i ಮೂರು ತಲೆಮಾರು (ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪಡೆದ ಕೃತಿ) ತ.ಸು. ಶಾಮರಾಯ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು - 560 002 ii Collection of Research Books by MOORU TALEMARU edited by T.S. Shama Rao, Published by Manu Baligar, Director, Department of Kannada and Culture, Kannada Bhavana, J.C.Road, Bengaluru - 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ : 2011 ಪ್ರತಿಗಳು : 1000 ಪುಟಗಳು : xxii + 347 ಬೆಲೆ : ರೂ. 80/- ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್‌ ನಂ. 69, ಸುಬೇದಾರ್ ಛತ್ರಂ ರೋಡ್ ಬೆಂಗಳೂರು - 560 020 ದೂ : 23342724 iii ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಸರ್ಕಾರ ವಿಧಾನಸೌಧ ಮುಖ್ಯಮಂತ್ರಿಗಳು ಳೂರು 560 001 ಸಿಎಂ/ಪಿಎಸ್/26/11 ಶುಭ ಸಂದೇಶ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು 55ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸ್ಮರಣೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ ``ವಿಶ್ವ ಕನ್ನಡ ಸಮ್ಮೇಳನ’’ ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ 100 ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಾಸಕ್ತರಿಗೆ ಒದಗಿಸುವ ಹಂಬಲ ನಮ್ಮದು. ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ. ದಿನಾಂಕ 24.01.2011 (ಬಿ.ಎಸ್. ಯಡಿಯೂರಪ್ಪ) iv ಗೋವಿಂದ ಎಂ. ಕಾರಜೋಳ ಕರ್ನಾಟಕ ಸರ್ಕಾರ ವಿಧಾನಸೌಧ ಕನ್ನಡ ಮತ್ತು ಸಂಸ್ಕೃತಿ, ಬೆಂಗಳೂರು - 01 ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು ಚೆನ್ನುಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು 100 ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ಕೆ ಸಮಿತಿಯು ಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಎಲ್ಲಾ ವಿದ್ವಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹೃದಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬುದು ನಮ್ಮ ಹೆಗ್ಗುರಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೈಲಿಗಲ್ಲುಗಳಾಗಿರುವ ಈ ಪುಸ್ತಕಗಳು ಭಾವಿ ಪೀಳಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ. ದಿನಾಂಕ 18.01.2011 (ಗೋವಿಂದ ಎಂ. ಕಾರಜೋಳ) v ಅಧ್ಯಕ್ಷರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‍ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ. ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆ ! ದಿನಾಂಕ 16.12.2010 ಎಲ್.ಎಸ್. ಶೇಷಗಿರಿ ರಾವ್ ಅಧ್ಯಕ್ಷ ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ vi ಹೊನ್ನುಡಿ ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಮಾಣವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಐದನೂರು ವರ್ಷಗಳಿಗೂ ದೀರ್ಘವಾದ ಐತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ, ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ. ಕರ್ನಾಟಕವು ಏಕೀಕರಣಗೊಂಡು 55ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿರುವುದು ಒಂದು ಐತಿಹಾಸಿಕವೂ ಹಾಗೂ ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರದ 101 ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ಮಾಲಿಕೆಯನ್ನು ಸಾಹಿತ್ಯಾಭಿಮಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪಯೋಗ ಪಡೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ. (ಐ.ಎಂ. ವಿಠ್ಠಲಮೂರ್ತಿ) ವಿಶೇಷಾಧಿಕಾರಿಗಳು ವಿಶ್ವ ಕನ್ನಡ ಸಮ್ಮೇಳನ vii ಎರಡು ನುಡಿ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ `ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು 100 ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ. ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್.ಎಸ್. ಶೇಷಗಿರಿರಾವ್‍ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ / ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಆಯ್ಕೆ ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ದಿನಾಂಕ 17.01.2011 (ರಮೇಶ್ ಬಿ.ಝಳಕಿ) ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ viii ಪ್ರಕಾಶಕರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ‘ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ. ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ. ಎಲ್.ಎಸ್. ಶೇಷಗಿರಿ ರಾವ್‍ರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್‌ಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕರ್, ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು. ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವ ಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆ್ಯಡ್ಸ್‌ನ ಮಾಲೀಕರಾದ ix ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿಮಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಮ್ಮದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ದಿನಾಂಕ 11.01.2011 ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ x ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ ಅಧ್ಯಕ್ಷರು ಪ್ರೊ . ಎಲ್.ಎಸ್. ಶೇಷಗಿರಿ ರಾವ್ ಸದಸ್ಯರು ಡಾ|| ಚಂದ್ರಶೇಖರ ಕಂಬಾರ ಡಾ|| ಎಂ.ಎಂ. ಕಲಬುರ್‌ಗಿ ಡಾ|| ದೊಡ್ಡರಂಗೇಗೌಡ ಡಾ|| ಅರವಿಂದ ಮಾಲಗತ್ತಿ ಡಾ|| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಡಾ|| ಪ್ರಧಾನ್ ಗುರುದತ್ತ ಡಾ|| ಹಂಪ ನಾಗರಾಜಯ್ಯ ಡಾ|| ಎಚ್.ಜೆ. ಲಕ್ಕಪ್ಪಗೌಡ ಶ್ರೀಮತಿ ಸಾರಾ ಅಬೂಬಕರ್ ಡಾ|| ಪಿ.ಎಸ್. ಶಂಕರ್ ಸದಸ್ಯ ಕಾರ್ಯದರ್ಶಿ ಶ್ರೀ ಮನು ಬಳಿಗಾರ್, ಕ.ಆ.ಸೇ. ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ xi ಸಜ್ಜನಿಕೆ ಸುಸಂಸ್ಕೃತಿ ಸರಸತೆಗಳಿಂದ ಸಂಪನ್ನ ಪುರುಷರೂ ವೈದ್ಯವಿದ್ಯೆಯ ಅರಿವು ಸೇವೆಗಳಿಂದ ಸರ್ವಜನಾದರಣೀಯರೂ ಸಾಹಿತ್ಯ ಸಂಗೀತ ಕಲಾಸಕ್ತಿಗಳಿಂದ ರಸಿಕರೂ ನನ್ನ ಪ್ರಿಯ ಸ್ನೇಹಿತರೂ ಆದ ಡಾ. ದೊಡ್ಡನಾರಣಪ್ಪ ಅವರಿಗೆ ಈ ಕೃತಿ ಕೃತಜ್ಞತೆಯಿಂದ ಸಮರ್ಪಿತವಾಗಿದೆ. xiii ಮುನ್ನುಡಿ ನನ್ನ ಪ್ರಿಯಗುರುಗಳಾದ ಶ್ರೀ ತ.ಸು. ಶಾಮರಾಯರು ಬರೆದಿರುವ `ಮೂರು ತಲೆಮಾರು' ಎಂಬ ಈ ಕೃತಿ, ಪುರಾಣ, ಚರಿತ್ರೆ ಹಾಗೂ ವಾಸ್ತವಗಳನ್ನು ಒಂದು ಸೃಜನಶೀಲ ಕೇಂದ್ರಬಿಂದುವಿಗೆ ತಂದುಕೊಂಡು ಸಾಕ್ಷೀಪ್ರಜ್ಞೆಯಲ್ಲಿ ನಿರೂಪಿಸಿದ ಅನನ್ಯ ಕಥನವಾಗಿದೆ. ನಿಜವಾಗಿ ನೋಡಿದರೆ ಪುರಾಣ ಚರಿತ್ರೆ ಮತ್ತು ವಾಸ್ತವ ಎಂದು ನಾವು ಗುರುತಿಸುವ ಈ ಮೂರು ನೆಲೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಈ ಮೂರೂ ಅಸ್ತಿತ್ವದ ನಿರಂತರತೆಯಲ್ಲಿ ನೆಲೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಈ ಮೂರೂ ಅಸ್ತಿತ್ವದ ನಿರಂತರತೆಯಲ್ಲಿ ಉದ್ಬದ್ಧವಾಗುವ ಘಟನಾವಲಿಗಳನ್ನು ಕುರಿತು ಕಾಲ-ದೇಶ ಬದ್ಧವಾದ ಮನಸ್ಸು ತನ್ನ ಸಂಸ್ಕಾರಕ್ಕೆ ಅನುಸಾರವಾಗಿ ಅದನ್ನು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವ ಕ್ರಮಕ್ಕೆ ನಾವು ಕೊಟ್ಟುಕೊಳ್ಳುವ ಹೆಸರುಗಳಷ್ಟೇ. `ಮೂರು ತಲೆಮಾರು' ಎಂಬ ಈ ಕೃತಿ ದಿವಂಗತ ಶ್ರೀ ಟಿ.ಎಸ್.ವೆಂಕಣ್ಣಯ್ಯ ನವರನ್ನು ಕುರಿತು, ಶ್ರೀ ತ.ಸು. ಶಾಮರಾಯರು ಬರೆದಿರುವ ಒಂದು `ಜೀವನ ಚರಿತ್ರೆ'ಯಾಗಿದೆ. ಈ ಕಥನದ ಮೂರನೆಯ ತಲೆಮಾರಿನಲ್ಲಿ ಕಾಣಿಸಿಕೊಳ್ಳುವ ಈ ವೆಂಕಣ್ಣಯ್ಯನವರು. ಕನ್ನಡ ನವೋದಯದ ಪ್ರಾತಃಸ್ಮರಣೀಯರಲ್ಲಿ ಒಬ್ಬರಾಗಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ನಿಶ್ಶಬ್ದ ಪ್ರಶಾಂತ ತೇಜಸ್ಸಿನಿಂದ ಸುಭದ್ರವಾದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ನಾನು ಅವರನ್ನು ಕಂಡದ್ದು, 1946ನೆಯ ಇಸವಿಯಲ್ಲಿ, ಕನ್ನಡ ಬಿ.ಎ., ಆನರ್ಸ್ ವಿದ್ಯಾರ್ಥಿಯಾಗಿ ಮೈಸೂರು ಮಹಾರಾಜಾ ಕಾಲೇಜಿನ ನಾಲ್ಕನೆ ನಂಬರಿನ ಕೊಠಡಿಯೊಳಗಿನ ಗೋಡೆಯ ಮೇಲಿನ ಭಾವಚಿತ್ರದಲ್ಲಿ! ಇದೇ ನಾಲ್ಕನೆ ನಂಬರಿನ ಕೊಠಡಿಯಲ್ಲಿ ನಾನು ಐದು ವರ್ಷಗಳ ಕಾಲ ಶ್ರೀ ಕುವೆಂಪು ಅವರ ಶಿಷ್ಯನಾಗಿ ಪಾಠ ಕೇಳುವ ಸುಯೋಗಕ್ಕೆ ಪಾತ್ರನಾಗಿದ್ದೆ. ಅಷ್ಟು ವರ್ಷವೂ, ಕುವೆಂಪು ಅವರು ಕೂತ ಕುರ್ಚಿಯ ಹಿಂದೆ ಸ್ವಲ್ಪ ಎತ್ತರದಲ್ಲಿ ಗೋಡೆಯ ಮೇಲೆ ವಿರಾಜಮಾನವಾಗಿದ್ದ ಶ್ರೀ ವೆಂಕಣ್ಣಯ್ಯನವರ ಭಾವಚಿತ್ರ ದಿನವೂ ನನ್ನನ್ನು ಸೆಳೆಯುತ್ತಿತ್ತು. ನಿಶ್ಚಲವಾದ ನಂದಾದೀಪದಂಥ ಮುಖ: ಆ ಪ್ರಶಾಂತವಾದ ಚೌಕನೆಯ ಮುಖದಲ್ಲಿ ನೀಳವಾದ ಮೂಗು; ದೃಢವಾದ ತುಟಿ; ಆ ತುಟಿಗಳಿಗೂ ಮೂಗಿಗೂ ನಡುವೆ, ಮುಖಕ್ಕೆ ಒಪ್ಪುವಂಥ, ಮೇಲ್ದುಟಿಯನ್ನು xiv ತುಸುವೇ ಮುಚ್ಚಿದಂಥ ಹದವಾದ ಮೀಸೆ, ಬೆಳದಿಂಗಳನ್ನು ತುಂಬಿಕೊಂಡಂಥ ಕಣ್ಣು, ಆ ಮುಖಕ್ಕೆ ಕಿರೀಟವಿಟ್ಟಂತೆ ಶೋಭಿಸುವ ಸಣ್ಣ ಜರಿಯಂಚಿನ ಪೇಟ; ಮುಚ್ಚುಕೋಟಿನ, ಜರೀ ಪೇಟದ ಪ್ರಶಾಂತ ಮುಖದ ವೆಂಕಣ್ಣಯ್ಯನವರ ದರ್ಶನ, ದಿನವೂ ನನಗೆ ಶ್ರೀ ಕುವೆಂಪು ಅವರ ಜತೆಗೇ ಆಗುತ್ತಿತ್ತು. ಶ್ರೀ ಕುವೆಂಪು ಅವರು ತಮ್ಮ ಮೇರುಕೃತಿ `ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯವನ್ನು, ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಣೆ ಮಾಡಿದ್ದನ್ನು ಕಂಡಮೇಲಂತೂ, ವೆಂಕಣ್ಣಯ್ಯನವರ ಮೇಲಿನ ನನ್ನ ಗೌರವ ಇನ್ನೂ ಮಿಗಿಲಾಯಿತು. ಜತೆಗೆ ವೆಂಕಟಣ್ಣಯ್ಯನವರ ಸಾಕ್ಷಾತ್ ಸಹೋದರರಾದ ಶ್ರೀ ತ.ಸು. ಶಾಮರಾಯರೂ ಆಗ ಮಹಾರಾಜಾ ಕಾಲೇಜಿನಲ್ಲಿ ನನಗೆ ಅಧ್ಯಾಪಕರಾಗಿ ದೊರೆತರು. ಶಾಮರಾಯರು ನನ್ನ ಪಾಲಿಗೆ ಕೇವಲ ಅಧ್ಯಾಪಕರಲ್ಲ; ನನ್ನ ಹಾಗೂ ನನ್ನಂಥ ಅನೇಕರ ವ್ಯಕ್ತಿತ್ವಕ್ಕೆ ನೀರೆರೆದು ಬೆಳೆಸಿದ ವಾತ್ಸಲ್ಯದ ಪ್ರತಿಮಾಸ್ವರೂಪರು. ಇಂಥ ಶಾಮರಾಯರು, ತಾವು ಬರೆದ ವೆಂಕಣ್ಣಯ್ಯನವರ `ಜೀವನ ಚರಿತ್ರೆ'ಗೆ ನಾನೊಂದು ಮುನ್ನುಡಿಯನ್ನು ಬರೆಯಬೇಕೆಂದು ಅಪ್ಪಣೆ ಮಾಡಿದ್ದಾರೆ. ಆದರೆ ಈ ಕೃತಿಗೆ ನಿಜವಾಗಿಯೂ ಯಾರ ಮುನ್ನುಡಿಯೂ ಬೇಕಾಗಿಲ್ಲ. ಈ ಬರೆಹವನ್ನು `ಜೀವನಚರಿತ್ರೆ' ಎಂದೂ ಕರೆಯುವುದೂ ಔಪಚಾರಿಕವೇ. ಇಲ್ಲಿರುವ ಜೀವನ, ಶ್ರೀ ವೆಂಕಣ್ಣಯ್ಯನವರ ಹಾಗೂ ಅವರ ಹಿಂದಿನ ಎರಡು ತಲೆಮಾರಿನವರ ಜೀವನ, ಯಾವ ಚರಿತ್ರೆಯ ಚೌಕಟ್ಟಿಗೂ ಅಳವಡುವಂಥದಲ್ಲ. ಶ್ರೀ ವೆಂಕಣ್ಣಯ್ಯನವರ ವ್ಯಕ್ತಿತ್ವದಲ್ಲಿ ಯಾವ ಅಸಾಧಾರಣ ಲಕ್ಷಣಗಳು ಕಂಡು ಬರುವುವೋ ಅವೆಲ್ಲವೂ ಅವರಿಗೆ ಹಿಂದಿನ ಪೂರ್ವಿಕರು ತಮ್ಮ ಬದುಕಿನಲ್ಲಿ ಪಡೆದುಕೊಂಡ ಪರಿಣತಿಯ ಪುನಃ ಪ್ರಕಾಶನಗಳೇ ಆಗಿವೆ. ಈ ಕಥನದ ಉದ್ದಕ್ಕೂ ವ್ಯಕ್ತಿಗಳ ಜೀವನದಲ್ಲಿ ಸಂಭವಿಸುವ ಅಲೌಕಿಕವೆನ್ನಬಹುದಾದ ಘಟನೆಗಳೂ, ಅವರ ಅಚಲವಾದ ದೈವಶ್ರದ್ಧೆ, ಅದರಿಂದ ಅವರ ವ್ಯಕ್ತಿತ್ವಕ್ಕೆ ಪ್ರಾಪ್ತವಾದ ನಿಲುವುಗಳು, ಆ ನಿಲುವಿನ ಮೂಕ ಅವರ ಲೋಕಾನುಭವಗಳನ್ನು ಸ್ವೀಕರಿಸಿದ ಹಾಗೂ ಎದುರಿಸಿದ ಕ್ರಮ- ಇತ್ಯಾದಿಗಳು ಒಂದು ನಿರಂತರವಾದ ಸಾತ್ವಿಕ ಪ್ರವಾಹವೊಂದರ ಪರಿಚಯವನ್ನು ಮಾಡಿ ಕೊಡುತ್ತವೆ. ಶಾಮರಾಯರು ಈ ಮೂರೂ ತಲೆಮಾರುಗಳ ಬದುಕಿನ ನಿರೂಪಣೆಯನ್ನು, ಕೇಳಿದ್ದು, ಕಂಡಿದ್ದು, ಅನುಭವಿಸಿದ್ದು ಎಂಬ ಮೂರು ಉಪ ವಿಭಾಗಗಳಲ್ಲಿ ಅಳವಡಿಸಿದ್ದಾರೆ. ಅದನ್ನೆ ನಾನು ಪುರಾಣ, ಚರಿತ್ರೆ, ವಾಸ್ತವ ಎಂಬ ಮೂರು ಮಾತುಗಳಲ್ಲಿ ಸೂಚಿಸಿದ್ದೇನೆ. ಈ ಮೂರೂ ವೆಂಕಣ್ಣಯ್ಯನವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಕಲಾತ್ಮಕ ಕ್ರಿಯೆಯಾಗಿ ಶ್ರೀ ಶಾಮರಾಯರ ವ್ಯಕ್ತಿಪ್ರಜ್ಞೆಯಲ್ಲಿ ಮೇಲವಿಸಿವೆ. ಈ `ಮೂರು ತಲೆಮಾರು' ಕೃತಿಯನ್ನು ಓದುತ್ತಿದ್ದರೆ ನಾವು ಯಾವುದೋ xv ಕಾಲದ ಭಗವದ್ ಭಕ್ತರ, ಸಾಧುಸಂತರ, ಪುಣ್ಯಪುರುಷರ ಕತೆಯನ್ನು ಓದುತ್ತಿದ್ದೇವೆಯೋ, ಎಂಬ ಭಾವನೆಯೊಂದು ನಮ್ಮನ್ನು ಆವರಿಸುತ್ತದೆ. ದಿನದಿಂದ ದಿನಕ್ಕೆ ಕಲುಷಿತವಾಗುತ್ತಿರುವಂತೆ ತೋರುವ ಇಂದಿನ ವರ್ತಮಾನದ ನಡುವೆ ಇರುವ ನಾವು, ಈ ಕಥನದಲ್ಲಿ ನಿರೂಪಿತವಾಗಿರುವ ಘಟನೆಗಳ ಹಾಗೂ ವ್ಯಕ್ತಿಗಳ ನಡವಳಿಕೆಗಳ ಸತ್ಯಾಸತ್ಯತೆಯನ್ನು ಕುರಿತು ಶಂಕೆಗೆ ಒಲಗಾದರೆ, ಅದು ನಮ್ಮ ದೋಷವೇ ಹೊರತು ಬೇರೆ ಅಲ್ಲ. ರಾಮಾಯಣ ಮಹಾಭಾರತಗಳು ಎಂದೋ ನಡೆದ ಕತೆಗಳಲ್ಲ; ಇಂದಿಗೂ, ಎಂದಿಗೂ ನಡೆಯುತ್ತಲೇ ಇರುವ ವಾಸ್ತವಗಳು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ನಿರೂಪಕರಾದ ಶ್ರೀ ರಾಮರಾಯರು, ಅತ್ಯಂತ ನಿರ್ಲಿಪ್ತತೆಯಿಂದ ಇದನ್ನು ಬರೆದುಕೊಂಡು ಹೋಗಿರುವ ಕ್ರಮ ವಿಶೇಷವಾದದ್ದು. ಎಲ್ಲಿಯೂ ಈ ಜೀವನಚರಿತ್ರೆ ತಮ್ಮವರಿಗೆ ಸಂಬಂಧಿಸಿದ್ದೆಂಬ ಕಾರಣದಿಂದ, ಆ ಅವರ ಬದುಕನ್ನು ವೈಭವಿಸುವ ಅಥವಾ ಅತಿ ರಂಜಿತವನ್ನಾಗಿಸುವ ಕಡೆಗೆ ಹೊರಳಿಲ್ಲ. ಅಷ್ಟರಮಟ್ಟಿಗೆ ಶಾಮರಾಯರು ಈ ಕಥಾನಕದ ಹಿಂದೆ `ಇದ್ದೂ ಇಲ್ಲದ ಹಾಗೆ' ಇದ್ದಾರೆ. ಈ ಜೀವನದ ಚರಿತ್ರೆಯ ನಾಲ್ಕನೆಯ ತಲೆಮಾರಿಗೆ ಸೇರುವ, ಹಿಂದಿನವರ ಜತೆಗೆ ಹೆಗಲೆಣೆಯಾಗಿ ನಿಲ್ಲಬಲ್ಲ ಶಾಮರಾಯರ ವ್ಯಕ್ತಿತ್ವ ಹೀಗಿರುವುದು ಆಶ್ಚರ್ಯವೇನೂ ಅಲ್ಲ. ಇಡೀ ಬರವಣಿಗೆ ರಮ್ಯಾದ್ಭುತ ವಾಸ್ತವವಾದ ಕತೆಯೊಂದನ್ನು ಕಟ್ಟಿಕೊಡುವ ಕಲೆಗಾರಿಕೆಯಿಂದ ಓದುಗರನ್ನು ಒಂದೇ ಹಿಡಿತದಲ್ಲಿ ನಡೆಸಿಕೊಂಡು ಹೋಗುತ್ತದೆ. ಶ್ರೀ ವೆಂಕಣ್ಣಯ್ಯ ನವರು ಒಂದು ಉದಾತ್ತ ಜೀವನ ಪರಂಪರೆಯ ಪ್ರತೀಕವಾಗಿ ಹೇಗೆ ನಿಂತಿದ್ದಾರೆ ಎಂಬುದನ್ನು, ಆ ಪರಂಪರೆಯ ಸಮೇತ ಪರಿಚಯ ಮಾಡಿಕೊಡುವ ಈ ಕೃತಿ, ಅತ್ಯಂತ ವಿಶಿಷ್ಟವಾದುದೆಂಬುದರಲ್ಲಿ ಸಂದೇಹವಿಲ್ಲ. ಜಿ.ಎಸ್.ಶಿವರುದ್ರಪ್ಪ xvi ಲೇಖನದ ಬಿನ್ನಹ ನಾನು ಇಲ್ಲಿ ಬರೆದಿರುವ `ಮೂರು ತಲೆಮಾರು' ಕಥೆಯಲ್ಲ, ಕಾದಂಬರಿಯಲ್ಲ; ಇಲ್ಲಿ ಸ್ವಕಪೋಲ ಕಲ್ಪಿತವಾದುದೇನೂ ಇಲ್ಲ. ಯಾವ ಊಹಾಪೋಹಗಳಿಗೂ ಎಡೆಕೊಟ್ಟಿಲ್ಲ. ಇದೊಂದು ಕಾದಂಬರಿಯಂತೆ ತೋರಬಹುದಾದ ಸತ್ಯಕಥೆ. ``ಸತ್ಯ ಕೆಲವು ವೇಳೆ ಕಾದಂಬರಿಗಿಂತಲೂ ರಮ್ಯ'' ಎಂಬ ಸೂಕ್ತಿಗೆ ಇದೊಂದು ಉದಾಹರಣೆ ಯಂತಿರಬಹುದು. ಈ ಭೂಮಿಯ ಮೇಲೆ ನಮ್ಮ ನಿಮ್ಮಂತೆಯೇ ಬಾಳಿಬದುಕಿ ಜೀವನದ ಕಹಿ ಸಿಹಿಗಳನ್ನುಂಡು, ಎಲೆಮರೆಯ ಹೂವಿನಂತೆ ಇದ್ದು, ಹೊಗಳಿಕೆ ತೆಗಳಿಕೆಗಳಿಗೆ ಅತೀತರಾಗಿ ಉಚ್ಚಜೀವನವನ್ನು ನಡೆಸಿ ಕಣ್ಮರೆಯಾದ ಮಹಾ ಜೀವಿಗಳ ಜೀವನದ ಮನನೀಯ ಸತ್ಯಚರಿತ್ರೆ ಇದು. ಆಂಗ್ಲ ಮಹಾಕವಿ ಥಾಮಸ್ ಗ್ರೇ ತನ್ನ 'ಎಲಿಜಿ'ಯಲ್ಲಿ ಹೇಳಿರುವಂತೆ ಸ್ವಚ್ಛಕಾಂತಿಯನರ್ಘ್ಯರತ್ನಂಗಳೆನಿತೊ ಆಳಗಾಣದ ಕಡಲ ಕತ್ತಲೊಳಗಡಗಿಹವು ಕರ್ಣಗೆ ಕಾಣದೆ ನಲಿಯೆ ಅರಳಿರುವ ಹೂವೆನಿತೊ ಮರಳುಗಾಡಲಿ ವ್ಯರ್ಥ ಪರಿಮಳವ ಸೂಸುವುವು ಎನ್ನುವಂತಿರುವ ರತ್ನಗಳನ್ನು ಹೂಗಳನ್ನು ಜನತಾ ಜನಾರ್ಧನರ ಗೋಚರಕ್ಕೆ ತರುವ ಒಂದು ಸರಳ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಯಾರಾದರೊಬ್ಬರ ಜೀವನ ಚರಿತ್ರೆಯನ್ನು ಅವರ ಅಭಿಮಾನಿಗಳು ಬರೆಯ ಹೊರಟಾಗ ಅಲ್ಪಸ್ವಲ್ಪ ಉತ್ಪ್ರೇಕ್ಷಿಸಿದರೂ ಅದು ಕ್ಷಮ್ಯವಾದೀತೇನೊ! ಆದರೆ `ಮೂರು ತಲೆಮಾರು' ವಿನ ಮಹಾನುಭಾವರ ಪೀಳಿಗೆಗೆ ನೇರವಾಗಿ ಸೇರಿರುವ ನಾನು ಹಾಗೆ ಮಾಡಿದರೆ ನೈತಿಕ ದೃಷ್ಟಿಯಿಂದ ಅಕ್ಷಮ್ಯ ಅಪರಾಧವಾದೀತೆಂದು ನನ್ನ ಭಾವನೆ. ಆದ್ದರಿಂದ ಯಾವ ವಿಧವಾದ ಉತ್ಪ್ರೇಕ್ಷೆ ಉದ್ವೇಗಗಳಿಗೂ ಅವಕಾಶ ಕೊಡದೆ ನನಗೆ ತಿಳಿದು ಬಂದಿರುವಷ್ಟು ಸತ್ಯಾಂಶವನ್ನು ಸರಳವಾಗಿ ಓದುಗರ ಮುಂದೆ ಇಡಲು ಇಲ್ಲಿ ಪ್ರಯತ್ನಿಸಿದ್ದೇನೆ. `ಮೂರು ತಲೆಮಾರು' ಕೃತಿಯ ಹಿರಿಯರಲ್ಲಿ ನನ್ನ ತಂದೆ ದೊಡ್ಡ ಸುಬ್ಬಣ್ಣ ನವರನ್ನು ನಾನು ಕಂಡಿದ್ದೆ. ಅವರು ದಿವಂಗತರಾದಾಗ ನನಗೆ ಹತ್ತು ಹನ್ನೆರಡು xvii ವಯಸ್ಸು. ಅವರನ್ನು ಕುರಿತು ಬರೆದಿರುವ ಭಾಗ `ಕಂಡದ್ದು'. ಅವರಿಗಿಂತ ಹಿಂದಿನವರ ವಿಚಾರವನ್ನು ಮುಖ್ಯವಾಗಿ ನನ್ನ ತಾಯಿಯಿಂದ- ಸ್ವಲ್ಪಮಟ್ಟಿಗೆ ನನ್ನ ಸೋದರರಿಂದ ಕೇಳಿದ್ದೆ. ಅದು `ಕೇಳಿದ್ದು' ನನ್ನ ಹಿರಿಯಣ್ಣ ವೆಂಕಣ್ಣಯ್ಯನವರ ಬಾಳಿನಲ್ಲಿ ನನ್ನ ಬಾಳು ಬಹುಮಟ್ಟಿಗೆ ಬೆರೆತುಹೋಗಿತ್ತು. ನನ್ನಲ್ಲಿ ಕಿಂಚಿತ್ತಾರದರೂ ಸದ್ಗುಣಗಳು ಕಂಡುಬಂದರೆ ಅದು ಅವರ ಪ್ರಭಾವ. ಆದ್ದರಿಂದ ಅದನ್ನು `ಅನುಭವಿಸಿದುದು' ಎಂದು ಕರೆದಿದ್ದೇನೆ. ನನ್ನ ತಮ್ಮ ಶ್ರೀ ಹನುಮಂತರಾಯ ನಮ್ಮ ತಂದೆಯವರನ್ನು ಕುರಿತು ಬರೆದಿರುವ ಅಪ್ರಕಟಿತ ಕಾದಂಬರಿಯೊಂದು ನನ್ನ ಬರವಣಿಗೆಯ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದೆ. ಇಂದು ಪಾಪಸುಕಳ್ಳಿಯಂತೆ ಎಲ್ಲೆಲ್ಲೂ ಹರಡಿರುವ ಜಾತೀಯತೆ ಕೇವಲ ಒಂದೆರಡು ತಲೆಮಾರುಗಳಿಂದ ಈಚೆಗೆ ಬಂದುದು. ಅದಕ್ಕೂ ಹಿಂದೆ ಜಾತೀಯತೆ ಇತ್ತು. ಆದರೆ ಅದು ಊಟ ಉಪಚಾರಗಳಿಗೆ ಮಾತ್ರ ಸೀಮಿತವಾಗಿತ್ತು. ಇಂದು ಅಂದಿದ್ದ ಊಟ ಉಪಚಾರಗಳ ವಿರೋಧವೇನೂ ಇಲ್ಲ. ಆದರೆ ಊಟ ಮಾಡುತ್ತಾ ಮಾಡುತ್ತಾ ಮನೆಯ ಜಂತೆಗಳನ್ನು ಎಣಿಸುವ ದುರ್ಬುದ್ಧಿ ಬೆಳೆಯುತ್ತಿದೆ. ಊರಿನ ಹಿತ ಪ್ರತಿಯೊಬ್ಬನದು. ಪ್ರತಿಯೊಬ್ಬನ ಹಿತ ಊರಿನದು ಆಗಿತ್ತು, ಹಿಂದೆ. ಇಂದು ಅದು ತಲೆಕೆಳಗಾಗಿದೆ. ಜಾತೀಯತೆಯ ಕಟ್ಟಲೆಗಳು ಅನಿವಾರ್ಯವೆನಿಸಿದ್ದರೂ ಪ್ರೀತಿ ವಿಶ್ವಾಸಗಳಿಗೆ ಅಪೋಹ ಬಂದಿರಲಿಲ್ಲ. ಕಳೆದ ಕೆಲವು ಶತಮಾನಗಳಿಂದ ವ್ಯತ್ಯಾಸಗೊಳ್ಳುತ್ತಾ ಹೋಗಿರುವ ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನ ಮೌಲ್ಯಗಳ ಒಂದು ಕಿರುನೋಟವನ್ನು ಇಲ್ಲಿ ಕಾಣಬಹುದೆಂದು ತೋರುತ್ತದೆ. ಈ ದೃಷ್ಟಿಯಿಂದ ಇದು ಸರ್ವಜನಾದರಣೀಯವಾಗುವುದೆಂದು ನಾನು ನಂಬಿದ್ದೇನೆ. `ಮೂರು ತಲೆಮಾರು' ಕೃತಿಯನ್ನು ನಾನು ಬರೆಯಬೇಕೆಂದುಕೊಂಡದ್ದು ಈಗ ಸುಮಾರು ನಾಲ್ಕು ದಶಕಗಳಿಗೂ ಹಿಂದೆ. ಆಗಲೇ ಅದನ್ನು ಮಾಡಿಮುಗಿಸಿದ್ದರೆ ನನ್ನ ಬರಹ ಇನ್ನೂ ಹೆಚ್ಚು ಕಾವ್ಯಮಯವಾಗಿರುತ್ತಿತ್ತು. ಈ ನನ್ನ ಎಂಬತ್ತನ್ನು ಮೀರಿದ ವಯಸ್ಸಿನಲ್ಲಿ- ನನ್ನ ಉತ್ಸಾಹ ಜ್ಞಾಪಕಶಕ್ತಿಗಳು ಇಳಿಮುಖವಾಗಿರುವಾಗ ಹಿರಿಯರ ಮೇಲಿನ ನನ್ನ ಭಕ್ತಿಯೊಂದೇ ನನ್ನ ಸಹಾಯಕ ಶಕ್ತಿಯಾಗಿ ನಿಂತಿದೆ. ಕುಮಾರಿ ಗಿರಿಜ ನನ್ನ ಬರವಣಿಗೆಯ ಊರುಗೋಲಾಗಿ ಇದರ ಕರಡುಪ್ರತಿಯನ್ನು ತಯಾರಿಸಿದ್ದಾಳೆ. ನನ್ನ ಹಿರಿಯಮಗ ಪ್ರೊ|| ವೆಂಕಣ್ಣಯ್ಯ ಅಚ್ಚಿನ ಪ್ರತಿಯನ್ನು ತಯಾರುಮಾಡಿಟ್ಟಿದ್ದಾನೆ. ನನ್ನ ಹೆಮ್ಮೆಯ ವಿದ್ಯಾರ್ಥಿ ಮಿತ್ರ ಡಾ|| ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟ ಇದರ ಪ್ರಕಟನೆಗೆ ಪ್ರೋತ್ಸಾಹಿಸಿ, ನನ್ನ ಸಮೀಪಬಂಧುವಾದ ಸುವಿದ್ಯಾ ಪ್ರಕಾಶನದ ಶ್ರೀಮಾನ್ ಜಿ.ವಿ. ಸತ್ಯನಾರಾಯಣರಾಯರನ್ನು ಇದರ ಪ್ರಕಾಶಕರಾಗಿ ಗೊತ್ತು ಮಾಡಿಕೊಟ್ಟಿದ್ದಾರೆ. ನನ್ನ ಮತ್ತೊಬ್ಬ ವಿದ್ಯಾರ್ಥಿ ಮಿತ್ರ xviii ಶ್ರೀ ರಾ.ವೆಂ. ಶ್ರೀನಿವಾಸ ಮೂರ್ತಿ ಮತ್ತು ಅವರ ಪುತ್ರ ಶ್ರೀ ಆರ್.ಎಸ್.ಮೋಹನ್ ಈ ಪುಸ್ತಕದ ಕರಡನ್ನು ತಿದ್ದುವುದರಿಂದ ಹಿಡಿದು ಅತ್ಯಲ್ಪ ಕಾಲದಲ್ಲಿ ಸುಂದರವಾಗಿ ಮುದ್ರಿಸಿಕೊಡುವಷ್ಟು ಸಹಾಯ ಮಾಡಿದ್ದಾರೆ. ಇವರೆಲ್ಲರಿಗೂ ನಾವು ಚಿರಋಣಿ. ತ.ಸು. ಶಾಮರಾಯ xix ಪರಿವಿಡಿ ಶುಭ ಸಂದೇಶ iii ಚೆನ್ನುಡಿ iv ಅಧ್ಯಕ್ಷರ ಮಾತು v ಹೊನ್ನುಡಿ vi ಎರಡು ನುಡಿ vii ಪ್ರಕಾಶಕರ ಮಾತು viii ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ x ಮುನ್ನುಡಿ xiii ಲೇಖಕನ ಬಿನ್ನಹ xvi ಒಂದು: ಕೇಳಿದ್ದು 1. ಬಂದನಾ ಹುಲಿರಾಯನು 3 2. ಧರ್ಮೋ ರಕ್ಷತಿ ರಕ್ಷಿತಃ 8 3. ಹಾಳೂರಿನ ಅನುಭವ 20 4. ಸತ್ವಪರೀಕ್ಷೆ 27 5. ವೆಂಕಣ್ಣಯ್ಯನವರ ಪೂರ್ವಿಕರು 31 6. `ದೇವರಲೀಲೆ' ವೆಂಕಪ್ಪನವರು ವೈಷ್ಣವರಾದುದು 57 7. ವೆಂಕಣ್ಣಯ್ಯನವರ ಅಂತಿಮಯಾತ್ರೆ 63 ಎರಡು: ಕಂಡದ್ದು 1. ತಳುಕಿನಲ್ಲಿ ನೆಲಸಿದರು 77 2. ತಳುಕು 84 3. ತಾಲ್ಲೂಕು ಕಛೇರಿಯಲ್ಲಿ 86 4. ಸುಬ್ಬಣ್ಣನ ವಿವಾಹ 90 5. ನರಸಮ್ಮ 104 xx 6. ಪುತ್ರೋತ್ಸವ 110 7. ಸ್ಟಾಂಪ್ ವೆಂಡರ್ ಸುಬ್ಬಣ್ಣ 113 8. ಆಸ್ತಿ-ಪಾಸ್ತಿ 128 9. ಕಂಟ್ರಾಕ್ಟದಾರ ಭೀಮರಾಯ 131 10. ಅಶ್ವರತ್ನರಂಗ 142 11. ಕಂಟ್ರಾಕ್ಟರ್ ಭೀಮರಾಯ 155 12. ಗುಗ್ಗರಿ ಕೆಂಚವ್ವ-ತೊರೆಯಪ್ಪ 165 13. ಸಣ್ಣ ಸುಬ್ಬಣ್ಣನ ಮದುವೆ 169 14. ಅಡ್ಡಿಕೆಯ ಕಳವು 172 15. ದಾಯಾದಿ ಮಾತ್ಸರ್ಯ 176 16. ಸೇಂದಿ ಕಂಟ್ರಾಕ್ಟರ್ 187 17. ಅಚ್ಚಮ್ಮ 201 18. ಮೃತ್ಯುಮುಖದಿಂದ ಮುಕ್ತಿ 205 19. ಸುಬ್ಬಣ್ಣನವರ ಸಾಹಿತ್ಯಸೇವೆ-ಕವಿತಾವೈಭವ 209 20. ಔದಾರ್ಯಕ್ಕೆ ಕೊನೆಯುಂಟೆ? 218 21. ಸುಬ್ಬಣ್ಣನವರ ಅನಾರೋಗ್ಯ 223 22. ಸುಬ್ಬಣ್ಣನವರ ಕೊನೆ ದಿನ 226 ಮೂರು: ಅನುಭವಿಸಿದುದು 1. ಬಾಲ್ಯ ಮತ್ತು ವಿದ್ಯಾಭ್ಯಾಸ 231 2. ಕಾಲೇಜು ವಿದ್ಯಾಭ್ಯಾಸ 242 3. ಧಾರವಾಡದಲ್ಲಿ ಅಧ್ಯಾಪನವೃತ್ತಿ 259 4. ಬೆಂಗಳೂರಿನ ಜೀವನ 268 5. ಮೈಸೂರು ಜೀವನ 288 6. ವೆಂಕಣ್ಣಯ್ಯನವರ ವ್ಯಕ್ತಿತ್ವ 310 7. ಸಾಹಿತ್ಯ ಸೃಷ್ಟಿ 331 8. ಕೊನೆಯ ದಿನಗಳು 336 9. ಶ್ರೀಗುರುವಿಗಿದೊ ವಂದನೆ 343 xxi ಮೂರು ತಲೆಮಾರು 1 ಒಂದು ಕೇಳಿದ್ದು 2 ಮೂರು ತಲೆಮಾರು ಬಂದನಾ ಹುಲಿರಾಯನು 3 1. ಬಂದನಾ ಹುಲಿರಾಯನು ! ಒಳ್ಳೆ ಬೇಸಗೆಯ ಮಟಮಟ ಮಧ್ಯಾಹ್ನ. ಜೋಡು ಕುದುರೆಗಳನ್ನು ಕಟ್ಟಿದ್ದ ಪೆಟ್ಟಿಗೆಯ ಗಾಡಿಯೊಂದು ಕಣಕುಪ್ಪೆಯ ತಾಲ್ಲೂಕ್ ಕಛೇರಿಯ ಕಾಂಪೌಂಡನ್ನು ಪ್ರವೇಶಿಸಿತು. ಕಛೇರಿಯ ಬಾಗಿಲಲ್ಲಿ ಕುಳಿತು ತೂಕಡಿಸುತ್ತಿದ್ದ ಬಿಲ್ಲೆಯ ಜವಾನ ಗಾಡಿಯ ಶಬ್ದದಿಂದ ಎಚ್ಚೆತ್ತು, ಅದನ್ನು ಕಾಣುತ್ತಲೇ ಧಿಗ್ಗನೆ ಮೇಲೆದ್ದು, ನೆಲದ ಮೇಲಿಟ್ಟಿದ್ದ ರುಮಾಲನ್ನು ತಲೆಯ ಮೇಲಿಟ್ಟುಕೊಂಡ. ಅಪ್ರಯತ್ನವಾಗಿಯೇ ಅವನ ಕೈಗಳು ‘ದಿರುಸ’ನ್ನು ಸರಿಪಡಿಸಿಕೊಂಡುವು. ಆರಡಿ ಎತ್ತರದ ಪರಂಗಿ ಸಾಹೇಬ ಗಾಡಿಯಿಂದ ಕೆಳಕ್ಕೆ ನೆಗೆದು, ಕಛೇರಿಯ ಬಾಗಿಲತ್ತ ಕಾಲು ಹಾಕುತ್ತಲೇ ಆ ಬಿಲ್ಲೆಯ ಜವಾನ ಅತ್ಯಂತ ಭಯಭಕ್ತಿಯಿಂದ ನೆಲ ತಾಕುವಂತೆ ಬಾಗಿ, ಮೂರು ಸಲ ಸಲಾಮು ಮಾಡಿದ. ಸಾಹೇಬ ಬಾಯಿಂದ ಸಿಗರೇಟಿನ ಹೊಗೆಯನ್ನುಗುಳುತ್ತಾ ‘ತುಮಾರ್ಹಾ ನಾಮ್ ಕ್ಯಾ’ ಎಂದು ಕೇಳಿ, ಅವನ ಉತ್ತರಕ್ಕೂ ಕಾಯದೆ ಕಛೇರಿಯನ್ನು ಪ್ರದೇಶಿಸಿದ. ಕೆಂಬಣ್ಣದ ಆ ಭವ್ಯಾಕೃತಿಯನ್ನು ಕಾಣುತ್ತಲೇ ಒಳಗೆ ಕುಳಿತಿದ್ದ ಗುಮಾಸ್ತರೆಲ್ಲ ಕೆಳಗಿಟ್ಟಿದ್ದ ರುಮಾಲನ್ನು ತಲೆಯ ಮೇಲಿಟ್ಟು, ಅಂಗಿಯ ಗುಂಡಿಗಳನ್ನು ಸರಿಪಡಿಸಿಕೊಳ್ಳುತ್ತ, ಧಿಗ್ಗನೆ ಎದ್ದು ನಿಂತು, ಆತನಿಗೆ ನಮಸ್ಕರಿಸಿದರು. ಪರಂಗಿಯವ ಅವರತ್ತ ನೋಡಿಯೂ ನೋಡದಂತೆ ಮುಂದುವರೆದು ಅಮಲ್ದಾರರ ಕೊಠಡಿಯನ್ನು ಪ್ರವೇಶಿಸಿದ. ಆ ಸಮಯದಲ್ಲಿ ತನ್ನ ಸಾಹೇಬರಿಗೆ ಪಂಕದಿಂದ ಗಾಳಿ ಬೀಸುತ್ತಿದ್ದ ಜವಾನ, ಇದ್ದಕ್ಕಿಂತೆಯೇ ಪ್ರತ್ಯಕ್ಷನಾದ ಪರಂಗಿಯವನನ್ನು ಕಂಡು, ನಡುಗುತ್ತ ಅವನಿಗೆ ಅಡ್ಡ ಬಿದ್ದ. ತಲೆ ಬಗ್ಗಿಸಿಕೊಂಡು ಏನನ್ನೋ ಬರೆಯುತ್ತಿದ್ದ ಅಮಲ್ದಾರ್ ಸಾಹೇಬರು ಗಾಳಿಯ ಸೇವೆ ನಿಂತುದನ್ನು ಕಂಡು ಕ್ರುದ್ಧರಾಗಿ ಜವಾನನತ್ತ ತಿರುಗಿದರು. ಇದ್ದಕ್ಕಿದ್ದಂತೆ ಇದಿರಿಗೆ ಬಂದು ನಿಂತಿದ್ದ ಪರಂಗಿ ಸಾಹೇಬನನ್ನು ಕಂಡು ಅವರ ಎದೆಗುಂಡಿಗೆ ಝಲ್ ಎಂದಿತು. ‘ಬಂದನಾ ಹುಲಿರಾಯನು’ ಎಂಬಂತಾಗಿ ಅವರು ಕುಳಿತಿದ್ದ ಕುರ್ಚಿಯಿಂದ ಧಿಗ್ಗನೆ ಮೇಲೆದ್ದು, ಮೇಜಿನ ಮೇಲಿದ್ದ ರುಮಾಲನ್ನು ತಲೆಗೇರಿಸಿ, ಬಗ್ಗಿ ಸಲಾಮು ಮಾಡಿದರು. ಬಂದವರನ್ನು ತಮ್ಮ ಆಸನದಲ್ಲಿ ಕುಳ್ಳಿರಿಸಿ, ಅವರು ಕುಳಿತ ಮೇಲೆ ಅಮಲ್ದಾರ ಸಾಹೇಬರೂ 4 ಮೂರು ತಲೆಮಾರು ಮೇಜಿನ ಪಕ್ಕದಲ್ಲಿದ್ದ ಮತ್ತೊಂದು ಕುರ್ಚಿಯಲ್ಲಿ ಅವರ ಅಪ್ಪಣೆಯಂತೆ ಕುಳಿತರು. ಇದ್ದಕ್ಕಿದ್ದಂತೆ ಬಂದ ಆ ಕೆಂಪು ಮನುಷ್ಯ ಮತ್ತಾರು ಅಲ್ಲ, ಸಾಕ್ಷಾತ್ ಜಿಲ್ಲಾಧಿಕಾರಿಗಳಾದ ಆಂಡ್ರೂಸ್ ಸಾಹೇಬರು. ಅವರು ಕಣಕುಪ್ಪೆಗೆ ಬರುತ್ತಿರುವುದು ಅದೇ ಮೊದಲು, ಅಮಲ್ದಾರರ ಹೊರತು ಅಲ್ಲಿದ್ದ ಮತ್ತಾರೂ ಅವರನ್ನು ಈವರೆಗೆ ಕಂಡಿರಲಿಲ್ಲ. ಬಾಳೆಯ ಹಣ್ಣು, ಎಳೆನೀರಿನ ನಿವೇದನೆಯಾದ ಮೇಲೆ ಜಿಲ್ಲೆಯ ಧಣಿ ಆಂಡ್ರೂಸ್ ಸಾಹೇಬರು ಕಛೇರಿಯನ್ನೆಲ್ಲ ನೊಡಬಯಸಿದರು. ಅಮಲ್ದಾರ್ ದಸ್ತಗೀರ್ ಸಾಹೇಬರು ಅವರನ್ನು ಕರೆದುಕೊಂಡು ಕಛೇರಿಯ ಕೆಲಸಗಾರರನ್ನೆಲ್ಲ ಪರಿಚಯ ಮಾಡಿಸುತ್ತ, ಕಡೆಗೆ ರೆವಿನ್ಯೂ ಗುಮಾಸ್ತರಾದ ವೆಂಕಣ್ಣಯ್ಯನವರ ಬಳಿಗೆ ಬಂದರು. ಆ ದಿನ ಕಛೇರಿಯ ದಫ್ತರಬಂದಿ ರಜ ಹೋಗಿದ್ದ. ವೆಂಕಣ್ಣಯ್ಯನವರು ತಮ್ಮ ಕೆಲಸದ ಜೊತೆಗೆ ಆತನ ಕೆಲಸವನ್ನೂ ನೋಡಿಕೊಳ್ಳಬೇಕಾಯಿತು. ಆದ್ದರಿಂದ ಅವರು ತಮ್ಮ ದಿನನಿತ್ಯದ ಕೆಲಸವನ್ನು ಮುಗಿಸಿಕೊಂಡು ದಫ್ತರಬಂದಿಯ ಕೊಠಡಿಯನ್ನು ಪ್ರವೇಶಿಸಿದ್ದರು. ಜಿಲ್ಲಾಧಿಕಾರಿ ಅಲ್ಲಿಗೆ ಬಂದವರೇ ಗೋಡೆಯ ಮುಂದೆ ಹಲಗೆಯ ಮೇಲೆ ಏರಿಸಿಟ್ಟಿದ್ದ ದಫ್ತರಗಳನ್ನು ತಮ್ಮ ಕೈಲಿದ್ದ ಕೋಲಿನಿಂದ ಹೊಡೆದರು. ಅದರಿಂದ ಧೂಳು ಹಾರಿತು. ಇದರಿಂದ ಕುಪಿತರಾದ ಜಿಲ್ಲೆಯ ಧಣಿ ವೆಂಕಣ್ಣಯ್ಯನವರತ್ತ ತಿರುಗಿ ‘You are a careless fellow. I have kept you under suspension’ ಎಂದು ಕೆಂಗಣ್ಣಿನಿಂದ ಕಿಡಿಗಳನ್ನು ಸೂಸಿದರು. ಅವರು ಏನು ಹೇಳಿದರೆಂಬುದು ವೆಂಕಣ್ಣಯ್ಯನವರಿಗೆ ಅರ್ಥವಾಗಲಿಲ್ಲ. ಕೈಗಳನ್ನು ಮುಗಿದು, ಪಿಳಿ ಪಿಳಿ ಕಣ್ಣು ಬಿಡುತ್ತ ಅವರನ್ನೇ ನೋಡುತ್ತಿದ್ದರು. ಏನೋ ಹೇಳಬೇಕೆಂದು ಬಾಯಿ ತೆರೆದಿದ್ದ ಅಮಲ್ದಾರ್ ಸಾಹೇಬರು ದೊಡ್ಡ ಸಾಹೇಬರ ಕೆಂಗಣ್ಣನ್ನು ನೋಡಿ ಭಯದಿಂದ ಬಾಯಿಮುಚ್ಚಿಕೊಂಡರು. ಜಿಲ್ಲಾಧಿಕಾರಿಗಳ ಜೊತೆಗೆ ಬಂದಿದ್ದ ಅವರ ಗುಮಾಸ್ತ ಸಸ್ಪೆಂಡ್ ಆಜ್ಞೆಯನ್ನು ಅಮಲ್ದಾರರ ಕೈಲಿಟ್ಟು, ಪೆಟ್ಟಿಗೆ ಗಾಡಿಯ ಕಡೆ ಹೊರಟ ಸಾಹೇಬರನ್ನು ಹಿಂಬಾಲಿಸಿದ. ಜಿಲ್ಲಾಧಿಕಾರಿ ಅತ್ತ ಹೋಗುತ್ತಲೇ ಇತ್ತ ತಾಲ್ಲೂಕು ಕಛೇರಿಯಲ್ಲಿ ಗುಸು ಗುಸು ಪ್ರಾರಂಭವಾಯಿತು. ವೆಂಕಣ್ಣಯ್ಯನವರಿಗೆ ಶಿಕ್ಷೆಯಾದುದನ್ನು ತಿಳಿದ ಅಲ್ಲಿನ ಗುಮಾಸ್ತರುಗಳು ‘ಅಯ್ಯೋ ಇದೆಂತಹ ಅನ್ಯಾಯ ! ವೆಂಕಣ್ಣಯ್ಯನವರಂತಹ ಸಜ್ಜನಶಿರೋಮಣಿಗೆ ಈ ಶಿಕ್ಷೆಯೆ ? ಪಾಪ, ಅವರು ತಮ್ಮ ಕೆಲಸದಲ್ಲಿ ಎಂದೂ ಉದಾಸೀನ ಮಾಡಿದವರಲ್ಲ. ಅಂದಿನ ಕೆಲಸವನ್ನು ಅಂದೇ ಮಾಡಿ ಬಂದನಾ ಹುಲಿರಾಯನು ! 5 ಮುಗಿಸುವವರು. ಅವರೇನು ದಫ್ತರಬಂದಿಯೆ? ಯಾರದೋ ಕೆಲಸವನ್ನು ಒಂದು ದಿನ ಮಾತ್ರ ವಹಿಸಿಕೊಂಡವರು. ತಲೆತಲಾಂತರದಿಂದ ಆ ದಫ್ತರಗಳ ಮೇಲೆ ಕುಳಿತಿರುವ ಧೂಳಿಗೆ, ಅಲ್ಲಿನ ಲೋಪದೋಷಗಳಿಗೆ ಇವರು ಜವಾಬುದಾರರೆ? ಮೇಲೆ ಎತ್ತಿಟ್ಟಿರುವ ಆ ದಫ್ತರುಗಳನ್ನು ದಿನದಿನವೂ ಹೊರಕ್ಕೆ ತರುತ್ತೇವೆಯೆ? ಒಂದು ಪಕ್ಷ ಅವೆಲ್ಲ ಚೊಕ್ಕಟವಾಗಿರಬೇಕೆಂದರೆ ಒಂದು ದಿನಕ್ಕೆ ಮಾತ್ರ ಆ ಕೆಲಸಕ್ಕೆ ನೇಮಕಗೊಂಡಿರುವ ವೆಂಕಣ್ಣಯ್ಯನವರು - ತಮ್ಮ ಸ್ವಂತ ಕರ್ತವ್ಯವನ್ನು ಮಾಡಿ ಮುಗಿಸಿ ಆಗ ತಾನೆ ಅಲ್ಲಿಗೆ ಹೋಗಿದ್ದ ವೆಂಕಣ್ಣಯ್ಯನವರು - ಅದಕ್ಕೆ ಹೇಗೆ ಜವಾಬ್ದಾರರು ? ಆ ಕೆಂಪು ಮೂತಿಯವನು ಇದ್ದಕ್ಕಿದ್ದ ಹಾಗೆ ಬಂದು, ಹಿಂದು ಮುಂದು ನೋಡದೆ ಶಿಕ್ಷೆಮಾಡಿ ಹೊರಟರೆ, ನಮ್ಮ ಸಾಹೇಬರಾದರೂ ಅವರಿಗೆ ಇದ್ದ ವಿಷಯವನ್ನು ತಿಳಿಸಿ ಹೇಳಬಾರದೆ? ನೌಕರರನ್ನು ರಕ್ಷಿಸುವ ಅಥವಾ ಶಿಕ್ಷಿಸುವ ಸರ್ವಾಧಿಕಾರ ಜಿಲ್ಲಾಧಿಕಾರಿಯ ಕೈಯಲ್ಲಿದೆ. ಅವರು ಹೀಗೆ ಮಾಡಿ ಹೊದರೆ ನಮ್ಮ ಗತಿ ಏನು? ಎಲ್ಲರೂ ಅಮಲ್ದಾರರ ಬಳಿಗೆ ಹೋಗಿ ವೆಂಕಣ್ಣಯ್ಯನವರಿಗೆ ಆಗಿರುವ ಅನ್ಯಾಯವನ್ನು ಹೋಗಲಾಡಿಸಬೇಕೆಂದು ಅವರನ್ನು ಪ್ರಾರ್ಥಿಸಿದರು. ಅಮಲ್ದಾರರು ಮುಖ ಸಣ್ಣಗೆ ಮಾಡಿಕೊಂಡು ನಿಟ್ಟುಸಿರು ಬಿಡುತ್ತಾ, ತಾವು ತಮ್ಮ ಕೈಲಾದುದೆಲ್ಲವನ್ನೂ ಮಾಡುವುದಾಗಿ ಹೇಳಿದರು. ಇತ್ತ ವೆಂಕಣ್ಣನವರು ತಮಗಾದ ಅನ್ಯಾಯಕ್ಕಾಗಿ ಮರ ಮರ ಮರುಗಿದರಾದರೂ ಸಂಯಮದಿಂದ ಮನಸ್ಸನ್ನು ಹತೋಟಿಗೆ ತಂದುಕೊಂಡು ತಮ್ಮ ಮನಸ್ಸಿನಲ್ಲಿಯೇ “ನನಗೆ ತಿಳಿಯದಂತೆಯೇ ನಾನೇನೋ ತಪ್ಪು ಮಾಡಿರಬೇಕು.” ಆದ್ದರಿಂದಲೇ ಶ್ರೀರಾಮನು ಹೀಗೆ ನನ್ನನ್ನು ಶಿಕ್ಷಿಸಿದ್ದಾನೆ. ಆಗಲಿ, ಅವನು ‘ಭಯಕೃತ್ ಭಯನಾಶನ’, ಭಯವನ್ನು ಹುಟ್ಟಿಸುವವನೂ ಅವನೇ ಅದನ್ನು ಹೊಗಲಾಡಿಸುವವನೂ ಅವನೆ. ‘ತ್ವಮೇವ ಶರಣಂ ಮಮ’ ಎಂದು ಹೇಳಿಕೊಂಡು ‘ಎಲ್ಲವನ್ನೂ ಅವನಿಗೆ ಒಪ್ಪಿಸುವುದೆ ನನ್ನ ಕರ್ತವ್ಯ’ ಎಂದುಕೊಂಡು ನೇರವಾಗಿ ಮನೆಗೆ ಹೋದರು. ಅಲ್ಲಿ ಬಚ್ಚಲುಮನೆಯನ್ನು ಹೊಕ್ಕು ಹತ್ತು ಕೊಡ ತಣ್ಣೀರನ್ನು ತಲೆಯ ಮೇಲೆ ಸುರಿದುಕೊಂಡರು. ಒದ್ದೆಯ ಬಟ್ಟೆಯಲ್ಲಿಯೇ ದೇವರ ಮನೆಗೆ ಹೋಗಿ, ಮಂಟಪದಲ್ಲಿ ರೇಷ್ಮೆ ವಸ್ತ್ರದಿಂದ ಸುತ್ತಿಟ್ಟಿದ್ದ ರಾಮಾಯಣವನ್ನು ಕೈಗೆ ತೆಗೆದುಕೊಂಡರು. ಅದನ್ನು ರೇಷ್ಮೆಯ ಮಗುಟ ಶಲ್ಯಗಳೊಡನೆ ಕೃಷ್ಣಾಜಿನದ ಚೀಲವೊಂದರಲ್ಲಿ ಇಟ್ಟುಕೊಂಡರು. ಮತ್ತೊಂದು ಕೈಚೀಲದಲ್ಲಿ ತಾಮ್ರದ ತಂಬಿಗೆ, ಲೋಟ, ಉದ್ಧರಣೆಗಳನ್ನು, ವಿಭೂತಿ, ಮಂತ್ರಾಕ್ಷತೆ, ಊದಿನಕಡ್ಡಿಗಳನ್ನು ತುಂಬಿಕೊಂಡು ಹೊರಹೊರಟರು. 6 ಮೂರು ತಲೆಮಾರು ಬೆರಗುಗಣ್ಣುಗಳಿಂದ ಇದನ್ನೆಲ್ಲ ನೋಡುತ್ತಿದ್ದ ಹೆಂಡತಿ - ವೆಂಕಣ್ಣಯ್ಯನವರಿಗೆ ಹದಿಮೂರು ಅಥವಾ ಹದಿನಾಲ್ಕು ವಯಸ್ಸಿನಲ್ಲಿ ಲಗ್ನವಾಗಿ ಆಕೆ ಮನೆಗೆ ಬರುವ ಮೊದಲೇ ತೀರಿಹೋಗಿದ್ದಳು. ಆದ್ದರಿಂದ ಹನುಮಕ್ಕಮ್ಮ ಆತನಿಗೆ ಎರಡನೆ ಸಂಬಂಧ. ಆಕೆಯನ್ನು ಮದುವೆಯಾದಾಗ ಆತ ಇಪ್ಪತ್ತೆರಡು ವರ್ಷಗಳ ಹರೆಯದವನಾಗಿದ್ದ. ಹೆಂಡತಿ ಮನೆಗೆ ಬಂದಾಗ ಆತನಿಗೆ ಇಪ್ಪತ್ತಾರು ವರ್ಷ. ಗಂಡನಿಗೂ ಹೆಂಡತಿಗೂ ಹನ್ನೆರಡು ವರ್ಷ ವ್ಯತ್ಯಾಸ. ಹನುಮಕ್ಕಮ್ಮನನ್ನು ಕುರಿತು ‘ನಾನು ಹಿಂದಿರುಗಿ ಬರುವವರೆಗೆ ಮನೆಯವರಾರೂ ನನ್ನನ್ನು ಹುಡುಕ ಹೊರಡಬೇಡಿರಿ. ನಾನು ಮನೆ ಬಿಟ್ಟು ಓಡಿ ಹೋಗುತ್ತಿಲ್ಲ. ಕೆಲವು ದಿನಗಳಲ್ಲಿಯೇ ನಾನು ಹಿಂದಿರುಗಿ ಬರುತ್ತೇನೆ’- ಇಷ್ಟನ್ನು ಹೇಳಿ ಮನೆಯಿಂದ ಹೊರಬಿದ್ದರು. ಕಣಕುಪ್ಪೆಯಿಂದ ಸುಮಾರು ಎರಡು ಮೈಲಿ ದೂರದಲ್ಲಿ ಒಂದು ದಟ್ಟವಾದ ಕಾಡು; ಆ ಕಾಡಿನ ಮಧ್ಯದಲ್ಲಿ ಆಂಜನೇಯಸ್ವಾಮಿಯ ಪುಟ್ಟದೊಂದು ಗುಡಿ; ಯಾವ ಕಾಲದಲ್ಲಿ ಯಾವ ಭಕ್ತ ಕಟ್ಟಿದುದೋ ಅದು ! ಅದರ ಸುತ್ತಮುತ್ತ ಎರಡು ಮೂರು ಮೈಲಿಯಲ್ಲಿ ಕೆಲವು ಸಣ್ಣ ಸಣ್ಣ ಹಳ್ಳಿಗಳಿದ್ದುವು. ದೇವಸ್ಥಾನವಿದ್ದುದು ನಿರ್ಜನ ಪ್ರದೇಶದಲ್ಲಿ. ಅದರ ಪಕ್ಕದಲ್ಲಿಯೇ ಸಣ್ಣದೊಂದು ನೀರಿನ ಝರಿ. ಏಕಾಂತವಾಸಕ್ಕೆ ಹೇಳಿ ಮಾಡಿಸಿದಂತಿತ್ತು. ಆ ಸ್ಥಳ. ವೆಂಕಣ್ಣಯ್ಯನವರು ಗುಡಿಯನ್ನು ಸೇರಿದಾಗ ಸಂಜೆಯ ಮಬ್ಬುಗತ್ತಲೆ ಆಗ ತಾನೇ ಆವರಿಸುತ್ತಿತ್ತು. ಅವರು ಗುಡಿಗೆ ಬಂದವರೇ ಝರಿಯಲ್ಲಿ ಸ್ನಾನಮಾಡಿ, ಮಡಿಯುಟ್ಟು, ಸಂಧ್ಯಾಕಾರ್ಯಗಳನ್ನು ಮಾಡಿ ಮುಗಿಸಿದರು. ಆಮೇಲೆ ಮೈ ಮೇಲಿದ್ದ ಟವೆಲನ್ನು ನೆಲದ ಮೇಲೆ ಹಾಸಿ ಗುಡಿಯಲ್ಲಿ ಮಲಗಿದರು. ಮರುದಿನ ಪಂಚಪಂಚ ಉಷಃ ಕಾಲಕ್ಕೆ ಮೇಲೆದ್ದು ಪ್ರಾತಃಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ ಝರಿಯಲ್ಲಿ ಸ್ನಾನ ಮಾಡಿದರು, ಮಗುಟವನ್ನುಟ್ಟು ಆಹ್ನಿಕವನ್ನು ನೇರವೇರಿಸಿದ ಬಳಿಕ ಸುಂದರಕಾಂಡದ ಸಪ್ತಾಹವನ್ನು- 68 ಸರ್ಗಗಳನ್ನು ಏಳು ದಿನಗಳಲ್ಲಿ ಪಾರಾಯಣ ಮಾಡಿ ಮುಗಿಸುವ ಕಾರ್ಯ ಆರಂಭಿಸಿದರು. ಪಾರಾಯಣವಾದ ಮೇಲೆ ಪುಸ್ತಕವನ್ನು ಆಂಜನೇಯನ ವಿಗ್ರಹದ ಎದುರು ಇರಿಸಿ ವಿಗ್ರಹಕ್ಕೂ ಪುಸ್ತಕಕ್ಕೂ ಷೋಡಶೋಪಚಾರ ಪೂಜೆ ಮಾಡಿದರು. ಆ ವೇಳೆಗೆ ಮಟ ಮಟ ಮಧ್ಯಾಹ್ನ. ಮತ್ತೆ ಮಾಧ್ಯಾಹ್ನಿಕವನ್ನು ಮಾಡಿ ಮುಗಿಸಿದ ಮೇಲೆ ಒಂದಿಷ್ಟು ಹಸಿಗರಿಕೆಯನ್ನು ತಂದು ಕಲ್ಲಿನ ಮೇಲೆ ಕುಟ್ಟಿ ಒಂದು ಲೋಟದಷ್ಟು ರಸವನ್ನು ತೆಗೆದರು. ಅದನ್ನು ದೇವರಿಗೆ ನೈವೇದ್ಯ ಮಾಡಿ, ಅದೇ ಪ್ರಸಾದವನ್ನೇ ತಾವು ಸ್ವೀಕರಿಸಿದರು. ಆನಂತರ ಸಾಯಂಕಾಲದವರೆಗೆ ಶ್ರೀರಾಮ ಬಂದನಾ ಹುಲಿರಾಯನು ! 7 ತಾರಕ ಮಹಾಮಂತ್ರವನ್ನು ಜಪಮಾಡುತ್ತಾ ಕುಳಿತಿದ್ದರು. ಸಾಯಂಕಾಲವಾಗುತ್ತಲೇ ಯಥಾಪ್ರಕಾರ ಮತ್ತೊಮ್ಮೆ ಸ್ನಾನಮಾಡಿ ಸಾಯಂಸಂಧ್ಯೆಯನ್ನು ಆಚರಿಸಿ, ರಾತ್ರಿ 12 ಘಂಟೆಯವರೆಗೆ ಮತ್ತೆ ಶ್ರೀರಾಮತಾರಕ ಜಪವನ್ನು ಮಾಡುತ್ತ ಉತ್ತರೀಯದ ಮೇಲೆ ಮಲಗಿ ನಿದ್ರಿಸಿದರು. ಇದು ಅವರ ನಿತ್ಯ ಕರ್ಮವಾಯಿತು. ಆಂಜನೇಯನ ಗುಡಿಯಲ್ಲಿ ಯಾರೋ ಬಂದು ಪೂಜೆ ಮಾಡುತ್ತಿರುವರೆಂಬ ಸಂಗತಿ ದನಕಾಯುವ ಹುಡುಗರಿಂದ ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಹರಡಿತು. ಮರು ದಿನದಿಂದ ಆ ಹಳ್ಳಿಯ ಜನ ತೆಂಗಿನಕಾಯಿ, ಬಾಳೇಹಣ್ಣು, ಹಾಲುಗಳನ್ನು ಹಿಡಿದು ಅಲ್ಲಿಗೆ ಬರಲಾರಂಭಿಸಿದರು. ಅಷ್ಟೇ ಅಲ್ಲ, ಆ ಕಾಡಿನಲ್ಲಿದ್ದ ನೂರಾರು ಕೋತಿಗಳು ವೆಂಕಣ್ಣಯ್ಯನವರ ಪಾರಾಯಣ ಪ್ರಾರಂಭವಾಗುತ್ತಲೇ ಗುಡಿಯ ಪ್ರಾಕಾರದೊಳಕ್ಕೆ ಬಂದು ಸ್ವಲ್ಪವೂ ಚೇಷ್ಟೆ ಮಾಡದೆ ನಿಶ್ಯಬ್ದವಾಗಿ ಕುಳಿತಿರುತ್ತಿದ್ದುವು. ಒಮ್ಮೊಮ್ಮೆ ಕಾಡಿನಲ್ಲಿ ಸಿಕ್ಕುವ ಹಣ್ಣು ಹಂಪಲುಗಳನ್ನು ಎತ್ತಿಕೊಂಡು ಬರುತ್ತಿದ್ದುವು; ಆ ಹಣ್ಣುಗಳನ್ನು ಗುಡಿಯ ಮುಂಭಾಗದಲ್ಲಿ ಚೆಲ್ಲುತ್ತಿದ್ದುವು. ವೆಂಕಣ್ಣಯ್ಯನವರು ಹಳ್ಳಿಗರು ತರುತ್ತಿದ್ದ ನೇವೇದ್ಯದ ಸಾಮಾನುಗಳನ್ನು ಕೋತಿಗಳಿಗೂ, ಕೋತಿಗಳು ತರುತ್ತಿದ್ದ ಹಣ್ಣು ಹಂಪಲುಗಳನ್ನು ದೇವರ ಪ್ರಸಾದವಾಗಿ ಹಳ್ಳಿಗರಿಗೂ ಹಂಚಿಬಿಡುತ್ತಿದ್ದರು. ತಾವು ಮಾತ್ರ ಗರಿಕೆಯ ರಸದ ಪ್ರಸಾದದಿಂದಲೇ ತೃಪ್ತರಾಗುತ್ತಿದ್ದರು. ಹೀಗೆ ಆರು ದಿನಗಳು ಕಳೆದುವು. * * * * 8 ಮೂರು ತಲೆಮಾರು 2. ಧರ್ಮೋ ರಕ್ಷತಿ ರಕ್ಷಿತಃ ಇತ್ತ ಜಿಲ್ಲೆಯ ಮುಖ್ಯಸ್ಥಳವಾದ ಚಿತ್ರದುರ್ಗವನ್ನು ಸೇರಿದ ಜಿಲ್ಲಾಧಿಕಾರಿಗಳು ಮರುದಿನ ಬೆಳಗ್ಗೆ ತಮ್ಮನ್ನು ಭೇಟಿ ಮಾಡಿದ ಅಸಿಸ್ಟೆಂಟ್ ಕಮೀಷನರಿಗೆ ಕಣ ಕುಪ್ಪೆಯ ತಾಲ್ಲೂಕು ಕಛೇರಿಯಲ್ಲಿ ನಡೆದ ವೃತ್ತಾಂತವನ್ನೆಲ್ಲ ವಿವರಿಸಿ ಹೇಳಿದರು. ಅದನ್ನು ಕೇಳಿ ಹೌಹಾರಿದ ಅಸಿಸ್ಟೆಂಟ್ ಕಮೀಷನರು ‘ಅಯ್ಯೋ, ಇದೆಂತಹ ಅನ್ಯಾಯ ? ವೆಂಕಣ್ಣಯ್ಯನವರು ತುಂಬ ಧೈವಭಕ್ತರು, ಧರ್ಮಭೀರುಗಳು, ಕರ್ತವ್ಯತತ್ಪರರು. ಅವರೆಂದಿಗೂ ಆಕ್ಷೇಪಣೆಗೆ ಗುರಿಯಾಗತಕ್ಕವರಲ್ಲ. ಅವರ ಕೆಲಸಗಳೆಲ್ಲ ತುಂಬ ಅಚ್ಚುಕಟ್ಟು. ಅವರು ನೀವು ಭಾವಿಸಿರುವಂತೆ ಧಫ್ತರ ಬಂದಿಯಲ್ಲ. ಅವರು ರೆವಿನ್ಯೂ ಗುಮಾಸ್ತರು’ ಎಂದು ಹೇಳಿದರು. ಇತ್ತ ಅಮಲ್ದಾರರೂ ವೆಂಕಣ್ಣಯ್ಯನವರ ಸಸ್ಪೆಂಡ್ ವಿಚಾರದಲ್ಲಿ ದೀರ್ಘವಾದ ಒಂದು ಪತ್ರವನ್ನು ಬರೆದು, ಅವರು ತಪ್ಪಿತಸ್ಥರಲ್ಲವೆಂಬುದನ್ನೂ, ಅವರಿಗೆ ವಿಧಿಸಿದ ಶಿಕ್ಷೆ ಅನ್ಯಾಯವೆಂಬುದನ್ನೂ, ಕೂಲಂಕಷವಾಗಿ ವಿವರಿಸಿ, ಅವರ ಪ್ರಾಮಾಣಿಕತೆ, ಕರ್ತವ್ಯನಿಷ್ಠೆಗಳನ್ನು ಮನವರಿಕೆಯಾಗುವಂತೆ ತಿಳಿಸಿದರು. ಅಲ್ಲದೆ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಬಿನ್ನವಿಸಿಕೊಂಡರು. ಅಷ್ಟೇ ಅಲ್ಲ, ಪತ್ರವನ್ನು ಬರೆದ ಮರುದಿನ ತಾವೇ ಖುದ್ದಾಗಿ ಸರ್ಕಾರಿ ಕೆಲಸದ ನಿಮಿತ್ತ ಚಿತ್ರದುರ್ಗಕ್ಕೆ ಹೋಗಿ, ಜಿಲ್ಲಾಧಿಕಾರಿಯವರೊಡನೆ ವೆಂಕಣ್ಣಯ್ಯನವರ ಪರವಾಗಿ ಮಾತನಾಡಿ, ಅವರಿಗಾಗಿದ್ದ ಅನ್ಯಾಯವನ್ನು ಮನಗಾಣಿಸಿಕೊಟ್ಟರು. ಜಿಲ್ಲಾಧಿಕಾರಿಯವರು ನೋಟಕ್ಕೆ ಕಠೋರರಾಗಿ ಕಾಣಿಸಿದರೂ ಮೃದು ಹೃದಯರು, ಉದಾರಿಗಳು, ಸಜ್ಜನರು, ದೈವಭಕ್ತಿಯುಳ್ಳವರು. ಸರಿಯಾಗಿ ವಿಚಾರ ಮಾಡದೆ ತಪ್ಪು ತಿಳಿವಳಿಕೆಯಿಂದ ತಾವು ಮಾಡಿದ ಅನ್ಯಾಯಕ್ಕಾಗಿ ಅವರು ಪಶ್ಚಾತ್ತಾಪಪಟ್ಟರು. ಅಮಲ್ದಾರರನ್ನು ತಮ್ಮ ಕಛೇರಿಗೆ ಕರೆದುಕೊಂಡು ಹೋಗಿ ವೆಂಕಣ್ಣಯ್ಯನವರ ಶಿಕ್ಷೆಯನ್ನು ರದ್ದುಗೊಳಿಸಿರುವುದಾಗಿಯೂ, ಅವರ ಗೈರು ಹಾಜರಿಯ ಕಾಲವನ್ನು ಕೆಲಸದ ಮೇಲಿದ್ದಂತೆಯೇ ಭಾವಿಸಬೇಕೆಂದೂ ಆಜ್ಞೆಯನ್ನು ಬರೆದುಕೊಟ್ಟುದಲ್ಲದೆ, ಅವರಿಗೆ ಶೇಕದಾರರಾಗಿ ಬಡ್ತಿಕೊಟ್ಟು, ಪರಶುರಾಮಪುರಕ್ಕೆ ವರ್ಗಾಯಿಸಿರುವುದಾಗಿ ಅಪ್ಪಣೆಯನ್ನು ಅಮಲ್ದಾರರ ಕೈಯಲ್ಲಿ ಬರೆದುಕೊಟ್ಟರು. ಧರ್ಮೋ ರಕ್ಷತಿ ರಕ್ಷಿತಃ 9 ಚಿತ್ರದುರ್ಗದಿಂದ ಕಣಕುಪ್ಪೆಗೆ ಎರಡು ದಿನಗಳ ಹಾದಿ. ಕಣಕುಪ್ಪೆಗೆ ಹೊರಟ ಅಮಲ್ದಾರರು ಎಷ್ಟು ಬೇಗ ಊರು ಸೇರುವೆನೋ ಎಂದು ಹಾತೊರೆಯುತ್ತಿದ್ದರು. ಜಿಲ್ಲಾಧಿಕಾರಿಗಳ ಆಜ್ಞೆಯನ್ನು ಕಂಡು ವೆಂಕಣ್ಣಯ್ಯನವರಿಗಾಗಬಹುದಾದ ಸಂತೋಷಕ್ಕಿಂತಲೂ ಅಮಲ್ದಾರರ ಸಂತೋಷವೇ ಹೆಚ್ಚಾಗಿತ್ತು. ಅವರಿಗೆ ವೆಂಕಣ್ಣಯ್ಯನವರಲ್ಲಿ ವಿಶ್ವಾಸ, ಅಭಿಮಾನ, ಅದಕ್ಕೂ ಹೆಚ್ಚಾಗಿ ಪೂಜ್ಯಭಾವನೆ. ಅವರು ತಮ್ಮ ಕುದುರೆಯನ್ನೇರಿ ಕಣಕುಪ್ಪೆಗೆ ಬಂದವರೇ ಮನೆಗಾಗಲಿ, ಕಛೇರಿಗಾಗಲಿ ಹೋಗದೆ ನೇರವಾಗಿ ಕಾಡಿನ ಮಧ್ಯದ ಆಂಜನೇಯನ ಗುಡಿಗೆ ಧಾವಿಸಿ ಬಂದರು. ಆಗ ಒಳ್ಳೆಯ ಮಧ್ಯಾಹ್ನ, ಮೂರು ಘಂಟೆಯ ಸಮಯ. ಆ ವೇಳೆಗಾಗಲೆ ವೆಂಕಣ್ಣಯ್ಯನವರ ಪಾರಾಯಣ, ಪೂಜೆ ಪುನಸ್ಕಾರಗಳೆಲ್ಲ ಮುಗಿದು, ಗರಿಕೆಯ ರಸದ ಪ್ರಸಾದ ಸೇವಿಸಿ, ಮಾರುತಿಯ ಮುಂದೆ ಕೈಜೋಡಿಸಿ ಧ್ಯಾನಸ್ಥಿಮಿತಮೂರ್ತಿಗಳಾಗಿ ಕುಳಿತಿರುತ್ತಿದ್ದರು. ಆ ದಿನ ಪಾರಾಯಣ ಮುಗಿದುದರಿಂದ ಹಳ್ಳಿಗರ ಪಾಯಸದ ‘ಚರುಪ’ನ್ನು ಮಾಡಿ ಕೋತಿಗಳಿಗೆ ಎಡೆ ನೀಡಿ ತಾವು ರಾಮನಾಮವನ್ನು ಭಜನೆ ಮಾಡುತ್ತಾ ಕುಳಿತಿದ್ದರು. ಗುಡಿಯ ಬಳಿ ಕುದುರೆ ಬಂದು ನಿಲ್ಲುತ್ತಲೇ ನೆರೆದಿದ್ದ ಜನರೆಲ್ಲರೂ ಗಡಿಬಿಡಿಯಿಂದ ಮೇಲಕ್ಕೆದ್ದು ತಾಲ್ಲೂಕು ಧಣಿಗೆ ನಮಸ್ಕರಿಸಿದರು. ಕುದುರೆಯಿಂದಿಳಿದ ಅಮಲ್ದಾರ ಸಾಹೇಬರು ಅಲ್ಲಿನ ದೃಶ್ಯವನ್ನು ಕಂಡು ಆನಂದಾಶ್ರುಗಳನ್ನು ಸುರಿಸಿದರು. ಅವರ ಪರಿವೆ ಇಲ್ಲದೆಯೆ ಅವರ ಬಾಯಿಂದ ‘ಇಂತಹ ಪುಣ್ಯಮೂರ್ತಿಯ ವಿಷಯದಲ್ಲಿಯೂ ಅನ್ಯಾಯವೇ’ ಎಂಬ ಮಾತುಗಳೂ ಹೊರಬಿದ್ದವು. ಯಾವ ಜಾತಿಯವರಾದರೇನು ? ಆತ ನೀತಿವಂತ. ಗುಣಗ್ರಾಹಿ, ಸುಸಂಸ್ಕೃತ, ಸತ್ಪುರುಷ. ಅಮಲ್ದಾರರ ಆಗಮನದ ಸಮಾಚಾರ ಕೇಳಿ ವೆಂಕಣ್ಣಯ್ಯನವರು ದೇವಸ್ಥಾನದಿಂದ ಹೊರಕ್ಕೆ ಬಂದರು. ಅಮಲ್ದಾರರ ಭೇಟಿ ಮಾಡಿದರು. ಅಮಲ್ದಾರರು ವೆಂಕಣ್ಣಯ್ಯನವರನ್ನು ಬಾಚಿ ತಬ್ಬಿಕೊಂಡು, ‘ವೆಂಕಣ್ಣಯ್ಯನವರೇ! ನಿಮ್ಮ ಪ್ರಭುವಾದ ರಾಮಚಂದ್ರ ನಿಮ್ಮ ಕಷ್ಟವನ್ನು ನಿವಾರಣೆ ಮಾಡಿದ್ದಾನೆ. ಅಷ್ಟೇ ಅಲ್ಲ, ನಿಮಗೆ ಶ್ರೇಯಸ್ಸನ್ನೂ ಮಾಡಿದ್ದಾನೆ. ಇಲ್ಲಿ ನೋಡಿ, ನಿಮ್ಮ ಜಿಲ್ಲಾಧಿಕಾರಿಗಳು ಕೊಟ್ಟಿರುವ ಈ ಪತ್ರವನ್ನು, ನಿಮಗೆ ಬಡ್ತಿ ಕೊಟ್ಟು ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರದ ಹೋಬಳಿಗೆ ಶೇಕದಾರರಾಗಿ ನೇಮಕ ಮಾಡಿದ್ದಾರೆ’ ಎಂದು ಹೇಳಿ ಜೇಬಿನಲ್ಲಿಟ್ಟಿದ್ದ ಸರ್ಕಾರಿ ಪತ್ರವನ್ನು ಅವರ ಕೈಗೆ ಕೊಟ್ಟರು. ವೆಂಕಣ್ಣಯ್ಯನವರ ಸಂತೋಷ ವರ್ಣನಾತೀತ, ಅವರಿಗೆ ಬಡ್ತಿ 10 ಮೂರು ತಲೆಮಾರು ದೊರೆತದ್ದಕ್ಕಿಂತ ಹೆಚ್ಚಾಗಿ ತಮ್ಮ ಮೇಲಿನ ಆಪಾದನೆ ತೊಲಗಿದ್ದು ಹರ್ಷದಾಯಕವಾಗಿತ್ತು. ‘ಪ್ರಭು ರಾಮಚಂದ್ರನ ಕೃಪೆ, ತಮ್ಮ ಅಭಿಮಾನ’- ಇಷ್ಟು ಹೇಳುವುದರಲ್ಲಿ ಅವರ ಕಂಠ ಗದ್ಗದವಾಯಿತು. ಅವರು ಮನಸ್ಸನ್ನು ಹತೋಟಿಗೆ ತಂದುಕೊಂಡು, ಅಮಲ್ದಾರರನ್ನು ಒಂದು ಕಲ್ಲು ಬಂಡೆಯ ಮೇಲೆ ಕೂಡಿಸಿ, ಗುಡಿಯೊಳಗೆ ಹೋದವರೇ ಬಾಳೆಹಣ್ಣಿನ ರಸಾಯನವನ್ನೂ, ಎಳೆನೀರಿನ ಪ್ರಸಾದವನ್ನೂ ತಂದು ಅವರಿಗೆ ಕೊಟ್ಟರು. ಅನಂತರ ಅಲ್ಲಿ ನೆರೆದಿದ್ದ ಕಪಿವೃಂದಕ್ಕೆ ಕೈ ಮುಗಿದು ಆಂಜನೇಯನ ಮುಂದೆ ಅಡ್ಡಬಿದ್ದರು. ಅನಂತರ ಅವರು ಅಮಲ್ದಾರರನ್ನು ಬೀಳ್ಕೊಟ್ಟು ಅಂದು ಸಂಜೆ ಅಲ್ಲಿಂದ ಹಿಂದಿರುಗಿ ಮನೆಯನ್ನು ಸೇರಿದರು. ವೆಂಕಣ್ಣಯ್ಯನವರದು ಸಾಕಷ್ಟು ದೊಡ್ಡ ಸಂಸಾರ; ತಾವು, ಹೆಂಡತಿ ಹನುಮಕ್ಕಮ್ಮ, ಮಕ್ಕಳು ಸುಬ್ಬಣ್ಣ, ಶ್ರೀನಿವಾಸ ಮತ್ತು ಶೇಷಣ್ಣ, ಅವಿವಾಹಿತ ಸೋದರ ಲಕ್ಷ್ಮಪ್ಪ, ವಿವಾಹಿತ ಸೋದರ ಲಿಂಗಣ್ಣ, ಆತನ ಹೆಂಡತಿ ಸೀತಮ್ಮ, ಮಗ ಸುಬ್ಬಣ್ಣ. ಆತನ ಮಕ್ಕಳಿನ್ನೂ ಚಿಕ್ಕವರು. ತಮ್ಮಂದಿರಾದ ಲಕ್ಷ್ಮಪ್ಪ, ಲಿಂಗಣ್ಣ ಯಾವ ಸಂಪಾದನೆಯೂ ಇಲ್ಲದವರು. ಅವರಿಬ್ಬರಲ್ಲಿ ಲಕ್ಷ್ಮಪ್ಪ ಒಳ್ಳೆ ಜಟ್ಟಿಯಂತಿದ್ದವನು. ಭೀಮಾಂಶಪುರುಷ, ಪುಕಾಪುಷ್ಟಿಯಾದ ಭೋಜನಪ್ರಿಯ. ಮನೆಗೆಲಸಗಳಲ್ಲಿ ಎಂತಹ ಕಷ್ಟದ್ದಾದರೂ ಲಕ್ಷ್ಯವಿಲ್ಲದೆ ಮಾಡಬಲ್ಲ, ಶುದ್ಧ ಭೋಳೇ ಸ್ವಭಾವದ ಮನುಷ್ಯ, ಮರೆ-ಮೋಸಗಳ ಗಂಧವೂ ಆತನ ಬಳಿ ಸುಳಿಯದು. ಎರಡನೆಯವನಾದ ಲಿಂಗಣ್ಣ ಒಳ್ಳೆ ಖುಶಿಗಾರ, ನಕಲಿಯ ಶ್ಯಾಮ, ಯಾವಾಗಲೂ ವಿನೋದದಲ್ಲಿಯೇ ಕಾಲ ಕಳೆಯುವ ಸ್ವಭಾವ, ದುಡಿಯುವ ಹವ್ಯಾಸವೇ ಇಲ್ಲ. ಒಮ್ಮೊಮ್ಮೆ ಆತನ ಹೆಂಡತಿ ಗೊಣಗಿದಾಗ ನಕ್ಕು ಅಲ್ಲಿಂದ ಜಾರಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಅಣ್ಣನ ಲೆಕ್ಕಪತ್ರಗಳು ರೇಜಿಗೆಯಾಗಿ, ತಿಕ್ಕಲು ಹಿಡಿಸುವಂತಿದ್ದರೆ, ಆತ ಅವುಗಳನ್ನು ಕೈಗೆ ತೆಗೆದುಕೊಂಡು ಬರೆದಿಡುವುದುಂಟು. ಒಟ್ಟಿನಲ್ಲಿ ಈ ದೊಡ್ಡ ಕುಟುಂಬದ ನಿರ್ವಹಣೆ ವೆಂಕಣ್ಣಯ್ಯನವರ ಸಂಪಾದನೆಯನ್ನು ಅವಲಂಬಿಸಿತ್ತು. ವೆಂಕಣ್ಣಯ್ಯನವರ ಸಂಪಾದನೆ ಎಂದರೆ ಸರ್ಕಾರಿ ಸಂಬಳವೊಂದೇ. ಅವರು ಧರ್ಮಭೀರುಗಳು : ಆತ್ಮಸಾಕ್ಷಿಗೆ ಅನುಸಾರವಾಗಿ ನಡೆಯತಕ್ಕವರು ; ಪರರ ಸೊತ್ತಿಗೆ ಆಸೆ ಪಡುವಂತಹವರಲ್ಲ; ಲಂಚ-ರುಷುವತ್ತುಗಳಿಗೆ ಕೈಯೊಡ್ಡುವವರಲ್ಲ. ಆಚಾರಸಂಪನ್ನರಾದ ಅವರು ಹಬ್ಬ ಹರಿದಿನಗಳಂದು ವಿಶೇಷ ಪೂಜೆಗಳನ್ನು ಸಲ್ಲಿಸುವ ಪದ್ಧತಿ; ದೈವಭಕ್ತಿಯಲ್ಲಿ ಎತ್ತಿದ ಕೈ; ದೇವರ ಧರ್ಮೋ ರಕ್ಷತಿ ರಕ್ಷಿತಃ 11 ಹತ್ತಿರ ದಿನದ 24 ಘಂಟೆಗಳೂ ನಂದಾದೀಪ ಉರಿಯುತ್ತಿರಬೇಕು. ಇವೆಲ್ಲಕ್ಕೂ ಹಣ ಎಲ್ಲಿಂದ ಬರಬೇಕು? ಅವರಿಗೆ ಬರುತ್ತಿದ್ದ 12 ರೂಪಾಯಿಗಳು ಏತಕ್ಕೂ ಸಾಲದು. ಆದ್ದರಿಂದ ಸಾಲ ಮಾಡದೆ ವಿಧಿಯಿಲ್ಲ. ಅಂಗಡಿಯವನಿಗೆ ಅವರಲ್ಲಿ ತುಂಬ ನಂಬಿಕೆ, ಪೂಜ್ಯಭಾವ. ಆತ ವೈಶ್ಯ, ಬ್ರಾಹ್ಮಣರಲ್ಲಿ ಭಕ್ತಿ ವಿಶ್ವಾಸವುಳ್ಳವನು. ಆತನ ದೃಷ್ಟಿಯಲ್ಲಿ ವೆಂಕಣ್ಣಯ್ಯನವರು ಒಬ್ಬ ದೇವತಾ ಪುರುಷ. ಅವರು ಅಪೇಕ್ಷಿಸಿದ ವಸ್ತುಗಳನ್ನು ತತ್‍ಕ್ಷಣವೇ ಸಂತೋಷವಾಗಿ ಕೊಡುತ್ತಿದ್ದ. ವೆಂಕಣ್ಣಯ್ಯನವರೇನೋ ಸಂಬಳ ಬಂದೊಡನೆಯೇ ಹತ್ತು ರೂಪಾಯಿಗಳನ್ನು ಅಂಗಡಿಯವನಿಗೆ ಪಾವತಿ ಮಾಡುವರು. ಆದರೂ ಕಣಕುಪ್ಪೆಯಲ್ಲಿ ಅವರಿದ್ದ ನಾಲ್ಕು ವರ್ಷಗಳಲ್ಲಿ ಅಂಗಡಿಯಲ್ಲಿ ಸಾಲ ನೂರು ರೂಪಾಯಿಗಳಿಗೆ ಏರಿತು. ವೆಂಕಣ್ಣಯ್ಯನವರಿಗೆ ವರ್ಗವಾದ ಸುದ್ದಿ ಊರಲ್ಲಿ ಹರಡುತ್ತಲೇ ಅವರ ಗೆಳೆಯರು ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿದರು. ಅಮಲ್ದಾರರೂ ಬ್ರಾಹ್ಮಣರಾದ ಶಿರಸ್ತೇದಾರರಿಗೆ ಹೇಳಿ ಭರ್ಜರಿಯಾದ ಭೋಜನಕೂಟವನ್ನು ಏರ್ಪಡಿಸಿದರು. ಎಲ್ಲವೂ ಸರಿಹೋಯಿತು. ಆದರೆ, ಸಂಸಾರಸಹಿತರಾಗಿ ಅವರು ಪರಶುರಾಮಪುರಕ್ಕೆ ಹೋಗುವುದು ಹೇಗೆ ? ಅಲ್ಲಿಂದ ಆ ಊರಿಗೆ ಮೂರು ದಿನಗಳ ಪ್ರಯಾಣ. ಮನೆಯವರೆಲ್ಲರೂ ಹೋಗಲು ಎರಡು ಗಾಡಿಗಳಾದರೂ ಬೇಕು. ಹತ್ತು ರೂಪಾಯಿಗಳು ವೆಚ್ಚಮಾಡದೆ ಗಾಡಿಗಳು ಸಿಗುವಂತಿಲ್ಲ. ಅಲ್ಲದೆ ಊರು ಬಿಡುವ ಮುನ್ನ ಶೆಟ್ಟರ ಅಂಗಡಿಯ ಸಾಲವನ್ನು ತೀರಿಸಬೇಕಲ್ಲವೆ ? ಶೆಟ್ಟರೇನೊ ಆ ಸಾಲವನ್ನೆಲ್ಲ ಬಿಟ್ಟುಬಿಡಲು ಸಿದ್ಧರಾಗಿದ್ದರು. ಆದರೆ ವೆಂಕಣ್ಣಯ್ಯನವರ ಮನಸ್ಸು ಅದಕ್ಕೆ ಒಪ್ಪಲಿಲ್ಲ. ‘ಸಾಲವೆಂದ ಮೇಲೆ ಸಾಲವೇ. ನೀವು ಬಿಟ್ಟರೂ ಆ ಋಣಭಾರ ನನಗೆ ತಪ್ಪದು. ಮತ್ತೊಂದು ಜನ್ಮವೆತ್ತಿಯಾದರೂ ಅದನ್ನು ತೀರಿಸಬೇಕಾಗುತ್ತದೆ. ಆದ್ದರಿಂದ ಸೋಡಿಯ ಮಾತು ಬೇಡ’ ಎಂದು ಅವರು ಖಡಾಖಂಡಿತವಾಗಿ ಹೇಳಿಬಿಟ್ಟರು. ಮಾರನೆಯ ದಿನ ಕಣಕುಪ್ಪೆ ಕಛೇರಿಯ ತಮ್ಮ ಕೆಲಸವನ್ನು ಬೇರೊಬ್ಬರಿಗೆ ವಹಿಸಿಕೊಡುವ ಕಾರ್ಯ ಮುಗಿಯಿತು. ಅದರ ಮರುದಿನ ಮನೆಯವರನ್ನೆಲ್ಲ ಕಣಕುಪ್ಪೆಯಲ್ಲೇ ಬಿಟ್ಟು ತಾವೊಬ್ಬರೆ ಕಾಲ್ನಡಿಗೆಯಿಂದ ಜಗಳೂರಿಗೆ ಬಂದರು. ಅಲ್ಲಿಂದ ಸಂತೆಗಾಡಿಯಲ್ಲಿ ಚಳ್ಳಕೆರೆಗೆ ಪ್ರಯಾಣ. ಮಾರನೆಯ ದಿನವೇ ಪರಶುರಾಮಪುರದಲ್ಲಿ ಕೆಲಸಕ್ಕೆ ಹಾಜರಾಗಬೇಕು. ಚಳ್ಳಕೆರೆಯಿಂದ ಅಲ್ಲಿಗೆ ಹದಿಮೂರು ಮೈಲಿ. ಆದರೆ ನೇರವಾಗಿ ಪರಶುರಾಮಪುರಕ್ಕೆ ಹೋಗುವ ಬದಲು ಅವರು ಚಳ್ಳಕೆರೆಯಲ್ಲಿದ್ದ ತಮ್ಮ ಬಂಧುಗಳ ಮನೆಯಲ್ಲಿ ಮಧ್ಯಾಹ್ನದ 12 ಮೂರು ತಲೆಮಾರು ಭೋಜನವನ್ನು ತೀರಿಸಿಕೊಂಡು ಅಲ್ಲಿಂದ ಹದಿನೈದು ಮೈಲಿ ದೂರದಲ್ಲಿರುವ ಚೆನ್ನಮ್ಮನಾಗತಿಹಳ್ಳಿಗೆ ಬಂದು ಸೇರಿದರು. ಅಲ್ಲಿಯೂ ಅವರ ಬಂಧುಗಳಿದ್ದರು. ಅಲ್ಲಿಯ ಜೋಯಿಸ ರಾಮಣ್ಣನವರಿಗೆ ವೆಂಕಣ್ಣಯ್ಯನವರ ತಮ್ಮ ಲಿಂಗಣ್ಣನವರ ಮಗಳು ಸುಬ್ಬಮ್ಮನನ್ನು ಕೊಟ್ಟು ವಿವಾಹವಾಗಿತ್ತು. ಆದರೆ ಆಕೆ ಇನ್ನೂ ದೊಡ್ಡವಳಾಗಿ ಗಂಡನ ಮನೆಗೆ ಬಂದಿರಲಿಲ್ಲ. ವೆಂಕಣ್ಣಯ್ಯ ಆ ದಿನ ರಾತ್ರಿ ಅಲ್ಲಿ ತಂಗಿ ಮರುದಿನ ಆಹ್ನಿಕ, ಭೋಜನಾದಿಗಳನ್ನು ಮುಗಿಸಿ ಪರಶುರಾಮಪುರಕ್ಕೆ ಹೊರಟರು. ಪರಶುರಾಮಪುರದಲ್ಲಿ ಹೊಸ ಶೇಕದಾರರು ಆ ದಿನ ಬಂದು ಸೇರುವರೆಂದು ತಿಳಿದು ಬಂದಿತ್ತು. ಅವರನ್ನು ಎದುರ್ಗೊಂಡು ಕರೆತರುವುದಕ್ಕಾಗಿ, ಆಗಿನ ಪದ್ಧತಿಯಂತೆ ಪಟೇಲ, ಶಾನುಭೋಗರು, ರೈತ ಮುಖಂಡರು ಸೇರಿ ತಮಟೆ, ಕಹಳೆ, ಕರಡಿವಾದ್ಯ ಮೊದಲಾದವುಗಳೊಂದಿಗೆ ಸಂಜೆ, ಹೊತ್ತು ಬಾಗುತ್ತಿರುವ ವೇಳೆಯಲ್ಲಿ ಊರಿನಿಂದ ಒಂದು ಕೂಗಿನಷ್ಟು ದೂರದಲ್ಲಿದ್ದ ಆಲದ ಮರದ ಕೆಳಗೆ ಕಾದು ಕುಳಿತಿದ್ದಾರೆ. ಶೇಕದಾರರೆಂದರೆ ಏನು ಸಣ್ಣ ಅಧಿಕಾರಿಗಳೆ ? ಅವರು ಹೋಬಳಿಯ ಧಣಿ. ತಾಲ್ಲೂಕು ಧಣಿಗೆ ಎರಡನೆಯವರು. ಅವರನ್ನು ಕರೆತರುವುದೆಂದರೆ ಸಾಮಾನ್ಯವಾಯಿತೆ ? ಕೊರಳಿಗೂ, ಕೊಂಬುಗಳಿಗೂ ಗೆಜ್ಜೆಗಳನ್ನು ಕಟ್ಟಿದ್ದ ದೊಡ್ಡ ಎತ್ತುಗಳನ್ನು ಹೂಡಿದ ಸವಾರಿ ಗಾಡಿಯಲ್ಲಿ ಅವರು ಬರುತ್ತಾರೆಂದು ಅಲ್ಲಿ ಕಾದಿದ್ದ ಜನಗಳ ನಿರೀಕ್ಷೆ. ಹತ್ತಿರಕ್ಕೆ ಬರುತ್ತಲೇ ಅವರಿಗೆ ಗೌರವ ತೋರಲು ನಿಂಬೆ ಹಣ್ಣುಗಳನ್ನು ಹಿಡಿದು ಮುಖಂಡರು ನಿಂತಿದ್ದಾರೆ. ತಿನ್ನಲು ಒಳ್ಳೆಯ ಬಾಳೆಹಣ್ಣು, ಕುಡಿಯಲು ಹದನಾದ ಎಳೆನೀರು ಸಿದ್ಧವಾಗಿದೆ. ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಬೇಕೆಂಬ ಉತ್ಸಾಹ. ಗ್ರಾಮವನ್ನು ಪ್ರವೇಶಿಸುತ್ತಲೇ ಮರ್ಯಾದೆಯಿಂದ ಕುಳ್ಳಿರಿಸಲು ಚಾವಡಿಯಲ್ಲಿ ಜಮಖಾನವನ್ನು ಹಾಸಿ ಒರಗುದಿಂಬುಗಳನ್ನು ಸಿದ್ಧಪಡಿಸಿದ್ದಾರೆ. ತಳವಾರನೊಬ್ಬನು ಕಾದು ನಿಂತಿದ್ದಾನೆ. ಅವರ ದರ್ಶನಕ್ಕಾಗಿ ಗ್ರಾಮದ ಜನರೆಲ್ಲ ಅಲ್ಲಿ ನೆರೆದು ನಿಂತಿದ್ದಾರೆ. ಅವರ ಉತ್ಸಾಹಕ್ಕೆ ಮಿತಿಯಿಲ್ಲ. ಸಂಜೆಯಾಯಿತು, ಮಬ್ಬುಗತ್ತಲೆ ಮುಸುಗಿತು. ಜನರು ಉತ್ಕಂಠತೆಯಿಂದ ಗಾಡಿ ಬರುವ ದಾರಿಯನ್ನೇ ನೋಡುತ್ತಿದ್ದಾರೆ. ಎಷ್ಟು ಹೊತ್ತಾದರೂ ಗಾಡಿಯ ಸುಳಿವೇ ಇಲ್ಲ. ಕುದುರೆಯ ಮೇಲೆ ಬರುವರೆಂದರೆ ಅದರ ಸುಳಿವೂ ಇಲ್ಲ. ಇಷ್ಟರಲ್ಲಿ ಗಾಡಿ-ಕುದುರೆಗಳಿಗೆ ಬದಲಾಗಿ ಪಾದಚಾರಿಯೊಬ್ಬ ಬರುವುದು ಕಾಣಿಸಿತು. ಆತ ಹತ್ತಿರಕ್ಕೆ ಬಂದ. ಆತನ ಹಣೆಯ ಮೇಲೆ ಎದ್ದು ಕಾಣುವ ಧರ್ಮೋ ರಕ್ಷತಿ ರಕ್ಷಿತಃ 13 ಗಂಧಾಕ್ಷತೆ ಅವನು ಬ್ರಾಹ್ಮಣನೆಂದು ಸಾರಿ ಹೇಳಿತು. ಅವನ ಮೈ ಮೇಲೆ ಒಂದು ಸಾದಾ ಬನೀನು. ಅದರ ಮೇಲೆ ಒಂದು ಅಂಗವಸ್ತ್ರ, ಭುಜದ ಮೇಲೆ ಮಡಿಸಿಹಾಕಿಕೊಂಡಿದ್ದ ಒಂದು ಹಳೆಯ ಶಾಲು, ಕಂಕುಳಲ್ಲಿ ಒಂದು ಕೃಷ್ಣಾಜಿನದ ಪೆಟ್ಟಿಗೆ, ಬರಿಗಾಲು. ಅವನನ್ನು ಕಂಡು ಅವನಾರೋ ಒಬ್ಬ ಯಾಚಕ ಬ್ರಾಹ್ಮಣನೆಂದು ಅವರು ಭಾವಿಸಿದರು. ಆ ಕಾಲದಲ್ಲಿ ಬಡಬ್ರಾಹ್ಮಣರು ಯಾಚನೆಗಾಗಿ ಆಗಾಗ ಊರಿಂದೂರಿಗೆ ಸಂಚರಿಸುತ್ತಿದ್ದರು. ಈ ಯಾಚಕ ಬ್ರಾಹ್ಮಣನನ್ನು ಕೇಳಿದರೆ ತಮ್ಮ ಶೇಕದಾರರ ವಿಷಯ ತಿಳಿಯಬಹುದೆಂದು ಶಾನುಭೋಗ ಮೈಲಾರಪ್ಪನವರು ಅವನ ಬಳಿಗೆ ಹೊದರು. ಅವನನ್ನು ಕುರಿತು ‘ಸ್ವಾಮಿ ತಾವು ಎಲ್ಲಿಂದ ಬರುತ್ತಿರುವಿರಿ?’ ‘ಚಳ್ಳಕೆರೆಯಿಂದ’. ‘ಈ ದಿನ ನಮ್ಮ ಹೊಸ ಶೇಕದಾರರು ಇಷ್ಟು ಹೊತ್ತಿಗೆ ಇಲ್ಲಿಗೆ ಬರಬೇಕಾಗಿತ್ತು. ತಾವು ಬರುವಾಗ ದಾರಿಯಲ್ಲಿ ಅವರ ಗಾಡಿಯನ್ನು ನೋಡಿದಿರಾ?’ ‘ಓಹೋ ನಿಮ್ಮ ಹೊಸ ಶೇಕದಾರರೊ? ಕಣಕುಪ್ಪೆಯಿಂದ ಬರುತ್ತಾರೆ. ಅಲ್ಲೇ ನನಗೆ ಗೊತ್ತು. ಅವರನ್ನು ಚಳ್ಳಕೆರೆಯಲ್ಲಿ ಕಂಡಿದ್ದೆ. ಅವರು ಈ ದಿನ ಬರುವುದಿಲ್ಲ, ಯಾವಾಗ ಬರುತ್ತಾರೋ ತಿಳಿಯದು’. ‘ತಾವು ಯಾರು? ತಮ್ಮ ಪ್ರಯಾಣ ಎಲ್ಲಿಯವರೆಗೆ ?’ ‘ನಾನೊಬ್ಬ ದಾರಿಹೋಕ. ಈ ದಿನ ಪರಶುರಾಮಪುರದಲ್ಲಿ ತಂಗಬೇಕೆಂದಿದ್ದೇನೆ. ಪರಸ್ಥಳದ ಬ್ರಾಹ್ಮಣರಿಗೆ ಇಲ್ಲಿ ಅನುಕೂಲವಿದೆಯೆ?’ ‘ಅಗತ್ಯವಾಗಿ ಆಗಬಹುದು, ನಾನು ಇಲ್ಲಿನ ಶಾನುಭೋಗ. ನನ್ನ ಹೆಸರು ಮೈಲಾರಪ್ಪ, ನಮ್ಮ ಮನೆಗೆ ತಾವು ದಯಮಾಡಿಸಬಹುದು’. ‘ತುಂಬ ಸಂತೋಷ, ತಮ್ಮ ಇಷ್ಟದಂತೆಯೇ ಆಗಲಿ’. ಹೊಸ ಶೇಕದಾರರು ಆ ದಿನ ಬರುವುದಿಲ್ಲವೆಂಬುದನ್ನು ತಿಳಿದು ಗ್ರಾಮದ ತಲೆಯಾಳುಗಳಿಗೆಲ್ಲ ತಮ್ಮ ಉತ್ಸಾಹಕ್ಕೆ ತಣ್ಣೀರೆರಚಿದಂತಾಯ್ತು. ಎಲ್ಲರೂ ನಿರಾಶರಾಗಿ ಊರಿಗೆ ಹಿಂತಿರುಗಿ ಬಂದರು. ಅವರನ್ನು ಹಿಂಬಾಲಿಸಿದ ಆ ‘ಯಾಚಕ ಬ್ರಾಹ್ಮಣ’ ಶಾನುಭೋಗ ಮೈಲಾರಪ್ಪನವರ ಜೊತೆಗೆ ಅವರ ಮನೆಗೆ ಹೋದರು. ಶಾನುಭೋಗರು ಆಗಂತುಕರ ವಸತಿಗೆ ತಕ್ಕ ಅನುಕೂಲಗಳನ್ನು ಮಾಡಿಕೊಟ್ಟರು. ಸಾಯಂಕಾಲದ ಆಹ್ನಿಕಗಳೆಲ್ಲ ಮುಗಿದ ಮೇಲೆ ಮೈಲಾರಪ್ಪನವರು ತಮ್ಮ ಅತಿಥಿಯೊಡನೆ ಭೋಜನ ಮಾಡಿದರು. ಆಮೇಲೆ ತಾಂಬೂಲವನ್ನು ಸವಿಯುತ್ತಾ ಕುಳಿತರು. ಶಾನುಭೋಗ ಮೈಲಾರಪ್ಪ ತುಂಬ ಬುದ್ಧಿವಂತ, ಪ್ರಪಂಚಾನುಭವವುಳ್ಳವ, ಮುಖವನ್ನು ನೋಡಿ ಯೋಗ್ಯತೆಯನ್ನು ಅಳೆಯಬಲ್ಲ ಮೇಧಾವಿ. ಅಗಂತುಕನ ಗಾಂಭೀರ್ಯ, ಮುಖದಲ್ಲಿ ಉಕ್ಕುತ್ತಿರುವ ಸಾತ್ವಿಕ 14 ಮೂರು ತಲೆಮಾರು ಬ್ರಹ್ಮತೇಜಸ್ಸು, ನಡೆ-ನುಡಿಗಳಲ್ಲಿನ ಸೌಮ್ಯತೆ - ಇವುಗಳನ್ನು ಕಂಡು ‘ಈತ ನಿಜವಾಗಿಯೂ ಯಾಚಕ ಬ್ರಾಹ್ಮಣನೇ’ ಎಂದು ಸಂದೇಹಗೊಂಡ. ನಿಜಾಂಶವನ್ನು ತಿಳಿಯಲು ಉತ್ಸುಕನಾದ. ಆಗಂತುಕ ಆತನ ಉತ್ಸುಕತೆ ಅರಳುವಂತೆ ಆತನನ್ನು ಕುರಿತು ‘ಈ ಫಿರ್ಕಾದ ಜಮಾಬಂದಿ ಎಷ್ಟು? ತಾಲ್ಲೂಕು ಜಮಾಬಂದಿ ಹುಜೂರು ಜಮಾಬಂದಿಗಳು ಯಾವಾಗ ಆದವು? ಅಥವಾ ಇನ್ನು ಆಗಬೇಕೆ? ಸಾಯರ್ (ಅಡಿಕೆ ಮೇಲಿನ ಸುಂಕ) ಬಾಬಿನ ವರಮಾನವೆಷ್ಟು?’ ಎಂದು ಪ್ರಶ್ನಿಸಿದ. ಹೋಬಳಿಯ ಆಡಳಿತಕ್ಕೆ ಸಂಬಂಧಿಸಿದ ಈ ವಿಚಾರಗಳನ್ನೆಲ್ಲ ಆ ಬ್ರಾಹ್ಮಣ ಆಸಕ್ತಿಯಿಂದ ಕೇಳುತ್ತಿರುವುದನ್ನು ಗಮನಿಸಿ ಈತ ಯಾಚಕ ಬ್ರಾಹ್ಮಣನಲ್ಲ ಎಂಬ ತನ್ನ ಅನುಮಾನ ಮೈಲಾರಪ್ಪನಿಗೆ ದೃಢವಾಯಿತು. ಆತ ಆ ಬ್ರಾಹ್ಮಣನನ್ನು ಕುರಿತು ‘ಸ್ವಾಮಿ, ದಾರಿಹೋಕ ಬ್ರಾಹ್ಮಣರಾದ ನಿಮಗೆ ಈ ಸರ್ಕಾರಿ ಸಂಬಂಧವಾದ ಆಡಳಿತ ವಿಚಾರದಲ್ಲಿ ಏಕಿಷ್ಟು ಆಸಕ್ತಿ? ನಿಜವಾಗಿಯೂ ನೀವು ಯಾರು? ಒಬ್ಬಂಟಿಗರಾಗಿ ಕಾಲ್ನಡಿಗೆಯಿಂದ ಹೀಗೇಕೆ ಬಂದಿದ್ದೀರಿ? ನನ್ನಲ್ಲಿ ಸ್ವಲ್ಪವೂ ಸಂಕೋಚಪಡಬೇಡಿ. ಸತ್ಯ ಸಂಗತಿಯನ್ನು ದಯವಿಟ್ಟು ತಿಳಿಸಿ ಎಂದು ಕೇಳಿಕೊಂಡ. ಆಗ ಆ ಬ್ರಾಹ್ಮಣ ಸ್ವಾಮಿ, ಮೈಲಾರಪ್ಪನವರೆ, ನಾನೇ ನಿಮ್ಮ ಹೋಬಳಿಯ ಶೇಕದಾರ, ನನ್ನ ಹೆಸರು ವೆಂಕಣ್ಣಯ್ಯ. ನೀವು ನಿರೀಕ್ಷಿಸಿದಂತೆ ಗಾಡಿಯಲ್ಲಾಗಲಿ, ಕುದುರೆಯ ಮೇಲಾಗಲಿ ಬರುವಷ್ಟು ಸೌಕರ್ಯ ನನಗಿಲ್ಲ. ಆದ್ದರಿಂದಲೇ ಎಡಬಿಡಂಗಿಯಾಗಿ ಹೀಗೆ ಬರಬೇಕಾಯಿತು’ ಎಂದು ಹೇಳಿ ಜಿಲ್ಲಾಧಿಕಾರಿಗಳಿಂದ ಬಂದಿದ್ದ ಅಧಿಕಾರಪತ್ರವನ್ನು ತೋರಿಸಿದರು. ತಮ್ಮ ಆರ್ಥಿಕ ಪರಿಸ್ಥಿತಿಯನ್ನೂ, ಗೃಹಕೃತ್ಯದ ಸಂಗತಿಯನ್ನೂ ಇದ್ದದ್ದಿದ್ದಂತೆ ಆತನಲ್ಲಿ ವಿವರಿಸಿದರು. ಸಜ್ಜನನಾದ ಮೈಲಾರಪ್ಪ ಅವರ ಒಂದೊಂದು ಮಾತನ್ನೂ ಅಕ್ಷರಶಃ ನಂಬಿದ. ಅವರಿಗೆ ತಕ್ಕ ಸಹಾಯ ಮಾಡಿ ಪುಣ್ಯಾಭಾಗಿಯಾಗಬೇಕೆಂದೂ ಮನಸ್ಸಿನಲ್ಲಿ ನಿರ್ಧರಿಸಿದ. ವೆಂಕಣ್ಣಯ್ಯನವರನ್ನು ಬೇರೆಯಾದ ಒಂದು ಕೊಠಡಿಯಲ್ಲಿ ಮೆತ್ತನೆಯ ಹಾಸಿಗೆಯೊಂದರ ಮೇಲೆ ಮಲಗಿಸಿ, ಅವರಿಗೆ ಸಹಾಯ ಮಾಡುವ ಮಾರ್ಗವನ್ನು ಯೋಚಿಸುತ್ತ ಮಲಗಿ ನಿದ್ರೆ ಹೋದ. ಮರುದಿನ ಬೆಳಿಗ್ಗೆ ವೆಂಕಣ್ಣಯ್ಯನವರು ಸ್ನಾನ, ಅಹ್ನಿಕಗಳನ್ನು ಸಾಂಗವಾಗಿ ಮಾಡಿ ಮುಗಿಸಿದರು. ಅಲ್ಲಿನ ಶೇಕದಾರಿಕೆಯ ಅಧಿಕಾರವನ್ನು ಶಾನುಭೋಗರಿಂದ ತೆಗೆದುಕೊಂಡು, ಹಾಗೆ ತಾವು ತೆಗೆದುಕೊಂಡ ಅಧಿಕಾರದ ವಿಚಾರವನ್ನು ಅಮಲ್ದಾರರಿಗೆ ಬರೆದು ಕಳುಹಿಸಿದ್ದಾಯಿತು. ಸಾಯರ್ ಎಂದರೆ ಅಡಿಕೆ ಬೆಳೆಯ ಮೆಲೆ ವಿಧಿಸಿದ ತೆರಿಗೆ. ಈಗಿನ ಧರ್ಮೋ ರಕ್ಷತಿ ರಕ್ಷಿತಃ 15 ಮಾರಾಟದ ತೆರಿಗೆ ಇರುವ ಹಾಗೆ ಅದೊಂದು ತೆರಿಗೆ. ಅದರ ಪರಿಮಿತಿಯನ್ನು ನಿರ್ಧರಿಸಿ. ತೆರಿಗೆಯನ್ನು ವಿಧಿಸುವ, ಅದನ್ನು ವಸೂಲು ಮಾಡಿ ಖಜಾನೆಗೆ ಜಮಾ ಮಾಡುವ ಜವಾಬ್ದಾರಿ ಶೇಕದಾರರದು. ಅವರು ನಿಗದಿ ಮಾಡಿದ ಮೊತ್ತವೇ ಆಖೈರು ತೀರ್ಮಾನ. ಅದರ ಮೇಲೆ ದೂರನ್ನು ಒಯ್ಯುವಂತೆಯೇ ಇಲ್ಲ. ಆದ್ದರಿಂದ ಅಡಕೆಯ ಬೆಳೆಗಾರರು ಶೇಕದಾರರಿಗೆ ಅಂಜಿ ನಡೆಯಬೇಕಾಗಿತ್ತು. ರೈತರು ವಿದ್ಯಾವಂತರಲ್ಲ. ಅಲ್ಲದೆ ಸರ್ಕಾರವೆಂದರೆ ಅವರಿಗೆ ಎಲ್ಲಿಲ್ಲದ ಭಯ. ದಂಡವನ್ನಾದರೂ ತೆರುವರೇ ಹೊರತು ಮೇಲಧಿಕಾರಿಗಳಿಗೆ ದೂರು ಹೇಳಲು ಹೋಗಲಾರರು. ಆ ದಿನವೇ ಶೇಕದಾರರು ದಯಮಾಡಿಸಿದ್ದಾರೆಂದೂ, ರಾತ್ರಿ 9 ಘಂಟೆಗೆ ಊರಿನ ಮುಖಂಡರೆಲ್ಲರೂ ಚಾವಡಿಯಲ್ಲಿ ಸೇರಬೇಕೆಂದೂ ತಳವಾರನ ಮೂಲಕ ಗ್ರಾಮ ಮುಖಂಡರಿಗೆಲ್ಲ ಕರೆ ಹೋಯಿತು. ಹಾಗೆ ಕರೆಯನ್ನು ಕಳುಹಿಸಿದ ಶಾನುಭೋಗ ಹೊಸ ಶೇಕದಾರರೊಡನೆ ಊಟ ಮಾಡಿ ಚಾವಡಿಗೆ ಹೊರಡಲು ಸಿದ್ಧನಾದ. ಹೊಸ ಶೇಕದಾರರಿಗೆ ತನ್ನದೇ ಒಂದು ಒಗೆದು ಶುದ್ಧವಾದ ಕೋಟನ್ನು ತೊಡಿಸಿ, ಗದ್ದೆ ಮಡಿಜರಿ ರುಮಾಲನ್ನು ಅವರ ತಲೆಗೆ ಸುತ್ತಿ, ತಕ್ಕ ಮಟ್ಟಿಗೆ ಜಬರ್‍ದಸ್ತಾಗಿ ಕಾಣುವಂತೆ ಮಾಡಿದ. ಈ ಆಡಂಬರವೊಂದೂ ವೆಂಕಣ್ಣಯ್ಯನವರಿಗೆ ಹಿಡಿಸದು. ಆದರೂ ಆ ಶಾನುಭೋಗ ‘ಸ್ವಾಮಿ ತಾವು ಸುಮ್ಮನಿರಿ, ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ ಬೇಕೂ ಸ್ವಾಮಿ. ಇಲ್ಲದಿದ್ದರೆ ಈ ಪ್ರಪಂಚದಲ್ಲಿ ಬಾಳುವುದೇ ಕಷ್ಟ. ತಾವು ಚಾವಡಿಯಲ್ಲಿ ಯಾವ ಮಾತನ್ನೂ ಆಡಬೇಡಿ, ದೇವರಂತೆ ಸುಮ್ಮನೆ ಕುಳಿತಿರಿ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ’ ಎಂದು ಬಲವಂತ ಮಾಡಿದ. ಆತನ ಮಾತಿಗೆ ಕಟ್ಟು ಬೀಳಲೇಬೇಕಾಯ್ತು. ಮೈಲಾರಪ್ಪನೊಡನೆ ಚಾವಡಿಗೆ ಬಂದ ಹೊಸ ಶೇಕದಾರರನ್ನು ಕಾಣುತ್ತಲೇ ಅಲ್ಲಿ ನೆರೆದಿದ್ದವರೆಲ್ಲ ಭಯ ಭಕ್ತಿಯಿಂದ ಎದ್ದು ನಿಂತು ನಮಸ್ಕರಿಸಿದರು. ವೆಂಕಣ್ಣಯ್ಯನವರು ಪ್ರತಿ ನಮಸ್ಕಾರ ಮಾಡಿ ಎಲ್ಲರೂ ಕುಳಿತುಕೊಳ್ಳುವಂತೆ ತಿಳಿಸಿ ತಾವೂ ಕುಳಿತರು. ಮೈಲಾರಪ್ಪ ಅವರೆಲ್ಲರ ಪರಿಚಯ ಮಾಡಿಕೊಟ್ಟ. ಪರಸ್ಪರ ಕ್ಷೇಮ ಸಮಾಚಾರಗಳಾದುವು. ಶೇಕದಾರರು ದೊಡ್ಡ ಅಧಿಕಾರಿಗಳೆಂಬ ಅಹಂಭಾವವಿಲ್ಲದೆ ತಮ್ಮಲ್ಲಿ ಒಬ್ಬರಂತೆ ನಮ್ರತೆಯಿಂದ ವರ್ತಿಸುತ್ತಿರುವುದನ್ನು ಕಂಡು ಅಲ್ಲಿದ್ದವರಿಗೆಲ್ಲ ವಿಶ್ವಾಸಾದರಗಳು ಮೂಡಿದುವು. ಎಲ್ಲರೂ ಮೌನದಿಂದ ಕುಳಿತಿರುವಾಗ ಶಾನುಭೋಗ ಮೈಲಾರಪ್ಪ ಅಲ್ಲಿದ್ದವರನ್ನೆಲ್ಲ ಉದ್ದೇಶಿಸಿ, ‘ಅಣ್ಣಗಳಿರಾ, ನಮ್ಮ ಹೊಸ ಶೇಕದಾರರನ್ನು ನಾನು ನಿನ್ನೆಯಿಂದ ನೋಡುತ್ತಿದ್ದೇನೆ. ಅವರು 16 ಮೂರು ತಲೆಮಾರು ಉಳಿದವರಂತಲ್ಲ. ಮಹಾ ದೈವಭಕ್ತರು, ಸತ್ಯವಂತರು, ಕರುಣಾಳುಗಳು. ಯಾರಿಗೂ ಅವರಿಂದ ಕೆಡುಕಾಗುವುದಿಲ್ಲ. ಅನ್ಯಾಯವಾಗುವುದಿಲ್ಲ. ಧರ್ಮಾತ್ಮರಾದ ಅವರು ಲಂಚ-ರುಷುವತ್ತಿಗೆ ಕೈಯೊಡ್ಡುವವರಲ್ಲ. ಇಲ್ಲದಿದ್ದರೆ ನಗದಿ ಗುಮಾಸ್ತರಾಗಿದ್ದವರು ಸಂಸಾರ ತೂಗಿಸುವುದಕ್ಕೆ ಸಾಲ ಮಾಡಬೇಕಾಗಿತ್ತೆ ? ಅವರಿಂದು ಸಾಲಗಾರರು, ಎಷ್ಟೊ ಜನ ಸರ್ಕಾರಿ ನೌಕರರು ಬೇಕಾದ ಹಾಗೆ ಸಂಪಾದಿಸಿಕೊಂಡು, ಮನೆ -ಮಠಗಳನ್ನು ಭೂಮಿ ಕಾಣಿಗಳನ್ನು ಮಾಡಿಕೊಂಡು ಸುಖವಾಗಿರುತ್ತಾರೆ. ನಮ್ಮಲ್ಲಿ ಎಷ್ಟೊ ಜನಕ್ಕೆ ಇದು ಅನುಭವವೇದ್ಯವಾಗಿದೆ. ಆದರೆ ನಮ್ಮ ಹೊಸ ಶೇಕದಾರರು ಇದುವರೆವಿಗೂ ಒಂದು ನಾಲ್ಕಂಕಣದ ಮನೆಯನ್ನಾಗಲಿ, ಒಂದು ಗುಂಟೆ ಜಮೀನನ್ನಾಗಲಿ ಸಂಪಾದಿಸಿಕೊಂಡಿಲ್ಲ. ಅವರು ಎಂದೂ, ಏನನ್ನೂ, ಯಾರನ್ನೂ ಬೇಡುವವರೂ ಅಲ್ಲ. ಅವರದು ಹತ್ತು ಹನ್ನೆರಡು ಜನರಿರುವ ಭಾರಿ ಸಂಸಾರ. ಅದನ್ನು ತೂಗಿಸಬೇಕಾದರೆ ಇಂತಹ ಸಾಚಾಮಂದಿ ಸಾಲಮಾಡದೆ ಹೇಗೆ ಸಾಧ್ಯ? ಮೈ ತುಂಬ ಸಾಲ ಮಾಡಿಕೊಂಡಿದ್ದಾರೆ. ಈ ಧರ್ಮಾತ್ಮರು ನಮ್ಮ ಹೋಬಳಿಗೆ ಧಣಿಯಾಗಿ ಬಂದಿದ್ದಾರೆ. ಇದೊಂದು ನಮ್ಮ ಪುಣ್ಯ. ಈಗ ನಾವೆಲ್ಲ ಸೇರಿ ಕಣಕುಪ್ಪೆಯಲ್ಲಿ ಅವರು ಮಾಡಿರುವ ಸಾಲವನ್ನೆಲ್ಲ ತೀರಿಸಿ, ಅಲ್ಲಿರುವ ಅವರ ಸಂಸಾರವನ್ನು ಇಲ್ಲಿಗೆ ಕರೆತರಬೇಕಾಗಿದೆ. ನಮ್ಮ ಹೋಬಳಿಯಲ್ಲಿ ಇರುವವರೆಗೆ ಅವರ ಜೀವನಕ್ಕೆ ಯಾವ ಕೊರತೆಯೂ ಇಲ್ಲದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಹಲವು ಹುಲ್ಲು ಕಡ್ಡಿಗಳನ್ನು ಹೊಸೆದರೆ ಅದರಿಂದ ಆನೆಯನ್ನು ಕಟ್ಟಬಹುದಂತೆ! ನಾವು ಇಷ್ಟು ಜನ ಒಟ್ಟಿಗೆ ಸೇರಿ ಅವರ ಕುಟುಂಬವನ್ನು ಸಾಕಲಾರೆವೆ? ನೀವು ಹೇಳಿ. ಯಾರು ಯಾರು ಎಷ್ಟೆಷ್ಟು ಸಹಾಯ ಮಾಡುತ್ತೀರೆಂಬುದನ್ನು ತಿಳಿಸಿ. ಇದು ದಂಡವಲ್ಲ, ದೋಷವಲ್ಲ, ಬಲವಂತವಿಲ್ಲ. ನಮ್ಮ ಹೊಸ ಶೇಕದಾರರು ಮಹಾ ರಾಮಭಕ್ತರು, ಸದ್‍ಬ್ರಾಹ್ಮಣರು, ಅವರಿಗೆ ನಮ್ಮ ಶಕ್ತಿಯಿದ್ದಂತೆ ಸಹಾಯ ಮಾಡಿದರೆ ದೈವ ಮೆಚ್ಚುತ್ತದೆ, ನಮಗೆ ಪುಣ್ಯ ಬರುತ್ತದೆ’ ಎಂದು ಹೇಳಿದರು. ಗೌಡನ ಸಲಹೆಯಂತೆ ಶಾನುಭೋಗರು ಕಾಗದವನ್ನು ಕೈಲಿ ಹಿಡಿದು ಲೆಕ್ಕಣಿಕೆಯಿಂದ ಬರೆಯಲು ಸಿದ್ಧರಾಗಿ ಕುಳಿತರು. ಶಾನುಭೋಗರ ಮಾತುಗಳಿಂದ ಮನಕರಗಿದ ಅಲ್ಲಿನ ಪ್ರಮುಖರು ಸಂತೋಷದಿಂದಲೇ ತಮ್ಮ ಕಾಣಿಕೆಗಳನ್ನು ಬಾಯಿಂದ ಹೇಳಿ ಬರೆಸಿದರು. 150 ರೂಪಾಯಿಗಳು 50 ಪಲ್ಲ ಭತ್ತವೂ ಪಟ್ಟಿಗೆ ಸೇರಿದವು. ಊರ ಗೊಂಚಗಾರ ತನ್ನ ವಿಶಾಲವಾದ ಧಾನ್ಯದ ಮನೆಯನ್ನು ಶೇಕದಾರರ ವಾಸಕ್ಕೆ ಬಿಟ್ಟುಕೊಟ್ಟ. ಚಂದಾಪಟ್ಟಿಯ ಹಣವೂ, ಧಾನ್ಯವೂ ಮೂರೇ ದಿನಗಳಲ್ಲಿ ಧರ್ಮೋ ರಕ್ಷತಿ ರಕ್ಷಿತಃ 17 ವಸೂಲಾದವು. ಗೌಡ, ಶಾನುಭೋಗರ ಪ್ರಯತ್ನದಿಂದ ಆ ಊರಿನಲ್ಲಿದ್ದ ನಾಲ್ಕು ಕಮಾನಿನ ಗಾಡಿಗಳು ಶೇಕದಾರರ ಕುಟುಂಬದವರನ್ನು ಕಣಕುಪ್ಪೆಯಿಂದ ಕರೆ ತರಲು ಬಾಡಿಗೆ ಇಲ್ಲದೆಯೆ ಸಿದ್ಧವಾದುವು. ಪ್ರಯಾಣಕ್ಕೆ ಗಾಡಿಗಳೇನೋ ಸಿದ್ಧವಾದುವು. ಆದರೆ ಕಣಕುಪ್ಪೆಗೆ ಹೋಗಿ ವೆಂಕಣ್ಣಯ್ಯನವರ ಸಂಸಾರವನ್ನು ಪರಶುರಾಮಪುರಕ್ಕೆ ಕರೆತರುವವರಾರು? ಅರವತ್ತು ಮೈಲಿಗಳ ಪ್ರಯಾಣ! ಹೋಗುವುದಕ್ಕೆ ಮೂರು ದಿನ, ಹಿಂದಿರುಗುವುದಕ್ಕೆ ಮತ್ತೆ ಮೂರು ದಿನ. ಅದರ ಜೊತೆಗೆ ಅಲ್ಲಿನ ಸಾಮಾನು ಸರಂಜಾಮುಗಳನ್ನು ಸರಿಯಾಗಿ ಕಟ್ಟಿ ಗಾಡಿಯಲ್ಲಿ ಜೋಡಿಸಿಡುವುದಕ್ಕೆ ಒಂದೆರಡು ದಿನ! ಒಟ್ಟು ಸುಮಾರು ಎಂಟು ದಿನಗಳು ಬೇಕು. ಅಷ್ಟೇ ಅಲ್ಲ, ಹೋಗುವಾಗ ಮತ್ತು ಬರುವಾಗ ಮೂರು ವಸತಿಗಳಾಗಬೇಕು. ಇದೂ ಅಲ್ಲದೆ ಕೈ ತುಂಬ ತುಂಬಿದ ಹಣವನ್ನು ಸುರಕ್ಷಿತವಾಗಿ ಕೊಂಡೊಯ್ದು ಕಣಕುಪ್ಪೆಯಲ್ಲಿ ಸಾಲಗಾರರಿಗೆ ಮುಟ್ಟಿಸಬೇಕು. ಇಷ್ಟು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವವರಾರು? ವೆಂಕಣ್ಣಯ್ಯನವರು ಆಗ ತಾನೆ ಬಂದು ಕೆಲಸಕ್ಕೆ ಸೇರಿದ್ದಾರೆ. ಅವರು ರಜ ತೆಗೆದುಕೊಳ್ಳುವುದೂ ಅಷ್ಟೇನೂ ಸರಿಯಿಲ್ಲ. ಆದ್ದರಿಂದ ಅವರು ಹೋಗುವಂತಿಲ್ಲ. ಅವರ ಕೈಕೆಳಗೆ ಮೂರು ಜನ ಜವಾನರಿದ್ದರಾದರೂ ಅವರಿಂದ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂದು ವೆಂಕಣ್ಣಯ್ಯನವರು ಚಿಂತಿಸತೊಡಗಿದರು. ಆಗ ಮೈಲಾರಪ್ಪನವರು ತಾವೇ ಆ ಹೊಣೆಯನ್ನು ಹೊರುವುದಾಗಿ ಹೇಳಿ ಒಂದು ದೊಡ್ಡ ಸಮಸ್ಯೆಯನ್ನು ಬಿಡಿಸಿದರು. ಗಾಡಿಗಳು ಪರಶುರಾಮಪುರದಿಂದ ಹೊರಟು ಹೆಚ್ಚು ತೊಂದರೆಯಿಲ್ಲದೆ ಕಣಕುಪ್ಪೆಯನ್ನು ಸೇರಿದುವು. ಮೈಲಾರಪ್ಪನವರು ವೆಂಕಣ್ಣಯ್ಯನವರ ಕುಟುಂಬ ವರ್ಗದವರನ್ನು ಕಂಡು ವೆಂಕಣ್ಣಯ್ಯನವರ ಕ್ಷೇಮ ಸಮಾಚಾರವನ್ನು ಅವರಿಗೆ ತಿಳಿಸಿದರು. ಎರಡು ದಿನ ಅಲ್ಲಿಯೆ ಉಳಿದುಕೊಂಡು ಅಂಗಡಿಯವರ ಸಾಲವನ್ನು ತೀರಿಸಿದರು. ಮನೆಯ ಸಾಮಾನು, ಸರಂಜಾಮುಗಳನ್ನು ಅಚ್ಚುಕಟ್ಟಾಗಿ ಕಟ್ಟಿಡಲು ಅಲ್ಲಿಯ ಅಮಲ್ದಾರರ ಜವಾನರೂ, ಮನೆಯಲ್ಲಿದ್ದವರೂ ಸಹಕರಿಸಿದರು. ಊರಿಗೆ ಪ್ರಯಾಣಮಾಡುವ ಕಾಲ ಸಮೀಪಿಸಿದಾಗ ಅಲ್ಲೊಂದು ದೊಡ್ಡ ಸಮಸ್ಯೆ ಹುಟ್ಟಿಕೊಂಡಿತು. ಸುಮಾರು ಹದಿನೈದು ದಿನಗಳ ಕೆಳಗೆ ಮನೆಯ ಯಜಮಾನಿ ಉಪ್ಪಿನಕಾಯಿ ಹಾಕಿದ್ದರು. ಅದು ಅಲ್ಪ ಸ್ವಲ್ಪವಲ್ಲ. ಅಷ್ಟು ದೊಡ್ಡ ಕುಟುಂಬಕ್ಕೆ ಆರು ತಿಂಗಳಿಗಾಗುವಷ್ಟು ದೊಡ್ಡ ಕಲ್ಲುಮರಿಗೆಯ ತುಂಬ ಅದು ತುಂಬಿತ್ತು. ಅದನ್ನು ಗಾಡಿಯಲ್ಲಿಟ್ಟರೆ ಮೈಲಿಗೆಯಾಗಿ ಹೋಗುತ್ತದೆ. ಅಷ್ಟೊಂದು 18 ಮೂರು ತಲೆಮಾರು ಉಪ್ಪಿನಕಾಯನ್ನು ಯಾರಿಗಾದರೂ ಕೊಡಲು ಹೇಗೆ ಸಾಧ್ಯ ? ಇದು ಬಿಸಿ ತುಪ್ಪದ ಸಮಸ್ಯೆ. ಏನು ಮಾಡಬೇಕೆಂದು ಗೃಹಿಣಿ ಒದ್ದಾಡುತ್ತಿರುವಾಗ ಸಂಸಾರದ ಭೀಮಸೇನನಂತಿದ್ದ ಲಕ್ಷ್ಮಪ್ಪ ಮುಂದೆ ಬಂದು ಆ ಸಮಸ್ಯೆಯನ್ನು ಬಗೆಹರಿಸಿದ. ಆತ ಗೃಹಿಣಿಯನ್ನು ಕುರಿತು ‘ಅವ್ವೋ ಹನುಮಕ್ಕತ್ತಿಗೆ, ಗಾಡಿಗೆ ಮುಟ್ಟಿಸದೆ ಆ ಉಪ್ಪಿನಕಾಯಿಯ ಕಲ್ಲುಮರಿಗೆಯನ್ನು ನಾನು ಹೊತ್ತು ತರುತ್ತೇನೆ. ಅದರ ಯೋಚನೆ ಹಚ್ಚಿಕೊಳ್ಳಬೇಡ’ ಎಂದ. ಆಗ ಹನುಮಕ್ಕಮ್ಮ ‘ಅಪ್ಪಾ, ಆ ಕಲ್ಲುಗಡಿಗೆ ವಿಪರೀತ ಭಾರ; ಉಪ್ಪಿನಕಾಯಿಂದ ಬೇರೆ ತುಂಬಿದೆ; ಐದು ಗಾವುದಗಳ ದೂರ ಅದನ್ನು ಹೊತ್ತು ನಡೆಯುವುದು ಬಾಬಜ್ಜಿ ಪರಿವಾರವಾಯಿತೆ?’ ಎಂದಳು. ಆಗ ಲಕ್ಷ್ಮಪ್ಪ ‘ಅತ್ತಿಗೆ! ಐದಲ್ಲದಿದ್ದರೆ ಐವತ್ತು ಗಾವುದಗಳಾಗಲಿ, ಹೊರುವವನು ನಾನು. ಅದರ ಯೋಚನೆ ನಿಮಗೇಕೆ?’ ಎಂದು ಬಿಟ್ಟ, ಅದನ್ನು ತಲೆಯ ಮೇಲೆ ಹೊತ್ತು ಉರಿ ಉರಿ ಬಿಸಿಲಿನಲ್ಲಿ ಆತ ಎಲ್ಲರಿಗಿಂತ ಮುಂಚೆ ಪರಶುರಾಮಪುರದ ಹಾದಿಯನ್ನು ಹಿಡಿದ. ಸಂಸಾರದ ಉಳಿದೆಲ್ಲರೂ ಊರಿನಲ್ಲಿ ಮಿತ್ರರನ್ನೆಲ್ಲ ಬೀಳ್ಕೊಂಡು ಗಾಡಿಯಲ್ಲಿ ಕುಳಿತರು. ಆರಂಭದಲ್ಲಿ ನಾಗಾಲೋಟದಿಂದ ಹೊರಟ ಆ ಗಾಡಿಗಳು ಕ್ಷಣಮಾತ್ರದಲ್ಲಿ ಲಕ್ಷ್ಮಪ್ಪನನ್ನು ಹಿಂದಕ್ಕೆ ಹಾಕಿ ಪ್ರಯಾಣ ಮಾಡಿದುವು. ಅಲ್ಲಲ್ಲಿ ವಸತಿ ಮಾಡುತ್ತಾ ಮೂರನೆಯ ದಿನ ರಾತ್ರಿ ಎಂಟು ಘಂಟೆಗೆ ವೆಂಕಣ್ಣಯ್ಯನವರ ಕುಟುಂಬವರ್ಗದವರೆಲ್ಲ ಪರಶುರಾಮಪುರವನ್ನು ಸೇರಿದರು. ಆ ರಾತ್ರಿ ಅವರೆಲ್ಲರೂ ಶಾನುಭೋಗರ ಮನೆಯಲ್ಲಿಯೇ ತಂಗಿದ್ದು, ಊಟ ಉಪಚಾರಗಳನ್ನು ಪಡೆದರು. ಮಾರನೆಯ ದಿವಸದಿಂದ ಅಲ್ಲಿ ವೆಂಕಣ್ಣಯ್ಯನವರ ಸಂಸಾರರಥ ತುಂಬು ಗಾಂಭೀರ್ಯದಿಂದ ನಡೆದುಕೊಂಡು ಹೋಗಲಾರಂಭಿಸಿತು. ಪರಶುರಾಮಪುರದಲ್ಲಿ ಇರುವವರೆಗೂ ವೆಂಕಣ್ಣಯ್ಯನವರ ಸಂಸಾರ ಜೀವನ ಸುಖವಾಗಿ, ಶಾಂತವಾಗಿ ನಡೆಯಿತೆಂದೇ ಹೇಳಬೇಕು. ಅವರು ದಿನದಿನವೂ ತಮ್ಮ ನಿತ್ಯಾಹ್ನಿಕಗಳನ್ನು ಸಾಂಗವಾಗಿ ನಡೆಸಿಕೊಂಡು ಹೋಗುತ್ತಿದ್ದರು; ಸರ್ಕಾರದ ಕೆಲಸವನ್ನು ನಿಸ್ಪೃಹತೆಯಿಂದ ಮಾಡುತ್ತಿದ್ದರು. ಅವರು ಎಂದೂ, ಯಾರನ್ನೂ ಕುರಿತು ಮನನೋಯುವಂತೆ ಮಾತನಾಡುತ್ತಿರಲಿಲ್ಲ, ಯಾರಿಗೂ ಯಾವ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಬರುವ ಹನ್ನೆರಡು ರೂಪಾಯಿ ಸಂಬಳ ಜೀವನಕ್ಕೆ ಸಾಕೋ ಸಾಕಾಗುತ್ತಿತ್ತು, ರೈತರು ಸುಗ್ಗಿಯಕಾಲದಲ್ಲಿ ಅಷ್ಟಿಷ್ಟು ಧಾನ್ಯಗಳನ್ನೋ, ಇತರ ಬೆಳೆಗಳನ್ನೋ ಶೇಕದಾರರ ಪೂಜೆಗೆ ಕಾಣಿಕೆಯೆಂದು ನೀಡುತ್ತಿದ್ದರು. ಶಾನುಭೋಗ ಮೈಲಾರಪ್ಪನವರು ವೆಂಕಣ್ಣಯ್ಯನವರಿಗೆ ಧರ್ಮೋ ರಕ್ಷತಿ ರಕ್ಷಿತಃ 19 ಗೊತ್ತಾಗದಂತೆಯೇ ಹಾಲು, ಮೊಸರು, ತುಪ್ಪ ಮೊದಲಾದ ಹೈನುಗಳನ್ನೂ ತರಕಾರಿಗಳನ್ನೂ ಯಥೇಚ್ಛವಾಗಿ ತಂದುಹಾಕುತ್ತಿದ್ದರು. ಇದರಿಂದ ಬಡತನದಲ್ಲಿ ಬೆಳೆದು ಬಂದ ಆ ಸಂಸಾರ ಸ್ವರ್ಗಸುಖವನ್ನೇ ಅನುಭವಿಸುತ್ತಿತ್ತು. ತಮ್ಮನಾದ ಲಿಂಗಣ್ಣನಿಗೆ ಮೂವರು ಮಕ್ಕಳು. ಹಿರಿಯಳಾದ ಸೀತಮ್ಮನನ್ನು ಚಿತ್ರದುರ್ಗದ ಅಗ್ನಿಹೋತ್ರಿ ವೆಂಕಪ್ಪ ದೀಕ್ಷಿತರಿಗೂ, ಎರಡನೆಯವಳಾದ ಸುಬ್ಬಮ್ಮನನ್ನು ಚನ್ನಮ್ಮನಾಗತಿಹಳ್ಳಿಯ ಜೋಯಿಸ ರಾಮಣ್ಣನವರಿಗೂ ಮದುವೆ ಮಾಡಿಕೊಟ್ಟಿತ್ತು. ಪರಶುರಾಮಪುರಕ್ಕೆ ಬಂದ ಮೇಲೆ ಆ ಹೆಣ್ಣು ಮಕ್ಕಳಿಬ್ಬರ ನಿಷೇಕ ಪ್ರಸ್ತಗಳನ್ನು ನೆರವೇರಿಸಿ ಗಂಡಂದಿರ ಮನೆಗಳಿಗೆ ಕಳುಹಿಸಿಕೊಟ್ಟು ದೊಡ್ಡ ಜವಾಬ್ದಾರಿಯೊಂದನ್ನು ಬಗೆಹರಿಸಿಕೊಂಡರು. ತಮ್ಮ ಮಕ್ಕಳಿಬ್ಬರಾದ ಸುಬ್ಬಣ್ಣ ಶ್ರೀನಿವಾಸರಲ್ಲಿ ಎಂಟು ವರ್ಷದವನಾದ ಹಿರಿಯನ ಉಪನಯನದ ಜೊತೆಗೆ ತಮ್ಮನ ಮಗನ ಉಪನಯನವನ್ನೂ ನೆರವೇರಿಸಿದರು. * * * * 20 ಮೂರು ತಲೆಮಾರು 3. ಹಾಳೂರಿನ ಅನುಭವ ವೆಂಕಣ್ಣಯ್ಯನವರು ಶೇಕದಾರರಾದ ಮೇಲೆ ಆಗಿನ ಕಾಲದ ಪದ್ಧತಿಯಂತೆ ಒಂದು ಒಳ್ಳೆಯ ಕುದುರೆಯನ್ನು ಕೊಂಡು, ಅದರ ಮೇಲೆ ಹಳ್ಳಿಗಳಿಗೆ ಹೋಗಿಬರುತ್ತಿದ್ದರು. ಸಾಯರ್ ಬಾಬಿನ ಹಣವನ್ನು ಅವರೇ ಖುದ್ದಾಗಿ ವಸೂಲ್ಮಾಡಿ ತಾಲ್ಲೂಕು ಕಛೇರಿಗೆ ಜಮಾ ಮಾಡಿಸಬೇಕಾಗಿತ್ತು. ಸಾಮಾನ್ಯವಾಗಿ ಪ್ರತಿ ತಿಂಗಳೂ ಈ ಕೆಲಸವಿದ್ದೇ ಇರುತ್ತಿತ್ತು. ಅವರು ಬೆಳಗಿನ ಪೂಜೆ, ಉಪಾಹಾರಗಳನ್ನು ಮಾಡಿ ಮುಗಿಸಿ ತಾಲ್ಲೂಕಿನ ಮುಖ್ಯ ಸ್ಥಳವಾದ ಚಳ್ಳಕೆರೆಗೆ ಹೋಗಿ ಸಂಜೆಯೊಳಗಾಗಿ ಆ ಕೆಲಸವನ್ನು ಮಾಡಿ ಮುಗಿಸಿ ಮರುದಿನ ಬೆಳಿಗ್ಗೆ ಹಿಂದಿರುಗಿ ಬರುವ ಪದ್ಧತಿ. ಹೀಗಿರುತ್ತಿರಲು ಒಮ್ಮೆ ಅವರು ಸಂಜೆ ನಾಲ್ಕು ಗಂಟೆಯ ಮೇಲೆ ಹಣ ಕಟ್ಟಲೆಂದು ಚಳ್ಳಕೆರೆಗೆ ಹೊರಟರು. ಸಾಯರ್ ಬಾಬಿನ ಐದು ನೂರು ರೂಪಾಯಿಗಳನ್ನು ಅವರು ಕೊಡಹೋಗಬೇಕಾಗಿತ್ತು. ಎಲ್ಲವೂ ಬೆಳ್ಳಿಯ ರೂಪಾಯಿಗಳು. ಆ ಹಣವನ್ನು ಹಮ್ಮಿಣಿಯಲ್ಲಿ (ಅಗಲ ಕಡಿಮೆಯಾದ ಉದ್ದನೆಯ ದಪ್ಪ ಬಟ್ಟೆಯ ದಾರದ ಚೀಲ) ತುಂಬಿ ನಡುವಿಗೆ ಭದ್ರವಾಗಿ ಕಟ್ಟಿಕೊಂಡು ದೇವರೇ ಗತಿ ಎಂದು ಪ್ರಯಾಣ ಹೊರಟರು. ಸಂಜೆ ಮಬ್ಬುಗತ್ತಲು ಪಸರಿಸುವ ವೇಳೆಗೆ ಅವರು ಉಳ್ಳರ್ತಿಯನ್ನು ಸೇರಿದರು. ಅಲ್ಲಿಂದ ಚಳ್ಳಕೆರೆಗೆ ಒಂಭತ್ತು ಮೈಲಿ. ಉಳ್ಳರ್ತಿಯಿಂದ ಮೂರು ಮೈಲಿ ಪ್ರಯಾಣ ಮಾಡುವಷ್ಟರಲ್ಲಿ ಕಗ್ಗತ್ತಲು ಕವಿಯಿತು. ಹಾದಿಯಲ್ಲಿ ಒಂದು ಹಳ್ಳ - ಅದನ್ನು ಗರಣಿ ಎಂದು ಕರೆಯುತ್ತಾರೆ. ಅದನ್ನು ದಾಟುತ್ತಲೇ ಒಂದು ಹಳ್ಳಿ ಕಾಣಿಸಿತು. ಊರಿನ ತುಂಬ ಜನ ತುಂಬಿದ್ದಾರೆ. ಮನೆ ಮನೆಯಿಂದಲೂ ದೀಪದ ಬೆಳಕು ಇಣುಕು ಹಾಕುತ್ತಿದೆ. ಊರ ಮುಂದಿನ ಒಂದು ಕಟ್ಟೆಯ ಮೇಲೆ ಊರಿನ ಶಾನುಭೋಗ, ಪಟೇಲ, ಕೆಲವು ದೊಡ್ಡ ಮನುಷ್ಯರು ಕೂತು ಮಾತನಾಡುತ್ತಿದ್ದಾರೆ. ವೆಂಕಣ್ಣಯ್ಯನವರಿಗೆ ಇದು ಯಾವುದೋ ಪರಿಚಿತ ಗ್ರಾಮವೆಂದು ಭಾವನೆ ಬಂತು. ಅಲ್ಲಿ ಮಾತನಾಡುತ್ತ ಕುಳಿತಿದ್ದ ಜನಗಳೂ ಪರಿಚಿತರೆಂಬಂತೆಯೇ ಭಾಸವಾಯಿತು. ಆದರೆ, ಅದು ಯಾವ ಗ್ರಾಮ, ಯಾವಾಗ ನೋಡಿದ್ದು ಎಂಬುದು ಮಾತ್ರ ನೆನಪಾಗಲೊಲ್ಲದು. ಈ ಸಂದಿಗ್ಧ ಮನಸ್ಸಿನಲ್ಲಿಯೇ ಅವರು ಊರ ಬಾಗಿಲನ್ನು ಸೇರಿದರು. ಒಡನೆಯೇ ಹಾಳೂರಿನ ಅನುಭವ 21 ಅಲ್ಲಿ ಕುಳಿತಿದ್ದವರಲ್ಲಿ ಒಬ್ಬ ತಟ್ಟನೆ ಮೇಲಕ್ಕೆದ್ದು ಬಂದು ಭಯ-ಭಕ್ತಿಯಿಂದ ಕೈಜೋಡಿಸಿ ‘ಶೇಕ್‍ದಾರ್‍ಸ್ವಾಮಿಯವರಿಗೆ ನಮಸ್ಕಾರ, ದಯಮಾಡಿಸಬೇಕು’ ಎಂದು ಸ್ವಾಗತಿಸಿದ. ಅಲ್ಲಿಯೇ ಹತ್ತಿರದಲ್ಲಿದ್ದ ಮತ್ತೊಬ್ಬನನ್ನು ‘ಎಲೋ ನಿಂಗ, ನಮ್ಮ ಮನೆಗೆ ಹೋಗಿ ಒಂದು ಜಮಖಾನವನ್ನೂ ಮತ್ತು ಒಂದು ಚಾಪೆಯನ್ನೂ ತಂದು ಆಂಜನೇಯನ ದೇವಸ್ಥಾನದಲ್ಲಿ ಹಾಸು’ ಎಂದು ಹೇಳಿದ. ಅವನು ಓಡುತ್ತ ಹೋಗಿ ಚಾಪೆ, ಜಮಖಾನಗಳನ್ನು ತಂದು ಹಾಸಿದ ಮೇಲೆ ಕುದುರೆಯ ಮೇಲೆ ಹಾಕಿದ್ದ ಥಡಿಯನ್ನು ತೆಗೆದು, ಗುಡಿಯೊಳಗಿಟ್ಟು, ಕುದುರೆಯನ್ನು ದೆವಸ್ಥಾನದ ಮುಂದೆ ಕಟ್ಟಿ ಹಾಕಿ, ಹುಲ್ಲು ತಂದು ಹಾಕಿದ. ದೇವಸ್ಥಾನದಲ್ಲಿ ಮಾರುತಿಯ ಎದುರಿಗೆ ದೀಪ ಢಾಳಾಗಿ ಉರಿಯುತ್ತಿತ್ತು. ವೆಂಕಣ್ಣಯ್ಯನವರು ಒಳಗೆ ಹೋಗಿ, ದೇವರಿಗೆ ನಮಸ್ಕರಿಸಿ, ಜಮಖಾನದ ಮೇಲೆ ಕುಳಿತರು. ಅವರೊಡನಿದ್ದ ಆಗಂತುಕ ‘ಸ್ವಾಮಿ ನಾನು ಇಲ್ಲಿನ ಶಾನುಭೋಗ. ಏಳಿ, ಮನೆಗೆ ಹೋಗೋಣ. ನಿಮ್ಮ ಆಹ್ನಿಕಕ್ಕೂ, ಭೋಜನಕ್ಕೂ ಏರ್ಪಾಡು ಮಾಡುತ್ತೇನೆ’ ಎಂದು ಆದರದಿಂದ ಆಹ್ವಾನಿಸಿದ. ವೆಂಕಣ್ಣಯ್ಯನವರು ‘ಶಾನುಭೋಗರೆ, ನಾನು ರಾತ್ರಿಯ ಹೊತ್ತು ಉಟಮಾಡುವುದಿಲ್ಲ. ಹತ್ತಿರದಲ್ಲಿಯೇ ಹಳ್ಳವಿದೆ. ಅಲ್ಲಿಯೇ ಕೈ ಕಾಲು ತೊಳೆದು ಸಂಧ್ಯಾವಂದನೆ ಮಾಡಿ ಬರುತ್ತೇನೆ. ಅಲ್ಲಿಯವರೆಗೆ ಇಲ್ಲಿ ಯಾರನ್ನಾದರೂ ಕಾವಲಿರುವಂತೆ ಏರ್ಪಾಡು ಮಾಡಿ’ ಎಂದು ಹೇಳಿದರು. ಆ ಶಾನುಭೋಗ ತಳವಾರನನ್ನು ಕೂಗಿ ಕರೆದು ಅಲ್ಲಿ ಕಾವಲಿರುವಂತೆ ಅಪ್ಪಣೆ ಮಾಡಿದ. ದೇವಸ್ಥಾನದಿಂದ ಇಪ್ಪತ್ತು ಹೆಜ್ಜೆ ದೂರದಲ್ಲಿಯೇ ಹರಿಯುತ್ತಿದ್ದ ಹಳ್ಳದಲ್ಲಿ ವೆಂಕಣ್ಣಯ್ಯನವರು ಕಾಲು ತೊಳೆದು, ಸಂಧ್ಯಾವಂದನೆ ಮಾಡಿ ಮುಗಿಸಿದರು. ಅಲ್ಲಿಂದ ಅವರು ದೇವಸ್ಥಾನಕ್ಕೆ ಮರಳಿ ಬರುವ ವೇಳೆಗೆ ಶಾನುಭೋಗರು ಒಂದು ಶುಭ್ರವಾದ ಹಿತ್ತಾಳೆಯ ಪಾತ್ರೆ ತುಂಬ ಸಕ್ಕರೆ ಬೆರೆಸಿದ ಘಮಘಮಿಸುವ ಹಸುವಿನ ಹಾಲನ್ನೂ, ಸೊಗಸಾದ ಒಂದು ಚಿಪ್ಪು ಬಾಳೆಹಣ್ಣನ್ನೂ ತಂದಿಟ್ಟುಕೊಂಡು ಕಾದಿದ್ದರು. ‘ಈ ಬಡವನ ಮನೆಯಲ್ಲಿ ಊಟವನ್ನಂತೂ ಮಾಡುವಂತಿಲ್ಲ ; ಈ ಹಾಲು-ಹಣ್ಣುಗಳನ್ನಾದರೂ ಸ್ವೀಕರಿಸಿ, ನನ್ನನ್ನು ಪುನೀತನನ್ನಾಗಿ ಮಾಡಬೇಕು. ಇಲ್ಲದಿದ್ದರೆ ನನ್ನ ಮನಸ್ಸಿಗೆ ಸಮಾಧಾನವಾಗದು’ ಎಂದು ಅಂಗಲಾಚಿ ಬೇಡಿಕೊಂಡ. ವೆಂಕಣ್ಣಯ್ಯನವರು ಆತನ ಪ್ರಾರ್ಥನೆಯನ್ನು ನಿರಾಕರಿಸಲಾಗದೆ ಹಾಲು- ಹಣ್ಣುಗಳನ್ನು ಆ ರಾಮದೂತನಿಗೆ ನೈವೇದ್ಯ ಮಾಡಿ, ಶ್ರೀರಾಮರಕ್ಷಾಮಂತ್ರದಿಂದ ಪುನೀತವಾದ ಆ ಹಣ್ಣುಗಳನ್ನು ತಿಂದು, ಹಾಲು ಕುಡಿದರು. ಅವರೆಡೂ ತುಂಬ ರುಚಿಯಾಗಿದ್ದುವು. 22 ಮೂರು ತಲೆಮಾರು ಶೇಕದಾರರು ಆ ಬಳಿಕ ಶಾನುಭೋಗನೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಆ ಊರಿನ ಹೆಸರು ಹೊಸಹಳ್ಳಿಯೆಂದೂ, ಚಳ್ಳಕೆರೆ ತಾಲ್ಲೂಕು ತಳುಕು ಹೋಬಳಿಗೆ ಸೇರಿದ ಗ್ರಾಮವೆಂದೂ, ಆ ಊರಿಗೆ ಶಾನುಭೋಗನಾದ ಆತನ ಹೆಸರು ತಿಮ್ಮಪ್ಪನೆಂದೂ ತಿಳಿದುಕೊಂಡರು. ಆತ ಶೇಕದಾರರನ್ನು ಕುರಿತು ‘ಮಹಾಸ್ವಾಮಿ, ತಮ್ಮಂತಹ ಹಿರಿಯರ ಆಶೀರ್ವಾದದಿಂದ ನನಗೆ ಯಾವ ತೊಂದರೆಯೂ ಇಲ್ಲ. ತಮ್ಮಂತಹ ಸದ್‍ಬ್ರಾಹ್ಮಣರ ಸೇವೆಯಿಂದ ನಾನು ಧನ್ಯನಾದೆ. ಇಲ್ಲಿಗೆ ಸಮೀಪದ ಹಳ್ಳಿಗಳು ಪರಶುರಾಮಪುರದ ಹೋಬಳಿಗೆ ಸೇರಿದವು. ಅಲ್ಲಿಗೆ ತಾವು ಬಂದು ಹೋಗುವಾಗ ನಾನು ತಮ್ಮನ್ನು ಅನೇಕ ಬಾರಿ ಕಂಡಿರುವುದರಿಂದ ನನಗೆ ತಮ್ಮ ಗುರುತು ಚೆನ್ನಾಗಿಯೇ ಇದೆ. ತಾವು ಇಂದು ಇಲ್ಲಿಗೆ ಬಂದದ್ದು ನನ್ನ ಪುಣ್ಯ ವಿಶೇಷ. ತಮಗೆ ನನ್ನ ಪರಿಚಯವಿಲ್ಲದಿದ್ದರೂ ನನಗೆ ತಮ್ಮ ಪರಿಚಯ ಚೆನ್ನಾಗಿದೆ’ ಎಂದು ಹೊಗಳಿದ. ಆ ವೇಳೆಗೆ ರಾತ್ರಿ ಹತ್ತು ಘಂಟೆಯಾಯಿತು. ಶಾನುಭೋಗ ತನ್ನ ಅತಿಥಿಯನ್ನು ಕುರಿತು ‘ಮಹಾಸ್ವಾಮಿ, ತಾವಿನ್ನು ಮಲಗೋಣವಾಗಲಿ, ನಾನು ಮನೆಗೆ ಹೊಗುತ್ತೇನೆ’ ಎಂದು ಅವರಿಗೆ ನಮಸ್ಕರಿಸಿ ಮೇಲಕ್ಕೆದ್ದ. ಆಗ ವೆಂಕಣ್ಣಯ್ಯನವರು ‘ತಿಮ್ಮಪ್ಪನವರೇ, ಇದು ಪರಸ್ಥಳ. ದೇವಸ್ಥಾನದ ಬಾಗಿಲು ಭದ್ರವಿರುವಂತೆ ಕಾಣುತ್ತಿಲ್ಲ. ಅಲ್ಲದೆ ಇದು ಊರಹೊರಗಿದೆ. ನನ್ನ ಹತ್ತಿರ ಈಗ ತಾನೆ ವಸೂಲಾದ ಭಾರಿ ಹಣವಿದೆ. ನಾನು ಹುಷಾರಾಗಿರುವುದು ಮೇಲು. ಇದು ನಾಳೆಯ ದಿನ ಖಜಾನೆಗೆ ಇರಸಾಲಾಗಬೇಕಾದ ಹಣ. ರಾತ್ರಿಯಲ್ಲಿ ಒಂಟಿಯಾಗಿರಬೇಕಾದ ನನ್ನ ಬಳಿ ಇಷ್ಟು ದೊಡ್ಡ ಮೊತ್ತ ಇರುವುದು ಸರಿಯಿಲ್ಲ. ಆದ್ದರಿಂದ ಈ ಹಣವನ್ನು ರಾತ್ರಿ ನಿಮ್ಮಲ್ಲಿಯೇ ಜೋಪಾನವಾಗಿಟ್ಟುಕೊಂಡಿದ್ದು, ಬೆಳಿಗ್ಗೆ ನಾನು ಹೊರಡುವ ವೇಳೆಗೆ ಹಿಂದಕ್ಕೆ ತಂದುಕೊಡಿ’ ಎಂದು ಹೇಳಿ, ತಮ್ಮ ಸೊಂಟದಲ್ಲಿದ್ದ ಹಣದ ಹಮ್ಮಿಣಿಯನ್ನು ಬಿಚ್ಚಿ ತೆಗೆದು ಶಾನುಭೋಗರ ಕೈಲಿ ಕೊಟ್ಟರು. ಶಾನುಭೋಗ ತಿಮ್ಮಪ್ಪ ‘ಅಗತ್ಯವಾಗಿ ಆಗಲಿ ಮಹಾಸ್ವಾಮಿ, ತಾವು ನಿಶ್ಚಿಂತೆಯಾಗಿ ನಿದ್ರೆ ಮಾಡೋಣವಾಗಲಿ’ ಎಂದು ಹೇಳಿ ಹಣದ ಹಮ್ಮಿಣಿಯೊಡನೆ ತನ್ನ ಮನೆಗೆ ಹೋದ. ವೆಂಕಣ್ಣಯ್ಯನವರು ಹಾಯಾಗಿ ನಿದ್ರೆ ಹೋದರು. ವೆಂಕಣ್ಣಯ್ಯನವರು ಮಾಮೂಲು ಪದ್ಧತಿಯಂತೆ ಪಂಚಪಂಚ ಉಷಃ ಕಾಲಕ್ಕೆದ್ದು ಹಾಸಿಗೆಯಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡೇ ಪ್ರಾತಃಸ್ಮರಣೆಯನ್ನು ಮಾಡಿ ಮುಗಿಸಿದರು. ಆ ವೇಳೆಗೆ ಸಾಮಾನ್ಯವಾಗಿ ಕೋಳಿ ಕೂಗಬೇಕು, ನೇಗಿಲಯೋಗಿ ಎತ್ತುಗಳನ್ನಟ್ಟಿಕೊಂಡು ಹೊಲಗಳ ಹಾದಿ ಹಿಡಿಯಬೇಕು; ಹಾಳೂರಿನ ಅನುಭವ 23 ಹೆಣ್ಣುಗಳೆದ್ದು ಹಾಡುತ್ತಾ ರಾಗಿ ಬೀಸಬೇಕು, ಅಕ್ಕಿ ಕುಟ್ಟಬೇಕು, ಅಂಗಳಕ್ಕೆ ಸಗಣಿ ನೀರು ಹಾಕಬೇಕು, ದನಗಳಿಗೆ ಹುಲ್ಲು ಹಾಕಿ ಹಾಲು ಕರೆಯಬೇಕು; ಹಕ್ಕಿಗಳು ಮರಗಳ ಮೇಲೆ ಕುಳಿತು ಚಿಲಿಪಿಲಿಗುಟ್ಟುತ್ತಿರಬೇಕು. ಆದರೆ ಅದೊಂದೂ ಅಲ್ಲಿ ಕಾಣಿಸುತ್ತಿಲ್ಲ. ಶೇಕದಾರರು ಅರ್ಧಘಂಟೆ ಕಾದರು. ಕೋಳಿ ಕೂಗಲಿಲ್ಲ. ಜನರ ಚಲನವಲನವಿಲ್ಲ. ಬೆಳಕು ಹರಿಯುತ್ತ ಬಂದಂತೆ ತಾವು ಮಲಗಿದ್ದ ಹಾಸಿಗೆ ಕಾಣಿಸಲಿಲ್ಲ. ಅದಕ್ಕೆ ಬದಲಾಗಿ ಸೊಪ್ಪುಸದೆಗಳ ರಾಶಿ ಕಾಣಿಸಿತು. ಎದ್ದು ಬಂದು ಗುಡಿಯ ಮುಂದಿನ ಕಟ್ಟೆಯ ಮೇಲೆ ನಿಂತು ನೋಡಿದರು. ಅಲ್ಲೇನಿದೆ? ಮನೆಗಳೂ ಇಲ್ಲ, ಜನಗಳೂ ಇಲ್ಲ, ಹರುಕು-ಮುರುಕು ಗೋಡೆಗಳು. ಅಸ್ತವ್ಯಸ್ತವಾಗಿ ಬಿದ್ದಿರುವ ಕಲ್ಲುಗಳ ರಾಶಿ. ಮಣ್ಣಿನ ಗುಪ್ಪೆ. ಆ ಕಲ್ಲು ಮಣ್ಣುಗಳ ಮಧ್ಯೆ ಅಲ್ಲಲ್ಲಿಯೇ ಬೆಳೆದಿರುವ ಕಾಡುಗಿಡಗಳು, ಅಲ್ಲಲ್ಲಿಯೇ ಹರಿದಾಡುತ್ತಿರುವ ಹುಳು - ಹುಪ್ಪಟೆಗಳು. ಅದೊಂದು ಹಾಳೂರು! ಪುಣ್ಯಕ್ಕೆ ಶೇಕದಾರರ ಕುದುರೆ ಮಾತ್ರ ಕಟ್ಟಿದೆಡೆಯಲ್ಲಿಯೇ ನಿಂತಿದೆ, ಕಣ್ಮರೆಯಾಗಿಲ್ಲ! ವೆಂಕಣ್ಣಯ್ಯನವರಿಗೆ ದಿಗ್ಭ್ರಮೆಯಾಯಿತು. ತಾವು ರಾತ್ರಿ ಕಳೆದುದು ಒಂದು ದೆವ್ವದ ಬೀಡಿನಲ್ಲಿ! ತಾವೆಂತಹ ಅವಿವೇಕವನ್ನು ಮಾಡಿದ ಹಾಗಾಯಿತು! ಐದುನೂರು ರೂಪಾಯಿಗಳ ದೊಡ್ಡ ಗಂಟನ್ನು ಶಾನುಭೋಗ ದೆವ್ವದ ಕೈಯಲ್ಲಿ ಕೊಟ್ಟುದಾಯಿತಲ್ಲ! ಅಷ್ಟು ದೊಡ್ಡ ಮೊತ್ತದ ಹಣವನ್ನು ಮತ್ತೆ ಜೋಡಿಸುವುದು ಹೇಗೆ ? ಯಾರು ಕೊಟ್ಟಾರು ? ಎಲ್ಲಿಂದ ತರಬೇಕು? ಇರಸಾಲಿನ ಹಣ ಒಡನೆಯೇ ಖಜಾನೆಗೆ ಪಾವತಿಯಾಗದಿದ್ದರೆ ತಮ್ಮ ಗತಿ ಏನು ? ಸರಕಾರ ತಮ್ಮನ್ನು ಸುಮ್ಮನೆ ಬಿಟ್ಟೀತೆ? ಹಣವನ್ನು ದಸ್ತು ಮಾಡಿದಕ್ಕೆ ಕ್ರಿಮಿನಲ್ ಕೇಸು ಮಾಡಿ ತಮ್ಮನ್ನು ಕೆಲಸದಿಂದಲೇ ಕಿತ್ತು ಹಾಕಬಹುದು; ಮನೆಯನ್ನು ಜಪ್ತಿ ಮಾಡಿ ತನ್ನನ್ನು ಜೈಲಿನಲ್ಲಿ ಕೂಡಿಸಬಹುದು. ತಮ್ಮ ಅಧಿಕಾರದ ತೀರ ಕಡೆಯ ಭಾಗದಲ್ಲಿ ಇದೆಂತಹ ಪ್ರಮಾದ ಸಂಭವಿಸಿತು! ಇದೆಂತಹ ಅವಮಾನ! ‘ಶ್ರೀರಾಮಚಂದ್ರ, ಈ ವಿಪತ್ತಿನಿಂದ ನನ್ನನ್ನು ಹೇಗೆ ಪಾರು ಮಾಡುವಿಯೋ ಏನೊ! ಪ್ರಭೋ; ನೀನೇ ಗತಿ’ ಎಂದು ಮಹತ್ತರವಾಗಿ ಚಿಂತಿಸುತ್ತ, ಕುದುರೆಗೆ ಥಡಿಹಾಕಿ, ತಮ್ಮ ಬಂಧುಗಳಿದ್ದ ಚೆನ್ನಮ್ಮನಾಗತಿಹಳ್ಳಿಗೆ ಪ್ರಯಾಣ ಬೆಳೆಸಿದರು. ಚೆನ್ನಮ್ಮನಾಗತಿಹಳ್ಳಿಯ ರಾಮಣ್ಣ ಜೋಯಿಸರ ತಂದೆ ಅಪ್ಪಣ್ಣ ಜೋಯಿಸರು ಸುಪ್ರಸಿದ್ಧರಾದ ಮಂತ್ರವಾದಿಗಳು, ಭೂತ-ಪ್ರೇತಗಳನ್ನು ಅವರು ಮನಬಂದಂತೆ ಕುಣಿಸುವರೆಂದು ಪ್ರತೀತಿ ಇತ್ತು. ದೆವ್ವ ಹಿಡಿದವರನ್ನು ಅವರ ಬಳಿಗೆ ಕರೆತಂದು ಅದರ ಉಚ್ಚಾಟನೆಯನ್ನು ಮಾಡಿಸುತ್ತಿದ್ದುದುಂಟು. 24 ಮೂರು ತಲೆಮಾರು ಅಮಾವಾಸ್ಯೆಯ ರಾತ್ರಿಗಳಲ್ಲಿ ಅಪ್ಪಣ್ಣನವರು ಸ್ಮಶಾನದಲ್ಲಿ ಕುಳಿತು ಮಂತ್ರಸಾಧನೆ ಮಾಡುತ್ತಿದ್ದರಂತೆ! ಅವರು ಸುಪ್ರಸಿದ್ಧ ವೈದ್ಯರೂ ಆಗಿದ್ದರು. ಲೆಕ್ಕವಿಲ್ಲದಷ್ಟು ಕುಪ್ಪಿ ಮಾತ್ರೆಗಳು ಅವರ ಬಳಿ ಇದ್ದುವು. ಎಂತಹ ಭಯಂಕರವಾದ ರೋಗವೇ ಆಗಿರಲಿ. ರೋಗಿ ಎಂತಹ ದುಸ್ಥಿತಿಯಲ್ಲಿಯೇ ಇರಲಿ, ಅವರು ಸಾಣೆಕಲ್ಲಿನ ಮೇಲೆ ಕುಪ್ಪಿ ಮಾತ್ರೆಯನ್ನು ಎರಡು ಸಲವೋ, ಮೂರು ಸಲವೋ ತಿಕ್ಕಿ ಅದರಿಂದ ಬಂದ ಔಷಧವನ್ನು ನಾಲಗೆಯ ಮೇಲೆ ಇಡುವುದು ತಡ, ಅವನನ್ನು ಕರೆಯಬಂದ ಯಮದೂತ ತತ್ತರಿಸಿ ಓಡಿ ಹೋಗುತ್ತಿದ್ದ ! ಅವರು ಎಂದೂ ತಮ್ಮ ವಿದ್ಯೆಯನ್ನು ಮಾರಿಕೊಳ್ಳಹೊರಟವರಲ್ಲ. ಕೇವಲ ಧರ್ಮದೃಷ್ಟಿಯಿಂದ, ಪರೋಪಕಾರ ಮಾಡಿ ‘ಪರೋಪಕಾರಿ ಅಪ್ಪಣ್ಣ’ ಎಂಬ ಹೆಸರು ಗಳಿಸಿದ್ದವರು. ಅವರಿಗೆ ಒಬ್ಬನೇ ಮಗ ರಾಮಣ್ಣ. ಹದಿಹರೆಯದಲ್ಲಿದ್ದ ಆತನಿಗೂ ತಕ್ಕಮಟ್ಟಿಗೆ ಆಯುರ್ವೇದವಿದ್ಯೆ ಮತ್ತು ಭೂತವಿದ್ಯೆಗಳು ಕರಗತವಾಗಿದ್ದುವು. ತಂದೆ - ಮಕ್ಕಳಿಬ್ಬರೂ ಸುತ್ತಮುತ್ತಿನ ಹತ್ತಾರು ಹಳ್ಳಿಗಳಿಗೆ ಪುರೋಹಿತರಾಗಿದ್ದರು. ಅದೇ ಅವರ ಜೀವನವೃತ್ತಿ. ಅದರಿಂದ ಬಂದ ಉತ್ಪತ್ತಿಯಲ್ಲಿ ಬಡತನದ ಜೀವನ ನಡೆಸುತ್ತಿದ್ದರು. ‘ಒಮ್ಮೆ ನಮ್ಮೂರಿನ (ತಳುಕಿನ ಮಹಿಳೆಯೊಬ್ಬಳು ಅಪ್ಪಣ್ಣನವರಿಂದ ಭೂತ ಬಾಧೆ ನಿವಾರಣೆ ಮಾಡಿಕೊಂಡದ್ದನ್ನು ನಾನೇ ಪ್ರತ್ಯಕ್ಷವಾಗಿ ಕಂಡಿದ್ದೇನೆ. ಅಲ್ಲೊಬ್ಬ ಬಡ ಬ್ರಾಹ್ಮಣ ದಂಪತಿಗಳು. ಅವರಿಗೆ ಆದ ಮಕ್ಕಳೊಂದೂ ಉಳಿಯುತ್ತಿರಲಿಲ್ಲ. ಅಪ್ಪಣ್ಣನವರಿಂದ ಭೂತಬಾಧೆ ನಿವಾರಣೆಯಾದ ಮೇಲೆ ಆ ದಂಪತಿಗಳಿಗೆ ಹುಟ್ಟಿದ ಒಂದು ಗಂಡು ಮಗು ಸುಖವಾಗಿ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಪ್ರಸಿದ್ಧ ವೈದ್ಯನೆಂದು ಹೆಸರಾಗಿದ್ದಾನೆ. ಆತನ ಮನೆ ಹೆಣ್ಣು, ಗಂಡು ಮಕ್ಕಳಿಂದ ತುಂಬಿ ನಂದಗೋಕುಲದಂತಿದೆ’. ಅಪ್ಪಣ್ಣ, ರಾಮಣ್ಣನವರ ಶಕ್ತಿ ಸಾಮಥ್ರ್ಯಗಳನ್ನು ಬಲ್ಲ ವೆಂಕಣ್ಣಯ್ಯನವರು ಹಾಳೂರಿನಿಂದ ನೇರವಾಗಿ ಚೆನ್ನಮ್ಮನಾಗತಿಹಳ್ಳಿಗೆ ಧಾವಿಸಿದರು. ಹಿರಿಯರಾದ ಅಪ್ಪಣ್ಣನವರ ಮುಂದೆ ತಮಗಾದ ಅನುಭವವನ್ನು ಆದ್ಯಂತವಾಗಿ ತಿಳಿಸಿ ‘ಮಾವಾ ನನ್ನ ಗತಿ ಏನು?’ ಎಂದು ಕಣ್ಣೀರಿಟ್ಟರು. ಅಪ್ಪಣ್ಣನವರು ಅವರನ್ನು ಸಮಾಧಾನ ಪಡಿಸಿ ವೆಂಕಣ್ಣಯ್ಯ ಆ ಹಾಳೂರಿನ ವಿಷಯವೆಲ್ಲ ನನಗೆ ಚೆನ್ನಾಗಿ ಗೊತ್ತು. ಅದು ಸಂಪೂರ್ಣವಾಗಿ ಹಾಳಾಗುವ ಮುನ್ನ ಕೆಲ ಜನ ವಾಸವಾಗಿದ್ದುದ್ದನ್ನು ನಾನು ಕಂಡಿದ್ದೆ. ಮಾರಮ್ಮನ ಬೇನೆಯಿಂದ ಆ ಊರು ನಿರ್ನಾಮವಾಯಿತು. ಈಗ ನೀನೊಂದು ಕೆಲಸ ಮಾಡು. ನಿನ್ನೆ ನೀನು ಅಲ್ಲಿಗೆ ಹೋದ ಹೊತ್ತಿಗೇ ಹಾಳೂರಿನ ಅನುಭವ 25 ಸರಿಯಾಗಿ ಅಲ್ಲಿಗೆ ಹೋಗು. ನಿನಗೆ ಯಾವುದೊಂದು ಭಯವೂ, ತೊಂದರೆಯೂ ಆಗದಂತೆ ನಾನು ಮಂತ್ರಾಕ್ಷತೆಯನ್ನು ಮಂತ್ರಿಸಿಕೊಡುತ್ತೇನೆ. ನಿನ್ನೆಯಂತೆ ಇಂದೂ ಅದೇ ಶಾನುಭೋಗ ನಿನ್ನನ್ನು ಕಾಣಲೆಂದು ಬರುತ್ತಾನೆ. ನೀನು ಏನೂ ಅರಿಯದವನಂತೆ ಅವನೊಂದಿಗೆ ವ್ಯವಹರಿಸಿ, ಯಾವುದಾದರೊಂದು ನೆಪವೊಡ್ಡಿ ನಿನ್ನೆ ನೀನು ಕೊಟ್ಟ ಹಣವನ್ನು ಹಿಂದಕ್ಕೆ ಕೊಡುವಂತೆ ಕೇಳು. ಅವನು ಕೊಡುತ್ತಾನೆ. ಅದನ್ನು ತೆಗೆದುಕೊಂಡು ಒಡನೆಯೇ ಹಿಂದಿರುಗಿ ಬಂದು ಬಿಡು. ನಿನ್ನ ರಕ್ಷಣೆಗೆ ಯಾರನ್ನಾದರೂ ಕಳುಹಿಸುವಂತೆ ಆ ಶಾನುಭೋಗನನ್ನು ಕೇಳು. ಅವನು ಕಳುಹಿಸುತ್ತಾನೆ. ನಾನಿತ್ತ ಮಂತ್ರಾಕ್ಷತೆಯನ್ನು ನಿನ್ನ ಪಂಚೆಯ ಅಂಚಿನಲ್ಲಿ ಕಟ್ಟಿಕೊಂಡಿರು. ನಿನಗಾವ ಬಾಧೆಯೂ ಆಗುವುದಿಲ್ಲ’ ಎಂದು ಹೇಳಿದರು. ವೆಂಕಣ್ಣಯ್ಯನವರು ಮಾವನ ಮಾತಿನಂತೆ ಧೈರ್ಯವಾಗಿ ಆ ಸಾಹಸಕಾರ್ಯಕ್ಕೆ ಕೈ ಹಾಕಿದರು. ವೆಂಕಣ್ಣಯ್ಯನವರು ಮಾವನ ಮಾತಿನಂತೆ ಕುದುರೆಗೆ ಥಡಿ ಹಾಕಿ ಪ್ರಯಾಣ ಬೆಳೆಸಿದವರೇ ಹಿಂದಿನ ದಿನ ಬಂದಿದ್ದ ಹೊತ್ತಿಗೆ ಸರಿಯಾಗಿ ಈ ದಿನವೂ ಹಾಳೂರಿಗೆ ಹೋದರು. ಎಲ್ಲವೂ ಹಿಂದಿನ ದಿನದಂತೆಯೇ ನಡೆಯಿತು. ಶಾನುಭೋಗರಿಂದ ಯೋಗಕ್ಷೇಮ, ಗರಣಿಯಲ್ಲಿ ಸಂಧ್ಯಾವಂದನೆ, ಶಾನುಭೋಗರ ಮನೆಯಿಂದ ಚಾಪೆ, ಜಮಖಾನೆಗಳು, ಶೇಕದಾರರ ಫಲಹಾರಕ್ಕಾಗಿ ಹಾಲು- ಹಣ್ಣುಗಳು, ಅವುಗಳ ಸೇವನೆ - ಎಲ್ಲವೂ ನಿನ್ನೆಯಂತೆಯೇ ನಡೆಯಿತು. ಲೋಕಾಭಿರಾಮವಾಗಿ ಮಾತನಾಡುತ್ತ ವೆಂಕಣ್ಣಯ್ಯನವರು ‘ತಿಮ್ಮಪ್ಪನವರೇ, ನಿನ್ನೆ ನಾನು ನಿಮ್ಮ ಕೈಯಲ್ಲಿ ಕೊಟ್ಟ ಹಣದ ಚೀಲವನ್ನು ಹಿಂದಕ್ಕೆ ಕೊಡುವಿರಾ? ಇಬ್ಬರು ಅಸಾಮಿಗಳ ಲೆಕ್ಕದಲ್ಲಿ ಪೊರಪಾಟಾಗಿದೆ. ಲೆಕ್ಕಕ್ಕೂ, ಹಣಕ್ಕೂ ತಾಳೆ ನೋಡಬೇಕಾಗಿದೆ. ಇಂದು ರಾತ್ರಿಯೇ ಅದನ್ನು ಮುಗಿಸಿ ನಾಳೆಯ ದಿನ ಹಣವನ್ನು ಕಛೇರಿಗೆ ಇರಸಾಲು ಮಾಡಬೇಕು’, ಎಂದು ಕೇಳಿದರು. ಆಗ ಶಾನುಭೋಗ ‘ಅದಕ್ಕೇನು ಮಹಾಸ್ವಾಮಿ, ಈಗಲೇ ತಂದುಕೊಡುತ್ತೇನೆ ಎಂದು ಹೇಳಿ ಮೇಲೆದ್ದು ಹೊರಟವನೇ ಎರಡೇ ನಿಮಿಷಗಳಲ್ಲಿ ಆ ಹಣದ ಚೀಲವನ್ನು ಶೇಕದಾರರ ಕೈಲಿಟ್ಟು ನೋಡಿಕೊಳ್ಳಿ ಸ್ವಾಮಿ, ತಮ್ಮ ಚೀಲವನ್ನು ತಾವು ಕೊಟ್ಟ ಹಾಗೆಯೇ ಮುಚ್ಚಿಟ್ಟಿದ್ದು ಹಿಂದಕ್ಕೆ ತಂದಿದ್ದೇನೆ’ ಎಂದು ಹೇಳಿ ಕೈಗಿತ್ತ. ವೆಂಕಣ್ಣಯ್ಯನವರು ಅದನ್ನು ಕೈಲಿ ಎತ್ತಿ ಕೊಳ್ಳುತ್ತಲೇ ಅದು ಸರಿಯಾಗಿದೆಯೆಂಬುದನ್ನು ತೂಕದಿಂದ ತಿಳಿದು, ಅವರನ್ನು ಬಾಯ್ತುಂಬಾ ಹೊಗಳಿ ‘ತಿಮ್ಮಪ್ಪನವರೇ, ಚೆನ್ನಮ್ಮನಾಗತಿಹಳ್ಳಿಯಲ್ಲಿ ಆಸಾಮಿಗಳು ನನಗಾಗಿ ಕಾಯುತ್ತಿದ್ದಾರೆ. ಅವರ ಲೆಕ್ಕಗಳಲ್ಲೇ ಪೊರಪಾಟಾಗಿರುವುದು. ಈಗ ಅಲ್ಲಿಗೆ 26 ಮೂರು ತಲೆಮಾರು ಹೋಗಿ ತಾಳೆ ನೋಡಬೇಕಾಗಿದೆ. ಈಗಲೇ ನಾವು ಹೊರಡಬೇಕು. ದಯವಿಟ್ಟು ಕುದುರೆಗೆ ಥಡಿ ಹಾಕಿಸಿ, ಇಬ್ಬರು ಆಳುಗಳನ್ನು ನನ್ನ ರಕ್ಷಣೆಗಾಗಿ ಕಳುಹಿಸಿಕೊಡಿ. ತುಂಬ ಕತ್ತಲಾಗಿದೆ, ಅಲ್ಲದೆ ಕೈಲಿ ಭಾರಿ ಹಣವಿದೆ. ಆದ್ದರಿಂದ ನಾನು ಹುಷಾರಾಗಿರಬೇಕಲ್ಲವೆ?’ ಎಂದರು. ಶಾನುಭೋಗ ತಿಮ್ಮಪ್ಪ ‘ಅಗತ್ಯವಾಗಿ ಆಗಲಿ ಮಹಾಸ್ವಾಮಿ’ ಎಂದು ಹೇಳಿ, ತಳವಾರನನ್ನು ಕರೆದು ‘ನಿಂಗ, ನಿನ್ನ ಜೊತೆಗೆ ಇನ್ನೊಬ್ಬನನ್ನು ಕರೆದುಕೊಂಡು, ಸುಡಿಗೆ ಹಿಡಿದು ಸ್ವಾಮಿಯವರ ಸಂಗಡ ಚೆನ್ನಮ್ಮ ನಾಗತಿಹಳ್ಳಿಯವರೆಗೆ ಹೋಗಿ, ಅವರನ್ನು ಕ್ಷೇಮವಾಗಿ ಅಲ್ಲಿಗೆ ಮುಟ್ಟಿಸಿ ಬಾ’ ಎಂದು ಅಪ್ಪಣೆ ಮಾಡಿದ. ಒಡನೆಯೇ ಕುದುರೆ ಥಡಿಯೊಡನೆ ಸಿದ್ಧವಾಯಿತು. ಶೇಕದಾರ ಸಾಹೇಬರು ಕುದುರೆಯನ್ನೇರಿ ಕುಳಿತರು. ತಿಮ್ಮಪ್ಪ ಎರಡು ಕೈಗಳನ್ನೂ ಜೋಡಿಸಿಕೊಂಡು ವಿನೀತಭಾವದಿಂದ ‘ಮಹಾಸ್ವಾಮಿ, ಮಹಾನುಭಾವರಾದ ತಮ್ಮ ಪಾದಧೂಳಿಯಿಂದ ನಮ್ಮ ಗ್ರಾಮ ಪುನೀತವಾಯಿತು. ತಮ್ಮನ್ನು ಆದರದಿಂದ ಕಂಡ ನನ್ನ ಜನ್ಮ ಸಾರ್ಥಕವಾಯಿತು. ನನ್ನ ಮೇಲೆ ನಿಮ್ಮ ಆಶೀರ್ವಾದ ಬಿದ್ದರೆ ನಾನು ಉದ್ಧಾರವಾದ ಹಾಗೆ’ ಎಂದು ಬಿನ್ನವಿಸಿದ ವೆಂಕಣ್ಣಯ್ಯನವರು ತಮ್ಮ ದೈವವಾದ ರಾಮಚಂದ್ರನಿಗೆ ಮನದಲ್ಲಿಯೇ ನಮಸ್ಕರಿಸಿ. ಆಂಜನೇಯನಿಗೆ ದೂರದಿಂದಲೇ ತಲೆಬಾಗಿ, ಶಾನುಭೋಗನನ್ನು ಬೀಳ್ಕೊಂಡು ಪ್ರಯಾಣ ಬೆಳೆಸಿದರು. ಶಾನುಭೋಗರು ಕಳುಹಿಸಿದ ಆಳುಗಳಿಬ್ಬರೂ - ಆ ಕಡೆಯೊಬ್ಬ ಈ ಕಡೆಯೊಬ್ಬ - ದೀವಟಿಗೆಯನ್ನು ಹಿಡಿದು ದಾರಿ ತೋರಿಸುತ್ತ ಮುಂದೆ ಮುಂದೆ ನಡೆದರು. ಸ್ವಲ್ಪ ದೂರ ಹೋಗುತ್ತಲೇ ಆ ಆಳುಗಳಿಬ್ಬರ ಮನುಷಾ್ಯಕಾರ ಮಾಯವಾಯಿತು. ಬರಿಯ ದೀವಟಿಗೆಗಳೇ ಮುಂದುವರಿಯುತ್ತಿದ್ದುವು. ಆದನ್ನು ಕಂಡು ವೆಂಕಣ್ಣಯನವರಿಗೆ ವಿಸ್ಮಯವಾಯಿತು. ಅಷ್ಟೇ ಅಲ್ಲ ಸ್ವಲ್ಪ ಭಯವೂ ಆಯಿತು. ಪಂಚೆಯ ಸೆರಗಿನಲ್ಲಿದ್ದ, ಮಂತ್ರಾಕ್ಷತೆಯ ಧೈರ್ಯದಿಂದ ಅವರ ಪ್ರಯಾಣ ಮುಂದೆ ಸಾಗಿತು. ಊರ ಮುಂದಿನವರೆಗೆ ಅವರು ಸಾಗಿ ಬರುತ್ತಲೇ ದೀವಟಿಗೆಗಳು ಮಾಯವಾದವು. ವೆಂಕಣ್ಣಯ್ಯನವರು ತಮ್ಮ ಬಂಧುಗಳ ಮನೆಯನ್ನು ಸೇರಿದರು. ಭಾರಿಯ ಗಂಡಾತರವೊಂದು ಶ್ರೀ ರಾಮಚಂದ್ರನ ಕೃಪೆಯಿಂದ ಕಳೆದಂತಾಯಿತು. ಮಾರನೆಯ ದಿನ ಇರಸಾಲು ಹಣ ಸುರಕ್ಷಿತವಾಗಿ ಖಜಾನೆಗೆ ಜಮಾ ಆಯಿತು. ವೆಂಕಣ್ಣಯ್ಯನವರು ಸಮಾಧಾನದ ಉಸಿರುವಿಟ್ಟರು. * * * * 27 4. ಸತ್ತ್ವಪರೀಕ್ಷೆ ಪರಶುರಾಮಪುರದ ಶೇಕದಾರಿಕೆಯಲ್ಲಿ ವೆಂಕಣ್ಣಯ್ಯನವರಿಗಾದ ಒಂದು ಅನುಭವ ಅವರ ವ್ಯಕ್ತಿತ್ವಕ್ಕೆ ಕನ್ನಡಿಯಂತಿದೆ. ಒಂದು ಬಾರಿ ಚಳ್ಳಕೆರೆಯಲ್ಲಿ ತಾಲ್ಲೂಕು ಧಣಿಯ ಜಮಾಬಂದಿ ನಡೆಯಿತು. ಇಡೀ ತಾಲ್ಲೂಕಿನ ಶೇಕದಾರರು, ಶಾನುಭೋಗರು, ಪಟೇಲರು, ರೈತರು ಎಲ್ಲ ಸೇರಿದ್ದರು. ಪರಶುರಾಮಪುರದ ಶಾನುಭೊಗರಾದ ಮೈಲಾರಪ್ಪನವರು ಮೈಯಲ್ಲಿ ಹುಷಾರಿಲ್ಲದಿದ್ದ ಕಾರಣ ತಮ್ಮ ಪರವಾಗಿ ಮಗ ವೆಂಕಟರಮಣಯ್ಯನನ್ನು ಕಳುಹಿಸಿದ್ದರು. ಆತ ಸ್ವಲ್ಪ ಕಿಡಿಗೇಡಿ. ‘ತರಲೆ ವೆಂಕಟರಾಮಯ್ಯ’ ಎಂದೇ ಎಲ್ಲರೂ ಆತನನ್ನು ಕೂಗುತ್ತಿದ್ದುದು. ಸಾಧುಸ್ವಭಾವದ ವೆಂಕಣ್ಣಯ್ಯನವರನ್ನು ಕಂಡರೆ ಆ ಕಿಡಿಗೇಡಿಗೆ ಏನಾದರೂ ಕುಚೋದ್ಯ ಮಾಡಬೇಕೆಂದಾಸೆ. ಜಮಾಬಂದಿಗಾಗಿ ಬಂದಿದ್ದ ವೆಂಕಣ್ಣಯ್ಯನವರನ್ನು ಆ ದಿನ ಸ್ವಲ್ಪ ಕೀಟಲೆ ಮಾಡಬೇಕೆಂಬ ಯೋಚನೆ ಅವನ ತಲೆಯನ್ನು ಹೊಕ್ಕಿತು. ತನ್ನಂತಹವರೇ ಇನ್ನೊಂದಿಬ್ಬರನ್ನು ತನ್ನ ಜೊತೆಗೆ ಸೇರಿಸಿಕೊಂಡ. ಈ ತ್ರಿಮೂರ್ತಿಗಳು ಸೇರಿ ಊರಿನಲ್ಲಿದ್ದ ಖಾಲಿ ಮನೆಯೊಂದನ್ನು ಆ ದಿನದ ಪೂರ್ತಿ ತಮ್ಮ ವಶಕ್ಕೆ ತೆಗೆದುಕೊಂಡರು. ಆ ಕಾಲಕ್ಕೆ ತಿಪ್ಪವ್ವ ಚಳ್ಳಕೆರೆಯಲ್ಲಿ ಹೆಸರಾದ ನಾಯಕಸಾನಿ. ಅವಳು ಒಳ್ಳೆಯ ಸ್ಫುರದ್ರೂಪಿ. ಒನಪು, ವಯ್ಯಾರಗಳಲ್ಲಿಯೂ ಅವಳ ಸಮಾನರೇ ಇರಲಿಲ್ಲ. ಈ ತ್ರಿಮೂರ್ತಿಗಳು ಸೇರಿ ಅವಳನ್ನು ಹೇಗೋ ತಮ್ಮ ಕಾರಸ್ಥಾನಕ್ಕೆ ಒಪ್ಪಿಸಿದರು. ಆ ದಿನ ಜಮಾಬಂದಿ ಮುಗಿಯುವುದು ತುಂಬಾ ಹೊತ್ತಾಯಿತು. ‘ರಾತ್ರಿ ಎಲ್ಲಿ ಮಲಗುವುದು’ ಎಂದು ವೆಂಕಣ್ಣಯ್ಯನವರು ಯೋಚಿಸುತ್ತಿರುವಾಗಲೇ ವೆಂಕಟರಮಣಯ್ಯ ಅವರ ಬಳಿಗೆ ಬಂದು ‘ಸ್ವಾಮಿ ಈ ರಾತ್ರಿ ಬಿಡಾರಕ್ಕೆ ನಾನು ಒಂದು ಮನೆ ಗೊತ್ತು ಮಾಡಿದ್ದೇನೆ. ಅದು ಖಾಲಿ ಮನೆ. ಹಾಸಿಗೆ ಮೊದಲಾದ ಎಲ್ಲ ಸೌಕರ್ಯಕ್ಕೂ ಏರ್ಪಾಡು ಮಾಡಿದ್ದೇನೆ. ತಮಗೆ ಅಭ್ಯಂತರವಿಲ್ಲದಿದ್ದರೆ ಅಲ್ಲಿಯೇ ತಂಗಬಹುದು’ ಎಂದ. ಕಪಟವನ್ನರಿಯದ ವೆಂಕಣ್ಣಯ್ಯನವರು ಸಂತೋಷದಿಂದಲೇ ಒಪ್ಪಿದರು. ಕೃತ್ರಿಮಿ ವೆಂಕಟರಮಣಯ್ಯ ಆ ವೇಳೆಗಾಗಲೇ ನಾಯಕಸಾನಿ ತಿಪ್ಪವ್ವನನ್ನು ಗೋಪ್ಯವಾಗಿ ಆ ಮನೆಯ ಕೋಣೆಯೊಂದರಲ್ಲಿ ಸೇರಿಸಿದ್ದ. ವೆಂಕಣ್ಣಯ್ಯನವರು 28 ಮೂರು ತಲೆಮಾರು ವೆಂಕಟರಮಣಯ್ಯನೊಡನೆ ರಾತ್ರಿ ಆ ಮನೆಗೆ ಬಂದು ಸೇರಿದರು. ವೆಂಕಟರಮಣಯ್ಯ ತನ್ನಲ್ಲಿದ್ದ ಬೀಗದ ಕೈಯಿಂದ ಬೀಗ ತೆಗೆದು ವೆಂಕಣ್ಣಯ್ಯನವರನ್ನು ಒಳಕ್ಕೆ ಕರೆದೊಯ್ದ. ಒಳಗಡೆ ಒಂದರ ಪಕ್ಕದಲ್ಲೊಂದು ಹಾಸಿದ್ದ ಎರಡು ಹಾಸಿಗೆಗಳು ಸಿದ್ಧವಾಗಿದ್ದುವು. ಒಂದು ತಮಗೆ ಮತ್ತೊಂದು ವೆಂಕಟರಮಣಯ್ಯನವರಿಗೆ ಎಂದು ವೆಂಕಣ್ಣಯ್ಯನವರು ಊಹಿಸಿದ್ದರು. ಅವರನ್ನು ಒಳಗೆ ಕರೆದೊಯ್ದು ವೆಂಕಟರಮಣಯ್ಯ ಏನೋ ಮರೆತವನಂತೆ ‘ಸ್ವಾಮಿ, ತಾವು ಸ್ವಸ್ಥವಾಗಿ ಮಲಗಿಕೊಳ್ಳಿ ನಾನು ನನ್ನ ದಫ್ತರವನ್ನು ಗೆಳೆಯನಕೈಲಿ ಕೊಟ್ಟಿದ್ದೇನೆ; ಅವನ ಬಳಿಗೆ ಹೋಗಿ ಈಗಲೇ ಅದನ್ನು ತೆಗೆದುಕೊಂಡು ಬರುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟು ಬಿಟ್ಟ. ಹಾಗೆ ಹೋಗುವಾಗ ತಲೆಬಾಗಿಲಿನ ಬೀಗ ಹಾಕಿಕೊಂಡು ಹೋದ. ಅವನು ಈಗ ಬಂದಾನು ಆಗ ಬಂದಾನು ಎಂದು ವೆಂಕಣ್ಣಯ್ಯನವರು ಕಾದು ಕುಳಿತರು. ರಾತ್ರಿ ಹನ್ನೆರಡಾದರೂ ಅವನ ಸುಳಿವೇ ಇಲ್ಲ. ‘ಇಸ್ಟೀಟಿನ ಖಯಾಲಿ ಮನುಷ್ಯ, ಎಲ್ಲಿ ಹೋಗಿ ಕುಳಿತನೋ, ಯಾವಾಗ ಬರುತ್ತಾನೋ’ ಎಂದುಕೊಂಡ ವೆಂಕಣ್ಣಯ್ಯನವರು ದೀಪವನ್ನು ಸಣ್ಣದು ಮಾಡಿ ತಾವು ಮಲಗಲು ಅಣಿಯಾದರು. ಇನ್ನೇನು ಮಲಗಬೇಕು, ಪಕ್ಕದ ಕೋಣೆಯ ಬಾಗಿಲು ಕಿರ್ ಎಂದು ಸದ್ದಾಯಿತು. ದೀಪವನ್ನು ಮತ್ತೆ ಸ್ವಲ್ಪ ದೊಡ್ಡದು ಮಾಡಿ ವೆಂಕಣ್ಣಯ್ಯನವರು ತಲೆಯೆತ್ತಿ ನೋಡಿದರು. ಕೋಣೆಯ ಬಾಗಿಲಿನಲ್ಲಿ ಸರ್ವಾಂಗ ಸುಂದರಿಯಾದ ಸ್ತ್ರೀಯೊಬ್ಬಳು ಮುಗುಳುನಗುತ್ತ ನಿಂತಿದ್ದಾಳೆ! ವೆಂಕಣ್ಣಯ್ಯನವರು ಸ್ವಲ್ಪ ಹೊತ್ತು ಗರಬಡಿದವರಂತೆ ಮೂಕರಾಗಿ ಕುಳಿತರು. ಇದೇನು ದೇವತೆಯೋ, ಪಿಶಾಚಿಯೋ ಒಂದೂ ತಿಳಿಯಲಿಲ್ಲ. ಅವರು ಮೆಲ್ಲಗೆ ರಾಮನಾಮ ಜಪಿಸುವುದಕ್ಕೆ ಪ್ರಾರಂಭಿಸಿದರು. ಅವರ ಪರದಾಟವನ್ನು ನೋಡಿ ತಿಪ್ಪವ್ವನಿಗೆ ನಗು ಬಂತು. ಅವಳು ಮತ್ತಷ್ಟು ಮುಂದಕ್ಕೆ ಬಂದು ‘ಯಾಕೆ ಸ್ವಾಮಿ ಗಾಬರಿಯಾಗುತ್ತೀರಿ ? ನಾನೇನು ಪಿಶಾಚಿಯಲ್ಲ’ ಎಂದು ಮುಗುಳ್ನಗೆ ನಕ್ಕಳು. ವೆಂಕಣ್ಣಯ್ಯನವರು ‘ನೀನು ಯಾರಮ್ಮ ತಾಯಿ? ನನ್ನಿಂದ ನಿನಗೇನಾಗಬೇಕು ? ನೀನು ಇಲ್ಲಿಗೆ ಹೇಗೆ ಬಂದೆ?’ ಎಂದು ಕೇಳಿದರು. ತಿಪ್ಪವ್ವನಿಗೆ ಆಶ್ಚರ್ಯವಾಯಿತು. ತನ್ನ ಜೀವಮಾನದಲ್ಲಿ ಇಂತಹ ವಿಲಕ್ಷಣವಾದ ವಿಚಿತ್ರವ್ಯಕ್ತಿಯನ್ನು ನೋಡಿದ್ದು ಇದೇ ಮೊದಲು. ತನ್ನ ರೂಪರಾಶಿಗೆ, ಹಾವ-ಭಾವ, ವಿಲಾಸ, ವಿಭ್ರಮಗಳಿಗೆ ಸೋಲದ ಗಂಡನ್ನು ಅವಳು ಅದುವರೆಗೆ ಕಂಡಿರಲಿಲ್ಲ. ‘ಈತ ನಿಜವಾಗಿಯೂ ಗಂಡಸೆ?’ ಎಂಬ ಅನುಮಾನ ಬಂದಿತವಳಿಗೆ. ಅರ್ಜುನನಿಂದ ಪರಾಜಿತಳಾದ ಊರ್ವಶಿಯಂತಾದಳು, ಆಕೆ. ವೆಂಕಣ್ಣಯ್ಯನವರಿಗೆ ವೆಂಕಟರಮಣಯ್ಯನ ಸತ್ತ್ವಪರೀಕ್ಷೆ 29 ಕಾರಸ್ಥಾನ ಸ್ವಲ್ಪ ಮಟ್ಟಿಗೆ ಅರ್ಥವಾಯಿತು. ಅವರು ನಾಯಕಸಾನಿಯತ್ತ ತಿರುಗಿ ‘ನೋಡು ತಾಯಿ, ನೀನು ಯಾರೇ ಆಗಿರು; ನಾನು ಮಾತ್ರ ನೀನು ತಿಳಿದುಕೊಂಡಿರುವಂತಹ ಮನುಷ್ಯನಲ್ಲ, ನನ್ನ ಧರ್ಮಪತ್ನಿಯೊಬ್ಬಳ ಹೊರತು ಮಿಕ್ಕವರೆಲ್ಲ ನನಗೆ ತಾಯಿಯ ಸಮಾನ. ಸೀತಾಮಾತೆಯ ಸಮಾನ. ಯಾರೋ ನಿನಗೆ ತಪ್ಪು ತಿಳುವಳಿಕೆ ಕೊಟ್ಟಿದ್ದಾರೆ. ದಯವಿಟ್ಟು ಇಲ್ಲಿಂದ ಹೊರಟು ಹೋಗು’ ಎಂದರು. ಆದರೆ ಅವಳು ಹೇಗೆ ಹೊರಗೆ ಹೋದಾಳು ? ತಲೆಬಾಗಿಲಿಗೆ ಬೀಗ ಹಾಕಿದೆ. ಬೆಳಿಗ್ಗೆ ವೆಂಕಟರಮಣಯ್ಯ ಬಂದು ಬಾಗಿಲು ತೆಗೆಯುವವರೆಗೆ ಅವಳು ಅಲ್ಲಿಯೇ ಇರಬೇಕು. ವೆಂಕಣ್ಣಯ್ಯನವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ರಾಮನಾಮವನ್ನೇ ಜಪಿಸುತ್ತಾ ಹಾಸಿಗೆಯಮೇಲೆ ಕುಳಿತುಬಿಟ್ಟರು. ತಿಪ್ಪವ್ವ ತನ್ನ ಕೋಣೆಗೆ ಹಿಂದಿರುಗಿದಳು. ಬೆಳಕು ಹರಿಯಿತು. ರಾತ್ರಿಯೆಲ್ಲಾ ಇಸ್ಪೀಟಿನ ಆಟದಲ್ಲಿ ಕಾಲಕಳೆದ ವೆಂಕಟರಮಣಯ್ಯ ಬೆಳಗು ಮುಂಜಾವದಲ್ಲಿ ಅಲ್ಲಿಂದ ಬಂದು, ತನ್ನ ಕಾರಸ್ಥಾನ ಎಷ್ಟರಮಟ್ಟಿಗೆ ಫಲಪ್ರದವಾಗಿದೆಯೋ ನೋಡಬೇಕೆಂದು ತಲೆಬಾಗಿಲಿನ ಬೀಗ ತೆಗೆದ. ಬಾಗಿಲ ತೆರೆದುದೇ ತಡ ತಿಪ್ಪವ್ವ. ಕ್ರೂರದೃಷ್ಟಿಯಿಂದ ವೆಂಕಟರಮಣಯ್ಯನತ್ತ ನೋಡಿ ‘ಥೂ’ ಎಂದು ಅವನನ್ನು ಉಗುಳಿ, ಬಿರುಗಾಳಿಯಂತೆ ಮನೆಯಿಂದ ಹೊರಗೆ ಹೊರಟುಹೋದಳು. ವೆಂಕಟರಮಣಯ್ಯ ಒಳಗೆ ಬಂದು ನೋಡುತ್ತಾನೆ - ವೆಂಕಣ್ಣಯ್ಯನವರು ಧ್ಯಾನಸ್ಥಿಮಿತಮೂರ್ತಿಯಾಗಿ ಹಾಸಿಗೆಯ ಮೇಲೆ ಕುಳಿತಿದ್ದಾರೆ. ವೆಂಕಟರಮಣಯ್ಯ ಒಳಗೆ ಬಂದುದರ ಅರಿವೂ ಅವರಿಗಿಲ್ಲ. ನಡೆದಿರಬಹುದಾದ ಘಟನೆಯನ್ನು ಊಹಿಸಿಕೊಳ್ಳುವುದು ಆತನಿಗೆ ಕಷ್ಟವಾಗಲಿಲ್ಲ. ಬ್ರಹ್ಮತೇಜಸ್ಸಿನಿಂದ ಬೆಳಗುತ್ತಿದ್ದ ವೆಂಕಣ್ಣಯ್ಯನವರನ್ನು ಕಾಣುತ್ತಲೇ ತಾನು ಮಾಡಲು ಯತ್ನಿಸಿದ ಅಕಾರ್ಯಕ್ಕಾಗಿ ಆತನಿಗೆ ಪಶ್ಚಾತ್ತಾಪವಾಯಿತು. ಅದರ ಜೊತೆಗೇ ವೆಂಕಣ್ಣಯ್ಯನವರಂತಹ ಸಾಧು ಸತ್ಪುರುಷರ ಕ್ರೋಧದಿಂದ ತನಗೆ ಯಾವ ವಿಪತ್ತು ಕಾದಿದೆಯೋ ಎಂದು ಭಯವೂ ಆಯಿತು. ಆತ ಕಳ್ಳನಂತೆ ಮೆಲ್ಲನೆ ಒಳಗೆ ಬಂದು, ಧ್ಯಾನಮಗ್ನರಾಗಿ ಕುಳಿತಿದ್ದ ವೆಂಕಣ್ಣಯ್ಯನವರ ಎರಡು ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. ಕಣ್ಣು ಬಿಟ್ಟು ನೋಡಿದ ಅವರು ‘ರಾಮ, ರಾಮ! ಇದೆನು ಮಾಡುತ್ತಿದ್ದೀರಿ ವೆಂಕಟರಮಣಯ್ಯ, ಮೊದಲು ಕಾಲು ಬಿಡಿ’ ಎಂದರು. ವೆಂಕಟರಮಣಯ್ಯ ಮತ್ತಷ್ಟು ಭದ್ರವಾಗಿ ಅವರ ಕಾಲನ್ನು ಹಿಡಿದು ‘ಸ್ವಾಮಿ, ನನ್ನದು ಮಹಾಪರಾಧವಾಯಿತು. ನನ್ನನ್ನು ಕ್ಷಮಿಸಿ, ತಾವು ಕ್ಷಮಿಸಿದ್ದೇವೆಂದು ಹೇಳುವವರೆಗೆ ಈ ಕಾಲುಗಳನ್ನು ಬಿಡುವುದಿಲ್ಲ. ಅರಿಯದೆ ಅಪರಾಧ ಮಾಡಿದೆ. 