Categories
Ebook ಕರ್ನಾಟಕ ಗ್ಯಾಸೆಟಿಯರ್ ತುಮಕೂರು ಜಿಲ್ಲಾ

ಕೈಗಾರಿಕೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕೈಗಾರಿಕೆಗಳು ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 68

Download  View

ತುಮಕೂರು ಜಿಲ್ಲೆಯು ವ್ಯವಸಾಯ ಪ್ರಧಾನವಾಗಿದ್ದು, ವ್ಯವಸಾಯೋತ್ಪನ್ನಗಳಾದ ಬತ್ತ, ರಾಗಿ, ನೆಲಗಡಲೆ, ರೇಷ್ಮೆ, ಹತ್ತಿ, ಎಣ್ಣೆ ಬೀಜಗಳು ಮೊದಲಾದವುಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಮಧುಗಿರಿ, ಕೊರಟಗೆರೆ, ಶಿರಾ ಮತ್ತು ಪಾವಗಡ ತಾಲೂಕುಗಳಲ್ಲಿ ನೆಲಗಡಲೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲೂಕುಗಳಲ್ಲಿ ಬತ್ತ, ರಾಗಿ, ಹಿಪ್ಪುನೇರಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ಮತ್ತು ತುರುವೇಕೆರೆ ತಾಲೂಕುಗಳಲ್ಲಿ ತೆಂಗನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 2010-11ರಲ್ಲಿ 2,40,658 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಮತ್ತು ಉಪತೃಣ ಧಾನ್ಯಗಳನ್ನು, 67,257 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳನ್ನು, ಒಟ್ಟು 3,07,915 ಹೆ. ಪ್ರದೇಶದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯಲಾಗಿತ್ತು. 1,35,019 ಹೆ. ಪ್ರದೇಶದಲ್ಲಿ ನೆಲಗಡಲೆ, 4197 ಹೆ. ಪ್ರದೇಶದಲ್ಲಿ ಸೂರ್ಯಕಾಂತಿ ಮೊದಲಾದವು ಸೇರಿ ಒಟ್ಟು 1,44,929 ಹೆ. ಪ್ರದೇಶದಲ್ಲಿ ಎಣ್ಣೆ ಬೀಜಗಳನ್ನು 4388 ಹೆ. ಪ್ರದೇಶದಲ್ಲಿ ಹಣ್ಣುಗಳನ್ನು, 22,249 ಹೆ. ಪ್ರದೇಶದಲ್ಲಿ ತರಕಾರಿಗಳನ್ನು ಮತ್ತು 12,538 ಹೆ. ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಹೊಗೆಸೊಪ್ಪು ಮೊದಲಾದವುಗಳನ್ನು ಬೆಳೆಯಲಾಗಿತ್ತು. ಜಿಲ್ಲೆಯ ಆಹಾರ ಮತ್ತು ಆಹಾರೇತರ ಬೆಳೆಗಳೆರಡೂ ಇಲ್ಲಿನ ಪ್ರಮುಖ ಕೈಗಾರಿಕೆಗಳಾದ ಅಕ್ಕಿಗಿರಣಿ, ಹಿಟ್ಟಿನ ಗಿರಣಿ, ಎಣ್ಣೆ ಮಿಲ್ಲುಗಳು, ಕೈಮಗ್ಗ ಮತ್ತು ವಿದ್ಯುತ್ ಮಗ್ಗ ಮೊದಲಾದವುಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತಿವೆ. 2011-12ರಲ್ಲಿ ಜಿಲ್ಲೆಯಲ್ಲಿ 3053.42 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೆಳೆ ಬೆಳೆಯಲಾಗುತ್ತಿದ್ದು, 2300.973 ಟನ್ ರೇಷ್ಮೆಗೂಡಿನ ಉತ್ಪಾದನೆ ಮಾಡಲಾಗಿತ್ತು.ಜಿಲ್ಲೆಯಲ್ಲಿ 8651 ಮಂದಿ ರೇಷ್ಮೆ ಕಸುಬು ಕೈಗೊಂಡು, ರೂ. 4673.95 ಲಕ್ಷ ಮೌಲ್ಯದ ರೇಷ್ಮೆಗೂಡು ಉತ್ಪಾದಿಸಿ ರೇಷ್ಮೆ ಉತ್ಪಾದನೆಯಲ್ಲಿ ಜಿಲ್ಲೆಯು ಪ್ರಮುಖ ಸ್ಥಾನ ಪಡೆದುಕೊಂಡು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಗಿದೆ.

ಸಂಬಂಧಿತ ಪುಸ್ತಕಗಳು