ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಭರತೇಶನ ದಿನಚರಿ ವಿಜಯದ ದಿನಗಳು ಪಿ. ಕೆ. ನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 244

Download  View

 ಕೃತಯುಗದ ಆದಿಯಲ್ಲಿ ಆದಿತೀರ್ಥಂಕರನ ಮೊದಲ ಮಗನಾದ ಆದಿ ಚಕ್ರಿಯು ಕ್ಷಿತಿಯನ್ನು ಪಾಲಿಸುತ್ತಿದ್ದನು. ಆದರೆ ಭೂಮಿಯ ಭಾರವನ್ನು ತಾಳಿದ ಚಿಂತೆಯೆಂಬುದು ಒಂದಿಷ್ಟೂ ಅವನಲ್ಲಿರಲಿಲ್ಲ. ಅವನಿಗೆ ಯಾವುದೊಂದರ ಶ್ರಮವೂ ಇರಲಿಲ್ಲ. ಸುತ್ರಾಮನು ಸ್ವರ್ಗವನ್ನಾಳುವಂತೆ ಒಂದಿಷ್ಟೂ ಆಲಸ್ಯವಿಲ್ಲದೆ ರಾಜ್ಯವನ್ನಾಳುತ್ತಿದ್ದನು.