ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ದೇವುಡು (ದೇವುಡು ನರಸಿಂಹ ಶಾಸ್ತ್ರಿ) | ಡಾ. ಕುಮಾರ ಚಲ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 67 |
ದೇವುಡು ಡಿಸೆಂಬರ್ 29, 1896 ರಂದು ಮೈಸೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ನರಸಿಂಹಶಾಸ್ತ್ರಿ; ಪೂರ್ವಿಕರು ಆಂಧ್ರ ಪ್ರಾಂತದ ಕಂಬಾಲೂರಿನವರು. ದೇವುಡು ಎಂದರೆ ತೆಲುಗಿನಲ್ಲಿ ʼದೇವರುʼ ಎಂದರ್ಥ. ಅದು ಅವರ ಮನೆತನದ ಹೆಸರಾಗಿತ್ತು. ಅದನ್ನೇ ದೇವುಡು ಬರವಣಿಗೆಯ ಸಂದರ್ಭದಲ್ಲೂ ಬಳಸಿಕೊಂಡರು. ಕಾಲಾನಂತರದಲ್ಲಿ ಅವರ ಹಿರಿಯರು ಮೈಸೂರಿಗೆ ಬಂದು ನೆಲೆಸಿದರು. ದೇವುಡು ಸ್ಮಾರ್ತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅವರ ತಂದೆ ಕೃಷ್ಣಶಾಸ್ತ್ರಿ; ತಾಯಿ ಸುಬ್ಬಮ್ಮ.