ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಬೀದರ ಜಿಲ್ಲಾ ರಂಗಮಾಹಿತಿ | ಚಂದ್ರಗುಪ್ತ ಚಾಂದಕವಠೆ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 124 |
ರಂಗಭೂಮಿಯೆಂದರೆ, ಕನಸುಗಳನ್ನು ಸೃಷ್ಟಿಸುವ ದಿವ್ಯತಾಣ. ದಿನ ನಿತ್ಯದ ಜಂಜಾಟ, ಬದುಕಿನ ಏಕತಾನತೆಯನ್ನು ಬದಿಗಿಟ್ಟು, ಮನೋಲ್ಲಾಸಗೊಳಿಸುವ ಸುಂದರ ಮೆಟ್ಟಿಲು. ಬದುಕನ್ನು ತಿದ್ದುವ, ಬದಲಾಯಿಸುವ ಭಾವನೆಗಳನ್ನು ಕೆರಳಿಸಿ ಸಂತೈಸುವ ಶಕ್ತಿ ಕೇಂದ್ರ. ಇದರ ಕಾಂತಕ್ಷೇತ್ರದಲ್ಲಿ ಬರುವವರನ್ನು ಸೆಳೆದು ಅಪ್ಪಿಕೊಳ್ಳುವ ಶಕ್ತಿ ರಂಗಭೂಮಿಗೆ ಇದೆ. |