ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಹಿಳಾ ಜಾನಪದ | ಡಾ. ಕೆ. ಆರ್. ಸಂಧ್ಯಾರೆಡ್ಡಿ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 224 |
ನಮ್ಮಪ್ಪನ ಹೆಸರು ಜವರೇಗೌಡ. ನಮ್ಮವ್ವ ನಾಗ್ತೀಹಳ್ಳಿಯವಳು. ಚಿಂದೂರೇಗೌಡನ ಮಗಳು. ನಾನಿನ್ನೂ ತೀರಾ ಚಿಕ್ಕೋಳಾಗಿರುವಾಗ ನಾಗ್ತೀಹಳ್ಳಿಗೆ ನಮ್ಮ ಸೋದರಮಾವನ ಮನೆಗೆ ಹೋಗ್ತಾ ಬತ್ತಾ ಇರೀವೆ. ನಾಗ್ತೀಹಳ್ಳಿ ರಸ್ತೇಲಿ ಎಲ್ಲೋ ಒಂದು ಮೋಟ್ರು ಹೋಗೋದು. ನಾವು ಚಿಕ್ಕ ಹುಡುಗರಲ್ಲಿ ಕಣದಲ್ಲಿ ಹುಲ್ಲು ಹಂಡಿರುವಾಗ ನಮ್ಮ ಮಾವನ್ನ ಮೋಟ್ರು ತೋರ‍್ಸು ಮಾವಯ್ಯ ಅಂತ ಕೇಳೋವು. |