30 ಮೂರು ತಲೆಮಾರು ನನ್ನದು ಸರ್ವಾಪರಾಧ. ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಂಡು ನನ್ನನ್ನು ಉದ್ಧಾರ ಮಾಡಬೇಕು. ನನ್ನ ಜನ್ಮದಲ್ಲಿ ಇನ್ನೆಂದೂ ಇಂತಹ ಕೀಳು ಕೆಲಸಕ್ಕೆ ಕೈ ಹಾಕುವುದಿಲ್ಲ. ಇಗೋ ತಮ್ಮ ಪಾದವನ್ನು ಹಿಡಿದೇ ಪ್ರಮಾಣ ಮಾಡುತ್ತೇನೆ. ಇದೊಂದು ಬಾರಿ ನನ್ನನ್ನು ಕ್ಷಮಿಸಿ. ನನ್ನ ವಂಶ ನಿರ್ವಂಶವಾಗದಿರಲಿ. ತಮ್ಮಂತಹ ಸಾತ್ವಿಕರು ಕೋಪಿಸಿಕೊಂಡರೆ ನನ್ನ ವಂಶ ಉಳಿಯುತ್ತದೆಯೆ?’ ಎಂದ. ವೆಂಕಣ್ಣಯ್ಯನವರು ‘ನಿಮ್ಮನ್ನು ಕ್ಷಮಿಸಲು ನಾನೆಷ್ಟರವನು? ಶಿಕ್ಷಿಸುವವನೂ ರಕ್ಷಿಸುವವನೂ ಶ್ರೀರಾಮನೊಬ್ಬನೇ, ಅವನು ಪತಿತಪಾವನ. ಪತಿತರೇ ಇಲ್ಲದಿದ್ದರೆ ಅವನು ಪಾವನ ಮಾಡುವುದು ಯಾರನ್ನು? ಅವನ ಬಿರುದಿಗೆ ಸ್ಥಾನವೆಲ್ಲಿ ? ಮಾಡಿದ ಪಾಪಕ್ಕೆ ಪಶ್ಚಾತ್ತಾಪಕ್ಕಿಂತ ಬೇರೆ ಪರಿಹಾರವಿಲ್ಲ. ಈ ದಿನ ಯಾರು ನನ್ನನ್ನು ಈ ನರಕದಿಂದ ಪಾರು ಮಾಡಿದನೋ ಅವನೇ ನಿಮ್ಮನ್ನು ಕ್ಷಮಿಸುತ್ತಾನೆ’ ಎಂದರು. ಅಂದಿನವರೆಗೆ ತಾನು ತಾತ್ಸಾರವಾಗಿ ಕಾಣುತ್ತಿದ್ದ ವ್ಯಕ್ತಿಯ ಔನ್ನತ್ಯವನ್ನು ಕಂಡು ವೆಂಕಟರಮಣಯ್ಯ ಅಚ್ಚರಿಗೊಂಡ. ಅಂದಿನಿಂದ ವೆಂಕಣ್ಣಯ್ಯನವರು ಅವನ ದೈವಸ್ವರೂಪರಾದರು. * * * * 31 5. ವೆಂಕಣ್ಣಯ್ಯನವರ ಪೂರ್ವಿಕರು 1. ದೇವರ ರಂಗಮ್ಮ ಒಂದು ಸಲ ಪರಶುರಾಮಪುರದ ಬ್ರಾಹ್ಮಣರಲ್ಲಿ ಹಲವರು ತಿರುಪತಿಗೆ ಯಾತ್ರೆ ಹೊರಟರು. ತಿರುಪತಿ ಭೂವೈಕಂಠ. ಅಲ್ಲಿನ ವೆಂಕಟರಮಣಸ್ವಾಮಿಯ ದರ್ಶನವೂ ಭವಬಂಧಹಾರಿ, ಎಷ್ಟೋ ಪುಣ್ಯ ಮಾಡಿದವರಿಗೆ ಮಾತ್ರ ಆತನ ದರ್ಶನವಾಗುವುದು ಎಂಬುದು ಆ ಕಾಲದ ನಂಬಿಕೆ. ಆ ಯಾತ್ರಿಕರೊಡನೆ ಹೋಗಿ ತಾನೂ ಸ್ವಾಮಿಯ ದರ್ಶನ ಮಾಡಿಕೊಂಡು ಬರಬೇಕೆಂಬುದು ಹಿರಿಯ ಮಗ ಸುಬ್ಬಣ್ಣನ ಆಸೆ. ಅವನೆಂದೂ ತಂದೆಯ ಎದುರಿಗೆ ನಿಂತು ಮಾತನಾಡಿದವನಲ್ಲ. ಆದರೆ ಇಂದು ಅವನ ಆಸೆ ಭಯವನ್ನು ತುಳಿದಿತ್ತು. ಅವನು ಮೆಲ್ಲನೆ ತಂದೆಯ ಹತ್ತಿರ ಬಂದು ‘ಅಪ್ಪಾ, ಇಲ್ಲಿನ ಹಲವರು ತಿರುಪತಿಗೆ ಯಾತ್ರೆ ಹೊರಟಿದ್ದಾರೆ. ನನಗೂ ಹೋಗಿ ಬರಬೇಕೆಂಬ ಆಸೆ. ಹೋಗಿ ಬರಲೇ?’ ಎಂದ. ಸುಬ್ಬಣ್ಣ ಹತ್ತು ವರುಷದವನಾದರೂ ಸಂಪನ್ನ ಹುಡುಗ. ರೂಪಿನಲ್ಲಿ ತಾಯಿಯನ್ನು, ಗುಣದಲ್ಲಿ ತಂದೆಯನ್ನು ಹೋತಿದ್ದ ಆ ಹುಡುಗ ಎಂದು ಯಾವುದಕ್ಕೂ ಆಸೆ ಪಟ್ಟವನಲ್ಲ. ತುಂಬ ಬುದ್ಧಿವಂತ, ಅಷ್ಟೇ ಆಚಾರಶೀಲ. ತಂದೆಯ ವಿಷಯದಲ್ಲಿ ಆತನಿಗೆ ತುಂಬ ಪೂಜ್ಯಭಾವನೆ. ಚಿಕ್ಕಪ್ಪ, ಚಿಕ್ಕಮ್ಮಂದಿರ ವಿಷಯದಲ್ಲಿ ತುಂಬ ಗೌರವ, ತಂಗಿ - ತಮ್ಮಂದಿರ ವಿಷಯದಲ್ಲಿ ತುಂಬ ಪ್ರೀತಿ. ಈ ಸದ್ಗುಣ ಸಂಪನ್ನನಾದ ಮಗನಲ್ಲಿ ವೆಂಕಣ್ಣಯ್ಯನವರಿಗೂ ತುಂಬ ಮಮತೆ. ಅವರು ಮಗನಿಗೆ ಹೇಳಿದರು, ‘ಸುಬ್ಬು, ನಿನ್ನ ಆಸೆ ತುಂಬ ಒಳ್ಳೆಯದೆ ಮಗು. ನನಗೆ ತುಂಬ ಸಂತೋಷವೇ. ಆದರೆ ನಾವು ತಿರುಪತಿಗೆ ಕಳ್ಳೊಕ್ಕಲು, ಹೋಗುವ ಹಾಗಿಲ್ಲ. ಅಲ್ಲದೆ ಅಲ್ಲಿಗೆ ಹೋಗುವ ಅವಶ್ಯಕತೆಯೂ ಇಲ್ಲ. ತಿರುಪತಿ ತಿಮ್ಮಪ್ಪ ನಮಗಾಗಿ, ನಮ್ಮ ವಂಶದವರಿಗಾಗಿ ಮೊಳಕಾಲ್ಮುರುವಿನಲ್ಲಿ ಬಂದು ನೆಲೆಸಿದ್ದಾನೆ. ನಮ್ಮ ಮುತ್ತಜ್ಜಿ ದೇವರ ರಂಗಮ್ಮನ ಭಕ್ತಿಯ ಫಲ ಇದು. ಅಲ್ಲಿಗೆ ಹೋಗಿ ಸ್ವಾಮಿಯ ದರ್ಶನ ಮಾಡಿ ಬಂದರಾಯಿತು. ತಿರುಪತಿಗೆ ಹೋಗಿ ಬಂದ ಫಲ ದೊರೆಯುತ್ತದೆ’ ಎಂದರು. ಬಾಲಕ ಸುಬ್ಬಣ್ಣ ಆಶ್ಚರ್ಯದಿಂದ ‘ಅಪ್ಪಾ ತಿರುಪತಿಯಲ್ಲಿರುವ ಸ್ವಾಮಿ ಮೊಳಕಾಲ್ಮುರುವಿಗೆ ಹೇಗೆ ಬಂದ? ಏಕೆ 32 ಮೂರು ತಲೆಮಾರು ಬಂದ? ದೇವರ ರಂಗಮ್ಮಜ್ಜಿ ಯಾರು ? ಆಕೆ ನಮಗೆ ಹೇಗೆ ಸಂಬಂಧ ? ಇದು ಯಾವಾಗ ನಡೆಯಿತು ? ಏಕೆ ನಡೆಯಿತು?’ ಎಂದು ಪ್ರಶ್ನೆಗಳ ಮಳೆಗರೆದ. ವೆಂಕಣ್ಣಯ್ಯನವರು ತಮ್ಮ ವಂಶದ ಕಥೆಯನ್ನು ಸೂಕ್ಷ್ಮವಾಗಿ ತಿಳಿಸಿ ಹೇಳಿದರು. ‘ಸುಬ್ಬು, ಹೇಳ್ತೀನಿ, ಕೇಳು. ನಮ್ಮ ವಂಶದವರು ಮೂಲತಃ ವೆಂಗಿದೇಶದವರೆಂದು ಹೇಳುತ್ತಾರೆ. ಕಾರಣಾಂತರದಿಂದ ಅವರು ದೇಶಾಂತರ ಹೊರಟು ಮೊಳಕಾಲ್ಮುರುವಿಗೆ ಬಂದು ಸೇರಿದರೆಂದು ತೋರುತ್ತದೆ. ಅವರು ಶ್ರೀರಾಮಚಂದ್ರನ ಅನನ್ಯಭಕ್ತರು, ಸದಾಚಾರಿಗಳು, ಸತ್ಯಸಂಧರು, ಧರ್ಮನಿಷ್ಠರು, ಆತ್ಮಸಾಕ್ಷಿಗನುಸಾರವಾಗಿ ನಡೆಯುವವರು. ಲೌಕಿಕವಾಗಿ ಶ್ರೀಮಂತರಲ್ಲ. ಸಂಪತ್ತಿಗೆ ಬಾಯ್ಬಿಟ್ಟವರೂ ಅಲ್ಲ, ಧರ್ಮನಿಷ್ಠೆಯನ್ನು ಕಳೆದುಕೊಂಡವರೂ ಅಲ್ಲ. ಆಧ್ಯಾತ್ಮಿಕವಾಗಿ ತುಂಬ ಮೇಲ್ಮಟ್ಟದವರು. ನನಗೆ ತಿಳಿದಿರುವ ಮಟ್ಟಿಗೆ ನಮ್ಮ ವಂಶದ ಮೂಲಪುರುಷ ಬಾಲಕೃಷ್ಣಪ್ಪ; ಆತನನ್ನು ಬಾಲಪ್ಪನೆಂದೂ ಕರೆಯುತ್ತಾರೆ. ಆತನ ಮಡದಿ ತಮ್ಮಾಜಮ್ಮ. ಅವರಿಗೂ ಹಿಂದಿನವರ ವಿಷಯ ನನಗೆ ತಿಳಿಯದು. ಬಾಲಕೃಷ್ಣಪ್ಪ-ತಿಮ್ಮಾಜಮ್ಮನವರ ಹಿರಿಯ ಮಗ ದೊಡ್ಡಪುಟ್ಟಣ್ಣ. ಆತನ ಮಡದಿಯೇ ನಮ್ಮ ವಂಶದಲ್ಲಿ ಶ್ರೇಷ್ಠಳೆನಿಸಿದ ದೇವರ ರಂಗಮ್ಮ. ನನಗೆ ಆಕೆ ಮುತ್ತಜ್ಜಿಯಾಗಬೇಕು. ಮಹಾ ಪತಿವ್ರತೆಯಾದ ಆಕೆಗೆ ತಿರುಪತಿ ವೆಂಕಟರಮಣಸ್ವಾಮಿಯಲ್ಲಿ ಅನನ್ಯವಾದ ಭಕ್ತಿ. ಪುಟ್ಟ ಬಾಲಕಿಯಾಗಿದ್ದಾಗ ಆಕೆಯ ಆಟಪಾಠಗಳೆಲ್ಲ ಭಗವತ್ಸಂಬಂಧವಾದುದೇ. ಏಳು ವರ್ಷದ ಬಾಲಕಿಯಾಗಿದ್ದಾಗ ಆಕೆಗೆ ದೇವರ ಮನೆಯನ್ನು ಚೊಕ್ಕಟವಾಗಿ ಸಾರಿಸುವುದು, ಶಂಖ, ಚಕ್ರಾದಿ ವಿವಿಧ ರೀತಿಯ ರಂಗವಲ್ಲಿಗಳನ್ನಿಡುವುದು, ದೇವಪೂಜಾಸಾಮಗ್ರಿಗಳನ್ನು ಥಳಥಳ ಹೊಳೆಯುವಂತೆ ಉಜ್ಜಿ ತೊಳೆಯುವುದು- ಪ್ರೀತಿಯ ಕಾರ್ಯಗಳಾಗಿದ್ದುವು. ಈ ದಿನಚರಿಯಲ್ಲಿ ಎಂದೂ ಲೋಪವಾಗುತ್ತಿರಲಿಲ್ಲ. ಈ ಪದ್ಧತಿ ಗಂಡನ ಮನೆಗೆ ಬಂದನಂತರವೂ ಮುಂದುವರೆಯಿತು. ಹಳೆಯ ಮುತ್ತೈದೆಯಂತೆ ಅಗಲವಾದ ಅರ್ಧಚಂದ್ರಾಕೃತಿಯ ಕುಂಕುಮವನ್ನು ಧರಿಸಿ, ತನ್ನ ಇಷ್ಟದೈವವಾದ ವೆಂಕಟರಮಣ ಸ್ವಾಮಿಯ ಬಳಪದ ವಿಗ್ರಹವನ್ನು ಪತ್ರ-ಪುಷ್ಪಗಳಿಂದ ಪೂಜಿಸಿ ಸಾಷ್ಟಾಂಗ ನಮಸ್ಕಾರದೊಡನೆ ‘ಪ್ರಭು, ದೀನಬಂಧು, ಉದ್ಧಾರ ಮಾಡು’ ಎಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಳು. ಅನಂತರ ತನ್ನ ಪಾಲಿನ ಮನೆಗೆಲಸವನ್ನು ಮಾಡಿ ಮುಗಿಸಿ, ವಿರಾಮ ವೇಳೆಯಲ್ಲಿ ಏಕಾಂತವಾಗಿ ಧ್ಯಾನಮಗ್ನಳಾಗುವಳು. ಆಕೆಯ ನಡತೆ, ನಡವಳಿಕೆಗಳಿಂದ ಸಂತೃಪ್ತರಾದ ಮನೆಯವರೆಲ್ಲರೂ ‘ಇಂತಹ ಮಹಾಸಾಧ್ವಿ ನಮ್ಮ ಮನೆಗೆ ಬಂದುದು ಎಷ್ಟು ಜನ್ಮದ ಸುಕೃತ ವಿಶೇಷವೋ’ ಎಂದುಕೊಳ್ಳುತ್ತಿದ್ದರು. ವೆಂಕಣ್ಣಯ್ಯನವರ ಪೂರ್ವಿಕರು 33 ಪತಿಗೃಹಕ್ಕೆ ಬಂದ ಹೊಸದರಲ್ಲಿ ಆ ಕಾಲದ ಸೊಸೆಯರಿಗೆ ಅತ್ತೆ ಮಾವಂದಿರಲ್ಲಿ ಅತ್ಯಂತ ಭಕ್ತಿ ಗೌರವ! ಅವರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಎಷ್ಟು ಅವಶ್ಯವೋ ಅಷ್ಟು ಮಾತ್ರ. ಗಂಡನೊಂದಿಗಂತೂ ಮಾತನಾಡುವುದಿರಲಿ, ಇದಿರಿಗೆ ನಿಲ್ಲುತ್ತಾ ಕೂಡ ಇರಲಿಲ್ಲ. ರಂಗಮ್ಮ ಪ್ರತಿದಿನವೂ ಹಾಸಿಗೆಯಿಂದ ಏಳುತ್ತಲೇ ಗಂಡನ ಪಾದಗಳಿಗೆ ನಮಸ್ಕರಿಸಿ ಮಲಗುವ ಮನೆಯಿಂದ ಹೊರಬರುತ್ತಿದ್ದಳು. ಶೌಚವಿಧಿ, ಮುಖಮಾರ್ಜನೆ, ಕುಂಕುಮಧಾರಣೆಗಳಾದ ಮೇಲೆ ಮನೆಯ ಅಂಗಳ, ಒಳಭಾಗಗಳನ್ನೆಲ್ಲ ಚೊಕ್ಕಟವಾಗಿ ಗುಡಿಸಿ, ಸಾರಿಸಿ, ರಂಗವಲ್ಲಿಯನ್ನಿಟ್ಟು, ಉಪಕರಣೆ ಮತ್ತು ಮುಸುರೆಯ ಪಾತ್ರೆಗಳನ್ನು ಥಳಥಳ ತೊಳೆದಿಟ್ಟು, ಹಿತ್ತಲಿನಲ್ಲಿದ್ದ ಹೂ ಗಿಡಗಳಿಂದ ಹೂಗಳನ್ನು ಬಿಡಿಸಿ ದೇವರ ಮನೆಯಲ್ಲಿಡುತ್ತಿದ್ದಳು. ಆ ವೇಳೆಗೆ ಅತ್ತೆ ಅಡಿಗೆಮನೆಯ ಕೆಲಸಗಳನ್ನು ಮುಗಿಸಿ, ಸ್ನಾನ ಮಾಡಿ ಅಡಿಗೆಮನೆಯನ್ನು ಪ್ರವೇಶಿಸುವಳು. ರಂಗಮ್ಮ ಅವರ ಹಿಂದೆಯೇ ಸ್ನಾನಮಾಡಿ, ಮಡಿಯುಟ್ಟು ದೇವರ ಮನೆಯಲ್ಲಿ ಗಂಡನ ಮತ್ತು ಮಾವನ ಆಹ್ನಿಕ, ದೇವರ ಪೂಜೆಗಳಿಗೆ ಅಣಿಗೊಳಿಸುವಳು ; ಅತ್ತೆಯ ಅಡಿಗೆಗೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಡುವಳು. ಆಮೇಲೆ ತುಳಸಿ ಪೂಜೆಯನ್ನು ಮಾಡಿ ಬಂದು ತನ್ನ ಇಷ್ಟದೈವವಾದ ವೆಂಕಟರಮಣ ಸ್ವಾಮಿಯ ವಿಗ್ರಹವನ್ನು ಏಕಾಂತದಲ್ಲಿ ಪೂಜಿಸುವಳು. ಯಾರು ನೋಡಿದರೆ ಏನೆಂದುಕೊಳ್ಳುವರೊ, ಏನನ್ನುವರೋ, ಎಂಬ ಭಯ, ಸಂಕೋಚ. ಪೂಜಾನಂತರ ವಿಗ್ರಹವನ್ನು ಬಚ್ಚಿಟ್ಟು ಸ್ವಾಮಿಯ ಪ್ರೀತ್ಯರ್ಥವಾಗಿ ದೀಪವೊಂದನ್ನು ನೀಲಾಂಜನದಲ್ಲಿ ಹಚ್ಚಿಡುವಳು. ಅದಕ್ಕೂ ಭಯ, ಕಂಬಗಳ ಮೇಲೆ, ಮಾಳಿಗೆಯ ಕೆಳಗೆ, ಏನಾದರೂ ಸಾಮಾನುಗಳನ್ನಿಡಲು ಹಾಕಿರುವ ಹಲಗೆಯ ಮೇಲೆ ಯಾರು ಕಾಣದಂತೆ ಆ ದೀಪವನ್ನಿಟ್ಟು ಕೈ ಮುಗಿಯುವಳು, ವಿರಾಮ ಸಿಕ್ಕಿದೊಡನೆಯೇ ಧ್ಯಾನತತ್ಪರಳಾಗುವಳು. ರಂಗಮ್ಮನ ದಿನಚರಿಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮೊಸರು ಕಡೆದು ಬೆಣ್ಣೆಯನ್ನು ತೆಗೆಯುವುದು ಒಂದಾಗಿತ್ತು. ಮೊಸರು ಕಡೆಯುತ್ತಿದ್ದುದು ಒಂದು ಕತ್ತಲೆ ಕೋಣೆಯಲ್ಲಿ. ಹಾಗೆ ಕಡೆಯುತ್ತಿರುವಾಗ ದೇವರಿಗೊಂದು ದೀಪವನ್ನು ರಾಜಾರೋಷವಾಗಿ ಹಚ್ಚಿಡಲು ತನಗೆ ಸ್ವಾತಂತ್ರ್ಯವಿಲ್ಲವಲ್ಲ ಎಂದು ಮರುಗಿ ಕಣ್ಣೀರಿಡುವಳು. ಒಂದು ದಿನ ಕೋಣೆಯ ಬಾಗಿಲನ್ನು ಹಾಕಿಕೊಂಡು ಎಂದಿನಂತೆ ಮೊಸರು ಕಡೆಯುತ್ತಿದ್ದಾಳೆ. ಕಣ್ಣಿನಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿದೆ. ಬೆಣ್ಣೆ ಮೂಡಿರುವುದರ ಪರಿವೆಯೂ ಇಲ್ಲ. ಇದ್ದಕ್ಕಿದ್ದಂತೆ ಹಿಂದೆ ಗೆಜ್ಜೆಯ ಸದ್ದು, 34 ಮೂರು ತಲೆಮಾರು ರಂಗಮ್ಮ ಬೆಚ್ಚಿಬಿದ್ದು ಹಿಂತಿರುಗಿ ನೋಡುತ್ತಾಳೆ - ಸಾಕ್ಷಾತ್ ಬಾಲಕೃಷ್ಣನ ಮೂರ್ತಿ! ಜಗನ್ಮೋಹನ ರೂಪ! ಕಾಲಲ್ಲಿ ಚಿನ್ನದ ಗೆಜ್ಜೆ! ಕಣ್ಣಲ್ಲಿ ಜಗತ್ತನ್ನೇ ಆಕರ್ಷಿಸುವ ಸಮ್ಮೋಹಕ ಕಾಂತಿ! ತುಟಿಯ ಮೇಲೆ ಮಲ್ಲಿಗೆಯನ್ನುಗುಳುವ ಮುಗುಳ್ನಗೆ. ರಂಗಮ್ಮ ಜಗತ್ತನ್ನೇ ಮರೆತಳು; ತನ್ನನ್ನು ತಾನೇ ಮರೆತಳು. ಆ ಮೋಹನಮೂರ್ತಿಯನ್ನು ನೋಡಿದಳು, ನೋಡಿದಳು, ಎಷ್ಟು ನೋಡಿದರೂ ಮನಕ್ಕೆ ತೃಪ್ತಿಯಿಲ್ಲ. ಮತ್ತೂ ನೋಡಬೇಕು! ನೋಡು, ನೋಡುತ್ತಿದ್ದಂತೆ ಬಲಗೈಯನ್ನು ಮುಂದಕ್ಕೆ ಚಾಚಿದ, ಆ ಜಗನ್ನಾಟಕ ಸೂತ್ರಧಾರ! ರಂಗಮ್ಮ ಯಾಂತ್ರಿಕವಾಗಿ ಮಡಕೆಯಲ್ಲಿನ ಬೆಣ್ಣೆಯನ್ನೆತ್ತಿ ಚಾಚಿದ ಆ ಹಸ್ತದಲ್ಲಿಟ್ಟಳು. ಅದನ್ನು ತಿನ್ನುತ್ತಿದ್ದಂತೆಯೇ ಆ ಭುವನೈಕಸುಂದರರೂಪಿ ಕಣ್ಮರೆಯಾದ. ‘ಏನು ರಂಗಮ್ಮ, ಇನ್ನೂ ಬೆಣ್ಣೆಕಡೆದು ಆಗಲಿಲ್ಲವೆ?’ ಎಂದು ಅತ್ತೆ ಕೂಗಿದಾಗಲೇ ರಂಗಮ್ಮನಿಗೆ ಎಚ್ಚರ! ಆಕೆ ಗಾಬರಿಯಿಂದ ಎಚ್ಚೆತ್ತು ನೋಡುತ್ತಾಳೆ. ಮಡಕೆಯಲ್ಲಿ ದಿನವೂ ಇರುತ್ತಿದ್ದ ಬೆಣ್ಣೆ ಇದ್ದೇ ಇದೆ. ಕಡಿಮೆಯೇನೂ ಆಗಿಲ್ಲ. ಯಾವ ಆಕ್ಷೇಪಣೆಗೂ ಕಾರಣವೇನೂ ಇಲ್ಲ. ಇದು ನಿತ್ಯದ ದಿನಚರಿಯಾಯಿತು. ಪ್ರತಿದಿನ ಬೆಳಿಗ್ಗೆ ರಂಗಮ್ಮ ಮೊಸರು ಕಡೆಯುವಳು. ಬೆಣ್ಣೆ ಬರುವ ವೇಳೆಗೆ ಸರಿಯಾಗಿ ಗೆಜ್ಜೆಯ ಸದ್ದು ಕೇಳಿ ಬರುವುದು. ಆಕೆ ಬೆಣ್ಣೆಯನ್ನು ಬಾಲಕೃಷ್ಣನ ಚಾಚಿದ ಕೈಯಲ್ಲಿಡುವಳು. ಅದನ್ನು ತಿಂದು ಅವನು ಕಣ್ಮರೆಯಾಗುವನು. ಒಂದು ದಿನ ಮೊಳಕಾಲ್ಮುರುವಿನ ಕೆಲಜನ ಬ್ರಹ್ಮೋತ್ಸವಕ್ಕೆಂದು ತಿರುಪತಿ ಯಾತ್ರೆಗೆ ಹೊರಟರು. ರಂಗಮ್ಮನ ಮನೆಯಲ್ಲಿ ಆಕೆಯ ಅತ್ತೆ-ಮಾವಂದಿರು ಯಾತ್ರೆಗೆ ಸಿದ್ಧರಾದರು. ತಿರುಪತಿ ಯಾತ್ರೆ ಎಂದರೆ ಸ್ವಲ್ಪ ಹೆಚ್ಚು ಕಡಿಮೆ ಕಾಶಿ ಯಾತ್ರೆಯಂತೆಯೇ. ತಿಂಗಳುಗಳ ಮೊದಲೇ ಹೊರಡುವ ಏರ್ಪಾಡಾಗಬೇಕು. ಕಾಲ್ನಡಿಗೆ, ತಪ್ಪಿದರೆ ಎತ್ತಿನಗಾಡಿಯ ಪ್ರಯಾಣ, ದಾರಿಯುದ್ಧಕ್ಕೂ ಕಳ್ಳ-ಕಾಕರ ಕಾಡುಮೃಗಗಳ ಕಾಟ, ಯಾತ್ರಿಕರು ಗುಂಪುಗುಂಪಾಗಿಯೇ ಹೊರಡಬೇಕು! ಒಂಟಿಯಾಗಿ ಪ್ರಯಾಣ ಮಾಡುವಂತಿಲ್ಲ. ಒಮ್ಮೆ ಯಾತ್ರೆಯನ್ನು ಸುಖವಾಗಿ ಮುಗಿಸಿಕೊಂಡು ಬರಬೇಕಾದರೆ ವೆಂಕಟರಮಣನ ಕೃಪೆಯಿಲ್ಲದೆ ಸಾಧ್ಯವೇ ಇಲ್ಲ. ಎಷ್ಟೋ ವೇಳೆ ಅದೇ ಜೀವನದ ಕೊನೆಯ ಯಾತ್ರೆ ಆಗುತ್ತಿದ್ದುದುಂಟು. ಯಾತ್ರೆಗೆ ಹೊರಡುವವರು ಅದಕ್ಕೆ ಸಿದ್ಧರಾಗಿಯೇ ಹೊರಡುತ್ತಿದ್ದರು. ರಂಗಮ್ಮ ಬ್ರಹ್ಮೋತ್ಸವವನ್ನು ಕೇಳಿಬಲ್ಲಳು, ಕಂಡಿರಲಿಲ್ಲ. ಬ್ರಹ್ಮರಥದ ಮೇಲೆ ವೈಭವದಿಂದ ಬಿಜಯಮಾಡುವ ಸ್ವಾಮಿಯನ್ನು ಕಂಣ್ಣಾರೆ ಕಾಣಬೇಕೆಂಬ ವೆಂಕಣ್ಣಯ್ಯನವರ ಪೂರ್ವಿಕರು 35 ಉತ್ಕಟೇಚ್ಚೆಯಿತ್ತು. ಒಂದು ದಿನ ರಾತ್ರಿ ತನ್ನ ಆಸೆಯನ್ನು ಆಕೆ ಗಂಡನೊಡನೆ ಗುಟ್ಟಾಗಿ ಹೇಳಿಕೊಂಡಳು. ಮರುದಿನ ಆತ ಅದನ್ನು ತನ್ನ ತಾಯಿಗೆ ಗುಟ್ಟಾಗಿ ತಿಳಿಸಿದ. ತಿಮ್ಮಾಜಮ್ಮ ‘ಅವಳಿಗೇನು?’ ಇನ್ನೂ ಚಿಕ್ಕಪುಟ್ಟ ಹುಡುಗಿ. ಮತ್ತೆ ಯಾವಾಗಲಾದರೂ ಹೋದರಾಯಿತು. ಈಗೇನವಸರ? ನೋಡು ಮಗು, ಮನೆಯ ಹತ್ತಿರ ಯಾರಾದರೂ ಇರಬೇಡವೆ? ಬಾಗಿಲು ಹಾಕಿಕೊಂಡು ಎಲ್ಲರೂ ಹೋಗುವುದಕ್ಕಾಗುತ್ತದೆಯೆ?’ ಎಂದುಬಿಟ್ಟರು. ಅಲ್ಲಿ ರಂಗಮ್ಮನ ಆಸೆ ಮುದುರಿ ಹೋಯಿತು. ಯಾತ್ರಿಕರೆಲ್ಲರೂ ತಿರುಪತಿಗೆ ಹೊರಟರು. ರಂಗಮ್ಮ ತನ್ನ ಪತಿಯೊಡನೆ ಮನೆಯ ಕಾವಲಾಗಿ ಹಿಂದುಳಿದಳು. ಯಾತ್ರಿಕರು ಹೊರಟುಹೋಗಿ ಒಂದು ತಿಂಗಳಾಗುತ್ತ ಬಂತು, ಅಂದು ವಿಜಯದಶಮಿ. ಅಂದೆ ತಿರುಪತಿಯಲ್ಲಿ ವೆಂಕಟೇಶ್ವರನ ರಥೋತ್ಸವ ನಡೆಯಬೇಕು. ರಂಗಮ್ಮ ಎಂದಿನಂತೆ ಕೋಣೆಯಲ್ಲಿ ಮೊಸರು ಕಡೆಯುತ್ತಿದ್ದಾಳೆ. ಆಕೆಯ ದೇಹ ಮಾತ್ರ ಆ ಮನೆಯಲ್ಲಿ, ಮನಸ್ಸೆಲ್ಲಾ ತಿರುಪತಿಯಲ್ಲಿ. ಆಕೆಯ ಕಣ್ಣಿದಿರಿನಲ್ಲಿ ಅಲ್ಲಿನ ವೈಭವ ತಾಂಡವವಾಡುತ್ತಿದೆ. ಸಹಸ್ರಾರು ಜನರ ಸಂದಣಿ, ಎಲ್ಲೆಲ್ಲಿಯೂ ಗಜಿಬಿಜಿ, ಉನ್ನತವಾದ ರಥದ ಮೇಲೆ ಆ ಸ್ವಾಮಿಯ ದಿವ್ಯಸುಂದರ ವಿಗ್ರಹ, ರಥದ ಮುಂದೆ ಭೋರ್ಗರೆಯುತ್ತಿರುವ ಮಂಗಳ ವಾದ್ಯಗಳು- ಈ ಸುಂದರ ದೃಶ್ಯವನ್ನು ಕಣ್ಣಾರೆ ಕಾಣುವ ಭಾಗ್ಯ ತನಗಿಲ್ಲವಲ್ಲ ಎಂದು ಮನಸ್ಸು ಮರುಗಿ ಬಾಡಿ ಹೋಗಿದೆ. ಕಣ್ಣಿನಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿದೆ, ಆಕೆ ಮೊಸರನ್ನು ಕಡೆಯುತ್ತಿದ್ದಾಳೆ, ಬೆಣ್ಣೆ ತೇಲಿ ಬರುತ್ತಿದೆ. ಅದನ್ನು ಸ್ವೀಕರಿಸಲು ಎಂದಿನಂತೆ ಅಂದೂ ಬಾಲಕೃಷ್ಣ ಬಂದು ಕಾಲ್ಗೆಜ್ಜೆಯ ಝಣ ಝಣತ್ಕಾರದೊಡನೆ ನಿಂತಿದ್ದಾನೆ. ರಂಗಮ್ಮನಿಗೆ ಇದರ ಪರಿವೆಯೇ ಇರಲಿಲ್ಲ. ಬಾಲಕೃಷ್ಣ ಮತ್ತೆ ಮತ್ತೆ ಕಾಲ್ಗೆಜ್ಜೆಯ ಸದ್ದು ಮಾಡಿದ. ರಂಗಮ್ಮ ತಿರುಗಿ ನೋಡಿದಳು. ಆಕೆಗೆ ತನ್ನ ಅಪಚಾರದ ಅರಿವಾಯಿತು. ಅಷ್ಟರಲ್ಲಿ, ಆ ಭಕ್ತವತ್ಸಲ ‘ಅಮ್ಮಾ ಕಣ್ಣೀರೇಕೆ? ನಾನಿರುವಾಗ ನಿನಗೇನು ಕೊರತೆ? ಏನಾಗಬೇಕು ನಿನಗೆ?’ ಎಂದು ಕೇಳಿದ. ರಂಗಮ್ಮ ‘ತಂದೆ, ಈದಿನ ತಿರುಪತಿಯಲ್ಲಿ ಬ್ರಹ್ಮೋತ್ಸವ, ದಿವ್ಯರಥದಲ್ಲಿ ಮಂಡಿಸಿರುವ ನಿನ್ನ ವೈಭವವನ್ನು ಕಣ್ಣಾರೆ ಕಾಣುವ ಪುಣ್ಯ ನನಗೆ ದೊರೆಯಲಿಲ್ಲವಲ್ಲ - ಎಂದು ನನಗೆ ಸಂಕಟವಾಯಿತು’ ಎಂದಳು. ಬಾಲಕೃಷ್ಣ ‘ಅಮ್ಮಾ, ಇಷ್ಟಕ್ಕಾಗಿ ಕಣ್ಣೀರೆ? ಬಾ ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ರಥದ ಮೇಲೆ ನನ್ನ ಪಕ್ಕದಲ್ಲಿಯೇ ಕುಳಿತು ಎಲ್ಲವನ್ನೂ ನೋಡುವೆಯಂತೆ!’ ಎಂದ. ತಿರುಪತಿಯ ಬ್ರಹ್ಮೋತ್ಸವ! ಅದನ್ನು ನೋಡಲು ಎರಡು ಕಣ್ಣು ಸಾಲದು, 36 ಮೂರು ತಲೆಮಾರು ಅ ವೈಭವವನ್ನು ವರ್ಣಿಸಲು ನಾಲಗೆಗೆ ಶಕ್ತಿಯಿಲ್ಲ, ಅದೇನು ಜನಸಂದಣಿ ! ಅದೆಂತಹ ವಾದ್ಯಘೋಷ ! ಅದೇನು ಮಂತ್ರ! ಅದೇನು ಪೂಜೆ! ಸಾವಿರ, ಸಾವಿರ ಕಂಠಗಳಿಂದ ‘ಗೋವಿಂದ, ಗೋವಿಂದ’ ಎಂಬ ಜಯಘೋಷ! ಮೊಳಕಾಲ್ಮುರುವಿನಿಂದ ಬಂದ ಯಾತ್ರಿಕರು ಒಂದು ಕಡೆ ನಿಂತು ಉತ್ಸವವನ್ನು ನಿಡುಗಣ್ಣುಗಳಿಂದ ನೋಡುತ್ತಿದ್ದಾರೆ. ನಿಧಾನವಾಗಿ ರಥ ಹತ್ತಿರ ಹತ್ತಿರಕ್ಕೆ ಬರುತ್ತಿದೆ. ದೇವರು ಕಣ್ಣು ಕೊಟ್ಟುದು ಸಾರ್ಥಕವಾಯಿತು ಎಂಬ ಭಾವನೆಯಿಂದ ಎಲ್ಲರೂ ತದೇಕದೃಷ್ಟಿಯಾಗಿ ರಥವನ್ನೇ ನೋಡುತ್ತಿದ್ದಾರೆ. ಎಲ ಎಲ, ಇದೇನಾಶ್ಚರ್ಯ! ಸ್ವಾಮಿಯ ಪಕ್ಕದಲ್ಲಿ ಕುಳಿತಿರುವ ಆ ಹೆಣ್ಣು ಯಾರು? ರಥ ಮತ್ತಷ್ಟು ಹತ್ತಿರವಾಯ್ತು. ಸ್ಪಷ್ಟವಾಗಿ ಕಾಣುತ್ತಿದೆ. ‘ಎಲಾ, ಅಲ್ಲಿ ಕುಳಿತಿರುವವಳು ನಮ್ಮ ರಂಗಮ್ಮ!’ ಅವಳ ಅತ್ತೆ-ಮಾವಂದಿರು ತಮ್ಮ ಕಣ್ಣನ್ನೇ ನಂಬಲಾರದೆ ಕಣ್ಣುಜ್ಜಿಕೊಂಡು ಮತ್ತೊಮ್ಮೆ ನೋಡಿದರು. ಸಂದೇಹವೇ ಇಲ್ಲ, ರಂಗಮ್ಮನೆ! ರಥ ಮುಂದಕ್ಕೆ ಸಾಗಿ ಹೋಯಿತು. ರಂಗಮ್ಮನ ಅತ್ತೆ-ಮಾವಂದಿರು ದಿಗ್ಭ್ರಾಂತರಾಗಿ ಕಣ್ಣುಬಿಟ್ಟುಕೊಂಡು ನೋಡುತ್ತ ಅಲ್ಲಿಯೇ ನಿಂತಿದ್ದರು. ಯಾತ್ರೆ ಹೋಗಿದ್ದವರು ಯಥಾಕಾಲದಲ್ಲಿ ಊರಿಗೆ ಹಿಂದಿರುಗಿದರು. ಮನೆಯಲ್ಲಿ ನೋಡಿದರೆ ರಂಗಮ್ಮ ಅಲ್ಲಿಯೇ ಇದ್ದಾಳೆ! ತಾವು ತಿರುಪತಿಯಲ್ಲಿ ರಥದ ಮೇಲೆ ನೋಡಿದ ರಂಗಮ್ಮ ಇಲ್ಲಿ ಮನೆಯಲ್ಲಿಯೇ ಇದ್ದಾಳೆ. ಅನುಮಾನವನ್ನು ಪರಿಹಾರಮಾಡಿಕೊಳ್ಳಲು ರಂಗಮ್ಮನನ್ನೇ ಅತ್ತೆ ಕೇಳಿದಳು. ‘ರಂಗೂ ನಾವು ತಿರುಪತಿಗೆ ಹೋಗಿದ್ದೆವಲ್ಲ, ಅಲ್ಲಿ ಎಂತಹ ಆಶ್ಚರ್ಯವನ್ನು ನೋಡಿದೆವೂಂತ!’ ರಂಗಮ್ಮ ಕೇಳಿದಳು, ‘ಏನತ್ತೆ ಅಂತಹ ಆಶ್ಚರ್ಯ?’ ‘ವಿಜಯದಶಮಿಯ ದಿನ ಬ್ರಹ್ಮರಥೋತ್ಸವವಾಗುತ್ತದೆಯಲ್ಲಾ?’ ‘ಹೂಂ’ ‘ಆಗ ಸ್ವಾಮಿಯ ರಥದ ಮೇಲೆ, ಸ್ವಾಮಿಯ ಪಕ್ಕದಲ್ಲೆ ಯಾರು ಕೂತಿದ್ದರೂಂತಿ?’ ‘ಇನ್ಯಾರು ಕೂತಿರ್ತಾರೆ? ಅರ್ಚಕರು’. ‘ಹೌದು ಒಂದು ಪಕ್ಕದಲ್ಲಿ ಅರ್ಚಕರು ಕೂತಿದ್ದರು, ಆದರೆ ಇನ್ನೊಂದು ಪಕ್ಕದಲ್ಲಿ ನೀನು ಕೂತಿದ್ದೆ’. ರಂಗಮ್ಮ ಮುಗುಳ್ನಗುತ್ತ ‘ನಾನು’ ನಾನು ಇಲ್ಲಿಯೇ ಇದ್ದೇನೆ. ಬೇಕಾದರೆ ಅವರನ್ನೇ ಕೇಳಿ. ಯಾರನ್ನು ನೋಡಿ ನಾನು ಎಂದುಕೊಂಡಿರೊ. ‘ಇಲ್ಲ ರಂಗಮ್ಮ, ನಿಜವಾಗ್ಲೂ ನಿನ್ನ ಹಾಗೇ ಇದ್ಲು. ಆಶ್ಚರ್ಯದಿಂದ ವೆಂಕಣ್ಣಯ್ಯನವರ ಪೂರ್ವಿಕರು 37 ಮತ್ತೆ ನೋಡಿದೆವು. ಅನುಮಾನವೇ ಇಲ್ಲ. ಎಲ್ಲ ನಿನ್ನ ಹಾಗೇ ತದ್ರೂಪು.’ ‘ಏನೋ ನನಗೊಂದು ತೋಚುತ್ತಿಲ್ಲ’ ಎಂದು ಮಾತು ಮುಗಿಸಿದಳು, ರಂಗಮ್ಮ. ರಂಗಮ್ಮನ ದೈನಂದಿನ ಧಾರ್ಮಿಕ ಕ್ರಮ ಒಂದೇ ರೀತಿಯಲ್ಲಿ ಸಾಗಿತ್ತು. ನಿತ್ಯವೂ ಆಕೆ ಹಲಗೆಯ ಮೇಲೆ ಇಡುತ್ತಿದ್ದ ದೇವರ ದೀಪವನ್ನು ಯಾರೂ ಗಮನಿಸಿರಲಿಲ್ಲ. ಆ ದೀಪಕ್ಕೂ, ಮಾಳಿಗೆಗೂ ಒಂದೆರಡು ಗೇಣುಗಳು ಅಂತರ ಮಾತ್ರ. ಅಕಸ್ಮಾತ್ತಾಗಿ ಜಂತಿಯ ಮಗ್ಗುಲಿನ ಸಣ್ಣ ಕಡ್ಡಿಗಳಿಗೆ ಶಾಖ ತಗುಲಿದರೆ ಮಾಳಿಗೆಯೇ ಹತ್ತಿಕೊಂಡು ಉರಿದುಹೋಗಬಹುದಾಗಿತ್ತು. ಆದರೆ ಭಗವದನುಗ್ರಹದಿಂದ ಯಾವ ವಿಧವಾದ ಅನಾಹುತವೇ ಆಗಲಿ, ಎಂದೂ ಆಗಿರಲಿಲ್ಲ. ಹೀಗಿರುತ್ತ ಒಂದು ದಿನ ಆಕಸ್ಮಾತ್ತಾಗಿ ಇದು ರಂಗಮ್ಮನವರ ಮಾವನ ಕಣ್ಣಿಗೆ ಬಿತ್ತು. ಮಾಳಿಗೆಗೆ ಅತಿ ಸಮೀಪದಲ್ಲಿ, ಕೆಳಗಡೆ ದೀಪ ಉರಿಯುತ್ತಿದ್ದುದನ್ನು ಕಂಡು ಅವರಿಗೆ ಭಯಾಶ್ಚರ್ಯಗಳುಂಟಾದುವು. ‘ಇದೇನಿದು? ಇಲ್ಲಿ ದೀಪವನ್ನಿಟ್ಟವರಾರು?’ ಏನಾದರೂ ಅನಾಹುತವಾಗಿದ್ದರೆ ಏನು ಗತಿ? ಎಂದು ಗಾಬರಿಯಿಂದ ಆ ದೀಪವನ್ನು ಅಲ್ಲಿಂದ ತೆಗೆದು ಕೆಳಗಿರಿಸಿದರು. ‘ಅಲ್ಲಿ ದೀಪವನ್ನಿಟ್ಟವರಾರು?’ ಎಂದು ಮತ್ತೊಮ್ಮೆ ಮನೆಯವರನ್ನೆಲ್ಲ ವಿಚಾರಿಸಿದರು. ಎಲ್ಲರೂ ‘ನಾನು ಕಾಣೆ, ತಾನು ಕಾಣೆ’ ಎಂದು ಹೇಳಿದರು. ಕೊನೆಗೆ ರಂಗಮ್ಮನ ಸರದಿ ಬಂತು. ‘ರಂಗಮ್ಮ, ನಿನಗೇನಾದರೂ ಈ ವಿಷಯ ಗೊತ್ತೇ?’ ಎಂದು ಕೇಳಿದರು. ರಂಗಮ್ಮ ಭಯದಿಂದ ತಲೆತಗ್ಗಿಸಿಕೊಂಡು, ದಿನನಿತ್ಯವೂ ತಾನು ವೆಂಕಟರಮಣಸ್ವಾಮಿಯ ಪೂಜೆ ಮಾಡುತ್ತಿರುವುದಾಗಿಯೂ, ಆ ಸ್ವಾಮಿಗಾಗಿ ನಿತ್ಯವೂ ದೀಪವಿಡುತ್ತಿರುವುದಾಗಿಯೂ, ಭಯ, ಸಂಕೋಚಗಳಿಂದ ತಾನು ಅದನ್ನು ಯಾರಿಗೂ ಕಾಣದಂತೆ ಹಲಗೆಯ ಮೇಲೆ ಇಡುತ್ತಿದ್ದುದಾಗಿಯೂ ತಿಳಿಸಿದಳು. ಆಗ ಬಾಲಕೃಷ್ಣನವರು ನಕ್ಕು ‘ಅಯ್ಯೋ ನನ್ನ ತಾಯಿ! ನಿನಗೇಕಮ್ಮ ಭಯ? ನೀನು ದೇವರಿಗಾಗಿ ದೀಪ ಹಚ್ಚಿದರೆ ಯಾರಾದರೂ ಆಕ್ಷೆಪಿಸುತ್ತಾರೆಯೇ? ಮಹರಾಯಳಾಗಿ ಒಂದಲ್ಲ, ನಾಲ್ಕು ದೀಪಗಳನ್ನು ಹಚ್ಚಿಕೊ. ನಿನ್ನ ಸ್ವಾಮಿಯನ್ನು ನಿನಗೆ ಬೇಕಾದಲ್ಲಿಟ್ಟುಕೊಂಡು ನಿನ್ನ ಇಷ್ಟಾನುಸಾರ ಪೂಜೆ ಮಾಡಿಕೊ. ನಮಗೂ ಬಹಳ ಸಂತೋಷ’. ಎಂದು ಹೇಳಿದರು. ಅಂದಿನಿಂದ ಅವಳಿಗೆ ತನ್ನ ಪೂಜಾ ಸಂಬಂಧವಾದ ಭಯ ಸಂಕೋಚಗಳಿಲ್ಲದಂತಾಗಿ ನಿರಾಳವಾಯಿತು. ನಿರ್ಮಲ ಮನಸ್ಸಿನಿಂದ ಭಕ್ತಿಪೂರ್ವಕವಾಗಿ ಸ್ವಾಮಿಯನ್ನು ಪೂಜಿಸತೊಡಗಿದ್ದಳು. ಒಂದು ದಿನ ಬೆಳಿಗ್ಗೆ ರಂಗಮ್ಮ ಎಂದಿನಂತೆ ಮೊಸರು ಕಡೆಯುತ್ತ 38 ಮೂರು ತಲೆಮಾರು ಕುಳಿತಿದ್ದಾಳೆ. ಅಕಸ್ಮಾತ್ತಾಗಿ ಆ ಕೋಣೆಯ ಮುಂದಿನಿಂದ ಹಾದು ಹೋಗುತ್ತಿದ್ದ ದೊಡ್ಡ ಪುಟ್ಟಣ್ಣ ಕೋಣೆಯೊಳಗಿನಿಂದ ಬರುತ್ತಿದ್ದ ಗೆಜ್ಜೆಯ ಸವಿದನಿ ಕೇಳಿ ಅಲ್ಲಿಯೇ ನಿಂತ. ಕಡೆಗೋಲಿನ ನಾದಕ್ಕೆ ಸರಿಯಾಗಿ ಗೆಜ್ಜೆಯ ಸದ್ದು ಕೇಳಿ ಬರುತ್ತಿದೆ. ಆತ ಮೆಲ್ಲನೆ ಕೋಣೆಯ ಬಾಗಿಲಿನ ಸಣ್ಣ ಸಂದಿಯೊಳಗಿನಿಂದ ಇಣುಕಿ ನೋಡಿದ. ಅಲ್ಲಿ ಯಾರೂ ಕಾಣುತ್ತಿಲ್ಲ, ಮೊಸರು ಕಡೆಯುತ್ತಿರುವ ರಂಗಮ್ಮನ ಹೊರತು. ಮೆಲ್ಲನೆ ಬಾಗಿಲನ್ನು ತಟ್ಟಿದ. ಮೊಸರು ಕಡೆಯುವ ಸದ್ದು ನಿಂತಿತು. ಅದರ ಜೊತೆಗೆ ಗೆಜ್ಜೆಯ ಸದ್ದು ನಿಂತಿತು. ಬಾಗಿಲಿನ ಸದ್ದು ಕೇಳಿ ಮೊಸರು ಕಡೆಯುತ್ತಿದ್ದ ರಂಗಮ್ಮ ಅದನ್ನು ಅಷ್ಟಕ್ಕೇ ನಿಲ್ಲಿಸಿ ಬಾಗಿಲು ತೆಗೆದಳು. ಬಾಗಿಲಲ್ಲಿ ಅ ಹೊತ್ತಿನಲ್ಲಿ ಅಲ್ಲಿಗೆ ಯಾರೂ ಬರುತ್ತಿರಲಿಲ್ಲ. ಆ ದಿನ ಗಂಡ ಬಂದುದು ತುಂಬ ಅನಿರೀಕ್ಷಿತ ಆಶ್ಚರ್ಯ. ತಾವಿಬ್ಬರೇ ಹಾಗೆ ನಿಂತಿರುವುದನ್ನು ಹಿರಿಯರು ಯಾರಾದರೂ ನೋಡಿಯಾರು ಎಂಬ ಭಯದಿಂದ ರಂಗಮ್ಮ ಗಂಡನನ್ನು ಕೋಣೆಯೊಳಗೆ ಕರೆದು ಬಾಗಿಲು ಹಾಕಿಕೊಂಡಳು. ಕೇವಲ ಪಿಸುದನಿಯಲ್ಲಿ ‘ಏನು? ಇಷ್ಟು ಹೊತ್ತಿನಲ್ಲಿ ಇಲ್ಲಿಗೆ ಬಂದಿದ್ದೇಕೆ? ನನ್ನಿಂದ ಏನಾದರೂ ಕೆಲಸವಿತ್ತೇ?’ ಎಂದು ಪಿಸುಗುಟ್ಟಿದ್ದಳು. ಆತನೂ ತಗ್ಗಿದ ಧ್ವನಿಯಲ್ಲಿಯೇ ‘ಏನೂ ಇಲ್ಲ ರಂಗು! ಎದ್ದವನು ಸುಮ್ಮನೆ ಕೋಣೆಯ ಮುಂದೆ ಹಾದು ಹೋಗುತ್ತಿದ್ದೆ. ಒಳಗಿನಿಂದ ಮೊಸರು ಕಡೆಯುವ ಸದ್ದಿನೊಂದಿಗೆ ಗೆಜ್ಜೆಗಳ ಸದ್ದು ಕೇಳಿಸಿತು. ಅದಕ್ಕಾಗಿ ಕುತೂಹಲದಿಂದ ಬಾಗಿಲ ಕಿಂಡಿಯಿಂದ ನೋಡಿದೆ. ಏನೂ ಕಾಣಲಿಲ್ಲ. ಗೆಜ್ಜೆಗಳ ಸದ್ದು ಮಾತ್ರ ಕೇಳುತ್ತಿತ್ತು. ನಿನ್ನ ಮೊಸರು ಕಡೆಯುವ ಕೆಲಸ ನಿಲ್ಲುತ್ತಲೇ ಅದೂ ನಿಂತು ಹೋಯಿತು. ಏನದು ರಂಗು?’ ರಂಗಮ್ಮನಿಗೆ ಸಂದಿಗ್ಧಕ್ಕೆ ಇಟ್ಟುಕೊಂಡಿತು. ತನ್ನನ್ನು ಪ್ರಶ್ನಿಸುತ್ತಿರುವವನು ತನ್ನ ಗಂಡ, ಪ್ರತ್ಯಕ್ಷ ದೈವಸ್ವರೂಪ, ಆತನೊಂದಿಗೆ ಸುಳ್ಳಾಡುವಂತಿಲ್ಲ. ಆದರೆ ಗುಟ್ಟನ್ನು ಯಾರೊಂದಿಗೂ ರಟ್ಟು ಮಾಡುವಂತೆಯೂ ಇಲ್ಲ. ಆಕೆಯ ಮೌನವನ್ನು ಕಂಡು ದೊಡ್ಡ ಪುಟ್ಟಣ್ಣ ‘ಯಾಕೆ ರಂಗು ಸುಮ್ಮನೆ ನಿಂತೆ? ನನ್ನೊಂದಿಗೆ ಹೇಳಬಾರದಂತಹ ಗುಟ್ಟೇ ಅದು?’ ‘ಹೌದು ಸ್ವಾಮಿ! ಅದೊಂದು ಬಹು ನಿಗೂಢವಾದ ಗುಟ್ಟು, ಯಾರಿಗೂ ಹೇಳುವ ಅಧಿಕಾರವಿಲ್ಲ, ನನಗೆ. ಇದೊಂದು ವಿಚಾರದಲ್ಲಿ ನೀವು ದಯವಿಟ್ಟು ನನ್ನನ್ನು ಕ್ಷಮಿಸುವಿರಾ?’ ‘ಇಲ್ಲ ರಂಗು, ಇದನ್ನು ನೀನು ನನಗೆ ಹೇಳಲೇಬೇಕು. ನಿನ್ನ ಯಾವ ಗುಟ್ಟನ್ನಾದರೂ ತಿಳಿದುಕೊಳ್ಳುವ ಅದಿಕಾರ ನನಗಿದೆ.’ ವೆಂಕಣ್ಣಯ್ಯನವರ ಪೂರ್ವಿಕರು 39 ‘ನಿಜ ಸ್ವಾಮಿ! ನನ್ನ ಯಾವ ಗುಟ್ಟನ್ನಾದರೂ ತಿಳಿದುಕೊಳ್ಳುವ ಅಧಿಕಾರ ನಿಮಗಿದೆ. ನೀವು ನನ್ನ ಪ್ರತ್ಯಕ್ಷ ದೈವ. ನಾನು ಇದುವರೆವಿಗೂ ಯಾವುದನ್ನೂ ನಿಮ್ಮಿಂದ ಮುಚ್ಚಿಟ್ಟಿಲ್ಲ. ಆದರೆ ಇದೊಂದು ವಿಚಾರದಲ್ಲಿ ಮಾತ್ರ ನಾನು ಪರಾಧೀನಳು!’ ‘ಊಹೂಂ, ಅದೊಂದು ಆಗುವುದಿಲ್ಲ. ನೀನು ಈ ವಿಚಾರವನ್ನು ಹೇಳಲೇಬೇಕು. ನನ್ನ ಮನೆದೇವರಾದ ವೆಂಕಟೆಶ್ವರನಾಣೆ’. ಗಂಡನ ಹಟವನ್ನು ಕಂಡು ರಂಗಮ್ಮನ ಕಣ್ಣಲ್ಲಿ ತಟ್ಟನೆ ಕಣ್ಣೀರು ತುಂಬಿತು. ಆಕೆ ‘ಸರಿ ಸ್ವಾಮಿ. ಇದೂ ಅವನಿಚ್ಛೆಯೋ ಏನೋ! ಅವನ ಲೀಲೆಗಳನ್ನು ಬಲ್ಲವರಾರು ? ನಿಮಗೆ ಈ ರೀತಿ ಪ್ರೇರಣೆ ಮಾಡಿ ನನ್ನ ಸತ್ವ ಪರೀಕ್ಷೆಯನ್ನು ಮಾಡುತ್ತಿರುವನೆಂದು ತೋರುತ್ತದೆ. ಆಗಲಿ’ ಎಂದು, ದಿನದಿನವೂ ಮೊಸರು ಕಡೆಯುವಾಗ ಬಾಲಕೃಷ್ಣ ಬಂದು ತನ್ನ ಬಳಿ ನೃತ್ಯ ಮಾಡುವುದನ್ನೂ, ತಾನಿತ್ತ ಬೆಣ್ಣೆಯನ್ನು ತಿಂದು ಹೋಗುವುದನ್ನೂ ವಿವರವಾಗಿ ತಿಳಿ ಹೇಳಿದಳು. ಅದನ್ನು ಕೇಳಿ ದೊಡ್ಡಪುಟ್ಟಣ್ಣ ಆಶ್ಚರ್ಯದಿಂದ ಮೂಕನಾಗಿ ಹೋದ. ಕೆಲನಿಮಿಷದ ನಂತರ ಆತನಿಗೊಂದು ಯೋಚನೆ ಹೊಳೆಯಿತು. ಆತ ಮಡದಿಯೊಡನೆ ತನಗೂ ಸ್ವಾಮಿಯ ದರ್ಶನ ಮಾಡಿಸಬೇಕೆಂದು ಬೇಡಿಕೊಂಡ. ‘ರಂಗು! ನನ್ನ ಪ್ರಾಣಪ್ರಿಯೆ ರಂಗು, ನಾನು ನಿನ್ನನ್ನು ದೈನ್ಯದಿಂದ ಬೇಡಿಕೊಳ್ಳುತ್ತಿದ್ದೇನೆ. ನನ್ನ ಕೋರಿಕೆಯನ್ನು ಈಡೇರಿಸಿ ಕೊಡು. ಒಂದೇ ಒಂದು ಬಾರಿ ನನಗೆ ಆ ಸ್ವಾಮಿಯ ದರ್ಶನ ಮಾಡಿಸು’, ಎಂದು ಕೇಳಿಕೊಂಡ. ರಂಗಮ್ಮ ಈಗ ಏನು ಮಾಡಬೇಕು? ಗಂಡನಿಗೆ ಏನೆಂದು ಉತ್ತರ ಕೊಡಬೇಕು? ದೈವಸ್ವರೂಪಿಯಾದ ಪತಿ ಪ್ರಾರ್ಥಿಸುತ್ತಿದ್ದಾನೆ. ಆದರೆ ಭಗವಂತನ ಅಪ್ಪಣೆಯಿಲ್ಲದೆ ಏನನ್ನು ತಾನೆ ಮಾಡಲು ಸಾಧ್ಯ? ಇಂತಹ ಸನ್ನಿವೇಶದಲ್ಲಿ ಅಸಹಾಯಕಳಾದ ತಾನು ಏನು ಮಾಡಬಹುದು? ಯೋಚಿಸಿ, ಯೋಚಿಸಿ ಕಡೆಗೆ ಮನಸ್ಸನ್ನು ದೃಢಮಾಡಿಕೊಂಡು ‘ನಾಳೆ ಸ್ವಾಮಿಯನ್ನು ಕೇಳಿ ಯಾವುದನ್ನೂ ಹೇಳುತ್ತೇನೆ. ಅಲ್ಲಿಯವರೆಗೆ ತಾಳಿಕೊಳ್ಳಿ. ದಯವಿಟ್ಟು ಈ ವಿಚಾರವನ್ನು ಯಾರೊಡನೆಯೂ ಬಾಯಿ ಬಿಡಬೇಡಿ’ ಎಂದು ಕೇಳಿಕೊಂಡಳು. ಮರುದಿನ ಎಂದಿನಂತೆ ಮೊಸರು ಕಡೆಯುತ್ತಿರುವಾಗ ‘ಸ್ವಾಮಿಯನ್ನು ಹೇಗೆ ಕೇಳುವುದು ? ಆ ಪರಮಾತ್ಮ ನನ್ನ ಪ್ರಾರ್ಥನೆಗೆ ಕಿವಿಗೊಡುತ್ತಾನೆಯೆ? ಕೋಪಗೊಂಡು ತನಗೆ ದರ್ಶನವನ್ನೇ ಕೊಡದೆ ಕಣ್ಮರೆಯಾದರೆ ಏನು ಗತಿ?’ ಎಂದು ಯೋಚಿಸುತ್ತಿರುವಷ್ಟರಲ್ಲಿ ಗೆಜ್ಜೆಗಳ ಝಣತ್ಕಾರ ಆಕೆಯನ್ನು 40 ಮೂರು ತಲೆಮಾರು ಎಚ್ಚರಗೊಳಿಸಿತು. ಬೆಣ್ಣೆಗಾಗಿ ಕೈಚಾಚಿ ಪಕ್ಕದಲ್ಲಿ ನಿಂತಿದ್ದ ಈ ಶ್ಯಾಮಸುಂದರ ‘ಏನಮ್ಮ ಬಹಳ ಯೋಚನೆಯಲ್ಲಿದ್ದೀ’? ಎಂದ. ‘ಹೌದು ಸ್ವಾಮಿ, ಬಿಡಲಾರದ ಕಗ್ಗಂಟೊಂದು ನನ್ನ ಕುತ್ತಿಗೆಗೆ ಬಿದ್ದಿದೆ. ನೀನು ಒಪ್ಪಿಗೆಯಿತ್ತರೆ ಆ ನನ್ನ ಸಮಸ್ಯೆಯನ್ನು ನಿನ್ನ ಮುಂದೆ ಇಡುತ್ತೇನೆ’ ಎಂದಳು. ‘ಏನಮ್ಮ ಅಂತಹ ಯೋಚನೆ? ನಾನು ಪರಿಹಾರ ಮಾಡಲಾಗದಂತಹುದೇ?’ ‘ಶಾಂತಂ ಪಾಪಂ, ನೀನು ಪರಿಹರಿಸಲಾಗದ ಸಮಸ್ಯೆಯುಂಟೆ ?’ ‘ಹಾಗಿದ್ದರೆ ಹೇಳು ತಾಯಿ, ನೀನು ಏನು ಕೇಳಿದರೂ ಇಲ್ಲವೆನ್ನಲಾರೆ. ಭಕ್ತರ ಕೋರಿಕೆಯನ್ನು ನೆರವೇರಿಸಲು ನಾನು ಸದಾ ಸಿದ್ಧ. ನಿಸ್ಸಂಕೋಚವಾಗಿ ನಿನ್ನ ಆಪೇಕ್ಷೆಯನ್ನು ತಿಳಿಸು’. ರಂಗಮ್ಮ ತನ್ನ ಪತಿಯ ಕೋರಿಕೆಯನ್ನು ಸ್ವಾಮಿಯ ಮುಂದೆ ನಿವೇದಿಸಿಕೊಂಡಳು. ಕ್ಷಣಕಾಲ ಪರಮಾತ್ಮನಿಂದ ಯಾವ ಉತ್ತರವೂ ಬರಲಿಲ್ಲ. ಅದನ್ನು ಕಂಡು ರಂಗಮ್ಮ ತನ್ನಿಂದ ಅಪಚಾರವಾಯಿತೆಂದು ನಡುಗಿಹೋದಳು. ‘ಕ್ಷಮಿಸು ಸ್ವಾಮಿ, ಪ್ರತ್ಯಕ್ಷದೈವವಾದ ಪತಿಯ ಆಜ್ಞೆಯನ್ನು ಮೀರಲಾರದೆ ಆತನ ಕೋರಿಕೆಯನ್ನು ನಿನ್ನಲ್ಲಿ ನಿವೇದಿಸಿಕೊಂಡೆ. ನನ್ನದು ಅಪರಾಧವಾಗಿದ್ದರೆ ನನ್ನನ್ನು ಮನ್ನಿಸು ತಂದೆ’ ಎಂದು ಆಕೆ ಅಡ್ಡಬಿದ್ದಳು. ಸ್ವಾಮಿಯು ಆಕೆಯನ್ನು ಮೇಲಕ್ಕೆತ್ತಿ ನಿಲ್ಲಿಸಿ ‘ತಾಯಿ, ನಿನ್ನದೇನೂ ತಪ್ಪಿಲ್ಲ. ಆದರೆ ನಿನ್ನ ಪತಿಗೆ ಈ ಜನ್ಮದಲ್ಲಿ ನನ್ನ ಪ್ರತ್ಯಕ್ಷದರ್ಶನದ ಯೋಗವಿಲ್ಲ. ಮುಂದಿನ ಜನ್ಮದಲ್ಲಿ ಅದು ಲಭ್ಯವಾಗುತ್ತದೆ. ಆದರೂ ನಿನ್ನ ಕೋರಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಲಾರೆ. ನಾಳೆಯ ದಿನ ನಾನಿಲ್ಲಿಗೆ ಬಂದಾಗ ಆತನು ಬಾಗಿಲ ಸಂದಿನಿಂದ ನೋಡುತ್ತಿರಲಿ. ಒಂದು ಕ್ಷಣಕಾಲ ಮಾತ್ರ ನನ್ನ ದರ್ಶನವಾಗುತ್ತದೆ. ಅಷ್ಟರಿಂದಲೇ ಆತನು ತೃಪ್ತನಾಗಬೇಕು. ಬಾಲಕೃಷ್ಣನ ಆಶ್ವಾಸನೆಯಿಂದ ಸಂತುಷ್ಟಳಾದ ರಂಗಮ್ಮ ‘ಸ್ವಾಮಿ, ಭಕ್ತಪರಾಧೀನನಾದ ನಿನ್ನ ಕೃಪೆಯಿಂದ ನಾನು ಧನ್ಯಳಾದೆ’ ಎಂದಳು. ಕಾಲಚಕ್ರ ಮುಂದುವರಿಯಿತು. ಕಾಲಕ್ರಮದಲ್ಲಿ ರಂಗಮ್ಮನಿಗೆ ಮೂವರು ಗಂಡು ಮಕ್ಕಳಾದರು. ಆಕೆಯ ಮನಸ್ಸು ಲೌಕಿಕದತ್ತ ತಿರುಗಲಿಲ್ಲ. ಭಕ್ತಿ ದಿನದಿನಕ್ಕೆ ಹೆಚ್ಚುತ್ತ ಹೋಯಿತು. ಆಕೆಯು ಹೆಚ್ಚು ಹೆಚ್ಚು ಧ್ಯಾನಮಗ್ನಳಾಗತೊಡಗಿದಳು. ತನ್ನ ಇಷ್ಟದೈವದ ಮುಂದೆ ಎಷ್ಟೋ ಹೊತ್ತು ಬಾಹ್ಯಪ್ರಜ್ಞೆಯೇ ಇಲ್ಲದೆ ಕುಳಿತು ಬಿಡುತ್ತಿದ್ದಳು. ಆಕೆಯ ಪ್ರಸನ್ನ ಮುಖಮುದ್ರೆಯಲ್ಲಿ ದಯೆ, ಅನುಕಂಪಗಳು ವೆಂಕಣ್ಣಯ್ಯನವರ ಪೂರ್ವಿಕರು 41 ಹೊರಸೂಸುತ್ತಿದ್ದುವು. ನೆರೆಹೊರೆಯವರ ಕಷ್ಟ-ಕಾರ್ಪಣ್ಯಗಳಲ್ಲಿ ತಾನೂ ಒಂದಾಗಿ ಅವರನ್ನು ಸಂತೈಸುತ್ತಿದ್ದಳು. ಬರುಬರುತ್ತಾ ಆಕೆ ಹೆಚ್ಚು ಹೆಚ್ಚು ಅಂತರ್ಮುಖಿಯಾಗ ತೊಡಗಿದಳು. ಅತ್ತೆ - ಮಾವಂದಿರು ಇರುವವರೆಗೂ ಅವರನ್ನು ಶುದ್ಧಾಂತಃಕರಣದಿಂದ ಸೇವಿಸಿ, ಮೆಚ್ಚಿಸಿ, ಅವರ ಆಶೀರ್ವಾದಕ್ಕೆ ಪಾತ್ರಳಾದಳು. ಪತಿಯನ್ನು ಪ್ರತ್ಯಕ್ಷದೈವವೆಂದು ಭಾವಿಸಿ ಬಾಳನ್ನು ಸವೆಸಿದಳು. ಅತ್ತೆ ಮಾವಂದಿರ ನಂತರ ತಾನೇ ಮನೆಯ ಯಜಮಾನಿಯಾದ ಮೇಲೆ ಮೈದುನರನ್ನು ತಮ್ಮಂದಿರಂತೆಯೂ, ಓರಗಿತ್ತಿಯರನ್ನು ತಂಗಿಯರಂತೆಯೂ ಭಾವಿಸಿ ಆದರಿಸುತ್ತಿದ್ದಳು. ಆಕೆಯ ಯಜಮಾನಿಕೆಯಲ್ಲಿ ಮನೆ ಆನಂದಧಾಮವಾಯಿತು. ಆಕೆಯ ಪತಿ ಮೊದಲುಗೊಂಡು ಮನೆಯವರೆಲ್ಲರೂ ಆಕೆಯನ್ನು ಗೌರವಾದರಗಳಿಂದ ಕಾಣುತ್ತಿದ್ದರು. ಆಕೆ ಎಲ್ಲರಿಗೂ ಬೇಕಾದವಳಾದಳು. ಸಂಸಾರದಲ್ಲಿ ಪದ್ಮಪತ್ರದಂತೆ ನಿರ್ಲಿಪ್ತಳಾಗಿದ್ದಳು. ದೇಹ ಸಂಸಾರದಲ್ಲಿ ಸವೆಯುತ್ತಿದ್ದರೂ ಮನಸ್ಸು ಭಗವಂತನಲ್ಲಿ ಲೀನವಾಗಿತ್ತು. ದೇವರ ರಂಗಮ್ಮನಿಗೆ ತನ್ನ ಇಷ್ಟದೈವವಾದ ವೆಂಕಟರಮಣಸ್ವಾಮಿಯನ್ನು ತಿರುಪತಿಯಲ್ಲಿಯೇ ದರ್ಶನ ಮಾಡಬೇಕೆಂಬ ಆಕಾಂಕ್ಷೆ ಬೆಳೆಯುತ್ತ ಬಂದು ಅದನ್ನು ತಡೆಯುವುದು ಅಸಾಧ್ಯವಾಯಿತು. ಆಕೆ ಇತರ ಭಾವುಕ ಭಕ್ತರೊಡನೆ ತಾನೂ ಕಾಲ್ನಡಿಗೆಯಿಂದಲೇ ಯಾತ್ರೆಯನ್ನು ಮಾಡಿಕೊಂಡು ಬರಬೇಕೆಂದು ಸಂಕಲ್ಪಿಸಿದಳು. ಗಂಡನ ಅಪ್ಪಣೆ ಪಡೆದು, ಮನೆಯವರ ಅನುಮತಿ ಹೊಂದಿ ಯಾತ್ರಿಕರೊಂದಿಗೆ ಪ್ರಯಾಣ ಹೊರಟಳು. ದಾರಿಯುದ್ಧಕ್ಕೂ ಭಗವಂತನ ನಾಮಾರ್ಚನೆ ಮಾಡುತ್ತಾ ಭಕ್ತರ ತಂಡ ಸಾಗಿತ್ತು. ರಂಗಮ್ಮನಾದರೋ ಮನಸ್ಸಿನಲ್ಲಿಯೇ ಹರಿಸ್ಮರಣೆ ಮಾಡುತ್ತಾ ಪ್ರಶಾಂತ ಮನಸ್ಸಿನಿಂದ ಹೆಜ್ಜೆ ಹಾಕುತ್ತಿದ್ದಳು. ಪ್ರಭುವಿನ ದರ್ಶನ ಮಾಡುವೆನೆಂಬ ಆನಂದದಲ್ಲಿ ಆಕೆಗೆ ಹಸಿವೆ- ನೀರಡಿಕೆಗಳಾಗಲೀ, ಪ್ರಯಾಣದ ಆಯಾಸವಾಗಲಿ ಕಾಣುತ್ತಲೆ ಇರಲಿಲ್ಲ. ಮನಸ್ಸು ಉಲ್ಲಾಸಭರಿತವಾಗಿತ್ತು. ಹೀಗೆ ಹಲವಾರು ದಿನಗಳ ಪ್ರಯಾಣಾನಂತರ ವೆಂಕಟಗಿರಿ ಸಮೀಪವಾಯಿತು. ರಂಗಮ್ಮ ಗೋವಿಂದನಾಮಾರ್ಚನೆ ಮಾಡುತ್ತಾ ಭಕ್ತರೊಡನೆ ಬೆಟ್ಟವನ್ನೇರಿದಳು. ವೆಂಕಟೇಶ ದರ್ಶನದಿಂದ ಆಕೆ ಆನಂದಗೊಂಡಳು. ಮೈಮರೆತಳು. ಇದಿರಿಗಿದ್ದ ಶಿಲಾಮೂರ್ತಿಯಲ್ಲಿ ಸಾಕ್ಷಾತ್ ವೈಕುಂಠಾಧಿಪತಿಯ ಸಾಕಾರ ರೂಪವು ಆಕೆಯ ಕಣ್ಣೆದುರಿಗೆ ಗೋಚರಿಸಿತು. ಅದರ ಸುಂದರ ರೂಪವನ್ನು ಆಕೆ ಹೃದಯದಲ್ಲಿ ತುಂಬಿಕೊಂಡಳು. ಆಕೆಗೆ ತನ್ನ ಜನ್ಮ ಸಾರ್ಥಕವೆನಿಸಿತು. ಆಕೆಯ ಯಾತ್ರೆ ಸಫಲವಾಯಿತು. ಅಲ್ಲಿಂದ ಮುಂದೆ ಆಕೆ 42 ಮೂರು ತಲೆಮಾರು ಪ್ರತಿ ವರ್ಷವೂ ತಿರುಪತಿ ಯಾತ್ರೆಯನ್ನು ತಪ್ಪದೆ ಕೈಗೊಳ್ಳತೊಡಗಿದಳು. ಇತರ ಯಾತ್ರಿಕರೊಡನೆ ರಂಗಮ್ಮನೂ ಮನೆಗೆ ಹಿಂದಿರುಗಿದಳು. ಆಕೆಯ ಚಿತ್ತಫಲಕದಲ್ಲಿ ಸ್ವಾಮಿಯ ದಿವ್ಯ ಸುಂದರಮೂರ್ತಿ ನೆಲೆಗೊಂಡು ನಿಂತಿತು. ಆಹಾರ-ನಿದ್ರೆಗಳ ಅರಿವೇ ಮರೆತುಹೋಯಿತು. ಸಮಯವೆಲ್ಲ ಪೂಜೆ, ಧ್ಯಾನಗಳಲ್ಲೇ ಕಳೆಯುತ್ತಿತ್ತು. ಗೃಹಕೃತ್ಯದಲ್ಲಿ ಆಸಕ್ತಿ ಕಡಿಮೆಯಾಯಿತು; ಇರಲೇ ಇಲ್ಲವೆಂದರೂ ಸರಿಯೇ. ಮನೆಯವರೂ ಆಕೆಯ ಮನೋವೃತ್ತಿಗನುಗುಣವಾಗಿ ಇದ್ದುಕೊಳ್ಳಲು ಆಕೆಯನ್ನು ಬಿಟ್ಟಿದ್ದರು. ಕ್ರಮೇಣ ಆಕೆ ಸ್ಥಿತಪ್ರಜ್ಞಳಾದಳು. ಸ್ವಾಮಿಯ ಮೇಲೆ ಭಕ್ತಿ ಜ್ಞಾನಪರವಾದ ಅನೇಕ ಗೀತೆಗಳನ್ನು ರಚಿಸಿ ಹಾಡಿದಳು. ಅವು ಬಾಯಿಂದ ಹರಿದು ಬಂದವೇ ಹೊರತು ಕಾಗದದ ಮೇಲೆ ಮೂಡಿ ನಿಲ್ಲಲಿಲ್ಲ. ಆದ್ದರಿಂದ ಈಗ ಅವು ಯಾವುವೂ ಇಲ್ಲ. ಅದೊಂದು ನಮ್ಮ ದೌರ್ಭಾಗ್ಯ. ರಂಗಮ್ಮನಿಗೆ ವಯಸ್ಸಾಗುತ್ತಾ ಬಂತು. ಪ್ರಕೃತಿ ಧರ್ಮಕ್ಕನುಸಾರವಾಗಿ ಶರೀರ ಮುಪ್ಪಾಯಿತು. ಅಶಕ್ತವಾಯಿತು. ವರ್ಷ ವರ್ಷವೂ ನಡೆಸುತ್ತಿದ್ದ ತಿರುಪತಿಯಾತ್ರೆಯನ್ನು ಮುಂದುವರಿಸುವುದು ಅಸಾಧ್ಯವಾಯಿತು. ಇದರಿಂದ ರಂಗಮ್ಮನ ಮನಸ್ಸಿಗೆ ಆತಂಕವಾಯಿತು. ದೇವರ ದರ್ಶನ ಮಾಡಬೇಕೆಂಬ ಉತ್ಕಂಠತೆ ಹೆಚ್ಚಿತು. ಆಗ ಆಕೆ ಆರ್ತಳಾಗಿ ಸ್ವಾಮಿಯನ್ನು ಕುರಿತು ಪ್ರಾರ್ಥಿಸಿದಳು. ‘ಪ್ರಭು, ದೀನಬಂಧೂ, ಅನಾಥರಕ್ಷಕ, ಆಪದ್ಭಾಂಧವ, ಆರ್ತತ್ರಾಣಪರಾಯಣ! ನಿನ್ನ ಸನ್ನಿಧಿಗೆ ಬಂದು, ನಿನ್ನ ದಿವ್ಯದರ್ಶನವನ್ನು ಪಡೆದು ನಿನ್ನ ಸೇವೆಗೈಯ್ಯುವ ಭಾಗ್ಯ ಇನ್ನು ನನಗಿಲ್ಲವಾಗಿದೆ. ಈ ಭೌತಿಕ ಶರೀರ ದಿನದಿನಕ್ಕೂ ನಿತ್ರಾಣವಾಗುತ್ತಿದೆ. ಆದರೆ ನಿನ್ನ ದಿವ್ಯ ಮೂರ್ತಿಯನ್ನು ಸಂದರ್ಶಿಸಬೇಕೆಂಬ ಆಕಾಂಕ್ಷೆ ಮಾತ್ರ ಕ್ಷಣಕ್ಷಣಕ್ಕೂ ವೃದ್ಧಿಗೊಳ್ಳುತ್ತಿದೆ. ಭಕ್ತರಕ್ಷಕ! ಭಕ್ತವತ್ಸಲ! ನೀನೇ ಈ ಅನಾಥಳ ಬಳಿಗೆ ಬಂದು ದರ್ಶನವನ್ನು ಅನುಗ್ರಹಿಸು’ ಎಂದು ಮೊರೆಯಿಟ್ಟಳು. ರಥೋತ್ಸವದ ದಿನವಂತೂ ಆಕೆಯ ಹಂಬಲ ಹೇಳಲಸದಳ. ವೆಂಕಟರಮಣಸ್ವಾಮಿಯ ವಿಗ್ರಹದ ಮುಂದೆ ತಾನೂ ಒಂದು ವಿಗ್ರಹವೆಂಬಂತೆ ಸ್ಥಿರವಾಗಿ ಕುಳಿತು ಕಂಬನಿ ಸುರಿಸುತ್ತಾ ಹಾಗೆಯೇ ಮೈಮರೆತಳು. ಆಹಾರ ಪಾನೀಯಗಳ ಸ್ಮರಣೆಯೇ ಆಕೆಗಿರಲಿಲ್ಲ. ಆಕೆಯ ಮನಃಸ್ಥಿತಿಯನ್ನು ಅರಿತವರಾಗಿದ್ದ ಮನೆಯವರೆಲ್ಲರೂ - ಕಡೆಗೆ ಆಕೆಯ ಗಂಡನೂ ಕೂಡ- ಆಕೆಯನ್ನು ಮಾತನಾಡಿಸಲು ಹಿಂಜರಿದು ಸುಮ್ಮನಿದ್ದರು. ಆಕೆಯ ಪಾಡಿಗೆ ಆಕೆಯನ್ನು ಪೂಜಾಮಂದಿರದಲ್ಲಿ ಬಿಟ್ಟು ತಮ್ಮ ಕೆಲಸಗಳಲ್ಲಿ ತಾವು ತೊಡಗಿದ್ದರು. ಭಗವಂತ ಭಕ್ತಪರಾಧೀನ. ಯಾರು ಉಪೇಕ್ಷಿಸಿದರೂ ತಾನು ಮಾತ್ರ ವೆಂಕಣ್ಣಯ್ಯನವರ ಪೂರ್ವಿಕರು 43 ತನ್ನ ಭಕ್ತರನ್ನು ಉಪೇಕ್ಷಿಸಲಾರ. ಅವರ ಹೃದಯದ ಕೂಗು ಪ್ರೇಮಪಾಶವಾಗಿ ಅವನನ್ನು ಸೆಳೆಯುತ್ತದೆ. ಅವರ ನೋವನ್ನು, ರೋದನವನ್ನು ಆತ ಸಹಿಸಲಾರ. ಭಕ್ತೋದ್ಧಾರಕ ಎಂಬುದು ಅವನ ಬಿರುದು. ‘ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ| ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್’ ಎಂಬುದು ಆತನ ಅಭಯವಚನ. ಲಕ್ಷಾಂತರ ಜನರು ಸೇರಿದ್ದ ರಥೋತ್ಸವದ ಮಹಾ ಸಂಭ್ರಮದ ಮಧ್ಯದಲ್ಲಿಯೂ ಆ ಭಗವಂತನಿಗೆ ರಂಗಮ್ಮನ ಹೃದಯದ ಕೂಗು ಕೇಳಿಸಿತು. ಕೇಳಿ ಆ ದಯಾಮಯನ ಹೃದಯ ತಳಮಳಿಸಿತು. ತಕ್ಷಣವೇ ಆ ದಯಾಪರನು ಭಕ್ತಳ ಇದಿರಿಗೆ ಪ್ರಸನ್ನವದನನಾಗಿ ಬಂದು ನಿಂತನು. ಮೈಮರೆತಿದ್ದ ಆಕೆಯ ಶಿರಸ್ಸಿನ ಮೇಲೆ ತನ್ನ ವರದಹಸ್ತವನ್ನಿಟ್ಟನು. ಒಡನೆಯೇ ಆಕೆಗೆ ಬಾಹ್ಯಜ್ಞಾನ ಬಂತು. ‘ಕಣ್ದೆರೆದು ಕಂಡಳು ಮುಂದೆ ನಿಂದ ಮುಕುಂದನಾಕೃತಿಯ’. ಕಾಣುತ್ತಲೇ ತನು ಪುಳಕಿತವಾಯಿತು, ಆನಂದಾಶ್ರುಗಳು ಧಾರೆಗಟ್ಟಿದವು, ಗಂಟಲುಬ್ಬಿತು. ಅನಿರ್ವಚನೀಯವಾದ ಒಂದು ದಿವ್ಯಾನುಭವವಾಯಿತು. ತ್ರೈಲೋಕ್ಯಸಾಮ್ರಾಜ್ಯವೇ ತನ್ನ ಕೈಗೂಡಿದಂತೆ ಭಾಸವಾಯಿತು. ಏನು ಹೇಳಲೂ ತೋಚದೆ ‘ನನ್ನ ಸ್ವಾಮಿ, ಬಂದೆಯಾ? ತಂದೆ ಅನುಗ್ರಹಿಸಿದೆಯಾ?’ ಎಂದು ಹೇಳುತ್ತ ಸ್ವಾಮಿಯ ಶ್ರೀಚರಣಗಳ ಮೇಲೆ ತನ್ನ ತಲೆಯನ್ನಿಟ್ಟು ಆನಂದಬಾಷ್ಪಗಳಿಂದ ಅವನ್ನು ತೋಯಿಸಿದಳು. ಆಗ ಸ್ವಾಮಿಯು ಆಕೆಯನ್ನು ಮೇಲೆತ್ತಿ ‘ಅಮ್ಮಾ ನೀನು ನನ್ನ ಪರಮಭಕ್ತಳು. ನಿನ್ನಂತಹ ಭಕ್ತರೇ ನನಗೆ ಆಧಾರ. ಅವರು ಇಲ್ಲದಿದ್ದರೆ ನನ್ನನ್ನು ಕೇಳುವವರಾರು? ಗೌರವಿಸುವವರಾರು? ಅಮ್ಮಾ ನೀನು ಪ್ರೀತಿಯಿಂದ ಕರೆದೆ. ಇಗೊ ನಾನು ಬಂದಿದ್ದೇನೆ. ನಿನಗೇನು ಬೇಕು ಕೇಳು. ಕೊಡುತ್ತೇನೆ’ ಎಂದ. ಆಗ ರಂಗಮ್ಮ, ‘ಸ್ವಾಮಿ, ನನಗೇನು ಬೇಕು? ನೀನು ಬೇಕು, ನಿನ್ನ ದರ್ಶನ ಬೇಕು. ನಾನು ಮುದುಕಿಯಾದೆ, ಶರೀರ ಗಲಿತವಾಯಿತು. ನೀನಿರುವಲ್ಲಿಗೆ ಬಂದು ನಿನ್ನ ದರ್ಶನ ಮಾಡಲು ನನಗೆ ಶಕ್ತಿ ಸಾಲದು. ಆದ್ದರಿಂದ ಈಗ ನೀನೇ ನಾನಿರುವಲ್ಲಿಗೆ ಬಂದು ನಿನ್ನ ದರ್ಶನಭಾಗ್ಯವನ್ನು ನನಗೆ ಅನುಗ್ರಹಿಸಬೇಕು’ ಎಂದು ಬೇಡಿಕೊಂಡಳು. ಆಕೆಯ ಮಾತನ್ನು ಕೇಳಿ ನಕ್ಕ ಸ್ವಾಮಿ ‘ಇಷ್ಟೇ ತಾನೆ? ಅಗತ್ಯವಾಗಿ ಆಗಲಿ. ನೀನೊಬ್ಬಳೇ ಅಲ್ಲ, ಇನ್ನು ಮುಂದೆ ನಿನ್ನ ವಂಶದವರು ಯಾರೂ ನನ್ನ ದರ್ಶನಕ್ಕಾಗಿ ಅಷ್ಟು ದೂರ ಬರುವ ಪ್ರಯಾಸವೇ ಬೇಡ. ನನಗಾಗಿ ನೀನೊಂದು ಆಲಯವನ್ನು ಇಲ್ಲಿಯೇ ನಿರ್ಮಿಸು. ನನ್ನ ವಿಗ್ರಹವೊಂದನ್ನು ಅಲ್ಲಿ ಸ್ಥಾಪಿಸು. ನಾನು ಬಂದು ಇಲ್ಲಿಯೂ ನೆಲೆಸುತ್ತೇನೆ. ಇಲ್ಲಿ ಬಂದು ನನ್ನನ್ನು ಪೂಜಿಸಿದರೆ 44 ಮೂರು ತಲೆಮಾರು ತಿರುಪತಿಯಾತ್ರೆಯ ಫಲವನ್ನು ಭಕ್ತರು ಪಡೆಯುತ್ತಾರೆ. ನೀನಿರುವವರೆಗೆ ನೀನು ನೆನೆಸಿದಾಗಲೆಲ್ಲಾ ನಾನು ನನ್ನ ನಿಜರೂಪದಿಂದ ಬಂದು ನಿನಗೆ ದರ್ಶನ ಕೊಡುತ್ತೇನೆ. ಸರಿ ತಾನೆ? ಇನ್ನೇನು ಬೇಕು? ಕೇಳು’ ಎಂದನು. ಆಗ ರಂಗಮ್ಮ ‘ಪ್ರಭು, ನನ್ನನ್ನು ಮಾತ್ರವೇ ಅಲ್ಲ, ನನ್ನ ವಂಶವನ್ನೇ ಉದ್ಧಾರ ಮಾಡಿದೆ. ಇಷ್ಟು ಸಾಕು’ ಎಂದು ಮತ್ತೆ ಮತ್ತೆ ಸ್ವಾಮಿಗೆ ದೀರ್ಘದಂಡ ನಮಸ್ಕಾರ ಮಾಡಿದಳು. ಮರು ನಿಮಿಷದಲ್ಲಿ ಭಗವಂತನು ಅಂತರ್ಧಾನನಾದ. ಇಲ್ಲಿಂದ ಮುಂದೆ ರಂಗಮ್ಮ ಪವಾಡಪುರುಷಳಾಗಿ ಲೋಕಸೇವೆಯಲ್ಲಿ ತಲ್ಲೀನಳಾಗುವುದನ್ನು ನಾವು ಕಾಣುತ್ತೇವೆ. ಮೊಳಕಾಲ್ಮುರುವಿನ ಶಾನುಭೋಗ ವೆಂಕಟರಾಮಯ್ಯನಿಗೆ ಬಹುಕಾಲದ ಮೇಲೆ ಪುತ್ರ ಸಂತಾನವಾಯಿತು. ಆ ಮಗ ಬೆಳೆದು ಯೌವನವನ್ನು ಮುಟ್ಟುತ್ತಿದ್ದಂತೆಯೇ ಅವನ ದೃಷ್ಟಿ ಮಂದವಾಗುತ್ತಾ ಹೋಗಿ ಕೆಲವೇ ದಿನಗಳಲ್ಲಿ ಪೂರ್ತಿ ಕುರುಡನಾದ. ಆ ಶಾನುಭೋಗರು ವೆಂಕಟೇಶ್ವರನ ಅನನ್ಯಭಕ್ತರು. ತಮ್ಮ ಯಾವ ಪಾಪದ ಫಲವಾಗಿ ಮಗನಿಗೆ ಇಂತಹ ದುರ್ಗತಿ ಒದಗಿತೋ ಎಂದು ಅವರು ಕೊರಗತೊಡಗಿದರು. ಅದರಲ್ಲಿಯೂ ಆ ಮಗನ ತಾಯಿಯ ದುಃಖ ಎಣೆಯಿಲ್ಲದ್ದು. ಆಕೆ ತನ್ನ ಇಷ್ಟದೈವ ವಿಗ್ರಹದ ಮುಂದೆ ಕುಳಿತು ‘ಸ್ವಾಮಿ, ನನ್ನ ಮಗನಿಗೆ ಕಣ್ಣುಗಳನ್ನು ಅನುಗ್ರಹಿಸು. ಅವನಿಗೆ ಕಣ್ಣು ಬರುವವರೆಗೆ ನಾನು ಅನ್ನ ನೀರನ್ನು ಮುಟ್ಟುವುದಿಲ್ಲ’ ಎಂದು ಹೇಳಿಕೊಂಡಳು. ಸ್ನಾನ ಮಾಡಿ, ಮಡಿಯುಟ್ಟು, ಅರಿಶಿನ ಬಟ್ಟೆಯಲ್ಲಿ ಹರಕೆಯನ್ನು ಕಟ್ಟಿ, ದೇವರ ಮುಂದೆ ಮಲಗಿಬಿಟ್ಟಳು. ಯಾರು ಎಷ್ಟು ಹೇಳಿದರೂ ತನ್ನ ಪ್ರತಿಜ್ಞೆಯನ್ನು ಆಕೆ ಬಿಡಲಿಲ್ಲ. ತನ್ನ ಕೋರಿಕೆ ಈಡೇರದಿದ್ದರೆ, ತಾನು ಪ್ರಾಯೋಪವೇಶಮಾಡಿ ಸಾಯುವುದೇ ಸರಿಯೆಂದು ನಿರ್ಧರಿಸಿಬಿಟ್ಟಳು. ಮಲಗಿದಲ್ಲಿಂದ ಮೇಲಕ್ಕೇಳಲಿಲ್ಲ. ಆ ರಾತ್ರಿ ಒಂದು ಹೊತ್ತಿನಲ್ಲಿ ಯಾರೊ ಕೂಗಿದಂತಾಗಿ ಕಣ್ಣು ತೆರೆದು ನೋಡಿದಳು. ಕಾರ್ಗತ್ತಲು ದಟ್ಟವಾಗಿ ಮುಸುಗಿತ್ತು ಏನೂ ಕಾಣುತ್ತಿಲ್ಲ. ಆದರೆ ಯಾವುದೋ ಧ್ವನಿ ಕಿವಿಯಲ್ಲಿ ಮೊಳಗುತ್ತಿದೆ- ‘ಮಗಳೇ, ಬೆಳಿಗ್ಗೆ ಎದ್ದೊಡನೆ ದೇವರ ರಂಗಮ್ಮನ ಮನೆಗೆ ಹೋಗು. ಆಕೆ ಮೊಸರು ಕಡೆಯುವ ಕೋಣೆಯ ಗೂಡಿನಲ್ಲಿ ನನ್ನ ಕಾಡಿಗೆ ಇದೆ. ಅದನ್ನು ತಂದು ನಿನ್ನ ಮಗನ ಕಣ್ಣಿಗೆ ಹಚ್ಚು, ಕಣ್ಣು ಬರುತ್ತದೆ’. ಆ ತಾಯಿ ಬೆಳಗಾಗುವುದನ್ನೇ ಕಾದಿದ್ದು, ಬೆಳಗಾದೊಡನೆಯೇ ‘ರಂಗಮ್ಮ ; ದೇವರ ರಂಗಮ್ಮ’ ಎಂದು ಕೂಗುತ್ತಲೇ ರಂಗಮ್ಮನ ಮನೆಗೆ ಧಾವಿಸಿ ಬಂದಳು. ಆ ವೇಳೆಗೆ ಪ್ರಾತಃ ಕೃತ್ಯಗಳನ್ನು ತೀರಿಸಿ ವೆಂಕಟೇಶ್ವರ ಸುಪ್ರಭಾತವನ್ನು ಗುನುಗುತ್ತಾ ಮೊಸರು ವೆಂಕಣ್ಣಯ್ಯನವರ ಪೂರ್ವಿಕರು 45 ಕಡೆಯುತ್ತಿದ್ದ ರಂಗಮ್ಮ ಬಾಗಿಲಲ್ಲಿ ತನ್ನ ಹೆಸರು ಹಿಡಿದು ಕೂಗುತ್ತಿರುವುದನ್ನು ಕೇಳಿ ತಲೆಬಾಗಿಲನ್ನು ತೆಗೆದು ನೋಡುತ್ತಾಳೆ - ಇದಿರಿಗೆ ಶಾನುಭೊಗರ ಸುಬ್ಬಮ್ಮ! ಮುಖ ಬತ್ತಿದೆ, ಕಣ್ಣು ಕೆಂಪಾಗಿದೆ, ತಲೆ ಕೆದರಿದೆ, ಧಾರಾಕಾರವಾಗಿ ಕಣ್ಣೀರು ಸುರಿಯುತ್ತಿದೆ. ರಂಗಮ್ಮನಿಗೆ ಗಾಬರಿಯಾಯಿತು. ‘ಏನಾಯ್ತು ಸುಬ್ಬಮ್ಮ? ಏಕೆ ಹೀಗಿದ್ದೀರಿ? ಅತ್ತೆಯವರು ಇನ್ನೂ ಎದ್ದಿಲ್ಲ, ಅವರನ್ನು ಎಬ್ಬಿಸಲೇ ಎಂದು ಕೇಳಿದಳು. ‘ನಿನ್ನ ಅತ್ತೆಯನ್ನಲ್ಲಮ್ಮ. ನಿನ್ನನ್ನೇ ನೋಡುವುದಕ್ಕೆ ಬಂದದ್ದು. ದೊಡ್ಡ ಮನಸ್ಸು ಮಾಡಿ ಸ್ವಾಮಿಯ ಕಾಡಿಗೆ ಕೊಡು ತಾಯಿ. ನನ್ನ ಮಗನಿಗೆ ಕಣ್ಣು ಕೊಡು’. ರಂಗಮ್ಮ ಕೊಟ್ಟ ಕಾಡಿಗೆಯಿಂದ ಶಾನುಭೋಗರ ಮಗನಿಗೆ ಕಣ್ಣು ಬಂತು. ಈ ವಿಚಾರ ಬಹು ಬೇಗ ಜನಜನಿತವಾಯಿತು. ಅನೇಕ ಕುರುಡರಿಗೆ ರಂಗಮ್ಮನ ಮನೆ ಯಾತ್ರಾಸ್ಥಳವಾಯಿತು. ರಂಗಮ್ಮ ‘ದೇವರ ರಂಗಮ್ಮ’ನಾದಳು. ‘ರಂಗಮ್ಮನಿಗೆ ತಿರುಪತಿ ವೆಂಕಟರಮಣಸ್ವಾಮಿ ಪ್ರತ್ಯಕ್ಷವಾಗಿದ್ದಾನಂತೆ! ಆಕೆಯ ಬಾಯಲ್ಲಿ ಬಂದದ್ದೆಲ್ಲ ನಡೆದು ಹೋಗುವುದಂತೆ! ಆಕೆಯ ಕೈ ಕಲ್ಪವೃಕ್ಷವಂತೆ! ಆಕೆಯ ಕೈ ಸೋಕುತ್ತಲೇ ಎಂತಹ ಖಾಯಿಲೆಯೂ ವಾಸಿಯಾಗುತ್ತದಂತೆ! ಆಕೆಯ ದರ್ಶನವಾದರೆ ಸಾಕು, ಭೂತ, ಪ್ರೇತಗಳು ಪಲಾಯನ ಮಾಡುತ್ತವಂತೆ!’ ಹೀಗೆ ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಸುದ್ದಿ. ಪರಿಸ್ಥಿತಿ ಹೀಗಿದ್ದುದರಿಂದ ವೆಂಕರಮಣಸ್ವಾಮಿಯ ದೇವಸ್ಥಾನ ನಿರ್ಮಾಣವಾಗುವುದು ಕಷ್ಟವಾಗಲಿಲ್ಲ, ತಡವಾಗಲಿಲ್ಲ. ನೂರಾರು ಜನ, ಸಾವಿರಾರು ಜನ ನೆರವಾದಾಗ ಗುಡಿಕಟ್ಟಿಸುವ ಕೆಲಸ ಎಷ್ಟು ಹೊತ್ತಿನದು! ಮೊಳಕಾಲ್ಮುರುವಿನಲ್ಲಿರುವ ವೆಂಕಟರಮಣಸ್ವಾಮಿಯ ಗುಡಿ ರೂಪಿತವಾದುದು ಹೀಗೆ ಗುಡಿಯೇನೋ ನಿರ್ಮಾಣವಾಯಿತು. ಆದರೆ ವೆಂಕಟರಮಣಸ್ವಾಮಿಯ ವಿಗ್ರಹವೊಂದನ್ನು ಕೆತ್ತಿಸಿ, ಸ್ಥಾಪಿಸುವ ಕೆಲಸ ಉಳಿದಿತ್ತು. ಒಳ್ಳೆಯ ಶಿಲ್ಪಿಯೊಬ್ಬನನ್ನು ಹುಡುಕುವ ಸಮಯದಲ್ಲಿ ತೊಡಗಿದ್ದಾಗ, ದೇವರ ರಂಗಮ್ಮನಿಗೆ ಒಂದು ರಾತ್ರಿ ಕನಸು ಆಯಿತಂತೆ. ಮೊಳಕಾಲ್ಮುರುವಿನಿಂದ 15 ಮೈಲಿ ದೂರದ ಒಂದು ಹಳ್ಳಿಯಲ್ಲಿ ಒಂದು ಕೆರೆಯಿದೆ. ಆ ಕೆರೆಯಲ್ಲಿ ತನ್ನನ್ನು ಒಗೆಯುವ ಬಂಡೆಯಾಗಿ ಬಳಸುತ್ತಿರುವುದಾಗಿಯೂ, ಅದನ್ನು ತಂದು ಗುಡಿಯಲ್ಲಿ ಪ್ರತಿಷ್ಠಿಸುವಂತೆಯೂ ಸಾಕ್ಷಾತ್ ವೆಂಕಟರಮಣಸ್ವಾಮಿಯೇ ತಿಳಿಸಿದಂತಾಯಿತು. ಮರುದಿನ ಬೆಳಿಗ್ಗೆ ರಂಗಮ್ಮ ಆ ಹಳ್ಳಿಗೆ ಆಳುಗಳನ್ನಟ್ಟಿದಳು. ಅಲ್ಲಿ ಒಗೆಯುವ ಬಂಡೆಗಳನ್ನೆಲ್ಲ 46 ಮೂರು ತಲೆಮಾರು ತಿರುಗಿಸಿ ನೋಡುತ್ತಾ ಹೋದಾಗ, ಒಂದು ಬಂಡೆಯ ಮೇಲೆ ಸುಂದರವಾದ ವೆಂಕಟರಮಣಸ್ವಾಮಿಯ ವಿಗ್ರಹವಿತ್ತು. ಸುಮಾರು ಮೂರು ಅಡಿ ಎತ್ತರವಿದ್ದ ಆ ವಿಗ್ರಹವನ್ನು ಮೊಳಕಾಲ್ಮುರುವಿಗೆ ಸಾಗಿಸಿ, ವಿಧಿವತ್ತಾದ ಪೂಜಾವಿಧಾನಗಳನ್ನು ಮಾಡಿ ಮುಗಿಸಿದ ಮೇಲೆ ಅದನ್ನು ಹೊಸ ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ಆ ಶುಭದಿನದಂದು ಸಹಸ್ರಾರು ಜನರಿಗೆ ಅನ್ನಸಂತರ್ಪಣೆಯಾಯಿತು. ಭಕ್ತರು ಆನಂದದಿಂದ ಜಯಘೋಷ ಮಾಡಿದರು. ದೇವರು ಬಂದು ಆ ಗುಡಿಯಲ್ಲಿ ನೆಲೆಸಿದನು. ರಂಗಮ್ಮನ ಆತ್ಮ ಆನಂದಭರಿತವಾಯಿತು. ಮುಂದೆ ಕೆಲವು ಕಾಲಾನಂತರ ಆ ಮಹಾಮಹಿಮಳು ಮುಪ್ಪಿನ ಮುತ್ತೈದೆ ಸಾವಿತ್ರಿಯಾಗಿ ಹರಿನಾಮ ಸ್ಮರಣೆ ಮಾಡುತ್ತ ಆತನ ಶ್ರೀಚರಣಗಳಲ್ಲಿ ಐಕ್ಯವಾದಳು’. ವೆಂಕಣ್ಣನವರು ಇಷ್ಟು ಹೇಳಿ, ಮಗನೊಡನೆ ‘ಸುಬ್ಬೂ, ಇದೇ ನಮ್ಮ ದೇವರ ರಂಗಮ್ಮನ ಚರಿತ್ರೆ. ಆಕೆಯ ಪುಣ್ಯವಿಶೇಷದಿಂದ ಈ ವೆಂಕಟರಮಣಸ್ವಾಮಿ ಮೊಳಕಾಲ್ಮುರುವಿನಲ್ಲಿರುವ ನಮ್ಮ ಮನೆಯ ಬಾಗಿಲಿಗೆ ಬಂದಿದ್ದಾನೆ. ಅಲ್ಲಿನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿದರೆ ಸಾಕು ತಿರುಪತಿಗೆ ಹೋಗಿ ಯಾತ್ರೆ ಮಾಡಿಕೊಂಡು ಬಂದ ಫಲ ಲಭಿಸುತ್ತದೆ.’. 2. ದೇವರ ಲೀಲೆ ವೆಂಕಪ್ಪ “ದೇವರ ರಂಗಮ್ಮನಿಗೆ ಮೂವರು ಮಕ್ಕಳಿದ್ದರೆಂದು ಈ ಹಿಂದೆಯೇ ಹೇಳಿದ್ದೇನೆ. ಅವರಲ್ಲಿ ಹಿರಿಯ ಮಗ ದೊಡ್ಡ ವೆಂಕಟಪ್ಪ, ಎರಡನೆಯಾತ ಪುಟ್ಟಲಕ್ಷ್ಮಪ್ಪ ಹಾಗೂ ಮೂರನೆಯಾತ ದೊಡ್ಡ ದೇವಪ್ಪ. ಈ ಮೂವರು ನನಗೆ ತಾತಂದಿರು. ಈ ಮೂವರಲ್ಲಿ ಕಡೆಯವನಾದ ದೊಡ್ಡದೇವಪ್ಪನ ವಂಶ ಎರಡು ತಲೆಮಾರುಗಳು ಮಾತ್ರ ನಡೆದು ಅಲ್ಲಿಗೆ ನಿಂತು ಹೋಯಿತು. ಉಳಿದಿಬ್ಬರು ಸೋದರರ ವಂಶಗಳು ಇದುವರೆಗೆ ನಡೆದುಕೊಂಡೆ ಬಂದಿವೆ. ಈ ಇಬ್ಬರಲ್ಲಿ ಪುಟ್ಟಲಕ್ಷ್ಮಪ್ಪ ನನಗೆ ಖಾಸಾ ತಾತ; ನಮ್ಮ ತಂದೆಯಾದ ಶಿರಸ್ತೆದಾರ್ ಸುಬ್ಬಣ್ಣನ ತಂದೆ ದೊಡ್ಡ ವೆಂಕಟಪ್ಪ - ನನ್ನ ತಾತನ ಅಣ್ಣ - ನನಗೆ ಹಿರಿಯ ತಾತ. ಅವನಿಗೆ ‘ದೇವರಲೀಲೆ ವೆಂಕಪ್ಪ’ ಎಂದು ಅಡ್ಡ ಹೆಸರು. ಆತ ದೇವರ ರಂಗಮ್ಮನಿಗೆ ತಕ್ಕ ಮಗ. ತಮ್ಮಂದಿರಿಬ್ಬರೂ ಜೀವನೋಪಾಯಕ್ಕಾಗಿ ಬೇರೆ ಬೇರೆ ವೃತ್ತಿಗಳನ್ನವಲಂಬಿಸಿ ಪರಸ್ಥಳಗಳಲ್ಲಿದ್ದರು. ವೆಂಕಟಪ್ಪ ಮಾತ್ರ ತನ್ನ ಹಿರಿಯರಿದ್ದ ಮೊಳಕಾಲ್ಮುರುವಿನಲ್ಲೇ ಇದ್ದುಕೊಂಡು ಜಮೀನಿನಿಂದ ಬರುವ ಅಲ್ಪ ಸ್ವಲ್ಪ ಆದಾಯದಿಂದಲೇ ಹೇಗೋ ಕಷ್ಟದಿಂದ ಜೀವನ ಮಾಡುತ್ತಿದ್ದ. ಆತ ತುಂಬ ವೆಂಕಣ್ಣಯ್ಯನವರ ಪೂರ್ವಿಕರು 47 ನಿಷ್ಠಾವಂತ, ಅಹ್ನಿಕಪರ. ನಿತ್ಯವೂ ಭಗವದ್ಗೀತಾ ಪಾರಾಯಣ, ವೆಂಕಟರಮಣಸ್ವಾಮಿಯ ಪೂಜೆ ಇತ್ಯಾದಿಗಳಿಲ್ಲದೆ ಬಾಯಲ್ಲಿ ನೀರು ಹಾಕುತ್ತಿರಲಿಲ್ಲ. ಆತನದು ಅಯಾಚಕ ವೃತ್ತಿ. ‘ಭಗವಂತನಲ್ಲಿ ಭಾರವಿರಿಸಿ, ಭಕ್ತಿಪಥದಲ್ಲಿ ನಡೆಯುವವರನ್ನು ಆ ಭಗವಂತ ಕೈ ಬಿಡುವುದಿಲ್ಲ ; ಹೇಗೋ ಕಾಪಾಡುತ್ತಾನೆ’ ಎಂಬ ನಂಬಿಕೆ, ಭರವಸೆ. ತನ್ನ ಆಯುಸ್ಸಿನ ಬಹುಭಾಗವನ್ನು ಆತ ಹೀಗೆಯೇ ಕಳೆದ. ಮಕ್ಕಳು ಮರಿಗಳಾದರು, ಸಂಸಾರ ಬೆಳೆಯಿತು; ಆದರೆ ಆದಾಯ ಹೆಚ್ಚಲಿಲ್ಲ. ಈ ನಿಷ್ಠನಾದ ಬ್ರಾಹ್ಮಣನಲ್ಲಿ ಜನರಿಗೆ ಬೇಕಾದಷ್ಟು ಗೌರವವಿತ್ತು. ಆತನು ದೇವರ ರಂಗಮ್ಮನ ಮಗ ಎಂಬ ಒಂದು ಕಾರಣದಿಂದ ಆತ ಬಾಯ್ಬಿಟ್ಟು ಕೇಳಿದರೆ ಯಾರು, ಏನು ಬೇಕಾದರೂ ಕೊಡುತ್ತಿದ್ದರು. ಆದರೆ ಆತ ಯಾರನ್ನೂ, ಎಂದೂ, ಏನನ್ನೂ ಕೇಳಲಿಲ್ಲ. ‘ಭಗವಂತನ ಇಚ್ಛೆಯಿದ್ದಂತಾಗಲಿ’ ಎಂದು ಸುಮ್ಮನಿದ್ದು ಬಿಡುವನು. ಎಲ್ಲಿಂದಲೋ, ಹೇಗೋ, ಯಾರೋ ದಿನದಿನವೂ, ಏನನ್ನಾದರೂ ತಂದುಕೊಡುತ್ತಿದ್ದರು. ಸಂಸಾರ ಜೀವನವು ಬಹು ಕಷ್ಟ ಕಾರ್ಪಣ್ಯಗಳಿಂದ ಹೇಗೋ ಸಾಗಿ ಹೋಗುತ್ತಿತ್ತು. ಇದ್ದುದರಲ್ಲೆ ಬಂದ ಅತಿಥಿಗಳಿಗೂ ಉಣಬಡಿಸಿ ತಾವೂ ಕಾಲ ಹಾಕುತ್ತಿದ್ದರು. ಎಂದೂ ಅವರು ಏನನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ. ಭಗವಂತನ ಮೇಲೆ ಭಾರ ಹಾಕಿ ನಿರ್ಲಿಪ್ತವಾಗಿದ್ದರು. ಒಂದು ದಿನ ಇಬ್ಬರು ಅತಿಥಿಗಳು ಮನೆಗೆ ಬಂದಿದ್ದಾರೆ. ಅವರಿಗೆ ಆಮಂತ್ರಣ ಕೊಟ್ಟಾಯಿತು. ಅಂದು ಅವರ ಸತ್ವಪರೀಕ್ಷೆ. ಮನೆಯಲ್ಲಿ ಆಹಾರ ಪದಾರ್ಥಗಳು ಏನೇನೂ ಇಲ್ಲ. ವೆಂಕಪ್ಪನಿಗೆ ಇದು ಯಾವುದೂ ಗೊತ್ತಿಲ್ಲ. ಗೃಹಿಣಿ ಎಂದೂ ಹೇಳುತ್ತಿರಲಿಲ್ಲ, ಇಂದೂ ಹೇಳಲಿಲ್ಲ. ದಿನದಿನವೂ ಹೇಗೋ ಅಹನ್ಯಹನಿ ಕಾಲಕ್ಷೇಪ ನಡೆಯುವುದೆಂದು ಆಕೆಯ ಅನುಭವಕ್ಕೂ ಬಂದ ವಿಷಯ. ಈ ದಿನವೂ ಹಾಗೆಯೇ ಆಗುತ್ತದೆಂದುಕೊಂಡು ಸುಮ್ನಿದ್ದು ಬಿಟ್ಟಳು. ವೆಂಕಪ್ಪನವರು ಎಂದಿನಂತೆ ನಿತ್ಯಾಹ್ನಿಕ, ದೇವರ ಪೂಜೆಗಳನ್ನು ಮುಗಿಸಿಕೊಂಡು, ಮನೆದೇವರಾದ ವೆಂಕಟರಮಣಸ್ವಾಮಿಯ ಪೂಜೆಯನ್ನು ಮುಗಿಸಿಕೊಂಡು ಬರುವ ಹೊತ್ತಿಗೆ ಹನ್ನೊಂದು - ಹನ್ನೊಂದುವರೆ ಘಂಟೆಯಾಗಿತ್ತು. ಅಡಿಗೆ ಮನೆಯಲ್ಲಿ ಬಗ್ಗಿ ನೋಡಿದರು. ಒಲೆ ಹೊತ್ತಿಸಿಯೇ ಇರಲಿಲ್ಲ. ಏಕೆಂದು ಹೆಂಡತಿಯನ್ನು ಕೇಳಿದರು. ಆ ಸಾಧ್ವಿ ತಲೆ ಬಗ್ಗಿಸಿಕೊಂಡು ‘ಈ ದಿನ ಮನೆಯಲ್ಲಿ ಅಡಿಗೆಯ ಸಾಮಗ್ರಿ ಏನೂ ಇಲ್ಲ’ ಎಂದು ಹೇಳುವಷ್ಟರಲ್ಲಿ ದುಃಖ ಉಮ್ಮಳಿಸಿ ಬಳ ಬಳ ಕಣ್ಣೀರು ಸುರಿಯಿತು. ವೆಂಕಪ್ಪನವರಿಗೆ ಆದ ಮನೋವ್ಯಥೆಯನ್ನು ಬಣ್ಣಿಸಲಾಗದು. 48 ಮೂರು ತಲೆಮಾರು ಈ ದಿನ ಅತಿಥಿಗಳು ಬೇರೆ ಬಂದಿದ್ದಾರೆ. ಅವರಿಲ್ಲದಿದ್ದರೆ ಉಪವಾಸವೋ ವನವಾಸವೋ ಹೇಗೆ ಬೇಕಾದರೂ ಆಗಬಹುದಾಗಿತ್ತು. ಅವರನ್ನು ಊಟಕ್ಕೆ ಬರಹೇಳಿ ಊಟವಿಲ್ಲದೆ ಕಳುಹಿಸುವುದೇ? ರಾಮ ರಾಮ! ಎಷ್ಟು ಅಪಮಾನ! ಎಂತಹ ಪಾಪ! ಇಂತಹ ಧರ್ಮಸಂಕಟಕ್ಕೆ ಅವರು ಜೀವಮಾನದಲ್ಲಿ ಎಂದೂ ಸಿಲುಕಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಭಗವಂತ ಅವರನ್ನು ಹೇಗೋ ಪಾರು ಮಾಡುತ್ತಿದ್ದ. ತಮ್ಮ ಅಯಾಚಕ ವೃತ್ತಿಗೆ ಇದುವರೆಗೂ ಚ್ಯುತಿಯುಂಟಾಗಿರಲಿಲ್ಲ. ಈ ದಿನ ಅತಿಥಿಗಳಿಗಾಗಿಯಾದರೂ ತಮ್ಮ ವ್ರತವನ್ನು ಮುರಿದು ಯಾರನ್ನಾದರೂ ಯಾಚಿಸಲೇಬೇಕು. ವ್ರತಭಂಗವಾಗಲೇಬೇಕು. ಈ ಸೌಭಾಗ್ಯಕ್ಕಾಗಿ ‘ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ | ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್’ ಎಂದು ಭಕ್ತರಿಗೆ ಏಕೆ ಭಾಷೆ ಕೊಡಬೇಕು? ಈ ದಿನ ಅವನ ಭಾಷೆ ಏನಾಯ್ತು? ತನ್ನ ಮಾತನ್ನೇ ಉಳಿಸಿಕೊಳ್ಳಲಾರದ ಈ ದೇವರನ್ನು ನಂಬಿ ತಾನೆ ಏನು ಫಲ? ಸುಳ್ಳು ಹೇಳಿದ ಈ ದೇವರ ನಾಲಿಗೆಯನ್ನು ಸೀಳ ಬೇಕು, ಎಂದು ದುಃಖ ಕೋಪಾವೇಷಭರಿತರಾಗಿ ‘ಅನನ್ಯಾಶ್ಚಿಂತಯಂತೋ ಮಾಂ......’ ಶ್ಲೋಕದ ಮೇಲೆ ಕೆಂಪು ಮಸಿಯಿಂದ ಗೀಟನ್ನೆಳೆದರು. ಪರಮಶಾಂತಮೂರ್ತಿಯಾದ ಅವರಿಗೆ ಆ ಘಳಿಗೆಯಲ್ಲಿ ಅಷ್ಟು ಕೋಪ ಬಂದಿತ್ತು! ನಂತರ ‘ಈಗಲೇ ಜಾಗ್ರತೆ ಬರುತ್ತೇನೆ’ ಎಂದು ಹೇಳಿ ಮನೆಬಿಟ್ಟು ಹೊರಗೆ ಹೋದರು. ವೆಂಕಪ್ಪನವರು ಮನೆಬಿಟ್ಟು ಹೋಗಿ ಐದು ನಿಮಿಷಗಳಾಗಿರಬಹುದು. ಒಬ್ಬ ಆಳು ಬಂದು ದಿನಕ್ಕಾಗುವಷ್ಟು ಅಕ್ಕಿ, ಬೇಳೆ, ಬೆಲ್ಲ, ತುಪ್ಪ ಮೊದಲಾದ ವಿಶಿಷ್ಟ ಪಾಕಸಾಮಗ್ರಿಗಳನ್ನು ಹೊತ್ತುಕೊಂಡು ಬಂದು, ಮನೆಯ ಬಾಗಿಲಲ್ಲಿಳಿಸಿ ‘ಅಮ್ಮಾ’ ಎಂದು ಕೂಗಿದ. ವೆಂಕಪ್ಪನವರ ಕುಟುಂಬ ಒಳಗಿನಿಂದ ಬಂದು ನೋಡಿದರು, ಒಳ್ಳೆಯ ಭವ್ಯವಾದ ಆಳು, ಕಟ್ಟುಮಸ್ತಾಗಿದ್ದಾನೆ, ಶ್ಯಾಮಲವರ್ಣ, ದಟ್ಟಿ ಚೆಲ್ಲಣವನ್ನು ತೊಟ್ಟಿದ್ದಾನೆ. ಸುಂದರವಾದ ಮುಖ, ವಿಶ್ವಾಸ ಹುಟ್ಟಿಸುವ ವ್ಯಕ್ತಿತ್ವ, ಚೆಲುವಾದ ಕಣ್ಣುಗಳು - ಒಟ್ಟಿನಲ್ಲಿ ಚೆಲುವ. ಈ ಗೃಹಿಣಿ ಅವನನ್ನು ಕುರಿತು ‘ಯಾರಪ್ಪಾ ನೀನು? ಏಕೆ ಬಂದಿದ್ದಿ? ಈ ಸಾಮಾನುಗಳನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಿ?’ ಎಂದು ಕೇಳಿದಳು. ಆಗ ಆ ಆಳು ‘ಅಮ್ಮ, ನಾನೊಬ್ಬ ಕೂಲಿಯವ, ನನ್ನ ಹೆಸರು ಗೋವಿಂದ; ನಿಮ್ಮ ಯಜಮಾನರು ಈ ಸಾಮಾನುಗಳನ್ನು ಕೊಡಿಸಿ, ಒಡನೆಯೇ ಮನೆಗೆ ಕೊಂಡು ಹೋಗುವಂತೆ ತಿಳಿಸಿ, ಎಲ್ಲಿಗೋ ಹೋದರು. ನಾನು ಬರುವುದು ಸ್ವಲ್ಪ ತಡವಾಯಿತು. ನಿಮ್ಮ ವೆಂಕಣ್ಣಯ್ಯನವರ ಪೂರ್ವಿಕರು 49 ಯಜಮಾನರು ಹಿಂದಿರುಗಿ ಬರುವಾಗ ನಾನು ಇನ್ನೂ ಪೇಟೆಯಲ್ಲಿಯೇ ಇದ್ದುದನ್ನು ಕಂಡು ಕೋಪದಿಂದ ‘ಇನ್ನೂ ಇಲ್ಲೇ ಇದ್ದೀಯಾ, ದನ ಕಾಯುವವನೆ, ನಿನಗೆ ತಕ್ಕದ್ದನ್ನು ಮಾಡುತ್ತೇನೆ ತಾಳು’ ಎಂದು ಚೂಪಾದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ನಾಲಗೆಯನ್ನು ಸೀಳಿದರು. ನೋಡಿ ತಾಯಿ, ಇನ್ನೂ ರಕ್ತ ಜಿನುಗುತ್ತಿದೆ’ ಎಂದು ಹೇಳಿ ಸಾಮಾನುಗಳನ್ನು ಒಳಗೆ ತೆಗೆದಿಟ್ಟುಕೊಳ್ಳುವಂತೆ ತಿಳಿಸಿದ. ಹಾಗೆ ಹೋಗುವ ಮುನ್ನ ಗೃಹಿಣಿಯನ್ನು ಕುರಿತು ‘ಅವರು ಬರುವುದರೊಳಗಾಗಿ ನಾನು ಇಲ್ಲಿಂದ ಹೋಗಬೇಕು. ನನ್ನನ್ನು ಮತ್ತೆ ನೋಡಿದರೆ ಇನ್ನಷ್ಟು ಕೋಪಗೊಂಡಾರು’ ಎಂದು ನುಡಿದು, ಬಾಯಿ ತೆಗೆದು ನಾಲಗೆಯ ಗಾಯವನ್ನು ಆಕೆಗೆ ತೋರಿಸಿದ. ನೆತ್ತರು ಜಿನುಗುತ್ತಿದ್ದ ಆ ನಾಲಗೆಯನ್ನು ನೋಡಿ ಆ ಸಾಧ್ವಿಗೆ ಅಪರಿಮಿತವಾದ ದುಃಖ, ವಿಸ್ಮಯಗಳಾದುವು. ಎಂದೂ, ಯಾರ ಮೇಲೆಯೂ ಕೋಪಗೊಳ್ಳದ ಶಾಂತಮೂರ್ತಿ, ಅಜಾತಶತ್ರು, ಮಹಾ ದಯಾಶೀಲ ತನ್ನ ಪತಿದೇವರು. ‘ಕೇವಲ ಒಬ್ಬ ಕೂಲಿಯವನನ್ನು ಅಲ್ಪ ಅಪರಾಧಕ್ಕಾಗಿ ಅವನ ನಾಲಗೆಯನ್ನು ಸೀಳುವಷ್ಟು ಕಠೋರ ಮನಸ್ಸು ಅವರಿಗೆ ಹೇಗೆ ಬಂದಿರಬಹುದು? ಇದು ನಿಜವಾಗಿಯೂ ನಡೆದ ಸಂಗತಿಯೆ? ನಂಬುವಂತೆಯೆ ಇಲ್ಲವಲ್ಲ! ಇದೇನು ಸೋಜಿಗ’ ಎಂದುಕೊಳ್ಳುತ್ತ ತಲೆಯೆತ್ತಿ ನೋಡಿಕೊಳ್ಳುವಷ್ಟರಲ್ಲಿ ಬಂದ ಆಳು ಹೊರಟು ಹೋಗಿದ್ದ. ಆಕೆ ಸಾಮಾನುಗಳನ್ನು ಒಳಕ್ಕೆ ಕೊಂಡೊಯ್ದು ಅಂದಿನ ಅಡಿಗೆಯನ್ನು ಮಾಡಿ ಮುಗಿಸಿದಳು. ಅಡಿಗೆ ಮುಗಿಯಿತು. ಅತಿಥಿಗಳು ಊರ ಹೊರಗಿನ ಬಾವಿಯಲ್ಲಿ ಸ್ನಾನಾಹ್ನಿಕಗಳನ್ನು ತೀರಿಸಿಕೊಂಡು ಮನೆಗೆ ಬಂದರು. ಮಧ್ಯಾಹ್ನ ಒಂದು ಘಂಟೆಯಾಯಿತು. ವೆಂಕಪ್ಪನವರು ಇನ್ನೂ ಮನೆಗೆ ಬರಲಿಲ್ಲ. ಅತಿಥಿಗಳು ತುಂಬ ಹಸಿದಿದ್ದರು. ತಾವಿಲ್ಲದಿದ್ದರೂ ಅತಿಥಿಗಳನ್ನು ಕಾಯಿಸಬಾರದೆಂದು, ಅವರಿಗೆ ಮೊದಲು ಭೋಜನ ಮಾಡಿಸಬೇಕೆಂಬುದು ವೆಂಕಪ್ಪನವರ ಕಟ್ಟಳೆ. ಆದ್ದರಿಂದ ಗೃಹಿಣಿ, ಮನೆಗೆ ಬಂದ ಅತಿಥಿಗಳನ್ನು ಎಬ್ಬಿಸಿ ಭೋಜನ ಮಾಡಿಸಿದರು. ತೃಪ್ತರಾದ ಅತಿಥಿಗಳು ‘ಸಮಸ್ತ ಸನ್ಮಂಗಳಾನಿ ಭವಂತು’ ಎಂದು ಆಶೀರ್ವದಿಸಿ ಹೊರಟುಹೋದರು. ಇತ್ತ ವೆಂಕಪ್ಪನವರು ಉದ್ವಿಗ್ನ ಮನಃಸ್ಥಿತಿಯಲ್ಲಿಯೇ ಪೇಟೆಗೆ ಹೊರಟರು. ಅವರ ಮನಸ್ಸು ಕಳವಳ ತುಂಬಿ ಏನೋ ಒಂದು ಬಗೆಯಾಗಿತ್ತು. ತಾವು ಏನೋ ಮಾಡಬಾರದ್ದನ್ನು ಮಾಡಿದ ಅಪರಾಧ ಭಾವನೆ ಚಿತ್ತವನ್ನು ಕಲಕಿತ್ತು. ಅವರು ಪೇಟೆಯಲ್ಲಿ ನಡೆಯುತ್ತಾ, ನಡೆಯುತ್ತಾ ಒಬ್ಬ ಶೆಟ್ಟರ ಅಂಗಡಿಯಲ್ಲಿ 50 ಮೂರು ತಲೆಮಾರು ಹೋಗಿ ಕುಳಿತರು. ಎಂದೆಂದೂ ಬಾರದವರು ಇಂದು ಬಂದು ತನ್ನ ಅಂಗಡಿಯಲ್ಲಿ ಕುಳಿತಿದ್ದನ್ನು ಕಂಡು ಆತನಿಗೆ ಅಪಾರ ಸಂತೋಷ. ಆಶ್ಚರ್ಯ! ಆ ಮಹಾನುಭಾವನ ಪಾದಸ್ಪರ್ಶದಿಂದ ತಾನು, ತನ್ನ ಅಂಗಡಿ ಪುನೀತವಾಯಿತು ಎಂದುಕೊಂಡ. ಆತ ಧಿಗ್ಗನೆ ಮೇಲೆದ್ದು ಭಕ್ತಿಯಿಂದ ಕೈ ಮುಗಿದು ‘ಎಷ್ಟು ಅಪರೂಪವಾಗಿ ಸ್ವಾಮಿಯವರು ದಯಮಾಡಿಸಿದಿರಿ? ಮನೆಗೇನಾದರೂ ಸಾಮಾನು ಬೇಕಾಗಿದೆಯೆ? ಅಪ್ಪಣೆಯಾದರೆ ಕಳುಹಿಸಿ ಕೊಡುತ್ತೇನೆ’ ಎಂದ. ವೆಂಕಪ್ಪನವರು ‘ಏನೂ ಇಲ್ಲ. ಸುಮ್ಮನೆ ಹಾಗೆ ತಿರುಗಾಡಿಕೊಂಡು ಬಂದೆ; ಕುಳಿತುಕೊಳ್ಳಬೇಕೆನಿಸಿತು. ಕುಳಿತೆ. ಇನ್ನು ಬರುತ್ತೇನೆ’ ಎಂದು ಹೇಳಿ ಮೇಲಕ್ಕೆದ್ದರು. ಇನ್ನೂ ಎರಡು, ಮೂರು ಅಂಗಡಿಗಳಲ್ಲಿ ಅವರು ಹಾಗೆಯೇ ಮಾಡಿದರು. ಅಂತೂ ಬರಿಗೈಯಲ್ಲಿಯೇ ಚಿಂತಾಮಗ್ನರಾಗಿ ಮನೆಗೆ ಬಂದರು. ಅಲ್ಲಿ ಅತಿಥಿಗಳು ಕಾಣಿಸಲಿಲ್ಲ. ಅವರು ಉಪವಾಸವೇ ಹೊರಟು ಹೋಗಿರಬೇಕೆಂದುಕೊಂಡರು. ಮನಸ್ಸಿಗೆ ಕಳವಳ ಕವಿಯಿತು. ಜೀವನದಲ್ಲಿಯೇ ಜುಗುಪ್ಸೆಯುಂಟಾಯಿತು. ‘ನಾನು ಇಷ್ಟು ದಿನ ಬದುಕಿದ್ದು ವ್ಯರ್ಥ. ಆಹ್ವಾನಿಸಿದ ಅತಿಥಿಗಳಿಗೆ ಅನ್ನವಿಡಲಾರದೆ ಉಪವಾಸ ಕಳುಹಿಸಿಕೊಟ್ಟ ನನ್ನ ಬಾಳನ್ನು ಸುಡಬೇಕು. ಪರಮಾತ್ಮ, ನಿನ್ನನ್ನೇ ನಂಬಿದ ನನಗೆ ಈ ಗತಿ ಬಂತೆ?’ ಎಂದು ನಿಟ್ಟುಸಿರುಬಿಟ್ಟು ನೆಲಕ್ಕೆ ಕುಸಿದರು. ಅವರ ಅಂತರಂಗ ಮೌನವಾಗಿ ಅಳುತ್ತಿತ್ತು. ಒಳಗಿದ್ದ ಗೃಹಿಣಿ ಹೊರಗೆ ಬಂದು ನೋಡುತ್ತಾಳೆ, ತನ್ನ ಪತಿ ದೇವರು ತಲೆ ತಗ್ಗಿಸಿಕೊಂಡು ನಿರ್ವಿಣ್ಣರಾಗಿ ಕುಳಿತಿದ್ದಾರೆ! ಏಕೆ ಅವರು ಹಾಗಿದ್ದಾರೆ ಎನ್ನುವುದು ಆಕೆಗೆ ಅರ್ಥವಾಗಲಿಲ್ಲ. ‘ಇದೇಕೆ ಹೀಗಿದ್ದೀರಿ ಎದ್ದು ಮಡಿಯುಟ್ಟು ಊಟಕ್ಕೆ ಬನ್ನಿ’ ಎಂದು ನಮ್ರತೆಯಿಂದ ನುಡಿದಳು. ಅಚ್ಚರಿಗೊಂಡ ವೆಂಕಪ್ಪನವರು ‘ಏನು? ಊಟವೆ? ಮನೆಯಲ್ಲಿ ಈ ದಿನ ಏನೂ ಇಲ್ಲವೆಂದು ಬೆಳಿಗ್ಗೆ ತಾರಮ್ಮಯ್ಯ ಆಡಿಸಿದೆ. ಈಗಲೂ ನಾನು ಬರಿಗೈಯಿಂದ ಮನೆಗೆ ಬಂದಿದ್ದೇನೆ. ಇನ್ನು ಅಡಿಗೆ ಹೇಗಾಗುತ್ತದೆ? ಯಾರಿಂದಲಾದರೂ ಸಾಲ ತಂದೆಯಾ? ಅತಿಥಿಗಳಿಗೆ ಊಟವಾಯಿತೆ? ಅವರೆಲ್ಲಿ ಹೋದರು?’ ಎಂದೆಲ್ಲ ಕೇಳಿದರು. ಆಕೆ ಮುಗುಳ್ನಗುತ್ತ ‘ಇದೇನು ಹೀಗೆ ಕೇಳುತ್ತೀರಿ? ನೀವೇ ಸಾಮಾನುಗಳನ್ನು ಕೊಡಿಸಿ, ಗೊವಿಂದನೆಂಬ ಆಳಿನ ಕೈಲಿ ಕಳಿಸಿದ್ದು ಮರೆತೇ ಹೋಯಿತೇ ? ಅವನೇ ಹೇಳಿದ. ಸಾಮಾನನ್ನು ಮನೆಗೆ ತರಲು ಸಾವಕಾಶ ಮಾಡಿದನೆಂದು ಅವನ ನಾಲಗೆಯನ್ನು ಚೂಪನೆಯ ಕಲ್ಲಿನಿಂದ ಕೊಯ್ದಿರಂತೆ! ಬಾಯಿ ತೆಗೆದು ತೋರಿಸಿದ, ಪಾಪ, ನಾಲಗೆ ಗಾಯವಾಗಿ ರಕ್ತ ಇನ್ನೂ ಜಿನುಗುತ್ತಿತ್ತು. ಕರುಣಾಳುಗಳಾದ ನೀವು ಹೀಗೆ ಮಾಡಬಹುದೆಂದು ನಾನು ವೆಂಕಣ್ಣಯ್ಯನವರ ಪೂರ್ವಿಕರು 51 ಸ್ವಪ್ನದಲ್ಲಿಯೂ ಯೋಚಿಸಿರಲಿಲ್ಲ. ಗೋವಿಂದನು ಹೇಳಿದಾಗಲೂ ನಾನು ನಂಬಲಿಲ್ಲ. ಆದರೆ, ಅವನ ನಾಲಗೆಯ ಗಾಯ ಕಂಡು ನಾನು ನಂಬಲೇಬೇಕಾಯಿತು. ಮನಸ್ಸಿಗೆ ಅಯ್ಯೋ ಎನಿಸಿತು. ಪಾಪ. ಹೀಗೇಕೆ ಮಾಡಿದಿರಿ? ಸಿಟ್ಟನ್ನೇ ಅರಿಯದ ನಿಮಗೆ ಅಷ್ಟು ಸಿಟ್ಟು ಹೇಗೆ ಬಂತು? ನನಗಂತೂ ಆಶ್ಚರ್ಯ. ಹೋಗಲಿ ಬಿಡಿ. ಏನೋ ವಿಷಘಳಿಗೆ. ಆಗಬಾರದ್ದು ಆಗಿಹೋಗಿದೆ. ಅದಕ್ಕಾಗಿ ಈಗೇಕೆ ಚಿಂತಿಸಬೇಕು? ಬಂದ ಬ್ರಾಹ್ಮಣರಿಗೂ ಬಡಿಸಿದೆ, ಅವರು ಊಟ ಮಾಡಿಕೊಂಡು ತೃಪ್ತರಾಗಿ ಹೋದರು. ತಮಗೆ ತಿಳಿಸಬೇಕೆಂದು ಹೇಳಿಯೇ ಹೋದರು. ನಿಮಗಾಗಿ ಅಷ್ಟು ಹೊತ್ತಿನಿಂದ ನಾನು ಕಾದಿದ್ದೇನೆ. ಜಾಗ್ರತೆ ಏಳಿ. ಮಡಿಯುಟ್ಟುಕೊಳ್ಳಿ’ ಎಂದು ಹೇಳಿದರು. ಮಡದಿಯ ಮಾತುಗಳನ್ನು ಕೇಳಿ ವೆಂಕಪ್ಪನವರು ದಿಗ್ಭ್ರಮೆಗೊಂಡರು. ‘ಯಾವ ಆಳು? ಯಾವ ಗೋವಿಂದ? ಎಲ್ಲಿಯ ಸಾಮಾನು? ಯಾವಾಗ ನಾನು ಕೊಡಿಸಿದೆ? ಎಲ್ಲಿ ಕೊಡಿಸಿದೆ? ಅವನ ನಾಲಗೆಯನ್ನು ನಾನೇಕೆ ಕೊಯ್ಯಲಿ? ಆ ಗೊವಿಂದನೆಂಬುವವನು ಯಾರೋ ಅವನ ಮುಖವನ್ನೇ ನಾನು ಕಾಣೆನಲ್ಲ! ನನಗೆ ತಿಳಿದಂತೆ ಈ ಊರಿನ ಪೇಟೆಯಲ್ಲಿ ಗೋವಿಂದ ಎಂಬ ಹೆಸರಿನ ಕೂಲಿಯಾಳೆ ಇಲ್ಲ. ಆ ಆಳು ಎಲ್ಲಿಂದ ಬಂದ? ಇದೇನು ಸೋಜಿಗ? ನನಗೆ ತಿಳಿಯದಂತೆಯೇ ಸಾಮಾನುಗಳನ್ನು ಏಕೆ ತಂದ? ನಾನು ಬರುವವರೆಗೂ ಕಾಯದೆ, ನನ್ನನ್ನು ಕಾಣದೆ, ಕೂಲಿಯನ್ನೂ ಕೇಳದೆ ಹಾಗೆಯೇ ಏಕೆ ಹೊರಟುಹೋದ? ಇದೇನು ಮಾಯೆ? ಇದರ ರಹಸ್ಯವೇನು? ಯೋಚಿಸಿದಷ್ಟೂ ಇದು ಗೂಢವಾಗುತ್ತಿದೆಯಲ್ಲ!’ ಎಂದು ಯೋಚಿಸಿದರು. ಸ್ವಲ್ಪ ಹೊತ್ತು ಆಳವಾಗಿ ಯೋಚಿಸಿದ ಮೇಲೆ ತಟ್ಟನೆ ಮನಸ್ಸಿಗೆ ಏನೋ ಹೊಳೆದಂತಾಯಿತು. ‘ಓಹೋ, ಇದು ಹೀಗೆಯೇ ಇರಬೇಕು. ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೇ ಕೂಲಿಯವನಾಗಿ ಬಂದಿರಬೇಕು! ಭಕ್ತರ ಯೋಗಕ್ಷೇಮವನ್ನು ವಹಿಸುವನೆಂಬುದು ಅವನ ಬಿರುದು; ಅವನಿತ್ತಿರುವ ಅಭಯವಾಣಿ. ಮನೆಗೆ ಸಾಮಾನುಗಳನ್ನು ತಂದು ಹಾಕಿ, ಭಕ್ತನ ರಕ್ಷಣೆಯನ್ನು ವಹಿಸಿದ್ದಾನೆ; ತನ್ನ ವಚನವನ್ನು ಪಾಲಿಸಿದ್ದಾನೆ. ನನ್ನ ಸತ್ವ ಪರೀಕ್ಷೆಯನ್ನು ಮಾಡಿದ್ದಾನೆ! ನನ್ನ ದೃಢಭಕ್ತಿ, ಸಂಯಮ, ಶೀಲಗಳನ್ನು ಪರೀಕ್ಷಿಸಬೇಕೆಂದು ಹೊರಟಿದ್ದಾನೆ. ಇದನ್ನು ಅರ್ಥಮಾಡಿಕೊಳ್ಳಲಾರದೆ ನಾನು ಆತುರಪಟ್ಟೆ. ಆ ದಯಾಮಯನನ್ನು ನಿಷ್ಕರುಣಿಯೆಂದು, ಅಸತ್ಯವಾದಿಯೆಂದು ಆರೋಪಿಸಿ ದುರ್ವಾಕ್ಯಗಳನ್ನಾಡಿದೆ; ಆತನ ಅಭಯವಾಣಿಯ ಮೇಲೆ ಕೆಂಪುಗೀಟನ್ನೆಳೆದೆ. ಅದು ಆ ಸ್ವಾಮಿಯ ನಾಲಗೆಯನ್ನು ಕೊಯ್ದಂತೆಯೇ ಅಲ್ಲವೆ? ನಾನೊಬ್ಬ 52 ಮೂರು ತಲೆಮಾರು ಬುದ್ಧಿಹೀನ. ಅಸಂಯಮಕ್ಕೆ ಅಧೀನನಾಗಿ, ಭಕ್ತಿ-ವಿವೇಕಗಳನ್ನು ಬಲಿಕೊಟ್ಟು ಎಂತಹ ಪ್ರಮಾದ ಮಾಡಿದೆ? ದೈವದ್ರೋಹಿಯಾದ ನನಗೆ ಯಾವ ಶಿಕ್ಷೆ ಸರಿಯಾದುದು? ಯಾವ ಪ್ರಾಯಶ್ಚಿತ್ತವನ್ನು ನಾನು ಮಾಡಿಕೊಳ್ಳಲಿ? ಮುಂದಿನ ನನ್ನ ಹಾದಿ ಏನು?’ ಎಂದು ಮರಮರ ಮರುಗಿದರು. ಕಡೆಗೆ ಒಂದು ನಿರ್ಧಾರಕ್ಕೆ ಬಂದವರಾಗಿ ‘ಎಂತಹ ತಪ್ಪು ಮಾಡಿದೆನೋ, ಅಂತಹುದೇ ಪ್ರಾಯಶ್ಚಿತ್ತ ಮಾಡಿಕೊಳ್ಳ ಬೇಕಲ್ಲವೆ? ದೈವವನ್ನು ನಿಂದಿಸಿ, ಅದರ ನಾಲಗೆಗೆ ಚೂರಿಯನ್ನು ಹಾಕಿದೆ! ಅದಕ್ಕೆ ಪ್ರಾಯಶ್ಚಿತ್ತರೂಪವಾಗಿ ನಾನೀಗ ನನ್ನ ನಾಲಗೆಯನ್ನೇ ಕತ್ತರಿಸಿ ಸ್ವಾಮಿಗೆ ಅರ್ಪಿಸಬೇಕು. ಇದೇ ನನಗೆ ತಕ್ಕ ಶಿಕ್ಷೆ’ ಎಂದು ನಿಶ್ಚಯಿಸಿದರು. ಈ ನಿಶ್ಚಯದಿಂದ ಆತನ ಮನಸ್ಸಿಗೆ ಒಂದು ಬಗೆಯ ಸಮಾಧಾನವಾಯಿತು. ವೆಂಕಪ್ಪನವರು ಸರಸರ ಮೇಲಕ್ಕೆದ್ದು ಬಚ್ಚಲಮನೆಗೆ ಧಾವಿಸಿದರು. ಅಲ್ಲಿ ಮನದಣಿಯುವಂತೆ ತಣ್ಣೀರನ್ನು ತಲೆಯ ಮೇಲೆ ಹೊಯ್ದುಕೊಂಡರು. ಆಮೇಲೆ ಮಡಿಯುಟ್ಟು ಭಸ್ಮಧಾರಣೆ ಮಾಡಿ ಮಾಧ್ಯಾಹ್ನಿಕವನ್ನು ಮಾಡಿ ಮುಗಿಸಿದರು. ದೇವರ ಮನೆಯ ಬಾಗಿನ್ನು ಹಾಕಿ ಭದ್ರಪಡಿಸಿದ ಅವರು ತಾನು ಪಾರಾಯಣ ಮಾಡುತ್ತಿದ್ದ ಭಗವದ್ಗೀತೆಯ ತಾಳೆಯ ಗರಿ ಪುಸ್ತಕವನ್ನು ಕೈಗೆ ತೆಗೆದುಕೊಂಡು ಕಣ್ಣಿಗೊತ್ತಿಕೊಂಡರು. ಅದರ ಹಾಳೆಗಳನ್ನು ತಿರುವಿ ಹಾಕಿ ‘ಅನನ್ಯಾಶ್ಚಿಂತಯಂತೋ ಮಾಂ’ ಎಂಬ ಶ್ಲೋಕವುಳ್ಳ ಪುಟವನ್ನು ತೆರೆದರು. ತಾನು ಅದರ ಮೇಲೆ ಎಳೆದಿದ್ದ ಕೆಂಪು ಗೆರೆ ಎದ್ದು ಕಾಣುತ್ತಿತ್ತು. ತನ್ನನ್ನದು ನೋಡಿ ಅಣಕಿಸುವಂತಿತ್ತು; ಸಾಕ್ಷಾತ್ ಭಗವಂತನೇ ಕಣ್ಣೆದುರಿಗೆ ನಿಂತು ನಗುತ್ತಿರುವಂತೆ ಭಾಸವಾಗುತ್ತಿತ್ತು. ವೆಂಕಪ್ಪನವರ ಕಣ್ಣುಗಳು ಕಂಬನಿಯಿಂದ ತುಂಬಿದುವು. ಬಟ್ಟೆಯನ್ನು ಒದ್ದೆ ಮಾಡಿ, ಆ ಕೆಂಪು ಗೀಟನ್ನು ಮೆಲ್ಲಮೆಲ್ಲನೆ ಒರೆಸಿ ಶುದ್ಧಗೊಳಿಸಹೊರಟರು. ಅದರೇನು? ಆ ಬಣ್ಣ ಸ್ಥಿರವಾಗಿ ನಿಂತಿರುವಂತೆ ಭಾಸವಾಗುತ್ತಿತ್ತು. ವೆಂಕಪ್ಪನವರು ಮನಸ್ಸಿನಲ್ಲಿಯೇ ‘ಹೌದು, ಇದು ನಾನು ಮಾಡಿದ ಮಹಾಪಾಪದ ಹೆಗ್ಗುರುತು. ಆ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವಾಗದ ಹೊರತು ಇದು ಅಳಿಸಿ ಹೋಗುವುದಿಲ್ಲ’ ಎಂದುಕೊಂಡು, ‘ಹೇ ಭಗವಾನ್! ಶ್ರೀ ಕೃಷ್ಣ ಪರಮಾತ್ಮ! ನನ್ನ ಮಹಾಪರಾಧವನ್ನು ಮನ್ನಿಸು. ಇಗೋ ಈ ಶಿಕ್ಷಾರೂಪವಾದ ಸೇವೆಯನ್ನು ನಿನಗೆ ಸಲ್ಲಿಸುತ್ತಿದ್ದೇನೆ, ಅದನ್ನು ಸ್ವೀಕರಿಸಿ ನನ್ನನ್ನು ಉದ್ಧರಿಸು’ ಎಂದು ಗಟ್ಟಿಯಾಗಿ ಕೂಗಿ ಹೇಳಿದವರೇ ಕೈಲಿದ್ದ ಚಾಕುವಿನಿಂದ ತಮ್ಮ ನಾಲಗೆಯನ್ನು ಕತ್ತರಿಸಿ ಇದಿರಿನಲ್ಲಿದ್ದ ಅಭಿಷೇಕದ ತಟ್ಟೆಯಲ್ಲಿಟ್ಟುಬಿಟ್ಟರು. ಅದಷ್ಟೇ ಆತನಿಗೆ ಗೊತ್ತು. ಮರುಕ್ಷಣದಲ್ಲಿ ಆತನಿಗೆ ಎಚ್ಚರ ತಪ್ಪಿತು. ಕೃಷ್ಣಾಜಿನದ ಮೇಲೆ ಬಿದ್ದು ಬಿಟ್ಟರು. ಅವರ ಬಾಯಿಂದ ರಕ್ತಧಾರೆ ವೆಂಕಣ್ಣಯ್ಯನವರ ಪೂರ್ವಿಕರು 53 ಹರಿಯತೊಡಗಿತು. ತನ್ನ ಪತಿದೇವನು ಗಟ್ಟಿಯಾಗಿ ಕೂಗಿದುದು, ಧೊಪ್ಪೆಂದು ಕೆಳಕ್ಕೆ ಬಿದ್ದುದು ಗೃಹಿಣಿಗೆ ಕೇಳಿಸಿತು. ಆಕೆ ಏನೋ ಅನಾಹುತವಾಗಿರಬೇಕೆಂದು ದೇವರ ಮನೆಯ ಬಾಗಿಲನ್ನು ಓರೆ ಮಾಡಿ ನೋಡಿದಳು. ಅಲ್ಲಿನ ದೃಶ್ಯವನ್ನು ಕಂಡು ಆಕೆಯ ಗುಂಡಿಗೆ ಒಡೆಯಿತು. ಬಾಯಿಂದ ಹರಿಯುತ್ತಿರುವ ನೆತ್ತರನ್ನು, ದೇವರ ತಟ್ಟೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿರುವ ನಾಲಗೆಯನ್ನು ಕಂಡು ಆಕೆಯ ಜೀವ ತಲ್ಲಣಿಸಿತು. ಕಣ್ಣು ಕತ್ತಲೆಗೂಡಿತು, ಎದೆ ವೇಗದಿಂದ ಬಡಿದುಕೊಳ್ಳಲಾರಂಭಿಸಿತು. ಒಂದೇ ಸಾರಿಗೆ ನೂರು ಚೇಳುಗಳು ಕುಟುಕಿದಷ್ಟು ಯಾತನೆಯಾಯಿತು. ಆಕೆ ಭಯ, ದುಃಖಗಳಿಂದ ಚಿಟ್ಟನೆ ಚೀರಿದಳು. ಏನಾಯಿತೋ ಎಂದು ಮನೆಯವರೆಲ್ಲ ಗಾಬರಿಯಿಂದ ಓಡಿಬಂದರು. ಅರೆಕ್ಷಣದಲ್ಲಿ ಸುದ್ದಿ ಹರಡಿತು. ನೆರೆಹೊರೆಯವರೆಲ್ಲ ಅಲ್ಲಿಗೆ ಓಡಿ ಬಂದರು. ನೂರಾರು ಜನ ನೆರೆದು ಜನಜಾತ್ರೆಯಾಯಿತು. ಆ ದೃಶ್ಯವನ್ನು ಕಂಡು ಎಲ್ಲರೂ ಮರಮರ ಮರುಗುವವರೇ. ಆದರೆ ಈ ಅನಾಹುತಕ್ಕೆ ಕಾರಣವೇನೆಂದೂ ಯಾರೂ ಅರಿಯರು. ಅವರವರಿಗೆ ತೋಚಿದಂತೆ ಅವರವರು ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೇನು ಮಾಡಬೇಕೆಂದು ಯಾರಿಗೂ ಹೊಳೆಯುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಆ ಗುಂಪಿನ ಮಧ್ಯದಿಂದ ನುಗ್ಗಿ ಮುಂದಕ್ಕೆ ಬಂದು ‘ಯಾರೂ ಹೆದರಬೇಡಿ, ನನ್ನ ಭಕ್ತನ ಜೀವಕ್ಕೆ ಭಯವಿಲ್ಲ. ಕತ್ತರಿಸಿಟ್ಟಿರುವ ನಾಲಗೆ ಅಭಿಷೇಕದ ತಟ್ಟೆಯಲ್ಲೇ ಇರಲಿ. ಅದನ್ನು ಮುಚ್ಚಿಡಿರಿ. ಗುಡಿಯಲ್ಲಿರುವ ನನಗೆ ನಾಳೆಯಿಂದ ಅಭಿಷೇಕ, ಪೂಜೆಗಳನ್ನು, ಪಂಚಾಮೃತ ಅಭಿಷೇಕವನ್ನು ಸಲ್ಲಿಸುತ್ತಾ ಹೋಗಿರಿ; ಮನೆಯಲ್ಲಿ ದಿನವೂ ರುದ್ರಾಭಿಷೇಕ ನಡೆಯಲಿ. ರಾಮಾಯಣ ಪಾರಾಯಣವೂ, ರಾಮ ಸಹಸ್ರನಾಮ ಪೂಜೆಯೂ ಇಂದಿನಿಂದ ಏಳು ದಿನಗಳು ನಡೆಯುತ್ತಾ ಹೋಗಲಿ ದಿನ ದಿನವೂ ಬ್ರಾಹ್ಮಣ ಸುವಾಸಿನಿಯರಿಗೆ ಸಂತರ್ಪಣೆ ನಡೆಯಲಿ. ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಹೇಳಿ ನೆಲದ ಮೇಲೆ ಉರುಳಿದನು. ಸಾಕ್ಷಾತ್ ವೆಂಕಟರಮಣಸ್ವಾಮಿಯೇ ಅವನಲ್ಲಿ ಆವೇಶವಾಗಿರುವನೆಂದು ಜನ ಅರ್ಥಮಾಡಿಕೊಂಡರು. ಭಗವಂತನ ಅಪ್ಪಣೆಯಂತೆ ನಡೆಸಲು ಕುಚೇಲನ ಕುಟೀರದಂತಿರುವ ವೆಂಕಪ್ಪನವರ ಮನೆಯಲ್ಲಿ ಹೇಗೆ ಸಾಧ್ಯ? ಆದರೆ ದೇವವಾಣಿಯ ವಿಷಯವನ್ನು ಕೇಳುತ್ತಲೇ ಊರಿನ ವೈಶ್ಯರು ಸಂತರ್ಪಣೆಗೆ ಬೇಕಾದ ಸಕಲ ಸಾಮಗ್ರಿಗಳನ್ನೂ ತಂದುಕೊಟ್ಟರು. ನೆರೆ-ಹೊರೆಯವರು ಪೂಜೆ, ಪಾರಾಯಣ, ಅಭಿಷೇಕಗಳಿಗೆ ಅಗತ್ಯವಾಗಿದ್ದ ಬ್ರಾಹ್ಮಣ ಋತ್ವಿಕ್ಕುಗಳನ್ನು ಕರೆತಂದರು. 54 ಮೂರು ತಲೆಮಾರು ಅಂದಿನಿಂದಲೇ ಆರಾಧನೆ ಪ್ರಾರಂಭವಾಯಿತು. ಮುಂದಿನ ಏಳುದಿನಗಳವರೆಗೆ ವೆಂಕಪ್ಪನವರು ಮೂರ್ಛಾವಸ್ಥೆಯಲ್ಲಿಯೇ ಇದ್ದರು. ಆದರೆ ಅವರ ಮುಖ ಪ್ರಸನ್ನವಾಗಿ ತೇಜಃಪುಂಜವಾಗಿತ್ತು. ಭಯ, ದುಃಖ, ನೋವುಗಳ ರೇಖೆ ಕೂಡ ಮುಖದಲ್ಲಿ ಕಾಣುತ್ತಿರಲಿಲ್ಲ. ಪತಿವ್ರತೆಯಾದ ಆತನ ಪತ್ನಿ ದಿನದಿನವೂ ಆತನಿಗೆ ಮಲಗಿದ್ದಲ್ಲಿಯೇ ಒದ್ದೆಯ ಬಟ್ಟೆಯಿಂದ ಒರೆಸಿ, ಬಟ್ಟೆಗಳನ್ನು ಬದಲಿಸಿ, ಶುಭ್ರವಾಗಿರುವಂತೆ ನೋಡಿಕೊಳ್ಳುತ್ತಿದ್ದಳು. ವೇದಜ್ಞರೂ ಮಂತ್ರಜ್ಞರು ಆದ ಸದ್ಭ್ರಾಹ್ಮಣರು ಅಭಿಷೇಕ, ಪಾರಾಯಣ, ಅರ್ಚನೆಗಳನ್ನು ನಿಷ್ಠೆಯಿಂದ ನೆರವೇರಿಸಿದರು. ನೂರಾರು ಜನ ಬ್ರಾಹ್ಮಣ ಸುವಾಸಿನಿಯರ ಸಂತರ್ಪಣೆ ಮಾತ್ರವೆ ಅಲ್ಲದೆ ಸಹಸ್ರಾರು ಜನ ಬಡಬಗ್ಗರಿಗೆ ಅನ್ನದಾನ ನಡೆಯುತ್ತಿತ್ತು. ಎಲ್ಲರ ಊಟೋಪಚಾರಗಳಾದ ಮೇಲೆ ಗೃಹಿಣಿಯು ದೇವರ ನೈವೇದ್ಯದ ಹಸುವಿನ ಹಾಲನ್ನು ಒಂದು ಲೋಟದ ತುಂಬ ತಂದು ಗಂಡನ ಬಾಯಿಗೆ ಹಾಕುತ್ತಿದ್ದಳು. ಪ್ರಜ್ಞೆಯಿಲ್ಲದೆ ಮಲಗಿದ್ದ ವೆಂಕಪ್ಪನವರ ಹೊಟ್ಟೆಯನ್ನು ಅದು ಸೇರುತ್ತಿತ್ತು. ಹೀಗೆ ಏಳು ದಿನಗಳು ಏಕಪ್ರಕಾರವಾಗಿ ನಡೆಯಿತು. ಏಳನೆಯ ದಿನ ಬ್ರಾಹ್ಮಣ ಭೋಜನವಾದ ಮೇಲೆ ನೆರೆದಿದ್ದವರೆಲ್ಲರೂ ತಾಂಬೂಲವನ್ನು ಮೆಲ್ಲುತ್ತಾ ಕುಳಿತಿದ್ದರು. ಪೂಜೆಯ ಕಟ್ಟಳೆ ಮುಗಿದಿದ್ದುದರಿಂದ ಆಹ್ವಾನಿತರಾದ ಬ್ರಾಹ್ಮಣ ಋತ್ವಿಕ್ಕುಗಳಿಗೆ ದಕ್ಷಿಣೆಯನ್ನು ನೀಡುವ ಕಾರ್ಯ ಪ್ರಾರಂಭವಾಗಿತ್ತು. ನಿತ್ಯದಂತೆ ವೆಂಕಪ್ಪನವರ ಪತ್ನಿ ಹಾಲನ್ನು ಕುಡಿಸಿ ಹೋದಳು. ಮರುನಿಮಿಷದಲ್ಲಿ ವೆಂಕಪ್ಪನಿಗೆ ಎಚ್ಚರಿಕೆಯಾಯಿತು. ಆತ ಕಣ್ದೆರೆದು ನೋಡಿದರು. ಮನೆಯಲ್ಲಿ ಏನೋ ಹೊಸತನ ಕಂಡು ಬರುತ್ತಿತ್ತು. ಹೊರಗಿನ ಪಡಸಾಲೆಯಲ್ಲಿ ತಾಂಬೂಲವನ್ನು ಮೆಲ್ಲುತ್ತಾ ಕುಳಿತಿದ್ದ ಜನರ ಮಾತುಗಳು ಕೇಳಿಬಂದವು. ಇದೇನು ವಿಚಿತ್ರವೆಂದು ನೋಡುವುದಕ್ಕಾಗಿ ಆತ ಎದ್ದು ಹೊರಕ್ಕೆ ಬಂದರು. ನೆರೆದಿದ್ದ ಬ್ರಾಹ್ಮಣ ಸಮೂಹವನ್ನು ಕಂಡು ಸಾಷ್ಟಾಂಗ ನಮಸ್ಕಾರ ಮಾಡಿದರು. ಆಮೇಲೆ ಕೈಜೋಡಿಸಿಕೊಂಡು ನಮ್ರತೆಯಿಂದ ‘ಮಹಾನುಭಾವರಾದ ತಮ್ಮ ಆಗಮನದಿಂದ ನನ್ನ ಬಡಕುಟೀರ ಪಾವನವಾಯಿತು. ನನ್ನ ಜನ್ಮ ಸಾರ್ಥಕವಾಯಿತು. ತಮ್ಮ ಅನುಗ್ರಹ, ಅಶೀರ್ವಾದಗಳು ನನ್ನ ಮೇಲಿರಬೇಕು’ ಎಂದು ಕೇಳಿದರು. ಆತನು ಹಾಗೆ ಸ್ಪಷ್ಟವಾಗಿ, ಅಸ್ಖಲಿತವಾಗಿ ಮಾತನಾಡುವುದನ್ನು ಕಂಡು ಅಲ್ಲಿ ನೆರೆದಿದ್ದವರಿಗೆಲ್ಲಾ ಆಶ್ಚರ್ಯ, ಆನಂದಗಳುಂಟಾದುವು. ತಮ್ಮ ಪೂಜೆ, ಪಾರಾಯಣಗಳು ಸಾರ್ಥಕವಾದುವೆಂದು ಅವರಿಗೆ ಸಂತೋಷವಾಯಿತು. ಅವರು ವೆಂಕಪ್ಪನವರನ್ನು ಕುರಿತು ‘ಸ್ವಾಮಿ, ನೀವು ಧನ್ಯಜೀವಿಗಳು. ಶ್ರೀ ವೆಂಕಣ್ಣಯ್ಯನವರ ಪೂರ್ವಿಕರು 55 ರಾಮಚಂದ್ರನಿಗೆ ನಿಮ್ಮ ಮೇಲೆ ಅಪಾರ ವಾತ್ಸಲ್ಯ. ನಿಮ್ಮ ಮೂಲಕ ಆತ ಎಲ್ಲರಿಗೂ ತನ್ನ ಲೀಲೆಯನ್ನು ತೋರಿಸಿ ಅನುಗ್ರಹಿಸಿದ್ದಾನೆ. ನೀವು ಜೀವಂತವಾಗಿ ಉಳಿದಿದ್ದು, ನಾಲಗೆಯನ್ನು ಪಡೆದದ್ದು ದಯಾಮಯನಾದ ಆ ದೇವದೇವನ ಲೀಲೆ. ನೀವು ಭಗವಂತನನ್ನು ಮೆಚ್ಚಿಸಿ ಕೃತಾರ್ಥರಾದಿರಿ. ನೀವು ಸಾಮಾನ್ಯರಲ್ಲ, ಮಹಾಭಗವದ್ಭಕ್ತಳಾದ ರಂಗಮ್ಮನಿಗೆ ತಕ್ಕ ಮಗ. ಆಕೆ ‘ದೇವರ ರಂಗಮ್ಮ’, ನೀವು ‘ದೇವರ ಲೀಲೆ’ ವೆಂಕಪ್ಪನವರು. ನಿಮ್ಮ ಕೃಪೆಯಿಂದ ನಮಗೂ ಭಗವಂತನ ತೀರ್ಥಪ್ರಸಾದಗಳು ದೊರೆತು ನಾವು ಧನ್ಯರಾದೆವು’ ಎಂದು ತಿಳಿಸಿ, ಕಳೆದ ಏಳು ದಿನಗಳಿಂದ ನಡೆದುದನ್ನೆಲ್ಲ ಸಾಂಗವಾಗಿ ವಿವರಿಸಿದರು. ವೆಂಕಪ್ಪನವರು ಕಳೆದ ಏಳು ದಿನಗಳಿಂದ ತಮಗಾದ ಅನುಭವವನ್ನು ಹೀಗೆ ನಿರೂಪಿಸಿದರು - “ಈ ಏಳು ದಿನಗಳು ನನಗೆ ಬಾಹ್ಯಪ್ರಜ್ಞೆ ಇರಲಿಲ್ಲ. ನಾನು ನಾಲಗೆಯನ್ನು ಕತ್ತರಿಸಿಕೊಳ್ಳುತ್ತಲೇ ಪ್ರಜ್ಞೆತಪ್ಪಿ ಬಿದ್ದೆ. ಆ ಅಜ್ಞಾನಾವಸ್ಥೆಯಲ್ಲಿ ನಾನು ನೇರವಾಗಿ ಶ್ರೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಹೋದೆ. ಅಲ್ಲಿ ದೇವರ ಮುಂದೆ ಅಡ್ಡಬಿದ್ದು ‘ಸ್ವಾಮಿ ಇದೇ ಏನು ನಿನ್ನ ಭಕ್ತವಾತ್ಸಲ್ಯ? ನಿನ್ನನ್ನು ಭಕ್ತರಕ್ಷಣಧುರೀಣ ಎಂಬ ಬಿರುದಿನಿಂದ ಕರೆಯುತ್ತಾರೆ. ಆ ಹೆಸರನ್ನು ನೀನು ಕಳೆದುಕೊಂಡೆಯಾ? ಮನೆಗೆ ಬಂದ ಅತಿಥಿಗಳಿಗೆ ಅನ್ನವಿಲ್ಲದಂತೆ ಮಾಡಿದೆ. ‘ಅನ್ಯಥಾ ಶರಣಂ ನಾಸ್ತಿ’ ಎಂದ ನಿನ್ನ ಅನನ್ಯಭಕ್ತನ ಸತ್ವಭಂಗ ಮಾಡಿದೆ. ನಿನ್ನನ್ನು ನಂಬಿ ಪೂಜಿಸಿದ್ದರಿಂದ ಫಲವೇನು?’ ಎಂದು ಸ್ವಾಮಿಯನ್ನು ಆಕ್ಷೇಪಿಸುತ್ತಿದ್ದೆ. ಆ ವೇಳೆಗೆ ಸರಿಯಾಗಿ ನನ್ನ ತಾಯಿ ‘ದೇವರ’ ರಂಗಮ್ಮ ಎಲ್ಲಿಂದಲೋ ಅಲ್ಲಿಗೆ ಬಂದು ನನ್ನೊಡನೆ ‘ಮಗು ಹಾಗೆಲ್ಲ ದೇವರನ್ನು ನಿಂದಿಸಬಾರದಪ್ಪ, ಅವನ ಲೀಲೆ ನಮಗೆ ಏನು ತಿಳಿಯುತ್ತದೆ? ಅವನು ಮಾಡುವುದೆಲ್ಲ ನಮ್ಮ ಒಳ್ಳೆಯದಕ್ಕೇ. ತಾಯಿ ಮಕ್ಕಳನ್ನು ಹೊಡೆಯುವುದು ಅವರ ಹಿತಕ್ಕಾಗಿಯೇ ಹೊರತು ದ್ವೇಷದಿಂದಲ್ಲ. ಭಗವಂತ ತಾಯಿ, ನಾವು ಆತನ ಸಂತಾನ. ಆತನಿಗೆ ಸಂತೋಷ ಬಂದಂತೆ ಮಾಡಿಕೊಳ್ಳಲಿ. ಸ್ವಲ್ಪ ಕಾಲ ನೀನು ಇಲ್ಲಿಯೇ, ಆತನ ಸನ್ನಿಧಿಯಲ್ಲಿಯೇ ಇದ್ದು ಬಿಡು. ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಸಂತೈಸಿದಳು. ಸ್ವಾಮಿಯ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು. ನಾನು ಅಮ್ಮನ ಮಾತಿನಂತೆ ಇದುವರೆಗೆ ಅಲ್ಲಿಯೇ ಇದ್ದೆ. ಇಂದು ಆಕೆ ‘ಸ್ವಾಮಿಗೆ ಸಮಾಧಾನವಾಗಿದೆ, ನೀನು ಹೋಗು’ ಎಂದು ನನ್ನನ್ನು ಕಳುಹಿಸಿಕೊಟ್ಟಳು. ನಾನು ಅಮ್ಮನಿಗೂ, ಸ್ವಾಮಿಗೂ ನಮಸ್ಕಾರ ಮಾಡಿ ಇಲ್ಲಿಗೆ ಹೊರಟು ಬಂದೆ. ಇದು ನಡೆದ ವಿಷಯ. ಆದರೆ ಇಲ್ಲಿ ಬಂದು ನೋಡಿದರೆ ಏನೇನೋ ವಿಚಿತ್ರವೆಲ್ಲ ನಡೆದಿದೆ’ ಎಂದು ಹೇಳಿದರು. ಅದನ್ನು 56 ಮೂರು ತಲೆಮಾರು ಕೇಳಿದವರೆಲ್ಲರೂ ಆಶ್ಚರ್ಯದಿಂದ ಸ್ತಂಭೀಭೂತರಾದರು. ಅನಂತರ ಅವರ ಕೈಯಿಂದಲೇ ಋತ್ವಿಜರಿಗೆ ದಕ್ಷಿಣೆ ವಿನಿಯೋಗವಾಯಿತು. ಬಂದಿದ್ದವರೆಲ್ಲ ದೇವರ ಮಹಿಮೆಯನ್ನೂ, ವೆಂಕಪ್ಪನವರ ದೈವಭಕ್ತಿಯನ್ನೂ ಕೊಂಡಾಡುತ್ತ ತಮ್ಮ ತಮ್ಮ ಮನೆಗೆ ಹಿಂದಿರುಗಿದರು. ಅಂದಿನಿಂದ ನಮ್ಮ ದೊಡ್ಡ ತಾತಂದಿರಿಗೆ ‘ದೇವರ ಲೀಲೆ ದೊಡ್ಡ ವೆಂಕಪ್ಪ’ ಎಂಬ ಹೆಸರು ರೂಢಿಗೆ ಬಂತು. ‘ದೇವರ ಲೀಲೆ ದೊಡ್ಡವೆಂಕಪ್ಪ’ನವರ ಪವಾಡದ ಕಥೆ ಎಲ್ಲೆಲ್ಲಿಯೂ ಹಬ್ಬಿ ಹರಡಿತು. ಕರ್ಣಾಕರ್ಣಿಕೆಯಾಗಿ ಆಗಿನ ಮೈಸೂರು ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರಿಗೆ ಅದು ತಿಳಿಯಿತು. ಆ ಕೊಡುಗೈ ದೊರೆ ‘ನನ್ನ ರಾಜ್ಯದಲ್ಲಿ, ನನ್ನ ಆಳ್ವಿಕೆಯಲ್ಲಿ ಭಗವದ್ಭಕ್ತರಾದ ಸದ್ಭ್ರಾಹ್ಮಣರೊಬ್ಬರು ಅನ್ನ ಬಟ್ಟೆಗಳ ಅಭಾವದಿಂದ ಇಂತಹ ಪಾಡು ಪಡಬೇಕೆ? ಇದು ನಮ್ಮ ರಾಜ್ಯಕ್ಕೂ, ಮನೆತನಕ್ಕೂ ಶ್ರೇಯಸ್ಕರವಲ್ಲ. ಅವರಿಗೆ ಶಾಶ್ವತವಾದ ಜೀವನಾಧಾರವನ್ನು ಕಲ್ಪಿಸಬೇಕು’ ಎಂದು ದೊಡ್ಡ ಮನಸ್ಸು ಮಾಡಿದರು. ದೊರೆಯ ಚಿತ್ತಕ್ಕೆ ಬಂದ ಮೇಲೆ ಕಾರ್ಯ ತಡವಾಗುತ್ತದೆಯೇ? ಮೊಳಕಾಲ್ಮುರುವಿಗೆ ಮೂರು ಮೈಲಿ ದೂರದಲ್ಲಿರುವ ಮರ್ಲಹಳ್ಳಿ ಎಂಬ ಸಣ್ಣ ಗ್ರಾಮವನ್ನು ಜೋಡಿಯಾಗಿ ಕೊಡುವಂತೆ ಅಪ್ಪಣೆಯಾಯಿತು. ಸನ್ನದನ್ನು ಬರೆದು ಜಿಲ್ಲೆಯ ಧಣಿ ಜಿಲ್ಲಾಧಿಕಾರಿಯ ಮೂಲಕ ವೆಂಕಟಪ್ಪನವರಿಗೆ ವಿನಿಯೋಗವಾಯಿತು. ಅಂದಿನಿಂದ ಅವರ ಸಾಂಸಾರಿಕ ಜೀವನ ತಾಪತ್ರಯವಿಲ್ಲದೆ ಸಾಗುವಂತಾಯಿತು. ಸುಬ್ಬು, ಅದರಲ್ಲಿ ನಮಗೂ ಹಕ್ಕಿದೆ, ಆದರೆ ಆ ಸಣ್ಣ ಆಸ್ತಿಯನ್ನು ಹರಿದು ಹಂಚಿದರೆ ಯಾರಿಗೂ ಸಾಲದಾಗುತ್ತದೆ. ಆದ್ದರಿಂದಲೇ ನಾವು ಅದಕ್ಕೆ ಕೈ ಹಾಕಿಲ್ಲ. ಹಾಗೆ ಹಾಕುವುದೂ ಬೇಡ. ನಮ್ಮ ವಂಶದಲ್ಲಿ ಒಂದು ಕುಟುಂಬವಾದರೂ ಹೊಟ್ಟೆ ಬಟ್ಟೆಗಳ ಅಡಚಣೆಯಿಲ್ಲದ ಸುಖವಾಗಿರಲಿ, ನಮ್ಮನ್ನು ಈಶ್ವರನು ಹೇಗೋ ಕಾಪಾಡುತ್ತಾನೆ”. * * * * 57 6. ‘ದೇವರಲೀಲೆ ವೆಂಕಪ್ಪ’ನವರು ವೈಷ್ಣವರಾದುದು “ಸುಬ್ಬೂ, ‘ದೇವರ ಲೀಲೆ ವೆಂಕಪ್ಪ’ ತಾತ ವೈಷ್ಣವರಾಗಿ ಹೋದರು. ಅದೊಂದು ರಮ್ಯವಾದ ಸಂಗತಿ. ಮಹಾರಾಜರಿಂದ ಜೋಡಿ ಗ್ರಾಮವನ್ನು ಪಡೆದ ಮೇಲೆ ಅವರು ಸಾಕಷ್ಟು ಆಢ್ಯರೆನಿಸಿ, ಲೌಕಿಕ, ಪಾರಲೌಕಿಕಗಳೆರಡರಲ್ಲೂ ಪ್ರಸಿದ್ಧರಾಗುವಂತಾಯಿತು. ಒಮ್ಮೆ ಮಾಧ್ಯ ಸಂಪ್ರದಾಯದ ಮಠಾಧಿಪತಿಗಳೊಬ್ಬರು ಮೊಳಕಾಲ್ಮುರುವಿಗೆ ದಯಮಾಡಿಸಿ ಕೆಲದಿನ ಅಲ್ಲಿಯೇ ಬಿಡಾರ ಹೂಡಿದರು. ಇದ್ದ ನಾಲ್ಕಾರು ಬ್ರಾಹ್ಮಣರ ಮನೆಗಳಲ್ಲಿ ಇವನು ಸ್ಮಾರ್ತ, ಇವನು ವೈಷ್ಣವ ಎಂಬ ಬೇಧವೇನೂ ಇರಲಿಲ್ಲ. ಎಲ್ಲರೂ ಶ್ರೀಮಠದಲ್ಲಿ ನಡೆಯುವ ಪೂಜೆಗಾಗಿ ಮಠಕ್ಕೆ ಹೋಗುತ್ತಿದ್ದರು. ಪೂಜೆಯಾದ ಮೇಲೆ ತೀರ್ಥ-ಪ್ರಸಾದಗಳನ್ನು ಸ್ವೀಕರಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ‘ದೇವರಲೀಲೆ ವೆಂಕಪ್ಪ’ನವರೂ ಎಲ್ಲರಂತೆ ಅಲ್ಲಿಗೆ ಹೋಗಿಬರುತ್ತಿದ್ದರು. ಅವರಿಗೆ ಆ ದೇವರು ಈ ದೇವರೆಂಬ ಭೇದವೇನೂ ಇಲ್ಲ. ಬೇರೆ ಬೇರೆ ಹೆಸರುಗಳಿಂದ ಕರೆಯುವ ದೇವರೊಬ್ಬನೇ ಎಂಬುದು ಅವರ ನಂಬಿಕೆ. ಅಲ್ಲಿಗೆ ಆಗಮಿಸಿದ್ದ ಮಾಧ್ವ ಸ್ವಾಮಿಗಳಲ್ಲಿ ಆತನಿಗೆ ಪೂಜ್ಯಭಾವನೆ. ಶ್ರೀಗಳಿಗೂ ಆತನ ಬ್ರಹ್ಮತೇಜಸ್ಸು, ಸಾತ್ವಿಕತೆ, ವಿನಯ, ನಮ್ರವಾದ ನಡೆ-ನುಡಿ ಇವುಗಳನ್ನು ಕಂಡು ತುಂಬ ಮೆಚ್ಚುಗೆ. ಒಂದು ದಿನ ರಾತ್ರಿ ವೆಂಕಪ್ಪನವರಿಗೆ ಒಂದು ಸ್ವಪ್ನವಾಯಿತು. ಆ ಸ್ವಪ್ನದಲ್ಲಿ ಮನೆದೇವರಾದ ವೆಂಕಟೇಶ್ವರನು ಕಾಣಿಸಿಕೊಂಡು ‘ಮಗೂ ನಾನು ಶಂಖ, ಚಕ್ರಧಾರಿ. ನನ್ನ ಪರಮಭಕ್ತನಾದ ನೀನೂ ಆ ಗುರುತುಗಳನ್ನು ಏಕೆ ಹೊಂದಿರಬಾರದು? ಈಗ ಬಂದಿರುವ ಮಠದ ಸ್ವಾಮಿಗಳಿಂದ ಮುದ್ರಾಧಾರನೆ ಮಾಡಿಸಿಕೊ. ನೀನು ಪುನೀತನಾಗುವೆ’ ಎಂದು ಹೇಳಿದಂತಾಯಿತು. ಅದೇ ದಿನವೇ ಸ್ವಾಮಿಗಳಿಗೂ ಸ್ವಪ್ನವಾಯಿತು. ವೆಂಕಪ್ಪನವರನ್ನು ಮುದ್ರಾಂಕಿತರನ್ನಾಗಿ ಮಾಡಬೇಕೆಂದು. ಸ್ವಾಮಿಯು ಸ್ವಪ್ನದಲ್ಲಿ ಮಾಡಿದ ಈ ಆಜ್ಞೆಯ ಉದ್ದೇಶವೇನೆಂಬುದು ವೆಂಕಪ್ಪನವರಿಗೆ ಅರ್ಥವಾಗಲಿಲ್ಲ. ಅವನ ಅಣತಿಯನ್ನು ಶಿರಸಾವಹಿಸುವುದು ಮಾತ್ರ ತಮ್ಮ ಕರ್ತವ್ಯ ಎಂದುಕೊಂಡರು. ಮರುದಿನ ಆತ ಸ್ವಾಮಿಗಳ ಸನ್ನಿಧಿಗೆ ಹೋದಾಗ, ಶ್ರೀಗಳು ವೆಂಕಪ್ಪನವರಿಗೆ ತಮ್ಮ ಸ್ವಪ್ನದ 58 ಮೂರು ತಲೆಮಾರು ವಿಚಾರವನ್ನು ತಿಳಿಸಿ ‘ವೆಂಕಪ್ಪನವರೇ! ಮುದ್ರಾಧಾರಣೆಯನ್ನು ಸ್ವೀಕರಿಸುವ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು? ನಾವೇನೂ ನಿಮ್ಮನ್ನು ಬಲವಂತಪಡಿಸುವುದಿಲ್ಲ. ನಾವು ಮತಪ್ರಚಾರಕ್ಕಾಗಿ ಇಲ್ಲಿಗೆ ಬಂದಿಲ್ಲ. ನಮಗೆ ಸ್ಮಾರ್ತ, ವೈಷ್ಣವರೆಂಬ ಭೇದವಿಲ್ಲ. ‘ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ’- ಇದೇ ನಮ್ಮ ನಿಜವಾದ ಭಾವನೆ. ಸ್ವಾಮಿಯಿಂದ ಸ್ವಪ್ನದಲ್ಲಿ ನನಗಾದ ಆಜ್ಞೆಯನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ಅದನ್ನು ನಡೆಸುವುದು, ಬಿಡುವುದು ನಿಮಗೆ ಸೇರಿದೆ’ ಎಂದು ಹೇಳಿದರು. ಆಗ ವೆಂಕಪ್ಪನವರು ತಮಗೂ ಪ್ರಭುವಿನ ಆಜ್ಞೆಯಾಗಿರುವುದಾಗಿ ತಮ್ಮ ಸ್ವಪ್ನವಿಚಾರವನ್ನು ಶ್ರೀಗಳಿಗೆ ತಿಳಿಸಿದರು. ‘ಪ್ರಭುವಿನ ಆಜ್ಞೆಯನ್ನು ಪ್ರತಿಭಟಿಸಲು ನಾನೆಷ್ಟರವನು? ಅವನ ಆಜ್ಞೆ ನಡೆದುಹೋಗಲಿ’ ಎಂದು ಬಿನ್ನವಿಸಿದರು. ಒಂದು ಶುಭದಿನ, ಶುಭಮುಹೂರ್ತದಲ್ಲಿ ವೆಂಕಪ್ಪನವರು ತಮ್ಮ ಸಂಸಾರ ಸಹಿತ ಮುದ್ರಾಧಾರಣೆಯ ಸಮಾರಂಭವನ್ನು ಮಾಡಿ ಮುಗಿಸಿದರು. ಆ ದಿನ ಮಠದಲ್ಲಿ ವಿಶೇಷ ಪೂಜೆ, ಸಂತರ್ಪಣೆಗಳು ನಡೆದುವು. ಅಂದಿನಿಂದ ‘ದೇವರಲೀಲೆ ವೆಂಕಪ್ಪ’ನವರು ವೈಷ್ಣವರಾಗಿ ಮೊಳಕಾಲ್ಮುರುವಿನಲ್ಲಿಯೇ ನೆಲೆಸಿದರು. ವಂಶಕ್ಕೆ ಹಿರಿಯರಾಗಿದ್ದ ಅವರು ‘ದೇವರ’ ರಂಗಮ್ಮ ಪ್ರತಿಷ್ಠಾಪಿಸಿದ್ದ ವೆಂಕರಮಣಸ್ವಾಮಿಯ ಕೈಂಕರ್ಯಕ್ಕೆ ಅಧಿಕಾರಿಗಳಾದರು. ಇಂದಿಗೂ ಆ ವಂಶದವರು ಯಥಾಶಕ್ತಿಯಾಗಿ ಸ್ವಾಮಿಯ ಸೇವೆಮಾಡುತ್ತ ಸಾತ್ವಿಕ ಸಂಪನ್ನರೆನಿಸಿ ಗೌರವದಿಂದ ಬಾಳುತ್ತಿದ್ದಾರೆ. ಮಹಾನುಭವರಾದ ದೊಡ್ಡ ವೆಂಕಪ್ಪನವರ ಖಾಸಾ ತಮ್ಮ ಪುಟ್ಟಲಕ್ಷ್ಮಪ್ಪ ನಮ್ಮ ಖಾಸಾ ತಾತ. ಆತ ಅಣ್ಣನಷ್ಟು ಪ್ರಸಿದ್ಧನಲ್ಲದಿದ್ದರೂ ಅಷ್ಟೇ ಸಾತ್ವಿಕರಾಗಿ, ಸಜ್ಜನರಾಗಿ, ಭಗವದ್ಭಕ್ತರಾಗಿ, ಆ ತಾಯಿಗೆ ತಕ್ಕ ಮಗನಾಗಿ, ಆ ಅಣ್ಣನಿಗೆ ತಕ್ಕ ತಮ್ಮನಾಗಿ ಬಾಳಿದವರು. ಹಿರಿಯರ ಆಸ್ತಿಯನ್ನೆಲ್ಲ ಹಿರಿಯ ಮಗನ ಪಾಲಿಗೆ ಬಿಟ್ಟು ಅವರು ಜೀವನ ನಿರ್ವಹಣಕ್ಕಾಗಿ ಸರ್ಕಾರಿ ನೌಕರಿಯನ್ನು ಆಶ್ರಯಿಸಿದರು. ಆದರೆ ನಿತ್ಯ ಕರ್ಮಾನುಷ್ಠಾನಗಳಲ್ಲಿ ಕಿಂಚಿತ್ತೂ ಲೋಪ ಬರದಂತೆ ಅವರು ನಡೆದುಕೊಂಡರು ಮುದ್ರಾಧಾರಣೆ ಮಾಡಿಕೊಂಡರೆಂದು ಆತನು ಕೊಂಚವೂ ಮನಸ್ಸಿಗೆ ಬೇಸರ ಮಾಡಿಕೊಳ್ಳಲಿಲ್ಲ. ಹಿಂದಿನಂತೆಯೇ ಅವರಲ್ಲಿ ಪೂಜ್ಯಭಾವ. ಸೋದರಪ್ರೇಮಗಳನ್ನು ಇಟ್ಟುಕೊಂಡಿದ್ದರು. ಆ ಅಣ್ಣನಿಗೆ ಎಲ್ಲೆಡೆಯಲ್ಲಿಯೂ ದೊರೆಯುತ್ತಲಿದ್ದ ಗೌರವಾದರಗಳನ್ನು ನೋಡಿ ಆತನಿಗೆ ಅಪಾರವಾದ ಹೆಮ್ಮೆ. ಅಸದೃಶವಾದ ಆನಂದ! ಮಹಾಮಹಿಮಳಾದ ತಾಯಿಗೆ ಮಗನಾಗಿ, ದೇವತಾ ಪುರುಷನಾದ ಅಣ್ಣನಿಗೆ ತಮ್ಮನಾಗಿ ಹುಟ್ಟಿದುದು ತನ್ನ ಪೂರ್ವಜನ್ಮದ ಸುಕೃತವೆಂದು ‘ದೇವರಲೀಲೆ ವೆಂಕಪ್ಪ’ನವರು ವೈಷ್ಣವರಾದುದು 59 ಆತನ ಭಾವನೆ. ವೆಂಕಪ್ಪನವರೂ ಈ ಭಾವನೆಯನ್ನು ತಮ್ಮ ನಡತೆ, ನಡವಳಿಕೆಗಳಿಂದ ಸಾರ್ಥಕಗೊಳಿಸಿದ್ದರು. ಇಬ್ಬರು ತಮ್ಮಂದಿರ ಮೇಲೂ ಅವರಿಗೆ ಪರಮವಾತ್ಸಲ್ಯ; ತಾಯಿ ಮಕ್ಕಳನ್ನು ಕಾಣುವಂತೆ ಅವರನ್ನು ಪ್ರೇಮಾದರಗಳಿಂದ ಕಾಣುತ್ತಿದ್ದರು. ಹರಿಕೃಪೆಯಿಂದ ಸೋದರರಿಬ್ಬರೂ ಸುಖಸಂತೋಷದಲ್ಲಿ ನಲಿಯುತ್ತಿರಲೆಂಬುದು ಅವರ ಹಾರೈಕೆ. ಮೂವರು ಒಟ್ಟಿಗೆ ಒಮ್ಮೆ ಕಲೆತಾಗ ವೆಂಕಟರಮಣದಾಸರು ತಮ್ಮಂದಿರೊಡನೆ ‘ಲಕ್ಷ್ಮಯ್ಯ, ದೇವಣ್ಣ ನಾವು ಏಕಕುಟುಂಬಗಳು. ನಮ್ಮ ಜೋಡಿಗ್ರಾಮ ನಮ್ಮ ಮೂವರಿಗೂ ಸೇರಿದ್ದು. ನೀವಿಬ್ಬರೂ ಮಕ್ಕಳೊಂದಿಗರು. ಅದರಿಂದ ಬರುವ ಆದಾಯದಲ್ಲಿ ನೀವಿಬ್ಬರೂ ನಿಮನಿಮಗೆ ಸಲ್ಲುವ ಭಾಗಗಳನ್ನು ತೆಗೆದುಕೊಂಡು ಸುಖವಾಗಿರಿ. ನಮ್ಮ ತಲೆಗಳಾದ ಮೇಲೆ ಎಂತಹ ಕಾಲ ಬರುತ್ತದೆಯೋ ಕಂಡವರಾರು? ವ್ಯವಹಾರ ಮತ್ತು ಧರ್ಮಗಳಿಗೆ ತಕ್ಕಂತೆ, ಧರ್ಮಮಯಿಯಾದ ನಮ್ಮ ತಾಯಿಯ ಮಕ್ಕಳಂತೆ ನಾವು ನಡೆದುಕೊಳ್ಳೋಣ. “ಧರ್ಮೋರಕ್ಷತಿ ರಕ್ಷಿತಃ’ ಎಂದು ಹಿರಿಯರು ಹೇಳುತ್ತಾರೆ. ಆ ಧರ್ಮಕ್ಕೆ ಲೋಪ ಬರದಂತೆ ನಿಮ್ಮ ಭಾಗವನ್ನು ನಿಮಗೆ ಕೊಟ್ಟ ಹೊರತು ನನ್ನ ಮನಸ್ಸಿಗೆ ನೆಮ್ಮದಿ ಇರದು’ ಎಂದು ಹೇಳಿದರು. ಅಣ್ಣನ ಉದಾರ ಹೃದಯವನ್ನು ಕಂಡು ತಮ್ಮಂದಿರ ಕಣ್ಣಲ್ಲಿ ನೀರು ತುಂಬಿತು. ಪುಟ್ಟಲಕ್ಷ್ಮಪ್ಪ ಅಣ್ಣನನ್ನು ಕುರಿತು ‘ವೆಂಕಣ್ಣ, ನೀನು ಹಿರಿಯ; ನಿನಗಾಗಿ- ನಿನ್ನ ತಪಸ್ಸಿನ ಫಲವಾಗಿ- ಈ ಜೋಡಿ ಗ್ರಾಮವು ಬಂದಿದೆ. ಅದರಲ್ಲಿನ ಭಾಗವನ್ನು ನೀನು ಕೊಟ್ಟರೂ ನಾವು ತೆಗೆದುಕೊಳ್ಳುವುದು ಧರ್ಮದೃಷ್ಟಿಯಿಂದ ಅನ್ಯಾಯವೆನಿಸುತ್ತದೆ. ವ್ಯವಹಾರ ದೃಷ್ಟಿಯಿಂದ ನೋಡಿದಾಗಲೂ ಆ ಜೋಡಿಯ ವರಮಾನ ಒಂದು ಕುಟುಂಬಕ್ಕೆ ಮಾತ್ರ ಕೊರತೆಯಿಲ್ಲದೆ ಜೀವನ ಮಾಡಲು ಸಾಕಷ್ಟಿದೆಯೇ ಹೊರತು ಹೆಚ್ಚೇನೂ ಇಲ್ಲ. ಇದರ ಮೇಲೆ ಈಗ ನಿನ್ನ ತಮ್ಮಂದಿರಿಬ್ಬರಿಗೂ ಬಂದಿರುವ ಕಷ್ಟವಾದರೂ ಏನು? ಸ್ವಾಮಿಯ ಕೃಪೆಯಿಂದ, ಅಮ್ಮನ ಮತ್ತು ನಿನ್ನ ಆಶೀರ್ವಾದದಿಂದ ನಮ್ಮ ಸಂಸಾರಯಾತ್ರೆ ಸುಖವಾಗಿ ಸಾಗಿಹೊಗುತ್ತಿದೆ. ಭಗವಂತ ಕಡೆಯವರೆಗೂ ಹೀಗೆಯೇ ನಡೆಸುವನೆಂದು ನಮಗೆ ಪೂರ್ಣ ನಂಬಿಕೆ ಇದೆ. ಒಂದು ವೇಳೆ ನಮಗೇನಾದರೂ ಕೊರತೆಯಾಗುವುದಾದರೆ ತಾಯಿಯ ಪ್ರತಿನಿಧಿಯಾಗಿ ನೀನು ಇದ್ದೇ ಇರುವೆಯಲ್ಲವೆ? ನಾವು ನಿನ್ನ ಬಳಿಗೆ ಓಡಿ ಬರುತ್ತೇವೆ. ನೀನಲ್ಲದೆ ನಮಗೆ ಇನ್ನಾವ ಆಶ್ರಯಸ್ಥಾನವಿದೆ? ನಾವು ಹೇಗಿದ್ದರೂ, ಎಲ್ಲಿದ್ದರೂ ನಮ್ಮನ್ನು ಕಾಪಾಡುವ ಭಾರ ನಿನ್ನದೇ ಅಲ್ಲವೆ? ಸದ್ಯಕ್ಕೆ ನಮಗೆ ಬೇಕಾಗಿರುವುದು ನಿನ್ನ ಅಂತಃಕರಣ, ವಿಶ್ವಾಸ, ಅವರೆಡಕ್ಕೂ ಹೆಚ್ಚಾಗಿ ಆಶೀರ್ವಾದ. ಇವೇ ನಮ್ಮ 60 ಮೂರು ತಲೆಮಾರು ರಕ್ಷಾಕವಚ, ನಾವು ಮೂವರು ಪವಿತ್ರಾತ್ಮಳೊಬ್ಬಳ ಹೊಟ್ಟೆಯಲ್ಲಿ ಹುಟ್ಟಿ ಒಂದಾಗಿದ್ದೇವೆ. ಇಂದೂ ಮುಂದೂ ಎಂದೆಂದಿಗೂ- ನಮ್ಮ ಜೀವನ ಪರ್ಯಂತ ಒಂದಾಗಿಯೇ ಇರೋಣ. ಅದನ್ನು ಬಿಟ್ಟು ನಾವು ಪರಸ್ಪರ ಬೇರೆ ಬೇರೆ ಎಂದುಕೊಂಡು ಆಸ್ತಿಯನ್ನು ಹರಿಹಂಚು ಮಾಡಿದರೆ ನಮ್ಮ ಕುಟುಂಬ ದೇವತೆಯಾದ ಅಮ್ಮನಿಗೆ ಸಮ್ಮತವಾದೀತೆ? ಲೋಕವಾದರೂ ನಮ್ಮನ್ನು ಏನೆಂದೀತು? ಮಹಾ ತಾಯಿ ‘ದೇವರ’ ರಂಗಮ್ಮನ ಮಕ್ಕಳು ಇಷ್ಟು ಕೀಳುಮಟ್ಟಕ್ಕಿಳಿದರೆ ಎಂದು ನಿಂದಿಸುವುದಿಲ್ಲವೆ? ನಮ್ಮ ಕುಟುಂಬ ಗೌರವಕ್ಕೆ ಊನವಾಗುವುದಿಲ್ಲವೆ? ಆದ್ದರಿಂದ ದಯವಿಟ್ಟು ಆಸ್ತಿ ವಿಭಾಗದ ಮಾತನ್ನು ಎತ್ತಬೇಡ. ನಾವು ಜೀವಂತವಾಗಿರುವವರೆಗೆ ನಾವು ಮೂವರೂ ಒಂದೇ. ನಮ್ಮ ತರುವಾಯ ನಮ್ಮ ಮುಂದಿನ ತಲೆಮಾರಿನವರು ಏನನ್ನಾದರೂ ಮಾಡಿ ಕೊಳ್ಳಲಿ, ‘ಏನೋ ದೇವಣ್ಣ. ನಿನ್ನ ಅಭಿಪ್ರಾಯವೇನು?’ ಎಂದು ಕೇಳಿದ. ದೇವಣ್ಣನೂ ರಂಗಮ್ಮನ ಮಗನೇ ಅಲ್ಲವೆ? ವೆಂಕಪ್ಪನ ತಮ್ಮನಲ್ಲವೆ? ಆನೆಯ ಹೊಟ್ಟೆಯಲ್ಲಿ ಸೂಲಂಗಿ ಹುಟ್ಟುತ್ತದೆಯೆ? ಧರ್ಮಿಷ್ಠನಾದ ಆತ ಲಕ್ಷ್ಮಣಪ್ಪ, ನನ್ನ ಮನಸ್ಸಿನಲ್ಲಿದ್ದುದನ್ನೇ ನೀನು ಹೇಳಿದೆ. ನಮಗೆ ಯಾವ ಜೋಡಿಜಹಗೀರುಗಳೂ ಬೇಡ. ವೆಂಕಣ್ಣನಂತಹ ಧರ್ಮನಿಧಿಯೇ ನಮಗಿರುವಾಗ ಗೇಣಗಲ ನೆಲಕ್ಕೆ ಆಸೆಪಡುವುದು ಮನುಷ್ಯತ್ವದ ಲಕ್ಷಣವೇ? ನೀನು ಹೇಳಿದಂತೆ ಹಿರಿಯಣ್ಣನ ಶುಭಾಶೀರ್ವಾದವೊಂದಿದ್ದರೆ ಸಾಕು. ಸಕಲ ಸೌಭಾಗ್ಯಗಳೂ ಇದ್ದಂತೆಯೇ. ನಿನ್ನ ಮಾತೇ ನನ್ನ ಮಾತು ಎಂದು ಉತ್ತರವಿತ್ತ. ತಮ್ಮಂದಿರ ಪ್ರೇಮ, ಆದ್ರ್ರಭಕ್ತಿ, ಹೃದಯವೈಶಾಲ್ಯಗಳನ್ನು ಕಂಡು ವೆಂಕಟರಮಣದಾಸರ ಮೃದು ಹೃದಯ ಕರಗಿ ನೀರಾಯಿತು. ಕಣ್ಣಿಂದ ಆನಂದಬಾಷ್ಪ ಹರಿಯಿತು. ಆ ಇಬ್ಬರ ತಲೆಯಮೇಲೂ ಕೈಯನ್ನಿಟ್ಟು ‘ಅಪ್ಪಾ, ನಿಮ್ಮಿಬ್ಬರ ಮೇಲೆ ಶ್ರೀವೆಂಕಟೇಶ್ವರನ ಅನುಗ್ರಹವಿದೆ. ಮಾತೃದೇವತೆಯ ಆಶೀರ್ವಾದವಿದೆ. ನೀವು ಸುಖವಾಗಿರಿ. ಏಳಿ, ಮಧ್ಯಾಹ್ನವಾಗಿದೆ. ಸ್ವಾಮಿಯ ಪ್ರಸಾದವನ್ನು ಎಲ್ಲರೂ ಸ್ವೀಕರಿಸೋಣ’ ಎಂದು ಹೇಳಿ ಮೇಲೆದ್ದರು. ಮೂವರೂ ಮಡಿಯುಟ್ಟು, ಮಾಧ್ಯಾಹ್ನಿಕವನ್ನು ಮಾಡಿ ಮುಗಿಸಿದರು. ವೆಂಕಟರಮಣದಾಸರು ಸ್ವಾಮಿಗೆ ನೈವೇದ್ಯವನ್ನು ಅರ್ಪಿಸಿದರು. ಅಂಗಾರಾಕ್ಷತೆಗಳಿಂದ ಶೋಭಿಸುತ್ತಿದ್ದ ಆತ, ಗಂಧಾಕ್ಷತೆಗಳಿಂದ ಶೋಭಿಸುವ ತಮ್ಮಂದಿರ ನಡುವೆ ಏಕಪಂಕ್ತಿಯಲ್ಲಿ ಕುಳಿತು, ಆನಂದದಿಂದ ಭೋಜನ ಮಾಡಿದರು. ಹರಿಹರರು ಒಂದೆಡೆ ಸೇರಿದಂತಿತ್ತು, ಆ ನೋಟ”. `ದೇವರಲೀಲೆ ವೆಂಕಪ್ಪ’ನವರು ವೈಷ್ಣವರಾದುದು 61 ಸುಬ್ಬು, ಆ ಪುಟ್ಟಲಕ್ಷ್ಮಪ್ಪನವರು ನಮ್ಮ ತಾತ, ನನ್ನ ತಂದೆ ಸುಬ್ಬಣ್ಣ, ಅವರ ಧರ್ಮಪತ್ನಿ ವೆಂಕಮ್ಮ ನನ್ನ ತಾಯಿ. ಅವರಿಬ್ಬರೂ ಸಂಪ್ರದಾಯ ಸಂಪನ್ನರು. ನನ್ನ ತಂದೆ ಸುಬ್ಬಣ್ಣ ತುಂಬ ಅನುಷ್ಠಾನಪರರು. ಶ್ರೀರಾಮಚಂದ್ರನ ಪರಮಭಕ್ತರು, ಆಜೀವ ಪರ್ಯಂತ ಶ್ರೀರಾಮನ ಸೇವೆಯನ್ನು ಹಲವು ಮುಖಗಳಿಂದ ಮಾಡಿ ಧನ್ಯರಾದವರು. ಅವರು ವ್ಯವಹಾರದಲ್ಲಿಯೂ ದಕ್ಷರಾಗಿದ್ದರು. ತಾಲ್ಲೂಕು ಕಛೇರಿಯಲ್ಲಿ ಸಾಮಾನ್ಯ ಕಾರಕೂನರಾಗಿ ಸೇರಿ ತಮ್ಮ ಕಾರ್ಯನಿಷ್ಠೆ. ಸತ್ಯಸಂಧತೆ, ಮೇಧಾಶಕ್ತಿಗಳಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ಕ್ರಮಕ್ರಮವಾಗಿ ಮೇಲೇರುತ್ತಾ ಹೋಗಿ ತುಂಬ ಜವಾಬ್ಧಾರಿಯ ಸ್ಥಾನವಾದ ಶಿರಸ್ತೇದಾರರಾಗಿಯೂ ನೇಮಕವಾದರು. ಸ್ವಲ್ಪ ಇಂಗ್ಲಿಷ್‌ ಬಂದಿದ್ದರೆ ಅಮಲ್ದಾರರೂ ಆಗುತ್ತಿದ್ದರು. ಅದು ಬಾರದ್ದರಿಂದ ಶಿರಸ್ತೇದಾರಿಕೆಯಲ್ಲಿಯೇ ಕಡೆಯವರೆಗೂ ಉಳಿಯಬೇಕಾಯಿತು. ಅದೇನೂ ಸಾಮಾನ್ಯವಾದುದಲ್ಲ. ಅಮಲ್ದಾರಿಕೆಯ ಅಧಿಕಾರದಿಂದ ಕೆಳಗಿನ ಮೆಟ್ಟಲು. ಸರ್ಕಾರಿ ಖಜಾನೆಯ ಆಡಳಿತವೆಲ್ಲ ಅವರ ಕೈಯಲ್ಲಿಯೇ. ಅಷ್ಟೇ ಅಲ್ಲ, ಕಛೇರಿಯ ಗುಮಾಸ್ತರು, ಹೋಬಳಿಯ ಶೇಕದಾರರು ಅವರಿಂದಲೇ ಅಪ್ಪಣೆಯನ್ನು ಪಡೆಯಬೇಕು. ಅವರು ಮನಸ್ಸು ಮಾಡಿದ್ದರೆ ಬೇಕಾದಷ್ಟು ಫಲವತ್ತಾದ ಜಮೀನುಗಳನ್ನು ಮಾಡಿಕೊಳ್ಳಬಹುದಿತ್ತು. ಸೊಗಸಾದ ಮನೆಯನ್ನು ಕಟ್ಟಿಸಬಹುದಿತ್ತು, ಹತ್ತಾರು ಸಾವಿರ ನಗದು ಹಣವನ್ನು ಕೂಡಿಹಾಕಬಹುದಿತ್ತು. ಕಷ್ಟವಿಲ್ಲದೆ, ನಿಷ್ಠುರವಿಲ್ಲದೆ ಬೇಕಾದಷ್ಟು ಬೆಳ್ಳಿ ಬಂಗಾರಗಳನ್ನು ಆಟವಾಡಿದಂತೆ ಸಂಗ್ರಹಿಸಿಡಬಹುದಿತ್ತು. ಆದರೆ ಅವರಿಗೆ ಅಂತಹ ಯೋಚನೆಯೇ ಎಂದೂ ಇರಲಿಲ್ಲ. ಸರ್ಕಾರದಿಂದ ಬರುವ ಸಂಬಳ ಕಷ್ಟದಿಂದ ಮಾಡಿದ ಜೀತದ ಫಲ. ಅದು ನ್ಯಾಯವಾದುದು, ಧರ್ಮವಾದುದು. ಬೇರೆ ರೀತಿಯಿಂದ ಬಂದ ಗಳಿಕೆಯೆಲ್ಲ ಆಕ್ರಮವಾದುದು, ಅನ್ಯಾಯವಾದುದು, ಅಧರ್ಮವಾದುದು. ಅಂತಹ ಸಂಪಾದನೆ ಮನುಷ್ಯನನ್ನು ನೀತಿರಹಿತನನ್ನಾಗಿ, ಸತ್ವಹೀನನನ್ನಾಗಿ ಮಾಡಿ ಅಧೋಗತಿಗೆ ಇಳಿಸುತ್ತದೆ. ಅವನು ಅಪವಿತ್ರನಾಗುತ್ತಾನೆ. ಅವನಿಗೆ ದೈವಕೃಪೆ ದೂರವಾಗುತ್ತದೆ. ಪಾಪಸಂಗ್ರಹಣೆಯಾಗುತ್ತದೆ. ಮನುಷ್ಯ ಜೀವನವೇ ಹಾಳಾಗಿ ಹೋಗುತ್ತದೆ. ಅಂಥವನು ಒಂದು ಪಶು, ಒಂದು ಪಿಶಾಚಿ. ಹಣಗಳಿಸಹೊರಟವನಿಗೆ ಧರ್ಮಭೀತಿ ಇಲ್ಲ. ಗುರುಹಿರಿಯರೆಂಬ ಗೌರವವಿಲ್ಲ, ಸ್ನೇಹಿತರೆಂಬ ವಿಶ್ವಾಸವಿಲ್ಲ; ಬಡಬಗ್ಗರೆಂಬ ಕರುಣೆಯಿಲ್ಲ; ಕಡೆಗೆ ಆತ್ಮಾಭಿಮಾನ ಕೂಡಾ ಇಲ್ಲ. ನರಕದ ಹೆದ್ದಾರಿಯಲ್ಲಿ ನಾಗಾಲೋಟ ಓಡಲು ಅವನು ಹಿಂಜರಿಯುವುದಿಲ್ಲ. ಆದರೆ ದರ್ಮಿಷ್ಠನಾದವನ ನಿರ್ಮಲ ಮನಸ್ಸು ಇಂತಹ 62 ಮೂರು ತಲೆಮಾರು ಹೇಯ ಕಾರ್ಯವನ್ನು ಹೇಗೆ ತಾನೇ ಮಾಡೀತು? ನನ್ನ ತಂದೆ ಧರ್ಮಜೀವಿ. ಆತ ತನ್ನ ಬಾಳಿನಲ್ಲಿ ಎಂದೂ ಅನ್ಯಾಯಕ್ಕೆ ಇಳಿಯಲಿಲ್ಲ. ಅಕ್ರಮವಾಗಿ ಯಾರಿಂದಲೂ ಒಂದು ಕಾಸನ್ನಾದರೂ ಮುಟ್ಟಲಿಲ್ಲ. ಆತ ಗೃಹಕೃತ್ಯಕ್ಕೆ ವೆಚ್ಚ ಮಾಡಿ ಉಳಿದ ಹಣವನ್ನು ಪ್ರತಿವರ್ಷದ ಕಡೆಯಲ್ಲಿಯೂ ಶ್ರೀರಾಮ ಪಟ್ಟಾಭಿಷೇಕವನ್ನು ಮಾಡಿ ಖರ್ಚುಮಾಡುತ್ತಿದ್ದ. ಯಥಾಶಕ್ತಿಯಾಗಿ ಅವರು ದಾನಧರ್ಮಗಳನ್ನು ನಡೆಸುತ್ತಿದ್ದರು. ಬಡತನವು ನಮ್ಮ ಮನೆತನಕ್ಕೆ ಮೀಸಲಾಗಿ ಬಂದಿದೆಯೇನೋ? ಎಷ್ಟೇ ಸಂಪಾದಿಸಿದರೂ ಅದು ಸನ್ಮಾರ್ಗದಲ್ಲಿ ವೆಚ್ಚವಾಗಿ ನಾಳೆಗೆ ಗತಿ ಏನು ಎಂಬ ಭಯ ತಪ್ಪಿದುದೇ ಅಲ್ಲ. ಇದು ನಮ್ಮ ಉದ್ಧಾರಕ್ಕಾಗಿಯೇ ಶ್ರೀರಾಮಚಂದ್ರನು ಅನುಗ್ರಹಿಸಿರುವ ಒಂದು ವರವೆಂದು ತೋರುತ್ತದೆ. ಅನ್ನ ಬಟ್ಟೆಗಳಿಗೆ ಅಭಾವವೇನೂ ಇಲ್ಲ. ಧರ್ಮಕಾರ್ಯಗಳಿಗೆ ಎಂದೂ ಲೋಪವಾಗಿಲ್ಲ; ಆದರೆ ನಾಲ್ಕು ಕಾಸು ಉಳಿಯಿತು, ಅದನ್ನು ಭದ್ರಪಡಿಸೋಣ ಎಂಬ ಸನ್ನಿವೇಶವೇ ಎಂದೂ ಸೃಷ್ಟಿಯಾಗಿಲ್ಲ. ನಮ್ಮ ತಂದೆ ಪುಣ್ಯಾತ್ಮ ಋಣಭಾರವಿಲ್ಲದೆ ಬಾಳಿದರು, ರೋಗ-ರುಜಿನಗಳಿಲ್ಲದೆ ದೃಢಕಾಯರಾಗಿದ್ದರು, ನಿರಂತರವೂ ಶ್ರೀರಾಮನ ಸೇವೆಯಲ್ಲಿ ನಿರತರಾಗಿದ್ದರು. ಅನಾಯಾಸವಾಗಿ ಶ್ರೀರಾಮನ ದಿವ್ಯಚರಣಗಳಲ್ಲಿ ಐಕ್ಯತೆಯನ್ನು ಪಡೆದರು. ಆತನನ್ನು ಸ್ಮರಿಸಿದ ಈ ದಿನವೇ ಸುದಿನ. * * * * 63 7. ವೆಂಕಣ್ಣಯ್ಯನವರ ಅಂತಿಮಯಾತ್ರೆ ತಂದೆಯಿಂದ ತನ್ನ ಹಿರಿಯರ ಕಥೆಯನ್ನು ಕೇಳಿದ ಸುಬ್ಬಣ್ಣನ ಎಳೆಯ ಮನಸ್ಸಿನ ಮೇಲೆ ಅದ್ಭುತವಾದ ಸತ್ಪರಿಣಾಮವುಂಟಾಯಿತು; ಆ ಸತ್ಪರಿಣಾಮ ಜೀವಮಾನದಲ್ಲೆಲ್ಲ ಅಚ್ಚೊತ್ತಿದಂತೆ ನಿಂತಿತು. ತನ್ನ ಹಿರಿಯರ ವಿಷಯದಲ್ಲಿ ಅಪಾರ ಗೌರವ, ಪೂಜ್ಯಭಾವಗಳು ಮೂಡಿದುದಲ್ಲದೆ, ತಾನೂ ಅವರು ನಡೆದ ಹಾದಿಯಲ್ಲೇ ನಡೆದು ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಆಸೆ, ಉತ್ಸಾಹಗಳು ಹೃದಯದಲ್ಲಿ ಮೂಡಿ ನೆಲೆಯಾಗಿ ನಿಂತುವು. ಪರಶುರಾಮಪುರಕ್ಕೆ ಬಂದ ಮೇಲೆ ವೆಂಕಣ್ಣಯ್ಯನವರ ಬಾಳು ಶಾಂತವಾಗಿ, ನಿರಾತಂಕವಾಗಿ ನಡೆದುಕೊಂಡು ಹೋಗುತ್ತಿತ್ತು. ಆದರೆ ಮಾನವ ಜೀವನವೆಂಬುದು ನೇರವಾದ ಹಾದಿಯೇನೂ ಅಲ್ಲ. ಬೆಳಕು-ಕತ್ತಲೆಗಳಂತೆ, ಉಬ್ಬು-ತಗ್ಗುಗಳಂತೆ ದ್ವೈತವಾದುದು. ಅವರು ಕೆಲಸದಿಂದ ನಿವೃತ್ತರಾಗುವ ಸಮಯ ಹತ್ತಿರವಾಗುತ್ತಿದ್ದಂತೆ ದುರ್ವಿಧಿ ಅವರನ್ನು ಛೇಡಿಸತೊಡಗಿತು. ಅವರ ತಮ್ಮ ಲಕ್ಷ್ಮಪ್ಪ ಅವರಿಗೆ ತುಂಬ ಅಚ್ಚುಮೆಚ್ಚು. ಭೀಮಸೇನನಂತಿದ್ದ ಆ ಲಕ್ಷ್ಮಪ್ಪ ಮೇಲ್ನೋಟಕ್ಕೆ ಒರಟನಾಗಿ ಕಾಣಿಸಿದರೂ ಆತನ ಹೃದಯ ಬಹು ಮೃದುವಾದುದು. ಆತನ ಅಂತಃಕರಣ ಬಹು ಶುದ್ಧವಾದದ್ದು. ಅಣ್ಣನಲ್ಲಿ ಪರಮ ಪೂಜ್ಯ ಭಾವನೆ. ಅತ್ತಿಗೆಯಲ್ಲಿ ಮಾತೃಸಮಾನ ಗೌರವ, ಮಕ್ಕಳ ಮೇಲೆ ಬಹು ಪ್ರೀತಿ, ಮರೆಮೋಸಗಳ ಗಂಧವನ್ನೂ ಅರಿಯದ ನಿಷ್ಕಳಂಕ ಹೃದಯ! ನಾಗರಿಕನಲ್ಲದಿದ್ದರೂ ಸುಸಂಸ್ಕೃತ, ಅಪ್ಪಟ ಬ್ರಹ್ಮಚಾರಿ, ಹೆಣ್ಣನ್ನು ದುರ್ಭಾವನೆಯಿಂದ ಎಂದೂ ಕಣ್ಣೆತ್ತಿ ನೋಡಿದವನಲ್ಲ. ವ್ಯವಹಾರದಲ್ಲಿ ಅಷ್ಟೇನೂ ಬುದ್ಧಿವಂತನಲ್ಲ. ಆದರೆ ಮೂರ್ಖನಲ್ಲ. ತನಗೆ ಸಂಬಂಧವಿಲ್ಲದ ವಿಷಯದಲ್ಲಿ ಎಂದೂ ಕೈ ಹಾಕುವವನಲ್ಲ. ಭೀಮಕಾಯಕ್ಕೆ ತಕ್ಕಂತೆ ಧೈರ್ಯದ ಎದೆಗುಂಡಿಗೆ. ಭಯವೆಂದರೇನೆಂಬುದನ್ನು ಅವನರಿಯ. ಪರರ ಕಷ್ಟಗಳಲ್ಲಿ ಸದಾ ಸಹಾಯಕ. ಸಜ್ಜನನಾದ ದೈವಭಕ್ತನೆಂದು ಕೀರ್ತಿ ಪಡೆದಿದ್ದ ಈ ತಮ್ಮನ ಮೇಲೆ ವೆಂಕಣ್ಣಯ್ಯನವರಿಗೆ ಅಪಾರವಾದ ಪ್ರೀತಿ. ಆರೋಗ್ಯವೇ ಮೂರ್ತಿವೆತ್ತಂತಿದ್ದ ಈ ಪ್ರೀತಿಯ ತಮ್ಮ ಇದ್ದಕ್ಕಿದ್ದಂತೆಯೇ ಅನಾರೋಗ್ಯವೆಂದು ಮಲಗಿದ. ಇದನ್ನು 64 ಮೂರು ತಲೆಮಾರು ಕಂಡು ವೆಂಕಣ್ಣಯ್ಯನವರಿಗೆ ಗಾಬರಿಯಾಯಿತು. ಸಾಧ್ಯವಾದಷ್ಟು ಆತನ ಬಳಿಯಲ್ಲೇ ಇದ್ದು, ಎಳೆಯ ಮಗುವಿನಂತೆ ಆತನನ್ನು ನೋಡಿಕೊಂಡರು. ಆತನ ಖಾಯಿಲೆಯ ಸುದ್ದಿ ಚೆನ್ನಮ್ಮನಾಗತಿಹಳ್ಳಿಯನ್ನು ಮುಟ್ಟುತ್ತಲೇ ಅಲ್ಲಿನ ಅಪ್ಪಾಜೋಯಿಸರು ಧಾವಿಸಿ ಬಂದರು ಪರಶುರಾಮಪುರಕ್ಕೆ. ಆದರೆ ಕಾಲ ಮಿಂಚಿತ್ತು. ಅವರು ಬರುವ ಹೊತ್ತಿಗೆ ಲಕ್ಷ್ಮಪ್ಪನವರ ಇಹಯಾತ್ರೆ ಮುಗಿದಿತ್ತು; ಆತನ ಆತ್ಮ ಭಗವಂತನಲ್ಲಿ ಲೀನವಾಗಿತ್ತು; ಪ್ರಾಣಪಕ್ಷಿ ಹಾರಿ ಹೋಗಿತ್ತು. ಪುಣ್ಯಾತ್ಮನಾದ ಲಕ್ಷ್ಮಪ್ಪನಿಗೆ ಸತ್ಪುರುಷ ಲಭ್ಯವಾದ ಅನಾಯಾಸ ಮರಣ ಲಭಿಸಿತು. ವೆಂಕಣ್ಣಯ್ಯನವರು ತಮ್ಮನ ಅಂತ್ಯಕರ್ಮಗಳನ್ನೆಲ್ಲವನ್ನೂ ಸಾಂಗವಾಗಿ ನೆರವೇರಿಸಿದರು. ಈ ತಮ್ಮನ ಮರಣದಿಂದ ಮನಸ್ಸಿಗೆ ಆದ ಆಘಾತ ಅವರ ಹೃದಯದ ಮೇಲೆ ಚಿರಮುದ್ರೆಯನ್ನು ಒತ್ತಿತ್ತು. ಆದರೂ ಜ್ಞಾನಿಗಳಾದ ಅವರು ಕೆಲ ಕಾಲದಲ್ಲಿಯೇ ಮನಸ್ಸನ್ನು ಸಮಾಧಾನಸ್ಥಿತಿಗೆ ತಂದುಕೊಂಡರು. ವೆಂಕಣ್ಣಯ್ಯನವರು ಸರ್ಕಾರದ ಸೇವೆಯಿಂದ ನಿವೃತ್ತರಾಗುವ ಕಾಲ ಸನ್ನಿಹಿತವಾಗುವ ಸಂದರ್ಭ. ಮುಂದೆ ಎಲ್ಲಿ ನೆಲೆ ನಿಲ್ಲಬೇಕೆಂಬ ಯೋಚನೆ ಇದುವರೆಗೆ ಅವರ ತಲೆ ಹೊಕ್ಕಿರಲಿಲ್ಲ. ನೌಕರಿ ಇದ್ದ ಕಡೆ ಇದ್ದು ಕಾಲಕಳೆಯಿತು. ಇನ್ನು ಮುಂದೆ ಹಾಗಿರುವಂತಿಲ್ಲ. ನಿವೃತ್ತನಾದ ಮೇಲೆ ಎಲ್ಲಿ ನಿಲ್ಲಬೇಕು? ಪರಶುರಾಮಪುರದಲ್ಲಿಯೇ? ಅಲ್ಲೇನಿದೆ? ಮನೆಯೇ? ಜಮೀನೆ? ಏನೂ ಇಲ್ಲ. ಹೋಬಳಿಯ ದೊರೆಯಾಗಿ ಬಾಳಿದ ಊರಿನಲ್ಲಿ ಅನಾಮಧೇಯನಂತೆ ಪರರನ್ನು ಆಶ್ರಯಿಸಿ ಬಾಳುವುದು ಗೌರವಕ್ಕೆ ಕುಂದು. ತಾನು ಹುಟ್ಟಿದೂರು ಮೊಳಕಾಲ್ಮುರು. ಅದು ತಾಲ್ಲೂಕು ಪ್ರದೇಶ. ಬರುವ ಅಲ್ಪ ಪಿಂಚಣಿಯಲ್ಲಿ ಕುಟುಂಬ ನಡೆಸಲು ಸಾಧ್ಯವಿಲ್ಲ. ಮನ್ನೇಕೋಟೆಯಲ್ಲಿ ತಮ್ಮವರು ಇದ್ದಾರೆ. ‘ದೇವರ’ ರಂಗಮ್ಮನ ಮೈದುನ ಅಚ್ಚಪ್ಪನ ಸಂತತಿಯವರು ಅಲ್ಲಿ ಶಾನುಭೋಗರಾಗಿದ್ದಾರೆ. ಅವರು ಜ್ಞಾತಿಗಳಷ್ಟೇ ಅಲ್ಲ. ಅವರ ಶಾನುಭೋಗಿಕೆಯಲ್ಲಿ ವೆಂಕಣ್ಣಯ್ಯನವರಿಗೂ ಹಕ್ಕು ಇದೆ. ಆದರೆ ಎರಡು ತಲೆಗಳು ಕಳೆದುಹೋಗಿ ಈಗ ಆ ಹಕ್ಕನ್ನು ಸ್ಥಾಪಿಸುವಂತಿಲ್ಲ. ಆದರೂ ಅಲ್ಲಿಗೆ ಹೋದರೆ ಅಲ್ಪಸ್ವಲ್ಪ ಅನುಕೂಲ ಸಿಕ್ಕಬಹುದು. ಆ ಸಣ್ಣ ಹಳ್ಳಿಯಲ್ಲಿ ಜೀವನಾವಶ್ಯಕ ಸಾಮಗ್ರಿಗಳು ಸುಲಭ ನೆಲೆಯಲ್ಲಿ ದೊರೆಯಬಹುದು. ಇನ್ನು ನಾಲ್ಕಾರು ವರ್ಷಗಳನ್ನು ಕಳೆದರೆ ಹಿರಿಯ ಮಗ ಸುಬ್ಬಣ್ಣ ಕೈಗೆ ಬರುತ್ತಾನೆ; ಸರ್ಕಾರದಲ್ಲಿ ಏನಾದರೂ ಕೆಲಸ ಸಿಗುತ್ತದೆ. ಅವನ ಸಂಬಳ, ತಮ್ಮ ಪಿಂಚಣಿ ಸೇರಿದರೆ ತಾಪತ್ರಯವಿರುವುದಿಲ್ಲ - ಹೀಗೆಂದು ಯೋಚಿಸಿಕೊಂಡರು. ನಿವೃತ್ತಿಯ ದಿನ ಬಂದೇ ಬಂತು. ಪರಶುರಾಮಪುರದ ಹೋಬಳಿಯ ವೆಂಕಣ್ಣಯ್ಯನವರ ಅಂತಿಮಯಾತ್ರೆ 65 ಜನರು ಇಂತಹ ಒಳ್ಳೆಯ ಅಧಿಕಾರಿ ತಮ್ಮನ್ನಗಲಿ ಹೋಗುತ್ತಿರುವುದಕ್ಕಾಗಿ ತುಂಬ ವ್ಯಥೆ ಪಟ್ಟರು. ತಮ್ಮ ಕೈಲಾದ ಕಡೆಯ ಸೇವೆಯ ಕಾಣಿಕೆಯನ್ನು ತುಂಬು ಹೃದಯದಿಂದ ಅರ್ಪಿಸಿದರು. ಸ್ವಲ್ಪ ಹೆಚ್ಚು ಕಡಿಮೆ ಆರು ತಿಂಗಳು ಸಂಸಾರ ನಿರ್ವಹಣೆಗೆ ಆಗುವಷ್ಟು ಸಾಮಗ್ರಿಗಳು ಶೇಖರವಾದುವು. ಮೈಲಾರಪ್ಪನವರು ತಮ್ಮ ಮನೆಯಲ್ಲಿ ಒಂದು ದಿನದ ಔತಣವನ್ನು ಏರ್ಪಡಿಸಿದ್ದರು. ಎಲ್ಲರಿಗಿಂತಲೂ ಅವರಿಗೆ ಹೆಚ್ಚು ವ್ಯಥೆ, ವೆಂಕಣ್ಣಯ್ಯನವರಿಂದ ಅಗಲುವುದಕ್ಕೆ. ವೆಂಕಣ್ಣಯ್ಯನವರಿಗೂ ಏಕಜೀವದಂತಿದ್ದ ಅವರನ್ನಗಲಲು ಅಷ್ಟೇ ಕಷ್ಟವಾಗಿತ್ತು. ಇಬ್ಬರಿಗೂ ಧಾರೆಯಾಗಿ ಕಂಬನಿ ಹರಿಯಿತು. ಒಬ್ಬರನ್ನೊಬ್ಬರು ಪ್ರೇಮದಿಂದ ಆಲಿಂಗಿಸಿದರು. ಉಭಯ ಸಂಸಾರದ ಹೆಣ್ಣು ಮಕ್ಕಳಲ್ಲಿಯೂ ಅದೇ ಬಗೆಯಾದ ಗೆಳೆತನ ಪ್ರಾರಂಭವಾಗಿತ್ತು. ಆದ್ದರಿಂದ ಅವರೂ ಪರಸ್ಪರ ಕಣ್ಣಿರಿಡುತ್ತಲೇ ಒಬ್ಬರಿಂದೊಬ್ಬರು ಬೀಳ್ಕೊಂಡರು. ವೆಂಕಣ್ಣಯ್ಯನವರು ಪರಶುರಾಮಪುರದಿಂದ ತಾವು ಹೊರಟು ಬರುವ ದಿನವನ್ನು ಮೊದಲೇ ಮನ್ನೇಕೋಟೆಯ ಶಾನುಭೋಗರಿಗೆ ತಿಳಿಸಿದ್ದರು. ಹೀಗಾಗಿ ಬಾಲಕೃಷ್ಣಪ್ಪನವರು ವೆಂಕಣ್ಣಯ್ಯನವರ ವಾಸಕ್ಕೆ ಅನುಕೂಲವಾದ ಮನೆಯೊಂದನ್ನು ನೋಡಿ, ಅದನ್ನು ಚೊಕ್ಕಟಪಡಿಸಿ, ಸಿದ್ಧಪಡಿಸಿದ್ದರು. ಪರಶುರಾಮಪುರದ ಮೈಲಾರಪ್ಪನವರು ವೆಂಕಣ್ಣಯ್ಯನವರ ಪ್ರಯಾಣಕ್ಕೆ, ಸಾಮಾನು ಸಾಗಾಣಿಕೆಗೆ ಅವಶ್ಯವಾದಷ್ಟು ಗಾಡಿಗಳನ್ನು ಬಾಡಿಗೆಯಿಲ್ಲದೆ ಏರ್ಪಡಿಸಿದ್ದರು. ಹೊರಡುವ ದಿನ ಮತ್ತೊಮ್ಮೆ ಔತಣದ ಭೋಜನ ಏರ್ಪಾಡಾಯಿತು. ಭೋಜನವಾದ ಮೇಲೆ ಒಂದು ಜೊತೆ ಉತ್ತಮ ರೀತಿಯ ಪಂಚೆಯನ್ನೂ, ಒಂದು ಜೊತೆ ಹೊದೆಯುವ ಮೇಲುಕೋಟೆ ಉತ್ತರೀಯವನ್ನೂ, ಹತ್ತು ರೂಪಾಯಿಗಳನ್ನೂ ಫಲತಾಂಬೂಲಗಳೊಂದಿಗೆ ಸಮರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿದರು. ಅನಂತರ ಎದ್ದು ಕೈ ಜೋಡಿಸಿ ‘ಸ್ವಾಮಿ. ತಮ್ಮ ಪಾದಧೂಳಿಯಿಂದ ನನ್ನ ಮನೆ, ಮನಸ್ಸುಗಳು ಪಾವನವಾದುವು. ತಮ್ಮ ಸಹವಾಸದಲ್ಲಿ ಕಳೆದ ಕಾಲ ನನ್ನ ಜನ್ಮದಲ್ಲಿಯೇ ಪರಮಪುಣ್ಯಕರವಾದುದು. ನನ್ನ ಜೀವಿತಕಾಲದಲ್ಲಿ ನಾನು ತಮ್ಮಂತಹ ನಿಸ್ಪೃಹರಾದ ಅಧಿಕಾರಿಗಳನ್ನು ಕಾಣಲಿಲ್ಲ. ಇದು ಬರಿಯ ಆಡಂಬರದ ಔಪಚಾರಿಕ ಮಾತಲ್ಲ. ನನ್ನ ಹೃದಯದ ಆಳದಿಂದ ಮೇಲೆದ್ದು ಬರುತ್ತಿರುವ ಮಾತುಗಳಿವು. ನಿಮ್ಮನ್ನು ಅಗಲುವುದು ನನಗೆ ತುಂಬ ಸಂಕಟಕರ. ಆದರೆ ಅನಿವಾರ್ಯ. ನನ್ನ ಮತ್ತು ನನ್ನ ಕುಟುಂಬದವರ ಮೇಲೆ ನಿಮ್ಮ ಕೃಪಾಶೀರ್ವಾದವಿರಲಿ. ತಾಯಿ ಹನುಮಕ್ಕಮ್ಮನವರೇ, ಪುಣ್ಯಶೀಲೆಯಾದ ನೀವು ಕೂಡ ನಮ್ಮನ್ನೆಲ್ಲಾ ಆಶೀರ್ವದಿಸಿ, 66 ಮೂರು ತಲೆಮಾರು ಎಂದು ಗದ್ಗದ ಕಂಠದಿಂದ ನುಡಿದರು. ಆತನ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಮೈಲಾರಪ್ಪನೆಂದರೆ ಸಾಮಾನ್ಯ ಶಾನುಭೋಗನಲ್ಲ. ಆತ ಘಟಾನುಘಟಿ, ವ್ಯವಹಾರದಕ್ಷ. ರೈತರಿಗೆ ಆತನನ್ನು ಕಂಡರೆ ತುಂಬ ವಿಶ್ವಾಸ, ಗೌರವ, ಅಷ್ಟೇ ಭಯ ಕೂಡ. ‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂಬ ಸ್ವಭಾವದವನು ಆತ. ಆತನ ವಿಶ್ವಾಸವನ್ನು ಸಂಪಾದಿಸಿದವರು ಸುರಕ್ಷಿತ : ಎದುರು ಹಾಕಿಕೊಂಡವರಿಗೆ ಉಳಿಗಾಲವಿಲ್ಲ. ಆತನ ಹೆಸರು ಸುತ್ತು ಮುತ್ತಿನ ಪ್ರದೇಶದಲ್ಲಿ ಪ್ರಸಿದ್ದವಾಗಿತ್ತು. ಆತನ ವಿಷಯದಲ್ಲಿ ಜನ ಸಾಮಾನ್ಯರಿಗಷ್ಟೇ ಅಲ್ಲ, ದೊಡ್ಡ ಅಧಿಕಾರಿಗಳಿಗೆ ಕೂಡ ಭಯ ಗೌರವಗಳಿದ್ದುವು. ತಾಲ್ಲೂಕು ದಣಿ ಅಮಲ್ದಾರ, ಜಿಲ್ಲೆಯ ದೊರೆ ಡೆಪ್ಯೂಟಿ ಕಮೀಷನರ್ ಕೂಡ ಅವರಲ್ಲಿ ನಯ ಗೌರವಗಳಿಂದ ವರ್ತಿಸುತ್ತಿದ್ದರು. ಅವರ ಸಹಾಯ, ಸಹಕಾರಗಳಿಲ್ಲದೆ ಯಾವ ಸರ್ಕಾರೀ ಕೆಲಸವೂ ನಡೆಯುತ್ತಿರಲಿಲ್ಲ. ಇಂತಹ ಪ್ರಭಾವಶಾಲಿ ವೆಂಕಣ್ಣಯ್ಯನವರ ಹತ್ತಿರ ಶ್ರೀರಾಮಚಂದ್ರನ ಬಳಿಯಲ್ಲಿ ಆಂಜನೇಯನಂತೆ ಭಕ್ತಿ ವಿಶ್ವಾಸಗಳಿಂದ, ನಮ್ರವಾಗಿ ನಡೆದುಕೊಳ್ಳುತ್ತಿದ್ದ. ಇದನ್ನು ಗಮನಿಸಿದರೆ ವೆಂಕಣ್ಣಯ್ಯವರ ದೈವೀ ತೇಜಸ್ಸು ಎಷ್ಟು ಉಚ್ಚಮಟ್ಟದ್ದೆಂದು ಅರ್ಥವಾಗುತ್ತದೆ. ವೆಂಕಣ್ಣಯ್ಯನವರಿಗೂ ಆತನಲ್ಲಿ ಅಷ್ಟೇ ಪ್ರೀತಿ, ಗೌರವ. ಆತನನ್ನು ತಮ್ಮ ಆತ್ಮಬಂಧುವಿನಂತೆ ಭಾವಿಸುತ್ತಿದ್ದರು. ಆತನಿಂದ ಅಗಲುವುದು ಅವರಿಗೂ ಅಪಾರವಾದ ನೋವನ್ನುಂಟುಮಾಡಿತು. ಅವರು ‘ಮೈಲಾರಪ್ಪ, ನಿಮ್ಮನ್ನಗಲುವುದು ನನಗೂ ತುಂಬ ಕಷ್ಟ. ನೀವು ನನ್ನ ಕುಟುಂಬದವರೆಂದೇ ನಾನು ಭಾವಿಸಿದ್ದೆ. ಇದುವರೆಗೆ ನೀವು ನನ್ನ ಸಂಸಾರವನ್ನೆಲ್ಲ ಹೊಟ್ಟೆಯಲ್ಲಿಟ್ಟುಕೊಂಡು ಸಂರಕ್ಷಣೆ ಮಾಡಿದ್ದೀರಿ. ನಿಮ್ಮ ಋಣಭಾರವನ್ನು ನಾನು ತೀರಿಸಲು ಸಾಧ್ಯವಿಲ್ಲ. ನಿಮ್ಮಿಂದ ಬೀಳ್ಕೊಳ್ಳುವುದು ಅನಿವಾರ್ಯವಾಗಿದೆ. ಇದು ಪ್ರಪಂಚ. ಇದರಲ್ಲಿ ಹೀಗೆಲ್ಲ ನಡೆಯತಕ್ಕದ್ದೇ. ಸಂಸಾರಪ್ರವಾಹದಲ್ಲಿ ಸಿಕ್ಕಿ ಬಿದ್ದವರ ಪಾಡೆಲ್ಲ ಇಷ್ಟೆ. ಪ್ರವಾಹದೊಂದಿಗೆ ಎಲ್ಲಿಂದಲೋ ಹರಿದು ಬಂದ ಎರಡು ಮರದ ತುಂಡುಗಳು ಸ್ವಲ್ಪ ದೂರ ಜೊತೆಯಾಗಿದ್ದು ಮತ್ತೆ ಬೇರೆ ಬೇರೆಯಾಗಿ ಎಲ್ಲಿಗೋ ಹೋಗಿಬಿಡುವಂತೆ ಈ ಸಂಸಾರದ ಹಣೆಬರಹ. ಇದೆಲ್ಲ ದೈವೇಚ್ಛೆ. ನಾವು ಸೇರಿರುವುದೂ, ಅಗಲುವುದೂ ಅವನಿಚ್ಛೆ. ‘ಕಾ ತತ್ರ ಪರಿದೇವನಾ?’ - ಇದಕ್ಕೇಕೆ ಚಿಂತೆ?- ಇದೇ ವೇದಾಂತ ಹೇಳುತ್ತಿರುವುದು. ‘ದುಃಖೇಶ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ | ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ||’ -ಈ ಗೀತಾವಾಕ್ಯವನ್ನು ಸ್ಮರಿಸಿ ಮನಸ್ಸನ್ನು ಸಮಾಧಾನಗೊಳಿಸಿಕೊಳ್ಳಬೇಕು. ಆಧ್ಯಾತ್ಮಿಕ ತಳಹದಿಯಿಲ್ಲದ ವೆಂಕಣ್ಣಯ್ಯನವರ ಅಂತಿಮ ಯಾತ್ರೆ 67 ಜೀವನ ಆಧಾರವಿಲ್ಲದ ದೋಣಿಯಂತೆ, ಅಲೆಗಳಿಗೆ ಸಿಕ್ಕಿ, ಅಲ್ಲೋಲಕಲ್ಲೋಲವಾಗುತ್ತದೆ, ಜೀವನನೌಕೆಯನ್ನು ಮನೋನಿಗ್ರಹವೆಂಬ ಹುಟ್ಟಿನ ಸಹಾಯದಿಂದ ಅಂಕೆಯಲ್ಲಿಟ್ಟುಕೊಳ್ಳಬೇಕು. ನೀವು ಪ್ರಪಂಚ, ಪರಮಾತ್ಮಗಳೆರಡನ್ನೂ ಬಲ್ಲವರು. ನಾನು ಹೆಚ್ಚು ಹೇಳಬೇಕಾಗಿಲ್ಲ. ಸಮಾಧಾನವನ್ನು ತಂದುಕೊಳ್ಳಿ’ ಎಂದು ಹೇಳಿದರು. ತಮ್ಮನ್ನು ಪ್ರೀತಿ, ವಿಶ್ವಾಸಗಳಿಂದ ಆಹ್ವಾನಿಸಿದ ಗ್ರಾಮಮುಖಂಡರು ಮನೆಗಳಿಗೆ ವೆಂಕಣ್ಣಯ್ಯನವರು ತಮ್ಮ ಕುಟುಂಬದೊಡನೆ ಹೋಗಿ ಅವರಿಂದ ಸತ್ಕೃತರಾಗಿ ಬೀಳ್ಕೊಂಡರು. ಸಾಮಾನು, ಸರಂಜಾಮುಗಳನ್ನು ತುಂಬಿದ ಗಾಡಿಯೊಡನೆ ಮನೆಯವರು ಕುಳಿತುಕೊಳ್ಳುವುದಕ್ಕೆಂದೇ ಏರ್ಪಡಿಸಿದ್ದ ಕಮಾನಿನ ಗಾಡಿ ಸಿದ್ಧವಾಗಿತ್ತು. ತಮ್ಮನ್ನು ಸಾಗಕಳುಹಿಸುವುದಕ್ಕಾಗಿ ಬಂದಿದ್ದ ಜನಸಂದಣಿಯನ್ನು ಆಶೀರ್ವದಿಸಿ, ಬೀಳ್ಕೊಟ್ಟು ಎಲ್ಲರೂ ಗಾಡಿಯಲ್ಲಿ ಕುಳಿತರು. ಎಷ್ಟು ಜಾಗ್ರತೆ ಹೊರಡಬೇಕೆಂದರೂ ಮಧ್ಯಾಹ್ನ ನಾಲ್ಕು ಘಂಟೆಯಾಯಿತು. ಮೈಲಾರಪ್ಪನವರು ತಳವಾರನೊಂದಿಗೆ ಮೇಲುಸ್ತುವಾರಿಗಾಗಿ ಅವರೊಡನೆಯೇ ಹೊರಟರು. ಸಾಯಂಕಾಲಕ್ಕೆ ಚನ್ನಮ್ಮನಾಗತಿಹಳ್ಳಿಯಲ್ಲಿ ವಸತಿಯಾಯಿತು. ಅಳಿಯ ರಾಮಣ್ಣ, ಮಗಳು ಸುಬ್ಬಮ್ಮ ಎಲ್ಲರನ್ನೂ ಸಂತೋಷದಿಂದ ಆದರಿಸಿ ರಾತ್ರಿ ಸುಗ್ರಾಸ ಭೊಜನ ಮಾಡಿಸಿದರು. ಮರುದಿನ ಬೆಳಿಗ್ಗೆ ಕೋಳಿಕೂಗುವ ಮುನ್ನವೇ ಸ್ನಾನಾಹ್ನಿಕಗಳನ್ನು ಪೂರೈಸಿ ಪ್ರಯಾಣವನ್ನು ಮುಂದುವರಿಸಲಾಯ್ತು. ದಾರಿಯಲ್ಲಿ ಹಾಲುಹೊಸಹಳ್ಳಿ ಸಿಕ್ಕಿತು. ಅದರ ಸಮೀಪಕ್ಕೆ ಬಂದಾಗ ವೆಂಕಣ್ಣಯ್ಯನವರು ಅಲ್ಲಿ ತಮಗಾಗಿದ್ದ ಅನುಭವವನ್ನು ಎಲ್ಲರಿಗೂ ವಿವರಿಸಿ ಹೇಳಿದರು. ಅದನ್ನು ಕೇಳಿ ಎಲ್ಲರಿಗೂ ವಿಸ್ಮಯವಾಯಿತು. ವೆಂಕಣ್ಣಯ್ಯ, ಲಿಂಗಣ್ಣ, ಸುಬ್ಬಣ್ಣ, ಮೈಲಾರಪ್ಪ- ಈ ನಾಲ್ವರು ಗಾಡಿಯಿಂದಿಳಿದು ಅಲ್ಲಿನ ಆಂಜನೇಯಸ್ವಾಮಿ ಗುಡಿಗೆ ಹೋಗಿ, ಸ್ವಾಮಿಗೆ ಧೂಪ, ದೀಪ ನೈವೇದ್ಯಗಳನ್ನರ್ಪಿಸಿ ಹಿಂದಕ್ಕೆ ಬಂದರು. ಪ್ರಯಾಣ ಮತ್ತೆ ಮುಂದೆ ಸಾಗಿತು. ಉಳ್ಳರ್ತಿಗೆ ಬರುವ ಹೊತ್ತಿಗೆ ಮಧ್ಯಾಹ್ನಒಂದು ಘಂಟೆಯಾಯಿತು. ಅಲ್ಲಿ ಗಾಡಿಗಳನ್ನು ನಿಲ್ಲಿಸಿ, ಆಳುಗಳಿಗೂ ಮಕ್ಕಳಿಗೂ ಬುತ್ತಿಯ ಹುಳಿಯನ್ನ, ಮೊಸರನ್ನಗಳನ್ನು ಉಣಬಡಿಸಿದರು. ದೊಡ್ಡವರೆಲ್ಲ ಚಕ್ಕುಲಿ, ಕೋಡಬಳೆ, ರವೆ ಉಂಡೆಗಳ ಫಲಹಾರ ಮಾಡಿದರು. ಗಾಡಿಗೆ ಹೊಡೆದ ಎತ್ತುಗಳು ನೀರು ಕುಡಿದು, ಹುಲ್ಲನ್ನು ಬಾಯಾಡಿಸಿ, ಆಯಾಸ ಪರಿಹಾರ ಮಾಡಿಕೊಂಡುವು. ಉಳ್ಳರ್ತಿಯಿಂದ ಮನ್ನೇಕೋಟೆಗೆ ಸುಮಾರು ಆರು ಮೈಲಿ ದೂರ. ಮೂರು ಘಂಟೆಯ ಸುಮಾರಿಗೆ ಮತ್ತೆ ಗಾಡಿಗಳನ್ನು ಕಟ್ಟಿಕೊಂಡು 68 ಮೂರು ತಲೆಮಾರು ಪ್ರಯಾಣ ಮುಂದುವರಿಸಿದರು. ಹೊತ್ತು ಮುಳುಗುವ ವೇಳೆಗೆ ಮನ್ನೇಕೋಟೆಯನ್ನು ಸೇರಿದುದಾಯಿತು. ಬಾಲಕೃಷ್ಣಪ್ಪನವರು ಇವರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಇವರಿಗಾಗಿ ಏರ್ಪಡಿಸಿದ್ದ ಮನೆಯ ಮುಂದಕ್ಕೆ ಗಾಡಿಗಳನ್ನು ಬಿಡಿಸಿದರು. ಸಾಮಾನುಗಳನ್ನೆಲ್ಲ ಆ ಮನೆಯಲ್ಲಿ ಜೊಡಿಸುವ ಹೊತ್ತಿಗೆ ಊಟದ ವೇಳೆಯಾಯಿತು. ಬಂದವರಿಗೆಲ್ಲ ರಾತ್ರಿ ಬಾಲಕೃಷ್ಣಪ್ಪನವರ ಮನೆಯಲ್ಲಿಯೇ ಆತಿಥ್ಯವಾಯಿತು. ಬಾಲಕೃಷ್ಣಪ್ಪನವರೆಂದರೆ ಮೈಲಾರಪ್ಪನವರಂತೆಯೇ ಸುತ್ತು ಮುತ್ತಿನ ಹತ್ತಾರು ಹಳ್ಳಿಗಳಿಗೆ ಹೆಸರಾದವರು, ನೆಮ್ಮದಿಯ ಕುಳ, ಧಾರಾಳವಾದ ಮನಸ್ಸಿನವರು, ಅಂತಃಕರಣವುಳ್ಳವರು, ಕೊಡುಗೈ ದೊರೆ. ಅವರಿಗೆ ತಕ್ಕ ಮಡದಿ ಗೌರಮ್ಮ ಬಂದವರಿಗೆಲ್ಲ ವಿಶ್ವಾಸಾದರಗಳಿಂದ ಊಟ ಮಾಡಿಸಿದಳು. ತಮ್ಮ ಮನೆಯಲ್ಲಿ ಇದ್ದುದು ಇಲ್ಲದ್ದನ್ನೆಲ್ಲ ಸರಿಮಾಡಿಕೊಳ್ಳುವವರೆಗೆ ಅಲ್ಲಿಯೇ ಊಟ ಮಾಡಿಕೊಂಡು ಹೋಗುವಂತೆ ವೆಂಕಣ್ಣಯ್ಯನವರ ಕುಟುಂಬಕ್ಕೆ ಆಹ್ವಾನ ನೀಡಿದರು. ಬಾಲಕೃಷ್ಣಪ್ಪನವರೂ, ಮೈಲಾರಪ್ಪನವರೂ ಚಿರಪರಿಚಿತರು, ಹೊಸಬರೇನೂ ಅಲ್ಲ. ಇಬ್ಬರೂ ಒಂದೇ ತಾಲ್ಲೂಕಿನವರು. ಅಕ್ಕಪಕ್ಕದ ಹೋಬಳಿಯ ಶಾನುಭೋಗರು, ಇಬ್ಬರೂ ಮೇಧಾವಿಗಳು. ಪ್ರಜೆಗಳಲ್ಲಿ, ಸರ್ಕಾರದಲ್ಲಿ ವರ್ಚಸ್ವಿಗಳು, ಜನಾನುರಾಗಿಗಳು. ಜಮಾಬಂದಿಯೇ ಮೊದಲಾದ ಸರ್ಕಾರಿ ಕೆಲಸಗಳಿಗಾಗಿ ತಾಲ್ಲೂಕು ಸ್ಥಳದಲ್ಲಿ ಎಷ್ಟೋ ಸಲ ಒಟ್ಟಿಗೆ ಸೇರಿದ್ದವರು. ಮುಂದೆಯೂ ಸೇರತಕ್ಕವರು. ಪರಸ್ಪರರ ಭೇಟಿಯಿಂದ ಉಭಯರೂ ಬಹು ಸಂತೋಷಪಟ್ಟರು. ಮನ್ನೆಕೋಟೆ ಸೇರಿದ ಮಾರನೇ ದಿನ ಮೈಲಾರಪ್ಪ ತಮ್ಮ ಊರಿಗೆ ಹಿಂದಿರುಗಹೊರಟರು. ಬಾಲಕೃಷ್ಣಪ್ಪನವರು ತಮ್ಮ ಸರಿ ಸಮಾನಸ್ಕಂಧರಾದ ಆ ಮಾನ್ಯ ಅತಿಥಿಯ ಗೌರವವಾಗಿ ಹೋಳಿಗೆ ಪಾಯಸದ ಔತಣವನ್ನೇರ್ಪಡಿಸಿದರು. ಭೋಜನಾನಂತರ ಮೈಲಾರಪ್ಪ, ಬಾಳಕೃಷ್ಣಪ್ಪನವರಿಂದ ಬೀಳ್ಕೊಂಡು, ಮತ್ತೊಮ್ಮೆ ವೆಂಕಣ್ಣಯ್ಯನವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಲಿಂಗಣ್ಣಯ್ಯ, ಹನುಮಕ್ಕಮ್ಮ ಮೊದಲಾದವರಿಂದ ಅನುಮತಿ ಪಡೆದು ಗಾಡಿಗಳೊಂದಿಗೆ ಪರಶುರಾಮಪುರಕ್ಕೆ ಹಿಂದಿರುಗಿದರು. ಅವರನ್ನು ಸಾಗ ಕಳುಹಿಸಲು ಸುಮಾರು ಒಂದು ಮೈಲಿ ದೂರ ಅವರೊಂದಿಗೆ ಮಾತನಾಡುತ್ತ ಹೋದ ವೆಂಕಣ್ಣಯ್ಯನವರು ಮಾತಿನ ಮಧ್ಯೆ ‘ಮೈಲಾರಪ್ಪನವರೇ, ನಮ್ಮಿಬ್ಬರ ಸಂಬಂಧವೆಂಬುದು ನಮ್ಮ ಪೂರ್ವಜನ್ಮಗಳ ಋಣಾನುಬಂಧ. ನಿಮಗೆ ತಿಳಿದಿರುವಂತೆ ನಾನು, ಯಾರನ್ನೂ, ಯಾವುದನ್ನೂ ಹೆಚ್ಚಾಗಿ ಹಚ್ಚಿಕೊಳ್ಳುವವನಲ್ಲ. ವೆಂಕಣ್ಣಯ್ಯನವರ ಅಂತಿಮ ಯಾತ್ರೆ 69 ಆದರೆ ನಿಮ್ಮಲ್ಲಿ ಮಾತ್ರ ಹಾಗಿಲ್ಲ. ನಿಮ್ಮಿಂದ ಅಗಲಿರುವುದು ನನಗೆ ತುಂಬ ಕಷ್ಟವೆನ್ನಿಸುತ್ತದೆ. ಅದೇಕೆ ಎನ್ನುವುದು ನನಗೆ ತಿಳಿಯದು. ಈ ಅನುಬಂಧ ನಮ್ಮ ತಲೆಗೆ ಕೊನೆಯಾಗುವುದು ಬೇಡ, ನಮ್ಮ ಮಕ್ಕಳ ಕಾಲಕ್ಕೂ ಮುಂದುವರೆಯಲಿ. ಶ್ರೀ ರಾಮನಿಚ್ಛೆ. ಸುಖವಾಗಿ ಹೋಗಿ ಬನ್ನಿ. ಅಲ್ಲಿರುವ ನನ್ನ ಹಿತೈಷಿಗಳೆಲ್ಲರಿಗೂ ನನ್ನ ಕೃತಜ್ಞತೆಯನ್ನು ತಿಳಿಸಿ. ನಿಮ್ಮನ್ನೂ, ನಿಮ್ಮ ಕುಟುಂಬದವರನ್ನೂ ಶ್ರೀ ರಾಮಚಂದ್ರ ಪ್ರಭು ರಕ್ಷಿಸಲಿ’ ಎಂದು ಹರಸಿ ಬೀಳ್ಕೊಟ್ಟರು. ಮೈಲಾರಪ್ಪನವರು ಪರಶುರಾಮಪುರಕ್ಕೆ ಹಿಂದಿರುಗಿ ಬಂದರು. ವೆಂಕಣ್ಣಯ್ಯನವರು ಹೇಳಿದ ಮಾತು ನಿಜವಾಯಿತು. ಮುಂದೆ ಸುಮಾರು ನಲ್ವತ್ತು ವರ್ಷಗಳ ನಂತರ ವೆಂಕಣ್ಣಯ್ಯನವರ ಎರಡನೇ ಮಗ ಶ್ರೀನಿವಾಸರಾಯ ಅದೇ ಪರಶುರಾಮಪುರದ ಹೋಬಳಿಗೆ ಶೇಕದಾರನಾದ. ಮೈಲಾರಪ್ಪನವರ ಮಗ ವೆಂಕಟರಮಣಯ್ಯ ಶಾನುಭೊಗನಾದ. ಅವರಿಬ್ಬರ ಸಂಬಂಧ ಅವರುಗಳ ತಂದೆಯರ ಸಂಬಂಧದಂತೆಯೇ ಇತ್ತು. ವೆಂಕಣ್ಣಯ್ಯನವರು ಮನ್ನೇಕೋಟೆಯಲ್ಲಿ ಸ್ವಲ್ಪಕಾಲ ಕಳೆದರು. ಅದು ಸಣ್ಣ ಹಳ್ಳಿ. ಹೆಚ್ಚು ದುಡಿಮೆಗೆ, ಸಂಪಾದನೆಗೆ ಅವಕಾಶವಿಲ್ಲ. ಬಹು ಸೀಮಿತವಾದ ವಲಯ. ಯಾರಾದರೂ ಬಂದು ಕೇಳಿಕೊಂಡರೆ ರೆವಿನ್ಯೂ ಸಂಬಂಧವಾದ ಅರ್ಜಿಯನ್ನೋ, ಜಮೀನು ದರಖಾಸ್ತನ್ನೋ ಬರೆದುಕೊಟ್ಟು, ಅದಕ್ಕಾಗಿ ಅವರು ಸ್ವಸಂತೋಷದಿಂದ ಕೊಡುವ ಪ್ರತಿಫಲವನ್ನು ಸ್ವೀಕರಿಸುವುದರಲ್ಲಿ ಅನ್ಯಾಯವಾಗಲಿ, ಅಧರ್ಮವಾಗಲಿ, ಅಪ್ರಮಾಣಿಕತೆಯಾಗಲಿ ಇರಲಿಲ್ಲ. ಅದರ ಹೊರತು ಬೇರೆ ಯಾವ ಸಂಪಾದನೆ ಮಾರ್ಗವೂ ಅವರಿಗೆ ಗೊತ್ತಿರಲಿಲ್ಲ. ಆದರೆ ಇದುವರೆಗೆ ತಮ್ಮ ಫಿರ್ಕಾ ಗ್ರಾಮಗಳಲ್ಲಿ ಸರ್ಕಾರಿ ಕಾರ್ಯಕ್ಕಾಗಿ ಬೇರೆ ಯಾರೂ ತಲೆಹಾಕಲು ಅವಕಾಶ ಕೊಡದೆ, ತಾವೇ ಅದನ್ನು ನಿರ್ವಹಿಸುತ್ತಿದ್ದ ಬಾಲಕೃಷ್ಣಪ್ಪನವರ ಮನಸ್ಸಿಗೆ ಅಸಮಾಧಾನವಾಗಬಹುದೋ ಏನೋ ಎಂಬ ಆತಂಕ ವೆಂಕಣ್ಣಯ್ಯನವರ ಮನಸ್ಸಿನಲ್ಲಿ ಕಾಡತೊಡಗಿತು. ಆದ್ದರಿಂದ ಕೆಲಕಾಲದ ಮೇಲೆ ಅದರ ಗೊಡವೆಗೂ ಹೋಗದೆ ಶ್ರೀರಾಮನು ಮಾಡಿಸಿದಂತಾಗಲಿ ಎಂದು ಸುಮ್ಮನಿದ್ದುಬಿಟ್ಟರು. ಕೇವಲ ಅವರ ಪಿಂಚಣಿಯಿಂದ ಆದಾಯ-ತಿಂಗಳಿಗೆ 6 ರೂಪಾಯಿಗಳು ಮಾತ್ರ - ಏಳೆಂಟು ಜನರ ಸಂಸಾರಯಾತ್ರೆಯನ್ನು ಸಾಗಿಸುವುದು ಸ್ವಲ್ಪ ಕಷ್ಟವೇ ಆಗಿತ್ತು. ಹೇಗೋ ಕಷ್ಟ, ಕಾರ್ಪಣ್ಯಗಳಿಂದ ಕಾಲವನ್ನು ದಬ್ಬುತ್ತಿದ್ದರು. ಬಡತನವೂ ಅವರಿಗೆ ಹೊಸದೇನೂ ಆಗಿರಲಿಲ್ಲ. ಅವರ ಜೀವನಾದ್ಯಂತ ಅಂಟಿಬಂದಿತ್ತು ಅದು. ಆದ್ದರಿಂದ ಅದಕ್ಕಾಗಿ ಅವರು ಚಿಂತಿಸಲಿಲ್ಲ. ಅವರ ಹಿರಿಯ ಮಗ ಸುಬ್ಬಣ್ಣ 70 ಮೂರು ತಲೆಮಾರು ಆಗ ಇನ್ನೂ ಹನ್ನೆರಡು ವರ್ಷದವನು. ಇನ್ನು ನಾಲ್ಕಾರು ವರ್ಷಗಳನ್ನು ಹೇಗಾದರೂ ಕಷ್ಟಪಟ್ಟು ನೂಕಿದರೆ, ವಿದ್ಯಾಬುದ್ಧಿಸಂಪನ್ನನಾದ ಆತನಿಗೆ ಯಾವುದಾದರೊಂದು ಸರ್ಕಾರಿ ನೌಕರಿ ಸಿಕ್ಕೇ ಸಿಗುತ್ತದೆ. ಅಲ್ಲಿಂದ ಮುಂದೆ ಇಷ್ಟು ತೊಂದರೆಯಿರುವುದಿಲ್ಲ ಎಂಬ ಭರವಸೆಯಿಂದ ಇದ್ದರು. ಸುಬ್ಬಣ್ಣ ತಂದೆ - ತಾಯಿಗಳ ಅಚ್ಚುಮೆಚ್ಚಿನ ಮಗ. ತಂದೆಯಂತೆಯೇ ಆಚಾರಶೀಲ, ದೈವಭಕ್ತ, ಸುಸಂಸ್ಕೃತ. ಯಾವ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಿ ಬಿರುದಾಂಕಿತನಾಗದಿದ್ದರೂ ಒಳ್ಳೆಯ ವಿದ್ಯಾವಂತ, ಬುದ್ಧಿವಂತ, ವ್ಯವಹಾರ ಚತುರ, ತಕ್ಕಮಟ್ಟಿಗೆ ಉನ್ನತ ಮಟ್ಟದ ಸಾಹಿತಿ. ತಂದೆ ಶೇಕದಾರರಾಗಿದ್ದಾಗಲೇ ಅವರ ಲೆಕ್ಕಪತ್ರಗಳನ್ನು ಗ್ರಹಿಸಿ ಬರೆಯುವಷ್ಟರಮಟ್ಟಿಗೆ ಮೇಧಾವಿ, ತಂದೆತಾ ಯಿಗಳಲ್ಲಿ, ಗುರು ಹಿರಿಯರಲ್ಲಿ ಪೂಜ್ಯಭಾವ, ಇಬ್ಬರು ತಮ್ಮಂದಿರು ಎಂದರೆ ಸ್ವಂತ ತಮ್ಮ ಶ್ರೀನಿವಾಸ ಮತ್ತು ಚಿಕ್ಕಪ್ಪ ಲಿಂಗಣ್ಣನವರ ಮಗ ಸಣ್ಣ ಸುಬ್ಬಣ್ಣನವರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬಾಸೆ. ತಾನು ಕಷ್ಟಪಟ್ಟು ದುಡಿದು ಸಂಸಾರದ ಕಷ್ಟ-ಕಾರ್ಪಣ್ಯಗಳನ್ನು ನೀಗಿಸಿ, ತಂದೆ-ತಾಯಿಗಳನ್ನು ಮುಪ್ಪಿನಲ್ಲಿ ಸುಖ- ಸಂತೋಷದಿಂದಿರಿಸಬೇಕೆಂಬ ಸದಾಕಾಂಕ್ಷೆ - ಇಂತಹ ಗುಣವಂತನಾದ ಮಗನ ವಿಷಯದಲ್ಲಿ ವೆಂಕಣ್ನಯ್ಯನವರಿಗೆ ಹೆಮ್ಮೆ ಭರವಸೆಗಳಿದ್ದುದರಲ್ಲಿ ವಿಶೇಷವೇನೂ ಇಲ್ಲ. ಅವರ ನಿರೀಕ್ಷೆ ಸಹಜವಾಗಿಯೇ ಇತ್ತು. ಕಾಲಚಕ್ರ ಉರುಳಿ ಹೋಗುತ್ತಿತ್ತು. ಜೀವನರಥ ಹೇಗೋ ಶಾಂತವಾಗಿ ಸಾಗುತ್ತಿತ್ತು. ಕಷ್ಟ-ಸುಖಗಳ ಕಣ್ಣುಮುಚ್ಚಾಲೆ ಜೀವನದಲ್ಲಿ ಅನಿವಾರ್ಯವಲ್ಲವೆ? `ವಿಧಿಯಂ ಮೀರುವವನಾವನೈ’ ಎಂದು ಪ್ರಾಜ್ಞರು ಹೇಳುತ್ತಾರೆ. ಅದು ಅನುಭವ ಪೂರ್ಣವಾದ ಸತ್ಯವಾಕ್ಯ. ಅಂದಿನ ಜನರ ಎದೆಯನ್ನು ನಡುಗಿಸುವ ಮಹಾಮಾರಿ ರೋಗ (ಕಾಲರಾ) ನಡುಬೇಸಿಗೆಯಲ್ಲಿ ಕಾಣಿಸಿಕೊಂಡು ಜನರನ್ನು ಆಹುತಿ ತೆಗೆದುಕೊಳ್ಳತೊಡಗಿತು. ಆ ಮಾರಿ ಮನ್ನೇಕೋಟೆಯನ್ನೂ ಪ್ರವೇಶಿಸಿತು; ಅಲ್ಲಿನ ಜೀವರಾಶಿಯನ್ನು ಬಲಿ ತೆಗೆದುಕೊಳ್ಳತೊಡಗಿತು. ವೆಂಕಣ್ಣಯ್ಯನವರ ಎರಡನೆಯ ಮಗ ಶೇಷಣ್ಣ ಆ ಮಾರಿಗೆ ತುತ್ತಾದ. ತಮ್ಮ ಲಕ್ಷ್ಮಪ್ಪನ ಮರಣಾನಂತರ ವೆಂಕಣ್ಣಯ್ಯನವರ ಜೀವನದಲ್ಲಿ ನಡೆದ ಎರಡನೆಯ ದುರಂತ, ಇದು. ಈ ಹೊಡೆತದಿಂದ ಅವರು ತುಂಬ ಮೆತ್ತಗಾಗಿ ಹೋದರು. ಹೊರನೋಟಕ್ಕೆ ಅವರು ಸಮುದ್ರದಂತೆ ಗಂಭೀರವಾಗಿ ಕಾಣಿಸಿದರೂ ಒಳಗೊಳಗೆ ತಮ್ಮನ ಮತ್ತು ಮಗನ ಅಗಲಿಕೆಯ ದುಃಖ ಸ್ಥಿರವಾಗಿ ನೆಲೆಸಿತು. ದೈವಶಕ್ತಿಗೆ ಎದುರಾದವರಾರು? ಮೌನದಿಂದ ದುಃಖವನ್ನು ಅನುಭವಿಸುತ್ತಿದ್ದರೂ ಹೊರನೋಟಕ್ಕೆ ಶಾಂತಿಯ ವೆಂಕಣ್ಣಯ್ಯನವರ ಅಂತಿಮ ಯಾತ್ರೆ 71 ತೆರೆಯನ್ನು ಮರೆಯಾಗಿಸಿದ್ದರು. ಕಾಲಪುರುಷನು ಇವೊಂದನ್ನೂ ಗಣಿಸದೆ ತನ್ನಷ್ಟಕ್ಕೆ ತಾನು ನಾಗಾಲೋಟದಿಂದ ಮುಂದುವರೆಯುತ್ತಿದ್ದ. ವೆಂಕಣ್ಣಯ್ಯನವರ ಉತ್ಸಾಹ ಕುಗ್ಗಿ ಹೋಯಿತು. ಅವರು ಸಂಪಾದಿಸುವ ಹವ್ಯಾಸವನ್ನೇ ಕೈಬಿಟ್ಟರು. ಬರುವ ವರಮಾನ ಏತಕ್ಕೂ ಸಾಲದು. ದಿನದಿನಕ್ಕೆ ಕೊರತೆ ಹೆಚ್ಚುತ್ತಿದೆ. ಕೈಯಲ್ಲಿ ಅಧಿಕಾರವಿಲ್ಲ. ಕಷ್ಟದಲ್ಲಿ ಆತುಕೊಳ್ಳುವ ಮೈಲಾರಪ್ಪನವರಂತಹ ಆಪ್ತ ಹಿತೈಷಿಗಳಿಲ್ಲ. ಬಾಯಿಬಿಟ್ಟು ಯಾರನ್ನೂ ಅವರು ಕೇಳುವವರಲ್ಲ. ಸಾಲ ಮಾಡಿ ಅಭ್ಯಾಸವಿಲ್ಲ. ಮಾಡಿದರೆ ತೀರಿಸುವುದಕ್ಕೂ ಅವಕಾಶವಿಲ್ಲ. ಅವರ ಜೀವನದಲ್ಲಿ ಇಂತಹ ಇಬ್ಬಂದಿ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಪ್ರಭು ರಾಮಚಂದ್ರ ಇಂದಿನವರೆಗೆ ಎಂದೂ ಮರ್ಯಾದೆಗೆ ಕುಂದು ತಂದಿಲ್ಲ. ಮುಂದೆಯೂ ಅವನೇ ಗತಿ. ತಮ್ಮನಂತರ ಈ ಸಂಸಾರ ಭಾರವನ್ನು ಮಗ ಹೇಗೆ ಹೊತ್ತಾನು? ಅವನೇನೋ ಸತ್ವಶಾಲಿ. ಆದರೂ ಇದನ್ನು ಹೊರುವಷ್ಟು ಅವನ ಭುಜ ಬಲಿತಿಲ್ಲವಲ್ಲ. ತಮ್ಮ ಲಿಂಗಣ್ಣ ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬ ಜಾತಿಯವನು. ಅಣ್ಣನ ಸಂಪಾದನೆಯ ಕಾಲದಲ್ಲಿ ಹೇಗೋ ಈಗಲೂ ಹಾಗೆಯೇ ಇದ್ದಾನೆ. ಆತನೊಬ್ಬ ವಿನೋದಪುರುಷ. ತಾನು ನಕ್ಕು, ಬೇರೆಯವರನ್ನೂ ನಗಿಸಿ, ನಿರ್ಯೋಚನೆಯಾಗಿ, ನಿಶ್ಚಿಂತೆಯಾಗಿ ಕಾಲ ಕಳೆಯುವ ಸ್ವಭಾವ ಆತನದು. ತಾನು ದುಡಿಯಬೇಕೆಂಬ ಯೋಚನೆ ಆತನಿಗೆ ಎಂದೂ ಬಂದಿರಲಿಲ್ಲ. ಇಂದೂ ಇಲ್ಲ. ತನ್ನ ಸಂಸಾರ ಅಣ್ಣನಿಗೆ ಭಾರವಾಗುವುದೆಂಬ ಭಾವನೆಯೇ ಆತನ ತಲೆಯನ್ನು ಹೋಗುತ್ತಿರಲಿಲ್ಲ. ಒಂದು ವಿಧದಲ್ಲಿ ಆತ ಶಾಂತ ನಿಶ್ಚಿಂತ ಜೀವಿ. ವಿಧಿ ಮತ್ತೊಮ್ಮೆ ವಿಕಟಾಟ್ಟಹಾಸ ಮಾಡಿತು. ಎಂದೂ ಖಾಯಿಲೆ - ಕಸಾಲೆಗಳನ್ನರಿಯದ, ಆರೋಗ್ಯ ದೃಢಕಾಯರಾದ ವೆಂಕಣ್ಣಯ್ಯನವರು ಖಾಯಿಲೆಯಿಂದ ಹಾಸಿಗೆ ಹಿಡಿದರು. ಪುಣ್ಯಾತ್ಮನಾದ ಆತನಿಗೆ ತನ್ನ ಕಾಲ ಮುಗಿಯಿತೆಂದು ಮನಸ್ಸಿಗೆ ಹೊಳೆಯಿತು. ಆತ ಮರಣಕ್ಕೆ ಅಂಜುವವರೇನೂ ಅಲ್ಲ. ‘ದೆಹಿನೋಸ್ಮಿತ್ ಯಥಾದೇಹೇ ಕೌಮಾರಂ ಯೌವನಂ ಜರಾ| ತಥಾ ದೇಹಾಂತರಪ್ರಾಪ್ತಿಃ ಧೀರಸ್ತತ್ರ ನ ಮುಹ್ಯತಿ||’ ಜನ್ಮ ಜರಾಮರಣಗಳು ಪ್ರಕೃತಿ ಸಹಜವಾದುವು. ಅವುಗಳಿಗಾಗಿ ಭಯವಾಗಲಿ, ವ್ಯಸನವಾಗಲಿ ಪಡಬೇಕಾದ್ದಿಲ್ಲ - ಎಂಬ ತತ್ವವನ್ನು ಅರಿತು, ಅನುಷ್ಠಿಸಿ ಆತ್ಮಸಾಕ್ಷಾತ್ ಮಡಿಕೊಂಡವರು. ಅವರು ಮರಣ ಸಮಿಪಿಸಿತೆಂದು ಕೊರಗಲಿಲ್ಲ. ಮರುಗಲಿಲ್ಲ. ಎಂದಿನಂತೆ ಹಸನ್ಮುಖಿಗಳಾಗಿ ಶಾಂತರಾಗಿರುತ್ತಿದ್ದರು. ಈ ಸ್ಥಿತಿಯನ್ನೇ ಜ್ಞಾನಿಗಳಾದವರು ‘ಶರಣರ ಪರೀಕ್ಷೆಯನ್ನು ಮರಣದಲ್ಲಿ ನೋಡು’ ಎಂದು ಹೇಳುತ್ತಾರೆ. 72 ಮೂರು ತಲೆಮಾರು ಮರಣವೆಂದರೆ ದೇಹತ್ಯಾಗ, ಹರಿದ ಅಂಗಿಯನ್ನು ಕಿತ್ತೊಗೆಯುವಂತೆ ಅಷ್ಟೆ. ಅದಕ್ಕಾಗಿ ಧೀರರು ಅಂಜುವುದಿಲ್ಲ. ಭಗವದ್ಗೀತೆಯನ್ನು ಕರತಲಾಮಲಕವಾಗಿ ಮಾಡಿಕೊಂಡಿದ್ದ ವೆಂಕಣ್ಣಯ್ಯನವರಿಗೆ ಇದು ಅರಿಯದ ತತ್ವವೇನಲ್ಲ. ಜೀವನದ ಕಹಿ-ಸಿಹಿಗಳನ್ನು ಇಷ್ಟದೈವವಾದ ಶ್ರೀರಾಮಚಂದ್ರನ ಪರಮ ಪ್ರಸಾದವೆಂದು ಸವಿದರು. ದೈವದ ಮೇಲೆ ಎಂದೂ ತಪ್ಪು ಹೊರಿಸಲಿಲ್ಲ, ದೇವರನ್ನು ದೂರಲಿಲ್ಲ. ಭಗವಂತನ ಪಾದಾರವಿಂದವನ್ನು ಸೇರುವ ಸಮಯ ಸಮೀಪಿಸಿತು. ಅದು ಮಧ್ಯಾಹ್ನ ಎರಡು ಎರಡೂವರೆ ಘಂಟೆಯ ಸಮಯ. ತಮ್ಮನ್ನು ಶುಶ್ರೂಷೆ ಮಾಡುತ್ತಾ ಮಗ್ಗುಲಲ್ಲೇ ಕುಳಿತಿದ್ದ ಮಗನನ್ನು ಕುರಿತು ‘ಮಗೂ ಸುಬ್ಬು, ಪಂಚಾಂಗವನ್ನು ತೆಗೆದುಕೊಂಡು ಬಾ! ಇಂದಿನ ದಿನಶುದ್ಧಿಯನ್ನು ನೋಡು’ ಎಂದು ಹೇಳಿದರು. ಸುಬ್ಬಣ್ಣ ಪಂಚಾಂಗವನ್ನು ತಂದು ತಂದೆಯ ಎದುರಿಗೆ ಓದಿದ. ಅದನ್ನು ಕೇಳಿದ ವೆಂಕಣ್ಣಯ್ಯನವರು ‘ದಿನ ಪ್ರಶಸ್ತವಾಗಿದೆ. ನಕ್ಷತ್ರಾದಿ ದೋಷವೇನೂ ಇಲ್ಲ. ಇನ್ನು ಹೊರಡಬಹುದು’ ಎಂದುಕೊಂಡರು. ಆ ಮಾತನ್ನು ಕೇಳಿಸಿಕೊಂಡ ಸುಬ್ಬಣ್ಣ ‘ಅಪ್ಪಾ, ಇದೇನು ನೀವು ಹೇಳುತ್ತಿರುವುದು? ನೀವು ಹೊರಡುವುದೆಲ್ಲಿಗೆ? ದಿನಶುದ್ದಿಯನ್ನು ನೋಡಿದ್ದು ಎಕೆ?’ ಎಂದು ಕೇಳಿದ. ವೆಂಕಣ್ಣಯ್ಯನವರಿಗೆ ಖಾಯಿಲೆಯಾಗಿದ್ದರೂ ಅವರು ಸಾಯಬಹುದೆಂಬ ಕಲ್ಪನೆ ಯಾರಿಗೂ ಬಂದಿರಲಿಲ್ಲ. ಅದು ಅಷ್ಟು ಪ್ರಬಲವಾದುದೆಂದು ಎಂದೂ ತೋರಿಸಿಕೊಂಡಿರಲಿಲ್ಲ, ಅವರು. ಎಲ್ಲರಿಗೂ ಖಾಯಿಲೆ ಬರುತ್ತದೆ, ಅವರಿಗೂ ಬಂದಿದೆ, ಔಷಧಿ ಕೊಡಿಸುತ್ತಿದೆ, ವಾಸಿಯಾಗುತ್ತದೆ - ಎಂದೇ ಎಲ್ಲರೂ ಭಾವಿಸಿದ್ದರು. ಆ ಕಾರಣದಿಂದಲೇ ಸುಬ್ಬಣ್ಣ ಆ ಪ್ರಶ್ನೆ ಮಾಡಿದ್ದು, ವೆಂಕಣ್ಣಯ್ಯನವರು ಆ ಪ್ರಶ್ನೆಗೆ ಉತ್ತರ ಕೊಡುವ ಬದಲು ತಾವು ನಿತ್ಯಪಾರಾಯಣ ಮಾಡುವ ರಾಮಾಯಣವನ್ನು ದೇವರ ಮಂಟಪದಿಂದ ತರುವಂತೆ ಮಗನಿಗೆ ಹೇಳಿದರು. ಅದು ಶುಭ್ರವಾದ ರೇಷ್ಮೆಯ ಬಟ್ಟೆಯಲ್ಲಿ ಸುತ್ತಿ ದೇವರ ಮಂಟಪದ ಮೇಲೆ ಇಟ್ಟಿರುತ್ತಿತ್ತು. ಅದನ್ನು ಅವರ ಹೊರತು ಬೇರೆಯವರಾರೂ ಮುಟ್ಟುತ್ತಿರಲಿಲ್ಲ. ವೆಂಕಣ್ಣಯ್ಯನವರ ಮಾತನ್ನು ಕೇಳಿದ ಮನೆಯವರಿಗೆ ಆ ಪುಸ್ತಕದಲ್ಲೇನಾದರೂ ಆಗತಾನೆ ಪ್ರಾರಂಭವಾಗಿದ್ದ (ಚಲಾವಣೆಯಲ್ಲಿದ್ದ) ನೋಟನ್ನೇನಾದರೂ ಇಟ್ಟಿರಬಹುದೆಂಬ ಭಾವನೆ. ಸುಬ್ಬಣ್ಣ ಮಡಿಯುಟ್ಟು ರಾಮಾಯಣವನ್ನು ತಂದೆಯ ಬಳಿಗೆ ತಂದ. ಅದನ್ನು ಕೈಗೆ ತೆಗೆದುಕೊಂಡ ವೆಂಕಣ್ಣಯ್ಯನವರು ಮಗನನ್ನು ಹತ್ತಿರಕ್ಕೆ ಕರೆದು ಮೃದುವಾದ ಧ್ವನಿಯಲ್ಲಿ ‘ಮಗು ನನ್ನ ಕಾಲ ಮುಗಿಯುತ್ತಾ ಬಂದಿದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ನಿಮ್ಮೆಲ್ಲರನ್ನೂ ಬಿಟ್ಟು ಪ್ರಭು ವೆಂಕಣ್ಣಯ್ಯನವರ ಅಂತಿಮ ಯಾತ್ರೆ 73 ರಾಮಚಂದ್ರನ ಸನ್ನಿಧಿಯನ್ನು ಸೇರುತ್ತೇನೆ. ಇದು ಪ್ರಕೃತಿ ಸಹಜ. ಇದಕ್ಕಾಗಿ ನನಗೆ ದುಃಖವಿಲ್ಲ, ನೀವು ದುಃಖಿಸಬಾರದು. ನನ್ನನ್ನು ಸಂತೋಷದಿಂದ ಕಳುಹಿಸಿಕೊಡಿ. ನಿನಗಾಗಿ ನಾನು ಯಾವ ವಿಧವಾದ ಐಹಿಕ ಆಸ್ತಿಯನ್ನೂ ಮಾಡಿಲ್ಲ. ಹಾಗೆ ಮಾಡಲು ನನಗೆ ಸಾಧ್ಯವಾಗಲಿಲ್ಲವೆಂಬುದನ್ನು ನೀವೆಲ್ಲ ಕಣ್ಣಾರೆ ಕಂಡಿದ್ದೀರಿ. ಆದರೆ ಸುಬ್ಬೂ, ನಾನು ನಿನಗೆ ಅಮೋಘವಾದ, ಶಾಶ್ವತವಾದ, ಅಸದೃಶವಾದ ಆಸ್ತಿಯನ್ನು ಕೊಟ್ಟು ಹೋಗುತ್ತಿದ್ದೇನೆ. ಇಗೊ, ನೋಡು, ನಾನು ಸದಾ ಪಾರಾಯಣ ಮಾಡುವ ವಾಲ್ಮೀಕಿ ರಾಮಾಯಣ. ಇದರಲ್ಲಿ ಸ್ವಾಮಿ ನೆಲೆಸಿದ್ದಾನೆ, ಇದನ್ನು ನೀನೂ ಪಾರಾಯಣ ಮಾಡು. ಶ್ರೀರಾಮಚಂದ್ರಪ್ರಭು ನಿನ್ನ ಕಷ್ಟ ಸುಖಗಳಲ್ಲಿ ಸಮಭಾಗಿಯಾಗಿ ನಿನ್ನನ್ನು ಸಂರಕ್ಷಿಸುತ್ತಾನೆ. ಇದೇ ನಿನ್ನ ತಂದೆಯಾಗಿ ನಿನಗೆ ನೀಡುವ ಆಸ್ತಿ. ಇದನ್ನು ಭದ್ರವಾಗಿ ಕಾಪಾಡಿಕೊ. ಎಲ್ಲ ಐಹಿಕ ಆಸ್ತಿಗಳಿಗಿಂತಲೂ ಇದು ಶ್ರೇಷ್ಠವಾದುದು. ಏಕೆಂದರೆ ಇದು ಇಪಹರಗಳೆರಡಕ್ಕೂ ಸಾಧಕವಾದುದು. ಇದೇ ನನ್ನನ್ನು ಇದುವರೆಗೆ ಕೈ ಹಿಡಿದು ಕಾಪಾಡಿದೆ; ನಿನ್ನನ್ನೂ ಕಾಪಾಡುತ್ತದೆ. ಉಳಿದೆಲ್ಲ ಕ್ಷಣಿಕ, ನಶ್ವರ. ಮಗು ನನ್ನ ಮಾತನ್ನು ನಂಬು, ನಂಬಿ ಕೆಟ್ಟವರಿಲ್ಲ. ದಯಾಮಯನಾದ ಭಗವಂತನು ನಿಮ್ಮನ್ನೆಲ್ಲ ಸಂರಕ್ಷಿಸಲಿ. ನೀನು ಧರ್ಮಮಾರ್ಗದಲ್ಲಿ ನಡೆ. ಹಿರಿಯರಲ್ಲಿ ಪೂಜ್ಯ ಭಾವವಿರಲಿ. ನೀನು ಯೋಗ್ಯ. ಎಲ್ಲವನ್ನೂ ಬಲ್ಲೆ. ಅದರಂತೆ ನಡೆದುಕೊಳ್ಳುವೆ. ಆದರೂ ಪ್ರಾಪಂಚಿಕ ರೀತಿಯಾಗಿ ತಂದೆಯಾದ, ನಾನು ನನ್ನ ಕರ್ತವ್ಯವನ್ನು ಮಾಡಿ ಮುಗಿಸುತ್ತಿದ್ದೇನೆ. ನಿನಗೆ ಹೆಚ್ಚಿಗೆ ಹೇಳಬೇಕಾದುದಿಲ್ಲ. ಇದು ನಿನಗೊಬ್ಬನಿಗೇ ಅಲ್ಲ, ಎಲ್ಲರಿಗೂ ಹೇಳಿರುವ ಮಾತು. ಮತ್ತೊಮ್ಮೆ ಹೇಳುತ್ತೇನೆ. ನನಗಾಗಿ ಯಾರೂ ಶೋಕಿಸಬಾರದು. ಇನ್ನು ನನ್ನ ಪಾಡಿಗೆ ನನ್ನನ್ನು ಬಿಡಿ. ನಿಮ್ಮ ಮುಂದಿನ ಕರ್ತವ್ಯವನ್ನು ನೋಡಿಕೊಳ್ಳಿ. ನನ್ನ ಮಾತು ಮುಗಿಯಿತು. ನಾನಿನ್ನು ಮೌನಿ. ನನ್ನನ್ನು ಯಾರೂ ಮಾತನಾಡಿಸಬೇಡಿ’ ಎಂದು ಹೇಳಿ ಮಗನ ಕೈಯಲ್ಲಿ ಪುಸ್ತಕವಿಟ್ಟರು. ಮನೆಯವರೆಲ್ಲರೂ ಸುತ್ತಲೂ ಕುಳಿತು ದಿಟ್ಟಿಸಿ ನೋಡುತ್ತಿದ್ದಾರೆ. ವೆಂಕಣ್ಣಯ್ಯನವರು ಕಣ್ಣು ಮುಚ್ಚಿದರು. ತುಟಿಗಳು ಏನನ್ನೋ ಹೇಳಿಕೊಳ್ಳುವಂತೆ ಅಲುಗಾಡುತ್ತಿವೆ. ಆನಂದಬಾಷ್ಪಗಳು ಕಣ್ಣಿಂದ ಸುರಿಯುತ್ತಿದೆ. ಮುಖದ ತೇಜಸ್ಸು ಘಳಿಗೆ ಘಳಿಗೆಗೂ ಹೆಚ್ಚುತ್ತಿದೆ. ಶಾಂತವಾದ ಆ ಮುಖದಲ್ಲಿ ಮಂದಹಾಸ ಉಕ್ಕುತ್ತಿದೆ. ಸುಬ್ಬಣ್ಣ ಪಾರಾಯಣ ಪುಸ್ತಕವನ್ನು ಪರಮಭಕ್ತಿಯಿಂದ ಸ್ವೀಕರಿಸಿ, ಒಮ್ಮೆ ತಲೆಯ ಮೇಲಿಟ್ಟುಕೊಂಡು ಅನಂತರ ಒಳಗೆ ಹೋಗಿ ಅದನ್ನು ಯಥಾಸ್ಥಾನದಲ್ಲಿಟ್ಟು ತಂದೆಯ ಪಕ್ಕದಲ್ಲಿ ಬಂದು ಕುಳಿತ. ಆ ವೇಳೆಗೆ ಅವರ 74 ಮೂರು ತಲೆಮಾರು ಆರೋಗ್ಯಸ್ಥಿತಿಯನ್ನು ವಿಚಾರಿಸಲು ಶಾಣುಭೊಗರು, ಜೋಯಿಸ ವೆಂಕಪ್ಪನವರು ಅಲ್ಲಿಗೆ ಬಂದವರು ಪರಿಸ್ಥಿತಿಯನ್ನರಿತು ಅಲ್ಲಿಯೇ ಕುಳಿತರು. ಆಗ ವೆಂಕಣ್ಣಯ್ಯನವರು ತಟಕ್ಕನೆ ಎದ್ದು ಕುಳಿತು ದಶದಿಕ್ಕುಗಳಿಗೂ ಕೈ ಮುಗಿದು ‘ಶ್ರೀ ರಾಮ ಜಯರಾಮ ಜಯಜಯರಾಮ’ ಎಂದು ಸ್ಪಷ್ಟವಾಗಿ ಉಚ್ಚರಿಸಿ ಮತ್ತೆ ಹಾಗೆಯೇ ಮಲಗಿದರು, ಮತ್ತೆ ಮೇಲೇಳಲಿಲ್ಲ. ಅವರ ಆತ್ಮ ಪ್ರಭು ಶ್ರೀರಾಮಚಂದ್ರನ ಪಾದಾರವಿಂದಗಳಲ್ಲಿ ಲೀನವಾಗಿ ಹೋಯಿತು. ವೆಂಕಣ್ಣಯ್ಯನವರ ಜೀವನ ನಾಟಕ ಅಲ್ಲಿಗೆ ಕೊನೆಗೊಂಡಿತು. * * * * 75 ಎರಡು ಕಂಡದ್ದು 77 1. ತಳುಕಿನಲ್ಲಿ ನೆಲೆಸಿದರು ಎಂದಿನಂತೆ ಬೆಳಗಿನ ಜಾವದಲ್ಲೆದ್ದ ಪಟೇಲ ಉಜ್ಜನಪ್ಪ ಪ್ರಾತಃಕೃತ್ಯಗಳನ್ನು ತೀರಿಸಿಕೊಂಡು ಬರಲೆಂದು ತೊಟದ ಕಡೆ ಹೊರಟ. ಊರಬಾಗಿಲಿನ ಹತ್ತಿರವಿದ್ದ ಅಶ್ವತ್ಥಕಟ್ಟೆಯ ಬಳಿಗೆ ಬಂದಾಗ, ಅದರ ಮೇಲೆ ಯಾರೋ ಕುಳಿತಿರುವಂತೆ ಕಾಣಿಸಿತು. ಮಸಕು ಕತ್ತಲೆಯಲ್ಲಿ ಕುಳಿತಿದ್ದ ವ್ಯಕ್ತಿ ಚೆನ್ನಾಗಿ ಕಾಣಿಸುತ್ತಿರಲಿಲ್ಲ. ಉಜ್ಜನಪ್ಪ ಸ್ವಲ್ಪ ದೂರದಿಂದಲೇ ‘ಯಾರದು ಕಟ್ಟೆಯ ಮೇಲೆ ಕುಳಿತಿರುವವರು?’ ಎಂದು ಕೂಗಿ ಕೇಳಿದ. ಕುಳಿತಿದ್ದ ವ್ಯಕ್ತಿ ಒಮ್ಮೆ ತಲೆಯೆತ್ತಿ ನೋಡಿ ಹಾಗೆಯೇ ತಲೆ ತಗ್ಗಿಸಿಕೊಂಡು ಕುಳಿತಿತ್ತು; ಮಾರುತ್ತರ ಕೊಡಲಿಲ್ಲ. ಉಜ್ಜನಪ್ಪ ಕುತೂಹಲ ಮಿಶ್ರಿತ ಕೋಪದಿಂದ ಎರಡು ಹೆಜ್ಜೆ ಹತ್ತಿರಕ್ಕೆ ಬಂದು ‘ಯಾರದು ಕೂತಿರುವವರು? ಕೂಗಿದ್ದು ಕೇಳಿಸಲಿಲ್ಲವೇ?’ ಎಂದು ಸ್ವಲ್ಪ ಅಸಹನೆಯಿಂದ ಗಟ್ಟಿಯಾಗಿ ಕೂಗಿ ಕೇಳಿದ. ಕುಳಿತಿದ್ದ ವ್ಯಕ್ತಿ ಮತ್ತೊಮ್ಮೆ ತಲೆಎತ್ತಿ ‘ನಾವಣ್ಣ, ಪರಸ್ಥಳದವರು’ ಎಂದಿತು ಯಾರೋ ಮಧ್ಯ ವಯಸ್ಸಿನ ಹೆಂಗಸು. ನೋಡುವುದಕ್ಕೆ ಸ್ಫುರದ್ರೂಪಿಯಾಗಿ ಕಾಣುತ್ತಾಳೆ. ಆಕೆ ತನ್ನ ಮೊಳಕಾಲುಗಳ ಮೇಲೆ ತಲೆಯಿಟ್ಟುಕೊಂಡು ಅಶ್ವತ್ಥ ಮರಕ್ಕೆ ಒರಗಿ ಕುಳಿತಿದ್ದಾಳೆ. ನೋಡಿದರೆ ಗೌರವಸ್ಥ ಮನೆತನದ ಹೆಣ್ಣಿನಂತೆ ಕಾಣಿಸುತ್ತಿದ್ದಾಳೆ. ಆಕೆಯ ಪಕ್ಕದಲ್ಲಿ ಮೂವರು ಮಕ್ಕಳು ಮಲಗಿದ್ದಾರೆ. ಉಜ್ಜನಪ್ಪ ಮತ್ತೆರಡು ಹೆಜ್ಜೆ ಮುಂದೆ ನಡೆದು ‘ತಾಯಿ, ನೀವು ಯಾರ ಮನೆಯವರಮ್ಮಾ? ಇಷ್ಟು ಹೊತ್ತಿನಲ್ಲಿ ಇಲ್ಲೇಕೆ ಕುಳಿತಿದ್ದೀರಿ? ಎಲ್ಲಿಗೆ ಹೋಗಬೇಕಾಗಿತ್ತು?’ ಎಂದು ಕೇಳಿದ. ಪಕ್ಕದಲ್ಲಿ ಮಲಗಿದ್ದ ಮಕ್ಕಳು ಆತನ ಧ್ವನಿಗೆ ಎಚ್ಚೆತ್ತು ಕುಳಿತರು. ತನ್ನ ಗಂಡನ ಹೆಸರನ್ನು ಹೇಳಲು ಸಂಕೋಚಪಟ್ಟ ಆ ಹೆಣ್ಣು ಮಗಳು ಪಕ್ಕದಲ್ಲಿ ಕುಳಿತಿದ್ದ ಹಿರಿಯ ಮಗನನ್ನು ‘ನಿಮ್ಮ ತಂದೆಯ ಹೆಸರಂತೆ ಹೇಳಪ್ಪ ಸುಬ್ಬಣ್ಣ’ ಎಂದಳು. `ನಮ್ಮ ತಂದೆ ವೆಂಕಣ್ಣಯ್ಯನವರು. ಅವರು ಪರಶುರಾಮಪುರದಲ್ಲಿ ಶೇಕದಾರರಾಗಿದ್ದರು. ನಾವು ಅವರ ಮಕ್ಕಳು. ಈಕೆ ನಮ್ಮ ತಾಯಿ’ ಎಂದ ಸುಬ್ಬಣ್ಣ. ವೆಂಕಣ್ಣಯ್ಯನವರ ಹೆಸರನ್ನು ಕೇಳುತ್ತಲೇ ಉಕ್ಕಿ ಬಂದ ಗೌರವದಿಂದ ಪಟೇಲ ಉಜ್ಜನಪ್ಪ ‘ಏನು, ವೆಂಕಣ್ಣಯ್ಯನವರ ಕುಟುಂಬದವರೇ ನೀವು? ಇಲ್ಲಿ 78 ಮೂರು ತಲೆಮಾರು ಯಾವ ಕಡೆ ಬಂದಿದ್ದಿರಿ? ಎಲ್ಲಿಗೆ ಹೋಗಬೇಕಾಗಿತ್ತು? ಇಷ್ಟು ಹೊತ್ತಿನಲ್ಲಿ ಇಲ್ಲೇಕೆ ತಂಗಿದ್ದೀರಿ?’ ಎಂದು ಕೇಳಿದ. ಚುರುಕು ಬುದ್ಧಿಯ ಸುಬ್ಬಣ್ಣ ಗೌಡನನ್ನು ಕುರಿತು ‘ನಮ್ಮ ತಂದೆಯವರ ಪರಿಚಯ ನಿಮಗಿದೆಯೆ ಮಾಮ?’ ಎಂದು ಕೇಳಿದ. ‘ವೆಂಕಣ್ಣಯ್ಯನವರ ಪರಿಚಯ ಈ ಪ್ರಾಂತ್ಯದಲ್ಲಿ ಯಾರಿಗಿಲ್ಲ ಮಗು? ನನಗಂತೂ ಅವರು ತುಂಬ ಬೇಕಾದವರು. ಅದಿರಲಿ, ಈಗ ನೀವು ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋಗಬೇಕೆಂದು ನಿಮ್ಮ ಉದ್ದೇಶ?’ ಎಂದು ಕೇಳಿದ ಪಟೇಲನಿಗೆ ಸುಬ್ಬಣ್ಣನೇ ಉತ್ತರಕೊಟ್ಟ. ‘ನಮ್ಮ ತಂದೆ ಮನ್ನೇಕೋಟೆಯಲ್ಲಿ ತೀರಿಕೊಂಡ ವಿಚಾರ ನಿಮಗೆ ತಿಳಿದಿರಬೇಕು. ಬಾಲಕೃಷ್ಣಪ್ಪನ ತಮ್ಮ ಲಕ್ಷ್ಮೀನಾರಾಯಣ ನಮ್ಮನ್ನು ಆದರದಿಂದ ನೋಡುತ್ತಿದ್ದ’. ‘ಅದು ಸರಿ. ಅದನ್ನು ನಾನು ಕೇಳಿದ್ದೇನೆ. ಆದರೆ ಇಷ್ಟು ಹೊತ್ತಿನಲ್ಲಿ ನೀವು ಇಲ್ಲಿಗೆ ಹೇಗೆ ಬಂದಿರಿ?’ ಈ ಪ್ರಶ್ನೆಗೆ ಹನುಮಕ್ಕಮ್ಮ ಉತ್ತರ ಕೊಟ್ಟಳು “ಅಣ್ಣಯ್ಯ, ಲಕ್ಷ್ಮೀನಾರಾಯಣಪ್ಪ ನಮ್ಮ ಯಜಮಾನರ ದಾಯಾದಿ. ದುಃಖದಲ್ಲಿ ಮುಳುಗಿ ದಿಕ್ಕುಗಾಣದೆ ಕುಳಿತಿದ್ದ ನನ್ನನ್ನು ‘ನೀನೇನೂ ಯೋಚಿಸಬೇಡ ಹನುಮಕ್ಕ. ನಾನಿದ್ದೇನೆ. ನೀನೂ, ನಿನ್ನ ಮಕ್ಕಳೂ ನನಗೆ ದೂರದವರೇ? ನಿಮ್ಮೆಲ್ಲರ ಯೋಗಕ್ಷೇಮ ನನ್ನದಾಗಿರಲಿ. ನನ್ನ ಶಾನುಭೋಗಿಕೆ ನಿಮ್ಮ ಹಿರಿಯರು ಕೊಟ್ಟದ್ದು. ದೇವರ ದಯೆಯಿಂದ ನಿಮ್ಮನ್ನೆಲ್ಲ ಸಾಕುವಷ್ಟು ಶಕ್ತಿ ನನಗಿದೆ. ನಡೆ ನಮ್ಮ ಮನೆಗೆ ಹೋಗೋಣ’ ಎಂದು ಹೇಳಿ ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋದ. ದಿಕ್ಕಿಲ್ಲದವಳಾದ ನಾನು ಆತನನ್ನು ನಂಬಿ ಮಕ್ಕಳೊಂದಿಗೆ ಆತನ ಮನೆಗೆ ಬಂದುಬಿಟ್ಟೆ. ಆತ ನಮ್ಮನ್ನು ತುಂಬ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದ. ಆದರೆ ಆ ವಿಶ್ವಾಸದ ಹಿಂದೆ ಅಡಗಿದ್ದ ದುರ್ಬುದ್ಧಿ ಆಗ ನನಗೆ ತಿಳಿದಿರಲಿಲ್ಲ. ಮೊದಲೇ ಅದರ ಸುಳಿವು ಸಿಕ್ಕಿದ್ದರೆ ನಾನು ಅಲ್ಲಿಗೆ ಹೋಗುತ್ತಲೇ ಇರಲಿಲ್ಲ”. ಪಟೇಲ ಮಧ್ಯೆ ಬಾಯಿ ಹಾಕಿ, ‘ಯಾಕವ್ವ, ಅಂಥದ್ದೇನಾಯಿತು?’ ಎಂದು ಕೇಳಿದ. ಆಗ ಹನುಮಕ್ಕಮ್ಮ ‘ಅದನ್ನು ಹೇಗೆ ಹೇಳಿಕೊಳ್ಳುವುದು ಅಣ್ಣಯ್ಯ? ನಾನು ಸ್ವಲ್ಪ ಲಕ್ಷಣವಾಗಿದ್ದೇನೆ, ಎಂದು ಅವರಿವರು ಹೇಳುತ್ತಾರೆ. ಲಕ್ಷ್ಮೀನಾರಾಯಣಪ್ಪನ ಕಣ್ಣಿಗೂ ಹಾಗೆ ಕಂಡಿರಬೇಕು. ಕೆಲಕಾಲ ಅದರ ಸುಳಿವು ನನಗೆ ಹತ್ತದಂತೆ ಆತ ನಡೆದುಕೊಂಡ. ಆದರೆ ಒಂದು ದಿನ ನನಗದರ ಸುಳಿವು ತಿಳಿಯಿತು. ಒಡನೆಯೇ ರಾತ್ರೋ ರಾತ್ರಿ ಮಕ್ಕಳನ್ನು ಕಟ್ಟಿಕೊಂಡು ಯಾರಿಗೂ ತಿಳಿಯದಂತೆ ಅಲ್ಲಿಂದ ಹೊರಟು ಬಂದು ಬಿಟ್ಟೆ. ಹೊರಡುವಾಗ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಎಂಬ ಯೋಚನೆಯೇನೋ ಬಂತು. ಆದರೆ ಸದ್ಯ ಆ ನರಕದಿಂದ ತುಳುಕಿನಲ್ಲಿ ನೆಲೆಸಿದರು 79 ತಪ್ಪಿಸಿಕೊಂಡರೆ ಸಾಕು. ಮುಂದೆ ಹೇಗಾದರೂ ಆಗಲಿ - ಎಂದು ಅಲ್ಲಿಂದ ಹೊರಟು ಬಂದು ಬಿಟ್ಟೆ’ ಎಂದಳು. ಉಜ್ಜನಪ್ಪ ಕಣ್ಣಿನಲ್ಲಿ ಹನಿ ತುಂಬಿ “ಲಕ್ಷ್ಮೀನಾರಾಯಣಪ್ಪ ಇಷ್ಟು ಕೀಳುಮಟ್ಟಕ್ಕಿಳಿಯಬಹುದೆಂದು ಊಹಿಸುವುದೂ ಕಷ್ಟ. ಆದದ್ದಾಯಿತು ತಂಗಿ, ಮುಂದೇನು ಮಾಡಬೇಕೆಂದು ಯೋಚಿಸಿದ್ದೀ” ಎಂದು ಕೇಳಿದ. ಹನುಮಕ್ಕಮ್ಮ ‘ಏನು ಮಾಡುವುದೋ ನನಗೊಂದೂ ತೋಚುತ್ತಿಲ್ಲ ಅಣ್ಣಯ್ಯಾ, ಎಲ್ಲಿಯಾದರೂ ಕೆರೆಯೋ ಬಾವಿಯೋ ನೋಡಿಕೊಳ್ಳೋಣ ಎಂದು ಒಂದೊಂದು ಸಲ ಯೋಚನೆ ಬರುತ್ತದೆ. ಆದರೆ ಇನ್ನೂ ಗಂಡನಮನೆ ಸೇರದಿರುವ ಈ ಹೆಣ್ಣು ಮಗಳು, ಈ ಎರಡು ಗಂಡು ಮಕ್ಕಳು ಬೀದಿಯ ಪಾಲಾಗುತ್ತವಲ್ಲ ಎಂಬ ಯೋಚನೆ ಬಂದು ಅದನ್ನು ತಡೆ ಹಿಡಿದಿದ್ದೇನೆ. ಇನ್ನೊಂದು ಮಾತು ಅಣ್ಣಯ್ಯಾ, ಈಗ ನಾನು ಹೇಳಿದ ವಿಚಾರ ಯಾರಿಗೂ ತಿಳಿಯಬಾರದು. ಗಂಡಸರು ಏನು ಮಾಡಿದರೂ ಅವರ ಗಂಡಸುತನಕ್ಕೆ ಕೋಡು ಮೂಡಿಸುತ್ತದೆ ಅದು. ಆದರೆ ಹೆಣ್ಣಿನ ವಿಚಾರದಲ್ಲಿ ಒಂದು ಒಡಕು ಶಬ್ದ ಹುಟ್ಟಿದರೆ - ನ್ಯಾಯವಾಗಿಯೋ, ಅನ್ಯಾಯವಾಗಿಯೋ ಅದು ಕೈಕಾಲು ಹುಟ್ಟಿಕೊಂಡು ಬೀದಿಯ ಮಾತಾಗುತ್ತದೆ. ಅಣ್ಣಯ್ಯಾ, ನಿಮ್ಮನ್ನು ನೋಡಿದಾಗ, ನಿಮ್ಮ ಮಾತುಗಳನ್ನು ಕೇಳಿದಾಗ ನೀವೊಬ್ಬ ಒಡ ಹುಟ್ಟಿದ ಅಣ್ಣ ಎಂಬ ಭಾವನೆ ಬಂದು ನನ್ನ ಹೊಟ್ಟೆಯಲ್ಲಿನ ಕಷ್ಟವನ್ನೆಲ್ಲಾ ನಿಮ್ಮಲ್ಲಿ ತೋಡಿಕೊಂಡಿದ್ದೇನೆ. ಬೇರೆ ಯಾರಿಗೂ ಈ ವಿಚಾರ ತಿಳಿಯಬಾರದು’ ಎಂದಳು. ಆಗ ಉಜ್ಜನಪ್ಪ ‘ಯೋಚನೆ ಮಾಡಬೇಡ ತಾಯಿ, ದನ ನಂಬಿದರೂ, ದಾಯಾದಿಯನ್ನು ನಂಬಬಾರದಂತೆ. ಹೋಗಲಿ ಈಗ ನಡಿ, ನಮ್ಮ ಮನೆಗೆ ಹೋಗೋಣ. ಬಾಕಿ ವಿಚಾರ ಆಮೇಲೆ ಯೋಚಿಸೋಣ’ ಎಂದು ಹೇಳಿ ಹನುಮಕ್ಕಮ್ಮನನ್ನು, ಮಕ್ಕಳನ್ನು ಮನೆಗೆ ಕರೆದುಕೊಂಡ ಬಂದ. ಮನೆಗೆ ಬಂದ ಉಜ್ಜನಪ್ಪ ಬಾಗಿಲಿನಲ್ಲಿಯೇ ನಿಂತು ‘ಗುರುಸಿದ್ದೀ, ಗುರುಸಿದ್ದೀ’ ಎಂದು ಕೂಗಿದ. ಒಳಗೆ ಕಸಗುಡಿಸುತ್ತಿದ್ದ ಗೌಡಿತಿ ಗುರುಸಿದ್ದಮ್ಮ ಗುಡಿಸುತ್ತಿದ್ದ ಪರಕೆಯೊಂದಿಗೆ ಹೊರಗೆ ಬಂದಳು. ‘ಇದೇನು ಇಷ್ಟು ಜಾಗ್ರತೆ ಬಂದುಬಿಟ್ಟಿರಿ? ತೋಟದ ಕಡೆ ಹೋಗಿ ಬಂದಾಯಿತೆ?’ ಎಂದಳು. ಆಗ ಉಜ್ಜನಪ್ಪ ‘ಮಹರಾಯಗಿತ್ತಿ ಸಧ್ಯ ಕೈಯಲ್ಲಿರೋ ಚಾಮರ ಒಳಗಿಟ್ಟು ಬಾ. ನನಗೇನೂ ದೃಷ್ಟಿ ತೆಗೆಯಬೇಕಾಗಿಲ್ಲ’ ಎಂದ. ತಾನು ಗುಡಿಸುತ್ತಿದ್ದವಳು ಹಾಗೆಯೇ ಪೊರಕೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದುದು ಅರಿವಾಯಿತು, ಗುರುಸಿದ್ದಮ್ಮನಿಗೆ. ಆಕೆ ನಾಚಿಕೆಯಿಂದ ಸರಸರನೆ ಒಳಕ್ಕೆ ಹೋಗಿ ಪೊರಕೆಯನ್ನು 80 ಮೂರು ತಲೆಮಾರು ಬಿಸುಟು ಬಂದು ‘ಏನು ಸಮಾಚಾರ?’ ಎಂದಳು. ‘ನೊಡು ಹೊರಗಡೆ ಯಾರು ಬಂದಿದ್ದಾರೆ’ ಎಂದ ಪಟೇಲ. ಗೌಡಿತಿ’ ‘ಯಾರೋ ಗೊತ್ತಾಗಲಿಲ್ಲ, ನಾನೆಂದೂ ಇವರನ್ನು ಕಂಡಿಲ್ಲ. ನೋಡಿದರೆ ಹಾರುವರಂತೆ ಕಾಣುತ್ತಾರೆ, ಯಾರಿವರು?’ ಎಂದಳು. ಉಜ್ಜನಪ್ಪ ಮುಗುಳು ನಗುತ್ತ ‘ನಾನು ಹೇಳುತ್ತಿರಲಿಲ್ಲವೇನೆ, ಶೇಕದಾರ್ ವೆಂಕಣ್ಣಯ್ಯನವರೂಂತ? ಅವರ ಮನೆಯವರು.’ ‘ಯಾರು? ಚಳ್ಳಕೆರೆಯಲ್ಲಿ ಏನೋ ತಮಾಷೆ ನಡೆಯಿತು ಎಂದು ಹೇಳುತ್ತಿದ್ದಿರಲ್ಲಾ, ಅ ವೆಂಕಣ್ಣಯ್ಯನವರೇ?’ ‘ಹೂಂ ಅದೇ ವೆಂಕಣ್ಣಯ್ಯನವರೆ. ನಾನು ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ. ಅಷ್ಟು ಹೊತ್ತಿಗೆ ನೀನು ತಳವಾರನಿಗೆ ಹೇಳಿ ಕಳುಹಿಸಿ ಕೇಶವದೇವರ ಗುಡಿ ಬರುತ್ತೇನೆ. ಅಷ್ಟು ಹೊತ್ತಿಗೆ ನೀನು ತಳವಾರನಿಗೆ ಹೇಳಿ ಕಳುಹಿಸಿ ಕೇಶವದೇವರ ಗುಡಿ ಹತ್ತಿರ ಇವರ ಅಡಿಗೆ, ಊಟಕ್ಕೆ ಏರ್ಪಾಟು ಮಾಡು ಎಂದು ಹೇಳಿ ಹೊರಟು ಹೋದ. ಗುರುಸಿದ್ದಮ್ಮ ತುಟಿಗಳಲ್ಲಿ ನಗುವನ್ನು ಕುಣಿಸುತ್ತಾ ‘ಒಳಗೆ ಬನ್ರವ್ವಾ, ಕುಳಿತುಕೊಳ್ಳಿ. ಅಷ್ಟರಲ್ಲಿ ತಳವಾರನಿಗೆ ಹೇಳಿ ಕಳುಹಿಸಿ ನಿಮ್ಮ ಅಡಿಗೆ, ಊಟಕ್ಕೆ ಏರ್ಪಾಟು ಮಾಡುತ್ತೀನಿ’ ಎಂದು ಹೇಳಿ ಹನುಮಕ್ಕಮ್ಮನನ್ನೂ, ಮಕ್ಕಳನ್ನೂ ಒಳಕ್ಕೆ ಕರೆದು ಚಾಪೆಯ ಮೇಲೆ ಕೂರಿಸಿದಳು. ವೆಂಕಣ್ಣಯ್ಯನವರ ಕುಟುಂಬವನ್ನು ಮನೆಯಲ್ಲಿ ಬಿಟ್ಟು ಹೊರಟ ಉಜ್ಜನಪ್ಪ ನೇರವಾಗಿ ಚಾವಡಿಗೆ ಬಂದ. ತಳವಾರನನ್ನಟ್ಟಿ ಗ್ರಾಮದ ಮುಖಂಡರನ್ನು ಗುಡೇಹಳ್ಳಿ ಶರಣಪ್ಪ. ಹಾದಿಮನೆ ಸಣ್ಣಪ್ಪ, ಮೂಲೆಮನೆ ಕೆಂಚಪ್ಪ, ಭಾರಿ ಗುರುಸಿದ್ದಪ್ಪ, ಕಂಟ್ರಾಕ್ಟರ್ ಕೃಷ್ಣರಾಯ, ಶಾನುಭೋಗ ಶ್ರೀನಿವಾಸರಾಯ, ನಾಯಕರ ಕಾಟಯ್ಯ - ಮೊದಲಾದವರನ್ನೆಲ್ಲ ಚಾವಡಿಗೆ ಬರುವಂತೆ ಹೇಳಿ ಕಳುಹಿಸಿದ, ಇದ್ದಕ್ಕಿದ್ದಂತೆ ತಮ್ಮನ್ನೆಲ್ಲ ಕರೆಸಿದ ಉದ್ದೇಶ ಏನಿರಬಹುದು? ಜಿಲ್ಲೆಯ ದೊಡ್ಡ ಧಣಿ ಏನಾದರೂ ಬರಬಹುದೇ ಅಥವಾ ಊರಿನ ಪಡ್ಡೇ ಹುಡುಗ ಯಾವನಾದರೂ ರಗಳೆಗೆ ದಾರಿ ಮಾಡಿರಬಹುದೆ? ಆತಂಕಗೊಂಡ ಮುಖಂಡರೆಲ್ಲರೂ ಚಾವಡಿಗೆ ಧಾವಿಸಿ ಬಂದರು. ಶಾನುಭೋಗ ಶ್ರೀನಿವಾಸರಾಯರು ‘ಏನು ಗೌಡರೇ ಇಷ್ಟು ಬೆಳಗಿನಲ್ಲಿ ನಮ್ಮನ್ನೆಲ್ಲ ಇಷ್ಟು ತರಾತುರಿಯಿಂದ ಕರೆಸಿದ್ದೇಕೆ? ಏನು ಸಮಾಚಾರ?’ ಎಂದು ಕೇಳಿದರು. ಉಜ್ಜನಪ್ಪ ಅಂದಿನ ಬೆಳಿಗ್ಗೆ ವೆಂಕಣ್ಣಯ್ಯನವರ ಕುಟುಂಬವನ್ನು ಕಂಡಾಗಿನಿಂದ ನಡೆದ ಸಮಾಚಾರವನ್ನೆಲ್ಲ ಅವರಿಗೆ ಹೇಳಿ, ವೆಂಕಣ್ಣಯ್ಯನವರ ಕುಟುಂಬವನ್ನು ಕಂಡಾಗಿನಿಂದ ನಡೆದ ಸಮಾಚಾರವನ್ನೆಲ್ಲ ಅವರಿಗೆ ಹೇಳಿ, ವೆಂಕಣ್ಣಯ್ಯನವರು ಧರ್ಮಾತ್ಮರು, ನಮಗೆಲ್ಲ ಬೇಕಾದವರು. ಅವರು ಬದುಕಿದ್ದಾಗ ನೂರಾರು ಜನಕ್ಕೆ ಉಪಕಾರಿಗಳಾಗಿದ್ದರು. ಅವರ ಕುಟುಂಬ ಈಗ ತಳುಕಿನಲ್ಲಿ ನೆಲೆಸಿದರು 81 ದಿಕ್ಕಿಲ್ಲದವರಾಗಿದ್ದಾರೆ. ವೆಂಕಣ್ಣಯ್ಯನವರು ಮನಸ್ಸು ಮಾಡಿದ್ದರೆ ಅವರ ಸಂಸಾರ ಈ ದಿನ ಈ ಸ್ಥಿತಿಗೆ ಬರಬೇಕಾಗಿರಲಿಲ್ಲ. ಅವರು ಸತ್ಯವಂತರಾಗಿ ಬಾಳಿದರು. ಅನ್ಯಾಯದ ಸಂಪಾದನೆಗೆ ಕೈ ಹಾಕಲಿಲ್ಲ. ನೀವೆಲ್ಲರೂ ಒಪ್ಪುವುದಾದರೆ ಅವರ ಸಂಸಾರ ಈ ಊರಿನಲ್ಲಿಯೇ ನೆಲಸುವಂತೆ ಏನಾದರೂ ಏರ್ಪಾಟು ಮಾಡೋಣ, ಅವರಿಗೆ ಒಂದು ದಿಕ್ಕು ತೋರಿಸೋಣ ಎಂದು ಯೋಚಿಸಿದ್ದೇನೆ. ಅದಕ್ಕಾಗಿಯೇ ನಿಮ್ಮ ಅಭಿಪ್ರಾಯ ತಿಳಿಯೋಣವೆಂದೇ ನಿಮ್ಮನ್ನೆಲ್ಲ ಕರೆಸಿದೆ’ ಎಂದ. ‘ನೀನು ಊರ ತಾಯಿ. ನಿನ್ನ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಪಟೇಲನಾದ ನೀನು ಹೇಳಿದ್ದಕ್ಕೆ ನಾವು ಪ್ರತಿ ಹೇಳುತ್ತೇವೆಯೇ? ಅಗತ್ಯವಾಗಿ ಆಗಬಹುದು’ ಎಂದ ಗುಡೇಹಳ್ಳಿ ಶರಣಪ್ಪ. ‘ನೀವೇನು ಹೇಳುತ್ತೀರಿ ಶಾನುಭೊಗರೆ? ನೀವೇನು ಬಾಯಿಬಿಡುತ್ತಿಲ್ಲವಲ್ಲ, ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದ ಪಟೇಲ. ‘ನಾನು ಹೇಳಬೇಕಾದುದು ಬೇರೆ ಏನಿದೆ ಉಜ್ಜನಪ್ಪ? ನಿನ್ನ ಮಾತೇ ನನ್ನ ಮಾತು. ನೀನು ಸೈ ಎಂದುದಕ್ಕೆಲ್ಲಾ ನನ್ನ ಸಂಪೂರ್ಣ ಬೆಂಬಲವಿದೆ’ ಎಂದ ಶಾನುಭೋಗ ಶ್ರೀನಿವಾಸರಾಯ. ‘ಹಾಗಾದರೆ, ನಾನು ಹೇಳುವ ಮಾತಿಗೆ ನೀವೆಲ್ಲರೂ ಒಪ್ಪುತ್ತೀರಿ ಎಂದಂತೆ ಆಯಿತು’ ಎಂದ ಗೌಡ. ‘ಯಾಕೆ ಅನುಮಾನ ಪಡುತ್ತಿದ್ದಿ ಗೌಡ? ನಮ್ಮಲ್ಲಿ ಯಾರ ವಿಚಾರದಲ್ಲಾದರು ನಿನಗೆ ಅನುಮಾನವಿದೆಯೇನು?’ ಎಂದ, ಭಾರಿ ಗುರುಸಿದ್ದಪ್ಪ. ‘ಹಾಗಲ್ಲ ಗುರುಸಿದ್ದಣ್ಣ, ಇದು ದೊಡ್ಡ ಜವಾಬ್ದಾರಿ ಕೆಲಸ. ಹತ್ತೂ ಜನಗಳ ಸಹಾಯವಿಲ್ಲದೆ ಒಬ್ಬಂಟಿಗನಾಗಿ ಇದನ್ನು ನಿರ್ವಹಿಸುವುದು ಕಷ್ಟ. ಅವರು ಬಂದಿರುವುದು ಉಟ್ಟ ಬಟ್ಟೆಯಲ್ಲಿ, ಬರಿಗೈಯಲ್ಲಿ. ಮೊದಲು ಅವರಿಗೆ ಇರುವುದಕ್ಕೊಂದು ನೆಲೆಯಾಗಬೇಕು. ಮುಂದೆ ಯಾವುದಾದರೂ ಖಾಯಂ ಏರ್ಪಾಟು ಆಗುವವರೆಗೆ ಅವರ ಯೋಗಕ್ಷೇಮ ನೊಡಿಕೊಳ್ಳಬೇಕು. ಸಧ್ಯಕ್ಕೇನೋ ನನ್ನ ಕೈಲಾದುದನ್ನು ನಾನು ಮಾಡುತ್ತೇನೆ. ಆದರೆ ನೀವು ಕಂಡಂತೆ ನಾನೇನೂ ಭಾರಿ ಕುಳವಲ್ಲ. ನನ್ನ ಹೊಟ್ಟೆಬಟ್ಟೆಗೇನೂ ಯಾರನ್ನೂ ಆಶ್ರಯಿಸಬೇಕಾಗಿಲ್ಲ. ಆದರೆ ಒಂದು ಕುಟುಂಬವನ್ನು ಕೊನೆಯವರಗೆ ಸಾಕಿ ಸಲಹುತ್ತೇನೆ ಎಂಬುದು ನನ್ನ ಶಕ್ತಿಗೆ ಮೀರಿದ ವಿಚಾರ’ ಎಂದ. ‘ಯಾಕೆ ಗೌಡ ಹೀಗೆ ಮಾತನಾಡುತ್ತೀ? ನೀನು ಆಡುವ ಮಾತು ಕೇಳಿದರೆ ಈ ಊರೆಲ್ಲ ಹಾಳಾಗಿದೆಯೇನೋ ಎಂಬಂತಿದೆ. ಊರಿನಲ್ಲಿರೋ ನಾವೆಲ್ಲ 82 ಮೂರು ತಲೆಮಾರು ಅಬ್ಬೇಪಾರಿಗಳೆ? ನೀನೊಬ್ಬನೇ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಹಾಗಿದ್ದರೆ ನಮ್ಮನ್ನಿಲ್ಲಿ ಯಾಕೆ ಕರೆಸಿದಿ? ನೋಡು, ಗೌಡ, ಶಾನುಭೋಗರಾದ ನೀವಿಬ್ಬರೂ ಊರಿನ ಮುಖ್ಯಸ್ಥರು. ನಾವೆಲ್ಲ ಏನು ಮಾಡಬೇಕೆಂದು ನೀವು ಹೇಳಿದರೆ ಅದರಂತೆ ನಾವು ನಡೆದುಕೊಳ್ಳುತ್ತೇವೆ. ನೀನು ಹೇಳಿದಂತೆ ಅವರಿಗೊಂದು ಖಾಯಂ ವ್ಯವಸ್ಥೆ ಮಾಡುವವರೆಗೆ ಅವರ ಅಡಿಗೆ, ಊಟಕ್ಕೆ ಏರ್ಪಾಟಾಗಬೇಕು. ಅದಕ್ಕಾಗಿ ನನಗೆ ತೋಚಿದ್ದನ್ನು ನಾನು ಹೇಳುತ್ತೇನೆ. ದಿನಕ್ಕೊಂದು ‘ಕುಳ’ದಂತೆ ಅವರಿಗೆ ಬೇಕಾದ ಸಾಮಾನನ್ನು ಸರಬರಾಜು ಮಾಡುವುದು. ಇದರಿಂದ ಯಾರಿಗೂ ಭಾರವಾಗುವುದಿಲ್ಲ. ಇದು ನನ್ನ ಭಾವನೆ. ಇದಕ್ಕೆ ಎಲ್ಲರ ಸಮ್ಮತಿ ಇದ್ದರೆ ಹಾಗೆ ಮಾಡಬಹುದು’ ಎಂದ ಭಾರಿ ಗುರುಸಿದ್ದಪ್ಪ, ಈ ಸಲಹೆ ಎಲ್ಲರಿಗೂ ಒಪ್ಪಿಗೆಯಾಯಿತು. ‘ಒಂದು ವಿಚಾರವೇನೋ ಇತ್ಯರ್ಥವಾದ ಹಾಗಾಯಿತು. ಈಗ ಅವರಿಗೆ ಇರುವುದಕ್ಕೆ ಒಂದು ತಾಣವಾಗಬೇಕು. ಅದಕ್ಕೇನು ಮಾಡೊಣ?’ ಎಂದು ಕೇಳಿದ ಪಟೇಲ. ‘ಮಾರಮ್ಮನ ಗುಡಿಯ ಮುಂದಿರುವ ನನ್ನ ಕಣವನ್ನು ನಾನು ಅವರಿಗೆ ಬಿಟ್ಟುಕೊಡುತ್ತೇನೆ’ ಎಂದ ಗುಡೇಹಳ್ಳಿ ಶರಣಪ್ಪ. ‘ಬಾಗಿಲು, ಕಿಟಕಿಗಳಿಗೆ ಬೇಕಾಗುವ ಮರಮುಟ್ಟುಗಳನ್ನು ನನ್ನ ತೋಟದ ಮರಗಳಿಂದ ನಾನು ಒದಗಿಸುತ್ತೇನೆ’ ಎಂದ ಮೂಲೆಮನೆ ಕೆಂಚಪ್ಪ. ಮನೆ ಕಟ್ಟುವುದಕ್ಕೆ ಬೇಕಾದ ಕಲ್ಲು ಮಣ್ಣುಗಳನ್ನು ತನ್ನ ಗಾಡಿಯಲ್ಲಿ ಸಾಗಿಸಿಕೊಡುವುದಾಗಿ ಕಾಟನಾಯಕ ಮಾತುಕೊಟ್ಟ. ಮರಗೆಲಸವನ್ನು ಮಾಡಿಸಿಕೊಡುವುದಾಗಿ ಬಡಗಿ ಲಿಂಗಪ್ಪ ಒಪ್ಪಿದ. ಕಟ್ಟಡದ ಕೆಲಸಕ್ಕೆ ಬೇಕಾಗುವ ಕೂಲಿಯಾಳುಗಳನ್ನು ಒದಗಿಸಿ ಮೇಲ್ವಿಚಾರಣೆ ಮಾಡಲು ಕಂಟ್ರಾಕ್ಟರ್ ಕೃಷ್ಣರಾಯರು ಒಪ್ಪಿದರು. ತಾನು ಯೋಚಿಸಿದ ಕಾರ್ಯ ಇಷ್ಟು ಸುಲಭವಾಗಿ ನೆರವೇರಿದುದನ್ನು ಕಂಡು ‘ಇದೆಲ್ಲವು ಶಿವನಿಚ್ಛೆಯೇ ಸರಿ’ ಎಂದುಕೊಂಡ ಪಟೇಲ ಉಜ್ಜನಪ್ಪ. ಇವರ ವಾದ-ವಿವಾದಗಳನ್ನು ಕೇಳುತ್ತ ಸುಮ್ಮನೆ ಕುಳಿತಿದ್ದ ಶಾನುಭೋಗ ಶ್ರೀನಿವಾಸರಾಯ ‘ಹತ್ತು ಜನರು ಮನಸ್ಸು ಮಾಡಿದರೆ ಯಾವ ಕಾರ್ಯ ತಾನೇ ಅಸಾಧ್ಯ? ನೀವು ಮನೆ ಕಟ್ಟಿಕೊಡುವುದು ‘ನಂದೋ ರಾಜಾ ಭವಿಷ್ಯತಿ’ ಎಂಬಂತೆ ಎಂದೋ ಆಗತಕ್ಕದ್ದು. ಹೊಸ ಮನೆಯನ್ನು ಕಟ್ಟಿ ಮುಗಿಸಬೇಕಾದರೆ ಕೆಲವು ತಿಂಗಳುಗಳಾದರೂ ಆಗಬೇಕು. ಅಲ್ಲಿಯವರೆಗೆ ಅವರೆಲ್ಲಿರಬೇಕು?’ ಎಂದು ಕೇಳಿದ. ಈ ಸಮಸ್ಯೆಯನ್ನು ಬಗೆಹರಿಸಲು ಕಾವೇರಮ್ಮ ಮುಂದೆ ಬಂದಳು. ಆಕೆಯ ಮನೆ ಸಾಕಷ್ಟು ದೊಡ್ಡದು. ಅದರಲ್ಲಿ ಆಕೆಯೊಬ್ಬಳೇ ತಳುಕಿನಲ್ಲಿ ನೆಲೆಸಿದರು 83 ವಾಸಿಸುತ್ತಿದ್ದಳು. ಆಕೆ, ತನ್ನ ಮನೆಯನ್ನೆಲ್ಲ ಹನುಮಕ್ಕಮ್ಮನಿಗೆ ಬಿಟ್ಟುಕೊಟ್ಟು ಹೊರಗಿನ ಕೋಣೆಯೊಂದರಲ್ಲಿ ತಾನು ಇದ್ದುಕೊಂಡಿರುವುದಾಗಿ ಒಪ್ಪಿದಳು. ಮನೆಗೆ ಬಾಡಿಗೆ ತೆಗೆದುಕೊಳ್ಳಲು ಆಕೆ ಒಪ್ಪಲಿಲ್ಲ. ಸ್ವಂತವಾದ ಜಮೀನು ತಕ್ಕಷ್ಟು ಇತ್ತು, ಆಕೆಗೆ. ಒಬ್ಬಳ ಜೀವನವನ್ನು ತಾಪತ್ರಯವಿಲ್ಲದೆ ಸಾಗಿಸುವಷ್ಟು ವರಮಾನ ಬರುತ್ತಿತ್ತು. ಹನುಮಕ್ಕಮ್ಮನಂತಹ ಸದ್ಗೃಹಿಣಿಯಾದ ಬ್ರಾಹ್ಮಣಿತಿ ಸಂಸಾರ ಸಮೇತ ತನ್ನ ಮನೆಯಲ್ಲಿ ಬಂದಿರುವುದೇ ತನ್ನ ಪುಣ್ಯವೆಂದು ಭಾವಿಸಿದಳು. ಆಕೆ ನಾಯ್ಡು ಪಂಗಡದವಳು. ಹತ್ತಿರದ ಆಪ್ತರು ಆಕೆಗೆ ಯಾರೂ ಇರಲಿಲ್ಲ. ಯಾರೋ ದೂರದ ಬಂಧುಗಳು ಬಳ್ಳಾರಿಯ ಸಮೀಪದಲ್ಲಿ ಎಲ್ಲೋ ಇದ್ದರು. ಒಬ್ಬಂಟಿಗಳಾಗಿದ್ದ ಆಕೆ ಬ್ರಾಹ್ಮಣ ಸಂಸಾರವೊಂದು ತನ್ನ ಮನೆಗೆ ಬರುವುದೇ ತನ್ನ ಅದೃಷ್ಟವೆಂದು ಹಿರಿಹಿರಿ ಹಿಗ್ಗಿದಳು. ಒಂದು ದಿನದೊಳಗಾಗಿ ತನ್ನ ಮನೆಯನ್ನೆಲ್ಲ ಚೊಕ್ಕಟಪಡಿಸಿ, ಗೋಡೆಗಳಿಗೆ ಸುಣ್ಣ ಹೊಡಿಸಿ, ನೆಲವನ್ನು ಸಾರಿಸಿ ಸಿದ್ಧಪಡಿಸಿದಳು. ಮರುದಿನ ಹನುಮಕ್ಕಮ್ಮ ತನ್ನ ಮಕ್ಕಳೊಡನೆ ಆ ಮನೆಯನ್ನು ಪ್ರವೇಶಿಸಿದಳು. ಊರಿನ ಮುಖಂಡರೆಲ್ಲರೂ ಸೇರಿ ವರ್ಷಕ್ಕೆ ಆಗುವಷ್ಟು ಸಕಲ ಸಂಭಾರವನ್ನು ಆ ಮನೆಗೆ ತಂದು ತುಂಬಿದರು. ಇದಾದ ಹದಿನೈದು ದಿನಗಳ ಮೇಲೆ ಆಕೆಯ ಮೈದುನನಾದ ಲಿಂಗಣ್ಣ ತನ್ನ ಹೆಂಡತಿ ಮತ್ತು ಮಗನೊಡನೆ ರಾಯದುರ್ಗದಿಂದ ಹಿಂದಿರುಗಿ ಮನೆಯಲ್ಲಿ ಸೇರಿಕೊಂಡ. ವೆಂಕಣ್ಣಯ್ಯನವರು ಕಾಲವಾದ ಮೇಲೆ ಹೆಂಡತಿಯೊಡನೆ ಆಕೆಯ ತೌರೂರಿಗೆ ಹೋಗಿದ್ದವನು, ತಳುಕಿನಲ್ಲಿ ಸಂಸಾರ ಪ್ರಾರಂಭವಾಗುತ್ತಲೇ ಅಲ್ಲಿಗೆ ಬಂದ. ಹೀಗೆ ಈ ವಂಶದವರು ಈಗ ಸುಮಾರು ನೂರೈವತ್ತು ವರ್ಷಗಳ ಕೆಳಗೆ ತಳುಕಿಗೆ ಬಂದು ಸೇರಿದರು. * * * * 84 ಮೂರು ತಲೆಮಾರು 2. ತಳುಕು ‘ತಳುಕು’ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಒಂದು ಸುಂದರವಾದ ಪುಟ್ಟ ಊರು; ಅದೇ ಹೆಸರಿನ ಒಂದು ಹೋಬಳಿಯ ಮುಖ್ಯ ಸ್ಥಳ. ಊರಿಗೆ ಹತ್ತಿಕೊಂಡಿರುವಂತೆ ಸುತ್ತಲೂ ಹಸಿರನ್ನು ಹರಡಿರುವ ಹೊಲ, ಗದ್ದೆ, ತೋಟಗಳು, ಅವುಗಳನ್ನು ಸೀಳಿಕೊಂಡು ಹರಿಯುತ್ತಿರುವ ತಲಪರಿಗೆಯ ಕಾಲುವೆ. ಅದನ್ನು ದಾಟಿ ಕಾಲು ಮೈಲು ದೂರ ಕ್ರಮಿಸುವಷ್ಟರಲ್ಲಿ ಒಂದು ಹಳ್ಳ. ಜೀವನದಿಯಂತಿರುವ ಈ ಹಳ್ಳದ ಎರಡು ಪಕ್ಕಗಳಲ್ಲಿಯೂ ದಟ್ಟವಾಗಿ ಬೆಳೆದಿರುವ ಈಚಲುವನ. ಆ ವನದ ಮಧ್ಯದಲ್ಲಿ ಸದಾಹಳದಿಯ ಹೂಗಳನ್ನು ಮುಡಿದ ತಂಗಟಿಯ ವನ. ಕಾಲುವೆ ಮತ್ತು ಹಳ್ಳ-ಇವೆರಡರ ದಂಡೆಯಲ್ಲಿಯೂ ದಟ್ಟವಾಗಿ ಬೆಳೆದಿರುವ ಕಣಿಗಿಲೆ ಗಿಡಗಳು, ಬೋರೆ, ನೇರಲೆ ಮರಗಳು. ಬೆಳಿಗ್ಗೆ ಎದ್ದು ಅತ್ತ ಹೊರಟರೆ ಹತ್ತಾರು ನವಿಲುಗಳ ನರ್ತನ - ಕಣ್ಣಿಗೆ ಹಬ್ಬ. ಪ್ರಾತಃಕೃತ್ಯಗಳನ್ನು ಮುಗಿಸಿಕೊಂಡು; ಸಾಕಷ್ಟು ಹೂ-ಹಣ್ಣುಗಳನ್ನು ಹಿಡಿದುಕೊಂಡು ಮನೆಗೆ ಹಿಂದಿರುಗಬಹುದು. ಅಲ್ಲಿನ ಇತಿಹಾಸ ಸಂಶೋಧನೆಯನ್ನು ಮಾಡುವ ಗೋಜಿಗೆ ನಾನು ಹೋಗುವುದಿಲ್ಲ. ಅಲ್ಲಿನ ಕೋಟೆ-ಕಂದಕಗಳ ಅವಶೇಷಗಳನ್ನು ನೋಡಿದರೆ ಒಂದು ಕಾಲದಲ್ಲಿ ಆ ಊರು ಇತಿಹಾಸ ಪ್ರಸಿದ್ಧವಾಗಿಯೂ ಇದ್ದಿತೇನೋ! ಯಾರಾದರೊಬ್ಬ - ಬಹುಶಃ ಚಿತ್ರದುರ್ಗದ - ಪಾಳೆಯಗಾರನ ಆಳ್ವಿಕೆಗೆ ಒಳಪಟ್ಟಿತ್ತೆಂದು ತೋರುತ್ತದೆ. ಅಲ್ಲಿನ ಶಿಲಾಶಾಸನವೊಂದರಲ್ಲಿ ಆ ಊರಿಗೆ ‘ತಳುಕು’ ಎಂಬ ನಾಮಕರಣವಾದುದಕ್ಕೆ ಕಾರಣ ಸಿಗುತ್ತದೆ. ಒಮ್ಮೆ ಎರಡು ಹೋರಿಗಳು ಒಂದರ ಕೊಂಬಿನಲ್ಲಿ ಇನ್ನೊಂದರ ಕೊಂಬನ್ನು ತಳುಕು ಹಾಕಿಕೊಂಡು ಹೋರಾಡಲು ಪ್ರಾರಂಭಿಸಿದವಂತೆ! ಎಷ್ಟು ಪ್ರಯತ್ನಿಸಿದರೂ ಅವುಗಳ ಹೋರಾಟವನ್ನು ನಿಲ್ಲಿಸಲಾಗಲಿಲ್ಲ ಇದನ್ನು ಕೇಳಿ ‘ಇದು ಗಂಡು ಮೆಟ್ಟಿದ ನೆಲ’ ಎಂದುಕೊಂಡ ಪಾಳೆಯಗಾರ ಅಲ್ಲಿ ಊರನ್ನು ಕಟ್ಟಿಸಿ, ಅದಕ್ಕೆ ‘ತಳುಕು’ ಎಂದು ಹೆಸರಿಟ್ಟಿರಬೇಕು. ಹೋರಾಡಿದ ಆ ಹೋರಿಗಳ ಕೆಚ್ಚು, ರೊಚ್ಚು, ಹುಚ್ಚು ಹುಮ್ಮಸ್ಸು ಅಲ್ಲಿನ ಜನರಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವಂತೆ ಭಾಸವಾಗುತ್ತದೆ. ಆ ಊರಿನ ದೊಡ್ಡವರ ವಿಚಾರ ಹಾಗಿರಲಿ, ತಳುಕು 85 ಎಳೆಯ ಹುಡುಗರನ್ನು ಯಾರಾದರೂ ಕೆಣಕಿ ಕೀಟಲೆ ಮಾಡಿದರೆ ಅವರು ‘ನಾನ್ಯಾರು ಗೊತ್ತೋ? ತಳುಕಿನ ಮರಿ, ಚಿನ್ನದ ಮರಿ; ನೀನೇನ್ ಬಲ್ಲೋ ಕಪ್ಪಾಲ್ ನರಿ’ ಎನ್ನುತ್ತಾನೆ. ತನ್ನ ಶಕ್ತಿಮೀರಿ ಹೋರಾಟಕ್ಕೆ ನಿಲ್ಲುತ್ತಾನೆ. ಹದಿನಾಲ್ಕು ವರ್ಷದ ಸುಬ್ಬಣ್ಣ ಏಳು ಜನರ ದೊಡ್ಡ ಸಂಸಾರದ ಭಾರವನ್ನು ತನ್ನ ಪುಟ್ಟ ಹೆಗಲಮೇಲೆ ಭರಿಸಬೇಕಾಗಿತ್ತು. ಆತನ ತಂದೆ, ಹಿರಿಯ ಮಗಳು ಅಚ್ಚಮ್ಮನ ಮದುವೆಯ ಜೊತೆಯಲ್ಲಿಯೇ ಮಗನಿಗೆ ಉಪನಯನವನ್ನು ಮಾಡಿ, ಸಂಧ್ಯಾವಂದನೆ, ದೇವತಾರ್ಚನೆಯ ಮಂತ್ರಗಳನ್ನು ಕಲಿಸಿಕೊಟ್ಟಿದ್ದರು. ಆತನಿಗೆ ದೇವರು, ಧರ್ಮ, ಸದಾಚಾರಗಳು ರಕ್ತಗತವಾಗಿ ಬಂದಿದ್ದುವು. ಆತ ಬೆಳಗು ಮುಂಜಾನೆ ಎದ್ದು ನಿತ್ಯಕರ್ಮಗಳನ್ನು ತೀರಿಸಹೊರಟವ ಪ್ರಕೃತಿಯ ಮಧ್ಯದಲ್ಲಿ ಪ್ರಕೃತಿಯಾಗಿ ಮೈಮರೆಯುವ. ಗಿಣಿ, ಕೋಗಿಲೆ, ನೀರು ಹಕ್ಕಿಗಳ ಗಾನವನ್ನು ಅನುಸರಿಸುವ; ನವಿಲುಗಳ ನರ್ತನದಲ್ಲಿ ತಲ್ಲೀನವಾಗುವ. ಹಳ್ಳದಲ್ಲಿ ಮುಖ ತೊಳೆದು ‘ದೀನ ನಾನು ಸಮಸ್ತಲೋಕಕೆ ದಾನಿ ನೀನು’ ‘ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಷಿಸಿ’, ‘ಯಾರ ನಾಮವನೊಲಿದು ಪಾಡುವೆ’ ಇತ್ಯಾದಿಗಳನ್ನು ಮೈದುಂಬಿ ಹಾಡಿಕೊಳ್ಳುತ್ತ ಬುಟ್ಟಿಯ ತುಂಬ ಹೂವನ್ನು ತುಂಬಿಕೊಂಡು ಬಂದು ಮನಃ ತೃಪ್ತಿಯಾಗುವಂತೆ ದೇವರನ್ನು ಪೂಜಿಸುವ, ಸುಬ್ಬಣ್ಣ ಒಳ್ಳೆಯ ಮೇಧಾವಿ, ಆ ವೇಳೆಗಾಗಲೇ ಆತ ಕೂಲಿ ಮಠದ ‘ಅಯ್ಯ’ನವರಿಂದ ‘ಗದುಗಿನ ಭಾರತ’, ‘ಜೈಮಿನಿ ಭಾರತ’, ‘ರಾಜಶೇಖರ ವಿಳಾಸ’ಗಳನ್ನು ಓದಿ ಅರ್ಥ ಹೇಳುವಷ್ಟು ಪ್ರಾವೀಣ್ಯವನ್ನು ಪಡೆದಿದ್ದ. ತಳುಕಿನಲ್ಲಿ ‘ಅಯ್ಯ’ನವರಾಗಿದ್ದ ಗೋವಿಂದಪ್ಪನವರಿಂದ ‘ಜಗನ್ನಾಥ ವಿಜಯ’ವನ್ನು ಅಭ್ಯಾಸಮಾಡುತ್ತಿದ್ದ. ವೆಂಕಣ್ಣಯ್ಯನವರ ಸಂಸಾರ ತಳುಕಿನಲ್ಲಿ ಬಂದು ನೆಲೆಸಿರುವುದನ್ನು ಕೇಳಿ ಚಳ್ಳಕೆರೆಯ ತಾಲ್ಲೂಕು ಕಛೇರಿಯಲ್ಲಿ ಹೆಡ್ ಗುಮಾಸ್ತರಾಗಿದ್ದ ಶಾಮಣ್ಣನವರು ತಮ್ಮ ಆಳನ್ನು ಕಳುಹಿಸಿ ಸುಬ್ಬಣ್ಣನನ್ನು ಚಳ್ಳಕೆರೆಗೆ ಕರೆಸಿಕೊಂಡು, ಅವನಿಗೆ ಲೆಕ್ಕ-ಪತ್ರಗಳ ಪರಿಶೀಲನೆಯನ್ನು ಕಲಿಸುವುದಕ್ಕಾಗಿ ತಮ್ಮ ಮನೆಯಲ್ಲಿಯೇ ಇರಿಸಿಕೊಂಡರು. * * * * 86 ಮೂರು ತಲೆಮಾರು 3. ತಾಲ್ಲೂಕು ಕಛೇರಿಯಲ್ಲಿ ಚಳ್ಳಕೆರೆಯ ತಾಲ್ಲೂಕು ಕಛೇರಿಯ ಜಾಗಟೆಯು ಏಳು ಘಂಟೆಗಳಾದುದನ್ನು ಸೂಚಿಸಿತು. ಸಂಜೆಯ ಮಬ್ಬು ಎಲ್ಲೆಡೆಯಲ್ಲಿಯೂ ದಟ್ಟವಾಗಿ ಕವಿಯಿತು. ಸುಬ್ಬಣ್ಣ ಇನ್ನೂ ಮನೆಗೆ ಬಂದಿರಲಿಲ್ಲ. ಹೆಡ್ ಗುಮಾಸ್ತೆ ಶಾಮಣ್ಣನವರು ಸಾಯಂ ಸಂಧ್ಯಾವಂದನೆಯನ್ನು ಮುಗಿಸಿಕೊಂಡು ಉಟ್ಟ ಮಗುಟದಲ್ಲಿಯೇ ತಮ್ಮ ಮನೆಯ ಪಡಸಾಲೆಯಲ್ಲಿ ಶತಪಥ ಹೆಜ್ಜೆ ಹಾಕುತ್ತಿದ್ದರು. ಸಂಪ್ರದಾಯದ ಅವರ ಆಚಾರ ಹಣೆಯ ಮೇಲಿನ ವಿಭೂತಿಯಿಂದ ಎದ್ದು ಕಾಣುತ್ತಿತ್ತು. ‘ಇಷ್ಟು ಹೊತ್ತಾದರೂ ಮನೆಗೇಕೆ ಬರಲಿಲ್ಲವೋ ಈ ಹುಡುಗ?’ ಎನ್ನುತ್ತ ತಮ್ಮ ಗೃಹಿಣಿಯ ಕಡೆ ನೋಡಿದರು ಶಾಮಣ್ಣ. ಗೃಹಿಣಿ ನಸುಗೋಪ ಸೂಚಿಸುವ ಭಂಗಿಯಿಂದ ‘ತಂದೆಯಿಲ್ಲದ ಆ ತಬ್ಬಲಿ ಹುಡುಗನನ್ನು ಏನು ಗೋಳಾಡಿಸುತ್ತೀರಿ ನೀವು? ಅವನ ವಯಸ್ಸೇನು? ಅವನು ಕಛೇರಿಯ ಕಾಗದ ಪತ್ರಗಳನ್ನು ಬರೆದು ಉದ್ಧಾರವಾದ ಹಾಗಾಯಿತೆ?’ ಎಂದು ಗೊಣಗುಟ್ಟಿದರು. ಶಾಮಣ್ಣ ಅರೆನಗುವನ್ನು ನಗುತ್ತ ‘ಅಯ್ಯೊ ಹುಚ್ಚಿ, ಅವರ ತಂದೆ ವೆಂಕಣ್ಣಯ್ಯನವರು ಸಾಯುವ ಮುನ್ನ ಒಂದು ವಾರದ ಕೆಳಗೆ ನನ್ನ ಮನೆಯಲ್ಲಿ ಕೂತು ನಿನ್ನೆದುರಿಗೆ ಹೇಳಿದ್ದು ಮರೆತು ಹೋಯಿತೆ? ‘ನೋಡು ಶಾಮಣ್ಣ, ನನ್ನ ಮಗವನ್ನು ಮುಂದಕ್ಕೆ ತರುವ ಭಾರ ನಿನ್ನದು’ ಎಂದು ಹೇಳಿರಲಿಲ್ಲವೆ? ಅವನನ್ನು ಅಕ್ಷರಸ್ಥನನ್ನಾಗಿ ಮಾಡಿ ನಮ್ಮ ಸ್ನೇಹದ ಋಣ ತೀರಿಸಿಕೊಳ್ಳಬೇಡವೆ?’ ಹೀಗೆ ಹೇಳುತ್ತಾ ಶಾಮಣ್ಣನ ಕಣ್ಣು ತೇವವಾಯಿತು. ಗೃಹಿಣಿಯು ಸಹ ಕಣ್ಣೊರೆಸಿಕೊಳ್ಳುತ್ತ ಅಡುಗೆಮನೆಯೊಳಕ್ಕೆ ಹೋದರು. ಇನ್ನೂ ಅರ್ಧಘಂಟೆ ಕಳೆಯಿತು. ಸುಬ್ಬಣ್ಣ ಮನೆಗೆ ಬರಲಿಲ್ಲ. ಶಾಮಣ್ಣ ಹೆಗಲ ಮೇಲೆ ಅಂಗವಸ್ತ್ರವನ್ನು ಇಳಿಯಬಿಟ್ಟು, ಕೈಯಲ್ಲಿ ಲಾಂದ್ರವನ್ನು ಹಿಡಿದು, ಊರಿನ ಮಧ್ಯದಲ್ಲಿದ್ದ ತಮ್ಮ ಕಛೇರಿಯ ಕೋಣೆಗೆ ಬಂದರು. ಸುಬ್ಬಣ್ಣ ತಾನು ಕೂತು ಕೆಲಸ ಮಾಡುತ್ತಿದ್ದ ಜಮಖಾನೆಯ ಮೇಲೆ ಹಾಗೆಯೇ ಮುದುರಿಕೊಂಡು ಮಲಗಿದ್ದಾನೆ. ಅವನ ಮುಂದೆ ಒಂದು ಇಳಿಜಾರಾದ ಕೈಮೇಜು, ಅದರ ಮೇಲೆ ಕಾಗದ ಪತ್ರಗಳು, ಲೇಖನ ಸಾಮಗ್ರಿಗಳು, ಬರೆಯುತ್ತ, ಬರೆಯುತ್ತ ಹುಡುಗ ಹಾಗೆಯೇ ನಿದ್ರೆ ಹೋಗಿದ್ದಾನೆ. ಶಾಮಣ್ಣ ಲಾಂದ್ರವನ್ನು ಎತ್ತಿ ಹಿಡಿದು ತಾಲ್ಲೂಕು ಕಛೇರಿಯಲ್ಲಿ 87 ನೋಡಿದರು. ಹುಡುಗ ಗಾಢನಿದ್ರೆಯಲ್ಲಿದ್ದ. ಶಾಮಣ್ಣ ‘ಏಳೋ ಸುಬ್ಬಣ್ಣ, ಮೈ ಮರೆತು ಹೀಗೆ ಮಲಗಿಬಿಡಬಹುದೇ’ ಎಂದು ಮೈ ತಟ್ಟಿ ಎಚ್ಚರಿಸಿದರು. ಸುಬ್ಬಣ್ಣ ಧಡಕ್ಕನೆ ಎದ್ದು, ಕಕ್ಕಾಬಿಕ್ಕಿಯಗಿ ನೋಡಿದ. ಅವನ ಮುಖದ ಮೇಲೆ ಭಯ, ವಿಸ್ಮಯಗಳು ತಾಂಡವವಾಡುತ್ತಿದ್ದುವು. ಗಾಬರಿಯಿಂದ ಅವನು ಕಾಗದ ಪತ್ರವನ್ನು ಓರಣವಾಗಿರಿಸಿ ಲೇಖನ ಸಾಮಗ್ರಿಗಳನ್ನು ಮೇಜಿನೊಳಕ್ಕೆ ಹಾಕಿದ. ಆಮೇಲೆ ಶಾಮಣ್ಣನತ್ತ ತಿರುಗಿ ಗಾಬರಿಯಿಂದ ‘ಬರೀತಾ ಬರೀತಾ ನನಗೆ ತಿಳಿಯದಂತೆ ನಿದ್ದೆ ಬಂದು ಬಿಡ್ತು ಚಿಕ್ಕಪ್ಪ’ ಎಂದು ಕೈಯ್ಯುಜ್ಜುತ್ತ ಹೇಳಿದ. ಆಗ ಶಾಮಣ್ಣ ಮುಗುಳ್ನಗುತ್ತ ‘ಮಗು, ನಿನ್ನ ಬರವಣಿಗೆ ಸಾಕಪ್ಪ. ನಿಮ್ಮ ಚಿಕ್ಕಮ್ಮ ನನ್ನ ಮೇಲೆ ಕೋಪಿಸಿಕೊಂಡು ಬುಸುಗುಟ್ಟುತ್ತಾ ಇದ್ದಾಳೆ. ಏಳು ಮನೆಗೆ ಹೋಗೋಣ’ ಎಂದು ಸುಬ್ಬಣ್ಣನನ್ನು ಮನೆಗೆ ಕರೆತಂದರು. ಅವನ ಸಂಧ್ಯಾವಂದನೆಯಾದ ಮೇಲೆ ಎಲ್ಲರೂ ಕುಳಿತು ಊಟ ಮಾಡಿದರು. ಸುಬ್ಬಣ್ಣನ ತಂದೆ ವೆಂಕಣ್ಣಯ್ಯನವರು ಪರಲೋಕಗತರಾಗಿ ಎರಡು ವರ್ಷಗಳಾಗಿದ್ದುವು. ಅವರ ಸಂಸಾರ ತಳುಕಿಗೆ ಬಂದು ಸೇರಿತ್ತು. ಮನೆಗೆ ಸುಬ್ಬಣ್ಣನೇ ದಿಕ್ಕು. ಅವನ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ತಾಯಿ, ಅಕ್ಕ, ತಮ್ಮಂದಿರಿಬ್ಬರು ಇವರೆಲ್ಲರ ನಿರ್ವಹಣೆ ಅವನಿಂದ ಆಗಬೇಕಾಯಿತು. ಇದನ್ನು ಕಂಡು ವೆಂಕಣ್ಣಯ್ಯನವರ ಪರಮ ಸ್ನೇಹಿತರಾದ ಹೆಡ್ ಗುಮಾಸ್ತೆ ಶಾಮಣ್ಣನವರು ಅವನಿಗೆ ತಾಲ್ಲೂಕು ಲೆಕ್ಕಪತ್ರಗಳನ್ನು ಕಲಿಸಿಕೊಡುವುದಕ್ಕಾಗಿ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಆಗಾಗ ಅಷ್ಟೋ ಇಷ್ಟೋ ಹಣವನ್ನು ಕೊಟ್ಟು ತಳುಕಿನ ಸಂಸಾರ ಮುಂದುವರೆದುಕೊಂಡು ಹೋಗಲು ಸಹಾಯ ಮಾಡುತ್ತಿದ್ದರು. ಎರಡು ವರ್ಷಗಳ ಕಾಲ ಹೀಗೆ ಮನೆಯಲ್ಲಿಟ್ಟುಕೊಂಡು ಆ ಹುಡುಗನನ್ನು ತಾಲ್ಲೂಕಿನ ಲೆಕ್ಕ -ಪತ್ರಗಳ ಪರಿಶೀಲನೆಯಲ್ಲಿ ನಿಷ್ಣಾತನನ್ನಾಗಿ ಮಾಡಿದರು. ತನ್ನ ಬುದ್ಧಿ ಚಟುವಟಿಕೆಗಳಿಂದ ಅವನು ಎಲ್ಲರ ಮೆಚ್ಚುಗೆಗೂ ಪಾತ್ರನಾದ. ಮಕ್ಕಳಿಲ್ಲದ ಶಾಮಣ್ಣನಿಗಂತೂ ಅವನು ಮಗನಿಗಿಂತಲೂ ಹೆಚ್ಚು ಪ್ರೀತ್ಯಾಸ್ಪದನಾದ. ಮಕ್ಕಳಿಲ್ಲದ ಶಾಮಣ್ಣನಿಗಂತೂ ಅವನು ಮಗನಿಗಿಂತಲೂ ಹೆಚ್ಚು ಪ್ರೀತ್ಯಾಸ್ಪದನಾದ. ಸುಂದರವಾದ ಬರವಣಿಗೆ, ಅಚ್ಚು ಕಟ್ಟಾದ ಕೆಲಸ. ಒಪ್ಪವಾದ ನಡವಳಿಕೆ. ಎಲ್ಲಕ್ಕಿಂತಲೂ ಆತನ ಬರವಣಿಗೆಯ ಪ್ರೌಢಿಮೆ ಎಲ್ಲರನ್ನೂ ತಲೆದೂಗಿಸುತ್ತಿತ್ತು. ಆತನ ಬರವಣಿಗೆಯನ್ನು ಕಂಡ ಶಾಮಣ್ಣ ‘ಪುಣ್ಯವಿದ್ದರೆ ನಮ್ಮ ಸುಬ್ಬಣ್ಣ ಮುಂದೆ ದೊಡ್ಡ ಕವಿಯಾಗುತ್ತಾನೆ’ ಎಂದು ಗೆಳೆಯರ ಬಳಿಯಲ್ಲಿ ಹೊಗಳುತ್ತಿದ್ದರು. ಆ ಕಾಲದಲ್ಲಿ ದೇಶದಾದ್ಯಂತವೂ ಪೂರ್ಣಯ್ಯನವರ ಛತ್ರಗಳಿದ್ದವು. 88 ಮೂರು ತಲೆಮಾರು ಪುಣ್ಯಭೂಮಿ ಎನಿಸಿಕೊಂಡಿದ್ದ ನಮ್ಮ ಭರತಖಂಡದಲ್ಲಿ ಹಿಮಾಲಯದಿಂದ ಹಿಡಿದು ರಾಮೇಶ್ವರದವರೆಗೆ ಲೆಕ್ಕವಿಲ್ಲದ್ದಷ್ಟು ಪುಣ್ಯಕ್ಷೇತ್ರಗಳಿವೆ. ಹಿಂದಿನಿಂದಲೂ ಸಾಧು, ಸಂತರು, ಗೋಸಾಯಿಗಳು ಮತ್ತು ಇತರ ಯಾತ್ರಿಕರು ಈ ಕ್ಷೇತ್ರಗಳ ದರ್ಶನಕ್ಕಾಗಿ ದೇಶದಾದ್ಯಂತವೂ ತಿರುಗುತ್ತಿದ್ದರು. ಇವರ ಯೋಗಕ್ಷೇಮವನ್ನು ಸರಕಾರ ವಹಿಸಿತ್ತು. ಅವರಿಗಾಗಿಯೇ ಈ ಛತ್ರಗಳು ಏರ್ಪಾಟಾಗಿದ್ದುವು. ದೇಶದ ಯಾವ ಭಾಗದಲ್ಲಿಯಾದರೂ ಕ್ಷಾಮ-ಡಾಮರಗಳು ಸಂಭವಿಸಿದಾಗ ಸರ್ಕಾರವು ಈ ಛತ್ರಗಳ ಮೂಲಕ ಸಹಾಯ ನೀಡುತ್ತಿದ್ದುದುಂಟು. ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಅನುಭವದಲ್ಲಿ ಮೂರ್ತಿಮತ್ತಾಗಿ ನಿಂತಿರುವುದು ‘ಜೈ ಸೀತಾರಾಮ’ ಗೋಸಾಯಿಗಳ ಯಾತ್ರೆ. ಅವರು ಉತ್ತರದಿಂದ ಸಣ್ಣ ಸಣ್ಣ, ಕೆಲವು ವೇಳೆ ದೊಡ್ಡ ದೊಡ್ಡ ಗುಂಪುಗಳಾಗಿ ಯಾತ್ರೆ ಹೊರಡುತ್ತಿದ್ದರು. ಅವರ ಭಾಷೆ ಹಿಂದಿ. ಅವರ ಗುಂಪಿನಲ್ಲಿ ಮುಖಂಡರೊಬ್ಬರು ಇರುತ್ತಿದ್ದರು. ಆ ಗುಂಪುಗಳಲ್ಲಿ ಇರುತ್ತಿದ್ದವರೆಲ್ಲ ಬ್ರಹ್ಮಚಾರಿಗಳೇ. ಭಸ್ಮಧೂಳಿನ ಶರೀರ, ತೇಜಃಪುಂಜವಾದ ಕಣ್ಣುಗಳು, ತಲೆಯ ಮೇಲೆ ಜಟೆ, ಕೊರಳಲ್ಲಿ ರುದಾಕ್ಷಿ, ತುಳಸಿ ಮಾಲೆಗಳು, ಕೈಯಲ್ಲಿ ದಂಡ ಕಮಂಡಲಗಳು, ಬಾಯಲ್ಲಿ ‘ಜೈ ಸೀತಾರಾಮ. ಹರಹರ ಮಹಾದೇವ’ ಇತ್ಯಾದಿ ನಾಮಸ್ಮರಣೆ. ಸಾಧಾರಣವಾಗಿ ಅವರು ಶಾಂತಮೂರ್ತಿಗಳಾಗಿರುತ್ತಿದ್ದರು. ಅವರು ಉಳಿದುಕೊಂಡ ಸ್ಥಳಗಳಲ್ಲಿ ಒಂದು ಅಗ್ನಿಕುಂಡವನ್ನು ಮಾಡುವರು, ಅದರ ಸುತ್ತಲೂ ಎಲ್ಲರೂ ಕುಳಿತು ಭಜನೆ, ಪಾರಾಯಣ, ಧರ್ಮಜಿಜ್ಞಾಸೆಗಳನ್ನು ನಡೆಸುತ್ತಿದ್ದರು. ದೊಡ್ಡ ದೊಡ್ಡ ಮಂಟಪಗಳನ್ನು ದೇವರುಗಳನ್ನಿಟ್ಟುಕೊಂಡು ಪೂಜಿಸುವುದೂ ಉಂಟು. ಒಬ್ಬೊಬ್ಬರಿಗೂ ದಿನವೊಂದಕ್ಕೆ ಒಂದು ಪಾವು ಅಕ್ಕಿ ಅಥವಾ ಅರ್ಧ ಸೇರು ಹಿಟ್ಟು, ಇತರ ಖರ್ಚಿಗಾಗಿ ಅರ್ಧ ಆಣೆ- ಈ ರೀತಿ ಪಡಿತರವನ್ನು ನೀಡುತ್ತಿತ್ತು ಛತ್ರ. ಒಬ್ಬ ಅಡಿಗೆಯವನು ಊಟಕ್ಕೆ ಬಂದವರಿಗೆ ಅಡಿಗೆ ಮಾಡಿ ಬಡಿಸುತ್ತಿದ್ದನು. ಅದಕ್ಕೊಬ್ಬ ಪಾರುಪತ್ತೇಗಾರನ ಕೆಲಸ ಖಾಲಿಯಾಗಿತ್ತು, ತಳುಕಿನಲ್ಲಿ ಶಾಮಣ್ಣನವರು ತಮ್ಮ ಬುದ್ಧಿಸಾಹಸಗಳಿಂದ ಸುಬ್ಬಣ್ಣನಿಗೆ ಪಾರುಪತ್ತೇಗಾರನ ಕೆಲಸವನ್ನು ಮಂಜೂರು ಮಾಡಿಸಿಕೊಟ್ಟರು. ಅಭೂತಪೂರ್ವವಾದ ಈ ಅಧಿಕಾರವನ್ನು ವಹಿಸಿಕೊಂಡು ಸುಬ್ಬಣ್ಣ ತಳುಕಿಗೆ ಬಂದ. ಎಷ್ಟಾದರೂ ಸರಿ, ಮಗನು ಕಣ್ಣೆದುರಿಗೆ ಬಂದನಲ್ಲ; ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಂತಾದವನಲ್ಲ, ಇದೇ ಒಂದು ಭಾಗ್ಯವೆಂದು ಹನುಮಕ್ಕಮ್ಮ ಸಂತೋಷಗೊಂಡಳು. ಶಾಮಣ್ಣನವರ ಉಪಕಾರಕ್ಕಾಗಿ ಅವರನ್ನು ಮನಸಾರ ವಂದಿಸಿದಳು. ತಳುಕಿನಲ್ಲಿ ತಾಲ್ಲೂಕು ಕಛೇರಿಯಲ್ಲಿ 89 ಮೊದಲಿನಿಂದಲೂ ಇದ್ದ ‘ಮುಸಾಫಿರ್‍ಖಾನೆಯ’ ಜೊತೆಗೆ ಅನ್ನಛತ್ರಕ್ಕಾಗಿ ಪ್ರತ್ಯೇಕ ಕಟ್ಟಡವೊಂದು ನಿರ್ಮಾಣವಾಯಿತು. ಇಂದಿಗೂ ಆ ಕಟ್ಟಡಗಳ ಅವಶೇಷಗಳು ಉಳಿದಿವೆ. ಸುಬ್ಬಣ್ಣ ಪಾರುಪತ್ತೇಗಾರನಾದ. ಸಂಬಳ ಕಡಿಮೆಯಾದರೂ ಅದರ ದಾಂಧಲೆ ಹೆಚ್ಚು. ಬೆಳಕು ಹರಿಯುವ ಹೊತ್ತಿಗೆ ಯಾರೊ ಗೊಸಾಯಿಗಳು ಬರುವರು. ‘ಜೈ ಸೀತಾರಾಮ್ ಎಂದು ಕೂಗುವರು. ಮೊದಮೊದಲು ಸುಬ್ಬಣ್ಣನಿಗೆ ಅವರನ್ನು ಕಂಡು ಹೆದರಿಕೆಯಾದರೂ ಬರುಬರುತ್ತಾ ಅಭ್ಯಾಸಬಲದಿಂದ ಧೈರ್ಯ ಬಂದಿತು. ತನ್ನ ಕೆಲಸದಲ್ಲಿ ಸಾಕಷ್ಟು ಯಶಸ್ವಿಯಾದ. ಹರುಕುಮುರುಕಾಗಿ ಅವರ ಭಾಷೆಯನ್ನು ಕಲಿತ. ಅವರ ವಿಶ್ರಾಂತಿಯ ಕಾಲದಲ್ಲಿ ಅವರಿಂದ ಕಾಶಿ, ಪ್ರಯಾಗ ಮೊದಲಾದ ಪವಿತ್ರ ಕ್ಷೇತ್ರಗಳ ವಿಷಯಗಳನ್ನು ಮನತುಂಬಿ ಕೇಳುತ್ತಿದ್ದ. ತನಗೆ ಅರಿವಿಲ್ಲದಂತೆಯೇ ಆತನ ಜ್ಞಾನಭಂಡಾರ ವೃದ್ಧಿಯಾಯಿತು. ಬಹುಶಃ ಈ ಅನುಭವ ಆತನ ಜೀವನದಲ್ಲಿ ತನ್ನ ಪ್ರಭಾವವನ್ನು ಬೀರುತ್ತಿತ್ತೋ ಏನೊ? ಸುಬ್ಬಣ್ಣ ಹೆಚ್ಚು ವಿದ್ಯಾವಂತನಲ್ಲವಾದರೂ ಒಳ್ಳೆಯ ಮೇಧಾವಿ. ಹದಿಮೂರು ಹದಿನಾಲ್ಕು ವಯಸ್ಸಿಗಾಗಲೇ ತನ್ನ ಜವಾಬ್ದಾರಿಯನ್ನರಿತು ಅದನ್ನು ನಿರ್ವಹಿಸಲು ಸಿದ್ಧನಾಗಿದ್ದ. ಹನುಮಕ್ಕಮ್ಮನವರು ಸಹ ಪರಿಸ್ಥಿತಿಗೆ ಹೊಂದಿಕೊಳ್ಳುವ ತಾಳ್ಮೆ ಮತ್ತು ಜಾಣ್ಮೆಯುಳ್ಳವರು. ಬರುವ ಅಲ್ಪ ಆದಾಯದಿಂದಲೇ ಹೇಗೋ ಸಂಸಾರವನ್ನು ಸಾಗಿಸಿಕೊಂಡು ಹೋಗುತ್ತಿದ್ದರು. * * * * 90 ಮೂರು ತಲೆಮಾರು 4. ಸುಬ್ಬಣ್ಣನ ವಿವಾಹ ಪತಿಯ ಅಕಾಲ ಮರಣದಿಂದ; ಆಮೇಲಿನ ಮಾನಸಿಕ ಮತ್ತು ದೈಹಿಕ ವೇದನೆಗಳಿಂದ ಹನುಮಕ್ಕಮ್ಮನ ದೇಹಸ್ಥಿತಿ ಕುಗ್ಗತೊಡಗಿತು. ತಾವಿನ್ನು ಹೆಚ್ಚು ಕಾಲಬದುಕುವುದಿಲ್ಲವೆಂಬ ಭಾವನೆ ಆಕೆಯಲ್ಲಿ ಮೂಡಿತು. ಇರುವ ಒಬ್ಬ ಮಗಳು ಇಂದೋ, ನಾಳೆಯೋ ಗಂಡನ ಮನೆಗೆ ಹೋಗುತ್ತಾಳೆ. ಆಮೇಲೆ ಈ ಮನೆಯನ್ನು ನೋಡಿಕೊಳ್ಳುವವರಾರು? ಮನೆಗೆ ಒಬ್ಬ ಸೊಸೆ ಬಂದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಮಗನಿಗೆ ಈಗಾಗಲೇ ಹದಿನೈದು ವರ್ಷ ತುಂಬುತ್ತ ಇದೆ. ಮುಂದೆ ನಿಂತು ಆತನ ವಿವಾಹ ಕಾರ್ಯವನ್ನು ನೆರವೇರಿಸುವವರು ಯಾರು? ಹೀಗೆ ಆಕೆ ಯೋಚನೆ ಮಾಡುತ್ತ ಮಲಗಿದಳು. ವೆಂಕಣ್ಣಯ್ಯನವರ ಕುಟುಂಬ ಒಂದು ಸ್ಥಾಯಿಗೆ ಬಂದನಂತರ ಉಜ್ಜನಪ್ಪನಾಗಲಿ, ಗುರುಸಿದ್ದಮ್ಮನಾಗಲಿ ಯಾವಾಗಲಾದರೊಮ್ಮೆ ಮನೆ ಕಡೆ ಬಂದು ಯೋಗಕ್ಷೆಮವನ್ನು ವಿಚಾರಿಸಿಕೊಂಡು ಹೋಗುವುದು ಪದ್ಧತಿಯಾಗಿತ್ತು. ಹನುಮಕ್ಕಮ್ಮ ಮಗನ ಮದುವೆ ಹೇಗಾದೀತು ಎಂದು ಯೋಚಿಸುತ್ತ ಮಲಗಿರುವಾಗ ಗುರುಸಿದ್ದಮ್ಮ ಮನೆಗೆ ಬಂದಳು. ಹನುಮಕ್ಕಮ್ಮ ತಟ್ಟನೆ ಮೇಲಕ್ಕೆದ್ದು ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಾ ತನ್ನ ಮನಸ್ಸಿನ ಆತಂಕವನ್ನು ಆಕೆಯಲ್ಲಿ ತೋಡಿಕೊಂಡಳು. ಗೌಡಿತಿ ಆಕೆಯನ್ನು ಸಮಾಧಾನ ಪಡಿಸುತ್ತ ‘ಹೆಣ್ಣು ಯವುದಮ್ಮಾ ?’ ಎಂದು ಕೇಳಿದಳು. ಹನುಮಕ್ಕಮ್ಮ ಹೇಳಿದಳು - ‘ಅತ್ತಿಗೆ! ತಿಮ್ಮಣ್ಣನಾಯ್ಕನ ಕೋಟೆಯ ಪುರೋಹಿತ ಅಹೋಬಲಶಾಸ್ತ್ರಿಗಳ ಮಗಳು ಲಕ್ಷ್ಮಿಗೆ ಈಗಾಗಲೇ 9 ವರ್ಷ. ಅವಳೇ ಹೆಣ್ಣು. ಅವಳು ಮಗುವಾಗಿ ತೊಟ್ಟಿಲಲ್ಲಿ ಇದ್ದಾಗಲೇ ಅವಳನ್ನು ನನ್ನ ಮಗನಿಗೆ ವಿವಾಹ ಮಾಡಿಕೊಡುವುದಾಗಿ ಅವಳ ತಂದೆ ನಮ್ಮ ಯಜಮಾನರಿಗೆ ಮಾತುಕೊಟ್ಟಿದ್ದರು. ಈಗ ಆ ಮಾತು ಕೊಟ್ಟವರೂ ಇಲ್ಲ, ಅದನ್ನು ಕೊಂಡವರೂ ಇಲ್ಲ. ಈಗ ನಾವಿರುವ ಸ್ಥಿತಿಯಲ್ಲಿ ಆಕೆಯ ಅಣ್ಣ ಆ ಮಾತನ್ನು ಎಷ್ಟು ಮಟ್ಟಿಗೆ ನಡೆಸುತ್ತಾನೋ ನಾನರಿಯೆ’ ಎಂದಳು. ಗುರುಸಿದ್ದಮ್ಮ ಆಕೆಗೆ ಸಮಾಧಾನ ಹೇಳಿ ಅಲ್ಲಿಂದ ಹಿಂದಿರುಗಿದಳು. ಹಾಗೆ ಹಿಂದಿರುಗಿದವಳೇ ಗಂಡನಲ್ಲಿ ಈ ಸುಬ್ಬಣ್ಣನ ವಿವಾಹ 91 ವಿಚಾರ ತಿಳಿಸಿ ಆತನನ್ನು ಹುರಿದುಂಬಿಸಿದಳು. ವೆಂಕಣ್ಣಯ್ಯನವರು ಪರಶುರಾಮಪುರದಲ್ಲಿ ಶೇಕದಾರರಾಗಿದ್ದಾಗ, ಆ ಹೋಬಳಿಗೆ ಸೇರಿದ ತಿಮ್ಮಣ್ಣನಾಯ್ಕನಕೋಟೆಗೆ ಆಗಾಗ ಹೋಗುತ್ತಿದ್ದರು. ಆ ಗ್ರಾಮದ ಪುರೋಹಿತರಾಗಿದ್ದ ಅಹೋಬಲಶಾಸ್ತ್ರಿಗಳು ನಿಷ್ಠರು. ಸಾತ್ವಿಕರು ಮತ್ತು ವೆಂಕಣ್ಣಯ್ಯನವರ ಸ್ವಜನರಾಗಿದ್ದರು. ಆದ್ದರಿಂದ ವೆಂಕಣ್ಣಯ್ಯನವರು ಆ ಹಳ್ಳಿಗೆ ಭೇಟಿ ನೀಡಿದಾಗ ಶಾಸ್ತ್ರಿಗಳ ಮನೆಯಲ್ಲಿ ಠಿಕಾಣಿ ಹಾಕುತ್ತಿದ್ದರು. ಶಾಸ್ತ್ರಿಗಳಿಗೆ ಪುಟ್ಟಮ್ಮ, ನರಸಮ್ಮ, ಲಕ್ಷ್ಮಿ ಎಂಬ ಮೂವರು ಹೆಣ್ಣು ಮಕ್ಕಳಿದ್ದರು. ಲಕ್ಷ್ಮಿ ಈ ಪ್ರಪಂಚದಲ್ಲಿ ಕಣ್ಣು ಬಿಟ್ಟ ಎರಡು ವರ್ಷಗಳಲ್ಲಿ ತಾಯಿ-ತಂದೆಗಳಿಬ್ಬರೂ ಈ ಲೋಕದಿಂದ ಕಣ್ಮರೆಯಾದರು. ಏನೂ ಅರಿಯದ ನರಹರಿ ಶಾಸ್ತ್ರಿಗಳು ಹೇಗೋ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ಅನಾಥ ಸಂಸಾರವನ್ನು ನೋಡಿ ಮೃದುಹೃದಯದ ವೆಂಕಣ್ಣಯ್ಯನವರು ಕಣ್ಣೀರಿಡುತ್ತಿದ್ದರು. ಕಡೆಯ ಮಗಳಾದ ಲಕ್ಷ್ಮಿಯನ್ನು ತಾವೇ ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುವರು. ನರಹರಿ, ಲಕ್ಷ್ಮಿ ದೊಡ್ಡವಳಾದ ಮೇಲೆ ತಮ್ಮ ಸುಬ್ಬಣ್ಣನನ್ನು ಕೈಹಿಡಿಯಲಿ, ಇವಳು ನನ್ನ ಸೊಸೆ’ ಎಂದು ಹೇಳುತ್ತಿದ್ದರು. ಶಾಸ್ತ್ರಿಗಳ ಹೆಸರು ನರಹರಿಯಾದರೂ ಅವರ ಸ್ವಭಾವ ಹೂವಿನಷ್ಟು ಕೋಮಲ. ‘ದೇವರು ಅನುಗ್ರಹಿಸಿದರೆ ನೀವು ಹೇಳಿದಂತೆಯೇ ಆಗಲಿ ಭಾವ’ ಎಂದು ಕಂಬನಿ ತುಂಬಿದ ತಮ್ಮ ಕಣ್ಣುಗಳನ್ನು ಸಣ್ಣ ಪಂಚೆಯ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು. ಲಕ್ಷ್ಮಿ ಎಂಟು ವರ್ಷದ ಕನ್ಯೆಯಾಗುವ ವೇಳೆಗೆ ವೆಂಕಣ್ಣಯ್ಯನವರು ಇಹಲೋಕದ ಯಾತ್ರೆಯನ್ನು ಮುಗಿಸಿದ್ದರು. ಲಕ್ಷ್ಮೀದೇವಿ ಜಾಣೆ, ಚೆಲುವೆ, ವಯಸ್ಸಿಗೆ ಮೀರಿದ ಬುದ್ಧಿವಂತೆ. ಆಕೆಯ ಗುರು ಶ್ರೀಕಂಠಶಾಸ್ತ್ರಿಗಳು ಆ ಊರಿನ ಶಾಲೆಯ ‘ಅಯ್ಯ’ನವರು. ಆತ ಒಬ್ಬಂಟಿಗ, ಪಾವಗಡದ ಪ್ರಾಂತದವನು. ಮುಲಕನಾಡು ಪಂಗಡಕ್ಕೆ ಸೇರಿದವನು. ಎರೆನೆಲದಲ್ಲಿ ಹಬ್ಬಿದ ಗರಿಕೆಯಂತೆ ಈ ಮುಲಕನಾಡು ಬ್ರಾಹ್ಮಣರ ಪಂಗಡ ಎಲ್ಲೆಲ್ಲಿಯೂ ಹಬ್ಬಿ ಹರಡಿರುತ್ತಿದೆ. ಅಷ್ಟೇ ಅಲ್ಲ, ಆ ಪಂಗಡದವರು ಅದೇ ಪಂಗಡದಲ್ಲಿಯೇ ವಿವಾಹ ಸಂಬಂಧವನ್ನು ಬೆಳೆಸುತ್ತಿದ್ದ ಆ ಕಾಲದಲ್ಲಿ ಪರಸ್ಪರ ಬಾದರಾಯಣ ಸಂಬಂಧ ಅಂಟಿಕೊಂಡೇ ಇರುತ್ತದೆ. ನರಹರಿಶಾಸ್ತ್ರಿಗಳು ಅದೇ ಪಂಗಡಕ್ಕೆ ಸೇರಿದವರು. ಯಾವುದೋ ಒಂದು ದೂರದ ಸಂಬಂಧ ಅಂಟಿಕೊಂಡಿತು. ಆದ್ದರಿಂದ ಶ್ರೀಕಂಠಶಾಸ್ತ್ರಿಗಳ ವಿಷಯದಲ್ಲಿ ನರಹರಿಶಾಸ್ತ್ರಿಗಳಿಗೆ ವಿಶೇಷವಾದ ಅಭಿಮಾನ ತುಂಬಿಕೊಂಡಿತು. ಆದ್ದರಿಂದ ‘ಓಚಯ್ಯ’ನವರ ಊಟ ಉಪಚಾರಗಳು 92 ಮೂರು ತಲೆಮಾರು ಶಾಸ್ತ್ರಿಗಳ ಮನೆಯಲ್ಲೇ ಆಗುತ್ತಿತ್ತು. ಕ್ರಮೇಣ ಅವರು ಮನೆಯವರಲ್ಲಿ ಒಬ್ಬರಾಗಿಬಿಟ್ಟರು. ಅವರಿಗೆ ಲಕ್ಷ್ಮಿದೇವಿಯಲ್ಲಿ ಅಪಾರವಾದ ಮಮತೆ. ಅವಳೊಬ್ಬ ಸುಟಿಯಾದ ಹುಡುಗಿ. ಉತ್ತಮವಾದ ಜ್ಞಾಪಕಶಕ್ತಿಯಿತ್ತು. ಓದು, ಬರಹ, ಲೆಕ್ಕಗಳಲ್ಲಿ ತುಂಬ ಜಾಣೆಯಾಗಿದ್ದಳು. ಎಂಟು ವರ್ಷ ತುಂಬುವ ವೇಳೆಗೆ ಗದುಗಿನ ಭಾರತ, ತೊರವೆರಾಮಾಯಣ, ಜೈಮಿನಿ ಭಾರತ, ಧ್ರುವಚರಿತ್ರೆ. ನಳಚರಿತ್ರೆ ಮೊದಲಾದ ಪದ್ಯಗ್ರಂಥಗಳನ್ನು ಸರಳವಾಗಿ, ಶ್ರಾವ್ಯವಾಗಿ, ಅರ್ಥವತ್ತಾಗಿ ಓದಬಲ್ಲವಳಾಗಿದ್ದಳು; ಬೇಕಾದಷ್ಟು ಹಸೆಗೆ ಕರೆಯುವ ಹಾಡು, ಬೀಗರ ಹಾಡು, ಉರುಟಣೆಯ ಹಾಡುಗಳನ್ನು ಕಲಿತಿದ್ದಳು. ಕ್ರಮವಾದ ಸಂಗೀತಾಭ್ಯಾಸವಿಲ್ಲದಿದ್ದರೂ ಅವಳು ಹಾಡುವ ಹಾಡುಗಳು ಸುಶ್ರಾವ್ಯವಾಗಿರುತ್ತಿದ್ದವು. ನಯ, ವಿನಯ, ಗಾಂಭೀರ್ಯಗಳು ಆ ಎಳೆತನದಲ್ಲಿಯೇ ವ್ಯಕ್ತವಾಗಿ ಕಂಡುಬರುತ್ತಿದ್ದುವು. ಎಲ್ಲರ ಬಾಯಿಂದಲೂ ಜಾಣೆ, ಯೋಗ್ಯೆ ಎಂಬ ಹೊಗಳಿಕೆ ಕೇಳಿಬರುತ್ತಿತ್ತು. ಅದನ್ನು ಕೇಳಿ ನರಹರಿ ಶಾಸ್ತ್ರಿಗಳಿಗೂ, ಗುರು ಶ್ರೀಕಂಠಶಾಸ್ತ್ರಿಗಳಿಗೂ ಪರಮ ಸಂತೋಷ. ಎಲ್ಲರ ಕಣ್ಮಣಿಯಾಗಿದ್ದಳು ಲಕ್ಷ್ಮಿದೇವಿ. ಈ ಸಂದರ್ಭದಲ್ಲಿ ನಡೆದ ಒಂದು ಸಣ್ಣ ಘಟನೆ ನಿರೂಪಣಾರ್ಹವಾಗಿದೆ. ಒಂದು ದಿನ ಜೈಮಿನಿ ಭಾರತದಲ್ಲಿ ಒಂದು ಪದ್ಯವನ್ನು ಓದುವಂತೆ ಗುರುಗಳು ಲಕ್ಷ್ಮಿಗೆ ಆಜ್ಞಾಪಿಸಿದರು. ಆಕೆ ಓದುವಾಗ ತಪ್ಪು ಮಾಡಿದಳು. ಕುಪಿತರಾದ ಶ್ರೀಕಂಠಶಾಸ್ತ್ರಿಗಳು ಕೈಲಿದ್ದ ಬೆತ್ತದಿಂದ ಆಕೆಯನ್ನು ಹೊಡೆಯಹೊರಟರು. ಹುಡುಗಿ ಏಟನ್ನು ತಪ್ಪಿಸಿಕೊಳ್ಳಲು ಕೈಯ್ಯನ್ನು ಅಡ್ಡಹಿಡಿದಳು. ಕಟ್ಟಿಗೆಯ ಏಟು ಅವಳು ತೊಟ್ಟಿದ್ದ ಬಳೆಗಳ ಮೇಲೆ ಬಿದ್ದು, ಫಳಾರನೆ ಒಡೆದು ಹೋದುವು. ಘಲ್ ಘಲ್ ಶಬ್ದದಿಂದ ಅವು ಕೆಳಕ್ಕೆ ಉದುರುತ್ತಿದ್ದಂತೆಯೇ ಅಯ್ಯನವರ ಕೋಪ ಹಾರಿಹೋಯಿತು, ದುಃಖ ಉಕ್ಕಿ ಬಂತು. ಒದ್ದೆಯಾದ ಕಣ್ಣುಗಳಿಂದ ಅವರು ಆ ಮಗುವನ್ನು ಹತ್ತಿರಕ್ಕೆಳೆದುಕೊಂಡು, ‘ಮಗು, ನನ್ನದು ಸರ್ವಾಪರಾಧವಾಯಿತು. ಕೋಪವೆಂಬುದು ಅನರ್ಥಸಾಧನ. ನನ್ನನ್ನು ಕ್ಷಮಿಸು’ ಎಂದು ಹೇಳಿ ಆ ಕ್ಷಣವೇ ಅವಳನ್ನು ಬಳೆಗಾರನ ಮನೆಗೆ ಕರೆದೊಯ್ದು ಎರಡು ಕೈಗಳ ತುಂಬ ಬಗೆ ಬಗೆಯ ಬಣ್ಣದ ಬಳೆಗಳನ್ನು ತೊಡಿಸಿದರು. ಅವುಗಳನ್ನು ಕಂಡು ಮುಗುಳ್ನಕ್ಕ ಲಕ್ಷ್ಮಿಯನ್ನು ಕಂಡ ಶಾಸ್ತ್ರಿಗಳ ಹೃದಯ ತಣ್ಣಗಾಯಿತು. ಹೆಂಡತಿಯ ಮಾತುಗಳನ್ನು ಕೇಳಿದ ಉಜ್ಜನಪ್ಪ ಹನುಮಕ್ಕಮ್ಮನ ಮನೆಗೆ ಬಂದು ‘ತಾಯಿ, ನಿನ್ನ ಮಗನ ಮದುವೆಗಾಗಿ ನೀನು ಕೊರಗುವುದು ಬೇಡ. ನನ್ನ ಸುಬ್ಬಣ್ಣ ಯಾವುದರಲ್ಲಿ ಕಡಿಮೆಯಾಗಿದ್ದಾನೆ? ಅಂತಹ ಗಂಡು ಸಿಕ್ಕಬೇಕಾದರೆ ಸುಬ್ಬಣ್ಣನ ವಿವಾಹ 93 ಪುಣ್ಯ ಮಾಡಿರಬೇಕು’ ಎನ್ನುತ್ತಿದ್ದಂತೆಯೇ ಹತ್ತಿರದಲ್ಲಿದ್ದ ಮಾರಮ್ಮನ ಗುಡಿಯಲ್ಲಿ ಯಾರೋ ಗಂಟೆ ಬಾರಿಸಿದಂತಾಯಿತು. ಆಗ ಉಜ್ಜನಪ್ಪ ‘ನೋಡಿದೆಯಮ್ಮಾ, ಒಳ್ಳೆಯ ಶಕುನವಾಗಿದೆ. ನಾಳೆಯೇ ನಾನು ಶಾನುಭೋಗರೊಡನೆ ತಿಮ್ಮಣ್ಣನಾಯ್ಕನ ಕೋಟೆಗೆ ಹೋಗಿ ಬರುತ್ತೇನೆ. ನೀವು ನಿಮ್ಮ ದೇಹಸ್ಥಿತಿಯನ್ನು ಹುಷಾರಾಗಿ ನೋಡಿಕೊಳ್ಳಿ’ ಎಂದು ಹೇಳಿದವನೇ ಅಲ್ಲಿಂದ ನೇರವಾಗಿ ಶ್ರೀನಿವಾಸರಾಯನ (ಶಾನುಭೋಗ) ಮನೆಗೆ ಬಂದ. ತನಗೂ ಹನುಮಕ್ಕಮ್ಮನಿಗೂ ನಡೆದ ಮಾತುಕತೆಗಳನ್ನು ತಿಳಿಸಿ ಮರುದಿನ ಬೆಳಿಗ್ಗೆ ತಾವಿಬ್ಬರೂ ಕನ್ಯಾರ್ಥಿಗಳಾಗಿ ಹೊರಡುವುದೆಂದು ಹೇಳಿ ಆತನನ್ನು ಒಪ್ಪಿಸಿದ. ಮರುದಿನ ಬೆಳಗಿನ ಜಾವದಲ್ಲೆದ್ದು ಸ್ನಾನ, ಶಿವಪೂಜೆಗಳನ್ನು ಮುಗಿಸಿ, ತನ್ನ ಕಮಾನುಗಾಡಿಯಲ್ಲಿ ಶ್ರೀನಿವಾರಾಯರ ಮನೆಯ ಮುಂದೆ ಬಂದಿಳಿದ, ಉಜ್ಜನಪ್ಪ. ಶ್ರೀನಿವಾಸರಾಯರೂ ಆ ವೇಳೆಗೆ ಸ್ನಾನಾಹ್ನಿಕಗಳನ್ನು ಪೂರೈಸಿಕೊಂಡು ಸಿದ್ಧರಾಗಿದ್ದರು. ಇಬ್ಬರೂ ಊರ ಮುಂದಿನ ದೇವರಿಗೆ ಕೈ ಮುಗಿದು ಕನ್ಯಾರ್ಥಿಗಳಾಗಿ ಹೊರಟರು. ಆದರೆ ಗಾಡಿ ನೇರವಾದ ದಾರಿಬಿಟ್ಟು ಚಳ್ಳಕೆರೆ ರಸ್ತೆಯನ್ನು ಹಿಡಿಯಿತು. ಅದನ್ನು ಕಂಡ ಶ್ರೀನಿವಾಸರಾಯ ‘ಇದೇನು ಉಜ್ಜನಪ್ಪ, ಚಳ್ಳಕೆರೆಯ ಮೇಲೆ ತಿಮ್ಮಣ್ಣನಾಯ್ಕನ ಕೋಟೆಗೆ ಹೋದರೆ ತುಂಬ ಬಳಸಾಗುವುದಿಲ್ಲವೆ?’ ಎಂದರು. ಉಜ್ಜನಪ್ಪ ‘ಏನು ಮಹಾ ಬಳಸು? ನಾಲ್ಕು ಮೈಲಿತಾನೆ? ದಾರಿ ಚೆನ್ನಾಗಿದೆ. ಕಾಡುದಾರಿಯಲ್ಲಿ ಏಕೆ ಹೋಗಬೇಕು?’ ‘ಸರಿ’ ಎಂದ ಶಾನುಭೋಗರು ಲೋಕಾಭಿರಾಮವಾಗಿ ಮಾತನಾಡುತ್ತ ಹತ್ತು ಘಂಟೆಯ ವೇಳೆಗೆ ಚಳ್ಳಕೆರೆಯನ್ನು ಸೇರಿದರು. ಗಾಡಿ ಹೊಡೆಯುವವನು ಗೌಡರ ಅಪ್ಪಣೆಯಂತೆ ಸಂಕಪ್ಪನ ಜವಳಿ ಅಂಗಡಿ ಮುಂದೆ ಗಾಡಿಯನ್ನು ನಿಲ್ಲಿಸಿದ. ಶ್ರೀನಿವಾಸರಾಯರು ‘ಇದೇನು ಉಜ್ಜನಪ್ಪ? ಜವಳಿ ತೆಗೆಯಬೇಕಾಗಿತ್ತೆ?’ ಎಂದರು. ‘ಹೆಚ್ಚಿಗೆ ಏನೂ ಇಲ್ಲ. ಒಂದು ಸೀರೆ, ಖಣ ತೆಗೆದುಕೊಳ್ಳೋಣ, ಅಷ್ಟೆ’. ಉಜ್ಜನಪ್ಪ ಹತ್ತು ನಿಮಿಷಗಳಲ್ಲಿ ಒಂದು ಪೊಟ್ಟಣ ಕೈಯ್ಯಲ್ಲಿ ಹಿಡಿದುಕೊಂಡು ಬಂದು ಗಾಡಿಯನ್ನೇರಿದ. ಗಾಡಿ ತಿಮ್ಮಣ್ಣನಾಯ್ಕನಕೋಟೆ ದಾರಿ ಹಿಡಿಯಿತು. ಹೊತ್ತು ಮುಳುಗುವ ಹೊತ್ತಿಗೆ ಪಟೇಲ - ಶಾನುಭೋಗರಿಬ್ಬರೂ ತಿಮ್ಮಣ್ಣ ನಾಯ್ಕನಕೋಟೆಯ ಶಾನುಭೋಗ ನಾಗಪ್ಪನವರ ಮನೆಯ ಮುಂದೆ ಗಾಡಿಯಿಂದಿಳಿದರು. ನಾಗಪ್ಪ ಮನೆಯಲ್ಲಿಯೇ ಇದ್ದರು. ಅನಿರೀಕ್ಷಿತವಾಗಿ ತಳುಕಿನ ಪಟೇಲ, ಶಾನುಭೋಗರಿಬ್ಬರೂ ತಮ್ಮ ಮನೆಗೆ ಬಂದುದನ್ನು ಕಂಡು ಆಶ್ಚರ್ಯಗೊಂಡರು. ಆಗಾಗ ನಡೆಯುತ್ತಿದ್ದ ಜಮಾಬಂದಿಗಳಲ್ಲಿ ಪರಸ್ಪರ ಸೇರಿ 94 ಮೂರು ತಲೆಮಾರು ಅವರೆಲ್ಲ ಪರಿಚಯದವರಾಗಿದ್ದರು, ಸ್ನೇಹ-ವಿಶ್ವಾಸವುಳ್ಳವರಾಗಿದ್ದರು. ಆದರೂ ಯಾವ ಮುನ್ಸೂಚನೆಯೂ ಇಲ್ಲದೆ ಬಂದಿಳಿದವರನ್ನು ಕಂಡು ‘ಏನೋ ವಿಶೇಷವಿದೆ’ ಎಂದುಕೊಂಡರು, ನಾಗಪ್ಪನವರು. ಪರಸ್ಪರ ಧಣಿಗಳಿಬ್ಬರೂ ಯೋಗಕ್ಷೇಮದ ಮಾತುಗಳಾದ ಮೇಲೆ ನಾಗಪ್ಪನವರು ಏನು, ತಳುಕಿನ ಧಣಿಗಳು ಇದ್ದಕ್ಕಿದ್ದಂತೆ ನನ್ನ ಮೇಲೆ ಈ ಕೃಪೆ ತೊರಿಸಿದಿರಲ್ಲ’ ಎಂದು ಹಾಸ್ಯ ಕುತೂಹಲಗಳಿಂದ ಕೇಳಿದರು. ‘ಯಾಕೆ ಬರಬಾರದಿತ್ತೆ ನಾಗಪ್ಪ?’ ‘ಹಾಗಲ್ಲ, ಮಹಾರಾಯರೇ, ನೀವು ಬಂದದ್ದು ತುಂಬ ಸಂತೋಷ. ಆದರೆ ಯಾವ ಮುನ್ಸೂಚನೆಯೂ ಇಲ್ಲದೆ ಇಬ್ಬರೂ ಒಟ್ಟಿಗೆ ಬಂದಿದ್ದೀರಲ್ಲ ಅದಕ್ಕೆ ಸ್ವಲ್ಪ ಆಶ್ಚರ್ಯ?’ ಶ್ರೀನಿವಾಸರಾಯರು ತಾವು ಬಂದ ಕಾರ್ಯವನ್ನು ಸೂಕ್ಷ್ಮವಾಗಿ ನಾಗಪ್ಪನವರಿಗೆ ತಿಳಿಸಿದರು. ನಾಗಪ್ಪನವರು ಶೇಕದಾರ ವೆಂಕಣ್ಣಯ್ಯನವರಲ್ಲಿ ಅಪಾರವಾದ ಭಕ್ತಿ-ಗೌರವಗಳನ್ನು ಇಟ್ಟಿದ್ದವರು. ಆದ್ದರಿಂದ ಅವರ ಮಗನ ಮದುವೆಯ ಯೋಚನೆ ಅವರಿಗೂ ಸಮ್ಮತವಾಗಿತ್ತು. ಅವರು ‘ಹಾಗಾದರೆ ನರಹರಿಶಾಸ್ತ್ರಿಗಳ ಮನೆಗೆ ಯಾವಾಗ ಹೋಗೋಣ?’ ಎಂದು ಕೇಳಿದರು. ‘ಶುಭಸ್ಯ ಶೀಘ್ರಂ’- ಈಗಲೇ ಹೋಗೋಣ. ಬೇಕಾದರೆ ನಿಮ್ಮ ಜೊತೆಯಲ್ಲಿ ನಿಮ್ಮ ಕುಟುಂಬವೂ ಬರಲಿ. ಅಲ್ಲಿಗೆ ನಾಲ್ಕು ಜನ ಸರಿ ಹೋಗುತ್ತದೆ’ ಎಂದರು, ಸ್ವಲ್ಪ ಆಹಾರ, ಪಾನಕ ಪನಿವಾರಗಳಾದ ಮೇಲೆ ನಾಗಪ್ಪನವರು ಕುಟುಂಬ ಸಹಿತವಾಗಿ ತಮ್ಮ ಅತಿಥಿಗಳೊಡನೆ ನರಹರಿಶಾಸ್ತ್ರಿಗಳ ಮನೆಗೆ ಹೋದರು. ಹಾಸ್ಯಪ್ರಿಯರಾದ ಅವರು ಶಾಸ್ತ್ರಿಗಳ ಮನೆಯ ಬಾಗಿಲಲ್ಲಿ ನಿಂತುಕೊಂಡು ‘ಭವತಿ ಭಿಕ್ಷಾಂ ದೇಹಿ’ ಎಂದು ಕೂಗಿದರು. ಆಗ ತಾನೇ ಸಾಯಂಸಂಧ್ಯೆಯನ್ನು ತೀರಿಸಿಕೊಂಡು ದೇವರ ಮನೆಯಿಂದ ಹೊರಬರುತ್ತಿದ್ದ ನರಹರಿಶಾಸ್ತ್ರಿಗಳು ನಾಗಪ್ಪನವರ ಧ್ವನಿಯನ್ನು ಗುರುತಿಸಿ, ‘ಒಳಕ್ಕೆ ಬಾ ನಾಗಪ್ಪ. ಬಾಗಿಲಲ್ಲಿಯೇ ನಿಂತುಕೊಂಡು ಭಿಕ್ಷೆ ಕೇಳುತ್ತಿದ್ದೀಯಲ್ಲ! ಅಗತ್ಯವಾಗಿಯೇ ಭಿಕ್ಷೆ ಹಾಕೋಣ. ಮೊದಲು ಒಳಗೆ ಬಾ’ ಎಂದರು ನಗುತ್ತಾ. ನಾಗಪ್ಪನವರೊಡನೆ ಹೊಸಬರಿಬ್ಬರಿದ್ದುದನ್ನು ಕಂಡ ಶಾಸ್ತ್ರಿಗಳು ಮರ್ಯಾದೆಯಿಂದ ಅವರನ್ನೆಲ್ಲ ಒಳಕ್ಕೆ ಕರೆದು ನಡುಮನೆಯಲ್ಲಿ ಚಾಪೆ ಹಾಕಿ ಕೂಡಿಸಿದರು. ಎಲ್ಲರೂ ಕುಳಿತ ನಂತರ ನಾಗಪ್ಪನವರು ಹೊಸಬರ ಪರಿಚಯ ಮಾಡಿಕೊಟ್ಟರು. ಅವರು ಬಂದಿದ್ದ ಉದ್ದೇಶವನ್ನು ಸೂಕ್ಷ್ಮವಾಗಿ ಶಾಸ್ತ್ರಿಗಳಿಗೆ ಸುಬ್ಬಣ್ಣನ ವಿವಾಹ 95 ತಿಳಿಸಿದರು. ‘ನೋಡಿ ಶಾಸ್ತ್ರಿಗಳೇ, ವೆಂಕಣ್ಣಯ್ಯನವರಾಗಲಿ ಅವರ ಕುಟುಂಬದವರಾಗಲಿ ನಿಮಗೆ ಅಪರಿಚಿತರೇನೂ ಅಲ್ಲ. ನೀವು ದೊಡ್ಡ ಮನಸ್ಸು ಮಾಡಬೇಕು. ಹುಡುಗ ಲಕ್ಷ್ಮಣವಾಗಿದ್ದಾನೆ, ಬುದ್ಧಿವಂತ, ಯಾವ ವಿಚಾರದಲ್ಲಿಯೂ ಯೋಚಿಸಬೇಕಾಗಿಲ್ಲ’ ಎಂದರು, ಶಾನುಭೋಗ ಶ್ರೀನಿವಾಸರಾಯರು. ಆಗ ಶಾಸ್ತ್ರಿಗಳು ‘ರಾಯರೆ, ನೀವು ಹೇಳಿದ್ದನ್ನೆಲ್ಲ ನಾನು ಒಪ್ಪುತ್ತೇನೆ. ವೆಂಕಣ್ಣಯ್ಯನವರಂತಹ ಸದ್ಗೃಹಸ್ಥರ ಮನೆಗೆ ಹೆಣ್ಣು ಕೊಡಲು ಯಾರಾದರೂ ಹೆಮ್ಮೆಪಡುವುದೇ. ಅವರು ಜೀವಂತರಾಗಿದ್ದರೆ ಯೋಚಿಸಬೇಕಾದ ಪ್ರಮೇಯವಿರಲಿಲ್ಲ. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ‘ಹುಲ್ಲಿದ್ದ ಗೋದಲು ನೋಡಿ ಹಸುಕಟ್ಟು’. ಎಂಬ ಗಾದೆಯಿದೆ. ಅವರಿಗೆ ‘ಊರಲ್ಲಿ ಮನೆಯಿಲ್ಲ. ಅಡವಿಯಲ್ಲಿ ಹೊಲವಿಲ್ಲ’. ಕಂಡೂ ಕಂಡೂ ಅಂತಹ ಕಡೆ ಹೆಣ್ಣು ಕೊಟ್ಟರೆ ಜನ ಆಡಿಕೊಳ್ಳುವುದಕ್ಕೆ ದಾರಿಯಾಗುವುದಿಲ್ಲವೆ? ‘ತಾಯಿ-ತಂದೆಯಿಲ್ಲದ ಪರದೇಶಿ ಹುಡುಗಿ; ತೊಲಗಿದರೆ ಸಾಕು’ ಅಂತ, ಅಂತಹ ಕಡೆ ಕೊಟ್ಟು ಬಿಟ್ಟ ಎಂದು ಆಡಿಕೊಳ್ಳುವವರಿಗೆ ದಾರಿಯಾಗುವುದಿಲ್ಲವೆ? ನೀವೇ ಯೋಚನೆ ಮಾಡಿ. ನಾನು ಹೀಗೆ ಹೇಳಿದೆನೆಂದು ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ. ನಾನೇನೂ ಅನುಕೂಲಸ್ಥನಲ್ಲ. ನಾಳೆ ನನ್ನ ತಂಗಿ ಕಷ್ಟಪಟ್ಟರೆ ಕಣ್ಣಿಂದ ನೋಡಬೇಕಾದುದು ನಾನೇ ತಾನೆ?’ ಎಂದರು. ‘ಒಂದು ದೃಷ್ಟಿಯಿಂದ ನೀವು ಹೇಳಿದ್ದು ಸರಿ ಶಾಸ್ತ್ರಿಗಳೇ. ಹೆಣ್ಣು ಕೊಡುವವರು ಇದನ್ನೆಲ್ಲ ಯೋಚಿಸಬೇಕಾದುದೇ. ಆದರೆ ಪರಿಸ್ಥಿತಿ ನೀವು ಊಹಿಸಿದಷ್ಟು ಹೀನವಾಗಿಲ್ಲ. ಅವರಿಗೆ ಇರುವುದಕ್ಕೆ ಮನೆಯಿದೆ. ಛತ್ರದಲ್ಲಿ ಎಂಥದೋ ಕೆಲಸವಿದೆ. ಹುಡುಗ ಬುದ್ಧಿವಂತ, ವಿವೇಕಿ. ಯಾವುದೋ ಧರ್ಮರೀತಿಯಿಂದ ಸಂಪಾದಿಸುವ ಶಕ್ತಿಯಿದೆ. ಜೊತೆಗೆ ಊರಿನವರೆಲ್ಲರ ಬೆಂಬಲವಿದೆ. ಹಣದ ದೃಷ್ಟಿಯಿಂದ ಇಂದು ಅವರು ಬಡವರೇ ನಿಜ. ಆದರೆ ಗುಣ ದೃಷ್ಟಿಯಿಂದ, ಯೋಗ್ಯತೆಯ ದೃಷ್ಟಿಯಿಂದ ಅವರು ದೊಡ್ಡ ಶ್ರೀಮಂತರಾಗಿದ್ದಾರೆ. ಬಡತನ, ಐಶ್ವರ್ಯಗಳು ಶಾಶ್ವತವೇನು? ಇಂದು ಬಡವ, ನಾಳೆ ಶ್ರೀಮಂತ. ನೀವು ಎಲ್ಲವನ್ನೂ ತಿಳಿದವರು. ನಿಮಗೆ ಹೆಚ್ಚು ಹೇಳುವ ಶಕ್ತಿ ನನಗಿಲ್ಲ’ ಎಂದ ಪಟೇಲ ಉಜ್ಜನಪ್ಪ. ಉಜ್ಜನಪ್ಪನ ಮಾತುಗಳನ್ನು ಕೇಳಿದ ನರಹರಿಶಾಸ್ತ್ರಿಗಳ ಮನಸ್ಸು ಡೋಲಾಯಮಾನವಾಯಿತು. ಏನು ಹೇಳಬೇಕೆಂದು ಅವರಿಗೆ ತೋಚಲಿಲ್ಲ. ಅವರು ನಾಗಪ್ಪನತ್ತ ದೃಷ್ಟಿಹಾಯಿಸಿದರು. ಉಜ್ಜನಪ್ಪನ ಮಾತು ನಾಗಪ್ಪನವರಿಗೂ ಸೂಕ್ತವೆಂದು ತೋರಿತು. ಆದ್ದರಿಂದ ಅವರು ಆತನ ಮಾತನ್ನೇ 96 ಮೂರು ತಲೆಮಾರು ಅನುಮೋದಿಸಿದರು. ‘ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ’ ಎಂದು ದೊಡ್ಡವರು ಹೇಳುತ್ತಾರೆ. ವೆಂಕಣ್ಣಯ್ಯನವರು ಧರ್ಮನಿಷ್ಠರು. ಅವರ ಧರ್ಮ ಅವರ ಮಕ್ಕಳನ್ನು ಕಾಪಾಡುತ್ತದೆ. ನೀವು ಮೀನ, ಮೇಷ ಯೋಚನೆ ಮಾಡದೆ ಒಂದೇ ಮನಸ್ಸಿನಿಂದ ಒಪ್ಪಿಕೊಳ್ಳಿ’ ಎಂದರು. ಶಾಸ್ತ್ರಿಗಳು ‘ಆಗಲಿ’ ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ‘ಇಂದೋ ನಾಳೆಯೋ ದಿನ ಚೆನ್ನಾಗಿದ್ದರೆ ನಿಶ್ಚಿತಾರ್ಥಶಾಸ್ತ್ರವನ್ನು ಯಾಕೆ ಮುಗಿಸಿ ಬಿಡಬಾರದು?’ ಎಂದ ಉಜ್ಜನಪ್ಪ. ಆಗ ನಾಗಪ್ಪನವರು ‘ಹೇಗೂ ಗಂಡಿನ ಕಡೆ ಹಿರಿಯರಾಗಿ ಶ್ರೀನಿವಾಸರಾಯರು, ಉಜ್ಜನಪ್ಪನವರು ಬಂದಿದ್ದಾರೆ. ದಿನಶುದ್ಧಿ ಇದ್ದರೆ ಅದನ್ನು ಏಕೆ ಪೂರೈಸಬಾರದು?’ ಎಂದರು. ‘ಹೆಣ್ಣು ಕೊಡುವುದೇ ನಿಶ್ಚಯವಾದಮೇಲೆ ನಿಶ್ಚಿತಾರ್ಥಕ್ಕೆ ಅಡ್ಡಿಏನು?’ ನರಹರಿಶಾಸ್ತ್ರಿಗಳು ಪಂಚಾಂಗ ತೆಗೆದುನೋಡಿ ಮರುದಿನ ದಿನಶುದ್ಧಿ ಇರುವುದರಿಂದ ಆ ದಿನ ನಿಶ್ಚಿತಾರ್ಥವನ್ನು ಪೂರೈಸಬಹುದೆಂದು ಒಪ್ಪಿಕೊಂಡರು. ಉಜ್ಜನಪ್ಪ ಚಳ್ಳಕೆರೆಯಲ್ಲಿ ಜವಳಿ ಕೊಂಡಿದ್ದರ ರಹಸ್ಯ ಶ್ರೀನಿವಾಸರಾಯರಿಗೆ ಈಗ ಅರ್ಥವಾಯಿತು. ಅವರು ಆತನ ಮುಂದಾಲೋಚನೆಯನ್ನು ತುಂಬ ಮೆಚ್ಚಿಕೊಂಡರು. ಹೋದ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಮರಳಿದ ಉಜ್ಜನಪ್ಪ ಮತ್ತು ಶ್ರೀನಿವಾಸರಾಯರು ನಡೆದ ವಿಚಾರವನ್ನೆಲ್ಲ ಹನುಮಕ್ಕಮ್ಮನವರಿಗೆ ಸಾಂಗವಾಗಿ ತಿಳಿಸಿದರು. ಮರುದಿನ ಊರಿನ ಮುಖಂಡರಿಗೆಲ್ಲ ಚಾವಡಿಗೆ ಬರುವಂತೆ ಮತ್ತೊಮ್ಮೆ ಕರೆ ಹೋಯ್ತು. ನೆರೆದ ಮುಖಂಡರಿಗೆ ಶ್ರೀನಿವಾಸರಾಯರು ಸುಬ್ಬಣ್ಣನ ಲಗ್ನವಿಚಾರವನ್ನು ಸಾಂಗವಾಗಿ ತಿಳಿಸಿ, ಮಂದಿನ ಕಾರ್ಯಭಾಗಕ್ಕೆ ಅವರ ಸಲಹೆಯನ್ನು ಕೇಳಿದರು. ನೆರೆದವರೆಲ್ಲ ಸಾಧ್ಯವಾದಷ್ಟೂ ಉದಾರವಾಗಿ ಸಹಾಯ ಮಾಡುವುದಾಗಿ ಭರವಸೆ ಇತ್ತರು. ಆದರೆ ಹಾದಿಮನೆ ಸಣ್ಣಪ್ಪ ಮಾತ್ರ “ಏನೋ ಪರದೇಶಿಗಳು ಊರಿಗೆ ಬಂದಿದ್ದಾರೆ, ಈಗ ‘ಉಡಿದಾರ, ಲಂಗೋಟಿ’ ಎಲ್ಲ ನೀವೇ ಮಾಡಿ ಎಂಬುದು ಯಾವ ನ್ಯಾಯ’ ಎಂದ. ಅದನ್ನು ಕೇಳಿ ಪಟೇಲನಿಗೆ ಸ್ವಲ್ಪ ಅವಮಾನವಾಯಿತು. ಆತನು ಸಹನೆಯನ್ನು ಕಳೆದುಕೊಂಡು ‘ಅಣ್ಣಯ್ಯ, ನಿಮಗಾರಿಗೂ ತೊಂದರೆ ಬೇಡ. ನಾನೇ ನನ್ನ ಊರ ಮುಂದಿನ ಐದು ಎಕರೆ ಗದ್ದೆಯನ್ನು ಮಾರಿ ನನ್ನ ಕೈಲಾದ ಮಟ್ಟಿಗೆ ಲಗ್ನ ಕಾರ್ಯವನ್ನು ನಡೆಸುತ್ತೇನೆ. ಹೇಗೂ ಈಗ ಮುಂದೆ ನಿಂತುದಾಗಿದೆ. ಜವಾಬ್ದಾರಿಯನ್ನು ಹೊತ್ತುಕೊಂಡ ತಪ್ಪಿಗೆ ಏನಾದರೂ ಮಾಡಬೇಕಲ್ಲ’ ಎಂದ ಅಸಮಾಧಾನದಿಂದ. ಹಾದಿಮನೆ ಸಣ್ಣಪ್ಪನ ಮಾತಿನಿಂದ ಪಟೇಲನ ಮನಸ್ಸು ನೊಂದಿದ್ದನ್ನು ಸುಬ್ಬಣ್ಣನ ವಿವಾಹ 97 ಕಂಡು ಉಳಿದವರಿಗೂ ಸ್ವಲ್ಪ ಕೆಡಕೆನಿಸಿತು. ಗುಡೇಹಳ್ಳಿಯ ಶರಣಪ್ಪ ಆತನನ್ನು ಕುರಿತು ‘ಯಾಕೆ ಗೌಡ. ಈ ಊರಿಗೆಲ್ಲ ಸಣ್ಣಪ್ಪನೊಬ್ಬನೇ ಪೋತನಾಯಕನೇನು? ನಿನ್ನ ಗದ್ದೆ ಮಾರಿ ಮದುವೆ ಮಾಡುವುದಕ್ಕೆ ಇದೇನು ನಿನ್ನ ಮಗನ ಮದುವೆಯೆ? ಹಾಗೆ ಮದುವೆ ಮಾಡುವ ಹಾಗಿದ್ದರೆ, ನಮ್ಮನ್ನೆಲ್ಲ ಯಾಕೆ ಕರೆಸಬೇಕಾಗಿತ್ತು? ನೀನು ಗದ್ದೆ ಮಾರುವುದೂ ಬೇಡ. ಸಣ್ಣಪ್ಪನ ‘ಭಿಕ್ಷೆ’ಯೂ ಬೇಡ. ದೇವರು ನನಗೆ ಸಾಕಷ್ಟು ಅನುಕೂಲ ಕೊಟ್ಟಿದ್ದಾನೆ. ಈ ಮದುವೆಯ ಖರ್ಚನ್ನೆಲ್ಲ ನಾನು ವಹಿಸುತ್ತೇನೆ’, ಎಂದ. ಆಗ ಭಾರಿ ಗುರುಸಿದ್ದಪ್ಪ ಕಣ್ಣು ಕೆಂಪಗೆ ಮಾಡಿಕೊಂಡು ‘ಹೌದು ಕಣಣ್ಣಾ, ನೀನು ಸಾಹುಕಾರ, ಯಾರು ಇಲ್ಲಾಂದ್ರು? ಈ ಸಂಪತ್ತಿಗೆ ನಮ್ಮನ್ನೆಲ್ಲ ಇಲ್ಲಿಗೆ ಯಾಕೆ ಕರೆಸಬೇಕಾಗಿತ್ತು? ತುಂಬಿದ ಸಭೆಯಲ್ಲಿ ನಮಗೆಲ್ಲ ಅವಮಾನ ಮಾಡುವುದಕ್ಕೇನು? ಗೌಡ ಗದ್ದೆ ಮಾರಿ ಮದುವೆ ಮಾಡುತ್ತಾನೆ, ಸಾಹುಕಾರ ಶರಣಪ್ಪ ಸಾಕಷ್ಟು ಹಣ ನೀಡುತ್ತಾನೆ. ಇದನ್ನು ತಿಳಿಸುವುದಕ್ಕೆ ನಮ್ಮನ್ನೆಲ್ಲ ಯಾಕೆ ಕರೆಸಬೇಕಾಗಿತ್ತು? ನೀವು ನೀವೇ ಸೇರಿಕೊಂಡು ಹೇಗೆ ಬೇಕೋ ಹಾಗೆ ಮಾಡಿಕೊಳ್ಳಬಹುದಿತ್ತು’ ಎಂದು ಕೆರಳಿ ನುಡಿದ. ‘ಗುರುಸಿದ್ದಣ್ಣ ಹೇಳಿದ ಮಾತು ಸರಿಕಣಪ್ಪ. ಈ ಊರಿಗೆಲ್ಲ ಇರೋರು ಹಾದಿಮನೆ ಸಣ್ಣಪ್ಪ, ಸಾಹುಕಾರ ಶರಣಪ್ಪ, ನಾವೆಲ್ಲ ಸತ್ತ ಕುಳಗಳು’ ಎಂದು ರೋಷದಿಂದ ಕುದಿಯುತ್ತಿದ್ದ ಕಾಟನಾಯಕ. ಅಲ್ಲಿ ನೆರೆದಿದ್ದ ಇತರರೂ ಆತನ ಮಾತಿಗೆ ತಲೆದೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದುದನ್ನು ಗಮನಿಸಿದ ಶ್ರೀನಿವಾಸರಾಯರು ‘ದಯವಿಟ್ಟು ಯಾರೂ ತಪ್ಪು ತಿಳಿದುಕೊಳ್ಳಬಾರದು, ಯಾರನ್ನಾಗಲಿ ನೋಯಿಸಬೇಕೆಂದು ಅಥವಾ ಅಪಮಾನ ಮಾಡಬೇಕೆಂದು ಉಜ್ಜನಪ್ಪ ಮಾತನಾಡಲಿಲ್ಲ. ಸಣ್ಣಪ್ಪನ ಮಾತಿನಿಂದ ಆತನಿಗೆ ಕೋಪ ಉಕ್ಕಿ ಸ್ವಲ್ಪ ಉಛಾಯಿಸಿ ಮಾತನಾಡಿದ ಅಷ್ಟೆ, ಆ ಮಾತು ಯಾರಿಗಾದರೂ ಸಿಟ್ಟು ಬರಿಸುವಂತಹುದೇ. ಆದರೆ ಅದಕ್ಕೆ ಹೆಚ್ಚು ಬೆಲೆ ಕೊಡಬೇಕಾದ್ದಿಲ್ಲ. ಉಜ್ಜನಪ್ಪನಾಗಲಿ, ಶರಣಪ್ಪನಾಗಲಿ ಕೋಪದ ಭರದಲ್ಲಿ, ಸುಬ್ಬಣ್ಣನ ಮೇಲಿನ ಪ್ರೀತಿಯಲ್ಲಿ ಹಾಗೆ ಮಾತನಾಡಿದರೇ ಹೊರತು ಅದರಲ್ಲಿ ಅಹಂಕಾರದ ದುರುದ್ದೇಶವೇನೂ ಇಲ್ಲ. ನೋಡಿ, ಇದು ಊರೊಟ್ಟಿನ ಕೆಲಸ, ಊರಿನವರಿಗೆಲ್ಲ ಸೇರಿದ್ದು. ಆ ಉದ್ದೇಶದಿಂದಲೇ ನಿಮ್ಮನ್ನೆಲ್ಲಾ ಇಲ್ಲಿಗೆ ಕರೆಸಿದ್ದು. ಸಣ್ಣಪ್ಪನ ‘ಅಡ್ಡ’ ಮಾತಿನಿಂದ ಮಾತು ಹೇಗೆ ಹೇಗೋ ತಿರುಗಿತು. ಅದನ್ನು ಯಾರೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ನನ್ನ ಸಲಹೆ ಇಷ್ಟೇ- ಇಲ್ಲಿ ಸೇರಿರುವವರೆಲ್ಲರೂ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಈ ಧರ್ಮಕಾರ್ಯ 98 ಮೂರು ತಲೆಮಾರು ಸಾಂಗವಾಗಿ ನೆರವೇರಲಿ. ನೀವೆಲ್ಲ ಇದಕ್ಕೆ ಒಪ್ಪುವುದಾದರೆ ಒಂದು ಚಂದಾಪಟ್ಟಿ ಮಾಡೋಣ’ ಎಂದರು. ಶ್ರೀನಿವಾಸರಾಯರ ಸಲಹೆ ಎಲ್ಲರಿಗೂ ಒಪ್ಪಿಗೆಯಾಯಿತು. ಅವರು ಕೈಯಲ್ಲಿ ಕಾಗದ ಲೆಕ್ಕಣಿಕೆಯನ್ನು ಹಿಡಿದು ಪಟ್ಟಿಯನ್ನು ಬರೆದುಕೊಳ್ಳಲು ಸಿದ್ಧರಾದರು. ‘ಸಣ್ಣಪ್ಪನ ಹೆಸರನ್ನು ಬಿಟ್ಟು ಉಳಿದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ, ಸ್ವಾಮಿ. ಬಲವಂತ ಮಾಘಸ್ನಾನ ಯಾರಿಗೂ ಬೇಡ. ನನ್ನ ಹೆಸರಿಗೆ ಒಂದು ನೂರು ರೂಪಾಯಿ ಹಾಕಿ’ ಎಂದ ಗುಡೇಹಳ್ಳಿ ಶರಣಪ್ಪ. ಶರಣಪ್ಪನ ಈ ಮಾತಿನಿಂದ, ಸಭಿಕರ ಒಟ್ಟಭಿಪ್ರಾಯದಿಂದ ಸಣ್ಣಪ್ಪನಿಗೆ ಮುಖಭಂಗವಾಯಿತು. ಆತ ಕುಗ್ಗಿದ ಮುಖದಿಂದ ‘ಅಣ್ಣಗಳಿರಾ, ನನ್ನನ್ನು ಯಾರೂ ತಪ್ಪು ತಿಳಿದುಕೊಳ್ಳಬೇಡಿ. ಏನೋ ಬಾಯಿಂದ ಮಾತು ಜಾರಿಹೋಯಿತು. ನಾನು ಸಭೆಯ ಕ್ಷಮೆಯನ್ನು ಕೇಳಿಕೊಳ್ಳುತ್ತೇನೆ. ತುಂಬಿದ ಸಭೆಯಲ್ಲಿ ಇನ್ನು ಹೆಚ್ಚಾಗಿ ಇದರ ಪ್ರಸಕ್ತಿ ಬೇಡ’ ಎಂದ. ತಗ್ಗಿದ ದನಿಯಿಂದ ‘ಒಲ್ಲದ ಮನಸ್ಸಿನಿಂದ ಯಾರೂ ಕೊಡುವುದು ಬೇಡ. ಹತ್ತು ಹಸುಗಳಲ್ಲಿ ಒಂದು ಬಿಡಿಸಿಕೊಂಡರೆ ಮಜ್ಜಿಗೆಗೇನೂ ಕೊರತೆಯಾಗುವುದಿಲ್ಲ’ ಎಂದು ಸಿಡಿಗುಟ್ಟಿದ ಭಾರಿ ಗುರುಸಿದ್ದಪ್ಪ. ಆಗ ಶಾನುಭೋಗರು ನಡುವೆ ಬಾಯಿ ಹಾಕಿ ‘ಗೆಳೆಯರೇ, ‘ತಪ್ಪಾಯಿತು’ ಎಂದು ಸಭೆಯಲ್ಲಿ ಕೇಳಿಕೊಂಡ ಮೇಲೆ, ಪ್ರಸಂಗವನ್ನು ಮುಂದುವರಿಸುವುದು ಸರಿಯಲ್ಲ. ಇಂತಹ ಒಂದು ಸಣ್ಣ ವಿಚಾರಕ್ಕಾಗಿ ಊರಿನ ಒಗ್ಗಟ್ಟು ಮುರಿಯಬೇಕೇನು? ಏನು ಕೆಂಚಪ್ಪ?’ ಎಂದರು. ‘ನೀವು ಹೇಳೋದು ಸರಿ ಸ್ವಾಮಿ. ಹತ್ತು ಜನ ಸೇರಿದರೆ ಹತ್ತು ಮಾತು ಬರುತ್ತದೆ, ಹೋಗುತ್ತದೆ. ಸಣ್ಣ ವಿಚಾರವನ್ನು ದೊಡ್ಡದು ಮಾಡುವುದು ಯಾರಿಗೂ ಹಿತವಲ್ಲ, ಎಂದ ಕೆಂಚಪ್ಪ. ಪಟೇಲ, ಶಾನುಭೋಗರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿಯೇ ಹಣ ಸಂಗ್ರಹವಾಯಿತು. ಲಗ್ನದ ದಿನ, ಮುಹೂರ್ತಗಳು ನಿಶ್ಚಯವಾದುವು. ತಿಮ್ಮಣ್ಣನಾಯ್ಕನಕೋಟೆಯಲ್ಲಿ ವಧುವಿನ - ಕನ್ಯಾದಾತನ ಸ್ವಗೃಹದಲ್ಲಿಯೇ ಶುಭಕಾರ್ಯ ನಡೆಯಬೇಕೆಂದು ಗುರುಹಿರಿಯರು ಸೇರಿ ನಿಶ್ಚಯಿಸಿದರು. ಆಪ್ತರು, ಸಮೀಪದ ಬಂಧುಗಳು ತಳುಕಿನಲ್ಲಿ ಸೇರಿ ಸಂಭ್ರಮದಿಂದ ದೇವರ ಸಮಾರಾಧನೆಯನ್ನು ಆಚರಿಸಿದರು. ಊರಿನ ಪ್ರಮುಖರೆಲ್ಲರೂ ಗಾಡಿಗಳನ್ನು ಕಟ್ಟಿಕೊಂಡು, ಸಂಸಾರಸಮೇತರಾಗಿ ಮದುವೆಯ ದಿಬ್ಬಣದೊಡನೆ ಸೇರಿಕೊಂಡರು. ವರ ಉಚಿತವೇಷದಿಂದ ಪ್ರಯಾಣ ಸನ್ನದ್ಧನಾದ. ಮಂಗಳ ಪ್ರಯಾಣದ ಸಡಗರವನ್ನು ನೋಡಲು ಊರಿನ ಜನರೆಲ್ಲ ಗುಂಪುಗುಂಪಾಗಿ ಸುಬ್ಬಣ್ಣನ ವಿವಾಹ 99 ಸೇರಿದರು. ಸುಬ್ಬಣ್ಣನ ಮನೆಯ ಪಕ್ಕದಲ್ಲಿಯೇ ಕಮ್ಮಾರ ಹೊನ್ನಪ್ಪನ ಮನೆ, ಆತ ತುಂಬ ಸಜ್ಜನ. ಶ್ರೀಮಂತನಲ್ಲದಿದ್ದರೂ ಕಡುಬಡವನೇನೂ ಅಲ್ಲ. ತನ್ನ ಕಸುಬಿನಿಂದ ಆತ ಕೈ ತುಂಬ ಸಂಪಾದಿಸುತ್ತಿದ್ದ. ಆತನಿಗೆ ಸುಬ್ಬಣ್ಣನಲ್ಲಿ ಬಲು ಪ್ರೀತಿ. ಆ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರಭಾರವನ್ನು ಹೊತ್ತು ನಡೆಸುತ್ತಿದ್ದ ಆತನ ಸತ್ವಶಕ್ತಿಯನ್ನು, ಆತನ ಉತ್ತಮ ನಡೆ-ನುಡಿಗಳನ್ನು ಕಂಡು ಆತನಲ್ಲಿ ಬಹು ಮೆಚ್ಚಿಗೆ. ಆತ ಹೊರಗೆ ಬಂದು ಸುಬ್ಬಣ್ಣನನ್ನು ನೋಡಿದ. ವರ ಧರಿಸಿದ್ದ ಉಡುಪುಗಳು ಆತನ ಸುಂದರ ರೂಪಕ್ಕೆ ತುಂಬ ಹೊಂದಿಕೆಯಾಗಿದ್ದುವು. ಒಳ್ಳೆಯ ಐದೂಕಾಲಡಿ ಎತ್ತರದ ಆಳು. ತೆಳುವಾಗಿದ್ದರೂ ಬಡಕಲಲ್ಲದ ಶರೀರ, ಮಾಗಿದ ನಿಂಬೆಹಣ್ಣಿನ ಮುಖವರ್ಣ, ವಿಶಾಲವಾದ ಹೊಳೆವ ಕಣ್ಣುಗಳು, ಉದ್ದದ ಮೂಗು, ಚೆಂದುಟಿಯ ಮೇಲೆ ಆಗ ತಾನೇ ಮೂಡುತ್ತಿರುವ ಕಿರುಮೀಸೆ, ತಲೆತುಂಬ ಕಾಳಮೇಘದಂತೆ ಕಪ್ಪಾದ ದಟ್ಟಕೂದಲು, ನೀಳವಾದ ತೊಳುಗಳು, ವಯಸ್ಸಿಗೆ ತಕ್ಕ ಎತ್ತರವಾದ ಆಕೃತಿ - ಒಟ್ಟಿನಲ್ಲಿ ಸ್ಫುರದ್ರೂಪಿಯಾದ ಸುಂದರ ಪುರುಷ. ಉಟ್ಟಿರುವ ಸಣ್ಣಗೀರಿನ ಶುಭ್ರ ಪಂಚೆ, ಧರಿಸಿರುವ ಬಿಳಿಯ ಬನೀನು, ಅದರ ಮೇಲೆ ಹಾಕಿರುವ ತಿಳಿ ಹಳದಿ ಬಣ್ಣದ ಅಂಗಿ, ತಲೆಯ ಮೇಲೆ ಸುತ್ತಿದ ಅಚ್ಚ ಬಿಳಿಯ ಮುಂಡಾಸು- ಎಲ್ಲವೂ ಆತನಿಗೆ ಒಪ್ಪುವಂತೆಯೇ ಇದ್ದುವು. ಆದರೆ ಆತ ಹೊದೆದಿದ್ದ ಉತ್ತರೀಯ ಮಾತ್ರ ಹೊನ್ನಪ್ಪನ ಮನಸ್ಸಿಗೆ ಹಿಡಿಸಲಿಲ್ಲ. ಆತ ನೆಟ್ಟಗೆ ತನ್ನ ಮನೆಯೊಳಗೆ ಹೋಗಿ, ತಾನು ಹೊದೆಯಬೇಕೆಂಬ ಆಸೆಯಿಂದ ತಂದಿರಿಸಿದ್ದ ಗರಿಮುರಿಯದ, ಹೊಸ ಹೊಸದಾದ, ಮೊಳಕಾಲ್ಮುರುವಿನ ರೇಷ್ಮೆಯ ವಸ್ತ್ರವನ್ನು ಪೆಟ್ಟಿಗೆಯಿಂದ ತೆಗೆದು, ಕೈಲಿ ಹಿಡಿದುಕೊಂಡು ಬಂದು ಒಂದು ಕ್ಷಣ ಅದರತ್ತ ನೋಡಿ ‘ನನಗೆ ಈಗ ಇದೇಕೆ ಬೇಕು? ಮದುವೆಯಾಗುವ ಬ್ರಾಹ್ಮಣ ಹುಡುಗ ಹೊದ್ದುಕೊಂಡರೆ ಸಾರ್ಥಕವಾಗುತ್ತದೆ; ಈಶ್ವರನಿಗೆ ಪ್ರೀತಿಯಾಗುತ್ತದೆ’ ಎಂದುಕೊಂಡವನೇ ಸುಬ್ಬಣ್ಣನ ಬಳಿಗೆ ಹೋಗಿ, ಆತನ ಮೈಮೇಲಿನ ಉತ್ತರೀಯದ ಪಂಚೆಯನ್ನು ತೆಗೆದುಹಾಕಿ, ರೇಷ್ಮೆಯ ವಸ್ತ್ರವನ್ನು ಮಡಿಕೆಮಾಡಿ ಹೊದ್ದಿಸಿ, ‘ಅಪ್ಪಯ್ಯಾ, ಈಗ ನೀನು ಒಳ್ಳೆ ಮನ್ಮಥನಾಗಿ ಕಾಣುತ್ತಿ. ಹೋಗಿ ಲಗ್ನಮಾಡಿಕೊಂಡು ಸುಖವಾಗಿ ಬಾಪ್ಪಾ’ ಎಂದು ಹರಸಿದ. ದಿಬ್ಬಣ ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ತಳುಕನ್ನು ಬಿಟ್ಟು ಹೊರಟಿತು. ಮದುವೆಯ ದಿಬ್ಬಣ ಸಾಯಂಕಾಲಕ್ಕೆ ಚೆನ್ನಮ್ಮನಾಗತಿಹಳ್ಳಿ ಸೇರಿತು. ರಾತ್ರಿ ಅಲ್ಲಿಯೆ ಊಟ-ವಸತಿಗಳಾದುವು. ಮಾರನೆಯ ದಿನವೇ ಎದುರುಗೊಳ್ಳುವುದು, ವರ ಪೂಜೆ. ಸಾಯಂಕಾಲಕ್ಕೆ ತಿಮ್ಮಣ್ಣನಾಯ್ಕನಕೋಟೆಗೆ 100 ಮೂರು ತಲೆಮಾರು ಹೋಗಿ ಸೇರಬೇಕು. ಚೆನ್ನಮ್ಮನಾಗತಿಹಳ್ಳಿಯಿಂದ ಅದು ಕೇವಲ ಆರು ಮೈಲಿ ದೂರ. ಆದರೂ ದಾರಿಯಲ್ಲಿ ಸೂರನಹಳ್ಳಿಯ ಹತ್ತಿರ ವೇದಾವತಿ ನದಿಯನ್ನು ದಾಟಬೇಕು. ಮುಂದೆ ಸುಮಾರು ಒಂದು ಮೈಲಿ ದೂರ ಮರಳಿನಲ್ಲಿ ಗಾಡಿಗಳು ಸಾಗಬೇಕು. ಆದ್ದರಿಂದ ಆದಷ್ಟು ಹೊತ್ತಿಗೆ ಮುಂಚೆ ಅಲ್ಲಿಂದ ಹೊರಡಬೇಕು. ಸುಮಾರು ಮಧ್ಯಾಹ್ನ ಒಂದು ಘಂಟೆಯ ವೇಳೆಗೆ ಅಲ್ಲಿಯ ಬಂಧುಗಳನ್ನು ಕರೆದುಕೊಂಡು ಮದುವೆಯ ದಿಬ್ಬಣ ಪ್ರಯಾಣ ಹೊರಟಿತು. ಸೂರನ ಹಳ್ಳಿಯವರೆಗೆ ಕಾಡುದಾರಿಯಾದರೂ ಗಟ್ಟಿನೆಲವಾದ್ದರಿಂದ ಯಾವ ತೊಂದರೆಯೂ ಇಲ್ಲದೆ ಗಾಡಿಗಳೂ ಸಾಗಿದುವು. ಅಲ್ಲಿಯ ನದಿಯಲ್ಲಿ ಗಾಡಿಗಳನ್ನೂ, ಹೆಂಗಸು ಮಕ್ಕಳನ್ನೂ ದಾಟಿಸುವುದು ತುಂಬ ಪ್ರಯಾಸದ ಕಾರ್ಯವಾಗಿತ್ತು. ಕೆಲವು ಕಡೆ ನೀರು ಮೊಳಕಾಲು ಮಟ್ಟ, ಕೆಲವು ಕಡೆ ತೊಡೆ ಮಟ್ಟ ಇರುತ್ತಿತ್ತು. ನದಿಯ ತಳದಲ್ಲಿ ಸಣ್ಣ ಪುಟ್ಟ ತಗ್ಗು ದಿಣ್ಣೆಗಳೂ, ಕಲ್ಲು ಬಂಡೆಗಳೂ ಇರುತ್ತಿದ್ದುವು. ಸಾಕಷ್ಟು ಸೆಳವು ಇರುತ್ತಿತ್ತು. ಹೆಜ್ಜೆಗಳನ್ನು ಎತ್ತಿಡುವಾಗ ಬಹಳ ಎಚ್ಚರಿಕೆಯಾಗಿರಬೇಕು. ಊರಿನ ಹಲವು ಜನರು ಸಹಾಯ ಮಾಡಿ ಎತ್ತು ಗಾಡಿಗಳನ್ನು ಎದುರು ದಡಕ್ಕೆ ಸೇರಿಸಿದ್ದಾಯಿತು. ಹೆಂಗಸರು, ಮಕ್ಕಳನ್ನೂ ಪ್ರಯಾಸದಿಂದ ಸಾಗಿಸಿದ್ದಾಯಿತು. ಗಂಡಸರೇನೋ ನಿರಾಯಾಸವಾಗಿ ಎದುರು ದಡ ಸೇರಿದರು. ಸುಮಾರು ಒಂದು ನೂರು ಗಜಗಳು ಮಾತ್ರ ನೀರಿದ್ದ ನದಿಯನ್ನು ಎಲ್ಲರೂ ದಾಟಲು ಸ್ವಲ್ಪ ಹೆಚ್ಚು ಕಡಿಮೆ ಒಂದು ಘಂಟೆ ಕಾಲವೇ ಬೇಕಾಯಿತು. ಆಮೇಲೆ ಮಕ್ಕಳಿಗೂ, ಗಾಡಿಯವರಿಗೂ ಬುತ್ತಿಯ ಊಟ, ದೊಡ್ಡವರಿಗೆ ತಿಂಡಿ, ತೀರ್ಥ ಇವುಗಳಿಗಾಗಿ ಮತ್ತೊಂದು ಘಂಟೆ ಕಾಲ ಕಳೆಯಿತು. ಹೆಂಗಸರು, ಮಕ್ಕಳನ್ನು ಗಾಡಿಯಲ್ಲಿ ಕೂರಿಸಿ ಮರಳುದಾರಿ ಮುಗಿಯುವವರೆಗೆ ಅಲ್ಲಲ್ಲಿ ಗಾಡಿಗಳನ್ನು ನೂಕಿ ಕೊಡುತ್ತ ಗಂಡಸರು ನಡೆದುಕೊಂಡೇ ಹೋದರು. ಅನಂತರ ಎಲ್ಲರೂ ಗಾಡಿಗಳಲ್ಲಿ ಕುಳಿತು ಪ್ರಯಾಣ ಮಾಡಿ ಹೊತ್ತು ಮುಳುಗುವುದಕ್ಕೆ ಮುಂಚೆಯೇ ಕೋಟೆಯನ್ನು ಸೇರಿದರು. ಗಂಡಿನ ಕಡೆಯವರು ಊರು ಸೇರಿದ ಸಮಾಚಾರ ನರಹರಿಶಾಸ್ತ್ರಿಗಳನ್ನು ಮುಟ್ಟಿತು. ಅವರು ಸಿದ್ಧರಾಗಿಯೇ ಇದ್ದರು, ಲಗುಬಗೆಯಿಂದ ಕಲಶ ಕನ್ನಡಿಗಳನ್ನು ಹಿಡಿದು, ಮಂಗಳವಾದ್ಯದೊಡನೆ ಬಂದು, ಬೀಗರನ್ನು ಇದಿರುಗೊಂಡರು. ಕಡಲೆಉಂಡೆ, ಅವಲಕ್ಕಿಉಂಡೆ, ಅರಳುಂಡೆ, ಪುಳ್ಳಂಗಾಯಿಉಂಡೆ, ಪೂರಿ ಸಕ್ಕರೆ, ಚೆಕ್ಕುಲಿ, ಕೋಡುಬಳೆ ಇತ್ಯಾದಿಗಳೂ, ಕುಡಿಯಲು ಸ್ವಚ್ಚ ತಣ್ಣೀರು, ಪೂರಾಪುಷ್ಟಿಯಾಗಿ ಬೀಗರನ್ನು ಸತ್ಕರಿಸಿದುದಾಯಿತು. ಮುತ್ತೈದೆಯರು ಲಕ್ಷಣವಾಗಿ ಸುಬ್ಬಣ್ಣನ ವಿವಾಹ 101 ತಲೆಬಾಚಿಕೊಂಡು, ಮುಖಗಳನ್ನು ತೊಳೆದುಕೊಂಡು, ಹಣೆಯಲ್ಲಿ ದೊಡ್ಡದಾಗಿ ಕುಂಕುಮವಿಟ್ಟು, ಹೊಸಬಟ್ಟೆಗಳನ್ನುಟ್ಟು ಸಿದ್ಧರಾದರು. ಇದಿರುಗೊಳ್ಳುವ ಕಾರ್ಯವಾದ ಮೇಲೆ ಉಭಯರೂ ಮಂಗಳವಾದ್ಯದೊಂದಿಗೆ ಹೊರಬಾಗಿಲಿನಿಂದ ಹೊರಬಂದು ಹನುಮಂತರಾಯನ ಗುಡಿಯನ್ನು ಹೊಕ್ಕರು. ಅಲ್ಲಿ ಶಾಸ್ತ್ರೋಕ್ಷವಾಗಿ ವರಪೂಜೆ ನಡೆಯಿತು. ಬಂದವರಿಗೆಲ್ಲ ತಾಂಬೂಲ, ಸಕ್ಕರೆ, ಕೊಬ್ಬರಿ, ಕದಳೀಫಲಗಳ ವಿನಿಯೋಗವಾಯಿತು. ಬೀಗರನ್ನು ಬಿಡದಿಯಲ್ಲಿ ಬಿಟ್ಟು ಕನ್ಯೆಯ ಕಡೆಯವರು ತಮ್ಮ ಮನೆ ಸೇರಿದರು. ರಾತ್ರಿ ಹತ್ತು ಘಂಟೆಯ ವೇಳೆಗೆ ಹೋಳಿಗೆ ಪಾಯಸದ ಸವಿ ‘ಬಿಸಿಲೂಟ’ವಾಗುತ್ತಿತ್ತು. ಎಲ್ಲರೂ ಮನೆಯಲ್ಲಿ ಹಾಯಾಗಿ ಮಲಗಿ ನಿದ್ರೆ ಮಾಡಿದರು. ಮಾರನೆಯ ದಿನವೇ ಶುಭ ಮುಹೂರ್ತ. ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಗೆ ಎದ್ದು ನಾಂದಿ ಇಟ್ಟುಕೊಳ್ಳುವ ಲಿಂಗಣ್ಣ. ಅವರ ಕುಟುಂಬ, ಕಲಶಗಿತ್ತಿ, ವರ ಸುಬ್ಬಣ್ಣ - ಇವರ ಎಣ್ಣೆಶಾಸ್ತ್ರ, ಅಭ್ಯಂಜನಗಳಾದುವು. ಲಘು ಫಲಾಹಾರವಾಗಿ ‘ಕಾಶಿಯಾತ್ರೆ’ಯ ಸಮಾರಂಭಕ್ಕೆ ಎಲ್ಲರೂ ಅಣಿಯಾಗುವ ವೇಳೆಗೆ ಹತ್ತು ಗಂಟೆಯಾಯಿತು. ಕನ್ಯಾಪಕ್ಷದವರೂ ಲಗುಬಗೆಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಬಂದರು. ಗೋಧಿಹಿಟ್ಟು, ಅರಿಶಿನ ಮಿಶ್ರವಾದ ಕಣಕದಿಂದ ತಯಾರಿಸಿದ ಕುಂಡಲಾಕಾರವಾದ ಕೋಡುಬಳೆಗಳನ್ನು ವರನ ಕಿವಿಯಲ್ಲಿ ತೂಗುಹಾಕಿದರು. ಕಾಲಿಗೆ ಮಟ್ಟಸವಾಗಿ ತೆಳ್ಳಗೆ ತಯಾರಿಸಿದ ಚಪ್ಪಲಿಗಳು, ಕೈಗೆ ಬೀಸಣಿಗೆ, ಬೆತ್ತ, ಛತ್ರಿಗಳು, ಹೆಗಲಿಗೆ ಅಕ್ಕಿ ಮೊದಲಾದ ಸಾಮಾನುಗಳಿದ್ದ ಜೋಳಿಗೆಯನ್ನು ಅಳವಡಿಸಲಾಯಿತು. ವರನನ್ನು ಪೂಜಿಸಿ ವಧುಗೃಹಕ್ಕೆ ಕರೆತರಲಾಯಿತು. ಮೆಟ್ಟಕ್ಕಿಯ ಬುಟ್ಟಿ, ಅಂತರ ಪಟ, ಅಕ್ಷತಾರೋಪಣ, ಕನ್ಯಾದಾನ, ಮಾಂಗಲ್ಯಧಾರಣೆಗಳು ಕ್ರಮವಾಗಿ ನಡೆದು ವಧುವು ವರನ ವಾಮಭಾಗದಲ್ಲಿ ಬಂದು ಕುಳಿತಳು. ಶಾಸ್ತ್ರೋಕ್ತವಾದ ಹವನ, ಹೋಮಾದಿಗಳು ನಡೆದು, ‘ಸಪ್ತಪದಿ’ ಯಜ್ಞೇಶ್ವರನ ಪ್ರದಕ್ಷಿಣೆಗಳೂ ನಡೆದುವು. ಇದುವರೆಗೆ ಕೇವಲ ವಧು-ವರರಾಗಿದ್ದವರು ಈಗ ಗಂಡ ಹೆಂಡತಿಯರಾದರು. ಬೇರೆ ಬೇರೆ ಹೆಸರುಗಳು ಮಾಯವಾಗಿ ‘ದಂಪತಿ’ ಎಂಬ ಏಕಭಾವದಲ್ಲಿ ಲೀನರಾದರು. ರಾತ್ರಿ ಹರಿಭೂಮದೊಂದಿಗೆ ಭೋಜನವಾಯಿತು. ಬೀಗರ ಹಾಡುಗಳ ಸುರಿಮಳೆಯಾಯಿತು. ಹಾಡುವವರ ಸಂಗೀತಜ್ಞಾನವಾಗಲಿ, ಕಂಠಮಾಧುರ್ಯವಾಗಲಿ ಯಾರೂ ಗಮನಿಸುತ್ತಿರಲಿಲ್ಲ. ಹೇಳಿದ ಹಾಡುಗಳ ಸಂಖ್ಯೆ, ಅವುಗಳಲ್ಲಿ ಅಡಗಿದ್ದ ಮಧುರ ಹಾಸ್ಯ ಭಾವನೆಗಳು ಮುಖ್ಯವೆನಿಸಿದ್ದುವು. 