ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
19 ಹಾಗೂ 20ನೆಯ ಶತಮಾನದ ಬೆಳವಣಿಗೆಗಳು ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 18

Download  View

ಟಿಪ್ಪು ಸುಲ್ತಾನನ ಮರಣಾನಂತರ ಬಂದ ಬ್ರಿಟಿಷ್‌ ಆಳ್ವಿಕೆಯು ಕರ್ನಾಟಕದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು.ಕನ್ನಡ ಮಾತನಾಡುವ ಸ್ಥಳಗಳನ್ನು ಹಲವಾರು ಸಣ್ಣ ಭಾಗಗಳಾಗಿ ವಿಂಗಡಿಸಿ, ಅವುಗಳನ್ನು ವಿವಿಧ ಆಡಳಿತಗಳಡಿಯಲ್ಲಿ ಇರಿಸಲಾಯಿತು.ಬ್ರಿಟಿಷರು ಮೈಸೂರನ್ನು ಪ್ರತ್ಯೇಕ ಆದರೆ ಕಡಿಮೆ ಪ್ರದೇಶವನ್ನುಳ್ಳ ಸಂಸ್ಥಾನವಾಗಿ ಉಳಿಸಿಕೊಂಡರು.ಕ್ರಿ.ಶ.1799ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಸಿಂಹಾಸನವನ್ನು ಏರಿದಾಗ ಇನ್ನೂ ಬಾಲಕರಾಗಿದ್ದರು; ಆಧುನಿಕ ಜಿಲ್ಲೆಗಳಾದ ಗುಲ್ಬರ್ಗಾ, ರಾಯಚೂರು, ಕೊಪ್ಪಳ ಹಾಗೂ ಬೀದರ್‍ನ ಪ್ರದೇಶಗಳನ್ನು ಹೈದರಾಬಾದ್ ನಿಜಾಮ್‍ಗೆ ಹಸ್ತಾಂತರಗೊಳಿಸಲಾಯಿತು.ಕೆನರಾ ಜಿಲ್ಲೆ (ಈಗಿನ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು) ಹಾಗೂ ಬಳ್ಳಾರಿಗಳನ್ನು ಟಿಪ್ಪುವಿನಿಂದ ತೆಗೆದುಕೊಂಡು, ಅದನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರ್ಪಡೆ ಮಾಡಲಾಯಿತು.ಕ್ರಿ.ಶ.1818ರಲ್ಲಿ ಪೇಶ್ವೆಯಿಂದ ಧಾರವಾಡ, ಗದಗ್, ಹಾವೇರಿ, ಬಿಜಾಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳನ್ನು ಬಾಂಬೆ ಪ್ರೆಸಿಡೆನ್ಸಿಯಲ್ಲಿ ವಿಲೀನಗೊಳಿಸಲಾಯಿತು.ಕ್ರಿ.ಶ.1862ರಲ್ಲಿ, ಕೆನರಾ ಜಿಲ್ಲೆಯನ್ನು ಇಬ್ಭಾಗಿಸಿ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿದರೆ, ದಕ್ಷಿಣ ಕೆನರಾ ಮದ್ರಾಸ್ ಪ್ರೆಸಿಡೆನ್ಸಿಯಲ್ಲೇ ಉಳಿಯಿತು.ಜೊತೆಗೆ, ಸವಣೂರಿನ ನವಾಬನೂ ಸೇರಿದಂತೆ, ಇತರ 15 ರಾಜಕುಮಾರರು ಸಣ್ಣ ಪುಟ್ಟ ಕನ್ನಡ ಸಂಸ್ಥಾನಗಳನ್ನು ಆಳಿದ್ದು, ಅವರಲ್ಲಿ ಅನೇಕರು ಮರಾಠ ಅರಸರಾಗಿದ್ದರು.ಅವುಗಳ ಪೈಕಿ ಜಮಖಂಡಿ, ಔಂಧ್, ರಾಮದುರ್ಗ, ಮುಧೋಳ್, ಸಂಡೂರು, ಹಿರೇ ಕುರುಂದವಾಡ್, ಜತ್, ಸಾಂಗ್ಲಿ, ಕೊಲ್ಹಾಪುರ್, ಮೀರಜ್, ಕಿರಿಯ ಕುರುಂದವಾಡ, ಅಕ್ಕಲಕೋಟೆ, ಮುಂತಾದವು ಮರಾಠ ರಾಜಕುಮಾರರ ನಿಯಂತ್ರಣಕ್ಕೆ ಒಳಪಟ್ಟಿದ್ದವು.

ಸಂಬಂಧಿತ ಪುಸ್ತಕಗಳು