ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ರವೀಂದ್ರ ಕಥಾಮಂಜರಿ – 3 | ರವೀಂದ್ರನಾಥ ಠಾಕೂರ್-ಅಹೋಬಲ ಶಂಕರ |
ಕೃತಿಯ ಹಕ್ಕುಸ್ವಾಮ್ಯ | ವಿಶ್ವಭಾರತಿ ಅಥಾರಿಟೀಸ್ |
ಪುಟ ಸಂಖ್ಯೆ | 469 |
ಇಂದು ಸತೀಶನ ದೊಡ್ಡಮ್ಮ ಸುಕುಮಾರಿ ಮತ್ತು ದೊಡ್ಡಪ್ಪ ಶಶಧರಬಾಬು ಬಂದಿರುವರು. ಸತೀಶನ ಅಮ್ಮ, ವಿಧುಮುಖಿ ಅವರನ್ನು ಉಪಚಾರದಿಂದ ಬರಮಾಡಿಕೊಳ್ಳುವ ಸಡಗರದಲ್ಲಿದ್ದಾಳೆ. “ಬಾ, ಅಕ್ಕ- ಬಾ ಕೂತುಕೋ. ಇವತ್ತೇನು ಪುಣ್ಯವೋ ಕಾಣೆ. ಭಾವಯ್ಯ ಕೂಡ ದಯಮಾಡಿಸಿಬಿಟ್ಟಿದಾರೆ. ಅಕ್ಕ ಬರದೆಹೋದರೆ ನಿಮ್ಮ ದರ್ಶನವಾಗುವುದೇ ಸಂಭವವಿರಲಿಲ್ಲವೇನೋ!” ಸೃಷ್ಟಿನಿಯಮದೊಲಗವನೇ ಬೋಗಿ. |