Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಮದಂ ಬೊವಾರಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಮದಂ ಬೊವಾರಿ ಗುಸ್ತಾವ್‌ ಫ್ಲಾಬೇರ್‌/ ವಿ. ನಾಗರಾಜ ರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 67

Download  View

ಹೆಡ್‌ಮಾಸ್ಟರು ಹೊಸ ಹುಡುಗನನ್ನು ಕರೆದುಕೊಂಡು ಬಂದಾಗ ನಮ್ಮಲ್ಲಿ ನಿದ್ದೆ ಹೋಗುತ್ತಿದ್ದವರೂ ಎದ್ದು ಎಲ್ಲರೂ ಸಡಗರದಿಂದ ಎದ್ದುನಿಂತೆವು. ಅವರು ಕ್ಲಾಸ್‌ ಟೀಚರಿಗೆ ಹೇಳಿದರು- “ಇವನನ್ನು ಈಗ ಎರಡನೆ ತರಗತಿಗೆ ಸೇರಿಸಿಕೊಳ್ಳಿ, ಅವನಕಲಿಕೆ, ಓದು ಎಲ್ಲ ಸರಿಯಾಗಿದ್ದರೆ ಅವನ ವಯಸ್ಸಿಗೆ ತಕ್ಕಂತೆ ಮೇಲಿನ ತರಗತಿಗೆ ಕಳಿಸೋಣ.”