ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪ್ರೇಕ್ಷಣೀಯ ಸ್ಥಳಗಳು ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 58

Download  View

ಧಾರ್ಮಿಕ ಕೇಂದ್ರ, ಐತಿಹಾಸಿಕ ಸ್ಮಾರಕ, ನಿಸರ್ಗದತ್ತ ರಮಣೀಯ ಸ್ಥಳ, ಪೌರಾಣಿಕ ಕ್ಷೇತ್ರ, ಸಿದ್ಧಪುರುಷರು, ಮಹಾನ್‍ಸಾಧಕರ ಜನ್ಮಸ್ಥಳ, ಹೀಗೆ ವೈವಿಧ್ಯ ಹಿನ್ನೆಲೆಯನ್ನು ಹೊಂದಿರುವ ಸ್ಥಳಗಳು ಪ್ರೇಕ್ಷಣೀಯ ಸ್ಥಳವೆಂದೆನಿಸಿಕೊಳ್ಳುತ್ತವೆ. ಈ ರೀತಿಯ ಸುಪ್ರಸಿದ್ಧ ಸ್ಥಳಗಳು ಕರ್ನಾಟಕದ ಉದ್ದಗಲಕ್ಕೂ ಹಬ್ಬಿದ್ದು, ಈ ಜಿಲ್ಲೆಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಪ್ರಮುಖವಾದವನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಜಿಲ್ಲೆಯು ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದ್ದು, ಸ್ಥಳೀಯ ಜನರ ಬದುಕನ್ನು ಜಿಲ್ಲೆಯಲ್ಲಿರುವ ಚಾರಿತ್ರಿಕ ನೆಲೆಗಳು ಹಾಗೂ ದೇವಾಲಯಗಳು ದರ್ಪಣದಂತೆ ಬಿಂಬಿಸುತ್ತಿವೆ. ಜಿಲ್ಲೆಯಲ್ಲಿ ಶಾಸನ, ವೀರಗಲ್ಲು, ಕೋಟೆ-ಕೊತ್ತಲ, ದೇವಾಲಯಗಳು ಯಥೇಚ್ಛವಾಗಿದ್ದು ಇವು ಜಿಲ್ಲೆಯ ಸಾಂಸ್ಕøತಿಕ ಹಿರಿಮೆಗೆ ಸಾಕ್ಷಿಯಾಗಿವೆ.

ಸಂಬಂಧಿತ ಪುಸ್ತಕಗಳು