102 ಮೂರು ತಲೆಮಾರು ಲಕ್ಷ್ಮಿದೇವಿ ಅಂದು ಹೇಳಿದ ಉರುಟಣೆಯ ಹಾಡುಗಳು, ಕಂದಪದ್ಯಗಳು, ಸೀಸಪದ್ಯಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾದುವು. ಅಂದು ರಾತ್ರಿ ತನ್ನ ಮಡದಿ ಹಾಡಿದ ಹಾಡುಗಳು ಸುಬ್ಬಣ್ಣನ ಕವಿತಾಶಕ್ತಿಯನ್ನು ಪ್ರಚೋದಿಸಿದುವೆಂದು ಕಾಣುತ್ತದೆ. ಬೊಂಬೆಯಾಟದಂತಹ ಆ ಮದುವೆ ಎಂಟು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಪ್ರತಿದಿನ ಸಂಜೆಯೂ ನೂತನ ದಂಪತಿಗಳಿಗೆ ಸಂಭ್ರಮದ ಉರುಟಣೆ. ಸುಬ್ಬಣ್ಣ ತನ್ನ ಹೆಂಡತಿ ಹಸೆಯ ಮೇಲೆ ಕೂರುತ್ತಿದ್ದ ಕಡೆ ಗೋಡೆಯ ಮೇಲೆ ಉರುಟಣೆಯ ಹಾಡುಗಳನ್ನು ಹೊಸಹೊಸದಾಗಿ ರಚಿಸಿ ಬರೆಯುತ್ತಿದ್ದನಂತೆ! ಲಕ್ಷ್ಮೀದೇವಿ ಅವುಗಳನ್ನು ಗಟ್ಟಿಮಾಡಿಕೊಂಡು ಉರುಟಣೆಯ ವೇಳೆಯಲ್ಲಿ ಮನೋಹರವಾಗಿ ಹಾಡುತ್ತಿದ್ದಳಂತೆ! ಹಾಡಿನ ಕೊನೆಯಲ್ಲಿ ‘ತಳುಕಿನ ಸುಬ್ಬಣ್ಣ’ ಎಂಬ ಅಂಕಿತವಿರುತ್ತಿತ್ತು. ಮುಗ್ಧಳಾದ ಹುಡುಗಿ ಅದನ್ನು ರಾಗರಾಗವಾಗಿ ಹಾಡಿದಾಗ ನೆರೆದಿದ್ದ ಹೆಣ್ಣು ಮಕ್ಕಳೆಲ್ಲ ನಗುವಿನ ಕಡಲಿನಲ್ಲಿ ಮುಳುಗೇಳುತ್ತಿದ್ದರು. ಈ ವಿವಾಹ ಸಮಯದಲ್ಲಿಯೇ ಸುಬ್ಬಣ್ಣನ ಅಕ್ಕ ಅಚ್ಚಮ್ಮನ ನಿಷೇಕಪ್ರಸ್ತದ ಮಂಗಳಕಾರ್ಯವೂ ನಡೆದುಹೋಯಿತು. ದಿನದಿನವೂ ಯಥೇಚ್ಛವಾದ ಅನ್ನ ಸಂತರ್ಪಣೆ ನಡೆಯುತ್ತಿತ್ತು. ಬ್ರಾಹ್ಮಣರು ಮಾತ್ರವೇ ಅಲ್ಲ, ಆಹ್ವಾನಿತರಾಗಿ ಬಂದಿದ್ದ ಆಪ್ತರು, ರೈತ ಮುಖ್ಯರು, ಆಳುಕಾಳುಗಳು ಹಳ್ಳಿಯ ಜನರು ಲಾಡು ಸಂತರ್ಪಣೆಯಿಂದ ತೃಪ್ತರಾಗಿ ಹೋದರು. ಎಂಟನೆಯ ರಾತ್ರಿ ಎಂಟು ಘಂಟೆಯ ಮೇಲೆ ಜೋಡೆತ್ತಿನ ಬಯಲು ಗಾಡಿಯಲ್ಲಿ ಹಳ್ಳಿಯಲ್ಲೆಲ್ಲ ಮೆರವಣಿಗೆ ನಡೆಯಿತು. ಎತ್ತರವಾಗಿ, ಎಲ್ಲರಿಗೂ ಕಾಣುವಂತೆ, ಗಾಡಿಯ ಪಕ್ಕ ದಬ್ಬೆಗಳ ಮೇಲೆ ಹಲಗೆಯನ್ನಿಟ್ಟು. ಅದರ ಮೆಲೆ ರಂಗು ರಂಗಿನ ಜಮಖಾನವನ್ನು ಹಾಸಿದ್ದರು. ಸೊಗಸಾದ ಎರಡು ಹೋರಿಗಳನ್ನು ಸಬರ, ಹಣೆಪಟ್ಟಿ, ಕೋಡಣಸುಗಳಿಂದ ಅಲಂಕೃತವಾಗಿ ಗಾಡಿಗೆ ಹೂಡಲಾಗಿತ್ತು. ನೂತನ ದಂಪತಿಗಳು ಹಿರಿಯರಿಗೆ ನಮಸ್ಕರಿಸಿ, ಎತ್ತುಗಳಿಗೂ, ಗಾಡಿಗಳಿಗೂ ನಮಸ್ಕರಿಸಿ ಸಡಗರದಿಂದ ರಥವನ್ನೇರಿ ತಮ್ಮ ಸ್ಥಳಗಳಲ್ಲಿ ಕುಳಿತರು. ಸಣ್ಣ ಹಳ್ಳಿ; ಒಂದೇ ಒಂದು ಬೀದಿ; ಆ ಬೀದಿಯ ಬಾಗಿಲ ಹೊರಗೆ ಆಂಜನೇಯ ದೇವಸ್ಥಾನ, ಮೆರವಣಿಗೆ ಅಲ್ಲಿಯವರೆಗೆ ಹೋಗಿ ಸ್ವಾಮಿಗೆ ಹಣ್ಣು ಕಾಯಿ ಮಂಗಳಾರತಿ ಮಾಡಿಕೊಂಡು ಹಿಂದಿರುಗಿತು. ಎರಡು ಪಕ್ಕಕ್ಕೂ ಗುಂಪುಗುಂಪಾಗಿ ನೆರೆದು ನಿಂತಿದ್ದ ಜನಸಮೂಹ ದಂಪತಿಗಳನ್ನು ನೋಡಿ ‘ಒಳ್ಳೆಯ ಜೋಡಿ. ಬೋ ಚಂದಾಗವ್ರೆ’ ಎಂದು ಸಂತೋಷಪಟ್ಟರು. ಕೆಲವರು ದೃಷ್ಟಿನಿವಾರಣೆಗಾಗಿ ತೆಂಗಿನಕಾಯನ್ನು ಇಳೆತೆಗೆದು ಸುಬ್ಬಣ್ಣನ ವಿವಾಹ 103 ಒಡೆದರು. ಅರ್ಧಗಂಟೆಯಲ್ಲಿ ಮೆರವಣಿಗೆ ಮುಗಿಯಿತು. ಅಂದು ರಾತ್ರಿ ಒಂಭತ್ತು ಗಂಟೆಗೆ ಊಟ ಮುಗಿಸಿ ಎಲ್ಲರೂ ವಿಶ್ರಾಂತರಾದರು. ವಿವಾಹವಿಧಿಗಳೆಲ್ಲ ಅಲ್ಲಿಗೆ ಮುಗಿದುವು. ನರಹರಿಶಾಸ್ತ್ರಿಗಳೇ ಸ್ವತಃ ಪುರೋಹಿತರಾಗಿ, ಶಾಸ್ತ್ರಜ್ಞರಾಗಿದ್ದುದರಿಂದ, ಲಗ್ನಕಾರ್ಯಗಳಲ್ಲಿ ಯಾವ ಲೋಪ ದೋಷವೂ ಬಾರದಂತೆ ವಿಚಕ್ಷಣೆಯಿಂದ ನಡೆಸಿದರು. * * * * 104 ಮೂರು ತಲೆಮಾರು 5. ನರಸಮ್ಮ ಈ ಅನಂತ ಸೃಷ್ಟಿಯಲ್ಲಿ ದುಃಖಮಿಶ್ರಿತವಲ್ಲದ ಸುಖವನ್ನು ಯಾರಾದರೂ ಕಂಡವರುಂಟೆ? ಯಾರೂ ಕಂಡರಿಯರು. ಹಾಗೆ ಕಂಡಿದ್ದರೆ ಅದು ಬರಿಯ ತೋರಿಕೆ ಮಾತ್ರ. ಸುಂದರವಾದ ಗುಲಾಬಿಯಲ್ಲಿ ಮುಳ್ಳು ಏಕೆ? ಮೃದು ಮಧುರವಾದ ಜಾಜಿಯ ಪೊದೆಯಲ್ಲಿ ಕಠೋರವಾದ ಕೃಷ್ಣಸರ್ಪವೇಕೆ? ಕ್ಷೀರಸಮುದ್ರದ ಮಥನ ಕಾಲದಲ್ಲಿ ಅಮೃತದೊಡನೆ ವಿಷವೇಕೆ ಹುಟ್ಟಬೇಕಾದೀತು? ಏಕೆ? ಏಕೆ? ಇದಕ್ಕೆ ಏಕೆ ಎಂಬ ಮರುಧ್ವನಿಯೇ ಮಾರುತ್ತರ. ಸುಬ್ಬಣ್ಣ - ಲಕ್ಷ್ಮೀದೇವಿಯರ ವಿವಾಹದ ಸುಖ-ಸಂತೋಷದ ನಡುವೆ ಸುಬ್ಬಣ್ಣನ ಅಂತಃಕರಣ ಕಲಕಿಹೋಗಿ ಆತನ ಮನೋಭೂಮಿ ಕಾರ್ಮೋಡದ ಕತ್ತಲೆಯಿಂದ ಆವೃತವಾಯಿತು. ಆತನ ನಗು ತುಟಿಯ ತೊಡಿಗೆಯಾಯಿತು. ಹೃದಯ ವೇದನೆಯ ಹಾಲಾಹಲದಿಂದ ತುಂಬಿಹೋಯಿತು. ಇದಕ್ಕೆ ಕಾರಣ ಲಕ್ಷ್ಮೀದೇವಿಯ ಅಕ್ಕ ನರಸಮ್ಮ. ನರಸಮ್ಮ ಲಕ್ಷ್ಮೀದೇವಿಗಿಂತ ಆರು ವರ್ಷ ದೊಡ್ಡವಳು. ಈಗ ಆಕೆಗೆ 15 ವರ್ಷ ತುಂಬಿದೆ. ತುಂಬಿದ ಮೈಕಟ್ಟು, ಬಂಗಾರದ ಮೈಬಣ್ಣ, ವಿಶಾಲವಾದ ಕಣ್ಣುಗಳು, ಗುಚ್ಛಗುಚ್ಛವಾದ, ಆದರೆ ನೀಳವಾದ ಕೇಶರಾಶಿ. ಆಕೆಯೊಬ್ಬ ಸುರಸುಂದರಿ. ಆದರೇನು? ಆಕೆ ಯಾರಿಗೂ ಬೇಡದ ವಿಧವೆ. ಆಕೆಗೆ ಐದು ವರ್ಷ ತುಂಬಿದಾಗ ನಲವತ್ತು ವರ್ಷಗಳ ತಿಪ್ಪಾಶಾಸ್ತ್ರಿಯನ್ನು ಕೈಹಿಡಿಯಬೇಕಾಯಿತು. ಬಳ್ಳಾರಿಯ ತಿಪ್ಪಾಶಾಸ್ತ್ರಿ ಮೊದಲನೆ ಮಡದಿಯನ್ನು ಕಳೆದುಕೊಂಡು ಈ ರೂಪರಾಶಿಯನ್ನು ಎರಡನೆಯವಳಾಗಿ ಕೈ ಹಿಡಿದ. ಮದುವೆಯಾದ ಎರಡೇ ವರ್ಷಗಳಲ್ಲಿ ಈ ದುರದೃಷ್ಟಶಾಲಿಯ ತಾಳಿ ಕಿತ್ತು ಹೋಯಿತು. ತನ್ನ ಏಳನೆಯ ವರ್ಷದಲ್ಲಿ, ಈ ಪ್ರಪಂಚದಲ್ಲಿ ಇನ್ನೂ ಕಣ್ಣು ಬಿಡುವ ಮೊದಲೇ, ಅವಳು ಅನಾಥೆಯಾದಳು. ಗಂಡ ಸತ್ತನೆಂದು ಸುದ್ದಿಬಂದಾಗ ಆಕೆಗೆ ಅಳಬೇಕೆಂದೂ ತಿಳಿಯಲಿಲ್ಲ. ನರಹರಿಶಾಸ್ತ್ರಿಯದು ಹೆಂಗರುಳು. ತಂಗಿಯ ದುರ್ವಿಧಿಯನ್ನು ಕಂಡು ಆತನ ಹೃದಯ ಬಿರಿದು ಹೋಯಿತು. ಕಣ್ಣೀರು ಕೋಡಿ ಹರಿಯಿತು. ಆದರೆ ನರಸಮ್ಮ 105 ಸಂಪ್ರದಾಯಶರಣನಾದ ಆತ ತನಗಾದ ದುಃಸ್ಥಿತಿಯನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳಲಾಗದ ಆ ತಂಗಿ ದಿನದಿನಕ್ಕೂ ಹೆಚ್ಚು ಸುಂದರಿಯಾಗಿ ಬೆಳೆಯುತ್ತಿರುವುದನ್ನು ಕಂಡು ಸಂಕಟವಾಗುತ್ತಿದೆ. ಈ ಮಧ್ಯೆ ಆತನ ಮದುವೆ ಗೊತ್ತಾಗಿತ್ತು. ಚಳ್ಳಕೆರೆಯ ದೀಕ್ಷಿತರ ಮನೆಯ ಹೆಣ್ಣು ಕೈ ಹಿಡಿದವಳಾಗಿದ್ದಳು. ದೀಕ್ಷಿತರೆಂದ ಮೇಲೆ ಕೇಳಬೇಕೆ? ಆಚಾರ-ವಿಚಾರಗಳಲ್ಲಿ ಅವರು ಸಮಾಜಕ್ಕೆ ಮೇಲ್ಪಂಕ್ತಿ. ವಧುವಿನ ತಂದೆ ಯಜ್ಞೇಶ್ವರ ದೀಕ್ಷಿತರು ಸಕೇಶಿಯಾದ ವಿಧವೆಯನ್ನು ಮನೆಯಲ್ಲಿಟ್ಟುಕೊಂಡಿರುವವನಿಗೆ ಮಗಳನ್ನು ಕೊಡುವುದು ಹೇಗೆ ಎಂದು ಯೋಚಿಸುತ್ತಿದ್ದರು. ಉದಾರದೃಷ್ಟಿಯ ಅವರ ಹಿರಿಯ ಮಗ ಶ್ರೀಕಂಠ ದೀಕ್ಷಿತರು ವಿಧವೆಯು ತುಂಬ ಚಿಕ್ಕವಯಸ್ಸಿನವಳಾದುದರಿಂದ ವಿನಾಯಿತಿ ಕೊಡಬೇಕೆಂದು ಸಲಹೆ ಮಾಡಿದರು. ಆದರೆ ಧರ್ಮಶಾಸ್ತ್ರಗಳ ಎದುರಿನಲ್ಲಿ ಈಗ ಎರಡು ಮಾರ್ಗಗಳು ಉಳಿದಿವೆ. ವಿಧವೆಯ ಕೇಶ ವಿಚ್ಛೇದನ; ಅದಾಗದಿದ್ದರೆ ಅವಳನ್ನು ತ್ಯಾಗ ಮಾಡುವುದು. ಇವೆರಡರಲ್ಲಿ ಒಂದು ನಡೆಯದ ಹೊರತು ಶಾಸ್ತ್ರಿಗಳ ಮದುವೆ ಸಾಧ್ಯವೇ ಇಲ್ಲ. ಇದಲ್ಲದೆ ಈ ವಿಷಯ ಮಠದವರಿಗೆ ತಿಳಿದಲ್ಲಿ ಬಹಿಷ್ಕಾರಕ್ಕೂ ಸಿದ್ಧವಾಗಿರಬೇಕಾದೀತು. ಕಡೆಯ ಬ್ರಹ್ಮಾಸ್ತ್ರದಿಂದ ನರಹರಿಶಾಸ್ತ್ರಿಗಳು ನಡುಗಿ ಹೊದರು. ಆತ ಸುತ್ತಮುತ್ತಿನ ಹತ್ತು ಗ್ರಾಮಗಳ ಪುರೋಹಿತ. ಆ ಪೌರೋಹಿತ್ಯವೇ ಆತನ ಜೀವನಾಧಾರ, ಬಹಿಷ್ಕಾರಬಿದ್ದರೆ ತಿನ್ನುವ ಅನ್ನಕ್ಕೆ ಕಲ್ಲು. ಏನು ಮಾಡುವುದು? ಮುಂದೆ ಬಾವಿ ಹಿಂದೆ ಹುಲಿ ಎಂಬಂತಾಯಿತು, ಅವರ ಸ್ಥಿತಿ. ಎಳೆಯ ವಯಸ್ಸಿನ ತಂಗಿಯನ್ನು ವಿರೂಪಗೊಳಿಸುವುದು ಅಥವಾ ತಮ್ಮ ತಂಗಿಯ ಮದುವೆಯ ಸುದ್ದಿಯನ್ನು ಬಿಟ್ಟು ಬಿಡುವುದು; ಇವೆರಡು ಹಾಗಿರಲಿ; ಬಹಿಷ್ಕಾರ ಹಾಕಿದರೆ? ರಾಮ, ರಾಮ! ಅದೆಂದಿಗೂ ಆಗಕೂಡದು. ಹಾಗಾದರೆ ಈಗ ಏನು ಮಾಡುವುದು? ಅರಿಯದ ತಂಗಿಯನ್ನು ಮುಂಡನಕ್ಕೆ ಒಪ್ಪಿಸುವುದು ಹೇಗೆ? ಶಾಸ್ತ್ರಿಗಳು ತಮ್ಮ ಅನನುಭವಿಕ ತಲೆಯನ್ನು ತಿಕ್ಕಿ ತಿಕ್ಕಿ ಯೋಚಿಸಿದರು, ತಮಗೆ ಆಪ್ತರಾದವರ ಸಲಹೆಯನ್ನು ಕೇಳಿದರು. ಆದರೆ ಎಲ್ಲಿಂದಲೂ ಬೆಳಕಿನ ಕಿರಣ ಮೂಡಿ ಬರಲಿಲ್ಲ. ಕಡೆಗೆ ತಮ್ಮ ಮೃದುಹೃದಯವನ್ನು ಕಲ್ಲು ಮಾಡಿಕೊಂಡು ತಂಗಿಗೆ ಹೇಳಿದರು..... ಹೇಳಬಾರದುದನ್ನು, ಹೇಳಲಾರದುದನ್ನು ಹೇಳಿದರು. ಅಯ್ಯೋ ದುರದೃಷ್ಟದ ಹುಡುಗಿ! ಅವಳು ಏನು ಹೇಳಬಲ್ಲಳು? ಅತ್ತಳು, ಕರೆದಳು, ಬಾವಿಯಲ್ಲಿ ಬಿದ್ದು ಸಾಯುವೆನೆಂದು ಹೇಳಿದಳು. ಕಡೆಯಲ್ಲಿ ಶಾನುಭೋಗ ನಾರಾಯಣಪ್ಪ ಒಂದು ಸಲಹೆಯನ್ನು ಕೊಟ್ಟರು - ‘ಶಾಸ್ತ್ರಿಗಳೇ, ನರಸಮ್ಮ 106 ಮೂರು ತಲೆಮಾರು ನಮ್ಮ ಮನೆಯ ಒಂದು ಕೋಣೆಯಲ್ಲಿರಲಿ. ನಾನು ಆಕೆಯ ತಂದೆಯಿದ್ದಂತೆ. ಆಕೆಗೆ ಯಾವ ಆಪತ್ತೂ ಬರದಂತೆ ನೋಡಿಕೊಳ್ಳುತ್ತೇನೆ. ಆಕೆಯ ಹೊಟ್ಟೆ, ಬಟ್ಟೆಗಳನ್ನು ನೀವೇ ನೋಡಿಕೊಳ್ಳಿ.’ ಈ ಸಲಹೆ ಅಣ್ಣ-ತಂಗಿಯರಿಬ್ಬರಿಗೂ ಒಪ್ಪಿಗೆಯಾಯಿತು. ಶಾಸ್ತ್ರಿಗಳು ಆಕೆಯನ್ನು ತ್ಯಾಗ ಮಾಡಿದರು. ಆಕೆಯ ವಿರೂಪ ಮುಂದೆ ಹೋಯಿತು. ಈಗ ಧರ್ಮಶಾಸ್ತ್ರದ ಅಡಚಣೆ ಇಲ್ಲದೆ ಶಾಸ್ತ್ರಿಗಳ ವಿವಾಹವೂ ನೆರವೇರಿತು. ಮೇಲಿನ ಸಂಗತಿ ನಡೆದ ಮೂರು ವರ್ಷಗಳ ಮೇಲೆ ಸುಬ್ಬಣ್ಣನ ವಿವಾಹ ನಡೆಯಿತು. ಅ ಕಾಲದಲ್ಲಿ ಸುಬ್ಬಣ್ಣನವರಿಗೆ ತಮ್ಮ ಅತ್ತಿಗೆಯ ದುರಂತದ ಕಥೆ ತಿಳಿದು ಬಂತು. ಮದುವೆಯ ಸಮಾರಂಭದಲ್ಲಿ ತನ್ನ ಅತ್ತಿಗೆ ಎನಿಸಿದ ಆ ಹೆಣ್ಣು ಯಾರ ಜೊತೆಯೂ ಸೇರದೆ ದೂರದಲ್ಲಿ ನಿಂತು ಕಣ್ಣೀರು ಸುರಿಸುತ್ತಿದ್ದುದನ್ನು ಅವರು ನೋಡಿದರು. ಅವರ ಮಿದುಹೃದಯ ಮಿಡುಕಿತು. ಮದುವೆ ಮುಗಿದು ಊರಿಗೆ ಹೊರಡುವ ಮುನ್ನ ಸುಬ್ಬಣ್ಣ ಶಾನುಭೋಗರ ಮನೆಗೆ ಹೋಗಿ ನರಸಮ್ಮನನ್ನು ಕಂಡರು. ಆಕೆ ಕಣ್ಣೀರಿನ ಕೋಡಿಯನ್ನು ಹರಿಸುತ್ತ ದುಃಖವನ್ನು ತೋಡಿಕೊಂಡಳು. ಸುಬ್ಬಣ್ಣನವರ ಕಣ್ಣು ಮಳೆಗರೆಯಿತು. ಅವರು, ನರಸಮ್ಮನನ್ನು ಆದಷ್ಟು ಬೇಗ ತಮ್ಮ ಮನೆಗೆ ಕರೆಸಿಕೊಳ್ಳುವುದಾಗಿ ಹೇಳಿ ಸಮಾಧಾನ ಮಾಡಿದರು. ಆಕೆಯ ದುರದೃಷ್ಟ ಜೀವನ ಆತನ ಮೃದು ಹೃದಯದ ಕಮಲದಲ್ಲಿ ಹನಿಯಾಗಿ ನಿಂತಿತು. ನರಸಮ್ಮ ನಾರಾಯಣಪ್ಪನ ಮನೆಯಲ್ಲಿದ್ದುಕೊಂಡು ಕಣಭಿಕ್ಷೆ, ವನಭಿಕ್ಷೆಗಳಿಂದ ಹೇಗೋ ಒಪ್ಪೊತ್ತಿನ ಊಟ ಸಂಪಾದಿಸಿಕೊಳ್ಳುತ್ತಿದ್ದಳು. ಸ್ವಲ್ಪಕಾಲ ಹಾಗೆ ನಡೆಯುವಷ್ಟರಲ್ಲಿ ಆಕೆಯ ತಂಗಿ ಲಕ್ಷ್ಮೀದೇವಿ ತನ್ನ ಗಂಡನ ಮನೆ, ಮನಗಳನ್ನು ತುಂಬಿದಳು. ತನ್ನ ಅಕ್ಕ ತಿಮ್ಮಣ್ಣನಾಯ್ಕನಕೋಟೆಯಲ್ಲಿ ಅನುಭವಿಸುತ್ತಿದ್ದ ನರಕವನ್ನು ಲಕ್ಷ್ಮೀದೇವಿ ಅತ್ತೆಯ ಮುಂದೆ ಹೇಳಿಕೊಂಡು ಕಣ್ಣೀರು ಕರೆದಳು. ಲಕ್ಷ್ಮೀದೇವಿಗೆ ಅಕ್ಕನ ಮೇಲೆ ತುಂಬ ಪ್ರೀತಿ ಇತ್ತು. ಇದನ್ನು ಕಂಡ ಹನುಮಕ್ಕಮ್ಮ - ಸ್ವಭಾವದಿಂದಲೇ ಆಕೆ ದಯಾಮಯಿ - ಸೊಸೆಯನ್ನು ಸಂತೈಸಿ ‘ಅಳಬೇಡ ಮಗು, ಅವಳನ್ನು ಇಲ್ಲಿಗೆ ಕರೆಸಿಕೊಳ್ಳೋಣ. ನಾನೂ ವಯಸ್ಸಾಗಿ ಮೆತ್ತಗಾದೆ. ಅವಳು ಬಂದರೆ ಕೆಲಸಕಾರ್ಯಗಳಲ್ಲಿ ನಿನಗೆ ಸಹಾಯವಾಗುತ್ತದೆ. ಇಷ್ಟು ಜನಗಳು ಊಟ ಮಾಡುವ ಮನೆಯಲ್ಲಿ ಅವಳಿಗೆ ಒಂದು ತುತ್ತು ಅನ್ನಕ್ಕೆ ಕೊರತೆಯೆ?’ ಎಂದು ಸಮಾಧಾನಪಡಿಸಿದರು. ಮಾರನೆಯ ದಿನವೇ ಮಗನನ್ನು ಕರೆದು ‘ಸುಬ್ಬೂ, ನರಸಮ್ಮ ತಿಮ್ಮಣ್ಣನಾಯ್ಕನಕೋಟೆಯಲ್ಲಿ ಬೇರೆ ಕಡೆ ನರಸಮ್ಮ 107 ಇದ್ದುಕೊಂಡು ಕಷ್ಟಪಡುತ್ತಿದ್ದಾಳಂತೆ. ನಾವೆಲ್ಲರೂ ಇದ್ದು ಅವಳು ಅನ್ನಕ್ಕೆ ಪರದಾಡಬೇಕೆ? ಮೊದಲು ಅವಳನ್ನು ಇಲ್ಲಿಗೆ ಕರೆಸಪ್ಪ. ನಮ್ಮ ಮಗಳಿಗೇ ಈ ಗತಿ ಬಂದಿದ್ದರೆ ನಾವು ಸುಮ್ಮನಿರುತ್ತಿದ್ದೆವೆ? ಯಾರಾದರೊಬ್ಬ ಸರಿಯಾದ ಆಳನ್ನು ನೋಡಿ, ಕುದುರೆಯನ್ನು ಏರ್ಪಾಟು ಮಾಡಿ ಕಳುಹಿಸು. ಪಾಪ, ಅವಳು ಇಲ್ಲಿಗೆ ಬಂದಹೊರತು ನನಗೆ ಸಮಾಧಾನವಿಲ್ಲ’ ಎಂದು ಹೇಳಿದಳು. ಇದನ್ನು ಕೇಳುತ್ತಲೇ ಸುಬ್ಬಣ್ಣನವರಿಗೆ ತಾವು ಅತ್ತಿಗೆಗಿತ್ತ ವಾಗ್ದಾನ ನೆನಪಾಯಿತು. ಅದನ್ನು ಮರೆತುದಕ್ಕಾಗಿ ಮನಸ್ಸಿಗೆ ಬಹಳ ಕಸಿವಿಯಾಯಿತು. ಕೂಡಲೇ ಕುದುರೆಯನ್ನೂ, ಆಳನ್ನೂ ಗೊತ್ತು ಮಾಡಿ ನರಹರಿಶಾಸ್ತ್ರಿಗಳಿಗೆ ‘ಮನೆಯಲ್ಲಿ ಮಾತೃಶ್ರೀಯವರಿಗೆ ವಯಸ್ಸಾಗಿದೆ. ಏನು ಕೆಲಸ ಮಾಡಲೂ ಕೈಲಾಗುವುದಿಲ್ಲ. ಕಸ-ಮುಸುರೆ, ದನ-ಕರುಗಳು, ಅಡುಗೆ-ನೀರು ಇತ್ಯಾದಿ ಮನೆ ಕೆಲಸಗಳನ್ನೆಲ್ಲ ಸೌಭಾಗ್ಯವತಿಯೊಬ್ಬಳೇ ನೋಡಿಕೊಳ್ಳಬೇಕಾಗಿದೆ. ಇದು ಬಹಳ ಪ್ರಯಾಸಕರವಾದುದು. ಆಪ್ತರಾದ ಇನ್ನೊಬ್ಬರು ಯಾರಾದರೂ ಸಹಾಯಕ್ಕಿರುವುದು ಅತ್ಯವಶ್ಯ. ಆದ್ದರಿಂದ ನರಸಮ್ಮತ್ತಿಗೆಯವರನ್ನು ಕೂಡಲೇ ಕರೆಸಿಕೊಳ್ಳಬೇಕೆಂದು ಮಾತೃಶ್ರೀಯವರು ಅಪೇಕ್ಷಿಸುತ್ತಾರೆ. ಅವರ ಅಪ್ಪಣೆಯಂತೆ ಆಳು, ಕುದುರೆಗಳನ್ನು ಕಳುಹಿಸುತ್ತಿದ್ದೇನೆ. ದಯವಿಟ್ಟು ಕೂಡಲೇ ಅತ್ತಿಗೆಯವರನ್ನು ಕಳುಹಿಸುವುದು’ ಎಂದು ಬರೆದು ಕಳುಹಿಸಿದರು. ಭಾವಮೈದುನನಿಂದ ಬಂದ ಕಾಗದವನ್ನು ನೋಡಿ ನರಹರಿಶಾಸ್ತ್ರಿಗಳಿಗೆ ಪರಮ ಸಂತೋಷವಾಯಿತು. ಅವರ ಚಿಂತೆ ಹರಿಯಿತು. ತನ್ನ ತಂಗಿಯ ಮನೆಯಲ್ಲಿ ಅವಳ ಈ ಅಕ್ಕ ಯವ ಕೊರತೆಯೂ ಇಲ್ಲದೆ ಸುಖವಾಗಿರುತ್ತಾಳೆಂದು ಮನಸ್ಸಿಗೆ ನಿರಾಳವಾಯಿತು. ಆಕೆಯ ಭಾವನಿಂದ ಬಂದ ಕಾಗದವನ್ನು ನರಸಮ್ಮನಿಗೆ ತೋರಿಸಿ ತಳುಕಿಗೆ ಹೊರಡುವಂತೆ ಸೂಚಿಸಿದರು. ತನ್ನ ಆಜ್ಞಾತವಾಸ ಮುಗಿಯಿತೆಂದು ನರಸಮ್ಮ ಸಂತೋಷಿಸಿದಳು. ಮಾರನೆಯ ದಿನ ಬೆಳಿಗ್ಗೆ ನಸುಕಿನಲ್ಲಿಯೇ ಹೊರಟ ನರಸಮ್ಮ ಸೂರ್ಯ ಮುಳುಗುವ ವೇಳೆಗೆ ತಳುಕಿಗೆ ಬಂದು ಸೇರಿದಳು. ಪರಸ್ಪರ ಸಮಾಗಮದಿಂದ ಎಲ್ಲರೂ ಸಂತೋಷಗೊಂಡರು. ದೊಡ್ಡಮ್ಮ ಎಂದರೆ ಅಮ್ಮನಿಗಿಂತ ದೊಡ್ಡವಳು. ನಿಜ, ನಮ್ಮ ಅಮ್ಮನಿಗಿಂತ ನಮ್ಮ ಅಮ್ಮನ ಅಕ್ಕಳಾದ ಆಕೆ ವಯಸ್ಸಿನಲ್ಲಿ ದೊಡ್ಡವಳು. ಅಷ್ಟೇ ಅಲ್ಲ, ಎಲ್ಲ ವಿಧಗಳಿಂದಲೂ ಆಕೆ ತಾಯಿಗಿಂತ ಹೆಚ್ಚಾಗಿದ್ದಳು. ತಂಗಿಯ ಹದಿಮೂರು ಬಾಣಂತನಗಳನ್ನು ಮಾಡಿದುದು ಆಕೆಯೇ. ಈ ಹದಿಮೂರರಲ್ಲಿ ಮೂರನೆಯವನಾಗಿ ಹುಟ್ಟಿದ್ದ ನರಸಿಂಗನೆಂಬ ಮಗು ಹುಟ್ಟಿದ ಒಂದು ವರ್ಷದಲ್ಲಿ 108 ಮೂರು ತಲೆಮಾರು ತೀರಿಹೋದ. ಅವನನ್ನು ಬಿಟ್ಟು, ಉಳಿದ ಹನ್ನೆರಡು ಮಕ್ಕಳನ್ನು ಚಿಕ್ಕಂದಿನಲ್ಲಿ ಸಾಕಿದವಳು ಆಕೆಯೇ. ನಮ್ಮ ಸ್ನಾನಪಾನಗಳನ್ನು, ಹೊತ್ತಿಗೆ ಸರಿಯಾಗಿ ಊಟತಿಂಡಿಗ ಳನ್ನು ನೋಡಿಕೊಳ್ಳುತ್ತಿದ್ದುದು, ಆಕೆಯೇ. ನಿತ್ಯವೂ ನಮ್ಮೆಲ್ಲರ ಒಂದು ಹೊರೆ ಬಟ್ಟೆಯನ್ನು ಒಗೆಯುತ್ತಿದ್ದುದು ಆಕೆಯೇ. ದಿನದಿನವೂ ಮಡಿಯುಟ್ಟು ತಂಗಿಗೆ ಅಡಿಗೆಯಲ್ಲಿ, ಬಡಿಸುವುದರಲ್ಲಿ ಸಹಾಯಕಳಾಗಿದ್ದವಳು ಆಕೆಯೇ. ಇನ್ನೂರು ಗಜದಷ್ಟು ದೂರದ ಭಾವಿಯಿಂದ ಸಿಹಿ ನೀರನ್ನು ಹೊತ್ತು ತರುತ್ತಿದ್ದವಳು ಆಕೆಯೇ. ಬೆಳಿಗ್ಗೆ, ಸಂಜೆ ಎರಡು ಹೊತ್ತು ಹಸು, ಎಮ್ಮೆಗಳ ಹಾಲು ಹಿಂಡುತ್ತಿದ್ದವಳು ಆಕೆಯೆ. ಅವುಗಳ ಹುಲ್ಲು, ನೀರು, ತೌಡು, ಮಡ್ಡಿ, ಮುಸುರೆ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದವಳೂ ಆಕೆಯೇ. ಒಂದು ಕಾಲಕ್ಕೆ ನಮ್ಮ ಮನೆಯಲ್ಲಿ ನಾಲ್ಕು ಹಸುಗಳಿದ್ದುವು. ಅವುಗಳಲ್ಲಿ ‘ಬೋರಪ್ಪನ ಹಟ್ಟಿ ಆಕಳು’ ಒಂದು. ಅದು ಮಹಾ ಸಿಡುಕ. ಯಾರನ್ನೂ ಹತ್ತಿರ ಬರಗೊಡುತ್ತಿರಲಿಲ್ಲ. ಸಿರುಗುಟ್ಟಿಕೊಂಡು ಹಾಯುವುದಕ್ಕೆ ಬರುತ್ತಿತ್ತು. ಯಜಮಾನಿಯು ಕೂಡ ಅದರ ಸಮೀಪಕ್ಕೆ ಹೋಗಲು ಹೆದರುತ್ತಿದ್ದಳು. ಅದರ ಕೊರಳಲ್ಲಿ ಕಣ್ಣಿ ಇಲ್ಲದಿದ್ದಾಗ ಹುಡುಗರಾರೂ ಅದರ ಹತ್ತಿರ, ಹತ್ತಿರ ಸುಳಿಯುತ್ತಿರಲಿಲ್ಲ. ಅದನ್ನು ಕಂಡರೆ ಅಷ್ಟು ಹೆದರಿಕೆ. ಆದರೆ ದೊಡ್ಡಮ್ಮ ಮಾತ್ರ ಅದನ್ನು ಕಟ್ಟುವುದು, ಬಿಡುವುದು, ಹುಲ್ಲು ಹಾಕುವುದು, ಹಾಲು ಕರೆಯುವುದು - ಇವುಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದಳು. ಅದೇನಾದರೂ ಸ್ವಲ್ಪ ತಂಟೆ ಮಾಡಿದರೆ ‘ಏನೇ ಹುಚ್ಚು ಮುಂಡಚ್ಚಿ, ತಂಟೆ ಮಾಡುತ್ತೀಯಾ? ಸುಮ್ಮಗೆ ನಿಂತುಕೋತಿಯೋ ಅಥವಾ ಹೊಡೆತಗಳು ಬೇಕೋ’ ಎಂದು ಗದರಿಕೊಂಡರೆ ತೀರಿತು. ಕುರಿಮರಿಯಂತೆ ಗಲಾಟೆಯಿಲ್ಲದೆ ಸುಮ್ಮನೆ ನಿಲ್ಲುತ್ತಿತ್ತು. ಆಕೆಯ ಮಾತಿನಲ್ಲಿ ಅದೇನು ಮೋಡಿ ಇತ್ತೋ! ಮನೆಯವರನ್ನೆಲ್ಲ ಹೇಗೆ ಪ್ರೀತಿಯಿಂದ ಮಾತನಾಡಿಸುತ್ತಿದ್ದಳೋ. ಹಾಗೆಯೇ ದನಗಳನ್ನು ಆಕೆ, ಅದೇ ಪ್ರೀತಿಯಿಂದಲೆ ಮಾತನಾಡಿಸುತ್ತಿದ್ದಳು. ಅವುಗಳಿಗೆ ಆಕೆಯ ಹೃದಯವೂ, ಆಕೆಗೆ ಅವುಗಳ ಹೃದಯವೂ ಅರ್ಥವಾಗುತ್ತಿತ್ತೋ ಏನೋ! ನರಸಮ್ಮ ಹೆಚ್ಚು ಮಾತಿನವಳಲ್ಲ, ಅಷ್ಟೇನೂ ಜಾಣೆಯೂ ಅಲ್ಲ; ಆದರೆ ಆಕೆಯದು ಸರಳ ಸ್ವಭಾವ, ವಿಶ್ವಾಸದ ಅಂತಃಕರಣ, ಬೇಸರವಿಲ್ಲದೆ ಅಹರ್ನಿಶಿ ಮನಃಪೂರ್ವಕವಾಗಿ ದುಡಿಯುವ ಸ್ವಭಾವ-ಇವುಗಳ ಪರಿಣಾಮವಾಗಿ, ಆಕೆ ಮನೆಯಲ್ಲಿ ಎಲ್ಲರಿಗೂ ಅಚ್ಚು ಮೆಚ್ಚಿನವಳಾಗಿದ್ದಳು, ಕಿರಿಯರಿಗೆಲ್ಲ ಪ್ರೀತಿಯ ತಾಯಾಗಿ ಇದ್ದಳು. ಇಡೀ ಜೀವಮಾನವೆಲ್ಲ ಆಕೆ ಮನೆಯವರೊಡನೆ ಸಮರಸವಾಗಿ ನರಸಮ್ಮ 109 ಬೆರೆತಳು. ಹಾಗೆಯೇ ಆಕೆಯ ಬಾಳು ಪರೋಪಕಾರದಲ್ಲಿ ಸವೆದುಹೋಯಿತು. ಬಾಲ್ಯದಲ್ಲಿ ಮಕ್ಕಳಿಗೆಲ್ಲ ತಾಯಿಗಿಂತಲೂ ಆಕೆಯೇ ಸಮೀಪದವಳಾಗಿದ್ದಳು. ಎಷ್ಟು ಕಾಡಿದರೂ ಆಕೆಗೆ ಕೋಪ ಬರುತ್ತಿರಲಿಲ್ಲ. ಮೈದುನನೆದುರಿಗೆ ಎಂದೂ ಸರಿಸಮವಾಗಿ ನಿಂತು ಮಾತನಾಡಲಿಲ್ಲ. ಅನಿವಾರ್ಯವಾಗಿ ಮಾತನಾಡಬೇಕಾದಾಗ ಕೇಳಿಸಿಯೂ ಕೇಳಿಸದಷ್ಟು ಮೆದು. ತಂಗಿಯ ಮೇಲಂತೂ ಜೀವ, ‘ಲಕ್ಷ್ಮೀದೇವ, ಲಕ್ಷ್ಮೀದೇವ’ ಎಂದು ಬಹು ಪ್ರೀತಿಯಿಂದ ಕೂಡಿದ ಸಂಭೋಧನೆ. ಹನುಮಕ್ಕಮ್ಮನವರಿಗೆ ಈ ಮೂಗು ಪ್ರಾಣಿಯನ್ನು ಕಂಡು ಅಪಾರವಾದ ಮಮತೆ. ಅನುಕಂಪ. ರಾತ್ರಿಯ ಫಲಾಹಾರವನ್ನು, ಯಾವಾಗಲಾದರೂ ತಿಂಡಿ-ತೀರ್ಥಗಳನ್ನು ತಮ್ಮ ಕಣ್ಣೆದುರಿಗೆ ಕೂಡಿಸಿಕೊಂಡು ಬಲವಂತದಿಂದ ತಿನ್ನಿಸುವರು; ಬಟ್ಟೆ- ಬರೆಗಳಿಗೆ ಕೊರತೆಯಿಲ್ಲದಂತೆ ನೋಡಿಕೊಳ್ಳುವರು. ಒಟ್ಟಿನ ಮೇಲೆ ಆಕೆಯ ಜೀವನದಲ್ಲಿ ಕುಂಕುಮಭಾಗ್ಯವೊಂದು ಇಲ್ಲವಾಯಿತು. ಮತ್ತಾವ ಕೊರತೆಯೂ ಇಲ್ಲದಂತೆ, ಆಕೆಯ ಬಾಳನ್ನು ಸುಲಲಿತವಾಗಿ ಸಾಗುವಂತೆ ಮನೆಯವರೆಲ್ಲರೂ ಪ್ರಯತ್ನಿಸುತ್ತಿದ್ದರು. * * * * 110 ಮೂರು ತಲೆಮಾರು 6. ಪುತ್ರೋತ್ಸವ ಲಕ್ಷ್ಮೀದೇವಮ್ಮ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡನ ಮನೆ- ಮನಗಳನ್ನು ತುಂಬಿದಳು. ಸುಬ್ಬಣ್ಣನಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸು. ಪರಸ್ಪರ ಪ್ರೇಮದಿಂದ, ಸದಾ ಹಸನ್ಮುಖಿಗಳಾಗಿ ಮನೆಯಲ್ಲಿ ಓಡಾಡಿಕೊಂಡಿದ್ದ ಈ ಚಕ್ರವಾಕ ಪಕ್ಷಿಗಳನ್ನು ಕಂಡು ಹನುಮಕ್ಕಮ್ಮನ ಸಂತೋಷಕ್ಕೆ ಪಾರವೇ ಇಲ್ಲ, ಸೊಸೆ ಮನೆಗೆ ಬಂದ ಮೇಲೆ ಅತ್ತೆಯ ಮನದಲ್ಲಿ ಮೂಡಿದ ಒಂದೇ ಒಂದು ದೊಡ್ಡ ಆಸೆ ಎಂದರೆ ತನ್ನ ವಂಶದಲ್ಲಿ ತನ್ನ ವಂಶದ ಹೊಸ ಕುಡಿಯೊಂದು ಹೊರಹೊಮ್ಮಿದುದನ್ನು ಕಾಣಬೇಕು! ದೇವರ ಕೃಪಾಕಟಾಕ್ಷವಿದ್ದರೆ ಅದೇನೂ ಮಹತ್ತಾದುದಲ್ಲ. ಹನುಮಕ್ಕ ತನ್ನ ಮನೆದೇವರಾದ ತಿರುಪತಿಯ ತಿಮ್ಮಪ್ಪನಿಗೆ ಹರಕೆ ಹೊತ್ತಳು. ಹೊಸಹಳ್ಳಿಯ ಹನುಮಪ್ಪನ ಗುಡಿಗೆ ಮಗ-ಸೊಸೆಯರನ್ನು ಕರೆದೊಯ್ದು ಹೂವಿನ ಪಲ್ಲಕ್ಕಿಯ ಸೇವೆ ಮಾಡಿಸಿದಳು; ಊರ ಮುಂದಿನ ದೇವಸ್ಥಾನದಲ್ಲಿದ್ದ ಶಿವಲಿಂಗಕ್ಕೆ ಕುಂಭಾಭಿಷೇಕ ಮಾಡಿಸಿದಳು; ಚನ್ನಕೇಶವಸ್ವಾಮಿಗೆ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸುವುದಾಗಿ ಹರಸಿಕೊಂಡಳು; ಸತ್ಯನಾರಾಯಣನ ವ್ರತವನ್ನು ಮಾಡಿಸಿದಳು. ಈ ಹರಕೆಗಳಲ್ಲಿ ಯಾವ ದೇವರ ಕೃಪೆ ಕಣ್ತೆರೆಯಿತೋ! ಆಕೆಯ ಕನಸು ಬಹುಬೇಗ ನನಸಾಯಿತು. ಲಕ್ಷ್ಮೀದೇವಮ್ಮ ಮನೆ ತುಂಬಿ ಎರಡು ವರ್ಷ ತುಂಬುವುದರೊಳಗೆ ನವಮಾಸ ತುಂಬಿತು. ಕ್ರಿ.ಶ 1855ನೆಯ ಇಸವಿ ಅಕ್ಟೋಬರ್ ಒಂದನೆಯ ತಾರೀಕು ಆಕೆ ಚೊಚ್ಚಲ ಪುತ್ರರತ್ನವನ್ನು ಹೆತ್ತಳು. ಇದರಿಂದ ಹನುಮಕ್ಕಮ್ಮನಿಗಾದ ಸಂತೋಷಕ್ಕೆ ಕೊನೆ ಮೊದಲಿಲ್ಲ. ಊರಿನ ಮುತ್ತೈದೆಯರಿಗೆಲ್ಲ ಆಹ್ವಾನ ಹೋಯಿತು. ಮುಪ್ಪಿನ ಮುತ್ತೈದೆ ಶಾನುಭೋಗರ ಸುಬ್ಬಮ್ಮ ಮನೆಯಿಂದ ಮನೆಗೆ ಹೋಗಿ, ಅರಿಶಿನ, ಕುಂಕುಮವಿತ್ತು ಮುತ್ತೈದೆಯರನ್ನೆಲ್ಲ ಹೆರಿಗೆಯ ಮನೆಗೆ ಕರೆತಂದಳು. ತೆಂಗಿನಕಾಯಿ ತಾಂಬೂಲಗಳೊಡನೆ, ಬೊಗಸೆ, ಬೊಗಸೆ ಸಕ್ಕರೆಯನ್ನು ಅವರಿಗೆಲ್ಲ ಹಂಚಿದುದಾಯಿತು. ತಾಯಿಯ ಅಪ್ಪಣೆಯಂತೆ ಸುಬ್ಬಣ್ಣ ಊರಿಗೆಲ್ಲ ಯಥೇಚ್ಛವಾಗಿ ಕೊಬ್ಬರಿ ಸಕ್ಕರೆ ಹಂಚಿದ. ಮೈ ತುಂಬಿಕೊಂಡು ಮರದ ತುಂಬ ಮಲಗಿದ್ದ ಮುದ್ದು ಮಗುವನ್ನು ಮನೆಗೆ ಬಂದ ಮುತ್ತೈದೆಯರೆಲ್ಲ ಬಾಯ್ತುಂಬ ಹರಸಿ, ಪುತ್ರೋತ್ಸವ 111 ಚಿರಾಯುವಾಗೆಂದು ಹಾರೈಸಿದರು. ಅವರಲ್ಲೆಲ್ಲ ಹಿರಿಯಳಾಗಿದ್ದ ಸುಬ್ಬಮ್ಮ ಮಗುವನ್ನು ಕೈಗೆತ್ತಿಕೊಂಡು ‘ಹನುಮಕ್ಕಮ್ಮ! ನಿನ್ನ ಸೊಸೆ ಎಷ್ಟು ಪುಣ್ಯಶಾಲಿ! ಆಕೆಯ ಹೊಟ್ಟೆಯಲ್ಲಿ ಸಾಕ್ಷಾತ್ ವೆಂಕಟರಮಣಸ್ವಾಮಿಯೇ ಮಗನಾಗಿ ಹುಟ್ಟಿದ್ದಾನೆ! ಮಗು ಎಷ್ಟು ಮುದ್ದಾಗಿದೆಯಮ್ಮ! ಇದು ಕೇವಲ ಮನೆ ಮುದ್ದಿನ ಮಗುವಲ್ಲಮ್ಮ; ಊರ ಮುದ್ದಿನ ಮಗು’ ಎಂದು ಹೇಳಿ ಆ ಮಗುವನ್ನು ಲೊಚ ಲೋಚ ಮುದ್ದಿಟ್ಟಳು. ಹನುಮಕ್ಕಮ್ಮ ‘ಎಲ್ಲ ದೇವರ ದಯ, ನಿಮ್ಮಂತಹ ಹಿರಿಯರ ಆಶೀರ್ವಾದ’ ಎಂದು ಹೇಳಿ, ಪುರೋಹಿತರಾದ ನಂಜುಂಡ ಶಾಸ್ತ್ರಿಗಳನ್ನು ಕರೆಸಿ, ಮಗುವಿನ ಜಾತಕವನ್ನು ಬರೆಸಿದಳು. ಶಾಸ್ತ್ರಿಗಳು ಕುಂಡಲಿಯನ್ನು ಬರೆದು ‘ತಾಯಿ, ಹನುಮಕ್ಕಮ್ಮ, ನಿನ್ನ ಮೊಮ್ಮಗ ತುಂಬ ಅದೃಷ್ಟಶಾಲಿ. ಅವನ ಜಾತಕದಲ್ಲಿ ನಾಲ್ಕು ಗ್ರಹಗಳು ಉಚ್ಚಸ್ಥಾನದಲ್ಲಿವೆ. ಇವನು ಬೃಹಸ್ಪತಿಯಂತೆ ಬುದ್ಧಿಶಾಲಿಯಾಗುತ್ತಾನೆ, ಶ್ರೀರಾಮನಂತೆ ಕೀರ್ತಿಶಾಲಿಯಾಗುತ್ತಾನೆ, ಮಹಾನುಭಾವನೆನಿಸುತ್ತಾನೆ’ ಎಂದು ಹೇಳಿದರು. ಇದನ್ನು ಕೇಳಿ ಹಿರಿ ಹಿರಿ ಹಿಗ್ಗಿದ ಅ ಮುದುಕಿ ಪುರೋಹಿತನಿಗೆ ಕೈ ತುಂಬ ದಕ್ಷಿಣೆಯನ್ನು ನೀಡಿದಳು. ಹನ್ನೊಂದನೆಯ ದಿನ ಮಗುವಿನ ನಾಮಕರಣ ನಡೆಯಿತು. ವೆಂಕಣ್ಣಯ್ಯ ಎಂದು ಹೆಸರಿಟ್ಟರು. ಹಿರಿಯ ಮುತ್ತೈದೆ ಸುಬ್ಬಮ್ಮನ ಅಕ್ಕರೆಯ ಮಾತು ಸತ್ಯರೂಪ ತಳೆದಂತೆ ಮಗು ವೆಂಕಣ್ಣಯ್ಯ ಊರಿನವರೆಲ್ಲರ ಅಕ್ಕರೆಯ ಸಕ್ಕರೆಯಾಗಿ ಬೆಳೆದ. ವೃದ್ಧರಾಗಿ ಯಾವ ಹವ್ಯಾಸವನ್ನೂ ಹಚ್ಚಿಕೊಳ್ಳದ ಲಿಂಗಣ್ಣನವರು ದಿನದಲ್ಲಿ ಬಹುಹೊತ್ತು ಮೊಮ್ಮಗ ವೆಂಕಣ್ಣಯ್ಯನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ‘ಮೂಗಣ್ಣ ಮೂಗೊ, ಕಣ್ಣಣ್ಣ ಕಣ್ಣೋ, ಬಾಯಣ್ಣ ಬಾಯೋ’ ಎಂದು ಅಂಗಾಂಗಗಳ ಹೆಸರು ಹೇಳುತ್ತ, ಮಗು ಆಯಾ ಅಂಗಗಳನ್ನು ತೋರಿಸಿದಾಗ ಬೊಚ್ಚು ಬಾಯಿಂದ ನಕ್ಕು ನಲಿಯುವರು. ತನ್ನ ಗಂಡನ ಹೆಸರಿಟ್ಟುಕೊಂಡಿದ್ದ ಆ ಮೊಮ್ಮಗನನ್ನು ಹನುಮಕ್ಕಮ್ಮ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಆಕೆ ಆ ಮಗುವನ್ನು ‘ಪುಟ್ಟಾ’ ಎಂದು ಕರೆಯುತ್ತಿದ್ದಳು. ಆ ಮುದ್ದಿನ ಹೆಸರೇ ಬಾಲ್ಯದಲ್ಲಿ ಆತನ ಅಂಕಿತನಾಮವಾಗಿತ್ತು. ಎಲ್ಲರೂ ಅವನನ್ನು ಈ ಹೆಸರಿನಿಂದಲೇ ಕರೆಯುತ್ತಿದ್ದರು. ಈ ‘ಪುಟ್ಟಾ’ ಬೆಳೆದು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುವ ಬಾಲಕನಾದ. ತನ್ನ ತಾತನನ್ನೇ ಹೋತುಕೊಂಡಿದ್ದ ಆ ಮಗುವನ್ನು ಹನುಮಕ್ಕಮ್ಮ ಎಲ್ಲಿಲ್ಲದ ಮಮತೆಯಿಂದ, ಹಗಲಿರುಳೂ ಕಣ್ಣ ಬೊಂಬೆಯಂತೆ ನೋಡಿಕೊಳ್ಳುತ್ತಿದ್ದಳು, ಪಕ್ಕದಲ್ಲಿ ಅವನನ್ನು ಮಲಗಿಸಿಕೊಂಡು ರಾಮಾಯಣ, ಭಾರತ, ಭಾಗವತಗಳ 112 ಮೂರು ತಲೆಮಾರು ಕಥೆಗಳನ್ನು ಹೇಳುತ್ತ ನಿದ್ದೆ ಮಾಡಿಸುವಳು. ಬೆಳಿಗ್ಗೆ ಮೇಲಕ್ಕೆ ಏಳುತ್ತಲೇ ದೇವರ ಸ್ತೋತ್ರಗಳನ್ನು ಹೇಳಿಕೊಳ್ಳುತ್ತ ಸ್ನಾನ ಮಾಡಿಸಿ, ದೇವರ ಪೂಜೆಗೆ ಕೂರುತ್ತಿದ್ದ ಸುಬ್ಬಣ್ಣನವರ ಬಳಿಗೆ ಕರೆತಂದು. ಅವರ ತೊಡೆಯ ಮೇಲೆ ಕೂರಿಸುವಳು. ತಂದೆಯ ಬಳಿ ಕುಳಿತ ಆ ಮಗು ಮೈಮರೆತು ಅವರ ಪೂಜೆಯನ್ನು ನೋಡುವನು, ಮಂತ್ರಗಳನ್ನು ಕೇಳುವನು. ಅವರು ಜಪ ಮಾಡುವಾಗ ತಾನೂ ಕಣ್ಣು ಮುಚ್ಚಿ ತಂದೆಯು ಹೇಳಿಕೊಟ್ಟ ರಾಮನಾಮವನ್ನು ಜಪಿಸುತ್ತಿರುವನು. ಪೂಜೆ, ಜಪ, ಧ್ಯಾನಗಳೇ ಆ ಮಗುವಿನ ಬಾಲ್ಯದ ಆಟಗಳಾದುವು. * * * * 113 7. ಸ್ಟಾಂಪ್‍ವೆಂಡರ್ ಸುಬ್ಬಣ್ಣ ಹೆಂಡತಿ ಮನೆ ತುಂಬಿದ ಮೇಲೆ ಸುಬ್ಬಣ್ಣನ ಜೀವನದೆಶೆ ಬದಲಾಯಿತು. ಆತನ ಜವಾಬ್ದಾರಿ ಹೆಚ್ಚಿತು. ಮನೆ ತುಂಬಿದ ಲಕ್ಷ್ಮಿ ಸಂತಾನಲಕ್ಷ್ಮಿಯಾದಳು. ಹಿರಿಯ ಮಗ ಹುಟ್ಟಿದ ಮೇಲೆ ಎರಡು ವರ್ಷ ಹೆಚ್ಚೆಂದರೆ, ಮೂರು ವರ್ಷಕ್ಕೆ ಒಂದು ಮಗುವನ್ನು ಗಂಡನಿಗೆ ಕಾಣಿಕೆಯಾಗಿ ನೀಡುತ್ತ ಹೋದಳು. ಮನೆಯ ಖರ್ಚು ಹೆಚ್ಚುತ್ತ ಬಂದಿತು. ಅದನ್ನು ಹೇಗೆ ನಿಭಾಯಿಸಬೇಕು? ಏನಾದರೂ ಹೊಸ ಮಾರ್ಗ ಹುಡುಕಬೇಕು. ಇರುವ ಆದಾಯದೊಂದಿಗೆ ಅಷ್ಟಿಷ್ಟು ಹೆಚ್ಚಿಸಿಕೊಳ್ಳಬೇಕು. ತಮ್ಮಂದಿರು ಬೆಳೆದು ದೊಡ್ಡವರಾಗಿ ಶಾಲೆಗೆ ಹೋಗುತ್ತಿದ್ದಾರೆ. ತಾನಂತೂ ಹೆಚ್ಚಿಗೆ ಓದಲು ಸಾಧ್ಯವಾಗಲಿಲ್ಲ. ಅವರನ್ನಾದರೂ ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಅಭಿವೃದ್ಧಿಗೆ ತರಬೇಕು. ಹೇಗೆ? ಇದಕ್ಕೆಲ್ಲ ಹಣ ಎಲ್ಲಿಂದ ಬರಬೇಕು? ಏನು ಮಾಡಬೇಕು? ಏನಾದರೂ ಮಾಡಲೇಬೇಕು. ಅದು ನನ್ನ ಮನೋವೃತ್ತಿಗೆ ಅನುಗುಣವಾಗಿರಬೇಕು. ಆತ ಆಳವಾಗಿ ಯೋಚನೆ ಮಾಡಿದ. ತಾನು ನಡೆಸುತ್ತಿದ್ದ ವ್ಯವಹಾರದಲ್ಲಿ ಮೇಲಿಂದ ಮೇಲೆ ಬೇರೆ ಬೇರೆ ಇಲಾಖೆಗಳ ನೌಕರರ ಪರಿಚಯವಾಗಿತ್ತು. ಸ್ವಲ್ಪ ಮಟ್ಟಿಗೆ ಗೆಳೆತನವೂ ಬೆಳೆದಿತ್ತು. ಜನಗಳಿಗೆ ಅರ್ಜಿ ಬರೆದು ಕೊಡಲು ಸರ್ಕಾರದ ಸ್ಟಾಂಪುಗಳು ಬೇಕಾಗುತ್ತಿದ್ದುವು. ಸಾಲ ಪತ್ರಗಳನ್ನು ಬರೆದುಕೊಡಲು ಚಾಪಾಕಾಗದಗಳು ಬೇಕಾಗುತ್ತಿದ್ದುವು. ಅವುಗಳಿಗಾಗಿ ಜನರು ತಾಲ್ಲೂಕು ಸ್ಥಳವಾದ ಚಳ್ಳಕೆರೆಗೆ ಹೋಗಿ, ಅಲ್ಲಿಯೇ ಬಲ್ಲವರಿಂದ ಪತ್ರ ಬರೆಸಬೇಕಾಗುತ್ತಿತ್ತು. ಇದು ಹೆಚ್ಚು ಶ್ರಮ, ಹೆಚ್ಚು ಖರ್ಚು, ತಾನೇ ಏಕೆ ಒಬ್ಬ ಸ್ಟಾಂಪ್‍ವೆಂಡರ್ ಆಗಬಾರದು? ಸ್ಟಾಂಪುಗಳ ಕಮೀಷನ್ ಸಿಕ್ಕುತ್ತದೆ. ಪತ್ರ ಬರೆಯುವುದರಿಂದ ‘ಶಾಖಾಯ ಲವಣಾಯಚ’ಗಿಟ್ಟುತ್ತದೆ. ನ್ಯಾಯವಾದ ಸಂಪಾದನೆಗೆ ಇನ್ನೊಂದು ಹಾದಿಯಾಗುತ್ತದೆ. ಈ ಯೋಚನೆ ಹೊಳೆಯುತ್ತಲೇ ಆತ ಚಳ್ಳಕೆರೆಗೆ ಹೋಗಿ ಅಲ್ಲಿನ ಹೆಡ್‍ಗುಮಾಸ್ತರಾದ ಶಾಮಣ್ಣನವರನ್ನು ಆಶ್ರಯಿಸಿದ. ಆತನ ಸಹಾಯದಿಂದ ಕಾರ್ಯಸಿದ್ಧಿಯಾಯಿತು, ಸ್ಟಾಂಪ್‍ವೆಂಡರ್ ಲೈಸೆನ್ಸ್‌ ಸಿಕ್ಕಿತು. ಅಲ್ಪ ಬಂಡವಾಳದಿಂದ ಆರಂಭವಾದ ಉದ್ಯೋಗ ಕ್ರಮಕ್ರಮವಾಗಿ 114 ಮೂರು ತಲೆಮಾರು ವೃದ್ಧಿಹೊಂದುತ್ತ ಬಂದಿತು, ಆದಾಯ ಹೆಚ್ಚಿತು. ಇದರಿಂದ ಸಂಸಾರ ರಥವು ಸುಗಮವಾಗಿ ಚಲಿಸತೊಡಗಿತು. ಎರಡು ಮೂರು ವರ್ಷದೊಳಗಾಗಿ ಸುಬ್ಬಣ್ಣನ ಹೆಸರು ಸುತ್ತಮುತ್ತಿನ ಹತ್ತಾರು ಹಳ್ಳಿಗಳಲ್ಲಿ ಮನೆಯಮಾತಾಯಿತು. ಬಂದುಹೋಗುವ ಜನರ ಸಂಖ್ಯೆ ಹೆಚ್ಚಿತು. ಅನೇಕ ಗ್ರಾಮಸ್ಥರ ಮುಖ್ಯಸ್ಥರೊಡನೆ ಸ್ನೇಹ ಬೆಳೆಯಿತು. ಛತ್ರದ ಸುಬ್ಬಣ್ಣ ದೊಡ್ಡ ಸುಬ್ಬಣ್ಣನವರಾದರು. ಲಕ್ಷ್ಮೀದೇವಮ್ಮ ಗಂಡನಿಗೆ ತಕ್ಕ ಹೆಂಡತಿಯಾಗಿದ್ದಳು. ಆಗಿನ ಕಾಲಕ್ಕೆ ಆಕೆ ಒಳ್ಳೆಯ ವಿದ್ಯಾವಂತೆ, ಅದಕ್ಕೂ ಹೆಚ್ಚಾಗಿ ಗುಣವಂತೆ, ಲಕ್ಷಣವಂತೆ, ಚೆಲುವೆ, ಮಾತಿನಲ್ಲಿ ಚತುರೆ, ಹಾಡು-ಹಸೆಗಳಲ್ಲಿ ನಿಪುಣೆ, ಮನೆಗೆಲಸದಲ್ಲಿ ಚೂಟಿ, ಬಲು ಓರಣ, ಅಡಿಗೆ, ತಿಂಡಿಗಳನ್ನು ಬಹಳ ಚೊಕ್ಕವಾಗಿ, ರುಚಿಯಾಗಿ ಮಾಡುವ ಕಲೆಯನ್ನು ಆ ಚಿಕ್ಕ ವಯಸ್ಸಿನಲ್ಲಿಯೇ ಅಳವಡಿಸಿಕೊಂಡಿದ್ದಳು. ಎಲ್ಲಕ್ಕೂ ಮಿಗಿಲಾಗಿ ಸಹನಶೀಲೆ, ತುಂಬ ಅಂತಃಕರಣವುಳ್ಳವಳು. ಸಂಪನ್ನ ತಾಯಿ-ತಂದೆಗಳ ಸಂಪನ್ನ ಮಗಳಾಕೆ. ತನ್ನ ಪತಿಯ ಪರಿಸ್ಥಿತಿಯನ್ನು, ಮನೋಧರ್ಮವನ್ನು ಅರಿತು ಸಂಸಾರವನ್ನು ನಡೆಸಬಲ್ಲ ಇಂಗಿತಜ್ಞೆ. ಒಟ್ಟಿನಲ್ಲಿ ಅಂತಹ ಗುಣಸಂಪನ್ನೆಯಾದ ಹೆಂಡತಿಯನ್ನು ಪಡೆದುದು ಸುಬ್ಬಣ್ಣನ ಪೂರ್ವ ಜನ್ಮದ ಪುಣ್ಯ, ಆತನ ಇಷ್ಟದೈವವಾದ ಶ್ರೀರಾಮಚಂದ್ರನ ಕೃಪಾಕಟಾಕ್ಷ. ಗುರು-ಹಿರಿಯರ ಆಶೀರ್ವಾದ. ಆಕೆ ಮನೆಗೆ ಕಾಲಿಟ್ಟುದು ಸುಬ್ಬಣ್ಣನ ಭಾಗ್ಯಲಕ್ಷ್ಮಿ ಮನೆಗೆ ಬಂದಂತಾಯಿತು. ಅತ್ಯಲ್ಪ ಕಾಲದಲ್ಲಿಯೇ ಲಕ್ಷ್ಮೀದೇವಮ್ಮ ಮನೆಯವರಿಗೆ ಮಾತ್ರವೇ ಅಲ್ಲದೆ, ನೆರೆ-ಹೊರೆಯವರಿಗೂ ಗೌರವ-ವಿಶ್ವಾಸಗಳ ಮೂರ್ತಿಯಾದರು. ಮೈದುನನಾದ ಸೀನು (ಶ್ರೀನಿವಾಸ) ಅತ್ತಿಗೆಯನ್ನು ತಾಯಿಗಿಂತಲೂ ಹೆಚ್ಚಾಗಿ ಹೊಂದಿಕೊಂಡಿದ್ದ. ಆಕೆಗೂ ಅಷ್ಟೆ. ಅವನಲ್ಲಿ ಪುತ್ರವಾತ್ಸಲ್ಯ, ನಿತ್ಯವೂ ಅವನನ್ನು ಹಾಸಿಗೆಯಿಂದ ಎಬ್ಬಿಸಿ ಸ್ನಾನ ಮಾಡಿಸುವುದು, ಮಡಿ ಬಟ್ಟೆಗಳನ್ನುಡಿಸುವುದು, ತಲೆ ಬಾಚುವುದು, ಹೊತ್ತಿಗೆ ಸರಿಯಾಗಿ ಸ್ಲೇಟು-ಪುಸ್ತಕಗಳನ್ನು ಕೈಲಿಟ್ಟು ಶಾಲೆಗೆ ಕಳುಹಿಸುವುದು, ಅವನ ಊಟ-ತಿಂಡಿಗಳನ್ನು ಸಕಾಲದಲ್ಲಿ ಮಾಡಿಸುವುದು-ಇದೆಲ್ಲ ಆಕೆಯ ಕೆಲಸವೇ. ಇದನ್ನು ಕುರಿತು ಅತ್ತೆಗೆ ಈ ಸೊಸೆಯ ಮೇಲೆ ಎಲ್ಲಿಲ್ಲದ ಆದರ. ಲಕ್ಷ್ಮೀದೇವಮ್ಮನಿಗೆ ಇನ್ನೊಬ್ಬ ಮೈದುನನಿದ್ದ - ಚಿಕ್ಕ ಮಾವನ ಮಗ. ಅವನ ಹೆಸರೂ ಸುಬ್ಬಣ್ಣನೆಂದೇ. ಆದರೆ ಅದೇಕೋ ಅವನು ಅತ್ತಿಗೆಗೆ ಹೊಂದಿಕೊಳ್ಳಲಿಲ್ಲ. ಸ್ವಭಾವತಃ ಅವನೂ ಒಳ್ಳೆಯ ಹುಡುಗನೇ. ಅವನಿಗೂ ಅತ್ತಿಗೆಯಲ್ಲಿ ಪ್ರೀತಿಯೇ. ಆದರೆ ಸೀನಯ್ಯನಿಗಿದ್ದಷ್ಟು ಸಲಿಗೆ ಇರಲಿಲ್ಲ. ಅವನದು ಸ್ವಲ್ಪ ಸಂಕುಚಿತ ಸ್ವಭಾವ. ಅಲ್ಲದೆ ಅವನ ತಾಯಿ ಸ್ವಲ್ಪ ಧೂರ್ತಳು. ಸಂಕುಚಿತ ಸ್ಟಾಂಪ್‍ವೆಂಡರ್ ಸುಬ್ಬಣ್ಣ 115 ಬುದ್ಧಿಯವಳು. ಬಹುಶಃ ಆಕೆಯ ಪ್ರೇರಣೆಯಿಂದ ಈ ಹುಡುಗ ಅತ್ತಿಗೆಗೆ ಹೊಂದಿಕೊಳ್ಳಲಿಲ್ಲವೇನೋ! ಲಕ್ಷ್ಮೀದೇವಮ್ಮನಲ್ಲಿ ಭಿನ್ನ ಭಾವನೆಯೇನೂ ಇರಲಿಲ್ಲ. ಇಬ್ಬರು. ಮೈದುನರನ್ನು ಎರಡು ಕಣ್ಣುಗಳಂತೆ ನೋಡಿಕೊಳ್ಳುತ್ತಿದ್ದರು. ಸುಬ್ಬಣ್ಣನೂ ಜೀವನಪರ್ಯಂತ ಅತ್ತಿಗೆಯಲ್ಲಿ ಗೌರವ, ಪೂಜ್ಯಭಾವನೆ ಇಟ್ಟುಕೊಂಡಿದ್ದ. ಸುಬ್ಬಣ್ಣ ಸ್ವಭಾವದಿಂದಲೇ ಉತ್ಸಾಹಶಾಲಿ, ರಸಿಕ, ದೈವಭಕ್ತ, ಪ್ರತಿದಿನವೂ ತನ್ನ ತಂದೆಯ ಬುದ್ಧಿವಾದದಂತೆ ಸ್ನಾನ, ಸಂಧ್ಯೆ, ಪಾರಾಯಣ, ದೇವರ ಪೂಜೆಗಳಾಗದ ಹೊರತು ಬಾಯಲ್ಲಿ ನೀರು ಹಾಕುತ್ತಿರಲಿಲ್ಲ. ತಂದೆ ಕಡೆಗಾಲದಲ್ಲಿ ನೀಡಿದ್ದ ಭರವಸೆ ಆತನ ಹೃದಯದಲ್ಲಿ ಮನೆ ಮಾಡಿಕೊಂಡಿತ್ತು. ತನ್ನ ಮೇಲೆ ಶ್ರೀರಾಮಚಂದ್ರ ಪ್ರಭುವಿನ ಕೃಪೆ ಇದೆಯೆಂಬ ಧೈರ್ಯ ದೃಢವಾಗಿತ್ತು. ಹೆಂಡತಿ ಮನೆಗೆ ಬಂದ ಮೇಲೆ ಆತನ ಉತ್ಸಾಹ ಇಮ್ಮಡಿಸಿತು. ಆಕೆ ನಿಜವಾಗಿಯೂ ತನ್ನ ಭಾಗದ ಲಕ್ಷ್ಮೀದೇವಿ ಎಂಬ ಭಾವನೆ ಬಲಿಯಿತು. ಲಗ್ನವಾದಂದಿನಿಂದ ತನ್ನ ಸಂಪಾದನೆ ಹೆಚ್ಚಿ ಈಗ ಅಶನ-ವಸನಗಳಿಗೆ ಯಾವ ತಾಪತ್ರಯವೂ ಇಲ್ಲದಂತೆ ನಡೆಯುವಂತಾಯ್ತು. ಬಂದ ಅತಿಥಿ ಅಭ್ಯಾಗತರಿಗೂ ಸಂತೋಷದಿಂದ ಆತಿಥ್ಯ ನಡೆಸುವಂತಾಯಿತು. ಮನಸ್ಸಿಗೆ ಸಂಪೂರ್ಣ ಸಮಾಧಾನವಾಯಿತು. ದಿನದಿನಕ್ಕೂ ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ಬರುತ್ತಿತ್ತು. ಹಿಂದೆ ತನ್ನ ತಂದೆ ನಡೆಸುತ್ತಿದ್ದಂತೆ ತಾವೂ ನವರಾತ್ರಿಯಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಶ್ರೀರಾಮ ಪಟ್ಟಾಭಿಷೇಕವನ್ನು ನಡೆಸಬೇಕೆಂಬ ಮನೋರಥ ಗೋಚರವಾಯಿತು. ಚಳ್ಳಕೆರೆ ತಾಲ್ಲೂಕಿನ ಅಮಲ್ದಾರ್ ಗುಂಡಪ್ಪನವರು ನಿಷ್ಠರಾದ ದೈವಭಕ್ತರೆಂದು ಹೆಸರಾಗಿದ್ದವರು. ದಿನವೂ ಬೆಳಿಗ್ಗೆ ಸ್ನಾನ, ಸಂಧ್ಯಾ ಪಾರಾಯಣಗಳನ್ನು ಮುಗಿಸದೆ, ಅವರು ಲೌಕಿಕ ಪ್ರಪಂಚಕ್ಕೆ ಕಾಲಿಡುತ್ತಿರಲಿಲ್ಲ. ತಳುಕಿನ ಮೊಕ್ಕಾಂಗೆ ಬಂದಾಗ ಅವರು ಬಂಗಲೆಯಲ್ಲಿ ಬಿಡಾರ ಮಾಡಿದರೂ ಸ್ನಾನ ಆಹ್ನಿಕಗಳಿಗೆ ಮಾತ್ರ ಸುಬ್ಬಣ್ಣನವರ ಮನೆಗೆ ಬರುತ್ತಿದ್ದರು. ಹೀಗಿರಲು ಒಮ್ಮೆ ಅವರು ತಳುಕಿನಿಂದ ಸುಮಾರು ಮೂರು ಮೈಲಿ ದೂರದಲ್ಲಿದ್ದ ಹಳ್ಳಿಯೊಂದರಲ್ಲಿ ಮೊಕ್ಕಾಂ ಮಾಡಿದರು. ಚಾವಡಿಯಲ್ಲಿ ಕುಳಿತು ಲೆಕ್ಕ ಪತ್ರಗಳನ್ನು ನೋಡುತ್ತಿದ್ದಾಗ, ತಳುಕಿನ ಛತ್ರಕ್ಕೆ ಸಂಬಂಧಿಸಿದ ಯಾವುದೋ ಒಂದು ದಾಖಲೆ ಬೇಕಾಯಿತು. ಸುಬ್ಬಣ್ಣನವರನ್ನು ತಕ್ಷಣ ಕರೆದುಕೊಂಡು ಬರುವಂತೆ ತಳವಾರನನ್ನಟ್ಟಿದರು. ಅವನು ತಳುಕಿಗೆ ಬಂದಾಗ ಸುಬ್ಬಣ್ಣನವರು ಪಾರಾಯಣವನ್ನು ಮಾಡುತ್ತಿದ್ದರು. ಅದು ಮುಗಿಯುವವರೆಗೆ ಅವರು ಮಾತನಾಡುತ್ತಿರಲಿಲ್ಲ. ಆದ್ದರಿಂದ ಅದು ಮುಗಿಯುವವರೆಗೆ ತಳವಾರ ಕಾದಿರಬೇಕಾಯಿತು. ದೇವರ ಮನೆಯಿಂದ 116 ಮೂರು ತಲೆಮಾರು ಹೊರಬಂದ ಸುಬ್ಬಣ್ಣನವರು ಅಮಲ್ದಾರರ ಅಪ್ಪಣೆಯನ್ನು ಕೇಳುತ್ತಲೇ ತಳವಾರನೊಡನೆ ಕೋಡಿಹಳ್ಳಿಯ ಮೊಕ್ಕಾಂಗೆ ಧಾವಿಸಿದರು. ಅವರು ಬರುವುದರಲ್ಲಿ ವಿಳಂಬವಾದುದರಿಂದ ಅಮಲ್ದಾರರಿಗೆ ಕೋಪ ಬಂದಿತ್ತು. ಆದ್ದರಿಂದ ಸುಬ್ಬಣ್ಣನವರು ‘ನಮಸ್ಕಾರ ಸ್ವಾಮಿ’ ಎಂದು ಹೇಳಿದಾಗ ಅಮಲ್ದಾರರು ಅದನ್ನು ಕೇಳಿಯೂ ಕೇಳದವರಂತೆ ತಮ್ಮ ಬರವಣಿಗೆಯಲ್ಲಿ ಮಗ್ನರಾಗಿದ್ದರು. ಸುಬ್ಬಣ್ಣನವರು ತಮ್ಮ ಮಾತು ಕೇಳಿಸಿತೊ ಇಲ್ಲವೋ ಎಂದುಕೊಂಡು ಮತ್ತೊಮ್ಮೆ ‘ನಮಸ್ಕಾರ ಸ್ವಾಮಿ’ ಎಂದು ಘಟ್ಟಿಯಾಗಿ ಹೇಳಿದರು. ಅಮಲ್ದಾರರು ಒಮ್ಮೆ ತಲೆ ಎತ್ತಿ ನೋಡಿ ಮತ್ತೆ ತಮ್ಮ ಬರವಣಿಗೆಯ ಕೆಲಸದಲ್ಲಿ ಮಗ್ನರಾದರು. ಪ್ರತಿ ನಮಸ್ಕಾರ ಹೇಳುವಷ್ಟು ಕೂಡ ಅವರಿಗೆ ತಾಳ್ಮೆ ಇರಲಿಲ್ಲ. ಇದರಿಂದ ಸುಬ್ಬಣ್ಣನವರ ಆತ್ಮಗೌರವಕ್ಕೆ ಕಿಚ್ಚಿಟ್ಟಂತಾಯಿತು. ಸ್ವಾಭಿಮಾನಿಗಳಾದ ಅವರಿಗೆ ಇದನ್ನು ಸಹಿಸಲಾಗಲಿಲ್ಲ. ಅವರು ಅಮಲ್ದಾರರ ಹತ್ತಿರಕ್ಕೆ ಬಂದು ‘ಏನು ಸ್ವಾಮಿ, ಗುಂಡಪ್ಪನವರೆ, ಏನೋ ಹೇಳಿ ಕಳುಹಿಸಿದಿರಂತಲ್ಲಾ’ ಎಂದು ಕೇಳಿದರು. ಅಧಿಕಾರ, ದರ್ಪದಿಂದ ಕುರುಡರಾಗಿದ್ದ ಅಮಲ್ದಾರರು ‘ಏನು ಸುಬ್ಬಣ್ಣ, ನಾವು ಹೇಳಿ ಕಳುಹಿಸಿ ಯಾವ ಕಾಲವಾಯಿತು? ನಿನಗೋಸ್ಕರ ನಾವು ಎಲ್ಲ ಕೆಲಸಗಳನ್ನು ಬಿಟ್ಟು ಕಾದು ಕೊಂಡಿರಬೇಕೋ’ ಎಂದರು. ಸುಬ್ಬಣ್ಣನವರು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ. ಅಮಲ್ದಾರರ ಮೇಜಿನ ಮೇಲಿದ್ದ ಬಿಳಿಯ ಕಾಗದವನ್ನೂ, ಲೇಖಣಿಯನ್ನೂ ಎತ್ತಿಕೊಂಡು, ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಬರೆದು ಅಮಲ್ದಾರರ ಮೇಜಿನ ಮೇಲಿಟ್ಟರು. ಇದನ್ನು ಕಂಡು ಅಮಲ್ದಾರರು ಆಶ್ಚರ್ಯಗೊಂಡುದು ಮಾತ್ರವೇ ಅಲ್ಲ, ತಮ್ಮ ನಡವಳಿಕೆಗಾಗಿ ಅವರು ಪಶ್ಚಾತ್ತಾಪಪಟ್ಟರು. ಅವರು ಸುಬ್ಬಣ್ಣನವರನ್ನು ಕುರಿತು, ಅವರನ್ನು ಸಾಂತ್ವನಗೊಳಿಸುವ ಧ್ವನಿಯಲ್ಲಿ ‘ಇದೇನು ಸುಬ್ಬಣ್ಣನವರೇ ನೀವು ಮಾಡುತ್ತಿರುವುದು? ಇಷ್ಟು ಸಣ್ಣ ವಿಚಾರಕ್ಕಾಗಿ ಕೆಲಸಕ್ಕೆ ರಾಜೀನಾಮೆ ಕೊಡುವುದೆ? ನಿಮ್ಮ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ’ ಎಂದರು. ಆಗ ಸುಬ್ಬಣ್ಣನವರು ‘ಕ್ಷಮಿಸಿ ಸ್ವಾಮಿ, ನಾನು ಮಾಡಿದ ತಪ್ಪು ನನಗೀಗ ಅರಿವಾಗಿದೆ. ಗೇಣುಹೊಟ್ಟೆಗಾಗಿ ಶ್ರೀರಾಮನಿಗೆ ಮುಗಿಯಬೇಕಾದ ತನ್ನ ಕೈಯನ್ನು ಮಾನವಮಾತ್ರನಿಗೆ ಮುಗಿದೆ. ಈ ನನ್ನ ತಪ್ಪಿಗಾಗಿ ನನ್ನ ಸ್ವಾಮಿ ನನಗೆ ಸರಿಯಾದ ಪಾಠ ಕಲಿಸಿದ್ದಾನೆ. ಇದಕ್ಕೆ ಕೇವಲ ನೀವು ಒಂದು ನಿಮಿತ್ತ ಮಾತ್ರ’ ಎಂದರು. ಸುಬ್ಬಣ್ಣನವರು ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಲು ಗುಂಡಪ್ಪನವರು ಸಮರ್ಥರಾದರು. ಸಾತ್ವಿಕರಾದ ಆ ದೈವಭಕ್ತರನ್ನು ನೋಯಿಸಿದುದಕ್ಕಾಗಿ ಸ್ಟಾಂಪ್‍ವೆಂಟರ್ ಸುಬ್ಬಣ್ಣ 117 ಗುಂಡಪ್ಪನವರು ವ್ಯಥೆಪಟ್ಟರು. ಸುಬ್ಬಣ್ಣನವರು ತಂದೆ ಶೇಕದಾರರರಾಗಿದ್ದುದನ್ನು ಕಂಡವರು. ತಾನೂ ಕೆಲ ಕಾಲ ಶೇಕದಾರನಾಗಬೇಕೆಂಬುದು ಆತನ ಬಯಕೆಯಾಗಿತ್ತು. ತನಗೀಗ ಸಾಕಷ್ಟು ವಯಸ್ಸಾಗಿದೆ. ರೆವಿನ್ಯೂ ಬಾಬಿನಲ್ಲಿ ಸಾಕಷ್ಟು ಅನುಭವವಾಗಿದೆ. ಆ ಬಾಬಿನಲ್ಲಿ ತಾನು ಬರೆದುಕೊಟ್ಟ ಅರ್ಜಿಗಳೆಲ್ಲ ಸಫಲವಾಗಿವೆ. ಹುಡುಗನಾಗಿದ್ದಾಗ ತಾಲ್ಲೂಕು ಕಛೇರಿಯಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಹೆಡ್ ಗುಮಾಸ್ತರಾಗಿದ್ದ ಶಾಮಣ್ಣನವರು ಶಿರಸ್ತೇದಾರ್ ಆಗಿದ್ದಾರೆ. ದೊಡ್ಡ ಅಧಿಕಾರಿಗಳಾಗಿರುವ ಅವರು ಮನಸ್ಸು ಮಾಡಿದರೆ ನನಗೊಂದು ಶೇಕದಾರಿ ಕೆಲಸವನ್ನು ಕೊಡಿಸಲಾರರೆ? ಶಾನುಭೋಗ, ಪಟೇಲರ ಲೆಕ್ಕ ಪತ್ರಗಳನ್ನೆಲ್ಲ ಬರೆದು ಬರೆದು ಕರತಲಾಮಲಕವಾಗಿದೆ. ಅವುಗಳನ್ನು ಪರಿಶೀಲಿಸಬಲ್ಲ ಸಾಮಥ್ರ್ಯ ನನಗಿದೆ. ಒಟ್ಟಿನಲ್ಲಿ ಶೇಕದಾರಿಕೆ ಎಂಬುದಕ್ಕೆ ಅಗತ್ಯವಾದ ಯೋಗ್ಯತೆ ಎಲ್ಲವೂ ನನಗಿದೆ. ಏಕೆ ಪ್ರಯತ್ನ ಮಾಡಬಾರದು- ಹೀಗೆಂದುಕೊಂಡು ಜಿಲ್ಲೆಯ ಧಣಿಗೆ ಒಂದು ಅರ್ಜಿಯನ್ನು ಹಾಕಿಕೊಂಡರು. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ತಾಲ್ಲೂಕು ಮಟ್ಟದಿಂದ ಹಿಡಿದು ಮೇಲ್ಪಟ್ಟ ಅಧಿಕಾರಿಗಳೆಲ್ಲ ಬ್ರಾಹ್ಮಣರು, ಮುಸಲ್ಮಾನರು ಅಥವಾ ಕ್ರಿಶ್ಚಿಯನ್ನರು. ಆಗಿನ್ನೂ ಕೆಳಗಿನವರನ್ನು ಮೇಲ್ಕಕೆತ್ತುವ ಯತ್ನ ನಡೆದಿರಲಿಲ್ಲ. ಯೋಗ್ಯತೆಗೆ ಪುರಸ್ಕಾರವಿತ್ತು. ಬೇರೆ ಜಾತಿಯವರೆಲ್ಲ ವ್ಯಾಪಾರ, ವ್ಯವಸಾಯಗಳನ್ನು ತಮ್ಮ ಕಸುಬುಗಳಾಗಿ ಮಾಡಿಕೊಂಡಿದ್ದರು. ಸರ್ಕಾರದ ಕೆಲಸಕ್ಕೆ ಅಪೇಕ್ಷೆಯಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಸುಬ್ಬಣ್ಣನ ಅರ್ಜಿ ಅಮಲ್ದಾರರಿಗೆ ಇಳಿದು ಬಂತು. ಶಿರಸ್ತೇದಾರರಾಗಿದ್ದ ಶಾಮಣ್ಣನವರು ಅದನ್ನು ಬಲವಾಗಿ ಶಿಫಾರಸ್ಸು ಮಾಡಿದರು. ತಂದೆ ವೆಂಕಣ್ಣಯ್ಯನವರು ದಕ್ಷರು, ನಿಸ್ಪೃಹರು, ದೀರ್ಘಕಾಲ ಸರ್ಕಾರಕ್ಕೆ ಸೇವೆ ಮಾಡಿದವರು. ಅವರ ಮಗ ಸುಬ್ಬಣ್ಣ ಯೋಗ್ಯನಾದವನು, ಒಳ್ಳೆಯ ಬರಹಗಾರ, ರೆವಿನ್ಯೂ ಇಲಾಖೆಯ ಲೆಕ್ಕಪತ್ರಗಳನ್ನು ಚೆನ್ನಾಗಿ ಬಲ್ಲವನು. ಆದ್ದರಿಂದ ಶೇಕದಾರನಾಗಲು ಸರ್ವವಿಧದಿಂದಲೂ ಯೋಗ್ಯನಾದವನು - ಎಂಬ ಶಿಫಾರಸ್ಸು ಮೇಲಕ್ಕೆ ಹೋಯಿತು. ಆಗ ಖಾಲಿಯಿದ್ದ ತಳುಕಿನ ಹೋಬಳಿಗೆ ಶೇಕದಾರರಾಗಿ ನೇಮಕವಾದರು, ಸುಬ್ಬಣ್ಣನವರು. ಇಂತಹ ಸ್ಥಾನಕ್ಕೆ ಇಂತಹ ಪರೀಕ್ಷೆಯನ್ನೇ ಪಾಸು ಮಡಿರಬೇಕೆಂಬ ನಿರ್ಬಂಧವೇನೂ ಆಗಿನ ಕಾಲದಲ್ಲಿ ಇರಲಿಲ್ಲ; ಪ್ರತ್ಯೇಕವಾಗಿ ಶಿಫಾರಸ್ಸು ಮಾಡುವ ಯಾವ ಸಮಿತಿಯೂ ಇರಲಿಲ್ಲ. ಕೆಲಸಕ್ಕೆ ನೇಮಿಸುವ ಅಥವಾ ಕೆಲಸದಿಂದ ಕಿತ್ತು ಹಾಕುವ ಅಧಿಕಾರ ಜಿಲ್ಲಾಧಿಕಾರಿಗಳ ಕೈಲಿತ್ತು. ಆದ್ದರಿಂದ ಸುಬ್ಬಣ್ಣನ ನೇಮಕವನ್ನು ಪ್ರಶ್ನಿಸುವವರಾಗಲಿ, ಪ್ರತಿಭಟಿಸುವವರಾಗಲಿ ಯಾರೂ ಇರಲಿಲ್ಲ. 118 ಮೂರು ತಲೆಮಾರು ಶೇಕದಾರ್ ಸುಬ್ಬಣ್ಣ ತನ್ನ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸತೊಡಗಿದ. ಯಾವ ಅನುಭವಸ್ಥ ಶೇಕದಾರನಿಗೂ ಆತ ಕಡಿಮೆಯಾಗಿರಲಿಲ್ಲ. ಆತನ ಉತ್ಸಾಹ, ಕಾರ್ಯದಕ್ಷತೆಗಳು ಮೇಲಿನ ಅಧಿಕಾರಿಗಳಿಗೂ, ಕೆಳಗಿನ ಪಟೇಲ, ಶಾನುಭೋಗರಿಗೂ, ಸಾರ್ವಜನಿಕರಿಗೂ ಒಪ್ಪಿಗೆಯಾದುವು. ಆತ ಎಲ್ಲರ ವಿಶ್ವಾಸಾದರಗಳಿಗೆ ಪಾತ್ರನಾದ. ತನ್ನ ಅಭೀಷ್ಟ ನೆರವೇರಿದಾಗ ಸುಬ್ಬಣ್ಣನವರ ದೈವಭಕ್ತಿ ಇಮ್ಮಡಿಯಾಯಿತು. ಸರ್ಕಾರದ ಕೆಲಸಕ್ಕಾಗಿ ಊರೂರು ತಿರುಗುವಾಗಲೂ ಆತ ತನ್ನ ಪಾರಾಯಣ ಪುಸ್ತಕ ರಾಮಾಯಣವನ್ನು ತಪ್ಪದೆ ಜೊತೆಯಲ್ಲಿಯೇ ಕೊಂಡೊಯ್ಯುತ್ತಿದ್ದರು. ಮನೆಯಲ್ಲಿರಲಿ, ಪರವೂರಲ್ಲಿರಲಿ, ಪ್ರತಿನಿತ್ಯ ಬೆಳಗಿನ ಜಾವಕ್ಕೆದ್ದು, ಶೌಚವಿಧಿಗಳನ್ನು ಮುಗಿಸಿ ಸ್ನಾನಮಾಡಿ, ಮಡಿಯುಟ್ಟು, ನಿತ್ಯಾಹ್ನಿಕಗಳಾದ ಮೇಲೆ ರಾಮಾಯಣದ ಒಂದು ಸರ್ಗವನ್ನಾದರೂ ಪಾರಾಯಣ ಮಾಡಿ, ಪುಸ್ತಕವನ್ನು ಷೋಡಶೋಪಚಾರಗಳಿಂದ ಪೂಜೆ ಮಾಡುವರು. ಅನಂತರ ಶುಭ್ರವಾದ ರೇಷ್ಮೆಯ ವಸ್ತ್ರದಲ್ಲಿ ಸುತ್ತಿ, ಪೂಜಾ ಸಾಮಗ್ರಿಗಳೊಂದಿಗೆ ಅದನ್ನು ಕೃಷ್ಣಾಜಿನ ಚೀಲದಲ್ಲಿಟ್ಟು ಕಟ್ಟಿಡುವುದು ಅವರ ಪದ್ಧತಿ. ಅಲ್ಲಿಯವರೆಗೆ ಬೇರ ಯಾವ ಕೆಲಸವನ್ನೂ, ಅದು ಎಷ್ಟೇ ಜರೂರಾಗಿದ್ದರೂ -ಲಕ್ಷಿಸುತ್ತಿರಲಿಲ್ಲ. ಅಲ್ಲಿಯವರೆಗೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇದು ಅವರ ಪರಿಚಿತರೆಲ್ಲರಿಗೂ ಗೊತ್ತಾಗಿತ್ತು. ಯಾರೂ ಅದಕ್ಕೆ ಅಡ್ಡಿ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ, ಆತನ ಆಚಾರಶೀಲತೆ, ಭಕ್ತಿ, ಶ್ರದ್ಧೆಗಳನ್ನು ಕಂಡು ಅವರನ್ನು ಅದರ ಗೌರವಗಳಿಂದ ನೋಡುತ್ತಿದ್ದರು. ಸುಬ್ಬಣ್ಣನವರು ಶೇಕದಾರರಾಗಿ ಎರಡು ವರ್ಷಗಳು ಉರುಳಿಹೋದವು. ಇನ್ನು ಅವರನ್ನು ಆ ಕೆಲಸದಲ್ಲಿ ಖಾಯಂ ಮಾಡಬೇಕು. ಹಾಗಾಗಿದ್ದಲ್ಲಿ ಅವರು ತಮ್ಮ ತಂದೆಯಂತೆಯೇ ಶೇಕದಾರರಾಗಿಯೋ ಅಥವಾ ತಾತನಂತೆ ಶಿರಸ್ತೇದಾರರಾಗಿಯೋ ಆಗಬಹುದಿತ್ತು. ಹಾಗೇನಾದರೂ ಆಗಿದ್ದರೆ ಅವರೂ ಕೂಡ ‘ಹತ್ತರಲ್ಲಿ ಹನ್ನೊಂದು ಪರೀಕ್ಷೆಯ ಕೂಡ ಗೋವಿಂದ’ ಎಂಬ ಗಾದೆಯಂತಾಗುತ್ತಿದ್ದರು. ಬಹುಶಃ ಅಂತಹ ಕೋಟ್ಯಾಂತರ ಜನಗಳ ಮಧ್ಯೆ ತಾನು ಒಬ್ಬ ಅನಾಮಧೇಯನಾಗಿ, ಅಜ್ಞಾತನಾಗಿ ಹೋಗಿಬಿಡಬಹುದಾಗಿತ್ತೋ ಏನೋ! ಆದರೆ ಸುಬ್ಬಣ್ಣನವರು ಉಜ್ವಲ ಕೀರ್ತಿಶಾಲಿಗಳಾಗಿ, ಗಣ್ಯರಾಗಿ, ಧರ್ಮಾತ್ಮರಾಗಿ, ಸುತ್ತಮುತ್ತಿನ ಹತ್ತಾರು ಜನಕ್ಕೆ ಆಶ್ರಯದಾತರಾಗಿ ಬೆಳಗಬೇಕಾಗಿತ್ತು. ಈ ಸರ್ಕಾರಿ ಕೆಲಸದಲ್ಲಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೈವೇಚ್ಛೆಯು ಅವರ ಅದೃಷ್ಟಚಕ್ರವನ್ನು ಬದಲಾಯಿಸುವ ಘಟನೆಯೊಂದು ಪ್ರಾಪ್ತವಾಗಿ ಅವರ ಸ್ಟಾಂಪ್‍ವೆಂಟರ್ ಸುಬ್ಬಣ್ಣ 119 ಜೀವನ ಕ್ರಮವನ್ನೇ ಬದಲಾಯಿಸಿತು. ಸುಬ್ಬಣ್ಣನವರು ತಮ್ಮ ಕರ್ತವ್ಯಕ್ರಮಕ್ಕನುಸಾರವಾಗಿ ಆಗಾಗ ತಾವು ಒಬ್ಬರೇ ಆಗಿಯೋ, ಅಮಲ್ದಾರರ ಜೊತೆಯಲ್ಲಿಯೋ ಹಳ್ಳಿಗಳಲ್ಲಿ ತಿರುಗಾಡಬೇಕಾಗಿತ್ತು. ಹೀಗಿರುವಾಗ ಒಮ್ಮೆ ಅವರು ಅಮಲ್ದಾರರೊಂದಿಗೆ ಒಂದು ದೊಡ್ಡ ಹಳ್ಳಿಗೆ ಹೋದರು. ಅದನ್ನು ಮುಟ್ಟಿದಾಗ ಸಂಜೆಯಾಗಿತ್ತು. ಇಬ್ಬರೂ ಅಲ್ಲಿನ ಚಾವಡಿಯಲ್ಲಿ ಮೊಕ್ಕಾಂ ಮಾಡಿದರು. ಆ ಅಮಲ್ದಾರರೂ ಬ್ರಾಹ್ಮಣರೇ, ಆಚಾರಶೀಲರೇ, ದೈವಭಕ್ತರೇ. ಅವರು ಮೊಕ್ಕಾಂ ಮಾಡಿದ ಚಾವಡಿ ನಾಲ್ಕು ಹಂತಗಳಾಗಿತ್ತು. ಎಲ್ಲಕ್ಕೂ ಕೆಳಗಿನ ಅಂತಸ್ತಿನಲ್ಲಿ ಗ್ರಾಮದ ಮಣೆಗಾರ ಇರುತ್ತಿದ್ದ. ಗ್ರಾಮದಲ್ಲಿ ಡಂಗೂರ ಹೊಡೆಯುವುದು, ಚಾವಡಿಯ ಮುಂದೆ ಕಸ ಗುಡಿಸುವುದು, ಅಧಿಕಾರಿಗಳು ಬಂದಾಗ ಅವರ ಕುದುರೆಗಳಿಗೆ ಹುಲ್ಲು ಒದಗಿಸುವುದು ಮೊದಲಾದ ಕೆಲಸಗಳನ್ನು ಮಾಡುವುದು ಅವನ ಹೊಣೆ. ಅದರ ಮೇಲಿನ ಎರಡನೆಯ ಅಂತಸ್ತಿನಲ್ಲಿ ಗ್ರಾಮದ ತಳವಾರ. ರಾತ್ರಿ ಅಲ್ಲಿ ಮಲಗುವ ದೊಣ್ಣೆ ಕಾವಲುಗಾರರು ಇರುತ್ತಿದ್ದರು. ಅದರ ಮೇಲಿನ ಮೂರನೆಯ ಅಂತಸ್ತಿನಲ್ಲಿ ಜಮಾಬಂದಿ ಮೊದಲಾದ ವಿಶೇಷ ಸಂದರ್ಭಗಳಾದಾಗ ಪಟೇಲ, ಶಾನುಭೋಗರು ತಾತ್ಕಾಲಿಕವಾಗಿ ತಂಗುತ್ತಿದ್ದರು. ಎಲ್ಲಕ್ಕೂ ಮೇಲಿನ ನಾಲ್ಕನೆಯ ಅಂತಸ್ತಿನಲ್ಲಿ ಹೋಬಳಿಯ ಶೇಕದಾರರೂ, ಅದಕ್ಕೆ ಮೇಲ್ಪಟ್ಟ ಎಲ್ಲ ಅಧಿಕಾರಿಗಳೂ ತಂಗಲು ಮೀಸಲಾಗಿತ್ತು. ಅಲ್ಲಿಯೇ ಅಮಲ್ದಾರರು ಮತ್ತು ಶೇಕದಾರರು ಒಬ್ಬೊಬ್ಬರು ಒಂದೊಂದು ಕಡೆ ಬಿಡಾರ ಹೂಡಿದ್ದರು. ಆ ಇಬ್ಬರ ಮಧ್ಯೆ ತಾತ್ಕಾಲಿಕವಾದ ಒಂದು ತೆರೆ ಇರುತ್ತಿತ್ತು. ಅಮಲ್ದಾರರ ಜೊತೆಯಲ್ಲಿ ಯಾವಾಗಲೂ ಒಬ್ಬ ಅಡಿಗೆಯವನಿರುತ್ತಿದ್ದ. ಈ ಅಡಿಗೆ ಕೆಲಸಕ್ಕಾಗಿಯೇ ಪ್ರತ್ಯೇಕವಾದ ಒಂದು ಸಣ್ಣ ಮನೆ ಮೀಸಲಾಗಿತ್ತು. ಅದರಲ್ಲಿ ಸ್ನಾನ, ಅಡಿಗೆ, ಊಟಗಳಿಗೆ ತಕ್ಕಷ್ಟು ಅನುಕೂಲವಿರುತ್ತಿತ್ತು. ಶೇಕದಾರ್ ಸುಬ್ಬಣ್ಣನವರು ಆ ರಾತ್ರಿ ಅಮಲ್ದಾರರ ಜೊತೆಯಲ್ಲಿಯೇ ಊಟ ಮಾಡಿದರು. ಅನಂತರ ಕೆಲವು ಲೆಕ್ಕ-ಪತ್ರಗಳನ್ನು ನೋಡಿ ಉಳಿದಿದ್ದನ್ನು ಬೆಳಿಗ್ಗೆ ನೋಡೋಣವೆಂದುಕೊಂಡು ಉಭಯರೂ ಮಲಗಿ ನಿದ್ದೆ ಹೋದರು. ಮರುದಿನ ಬೆಳಗಾಯಿತು. ಬಿಡದಿಯಲ್ಲಿ ಸ್ನಾನಕ್ಕೇನೋ ಅನುಕೂಲವಿತ್ತು. ಆದರೆ ಮಡಿ-ಮೈಲಿಗೆಗಳಿಗೆ ಹೆಚ್ಚು ಗಮನವಿರಲಿಲ್ಲ. ಅಮಲ್ದಾರರು ಸ್ನಾನ ಮಾಡಿ ಜವಾನರು ಮಡಿ ಮಾಡಿದ ಬಟ್ಟೆಗಳನ್ನುಟ್ಟು ಸಂಧ್ಯಾವಂದನೆಯ ಶಾಸ್ತ್ರ ಮಾಡಿ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಸುಬ್ಬಣ್ಣನವರಿಗೆ ಅದು ಒಗ್ಗುತ್ತಿರಲಿಲ್ಲ. ಅದು ಅವರ ಜಾಯಮಾನಕ್ಕೆ ಬಂದದ್ದಲ್ಲ. ಮಡಿ ಇಲ್ಲದೆ, ಮಡಿ ನೀರಿಲ್ಲದೆ 120 ಮೂರು ತಲೆಮಾರು ಅವರಿಗೆ ಆಹ್ನಿಕ, ಪಾರಾಯಣಗಳು ಸಾಗುವಂತಿರಲಿಲ್ಲ. ಅಲ್ಲದೆ ಅವರಿಗೆ ಏಕಾಂತಬೇಕು. ಬಿಡದಿಯಲ್ಲಿ ಅದು ಸಾಧ್ಯವಿರಲಿಲ್ಲ. ಅಡಿಗೆಯವನಲ್ಲದೆ ಹಾಲು, ಮೊಸರು ತಂದು ಕೊಡುವ ತಳವಾರ, ತರಕಾರಿ ತಂದುಕೊಡುವ ರೈತ, ಮೇಲ್ವಿಚಾರಣೆ ಮಾಡುವ ಪಟೇಲ, ಶಾನುಭೋಗರು ಅಲ್ಲಿಗೆ ಬರುತ್ತಿದ್ದರು. ಅವರನ್ನು ತಡೆಯುವಂತಿಲ್ಲ. ಆದ್ದರಿಂದ ಅವರು ತಮ್ಮ ಪೂಜಾಸಾಮಗ್ರಿಗಳ ಕೃಷ್ಣಾಜಿನದ ಪೆಟ್ಟಿಗೆಯೊಂದಿಗೆ ಊರ ಹೊರಗೆ ಸ್ವಲ್ಪ ದೂರದಲ್ಲಿದ್ದ ಕಪಿಲೆ ಬಾವಿಗೆ ಹೋದರು. ಆ ಬಾವಿಯ ಮುಂದುಗಡೆಯಲ್ಲಿ ಒಂದು ಸಣ್ಣ ಮಂಟಪವಿತ್ತು. ಸುಬ್ಬಣ್ಣನವರು ಆ ಮಂಟಪವನ್ನು ಸ್ವಚ್ಛ ಮಾಡಿಕೊಂಡು, ತಮ್ಮ ಪೂಜೆಯಚೀಲವನ್ನು ಇಟ್ಟು, ಸಣ್ಣ ಪಂಚೆಯನ್ನುಟ್ಟು, ಬಾವಿಯಲ್ಲಿ ಸ್ವೇಚ್ಚೆಯಾಗಿ ಸ್ನಾನ ಮಾಡಿ ಮುಗಿಸಿದರು. ಆಮೇಲೆ ಕೃಷ್ಣಾಜಿನದ ಚೀಲದಲ್ಲಿದ್ದ ಮಗುಟವನ್ನುಟ್ಟು, ಕೃಷ್ಣಾಜಿನವನ್ನು ಹಾಸಿ ಕುಳಿತು, ಹಣೆ ತುಂಬ ಭಸ್ಮಧಾರಣೆ ಮಾಡಿಕೊಂಡು ಆಹ್ನಿಕವನ್ನು ಆರಂಭಿಸಿದರು. ಸಂಧ್ಯಾವಂದನೆ, ಜಪ-ತಪಾದಿಗಳು ಮುಗಿದುವು. ಇನ್ನು ಪಾರಾಯಣ ಪ್ರಾರಂಭವಾಗಬೇಕು. ಅಷ್ಟರಲ್ಲಿಯೆ ಅಮಲ್ದಾರರಿಂದ ಕರೆ ಬಂತು. ಅವರ ಜವಾನ ಬಂದು ಸ್ವಾಮಿ, ಅಮಲ್ದಾರರ ಅಪ್ಪಣೆಯಾಗಿದೆ, ತಕ್ಷಣ ಬರಬೇಕಂತೆ’ ಎಂದ. ಪಾರಾಯಣ ಮಾಡುವಾಗ ಸುಬ್ಬಣ್ಣನವರು ಯಾರೊಂದಿಗೂ - ಮನೆಯವರೊಂದಿಗೂ ಕೂಡ - ಮಾತನಾಡುತ್ತಿರಲಿಲ್ಲ. ಶೂದ್ರರೊಂದಿಗೆ ಮಾತನಾಡುವುದಿರಲಿ, ಅವರ ಮುಖದರ್ಶನ ಕೂಡ ಮಾಡುತ್ತಿರಲಿಲ್ಲ. ಅದು ಅವರ ಆ ಕಾಲದ ನಿಯಮ. ನಿಷ್ಠರಾದ ಬ್ರಾಹ್ಮಣರೆಲ್ಲರ ನೇಮವೂ ಆಗಿತ್ತು. ಈಗಲೂ ಅನೇಕರು ಆ ನಿಯಮವನ್ನು ಪಾಲಿಸುತ್ತಿದ್ದಾರೆ. ಅದು ಸರಿಯೇ ತಪ್ಪೇ ಎಂಬ ಪ್ರಶ್ನೆ ಇಲ್ಲಿ ಅನಾವಶ್ಯಕ. ಅದು ಎಷ್ಟೋ ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಸುಬ್ಬಣ್ಣನವರು ತಮ್ಮ ನಿಯಮದಿಂದ ಚಾಚೂ ಕದಲುತ್ತಿರಲಿಲ್ಲ. ಬಂದ ಜವಾನನೊಂದಿಗೆ ಅವರು ಮಾತನಾಡುವಂತಿಲ್ಲ. ಬ್ರಾಹ್ಮಣರಾದ ಅಮಲ್ದಾರರಿಗೆ ಇದು ತಿಳಿಯದ ವಿಷಯವಲ್ಲ. ಆದರೂ ಜವಾನನನ್ನು ಕಳುಹಿಸಿದ್ದಾರೆ. ಪಾರಾಯಣ ಮುಗಿಯುತ್ತಲೇ ತಾವೇ ಹೋಗುತ್ತಿರಲಿಲ್ಲವೆ? ಅಷ್ಟರಲ್ಲಿ ಏನು ಅವಸರವಾಗಿತ್ತು? ಬಂದ ಜವಾನನಿಗೆ ಯಾರು ಜವಾಬು ಹೇಳಬೇಕು? ಅಲ್ಲಿ ತಮ್ಮ ಹೊರತೂ ಬೇರೆ ಯಾರೂ ಇಲ್ಲ. ಊರಿನಲ್ಲಿದ್ದ ಬಿಡಾರದಲ್ಲಿ ಈ ರೀತಿಯ ಅನನುಕೂಲವಾಗುವುದೆಂದೇ ಊರು ಬಿಟ್ಟು ದೂರ ಬಂದದ್ದು. ಆದರೇನು? ‘ರಾಮೇಶ್ವರಕ್ಕೆ ಹೋದರೂ ಶನೇಶ್ವರ ಬಿಡ’ ಎಂಬಂತೆ ಇಲ್ಲಿಯೂ ಗ್ರಹಚಾರ ಸ್ಟಾಂಪ್‍ವೆಂಟರ್ ಸುಬ್ಬಣ್ಣ 121 ವಕ್ರಿಸಬೇಕೆ? ಮನಸ್ಸಿಗೆ ತುಂಬ ಬೇಸರವಾಯಿತು. ಜವಾನನನ್ನು ಕೈ ಸನ್ನೆಯಿಂದ ಹಿಂದಕ್ಕೆ ಕಳುಹಿಸಿದರು. ಆಮೇಲೆ ಸ್ವಲ್ಪ ಹೊತ್ತು ಶ್ರೀರಾಮನಾಮದ ಜಪಮಾಡಿ ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡು ಪಾರಾಯಣವನ್ನು ಆರಂಭಿಸಿದರು. ಆ ದಿನದ ಪಾರಾಯಣ ಭಾಗದ ಸರ್ಗ ದೀರ್ಘವಾದುದಾಗಿತ್ತು. ಅದನ್ನು ಮಾಡಿ ಮುಗಿಸಲು ಹೆಚ್ಚು ಕಾಲ ಹಿಡಿಸುತ್ತಿತ್ತು. ಆದರೂ ಅದನ್ನು ಮುಗಿಸದೆ ಮಧ್ಯದಲ್ಲಿ ನಿಲ್ಲಿಸುವಂತಿಲ್ಲ. ಅವರು ಪಾರಾಯಣದಲ್ಲಿ ತಲ್ಲೀನರಾಗಿ ಆನಂದಬಾಷ್ಪಗಳನ್ನು, ದುಃಖಾಶ್ರುಗಳನ್ನು ಸುರಿಸುತ್ತ, ಗಂಟಲು ಕಟ್ಟಿದಾಗ ಮಧ್ಯೆ ಮಧ್ಯೆ ನಿಲ್ಲಿಸಿ ಮುಂದೆ ಸಾಗಬೇಕಿತ್ತು. ಹೀಗೆ ಪಾರಾಯಣ ನಡೆಯುತ್ತಿತ್ತು. ಸುಬ್ಬಣ್ಣನವರ ಬಳಿಯಿಂದ ಹಿಂದಿರುಗಿದ ಜವಾನ ಅಮಲ್ದಾರರ ಬಳಿಗೆ ಹೋಗಿ ಏನೇನು ಅಬದ್ಧ - ಸುಬದ್ಧಗಳನ್ನು ಹೇಳಿದನೋ ಏನೋ! ಅಮಲ್ದಾರ ಸಾಹೇಬರು ಕನಲಿ ಕೆಂಡವಾದರು. ತಕ್ಷಣವೇ ಅವರನ್ನು ಕರೆತರುವಂತೆ ಜವಾನನ್ನು ಮತ್ತೊಮ್ಮೆ ಕಳುಹಿಸಿಕೊಟ್ಟರು. ಜವಾನರಿಗೆ ಸ್ವಲ್ಪ ಅವಕಾಶಕೊಟ್ಟರೆ ಸಾಕು, ದಿವಾನಗಿರಿಯನ್ನೇ ಚಲಾಯಿಸುತ್ತಾರೆ. ಅದರಲ್ಲಿಯೂ ತಮ್ಮ ಧಣಿಗೆ ಯಾರ ಮೇಲಾದರೂ ಅಸಮಾಧಾನವಾಗಿದೆ ಎಂದು ಗೊತ್ತಾದರೆ. ಅಂತಹವರ ವಿಷಯದಲ್ಲಿ ಈ ಜವಾನರು ಇದ್ದದ್ದೂ ಜೋರಾಗುತ್ತಾರೆ. ತಾವೇ ಮೇಲಧಿಕಾರಿಗಳೆಂಬಂತೆ ಗರ್ವ ಬಂದು ಬಿಡುತ್ತದೆ. ಅಮಲ್ದಾರರ ಕಡೆಯಿಂದ ಬಂದ ಜವಾನ ಸುಬ್ಬಣ್ಣನನ್ನು ಕರೆದ ರೀತಿಯಲ್ಲಿಯೇ ಆ ಜಬರದಸ್ತು ಎದ್ದು ಕಾಣುತ್ತಿತ್ತು. ಸುಬ್ಬಣ್ಣನವರು ಪಾರಾಯಣದಲ್ಲಿ ಮಗ್ನರಾಗಿದ್ದರು. ರಾಮಾಯಣದ ವ್ಯಕ್ತಿ ಚಿತ್ರಗಳು ಸಿನಿಮಾದಂತೆ ಕಣ್ಣೆದುರು ಬಂದು ಹೋಗುತ್ತಿದ್ದುವು. ಅವರಿಗೆ ಬಾಹ್ಯಪ್ರಜ್ಞೆಯೇ ಇರಲಿಲ್ಲ. ಜವಾನನ ಮಾತುಗಳು ಅವರ ಕಿವಿಯ ಮೇಲೆ ಬೀಳಲಿಲ್ಲ. ಅವರು ಅವನನ್ನು ಲಕ್ಷಿಸಲಿಲ್ಲ. ಕೈಸನ್ನೆಯನ್ನೂ ಮಾಡಲಿಲ್ಲ. ಅವನು ಸ್ವಲ್ಪ ಹೊತ್ತು ನಿಂತಿದ್ದು, ಹಿಂದಿರುಗಿ ಸಾಹೇಬರ ಬಳಿಗೆ ಹೋದವನೇ ಶೇಕದಾರರ ನಿರ್ಲಕ್ಷ್ಯ ಮನೋಭಾವ, ಉದ್ಧಟತನಗಳನ್ನು ಉಪ್ಪುಕಾರ ಹಚ್ಚಿ ವರ್ಣಿಸಿದ. ಅದನ್ನು ಕೇಳಿ ಅಮಲ್ದಾರರ ಪಿತ್ತ ಕೆರಳಿತು. ತನ್ನ ಕೈಕೆಳಗಿನ ನೌಕರನಿಗೆ ತನ್ನನ್ನು ಅವಮಾನಗೊಳಿಸುವಷ್ಟು ಧೈರ್ಯವೆ? ತನ್ನ ಅಪ್ಪಣೆಗೆ ಬೆಲೆಯೇ ಇಲ್ಲವೆ? ಆಗಲಿ, ಇವನ ಅಹಂಕಾರ ಎಷ್ಟಿದೆಯೋ ನೋಡುತ್ತೇನೆ! ಸರಿಯಾಗಿ ಬಿಸಿ ಮುಟ್ಟಿಸುತ್ತೇನೆ! ಎಂದು ಯೋಚಿಸಿ ಉಗ್ರಾವತಾರವನ್ನು ತಾಳಿ ಕುಳಿತರು. ಸುಬ್ಬಣ್ಣನವರ ಪಾರಾಯಣವು ಸಕಾಲಕ್ಕೆ ಮುಗಿಯಿತು. ಮಾಮೂಲಿನಂತೆ ಪೂಜೆ ಪುನಸ್ಕಾರಗಳಾದವು. ಅವರು ರಾಮಾಯಣವನ್ನೂ, ಮಡಿಬಟ್ಟೆಗಳನ್ನೂ 122 ಮೂರು ತಲೆಮಾರು ಕೃಷ್ಣಾಜಿನದಲ್ಲಿ ಕಟ್ಟಿಟ್ಟು ತಮ್ಮ ಮಾಮೂಲು ಬಟ್ಟೆಗಳನ್ನು ಹಾಕಿಕೊಂಡು ಹಿಂದಿರುಗಿ ತಮ್ಮ ಸ್ಥಳಕ್ಕೆ ಬಂದರು. ಅಲ್ಲಿ ತಮ್ಮ ಅಧಿಕಾರಕ್ಕೆ ತಕ್ಕಂತೆ ಕೋಟು-ರುಮಾಲುಗಳನ್ನು ಧರಿಸಿ, ಅಮಲ್ದಾರರ ಎದುರಿಗೆ ಬಂದು ಕೈ ಮುಗಿದು ನಿಂತರು. ಅಮಲ್ದಾರರ ಉಗ್ರ ನರಸಿಂಹಾವತಾರ ಇನ್ನೂ ಇಳಿದಿರಲಿಲ್ಲ. ಅವರ ಕೋಪ ಖೇಚರಕ್ಕೇರಿತ್ತು. ಕೈ ಮುಗಿದವರ ಕಡೆ ತಿರುಗಿಯೂ ನೋಡದೆ ಏನನ್ನೋ ಬರೆಯುವವರಂತೆ ತಲೆ ತಗ್ಗಿಸಿಕೊಂಡು ನಟಿಸುತ್ತಿದ್ದರು. ಮುಖ ದುಮುದುಮುಗುಟ್ಟುತ್ತಿತ್ತು. ಸುಬ್ಬಣ್ಣನವರಿಗೆ ಅರ್ಥವಾಯಿತು. ಕೋಪಕ್ಕೆ ಕಾರಣವೂ ತಿಳಿಯಿತು. ಅಮಲ್ದಾರಿಯ ಅಧಿಕಾರದ ಮತ್ತು ತಲೆಗೇರಿದ ಆ ಅಮಲ್ದಾರರಿಗೆ ಕೈ ಮುಗಿದರು. ಅವರಿಂದ ಪ್ರತಿಕ್ರಿಯೆ ಬರಲಿಲ್ಲ; ತಲೆಯೆತ್ತಿ ನೋಡಲಿಲ್ಲ. ಸುಬ್ಬಣ್ಣನವರು ಮೂರನೆಯ ತಳವಾರಹಂತಕ್ಕೆ ಇಳಿದು ಬಂದು ಕೈ ಮುಗಿದರು, ಪ್ರಯೋಜನವಾಗಲಿಲ್ಲ. ಸುಬ್ಬಣ್ಣನವರು ನಗುನಗುತ್ತಾ ತಮ್ಮ ಸ್ವಸ್ಥಳಕ್ಕೆ ಹಿಂದಿರುಗಿ ‘ಅಮಲ್ದಾರ್ ಸಾಹೇಬರಿಗೆ ನಮಸ್ಕಾರ’ ಎಂದು ಗಟ್ಟಿಯಾಗಿ ಹೇಳಿ ಕೈ ಮುಗಿದರು. ಆಗ ಅಮಲ್ದಾರರು ತಲೆಯೆತ್ತಿ ಶ್ರೀಮದ್ಗಾಂಭೀರ್ಯದಿಂದ ನೋಡುತ್ತ ‘ಏನು ಶೇಕದಾರ್ ಸಾಹೇಬರೇ, ಆಹ್ನಿಕ ಪಾರಾಯಣಗಳು ಮುಗಿದುವೋ? ಇಲ್ಲಿಗೆ ಬರುವಷ್ಟು ಪುರಸೊತ್ತಾಯಿತೋ?’ ಎಂದು ವಕ್ರವಾಗಿ ನುಡಿದರು. ಆಗ ಸುಬ್ಬಣ್ಣನವರು ‘ಸ್ವಾಮಿ, ಆಹ್ನಿಕ, ಪಾರಾಯಣಗಳು ಶೇಕ್‍ದಾರರವಲ್ಲ. ಅವು ಸರ್ಕಾರಿ ಕಾನೂನಿಗೆ ಸಂಬಂಧಪಟ್ಟವಲ್ಲ. ಅವು ನನ್ನ ಸ್ವಂತ ವ್ಯಕ್ತಿತ್ವಕ್ಕೆ ಸಂಬಂಧಪಟ್ಟವು. ಅವುಗಳನ್ನು ನಡೆಸಬಾರದೆಂದು, ನಡೆಸಕೂಡದೆಂದು ಸರ್ಕಾರದ ಯಾವ ಕಾನೂನೂ ಹೇಳಿಲ್ಲ. ಅವನ್ನು ಕುರಿತು ಆಕ್ಷೇಪಿಸುವ ಹಕ್ಕು ನಿಮಗೇನೂ ಇಲ್ಲ. ತಾವೂ ಬ್ರಾಹ್ಮಣರೇ. ತಾವೇ ಈ ರೀತಿ ಮಾತನಾಡುತ್ತಿರುವುದು ತುಂಬ ಆಶ್ಚರ್ಯ! ಅದನ್ನು ಕೇಳಿ ನನಗೆ ವ್ಯಥೆಯಾಗಿದೆ’. ಹೀಗೆ ಹೇಳಿದವರೇ ಸುಬ್ಬಣ್ಣನವರು ಸರಸರ ತಮ್ಮ ದಫ್ತರದಿಂದ ಬಿಳಿ ಕಾಗದವೊಂದನ್ನು ತೆಗೆದುಕೊಂಡು, ಕೆಲಸಕ್ಕೆ ರಾಜೀನಾಮೆಯನ್ನು ಬರೆದು ಅಮಲ್ದಾರರ ಮುಂದಿಟ್ಟರು. ಸುಬ್ಬಣ್ಣನವರ ರಾಜೀನಾಮೆಯನ್ನು ಕಂಡು ಅಮಲ್ದಾರರಿಗೆ ದಿಗ್ಭ್ರಮೆಯಾಯಿತು. ಅವರ ಕಡೆ ಮಿಕಿ ಮಿಕಿ ನೋಡುತ್ತ ಸ್ವಲ್ಪ ಹೊತ್ತಿನ ಮೇಲೆ ‘ಸುಬ್ಬಣ್ಣನವರೇ, ತಾಲ್ಲೂಕು ಕಛೇರಿಯಲ್ಲಿ ಎಷ್ಟೋ ಕಾಲ ಗುಮಾಸ್ತಗಿರಿ ಮಾಡಿದವರಿಗೆ ಸಿಕ್ಕಬಹುದಾದ ಸ್ವತಂತ್ರಾಧಿಕಾರ ಶೇಕದಾರರದು. ಇದು ಇನ್ನೂ ಎಳೆಯ ವಯಸ್ಸಿನ ನಿಮಗೆ ಆರಂಭದಲ್ಲಿಯೇ ಸಿಕ್ಕಿದೆ. ಮೇಲಧಿಕಾರಿಗಳ ಮನ ಮೆಚ್ಚುವಂತೆ, ದಕ್ಷತೆಯಿಂದ ಕೆಲಸ ಮಾಡಿಕೊಂಡು ಹೋದರೆ ಇನ್ನು ಕೆಲವೇ ಸ್ಟಾಂಪ್‍ವೆಂಟರ್ ಸುಬ್ಬಣ್ಣ 123 ವರ್ಷಗಳಲ್ಲಿ ನೀವು ಶಿರಸ್ತೇದಾರರಾಗುತ್ತೀರಿ. ಇಂತಹ ಒಳ್ಳೆಯ ಸ್ಥಾನಕ್ಕೆ ರಾಜೀನಾಮೆ ಕೊಡುವುದೆ? ಇನ್ನ್ಯಾರಾದರೂ ಆಗಿದ್ದರೆ ಕ್ಷಮಾಪಣೆ ಕೇಳಿ ಗೋಗರೆಯುತ್ತಿದ್ದರು. ಆದರೆ ನೀವೇನು ಮಾಡಿದ್ದೀರಿ? ನೀವು ದೇವರ ಪೂಜೆಯಲ್ಲಿ ನಿರತರಾಗಿದ್ದಾಗ ಆಳನ್ನು ಕಳುಹಿಸಿದ್ದು ತಪ್ಪು ಎಂದಿಟ್ಟುಕೊಳ್ಳೋಣ. ಆದರೆ ನೀವು ಪ್ರತ್ಯುತ್ತರ ಕೊಡದೆ ಉದಾಸೀನವಾಗಿ ನಡೆದುಕೊಂಡುದು ಸರಿಯೇನು? ನೀವು ಶುದ್ಧ ಚರಿತ್ರರು, ದೈವಭಕ್ತರು, ಸದಾಚಾರಸಂಪನ್ನರು, ಸದ್ಬ್ರಾಹ್ಮಣರು. ಸ್ವಲ್ಪ ಸಮಾಧಾನವನ್ನು ತಂದುಕೊಳ್ಳಿ. ಇದೇನು ನೀವು ಮಾಡಿರುವುದು? ರಾಜೀನಾಮೆ ಏಕೆ ಕೊಟ್ಟಿದ್ದೀರಿ? ಇಷ್ಟು ಒಳ್ಳೆಯ ಕೆಲಸ ಯಾರಿಗುಂಟು, ಯಾರಿಗಿಲ್ಲ? ಇದನ್ನು ಕಳೆದುಕೊಂಡು ಮುಂದೇನು ಮಾಡುತ್ತೀರಿ? ನೀವು ಇನ್ನೂ ಚಿಕ್ಕ ವಯಸ್ಸಿನವರು, ದಕ್ಷರು, ಉನ್ನತಿಗೆ ಬರುವವರು. ದಯವಿಟ್ಟು ಆದದ್ದನ್ನು ಮರೆತು ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಹೇಳಿದರು. ಆಗ ಸುಬ್ಬಣ್ಣನವರು `ಸ್ವಾಮಿ, ನಾನು ರಾಜೀನಾಮೆಯನ್ನು ಕೊಡುವಾಗ ಹಿಂದು ಮುಂದು ಚೆನ್ನಾಗಿಯೇ ಯೋಚಿಸಿದ್ದೇನೆ. ಖಂಡಿತವಾಗಿಯೂ ರಾಜೀನಾಮೆ ಕೊಡುತ್ತಿರುವುದು ತಮ್ಮ ಮೇಲಿನ ಕೊಪದಿಂದಲ್ಲ. ತಾವು ಅದನ್ನು ಮನಸ್ಸಿಗೆ ಇಟ್ಟುಕೊಳ್ಳಬೇಡಿ. ನನಗೆ ಈ ಸರ್ಕಾರಿ ಸೇವೆಗಿಂತಲೂ, ಜಗತ್ ಪ್ರಭುವಾದ ರಾಮನ ಸೇವೆ ದೊಡ್ಡದು. ವಿಶ್ವಕ್ಕೇ ಅನ್ನದಾತನಾದ ಆ ಸ್ವಾಮಿ ನನ್ನನ್ನು ಎಂದೂ ಉಪವಾಸವಿರಿಸಲಾರ. ಈ ಶೇಕದಾರಿ ಹೋದ ಮಾತ್ರಕ್ಕೇ ಅನ್ನದಾತನಾದ ಆ ಸ್ವಾಮಿ ನನ್ನನ್ನು ಎಂದೂ ಉಪವಾಸವಿರಿಸಲಾರ. ಈ ಶೇಕದಾರಿ ಹೋದ ಮಾತ್ರಕ್ಕೇ ನನ್ನ ಪಾಲಿನ ಪ್ರಪಂಚ ಮುಳುಗುವುದಿಲ್ಲ. ಶ್ರೀರಾಮನ ಕೃಪೆಯಿದ್ದರೆ ಇದಕ್ಕಿಂತಲೂ ಉತ್ತಮವಾದ ಜೀವನ ಸಾಧನೆ ನನಗೆ ಸಿಕ್ಕುತ್ತದೆ. ನನ್ನ ತಂದೆಯವರೂ ಶೇಕದಾರರಾಗಿದ್ದೇ ನೌಕರಿಯಿಂದ ನಿವೃತ್ತರಾದರು. ಆದರೆ ಆಗಿನ ಮಾತು ಬೇರೆ. ದೇವರು, ಬ್ರಾಹ್ಮಣರು ಪೂರ್ಣ ಭಕ್ತಿಯಿದ್ದ ಕಾಲ. ಈಗ ಕಾಲ ಬದಲಾಯಿಸುತ್ತಿದೆ. ನೋಡಿ, ತಾವು ಬ್ರಾಹ್ಮಣರು. ಧರ್ಮ, ಕರ್ಮಗಳನ್ನು ಬಲ್ಲವರು. ನಾನು ಬಾವಿಯ ಹತ್ತಿರ ಆಟವಾಡುತ್ತಿರಲಿಲ್ಲ; ನಿತ್ಯಾಹ್ನಿಕ, ಪಾರಾಯಣಗಳಲ್ಲಿ ನಿರತನಾಗಿದ್ದೆ. ಅದು ನನ್ನ ನಿತ್ಯ ಕರ್ತವ್ಯ. ಅದು ತಮಗೆ ತಿಳಿಯದ್ದೇನೂ ಅಲ್ಲ. ಪಾರಾಯಣದ ಸರ್ಗಗಳ ದೀರ್ಘತ್ವ, ಹ್ರಸ್ವತ್ವಗಳನ್ನನುಸರಿಸಿ ಹೊತ್ತು ಹೆಚ್ಚು ಕಡಿಮೆಯಾಗುತ್ತದೆ. ಅದೂ ತಮಗೆ ತಿಳಿದಿದೆ. ಈಗ ಎರಡು ವರ್ಷಗಳಿಂದ ತಾವು ನನ್ನ ವಿಷಯವನ್ನು ನೋಡಿ ಬಲ್ಲಿರಿ. ಅಂತಹ ತಮಗೆ ಈ ದಿನ ಸ್ವಲ್ಪ ತಡವಾದುದಕ್ಕಾಗಿ ಕೋಪ ಬಂತು. ಮುಂದೆ ಯಾರಾದರೂ 124 ಮೂರು ತಲೆಮಾರು ಕ್ರಿಶ್ಚಿಯನ್ನರೋ, ಮುಸಲ್ಮಾನರೋ, ಪರಂಗಿಯವರೋ ಅಧಿಕಾರಿಗಳಾಗಿ ಬಂದರೆ ಅವರಿಗೆ ಬ್ರಾಹ್ಮಣರ ಆಚಾರ-ವಿಚಾರಗಳಲ್ಲಿ ಶ್ರದ್ಧೆ ಏನಿದ್ದೀತು? ಆಗ ನನ್ನ ಪರಿಸ್ಥಿತಿ ಏನು? ದೇವರ ಸೇವೆಯನ್ನು ಕೈಬಿಡಬೇಕು ಅಥವಾ ಅಧಿಕಾರವನ್ನು ಕೈಬಿಡಬೇಕು. ಸ್ವಲ್ಪ ಕಾಲವಾಗಿ ಅಧಿಕಾರ ಅಭ್ಯಾಸವಾದ ಮೇಲೆ ಕೆಲಸ ಬಿಡುವುದು ಕಷ್ಟ. ಬೇರೆ ದಾರಿ ತೋರದೆ ಆತ್ಮಗೌರವವನ್ನು ಬಲಿಕೊಟ್ಟು, ದೇವರ ಸೇವೆಯನ್ನೂ ಕೈಬಿಟ್ಟು ಕೆಲಸದಲ್ಲಿ ಮುಂದುವರಿಯಬೇಕಾಗುತ್ತದೆ. ಆದ್ದರಿಂದ ಈಗಲೇ ಈ ಕೆಲಸ ಬಿಡುವುದು ಲೇಸು. ನೀವು ಹೇಳಿದಂತೆ ನನಗಿನ್ನೂ ಚಿಕ್ಕವಯಸ್ಸು; ಒಂದಲ್ಲ ಮತ್ತೊಂದು ಮಾರ್ಗವನ್ನು ಅನುಸರಿಸಿ ಬಾಳನ್ನು ಹೊರೆಯಬಲ್ಲೆನೆಂಬ ವಿಶ್ವಾಸವಿದೆ. ನಿಮ್ಮಂತಹ ಹಿರಿಯರ ಆಶೀರ್ವಾದದಿಂದ ಮತ್ತು ಪ್ರಭು ರಾಮಚಂದ್ರನ ಕೃಪೆಯಿಂದ ನನಗೆ ಮುಂದೆ ಎಲ್ಲವೂ ಸುಗಮವಾಗುತ್ತದೆ. ಈ ವಿಷಯದಲ್ಲಿ ಖಂಡಿತವಾಗಿ ತಾವು ಮನಸ್ಸಿಗೆ ಕಿರಿಕಿರಿ ಪಟ್ಟುಕೊಳ್ಳಬೇಡಿ. ನನ್ನ ರಾಜೀನಾಮೆಯನ್ನು ದಯವಿಟ್ಟು ಅಂಗೀಕರಿಸಿ. ಅದು ನನಗೆ ತಾವು ಮಾಡುವ ಉಪಕಾರವೆಂದು ಭಾವಿಸುತ್ತೇನೆ’ ಎಂದು ಹೇಳಿದರು. ಅಮಲ್ದಾರರಿಗೆ ಸುಬ್ಬಣ್ಣನ ಪ್ರತಿಯೊಂದು ಮಾತು ನಿಜವೆನಿಸಿತು. ಹುಡುಗನ ಧೈರ್ಯ, ದಿಟ್ಟತನ, ಆತ್ಮಗೌರವಗಳು ತುಂಬ ಮೆಚ್ಚುಗೆಯಾದುವು. ಆತನಿಗೆ ಹೋಲಿಸಿಕೊಂಡರೆ ತಾವು ಕೀಳೆನಿಸಿತು. ಕೇವಲ ಅಧಿಕಾರ, ಸ್ಥಾನದ ಬಲದಿಂದ ತಾವು ಹಿರಿಯರು; ಅಧಿಕಾರಬಲವಿಲ್ಲದಿದ್ದರೆ ತಮಗೇನು ಬೆಲೆ? ‘ಉದ್ಯೋಗವಿರುವಾಗ ರುದ್ರನಂತಿರುವನು, ಉದ್ಯೋಗ ಹೋದ ಮರುದಿನವೆ ಹಾಳೂರ ಹದ್ದು ಕಾಣಯ್ಯ’ ಎಂಬ ಸರ್ವಜ್ಞರ ಪದ ಅವರಿಗೆ ಜ್ಞಾಪಕಕ್ಕೆ ಬಂತು. ತನ್ನ ಎಳೆಯ ಭುಜಗಳ ಮೇಲೆ ಸಂಸಾರದ ನೊಗವನ್ನು ಹೊತ್ತು ಧೈರ್ಯದಿಂದ ಸಾಗಿಸಿಕೊಂಡು ಬಂದಿರುವ ಧೀರ; ಇನ್ನು ಮುಂದೆಯೂ ಹೆದರದೆ ಮುಂದಡಿಯಿಡುವ ಸಾಹಸಿ. ಆತನ ವಿಷಯದಲ್ಲಿ ತಾನು ನಡೆದುಕೊಂಡ ರೀತಿ ನಿಜವಾಗಿಯೂ ತಪ್ಪು. ಆಗಿದ್ದು ಆಗಿ ಹೊಗಿದೆ. ಅದಕ್ಕಾಗಿ ಈಗ ಚಿಂತಿಸಿ ಫಲವಿಲ್ಲ, ಎಂದು ಯೋಚಿಸಿ ‘ಸುಬ್ಬಣ್ಣನವರೇ ನನ್ನನ್ನು ದಯವಿಟ್ಟು ಕ್ಷಮಿಸಿ. ನಿಮ್ಮ ಮನಸ್ಸನ್ನು ನೋಯಿಸಿ ನಾನು ಪಾಪಭಾಗಿಯಾದೆ ಎಂದು ನನ್ನ ಅಂತರಾತ್ಮ ತುಡುಕುತ್ತಿದೆ. ಏನೋ ಕೆಟ್ಟ ಘಳಿಗೆ. ಅದನ್ನು ಮರೆತು ಬಿಡಿ. ನಿಮ್ಮ ಮಾತು ನಿಜ. ಮುಂದಿನ ದಿನಗಳು ಹೇಗೋ ಎಂತೋ! ಈ ಸರ್ಕಾರಿ ಚಾಕರಿಯಲ್ಲಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡ ಹುಳುವಿನಂತೆ ಒದ್ದಾಡುವುದಕ್ಕಿಂತ, ಯಾವುದಾದರೊಂದು ವೃತ್ತಿಯನ್ನು ಅವಲಂಬಿಸಿ, ಸ್ವತಂತ್ರರಾಗಿ ಬಾಳುವುದು ಸ್ಟಾಂಪ್‍ವೆಂಟರ್ ಸುಬ್ಬಣ್ಣ 125 ಮೇಲು. ನಿಮ್ಮ ಪ್ರಭು ಶ್ರೀ ರಾಮಚಂದ್ರ ನಿಮ್ಮನ್ನು ಕಾಪಾಡುತ್ತಾನೆ. ಯೋಗ್ಯತೆಯ ದೃಷ್ಟಿಯಿಂದ ನೀವು ಹಿರಿಯರು. ಆದರೆ ವಯಸ್ಸಿನಲ್ಲಿ ಹಿರಿಯನಾದ ನಾನು ನಿಮಗೆ ಸಮಸ್ತ ಸನ್ಮಂಗಳಗಳು ಉಂಟಾಗಲೆಂದು ಆಶೀರ್ವಾದಿಸುತ್ತೇನೆ’. ಇಷ್ಟು ಹೇಳುವಷ್ಟರಲ್ಲಿ ಅವರ ಗಂಟಲು ಕಟ್ಟಿ ಕಣ್ಣೀರು ಹರಿಯಿತು. ಸುಬ್ಬಣ್ಣನವರು ಅವರನ್ನು ಸಂತೈಸಿದರು. ಸರ್ಕಾರದ ಸಕಲ ಕಾಗದ ಪತ್ರಗಳನ್ನೂ ಅವರಿಗೆ ಒಪ್ಪಿಸಿದರು; ಅವರಿಂದ ಕ್ರಮವಾಗಿ ರಶೀತಿಯನ್ನು ಪಡೆದರು; ಅವರ ಕೋರಿಕೆಯನ್ನು ಮೀರಲಾರದೆ ಮಧ್ಯಾಹ್ನ ಅವರ ಸಹಪಂಕ್ತಿಯಲ್ಲಿಯೇ ಕುಳಿತು ಭೋಜನ ಮಾಡಿದರು. ವಿಶ್ರಾಂತಿಯ ನಂತರ ಅವರಿಂದ ಅಪ್ಪಣೆ ಪಡೆದು ಸಾಯಂಕಾಲದ ಹೊತ್ತಿಗೆ ತಳುಕಿಗೆ ಹಿಂದಿರುಗಿ ಮನೆ ಸೇರಿದರು. ಇನ್ನು ಮುಂದೆ ಶೇಕದಾರಿಕೆ ಇಲ್ಲವೆಂದು ಕೇಳಿ ಮನೆಯವರು ತುಂಬ ಪೇಚಾಡಿದರು. ಸುಬ್ಬಣ್ಣನವರು ಅಲ್ಲಿ ನಡೆದುದನ್ನೆಲ್ಲ ವಿವರವಾಗಿ ತಿಳಿಸಿ ಎಲ್ಲರನ್ನೂ ಸಮಾಧಾನ ಪಡಿಸಿದರು. ಮತ್ತೆ ಸ್ಟಾಂಪ್ ವೆಂಡರ್‌ಗಿರಿ, ಅರ್ಜಿ, ಸಾಲದ ಪತ್ರ, ಬರವಣಿಗೆ ಆರಂಭವಾದುವು. ಛತ್ರದ ಪಾರುಪತ್ತೆದಾರಿಯೂ ಅವರ ಚಿಕ್ಕಪ್ಪನವರ ಹೆಸರಿನಲ್ಲಿ ಇದ್ದೇ ಇತ್ತು. ಶೇಕದಾರ್‌ಗಿರಿಯಿಂದ ಹೋಬಳಿಯಲ್ಲಿನ ಎಲ್ಲ ಗ್ರಾಮಗಳ ಜನರ ಪರಿಚಯವಾಗಿತ್ತು. ತುಂಬ ಒಳ್ಳೆಯವರು, ಬಹಳ ಗಟ್ಟಿಗರು, ಶೇಕದಾರರಾಗಿ ವಿಶೇಷ ಅನುಭವವುಳ್ಳವರು, ಮೇಲಿನ ಅಧಿಕಾರಿಗಳನ್ನು ಬಲ್ಲವರು, ಅವರ ಹತ್ತಿರಹೋದರೆ ತಮ್ಮ ಕೆಲಸ ಆಗಿಯೇ ತೀರುತ್ತದೆ ಎಂಬ ವಿಶ್ವಾಸ ಜನರಲ್ಲಿ ಬೆಳೆದುಹೋಗಿತ್ತು. ಜನರು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದರು. ಕೈತುಂಬ ಕೆಲಸ, ಅದಕ್ಕೆ ತಕ್ಕ ಆದಾಯ; ಶೇಕದಾರಿಯ ನಿರ್ಬಂಧವಿರಲಿಲ್ಲ; ಆದಾಯ ಅದಕ್ಕೂ ಹೆಚ್ಚಾಗಿತ್ತು. ಯಾರಿಗೂ ನೋವಿಲ್ಲ, ಯಾರಿಗೂ ಬಲಾತ್ಕಾರವಿಲ್ಲ. ಸಂತೋಷದಿಂದ, ವಿಶ್ವಾಸದಿಂದ, ಧಾರಾಳ ಮನಸ್ಸಿನಿಂದ ಜನ ಹಣದ ರೂಪದಲ್ಲಿ, ದವಸದ ರೂಪದಲ್ಲಿ ತಂದು ತಂದು ಮನೆಗೆ ಹಾಕುತ್ತಿದ್ದರು. ಒಂದೆರಡು ವರ್ಷಕಾಲ ಯಾವ ತೊಂದರೆ ತೊಡಕುಗಳೂ ಇಲ್ಲದೆ ಸರಾಗವಾಗಿ ಸಂಸಾರ ನಡೆದುಕೊಂಡು ಹೋಗುತ್ತಿತ್ತು. ಈ ಅವಧಿಯೊಳಗಾಗಿ ಹಿರಿಯ ಮಗ ವೆಂಕಣ್ಣಯ್ಯ, ಹಿರಿಯ ಮಗಳು ವೆಂಕಮ್ಮ ಹುಟ್ಟಿದರು. ತಮ್ಮ ಸೀನಯ್ಯ ಐದು ರೂಪಾಯಿಯ ಪರೀಕ್ಷೆಯ ತರಗತಿಯಲ್ಲಿ ಓದುತ್ತಿದ್ದ. ಸಣ್ಣ ಸುಬ್ಬಣ್ಣ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ. ಮನೆ ನಂದಗೋಕುಲವಾಗಿತ್ತು. ಅಶನವಸನಗಳಿಗೆ ಯಾವ ತೊಂದರೆಯೂ ಇರಲಿಲ್ಲ. 126 ಮೂರು ತಲೆಮಾರು ಚಿಕ್ಕಪ್ಪ ಲಿಂಗಣ್ಣನವರು ಈ ವೇಳೆಗೆ ಅರುವತ್ತು ವರ್ಷಗಳ ವೃದ್ಧರಾಗಿದ್ದರು. ‘ಮೊದಲೇ ಅಪಾಟಿ ಮಳೆ ಬಂದರೆ ಯಪಾಟಿ’ ಎನ್ನುವಂತೆ ಅವರು ಯಾವ ಹವ್ಯಾಸವನ್ನೂ ಹಚ್ಚಿಕೊಳ್ಳುತ್ತಿರಲಿಲ್ಲ. ಸದಾ ವಿನೋದ, ಉಲ್ಲಾಸ. ದಿನದಲ್ಲಿ ಬಹಳ ಹೊತ್ತು ಮೊಮ್ಮಗ ವೆಂಕಣ್ಣಯ್ಯನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ‘ಮೂಗಣ್ಣ ಮೂಗೋ, ಕಣ್ಣಣ್ಣ ಕಣ್ಣೋ, ಕಿವಿಯಣ್ಣ ಕಿವಿಯೋ,ಬಾಯಣ್ಣ ಬಾಯೊ, ಕೈಯಣ್ಣ ಕೈಯೊ’ ಎಂದು ಅಂಗಾಂಗಗಳ ಹೆಸರು ಹೇಳಿ ಹಾಡುವಾಗ ಮಗು ಆಯಾ ಅಂಗಗಳ ಹೆಸರನ್ನು ಮುಟ್ಟಿ ತೋರಿಸುತ್ತಿದ್ದರೆ ಆನಂದ ಪಟ್ಟು ಮುದ್ದಿಸುವರು. ಅವರ ಕುಟುಂಬಕ್ಕೆ ಇದು ಸಹನೆಯಿಲ್ಲ. ಆದರೂ ಅವರು ಏನು ಮಾಡುವಂತಿಲ್ಲ. ತಮ್ಮಲ್ಲಿಯೇ ತಾವು, ಯಾರಿಗೂ ಕೇಳದಂತೆ ಗೊಣಗಿಕೊಂಡು ಸಮಾಧಾನಪಡಬೇಕಿತ್ತು. ಲಿಂಗಣ್ಣನವರು ಹೆಂಡತಿಯ ಮಾತಿಗೆ ಎಂದೂ ಕಿವಿ ಜೋಲುತ್ತಿರಲಿಲ್ಲ. ಅವರು ಅಲಿಪ್ತರು. ಅವರಿಗೆ ತಮ್ಮ ಮತ್ತು ಅಣ್ಣನ ಮಕ್ಕಳ ನಡುವೆ ಯಾವ ಭೇದವೂ ಇರಲಿಲ್ಲ. ಹಿಂದೆ ಅಣ್ಣ ಇದ್ದರು; ಈಗ ಅವರ ಹಿರಿಯ ಮಗ ಜವಾಬ್ದಾರನಾಗಿದ್ದಾನೆ. ಆಗ ಹೇಗೋ ಈಗಲೂ ಹಾಗೆ. ತಾನು ಮಾತ್ರ ನಿಶ್ಚಿಂತ ಪುರುಷ. ಛತ್ರದ ಪಾರುಪತ್ತೆದಾರಿಕೆ ಅವರ ಹೆಸರಿಗೆ ಕೇವಲ ನಾಮಮಾತ್ರವಾಗಿತ್ತು. ಛತ್ರಕ್ಕೆ ಬಂದವರಿಗೆ ಭತ್ಯೆ ಕೊಡುವುದು, ಅದರ ಲೆಕ್ಕಗಳನ್ನು ಬರೆದಿಡುವುದು ಇತ್ಯಾದಿ ಕೆಲಸಗಳನ್ನೆಲ್ಲ ಲಕ್ಷ್ಮೀದೇವಮ್ಮನೇ ಲೋಪವಿಲ್ಲದಂತೆ ನಡೆಸಿಕೊಂಡು ಹೋಗುತ್ತಿದ್ದರು. ಕಾಶಿಯಿಂದ ರಾಮೇಶ್ವರಕ್ಕೆ ಕಾಲ್ನಡಿಗೆಯಿಂದ ಹೋಗುತ್ತಿದ್ದ ಗೋಸಾಯಿಗಳಲ್ಲಿ ಅನೇಕರು ನಿಜವಾದ ಸಾಧು ಸತ್ಪುರುಷರಾಗಿರುತ್ತಿದ್ದರು. ಛತ್ರದಲ್ಲಿ ಬ್ರಾಹ್ಮಣರೇ ಅಡಿಗೆ ಮಾಡುತ್ತಿದ್ದರು. ಕೆಲವರು ಅಲ್ಲಿ ಊಟ ಮಾಡಲು ಒಪ್ಪುತ್ತಿರಲಿಲ್ಲ. ಅವರು ಸ್ನಾನ ಮಾಡಿ, ಹಣೆಗಿಟ್ಟು, ಮೀರಾ ಬಾಯಿಯ ಭಕ್ತಿಗೀತೆಗಳನ್ನೋ, ಜಯದೇವ ಗೋಸ್ವಾಮಿಯ ಗೀತ ಗೋವಿಂದವನ್ನೋ ಭಕ್ತಿಯಿಂದ ಹಾಡುವರು. ಕೆಲವರು ಭಗವದ್ಗೀತಾ ಪಾರಾಯಣ ಮಾಡುವರು. ತಿರಿದು ತಂದ ಬೆರಣಿಯನ್ನು ತಾಳಿ ಹಾಕಿ ಪಾರುಪತ್ತೆಗಾರರು ಕೊಟ್ಟ ಹಿಟ್ಟಿನಿಂದ ದಪ್ಪವಾಗಿ ಎರಡೋ ಮೂರೋ ರೊಟ್ಟಿಗಳನ್ನು ತಟ್ಟಿ ಬೇಯಿಸುವರು. ಬೇಳೆಯನ್ನು ಬೇಯಿಸಿ ತೊವ್ವೆ ಮಾಡಿ, ಅದನ್ನೂ ರೊಟ್ಟಿಯನ್ನೂ ಯಜ್ಞೇಶ್ವರನಿಗೆ ನೈವೇದ್ಯ ಮಾಡಿ ತೃಪ್ತಿಯಾಗಿ ಊಟ ಮಾಡುವರು. ಲಕ್ಷ್ಮೀದೇವಮ್ಮ ಅವರಿಗೆ ಸಾಕಷ್ಟು ನೀಡುತ್ತಿದ್ದ ಮಜ್ಜಿಗೆಯನ್ನು ಕುಡಿದು ಆನಂದಿಸುತ್ತಿದ್ದರು. ಗೋಸಾವಿಗಳಲ್ಲದೆ ಅನೇಕ ಬ್ರಾಹ್ಮಣ ಯಾತ್ರಾರ್ಥಿಗಳೂ, ಯಾಚಕ ಬ್ರಾಹ್ಮಣರೂ ಬರುತ್ತಿದ್ದರು. ಅವರಲ್ಲಿ ಬಹಳ ಸ್ಟಾಂಪ್‍ವೆಂಟರ್ ಸುಬ್ಬಣ್ಣ 127 ಜನ ಛತ್ರದಲ್ಲಿಯೇ ಊಟ ಮಾಡುತ್ತಿದ್ದರು. ಅದು ಒಗ್ಗದ ನಿಷ್ಠರನ್ನು ಸುಬ್ಬಣ್ಣನವರು ತಮ್ಮ ಸ್ವಂತ ಅತಿಥಿಗಳಾಗಿ ಆಹ್ವಾನಿಸುತ್ತಿದ್ದರು. ಕೆಲ ಕಾಲಾನಂತರ ಚಿಕ್ಕಪ್ಪ-ಚಿಕ್ಕಮ್ಮಂದಿರಿಬ್ಬರೂ ವೈಕುಂಠವಾಸಿಗಳಾದರು. ಸುಬ್ಬಣ್ಣನವರೇ ತಮ್ಮ ಸಣ್ಣ ಸುಬ್ಬಣ್ಣನನ್ನು ಮುಂದಿಟ್ಟುಕೊಂಡು ಕರ್ಮಾಂತರಗಳನ್ನೆಲ್ಲ ಸಾಂಗವಾಗಿ ನೆರವೇರಿಸಿ ವೈಕುಂಠ ಸಮಾರಾಧನೆಯನ್ನೂ ಮಾಡಿದರು. ಈಗ ಸಣ್ಣ ಸುಬ್ಬಣ್ಣನ ಜವಾಬ್ದಾರಿ ತಮ್ಮ ಮೇಲೆಯೇ ಬಿದ್ದಂತಾಯಿತು. ಅದನ್ನು ಅವರು ಸಂತೋಷವಾಗಿ ವಹಿಸಿಕೊಂಡರು. ಸ್ವಂತ ತಮ್ಮ ಶ್ರೀನಿವಾಸ ಐದು ರೂಪಾಯಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇಂಗ್ಲೀಷ್‌ ವಿದ್ಯಾಭ್ಯಾಸಕ್ಕಾಗಿ ಚಿತ್ರದುರ್ಗದ ಹೈಸ್ಕೂಲನ್ನು ಸೇರಿದ. ಸುಬ್ಬಣ್ಣ ಚಿತ್ರದುರ್ಗಕ್ಕೆ ಹೋಗಿ ತಮ್ಮನ ವಾಸಕ್ಕೊಂದು ಸಣ್ಣ ಕೋಣೆಯನ್ನು ಗೊತ್ತು ಮಾಡಿದರು. ಊಟಕ್ಕೆ ವಾರದ ಮನೆಗಳೂ ಸಿಕ್ಕುವುದು ಅಷ್ಟೇನೂ ಕಷ್ಟವಾಗಲಿಲ್ಲ. ಶೀನಯ್ಯ ಸುಟಿಯಾದ ಹುಡುಗ, ಸಂಭಾವಿತ, ಭಯಸ್ಥ, ಮೃದುಭಾಷಿ, ಹೆಚ್ಚಿಗೆ ಯಾರ ಸಹವಾಸಕ್ಕೂ ಹೋಗುವವನಲ್ಲ, ಯಾವಾಗಲೂ ನಗುಮುಖ, ನಯವಾಗಿ, ಮಿತವಾಗಿ ಮಾತನಾಡುವವನು, ತಾನಾಯಿತು ತನ್ನ ಪಾಠಗಳಾಯಿತು ಎಂಬ ಸ್ವಭಾವದವನು. ಹೀಗಾಗಿ ಅವನ ಸ್ನೇಹಿತ ವರ್ಗ ಬೆರಳಮೇಲೆ ಎಣಿಸುವಷ್ಟು ಮಾತ್ರ. ಅವನನ್ನು ಚಿತ್ರದುರ್ಗಕ್ಕೆ ಕಳುಹಿಸುವ ದಿನ, ತಾಯಿ ಹನುಮಕ್ಕಮ್ಮನಿಗಿಂತಲೂ, ಅತ್ತಿಗೆ ಲಕ್ಷ್ಮೀದೇವಮ್ಮನಿಗೆ ಹೆಚ್ಚು ಆತಂಕ. ಆತನ ಬಟ್ಟೆಬರೆಗಳನ್ನೆಲ್ಲ ಚೊಕ್ಕಟವಾಗಿ ಒಗೆದು ಒಣಗಿಸಿ, ಮಡಿಸಿ ಆತನ ಪುಸ್ತಕಗಳೊಂದಿಗೆ ಮಟ್ಟಸವಾಗಿ ಪೆಟ್ಟಿಗೆಯಲ್ಲಿಟ್ಟರು. ಒಂದೆರಡು ವಾರಗಳಿಗಾಗುವಷ್ಟು ಚಕ್ಕುಲಿ, ಕೋಡುಬಳೆ, ಹುರಿಯಕ್ಕಿ, ಅವಲಕ್ಕಿ, ಚಟ್ನಿಪುಡಿ ಮೊದಲಾದ ತಿನಿಸುಗಳನ್ನು ಮಾಡಿ- ಅವನ್ನು ಓರಣವಾಗಿಟ್ಟುಕೊಳ್ಳುವಂತೆಯೂ, ಮಿತವಾಗಿ ಬಳಸಿಕೊಳ್ಳುವಂತೆಯೂ ಹೇಳಿ ಕಟ್ಟಿಕೊಟ್ಟಳು. ಸುಬ್ಬಣ್ಣನವರು ತಮ್ಮನಿಗೆ ಚೆನ್ನಾಗಿ ಓದಿ ಅಭಿವೃದ್ಧಿಗೆ ಬರುವಂತೆ ಯೋಗ್ಯವಾಗಿದ್ದು, ಮನೆತನದ ಗೌರವಕ್ಕೆ ಕುಂದು ಉಂಟಾಗದಂತೆ ನಡೆದುಕೊಳ್ಳಬೇಕೆಂದು ಬುದ್ಧಿ ಹೇಳಿದರು. ಹತ್ತು ರೂಪಾಯಿಗಳನ್ನು ತಮ್ಮನ ಕೈಲಿಟ್ಟು ‘ಬಹಳ ಮಿತವಾಗಿ ವೆಚ್ಚಮಾಡು, ಮತ್ತೆ ಮತ್ತೆ ಕಾಗದ ಬರೆ’ ಎಂದು ಹೇಳಿ ಕಳುಹಿಸಿದರು. * * * * 128 ಮೂರು ತಲೆಮಾರು 7. ಆಸ್ತಿ ಪಾಸ್ತಿ ಇದುವರೆಗೆ ಸುಬ್ಬಣ್ಣನವರು ವಾಸಮಾಡುತ್ತಿದ್ದ ಮನೆ ಮಾಲೀಕಳಾದ ಕಾವೇರಮ್ಮ ಶತವೃದ್ಧಳಾಗಿ ಕಾಲವಾದಳು. ಆಕೆಯ ಜೀವಮಾನದಲ್ಲಿ ‘ಆಕೆಯು ಇದ್ದಾಳೆಯೇ, ಹೇಗೆ ಜೀವಿಸಿದ್ದಾಳೆ? ಯಾರು ಆಕೆಯ ಪೋಷಣೆ, ರಕ್ಷಣೆ ಮಾಡುತ್ತಾರೆ?’ ಎಂದು ಎಂದೂ ಯೋಚಿಸದೆ, ಆಕೆಯ ಕಡೆ ತಿರುಗಿಯೂ ನೋಡದೇ ಇದ್ದ ಸಂಬಂಧಿಗಳು ಆಕೆ ಗತಿಸಿದ ಸಮಾಚಾರ ಕೇಳುತ್ತಲೇ ಆಕೆಯ ಆಸ್ತಿಯ ಮೇಲೆ ತಮ್ಮ ಹಕ್ಕು ಬಾಧ್ಯತೆಗಳನ್ನು ಸ್ಥಾಪಿಸಲು ಹಾತೊರೆದು ಬಂದರು. ಅಲ್ಲಿಯೇ ನಿಂತು ಆಸ್ತಿಪಾಸ್ತಿಗಳನ್ನು ರೂಢಿಸಿಕೊಂಡು ಆಕೆಯ ಹೆಸರನ್ನು ನಿಲ್ಲಿಸಬೇಕೆಂಬ ಆಸೆ, ಅಕ್ಕರೆ ಅವರಲ್ಲಿ ಯಾರಿಗೂ ಇರಲಿಲ್ಲ. ಇದ್ದುಬದ್ದುದನ್ನು ಆರಕ್ಕೆ ಮೂರಾಗಿ ಮಾರಿ ಹಾಕಿ, ಬಂದದ್ದನ್ನು ಕೈಲಿ ಹಾಕಿಕೊಂಡು ಒಡಿ ಹೋಗುವ ಅಭಿಲಾಷೆ ಅವರದು. ಇದನ್ನು ಮೊದಲೇ ಅರಿತಿದ್ದರು, ಸುಬ್ಬಣ್ಣನವರು. ಅಲ್ಲದೆ ಆ ಮನೆಗೆ ಸಿಹಿನೀರನ್ನು ದೂರದಲ್ಲಿದ್ದ ಶಾನುಭೋಗರ ಬಾವಿಯಿಂದ ತರಬೇಕಾಗುತ್ತಿತ್ತು. ತಲೆಬಾಗಿಲಿನಲ್ಲಿ ನಾಲ್ಕೈದು ಮೆಟ್ಟಿಲುಗಳನ್ನು ಹತ್ತಿ ಮನೆಯನ್ನು ಪ್ರವೇಶಿಸಬೇಕಾಗಿತ್ತು. ಮನೆಯ ಮುಂದೆ ಅಂಗಳವಿಲ್ಲ, ಹಿಂದೆ ಹಿತ್ತಲಿಲ್ಲ. ಆದ್ದರಿಂದ ಅನುಕೂಲವಾದ ಬೇರೆಯ ಮನೆಯನ್ನು ನೊಡಿಕೊಳ್ಳಬೇಕೆಂದು ಅವರು ಯೋಚಿಸುತ್ತಿದ್ದರು. ತಾವಿದ್ದ ಮನೆಯ ಹಿಂದಿನ ಬೀದಿಯಲ್ಲಿ ವಿಶಾಲವಾದ ಒಂದು ಮನೆಯಿತ್ತು. ಅದು ಹಳೆಯ ಮನೆಯೇ. ಸಮಯ ಬಂದರೆ ಅದರಲ್ಲಿ ಎರಡು ಮನೆಗಳನ್ನು ಅನುಕೂಲವಾಗಿ ಮಾಡಿಕೊಳ್ಳಬಹುದಿತ್ತು. ಮುಂದೆ ದೊಡ್ಡದಾದ ಅಂಗಳ, ಹಿಂದೆ ದೇಶೋವಿಶಾಲವಾದ ಹಿತ್ತಲು. ಸುಬ್ಬಣ್ಣನವರು ಒಂದು ನೂರು ರೂಪಾಯಿಗಳಿಗೆ ಆ ಮನೆಯನ್ನು ಕೊಂಡುಕೊಂಡರು. ಮುಂದಿನ ಪಡಸಾಲೆ ಸ್ವಲ್ಪ ಶಿಥಿಲವಾಗಿತ್ತು. ಅದನ್ನು ರಿಪೇರಿ ಮಾಡಿಸಿದರು. ಮುಂಭಾಗದಲ್ಲಿ ಎರಡು ತಲೆಬಾಗಿಲುಗಳು, ಆ ಎರಡು ಬಾಗಿಲುಗಳ ಮುಂದೆಯೂ ಎರಡೆರಡು ಜಗುಲಿಗಳು. ಎಡಜಗುಲಿಯ ಮೇಲೆ ಪ್ರತ್ಯೇಕವಾದ ಒಂದು ಕೊಠಡಿ. ಅದು ಸುಬ್ಬಣ್ಣನವರ ದಿವಾನಖಾನೆ. ಅವರ ನಿತ್ಯದ ಕಾರ್ಯಕಲಾಪಗಳಿಗೆ ಅದು ತುಂಬ ಅನುಕೂಲವಾಗಿತ್ತು. ಮನೆಗೆ ಆಸ್ತಿ ಪಾಸ್ತಿ 129 ಸುಮಾರು ಇಪ್ಪತ್ತು ಗಜಗಳ ದೂರದಲ್ಲಿ ಸೀನೀರಿನ ಬಾವಿ. ತಲೆಬಾಗಿಲಿನಿಂದಾಗಲಿ, ಹಿತ್ತಲಿನಿಂದಾಗಲಿ ಅದು ಒಂದೇ ದೂರ. ಸುಬ್ಬಣ್ಣನವರು, ಕಾವೇರಮ್ಮ ಗತಿಸುತ್ತಲೇ ತಾವು ಕೊಂಡಿದ್ದ ಈ ಹೊಸ ಮನೆಯನ್ನು, ಪುಣ್ಯಾಹ ಮಾಡಿಸಿ, ಶುಭದಿನ, ಶುಭ ಮುಹೂರ್ತದಲ್ಲಿ ಬಂದು ಸೇರಿಕೊಂಡರು. ಸುಬ್ಬಣ್ಣನವರು ಅಪೇಕ್ಷೆಪಟ್ಟಿದ್ದರೆ ಕಾವೇರಮ್ಮನ ಮನೆ ಜಮೀನುಗಳೆರಡನ್ನೂ ಕೊಂಡುಕೊಳ್ಳಬಹುದಿತ್ತು. ಆದರೆ ಆ ಮನೆ, ಜಮೀನುಗಳೆರಡೂ ನಿರ್ವಂಶವಾಗಿದ್ದ ಒಂದು ಸಂಸಾರದ ಸೊತ್ತು. ಬೆಳೆಯುತ್ತಿರುವ ತಮ್ಮ ಸಂಸಾರಕ್ಕೆ ಅಂತಹ ಸೊತ್ತು ಬೇಡವೆನಿಸಿತು ಅವರಿಗೆ. ಆ ಸ್ವತ್ತುಗಳನ್ನು ಬೇರೆ ಯಾರೋ ಕೊಂಡುಕೊಂಡರು. ನಾನು ಕಂಡಂತೆ ಆ ಮನೆಯೆಲ್ಲ ಬಿದ್ದುಹೋಗಿ ಅದನ್ನು ಕೊಂಡವರ ವಂಶವೂ ನಿರ್ವಂಶವಾಯಿತು. ಅದೆ ಜಾಗದಲ್ಲಿ ಹೊಸಮನೆಯೊಂದು ನಿರ್ಮಾಣವಾಯಿತು. ಹಾಗೆ ನಿರ್ಮಿಸಿ ಅದರಲ್ಲಿ ಸೇರಿಕೊಂಡವರು, ಅಲ್ಲಿರುವವರೆಗೆ ನಾನಾ ವಿಧವಾದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ, ಯಾರಿಗೋ ಅದನ್ನು ಮಾರಿ ಕೈ ತೊಳೆದುಕೊಂಡರು. ಈಗ ಹಾಲಿ ಅಲ್ಲಿರುವಾತನಿಗೆ ಮನೆಯವರೆಲ್ಲ ಹೋಗಿ, ಕೇವಲ ಒಬ್ಬ ಮಗನೊಂದಿಗೆ ಕಷ್ಟದಿಂದ ಒಂಟಿ ಬಾಳು ಬಾಳುತ್ತಿದ್ದಾನೆ. ಹಿಂದೆ ನೆಮ್ಮದಿಯಾಗಿದ್ದ ಆತ ಈಗ ಅಹನ್ಯಹನಿ ಕಾಲಕ್ಷೆಪ ಮಾಡುತ್ತಿದ್ದಾನೆ. ಇದಕ್ಕೆ ಏನು ಹೇಳುವುದು? ಸುಬ್ಬಣ್ಣನವರಿಗೆ ಸ್ವಂತವಾದ ಮನೆಯಾಯಿತು. ಹಂಗಿನ ವಾಸ ತಪ್ಪಿತು. ಮನೆಗೆ ಸಾಕಾಗುವಷ್ಟು ಧಾನ್ಯ ಬರುವಂತಾದರೆ ಮತ್ತೊಂದು ದೊಡ್ಡ ಭಾರ ಇಳಿದಂತಾಗುತ್ತದೆ. ಆದರೆ ಈಗ ತಾವಿರುವ ಸ್ಥಿತಿಯಲ್ಲಿ ನಿಷ್ಕøಷ್ಟವಾದ ಆದಾಯ ಬರುವ ಯಾವ ವೃತ್ತಿಯೂ ಇಲ್ಲ, ಸಾಮಾನ್ಯವಾಗಿ ಪ್ರತಿ ಪದಾರ್ಥವನ್ನೂ ಕೊಂಡೇ ತರಬೇಕು. ಅಷ್ಟೋ ಇಷ್ಟೋ ದವಸ - ಧಾನ್ಯಗಳನ್ನು ಯಾರೋ ತಂದು ಹಾಕುತ್ತಾರೆ, ನಿಜ. ಆದರೆ, ಅದೆಲ್ಲ ನಾಯಿ ತಲೆಯ ಮೇಲಿನ ಬುತ್ತಿ, ಮನೆಯಲ್ಲಿ ಸಾಕಷ್ಟು ದೊಡ್ಡ ಸಂಸಾರ ಸಾಗಬೇಕಾಗಿದೆ. ಹಬ್ಬ ಹುಣ್ಣಿಮೆಗಳು, ವ್ರತಕಥೆಗಳು ನಡೆಯಬೇಕು, ನೆಂಟರಿಷ್ಟರು, ಅತಿಥಿ, ಅಭ್ಯಾಗತರು - ಇವರಿಗೆ ಆದರದ ಸತ್ಕಾರಗಳಾಗಬೇಕು. ತಮ್ಮ ಓದುತ್ತಿದ್ದಾನೆ. ಹೈಸ್ಕೂಲಿನ ಓದು ಮುಗಿಸಿದರೆ ಬೆಂಗಳೂರಿಗೋ, ಮೈಸೂರಿಗೋ, ಅವನನ್ನು ಕಳುಹಿಸಿ ತಿಂಗಳು, ತಿಂಗಳು ಹಣ ಒದಗಿಸಬೇಕು. ದುಡಿಯುತ್ತಿರುವುದು ಒಂದೇ ಕೈ, ಖರ್ಚು ನಾನಾಮುಖವಾಗಿದೆ. ಪ್ರಭು ರಾಮಚಂದ್ರ ಹೇಗೋ ಎಲ್ಲವನ್ನೂ ಸರಾಗವಾಗಿ ನಡೆಸುತ್ತಿದ್ದಾನೆ. ಇನ್ನು ಉಳಿಸುವುದೆಲ್ಲಿ? ಜಮೀನು ಕೊಳ್ಳುವುದೆಲ್ಲಿ? ಏನಾದರಾಗಲಿ, 130 ಮೂರು ತಲೆಮಾರು ಹೇಗಾದರೂ ಮಾಡಿ ಮನೆಗಾಗುವಷ್ಟು ಭತ್ತ ಬರುವಂತೆ ಒಂದು ಜಮೀನನ್ನು ಮಾಡಲೇಬೇಕು. ಈಶ್ವರಕೃಪೆಯಾದರೆ ತೃಣವೂ ಪರ್ವತವಾಗುತ್ತದೆ. ಯಾವ ವಿಧವಾದ ಲೌಕಿಕ ಆಧಾರವಾಗಲಿ, ಅನುಭವವಾಗಲಿ ಇಲ್ಲದೇ ಇದ್ದ ಕಾಲದಲ್ಲಿ, ಕೇವಲ ಬಾಲ್ಯದಲ್ಲಿಯೇ ತನ್ನ ಕೈ ಹಿಡಿದು ಮುನ್ನಡೆಸಿದ ಪ್ರಭು ರಾಮಚಂದ್ರನ ಇಚ್ಛೆಗೆ ಬಂದರೆ ಯಾವುದು ತಾನೇ ಅಸಾಧ್ಯ? ಅದಕ್ಕೆ ತಕ್ಕ ಸನ್ನಿವೇಶ, ಸಂದರ್ಭಗಳನ್ನು ಆ ಪ್ರಭುವೇ ಒದಗಿಸುವನೆಂದು ದೃಢಭಾವನೆಯಿತ್ತು, ಸುಬ್ಬಣ್ಣನಿಗೆ. ಸ್ವಲ್ಪ ಕಾಲದಲ್ಲಿಯೇ ಆ ಭಾವನೆ ಸತ್ಯವಾಗುವ ಸಂದರ್ಭ ಸೃಷ್ಟಿಯಾಯಿತು. * * * * 131 9. ಕಂಟ್ರಾಕ್ಟರದಾರ ಭೀಮರಾಯ ಪಾವಗಡ ತಾಲ್ಲೂಕಿನಲ್ಲಿ ಪಾವಗಡದ ಪಶ್ಚಿಮಕ್ಕೆ ಹತ್ತು ಮೈಲಿ ದೂರದಲ್ಲಿ ಹಂದಿಕುಂಟೆ ಎಂಬ ಒಂದು ಗ್ರಾಮವಿದೆ. ಈಗ ಅದಕ್ಕೆ ಚನ್ನಕೇಶವಪುರ ಎಂಬ ಹೊಸ ನಾಮಕರಣವಾಗಿದೆ. ಆದರೂ ಹಳೆಯ ತಲೆಗಳು ಹಳೆಯ ಹೆಸರನ್ನೇ ಈಗಲೂ ಬಳಸುತ್ತಾರೆ. ಆ ಊರಿನಲ್ಲಿ ಒಂದು ಜೋಯಿಸರ ಮನೆತನವಿತ್ತು. ಅವರು ಮುಲುಕನಾಡು ಪಂಗಡದವರು; ನಮ್ಮ ದೂರದ ಸಂಬಂಧಿಗಳೂ ನಿಜ. ಅವರಿಗೆ ವಿಪರೀತ ಬಡತನ. ತಾಯಿ ಮತ್ತು ನಾಲ್ಕು ಜನ ಗಂಡು ಮಕ್ಕಳು. ಅವರಲ್ಲಿ ಮೂರುಜನ ಸಾಕಷ್ಟು ವಯಸ್ಸಾದವರು, ದುಡಿಯಲು ಶಕ್ತರಾದವರು. ಆದರೆ ದುಡಿದು ಮಾಡಬಹುದಾದ ಕೆಲಸವೇ ಇಲ್ಲ, ಆ ಕೊಂಪೆಯಲ್ಲಿ ಏನೇನು ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಜೀವನ ತುಂಬ ಕಠಿಣವಾಯಿತು. ಐವರ ಆ ಸಂಸಾರಕ್ಕೆ ಒಂದು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ಅವರೆಲ್ಲ ಒಟ್ಟಿಗೆ ಕುಳಿತು ಯೋಚಿಸಿದರು. ‘ಈ ಊರಿನಲ್ಲಂತೂ ಏನೂ ಆಗುವಂತಿಲ್ಲ; ಬೇರೆ ಎಲ್ಲಿಯಾದರೂ ಹೋಗಿ ಜೀವನಕ್ಕೆ ಮಾರ್ಗವನ್ನು ಕಂಡುಕೊಳ್ಳಬೇಕು, ಅದೂ ಆದಷ್ಟು ಬೇಗ, ಇಲ್ಲದಿದ್ದರೆ ಉಳಿಗಾಲವಿಲ್ಲ’. ಈ ನಾಲ್ವರಲ್ಲಿ ಯಾರೂ ಹೆಚ್ಚು ಓದಿದವರಲ್ಲ. ಆದರೆ ಎರಡನೇ ಮಗ ಭೀಮರಾಯ ವಿದ್ಯಾವಂತನಲ್ಲದಿದ್ದರೂ ಕೆಚ್ಚೆದೆಯೆ ಗಂಡುಗಲಿ, ಮಹಾಧೈರ್ಯಶಾಲಿ, ಕಲಿಯುಗದ ಭೀಮಸೇನ. ಆತ ವಿವೇಕಶಾಲಿ, ಬುದ್ಧಿಶಾಲಿ, ಸಮಯಾಸಮಯಗಳನ್ನು ಅರಿತು, ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲ ಲೌಕಿಕ ಜಾಣ್ಮೆಯೂ ಇತ್ತು. ಬಡತನದಲ್ಲಿ ಬೆಳೆದುಬಂದಿದ್ದರೂ ಆತನಲ್ಲಿ ಭೀಮಕಾಯ, ಭೀಮಬಲ ಅದು ಹೇಗೆ ಸೇರಿದ್ದವೋ! ಅಂತಹ ಬಡತನದಲ್ಲಿಯೂ ಆತ ಸದಾ ಉತ್ಸಾಹಶಾಲಿ. ಸಮಾಲೋಚನೆಯಾದ ಮೇಲೆ ಆತ ಹೇಳಿದ - ‘ನಾವು ಈ ಊರನ್ನು ಬಿಡಲೇಬೇಕು, ಇಲ್ಲದಿದ್ದರೆ ಹೊಟ್ಟೆಗಿಲ್ಲದೆ ಸಾಯುತ್ತೇವೆ. ನಾನು ನಾಳೆ ಹಿರಿಯೂರಿಗೆ ಹೋಗುತ್ತೇನೆ. ಅಲ್ಲಿ ನಮ್ಮವರಿದ್ದಾರೆ. ಅದು ದೊಡ್ಡ ಊರು, ತಾಲ್ಲೂಕು ಜಾಗ, ಏನಾದರೂ ಕೆಲಸ ಸಿಕ್ಕಬಹುದು. ಪೊಲೀಸ್ ಇಲಾಖೆಯಲ್ಲಿ ಪ್ರಯತ್ನಿಸುತ್ತೇನೆ. ಕೆಲಸ ಸಿಕ್ಕುವವರೆಗೆ ಅಲ್ಲಿ ನಮ್ಮವರ ಮನೆಗಳಲ್ಲಿ ಊಟ 132 ಮೂರು ತಲೆಮಾರು ತಿಂಡಿಗಳಿಗೇನೂ ಕೊರತೆಯಾಗುವುದಿಲ್ಲ. ಕೆಲಸ ಸಿಕ್ಕ ಕೂಡಲೇ ನಿಮ್ಮನ್ನು ಕರೆಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ನೀವೆಲ್ಲ ಇಲ್ಲಿ ಸಾಲ ಮಾಡಿಯೋ ಕೂಲಿಮಾಡಿಯೋ, ಹೇಗಾದರೂ ಉಸಿರಾಡಿಸುತ್ತಿರಿ’ ಎಂದು ಸಲಹೆ ಮಾಡಿದ. ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಭೀಮರಾಯ ದಾಪು ಹೆಜ್ಜೆಗಳನ್ನಿಡುತ್ತ ಹಿರಿಯೂರಿಗೆ ನಡೆದುಕೊಂಡು ಹೋದ. ಸುಮಾರು ಐವತ್ತು ಮೈಲಿಗಳ ಪ್ರಯಾಣವನ್ನು ಮೂವತ್ತಾರು ಗಂಟೆಗಳಲ್ಲಿ ನಿರ್ಲಕ್ಷ್ಯವಾಗಿ ನಡೆದುಹೋದ. ಮೊದಲೆ ಯೋಚಿಸಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕಾಗಿ ಸಾಕಷ್ಟು ಪ್ರಯತ್ನಿಸಿದ. ಆತನ ವ್ಯಕ್ತಿತ್ವವನ್ನು ಕಂಡು ಆ ಇಲಾಖೆಯವರು ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ತುಂಬ ಆತುರರಾಗಿದ್ದರು. ಆದರೆ ಅಲ್ಲಿ ಯಾವ ಸ್ಥಾನವೂ ಖಾಲಿ ಇರಲಿಲ್ಲ. ಆ ಇಲಾಖೆಗೆ ಸೇರಿ ಒಬ್ಬ ದಫೇದಾರನೋ, ಸಬ್‍ಇನ್ಸ್‌ಪೆಕ್ಟರೋ ಆಗಿ ಅನಾಮಧೇಯನಾಗಿ ಸಾಯುವ ದುರದೃಷ್ಟಶಾಲಿಯಾಗಿರಲಿಲ್ಲ, ಭೀಮರಾಯ. ಉನ್ನತ ಮಟ್ಟಕ್ಕೇರಿ, ಸಹಸ್ರಾರು ಜನಕ್ಕೆ ಆಶ್ರೆಯದಾತನಾಗಿ, ಕಲಿಯುಗ ಕರ್ಣನೆಂದು ಹೊಗಳಿಸಿಕೊಂಡು, ರಾಜವೈಭವದಿಂದ ಬಾಳಿ, ಶಾಶ್ವತ ಕೀರ್ತಿಗೆ ಪಾತ್ರನಾಗಬೇಕಾದ ಪುಣ್ಯ ಜೀವಿ, ಆತ. ಯಃಕಶ್ಚಿತ್ ಪೊಲೀಸ್ ನೌಕರಿ ಆತನಿಗೆ ಹೇಗೆ ಒದಗೀತು? ಭೀಮರಾಯ ಯಾವುದಾದರೊಂದು ಕೆಲಸಕ್ಕೆ ಸೇರಲೇಬೇಕಾಗಿತ್ತು, ತನ್ನ ಮತ್ತು ತನ್ನ ತಾಯಿ, ಸೋದರರ ಜೀವನವನ್ನು ಉಳಿಸಿಕೊಳ್ಳಲು, ಆತ ಅಲ್ಲಿ, ಇಲ್ಲಿ ತಡಕಾಡಿದ, ಒಂದು ಕೆಲಸ ಸಿಕ್ಕಬೇಕು. ಎಷ್ಟೋ ಪ್ರಯತ್ನ ಮಾಡಿದ ಮೇಲೆ ಇಂಜಿನಿಯರಿಂಗ್ ಇಲಾಖೆಯಲ್ಲಿ ಅನಾಮಧೇಯವಾದ ಮೇಸ್ತ್ರಿ ಕೆಲಸವೊಂದು ಸಿಕ್ಕಿತು. ಸರ್ಕಾರಿ ಇಲಾಖೆಯಿಂದ ರಸ್ತೆಗಳಲ್ಲಿ ನಡೆಯುತ್ತಿದ್ದ ಕಾಮಗಾರಿಯ ಆಳುಗಳ ಹಾಜರಿ, ಗೈರುಹಾಜರಿಯನ್ನು ಗುರುತಿಸುವುದು, ಅವರ ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುವುದು - ಅಂದಾಜಿಗೆ ಸರಿಯಾಗಿ ಕೆಲಸ ಮಾಡಿಸುವುದು- ಇವು ಮೇಸ್ತ್ರಿಯಾದವನ ನಿತ್ಯಕರ್ತವ್ಯ. ತಿಂಗಳಿಗೆ ಐದು ರೂ. ಸಂಬಳ. ಬಂಧುಗಳ ಮನೆಯಲ್ಲಿ ಊಟ ಮಾಡಿಕೊಂಡು ಸಂಬಳವನ್ನು ಊರಿಗೆ ಕಳುಹಿಸಿಕೊಡುತ್ತಿದ್ದ. ಕೆಲವು ತಿಂಗಳು ಕಳೆಯುವಷ್ಟರಲ್ಲಿ ಕಾಮಗಾರಿಗಳ ಮರ್ಮವೆಲ್ಲ ಅವನಿಗೆ ಮನದಟ್ಟಾಯಿತು. ಕಂಟ್ರಾಕ್ಟುದಾರರು ಹೇಗೆ ಹಣಗಳಿಸಿ ಅನುಕೂಲಸ್ಥಿತಿಗೆ ಬರುತ್ತಿದ್ದರು ಎಂಬ ಗುಟ್ಟೆಲ್ಲ ಆತನಿಗೆ ಗೊತ್ತಾಯಿತು. ತಾನೂ ಒಬ್ಬ ಕಂಟ್ರಾಕ್ಟರ್ ಆಗುವಂತಿದ್ದರೆ! ಅವರಂತೆಯೇ ಕಂಟ್ರಾಕ್ಟರದಾರ ಭೀಮರಾಯ 133 ತಾನೂ ಯಥೇಚ್ಛವಾಗಿ ಸಂಪಾದನೆ ಮಾಡಿ ಅನುಕೂಲಸ್ಥನಾಗಬಹುದಿತ್ತು. ಆದರೆ ತನಗೆ ಆ ಅದೃಷ್ಟ ಎಲ್ಲಿಂದ ಬರಬೇಕು? ಬಂಡವಾಳವನ್ನು ತನ್ನಂತಹವನಿಗೆ ಕೊಡುವವರು ಯಾರು? ತನ್ನಲ್ಲಿ ಏನು ನೋಡಿ ಕೊಡಬೇಕು? ಅಧಿಕಾರವೇ, ಆಸ್ತಿಯೇ? ಯಾವುದೂ ಇಲ್ಲ, ಅವನ ಯೋಚನೆ, ಯೋಚನೆಯಾಗಿಯೇ ಉಳಿಯುತ್ತಿತ್ತು. ಒಂದು ಸಾರಿ ಭೀಮರಾಯ ಹಿರಿಯೂರು-ಚಿತ್ರದುರ್ಗ ರಸ್ತೆಯಲ್ಲಿ ಕೆಲಸದ ಆಳುಗಳ ಮೇಲೆ ಉಸ್ತುವಾರಿ ನಡೆಸುತ್ತಿದ್ದ. ಆ ದಿನ ಚಿತ್ರದುರ್ಗದ ಎಕ್ಸಿಕ್ಯುಟಿವ್ ಎಂಜಿನಿಯರ್‍ರವರು ರಸ್ತೆಯ ಕೆಲಸವನ್ನು ತನಿಖೆ ಮಾಡುವುದಕ್ಕಾಗಿ ಅಸಿಸ್ಟೆಂಟ್ ಎಂಜಿನಿಯರರೊಂದಿಗೆ ಜೋಡು ಕುದುರೆ ಸಾರೋಟಿನಲ್ಲಿ ಬಂದರು. ಆತ ಪರಂಗಿಯವನು. ಲಹರಿಯ ಮನುಷ್ಯ, ಉದಾರಿ, ಗುಣಗ್ರಾಹಿ. ಆತ ಬಂದಾಗ ಭೀಮರಾಯ ಸೇತುವೆಯೊಂದನ್ನು ಸರಿಮಾಡಿಸುತ್ತಿದ್ದ, ಎಂಜನಿಯರಿಬ್ಬರೂ ಸಾರೋಟನ್ನು ನಿಲ್ಲಿಸಿ, ಸ್ವಲ್ಪ ಹೊತ್ತು ಅಲ್ಲಿನ ಕೆಲಸವನ್ನು ನೋಡುತ್ತಾ ನಿಂತರು. ಭೀಮರಾಯ, ಸಾಹೇಬರಿಗೆ ಮರ್ಯಾದೆಯಿಂದ ನಮಸ್ಕರಿಸಿ ತನ್ನ ಕೆಲಸದಲ್ಲಿ ತಾನು ಮಗ್ನನಾದ. ಆತನ ಆಕಾರ, ಕೆಲಸದ ಜಾಣ್ಮೆ, ದಕ್ಷತೆ, ತಾಳ್ಮೆಗಳನ್ನು ನೋಡಿ ದೊಡ್ಡ ಸಾಹೇಬರಿಗೆ ತುಂಬ ಮೆಚ್ಚುಗೆಯಾಯಿತು. ಆತನ ಭವ್ಯವಾದ ಆಕಾರ ಹೃದಯವನ್ನು ಸೂರೆಗೊಂಡಿತು. ದೊಡ್ಡ ಸಾಹೇಬರಿಗೆ ಆತನ ವಿಷಯದಲ್ಲಿ ಅಭಿಮಾನ ಹುಟ್ಟಿತು, ಸದಭಿಪ್ರಾಯವೂ ಉಂಟಾಯಿತು. ಅವರು ಆತನನ್ನು ಹತ್ತಿರಕ್ಕೆ ಕರೆದರು. ಭೀಮರಾಯ ಸಮೀಪಕ್ಕೆ ಬಂದು ಕೈ ಮುಗಿದು ನಿಂತ. ಸಾಹೇಬರಿಗೆ ಕನ್ನಡ ಭಾಷೆ ಚೆನ್ನಾಗಿ ಬರುತ್ತಿತ್ತು. ಅವರು ‘ನಿಮ್ಮ ಹೆಸರೇನಪ್ಪ’ ಎಂದರು. ‘ಭೀಮರಾಯ, ಸ್ವಾಮಿ’. ‘ಸರಿಯಾದ ಹೆಸರು. ಭೀಮನ ಹಾಗೆ ಇದ್ದೀರಿ. ಈ ಇಲಾಖೆಯಲ್ಲಿ ನೀವು ಎಷ್ಟು ಕಾಲದಿಂದ ಕೆಲಸ ಮಾಡುತ್ತಿದ್ದೀರಿ?’ ‘ಒಂದು ವರ್ಷದಿಂದ ಸ್ವಾಮಿ’ ‘ನೀವೇ ಸ್ವಂತವಾಗಿ ಏಕೆ ಕಂಟ್ರಾಕ್ಟ್ ಮಾಡಬಾರದು? ಈ ಮೇಸ್ತ್ರಿ ಕೆಲಸದಲ್ಲಿ ನಿಮಗೆ ಬರುವ ಸಂಬಳ ಜೀವನಕ್ಕೆ ಸಾಕಾಗುತ್ತದೆಯೆ?’ ‘ತಾವು ಅಪ್ಪಣೆ ಕೊಡಿಸಿರುವುದು ನಿಜ ಸ್ವಾಮಿ. ಈ ಮೇಸ್ತ್ರಿ ಕೆಲಸದಲ್ಲಿ ಅರೆ ಹೊಟ್ಟೆಯೂ ತುಂಬುವುದಿಲ್ಲ. ಸ್ವಂತವಾಗಿ ಕಂಟ್ರಾಕ್ಟ್ ಮಾಡಬೇಕೆಂಬ ಆಸೆ ನನಗೂ ಇದೆ. ಆದರೇನು ಮಾಡುವುದು? ನಾನು ಬಡವ. ನನ್ನಲ್ಲಿ ಹಣದ 134 ಮೂರು ತಲೆಮಾರು ಬಂಡವಾಳವಿಲ್ಲ. ಕೊಡುವವರೂ ಯಾರೂ ಇಲ್ಲ. ಯತ್ನವಿಲ್ಲದೆ ಈ ಕೆಲಸ ಮಾಡಬೇಕಾಗಿದೆ’ ಎಂದು ತಮ್ಮ ಸಂಸಾರದ ಕರುಣಾಜನಕ ಸ್ಥಿತಿಗಳನ್ನೆಲ್ಲ ಅವರಿಗೆ ಸೂಕ್ಷ್ಮವಾಗಿ ಹೇಳಿಕೊಂಡ. ದಯಾಳುವಾದ ಸಾಹೇಬರಿಗೆ ಅದನ್ನು ಕೇಳಿ ತುಂಬ ಕನಿಕರವಾಯ್ತು. ಅವರು ಅಸಿಸ್ಟೆಂಟ್ ಎಂಜಿನಿಯರ್ ಕಡೆಗೆ ತಿರುಗಿ ‘ಇವರಿಗೆ ಸರಿಯಾದ, ಲಾಭದಾಯಕವಾದ ಕೆಲಸಗಳ ಕಂಟ್ರಾಕ್ಟ್ ಕೊಡಿ. ಕೆಲಸ ನಡೆಸಲು ಸಾಕಷ್ಟು ಹಣವನ್ನು ಇಲಾಖೆಯಿಂದಲೇ ಮುಂಗಡವಾಗಿ ಕೊಡಿ. ಕೆಲಸ ಮುಗಿದ ಮೇಲೆ ಅವರ ಬಿಲ್ಲಿನಲ್ಲಿ ವಜಾಹಾಕಿಕೊಳ್ಳಿ’ ಎಂದರು. ಅವರ ಅಪ್ಪಣೆಯನ್ನು ಸಂತೋಷದಿಂದ ಒಪ್ಪಿಕೊಂಡ ಸಣ್ಣ ಸಾಹೇಬರು ಅಲ್ಲಿಯೇ ಇಳಿದರು. ದೊಡ್ಡ ಸಾಹೇಬರು ಮುಂದಕ್ಕೆ ಪ್ರಯಾಣ ಬೆಳೆಸಿದರು. ಇಲ್ಲಿಂದ ಮುಂದೆ ಭೀಮರಾಯನ ಶುಕ್ರಮಹಾದೆಸೆ ಆರಂಭವಾಯಿತು. ಆತನ ಸರಳ ಸ್ವಭಾವ, ಕೆಲಸದಲ್ಲಿನ ಚಾಕಚಕ್ಯತೆ, ಅನುಭವಗಳು ಪ್ರಯೋಜನಕ್ಕೆ ಬರುವಂತಾಯಿತು. ದೊಡ್ಡ ಸಾಹೇಬರ ಅಪ್ಪಣೆಯಂತೆ ಸಣ್ಣ ಸಾಹೇಬರು ಭೀಮರಾಯನಿಗೆ ಕೆಲಸಗಳನ್ನು ಒದಗಿಸಿದರು. ಭೀಮರಾಯನ ಅದೃಷ್ಟ ಚೆನ್ನಾಗಿದ್ದು ಏರಿಕೆಯ ಕಾಲ ಒದಗಿತು. ಮೊದಮೊದಲು ಸಣ್ಣ ಪುಟ್ಟ ಕೆಲಸಗಳನ್ನು ಆತ ಕೈಗೊಂಡ. ಆತನ ನಿರೀಕ್ಷೆಗಿಂತ ಹೆಚ್ಚು ಆದಾಯ ಬರಲಾರಂಭಿಸಿತು. ಕೆಲಸ ಕಾರ್ಯಗಳ ಮರ್ಮವೂ ಸಂಪೂರ್ಣವಾಗಿ ಅವಗತವಾಯಿತು. ಇನ್ನೂ ಭಾರಿ ಕೆಲಸಗಳನ್ನು ನಿರ್ವಹಿಸಬಲ್ಲೆನೆಂಬ ಧೈರ್ಯ ಆತ್ಮ ವಿಶ್ವಾಸ ದೃಢವಾಯಿತು. ಕೈಯಲ್ಲಿ ತಕ್ಕ ಮಟ್ಟಿಗೆ ಬಂಡವಾಳ ಕೂಡಿತು. ಹಿರಿಯೂರಲ್ಲಿ ಮನೆ ಮಾಡಿದರು. ಹಂದಿಕುಂಟೆಯ ಸಂಸಾರ ಹಿರಿಯೂರಿಗೆ ಬಂತು. ಕ್ರಮಕ್ರಮವಾಗಿ ದೊಡ್ಡ ದೊಡ್ಡ ಕೆಲಸಗಳ ಕಂಟ್ರಾಕ್ಟಿಗೆ ಕೈ ಹಾಕಿದರು. ವರಮಾನವು ಹತ್ತಾರರಿಂದ ನೂರಾರು, ನೂರಾರರಿಂದ, ಸಾವಿರಾರು ರೂಪಾಯಿಗಳಿಗೆ ಏರುತ್ತಾ ಹೋಯಿತು. ಕಾಮಗಾರಿಗಳ ಮೇಲ್ವಿಚಾರಣೆಗೆ ಹೋಗುವಾಗ ಕಾಲುನಡಿಗೆ ತಪ್ಪಿತು. ಸೊಗಸಾದ ಜೀನಿನಿಂದ ಸುಸಜ್ಜಿತವಾದ ಕುದುರೆ ಬಂದಿತು. ಕಾಲಕ್ರಮದಲ್ಲಿ ಕುದುರೆಗೆ ಬದಲಾಗಿ ಒಂದು ಕುದುರೆಯ ಸಾರೋಟಾಯಿತು. ಹಿರಿಯೂರಿನಲ್ಲಿ ಸೊಗಸಾದ ಮನೆಯಾಯಿತು. ತನಗೂ ಅಣ್ಣ ತಮ್ಮಂದಿರಿಗೂ ವೈಭವದಿಂದ ವಿವಾಹಗಳಾದವು. ಕಿರಿಯ ತಮ್ಮನನ್ನು ಇಂಗ್ಲಿಷ್‌ ಓದಿಸಿ ಎಂಜಿನಿಯರ ಅಂತಸ್ತಿಗೇರಿಸಿದ್ದಾಯಿತು. ಭಗವಂತನ ಕೃಪಾಕಟಾಕ್ಷದಿಂದ ಮನೆ ನಂದಗೋಕುಲವಾಯಿತು. ಜೊತೆ ಜೊತೆಯಲ್ಲಿಯೇ ಅದು ಧರ್ಮಛತ್ರವೂ ಆಯಿತು. ಆ ಮನೆಯಲ್ಲಿ ಶಾಲಾ ವಿದ್ಯಾರ್ಥಿಗಳೂ, ಪರಸ್ಥಳದ ಬ್ರಾಹ್ಮಣರೂ ಎಷ್ಟು ಜನ ಊಟ ಮಾಡುತ್ತಿದ್ದರೋ ಕಂಟ್ರಾಕ್ಟರದಾರ ಭೀಮರಾಯ 135 ಲೆಕ್ಕವೇ ಇರಲಿಲ್ಲ. ಆ ಊರಿಗೆ ವರ್ಗವಾಗಿ ಬರುತ್ತಿದ್ದ ಯಾವ ನೌಕರನೇ ಆಗಲಿ, ಅವನಿಗೆ ಅನುಕೂಲವಾಗಿ ಮನೆ ಸಿಕ್ಕಿ, ಮನೆಯವರನ್ನು ಕರೆದುಕೊಂಡು ಬರುವವರೆಗೂ ಅವರ ಊಟ ವಸತಿಗಳಿಗೆ ಭೀಮರಾಯರ ಮನೆ ದಿಕ್ಕಾಗುತ್ತಿತ್ತು. ಮನೆಯಲ್ಲಿ ಅಡುಗೆ, ನೀರುಗಳ ಪರಿಚಾರಕರು ನೇಮಿತರಾಗಿದ್ದರು. ಆ ಪುಣ್ಯಾತ್ಮನಿಂತ ಅಶನ-ವಸನಗಳು ಮಾತ್ರವೇ ಅಲ್ಲ ಆರ್ಥಿಕ ಸಹಾಯವನ್ನು ಪಡೆದವರು ಎಷ್ಟು ಮಂದಿಯೋ ಲೆಕ್ಕವಿಲ್ಲ. ಆತನನ್ನು ಹಾಡಿ ಹರಸದವರೇ ಇರಲಿಲ್ಲ. ಭಗವಂತ ಅಷ್ಟೆೈಶ್ವರ್ಯವನ್ನು ದಯಪಾಲಿಸಿದ್ದರೂ ಆ ಮಹಾನುಭಾವ ತನ್ನ ಹಿಂದಿನ ಬಡತನವನ್ನು ಮರೆತಿರಲಿಲ್ಲ. ಆರ್ತರಿಗೆ, ದೀನ, ಅನಾಥರಿಗೆ ಧಾರಾಳವಾಗಿ, ಅಷ್ಟೇ ನಿರಾಡಂಬರವಾಗಿ ಮುಕ್ತಹಸ್ತವಾಗಿ ದಾನಮಾಡುತ್ತಿದ್ದರು. ಕಾಲಕ್ರಮದಲ್ಲಿ ಭೀಮರಾಯರು ಲೋಕೋತ್ತರವಾದ ಕೀರ್ತಿಗೆ ಪಾತ್ರರಾದರು. ಹಿರಿಯೂರಿನಲ್ಲಿ ನಾಲ್ಕಾರು ಭವ್ಯ ಗೃಹಗಳಾದುವು. ವಾಣಿವಿಲಾಸಸಾಗರದ ನೀರಿನಾಸರೆಯಲ್ಲಿ ಫಲವತ್ತಾದ ನೂರಾರು ಎಕರೆ ಜಮೀನಾಯಿತು. ವಿಸ್ತೀರ್ಣವಾದ ಎರೆಮಣ್ಣಿನ ಖುಷ್ಕಿ ಜಮೀನುಗಳು ಅವರಿಗೆ ಸೇರಿದುವು. ಅವರು ಪೂರ್ವಕಾಲದ ಒಬ್ಬ ಸಣ್ಣ ಪಾಳೆಗಾರನಂತೆ ವೈಭವದಿಂದ ಕಾರ್ಯಮಗ್ನರಾಗಿದ್ದರು. ಅವರ ಕೈಕೆಳಗಿನ ನೌಕರರು ಭಯ, ಭಕ್ತಿ, ಗೌರವಗಳಿಂದ ಮಾತ್ರವೇ ಅಲ್ಲದೆ ಅತ್ಯಂತ ಪ್ರೇಮದಿಂದಲೂ ನೋಡಿಕೊಳ್ಳುತ್ತಿದ್ದರು. ಜನರ ಯೋಗ್ಯತೆಯನ್ನು ಗುರುತಿಸಿ ಬೆಲೆಕಟ್ಟುವುದು ಅವರಿಗೆ ಸಹಜವಾಗಿತ್ತು. ಅವರು ತುಂಬ ರಸಿಕರಾದರೂ ಲಂಪಟರಲ್ಲ. ಸುಬ್ಬಣ್ಣನವರು ಶೇಕದಾರಿಕೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸುಮಾರು ಎರಡು ವರ್ಷಗಳಾಗಿದ್ದವು. ಆಗ ಭೀಮರಾಯರು ತಳುಕು ಹೋಬಳಿಯ ಕೋಡಿಹಳ್ಳಿಯಲ್ಲಿ ಹೊಸದಾಗಿ ಕೆರೆಯನ್ನು ಕಟ್ಟಿಸುವ ಕಂಟ್ರಾಕ್ಟ್ ಹಿಡಿದರು. ಲಕ್ಷಾಂತರ ರೂಪಾಯಿಗಳ ಕಾಮಗಾರಿ ಅದು. ಪ್ರತಿದಿನವೂ ನೂರಾರು, ಸಾವಿರಾರು ಮಂದಿ ಕೂಲಿಯವರು ಕೆಲಸ ಮಾಡಬೇಕಿತ್ತು. ಅವರ ಮೇಲೆ ಉಸ್ತುವಾರಿ ನೋಡಿಕೊಂಡು ಸರಿಯಾಗಿ ಕೆಲಸ ತೆಗೆದುಕೊಳ್ಳುವ ಮತ್ತು ಕರಾರುವಕ್ಕಾಗಿ ಲೆಕ್ಕಪತ್ರಗಳನ್ನು ಇಡಬಲ್ಲ ದಕ್ಷರೂ, ಪ್ರಾಮಾಣಿಕರೂ ಆದ ಗುಮಾಸ್ತರುಗಳು ಬೇಕಾಗಿದ್ದರು. ಅಲ್ಲಿಯ ಕೆಲಸಗಳನ್ನು ಮೂರು ಭಾಗಗಳಾಗಿ ವಿಂಗಡಿಸಿತ್ತು. ಒಂದು ಭಾಗದ ಮೇಲ್ವಿಚಾರಣೆಯನ್ನು ಕೋಡಿಹಳ್ಳಿಯ ಶಾನುಭೋಗ ಹನುಮಂತಪ್ಪನವರು ನೋಡಿಕೊಳ್ಳುತ್ತಿದ್ದರು. ಇನ್ನೊಂದು ಭಾಗವನ್ನು ಮನ್ನೇಕೋಟೆಯ ಶಾನುಭೋಗ ಬಾಲಕೃಷ್ಣಪ್ಪನವರ ಮೂರನೇ ಮಗ 136 ಮೂರು ತಲೆಮಾರು ನೋಡಿಕೊಳ್ಳುತ್ತಿದ್ದರು. ಮೂರನೆಯ ಭಾಗವೊಂದು ಉಳಿದಿತ್ತು. ಯೋಗ್ಯರಾದವರನ್ನು ಆ ಸ್ಥಳಕ್ಕೆ ನೇಮಿಸಬೇಕೆಂದು ಹುಡುಕುತ್ತಿರುವಾಗ ಅವರಿಗೆ ತಳುಕಿನ ದೊಡ್ಡ ಸುಬ್ಬಣ್ಣನವರ ಜ್ಞಾಪಕ ಬಂದಿತು. ಒಂದು ಬಾರಿ ಭೀಮರಾಯರು ಚಿತ್ರದುರ್ಗದ ಖಜಾನೆಯಿಂದ ತಮ್ಮ ಯಾವುದೋ ಬಿಲ್ಲಿನ ಬಾಬತ್ತು ಹಣ ತೆಗೆದುಕೊಂಡರು. ಅದು ಭಾರಿ ಮೊತ್ತದ ಹಣ. ಈಗಿನಂತೆ ಆಗ ನೋಟುಗಳು ಹೆಚ್ಚು ಚಲಾವಣೆಯಲ್ಲಿರಲಿಲ್ಲ. ಎಲ್ಲವೂ ಬೆಳ್ಳಿಯ ರೂಪಾಯಿಗಳು. ರಾಯರು ಹಣವನ್ನು ಪಲ್ಲ ಚೀಲದಲ್ಲಿ ತುಂಬಿಕೊಂಡು ತಮ್ಮ ಕುದುರೆಯ ಗಾಡಿಯಲ್ಲಿಟ್ಟುಕೊಂಡು ಹೊರಟರು. ಹಾಗೆ ಹೊರಡುವ ವೇಳೆಗೆ ಮುಸ್ಸಂಜೆಯಾಗಿತ್ತು. ಚಿತ್ರದುರ್ಗದಿಂದ ಹಿರಿಯೂರಿಗೆ ಸುಮಾರು ಇಪ್ಪತ್ತೈದು ಮೈಲಿ ದೂರ. ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು ಮೂರು ಮೈಲಿ ದೂರದಲ್ಲಿ ಕಣಿವೆಯೊಂದಿದೆ. ಅದು ಕಳ್ಳರಿಗೆ, ದರೋಡೆಕೋರರಿಗೆ ಹೆಸರುವಾಸಿಯಾಗಿತ್ತು. ಹಗಲು ಹೊತ್ತಿನಲ್ಲಿಯೂ ಸಹ ಒಬ್ಬಂಟಿಗರಾಗಿ ಪ್ರಯಾಣಿಕರು ಆ ದಾರಿಯಲ್ಲಿ ಹೋಗುತ್ತಿರಲಿಲ್ಲ. ಅನೇಕ ವೇಳೆ ಜನರು ಗುಂಪು ಗುಂಪಾಗಿದ್ದರೂ ಕಳ್ಳರು ಧಾಳಿ ಮಾಡುತ್ತಿದ್ದುದುಂಟು. ಅಂತಹುದರಲ್ಲಿ ಒಬ್ಬಂಟಿಗರಾಗಿ, ಅದರಲ್ಲಿಯೂ ಭಾರಿ ಮೊತ್ತದ ಹಣದೊಂದಿಗೆ, ಆ ವೇಳೆಯಲ್ಲಿ ಪ್ರಯಾಣ ಮಾಡುವುದೆಂದರೆ ಮೃತ್ಯುವಿಗೆ ಆಹ್ವಾನಕೊಟ್ಟಂತೆಯೇ. ಭೀಮರಾಯರ ಧೈರ್ಯವೆಂದರೆ ಅವರು ಗಾಡಿಗೆ ಹೂಡಿದ್ದ ಕುದುರೆ. ಅದು ಅತ್ಯುತ್ತಮವಾದ ಜಾತ್ಯಶ್ವ. ಇಪ್ಪತ್ತೈದು ಮೈಲಿಗಳ ದೂರವನ್ನು ಅದು ಎರಡು ಘಂಟೆಗಳಲ್ಲಿ ಓಡಬಲ್ಲದಾಗಿತ್ತು. ಹಾಗಿತ್ತು ಅದರ ವೇಗ! ಅಂತಹ ಉತ್ಕೃಷ್ಟವಾದ ಕುದುರೆಯಲ್ಲಿ ಒಂದು ದೋಷವಿತ್ತು. ಅದರ ಒಂದು ಕಣ್ಣು ಬಹಳ ಮಂದವಾಗಿತ್ತು. ‘ದಾರಿ ಅಪಾಯವಾದುದು, ಇದು ಅವೇಳೆ. ಈಗ ಹೋಗುವುದು ಬೇಡ, ಮರುದಿನ ಬೆಳಗ್ಗೆ ಹೊರಡಿ’ ಎಂದು ಗೆಳೆಯರು ಬುದ್ಧಿ ಹೇಳಿದರು. ಭೀಮರಾಯರು ಅವರ ಮಾತುಗಳನ್ನು ಕೇಳಲಿಲ್ಲ. ‘ಏನು ಮಹಾ, ಹೆಚ್ಚೆಂದರೆ ಎರಡು ಗಂಟೆ ಪ್ರಯಾಣ. ಇಲ್ಲಿ ನಿಂತರೆ ಸಂಧ್ಯೆ, ಪಾರಾಯಣಗಳಿಗೆ ಅನಾನುಕೂಲವಾಗುತ್ತದೆ’ ಎಂದು ಹೇಳಿ ಹೊರಟೇಬಿಟ್ಟರು. ಚಿತ್ರದುರ್ಗದಿಂದ ಹೊರಟ ಭೀಮರಾಯರು ಕಣಿವೆಗೆ ಬರುವ ಹೊತ್ತಿಗೆ ಮಬ್ಬುಗತ್ತಲಾಗಿತ್ತು. ಗಾಡಿ ಕಣಿವೆಯ ಮಧ್ಯಕ್ಕೆ ಬಂದಿದೆ; ಇದ್ದಕ್ಕಿದ್ದಂತೆಯೇ ನಾಲ್ಕೂ ಕಡೆಗಳಿಂದ ಕವಣಿಕಲ್ಲುಗಳ ಸುರಿಮಳೆಯಾಯಿತು. ಕ್ಷಣಮಾತ್ರದಲ್ಲಿ ಕಂಟ್ರಾಕ್ಟರದಾರ ಭೀಮರಾಯ 137 ಕಳ್ಳನೊಬ್ಬ ಕುದುರೆಯ ಮಂಜುಗಣ್ಣಿನ ಕಡೆಯಿಂದ ಬಂದು ಕುದುರೆಯ ಕಡಿವಾಣ ಹಿಡಿದ. ಭೀಮರಾಯರಿಗೆ ತಮ್ಮ ಅಂತ್ಯಕಾಲ ಸಮೀಪಿಸಿದಂತಾಯಿತು. ಆದರೆ ಈಗ ಯಾವ ಪ್ರಯೋಜನವೂ ಇಲ್ಲ. ಭೀಮರಾಯರು ಮನಸ್ಸಿನಲ್ಲಿ ರಾಮನಾಮವನ್ನು ಜಪಿಸುತ್ತ ಕೈಲಿದ್ದ ಚಾವಟಿಯಿಂದ ಕಳ್ಳನಿಗೆ ಬಲವಾದ ಒಂದು ಏಟನ್ನು ಕೊಟ್ಟು ಕುದುರೆಗೂ ಅಬ್ಬರಿಸಿ ಹೊಡೆದರು. ಹುಟ್ಟಿದಾಗಿನಿಂದ ಏಟನ್ನೇ ಕಾಣದಿದ್ದ ಕುದುರೆ ಅನಿರೀಕ್ಷಿತವಾಗಿ ಬಿದ್ದ ಏಟಿನಿಂದ ದಿಗ್ಭ್ರಮೆಗೊಂಡಿತು. ಅದು ಕಳ್ಳನ ಕೈಯ್ಯಿಂದ ಕಡಿವಾಣವನ್ನು ಕಿತ್ತುಕೊಂಡು ನಾಗಾಲೋಟದಿಂದ ಓಡಲಾರಂಭಿಸಿತು. ಅದು ಓಟವನ್ನು ನಿಲ್ಲಿಸಿದುದು ಹಿರಿಯೂರಿನಲ್ಲಿ, ಭೀಮರಾಯರ ಮನೆಯ ಮುಂದೆ. ಅಂದು ಪುನರ್ಜನ್ಮವನ್ನು ಪಡೆದಂತಾಗಿತ್ತು ಭೀಮರಾಯರಿಗೆ. ತಮ್ಮನ್ನು ಗಂಡಾಂತರದಿಂದ ಪಾರು ಮಾಡಿದ ಆ ಕುದುರೆಯನ್ನು ಅವರು ಮತ್ತೆಂದೂ ಗಾಡಿಗೆ ಕಟ್ಟಲಿಲ್ಲ. ಅದರ ಪಾಲನೆ ಪೋಷಣೆಗಳಿಗೆ ಪ್ರತ್ಯೇಕವಾಗಿ ಒಬ್ಬ ಆಳನ್ನು ಗೊತ್ತು ಮಾಡಿ ಅದನ್ನು ದೇವರಂತೆ ನೋಡಿಕೊಂಡರು. ತಳುಕಿನ ಬಳಿಯ ಕೋಡಿಹಳ್ಳಿಯ ಕೆರೆ ಕೆಲಸವನ್ನು ಭೀಮರಾಯರು ಕಂಟ್ರಾಕ್ಟ್ ತೆಗೆದುಕೊಂಡಿದ್ದದ್ದು ಸರಿಯಷ್ಟೆ. ಅಲ್ಲಿಯ ಕೆಲಸದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು, ಲೆಕ್ಕಪತ್ರವನ್ನಿಡಲು ಅವರಿಗೆ ನಂಬಿಕೆಯಾದವರೊಬ್ಬರು ಬೇಕಾಗಿತ್ತು. ಸುಬ್ಬಣ್ಣನವರು ಋಜುಸ್ವಭಾವದವರೆಂದು, ದೈವಭಕ್ತರೆಂದು ಅವರಿಗೆ ತಿಳಿದಿತ್ತು. ಅಲ್ಲದೆ ಅವರು ಭೀಮರಾಯರಿಗೆ ದೂರದ ಸಂಬಂಧಿಗಳೂ ಆಗಿದ್ದರು. ಅವರನ್ನು ಹೇಗಾದರೂ ತಮ್ಮ ಕೆಲಸಕ್ಕೆ ಒಪ್ಪಿಸಿದರೆ ಆ ಕೆಲಸದ ಅರ್ಧಯೋಚನೆ ಕಡಿಮೆಯಾಗುವುದೆಂದು ಅವರಿಗೆ ಗೊತ್ತಿತ್ತು. ಆದರೆ ಅವರನ್ನು ಈ ಕೆಲಸಕ್ಕೆ ಒಪ್ಪಿಸುವುದು ಹೇಗೆ? ಹಿಂದೆ ಅಮಲ್ದಾರರೊಂದಿಗೆ ನಡೆದ ವ್ಯವಹಾರದಿಂದ ಸುಬ್ಬಣ್ಣನವರು ಯಾರ ಬಳಿಯೂ ಕೆಲಸ ಮಾಡಲು ಒಪ್ಪುತ್ತಿರಲಿಲ್ಲ. ಹೇಗಾದರೂ ಮಾಡಿ ತಮ್ಮ ಕೆಲಸಕ್ಕೂ ಒಪ್ಪಿಸಿದರೆ ಅವರಿಗೆ ಸಹಾಯ ಮಾಡಿದಂತಾಗುತ್ತದೆ. ತಮ್ಮ ಕೆಲಸಕ್ಕೂ ಅನುಕೂಲವಾಗುತ್ತದೆ. ಒಮ್ಮೆ ಕೆರೆ ಕೆಲಸದ ಮೇಲ್ವಿಚಾರಣೆಗೆಂದು ಕೋಡಿಹಳ್ಳಿಗೆ ಬಂದಿದ್ದ ಭೀಮರಾಯರು ಅಂದು ತಮ್ಮ ಸ್ನಾನಾಹಿಕಗಳನ್ನು ಪೂರೈಸಲು ಸುಬ್ಬಣ್ಣನವರ ಮನೆಗೆ ಹೇಳಿಕಳುಹಿಸಿದರು. ಅದನ್ನು ಕೇಳಿ ಸುಬ್ಬಣ್ಣನವರಿಗೆ ಸಂತೋಷವಾದರೂ, ಅಂತಹ ಶ್ರೀಮಂತರನ್ನು ತನ್ನ ಕಡು, ಬಡಕುಟೀರದಲ್ಲಿ ಹೇಗೆ ಸತ್ಕರಿಸುವುದೆಂದು ಚಿಂತೆಯಾಯಿತು. ಆದರೆ ಬೇರೆ ಮಾರ್ಗವಿರಲಿಲ್ಲ. ತಾವಾಗಿ ಬರುತ್ತೇವೆಂದು 138 ಮೂರು ತಲೆಮಾರು ಹೇಳಿ ಕಳುಹಿಸಿರುವಾಗ ಬೇಡವೆಂದು ಹೇಳುವುದು ಹೇಗೆ? ಅವರು ಭೀಮರಾಯರ ವಿಚಾರವನ್ನು ಕೇಳಿ ತಿಳಿದಿದ್ದರು: ಒಂದೆರಡು ಬಾರಿ ತಮ್ಮ ಬಂಧುಗಳ ಮನೆಯಲ್ಲಿ ನೋಡಿದ್ದರು. ಆದರೆ ಹೆಚ್ಚು ಸಲಿಗೆ ಬೆಳೆದಿರಲಿಲ್ಲ. ಕುತೂಹಲದಿಂದ ಅವರು ಭೀಮರಾಯರ ಬರವನ್ನು ನಿರೀಕ್ಷಿಸುತ್ತಿದ್ದರು. ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಭಾರಿ ಕುದುರೆಯನ್ನೇರಿದ್ದ ಭೀಮರಾಯರು ಸುಬ್ಬಣ್ಣನವರ ಮನೆಯ ಮುಂದೆ ಇಳಿದರು. ಅವರು ಏರಿದ್ದ ಆ ಕುದುರೆ, ಜೊತೆಯಲ್ಲಿದ್ದ ಜಬರ್ದಸ್ತಿನ ಜವಾನ- ಇವೆರಡನ್ನು ಬಿಟ್ಟರೆ ಅವರನ್ನು ಮಹಾಶ್ರೀಮಂತರೆಂದು ತಿಳಿಯಲು ಯಾರಿಗೂ ಸಾಧ್ಯವಿರಲಿಲ್ಲ. ಅವರು ಅಷ್ಟು ಸರಳವಾಗಿದ್ದರು. ಸ್ವಲ್ಪ ಹೊತ್ತು ಅವರು ಭೀಮರಾಯರನ್ನೇ ನೋಡುತ್ತ ನಿಂತುಕೊಂಡರು. ‘ಏನಪ್ಪ ಸುಬ್ಬಣ್ಣ’ ಮನೆಗೆ ಬಂದವನನ್ನು ಒಳಕ್ಕೆ ಬಾ ಎಂತಲೂ ಹೇಳದೆ ಸುಮ್ಮನೆ ನಿಂತುಬಿಟ್ಟೆಯಲ್ಲ’ ಎಂದು ನಸುನಕ್ಕರು, ಭೀಮರಾಯರು. ಇದನ್ನು ಕೇಳಿ ಸುಬ್ಬಣ್ಣನವರಿಗೆ ಮತ್ತಷ್ಟು ಆಶ್ಚರ್ಯವಾಯಿತು. ಉಡಿಗೆ-ತೊಡಿಗೆಯಲ್ಲಿ ಮಾತ್ರವೇ ಅಲ್ಲ, ತಮ್ಮ ನಡವಳಿಕೆಯಲ್ಲೂ ಅತ್ಯಂತ ಸರಳವಾಗಿದ್ದ ಭೀಮರಾಯರನ್ನು ಕಂಡು ಸುಬ್ಬಣ್ಣನವರ ಸಂಕೋಚ ಸ್ವಲ್ಪ ಕಡಿಮೆಯಾಯಿತು. ‘ಒಳಕ್ಕೆ ಬನ್ನಿ ಭಾವ’ ಎಂದು ಗೌರವದಿಂದ ಆಹ್ವಾನಿಸಿದರು. ಭೀಮರಾಯರ ಸ್ನಾನಾಹ್ನಿಕಗಳು ಮುಗಿದ ಮೇಲೆ ಇಬ್ಬರೂ ಜೊತೆಯಲ್ಲಿ ಊಟಕ್ಕೆ ಕುಳಿತರು. ಹಾಗೆ ಕುಳಿತಾಗ ಭೀಮರಾಯರೇ ‘ಏನಪ್ಪ ಸುಬ್ಬಣ್ಣ, ನಿನ್ನಿಂದ ಒಂದು ಕೆಲಸವಾಗಬೇಕಾಗಿದೆಯಲ್ಲ. ಮಾಡಿಕೊಡುತ್ತೀಯಾ?’ ಎಂದರು. ‘ನೀವು ಹೇಳಿದರೆ ಇಲ್ಲ ಎನ್ನುತ್ತೇನೆಯೆ ಭಾವಾ? ಏನಾಗಬೇಕು? ಹೇಳಿ’ ಎಂದರು ಸುಬ್ಬಣ್ಣನವರು. ‘ನಾನು ಕೋಡಿಹಳ್ಳಿ ಕೆರೆ ಕಂಟ್ರಾಕ್ಟ್ ತೆಗೆದುಕೊಂಡಿರುವ ವಿಚಾರ ನಿನಗೆ ಗೊತ್ತಿದೆಯಲ್ಲ? ಅಲ್ಲಿ ನೂರಾರು ಜನ ಆಳುಗಳು ಕೆಲಸ ಮಾಡುತ್ತಿದ್ದಾರೆ. ವಾರಕ್ಕೊಂದು ಬಾರಿ ನೂರಾರು ರೂಪಾಯಿಗಳ ಬಟವಾಡೆಯಾಗಬೇಕು. ಕೆಲಸವನ್ನು ನೋಡಿಕೊಳ್ಳುವುದಕ್ಕೇನೋ ಬೇಕಾದಷ್ಟು ಮೇಸ್ತ್ರಿಗಳಿದ್ದಾರೆ. ಆದರೆ ಭಾರಿ ಹಣದ ವ್ಯವಹಾರ ನಡೆಯುವಾಗ ಮೋಸ ಮಾಡುವುದು ಕಷ್ಟವಲ್ಲ. ಕೆಲವು ಸಂದರ್ಭಗಳಲ್ಲಿ ನಾನೇ ಸ್ವತಃ ಬಂದು ಬಟವಾಡೆ ಮಾಡುವುದು ಸಾಧ್ಯವಾಗದೇ ಹೋಗಬಹುದು. ಅದಕ್ಕಾಗಿ ಈ ವ್ಯವಹಾರ ನೋಡಿಕೊಳ್ಳಲು ನನ್ನವರಾದ ನಂಬಿಕಸ್ಥರೊಬ್ಬರು ನನಗೆ ಬೇಕು. ಈ ಕೆಲಸ ನೀನು ಒಪ್ಪಿಕೊಳ್ಳಬೇಕು’. ‘ನೀವು ಹೇಳುವುದು ಸರಿ ಭಾವಾ. ನೀವು ನನ್ನಲ್ಲಿಟ್ಟಿರುವ ನಂಬಿಕೆ ಕಂಟ್ರಾಕ್ಟರದಾರ ಭೀಮರಾಯ 139 ಅಸದೃಶವಾದುದು. ಆದರೆ...’ ‘ನನಗೆ ಗೊತ್ತಾಯಿತು ಸುಬ್ಬಣ್ಣ. ನೀನು ಬೇರೆಯವರ ಬಳಿ ನೌಕರಿ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ನಿನ್ನ ಮತ್ತು ಅಮಲ್ದಾರರ ನಡುವೆ ನಡೆದ ವಿಚಾರವೆಲ್ಲ ನನಗೆ ಗೊತ್ತಿದೆ. ಆದರೆ ಇದು ಬೇರೊಬ್ಬರ ಬಳಿ ನೌಕರಿಯಲ್ಲ. ಒಂದು ದೃಷ್ಟಿಯಿಂದ ನಿನ್ನ ಸ್ವಂತ ಕೆಲಸ. ನೀನು ನನ್ನನ್ನು ಭಾವಾ ಎಂದು ಕರೆಯುತ್ತೀ. ಭಾವನ ಕೆಲಸ ಮೈದುನನನಿಗೆ ನೌಕರಿಯಾಗುತ್ತದೆಯೆ? ಇದೆಲ್ಲ ಯೋಚಿಸಿಯೇ ನಾನು ನಿನಗೆ ಇದನ್ನು ಹೇಳುತ್ತಿರುವುದು. ಇದರಿಂದ ನಿನ್ನ ಸ್ನಾನಾಹ್ನಿಕಗಳಿಗಾಗಲಿ, ದೇವತಾರ್ಚನೆ, ಧರ್ಮಕಾರ್ಯಗಳಿಗಾಗಲಿ ಯಾವ ಆತಂಕವೂ ಆಗುವುದಿಲ್ಲ. ನಿನ್ನ ಉಪಯೋಗಕ್ಕಾಗಿ ಒಂದು ಕುದುರೆಯನ್ನು ತೆಗೆದುಕೊ. ಜೊತೆಗೆ ನಿನ್ನ ಬೆಂಗಾವಲಿಗೆ ಆಳನ್ನು ನೇಮಿಸಿಕೊ. ಇವುಗಳಿಗೆಲ್ಲ ಏನಾಗಬೇಕೋ ಅದನ್ನೆಲ್ಲ ನಾನು ಒದಗಿಸಿಕೊಡುತ್ತೇನೆ, ಅಥವಾ ಅಗತ್ಯವಾದ ಹಣವನ್ನು ಕೊಡುತ್ತೇನೆ. ನಿನಗೆ ಬೇಕಾದ ನಂಬಿಕೆಯಾದ ಆಳನ್ನು ನೀನೇ ಗೊತ್ತು ಮಾಡಿಕೊ. ಅವನ ಸಂಬಳವನ್ನೂ ನೀನೇ ಗೊತ್ತು ಮಾಡು. ನಿನಗೆ ನಾನು ಯಾವ ಸಂಬಳವನ್ನೂ ಕೊಡುವುದಿಲ್ಲ. ನನ್ನ ಪರವಾಗಿ ನೀನು ನನ್ನ ಕೆಲಸ ನೋಡಿಕೊ; ನಿನ್ನ ಸಂಸಾರದ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ಒಪ್ಪಿಗೆ ತಾನೆ?’ ಭೀಮರಾಯರ ಮಾತಿಗೆ ಪ್ರತಿಹೇಳಲು ಸುಬ್ಬಣ್ಣನವರಿಗೆ ಸಾಧ್ಯವಾಗಲಿಲ್ಲ. ಸುಬ್ಬಣ್ಣನವರು ‘ಬುದ್ಧಿವಂತ’ರಾಗಿದ್ದರೆ ಹಣವಂತರಾಗಲು ಈಗ ಬೇಕಾದಷ್ಟು ಅನುಕೂಲವಿತ್ತು. ಪ್ರತಿದಿನವೂ ನೂರಾರು ಕೂಲಿಯವರು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದರು. ಅವರ ಹಾಜರಾತಿಯನ್ನು ನಮೂದಿಸುವುದು ಇವರೇ. ಅವರ ಕೂಲಿಯನ್ನು ಬಟವಾಡೆ ಮಾಡುವವರು ಇವರೇ. ವಾರಕ್ಕೆ ಒಂದು ನೂರು ಜನರಂತೆ ಹೆಚ್ಚು ಕೂಲಿಯವರ ಹೆಸರನ್ನು ಬರೆದು ಬಟವಾಡೆಯ ಖರ್ಚು ಹಾಕಿದ್ದರೆ ಆ ವ್ಯತ್ಯಾಸ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಪ್ರತಿ ತಿಂಗಳೂ ನೂರಾರು ರೂಪಾಯಿಗಳನ್ನುಳಿಸಿಕೊಳ್ಳಬಹುದಾಗಿತ್ತು. ಸ್ವಲ್ಪ ಕಾಲದಲ್ಲಿಯೇ ಅವರು ಶ್ರೀಮಂತರೂ ಆಗಬಹುದಾಗಿತ್ತು. ಆದರೆ ಸುಬ್ಬಣ್ಣನವರು ಅಂತಹ ‘ಬುದ್ಧಿವಂತ’ರಾಗಲು ಅವರ ಜೀವಮಾನದಲ್ಲಿ ಎಂದೂ ಇಚ್ಛಿಸಲಿಲ್ಲ. ಪ್ರಾಮಾಣಿಕತೆ ಅವರ ಹುಟ್ಟುಗುಣ. ಸತ್ಯವೇ ನಿತ್ಯವೆಂಬುದು ಅವರ ಬಾಳ ಗುರಿ. ತನ್ನ ಹಿರಿಯರು ನಡೆದ ಸತ್ಪಥದಲ್ಲಿಯೇ ನಡೆದು ಬಾಳನ್ನು ಸಾಗಿಸಬೇಕೆನ್ನುವುದು ಅವರ ಆದರ್ಶ. ಸ್ವಾಮಿದ್ರೋಹಿಯಾಗಲು ಅವರ ಆತ್ಮಸಾಕ್ಷಿ ಎಂದೂ ಒಪ್ಪಲಿಲ್ಲ. 140 ಮೂರು ತಲೆಮಾರು ಲೆಕ್ಕಗಳಲ್ಲಿ ರಾಮ, ಕೃಷ್ಣ ಲೆಕ್ಕಗಳಿರಲಿಲ್ಲ. ಭೀಮರಾಯರು ಕೆರೆ ಕೆಲಸದ ತನಿಖೆಗೆ ಬಂದಿದ್ದಾಗ ಮನ್ನೇಕೋಟೆಯಲ್ಲಿ ಅಥವಾ ಕೋಡಿಹಳ್ಳಿಯಲ್ಲಿ ಮೊಕ್ಕಾಂ ಮಾಡುತ್ತಿದ್ದರು. ತಾವಿರುವಲ್ಲಿಗೆ ಎಲ್ಲರನ್ನೂ ಕರೆಸಿ ಅಲ್ಲಿಯೇ ಅವರ ಲೆಕ್ಕಗಳನ್ನು ನೋಡುತ್ತಿದ್ದರು. ಕೆಲಸದ ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆ ಎಲ್ಲರದೂ ಒಂದೇ ಆಗಿದ್ದರೂ-ಬಟವಾಡೆ ಮೊಬಲಗು ಮಾತ್ರ ಸುಬ್ಬಣ್ಣನವರದ್ದಕ್ಕಿಂತ ಉಳಿದವರದು ಯಾವಾಗಲೂ ಸ್ವಲ್ಪ ಹೆಚ್ಚೇ ಆಗಿರುತ್ತಿತ್ತು. ಭೀಮರಾಯರು ಇದನ್ನು ಗಮನಿಸಿದರೂ ಗಮನಿಸದವರಂತೆ ಇದ್ದು ಬಿಡುತ್ತಿದ್ದರು. ಆದರೆ ಯಾರ ಯಾರ ಮನೋಧರ್ಮ ಎಂತಹುದು, ಪ್ರಾಮಾಣಿಕತೆ ಎಷ್ಟು ಮಟ್ಟಿನದು ಎಂಬುದು ಮಾತ್ರ ಒರೆಗೆ ಹಚ್ಚಿದಂತೆ ಗೋಚರವಾಗುತ್ತಿತ್ತು. ಇದರಿಂದ ಸುಬ್ಬಣ್ಣನವರ ವಿಷಯದಲ್ಲಿ ಪ್ರೇಮ, ಅಭಿಮಾನಗಳು ಹೆಚ್ಚಾದುವು. ಅವರು ವಿನೋದವಾಗಿ ‘ಒರೇ ಸುಬ್ಬ, ನೀಕು ಕೊಂಚಮೂ ಬುದ್ದಿ ಲೇದುರಾ! ಇಟ್ಲೇನಾ ಲೆಕ್ಕಮು ರ್ರಾಶೇದಿ?’ (ಎಲಾ ಸುಬ್ಬ ನಿನಗೆ ಸ್ವಲ್ಪವೂ ಬುದ್ಧಿ ಇಲ್ಲವಯ್ಯ! ಹೀಗೇನೇ ಲೆಕ್ಕ ಬರೆಯೋದು?) ಎಂದು ಗೇಲಿ ಮಾಡುತ್ತಿದ್ದರು. ‘ನಾಕು ತೆಲಿಸಿನಟ್ಲು ವ್ರಾಶಿನಾನು ಭಾವಾ. ತಪ್ಪುಲೇಮೈನಾವುಂಟೆ, ತೆಲಿಪಿತೆ ತಿದ್ದುಕೊಂಟಾನು’ (ಭಾವಾ ನನಗೆ ತಿಳಿದಂತೆ ನಾನು ಬರೆದಿದ್ದೇನೆ. ತಪ್ಪುಗಳೇನಾದರೂ ಇದ್ದರೆ, ತಿಳಿಸಿದರೆ ತಿದ್ದಿಕೊಳ್ಳುತ್ತೇನೆ) ಎಂದು ನಗುತ್ತ ಉತ್ತರಕೊಡುತ್ತಿದ್ದರು. ಅವರ ಗುಟ್ಟು ಅವರಿಬ್ಬರಿಗೇ ಹೊರತು ಉಳಿದವರಿಗೆ ಅರ್ಥವಾಗುತ್ತಿರಲಿಲ್ಲ. ಆ ಮಾತುಗಳು ಅಷ್ಟು ಸಹಜವಾಗಿರುತ್ತಿದ್ದುವು. ಭೀರಾಮರಾಯರ ಮಾತೃಭಾಷೆ ತೆಲುಗು. ಮುಲಿಕನಾಡು ಪಂಗಡದವರೆಲ್ಲ ಆಂಧ್ರ ಪ್ರದೇಶದಿಂದ ವಲಸೆ ಬಂದವರಾದುದರಿಂದ ಅವರ ಮಾತೃಭಾಷೆ ತೆಲುಗೇ ಸರಿ. ನಮ್ಮ ಮಾತೃಭಾಷೆಯೂ ತೆಲುಗೇ. ಆದರೆ ನಮ್ಮ ಅಜ್ಜಿ ಹನುಮಕ್ಕಮ್ಮ ಕನ್ನಡ ಮಾತನಾಡುವ ಮನೆತನದಲ್ಲಿ ಹುಟ್ಟಿ ಬೆಳೆದವಳು. ಆದ್ದರಿಂದ ಆಕೆಗೆ ತೆಲುಗು ಬಾರದು. ಆಕೆಯ ಕಾಲದಿಂದ ನಮ್ಮ ಮನೆಯಲ್ಲಿ ಕನ್ನಡ ಭಾಷೆ ಬಳಕೆಯಲ್ಲಿ ಬಂತು. ನಮ್ಮ ತಂದೆ ತಾಯಿಗಳು ಪರಸ್ಪರ ಮಾತನಾಡುವಾಗ ತೆಲುಗು ಭಾಷೆಯನ್ನು ಬಳಸುತ್ತಿದ್ದರು. ಆದರೆ ಮಕ್ಕಳೊಂದಿಗೆ ಮನೆ ದ್ವಿಭಾಷಿಗಳ ಮನೆಯಾಗಿದೆ. ಈ ವೇಳೆಗೆ ಸುಬ್ಬಣ್ಣನವರು ಬಹು ದೊಡ್ಡ ಕವಿಯೆಂದು ಸುತ್ತುಮುತ್ತಿನ ಹತ್ತಾರು ಹಳ್ಳಿಗಳಲ್ಲಿ ಪ್ರಸಿದ್ಧರಾಗಿ ಹೋಗಿದ್ದರು. ಎಷ್ಟೋ ದೇವರನಾಮಗಳು, ಕೋಲಾಟದ ಪದಗಳು, ಉರುಟಣೆಯ ಹಾಡು, ಹಸೆಗೆ ಕರೆಯುವ ಹಾಡು, ಮಠಾಧಿಪತಿಗಳೋ, ದೊಡ್ಡ ಸರ್ಕಾರಾಧಿಪತಿಗಳೋ ಬಂದಾಗ ಕಂಟ್ರಾಕ್ಟರದಾರ ಭೀಮರಾಯ 141 ಅವರನ್ನು ಸ್ವಾಗತಿಸುವ ಹಾಡುಗಳು ಅವರಿಂದ ರಚಿತವಾಗಿದ್ದುವು. ಕರಿಭಂಟನ ಕಾಳಗ ಮೊದಲಾದ ಕೆಲವು ಬಯಲಾಟಗಳನ್ನು ಬರೆದಿದ್ದರು. ಅವು ಬಾಯಿಂದ ಬಾಯಿಗೆ ಪಾಠವಾಗಿ ನಮ್ಮ ಜಿಲ್ಲೆಯ ಎಲ್ಲ ಕಡೆಯೂ ಹರಡಿದ್ದುವು. ಅವರ ಪ್ರತಿಯೊಂದು ಹಾಡಿನ ಕೊನೆಯ ಚರಣದಲ್ಲಿ ಅಂಕಿತವೂ ಇರುತ್ತಿತ್ತು. ಹೀಗೆ ಯಾವುದೊ ಒಂದು ಮೂಲೆಯ ಕೊಂಪೆಯಾಗಿ, ಅನಾಮಧೇಯವಾಗಿದ್ದ ತಳುಕು ಸುಬ್ಬಣ್ಣನವರ ಹೆಸರು ಎಲ್ಲೆಲ್ಲಿಯೂ ವ್ಯಾಪಿಸಿ ಅನೇಕ ಗಣ್ಯವ್ಯಕ್ತಿಗಳ ಗಮನವನ್ನು ಸೆಳೆಯಿತು. ಆದಿಪ್ರಾಸ, ಅಂತ್ಯಪ್ರಾಸಗಳಿಂದ ಕೂಡಿ ಹಾಡುಗಳು ಜನಸಾಮಾನ್ಯರಿಗೆ ಮಾತ್ರವಲ್ಲದೆ ಆಗಿನ, ವಿದ್ವಾಂಸರ, ಕವಿಗಳ, ನಾಟಕಕಾರರ ಮೆಚ್ಚುಗೆ, ಗೌರವಗಳಿಗೆ ಪಾತ್ರವಾದುವು. ಸುಬ್ಬಣ್ಣನವರು ತಮ್ಮ ಅಭಿಮಾನದ ಧಣಿ ಭೀಮರಾಯರ ಮೇಲೆ ಒಂದು ನೂರು ನುಡಿಗಳ ಲಾವಣಿಯನ್ನೇ ರಚಿಸಿದರು. ಅದರಲ್ಲಿ ಆ ಪುಣ್ಯಾತ್ಮನ ತ್ಯಾಗಬುದ್ದಿ, ಔದಾರ್ಯ, ಹಿರಿಯತನಗಳನ್ನೆಲ್ಲ ವಿಸ್ತಾರವಾಗಿ, ಮನರಂಜನೀಯವಾಗಿ ವಿವರಿಸಿ ಹೇಳಿದರು. ಅದನ್ನು ತಮ್ಮ ಜವಾನ ಟಿಪ್ಪುವಿಗೆ ಕಂಠಪಾಠ ಮಾಡಿಸಿದರು. * * * * 142 ಮೂರು ತಲೆಮಾರು 10. ಅಶ್ವರತ್ನ ರಂಗ ತಳುಕಿನಿಂದ ಕೋಡಿಹಳ್ಳಿಯ ಕೆರೆ ಸುಮಾರು ಮೂರು ಮೈಲಿ ದೂರವಾಗುತ್ತದೆ. ಪ್ರತಿದಿನವೂ ಸುಬ್ಬಣ್ಣನವರು ತಮ್ಮ ನಿತ್ಯಾಹ್ನಿಕ, ಪೂಜೆ, ಪಾರಾಯಣಗಳನ್ನು ನೆರವೇರಿಸಿ, ಊಟ ಮಾಡಿಕೊಂಡು ಜವಾನನೊಡನೆ ಕಾಲ್ನಡಿಗೆಯಿಂದಲೇ ಕೆಲಸದ ಮೇಲೆ ಹೋಗುತ್ತಿದ್ದರು. ಅಲ್ಲಿ ಸಾಯಂಕಾಲದವರೆಗೂ ಇದ್ದು ಕೂಲಿಯವರ ಹಾಜರಾತಿಯನ್ನು ಹಾಕಿ, ಅವರು ಹೋದ ಮೇಲೆ, ತಾವು ಅಲ್ಲಿಂದ ಹೊರಟು ಮನೆ ಸೇರಬೇಕಾದರೆ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಪ್ರತಿದಿನವೂ ಊಟವಾದೊಡನೆ ಉರಿ ಉರಿ ಬಿಸಿಲಿನಲ್ಲಿ ಮೂರು ಮೈಲಿ ನಡೆದುಕೊಂಡು ಹೋಗುವುದೆಂದರೆ ಬಹು ಕಷ್ಟವಾಗುತ್ತಿತ್ತು. ಹೇಗೂ ಧಣಿ ಕುದುರೆಯನ್ನು ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ಅದರ ಚಾಕರಿ ಮಾಡಿ ನೋಡಿಕೊಳ್ಳಲು ಜವಾನನೂ ಇದ್ದಾನೆ. ಆದ್ದರಿಂದ ಒಂದು ಸಾಮಾನ್ಯವಾದ ಕುದುರೆಯನ್ನು ಕೊಂಡುಕೊಳ್ಳಬೇಕೆಂದು ಅವರು ನಿಶ್ಚಯಿಸಿದರು. ಸುಬ್ಬಣ್ಣನವರು ಕುದುರೆಗಾಗಿ ಅಲ್ಲಲ್ಲಿ ವಿಚಾರಿಸಹತ್ತಿದರು. ಹೀಗಿರಲು ತಳುಕು ಗ್ರಾಮದಲ್ಲಿ ತಾಲ್ಲೂಕು ಜಮಾಬಂದಿ ಏರ್ಪಾಟಾಯಿತು. ದೂರದೂರದ ಊರುಗಳ ಶಾನುಭೋಗರು ಅಲ್ಲಿಗೆ ಬಂದು ಸೇರಿದರು. ಅವರು ಅಲ್ಲಿಯೇ ಒಂದೆರಡು ದಿನಗಳು ಇರಬೇಕಾಯಿತು. ಆ ಹೊತ್ತಿಗೆ ಧರ್ಮಛತ್ರದ ಅವಶ್ಯಕತೆ ಇಲ್ಲವೆಂದು ಸರ್ಕಾರಕ್ಕೆ ತೋರಿದ್ದರಿಂದ ಅದು ವಜಾ ಆಗಿ ಹೋಯಿತು. ಅದಕ್ಕೆ ಬಲವಾಗಿ ಸುಬ್ಬಣ್ಣನವರ ಮನೆಯೇ ಬಂದವರಿಗೆ ಧರ್ಮಛತ್ರವಾಯಿತು. ಆ ಮನೆಯ ಒಡೆಯ - ಒಡತಿಯರಿಬ್ಬರೂ ಅತಿಥಿಸತ್ಕಾರಕ್ಕೆ ಎತ್ತಿದ ಕೈ ಎನಿಸಿದ್ದರು. ಎಷ್ಟೇ ಜನರು ಬಂದರೂ ಲಕ್ಷ್ಮೀದೇವಮ್ಮ ಸ್ವಲ್ಪವೂ ಬೇಜಾರು ಪಡದೆ, ಸಿಡಿಮಿಡಿಗೊಳ್ಳದೆ, ಇದು ಶ್ರೀರಾಮನ ಸೇವೆಯೆಂಬ ಪೂಜ್ಯ ಭಾವನೆಯಿಂದ ಅಡಿಗೆ ಮಾಡಿ ಬಡಿಸುತ್ತಿದ್ದರು. ಪ್ರಭು ರಾಮಚಂದ್ರನ ಅನುಗ್ರಹದಿಂದ ಸುಬ್ಬಣ್ಣನವರಿಗೆ ಕೈ ತುಂಬ ಸಂಪಾದನೆ ಇತ್ತು. ಯಾವುದಕ್ಕೂ ಕೊರತೆ ಇರಲಿಲ್ಲ. ಮನೆಯಲ್ಲಿ ಎಮ್ಮೆ, ಹಸುಗಳು ಎರಡು ಹೊತ್ತು ಹಾಲು ಕೊಡುತ್ತಿದ್ದುವು. ಅಶ್ವರತ್ನ ರಂಗ 143 ಧಂಡಿಯ ಕಾಲ, ಧಾರಾಳವಾದ ಮನಸ್ಸು. ಲಕ್ಷ್ಮೀದೇವಮ್ಮನವರ ಜೊತೆಗೆ ಅವರ ಹಿರಿಯಕ್ಕ ನರಸಮ್ಮ ಸಹಾಯಕ್ಕೆ ಇದ್ದರು. ತಾಲ್ಲೂಕು ಜಮಾಬಂದಿಗಾಗಿ ತಳುಕಿಗೆ ಬಂದಿದ್ದವರಲ್ಲಿ ಘಟಪರ್ತಿಯ ಶಾನುಭೋಗ ಲಿಂಗಣ್ಣನವರೂ ಒಬ್ಬರು. ಅವರು ಸಬ್ಬಣ್ಣನವರ ದೂರದ ಬಂಧುಗಳು. ಅವರ ತಂಗಿ ಗಂಗಮ್ಮನನ್ನು ತಳುಕಿನಲ್ಲಿದ್ದ ಸುಬ್ಬಣ್ಣನವರ ಜ್ಞಾತಿ ವೆಂಕಟರಾಯರ ಮಗ ಶ್ರೀನಿವಾಸರಾಯರಿಗೆ ಕೊಟ್ಟಿತ್ತು. ಆತ ಆ ಕಾಲದಲ್ಲಿ ಮುಪ್ಪಿನ ತಂದೆ, ಕೈ ಹಿಡಿದ ಹೆಂಡತಿ, ಎಳೆ ವಯಸ್ಸಿನ ಒಬ್ಬ ಮಗಳನ್ನು ಬಿಟ್ಟು ಕೈಲಾಸವಾಸಿಯಾಗಿದ್ದರು. ತಂದೆ ವೆಂಕಟರಾಯರು ತಾಲ್ಲೂಕು ಮುನಿಷಿಯಾಗಿದ್ದು ವಿಶ್ರಾಂತರಾಗಿದ್ದರು, ನಿವೃತ್ತಿ ವೇತನ ಪಡೆಯುತ್ತಿದ್ದರು. ಜೊತೆಗೆ ಸ್ವಲ್ಪ ಜಮೀನು ಇತ್ತು. ಹಾಗೂ ಹೀಗೂ ಸಂಸಾರದ ಕಾಲಕ್ಷೇಪವಾಗುತ್ತಿತ್ತು. ಈ ತಂಗಿಯನ್ನು ನೋಡಿಕೊಂಡು ಹೋಗಲು ಶಾನುಭೋಗ ಲಿಂಗಣ್ಣನವರು ಆಗಾಗ ಘಟಪರ್ತಿಯಿಂದ ತಳುಕಿಗೆ ಬರುತ್ತಿದ್ದರು. ಬಂದಾಗಲೆಲ್ಲ ಸುಬ್ಬಣ್ಣನವರನ್ನು ನೋಡದೆ ಹೋಗುತ್ತಿರಲಿಲ್ಲ. ಇಬ್ಬರಿಗೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ವಯಸ್ಸು. ಪರಸ್ಪರ ‘ಮಾವ’ ಎಂದು ಸಂಬೋಧಿಸುತ್ತಿದ್ದರು. ಸುಬ್ಬಣ್ಣನವರು ತಮ್ಮ ಬಳಿಗೆ ಬಂದ ಲಿಂಗಣ್ಣ ಮಾವನ ಮುಂದೆ ಕುದುರೆಯ ಪ್ರಸ್ತಾಪ ಮಾಡಿದರು. ಆಗ ಲಿಂಗಣ್ಣನವರು ‘ಮಾವ, ನಮ್ಮ ಊರಿನ ಈಡಿಗರ ಕದರಪ್ಪನಲ್ಲಿ ಒಂದು ಕುದುರೆ ಮರಿ ಇದೆ. ಗಂಡು ಮರಿ, ಥಡಿಗೆ ಬಂದಿದೆ. ಸಣ್ಣ ಈಡಾದರೂ ಮೈ ಕೈ ತುಂಬಿಕೊಂಡು ಧಡೂತಿಯಾಗಿದೆ. ನೀವು ನಾಳೆ ಗುರುವಾರ ನಮ್ಮೂರಿಗೆ ಬನ್ನಿ, ನೋಡೋಣ. ಲಕ್ಷಣಗಳು ಸರಿಯಾಗಿದ್ದು ಮನಸ್ಸಿಗೆ ಸಮಾಧಾನವಾದರೆ ಖರೀದಿಯ ಮಾತನಾಡೋಣ. ಮಧ್ಯಾಹ್ನದ ಊಟಕ್ಕೆ ಅಲ್ಲಿಗೆ ಬಂದು ಬಿಡಿ,’ ಎಂದು ಹೇಳಿದರು. ಹಳ್ಳಿಗಳ ಬ್ರಾಹ್ಮಣರ ಮನೆಗಳಲ್ಲಿ, ಅದರಲ್ಲೂ ಶಾನುಭೋಗರ ಮನೆಯಲ್ಲಿ ಮಧ್ಯಾಹ್ನದ ಊಟವೆಂದರೆ ಒಂದು ಘಂಟೆಯ ಮೇಲೆಯೇ. ಸುಬ್ಬಣ್ಣನವರು ಒಪ್ಪಿಕೊಂಡರು. ಆ ದಿನ ಸೋಮವಾರ, ಮರುದಿನ ಮಂಗಳವಾರ ತಿಮ್ಮಣ್ಣನ ಹಳ್ಳಿಯ ರೈತನೊಬ್ಬ ಬಂದ. ಅವನೂ, ಅವನ ತಮ್ಮನೂ ತಮಗಿದ್ದ ಪಿತ್ರಾರ್ಜಿತವಾದ ಆರು ಎಕರೆ ಜಮೀನು ಹಂಚಿಕೊಳ್ಳಬೇಕಾಯಿತು. ಇಬ್ಬರಿಗೂ ಸುಬ್ಬಣ್ಣನವರಲ್ಲಿ ತುಂಬ ನಂಬಿಕೆ. ಅವರೇ ಖುದ್ದಾಗಿ ಬಂದು ಹಗ್ಗ ಹಿಡಿದು ಅಳತೆ ಮಾಡಬೇಕೆಂದೂ, ಅದಕ್ಕೆ ಅವಶ್ಯಕವಾದ, ಛಾಪಾಕಾಗದವನ್ನು ತಂದು ವಿಭಾಗಪತ್ರವನ್ನು ಬರೆದುಕೊಡಬೇಕೆಂದೂ ಕೇಳಿಕೊಂಡರು. ಸುಬ್ಬಣ್ಣನವರು ಅದಕ್ಕೆ ಒಪ್ಪಿ ಗುರುವಾರ ಬೆಳಿಗ್ಗೆ ಎಂಟು ಘಂಟೆಗೆ ತಾವು ಬರುವುದಾಗಿಯೂ, 144 ಮೂರು ತಲೆಮಾರು ಅಷ್ಟರೊಳಗಾಗಿ ಅಳತೆಯ ಸಾಧನಗಳೊಂದಿಗೆ ಸಿದ್ಧವಾಗಿರಬೇಕೆಂದೂ ತಿಳಿಸಿ, ಕಳುಹಿಸಿಕೊಟ್ಟರು. ಗುರುವಾರದ ದಿನ ಸುಬ್ಬಣ್ಣನವರು ಬೆಳಗಿನ ಜಾವದಲ್ಲಿಯೇ ಎದ್ದು ತಮ್ಮ ನಿತ್ಯದ ಆಹ್ನಿಕಗಳನ್ನು ನೆರವೇರಿಸಿ, ಅಲ್ಪೋಪಹಾರದೊಡನೆ ಹಾಲು ಕುಡಿದು, ಏಳು ಘಂಟೆಯೊಳಗಾಗಿ ಜವಾನ ಟಿಪ್ಪುವಿನೊಂದಿಗೆ ಪ್ರಯಾಣ ಮಾಡಿದರು. ತಳುಕಿನಿಂದ ತಿಮ್ಮಣ್ಣಹಳ್ಳಿಗೆ ಕೇವಲ ಎರಡೂವರೆ ಮೈಲಿ ಮಾತ್ರ. ಮನೆ ಬಿಟ್ಟು ಹೊರಡುತ್ತಲೇ ಶುಭಶಕುನಗಳಾದುವು. ಮನಸ್ಸು ಹರ್ಷವಾಗಿತ್ತು. ಎಂಟು ಘಂಟೆಯ ವೇಳೆಗೆ ತಿಮ್ಮಣ್ಣನ ಹಳ್ಳಿಯನ್ನು ಮುಟ್ಟಿದರು. ರೈತರು ಇವರನ್ನು ಕಾಯುತ್ತ ಸಿದ್ಧರಾಗಿದ್ದರು. ಊರಿನಿಂದ ಕೇವಲ 200 ಗಜ ದೂರದಲ್ಲಿದ್ದ ಜಮೀನಿನ ಬಳಿಗೆ ಊರ ಪಂಚಾಯಿತರನ್ನು ಕರೆದುಕೊಂಡು ಹೋದರು. ತಮ್ಮಲ್ಲಿದ್ದ ಟೇಪನ್ನು ತೆಗೆದು ಸುಬ್ಬಣ್ಣನವರು ಅಳತೆ ಮಾಡಿದರು. ಹಗ್ಗದಲ್ಲಾಗಲಿ, ಸರಪಳಿಯಲ್ಲಾಗಲಿ ಅಳತೆ ಮಾಡಿದಾಗ ಸ್ವಲ್ಪ ಕಡಿಮೆ ಆಗಬಹುದು. ಟೇಪಿನ ಅಳತೆಯಲ್ಲಿ ವ್ಯತ್ಯಾಸದ ಸಂದೇಹವೇ ಇಲ್ಲ. ಕ್ರಮವಾಗಿ ಅಳತೆ ಮಾಡಿ ಅರ್ಧ ಭಾಗಕ್ಕೆ ಸರಿಯಾಗಿ ಅಲ್ಲಲ್ಲಿಯೇ ಗೂಟಗಳನ್ನು ಹೊಡೆಸಿ ಪಂಚಾಯಿತರ ಸಮಕ್ಷಮದಲ್ಲಿಯೇ ಉದ್ದಕ್ಕೂ ಬದು ಹಾಕಿಸಿದರು. ಹಂಚಿಕೆ ಎಲ್ಲರ ಮನಸ್ಸಿಗೂ ಒಪ್ಪಿಗೆಯಾಯಿತು. ಅನಂತರ ಊರೊಳಗೆ ಬಂದು ಪಟೇಲರ ವಿಶಾಲವಾದ ಕಟ್ಟೆಯ ಮೇಲೆ ಕುಳಿತು, ತಾವು ತಂದಿದ್ದ ಛಾಪಾಕಾಗದದಲ್ಲಿ ವಿಭಾಗ ಪತ್ರದಲ್ಲಿ ಬರೆದು, ಸಾಕ್ಷಿಗಳ ರುಜು ಹಾಕಿಸಿ ತಮ್ಮ ಬಿಕ್ಕಲಂ ರುಜುವನ್ನು ಹಾಕಿ ಮುಗಿಸಿದರು. ಸಂಬಂಧಿಸಿದ ರೈತರು ಸಂತೋಷಪಟ್ಟು, ಕೆಂಪಗೆ ಕಾಯಿಸಿ, ಸಕ್ಕರೆ ಬೆರೆಸಿದ ಹಸುವಿನ ಹಾಲನ್ನೂ, ಎಳನೀರನ್ನೂ ಕುಡಿಯಲು ಕೊಟ್ಟರು. ತಾಂಬೂಲದಲ್ಲಿ ಕಲ್ಲು ಸಕ್ಕರೆ, ಬಾದಾಮಿ. ಉತ್ತುತ್ತೆ, ದ್ರಾಕ್ಷಿಗಳನ್ನು, ಎರಡು ತೆಂಗಿನಕಾಯಿಗಳೊಂದಿಗೆ ಇಪ್ಪತ್ತು ರೂಪಾಯಿಗಳನ್ನು ಮುಂದಿಟ್ಟು ನಮಸ್ಕರಿಸಿದರು. ಆ ಗ್ರಾಮದ ಗೊಂಚಿಗಾರ ಐವತ್ತು ಎಕರೆ ಬಯಲು ಜಮೀನಿಗಾಗಿ ಅರ್ಜಿಯನ್ನು ಬರೆಸಿಕೊಂಡು ಐದು ರೂಪಾಯಿಗಳನ್ನು ಕೊಟ್ಟ. ಒಂದೆರಡು ಘಂಟೆಗಳ ಕಾಲದಲ್ಲಿ ಅನಿರೀಕ್ಷಿತವಾಗಿ ಇಪ್ಪತ್ತೈದು ರೂಪಾಯಿಗಳ ವರಮಾನವನ್ನು ಪ್ರಭು ರಾಮಚಂದ್ರ ಕೊಟ್ಟಿದ್ದ. ಆಗ ಸುಮಾರು ಹನ್ನೊಂದು ಗಂಟೆಯಾಗಿತ್ತು. ಸುಬ್ಬಣ್ಣನವರು ಅಲ್ಲಿಂದ ಜನರೆಲ್ಲರಿಂದ ಬೀಳ್ಲೊಂಡು ಘಟಪರ್ತಿಯ ಕಡೆ ಪ್ರಯಾಣಮಾಡಿದರು. ಅಲ್ಲಿಂದ ಮೂರುವರೆ ಮೈಲಿಗಳು ನಡೆದರೆ ಘಟಪರ್ತಿ ಸಿಕ್ಕುತ್ತದೆ. ದಾರಿಯಲ್ಲಿ ವಲಸೆ ಗ್ರಾಮದಲ್ಲಿಯ ಬೊಮ್ಮಯ್ಯ ಇವರು ಬರುವುದನ್ನು ನಿರೀಕ್ಷಿಸುತ್ತ ಅಶ್ವರತ್ನ ರಂಗ 145 ಹಾದಿಯಲ್ಲಿ ನಿಂತಿದ್ದ. ಆತ ಅಮಲ್ದಾರರಿಗೆ ಒಂದು ಅರ್ಜಿಯನ್ನು ಬರೆಸಿಕೊಳ್ಳಬೇಕಿತ್ತು. ಆತನ ಗೆಳೆಯ ತಿಮ್ಮಣ್ಣ ಒಂದು ಸಾಲಪತ್ರವನ್ನು ಬರೆಸಿಕೊಳ್ಳಬೇಕಿತ್ತು. ಸುಬ್ಬಣ್ಣನವರು ಅವರಿಬ್ಬರ ಕೆಲಸವನ್ನು ಮಾಡಿಕೊಟ್ಟು ಮತ್ತೆ ಹತ್ತು ರೂಪಾಯಿಗಳನ್ನು ಸಂಪಾದಿಸಿದರು. ಇದೆಲ್ಲ ಅನಿರೀಕ್ಷಿತವಾಗಿತ್ತು. ಆ ಊರಿನಲ್ಲಿಯೇ ಜವಾನ ಟಿಪ್ಪು ಪಟೇಲನ ಮನೆಯಲ್ಲಿ ಊಟ ಮಾಡಿದ. ಅಲ್ಲಿಂದ ಹೊರಟು ಮಧ್ಯಾಹ್ನ ಹನ್ನೆರಡೂವರೆ ಘಂಟೆಗೆ ಘಟವರ್ತಿಯನ್ನು ಸೇರಿದ್ದಾಯಿತು. ಲಿಂಗಣ್ಣನವರು ತಮ್ಮ ಆಹ್ನಿಕ, ದೇವರ ಪೂಜೆಗಳನ್ನು ಮುಗಿಸಿ ‘ಮಾವ’ನಿಗಾಗಿ ಕಾಯುತ್ತಿದ್ದರು. ಸುಬ್ಬಣ್ಣನವರು ಮನೆಯನ್ನು ಸೇರುತ್ತಲೇ ಬಟ್ಟೆ ಬರೆಗಳನ್ನು ಬಿಚ್ಚಿಟ್ಟು, ಮತ್ತೊಮ್ಮೆ ಸ್ನಾನ ಮಾಡಿ, ಮಡಿಯುಟ್ಟು ಮಾಧ್ಯಾಹ್ನಿಕವನ್ನು ಮಾಡಿ ಮುಗಿಸಿದರು. ಲಿಂಗಣ್ಣನವರ ಮಡದಿ ಅಕ್ಕಮ್ಮ (ಆಕೆಯ ಹೆಸರು ಲಕ್ಷಮ್ಮ ಚಿಕ್ಕಂದಿನಲ್ಲಿ ಮುದ್ದಿನಿಂದ ಕರೆಯುತ್ತಿದ್ದ ಅಕ್ಕಮ್ಮ ಎಂಬ ಹೆಸರೇ ರೂಢಿಯಲ್ಲಿ ಬಂತು) ಅಕ್ಕರೆಯಿಂದ ಬಡಿಸಿದ ಅಡಿಗೆಯನ್ನು ಸಂತೋಷವಾಗಿ ಲಿಂಗಣ್ಣ ಮತ್ತು ಅವರ ತಂದೆ ಮಲ್ಲಣ್ಣ ಅವರ ಜೊತೆಯಲ್ಲಿ ಕುಳಿತುಕೊಂಡು ಊಟಮಾಡಿದರು. ತಾಂಬೂಲಾನಂತರ ವಾಮಕುಕ್ಷಿಯಾಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿ ಏಳುವ ಹೊತ್ತಿಗೆ ನಾಲ್ಕು ಘಂಟೆಯಾಗಿತ್ತು. ಅಕ್ಕಮ್ಮ ಬಿಸಿಬಿಸಿಯಾಗಿ ಚಕ್ಕುಲಿ, ಮುಚ್ಚೋರೆ, ಕೋಡುಬಳೆಗಳನ್ನು ಫಲಾಹಾರಕ್ಕೆ ನೀಡಿದಳು. ಮನೆಯ ಮುಂದೆ ಪಡಸಾಲೆಯಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಸುಬ್ಬಣ್ಣ, ಲಿಂಗಣ್ಣನವರಿಬ್ಬರೂ ಕುಳಿತರು. ಆ ವೇಳೆಗಾಗಲೇ ಕುದುರೆಯ ಸಮೇತ ಬರುವಂತೆ ಕದರಪ್ಪನಿಗೆ ತಳವಾರನ ಮೂಲಕ ಸುದ್ದಿ ಹೋಗಿತ್ತು. ಅವನು ಕುದುರೆಯೊಂದಿಗೆ ಬಂದ. ಅಷ್ಟು ಹೊತ್ತಿಗೆ ಗ್ರಾಮದ ಕೆಲವು ಗಣ್ಯರು ಸುಬ್ಬಣ್ಣನವರನ್ನು ನೋಡಲೆಂದು ಅಲ್ಲಿಗೆ ಬಂದು ಸೇರಿದರು. ಅವರಲ್ಲಿ ಒಬ್ಬನಾದ ರಾಮಪ್ಪ ಅಶ್ವಶಾಸ್ತ್ರದಲ್ಲಿ ನಿಪುಣನಾಗಿದ್ದವ. ಆತ ಕದರಪ್ಪನ ಕುದುರೆಯನ್ನು ಆಮೂಲಾಗ್ರನಾಗಿ ಪರೀಕ್ಷಿಸಿದ. ‘ಅದರ ಸುಳಿ, ಮಸ್ತಕಾದಿ ಲಕ್ಷಣಗಳು ಪ್ರಶಸ್ತವಾಗಿವೆ, ಶುಭಕರವಾಗಿವೆ. ಅಮಂಗಳಕರವಾದ ಕೆಟ್ಟ ಸುಳಿಗಳಾವುವೂ ಇಲ್ಲ’ ಎಂದು ತೀರ್ಮಾನ ಹೇಳಿದ. ಸುಬ್ಬಣ್ಣನವರಿಗೂ ಕುದುರೆಯನ್ನು ನೋಡಿ ಏನೋ ಒಂದು ಬಗೆಯಾದ ಆನಂದವಾಯಿತು. ಅವರು ಅದನ್ನು ಮೆಚ್ಚಿದರು. ಅಲ್ಲಿದ್ದವರೆಲ್ಲರೂ ಅದನ್ನು ಒಪ್ಪಿದರು. ಸುಬ್ಬಣ್ಣನವರು ಮೇಲೆದ್ದು, ಒಳಕ್ಕೆ ಹೋಗಿ ಅಕ್ಕಮ್ಮನೊಡನೆ ‘ತಾಯಿ, ಸ್ವಲ್ಪ ಹೊರಕ್ಕೆ ಬಾ. ನಾನೊಂದು ಕುದುರೆಯನ್ನು ಕೊಂಡುಕೊಳ್ಳಬೇಕೆಂದಿದ್ದೇನೆ. ಅದು ಹೊರಗೆ ನಿಂತಿದೆ. ಅದು ಚೆನ್ನಾಗಿದೆ 146 ಮೂರು ತಲೆಮಾರು ಎಂದು ಎಲ್ಲರೂ ಹೇಳುತ್ತಿದ್ದಾರೆ. ನೀನು ಅದನ್ನು ನೋಡಿ ಒಪ್ಪಿದರೆ ನನಗೆ ಸಮಾಧಾನ, ಸಂತೋಷ. ನೋಡಿ ಹೇಳು ನಾ’ ಎಂದು ಕರೆದರು. ಅಕ್ಕಮ್ಮ ನಿಜವಾಗಿಯೂ ಲಕ್ಷ್ಮೀಯೇ. ತನ್ನ ಕೆನ್ನೆ, ಕೈಕಾಲುಗಳ ತುಂಬ ಹಚ್ಚನೆಯ ಹಳದಿ ಅರಿಶಿನ, ಮುಖದ ಮೇಲೆ ಅರ್ಧರೂಪಾಯಿ ಅಗಲದ ಕುಂಕುಮ; ಕಿವಿಗಳಲ್ಲಿ ಕೆಂಪನೆ ಓಲೆ, ಮೂಗಿನಲ್ಲಿ ಮುತ್ತಿನ ನತ್ತು; ಕಂಠದಲ್ಲಿ ತಾಳಿ, ಕೋವಿಗಳಿಂದ ಕೂಡಿದ ಕರಿಮಣಿ ಸರ, ಕೈಗಳ ತುಂಬ ಬಣ್ಣದ ಗಾಜಿನ ಬಳೆಗಳು - ಇವುಗಳಿಂದ ಕೂಡಿದ ಆಕೆ ನೋಡುವವರಿಗೆ ಮಂಗಳದೇವತೆಯಂತೆ ತೋರುತ್ತಿದ್ದಳು. ಮುಖದ ಮೇಲೆ ತುಂಬ ತೇಜಸ್ಸು, ಗಾಂಭೀರ್ಯ, ಆಕೆ ಬರಿಯ ಬಿಚ್ಚೋಲೆಯ ಲಕ್ಷ್ಮಿ ಮಾತ್ರವಲ್ಲ, ಮನೆಗೆಲಸಗಳಲ್ಲಿ ದಕ್ಷಳು. ಶುಚಿರುಚಿಯಾದ ಭಕ್ಷ್ಯ, ಭೋಜ್ಯ ತಯಾರಿಕೆಯಲ್ಲಿ ಸಿದ್ಧಹಸ್ತಳು, ಮನೆತನದ ಸಂಪ್ರದಾಯಗಳನ್ನು ಸಾಂಗವಾಗಿ ನಡೆಸುವಳು, ದಯಾಶೀಲೆ, ಉದಾರಿ. ತನ್ನ ಮಕ್ಕಳಂತೆ ಬಡಬಗ್ಗರಿಗೂ ತಾಯಿ. ಬಂಧು-ಬಳಗದವರಲ್ಲಿ ಪ್ರೀತಿ, ವಿಶ್ವಾಸ, ಅತಿಥಿ ಸೇವೆಯಲ್ಲಿ ಬದ್ಧಾಧರೆ. ತಾನು ಉಪವಾಸವಿದ್ದಾದರೂ ಬಡವರಿಗೆ ಒಂದು ತುತ್ತು ನೀಡಿಯಾಳೆ ಹೊರತು ಬರಿಗೈಯಿಂದ, ಬರಿ ಹೊಟ್ಟೆಯಿಂದ ಎಂದೂ ಹಿಂದಿರುಗಿಸುತ್ತಿರಲಿಲ್ಲ. ತಳುಕಿನಲ್ಲಿ ಲಕ್ಷ್ಮೀದೇವಮ್ಮ, ಘಟಪರ್ತಿಯಲ್ಲಿ ಅಕ್ಕಮ್ಮ -ಇಬ್ಬರೂ ಸಮಾನ ಗುಣಶೀಲೆಯರು, ಪುಣ್ಯಾತ್ಮರು, ಆದ್ದರಿಂದಲೇ ಸುಬ್ಬಣ್ಣನವರಿಗೆ ಆಕೆಯಲ್ಲಿ ಮಮತೆ, ಗೌರವ. ತನ್ನ ‘ಚಿಕ್ಕಪ್ಪ’ ಕರೆಯುತ್ತಲೇ ಆಕೆ ತಲೆಬಾಗಿಲಿಗೆ ಬಂದು ಕುದುರೆಯನ್ನು ನೋಡಿದಳು. ಆಕೆಯ ಮನಸ್ಸಿಗೂ ಅದು ಹಿಪ್ಪಿಗೆಯಾಯಿತು. ‘ಚಿಕ್ಕಪ್ಪ, ಕುದುರೆ ಮರಿ ಲಕ್ಷಣವಾಗಿದೆ. ತೆಗೆದುಕೊ’ ಎಂದು ಹೇಳಿದಳು. ಮೊದಲೇ ಸಂತೋಷಗೊಂಡಿದ್ದ ಸುಬ್ಬಣ್ಣನವರ ಮನಸ್ಸಿಗೆ ಮತ್ತಷ್ಟು ಸಂತೋಷವಾಯಿತು. ಅದನ್ನು ಕೊಳ್ಳುವುದು ನಿಶ್ಚಯವಾಯಿತು. ಈಗ ಖರೀದಿಯ ವಿಚಾರ ಚರ್ಚೆಗೆ ಬಂತು. ಕುದುರೆಯ ಮಾಲೀಕ ಕದರಪ್ಪ ಇಪ್ಪತ್ತೈದು ರೂಪಾಯಿ ಹೇಳಿದ. ಅಲ್ಲಿ ನೆರೆದಿದ್ದವರು ಇಪ್ಪತ್ತು ರೂಪಾಯಿಗಳಿಗೆ ಆತನನ್ನು ಒಪ್ಪಿಸಿದರು. ಅವರ ಮಾತಿಗೆ ಒಪ್ಪಿದನಾದರೂ ಅವನಿಗೆ ಸಮಾಧಾನವಾಗಿರಲಿಲ್ಲವೆಂಬುದು ಅವನ ಮುಖಚರ್ಯೆಯಿಂದ ಎದ್ದು ಕಾಣುತ್ತಿತ್ತು. ಸುಬ್ಬಣ್ಣನವರು ಇದುವರೆಗೂ ಒಂದು ಮಾತು ಆಡಿರಲಿಲ್ಲ. ಅವರು ಕದರಪ್ಪನನ್ನು ಹತ್ತಿರ ಕರೆದು ‘ಅಯ್ಯ ಕದರಪ್ಪ, ನಿನ್ನ ಮನಸ್ಸಿಗೆ ಅಸಮಾಧಾನ ಮಾಡಿಕೊಳ್ಳಬೇಡ. ನಾನು ನೀನು ಕೇಳಿದಷ್ಟೇ ಹಣ ಕೊಡುತ್ತೇನೆ. ನನಗೆ ಥಡಿಯ ಜೊತೆಯಲ್ಲಿ ಕುದುರೆ ಕೊಡು. ನನ್ನ ಹತ್ತಿರ ಥಡಿ ಇಲ್ಲ. ಅದನ್ನು ಅಶ್ವರತ್ನ ರಂಗ 147 ಹುಡುಕಿಕೊಂಡು ನಾನು ಎಲ್ಲಿಗೆ ಹೋಗಲಿ?’ ಎಂದು ಮೂವತ್ತು ರೂಪಾಯಿಗಳನ್ನು ಅವನ ಕೈಲಿಟ್ಟರು. ಅವನಿಗೆ ತುಂಬ ಸಂತೋಷವಾಯಿತು. ಅವನು ಸರಸರನೆ ಮನೆಗೆ ಹೋಗಿ ಹೊಚ್ಚ ಹೊಸದಾಗಿ ಈ ಕುದುರೆಗಾಗಿಯೇ ಹೊಲಿಸಿಟ್ಟಿದ್ದ ಥಡಿಯನ್ನು ತಂದು ಕೊಟ್ಟ. ಕೆಲವರಿಗೆ ಇದು ಸೋಜಿಗವಾಯಿತು. ಹೆಚ್ಚಿಗೆ ಕೊಟ್ಟದ್ದು ಅವಿವೇಕವೆಂದು ತೋರಿತು. ಕದರಪ್ಪನು ಅತ್ತ ಹೋಗುತ್ತಲೇ ಇತ್ತ ಅವರು ‘ಹೀಗೇಕೆ ಮಾಡಿದಿರಿ?’ ಎಂದು ಸುಬ್ಬಣ್ಣನವರನ್ನು ಕೇಳಿದರು. ಆಗ ಅವರು ತಾವು ಮನೆಬಿಟ್ಟು ಹೊರಟಾಗಿನಿಂದ ಅಲ್ಲಿಗೆ ಬಂದು ಸೇರುವವರೆಗೆ ಅನಿರೀಕ್ಷಿತವಾಗಿ ಬಂದು ಸೇರಿದ ಸಂಪಾದನೆಯನ್ನು ವಿವರಿಸಿ, ‘ಇದೆಲ್ಲ ಆ ಕುದುರೆಯ ಶುಭಲಕ್ಷಣದ ಫಲ. ಆದ್ದರಿಂದಲೇ ಕುದುರೆಯವನಿಗೆ ಸಂತೋಷವಾಗುವಂತೆ ಪೂರಾ ಹಣವನ್ನು ಕೊಟ್ಟೆ’ ಎಂದು ತಿಳಿಸಿದರು. ಸುಬ್ಬಣ್ಣನವರು ಆ ದಿನ ಘಟವರ್ತಿಯಲ್ಲೇ ಇದ್ದು, ಮರುದಿನ ಬೆಳಿಗ್ಗೆ, ತಮ್ಮ ಮಾಮೂಲು ಪದ್ಧತಿಯಂತೆ ಆಹ್ನಿಕ, ಪಾರಾಯಣಗಳನ್ನು ಮುಗಿಸಿಕೊಂಡು ಮಗಳು ಮಾಡಿಕೊಟ್ಟ ತಿಂಡಿಯನ್ನು ತಿಂದು, ಹಾಲು ಕುಡಿದು ತಳುಕಿಗೆ ಹಿಂದಿರುಗಿದರು. ಮಧ್ಯದಾರಿಯಲ್ಲಿ ಸಿಕ್ಕ ಪರಿಚಯದವರೊಡನೆ ಮಾತನಾಡಿಕೊಂಡು ಮನೆಯನ್ನು ಸೇರುವಾಗ ಮಧ್ಯಾಹ್ನ ಹನ್ನೆರಡು ಘಂಟೆಯಾಗಿತ್ತು. ಶುಕ್ರವಾರದ ದಿನ ಮಹಾಲಕ್ಷ್ಮಿಯಂತೆ ಬಂದ ಕುದುರೆಯನ್ನು ಕಂಡು ಮನೆಯವರಿಗೆಲ್ಲ ಸಂತೋಷವಾಯಿತು. ಸ್ವಲ್ಪ ಕಪ್ಪು ಮಿಶ್ರಿತವಾದ ಕೆಂಪು ಬಣ್ಣ, ಮಟ್ಟಸವಾದ ಎತ್ತರ, ಗಡುಸಾದ, ಬಲವಾದ ಕಾಲುಗಳು, ಉದ್ದವಾದ ಬಾಲ, ತುಂಬಿಕೊಂಡ ಮೈ, ಹಣೆಯ ಮೇಲೆ ಎದ್ದು ಕಾಣುವ ಬಿಳಿಯ ಚುಕ್ಕೆ, ಹೊಳೆಯುವ ಕಣ್ಣುಗಳು, ಮಟ್ಟಸವಾದ ಆಯಾಲು - ಒಟ್ಟಿನ ಮೆಲೆ ಲಕ್ಷಣವಾದ ಆಕಾರ. ಅಭಿಜಿತ್ ಮಹೂರ್ತದಲ್ಲಿ ಮನೆಯ ಬಾಗಿಲಿಗೆ ಬಂದ ಕುದುರೆಯು ಲಕ್ಷ್ಮೀದೇವಮ್ಮನವರಿಗೆ ತುಂಬ ಮೆಚ್ಚುಗೆಯಾಯಿತು. ಅದಕ್ಕೆ ಆಕೆ ಅಕ್ಕಿ ಬೆಲ್ಲವನ್ನು ತಿನ್ನಲಿತ್ತು, ಆರತಿ ಎತ್ತಿದ ಓಕುಳಿಯ ನೀರನ್ನು ಅದರ ಮುಂಗಾಲುಗಳ ಮೇಲೆ ಸುರಿದು ಒಳಗೆ ಬರಮಾಡಿಕೊಂಡರು. ರಂಗ ಎಂದು ನಾಮಕರಣವಾಯಿತು. ರಂಗ ಬಲಗಾಲನ್ನು ಮುಂದಿಟ್ಟುಕೊಂಡು ಹೊಸ್ತಿಲನ್ನು ದಾಟಿ ಮನೆಯೊಳಗಿನಿಂದ ಹಿತ್ತಲನ್ನು ಸೇರಿತ್ತು. ಆ ದಿನ ಸಾಯಂಕಾಲದೊಳಗಾಗಿ ಅದಕ್ಕಾಗಿ ಟಿಪ್ಪು ಅಚ್ಚುಕಟ್ಟಾದ ಭದ್ರವಾದ ಲಾಯವೊಂದನ್ನು ನಿರ್ಮಾಣ ಮಾಡಿದ. ರಂಗ ಬಂದ ಘಳಿಗೆ ಅಮೃತ ಘಳಿಗೆ. ಅದು ಮನೆಯಲ್ಲಿ ಕಾಲಿಟ್ಟಲಾಗಾಯಿತು ಸುಬ್ಬಣ್ಣನವರಿಗೆ ಶುಕ್ರ ಮಹಾದೆಸೆ ಆರಂಭವಾಯಿತು. 148 ಮೂರು ತಲೆಮಾರು ಅವರ ನಿತ್ಯದ ಕಸುಬಿನಲ್ಲಿ ದಿನದಿಂದ ದಿನಕ್ಕೆ ಆದಾಯ ಏರ ತೊಡಗಿತು - ಇಮ್ಮಡಿಯಾಗಿ, ಮುಮ್ಮಡಿಯಾಗಿ. ನಾಲ್ಮಡಿಯಾಗುತ್ತಾ ಹೋಯಿತು. ಅವರು ಬರೆದ ನಾಟಕಗಳು - ಜಲಂಧರ ಕಥೆ, ಚೋರ ಕಥೆ ಮೊದಲಾದುವು ಹೆಚ್ಚು ಜನಪ್ರಿಯವಾಗಿ ಅವರ ಕೀರ್ತಿ ವಿಸ್ತರಿಸಿತು. ಅವರ ಆತಶುಕವಿತ್ವಕ್ಕೂ ಸಿದ್ಧಿ ಒದಗಿತು. ನಿಂತಲ್ಲಿ ನಿಂತ ಹಾಗೆಯೇ ಕುಳಿತಲ್ಲಿ ಕುಳಿತಂತೆಯೇ ಹಾಡುಗಳನ್ನು ರಚಿಸುತ್ತಿದ್ದರು. ಅವು ಒಂದೊಂದೂ ನವರಸಭರಿತವಾಗಿರುತ್ತಿದ್ದುವು. ದಿನದಿನವೂ ಅವರು ಕಾಮಗಾರಿಯ ಸ್ಥಳಕ್ಕೆ ರಂಗನ ಮೇಲೆ ಕುಳಿತು ಹೋಗುತ್ತಿದ್ದರು. ಅದರ ನಡಿಗೆ ಬಲು ಚುರುಕು. ಕೇವಲ ಅರ್ಧ ಘಂಟೆಯಲ್ಲಿ ಗುರಿ ಮುಟ್ಟುತ್ತಿತ್ತು. ಅದೇನೂ ಓಡುತ್ತಿರಲಿಲ್ಲ; ಅದರ ಸಾಮಾನ್ಯ ನಡಿಗೆಯೇ ಓಟದಂತಿರುತ್ತಿತ್ತು. ಅದರ ನಡಿಗೆಯೇ ಅಷ್ಟು ಶೀಘ್ರ. ಅದರ ಮೇಲೆ ಏರಿ ಹೋಗಿ ಬರುವಾಗ ಟಿಪ್ಪು ಓಡೋಡಿ ಬರಬೇಕಾಗುತ್ತಿತ್ತು ಅಥವಾ ಅದು ಹೊರಡುವುದಕ್ಕಿಂತ ಮುಂಚೆಯೆ ತಾನು ಹೊರಡಬೇಕಿತ್ತು. ಸುಬ್ಬಣ್ಣನವರ ಹತ್ತಿರ ಕೊರಡೆಯೇನೋ ಇತ್ತು. ಆದರೆ ಎಂದೂ ಅವರು ಅದನ್ನು ಬಳಸುತ್ತಿರಲಿಲ್ಲ. ಅದರ ಅವಶ್ಯಕತೆಯೇ ಇರಲಿಲ್ಲ. ಥಡಿ ಹಾಕಿ ಹತ್ತುವುದಕ್ಕೆ ಮುಂಚೆ, ಅವರು ಅದರ ಕುತ್ತಿಗೆಯನ್ನು ಚಪ್ಪರಿಸಿ, ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ‘ರಂಗಾ. ಹೊರಡೋಣವೇನಪ್ಪ’ ಎಂದು ಕೇಳುತ್ತಿದ್ದರು. ಅದಕ್ಕೆ ಅವರ ಮಾತು ಅರ್ಥವಾಗುತ್ತಿತ್ತೋ ಏನೊ. ತನ್ನ ಕುತ್ತಿಗೆಯನ್ನು ಆಡಿಸಿ ಒಪ್ಪಿಗೆಯನ್ನು ಸೂಚಿಸುತ್ತಿತ್ತು. ಅದರ ಮೇಲೆ ಕುಳಿತು ಹೋದಾಗ ಯಾವ ಕೆಲಸವೇ ಆಗಲಿ ಹೂವಿನ ಸರ ಎತ್ತಿದಂತೆ ಸರಾಗವಾಗಿ ಸಾಗುತ್ತಿತ್ತು. ಕ್ರಮೇಣ ಇಬ್ಬರ ಹೃದಯಗಳೂ ಒಂದಾದುವು. ಸುಬ್ಬಣ್ಣನವರು ಆ ಕುದುರೆಯನ್ನು ತಮ್ಮ ಜೀವದಂತೆ ನೋಡಿಕೊಳ್ಳುತ್ತಿದ್ದರು. ಅದನ್ನು ಬೇರೆ ಯಾರಿಗೂ ಸವಾರಿಗೆ ಕೊಡುತ್ತಿರಲಿಲ್ಲ. ರಂಗನಾದರೂ ಅಷ್ಟೆ. ತನ್ನ ಧಣಿ, ಆತನ ಮಕ್ಕಳು, ಹತ್ತಿರದ ಆಪ್ತೇಷ್ಟರು - ಅವರನ್ನು ಬಿಟ್ಟು ಬೇರೆ ಯಾರೇ ಆಗಲಿ, ಅವರು ತನ್ನ ಬೆನ್ನೇರುವುದಿರಲಿ, ತನ್ನ ಸಮೀಪಕ್ಕೂ ಬರಲು ಅವಕಾಶ ಕೊಡುತ್ತಿರಲಿಲ್ಲ. ಹುಲಿಯಂತೆ ಸಿಡುಗುಟ್ಟಿಕೊಂಡು ಕಚ್ಚಲು ಬರುತ್ತಿತ್ತು; ಅವರನ್ನು ಓಡಿಸುತ್ತಿತ್ತು. ಮನೆಯ ಮಕ್ಕಳು ಅದರ ಹೊಟ್ಟೆಯ ಕೆಳಗೆ ತೂರಿಕೊಂಡು ಆಟವಾಡಿದರೂ, ತನ್ನ ಪಾಡಿಗೆ ತಾನು ಸ್ವಸ್ಥವಾಗಿರುತ್ತಿತ್ತು. ಸುಬ್ಬಣ್ಣನವರನ್ನು ಕಂಡರೆ ಅದಕ್ಕೆ ಆಗುತ್ತಿದ್ದ ಆನಂದ ಅದರ ಕಣ್ಣಿನಲ್ಲಿ ಉಕ್ಕಿ ಹರಿಯುತ್ತಿತ್ತು. ಅವರಿಬ್ಬರಿಗೂ ಯಾವ ಜನ್ಮದ ಅನುಬಂಧವೋ ಏನೋ! ರಂಗನು ಮನೆಗೆ ಬಂದ ಸುಮಾರು ಆರು ತಿಂಗಳ ಮೇಲೆ ಕಂಟ್ರಾಕ್ಟರ್ ಅಶ್ವರತ್ನ ರಂಗ 149 ಭೀಮರಾಯರು ಕೋಡಿಹಳ್ಳಿ ಕೆರೆಯ ಕೆಲಸದ ತನಿಖೆಗಾಗಿ ಬಂದು ಮನ್ನೇಕೋಟೆಯಲ್ಲಿ ಮೊಕ್ಕಾಂ ಮಾಡಿದರು. ಮಾರನೆಯ ದಿನ ಬೆಳಿಗ್ಗೆ ಹೊತ್ತಿಗೆ ಮುಂಚೆ ಬರುವಂತೆ ಸುಬ್ಬಣ್ಣನವರಿಗೆ ಹೇಳಿ ಕಳುಹಿಸಿದರು. ರಾತ್ರಿ ಕೋಡಿಹಳ್ಳಿಯಲ್ಲಿಯೆ ತಂಗಬೇಕಾಗಬಹುದೆಂದೂ, ಅದಕ್ಕೆ ಸಿದ್ಧರಾಗಿಯೇ ಬರಬೇಕೆಂದೂ ತಿಳಿಸಿದ್ದರು. ಅದರಂತೆ ಸುಬ್ಬಣ್ಣನವರು ಪಂಚ ಪಂಚ ಉಷಃ ಕಾಲಕ್ಕೆದ್ದು, ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಬೆಳಿಗ್ಗೆ ಎಂಟು ಘಂಟೆಯ ಒಳಗಾಗಿಯೇ ತಮ್ಮ ಕುದುರೆಯ ಮೇಲೆ ಮನ್ನೇಕೋಟೆಗೆ ಹೋದರು. ಆ ವೇಳೆಗೆ ಭೀಮರಾಯರ ಆಹ್ನಿಕಗಳು ಮುಗಿದ್ದಿದ್ದುವು. ಇಬ್ಬರಿಗೂ ಬೆಳಗಿನ ಉಪಾಹಾರವಾಯಿತು. ಅನಂತರ ಲೆಕ್ಕ -ಪತ್ರಗಳ ತನಿಖೆ ಆರಂಭವಾಗಿ ಹನ್ನೆರಡು ಘಂಟೆಗೆ ಮುಗಿಯಿತು. ಆಮೇಲೆ ಮಧ್ಯಾಹ್ನದ ಭೋಜನ. ಭೀಮರಾಯರು ಒಳ್ಳೆ ಸುಖಪುರುಷರು. ಅವರಿಗೆ ಊಟದಲ್ಲಿ ಕೃಪಣತೆ ಕೂಡದು. ಒಳ್ಳೆಯ ರಸಕವಳವಾಗಬೇಕು. ತನ್ನಂತೆ ತನ್ನ ಜೊತೆಯವರಿಗೂ ಚೊಕ್ಕ ಭೋಜನವಾಗಬೇಕು. ಇದು ಎಲ್ಲರಿಗೂ ಗೊತ್ತಿತ್ತು. ಭೀಮರಾಯರು ಊಟಕ್ಕೆ ನಿಂತರೆಂದರೆ ಮಾಮೂಲು ಅಡಿಗೆಯೊಂದಿಗೆ ಇನ್ನೊಂದೆರಡು ಮೂರು ಪಲ್ಯಗಳು, ಚಟ್ಣಿ, ತೊವ್ವೆ, ಹುಳಿ, ಹಪ್ಪಳ ಸಂಡಿಗೆ , ಚಪಾತಿ ಇತ್ಯದಿಗಳೆಲ್ಲ ಸಿದ್ಧವಾಗಿರುತ್ತಿದ್ದುವು. ರಾಜ ಭೋಜನವಾಗುತ್ತಿತ್ತು. ಅದು ಅವರ ಯೋಗ, ಎಲ್ಲೇ ಇದ್ದರೂ ಹಾಗೆಯೇ ನಡೆಯುತ್ತಿತ್ತು ಆತನೊಬ್ಬ ಯೋಗಪುರುಷ. ಭೊಜನಾನಂತರ ಸ್ವಲ್ಪ ವಿಶ್ರಾಂತಿ, ನಾಲ್ಕು ಘಂಟೆಯ ವೇಳೆಗೆ ಅಲ್ಪ ಉಪಹಾರ. ಇವುಗಳಾದ ಮೇಲೆ ಅವರ ಸವಾರಿ ಕೋಡಿಹಳ್ಳಿಗೆ ಹೊರಟಿತು. ಭೀಮರಾಯರ ಜೋಡು ಕುದುರೆ ಸಾರೋಟನ್ನು ಸಾರಥಿ ಸಿದ್ಧಮಾಡಿ ತಂದು ನಿಲ್ಲಿಸಿದ. ಸಾರೋಟಿಗೆ ಹೂಡಿದ್ದ ಕುದುರೆಗಳೆರಡೂ ಅರಬ್ಬಿಯ ಭಾರಿ ಕುದುರೆಗಳು. ಆಗಿನ ಕಾಲಕ್ಕೇ ಒಂದೊಂದು ಕುದುರೆಗೂ ಐದು ನೂರು ರೂಪಾಯಿಗಳ ಬೆಲೆ. ಆ ಕುದುರೆಗಳನ್ನು ನೋಡಲೆಂದೇ ಎಷ್ಟೋ ಜನ ಹಳ್ಳಿಗರು ಬರುತ್ತಿದ್ದರು! ಬಂದು ನೋಡಿ ಅಬ್ಬಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯದಿಂದ ಮೂಕರಾಗುತ್ತಿದ್ದರು. ಅವುಗಳ ಮೇವಿಗಾಗಿಯೇ ದಿನದಿನವೂ ಐದು ರೂಪಾಯಿ ಖರ್ಚಾಗುತ್ತಿತ್ತು. ಸುಬ್ಬಣ್ಣನವರ ಆಳು ಟಿಪ್ಪುವು ರಂಗನಿಗೆ ಥಡಿ ಹಾಕಿ ಸಜ್ಜುಗೊಳಿಸಿದ. ಭೀಮರಾಯರು ಸುಬ್ಬಣ್ಣನವರೊಂದಿಗೆ ಹೊರಗೆ ಬಂದರು. ಸುಬ್ಬಣ್ಣನವರು ಕುದುರೆ ಕೊಂಡಿರುವ ವಿಷಯ ಅವರಿಗೆ ತಿಳಿಯದು. ತಮ್ಮೊಂದಿಗೆ ಅವರು 150 ಮೂರು ತಲೆಮಾರು ಸಾರೋಟಿನಲ್ಲಿ ಬರುತ್ತಾರೆಂದುಕೊಂಡು, ತಾವು ಗಾಡಿ ಹತ್ತಿ ಕುಳಿತುಕೊಳ್ಳುತ್ತಲೇ ‘ಬಾಪ್ಪಾ ಸುಬ್ಬಣ್ಣ, ಗಾಡಿಯಲ್ಲಿ ಕೂತುಕೋ, ಹೊರಡೋಣ’ ಎಂದು ಕರೆದರು. ಆಗ ಸುಬ್ಬಣ್ಣ ‘ಭಾವಾ, ತಾವು ಸಾರೋಟಿನಲ್ಲಿ ಹೊರಡಿ, ನಾನು ನನ್ನ ಕುದುರೆಯೇರಿ ನಿಮ್ಮ ಜೊತೆಯಲ್ಲಿಯೇ ಬರುತ್ತೇನೆ’ ಎಂದು ಹೇಳಿದರು. ಆಗ ಭೀಮರಾಯರು ‘ಎಲಾ, ಸುಬ್ಬರಾಯ, ಕುದುರೆಯನ್ನು ಯಾವಾಗ ತಂದೆಯಯ್ಯಾ? ಎಲ್ಲಿ ಹೇಗಿದೆ ನೋಡೋಣ’ ಎಂದು ಹೇಳಿ, ಗಾಡಿಯಿಂದಿಳಿದವರೇ ರಂಗನಿದ್ದಲ್ಲಿಗೆ ಬಂದು, ಅದನ್ನು ನೋಡಿ ಗಹಗಹಿಸಿ ನಗಲಾರಂಭಿಸಿದರು. ‘ಎಲಾ ಎಲಾ ಸುಬ್ಬಣ್ಣ, ಈ ಕುದುರೆ ಒಂದು ಮಾರು ಕೂಡ ಸರಿಯಾಗಿಲ್ಲ. ಈ ಕುದುರೆಯ ಮೇಲೆ ನನ್ನ ಸಾರೋಟಿನ ಜೊತೆಯಲ್ಲಿಯೇ ಬರುತ್ತೇನೆಂದು ಹೇಳುತ್ತಿದ್ದೀಯಲ್ಲ! ಅಬ್ಬಾ ನಿನ್ನ ಧೈರ್ಯವೇ!’ ಎಂದು ಹಾಸ್ಯ ಮಾಡಿದರು. ಸುಬ್ಬಣ್ಣನವರು ಅವರೊಡನೆ ನಗುತ್ತ ದೃಢಸ್ವರದಿಂದ ಹೇಳಿದರು - ‘ನನ್ನ ಕುದುರೆ ಚಾಲಕ್ಕು ನಿಮಗೆ ಇನ್ನೂ ಗೊತ್ತಿಲ್ಲ. ಹೇಗಿದ್ದರೂ ನಿಮ್ಮ ಜೊತೆಗೆ ನಾನೂ ಬರುತ್ತೇನಲ್ವೆ. ನಾನು ಹೇಳಿದ ಮಾತು ಸತ್ಯವೋ, ಮಿಥ್ಯವೋ, ಅದು ನಿಮಗೇ ಅನುಭವವೇದ್ಯವಾಗುತ್ತದೆ’ ಎಂದು ಉತ್ತರಕೊಟ್ಟರು. ಆಗ ಭೀಮರಾಯರು ‘ಆಗಲಯ್ಯ ಆಗಲಿ, ಈಗ ನನಗೂ ನಿನಗೂ ಒಂದು ಪಂದ್ಯ. ನಿನ್ನ ಕುದುರೆ ನನ್ನ ಕುದುರೆಗಳಿಗೆ ಸಮನಾಗಿ ಓಡದೆ ಹೋದಾಗ ನಿನ್ನ ಮುಖದ ಮೇಲೆ ಮೂರು ನಾಮ ಹಾಕಿ ಆರತಿ ಮಾಡಿಸುತ್ತೇನೆ’ ಎಂದು ಹೇಳಿ ತಮ್ಮ ಸಾರೋಟಿನ ಕಡೆ ತಿರುಗಿದರು. ಆಗ ಸುಬ್ಬಣ್ಣನವರು ‘ಆಗಲಿ ಭಾವ, ನಿಮ್ಮ ಪಂದ್ಯಕ್ಕೆ ಒಪ್ಪಿದ್ದೇನೆ. ಒಂದು ವೇಳೆ ನಮ್ಮ ರಂಗನೇ ಗೆದ್ದುಬಿಟ್ಟರೆ!’ ಎಂದರು. ‘ಹೋಗ್ಹೋಗಯ್ಯ. ಏನು ಮಾತನಾಡುತ್ತಿ? ಬೇವಿನ ಮರದಲ್ಲಿ ಮಾವಿನಹಣ್ಣೋ? ಹಾಳೆಯ ಹದ್ದು ಗರುಡನಿಂದ ಮೇಲಕ್ಕೆ ಹಾರಿಹೋದರೆ ಎಂದ ಹಾಗೆ’ ಎಂದು ಹೇಳುತ್ತ ಭೀಮರಾಯರು ತಮ್ಮ ಸಾರೋಟಿನಲ್ಲಿ ಕುಳಿತರು. ಅದೇ ಸಮಯಕ್ಕೆ ಸುಬ್ಬಣ್ಣನವರು ತಮ್ಮ ಕುದುರೆಯ ಮೇಲೆ ಕುಳಿತರು. ಸುಬ್ಬಣ್ಣನವರು ಮಾಮೂಲಿನಂತೆ ತಮ್ಮ ರಂಗನ ಕತ್ತನ್ನು ಚಪ್ಪರಿಸಿ ‘ರಂಗಾ, ಈ ದಿನ ಜಯಾಪಜಯಗಳು ನಿನ್ನ ಕೈಲಿವೆ. ನೋಡು, ಹುಷಾರ್’ ಎಂದು ಹೇಳಿದರು. ಅತ್ತ ಭೀಮರಾಯರು ತಮ್ಮ ಸಾರಥಿಗೆ ‘ಎಲೋ ಕೊರಡೆಯಿಂದ ಕುದುರೆಗಳಿಗೆ ಬಿಗಿಯಾಗಿ ಎರಡೇಟು ಕೊಡು. ನಮ್ಮ ಸುಬ್ಬಣ್ಣನವರ ಕುದುರೆ ಅರ್ಧ ಮೈಲಿ ಬರುವುದರೊಳಗಾಗಿ, ನಾವು ಮೂರು ಮೈಲಿ ಇರುವ ಕೋಡಿಹಳ್ಳಿಯಲ್ಲಿ ತಲುಪಿರಬೇಕು’ ಎಂದು ಆಜ್ಞೆ ಮಾಡಿದರು. ಅಶ್ವರತ್ನ ರಂಗ 151 ಸುಬ್ಬಣ್ಣನವರ ಕುದುರೆಯೂ ಭೀಮರಾಯರ ಸಾರೋಟೂ ಏಕಕಾಲದಲ್ಲಿ ಹೊರಟುವು. ಕೋಚ್‍ಮ್ಯಾನ್ ‘ಹೇ ಹೇ’ ಎಂದು ಅಬ್ಬರಿಸುತ್ತ ಅರಬ್ಬೀ ಕುದುರೆಗಳಿಗೆ ಜೋರಾಗಿ ಬಾರಿಸುತ್ತಿದ್ದ. ಸುಬ್ಬಣ್ಣನವರು ಒಂದೇ ಒಂದು ಸಾರಿ ‘ರಂಗಾ’ ಎಂದು ಸ್ವಲ್ಪ ಜೋರಾಗಿ ಕೂಗಿ ಹೇಳಿದರು, ಅಷ್ಟೆ. ಆ ರಂಗನಿಗೆ ಅದೇನು ಆವೇಶ ಬಂದಿತೊ ಏನೊ! ಗಾಳಿಯ ವೇಗದಿಂದ ಓಡತೊಡಗಿತು. ಸಾರೋಟು ತನಗಿಂತಲೂ ಒಂದೇ ಒಂದು ಇಂಚು ಕೂಡ ಮುಂದುವರಿಯಲು ಅವಕಾಶ ಕೊಡಲಿಲ್ಲ. ಕಡೆಗೆ ಕೋಡಿಹಳ್ಳಿ ಕೆರೆಯ ಮಾಮೂಲು ಸ್ಥಳವನ್ನು ಸೇರುವ ಹೊತ್ತಿಗೆ ಸಾರೋಟು ಸುಮಾರು ಅರ್ಧ ಫರ್ಲಾಂಗು ಹಿಂದೆ ಬಿದ್ದಿತು. ಹೀಗಾಗಬಹುದೆಂದು ಯಾರೂ, ಎಂದಿಗೂ ಊಹಿಸಲು ಸಾಧ್ಯವೇ ಇರಲಿಲ್ಲ. ಇದನ್ನು ಕಣ್ಣಾರೆ ಕಂಡ ಭೀಮರಾಯರು ‘ಅಬ್ಬಾ, ನನ್ನ ಕುದುರೆಗಳ ಒಂದು ಹೆಜ್ಜೆಗೆ ಈ ಚೋಟುದ್ದದ ಮರಿ ಎರಡು ಹೆಜ್ಜೆ ಹಾಕಿದರೂ ಸಾಲದು. ಆದರೂ ಎರಡೂವರೆ ಮೈಲಿ ಓಟದಲ್ಲಿ ತನ್ನ ಅಳೆತ್ತರದ ಭಾರಿ ಬೆಲೆಯ ಭಾರಿ ಅರಬ್ಬಿ ಕುದುರೆಯನ್ನು ನೂರು ಗಜ ಹಿಂದೆ ಹಾಕಿದೆ’ ಎಂದು ಏಕಕಾಲಕ್ಕೆ ಆಶ್ಚರ್ಯ ಆನಂದಗಳನ್ನು ವ್ಯಕ್ತಪಡಿಸಿದರು. ರಂಗ ಅವರಿಗೆ ಬಲು ಮೆಚ್ಚಿಗೆಯಾಯಿತು. ಸಾರೋಟು ಇಳಿದವರೇ ನೇರವಾಗಿ ಅದರ ಬಳಿಗೆ ಹೋಗಿ ಅದನ್ನು ತಬ್ಬಿಕೊಂಡರು. ಕಣ್ಣಲ್ಲಿ ಸಂತೋಷದ ಹನಿ ತುಂಬಿತು. ಅವರು ಪ್ರೀತಿಯಿಂದ ‘ಎಲಾ ಮುಂಡೇದೆ, ನಿನ್ನ ಮುಂಡಮೋಚ! ನೀನು ಅಶ್ವರತ್ನವೋ ಅಶ್ವರತ್ನ!’ ಎಂದು ಹೊಗಳಿದರು. ಈ ಕುದುರೆಯ ರೂಪದಿಂದ ಭಾಗ್ಯಲಕ್ಷ್ಮಿ ನಿನ್ನ ಬಳಿಗೆ ಬಂದಿದ್ದಾಳೆ. ಇದನ್ನು ತುಂಬ ಚೆನ್ನಾಗಿ ನೋಡಿಕೊ. ಇಂದಿನಿಂದ ಈ ಕುದುರೆಗಾಗಿಯೇ ನಾನು ತಿಂಗಳಿಗೆ ಹತ್ತು ರೂಪಾಯಿಯನ್ನು ಕೊಡುತ್ತೇನೆ’ ಎಂದು ಹೇಳಿ ಲೆಕ್ಕದ ಪುಸ್ತಕದಲ್ಲಿ ‘ಸುಬ್ಬಣ್ಣನ ಕುದುರೆ ಪಂದ್ಯದಲ್ಲಿ ನನ್ನ ಕುದುರೆಗಳನ್ನು ಗೆದ್ದುದರಿಂದ ಅದಕ್ಕಾಗಿ ತಿಂಗಳಿಗೆ ಹತ್ತು ರೂಪಾಯಿಗಳನ್ನು ಮಂಜೂರು ಮಾಡಿರುತ್ತೇನೆ’ ಎಂದು ಸೊಟ್ಟನಾದ ದಪ್ಪ ಅಕ್ಷರಗಳಲ್ಲಿ ಮುದ್ದೆ ಮುದ್ದೆಯಾಗಿ ಬರೆದು ಭೀಮರಾಯ ಎಂದು ರುಜುಮಾಡಿ ಸುಬ್ಬಣ್ಣನ ಕೈಲಿಕೊಟ್ಟರು. ಅವರಿಗಾದ ಸಂತೋಷ ವರ್ಣನಾತೀತ. ಅವರು ಕಣ್ಣಲ್ಲಿ ಆನಂದಾಶ್ರುಗಳನ್ನು ಸುರಿಸುತ್ತ ಮಾತನಾಡಲು ಸಾಧ್ಯವಿಲ್ಲದೆ ಮೌನವಾಗಿ ರಂಗನನ್ನು ಬಿಗಿದಪ್ಪಿದರು. ಕಡೂರು ತಿಮ್ಮೇಗೌಡರು ಸುಪ್ರಸಿದ್ದ ಟಾಡಿ ಕಂಟ್ರಾಕ್ಟದಾರರಲ್ಲಿ ಒಬ್ಬರು. ಒಂದು ವರ್ಷ ಅವರು ಇತರ ಎರಡು ಮೂರು ಜಿಲ್ಲೆಗಳ ಜೊತೆಗೆ ಚಿತ್ರದುರ್ಗ ಜಿಲ್ಲೆಯ ಕಂಟ್ರಾಕ್ಟ್ ಪಡೆದಿದ್ದರು. ಭಾರಿ ಶ್ರೀಮಂತರಾಗಿದ್ದ ಈ ತಿಮ್ಮೇಗೌಡರ 152 ಮೂರು ತಲೆಮಾರು ವಂಶದವರೇ ಈಗ ಪ್ರಜಾವಾಣಿ ಇತ್ಯಾದಿ ದಿನಪತ್ರಿಕೆ, ಮಾಸಪತ್ರಿಕೆಗಳ ಮಾಲೀಕರು. ತಿಮ್ಮೇಗೌಡರು ಭಾರಿ ಶ್ರೀಮಂತರು. ಸೇಂದೀ ಅಂಗಡಿಗಳ ಮೇಲ್ವಿಚಾರಣೆಗಾಗಿ ಯಾವಾಗಲಾದರೂ ಒಮ್ಮೆ ತಳುಕಿಗೂ ಬರುತ್ತಿದ್ದರು. ಅವರ ಕೈಕೆಳಗೆ ಅನೇಕ ಚಿಕ್ಕ ಪುಟ್ಟ ಕಂಟ್ರಾಕ್ಟದಾರರಿದ್ದರು. ಅವರೆಲ್ಲರೂ ತಿಮ್ಮೇಗೌಡರು ಬಿಡಾರ ಮಾಡಿದೆಡೆಗೆ ಬಂದು ತಮ್ಮ ಅಂಗಡಿಗಳ ಲೆಕ್ಕಗಳನ್ನೊಪ್ಪಿಸಿ, ತಾವು ಕಟ್ಟಬೇಕಾದ ಕಂತನ್ನು ಕಟ್ಟಿ ಹೋಗುವುದು ಪದ್ಧತಿಯಾಗಿತ್ತು. ತಿಮ್ಮೇಗೌಡರು ತಮ್ಮ ಐಶ್ವರ್ಯ, ಅಂತಸ್ತಿಗೆ ತಕ್ಕಂತೆ ತಮ್ಮ ಪ್ರಯಾಣಕ್ಕಾಗಿ ಭಾರಿ ಕುದುರೆಯೊಂದನ್ನು ಇಟ್ಟಿದ್ದರು. ಗೌಡರಿಗೆ ತಮ್ಮ ಕುದುರೆಯ ಮೇಲೆ ತುಂಬ ಅಭಿಮಾನ. ಅದನ್ನು ನೋಡಿಕೊಳ್ಳುವುದಕ್ಕೆಂದೇ ಪ್ರತ್ಯೇಕ ಆಳನ್ನು ನೇಮಿಸಿಕೊಂಡಿದ್ದರು. ಒಮ್ಮೆ ತಿಮ್ಮೇಗೌಡರು ತಳುಕಿಗೆ ಬಂದು ಮಾರಮ್ಮನ ಗುಡಿಯ ಪಡಸಾಲೆಯಲ್ಲಿ ರತ್ನಗಂಬಳಿ ಮೇಲೆ ಕುಳಿತಿದ್ದಾರೆ. ಅವರ ಸುತ್ತಲೂ ಚಿಕ್ಕಪುಟ್ಟ ಕಂಟ್ರಾಕ್ಟರ್‍ಗಳು ಲೆಕ್ಕ ಒಪ್ಪಿಸುತ್ತ ಕುಳಿತಿದ್ದಾರೆ. ಆ ಸಮಯದಲ್ಲಿ ಸುಬ್ಬಣ್ಣನವರು ತಮ್ಮ ಕುದುರೆಯನ್ನೇರಿ ಕೋಡಿಹಳ್ಳಿ ಕೆರೆಯಿಂದ ಮನೆಗೆ ಹಿಂದಿರುಗುತ್ತಿದ್ದರು. ಗೌಡರ ಕುದುರೆಯ ಮುಂದೆ ಆನೆಯ ಮುಂದಿನ ಆಡಿನಂತೆ ಬರುತ್ತಿದ್ದ ರಂಗನನ್ನು ಕಂಡು ನೆರೆದವರೆಲ್ಲರೂ ಹಾಸ್ಯಮಾಡಿ ನಕ್ಕರು. ಅದೇ ವೇಳೆಗೆ ತಿಮ್ಮೇಗೌಡರ ಕುದುರೆ ಸುಬ್ಬಣ್ಣನವರ ಕುದುರೆಯನ್ನು ಕಂಡು ತನ್ನ ಸ್ವಭಾವಕ್ಕೆ ಸಹಜವಾಗಿ ಕೆನೆಯಿತು. ತಿಮ್ಮೇಗೌಡರು ಪರಿಹಾಸ್ಯವಾಗಿ ಸುಬ್ಬಣ್ಣನವರನ್ನು ಕುರಿತು ‘ಏನು ಸ್ವಾಮಿ, ನಮ್ಮ ಕುದುರೆ ನಿಮ್ಮ ಕುದುರೆಯನ್ನು ಪಂದ್ಯಕ್ಕೆ ಕರೆಯುತ್ತಿದೆಯಲ್ಲ! ಎರಡನ್ನೂ ಪಂದ್ಯಕ್ಕೆ ಬಿಡೋಣವೆ?’ ಎಂದರು. ಸುಬ್ಬಣ್ಣನವರು ಹಸನ ಭಾವದಿಂದಲೆ ‘ಅದಕ್ಕೇನು ಗೌಡರೇ, ಅಗತ್ಯವಾಗಲಿ ಆಗಲಿ. ನನ್ನ ಕುದುರೆಯೇನೂ ನಿಮ್ಮ ಕುದುರೆಗಿಂತ ಕಡಿಮೆಯಿಲ್ಲ. ಬೇಕಾದರೆ ಪರೀಕ್ಷೆ ಮಾಡಿ’ ಎಂದರು. ‘ಹಾಗಾದರೆ ಇದೇ ಮಾತು. ನಿಮ್ಮ ಕುದುರೆ ಗೆದ್ದರೆ ನಾನು ನೂರು ರೂಪಾಯಿ ಕೊಡುತ್ತೇನೆ. ನನ್ನ ಕುದುರೆ ಗೆದ್ದರೆ ನೀವು ನನಗೆ ಐದು ರೂಪಾಯಿ ಕೊಡಿ ಸಾಕು’ ಎಂದರು, ಗೌಡರು. ಸುಬ್ಬಣ್ಣನವರು ಒಪ್ಪಿದರು. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಕುದುರೆಗಳಲ್ಲಿ ತಾವು ತಾವೇ ಸವಾರಿ ಮಾಡುವುದೆಂದು ನಿರ್ಧಾರವಾಯಿತು. ನೆರೆದವರಿಗೆಲ್ಲ ಎಲ್ಲೋ ಸುಬ್ಬಣ್ಣನವರಿಗೆ ತಲೆ ಕೆಟ್ಟಿದೆ ಎನ್ನಿಸಿತು. ಆದರೆ ಯಾರೂ ಮಾತನಾಡಲಿಲ್ಲ. ಮರುದಿನ ಬೆಳಿಗ್ಗೆ ಊರಿನಿಂದ ದೊಡ್ಡ ರಸ್ತೆಯವರೆಗೆ ಸುಮಾರು ಒಂದು ಮೈಲಿ ದೂರ ಕುದುರೆ ಪಂದ್ಯವನ್ನು ನಡೆಸಬೇಕೆಂದು ಇತ್ಯರ್ಥವಾಯಿತು. ಅಶ್ವರತ್ನ ರಂಗ 153 ಮರುದಿನ ಬೆಳಿಗ್ಗೆ ಸುಬ್ಬಣ್ಣನವರು ಬೆಳಗಿನ ಜಾವಕ್ಕೆ ಮೇಲಕ್ಕೆದ್ದು, ತಮ್ಮ ಸ್ನಾನ ಸಂಧ್ಯಾದಿಗಳನ್ನು ಮುಗಿಸಿ ತಮ್ಮ ಕುದುರೆಯೊಡನೆ ಮಾರಿಗುಡ್ಡದ ಮೈದಾನಕ್ಕೆ ಬಂದರು. ಆ ವೇಳೆಗೆ ತಿಮ್ಮೇಗೌಡರು ಸ್ಪರ್ಧೆಗೆ ಸಿದ್ಧರಾಗಿ ತಮ್ಮ ಭಾರೀ ಕುದುರೆಯೊಡನೆ ಅಲ್ಲಿಗೆ ಬಂದರು. ಕುದುರೆಯನ್ನೇರುವ ಮೊದಲು ಸುಬ್ಬಣ್ಣನವರು ‘ನೋಡು ರಂಗ, ಇಂದು ನನ್ನ ಪರೀಕ್ಷೆ. ಇದರಲ್ಲಿ ನನ್ನ ಮತ್ತು ನಿನ್ನ -ಇಬ್ಬರ ಮರ್ಯಾದೆಯೂ ಅಡಗಿದೆ, - ಎಂದು ಅದರ ಕಿವಿಯಲ್ಲಿ ಪಿಸುಗುಟ್ಟಿದರು. ಅದು ತನಗೆ ಅರ್ಥವಾಯಿತೇನೋ ಎಂಬಂತೆ ರಂಗ ಒಮ್ಮೆ ತಲೆಯಾಡಿಸಿತು. ನೆರೆದ ಜನರಲ್ಲಿ ಪರೀಕ್ಷಕರ ಅಪ್ಪಣೆಯಂತೆ ನಿರ್ದಿಷ್ಟವಾದ ಕ್ಷಣದಲ್ಲಿ ಎರಡು ಕುದುರೆಗಳೂ ನಾಗಾಲೋಟದಿಂದ ಹೊರಟವು. ಪಂದ್ಯದ ಪರಿಣಾಮ ಏನೆಂಬುದು ಎಲ್ಲರಿಗೂ ನಿಚ್ಚಳವಾಗಿತ್ತು. ಸುಬ್ಬಣ್ಣನವರ ಚೋಟುದ್ದದ ಕುದುರೆ ಗೆಲ್ಲುವುದು ಕನಸಿನ ಮಾತಾಗಿತ್ತು. ಎಲ್ಲರ ನಿರೀಕ್ಷೆಯಂತೆ ತಿಮ್ಮೇಗೌಡರ ಕುದುರೆ ಕ್ಷಣಮಾತ್ರದಲ್ಲಿ ರಂಗನನ್ನು ಮೀರಿ ಮುಂದಾಯಿತು. ಆದರೆ ಅರ್ಧ ದಾರಿ ಸಾಗುವಷ್ಟರಲ್ಲಿ ಸುಬ್ಬಣ್ಣನವರ ಕುದುರೆ ಅದನ್ನು ಸಮೀಪಿಸಿತು. ಅಲ್ಲಿಂದ ಮುಂದೆ ಅದು ಇದ್ದಕ್ಕಿದ್ದಂತೆ ಗಾಳಿಯಂತೆ ಚಲಿಸತೊಡಗಿತು. ದೊಡ್ಡ ರಸ್ತೆಯನ್ನು ಮುಟ್ಟುವ ವೇಳೆಗೆ ಅದು ತನ್ನ ಪ್ರತಿಸ್ಪರ್ಧಿಗಿಂತ ನೂರು ಗಜ ಮುಂದಿತ್ತು. ತಿಮ್ಮೇಗೌಡರಿಗೆ ತಮ್ಮ ಕಣ್ಣನ್ನು ತಾವೇ ನಂಬಲು ಸಾಧ್ಯವಾಗಲಿಲ್ಲ. ‘ಆನೆಯನ್ನು ಆಡುಗೆದ್ದಿತ್ತು’. ರಸ್ತೆಯನ್ನು ಮುಟ್ಟಿದ ಕುದುರೆಗಳೆರಡೂ ಹಿಂದಿರುಗಿ ಸ್ವಸ್ಥಾನಕ್ಕೆ ಸೇರಿದುವು. ತಿಮ್ಮೇಗೌಡ ದೊಡ್ಡ ಮನಸ್ಸಿನ ದೊಡ್ಡ ಮನುಷ್ಯ. ತನ್ನ ಕುದುರೆ ಸೋತಿತಲ್ಲ ಎಂದು ಕರುಬಲಿಲ್ಲ. ಸುಬ್ಬಣ್ಣನವರನ್ನು ಕುರಿತು ‘ಸಂತೋಷ ಸ್ವಾಮಿ, ನೋಡೋದಕ್ಕೆ ಆಡಿನಂತಿದ್ದರೂ ನಿಮ್ಮ ಕುದುರೆ ಒಳ್ಳೆಯ ಜಾತಿಯ ಕುದುರೆಗಿಂತ ಶ್ರೇಷ್ಠವಾದುದು. ಅದನ್ನು ಚೆನ್ನಾಗಿ ಸಾಕಿ. ನಿಮ್ಮ ಕುದುರೆ ಗೆದ್ದರೆ ನೂರು ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದೆ. ಈಗ ಸಂತೋಷವಾಗಿ ಇನ್ನೂರು ರೂಪಾಯಿ ಕೊಡುತ್ತೇನೆ. ನಿಮಗೆ ನೂರು, ನಿಮ್ಮ ಜಾತ್ಯಶ್ವಕ್ಕೆ ನೂರು’ ಎಂದು ಹೇಳಿ ತನ್ನ ಜೇಜಿಬಿಂದ ಎರಡು ಹಸಿರು ನೋಟುಗಳನ್ನು ತೆಗೆದುಕೊಟ್ಟ! ‘ಇದೆಲ್ಲ ಏನು ಗೌಡರೆ? ಏನೋ ತಮಾಷೆಗೆ ಹೇಳಿದ ಮಾತು. ಅದಕ್ಕೆಲ್ಲ ಅಷ್ಟು ಮಹತ್ವ ಕೊಡುತ್ತಾರೆಯೇ?’ ಎಂದರು ಸುಬ್ಬಣ್ಣನವರು. ತಿಮ್ಮೇಗೌಡರು ಅದನ್ನು ಒಪ್ಪಲಿಲ್ಲ. “ಏನು ಸ್ವಾಮಿ ನೀವು ಹೇಳೋದು? ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯಿತು?’ ನಿಮ್ಮ ಕುದುರೆಗೆ -ಅಸಾಧಾರಣವಾದ ಅದರ ಚಮತ್ಕೃತಿಗೆ - ಸಾವಿರ ಕೊಟ್ಟರೂ ಕಡಿಮೆಯೆ. ನಾನು ಕೊಡುತ್ತಿರುವ 154 ಮೂರು ತಲೆಮಾರು ಬಹುಮಾನ ನಿಮಗಲ್ಲವಲ್ಲ, ಅದು, ನಿಮ್ಮ ಕುದುರೆಗೆ! ಬೇಕಾದರೆ ನಿಮ್ಮ ಕುದುರೆ ಹೇಳಲಿ ‘ಬೇಡ’ ಅಂತ. ಆಗ ನೋಡೋಣ” ಈ ವಾದಕ್ಕೆ ಸುಬ್ಬಣ್ಣನವರಲ್ಲಿ ಉತ್ತರವಿರಲಿಲ್ಲ. ಆದ್ದರಿಂದ ಅವರು ತಿಮ್ಮೇಗೌಡರ ಬಹುಮಾನವನ್ನು ಅಂಗೀಕರಿಸಲೇಬೇಕಾಯಿತು. * * * * 155 11. ಕಂಟ್ರಾಕ್ಟರ್ ಭೀಮರಾಯ ಮತ್ತಾರು ತಿಂಗಳು ಉರುಳಿಹೋದವು. ಕೆರೆಯಕೆಲಸ ಮುಗಿಯುತ್ತ ಬಂತು. ಭೀಮರಾಯರು ಲೆಕ್ಕ ತಪಾಸಣೆಗಾಗಿ ಕೋಡಿಹಳ್ಳಿಗೆ ಬಂದು ತಮ್ಮ ಷಡ್ಡುಕನ ಮನೆಯಲ್ಲಿ ಮೊಕ್ಕಾಂ ಮಾಡಿದರು. ಅಂದು ಹಗಲೆಲ್ಲ ಲೆಕ್ಕ-ಪತ್ರಗಳ ತನಿಖೆಯಾಯಿತು. ಸುಬ್ಬಣ್ಣನವರು ರಾತ್ರಿ ಬಹಳ ಹೊತ್ತಾದುದರಿಂದ ಅಲ್ಲಿಯೇ ನಿಲ್ಲಬೇಕಾಯಿತು. ಬೇಸಿಗೆ ಕಾಲವಾದ್ದರಿಂದ ಭೀಮರಾಯರು ಮನೆಯಿಂದ ಹೊರಕ್ಕೆ ಅಂಗಳದಲ್ಲಿ ಮಂಚವನ್ನು ಹಾಕಿಸಿಕೊಂಡು ಅದರ ಮೇಲೆ ಲೇಪು, ದಿಂಬುಗಳನ್ನು ಹಾಸಿಸಿ, ಸೊಳ್ಳೇಪರದೆ ಕಟ್ಟಿಕೊಂಡು ಮಲಗಿದರು. ಹಾಲಿನಂತೆ ಬೆಳ್ಳಗೆ ಬೆಳದಿಂಗಳೂ ಹರಡಿತ್ತು. ಸುಬ್ಬಣ್ಣನವರು ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಸಾಹುಕಾರರ ಜಗುಲಿಯ ಮೇಲೆ ತಮ್ಮ ಜವಾನ ಹಾಸಿದ್ದ ಹಾಸಿಗೆಯ ಮೇಲೆ ಮಲಗಿದರು. ಕಂಟ್ರಾಕ್ಟರರ ಸಾರಥಿ ಕುದುರೆ ಮತ್ತು ಜವಾನ ಹಾಸಿದ್ದ ಹಾಸಿಗೆಯ ಮೇಳೆ ಮಲಗಿದರು. ಕಂಟ್ರಾಕ್ಟರರ ಸಾರಥಿ ಕುದುರೆ ಮತ್ತು ಸಾರೋಟಿನೊಂದಿಗೆ ಊರ ಮುಂದಿನ ಚಾವಡಿಯ ಮೇಲೆ ತನ್ನ ಮಾಮೂಲಿನಂತೆ ವಸತಿ ಮಾಡಿದ್ದ. ಟಿಪ್ಪುವು ಶಾನುಭೋಗರ ಬೀದಿಯ ಕೊನೆಯಲ್ಲಿದ್ದ ಗ್ರಾಮ ದೇವತೆಯ ದೇವಸ್ಥಾನದ ಜಗಲಿಯ ಕೆಳಗೆ ಕುದುರೆ ಕಟ್ಟಿಹಾಕಿ, ಮೇವು ಹಾಕಿ ಅದರ ಸಮೀಪದಲ್ಲಿಯೇ ಜಗಲಿಯ ಮೇಲೆ ಮಲಗಿದ. ಒಳ್ಳೆಯ ಉರಿ ಬೇಸಿಗೆ ಸೆಖೆಯಿಂದ ನಿದ್ದೆ ಬರದೆ ಅವನು ಹೊರಳಾಡುತ್ತಿದ. ಘಂಟೆ ಹತ್ತಾಯಿತು. ಊರಿನಲ್ಲಿ ಎಲ್ಲರೂ ಮಲಗಿದ್ದರು, ಎಲ್ಲೆಡೆಯೂ ನಿಶ್ಶಬ್ದ, ಟಿಪ್ಪು ಎಷ್ಟು ಪ್ರಯತ್ನಿಸಿದರೂ ನಿದ್ದೆ ಹತ್ತುವಂತೆ ಕಾಣಲಿಲ್ಲ. ಆ ದಿವ್ಯವಾದ ಬೆಳದಿಂಗಳಿನಲ್ಲಿ, ಆ ಭವ್ಯವಾದ ನೀರವತೆಯಲ್ಲಿ ಅವನಿಗೆ ಏನೋ ಒಂದು ಬಗೆಯ ಖುಷಿಯ ಲಹರಿ ಉಂಟಾಯಿತು. ಅವನು ತನ್ನನ್ನು ತಾನೆ ಮರೆತ. ಅವನಿಗೆ ಗೊತ್ತಿಲ್ಲದಂತೆಯೆ ಸಂಗೀತವೂ ಹೃದಯದ ಆಳದಿಂದ ಹೊಮ್ಮಿ ಹೊರಹೊಮ್ಮಿತು. ಅವನೇನು ಸಂಗೀತಗಾರನಲ್ಲ, ಸಾಹಿತ್ಯಗಾರನೂ ಅಲ್ಲ, ವಿದ್ಯೆಯ ಗಂಧವೂ ಕೂಡ ಅವನಿಗೆ ಗೊತ್ತಿರಲಿಲ್ಲ. ಆದರೆ ಮಾನವ ಸಹಜವಾದ ಭಾವನಾತರಂಗಗಳು ತಮಗೆ ತಾವೇ ಉಕ್ಕಿ ಬಂದವು. ಆಗಿನ ಪ್ರಕೃತಿ ರಮ್ಯತೆ ಅವನ ಭಾವನೆಗಳಿಗೆ ಪುಟಕೊಟ್ಟಿತು. ಆ 156 ಮೂರು ತಲೆಮಾರು ಭಾವನೆಗಳು ಭಾಷೆಗೆ ಎಡೆಕೊಟ್ಟವು. ಹಾಡಬೇಕೆನಿಸಿತು, ಅವನಿಗೆ. ಬರುತ್ತಿದ್ದದ್ದು ತನ್ನ ಧಣಿ ಹೇಳಿಕೊಟ್ಟಿದ್ದ ಲಾವಣಿಯೊಂದೆ. ಬೇಡಿದವರಿಗೆ ಬೇಡಿದ್ದು ಕೊಡುತ್ತಾನೆ ಕಂಟ್ರಾಕ್ಟುದಾರಾ| ಭಾಳಾ ಪುಣ್ಯವಂತ ನಮ್ಮ ಭೀಮರಾವ್ ಬಹದ್ದೂರಾ|| ಕಂಟ್ರ್ಟಾಕ್ಟ್ ಕೆಲಸ ಮಾಡಿಸೋದರಲ್ಲಿ ಬಹಳ ಹಿಕ್‍ಮತ್‍ಕಾರಾ| ಸಾತ್ಯಕಿಯಂಥಾ ತಮ್ಮ ಅದಾನೆ ಕೃಷ್ಣರಾವ್ ಬಹದ್ದೂರಾ|| ಯಾರಾದರೂ ಕೇಳಿಸಿಕೊಂಡಾರೆಂಬ ಯೋಚನೆಯೇ ಬರಲಿಲ್ಲ ಅವನಿಗೆ. ಹೊತ್ತು ಮೀರಿದ ರಾತ್ರಿಯಾದ್ದರಿಂದ ಎಲ್ಲರೂ ನಿದ್ರೆ ಹೋಗಿರಬಹುದಾದ ಆ ಸಮಯದಲ್ಲಿ ಆ ಯೋಚನೆ ಬರಲೂ ಕಾರಣವಿಲ್ಲ. ಆದ್ದರಿಂದ ಅವನ ಲಾವಣಿ ಹಾಡು ನಿಸ್ಸಂಕೋಚವಾಗಿ, ನಿರ್ಭಯವಾಗಿ, ನಿರರ್ಗಳವಾಗಿ ಸಾಗಿತು. ಹಾಗೆ ಪ್ರಾರಂಭವಾದುದು ‘ಸುಬ್ಬಣ್ಣನವರು ಮಾಡಿದ ಪದವಿದು ತಳುಕಿನ ಊರಲ್ಲಿ’ ಎಂಬ ಅಂಕಿತದೊಡನೆ ಮುಕ್ತಾಯವಾಯಿತು. ಲಾವಣಿಯ ಒಂದು ನೂರು ಪದ್ಯಗಳು ಧಣಿ ಹೇಳಿಕೊಟ್ಟಿದ್ದಂತೆ ಚಾಚೂತಪ್ಪದೆ ಹೊರಬಂದಿದ್ದುವು. ತನ್ನ ಗಂಧರ್ವಗಾನವನ್ನು ಯಾರೂ ಕೇಳಿಲ್ಲವೆಂದೇ ಟಿಪ್ಪು ಅಂದುಕೊಂಡಿದ್ದ. ಆದರೆ ಯಾರನ್ನು ಉದ್ದೇಶಿಸಿ ಆ ಲಾವಣಿಯನ್ನು ಬರೆಯಲಾಗಿತ್ತೋ ಆ ಭೀಮರಾಯರೇ ಅದನ್ನು ಆದ್ಯಂತವಾಗಿ, ಅಕ್ಷರ ಅಕ್ಷರವಾಗಿ ಕೇಳಿದ್ದರು. ಅವರಿಗೆ ಯಾವುದೋ ಯೋಚನೆಯಲ್ಲಿ ನಿದ್ರೆ ಬರದೆ ಸುಮ್ಮನೆ ಮಲಗಿದ್ದರು. ರಾತ್ರಿಯ ಬೆಳುದಿಂಗಳೂ ನೀರವವಾಗಿದ್ದು ಯಾವ ಅಡೆತಡೆಯೂ ಇಲ್ಲದೆ ಯೋಚನಾಪ್ರವಾಹ ಸರಾಗವಾಗಿ ಹರಿಯುತ್ತಿತ್ತು. ಇದ್ದಕ್ಕಿದ್ದಂತೆಯೇ ಟಿಪ್ಪುವಿನ ರೇಡಿಯೋ ಆರಂಭವಾಯಿತು. ಅದರ ಆರಂಭದಲ್ಲಿಯೇ ತಮ್ಮ ಹೆಸರು ಬಂದದ್ದು ಕೇಳಿ ಅವರು ಚಕಿತರಾದರು. ಕಿವಿಗೊಟ್ಟು ಆಲಿಸಿದರು. ಎಲ್ಲವೂ ತಮ್ಮ ಚರಿತ್ರೆಯೇ. ಕಡೆಯಲ್ಲಿ ತಳುಕಿನ ಸುಬ್ಬಣ್ಣನವರ ಅಂಕಿತ. ಈ ಕವನವು ಅವರ ರಚನೆಯೇ ಎಂದು ಮನದಟ್ಟಾಯಿತು. ಸುಬ್ಬಣ್ಣ ಕವಿಯೆಂದೂ, ಹಾಡುಗಳನ್ನು ರಚಿಸುತ್ತಾನೆಂದೂ ಅವರು ಕೇಳಿದ್ದರು. ಹಾಗೆ ರಚಿಸಿದ್ದ ಕೆಲವು ದೇವರ ನಾಮಗಳನ್ನು ಕೇಳಿಯೂ ಇದ್ದರು. ಪ್ರಾಸಬದ್ಧವಾಗಿ, ಶ್ರಾವ್ಯವಾಗಿದ್ದ ಅವನ್ನು ಕೇಳಿ ‘ಎಲೆ ಎಲೆ, ನಮ್ಮ ಸುಬ್ಬಣ್ಣ ಪರವಾಯಿಲ್ಲಪ್ಪ, ಕವಿತ್ವವನ್ನೂ ಕೂಡ ಮಾಡುತ್ತಾನೆ’ ಎಂದು ಮೆಚ್ಚಿದ್ದರು. ಸಣ್ಣ ಪುಟ್ಟ ಹಾಡುಗಳನ್ನು ರಚಿಸಬಲ್ಲನೇ ಹೊರತು ಹೀಗೆ ನೂರು ಪದ್ಯಗಳ ದೀರ್ಘವಾದ ಲಾವಣಿಯನ್ನು ಬರೆಯಬಲ್ಲ ಕವಿತಾಸಾಮಥ್ರ್ಯವಿರಬಹುದೆಂದು ಆತ ಭಾವಿಸಿರಲಿಲ್ಲ. ಆ ರಾತ್ರಿ ಟಿಪ್ಪು ಹಾಡಿದ ಒಂದೊಂದು ನುಡಿಯೂ ಆದಿಪ್ರಾಸ, ಕಂಟ್ರಾಕ್ಟರ್ ಭೀಮರಾಯ 157 ಅಂತ್ಯಪ್ರಾಸಗಳಿಂದ ಕೂಡಿ, ರಸಭಾವಗಳನ್ನು ಒಳಗೊಂಡು, ವಿಷಯಗರ್ಭಿತವಾಗಿ, ಆಣಿಮುತ್ತಿನಂತಿತ್ತು. ಅತ್ಯಂತ ಹೃದ್ಯವಾಗಿದ್ದ ಆ ಹಾಡು ಭೀಮರಾಯರ ಹೃದಯವನ್ನು ಹೆಮ್ಮೆ, ಸಂತೋಷಗಳಿಂದ ಕುಣಿಸಿತು. ಮರುದಿನ ಬೆಳಗಾಯಿತು. ಪ್ರಾತರ್ವಿಧಿಗಳೆಲ್ಲ ತೀರಿ ಸ್ನಾನ, ಸಂಧ್ಯಾ ವಂದನೆಗಳಾದುವು. ಸುಬ್ಬಣ್ಣನವರು ಪಾರಾಯಣವನ್ನು ಮುಗಿಸಿ ಎಲ್ಲರೊಡನೆ ಫಲಾಹಾರ ಮಾಡಿದುದಾಯಿತು. ಶಾನುಭೋಗರ ಮನೆಯಲ್ಲಿ ಪಡಸಾಲೆಯಲ್ಲಿ ಹಾಸಿದ್ದ ವಿಸ್ತಾರವಾದ ಜಮಖಾನೆಯ ಮೇಲೆ ಎಲ್ಲರೂ ಕುಳಿತರು. ಆಗ ಭೀಮರಾಯರು ‘ಅಯ್ಯಾ ಸುಬ್ಬಣ್ಣ. ಇತ್ತೀಚೆಗೆ ನೀನು ತುಂಬ ತಂಟೆಕೋರನಾಗಿದ್ದೀಯೆ. ಹಾಗೆಂದು ನನಗೆ ಫಿರ್ಯಾದಿ ಬರುತ್ತಾ ಇವೆ. ಬೇಕಾದಷ್ಟು ರಗಳೆಗಳಿಗೆ ನೀನು ಅವಕಾಶ ಕೊಡುತ್ತಿದ್ದಿ. ನೀನು ಬಹಳ ಒಳ್ಳೆಯವನೆಂದುಕೊಂಡಿದ್ದೆ. ಅದ್ಯಾಕೆ ಹೀಗೆ ಮಾಡಿಕೊಂಡೆ?’ ಎಂದು ಗಂಭೀರ ಮುಖಮುದ್ರೆಯಿಂದ ಕೇಳಿದರು. ಅವನ ಮಾತಿನಲ್ಲಿ ಮಾಮೂಲದ ದರ್ಪವಿತ್ತು. ಸುಬ್ಬಣ್ಣನವರಿಗೆ ಗಾಬರಿಯಾಯಿತು. ‘ನಾನು ಯಾರಿಗೆ ಏನು ಮಾಡಿದೆ? ಕೂಲಿಯವರನ್ನು ಕುರಿತು ಕೂಡ ನಾನು ಕೆಟ್ಟಮಾತುಗಳನ್ನಾಡುವುದಿಲ್ಲ. ನನ್ನ ಮೇಲೆ ಯಾರು ತರಲೆ ಮಾಡಿರಬಹುದು? ನಾನು ಎಂದೂ ಧಣಿಗೆ ಮೋಸಮಾಡಿಲ್ಲ. ಅನ್ಯಾಯವಾಗಿ ಒಂದು ಕಾಸನ್ನೂ ಮುಟ್ಟಿಲ್ಲ. ನನಗೆ ತಿಳಿದಿರುವಂತೆ ನನಗೆ ಹಗೆಗಳು ಯಾರೂ ಇಲ್ಲ. ಆದರೂ ಇಂತಹ ಆಕ್ಷೇಪಣೆ ಏಕೆ?’ ಎಂದು ತಮ್ಮಲ್ಲೇ ಆಲೋಚಿಸುತ್ತ, ಬೆರಗಾಗಿ ‘ಭಾವಾ, ನೀವು ಹೇಳುವುದೇ ನನಗೆ ಅರ್ಥವಾಗುತ್ತಿಲ್ಲ. ನಾನು ಮಾಡಿದಂತಹ ಅಪರಾಧವಾದರೂ ಏನು? ಹಾಗೆಂದು ಹೇಳಿದವರು ಯಾರು? ದಯವಿಟ್ಟು ತಿಳಿಸಿ. ನನ್ನ ದೋಷವೇನಾದರೂ ಇದ್ದರೆ ಒಪ್ಪಿಕೊಳ್ಳುತ್ತೇನೆ. ಸರಿಪಡಿಸಿಕೊಳ್ಳುತ್ತೇನೆ’ ಎಂದು ಹೇಳಿದರು. ‘ಯಾರೇನು ಹೇಳುವುದಯ್ಯ? ನಿನ್ನ ಜವಾನ ಟಿಪ್ಪುವೇ ನಿನ್ನೆ ರಾತ್ರಿ ನನಗೆ ಎಲ್ಲವನ್ನೂ ವಿವರವಾಗಿ ಹೇಳಿದ್ದಾನೆ. ಈಗಲೇ ಅವನಿಗೆ ಹೇಳಿ ಕಳುಹಿಸುತ್ತೇನೆ. ನಿನ್ನ ಸಮಕ್ಷಮದಲ್ಲಿಯೇ ಎಲ್ಲವನ್ನೂ ಹೇಳಿಸುತ್ತೇನೆ’ ಎಂದು ಹೇಳಿ ಬಾಗಿಲಲ್ಲಿ ನಿಂತಿದ್ದ ಆಳಿಗೆ ‘ಎಲೋ, ಚಿತ್ತ ಮಾರಮ್ಮನ ಗುಡಿ ಹತ್ತಿರ ಜವಾನ ಟಿಪ್ಪು ಇದ್ದಾನೆ.ಅವನಿಗೆ ಈ ಕೂಡಲೇ ಬರಬೇಕೆಂದು ಹೇಳು’ ಎಂದು ಹೇಳಿ ಕಳುಹಿಸಿದರು. ದೊಡ್ಡ ದಣಿಗಳು ಕರೆಯುತ್ತಾರೆಂದು ಕೇಳಿ ಟಿಪ್ಪುವಿನ ಜಂಘಾಬಲವೇ ಉಡುಗಿಹೋಯಿತು, ‘ಅರೇ ಅಲ್ಲಾ, ಯೇ ಕ್ಯಾ ಹೈ?’ ಎಂದು ಅಲ್ಲಿಂದ ಓಡೋಡಿ ಬಂದವನೇ, ಭೀಮರಾಯರಿಗೆ ನೆಲ ಮುಟ್ಟಿ ಸಲಾಂ ಮಾಡಿ ದೂರ ನಿಂತುಕೊಂಡ. ಭೀಮರಾಯರು ಅವನತ್ತ ಒಮ್ಮೆ ದುರುದುರು 158 ಮೂರು ತಲೆಮಾರು ನೋಡಿದರು. ಟಿಪ್ಪುವಿನ ಎದೆಗುಂಡಿಗೆ ಒಡೆದಂತಾಯಿತು, ಭೀಮರಾಯರು ಕೃತ್ರಿಮ ಕೋಪವನ್ನು ನಟಿಸುತ್ತ ‘ಕ್ಯಾರೇ ಹೈವಾನ್, ನಿನ್ನೆ ರಾತ್ರಿ ಏನು ಮಾಡುತ್ತಿದ್ದೆಯೋ?’ ಎಂದು ರಾಜದರ್ಪದಿಂದ ಕೇಳಿದರು. ಅವರ ಜಬರ್‍ದಸ್ತನ್ನು ಕಂಡು ಟಿಪ್ಪುವಿಗೆ ಮಂಕು ಹಿಡಿದಂತಾಯಿತು. ನಿನ್ನೆ ರಾತ್ರಿ ತಾನು ಏನು ಮಾಡಿದೆ? ಏನೂ ಇಲ್ವಲ್ಲ! ಅವನು ಎದೆಯನ್ನು ಸವರಿಕೊಳ್ಳುತ್ತ ‘ಹುಜೂರ್, ಮಾಫ್‍ಕರನಾ. ನಿನ್ನೆ ರಾತ್ರಿ ನಾನು ನನ್ನ ಧಣಿಯ ಕುದುರೆ ಹತ್ತಿರ ಕಾವಲಿಗಾಗಿ ಮಲಗಿದ್ದೆ, ಅಷ್ಟೇ’ ಎಂದು ತೊದಲಿದ. ಆಗ ಭೀಮರಾಯರು ಮತ್ತಷ್ಟು ಗರ್ಜನೆಯ ಧ್ವನಿಯಿಂದ ‘ಅರೇ ಬೇಕೂಫ್, ಸುಮ್ಮನೆ ಮಲಗಿದ್ದೆಯೇನೊ? ಸುಳ್ಳು ಬೊಗಳುತ್ತೀಯಾ? ಏನೇನೋ ಒದರುತ್ತಿರಲಿಲ್ಲವೇನೋ? ಏನೋ? ಅದು ನೀನು ಹಾಡುತ್ತಲಿದ್ದುದು? ನಿಜ ಹೇಳು. ಇಲ್ಲದಿದ್ದರೆ ಕೊರಡೆ ಏಟು ಬಿದ್ದೀತು. ಹುಷಾರ್! ಎಂದರು. ಟಿಪ್ಪುವಿಗೆ ತಾನು ಹಿಂದಿನ ರಾತ್ರಿ ಲಾವಣಿ ಹಾಡಿದುದು ಜ್ಞಾಪಕಕ್ಕೆ ಬಂತು. ದೊಡ್ಡ ಧಣಿ ಅದನ್ನು ಕೇಳಿದ್ದಾರೆ. ಏನೋ ಗಂಡಾಂತರ ಕಾದಿದೆ ಎಂದು ಭಯವಾಯಿತು. ಆದರೂ ಸತ್ಯವನ್ನು ಹೇಳದೆ ಬೇರೆ ಮಾರ್ಗವಿಲ್ಲ, ಅವನು ತಲೆ ತಗ್ಗಿಸಿಕೊಂಡು ‘ಹುಜೂರ್, ನಿನ್ನೆ ರಾತ್ರಿ ನಾನು ಲಾವಣಿಹಾಡಿದೆ. ನನ್ನ ಧಣಿ ಅದನ್ನು ನನಗೆ ಕಲಿಸಿದರು. ಅದರ ಹೊರತು ಬೇರೆ ಏನನ್ನೂ ಹೇಳಲಿಲ್ಲ. ತಪ್ಪಾಗಿದ್ದರೆ ಮಾಫ್ ಮಾಡಬೇಕು’ ಎಂದು ಅವರ ಮುಂದೆ ಅಡ್ಡಬಿದ್ದ. ಆಗ ಭೀಮರಾಯರು ಸುಬ್ಬಣ್ಣನವರ ಕಡೆ ತಿರುಗಿ, ‘ಕೇಳಿದೆ ಏನಯ್ಯಾ ಸುಬ್ಬರಾಯಾ ನಿನ್ನ ಪ್ರತಾಪವನ್ನ? ನೀನು ಹುಚ್ಚು ಹುಚ್ಚಾಗಿ ಏನು ಏನೋ ಬರೆಯುವುದು; ನಿನ್ನ ಜವಾನ ಅದನ್ನು ವರಲಿಕೊಳ್ಳುವುದು, ಇದು ತಂಟೆಯಲ್ವೋ? ತಗಾದೆಯಲ್ವೋ? ಆಗಲಿ ನಿಲ್ಲು, ನಿಮ್ಮಿಬ್ಬರಿಗೂ ಸರಿಯಾಗಿ ಮಾಡ್ತೀನಿ. ನಿಮ್ಮ ಲೆಕ್ಕದ ಪುಸ್ತಕಗಳನ್ನು ತೆಗೆದುಕೊಂಡು ಬಾ’ ಎಂದು ಅಪ್ಪಣೆ ಮಾಡಿದರು. ಪುಸ್ತಕ ಬಂತು, ಅದರಲ್ಲಿ ‘ನನ್ನ ಮೇಲೆ ಲಾವಣಿ ಬರೆಯುವುದಕ್ಕಾಗಿ ಕವಿ ಸುಬ್ಬಣ್ಣನಿಗೆ ನುಡಿಯೊಂದಕ್ಕೆ ಎರಡು ರೂಪಾಯಿಗಳಂತೆ ಒಂದು ನೂರು ನುಡಿಗಳಿಗೆ ಎರಡು ನೂರು ರೂಪಾಯಿಗಳನ್ನೂ, ಅದನ್ನು ಕಾವ್ಯವಾಗಿ ಹಾಡಿದ ಜವಾನ ಟಿಪ್ಪುವಿಗೆ 50 ರೂಪಾಯಿಗಳನ್ನೂ ಬಹುಮಾನವಾಗಿ ಮಂಜೂರು ಮಾಡಿದ್ದೇನೆ- ಭೀಮರಾಯ ಕಂಟ್ರಾಕ್ಟರ್’ ಎಂದು ಬರೆದು ಹಿಂದಕ್ಕೆ ಕೊಟ್ಟರು. ಅದನ್ನು ತೆರೆದು ನೋಡಿದಾಗ ಸತ್ಯಸಾಕ್ಷಾತ್ಕಾರವಾಯಿತು. ಗುಣಗ್ರಾಹಿಯಾದ ಭೀಮರಾಯರ ಉದಾರಹೃದಯವನ್ನು ಕಂಡು ಜನ ಅವರನ್ನು ಬಾಯ್ತುಂಬಾ ಹೊಗಳಿದರು. ಸುಬ್ಬಣ್ಣನವರ ಆರ್ಥಿಕಸ್ಥಿತಿ ಸುಧಾರಿಸಿತು. ಭೀಮರಾಯರು ಕೊಟ್ಟ ಕಂಟ್ರಾಕ್ಟರ್ ಭೀಮರಾಯ 159 ಇನ್ನೂರು ರೂಪಾಯಿಗಳಿಂದ ಇಪ್ಪತ್ತೆಕರೆ ತರಿಜಮೀನನ್ನು ಕೊಂಡುಕೊಂಡರು. ತಳುಕಿಗೆ ಎರಡು ಮೈಲಿ ದೂರದಲ್ಲಿ ಹೊಸಹಳ್ಳಿ ಎಂಬ ಗ್ರಾಮವಿದೆ. ಅಲ್ಲಿಯ ಗ್ರಾಮಸ್ಥರು ತಾವಿದ್ದ ಹಳ್ಳಿಯನ್ನು ತ್ಯಜಿಸಿ ಅಲ್ಲಿಂದ ದಕ್ಷಿಣಕ್ಕೆ ಎರಡು ಫರ್ಲಾಂಗ್ ದೂರದಲ್ಲಿ ಹೊಸದಾಗಿ ಮನೆಗಳನ್ನು ಕಟ್ಟಿಕೊಂಡಿದ್ದರು. ಆದ್ದರಿಂದಲೇ ಆ ಊರಿಗೆ ಹೊಸಹಳ್ಳಿ ಎಂದು ಹೆಸರು. ಗ್ರಾಮ ಹೊಸದಾಗಿ ನಿರ್ಮಾಣವಾದರೂ ಗ್ರಾಮರಕ್ಷಕನಾದ ಆಂಜನೇಯ ಹಾಳೂರಿನ ಪಕ್ಕದಲ್ಲಿರುವ ತನ್ನ ಹಳೆಯ ಮಂದಿರದಲ್ಲೇ ನೆಲೆಸಿದ್ದಾನೆ. ಆ ದೇವಸ್ಥಾನದ ಸುತ್ತಲೂ ಹಾಳೂರನ್ನೊಳಗೊಂಡು ನಾಲ್ಕು ಎಕರೆ ಖುಷ್ಕಿ ಜಮೀನಿದೆ. ಅದಕ್ಕೊಂದು ಬಾವಿ ಉಂಟು, ಅದರ ಪಕ್ಕದಲ್ಲಿಯೇ ಸುಮಾರು ಹದಿನಾಲ್ಕು ಎಕರೆ ವಿಸ್ತೀರ್ಣವುಳ್ಳ ತರಿ ಜಮೀನಿದೆ. ಅದರ ಪಕ್ಕದಲ್ಲಿಯೇ ಮತ್ತೊಂದು ಹತ್ತು ಎಕರೆ ಜಮೀನಿದೆ. ಅದಷ್ಟೂ ಸರ್ಕಾರಿ ಹರಾಜಿನಲ್ಲಿ ಇನ್ನೂರು ರೂಪಾಯಿಗಳಿಗೆ ದೊರೆಯಿತು. ಸುಬ್ಬಣ್ಣನವರಿಗೆ ಈ ನೀರಾವರಿಗಳಲ್ಲದೆ ಹೊಸಹಳ್ಳಿ ಗ್ರಾಮಕ್ಕೆ ಪಶ್ಚಿಮ ದಿಕ್ಕಿನಲ್ಲಿ ಸುಮಾರು ನೂರು ಎಕರೆ ಜಮೀನು ಅತ್ಯಂತ ಸುಲಭ ಬೆಲೆಗೆ ಕ್ಕೆಸೇರಿತು. ಧಂಡಿಯಾಗಿ ಜಮೀನಿನ ಆಸ್ತಿ ಮಾಡಿಕೊಳ್ಳಬೇಕೆಂಬ ಅವರ ಬಹುದಿನಗಳ ಆಸೆ ಈಡೇರಿದಂತಾಯಿತು. ಕೋಡೀಹಳ್ಳಿಯ ಕಾಮಗಾರಿ ಕೆಲಸ ಮುಗಿಯುತ್ತಾ ಬಂತು. ಇನ್ನು ಗುಮಾಸ್ತನ ಅಗತ್ಯವಿಲ್ಲ ಎನ್ನುವಂತಾಯಿತು. ಆ ವೇಳೆಗೆ ಸರಿಯಾಗಿ ಭೀಮರಾಯರು ತಳುಕು ಹೋಬಳಿಯ ಸುಮಾರು 25 ಸೇಂದಿ ಅಂಗಡಿಗಳನ್ನು ಕಂಟ್ರಾಕ್ಟ್ ಹಿಡಿದರು. ಅವುಗಳಿಂದ ಪ್ರತಿ ತಿಂಗಳೂ ಸುಮಾರು 150 ರಿಂದ 200 ರೂಪಾಯಿಗಳವರೆಗೆ ವರಮಾನ ಬರುತ್ತಿತ್ತು. ಕೆರೆಯ ಕಾಮಗಾರಿ ಮುಗಿದರೆ ಸುಬ್ಬಣ್ಣನವರಿಗೆ ಬೇರೊಂದು ಉದ್ಯೋಗ ಸಿಕ್ಕಿದಂತಾಗಲಿ ಎಂಬ ಸದುದ್ದೇಶದಿಂದಲೇ ಈ ಕಂಟ್ರಾಕ್ಟ್‍ನ್ನು ಅವರು ಹಿಡಿದಿದ್ದರು. ಕೆರೆಯ ಕೆಲಸ ಮುಗಿಯುತ್ತಲೆ ಅವರು ಸುಬ್ಬಣ್ಣನವರನ್ನು ತಿಂಗಳಿಗೆ 50 ರೂ. ಸಂಬಳದ ಮೇಲೆ ಟಾಡಿ ಕಂಟ್ರಾಕ್ಟ್ ಗುಮಾಸ್ತೆಯಾಗಿ ನೇಮಿಸಿಕೊಂಡರು. ಇದರ ಜೊತೆಗೆ ಕುದುರೆಗಾಗಿ ಕೊಡುತ್ತಿದ್ದ ಹತ್ತು ರೂಪಾಯಿ ಮಾಸಾಶನ ಇದ್ದೇ ಇತ್ತು. ಒಟ್ಟು ಕಂಟ್ರಾಕ್ಟು ಭೀಮರಾಯರದು. ಒಂದೊಂದು ಅಂಗಡಿಯನ್ನು ಒಬ್ಬೊಬ್ಬ ಈಡಿಗರವನಿಗೆ ವಹಿಸಿಕೊಟ್ಟು, ಆ ಅಂಗಡಿಯ ಬಾಬತ್ತು ಸರ್ಕಾರಕ್ಕೆ ಸಲ್ಲಬೇಕಾದ ಕಂದಾಯ, ಮರ ತೆರಿಗೆ, ಕಂಟ್ರಾಕ್ಟರ ಲಾಭಾಂಶ - ಇವುಗಳನ್ನು ಛಾಪಾ ಕಾಗದದ ಮೇಲೆ ಬರೆಸಿಕೊಳ್ಳಲಾಗಿತ್ತು. ಪ್ರತಿ ತಿಂಗಳು ಅಮಗಡಿಯವನಿಂದ ಹಣವನ್ನು ವಸೂಲು ಮಾಡಿ, ಸರ್ಕಾರದ ಕಂದಾಯವನ್ನು ಸಕಾಲದಲ್ಲಿ ಖಜಾನೆಗೆ 160 ಮೂರು ತಲೆಮಾರು ಕಟ್ಟಿ, ಕಂಟ್ರಾಕ್ಟರ ಪಾಲಿನ ಹಣವನ್ನು ಅವರಿಗೆ ಸಲ್ಲಿಸುವ ಜವಾಬ್ದಾರಿ ಸುಬ್ಬಣ್ಣನವರದಾಗಿತ್ತು. ಹೊಸ ಪದ್ಧತಿಯಿಂದ ಸುಬ್ಬಣ್ಣನವರಿಗೆ ಹೆಚ್ಚು ಅನುಕೂಲವಾಯಿತು. ಹಣವನ್ನು ವಸೂಲು ಮಾಡುವುದು ಜವಾನನ ಜವಾಬ್ದಾರಿಯಾಗಿತ್ತು. ಅಂಗಡಿಯವರು ತುಂಬ ಪ್ರಾಮಾಣಿಕರಾಗಿದ್ದರು. ತಾವು ಕಟ್ಟಬೇಕಾದ ಹಣವನ್ನು ಅನೇಕ ವೇಳೆ ತಾವೇ ತಂದೊಪ್ಪಿಸುತ್ತಿದ್ದರು, ಇದರಿಂದ ಸುಬ್ಬಣ್ಣನವರಿಗೆ ಸಾಕಷ್ಟು ಕಾಲಾವಕಾಶ ದೊರೆಯುವಂತಾಯಿತು. ಆಗಿಂದಾಗ ಜಮೀನುಗಳಿಗೆ ಹೋಗಿ ನೋಡಿಕೊಂಡು ಬರಲು, ಛಾಪಾಕಾಗದ ವಿಕ್ರಯ, ಅರ್ಜಿಗಳ ಬರವಣಿಗೆ ಇವುಗಳ ಜೊತೆಗೆ ನಾಟಕಗಳ ರಚನೆ, ಕವಿತೆಗಳ ರಚನೆ, ವಿರಾಮವಾಗಿ ಮಾಡಲು ಅನುಕೂಲವಾಯಿತು. ಸುಬ್ಬಣ್ಣನವರ ಆರ್ಥಿಕ ಪರಿಸ್ಥಿತಿ ತುಂಬ ಸುಧಾರಿಸಿತು. ಸುಬ್ಬಣ್ಣನವರ ತಮ್ಮ ಶ್ರೀನಿವಾಸರಾಯ ಹನ್ನೆರಡು ರೂಪಾಯಿ ಪರೀಕ್ಷೆ (ಮೆಟ್ರಿಕ್ಯುಲೇಶನ್)ಯಲ್ಲಿ ತೇರ್ಗಡೆಯಾಗಿ ಮುಂದೆ ಕಾಲೇಜಿಗೆ ಸೇರಬೇಕು. ಏಕೋ ಆತನಿಗೆ ಬೆಂಗಳೂರು, ಮೈಸೂರು ಹಿಡಿಸಲಿಲ್ಲ; ಮದ್ರಾಸಿನಲ್ಲಿ ಓದಲು ಅಪೇಕ್ಷಿಸಿದ. ಎಲ್ಲಿಯೇ ಆದರೂ ಓದುವುದು ಒಂದೇ. ಬೆಂಗಳೂರು ಮದ್ರಾಸಿಗಿಂತ ಹತ್ತಿರ, ಖರ್ಚು ಕಡಿಮೆ. ಆದರೆ ತಮ್ಮ ಮದ್ರಾಸಿನಲ್ಲಿ ಓದಬೇಕೆಂದು ಬಯಸುತ್ತಿದ್ದಾನೆ. ಸ್ವಲ್ಪ ದುಬಾರಿ ವೆಚ್ಚಕ್ಕಾಗಿ ತಮ್ಮನ ಮನಸ್ಸನ್ನು ಏಕೆ ನೋಯಿಸಬೇಕು? ಹೇಗೂ ರಾಮಚಂದ್ರಪ್ರಭು ಸಾಕಷ್ಟು ಅನುಕೂಲವನ್ನು ಕೊಟ್ಟಿದ್ದಾನೆ. ತಮ್ಮನ ಇಷ್ಟದಂತೆಯೇ ಆಗಲಿ. ಅವನು ಮದ್ರಾಸಿನ ಕಾಲೇಜಿನಲ್ಲಿ ಓದುತ್ತಾನೆಂದರೆ ಎಷ್ಟೋ ಗೌರವ - ಎಂದು ಯೋಚಿಸಿದರು ಸುಬ್ಬಣ್ಣ. ತಾಯಿ ಹನುಮಕ್ಕಮ್ಮ, ಹೆಂಡತಿ ಲಕ್ಷ್ಮೀದೇವಮ್ಮ ಯಾವಾಗಲೂ ತಮ್ಮನ ಪರವಾಗಿಯೇ ಇದ್ದರು. ಸರಿ, ಶ್ರೀನಿವಾಸ ಮದ್ರಾಸಿನ ಕಾಲೇಜಿಗೆ ಸೇರಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಊಟಕ್ಕೆ ಏರ್ಪಾಟಾಯಿತು. ಆತನ ಖರ್ಚು ತಿಂಗಳಿಗೆ ಇಪ್ಪತ್ತೈದರಿಂದ ಮೂವತ್ತು ರೂಗಳು. ಅದನ್ನು ಸುಬ್ಬಣ್ಣನವರು ಸಂತೋಷದಿಂದ ಭರಿಸುತ್ತಿದ್ದರು. ಇನ್ನೊಬ್ಬ ತಮ್ಮ ಸಣ್ಣ ಸುಬ್ಬಣ್ಣ ವಿದ್ಯಾಭ್ಯಾಸದಲ್ಲಿ ಮುಂದುವರಿಯಲಿಲ್ಲ. ಐದು ರೂಪಾಯಿ ಪರೀಕ್ಷೆಗೆ ಕಟ್ಟಿದನಾದರೂ ಆ ತರಗತಿಯಿಂದ ಅಗಲಲು ಆತನಾಗಲಿ, ಆ ತರಗತಿಯಾಗಲಿ ಒಪ್ಪಲಿಲ್ಲ. ಅವನನ್ನು ಮುಂದೆ ಓದಿಸಬೇಕೆಂಬ ಸುಬ್ಬಣ್ಣನವರ ಆಸೆ ಈಡೇರಲಿಲ್ಲ. ‘ಸ್ವಂತ ತಮ್ಮನನ್ನು ಓದಿಸಿ ಮುಂದಕ್ಕೆ ತಂದ; ಚಿಕ್ಕಪ್ಪನ ಮಗನನ್ನು ಉಪೇಕ್ಷೆ ಮಾಡಿದ’ ಎಂಬ ಅಪವಾದ ಅಪಕೀರ್ತಿಗಳಿಗೆ ಗುರಿಯಾಗಬಾರದೆಂದು ಆತ ಮಾಡಿದ ಕಂಟ್ರಾಕ್ಟರ್ ಭೀಮರಾಯ 161 ಪ್ರಯತ್ನವೆಲ್ಲ ನಿಷ್ಫಲವಾಯ್ತು. ಅವನ ಅದೃಷ್ಟ ಅಷ್ಟೇ ಸರಿ ಎಂದು ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಆತನಿಗೆ ಗುಮಾಸ್ತೆ ಕೆಲಸದ ವಹಿವಾಟನ್ನೂ, ಲೆಕ್ಕ ಪತ್ರಗಳ ರೀತಿನೀತಿಗಳನ್ನೂ ಕಲಿಸಿಕೊಟ್ಟರು. ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಲಿ - ಎಂಬುದು ಸುಬ್ಬಣ್ಣನವರ ಉದ್ದೇಶವಾಗಿತ್ತು. ಶ್ರೀನಿವಾಸನೊಡನೆ ಸಣ್ಣ ಸುಬ್ಬಣ್ಣನೂ ಪ್ರಾಯಕ್ಕೆ ಬರುತ್ತಿದ್ದ. ಇಬ್ಬರಿಗೂ ವಿವಾಹ ಮಾಡಿ, ಮನೆತನಸ್ಥರಾದ ಅವರು ತಮ್ಮ ಜೀವನವನ್ನು ನಿರಾಯಾಸವಾಗಿ ನಡೆಸಿಕೊಂಡು, ಹೋಗುವುದಾಗಿ ಮಾಡಿದರೆ ತಮ್ಮ ಮೇಲಿನ ಭಾರ ಎಷ್ಟೋ ಮಟ್ಟಿಗೆ ಕಡಿಮೆಯಗುವುದೆಂದೂ, ಅದು ತಮ್ಮ ಅವಶ್ಯ ಕರ್ತವ್ಯವೆಂದೂ ಅವರು ಆಲೋಚಿಸಿದ್ದರು. ಅದಕ್ಕೆ ಅನುಕೂಲ ಸಮಯಕ್ಕಾಗಿ ಕಾಯುತ್ತಿದ್ದರು. ರಾಯದುರ್ಗದ ಈಡಿಗರ ಗಂಗಪ್ಪ ಬಹುದೊಡ್ಡ ಟಾಡಿ ಕಂಟ್ರಾಕ್ಟರ್. ಆತನ ಅಂಗಡಿಗಳಿಗೆ ಪ್ರತಿದಿನವೂ ಕನಿಷ್ಠಪಕ್ಷ ನಾಲ್ಕು ಗಾಡಿ ಭರ್ತಿ ಸೇಂದಿ ಬೇಕಾಗುತ್ತಿತ್ತು. ತಮ್ಮ ಊರಿನ ಆಸುಪಾಸಿನಲ್ಲಿ ಈಚಲುವನಗಳಿರಲಿಲ್ಲ. ಅಲ್ಲಲ್ಲಿ ಇದ್ದ ಸಣ್ಣ ಪುಟ್ಟ ವನಗಳಿಂದ ಒಂದು ಗಾಡಿಯಷ್ಟು ಸೇಂದಿಯೂ ಸಿಗುತ್ತಿರಲಿಲ್ಲ. ಆದರೆ ತಳುಕಿನ ಬಳಿ ಹಳ್ಳದ ದಂಡೆಯಲ್ಲಿ, ತಿಪ್ಪಯ್ಯನಕೋಟೆ ಕೆರೆಯ ಹಿಂದೆ, ಹಳ್ಳ ಹುಟ್ಟುವೆಡೆಯಿಂದ ಅದು ವೇದಾವತಿ ನದಿಯನ್ನು ಸೇರುವ ಭೋಗನಹಳ್ಳಿ ಗ್ರಾಮದವರೆಗೆ ಸುಮಾರು ಹನ್ನೆರಡು ಮೈಲಿ ಉದ್ದಕ್ಕೆ, ಕಾಲು ಮೈಲಿ ಅಗಲದಷ್ಟಕ್ಕೆ ಕಡಿಮೆ ಇಲ್ಲದೆ ದಟ್ಟವಾದ ಈಚಲುವನವಿತ್ತು. ಅದರಲ್ಲಿ ಸೇಂದಿ ಇಳಿಸಲು ಯೋಗ್ಯವಾದ ಲಕ್ಷಾಂತರ ಮರಗಳಿದ್ದುವು. ಊರೂರಿಗೆ ಪ್ರಯಾಣ ಮಾಡುವ ಜನರು ಆ ವನವನ್ನು ದಾಟಿ ಹೋಗಬೇಕಾದರೆ ಹಗಲುಹೊತ್ತಿನಲ್ಲಿಯೇ ಭಯಪಡುತ್ತಿದ್ದರು. ರಾತ್ರಿಹೊತ್ತಿನಲ್ಲಂತೂ ಒಬ್ಬಂಟಿಗರಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಆ ವನದಲ್ಲಿ ನೂರಾರು ಕಾಡು ಹಂದಿಗಳು ಗುಂಪುಗುಂಪಾಗಿ ತುಂಬಿಕೊಂಡಿದ್ದವು. ನವಿಲುಗಳು, ಹಾವುಗಳಂತೂ ಲೆಕ್ಕವಿಲ್ಲದಷ್ಟಿದ್ದುವು. ಇವಲ್ಲದೆ ಬೇರೆ ಬೇರೆ ಸಣ್ಣ ಪುಟ್ಟ ಹಳ್ಳಿಗಳ ಸುತ್ತ ಸಾವಿರಾರು ಈಚಲ ಮರಗಳಿದ್ದವು. ಇವೆಲ್ಲವೂ ಸರ್ಕಾರದ ರಕ್ಷಣೆಗೆ ಒಳಪಟ್ಟಿದ್ದರಿಂದ ವರುಷದಿಂದ ವರುಷಕ್ಕೆ ವೃದ್ಧಿಯಾಗುತ್ತಿದ್ದುವು. ಸರ್ಕಾರದ ಖಜಾನೆ ಇವುಗಳಿಂದ ಲಕ್ಷಾಂತರ ರೂಪಾಯಿಗಳನ್ನು ತುಂಬಿಕೊಳ್ಳುತ್ತಿತ್ತು. ಈ ಮರಗಳಿಂದ ಜನಗಳಿಗೂ ಬೇಕಾದಷ್ಟು ಅನುಕೂಲವಾಗುತ್ತಿತ್ತು. ಮನೆಕಟ್ಟಲು ಬೇಕಾದ ಕಂಬ, ತೊಲೆ, ಜಂತಿಗಳೇ ಮೊದಲಾದ ಮುಟ್ಟುಗಳು ಯಥೇಚ್ಛವಾಗಿ ಸಿಕ್ಕುತ್ತಿದ್ದುವು. ಚೆನ್ನಾಗಿ ಬಲಿತ ಈಚಲುಮರ ತೆಂಗಿನಮರಕ್ಕಿಂತಲೂ ಗಟ್ಟಿ. ಈಚಲು ಮುಟ್ಟುಗಳು ನೂರಾರು 162 ಮೂರು ತಲೆಮಾರು ವರ್ಷಕಾಲ ಬಾಳಿಕೆ ಬರುತ್ತವೆ. ಹಳ್ಳದ ಅಕ್ಕಪಕ್ಕದಲ್ಲಿರುವ ಹತ್ತಾರು ಹಳ್ಳಿಗಳಲ್ಲಿ ಈಚಲು ಮುಟ್ಟಿನಿಂದ ಕಟ್ಟಿರುವ ಅನೇಕಾನೇಕ ಮಾಳಿಗೆ ಮನೆಗಳನ್ನೂ, ಈಚಲಗರಿಯ ಮೇಲ್ಚಾವಣಿಯನ್ನು ಹೊದಿಸಿರುವ ನೂರಾರು ಗುಡಿಸಲುಗಳನ್ನೂ ಈಗಲೂ ಕಾಣಬಹುದು. ಈ ಪ್ರದೇಶವು ಸಾವಿರಾರು ದನಕರುಗಳಿಗೆ ಮೇವಿನ ತಾಣವಾಗಿತ್ತು. ಅಷ್ಟೇ ಅಲ್ಲ, ಮೇವಿನ ಅಭಾವ ತಲೆದೋರಿದಾಗ ಎಳೆಯ ಈಚಲಗರಿಯನ್ನು ದನಗಳಿಗೆ ಸವರಿ ಹಾಕುತ್ತಿದ್ದರು. ಅದು ಅವುಗಳಿಗೆ ಪುಷ್ಟಿಕರವಾದ ಆಹಾರವಾಗಿತ್ತು. ಅದನ್ನು ತಿಂದ ದನಕರುಗಳು ಮೈತುಂಬಿಕೊಂಡು ನೆಮ್ಮದಿಯಾಗಿರುತ್ತಿದ್ದುವು. ಈ ವನಗಳಿರುವವರೆಗೆ ವರುಷ ವರುಷವೂ ಆ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿತ್ತು. ಹೀಗೆ ಈಚಲುವನಗಳು ಅತ್ತ ಸರ್ಕಾರಕ್ಕೂ ಇತ್ತ ಜನ ಸಾಮಾನ್ಯರಿಗೂ ಅನುಕೂಲಕರವಾಗಿದ್ದುವು. ಸ್ವರಾಜ್ಯ ಚಳವಳಿ ಪ್ರಾರಂಭವಾಗಿ ಪಾನನಿರ್ಬಂಧದ ಕಾನೂನು ಜನರ ತಲೆಯನ್ನು ಹೋಗುತ್ತಲೇ ಈಚಲಮರಗಳ ಪ್ರಳಯಕ್ಕೆ ಪ್ರಾರಂಭವಾಯಿತು. ಜನರು ಆ ಮರಗಳನ್ನು, ಯದ್ವಾ, ತದ್ವಾ ಕಡಿದು ಹಾಕಿ ಆ ವನಗಳನ್ನೆಲ್ಲ ಹಾಳು ಮಾಡಿದರು, ಸರ್ಕಾರವು ಸ್ವಲ್ಪ ವಿಚಕ್ಷಣೆ ವಹಿಸಿ, ಉಪಯೋಗಕ್ಕೆ ಬರಬಹುದಾದ ಈಚಲು ಮರಗಳನ್ನಾದರೂ ಹರಾಜು ಹಾಕಿದ್ದರೆ ಎಷ್ಟೋ ಲಕ್ಷಾಂತರ ರೂಪಾಯಿಗಳನ್ನು ಪಡೆಯಬಹುದಾಗಿತ್ತು. ಪಾನನಿರೋಧ ಕಾನೂನಿಗೂ ಅನುಕೂಲವಾಗುತ್ತಿತ್ತು. ಆದರೆ ಆ ಕಾನೂನನ್ನು ಜಾರಿಗೆ ತರುವ ಅತ್ಯುತ್ಸಾಹದಲ್ಲಿ ಸರಕಾರ ತಮ್ಮ ವಿವೇಚನಾ ಶಕ್ತಿಯನ್ನೇ ಕಳೆದುಕೊಂಡು ದೇಶದ ಖಜಾನೆಗೆ ಬರಬಹುದಾಗಿದ್ದ ದೊಡ್ಡ ಆದಾಯವೊಂದನ್ನು ಕಳೆದುಕೊಂಡಿತು. ಒಟ್ಟಿನಲ್ಲಿ ಲಕ್ಷಾಂತರ ಮರಗಳಿಂದ ತುಂಬಿ ನಯನಮನೋಹರವಾಗಿ ಮರೆಯುತ್ತಿದ್ದ ಈಚಲವನಗಳು ಈ ದಿನ ತಿರುಪತಿಯ ಯಾತ್ರಿಕರಂತೆ ಬೋಳು ಬೋಳಾಗಿ ಜೀವಕಳೆಯನ್ನು ಕಳೆದುಕೊಂಡು ಹಾಳು ಸುರಿಯುತ್ತಿವೆ. ಇದರ ಪರಿಣಾಮವಾಗಿ ಮೋಡಗಳನ್ನು ಆಕರ್ಷಿಸುವ ಸಾಧನವೇ ಸತ್ತು ಹೋಗಿ ಆ ಪ್ರದೇಶವೆಲ್ಲ ಮಳೆಯಿಲ್ಲದ ಬೆಂಗಾಡಾಗುತ್ತಿದೆ. ಕಂಟ್ರಾಕ್ಟರ್ ಗಂಗಪ್ಪ ತಳುಕಿನ ಈಚಲವನದಿಂದ ದಿನದಿನವೂ ಎರಡೆರಡು, ಕೆಲವು ವೇಳೆ ಮೂರು ಮೂರು ಗಾಡಿ ಸೇಂದಿಯನ್ನು ರಾಯದುರ್ಗಕ್ಕೆ ಸಾಗಿಸಲು ಏರ್ಪಾಡು ಮಾಡಿದ್ದ. ಪ್ರತಿದಿನವೂ ಹತ್ತಾರು ಜನ ಆಳುಗಳು ಈಚಲ ಮರಗಳನ್ನು ಗೀಚಿ, ಸೇಂದಿಯನ್ನು ಇಳಿಸಬೇಕಾಗಿತ್ತು. ಪ್ರತಿತಿಂಗಳೂ ತೆರಿಗೆಯಬಾಬ್ತು ಐದು ನೂರು ರೂಪಾಯಿಗಳನ್ನು ಸರ್ಕಾರದ ಖಜಾನೆಗೆ ಜಮಾ ಮಾಡಿಸಬೇಕಾಗುತ್ತಿತ್ತು. ಕಂಟ್ರಾಕ್ಟರ್ ಭೀಮರಾಯ 163 ಈ ಲೆಕ್ಕಗಳನ್ನೆಲ್ಲ ಚೊಕ್ಕವಾಗಿಡಲು ಶಕ್ತನಾದ ಸ್ಥಳೀಯ ಗುಮಾಸ್ತನೊಬ್ಬನ ಅಗತ್ಯವಿತ್ತು. ಗಂಗಪ್ಪ ಸುಬ್ಬಣ್ಣನವರನ್ನು ಚೆನ್ನಾಗಿ ಬಲ್ಲವನಾಗಿದ್ದ. ಅವರನ್ನು ಈ ವಿಷಯದಲ್ಲಿ ವಿಚಾರಿಸಿ ನೋಡಿದ, ಅವರು ತಮ್ಮ ತಮ್ಮನಾದ ಸಣ್ಣ ಸುಬ್ಬಣ್ಣನನ್ನು ಶಿಫಾರಸ್ಸು ಮಾಡಿ ಆ ಕೆಲಸಕ್ಕೆ ನೇಮಿಸಿದರು. ತಿಂಗಳಿಗೆ ಇಪ್ಪತ್ತೈದು ರೂಪಾಯಿಗಳ ಸಂಬಳ ನಿಗದಿಯಾಯ್ತು. ಸಣ್ಣ ಸುಬ್ಬಣ್ಣ ಹೆಚ್ಚು ವಿದ್ಯಾವಂತನಾಗದಿದ್ದರೂ ಬುದ್ಧಿವಂತ, ಉತ್ಸಾಹಶಾಲಿ, ಜನಾಕರ್ಷಣ ಶಕ್ತಿ ಇದ್ದವ. ಆತ ಯಾವಾಗಲೂ ಹಸನ್ಮುಖಿ. ತಂದೆ ಲಿಂಗಣ್ಣನವರಂತೆಯೆ ವಿನೋದಶೀಲ. ಅಣ್ಣನ ತಯಾರಿಯಲ್ಲಿ ಲೆಕ್ಕ-ಪತ್ರಗಳನ್ನಿಡುವ ಮಾಹಿತಿ ಚೆನ್ನಾಗಿ ಅವಗತವಾಗಿತ್ತು. ತನಗೆ ವಹಿಸಲಾಗಿದ್ದ ಕೆಲಸವನ್ನು ದಕ್ಷತೆಯಿಂದ ತೂಗಿಸುತ್ತಿದ್ದ. ಗಂಗಪ್ಪನಿಗಾಗಲಿ, ಸುಬ್ಬಣ್ಣನಿಗಾಗಲಿ ಆತನ ಕಾರ್ಯನಿರ್ವಹಣೆಯ ವಿಷಯದಲ್ಲಿ ಯಾವ ಯೋಚನೆಯೂ ಇರಲಿಲ್ಲ. ತಮ್ಮಂದಿರಿಬ್ಬರಿಗೂ ವಿವಾಹದ ವಯಸ್ಸಾಗಿತ್ತು. ಇಬ್ಬರಿಗೂ ಅವರವರ ಕಾಲ ಮೇಲೆ ನಿಂತು ಸ್ವತಃ ಜೀವನ ಮಾಡುವಷ್ಟು ಅನುಕೂಲವಾಗಿತ್ತು. ಅವರ ಮದುವೆಗಳನ್ನು ಆದಷ್ಟು ಬೇಗ ಮಾಡಿ ಮುಗಿಸಿದರೆ ತಮ್ಮ ತಲೆಯ ಮೇಲಿನ ಅರ್ಧ ಭಾರ ಇಳಿದಂತಾಗುತ್ತಿತ್ತು. ಸುಬ್ಬಣ್ಣನವರು ಮುಂದೆ ನಿರ್ವಹಿಸಬೇಕಾಗಿದ್ದ ತಮ್ಮ ಮಕ್ಕಳ ಜವಾಬ್ದಾರಿ ಬೇಕಾದಷ್ಟಿತ್ತು. ಗಂಡು ಮಕ್ಕಳ ಉಪನಯನ, ವಿದ್ಯಾಭ್ಯಾಸಗಳೂ, ಹೆಣ್ಣು ಮಕ್ಕಳ ಮದುವೆಗಳೂ ನಡೆಯಬೇಕಾಗಿತ್ತು. ಆದಷ್ಟು ಬೇಗ ಒಂದೊಂದಾಗಿ ಭಾರವನ್ನು ಕಡಿಮೆಮಾಡಿಕೊಳ್ಳಬೇಕಾಗಿತ್ತು. ಇಷ್ಟು ಹೊತ್ತಿಗೆ ಭೀಮರಾಯರು ವೃದ್ಧರಾಗಿ ಹಾಸಿಗೆ ಹಿಡಿದರು. ಅವರ ಕಂಟ್ರಾಕ್ಟ್ ಕೆಲಸಗಳನ್ನು ಅವರ ಚಿಕ್ಕ ತಮ್ಮ ಕೃಷ್ಣಪ್ಪನವರು ವಹಿಸಿಕೊಂಡರು. ಭೀಮರಾಯರು ಸುಬ್ಬಣ್ಣನವರನ್ನು ಹಿರಿಯೂರಿಗೆ ಕರೆಸಿಕೊಂಡು ‘ಸುಬ್ಬಣ್ಣ, ನನ್ನ ಕಾಲ ಮುಗಿಯಿತು. ಮುಂದಿನ ಪರಿಸ್ಥಿತಿ ಹೇಗೋ ಏನೋ ಗೊತ್ತಿಲ್ಲ. ನನ್ನ ಸ್ವಭಾವ ನಿನಗೆ, ನಿನ್ನ ಸ್ವಭಾವ ನನಗೆ ತಿಳಿದಿರುವಂತೆ ಬೇರೆಯವರಿಗೆ ತಿಳಿಯದು. ತಳುಕು ಹೋಬಳಿಯ ಟಾಡಿ ಕಂಟ್ರಾಕ್ಟ್ ನಿನಗಾಗಿಯೇ ಮಾಡಿಕೊಂಡದ್ದು, ಇತಃಪರ ಆ ಕಂಟ್ರಾಕ್ಟನ್ನು ನಿನಗೆ ವಹಿಸಿಕೊಡುತ್ತಿದ್ದೇನೆ. ಅದನ್ನು ಮಾಡಿಕೊಂಡು ಹೋಗು. ದೊಡ್ಡ ಸಂಸಾರಿಯಾದ ನಿನಗೆ ಸುಖವಾಗಿ ಮರ್ಯಾದೆಯಿಂದ ಇರುವುದಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳಿ ಕಂಟ್ರಾಕ್ಟ್ ಬದಲಾವಣೆಗೆ ಅಗತ್ಯವಾದ ದಸ್ತಾವೇಜನ್ನು ಮಾಡಿಕೊಟ್ಟು ಕಂಟ್ರಾಕ್ಟನ್ನು ವಹಿಸಿಕೊಟ್ಟರು. ಇದಾದ ಸ್ವಲ್ಪಕಾಲದಲ್ಲಿಯೇ ಅವರ ಅಣ್ಣನ ಹೆಂಡತಿ ಮಹಾಲಕ್ಷಮ್ಮ 164 ಮೂರು ತಲೆಮಾರು ಕಾಲವಾದರು. ಆ ಕುಟುಂಬದ ಏಳಿಗೆಗೆಲ್ಲ ಆಕೆಯ ಅದೃಷ್ಟವೇ ಕಾರಣವೆಂದು ಭೀಮರಾಯರು ನಂಬಿದ್ದರು. ಆಕೆಯಾದರೋ ಲೌಕಿಕವೇನೂ ತಿಳಿಯದ ಮಂಕುಮನುಷ್ಯಳು. ಮನೆಯಲ್ಲಿ ಆಕೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ; ಯಾರ ಗೊಡವೆಗೂ ಹೋಗುತ್ತಿರಲಿಲ್ಲ; ಸ್ವಸ್ಥರಾಗಿ ಒಂದು ಕಡೆ ಕುಳಿತು ಬಿಡುತ್ತಿದ್ದಳು. ಅಡಿಗೆಯಾದ ಮೇಲೆ ಎದ್ದು ಸ್ನಾನಮಾಡಿ, ಮಡಿಯುಟ್ಟು, ಕುಂಕುಮವಿಟ್ಟು ದೇವರಿಗೆ ಒಂದೆರಡು ನಮಸ್ಕಾರ ಹಾಕಿ, ಊಟ ಮಾಡಿ ಮೇಲಕ್ಕೆದ್ದರೆ ತೀರಿತು. ತನ್ನ ಪಾಡಿಗೆ ತಾನು ಸ್ವಸ್ಥವಾಗಿ ಕುಳಿತು ಬಿಡುತ್ತಿದ್ದಳು. ಆಕೆ ಏನು ಮಾಡುತ್ತಿದ್ದಳೋ ಆ ದೇವರಿಗೇ ಗೊತ್ತು. ಮನೆಯಲ್ಲಿದ್ದ ಎಲ್ಲರಿಗೂ ಆಕೆಯಲ್ಲಿ ಉಪೇಕ್ಷೆ. ಎಲ್ಲರೂ ಮೂದೇವಿ ಎಂದು ಹಳಿಯುತ್ತಿದ್ದರು. ಆದರೆ, ಭೀಮರಾಯರಿಗೆ ಮಾತ್ರ ಆಕೆಯಲ್ಲಿ ಅಪಾರವಾದ ಗೌರವ, ಪೂಜ್ಯಭಾವನೆ. ಮಿಕ್ಕವರಾರಲ್ಲಿಯೂ ಕಾಣದ ಒಂದು ವೈಶಿಷ್ಟ್ಯ ಆಕೆಯಲ್ಲಿ ಕಾಣುತ್ತಿತ್ತು ಆತನಿಗೆ. ಅದನ್ನು ಆತ ಯಾರ ಮುಂದೆಯೂ ಆಡುತ್ತಿರಲಿಲ್ಲ. ಆಕೆ ನಿಜವಾಗಿಯೂ ಮೂದೇವಿಯೋ, ಮಾದೇವಿಯೋ? ದೇವನೊಬ್ಬನೇ ಬಲ್ಲ. ಆಕೆಯು ಕಾಲವಾಗುತ್ತಲೇ ಭೀಮರಾಯರು ಆಕೆಯನ್ನು ಹಿಂಬಾಲಿಸಿದರು. ಶೂನ್ಯದಿಂದ ಮೂಡಿ ಬಂದ ವಿಶ್ವ ಮತ್ತೆ ಶೂನ್ಯದಲ್ಲಿಯೇ ಅಡಗಿಹೋಗುವಂತೆ ಯಾರೂ ಅರಿಯದ ಭೀಮರಾಯ ಲೋಕೋತ್ತರ ಖ್ಯಾತನಾಗಿ ಮತ್ತೆ ಮರವೆಯ ಮಹಾಸಾಗರದಲ್ಲಿ ಲೀನವಾದ. * * * * 165 12. ಗುಗ್ಗರಿ ಕೆಂಚವ್ವ-ತೊರೆಯಪ್ಪ ಗುಗ್ಗರಿ ಕೆಂಚವ್ವ ತಳುಕಿನ ಜನರೆಲ್ಲರ ನಾಲಗೆಗೆ ವಸ್ತುವಾಗಿದ್ದಳು. ಆದರೆ ಅವಳ ನಾಲಗೆ ಉಳಿದವರೆಲ್ಲರನ್ನೂ ಮೂಲೆಗುಂಪು ಮಾಡಿತ್ತು. ಅವಳನ್ನು ಕಂಡರೆ ಹೆದರಿದಿದ್ದವರು ಊರಿನಲ್ಲಿಯೇ ಅಪರೂಪ. ಅವಳೂ ಅಂತಹ ಗಂಡುಬೀರಿ, ಊರಿನ ಗಂಡಸರೂ ಸಹ ಅವಳ ಬಾಯಿಗೆ ಹೆದರುತ್ತಿದ್ದರು. ಅವಳ ಬಾಯಿಂದ ಬರುತ್ತಿದ್ದ ಮಾತುಗಳೆಲ್ಲವೂ ಸೊಂಟದ ಕೆಳಗಿನ ಮಾತುಗಳೇ. ಆದ್ದರಿಂದ ಮರ್ಯಾದಸ್ಥರು ಆಕೆಯ ಹತ್ತಿರಕ್ಕೆ ಹೋಗುತ್ತಿರಲಿಲ್ಲ. ಬಾಲವಿಧವೆಯಾದ ಕೆಂಚವ್ವ ಒಂದು ಸಣ್ಣ ಅಂಗಡಿಯಿಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಳು. ಮನೆಯಲ್ಲಿದ್ದ ಆ ಅಂಗಡಿಯಲ್ಲಿ ಹೆಚ್ಚು ವ್ಯಾಪಾರವೇನೂ ಆಗುತ್ತಿರಲಿಲ್ಲ. ಆದರೆ ಸುಗ್ಗಿಯ ಕಾಲದಲ್ಲಿ ಆಕೆ ಹುರುಳಿ, ಕಡಲೆ, ಆಲಸಂದೆಕಾಳು ಮೊದಲಾದವುಗಳ ಗುಗ್ಗರಿಯನ್ನು ಹೊತ್ತು ಕಣಗಳಿಗೆ ಹೋಗಿ ಮಾರುತ್ತಿದ್ದಳು. ಬೆಳೆದವರು ತಿನಿಸನ್ನು ಪಡೆದು ಧಾರಾಳವಾಗಿಯೇ ಅವಳಿಗೆ ಕಾಳನ್ನು ನೀಡುತ್ತಿದ್ದರು. ಇದೇ ಅವಳ ಮುಖ್ಯ ಕಸುಬಾಗಿತ್ತು. ಆದ್ದರಿಂದಲೇ ಆಕೆಯನ್ನು ಎಲ್ಲರೂ ಗುಗ್ಗರಿ ಕೆಂಚವ್ವ ಎಂದೇ ಕರೆಯುತ್ತಿದ್ದರು. ಮಕ್ಕಳು ಮರಿಗಳಾರೂ ಇಲ್ಲದ ಆ ವಿಧವೆ ಸಿಕ್ಕಷ್ಟರಿಂದಲೇ ತೃಪ್ತಳಾಗಿರುತ್ತಿದ್ದಳು. ನಿತ್ಯತೃಪ್ತಳಾದ ಆಕೆ ಯಾರಲ್ಲಿಯೂ ಏನನ್ನೂ ಬೇಡ ಹೋದವಳಲ್ಲ, ಅವಳ ಗಂಡುಬೀರಿತನಕ್ಕೆ ಇದೂ ಒಂದು ಮುಖ್ಯ ಕಾರಣವಾಗಿತ್ತು. ಅವಳು ಯಾರನ್ನೂ ಲಕ್ಷ್ಯ ಮಾಡುತ್ತಿರಲಿಲ್ಲ. ಊರಿನಲ್ಲಿ ಪುಂಟಾಗ್ರೇಸರನೆಂದು ಹೆಸರುವಾಸಿಯಾಗಿದ್ದ ತೊರೆಯಪ್ಪ ಈ ಕೆಂಚವ್ವನನ್ನು ಮೋಹಿಸಿದ. ಕರ್ಮ ಧರ್ಮಸಂಯೋಗದಿಂದ ಅವರಿಬ್ಬರಿಗೂ ಗೆಳೆತನವಾಯಿತು. ತೊರೆಯಪ್ಪನಿಗೂ ‘ಅಗಾಡಿ-ಪಿಚಾಡಿ’ ಏನೂ ಇರಲಿಲ್ಲ. ಹೆಸರಾಂತ ಆ ಪುಂಡನಿಗೆ ಹೇಳಿಕೊಳ್ಳುವಂತಹ ಕೆಲಸವೇನೂ ಇರಲಿಲ್ಲ. ಅವನ ಎರಡು ಹೊತ್ತಿನ ಊಟ ಹೇಗೆ ಸಾಗುತ್ತಿತ್ತೋ ಯಾರಿಗೂ ಗೊತ್ತಿರಲಿಲ್ಲ. ‘ಕಂತೆಗೆ ತಕ್ಕ ಬೊಂತೆ’ ಎನ್ನುವಂತೆ ಆ ಗಂಡು ಬೀರಿಗೂ ಈ ಪುಂಡನಿಗೂ ಸ್ನೇಹವಾಯಿತು. ಅವಳ ಸ್ನೇಹವಾದ ಮೇಲೆ ತೊರೆಯಪ್ಪನಿಗೆ ಊಟ 166 ಮೂರು ತಲೆಮಾರು ತಿಂಡಿಗಳಿಗಾಗಲಿ, ನೆಲೆಸಲು ನೆಲೆಗಾಗಲಿ ಯೋಚನೆ ಇಲ್ಲದಂತಾಯಿತು. ಕೆಂಚವ್ವ ಹಾಕಿದ ಕೂಳನ್ನು ಗಂಟಲು ಮಟ್ಟ ತಿನ್ನುವುದು, ಅದು ಅರಗುವುದಕ್ಕಾಗಿ ಸಿಕ್ಕ ಸಿಕ್ಕವರೊಡನೆ ಜಗಳವಾಡುವುದು, ಆಗಾಗ ತೋಟ, ತುಡಿಕೆಗಳಲ್ಲಿ ಓಡಾಡಿ ಹಣ್ಣು ಕಾಯಿಗಳನ್ನು ಎತ್ತಿಕೊಂಡು ಬರುವುದು -ಇದೇ ಅವನ ದಿನಚರಿ. ಅವನೇನೂ ಹೆಚ್ಚು ಕಳ್ಳತನವನ್ನು ಮಾಡುತ್ತಿರಲಿಲ್ಲ; ತತ್ಕಾಲಕ್ಕೆ ಬೇಕಾಗುವಷ್ಟನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದ. ಆದ್ದರಿಂದ ಅವನು ಸಿಕ್ಕಿಬಿದ್ದರೂ ಯಾರೂ ಅವನನ್ನು ದಂಡಿಸುತ್ತಿರಲಿಲ್ಲ. ಮನೆಗಳಲ್ಲಿ ಮಕ್ಕಳು ರಚ್ಚೆ ಹಿಡಿದರೆ ‘ನೋಡು, ನೀನು ರಚ್ಚೆ ಹಿಡಿದರೆ ತೊರೆಯಪ್ಪನಿಗೆ ಹಿಡಿದುಕೊಡುತ್ತೇನೆ’ ಎಂದು ಹೇಳಿದರೆ ಸಾಕು, ಸದ್ದುಅಡಗಿ ಹೋಗುತ್ತಿತ್ತು. ಮಕ್ಕಳಿರಲಿ ದೊಡ್ಡವರು ಸಹ ಅವನ ತಂಟೆಗೆ ಹೋಗಲು ಹೆದರುತ್ತಿದ್ದರು; ಅವನಿಂದ ಆದಷ್ಟು ದೂರವಿರುತ್ತಿದ್ದರು. ಏನು ಕಾರಣವೋ ಏನೊ, ಒಂದು ದಿನ ಕೆಂಚವ್ವನಿಗೂ ತೊರೆಯಪ್ಪನಿಗೂ ಜಗಳ ಹುಟ್ಟಿತು. ಒಂದು ಬಿರುಗಾಳಿ ಮತ್ತೊಂದು ಸುಂಟರಗಾಳಿ. ಅವುಗಳನ್ನು ತಡೆಯಲು ಯಾರಿಂದ ಸಾಧ್ಯ? ಕಟ್ಟೆಯೊಡೆದ ಪ್ರವಾಹದಂತೆ ಇಬ್ಬರ ಬೈಗುಳದ ಪ್ರವಾಹವೂ ನಿರರ್ಗಳವಾಗಿ ಹರಿಯುತ್ತಿದೆ. ಅಚ್ಚ ಸಂಸ್ಕೃತದ ಬೈಗಳು ಕೇಳುವವರ ಕಿವಿಗಳನ್ನು ಪಾವನಗೊಳಿಸುತ್ತಿವೆ. ಅವರ ಘೋರ ಕದನದಲ್ಲಿ ಕೆಂಚವ್ವನ ಸೀರೆ ಅರ್ಧ ಹರಿದು ಹೋಗಿದ್ದರೆ, ತೊರೆಯಪ್ಪನ ಬಟ್ಟೆಗಳೆಲ್ಲ ಚಿಂದಾಪಿಂದಿಯಾಗಿವೆ. ಅವರನ್ನು ಸಮಾಧಾನ ಮಾಡುವರು ಯಾರು? ಅವರ ಜಗಳದ ಮಧ್ಯೆ ಪ್ರವೇಶ ಮಾಡಲು ಊರಿನಲ್ಲಿ ಯಾರಿಗೂ ಧೈರ್ಯವಿಲ್ಲ. ಹಣಾಹಣಿ, ಕೇಶಾಕೇಶಿಗಳಾಗಿ ರಸ್ತೆಯುದ್ದಕ್ಕೂ ಜಗಳವಾಡುತ್ತಾ ಇವರ ಮೆರವಣಿಗೆ ಸುಬ್ಬಣ್ಣನವರ ಮನೆ ಮುಂದಕ್ಕೆ ಬಂತು. ರಸ್ತೆಯ ಪಕ್ಕದ ಮನೆಯಲ್ಲಿದ್ದವರೆಲ್ಲ ತಮಗೇನು ವಿಪತ್ತೊ ಎಂದು ಬಾಗಿಲುಗಳನ್ನು ಹಾಕಿಕೊಂಡು ಬಿಟ್ಟರು. ರಸ್ತೆಯಲ್ಲಿ ಒಂದು ನರಹುಳುವಿನ ಸುಳಿವಿಲ್ಲ. ಗದ್ದಲವೇನೆಂದು ನೋಡಲು ಮನೆಯ ಬಾಗಿಲಿಗೆ ಬಂದ ಸುಬ್ಬಣ್ಣನವರು ಮಹಾಮಾರಿಯಂತೆ ಕೆರಳಿ ಬರುತ್ತಿದ್ದ ಕೆಂಚವ್ವನ ಕಣ್ಣಿಗೆ ಬಿದ್ದರು. ಕೂಡಲೇ ಅವಳು ಅಂಗಳಕ್ಕೆ ನುಗ್ಗಿ ಬಂದಳು. ತನ್ನ ಪ್ರಣಯದಾಣ್ಮನನ್ನು ವಾಚಾಮಗೋಚರವಾಗಿ ಸಹಸ್ರನಾಮಸ್ತೋತ್ರ ಮಾಡುತ್ತಾ ನಿಂತ ಕೆಂಚವ್ವನನ್ನು ಕಂಡು ಸುಬ್ಬಣ್ಣನವರು ಕೊಠಡಿಯೊಳಗೆ ಬರುವಂತೆ ಸನ್ನೆ ಮಾಡಿ ತಮ್ಮ ದಿವಾನಖಾನೆಯನ್ನು ಪ್ರವೇಶಿಸಿದರು. ಅವಳು ತನ್ನ ಅಹವಾಲನ್ನು ಸುಬ್ಬಣ್ಣನವರ ಗುಗ್ಗರಿ ಕೆಂಚವ್ವ-ತೊರೆಯಪ್ಪ 167 ಬಳಿ ಇಡುವಷ್ಟರಲ್ಲಿಯೆ ತೊರೆಯಪ್ಪ ಅವರ ಹಿಂದೆಯೇ ನುಗ್ಗಿ ಬಂದು ಅವಳ ಸಹಸ್ರನಾಮಾರ್ಚನೆ ಮಾಡುತ್ತಾ ತನ್ನ ಪರವಾದ ವಾದವನ್ನು ಪ್ರಾರಂಭಿಸಿದ. ಸುಬ್ಬಣ್ಣನವರು ಇಬ್ಬರನ್ನು ಚಾಪೆಯ ಮೇಲೆ ಕೂಡುವಂತೆ ಆಜ್ಞಾಪಿಸಿದರು. ಇಬ್ಬರ ವಾಕ್ ಪ್ರವಾಹವೂ ಒಂದೇ ಸಮನೆ ಹರಿಯುತ್ತಲೇ ಇತ್ತು. ಕೂಗಿ ಕೂಗಿ ಇಬ್ಬರ ಗಂಟಲೂ ಕಟ್ಟಿ ಹೋಗಿದ್ದುವು. ಭಯಂಕರ ಹೋರಾಟದ ಫಲವಾಗಿ ಇಬ್ಬರೂ ಸುಸ್ತಾಗಿದ್ದರು. ಆದ್ದರಿಂದ ಸುಬ್ಬಣ್ಣನವರ ಸೂಚನೆಯಂತೆ ಅವರಿಬ್ಬರೂ ಸ್ವಲ್ಪ ಸುಮ್ಮನಾದರು. ಹೇಗಾದರೂ ಮಾಡಿ ಈ ಭಯಂಕರ ಕಾಳಿಂಗಸರ್ಪಗಳನ್ನು ಬುಟ್ಟಿಯಲ್ಲಿ ಮುಚ್ಚಿಡಬೇಕೆಂದು ಯೋಚಿಸಿದರು, ಸುಬ್ಬಣ್ಣನವರು. ಇಲ್ಲವಾದರೆ ಇಬ್ಬರಲ್ಲೊಬ್ಬರು ಖೂನಿಯಾಗುವುದು ಖಂಡಿತ; ದುರಂತ ಕಟ್ಟಿಟ್ಟಿದ್ದು, ಈ ಗಾಳಿ ಬೆಂಕಿಗಳನ್ನು ತಣ್ಣಗೆ ಮಾಡುವುದು ಹೇಗೆ? ಸುಬ್ಬಣ್ಣನವರು ಆಳವಾದ ಯೋಚನೆಯಲ್ಲಿ ಮಗ್ನರಾದವರಂತೆ ನಟಿಸಿದರು. ಆಮೇಲೆ ಇದ್ದಕ್ಕಿದ್ದಂತೆಯೇ ಮುಗುಳ್ನಗುತ್ತಾ, “ಗೊಗ್ಗಗಳು ಹದಿನಾರು ಸಾವಿರ ನುಗ್ಗಿಬರುತಿರಲು ಅದರ ಮಧ್ಯದಿ ಮಗ್ಗುಲನು ಮುರಿಯುವೆನು ತುಂಟರನೆನುತ ಖಾತಿಯಲಿ ಭಗ್ಗ ಭಗ್ಗನೆ ಕಾಲನಿಕ್ಕುತ ಜಗ್ಗ ಜಗ್ಗನೆ ನೆರಿಯ ಚಿಮ್ಮುತ ಗುಗ್ಗರಿಯ ಕೆಂಚಿಯನು ಹುಡುಕುತಾ ತೊರೆಯ ನಡೆತಂದ” ಎಂದರು. ಅವರ ಈ ಹಾಡನ್ನು ಕೇಳಿ ಕೆಂಚವ್ವ, ತೊರೆಯಪ್ಪ ಇಬ್ಬರೂ ಫಕ್ಕನೆ ನಕ್ಕು ಬಿಟ್ಟರು. ಅಲ್ಲಿಂದ ಮುಂದೆ ಅವರನ್ನು ಸಮಾಧಾನಗೊಳಿಸುವುದು ಸುಬ್ಬಣ್ಣನವರಿಗೆ ಕಷ್ಟವಾಗಲಿಲ್ಲ. ಹುಲಿ ಹಂದಿಗಳಂತೆ ಹೋರಾಡುತ್ತ ಬಂದವರು ಗಿಳಿ-ಗೊರವಂಕಗಳಂತೆ ನಗುತ್ತಾ ಜೊತೆಗೂಡಿ ಹೊರಟು ಹೋದರು. ಈ ಪವಾಡವನ್ನು ಕೇಳಿದ ಊರಜನ ಸುಬ್ಬಣ್ಣನವರ ಜಾಣ್ಮೆಗೆ ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಕೆಂಚವ್ವ ತೊರೆಯಪ್ಪನ ಹೋರಾಟ ಸಮಾಧಾನಗಳ ಕಥೆ ಕರ್ಣಾಕರ್ಣಿಕೆಯಾಗಿ ಊರಲ್ಲೆಲ್ಲ ಪಸರಿಸಿತು. ಯಾರ ಬಾಯಲ್ಲಿಯೂ ಅದೇ ಮಾತು, ಅಂದಿನಿಂದ ಊರಿನಲ್ಲಿ ಯಾವ ರಗಳೆ ಬರಲಿ, ಗಂಡ ಹೆಂಡಿರ 168 ಮೂರು ತಲೆಮಾರು ಜಗಳದಿಂದ ಖೂನಿ ಕೇಸಿನವರೆಗೆ-ಎಲ್ಲ ವಿವಾದಗಳೂ ಸುಬ್ಬಣ್ಣನವರಲ್ಲಿಯೇ ತೀರ್ಮಾನವಾಗಬೇಕು. ಅವರ ತೀರ್ಮಾನ ಎರಡು ಕಡೆಯವರಿಗೂ ತೃಪ್ತಿಕರವಾಗಿರುತ್ತಿತ್ತು. ಅವರು ಬದುಕಿರುವವರೆಗೆ ತಳುಕಿನ ಯಾವ ವಿವಾದವೂ ಕೋರ್ಟಿಗೆ ಹೋಗುವ ಪ್ರಸಂಗವೇ ಇರುತ್ತಿರಲಿಲ್ಲ. ಸುಬ್ಬಣ್ಣನವರ ನ್ಯಾಯತೀರ್ಮಾನ ತಳುಕಿಗೆ ಮಾತ್ರವಲ್ಲ. ಸುತ್ತಮುತ್ತಿನ ಹಳ್ಳಿಗಳಿಗೂ ವ್ಯಾಪಿಸಿತು. ಅವರು ಜನರಲ್ಲಿ ಅಚ್ಚುಮೆಚ್ಚಿನವರಾದರು, ಸತ್ಯವಂತರೆನಿಸಿದರು, ದೈವಸ್ವರೂಪಿಯೆನಿಸಿದರು. ಎಂತಹ ಕಠಿಣವಾದ ಸಮಸ್ಯೆಯೇ ಇರಲಿ, ಸುಬ್ಬಣ್ಣನವರ ಬಳಿಯಲ್ಲಿ ಅದು ಸರಳವಾಗಿ, ಸುಲಭವಾಗಿ ನಿವಾರಣೆಯಾಗುತ್ತಿತ್ತು. ಎಂತಹ ತುಂಟರೇ ಆಗಲಿ ಸುಬ್ಬಣ್ಣನವರ ಎದುರಿಗೆ ಬಂದಾಗ, ಅವರ ಮೃದು ನುಡಿಗಳನ್ನು ಕೇಳಿದಾಗ, ಧಾರ್ಮಿಕ ನುಡಿಗಳನ್ನು ಆಲಿಸಿದಾಗ ಸಾಧುವಾದ ಹಸುವಿನಂತಾಗುತ್ತಿದ್ದರು. ಅವರ ದೈವಭಕ್ತಿಯ ಫಲವೋ ಹಿರಿಯರ ಆಶೀರ್ವಾದದ ಫಲವೋ, ಅವರ ಬಾಯಲ್ಲಿ ಬಂದುದೆಲ್ಲ ಕವಿತೆಯಾಗುತ್ತಿತ್ತು ಅಥವಾ ಧರ್ಮಜಿಜ್ಞಾಸೆಯಗುತ್ತಿತ್ತು. * * * * 169 13. ಸಣ್ಣ ಸುಬ್ಬಣ್ಣನ ಮದುವೆ ಸ್ವಂತ ತಮ್ಮ ಶ್ರೀನಿವಾಸ, ಚಿಕ್ಕಪ್ಪನ ಮಗ ಸಣ್ಣ ಸುಬ್ಬಣ್ಣ ಇವರಿಬ್ಬರಿಗೂ ಯೌವನ ಪ್ರಾಪ್ತಿಯಾಗುತ್ತಾ ಬಂದುದರಿಂದ ಸುಬ್ಬಣ್ಣನವರು ಅವರ ವಿವಾಹ ವಿಷಯವಾಗಿ ಚಿಂತೆಗೊಳಗಾದರು. ಶ್ರೀನಿವಾಸನಿಗೆ ಹೆಣ್ಣು ಗೊತ್ತಾಯಿತು. ಅದಕ್ಕೆ ಕಷ್ಟವೇನೂ ಆಗಲಿಲ್ಲ. ಆತ ವಿದ್ಯಾವಂತ, ಬುದ್ಧಿವಂತನಾಗಿ ಸರ್ಕಾರಿ ನೌಕರಿಯಲ್ಲಿದ್ದುದರಿಂದ ನಾನು ತಾನೆಂದು ಹೆಣ್ಣು ಕೊಡುವವರು ಮುಂದೆ ಬಂದಿದ್ದರು. ಆದರೆ ಸಣ್ಣ ಸುಬ್ಬಣ್ಣನಿಗೆ ಹೆಣ್ಣು ಕೊಡಲು ಯಾರು ಒಪ್ಪುತ್ತಿರಲಿಲ್ಲ. ಆತ ವಿದ್ಯಾವಂತನಲ್ಲ, ಯಾವ ಉದ್ಯೋಗವೂ ಇರಲಿಲ್ಲ. ಆದರೆ ಆತನ ತಾಯಿ ಮಗನ ಮದುವೆಯನ್ನು ಕಾಣಬೇಕೆಂದು ತುಂಬ ಆತುರಳಾಗಿದ್ದಳು. ಅಷ್ಟೇ ಅಲ್ಲ, ತನ್ನ ತೌರುಮನೆಯ ಹೆಣ್ಣನ್ನೇ ತರಬೇಕೆಂದು ಆಕೆ ಹಠ ಹಿಡಿದಳು. ಸುಬ್ಬಣ್ಣ ಆಕೆಯ ಮನಸ್ಸನ್ನು ನೋಯಿಸಲಾಗದೆ ‘ಆಗಲಮ್ಮ’ ಎಂದು ಹೇಳಿ, ಹೆಣ್ಣನ್ನು ಗೊತ್ತು ಮಾಡುವುದಕ್ಕಾಗಿ ಚಿಕ್ಕಮ್ಮನನ್ನೂ ಕರೆದುಕೊಂಡು ಆಕೆಯ ತೌರೂರಿಗೆ ಹೋದರು. ಆ ತೌರೂರಿನವರು ಬಹು ನಿಷ್ಠುರ ಸ್ವಭಾವದವರು, ನಿರ್ದಾಕ್ಷಿಣ್ಯಪರರು, ನಿರ್ದಯಿಗಳೆಂದು ಹೇಳಿದರೂ ತಪ್ಪೇನಿಲ್ಲ. ಹೆಣ್ಣು ಕೇಳಲು ಬಂದ ಸುಬ್ಬಣ್ಣನವರನ್ನು ಹೆಣ್ಣಿನ ತಂದೆ ಸ್ವಲ್ಪ ಕಟುವಾಗಿಯೇ ‘ಏನು ನೋಡಿ ನಿನ್ನ ತಮ್ಮನಿಗೆ ಹೆಣ್ಣು ಕೊಡಬೇಕಯ್ಯ? ವಾಸಕ್ಕೆ ಮನೆಯಿಲ್ಲ. ಭತ್ತಕ್ಕೆ ಭೂಮಿಯಿಲ್ಲ, ನಾಳೆ ಬೆಳಿಗ್ಗೆ ಹುಡುಗಿ ಗತಿಯೇನು? ನಿನ್ನ ಮೀಸೆ, ರೇಷ್ಮೆ ವಸ್ತ್ರಗಳಿಗೆ ನಾವು ಬೆರಗಾಗುವವರಲ್ಲ. ನಾವು ಹುಡುಗಿಯನ್ನು ಕೊಡುವುದಿಲ್ಲ. ನೀನು ಬಂದ ದಾರಿ ಹಿಡಿದು ಹಿಂದಕ್ಕೆ ಹೋಗು’ ಎಂದುಬಿಟ್ಟರು. ಸರಳ ಸ್ವಭಾವದ ಸುಬ್ಬಣ್ಣನವರಿಗೆ ದಿಕ್ಕು ತೋಚದಂತಾಯಿತು. ಆತ್ಮಗೌರವದಿಂದ ತುಂಬಿ ತುಳುಕುತ್ತಿದ್ದ ಆತನಿಗೆ ಸ್ವಲ್ಪ ಕೋಪವು ಉಕ್ಕಿಬಂತು. ಆದರೆ ಚಿಕ್ಕಮ್ಮನ ಮನ ನೋಯಿಸಲಾರದೆ ಆತ ಮೌನವನ್ನು ಮರೆಹೊಕ್ಕರು. ಚಿಕ್ಕಮ್ಮನನ್ನು ಏಕಾಂತದಲ್ಲಿ ಕರೆದು ‘ಏನು ಮಾಡಲಮ್ಮ’ ಎಂದು ಕೇಳಿದರು. ಕೋಡಿ ಹರಿಯುವ ಕಂಬನಿಯೊಂದೇ ಆಕೆಯ ಉತ್ತರವಾಯಿತು. ಸುಬ್ಬಣ್ಣನವರು ನಿಷ್ಕಾರಣವಾಗಿ ತಮಗಾದ ಅಪಮಾನವನ್ನು ಗಣನೆಗೆ ತಂದುಕೊಳ್ಳದೆ ಪುನಃ 170 ಮೂರು ತಲೆಮಾರು ಅವರನ್ನು ಕೇಳಿಕೊಂಡರು. ‘ಸ್ವಾಮೀ, ನನ್ನ ಚಿಕ್ಕಮ್ಮ ಕಣ್ಣೀರಿಡದೆ ತನ್ನ ತೌರುಮನೆಯಿಂದ ಹಿಂದಿರುಗುವಂತೆ ಮಾಡಿ. ನಮ್ಮ ಹುಡುಗನಿಗೆ ಹೇಗಾದರೆ ನೀವು ಹೆಣ್ಣು ಕೊಡುವಿರೋ ಹಾಗೆ ನಾನು ಮಾಡುತ್ತೇನೆ’ ಎಂದು ಅಂಗಲಾಚಿದ. ಆಗ ತೌರಿನವರು ನಿರ್ದಾಕ್ಷಿಣ್ಯವಾಗಿ ಹೇಳಿದರು - ‘ಹಾಗಾದರೆ ನಿನ್ನ ಆಸ್ತಿಯಲ್ಲಿ ನಿನ್ನ ತಮ್ಮನಿಗೆ ಸಮಪಾಲು ಕೊಡು. ಹೊಟ್ಟೆಬಟ್ಟೆಗೆ ದಿಕ್ಕಾದಂತಾಗುತ್ತದೆ. ಆಗ ನಾವು ಹೆಣ್ಣು ಕೊಡುತ್ತೇವೆ. ಇಲ್ಲವಾದಲ್ಲಿ ಇಲ್ಲ’. ಅದನ್ನು ಕೇಳಿ ಸುಬ್ಬಣ್ಣ ‘ಇಷ್ಟು ಸಣ್ಣ ವಿಷಯಕ್ಕೆ ಇಷ್ಟು ರಂಪವೇ? ನನ್ನ ತಮ್ಮನಿಗೆ ನಾನು ಆಸ್ತಿಕೊಡಲಾರನೆ? ಅಗತ್ಯವಾಗಿಯೂ ಕೊಡುತ್ತೇನೆ; ಹಾಗೆ ಕೊಟ್ಟುದುದರ ಕಾಗದ ಪತ್ರಗಳನ್ನು ನಿಮಗೆ ತೋರಿಸಿದರೆ ಹೆಣ್ಣನ್ನು ಕೊಡುವಿರಷ್ಟೆ?’ ಎಂದು ಕೇಳಿದ. ಅನಂತರ ನಗುಮುಖದ ಚಿಕ್ಕಮ್ಮನೊಂದಿಗೆ ಊರಿಗೆ ಹಿಂದಿರುಗಿದ. ಊರನ್ನು ಸೇರುತ್ತಲೇ ಸುಬ್ಬಣ್ಣ ಗ್ರಾಮದ ದೊಡ್ಡ ಮನುಷ್ಯರನ್ನು ಬರಮಾಡಿಕೊಂಡು, ಅವರೆದುರಿನಲ್ಲಿ ತಾನು ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ಎರಡು ಭಾಗ ಮಾಡಿ, ಅದರಲ್ಲಿ ಒಂದು ಭಾಗವನ್ನು ಆರಿಸಿಕೊಳ್ಳುವಂತೆ ತಮ್ಮನಿಗೆ ಹೇಳಿದ. ಸಣ್ಣ ಸುಬ್ಬಣ್ಣ ತೇವವಾದ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ‘ಅಣ್ಣಯ್ಯ, ಇದಕ್ಕೆ ನಾನು ಹಕ್ಕುದಾರನಲ್ಲ, ಇದು ಪಿತ್ರಾರ್ಜಿತವಾದ ಆಸ್ತಿಯಲ್ಲ, ನೀನು ಸ್ವತಃ ಸಂಪಾದಿಸಿರುವುದು. ಇದರ ಮೇಲೆ ನನ್ನಿಂದ ನಿನಗೆ ಯಾವ ಪ್ರಯೋಜನವೂ ಆಗಿಲ್ಲ. ಆದರೂ ಒಡಹುಟ್ಟಿದ ತಮ್ಮನಿಗಿಂತ ಹೆಚ್ಚಾಗಿ ನನ್ನನ್ನು ನಡೆಸಿಕೊಂಡು ಬಂದಿದ್ದಿ. ನನಗೆ ಈ ಪಾಲು ಬೇಡ, ಮದುವೆಯೂ ಬೇಡ’ ಎಂದ. ಆಗ ಸುಬ್ಬಣ್ಣ ಅವನ ಬೆನ್ನು ತಟ್ಟಿ ನಗುತ್ತ, ಹಾಗೆನ್ನಬೇಡ ಸುಬ್ಬು, ಚಿಕ್ಕಪ್ಪ ನನಗೆ ತಂದೆಯ ಸಮಾನವಾಗಿದ್ದರು. ಅವರ ಪ್ರೇಮಕ್ಕೆ ಬೆಲೆಕಟ್ಟುವವರಾರು? ಅವರ ಮಗನಾದ ನೀನು ಶ್ರೀನಿವಾಸನಂತೆಯೇ ನನಗೂ ತಮ್ಮ. ಅವನೇನೋ ಓದಿನಲ್ಲಿ ಮುಂದುವರಿದ, ನಿನಗದು ಸಾಧ್ಯವಾಗಲಿಲ್ಲ. ನಿನ್ನ ಜೀವನದ ಜವಾಬ್ದಾರಿ ನನ್ನದಲ್ಲವೇನಪ್ಪ? ಎಂದಾದರೂ ಮಾಡುವುದನ್ನು ಇಂದೇ ಮಾಡುತ್ತಿದ್ದೇನೆ. ಇದರಿಂದ ಚಿಕ್ಕಮ್ಮನ ಆಸೆ ನೆರವೇರುವುದಾದರೆ ಅದಕ್ಕಿಂತಲೂ ಹೆಚ್ಚಿಗೆ ನನಗೇನು ಬೇಕು?’ ಎಂದು ತಮ್ಮನನ್ನು ಸಮಾಧಾನ ಪಡಿಸಿದರು. ಅರ್ಧ ಮನೆ, ಅರ್ಧ ಜಮೀನು, ಪಾತ್ರೆ -ಪಡಗಗಳು, ದನ-ಕರು ಎಲ್ಲದರಲ್ಲಿಯೂ ಸಮಭಾಗವಾಯಿತು. ಇದರಂತೆ ಒಂದು ಪಾರಿಖತ್ತನ್ನು ಬರೆದು ಪಂಚಾಯಿತರ ಸಹಿ ಹಾಕಿಸಲಾಯಿತು, ಇದನ್ನು ಕಂಡ ಹೆಣ್ಣಿನ ಮನೆಯವರು ಮದುವೆಗೆ ಒಪ್ಪಿಕೊಂಡರು. ಕೆಲ ದಿನಗಳಲ್ಲಿಯೇ ಸಣ್ಣ ಸುಬ್ಬಣ್ಣ ಮತ್ತು ಆತನ ತಾಯಿ ಇಬ್ಬರೂ ಮದುವೆಗೆ ಸಣ್ಣ ಸುಬ್ಬಣ್ಣನ ಮದುವೆ 171 ಇನ್ನೂ ಸ್ವಲ್ಪ ದಿನಗಳಿರುವಾಗಲೇ ರಾಯದುರ್ಗಕ್ಕೆ ಹೊರಟು-ಹೋದರು. ಹೆಣ್ಣಿನ ಮನೆಯಾದ ರಾಯದುರ್ಗದಲ್ಲಿ ಮದುವೆ ನಡೆಯುವುದೆಂದು ದಿನ ಗೊತ್ತಾಯಿತು. ಮದುವೆ ಹಿಂದಿನ ದಿನ ಸುಬ್ಬಣ್ಣನವರು ತಮ್ಮ ತಾಯಿ ಮತ್ತು ಮಡದಿಯೊಂದಿಗೆ ರಾಯದುರ್ಗಕ್ಕೆ ಬಂದರು. ಬೀಗರ ಮನೆಯ ಪಕ್ಕದ ಗಣೇಶನಗುಡಿಯಲ್ಲಿ ಇವರಿಗೆ ಬಿಡಾರವಾಯಿತು. ಆದರೆ ಇವರನ್ನು ಮದುವೆ ಮನೆಗೆ ಯಾರೂ ಕರೆಯಲೇ ಇಲ್ಲ. ಮದುವೆಯೇನೋ ವಿಧಿವತ್ತಾಗಿ ಸಡಗರದಿಂದಲೇ ನಡೆಯಿತು. ಮದುವೆಯ ವಾಲಗ, ಹಾಡು, ಹಸೆ, ಗಡಿಬಿಡಿ ಎಲ್ಲವೂ ಕೇಳುತ್ತಿತ್ತು. ಇವರು ಅಷ್ಟರಿಂದಲೇ ತೃಪ್ತಿಹೊಂದಿ ಗುಡಿಯಲ್ಲಿ ಕುಳಿತಿರಬೇಕಾಗಿತ್ತು. ಆ ಗುಡಿಯಲ್ಲಿ ನಿತ್ಯಯಾತ್ರೆಯಿಂದ ಜೀವಿಸುತ್ತಿದ್ದ ಒಬ್ಬ ಪೂರ್ವ ಸುವಾಸಿನಿಯಿದ್ದಳು. ಆಕೆಯ ಆತಿಥ್ಯದಿಂದ ತೃಪ್ತರಾದ ಸುಬ್ಬಣ್ಣನವರು ತಾಯಿ, ಮಡದಿಯೊಡನೆ ಊರಿಗೆ ಹಿಂದಿರುಗುತ್ತಾ ದಾರಿಯಲ್ಲಿ ಗುಮ್ಮಗಟ್ಟೆ ಗ್ರಾಮಕ್ಕೆ ಬಂದರು. ಅಲ್ಲಿನ ಕೃಷ್ಣಪ್ಪನವರ ಮಗಳನ್ನು ತಮ್ಮ ಶ್ರೀನಿವಾಸನಿಗೆ ಕೊಡಬೇಕೆಂದು ನಿಶ್ಚಯವಾಗಿತ್ತು. ಸುಬ್ಬಣ್ಣನವರು ಅವರ ಮನೆಯಲ್ಲಿ ಒಂದುದಿನ ನಿಂತರು. ರಾಯದುರ್ಗದ ಮದುವೆಯ ವಿಷಯವನ್ನು ಕೇಳಿ ಕೃಷ್ಣಪ್ಪನವರು ತುಂಬ ನೊಂದುಕೊಂಡು ‘ಆ ಜನ ಶುದ್ಧ ಕಠಿಣಹೃದಯದವರು, ನೀವು ಹೋಗಬಾರದಿತ್ತು’ ಎಂದರು. ಇದಾದ ಹಲವು ದಿನಗಳಲ್ಲಿಯೇ ಶ್ರೀನಿವಾಸನ ಮದುವೆಯೂ ನಡೆಯಿತು. ಆ ಮದುವೆ ಸುಖ-ಸಂತೋಷಗಳಿಂದ ತುಂಬಿತ್ತು. ಸುಬ್ಬಣ್ಣನವರು ರಚಿಸಿದ್ದ ಬೀಗರ ಹಾಡುಗಳು, ಲಕ್ಷ್ಮೀದೇವಮ್ಮನ ಕಂಠಮಾಧುರ್ಯದಿಂದ ಹೊರಹೊಮ್ಮಿ ಮದುವೆ ಮನೆಯು ಆನಂದಸಾಗರದಲ್ಲಿ ತೇಲಾಡಿತು. ಕೃಷ್ಣಪ್ಪನವರು ಶಾನುಭೋಗರು, ಶ್ರೀಮಂತರು, ಸಜ್ಜನರು, ಮದುವೆ ಎಂಟು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. * * * * 172 ಮೂರು ತಲೆಮಾರು 14. ಅಡ್ಡಿಕೆಯ ಕಳವು ಸುಬ್ಬಣ್ಣನವರ ಜೀವನ ವೈರಾಗ್ಯಮಯವಾದುದು. ಪ್ರಪಂಚದ ನಾನಾ ವಿಧವಾದ ಸುಖದುಃಖಗಳ ನಡುವೆ ಅವರು ಅಂಟಿಯೂ ಅಂಟದಂತೆ ಆನಂದವಾಗಿ ಕಾಲಕಳೆಯುತ್ತಿದ್ದರು. ಅವರಿಗೆ ಶತ್ರುಗಳೇ ಇರಲಿಲ್ಲವೆಂದು ಹೇಳಬಹುದು. ಕಾಲಕರ್ಮಸಂಯೋಗದಿಂದ ಯಾರಾದರೂ ಶತ್ರುಗಳಾದರೂ ಸಹ ಬಳಿಕ ತಾವಾಗಿಯೇ ಮಿತ್ರರಾಗಬಯಸುತ್ತಿದ್ದರು. ಅವರ ಜೀವನದಲ್ಲಿ ಇಂತಹ ಹಲವಾರು ನಿದರ್ಶನಗಳು ಕಂಡು ಬರುತ್ತವೆ. ಅವುಗಳಲ್ಲಿ ಮೊದಲನೆ ಯದೇ ಅವರ ತಮ್ಮ ಸಣ್ಣ ಸುಬ್ಬಣ್ಣನದು. ದೊಡ್ಡ ಸುಬ್ಬನ್ಣನವರು ಅವರ ಹೆಸರಿಗೆ ತಕ್ಕಂತೆ ಬಹು ದೊಡ್ಡ ಗುಣವನ್ನು ಮೆರೆದು ತಮ್ಮ ಆಸ್ತಿಯಲ್ಲಿ ಅರ್ಧವನ್ನು ಈ ತಮ್ಮನಿಗೆ ಹಂಚಿಕೊಟ್ಟು, ಮನೆಯಲ್ಲಿಯೂ ಅರ್ಧಭಾಗವನ್ನು ಬಿಟ್ಟುಕೊಟ್ಟಿದ್ದರಷ್ಟೆ. ಇದಕ್ಕಾಗಿ ತಮ್ಮನೇನೋ ಕೃತಜ್ಞನಾಗಿದ್ದ. ಆತ ಎಂದೂ ಅಣ್ಣನ ಇದಿರಿನಲ್ಲಿ ನಿಂತು ಮಾತನಾಡಿದವನಲ್ಲ. ಆದರೆ ಆತನ ಹೆಂಡತಿ, ಆಕೆಗಿಂತಲೂ ಹೆಚ್ಚಾಗಿ ಆಕೆಯ ತಾಯಿ ಬರುಬರುತ್ತಾ ಸುಬ್ಬಣ್ಣನವರ ಎದುರಿನಲ್ಲಿ ದಾಯಾದಿ ವಿಷವನ್ನು ಕಾರಲು ಪ್ರಾರಂಭವಾಯಿತು. ನಿಷ್ಕಾರಣವಾಗಿ ಅವರನ್ನು ಬಾಯಿಗೆ ಬಂದ ಹಾಗೆ ಬೈಯಲು ಪ್ರಾರಂಭವಾಯಿತು. ಇದೇ ಕಾಲದಲ್ಲಿ ಅವರ ಮನೆಯಲ್ಲಿದ್ದ ಒಂದು ಬಂಗಾರದ ಅಡ್ಡಿಕೆ ಮಂಗಮಾಯವಾಯಿತು. ಲಕ್ಷ್ಮಿದೇವಮ್ಮ ಅದನ್ನು ಕಳುವು ಮಾಡಿರುವಳೆಂದು ರಂಪರಾದ್ದಾಂಥ ಮಾಡಿದರು. ಸುಮಾರು ಒಂದು ವರ್ಷಕಾಲ ಸುಬ್ಬಣ್ಣನವರ ಮನೆಯವರು ಇದಕ್ಕಾಗಿ ಪಟ್ಟ ಕಷ್ಟ, ಅನುಭವಿಸಿದ ವೇದನೆ ವರ್ಣನಾತೀತವಾದುದು. ಒಂದು ಉತ್ಥಾನದ್ವಾದಶಿಯ ದಿನ. ಅಂದು ಎಲ್ಲರ ಮನೆಯಲ್ಲಿಯೂ ತುಳಸಿಯ ಪೂಜೆ, ಮಂಗಳಾರತಿಗಳು ವಿಜೃಂಭಣೆಯಿಂದ ನಡೆಯುವ ಪದ್ಧತಿ. ಸುಬ್ಬಣ್ಣನವರ ಮನೆಯಲ್ಲಿಯೂ ಅದೇ ರೀತಿ ಮಂಗಳಾರತಿ ನಡೆಯಿತು. ಊರವರೆಲ್ಲರೂ ಬಂದು ಗಂಧ, ಪುಷ್ಪ, ಪ್ರಸಾದಗಳನ್ನು ಪಡೆದರು. ಆದರೆ ತಮ್ಮನಾದ ಸಣ್ಣ ಸುಬ್ಬಣ್ಣ ಬರಲಿಲ್ಲ. ಸುಬ್ಬಣ್ಣನವರಿಗೆ ಇದರಿಂದ ಹಿಡಿಸಲಾರದ ಅಡ್ಡಿಕೆಯ ಕಳವು 173 ದುಃಖವಾಯಿತು. ಯಾವ ತಪ್ಪಿಗಾಗಿ ತನಗೀ ಶಿಕ್ಷೆ ಎನಿಸಿತು. ಪಕ್ಕದಲ್ಲಿಯೇ ಸಣ್ಣ ಸುಬ್ಬಣ್ಣನ ಮನೆಯಲ್ಲಿ ಉತ್ಸವ ನಡೆಯುತ್ತಿದೆ. ಜೋಯಿಸ ನಂಜುಂಡಭಟ್ಟರು ರಾಗರಾಗವಾಗಿ ಹೇಳುತ್ತಿರುವ ಮಂತ್ರ ಕೇಳಿಸುತ್ತಿದೆ. ಉತ್ಸವಕ್ಕೆ ತಮ್ಮನ್ನು ಕರೆಯಲಿಲ್ಲ ನಿಜ, ಆದರೆ ದೊಡ್ಡವನಾದ ತಾನು ಕರೆಯದ ಮಾತ್ರಕ್ಕೆ ಹೋಗಬಾರದೆ? ಪೂಜೆಯ ಉತ್ಸವಕ್ಕೆ ಹೋದರೆ ಅವಮಾನವಾಗುತ್ತದೆಯೇನು? ಆದರೆ ಆಗಲಿ’ - ಹೀಗೆಂದುಕೊಂಡು ಹೆಂಡತಿ ಬೇಡವೆಂದರೂ ಕೇಳದೆ ಸುಬ್ಬಣ್ಣ ಉಟ್ಟಮಡಿಯಿಂದ ತಮ್ಮನ ಮನೆಗೆ ಹೋದರು. ನೆರೆದಿದ್ದವರೆಲ್ಲರಿಗೂ ಆಶ್ಚರ್ಯವಾಯಿತು. ಕಂಟ್ರಾಕ್ಟದಾರ್ ಕೃಷ್ಣರಾಯರು ‘ಬನ್ನಿ ಸುಬ್ಬಣ್ಣನವರೇ’ ಎಂದು ಸುಬ್ಬಣ್ಣನವರನ್ನು ಬಾಚಿ ತಬ್ಬಿಕೊಂಡು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಇದನ್ನು ಕಂಡು ಸಣ್ಣ ಸುಬ್ಬಣ್ಣನಿಗೆ ತಡೆಯಲಾರದಷ್ಟು ಪಶ್ಚಾತ್ತಾಪವಾಯಿತು. ಉಕ್ಕಿ ಬರುವ ದುಃಖವನ್ನು ತಡೆಯಲಾರದೆ, ಪೂಜೆ ಮಾಡುತ್ತಿದ್ದುದನ್ನು ಅಲ್ಲಿಗೆ ಬಿಟ್ಟು ಬಂದು, ಅಣ್ಣನ ಪಾದಗಳನ್ನು ಕಣ್ಣೀರಿನಿಂದ ತೋಯಿಸಿದ. ಅನಂತರ ನಿಧಾನವಾಗಿ ತಡವರಿಸಿಕೊಂಡು, ಮುಗಿದ ಕೈಗಳಿಂದ ಜನರೆಲ್ಲರ ಮುಂದೆ ಹೇಳಿಕೊಂಡ, ‘ಅಡ್ಡಿಕೆ ಕಳವಾಗಲಿಲ್ಲ. ನಾನು ಅದನ್ನು ಅಡವಿಟ್ಟು, ಅದರಿಂದ ಬಂದ ಹಣವನ್ನು ಇಸ್ಪೀಟ್ ಆಟದಲ್ಲಿ ಕಳೆದೆ. ತಪ್ಪು ನನ್ನದು. ನಾನಿನ್ನು ಪೂಜೆ ಮಾಡಲಾರೆ. ಅಣ್ಣ ನೀನೇ ಪೂಜೆ ಮಾಡಿ ಮುಗಿಸು, ನಾನು ಕೇಳಿಕೊಂಡರೆ ದೇವರು ನನ್ನನ್ನು ಕ್ಷಮಿಸುವನೋ ಇಲ್ಲವೋ. ನನ್ನನ್ನು ಕ್ಷಮಿಸುವಂತೆ ದೇವರನ್ನು ನೀನೇ ಕೇಳಿಕೊ’ ಎಂದ. ಸುಬ್ಬಣ್ಣನವರು ಆತನನ್ನು ಸಮಾಧಾನಪಡಿಸಿ, ಮುಂದಿನ ಪೂಜೆಯನ್ನು ತಾವೇ ಮಾಡಿ ಮುಗಿಸಿದರು. ಇಂತಹುದೇ ಮತ್ತೊಂದು ಸಣ್ಣ ಪ್ರಸಂಗ. ಊರಿನ ಜೋಯಿಸರಾದ ನಂಜುಂಡಭಟ್ಟರು ದೂರದ ಬಂಧುಗಳು. ಸಣ್ಣ ಸುಬ್ಬಣ್ಣನ ಮನೆಯಲ್ಲಿ ಅಡ್ಡಿಕೆ ಮಾಯವಾದಾಗ ಆತನ ಅತ್ತೆ ಜೋಯಿಸರ ಬಳಿ ಹೋಗಿ ಕಳ್ಳರಾರೆಂದು ಪ್ರಶ್ನಿಸಿದರು. ಆಗ ಜೋಯಿಸರು ಯಾವ ಯಾವುದೋ ಪುಸ್ತಕಗಳನ್ನು ತೆರೆದು ಆ ರಾಕ್ಷಸಸ್ತ್ರೀಯ ಪಕ್ಷವನ್ನು ಸೇರಿಕೊಂಡು, ಆ ಕಾರಣವಾಗಿ ಸುಬ್ಬಣ್ಣನವರ ಮೇಲೆ ಹಗೆ ಕಾರಿದರು. ಇದರಿಂದ ಅವೆರಡು ಸಂಸಾರಗಳಿಗೆ ಜೋಯಿಸರು ಬರುವುದು ನಿಂತು ಹೋದುವು. ಸುಬ್ಬಣ್ಣನವರ ಮನೆಯ ಶಾಸ್ತ್ರ-ಸಂಬಂಧಗಳಿಗೆ ಜೋಯಿಸರು ಬರುವುದು ನಿಂತುಹೋಯಿತು. ಆದರೆ ಸುಬ್ಬಣ್ಣನವರಿಗೆ ಜೋಯಿಸರ ಮೇಲಾಗಲಿ, ಅವರ ಮನೆಯವರ ಮೇಲಾಗಲಿ ದ್ವೇಷವುಂಟಾಗಲಿಲ್ಲ. ಹೀಗಿರಲು ಜೋಯಿಸರ ಮಗಳಿಗೆ ಗೊತ್ತಾಗಿದ್ದ ವರ ತಪ್ಪಿಹೋಯಿತು. ಮದುವೆಗೆ 174 ಮೂರು ತಲೆಮಾರು ಎಲ್ಲ ಸಿದ್ಧವಾಗಿದ್ದು. ನಾಳೆ ಮದುವೆ ಎನ್ನುವಾಗ ಅಳಿಯನಾಗುವವನು ಕೈಕೊಟ್ಟ. ಆಗ ಜೊಯಿಸರು ಸುಬ್ಬಣ್ಣನವರ ಮನೆಗೆ ಬಂದು. ಅವರ ಕಾಲುಗಳನ್ನು ಹಿಡಿದುಕೊಂಡು, ತಮ್ಮ ಮಾತನ್ನು ನಡೆಸಿಕೊಡುವವರೆಗೆ ಪಾದಗಳನ್ನು ಬಿಡುವುದಿಲ್ಲವೆಂದು ಹಟ ಹಿಡಿದರು. ಸುಬ್ಬಣ್ಣನವರು ನಡೆಸಿಕೊಡುವುದಾಗಿ ಮಾತುಕೊಟ್ಟರು. ಜೋಯಿಸರ ಪ್ರಾರ್ಥನೆಯಂತೆ ಅವರ ಮಗಳನ್ನು ತಮ್ಮ ಮಗ ರಾಮುವಿಗೆ ಮದುವೆ ಮಾಡಿಕೊಂಡರು. ಸುಬ್ಬಣ್ಣನವರ ವಿಶಾಲಹೃದಯ ಎಂತಹ ತಪ್ಪಿತಸ್ಥರನ್ನೂ ಸಜ್ಜನರನ್ನಾಗಿ ಮಾಡುತ್ತಿತ್ತು. ಸುಬ್ಬಣ್ಣನವರು ಎಷ್ಟು ವಿಶಾಲ ಹೃದಯರೋ ಅಷ್ಟೇ ದೈವಭಕ್ತರು. ಎಂತಹ ಕಷ್ಟಬಂದರೂ ನಿರ್ವೀರ್ಯರಾಗುತ್ತಿರಲಿಲ್ಲ. ಸಂಸಾರದಲ್ಲಿ ಬಂದ ಎಡರು ತೊಡರುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ‘ಶ್ರೀರಾಮನಿದ್ದಾನೆ’ ಎಂದು ಹೇಳಿ ಪದ್ಮಮಿವಾಂಭಸರಂತೆ ಆನಂದದಿಂದ ಕಾಲಕಳೆಯುತ್ತಿದ್ದರು. ಒಂದು ಸಾರಿ ಅಗಡಿಯ ಶೇಷಾಚಲ ಸಾಧುಗಳು ತಳುಕಿಗೆ ಬಂದರು. ಎಂದಿನಂತೆ ಅವರು ಸುಬ್ಬಣ್ಣನವರ ಮನೆಯಲ್ಲಿ ಬಿಡಾರ ಮಾಡಿದರು. ಸಾಧುಗಳ ಜೊತೆಯಲ್ಲಿ ಮೂವರು ಶಿಷ್ಯರಿದ್ದರು. ಸುಬ್ಬಣ್ಣನವರು ಅವರನ್ನು ಆದರದಿಂದ ಬಿಜಯ ಮಾಡಿಸಿ, ಅವರ ಸೇವಾದಿಗಳಲ್ಲಿ ನೆರವಾದರು. ಸಾಧುಗಳ ಪದ್ಧತಿ ವಿಚಿತ್ರವಾಗಿತ್ತು. ಬೆಳಗಿನ ಉಷಃಕಾಲಕ್ಕೆ ಮೇಲೆದ್ದು ಚಿದಂಬರನಿಗೆ ಕಾಕಡಾರತಿಯನ್ನು ಬೆಳಗಿ, ಅನಂತರ ಸ್ನಾನ, ಪೂಜೆ-ಪುರಸ್ಕಾರಗಳನ್ನು ಪೂರೈಸಿದ ಮೇಲೆ ಭಜನೆ ಮಾಡುತ್ತ ಊರಿನಲ್ಲಿ ಹೊರಡುವರು. ಯಾರು ಏನು ಕೊಟ್ಟರೂ ಸಂತೋಷದಿಂದ ತೆಗೆದುಕೊಳ್ಳುವರು. ಯಾರು ಆಹ್ವಾನಿಸಿದರೂ ಅವರ ಮನೆಗೆ ಹೋಗಿ ಭೋಜನ ಮಾಡುವರು. ಬಂದವರನ್ನು ‘ಮಹರಾಜ್’ ಎಂದು ಸಂಬೋಧಿಸಿ ತಾವೇ ಮೊದಲು ಕೈಜೋಡಿಸುವರು. ಮಹತ್ತಾದ ವಿಷಯಗಳನ್ನು ಸುಲಭವಾಗಿ, ಸರಳವಾಗಿ, ಚಿಕ್ಕಮಕ್ಕಳಿಗೂ ಅರ್ಥವಾಗುವಂತೆ ಹೇಳಿ ಎಲ್ಲರ ಹೃದಯಗಳನ್ನೂ ಸೂರೆಗೊಳ್ಳುವರು. ಅಂತಹ ವ್ಯಕ್ತಿಗಳು ಬಹು ವಿರಳ. ಅವರ ಸಹವಾಸದಲ್ಲಿ ಸುಬ್ಬಣ್ಣ ಬ್ರಹ್ಮಾನಂದದಲ್ಲಿ ಮುಳುಗಿ ತೇಲುತ್ತಿದ್ದರು. ಅವರು ಸಾಧುಗಳ ಮೇಲೆ ಹಲವು ಕೀರ್ತನೆಗಳನ್ನು ಬರೆದರು. ಅವರ ಹೆಂಡತಿ, ಹೆಣ್ಣು ಮಕ್ಕಳು ಅವುಗಳನ್ನು ಬಾಯಿಪಾಠ ಮಾಡಿ ಹಾಡಿದರು. ಅವನ್ನು ಕೇಳಿ ಆನಂದಗೊಂಡ ಸಾಧುಗಳು ಸುಬ್ಬಣ್ಣನವರನ್ನು ಬಾಚಿ ತಬ್ಬಿಕೊಂಡರು. ಹೀಗೆ ಮೂರು ದಿನಗಳು ಕಳೆದುವು. ನಾಲ್ಕನೆಯ ದಿನ ಸಾಧುಗಳು ಬೇರೆಯಾರಿಗೆ ಪ್ರಯಾಣಮಾಡಬೇಕೆಂದು ನಿರ್ಧಾರವಾಗಿತ್ತು. ಕಳೆದ ಮೂರು ದಿನಗಳು ಊರಿನ ಬೇರೆ ಬೇರೆ ಮನೆಗಳಲ್ಲಿ ಅಡ್ಡಿಕೆಯ ಕಳವು 175 ಸಾಧುಗಳಿಗೆ ಔತಣಗಳು ಏರ್ಪಟ್ಟಿದ್ದುವು. ಕಡೆಯ ದಿನ ಸುಬ್ಬಣ್ಣನವರ ಮನೆಯಲ್ಲಿ ಔತಣ ನಡೆಯಬೇಕು, ಆ ಕಾಲದಲ್ಲಿ ಸುಬ್ಬಣ್ಣನವರ ಕೈ ಕಟ್ಟಿಹೋಗಿತ್ತು. ತನ್ನ ಮನಸ್ತೃಪ್ತಿಯಾಗುವಂತೆ ಸಾಧುಗಳನ್ನು ಮೃಷ್ಟಾನ್ನದಿಂದ ತಣಿಸುವಂತಿರಲಿಲ್ಲ. ಸಮುದ್ರದಂತೆ ವಿಶಾಲವಾದ ಅವರ ಹೃದಯ ಅಲ್ಲೋಲಕಲ್ಲೋಲವಾಗಿತ್ತು. ಅವರು ಯಾರಿಗೂ ಹೇಳಿಕೊಳ್ಳುವಂತಿರಲಿಲ್ಲ. ಮಧ್ಯಾಹ್ನ ಮೂರು ಘಂಟೆಯ ಹೊತ್ತು. ದಿವಾನಖಾನೆಯಲ್ಲಿ ವಿಶ್ರಾಂತಿಯಿಂದ ಮೇಲಕ್ಕೆದ್ದ ಸಾಧುಗಳು ಭಕ್ತ ಜನರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ರಾಮಾಯಣ, ಭಾರತ, ಭಾಗವತಗಳಿಂದ ಹಲವು ವಿಷಯಗಳನ್ನು ಹೃದಯಂಗಮವಾಗಿ ಬಣ್ಣಿಸುತ್ತ ಭಕ್ತರ ಮನಸ್ಸನ್ನು ಪರಮಾತ್ಮನ ಕಡೆಗೆ ಕೊಂಡೊಯ್ಯುವ ಕಾರ್ಯ ನಡೆದಿತ್ತು. ಅವರ ಮಾತು ಬೆಣ್ಣೆಯಷ್ಟು ಮೃದು, ಸಕ್ಕರೆಯಷ್ಟು ಸಿಹಿ. ದೂರ್ವಾಸಾತಿಥ್ಯವನ್ನು ವಿವರಿಸುತ್ತ ‘ನೋಡಿ ಮಹರಾಜ್, ಪರಮಾತ್ಮ ಭಕ್ತರು ಕೊಟ್ಟ ಒಂದು ತುಳಸೀದಳದಿಂದ ಹೇಗೆ ತೃಪ್ತನಾಗುತ್ತಾನೆ’ ಎಂದು ಪೂರೈಸಿದರು. ಅನಂತರ ತಟ್ಟನೆ ಅವರು ಸುಬ್ಬಣ್ಣನವರತ್ತ ತಿರುಗಿ ‘ಮಹರಾಜ್, ಸ್ವಾಮಿ ನಾಳೆಯ ದಿನ ನಿಮ್ಮ ಅಪ್ಪಣೆ ತೆಗೆದುಕೊಂಡು ಹೊರಡುತ್ತಾನೆ. ನಾಳೆ ನಿಮ್ಮ ಮನೆಯಲ್ಲಿ ಸ್ವಾಮಿಗೆ ಮಹಾಪ್ರಸಾದ ಮಾಡಿಸಬೇಕು. ಚಲೋ ರಾಗಿ ಬಕ್ರೀ, ಎಣ್ಣೆ ಬದನೆಕಾಯಿ ಪಲ್ಯ ಮಾಡಿಸಬೇಕು. ಸ್ವಾಮಿಗೆ ಸಿಹಿ ತಿಂದು ತಿಂದು ಕಟೆಯಾಯಿತು’ ಎಂದರು. ಸಾಧುಗಳು ತ್ರಿಕಾಲಜ್ಞಾನಿಗಳಲ್ಲವೆ? ಮೂರು ದಿನ ಒಂದೇ ಸಮನಾಗಿ ‘ಸಾಂಬಸದಾಶಿವ’ ಎಂಬ ಘೋಷಣೆ ಮೊಳಗುತ್ತಿದ್ದ ಆ ಊರು ಸ್ವಾಮಿಗಳು ಊರು ಬಿಟ್ಟೊಡನೆ ಬರಿದಾದಂತಾಯಿತು, ಸುಬ್ಬಣ್ಣನವರಿಗೆ. * * * * 176 ಮೂರು ತಲೆಮಾರು 15. ದಾಯಾದಿ ಮಾತ್ಸರ್ಯ ಅಜಾತ ಶತ್ರುಗಳೆನಿಸಿದ ಸುಬ್ಬಣ್ಣನವರಿಗೂ ಒಬ್ಬ ಶತ್ರುವಿದ್ದ. ಆತ ಶಾನುಭೋಗ ರಾಮಣ್ಣ. ರಾಮಣ್ಣ ಮನ್ನೇಕೋಟೆಯ ಶಾನುಭೋಗ ಲಕ್ಷ್ಮೀನಾರಾಯಣಪ್ಪನ ಹಿರಿಯ ಮಗ. ತಂದೆಯ ನಂತರ ಈತ ಶಾನುಭೋಗನಾಗಿದ್ದ. ಈತ ಶ್ರೀಮಂತ. ಹತ್ತಾರು ಜನರಿಗೆ ಬೇಕಾದವನು. ಸಾಕಷ್ಟು ಅಧಿಕಾರ, ದರ್ಪಗಳನ್ನುಳ್ಳವನು. ನೂರು ರೂಪಾಯಿಗಳಿಗಿಂತಲೂ ಹೆಚ್ಚಾಗಿ ಕಂದಾಯ ಕೊಡುತ್ತಿದ್ದ ದೊಡ್ಡ ಭೂ ಮಾಲೀಕ. ತಾಲ್ಲೂಕಿನ ಶಾನಭೋಗರಲ್ಲೆಲ್ಲ ಸಾಕಷ್ಟು ವರ್ಚಸ್ವಿಯಾಗಿದ್ದವನು. ಆದರೆ ಸುಬ್ಬಣ್ಣನವರ ಕೀರ್ತಿ ರಾಮಣ್ಣನ ಈ ಎಲ್ಲ ಪ್ರಭಾವವನ್ನೂ ಮುಚ್ಚಿಹಾಕಿತು. ಜನರಲ್ಲಿ, ಸರ್ಕಾರಿ ನೌಕರರಲ್ಲಿ, ಅಧಿಕಾರಿಗಳಲ್ಲಿ ಸುಬ್ಬಣ್ಣನವರಿಗಿದ್ದ ಅದರ, ಗೌರವ, ಭಕ್ತಿಗಳು ಇನ್ನಾರಿಗೂ ಇರಲಿಲ್ಲ. ಆತನಿಗಿಂತಲೂ ಹಿರಿಯನಾದ ತನಗಿಲ್ಲದ ಈ ಮೇಲ್ಮೆ ಸುಬ್ಬಣ್ಣನಿಗೆ? ಎಂದು ಶಾನುಭೋಗ ರಾಮಣ್ಣನಿಗೆ ಹೃದಯವೇದನೆ. ಆತನ ಮೇಲಿನ ಈ ಅಸೂಯೆಯನ್ನು ರಾಮಣ್ಣ ಪ್ರತ್ಯಕ್ಷವಾಗಿ ತೋರಿಸಿಕೊಳ್ಳುವಂತಿರಲಿಲ್ಲ. ದಿನೇ ದಿನೇ ಬೆಳೆಯುತ್ತಿದ್ದ ಸುಬ್ಬಣ್ಣನ ಪ್ರತಿಷ್ಠೆ ಗೌರವಗಳನ್ನು ಸಹಿಸುವುದು ಆತನಿಗೆ ಬಹು ಕಷ್ಟವಾಗಿತ್ತು. ಚಾಣಾಕ್ಷನಾದ ಆತ ಹೇಗಾದರೂ ಮಾಡಿ ಸುಬ್ಬಣ್ಣನನ್ನು ಸಂಕಟಕ್ಕೆ ಸಿಕ್ಕಿಸಬೇಕೆಂದು ಮಾಡಿದ ಪ್ರಯತ್ನವಾವೂದೂ ಸಫಲವಾಗಿರಲಿಲ್ಲ. ಅಕ್ಬರ್ ಸಾಹೇಬರು ಚಳ್ಳಕೆರೆಯ ಅಮಲ್ದಾರರಾಗಿ ನೇಮಕವಾಗಿ ಬಂದರು. ಅವರು ತುಂಬ ಸಾತ್ವಿಕರು, ಸಜ್ಜನರು, ಆಗರ್ಭ ಶ್ರೀಮಂತರು. ದೊಡ್ಡ ಅಧಿಕಾರದಲ್ಲಿದ್ದರೂ ಅವರು ನಿರಹಂಕಾರಿಗಳು. ಸರಳ ಸ್ವಭಾವದವರು. ಅವರ ‘ಬೇಗಂ’ರವರೂ ಗಂಡನಂತೆಯೇ ಪರಮ ಸಾತ್ವಿಕರು, ಉದಾರಗುಣಿಗಳು. ಅವರು ಸಹ ಶ್ರೀಮಂತ ಮನೆತನದಲ್ಲಿ ಹುಟ್ಟಿಬಂದವರಾಗಿದ್ದರು. ದಂಪತಿಗಳು ತುಂಬ ಅನ್ಯೋನ್ಯವಾಗಿದ್ದರು. ಆದರೆ ಅವರಿಗೆ ಜೀವನದಲ್ಲಿ ಒಂದು ದೊಡ್ಡ ಕೊರತೆ. ಪ್ರಾಪಂಚಿಕವಾದ ಎಲ್ಲ ಸುಖ ಸೌಲಭ್ಯಗಳನ್ನು ಅನುಗ್ರಹಿಸಿದ್ದ ಭಗವಂತ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳನ್ನು ಮಾತ್ರ ಅನುಗ್ರಹಿಸಿರಲಿಲ್ಲ. ದಾಯಾದಿ ಮಾತ್ಸರ್ಯ 177 ಇದಕ್ಕಾಗಿ ಒಳಗೊಳಗೇ ವ್ಯಥೆಗೊಳ್ಳುತ್ತಿದ್ದ ಅವರು ಎಲ್ಲ ಪ್ರಯತ್ನಗಳನ್ನೂ ಮಾಡಿ ಮುಗಿಸಿದ್ದರು. ಔಷಧಿಗಳಾದುವು, ಫಕೀರರಿಗೆ ದಾನಧರ್ಮಗಳಾದುವು. ಮಸೀದಿಗಳಲ್ಲಿ ಪ್ರಾರ್ಥನೆಗಳಾದುವು. ಆದರೆ ಇದುವರೆಗೆ ಯಾವುದೂ ಫಲಕಾರಿಯಾಗಿರಲಿಲ್ಲ. ಸರ್ಕಾರಿ ಕೆಲಸಗಳಲ್ಲಿ, ಹೊರಗಡೆಯ ತಿರುಗಾಟಗಳಲ್ಲಿ ಸದಾ ಮುಳುಗಿರುತ್ತಿದ್ದ ಸಾಹೇಬರು ಈ ಕೊರತೆಯನ್ನು ಹೆಚ್ಚಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಮರೆಯುವ ಸಾಧ್ಯತೆ ಇತ್ತು. ಆದರೆ ಯಾವ ಯೋಚನೆಯೂ ಇಲ್ಲದೆ, ಎಲ್ಲವೂ ನೆಮ್ಮದಿಯಾಗಿದ್ದ ಬೇಗಂರವರಿಗೆ ಮಾತ್ರ ಹಗಲಿರುಳು ಇದೇ ಒಂದು ಗೀಳಾಯಿತು. ಯಾರು ಏನು ಹೇಳಿದರೂ ಅದನ್ನು ಹಿಂದು ಮುಂದು ನೋಡದೆ ಅವರು ನಡೆಸಿ ಬಿಡುತ್ತಿದ್ದರು. