ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ದೊಂಬಿದಾಸ | ಕುಪ್ಪೆ ನಾಗರಾಜ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 228 |
ಕಂಠಸ್ತ ಸಂಪ್ರದಾಯದ ವೃತ್ತಿಗಾಯಕರನ್ನು ಜಗತ್ತಿನ ಹಲವಾರು ಭಾಷಾ ಜನಪದರಲ್ಲಿ ಕಾಣಬಹುದಾಗಿದೆ. ರಷ್ಯಾದ ಜನಪದ ಕಾವ್ಯ ಸಂಪ್ರದಾಯಗಳಲ್ಲಿ ಸ್ಕೊಮರೊಸ್ಕಿ ಎಂಬ ವೃತ್ತಿಗಾಯಕರನ್ನು ಕಾಣಬಹುದು. ಡ್ಯಾನಿಷ್‌ರಲ್ಲಿಯೂ ಈ ತರಹದ ವೃತ್ತಿಗಾಯಕರ ಪರಂಪರೆಯನ್ನು ಕಾಣಬಹುದಾಗಿದೆ. ಇಂಗ್ಲೆಂಡಿನ ಡ್ಯಾನಿಷ್ ಚಕ್ರವರ್ತಿ ತನ್ನ ಸೇನೆಯ ಬಲವನ್ನು ಅರಿಯಲು ವೃತ್ತಿಕಲಾವಿದ ವೇಷಧರಿಸಿ ಸೈನಿಕರ ಶಿಬಿರಗಳಿಗೆ ಹೋಗಿ ಹಾಡಿ ಕುಣಿದು ರಂಜಿಸಿದ ಸ್ವಾರಸ್ಯಕರ ಸಂಗತಿಗಳು ಲಭ್ಯವಾಗಿವೆ. |