ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜಾನಪದ ತಜ್ಞ ಮತಿಘಟ್ಟ ಕೃಷ್ಣಮೂರ್ತಿ ಅವರ ವ್ಯಕ್ತಿ ಪರಿಚಯ ಎಂ. ಕೆ. ರಮಾದೇವಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 78

Download  View

 ಮತಿಘಟ್ಟ ಒಂದು ಸುಂದರ ಹಳ್ಳಿ. ಹಳ್ಳಿಯ ಯಾವುದೇ ಮನೆಯ ಮುಂದೆ ನಿಂತು ಪೂರ್ವಕ್ಕೆ ನೋಡಿದಾಗ ಅಗಲವಾದ ಅರ್ಧಚಂದ್ರಾಕಾರದಲ್ಲಿ ಹರಡಿಕೊಂಡಿರುವ ಕೆರೆ ಕಾಣಿಸುವುದು. ತುಂಬಿದ ಕೆರೆಯ ಮೇಲೆ ಮೂಡುತ್ತಿರುವ ಅರುಣರೇಖೆಗಳು ಬಿದ್ದು, ಹೊನ್ನಿನ ರೇಖೆಯಾಗಿ ಪ್ರತಿಫಲಿಸುವುದು. ಕೆರೆಯ ಆಚೆ-ಬದಿ ಎತ್ತರವಾದ ಗುಡ್ಡ; ಹೆಸರು ಕೊಂಡ್ಲಿ ಗುಡ್ಡ.