ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
---|---|
ಪಂಚಭೂತ ಪ್ರಪಂಚ | ಅಂಬಾತನಯ ಮುದ್ರಾಡಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 35 |
ಹೌದು, ನಾನು ಪೃಥ್ವಿ. ಇತ್ತೀಚೆಗಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಕೂಗನ್ನು ಎಲ್ಲೆಡೆಯಿಂದ ಕೇಳುತ್ತಿದ್ದೇನೆ. ನನ್ನನ್ನು ಹೊರತಾಗಿ ಪರಿಸರ ಉಂಟೆ? ಪರಿಸರವೆಂದರೆ ಜನ ಸುತ್ತನೋಡುವ ನೆಲ – ನೆಲದ ಮೇಲೆ ಗಿಡಮರ ಸಸ್ಯರಾಶಿ, ಇವುಗಳ ಬದುಕಿಗೆ ಪೋಷಕವಾದ ಜಲ, ಉಸಿರಾಡುವುದಕ್ಕೆ ಗಾಳಿ, ಮೈ ಬೆಚ್ಚನೆಗೆ ಅಗ್ನಿ ಅಥವಾ ಶಾಖ. ಇದರೊಂದಿಗೆ ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರ ಗೊತ್ತಾಗುವ ವಾಯು ಮತ್ತು ಆಕಾಶ. ಪರಿಸರ ಮಾಲಿನ್ಯವೆಂದರೆ ಪಂಚಭೂತಗಳಾದ ನಮ್ಮ ಮೇಲಾಗುವ ಮಲಿನತೆ. |