ಪುಸ್ತಕ ವಿವರ
ಕೃತಿಯ ಹೆಸರು | ಮೂಲ/ಅನುವಾದಕರ ಹೆಸರು |
---|---|
ಚೆಲುವ ಕನ್ನಡ ನಾಡು | ಎಂ.ವಿ.ಕಾಮತ್/ಡಾ|| ಎಚ್.ಕೆ.ರಂಗನಾಥ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 121 |
ಕರ್ನಾಟಕ ಎಂದರೆ ಒಂದು ನಂದನ. ಸ್ವರ್ಗದ ಹಾದಿ ಈ ನೆಲದಲ್ಲಿಯೇ ಹುಟ್ಟಿ ಇಲ್ಲಿಯೇ ಮುಗಿಯುತ್ತದೆ. ಕವಿ ಹೇಳುವಂತೆ ಇದು ಚೆಲುವ ಕನ್ನಡ ನಾಡು. ‘ಚೆಲುವು’ ಎಂಬುದು ನಿಶ್ಚಿತವಾದ ಒಂದೇ ಅರ್ಥಕ್ಕೆ ಅಂಟಿಕೊಂಡ ಮಾತಲ್ಲ. ಆ ಮಾತಿನಲ್ಲಿ ಸೌಂದರ‍್ಯ, ಲಾಲಿತ್ಯ, ಲಾವಣ್ಯಗಳೆಲ್ಲ ಮುಪ್ಪುರಿಗೊಂಡಿವೆ. ಕನ್ನಡದಲ್ಲಿ ನಿರಾಬರಣ ಸುಂದರಿಗೆ ‘ಚೆಲುವೆ’ ಎನ್ನುತ್ತಾರೆ. ಆಕೆ ಮನಸ್ಸನ್ನು ಆಹ್ಲಾದಗೊಳಿಸುವಂತಹ ಹೆಣ್ಣು; ಅಂದ ಚೆಂದಗಳಿಂದ. ಶಾಂತಿ ತೃಪ್ತಿಗಳಿಂದ ಮೈತುಂಬಿಕೊಂಡ ಲಾವಣ್ಯವತಿ. ಹೀಗೆ. ‘ಚೆಲುವು’ ಎಂದರೆ ಹತ್ತು ಅರ್ಥಗಳನ್ನು ಹೊಮ್ಮಿಸುವ ಒಂದು ಪದ. |
Leave A Comment