ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕೋಲಾರ ಜಿಲ್ಲಾ ರಂಗಮಾಹಿತಿ | ಡಾ. ಮುನಿನಾರಾಯಣ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 77 |
ಕೋಲಾಹಲ ಅಥವಾ ಕುವಲಾಲ ಎಂಬ ತನ್ನ ಮೂಲ ಹೆಸರನ್ನು ಬದಲಿಸಿಕೊಂಡು ಕೋಲಾರ ಎಂಬುದಾಗಿ ಗುರ್ತಿಸಲ್ಪಟ್ಟಿರುವ ಕೋಲಾಹಲವು ಹಿಂದೆ ಗಂಗರ ಕುವಲಾಳ ಮೆಚ್ಚಿನ ರಾಜಧಾನಿಯಾಗಿತ್ತು. ಶತಶೃಂಗ ಪರ್ವತಗಳನ್ನು ಹೊಂದಿರುವ ಕೋಲಾರವು 2008 ರಲ್ಲಿ ತನ್ನಿಂದ ಹೊರ ಹೋದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹೊರತು ಪಡಿಸಿ, 5 ತಾಲ್ಲೂಕುಗಳನ್ನು, 27 ಹೋಬಳಿಗಳನ್ನು, 156 ಗ್ರಾಮಪಂಚಾಯ್ತಿಗಳನ್ನು, 1598 ಜನ ವಸತಿ ಹಳ್ಳಿಗಳನ್ನು, 2 ನಗರಸಭೆಗಳನ್ನು ಮತ್ತು 4 ಪುರಸಭೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. |