ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಬಂಡಾಯ ಕಾವ್ಯ ಮತ್ತು ಜಾನಪದ | ಡಾ. ಬಸವರಾಜ ಸಬರದ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 128 |
“ಜನವಾಣಿ ಬೇರು ಕವಿವಾಣಿ ಹೂವು” ಬಿ. ಎಂ. ಶ್ರೀಯವರ ಈ ನುಡಿಯ ಮೂಲಕ ಪ್ರಸ್ತುತ ಚರ್ಚೆಯನ್ನು ಪ್ರಾರಂಭಿಸಬಹುದಾಗಿದೆ. ಜಾನಪದ ಸಂಸ್ಕೃತಿ ಎಲ್ಲ ಸಂಸ್ಕೃತಿಗಳಿಗೂ ತಾಯಿ ಬೇರು. ಅದೇ ರೀತಿ ಶಿಷ್ಟ ಸಾಹಿತ್ಯದ ಎಲ್ಲ ಘಟ್ಟಗಳೂ ಜನಪದ ಸಾಹಿತ್ಯಕ್ಕೆ ಋಣಿಯಾಗಿವೆ. ಜಾನಪದರ ಸಾಮುದಾಯಿಕ ಸೃಷ್ಟಿಕ್ರಿಯೆಯೇ ಮುಂದಿನ ಶಿಷ್ಟ ಪರಂಪರೆಯ ಹುಟ್ಟಿಗೆ ಕಾರಣವಾಗಿದೆ. |