Categories
Ebook ಕರ್ನಾಟಕ ಕೈಪಿಡಿ ೨೦೧೨ ಕರ್ನಾಟಕ ಗ್ಯಾಸೆಟಿಯರ್

ಬ್ಯಾಂಕಿಂಗ್‌, ಸಹಕಾರ, ವಾಣಿಜ್ಯ ಮತ್ತು ವ್ಯವಹಾರ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಬ್ಯಾಂಕಿಂಗ್‌, ಸಹಕಾರ, ವಾಣಿಜ್ಯ ಮತ್ತು ವ್ಯವಹಾರ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 30

Download  View

ಕರ್ನಾಟಕಕ್ಕೆ ಶ್ರೀಮಂತ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆ ಇದೆ. ಪ್ರಾಚೀನ ಕರ್ನಾಟಕದ ಸಾಕಷ್ಟು ಶಾಸನಗಳು ವ್ಯಾಪಾರಿ ಸರಕುಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತಂತೆ ಉಲ್ಲೇಖಿಸುತ್ತವೆ. ಶಾಸನಗಳು ಆಯಾಕಾಲದಲ್ಲಿ ಚಾಲ್ತಿಯಲ್ಲಿದ್ದ ವಾಣಿಜ್ಯ ಚಟುವಟಿಕೆ, ಸಾಲದ ಮೇಲಿನ ಬಡ್ಡಿದರ, ಸಮುದಾಯ ಜೀವನ ಮುಂತಾದವನ್ನು ಕುರಿತಂತೆ ವಿಪುಲ ಮಾಹಿತಿಯನ್ನು ಒದಗಿಸುತ್ತವೆ. ಅಂದಿನ ಕಾಲದಲ್ಲಿ ದೇವಾಲಯಗಳು, ತಮ್ಮ ಪರಿಸರದಲ್ಲಿ ಸ್ಥಳೀಯ ಬ್ಯಾಂಕುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರಬಿಂದುಗಳಾಗಿದ್ದವು. 20ನೇ ಶತಮಾನದಲ್ಲಿಯೂ ಆಧುನಿಕ ಬ್ಯಾಂಕಿಂಗ್ ಉದ್ಯಮದಲ್ಲಿ ಇಡೀ ದೇಶದಲ್ಲೇ ಕರ್ನಾಟಕವು ಗಮನಾರ್ಹ ಮುನ್ನಡೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಸಂಘಟಿತ ವಲಯದ ಬ್ಯಾಂಕಿಂಗ್ ಉದ್ಯಮದ ಆರಂಭವನ್ನು ಅಂದಿನ ಬೊಂಬಾಯಿ ಪ್ರೆಸಿಡೆನ್ಸಿ ಬ್ಯಾಂಕ್ (1840) (Presidency Bank of Bombay), ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಬ್ಯಾಂಕ್ (Madras Presidency Bank) (1843)ಗಳು ತಮ್ಮ ತಮ್ಮ ಶಾಖೆಗಳನ್ನು ಕ್ರಮೇಣ ಧಾರವಾಡ (1863) ಮತ್ತು ಬೆಂಗಳೂರು ದಂಡುಪ್ರದೇಶ(Cantonment)ಗಳಲ್ಲಿಆರಂಭಿಸಿದ್ದು ಈ ಉದ್ಯಮದ ಆರಂಭದ ಹಂತವನ್ನು ಗುರುತಿಸಲು ನೆರವಾಗುತ್ತದೆ. ಆನಂತರದಲ್ಲಿ ಈ ಪ್ರೆಸಿಡೆನ್ಸಿ ಬ್ಯಾಂಕಿನ ಶಾಖೆಗಳು (ಬೆಳಗಾವಿ (1867), ಮಂಗಳೂರು(1867), ಹುಬ್ಬಳ್ಳಿ(1870)ಹಾಗೂ ಕುಮಟಾಗಳಲ್ಲಿ (1872-73)) ಆರಂಭಗೊಂಡವು. ಮದ್ರಾಸ್ ಬ್ಯಾಂಕಿನ ಮಂಗಳೂರು ಶಾಖೆಯನ್ನು ಬಂದರು ಪ್ರದೇಶದ ಸ್ಥಳೀಯ ವರ್ತಕರ ಅನುಕೂಲಕ್ಕಾಗಿ ಮತ್ತು ಬೊಂಬಾಯಿ ಬ್ಯಾಂಕಿನ ಧಾರವಾಡ ಶಾಖೆಯನ್ನು ಬೊಂಬಾಯಿ ಕರ್ನಾಟಕ ಭಾಗದ ಹತ್ತಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.

ಸಂಬಂಧಿತ ಪುಸ್ತಕಗಳು