ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು? | ಡಾ. ನಾ. ಸೋಮೇಶ್ವರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 190 |
ಬ್ರಹ್ಮಾಂಡದಲ್ಲಿ ಸೌರಮಂಡಲ. ಸೌರಮಂಡಲದ ಮೂರನೆಯ ಗ್ರಹ ಭೂಮಿ. ಭೂಮಿಯಲ್ಲಿ ಸುಮಾರು ೧೫ ಲಕ್ಷ ವಿವಿಧ ಜೀವಿಗಳಿವೆ ಎಂದು ಒಂದು ಅಂದಾಜು. ೧೦-೧೦೦ ದಶಲಕ್ಷ ಜೀವಿಗಳು ಇರುವ ಸಾಧ್ಯತೆಗಳಿವೆ. ಈ ಎಲ್ಲ ಜೀವಿಗಳು ಹುಟ್ಟುತ್ತವೆ, ಬದುಕುತ್ತವೆ, ಸಾಯುತ್ತವೆ. ಹುಟ್ಟು, ಬದುಕು ಹಾಗೂ ಸಾವು ಇಲ್ಲಿ ಒಂದು ಚಕ್ರ. ಪ್ರತಿದಿನ ಜೀವಿಗಳು ಹುಟ್ಟುತ್ತವೆ. ಪ್ರತಿದಿನ ಜೀವಿಗಳು ಸಾಯುತ್ತವೆ. ಇದೊಂದು ನಿರಂತರ ಕರ್ಮ. ಮನುಷ್ಯರಾದ ನಾವು ಭೂವಾಸಿಗಳಾಗಿರುವ ಕಾರಣ, ನಾವೂ ಸಹಾ ಈ ಕರ್ಮಚಕ್ರದ ಒಂದು ಭಾಗವಾಗಿದ್ದೇವೆ. |