Categories
Ebook Scanned Book Text ಕನ್ನಡ ಸಾಹಿತ್ಯ ಪರಿಷತ್ತು

ದಲಿತ ಸಾಹಿತ್ಯ ಸಂಪುಟ – ಸಂಶೋಧನೆ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ದಲಿತ ಸಾಹಿತ್ಯ ಸಂಪುಟ – ಸಂಶೋಧನೆ  ನಾಡೋಜ ಡಾ. ಮನು ಬಳಿಗಾರ್, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತು
ಪುಟಗಳ ಸಂಖ್ಯೆ 300

Download   |   View

Ebook  |   Text

ಕ್ರಿ.ಶ. 1971 ಜನಗಣತಿಯ ಅಂಕಿ-ಅಂಶಗಳಂತೆ ಕರ್ನಾಟಕದ ಬೇಡ ಜನಾಂಗದ ಸಂಖ್ಯೆ ಸುಮಾರು ಹದಿನೈದೂ ಕಾಲು ಲಕ್ಷವೆಂದು ತಿಳಿದುಬರುತ್ತದೆ. ಎಂದರೆ ಇದು ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ ಸುಮಾರು ಏಳರಷ್ಟು ಆಗುತ್ತದೆ. ವೀರಶೈವರು, ಒಕ್ಕಲಿಗರು, ಕುರುಬರು, ಮುಸಲ್ಮಾನರು – ಇವರ ತರುವಾಯದ ಸ್ಥಾನ ಬೇಡ ಜನಾಂಗಕ್ಕೆ ಸಲ್ಲುತ್ತದೆ. ಕರ್ನಾಟಕದ ಮೂಲ ನಿವಾಸಿಗಳೆನ್ನಬಹುದಾದ ಜನಾಂಗಗಳ ಪೈಕಿ ಬೇಡ ಜನಾಂಗವೂ ಒಂದು.