Categories
Ebook ಇ-ಪಬ್ ಕರ್ನಾಟಕ ಶಿಲ್ಪಕಲಾ ಅಕಾಡೆಮಿ

ಬಹುಮುಖೀಯ ಶಿಲ್ಪ ಸಾರ್ವಭೌಮ ಎ. ಕಿರಣ್ ಸುಬ್ಬಯ್ಯ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಬಹುಮುಖೀಯ ಶಿಲ್ಪ ಸಾರ್ವಭೌಮ ಎ. ಕಿರಣ್ ಸುಬ್ಬಯ್ಯ ಎನ್.ಬಿ.ಕಾವೇರಪ್ಪ
ಕೃತಿಯ ಹಕ್ಕುಸ್ವಾಮ್ಯ ಎನ್.ಬಿ.ಕಾವೇರಪ್ಪ
ಪುಟ ಸಂಖ್ಯೆ 41

Download  View

Epub  Text

ಕೊಡಗಿನ ‘ಆದಿಕವಿ’ಯೆಂದು ಅಮರರಾದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ1ಯ (1868-1944) ನಂತರ ಆ ಮನೆತನಕ್ಕೆ ಹೆಸರು ತಂದುಕೊಡುತ್ತಿರುವ ಮತ್ತೋರ್ವ ವ್ಯಕ್ತಿಯೇ ಪ್ರಸ್ತುತ ನಮ್ಮೊಡನೆ ಇರುವ ಅಪ್ಪನೆರವಂಡ ಕಿರಣ್ ಸುಬ್ಬಯ್ಯನವರು. ಸಮಕಾಲೀನ-ಆಧುನಿಕ ಶಿಲ್ಪಕಲಾ ಪ್ರಾಕಾರದ ಸಂದರ್ಭದಲ್ಲಿ ಕರ್ನಾಟಕದ ಒಬ್ಬ ಶ್ರೇಷ್ಠ ಶಿಲ್ಪಿ ಹೇಗೆ ಕಲಾಬರಹಗಾರರ2, ಕಲಾವಿಮರ್ಶಕರ ಹಾಗೂ ಕಲಾಸಂಬಂಧಿ ಸಂಸ್ಥೆಗಳ ದೃಷ್ಟಿಯಿಂದ ಬಹಳ ಕಾಲದವರೆಗೆ ಉಪೇಕ್ಷೆಗೊಳಪಟ್ಟರು ಎನ್ನುವುದಕ್ಕೆ ಮೈಸೂರಿನ ಒಂದು ಮೂಲೆಯಲ್ಲಿ ತನ್ನಷ್ಟಕ್ಕೆ ತಾನು ನವ್ಯ-ನವೀನ ಮಾದರಿಯ ಶಿಲೆ ಹಾಗೂ ಕಾಷ್ಟ ಶಿಲ್ಪಗಳನ್ನು ಸೃಷ್ಟಿಸುತ್ತಾ ಬಂದಿರುವ, ನಮ್ಮೊಡನೆ ಇರುವ ಶಿಲ್ಪಿ ಎ.ಕಿರಣ್ಸುಬ್ಬಯ್ಯನವರು ಸಾಕ್ಷಿಯಾಗಿದ್ದಾರೆ.