ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ನಿತ್ಯ ಜೀವನದಲ್ಲಿ ಆರೋಗ್ಯದ ಅರಿವು | ಡಾ. ಕೆ ಎನ್. ಪ್ರಸಾದ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 205 |
“ಆರೋಗ್ಯ ಏನೆಂಬುದು ಅನಾರೋಗ್ಯ ಬಂದಾಗಲೇ ತಿಳಿಯುವುದು” ಎಂಬ ಸಾಮಾನ್ಯವಾದ ನಾಣ್ಣುಡಿಯಿದೆ. ಅದೇ ರೀತಿ ಆರೋಗ್ಯವಾಗಿದ್ದಾಗ ಸಾಮಾನ್ಯವಾಗಿ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ಕೆಲವರು ಕುತೂಹಲಕ್ಕಾಗಿ ಆರೋಗ್ಯದ ಬಗ್ಗೆ ತಿಳಿಯುವವರಿದ್ದಾರೆ, ಆರೋಗ್ಯವನ್ನು ಸುಧಾರಿಸಿಕೊಳ್ಳಲು ಓದುವವರಿದ್ದಾರೆ ಮತ್ತು ಆರೋಗ್ಯದ ಕುರಿತು ಬರೆದ ವಿಷಯಗಳನ್ನು ಅರಿತು ಬೇರೆಯವರಿಗೂ ತಿಳಿಸುವವರಿದ್ದಾರೆ. ಈ ದೃಷ್ಟಿಯಿಂದ ಆರೋಗ್ಯದ ಅರಿವು ಎಲ್ಲಾ ವರ್ಗದ ಓದುಗರಿಗೂ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. |