ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ನಗು ಅತ್ಯುತ್ತಮ ಔಷಧಿ | ಡಾ. ಕೆ. ಪಿ. ಪುತ್ತೂರಾಯ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 76 |
ಭಗವಂತನ ಸೃಷ್ಟಿಯಲ್ಲಿ, ಜೀವಾಧಾರವಾಗಿರುವ ಎರಡು ಜಗತ್ತುಗಳಿವೆ- ಒಂದು ಸಸ್ಯ ಜಗತ್ತು ಇನ್ನೊಂದು ಪ್ರಾಣಿ ಜಗತ್ತು. ಮೂಲತಃ ನಾವೆಲ್ಲರೂ ಪ್ರಾಣಿ ಜಗತ್ತಿಗೆ ಸೇರಿದವರು. ಆದುದರಿಂದಲೇ ಪ್ರಾಣಿ ಸಹಜವಾದ ಹಸಿವೆ, ನಿದ್ರೆ, ಭಯ ಮತ್ತು ಮೈಥುನಗಳೆಂಬ ಗುಣ ಸ್ವಭಾವಗಳನ್ನು ಮಾನವರಲ್ಲೂ ಕಾಣಬಹುದು. ಆದರೆ, ಈ ಮೃಗ ಸ್ವಭಾವದ ಗುಣಗಳ ಹೊರತಾಗಿ ಅನೇಕ ಮಾನವೀಯ ಗುಣಗಳನ್ನೂ ಶಕ್ತಿ ಸಾಮರ್ಥ್ಯಗಳನ್ನೂ ಮನುಷ್ಯ ಪಡೆದಿರುತ್ತಾನೆ. ತನ್‌ಮೂಲಕ ಮನುಷ್ಯತ್ವವನ್ನು ಗಳಿಸಿರುತ್ತಾನೆ. |