ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ರವೀಂದ್ರ ಕಥಾ ಮಂಜರಿ-೨ | ಅಹೋಬಲ ಶಂಕರ/ಕಮಲೇಶ್ವರ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ |
ಪುಟ ಸಂಖ್ಯೆ | 478 |
ಒಂದು ದಿನ ಬೆಳಗ್ಗೆ ದಾರಿಯ ಪಕ್ಕದಲ್ಲಿ ನಿಂತು ಹುಡುಗನೊಬ್ಬ ಮತ್ತೊಬ್ಬ ಹುಡುಗನೊಂದಿಗೆ ಅತಿ ಸಾಹಸಕರವಾದ ಕೆಲಸವೊಂದನ್ನು ಕುರಿತು ಪಂದ್ಯ ಕಟ್ಟುತ್ತಿದ್ದ. ದೇವಮಂದಿರದ ಮಾಧವೀ ಲತೆಯ ಕುಂಜದಿಂದ ಹೂವನ್ನು ಕುಯಿದು ತರಲಾಗುತ್ತದೆಯೇ ಇಲ್ಲವೆ? ಇದರ ವಿಷಯವಾಗಿ ತರ್ಕ. ಮೊದಲ ಹುಡುಗ ‘ಓಹೋ ಅದೆಷ್ಟು ಹೊತ್ತು?’ ಎಂದ. ಎರಡನೆಯವ ‘ಎಂದಿಗೂ ಆಗುವುದಿಲ್ಲ.’ ಎಂದು ತಲೆಯಲ್ಲಾಡಿಸಿದ. |