Categories
Text ಕರ್ನಾಟಕ ಗ್ಯಾಸೆಟಿಯರ್ ತುಮಕೂರು ಜಿಲ್ಲಾ

ಸಾಹಿತ್ಯ ಮತ್ತು ಸಂಸ್ಕೃತಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಸಾಹಿತ್ಯ ಮತ್ತು ಸಂಸ್ಕೃತಿ ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 128

Download  View

ರಾಜ್ಯದ ಆಗ್ನೇಯ ಭಾಗದಲ್ಲಿರುವ ತುಮಕೂರು ಜಿಲ್ಲೆಯು ವಿಶಾಲವಾದ ಬಯಲು ಪ್ರದೇಶದಿಂದ ಕೂಡಿದ್ದು ಇಲ್ಲಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ವೈವಿಧ್ಯ ಶಿಲ್ಪಕಲೆ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಲಲಿತ ಕಲೆಗಳ ಬೀಡೆನಿಸಿದ್ದು ಜನಪದ, ಯಕ್ಷಗಾನ, ರಂಗಭೂಮಿಗಳ ತ್ರಿವೇಣಿ ಸಂಗಮವಾಗಿದೆ. “ಕಲ್ಪತರು ನಾಡು” ಎಂಬ ಅನ್ವರ್ಥನಾಮವನ್ನು ಹೊಂದಿದ್ದು ಗಂಗರಸ ದುರ್ವಿನೀತನ ಕಾಲದ ತಾಮ್ರಶಾಸನವೊಂದರಲ್ಲಿ ಉಲ್ಲೇಖಿತವಾಗಿರುವಂತೆ ‘ಸುಜನ ಜನಪದ’ರೆಂಬ ನುಡಿಗಟ್ಟನ್ನು ಅರ್ಥವತ್ತಾಗಿಸಿದೆ. ಕರ್ನಾಟಕದ ಪ್ರಮುಖ ರಾಜಮನೆತನವಾದ ಗಂಗರ ಆಳ್ವಿಕೆಗೆ ಜಿಲ್ಲೆಯ ದಕ್ಷಿಣಭಾಗವು ಒಳಪಟ್ಟಿದ್ದು ಅವರ ಕಾಲದ ಶಾಸನ, ವಾಸ್ತುಶಿಲ್ಪಗಳು ಇಂದಿಗೂ ಉಳಿದು ಬಂದಿವೆ. ಈ ಮನೆತನದೊಂದಿಗೆ ರಕ್ತಸಂಬಂಧವಿರಿಸಿಕೊಂಡಿದ್ದ ನೊಳಂಬರು ಜಿಲ್ಲೆಯ ಪೂರ್ವಭಾಗದ ಮೇಲೆ ನಿಯಂತ್ರಣ ಹೊಂದಿದ್ದು, ಆ ಭಾಗದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು ಶಾಸನೋಕ್ತವಾಗಿವೆ. ನೊಳಂಬರ ರಾಜಧಾನಿಯಾಗಿದ್ದ ಹೇಮಾವತಿಯು (ಹೆಂಜೇರು–ಮಡಕಶಿರಾ ತಾಲೂಕು, ಅನಂತಪುರ ಜಿಲ್ಲೆ, ಆಂಧಪ್ರದೇಶ) ಹಿಂದೆ, ತುಮಕೂರು ಜಿಲ್ಲೆಯಲ್ಲಿಯೇ ಇದ್ದು, ಜಿಲ್ಲೆಯ ಹಲವೆಡೆ ನೊಳಂಬರ ವಾಸ್ತುಶಿಲ್ಪ ಪ್ರಭಾವ ಕಂಡುಬರುತ್ತದೆ. ರಾಷ್ಟ್ರಕೂಟ ಕೃಷ್ಣನ ಗುಬ್ಬಿ ತಾಮ್ರಶಾಸನವು ಅವರ ವಂಶಾವಳಿ ಹಾಗೂ ಎಲ್ಲೋರಾದಲ್ಲಿ ನಿರ್ಮಾಣಗೊಂಡ ದೇವಾಲಯದ ಬಗ್ಗೆ ಮಾಹಿತಿಯನ್ನು ಒದಗಿಸುವ ಅಪೂರ್ವ ಶಾಸನವಾಗಿದೆ.

ಸಂಬಂಧಿತ ಪುಸ್ತಕಗಳು