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಸಾಹೇಬರಲ್ಲಿ ವಿಶೇಷವಾಗಿ ಓಡಾಡಿಕೊಂಡಿರುತ್ತಿದ್ದ ರಾಮಣ್ಣನವರಿಗೂ ಇದು ಗೊತ್ತಿತ್ತು. ಇದನ್ನೇ ಒಂದು ನಿಮಿತ್ತವಾಗಿ ಮಾಡಿಕೊಂಡು ಸುಬ್ಬಣ್ಣನವರ ತೇಜೊವಧೆ ಮಾಡಬೇಕೆಂಬ ಕುಯುಕ್ತಿಯೊಂದು ರಾಮಣ್ಣನ ತಲೆಯನ್ನು ಹೊಕ್ಕಿತು. ಚತುರ ಮಾತುಗಾರನೂ, ಕುಟಿಲೋಪಾಯತಜ್ಞನೂ ಆದ ರಾಮಣ್ಣನಿಗೆ ಸಾಹೇಬರಿಗಿಂತಲೂ ಅವರ ಬೇಗಂ ಹೆಚ್ಚು ಉಪಯುಕ್ತ ಸಾಧನವಾಗಿದ್ದರು. ಮುಸಲ್ಮಾನರಾದರೂ ಸಾಕಷ್ಟು ಮುಂದುವರೆದಿದ್ದ ಅಕ್ಬರ್ ಸಾಹೇಬರ ಮನೆಯಲ್ಲಿ ಕಟ್ಟುನಿಟ್ಟಾದ ಘೋಷಾಚರಣೆ ಜಾರಿಯಲ್ಲಿರಲಿಲ್ಲ. ತೀರ ಅಪರಿಚಿತರಾದವರ ಹೊರತು ಉಳಿದವರಿಗೆ ‘ಅಮ್ಮಾವರ’ ದರ್ಶನ ಅಷ್ಟು ಕಷ್ಟವಾಗಿರಲಿಲ್ಲ. ಶಾನುಭೋಗ ರಾಮಣ್ಣನಿಗೆ ಬೀಬಿಯವರನ್ನು ದರ್ಶನ ಮಾಡುವುದು ಕಷ್ಟವಾಗಿರಲಿಲ್ಲ. ಸಾಕಷ್ಟು ವಯಸ್ಸಾಗಿದ್ದ ಶಾನುಭೊಗ ರಾಮಣ್ಣನೊಡನೆ ಮಾತನಾಡುವುದಕ್ಕೆ ಬೀಬಿಯವರು ಹೆಚ್ಚು ಸಂಕೋಚಪಡುತ್ತಲೂ ಇರಲಿಲ್ಲ. ಎಷ್ಟಾದರೂ ಆ ಶಾನುಭೋಗರು ತಮ್ಮ ಆಶ್ರಿತರಲ್ಲಿ ಒಬ್ಬರಲ್ಲವೇ? ರಾಮಣ್ಣ ಒಂದು ದಿನ, ಸಾಹೇಬರು ಮನೆಯಲ್ಲಿಲ್ಲದ ಸಮಯವನ್ನು ಸಾಧಿಸಿ ಸಾಹೇಬರ ಮನೆಯಲ್ಲಿ ಹಾಜರಾದ. ಆ ದಿನ ಏಕೋ ಏನೋ ಅಮ್ಮಾವರು ತುಂಬ ಚಿಂತಿತರಾದಂತೆ ಕಾಣಿಸಿದರು. ಚಾಣಾಕ್ಷನಾದ ರಾಮಣ್ಣನಿಗೆ ಬೇಗಂರವರ ಚಿಂತೆಗೆ ಕಾರಣ ಊಹಿಸುವುದು ಕಷ್ಟವಾಗಿರಲಿಲ್ಲ. ಆದರೂ ಏನೂ ಅರಿಯದವನಂತೆ ಆತ ‘ಏಕೋ ತಾಯಿಯವರು ತುಂಬ ಯೋಚನೆಯಲ್ಲಿರುವಂತೆ ಕಾಣಿಸುತ್ತದೆ. ಕಾರಣ ಗೊತ್ತಾದರೆ ಸಾಧ್ಯವಾದ ಮಟ್ಟಿಗೆ ನಮ್ಮ ಕೈಲಾದ ಸೇವೆ ಮಾಡಬಹುದಿತ್ತು’ ಎಂದ. 178 ಮೂರು ತಲೆಮಾರು ‘ನಿಮಗೆ ಗೊತ್ತಿರುವಂತೆ ನಮಗಿನ್ನೇನು ಯೋಚನೆ ಶಾನುಭೋಗರೆ? ಇರುವುದು ಒಂದೇ ಯೋಚನೆ, ಅಲ್ಲಾ ನಮಗೆ ಎಲ್ಲಾ ಕೊಟ್ಟಿದ್ದಾನೆ; ಆದರೆ ಮಕ್ಕಳನ್ನು ಕರುಣಿಸಲಿಲ್ಲ. ಮಕ್ಕಳಿಲ್ಲದ ಮನೆಯಲ್ಲಿ ಏನಿದ್ದರೇನು ರಾಮಣ್ಣ? ಈ ದಿನ ಬೆಳಿಗ್ಗೆ ಈ ಮನೆ ಕಿಟಕಿಯಿಂದ ಹೊರಗೆ ನೋಡುತ್ತಾ ಇದ್ದೆ. ಯಾರದೋ ಮಗು, ಮೈಯೆಲ್ಲ ಧೂಳು, ಸರಿಯಾದ ಬಟ್ಟೆಯಿಲ್ಲ. ನೋಡುವುದಕ್ಕೆ ಮಾತ್ರ ಎಷ್ಟು ಮುದ್ದಾಗಿತ್ತು ಅಂತೀರಿ! ಒಪ್ಪೊತ್ತಿಗೆ ಗತಿಯಿಲ್ಲದ ಪರದೇಶಿಗಳಿಗೆ ಮಕ್ಕಳಾಗುತ್ತೆ. ಆದರೆ ಈ ಶ್ರೀಮಂತಿಕೆಯಲ್ಲಿ ಹೊರಳಾಡುತ್ತಿರುವ ನಮಗೆ ಯಾವ ಪೂಜೆ, ಯಾವ ದಾನ, ಯಾವ ಧರ್ಮ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಎಲ್ಲ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದ ಹಾಗೆ’ ಎಂದು ಹೇಳಿ ನಿಟ್ಟುಸಿರು ಬಿಟ್ಟರು. ಸಾಹೇಬರ ಪತ್ನಿ ಹೇಳಿದ ಮಾತುಗಳನ್ನು ಕೇಳಿ ರಾಮಣ್ಣ ಸ್ವಲ್ಪ ಹೊತ್ತು ಆಲೋಚನಾಮಗ್ನನಾದವನಂತೆ ಕಣ್ಣುಮುಚ್ಚಿ ಕುಳಿತ. ಅನಂತರ ‘ತಾಯಿ ನಾನು ಒಂದು ಮಾತು ಹೇಳಿದರೆ ತಾವು ತಪ್ಪು ತಿಳಿಯುವುದಿಲ್ಲ ಎಂದಾದರೆ ಹೇಳುತ್ತೇನೆ. ಆ ಮಾತು ತಮಗೆ ಒಪ್ಪಿಗೆಯಾದಿದ್ದರೆ ಆ ಮಾತನ್ನು ಅಲ್ಲಿಗೆ ಬಿಟ್ಟುಬಿಡಬೇಕು’ ಎಂದ. ಆತನ ಮಾತಿನಿಂದ ಯಾವುದೋ ಒಂದು ಆಧಾರ ಸಿಕ್ಕಿದವರಂತೆ ಆ ಹೆಣ್ಣು ‘ಸುತ್ತು ಬಳಸಿನ ಮಾತು ಏಕೆ ರಾಮಣ್ಣ? ಅದೇನು ಮಾತು? ಹೇಳಬಾರದೆ? ಫಲಕಾರಿಯಾಗುವಂತಿದ್ದರೆ ಕಾಲಿನಲ್ಲಿ ತೋರಿಸಿದುದನ್ನು ತಲೆಯಲ್ಲಿ ಹೊತ್ತು ನಡೆಸುತ್ತೇನೆ’ ಎಂದರು. ಆಗ ರಾಮಣ್ಣ ಆಕೆಯ ಮನಮುಟ್ಟುವಂತೆ ಹೇಳತೊಡಗಿದ. ‘ತಾಯಿ ತಳುಕಿನಲ್ಲಿ ಸುಬ್ಬಣ್ಣ ಎಂಬ ಒಬ್ಬರಿದ್ದಾರೆ. ಅವರನ್ನು ದೊಡ್ಡ ಸುಬ್ಬಣ್ಣ ಎಂದು ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಅವರು ತುಂಬ ದೊಡ್ಡವರು, ಮಹಾದೈವಭಕ್ತರು. ಶ್ರೀರಾಮನ ಉಪಾಸಕರು. ಅವರು ಮನಸ್ಸು ಮಾಡಿದರೆ, ಭಕ್ತಿಯಿಂದ ಬಾಯ್ತುಂಬ ಹರಸಿದರೆ ಖಂಡಿತ ನಿಮಗೆ ಪುತ್ರೋತ್ಸವವಾಗುತ್ತದೆ. ಸಾಹೇಬರಿಗೂ ಅವರ ಪರಿಚಯವಿದೆ. ಸಾಹೇಬರೇ ಸ್ವತಃ ಅವರಿಗೆ ಒಂದು ಮಾತು ಹೇಳಿದರೆ ಅವರು ಖಂಡಿತ ಇಲ್ಲ ಎನ್ನಲಾರರು. ಭಗವಂತನ ಅನುಗ್ರಹದಿಂದ ಮುಂದಿನ ವರ್ಷವೇ ಪುಟ್ಟ ಅಮಲ್ದಾರರನ್ನು ನೀವು ಕಂಡರೆ ಆಶ್ಚರ್ಯವಿಲ್ಲ. ಆದರೆ ಈ ವಿಚಾರವನ್ನು ನಾನು ಹೇಳಿದೆ ಎಂದು ಯಾರ ಮುಂದೆಯೂ ಹೇಳಬಾರದು. ಇದರ ಮೇಲೆ ಧಣಿಯ ಚಿತ್ತ’ ಎಂದು ಆಶಾಬೀಜವನ್ನು ಬಿತ್ತಿದ. ದಾಯಾದಿ ಮಾತ್ಸರ್ಯ 179 ರಾಮಣ್ಣನ ಮಾತು ಅಮ್ಮಾವರ ಮನಸ್ಸಿನಲ್ಲಿ ಆಳವಾಗಿ ನಾಟಿತು. ಸಂಜೆ ಸಾಹೇಬರು ಮನೆಗೆ ಹಿಂದಿರುಗುತ್ತಲೇ ಅಮ್ಮಾವರು ಈ ವಿಚಾರವನ್ನು ಅವರೊಂದಿಗೆ ಪ್ರಸ್ತಾಪಿಸಿದರು. ಅದನ್ನು ಕೇಳಿ ಸಾಹೇಬರು ಸುಮ್ಮನೆ ನಕ್ಕುಬಿಟ್ಟರು. ಅವರು ‘ನಿನಗೆಲ್ಲೋ ಹುಚ್ಚು. ನನಗೆ ಸುಬ್ಬಣ್ಣನವರು ಚೆನ್ನಾಗಿ ಗೊತ್ತು. ಅವರು ಯಾವ ಮಾಯಾಮಂತ್ರವನ್ನೂ ಮಾಡುವವರಲ್ಲ. ಅವರೊಬ್ಬ ಸರಳವಾದ ಸಾಚಾ ಮನುಷ್ಯ. ಯಾರೋ ತಿಳಿಗೇಡಿಗಳು ಹೇಳಿದರು ಎಂದು ನೀನು ಅದನ್ನು ನಂಬಿ ಬಿಡುವುದೇ?’ ಎಂದು ಬೀಬಿಯ ಮಾತನ್ನು ಕೇರಿ ಹೊರಚೆಲ್ಲಿದರು. ಆದರೆ ಬೀಬಿ ಕೆಲಕಾಲ ಅವರೊಡನೆ ವಾಗ್ವಾದ ಮಾಡಿ, ಕಡೆಗೆ ಸ್ತ್ರೀ ಸಹಜವಾದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದರು. ‘ಹೌದು ನನಗೆ ಹುಚ್ಚು. ಮಕ್ಕಳಾಗಲಿಲ್ಲವೆಂಬ ನೆಪದಿಂದ, ಬೇರೊಬ್ಬ ಬೀಬಿಯನ್ನು ತರುವ ಯೋಚನೆ ನಿಮಗೆ, ಆದ್ದರಿಂದಲೇ ಈಚೆಗೆ ನನ್ನನ್ನು ಕಂಡರೆ ತಾತ್ಸಾರ’ ಕಣ್ಣೀರಿನೊಡನೆ ಹರಿದು ಬಂದ ಈ ವಾಕ್ಪ್ರವಾಹದಿಂದ ಅಮಲ್ದಾರರು ನೆನೆದು ಮೆತ್ತಗಾದರು. ಅಕ್ಬರ್ ಸಾಹೇಬರಿಗೆ ಬೇರೊಬ್ಬ ಬೀಬಿಯನ್ನು ತರುವ ಯೋಚನೆ ಯಾವಾಗಲೂ ಇರಲಿಲ್ಲ. ಅನೇಕರಿಂದ ಆ ಸಲಹೆ ಬಂದಾಗಲೂ ಅವರು ಅದನ್ನು ಕೊಡವಿ ಹಾಕಿದ್ದರು. ತಮ್ಮ ಬೀಬಿಯಲ್ಲಿ ಅವರಿಗೆ ಅಸೀಮವಾದ ಪ್ರೇಮವಿತ್ತು. ಯಾವ ಕಾರಣದಿಂದಲೂ ಅದು ವ್ಯತ್ಯಾಸಗೊಳ್ಳುವಂತಿರಲಿಲ್ಲ. ಅದು ಅವರ ಬೀಬಿಗೂ ಗೊತ್ತು. ಆದರೂ ತಮ್ಮ ಅಪೇಕ್ಷೆಯನ್ನು ನೆರೆವೇರಿಸಿಕೊಳ್ಳುವುದಕ್ಕಾಗಿ-ತಮ್ಮ ಗುರಿಯನ್ನು ಮುಟ್ಟುವುದಕ್ಕಾಗಿ ಈ ಬಾಣವನ್ನು ಪ್ರಯೋಗಿಸಿದ್ದರು. ಅದನ್ನು ಕೇಳುತ್ತಲೇ ಸಾಹೇಬರು ‘ಸಧ್ಯ ನಿನ್ನ ಅಳು ನಿಲ್ಲಿಸು ಮಹರಾಯಿತಿ. ನಾಳೆಯೇ ತಳುಕಿಗೆ ಹೋಗಿ ಬರುತ್ತೇನೆ. ಇಷ್ಟು ಸಣ್ಣ ವಿಚಾರಕ್ಕೆ ರಾದ್ಧಾಂತ ಮಾಡಬೇಕೆ? ನಿನ್ನಂತಹ ಉತ್ತಮ ಜಾತಿಯ ಸುರಸುಂದರಿಯನ್ನು ಬಿಟ್ಟು ಬೇರೆ ನಿಖಾ ಮಾಡಿಕೊಳ್ಳುತ್ತೇನೆಯೆ? ಮುತ್ತನ್ನು ಎತ್ತಿಬಿಸುಟು ಗಾಜನ್ನು ಎತ್ತಿಕೊಳ್ಳುತ್ತೇನೆಯೆ? ನಾನು ಅಂತಹವನಾಗಿದ್ದರೆ ಇಷ್ಟು ದಿನ ಸುಮ್ಮನಿರುತ್ತಿದ್ದೆನೆ? ಇಲ್ಲಸಲ್ಲದ ಯೋಚನೆಯನ್ನು ತಲೆಗೆ ಹಚ್ಚಿಕೊಂಡು ಕೊರಗಬೇಡ. ನಿನ್ನಿಷ್ಟದಂತೆ ಅದೂ ಒಂದು ಪ್ರಯತ್ನ ಮಾಡೋಣ. ಮಕ್ಕಳಾಗಲಿ, ಆಗದಿರಲಿ ಈ ಜನ್ಮದಲ್ಲಿ ಬೇರೆ ಬೀಬಿ ತರುವ ಯೋಚನೆ ಇಲ್ಲ, ಇಲ್ಲ, ಇಲ್ಲ’ ಎಂದು ಸಮಾಧಾನಪಡಿಸಿದ್ದರು. ಮಡದಿಗೆ ಮಾತುಕೊಟ್ಟಂತೆ ಮರುದಿನ ಅಕ್ಬರ್‍ಸಾಹೇಬರು ತಳುಕಿಗೆ ಸರ್ಕೀಟು ಹೊರಟರು. ಇದ್ದಕ್ಕಿದ್ದಂತೆಯೇ ಬಂದಿಳಿದ ತಾಲ್ಲೂಕು ಧಣಿಯನ್ನು ಕಂಡು ಪಟೇಲ, ಶಾನುಭೋಗರಿಗೆ ಆಶ್ಚರ್ಯ, ಗಾಬರಿಗಳಾದುವು. 180 ಮೂರು ತಲೆಮಾರು ಯಾವುದಾದರೂ ವಿಶೇಷ ಕಾರಣವಿಲ್ಲದೆ ಸಾಹೇಬರು ಏಕಾಏಕಿ ಹೀಗೆ ಬರುವ ಪದ್ದತಿ ಇಲ್ಲ. ಎಲ್ಲಿ, ಏನು ವ್ಯತ್ಯಾಸವಾಗಿದೆಯೋ? ಯಾವ ಅನಿರೀಕ್ಷಿತ ತನಿಖೆಗಾಗಿ ಸಾಹೇಬರು ಬಂದಿದ್ದಾರೆಯೋ ಎಂದು ಶೇಕದಾರರಿಗೆ ಜಂಘಾಬಲವೇ ಉಡುಗಿ ಹೋಗಿದೆ. ಅತ್ತ ಸಾಹೇಬರು ಬಂಗಲೆಯ ಬಳಿ ಕುದುರೆಯನ್ನಿಳಿದವರೇ ಅಲ್ಲಿಗೆ ಜವಾನನನ್ನು ಕರೆದು ಸುಬ್ಬಣ್ಣನವರಿಗೆ ಹೇಳಿ ಕಳುಹಿಸಿದರು. ಆತಂಕಗೊಂಡು ಬಂದಿದ್ದ ಶೇಕದಾರ, ಪಟೇಲ, ಶಾನುಭೋಗರನ್ನು ಮಾಮೂಲು ಮಾತುಗಳನ್ನಾಡಿ ಕಳುಹಿಸಿಕೊಟ್ಟರು. ಆಗ ತಾನೇ ಪಾರಾಯಣ ದೇವತಾರ್ಚನೆಗಳನ್ನು ಮುಗಿಸಿ ಹೊರಗೆ ಬಂದ ಸುಬ್ಬಣ್ಣನವರಿಗೆ ಬಂಗಲೆ ಜವಾನನಿಂದ ಅಮಲ್ದಾರರ ‘ಬುಲಾವ್’ ಸಮಾಚಾರ ತಿಳಿಯಿತು. ಅದನ್ನು ಕೇಳಿ ಸುಬ್ಬಣ್ಣನವರಿಗೆ ಆಶ್ಚರ್ಯವಾಯಿತು. ತಮ್ಮೊಂದಿಗೆ ಅಮಲ್ದಾರರ ಕೆಲಸ ಏನು? ಎಂಬುದನ್ನು ಊಹಿಸಲಾರದಾದರು. ಆದರೂ ಬೇಗ ಬೇಗ ಬಟ್ಟೆ ಹಾಕಿಕೊಂಡು ಜವಾನನೊಡನೆ ಅವರು ಬಂಗಲೆಗೆ ಹೋದರು. ‘ನಮಸ್ಕಾರ, ಏನೋ ಅಪ್ಪಣೆಯಾಯಿತಂತೆ?’ ಎಂದರು ಸುಬ್ಬಣ್ಣನವರು. ಯಾವುದೋ ಕಾಗದ ನೋಡುತ್ತಿದ್ದ ಅಮಲ್ದಾರರು ಸುಬ್ಬಣ್ಣನವರ ಧ್ವನಿಯನ್ನು ಕೇಳಿ ಧಿಗ್ಗನೆ ಮೇಲೆದ್ದು ‘ಹೌದು ಸುಬ್ಬಣ್ಣನವರೇ, ನಿಮ್ಮೊಂದಿಗೆ ಸ್ವಲ್ಪ ಸ್ವಂತ ವಿಚಾರ ಮಾತನಾಡುವುದಿತ್ತು. ತಮಗೆ ತೊಂದರೆಯಾಗಲಿಲ್ಲವಷ್ಟೆ? ತಾವು ದಯವಿಟ್ಟು ಕುಳಿತುಕೊಳ್ಳಿ’ ಎಂದು ಎದುರಿಗಿದ್ದ ಕುರ್ಚಿಯ ಕಡೆ ಕೈ ತೋರಿಸಿ, ಅವರು ಕುಳಿತ ಮೇಲೆ ತಾವು ಸುಖಾಸೀನರಾದರು. ಆಗ ಸುಬ್ಬಣ್ಣನವರು ‘ನನಗೇನು ತೊಂದರೆ ಸ್ವಾಮಿ? ನನಗ್ಯಾವ ರಾಜಕಾರ್ಯ ಕೊಳ್ಳೆಹೋಗುತ್ತದೆ? ತಾವು ತಾಲ್ಲೂಕಿನ ಧಣಿ, ಅಪ್ಪಣೆಯಾಗಲಿ, ಈ ಸೇವಕನಿಂದ ಏನಾಗಬೇಕು?’ ಎಂದು ಕೇಳಿದರು. ಆಗ ಅಮಲ್ದಾರರು ‘ಸ್ವಾಮಿ, ತಾವೇನೂ ಅರ್ಜಿ ಕೊಡಲು ನನ್ನಲ್ಲಿಗೆ ಬಂದಿಲ್ಲ. ನಾನೇ ನಿಮಗೆ ಅರ್ಜಿ ಕೊಡಲು ತಮ್ಮನ್ನು ಇಲ್ಲಿಗೆ ಕರೆಸಿದ್ದೇನೆ’ ಎಂದರು. ‘ಶಾಂತಂ ಪಾಪಂ ತಾವು ನನಗೆ ಅರ್ಜಿ ಕೊಡುವುದೆ?’ ‘ಹೌದು ಸ್ವಾಮಿ, ನಿಮಗೆ ಅರ್ಜಿ ಸಲ್ಲಿಸಲು ಬಂದಿದ್ದೇನೆ. ನನಗೆ ಮಕ್ಕಳಿಲ್ಲ ಎನ್ನುವ ವಿಚಾರ ತಮಗೆ ತಿಳಿದಿರಬಹುದಲ್ಲ?’ ‘ಹೌದು’ ಎಂಬಂತೆ ಸುಬ್ಬಣ್ಣನವರು ತಲೆಯಾಡಿಸಿದರು. ‘ನಮಗೇನೋ ಕಛೇರಿ ಕೆಲಸ, ಸರ್ಕೀಟು, ಸಾಹೇಬರ ಜಮಾಬಂದಿ ಇತ್ಯಾದಿಗಳಲ್ಲಿ ಆ ವಿಚಾರ ಅಷ್ಟಾಗಿ ತಲೆಗೆ ಹತ್ತುವುದಿಲ್ಲ. ಆದರೆ ನಮ್ಮ ಬೀಬಿಯವರಿಗೆ ಅದೇ ಒಂದು ದೊಡ್ಡ ಕೊರಗು. ಹಗಲು ರಾತ್ರಿ ಅವರಿಗೆ ಅದೇ ಯೋಚನೆ. ಅದಕ್ಕಾಗಿ ನಾವು ಮಾಡದೇ ಬಿಟ್ಟಿರುವ ಪ್ರಯತ್ನವೇನೂ ದಾಯಾದಿ ಮಾತ್ಸರ್ಯ 181 ಇಲ್ಲ. ಆದರೆ ಯಾವುದೂ ಇದುವರೆಗೆ ಸಾರ್ಥಕವಾಗಿಲ್ಲ. ನಮ್ಮ ಮನೆಯವರಿಗೆ ಈ ಗೀಳು ಎಷ್ಟು ಹಿಡಿದಿದೆ ಎಂದರೆ ಯಾರು ಏನು ಹೇಳಿದರೆ ಅದಕ್ಕೆ ಅವರು ಒಪ್ಪುತ್ತಾರೆ’. ‘ಅದು ಸ್ವಾಭಾವಿಕ ತಾನೇ ಸ್ವಾಮಿ. ಏನೋ ಯಾವ ದೇವರ ಕೃಪೆಯಿಂದಲಾದರೂ ತಮಗೊಂದು ಮಗುವಾದರೆ ಸಾಕು- ಎಂಬ ಹಂಬಲ ಹೆಂಗಸರಿಗೆ ನೈಜವಾದುದು!’ “ನಾನು ಹೇಳುವುದು ಅದನ್ನೇ. ಮೊನ್ನೆ ದಿನ ಅವರಿಗೆ ಯಾರೋ ‘ಸುಬ್ಬಣ್ಣನವರು ದೊಡ್ಡ ದೈವಭಕ್ತರು. ಅವರಿಗೆ ಅವರ ರಾಮ ಕೇಳಿದ್ದನ್ನೆಲ್ಲಾ ಕೊಡುತ್ತಾನೆ. ಅವರು ಮನಸ್ಸು ಮಾಡಿ ಬೇಡಿದರೆ ನಿಮಗೆ ಮಕ್ಕಳಾಗುವುದು ಖಂಡಿತ’ ಎಂದು ನಂಬಿಸಿಬಿಟ್ಟಿದ್ದಾರೆ. ಅವರ ಈ ಆಶಯವನ್ನು ನಿಮಗೆ ತಿಳಿಸುವುದಕ್ಕಾಗಿ ನಿಮಗೆ ಹೇಳಿ ಕಳುಹಿಸಿದೆ. ನೀವು ದೊಡ್ಡ ಮನಸ್ಸು ಮಾಡಿ ನಿಮ್ಮ ‘ರಾಮ’ನ ಪೂಜೆ ನಡೆಸಿ. ಅದಕ್ಕೆ ಏನು ಖರ್ಚಾದರೂ ನಾವು ಕೊಡುತ್ತೇವೆ. ನಮ್ಮ ಈ ಕೋರಿಕೆಯನ್ನು ನೀವು ನೆರವೇರಿಸಿ ಕೊಡಬೇಕು.” ಅಕ್ಬರ್ ಸಾಹೇಬರ ಮಾತನ್ನು ಕೇಳಿ ಸುಬ್ಬಣ್ಣನವರಿಗೆ ದಿಗ್ಭ್ರಮೆಯಾಯಿತು. ಸ್ವಲ್ಪ ಹೊತ್ತು ಅವರ ಬಾಯಿಂದ ಮಾತೇ ಹೊರಡಲಿಲ್ಲ. ಆಮೇಲೆ ಹೇಳಿದರು. ‘ಸ್ವಾಮಿ, ಯಾರೋ ನಿಮಗೆ ಕುಚೋದ್ಯಕ್ಕೆ ಈ ಮಾತು ಹೇಳಿದ್ದಾರೆ. ನಾನೊಬ್ಬ ಸಾಮಾನ್ಯ ಮನುಷ್ಯ. ಮಕ್ಕಳಿಲ್ಲದವರಿಗೆ ಮಕ್ಕಳು, ಬಡವರಿಗೆ ಐಶ್ವರ್ಯ ಅನುಗ್ರಹಿಸುವ ಸಿದ್ಧನಲ್ಲ, ನಾನು. ದೊಡ್ಡವರ ಮಾತಿಗೆ ಪ್ರತಿಹೇಳುತ್ತೇನೆ ಎಂದು ತಾವು ಅನ್ಯಥಾ ಭಾವಿಸಬಾರದು’ ಎಂದರು. ‘ಹಾಗಲ್ಲ ಸುಬ್ಬಣ್ಣನವರೆ, ನೀವು ನಡೆಸುವ ಪ್ರಾರ್ಥನೆ ನಡೆಸಿ. ಅವನು ಅನುಗ್ರಹಿಸಿದರೆ ಸಂತೋಷ. ಇಲ್ಲವಾದರೆ ನಮ್ಮ ಪ್ರಾಪ್ತಿ ಇಷ್ಟೇ ಎಂದುಕೊಳ್ಳೋಣ. ಅಲ್ಲದೆ ಇದರಲ್ಲಿ ನಿಮ್ಮ ಸ್ವಾರ್ಥವೇನೂ ಇಲ್ಲವಲ್ಲ. ನಿಸ್ವಾರ್ಥಭಾವನೆಯಿಂದ ನಡೆಸುವ ಪೂಜೆಯನ್ನು ದೇವರು ಅಂಗೀಕರಿಸುತ್ತಾನೆ-ಎಂದು ಒಮ್ಮೆ ನೀವೇ ಹೇಳಿದ್ದೀರಲ್ಲವೆ? ನಾನು ಜಾತಿಯಿಂದ ಮುಸಲ್ಮಾನನಾದರೂ ನನಗೆ ರಾಮರ ಹೀಮರಲ್ಲಿ ಭೇದವಿಲ್ಲ. ನೀವು ಮಾಡುವ ಪೂಜೆ ಮಾಡಿ, ಫಲಾಫಲಗಳು ದೈವಾಯತ್ತ. ನಿಮ್ಮ ಪೂಜೆಗೆ ಏನು ಖರ್ಚಾಗುತ್ತದೆಯೋ ಅದನ್ನು ನಾನು ಕೊಡುತ್ತೇನೆ. ಇನ್ನೇನಿಲ್ಲವಾದರೂ ನಾವು ಮಾಡುವುದನ್ನು ಮಾಡಿದ್ದೇವೆ ಎಂಬ ತೃಪ್ತಿಯಾದರೂ ಸಿಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನೆಯವರಿಗೆ ಇದರಿಂದ ಸಮಾಧಾನವಾಗುತ್ತದೆ’ ಎಂದರು, ಅಮಲ್ದಾರರು. ಅವರ ಮಾತಿಗೆ ಪ್ರತಿ ಹೇಳುವುದು ಸುಬ್ಬಣ್ಣನವರಿಗೆ ಸಾಧ್ಯವಾಗಲಿಲ್ಲ. ಅವರ ಮಾತನ್ನು ರಾಮನ ಮೇಲೆ ಭಾರಹಾಕಿ 182 ಮೂರು ತಲೆಮಾರು ಅಂಗೀಕರಿಸಿದರು. ಅದನ್ನು ಅವರಿಗೆ ತಿಳಿಸುತ್ತ ‘ನನಗೆ ಗೊತ್ತಿರುವುದು ಒಂದೇ: ಅದು ರಾಮಾಯಣ ಪಾರಾಯಣ, ತಮ್ಮ ಇಚ್ಛೆಯಂತೆ ನಾನು ಹತ್ತು ದಿನ ಪಾರಾಯಣ ಮಾಡಿ ತಮಗೆ ಪ್ರಸಾದ ತಂದುಕೊಡುತ್ತೇನೆ. ಒಂದು ವೇಳೆ ಅವನೇನಾದರೂ ಅನುಗ್ರಹಿಸಿದರೆ ನನಗಿಂತ ಹೆಚ್ಚು ಸಂತೋಷಪಡುವವರು ಬೇರೆ ಯಾರೂ ಇರಲಾರರು. ತಾವು ಖರ್ಚಿನ ವಿಚಾರ ಅಪ್ಪಣೆ ಕೊಡಿಸಿದಿರಿ. ಇದಕ್ಕೆ ಖರ್ಚೇನೂ ಆಗುವುದಿಲ್ಲ. ತಾವು ಅದರ ವಿಚಾರ ಯೋಚಿಸಬೇಕಾದ್ದಿಲ್ಲ’ ಎಂದರು. ಅಮಲ್ದಾರರಿಂದ ಬೀಳ್ಕೊಂಡು ಮನೆಗೆ ಬಂದ ಸುಬ್ಬಣ್ಣನವರ ಮನಸ್ಸಿಗೆ ಸ್ವಲ್ಪವೂ ಶಾಂತಿಯಿಲ್ಲದಂತಾಯಿತು. ರಾತ್ರಿಯೆಲ್ಲಾ ಅವರಿಗೆ ನಿದ್ರೆಯೇ ಇಲ್ಲ. ಅವರ ತಲೆ ತುಂಬ ಒಂದೇ ಯೋಚನೆ. ತಮಗೆ ಅವಮಾನವಾದರೆ ಯೋಚಿಸಬೇಕಾದ್ದಿಲ್ಲ; ಆದರೆ ತಮ್ಮ ಆರಾಧ್ಯದೈವ ‘ಶ್ರೀರಾಮಚಂದ್ರನಿಗೆ ಅವಮಾನವಾದರೆ ಹೇಗೆ? ಮರುದಿನ ಬೆಳಗಿನ ಜಾವಕ್ಕೆದ್ದು, ಸ್ನಾನ ಮಾಡಿ, ಮಡಿಯುಟ್ಟು, ಸಂಧ್ಯೆಯಾದ ಮೇಲೆ ರಾಮಾಯಣ ಪಾರಾಯಣವನ್ನು ಪ್ರಾರಂಭಿಸಿದರು. ಅನನ್ಯಭಕ್ತಿಯಿಂದ ಹತ್ತು ದಿನಗಳಲ್ಲಿ ರಾಮಾಯಣ ಪಾರಾಯಣ ಮಾಡಿ, ಪಟ್ಟಾಭಿಷೇಕ ಮುಗಿಸಿದ ಮೇಲೆ ‘ಶ್ರೀರಾಮ! ನೀನು ಭಕ್ತಪರಾಧೀನ! ನಿನ್ನ ಕೀರ್ತಿಗೆ ಕಳಂಕ ಬಾರದಿರಲಿ. ಆ ಮಹಮ್ಮದೀಯ ದಂಪತಿಗಳಿಗೆ ಮಗುವನ್ನು ಅನುಗ್ರಹಿಸು’ ಎಂದು ನಿಶ್ಚಲ ಮನಸ್ಸಿನಿಂದ ಬೇಡಿಕೊಂಡರು. ಆ ಹತ್ತು ದಿನಗಳೂ ಅವರು ಹೊರಗೆಲ್ಲಿಯೂ ಹೋಗದೆ, ದೇವರ ಮುಂದೆಯೇ ಮಡಿಯಲ್ಲಿದ್ದು ತಮ್ಮ ಪೂಜೆಯನ್ನು ಮುಗಿಸಿದರು. ಮರುದಿನ ಶ್ರೀರಾಮನ ಪ್ರಸಾದವನ್ನು ಆ ಮಹಮದೀಯ ದಂಪತಿಗಳಿಗೆ ತೆಗೆದುಕೊಂಡು ಹೋಗಿ ಮುಟ್ಟಿಸಿದರು. ಸುಬ್ಬಣ್ಣನವರ ಭಕ್ತಿಯೋ, ಅಮಲ್ದಾರರ ಬೀಬಿಯ ದೃಢನಂಬಿಕೆಯೋ ಅಥವಾ ಕಾಲವೇ ಕೂಡಿ ಬಂದಿತೋ! ಅಂತೂ ವರ್ಷ ತುಂಬುವಷ್ಟರಲ್ಲಿ ಅಮಲ್ದಾರರ ಬೇಗಂ ಗಂಡು ಮಗುವಿನ ತಾಯಿಯಾದರು. ಆ ದಂಪತಿಗಳ ಸಂತೋಷಕ್ಕೆ ಪಾರವೇ ಇಲ್ಲ. ಮಗು ಹುಟ್ಟಿದ ದಿನ ಊರಿಗೆಲ್ಲ ಸಕ್ಕರೆ ಹಂಚಿದ್ದಾಯಿತು. ಮಸೀದಿಯಲ್ಲಿ, ದೇವಸ್ಥಾನಗಳಲ್ಲಿ ಪ್ರಾರ್ಥನೆಗಳಾದುವು. ಬಡಬಗ್ಗರಿಗೆ -ಫಕೀರರಿಗೆ ದಾನಧರ್ಮಗಳಾದುವು. ಆಗರ್ಭ ಶ್ರೀಮಂತರಾದ ಅವರು ಯಾವ ಕೊರತೆಯೂ ಆಗದಂತೆ ವೈಭವದಿಂದ ಪುತ್ರೋತ್ಸವವನ್ನು ಆಚರಿಸಿದರು. ಮಗುವಿಗೆ ಹೆಸರಿಡಬೇಕಾದ ದಿನ ಒಂದು ತಕರಾರು ಹುಟ್ಟಿತು. ನಾಮಕರಣಕ್ಕೆ ಬಂದಿದ್ದ ಖಾಜಿಗಳು ‘ಯಾವ ಹೆಸರಿಡಬೇಕು?’ ಎಂದು ಕೇಳಿದರು. ದಾಯಾದಿ ಮಾತ್ಸರ್ಯ 183 ಒಳಗಿನಿಂದ ಕೂಡಲೇ ಉತ್ತರ ಬಂತು ‘ಜನಾಬ್ ಸುಬ್ಬಣ್ಣ’. ನೆರೆದಿದ್ದವರೆಲ್ಲ ಅವಾಕ್ಕಾದರು. ಮುಸಲ್ಮಾನ ಹುಡುಗನಿಗೆ ‘ಸುಬ್ಬಣ್ಣ’ ಎಂದು ಹೆಸರಿಡುವುದು ಅವರಾರ ಊಹೆಗೂ ಸಿಲುಕದಾಗಿತ್ತು. ಅಮಲ್ದಾರರು ಜನಾನದೊಳಗೆ ಬಂದು ‘ಇದೇನು ಬೀಬಿ? ಸುಬ್ಬಣ್ಣ ಅಂತ ಹೆಸರಿಡಬೇಕು ಅಂತೀಯಲ್ಲ. ನಮ್ಮವರು ಅದನ್ನು ಕೇಳಿ ನಗುವುದಿಲ್ಲವೆ? ಬೇರೆ ಯಾವುದಾದರೂ ಹೆಸರನ್ನು ಸೂಚಿಸು’ ಎಂದು ಹೆಂಡತಿಗೆ ಹೇಳಿದರು. ಬೀಬಿ ಹೇಳಿದಳು - ‘ನಿಮಗೂ ಭೇದಬುದ್ಧಿ ಬಂದಿತೇನು? ರಾಮ-ರಹೀಮರಿಗೆ ಭೇದವಿಲ್ಲವೆನ್ನುವ ನೀವೇ ಹೀಗೆ ಹೇಳುತ್ತೀರಾ? ಸುಬ್ಬಣ್ಣನವರ ಪ್ರಾರ್ಥನೆಯಿಂದ ತಾನೆ ನಮಗೆ ಮಗುವಾದುದು? ಸುಬ್ಬಣ್ಣ ಆದರೆ ಏನು? ಸುಬಾನ್ ಆದರೆ ಏನು? ಅದರಲ್ಲಿ ಏನು ವ್ಯತ್ಯಾಸ? ಯಾರನ್ನು ಮರೆತರೂ ನಾನು ಸುಬ್ಬಣ್ಣನವರನ್ನು ಮರೆಯುವುದಕ್ಕೆ ಸಾಧ್ಯವೆ? ಅದಕ್ಕಾಗಿಯೇ ನಾನು ಸುಬ್ಬಣ್ಣ ಎಂದು ಹೇಳಿದ್ದು. ಮಗುವಿನ ನೆಪದಿಂದಲಾದರೂ ನಾವು ಮತ್ತೆ ಮತ್ತೆ ಅವರನ್ನು ನೆನೆಸಿಕೊಳ್ಳುತ್ತಾ ಇರಬಹುದು’ ಎಂದಳು. ಆಗ ಸಾಹೇಬರು ನೀನು ಹೇಳುವುದನ್ನು ನಾನು ಒಪ್ಪುತ್ತೇನೆ. ಆದರೆ ಸುಬ್ಬಣ್ಣ ಎಂಬ ಹೆಸರನ್ನು ನಮ್ಮವರು ಯಾರೂ ಒಪ್ಪುವುದಿಲ್ಲ. ನೀನೇ ಹೇಳಿದೆಯಲ್ಲಾ - ಸುಬ್ಬಣ್ಣ ಏನು, ಸುಬಾನ್ ಏನು ಎಂದು. ಸುಬಾನ್ ಎಂತಲೇ ಇರಲಿ. ಅದರಂತೆ ಮಗುವಿಗೆ ಸುಬಾನ್ ಎಂದು ಹೆಸರಾಯಿತು. ಬೀಬಿ ಮಾತ್ರ ಮಗುವನ್ನು ‘ಸುಬ್ಬಣ್ಣ’ ಎಂತಲೇ ಕರೆಯುತ್ತಿದ್ದಳು. ಮಗುವಿಗೆ ಮೂರು ತಿಂಗಳಾದ ಮೇಲೆ ಗಂಡಹೆಂಡಿರಿಬ್ಬರೂ ಸಮಾಲೋಚಿಸಿಕೊಂಡು ಮಗುವಿನೊಂದಿಗೆ ಗಾಡಿಯಲ್ಲಿ ತಳುಕಿಗೆ ಪ್ರಯಾಣ ಮಾಡಿದರು. ಗಾಡಿ ನೇರವಾಗಿ ಸುಬ್ಬಣ್ಣನವರ ಮನೆಯ ಮುಂದೆ ನಿಂತಿತು. ಗಾಡಿಯಿಂದಿಳಿದ ದಂಪತಿಗಳು ಮಗುವನ್ನೆತ್ತಿಕೊಂಡು ನೇರವಾಗಿ ಮನೆಯೊಳಕ್ಕೆ ಬಂದರು. ಅವರ ಹಿಂದೆ ಇಬ್ಬರು ಜವಾನರು ಜರತಾರಿ ಬಟ್ಟೆಯನ್ನು ಹೊದಿಸಿದ ಎರಡು ತಟ್ಟೆಗಳನ್ನು ಹೊತ್ತುಕೊಂಡು ಬಂದರು. ಆಗ ತಾನೆ ದೇವತಾರ್ಚನೆ ಮುಗಿಸಿ ಹೊರಗೆ ಬಂದ ಸುಬ್ಬಣ್ಣನವರು ಮನೆಗೆ ಬಂದ ಮಹಮದೀಯ ದಂಪತಿಗಳನ್ನು ಕುರಿತು, ಆಶ್ಚರ್ಯದಿಂದ ತಾವೇ ಪಡಸಾಲೆಯಲ್ಲಿ ಒಂದು ಜಮಖಾನೆ ಹಾಸಿದರು ‘ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂತಾಯಿತು. ತಮ್ಮಂತಹವರು ಬಂದರೆ ಕೂಡಿಸಲು ಸರಿಯಾದ ಆಸನ ಸೌಕರ್ಯವೂ ನಮ್ಮ ಮನೆಯಲ್ಲಿಲ್ಲ. ದಯವಿಟ್ಟು ಅನ್ಯಥಾ ಭಾವಿಸದೆ ಈ ಜಮಖಾನೆಯ ಮೇಲೆ ಕುಳಿತುಕೊಳ್ಳಬೇಕು’, ಎಂದು ಸುಬ್ಬಣ್ಣನವರು ಕೈ ಮುಗಿದರು. 184 ಮೂರು ತಲೆಮಾರು ‘ಅಷ್ಟೆಲ್ಲ ಉಪಚಾರ ಬೇಡ ಸುಬ್ಬಣ್ಣನವರೆ. ನಮಗೆ ಸರ್ಕಾರದವರು ಒಂದು ಪದವಿ ಅನುಗ್ರಹ ಮಾಡಿರಬಹುದು. ಆದರೆ ನಿಮಗೆ ಜಗತ್‍ಸ್ವಾಮಿಯಾದ ಭಗವಂತ ನಮಗಿಂತ ನೂರ್ಮಡಿ ದೊಡ್ಡ ಪದವಿಯನ್ನು ಅನುಗ್ರಹ ಮಾಡಿದ್ದಾನೆ. ನಾವು ನಿಮ್ಮ ಉಪಕಾರವನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವೆ? ದೊಡ್ಡ ಮನಸ್ಸು ಮಾಡಿ ನಮ್ಮ ವಂಶವನ್ನೇ ಉದ್ಧಾರ ಮಾಡಿದಿರಿ. ಈ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಸಾಧ್ಯವೆ? ದಯವಿಟ್ಟು ನಮ್ಮ ಈ ಅಲ್ಪಕಾಣಿಕೆಯನ್ನು ಸ್ವೀಕಾರ ಮಾಡಿದರೆ ನಮ್ಮ ಮನಸ್ಸಿಗೆ ತುಂಬ ಸಂತೋಷವಾಗುತ್ತದೆ. ತಮ್ಮ ದರ್ಶನ ಮಾಡಬೇಕೆಂದು ನಮ್ಮ ಬೀಬಿಯವರು ತುಂಬ ಆಸೆಪಟ್ಟಿದ್ದರು. ಅದಕ್ಕಾಗಿ ಈ ದಿನ ಅವರನ್ನೂ ಕರೆದುಕೊಂಡು ಬಂದಿದ್ದೇನೆ. ದೊಡ್ಡವರನ್ನು ದರ್ಶನ ಮಾಡುವಾಗ ಬರಿಯಕೈಲಿ ಹೋಗಬಾರದೆಂದು ತಮ್ಮಂತಹವರು ಹೇಳುತ್ತಾರೆ. ಅದಕ್ಕಾಗಿ ಈ ಅಲ್ಪಕಾಣಿಕೆಯನ್ನು ತಂದಿದ್ದೇನೆ’ ಎಂದು ಹೇಳಿ, ಮುಂದಿದ್ದ ತಟ್ಟೆಗಳ ಮೇಲಿನ ಹೊದಿಕೆಯನ್ನು ತೆಗೆದರು. ಒಂದು ತಟ್ಟೆಯ ತುಂಬ ಬೆಳ್ಳಿಯ ರೂಪಾಯಿಗಳು, ಮತ್ತೊಂದು ತಟ್ಟೆಯಲ್ಲಿ ಹೂವು, ಹಣ್ಣು, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ, ತೆಂಗಿನಕಾಯಿ, ತಾಂಬೂಲ. ಸುಬ್ಬಣ್ಣನವರು ಒಂದು ಕ್ಷಣ ಎರಡೂ ತಟ್ಟೆಗಳನ್ನು ನೋಡಿದರು. ಅನಂತರ ಅಮಲ್ದಾರರ ಕಡೆ ತಿರುಗಿ ‘ಸ್ವಾಮಿ, ಈ ಎರಡನೆಯ ತಟ್ಟೆಯನ್ನು ತೆಗೆದುಬಿಡಿ. ನನ್ನ ರಾಮನಿಗೆ ಬರಿಯ ಹಣ್ಣು -ಹೂವು ಸಾಕು. ಭಕ್ತಿಗಿಂತ ದೊಡ್ಡ ಕಾಣಿಕೆಯನ್ನು ಅವನು ಅಪೇಕ್ಷಿಸುವುದಿಲ್ಲ. ಈ ಹಣವನ್ನು ದೀನ-ದರಿದ್ರರಿಗೆ ದಾನ ಮಾಡಿ. ನಮ್ಮ ರಾಮನಿಗೆ ತೃಪ್ತಿಯಾಗುತ್ತದೆ’ ಎಂದು ಹೇಳಿ, ಲಕ್ಷ್ಮೀದೇವಮ್ಮನವರನ್ನು ಕರೆದು, ಹಣ್ಣು -ಹೂವಿನ ತಟ್ಟೆಯನ್ನು ಒಳಕ್ಕೆ ತೆಗೆದುಕೊಂಡು ಹೋಗಿ ಖಾಲಿ ತಟ್ಟೆಯನ್ನು ಹಿಂದಕ್ಕೆ ತಂದುಕೊಡುವಂತೆ ಹೇಳಿದರು. ಅಕ್ಬರ್ ದಂಪತಿಗಳು ಎಷ್ಟು ಕೇಳಿಕೊಂಡರೂ ಸುಬ್ಬಣ್ಣನವರು ಆ ಹಣವನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ದೊಡ್ಡ ಸಂಸಾರವನ್ನು ಬಡತನದಲ್ಲಿ ತೂಗಿಸಿಕೊಂಡು ಹೋಗುತ್ತಿದ್ದ ಸುಬ್ಬಣ್ಣನವರಿಗೆ ಯಾವುದಾದರೂ ಒಂದು ರೀತಿಯಲ್ಲಿ ಸಹಾಯ ಮಾಡಬೇಕೆಂದು ಅಕ್ಬರ್ ಸಾಹೇಬರ ಆಸೆ. ಆದರೆ ಆ ಕಾರಣವಾಗಿ ಯಾವ ಸಹಾಯವನ್ನೂ ಸ್ವೀಕರಿಸಲು ಸುಬ್ಬಣ್ಣನವರು ಒಪ್ಪುವವರಲ್ಲ. ‘ನಾನು ಯಾರಿಂದಲೂ ಯಾವ ದಾನವನ್ನೂ ಸ್ವೀಕರಿಸುವವನಲ್ಲ. ನನಗೆ ಕೊಡಬೇಕಾದುದನ್ನು ಭಗವಂತ ಕೊಡುತ್ತಾನೆ. ಅವನು ಕೊಟ್ಟದ್ದಕ್ಕಿಂತ ಹೆಚ್ಚು ಆಸೆ ಪಡುವುದು ಅಧೋಗತಿಗೆ ಕಾರಣ’ ಎಂದು ಸ್ಪಷ್ಟವಾಗಿ ಹೇಳಿದ್ದರು ಸುಬ್ಬಣ್ಣನವರು. ಅವರ ಋಜುಸ್ವಭಾವ, ದಾಯಾದಿ ಮಾತ್ಸರ್ಯ 185 ತೃಪ್ತಿಗಳನ್ನು ಕಂಡು ಅಮಲ್ದಾರರಿಗೆ ಆಶ್ಚರ್ಯವಾಯಿತು. ಹಣವನ್ನು ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಸುಬ್ಬಣ್ಣನವರ ವಿಚಾರದಲ್ಲಿ ಸುಳ್ಳಾಗಿತ್ತು. ಈ ತೃಪ್ತ ಮನೋಭಾವವನ್ನು ಕಂಡು ಅಕ್ಬರ್ ಸಾಹೇಬರಿಗೆ ಅವರ ಮೇಲಿನ ಗೌರವ ನೂರ್ಮಡಿ ಹೆಚ್ಚಾಯಿತು. ಯಾವುದೇ ರೀತಿಯಲ್ಲಾದರೂ ಸುಬ್ಬಣ್ಣನವರ ಕುಟುಂಬ ನಿರ್ವಹಣೆಗೆ ಸಹಾಯಕವಾಗುವಂತೆ ಏನನ್ನಾದರೂ ಮಾಡಬೇಕು. ಆದರೆ ಹೇಗೆ? ಕೊನೆಗೊಂದು ಯೋಚನೆ ಹೊಳೆಯಿತು. ಸುಬ್ಬಣ್ಣನವರಿಗೆ ಇನ್ನೂ ಜಮೀನಿರಲಿಲ್ಲ. ತಳುಕಿಗೆ ಸಮೀಪದಲ್ಲಿ ಎಲ್ಲಿಯಾದರೂ ಸ್ವಲ್ಪ ಜಮೀನು ಮಾಡಿಕೊಟ್ಟರೆ ಅವರ ಕುಟುಂಬಕ್ಕೆ ಅನುಕೂಲ. ತಾಲ್ಲೂಕಿನ ರೆವಿನ್ಯೂ ಧಣಿಯಾದ ತಮಗೆ ಅದು ಅಸಾಧ್ಯವೂ ಅಲ್ಲ. ಹಾಗೆ ಮಾಡಿಕೊಟ್ಟರೆ ಸುಬ್ಬಣ್ಣನವರು ತಿರಸ್ಕರಿಸುವಂತೆಯೂ ಇಲ್ಲ. ಹೀಗೆ ಆಲೋಚಿಸಿದ ಅಮಲ್ದಾರ್ ಸಾಹೇಬರು ಪಟೇಲ ಶಾನುಭೋಗರನ್ನು ಕರೆಸಿ, ಅವರೊಡನೆ ಸಮಾಲೋಚಿಸಿದರು. ಪಟೇಲ ಗುರುಸಿದ್ದಪ್ಪ ಅಮಲ್ದಾರರಿಗೆ ಹೇಳಿದ-’ಸ್ವಾಮಿ, ಹೊಸಹಳ್ಳಿಯ ಹಾಳೂರು ಬೆಚಾರಕ್ ಗ್ರಾಮ. ಅಲ್ಲಿಯ ಆಂಜನೇಯ ಗುಡಿಯ ಸುತ್ತಮುತ್ತ ಐವತ್ತು ಎಕರೆ ಜಮೀನು ಸರ್ಕಾರಕ್ಕೆ ಸೇರಿದೆ. ಸ್ವಾಮಿಯವರು ದೊಡ್ಡ ಮನಸ್ಸು ಮಾಡಿದರೆ ಅದನ್ನು ಸುಬ್ಬಣ್ಣನವರಿಗೆ ನಾಮಕಾವಸ್ಥೆ ದರಖಾಸ್ತಿನಲ್ಲಿ ಕೊಡಿಸಬಹುದು’. ಅದನ್ನು ಕೇಳಿ ಅಕ್ಬರ್ ಸಾಹೇಬರಿಗೆ ಸಂತೋಷವಾಯಿತು. ಸುಬ್ಬಣ್ಣನವರಿಂದ ಒಂದು ಅರ್ಜಿ ತೆಗೆದುಕೊಂಡು ತಮಗೆ ಕಳುಹಿಸುವಂತೆ ಅಪ್ಪಣೆ ಮಾಡಿದರು. ಅದರಂತೆಯೇ ಪಟೇಲ ಸುಬ್ಬಣ್ಣನವರಿಂದ ಅರ್ಜಿ ತೆಗೆದುಕೊಂಡು ಅಮಲ್ದಾರ್ ಸಾಹೇಬರಿಗೆ ಕಳುಹಿಸಿದ. ಪಟೇಲ ಕಾನೂನಿನಂತೆ ಒಂದು ಮಹಜರ್ ಮಾಡಿಸಿ ಅರ್ಜಿಯನ್ನು ಶಾನುಭೋಗರಿಗೆ ಕಳುಹಿಸಿದ. ಹೊಸಹಳ್ಳಿ ಮನ್ನೇಕೋಟೆಗೆ ಸೇರಿದ ಗ್ರಾಮ.ಅಲ್ಲಿಯ ಶಾನುಭೋಗ ಸುಬ್ಬಣ್ಣನವರ ದಾಯಾದಿಯಾದ ರಾಮಣ್ಣ. ಸುಬ್ಬಣ್ಣನವರಿಗೆ ಅವಮಾನ ಮಾಡಬೇಕೆಂದು ಆತ ಹೂಡಿದ್ದ ಹೂಟ ತನಗೆ ತಿರುಗುಬಾಣವಾಗಿ, ಸುಬ್ಬಣ್ಣನವರ ಕೀರ್ತಿ -ಪ್ರತಿಷ್ಠೆಗಳು ಮತ್ತಷ್ಟು ಹೆಚ್ಚಾದುದು ರಾಮಣ್ಣನಿಗೆ ನುಂಗಲಾರದ ತುತ್ತಾಗಿತ್ತು. ಉರಿಯುವ ಬೆಂಕಿಗೆ ತುಪ್ಪ ಹೊಯ್ದಂತಾಯಿತು. ಹೀಗಿರುವಾಗ ಅನಾಯಾಸವಾಗಿ ಐವತ್ತು ಎಕರೆ ತರಿ ಜಮೀನು ಅವರಿಗೆ ಸಿಕ್ಕುವ ಸಂದರ್ಭವನ್ನು ಕಂಡು ಆತನ ಹೊಟ್ಟೆಯಲ್ಲಿ ಕಿಚ್ಚು ಕಾಡುಕಿಚ್ಚಾಯಿತು. ಹಳ್ಳಿಯ ಧಣಿಯಾದ ತಾನು ಈ ದಾಯಾದಿಗೆ ಅದು ಎಂದಿಗೂ ಸಿಗದಂತೆ ಮಾಡಬೇಕೆಂದು ಸಂಕಲ್ಪ ಮಾಡಿದ. ಈ ಸಂಕಲ್ಪ ನೆರವೇರುವುದಕ್ಕಾಗಿ ಅಮಲ್ದಾರರಿಗೊಂದು ಪತ್ರ ಬರೆದ, 186 ಮೂರು ತಲೆಮಾರು ‘ಸ್ವಾಮಿ, ಸುಬ್ಬಣ್ಣನವರು ದರಖಾಸ್ತಿನಲ್ಲಿ ಕೇಳಿರುವ ಜಮೀನು ಅಮೂಲ್ಯವಾದುದು, ಅಪಾರವಾದ ಬೆಲೆ ಬಾಳತಕ್ಕದ್ದು. ಅದನ್ನು ದರಖಾಸ್ತಿನಲ್ಲಿ ಕೊಡುವುದಕ್ಕೆ ಗ್ರಾಮಸ್ಥರು ಒಪ್ಪುವುದಿಲ್ಲ. ಅದಕ್ಕೆ ಬದಲಾಗಿ ಆ ಜಮೀನನ್ನು ಹರಾಜು ಹಾಕಿದರೆ ಸರ್ಕಾರಕ್ಕೆ ಹೆಚ್ಚು ಹಣ ಬರುತ್ತದೆ’ ಎಂದು. ಶಾನುಭೋಗ ರಾಮಣ್ಣನ ಕಾಗದವನ್ನು ಕಂಡು ಅಮಲ್ದಾರರು ಕಿಡಿಕಿಡಿಯಾದರು. ಆತನ ಕುಹಕಬುದ್ಧಿಗಾಗಿ ವ್ಯಥೆಯೂ ಆಯಿತು. ಆದರೆ ಇಂತಹ ಪತ್ರ ಬಂದಾಗ ಅಮಲ್ದಾರರಾದರೂ ನಿಸ್ಸಹಾಯಕರಾಗಿದ್ದರು. ಶಾನುಭೋಗನ ಮಾತಿನಂತೆ ಆ ಜಮೀನನ್ನು ಹರಾಜಿಗಿಟ್ಟರೆ, ಯಾರಾದರೊಬ್ಬರು ಅದನ್ನು ಹೆಚ್ಚು ಕ್ರಯಕ್ಕೆ ಕೂಗಬಹುದು! ಈ ಕಪಟಿ ಶಾನುಭೋಗನೇ ಯಾರನ್ನಾದರೂ ನಿಲ್ಲಿಸಿ ಹೆಚ್ಚು ಹಣಕ್ಕೆ ಕೂಗಿಸಬಹುದು. ಹಾಗಾದಾಗ ಸುಬ್ಬಣ್ಣನವರಿಗೆ ಸಹಾಯ ಮಾಡಬೇಕೆಂಬ ತಮ್ಮ ಪ್ರಯತ್ನ ವ್ಯರ್ಥವಾಗುತ್ತದೆ. ಸುಬ್ಬಣ್ಣನವರಿಗೆ ಸಹಾಯವಾಗದಿರುವುದು ಹೋಗಲಿ ಸಹಾಯ ಮಾಡಬೇಕೆಂದು ಹೊರಟ ತಮಗೆ ಎಂಥ ಅವಮಾನ! ಈಗ ಏನು ಮಾಡಬೇಕು? ಅಮಲ್ದಾರರು ಪಟೇಲ ಗುರುಸಿದ್ದಪ್ಪನನ್ನು ಕರೆಸಿ, ಆತನೊಡನೆ ಸಮಾಲೋಚಿಸಿದರು. ಆತ ಹೇಳಿದ -ಮಹಾಸ್ವಾಮಿಯವರು ಇದಕ್ಕಾಗಿ ಅಷ್ಟು ಪೇಚಾಡುವುದು ಬೇಡ. ಕಾನೂನಿನಂತೆ ತಾವು ಜಮೀನನ್ನು ಹರಾಜಿಗೆ ಇಡಿ. ಮುಂದಿನದವನ್ನು ನಾನು ನೋಡಿಕೊಳ್ಳುತ್ತೇನೆ. ಈ ಶಾನುಭೋಗನ ಕೊಂಕುಮಂತ್ರಕ್ಕೆ ತಿರುಮಂತ್ರ ನನಗೆ ಗೊತ್ತಿದೆ’. ಸರ್ಕಾರಿ ಕಾನೂನಿನಂತೆ ಜಮೀನನ್ನು ಹರಾಜಿಗಿಡಲಾಯಿತು. ಗುರುಸಿದ್ದಪ್ಪ ಹೊಸಹಳ್ಳಿಯ ರೈತರನ್ನೆಲ್ಲ ಒಂದೆಡೆ ಸೇರಿಸಿ ‘ಅಯ್ಯಾ, ಈ ಜಮೀನನ್ನು ಸುಬ್ಬಣ್ಣನವರಿಗೆ ಕೊಡಿಸಬೇಕೆಂದು ಅಮಲ್ದಾರರು ಅಪೇಕ್ಷಿಸಿದ್ದಾರೆ. ಆದ್ದರಿಂದ ನೀವು ಯಾರೂ ಹರಾಜಿನಲ್ಲಿ ಕೂಗುವುದಕ್ಕೆ ಹೋಗಬೇಡಿ’ ಎಂದ. ಸುಬ್ಬಣ್ಣನವರನ್ನು ದೇವರಂತೆ ಭಾವಿಸಿದ್ದ ರೈತರು ಯಾರೂ ಹರಾಜು ಕೂಗಲು ಮುಂದೆ ಬರಲಿಲ್ಲ. ಹಳ್ಳಿಯ ಒಬ್ಬಿಬ್ಬರನ್ನು ಎತ್ತಿಕಟ್ಟಲು ರಾಮಣ್ಣ ಪರೋಕ್ಷವಾಗಿ ಪ್ರಯತ್ನಿಸಿದ. ಆದರೆ ಯಾರೂ ಅವನ ಮಾತಿಗೆ ಕಿವಿಗೊಡಲಿಲ್ಲ. ತಾಲ್ಲೂಕು ಧಣಿಗೆ ವಿರುದ್ಧವಾಗಿ ನಡೆದುಕೊಳ್ಳಲು ಅವರಲ್ಲಿ ಯಾರೂ ಸಿದ್ಧರಿರಲಿಲ್ಲ. ಕೊನೆಗೆ ಸುಬ್ಬಣ್ಣನವರ ಹೆಸರಿಗೆ ನಿಂತಿತು. ಶಾನುಭೋಗ ರಾಮಣ್ಣ ಇದನ್ನೆಲ್ಲ ಅಸಹಾಯಕನಾಗಿ ನೋಡುತ್ತ ನಿಂತ. ಸುಬ್ಬಣ್ಣನವರಿಗೆ ಜಮೀನಿಗಿಂತಲೂ ಹೆಚ್ಚಾಗಿ. ಆ ಜಮೀನಿನ ನೆಪದಲ್ಲಿ ದಾಯಾದಿ ಮಾತ್ಸರ್ಯ 187 ಪ್ರತಿ ದಿನವೂ ತಮಗೆ ಆಂಜನೆಯ ದರ್ಶನವಾಗುತ್ತದೆಯೆಲ್ಲಾ ಎಂಬ ಆಕರ್ಷಣೆಯಿತ್ತು. ಅತ್ತ ಅಕ್ಬರ್ ಸಾಹೇಬರ ಅಪೇಕ್ಷೆ ಪೂರೈಸಿದಂತಾಗಿತ್ತು. ಅಮಲ್ದಾರ್ ಸಾಹೇಬರ ಶಿಫಾರಸ್ಸಿನಂತೆ ಜಿಲ್ಲೆಯ ಧಣಿ ಆ ಹರಾಜನ್ನು ಮಂಜೂರು ಮಾಡಿದರು. * * * * 188 ಮೂರು ತಲೆಮಾರು 16. ಸೇಂದಿ ಕಂಟ್ರಾಕ್ಟರ್ ಸುಬ್ಬಣ್ಣನವರ ಕಾಲದಲ್ಲಿ ತಳುಕು ಅಥವಾ ಅದರ ಸುತ್ತಮುತ್ತಲಿನ ಗ್ರಾಮಗಳವರಾರೂ ಕೋರ್ಟು ಕಛೇರಿಗೆ ಹೋಗುತ್ತಿರಲಿಲ್ಲ. ಯಾವ ವಿಚಾರವಿದ್ದರೂ ಸುಬ್ಬಣ್ಣನವರ ಕೋರ್ಟಿನಲ್ಲಿಯೇ ಇತ್ಯರ್ಥವಾಗುತ್ತಿತ್ತು. ಹೀಗಿರಲು ಒಂದು ಬಾರಿ ಆಕಸ್ಮಾತ್ ಆಗಿ ಸುಬ್ಬಣ್ಣನವರೇ ಒಂದು ಕೇಸಿನಲ್ಲಿ ಸಾಕ್ಷಿಯಾಗಿ ಚಿತ್ರದುರ್ಗಕ್ಕೆ ಹೋಗಬೇಕಾಯಿತು. ಜಿಲ್ಲಾಧಿಕಾರಿಗಳ ಕೋರ್ಟಿನಲ್ಲಿ ನಡೆಯುತ್ತಿದ್ದ ಕೇಸು, ಅದು. ಚಿತ್ರದುರ್ಗದಲ್ಲಿ ಸುಬ್ಬಣ್ಣನವರ ಬಂಧುಗಳಿದ್ದುದರಿಂದ ಅವರ ಸ್ನಾನಾಹ್ನಿಕಾದಿಗಳನ್ನು ಮುಗಿಸಿಕೊಂಡು ಕೋರ್ಟಿನ ಬಳಿಗೆ ಹೋದರು. ಕೋರ್ಟಿನಲ್ಲಿ ತಮ್ಮ ಹೆಸರನ್ನು ಕೂಗುತ್ತಲೇ ಸುಬ್ಬಣ್ಣನವರು ಒಳಕ್ಕೆ ಪ್ರವೇಶಿಸಿದರು. ಎಂದೂ ಕೋರ್ಟಿನ ಮುಖವನ್ನೇ ಕಾಣದಿದ್ದ ಅವರಿಗೆ ಮುಂದೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಕೋರ್ಟಿನ ಗುಮಾಸ್ತ ಅವರನ್ನು ಸಾಕ್ಷಿಯ ಕಟಕಟೆಯಲ್ಲಿ ನಿಲ್ಲಿಸಿದ. ಅಲ್ಲಿಯ ಪದ್ಧತಿಯಂತೆ ಆ ಗುಮಾಸ್ತ ಸುಬ್ಬಣ್ಣನವರ ಕೈಯಲ್ಲಿ ಒಂದು ಭಗವದ್ಗೀತೆಯ ಪ್ರತಿಯನ್ನು ಹಿಡಿಸಿ “ಇದನ್ನು ಹಿಡಿದು ‘ಸತ್ಯವನ್ನೇ ಹೇಳುತ್ತೇನೆ’ ಎಂದು ಪ್ರಮಾಣ ಮಾಡಿ” ಎಂದ. ಸುಬ್ಬಣ್ಣನವರು ಇದನ್ನು ಒಪ್ಪಲಿಲ್ಲ. ‘ನಾನು ಸತ್ಯವನ್ನೇ ಹೇಳುತ್ತೇನೆ. ಆದರೆ ಗೀತೆಯನ್ನು ಹಿಡಿದು ಪ್ರಮಾಣ ಮಾಡುವುದಿಲ್ಲ’-ಎಂದು ನಿರ್ಧಾರವಾಗಿ ಹೇಳಿದರು. ಗುಮಾಸ್ತನಿಗೆ ಇದೊಂದು ಹೊಸ ಅನುಭವ. ಇದುವರೆಗೆ ಕೋರ್ಟಿಗೆ ಬಂದ ಯಾರೂ ಹೀಗೆ ಹೇಳಿರಲಿಲ್ಲ. ಆದ್ದರಿಂದ ಆತ ಕೋಪಗೊಂಡು ‘ಇದು ಕೋರ್ಟು. ಇಲ್ಲಿನ ಆಜ್ಞೆಗೆ ಮೀರಿದರೆ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಗದರಿಸಿದ. ಈ ಗದರಿಕೆಯಿಂದ ಸುಬ್ಬಣ್ಣನವರು ಸ್ವಲ್ಪವೂ ವಿಚಲಿತರಾಗಲಿಲ್ಲ. ‘ರಾಮನಿಚ್ಛೆ ಹಾಗಿದ್ದರೆ, ಅದು ಹಾಗೆಯೇ ಆಗಿ ಹೋಗಲಿ, ನಾನಂತೂ ಖಂಡಿತ ಪ್ರಮಾಣ ಮಾಡುವುದಿಲ್ಲ’ ಎಂದರು. ಗುಮಾಸ್ತನಿಗೆ ಏನು ಮಾಡಬೇಕೋ ತೋಚಲಿಲ್ಲ. ಆತನು ನ್ಯಾಯಾಧೀಶರತ್ತ ತಿರುಗಿ ನೋಡಿದ. ಅವರು ಗುಮಾಸ್ತರನ್ನು ಹತ್ತಿರಕ್ಕೆ ಕರೆದು ‘ಅಯ್ಯಾ, ಅವರನ್ನು ಬಲವಂತ ಮಾಡಬೇಡ, ಅವರು ಪ್ರಮಾಣ ಮಾಡುವುದಿಲ್ಲ. ಪ್ರಮಾಣ ಮಾಡಿದ್ದಾರೆ ಎಂದು ನೀನು ಬರೆದುಕೊ. ಅವರು ಸೇಂದಿ ಕಂಟ್ರಾಕ್ಟರ್ 189 ಪ್ರಮಾಣ ಮಾಡದಿದ್ದರೂ ಸತ್ಯವನ್ನೇ ನುಡಿಯುತ್ತಾರೆ ನಾನು ಅವರನ್ನು ಬಲ್ಲೆ’ ಎಂದರು. ಸುಬ್ಬಣ್ಣನವರು ಅಲ್ಲಿಂದ ಹಿಂದಿರುಗಿದ ಮೇಲೆ ತಮ್ಮ ಜೀವಮಾನದಲ್ಲಿ ಮತ್ತೆಂದೂ ಕೋರ್ಟಿಗೆ ಹೋಗಲಿಲ್ಲ, ಅದರ ಮೆಟ್ಟಿಲೂ ಹತ್ತಲಿಲ್ಲ. ಭಗವಾನ್ ಶ್ರೀ ಕೃಷ್ಣನು ‘ಯಸ್ಯಾನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ’- ನಾನು ಯಾರಿಗೆ ಅನುಗ್ರಹಮಾಡಬೇಕೆಂದು ಇಚ್ಛಿಸುತ್ತೇನೆಯೋ ಅಂತಹವರ ಶ್ರೀಮಂತಿಕೆಯನ್ನು ಹರಣ ಮಾಡುತ್ತೇನೆ - ಎಂದು ಹೇಳಿದ್ದಾನೆ. ಈ ಭಗವಂತ ತನ್ನ ಮಾತಿಗನುಸಾರ ಸುಬ್ಬಣ್ಣನವರ ಶ್ರೀಮಂತಿಕೆಯನ್ನು ಹರಣ ಮಾಡಿದ್ದನು. ಶ್ರೀಮಂತಿಕೆ ವಿಚಾರದಲ್ಲಿ ಇಷ್ಟು ಲುಬ್ಧನಾಗಿದ್ದ ಆ ಭಗವಂತ ಮಕ್ಕಳ ವಿಚಾರದಲ್ಲಿ ಮಾತ್ರ ಮಹಾ ಉದಾರಿಯಾಗಿದ್ದ. ಸುಬ್ಬಣ್ಣನವರಿಗೆ ಎಂಟು ಜನ ಗಂಡು ಮಕ್ಕಳು, ಐದು ಜನ ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬನು ಮಾತ್ರ ಚಿಕ್ಕಂದಿನಲ್ಲಿಯೇ ತೀರಿಕೊಂಡಿದ್ದನು. ಮನೆಯ ತುಂಬ ಮಕ್ಕಳು ಮೊಮ್ಮಕ್ಕಳು. ಇಷ್ಟು ದೊಡ್ಡ ಸಂಸಾರಕ್ಕೆ ತಮ್ಮ ವರಮಾನ ಯತಕ್ಕೂ ಸಾಲದು. ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿತ್ತು. ಇಷ್ಟಾದರೂ ಸುಬ್ಬಣ್ಣನವರ ಔದಾರ್ಯಕ್ಕೆ ಮಿತಿಯಿರಲಿಲ್ಲ. ಯಾರಾದರೂ ಬುಡುಬುಡುಕಿಯವನೋ, ದೊಂಬರವನೋ, ಹಗಲು ವೇಷದವನೋ ಬಂದು ಹರಕೆ ಹಾಕಿದರೆ ಸಾಕು, ಕೈಗೆ ಸಿಕ್ಕಿದ್ದನ್ನು ಕೊಟ್ಟು ಬಿಡುವರು. ಏನೂ ಸಿಕ್ಕದಿದ್ದಾಗ ಮೈ ಮೇಲಿದ್ದ ಶಲ್ಯವನ್ನೋ, ಅಂಗಿಯನ್ನೋ ತೆಗೆದು ಕೊಟ್ಟು ಬಿಡುವರು. ಮಧ್ಯಾಹ್ನದ ಹೊತ್ತಿಗೆ ಯಾರು ಬಂದರೂ ಮನೆಯಲ್ಲಿ ಏನಿದೆ, ಏನಿಲ್ಲ ಎಂಬುದನ್ನು ಸ್ವಲ್ಪವೂ ಮನಸ್ಸಿಗೆ ತಂದುಕೊಳ್ಳದೆ - ಅವರನ್ನು ಊಟಕ್ಕೆಬ್ಬಿಸಿ ಬಿಡುವರು. ಎಷ್ಟೋ ಬಾರಿ ಲಕ್ಷ್ಮೀದೇವಮ್ಮನವರು ತಮ್ಮ ಭಾಗದ ಊಟವನ್ನು ಅತಿಥಿಗಳಿಗಿಟ್ಟು ತಾವು ಏಕಾದಶಿ ಮಾಡಿದ್ದುಂಟು. ಸುಬ್ಬಣ್ಣನವರಿಗೆ ಇದಾವುದರ ಪರಿವೆಯೂ ಇರುತ್ತಿರಲಿಲ್ಲ. ಅವರು ಎಂದೂ ಸಂಸಾರದ ವಿಚಾರವನ್ನು ತಲೆಗೆ ಹಚ್ಚಿ ಕೊಂಡವರೇ ಅಲ್ಲ. ‘ನಾಳೆ’ಯ ವಿಚಾರವನ್ನಂತೂ ಅವರು ಎಂದೂ ಮಾಡಿದವರಲ್ಲ. ಮಧ್ಯಾಹ್ನಕ್ಕೆ ಏನೂ ಇಲ್ಲದಾಗ ಲಕ್ಷ್ಮೀದೇವಮ್ಮ ಅವರಿವರ ಮನೆಗಳಿಂದ ಏನನ್ನಾದರೂ ತಂದು ಸಂಸಾರ ನಡೆಸಿದ ದಿನಗಳು ಎಷ್ಟೋ! ಆಕೆಯ ಪ್ರತಿಭೆ ಸರ್ವತೋಮುಖವಾದುದು. ಸುತ್ತಮುತ್ತಿನ ಹತ್ತು ಜನರು ಒಂದಿಲ್ಲ ಒಂದು ಕಾರಣಕ್ಕಾಗಿ ಆಕೆಯನ್ನು ಆಶ್ರಯಿಸಿರುತ್ತಿದ್ದರು. ಆಕೆಯಿಂದ ಉಪಕೃತರಾದವರು ಪ್ರತ್ಯುಪಕಾರ ಮಡಲು ಸದಾ ಸಿದ್ಧರಾಗಿಯೇ ಇರುತ್ತಿದ್ದರು. ಇಷ್ಟರ ಮೇಲೂ ಮುಂದೋರದ ಸಂದರ್ಭ ಬಂದಾಗ ಆಕೆ ಗಂಡನನ್ನು 190 ಮೂರು ತಲೆಮಾರು ಪ್ರಶ್ನಿಸಿದಾಗ ಆತ ಹೇಳುತ್ತಿದ್ದುದು ಒಂದೆ ಮಾತು - ‘ರಾಮುಡುನ್ನಾಡೇ - ರಾಮನಿದ್ದಾನೆ’ ಆದ್ದರಿಂದ ಲಕ್ಷ್ಮೀದೇವಮ್ಮ ಎಂತಹ ಸಂದರ್ಭದಲ್ಲಿಯೂ ಸ್ವಲ್ಪವೂ ಗೊಣಗದೆ, ಪತಿಯ ಇಚ್ಛೆಗೂ ಪ್ರತಿಯಾಗಿ ನಡೆಯದೆ, ಹೇಗೋ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಇಷ್ಟಾದರೂ ಒಂದೊಂದು ಬಾರಿ ಅವರ ಅಸಹನೆಯ ಪರೀಕ್ಷೆ ನಡೆದು ಹೋಗುತ್ತಿತ್ತು. ಸುಬ್ಬಣ್ಣನವರ ಆತ್ಮೀಯರಲ್ಲಿ, ಅಭಿಮಾನಿಗಳಲ್ಲಿ ಶಾನುಭೋಗ ಗೋವಿಂದಪ್ಪನವರೂ ಒಬ್ಬರು. ಅವರು ಸುಬ್ಬಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರು. ಕೆಲದಿನ ಅವರಿಗೆ ಪಾಠವನ್ನು ಹೇಳಿಕೊಟ್ಟವರು. ಅವರು ತುಂಬ ಅನುಕೂಲಸ್ಥರು. ವಯೋಧರ್ಮದಿಂದ ಶಾನುಭೋಗಿಕೆಯನ್ನು ಕೈ ಬಿಟ್ಟಿದ್ದರಾದರೂ, ಅಧಿಕಾರಿದಲ್ಲಿದ್ದಾಗ ಸಾಕಷ್ಟು ಸಂಪಾದಿಸಿಟ್ಟಿದ್ದರು; ಹಾಗೆ ಸಂಪಾದಿಸಿಟ್ಟಿದ್ದ ಆಸ್ತಿಯಿಂದ ಸುಖವಾಗಿ ಸಂಸಾರ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಅವರಿಬ್ಬರೂ ಶಾಲೆಯ ಉಪಾಧ್ಯಾಯರಾಗಿದ್ದರು. ಸಂಪಾದಿಸುತ್ತಿದ್ದರು. ಹೀಗಾಗಿ ಗೋವಿಂದಪ್ಪನವರಿಗೆ ಸಂಸಾರದಲ್ಲಿ ಯಾವ ತಾಪತ್ರಯವೂ ಇರಲಿಲ್ಲ. ವ್ಯವಹಾರಜ್ಞರಾದ ಅವರು ಸುಬ್ಬಣ್ಣನವರ ಮಿತಿಮೀರಿದ ಔದಾರ್ಯವನ್ನು ಕಂಡು ‘ಸುಬ್ಬಣ್ಣ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಪ್ಪ. ದೊಡ್ಡ ಸಂಸಾರಿಯಾದ ನೀನು ಬಂದುದನ್ನು ಬಂದ ಹಾಗೆ ಖರ್ಚು ಮಾಡುತ್ತ ಹೊರಟರೆ ನಾಳೆ ಆದಾಯ ಕಡಿಮೆಯಾದಾಗ ಏನು ಮಾಡುತ್ತಿ?’ ಎಂದು ಆಕ್ಷೇಪಿಸುವರು. ಆಗ ಸುಬ್ಬಣ್ಣನವರು ನಗುತ್ತ ‘ಗುರುಗಳೇ, ಹಾಲಿದ್ದಾಗ ಹಬ್ಬ ಮಾಡಬೇಕು. ನಾಳೆಯ ವಿಚಾರ ನಮಗೇಕೆ? ಅದನ್ನು ಯೋಚಿಸುವವನು ಶ್ರೀರಾಮ, ಅವನು ಹೇಗೋ ನಡೆಸುತ್ತಾನೆ’ ಎಂದು ಹೇಳುವರು. ಇದು ಏತಕ್ಕೂ ಜಗ್ಗದ ಆಸಾಮಿ, ಈತನಿಗೆ ಹೇಳಿ ಏನೂ ಪ್ರಯೋಜನವಿಲ್ಲ ಎಂದು ಅವರು ಸುಮ್ಮನಾಗುವರು. ಆದರೆ ಸಂಸಾರದ ರಥವನ್ನು ತಾನೊಬ್ಬಳೇ ಎಳೆದುಕೊಂಡು ಹೋಗುತ್ತಿರುವ ಲಕ್ಷ್ಮೀದೇವಮ್ಮನ ಪರಿಸ್ಥಿತಿಯನ್ನು ಕಂಡಾಗಲೆಲ್ಲ ಅವರಿಗೆ ಅಯ್ಯೋ ಎನಿಸುತ್ತಿತ್ತು. ಒಂದು ದಿನ ಗೋವಿಂದಪ್ಪನವರು ಗೌಡರ ಗುರುಸಿದ್ದಪ್ಪನೊಂದಿಗೆ ಮಾತನಾಡುತ್ತ ‘ಈ ಸುಬ್ಬಣ್ಣನ ವಿಚಾರವನ್ನು ಏನು ಮಾಡುವುದು ಗುರುಸಿದ್ದಪ್ಪ? ಆತನಿಗೆ ಸಂಸಾರದ ಯೋಚನೆಯೇ ಇಲ್ಲ. ತಾನಾಯಿತು ತನ್ನ ಶ್ರೀರಾಮನಾಯಿತು, ತನ್ನ ಅತಿಥಿ ಸತ್ಕಾರವಾಯಿತು. ಮನೆಯ ಯೋಗಕ್ಷೇಮದತ್ತ ಗಮನವೇ ಇಲ್ಲ. ಏನನ್ನು ಕೇಳಿದರೂ ಆ ರಾಮನನ್ನು ತೋರಿಸುತ್ತಾನೆ. ಪಾಪ ಆ ಲಕ್ಷ್ಮೀದೇವಮ್ಮನನ್ನು ಸೇಂದಿ ಕಂಟ್ರಾಕ್ಟರ್ 191 ನೋಡಿದರೆ ಕರುಳು ಕಿತ್ತು ಬರುತ್ತದೆ. ಅದು ಹೇಗೆ ನಡೆಸುತ್ತಿದ್ದಾಳೋ ಆ ಮಹಾರಾಯಿತಿ, ಆ ಸಂಸಾರವನ್ನು!’ ಎಂದರು. ಗೋವಿಂದಪ್ಪನವರ ಮಾತನ್ನು ಕೇಳುತ್ತಿದ್ದ ಗುರುಸಿದ್ದಪ್ಪನಿಗೆ ಏನೋ ಹೊಳೆದಂತಾಯಿತು. ‘ಒಂದು ಕೆಲಸ ಮಾಡೋಣ ಗೋವಿಂದಪ್ಪನವರೇ. ಹೇಗೂ ಎಕ್ಸೈಜ್ ಇನ್ಸ್‌ಪೆಕ್ಟರ್ ಶಿವರಾಮಯ್ಯನವರಿಗೆ ಸುಬ್ಬಣ್ಣನವರಲ್ಲಿ ಅಪಾರವಾದ ಭಕ್ತಿಗೌರವಗಳಿವೆ. ಅವರಿಗೆ ಒಂದು ಮಾತು ಹೇಳಿದರೆ ಟಾಡಿ ಕಂಟ್ರಾಕ್ಟರ್ ಮುನಿಯಪ್ಪನಿಗೆ ಹೇಳಿ ಅವನ ವ್ಯವಹಾರದಲ್ಲಿ ಸುಬ್ಬಣ್ಣನವರನ್ನು ಪಾಲುದಾರರನ್ನಾಗಿ ಸೇರಿಸಿಕೊಳ್ಳುತ್ತಾನೆ. ಕೈ ತುಂಬ ಹಣ ಬರುತ್ತದೆ. ಅವರ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. ಹೇಗೂ ಅದನ್ನೆಲ್ಲಾ ನೋಡಿಕೊಳ್ಳುವವರು ನೋಡಿಕೊಳ್ಳುತ್ತಾರೆ. ಸುಬ್ಬಣ್ಣನವರಿಗೆ ಬರಬೇಕಾದ ಭಾಗ ಬರುತ್ತದೆ. ಸ್ವಲ್ಪ ಲೆಕ್ಕ ಪತ್ರ ನೋಡಿಕೊಂಡರೆ ಆಯ್ತು. ಇದಕ್ಕೆ ಬಂಡವಾಳವೂ ಬೇಕಾಗಿಲ್ಲ. ಹಾಗೇಕೆ ಮಾಡಬಾರದು?’ ಎಂದ ಗುರುಸಿದ್ದಪ್ಪ. ಆತನೇ ಸುಬ್ಬಣ್ಣನವರಿಗೆ ಆ ವಿಚಾರವನ್ನು ತಿಳಿಸಿ, ಅವರನ್ನು ಒಪ್ಪಿಸಲು ಪ್ರಯತ್ನಿಸಿದ. ಮೊದಲು ಸುಬ್ಬಣ್ಣನವರು ಈ ಸಲಹೆಯನ್ನು ಒಪ್ಪಲಿಲ್ಲ. ‘ಗೋಕುಲಾಷ್ಟಮಿಗೂ ಇಮಾಮಸಾಬಿಗೂ ಏನು ಸಂಬಂಧ? ನನ್ನ ಯೋಗಕ್ಷೇಮವನ್ನು ನನ್ನ ರಾಮ ನೋಡಿಕೊಳ್ಳುತ್ತಾನೆ. ಹೊಟ್ಟೆ ಹೊರೆದುಕೊಳ್ಳಲು ಹೆಂಡ ಮಾರುವುದಕ್ಕೆ ಹೋಗಲೆ ? ಖಂಡಿತ ಸಾಧ್ಯವಿಲ್ಲ’ ಎಂದು ಬಿಟ್ಟರು. ಗುರುಸಿದ್ದಪ್ಪ ಜಿಗುಟು ಇಸಮು. ಸುಬ್ಬಣ್ಣನವರನ್ನು ಕುರಿತು ‘ನೀವೇನು ಅಂಗಡಿಯಲ್ಲಿ ಕುಳಿತು ಹೆಂಡ ಅಳೆದುಕೊಡಬೇಕೆ? ಈಗ ಮುನಿಯಪ್ಪ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆಯೆ? ಅವರೊಬ್ಬ ದೊಡ್ಡ ಕಂಟ್ರಾಕ್ಟರ್, ಯಾರೋ ಮಾರುವವರು ಮಾರುತ್ತಾರೆ, ಅಷ್ಟೆ. ಇಷ್ಟು ಹಣ ಕೊಡಬೇಕೆಂದು ಗೊತ್ತು ಮಾಡಿ ಸೇಂಧಿಯವರಿಗೆ ಕೊಟ್ಟರಾಯಿತು. ಅವರು ವ್ಯಾಪಾರ ಮಾಡಿ ಸರ್ಕಾರಕ್ಕೆ ಕಂದಾಯ ಕಟ್ಟುತ್ತಾರೆ. ನಿಮ್ಮ ಪಾಲಿನ ಹಣವನ್ನು ನಿಮಗೆ ಕೊಡುತ್ತಾರೆ. ನಿಮ್ಮ ಮಾತು ಚೆನ್ನಾಗಿದೆ. ಶಿವ ಕೊಟ್ಟ ಜೋಳಿಗೆ ಎಂದು ಗೂಟಕ್ಕೆ ತಗುಲಿ ಹಾಕಿದರೆ ಆಹಾರ ಬರುತ್ತದೆಯೆ? ಹಾಗೆಯೇ ನಿಮ್ಮ ರಾಮ ಮನೆಗೆ ಬಂದು ಪರಿಚಾರಿಕೆ ಮಾಡುತ್ತಾನೆಯೆ? ಆರು ಪಾಲು ಮನುಷ್ಯರ ಕರ್ತವ್ಯ, ಒಂದು ಪಾಲು ದೇವರ ಸಹಾಯ- ಎಂದು ಹೇಳುತ್ತಾರೆ. ನಿಮ್ಮ ಕರ್ತವ್ಯ ನೀವು ಮಾಡಿದರೆ ದೇವರ ಸಹಾಯವೂ ಸಿಕ್ಕುತ್ತದೆ. ಇದಕ್ಕಾಗಿ ನೀವೇನೂ ಕಡಿದು ಕಟ್ಟೆ ಹಾಕಬೇಕಾಗಿಲ್ಲ’ ಎಂದು ಛೀಗುಟ್ಟಿದ. ಈಗ ಸುಬ್ಬಣ್ಣನವರು ಪಟೇಲನ ಸಲಹೆಯನ್ನು ಒಪ್ಪಿಕೊಳ್ಳಬೇಕಾಯಿತು. ಪಟೇಲರು ಮುನಿಯಪ್ಪನೊಂದಿಗೆ 192 ಮೂರು ತಲೆಮಾರು ಮಾತನಾಡಿ ಅವರನ್ನು ಒಪ್ಪಿಸಿದರು. ಮುನಿಯಪ್ಪ ಸಂತೋಷವಾಗಿಯೇ ಸುಬ್ಬಣ್ಣನವರಿಗೆ ಸಹಾಯ ಮಾಡಲು ಒಪ್ಪಿಯೂ ಒಪ್ಪಿದರು. ಕೆಲವು ವರ್ಷಗಳಕಾಲ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಯಿತು. ಇದರಿಂದ ಮಗನನ್ನು ಓದಿಸಲು ಅನುಕೂಲವಾಯಿತು. ಆದರೆ ಇದ್ದಕ್ಕಿದಂತೆ ತಳುಕಿನ ಸುತ್ತಮುತ್ತ ಪ್ಲೇಗುರೋಗ ಕಾಣಿಸಿಕೊಂಡಿತು. ನೂರಾರು ಜನರು ಆ ಮಾರಿಗೆ ಆಹುತಿಯಾದರು. ಎಷ್ಟೋ ಜನ ದಿಕ್ಕಾಪಾಲಾಗಿ ಓಡಿ ಹೋದರು. ಸೇಂದಿ ಅಂಗಡಿಗಳು ಮುಚ್ಚಿದುವು. ವ್ಯಾಪಾರ ನಿಂತುಹೋಯಿತು. ಸರ್ಕಾರಕ್ಕೆ ಹಣ ಕಟ್ಟುವುದು ನಿಂತುಹೋಯಿತು. ಸಾವಿರಾರು ರೂಪಾಯಿ ಕಂದಾಯ ಬಾಕಿ ನಿಂತಿತು ಕಾನೂನಿನಂತೆ ಗುತ್ತಿಗೇದಾರರಿಂದ ಬರುವ ಹಣ ಬರಲಿಲ್ಲ. ಅವರಿಗೇ ವ್ಯಾಪಾರವಿಲ್ಲದೆ ಅಂಗಡಿಗಳನ್ನು ಮುಚ್ಚಿದಾಗ ಕಂಟ್ರಾಕ್ಟರಿಗೆ ಎಲ್ಲಿಂದ ಹಣ ತಂದು ಕೊಡುತ್ತಾರೆ? ಆದರೆ ಹಾಗೆಂದು ಸರ್ಕಾರ ಸುಮ್ಮನಿರುತ್ತದೆಯೆ? ಸುಬ್ಬಣ್ಣನವರು ಸುಮಾರು ಮೂರು ಸಹಸ್ರ ರೂಪಾಯಿಗಳಷ್ಟು ಹಣವನ್ನು ಸರ್ಕಾರಕ್ಕೆ ಕಟ್ಟಬೇಕಾಯಿತು. ಅವರಿಗೆ ದಿಕ್ಕೇ ತೋಚದಂತಾಯಿತು. ಅವರಿಂದ ಹಣ ವಸೂಲ್ಮಾಡಿ ಸರ್ಕಾರಕ್ಕೆ ಜಮಾ ಮಾಡುವಂತೆ ಸರ್ಕಾರದಿಂದ ಅಮಲ್ದಾರರಿಗೆ ಹುಕುಂ ಬಂತು. ಅಮಲ್ದಾರರು ಸುಬ್ಬಣ್ಣನವರನ್ನು ಕರೆಸಿ ಪರಿಸ್ಥಿತಿಯನ್ನು ವಿವರಿಸಿದರು. ಅಲ್ಪಸ್ವಲ್ಪವಾದ ಹಣವಲ್ಲ. ಅಪಾರವಾದ ಹಣವನ್ನು ಇದ್ದಕ್ಕಿದ್ದಂತೆ ಎಲ್ಲಿಂದ ತರುವುದು? ಸುಬ್ಬಣ್ಣನವರು ಅಮಲ್ದಾರರನ್ನು ಕುರಿತು ‘ಸ್ವಾಮಿ, ಸ್ವಲ್ಪ ಕಾಲಾವಕಾಶವನ್ನು ಕೊಟ್ಟರೆ ಏನಾದರೂ ಪ್ರಯತ್ನ ಮಾಡಿ ನೋಡುತ್ತೇನೆ. ನಿಂತ ಕಾಲಿನಲ್ಲಿ ಅಷ್ಟು ಹಣವನ್ನು ಒದಗಿಸಬೇಕೆಂದರೆ ಹೇಗೆ ಸಾಧ್ಯ? ತಾವು ದೊಡ್ಡ ಮನಸ್ಸು ಮಾಡಬೇಕು’ ಎಂದರು. ಆಗ ಅಮಲ್ದಾರರು ‘ಆಗಲಿ ಸುಬ್ಬಣ್ಣನವರೇ, ನಾನು ಜಿಲ್ಲಾಧಿಕಾರಿಗಳಿಗೆ ಬರೆದು ನೋಡುತ್ತೇನೆ. ಕಾಲಾವಕಾಶವನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಆದರೆ ನೀವು ಸೂಕ್ತವಾದ ಜಾಮೀನು ಕೊಡಬೇಕಾಗುತ್ತದೆ. ಇಷ್ಟು ದೊಡ್ಡ ಮೊತ್ತಕ್ಕೆ ಜಾಮೀನು ನಿಲ್ಲುವವರು ಇದ್ದಾರೆಯೆ?’ ಎಂದು ಕೇಳಿದರು. ಸುಬ್ಬಣ್ಣನವರು ‘ಪ್ರಯತ್ನ ಮಾಡುತ್ತೇನೆ ಸ್ವಾಮಿ. ಇದರ ಮೇಲೆ ಭಗವದಿಚ್ಛೆ. ತಾವು ಕಾಲಾವಕಾಶ ಕೊಡಿಸುವುದಾದರೆ ಜಾಮೀನಿಗಾಗಿ ನಾನು ಪ್ರಯತ್ನಿಸುತ್ತೇನೆ’. ‘ಹಾಗಾದರೆ ಮುಂದಿನ ಜಮಾಬಂದಿಯನ್ನು ತಳುಕಿನಲ್ಲಿಟ್ಟುಕೊಳ್ಳುತ್ತೇನೆ. ಆ ವೇಳೆಗೆ ಜಾಮೀನಿಗೆ ಏರ್ಪಾಡು ಮಾಡುತ್ತೀರಾ?’ ಸೇಂದಿ ಕಂಟ್ರಾಕ್ಟರ್ 193 ‘ಅಂದರೆ ಇನ್ನೆಷ್ಟು ದಿನಗಳಲ್ಲಿ ಜಮಾಬಂದಿ ಇಟ್ಟುಕೊಳ್ಳಬೇಕೆಂದು ಖಾವಂದರ ಅಭಿಪ್ರಾಯ?’ ‘ನಿಮಗೆ ಎಷ್ಟು ದಿನ ವ್ಯವಧಾನ ಬೇಕು?’ ‘ಒಂದು ವಾರ ಕಾಲಾವಕಾಶ ಸಿಕ್ಕಿದರೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ’. ‘ಹಾಗೆಯೇ ಆಗಲಿ. ಇನ್ನು ಹದಿನೈದು ದಿನಕ್ಕೆ ಜಮಾಬಂದಿ ಇಟ್ಟುಕೊಳ್ಳುತ್ತೇನೆ. ಆ ವೇಳೆಗೆ ಜಿಲ್ಲಾಧಿಕಾರಿಗಳಿಂದ ಈ ವ್ಯವಸ್ಥೆಗೆ ಅಪ್ಪಣೆ ಪಡೆಯುತ್ತೇನೆ’. ‘ಬಹಳ ಉಪಕಾರವಾಯಿತು ಸ್ವಾಮಿ. ಆ ವೇಳೆಗೆ ಜಾಮೀನಿಗೆ ಏರ್ಪಾಡು ಮಾಡಲು ಸಾಧ್ಯವಾದ ಪ್ರಯತ್ನ ಮಾಡುತ್ತೇನೆ.’ ಅಮಲ್ದಾರರನ್ನು ನೋಡಿ ಹಿಂದಿರುಗಿ ಬಂದ ಸುಬ್ಬಣ್ಣನವರಿಗೆ ‘ಯಾರನ್ನು ಜಾಮೀನು ಕೇಳುವುದು? ಅಷ್ಟು ಭಾರಿ ಹಣಕ್ಕೆ ಜಾಮೀನಾಗಲು ಯಾರು ಒಪ್ಪುತ್ತಾರೆ? ನನ್ನ ಆರ್ಥಿಕ ಸ್ಥಿತಿ ಎಲ್ಲರಿಗೂ ತಿಳಿದಿರುವುದೇ?’ ಈ ಚಿಂತೆಯಲ್ಲಿ ಸುಬ್ಬಣ್ಣನವರಿಗೆ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಹಗಲಿರುಳು ಯಾರನ್ನು ಕೇಳಲಿ ಎಂಬ ಪ್ರಶ್ನಾರ್ಥಕ ಚಿಹ್ನೆ ವಿಕಟ್ಟಾಟ್ಟಹಾಸ ಮಾಡುತ್ತ ಎದುರಿಗೆ ನಿಲ್ಲುತ್ತಿತ್ತು. ಮನ್ನೇಕೋಟೆಯ ಶಾನುಭೋಗ ರಾಮಣ್ಣ ಇಂತಹ ಸಂದರ್ಭಕ್ಕಾಗಿಯೇ ಕಾಯುತ್ತಾ ಕುಳಿತಿದ್ದ. ಹಿಂದೆ ಸುಬ್ಬಣ್ಣನವರಿಗೆ ಅವಮಾನ ಮಾಡಬೇಕೆಂದು ಅಕ್ಬರ್ ಸಾಹೇಬರ ಬೇಗಂರವರಲ್ಲಿ ಮಾಡಿದ ಪ್ರಯತ್ನ ತನಗೇ ತಿರುಗುಬಾಣವಾಗಿ ಪರಿಣಮಿಸಿ ಸುಬ್ಬಣ್ಣನವರ ಕೀರ್ತಿ ಮತ್ತಷ್ಟು ಹೆಚ್ಚಿತ್ತು. ಈ ನುಂಗಲಾರದ ತುತ್ತು ರಾಮಣ್ಣನಿಗೆ ಸಿಡಿಲಿನ ಬಡಿತದಂತಿತ್ತು. ಯಾವ ರೀತಿಯಿಂದಲಾದರೂ ಸುಬ್ಬಣ್ಣನವರಿಗೆ ಅವಮಾನ ಮಾಡಿ ತನ್ನ ದಾಯಾದಿ ಮಾತ್ಸರ್ಯವನ್ನು ತೀರಿಸಿಕೊಳ್ಳಲು ಅವನು ಕಾಯುತ್ತಿದ್ದ. ಸುಬ್ಬಣ್ಣನವರಿಗೆ ಜಾಮೀನು ಬೇಕಾಗಿದೆ ಎಂಬ ವಿಚಾರ ಶಾನುಭೋಗನಾದ ಆತನಿಗೆ ಸ್ವಾಭಾವಿಕವಾಗಿಯೇ ತಿಳಿದಿತ್ತು. ಈ ನೆಪವನ್ನೇ ಹಿಡಿದು ಆತ ಒಂದು ದಿನ ಬೆಳಿಗ್ಗೆ ಸುಬ್ಬಣ್ಣನವರ ಮನೆಗೆ ಬಂದ. ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ ಮನೆಗೆ ಬಂದ ರಾಮಣ್ಣನನ್ನು ಕಂಡು ಸುಬ್ಬಣ್ಣನವರಿಗೆ ಏಕಕಾಲದಲ್ಲಿ ಕುತೂಹಲ, ಆಶ್ಚರ್ಯಗಳೆರಡೂ ಉಂಟಾದುವು. ‘ಇದೇನು ರಾಮಣ್ಣ, ಬೀಸುವ ಕಲ್ಲು ಗಾಳಿಗೆ ಬಂದ ಹಾಗೆ ಅಪರೂಪಕ್ಕೆ ನನ್ನ ಮನೆಗೆ ಬಂದು ಬಿಟ್ಟೆಯಲ್ಲ! ಏನು ಸಮಾಚಾರೆ?’ ಎಂದು ಕೇಳಿದರು. ‘ಏನೋ ಒಂದು ಗಾಳಿ ವರ್ತಮಾನ ಕೇಳಿದೆ. ಅದು ನಿಜವೋ ಸುಳ್ಳೋ ಎಂದು ತಿಳಿದುಕೊಳ್ಳಲು ಬಂದೆ. ನೀನೇನೋ ಸರ್ಕಾರಕ್ಕೆ ಖಿಸ್ರಿನ ಹಣ ಕಟ್ಟಬೇಕಂತಲ್ಲ! ಅದಕ್ಕೆ ಅಮಲ್ದಾರರು ಜಾಮೀನು ಕೇಳಿದ್ದಾರೆ ಅಂತ ಯಾರೋ 194 ಮೂರು ತಲೆಮಾರು ಹೇಳಿದರು. ಸಮಾಚಾರ ಏನೂಂತ ತಿಳಿದುಕೊಂಡು ಹೋಗೋಣ ಅಂತ ಬಂದೆ.’ ‘ಹೌದು ಅಣ್ಣಯ್ಯ, ಆದರೆ ಯಾರನ್ನು ಜಾಮೀನಿಗೆ ಒಪ್ಪಿಸುವುದು? ನನಗೆ ಏನೂ ಗೊತ್ತಾಗುತ್ತಿಲ್ಲ. ಅಷ್ಟು ದೊಡ್ಡ ಮೊತ್ತಕ್ಕೆ ಜಾಮೀನಾಗಲು ಯಾರು ಒಪ್ಪುತ್ತಾರೆ ಅಣ್ಣಯ್ಯ?’ ‘ಅದಕ್ಯಾಕೆ ಅಷ್ಟೊಂದು ಯೋಚಿಸುತ್ತಿ ಸುಬ್ಬಣ್ಣ? ಅವರಿವರು ಯಾಕೆ ಬೇಕು? ನಾನೇ ಜಾಮೀನು ನಿಲ್ಲುತ್ತೇನೆ. ನಾನೇನು ಹೊರಗಿನವನೆ? ಕಷ್ಟ- ಸುಖಗಳಲ್ಲಿ ಒಬ್ಬರಿಗೊಬ್ಬರು ನೆರವಾಗದಿದ್ದರೆ ನಾವೆಂತಹ ಅಣ್ಣತಮ್ಮಂದಿರು? ನೀನೇನೂ ಯೋಚನೆ ಮಾಡಬೇಡ. ಜಮಾಬಂದಿಯ ದಿನ ಹೇಗೂ ನಾನು ಬಂಗಲೆಯ ಬಳಿ ಇರುತ್ತೇನಲ್ಲ! ಜಾಮೀನಿಗೆ ಕೂಗಿದಾಗ ನಾನೇ ಬಂದು ಜಾಮೀನು ಕೊಡುತ್ತೇನೆ’. ‘ಬೆಳ್ಳಗಿರುವುದೆಲ್ಲ ಹಾಲು’ ಎಂಬ ಸರಳ ಸ್ವಭಾವದ ಸುಬ್ಬಣ್ಣನವರಿಗೆ ರಾಮಣ್ಣನ ಕುಟಿಲಬುದ್ಧಿ ಅರ್ಥವಾಗಲಿಲ್ಲ. ಹಾಗಾಗಿ ಅವರು ಬೇರೆ ಯಾವ ಪ್ರಯತ್ನವನ್ನೂ ಮಾಡದೆ ರಾಮಣ್ಣನೇ ತಮ್ಮ ಪಾಲಿನ ಶ್ರೀರಾಮನೆಂದು ನಂಬಿ ಹಾಯಾಗಿದ್ದುಬಿಟ್ಟರು. ಇಂದು ತಳುಕಿನ ಬಂಗಲೆಯಲ್ಲಿ ಜಮಾಬಂದಿ. ಸಾಮಾನ್ಯವಾಗಿ ಜಮಾಬಂದಿಯ ದಿನ ರೈತರು ತಮ್ಮ ಅಹವಾಲುಗಳನ್ನು, ಕುಂದುಕೊರತೆಗಳನ್ನು ಖುದ್ದಾಗಿ ಅಧಿಕಾರಿಗಳಿಗೆ ತಿಳಿಸುವ ವಾಡಿಕೆ. ಅದರಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ನೂರಾರು ರೈತರು ಬಂಗಲೆಯ ಮುಂದುಗಡೆ ಜಮಾಯಿಸಿದ್ದಾರೆ. ಹೋಬಳಿಯ ಪಟೇಲ ಶಾನುಭೋಗರು ತಮ್ಮ ಲೆಕ್ಕಪತ್ರಗಳನ್ನು ತಾಲ್ಲೂಕು ಗುಮಾಸ್ತರಿಗೆ ಒಪ್ಪಿಸಿ, ಲೆಕ್ಕ ಮೊಕಾಬಿಲಿ ಮಾಡಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ನೆರೆದ ಆ ಗುಂಪಿನಲ್ಲಿ ಸುಬ್ಬಣ್ಣನವರು ಶಾನುಭೋಗ ರಾಮಣ್ಣನನ್ನು ಹುಡುಕುತ್ತಿದ್ದಾರೆ. ಎಲ್ಲ ಪಟೇಲ, ಶಾನುಭೋಗರು ಅಲ್ಲಿಯೇ ಇದ್ದು ಮನ್ನೇಕೋಟೆಯ ಶಾನುಭೋಗ ಮಾತ್ರ ಅಲ್ಲಿ ಎಲ್ಲಿಯೂ ಪತ್ತೆ ಇಲ್ಲ. ಆತ ಬೇಕೆಂದೇ ಚಕ್ಕರ್ ಹೊಡೆದಿದ್ದಾನೆ. ಸುಬ್ಬಣ್ಣನವರಿಗೆ ತುಂಬ ನಿರಾಸೆಯಾಯಿತು. ಯಾರನ್ನೋ ಕೇಳಿದಾಗ ಆ ದಿನ ರಾಮಣ್ಣ ಅನಾರೋಗ್ಯದ ನಿಮಿತ್ತ ಜಮಾಬಂದಿಗೆ ಬಂದಿಲ್ಲವೆಂದು ಗೊತ್ತಾಯಿತು. ಅವಮಾನದಿಂದ ಕುದಿಯುತ್ತ ಸುಬ್ಬಣ್ಣನವರು ತಲೆಯ ಮೇಲೆ ಮುಸುಕು ಹೊದೆದು ಮನೆಗೆ ಹೋದರು. ರಾಮಣ್ಣ ಮರೆಸಿ ಕೊರಳನ್ನು ಕೊಯ್ದುದು, ಅದಕ್ಕೂ ಹೆಚ್ಚಾಗಿ ತಮ್ಮ ಮಾತು ಸೇಂದಿ ಕಂಟ್ರಾಕ್ಟರ್ 195 ಸುಳ್ಳಾದುದು ಸುಬ್ಬಣ್ಣನವರ ಮನಸ್ಸನ್ನು ಅಪಾರವಾಗಿ ಬಾಧಿಸಿತು. ಜಾಮೀನು ಕೊಡಲು ಅಸಮರ್ಥನಾದಾಗ ಮನೆಯನ್ನು ಜಫ್ತಿ ಮಾಡುವುದು ಮುಂದಿನ ಕ್ರಮ. ಇದು ಸುಬ್ಬಣ್ಣನವರ ಭಾವನೆ. ಮನೆಗೆ ಬರುತ್ತಲೇ ಅವರು ಸ್ನಾನ ಮಾಡಿ, ಮಡಿಯುಟ್ಟು ದೇವರ ಮುಂದೆ ಕಣ್ಣೀರಿಡುತ್ತ ‘ಇಂದಿಗೆ ನೀನೂ ನನ್ನನ್ನು ಕೈ ಬಿಟ್ಟೆಯಾ ರಾಮ? ಆಯಿತು ನಿನ್ನ ಲೀಲೆ ಏನಿದೆಯೋ ಅದು ನಡೆಯಲಿ. ನನ್ನಿಂದ ಇನ್ನು ಮುಂದೆ ಈ ಮನೆಯಲ್ಲಿ ಪೂಜೆ ಮಾಡಿಕೊಳ್ಳಲು ನಿನಗೆ ಇಷ್ಟವಿಲ್ಲದಿದ್ದಲ್ಲಿ ನಾನೇನು ಮಾಡಬಲ್ಲೆ?’ ದುಃಖ ಭಾರದಿಂದ ಅವರು ತಮ್ಮ ಪಾರಾಯಣ ಗ್ರಂಥ ರಾಮಾಯಣವನ್ನು ಮಂದಾಸನದ ಮುಂದಿಟ್ಟುಕೊಂಡು ಕುಳಿತರು. ಅತ್ತ ಜಮಾಬಂದಿಯಲ್ಲಿ ಸುಬ್ಬಣ್ಣನವರ ಹೆಸರನ್ನು ಕೂಗಿದಾಗ ಅವರು ಹಾಜರಾಗಲಿಲ್ಲ. ಆಳನ್ನು ಕಳುಹಿಸಿ ನೋಡಿಸಿದಾಗ ಸುತ್ತಮುತ್ತ ಎಲ್ಲಿಯೂ ಅವರಿರಲಿಲ್ಲ. ಅಲ್ಲಿ ನೆರೆದಿದ್ದ ರೈತರಲ್ಲಿ ಹೊಸಹಳ್ಳಿಯ ಗೊಲ್ಲರ ಕರಡಪ್ಪ, ಸುಬ್ಬಣ್ಣನವರನ್ನು ಕೂಗಿದ್ದನ್ನು ಕಂಡು ‘ಏನು ಸಮಾಚಾರ’ ಎಂದು ಯಾರನ್ನೋ ಕೇಳಿದ. ಯಾರಿಗೂ ವಿಷಯವೇನೆಂಬುದು ಸರಿಯಾಗಿ ತಿಳಿದಿರಲಿಲ್ಲ. ‘ಸುಬ್ಬಣ್ಣನವರು ಸರ್ಕಾರಕ್ಕೆ ಹಣ ಕಟ್ಟಬೇಕಾಯಿತಂತೆ; ಅದಕ್ಕೆ ಜಾಮೀನು ಕೊಡಲು ಸಾಧ್ಯವಾಗದೆ ತಪ್ಪಿಸಿಕೊಂಡಿದ್ದಾರಂತೆ’-ಎಂದು ಯಾರೋ ಒಬ್ಬರು ಹೇಳಿದರು. ಮತ್ತೊಬ್ಬರು ‘ಸುಬ್ಬಣ್ಣನವರ ಮನೆ ಹರಾಜಿಗೆ ಬಂದಿದೆಯಂತೆ! ಅದಕ್ಕಾಗಿ ತಪ್ಪಿಸಿಕೊಂಡಿದ್ದಾರಂತೆ’ ಎಂದರು. ಈ ಹೇಳಿಕೆಗಳಿಂದ ಒಂದು ವಿಚಾರ ಸ್ಪಷ್ಟವಾದ ಹಾಗಾಯಿತು-ಸುಬ್ಬಣ್ಣನವರು ಸರ್ಕಾರಕ್ಕೆ ಹಣ ಕಟ್ಟಬೇಕು. ಅದಕ್ಕಾಗಿ ಜಾಮೀನು ಕೊಡಬೇಕು. ಇಲ್ಲವಾದರೆ ಅವರ ಮನೆ ಹರಾಜಿಗೇಳುತ್ತದೆ. ಇದನ್ನು ಸರಿಯಾಗಿ ತಿಳಿಯುವುದಕ್ಕಾಗಿ ಕರಡಪ್ಪ ತಾನೇ ಅಮಲ್ದಾರರ ಬಳಿಗೆ ಹೋದ. ಸಾಹೇಬರ ಮುಂದೆ ಕಂಬಳಿ ಹಾಸಿ, ಅಡ್ಡ ಬಿದ್ದ ಆ ರೈತನನ್ನು ಕಂಡು ಅಮಲ್ದಾರರು ‘ನಿನ್ನ ಅಹವಾಲೇನಪ್ಪ’ ಎಂದು ಕೇಳಿದರು. ನನ್ನದೇನೂ ಅಹವಾಲಿಲ್ಲ ಸ್ವಾಮಿ, ಏನೋ ಒಂದು ವರ್ತಮಾನ ಕಿವಿಗೆ ಬಿತ್ತು, ನಮ್ಮ ‘ಸುಬ್ಬಣ್ಣನವರೇನೋ ಸರ್ಕಾರಕ್ಕೆ ಹಣ ಕೊಡಬೇಕಂತೆ. ಅದಕ್ಕೆ ಜಾಮೀನು ಬೇಕು ಅಂತ ಯಾರೋ ಹೇಳಿದರು. ಹಾಗೇನಾದರೂ ಇದ್ದರೆ ಜಾಮೀನಾಗೋಣಾಂತ ಬಂದಿದ್ದೇನೆ’. ಸಾಹೇಬರು ಅವನನ್ನು ದಿಟ್ಟಿಸಿ ನೋಡಿದರು. ಮೊಳಕಾಲಿನಿಂದ ಮೇಲಕ್ಕೆ ಒಂದು ಚಡ್ಡಿ, ಹೆಗಲ ಮೇಲೊಂದು ಕರಿಯ ಕಂಬಳಿ, ತಲೆಯ ಮೇಲೊಂದು ಬಿಳಿಯ ರುಮಾಲು. ಇಂಥ ವ್ಯಕ್ತಿಯನ್ನು ಮೂರು ಸಾವಿರ ರೂಪಾಯಿಗಳಿಗೆ 196 ಮೂರು ತಲೆಮಾರು ಜಾಮೀನಾಗಿ ಒಪ್ಪಿಕೊಳ್ಳಲು ಯಾವ ಹುಚ್ಚ ತಾನೇ ಸಮ್ಮತಿಸುತ್ತಾನೆ? ಆದ್ದರಿಂದ ಅಮಲ್ದಾರರು- ‘ಏನಪ್ಪ! ಸುಬ್ಬಣ್ಣನವರು ಸರ್ಕಾರಕ್ಕೆ ಕಟ್ಟಬೇಕಾದ ಹಣ ಎಷ್ಟು ಗೊತ್ತೆ?’ ಎಂದರು. ‘ನಾನೇನು ಬಲ್ಲೆ ಮಹಸ್ವಾಮಿ? ಖಾವಂದರು ಹೇಳಿದರೆ ತಿಳಿಯುತ್ತದೆ’. ‘ಅವರು ಸುಮಾರು ಮೂರು ಸಾವಿರ ರೂಪಾಯಿ ಕಟ್ಟಬೇಕು’. ‘ಇರಬಹುದು ಮಹಾಸ್ವಾಮಿ’. ‘ಮತ್ತೆ; ನಿನ್ನಂತಹವನನ್ನು ಅಷ್ಟು ಹಣಕ್ಕೆ ಜಾಮೀನು ಒಪ್ಪಿಕೊಳ್ಳಲು ಸಾಧ್ಯವೆ?’ ಎರಡು ಸಲಿಗೆ (ಒಂದು ಸಲಿಗೆ = ಐವತ್ತು) ಧನ, ಹತ್ತು ಸಲಿಗೆ ಕುರಿ- ಇಷ್ಟು ಆಸ್ತಿ ಇದೆ. ಈ ಆಸ್ತಿ ಮೂರು ಸಾವಿರ ರೂಪಾಯಿ ಬಾಳುವುದಾದರೆ ಖಾವಂದವರು ನನ್ನ ಜಾಮೀನು ಒಪ್ಪಿಕೊಳ್ಳಿ’. ಅಷ್ಟರಲ್ಲಿ ಪಕ್ಕದಲ್ಲಿಯೇ ಇದ್ದ ಪಟೇಲ, ಅಮಲ್ದಾರರನ್ನು ಕುರಿತು ‘ಆತ ಹೇಳುವುದು ನಿಜ ಸ್ವಾಮಿ. ಈ ಪ್ರಾಂತ್ಯದ ದೊಡ್ಡ ರೈತರಲ್ಲಿ ಈತ ಒಬ್ಬ. ಸರ್ಕಾರಕ್ಕೆ ಮುನ್ನೂರು ರೂಪಾಯಿ ಕಂದಾಯ ಕಟ್ಟುತ್ತಾನೆ’ ಎಂದು ಹೇಳಿ ಕರಡಪ್ಪನ ಹೇಳಿಕೆಯನ್ನು ಸಮರ್ಥಿಸಿದರು. ಅಮಲ್ದಾರರಿಗೆ ಕರಡಪ್ಪನನ್ನು ಸ್ವಲ್ಪ ತಮಾಷೆ ಮಾಡಬೇಕೆನ್ನಿಸಿತು. ‘ಅದೆಲ್ಲಾ ಸರಿ ಕರಡಪ್ಪ. ನಿನ್ನ ಜಾಮೀನನ್ನು ನಾವು ಒಪ್ಪಿಕೊಳ್ಳಲೂಬಹುದು. ಆದರೆ ಇಷ್ಟು ಹಣಕ್ಕೆ ಜಾಮೀನಾಗುವುದಕ್ಕೆ ನೀ ಏನಾಗಬೇಕು. ಸುಬ್ಬಣ್ಣನವರಿಗೆ? ಒಂದು ವೇಳೆ ಅವರು ಹಣ ಕಟ್ಟದಿದ್ದರೆ ನಿನ್ನ ಆಸ್ತಿಯೆಲ್ಲ ಜಪ್ತಿಯಾಗುತ್ತದಲ್ಲಯ್ಯಾ, ಅದನ್ನು ಯೋಚಿಸಿದ್ದೀಯಾ?’ ಎಂದರು. ‘ಜಾಮೀನಾಗುವುದಕ್ಕೆ ಸಂಬಂಧವೇ ಆಗಬೇಕಾ ಸ್ವಾಮಿ? ಹಂಗೂ ಆಗಬೇಕು ಎಂದರೆ ನಾನು ಅವರ ಹಿರೇ ಮಗ. ಅವರು ನನಗೆ ತಂದೆ, ದೇವರು ಎಲ್ಲಾ. ಇನ್ನು ಆಸ್ತಿಯ ವಿಚಾರ. ತಂದೆಯ ಸಾಲ ಮಗ ತೀರಿಸಬೇಕಾದದ್ದು ನ್ಯಾಯ ತಾನೆ? ನಾನು ಎಲ್ಲ ಯೋಚಿಸಿಯೇ ತಮ್ಮ ಹತ್ತಿರ ಬಂದಿದ್ದೇನೆ’ ಎಂದ ಕರಡಪ್ಪ. ಆತನ ಮಾತು ಕೇಳಿ ಅಮಲ್ದಾರರು ಮೂಕರಾದರು. ಮರುಮಾತನಾಡದೆ ಅವರು ಕರಡಪ್ಪನ ಜಾಮೀನನ್ನು ಒಪ್ಪಿಕೊಂಡು ಅಗತ್ಯವಾದ ಕಾಗದ ಪತ್ರಗಳಿಗೆ ಅವನ ಹೆಬ್ಬೆಟ್ಟನ್ನು ಒತ್ತಿಸಿಕೊಂಡರು. ಜಮಾಬಂದಿ ಮುಗಿದ ನಂತರ, ಊರು ನೋಡಬೇಕೆಂಬ ನೆಪ ಮಾಡಿಕೊಂಡು ಸುಬ್ಬಣ್ಣನವರನ್ನು ದರ್ಶನ ಮಾಡಿಕೊಂಡು ಬರಬೇಕೆಂದು ಸೇಂದಿ ಕಂಟ್ರಾಕ್ಟರ್ 197 ಅಮಲ್ದಾರರಿಗೆ ಮನಸ್ಸು ಆಯಿತು. ಹಳ್ಳಿಗಳಲ್ಲಿ ದೊಡ್ಡ ಅಧಿಕಾರಿಗಳು ಬಂದಾಗ ಅವರ ಗೌರವಾರ್ಥವಾಗಿ ಕೊಂಬು, ಕಹಳೆಗಳಿಂದ ಸ್ವಾಗತಿಸುವುದು ಒಂದು ನಿಯಮ. ಅದರಂತೆ ತಾಲ್ಲೂಕಿನ ಧಣಿ ಊರೊಳಗೆ ಬರುವಾಗ, ಊರಿನಿಂದ ಸುಮಾರು ಇನ್ನೂರು ಗಜ ದೂರದಲ್ಲಿರುವ ಜುವ್ವೆ ಮರದ ಬಳಿ ಒಂದು ಕೊಂಬಿನ ಸದ್ದು ಕೇಳಿಸಿತು. ಬಂಗಲೆಯಲ್ಲಿ ಕರಡಪ್ಪ ನಡೆಸಿದ ಮಹಾಕಾರ್ಯ ಸುಬ್ಬಣ್ಣನವರಿಗೆ ಗೊತ್ತಿರಲಿಲ್ಲ. ಕೊಂಬಿನ ಸದ್ದು ಕೇಳುತ್ತಲೇ ಅವರು, ಜಾಮೀನು ಕೊಡಲು ವಿಫಲರಾದ ತಮ್ಮ ಮನೆಯನ್ನು ಜಪ್ತಿ ಮಾಡುವುದಕ್ಕಾಗಿ ಅಮಲ್ದಾರರು ಊರೊಳಗೆ ಬರುತ್ತಿದ್ದಾರೆ ಎಂದು ಭಾವಿಸಿದರು. ಆ ವೇಳೆಗೆ ಸರಿಯಾಗಿ ಅದುವರೆಗೆ ಬೇಕೆಂದೇ ಬಚ್ಚಿಟ್ಟುಕೊಂಡಿದ್ದ ಶಾನುಭೋಗ ರಾಮಣ್ಣ ಸುಬ್ಬಣ್ಣನವರ ಮನೆ ಜಪ್ತಿ ನಡೆಯುವುದೆಂದು ಭಾವಿಸಿ ಅಲ್ಲಿ ಹಾಜರಾದ. ಎಲ್ಲಿಂದಲೋ ಆಕಸ್ಮಿಕವಾಗಿ ಬಂದವನಂತೆ ಆತ ಸರಸರನೆ ಬಂದು ಗುಂಪಿನಲ್ಲಿ ಸೇರಿಕೊಂಡ. ಸಾಹೇಬರು ಊರ ಮುಂದಿನ ಮಾರಮ್ಮನ ಗುಡಿಯ ಬಳಿ ಬಂದಾಗ, ಮತ್ತೊಮ್ಮೆ ಕೊಂಬಿನ ಧ್ವನಿಯಾಯಿತು. ಇದುವರೆಗೆ ದೇವರ ಮುಂದೆಯೇ ಕುಳಿತಿದ್ದ ಸುಬ್ಬಣ್ಣನವರು ತಟ್ಟನೆ ಮೇಲೆದ್ದು ತಮ್ಮ ಮಡದಿಯೊಡನೆ, ಮಕ್ಕಳನ್ನೆಲ್ಲ ಕರೆದುಕೊಂಡು ಮನೆಯಿಂದ ಹೊರಬರುವಂತೆ ಸೂಚಿಸಿದರು. ‘ನೋಡು, ಮನೆಯಲ್ಲಿರುವ ಒಂದು ಹುಲ್ಲುಕಡ್ಡಿಯನ್ನೂ ಮುಟ್ಟಬಾರದು, ಉಟ್ಟ ಬಟ್ಟೆಯಲ್ಲಿ ಎಲ್ಲರೂ ಬರಬೇಕು’ ಎಂದು ಅಪ್ಪಣೆ ಮಾಡಿದರು. ತಾವೂ ಸಹ ಉಟ್ಟ ಬಟ್ಟೆಯಲ್ಲಿಯೇ ರಾಮಾಯಣ ಪಾರಾಯಣದ ಪುಸ್ತಕವನ್ನು ಕಂಕುಳಿನಲ್ಲಿಟ್ಟುಕೊಂಡು, ದೇವರಿಗೆ ಕೊನೆಯದೊಂದು ನಮಸ್ಕಾರ ಹಾಕಿ ಹೊರಗೆ ಬಂದು ಬಿಟ್ಟರು. ಅಮಲ್ದಾರರ ಆಗಮನವಾಗುತ್ತಲೇ ರಾಮಣ್ಣ ಅವರ ಸಮೀಪಕ್ಕೆ ಹೋದ. ಸುಬ್ಬಣ್ಣನವರ ಮನೆ ಹತ್ತಿರವಾಗುತ್ತಲೇ ಆತ ‘ಅದೇ ಸ್ವಾಮಿ ಸುಬ್ಬಣ್ಣನವರ ಮನೆ’ ಎಂದು ತೋರಿಸಿದ. ಅಮಲ್ದಾರರು ಸುಬ್ಬಣ್ಣನವರ ಮನೆಯ ಜಪ್ತಿಗಾಗಿಯೇ ಬಂದಿದ್ದಾರೆಂಬುದು ಅಷ್ಟು ಖಚಿತವಾಗಿತ್ತು ಅವನಿಗೆ. ಅಮಲ್ದಾರರು ಯಾವ ಮಾತನ್ನೂ ಆಡಲಿಲ್ಲ. ರಾಮಣ್ಣನ ಮಾತನ್ನು ಕೇಳಿಯೂ ಕೇಳದವರಂತೆ ನಡೆದರು. ಸುಬ್ಬಣ್ಣನವರ ಮನೆಯಿಂದ ಎರಡು ಹೆಜ್ಜೆ ಮುಂದಕ್ಕೂ ನಡೆದಾಗ, ರಾಮಣ್ಣ ‘ಸುಬ್ಬಣ್ಣನವರ ಮನೆ ಹಿಂದಕ್ಕಾಯಿತಲ್ಲ ಸ್ವಾಮಿ’ ಎಂದ. ಈ ಬಾರಿ ಅಮಲ್ದಾರರಿಗೆ ತಮ್ಮ ಕೋಪವನ್ನು ತಡೆಯುವುದು ಸಾಧ್ಯವಾಗಲಿಲ್ಲ. ಅವರು ಸರ್ರನೆ ಹಿಂದಕ್ಕೆ ತಿರುಗಿ ‘ಏನು? ಏನಂದೆ? ಸುಬ್ಬಣ್ಣನವರ ಮನೆ ಹಿಂದಕ್ಕಾಯಿತಲ್ವೆ? ಅವರ 198 ಮೂರು ತಲೆಮಾರು ಮನೆ ಜಪ್ತಿ ಮಾಡಬೇಕಾಗಿತ್ತಲ್ವೆ? ಈ ಮಾತನ್ನು ಹೇಳುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ವೆ? ನಂದಗೋಕುಲದಂತಹ ಮನೆಯನ್ನು ಜಪ್ತಿ ಮಾಡಲು ನಾನೇನು ಕಟುಕರವನಿಗೆ ಹುಟ್ಟಿದ್ದೇನೆಯ? ಎಷ್ಟಾದರೂ ದಾಯಾದಿ ದಾಯಾದಿಯೆ. ಆ ಮತ್ಸರ ಎಲ್ಲಿ ಹೊಗುತ್ತದೆ. ಛಿ’ ಎಂದು ಮುಂದೆ ಹೋಗುತ್ತಿದ್ದವರು ಹಾಗೆಯೇ ಹಿಂದಕ್ಕೆ ತಿರುಗಿದರು. ಮುಂದೆ ಹೋಗುತ್ತಿದ್ದ ಅಮಲ್ದಾರರು ಹಿಂದಕ್ಕೆ ತಿರುಗಿ ತಮ್ಮ ಮನೆಯ ಕಡೆ ಬರುತ್ತಿದ್ದುದನ್ನು ಆಗ ತಾನೆ ಮನೆಯವರೊಡನೆ ಹೊರಕ್ಕೆ ಬಂದ ಸುಬ್ಬಣ್ಣನವರು ನೋಡಿದರು. ತಮ್ಮ ಮನೆಯ ಜಪ್ತಿಗಾಗಿಯೇ ಅವರು ಬರುತ್ತಿದ್ದಾರೆಂದು ಖಚಿತವಾದಂತಾಯಿತು. ಅವರು ಅಂಗಳದಿಂದ ಮುಂದೆ ಬಂದು, ಅಮಲ್ದಾರರಿಗೆ ಕೈ ಮುಗಿದು ‘ಒಪ್ಪಿಸಿಕೊಳ್ಳಬೇಕು ಮಹಾಸ್ವಾಮಿ, ನಾವು ಮನೆಯಲ್ಲಿದ್ದ ಯಾವ ಸಾಮಾನನ್ನೂ ಮುಟ್ಟಿಲ್ಲ. ಈ ಪಾರಾಯಣಕ್ಕಿರುವ ರಾಮಾಯಣದ ಪುಸ್ತಕವೊಂದನ್ನು ಮಾತ್ರ ತೆಗೆದುಕೊಂಡಿದ್ದೇನೆ. ತಮ್ಮ ಒಪ್ಪಿಗೆ ಇಲ್ಲದಿದ್ದರೆ ಇದನ್ನೂ ಮನೆಯಲ್ಲಿಯೇ ಇರಿಸುತ್ತೇನೆ’ ಎಂದರು. ಸುಬ್ಬಣ್ಣನವರ ಮಾತನ್ನು ಕೇಳಿ ಅಮಲ್ದಾರರಿಗೆ ಕಣ್ಣೀರು ಉಕ್ಕಿತು. ಅವರು ಸುಬ್ಬಣ್ಣನವರ ಎರಡು ಕೈಗಳನ್ನೂ ಹಿಡಿದುಕೊಂಡು ‘ಕ್ಷಮಿಸಿ ಸುಬ್ಬಣ್ಣನವರೇ, ನಾನು ಮನೆ ಜಪ್ತಿಗಾಗಿ ಬರಲಿಲ್ಲ. ಬಂಗಲೆಯ ಬಳಿ ತಾವು ಕಾಣದಿದ್ದುದರಿಂದ ನಿಮ್ಮನ್ನು ನೋಡಿಕೊಂಡು ಹೋಗಲು ಬಂದೆ. ನಿಮಗೆ ಜಾಮೀನು ಹೊಸಹಳ್ಳಿಯ ಗೊಲ್ಲರ ಕರಡಪ್ಪ ಎಂಬಾತ ಕೊಟ್ಟಿದ್ದಾನೆ. ಅದಕ್ಕಾಗಿ ನೀವು ಯೋಚಿಸಬೇಕಾಗಿಲ್ಲ. ಪಾಪ ನೀವು ಮಡಿಯಲ್ಲಿ ಇದ್ದಿರೋ ಏನೋ! ನಾವು ಬಂದು ನಿಮಗೆ ತೊಂದರೆ ಕೊಟ್ಟ ಹಾಗಾಯಿತು. ನಾವಿನ್ನು ಊರಿಗೆ ಹೊರಡುತ್ತೇವೆ. ನೀವು ಮನೆಯೊಳಕ್ಕೆ ದಯಮಾಡಿಸಿ’ ಎಂದು ಕೈ ಮುಗಿದು ಸರಸರನೆ ಬಂಗಲೆಯ ಕಡೆಗೆ ಹೊರಟುಹೋದರು. ಅಮಲ್ದಾರರು ಹೊರಟುಹೋದ ಮೇಲೂ ಎಷ್ಟೋ ಹೊತ್ತಿನವರೆಗೆ ಸುಬ್ಬಣ್ಣನವರು ಕಂಬದಂತೆ ನಿಂತಲ್ಲಿಯೇ ನಿಂತಿದ್ದರು. ಅವರಿಗೆ ತಮ್ಮ ಕಿವಿಗಳನ್ನು ನಂಬುವುದೇ ಕಷ್ಟವಾಗಿತ್ತು. ಅವರು ಮನಸ್ಸಿನಲ್ಲಿಯೇ “ಹೇ ಪ್ರಭು ರಾಮಚಂದ್ರ! ಏನಿದು ನಿನ್ನ ಲೀಲೆ? ನಿನ್ನನ್ನು “ಭಯಕೃತ್ ಭಯನಾಶನಃ” ಎನ್ನುತ್ತಾರೆ. ‘ಭಕ್ತವತ್ಸಲ’ ಎನ್ನುತ್ತಾರೆ. ನಿನ್ನ ಲೀಲೆಯನ್ನು ಅರ್ಥಮಾಡಿಕೊಳ್ಳಲು ಮಹಾಯೋಗಿಗಳೂ ಅಸಮರ್ಥರಾಗಿರುವಾಗ ನನ್ನಂತಹ ಪಾಮರ ಅದನ್ನು ತಿಳಿಯಬಲ್ಲನೆ?” ಎಂದುಕೊಂಡರು. ನಿಧಾನವಾಗಿ ಮನೆಯನ್ನು ಪ್ರವೇಶಿಸಿದ ಸೇಂದಿ ಕಂಟ್ರಾಕ್ಟರ್ 199 ಅವರು ದೇವರ ಮುಂದೆ ಕುಳಿತು ಭಕ್ತಿಪರವಶರಾಗಿ ಮೈ ಮರೆತರು. ಎಷ್ಟೋ ಹೊತ್ತಿನ ಮೇಲೆ ಅವರು ಇಹಪ್ರಜ್ಞೆಯನ್ನು ಪಡೆದರು. ಮೇಲಿನ ಸಂಗತಿ ನಡೆದ ಮರುದಿನ ಗುಡೇಹಳ್ಳಿಯ ತಿಪ್ಪಯ್ಯ ಒಂದು ವಾರ ಕಾಲ ಬಾಕಿ ವಸೂಲಿಗಾಗಿ ಹಳ್ಳಿಗಳ ಮೇಲೆ ಹೋಗಿದ್ದವನು ಊರಿಗೆ ಹಿಂದಿರುಗಿದ. ಮನೆಗೆ ಹೋಗಿ ವಸೂಲಾದ ಹಣವನ್ನು ಪೆಠಾರಿಯಲ್ಲಿ ಇಟ್ಟವನೇ ನೇರವಾಗಿ ಗೆಳೆಯ ಸುಬ್ಬಣ್ಣನವರನ್ನು ನೋಡುವುದಕ್ಕೆಂದು ಬಂದ. ಆ ವೇಳೆಗೆ ಸುಬ್ಬಣ್ಣ ಏನನ್ನೋ ಬರೆಯಲು ಲೇಖನಿಯನ್ನು ಕೈಲಿ ಹಿಡಿದು ದಿವಾನಖಾನೆಯಲ್ಲಿ ಕುಳಿತಿದ್ದರು. ತಿಪ್ಪಯ್ಯ ಸಪ್ಪಳವಾಗದಂತೆ ಬಂದು ಅವರ ಪಕ್ಕದಲ್ಲಿ ಕುಳಿತ. ಭಾವಾವೇಶದಲ್ಲಿ ಮುಳುಗಿದ್ದ ಸುಬ್ಬಣ್ಣನವರಿಗೆ ಇದರ ಅರಿವಾಗಲಿಲ್ಲ. ಆಗ ತಿಪ್ಪಯ್ಯ ‘ಏನು ಸುಬ್ಬಣ್ಣ! ನಾನು ಬಂದರೂ ಕಾಣದವನಂತೆ ಏನೋ ಯೋಚನೆಯಲ್ಲಿ ಮುಳುಗಿ ಹೋಗಿರುವಿಯಲ್ಲ? ಏನು ಸಮಾಚಾರ?’ ಎಂದ. ತಿಪ್ಪಯ್ಯನನ್ನು ಕಂಡ ಸುಬ್ಬಣ್ಣ ಕಾವ್ಯಜಗತ್ತಿನಿಂದ ಲೌಕಿಕ ಜಗತ್ತಿಗೆ ಇಳಿದು ಬಂದರು. ಹಿಂದಿನ ದಿನದ ಸಂಗತಿ ಎಲ್ಲವೂ ಜ್ಞಾಪಕಕ್ಕೆ ಬಂತು. ಭಾವಜೀವಿಯಾದ ಅವರಿಗೆ ದುಃಖದಿಂದ ಗಂಟಲು ಕಟ್ಟಿದಂತಾಯಿತು. ಅವರು ಕಷ್ಟದಿಂದ ಒಂದು ಬಾರಿ ಗೊಗ್ಗರ ಧ್ವನಿಯಲ್ಲಿ ‘ಅಣ್ಣಯ್ಯ’ ಎಂದರು. ಮುಂದೆ ಅವರಿಂದ ಮಾತನಾಡಲು ಸಾಧ್ಯವಾಗಲಿಲ್ಲ. ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಗೆಳೆಯನ ಕಣ್ಣೀರನ್ನು ಕಂಡು ತಿಪ್ಪಯ್ಯನಿಗೂ ಕಣ್ಣೀರು ಉಕ್ಕಿ ಬಂತು. ಕಾರಣ ತಿಳಿಯದೆಯೇ ಆತ ಸ್ಪಂದಿಸಿದ್ದ. ವೀಣೆಗಳೆರಡರನ್ನು ಸಿದ್ಧಗೊಳಿಸಿ ಒಂದರ ಇದಿರಿಗೆ ಮತ್ತೊಂದನ್ನು ಇಟ್ಟು ಒಂದನ್ನು ಬಾರಿಸಿದರೆ ಮತ್ತೊಂದರಲ್ಲಿಯೂ ದನಿ ಹೊರಡುತ್ತದೆಯಂತೆ! ಈ ಗೆಳೆಯರಿಬ್ಬರ ವಿಷಯದಲ್ಲಿಯೂ ಹಾಗಾಗಿತ್ತು. ಸ್ವಲ್ಪ ಹೊತ್ತಿನ ಮೆಲೆ ಸಾವರಿಸಿಕೊಂಡ ತಿಪ್ಪಯ್ಯ ‘ಏನಾಯಿತು ಸುಬ್ಬಣ್ಣ, ನಿನ್ನ ದುಃಖದಲ್ಲಿ, ಸುಖದಲ್ಲಿ ಹೇಗೋ ಹಾಗೆಯೇ ನಾನು ಸಮಭಾಗಿಯಲ್ಲವೆ? ಕಣ್ಣೀರಿಡುವಂತಹ ಪ್ರಸಂಗ ಏನು ಬಂತು? ಮನೆಯಲ್ಲೆಲ್ಲ ಸೌಖ್ಯ ತಾನೆ? ತಂಗಿ ಲಕ್ಷ್ಮೀದೇವಮ್ಮ... ‘ಅದೆಲ್ಲಾ ಏನೂ ಇಲ್ಲ ಅಣ್ಣಯ್ಯ, ಮನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ಎಲ್ಲರೂ ಸುಖವಾಗಿದ್ದರೆ. ಆದರೆ...’ ಎಂದು ಹಿಂದಿನ ದಿನ ಶಾನುಭೋಗ ರಾಮಣ್ಣ ತಮಗೆ ಮಾಡಿದ ಮೋಸವನ್ನು ಮೊದಲುಗೊಂಡು ನಡೆದುದೆಲ್ಲವನ್ನೂ ಕೂಲಂಕಷವಾಗಿ ಸೋದರಸಮನಾದ ಗೆಳೆಯನಲ್ಲಿ ಹೇಳಿಕೊಂಡರು. ಕಣ್ಣೀರನ್ನು ಕಂಡು ಏನಾಗಿ ಹೋಗಿದೆಯೋ ಎಂದು ಗಾಬರಿಯಾಗಿದ್ದ ತಿಪ್ಪಯ್ಯನಿಗೆ 200 ಮೂರು ತಲೆಮಾರು ಸುಬ್ಬಣ್ಣನವರ ಮಾತು ಕೇಳಿ ನಗು ಬಂತು. ಆತ ಮುಗುಳ್ನಗುತ್ತಾ - ‘ಅಯ್ಯೋ ಹುಚ್ಚಪ್ಪ. ನಿನಗೆ ದೇವರಪೂಜೆ ಮಾಡುವುದು, ಕವನಗಳನ್ನು ಕಟ್ಟುವುದು - ಇವೆರಡನ್ನು ಬಿಟ್ಟು ಪ್ರಪಂಚಜ್ಞಾನವೇನಾದರೂ ಇದೆಯೆ?’ ದನ ನಂಬಿದರೂ ದಾಯಾದಿ ನಂಬಬೇಡ’ ಎಂಬ ಗಾದೆಯೆ ಇದೆ. ಎಲ್ಲ ಬಿಟ್ಟು ಆ ರಾಮಣ್ಣ ನಿನಗೆ ಜಾಮೀನಾಗುತ್ತಾನೆಂದು ನಂಬಿಕೊಂಡೆಯಲ್ಲ! ನಿನ್ನ ಅವಿವೇಕಕ್ಕೆ ನಗಬೇಕೋ, ಆಳಬೇಕೋ ಗೊತ್ತಾಗುವುದಿಲ್ಲ. ಇಷ್ಟಕ್ಕೂ ಯಾರನ್ನು ಯಾತಕ್ಕೆ ಜಾಮೀನು ಕೇಳಬೇಕಾಗಿತ್ತು? ಮನೆಯೊಳಗೆ ಪೆಠಾರಿಯಲ್ಲಿ ದುಡ್ಡಿತ್ತು. ನಿನ್ನ ತಂಗಿಯ ಹತ್ತಿರ ಬೀಗದ ಕೈ ಇತ್ತು. ಅವಳನ್ನು ಕೇಳಿ ಬೀಗದ ಕೈ ತೆಗೆದುಕೊಂಡು, ಕಟ್ಟಬೇಕಾದ ದುಡ್ಡನ್ನು ಕಟ್ಟಿಬಿಟ್ಟಿದ್ದರೆ ಈ ರಾಮಾಯಣವೇ ಇರುತ್ತಿರಲಿಲ್ಲ. ಈಗಲೂ ಪ್ರಪಂಚವೇನೂ ಮುಳುಗಿ ಹೋಗಿಲ್ಲ ನಾಳೇ ಬೆಳಿಗ್ಗೆ ಚಳ್ಳಕೆರೆಗೆ ಹೋಗಿ, ಖಜಾನೆಗೆ ಹಣ ಕಟ್ಟಿ, ಕರಡಪ್ಪನ ಜಾಮೀನು ತಪ್ಪಿಸಿದರಾಯ್ತು. ನೀನು ಕಣ್ಣೀರು ಹಾಕಿದ್ದನ್ನು ನೋಡಿ ಏನೋ ಅನಾಹುತವಾಗಿಬಿಟ್ಟಿದೆ ಎಂದು ಹೆದರಿಬಿಟ್ಟಿದ್ದೆ ನಾನು! ಇಷ್ಟಕ್ಕೆಲ್ಲ ಇಷ್ಟು ಯೋಚನೆ ಮಾಡುತ್ತಾರೆಯೆ? ಏಳು ಏಳು ಸಾಕು, ನೀನು ಬಾಳ ಬುದ್ಧಿವಂತ’ ಎಂದ ತಿಪ್ಪಯ್ಯ. ಆಗ ಸುಬ್ಬಣ್ಣ ‘ನೀನು ಹೇಳೋದೇನೋ ಸರಿ ಅಣ್ಣಯ್ಯ, ಆದರೆ ಈ ಸಾಲ ನಾನು ತೀರಿಸುವುದು ಹೇಗೆ? ಅದನ್ನು ಯೋಚನೆ ಮಾಡಬೇಡವೆ?’ ಎಂದರು. “ಸಾಲ ಕೊಡುವವನು ನಾನು, ನೀನಲ್ಲ. ನಿನ್ನ ಹಾಗೆ ನಾನೇನೂ ದೇವರ ಮುಂದೆ ಮೂಗು ಹಿಡಿದು ಕೂತುಕೊಳ್ಳೋ ಸಾಧು ಅಲ್ಲ, ನಾನು ವ್ಯವಹಾರಸ್ಥ, ಸಾಲ ಕೊಡೋಕೆ ಗೊತ್ತಿರುವವನಿಗೆ ಅದನ್ನು ಹೇಗೆ ವಸೂಲಿ ಮಾಡಿಕೊಳ್ಳಬೇಕು ಎಂಬುದೂ ಗೊತ್ತಿರುತ್ತದೆ. ಇಷ್ಟಕ್ಕೂ ‘ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸುವ’ ಯೋಚನೆ ಯಾಕೆ? ಅದನ್ನೆಲ್ಲ ಯೋಚಿಸುವುದಕ್ಕೆ ಬೇಕಾದಷ್ಟು ವ್ಯವಧಾನವಿದೆ. ಮೊದಲು ಸರ್ಕಾರದ ಹಣ ಕಟ್ಟು. ಕರಡಪ್ಪನ ಜಾಮೀನು ಬಿಡಿಸಿಕೊ. ಆ ಮೇಲೆ ಮುಂದಿನ ವಿಚಾರ” ಎಂದು ಹೇಳಿ, ಮನೆಗೆ ಹೊರಟು ಹೋದ ತಿಪ್ಪಯ್ಯ. * * * * 201 17. ಅಚ್ಚಮ್ಮ ಸಣ್ಣ ಸುಬ್ಬಣ್ಣನ ಅತ್ತೆ ಅಚ್ಚಮ್ಮ ಒಳ್ಳೆಯ ಘಟವಾಣಿ. ಆಕೆಯ ದೇಹ ಎಷ್ಟು ದೊಡ್ಡದೋ ಗಂಟಲು ಅಷ್ಟೇ ದೊಡ್ಡದು. ಗುಗ್ಗರಿ ಕೆಂಚವ್ವನಂತಹವಳೂ ಕೂಡ ಒಂದೊಂದು ಸಾರಿ ಅಚ್ಚಮ್ಮನಿಗೆ ಸೋತು ಹೋಗುತ್ತಿದ್ದಳು, ಎಂದ ಮೇಲೆ ಅಚ್ಚಮ್ಮನ ಮಹಿಮೆಯನ್ನು ಸುಲಭವಾಗಿಯೇ ಊಹಿಸಿಕೊಳ್ಳಬಹುದು. ದೊಡ್ಡಸುಬ್ಬಣ್ಣನವರಿಗಿದ್ದ ಜನಾನುರಾಗ, ಗೌರವಗಳು ತನ್ನ ಅಳಿಯನಿಗೆ ಇಲ್ಲವಲ್ಲ ಎಂಬ ಕಿಚ್ಚು ಅಚ್ಚಮ್ಮನಿಗೆ. ಯಾವಾಗಲೂ ಸುಬ್ಬಣ್ಣನವರ ಮನೆ ಜನಜಂಗುಳಿಯಿಂದ ತುಂಬಿರುತ್ತಿತ್ತು. ಎಲ್ಲರ ಬಾಯಲ್ಲಿಯೂ ಅವರ ಗುಣಗಾನ, ಲಕ್ಷ್ಮೀದೇವಮ್ಮನನ್ನು ಕುರಿತು ಹೊಗಳಿಕೆಯಾದರೆ ತಮ್ಮ ಮನೆಯಲ್ಲಿ ಸುಳಿಯುವವರೇ ಇಲ್ಲ. ಇದು ಅಚ್ಚಮ್ಮನಿಗೆ ನುಂಗಲಾರದ ತುತ್ತು. ಬೇರೆ ಏನೂ ಮಾಡಲು ಸಾಧ್ಯವಿಲ್ಲದೆ ಅಚ್ಚಮ್ಮ ವಿನಾಕಾರಣ ಏನಾದರೂ ನೆಪದಿಂದ ಪಕ್ಕದ ಮನೆಯ ದಂಪತಿಗಳನ್ನು ಬಾಯಿಗೆ ಬಂದಷ್ಟು ಬಯ್ಯುತ್ತಿದ್ದಳು. ಇಬ್ಬರ ಮನೆಯ ಮಧ್ಯದಲ್ಲಿ ಇದ್ದುದು ತೆಳುವಾದ ಒಂದು ಗೋಡೆ ಮಾತ್ರ. ಆದ್ದರಿಂದ ಆಕೆಯ ಬೈಗಳು ಸುಬ್ಬಣ್ಣನವರ ಮನೆಗೆ ಸುಲಭವಾಗಿಯೇ ಕೇಳಿಬರುತ್ತಿತ್ತು. ಸ್ವಭಾವತಃ ಶಾಂತಮೂರ್ತಿಯಾದ ಸುಬ್ಬಣ್ಣನವರ ಮನೆಗೆ ಸುಲಭವಾಗಿಯೇ ಕೇಳಿ ಬರುತ್ತಿತ್ತು. ಸ್ವಭಾವತಃ ಶಾಂತಮೂರ್ತಿಯಾದ ಸುಬ್ಬಣ್ಣನವರ ಮನೆಗೆ ಸುಲಭವಾಗಿಯೇ ಕೇಳಿ ಬರುತ್ತಿತ್ತು. ಸ್ವಭಾವತಃ ಶಾಂತಮೂರ್ತಿಯಾದ ಸುಬ್ಬಣ್ಣನವರು ಇದರಿಂದ ಸ್ವಲ್ಪವೂ ವಿಚಲಿತರಾಗುತ್ತಿರಲಿಲ್ಲ. ಎಂದಾದರೊಮ್ಮೆ ಲಕ್ಷ್ಮೀದೇವಮ್ಮ ಆ ಬೈಗುಳನ್ನು ಕೇಳಲಾರದೆ ತನ್ನ ಗಂಡನೊಡನೆ ‘ಅಯ್ಯೋ! ನಿಷ್ಕಾರಣವಾಗಿ ನಮ್ಮನ್ನ ಹೀನಾಮಾನವಾಗಿ ಬಯ್ಯುತ್ತಾಳಲ್ಲ, ಅದನ್ನೆಲ್ಲ ಕೇಳಿಯೂ ನೀವು ಸುಮ್ಮನಿರುತ್ತೀರಿ! ಇಂತಹ ದುರ್ವಾಕ್ಯಗಳನ್ನು ಕೇಳುವುದಕ್ಕೆ ನಾವು ಮಾಡಿದ ಅಪರಾಧವಾದರೂ ಏನು?’ ಎಂದು ಕಣ್ಣೀರಿಡುವರು. ಅದಕ್ಕೆ ಸುಬ್ಬಣ್ಣನವರು “ಇದಕ್ಕೆಲ್ಲ ಕಣ್ಣೀರಿಡುತ್ತಾರೇನು? ಅಯ್ಯೋ ಹುಚ್ಚಿ, ‘ಬಯ್ಯಿರೋ ಬಯ್ಯಿರೋ, ಮನಮುಟ್ಟಿ ಬಯ್ಯಿರೋ, ಬಯ್ಯಿರೋ, ಚೆನ್ನಾಗಿ ಬೈದೆನ್ನ ಧನ್ಯನನ್ನಾಗಿ ಮಾಡಿರೋ’ ಎಂದು ಸಂತೋಷ ಪಡಬೇಕಲ್ಲದೆ, ದುಃಖ ಪಡುತ್ತಾರೆಯೆ? ‘ನಿಂದಕರಿರಬೇಕು. 202 ಮೂರು ತಲೆಮಾರು ಹಂದಿಯಿದ್ದರೆ ಹೆಂಗೆ ಕೇರಿ ಶುದ್ಧವೊ ಹಂಗೆ’ ಎಂಬ ದಾಸರ ವಾಕ್ಯವನ್ನು ಕೇಳಿಲ್ಲವೆ? ಅವರು ಬಯ್ಯುವುದರಿಂದ ನಮಗೆ ಶ್ರೇಯಸ್ಸೇ ಹೊರತು ನಷ್ಟವೇನಿಲ್ಲ. ಇಷ್ಟಕ್ಕೆಲ್ಲ ನೀನೇಕೆ ತಲೆ ಕೆಡಿಸಿಕೊಳ್ಳುತ್ತಿ?” ಎಂದು ಸಮಾಧಾನ ಹೇಳುವರು. ಮನೆಯೊಳಗೆ ಕೂತು ಬಯ್ಯುವುದರಿಂದ ಯಾವ ಪರಿಣಾಮವೂ ಆಗದಿರುವುದನ್ನು ಕಂಡು ಅಚ್ಚಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ಬಯ್ಯುವುದಕ್ಕೆ ಪ್ರಾರಂಭಿಸಿದಳು. ಇದನ್ನು ಕೇಳುತ್ತಿದ್ದ ಜನ ಅಸಹ್ಯಪಟ್ಟುಕೊಳ್ಳುತ್ತಿದ್ದರೂ ಅಚ್ಚಮ್ಮನ ಬಾಯಿಗೆ ಹೆದರಿ ಸುಮ್ಮನಿರುತ್ತಿದ್ದರು. ಆಕೆಯ ‘ಸಂಸ್ಕೃತ’ ಅನಾಗರಿಕರಾದ ಅಸಂಸ್ಕೃತ ಜನರನ್ನೂ ಮೂದಲಿಸುವಂತಿತ್ತು, ಆಕೆಯ ಪಾಂಡಿತ್ಯ ಅಂತಹುದು, ಬೈಯ್ಯುವುದರಲ್ಲಿ! ಹೊಲೆಯರ ಸಿದ್ಧಿ ಕಹಳೆ ಗುಂಡನ ಮಗಳು. ಗ್ರಾಮದೇವತೆಯಾದ ಮಾರಮ್ಮನಿಗೆ ಅವಳನ್ನು ಬಸವಿಯಾಗಿ ಬಿಟ್ಟಿದ್ದರು. ಅವಳು ದೇವಸ್ಥಾನದ ಬಳಿಗೆ ಬಂದಾಗಲೆಲ್ಲ ಅಚ್ಚಮ್ಮ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತು ಸುಬ್ಬಣ್ಣನವರನ್ನೂ ಅವರ ಕುಟುಂಬದವರನ್ನೂ ವಾಚಾಮಗೋಚರವಾಗಿ ಬಯ್ಯುವುದನ್ನು ನೋಡುತ್ತಿದ್ದಳು, ಕೇಳುತ್ತಿದ್ದಳು. ಕೀಳು ಭಾಷೆ ಅಭ್ಯಾಸವಾಗಿದ್ದ ಆ ಬಸವಿಗೆ ಕೂಡ ಅಚ್ಚಮ್ಮನ ವಾಕ್ಪ್ರವಾಹ ಹೊಲಸು ನಾರುವಂತೆ ಗೊಚರವಾಗುತ್ತಿತ್ತು. ಆದರೂ ಮೇಲುವರ್ಗದ ಅಚ್ಚಮ್ಮನನ್ನು ಅಕ್ಷೇಪಿಸಲು ಅವಳಿಗೆ ಧೈರ್ಯ ಸಾಲದು, ದಿನದಿನವೂ ತನ್ನಲ್ಲಿ ತಾನೇ ‘ಇದೆಂತಹ ಹೊಲಸು ಹೆಂಗಸು’ ಎಂದು ಗೊಣಗಿಕೊಂಡು ಹೊರಟು ಹೋಗುತ್ತಿದ್ದಳು. ಒಂದು ದಿನ ಅವಳಿಗೂ ತಾಳ್ಮೆ ತಪ್ಪಿತು. ಬೆಳಿಗ್ಗೆ ಎದ್ದು ದೇವರ ದರ್ಶನ ಮಾಡುತ್ತಲೇ ಆ ಹೊಲಸು ಬೈಗುಳವನ್ನು ಕೇಳಬೇಕಲ್ಲ ಎಂದು ವ್ಯಥೆಯಾಯಿತು. ಆ ದಿನ ಅಚ್ಚಮ್ಮನ ‘ಕಾವ್ಯಧಾರೆ’ ದಿನನಿತ್ಯದ ಮಟ್ಟವನ್ನೂ ಮೀರಿತ್ತು. ಯಾವಾಗಲೂ ಮನೆಯೊಳಗಿನ ಕೆಲಸಕಾರ್ಯಗಳಲ್ಲಿ ನಿರತರಾಗಿರುತ್ತಿದ್ದ ಲಕ್ಷ್ಮೀದೇವಮ್ಮನವರು ಆ ದಿನ ಬೆಳಿಗ್ಗೆ ಅಂಗಳ ಗುಡಿಸಲೆಂದು ಹೊರಗೆ ಬಂದರು. ಆಕೆಯ ಮುಖವನ್ನು ಕಾಣುತ್ತಲೇ ಅಚ್ಚಮ್ಮನಿಗೆ ಆವೇಶ ಬಂದಂತಾಯಿತು. ಹೆಂಡಕುಡಿದ ಕಪಿಗೆ ಚೇಳು ಕುಟುಕಿದಂತಾಯ್ತು. ತಾರಕದಲ್ಲಿದ್ದ ಅವಳ ಸ್ವರ ಖೇಚರಕ್ಕೇರಿತು. ಶಬ್ದ ಕೋಶದಲ್ಲಿದ್ದ ಬೈಗುಳೆಲ್ಲವೂ ರಾಮಬಾಣದಂತೆ ಪುಂಖಾನುಪುಂಖವಾಗಿ ಹೊರಬಂದುವು. ಲಕ್ಷ್ಮೀದೇವಮ್ಮ ಬೆಳಗಾಗುತ್ತಲೇ ನಿಷ್ಕಾರಣವಾಗಿ ಬಂದ ಆ ನಿಂದೆಯನ್ನು ಕೇಳಲಾರದೆ ಕಣ್ಣೀರಿಟ್ಟುಕೊಂಡು ಒಳಕ್ಕೆ ಹೋದರು. ಇದನ್ನೆಲ್ಲ ನೋಡುತ್ತಿದ್ದ ಸಿದ್ದಿಗೆ ತಾಳ್ಮೆ ತಪ್ಪಿತು. ಅಸಹ್ಯವಾದ ಅಚ್ಚಮ್ಮನ ಬೈಗುಳ, ಅಚ್ಚಮ್ಮ 203 ಅಸಹಾಯಕರಾದ ಲಕ್ಷ್ಮೀದೇವಮ್ಮನವರ ಕಣ್ಣೀರು - ಇದನ್ನು ಕಂಡ ಅವಳ ಹೆಂಗರುಳು ಮಿಡಿಯಿತು, ಹೊಟ್ಟೆ ಉರಿಯಿತು. ತಾನು ಅಂತ್ಯಜಳು, ಅವರು ಉತ್ತಮ ಕುಲದವರು ಎಂಬ ತಾರತಮ್ಯ ಅವಳಿಗೆ ಮರೆತು ಹೋಯಿತು. ಅವಳು ಅಚ್ಚಮ್ಮನತ್ತ ತಿರುಗಿ ‘ಯಾಕವ್ವ ನಿನಗೇನು ಬಡಿದೈತೆ? ಆ ಮಹಾತಾಯೀನ ಹೀಗೆ ಬೈತೀಯಲ್ಲ? ನೀನು ಹುಟ್ಟಿದ್ದು ಉತ್ತಮಕುಲದಲ್ಲಿ, ನಿನ್ನ ಬಾಯಲ್ಲಿ ಬರೋ ಮಾತು ಹೊಲೇರದು. ಅದನ್ನು ಕೇಳಿ ನಾವು ನಾಚಬೇಕು. ಇಂತಹ ಹೊಲಸು ಬೈಗುಳ ಬೈಯ್ಯುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೆ? ಪಾಪ! ಆ ತಾಯಿ ಎಷ್ಟು ನೊಂದುಕೊಂಡು ಕಣ್ಣೀರಿಡುತ್ತ ಒಳಗೆ ಹೋದರು? ನಿಮಗೆ ದೇವರು ಒಳ್ಳೇದು ಮಾಡ್ಯಾನ? ನೋಡಿದವರು ನಿನ್ನ ಮುಖದ ಮೇಲೆ ಉಗಿಯುವುದಿಲ್ಲವೆ? ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ!’ ಎಂದು ಉಗುಳಿ ಹೊರಟುಹೋದಳು. ಬಸವಿಯಿಂದ ಈ ಮಾತು ಕೇಳಿದ ಮೇಲೆ ಅಚ್ಚಮ್ಮ ಹೊರಗೆ ಕುಳಿತು ಬಯ್ಯುವುದನ್ನು ನಿಲ್ಲಿಸಿದಳು. ಆದರೆ ಮನೆಯೊಳಗೆ ಬಯ್ಯುವುದೇನೂ ನಿಲ್ಲಲಿಲ್ಲ. ಮನೆಯೊಳಗೆ ಬಂದ ಸುಬ್ಬಣ್ಣನವರು ಒಲೆಯ ಮುಂದೆ ಕುಳಿತು ಆಳುತ್ತಿದ್ದ ಹೆಂಡತಿಯನ್ನು ಕಂಡು “ಯಾಕೆ ಅಳುತ್ತಿದ್ದೀಯೆ?” ಎಂದು ಕೇಳಿದರು. ಲಕ್ಷ್ಮೀದೇವಮ್ಮನವರಿಗೆ ಬೆಳಗಾಗುತ್ತಲೇ ನಿಷ್ಕಾರಣವಾಗಿ ಕಿವಿಯಿಂದ ಕೇಳಲಾರದ ಮಾತುಗಳನ್ನು ಕೇಳಿ ತಮಗಾದ ಸಂಕಟವನ್ನು ಮನೆಯವರ ಮುಂದೆ ಹೇಳಿಯೂ ವ್ಯರ್ಥವಾಗುವುದಲ್ಲ ಎಂಬ ಕ್ರೋಧ ಉಕ್ಕಿ ಹರಿಯುತ್ತಿತ್ತು. ತಾವು ಯಾವ ಪ್ರತೀಕಾರವನ್ನೂ ಮಾಡಲಾಗದ ಅಸಹಾಯಕತೆ ನುಂಗಲಾರದ ತುತ್ತಾಗಿತ್ತು. ಎಂದೂ ಗಂಡನ ಮುಂದೆ ನಿಂತು ಪ್ರತಿಭಟಿಸಿ ಮಾತನಾಡದಿದ್ದ ಲಕ್ಷ್ಮೀದೇವಮ್ಮ ಅಂದು ಹೊಟ್ಟೆಯ ಸಂಕಟವನ್ನು ತಡೆಯಲಾರದೆ “ನನ್ನ ಹಣೆಯಲ್ಲಿ ಅಳುವುದನ್ನೇ ಬರೆದುಬಿಟ್ಟಿದ್ದೀರಲ್ಲ! ಅಳದೆ ಇನ್ನೇನು ಮಾಡಲಿ? ‘ಹಾದಿಯಲ್ಲಿ ಹೋಗುವ ಮಾರಮ್ಮ, ಮನೆ ಹೊಕ್ಕು ಹೋಗು’ ಎಂಬಂತೆ ಎಲ್ಲಿಯೋ. ಅಲೆಯುತ್ತಿದ್ದ ತಮ್ಮನನ್ನು ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದಿರಿ. ಬೆಳಗಾದರೆ ಅಷ್ಟೋತ್ತರ ಸಹಸ್ರನಾಮ! ಮಹರಾಯಗಿತ್ತಿ, ನನ್ನ ಅತ್ತೆ ಒಂದು ದಿನ ಒಂದು ಕೆಟ್ಟ ಮಾತನಾಡಲಿಲ್ಲ. ತಾಯಿಗಿಂತ ಹೆಚ್ಚಾಗಿದ್ದರು. ಕೈ ಹಿಡಿದ ಗಂಡ ನೀವು, ನಿಮ್ಮಿಂದ ಒಂದು ಕೆಟ್ಟ ಮಾತು ಕೇಳಲಿಲ್ಲ. ಇದೆಲ್ಲಿಯ ಪ್ರಾರಬ್ಧ ಗಂಟು ಬಿತ್ತು ನನ್ನ ಪಾಲಿಗೆ! ಒಂದು ದಿನವೂ ತಪ್ಪಲಿಲ್ಲ ಮುಂಡಾಷ್ಟಕ. ನಾನು ಗಂಡನಿದ್ದೂ ಮುಂಡೆ, ಮಕ್ಕಳಿದ್ದೂ ಬಂಜೆ ಈ ಮಹಾತಾಯಿಯ ಬಾಯಿ ಹರಕೆಯಿಂದ! ಇದ್ದರೆ 204 ಮೂರು ತಲೆಮಾರು ತಿನ್ನಬಹುದು, ಇಲ್ಲದಿದ್ದರೆ ನೀರು ಕುಡಿದುಕೊಂಡಾದರೂ ನಮ್ಮ ಮನೆಯಲ್ಲಿ ನಾವು ಹಾಯಾಗಿರೋಣ ಅಂದರೆ ಅದೂ ಅಸಾಧ್ಯವಾಗಿದೆ ಈ ಮಹಾನುಭಾವಳ ಕೃಪಾಕಟಾಕ್ಷದಿಂದ! ನೀವೇನೋ ಪುಣ್ಯಾತ್ಮರು, ಮಹಾನುಭಾವರು! ಯಾರು ಏನೆಂದರೂ, ಏನಾದರೂ ನಿರ್ಲಿಪ್ತರಾಗಿದ್ದುಬಿಡುತ್ತೀರಿ! ಆದರೆ ನಮಗೆ ನಿಮ್ಮಷ್ಟು ವೈರಾಗ್ಯ ಎಲ್ಲಿಂದ ಬರಬೇಕು? ಉಪ್ಪು ಹುಳೀ ತಿನ್ನುವ ದೇಹ ಎಷ್ಟೂಂತ ಸಹಿಸುವುದು? ಹೋಗಲಿಬಿಡಿ. ನಿಮಗೆ ಹೇಳಿ ಏನು ತಾನೇ ಪ್ರಯೋಜನ? ನನ್ನ ಕರ್ಮ ನಾನು ಅನುಭವಿಸುತ್ತೇನೆ. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೊ ಏನೋ ಈ ಜನ್ಮದಲ್ಲಿ ಅದನ್ನು ಅನುಭವಿಸುತ್ತೇನೆ’ ಎಂದು ತಮ್ಮ ಹೊಟ್ಟೆಯ ಸಂಕಟವನ್ನು ಗಂಡನ ಮುಂದೆ ತೋಡಿಕೊಂಡರು. ಒಂದು ಕ್ಷಣ ಸುಬ್ಬಣ್ಣನವರಿಗೂ ಮನನೊಂದು ಉದ್ವಿಗ್ನವಾಗಿತ್ತು. ಲಕ್ಷ್ಮೀದೇವಮ್ಮನವರ ಮಾತು ಸತ್ಯಸ್ಯ ಸತ್ಯವಾಗಿತ್ತು. ಮರುಕ್ಷಣವೇ ಅವರು ಎಂದಿನಂತೆ ಶಾಂತಮೂರ್ತಿಯಾದರು. ‘ಎಲ್ಲವೂ ರಾಮನ ಲೀಲೆ! ಅವನು ತಮ್ಮ ತಾಳ್ಮೆಯನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಮಾಡುತ್ತಿದ್ದಾನೆ. ಅವನ ಇಚ್ಛೆ ಇದ್ದಂತಾಗಲಿ. ಇಷ್ಟಕ್ಕಾಗಿ ನಾವು ನಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು’ ಎಂದು ಸುಮ್ಮನಾಗಿಬಿಟ್ಟರು. * * * * 205 18. ಮೃತ್ಯುಮುಖದಿಂದ ಮುಕ್ತಿ ! ಒಮ್ಮೆ ಸುಬ್ಬಣ್ಣನವರಿಗೆ ಖಾಯಿಲೆಯಾಯಿತು. ಏನೋ ಅಲಸಿಕೆಯಿಂದ ಸ್ವಲ್ಪ ಜ್ವರ ಬಂದಿದೆ ಎಂದು ಸುಬ್ಬಣ್ಣನವರು ತಾತ್ಸಾರ ಮಾಡಿ ಎಂದಿನಂತೆ ತಮ್ಮ ಸ್ನಾನಾಹ್ನಿಕಗಳಲ್ಲಿ ನಿರತರಾಗಿದ್ದರು. ದಿನದಿನಕ್ಕೆ ಕ್ರಮೇಣ ಜ್ವರ ಏರುತ್ತ ಹೋಯಿತು. ಖಾಯಿಲೆ ಉಲ್ಬಣಿಸಿ ಹಾಸಿಗೆ ಹಿಡಿಯುವಂತಾಯಿತು. ‘ಜ್ವರ ಬಂದಿರುವಾಗ ತಣ್ಣೀರಿನ ಸ್ನಾನ ಬೇಡ’ ಎಂಬ ಲಕ್ಷ್ಮೀದೇವಮ್ಮನವರ ಮಾತು ಸುಬ್ಬಣ್ಣನವರ ಲಕ್ಷ್ಯಕ್ಕೆ ಬರಲಿಲ್ಲ. ಜ್ವರ ಉಲ್ಬಣಿಸುತ್ತಲೇ ಆಕೆ ಕಂಗಾಲಾದರು. ತುಂಬಿದ ಸಂಸಾರಕ್ಕೆ ಏಕಮಾತ್ರ ಆಧಾರವಾಗಿದ್ದ ಸುಬ್ಬಣ್ಣನವರು ಹಾಸಿಗೆ ಹಿಡಿಯುತ್ತಲೇ ಆ ಗೃಹಿಣಿಗೆ ದಿಕ್ಕು ತೋಚದಂತಾಯಿತು. ಸ್ವಲ್ಪವಯಸ್ಸು ಬಂದಿದ್ದ ಗಂಡು ಮಕ್ಕಳು ಪರಸ್ಥಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಮನೆಯಲ್ಲಿದ್ದವರೆಲ್ಲ ಪಾವು, ಅರೆಪಾವು, ಚಟಾಕು! ಏನಾದರೂ ಹೆಚ್ಚು ಕಡಮೆ ಆದರೆ ತನ್ನ ಗತಿಯೇನು? ಈ ದೊಡ್ಡ ಸಂಸಾರಕ್ಕೆ ದಿಕ್ಕಾರು? ಅವರು ಕರ್ತವ್ಯಮೂಢರಾಗಿ ಗಂಡನ ಹಾಸಿಗೆಯ ಬಳಿ ಮೂಕರೋದನದೊಡನೆ ಕುಳೀತುಬಿಟ್ಟರು. ಸುಬ್ಬಣ್ಣನವರಿಗಾದರೋ ಸಂಸಾರದ ಯೋಚನೆಗೆ ಬದಲಾಗಿ ‘ಅಯ್ಯೋ ದೇವರ ಪೂಜೆ ನಿಂತು ಹೋಯಿತಲ್ಲ, ಸ್ನಾನ ಆಹ್ನಿಕಗಳಿಗೆ ಸಾಧ್ಯವಿಲ್ಲದಂತಾಯಿತಲ್ಲ’ ಎಂಬ ಹಂಬಲ. ಒಂದು ದಿನ ಈ ಯೋಚನೆಯಿಂದ ಅವರ ಮನಸ್ಸಿಗೆ ತುಂಬ ಕಿರಿಕಿರಿಯಾಗಿದೆ. ಅವರು ಮಡದಿಯನ್ನು ಕುರಿತು ‘ಮಡಿಯುಟ್ಟು ಸ್ವಲ್ಪ ರಾಮಾಯಣವನ್ನಾದರೂ ಓದುತ್ತೀಯಾ? ಕೊನೆಗಾಲದಲ್ಲಿ ಸ್ವಲ್ಪ ರಾಮನಾಮವಾದರೂ ಕಿವಿಗೆ ಬೀಳಲಿ’ ಎಂದರು. ಗಂಡನ ಈ ಮಾತನ್ನು ಕೇಳಿ ಲಕ್ಷ್ಮೀದೇವಮ್ಮನಿಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ಯೋಚನಾಶೂನ್ಯರಾಗಿ ಅವರು ಸುಮ್ಮನೆ ಕುಳಿತುಬಿಟ್ಟರು. ಸ್ವಲ್ಪ ಕಾಲವಾದನಂತರ, ಸುಬ್ಬಣ್ಣನವರಿಗೆ ಏನು ತೋಚಿತೊ! ‘ರಾಮಣ್ಣ ಭಾವನಿಗಾದರೂ ಹೇಳಿ ಕಳುಹಿಸಿದರೆ ಚೆನ್ನಾಗಿತ್ತು’ ಎಂದರು. ಈ ಮಾತಿನಿಂದ ಲಕ್ಷ್ಮೀದೇವಮ್ಮನಿಗೆ ಕಾರ್ಗತ್ತಲೆಯಲ್ಲಿ ಮಿಂಚು ಹೊಳೆದಂತಾಯಿತು. ತನಗೇಕೆ ಇದು ಮುಂಚೆಯೇ ಹೊಳೆಯಲಿಲ್ಲ, ಎಂದು ಅವರು ಕಳವಳಿಸಿದರು. ಚೆನ್ನಮ್ಮನಾಗತಿಹಳ್ಳಿ ರಾಮಣ್ಣನವರು ವಾವೆಯಲ್ಲಿ ಸುಬ್ಬಣ್ಣನವರಿಗೆ 206 ಮೂರು ತಲೆಮಾರು ಭಾವನಾಗಬೇಕಷ್ಟೆ! ವೃತ್ತಿಯಿಂದ ಆತ ಪುರೋಹಿತ, ಆದರೆ, ಆಯುರ್ವೇದ ವೈದ್ಯ. ಆತನಿಗೆ ವಂಶ ಪರಂಪರೆಯಿಂದ ಬಂದ ಉದ್ಯೋಗ. ಅಲ್ಲದೆ ಆತನ ಕೈಗುಣ ಬಹಳ ಉತ್ತಮವಾದುದೆಂದು ಹೆಸರುವಾಸಿಯಾಗಿತ್ತು. ವೈದ್ಯವಿದ್ಯೆಯನ್ನು ಆತ ಹೊಟ್ಟೆಯಪಾಡಿಗೆ ಬಳಸುತ್ತಿರಲಿಲ್ಲ. ಪ್ರತಿಫಲ ಪಡೆದು ಚಿಕಿತ್ಸೆ ಮಾಡಿದರೆ ವೈದ್ಯ ಫಲಿಸುವುದಿಲ್ಲ ಎಂಬುದು ಅವರ ನಂಬಿಕೆ. ಅನೇಕ ವೇಳೆ ತಮ್ಮ ಕೈಯಿಂದಲೇ ಖರ್ಚುಮಾಡಿ ಕಡುಬಡವರಿಗೆ ಔಷಧ ಕೊಡುವುದು ಆತನ ಪದ್ಧತಿ. ಆತನ ಬಳಿಯಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದ ಕೆಲವು ಕುಪ್ಪಿಯ ಮಾತ್ರೆಗಳಿದ್ದುವು. ಅವು ಅಮೂಲ್ಯವಾದುವು, ಅಸದೃಶವಾದ ಔಷಧಗುಣವುಳ್ಳವು. ಕೇವಲ ರಾಜವೈದ್ಯರುಗಳಲ್ಲಿ ಮಾತ್ರವೇ ಇರುತ್ತಿದ್ದ ಈ ಅಮೂಲ್ಯ ವಸ್ತುಗಳು ರಾಮಣ್ಣನವರಲ್ಲಿ ಇರುತ್ತಿದ್ದುವು. ಸುಬ್ಬಣ್ಣನವರ ಅನಾರೋಗ್ಯದ ವಿಚಾರ ರಾಮಣ್ಣನನ್ನು ಮುಟ್ಟಿತು. ಒಡನೆಯೇ ಆತ ಕುದುರೆ ಏರಿ ತಳುಕಿಗೆ ಧಾವಿಸಿ ಬಂದರು. ಆ ವೇಳೆಗೆ ಸುಬ್ಬಣ್ಣನವರ ಸ್ಥಿತಿ ಅಸ್ತವ್ಯಸ್ತವಾಗಿತ್ತು. ಆತನನ್ನು ಕಾಣುತ್ತಲೇ ಲಕ್ಷ್ಮೀದೇವಮ್ಮನಿಗೆ ಅದುವರೆಗೆ ತಡೆಹಿಡಿದಿದ್ದ ದುಃಖ ಉಕ್ಕಿ ಬಂದಿತು. ಆಕೆ ರಾಮಣ್ಣನ ಎರಡು ಕಾಲುಗಳನ್ನೂ ಭದ್ರವಾಗಿ ಹಿಡಿದು ‘ಅಣ್ಣ, ನನ್ನ ಮಾಂಗಲ್ಯವನ್ನು ಉಳಿಸಿಕೊಡು’ ಎಂದು ಕಣ್ಣೀರಿನಿಂದ ಆತನ ಪಾದಗಳನ್ನು ತೊಳೆದಳು. ಅದನ್ನು ಕಂಡು ರಾಮಣ್ಣನಿಗೂ ದುಃಖ ಉಕ್ಕಿ ಬಂತು. ಆತ ಕಷ್ಟದಿಂದ ದುಃಖವನ್ನು ಹತ್ತಿಕ್ಕಿಕೊಂಡು “ಲಕ್ಷ್ಮೀದೇವಿ, ದೇವರಿದ್ದಾನೆ, ಸಮಾಧಾನ ಮಡಿಕೊ. ಸುಬ್ಬು ನಂಬಿರುವ ಆ ಶ್ರೀರಾಮನೇ ಅವನನ್ನು ಕಾಪಾಡಬೇಕು. ಅವನ ಹೆಸರು ಹೇಳಿಯೇ ನನ್ನ ಕೈಲಾದುದನ್ನು ನಾನು ಮಾಡುತ್ತೇನೆ. ರೋಗ ತುಂಬ ಬಲಿತುಹೋಗಿದೆ. ಆದರೇನು ಅವನು “ಭಯಕೃತ್ ಭಯನಾಶನಃ’. ನೀನು ಮಡಿಯುಟ್ಟು, ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿಡು. ನಾನೂ ಮಡಿಯುಟ್ಟು. ‘ವೈದ್ಯೋನಾರಾಯಣೋ ಹರಿಃ’ ಎಂದು ಹೇಳಿ ಔಷಧ ಕೊಡುತ್ತೇನೆ” ಎಂದು ಸಮಾಧಾನಪಡಿಸಿದ. ಲಕ್ಷ್ಮೀದೇವಮ್ಮನಿಗೆ ರಾಮಣ್ಣ ಧೈರ್ಯ ಹೇಳಿದ್ದ ನಿಜ. ಆದರೆ ಸ್ವತಃ ವೈದ್ಯನಿಗೇ ಧೈರ್ಯವಿರಲಿಲ್ಲ. ರೋಗ ಅಷ್ಟು ಉಲ್ಬಣಿಸಿತ್ತು. ನಾಲಗೆಯ ಮೇಲೆ ದೋಷ ಮೂಡಿತ್ತು. ನಾಡಿಯ ಬಡಿತ ಕ್ಷೀಣವಾಗಿತ್ತು. ರಾಮಣ್ಣ ದೇವರ ಮೇಲೆ ಭಾರಹಾಕಿ ತನ್ನ ಕುಪ್ಪಿಯ ಮಾತ್ರೆಗಳಲ್ಲಿ ಒಂದನ್ನು ಹೊರತೆಗೆದ. ಅದನ್ನು ಸಾಣೆಕಲ್ಲ ಮೇಲೆ ತೇದು ಸುಬ್ಬಣ್ಣನವರ ನಾಲಗೆಯ ಮೇಲೆ ತೀಡಿದ. ಅದನ್ನು ನೀರಿನಲ್ಲಿ ಹಾಕಿ ಆತನಿಗೆ ಕುಡಿಸಿದ. ಅರ್ಧ ಹೊಟ್ಟೆಯೊಳಗೆ ಹೋಯಿತು, ಮೃತ್ಯುಮುಖದಿಂದ ಮುಕ್ತಿ ! 207 ಉಳಿದರ್ಧ ಹೊರಕ್ಕೆ ಬಂದಿತು. ರಾಮಣ್ಣ ರೋಗಿಯ ಪರಿಸ್ಥಿತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತ ರೋಗಿಯ ಪಕ್ಕದಲ್ಲಿಯೇ ಕುಳಿತಿದ್ದ. ಲಕ್ಷ್ಮೀದೇವಮ್ಮನೂ ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿಟ್ಟು’ ನಮಸ್ಕಾರ ಮಾಡಿ, ತಾನೂ ಹಾಸಿಗೆಯ ಬಳಿ ಕೂತಳು. ರಾಮಣ್ಣ ಸುಬ್ಬಣ್ಣನವರ ನಾಡಿಯನ್ನು ಹಿಡಿದು ನೋಡುತ್ತ, ಅವರ ಮುಖವನ್ನೇ ನೆಟ್ಟ ನೋಟದಿಂದ ನಿರೀಕ್ಷಿಸುತ್ತ ಕುಳಿತರು. ಗುಡೆಹಳ್ಳಿಯ ತಿಪ್ಪಯ್ಯನಂತೂ ಆ ದಿನ ಊಟಕ್ಕೂ ಹೋಗದೆ ತಮ್ಮನ ಪಕ್ಕದಲ್ಲಿಯೇ ಕುಳಿತುಬಿಟ್ಟಿದ್ದ. ‘ನನ್ನ ಸುಬ್ಬಣ್ಣನನ್ನು ಉಳಿಸಿಕೊಡಿ ರಾಮಣ್ಣನವರೆ, ನನ್ನ ಚರ್ಮದಿಂದ ನಿಮ್ಮ ಕಾಲಿಗೆ ಚಪ್ಪಲಿ ಮಾಡಿಸಿಕೊಡುತ್ತೇನೆ’ ಎಂದು ಹೇಳಿ ಗೋಳಿಡುತ್ತಿದ್ದ. ಧಾರಾಕಾರವಾಗಿ ಹರಿಯುವ ಕಣ್ಣೀರನ್ನು ಒರೆಸಿಕೊಳ್ಳುವ ಗೋಜಿಗೂ ಹೋಗಿರಲಿಲ್ಲ. ಇತ್ತ ಹೆಂಡತಿ, ಅತ್ತ ಜೀವದ ಗೆಳೆಯ ವೈದ್ಯರ ಮುಖವನ್ನೇ ಎವೆಯಿಕ್ಕದೆ ನೋಡುತ್ತಿದ್ದರು. ಹೀಗೆ ಎಷ್ಟು ಹೊತ್ತು ಕಳೆಯಿತೋ ಗೊತ್ತಿಲ್ಲ. ಎಷ್ಟೋ ಹೊತ್ತಾದ ಮೇಲೆ ರಾಮಣ್ಣನವರು ‘ಲಕ್ಷ್ಮೀದೇವಿ ಸ್ವಲ್ಪ ಹಾಲಿದ್ದರೆ ತೆಗೆದುಕೊಂಡು ಬಾಮ್ಮಾ’ ಎಂದರು. ಅದನ್ನು ಕೇಳಿ ಆಕೆಗೆ ಸ್ವಲ್ಪ ಧೈರ್ಯ ಬಂದಂತಾಯಿತು. ಆಕೆ ಎದ್ದು ಹಾಲು ತರಲೆಂದು ಅಡಿಗೆಯ ಮನೆಗೆ ಹೋದಳು. ಆಗ ತಿಪ್ಪಯ್ಯ ಮೆಲ್ಲಗೆ ‘ರಾಮಣ್ಣೋರೇ...’ ಎಂದ. ‘ಹೆದರಬೇಡ ತಿಪ್ಪಯ್ಯ. ದೇವರು ದೊಡ್ಡವನು. ಸುಬ್ಬಣ್ಣನವರ ಪ್ರಾಣಕ್ಕೇನೂ ಭಯವಿಲ್ಲ. ಆತ ಚೀಟಿ ತಿರುವಿ ಹಾಕಿದ. ಮೊದಲಿನಂತಾಗುವುದಕ್ಕೆ ಸ್ವಲ್ಪ ಕಾಲ ಬೇಕಾಗಬಹುದು. ಆದರೆ ಪ್ರಾಣಭಯವಂತೂ ಇಲ್ಲ’ ಎಂದು ಧೈರ್ಯ ಹೇಳಿದ. ಆನಂದದಿಂದ ತಿಪ್ಪಯ್ಯನಿಗೆ ಬಾಯೇ ಕಟ್ಟಿಹೋಯಿತು. ಆತ ರಾಮಣ್ಣನವರ ಕೈಗಳೆರಡನ್ನೂ ಭದ್ರವಾಗಿ ಹಿಡಿದುಕೊಂಡ. ಆತನ ಸ್ನೇಹದ ಆಳವನ್ನು ಕಂಡು ರಾಮಣ್ಣನಿಗೆ ಅಚ್ಚರಿಯಾಯಿತು, ‘ಪ್ರಪಂಚದಲ್ಲಿ ಇಂಥವರೂ ಉಂಟೆ’ ಎಂದುಕೊಂಡ. ಕೆಲದಿನಗಳಲ್ಲಿಯೇ ಸುಬ್ಬಣ್ಣನವರ ಆರೋಗ್ಯ ಸುಧಾರಿಸಿತು. ಆಗ ರಾಮಣ್ಣನವರು ಊರಿಗೆ ಹೊರಡುವ ಸಿದ್ಧತೆಯನ್ನು ಮಾಡಿದರು. ಆ ದಿನ ಊಟ ಮಾಡುತ್ತಿರುವಾಗ ಆತ ಸುಬ್ಬಣ್ಣನವರೊಡನೆ ‘ನಾನಿನ್ನು ಊರಿಗೆ ಹೊರಡುತ್ತೇನೆ. ಸುಬ್ಬಣ್ಣ ನನಗೆ ಅಪ್ಪಣೆಯನ್ನು ಕೊಡು’ ಎಂದರು. ಒಡನೆಯೇ ಬಡಿಸುತ್ತಿದ್ದ ಲಕ್ಷ್ಮೀದೇವಮ್ಮ ಅಣ್ಣಯ್ಯ, ನಿನ್ನ ಉಪಕಾರದ ಋಣ ಎಷ್ಟು ಜನ್ಮಗಳನ್ನೆತ್ತಿ ತೀರಿಸಬೇಕೊ? ಮುಳುಗಿ ಹೋಗುತ್ತಿದ್ದ ನನ್ನ ಮನೆಯನ್ನು ಉಳಿಸಿದೆ. ನನ್ನ ಮಾಂಗಲ್ಯವನ್ನು ಕಾಪಾಡಿಕೊಟ್ಟೆ’ ಎಂದಳು. ರಾಮಣ್ಣನವರು ಇಂತಹ 208 ಮೂರು ತಲೆಮಾರು ಸಂದರ್ಭಕ್ಕಾಗಿಯೇ ಕಾಯುತ್ತಿದ್ದರೊ ಏನೊ! ಸುಬ್ಬಣ್ಣನವರ ಹೆಣ್ಣು ಮಕ್ಕಳು ಅತ್ಯಂತ ರೂಪವತಿಯರಾಗಿದ್ದಂತೆಯೇ ಗುಣವತಿಯರೂ ಆಗಿದ್ದರು. ಅವರಲ್ಲಿ ಕಮಲಮ್ಮ ಅತ್ಯಂತ ಸುಂದರಿ. ಆಕೆಯನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳಬೇಕೆಂದು ರಾಮಣ್ಣನವರ ಬಹುದಿನಗಳ ಆಸೆ. ಅದನ್ನು ಕೇಳಲು ಅವರು ಹಿಂಜರಿಯುತ್ತಿದ್ದರು. ಈಗ ಸಂದರ್ಭ, ಸನ್ನಿವೇಶಗಳು ತನಗೆ ಅನುಕೂಲವಾಗಿ ಒದಗಿ ಬಂದಿದ್ದುವು. ಆದ್ದರಿಂದ ರಾಮಣ್ಣ ಹೇಳಿದರು. ‘ನೀವು ದಂಪತಿಗಳು ಮನಸ್ಸು ಮಡಿದರೆ ನನ್ನ ಋಣವನ್ನು ತೀರಿಸುವುದು ಬಹು ಕಷ್ಟವೇನೂ ಅಲ್ಲ. ಮುಖ್ಯ ನೀವು ಮನಸ್ಸು ಮಾಡಬೇಕು ಅಷ್ಟೆ’ ಎಂದು ತಮ್ಮ ಆಶಾಪೂರ್ತಿಗೆ ಪೀಠಿಕೆ ಹಾಕಿದರು. ಆಗ ಸುಬ್ಬಣ್ಣನವರು ‘ಏನು ಭಾವ! ನಾವು ಬಡವರು ಎಂದು ಹಾಸ್ಯ ಮಾಡುತ್ತೀಯ? ನಿನ್ನ ಉಪಕಾರ ತೀರಿಸುವಂತಹ ಅಮೂಲ್ಯ ವಸ್ತು ನಮ್ಮಲ್ಲಿ ಏನಿದೆ? ನಮ್ಮ ಆಸ್ತಿ ಇಗೋ ಈ ನಂದಗೋಕುಲ. ಬೇರೆ ಯಾವ ಐಶ್ವರ್ಯ ನಮಗಿದೆ?’ ಎಂದರು. ‘ನಾನು ಅದನ್ನೇ ಕೇಳುತ್ತಿರುವುದು ಸುಬ್ಬಣ್ಣ. ನಿನ್ನ ಮಕ್ಕಳಲ್ಲಿ ಒಬ್ಬಳನ್ನು ನನ್ನ ಸೊಸೆಯಾಗಿ ಮಾಡಿಕೊಳ್ಳಬೇಕೆಂದು ನನ್ನ ಬಹುದಿನದ ಬಯಕೆ, ನಿನ್ನ ಮಗಳು ಕಮಲಮ್ಮನನ್ನು ನನ್ನ ಮಗ ಛಾಯಾಪತಿಗೆ ಕೊಟ್ಟು ಮದುವೆ ಮಡಲು ಒಪ್ಪಿದರೆ ನನ್ನ ಮನಸ್ಸಿಗೆ ತುಂಬ ಸಂತೋಷವಾಗುತ್ತದೆ. ಏನು ಹೇಳುತ್ತಿ?’ ನೀನು ಹೇಳುವ ಮಾತು ಚೆನ್ನಾಗಿದೆ ಭಾವ. ನಾವಾಗಿ ಬಂದು ನಿನ್ನ ಕಾಲು ಕಟ್ಟಿಕೊಂಡು, ನಿಮ್ಮ ಮನೆಗೆ ನಮ್ಮ ಹೆಣ್ಣು ತಂದುಕೊಂಡು ಕನ್ಯಾಸೆರೆ ಬಿಡಿಸಿ- ಎಂದು ಕೇಳಿಕೊಳ್ಳಬೇಕು. ನಾವು ಕೇಳಬೇಕಾದುದನ್ನು ನೀವೇ ಕೇಳಿದರೆ ಇಲ್ಲ ಎನ್ನುತ್ತೇವೆಯೇ?’ ‘ಹೌದಪ್ಪ ನೀನೇನೋ ನನ್ನ ಮೇಲಿನ ಅಭಿಮಾನದಿಂದ ‘ಹೂಂ’ ಎನ್ನಬಹುದು. ಆದರೆ ಹೊತ್ತು ಹೆತ್ತ ನಿನ್ನ ಮಡದಿಯ ಅಭಿಪ್ರಾಯ ಏನಿದೆಯೋ ಯಾರಿಗೆ ಗೊತ್ತು?’ ಲಕ್ಷ್ಮಿದೇವಮ್ಮ ಒಡನೆಯೇ ಉತ್ತರಿಸಿದಳು. ‘ಭಾವ ಮೈದುನರು ನೀವಿಬ್ಬರೂ ಒಂದಾದ ಮೇಲೆ ನನ್ನದೇನಿದೆ ಅಣ್ಣಯ್ಯ? ನಿಮ್ಮ ಮಾತಿಗೆ ಪ್ರತಿ ಹೇಳುವಷ್ಟು ಧೈರ್ಯವಾದರೂ ನನಗಿದೆಯೇ? ನನ್ನ ಹೆಣ್ಣು ಮಕ್ಕಳಲ್ಲಿ ಕಮಲ ಹೇಗೆ ರೂಪಸಿಯೋ ನಿನ್ನ ಗಂಡು ಮಕ್ಕಳಲ್ಲಿ ಛಾಯಾಪತಿಯೂ ಹಾಗೆ ರೂಪವಂತ. ಅವರಿಬ್ಬರ ಜೋಡಿ ರತಿ-ಮನ್ಮಥರಂತೆ. ಇದೂ ಅಲ್ಲದೆ ನಿಮ್ಮ ನಮ್ಮ ಮನೆತನಗಳಿಗೆ ಬಹುಕಾಲದಿಂದಲೂ ಕಲೆತುಬಂದ ಬಾಂಧವ್ಯವಿದೆ. ಅದು ಮುಂದುವರೆದರೆ ನಮಗೆ ತುಂಬ ಸಂತೋಷ’ ಎಂದರು. * * * * 209 19. ಸುಬ್ಬಣ್ಣನವರ ಸಾಹಿತ್ಯ ಸೇವೆ - ಕವಿತಾ ವೈಭವ ಸುಬ್ಬಣ್ಣನವರು ಕುಂತಲ್ಲಿ ನಿಂತಲ್ಲಿ ಕವಿತೆ ಮಾಡಬಲ್ಲವರಾಗಿದ್ದರು. ಅವರ ಬಾಯಿಂದ ಬರುವ ಮಾತುಗಳು ಕಾವ್ಯರಸವನ್ನು ಹೊರಚಿಮ್ಮುತ್ತಿದ್ದುವು. ಒಂದು ದಿನ ಬೆಳಿಗ್ಗೆ ಅವರು ಹಳ್ಳದ ಬಳಿ ಹೂಗಳನ್ನು ಎತ್ತಿಕೊಂಡು ಮನೆಗೆ ಬರುವ ವೇಳೆಗೆ ತಾಯಿ ಹನುಮಕ್ಕಮ್ಮ ಸಪ್ಪೆ ಮೋರೆ ಮಾಡಿಕೊಂಡು ಕುಳಿತಿದ್ದರು. ಸುಬ್ಬಣ್ಣ ಆಕೆಯನ್ನು ಕುರಿತು ‘ಏಕಮ್ಮಾ ಹೀಗೆ’ಎಂದು ಕೇಳಿದರು. ಆತ ಪ್ರಶ್ನಿಸುತ್ತಲೇ ತಾಯಿಯ ಕಣ್ಣಲ್ಲಿ ನೀರು ತುಂಬಿದುವು. ಆಕೆ “ನೋಡು ಸುಬ್ಬು, ಆಚೆ ಮನೆಯ ಶೇಕದಾರರ ತಾಯಿ ಉಷಃ ಕಾಲಕ್ಕೆದ್ದು ‘ದುರ್ವಾಸ ಶಾಪ’ದ ಉದಯರಾಗವನ್ನು ಹಾಡಿಕೊಳ್ಳುತ್ತಾಳೆ. ಅದು ತುಂಬ ಸುಂದರವಾಗಿದೆ. ನನಗೂ ಅದನ್ನು ಕಲಿಯಬೇಕೆಂದು ಚಪಲ ಹುಟ್ಟಿತು. ಅದನ್ನು ಹೇಳಿಕೊಡುವಂತೆ ಆಕೆಯನ್ನು ಅಂಗಲಾಚಿ ಬೇಡಿಕೊಂಡೆ. ಮೂರು ನಾಲ್ಕು ಬಾರಿ ಹೋಗಿ ಮತ್ತೆ ಮತ್ತೆ ಕೇಳಿಕೊಂಡೆ. ಆ ಮುದುಕಿಗೆ ಎಲ್ಲಿಲ್ಲದ ಬಿಂಕ. ಕಡೆಗೊಂದು ದಿನ ‘ನೋಡೆ ಹನುಮಕ್ಕ ಅದು ಬಹಳ ಮಹತ್ತಾದ ಹಾಡಮ್ಮ. ಅದನ್ನು ಮೈಲಿಗೆಯಲ್ಲಿ ಹೇಳಬಾರದು, ಹೇಳಿಸಿಕೊಳ್ಳಲೂ ಬಾರದು. ಅದನ್ನು ತುಂಬ ಮಡಿಯಿಂದ ಶ್ರದ್ಧೆಯಿಂದ ಕಲಿಯಬೇಕಾಗುತ್ತದೆ’ ಎಂದು ಹೇಳಿದಳು. ಆಕೆಯ ವ್ಯಂಗ್ಯವನ್ನು ಕಂಡು ನನಗೆ ತುಂಬ ಅವಮಾನವಾದ ಹಾಗಾಯಿತು. ಆಕೆ ಮಾತ್ರ ದಿನವೂ ಬೆಳಿಗ್ಗೆ ಹಾಸಿಗೆಯಿಂದ ಎದ್ದವಳೇ ಸ್ನಾನವೂ ಮಾಡದೆ ಉದಯರಾಗವನ್ನು ಹಾಡಿಕೊಳ್ಳುತ್ತಾಳೆ. ನಾನು ಮಾಡಿದ ತಪ್ಪೇನು? ಆಕೆಗಿಲ್ಲದ ಮಡಿ ನನಗೇಕೆ ಬೇಕು? ಆಕೆಯ ಮಾತು ನನ್ನ ಎದೆಯನ್ನು ಸೂಚಿಯಿಂದ ಚುಚ್ಚಿದಂತೆ ನೋಯಿಸಿತು’ ಎಂದು ಹೇಳಿಕೊಂಡರು. ಸುಬ್ಬಣ್ಣ ತಾಯಿಯ ಕಥೆಯನ್ನು ಕೇಳಿ ‘ಆ ಹಾಡಿನ ಧಾಟಿ ಹೇಗಮ್ಮ’ ಎಂದು ಕೇಳಿದರು. ತಾಯಿ ಹಾಡಿ ತೋರಿಸಿದಳು. ಅಗ ಸುಬ್ಬಣ್ಣ ಮುಗುಳ್ನಗುತ್ತ ‘ಇಷ್ಟೇನೇ? ಇದಕ್ಕೇಕಮ್ಮ ಅಶ್ರುತಲದೇವತೆಯನ್ನು ಆರಾಧಿಸುತ್ತಿದ್ದೆ. ಇವತ್ತು ಸಂಜೆಯೊಳಗಾಗಿ ನಾನು ದೂರ್ವಾಸಶಾಪವನ್ನು ಬರೆದುಕೊಡುತ್ತೇನೆ. ನಾಳೆಯಿಂದ ಬೆಳಿಗ್ಗೆ ಅದನ್ನು ಹಾಡಿಕೊ’ ಎಂದರು. ಅಂದೇ ಕುಳಿತು ಸುಮಾರು ನೂರು 210 ಮೂರು ತಲೆಮಾರು ನುಡಿಗಳುಳ್ಳ ದುರ್ವಾಸಾತಿಥ್ಯದ ಹಾಡನ್ನು ಸಾಂಗತ್ಯರೂಪದಲ್ಲಿ ರಚಿಸಿಕೊಟ್ಟರು. ಹನುಮಕ್ಕಮ್ಮನಿಗೆ ಓದಲು ಬಾರದು. ಸೊಸೆಯನ್ನು ಕೂಡಿಸಿಕೊಂಡು ಆಕೆಯಿಂದ ಹೇಳಿಸಿಕೊಂಡಳು. ಕೆಲವೇ ದಿನಗಳಲ್ಲಿ ಅತ್ತೆ-ಸೊಸೆಯರಿಬ್ಬರೂ ಆ ಹಾಡನ್ನು ಕಲಿತರು. ಲಕ್ಷ್ಮೀದೇವಮ್ಮ ದಿನವೂ ತನ್ನ ಮನೆಯಲ್ಲಿ ಸೇರುತ್ತಿದ್ದ ಮಹಿಳಾ ಗೋಷ್ಠಿಯ ಎದುರಿನಲ್ಲಿ ಅದನ್ನು ಶ್ರಾವ್ಯವಾಗಿ ಹಾಡಿ ಕೇಳಿದವರ ಮನರಂಜನೆ ಮಾಡಿದರು. ಇಂದಿಗೂ ಆ ಹಾಡು ಅನೇಕ ಮನೆಗಳಲ್ಲಿ ಬೆಳಗಿನಲ್ಲಿ ಹಾಡುವುದನ್ನು ನಾವು ಕಾಣಬಹುದು. ಸುಬ್ಬಣ್ಣನವರ ವಿಸ್ತೃತ ಕವಿತಾಭಂಡಾರದಿಂದ, ಅಚ್ಚಿನ ಮೂಲಕ ಬೆಳಕಿಗೆ ಬಂದಿರುವುದು ಇದೊಂದೇ. ಉಳಿದವೆಲ್ಲ ನಷ್ಟವಾಗಿವೆ. ಹೀಗಾಗಿರುವುದಕ್ಕೆ ಒಂದು ಮುಖ್ಯವಾದ ಕಾರಣ ಸುಬ್ಬಣ್ಣನವರು ಬರೆಯುತ್ತಿದ್ದುದು ಸುತ್ತುಮುತ್ತಿನ ಜನರಿಗಾಗಿ; ಅವರು ಬರೆದ ನಾಟಕಗಳು ತಮ್ಮ ಗ್ರಾಮದ ನಾಟಕಗೋಷ್ಠಿಗಾಗಿ. ನಾಟಕಗೋಷ್ಠಿ ಎಂದರೆ ಅದೇನು ಅವರಿಗೊಂದು ಕಸುಬಲ್ಲ. ಮುಖ್ಯವಾಗಿ ತಮ್ಮ ಮತ್ತು ತಮ್ಮ ಹಳ್ಳಿಯ ಜನಮನರಂಜನೆಗಾಗಿ ನಾಟಕಗಳನ್ನು ಆಧುನಿಕ ಶೈಲಿಯಲ್ಲಿ ಬರೆದಿದ್ದರೂ ಅವು ಒಂದು ರಾತ್ರಿಯೆಲ್ಲಾ ಆಡುವಷ್ಟು ವಿಸ್ತಾರವಾಗಿವೆ. ಈ ವಿಸ್ತಾರ ಇಂದಿನ ಜನಜೀವನದಲ್ಲಿ ಹಳ್ಳಿಯವರಿಗೆ ಮಾತ್ರ ಇಷ್ಟವೆನಿಸೀತು. ಅವರಿದ್ದ ಕಾಲದಲ್ಲಿ ಅಚ್ಚಿನ ಮನೆಗಳು ಈಗಿನಷ್ಟು ವಿಪುಲವಾಗಿರಲಿಲ್ಲ. ಇದರ ಮೇಲೆ, ಸುಬ್ಬಣ್ಣನವರು ಪ್ರಚಾರಪ್ರಿಯರೂ ಅಲ್ಲ. ಅವರ ಜೀವನ ತಾವರೆಯ ಮೇಲಿನ ನೀರಹನಿಯಂತೆ ನಿರ್ಲಿಪ್ತವಾದುದಾಗಿತ್ತು. ತಳುಕಿನ ಮಾರಮ್ಮನ ಜಾತ್ರೆ, ಅದು ತಳುಕಿನಲ್ಲಿ ಮಾತ್ರವಲ್ಲದೆ ಸುತ್ತುಮುತ್ತಿನ ಹತ್ತಾರು ಗ್ರಾಮಗಳಲ್ಲಿಯೂ ಪ್ರಸಿದ್ಧವಾಗಿತ್ತು. ಸಾವಿರಾರು ಭಕ್ತರು ಬಂದು ಜಾತ್ರೆಯ ಕಾಲದಲ್ಲಿ ಹರಕೆಯನ್ನು ಒಪ್ಪಿಸಿ ಹೋಗುತ್ತಿದ್ದರು. ಮಾಂಸಾಹಾರಿಗಳು ಕುರಿ-ಕೋಣಗಳನ್ನು ಒಪ್ಪಿಸಿದರೆ, ಶಾಖಾಹಾರಿಗಳು ಹಣ್ಣು - ಕಾಯಿಗಳನ್ನು, ಕಡಲೆಹಿಟ್ಟಿನ ತಂಬಿಟ್ಟನ್ನು ಒಪ್ಪಿಸುತ್ತಿದ್ದರು. ಮಾರಮ್ಮನ ಭಕ್ತರಲ್ಲಿ ಬ್ರಾಹ್ಮಣರಿಂದ ಹಿಡಿದು ಅಂತ್ಯಜರವರೆಗೆ ಎಲ್ಲ ಕೋಮಿನವರೂ ಇದ್ದರು. ಕಾರಣಾಂತರಗಳಿಂದ ಕಳೆದ ಮೂರು ವರ್ಷಗಳಿಂದ ಜಾತ್ರೆ ನಿಂತುಹೋಗಿತ್ತು. ಆದ್ದರಿಂದ ಈ ವರ್ಷ ಆ ಜಾತ್ರೆಗೆ ಹೆಚ್ಚಿನ ಕಳೆ ಬಂದಿತ್ತು. ಆ ಕಾರಣದಿಂದ ಆ ವರ್ಷ ಮಾರಮ್ಮನ ಜಾತ್ರೆಯನ್ನು ಹೆಚ್ಚು ವಿಜೃಂಭಣೆಯಿಂದ ನಡೆಸಬೇಕೆಂದು ಊರಿನ ಮುಖಂಡರು ತೀರ್ಮಾನಿಸಿದ್ದರು. ಗ್ರಾಮದ ಪಟೇಲ, ಶಾನುಭೋಗರುಗಳು ಈ ಉತ್ಸಾಹಕ್ಕೆ ಬೆಂಬಲವಿತ್ತಿದ್ದರು. ಸಾಕಷ್ಟು ಹಣವೂ ಕೂಡಿಬಿದ್ದಿತು. ಆದ್ದರಿಂದ ಜಾತ್ರೆಯ ಕಾಲದಲ್ಲಿ ಅದ್ಧೂರಿಯಾಗಿ ಒಂದು ನಾಟಕವನ್ನು ನಡೆಸಬೇಕೆಂದು ಸುಬ್ಬಣ್ಣನವರ ಸಾಹಿತ್ಯ ಸೇವೆ - ಕವಿತಾ ವೈಭವ 211 ನಿಶ್ಚಯಿಸಲಾಯಿತು. ಆದರೆ ಯಾವ ನಾಟಕವನ್ನು ಆಡಬೇಕು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂತು. ಒಬ್ಬನು ‘ಕರಿಭಂಟನ ಕಥೇ’ ಎಂದರೆ, ಇನ್ನೊಬ್ಬ ‘ಶಂಬರಾಸುರ ಕಾಳಗ’ ಎನ್ನುತ್ತಿದ್ದ, ಮತ್ತೊಬ್ಬ ‘ಚೋರಕಥೆ’ ಎನ್ನುತ್ತಿದ್ದ. ಆಗ ಜನರೆಲ್ಲರ ಮುಖಂಡನಾದ ಸಾಹುಕಾರ್ ತಿಪ್ಪಯ್ಯ ‘ಸುಬ್ಬಣ್ಣನವರು ಯಾವುದು ಹೇಳಿದರೆ ಅದು ಆಗಲಿ. ಸುಮ್ಮನೆ ವಿವಾದ ಬೇಡ’ ಎಂದು ಹೇಳಿದ. ಈ ಸಲಹೆಯನ್ನು ಎಲ್ಲರೂ ಒಪ್ಪಿದರು. ಸಾಹುಕಾರ ತಿಪ್ಪಯ್ಯನನ್ನೇ ಮುಂದಿಟ್ಟುಕೊಂಡು ಯುವಕರೆಲ್ಲ ಸುಬ್ಬಣ್ಣನವರ ಮನೆಗೆ ಬಂದರು. ಯಾವುದೋ ಪಂಚಾಯ್ತಿ ತೀರ್ಮಾನಕ್ಕಾಗಿ ದಿವಾನಖಾನೆಯಲ್ಲಿ ಕುಳಿತಿದ್ದ ಸುಬ್ಬಣ್ಣನವರು ಮನೆಗೆ ಬಂದ ಗುಂಪನ್ನು ನೋಡಿ ಅವರನ್ನೆಲ್ಲ ಒಳಕ್ಕೆ ಕರೆದರು. ಕುಳಿತ ಯುವಕರ ಪರವಾಗಿ ತಿಪ್ಪಯ್ಯನೇ ಸಮಸ್ಯೆಯನ್ನು ಸುಬ್ಬಣ್ಣನವರ ಮುಂದಿಟ್ಟು ‘ನೀನು ಯಾವುದನ್ನು ಆರಿಸುತ್ತೀಯೋ ಅದನ್ನು ಆಡುವುದಕ್ಕೆ ಎಲ್ಲರೂ ಒಪ್ಪಿದ್ದಾರೆ. ಯಾವ ನಾಟಕವನ್ನು ಆಡೋಣ ಹೇಳು’ ಎಂದು ಕೇಳಿದ. ತಿಪ್ಪಯ್ಯ ಮತ್ತು ಸುಬ್ಬಣ್ಣ ಅತ್ಯಂತ ಆತ್ಮೀಯರಾದ ಗೆಳೆಯರು, ‘ಒಡಲೆರಡು ಅಸುವೊಂದು’ ಎಂದು ಕವಿಗಳು ಹೇಳುತ್ತಾರಲ್ಲ ಹಾಗೆ ತಿಪ್ಪಯ್ಯ ಗ್ರಾಮಕ್ಕೆ ದೊಡ್ಡ ಸಾಹುಕಾರ. ಸುಬ್ಬಣ್ಣ ಬಹುಶಃ ಗ್ರಾಮಕ್ಕೆಲ್ಲ ದೊಡ್ಡ ಬಡವ. ಕೃಷ್ಣ - ಕುಚೇಲರಂತೆ ಅವರ ಸ್ನೇಹ. ಅದನ್ನು ಊರಿನವರೆಲ್ಲರೂ ‘ಲಕ್ಷ್ಮೀ-ಸರಸ್ವತಿ ಸಂಗಮ’ ಎಂದು ಹಾಸ್ಯ ಮಾಡುತ್ತಿದ್ದರು. ಅವರ ಆರ್ಥಿಕ ಸ್ಥಿತಿ ಅವರ ಸ್ನೇಹಕ್ಕೆ ಯಾವ ವಿಧದಲ್ಲಿಯೂ ಅಡ್ಡಿಯಾಗಿರಲಿಲ್ಲ. ಯಾವ ಆರ್ಥಿಕ ಸಹಾಯಕ್ಕಾದರೂ ತಿಪ್ಪಯ್ಯ ಸಿದ್ಧನಾಗಿದ್ದ. ಸುಬ್ಬಣ್ಣನವರು ಮಾತ್ರ ಆತನಿಂದ ಯಾವ ಸಹಾಯವನ್ನೂ ಅಪೇಕ್ಷಿಸುತ್ತಿರಲಿಲ್ಲ. ಆದರೂ ಅವರಿಬ್ಬರು ಅಣ್ಣ - ತಮ್ಮಂದಿರಂತೆ ಪರಸ್ಪರ ಪ್ರೇಮಮಯರು. ಒಬ್ಬರ ಮಾತು ಇನ್ನೊಬ್ಬರಿಗೆ ವೇದವಾಕ್ಯ. ದಿನಕ್ಕೊಂದು ಬಾರಿಯಾದರೂ ಒಬ್ಬರನ್ನೊಬ್ಬರು ನೋಡಲೇಬೇಕು. ಹಾಗೆ ನೋಡದಿದ್ದ ದಿನ ದುರ್ದಿನ, ಇಬ್ಬರಿಗೂ ಏನೋ ಅಸಮಾಧಾನ. ಕೆಲಸವಿರಲಿ, ಬಿಡಲಿ ದಿನಕ್ಕೊಂದು ಬಾರಿ ಮನೆಗೆ ಬಂದು ‘ಏನು ಸುಬ್ಬಣ್ಣ, ಚೆನ್ನಾಗಿದ್ದೀಯಾ ಎಂದು ವಿಚಾರಿಸಿಕೊಂಡು ಹೋಗುವುದು ತಿಪ್ಪಯ್ಯನ ದಿನಚರಿ. ಎಷ್ಟೋ ದಿನ ಅವರಿಬ್ಬರೂ ಮೈಮರೆತು ಮಾತಿನಲ್ಲಿ ಮುಳುಗಿರುವಾಗ ಊಟ, ತಿಂಡಿಗಳನ್ನು ಮರೆತದ್ದುಂಟು, ಮನೆಯವರ ಆಕ್ರೋಶಕ್ಕೆ ಗುರಿಯಾದದ್ದುಂಟು. ತಿಪ್ಪಯ್ಯ ಸಮಸ್ಯೆಯನ್ನು ಮುಂದಿಟ್ಟಾಗ ಸುಬ್ಬಣ್ಣನವರು ಒಂದು ಕ್ಷಣ ಯೋಚಿಸಿದರು. ‘ಮಾರಮ್ಮ ಎಂದರೆ ಆದಿಶಕ್ತಿ. ಅರ್ಥಾತ್ ಪಾರ್ವತಿ. “ಮಾರಮ್ಮನ 212 ಮೂರು ತಲೆಮಾರು ಜಾತ್ರೆಗೆ ‘ಗಿರಿಜಾ ಕಲ್ಯಾಣ’ವನ್ನು ಏಕೆ ಆಡಬಾರದು?” ಸುಬ್ಬಣ್ಣನವರ ಈ ಸಲಹೆ ಎಲ್ಲರಿಗೂ ಒಪ್ಪಿಗೆಯಾಯಿತು. ‘ಅದಕ್ಕೆ ಸುಬ್ಬಣ್ಣ ನಿನ್ನ ಹತ್ರ ಬಂದಿದ್ದು! ನೋಡು ಸಮಸ್ಯೆ ಎಷ್ಟು ಸುಲಭವಾಗಿ ಬಗೆಹರಿಯಿತು’ ಎಂದು ತಿಪ್ಪಯ್ಯ ಮೆಚ್ಚಿಕೊಂಡ. ಮಿಕ್ಕವರು ಮೌನವಾಗಿ ತಲೆ ಆಡಿಸಿದರು. ನಿರ್ಣಯವೇನೋ ಎಲ್ಲರಿಗೂ ಒಪ್ಪಿಗೆಯಾಯಿತು. ಒಂದು ಸಮಸ್ಯೆ ಪರಿಹಾರವಾದರೆ ಮತ್ತೊಂದು ಸಮಸ್ಯೆ. ಗುಂಪಿನಲ್ಲಿ ಗುಜುಗುಜು. ಅಷ್ಟರಲ್ಲಿ ಕಮ್ಮಾರ ಲಿಂಗಪ್ಪ ‘ಯಾಕಪ್ಪ ಅಷ್ಟು ಯೋಚನೆ ಮಾಡ್ತೀರ? ನಮ್ಮ ಪಾಲಿನ ದೇವರಿದ್ದ ಹಾಗೆ ಸುಬ್ಬಣ್ಣನವರಿಲ್ವೆ? ಅವರೇ ನಾಟಕ ಬರೆದು ಕೊಡುತ್ತಾರೆ. ಅವರು ಮನಸ್ಸು ಮಾಡಿದರೆ ಯಾವುದು ಅಸಾಧ್ಯ’ ಎಂದ. ‘ಬೆಣ್ಣೆಯನ್ನು ಕೈಲಿಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದ ಹಾಗೆ; ನಮಗಿದು ಹೊಳೆಯಲೇ ಇಲ್ಲವಲ್ಲ’ ಎಂದ ನಾಟಕದ ಮುಂದಾಳು ಅಗಸರ ಕೆಂಚಪ್ಪ. ನೆರೆದವರ ಮಾತುಗಳನ್ನು ಕೇಳಿ ಸುಬ್ಬಣ್ಣನವರಿಗೆ ಗರಬಡಿದಂತಾಯಿತು. ಜಾತ್ರೆಯಿರುವುದು ಇನ್ನೊಂದು ತಿಂಗಳು. ಅಷ್ಟರಲ್ಲಿ ತಾವು ನಾಟಕ ಬರೆಯುವುದು ಯಾವಾಗ? ಅದನ್ನು ಅಭ್ಯಾಸ ಮಾಡುವುದು ಯಾವಾಗ? ಆಡುವುದು ಯಾವಾಗ? ಇದು ಸಾಧ್ಯವೆ? ಆದ್ದರಿಂದ ಸುಬ್ಬಣ್ಣನವರು ಹೇಳಿದರು - “ಇದೊಳ್ಳೆ ಚೆನ್ನಾಗಿದೆ ಲಿಂಗಪ್ಪ. ‘ಮದುವೆಯಾಗು ಬ್ರಾಹ್ಮಣ ಎಂದರೆ ನೀನೇ ನನ್ನ ಹೆಂಡತಿಯಾಗು’ ಎಂದ ಹಾಗಾಯಿತು. ಇಷ್ಟು ಬೇಗ ನಾಟಕ ಬರೆದು, ನೀವು ಅಭ್ಯಾಸ ಮಾಡಿ ಆಡುವುದು ಸಾಧ್ಯವಿಲ್ಲದ ಮಾತು. ‘ಗಿರಿಜಾ ಕಲ್ಯಾಣ’ವಲ್ಲವಾದರೆ ಬೇರೆ ಯಾವುದಾದರೂ ನಾಟಕವನ್ನು ಆಡಿ. ಮುಂದಿನ ಸಾರಿ ಬೇಕಾದರೆ ‘ಗಿರಿಜಾ ಕಲ್ಯಾಣ’ ಆಡುವಿರಂತೆ’. ಆದರೆ ಈ ಮಾತನ್ನು ಯಾರೂ ಒಪ್ಪಲಿಲ್ಲ. ‘ನೀವು ಬರೆದುಕೊಡಿ ಸ್ವಾಮಿ. ನೀವು ಬರೆದು ಕೊಟ್ಟಂತೆಲ್ಲ ನಾವು ಅಭ್ಯಾಸ ಮಾಡುತ್ತ ಹೋಗುತ್ತೇವೆ. ನೀವು ನಮಗೆ ಮಾರ್ಗದರ್ಶನ ಮಾಡುತ್ತ ಹೋಗಿ. ನಿಮ್ಮ ಹೆಸರಿಗಾಗಲಿ, ನಮ್ಮ ಊರಿನ ಹೆಸರಿಗಾಗಲಿ ಕಳಂಕ ಬಾರದಂತೆ ನಾಟಕ ನಡೆಸುವುದು ನಮ್ಮ ಜವಾಬ್ದಾರಿ. ಹುಡುಗರೆಲ್ಲ ತುಂಬ ಉತ್ಸಾಹದಿಂದಿದ್ದಾರೆ. ಅವರ ಉತ್ಸಾಹಕ್ಕೆ ತಣ್ಣೀರೆರಚಬೇಡಿ. ನೀವು ಮನಸ್ಸು ಮಾಡಿದರೆ ಮೂರು ದಿನದಲ್ಲಿ ನಾಟಕ ಬರೆದು ಮುಗಿಸಬಲ್ಲಿರಿ. ನೀವು ಹೇಳಿದ ಮಾತು ನಮಗೆಲ್ಲ ತುಂಬ ಹಿಡಿಸಿದೆ. ಬೇರೆ ಯಾವ ನಾಟಕಕ್ಕೂ ನಮ್ಮ ಹುಡುಗರು ಈಗ ಒಪ್ಪುವುದಿಲ್ಲ’ ಎಂದರು ಲಿಂಗಪ್ಪ ಮತ್ತು ಕೆಂಚಪ್ಪ. ‘ಸುಮ್ಮನೆ ಬರಿ ಸುಬ್ಬಣ್ಣ. ನೀನು ಆಗುವುದಿಲ್ಲ ಎಂದರೆ ನಾನು ಒಪ್ಪುತ್ತೇನೆಯೆ? ಸುಬ್ಬಣ್ಣನವರ ಸಾಹಿತ್ಯ ಸೇವೆ - ಕವಿತಾ ವೈಭವ 213 ನೀನು ಮನಸ್ಸು ಮಾಡಿದರೆ ನೀರು ಕುಡಿದಂತೆ ನಾಟಕ ಬರೆಯಬಲ್ಲೆ. ನಿನಗೆ ಇದು ಅಗಾಧವಾದುದೇನೂ ಅಲ್ಲ. ಸುಮ್ಮನೆ ಹೂಂ ಅನ್ನು’ ಎಂದ ತಿಪ್ಪಯ್ಯ. ಆತನ ಮಾತಿಗೆ ಎದುರು ಹೇಳುವುದು ಸುಬ್ಬಣ್ಣನವರಿಗೆ ಸಾಧ್ಯವಿರಲಿಲ್ಲ. ಅವರು ಒಪ್ಪಿಕೊಳ್ಳಲೇಬೇಕಾಯ್ತು. ಮರುದಿನ ಸ್ನಾನ, ಸಂಧ್ಯೆ, ಪಾರಾಯಣಗಳನ್ನು ಮುಗಿಸಿ ‘ಗಿರಿಜಾ ಕಲ್ಯಾಣ’ ರಚನೆಗೆ ಪ್ರಾರಂಭಿಸಿದರು. ಆರಂಭಿಸಿದುದೇ ತಡ, ಹೂವಿನ ಸರ ಎತ್ತಿದಂತೆ ನಾಟಕ ಮುಂದೆ ಸಾಗಿತು. ದಿನವೂ ಮಧ್ಯಾಹ್ನ ಊಟದ ವೇಳೆಯವರೆಗೆ ಬರೆಯುವುದು, ಊಟವಾದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ರಾತ್ರಿ ನಿದ್ರೆ ಬರುವವರೆಗೆ ಮತ್ತೆ ಬರೆಯುವುದು. ಹೀಗೆ ಒಂದು ವಾರದಲ್ಲಿ ನಾಟಕ ಸಿದ್ಧವಾಯಿತು. ಮುಮ್ಮೇಳದವರಾದ ಕಮ್ಮಾರ ಲಿಂಗಪ್ಪ ಅಗಸರ ಕೆಂಚಪ್ಪ ಅವರಿಬ್ಬರನ್ನೂ ಕರೆಸಿ, ಅವರೆದುರಿಗೆ ನಾಟಕ ಓದಿದರು. ಅದನ್ನು ಕೇಳುತ್ತಿದ್ದಂತೆ ಅವರ ಮೈ ಉಬ್ಬಿ ಬಂತು. ‘ಇಂಥಾ ನಾಟಕ ಬಿಟ್ಟು ಬೇರೆ ಯಾವುದೊ ಆಡಿ ಅಂತ ಹೇಳುತ್ತಿದ್ದಿರಲ್ಲ ಸ್ವಾಮಿ, ನಾವೇನೂ ನಿಮ್ಮನ್ನು ಹೊಗಳುತ್ತಿಲ್ಲ. ಇಷ್ಟು ಸೊಗಸಾದ ನಾಟಕ ಇದುವರೆಗೆ ಈ ಸುತ್ತುಮುತ್ತು ಯಾರೂ ಆಡಿಲ್ಲ. ನೀವೇ ನೋಡ್ತಾ ಇರ್ತೀರಲ್ಲ. ಎಷ್ಟು ಭರ್ಜರಿಯಾಗಿರುತ್ತೆ ನಾಟಕಾಂತ’ ಎಂದು ತುಂಬು ಹೃದಯದಿಂದ ಹೊಗಳಿದರು. ಆಗ ಸುಬ್ಬಣ್ಣನವರು ‘ನಾಟಕ ಬರೆಯುವುದು ದೊಡ್ಡದಲ್ಲ ಲಿಂಗಪ್ಪ, ಭಗವತ್ಪ್ರೇರಣೆಯಾದರೆ ಯಾರು ಬೇಕಾದರೂ ನಾಟಕ ಬರೆದಾರು, ಆದರೆ ಕೆಂಚಪ್ಪ ಅದನ್ನು ಯಶಸ್ವಿಯಾಗಿ ಪ್ರದರ್ಶಿಸುವುದರಲ್ಲಿ ಮೆಹನತ್ತು. ಒಂದೊಂದು ಪಾತ್ರಕ್ಕೂ ತಕ್ಕವರನ್ನು ಆರಿಸುವುದು, ಅದನ್ನು ಅಭ್ಯಾಸ ಮಾಡಿಸುವುದು, ಆಯಾ ಪಾತ್ರಗಳಿಗೆ ತಕ್ಕ ಉಡುಗೆ - ತೊಡಿಗೆ ಹೊಂದಿಸುವುದು - ಇದರಲ್ಲಿ ಯಾವುದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾಟಕ ಕೆಟ್ಟುಹೋಗುತ್ತದೆ. ಇದರ ಯಶಸ್ಸೆಲ್ಲಾ ಮುಮ್ಮೇಳದವರಾದ ನಿಮ್ಮ ಕೈಲಿದೆ’ ಎಂದರು. ‘ನೀವು ಏನೂ ಯೋಚನೆ ಮಾಡಬೇಡಿ ಸ್ವಾಮಿ; ನಿಮ್ಮ ಆಶೀರ್ವಾದವಿದ್ದರೆ ನಿಮ್ಮ ಹೆಸರಿಗೆ ಸ್ವಲ್ಪವೂ ಕಳಂಕ ಬರದಂತೆ ನಾಟಕ ನಡೆಸಿಕೊಡುತ್ತೇವೆ. ಅಪರಂಜಿ ಚಿನ್ನ ಕೈಲಿರುವಾಗ ಒಡವೆ ಮಾಡಿಸುವುದು ಕಷ್ಟವೆ? ಆ ಜವಾಬ್ದಾರಿ ಏನಿದ್ದರೂ ನಮಗಿರಲಿ. ಸ್ವಲ್ಪ ದಿನ ನೀವು ನಾಟಕಾಭ್ಯಾಸ ಕಾಲದಲ್ಲಿದ್ದು, ಏನಾದರೂ ಲೋಪ-ದೋಷಗಳು ಇದ್ದರೆ ಅದನ್ನು ತಿದ್ದಿ ನಮಗೆ ಮಾರ್ಗದರ್ಶನ ಮಾಡಿಕೊಡಿ. ಉಳಿದುದೇನಿದ್ದರೂ ನಾವು ನೋಡಿಕೊಳ್ಳುತ್ತೇವೆ’ ಎಂದರು ಲಿಂಗಪ್ಪ - ಕೆಂಚಪ್ಪ ಒಂದಾಗಿ. ಒಂದು ಮಂಗಳ ಮುಹೂರ್ತದಲ್ಲಿ ನಾಟಕಾಭ್ಯಾಸ ಪ್ರಾರಂಭವಾಯ್ತು. 