ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ ಥಿಯೋಡೋರ್‌ ಶೆರ್‌ಬಾತ್‌ಸ್ಕಿ/ಶ್ರೀ ಬಿ.ಆರ್‌. ಜಯರಾಮರಾಜೇ ಅರಸ್‌
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 79

Download  View

‘ಧರ್ಮ’ ಎಂಬ ಪದದ ಅರ್ಥದ ಬಗ್ಗೆ ಈಗಲೂ ಅನಿಶ್ಚಿತತೆ ಉಳಿದುಕೊಂಡು ಬಂದಿದೆ. ಶ್ರೀಮತಿ ಎಂ.ಗೈಜರ್‌ ಮತ್ತು ಪ್ರೊ.ಡಬ್ಲ್ಯುಗೈಜರ್‌ ಅವರು ತಮ್ಮ ಇತ್ತೀಚಿನ ಕೃತಿಯಲ್ಲಿ ಈ ಅನಿಶ್ಚಿತತೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.ಪಾಳಿ ಪವಿತ್ರ ಗ್ರಂಥಗಳ ಸಾಹಿತ್ಯದಲ್ಲಿ ಈ ಪದ ಕಾಣಿಸಿಕೊಳ್ಳುವ ಪ್ರತಿಯೊಂದು ಸಂದರ್ಭದ ವಿಷಯಾನುಕ್ರಮಣಿಕೆಯನ್ನು ಅವರು ತಯಾರಿಸಿದ್ದಾರೆ; ವೈವಿಧ್ಯಮಯ ಅರ್ಥಗಳ ಒಂದು ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ.