Categories
Ebook ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಸಮಗ್ರ ವಿಮರ್ಶಾ ಸಾಹಿತ್ಯ ಸಂಪುಟ-೬

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಸಮಗ್ರ ವಿಮರ್ಶಾ ಸಾಹಿತ್ಯ ಸಂಪುಟ-೬ ಪ್ರೊ. ಎಲ್.ಎಸ್.ಶೇಷಗಿರಿ ರಾವ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 1007

Download  View

Epub  Text

‘ಷೇಕ್ಸ್ಪಿಯರ್’ ಹುಟ್ಟಿ ನಾಲ್ಕುನೂರು ವರ್ಷಗಳಾದುವಂತೆ. ಆದರೆ ನನಗೇನು?
‘ಷೇಕ್ಸ್ಪಿಯರ್’ ಎಂಬುವನಿದ್ದ-ಎನ್ನುವುದನ್ನೇ ಎಷ್ಟೋ ಮಂದಿಸಂದೇಹಿಸುತ್ತಿಲ್ಲವೆ? ಅವನೇನು ನನ್ನ ದೇಶದವನೆ, ನನ್ನ ಭಾಷೆಯವನೆ? ನಮ್ಮದೇಶದಲ್ಲಿ ಹಿರಿಯ ಸಾಹಿತಿಗಳು ಆಗಿಹೋಗಿಲ್ಲವೇ? ಇಷ್ಟಾಗಿಯೂ ಆತ ಬರೆದುದುನನ್ನ ನಾಡಿಗೆ ಸಂಕೋಲೆಯನ್ನು ತೊಡಿಸಿದ್ದವರ ಭಾಷೆಯಲ್ಲಿ. ಅವನ ಭಾಷೆಯನ್ನು ಕಲಿಯುವುದು, ಅವನ ವಿಷಯ ಮಾತನಾಡುವುದು ಪ್ರತಿಷ್ಠೆಯ ಚಿಹ್ನೆಯಾಗಿದ್ದ ಕಾಲ ಒಂದಿತ್ತು.