Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಹೃದಯಾಘಾತ ಚಿಕಿತ್ಸೆ ಹಾಗೂ ನಿವಾರಣೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಹೃದಯಾಘಾತ ಚಿಕಿತ್ಸೆ ಹಾಗೂ ನಿವಾರಣೆ ಡಾ. ಚಂದ್ರಕಾಂತ ಬಿ. ಪಾಟೀಲ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 76

Download  View

ಸಾಮಾನ್ಯವಾಗಿ ಹೃದಯವು ಪ್ರೇಮ, ಪ್ರೀತಿ, ವಿಶ್ವಾಸ, ಭಾವನೆಗಳ ಕುರುಹಾಗಿದೆ. ಆದರೆ ವಾಸ್ತವವಾಗಿ ಹೃದಯವು ರಕ್ತವನ್ನು ದೇಹಕ್ಕೆ ಪೂರೈಸುವ ಒಂದು ಅದ್ಭುತವಾದ ಯಂತ್ರವಾಗಿದೆ. ಹೃದಯವು ನಮ್ಮ ಎದೆ ಗೂಡಿನ ಮಧ್ಯ ಹಾಗೂ ಎಡಭಾಗದಲ್ಲಿದ್ದು, ನಮ್ಮ ಕೈ ಮುಷ್ಠಿಯಷ್ಟುಗಾತ್ರದ್ದಾಗಿದೆ. ಅದರ ತೂಕವು ಸುಮಾರು 250-300 ಗ್ರಾಂಗಳಷ್ಟು. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ ಶ್ವಾಸಕೋಶಗಳಿದ್ದು, ಅದರ ಹಿಂದೆ ಬೆನ್ನು ಮೂಳೆಗಳಿದ್ದು, ಮುಂದೆ ಎದೆಗೂಡಿನ ಮೂಳೆಗಳಿರುತ್ತವೆ.