Categories
Ebook ಕರ್ನಾಟಕ ಗ್ಯಾಸೆಟಿಯರ್ ಕರ್ನಾಟಕದ ಮಿನುಗುನೋಟ

ಕರ್ನಾಟಕದ ಸುವರ್ಣಯುಗ ವಿಜಯನಗರ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕರ್ನಾಟಕದ ಸುವರ್ಣಯುಗ ವಿಜಯನಗರ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 33

Download  View

ವಿಜಯನಗರದ ಆಳ್ವಿಕೆಯ ಪ್ರಾರಂಭದಲ್ಲಿ, ಡೆಕ್ಕನ್ ಹಾಗೂ ದಕ್ಷಿಣ ಭಾರತದ ಪರಿಸ್ಥಿತಿಯು ಗಂಭೀರವಾಗಿತ್ತು.ಇದಕ್ಕೆ ಕಾರಣ, ಮಹಮ್ಮದೀಯ ಧಾಳಿಗಳಿಂದ ವಾರಂಗಲ್ ರಾಜ್ಯಕ್ಕೆ ವಿನಾಶದ ಬೆದರಿಕೆ ಬಂದಿತು.ಕಳಿಂಗ ರಾಜ್ಯವನ್ನು ಅದಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.13ನೆಯ ಶತಮಾನದ ಸೂಫಿ ಕವಿಯಾದ ಅಮೀರ್ ಖುಸ್ರುವಿನ ಪ್ರಕಾರ, ಕ್ರಿ.ಶ.1316ರಲ್ಲಿ ದೆಹಲಿಯ ಸಿಂಹಾಸನವನ್ನು ಏರಿದ ಮುಬಾರಕ್‍ನು ಹರಪಾಲನನ್ನು ಚಾವಟಿ ಏಟಿನಿಂದ ಹೊಡೆದು ಸಾಯಿಸಲಾಯಿತು. ದೇವಗಿರಿಯು ಮುಸಲ್ಮಾನ ಪ್ರಾಂತವಾಗಿ ವಾರಂಗಲ್‍ನ ಪ್ರತಾಪರುದ್ರನು ಶರಣಾಗತನಾದನು. ದಕ್ಷಿಣದ ರಾಜ್ಯಗಳ ನಡುವಣ ವೈರತ್ವವು, ಅದರಲ್ಲೂ ವಿಶೇಷವಾಗಿ ಯಾದವರು ಹಾಗೂ ಹೊಯ್ಸಳರ ನಡುವಣ ವೈಷಮ್ಯವು, ದಕ್ಷಿಣದಲ್ಲಿ ತಮ್ಮ ಅಧಿಕಾರವನ್ನು ವಿಸ್ತರಿಸಲು ಮುಸಲ್ಮಾನರಿಗೆ ಸುಲಭಗೊಳಿಸಿತು. ಪ್ರಾರಂಭದಲ್ಲಿ ಲೂಟಿ ಮಾಡುವ ಉದ್ದೇಶದೊಂದಿಗೆ ಈ ಧಾಳಿಗಳನ್ನು ಕೈಗೊಳ್ಳಲಾಯಿತು, ಆದರೆ, ಮಹಮ್ಮದ್-ಬಿನ್-ತುಘಲಕ್‍ನೊಂದಿಗೆ ಅವರ ಅಧಿಪತ್ಯದ ವಿಸ್ತರಣೆಯು ಮುಸಲ್ಮಾನ ಕಾರ್ಯನೀತಿಯ ಘೋಷಿತ ಉದ್ದೇಶವಾಯಿತು.

ಸಂಬಂಧಿತ ಪುಸ್ತಕಗಳು