ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ತೇರದಾಳದ ಲಾವಣಿಕಾರರು ಡಾ. ಸಂಗಮೇಶ ಬಿರಾದಾರ‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 115

Download  View

 ‘ತೇರದಾಳದ ಲಾವಣಿಕಾರರು’ ಇದು ತೇರದಾಳ, ಲಾವಣಿ ಮತ್ತು ಲಾವಣಿಕಾರರು ಈ ಮೂರು ವಿಷಯಗಳನ್ನು ಒಳಗೊಂಡದ್ದು. ಆದ್ದರಿಂದ ಪ್ರಾರಂಭದಲ್ಲಿ ತೇರದಾಳದ ಸಂಕ್ಷಿಪ್ತ ಪರಿಚಯ ಕೊಟ್ಟಿದ್ದೇನೆ. ಲಾವಣಿ ಸಾಹಿತ್ಯದ ವಿಷಯವಾಗಿ ಪಂಡಿತರಲ್ಲಿ ಭಿನ್ನಾಭಿಪ್ರಾಯಗಳಿರುವುದರಿಂದ ಅವುಗಳ ನಿವಾರಣೆಗಾಗಿ ಆ ಸಾಹಿತ್ಯದ ಬಗೆಗೆ ಸ್ವಲ್ಪ ವಿವರವಾಗಿ ವಿಷಯ ನಿರೂಪಿಸಿದ್ದೇನೆ.