ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕುಮಾರವ್ಯಾಸ ಮತ್ತು ಜಾನಪದ | ಪ್ರೊ. ಎಂ. ಆರ್. ಲಕ್ಷೀದೇವಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 147 |
ಕನ್ನಡ ಸಾಹಿತ್ಯ ನಡೆದು ಬಂದ ದಾರಿಯನ್ನು ವೀಕ್ಷಿಸಿದವರಿಗೆ ಜೈನ, ವೀರಶೈವ, ವೈಷ್ಣವ ಧರ್ಮಗಳ ಹಿನ್ನೆಲೆಯಲ್ಲಿ ಮೂರು ಘಟ್ಟಗಳು ಎದ್ದು ಕಾಣುತ್ತವೆ. ಜೈನಧರ್ಮದ ಹಿನ್ನೆಲೆಯಲ್ಲಿ ಪಂಪರನ್ನರು ಚಂಪೂ ಮಾಧ್ಯಮದಲ್ಲಿ ಮೇರು ಕೃತಿಗಳನ್ನು ರಚಿಸಿದರೆ, ವೀರಶೈವ ಧರ್ಮದ ಹಿನ್ನೆಲೆಯಲ್ಲಿ ಹರಿಹರ ರಾಘವಾಂಕರು ರಗಳೆ-ಷಟ್ಪದಿಗಳಲ್ಲಿ ವಿಶಿಷ್ಟಕೃತಿಗಳನ್ನು ರಚಿಸಿದರು. |