ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಜ್ವಾಲಾಮುಖಿಯ ಮೇಲೆ | ಬಸವರಾಜ ಕಟ್ಟೀಮನಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 414 |
ಕಟ ಕಟಟ್ ಢಕ್ ಕಟ ಕಟಟ್ ಢಕ್ ರಂಗಯ್ಯನ ಮುದ್ರಣ ಯಂತ್ರ ಗೊಣಗಿಕೊಳ್ಳುತ್ತ ಕೆಲಸ ಮಾಡುತ್ತಿತ್ತು. ಹತ್ತು ವರ್ಷಗಳಿಂದ ಅದು ಹಾಗೆಯೇ ಕೆಲಸ ಮಾಡುತ್ತ ಬಂದಿದೆ. ಯಾವುದೋ ಒಂದು ಸಣ್ಣ ಊರಿನಲ್ಲಿ ಬೀಡಿ ಕರಪತ್ರ ಅಚ್ಚು ಹಾಕುವವರ ಹತ್ತಿರ ಕತ್ತೆಯಂತೆ ದುಡಿದು ದುಡಿದು ಬಡವಾಗಿದ್ದ ಆ ಯಂತ್ರವನ್ನು ರಂಗಯ್ಯ ಐದುನೂರು ರೂಪಾಯಿಗಳಿಗೆ ಕೊಂಡು ತಂದಂದಿನಿಂದ ಆಗಾಗ ಅದಕ್ಕೆ ಎಣ್ಣೆಯ ಸ್ನಾನವಾದರೂ ಆಗುತ್ತಿದೆ. ಆದರೂ ಅದರ ಗೊಣಗಾಟವೇನೂ ನಿಂತುಹೋಗಿಲ್ಲ. ರಂಗಯ್ಯನಿಗೂ ಬೇಸರವಿಲ್ಲ. ಅದರೊಂದಿಗೆ ತಾನೂ ಗೊಣಗಿಕೊಳ್ಳುತ್ತ ಆತ ಕೆಲಸ ಸಾಗಿಸುತ್ತ ಬಂದಿದ್ದಾನೆ. |