Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಸ್ತ್ರೀ ಸ್ವಗತ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಸ್ತ್ರೀ ಸ್ವಗತ ಶ್ರೀ ಕುಮಾರ ಶಂಕರನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 42

 

Download    |    View

ಏನಿದು ವಿಚಿತ್ರ. ಅತ್ಯಂತ ಎತ್ತರವೂ ಸುಂದರವೂ ಆದ ಪ್ರದೇಶ. ಇದನ್ನೇ ಕೈಲಾಸ ಪರ್ವತವೆಂದು, ಬೆಳ್ಳಿಯ ಬೆಟ್ಟವೆಂದು, ರಜತ ಗಿರಿಯೆಂದೇ ಕರೆಯುತ್ತಿದ್ದಾರೆ. ಇಲ್ಲಿ ಸರ್ವಾತ್ಮಕನು, ಸರ್ವವ್ಯಾಪಕನು, ಸರ್ವೇಶ್ವರನೂ ಆದ ಭಗವಂತನು ಪ್ರಮಥಾದಿ ಗಣಗಳೊಂದಿಗೆ ನೆಲೆಸಿದ್ದಾನೆ. ಆದ್ದರಿಂದಲೇ ಈ ಕ್ಷೇತ್ರಕ್ಕೊಂದು ಪಾವಿತ್ರ್ಯ ಉಂಟಾಯಿತು. ದೂರದಿಂದಲೇ ಕಂಡರೂ ಕಂಡವರ ಪಾಪ ಪರಿಹಾರವಾಗುವುದೆನ್ನುವ ಪ್ರಬಲವಾದ ನಂಬುಗೆ ಭಕ್ತರ ಮನದಲ್ಲಿ.