ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಸಿಕ್ಲಿಗರ | ಡಾ ಚಲವಾದಿ ಬಸವರಾಜ, ಶೇಖರಸಿಂಗ್ ಎಸ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 110 |
ಈಗಾಗಲೇ ಹಲವಾರು ಬುಡಕಟ್ಟು ಸಮುದಾಯಗಳ ಕುರಿತಾಗಿ ಅಧ್ಯಯನಗಳು ನಡೆದಿದೆ. ಆದರೆ ಅಧ್ಯಯನ ನಡೆಯಬೇಕಾದ ಸಮುದಾಯಗಳು ಸಾಕಷ್ಟಿವೆ. ಅಂತಹ ಸಮುದಾಯಗಳಲ್ಲಿ ಸಿಕ್ಲಿಗರ ಸಮುದಾಯವು ಒಂದಾಗಿದೆ. ಇವರಿಗೆ ಸಿಕ್ಲಿಗರೆಂದು ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಕಾರಣ ಸ್ವತಂತ್ರ ಭಾರತದ ಕರ್ನಾಟಕ ರಾಜ್ಯದಲ್ಲಿ ಇವರನ್ನು ಮೀಸಲಾತಿಯ ಯಾವುದೇ ಪಟ್ಟಿಗೂ ಇದುವರೆಗೂ ಸೇರಿಸಿರುವುದಿಲ್ಲ. ಮೊದಲಿಗೆ ಇವರನ್ನು ಅಪರಾಧಿ ವರ್ಗಕ್ಕೆ ಸೇರಿಸಲಾಗಿತ್ತು. ಏಕೆಂದರೆ ಇವರು ತಲವಾರ, ಖಡ್ಗ, ಚಾಕು, ಚೂರಿಗಳನ್ನು ತಯಾರಿಸುವುದರಿಂದ ಹೆಚ್ಚು ಜನರು ಇವರನ್ನು ಅನುಮಾನದಿಂದಲೆ ನೋಡುತ್ತಿದ್ದರು. |