|
ಕರ್ನಾಟಕ ರಾಜ್ಯವು ಅಧಿಕ ಪ್ರಮಾಣದ ಉಪಯುಕ್ತ ಖನಿಜಗಳು, ಕಚ್ಚಾ ಸರಕುಗಳು, ಸಾಗರೋತ್ಪನ್ನಗಳು ಮೊದಲಾದವುಗಳನ್ನು ಹೊಂದಿರುವುದರ ಜೊತೆಗೆ ಆಂತರಿಕ ಸಾಧನ ಸೌಲಭ್ಯಗಳಾದ ಸಾರಿಗೆ-ಸಂಪರ್ಕ, ಬ್ಯಾಂಕಿಂಗ್, ತಾಂತ್ರಿಕ ಜ್ಞಾನವನ್ನು ಹೊಂದಿರುವ ಮಾನವಶಕ್ತಿ, ಕೈಗಾರಿಕಾ ವಸಾಹತು, ಕೈಗಾರಿಕಾ ಪ್ರದೇಶ, ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಪಾರ್ಕ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್ ಮೊದಲಾದ ಸೌಲಭ್ಯಗಳನ್ನು ಹೊಂದಿದೆ. ರಾಷ್ಟ್ರದ ಕೈಗಾರಿಕಾ ನಕ್ಷೆಯಲ್ಲಿ ರಾಜ್ಯವು ಪ್ರಮುಖ ಸ್ಥಾನವನ್ನು ಪಡೆಯಲು ಬಹಳ ಹಿಂದಿನಿಂದಲೂ ಕೈಗಾರಿಕಾ ಬೆಳವಣಿಗೆಗೆ ಹಾಕಿದ ಉತ್ತಮ ಅಡಿಪಾಯ ಮತ್ತು ಕಾರ್ಮಿಕ ಬಾಂಧವ್ಯ ಇದಕ್ಕೆ ಸಹಕಾರಿಯಾಗಿದೆ. |
Leave A Comment