ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ | ಭಾಸ್ಕರ ರೈ ಕುಕ್ಕುವಳ್ಳಿ, ಪಿ. ಕಿಶನ್ ಹೆಗ್ಡೆ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 83 |
ನಾನು ಬಹುವಾಗಿ ಮೆಚ್ಚಿ ಗೌರವಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದರಲ್ಲಿ ಅಳಿಕೆ ರಾಮಯ್ಯ ರೈ ಅವರೂ ಒಬ್ಬರು. ಚಿಕ್ಕಂದಿನಿಂದಲೂ ಅವರ ವಿಧ ವಿಧದ ಪಾತ್ರಗಳನ್ನು ನೋಡುತ್ತಾ ಬಂದಿದ್ದೆ. ಅವರ ರಂಗ ಪ್ರವೇಶವಾಗುತ್ತಲೇ ರಂಗಸ್ಥಳಕ್ಕೊಂದು ಹೊಸ ಜೀವ ಸಂಚಾರವಾಗಿ ಬಿಡುತ್ತಿತ್ತು. ಬಣ್ಣದ ವೇಷಗಳ ಹೊರತಾಗಿ ಯಕ್ಷಗಾನದ ಎಲ್ಲ ಪ್ರಕಾರದ ವೇಷಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. |