Categories
Ebook ಕರ್ನಾಟಕ ಗ್ಯಾಸೆಟಿಯರ್ ಕರ್ನಾಟಕದ ಮಿನುಗುನೋಟ

ಸಾಮ್ರಾಜಶಾಹಿ ರಾಜವಂಶಗಳ ಯುಗ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಸಾಮ್ರಾಜಶಾಹಿ ರಾಜವಂಶಗಳ ಯುಗ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 32

Download  View

ಈ ಅವಧಿಯಲ್ಲಿ, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು ಹಾಗೂ ಹೊಯ್ಸಳರು ಕರ್ನಾಟಕದಲ್ಲಿ ಬಲಿಷ್ಠ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳೆರಡರ ಸುಭಿಕ್ಷತೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಯತನಕ, ಕರ್ನಾಟಕದ ಅರಸರು ಕರ್ನಾಟಕದ ಗಡಿಪ್ರದೇಶಗಳ ಒಳಗೆ ಆಳ್ವಿಕೆ ನಡೆಸಿದ್ದರು. ಆದರೆ, ಈ ರಾಜವಂಶಗಳ ಆಗಮನದಿಂದ, ದಕ್ಷಿಣಪಥದ ಬಹುತೇಕ ಭಾಗದ ಮೇಲೆ ನಿಯಂತ್ರಣ ಸಾಧಿಸಲು ಇವರಿಗೆ ಸಾಧ್ಯವಾಯಿತು. ತಮ್ಮ ಸಾಮ್ರಾಜ್ಯಗಳನ್ನು ಉತ್ತರಕ್ಕೆ ಹಾಗೂ ದಕ್ಷಿಣ ಭಾರತದ ತಮಿಳುನಾಡಿನವರೆಗೂ ವಿಸ್ತರಿಸಿಕೊಂಡರು. ರಾಜಕೀಯ ಬಲ ಹಾಗೂ ಆರ್ಥಿಕ ಸಮೃದ್ಧಿಯೆಂದು ಗುರುತಿಸಲ್ಪಡುವ ಈ ಅವಧಿಯು, ಸಾಹಿತ್ಯ, ಕಲೆ ಹಾಗೂ ವಾಸ್ತು ನಿರ್ಮಾಣ ಕ್ಷೇತ್ರಗಳ ಅಭಿವೃದ್ಧಿಗೂ ಸಾಕ್ಷಿಯಾಯಿತು.

ಸಂಬಂಧಿತ ಪುಸ್ತಕಗಳು