Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಹಿಮಾಚಲವನ್ನಾಳಿದ ಕರ್ನಾಟ ಸೇನರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಹಿಮಾಚಲವನ್ನಾಳಿದ ಕರ್ನಾಟ ಸೇನರು ಪ್ರೊ. ಸದಾನಂದ ಕನವಳ್ಳಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 131

Download  View

 ಭಾರತದಲ್ಲಿ ರಾಜವಂಶಗಳ ಮತ್ತು ಅವುಗಳ ರಾಜರ ಚರಿತ್ರೆಕಾರರು ಸಾಮಾನ್ಯವಾಗಿ ಅವರು ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ಉಲ್ಲೇಖಿಸುವರು. ಆ ಮಹಾಯುದ್ಧದಲ್ಲಿ ಅವರ ಸಾಧನೆಗಳು ಅವರನ್ನು ಭಾರತೀಯರೆಂದು ಹಾಗೂ ಕ್ಷಾತ್ರಧರ್ಮ ಪರಿಪಾಲರ ಕ್ಷತ್ರಿಯರೆಂದು ಅನನ್ಯೀಕರಿಸುತ್ತವೆ. ತಮ್ಮ ಪ್ರಾಣಗಳನ್ನು ತಮ್ಮ ರಾಜನಿಗಾಗಿ ಮತ್ತು ದೇಶಕ್ಕಾಗಿ ತ್ಯಾಗಮಾಡುವುದು ಮತ್ತು ಧರ್ಮರಾಜ್ಯ ಸ್ಥಾಪಿಸುವುದು ಕ್ಷಾತ್ರಧರ್ಮದ ಮೌಲ್ಯಗಳಲ್ಲೊಂದಾಗಿತ್ತು. ಧರ್ಮರಾಜ್ಯವೆಂದರೆ ವರ್ಣಾಶ್ರಮ ಪಾಲನೆಯೇ ಆಗಿತ್ತು.