Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಸಮಣ ಸುತ್ತಂ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಸಮಣ ಸುತ್ತಂ ಜಿ. ಎಸ್‌. ವಸಂತಮಾಲಾ‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 31

Download  View

Ebook | Text

 ವೇದಗಳ ಪೂರ್ವದಲ್ಲೆ ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದು ವೇದ, ಉಪನಿಷತ್‌, ಭಾಗವತಗಳಲ್ಲಿ ದೊರೆಯುವ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಐದು ಸಾವಿರ ವರ್ಷಗಳಷ್ಟು ಪ್ರಾಚೀನ ಇತಿಹಾಸವಿರುವ ಜೈನಧರ್ಮ ಅಂದು ಪ್ರತಿಪಾದಿಸಿದ ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಮುಂತಾದ ತತ್ವಗಳು ಇಂದಿಗೂ ಆರೋಗ್ಯಕರವಾದ ಸಮಾಜಕ್ಕೆ ಅತ್ಯವಶ್ಯ. ಸಾರ್ವಕಾಲಿಕ ಹಾಗೂ ಸಾರ್ವಭೌಮಿಕವಾದ ಈ ಮಾನವೀಯ ಮೌಲ್ಯಗಳು ಜೈನಧರ್ಮವನ್ನು ಸುದೀರ್ಘಕಾಲ ಜೀವಂತವಾಗಿಡಲು ಕಾರಣವಾಗಿವೆ.