ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ರೈತ ಜಾನಪದ | ಡಾ. ಮೃತ್ಯುಂಜಯ ಹೊರಕೇರಿ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 72 |
ರೈತ ಮತ್ತು ಭೂಮಿಯ ನಡುವಿನ ಸಂಬಂಧವನ್ನು ಗುರುತಿಸ ಹೊರಡುವುದು ಮೇಲುನೋಟಕ್ಕೆ ಒಂದು ಬಗೆಯ ಅಸಹಜತೆಯ ಅಥವಾ ವಿರೋಧಾಭಾಸದ ಹಾಗೆ ಕಾಣಬಹುದು. ಆದರೂ ರೈತರ ಜೀವನವಿಧಾನದಲ್ಲಿ ಹಾಗೂ ತನ್ನ ಎಲ್ಲ ಪರಿಕರಗಳ ಬಗ್ಗೆ ಆತ ಇರಿಸಿಕೊಂಡಿದ್ದ ನಂಬಿಕೆ-ನಿಷ್ಠೆಗಳಲ್ಲಿ ಇತ್ತೀಚಿಗೆ ಸಾಕಷ್ಟು ವ್ಯತ್ಯಾಸಗಳು ತಲೆದೋರಿರುವುದರಿಂದ ಹಿಂದಿನ ರೈತ ಭೂಮಿಯ ಬಗ್ಗೆ ಇರಿಸಿಕೊಂಡಿದ್ದ ಜಾನಪದ ತಿಳುವಳಿಕೆಗಳನ್ನು ಗುರುತಿಸಿ ದಾಖಲಿಸುವುದು ಅಗತ್ಯವೆನಿಸುತ್ತದೆ. |