|
ತುಮಕೂರು ಜಿಲ್ಲೆಯು ಕಲ್ಪತರುನಾಡು ಎಂದು ಪ್ರಸಿದ್ಧಿ ಪಡೆದಿದೆ. ಈ ಜಿಲ್ಲೆಯು ಒಟ್ಟು 10,598 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ತುಮಕೂರು ಜಿಲ್ಲೆಯು ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗಳನ್ನೊಳಗೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ನಹಿ ಜ್ಞಾನೇನ ಸದೃಶಂ ಎಂಬ ವೇದ ವಾಕ್ಯದಂತೆ ಜ್ಞಾನಕ್ಕೆ ಸಮಾನವಾದುದು ಬೇರೊಂದಿಲ್ಲ. ಈ ಜ್ಞಾನವನ್ನು ಧಾರೆಯೆರೆಯುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ಮಾನವನ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಅತ್ಯವಶ್ಯವಾಗಿದೆ. ಪ್ರಾಥಮಿಕ ಶಿಕ್ಷಣವು ಶಿಕ್ಷಣದ ಅಡಿಗಲ್ಲಾಗಿರುತ್ತದೆ. ಈ ದಿಸೆಯಲ್ಲಿ ತುಮಕೂರು ಜಿಲ್ಲೆಯ ಶಿಕ್ಷಣದ ಬಗೆಗಿನ ಮಾಹಿತಿ ಈ ಅಧ್ಯಾಯದಲ್ಲಿ ನೀಡಿದೆ. |