ಉಲ್ಲಾಸದತ್ತ ವಿಜಯ ಹಾಗೂ ಇತರ ಯಕ್ಷಗಾನ ಪ್ರಸಂಗಗಳು

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಉಲ್ಲಾಸದತ್ತ ವಿಜಯ ಹಾಗೂ ಇತರ ಯಕ್ಷಗಾನ ಪ್ರಸಂಗಗಳು ಹೊಸ್ತೋಟ ಮಂಜುನಾಥ ಭಾಗವತ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 113

Download  View

 

ನಮೋ ನಮೋ ಲಂಬೋದರ ಗಜವದನ | ವಿಘ್ನೇಶ್ವರ ಶುಭಕರ | ಉಮಾತನಯ ಪರಿಪೂರ್ಣ ದಯಾಸದನ || ಸುಮಾಂಬುಹರ ನಟಶೇಖರ ನಂದನ | ಹಿಮಾಂಶುಮದಹರ ಕರುಣಾ ಭರಣ || ನಮೋ || ೧ || ನವನವೋನ್ಮೇಷ ಶಾಲಿನ ಗೀರ್ವಾಣಿ | ವೀಣಾಧರೆ ಶಾರದೆ | ಕವನ ಕಥನ ಸುವಿನೋದಿನಿ ವಿಧಿರಾಣಿ || ಧವಳಾಂಬರೆ ಕಲಹಂಸವರೂಧಿನಿ | ವಿವಿಧಗಾನ ನಾಟ್ಯ ವೇದ ಮೋದಿನಿ || ೨ ||