ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಚಿಕ್ಕಮಗಳೂರು ಜಿಲ್ಲಾ ರಂಗಮಾಹಿತಿ | ಬಿ. ಎನ್. ಜ್ವಾಲನಪ್ಪ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 73 |
ಸೃಜನಶೀಲ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಮ್ಮಿಶ್ರ ಮತ್ತು ತುಂಬಾ ಸಂಕೀರ್ಣ ಕಲೆಯಾದ ನಾಟಕ ಒಂದು ಅತ್ಯಂತ ವಿಶಿಷ್ಟವಾದ ಮತ್ತು ಪರಿಣಾಮಕಾರಿ ದೃಶ್ಯಮಾಧ್ಯಮವಾಗಿದೆ. ರಂಗಭೂಮಿ ನಿರಂತರವಾಗಿ ಅಸ್ತಿತ್ವದಲ್ಲಿರುವಂತಹ ಚಲನಶೀಲ ಕ್ರಿಯೆ. ಅಂತೆಯೇ ಈ ಕಲೆ ಅನುಕರಣೆ, ವಿಡಂಬನೆ, ಸ್ವಂತಿಕೆ, ಅಳವಡಿಸುವಿಕೆ, ವ್ಯಂಗ್ಯ, ಹಾಸ್ಯ, ವೈಚಾರಿಕತೆ ಇತ್ಯಾದಿ ವಿವಿಧ ಮಜಲು-ಮಗ್ಗಲುಗಳಿಂದ ಆವಿಷ್ಕಾರಗೊಂಡಿದ್ದು ಸಹೃದಯ ಪ್ರೇಕ್ಷಕರನ್ನು ಸುಲಭವಾಗಿ ತಲುಪುವಂತಹ ಕಲೆಯಾಗಿದೆ. |