ಪುಸ್ತಕ ವಿವರ
ಕೃತಿಯ ಹೆಸರು | ಸಂಪಾದಕರು |
ಯಕ್ಷಲೋಕದ ಮಾಸದ ಬಣ್ಣ (ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ) | ಕಂದಾವರ ರಘುರಾಮ ಶೆಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ |
ಪುಟಗಳ ಸಂಖ್ಯೆ | 149 |
ಉಡುಪಿ ತಾಲ್ಲೂಕಿನ ಶಿರಿಯಾರ ಗ್ರಾಮದ ಸಕ್ಕಟ್ಟಿನಲ್ಲಿ ತಾರೀಖು ೧೫-೬-೧೯೨೫ ರಲ್ಲಿ ನನ್ನ ಜನನವಾಯಿತು. ಈ ನನ್ನ ಊರು ಸುತ್ತಲೂ ಹೊಳೆಯಿಂದ ಆವರಿಸಲ್ಪಟ್ಟ ಒಂದು ಚಿಕ್ಕ ದ್ವೀಪದಂತೆ ಕಾಣುತ್ತದೆ. ಊರಿನ ಒಂದು ದಿಕ್ಕಿನಲ್ಲಿ ನದಿಯು ಎರಡು ಶಾಖೆಗಳಾಗಿ ಹರಿದು ಊರನ್ನು ಸುತ್ತುವರಿದು ಇನ್ನೊಂದು ಕಡೆಯಲ್ಲಿ ಸಂಗಮಿಸುತ್ತದೆ. ಸಂಗಮಿಸುವ ಸ್ಥಳದಲ್ಲಿ ಬಲವಾದ ಕಟ್ಟು ಹಾಕಿ ನೆರೆಯ ಊರುಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.