Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ ಡಾ. ಎಂ. ಚಿದಾನಂದಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 55

Download  View

Ebook | Text

 ಭಾರತಕ್ಕೆ ಸ್ವಾತಂತ್ರ‍್ಯ ಬಂದ (15-8-1947) ಬಳಿಕ ಅಧಿಕೃತವಾಗಿ ರವೀಂದ್ರನಾಥ ಠಾಕೂರರ “ಜನಗಣ ಮನ ಅಧಿನಾಯಕ….” ಕವನವನ್ನು “ರಾಷ್ಟ್ರಗೀತೆ” ಎಂದು, ಬಂಕಿಂಚಂದ್ರ ಚಟರ್ಜಿಯವರ “ವಂದೇ ಮಾತರಂ” ಕವನವನ್ನು “ರಾಷ್ಟ್ರಗಾಥೆ” ಎಂದು ಒಮ್ಮತದಿಂದ ತೀರ್ಮಾನಿಸಿ ಸಂವಿಧಾನದಲ್ಲಿ ಎರಡಕ್ಕೂ ಸಮಾನವಾದ ಗೌರವಸ್ಥಾನ ನೀಡಲಾಯ್ತು. ಠಾಕೂರರ ಕವನದ ಐದು ಪದ್ಯಖಂಡಗಳಲ್ಲಿ ಮೊದಲನೆಯದನ್ನು, ಬಂಕಿಮರ ಕವನದ ಐದು ಪದ್ಯಖಂಡಗಳಲ್ಲಿ ಮೊದಲನೆಯದನ್ನು ಮಾತ್ರ ರಾಷ್ಟ್ರಗೀತೆ, ರಾಷ್ಟ್ರಗಾಥೆ ಎಂದು ಗುರುತಿಸಲಾಗಿದೆ.