Categories
Scanned Book ಕರ್ನಾಟಕ ಕೈಪಿಡಿ ೨೦೧೭ ಕರ್ನಾಟಕ ಗ್ಯಾಸೆಟಿಯರ್

ಶಿಕ್ಷಣ ಮತ್ತು ಕ್ರೀಡೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಶಿಕ್ಷಣ ಮತ್ತು ಕ್ರೀಡೆಗಳು ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 583-650

Download  View

ಪ್ರಾಚೀನ ಕಾಲದಲ್ಲಿ ಶಿಕ್ಷಣ: ಪ್ರಾಚೀನ ಕಾಲದಲ್ಲಿ ಭಾರತದ ಇತರೆಡೆಯಲ್ಲಿದ್ದಂತೆ ವೈದಿಕ ಶಿಕ್ಷಣ ಈ ಭಾಗದಲ್ಲಿಯೂ ಪ್ರಚಲಿತವಾಗಿತ್ತು. ಆ ಕಾಲದಲ್ಲಿ ಶಿಕ್ಷಣ ವಿಧಾನ ಬಹುತೇಕ ಮೌಖಿಕವಾಗಿತ್ತು. ಕಲಿಕಾರ್ಥಿಗಳು ಗ್ರಂಥಗಳ ಹೆಚ್ಚಿನ ಮಾಹಿತಿಗಳನ್ನು ಕೇವಲ ಕಂಠಪಾಠದ ಮೂಲಕ ಕಲಿತು ನೆನಪಿನಲ್ಲಿಟ್ಟು ಕೊಳ್ಳಬೇಕಾಗಿತ್ತು. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ತಮ್ಮ ಕಸುಬಿಗೆ ಸಂಬಂಧಿಸಿದ ಶಿಕ್ಷಣ ಪಡೆಯುತ್ತಿದ್ದರು. ಬ್ರಾಹ್ಮಣರ ಶಿಕ್ಷಣ ವಿಷಯ, ಜ್ಞಾನ ಮತ್ತು ವೈದಿಕ ವೃತ್ತಿಗೆ ಸಂಬಂಧಿಸಿದ್ದಾಗಿತ್ತು. ಪಠ್ಯಕ್ರಮದಲ್ಲಿ ವೇದಾಂತ, ಗಣಿತ, ಅರ್ಥಶಾಸ್ತ್ರ, ವ್ಯಾಕರಣ, ತರ್ಕಶಾಸ್ತ್ರ, ನೀತಿಶಾಸ್ತ್ರ, ಖಗೋಳಶಾಸ್ತ್ರ, ಶಬ್ದಶಾಸ್ತ್ರ ಮುಂತಾದ ವಿಷಯಗಳ ಜೊತೆಗೆ ನೃತ್ಯ, ಸಂಗೀತ ಇತ್ಯಾದಿ ಪ್ರಾಯೋಗಿಕ ಲಲಿತ ಕಲೆಗಳು ಸೇರಿದ್ದವು.

ಸಂಬಂಧಿತ ಪುಸ್ತಕಗಳು