Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಭರತೇಶನ ದಿನಚರಿ ಸರಸದ ದಿನಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಭರತೇಶನ ದಿನಚರಿ ಸರಸದ ದಿನಗಳು ಪಿ. ಕೆ. ನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 116

Download  View

 ಭರತಭೂತಳಕ್ಕೆ ಸಿಂಗಾರವಾದ ಅಯೋಧ್ಯಾಪುರದಲ್ಲಿ ಮೂರು ಲೋಕ ಹೊಗಳುವಂತೆ ಭರತ ಚಕ್ರೇಶ್ವರನು ಸುಖವಾಗಿ ಬಾಳುತ್ತಿದ್ದನು. ಅವನು ಪುರುಪರಮೇಶನ ಹಿರಿಯ ಕುಮಾರ. ನರಲೋಕಕ್ಕೆ ಒಬ್ಬನೇ ರಾಜನಂತಿದ್ದನು. ಅವನು ಹದಿನಾರನೆಯ ಮನು ! ಪ್ರಥಮ ಚಕ್ರೇಶ್ವರ ! ಸುದತಿ ಜನಕ್ಕೆ ರಾಜಮದನ ! ಚದುರರ ತಲೆವಣಿ ! ಇಂತಹವನನ್ನು ಬಣ್ಣಿಸುವುದು ಸುಲಭವಲ್ಲ. ಆ ಚಕ್ರಿ ಕೋಮಲಾಂಗನು; ಹೇಮವರ್ಣನು; ಜಗವೆಲ್ಲ ಕಾಮಿಸತಕ್ಕ ಚನ್ನಿಗನು; ಅಮೋದವುಕ್ಕವ ಜವ್ವನಿಗನು. ಅಷ್ಟೇ ಅಲ್ಲ ಸರ್ವಭೂಮೀಶರೊಡೆಯನು.