Categories
Ebook ಕರ್ನಾಟಕ ಗ್ಯಾಸೆಟಿಯರ್ ತುಮಕೂರು ಜಿಲ್ಲಾ

ಸಾರಿಗೆ ಮತ್ತು ಸಂಪರ್ಕ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಸಾರಿಗೆ ಮತ್ತು ಸಂಪರ್ಕ ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 30

Download  View

ಮಾನವ ಸಮಾಜದ ಸರ್ವಾಂಗೀಣ ಬೆಳವಣಿಗೆಯಲ್ಲಿ ಆರ್ಥಿಕ ಅಭಿವೃದ್ಧಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆರ್ಥಿಕ ಅಭಿವೃದ್ಧಿಯ ಸಾಧನೆಗೆ ಅಗತ್ಯವಾದ ಸಮೃದ್ಧ ಪ್ರಾಕೃತಿಕ ಸಂಪನ್ಮೂಲ, ಉತ್ಪಾದನಾಶೀಲ ಕೃಷಿ, ಪ್ರಗತಿಶೀಲ ಕೈಗಾರಿಕೆ, ಕ್ರಿಯಾಶೀಲ ವಾಣಿಜ್ಯ, ಉದ್ಯಮಶೀಲ ಬ್ಯಾಂಕಿಂಗ್‍ಗಳಂತಹ ವಿವಿಧ ಆರ್ಥಿಕ ಚಟುವಟಿಕೆಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯ ಪಾತ್ರ ಗಮನಾರ್ಹವಾಗಿದೆ. ಸಮಾಜದಲ್ಲಿ ಜನ-ಜಾನುವಾರು, ಸರಕು-ಸರಂಜಾಮುಗಳ ಸಾಗಾಣಿಕೆಯಲ್ಲಿ ಉತ್ತಮ ರಸ್ತೆ ಸಾರಿಗೆ, ರೈಲುಸಾರಿಗೆ, ಜಲಸಾರಿಗೆ, ವಾಯುಸಾರಿಗೆ; ವ್ಯವಸ್ಥಿತ ವಾಹನ ಸೌಕರ್ಯ; ವ್ಯಾಪಾರ-ವ್ಯವಹಾರ ಹಾಗೂ ಸಾಮಾಜಿಕ ಸಂಬಂಧಗಳನ್ನು ವೃದ್ಧಿಸುವಲ್ಲಿ ಸಂಪರ್ಕ ಸಾಧನಗಳಾದ ಅಂಚೆ-ತಂತಿ, ದೂರವಾಣಿ, ಮೊಬೈಲ್ ಸೇವೆ; ಸಮೂಹ ಮಾಧ್ಯಮಗಳಾದ ಆಕಾಶವಾಣಿ ಮತ್ತು ದೂರದರ್ಶನ; ವಿದ್ಯುನ್ಮಾನ ಆಡಳಿತದ ಅನುಷ್ಠಾನಕ್ಕೆ ಅಗತ್ಯವಾದ ಮಾಹಿತಿ ತಂತ್ರಜ್ಞಾನ ಸಾಧನಗಳಾದ ಗಣಕಯಂತ್ರ, ಅಂತರ್ಜಾಲ ವ್ಯವಸ್ಥೆ, ವಿದ್ಯುನ್ಮಾನ ಅಂಚೆ ಅಥವಾ ಮಿಂಚಂಚೆ (e-mail), ಅಂತರ್ಜಾಲ ದೂರವಾಣಿ ಸೇವೆ, ಸಂಕ್ಷಿಪ್ತ ಸಂದೇಶ ಸೇವೆ (SMS – Short Message Service), ಮುಂತಾದ ಸೇವೆಗಳನ್ನು ನೀಡುವಲ್ಲಿ ಸಾರ್ವಜನಿಕ ಹಾಗೂ ಸರ್ಕಾರಿ ವಲಯಗಳು ಪೈಪೋಟಿಯಲ್ಲಿವೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಬದುಕಿನಲ್ಲಿ ಸಾರಿಗೆ ಸಂಪರ್ಕ ಸಾಧನಗಳಿಂದು ಗಣನೀಯ ಸೇವೆ ಸಲ್ಲಿಸುತ್ತಿವೆ. ಅದರಲ್ಲೂ ತಂತ್ರಜ್ಞಾನ ರಂಗದಲ್ಲಿಂದು ಉಂಟಾಗಿರುವ ಅದ್ಭುತ ಪ್ರಗತಿಯಿಂದಾಗಿ ಸಾವಿರಾರು ಕಿಲೋಮೀಟರ್‍ಗಳ ಅಂತರ ದೂರವೆನಿಸದೆ, ಪ್ರಪಂಚವಿಂದು ಕಿರಿದಾಗಿ ಅತ್ಯಂತ ಸಮೀಪವಾಗುತ್ತಿದೆಯೇನೋ ಎಂಬ ಭಾವನೆ ಉಂಟಾಗುತ್ತಿದ್ದು, ವಿಶ್ವಗ್ರಾಮ (Global Village) ಪರಿಕಲ್ಪನೆ ಮತ್ತಷ್ಟು ಗಟ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯಲ್ಲಿ ಸಾರಿಗೆ ಹಾಗೂ ಸಂಪರ್ಕ ಜಾಲವನ್ನು ಒದಗಿಸುವ ನಿಟ್ಟಿನಲ್ಲಿ, ಬಹು ಹಿಂದಿನಿಂದಲೂ, ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯಾ ನಂತರದ ದಶಕಗಳಲ್ಲಿ, ಆಗಿರುವ ಬೆಳವಣಿಗೆ, ಸಾಧನೆಗಳನ್ನು ಸಂಕ್ಷಿಪ್ತವಾಗಿ ನಿರೂಪಿಸುವುದೇ ಈ ಅಧ್ಯಾಯದ ಉದ್ದೇಶವಾಗಿದೆ.

ಸಂಬಂಧಿತ ಪುಸ್ತಕಗಳು