214 ಮೂರು ತಲೆಮಾರು ಮುಮ್ಮೇಳದವರಿಬ್ಬರೂ ಎಷ್ಟೋ ನಾಟಕಗಳನ್ನು ಆಡಿಸಿ ನುರಿತವರಾಗಿದ್ದರು. ಸುಬ್ಬಣ್ಣನವರ ನೇತೃತ್ವದಲ್ಲಿ ನಾಟಕದ ಅಭ್ಯಾಸ ಸುಲಲಿತವಾಗಿ ಸಾಗಿತು. ಪಾತ್ರಧಾರಿಗಳೆಲ್ಲರೂ ಮಿತಿಮೀರಿದ ಉತ್ಸಾಹದಿಂದ ಹಗಲು ರಾತ್ರಿ ಅಭ್ಯಾಸ ಮಾಡಿದರು. ಇಂದು ಮಾರಮ್ಮನ ಜಾತ್ರೆ, ಊರೆಲ್ಲ ತಳಿರುತೋರಣಗಳಿಂದ ಕಂಗೊಳಿಸುತ್ತಿದೆ. ಯಾರ ಮನೆ ಮುಂದೆ ನೋಡಿದರೂ ಗುಡಿಸಿ, ಸಾರಿಸಿ, ಚಿತ್ರವಿಚಿತ್ರವಾದ ರಂಗೋಲಿ, ಹಸಿರು ತೋರಣಗಳಿಂದ ಅಲಂಕೃತವಾಗಿದೆ. ಪರವೂರುಗಳಿಂದ ಬಂದಿದ್ದ ನೆಂಟರಿಷ್ಟರಿಂದ ಎಲ್ಲರ ಮನೆಗಳೂ ಜಿಗಿಜಿಗಿಸುತ್ತಿವೆ. ಜಾತ್ರೆಯ ಸಂಭ್ರಮಕ್ಕಿಂತ ನಾಟಕದ ಹುಮ್ಮಸ್ಸೇ ಜೋರಾಗಿದೆ. ಅಂದು ಬೆಳಿಗ್ಗೆ ವೇಷಧಾರಿಗಳೆಲ್ಲ ಮಿಂದು ಮಡಿಯುಟ್ಟು, ಮುಮ್ಮೇಳದವರೊಂದಿಗೆ ನಾಟಕಕಾರ ಸುಬ್ಬಣ್ಣನವರ ಮನೆಗೆ ಬಂದು ಫಲತಾಂಬೂಲಗಳನ್ನಿತ್ತು ಅವರಿಗೆ ಸಾಷ್ಟಾಂಗ ಪ್ರಣಾಮಮಾಡಿ ಅವರ ಅಶೀರ್ವಾದ ಪಡೆದರು. ರಾತ್ರಿ ಹತ್ತು ಗಂಟೆಗೆ ನಾಟಕ ಪ್ರಾರಂಭವಾಗುವುದು. ಎಂಟು ಗಂಟೆಯ ವೇಳೆಗಾಗಲೇ ಸುತ್ತುಮುತ್ತಿನ ಊರುಗಳಿಂದ ಜನರು ಗುಂಪುಗುಂಪಾಗಿ ಬಂದು ನಾಟಕದ ಆವರಣದಲ್ಲಿ ಸೇರತೊಡಗಿದರು. ‘ಹೊಸ ನಾಟಕ, ಸುಬ್ಬಣ್ಣಸ್ವಾಮಿಯವರು ಬರೆದವರಂತೆ! ಬಹಳ ಚೆನ್ನಾಗಿದೆಯಂತೆ! ಪಾತ್ರಧಾರಿಗಳೆಲ್ಲ ಬಲು ಮುದ್ದಾಗಿ ಆಡುತ್ತಾರಂತೆ! ಜಗಳೂರಿನಿಂದ ಹೊಸದಾಗಿರುವ ಕಿರೀಟ, ಭುಜಕೀರ್ತಿ ಎಲ್ಲ ತರಿಸಿದ್ದಾರಂತೆ!’ ಯಾರ ಬಾಯಲ್ಲಿ ನೋಡಿದರೂ ಈ ನಾಟಕದ ಮಾತೇ. ನಾಟಕವನ್ನು ಬರೆದ ಸುಬ್ಬಣ್ಣನವರಿಗೆ ಸ್ವಲ್ಪ ಆತಂಕ. ಪಾತ್ರಧಾರಿಗಳಲ್ಲಿ ಅನೇಕರು ಅದೇ ಮೊದಲ ಬಾರಿಗೆ ರಂಗಸ್ಥಳದ ಮೇಲೆ ಬರುತ್ತಿರುವುದು. ಏನು ಅಭಾಸ ಮಾಡುತ್ತಾರೋ, ಸ್ವಲ್ಪ ಹೆಚ್ಚು ಕಡಿಮೆಯಾದರೆ, ತಮಗೆ ಮಾತ್ರವೇ ಅಲ್ಲ. ಊರಿಗೇ ಕೆಟ್ಟ ಹೆಸರು. ಹತ್ತು ಗಂಟೆಗೆ ಸರಿಯಾಗಿ ನಾಟಕ ಪ್ರಾರಂಭವಾಯಿತು. ಮುಮ್ಮೇಳದವರು ರಂಗಸ್ಥಳಕ್ಕೂ. ತಮ್ಮ ವಾದ್ಯಗಳಿಗೂ ಪೂಜೆ ಮಾಡಿ, ಕೈ ಮುಗಿದು, ನೆರೆದ ಪ್ರೇಕ್ಷಕ ವರ್ಗಕ್ಕೂ ಹಿರಿಯರಿಗೂ ನಮಸ್ಕರಿಸಿ ನಾಟಕವನ್ನು ಪ್ರಾರಂಭಿಸಿದರು. ದೈವಾನುಗ್ರಹ! ಪಾತ್ರವರ್ಗದವರೆಲ್ಲ ಅತ್ಯಂತ ಉತ್ಸಾಹದಿಂದ ತಮ್ಮ ಪಾತ್ರಗಳನ್ನು ಅಭಿನಯಿಸತೊಡಗಿದರು. ನೇಪಥ್ಯದಲ್ಲಿ ಸುಬ್ಬಣ್ಣನವರು ನಿಂತು ನೋಡುತ್ತಿದ್ದರು. ಅವರಿದ್ದುದು ಪಾತ್ರಧಾರಿಗಳಿಗೂ, ಮುಮ್ಮೇಳದವರಿಗೂ ಬಲಭುಜ ಬಂದಂತಾಗಿತ್ತು. ನಾಟಕ ಎಲ್ಲರ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಬೆಳಗಿನ ಜಾವದ ಸುಬ್ಬಣ್ಣನವರ ಸಾಹಿತ್ಯ ಸೇವೆ - ಕವಿತಾ ವೈಭವ 215 ವೇಳೆಗೆ ನಾಟಕ ಮುಗಿಯಿತು. ‘ಗಂಗಾಧರ ಮಹನೀಯ, ಮಂಗಳಮಯ ತಳುಕುನಿಲಯ...’ ಮಂಗಳವನ್ನು ಹಾಡಿದ್ದಾಯಿತು. ಇನ್ನೇನು ಜನಗಳೂ ಮನೆಗೆ ಹೊರಡಬೇಕು. ಅಷ್ಟರಲ್ಲಿ, ಗಣ್ಯಪ್ರೇಕ್ಷಕರ ಸ್ಥಾನದಲ್ಲಿ ಕುಳಿತಿದ್ದ ಕೋಡಿಹಳ್ಳಿಯ ಪಟೇಲ ಏಕಾಂತಪ್ಪ ಎದ್ದು ನಿಂತು ‘ಸುಬ್ಬಣ್ಣ ಸ್ವಾಮಿಯವರು ರಂಗಸ್ಥಳದ ಮೇಲೆ ಬರಬೇಕು’ ಎಂದು ಕೂಗಿದ. ಏಳುತ್ತಿದ್ದವರೆಲ್ಲ ಮತ್ತೆ ಕೂತರು. ಏಕಾಂತಪ್ಪನ ಕೂಗು ಮರುದನಿಯಾಯ್ತು. ಎಲೆಮರೆ ಕಾಯಿಯಂತೆ ಹಿಂದೆ ನಿಂತ ಸುಬ್ಬಣ್ಣನವರು ಬಡಪೆಟ್ಟಿಗೆ ರಂಗಸ್ಥಳದ ಮೇಲೆ ಬರಲು ಒಪ್ಪಲಿಲ್ಲ. ಅದರೆ ಅವರು ಬರುವವರೆಗೆ ಜನಗಳೂ ಕದಲುವಂತೆ ಕಾಣಲಿಲ್ಲ. ನೆರೆದಿದ್ದ ಸಾವಿರಾರು ಜನಗಳ ಅಪೇಕ್ಷೆಯಂತೆ ಅವರು ಬರಲೇಬೇಕಾಯಿತು. ಸುಬ್ಬಣ್ಣನವರನ್ನು ರಂಗಸ್ಥಳದ ಮೇಲೆ ಕಾಣುತ್ತಲೇ ಆನಂದದಿಂದ ಹುಚ್ಚೆದ್ದ ಜನ ‘ಹೋ’ ಎಂದು ಕೂಗಿದರು. ಪಟೇಲ ಏಕಾಂತಪ್ಪ ರಂಗಸ್ಥಳದ ಮೇಲೆ ಬಂದು ‘ಈ ದಿವಸದ ನಾಟಕದಂತೆ ಸೊಗಸಾದ ನಾಟಕವನ್ನು ಇದುವರೆವಿಗೆ ನಾನು ನೋಡಿಯೇ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣವಾದವರು ಸುಬ್ಬಣ್ಣನವರು. ಅವರು ತಮ್ಮ ಕೆರೆ ಕೆಲಸ ನೋಡುವುದಕ್ಕೆ ಆಗಾಗ ಬರುತ್ತಿದ್ದಾಗ ಅವರನ್ನು ನೋಡಿದ್ದೆ. ಆದರೆ ಅವರು ಇಷ್ಟು ದೊಡ್ಡ ಕವಿಗಳೆಂದು ತಿಳಿದಿರಲಿಲ್ಲ. ಈ ದಿನದ ನಾಟಕವನ್ನು ನೋಡಿ, ನಮ್ಮೂರಿನಲ್ಲಿಯೂ ಇಂತಹ ಒಂದು ನಾಟಕ ಆಡಿಸಬೇಕೆಂದು ನನಗೆ ಆಸೆಯಾಗಿದೆ. ಸುಬ್ಬಣ್ಣನವರು ದೊಡ್ಡ ಮನಸ್ಸು ಮಾಡಿ ನಮಗೂ ಒಂದು ನಾಟಕ ಬರೆದುಕೊಟ್ಟು ನಮ್ಮೂರಲ್ಲಿ ಆಡಿಸಬೇಕು ಎಂದು ನಮ್ಮೂರಿನ ಪರವಾಗಿ ನಿಮ್ಮೆಲ್ಲರೆದುರಿಗೆ ಅವರನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿ ಸುಬ್ಬಣ್ಣನವರಿಗೆ ಹಾರ ಹಾಕಿ ಕೈ ಮುಗಿದ. ತಾವು ಆಡಿದ ನಾಟಕ ತಮ್ಮೂರಿಗಲ್ಲದೆ, ಪರ ಊರಿನವರಿಗೂ ಇಷ್ಟು ಮೆಚ್ಚುಗೆಯಾದುದನ್ನು ಕಂಡು ಊರವರೆಲ್ಲರಿಗೂ ಸುಬ್ಬಣ್ಣನವರಲ್ಲಿದ್ದ ಆದರ, ಗೌರವಗಳು ಇಮ್ಮಡಿಯಾದುವು. ನಾಟಕ ಮುಗಿದಮೇಲೆ ಕೆಲವು ಕಾಲ ಊರಿನ ಯಾರ ಬಾಯಲ್ಲಿ ನೋಡಿದರೂ ನಾಟಕದ ಮಾತೇ. ಸುಬ್ಬಣ್ಣನವರು ಬರುವುದನ್ನು ಕಂಡೊಡನೆ ಕುಳಿತಿದ್ದ ಜನಗಳು ಧಿಗ್ಗನೆ ಮೇಲಕ್ಕೆದ್ದು ಭಕ್ತಿ, ಪ್ರೀತಿ, ಗೌರವದಿಂದ ಕೈಮುಗಿಯುತ್ತಿದ್ದರು. ಸುಬ್ಬಣ್ಣನವರು ಬರೆದು ಆಡಿದ “ಗಿರಿಜಾಕಲ್ಯಾಣ’ದಿಂದ ಉತ್ಸಾಹಿತರಾದ ಯುವಕರು ಅವರಿಂದ ಇನ್ನೂ ಬೇರೆ ಬೇರೆ ನಾಟಕಗಳನ್ನೂ ಬರೆಸಿ ಆಡಬೇಕೆಂದುಕೊಂಡರು. ಇದರಿಂದ ಉತ್ತೇಜಿತರಾದ ಸುಬ್ಬಣ್ಣನವರು ಬಯಲು ನಾಟಕಗಳನ್ನು ಮಾತ್ರವಲ್ಲದೆ ರಂಗನಾಟಕಗಳನ್ನೂ ಬರೆಯತೊಡಗಿದರು. 216 ಮೂರು ತಲೆಮಾರು ‘ಶನಿಮಹಾತ್ಮೆ “ಮದನ ಮಂಜರಿ” ``ಮುಕ್ತಾವಳಿ” ``ಲವಕುಶ” ‘ಚಾತುರ್ಯದರ್ಶಿನೀ’ ಇತ್ಯಾದಿ ಎಷ್ಟೋ ನಾಟಕಗಳನ್ನು ಅವರು ಬರೆದರು. ತಳುಕಿನಲ್ಲಿ ಒಂದು ನಾಟಕ ಕಂಪೆನಿ ಹುಟ್ಟಿಕೊಂಡಿತು. ಅವರ ಈ ನಾಟಕಗಳನ್ನು ಬೇರೆ ಬೇರೆ ಕಡೆಗಳಲ್ಲಿ ಆಡಿ ಕಂಪೆನಿ ಸಾಕಷ್ಟು ಕೀರ್ತಿಯನ್ನು ಗಳಿಸಿತು. ಸುಬ್ಬಣ್ಣನವರ ಕಾಲದಲ್ಲಿ ಮದುವೆಯೆಂದರೆ ಅತ್ಯಂತ ಸಂಭ್ರಮದ ಸಂತೋಷ ಕೂಟ. ಈಗಿನ ಕಾಲದಂತೆ ಹೇಗೋ ಸಧ್ಯ ಮುಗಿದರೆ ಸಾಕು, ಎಂದು ಚಿಟಿಕೆ ಚಪ್ಪರದಲ್ಲಿ ಮುಗಿಸುವುದಲ್ಲ. ಮದುವೆ ಹೇಗೆ ಮುಗಿದೀತಪ್ಪ ಎಂದು ತಲೆಯ ಮೇಲೆ ಕೈ ಹೊತ್ತು ಕೂಡುವ ಕೆಲಸವೂ ಇರಲಿಲ್ಲ. ಮದುವೆ ಎಂದೊಡನೆ ಅದೇನು ಉತ್ಸಾಹ, ಅದೆಷ್ಟು ಸಂಭ್ರಮ. ಅದೆಷ್ಟು ಗಡಿಬಿಡಿ! ತಿಂಗಳುಗಟ್ಟಲೆ ಮದುವೆಗಾಗಿ ಅದ್ಧೂರಿಯ ತಯಾರಿ ನಡೆಯಬೇಕು. ಕೇವಲ ಒಂದು ಮನೆಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಲ್ಲ ಅದು, ಊರಿನವರೆಲ್ಲರಿಗೂ ಸೇರಿದ ಮಹೋತ್ಸವ. ಪ್ರತಿಯೊಬ್ಬರೂ ಅದರಲ್ಲಿ ಭಾಗಿಯಾಗುವವರೇ, ಸಹಕರಿಸುವವರೇ. ಎಂಟು ದಿನಗಳು ಅದ್ದೂರಿಯಗಿ ನಡೆಯಬೇಕು. ಎಲ್ಲೆಲ್ಲಿಯೂ ನಗು, ಚೆಲ್ಲಾಟ, ಸಂಭ್ರಮ. ಹತ್ತಾರು ಊರುಗಳಿಂದ ನೆಂಟರಿಷ್ಟರ ಆಗಮನ. ಕಡೆಯ ದಿನದ ಹರಿಭೂಮವಂತೂ ನೆನೆದರೆ ಬಾಯಲ್ಲಿ ನೀರೂರುವ ಸುಂದರ ದೃಶ್ಯ. ಹರಿಭೂಮದ ದಿನ ಹತ್ತಿರದ ನೆಂಟರಿಷ್ಟರೆಲ್ಲರೂ ಒಂದೇ ಸಾಲಿನಲ್ಲಿ ಊಟಕ್ಕೆ ಕುಳಿತುಕೊಳ್ಳುವರು. ಮೊದಲ ಎಲೆಯಿಂದ ಹೊರಟ ಲಾಡು ಸಾಲಿನ ಕೊನೆಯ ಎಲೆಯವರೆಗೂ ಚೆಂಡಿನಂತೆ ಉರುಳಿಕೊಂಡು ಹೋಗುವುದು; ಎಂಜಲಾಯಿತೆಂದು ಯಾರೂ ಅಸಹ್ಯಪಟ್ಟುಕೊಳ್ಳುತ್ತಿರಲಿಲ್ಲ, ಆನಂದದಿಂದ ಕೇಕೆ ಹಾಕಿ ನಗುತ್ತಿದ್ದರು. ಅಷ್ಟು ಪರಸ್ಪರ ಸೌಹಾರ್ದ. ಇದು ಗಂಡಸರ ಚಿತ್ರ. ಹೆಂಗಸರ ಮಧ್ಯದಲ್ಲಿ ಮತ್ತೊಂದು ವಿನೋದ. ಬೀಗರು ಬೀಗರ ಮೇಲೆ ಹಾಡು ಕಟ್ಟಿ. ಹಾಸ್ಯ, ಪ್ರತಿಹಾಸ್ಯಗಳಿಂದ ನಕ್ಕು ನಲಿಯುವರು. ಎಲ್ಲರ ಮುಖದ ಮೇಲೆಯೂ ಉತ್ಸಾಹ, ಆನಂದ! ಯಾರ ಮುಖದಲ್ಲಿಯೂ ಸಿಡುಕಿಲ್ಲ. ಸುಬ್ಬಣ್ಣನವರ ಹಿರಿಯ ಮಗಳು ವೆಂಕಮ್ಮನ ಲಗ್ನದಲ್ಲಿ ಸ್ವತಃ ಸುಬ್ಬಣ್ಣನವರೇ ಬೀಗರ ಮೇಲೆ ಇಂತಹ ಹಾಸ್ಯದ ಚಟಾಕಿಯನ್ನು ಹಾರಿಸಿದ್ದರು. ಅಳಿಯ ಅನಂತಭಟ್ಟನ ಮೇಲೆ ಒಂದು ಹಾಸ್ಯದ ಕವಿತೆಯನ್ನು ರಚಿಸಿ ಹಾಡಿದರು, ಅದು ತೆಲುಗು ಹಾಡೊಂದರ ಪ್ರತಿಬಿಂಬ. ಭಲಾ ಭಲಾ ನಂಭಾವ ಬಳ್ಳಾರಿ ಪೇಟೆಯಲ್ಲಿ ತಾಳೆಗರಿಯಲ್ಲಿ ತೂತ ಕೊರೆದುಬಿಟ್ಟ ಮುದಿಯೆಮ್ಮೆ ಹೊಯ್ದುಚ್ಚೆ ಸುಬ್ಬಣ್ಣನವರ ಸಾಹಿತ್ಯ ಸೇವೆ - ಕವಿತಾ ವೈಭವ 217 ನದಿಯಾಗಿ ಹರಿಯಲಿಕ್ಕೆ ಅದರೊಳಗೆ ನಂಭಾವ ಮುಳುಗಿಬಿಟ್ಟ ಹದವಾಗಿ ಬಲಿತಿದ್ದ ಹಲಸಂದೆ ಕಾಯ್ಗಳಂ ಹೆದರದೆ ಉಗುರಿನಿಂದ ಸೀಳಿಬಿಟ್ಟ ಮೃದುವಾದ ಹೋಳಿಗೆಯ ಮುದದಿ ಮಂಡಿಯನ್ನೂರಿ ಕದಲದೆ ಕೈಯ್ಯಿಂದ ಮುರಿದುಬಿಟ್ಟ ಇದಕಂಡು ಅವರಪ್ಪ ಹರುಷಪಟ್ಟ ದಿಟ್ಟ ಜನಶ್ರೇಷ್ಠ ಸೃಷ್ಟಿಯೊಳು ಅನಂತಭಟ್ಟ ಕೂಡಿದ ಜನಸಂದಣಿಯಲ್ಲಿ ಸುಬ್ಬಣ್ಣನವರ ಚಿಕ್ಕವಯಸ್ಸಿನ ಮಗ ಕೃಷ್ಣ ಇದನ್ನು ರಾಗವಾಗಿ ಹಾಡಿದಾಗ ನೆರೆದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಇಂತಹವೆಷ್ಟೋ! ದುರದೃಷ್ಟದಿಂದ ಅವುಗಳೆಲ್ಲ ನಷ್ಟವಾಗಿ ಹೋಗಿವೆ. * * * * 218 ಮೂರು ತಲೆಮಾರು 20. ಔದಾರ್ಯಕ್ಕೆ ಕೊನೆಯುಂಟೆ? ಒಂದು ದಿನ ಬೆಳಿಗ್ಗೆ ಸುಬ್ಬಣ್ಣನವರು ಸ್ನಾನಾಹ್ನಿಕಗಳನ್ನು ಮುಗಿಸಿಕೊಂಡು ತಮ್ಮ ದಿವಾನ ಖಾನೆಯಲ್ಲಿ ಯಾರೊಂದಿಗೋ ಮಾತನಾಡುತ್ತ ಕುಳಿತಿದ್ದರು. ಹೊರಗಡೆಯಿಂದ ಯಾರೋ ಒಬ್ಬರು ‘ದೊಡ್ಡ ಸುಬ್ಬಣ್ಣನವರ ಮನೆ ಇದೇಯೇ’ ಎಂದು ಕೂಗಿದುದನ್ನು ಕೇಳಿ ಸುಬ್ಬಣ್ಣನವರು ಹೊರಗಡೆ ಬಂದರು. ಅಂಗಳದಲ್ಲಿ ನಿಂತಿದ್ದ ಆಗಂತುಕರಿಬ್ಬರೂ ಮತ್ತೊಮ್ಮೆ ‘ದೊಡ್ಡ ಸುಬ್ಬಣ್ಣನವರ ಮನೆ ಯಾವುದು ಸ್ವಾಮಿ?’ ಎಂದು ಅವರನ್ನು ಕೇಳಿದರು. ‘ನಾನೇ ಸುಬ್ಬಣ್ಣ ಒಳಗೆ ದಯಮಾಡಿಸಿ. ತಾವು ಯಾರೋ ಗೊತ್ತಾಗಲಿಲ್ಲ’ ಎಂದು ಅವರನ್ನು ಆದರದಿಂದ ಒಳಕ್ಕೆ ಕರೆದೊಯ್ದು ಅಲ್ಲಿ ಹಾಸಿದ್ದ ಜಮಖಾನದ ಮೇಲೆ ಕುಳ್ಳಿರಿಸಿದರು. ‘ನನ್ನಿಂದ ತಮಗೇನಾಗಬೇಕು? ತಾವು ಎಲ್ಲಿಂದ ಬರುತ್ತಿದ್ದೀರಿ?’ ಎಂದು ಅವರನ್ನು ಕೇಳಿದರು, ಸುಬ್ಬಣ್ಣ. ಅಗಂತುಕರು ಹೇಳಿದರು- ‘ಸ್ವಾಮಿ ನಮ್ಮದು ಬಳ್ಳಾರಿ ಹತ್ತಿರ ತಿರುಮಲೆ ಎಂಬ ಗ್ರಾಮ. ತಮ್ಮನ್ನು ಕಂಡು ತಮ್ಮಲ್ಲಿ ಸಮಾಲೋಚಿಸಬೇಕಾದ ಗಹನವಾದ ವಿಚಾರವೊಂದಿತ್ತು. ನಾವು ಮಹತ್ತಾದ ಯಾವುದೋ ಒಂದು ಕಾರ್ಯಕ್ಕಾಗಿ ಬಂದಿದ್ದೇವೆ. ಯಾರೋ ಹೇಳಿದರು-ತಮ್ಮಲ್ಲಿಗೆ ಹೋದರೆ ನಮ್ಮ ಕೆಲಸವಾಗುತ್ತದೆ ಎಂದು, ಅದಕ್ಕಾಗಿ ಬಂದಿದ್ದೇವೆ’ ಎಂದರು. ಆ ಇಬ್ಬರು ಆಗುಂತುಕರು ತುಂಬ ದಣಿದು ಬಂದಿದ್ದಾರೆ ಎಂಬುದು ತಿಳಿಯುವಂತಿತ್ತು. ಅವರನ್ನು ನೋಡಿದರೆ. ಆದ್ದರಿಂದ ಅವರನ್ನು ಮುಂದಕ್ಕೆ ಪ್ರಶ್ನಿಸದೆ ‘ಮಧ್ಯಾಹ್ನದ ವೇಳೆಗೆ ದೇವರ ಹಾಗೆ ಬಂದಿದ್ದೀರಿ. ಮೊದಲು ಸ್ನಾನ - ಆಹ್ನಿಕಗಳನ್ನು ಮುಗಿಸಿ ಊಟ ಮಾಡಿ. ಅನಂತರ ಉಳಿದ ವಿಚಾರವನ್ನು ಮಾತನಾಡೋಣ’ ಎಂದು ಬಂದವರನ್ನು ಸುಬ್ಬಣ್ಣನವರು ಆಹ್ವಾನಿಸಿದರು. ಅವರ ಮಾತಿನಂತೆ ಸ್ನಾನಾಹ್ನಿಕಗಳನ್ನು ಮಾಡಿ ಮುಗಿಸಿ, ಊಟಕ್ಕೆ ಕುಳಿತಾಗ ಮತ್ತೊಮ್ಮೆ ಆ ಅಭ್ಯಾಗತರು ತಾವು ಬಂದ ಕೆಲಸದ ವಿಚಾರವನ್ನು ಪ್ರಸ್ತಾಪಿಸಹೊರಟರು. ಆಗ ಸುಬ್ಬಣ್ಣನವರು ‘ಸ್ವಾಮಿ ಮೊದಲು ಸಾವಕಾಶವಾಗಿ ಭೋಜನಮಾಡಿ. ನನ್ನ ಕೈಲಾಗುವ ಯಾವ ಕೆಲಸವನ್ನಾದರೂ ನಾನು ಮಾಡಿಕೊಡುತ್ತೇನೆ. ಆ ವಿಚಾರದಲ್ಲಿ ನೀವು ನಿಶ್ಚಿಂತರಾಗಿರಿ’ ಎಂದು ಭರವಸೆಯಿತ್ತರು. ಔದಾರ್ಯಕ್ಕೆ ಕೊನೆಯುಂಟೆ? 219 ಭೋಜನಾನಂತರ ತಾಂಬೂಲವನ್ನು ಹಾಕಿಕೊಳ್ಳುತ್ತಿರುವಾಗ ಸುಬ್ಬಣ್ಣನವರು ‘ಈಗ ಅಪ್ಪಣೆಯಾಗಲಿ ಸ್ವಾಮಿ. ತಮ್ಮ ಕೆಲಸವೇನೆಂದು’ ಎಂದು ಕೇಳಿದರು. ಆಗ ಆಗಂತುಕರಲ್ಲಿ ಒಬ್ಬರು ಹೇಳಿದರು. ‘ನಾವು ಬಂದಿರುವ ಕೆಲಸದ ವಿಚಾರವನ್ನು ಅರಿಕೆ ಮಾಡಿಕೊಳ್ಳುವುದಕ್ಕೆ ಮುಂಚೆ ನಮ್ಮ ವಿಚಾರವನ್ನು ಸ್ವಲ್ಪ ಪರಿಚಯಮಾಡಿಕೊಡುವುದು ಸೂಕ್ತವೆಂದು ತೋರುತ್ತದೆ. ನನ್ನ ಸ್ಥಳ ಬಳ್ಳಾರಿ ಜಿಲ್ಲೆಯ ತಿರುಮಲೆ. ದೇವರು ನನ್ನನ್ನು ಸಾಕಷ್ಟು ಅನುಕೂಲ ಸ್ಥಿತಿಯಲ್ಲಿಟ್ಟಿದ್ದಾನೆ. ನನಗೊಬ್ಬ ತಂಗಿಯಿದ್ದಾಳೆ. ಅವಳ ಹೆಸರು ಭವಾನಮ್ಮ. ಆಕೆಯನ್ನು ನಮ್ಮ ಗ್ರಾಮದ ಸಮೀಪದಲ್ಲಿರುವ ಏಟೂರು ಗ್ರಾಮದ ಶ್ರೀಮಂತರೊಬ್ಬರ ಮನೆಗೆ ಕೊಟ್ಟಿದೆ. ಆ ಮನೆಗೆ ನನ್ನ ಭಾವಮೈದುನನೊಬ್ಬನೇ ಗಂಡು ಮಗ. ನಮ್ಮ ಪ್ರಾಂತ್ಯದ ವಿಚಾರ ಸಾಮಾನ್ಯವಾಗಿ ತಾವು ಕೇಳಿರಬಹುದು. ಎಲ್ಲ ಗ್ರಾಮಗಳೂ ಪಾರ್ಟಿ ಗ್ರಾಮಗಳೇ. ಆ ಪ್ರಾಂತ್ಯದಲ್ಲಿ ಖೂನಿ, ಕೊಳ್ಳೆಹೊಡೆಯುವುದು, ಡಕಾಯಿತಿ ಇದೆಲ್ಲ ಸರ್ವೇ ಸಾಮಾನ್ಯ. ಏಟೂರಿನಲ್ಲಿಯೂ ಎರಡು ಪಾರ್ಟಿ ಇದ್ದುವು. ಈಗಲೂ ಇವೆ. ಅವುಗಳಲ್ಲಿ ಒಂದಕ್ಕೆ ಶ್ರೀಮಂತನಾದ ನನ್ನ ಭಾವ ಮೈದುನ ಮುಂದಾಳು. ಆ ಗ್ರಾಮದ ಶ್ರೀಮಂತ ರೆಡ್ಡಿಯದು ಇನ್ನೊಂದು ಪಾರ್ಟಿ. ಇಬ್ಬರಿಗೂ ಸಾಕಷ್ಟು ಜನ ಬೆಂಬಲಿಗರು. ಇಬ್ಬರೂ ಸಾಕಷ್ಟು ಬಲಿಷ್ಠರು. ಇಬ್ಬರ ತಲೆಯ ಮೇಲೂ ಮೃತ್ಯು ಸದಾ ನೇತಾಡುತ್ತಿರುತ್ತದೆ. ನನ್ನ ತಂಗಿ ಮಹಾ ಧೈರ್ಯಶಾಲಿ. ತನ್ನ ಗಂಡನ ಪ್ರಾಣಕ್ಕೆ ಗಂಡಾಂತರವಿದೆಯೆಂದು ತಿಳಿದಿದ್ದ ಆಕೆ ರಾತ್ರಿಯ ವೇಳೆ, ಬಿಚ್ಚು ಕತ್ತಿ ಹಿಡಿದು ಮನೆಯ ಸುತ್ತಲೂ ಪಹರೆ ತಿರುಗುತ್ತಿದ್ದಳು. ಹಗಲು ಹೊತ್ತು ನನ್ನ ಮೈದುನನ ತಂಟೆಗೆ ಬರುವ ಧೈರ್ಯ ಎದುರಾಳಿಗೆ ಇರಲಿಲ್ಲ. ಹಾಗೆಯೇ ನನ್ನ ತಂಗಿಯನ್ನು ಕೆಣಕುವ ಧೈರ್ಯ ಎದುರಾಳಿಗೆ ಇರಲಿಲ್ಲ. ಒಂದು ಬೇಸಗೆಯ ರಾತ್ರಿ ನಡೆಯಬಾರದುದು ನಡೆದುಹೋಯಿತು. ಎಲ್ಲರೂ ನಿದ್ರೆಯಲ್ಲಿ ಮುಳುಗಿಹೋಗಿರುವ ಒಂದು ಹೊತ್ತಿನಲ್ಲಿ ನನ್ನ ಮೈದುನ ಖೂನಿಯಾಗಿದ್ದ. ಗಂಡನ ಆರ್ತನಾದದಿಂದ ನನ್ನ ತಂಗಿ ಮತ್ತು ಕಾವಲುಗಾರರು ಎಚ್ಚೆತ್ತುಕೊಳ್ಳುವುದರೊಳಗಾಗಿ ಕೊಲೆಗಾರರು ಪರಾರಿಯಾಗಿದ್ದರು. ನನ್ನ ಮೈದುನನ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ವಿಧವೆಯಾದ ನನ್ನ ತಂಗಿ ಅಪುತ್ರವತಿಯಾಗಿದ್ದಾಳೆ. ಅವಳ ಆಸ್ತಿಯನ್ನು ಎತ್ತಿ ಹಾಕಲು ಇದೇ ಸಮಯವೆಂದು ದಾಯಾದಿಗಳು ಪಿತೂರಿ ಮಾಡುತ್ತಿದ್ದಾರೆ. ಆದರೆ ನನ್ನ ತಂಗಿಯು ಏನೂ ಸಾಮಾನ್ಯಳಲ್ಲ. ಅಸಹಾಯಶೂರಳು. ಹೇಗಾದರೂ ಮಾಡಿ ಆಸ್ತಿ ದಾಯಾದಿಗಳ ಕೈ ಸೇರದಂತೆ ನೋಡಿಕೊಳ್ಳಲು ಮತ್ತು ತನ್ನ ಗಂಡನ ಕೊಲೆಯ ಸೇಡನ್ನು 220 ಮೂರು ತಲೆಮಾರು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಇದಕ್ಕಾಗಿ ಯಾರನ್ನಾದರೂ ದತ್ತು ತೆಗೆದುಕೊಳ್ಳಬೇಕೆಂಬುದು ಆಕೆಯ ಆಸೆ. ನನಗೂ ಗಂಡು ಮಕ್ಕಳಿಲ್ಲ. ಇರುವವರು ಇಬ್ಬರೇ ಹೆಣ್ಣು ಮಕ್ಕಳು. ನಾವು - ನಾನು ಮತ್ತು ಒಬ್ಬಳೇ ತಂಗಿ ಇಬ್ಬರೂ ಅತ್ಯಂತ ಅನ್ನೋನ್ಯವಾಗಿದ್ದೇವೆ. ಆದ್ದರಿಂದಲೇ ಆಕೆ ನನಗೆ ಈ ಜವಾಬ್ದಾರಿಯನ್ನು ವಹಿಸಿದ್ದಾಳೆ. ಇದಿಷ್ಟು ನಮ್ಮ ವಿಚಾರ. ನೀವು ಧರ್ಮಾತ್ಮರು, ಬೇಡಿದವರಿಗೆ ಬೇಡಿದ್ದನ್ನು ಕೊಡುವವರು ಎಂಬ ನಿಮ್ಮ ಕೀರ್ತಿಯನ್ನು ಕೇಳಿ ಇಷ್ಟು ದೂರ ಬಂದಿದ್ದೇವೆ. ನೀವು ದೊಡ್ಡ ಮನಸ್ಸು ಮಾಡಿ ನನ್ನ ತಂಗಿಯ ಮನೆಯನ್ನು ಉದ್ಧಾರಮಾಡಿದ ಕೀರ್ತಿಗೆ ಪಾತ್ರರಾಗಬೇಕು’ ಎಂದು ಹೇಳಿ ಸುಬ್ಬಣ್ಣನವರ ಪಾದ ಮುಟ್ಟಿ ನಮಸ್ಕಾರ ಮಾಡಿದರು. ಸುಬ್ಬಣ್ಣನವರು ಸ್ವಲ್ಪ ಹೊತ್ತು ಯೋಚನಾಮಗ್ನರಾಗಿದ್ದರು. ಅವರು ಏನು ಹೇಳುವರೋ ಎಂದು ಕಾತರದಿಂದ ನಿರೀಕ್ಷಿಸುತ್ತಿದ್ದರು ಶಂಕರಪ್ಪ ಎಂಬ ಹೆಸರಿನ ಹೊಸಬರು. ಸ್ವಲ್ಪ ಕಾಲಾನಂತರ ಸುಬ್ಬಣ್ಣನವರು “ಆಗಲಿ ಸ್ವಾಮಿ, ಇದೂ ರಾಮನಿಚ್ಛೆಯೇ. ‘ತೇನ ವಿನಾ ತೃಣಮಪಿ ನ ಚಲತಿ’ ಅವನ ಇಚ್ಛೆಯಿಲ್ಲದೆ ಹುಲ್ಲುಕಡ್ಡಿಯೂ ಅಲುಗುವುದಿಲ್ಲ. ನೀವು ಬಂದಿರುವುದೂ ಅವನ ಪ್ರೇರಣೆಯೇ ಇರಬೇಕು. ಇಲ್ಲವಾದರೆ ಎಲ್ಲಿಯವರೋ ಅದ ನೀವು ಇಷ್ಟು ದೂರ ಬರುವುದೆಂದರೇನು? ಇದು ಭಗವಂತ ಪ್ರೇರಣೆಯೇ ಎಂಬುದರಲ್ಲಿ ಸಂದೇಹವಿಲ್ಲ. ಇನ್ನೂ ಮುಂಜಿಯಾಗದ ನನ್ನ ಮಕ್ಕಳು ಮೂವರನ್ನು ನಿಮ್ಮ ಮುಂದೆ ನಿಲ್ಲಿಸುತ್ತೇನೆ. ನಿಮಗೆ ಬೇಕಾದವರನ್ನು ಆರಿಸಿಕೊಳ್ಳಿ’ ಎಂದರು. ಸುಬ್ಬಣ್ಣನವರು ಪರಮ ಉದಾರಿಗಳು ಎಂಬುದನ್ನು ಅವರಿವರಿಂದ ಅವರು ಕೇಳಿದ್ದರು. ಅದರೆ ಅವರ ಔದಾರ್ಯ ಇಷ್ಟು ಮಹತ್ತಾದುದೆಂದು ಅವರು ಭಾವಿಸಿರಲಿಲ್ಲ. ತಮ್ಮ ಕೋರಿಕೆಗೆ ಅವರು ಒಪ್ಪುವ ಸಂಭವವೇ ಇಲ್ಲವೆಂದು ಭಾವಿಸಿದ್ದರು. ಆದರೆ ಸುಬ್ಬಣ್ಣನವರ ಮಾತು ಕೇಳಿ ಅವರಿಗೆ ಸ್ವಲ್ಪ ಹೊತ್ತು ತಮ್ಮ ಕಿವಿಗಳನ್ನು ತಾವೇ ನಂಬುವುದು ಕಷ್ಟವಾಯ್ತು. ಆಗ ಶಂಕರಪ್ಪ ‘ನಿಮ್ಮ ಮಾತುಗಳನ್ನು ಕೇಳಿ ಅಮೃತರಸಾಸ್ವಾದನವಾದಂತಾಯಿತು. ನಾವು ಭೂದಾನ, ಗೊದಾನ, ಸುವರ್ಣದಾನ, ಕನ್ಯಾದಾನ ಮೊದಲಾದ ದಾನಗಳನ್ನು ಮಾಡಿದ ಮಹಾನುಭಾವರನ್ನು ಕೇಳಿದೇವೆ, ಕಂಡಿದ್ದೇವೆ. ಆದರೆ ನಿಮ್ಮಂತೆ ಪುತ್ರದಾನ ಮಾಡಿದವರನ್ನು ನಮ್ಮ ಜೀವನದಲ್ಲಿ ಕಂಡುದು ಇದೇ ಮೊದಲು. ಸಾಮಾನ್ಯವಾಗಿ ದೂರಬಾರಕ್ಕೆ ಹೆಣ್ಣು ಕೊಡಲೂ ಸಹ ಜನ ಹಿಂಜರಿಯುತ್ತಾರೆ. ಅಂತಹುದರಲ್ಲಿ ನೀವು ಕಂಡು ಕೇಳರಿಯದ ದೂರದೂರಿನವರಿಗೆ ಪುತ್ರದಾನ ಮಾಡಲು ಒಪ್ಪಿದ್ದೀರಿ. ಔದಾರ್ಯಕ್ಕೆ ಕೊನೆಯುಂಟೆ? 221 ಹಿಂದೆ ದ್ವಾಪರ ಯುಗದಲ್ಲಿ ಕರ್ಣನ ಕೊಡುಗೈ ವಿಚಾರವನ್ನು ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಇಂಥ ಈ ಕಲಿಯುಗದಲ್ಲಿಯೂ ಬ್ರಾಹ್ಮಣ ಕರ್ಣನೊಬ್ಬನನ್ನು ಪ್ರತ್ಯಕ್ಷವಾಗಿ ಕಂಡಂತಾಯಿತು. ಇದು ಬರಿ ಹೊಗಳಿಕೆಯ ಮಾತಲ್ಲ. ಹೃತ್ಪೂರ್ವಕವಾಗಿ ಹೇಳುವ ಮಾತು. ಈ ಸಂದರ್ಭದಲ್ಲಿ ತಮಗೊಂದು ಭರವಸೆಯನ್ನು ಕೊಡುತ್ತೇನೆ. ನಿಮ್ಮ ಮಗನನ್ನು ಸುಖವಾಗಿ ಬೆಳೆಸಿ, ದೊಡ್ಡವನನ್ನು ಮಾಡುತ್ತೇವೆ. ಬುದ್ಧಿವಂತನನ್ನಾಗಿ ವಿದ್ಯಾವಂತನನ್ನಾಗಿ ಮಾಡುತ್ತೇವೆ. ಇದಕ್ಕೆ ಪರಮಾತ್ಮನೇ ಸಾಕ್ಷಿ. ಅವನು ಬರಿಯ ತನ್ನ ತಂಗಿಯ ಮಗನಾಗಿರದೆ, ನನಗೆ ಅಳಿಯನೂ ಆಗಿರುತ್ತಾನೆ. ನನ್ನ ಮಗಳನ್ನು ಅವನಿಗೆ ಕೊಟ್ಟು ನನ್ನ ಮತ್ತು ತಂಗಿಯ ಸಂಬಂಧವನ್ನು ಮತ್ತಷ್ಟು ಹತ್ತಿರ ಮಾಡಿಕೊಳ್ಳುತ್ತೇನೆ. ನಿಮಗೆ ಈಗಾಗಲೇ ಅರಿಕೆ ಮಾಡಿಕೊಂಡಂತೆ ನನಗೂ ಗಂಡು ಮಕ್ಕಳಿಲ್ಲ. ನನ್ನ ಮತ್ತು ನನ್ನ ತಂಗಿಯ ಮನೆಗಳೆರಡಕ್ಕೂ ನಿಮ್ಮ ಮಗ ಬಾಧ್ಯಸ್ಥನಾಗುತ್ತಾನೆ, ಯಜಮಾನನಾಗುತ್ತಾನೆ. ಅವನ ಯೋಗಕ್ಷೇಮದ ವಿಚಾರದಲ್ಲಿ ನೀವು ಎಳ್ಳಷ್ಟೂ ಚಿಂತಿಸಬೇಕಾದ್ದಿಲ್ಲ’ ಎಂದು ಭರವಸೆಯಿತ್ತರು, ಶಂಕರಯ್ಯನವರು. ಸುಬ್ಬಣ್ಣನವರು ಆಯ್ಕೆಗಾಗಿ ನಿಲ್ಲಿಸಿದ್ದ ಮೂವರು ಮಕ್ಕಳಲ್ಲಿ ಬಹಳ ಸುಟಿಯಾಗಿ ಸುಂದರವಾಗಿದ್ದವನು ಜಯಶಂಕರ. ಅವನನ್ನೇ ಆರಿಸಿಕೊಂಡರು ಶಂಕರಪ್ಪನವರು. ತಂದೆಯನ್ನೇ ಬಹುಮಟ್ಟಿಗೆ ಹೋಲುತ್ತಿದ್ದ ಆ ಮಗನನ್ನು ಕಂಡರೆ ಲಕ್ಷ್ಮಿದೇವಮ್ಮನಿಗೆ ಎಲ್ಲಿಲ್ಲದ ಪ್ರೀತಿ. ಅವನನ್ನು ದೂರದೇಶಕ್ಕೆ ಧಾರೆಯೆರೆದುಕೊಟ್ಟುದನ್ನು ಕೇಳಿದ ಆಕೆ ದುಃಖದಿಂದ ಭೂಮಿಗಿಳಿದುಹೋದಳು. ಹೆತ್ತ ಹೊಟ್ಟೆಯ ಸಂಕಟ ಗಂಡನಿಗೆ ಹೇಗೆ ಗೊತ್ತಾದೀತು? ಆಕೆ ಗಂಡನೊಡನೆ ‘ಇದೆಲ್ಲಾದ್ರೂ ಉಂಟೆ ಅಂದ್ರೆ? ಮಕ್ಕಳು ಅಂದರೆ ಅಂಗಡಿಯಲ್ಲಿ ಮಾರೋ ಗೊಂಬೆಗಳು ಕೆಟ್ಟುಹೋದವೆ? ನನ್ನ ಕರುಳಿನ ಸಂಕಟ ನಿಮಗೆ ಸ್ವಲ್ಪವೂ ಅರ್ಥವಾಗದೇ ಹೋಯಿತೆ? ಕಂಡು, ಕೇಳಿ, ಅರಿಯದ ಯಾರಿಗೋ ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನು ಕೊಡುವುದಕ್ಕೆ ನಿಮಗೆ ಸ್ವಲ್ಪವಾದರೂ ಸಂಕಟವಾಗಲಿಲ್ಲವೆ?’ ಎಂದು ಕಣ್ಣೀರಿನ ಕೋಡಿಯನ್ನೇ ಹರಿಸಿದಳು. ಆಕೆಯ ಮಾತನ್ನು ಕೇಳಿದ ಸುಬ್ಬಣ್ಣನವರಿಗೂ ಕರುಳು ಚುರ್ ಎಂದಿತು. ಆದರೆ ಅವರು ಮಾತುಕೊಟ್ಟಾಗಿತ್ತು. ಅಸತ್ಯವನ್ನು ಆಡುವುದಕ್ಕಿಂತ ಆತ್ಮಹತ್ಯೆಯೇ ಮೇಲು ಎಂಬುದು ಆ ಮಹಾರಾಯನ ಮತವಾಗಿತ್ತು. “ನೋಡು ಲಕ್ಷ್ಮೀ! ಮಕ್ಕಳ ವಿಚಾರದಲ್ಲಿ ನಿನಗಿಂತಲೂ ನನಗೆ ಮಮತೆ ಹೆಚ್ಚು ಎನ್ನುವುದು ನಿನಗೆ ತಿಳಿದಿರಬಹುದು. ಎಂದಾದರೂ ಬೇಸರವಾದಾಗ 222 ಮೂರು ತಲೆಮಾರು ನೀನು ಮಕ್ಕಳನ್ನು ಗದರಿಸಿರಬಹುದು, ಹೊಡೆದಿರಬಹುದು; ಆದರೆ ನಾನು ಮಕ್ಕಳನ್ನು ಗದರಿಸಿದುದನ್ನಾಗಲಿ, ಹೊಡೆದುದನ್ನಾಗಲಿ, ನೀನು ಕಂಡಿರುವೆಯಾ? ನನಗೆ ಮಕ್ಕಳೇ ದೇವರು. ಅವರ ಆಟಪಾಠಗಳನ್ನು, ಆನಂದವನ್ನು ನೋಡುವುದೇ ಒಂದು ಸೌಭಾಗ್ಯ! ಹಾಗಿರುವಾಗ ನಾನು ಮಗನನ್ನು ಕೊಡುತ್ತೇನೆ ಎಂದು ಹೇಳಬೇಕಾದರೆ ಪೂರ್ವಾಪರಗಳನ್ನು ಯೋಚಿಸಿಲ್ಲ ಎಂದು ಭಾವಿಸುತ್ತೀಯಾ? ಸ್ವಲ್ಪ ಸಮಾಧಾನವಾಗಿ ಯೋಚನೆ ಮಾಡು. ನಮ್ಮ ಪೂರ್ವಜನ್ಮದ ಪುಣ್ಯದಿಂದ ನಮಗೆ ಮನೆತುಂಬ ಮಕ್ಕಳಾಗಿವೆ. ಪಾಪ ಯಾವ ಜನ್ಮದ ಪಾಪ ಶೇಷದಿಂದಲೋ, ಅವರಿಗೆ ಮಕ್ಕಳಿಲ್ಲದೆ ವಂಶ ನಿಂತುಹೋಗುವ ಸ್ಥಿತಿ ಬಂದಿದೆ. ‘ನಮ್ಮ ವಂಶವನ್ನು ಉದ್ಧಾರ ಮಾಡಿ’ ಎಂದು ಅವರು ಕೇಳಿಕೊಂಡಾಗ ‘ಇಲ್ಲ’ ಎನ್ನಲು ನನ್ನ ಮನಸ್ಸು ಒಡಂಬಡಲಿಲ್ಲ. ಇದ್ದವರು ಇಲ್ಲದವರಿಗೆ ದಾನ ಮಾಡಬೇಕಾದುದು ಮಾನವಧರ್ಮ. ಅದು ಹಣವಾಗಬಹುದು. ಆಸ್ತಿಯಾಗಬಹುದು. ಮತ್ತೇನಾದರೂ ಆಗಬಹುದು. ಭಗವಂತ ಅನುಗ್ರಹಿಸಿದ್ದರಿಂದ ನಮಗೆ ಮನೆತುಂಬ ಮಕ್ಕಳಾದವು. ಅವನು ಅನುಗ್ರಹಿಸದಿದ್ದರೆ ನಾವೇನು ಮಾಡುತ್ತಿದ್ದೆವು? ಹಾಗೂ ನಿನಗೆ ಇಷ್ಟವಿಲ್ಲದಿದ್ದರೆ, ಸ್ಪಷ್ಟವಾಗಿ ಹೇಳಿಬಿಡು, ‘ನನ್ನ ಮಾತು ಹೋಯಿತು ಸ್ವಾಮಿ! ನಮ್ಮ ಮನೆಯವರು ಒಪ್ಪುವುದಿಲ್ಲ; ನನ್ನನ್ನು ಕ್ಷಮಿಸಿಬಿಡಿ’ ಎಂದು ಅವರಿಗೆ ಹೇಳಿಬಿಡುತ್ತೇನೆ” ಎಂದರು. ಆ ಮತನ್ನು ಕೇಳಿ ಲಕ್ಷ್ಮೀ ದೇವಮ್ಮನಿಗೆ ಬಾಯಿಕಟ್ಟಿತು. ಆಕೆ ನಮ್ರಳಾಗಿ ‘ನೀವೇ ನನಗೆ ದೇವರು, ನನಗೆ ಬೇರೆ ದೇವರಿಲ್ಲ. ಶಂಕರ ನನಗೆ ಹೇಗೆ ಮಗನೋ ಹಾಗೆ ನಿಮಗೂ ಮಗ. ಏನೋ ತಿಳಿಯದೆ ಮಾತಾಡಿದೆ, ನಿಮ್ಮ ಮಾತಿಗೆ ಎದುರು ಹೇಳಿ, ನಿಮ್ಮ ಧರ್ಮಕ್ಕೆ ಅಡ್ಡ ಬರುವುದಾದರೆ ನಿಮ್ಮ ಕೈ ಹಿಡಿದು ಸಾರ್ಥಕವೇನು? ನಿಮ್ಮ ಮಾತಿನಂತೆ ಆಗಲಿ, ಅಗತ್ಯವಾಗಿ ಮಗನನ್ನು ಕಳುಹಿಸಿಕೊಡಿ, ನಾನು ಅಡ್ಡಿ ಬರುವುದಿಲ್ಲ’ ಎಂದರು ಲಕ್ಷ್ಮೀದೇವಮ್ಮ. ‘ಮಗನನ್ನು ಸಾವಿರ ರೂಪಾಯಿಗೆ ಮಾರಿಕೊಂಡ ಸುಬ್ಬಣ್ಣ. ಇಂತಹ ಜನಗಳೂ ಇದ್ದಾರಲ್ಲ ಭೂಮಿ ಮೇಲೆ’ ಎಂದು ಅಪಪ್ರಚಾರ ಮಾಡಿದಳು, ನೆರೆಮನೆ ಅಚ್ಚಮ್ಮ, ‘ಅವರನ್ನು ಆಡಿಕೊಂಡವರ ಬಾಯಲ್ಲಿ ಹುಳು ಬೀಳುತ್ತದೆ. ಅಂತಹ ಮಹಾನುಭಾವರು ಇರುವುದರಿಂದಲೇ ಪ್ರಪಂಚದಲ್ಲಿ ಇನ್ನೂ ಮಳೆ ಬೆಳೆಗಳಾಗುತ್ತಿವೆ. ನಿನ್ನಂತಹ ನಾಯಿಗಳು ಬೊಗಳಿದರೆ ಸ್ವರ್ಗಲೋಕ ಹಾಳಾಗುತ್ತದೆಯೆ? ಇಂತಹ ಅನ್ಯಾಯದ ಮಾತನ್ನಾಡಿ ಯಾವ ನರಕಕ್ಕೆ ಹೋಗಬೇಕೆಂದು ಮಾಡಿದ್ದೀಯಾ?’ ಎಂದು ಛೀಮಾರಿ ಹಾಕಿದರು, ಆಕೆಯ ಮಾತನ್ನು ಕೇಳಿದ ಜನ. * * * * 223 21. ಸುಬ್ಬಣ್ಣನವರ ಅನಾರೋಗ್ಯ ಮನುಷ್ಯನಿಗೆ ಆಸೆ ಎಂಬುದು ಕೆಟ್ಟದ್ದು. ಆದರೆ ಅದು ಯಾರನ್ನೂ ಬಿಡದು. ಒಂದು ದೃಷ್ಟಿಯಿಂದ ಆಸೆಯೇ ಜೀವನವನ್ನು ನಡೆಸುವ ಶಕ್ತಿ. ನಿರಾಸೆಯೇ ಮೃತ್ಯು. ಸುಬ್ಬಣ್ಣನವರ ಹಿರಿಯ ಮಗ ವೆಂಕಣ್ಣಯ್ಯ ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣನಾದ. ಆದರೇನು, ಸರ್ಕಾರದಲ್ಲಿ ಸರಿಯಾದ ಪದವಿ ದೊರೆಯಲಿಲ್ಲ. ಆತ ಎಲ್ಲಿಯೋ ಒಂದು ಹೈಸ್ಕೂಲಿನಲ್ಲಿ ಉಪಾಧ್ಯಾಯನಾಗಿದ್ದ. ಎರಡನೆಯ ಮಗ ರಾಮು ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಹೈಸ್ಕೂಲು ವಿದ್ಯಾಭ್ಯಾಸ ಮುಗಿಯುತ್ತಲೇ ಆತ ತಾಲ್ಲೂಕು ಕಛೇರಿಯ ಗೋಡೆಸಾಲಿನ ಗುಮಾಸ್ತರಲ್ಲಿ ಒಬ್ಬನಾದ. ಆತನಿಂದ ಸಂಸಾರ ನಿರ್ವಹಣೆಗೆ ಸ್ವಲ್ಪ ಸಹಾಯವಾಗುತ್ತಿತ್ತು. ಎರಡು ವರ್ಷಗಳಲ್ಲಿ ಆತ ಶೇಕದಾರಿ ತರಬೇತಿಯನ್ನು ಪಡೆದು, ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ಶೇಕದಾರನಾದ. ತಾನು, ತನ್ನ ತಂದೆ, ತನ್ನ ತಾತ ನಡೆಸಿದ ಶೇಕದಾರಿ ತನ್ನ ಮಗನಿಗೂ ದೊರೆತದ್ದಕ್ಕಾಗಿ ಸುಬ್ಬಣ್ಣನವರಿಗೆ ಪರಮಸಂತೋಷವಾಯಿತು. ಇನ್ನೇನು ತಮ್ಮ ಸಂಸಾರದ ತಾಪತ್ರಯಗಳೆಲ್ಲ ಬಹುಮಟ್ಟಿಗೆ ದೂರವಾದುವೆಂದು ಅವರು ಭಾವಿಸಿದರು. ತಾವೇ ಸ್ವತಃ ಮಗನ ಜೊತೆಯಲ್ಲಿ ಕೆಲವು ದಿನಗಳಿದ್ದು ಆ ಕೆಲಸದಲ್ಲಿ ಮಗನಿಗೆ ಮಾಹಿತಿ ಮಾಡಿಕೊಡಬೇಕೆಂದು ಅವರು ಬಯಸಿದರು. ರಾಮಸ್ವಾಮಿಯ ಜೊತೆಯಲ್ಲಿ ಹೊರಟವರು ಹರಿಹರದಲ್ಲಿ ಹರಿಹರೇಶ್ವರನ ದರ್ಶನ ಮಾಡಿಕೊಂಡು ತುಂಗಭದ್ರೆಯಲ್ಲಿ ಸ್ನಾನ ಮಾಡಿ ಮಲೆಬೆನ್ನೂರಿಗೆ ಬಂದರು. ಕೆಲವು ವರ್ಷಗಳ ಕೆಳಗೆ ತಮ್ಮ ಶ್ರೀನಿವಾಸರಾಯರು ಅಲ್ಲಿ ಶೇಕದಾರರಾಗಿದ್ದಾಗ, ಸುಬ್ಬಣ್ಣನವರು ಆಗಾಗ ಅಲ್ಲಿಗೆ ಹೋಗುತ್ತಿದ್ದುಂಟು. ಇದರಿಂದ ಅಲ್ಲಿನ ಜನರ ಪರಿಚಯ ಅವರಿಗಿತ್ತು. ಅದರಲ್ಲಿಯೂ ಆ ಊರಿನ ಸಾಹಿತಿಗಳು, ಗಮಕಿಗಳು, ಛೋಟಾ ಲಾಯರು ಆದ ಹನುಮಂತರಾಯರು ಅವರಿಗೆ ಪಂಚಪ್ರಾಣವಾಗಿದ್ದರು. ಆದ್ದರಿಂದ ರಾತ್ರಿ ಹರಿಹರದಿಂದ ಗಾಡಿಯಲ್ಲಿ ಹೊರಟವರು ಬೆಳಗಿನ ಜಾವದ ಹೊತ್ತಿಗೆ ಮಲೆಬೆನ್ನೂರಿಗೆ ಬಂದು 224 ಮೂರು ತಲೆಮಾರು ಹನುಮಂತರಾಯರ ಮನೆ ತಲುಪಿದರು. ಮಲೆಬೆನ್ನೂರನ್ನು ಸೇರಿದ ಮರುದಿನವೇ ಸುಬ್ಬಣ್ಣನವರಿಗೆ ಹುಷಾರು ತಪ್ಪಿತು. ಜ್ವರ ಕಾಣಿಸಿಕೊಂಡಿತು. ತುಂಗಭದ್ರೆಯಲ್ಲಿ ಮಿಂದ, ರಾತ್ರಿಯೆಲ್ಲ ನಿದ್ದೆಗೆಟ್ಟು ಪ್ರಯಾಣಮಾಡಿದ ಫಲವಾಗಿ ಜ್ವರ ಕಾಣಿಸಿಕೊಂಡುದು ದಿನದಿನಕ್ಕೆ ಉಲ್ಬಣಿಸುತ್ತಹೋಯಿತು. ರಾಮಸ್ವಾಮಿ ಅಲ್ಲಿನ ಕೆಲಸ ಕಾರ್ಯಗಳನ್ನು ಮತ್ತೊಬ್ಬರಿಂದ ವಹಿಸಿಕೊಳ್ಳುವುದು, ಊರಿನವರ ಪರಿಚಯ ಮಾಡಿಕೊಳ್ಳುವುದು, ಜರೂರೆಂದು ಬಂದ ಸರ್ಕಾರದ ಕಾಗದ ಪತ್ರಗಳನ್ನು ನೋಡುವುದು ಮುಂತಾದ ಕೆಲಸಗಳಲ್ಲಿ ಮಗ್ನನಾದುದರಿಂದ ತಂದೆಯ ರೋಗದತ್ತ ಗಮನ ಹರಿಸಲಿಲ್ಲ. ಆದರೆ ನಾಲ್ಕನೆಯ ದಿನ ಸುಬ್ಬಣ್ಣನವರಿಗೆ ಮೈಮೇಲಿನ ಎಚ್ಚರ ತಪ್ಪಿತು. ಗಾಬರಿಗಿಟ್ಟುಕೊಂಡಿತು. ಶೇಷಾಚಾರ್ಯರೆಂಬುವವರು, ಆ ಊರಿನಲ್ಲಿ ಹೊಸದಾಗಿ ನೇಮಕವಾಗಿದ್ದ ವೈದ್ಯರು. ಅವರು ಬಂದು ರೋಗಿಯನ್ನು ಪರೀಕ್ಷಿಸಿ ‘ಇದು ಸನ್ನಿಪಾತ ಜ್ವರ’ ಎಂದು ಹೇಳಿ ಔಷಧ ಕೊಡಲು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ‘ಸನ್ನಿಪಾತ ಜ್ವರ’ವೆಂದರೆ ಮೃತ್ಯುವಿನ ಕರೆಯೆಂದೇ ನಂಬಿಕೆ. ಆದ್ದರಿಂದ ರಾಮಸ್ವಾಮಿ ತುಂಬ ಗಾಬರಿಗೊಂಡು ತಳುಕಿನಲ್ಲಿದ್ದ ತಾಯಿಯನ್ನು ಆಳನ್ನು ಕರೆಸಿ ಕಳುಹಿಸಿ ಅಲ್ಲಿಂದ ಕರೆಸಿಕೊಂಡ. ಸುಮಾರು ಇಪ್ಪತ್ತು ದಿನಗಳು ಸುಬ್ಬಣ್ಣನವರಿಗೆ ಪ್ರಜ್ಞೆ ತಪ್ಪಿತ್ತು. ರಾಮಸ್ವಾಮಿಗೆ ದಿಕ್ಕು ತೋಚದಂತಾಯಿತು. ಅದು ಪರಿಚಯವಿಲ್ಲದ ಪರಸ್ಥಳ, ಇದ್ದುದು ಅಪರಿಚಿತರ ಮನೆಯಲ್ಲಿ. ಆದ್ದರಿಂದ ರಾಮಸ್ವಾಮಿ ಭಯದಿಂದ ಹೌಹಾರಿದ. ಅದರೆ ಆತನ ಪುಣ್ಯ. ಹನುಮಂತರಾಯರು, ಶೇಷಾಚಾರ್ಯರು ಸುಬ್ಬಣ್ಣನವರ ಇಬ್ಬರು ಮಕ್ಕಳಂತೆ ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ ಔಪಧೋಪಚಾರಗಳನ್ನು ನಡೆಸಿದರು. ಅದೇ ಮೊದಲಬಾರಿ ಕೆಲಸಕ್ಕೆ ಸೇರಿದ್ದ ವೈದ್ಯ ಶೇಷಾಚಾರ್ಯರು ಸುಬ್ಬಣ್ಣನವರ ಖಾಯಿಲೆಯನ್ನು ಒಂದು ಸವಾಲಿನಂತೆ ಎದುರಿಸಿದರು. ಸುಬ್ಬಣ್ಣನವರನ್ನು ಸಾಕ್ಷಾತ್ ದೈವವೆಂದು ತಿಳಿದಿದ್ದ ಹನುಮಂತರಾಯರು ಅವರ ಸೇವೆಯೇ ತಮ್ಮ ಉದ್ಧಾರದ ಹೆದ್ದಾರಿಯೆಂದು ತಿಳಿದು ಸೇವೆ ಸಲ್ಲಿಸಿದರು. ಅವರಿಬ್ಬರ ಅವ್ಯಾಹತಶ್ರಮದ ಫಲವಾಗಿ ಸುಬ್ಬಣ್ಣನವರು ಖಾಯಿಲೆಯಿಂದ ಪಾರಾಗಿ ಚೇತರಿಸಿಕೊಂಡರು. ಅವರು ಪ್ರಜ್ಞೆಯಿಲ್ಲದಾಗ ಹುಚ್ಚುಹುಚ್ಚಾಗಿ ಹಾಡಿದ ಕವನಗಳನ್ನು ಹನುಮಂತರಾಯರು ಒಂದು ಪುಸ್ತಕದಲ್ಲಿ ಬರೆದುಕೊಂಡು ಸಂಗ್ರಹಿಸಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಸುಬ್ಬಣ್ಣನವರು ಹನುಮಂತರಾಯರ ಉಪಕಾರವನ್ನು ಬಾಯಿತುಂಬ ಹೊಗಳಿದರು. ಆಗ ಹನುಮಂತರಾಯರು ‘ಸ್ವಾಮಿ ಸುಬ್ಬಣ್ಣನವರೇ, ನಾನೇನು ಮಾಡಿದೆ ಮಹಾ! ಸುಬ್ಬಣ್ಣನವರ ಅನಾರೋಗ್ಯ 225 ಸಾವಿನಲ್ಲಿಯೂ ನೀವು ಸಾಹಿತ್ಯವನ್ನು ಸೃಷ್ಟಿಸಿದಿರಿ’ ಎಂದು ಹೊಗಳಿ ಅವ್ಯವಸ್ಥಿತವಾಗಿದ್ದ ಅವರ ಕವನಗಳನ್ನು ಹಾಡಿ ಸಂತೋಷಪಡಿಸಿದರು. ಆತನಿಗೆ ಒಳ್ಳೆಯ ಶಂಖದಂತಹ ಕಂಠವಿತ್ತು. ಮಧುರವಾಗಿ ಕಾವ್ಯವಚನ ಮಾಡುತ್ತಿದ್ದರು. ಭಾರತ ಕಾವ್ಯವಾಚನವಂತೂ ಆತನ ಬಾಯಿಂದ ಕೇಳಿ ಸಂತೋಷ ಪಡುವರು, ಸುಬ್ಬಣ್ಣನವರು. ಕುಮಾರವ್ಯಾಸ ಭಾರತ ಆತನಿಗೆ ವಾಚೋವಿಧೇಯವಾಗಿತ್ತು. ಬರುಬರುತ್ತ ಆ ಗ್ರಂಥವೇ ಆತನ ಸರ್ವಸ್ವವಾಗಿತ್ತು. ಜೀವನದಲ್ಲಿ ಯಾವುದೇ ಒಂದು ಸಮಸ್ಯೆ ಉದ್ಭವಿಸಿದರೂ ಅದಕ್ಕೆ ಉತ್ತರ ಕುಮಾರವ್ಯಾಸ ಭಾರತದಲ್ಲಿದೆ ಎಂಬುದು ಆತನ ನಂಬಿಕೆಯಾಗಿತ್ತು. ಆ ನಂಬಿಕೆಯೆ ಆತನ ಬಾಳಿನಲ್ಲಿ ದಾರಿದೀಪವಾಗಿ ಪರಿಣಮಿಸಿತು. ತನಗೆ ಮಾತ್ರವೇ ಅಲ್ಲ. ತನ್ನ ಬಳಿಗೆ ಬಂದವರಿಗೆಲ್ಲರಿಗೂ ಆತ ಮಾರ್ಗದರ್ಶನ ಮಾಡಿಸುತ್ತಿದ್ದರು. ಶೇಷಾಚಾರ್ಯರು ರಾಮಸ್ವಾಮಿಯ ಸಹೋದರರಂತೆ ನಡೆದುಕೊಂಡರು. ಸುಬ್ಬಣ್ಣನವರ ಇದಿರಿನಲ್ಲಿ ಚಿಕ್ಕಮಗುವಿನಂತೆ ನಡೆದುಕೊಂಡು ಅವರ ಪುತ್ರಪ್ರೇಮಪಾತ್ರರಾಗಿದ್ದರು. ಸುಬ್ಬಣ್ಣನವರ ಖಾಯಿಲೆ ವಾಸಿಯಾದ ಮೇಲೆ ರಾಮಸ್ವಾಮಿ ಬೇರೊಂದು ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ತನ್ನ ಸಂಸಾರವನ್ನು ಪ್ರಾರಂಭಿಸಿದ. ತಾಯಿತಂದೆಗಳಿಬ್ಬರೂ ಕೆಲದಿನ ಆತನ ಜೊತೆಯಲ್ಲಿದ್ದು ರಾಮುವಿನ ಹೊಸಜೀವನ ಹಸನಾಗುವಂತೆ ಮಾಡಿ ಊರಿಗೆ ಹಿಂದಿರುಗಿದರು. ದೊಡ್ಡಮ್ಮ ನರಸಮ್ಮ ರಾಮುವಿನ ಮನೆಯಲ್ಲಿ ಯಜಮಾನಿಯಗಿ ನಿಂತುಕೊಂಡಳು. ಸುಬ್ಬಣ್ಣನವರು ಒಂದು ತಿಂಗಳಾಗುತ್ತಲೇ ಮತ್ತೆ ಮಲೆಬೆನ್ನೂರಿಗೆ ಬಂದರು, ತಮ್ಮ ಗೆಳೆಯ ತಿಪ್ಪಣ್ಣನೊಡನೆ, ಆ ಗೆಳೆಯನಿಗೆ ತಮ್ಮ ಮಗನ ರಾಜ್ಯಾಡಳಿತವನ್ನು ತೋರಿಸುವ ಉತ್ಸಾಹ ಅವರದು. ನಮ್ಮ ಜನ ವರ್ಷಕ್ಕೊಂದು ಬಾರಿ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ. ಈ ಜಗತ್ತೆಲ್ಲವೂ ಬಲಿ ಚಕ್ರವರ್ತಿಗೆ ಸೇರಿತ್ತಂತೆ! ವಿಷ್ಣು ದೇವತೆಗಳ ಮಾತಿಗೆ ಮರುಳಾಗಿ, ಮಹಾಭಾಗವತನಾದ ಬಲಿರಾಕ್ಷಸನನ್ನು, ವಾಮನಾವತಾರ ಮಾಡಿ ವ್ಯಾಜಾಂತರದಿಂದ ಪಾತಾಳಕ್ಕೆ ಮೆಟ್ಟಿದನಂತೆ! ಹೀಗೆ ಮಾಡಬಹುದೆ? ಎಂದು ಬಲಿ ಕೇಳಿದಾಗ ಆ ವಿಷ್ಣು ನಾಚಿ ಬಲಿಚಕ್ರವರ್ತಿಗೆ ವರವೊಂದನ್ನು ಕರುಣಿಸಿದನಂತೆ. ಆ ವರಕ್ಕನುಸರವಾಗಿ ಈ ಜಗತ್ತಿನ ಜನ ವರ್ಷಕ್ಕೊಂದು ಬಾರಿ ಬಲಿಯನ್ನು ವೈಭವದಿಂದ ಪೂಜಿಸಿ, ಈ ಭೂಮಂಡಲವೆಲ್ಲ ಆತನಿಗೆ ಸೇರಿದುದೆಂದು ಆತನನ್ನು ಹೊಗಳುತ್ತಾರಂತೆ. ಸುಬ್ಬಣ್ಣನವರು ಗೆಳೆಯ ತಿಪ್ಪಣ್ಣನನ್ನು ಮಲೆಬೆನ್ನೂರಿಗೆ ಕರೆದುಕೊಂಡು ಬಂದುದು ಇಂತಹುದೊಂದು ವೈಭವವನ್ನು ತೋರಿಸುವುದಕ್ಕಾಗಿ! * * * * 226 ಮೂರು ತಲೆಮಾರು 22. ಸುಬ್ಬಣ್ಣನವರ ಕೊನೆಯ ದಿನ 1918ನೆಯ ಇಸವಿ. ಪ್ರಪಂಚದ ಮಹಾಯುದ್ಧ ಆಗತಾನೇ ಮುಗಿದಿತ್ತು. ಆದರೆ ಅದರ ಪರಿಣಾಮ ಮಾತ್ರ ಜಗತ್ತಿನಲ್ಲೆಲ್ಲ ತನ್ನ ಪ್ರಭಾವ ಬೀರಿತು. ಯುದ್ಧದಿಂದ ಕಲುಷಿತವಾದ ವಾತಾವರಣ ‘ಇನಫ್ಲೂಯೆಂಜಾ’ ರೋಗದ ರೂಪದಲ್ಲಿ ಜಗತ್ತಿನಲ್ಲೆಲ್ಲ ವ್ಯಾಪಿಸಿತು. ಆ ಕಾಲದಲ್ಲಿ ಎಷ್ಟು ಮನೆಗಳ ಕದ ಮುಚ್ಚಿ ಹೋದವೊ! ಒಂದಾದರೂ ಸಾವಿಲ್ಲದ ಮನೆಯೇ ಇಲ್ಲವೆನ್ನಬಹುದು. ಇನ್‍ಫ್ಲೂಯೆಂಜಾ ಮಾರಿಯ ಎದುರಿನಲ್ಲಿ ಎಲ್ಲ ವೈದ್ಯರೂ ನಿರ್ವೀರ್ಯರಾದರು. ಸುಬ್ಬಣ್ಣನವರ ಮನೆಯ ಹಿಂದೆ ಕುಂಬಾರರ ತಿಮ್ಮನ ಮನೆಯಿತ್ತು. ಸುಬ್ಬಣ್ಣನವರ ಮನೆಯಂತೆ ಅವನ ಮನೆಯೂ ಒಂದು ನಂದಗೋಕುಲ. ಅವನಿಗೆ ಹನ್ನೆರಡು ಜನ ಮಕ್ಕಳು. ದಿನಕ್ಕೊಬ್ಬರಂತೆ ಅವನ ಮನೆಯವರು ಯಮನಿಗೆ ತುತ್ತಾಗಿ ಹೋದರು. ಕಡೆಯಲ್ಲಿ ಹತ್ತು ವರ್ಷದ ರಂಗನೊಬ್ಬ ಉಳಿದಿದ್ದ. ಸಾವನ್ನು ಕಂಡು ಹೆದರಿಕೆಯಿಂದ ಕುಗ್ಗಿಹೋಗಿದ್ದ ಆ ಹುಡುಗ ಮಣ್ಣು ಕಾಣದೆ ಬಿದ್ದಿದ್ದ ಶವಗಳ ಮಧ್ಯದಲ್ಲಿ, ಹೊಸ ಗಡಿಗೆಗಳ ಮಧ್ಯೆ ತಲೆಮರೆಸಿ ಕುಳಿತಿದ್ದವನು ಹಾಗೆಯೆ ಕೊನೆಯುಸಿರೆಳೆದಿದ್ದ. ಹರಿಕಥೆಯ ತಿಮ್ಮಣ್ಣದಾಸರ ಮಗ ಚಿನ್ನರಾಯಪ್ಪ, ಮೊಮ್ಮಗ ನರಸಣ್ಣನನ್ನು ಕಳೆದುಕೊಂಡು ಮರುದಿನ ಅವರೂ ಮೃತ್ಯುವಿಗೆ ತುತ್ತಾದರು. ಹೆಣಗಳನ್ನು ಸಾಗಿಸುವವರಿಲ್ಲದೆ ಮನೆಗೇ ಬೆಂಕಿಯನ್ನು ಹಚ್ಚಲಾಯಿತು. ಇಂತಹ ದುರಂತಗಳು ಎಷ್ಟೋ? ಮಾರಿಗೆ ಔತಣವಾಗುತ್ತಿದ್ದ ಆ ಕಾಲದಲ್ಲಿ ಮೃತ್ಯು ಸುಬ್ಬಣ್ಣನವರ ಮನೆಯನ್ನೂ ಪ್ರವೇಶಿಸಿತು. ಮೊದಲು ಮನೆಯಲ್ಲಿ ಹಾಸಿಗೆ ಹಿಡಿದವರು ಲಕ್ಷ್ಮೀದೇವಮ್ಮ, ಒಂದೆರಡು ದಿನಗಳಲ್ಲಿಯೇ ಆ ಖಾಯಿಲೆ ಉಲ್ಬಣಿಸಿತು. ಆಕೆಯ ಆಸೆಯನ್ನೇ ಬಿಡುವಂತಾಯಿತು. ಆದರೆ ದೈವಲೀಲೆ ವಿಚಿತ್ರವಾದುದು! ಜೀವನ್ಮರಣಗಳ ಮಧ್ಯೆ ಓಲಾಡುತ್ತಿದ್ದ ಲಕ್ಷ್ಮೀದೇವಮ್ಮ ಕ್ರಮೇಣ ಗುಣಮುಖರಾದರು. ಆದರೆ ಆರೋಗ್ಯವಾಗಿದ್ದು ಊರಿನಲ್ಲಿ ಸತ್ತವರಿಗೆಲ್ಲ ಶವಸಂಸ್ಕಾರಕ್ಕೆ ಸಹಾಯಮಾಡುತ್ತಿದ್ದ ಸುಬ್ಬಣ್ಣನವರು ಹಾಸಿಗೆ ಹಿಡಿದು ಮಲಗಿದರು. ದಿನದಿನಕ್ಕೆ ರೋಗ ಉಲ್ಬಣಿಸತೊಡಗಿತು. ಚೆನ್ನಮ್ಮನಾಗ್ತಿಹಳ್ಳಿಯ ವೈದ್ಯರಾಮಣ್ಣನವರು ತಮ್ಮ ಊರಿನಿಂದ ಬರುವಂತಿರಲಿಲ್ಲ. ಅವರ ಸುಬ್ಬಣ್ಣನವರ ಕೊನೆಯ ದಿನ 227 ಮನೆಯಲ್ಲಿಯೂ ಮೃತ್ಯುಮುಖರಾಗಿ ಮಲಗಿದ್ದ ರೋಗಿಗಳತ್ತ ಗಮನ ಕೊಡಬೇಕಾಗಿತ್ತು. ಚಳ್ಳಕೆರೆಯಿಂದ ಸರ್ಕಾರಿ ವೈದ್ಯರು ಆಗಮಿಸಿದರು. ಅವರಿಗೆ ಸುಬ್ಬಣ್ಣನವರಲ್ಲಿ ಆದರ, ವಿಶ್ವಾಸ, ಭಕ್ತಿ. ಆದರೆ ಪ್ರಳಯಕಾಲದಂತಿದ್ದ ಆ ಸಮಯದಲ್ಲಿ ಯಾರ ಔಷಧವೂ ಯಾವ ಉಪಯೋಗಕ್ಕೂ ಬರುವಂತಿರಲಿಲ್ಲ. ಹಿರಿಯ ಮಕ್ಕಳಿಬ್ಬರೂ ಬಹು ದೂರದಲ್ಲಿದ್ದುದರಿಂದ ಅವರಿಗೆ ಸುದ್ದಿ ಮುಟ್ಟುವುದೇ ಕಷ್ಟವಾಗಿತ್ತು. ಎಂಟು, ಹತ್ತು ದಿನಗಳು ಮೈಮೇಲೆ ಜ್ಞಾನವಿಲ್ಲದೆ ಅವರು ಮಲಗಿದ್ದರು. ಬಾಳಿನುದ್ದಕ್ಕೂ ದೈವಭಕ್ತರಾಗಿದ್ದ ಅವರು ಪ್ರಜ್ಞಾಹೀನರಾಗಿ ಮಲಗಿದ್ದಾಗಲೂ ದೇವರಪೂಜೆ ಮಾಡುವುದು, ಸಹಸ್ರಾರ್ಚನೆ ಮಾಡುವಂತೆ, ಹೂಗಳನ್ನು ದೇವರ ಮೇಲೆ ಹಾಕುವಂತೆ ಕೈಯ್ಯಾಡಿಸುವುದನ್ನು ಮಾಡುತ್ತಿದ್ದರು. ಇನ್ನೇನು ಅಂತ್ಯಕಾಲ ಸಮೀಪಿಸಿತು ಎನ್ನುವಾಗ ಸುಬ್ಬಣ್ಣನವರಿಗೆ ಪ್ರಜ್ಞೆ ಬಂತು. ಅವರು ಹೆಂಡತಿಯನ್ನು ಹತ್ತಿರಕ್ಕೆ ಕರೆದು ‘ಲಕ್ಷ್ಮೀ ಜಾಗ್ರತೆ, ದೇವರ ಮನೆಯಿಂದ ಕಾಶಿಯ ಗಂಗೆಯನ್ನು ತೆಗೆದುಕೊಂಡು ಬಾ’ ಎಂದು ಹೇಳಿದರು. ಆಕೆ ಆ ಕಾರ್ಯಕ್ಕಾಗಿ ಅತ್ತ ಒಳಗೆ ಹೋಗುತ್ತಲೇ ಇತ್ತ ಸುಬ್ಬಣ್ಣನವರು ಪಕ್ಕದಲ್ಲಿದ್ದ ತಿಪ್ಪಯ್ಯನನ್ನು ಹತ್ತಿರಕ್ಕೆ ಕರೆದು ‘ಅಣ್ಣಯ್ಯ, ನಾನು ಹೋಗುತ್ತಿದ್ದೇನೆ. ನನ್ನ ಸಂಸಾರವನ್ನೆಲ್ಲ ನಿನ್ನ ರಕ್ಷಣೆಯಲ್ಲಿ ಬಿಟ್ಟು ಹೋಗುತ್ತಿದ್ದೇನೆ’ ಎಂದು ಹೇಳಿದರು. ಕ್ಷೀಣಸ್ವರದಲ್ಲಿ ಆತನಾಡಿದ ಮಾತನ್ನು ಕೇಳಿದ ತಿಪ್ಪಯ್ಯ, ಕೋಡಿ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳಲೂ ಯತ್ನಿಸದೆ ‘ಸುಬ್ಬಣ್ಣ, ನೀನು ಹೋದಮೇಲೆ ನಾನು ಉಳಿಯುತ್ತೇನೆಂದು ಭಾವಿಸುತ್ತೀಯಾ? ನಿನ್ನ ಹಿಂದೆಯೇ ನಾನೂ ಬರುತ್ತೇನೆ’ ಎಂದು ಹೇಳಿ ಆತನ ಮೈಯ್ಯನ್ನು ಒಮ್ಮೆ ಸವರಿದ. ಆ ವೇಳೆಗೆ ಮಡಿಯುಟ್ಟು ಗಂಗಾಜಲವನ್ನು ತಂದ ಲಕ್ಷ್ಮೀದೇವಮ್ಮ ಉದ್ಧರಣೆಯಿಂದ ಗಂಗೆಯನ್ನು ಸುಬ್ಬಣ್ಣನವರ ಬಾಯಿಗೆ ಹಾಕಿದರು. ಒಂದು ಬಾರಿ ಲಕ್ಷ್ಮೀದೇವಮ್ಮನನ್ನೂ, ಇನ್ನೊಮ್ಮೆ ತಿಪ್ಪಯ್ಯನನ್ನೂ ನೋಡಿದ ಸುಬ್ಬಣ್ಣನವರು ಮೆಲ್ಲನೆ ‘ಶ್ರೀರಾಮಚಂದ್ರ’ ಎಂದರು. ಅದೇ ಅವರ ಕೊನೆಯ ಮಾತು. ಅವರ ಪವಿತ್ರ ಆತ್ಮ ಪರಮಾತ್ಮನಲ್ಲಿ ಲೀನವಾಗಿ ಹೋಗಿತ್ತು. ಹಿರಿಯ ಮಕ್ಕಳಿಲ್ಲದ ಆ ಮನೆ ರೋದನ ಧ್ವನಿಯಿಂದ ತುಂಬಿಹೋಯಿತು. ಎಲ್ಲರಂತೆ ತಿಪ್ಪಯ್ಯನೂ ಅತ್ತು ಅತ್ತು ಸುಸ್ತಾಗಿ ಹೋದ. ಆದರೆ ಈ ಅಳುವಿಗೆ ಕೊನೆಯೆಲ್ಲಿ? ಆತ ಸಾವರಿಸಿಕೊಂಡು ಮೇಲೆದ್ದ. ಲಕ್ಷ್ಮೀದೇವಮ್ಮನನ್ನು ಕುರಿತು ‘ತಂಗಿ, ಅಳುವುದಕ್ಕೆ ಸಾಕಷ್ಟು ವ್ಯವಧಾನವಿದೆ. ದೇಹದಲ್ಲಿ ಉಸಿರಿರುವವರೆಗೆ ನಾವು ಅಳುತ್ತ ಹೋಗೋಣ. ಆದರೆ ಸಧ್ಯಕ್ಕೆ ಸತ್ತವರ ಸ್ಮಶಾನಯಾತ್ರೆ 228 ಮೂರು ತಲೆಮಾರು ನಡೆಯಬೇಕಲ್ಲವೆ? ಹುಡುಗರು ಹೋಗಿ ಬ್ರಾಹ್ಮಣರಿಗೆ ಹೇಳಿಬರಲಿ. ಒಬ್ಬನನ್ನು ನನ್ನ ಮನೆಗೆ ಕಳುಹಿಸಿ, ಶರಣನನ್ನು ಬರಹೇಳು ಎಂದು ಹೇಳಿದ. ಮೃತ್ಯುವಿನ ಅಟ್ಟಹಾಸ ಊರಮುಂದಿನ ಮಾದಿಗರ ಹಟ್ಟಿಯಲ್ಲಿ ಹೆಚ್ಚು ಭಯಂಕರವಾಗಿತ್ತು. ಸ್ಮಶಾನಕ್ಕೆ ಕಟ್ಟಿಗೆಯನ್ನು ಸಾಗಿಸುವುದಕ್ಕಾಗಲಿ, ಬಟ್ಟೆ ಸಿದಿಗೆಯನ್ನು ಸಿದ್ಧ ಪಡಿಸುವುದಕ್ಕಾಗಲಿ, ಅಲ್ಲಿನ ಜನರ ಸಹಾಯ ದೊರೆಯುವಂತಿರಲಿಲ್ಲ. ಇದ್ದ ಬ್ರಾಹ್ಮಣರ ಹತ್ತು ಮನೆಗಳಲ್ಲಿ ಸುಬ್ಬಣ್ಣನವರಂತಹ ಮಹಾನುಭಾವರು ಕಾಲವಾದಾಗಲೂ ಶವಸಂಸ್ಕಾರಕ್ಕೆ ಸಾಕಷ್ಟು ಜನ ಸಿಕ್ಕುವುದು ಕಷ್ಟವಾಗಿತ್ತು. ನಾಲ್ಕು ಜನ ಬ್ರಾಹ್ಮಣರು ಬಂದರು. ಆದರೆ ಸ್ಮಶಾನದಲ್ಲಿ ಒಟ್ಟುವ ಕಟ್ಟಿಗೆಗೆ ಏನು ಮಾಡಬೇಕು? ಈ ಆಲೋಚನೆಯಲ್ಲಿ ಮುಳುಗಿರುವಾಗ ತಿಪ್ಪಯ್ಯನ ಮಗ ಶರಣಪ್ಪ ತಂದೆಯ ಬಳಿ ಬಂದು ನಿಂತ. ಅವನನ್ನು ಕುರಿತು ತಿಪ್ಪಯ್ಯ ‘ಮಗು ಹೊಸ ಮನೆಯನ್ನು ಕಟ್ಟಿಸಲೆಂದು ತೊಲೆ, ಕಂಬಗಳನ್ನು ಸಿದ್ಧಪಡಿಸಿ ದನಗಳ ಕೊಟ್ಟಿಗೆಯಲ್ಲಿ ಇಟ್ಟಿರುವೆಯಲ್ಲ, ಅದನ್ನು ಗಾಡಿಯಲ್ಲಿ ಹಾಕಿಕೊಂಡು ತೊರೆದಂಡೇಶ್ವರನ ಗುಡಿಯ ಮುಂದೆ ಜೋಡಿಸಿ ಬಾ. ಚಪ್ಪರಕ್ಕಾಗಿ ತಂದು ಹಾಕಿರುವ ಗರಿಯ ಮೂಟೆಗಳಲ್ಲಿ ಒಂದನ್ನು ಅದರ ಜೊತೆಯಲ್ಲಿ ತೆಗೆದುಕೊಂಡು ಹೋಗು. ಸೀಮೆಎಣ್ಣೆಯ ಡಬ್ಬಗಳಲ್ಲಿ ಒಂದನ್ನು ತೆಗೆದುಕೊಂಡು ಹೋಗು. ಹೋದ ವಾರ ತೋಟದಲ್ಲಿ ಮುರಿದು ಬಿದ್ದ ಗಂಧದ ಮರದ ಕೊರಡನ್ನೂ ಗಾಡಿಯಲ್ಲಿ ಹಾಕಿಕೊಂಡು ಹೋಗು’ ಎಂದು ಹೇಳಿ ಕಳುಹಿಸಿಕೊಟ್ಟ. ಅಂದು ಸುಬ್ಬಣ್ಣನವರ ಪಾರ್ಥಿವ ದೇಹ ಬೂದಿಯಾಗಿ ಹೋಯಿತು. ಸುಬ್ಬಣ್ಣನವರ ನಿಧನವಾರ್ತೆ ಬೆಂಗಳೂರಿನಲ್ಲಿದ್ದ ಅವರ ಹಿರಿಯ ಮಗ ವೆಂಕಣ್ಣಯ್ಯನಿಗೆ ತಲುಪಬೇಕಾದರೆ ಎರಡು ದಿನಗಳಾದವು. ಆತ ತಕ್ಷಣವೇ ಬೆಂಗಳೂರಿನಿಂದ ಹೊರಟು ಮಾರನೆಯ ಸಂಜೆ ತಳುಕನ್ನು ಸೇರಿದ. * * * * 229 ಮೂರು ಅನುಭವಿಸಿದುದು 231 1. ಬಾಲ್ಯ ಮತ್ತು ವಿದ್ಯಾಭ್ಯಾಸ ವೆಂಕಣ್ಣಯ್ಯ ದೊಡ್ಡ ಸುಬ್ಬಣ್ಣನವರ ಹಿರಿಯ ಮಗ. ಆತನ ಹಿರಿತನವಿರುವುದು ಬರಿಯ ಎಣಿಕೆಯಲ್ಲಲ್ಲ. ವಂಶದ ಘನತೆ, ಗೌರವಗಳನ್ನು ಉಳಿಸಿ ಬೆಳೆಸಿದ ಆತನ ಪಾತ್ರವೂ ಬಹು ಹಿರಿದಾದುದು. ವೆಂಕಣ್ಣಯ್ಯನೆಂದು ಆತನಿಗೆ ನಾಮಕರಣಮಾಡಿದ ಕೀರ್ತಿ ಆತನ ಅಜ್ಜಿ ಹನುಮಕ್ಕನಿಗೆ ಸಲ್ಲಬೇಕು. ಆಕೆಯ ಗಂಡನ ಹೆಸರೂ ವೆಂಕಣ್ಣಯ್ಯನೆಂದೇ. ಆ ಹೆಸರನ್ನು ಇಟ್ಟರೆ ಈ ಮೊಮ್ಮಗನೂ ತನ್ನ ಗಂಡನಂತೆ ಸಜ್ಜನ ಶಿರೋಮಣಿಯಾಗುವನೆಂದು ಆಕೆಯ ಆಸೆ. ಬಹುಶಃ ತನ್ನ ಗಂಡನೇ ಪುನಃ ಜನ್ಮತಾಳಿ ಬಂದಿರುವನೆಂದೂ ಆಕೆ ಭಾವಿಸಿದ್ದಿರಬಹುದು. ಕೇಳಿದವರಿಗೆ ಆಕೆ ಹೇಳುತ್ತಿದ್ದುದು ‘ನಮ್ಮ ವಂಶದ ಮನೆ ದೇವರು ವೆಂಕಟರಮಣಸ್ವಾಮಿ. ಆ ಹೆಸರನ್ನು ಮಗುವಿಗಿಟ್ಟರೆ ಅವನ ಹೆಸರನ್ನು ಕೂಗಿದಾಗಲೆಲ್ಲ ಭಗವಂತನ ನಾಮಸ್ಮರಣೆ ಮಾಡಿದಂತಾಗುತ್ತದೆ’ ಎಂದು ಹೇಳುತ್ತಿದ್ದರು. ವೆಂಕಣ್ಣಯ್ಯ ‘ಪುತ್ರಾದಿಚ್ಛೇತ್ ಪರಾಜಯಂ’ ಎಂಬ ಸೂಕ್ತಿಗೆ ಒಂದು ಭಾಷ್ಯವೆಂಬಂತೆ ಬಾಲ್ಯದಿಂದಲೂ ತನ್ನ ನಡೆನುಡಿಗಳಲ್ಲಿ ತಂದೆಯ ಕಣ್ಣಿಗೆ ಕಂಗೊಳಿಸುತ್ತಿದ್ದ. ತಂದೆ-ತಾಯಿಗಳ ಮುದ್ದಿನ ಮುದ್ದೆಯಾಗಿ-ಅಜ್ಜಿಯ ಬಾಹ್ಯ ಪ್ರಾಣವಾಗಿ ಈ ಮಗ ಬೆಳೆದು ಬಾಲಕನಾದಾಗ ಶಾಲೆಯ ಉಪಾಧ್ಯಾಯರನ್ನು ತನ್ನ ಕುಶಾಗ್ರಮತಿಯಿಂದ ದಂಗುಬಡಿಸುತ್ತಿದ್ದ. ಇನ್ನೂ ಸಸಿಯಾಗಿರುವಾಗಲೆ ಆತನ ಆಧಾತ್ಮಿಕ ದೃಷ್ಟಿ ಮಹೋನ್ನತವಾದ ಹೆಮ್ಮರದಂತೆ ಬೆಳೆದಿರುವುದನ್ನು ಕಂಡು ಆಶ್ಚರ್ಯಪಡದವರಾರು? ಹನ್ನೆರಡು ವರ್ಷ ತುಂಬುವಷ್ಟರಲ್ಲಿ ಆತ ಐದು ರೂಪಾಯಿ ಪರೀಕ್ಷೆಗೆ ಕಟ್ಟಿದುದು ಆಗಿನ ಕಾಲದ ಜನರಿಗೆ ಒಂದು ದೊಡ್ಡ ಸೋಜಿಗವೆನಿಸಿತ್ತು. ಅದೊಂದು ಕಟ್ಟುಕಥೆಯೆಂಬಂತೆ ಜನ ಕುತೂಹಲದಿಂದ ಪರಸ್ಪರ ಮಾತಾಡಿಕೊಳ್ಳುತ್ತಿದ್ದರು. ಮುಖ್ಯೋಪಾಧ್ಯಾಯರಾದ ನರಸಿಂಗರಾಯರಿಗಂತೂ ಹೆಮ್ಮೆಯಿಂದ ಕೋಡು ಮೂಡಿತ್ತು. ಅವರು ಪರೀಕ್ಷೆಗೆ ಕಟ್ಟಿದ್ದ ಆರು ಜನ ವಿದ್ಯಾರ್ಥಿಗಳನ್ನೂ ಕರೆದುಕೊಂಡು ಒಂದು ಶನಿವಾರ ಸಂಜೆ ಹನುಮಪ್ಪನ ಗುಡಿಗೆ ಹೋದರಂತೆ! ಶಿಷ್ಯರೆಲ್ಲರೂ ಹೂ, ಹಣ್ಣು, 232 ಮೂರು ತಲೆಮಾರು ಕಾಯಿಗಳನ್ನು ದೇವರಿಗೆ ಅರ್ಪಿಸಿ ‘ಸ್ವಾಮಿ ನಮ್ಮಪ್ಪ, ನಮ್ಮನ್ನು ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ಅನುಗ್ರಹಿಸು’ ಎಂದು ಕೇಳಿ ಪೂಜೆ ಸಲ್ಲಿಸಿದರು. ಇವರ ಜೊತೆಯಲ್ಲಿ ಹೊರಟಿದ್ದ ವೆಂಕಣ್ಣಯ್ಯ ಗುಡಿಗೆ ಹೋಗುವ ಹಾದಿಯಲ್ಲಿ ಸಿಕ್ಕ ಕೆರೆ ಕಾಲುವೆಯ ಬಳಿಯಲ್ಲಿಯೇ ತೆಂಗಿನಕಾಯನ್ನು ಒಡೆದು ತಿನ್ನುತ್ತ ಕುಳಿತಿದ್ದನಂತೆ! ಮುಖ್ಯೋಪಾಧ್ಯಾಯರು ಗುಡಿಯಿಂದ ಹಿಂದಕ್ಕೆ ಬರುವಾಗ ಕಾಲುವೆಯ ಬಳಿ ಕುಳಿತು ಕಾಯನ್ನು ಮೆಲ್ಲುತ್ತಿದ್ದ ಅವನನ್ನು ಕಂಡು ‘ಎಲಾ, ಗುಡಿಗೆ ಬರದೆ ಇಲ್ಲಿಯೇ ಕುಳಿತು ದೇವರಿಗೆ ಅರ್ಪಿಸುವ ಕಾಯನ್ನು ನೀನೇ ತಿನ್ನುತ್ತಿರುವೆಯಾ’ ಎಂದು ಆಕ್ಷೇಪಿಸಿದರಂತೆ. ಆಗ ಬಾಲಕ ವೆಂಕಣ್ಣಯ್ಯ ‘ಗುರುಗಳೇ ಫಲಾಪೇಕ್ಷೆಯಿಂದ ದೇವರನ್ನು ಪೂಜಿಸಬಾರದೆಂದು ನಮ್ಮ ತಂದೆ ಆಗಾಗ ಹೇಳುತ್ತಿರುತ್ತಾರೆ. ಅದಕ್ಕಾಗಿಯೇ ನಾನು ಫಲಸಮರ್ಪಣೆ ಮಾಡಲು ಗುಡಿಗೆ ಬರಲಿಲ್ಲ. ಒಂದು ತೆಂಗಿನಕಾಯನ್ನು ದೇವರಿಗೆ ಒಪ್ಪಿಸಿ ನನ್ನನ್ನು ಪರೀಕ್ಷೆಯಲ್ಲಿ ತೇರ್ಗಡೆ ಮಾಡಿಸು ಎಂದು ಹೇಗೆ ಕೇಳಲಿ?’ ಎಂದನಂತೆ. ಉಪಾಧ್ಯಾಯರು ಆತನ ಉದಾತ್ತ ದೃಷ್ಟಿಯನ್ನು ಮೆಚ್ಚಿ ಮನದಲ್ಲಿಯೆ ಸಂತಸಪಟ್ಟರೂ ಅದನ್ನು ಹೊರಗೆ ತೋರ್ಪಡಿಸದೆ ‘ನೀನೊಬ್ಬ ಪಿತೃವಾಕ್ಯಪರಿಪಾಲನ ಧುರಂಧರ’ ಎಂದು ಗೇಲಿ ಮಾಡಿದರಂತೆ. ದೇವರು ಕೊಟ್ಟುದುದರಲ್ಲಿ ತೃಪ್ತನಾಗಬೇಕು; ಫಲಾಪೇಕ್ಷೆಯಿಲ್ಲದೆ ಕಾರ್ಯತತ್ಪರನಾಗಬೇಕು ಎಂಬ ಭಾವನೆ ಆತನ ಬಾಳಿನುದ್ದಕ್ಕೂ ಇದ್ದ ಆಧ್ಯಾತ್ಮಿಕ ದೃಷ್ಟಿ. ತಳುಕಿನಿಂದ ಆ ವರ್ಷ ಐದು ರೂಪಾಯಿ ಪರೀಕ್ಷೆಗೆ ಕಟ್ಟಿದ್ದ ಆರು ಜನರಲ್ಲಿ ತೇರ್ಗಡೆಯಾದವನು ವೆಂಕಣ್ಣಯ್ಯನೊಬ್ಬನೆ. ಆ ಕಾಲಕ್ಕೆ ಇದು ಸರ್ವಸಾಮಾನ್ಯ ಸಾಧನೆಯಾಗಿರಲಿಲ್ಲ. ಐದು ರೂಪಾಯಿ ಪರೀಕ್ಷೆಯಲ್ಲಿ ತೇರ್ಗಡೆ ಎಂದರೆ ಸರ್ಕಾರಿ ನೌಕರಿಯಲ್ಲಿ ಒಂದು ಪರವಾನಗಿ ಸಿಕ್ಕ ಹಾಗೆ. ಅದರೆ ವೆಂಕಣ್ಣಯ್ಯನಿಗೆ ಇನ್ನೂ ಹನ್ನೆರಡು ವರ್ಷ ವಯಸ್ಸು. ಹದಿನೆಂಟಾಗದ ಹೊರತು ಸರ್ಕಾರಿ ನೌಕರಿಗೆ ಸೇರುವಂತಿಲ್ಲ. ಆದ್ದರಿಂದ ಆತನನ್ನು ಮುಂದೆ ಓದಿಸುವ ಪ್ರಶ್ನೆ ಹುಟ್ಟಿತು. ತಾಲ್ಲೂಕಿನ ಮುಖ್ಯ ಸ್ಥಳವಾದ ಚಳ್ಳಕೆರೆಯಲ್ಲಿ ಆಗತಾನೆ ಆಂಗ್ಲೋವರ್ನ್ಯಾಕ್ಯುಲರ್ ಶಾಲೆಯೊಂದು ಪ್ರಾರಂಭವಾಗಿತ್ತು. ಅಲ್ಲಿ ಇಂಗ್ಲೀಷ್‌ ಲೋಯರ್ ಸೆಕೆಂಡರಿ ಪರೀಕ್ಷೆಗೆ ತಯಾರಿ ನಡೆಯುತ್ತಿತ್ತು. ಆ ಪರೀಕ್ಷೆಯಲ್ಲಿ ತೇರ್ಗಡೆಯಾದವನು ಹೆಡ್‍ಗುಮಾಸ್ತೆಯಾಗಬಹುದಿತ್ತು. ಶೇಕದಾರನಾಗಬಹುದಿತ್ತು. ಕೊನೆಗೆ ಶಿರಸ್ತೆದಾರನೂ ಆಗಬಹುದಿತ್ತು. ಆದ್ದರಿಂದ ಸುಬ್ಬಣ್ಣನವರು ಈ ಹಿರಿಯ ಮಗನನ್ನು ಚಳ್ಳಕೆರೆಯಲ್ಲಿ ಇಂಗ್ಲೀಷ್‌ ಪರೀಕ್ಷೆಗೆ ಒದಿಸಬೇಕೆಂದು ನಿಶ್ಚಯಿಸಿದರು. ಬಾಲ್ಯ ಮತ್ತು ವಿದ್ಯಾಭ್ಯಾಸ 233 ಆಗಿನ ಕಾಲದಲ್ಲಿ ಹೋಟೆಲುಗಳು ಇರಲಿಲ್ಲ. ಆ ಭಾವನೆಯೆ ಅಂದಿನ ಜನರಿಗೆ ಭಯಂಕರವಾಗಿತ್ತು. ಅನ್ನವನ್ನು ಮಾರಿದವನು ಪುನ್ನಾಮ ನರಕದಲ್ಲಿ ಬಿದ್ದುಹೋಗುವನೆಂಬ ಭಯವಿತ್ತು. ಆದ್ದರಿಂದ ವೆಂಕಣ್ಣಯ್ಯನ ಅಶನ ವಸನಗಳಿಗೆ ಯಾವುದಾದರೊಂದು ಮನೆಯನ್ನು ಗೊತ್ತುಮಾಡಬೇಕಾಗಿತ್ತು. ಭಿಕ್ಷಾನ್ನ ವಾರಾನ್ನಗಳಿಗೆ ಅವಕಾಶವಿದ್ದಿತಾದರೂ ಸುಬ್ಬಣ್ಣನವರ ಘನತೆ, ಗೌರವಗಳಿಗೆ ಅದು ತಕ್ಕದಾಗಿರಲಿಲ್ಲ. ಆದ್ದರಿಂದ ಅವರು ತಮ್ಮ ಮಗನನ್ನು ಹತ್ತಿರದ ಬಂಧುಗಳಾದ ಶ್ರೀಕಂಠದೀಕ್ಷಿತರ ಮನೆಯಲ್ಲಿ ಬಿಟ್ಟರು. ಶ್ರೀಕಂಠದೀಕ್ಷಿತರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳುವುದು ಇಲ್ಲಿ ಅತ್ಯಗತ್ಯವೆನಿಸುತ್ತದೆ. ಏಕೆಂದರೆ ವೆಂಕಣ್ಣಯ್ಯನವರ ಬಾಳಿನ ಮೇಲೆ ದೀಕ್ಷಿತರ ಪ್ರಭಾವ ಸಾಕಷ್ಟು ಬಿದ್ದಿದೆ ಎನಿಸುತ್ತದೆ. ಚಳ್ಳಕೆರೆಗೆ ನಾಲ್ಕು ಮೈಲಿ ದೂರವಿದ್ದ ಹೊಟ್ಟೆಯಪ್ಪನ ಹಳ್ಳಿ ಎಂಬ ಕುಗ್ರಾಮದಲ್ಲಿ ಪಟೇಲರಾಗಿದ್ದರು ದೀಕ್ಷಿತರು. ಭೂಮಿ-ಕಾಣಿಯಿಂದ ಮನೆಗೆ ಸಾಕಾಗುವಷ್ಟು ಭತ್ತ ಬರುತ್ತಿತ್ತು. ಪಟೇಲರಾಗಿ ವರುಷಕ್ಕೆ 60 ರೂಪಾಯಿಗಳ ಪೋಟಿಗೆ ಬರುತ್ತಿತ್ತು. ಇದರಿಂದ ಅವರು ತೃಪ್ತರಾಗಿದ್ದರು. ತಮ್ಮ ಉದ್ಯೋಗದಲ್ಲಿ ಅವರು ಎಷ್ಟು ದಕ್ಷರಾಗಿದ್ದರೆಂದರೆ ಇಡೀ ಚಳ್ಳಕೆರೆಯ ತಾಲ್ಲೂಕಿನಲ್ಲಿ ಕಂದಾಯದ ಹಣವನ್ನು ಕಟ್ಟುವುದರಲ್ಲಿ ಅವರು ಮೊದಲಿಗರಾಗಿದ್ದರು. ಅಲ್ಲಿನ ಶಿರಸ್ತೇದಾರರು ಹೇಳುತ್ತಿದ್ದರು- ‘ಹೊಟ್ಟೆಯಪ್ಪನಹಳ್ಳಿಯ ಇರುಸಾಲಿನ ಹಣ ನಮ್ಮ ಕಛೇರಿಯ ಗಣಪತಿ ಪೂಜೆ. ಅದಾದ ಮೇಲೆಯೇ ಉಳಿದ ಹಳ್ಳಿಗಳ ಕಂದಾಯ ಪಾವತಿ; ಅಷ್ಟೇ ಅಲ್ಲ, ಆ ಹಳ್ಳಿಯದು ಬೇಬಾಕು ಕಂದಾಯ. ಜಮೀನುದಾರನೊಬ್ಬನು ಅನಿವಾರ್ಯವಾದ ಕಾರಣದಿಂದ ಹೊತ್ತಿಗೆ ಸರಿಯಾಗಿ ಹಣ ಕೊಡಲಾರದೆ ಹೋದರೆ, ಅದನ್ನು ಪಟೇಲರೇ ಸಂದಾಯ ಮಾಡುವರು. ಅನುಕೂಲವಾದಾಗ ಬಾಕಿದಾರನಿಂದ ಅವರು ಹಣವನ್ನು ಪಡೆಯುವರು. ಕೆಲಸದಲ್ಲಿ, ವ್ಯವಹಾರದಲ್ಲಿ ಅವರು ತುಂಬ ಕಟ್ಟುನಿಟ್ಟು. ಒಂದು ಬಿಡಿಕಾಸಿನ ವ್ಯತ್ಯಾಸವೂ ಆಗಕೂಡದು. ದೀಕ್ಷಿತರದು ಶುದ್ಧವಾದ ಅಂತಃಕರಣ. ಕನ್ನಡ ಸಂಸ್ಕೃತಗಳೆರಡರಲ್ಲಿ ಅಪಾರವಾದ ಪಾಂಡಿತ್ಯ. ಆದರೂ ನಿಗರ್ವಶಿರೋಮಣಿ, ಸಜ್ಜನ, ಸರಸಿ, ವಿನೋದಪ್ರಿಯ. ಆತನ ಬಾಳು ಭಗವದ್ಗೀತೆಗೆ ಬರೆದ ಒಂದು ಟೀಕೆಯಂತಿತ್ತು. ಉದಾರಿಯಾಗಿದ್ದ ಆತನ ಮನೆ ಒಂದು ಅನ್ನಛತ್ರದಂತಿತ್ತು. ನಾರಣಪ್ಪನ ಭಾರತ ಆತನಿಗೆ ವಾಚೋವಿಧೇಯವಾಗಿತ್ತು. ಊಟ ಮಾಡಿ, ತಾಂಬೂಲವನ್ನು ಸವಿಯುತ್ತ ತಮ್ಮ ಮಗಳು ಲಕ್ಷ್ಮಿಯನ್ನು ಕರೆದು ಭಾರತವನ್ನು ಓದುವಂತೆ ಹೇಳುವರು. ಆಕೆ ತನ್ನ ಮಧುರ ಕಂಠಧ್ವನಿಯಿಂದ 234 ಮೂರು ತಲೆಮಾರು ಷಟ್ಪದಿಗಳನ್ನು ತುಂಬುರುಗಾನದಂತೆ ಹಾಡುವಳು. ಜನಪ್ರಿಯರಾದ ದೀಕ್ಷಿತರಿಗೆ ಸಾಕಷ್ಟು ಜನ ಶಿಷ್ಯರಿದ್ದರು. ಭಾರತವನ್ನು ಕೇಳಲೆಂದೇ ಅವರು ಗುಂಪುಗುಂಪಾಗಿ ಬಂದು ನೆರೆಯುವರು. ಮಗಳು ಒಂದು ಪದ್ಯ ಹಾಡುತ್ತಲೇ ದೀಕ್ಷಿತರು ಆ ಪದ್ಯದ ಹಿನ್ನೆಲೆಯನ್ನಿಟ್ಟುಕೊಂಡು ಕುಮಾರವ್ಯಾಸನ ಶೈಲಿ, ಪ್ರಾಸದ ಸೊಗಸು, ಪಾತ್ರದ ನಿರೂಪಣೆ, ಸಾಹಿತ್ಯದ ಸೌಂದರ್ಯ ಇತ್ಯಾದಿಗಳೊಡನೆ ತಾತ್ಪರ್ಯವನ್ನು ವಿವರಿಸುತ್ತ ಒಂದು ಸ್ವಪ್ನಲೋಕವನ್ನು ಸೃಷ್ಟಿಸುವರು. ಅವರ ವಿವರಣೆಯನ್ನು ಕೇಳುತ್ತಿರುವವರು ಯಾವುದೋ ದಿವ್ಯಲೋಕದಲ್ಲಿ ಕಣ್ಣೆದುರು ನರ್ತಿಸುವ ರಸಚಿತ್ರದಲ್ಲಿ ಮಗ್ನರಾಗಿ ಮೈಮರೆಯುವರು. ಮೂಲಕ್ಕಿಂತಲೂ ಅವರ ಭಾಷ್ಯ ಹೆಚ್ಚು ರುಚಿಕಟ್ಟಾಗಿರುತ್ತಿತ್ತು. ಅವರ ಮಡದಿ ಸೀತಮ್ಮ ಅನ್ನಪೂರ್ಣೆಯ ಪ್ರತಿರೂಪ. ಬಂದವರಿಗೆ ಅತ್ಯಂತ ಆದರದಿಂದ ಅನ್ನವಿಕ್ಕುವುದು ಆಕೆಯ ಹುಟ್ಟುಗುಣವಾಗಿತ್ತು. ಆದ್ದರಿಂದ ಆ ಮನೆಯಲ್ಲಿ ನಿತ್ಯ ದಾಸೋಹ ತಪ್ಪಿದುದಲ್ಲ. ವೆಂಕಣ್ಣಯ್ಯನಿಗೆ ಈ ದೊಡ್ಡಪ್ಪನ ಮನೆ ತತ್ಕಾಲಕ್ಕೆ ಆಶ್ರಯಸ್ಥಾನವಾಯಿತು. ಶ್ರೀಕಂಠದೀಕ್ಷಿತರ ಅಳಿಯ ಲಕ್ಷ್ಮೀಪತಿರಾಯ. ಲಕ್ಷ್ಮೀಪತಿ ಎಂಬುದು ಆತನ ಅಂಕಿತನಾಮವಾಗಿರುವಂತೆ ಅನ್ವರ್ಥನಾಮವೂ ಆಗಿತ್ತು. ಶ್ರೀಮಂತ ಮನೆತನದಿಂದ ಬಂದಿದ್ದ ಆತ ವಿದ್ಯಾಭ್ಯಾಸಕ್ಕಾಗಿ ಚಳ್ಳಕೆರೆಯಲ್ಲಿ ನಿಲ್ಲಬೇಕಾಗಿತ್ತು. ‘ಶ್ವಶುರಗೃಹ ನಿವಾಸಃ ಸ್ವರ್ಗತುಲ್ಯಂ ನರಾಣಾಂ’- ಮಾವನ ಮನೆಯಲ್ಲಿ ಆ ಸ್ವರ್ಗಸುಖವನ್ನು ಅನುಭವಿಸುತ್ತ ವಿದ್ಯಾಭ್ಯಾಸ ಮಾಡುತ್ತಿದ್ದ ಆತ ಕನ್ನಡ ಮತ್ತು ಇಂಗ್ಲಿಷ್‌ ಲೋಯರ್ ಸೆಕೆಂಡರಿ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದ. ಬರಿಯ ಇಂಗ್ಲಿಷ್‌ ಲೋಯರ್ ಸೆಕೆಂಡರಿಗೆ ಮಾತ್ರ ಓದುತ್ತಿದ್ದ ವೆಂಕಣ್ಣಯ್ಯ ಆತನ ಸಹಪಾಠಿಯಾದ. ಈಗಿನ ಕಾಲದಲ್ಲಿ ಎಂ.ಎ. ಓದುವವರಿಗೂ ಅಂತಹ ಮಹತ್ವವೇನಿಲ್ಲ. ಆದರೆ ಈಗ ಒಂದು ಶತಮಾನದ ಕೆಳಗೆ ಇಂಗ್ಲಿಷ್‌ ಲೋಯರ್ ಸೆಕೆಂಡರಿ ಪರೀಕ್ಷೆ ಎಂಬುದು ಜನ ಸಾಮಾನ್ಯರ ದೃಷ್ಟಿಯಲ್ಲಿ ಮಹತ್ತಾದ ಸಾಧನೆ ಎನಿಸಿತ್ತು. ಇಂಗ್ಲಿಷ್‌ ಓದುತ್ತಿರುವ ಅಳಿಯನ ವಿಚಾರದಲ್ಲಿ ಅಪಾರವಾದ ಆದರವನ್ನು ತಳೆದಿದ್ದ ಅತ್ತೆ ಸೀತಮ್ಮ ಲಕ್ಷ್ಮೀಪತಿಗೆ ವಾರಕ್ಕೊಮ್ಮೆ ತಪ್ಪದೆ ಎಣ್ಣೆಮಜ್ಜನ ಮಾಡಿಸುವಳು. ಆತನ ಊಟ ಉಪಚಾರಗಳಲ್ಲಿ ಅಪಾರವಾದ ಆಸಕ್ತಿಯನ್ನು ವಹಿಸುತ್ತಿದ್ದಳು. ಆ ಅಳಿಯನನ್ನು ಕಂಡರೆ ಆಕೆಗೆ ಅದೆಷ್ಟು ಪ್ರೀತಿ! ಅದೆಷ್ಟು ಗೌರವ ! ಅದೆಷ್ಟು ಉಪಚಾರ! ದಿನದಿನವೂ ರಾತ್ರಿ ಮಲಗುವ ಮುನ್ನ ಹಣ್ಣು- ಹಾಲುಗಳ ನಿವೇದನೆಯಾಗಬೇಕು ಆತನಿಗೆ. ಇದಕ್ಕೆ ತಕ್ಕಂತೆ ಆತನಿಗೆ ಓದಿನಲ್ಲಿ ಬಾಲ್ಯ ಮತ್ತು ವಿದ್ಯಾಭ್ಯಾಸ 235 ಎಷ್ಟು ಆಸಕ್ತಿ, ಏನು ಕಥೆ! ಪುಸ್ತಕವನ್ನು ಕೈಲಿ ಹಿಡಿದು ಗಂಭೀರ ಧ್ವನಿಯಿಂದ ಓದುತ್ತಾ ಕುಳಿತನೆಂದರೆ ಊಟಕ್ಕಾಗಿ ಮನೆಯವರು ನಾಲ್ಕು ಬಾರಿ ಬೇಡಿಕೊಂಡರೂ ಅದರತ್ತ ಗಮನವಿಲ್ಲ. ಸುಂದರಿಯಾದ ಮಡದಿ ಲಕ್ಷ್ಮಿ ನಾಚಿಕೆಯಿಂದ ಮುಗುಳ್ನಗೆ ಸೂಸುತ್ತ, ಘಮಘಮಿಸುವ ಹಾಲಿನ ಬಟ್ಟಲನ್ನು ಮೇಜಿನ ಮೇಲೆ ತಂದಿಟ್ಟಾಗಲೂ ಆತನ ದೃಷ್ಟಿ ಚಂಚಲವಾಗುತ್ತಿರಲಿಲ್ಲ. ಓದಿನಲ್ಲಿ ಆತನಿಗೆ ಅಷ್ಟು ಆಸಕ್ತಿ! ಸದಾ ‘ಪುಸ್ತಕಂ ಹಸ್ತಭೂಷಣಂ’. ಶ್ರೀಮಂತನಾದುದರಿಂದ ಆತನಿಗೆ ಯಾವ ಅನುಕೂಲಕ್ಕೂ ಕೊರತೆ ಇರಲಿಲ್ಲ. ಓದುವುದಕ್ಕೆಂದೇ ಒಂದು ಪ್ರತ್ಯೇಕವಾದ ಆರಾಮ ಕುರ್ಚಿ, ಬರೆಯಲು ಸೊಗಸಾದ ಮೇಜು, ಕುರ್ಚಿ, ಮಲಗಲು ಪಲ್ಲಂಕದ ಮೇಲೆ ಮೆತ್ತನೆಯ ಸುಪ್ಪತ್ತಿಗೆ. ವೆಂಕಣ್ಣಯ್ಯನಿಗೆ ಈ ಬಗೆಯಾದ ಸೌಖ್ಯ, ಅಟ್ಟಹಾಸ ಆಗ ಇರಲಿ, ಮುಂದೆ ಪ್ರಾಧ್ಯಾಪಕನಾಗಿ ಜಗದ್ವಿಖ್ಯಾತನಾದಾಗಲೂ ದೊರೆಯಲಿಲ್ಲವೆಂದು ತೋರುತ್ತದೆ. ಆಗಂತೂ ಕೆಳಗಡೆ ನೆಲದ ಮೇಲೆ ಒಂದು ಈಚಲು ಚಾಪೆಯನ್ನು ಹಾಸಿಕೊಂಡು ತನ್ನ ಅಜ್ಜಿ ಹೊಲಿದುಕೊಟ್ಟಿದ್ದ ಬೊಂತೆ ಹೊದಿಕೆಗಳ ಸುರುಳಿಯ ಮೇಲೆ ಮೈಚೆಲ್ಲಿ ಯಾವುದಾದರೊಂದು ಕಥೆಪುಸ್ತಕವನ್ನು ಓದುವುದರಲ್ಲಿ ತಲ್ಲೀನನಾಗಿರುತ್ತಿದ್ದ. ಆತನಿಗಿಂತ ಆರು ವರ್ಷ ಹಿರಿಯನಾದ ಲಕ್ಷ್ಮೀಪತಿ ಇದನ್ನು ಕಂಡು ಕೆಕ್ಕರಗಣ್ಣಿನಿಂದ ನೋಡುತ್ತ ‘ಎಲೋ ವೆಂಕಣ್ಣಯ್ಯ! ನೀನು ಪಠ್ಯಪುಸ್ತಕವನ್ನು ಕೈಲಿ ಹಿಡಿದಿದ್ದೇ ನಾನು ಕಾಣೆನಲ್ಲ ! ಯಾವಾಗ ನೋಡಿದರೂ ಯಾವುದೋ ಒಂದು ಹಾಳುಮೂಳನ್ನು ಓದಿಕೊಂಡು ಕಾಲ ಕಳೆಯುವೆಯಲ್ಲ! ನಾಳೆ ಪರೀಕ್ಷೆಯಲ್ಲಿ ನಿನ್ನ ಗತಿ ಏನು?’ ಎಂದು ಗದರಿಸುವ. ಆಗ ವೆಂಕಣ್ಣಯ್ಯ ಹಲ್ಲು ಕಿರಿಯುತ್ತ ‘ಭಾವ! ನೀವು ಎಷ್ಟು ಚೆನ್ನಾಗಿ ಓದುತ್ತೀರಿ? ಅದನ್ನು ಕೇಳಿದರೆ ಸಾಕು, ನನಗೆಲ್ಲವೂ ಮನದಟ್ಟಾಗುತ್ತದೆ’ ಎನ್ನುತ್ತಿದ್ದ. ಅಳಿಯನ ಬುದ್ಧಿವಾದವನ್ನು ಕೇಳಿ ಮನದಲ್ಲಿಯೇ ಮೆಚ್ಚುತ್ತಿದ್ದ ಆತನ ಅತ್ತೆ ‘ಓದಿನಲ್ಲಿ ಆಸಕ್ತಿ ಹುಟ್ಟುವುದಕ್ಕೂ ಪುಣ್ಯ ಮಾಡಿರಬೇಕು. ಈ ಸೋಂಬೇರಿ ಓದಿ ಉದ್ಧಾರವಾದ ಹಾಗೆಯೇ. ನೋಡು ಅಜಗರದ ಹಾಗೆ ಬಿದ್ದುಕೊಂಡು ಓದುತ್ತಿದ್ದಾನಲ್ಲ! ಇವನಿಗೆ ಸರಸ್ವತಿ ಒಲಿಯುತ್ತಾಳೆಯೆ?’ ಎಂದು ಹಿಂದೆ ಮುಂದೆ ಛೀಮಾರಿ ಮಾಡುತ್ತಿದ್ದರು. ವೆಂಕಣ್ಣಯ್ಯ ಅದನ್ನೆಲ್ಲ ಕೇಳಿಯೂ ಕೇಳದವನಂತೆ ಹಾಯಗಿರುತ್ತಿದ್ದ. ಹೀಗೆ ಎರಡು ವರ್ಷಗಳು ಮಂದವಾಗಿ ಉರುಳಿಹೋದುವು. ಪರೀಕ್ಷೆಯ ಭೂತ ಪ್ರತ್ಯಕ್ಷವಾಯಿತು. ವೆಂಕಣ್ಣಯ್ಯ ಭಾವನೊಡನೆ ಪರೀಕ್ಷಾಕೊಠಡಿಯನ್ನು ಪ್ರವೇಶಿಸಿದ. ಅಲ್ಲಿ ಕೈಗಿತ್ತ ಪ್ರಶ್ನೆಪತ್ರಿಕೆಗೆ ಪ್ರತ್ಯುತ್ತರಗಳನ್ನು ಬರೆದು ಮುಗಿಸಿ, 236 ಮೂರು ತಲೆಮಾರು ನಿಶ್ಚಿತವಾದ ವೇಳೆಗಿಂತಲೂ ಅರ್ಧಘಂಟೆ ಮುಂಚಿತವಾಗಿ ಪರೀಕ್ಷಾಮಂದಿರದಿಂದ ಹೊರಬಂದ. ಲಕ್ಷ್ಮೀಪತಿ ಭಾವ ಬಾಹ್ಯಪ್ರಜ್ಞೆಯಿಲ್ಲದೆ ಉತ್ತರ ಬರೆಯುವುದರಲ್ಲಿ ತಲ್ಲೀನನಾಗಿದ್ದ. ಆತ ಘಂಟೆಯಾದ ಮೇಲೆ ಉತ್ತರಪತ್ರಿಕೆಯನ್ನು ಕಿತ್ತುಕೊಳ್ಳದ ಹೊರತು ಹೊರಬರುವಂತೆ ಕಾಣಲಿಲ್ಲ. ಆತ ಹೊರಬಂದಾಗ ತಾನೇನಾದರೂ ಕಣ್ಣಿಗೆ ಬಿದ್ದರೆ ಮತ್ತಾವ ಗ್ರಹಚಾರ ವಕ್ರಿಸುತ್ತದೆಯೋ ಎಂದುಕೊಂಡ ವೆಂಕಣ್ಣಯ್ಯ, ದೊಡ್ಡಪ್ಪನ ಮನೆಗೂ ಹೋಗದೆ ನೇರವಾಗಿ ತಳುಕಿನ ಹಾದಿ ಹಿಡಿದ. ಒಂಭತ್ತು ಮೈಲಿ ದೂರವನ್ನು ದಾಪುಗಾಲು ಹಾಕಿಕೊಂಡು ನಡೆದು ಮನೆ ಸೇರಿದ. ಸಾಹಿತ್ಯಪ್ರಿಯರಾದ ಸುಬ್ಬಣ್ಣನವರ ಮನೆ ಒಂದು ಸರಸ್ವತಿ ಮಂದಿರ. ಆಗ ಪ್ರಕಟವಾಗುತ್ತಿದ್ದ ಪುಸ್ತಕಗಳೆಲ್ಲವೂ ಅಲ್ಲಿ ಸಂಗ್ರಹವಾಗಿತ್ತು. ವೆಂಕಣ್ಣಯ್ಯ ಬೇಸಿಗೆಯ ರಜೆ ಮುಗಿಯುವಷ್ಟರಲ್ಲಿ ಸುಬ್ಬಣ್ಣನವರ ಗ್ರಂಥಭಂಡಾರವನ್ನೆಲ್ಲ ಸೂರೆಮಾಡಿದ. ತಂದೆ ಕವಿ, ಒಳ್ಳೆಯ ಮೇಧಾವಿ. ಚತುರ, ಮಾತುಗಾರ, ಹತ್ತು ಜನಕ್ಕೆ ಬೇಕಾದವರು. ಆದ್ದರಿಂದ ಊರಿನ ತಲೆಯಾಳುಗಳೆಲ್ಲ ಪ್ರತಿದಿನವೂ ಅವರ ಮನೆಯಲ್ಲಿ ನೆರೆಯುವ ಪದ್ಧತಿ. ಸುಬ್ಬಣ್ಣನವರು ಅವರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತ ಕುಳಿತಿರುವರು. ವೆಂಕಣ್ಣಯ್ಯನಿಗೆ ಇದೊಂದು ಶಿಕ್ಷಣಕ್ಷೇತ್ರವಾಗಿತ್ತು. ರಸಿಕ ರಸಜೀವಿಗಳಾದ ಸುಬ್ಬಣ್ಣನವರ ಸಾರಸ್ವತ ಹಬ್ಬದಿಂದ ವೆಂಕಣ್ಣಯ್ಯ ಎಂದೂ ವಂಚಿತನಾಗಲಿಲ್ಲ. ಆತನ ಶಬ್ದಕೋಶ, ಭಾವಕೋಶಗಳು ದಿನದಿನಕ್ಕೂ ಶ್ರೀಮಂತವಾಗುತ್ತಿದ್ದವು. ಸಂಜೆಯ ವೇಳೆ ತಂದೆ ಜಮೀನಿನತ್ತ ಹೋದಾಗ, ತಾಯಿ ಲಕ್ಷ್ಮೀದೇವಮ್ಮ ಮಹಿಳಾ ದರ್ಬಾರನ್ನು ನಡೆಸುತ್ತಿದ್ದರು. ಊರಿನ ಹೆಣ್ಣು ಮಕ್ಕಳೆಲ್ಲರೂ ಅಲ್ಲಿ ಸೇರುವರು. ಲಕ್ಷ್ಮೀದೇವಮ್ಮ ಕುಮಾರವ್ಯಾಸ ಭಾರತವನ್ನೋ, ತೊರವೆ ರಾಮಾಯಣವನ್ನೋ ಓದಿ ಅರ್ಥ ಹೇಳುವರು. ವೆಂಕಣ್ಣಯ್ಯ ಇಲ್ಲಿಯೂ ಹಾಜರು. ಸುಶ್ರಾವ್ಯವಾದ ಆಕೆಯ ಕಾವ್ಯವಾಚನ ಆತನ ಸಾಹಿತ್ಯಾಸಕ್ತಿಯನ್ನು ಬೆಳೆಸುವುದು. ಸುಬ್ಬಣ್ಣನವರ ಗುರು, ಗೋವಿಂದಜ್ಜ ಸುತ್ತಮುತ್ತಲಿನ ಹತ್ತು ಹಳ್ಳಿಗೆ ಮಹಾಪಂಡಿತರೆಂದು ಪ್ರಸಿದ್ಧರಾಗಿದ್ದವರು. ಅವರಿಗೆ ಜೈಮಿನಿಭಾರತವೆಂದರೆ ಪಂಚಪ್ರಾಣ. ಸಂಜೆಯಾದ ಮೇಲೆ ಅವರು ಅದನ್ನು ತಮ್ಮ ಮನೆಯಲ್ಲಿ ಓದಿ ಅರ್ಥ ಹೇಳುವರು. ಈ ಕಾವ್ಯಪ್ರಪಂಚಕ್ಕೆ ಊರಿನ ವಯೋವೃದ್ಧರೆಲ್ಲರೂ ಬಂದು ಸೇರುವರು. ಈ ವೃದ್ಧರ ಮಧ್ಯದಲ್ಲಿ ಬಾಲಕನಾದ ವೆಂಕಣ್ಣಯ್ಯನೂ ಸೇರಿಕೊಳ್ಳುತ್ತಿದ್ದ. ಗೋವಿಂದಜ್ಜ ಒಮ್ಮೊಮ್ಮೆ ಈ ಹುಡುಗನ ಕೈಲೂ ಅದನ್ನು ಓದಿಸುವರು. ತಪ್ಪಿದಾಗ ಅವನನ್ನು ತಿದ್ದುವರು. ತಾಯಿಯನ್ನು ಅನುಕರಿಸಿ ರಾಗರಾಗವಾಗಿ ಹಾಡುತ್ತಿದ್ದ ಅವನ ಬೆನ್ನನ್ನು ಚಪ್ಪರಿಸಿ ಬಾಲ್ಯ ಮತ್ತು ವಿದ್ಯಾಭ್ಯಾಸ 237 ಪ್ರೋತ್ಸಾಹಿಸುವರು. ವೆಂಕಣ್ಣಯ್ಯನಿಗೆ ಆಟಪಾಠಗಳಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಸಾಹಿತ್ಯದ ವಾತಾವರಣದಲ್ಲಿಯೇ ಆತನ ಕಾಲವೆಲ್ಲ ಕಳೆದು ಹೋಗುತ್ತಿತ್ತು. ಬೇಸಗೆಯ ರಜ ಮುಗಿಯಿತು. ಪರೀಕ್ಷೆಯ ಫಲಿತಾಂಶ ಹೊರಬಿತ್ತು. ವೆಂಕಣ್ಣಯ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ. ಭಾವ ಲಕ್ಷ್ಮೀಪತಿ ಲಗಾಟ ಹೊಡೆದಿದ್ದ. ಈ ಅಚ್ಚರಿಯನ್ನು ನೋಡಿ ಆತನ ಅತ್ತೆ ‘ಪರೀಕ್ಷೆ ಎಂಬುದು ಒಂದು ಅದೃಷ್ಟ’ ಎಂದು ಉದ್ಗರಿಸಿದರು. ಆ ಅದೃಷ್ಟ ಲಕ್ಷ್ಮೀಪತಿಭಾವನಿಗೆ ಕೊನೆಯವರೆಗೂ ಖುಲಾಯಿಸಲಿಲ್ಲ. ಲಕ್ಷ್ಮೀ-ಸರಸ್ವತಿಯರು ಅತ್ತೆ- ಸೊಸೆಯರಲ್ಲವೆ? ವೆಂಕಣ್ಣಯ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದುದರಿಂದ ಆತನ ಮನೆಯವರೆಲ್ಲರೂ ಸಂತೋಷಸಾಗರದಲ್ಲಿ ಮುಳುಗಿ ತೇಲಿದರು. ಅಜ್ಜಿ ಹನುಮಕ್ಕಮ್ಮ ಅದ್ಧೂರಿಯಾಗಿ ಸತ್ಯನಾರಾಯಣವ್ರತವನ್ನು ಮಾಡಿಸಿ, ಮೊಮ್ಮಗನನ್ನು ದೇವರ ಮುಂದೆ ಅಡ್ಡಬೀಳಿಸಿದಳು. ತಾಯಿ ಲಕ್ಷ್ಮೀದೇವಮ್ಮ ಮಗನನ್ನು ಹತ್ತಿರಕ್ಕೆ ಕರೆದೊಯ್ದು, ತಲೆಯ ಮೇಲೆ ಕೈಯಾಡಿಸಿ, ‘ಎಲಾಪುಟ್ಟ, ನೀನು ಒಂದು ದಿನವೂ ಓದುತ್ತಲೇ ಇರಲಿಲ್ಲವಂತೆ! ನೀನು ಹೇಗೆ ತೇರ್ಗಡೆಯಾದೆಯೋ? ನಿಮ್ಮ ಭಾವ ಹಗಲು ರಾತ್ರಿ ಓದಿದರೂ ಏಕೆ ತೇರ್ಗಡೆಯಾಗಲಿಲ್ಲ?’ ಎಂದು ಕೇಳಿದರು. ಆಗ ವೆಂಕಣ್ಣಯ್ಯ ‘ಅಮ್ಮ, ಭಾವ ಸುಮ್ಮನೆ ಓದುತ್ತಿದ್ದರು. ಅವರು ಓದಿದುದನ್ನು ನಾನು ಅರ್ಥ ಮಾಡಿಕೊಳ್ಳುತ್ತಿದ್ದೆ’ ಎಂದ. ಆ ಮಾತನ್ನು ಕೇಳಿ ತಾಯಿ ಹಿರಿಹಿರಿ ಹಿಗ್ಗಿದಳು. ಆತನ ಅಜ್ಜಿಯ ಕಿವಿಗಂತೂ ಆ ಮಾತು ದೈವದ ಕಣಿಯಂತೆ ಭಾಸವಾಯಿತು. ಮೊಮ್ಮಗ ಪರೀಕ್ಷೆಯಲ್ಲಿ ಜಯಭೇರಿ ಹೊಡೆದುದನ್ನು ಕಂಡು ಅಜ್ಜಿ ಹನುಮಕ್ಕಮ್ಮನಿಗೆ ಮರಿಮಗನನ್ನು ಕಾಣುವ ಸ್ಫೂರ್ತಿ ಹುಟ್ಟಿತು. ಬೆಳೆದು ನಿಂತಿರುವ ತಮ್ಮ ಮೊಮ್ಮಗನಿಗೆ ಬೇಗ ಮದುವೆ ಮಾಡುವಂತೆ ಮಗನಿಗೆ ದುಂಬಾಲು ಬಿದ್ದರು, ಅವರು. ಮಾತೃವಾಕ್ಯಪರಿಪಾಲನಾಧುರಂಧರನಾದ ಸುಬ್ಬಣ್ಣ ಒಡನೆಯೇ ಹೆಣ್ಣನ್ನು ಅರಸಹೊರಟ. ತನ್ನ ಹೆಂಡತಿಯ ಅಣ್ಣ ನರಹರಿಶಾಸ್ತ್ರಿಗಳ ಹಿರಿಯ ಮಗಳು ಭಾಗೀರತಿ ಆಗ ತಾನೆ ಏಳುವರ್ಷ ತುಂಬಿ ಎಂಟರಲ್ಲಿ ಕಾಲಿಟ್ಟಿದ್ದಳು. ಆಕೆ ಅಷ್ಟೇನೂ ಚೆಲುವೆಯಲ್ಲ. ಹಾಡು - ಹಸೆಗಳಲ್ಲಿಯೂ ಪ್ರವೀಣಳಲ್ಲ, ಏನೂ ಓದಿರಲಿಲ್ಲ. ಆದರೇನು? ಓದಿ ಏನು ಸರ್ಕಾರಿ ನೌಕರಿಗೆ ಹೋಗ ಬೇಕೆ? ಸೌಂದರ್ಯವೇಕೆ? ಅದನ್ನೇನು ಅರೆದುಕೊಂಡು ಕುಡಿಯಬೇಕೆ? ಅವಳೇನು ವೇಶ್ಯೆಯೆ? ಇದು ಅಜ್ಜಿಯ ವಾದ. ಅಡಿಗೆ, ಕಸ - ಮುಸುರೆಗಳಲ್ಲಿ ಜಾಣೆಯಾಗಿದ್ದರೆ ಸಾಕು. ಭಾಗೀರತಮ್ಮ ಒಳ್ಳೆಯ ಮನೆತನಕ್ಕೆ ಸೇರಿದವಳು. ಅಣ್ಣ ವೈದಿಕಬ್ರಾಹ್ಮಣ. 238 ಮೂರು ತಲೆಮಾರು ಅಡಿಗೆ, ಕಸಮುಸರೆ, ಮನೆಗೆಲಸಗಳಲ್ಲಿ ಜಾಣೆಯಾಗಿದ್ದಾಳೆ. ಸೋದರಿಕೆಯಲ್ಲಿ ಯಾವುದು ತಾನೆ ಬೇಕು? ಹಸುವಿನಿಂದ ಹಾಲು ಕರೆಯಬಲ್ಲಳು, ಹಾಲು - ಹಯನನ್ನು ನೋಡಿಕೊಳ್ಳಬಲ್ಲಳು. ಇಂತಹ ಜಾಣ ಹುಡುಗಿಯನ್ನು ಕೈಹಿಡಿಯಬೇಕಾಗಿದ್ದರೆ ಪುಣ್ಯಮಾಡಿರಬೇಕು - ಇದು ಅಜ್ಜಿಯ ನಿರ್ಣಯ. ಈ ನಿರ್ಣಯವನ್ನು ಹೊತ್ತು ಆಚರಿಸಲು ಇಂಗ್ಲಿಷ್‌ ಓದಿದ ವೆಂಕಣ್ಣಯ್ಯನಂತಹ ಜಾಣಹುಡುಗ ಸಿಕ್ಕಿಬಿಟ್ಟನಲ್ಲಾ ಎಂದು ನರಹರಿಶಾಸ್ತ್ರಿಗಳಿಗೂ ಸಂತೋಷವಾಯಿತು. ಬಂಧು - ಬಳಗದವರು. ನೆರೆಹೊರೆಯವರು ಸೇರಿ ಎಂಡು ದಿನಗಳ ವಿವಾಹ ಮಹೋತ್ಸವವನ್ನು ಸಾಂಗವಾಗಿ ನೆರವೇರಿಸಿದುದಾಯಿತು. ‘ವಿವಾಹಂ ವಿದ್ಯನಾಶಾಯ’ ಎಂಬ ಸೂಕ್ತಿ ವೆಂಕಣ್ಣಯ್ಯನಿಗೆ ಅನ್ವಯವಾಗಲಿಲ್ಲ. ಸುಬ್ಬಣ್ಣನವರು ಮಗನನ್ನು ಮುಂದಕ್ಕೆ ಓದಿಸಬೇಕೆಂದು ನಿರ್ಧರಿಸಿದ್ದರು. ಅವರಿಗಿಂತಲೂ ಹೆಚ್ಚಾಗಿ ಅವರ ತಮ್ಮ ಶ್ರೀನಿವಾಸರಾಯ ವೆಂಕಣ್ಣಯ್ಯನನ್ನು ಹೇಗಾದರೂ ಮಾಡಿ ಪದವೀಧರನನ್ನಾಗಿ ಮಾಡಬೇಕೆಂದು ಸಂಕಲ್ಪಸಿದರು. ಪಾಪ, ಅವರು ಪದವೀಧರರಾಗಬೇಕೆಂದು ತುಂಬ ಆಸೆಯಿಂದ ಇದ್ದರು. ಅದಕ್ಕಾಗಿ ಪ್ರಯಾಸಪಟ್ಟು ವಿಫಲರಾಗಿದ್ದರು. ಹನ್ನೆರಡು ರೂಪಾಯಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಲೆ ಎಂಟ್ರೆನ್ಸ್‌ ತರಗತಿಗೆ ಸೇರಬೇಕೆಂದು ಮದ್ರಾಸಿಗೆ ಹೋಗಿದ್ದರು. ಅಲ್ಲಿನ ಕ್ರಿಶ್ಚಿಯನ್ ಕಾಲೇಜಿಗೆ ಸೇರಿ ಹಗಲಿರುಳೂ ಅಭ್ಯಾಸಮಾಡಿ ಪರೀಕ್ಷೆಗೆ ಕಟ್ಟಿದ್ದರು. ಅದು ದಕ್ಕಲಿಲ್ಲ. ಮತ್ತೆ ಮತ್ತೆ ಮೂರು ಬಾರಿ ಪ್ರಯತ್ನಿಸಿದರೂ ನಿಷ್ಪಲವಾಯಿತು. ಆತ ನಿರಾಶೆಯಿಂದ ಸರ್ಕಾರಿ ನೌಕರಿಗೆ ಸೇರಿಕೊಂಡಿದ್ದರು. ತನಗೆ ಸಾಧ್ಯವಾಗದುದು ವೆಂಕಣ್ಣಯ್ಯನಿಗಾದರೂ ಸಾಧ್ಯವಾಗಲೆಂದು ಅವರು ಬಯಸಿದ್ದರು. ಅವರು ಅಣ್ಣನೊಡನೆ ‘ವೆಂಕಣ್ಣಯ್ಯ ಮುಂದಕ್ಕೆ ಓದಲೇಬೇಕು. ಬಿ. ಎ. ಪದವಿಯನ್ನು ಪಡೆಯಲೇಬೇಕು. ನಿನಗೆ ಓದಿಸಲಾಗದಿದ್ದರೆ ನಾನು ಅವನನ್ನು ಓದಿಸುತ್ತೇನೆ’. ಎಂದು ಹಟಹಿಡಿದರು. ಸುಬ್ಬಣ್ಣನವರಿಗೆ ಮಗ ಮುಂದಕ್ಕೆ ಓದಬಾರದೆಂದೇನೂ ಇರಲಿಲ್ಲ. ಆದರೆ ಹಾಗೆ ಓದಿಸಲು ಅವನನ್ನು ಇಪ್ಪತ್ತೇಳು ಮೈಲಿ ದೂರದಲ್ಲಿರುವ ಚಿತ್ರದುರ್ಗಕ್ಕೆ ಕಳುಹಿಸಬೇಕು. ಅಲ್ಲಿ ಅವನ ಅಶನ - ವಸನಗಳಿಗಾಗಿ ಪ್ರತ್ಯೇಕವಾದ ಒಂದು ಸಂಸಾರವನ್ನೇ ಹೂಡಬೇಕು. ಮೊಮ್ಮಗನನ್ನು ಏಕಾಕಿಯಾಗಿ ಬಿಡಲು ಅಜ್ಜಿ ಹನುಮಕ್ಕಮ್ಮ ಒಪ್ಪುವುದಿಲ್ಲ. ತಾನೂ ಅವನ ಜೊತೆಗೆ ಹೋಗಿ ಅವನ ಅಡಿಗೆ, ಆರೈಕೆಗಳನ್ನು ನೋಡಿಕೊಳ್ಳುವುದಾಗಿ ಹಟ ಹಿಡಿದಳು. ಸುಬ್ಬಣ್ಣನವರಿಗೆ ಇದೊಂದು ನುಂಗಲಾರದ ತುತ್ತಾಗಿತ್ತು. ಆದರೆ ಈ ದೊಡ್ಡ ಸಮಸ್ಯೆ ಅತ್ಯಂತ ಸುಲಭವಾಗಿಯೇ ಬಗೆಹರಿಯಿತು. ಬಾಲ್ಯ ಮತ್ತು ವಿದ್ಯಾಭ್ಯಾಸ 239 ಸುಬ್ಬಣ್ಣನವರ ಭಾವ ಸುಬ್ಬರಾಯರು ತಮ್ಮ ಮಗ ತಿರುಮಲರಾಯನನ್ನು ಚಿತ್ರದುರ್ಗದ ಹೈಸ್ಕೂಲಿಗೆ ಸೇರಬೇಕೆಂದು ಬಯಸಿದರು. ಅವರು ಮೂರು ಹಳ್ಳಿಗಳ ಶಾನಭೋಗರು. ಸಾಕಷ್ಟು ಶ್ರೀಮಂತರು. ಚಿತ್ರದುರ್ಗದಲ್ಲಿ ಮನೆಮಾಡಿ ಮಗನನ್ನು ಓದಿಸಲು ಸಿದ್ಧರಾಗಿದ್ದರು. ಆದರೆ ಇದ್ದ ಒಬ್ಬನೇ ಮಗನನ್ನು ಒಂಟಿಯಾಗಿ ಬಿಡಲು ಅವರ ಮನಸ್ಸು ಹಿಂಜರಿಯುತ್ತಿತ್ತು. ಅವರು ಏನು ಮಾಡಬೇಕೆಂದು ಚಿಂತಾಮಗ್ನರಾಗಿದ್ದಾಗ ವೆಂಕಣ್ಣಯ್ಯನೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೈಸ್ಕೂಲಿಗೆ ಸೇರಲು ಸಿದ್ಧನಾಗಿರುವ ಸಂಗತಿ ತಿಳಿದುಬಂತು. ಒಡನೆಯೇ ಅವರು ಸುಬ್ಬಣ್ಣನವರಿಗೆ ಪತ್ರ ಬರೆದು ವೆಂಕಣ್ಣಯ್ಯನನ್ನು ತಮ್ಮ ಮಗನ ಜೊತೆಗೆ ಬಿಡಬೇಕೆಂದು ಕೇಳಿಕೊಂಡರು. ಇದರಿಂದ ಸುಬ್ಬಣ್ಣನವರ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಅವರು ಸಂತೋಷದಿಂದ ಒಪ್ಪಿಕೊಂಡರು. ಸುಬ್ಬರಾಯರು ಚಿತ್ರದುರ್ಗದಲ್ಲಿ ಪುಟ್ಟದೊಂದು ಮನೆಯನ್ನು ಒಂದು ರೂಪಾಯಿಗೆ ಬಾಡಿಗೆಗೆ ತೆಗೆದುಕೊಂಡರು. ಸಕಲ ಸಂಭಾರಗಳಿಂದ ಅದನ್ನು ಸಜ್ಜುಗೊಳಿಸಿದ್ದರು. ಅಜ್ಜಿ ಹನುಮಕ್ಕಮ್ಮ ಮೊಮ್ಮಗನನ್ನು ಕರೆದುಕೊಂಡು ಬಂದು ಆ ಮನೆಯ ಯಜಮಾನಿಯಾದಳು. ಆಕೆಯ ಆರೋಗ್ಯ ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. ಮೂರು ತಿಂಗಳು ತುಂಬುವಷ್ಟರಲ್ಲಿ ಆಕೆ ಹಾಸಿಗೆ ಹಿಡಿದು ತಳುಕಿಗೆ ಹಿಂತಿರುಗಬೇಕಾಯಿತು. ಚಿತ್ರದುರ್ಗದಲ್ಲಿ ಭಾವಮೈದುನರಿಬ್ಬರೇ ಅಡುಗೆಮಾಡಿ ಊಟಮಾಡಿಕೊಂಡು ಇರುವಂತಾಯಿತು. ವೆಂಕಣ್ಣಯ್ಯನಿಗೆ ಹೈಸ್ಕೂಲು ವಿದ್ಯಾಭ್ಯಾಸಕ್ಕೂ ಒಬ್ಬ ಸಿಕ್ಕಿದಂತಾಯಿತು. ಆದರೆ ಚಳ್ಳಕೆರೆಯ ಆ ಭಾವನಿಗೂ ಚಿತ್ರದುರ್ಗದ ಈ ಭಾವನಿಗೂ ಅಜಗಜಾಂತರ ವ್ಯತ್ಯಾಸ. ಭಾವಮೈದುನರಿಬ್ಬರೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ಸ್ವಭಾವದವರು. ಆದ್ದರಿಂದ ಈ ಇಬ್ಬರೂ ಹಾಲು - ನೀರಿನಂತೆ ಬೆರೆದು ಒಂದಾಗಿ ಹೋದರು. ವೆಂಕಣ್ಣಯ್ಯನಿಗೆ ಅಡುಗೆ ಮಾಡಲು ಬಾರದು. ಆತ ಕಸಮುಸುರೆ ಮಾಡಿ, ಭಾವನಿಗೆ ಅಡುಗೆ ಮಾಡಲು ಅಣಿಮಾಡಿ ಕೊಡುವನು. ತಿರುಮಲರಾಯ ರಸಕವಳವನ್ನು ಸಿದ್ಧಪಡಿಸುವನು. ಇಬ್ಬರೂ ಜೊತೆಯಲ್ಲಿ ಕುಳಿತು ಪರಸ್ಪರ ಉಪಚಾರ ಮಾಡುತ್ತ ಊಟಮಾಡುವರು. ಜೊತೆಜೊತೆಯಾಗಿಯೇ ಶಾಲೆ ಹೋಗುವರು. ಅಲ್ಲಿಯೂ ಅಕ್ಕಪಕ್ಕದಲ್ಲಿ ಕುಳಿತು ಪಾಠ ಕೇಳುವರು. ಅವರಿಬ್ಬರಿಗೂ ಆಟಪಾಠಗಳಲ್ಲಿ ಆಸಕ್ತಿ ಇರಲಿಲ್ಲ. ಶಾಲೆ ಮುಗಿದೊಡನೆಯೇ ನೇರವಾಗಿ ಮನೆಗೆ ಬಂದು ಊರಿಂದ ತಂದ ಅವಲಕ್ಕಿಯನ್ನೋ, ಅರಳಿಟ್ಟನ್ನೊ ತಿಂದು ಬೆಟ್ಟದ ಕಡೆ ಹೋಗಿ ತಿರುಗಾಡಿಕೊಂಡು ಬಿರುವರು. ಕತ್ತಲೆಯಾಗುತ್ತಲೇ ದೀಪವನ್ನು 240 ಮೂರು ತಲೆಮಾರು ಹಚ್ಚಿಕೊಂಡು ಸಂಧ್ಯಾವಂದನೆ ಮಾಡಿ ಮುಗಿಸಿ ಊಟಮಾಡುವರು. ಆಮೇಲೆ ಓದು. ಇದೊಂದರಲ್ಲಿ ಮಾತ್ರ ಭಾವ-ಮೈದುನರು ಉತ್ತರಧ್ರುವ. ವೆಂಕಣ್ಣಯ್ಯ ಶುದ್ಧ ಸೋಂಭೇರಿ. ಹಾಸಿಗೆಯಲ್ಲಿ ಬಿದ್ದುಕೊಂಡು ‘ಭಾವ, ನೀನು ಗಟ್ಟಿಯಾಗಿ ಓದು. ನಾನದನ್ನು ಕೇಳುತ್ತಿರುತ್ತೇನೆ. ನಾನು ಓದಿಕೊಳ್ಳುವುದಕ್ಕಿಂತಲೂ ನೀನು ಓದುವುದನ್ನು ಕೇಳಿದರೆ ನನಗೆ ಚೆನ್ನಾಗಿ ಮನದಟ್ಟಾಗುತ್ತದೆ’ ಎನ್ನುವನು. ಈ ಹೊಗಳಿಕೆಯ ಮಾತನ್ನು ಕೇಳಿ ಹಿರಿ ಹಿರಿ ಹಿಗ್ಗಿದ ಭಾವ ಪಾಠವನ್ನು ಗಟ್ಟಿಯಾಗಿ ಓದುತ್ತ ಹೋಗುವನು. ವೆಂಕಣ್ಣಯ್ಯ ಅದನ್ನು ಕೇಳುತ್ತ, ಕೇಳುತ್ತ ಹಾಗೆಯೇ ನಿದ್ದೆ ಹೋಗುವನು. ಹೀಗೆ ದಿನಗಳು ಉರುಳಿ ಹೋಗುತ್ತಿದ್ದುವು. ವರ್ಷದ ಕೊನೆಯಲ್ಲಿ ಪರೀಕ್ಷೆ ಬಂದಾಗ ಭಾವ - ಮೈದುನರಿಬ್ಬರೂ ಚೆನ್ನಾಗಿಯೇ ಉತ್ತರ ಬರೆದು ಬಂದರು. ಮೊದಲ ಎರಡು ವರ್ಷಗಳ ತರಗತಿ ಪರೀಕ್ಷೆಯಲ್ಲಿ ಇಬ್ಬರೂ ಜಯಭೇರಿ ಬಾರಿಸಿದರು. ವೆಂಕಣ್ಣಯ್ಯನಿಗೆ 50 ನಂಬರ್ ಬಂದರೆ, ಭಾವನಿಗೆ 45 ನಂಬರ್. ಈ ವ್ಯತ್ಯಾಸವೇನೂ ದೊಡ್ಡದಲ್ಲ. ಆದರೆ ಮೂರನೇ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಮಾತ್ರ ವೆಂಕಣ್ಣಯ್ಯ ತೇರ್ಗಡೆಯಾದ. ಭಾವ ನಪಾಸಾದ. ಆತ ಮತ್ತೆ ಮತ್ತೆ ಪರೀಕ್ಷೆಗೆ ಕುಳಿತನಾದರೂ ಆ ಹಾಳು ಹನ್ನೆರಡು ರೂಪಾಯಿ ಪರೀಕ್ಷೆಯಲ್ಲಿ ಆತ ಕೊನೆಗೂ ತೇರ್ಗಡೆಯಾಗಲಿಲ್ಲ. ಜಿಲ್ಲಾ ಕಛೇರಿಯಲ್ಲಿ ಗುಮಾಸ್ತನಾಗಿ ಸೇರಿಕೊಂಡು ಆತ ಬಾಳನ್ನೆಲ್ಲ ಸವೆಸಿದ. ಪರೀಕ್ಷೆ ಮುಗಿದೊಡನೆಯೇ ಭಾವ-ಮೈದುನರಿಬ್ಬರೂ ತಮ್ಮ ತಮ್ಮ ಊರಿಗೆ ಹಿಂದಿರುಗಿದರು. ಮೂರು ವರ್ಷಗಳು ಕಳೆಯುವಷ್ಟರಲ್ಲಿ ವೆಂಕಣ್ಣಯ್ಯ ಅದೆಷ್ಟು ಬೆಳೆದು ಹೋಗಿದ್ದಾನೆ! ಅಜ್ಜಿ ಮೊಮ್ಮಗನನ್ನು ತಾಳೆಯ ಮರ ಎಂದು ಗೇಲಿ ಮಾಡುವಳು. ಆಗ ಲಕ್ಷ್ಮೀದೇವಮ್ಮ ‘ಅವನೇನು ಸಣ್ಣವನೆ? ಹದಿನೇಳು ವರ್ಷದ ಯುವಕ. ಮುಖದ ಮೇಲಿನ ಚಿಗುರು ಮೀಸೆ ಅವರ ಯೌವನವನ್ನು ಸಾರಿ ಹೇಳುತ್ತಿದೆ’ ಎನ್ನುವಳು. ಆಗ ಹನುಮಕ್ಕಮ್ಮ ಸುಬ್ಬಣ್ಣನಿಗೆ ಬುದ್ಧಿ ಹೇಳಿ ಮೊಮ್ಮಗನ ನಿಷೇಕಪ್ರಸ್ತವನ್ನು ಮಾಡಿ ಮುಗಿಸಿದಳು. ಮರಿಮಗನನ್ನು ಕಾಣಬೇಕೆಂಬ ಆಕೆಯ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ. ಅದು ಆ ಮುಪ್ಪಿನ ಮುದುಕಿಯ ವಿಚಾರಲಹರಿ. ಆದರೆ ಸುಬ್ಬಣ್ಣನವರಿಗೆ ಮಗನನ್ನು ಮುಂದಕ್ಕೆ ಓದಿಸುವುದು ಹೇಗೆ ಎಂಬ ಯೋಚನೆ. ಮುಂದಕ್ಕೆ ಓದಬೇಕಾದರೆ ಅವನು ಬೆಂಗಳೂರಿಗೋ, ಮೈಸೂರಿಗೋ ಹೋಗಬೇಕು. ಆ ಶಹರುಗಳಲ್ಲಿ ಆಗುವ ಖರ್ಚುವೆಚ್ಚಗಳನ್ನು ಸರಿದೂಗಿಸುವುದು ಹೇಗೆ? ಮನೆಯಲ್ಲಿ ನೋಡಿದರೆ ದಿನ ದಿನಕ್ಕೆ ಸಂಸಾರ ಹುಲುಸಾಗಿ ಬೆಳೆಯುತ್ತಿದೆ. ವೆಂಕಣ್ಣಯ್ಯನ ತರುವಾಯ ಮತ್ತೆ ಬಾಲ್ಯ ಮತ್ತು ವಿದ್ಯಾಭ್ಯಾಸ 241 ನಾಲ್ಕು ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ಹಿರಿಯ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ. ಮತ್ತೊಬ್ಬ ಮಗಳು ಮದುವೆಗೆ ಸಿದ್ಧವಾಗಿದ್ದಾಳೆ. ಗಂಡುಮಕ್ಕಳಿಬ್ಬರೂ ಶಾಲೆಗೆ ಸೇರಿದ್ದಾರೆ. ವರ್ಷವರ್ಷವೂ ಬಸಿರು, ಬಾಣಂತಿತನಗಳು. ತಮ್ಮ ಮನೆ ನಂದಗೋಕುಲವಾಗಿರುವುದನ್ನು ಕಂಡು ಸುಬ್ಬಣ್ಣನವರಿಗಿಂತ ಅವರ ತಾಯಿಗೆ ಹಿರಿಹಿರಿ ಹಿಗ್ಗು. ಆದರೆ ಅಷ್ಟು ಜನಕ್ಕೆ ಹೊಟ್ಟೆ ಬಟ್ಟೆಗಳನ್ನು ಒದಗಿಸುವುದು ಅಷ್ಟು ಸುಲಭದ ಕೆಲಸವೆ? ಮನೆಯ ಸ್ಥಿತಿ ಹೀಗಿರುವಾಗ ಮಗನನ್ನು ಶಹರಿಗೆ ಕಳುಹಿಸಿ ಓದಿಸುವುದೆಂದರೆ ಹುಡುಗಾಟವೆ? ಸುಬ್ಬಣ್ಣನವರು ಮುಂದೋರದೆ ತಲೆಯ ಮೇಲೆ ಕೈಹೊತ್ತು ಕುಳಿತಿರುವಾಗ ಇದ್ದಕ್ಕಿದ್ದಂತೆ ಅವರಿಗೆ ಶುಕ್ರಮಹಾದೆಸೆ ತಿರುಗಿದಂತಾಯಿತು. ಶಿವರಾಮಯ್ಯ ಎಂಬುವವರೊಬ್ಬರು ಎಕ್ಸೈಸ್ ಇನ್ಸ್‌ಸ್ಪೆಕ್ಟರಾಗಿ ತಳುಕಿಗೆ ಬಂದರು. ಹೊಸಬರು ಯಾರೇ ಬಂದರೂ ಊರಿಗೆಲ್ಲ ಆಢ್ಯರೆನಿಸಿದ್ದ ಸುಬ್ಬಣ್ಣನವರ ಪರಿಚಯ ಮಾಡಿಕೊಳ್ಳುವುದು ಸಹಜವಾಗಿಯೇ ಇತ್ತು. ಶಿವರಾಮಯ್ಯನವರಿಗೂ ಅವರ ಪರಿಚಯವಾಯಿತು. ಪರಿಚಯ ಸ್ನೇಹವಾಗಿ ಬೆಳೆದು ‘ಒಡಲೆರಡು ಅಸುವೊಂದು’ ಎನ್ನುವಷ್ಟು ಹತ್ತಿರವಾಯಿತು. ಸುಬ್ಬಣ್ಣನವರ ಆರ್ಥಿಕಸ್ಥಿತಿ ಶಿವರಾಮಯ್ಯನವರಿಗೆ ಅರ್ಥವಾಯಿತು. ಅದು ಸುಧಾರಿಸಿ ಮಗನನ್ನು ಮುಂದಕ್ಕೆ ಓದಿಸಲು ತಕ್ಕ ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂಬ ಭಾವನೆ ಅವರ ತಲೆಯನ್ನು ಹೊಕ್ಕಿತು. ಮುನಿಯಪ್ಪ ಚಳ್ಳಕೆರೆಯ ತಾಲ್ಲೂಕಿನಲ್ಲಿ ಸುಪ್ರಸಿದ್ಧನಾಗಿದ್ದ ಟಾಡಿ ಕಂಟ್ರಾಕ್ಟರ್. ಆತ ಶಿವರಾಮಯ್ಯನವರ ಅವಿಚ್ಛಿನ್ನ ಭಕ್ತ. ಶಿವರಾಮಯ್ಯನವರು ಅವನನ್ನು ಏಕಾಂತದಲ್ಲಿ ಕೂರಿಸಿಕೊಂಡು ತಮ್ಮ ಅಭಿಪ್ರಾಯವನ್ನು ಅವನಿಗೆ ತಿಳಿಸಿದರು. ತಳುಕು ಹೋಬಳಿಯ ಸೇಂದಿ ವ್ಯವಹಾರದಲ್ಲಿ ಸುಬ್ಬಣ್ಣನವರನ್ನು ಪಾಲುಗಾರರನ್ನಾಗಿ ಸೇರಿಸಿಕೊಳ್ಳಲು ಅವನನ್ನು ಒಪ್ಪಿಸಿದರು. ಇದರಿಂದ ಸುಬ್ಬಣ್ಣನವರ ಆದಾಯ ಇದ್ದಕ್ಕಿದ್ದಂತೆ ಮೇಲೇರಿತು. ಅವರು ತಮ್ಮ ಇಷ್ಟ ದೈವವಾದ ಶ್ರೀರಾಮನನ್ನು ಮನದಲ್ಲಿಯೇ ಸ್ತುತಿಸುತ್ತ, ಮಗನನ್ನು ಓದಲೆಂದು ಮೈಸೂರಿಗೆ ಬೀಳ್ಕೊಟ್ಟರು. * * * * 242 ಮೂರು ತಲೆಮಾರು 2. ಕಾಲೇಜು ವಿದ್ಯಾಭ್ಯಾಸ ವೆಂಕಣ್ಣಯ್ಯ ಎಫ್.ಎ. ತರಗತಿಗೆ ಸೇರಿದ. ಇತರ ಶ್ರೀಮಂತ ಮಕ್ಕಳಂತೆ ಆತನೂ ಕಾಲೇಜು ಹಾಸ್ಟೆಲ್‍ನಲ್ಲಿ ಊಟ ವಸತಿಗಳಿಗೆ ಏರ್ಪಾಟು ಮಾಡಿಕೊಂಡನು. ತಂದೆ ಕೇಳಿದಷ್ಟು ಹಣವನ್ನು ಕೊಡಬಲ್ಲರೆಂದು ಅವನಿಗೆ ಗೊತ್ತಿತ್ತು. ಆದರೆ ಈ ಶ್ರೀಮಂತಿಕೆ ಅಸ್ಥಿರವಾದುದು ‘ನಾಯ ತಲೆಯ ಮೇಲಿನ ಬುತ್ತಿಯಂತೆ’. ಅದು ಎಂದು ಕಣ್ಮರೆಯಾಗುವುದೊ! ಆದ್ದರಿಂದ ಆತನು ಆದಷ್ಟು ಹಿತಮಿತವಾಗಿಯೇ ತನ್ನ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗುತ್ತಿದ್ದ. ಏನೇ ಆಗಲಿ, ಮಹಾರಾಜಾ ಕಾಲೇಜಿಗೆ ಸೇರಿದ ಮೊದಲ ವರ್ಷ ಆತನ ವಿದ್ಯಾಭ್ಯಾಸ ಜೀವನದಲ್ಲಿ ಅತ್ಯಂತ ಸುಖಮಯವಾದ ಕಾಲವೆಂದು ಹೇಳಬಹುದು. ಆತನು ಅಧ್ಯಾಪಕರ ವಿಶ್ವಾಸಕ್ಕೂ, ಗೆಳೆಯರ ಸ್ನೇಹಕ್ಕೂ ಪಾತ್ರನಾಗಿ ಹಾಡುವ ಹಕ್ಕಿಯಂತೆ ಒಂದು ವರ್ಷವನ್ನು ಹಾಯಾಗಿ ಕಳೆದ. ವರ್ಷದ ಕೊನೆಯಲ್ಲಿ ಪರೀಕ್ಷೆಯಾಗುತ್ತಲೇ ಬೇಸಿಗೆ ರಜೆಯನ್ನು ಕಳೆಯಲು ಊರಿಗೆ ಹಿಂದಿರುಗಿದ. ಕಾಲೇಜಿನಲ್ಲಿ ಓದುತ್ತಿರುವ ಈ ಮಗನನ್ನು ಕಂಡು ತಾಯಿ ತಂದೆಗಳಿಗೆ ಎಲ್ಲಿಲ್ಲದ ಸಂತೋಷ. ಇಡೀ ತಾಲ್ಲೂಕಿನಲ್ಲಿಯೇ ತಮ್ಮ ಮಗನಂತಹ ಮಗ ಮತ್ತಾರಿಗೂ ಇಲ್ಲ ಎಂಬುದು ಆ ದಂಪತಿಗಳ ಹೆಮ್ಮೆ. ಅಜ್ಜಿಯ ಕಣ್ಣುಗಳಿಗಂತೂ ಅವನೊಂದು ಹಬ್ಬ. ತಮ್ಮ ತಂಗಿಯರಿಗೆ ಈ ‘ದೊಡ್ಡಣ್ಣ’ ಒಂದು ಆದರ್ಶ ಮೂರ್ತಿ. ಆತನಿಗೆ ದೊರೆತ ಆದರ-ಗೌರವಗಳೂ ಆತನ ಆರ್ಧಾಂಗಿಗೂ ಅನ್ವಯವಾಗುತ್ತಿತ್ತಲ್ಲವೆ? ಭಾಗೀರತಮ್ಮನಿಗೆ ಒಳಗೊಳಗೇ ಸಂತೋಷದ ಸುಗ್ಗಿ. ನಾದಿನಿಯರು ಆಕೆಯನ್ನು ‘ನಿನ್ನ ಗಂಡ ಕಾಲೇಜಿನಲ್ಲಿ ಓದುತ್ತಾನೆ ಎಂದು ನಿನಗೆ ಬಹಳ ಜಂಭ’ ಎಂದು ಚುಡಾಯಿಸಿದರೆ ಆಕೆಗೆ ಆಗುತ್ತಿದ್ದ ಸಂತೋಷ ಅನಿರ್ವಚನೀಯ. ವೆಂಕಣ್ಣಯ್ಯನ ಹೆಸರು ಹೇಳಿಕೊಂಡು ದಿನಕ್ಕೊಂದು ಬಗೆಯ ಊಟ, ದಿನಕ್ಕೊಂದು ಬಗೆಯ ತಿಂಡಿ ಇಷ್ಟೇ ಅಲ್ಲ, ಪ್ರತಿ ಶನಿವಾರ ಹನುಮಂತರಾಯನ ಗುಡಿಯಲ್ಲಿ ವಿಶೇಷ ಪೂಜೆ. ಅಲ್ಲಿಯೇ ಸಿಹಿ ಅಡುಗೆ, ಸಿಹಿ ಊಟ. ಇವೆಲ್ಲದರ ಮಧ್ಯೆ ಹನುಮಕ್ಕಜ್ಜಿಗೆ ಒಂದು ಸಣ್ಣ ಕೊರತೆ. ಮರಿಮಗ ಯಾವಾಗ ಉದಿಸಿ, ತನಗೆ ಕನಕಾಭಿಷೇಕ ಮಾಡಿಸುವನೋ ಎಂಬ ಚಿಂತೆ. ಕಾಲೇಜು ವಿದ್ಯಾಭ್ಯಾಸ 243 ಒಂದೊಂದು ಸಲ ಭಾಗೀರತಮ್ಮನನ್ನು ಕೆಣಕಿ ಆಕ್ಷೇಪಿಸಿದ್ದೂ ಉಂಟು. ವೆಂಕಣ್ಣಯ್ಯ ಮತ್ತೆ ಮೈಸೂರಿಗೆ ಹಿಂದಿರುಗುವ ದಿನ ಹತ್ತಿರವಾಗುತ್ತ ಬಂದಂತೆ ಹನುಮಕ್ಕಮ್ಮನ ಮನಸ್ಸು ಮುದುಡಿ ಹೋಗುವಂತೆ ಭಾಸವಾಗುತ್ತಿತ್ತು. ಆದರೆ ಈ ಕಾರಣಕ್ಕಾಗಿ ಆತನ ಪ್ರಯಾಣ ನಿಲ್ಲುವುದು ಸಾಧ್ಯವೆ? ನಿರ್ದಿಷ್ಟವಾದ ಒಂದು ದಿನ ಆತ ಎಲ್ಲರಿಂದ ಬೀಳ್ಕೊಂಡು ಮೈಸೂರಿಗೆ ಪ್ರಯಾಣ ಬೆಳೆಸಿದ. ಕುದುರೆ ಏರಿ ಚಳ್ಳಕೆರೆಗೆ ಬಂದವನು ಅಲ್ಲಿಂದ ಟಪಾಲಿನ ಜಟಕಾಗಾಡಿಯಲ್ಲಿ ಚಿತ್ರದುರ್ಗಕ್ಕೂ, ಹೊಳಲ್ಕೆರೆಗೂ ಪ್ರಯಾಣ ಮಾಡಿ ಅಲ್ಲಿಂದ ರೈಲಿನಲ್ಲಿ ಮೈಸೂರಿಗೆ ಬಂದ. ರೈಲಿನಿಂದ ಇಳಿದು ಶಾಪಸಂದ್‍ನಲ್ಲಿ ಹಾಸ್ಟೆಲನ್ನು ಸೇರಿದ. ಎಂದಿನಂತೆ ಆತನ ದಿನಚರಿ ಮೊದಲಾಯಿತು. ಕಾಲೇಜಿಗೆ ಹೋಗಿ ಅಧ್ಯಾಪಕರಿಗೆಲ್ಲ ವಂದನೆ ಮಾಡಿ ‘How do you do?’ಎಂದು ನಗೆಮೊಗದಿಂದ ಅವರು ಪ್ರಶ್ನಿಸಿದಾಗ ‘Thank you Sir’ ಎಂದು ಹೇಳಿದ್ದಾಯಿತು. ಕಾಲ ಉರುಳಿ ವರ್ಷ ಮಧ್ಯದ ಟರ್ಮಿನಲ್ ಪರೀಕ್ಷೆ ಬಂತು. ಆಗ ನಡೆದೊಂದು ಪುಟ್ಟ ಘಟನೆ ವೆಂಕಣ್ಣಯ್ಯನ ಬಾಳಿನಲ್ಲಿ ಒಂದು ಹೊಸ ಅಧ್ಯಾಯವನ್ನೇ ನಿರ್ಮಿಸಿತೆಂದು ತೋರುತ್ತದೆ. ಆತ ಮುಂದೆ ಇದೇ ಕಾಲೇಜಿನಲ್ಲಿ ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕನಾಗಿ ನೇಮಕವಾದಾಗ ಈ ಘಟನೆಯನ್ನು ನೆನೆನೆನೆದು ವಿನೋದಮಿಶ್ರವಾದ ಬಿಸಿಯುಸಿರನ್ನು ಹೊರ ಸೂಸುತ್ತಿದ್ದರು. ಇತರರೆಲ್ಲರಂತೆ ವೆಂಕಣ್ಣಯ್ಯ ಟರ್ಮಿನಲ್ ಪರೀಕ್ಷೆಗೆ ಕೂತು ಎಲ್ಲ ಪ್ರಶ್ನೆ ಪತ್ರಿಕೆಗಳಿಗೂ ಉತ್ತರ ಬರೆದು ಬಂದ. ಗಣಿತ ಪರೀಕ್ಷೆಯ ದಿನ ಮಾತ್ರ ಆತ ಕಾಲೇಜಿಗೆ ಚಕ್ಕರ್ ಹೊಡೆದ. ಇದು ಅಂದಿನ ಪ್ರಾಂಶುಪಾಲರಾಗಿದ್ದ ವಿಯರ್ ಸಾಹೇಬರ ಗಮನಕ್ಕೆ ಬಂತು. ಅವರು ಗಣಿತದ ಪ್ರಾಧ್ಯಾಪಕರೂ ಆಗಿದ್ದರು. ಅಂದಿನ ಕಾಲದಲ್ಲಿ ಲೆಕ್ಕಕ್ಕೆ ಸಿಗದಷ್ಟು ವಿದ್ಯಾರ್ಥಿಗಳು ಇರುತ್ತಿರಲಿಲ್ಲ ವಾದ್ದರಿಂದ ಗಣಿತಕ್ಕೆ ಮಾತ್ರ ಗೈರುಹಾಜರಾದ ವೆಂಕಣ್ಣಯ್ಯ ಸಿಕ್ಕಿಬಿದ್ದ. ವಿಯರ್ ಸಾಹೇಬರಿಗೆ ಇದರಿಂದ ಉದ್ರೇಕವಾಯಿತು. ಅವರು ತಪ್ಪಿತಸ್ಥನನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ‘ಗಣಿತಕ್ಕೆ ನೀನೇಕೆ ಗೈರು ಹಾಜರಾದೆ?’ ಎಂದು ಅವರು ಗರ್ಜಿಸಿ ಕೇಳಿದರು. ಅವರ ಅಬ್ಬರಕ್ಕೆ ವೆಂಕಣ್ಣಯ್ಯ ತಬ್ಬಿಬ್ಬಾದ. ಆತನ ಬಾಯಿಂದ ಅಪ್ರಯತ್ನವಾಗಿಯೇ ಸತ್ಯ ಹೊರಬಿತ್ತು. ‘ಗಣಿತ ನನ್ನ ತಲೆಗೆ ಹಿಡಿಸುವುದಿಲ್ಲ. ಕ್ಷಮಿಸಿ, ಸಾರ್. ಪರೀಕ್ಷೆಗೆ ಕುಳಿತಿದ್ದರೂ ನಾನು ತೇರ್ಗಡೆಯಾಗುತ್ತಿರಲಿಲ್ಲ’ ಎಂದ. ‘ಗಣಿತ ಕಂಡರೆ ನಿನಗೆ ಅಸಹ್ಯವೋ’ ಎಂಬ ಪ್ರಶ್ನೆಗೆ ‘ಹೌದು ಸರ್, ಅದರಲ್ಲಿ ಹೃದ್ಯವಾದುದು ಏನೂ ಇಲ್ಲ’ ಎಂದು ಉತ್ತರಿಸಿದ. ಇದನ್ನು ಕೇಳಿ ಆ ಗಣಿತಾಧ್ಯಾಪಕನ ಪಿತ್ತ ನೆತ್ತಿಗೇರಿತು. ಕೆರಳಿ 244 ಮೂರು ತಲೆಮಾರು ಕೆಂಗೆಂಡವಾದ ವಿಯರ್ ಸಾಹೇಬ ‘ಫೂಲ್, ನೀನು ಉನ್ನತ ಶಿಕ್ಷಣಕ್ಕೆ ಶುದ್ಧ ಅಯೋಗ್ಯ, ನಿನ್ನನ್ನು ಜೂನಿಯರ್ ಎಫ್.ಎ.ಗೆ ಡಿಮೋಟ್ ಮಾಡಿದ್ದೇನೆ. ಇಲ್ಲಿಂದ ಹೊರಟುಹೋಗು’ ಎಂದು ಗರ್ಜಿಸಿದ. ಗಿಲಿಬಿಟ್ಟಿತೆಂದುಕೊಂಡ ವೆಂಕಣ್ಣಯ್ಯ ‘Thank you Sir’ ಎಂದು ಹೇಳಿ ಅಲ್ಲಿಂದ ಹೊರಕ್ಕೆ ಬಂದ. ಕ್ಷಣಕಾಲ ಆತನಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ವಿಯರ್ ಸಾಹೇಬ ಕಟ್ಟುನಿಟ್ಟಾದ ಮನುಷ್ಯ. ಆತ ಮಾತಾಡಿದಂತೆ ಮಾಡುವ ಹಟವಾದಿ. ಮಹಾರಾಜ ಕಾಲೇಜಿನಲ್ಲಿ ತಾನಿನ್ನು ವಿದ್ಯಾಭ್ಯಾಸವನ್ನು ಮುಂದುವರಿಸುವುದೆಂದರೆ ಕೊಳ್ಳಿಯಿಂದ ತಲೆ ಕೆರೆದುಕೊಂಡಂತೆಯೇ ಸರಿ. ಈಗೇನು ಮಾಡಬೇಕು? ವೆಂಕಣ್ಣಯ್ಯನಿಗೆ ಥಟ್ಟನೆ ಏನೋ ಹೊಳೆದಂತಾಯಿತು. ಆತ ಮಿಂಚಿನ ವೇಗದಿಂದ ಕಾಲೇಜು ಕಛೇರಿಗೆ ಹೋಗಿ ಅಪ್ಪಣೆ ಚೀಟಿಯನ್ನು ಪಡೆದುಕೊಂಡ. ಹಾಸ್ಟೆಲ್ಲಿಗೆ ಹೋಗಿ ತಾನು ತೆರಬೇಕಾಗಿದ್ದ ಹಣವನ್ನು ಹಾಸ್ಟೆಲ್ ಕಛೇರಿಗೆ ಸಲ್ಲಿಸಿ, ತನ್ನ ಹಾಸಿಗೆ, ಬಟ್ಟೆ, ಪುಸ್ತಕಗಳೊಡನೆ ರೈಲು ಹತ್ತಿ ಬಳ್ಳಾರಿಗೆ ಹೊರಟುಬಂದ. ಅಲ್ಲಿ ಆತನ ದೂರದ ಬಂಧುವೊಬ್ಬರು ಊರಿನ ಆಢ್ಯರೆನಿಸಿದ್ದರು. ಅವರ ಸಹಾಯದಿಂದ ಅಲ್ಲಿನ ವಾರ್ಡ್‍ಲಾ ಕಾಲೇಜಿಗೆ ಸೇರಿ ತನ್ನ ಶಿಕ್ಷಣವನ್ನು ಮುಂದುವರಿಸಿದ. ದೊಡ್ಡ ಸುಬ್ಬಣ್ಣನವರ ಮಗ ತನ್ನ ಮನೆಯಲ್ಲಿದ್ದು ಕಾಲೇಜು ವಿದ್ಯಾಭ್ಯಾಸವನ್ನು ಮಾಡುತ್ತಿರುವುದೇ ತಮಗೊಂದು ಗೌರವ ಎಂದುಕೊಂಡ ಆ ದೂರದ ಬಂಧು, ವೆಂಕಣ್ಣಯ್ಯನನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಆತನ ಅಶನ- ವಸನಗಳಿಗೂ, ವಿದ್ಯಾಭ್ಯಾಸಕ್ಕೂ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟರು. ವೆಂಕಣ್ಣಯ್ಯ ಆ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾದುದು ಮಾತ್ರವೇ ಅಲ್ಲ, ಆ ಕಾಲದಲ್ಲಿ ವಾಡಿಕೆಯಲ್ಲಿದ್ದ ಬೈಬಲ್ ಪರೀಕ್ಷೆಗೆ ಕುಳಿತು ಪ್ರಥಮ ಸ್ಥಾನವನ್ನು ಗಿಟ್ಟಿಸಿದ. ವಾರ್ಡ್‍ಲಾ ಕಾಲೇಜಿನ ಪ್ರಾಂಶುಪಾಲರು ವೆಂಕಣ್ಣಯ್ಯನನ್ನು ಕರೆಸಿ, ಕೈ ಕುಲುಕಿ, ಕಾಫಿ ಇತ್ತು ಬೈಬಲಿನ ಎರಡು ಸುಂದರ ಸಂಪುಟಗಳನ್ನು ಆತನ ಕೈಲಿಟ್ಟರು. ಆತನನ್ನು ಬೀಳ್ಕೊಡುತ್ತ ಪ್ರಾಂಶುಪಾಲರು ‘ನಿಮ್ಮ ಭವಿಷ್ಯ ಭವ್ಯವಾಗಲಿ’ ಎಂದು ಹರಸಿ ಹಾರೈಸಿದರು. ಪರೀಕ್ಷೆಯಾಗುತ್ತಲೇ ವೆಂಕಣ್ಣಯ್ಯ ಊರಿಗೆ ಹಿಂದಿರುಗಿ ಬಂದ. ಆ ವೇಳೆಗೆ ಸುಬ್ಬಣ್ಣನವರ ಮನೆ ಪುರಂದರದಾಸನ ಮನೆಯಂತಾಗಿತ್ತು. ಸುಬ್ಬಣ್ಣನವರ ಜೀವನದಲ್ಲಿ ಸುಖ, ಸಮೃದ್ಧಿಗಳ ಅಧ್ಯಾಯ ಸುದೀರ್ಘವಾಗಿರುವುದಿಲ್ಲ. ಕಷ್ಟ ಕಾರ್ಪಣ್ಯಗಳ ಅಧ್ಯಾಯವೇ ಸುದೀರ್ಘವಾಗಿ ಬೆಳೆದುಕೊಂಡು ಹೋಗುತ್ತದೆ. ಕನಕಾಭಿಷೇಕಕ್ಕಾಗಿ ಕಾದು ಕುಳಿತಿದ್ದ ಕಾಲೇಜು ವಿದ್ಯಾಭ್ಯಾಸ 245 ಹನುಮ್ಮಕ್ಕಮ್ಮನಿಗೆ ಯಮರಾಜನಿಂದ ಕರೆ ಬಂದಿತು. ‘ಭಾಗೀರತಮ್ಮ ಗರ್ಭಿಣಿಯಾಗಿದ್ದಾಳೆ. ಇನ್ನಾರು ತಿಂಗಳು ಕಾಯಪ್ಪ’-ಅಜ್ಜಿ ಬೇಡಿಕೊಂಡ ಮಾತ್ರಕ್ಕೆ ಯಮನಿಗೆ ಕರುಣೆ ಹುಟ್ಟೀತೆ? ‘ಯಮಸ್ಯ ಕರುಣಾನಾಸ್ತಿ’. ಅವನು ಹಗ್ಗವನ್ನು ಬೀಸಿ ಆಕೆಯ ಕೊರಳಿಗೆ ಹಾಕಿದ. ಬಲವಂತ ಮಾಡಿ ಎಳೆದುಕೊಂಡೇ ಹೋದ. ಸುಬ್ಬಣ್ಣನವರು ಶ್ರೀರಾಮನಂತೆ ಪಿತೃಭಕ್ತಿ ಪರಾಯಣನಾಗಿರಲು ಸಾಧ್ಯವಿರಲಿಲ್ಲ. ಅವರು ಮಾತೃಭಕ್ತಿ ಪರಾಯಣರಾಗಿದ್ದರು. ಆಕೆಯ ಸದ್ಗತಿಗಾಗಿ ಕರ್ಮಕ್ಕೆ ಸ್ವಲ್ಪವೂ ಲೋಪವಿಲ್ಲದಂತೆ, ಪುರೋಹಿತರ ಮನಸ್ಸು ತೃಪ್ತಿಯಾಗುವಂತೆ. ಭೂದಾನ, ಗೋದಾನ, ಸುವರ್ಣದಾನ ಇನ್ನೂ ಏನೇನೋ ಹತ್ತಾರು ದಾನಗಳನ್ನು ಮಾಡಿದರು. ಯಥೇಚ್ಛವಾಗಿ ಅನ್ನದಾನ ಮಾಡಿದರು. ಇದರ ಫಲವಾಗಿ ಸಾಲದ ಭಾರ ಮತ್ತಷ್ಟು ವೃದ್ಧಿಯಾಯಿತು. ಈ ಸನ್ನಿವೇಶದಲ್ಲಿ ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆ ಅವರ ಕಣ್ಣ ಮುಂದೆ ಎದ್ದು ನಿಂತಿತು. ಆದರೆ ಆ ಚಿಂತೆ ಬಹುಬೇಗ ಕಣ್ಮರೆಯಾಯಿತು. ‘ರಾಮುಡುನ್ನಾಡು’ ಎಂಬ ಮಂತ್ರ ಅವರ ಮನಸ್ಸಿನ ಶಾಂತಿಯನ್ನು ಸ್ಥಿರಗೊಳಿಸಿತು. ‘ನಂಬಿ ಕೆಟ್ಟವರಿಲ್ಲವೋ’ ಎಂದು ದಾಸರು ಹಾಡಿದ್ದಾರೆ. ಸುಬ್ಬಣ್ಣನವರು ಶ್ರೀರಾಮನನ್ನು ನಂಬಿದವರು. ಆ ಶ್ರೀರಾಮ ಅವರನ್ನು ಕೈಬಿಡುವುದಕ್ಕಾಗುತ್ತದೆಯೆ? ಅವರ ಸಮಸ್ಯೆಯನ್ನು ಆತ ಸುಲಭವಾಗಿಯೇ ನಿವಾರಿಸಿದ. ಸುಬ್ಬಣ್ಣನವರ ತಮ್ಮ ಶ್ರೀನಿವಾಸರಾಯನಿಗೆ ವೆಂಕಣ್ಣಯ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದುದು ಗೊತ್ತಾಯಿತು. ತಕ್ಷಣವೇ ಅವರು ಮೈದುಂಬಿದ ವೀರಭದ್ರನಂತೆ ತಳುಕಿಗೆ ಧಾವಿಸಿ ಬಂದರು. ಅಣ್ಣನ ಆರ್ಥಿಕ ದುಃಸ್ಥಿತಿ ಆತನಿಗೆ ಗೊತ್ತಿತ್ತು. ಆದ್ದರಿಂದ ಹೆಚ್ಚು ವಿವಾದಕ್ಕೆ ಆಸ್ಪದವನ್ನೇ ಕೊಡದೆ ‘ಅಣ್ಣ, ಪುಟ್ಟನನ್ನು ಮುಂದಕ್ಕೆ ಓದಿಸುವುದು ಹೇಗೆ ಎಂದು ನೀನೇನೂ ಚಿಂತೆ ಮಾಡುತ್ತ ಕುಳಿತುಕೊಳ್ಳಬೇಡ. ಇನ್ನು ಮುಂದೆ ಆ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ನೀನು ಅವನ ದಾರಿಗೆ ಅಡ್ಡಬರದಿದ್ದರೆ ಸಾಕು, ಮುಕ್ತ ಮನಸ್ಸಿನಿಂದ ಅವನನ್ನು ಕಳುಹಿಸಿಕೊಟ್ಟರೆ ಸಾಕು. ನಿನ್ನ ಸಂಸಾರ ತಾಪತ್ರಯಗಳು ಮುಂದೆ ಮಾಡಿ ಅವನನ್ನು ನೌಕರಿಗೆ ಸೇರಿಸುವ ಅನ್ಯಾಯಕ್ಕೆ ಕೈ ಹಾಕಬೇಡ’ ಎಂದರು. ಅವರ ಮಾತನ್ನು ಕೇಳಿದ ಲಕ್ಷ್ಮೀದೇವಮ್ಮ, ‘ಶೀನಣ್ಣ, ನಮ್ಮ ತಾಪತ್ರಯಗಳು ಸಾವಿರ ಇರಲಿ. ಜೀವನದಲ್ಲಿ ಈಗ ತಾನೆ ಕಣ್ಣು ತೆರೆಯುತ್ತಿರುವ ಪುಟ್ಟನಿಗೇಕೆ ಅವುಗಳ ಚಿಂತೆ? ನಾನು ಹೇಗೋ ಮಾಡಿ ಸಂಸಾರಕ್ಕೆ ಹಿಟ್ಟನ್ನೊ, ಗಂಜಿಯನ್ನೋ, ಒದಗಿಸುತ್ತೇನೆ. ಪುಟ್ಟ ಮುಂದಕ್ಕೆ ಓದಲಿ’ ಎಂದಳು. ಸುಬ್ಬಣ್ಣನವರಿಗೆ ತಾನೆ ಮಗ ಮುಂದಕ್ಕೆ ಓದುವುದು ಬೇಡವೇ? 246 ಮೂರು ತಲೆಮಾರು ಅವರು ‘ವೆಂಕಣ್ಣಯ್ಯನನ್ನು ಒಂದು ಮಾತು ಕೇಳಿರಪ್ಪ. ಅವನು ಹೇಗೆ ಹೇಳಿದರೆ ಹಾಗೆ ಮಾಡೋಣ’ ಎಂದರು. ವೆಂಕಣ್ಣಯ್ಯ ಏನು ಹೇಳುತ್ತಾನೆ? ‘ನೀವೆಲ್ಲ ಹೇಗೆ ಹೇಳಿದರೆ ಹಾಗೆ’ ಎಂದು ಬಿಟ್ಟ. ಹೀಗೆ ಪುಟ್ಟನ ಓದು ಮುಂದುವರಿಯಬೇಕೆಂದು ನಿಶ್ಚಯವಾಯಿತು. ವೆಂಕಣ್ಣಯ್ಯ ಚಿಕ್ಕಪ್ಪನಿಂದ ಪ್ರಯಾಣದ ಭತ್ಯವನ್ನು ಪಡೆದು ಮೈಸೂರಿಗೆ ಬಂದ. ಚಿಕ್ಕಪ್ಪ ಪ್ರತಿತಿಂಗಳೂ ಕಳುಹಿಸುವೆನೆಂದು ಭರವಸೆ ಇತ್ತಿದ್ದ ಹತ್ತು ರೂಪಾಯಿಗಳಲ್ಲಿ ಅವನ ಜೀವನ ನಿರ್ವಹಣೆಯಾಗಬೇಕಿತ್ತು. ಊಟ-ತಿಂಡಿಗಾಗಿ ಹೋಟೆಲ್ಲಿಗೆ ಏಳು ರೂಪಾಯಿ ಖರ್ಚಾಗಿ ಹೋದರೆ ಉಳಿದ ಮೂರು ರೂಪಾಯಿಗಳಲ್ಲಿ ಕೊಠಡಿಯ ಬಾಡಿಗೆಯಿಂದ ಹಿಡಿದು, ವಾರಕ್ಕೊಮ್ಮೆ ಆಗಬೇಕಾದ ಮುಖಕ್ಷೌರದವರೆಗೆ ಎಲ್ಲ ಖರ್ಚನ್ನೂ ತೂಗಿಸಿಕೊಂಡು ಹೋಗಬೇಕಾಗಿತ್ತು. ಕಡೆಯ ಪಕ್ಷ ಇನ್ನೆರಡು ರೂಪಾಯಿಗಳ ಆದಾಯವಾದರೂ ಇದ್ದಿದ್ದರೆ! ಆದರೆ ಆ ಚಿಕ್ಕಪ್ಪ ತನಗೆ ಬರುತ್ತಿದ್ದ 25 ರೂಪಾಯಿಗಳಲ್ಲಿ ಹೆಂಡತಿ-ಮಕ್ಕಳ ಸಂಸಾರವನ್ನೆಲ್ಲ ನಡೆಸಿಕೊಂಡು ಅಷ್ಟನ್ನು ಕಳುಹಿಸುತ್ತಿದ್ದುದೇ ಮಹಾಕಷ್ಟವಾಗುತ್ತಿತ್ತು. ವೆಂಕಣ್ಣಯ್ಯನಿಗೆ ಇತರರ ಕಷ್ಟವನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಕವಿತ್ತು. ‘ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು’ ಎಂದುಕೊಂಡ. ಈ ಸಂದಿಗ್ಧ ಸ್ಥಿತಿಯಲ್ಲಿ ಆತನ ಮಿತ್ರರು ಆತನಿಗೆ ನೆರವಾದರು. ವೆಂಕಣ್ಣಯ್ಯನಿಗೆ ಹಣದ ಅಭಾವವಿದ್ದರೂ ಗುಣದ ಅಭಾವವಿರಲಿಲ್ಲ. ಆದ್ದರಿಂದ ಆತನ ಶ್ರೀಮಂತ ಗೆಳೆಯರು ಆತನನ್ನು ತಮ್ಮ ಕೊಠಡಿಯಲ್ಲಿ ಇಟ್ಟುಕೊಳ್ಳಲು ನಾನು, ತಾನೆಂದು ಮುಂದಾದರು. ಇದರಿಂದ ವಸತಿಯ ದೊಡ್ಡ ಸಮಸ್ಯೆಯೊಂದು ನಿವಾರಣೆಯಾದಂತಾಯಿತು. ನೆಲೆಸಲು ಆಶ್ರಯವಿತ್ತವನೇ ಪಠ್ಯಪುಸ್ತಕಗಳ ಸಮಸ್ಯೆಯನ್ನೂ ಬಗೆಹರಿಸಿದ. ತನ್ನ ಮನೆಯವರೆಲ್ಲರ ಪ್ರೇಮಪುತ್ಥಳಿಯಾಗಿದ್ದ ಪುಟ್ಟ ಈಗ ಪರಪುಟ್ಟನಾಗಿದ್ದ. ಅಂದು ಆತನ ಕಾಲೇಜಿನಲ್ಲಿಯೇ ಓದುತ್ತಿದ್ದ ಶ್ರೀ ಎ.ಆರ್. ಕೃಷ್ಣಶಾಸ್ತ್ರಿಯವರು ವೆಂಕಣ್ಣಯ್ಯನ ಆ ಜೀವನವನ್ನು ಕಣ್ಣಾರೆ ಕಂಡಿದ್ದು ಅದನ್ನು ಹೀಗೆ ವರ್ಣಿಸುತ್ತಾರೆ; ಆ ಕಾಲದಲ್ಲಿ ವೆಂಕಣ್ಣಯ್ಯನ ಆರೋಗ್ಯ ಅಷ್ಟೇನೂ ಸಮರ್ಪಕವಾಗಿರಲಿಲ್ಲವಂತೆ. ಆದರೂ ‘ವೆಂಕಣ್ಣಯ್ಯ ತನ್ನ ಅನಾರೋಗ್ಯವನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಆತ ಅನಾಸಕ್ತನಾದರೂ ಆತನ ಸೌಜನ್ಯ ಸಜ್ಜನಿಕೆಗಳಿಗೆ ಮಾರುಹೋಗಿದ್ದ ಗೆಳೆಯರು ಸುಮ್ಮನಿದ್ದಾರೆಯೆ? ಗೆಳೆಯರು ಹಾಗಿರಲಿ, ಹೋಟೆಲಿನ ಮಾಲೀಕನಿಂದ ಹಿಡಿದು ಮುಸುರೆ ತಿಕ್ಕುವ ಅಳಿನವರೆಗೆ ಎಲ್ಲರಿಗೂ ಆತನಲ್ಲಿ ಪ್ರೀತಿ, ಆದರ, ಗೌರವ. ಹೋಟೆಲಿನ ಅಡುಗೆಯವನು ವೆಂಕಣ್ಣಯ್ಯನ ಆರಾಧಕನಾಗಿದ್ದ. ಅವನು ಕಾಲೇಜು ವಿದ್ಯಾಭ್ಯಾಸ 247 ಆತನಿಗೆ ಒಂದು ಮಿಳ್ಳೆ ತುಪ್ಪವನ್ನೂ ಹೆಚ್ಚಾಗಿ ಹಾಕಿ, ಗಟ್ಟಿ ಮೊಸರನ್ನು ಗುಟ್ಟಾಗಿ ಬಡಿಸುತ್ತಿದ್ದ. ಕುಡಿಯಲು ಧಂಡಿಯಾಗಿ ಮಜ್ಜಿಗೆ ಕೊಡುತ್ತಿದ್ದ. ವಾರಕ್ಕೊಮ್ಮೆ ಬಲವಂತವಾಗಿ ಎಣ್ಣೆ ಮಜ್ಜನ ಮಾಡಿಸುತ್ತಿದ್ದ. ಇಂತಹ ಪ್ರೇಮವನ್ನು ಕೊಂಡುಕೊಳ್ಳಲು ಸಾಧ್ಯವೆ? ಹಣ ಕೊಟ್ಟರೆ ಪ್ರೇಮ ಉಕ್ಕುತ್ತದೆಯೆ?’ ವೆಂಕಣ್ಣಯ್ಯ ಉಳಿದುದೆಲ್ಲವನ್ನೂ ಹೇಗಾದರೂ ಹೊಂದಿಸಿಕೊಂಡು ಹೋದಾನು. ಆದರೆ ತಿಂಗಳು, ತಿಂಗಳು ತೆರಬೇಕಾದ ಕಾಲೇಜು ಶುಲ್ಕಕ್ಕೆ ಏನು ಮಾಡುವುದು? ಶುಲ್ಕದಿಂದ ವಿನಾಯಿತಿ ಬೇಕಾದರೆ ಪ್ರಾಂಶುಪಾಲರನ್ನು ಕಾಣಬೇಕು. ಹಿಂದೆ ಆ ಮಹಾನುಭಾವ ತಾಳಿದ್ದ ರುದ್ರರೂಪವನ್ನು ನೆನೆಸಿಕೊಂಡರೆ ವೆಂಕಣ್ಣಯ್ಯನ ಕೈ ಕಾಲುಗಳೆಲ್ಲ ನಡುಗುತ್ತವೆ. ಆದರೆ ಈಗ ಹೆದರಿ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಆತನನ್ನು ಕಾಣುವುದು ಅನಿವಾರ್ಯ. ವೆಂಕಣ್ಣಯ್ಯ ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಅವರನ್ನು ಕಾಣಲು ಹೋದ. ಅತ್ಯಂತ ನಮ್ರನಾಗಿ ಇಂದಿನ ತನ್ನ ಸ್ಥಿತಿ-ಗತಿಯನ್ನೆಲ್ಲ ಅವರಿಗೆ ಅರಿಕೆ ಮಾಡಿಕೊಂಡ. ಆತನ ವಿನಯ, ಅದಕ್ಕೂ ಹೆಚ್ಚಾಗಿ ಅಸ್ಖಲಿತವಾದ ಆತನ ಇಂಗ್ಲಿಷ್‌ ವಾಣಿಯನ್ನು ಕೇಳಿ ವಿಯರ್ ಸಾಹೇಬನ ಮನಸ್ಸು ಪ್ರಸನ್ನವಾಯಿತು. ‘ಪರೀಕ್ಷೆಗೆ ಚಕ್ಕರ್ ಹೊಡೆಯುವ ಅಭ್ಯಾಸ ಬಿಟ್ಟಿರುವಿತಾನೆ’ ಎಂದು ಹಂಗಿಸಿ, ಮುಗುಳ್ನಗುತ್ತ ‘ಆಯಿತು, ನಿನಗೆ ಅರ್ಧ ಶುಲ್ಕವನ್ನು ಮನ್ನ ಮಾಡಿದ್ದೇನೆ. ಹೋಗು’ ಎಂದರು. ವೆಂಕಣ್ಣಯ್ಯ ಅವರಿಗೆ ವಂದನೆಯನ್ನು ಸಲ್ಲಿಸಿ ಹೊರಗೆ ಬಂದವನೇ ನೇರವಾಗಿ ಇತಿಹಾಸದ ಪ್ರಾಧ್ಯಾಪಕ ಡನ್‍ಹ್ಯಾಂ ಸಾಹೇಬರ ಬಳಿಗೆ ಹೋದ. ಅವರ ಮುಂದೆ ತನ್ನ ಇಂದಿನ ದುಃಸ್ಥಿತಿಯನ್ನು ವಿವರಿಸಿ ಹೇಳಿದ. ಪ್ರಾಂಶುಪಾಲರು ದಯಪಾಲಿಸಿದ ಧರ್ಮ ವಿನಾಯಿತಿಯ ವಿಷಯವನ್ನು ತಿಳಿಸಿದ. ಆತನ ಕಥೆಯನ್ನು ಕೇಳಿ ಮರುಕಗೊಂಡು ಡನ್‍ಹ್ಯಾಂ ಸಾಹೇಬರು ಶಿಷ್ಯನನ್ನು ಉಚಿತ ವಚನಗಳಿಂದ ಸಮಾಧಾನಪಡಿಸಿದರು. ಆತನಿಗೆ ಈ ಶಿಷ್ಯನಲ್ಲಿ ಅಪಾರವಾದ ಮಮತೆ. ಈ ಶಿಷ್ಯ ತುಂಬ ಪ್ರಭಾವಶಾಲಿ. ಆದರೆ ಬೂದಿ ಮುಚ್ಚಿದ ಕೆಂಡ ಎಂಬುದು ಆತನಿಗೆ ಗೊತ್ತಿತ್ತು. ಅವರು ವಿಯರ್ ಸಾಹೇಬರೊಡನೆ ಸಾಕಷ್ಟು ಹೊರಾಟ ನಡೆಸಿ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿಸಿದರು. ವೆಂಕಣ್ಣಯ್ಯ ತರಗತಿಯಲ್ಲಿ ನಡೆಯುತ್ತಿದ್ದ ಪಾಠವನ್ನು ಏಕಾಗ್ರಚಿತ್ತದಿಂದ ಕೇಳುವನು. ಅದನ್ನೇ ಮತ್ತೆ ಪಠ್ಯಪುಸ್ತಕದಲ್ಲಿ ಓದಬೇಕೆಂದರೆ ಬೇಸರ. ಆತನಿಗೆ ಸಾಹಿತ್ಯದಲ್ಲಿ ಅಭಿರುಚಿ. ತತ್ತ್ವಶಾಸ್ತ್ರವೆಂದರೆ ಪಂಚಪ್ರಾಣ. ಆದ್ದರಿಂದ ಆತ ಜಗತ್ತಿನ ಮಹಾಕವಿ ಕಾವ್ಯಗಳನ್ನು ಓದುವುದರಲ್ಲಿ ಸದಾ ಮಗ್ನನಾಗಿರುತ್ತಿದ್ದ. ಅಧ್ಯಾತ್ಮದಲ್ಲಿ 248 ಮೂರು ತಲೆಮಾರು ಅಪಾರವಾದ ಒಲವಿದ್ದುದರಿಂದ ಪ್ರಾಚ್ಯ, ಪಾಶ್ಚಾತ್ಯ ತತ್ವಶಾಸ್ತ್ರ ಗ್ರಂಥಗಳನ್ನು ಅತ್ಯಂತ ಆಸಕ್ತಿಯಿಂದ ಓದಿ, ತನ್ನ ಜ್ಞಾನ ಭಂಡಾರವನ್ನು ಶ್ರೀಮಂತಗೊಳಿಸಿಕೊಳ್ಳುತ್ತಿದ್ದ. ಪಠ್ಯಪುಸ್ತಕಗಳ ವಿಚಾರದಲ್ಲಿ ಮಾತ್ರ ‘ಯಾವಾಗಿನಾಟ ಮೊದಲಾಟ’ ಎಂಬಂತೆ ಸಹಪಾಠಿಗಳನ್ನು ಗಟ್ಟಿಯಾಗಿ ಓದುವಂತೆ ಪ್ರಾರ್ಥಿಸಿಕೊಂಡು ಅವರು ಓದುವುದನ್ನು ಕೇಳಿ ಅಷ್ಟರಿಂದಲೇ ತೃಪ್ತನಾಗುವನು. ಇದರ ಫಲವಾಗಿಯೋ ಏನೋ, ಆತ ಎಂದೂ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಗಿಟ್ಟಿಸಲಿಲ್ಲ. ಆತ ಅದನ್ನು ಬಯಸಲಿಲ್ಲ. ಅದು ಬರಲಿಲ್ಲವೆಂದು ವ್ಯಥೆಪಡಲೂ ಇಲ್ಲ. ಆತ ಎಂದೂ ಯಾವ ಪರೀಕ್ಷೆಯಲ್ಲೂ ನಪಾಸಾಗಲೂ ಇಲ್ಲ. ಬಾಲ್ಯದಿಂದಲೂ ವೆಂಕಣ್ಣಯ್ಯನಿಗೆ ಆಟಪಾಠಗಳ ಗೀಳು ಹತ್ತಲಿಲ್ಲ. ತನ್ನ ಗೆಳೆಯರು ಆಟದ ಮೈದಾನದಲ್ಲಿ ಮೈಮರೆತಿರುವಾಗ ವೆಂಕಣ್ಣಯ್ಯ ಯಾವುದೋ ಒಂದು ಮಹಾಕಾವ್ಯವನ್ನು ಓದುವುದರಲ್ಲಿ ಮಗ್ನನಾಗಿರುವನು. ಪಠ್ಯೇತರ ಚಟುವಟಿಕೆಗಳಿಗೂ ಆತನಿಗೂ ಬಹುದೂರ. ಬಹುಮಾನತರುವ ಸ್ಪರ್ಧೆಗಳಾದರಂತೂ ಆತನ ಪಾಲಿಗೆ ಎಣ್ಣೆ ಸೀಗೇಕಾಯಿ. ಇದು ಆತನ ಸ್ವಭಾವ. ಆತನ ಇಡೀ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆ ಮಾತ್ರ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದನಂತೆ! ಅದೂ ತನ್ನ ಪ್ರಿಯ ಅಧ್ಯಾಪಕರಾದ ಡನ್‍ಹ್ಯಾಂ ಸಾಹೇಬರ ಬಲವಂತಕ್ಕೆ. ಕಾಲೇಜಿನ ಇತಿಹಾಸ ಸಂಘದ ವಾರ್ಷಿಕೋತ್ಸವ ನಡೆಯುತ್ತಿತ್ತು. ಒಂದು ದೊಡ್ಡ ಮೇಜಿನ ಮೇಲೆ ನೂರಾರು ಬೇರೆ ಬೇರೆ ಸಣ್ಣಪುಟ್ಟ ಸಾಮಾನುಗಳನ್ನು ಹರಡಿ ಅವುಗಳ ಮೇಲೆ ಒಂದು ಬಟ್ಟೆಯನ್ನು ಹೊದಿಸಿದೆ. ಒಂದು ಕ್ಷಣ ಮಾತ್ರ ಆ ಹೊದಿಕೆಯನ್ನು ತೆಗೆದು ಮತ್ತೆ ಅದನ್ನು ಮುಚ್ಚಿಬಿಡುವರು. ಅಷ್ಟರಲ್ಲಿ ಅಲ್ಲಿ ನೋಡಿದ ಸಾಮಾನುಗಳನ್ನು ಜ್ಞಾಪಕವಿಟ್ಟುಕೊಂಡು ಒಂದು ಕಾಗದದ ಮೇಲೆ ಅವುಗಳ ಹೆಸರನ್ನು ಬರೆಯಬೇಕು. ಗೆಳೆಯರ ಬಲವಂತದಿಂದ ಇದನ್ನು ನೋಡಲು ಬಂದ ವೆಂಕಣ್ಣಯ್ಯನನ್ನು ಆ ಸ್ಪರ್ಧೆಗೆ ಸೇರುವಂತೆ ಡನ್‍ಹ್ಯಾಂ ಸಾಹೇಬರು ಅಪ್ಪಣೆ ಮಾಡಿದರು. ವೆಂಕಣ್ಣಯ್ಯ ಆ ಸ್ಪರ್ಧೆಯಲ್ಲಿ ಪ್ರಥಮಸ್ಥಾನವನ್ನು ಗಳಿಸಿ, ಬಾಸ್ವೆಲ್‍ನ ‘ಜಾನ್‍ಸನ್ ಜೀವನಚರಿತ್ರೆ’ಯ ಎರಡು ಸುಂದರ ಸಂಪುಟಗಳನ್ನು ಬಹುಮಾನವಾಗಿ ಪಡೆದನಂತೆ! ವೆಂಕಣ್ಣಯ್ಯನವರು ಮುಂದೆ ಪ್ರಾಧ್ಯಾಪಕರಾದ ಮೇಲೆ ಒಂದೇ ಒಂದು ಸಲ ಒಂದು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಯಿತಂತೆ. ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಇದನ್ನು ಕುರಿತು ಹೀಗೆ ಬರೆಯುತ್ತಾರೆ: ‘ಈಚೆಗೆ ಎಂದರೆ ಬಹುಶಃ 1937ರಲ್ಲಿ ಮಹಾರಾಣೀ ಕಾಲೇಜಿನಲ್ಲಿ ಜರುಗಿದ ಒಂದು ಸಂತೋಷ ಕೂಟದಲ್ಲಿ ಒಂದು ಕಾಲೇಜು ವಿದ್ಯಾಭ್ಯಾಸ 249 ವಿನೋದವಾದ ಸ್ಪರ್ಧೆ ಏರ್ಪಾಟಾಗಿತ್ತು. ಎದುರಿಗೆ ಬೋರ್ಡಿನ ಮೇಲೆ ಒಂದು ಹಂದಿಯನ್ನು ಬರೆದಿತ್ತು. ಅದಕ್ಕೆ ಬಾಲ ಮಾತ್ರ ಇರಲಿಲ್ಲ. ಸ್ಪರ್ಧಿಗಳು ಚೆನ್ನಾಗಿ ಕಣ್ಣು ಕಟ್ಟಿಸಿಕೊಂಡು ಹೋಗಿ ಅದರ ಬಾಲವನ್ನು ಸರಿಯಾದ ಸ್ಥಾನದಲ್ಲಿ ಸೀಮೆಸುಣ್ಣದಿಂದ ಬರೆದು ಬರಬೇಕಾಗಿತ್ತು. ಪ್ರತಿಯೊಬ್ಬರೂ ‘ಇದೇನು ಕಷ್ಟ’ ಎಂದು ಧೈರ್ಯದಿಂದ ಎದ್ದು ಹೋಗಿ ತಲೆಯ ಮೇಲೋ, ಹೊಟ್ಟೆಯ ಕೆಳಗೋ, ಕಾಲಿಗೆ ಅಡ್ಡವಾಗಿಯೋ ಬಾಲ ಬರೆಯುವುದು, ಅದನ್ನು ನೋಡಿ ಎಲ್ಲರೂ ನಗುವುದು - ಹೀಗೆಯೇ ನಡೆಯಿತು. ವೆಂಕಣ್ಣಯ್ಯನವರು ಸ್ನೇಹಿತರ ನಿರ್ಬಂಧಕ್ಕೆ ಎದ್ದು ಹೋಗಿ, ಸ್ಪರ್ಧೆಯಲ್ಲಿ ಜಯಶಾಲಿಗಳಾದರು. ಅವರಿಗೆ ಒಂದು ಬೆಳ್ಳಿಯ ಹಕ್ಕಿ ಬಹುಮಾನವಾಗಿ ಬಂತು. ವೆಂಕಣ್ಣಯ್ಯನವರು ಹಂದಿಯ ಬಾಲ ಎಳೆದು ಬೆಳ್ಳಿಯ ಹಕ್ಕಿಯನ್ನು ಸಂಪಾದಿಸಿದರು - ಎಂಬುದು ಕೆಲವು ಕಾಲದವರೆಗೆ ‘ಟಂಟಂ ಟಂಟಂ ಟಟಟಂ ಟಹ!’ ಎಂಬಂತೆ ಇದನ್ನೆಲ್ಲ ತಿಳಿಯದವರಿಗೆ ಒಂದು ಸಮಸ್ಯೆಯಾಗಿತ್ತು. ವೆಂಕಣ್ಣಯ್ಯ ಬಿ.ಎ. ಪರೀಕ್ಷೆ ಮುಗಿಯುತ್ತಲೇ ಹುಟ್ಟಿದೂರಿಗೆ ಹಿಂತಿರುಗಿದ. ಆತನ ಆಗಮನದಿಂದ ಮನೆಯವರಿಗೆಲ್ಲ ಸಂತೋಷವಾಯಿತು. ಈ ಸಾಧಾರಣಕ್ಕೆ ಅಸಾಧಾರಣವನ್ನು ತುಂಬುತ್ತಿದ್ದ ಮುದಿ ಜೀವಿ ಹನುಮಕ್ಕಮ್ಮ ಈಗ ಕಣ್ಮರೆಯಾಗಿ ಹೋಗಿದ್ದಾಳೆ. ವೆಂಕಣ್ಣಯ್ಯನಂತೆಯೇ ಮನೆಯವರೆಲ್ಲರಿಗೂ ಈ ಸನ್ನಿವೇಶದಲ್ಲಿ ಆಕೆಯ ಜ್ಞಾಪಕ ಬಂತು. ಗಂಡು ಮಕ್ಕಳು ನಿಟ್ಟುಸಿರಿಟ್ಟರೆ ಹೆಣ್ಣು ಮಕ್ಕಳು ಕಣ್ಣೀರು ಸುರಿಸಿದರು. ಸುಬ್ಬಣ್ಣನವರು ‘ಹುಟ್ಟುವುದು ಎಷ್ಟು ಸತ್ಯವೋ ಸಾಯುವುದು ಅಷ್ಟೇ ಸತ್ಯ’ ಎಂದು ಹೇಳಿ ಎಲ್ಲರನ್ನೂ ಸಮಾಧಾನಪಡಿಸಿದರು. ಬೇಸಗೆಯ ರಜ ಮುಗಿಯುವಷ್ಟರಲ್ಲಿ ಮೈಸೂರಿನ ಮಿತ್ರರಿಂದ ವೆಂಕಣ್ಣಯ್ಯನಿಗೆ ತಂತಿ ಸಮಾಚಾರ ಬಂತು - ನೀನು ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದೆ ಎಂದು. ಈ ಫಲಿತಾಂಶ ತಳುಕನ್ನು ಮುಟ್ಟಿದಾಗ ಅಲ್ಲಿ ಕಂಡುಬಂದ ಸಂತೋಷ, ಸಂಭ್ರಮಗಳು ಆ ಊರಿನ ಇತಿಹಾಸದಲ್ಲಿಯೇ ‘ನ ಭೂತೋ ನ ಭವಿಷ್ಯತಿ’ ಇದನ್ನು ಕುರಿತು ‘ಪ್ರಾಧಾಪಕ ವೆಂಕಣ್ಣಯ್ಯ’ ಎಂಬ ಪುಸ್ತಕದಲ್ಲಿ ಹೀಗೆ ಬರೆದಿದೆ- ‘ತಳುಕಿನ ಜನರಿಗೆಲ್ಲ ಅದೊಂದು ಐತಿಹಾಸಿಕ ಘಟನೆ. ನಮ್ಮ ವೆಂಕಣ್ಣಯ್ಯ ನಾಲ್ಕು ತೋಳಿನ ಅಂಗಿ ಹಾಕಿಕೊಳ್ಳುತ್ತಾನೆ; ಅಮಲ್ದಾರನಾಗುತ್ತಾನೆ. ಯಾರಿಗೆ ಗೊತ್ತು ಡೆಪ್ಯುಟಿ ಕಮೀಷನರ್ ಆಗಬಹುದು- ಎಂದು ಹೇಳಿಕೊಂಡು ಊರ ಜನರೆಲ್ಲ ನಲಿದು ನರ್ತಿಸಿದರು. ಎಕ್ಸೈಜ್ ಇನ್ಸ್‌ಪೆಕ್ಟರ್ ಶಿವರಾಮಯ್ಯ ಚಳ್ಳಕೆರೆಯಿಂದ ಹತ್ತು ಮಣ ಸಕ್ಕರೆಯನ್ನು ತರಿಸಿ ಊರಿಗೆಲ್ಲ ಗಾಡಿಯಲ್ಲಿ 250 ಮೂರು ತಲೆಮಾರು ಹಂಚಿಸಿದರು. ಗೌಡ, ಶಾನುಭೋಗರು ಊರಿನವರೆಲ್ಲ ಹಬ್ಬವನ್ನು ಆಚರಿಸಬೇಕೆಂದು ಡಂಗೂರ ಹೊಡೆಸಿದರು. ಚಿಪ್ಪಿಗರ ವೀರಣ್ಣ ಹೊಸ ಮಲ್ಲುಪಂಚೆಗಳನ್ನು ವೆಂಕಣ್ಣಯ್ಯನಿಗೆ ಉಡಲು ತಂದುಕೊಟ್ಟ. ಶೇಕದಾರರು ಆತನಿಗೆ ಹೂಮಾಲೆಯನ್ನು ಹಾಕಿ ಗೌರವಿಸಿದರು. ತಂದೆ ದೊಡ್ಡಸುಬ್ಬಣ್ಣನವರು ಹೊಸಹಳ್ಳಿಯ ಹನುಮಪ್ಪನಿಗೆ ‘ಎಣ್ಣೆಮಜ್ಜನ’ ‘ಎಲೆಪೂಜೆ’ಗಳನ್ನು ಮಾಡಿಸಿದರು. ಲಕ್ಷ್ಮೀದೇವಮ್ಮ ಮಗನಿಗೆ ನೀರೆರೆದು, ಓಕುಳಿಯನ್ನು ಇಳಿ ತೆಗೆದುಹಾಕಿದಳು. ಹೆಂಡತಿ ಭಾಗೀರಥಮ್ಮ ಸರ್ವಾಲಂಕೃತಳಾಗಿ ಹೆಮ್ಮೆಯಿಂದ ಹಿಗ್ಗಿ, ಠೀವಿಯಿಂದ ಓಡಾಡಿದಳು. ಒಕ್ಕಲಿಗರ ಪಾಲವ್ವ ಅಂದು ತನ್ನ ಹಸು ಕರೆದ ಹಾಲನ್ನೆಲ್ಲ ವೆಂಕಣ್ಣಯ್ಯನಿಗೆ ಕುಡಿಯಲೆಂದು ತಂದಿತ್ತಳು. ಮನೆ ಮನೆಯಿಂದಲೂ ತರಕಾರಿ, ಹಣ್ಣು, ಹೂವು, ಮೊಸರು, ತುಪ್ಪಗಳು ಸುಬ್ಬಣ್ಣನವರ ಮನೆಯಲ್ಲಿ ಬಂದು ಬಿದ್ದುವು. ಊರಿನಲ್ಲಿರುವ ಗಂಡು, ಹೆಣ್ಣುಗಳೆಲ್ಲರ ಬಾಯಲ್ಲಿ ವೆಂಕಣ್ಣಯ್ಯ ಬಿ.ಎ. ಪಾಸು ಮಡಿದ ಸುದ್ದಿಯೇ. ಊರಿನ ಕಲಾವಿದರು ಸುಬ್ಬಣ್ಣನವರು ರಚಿಸಿದ ‘ಶನಿಮಹಾತ್ಮೆ’ ನಾಟಕವನ್ನು ಅಭಿನಯಿಸಿ ವೆಂಕಣ್ಣಯ್ಯನವರನ್ನು ಅಂದಿನ ಮುಖ್ಯ ಅತಿಥಿಯಾಗಿ ಕರೆದು ಸಂಭಾವಿಸಿದರು. ಒಂದು ವಾರ ಕಾಲ ಊರಿನಲ್ಲೆಲ್ಲ ಹಬ್ಬದ ಸಡಗರ. ಮನೆಯೆಲ್ಲವೂ ಬಂಧುಬಾಂಧವರಿಂದ ತುಂಬಿ ಮದುವೆಯ ಸಡಗರ ನಡೆದಿತ್ತು. ಮನೆ ಮನೆಯಿಂದಲೂ ವೆಂಕಣ್ಣಯ್ಯನಿಗೆ ಊಟ-ತಿಂಡಿಗಳಿಗಾಗಿ ಆಹ್ವಾನ. ಸುತ್ತಮುತ್ತಿನ ಹತ್ತಾರು ಜನ ಬಂದು ವೆಂಕಣ್ಣಯ್ಯನ ದರ್ಶನ ಪಡೆದು ಧನ್ಯರಾದರು’. ವೆಂಕಣ್ಣಯ್ಯ ಪದವೀಧರನಾದ ಸಂತೋಷ ಸಮಾಚಾರವನ್ನು ಸುಬ್ಬಣ್ಣನವರು ತಮ್ಮ ಬಂಧುಬಾಂಧವರಿಗೆಲ್ಲ ಪತ್ರ ಬರೆದು ತಿಳಿಸಿದರು. ಅದನ್ನು ಕೇಳುತ್ತಲೇ ಅವರೆಲ್ಲರೂ ಸಕುಟುಂಬ ಸಪರಿವಾರವಾಗಿ ತಳುಕಿಗೆ ಬಂದಿಳಿದರು. ಮೊಳಕಾಲ್ಮುರುವಿನಲ್ಲಿ ಶೇಕದಾರರಾಗಿದ್ದ ಶ್ರೀನಿವಾಸರಾಯರು ಸುದ್ದಿಯನ್ನು ಕೇಳುತ್ತಲೇ ಹೇಗಿದ್ದವರು ಹಾಗೆಯೇ ತಮ್ಮ ಕುದುರೆಯೇರಿ ತಳುಕಿಗೆ ಬಂದರು. ತಾವು ಸಾಧಿಸಲಾರದೆ ಹೋದ ಬಾಳ ಹೆಗ್ಗುರಿಯನ್ನು ವೆಂಕಣ್ಣಯ್ಯ ಸಾಧಿಸಿದ್ದಾನೆ! ಈ ಉತ್ಸಾಹ ಅವರ ಮೈಮನಗಳನ್ನು ತುಂಬಿತ್ತು. ತಳುಕನ್ನು ಹೊಕ್ಕು ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ಅವರು ‘ವೆಂಕಣ್ಣಯ್ಯ’ ಎಂದು ಕೂಗಿಕೊಳ್ಳುತ್ತ ಎಳೆಯ ಮಗುವಿನಂತೆ ಉತ್ಸಾಹದಿಂದ ಬಂದರು. ಅವನನ್ನು ಕಾಣುತ್ತಲೆ ಅವರು ಆನಂದಬಾಷ್ಪಗಳನ್ನು ಸುರಿಸುತ್ತ ಭದ್ರವಾಗಿ ತಬ್ಬಿಕೊಂಡು ಗದ್ಗದ ಕಂಠದಿಂದ ‘ಬಿ.ಎ. ಪದವಿಯನ್ನು ಪಡೆದೆಯಾ ನನ್ನಪ್ಪ! ನಮ್ಮ ವಂಶಕ್ಕೆ ಕೀರ್ತಿಯ ಕಲಶವನ್ನು ಕಾಲೇಜು ವಿದ್ಯಾಭ್ಯಾಸ 251 ಏರಿಸಿದೆಯಾ ! ನಾವೇನು ಪುಣ್ಯ ಮಾಡಿದ್ದೆವೊ ನಿನ್ನಂಥ ಮಗನನ್ನುಪಡೆಯಲು!’ ಎಂದು ಉದ್ಗರಿಸಿದರು. ಈ ಸಂದರ್ಭದಲ್ಲಿ ನಮ್ಮ ಓದುಗರು ಒಂದು ವಿಚಾರವನ್ನು ನೆನಪಿಗೆ ತಂದುಕೊಳ್ಳಬೇಕು. ಈ ಘಟನೆ ನಡೆದುದು ಕ್ರಿ. ಶ 1908 ರಲ್ಲಿ. ಈಗಿನಂತೆ ಆಗ ಬಿ.ಎ. ಪದವಿ ಎಂಬುದು ‘ಕಾಸಿಗೊಂದು ಕೊಸರಿಗೆರಡು’ ಆಗಿರಲಿಲ್ಲ. ಇಡೀ ಮೈಸೂರು ಸಂಸಾನದಲ್ಲಿದ್ದ ಪದವೀಧರರನ್ನು ಕೈಬೆರಳುಗಳಿಂದ ಎಣಿಸಬಹುದಿತ್ತು. ಬಿ.ಎ. ಎಂಬುದು ಶಿಕ್ಷಣದ ಕೊನೆಯ ಘಟ್ಟ ಎಂಬುದು ಅಂದಿನ ಸಾಮಾನ್ಯ ಜನರ ನಂಬಿಕೆ. ಅವರಿವರ ಮಾತೇಕೆ? ಸುಬ್ಬಣ್ಣನವರೇ ಹಾಗೆ ತಿಳಿದಿದ್ದರು. ಆದ್ದರಿಂದಲೇ ಅವರು ತಮ್ಮನೊಡನೆ ‘ಶೀನು’ ಇನ್ನು ನಮ್ಮ ವೆಂಕಣ್ಣಯ್ಯ ಅಮಲ್ದಾರಿಯಂತಹ ಯಾವುದಾದರೊಂದು ದೊಡ್ಡ ಉದ್ಯೋಗಕ್ಕೆ ಸೇರಲಪ್ಪ. ಓದೆಂಬುದು ಕೊನೆ ಆದ ಹಾಗಾಯಿತಲ್ಲ!’ ಎಂದರು. ಅದನ್ನು ಕೇಳಿ ಶ್ರೀನಿವಾಸರಾಯರಿಗೆ ನಗು ಬಂತು. ‘ಅಣ್ಣ ! ವಿದ್ಯೆಗೆ ಕೊನೆಯುಂಟೆ? ಎಂ.ಎ., ಬಿ.ಎಲ್., ಎಂ.ಸಿ.ಎಸ್., ಐ.ಸಿಎಸ್. ಇನ್ನೂ ಎಷ್ಟೋ ಪರೀಕ್ಷೆಗಳಿವೆ. ದೇವರು ಅನುಕೂಲ ಕೊಟ್ಟರೆ ಇಂಗ್ಲೆಂಡಿಗೆ ಕಳುಹಿಸಬಹುದು ಮುಂದಕ್ಕೆ ಓದಲೆಂದು. ಅಣ್ಣ, ನಮ್ಮ ಪುಟ್ಟನಿಗೆ ಇನ್ನೂ ಕೆಲಸಕ್ಕೆ ಸೇರುವ ವಯಸ್ಸಾಗಿಲ್ಲ. ಇನ್ನೆರಡು ವರ್ಷ ಓದಿ ಬಿ. ಎಲ್. ಪಾಸು ಮಾಡಲಿ. ಎತ್ತಿಕೊಳ್ಳುತ್ತ ಮುನ್ಸೀಫ್ ಮ್ಯಾಜಿಸ್ಟ್ರೇಟ್ ಆಗುತ್ತಾನೆ. ಪುಣ್ಯವಿದ್ದರೆ ಹತ್ತು ವರ್ಷಗಳಲ್ಲಿ ಡೆಪ್ಯುಟಿ ಕಮೀಷನರ್ ಆಗಬಹುದು ನೋಡು. ಆ ವೆಂಕಟಶಾಮಣ್ಣ ಮೂರು ವರ್ಷಗಳ ಕೆಳಗೆ ಬಿ.ಎಲ್. ಪಾಸ್ ಮಾಡಿ ಅಡ್ವೊಕೇಟ್ ಆದ. ‘ನಿನಗೆ ಸೆಷನ್ಸ್‌ ಜಡ್ಜಿ ಕೆಲಸ ಕೊಡುತ್ತೇವೆ ಬಾ’ ಎಂದು ಸರ್ಕಾರ ಆತನನ್ನು ಬೇಡಿಕೊಳ್ಳುತ್ತಿದೆ. ಮೊನ್ನೆ ದಿವಾನರೆ ಆತನನ್ನು ಕರೆಸಿ ಹೇಳಿದರಂತೆ! ಆತ ಇನ್ನೂ ದೊಡ್ಡ ಪದವಿ ಬೇಕೆಂದು ಅದನ್ನು ತಿರಸ್ಕರಿಸಿದನಂತೆ! ತಿರುಪತಿ ತಿಮ್ಮಪ್ಪನ ಕೃಪೆಯೊಂದಿದ್ದರೆ ನಮ್ಮ ಪುಟ್ಟ ಒಂದಲ್ಲ ಒಂದು ದಿನ ರೆವಿನ್ಯೂ ಕಮಿಷನರ್ ಆಗಬಹುದು’ಎಂದರು. ತಮ್ಮ ಮಗನಿಗೆ ದಿವಾನನ ಪದವಿ ! ಆ ಮಾತು ಕೇಳಿಯೇ ಸುಬ್ಬಣ್ಣನವರಿಗೆ ದಿವಾನನ ತಂದೆ ತಾವೆಂಬಂತೆ ಭಾಸವಾಯಿತು. ಅವರು ಶೀನಿ! ಇದೆಲ್ಲ ನನಗೇನು ಗೊತ್ತಾಗುತ್ತದೆಯಪ್ಪ ? ಅವನ ಓದು, ನೌಕರಿಗಳ ಜವಾಬ್ದಾರಿ ಏನಿದ್ದರೂ ನಿನಗೆ ಸೇರಿದುದು. ನಿನ್ನ ಇಷ್ಟ ಬಂದ ಹಾಗೆ ಮಾಡು. ಅಗತ್ಯವಿದ್ದರೆ ಈ ವಿಚಾರವನ್ನೆಲ್ಲ ನೀನೇ ನಿನ್ನ ಮಗನಿಗೆ ಹೇಳು’ ಎಂದರು. ಶ್ರೀನಿವಾಸರಾಯರು ವೆಂಕಣ್ಣಯ್ಯನನ್ನು ಕೂಗಿ ಕರೆದು’ ಪುಟ್ಟ ನೀನೀಗ ಪದವೀಧರನಾಗಿದ್ದಿ, ಮುಂದೆ 252 ಮೂರು ತಲೆಮಾರು ಏನು ಮಾಡಬೇಕೆಂದಿದ್ದೀಯ?’ ಎಂದು ಕೇಳಿದರು. ಆ ವೇಳೆಗೆ ಎರಡು ಮಕ್ಕಳ ತಂದೆಯಾಗಿದ್ದ ಆ ‘ಪುಟ್ಟ’ “ಚಿಕ್ಕಪ್ಪ ಈ ವಿಚಾರ ಯೋಚನೆಯೇ ಮಾಡಿಲ್ಲ, ನೀವಿದ್ದೀರಿ, ಅಪ್ಪ ಇದ್ದಾರೆ; ಹಿರಿಯರಾದ ನೀವಿಬ್ಬರೂ ಹೇಗೆ ಹೇಳಿದರೆ ಹಾಗೆ ಮಾಡುತ್ತೇನೆ’ ಎಂದ. ಆಗ ಚಿಕ್ಕಪ್ಪ ಹೇಳಿದರು ‘ನೀನೀಗ ಬೊಂಬಾಯಿಗೆ ಹೋಗಿ ಬಿ.ಎಲ್. ಪರೀಕ್ಷೆಗೆ ಓದು. ನಾನೀಗ ಶೇಕದಾರನಾಗಿದ್ದೇನೆ. ಸಂಬಳ ಹೆಚ್ಚಾಗಿದೆ. ಸ್ವಲ್ಪ ಕಷ್ಟಪಟ್ಟರೆ ನಿನ್ನ ಓದಿನ ಖರ್ಚನ್ನೆಲ್ಲ ನಾನು ವಹಿಸಿಕೊಳ್ಳಬಲ್ಲೆ. ನೀನು ಜಾಣ, ಸ್ವಲ್ಪ ಹೆಚ್ಚು ಕಡಿಮೆಯಾದರೆ ಹೇಗೊ ಸುಧಾರಿಸಿಕೊಂಡು ಹೋಗಬಲ್ಲೆ’ ಎಂದರು. ವೆಂಕಣ್ಣಯ್ಯ ‘ತಥಾಸ್ತು’ ಎಂದ. ಶ್ರೀನಿವಾಸರಾಯರು ಬಹು ಕಷ್ಟದಿಂದ ಕಾಸಿಗೆ ಕಾಸು ಕೂಡಿಸಿ ಒಟ್ಟು ಮಾಡಿಟ್ಟುಕೊಂಡಿದ್ದ ಒಂದು ನೂರು ರೂಪಾಯಿಗಳನ್ನು ಒಂದು ಚೀಲದಲ್ಲಿ ಹಾಕಿ ಅವನ ಕೈಗಿತ್ತರು. ಮಗನನ್ನು ಬಹು ದೂರ ದೇಶವಾದ ಬೊಂಬಾಯಿಗೆ ಕಳುಹಿಸಲು ಲಕ್ಷ್ಮೀದೇವಮ್ಮನವರ ತಾಯಿ ಕರುಳು ಹಿಂಡಿದಂತಾಯಿತು. ಆದರೆ ಮಗ ದಿವಾನನಾಗುವನೆಂಬ ದೂರದ ಆಸೆ ಆಕೆಯ ಆತಂಕವನ್ನು ಕಬಳಿಸಿಬಿಟ್ಟಿತು. ಆಕೆ ಕಣ್ತುಂಬ ನೀರು ತುಂಬಿಕೊಂಡು ‘ಸುಖವಾಗಿ ಹೋಗಿ ಬಾರಪ್ಪ’ ಎಂದು ಬಾಯ್ತುಂಬ ಹರಸಿ ಬೀಳ್ಕೊಟ್ಟಳು. ವೆಂಕಣ್ಣಯ್ಯ ಬೊಂಬಾಯಿಗೆ ಹೋದ. ಮೈಸೂರಲ್ಲಿ ಆತನ ಗೆಳೆಯರೆನಿಸಿದ್ದ ಮೂವರು ಅಲ್ಲಿಗೆ ಹೋಗಿ ಬಿ.ಎಲ್. ತರಗತಿಗೆ ಸೇರಿದ್ದರು. ಆರಂಭದಲ್ಲಿ ಅವರೇ ವೆಂಕಣ್ಣಯ್ಯನ ಆಶ್ರಯದಾತರಾದರು. ಅವರು ಆತನನ್ನು ರೈಲು ನಿಲ್ದಾಣದಲ್ಲಿ ಎದುರ್ಗೊಂಡು ತಮ್ಮ ಕೊಠಡಿಗೆ ಕರೆದೊಯ್ದರು. ತಾವು ನೆಲೆಸಿದ್ದ ಕಾಲೇಜು ಹಾಸ್ಟೆಲಿನಲ್ಲಿಯೇ ಆತನನ್ನೂ ತಮ್ಮ ಅತಿಥಿಯಾಗಿಟ್ಟುಕೊಂಡರು. ಆದರೆ ಅಲ್ಲಿನ ಖರ್ಚುವೆಚ್ಚಗಳನ್ನು ಕಂಡು ವೆಂಕಣ್ಣಯ್ಯ ಹೌಹಾರಿದ. ತನ್ನಲ್ಲಿದ್ದ ನಿಧಿ ಅಲ್ಲಿನ ಖರ್ಚಿಗೆ ಏತಕ್ಕೂ ಸಾಲದು ಎನಿಸಿತು. ಆತನು ಮುಂದೋರದೆ ತಳಮಳದ ಸುಳಿಯಲ್ಲಿ ಸಿಕ್ಕಿರುವಾಗ ಒಂದು ಸಂಜೆ ಆತನ ಅದೃಷ್ಟದೇವತೆ ಆತನ ಸಂರಕ್ಷಣೆಗೆ ಧಾವಿಸಿ ಬಂದಳು. ಸಂಜೆ ಏಕಾಕಿಯಾಗಿ ರಸ್ತೆಯಲ್ಲಿ ಹೋಗುತ್ತಿರುವಾಗ ಪಕ್ಕದ ಕಟ್ಟಡದ ಮೇಲೆ ‘ಶ್ವೇತಾಂಬರದ ಫ್ರೀ ಬೋರ್ಡಿಂಗ್ ಅಂಡ್ ಲಾಡ್ಜಿಂಗ್’ ಎಂಬ ನಾಮಫಲಕ ಕಣ್ಣಿಗೆ ಬಿತ್ತು. ವೆಂಕಣ್ಣಯ್ಯ ಆ ನಾಮಫಲಕವನ್ನು ಹೊತ್ತಿದ್ದ ಭವ್ಯ ಭವನವನ್ನು ಪ್ರವೇಶಿಸಿದ. ಬಾಗಿಲ ಬಳಿಯಲ್ಲಿಯೇ ಇದ್ದ ಕೊಠಡಿಯೊಂದರಲ್ಲಿ ಅಲ್ಲಿನ ವಾರ್ಡನ್ ಕುಳಿತಿದ್ದರು. ವೆಂಕಣ್ಣಯ್ಯ ಅವರನ್ನು ಕಂಡು ತನ್ನ ಇತಿಹಾಸವನ್ನೆಲ್ಲ ಅವರಲ್ಲಿ ತೋಡಿಕೊಂಡ. ಅವರು ಆತನಿಗೆ ಉಚಿತವಾದ ಊಟವಸನಗಳನ್ನು ಕಾಲೇಜು ವಿದ್ಯಾಭ್ಯಾಸ 253 ನೀಡಿದರು. ಆದರೆ ಕಾಲೇಜಿನ ಶುಲ್ಕ, ಪುಸ್ತಕಗಳು, ಕಾಫಿ-ತಿಂಡಿ ಇತ್ಯಾದಿ ಇತ್ಯಾದಿ ಹತ್ತಾರು ಬಗೆಯ ಖರ್ಚುವೆಚ್ಚಗಳಿಗಾಗಿ ಹಣ ಬೇಕಾಗಿತ್ತು. ಊರಿಗೆ ಪತ್ರ ಬರೆದು ಪ್ರಯೋಜನವಿಲ್ಲ. ಅಲ್ಲಿಯೇ ಏನಾದರೊಂದು ಉದ್ಯೋಗವನ್ನು ಹಿಡಿದು ತನ್ನ ಸಮಸ್ಯೆಯನ್ನು ತಾನೇ ಪರಿಹರಿಸಿಕೊಳ್ಳಬೇಕು. ಈ ಕಾರಣದಿಂದಲೇ ಆತ ಹಗಲು ಕಾಲೇಜನ್ನು ಸೇರದೆ Night College for B.L.’ ರಾತ್ರಿ ಕಾಲೇಜನ್ನು ಸೇರಿದ. ಎರಡು ವರ್ಷಗಳ ಕಾಲ ಬೊಂಬಾಯಿಯಲ್ಲಿ ಹೇಗೆ ಕಳೆಯುವುದು ಎಂಬ ಯೋಚನೆಯಲ್ಲಿ ತೊಳಲುತ್ತಿರುವಾಗ ಆತನ ಅದೃಷ್ಟ ದೇವತೆ ಮತ್ತೊಮ್ಮೆ ಆತನಿಗೆ ಮಾರ್ಗದರ್ಶನ ನೀಡಿತು. ಒಂದು ದಿನ ಆತ ತಂದೆಗೆ ಪತ್ರ ಬರೆಯಲೆಂದು ಕಾರ್ಡನ್ನು ತೆಗೆದುಕೊಳ್ಳುವುದಕ್ಕಾಗಿ ಪೊೀಸ್ಟ್ ಆಫೀಸಿಗೆ ಹೋದ. ಕಾರ್ಡು ಕೊಡುವ ಗುಮಾಸ್ತೆ ಕನ್ನಡಿಗನಾಗಿರಬೇಕೆ? ಆಗ ಬೊಂಬಾಯಿಯಲ್ಲಿ ಈಗ ಇರುವ ಹಾಗೆ ಕನ್ನಡಿಗರ ಸಂಖ್ಯೆ ಹೇಳಿಕೊಳ್ಳುವಷ್ಟು ಹೆಚ್ಚಾಗಿರಲಿಲ್ಲ. ಕನ್ನಡಿಗರದೆಂದು ಹೇಳಿಕೊಳ್ಳುವಂತಹ ಸಂಘ ಸಂಸ್ಥೆಗಳೂ ಇರಲಿಲ್ಲ. ಆದ್ದರಿಂದ ಒಬ್ಬ ಕನ್ನಡಿಗ ಮತ್ತೊಬ್ಬ ಕನ್ನಡಿಗನನ್ನು ಕಂಡಾಗ ಮರುಳುಗಾಡಿಯಲ್ಲಿ ಓಯಸಿಸ್ ಕಂಡಷ್ಟು ಸಂತೋಷವಾಗುವುದು ಸಹಜವಾಗಿಯೇ ಇತ್ತು. ಆದ್ದರಿಂದ ಪರಸ್ಪರ ಪರಿಚಯವಾದೊಡನೆಯೇ ಅವರಿಬ್ಬರೂ ‘ಗಳಸ್ಯ ಕಂಠಸ್ಯ’ ಎನ್ನುವಂತಹ ಗೆಳೆಯರಾದರು. ವೆಂಕಣ್ಣಯ್ಯ ಬಿ.ಎ. ಪದವೀಧರ, ಬಿ.ಎಲ್. ಓದಲು ಬಂದಿದ್ದಾನೆ ಎಂಬುದನ್ನು ಕೇಳಿ ಆ ಗುಮಾಸ್ತನಿಗೆ ತನ್ನ ಹೊಸ ಗೆಳೆಯನಲ್ಲಿ ಎಲ್ಲಿಲ್ಲದ ಆದರ ಗೌರವಗಳು ಮೂಡಿದುವು. ಆತ ತನ್ನ ಕೆಲಸವನ್ನು ಬದಿಗಿಟ್ಟು ವೆಂಕಣ್ಣಯ್ಯನನ್ನು ಕಾಫಿಗೆಂದು ಹತ್ತಿರದ ಹೋಟೆಲಿಗೆ ಕರೆದುಕೊಂಡು ಹೋದ. ಆತನ ಹಿಂದುಮುಂದುಗಳನ್ನೆಲ್ಲ ಕೇಳಿದ ಮೇಲೆ ಆ ಗುಮಾಸ್ತ ‘ವೆಂಕಣ್ಣಯ್ಯನವರೇ! ನಮ್ಮ ಪ್ರಧಾನ ಕಛೇರಿಯಲ್ಲಿ ಒಬ್ಬ ಗುಮಾಸ್ತನ ಕೆಲಸ ಖಾಲಿ ಇದೆ. ನೀವು ಆ ಕೆಲಸಕ್ಕೆ ಒಂದು ಅರ್ಜಿಯನ್ನು ಬರೆದು ನನ್ನ ಕೈಲಿ ಕೊಡಿ. ಅಲ್ಲಿನ ಮುಖ್ಯಾಧಿಕಾರಿ ನನಗೆ ಗೊತ್ತಿರುವವರು. ನಾನು ಅವರಿಗೆ ಹೇಳಿ ಆ ಕೆಲಸವನ್ನು ನಿಮಗೆ ಕೊಡಿಸುತ್ತೇನೆ. ಐವತ್ತು ರೂಪಾಯಿಗಳ ಸಂಬಳ ಬರುತ್ತದೆ. ಯಾವ ತೊಂದರೆಯೂ ಇಲ್ಲದೆ ನೀವು ನಿಮ್ಮ ಪಾಠಪ್ರವಚನಗಳನ್ನು ನಡೆಸಿಕೊಂಡು ಹೋಗಬಹುದು’. ವೆಂಕಣ್ಣಯ್ಯ ಅವರು ಹೇಳಿದಂತೆ ಮಾಡಿದ. ಮರುದಿನವೇ ಆತನಿಗೆ ಕರೆ ಬಂತು. ಆತ ಅಂಚೆ ಕಛೇರಿಯಲ್ಲಿ ಗುಮಾಸ್ತನಾದ. ತನ್ನ ತೊಡಕುಗಳೆಲ್ಲ ಬಗೆಹರಿದುಕೊಂಡವೆಂದು ವೆಂಕಣ್ಣಯ್ಯ ಸಮಾಧಾನಪಟ್ಟುಕೊಂಡ. ತನ್ನ ಸಂಬಳದ 254 ಮೂರು ತಲೆಮಾರು ಹಣದಲ್ಲಿ ಸ್ವಲ್ಪವನ್ನು ಕಡು ಕಷ್ಟದಲ್ಲಿದ್ದ ತಂದೆಯವರಿಗೆ ಕಳುಹಿಸುವುದೆಂದೂ ನಿರ್ಧರಿಸಿದ. ವೆಂಕಣ್ಣಯ್ಯನ ವಿದ್ಯಾಭ್ಯಾಸ ಯಾವ ಆತಂಕವೂ ಇಲ್ಲದೆ ಮುಂದುವರೆಯಿತು. ಆತ ಮೊದಲ ವರ್ಷದ ಎಫ್.ಎಲ್. ನಲ್ಲಿ ತೇರ್ಗಡೆಯಾಗಿ, ಬಿ.ಎಲ್. ವ್ಯಾಸಂಗವೂ ಸಲೀಸಾಗಿ ನಡೆದುಕೊಂಡು ಹೋಗುತ್ತಿತ್ತು. ಆಗಾಗ ಹೆಂಡತಿ, ಮಕ್ಕಳ ಜ್ಞಾಪಕ ಬರುತ್ತಿತ್ತಾದರೂ ಆತ ತನ್ನ ಮನಃಸ್ಥೈರ್ಯವನ್ನು ಕಳೆದುಕೊಳ್ಳುವಷ್ಟು ಅಲ್ಪಮತಿಯಾಗಿರಲಿಲ್ಲ. ಆದರೆ ಆತ ಬಿ. ಎಲ್. ಪದವೀಧರನಾಗುವುದು ದೈವೇಚ್ಛೆಗೆ ಬರಲಿಲ್ಲವೋ ಏನೊ! ಕನಸು-ಮನಸಿನಲ್ಲಿಯೂ ನೆನೆಸದಂತಹ ಘಟನೆಯೊಂದು ನಡೆದು ಪರೀಕ್ಷೆ ಇನ್ನು ಮೂರು ತಿಂಗಳಿದೆ ಎನ್ನುವಾಗ ಆತನ ವಿದ್ಯಾಭ್ಯಾಸ ಕೊನೆಗೊಳ್ಳಬೇಕಾಯಿತು. ಆತನ ಮೇಲಧಿಕಾರಿ ಒಬ್ಬ ಮಹಾರಾಷ್ಟ್ರದವನು. ಅವನಿಗೆ ತಾನೊಬ್ಬನೇ ದಕ್ಷನಾದ ಅಧಿಕಾರಿ ಎಂಬ ಅಹಂಕಾರ; ಉಳಿದವರೆಲ್ಲ ಕೆಲಸಕ್ಕೆ ಬಾರದವರೆಂಬ ಭಾವನೆ. ಅವನ ಕೆಟ್ಟ ಕಣ್ಣು ವೆಂಕಣ್ಣಯ್ಯನ ಮೇಲೆ ನೆಟ್ಟಿತು. ಈ ಹೊಸಬ ಸದಾ ಹಸನ್ಮುಖಿ. ಕೆಲಸಕ್ಕೆ ಬಂದ ಕೆಲವೇ ದಿನಗಳಲ್ಲಿ ಸರ್ವಜನಾನುರಾಗಿಯಾಗಿ ಹೋಗಿದ್ದಾನೆ. ಕಛೇರಿಯ ಮುಖ್ಯಾಧಿಕಾರಿಗೂ ಅವನಲ್ಲಿ ಮಮತೆ. ಅವನಲ್ಲಿ ಹುಡುಕಿದರೂ ಹುಳುಕು ಸಿಗುತ್ತಿಲ್ಲ. ಇದನ್ನು ಕಂಡು ಆ ಮೇಲಧಿಕಾರಿಗೆ ಎಲ್ಲಿಲ್ಲದ ಅಸೂಯೆ. ಏನಾದರೂ ಒಂದು ನೆಪ ಎತ್ತಿಕೊಂಡು ಅವನು ವೆಂಕಣ್ಣಯ್ಯನನ್ನು ಗೇಲಿ ಮಾಡುತ್ತಿದ್ದ. ವೆಂಕಣ್ಣಯ್ಯ ಅಲ್ಲಿದ್ದ ಇತರರೊಡನೆ ತಾನೂ ನಗುತ್ತ, ಆ ಅಧಿಕಾರಿಯ ಸಣ್ಣತನವನ್ನು ಅಲ್ಲಿದ್ದವರಿಗೆಲ್ಲ ಮನದಟ್ಟು ಮಾಡಿಕೊಡುತ್ತಿದ್ದ. ಹೀಗಿರಲು ಒಂದು ದಿನ ಯಾವುದೋ ವಿಷ ಘಳಿಗೆಯಲ್ಲಿ ಅವನ ಕುಚೇಷ್ಟೆ ವೆಂಕಣ್ಣಯ್ಯನನ್ನು ಕೆರಳಿಸಿತು. ಆ ತಲೆ ಕೆಟ್ಟ ಅಧಿಕಾರಿ ‘ಕನ್ನಡಿಗರೆಲ್ಲ ಬುದ್ಧಿಹೀನರು, ಶುದ್ಧ ಹೇಡಿಗಳು, ಆತ್ಮಾಭಿಮಾನಶೂನ್ಯರು, ಕಾಸಿಗಾಗಿ ಕತ್ತೆ ಕಾಲು ಕಟ್ಟುವವರು, ಶುದ್ಧ ಸ್ವಾರ್ಥಿಗಳು’ ಇತ್ಯಾದಿಯಾಗಿ ಬಾಯಿಗೆ ಬಂದಂತೆ ಬೊಗಳುತ್ತಿದ್ದ. ಆತನ ಒಂದೊಂದು ಮಾತು ವೆಂಕಣ್ಣಯ್ಯನ ಶಾಂತಿಯನ್ನು ಕಲಕುತ್ತಿತ್ತು. ಸಾತ್ವಿಕನಾದ ಆತ ಕ್ರಮೇಣ ಕೆರಳಿ ಕೆಂಡವಾದ. ಕಿಡುನುಡಿಗಳು ಆತನ ಹೃದಯಕ್ಕೆ ತಾಗುತ್ತಲೆ ಆತ ಜ್ವಲಂತ ಅಗ್ನಿಪರ್ವತವಾದ. ಆ ಅಧಿಕಾರಿಯತ್ತ ತಿರುಗಿ ‘ಷಟಪ್’ ಎಂದು ಗರ್ಜಿಸಿದ. ಆ ಗರ್ಜನೆಗೆ ಇಡೀ ಕಛೇರಿಯೇ ನಡುಗಿಹೋಯಿತು. ಸ್ವತಃ ವೆಂಕಣ್ಣಯ್ಯ ಈ ಕೋಪದಿಂದ ಆಪಾದಮಸ್ತಕವೂ ನಡುಗುತ್ತ ನಿಂತಿದ್ದ. ಮರುನಿಮಿಷದಲ್ಲಿ ಆತ ತನ್ನ ಕೆಲಸಕ್ಕೆ ರಾಜೀನಾಮೆ ಬರೆದುಕೊಟ್ಟು ಬರಸಿಡಿಲಿನಂತೆ ಆ ಕಛೇರಿಯಿಂದ ಕಾಲೇಜು ವಿದ್ಯಾಭ್ಯಾಸ 255 ಹೊರಕ್ಕೆ ಬಂದ. ಯಾರು ಎಷ್ಟು ಸಮಾಧಾನ ಮಾಡಿದರೂ ಕೇಳದೆ ಬಿ.ಎಲ್. ಗೆ ಶರಣು ಹೊಡೆದು ಹುಟ್ಟಿದೂರಿಗೆ ಹಿಂದಿರುಗಿದ. ವೆಂಕಣ್ಣಯ್ಯ ಪರೀಕ್ಷೆಗೆ ಕುಳಿತುಕೊಳ್ಳದೆಯೇ ಬೊಂಬಾಯಿಂದ ಏಕೆ ಹಿಂತಿರುಗಿದ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಆ ವಿಚಾರವನ್ನು ಎತ್ತಿದವರಿಗೆಲ್ಲ ಆತನ ಮೌನವೇ ಪ್ರತ್ಯುತ್ತರವಾಗಿತ್ತು. ಆದರೆ ಬೊಂಬಾಯಿಯಲ್ಲಾದ ಕಟು ಅನುಭವ ಆತನ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಅದರ ಜೊತೆಯಲ್ಲಿಯೇ ಆತನ ನಾಡು, ನುಡಿ, ಸಾಹಿತ್ಯಗಳ ಅಭಿಮಾನ ಜಾಗೃತಗೊಂಡಿತು. ಆಗ ಇಡೀ ಭರತಖಂಡವೇ ಬ್ರಿಟಿಷರ ವಶವರ್ತಿಯಾಗಿತ್ತು. ತಾವು ಸ್ವತಂತ್ರರಾಗಬೇಕೆಂಬ ಭಾರತೀಯರ ಕೂಗು ಯಾವುದೋ ದೂರದ ಗುಹೆಯಿಂದ ಹೊರ ಹೊರಟು ಅಲ್ಲಿಯೇ ಅಡಗುತ್ತಿತ್ತು. ಮಹಾರಾಜರು ಆಳುತ್ತಿದ್ದ ಮೈಸೂರು ಪ್ರಾಂತ್ಯದೊಳಗೆ ಅದು ಇನ್ನೂ ಪ್ರವೇಶಿಸಿಯೇ ಇರಲಿಲ್ಲ. ತಿರುಳು ಕನ್ನಡದ ತವರೂರೆನಿಸಿದ ಮೈಸೂರು ದೇಶದಲ್ಲಿ ಕನ್ನಡ ಆಡುಭಾಷೆಯೇನೋ ಆಗಿತ್ತು. ಆದರೆ ಅದು ಶಹರುಗಳನ್ನು ಬಿಟ್ಟು ಹಳ್ಳಿಗೆ ಹೋಗಿ ತಲೆಮರೆಸಿಕೊಂಡಿತ್ತು. ಪಟ್ಟಣಗಳಲ್ಲಿ ಕನ್ನಡದ ಗತಿ ಏನಾಗಿತ್ತು ಎಂಬುದನ್ನು ಕೈಲಾಸಂ ಅವರ ನಾಟಕಗಳು ವಿವರಿಸುತ್ತವೆ. ವಿದ್ಯಾಭ್ಯಾಸದಲ್ಲಿಯಂತೂ ಅದು ತನ್ನ ಮನೆಯಲ್ಲಿಯೇ ಗುಲಾಮನಂತಿತ್ತು. ಕನ್ನಡದ ಗಂಧವೇ ಇಲ್ಲದ ಸಂಸ್ಕೃತ ಪಂಡಿತರು ಕಾಲೇಜಿನ ಅಧ್ಯಾಪಕರಾದುದೂ ಉಂಟು. ಅವರು ಕನ್ನಡ ಕಲಿತವರಾಗಲಿ, ಸಂಸ್ಕೃತ ಕಲಿತವರಾಗಲಿ ಅವರಿಗಿದ್ದ ಸ್ಥಾನಮಾನಗಳು ಅತ್ಯಂತ ಕೆಳಮಟ್ಟದ್ದಾಗಿತ್ತು. ಶಾಲು ಹೊದ್ದು, ತಲೆಗೆ ಪೇಟ ಸುತ್ತಿಕೊಂಡು ಬರುತ್ತಿದ್ದ ಅವರನ್ನು ಸೂಟುಬೂಟುಗಳನ್ನು ಧರಿಸಿದ ಇತರ ಅಧ್ಯಾಪಕರಿರಲಿ, ಅವರ ವಿದ್ಯಾರ್ಥಿಗಳೇ ಅವರ ಎದುರಿನಲ್ಲಿಯೇ ಹಾಸ್ಯ ಮಾಡಿಕೊಂಡು ನಗುತ್ತಿದ್ದರು. ಎಷ್ಟೋ ಜನ ವಿದ್ಯಾರ್ಥಿಗಳು ಕನ್ನಡಕ್ಕೆ ಬದಲಾಗಿ ಫ್ರೆಂಚ್ ಭಾಷೆಯನ್ನೋ, ಜರ್ಮನ್ ಭಾಷೆಯನ್ನೋ ದ್ವಿತೀಯ ಭಾಷೆಯಾಗಿ ತೆಗೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಒಮ್ಮೊಮ್ಮೆ ಅದ್ವಿತೀಯರಾದ ವಿದ್ವಾಂಸರು ಕನ್ನಡ ಅಧ್ಯಾಪಕರಾದುದುಂಟು. ಆದರೂ ಅವರಿಗಿದ್ದ ಸ್ಥಾನಮಾನಗಳು ಮಾತ್ರ ಅತ್ಯಂತ ಕೆಳದರ್ಜೆಯದು. ಆ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇನ್ನೂ ಸ್ಥಾಪನೆಯಾಗಿರಲಿಲ್ಲ. ಆಗಿನ ಕಾಲದ ಪ್ರೌಢಶಾಲೆಗಳನ್ನೂ ಒಳಗೊಂಡಿದ್ದ ಮೈಸೂರಿನ ಮಹಾರಾಜಾ ಕಾಲೇಜು ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮದ್ರಾಸ್ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಗಳಾಗಿದ್ದುವು. ಮೈಸೂರಿನ ಕಲಾ ವಿದ್ಯಾರ್ಥಿಗಳೂ ಬೆಂಗಳೂರಿನ ವಿಜ್ಞಾನ ವಿದ್ಯಾರ್ಥಿಗಳೂ 256 ಮೂರು ತಲೆಮಾರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕಾದರೆ ಮದ್ರಾಸಿಗೋ, ಬೊಂಬಾಯಿಗೋ, ಕಲ್ಕತ್ತೆಗೋ ಹೋಗಬೇಕಾಗಿತ್ತು. ಮದ್ರಾಸಿನಲ್ಲಿ ಕನ್ನಡ ಎಂ. ಎ. ಓದುವುದಕ್ಕೆ ಆಗ ತಾನೆ ಅವಕಾಶ ನೀಡಲಾಗಿತ್ತು. ಅದನ್ನು ಓದಬಯಸುವವರು ಯಾರೂ ಇರಲಿಲ್ಲ. ಹೀಗೆ ಕಡೆಯ ಗೂಟಕ್ಕೆ ಕಟ್ಟಿಹಾಕಿದ್ದ ‘ಕನ್ನಡ ಎಮ್ಮೆ’ಯನ್ನು ಓದಬೇಕೆಂದು ವೆಂಕಣ್ಣಯ್ಯ ನಿಶ್ಚಯಿಸಿದ. ಈ ನಿಶ್ಚಯವನ್ನು ತಂದೆಗೆ ತಿಳಿಸಿ, ಅವರ ಅಪ್ಪಣೆಯನ್ನು ಪಡೆದು ಮೈಸೂರಿಗೆ ಹೊರಟು ಬಂದ. ವೆಂಕಣ್ಣಯ್ಯ ಕನ್ನಡ ಎಂ.ಎ. ಓದುತ್ತಾರಂತೆ ಎಂಬ ಸುದ್ದಿ-ಯಾವಳೋ ಒಬ್ಬಳು ನಾಲ್ಕು ಮಕ್ಕಳನ್ನು ಏಕಕಾಲಕ್ಕೆ ಹೆತ್ತಳಂತೆ-ಎಂಬ ವಿಶೇಷ ಸಮಾಚಾರದಂತೆ ಅವರ ಗೆಳೆಯರಲ್ಲಿ ಪ್ರಚಾರವಾಯಿತು. ಅದನ್ನು ಕೇಳಿದವರೆಲ್ಲ ಮೂಗು ಮುರಿಯುವವರೇ! ಕೆಲವರಂತೂ ಪ್ರತ್ಯಕ್ಷವಾಗಿಯೇ ಅವರನ್ನು ಪ್ರಶ್ನಿಸಿದರು- ’ಏನು ವೆಂಕಣ್ಣಯ್ಯ ನೀವು ಕನ್ನಡದ ಎಮ್ಮೆ ಯಾಗುತ್ತೀರಾ?’ ಎಂದು. ವೆಂಕಣ್ಣಯ್ಯ ಅವರೊಡನೆ ತಾವೂ ನಗುತ್ತ ‘ಹೌದು ಹೌದು ವಿದೇಶೀ ದನಗಳನ್ನು ಸಾಕುವುದು ಕಷ್ಟ. ನಮ್ಮ ಸ್ವದೇಶಿ ಎಮ್ಮೆಯಾದರೆ ಹಾದಿಬೀದಿಯ ಹುಲ್ಲನ್ನು ಮೇದು, ಹೊಳೆಯಲ್ಲಿ ನೀರು ಕುಡಿದು ಮನೆಗೆ ಬಂದೊಡನೆಯೇ ತಂಬಿಗೆಯ ತುಂಬ ಹಾಲು ಕರೆಯುತ್ತದೆ. ಅಷ್ಟರಿಂದಲೇ ನಾನು ತೃಪ್ತ’ ಎನ್ನುತ್ತಿದ್ದರು. ಕನ್ನಡ ಎಂ.ಎ. ಪರೀಕ್ಷೆಗೆ ಕನ್ನಡದೊಡನೆ ಸಂಸ್ಕೃತ ಮತ್ತು ತೆಲುಗು ಪ್ರಶ್ನೆ ಪತ್ರಿಕೆಗಳಿಗೂ ಉತ್ತರಿಸಬೇಕಾಗುತ್ತಿತ್ತು. ಆ ಉತ್ತರ ಪತ್ರಿಕೆಗಳನ್ನು ಓದಿ ಬೆಲೆ ಕಟ್ಟುವವರು ಬಹುಮಟ್ಟಿಗೆ ಸಂಸ್ಕೃತ ವಿದ್ವಾಂಸರೆ. ಆದ್ದರಿಂದ ಸಂಸ್ಕೃತಕ್ಕೆ ಹೆಚ್ಚು ಗಮನ ಅಗತ್ಯವಾಗಿತ್ತು. ವೆಂಕಣ್ಣಯ್ಯ 1910 ರಿಂದ 1912 ರವರೆಗೆ ಮೈಸೂರಿನಲ್ಲಿ ನಿಂತು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಸುಪ್ರಸಿದ್ಧ ಕನ್ನಡ ವಿದ್ವಾಂಸರೆನಿಸಿದ್ದ ತಿಮ್ಮಪ್ಪಯ್ಯಶಾಸ್ತಿಗಳನ್ನು ಕನ್ನಡಕ್ಕೂ, ಮಹಾರಾಜಾ ಕಾಲೇಜಿನಲ್ಲಿ ಆಗ ತಾನೆ ತೆಲುಗು ಪಂಡಿತರಾಗಿ ಬಂದಿದ್ದ ರಾಳ್ಳಪಲ್ಲಿ ಅನಂತಕೃಷ್ಣಶರ್ಮರನ್ನು ತೆಲುಗಿಗೂ ಆಶ್ರಯಿಸಿ ಅವರು ಅಭ್ಯಾಸ ಮಾಡುತ್ತಿದ್ದರು. ಪಠ್ಯಪುಸ್ತಕಗಳನ್ನು ಆಳವಾಗಿ ಓದಿ, ಅಭ್ಯಾಸ ಮಾಡಿದುದು ಬಹುಶಃ ಅವರು ಈ ಎಂ.ಎ. ಪರೀಕ್ಷೆಗೆ ಮಾತ್ರವೇ ಎಂದು ಹೇಳಬಹುದು. ಅವರು ಸಂಸ್ಕೃತಕ್ಕೂ ತಕ್ಕ ಗುರು ಒಬ್ಬರನ್ನು ಅರಸುತ್ತಿರುವಾಗ ಅವರಿಗೆ ಶ್ರೀಕಂಠಶಾಸ್ತ್ರಿಗಳ ಪರಿಚಯವಾಯಿತು. ಶ್ರೀ ಶ್ರೀಕಂಠಶಾಸ್ತ್ರಿಗಳು ಚಿತ್ರದುರ್ಗದ ಸುಪ್ರಸಿದ್ಧ ವೈದಿಕ ಮನೆತವೊಂದಕ್ಕೆ ಸೇರಿದವರು. ಅವರು ವೆಂಕಣ್ಣಯ್ಯನವರ ದೂರದ ಬಂಧುಗಳೂ ಆಗಿದ್ದರು. ಅವರಿಬ್ಬರಿಗೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ವಯಸ್ಸು. ಇಬ್ಬರಿಗೂ ವಿವಾಹವಾಗಿತ್ತು. ಕಾಲೇಜು ವಿದ್ಯಾಭ್ಯಾಸ 257 ಗುರು ಒಂದು ಮಗುವಿನ ತಂದೆಯಾಗಿದ್ದರೆ ಶಿಷ್ಯ ಎರಡು ಮಕ್ಕಳ ತಂದೆಯಾಗಿದ್ದರು. ಅವರ ಹೆಗ್ಗುರಿ, ಅದರ ದಾರಿಗಳು ಮಾತ್ರ ಭಿನ್ನವಾಗಿದ್ದುವು. ಶಾಸ್ತ್ರಿಗಳು ಸಂಪ್ರದಾಯಶೀಲರು. ವೆಂಕಣ್ಣಯ್ಯನವರು, ಸಂಪ್ರದಾಯ ವಿರೋಧಿಗಳಲ್ಲದಿದ್ದರೂ ಸ್ವತಂತ್ರ ಯೋಚನಾಪರರು; ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳುವವರಲ್ಲ. ಶ್ರೀಕಂಠಶಾಸ್ತ್ರಿಗಳು ಸಂಸ್ಕೃತವನ್ನು ಓದಿ ಭಾರತ ಸಂಸ್ಕೃತಿಯನ್ನು ತಮ್ಮ ಜನಮನದಲ್ಲಿ ಸ್ಥಿರಗೊಳಿಸಬೇಕೆಂಬ ಕಳಕಳಿಯಿಂದ ಇದ್ದವರು. ವೆಂಕಣ್ಣಯ್ಯನವರು ಕನ್ನಡ ಎಂ.ಎ. ಓದಿ, ಕನ್ನಡಿಗರಲ್ಲಿ ಕನ್ನಡ ಪ್ರೇಮವನ್ನು ಚಚ್ಚರಗೊಳಿಸಬೇಕೆಂದು ಹವಣಿಸುತ್ತಿದ್ದವರು. ಶ್ರೀಕಂಠಶಾಸ್ತ್ರಿಗಳು ಮೈಸೂರಿನ ಸಂಸ್ಕೃತ ಮಹಾಪಾಠಶಾಲೆಯಲ್ಲಿ ವಿದ್ವತ್ ಪರೀಕ್ಷೆಗೆ ಓದುತ್ತಿದ್ದರು. ಆತ ಒಳ್ಳೆ ಮಟ್ಟಸವಾದ ಆಳು. ವಿಶಾಲವಾದ ಹಣೆ, ನಕ್ಷತ್ರದಂತೆ ಮಿನುಗುತ್ತಿದ್ದ ಕಣ್ಣುಗಳು, ಸದಾ ಮುಗುಳ್ನಗೆಯನ್ನು ಮುಡಿದಿರುವ ತುಟಿಗಳು. ಹಿತಮಿತ ಮಧುರೋಕ್ತಿಯ ಆ ವ್ಯಕ್ತಿಗೆ ಅಧ್ಯಾತ್ಮದಲ್ಲಿ ಅಪಾರವಾದ ಆಸಕ್ತಿ. ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಕೊಳ್ಳುವುದು ಆತನ ಸ್ವಭಾವ. ಆತ ಮಕ್ಕಳಲ್ಲಿ ಮಗು, ಹಿರಿಯರಲ್ಲಿ ಹಿರಿಯ, ಜ್ಞಾನಿಗಳ ಮಧ್ಯೆ ಪರಮ ಜ್ಞಾನಿ. ಕೋಪವೆಂದರೆ ಏನೆಂಬುದೇ ಆತನಿಗೆ ಗೊತ್ತಿಲ್ಲ. ಆತ ಸದಾ ಶಾಂತಮೂರ್ತಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆತನೊಬ್ಬ ದೇವಮಾನವ. ವೆಂಕಣ್ಣಯ್ಯನವರಿಗೆ ಆತನೇನೂ ಅಪರಿಚಿತನಾಗಿರಲಿಲ್ಲ. ಆದರೆ ಪರಸ್ಪರ ಸೇರುವ ಅವಕಾಶವಿರಲಿಲ್ಲವಾದ್ದರಿಂದ ಹೆಚ್ಚು ಸಲಿಗೆ ಬೆಳೆದಿರಲಿಲ್ಲ. ಈಗ ಅವರು ಇಬ್ಬರೂ ಹಿಂದಿನ ಪರಿಚಯವನ್ನು ಪುನರುಜ್ಜೀವನಗೊಳಿಸಿಕೊಂಡು ಪರಸ್ಪರ ಸೇರಿದರು. ಗೆಳೆತನ ಬೆಳೆಯಿತು. ಕ್ರಮ ಕ್ರಮವಾಗಿ ಜೀವ-ಆತ್ಮಗಳಂತೆ ಅವರು ಬೆಸೆದು ಹೋದರು. (ಮುಂದೆ ವೆಂಕಣ್ಣಯ್ಯನವರು ಸ್ವತಂತ್ರ ಜೀವಿಗಳಾದ ಮೇಲೆ ಈ ಶಾಸ್ತ್ರಿಗಳ ಛಾಯಾಚಿತ್ರವನ್ನು ದೇವರ ಮನೆಯಲ್ಲಿಟ್ಟು ಅದಕ್ಕೆ ಪುಷ್ಟಾಲಂಕಾರ ಮಾಡುತ್ತಿದ್ದುದುಂಟು). ಅನತಿ ಕಾಲದಲ್ಲಿಯೇ ಅವರಿಬ್ಬರೂ ಸೇರಿ, ಪ್ರತ್ಯೇಕವಾದ ಕೊಠಡಿಯೊಂದನ್ನು ಮಾಡಿಕೊಂಡು ಒಟ್ಟಿಗೆ ವಾಸಿಸುತ್ತಿದ್ದರು. ವೆಂಕಣ್ಣಯ್ಯನವರು ಪಾಶ್ಚಾತ್ಯ ತತ್ವಶಾಸ್ತ್ರವನ್ನು ಓದಿ ಅವರಿಗೆ ವಿವರಿಸುವರು. ಶಾಸ್ತ್ರಿಗಳು ಪ್ರಾಚ್ಯ ತತ್ವಶಾಸ್ತ್ರವನ್ನು ಸಂಸ್ಕೃತ ಸಾಹಿತ್ಯದೊಡನೆ ಪಾಠ ಮಾಡಿ ಹೇಳುವರು. ಈ ಬಗೆಯ ವಿನಿಮಯದಿಂದ ಇಬ್ಬರ ಜ್ಞಾನಭಂಡಾರಗಳೂ ಶ್ರೀಮಂತಗೊಳ್ಳುತ್ತಿದ್ದುವು. ಶ್ರೀಕಂಠಶಾಸ್ತ್ರಿಗಳು ತಮ್ಮ ಪರೀಕ್ಷೆ ಮುಗಿಯುತ್ತಲೆ ತಮ್ಮ ಗಮ್ಯ ಸ್ಥಾನವಾದ 258 ಮೂರು ತಲೆಮಾರು ಅಗಡಿಗೆ ಹೊರಟುಹೋದರು. ಧಾರವಾಡ ಜಿಲ್ಲೆಯಲ್ಲಿರುವ ಈ ಸಣ್ಣ ಹಳ್ಳಿಯಲ್ಲಿ ಶೇಷಾಚಲ ಭಗವಾನರೆಂಬ ದೊಡ್ಡ ಸಂತರೊಬ್ಬರು ಆನಂದವನವೆಂಬ ಒಂದು ಆಶ್ರಮವನ್ನು ಸ್ಥಾಪಿಸಿದ್ದರು. ಕಾರಣಾಂತರಗಳಿಂದ ನಮ್ಮ ಜನರಲ್ಲಿ ನಶಿಸಿಹೋಗುತ್ತಿರುವ ಆಸ್ತಿಕತೆಯನ್ನು ಪುನರುಜ್ಜೀವನಗೊಳಿಸಿ, ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಜನಮನದಲ್ಲಿ ಅರಳಸಬೇಕೆಂಬುದು ಅವರ ಹೆಗ್ಗುರಿಯಾಗಿತ್ತು. ಅವತಾರಪುರುಷರೆನಿಸಿದ ಅವರಲ್ಲಿ ಶಾಸ್ತ್ರಿಗಳಿಗೆ ಅಪಾರವಾದ ಭಕ್ತಿ. ಇದು ಅವರ ಮಡದಿಗೆ ಸರಿಬೀಳಲಿಲ್ಲ. ಆಕೆಯ ದೃಷ್ಟಿಯಲ್ಲಿ ಮೂಗು ಹಿಡಿದು ಕೂರುವುದು ಒಂದು ದೊಂಬರಾಟ. ಕಣ್ಣಿಗೆ ಕಾಣದ ಮೋಕ್ಷಕ್ಕಾಗಿ ಲೌಕಿಕ ಸುಖವನ್ನೆಲ್ಲ ತ್ಯಾಗ ಮಾಡುವುದು ಆಕೆಯ ದೃಷ್ಟಿಯಲ್ಲಿ ಒಂದು ಅವಿವೇಕತನ. ಲೌಕಿಕ ಸುಖದಲ್ಲಿ ಆಕೆಗೆ ತುಂಬ ಆಸಕ್ತಿ. ಎತ್ತು ಏರಿಗೆಳೆದರೆ ಕೋಣ ಕೆರೆಗೆಳೆಯಿತು ಎಂಬ ಗಾದೆಯಂತಿತ್ತು ಅವರ ಸಂಸಾರ ಜೀವನ. ಶಾಸ್ತ್ರಿಗಳು ತಮ್ಮ ಬಾಳಸಂಗಾತಿಯನ್ನು ತಮ್ಮ ದಾರಿಗೆಳೆದುಕೊಳ್ಳಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಅವರು ಆನಂದವನ ಆಶ್ರಮದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ನಿಂತು, ತಮ್ಮ ಸಂಬಳವನ್ನೆಲ್ಲ ಹೆಂಡತಿಗೆ ಕಳುಹಿಸಿಕೊಡುತ್ತಿದ್ದರು. ತಮ್ಮ ಬಾಳನ್ನೆಲ್ಲ ಶೇಷಾಚಲ ಭಗವಾನರ ಸೇವೆಗರ್ಪಿಸಿ, ಅವರು ಸಾರ್ಥಕ ಜೀವಿಗಳಾದರು. * * * * 259 3. ಧಾರವಾಡದಲ್ಲಿ ಅಧ್ಯಾಪಕನ ವೃತ್ತಿ ಶ್ರೀಕಂಠಶಾಸ್ತ್ರಿಗಳ ಅಗಲಿಕೆಯಿಂದ ವೆಂಕಣ್ಣಯ್ಯ ಕಂಗಾಲಾದರು. ವಿದ್ಯಾಭ್ಯಾಸದಲ್ಲಿ ಅವರಿಗಿದ್ದ ಆಸಕ್ತಿ ಕಡಿಮೆಯಾಗುತ್ತ ಹೋಯಿತು. ಅಗಡಿಯ ಹತ್ತಿರ ಎಲ್ಲಾದರೂ ಒಂದು ಪುಟ್ಟ ಉದ್ಯೋಗ ಸಿಕ್ಕಿದರೂ ಸಾಕು ಹೊರಟುಹೋಗೋಣ ಎಂದು ಚಡಪಡಿಸತೊಡಗಿದರು. ಬಹು ಬೇಗ ಅವರ ಬಯಕೆ ಕೈಗೂಡುವ ಸನ್ನಿವೇಶ ಸೃಷ್ಟಿಯಾಯಿತು. ವೆಂಕಣ್ಣಯ್ಯ ಮಹಾರಾಜಾ ಕಾಲೇಜಿನಲ್ಲಿ ಎಮ್.ಎ. ಓದುತ್ತಿದ್ದಾಗ ಜ್ಞಾನಕಣ್ಣನ್ ಎಂಬ ಕ್ರೈಸ್ತ ಬಾಲಕನೊಬ್ಬ ಬಿ.ಎ. ತರಗತಿಯಲ್ಲಿ ಓದುತ್ತಿದ್ದರು. ಆತನಿಗೂ, ವೆಂಕಣ್ಣಯ್ಯನಿಗೂ ತುಂಬ ಗೆಳೆತನ. ಆತ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಲೇ ಧಾರವಾಡದಲ್ಲಿದ್ದ ಬಾಸೆಲ್ ಮಿಷಿನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು. ತಮ್ಮ ಕಾರ್ಯಶ್ರದ್ಧೆ, ಸೂಕ್ಷ್ಮ ಬುದ್ಧಿಗಳಿಂದ ಬಹು ಬೇಗ ಅಲ್ಲಿನ ಮುಖ್ಯೋಪಾಧ್ಯಾಯರಾದರು. ಆ ಶಾಲೆಯಲ್ಲಿ ಇತಿಹಾಸದ ಉಪಾಧ್ಯಾಯರೊಬ್ಬರ ಕೆಲಸ ಖಾಲಿ ಬಿದ್ದಿತ್ತು. ಆ ಕಾಲದಲ್ಲಿ ಪದವೀಧರರಾದವರು ಸಿಕ್ಕುವುದು ಬಹು ಕಷ್ಟವಾಗಿತ್ತು. ಜ್ಞಾನಕಣ್ಣನ್‍ರವರು ತಕ್ಕ ಉಪಾಧ್ಯಾಯರಿಗಾಗಿ ತಡಕಾಡುತ್ತಿರುವಾಗ ವೆಂಕಣ್ಣಯ್ಯನವರ ಜ್ಞಾಪಕ ಬಂತು. ಅವರು ಪದವೀಧರರಾಗಿದ್ದುದು ಮಾತ್ರವಲ್ಲದೆ, ವಾರ್ಡ್‍ಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ಬೈಬಲ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದುದೂ ಗೊತ್ತಿತ್ತು. ಆದ್ದರಿಂದ ತಮ್ಮ ಶಾಲೆಗೆ ಆತನ ಸಹಾಯ ದೊರೆತರೆ ತುಂಬ ಪ್ರಯೋಜನವೆಂದು ಆತನಿಗೆ ಇತಿಹಾಸದ ಉಪಾಧ್ಯಾಯನಾಗಿ ಬರುವಂತೆ ಆಹ್ವಾನಿಸಿದರು. ರೋಗಿ ಬಯಸಿದುದು ಹಾಲು-ಅನ್ನ, ವೈದ್ಯ ಹೇಳಿದುದೂ ಹಾಲು-ಅನ್ನ ಎಂಬಂತಾಯಿತು. ವೆಂಕಣ್ಣಯ್ಯನವರು ಗಂಟುಮೂಟೆ ಕಟ್ಟಿಕೊಂಡು ಧಾರವಾಡಕ್ಕೆ ಪ್ರಯಾಣ ಬೆಳೆಸಿದರು. ತಾವು ಅಲ್ಲಿಗೆ ಹೋಗುತ್ತಿರುವುದನ್ನು ಗೆಳೆಯ ಶ್ರೀಕಂಠಶಾಸ್ತ್ರಿಗೆ ತಿಳಿಸುವುದನ್ನೂ ಅವರು ಮರೆಯಲಿಲ್ಲ. ತಮ್ಮ ಕರೆಗೆ ಓಗೊಟ್ಟು ವೆಂಕಣ್ಣಯ್ಯನವರು ಒಡನೆಯೇ ಹೊರಟುಬಂದುದಕ್ಕಾಗಿ ಜ್ಞಾನಕಣ್ಣನ್‍ಗೆ ಪರಮ ಸಂತೋಷವಾಯಿತು. ಅವರನ್ನು ಆದರದಿಂದ ಬರಮಾಡಿಕೊಂಡು ಪ್ರಾಂಶುಪಾಲರಾದ ಮುಲ್ಲರ್‍ರವರಿಗೆ 260 ಮೂರು ತಲೆಮಾರು ಪರಿಚಯಿಸಿದರು. ಅವರು ಭವ್ಯ ವ್ಯಕ್ತಿತ್ವದ ಈ ಉಪಾಧ್ಯಾಯನಿಗೆ ಹಸ್ತಲಾಘವವಿತ್ತು, ಹತ್ತಿರ ಕೂಡಿಸಿಕೊಂಡು ‘ವೆಂಕಣ್ಣಯ್ಯನವರೆ, ಈ ವಿದ್ಯಾಸಂಸ್ಥೆ ಕ್ರಿಸ್ತರದು, ಇದು ಇಲ್ಲಿನ ಮಕ್ಕಳನ್ನು ಮತಾಂತರಿಸುವುದಕ್ಕಾಗಿ ಹುಟ್ಟಿಕೊಂಡಿದೆ’ ಎಂದು ಇಲ್ಲಿನ ಜನ ಭಾವಿಸಿದ್ದಾರೆ. ಈ ತಪ್ಪು ಭಾವನೆಯನ್ನು ಹೋಗಲಾಡಿಸಿ ಈ ಸಂಸ್ಥೆಯ ಹೆಗ್ಗುರಿ ವಿದ್ಯಾಪ್ರಚಾರವೆಂಬುದನ್ನು ಜನಮನದಲ್ಲಿ ಬೇರೂರುವಂತೆ ಮಾಡಬೇಕಾಗಿದೆ. ಈ ಕಾರ್ಯದಲ್ಲಿ ನಿಮ್ಮ ಸಹಾಯ, ಸಹಕಾರಗಳು ಅಗತ್ಯ” ಎಂದರು. ವೆಂಕಣ್ಣಯ್ಯ ‘ದೇವರಿದ್ದಾನೆ, ಕೈಲಾದುದನ್ನು ಮಾಡೋಣ’ ಎಂದು ನಮ್ರವಾಗಿ ನುಡಿದರು. ಆ ಹೈಸ್ಕೂಲಿನಲ್ಲಿ ಅವರಿಗಿಂತಲೂ ಮೊದಲೆ ಮೈಸೂರು ಸಂಸ್ಥಾನದಿಂದ ಅಲ್ಲಿಗೆ ಬಂದು ಉಪಾಧ್ಯಾಯರಾಗಿ ಸೇರಿದ್ದ ಚೆಲುವಯ್ಯಂಗಾರ್, ನಾಗಕುಮಾರ್ ಮೊದಲಾದವರು ಮಾತ್ರವೇ ಅಲ್ಲ ಅಲ್ಲಿನ ಉಪಾಧ್ಯಾಯರೆಲ್ಲರೂ ವೆಂಕಣ್ಣಯ್ಯನವರ ಜೀವದ ಗೆಳೆಯರಾದರು. ಅಂದು ಸಂಜೆ ಜ್ಞಾನಕಣ್ಣನ್‍ರವರು ವೆಂಕಣ್ಣಯ್ಯನವರನ್ನು ಕರೆದೊಯ್ದು ಊರಿನ ಪ್ರಮುಖರೆಲ್ಲರ ಪರಿಚಯ ಮಾಡಿಸಿದರು. ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಕಡಪ ರಾಘವೇಂದ್ರರಾಯರು, ನರಗುಂದ ರಾಮರಾಯರು ಮೊದಲಾದವರೆಲ್ಲರ ಪರಿಚಯವಾಯಿತು. ಬೇರೊಂದು ಹೆಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದ ದ. ರಾ. ಬೇಂದ್ರೆಯವರೂ ಅವರ ಜೀವದ ಗೆಳೆಯರಾದರು. ಮೊದಲ ತಿಂಗಳ ಸಂಬಳ ಕೈಗೆ ಬರುತ್ತಲೇ ವೆಂಕಣ್ಣಯ್ಯನವರ ಚಿತ್ತ ತಳುಕಿನತ್ತ ಧಾವಿಸಿತು. ಬಹು ದೊಡ್ಡ ಸಂಸಾರ ರಥವನ್ನು ನಡೆಸಲು ಹೆಣಗುತ್ತಿದ್ದ ತಮ್ಮ ತಾಯ್ತಂದೆಗಳ ಚಿತ್ರ ಅವರ ಕಣ್ಣಿಗೆ ಕಟ್ಟಿತು. ಅವರು ತಮ್ಮ ಸಂಬಳದ ಅರ್ಧವಾದ ಮೂವತ್ತು ರೂಪಾಯಿಗಳನ್ನು ತಮ್ಮ ದುಡಿಮೆಯ ಪ್ರಥಮ ಫಲವಾಗಿ ತಂದೆಗೆ ಕಳುಹಿಸಿಕೊಟ್ಟರು. ಮಗ ಅಮಲ್ದಾರನಾಗಲಿಲ್ಲವೆಂದು ಕಿಂಕೃತಿಗೊಂಡ ಸುಬ್ಬಣ್ಣನವರಿಗೆ ಮಗನಿಗೆ ಅಮಲ್ದಾರರಷ್ಟೇ ಸಂಬಳ ಬರುತ್ತಿದೆಯಲ್ಲ ಎಂಬ ಸಮಾಧಾನವಾಯಿತು. ತಮ್ಮ ಮಗ ಕಳುಹಿಸಿಕೊಟ್ಟ ಹಣ ಸಣ್ಣದೇನೂ ಅಲ್ಲ, ಅದೊಂದು ಶಿರಸ್ತೇದಾರನ ಸಂಬಳ. ಧಾರವಾಡದಲ್ಲಿ ಮನೆ ಮಾಡಿರುವುದಾಗಿ ವೆಂಕಣ್ಣಯ್ಯನ ಪತ್ರದಿಂದ ತಿಳಿದುಬಂದಿತ್ತು. ಹೌದು ಆತನಿಗೆ ಬಾಡಿಗೆ ಇಲ್ಲದೆಯೇ ಒಂದು ದೊಡ್ಡ ಮನೆ ಸಿಕ್ಕಿತ್ತು. ಬರಿಯ ಮನೆಯಲ್ಲ. ಅದೊಂದು ದೊಡ್ಡ ಬಂಗಲೆ. ಅದು ದೇಸಾಯಿ ಮನೆತನದವರೊಬ್ಬರಿಗೆ ಸೇರಿತ್ತು. ಅದರ ಯಜಮಾನನಿಗೆ ಮಕ್ಕಳಿರಲಿಲ್ಲ. ಮನೆಯ ಒಂದು ಭಾಗದಲ್ಲಿ ಆತ ತನ್ನ ಮಡದಿಯೊಡನೆ ವಾಸವಾಗಿದ್ದರು. ಉಳಿದ ಬಹುಭಾಗವೆಲ್ಲ ಅವರ ಎರಡು ಧಾರವಾಡದಲ್ಲಿ ಅಧ್ಯಾಪಕನ ವೃತ್ತಿ 261 ನಾಯಿಗಳ ಸಾಮ್ರಾಜ್ಯವಾಗಿತ್ತು. ಯಾರಾದರೂ ಬಂದು ಅಲ್ಲಿ ವಾಸ ಮಾಡಬಾರದೆ ಎಂದು ಅವರು ಚಿಂತಿಸುತ್ತಿದ್ದರು. ಅವರ ಆ ಚಿಂತೆಯನ್ನು ವೆಂಕಣ್ಣಯ್ಯನವರು ನಿವಾರಿಸಿದರು. ಮಗ ಮನೆ ಮಾಡಿರುವೆನೆಂದು ಬರೆದುದನ್ನು ಅರ್ಥ ಮಾಡಿಕೊಂಡ ಸುಬ್ಬಣ್ಣನವರು ತಮ್ಮ ಸೊಸೆಯನ್ನು ಆಕೆಯ ಮಕ್ಕಳೊಡನೆ ಧಾರವಾಡಕ್ಕೆ ಕಳುಹಿಸಿದರು. ಅಲ್ಲಿ ಸಂಸಾರವನ್ನು ಹೂಡುತ್ತಲೇ ವೆಂಕಣ್ಣಯ್ಯನವರು ಚಿಕ್ಕಬಳ್ಳಾಪುರದಲ್ಲಿ ಭಿಕ್ಷಾನ್ನ ಮಾಡಿಕೊಂಡು ಹೈಸ್ಕೂಲಿನಲ್ಲಿ ಓದುತ್ತಿದ್ದ ತಮ್ಮ ಕೃಷ್ಣರಾಯನನ್ನು ಧಾರವಾಡಕ್ಕೆ ಕರೆಸಿಕೊಂಡು ಹೈಸ್ಕೂಲಿಗೆ ಸೇರಿಸಿದರು. ಎತ್ತಿಕೊಳ್ಳುತ್ತಲೇ ಸಂಸಾರ ಸಾಕಷ್ಟು ದೊಡ್ಡದಾಯಿತು. ಆದರೇನು? ಸ್ವಸುಖವನ್ನು ತ್ಯಾಗ ಮಾಡಿಯಾದರೂ ಆತನು ಪ್ರತಿ ತಿಂಗಳೂ ತಂದೆಗೆ 20 ರೂ. ಅನ್ನು ಕಳುಹಿಸುವುದನ್ನು ಮರೆಯಲಿಲ್ಲ. ವೆಂಕಣ್ಣಯ್ಯನವರ ಧಾರವಾಡದ ಜೀವನವನ್ನು ಕುರಿತು ಅವರ ಮಗ ಶೇಷಗಿರಿರಾಯ ತಮ್ಮ ಅನುಭವಗಳನ್ನು ಹೀಗೆ ಜ್ಞಾಪಿಸಿಕೊಳ್ಳುತ್ತಾರೆ - ‘ನಾನು, ನನ್ನ ತಮ್ಮ, ನನ್ನ ತಂಗಿ ಇಂದಿರಾ ಮತ್ತು ನನ್ನ ತಾಯಿ ಇಷ್ಟು ಜನರೊಂದಿಗೆ ಸಂಸಾರ ಆರಂಭವಾಯಿತು. ಜೊತೆಗೆ ನನ್ನ ಚಿಕ್ಕಪ್ಪ ಕೃಷ್ಣರಾಯರೂ ಬಂದು ಸೇರಿದರು. ಆಗಿನ ಒಂದೆರಡು ಸಂಗತಿಗಳು ನಿಜವಾಗಿಯೂ ಅವಿಸ್ಮರಣೀಯ. ನನಗೆ, ನನ್ನ ತಂದೆಯವರು ತುಂಬ ಕೋಪಿಷ್ಠರು, ಮಕ್ಕಳ ಪಾಲಿಗೆ ಅವರು ಯಮಸ್ವರೂಪರು ಎಂಬ ಭಾವನೆ ಅದುವರೆಗೆ ತಲೆಯಲ್ಲಿತ್ತು. ಆದರೆ ಅವರ ದರ್ಯಾದ್ರ್ರಹೃದಯವನ್ನು ಕಣ್ಣಾರೆ ಕಂಡಾಗ ಅದು ನನ್ನನ್ನು ಬೆರಗುಗೊಳಿಸಿತು. ಆಗ ತುಂಬ ಸುಭಿಕ್ಷಕಾಲ. ಪ್ರತಿ ಸಂಜೆ ಐದು ಘಂಟೆಗೆ ಸರಿಯಾಗಿ ತಂದೆಯವರು ಶಾಲೆಯಿಂದ ಮನೆಗೆ ಬರುವ ವೇಳೆಗೆ ಮಕ್ಕಳಾದ ನಮ್ಮ ಮೂವರಿಗೂ ಬೆಣ್ಣೆಕಾಯಿಸಿದ ತುಪ್ಪದಲ್ಲಿ ಬೂರಾಸಕ್ಕರೆಯನ್ನು ಸೇರಿಸಿ ಉಂಡೆಗಳನ್ನು ಮಾಡಿ ತಿನ್ನಲು ಕೊಡುವ ಏರ್ಪಾಡಾಗಿದ್ದಿತು. ಶಾಲೆಯಿಂದ ಬಂದಕೂಡಲೆ ನನ್ನ ತಾಯಿಯನ್ನು ವಿಚಾರಿಸಿ, ಅದಿನ್ನೂ ಆಗಿಲ್ಲವೆಂದು ಗೊತ್ತಾದರೆ ತಾವೇ ಸ್ವತಃ ಆ ಕೆಲಸವನ್ನು ಮಾಡುತ್ತಿದ್ದರು. ಆ ಮನೆಯಲ್ಲಿದ್ದ ನಾಯಿಗಳಿಗೆ ಆಗುತ್ತಿದ್ದ ಶುಶ್ರೂಷೆಯನ್ನು ನಮ್ಮ ತಾಯಿಗೆ ತೋರಿಸಿ ‘ಮಕ್ಕಳನ್ನು ಆ ನಾಯಿಗಳಷ್ಟು ಮಟ್ಟಿಗಾದರೂ ಪೋಷಣೆ ಮಾಡಬೇಡವೆ?’ ಎಂದು ಆಕೆಯನ್ನು ಗದರಿಸುವರು. ಆಗ ನನಗೆ ಆರು ವರ್ಷ, ನನ್ನ ತಮ್ಮ ರಾಘವನಿಗೆ ನಾಲ್ಕು ವರ್ಷ, ನನ್ನ ತಂಗಿ ಇಂದಿರೆಗೆ ಒಂದು ವರ್ಷ. ನಾವಿನ್ನೂ ಶಾಲೆಗೆ ಹೋಗುತ್ತಿರಲಿಲ್ಲ. ಮನೆಯಲ್ಲಿದ್ದ ನಾಯಿಗಳೊಡನೆ ಆಟವಾಡಿಕೊಂಡಿರುತ್ತಿದ್ದೆವು. ತಂದೆಯವರು ಎರಡು, ಮೂರು 262 ಮೂರು ತಲೆಮಾರು ಸಲ ಮನೆಯವರನ್ನೆಲ್ಲ ಆಗ ಸುಪ್ರಸಿದ್ಧವಾದ ಪಟವರ್ಧನ್ ಸರ್ಕಸ್ಸಿಗೆ ಕರೆದುಕೊಂಡು ಹೋದುದು ನನಗಿನ್ನೂ ಜ್ಞಾಪಕವಿದೆ. ರಜದ ದಿನಗಳಲ್ಲಿ ಅಂಗಡಿಗೆ ಹೋಗಿ ಬಂದುದೂ ಉಂಟು. ವೆಂಕಣ್ಣಯ್ಯನವರು ಗೋಮುಖವ್ಯಾಘ್ರರಲ್ಲ, ಯೌವನಕಾಲದಲ್ಲಿ ವ್ಯಾಘ್ರಮುಖಗೋವಿನಂತಿದ್ದರು. ಅವರಿಗೆ ಮಮತೆ ಎಂಬುದು ಮುಖವಾಡವಾಗಿರಲಿಲ್ಲ. ಹೃದಯ ವಜ್ರಕವಚವಾಗಿತ್ತು.’ ವೆಂಕಣ್ಣಯ್ಯನವರು ಕೆಲಸಕ್ಕೆ ಸೇರಿದ ದಿನ ಪ್ರಾಂಶುಪಾಲರಿಗಿತ್ತ ಭರವಸೆಯನ್ನು ಮರೆತಿರಲಿಲ್ಲ. ಬಹುಬೇಗ ಅವರ ಹೆಸರು ಧಾರವಾಡದಲ್ಲಿ ಮನೆಮಾತಾಗುವಂತಾಯಿತು. ಅಲ್ಲಿನ ಜನ ಅವರನ್ನು ‘ತಳುಕು ಮಾಸ್ತರ’ ಎಂದು ಕರೆಯುತ್ತಿದ್ದರು. ಅವರ ಈ ತಳುಕು ಮಾಸ್ತರು ಅಲ್ಲಿನ ವಿದ್ಯಾರ್ಥಿಗಳನ್ನು ಮಾತ್ರವೇ ಅಲ್ಲ, ಸಾರ್ವಜನಿಕರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿದರು. ಆಗಿನ ಕಾಲದಲ್ಲಿ ಕನ್ನಡಕ್ಕಿದ್ದ ಸ್ಥಾನಮಾನವನ್ನು ಕುರಿತು ಈ ಹಿಂದೆಯೇ ಪ್ರಸ್ತಾಪ ಮಾಡಿದ್ದೇವೆ. ಕ್ರಿಶ್ಚಿಯನ್ನರು ನಡೆಸುತ್ತಿದ್ದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಂತೂ ಅದು ಅತ್ಯಂತ ಕೆಳಮಟ್ಟಕ್ಕೆ ಇಳಿದಿತ್ತು. ಅಲ್ಲಿನ ಆಡಳಿತಾಧಿಕರಿಗಳಿಗಿಂತಲೂ ಅಲ್ಲಿನ ಉಪಾಧ್ಯಾಯರೂ, ವಿದ್ಯಾರ್ಥಿಗಳೂ ಕನ್ನಡಕ್ಕೆ ಖಗ್ರಾಸ ಗ್ರಹಣವನ್ನು ಹಿಡಿಸಿದ್ದರು. ಕನ್ನಡವೆಂಬುದು ಒಂದು ಅನಾಗರಿಕ ಭಾಷೆ ಎಂಬ ಭಾವನೆ ಶಾಲೆಯ ವಾತಾವರಣವನ್ನೆಲ್ಲ ಕಲುಷಿತಗೊಳಿಸಿತ್ತು. ವೆಂಕಣ್ಣಯ್ಯನವರು ಕನ್ನಡ ಕಲಿಸುವ ಉಪಾಧ್ಯಾಯರಾಗುತ್ತಲೇ ಅದಕ್ಕೆ ಶುಕ್ರಮಹಾದೆಸೆ ತಿರುಗಿತು. ಕನ್ನಡ ಪಾಠ ಮಕ್ಕಳ ಹೃದಯವನ್ನು ಸೂರೆಗೊಂಡಿತು. ಕೆಲದಿನಗಳಲ್ಲಿಯೇ ಇತರ ಪಾಠಗಳಿಗಿಂತ ಕನ್ನಡವೇ ಮಕ್ಕಳ ಅಕ್ಕರೆಯ ಸಕ್ಕರೆಯಾಯಿತು. ತಳುಕುಮಾಸ್ತರರ ಕನ್ನಡಪಾಠದ ವೈಖರಿಯನ್ನು ಕೇಳಿ, ಊರಿನ ಹಲವು ಹಿರಿಯರು ಅದನ್ನು ಕೇಳುವುದಕ್ಕಾಗಿಯೇ ಮಾಸ್ತರರ ಅಪ್ಪಣೆ ಪಡೆದು ಅವರ ತರಗತಿಯಲ್ಲಿ ಕುಳಿತುಕೊಳ್ಳತೊಡಗಿದರು. ಪ್ರತಿ ಶನಿವಾರ ಮಧ್ಯಾಹ್ನವೂ ಆ ಮಾಸ್ತರು ಮಕ್ಕಳಿಗೆ ಭಾಷಣ ಕಲೆಯನ್ನು ಅಭ್ಯಾಸ ಮಾಡಿಸುತ್ತಿದ್ದರಂತೆ. ಈ ಸನ್ನಿವೇಶವನ್ನು ಬಳಸಿಕೊಂಡು ಅವರು ಮಕ್ಕಳಲ್ಲಿ ಸತ್ ಸಂಪ್ರದಾಯವನ್ನು ಬಿತ್ತಿ ಬೆಳೆಯುತ್ತಿದ್ದರಂತೆ. ವಿದ್ಯಾರ್ಥಿಯಾಗಿದ್ದಾಗ ಪಠ್ಯೇತರ ವಿಷಯಗಳಲ್ಲಿ ಸ್ವಲ್ಪವೂ ಆಸಕ್ತಿ ವಹಿಸದಿದ್ದ ವೆಂಕಣ್ಣಯ್ಯನವರು ಈಗ ಅದರಲ್ಲಿಯೂ ತೇಲಿ ಮುಳುಗುತ್ತಿದ್ದರಂತೆ. ಶಾಲೆಯ ವಾರ್ಷಿಕೋತ್ಸವದಲ್ಲಿ ತಾವೇ ಮುಂದೆ ನಿಂತು ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಇತ್ಯಾದಿಗಳನ್ನು ಮಕ್ಕಳಿಂದ ಆಡಿಸುತ್ತಿದ್ದರಂತೆ! ಅಷ್ಟೇ ಅಲ್ಲ, ದಿನದಿನವೂ ಅವರು ಬೆಳಿಗ್ಗೆ ಟೆನಿಸ್ ಆಡಲು ಹೊರಡುತ್ತಿದ್ದರಂತೆ, ಇದನ್ನು ಕುರಿತು ಶ್ರೀವರದರಾಜ ಧಾರವಾಡದಲ್ಲಿ ಅಧ್ಯಾಪಕನ ವೃತ್ತಿ 263 ಹುಯಿಲಗೋಳರು ಹೀಗೆ ಹೇಳುತ್ತಾರೆ- ‘ವೆಂಕಣ್ಣಯ್ಯನವರು ಹೋಗಿದ್ದಾರೆ. ಅವರ ಸ್ಥಾನದಲ್ಲಿ ಅವರ ಸವಿನೆನಪಿನ ಭವ್ಯಮಂದಿರ ಧಾರವಾಡದಲ್ಲಿ ಈಗಲೂ ನಿಂತಿದೆ.’ ಧಾರವಾಡಕ್ಕೆ ಬಂದು ಎರಡು ವರ್ಷಗಳಾದ ಮೇಲೆ, 1914ರಲ್ಲಿ ವೆಂಕಣ್ಣಯ್ಯನವರು ಎಂ.ಎ. ಪರೀಕ್ಷೆಗೆ ಕುಳಿತುಕೊಳ್ಳಲೆಂದು ಮದ್ರಾಸಿಗೆ ಹೋದರು. ಆಗ ಅವರ ಗೆಳೆಯರಾದ ಎ.ಎನ್. ನರಸಿಂಹಯ್ಯನವರು ಮದ್ರಾಸಿನಲ್ಲಿ L.T. ಪರೀಕ್ಷೆಗೆ ಓದುತ್ತಿದ್ದರು. ವೆಂಕಣ್ಣಯ್ಯನವರು ಅವರ ಕೊಠಡಿಯಲ್ಲಿಯೇ ಇಳಿದುಕೊಂಡರು. ಆ ಕೊಠಡಿಯ ಪಕ್ಕದಲ್ಲಿಯೇ ಮೈಸೂರಿನ ಎಂಟು ಜನ ವಿದ್ಯಾರ್ಥಿಗಳು ಡಾಕ್ಟರ್ ಪರೀಕ್ಷೆಗೆ ಓದುತ್ತಿದ್ದರು. ದಿನವೂ ರಾತ್ರಿ ಊಟವಾದ ಮೇಲೆ ಗೆಳೆಯನ ಬಲವಂತಕ್ಕಾಗಿ ಕನ್ನಡ ಭಾರತ, ರಾಮಾಯಣಗಳಿಂದ ಕೆಲವು ಪದ್ಯಗಳನ್ನು ವೆಂಕಣ್ಣಯ್ಯ ಹಾಡುತ್ತಿದ್ದರು. ಒಮ್ಮೊಮ್ಮೆ ದಾಸರಹಾಡುಗಳನ್ನೋ, ವೇಮನನ ತೆಲುಗು ಪದ್ಯಗಳನ್ನೋ ಹಾಡುತ್ತಿದ್ದುದುಂಟು, ಸುಮಧುರವಾದ ಅವರ ಕಂಠಧ್ವನಿಗೆ ಮನಸೋತ ಪಕ್ಕದ ಕೊಠಡಿಯ ವಿದ್ಯಾರ್ಥಿಗಳು ಅದನ್ನು ಕದ್ದು ಕೇಳುತ್ತಿದ್ದರು. ಒಂದು ದಿನ ಅವರು ವೆಂಕಣ್ಣಯ್ಯನವರ ಬಳಿಗೆ ಬಂದು ‘ದಯವಿಟ್ಟು ನಮಗೂ ನಿಮ್ಮ ಗಾಯನವನ್ನು ಕೇಳುವ ಭಾಗ್ಯವನ್ನು ದಯಪಾಲಿಸಿರಿ’ ಎಂದು ಕೇಳಿಕೊಂಡರು. ಒಡನೆಯೇ ಅನುಮತಿ ಸಿಕ್ಕಿತು. ಅವರು ದಿನವೂ ತಪ್ಪದೆ ಆ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ಅವರ ಅಭ್ಯಾಸವೆಲ್ಲ ಮೈಸೂರಿಗೆ ಮುಗಿದಿತ್ತು. ಧಾರವಾಡಕ್ಕೆ ಬಂದ ಮೇಲೆ ಅವರ ದೃಷ್ಟಿ ಸಂಪೂರ್ಣವಾಗಿ ಅವರ ವಿದ್ಯಾರ್ಥಿಗಳತ್ತ ಹೊರಳಿತು. ಆದರೂ ಅವರ ಜ್ಞಾಪಕಶಕ್ತಿ ಸಾಕಷ್ಟು ಚುರುಕಾಗಿದ್ದರಿಂದ ಅವರು ಪರೀಕ್ಷೆಯಲ್ಲಿ ಉತ್ತಮವಾಗಿಯೇ ಉತ್ತರಗಳನ್ನು ಬರೆದು ಬಂದರು. ಧಾರವಾಡಕ್ಕೆ ಹಿಂದಿರುಗುವ ಮುನ್ನ ಅವರು ಅಗಡಿಯಲ್ಲಿದ್ದ ತಮ್ಮ ಗೆಳೆಯ ಶ್ರೀಕಂಠಶಾಸ್ತ್ರಿಗಳನ್ನು ಕಾಣಬಯಸಿದರು. ಆನಂದವನದೊಳಕ್ಕೆ ಕಾಲಿಡುತ್ತಲೇ ಶಾಸ್ತ್ರಿಗಳು ಅವರ ಕಣ್ಣಿಗೆ ಬಿದ್ದರು. ಒಡನೆಯೇ ಅವರು ಎಳೆಯ ಮಗುವಿನಂತೆ ಓಡಿ ಹೋಗಿ ಅವರನ್ನು ಅನಾಮತ್ತಾಗಿ ಆಲಿಂಗಿಸಿದರು. ಇಬ್ಬರ ಕಣ್ಣುಗಳಲ್ಲಿಯೂ ಆನಂದಾಶ್ರುಗಳು ಬಳಬಳ ಸುರಿದುವು. ಕ್ಷಣಕಾಲವಾದ ಮೇಲೆ ಅವರ ಭಾವೋದ್ವೇಗ ಹತೋಟಿಗೆ ಬಂದಿತು. ಪರಸ್ಪರ ಕ್ಷೇಮ ಸಮಾಚಾರಗಳನ್ನು ತಿಳಿದುಕೊಂಡು ಅವರಿಗೆ ಪರಸ್ಪರ ಕಾಣದಿದ್ದುಕ್ಕಾಗಿ ಇಬ್ಬರೂ ಪರಸ್ಪರ ಆಕ್ಷೇಪಣೆ, ಸಮಾಧಾನಗಳನ್ನು ವಿನಿಮಯ ಮಾಡಿಕೊಂಡರು. ಆ ಮೇಲೆ ಶ್ರೀಕಂಠಶಾಸ್ತ್ರಿಗಳು ಗೆಳೆಯನನ್ನು ಆಶ್ರಮದ ಮುಖ್ಯಪ್ರಾಣದಂತಿದ್ದ ಶೇಷಾಚಲಸದ್ಗುರುಗಳ ಬಳಿ 264 ಮೂರು ತಲೆಮಾರು ಕರೆದೊಯ್ದರು. ಆಗ ಗುರುಗಳು ತಮ್ಮ ಕೊಠಡಿಯಲ್ಲಿ ತಪೋಮಗ್ನರಾಗಿ ಕುಳಿತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಅವರು ಮೆಟ್ಟಿ ಬಿದ್ದವರಂತೆ ಚಚ್ಚರಗೊಂಡು ವೆಂಕಣ್ಣಯ್ಯನವರೊಡನೆ `ನಮಸ್ಕಾರ ಮಹಾರಾಜ್. ನಿಮ್ಮ ದರ್ಶನ ಮಾಡಬೇಕೆಂದು ನಾವು ಎಷ್ಟು ದಿನಗಳಿಂದ ಕಾದಿದ್ದೆವು? ಭಗವಂತನ ದಯದಿಂದ ಆ ಭಾಗ್ಯ ಈ ದಿನ ದೊರೆತಂತಾಯಿತು. ತುಂಬ ಸಂತೋಷ ಮಹಾರಾಜ್. ನೀವು ದಣಿದು ಬಂದಿದ್ದೀರಿ. ದಯವಿಟ್ಟು ಕುಳಿತುಕೊಳ್ಳಿ’ ಎಂದು ಚಿರಪರಿಚಿತರಂತೆ ಅವರೊಡನೆ ಮಾತನಾಡಿದರು. ಇದರಿಂದ ಅಚ್ಚರಿಗೊಂಡ ವೆಂಕಣ್ಣಯ್ಯ ಶ್ರೀರಾಮಕೃಷ್ಣರನ್ನು ಮೊಟ್ಟ ಮೊದಲಬಾರಿ ಕಾಣಹೊರಟ ವಿವೇಕಾನಂದರ ನೆನಪು ಮಾಡಿಕೊಂಡರು. ಅವರು ಅದನ್ನು ನೆನೆಪಿಸಿಕೊಳ್ಳುತ್ತಿದ್ದಂತೆ ಭಗವಾನರು ‘ದೊಡ್ಡವರು ಹೇಳುವುದೆಲ್ಲ ಒಂದೆ ಮಹಾರಾಜ್, ಅವರು ಹೇಳುವ ಮಾರ್ಗ ಬೇರೆ ಅಷ್ಟೆ. ನಾವು ಹೇಳುವುದೆಲ್ಲ ನಿಮಗೆ ಹೊಸದೇನಲ್ಲ, ನೀವು ತಿಳಿದಿರುವುದನ್ನೇ ಮತ್ತೆ ನಿಮಗೆ ಜ್ಞಾಪಿಸಿಕೊಡುತ್ತೇವೆ, ಅಷ್ಟೆ’ ಎಂದರು. ವೆಂಕಣ್ಣಯ್ಯ ಮುಗ್ಧರಾಗಿ ಬಿಡುಗಣ್ಣಿನಿಂದ ಭಗವಾನರತ್ತ ನೋಡುತ್ತಿರುವಾಗ ಭಗವಾನರು ಶಾಸ್ತ್ರಿಯವರತ್ತ ತಿರುಗಿ ‘ಮಹಾರಾಜ್’ ಆಶ್ರಮಕ್ಕೆ ದೊಡ್ಡವರು ಬಂದಿದ್ದಾರೆ, ತುಂಬ ದಣಿದುಬಂದಿದ್ದಾರೆ, ಎರಡು ದಿನ ಹಾಯಾಗಿ ನಿಮ್ಮ ಜೊತೆ ನಿಂತು ಆಯಾಸವನ್ನು ಪರಿಹರಿಸಿಕೊಳ್ಳಲಿ’ ಎಂದು ಹೇಳಿ ಕಣ್ಮುಚ್ಚಿದರು. ಭಗವಾನರ ಅಪ್ಪಣೆ, ಗೆಳೆಯನ ಬಲವಂತ ಇವುಗಳಿಗೆ ಕಟ್ಟುಬಿದ್ದು ವೆಂಕಣ್ಣಯ್ಯ ನಾಲ್ಕು ದಿನಗಳ ಕಾಲ ಆನಂದವನದಲ್ಲಿಯೇ ಉಳಿದುಕೊಂಡರು. ಭಗವಾನರನ್ನು ನೋಡಿ, ನೋಡಿದಂತೆ, ಅವರ ಮಾತುಗಳನ್ನು ಕೇಳಿ ಕೇಳಿದಂತೆ ವೆಂಕಣ್ಣಯ್ಯನವರಿಗೆ ಅವರೊಬ್ಬ ಮಹಾವಿಭೂತಿ ಪುರುಷರೆಂಬ ಭಾವನೆ ಬೆಳೆದು ಬಲಿಯಿತು. ಮರುದಿನ ಸೋಮವಾರ, ಆ ದಿನ ಬೆಳಿಗ್ಗೆ ವೆಂಕಣ್ಣಯ್ಯ ಶಾಸ್ತ್ರಿಗಳೊಡನೆ ಭಗವಾನರ ದರ್ಶನಕ್ಕೆಂದು ಹೋದಾಗ ಅಲ್ಲಿನ ಭಕ್ತವೃಂದ ಅವರನ್ನು ಒಂದು ಕುರ್ಚಿಯಲ್ಲಿ ಕೂಡಿಸಿ ಶೋಡಶೋಪಚಾರ ಪೂಜೆಯನ್ನು ನಡೆಸುತ್ತಿದ್ದರು. ಮಾನವರನ್ನು ಆತ ಎಷ್ಟೇ ದೊಡ್ಡವನಾಗಿರಲಿ ದೇವರಂತೆ ಪೂಜಿಸುವುದು ವೆಂಕಣ್ಣಯ್ಯನವರಿಗೆ ವಿಲಕ್ಷಣವಾಗಿ ಕಾಣಿಸಿತು. ಅಷ್ಟರಲ್ಲಿ ರುದ್ರಮಂತ್ರವನ್ನು ಹೇಳುವ ಬ್ರಾಹ್ಮಣ ಹೊತ್ತಿಗೆ ಸರಿಯಾಗಿ ಬಾರದೆ ಅಭಿಷೇಕ ನಿಲ್ಲುವಂತಾಯಿತು. ಒಡನೆಯೇ ಭಗವಾನರು ತಾವೇ ರುದ್ರಮಂತ್ರವನ್ನು ಪಠಿಸಲು ಪ್ರಾರಂಭಿಸಿದರು. ಶಿಷ್ಯರು ಪಾದಾಭಿಷೇಕಕ್ಕೆ ಪ್ರಾರಂಭಿಸಿದರು. ಇದಂತೂ ವೆಂಕಣ್ಣಯ್ಯನವರನ್ನು ಬೆಕ್ಕಸ ಬೆರಗಾಗಿಸಿತು. ತಮ್ಮ ಪಾದಕ್ಕೆ ಪೂಜೆ ಮಾಡುತ್ತಿರುವಾಗ ಧಾರವಾಡದಲ್ಲಿ ಅಧ್ಯಾಪಕನ ವೃತ್ತಿ 265 ತಾವೇ ಮಂತ್ರ ಹೇಳುವುದೆ? ಈ ಯೋಚನೆಯಲ್ಲಿ ಅವರು ಮುಳುಗಿರುವಾಗ ಪೂಜೆ ಮುಗಿಯಿತು. ಭಗವಾನರು ತೀರ್ಥವನ್ನು ನೀಡಿ ಅನುಗ್ರಹಭಾಷಣ ಮಾಡಲು ಆರಂಭಿಸಿದರು. ಆ ಭಾಷಣದಲ್ಲಿ ಪೂಜೆ ಎಂದರೇನು? ಯಾರಿಗೆ ಪೂಜೆ? ದೇಹಕ್ಕೋ, ಜೀವಕ್ಕೋ, ಆತ್ಮಕ್ಕೋ? ದೇಹ-ಜೀವಾತ್ಮಗಳ ಸಂಬಂಧವೇನು? ಇತ್ಯಾದಿ. ಈ ಭಾಷಣವನ್ನು ಕೇಳುತ್ತ ಹೋದಂತೆ ವೆಂಕಣ್ಣಯ್ಯನವರಿಗೆ ಹೊಸದೊಂದು ಬೆಳಕು ಮೂಡಿದಂತಾಯಿತು. ತಮ್ಮ ಮನಸ್ಸಿನ ಗುಟ್ಟು ಭಗವಾನರಲ್ಲಿ ರಟ್ಟು ; ಅವರು ಸಾಮಾನ್ಯರಲ್ಲ ; ಅವರೊಬ್ಬ ಸತ್ಯ ಸಾಕ್ಷಾತ್ಕಾರವಾದ ಮಹಾಚೇತನ! ಅವರು ಶೇಷಾಚಲಭಗವಾನರನ್ನು ತಮ್ಮ ಮನದಲ್ಲಿಯೇ ಗುರುವಾಗಿ ಸ್ವೀಕರಿಸಿದರು. ಫಲತಾಂಬೂಲಗಳೊಡನೆ ಹತ್ತು ರೂಪಾಯಿಗಳನ್ನು ಅವರ ಮುಂದಿಟ್ಟು ದೀರ್ಘದಂಡ ನಮಸ್ಕಾರ ಹಾಕಿದರು. ಭಗವಾನರು ಮುಗುಳ್ನಗುತ್ತ ಅದನ್ನು ಮುಟ್ಟಿ ‘ಮಹಾರಾಜ್, ಗುರು ಶಿಷ್ಯರ ವಿತ್ತಾಪಹಾರಕನಲ್ಲ, ಶ್ರೇಯಸ್ಸಾಧಕ. ಈಗ ನೀವು ಇಲ್ಲಿಟ್ಟಿರುವ ಹಣ ನನಗಿಂತ ನಿಮಗೇ ಹೆಚ್ಚು ಅಗತ್ಯವಾಗಿದೆ. ಅದನ್ನು ಎತ್ತಿ ನಿಮ್ಮ ಜೇಬಿಗೆ ಹಾಕಿಕೊಳ್ಳಿ. ಮುಂದೆ ನೀವು ಐದುನೂರ ರೂಪಾಯಿ ಪಗಾರದ ದೊಡ್ಡ ಅಧಿಕಾರಕ್ಕೇರುತ್ತೀರಿ. ಆಗ ನಿಮ್ಮ ಒಂದು ತಿಂಗಳ ಪಗಾರದೊಡನೆ ಈ ಹಣವನ್ನೂ ಸೇರಿಸಿಕೊಡಿ. ನಮಗಲ್ಲ, ನಮ್ಮ ಆಶ್ರಮಕ್ಕೆ’ ಎಂದು ಹೇಳಿ ಆಶೀರ್ವಾದ ಪೂರ್ವಕ ಫಲಮಂತ್ರಾಕ್ಷತೆಗಳನ್ನು ನೀಡಿದರು. ವೆಂಕಣ್ಣಯ್ಯನವರು ಪ್ರಶ್ನಾರ್ಥಕ ದೃಷ್ಟಿಯಿಂದ ಶ್ರೀಕಂಠಶಾಸ್ತ್ರಿಗಳತ್ತ ದೃಷ್ಟಿ ಹಾಯಿಸಿದರು. ಅವರು ‘ಇದು ಭಗವಾನರ ಅನುಗ್ರಹ’ ಎಂದರು. ಆಗ ಭಗವಾನರು ನಗುನಗುತ್ತ ‘ಮಹಾರಾಜ್ ನುಡಿದಂತೆ ನಡಿ, ಇದೇ ನಿನ್ನ ಜನ್ಮಕ್ಕೆ ಕಡಿ’ ಎಂದರು. ಕಡೆಯ ಮಾತನ್ನು ಕೇಳಿ ವೆಂಕಣ್ಣಯ್ಯನವರು ಹರ್ಷಪುಳಕಿತರಾದರು. ಕಣ್ಣಲ್ಲಿ ಹರ್ಷಾಶ್ರು ತುಂಬಿತು. ಅವರು ಮತ್ತೊಮ್ಮೆ ಭಗವಾನರಿಗೆ ನಮಸ್ಕರಿಸಿ ಧಾರವಾಡದ ಹಾದಿ ಹಿಡಿದರು. ವೆಂಕಣ್ಣಯ್ಯನವರು ಆನಂದವನದಲ್ಲಿ ಕಳೆದ ನಾಲ್ಕು ದಿನಗಳು ಅವರ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದವು. ಶ್ರೀ ಭಗವಾನರು ಅವರ ಹೃದಯದ ಮೇಲೆ ತಮ್ಮ ವ್ಯಕ್ತಿತ್ವದ ಚಿರಮುದ್ರೆಯನ್ನು ಒತ್ತಿದುದು ಮಾತ್ರವೇ ಅಲ್ಲ, ಭಗವಾನರ ಪಟ್ಟ ಶಿಷ್ಯರೆನಿಸಿದ ನಾರಾಯಣ ಭಗವಾನ್, ಶಂಕರ ಭಗವಾನ್, ಶ್ರೀನಿವಾಸ ಭಗವಾನ್‍ರವರ ಸಹವಾಸ ಸೌಭಾಗ್ಯ ದೊರೆತಿತ್ತು. ಇವರೆಲ್ಲರೂ ಅಧ್ಯಾತ್ಮದಲ್ಲಿ ತುಂಬ ಮುಂದುವರಿದಿದ್ದವರು. ಅಲ್ಲಿನ ಮಾಸಪತ್ರಿಕೆ ‘ಸದ್ಬೋಧ ಚಂದ್ರಿಕೆ’ ಕೆಲಸ ಮಾಡುತ್ತಿದ್ದ ಗಳಗನಾಥರು, ಎಲ್ಲೋ ಗುಡ್ಡೋ ಕುಲಕರ್ಣಿ 266 ಮೂರು ತಲೆಮಾರು ಮೊದಲಾದ ಸಾಹಿತಿಗಳ ಪರಿಚಯವಾಯಿತು. ಅವರ ಅಪೇಕ್ಷೆಯಂತೆ ವೆಂಕಣ್ಣಯ್ಯನವರು ಮಾಸಪತ್ರಿಕೆಗೆ ಆಗಾಗ ಲೇಖನಗಳನ್ನು ಬರೆದುಕೊಡುವುದಾಗಿ ಒಪ್ಪಿಕೊಂಡರು. ಅವರ ಪ್ರಪ್ರಥಮ ಲೇಖನ ಪ್ರಕಟವಾದುದು ‘ಸದ್ಬೋಧ ಚಂದ್ರಿಕೆ’ಯಲ್ಲಿಯೇ. ಅಂದು ಅವರು ಬರೆದ ಕೆಲವು ಲೇಖನಗಳು ಇತ್ತೀಚೆಗೆ ಆಶ್ರಮದಿಂದ ಪ್ರಕಟವಾಗಿರುವ ‘ಆನಂದವನ’ದಲ್ಲಿ ಪ್ರಕಾಶಗೊಂಡಿವೆ. ಕನ್ನಡ ಎಂ.ಎ. ಪದವಿಯನ್ನು ಪಡೆದವರಲ್ಲಿ ವೆಂಕಣ್ಣಯ್ಯನವರೇ ಮೊಟ್ಟ ಮೊದಲಿಗರೇನೊ! ನನಗೆ ಆ ವಿಚಾರ ಸ್ಪಷ್ಟವಾಗಿ ತಿಳಿದಿಲ್ಲ. ಪರೀಕ್ಷೆಯ ಫಲಿತಾಂಶ ತಂತಿಯ ಮೂಲಕ ಮೊದಲು ಗೊತ್ತಾದುದು ಪ್ರಾಂಶುಪಾಲರಾದ ಮುಲ್ಲರ್ ಸಾಹೇಬರಿಗೆ. ಅವರು ಹೃತ್ಪೂರ್ವಕವಾದ ಅಭಿನಂದನೆಯನ್ನು ಅರ್ಪಿಸಿದರು. ‘ಶ್ರೀಮಾನ್ ವೆಂಕಣ್ಣಯ್ಯನವರೇ, ಈಗ ತಾನೆ ಮದ್ರಾಸಿನಿಂದ ತಂತಿ ಬಂದಿದೆ. ನೀವು ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ. ನೀವು ನಮ್ಮ ಶಾಲೆಯ ಅಧ್ಯಾಪಕರಾಗಿರುವುದು ನಮಗೊಂದು ಹೆಮ್ಮೆ. ನಿಮ್ಮಿಂದ ನಮ್ಮ ಶಾಲೆಗೆ ತುಂಬ ಒಳ್ಳೆಯ ಹೆಸರು ಬಂದಿದೆ. ನಮ್ಮ ಶಾಲೆಯ ಮೇಲೆ ಇದ್ದ ಒಂದು ದೂರು ನಿಮ್ಮ ದೆಸೆಯಿಂದ ನಿವಾರಣೆಯಾಯಿತು. ಆ ದೃಷ್ಟಿಯಿಂದಲೂ ನೀವು ಅಭಿನಂದನಾರ್ಹರು. ಇಂದಿನಿಂದ ನಿಮ್ಮ ಸಂಬಳ ಎಪ್ಪತ್ತೈದು ರೂಪಾಯಿ’ ಎಂದರು, ಪ್ರಾಂಶುಪಾಲರ ಹತ್ತಿರದಲ್ಲಿಯೇ ಕುಳಿತಿದ್ದ ಮುಖ್ಯೋಪಾಧ್ಯಾಯರಿಗಂತೂ ಹಿಡಿಸಲಾರದಷ್ಟು ಸಂತೋಷ. ತಾವು ಕರೆಸಿದ ವೆಂಕಣ್ಣಯ್ಯ ಎಷ್ಟು ದೊಡ್ಡವರು, ಎಷ್ಟು ಮೇಧಾವಿಗಳು, ಎಷ್ಟು ದಕ್ಷರು, ಎಂತಹ ಸಜ್ಜನರು, ಎಂತಹ ಜನಾನುರಾಗಿಗಳು! ಅವರು ಎಂ.ಎ. ಪದವೀಧರರಾಗಿದ್ದಕ್ಕಾಗಿ ಅಂದು ಮಧ್ಯಾಹ್ನ ಶಾಲೆಗೆ ರಜ. ಅಂದು ಸಂಜೆ ಅಭಿನಂದನಾ ಸಮಾರಂಭ. ಪ್ರಾಂಶುಪಾಲರು ಸಮಾರಂಭದ ಅಧ್ಯಕ್ಷರಾಗಿ ವೆಂಕಣ್ಣಯ್ಯನವರನ್ನು ಬಾಯ್ತುಂಬ ಹೊಗಳಿ ಸನ್ಮಾನಿಸಿದರು. ವೆಂಕಣ್ಣಯ್ಯನವರು ಮೂರು ವರ್ಷಕಾಲ ಧಾರವಾಡದಲ್ಲಿದ್ದರು. ಅಷ್ಟರಲ್ಲಿ ಅವರ ಗೆಳೆಯರು ಮೈಸೂರಿಗೋ, ಬೆಂಗಳೂರಿಗೋ ಹಿಂದಿರುಗಿ ಬರುವಂತೆ ಮತ್ತೆ ಮತ್ತೆ ಅವರಿಗೆ ಪತ್ರ ಬರೆಯುತ್ತಿದ್ದರು. ಎಂ.ಎ. ಪದವೀಧರರಾದ ಮೇಲಂತೂ ಈ ಆಹ್ವಾನಕ್ಕೆ ವಿಶೇಷ ಸೆಳವು ಬಂದಿತ್ತು. ಧಾರವಾಡ ಮದ್ರಾಸು ಆಧಿಪತ್ಯಕ್ಕೆ ಸೇರಿತ್ತು. ‘ಕನ್ನಡ ಎಂ.ಎ. ಪದವಿಯನ್ನು ಪಡೆದವರಿಗೆ ಮೇಲಕ್ಕೇರಲು ಅಲ್ಲಿ ಆಸ್ಪದವೆಲ್ಲಿದೆ? ಮೈಸೂರು ಬೆಂಗಳೂರುಗಳ ಕಾಲೇಜುಗಳಲ್ಲಿ ಇಂದಲ್ಲ ನಾಳೆ ಕೆಲಸ ಸಿಕ್ಕಿ ಮೇಲಕ್ಕೇರುವ ಸಾಧ್ಯತೆಗಳಿವೆ’ ಎಂದು ಅವರು ಬಲವಂತ ಧಾರವಾಡದಲ್ಲಿ ಅಧ್ಯಾಪಕನ ವೃತ್ತಿ 267 ಪಡಿಸುತ್ತಿದ್ದರು. ತಂದೆ ಸುಬ್ಬಣ್ಣನವರೂ, ಚಿಕ್ಕಪ್ಪ ಶ್ರೀನಿವಾಸರಾಯರೂ ಮೇಲಿಂದ ಮೇಲೆ ಸರ್ಕಾರಿ ಹುದ್ದೆಗೆ ಸೇರಿಕೊಳ್ಳುವಂತೆ ಒತ್ತಾಯಿಸಿದ್ದರು. ವೆಂಕಣ್ಣಯ್ಯ ಮುಲ್ಲರ್ ಸಾಹೇಬರ ಸಲಹೆಯನ್ನು ಕೇಳಿದ ; ಅವರು ಹೇಳಿದರಂತೆ - “ಅಯ್ಯಾ ! ಸರ್ಕಸ್ಸಿನ ಸಿಂಹ ತನ್ನ ಯಜಮಾನನನ್ನು ಕುರಿತು ‘ನಾನು ಇಲ್ಲಿ ಇರಲೋ, ಕಾಡಿಗೆ ಹೋಗಲೋ’ ಎಂದು ಕೇಳಿದರೆ ಅವನು ಏನು ಹೇಳುತ್ತಾನೆ? ನಾನೂ ಅಷ್ಟೆ. ನಿಮ್ಮನ್ನು ಮುಖ್ಯೋಪಾಧ್ಯಾಯ ನನ್ನಾಗಿ ಮಾಡಬಹುದು. ಆದರೆ ನಿಮ್ಮ ವಿದ್ಯೆಗೆ ನನ್ನ ಸಂಸ್ಥೆ ತುಂಬ ಚಿಕ್ಕದು. ಇಲ್ಲಿ ಭವ್ಯ ಭವಿಷ್ಯತ್ತೇನೂ ಇಲ್ಲ. ನಿಮಗೆ ಮಹತ್ವಾಕಾಂಕ್ಷೆಯಿದ್ದರೆ ಅಗತ್ಯವಾಗಿಯೂ ಬೇರೆ ಕಡೆ ಹೊರಡಿ. ನಿಮಗೆ ಭಗವಂತನು ಸಮಸ್ತ ಸನ್ಮಂಗಳಗಳನ್ನೂ ನೀಡಲೆಂದು ನಾನು ಹರಸಿ ಹಾರೈಸುತ್ತೇನೆ’ ಎಂದರು. ವೆಂಕಣ್ಣಯ್ಯನಿಗೆ ಮಹತ್ವಾಕಾಂಕ್ಷೆಗಿಂತಲೂ ತನ್ನ ಹಿರಿಯರ ಹಿತನುಡಿ ಮುಖ್ಯವಾಗಿತ್ತು. ಆತ ಬೆಂಗಳೂರಿನ ಗೆಳೆಯನಿಗೆ ಪತ್ರ ಬರೆದ - ‘ನಾನು ಸಂಸಾರವೊಂದಿಗ, ಬೆಂಗಳೂರಿನಲ್ಲಿ ಸಂಸಾರ ಸಾಗಿಸುವಂತಹ ಸಂಪಾದನೆಗೆ ಅವಕಾಶವಿದ್ದರೆ ಅಗತ್ಯವಾಗಿಯೂ ಅಲ್ಲಿಗೆ ಹೊರಟುಬರುತ್ತೇನೆ’ ಎಂದು. ಇಲ್ಲಿಗೆ ಬಂದು ಆ ಕೆಲಸಕ್ಕೆ ಸೇರಬಹುದ’ ಎಂದು ಮರುಟಪಾಲಿಗೆ ಪ್ರತ್ಯುತ್ತರ ಬಂತು - ‘ಇಲ್ಲಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇತಿಹಾಸ ಅಧ್ಯಾಪಕನ ಕೆಲಸವೊಂದು ಖಾಲಿ ಇದೆ. ಒಡನೆಯೇ ನೀನು ಇಲ್ಲಿಗೆ ಬಂದು ಆ ಕೆಲಸಕ್ಕೆ ಸೇರಬಹುದು’ ಎಂದು. ಒಡನೆಯೇ ವೆಂಕಣ್ಣಯ್ಯ ಧಾರವಾಡದಿಂದ ಬೀಳ್ಕೊಂಡು ಬೆಂಗಳೂರಿಗೆ ಹೊರಟು ಬಂದರು. * * * * 268 ಮೂರು ತಲೆಮಾರು 4. ಬೆಂಗಳೂರಿನ ಜೀವನ 1916ರಲ್ಲಿ ಬೆಂಗಳೂರಿಗೆ ಬಂದ ವೆಂಕಣ್ಣಯ್ಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ 75ರೂ. ಸಂಬಳದ ಮೇಲೆ ಇತಿಹಾಸದ ಉಪಾಧ್ಯಾಯರಾದರು. ಅವರು ತಮ್ಮ ಗೆಳೆಯರಾದ ಎ.ಆರ್. ಕೃಷ್ಣಶಾಸ್ತ್ರಿ ಮತ್ತು ಎ.ಎನ್. ನರಸಿಂಹಯ್ಯನವರ ಸಹಾಯದಿಂದ ಕಂಟೋನ್ಮೆಂಟಿನ ಕ್ಲಾಕ್ ರಸ್ತೆಯಲ್ಲಿ ಹದಿನೈದು ರೂಪಾಯಿಗಳಿಗೆ ದೊಡ್ಡದೊಂದು ಬಂಗಲೆಯನ್ನು ಬಾಡಿಗೆಗೆ ಹಿಡಿದರು. ಮನೆ ಒಂದು ಸಂಸಾರಕ್ಕೆ ಬಹು ದೊಡ್ಡದಾಗಿದ್ದುದರಿಂದ ಮೂವರೂ ತಮ್ಮ ಸಂಸಾರಗಳನ್ನು ಅಲ್ಲಿಯೇ ಹೂಡಿದರು. ವೆಂಕಣ್ಣಯ್ಯ ತಮ್ಮ ಹೆಂಡತಿ ಮಕ್ಕಳೊಡನೆ ದೊಡ್ಡಮ್ಮ ನರಸಮ್ಮನವರನ್ನೂ ಅಲ್ಲಿಗೆ ಕರೆಸಿಕೊಂಡರು. ಆವೇಳೆಗೆ ಅವರ ತಮ್ಮ ಕೃಷ್ಣರಾಯ ಹನ್ನೆರಡು ರೂಪಾಯಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮುಂದಿನ ಮಾರ್ಗದರ್ಶನಕ್ಕೆ ಅಣ್ಣನವರನ್ನು ಆಶ್ರಯಿಸಿದರು. ನ್ಯಾಯವಾಗಿ ಮುಂದಕ್ಕೆ ಓದಲು ಆತ ಕಾಲೇಜನ್ನು ಸೇರಬೇಕಾಗಿತ್ತು. ಆದರೆ ಆಗ ತಂದೆಯವರು ತುಂಬ ತಾಪತ್ರಯಕ್ಕೆ ಸಿಕ್ಕಿಕೊಂಡಿದ್ದರು. ಅವರತ್ತ ಗಮನಹರಿಸುವುದು ವೆಂಕಣ್ಣಯ್ಯನವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದ ಕಾಲೇಜಿಗೆ ಸೇರಲು ಬಂದ ತಮ್ಮನನ್ನು ಅವರು ಅಠಾರಾ ಕಛೇರಿಯಲ್ಲಿ ಒಂದು ಗುಮಾಸ್ತೆಯ ಕೆಲಸಕ್ಕೆ ಸೇರಿಸಬೇಕಾಯಿತು. ಆತ ತರುತ್ತಿದ್ದ 20 ರೂಪಾಯಿ ಸಂಬಳದ ಜೊತೆಗೆ ತಮ್ಮ ಸಂಬಳದ 25 ಅನ್ನು ಸೇರಿಸಿ ಪ್ರತಿ ತಿಂಗಳೂ ತಂದೆಗೆ ಕಳುಹಿಸುತ್ತಿದ್ದರು. ತಮ್ಮನಿಗೆ ಸಂಬಳ ಬರುತ್ತಲೇ ಅವರು ಒಂದು ರೂಪಾಯಿಯನ್ನ ಮಾತ್ರ ಕೊಡುತ್ತಿದ್ದರು. ಅರ್ಧ ಆಣೆಗೆ ಒಂದು ಲೋಟ ಕಾಫಿ ಸಿಗುತ್ತಿದ್ದ ಕಾಲ ಅದು ! ಮನೆಯಿಂದ ತಿಂಡಿಯನ್ನು ತೆಗೆದುಕೊಂಡು ಕಾಲ್ನಡಿಗೆಯಲ್ಲಿ ಕಛೇರಿಗೆ ಹೋಗುತ್ತಿದ್ದ ತಮ್ಮನ ಖರ್ಚಿಗೆ ಅಷ್ಟು ಸಾಕಾಗುತ್ತಿತ್ತು. ತನ್ನವರಿಗೇ ಆಗಲಿ, ಇತರರಿಗೇ ಆಗಲಿ ಅಗತ್ಯಬಿದ್ದಾಗ ನೂರಾರು ರೂಪಾಯಿಗಳನ್ನು ಸಾಲ ಮಾಡಿಯಾದರೂ ಒದಗಿಸುತ್ತಿದ್ದ ವೆಂಕಣ್ಣಯ್ಯನವರು ಅನಗತ್ಯವಾಗಿ ಒಂದು ಕಾಸನ್ನೂ ಖರ್ಚು ಮಾಡದಿದ್ದುದು ಅವರ ಸ್ವಭಾವವಾಗಿತ್ತು. ವೆಂಕಣ್ಣಯ್ಯ ಕಂಟೋನ್ಮೆಂಟಿನಲ್ಲಿದ್ದಾಗ ನಡೆದ ಹತ್ತಾರು ಘಟನೆಗಳಲ್ಲಿ ಬೆಂಗಳೂರಿನ ಜೀವನ 269 ಒಂದು ಅತ್ಯಂತ ಸ್ಮರಣಾರ್ಹವಾದುದು. ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದ ಅವರಿಗೂ ಎ. ಆರ್. ಕೃಷ್ಣಶಾಸ್ತ್ರಿಗಳಿಗೂ ಕಿತ್ತರೆ ಬರದಂತಹ ಗೆಳೆತನ. ಕೃಷ್ಣಶಾಸ್ತ್ರಿಗಳು ವೆಂಕಣ್ಣಯ್ಯನವರಿಗಿಂತ ಸ್ವಲ್ಪ ಕಿರಿಯರು. ಆದ್ದರಿಂದ ಅವರು ವೆಂಕಣ್ಣಯ್ಯನವರನ್ನು ‘ಅಣ್ಣಯ್ಯ’ ಎಂದು ಕರೆಯುವರು. ವೆಂಕಣ್ಣಯ್ಯ, ಶಾಸ್ತ್ರಿಗಳನ್ನು ‘ಕೃಷ್ಣ’ ಎಂದು ಕರೆಯುವರು. ಹಾಗೆ ಪರಸ್ಪರ ಸಂಬೋಧಿಸುವುದು ಅವರಿಗೆ ಸಂತೋಷಕರವಾಗಿತ್ತು. ಹೀಗಿರುವಾಗ ಒಮ್ಮೆ ಕೃಷ್ಣಶಾಸ್ತ್ರಿಗಳು ಜ್ವರದಿಂದ ಹಾಸಿಗೆ ಹಿಡಿದು ಮಲಗಿದರು. ದಿನ ದಿನಕ್ಕೆ ರೋಗ ಉಲ್ಬಣಿಸುತ್ತ ಹೋಯಿತು. ಡಾಕ್ಟರ್ ತಮ್ಮ ಕೈಮೀರಿದೆ ಎಂದು ಕೈಯ್ಯಾಡಿಸಿದರು. ಎಲ್ಲರೂ ಅವರ ಜೀವದಾಸೆಯನ್ನು ತೊರೆದರು. ತಮ್ಮ ‘ಕೃಷ್ಣ’ ಸಾವಿನ ದವಡೆಯಲ್ಲಿ ಸಿಕ್ಕಿರುವನೆಂದು ಕೇಳಿ ವೆಂಕಣ್ಣಯ್ಯನವರಿಗೆ ತಡೆಯಲಾರದಷ್ಟು ದುಃಖವಾಯಿತು. ಅವರು ರೋಗಿಯ ಪಕ್ಕದಲ್ಲಿ ಕುಳಿತು ‘ಭಗವಂತ ನಾನೆಂದೂ, ಯಾವುದಕ್ಕೂ ನಿನ್ನನ್ನು ಕಾಡಿ ಬೇಡಿಲ್ಲ, ಈಗ ಅನಾಥನಂತೆ ಬೇಡುತ್ತಿದ್ದೇನೆ. ನನ್ನ ಕೃಷ್ಣನನ್ನು ಉಳಿಸಿಕೊಡು. ನನ್ನ ಆಯಸ್ಸಿನ ಸ್ವಲ್ಪ ಭಾಗವನ್ನು ನಾನು ಅವನಿಗೆ ಕೊಡುತ್ತಿದ್ದೇನೆ ಎಂದು ಒಂದೇ ಮನಸ್ಸಿನಿಂದ ಪ್ರಾರ್ಥಿಸಿದರು. ಮರುದಿನ ಕೃಷ್ಣಶಾಸ್ತ್ರಿಗಳು ಚೀಟಿಯನ್ನು ತಿರುವಿಹಾಕಿದರು. ದಿನದಿನಕ್ಕೂ ಚೇತರಿಸಿಕೊಳ್ಳುತ್ತ, ಕೆಲ ದಿನಗಳಲ್ಲಿ ಅರೋಗ ದೃಢಕಾಯರಾದರು. ಇದನ್ನು ಕುರಿತು ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳು ಹೀಗೆ ಹೇಳುತ್ತಾರೆ-’ಅವರ ಪ್ರಾರ್ಥನೆಯನ್ನು ದೇವರು ಪಾಲಿಸಿದನೆಂದೂ, ಸಲ್ಲಿಸಿದನೆಂದೂ ಇಂದಿಗೂ ನಾನು ನಂಬಿದ್ದೇನೆ.’ ಚಿಕ್ಕಪ್ಪ ಮತ್ತು ತಂದೆಯವರ ಅಪೇಕ್ಷೆಯಂತೆ ವೆಂಕಣ್ಣಯ್ಯ ಸರ್ಕಾರಿ ನೌಕರಿಗೆ ಪ್ರಯತ್ನ ಪಡಬೇಕಾಗಿತ್ತು. ಆದರೆ ಹೇಗೆ ಪ್ರಯತ್ನ ಪಡಬೇಕೊ ಅವರಿಗೆ ತಿಳಿಯದು. ಗೆಳೆಯರ ಸಲಹೆಯಂತೆ ಒಮ್ಮೆ ಅವರು ವಿದ್ಯಾಭ್ಯಾಸ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್‍ರವರನ್ನು ಸಂದರ್ಶಿಸಿ ತಮಗೊಂದು ಕೆಲಸ ಬೇಕೆಂದು ಕೇಳಿದರು. ಆ ಅಧಿಕಾರಿಗಳು ವೆಂಕಣ್ಣಯ್ಯನವರಂತಹವರನ್ನೇ ಹುಡುಕುತ್ತಿದ್ದರು. 1917 ರಲ್ಲಿ ಮೈಸೂರು ಸರ್ಕಾರದವರು ಕನ್ನಡ ಭಾಷಾ ಸಾಹಿತಿಗಳಿಗೆ ಉನ್ನತ ಸ್ಥಾನಮಾನವನ್ನು ನೀಡಬೇಕೆಂಬ ಉದಾತ್ತ ಧ್ಯೇಯದಿಂದ ನಾಲ್ಕು ಪ್ರಾಯೋಗಿಕ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಿದರು. ಕನ್ನಡ ಲೋಯರ್ ಸೆಕಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಮಾತ್ರ ಈ ಶಾಲೆಗಳಿಗೆ ಸೇರಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದಾಗಿತ್ತು. ಅಲ್ಲಿ ಪಠ್ಯ ವಿಷಯಗಳನ್ನು ಅಚ್ಚಕನ್ನಡದಲ್ಲಿ ಬೋಧಿಸಬಹುದಾಗಿತ್ತು. ಅಂತಹ ಪ್ರಾಯೋಗಿಕ 270 ಮೂರು ತಲೆಮಾರು ಶಾಲೆಯೊಂದು ದೊಡ್ಡಬಳ್ಳಾಪುರದಲ್ಲಿ ಪ್ರಾರಂಭವಾಗಿತ್ತು. ಕನ್ನಡ ಎಂ.ಎ. ಪದವೀಧರರಾಗಿದ್ದ ವೆಂಕಣ್ಣಯ್ಯ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕವಾದರು. ಅವರು ಬಹುಶಃ ಒಂದು ವರ್ಷ ಕಾಲ ಅಲ್ಲಿ ಅತ್ಯಂತ ಶಾಂತವಾಗಿ ತಮ್ಮ ಕಾಲವನ್ನು ಕಳೆದರೆಂದು ತೋರುತ್ತದೆ. ವಾಸ ಮಾಡಲು ಸೊಗಸಾದ ಒಂದು ಮನೆ, ಸುತ್ತಲೂ ವಿಸ್ತಾರವಾದ ಒಳ ಅಂಗಳ, ಗಂಗ, ಕುಂಭ ಎಂಬ ಶಾಲೆಯ ಜವಾನರಿಬ್ಬರೂ ಮುಖ್ಯೋಪಾಧ್ಯಾಯರ ಅಚ್ಚು ಮೆಚ್ಚಿನ ಆಳು ಮಕ್ಕಳಾಗಿದ್ದರು. ಅವರ ಪ್ರಯತ್ನದ ಫಲವಾಗಿ ಮನೆಯ ಸುತ್ತ ಸುಂದರವಾದ ನಂದನವನ ನಿರ್ಮಾಣವಾಗಿತ್ತು. ಮನೆಯ ಹಿಂದೆ ಸಾಕಷ್ಟು ತರಕಾರಿ ಬೆಳೆಯುತ್ತಿತ್ತು. ಎಷ್ಟು ಬಳಸಿದರೂ ಸವೆಯದಷ್ಟು ಸವತೆಕಾಯಿಗಳು! ವೆಂಕಣ್ಣಯ್ಯನವರು ಪ್ರತಿ ಶನಿವಾರ ಮನೆಯಲ್ಲಿ ರಾಮಭಜನೆಯ ನೆಪಮಾಡಿಕೊಂಡು ಕೋಸಂಬರಿ ಪಾನಕದ ಪನಿವಾರವನ್ನು ಏರ್ಪಡಿಸುತ್ತಿದ್ದರಂತೆ. ಹತ್ತಿರದ ಹಳ್ಳಿಯೊಂದರಿಂದ ವೆಂಕಣ್ಣಯ್ಯನವರನ್ನು ಆಶ್ರಯಿಸಿದ್ದ ಸೀತಾರಾಮಯ್ಯನೆಂಬ ಬಂಧು ಅವರ ಮನೆಯಲ್ಲಿಯೇ ಇದ್ದುಕೊಂಡು ಮನೆಯ ವ್ಯವಹಾರವನ್ನೆಲ್ಲ ನೋಡಿಕೊಳ್ಳುತ್ತಿದ್ದರು. ವೆಂಕಣ್ಣಯ್ಯನವರು ಸಂಬಳವನ್ನು ತಂದು ಅವನ ಕೈಲಿ ಹಾಕಿ ಯಾವುದೊಂದು ಚಿಂತೆಯೂ ಇಲ್ಲದೆ ತಾವೇ ತಾವಾಗಿ ಸುಖಶಾಂತಿಗಳಿಂದ ಜೀವಿಸುತ್ತಿದ್ದರು. ವೆಂಕಣ್ಣಯ್ಯನವರು ದೊಡ್ಡಬಳ್ಳಾಪುರದಲ್ಲಿದ್ದಾಗ ನಡೆದ ಒಂದು ಪುಟ್ಟ ಘಟನೆ ತುಂಬ ಅರ್ಥಪೂರ್ಣವಾಗಿದೆ, ಭಾವಪೂರ್ಣವಾಗಿದೆ, ಧ್ವನಿಪೂರ್ಣವಾಗಿದೆ. ಒಮ್ಮೆ ಕಾರಣಾಂತರದಿಂದ ಅವರು ಮನೆಯವರನ್ನೆಲ್ಲ ಊರಿಗೆ ಕಳುಹಿಸಿ ತಾವೊಬ್ಬರೇ ಮನೆಯಲ್ಲಿದ್ದರು. ಹಾಗಿರುವಾಗ ಒಂದು ದಿನ ಸಂಜೆ ಮುದಿಬ್ರಾಹ್ಮಣನೊಬ್ಬ ಅವರ ಮನೆಗೆ ಬಂದು, ‘ಸ್ವಾಮಿ, ನಾನು ದೇಶಾವರಿ ಬ್ರಾಹ್ಮಣ. ನನಗೆ ಚಿರೋಟಿ ತಿನ್ನ ಬೇಕೆಂಬ ಅಸೆಯಾಗಿದೆ. ತಾವು ದಯವಿಟ್ಟು ಅದನ್ನು ಮಾಡಿಕೊಡಿ’ ಎಂದು ಕೇಳಿಕೊಂಡ. ಪಾಪ, ವೆಂಕಣ್ಣಯ್ಯನವರಿಗೆ ಚಿರೋಟಿ ಮಾಡಲು ಬಾರದು. ಅವರು ಆ ಮುದುಕನೊಡನೆ ‘ಸ್ವಾಮಿ, ನೀವು ಇಂದು ರಾತ್ರಿ ನಮ್ಮ ಮನೆಯಲ್ಲಿಯೇ ಬಿಡಾರ ಮಾಡಿ. ನಾಳೆ ಬೆಳಿಗ್ಗೆ ಚಿರೋಟಿ ಮಾಡುವ ಯಾರನ್ನಾದರೂ ಹುಡುಕಿ ಅದನ್ನು ನಿಮಗೆ ಮಾಡಿಸಿಕೊಡುತ್ತೇನೆ. ನನಗೆ ಚಿರೋಟಿ ಮಾಡಲು ಬಾರದು’ ಕೇಳಿಕೊಂಡರು. ಆದರೆ ಮುದುಕ ಒಂದು ರಾತ್ರಿಯನ್ನು ವ್ಯರ್ಥವಾಗಿ ಕಳೆಯಲು ಸಿದ್ಧನಿರಲಿಲ್ಲ. ಆತ ಹೇಳಿದ, ‘ಸ್ವಾಮಿ, ಅದಕ್ಕೆ ಬೇಕಾದ ಲವಾಜಮೆಯನ್ನು ನಾನೇ ಹೇಳುತ್ತೇನೆ. ಅವನ್ನು ಬೆಂಗಳೂರಿನ ಜೀವನ 271 ನೀವು ತರಿಸಿಕೊಡಿ. ನಾನೇ ಅದನ್ನು ತಯಾರಿಸುತ್ತೇನೆ’ ಎಂದ. ವೆಂಕಣ್ಣಯ್ಯ ‘ತಥಾಸ್ತು’ ಎಂದು ಆತ ಹೇಳಿದ ಲವಾಜಮೆಯನ್ನೆಲ್ಲ ತರಿಸಿಕೊಟ್ಟರು. ಒಂದು ಗಂಟೆಯೊಳಗಾಗಿ ಮುದುಕ ಒಂದು ಪುಟ್ಟ ಬುಟ್ಟಿಯ ತುಂಬ ಚಿರೋಟಿಗಳನ್ನು ತಯಾರಿಸಿಟ್ಟ. ಅನಂತರ ಅವನ್ನೆಲ್ಲ ಸಕ್ಕರೆ ಬೆರೆಸಿದ ಹಾಲಿನಲ್ಲಿ ನೆನೆಸಿ ತಿಂದು ತೇಗಿದ. ಅನಂತರ ಎಲಡಿಕೆಯನ್ನು ಜಗಿಯುತ್ತ ‘ಸ್ವಾಮಿ ಮಹಾರಾಯರೆ, ನನ್ನ ಆಸೆಯನ್ನು ನೀವು ನೆರವೇರಿಸಿದಿರಿ; ನನಗೆ ತೃಪ್ತಿಯನ್ನು ನೀಡಿದಿರಿ. ಭಗವಂತ ನಿಮಗೂ ತೃಪ್ತಿಯಾಗುವಂತೆ ಸಕಲ ಸನ್ಮಂಗಳಗಳನ್ನೂ ನೀಡಲಿ. ನೀವು ಕೀರ್ತಿಶಾಲಿಯಾಗಿ ಬಾಳಿರಿ’ ಎಂದು ಹೇಳಿ ಅಲ್ಲಿಂದ ಹೊರಟುಹೋದರು. ಅವರು ಯಾರು? ಎಲ್ಲಿಂದ ಬಂದರು? ಎಲ್ಲಿಗೆ ಹೋದರು? ಅದು ಭಗವಂತನಿಗೇ ಗೊತ್ತು. ಆದರೆ ಈ ಘಟನೆ ನಡೆದ ಒಂದು ವಾರದಲ್ಲಿಯೇ ವೆಂಕಣ್ಣಯ್ಯನವರಿಗೆ ಬೆಂಗಳೂರಿನ ಕೊಲಿಜಿಯೇಟ್ ಹೈಸ್ಕೂಲಿಗೆ ವರ್ಗವಾಯಿತು. ಅವರು ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಹೊರಟರು. ವೆಂಕಣ್ಣಯ್ಯನವರು ಕೊಲಿಜಿಯೇಟ್ ಹೈಸ್ಕೂಲಿನಲ್ಲಿ ಹೆಚ್ಚು ಕಾಲ ಇರಲಿಲ್ಲ. ಬಹುಶಃ ಕೆಲವು ತಿಂಗಳುಗಳ ಕಾಲ ಮಾತ್ರ ಅಲ್ಲಿದ್ದರೆಂದು ತೋರುತ್ತದೆ. ಅಲ್ಲಿಯೂ ತಮ್ಮ ಶಿಷ್ಯ ಪ್ರೇಮದಿಂದ, ಪಾಂಡಿತ್ಯಪ್ರಭಾವದಿಂದ ವಿದ್ಯಾರ್ಥಿಗಳ ಹೃದಯವನ್ನು ಸೂರೆಗೊಂಡರು. ಮೊದಲ ದಿನ ಅವರು ತರಗತಿಯನ್ನು ಪ್ರವೇಶಿಸಿದಾಗ ನಡೆದ ಘಟನೆಯನ್ನೂ ಶಿಷ್ಯರ ಮೇಲೆ ಬೀರಿದ ಪ್ರಭಾವವನ್ನೂ ಅವರ ಶಿಷ್ಯರಾಗಿದ್ದ ರಾ. ಶಿ. ಹೀಗೆ ಹೇಳುತ್ತಾರೆ - “ತರಗತಿಯಲ್ಲಿ ಗಲಭೆಯೋ ಗಲಭೆ ನಡೆಯುತ್ತಿತ್ತು. ಆಗ ಕೊಠಡಿಯ ಬಾಗಿಲಲ್ಲಿ ಹಠಾತ್ತನೆ ಆಜಾನುಬಾಹುವೊಬ್ಬರು ಕಾಣಿಸಿಕೊಂಡರು. ರುಮಾಲನ್ನು ಕಂಡಾಗ ‘ಮೇಷ್ಟ್ರು, ಇವರು ಹೊಸ ಮೇಷ್ಟ್ರು’ ಅಂತ ಅರ್ಥವಾಯಿತು. ಇಂಗ್ಲಿಷ್‌ ಪೊಯೆಟ್ರಿ ಆ ಪೀರಿಯಡ್ಡಿನಲ್ಲಿ.... ಪಾಠಕ್ಕೆ ಶುರು ಮಾಡಿದರು. ‘The street of by and by’ ಅಂತ ಪದ್ಯ. ಇಂಗ್ಲಿಷ್‌ನಲ್ಲಿಯೇ ಪಾಠ, ಇಂಗ್ಲಿಷ್‌ನಲ್ಲಿಯೇ ವಿವರಣೆ. ಹುಡುಗರ ಮನಸ್ಸನ್ನು ಸೆರೆಹಿಡಿಯುವ ಕಲೆ ಮೇಷ್ಟ್ರಿಗೆ ಗೊತ್ತಿತ್ತು. ಪಾಠ ಶುರುವಾದ ಕೆಲವೇ ನಿಮಿಷಗಳಲ್ಲಿ ಕ್ಲಾಸು ನಿಶ್ಯಬ್ದವಾಗಿತ್ತು. ಹಾಗೆ ಇಂಗ್ಲಿಷ್‌ ಪೊಯೆಟ್ರಿ ಕಲಿಸಲು ಬಂದ ಮೇಷ್ಟ್ರು ಕೀರ್ತಿಶೇಷ ವೆಂಕಣ್ಣಯ್ಯನವರು. ಪದ್ಯಗಳ ರಸಾಸ್ವಾದನೆ ಮಾಡುವ ರೀತಿನೀತಿಗಳನ್ನು ನಮಗೆ ಸುಲಭವಾಗಿ ತಿಳಿಯುವಂತೆ ಕಲಿಸಿದರು! ಅದೂ ಇಂಗ್ಲಿಷ್‌ ಭಾಷೆಯಲ್ಲಿ. ಕನ್ನಡದಲ್ಲಿ ಕಲಿಸಿದರೆ!” ದೊಡ್ಡಬಳ್ಳಾಪುರದಲ್ಲಿ ಚಿರೋಟಿ ತಿಂದು ತೃಪ್ತನಾದ ಬ್ರಾಹ್ಮಣ ಹರಸಿ 272 ಮೂರು ತಲೆಮಾರು ಹಾರೈಸಿದನಲ್ಲ, ಆ ಹರಕೆಯ ಫಲವೋ ಏನೋ ! ವೆಂಕಣ್ಣಯ್ಯನವರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಟ್ಯೂಟರ್ ಆಗಿ ನೇಮಕವಾದರು. ಆ ಸ್ಥಾನದಲ್ಲಿದ್ದ ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳು ಮೈಸೂರಿನ ಪ್ರಾಚ್ಯ ಸಂಶೋಧನಾಲಯದ ನಿರ್ದೇಶಕರಾಗಿ ನೇಮಕವಾಗಿ ಹೋದರು. ಅವರ ಸ್ಥಾನವನ್ನು ತುಂಬಿದವರು ವೆಂಕಣ್ಣಯ್ಯನವರು. ಇಲ್ಲಿಂದ ಮುಂದೆ ಅವರ ಬಾಳಿನಲ್ಲಿ ಹೊಸ ತಿರುವೊಂದು ಸೃಷ್ಟಿಯಾಗಿ ಅವರು ದಿನ ದಿನಕ್ಕೂ ಮೆಟ್ಟಲು ಮೆಟ್ಟಲು ಮೇಲೇರುತ್ತಾ ಮಹೋನ್ನತಿಯನ್ನು ಮುಟ್ಟಿದರು. ಮಗ ಕಾಲೇಜಿನ ಅಧ್ಯಾಪಕನಾದುದನ್ನು ಕೇಳಿ ಸುಬ್ಬಣ್ಣನವರಿಗೆ ಪರಮಾನಂದವಾಯಿತು. ಮಗ ಅಮಲ್ದಾರನಾಗದಿದ್ದರೂ, ಅಮಲ್ದಾರ ನಾಗುವವನನ್ನು ರೂಪಿಸುವ ರೂವಾರಿಯಾದನಲ್ಲ! ಅವರು ತಮ್ಮ ಗೆಳೆಯ ಗುಡೇಹಳ್ಳಿ ತಿಪ್ಪಯ್ಯನೊಡನೆ ಅಣ್ಣಯ್ಯ ! ಇನ್ನು ಮುಂದೆ ದೊಡ್ಡ ಅಧಿಕಾರಿಗಳಾಗುವವರೆಲ್ಲ ನಮ್ಮ ಪುಟ್ಟನ ಶಿಷ್ಯರೆ’ ಎಂದರು. ಈ ಹಗಲುಗನಸಿನ ಸವಿಯನ್ನು ಅವರು ಬಹು ಕಾಲ ಅನುಭವಿಸಲು ಅದೃಷ್ಟ ಅವಕಾಶಕೊಡಲಿಲ್ಲ. ವೆಂಕಣ್ಣಯ್ಯನವರು ಅಧ್ಯಾಪಕರಾದ ಕೆಲವೇ ದಿನಗಳಲ್ಲಿ ಅವರು ಕಡೆಯುಸಿರೆಳೆದರು. 1918ನೆಯ ಇಸವಿಯಲ್ಲಿ ನಮ್ಮ ದೇಶವನ್ನೆಲ್ಲ ಮುತ್ತಿ ಮಾರಣಹೋಮವನ್ನು ನಡೆಸಿದ ಇನ್‍ಫ್ಲೂಯೆಂಜಾ ರೋಗವು ಸುಬ್ಬಣ್ಣನವರನ್ನು ಆಕ್ರಮಿಸಿ ಆಹುತಿ ತೆಗೆದುಕೊಂಡಿತು. ಅವರಿಗೆ ಖಾಯಿಲೆ ಉಲ್ಬಣಿಸಿರುವುದನ್ನು ಕೇಳಿ ವೆಂಕಣ್ಣಯ್ಯನವರು ತಳುಕಿಗೆ ಧಾವಿಸಿ ಬಂದರು. ಆ ವೇಳೆಗೆ ಸುಬ್ಬಣ್ಣನವರು ದೈವಾಧೀನರಾಗಿ ಕಾಲ ಕೈ ಮೀರಿಹೋಗಿತ್ತು. ಅಪಾರ ವೇದನೆಯಿಂದ ಅವರ ಹೃದಯ ಬಿರಿದು ಹೋಗುವಂತಾಗಿದ್ದರೂ ಅವರು ತಮ್ಮ ಕಣ್ಣೀರಿಗೆ ಅಡ್ಡಕಟ್ಟೆ ಹಾಕಿದ್ದರು. ಆದರೆ ಆ ತಂದೆಯ ಕಷ್ಟ-ಸುಖಗಳಲ್ಲಿ ಸದಾ ಸಮಭಾಗಿಯಾಗಿ ತನ್ನ ಬಾಳನ್ನು ಸವೆಸಿದ್ದ ತಾಯಿಯನ್ನು ಕಾಣುತ್ತಲೇ ಆ ಅಡ್ಡಕಟ್ಟೆ ಕುಸಿದುಬಿದ್ದು ಕಣ್ಣೀರಿನ ತುಂಬುಹೊಳೆ ವೇಗವಾಗಿ ಹರಿಯಿತು. ಆಕೆಯಿಂದ ಲಕ್ಷ ಕುಂಕುಮ ಪೂಜೆ ಮಾಡಿಸಿಕೊಂಡ ಗೌರೀದೇವಿ ಆಕೆಯ ಕುಂಕುಮವನ್ನು ಕಾಯಲಿಲ್ಲ. ಲಕ್ಷ ಜಾಜಿ, ಲಕ್ಷ ಮಲ್ಲಿಗೆ, ಲಕ್ಷ ಬಿಲ್ವಪತ್ರೆಗಲ ಪೂಜೆಯನ್ನು ಸ್ವೀಕರಿಸಿದ್ದ ದಿವ್ಯಶಕ್ತಿ ಆಕೆಯ ಮುತ್ತೈದೆತನವನ್ನು ಕಾಯದೆ ಹೋಯಿತು. ಹಲವಾರು ವರ್ಷಗಳ ಕಾಲ ಪತಿಯೊಡನೆ ಶ್ರೀರಾಮ ಪಟ್ಟಾಭಿಷೇಕದಲ್ಲಿ ಸಹಭಾಗಿಯಾಗಿದ್ದ ಆ ತಾಯಿ ಈಗ ವಿಧವೆಯಾಗಬೇಕೆ? ಸಹಸ್ರಾರು ಬ್ರಾಹ್ಮಣ ಸುವಾಸಿನಿಯರನ್ನು ನಾನಾ ಕಾರಣಗಳಿಂದ ಪೂಜಿಸಿ ‘ಸುಮಂಗಲೀ ಭವ’ ಎಂದು ಅವರಿಂದ ಪಡೆದ ಬೆಂಗಳೂರಿನ ಜೀವನ 273 ಆಶೀರ್ವಾದ ಈಗ ಎಲ್ಲಿ ಹೋಯಿತು? ಕೈ ನಡೆಯುವಾಗ ಸಹಸ್ರಾರು ಜನ ಬಡಬಗ್ಗರಿಗೆ, ದಿಕ್ಕಿಲ್ಲದವರಿಗೆ ಅನ್ನ-ಬಟ್ಟೆಗಳನ್ನು ಇತ್ತು ಗಳಿಸಿದ ಪುಣ್ಯವೆಲ್ಲ ಎಲ್ಲಿ ಹೋಯಿತು? ವೆಂಕಣ್ಣಯ್ಯ ಕ್ಷಣ ಕಾಲ ನಾಸ್ತಿಕರಂತಾದರು. ತಳಮಳಗೊಂಡರು. ಆದರೆ ಇದೆಲ್ಲ ನಡೆದುದು ಕ್ಷಣ ಕಾಲ ಮಾತ್ರ. ಈ ರೋಗಕ್ಕೆ ತಕ್ಕ ಮದ್ದು ಪಕ್ಕದಲ್ಲಿಯೇ ಇತ್ತು. ಆ ಮದ್ದೇ ಶ್ರೀಕಂಠಶಾಸ್ತ್ರಿಗಳು. ಅವರ ಬುದ್ಧಿವಾದದಿಂದ ಆತನ ಮನಸ್ಸು ಸ್ಥಿರಗೊಂಡು ಶಾಂತವಾಯಿತು. ಎಲ್ಲವನ್ನೂ ಆತ ಧೀರನಾಗಿ ಸಹಿಸಲು ಶಕ್ತನಾದ. ಸುಬ್ಬಣ್ಣನವರು ದಿವಂಗತರಾದುದು ಸಮುದ್ರ ಮಧ್ಯದಲ್ಲಿದ್ದ ಸಂಸಾರದ ಹಡಗು ಚುಕ್ಕಾಣಿ ತಪ್ಪಿದಂತಾಯಿತು. ಆತನ ತಮ್ಮ ರಾಮಸ್ವಾಮಿ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ಶೇಕದಾರರಾಗಿದ್ದರು. ಉಳಿದ ಐದು ಜನ ತಮ್ಮಂದಿರೂ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಕಡೆಯ ತಂಗಿ ಇನ್ನೂ ಐದು ವರ್ಷದ ಬಾಲೆ, ಇವರೆಲ್ಲರನ್ನೂ ಬೆಳಸಿ ವಿದ್ಯಾವಂತರನ್ನಾಗಿ ಮಾಡುವ, ಅವರ ಮದುವೆ, ಮುಂಜಿಗಳನ್ನು ಮಾಡುವ ಹೊಣೆ, ಹೊರೆ ಹಿರಿಯ ಮಗ ವೆಂಕಣ್ಣಯ್ಯನವರ ಹೆಗಲೇರಿತು. ಸುಬ್ಬಣ್ಣನವರು ಸಾಕಷ್ಟು ಆಸ್ತಿಯನ್ನೇನೋ ಮಾಡಿದ್ದರು. ಮೂವತ್ತು ಎಕರೆಯಷ್ಟು ನೀರಾವರಿ ಜಮೀನಿತ್ತು, ನೂರಾರು ಎಕರೆ ಖುಷ್ಕಿ ಜಮೀನಿತ್ತು, ಮನೆ ಇತ್ತು. ಸಾಕಷ್ಟು ದನಕರುಗಳಿದ್ದುವು. ಅದರೆ ಅವನ್ನೆಲ್ಲ ಮಾರಿದರೂ ತೀರದಷ್ಟು ಸಾಲವಿತ್ತು. ಮನೆ ಮಂದಿಯನ್ನೆಲ್ಲ ಬೆಂಗಳೂರಿನಂತಹ ಶಹರಿನಲ್ಲಿ ಇಟ್ಟುಕೊಂಡು ಸಂಸಾರ ಸಾಗಿಸುವುದು ಸಾಧ್ಯವೆ? ಅದಕ್ಕಾಗಿ ಆಸ್ತಿ-ಪಾಸ್ತಿಯನ್ನೆಲ್ಲ ಆರನ್ನು ಮೂರಕ್ಕೆ ಮಾಡಿ ಮಾರಲು ಸಾಧ್ಯವೇ? ವೆಂಕಣ್ಣಯ್ಯನವರು ಆಳವಾಗಿ ಎಲ್ಲವನ್ನೂ ಯೋಚಿಸಿ ಈ ನಿರ್ಧಾರಕ್ಕೆ ಬಂದರು- ಎರಡನೆಯ ತಮ್ಮ ಧಾರವಾಡದ ಕಾಲೇಜಿನಲ್ಲಿ ಎಫ್.ಎ. ಓದುತ್ತಿದ್ದ. ಆ ತಮ್ಮನನ್ನು ಈ ಆಸ್ತಿಗೆ ಒಡೆಯನನ್ನಾಗಿ ನಿಲ್ಲಿಸಿ ಸಂಸಾರವನ್ನು ನಡೆಸಿಕೊಂಡು ಹೋಗುವಂತೆ ನೇಮಿಸುವುದು! ತಂದೆಯ ಸಾಲವನ್ನೆಲ್ಲ ತಾನು ಹೊರುವುದು. ಈ ನಿರ್ಧಾರಕ್ಕೆ ಬಂದೊಡನೆಯೇ ಅವರು ಆ ತಮ್ಮ ಕೃಷ್ಣರಾಯನನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ‘ಕೃಷ್ಣ, ಬಹುಜನರ ಹಿತಕ್ಕಾಗಿ ಒಬ್ಬರು ತ್ಯಾಗ ಮಾಡಬೇಕಾದುದು ಅಗತ್ಯ. ಅಂತಹ ತ್ಯಾಗವೊಂದನ್ನು ನಾವಿಬ್ಬರೂ ಈಗ ಕೈಗೊಳ್ಳೋಣ. ತಂದೆಯವರು ಸಾಕಷ್ಟು ಸಾಲ ಮಾಡಿ ಹೋಗಿದ್ದಾರೆ. ಅದರ ಹೊಣೆಯನ್ನು ನಾನು ಹೊರುತ್ತೇನೆ. ನೀನು ನಿನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿ ಈ ಸಂಸಾರದ ಭಾರವನ್ನು ವಹಿಸಿಕೊ. ನಿನ್ನ ಮತ್ತು ಇತರ ಮಕ್ಕಳ ಮದುವೆ, ಮುಂಜಿಗಳಾಗಬೇಕು, ವಿದ್ಯಾಭ್ಯಾಸ 274 ಮೂರು ತಲೆಮಾರು ನಡೆಯಬೇಕು, ಸಧ್ಯಕ್ಕೆ ಅದೆಲ್ಲ ನಡೆಯಬೇಕಾದುದು ಇಲ್ಲಿಯೇ. ಹಣಕಾಸು ವ್ಯವಹಾರಕ್ಕೆ ನಾನು ಜವಾಬ್ದಾರನಾಗುತ್ತೇನೆ. ಸಂಸಾರ ನಡೆಸುವ ಜವಾಬ್ದಾರಿಯನ್ನು ನೀನು ವಹಿಸಿಕೊ. ನನಗೆ ಆಸ್ತಿಯಲ್ಲಿ ಒಂದು ಕಾಸೂ ಬೇಡ. ಅಪ್ಪನ ಒಂದು ಅಂಗಿಯನ್ನು ಪಿತ್ರಾರ್ಜಿತವೆಂದು ನಾನು ಸ್ವೀಕರಿಸುತ್ತೇನೆ. ಆಸ್ತಿಯೆಲ್ಲ ನಿನ್ನದಾಗಲಿ’ ಎಂದು ಹೇಳಿದರು. ಕೃಷ್ಣರಾಯ ಅದನ್ನು ಮನಸಾರೆ ಒಪ್ಪಿಕೊಂಡ. ವೆಂಕಣ್ಣಯ್ಯನವರು ಸಾಲದ ಭಾರವನ್ನು ಹೊತ್ತು ಬೆಂಗಳೂರಿಗೆ ಹಿಂದಿರುಗಿದರು. ಮಲ್ಲೇಶ್ವರಂ ರೈಲ್ವೆ ನಿಲ್ದಾಣಕ್ಕೆ ಒಂದು ಮೈಲಿ ದೂರದಲ್ಲಿ ಒಂದು ದೊಡ್ಡ ಮಾವಿನ ತೋಪಿತ್ತು. ಆ ತೋಪಿನ ಮಧ್ಯದಲ್ಲಿ ಭವ್ಯವಾದ ಬಂಗಲೆ. ಅಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ. ಆ ಬಂಗಲೆಯ ಯಜಮಾನ ಕಾರಣಾಂತರಗಳಿಂದ ದೊಡ್ಡಬಳ್ಳಾಪುರದ ಸಮೀಪದಲ್ಲಿದ್ದ ತನ್ನ ಹಳ್ಳಿಯಲ್ಲಿ ವಾಸಿಸುತ್ತಿದ್ದ. ವೆಂಕಣ್ಣಯ್ಯನವರು ಬೆಂಗಳೂರಿಗೆ ಹೊರಡುವ ಮುನ್ನ ಆ ಶ್ರೀಮಂತನ ಮನೆಯಲ್ಲಿ ಊಟಕ್ಕೆ ಆಹ್ವಾನಿತರಾಗಿದ್ದರು. ಅವರು ಬೆಂಗಳೂರಿನಲ್ಲಿರುವ ತಮ್ಮ ಬಂಗಲೆಯನ್ನು ವೆಂಕಣ್ಣಯ್ಯನವರಿಗೆ ಬಾಡಿಗೆ ಇಲ್ಲದೆ ಕೊಡುವುದಕ್ಕೆ ಒಪ್ಪಿದರು. ವೆಂಕಣ್ಣಯ್ಯನವರು ಸಂಸಾರ ಸಮೇತರಾಗಿ ಆ ಮನೆಯಲ್ಲಿ ಬಿಡಾರ ಹೂಡಿದರು. ಕಾಡಿನ ಮಧ್ಯದ ಆ ಮನೆಯಲ್ಲಿದ್ದಾಗ ವೆಂಕಣ್ಣಯ್ಯನವರ ಸಂಸಾರದಲ್ಲಿ ಒಂದು ದುರಂತ ನಡೆಯಿತು. ಅವರ ತಂಗಿಯರಲ್ಲಿ ಒಬ್ಬಳಾದ ಹನುಮಕ್ಕಮ್ಮ ಹೆರಿಗೆಗಾಗಿ ಅಣ್ಣನ ಮನೆಗೆ ಬಂದಳು. ತನ್ನ ಅಜ್ಜಿಯ ಹೆಸರನ್ನು ಹೊತ್ತ ಆ ತಂಗಿಯಲ್ಲಿ ವೆಂಕಣ್ಣಯ್ಯನವರಿಗೆ ಅಪಾರವಾದ ಪ್ರೇಮ. ಆಕೆಯ ಹೆರಿಗೆಗಾಗಿ ತಾಯಿಯನ್ನು ಕರೆಸಿಕೊಂಡರು. ಹೆರಿಗೆ ದಿನ ಸಮೀಪಿಸಿದಂತೆ ಆಕೆಯ ಗಂಡನೂ ಅಲ್ಲಿಗೆ ಬಂದರು. ಹೆರಿಗೆಯ ದಿನ ಹತ್ತಿರ ಬಂದಿತು. ಹೆರಿಗೆಗಾಗಿ ಸಕಲ ಸಂಭಾರಗಳನ್ನೂ ಸಿದ್ಧಗೊಳಿಸಲಾಗಿತ್ತು. ಹೆರಿಗೆಯ ಸಮಯ ಸಮೀಪಿಸಿದಾಗ ಆಸ್ಪತ್ರೆಯಿಂದ ಒಬ್ಬ ದಾದಿಯೂ ಅಲ್ಲಿ ಹಾಜರಾಗಿದ್ದಳು. ಹೆರಿಗೆಯ ಹಿಂದಿನ ರಾತ್ರಿ ವೆಂಕಣ್ಣಯ್ಯನವರ ತಮ್ಮ ರಾಮಸ್ವಾಮಿ ತಂಗಿಯ ಬಾಣಂತನಕ್ಕಾಗಿ ಒಂದು ಡಬ್ಬದ ತುಂಬ ತುಪ್ಪವನ್ನೂ, ಬುಟ್ಟಿಯ ತುಂಬ ಹಣ್ಣು ಹಂಪಲನ್ನೂ ತುಂಬಿಕೊಂಡು ಅಲ್ಲಿಗೆ ಬಂದಿದ್ದ. ಅದೇ ದಿನವೇ ಎ. ಆರ್. ಕೃಷ್ಣಶಾಸ್ತ್ರಿಗಳು ಮೈಸೂರಿನಿಂದ ವೆಂಕಣ್ಣಯ್ಯನವರನ್ನು ಕಾಣಲಿಕ್ಕಾಗಿ ಆ ಮನೆಗೆ ಬಂದಿದ್ದರು. ಅವರೆಲ್ಲರೂ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ಹನುಮಕ್ಕನ ಹೆರಿಗೆಯಾಯಿತೆಂಬ ಸಂತೋಷದ ಸುದ್ದಿ ಬಂತು. ಅದರ ಮರುಕ್ಷಣದಲ್ಲಿಯೇ ಆಕೆಯು ಕಡೆಯುಸಿರೆಳೆದಳೆಂಬ ಬೆಂಗಳೂರಿನ ಜೀವನ 275 ದುರ್ವಾರ್ತೆಯೂ ಬಂತು. ಹನುಮಕ್ಕನ ಗಂಡ ಕಾಶೀನಾಥಶಾಸ್ತ್ರಿ ಯಜ್ಞ ಮಾಡಿದ್ದವನು. ದಿನ ದಿನವೂ ಇಷ್ಠಿಯನ್ನು ಮಾಡುತ್ತಿದ್ದ. ಆದ್ದರಿಂದ ಹನುಮಕ್ಕನ ದಹನಕ್ರಿಯೆಯಾಗಬೇಕಾದರೆ ಮರವನ್ನು ಉಜ್ಜಿ ಅಗ್ನಿಯನ್ನು ಪಡೆಯಬೇಕು. ಬಹುಕಾಲ ಆ ಕ್ರಿಯೆಯನ್ನು ನಡೆಸಿದ ಮೇಲೆ ಅಗ್ನಿ ಕಾಣಿಸಿಕೊಂಡಿತು. ಅದನ್ನು ಉಪಾಯವಾಗಿ ಅರಳೆಗೆ ಹತ್ತಿಸಿಕೊಂಡು ಯಜ್ಞೇಶ್ವರನನ್ನು ಉದ್ದೀಪನ ಗೊಳಿಸಬೇಕಾಯಿತು. ಆ ಮಾವಿನ ತೋಪಿನ ಮಧ್ಯದಲ್ಲಿಯೇ ಆಕೆಯ ದಹನ ಕ್ರಿಯೆ ನಡೆದುಹೋಯಿತು. ವೆಂಕಣ್ಣಯ್ಯ ತನ್ನ ತಂಗಿ ಕಾಲವಾದ ಮನೆಯಲ್ಲಿ ಇರಲಾರದೆ ತಂಗಿಯ ಕರ್ಮಗಳು ಮುಗಿದ ಮೇಲೆ ಬೆಂಗಳೂರಿನ ಬಸವನಗುಡಿಯಲ್ಲಿ ಮನೆಯೊಂದನ್ನು ಬಾಡಿಗೆ ತೆಗೆದುಕೊಂಡು ಅಲ್ಲಿಯೇ ತಳವೂರಿದರು. ವೆಂಕಣ್ಣಯ್ಯನವರು ದೊಡ್ಡಬಳ್ಳಾಪುರಕ್ಕೆ ಹೋಗಿದ್ದಾಗ ತಮ್ಮನಾದ ಲಕ್ಷ್ಮಣರಾಯ ಅವರ ಜೊತೆಯಲ್ಲಿದ್ದ. ಈತ ಬಾಲ್ಯದಲ್ಲಿ ತುಂಬ ತುಂಟ. ಆತನ ತುಂಟತನವನ್ನು ಸಹಿಸಲಾರದೆ ತಾಯಿ ಲಕ್ಷ್ಮೀದೇವಮ್ಮ ‘ಪುಟ್ಟ’ನ ಜೊತೆಯಲ್ಲಿಯೇ ಮಗನನ್ನು ಕಳುಹಿಸಿದ್ದಳು. ಅವನು ನಿತ್ಯವೂ ಅಣ್ಣನ ಜೊತೆಯಲ್ಲಿ ಶಾಲೆಗೆ ಹೋಗಬೇಕಾಗಿತ್ತು. ಆತ ಆ ವರ್ಷ ಲೋಯರ್ ಸೆಕೆಂಡರಿ ಪರೀಕ್ಷೆಗೆ ಕಟ್ಟಿದ್ದ. ಆ ಪರೀಕ್ಷೆಯಲ್ಲಿ ಆತ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ವೆಂಕಣ್ಣಯ್ಯನವರು ಬೆಂಗಳೂರಿಗೆ ಬಂದ ಮೇಲೆ ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಫೋರ್ತ್ ಫಾರಂಗೆ ಸೇರಿದ. ಆದರೆ ಅವನು ಕೆಟ್ಟ ಸಹವಾಸಕ್ಕೆ ಬಿದ್ದು ಅವಿಧೇಯನಾಗಿದ್ದರಿಂದ ವೆಂಕಣ್ಣಯ್ಯನವರು ಅವನನ್ನು ಚಿತ್ರದುರ್ಗದ ಹೈಸ್ಕೂಲಿಗೆ ಓದುವುದಕ್ಕಾಗಿ ಕಳುಹಿಸಿದರು. ಇದರಿಂದ ಪ್ರತಿ ತಿಂಗಳೂ ಅವನಿಗಾಗಿ ಇಪ್ಪತ್ತು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ಆಗಿನ ಸಂದರ್ಭದಲ್ಲಿ ಅದು ಸಣ್ಣ ಮೊತ್ತವೇನೂ ಆಗಿರಲಿಲ್ಲ. ಏನಾದರೇನು? ಅವನು ಓದಲಿಲ್ಲ. ಹನ್ನೆರಡು ರೂಪಾಯಿ ಪರೀಕ್ಷೆ ಪಾಸು ಮಾಡಲಿಲ್ಲ. ಪ್ರೈಮರಿ ಶಾಲೆಯೊಂದರಲ್ಲಿ ಉಪಾಧ್ಯಾಯನಾಗಿ ತನ್ನ ಬಾಳನ್ನೆಲ್ಲ ಸವೆಸಬೇಕಾಯಿತು. ವೆಂಕಣ್ಣಯ್ಯನವರು ಬೆಂಗಳೂರಿಗೆ ಬಂದ ಕಾಲ ಭರತಖಂಡದ ಇತಿಹಾಸದಲ್ಲಿ ಒಂದು ಚಿರಸ್ಮರಣೀಯವಾದ ಕಾಲ. ರಾಷ್ಟ್ರವು ಪರಕೀಯರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಊದುತ್ತಿದ್ದ ಕಾಲ. ಮಹಾತ್ಮ ಗಾಂಧಿಯವರು ಆಫ್ರಿಕಾ ಖಂಡದಿಂದ ಹಿಂದಿರುಗಿ ಭರತ ಖಂಡದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಮೇಲೆ ಸತ್ಯಾಗ್ರಹ ಸಮರವನ್ನು ಹೂಡಿದ್ದ 276 ಮೂರು ತಲೆಮಾರು ಕಾಲ. ರಾಷ್ಟ್ರಪ್ರೇಮದ ಹೊಳೆ ದಾಸ್ಯದ ದಡಗಳನ್ನು ಕೊಚ್ಚಿ ಹಾಕಿ,. ಸ್ವಾತಂತ್ರ್ಯದ ಹೊಸ ಪಾತ್ರವೊಂದನ್ನು ನಿರ್ಮಿಸುವ ಹವಣಿಕೆಯಿಂದ ಪ್ರಚಂಡ ವೇಗದಿಂದ ಹರಿಯುತ್ತಿದ್ದ ಕಾಲ. ಆ ತುಂಬು ನೆರೆಯ ಒಂದು ಕವಲಾಗಿ ಸ್ವಭಾಷಾ ಸಾಹಿತ್ಯಗಳ ಪ್ರೇಮಪ್ರವಾಹವೂ ನೊರೆಗಟ್ಟಿ ಹರಿಯುತ್ತಿದ್ದ ಕಾಲ. ಇದರ ಫಲವಾಗಿಯೇ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಅದರ ಶೈಶವ ಬಾಲ್ಯಗಳಲ್ಲಿ ಅದಕ್ಕೆ ಪೋಷಣೆ ನೀಡಿದ ಪುಣ್ಯಶ್ಲೋಕರಲ್ಲಿ ವೆಂಕಣ್ಣಯ್ಯನವರೂ ಒಬ್ಬರು. ಅದು ಹುಟ್ಟಿದ ಒಂದೆರಡು ವರ್ಷಗಳಲ್ಲಿಯೇ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಸ್ಥಾಪನೆಯಾಯಿತು. ಇದಕ್ಕೆ ಸ್ವಲ್ಪ ಮುಂಚಿನ ಸ್ವಾರಸ್ಯ ಪ್ರಸಂಗವನ್ನು ಡಿ.ವಿ.ಜಿ. ಹೇಳುತ್ತಾರೆ. ಒಮ್ಮೆ ಡಿ.ವಿ.ಜಿ.ಯವರು ನಡೆಸುತ್ತಿದ್ದ ‘ಕರ್ಣಾಟಕ ಪತ್ರಿಕೆ’ ಕಾರ್ಯಾಲಯಕ್ಕೆ ಇಬ್ಬರು ಮಹನೀಯರು ಬರುತ್ತಾರೆ. “ಬಂದವರಲ್ಲಿ ಒಬ್ಬರು ತೆಳ್ಳಗೆ ಎತ್ತರವಾಗಿದ್ದರು. ಷರಾಯಿ ತೊಟ್ಟು, ಓಪನ್ ಕಾಲರ್ ಕೋಟು ಧರಿಸಿ ಕೊರಳಿಗೆ ನೆಕ್ ಟೈ ಕಟ್ಟಿದ್ದರೆಂದು ಜ್ಞಾಪಕ. ಪಂಜಾಬಿ ಸ್ಟೈಲ್‍ನಲ್ಲಿ ಕೋರೆ ರುಮಾಲು ಸುತ್ತಿದ್ದರು. ಎಡ ಭುಜದ ಮೇಲೆ ಅದರ ಚುಂಗು; ಅದರ ಇನ್ನೊಂದು ಕೊನೆ ತಲೆಯ ಮೇಲೆ (ಶಿರ್‌ಪೇಷ್‌) ಉತ್ತಂಸದಂತೆ ಕಾಣುತ್ತಿತ್ತು. ಒಳ್ಳೆಯ ಠೀವಿಯ ಆಳು. ಅದು ವೆಂಕಣ್ಣಯ್ಯ.” ಇನ್ನೊಬ್ಬರು ಎ. ಆರ್. ಕೃಷ್ಣಶಾಸ್ತ್ರಿಗಳು. “ನಾವು ಕಂಟೋನ್ಮೆಂಟಿನಿಂದ ಬಂದಿದ್ದೇವೆ. ಕನ್ನಡದ ವಿಷಯದಲ್ಲಿ ನಮಗೆ ಶ್ರದ್ಧೆಯುಂಟು, ಆ ವಿಚಾರ ಮತನಾಡಲು ಬಂದಿದ್ದೇವೆ” ಎಂದು ಮಾತು ಪ್ರಾರಂಭಿಸಿದ ಶಾಸ್ತ್ರಿಗಳು ‘ಸ್ವಾಮಿ ಪರಿಷತ್ತನ್ನು ಪ್ರಾರಂಭ ಮಾಡಿದವರು ಎಲ್ಲರೂ ಮುದುಕರು, ಪ್ರತಿಷ್ಠಾವಂತರು, ನೀವು ಹೋಗಿ ಅವರ ಜೊತೆ ಸೇರಿಕೊಂಡಿರಲ್ಲ? ಅವರಿಂದ ಏನು ಕೆಲಸ ನಡೆಯುತ್ತದೆ?’ ಎಂದು ಕೇಳಿದರು. ಡಿ.ವಿ.ಜಿಯವರು ಗಣ್ಯರಾದ ಆ ಹಳಬರಿಂದ ಸರ್ಕಾರದ ನೆರವು, ಧನಸಹಾಯ, ಸಂಸ್ಥೆಗೆ Prestige ಬರುತ್ತದೆಯೆಂದು ಸಮಾಧಾನ ಹೇಳಿದರು. ಆದರೆ ಕೃಷ್ಣಶಾಸ್ತ್ರಿಗಳು ಪಟ್ಟು ಬಿಡಲಿಲ್ಲ. ‘ಅದೆಲ್ಲ ಇರಬಹುದು; ಸ್ವಾಮಿ, ಕೆಲಸದ ಮಾತು ಹೇಳಿ. ಅವರಲ್ಲಿ ಕೆಲಸ ಮಾಡುವವರು ಯಾರು? ಅಂಥ ಮುದುಕರಿಂದ ಕೆಲಸ ನಡೆಯುತ್ತದೆಯೆ? ಯುವಕರನ್ನು ಈ ಕೆಲಸಕ್ಕೆ ತರಬೇಕು’ ಎಂದರು. ಡಿ.ವಿ.ಜಿ.ಯವರು ‘ಅದು ನನ್ನಿಂದಾಗುವ ಕೆಲಸವೆ?’ ಎಂದಾಗ ಶಾಸ್ತ್ರಿಗಳು ‘ನೀವು ಬೆಂಬಲ ಕೊಟ್ಟರೆ ನಾವು ಆ ಕೆಲಸ ಮಾಡುತ್ತೇವೆ. ನೀವು ನಮ್ಮ ವಯಸ್ಸಿನವರು; ಹೋಗಿ ಆ ವೃದ್ಧರಲ್ಲಿ ತಗುಲಿ ಹಾಕಿಕೊಂಡಿದ್ದೀರಿ!’ ಎಂದರು. ಡಿ.ವಿ.ಜಿ. ‘ನಾನೇನೂ ಬೆಂಗಳೂರಿನ ಜೀವನ 277 ತಗುಲಿಹಾಕಿಕೊಂಡಿಲ್ಲ’. ಅವರು ‘ಒಳ್ಳೆಯ ಕೆಲಸ ಮಾಡೋಣ ಬಾ’ ಎಂದರು ಹೋದೆ. ‘ಈಗ ನೀವು ಬಾ ಎಂದರೆ ನಿಮ್ಮೊಡನೆಯೂ ಸೇರಲು ಸಿದ್ಧನಾಗಿದ್ದೇನೆ’ ಎಂದು ಆಶ್ವಾಸನೆ ನೀಡಿದರು. ಇದಾದ ಒಂದು ತಿಂಗಳಿನೊಳಗಾಗಿ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಪ್ರಾರಂಭವಾಯಿತು. ಇದೇ ಕರ್ನಾಟಕದಲ್ಲಿ ಹುಟ್ಟಿಕೊಂಡ ಕರ್ನಾಟಕ ಸಂಘಗಳಲ್ಲಿ ಮೊಟ್ಟಮೊದಲನೆಯದು. ವೆಂಕಣ್ಣಯ್ಯ ಮತ್ತು ಕೃಷ್ಣಶಾಸ್ತ್ರಿಗಳ ದೂರದರ್ಶಿತ್ವದಿಂದ ಅದು ಪರಿಷತ್ತಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಲಿಲ್ಲ. ಪೂರಕವಾಗಿ ಬೆಳೆಯಿತು. ಪರಿಷತ್ತಿನ ಗೌರವಾಧ್ಯಕ್ಷರಾಗಿದ್ದ ದಿವಂಗತ ವೆಂಕಟನಾರಣಪ್ಪನವರೇ ಈ ಕರ್ನಾಟಕ ಸಂಘದ ಪ್ರಪ್ರಥಮ ಅಧ್ಯಕ್ಷರಾದರು. ವೆಂಕಣ್ಣಯ್ಯನವರು ಬೆಂಗಳೂರಿನಲ್ಲಿರುವಷ್ಟು ಕಾಲವೂ ಕಾಲೇಜನ್ನು ಬಿಟ್ಟರೆ ಅಲ್ಲಿನ ಕರ್ನಾಟಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಅವರ ಜೀವನದ ಪ್ರಮುಖ ಕಾರ್ಯರಂಗಗಳಾಗಿದ್ದುವು. ತಮ್ಮ ಎರಡು ಕಣ್ಣುಗಳಂತೆ ಅವರು ಈ ಎರಡು ಸಂಸ್ಥೆಗಳನ್ನು ರಕ್ಷಿಸಿಕೊಂಡು ಬಂದರು. ತಮ್ಮ ಜೀವನದ ಇತಿಹಾಸ ಈ ಸಂಸ್ಥೆಯ ಇತಿಹಾಸದಲ್ಲಿ ಅವಿಭಾಜ್ಯವಾಗಿ ಬೆರೆತುಹೋಗುವಂತೆ ಅವುಗಳ ಮೇಲ್ಮೆಗಾಗಿ ದುಡಿದರು. ಇವುಗಳ ಮೂಲಕ ಕನ್ನಡದ ಕೆಲಸಕ್ಕೆ ಯುವಕರ ಒಂದು ಪಡೆಯನ್ನೇ ನಿರ್ಮಾಣ ಮಾಡಿದರು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಈ ಸಂಸ್ಥೆಗಳು ಸಲ್ಲಿಸಿದ ಕೊಡುಗೆ ಈಗ ಇತಿಹಾಸಕ್ಕೆ ಸೇರಿಹೋಗಿದೆ. ಕನ್ನಡದ ‘ಅಶ್ವಿನಿ ದೇವತೆ’ಗಳೆಂದು ಖ್ಯಾತನಾಮರಾದ ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಟಿ. ಎಸ್. ವೆಂಕಣ್ಣಯ್ಯ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಸ್ಥಾಪನೆ, ಬೆಳವಣಿಗೆಗಳಲ್ಲಿ ಅಪಾರವಾದ ಆಸಕ್ತಿಯನ್ನು ವಹಿಸಿ ಅಹರ್ನಿಶಿ ದುಡಿದರು. ಆ ಕಾಲದ ಹಿರಿಯ ಸಾಹಿತಿಯೊಬ್ಬರು ಇಂಗ್ಲಿಷ್‌ ದೈನಿಕವೊಂದರಲ್ಲಿ ಬರೆದಂತೆ ‘ಕೃಷ್ಣಶಾಸ್ತ್ರಿಗಳು ಆ ಸಂಘದ ಚಟುವಟಿಕೆಗಳ ಮೆದುಳು; ವೆಂಕಣ್ಣಯ್ಯನವರು ಅದರ ಹೃದಯ. ‘ಶ್ರೀ ಡಿ.ವಿ.ಜಿ. ಯವರು ಹೇಳುತ್ತಾರೆ, “ಶಾಸ್ತ್ರಿಗಳು ಕೆಲಸ ಮಾಡುವರು, ವೆಂಕಣ್ಣಯ್ಯ ಮಾಡಿಸುವವರು. ಕೃಷ್ಣಶಾಸ್ತ್ರಿಗಳಿಗೆ ಸಂಘದ ಯಾವ ಕೆಲಸವೂ ಸಣ್ಣದೆಂದು ತೋರಲಿಲ್ಲ. ಪೊರಕೆ ಹಿಡಿದು ಕಸ ಬಳಿಯುವುದು ಮೊದಲುಗೊಂಡು ಪುಸ್ತಕಗಳ ಮೇಲಿನ ಧೂಳು ಹೊಡೆಯುವುದು. ಮೀಟಿಂಗ್‍ಗಾಗಿ ಕುರ್ಚಿ ಮೇಜುಗಳನ್ನು ಹೊರುವುದು ಮೊದಲುಗೊಂಡು ಅವರು ಮಾಡದಿದ್ದ ಕೆಲಸವಿಲ್ಲ. ಎಲ್ಲ ಸಣ್ಣ ಪುಟ್ಟ ಕೆಲಸಗಳಲ್ಲಿಯೂ ಅವರಿಗಿದ್ದ 278 ಮೂರು ತಲೆಮಾರು ಶ್ರದ್ಧೆ-ಅವರ ವ್ಯಾಕರಣ ವಿಚಾರದಲ್ಲಿಯೂ, ಸಾಹಿತ್ಯ ಶೋಧನೆಯಲ್ಲಿಯೂ ಎಷ್ಟು ಶ್ರದ್ಧೆ ಇತ್ತೋ ಅಷ್ಟೇ ಆಳವಾದುದು. ಆದ್ದರಿಂದ ಅವರ ತಿಂಡಿತೀರ್ಥಗಳು ಸೊಗಯಿಸುತ್ತಿದ್ದುವು. ಈ ವಿಷಯದಲ್ಲಿ ವೆಂಕಣ್ಣಯ್ಯನವರ ಪಾತ್ರ ಬೇರೆ ವಿಧದ್ದು. ಹೆಸರುಬೇಳೆ ಕೋಸಂಬರಿ ತಯಾರಾಗುತ್ತಿದೆಯೆನ್ನಿ, ವೆಂಕಣ್ಣಯ್ಯ ‘ಭೇಷ್‌ ! ಭರ್ಜರಿಯಾಗಿರುತ್ತದೆ-ಮಾವಿನಕಾಯಿ ತುರಿ ಸ್ವಲ್ಪ ಬಿದ್ದರೆ ಅದರ ರುಚಿ ಬಲು ಸೊಗಸು’ ಎನ್ನುವರು. ಆಂಬೊಡೆ ತಯಾರಾಗುತ್ತಿದೆ ಎಂದು ಗೊತ್ತಾದರೆ ‘ಭೇಷ್‌! ಮಧ್ಯದಲ್ಲಿ ಒಂದೊಂದು ಹಸಿ ಶುಂಠಿ ಚೂರು ಇರುತ್ತದೆ ತಾನೆ?’ ಎನ್ನುವರು. ಆ ಸಲಹೆಯನ್ನು ಅಂಗೀಕರಿಸುವವರಿದ್ದರು. ಅವರೇಕಾಯಿ ಕಾಲದಲ್ಲಿ ಉಪ್ಪಿಟ್ಟು ಎಂದರೆ ಸೊಗಸಾದ ಭಕ್ಷ್ಯ. ‘ಅದರ ಮಧ್ಯದಲ್ಲಿ ಒಂದೊಂದು ಮೆಣಸಿನಕಾಳು ಇದ್ದು, ಉಪ್ಪಿಟ್ಟನ್ನು ಕೈಪಿಡಿಚೆ ಮಾಡಿ ಆವಿಯಲ್ಲಿ ಬೇಯಿಸಿದರೆ ರಾಜಯೋಗ್ಯವಾಗುತ್ತದೆ’ ಎನ್ನುವರು. ಅದು ಹಾಗೇ ನಡೆಯುವುದು. ವೆಂಕಣ್ಣಯ್ಯ, ಶಾಸ್ತ್ರಿ ಇಬ್ಬರಿಗೂ ಇಂತಹ ವೈಲಕ್ಷಣ್ಯಗಳು ಅನೇಕ. ವೆಂಕಣ್ಣಯ್ಯ ನಯವಾಗಿ, ಮೃದುವಾಗಿ, ರಸವತ್ತಾಗಿ ಮಾತನಾಡಿ ಕೆಲಸ ಮಾಡಿಸುತ್ತಿದ್ದರು.” ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಕನ್ನಡಾಭಿಮಾನ, ಸಾಹಿತ್ಯಾಭಿಮಾನಗಳನ್ನು ಬೆಳೆಸುವುದರ ಜೊತೆಗೆ ಹೊಸದೊಂದು ಸಾಹಿತ್ಯಾಭೀರುಚಿಯನ್ನು ಬೆಳೆಸಿತು; ಹೊಸ ವಿಮರ್ಶನಾ ದೃಷ್ಟಿಕೋನವನ್ನು ಮೂಡಿಸಿತು. ಶ್ರೀ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರು ಇದನ್ನು ಕುರಿತು ಹೀಗೆ ಹೇಳೂತ್ತಾರೆ-ಹೊಸ ವಿಮರ್ಶೆ ಎಷ್ಟು ಮುಖವಾಗಿ ಕೆಲಸ ಮಾಡಬೇಕಾಗಿದೆ ಎನ್ನುವುದನ್ನು ತೋರಿಸಿಕೊಟ್ಟ ಒಂದು ಕೆಲಸ ಮುದ್ದಣನನ್ನು ಕುರಿತ ಪ್ರಶಸ್ತಿ ಗ್ರಂಥ. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಕವಿಯ ಜಯಂತಿಯನ್ನು ನಡೆಸಿ ಸಾಹಿತ್ಯ ಲೋಕದಲ್ಲಿ ಅವನಿಗೆ ನ್ಯಾಯವಾಗಿ ಸಲ್ಲಬೇಕಾದ ಸ್ಥಾನವನ್ನು ಗಳಿಸಿಕೊಟ್ಟಿತು’ ಎಂದು ಸಂಘದ ಆ ಪ್ರಕಟಣೆಯನ್ನು ಹೊಗಳಿದ್ದಾರೆ. ಹೊಸ ಸಾಹಿತ್ಯದ ಮುನ್ನಡೆಗೆ ಸಹಾಯಕವಾಗುವಂತೆ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಕೈಕೊಂಡ ಮತ್ತೊಂದು ಮಹತ್ಕಾರ್ಯವೆಂದರೆ ‘ಪ್ರಬುದ್ಧ ಕರ್ಣಾಟಕ’ ಎಂಬ ತ್ರೈಮಾಸಿಕ ಪತ್ರಿಕೆಯೊಂದನ್ನು ಆರಂಭಿಸಿದರು ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಟಿ. ಎಸ್. ವೆಂಕಣ್ಣಯ್ಯ. ‘ಇವರಲ್ಲಿ ಯಾರ ಒಬ್ಬರ ಕೆಲಸ ನಡೆದಾಗಲೂ ಮತ್ತೊಬ್ಬರು ಸದಾ ಜೊತೆ ಬೆರೆತು ಕಾರ್ಯದ ರೂಪವನ್ನು ನಿರ್ಧರಿಸುತ್ತಿದ್ದರು. ಅವಿಭಕ್ತ ಕುಟುಂಬದ ವ್ಯವಹಾರದ ರೀತಿ ಈ ಪತ್ರಿಕೆಯ ಕೆಲಸ. ಹಲವು ಮನಗಳ ಮಿಲನದಿಂದ ರೂಪುಗೊಂಡು ವೆಂಕಣ್ಣಯ್ಯನವರ ಬೆಂಗಳೂರಿನ ಜೀವನ 279 ವ್ಯಕ್ತಿತ್ವದಲ್ಲಿ, ಶಾಸ್ತ್ರಿಗಳ ಕರ್ತೃತ್ವದಲ್ಲಿ ಸ್ಪಷ್ಟ ಆಕಾರಕ್ಕೆ ಬಂದಿತು. ಎ.ಆರ್. ಕೃಷ್ಣಶಾಸ್ತ್ರಿಗಳು ವರ್ಗವಾಗಿ, ಮೈಸೂರಿಗೆ ಹೊರಟು ಹೋದುದರಿಂದ ಕಾಲೇಜಿನ ಕರ್ನಾಟಕ ಸಂಘ ಮತ್ತು ‘ಪ್ರಬುದ್ಧ ಕರ್ನಾಟಕ’ದ ನಿರ್ವಹಣೆಯ ಕಾರ್ಯ ಸಂಪೂರ್ಣವಾಗಿ ವೆಂಕಣ್ಣಯ್ಯನವರ ಹೆಗಲೇರಿತು. ಅವರು ಸೂಜಿಗಲ್ಲಿನಂತಹ ತಮ್ಮ ವ್ಯಕ್ತಿತ್ವದಿಂದ ತರುಣರ ಸಮೂಹವನ್ನೇ ಆಕರ್ಷಿಸಿ ‘ಪ್ರಬುದ್ಧ ಕರ್ನಾಟಕ’ದ ಲೇಖಕರಾಗಿ, ಕಾರ್ಯಕರ್ತರಾಗಿ ದುಡಿಸಿಕೊಳ್ಳುತ್ತಿದ್ದರು. ಈ ಸಂಗತಿಯನ್ನು ಕೃಷ್ಣಶಾಸ್ತ್ರಿಗಳು ಬಹು ಸ್ವಾರಸ್ಯವಾಗಿ ವರ್ಣಿಸುತ್ತಾರೆ- “ವೆಂಕಣ್ಣಯ್ಯನವರೆಂದರೆ ಬೆಲ್ಲದ ಉಂಡೆ! ಆ ಉಂಡೆಗೆ ಗೊದ್ದಗಳು, ಇರುವೆಗಳು ಸದಾ ಮುತ್ತಿಕೊಂಡಿರುತ್ತಿದ್ದುವು. ಅವರು ಈ ಪಿಪೀಲಿಕಾ ಪಂಕ್ತಿಗಳಿಂದ ಬೇಕಾದಷ್ಟು ಕೆಲಸ ಮಾಡಿಸುತ್ತಿದ್ದರು. ಅವು ಸಂತೋಷವಾಗಿಯೇ ಕೆಲಸ ಮಾಡುತ್ತಿದ್ದುವು. ನಾನು ಒಂದು ಸಾರಿ, ಅವರು ಶಂಕರಪುರದಲ್ಲಿ ವಾಸ ಮಾಡುತ್ತಿದ್ದಾಗ ಅವರ ಮನೆಗೆ ಹೋಗಿ ನೋಡಿದೆ. ಅದು ‘ಪ್ರಬುದ್ಧ ಕರ್ನಾಟಕ’ದ ಕಛೇರಿಯಾಗಿಬಿಟ್ಟಿತ್ತು. ಅದನ್ನು ಎಂದರೆ ‘ಪ್ರಬುದ್ಧ ಕರ್ನಾಟಕ’ವನ್ನು ಕಾಗದದಲ್ಲಿ ಸುತ್ತುವವರು ಎಷ್ಟು ಜನ! ಸ್ಟಾಂಪು ಅಂಟಿಸುವವರು ಎಷ್ಟು ಜನ! ಜೋಡಿಸುವವರು ಎಷ್ಟು ಜನ! ಅಷ್ಟು ಜನ ಅವಶ್ಯವೋ ಅಲ್ಲವೋ ಅಂತೂ ಆ ಮನೆ ಒಂದು ಇರುವೆಯ ಗೂಡಿನಂತಿತ್ತು !’ ಹಾಗೆ ಮುಕ್ಕಿರಿದುಕೊಂಡಿದ್ದ ಜನ ಮತ್ತಾರೂ ಅಲ್ಲ, ವೆಂಕಣ್ಣಯ್ಯನವರ ವಿದ್ಯಾರ್ಥಿಗಳು!” ಕೇವಲ ವಿದ್ಯಾರ್ಥಿಗಳೇ ಅಲ್ಲ, ಚಿಕ್ಕ ಚಿಕ್ಕ ಮಕ್ಕಳು ಕೂಡ. ಅವರು ಪ್ರೀತಿಯಿಂದ ಕೊಡುವ ಕಲ್ಲುಸಕ್ಕರೆಯ ಚೂರುಗಳಿಗೆ, ಆತ್ಮೀಯತೆಯಿಂದ ಹೇಳಿಕೊಡುವ ಕತೆಗಳಿಗೆ ಮರುಳಾಗಿ ‘ಪ್ರಬುದ್ಧ ಕರ್ನಾಟಕ’ವನ್ನು ಹಂಚುವ ಕೆಲಸವನ್ನು ಮಾಡಿಕೊಡುತ್ತಿದ್ದರು. ಸುಪ್ರಸಿದ್ಧ ಕತೆಗಾರರಾದ ಅಶ್ವತ್ಥರವರು ತಮ್ಮದೊಂದು ಕಥೆಯಲ್ಲಿ ಈ ವಿಷಯವನ್ನು ಬಹು ಸ್ವಾರಸ್ಯವಾಗಿ ಸ್ಮರಿಸಿದ್ದಾರೆ. ವೆಂಕಣ್ಣಯ್ಯನವರು ಮಕ್ಕಳ ಬರಹವನ್ನೂ ಲಘುವಾಗಿ ಕಾಣದ ಹೃದಯವಂತಿಕೆಯುಳ್ಳವರು. ಚಿಕ್ಕ ಹುಡುಗ ಅಶ್ವತ್ಥ ಬರೆದ ಕಥೆಯನ್ನು ಪ್ರತ್ಯೇಕವಾಗಿ ಅಚ್ಚು ಹಾಕಿಸಿ ಅವನಿಗೆ ಕೊಟ್ಟುದಲ್ಲದೆ, ‘ಪ್ರಬುದ್ಧ ಕರ್ನಾಟಕ’ದ ಪ್ರತಿಯಲ್ಲಿ ಅದನ್ನು ಅಂಟಿಸಿ ಅವನಿಗೆ ಕೊಟ್ಟರಂತೆ ! ಅದನ್ನು ನೆನೆದು ಆತ ಈಗ ಹೇಳಿಕೊಳ್ಳುತ್ತಾರೆ ‘ಆಗಿನ ಅನುಭವ ಮೊಳೆತು, ಮರವಾಗಿ ಈಗ ನಾನು ಒಬ್ಬ ಕತೆಗಾರ ಅನ್ನಿಸಿಕೊಂಡುಬಿಟ್ಟಿದ್ದೇನೆ. ಕೇವಲ ಆಟದ ಆನೆಗೆ ಇಷ್ಟೊಂದು ಗಮನ ಕೊಟ್ಟ ಹಿರಿಯರು ನಿಜವಾದ ಆನೆಗಳಿಗಾಗಿ ಎಷ್ಟೊಂದು ಶ್ರಮ ಪಟ್ಟು ಖೆಡ್ಡಾ ಪ್ರಕರಣವನ್ನು ನಡೆಸಿದ್ದರೋ! 280 ಮೂರು ತಲೆಮಾರು ಡಿ.ವಿ.ಜಿ.ಯವರ ‘ವನಸುಮದೊಳೆನ್ನ ಜೀವನವು ವಿಕಸಿಸುವಂತೆ’ ಎಂಬ ಕವನವು ವೆಂಕಣ್ಣಯ್ಯನವರ ಅಚ್ಚುಮೆಚ್ಚಿನ ಗೀತೆಗಳಲ್ಲಿ ಒಂದು. ಅವರು ಅದನ್ನು ಕರ್ನಾಟಕ ಸಂಘದ ಪ್ರಾರ್ಥನಾಗೀತೆಯಾಗಿ ಆಯ್ದಿದ್ದರು. ತಾವೂ ವನಸುಮದಂತೆಯೇ ಅಧಿಕಾರಸೂತ್ರವನ್ನು ಹಿಡಿಯದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದುಡಿದರು, ಅವರ ವ್ಯಕ್ತಿತ್ವದ ಸೌರಭ ಪರಿಷತ್ತಿನ ಚಟುವಟಿಕೆಗಳಲ್ಲೆಲ್ಲ ವ್ಯಾಪಿಸಿತ್ತು. ಅಲ್ಲಿನ ಪ್ರಾಚೀನ ಕಾವ್ಯಗಳ ಪರಿಷ್ಕರಣ ಕಾರ್ಯದಲ್ಲಿ ವೆಂಕಣ್ಣಯ್ಯನವರ ಪಾತ್ರ ಮಹತ್ತರವಾದುದಾಗಿತ್ತು. ಪಂಪ ಭಾರತವನ್ನು ಪುನರ್ಮುದ್ರಣಕ್ಕಾಗಿ ಪರಿಷ್ಕಾರ ಮಾಡುತ್ತಿದ್ದಾಗ ಅವರು ಪ್ರತಿ ರಾತ್ರಿಯೂ ಆ ಕಾರ್ಯಕ್ಕಾಗಿ ತಪ್ಪದೆ ಬರುತ್ತಿದ್ದರು. ಪರಿಷತ್ತಿನ ಅಧ್ಯಕ್ಷರಾಗಿದ್ದ ವೆಂಕಟನಾರಣಪ್ಪನವರ ಕಟ್ಟುನಿಟ್ಟಿನ ರಾಜ್ಯಭಾರವನ್ನು ಅವರು ನಗುಮುಖದಿಂದ ಸಹಿಸಿಕೊಳ್ಳುತ್ತಿದ್ದರು. ‘ಆಗ ಕಾಣಬರುತ್ತಿತ್ತು ವೆಂಕಣ್ಣಯ್ಯನವರ ಕಾವ್ಯದೃಷ್ಟಿ ಸೂಕ್ಷ್ಮತೆ. ಯಾವ ಕಡೆ ಯಾವ ಅಕ್ಷರವಿದ್ದರೆ ಸೊಗಸು, ವ್ಯಂಗ್ಯಾರ್ಥ ಪ್ರತೀತಿಗೆ ಹೇಗೆ ಸೊಗಸು? ವಾಚ್ಯಾರ್ಥಕ್ಕೆ ಹೇಗೆ ಸೊಗಸು? ಈ ಮರ್ಮಗಳನ್ನು ಅವರು ಹುಡುಕಿ ಹುಡುಕಿ ವಿವರಿಸುತ್ತಿದ್ದರು. ಇದರಿಂದ ಕೆಲಸ ತಡವಾಗುತ್ತಿತ್ತು. ಕೆಲಸದಲ್ಲಿ ತೀವ್ರರಾಗಿಯೂ, ಕಾಲವಿಳಂಬದ ವಿಷಯದಲ್ಲಿ ಕಟುವಾಗಿಯೂ ಇದ್ದ ವೆಂಕಟನಾರಣಪ್ಪನವರೂ ಕೂಡ ವೆಂಕಣ್ಣಯ್ಯನವರ ಮಾತನ್ನು ಕೇಳುವುದರಲ್ಲಿ ತಮ್ಮ ಕಟ್ಟುನಿಟ್ಟನ್ನು ಮರೆಯುತ್ತಿದ್ದರಂತೆ!’ ಡಿ.ವಿ.ಜಿ.ಯವರು ಕೆಲವು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಅವರು ಅಧಿಕಾರ ಸ್ವೀಕಾರ ಮಾಡುತ್ತಲೇ ಹುರುಪಿನಿಂದ ಹೊಸ ನಿಯಮಾವಳಿಗಳನ್ನು ಕಾರ್ಯ ಸಮಿತಿಯ ಮುಂದೆ ತಂದರು. ಅವರೊಬ್ಬ ಶಿಸ್ತಿನ ಸಿಪಾಯಿ. ಆದ್ದರಿಂದ ಸಭೆ, ಸಮ್ಮೇಳನಗಳಿಗೆ ಕಾಲನಿಯಮ, ಉಪನ್ಯಾಸಗಳಿಗೆ ನಿಶ್ಚಿತ ಅನುಕ್ರಮ, ಭಾಷಣಗಳಿಗೆ ಕ್ಲುಪ್ತವೇಳೆ - ಹೀಗೆ ಶಿಸ್ತನ್ನು ಇರಿಸಿಕೊಂಡು ಸಫಲವಾಗಿ ಕೆಲಸ ಮಾಡುವ ಉದ್ದೇಶದಿಂದ ತಂದ ನಿಯಮಗಳು, ಅವು. ಪರಿಷತ್ತಿನ ಕಾರ್ಯ ಸಮಿತಿ ಈ ನಿಯಮಗಳನ್ನು ಉತ್ಸಾಹದಿಂದ ಒಪ್ಪಿಕೊಂಡಿತು. ಆ ಸಮಿತಿಯಲ್ಲಿ ಒಬ್ಬರಾದ ವೆಂಕಣ್ಣಯ್ಯನವರು ಆ ನಿಯಮಗಳನ್ನು ಅನುಮೋದಿಸಿದರಾದರೂ ‘ಇದೆಲ್ಲ ಅಚ್ಚಾಗಿರಲಿ, ನಿಮ್ಮ ಉದ್ದೇಶವೇನೆಂಬುದು ತಿಳಿಯುತ್ತದೆ. ಆದರೆ ಅದೊಂದೂ ನಡೆಯುವುದಿಲ್ಲ. ಏಕೆಂದರೆ ನಮ್ಮ ಜನರ ಸ್ವಭಾವ ಅಂತಹುದು. ಅವರು ಒಂದು ನಿಯಮವನ್ನೂ ನಡೆಸಗೊಡುವುದಿಲ್ಲ’ ಎಂದು ತಮ್ಮ ವ್ಯಾವಹಾರಿಕ ಪ್ರಜ್ಞೆ ಮತ್ತು ಮಾನವ ಬೆಂಗಳೂರಿನ ಜೀವನ 281 ಸ್ವಭಾವದ ಒಳನೋಟ ತೋರಿಸಿದರು. ಬಹು ಕಾಲದಲ್ಲಿಯೇ ಡಿ.ವಿ.ಜಿ.ಯವರ ಅನುಭವ ವೆಂಕಣ್ಣಯ್ಯನವರ ಮಾತೇ ಸರಿ ಎಂಬುದನ್ನು ತೋರಿಸಿಕೊಟ್ಟಿತು. ಕನ್ನಡ ಸಾಹಿತ್ಯ ಪರಿಷತ್ ಮಂದಿರದ ಕಟ್ಟಡ ಈಗಿರುವ ನಿವೇಶನದಲ್ಲಿ ಇರುವುದಕ್ಕೆ ವೆಂಕಣ್ಣಯ್ಯನವರ ಕೈವಾಡವೂ ಕಾರಣ. ಮೊದಲು ಸರ್ಕಾರದವರು ಪರಿಷತ್ತಿಗೆ ಶಂಕರಪುರದ ಕಲ್ಲುಗುಂಡುಗಳ ನಿವೇಶನವೊಂದನ್ನು ಕೊಟ್ಟಿದ್ದರು. ವೆಂಕಣ್ಣಯ್ಯನವರು ವೆಂಕಟನಾರಣಪ್ಪನವರಿಗೆ ಹೇಳಿ ಅವರಿಂದ ದಿವಾನ್ ಮಿರ್ಜಾರವರಿಗೆ ಹೇಳಿಸಿ ಇಂದಿನ ನಿವೇಶನ ಪರಿಷತ್ತಿಗೆ ದಕ್ಕುವಂತೆ ಮಾಡಿದರು. ದಿವಾನ್ ಮಿರ್ಜಾರವರು ವೆಂಕಟನಾರಣಪ್ಪನವರ ಶಿಷ್ಯರಾಗಿದ್ದವರು, ಅವರಲ್ಲಿ ಅಪಾರವಾದ ಭಕ್ತಿ ಗೌರವಗಳನ್ನಿಟ್ಟಿದ್ದವರು. ಇದನ್ನು ವೆಂಕಣ್ಣಯ್ಯನವರು ಬಲ್ಲವರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಗಾಗ ಬಿಡಿಸಲಾಗದ ಕಗ್ಗಂಟಿನಂತೆ ಕಠಿಣ ಸಮಸ್ಯೆಗಳು ಉದ್ಭವಿಸುತ್ತಿದ್ದುವು. ಅದನ್ನು ಬಿಡಿಸುವುದರಲ್ಲಿ ವೆಂಕಣ್ಣಯ್ಯನವರ ವ್ಯಕ್ತಿತ್ವ ತುಂಬ ಪ್ರಭಾವಶಾಲಿಯಾಗಿತ್ತು. ಯಾವ ವರ್ಷವೆಂದು ಮರೆತುಹೋಗಿದೆ. ಆ ವರ್ಷ ಬಿಜಾಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಬೇಕಾಗಿತ್ತು. ಅದರ ಅಧ್ಯಕ್ಷರು ಯಾರಾಗಬೇಕೆಂಬ ವಿಚಾರದಲ್ಲಿ ಏಕಾಭಿಪ್ರಾಯವಿರಲಿಲ್ಲ. ಮಂಗಳೂರಿನ ಪತ್ರಿಕೆಯೊಂದರಲ್ಲಿ ಪರಿಷತ್ತಿನ ಆಡಳಿತವನ್ನು ಕುರಿತು ಕಟು ಟೀಕೆ ಕಾಣಿಸಿಕೊಂಡಿತು. ಮಂಗಳೂರು, ಬೆಂಗಳೂರು, ಬಿಜಾಪುರ ಇವು ಕಲಹದ ಕೇಂದ್ರಗಳಾದುವು. ಬಿಜಾಪುರದವರಿಗೆ ತಮ್ಮ ಮಾತಿಗೆ ಬೆಲೆಯಿಲ್ಲವಲ್ಲ ಎಂಬ ಅಸಮಾಧಾನ. ಮಂಗಳೂರಿನವರಿಗೆ ಅಧಿಕಾರಿವರ್ಗದವರ ಮೇಲೆ ಅಸಮಾಧಾನ. ಬೆಂಗಳೂರಿನವರಿಗೆ ತಾವು ಸೂಚಿಸುವ ಅಧ್ಯಕ್ಷರನ್ನು ಬಿಜಾಪುರದ ಸ್ವಾಗತ ಸಮಿತಿ ಒಪ್ಪದಿದ್ದರೆ ಏನು ಗತಿ ಎಂಬ ಕಳವಳ. ಈ ಸಮಸ್ಯೆಯನ್ನು ಬಗೆಹರಿಸಲು ಶ್ರೀ ವೆಂಕಣ್ಣಯ್ಯನವರು ಮುಂದೆ ಬಂದರು. ಶ್ರೀ ಟಿ.ಟಿ. ಶರ್ಮರನ್ನು ಮಂಗಳೂರಿಗೂ ಬಿಜಾಪುರಕ್ಕೂ ಕಳುಹಿಸಿ, ಸಂಧಾನ ನಡೆಸಿ ಎಲ್ಲವನ್ನೂ ನೇರ್ಪಡಿಸಿದರು. ಸಮ್ಮೇಳನದ ಅಧ್ಯಕ್ಷರಾಗಲು ನಾನು ತಾನೆಂದು ಸ್ಪರ್ಧಿಸುತ್ತಿದ್ದಾಗ ವೆಂಕಣ್ಣಯ್ಯನವರು ಮಾತ್ರ ಮನೆಯ ಬಾಗಿಲಿಗೆ ಬಂದ ಈ ಆಹ್ವಾನವನ್ನು ಅತ್ಯಂತ ನಮ್ರತೆಯಿಂದ ನಿರಾಕರಿಸಿದರು. ಅವರು ಕೊನೆಯವರೆಗು ಅಧ್ಯಕ್ಷರಾಗಲು ಒಪ್ಪಲೇ ಇಲ್ಲ. ಅಧ್ಯಕ್ಷ ಪದವಿಗೆ ಮೂರು, ನಾಲ್ಕು ಸಲ ಅವರ ಹೆಸರು ಸೂಚಿತವಾದರೂ ಅವರು ‘ನನಗಿಂತ ಹಿರಿಯರು, ಅರ್ಹರಾದವರು ಇರುವಾಗ ಆ ಗೌರವವನ್ನು ನಾನು ಒಪ್ಪಿಕೊಳ್ಳುವುದೆ? ನನ್ನ 282 ಮೂರು ತಲೆಮಾರು ಸರದಿ ನಿಧಾನವಾಗಿ ಬರಲಿ’ ಎಂದು ಹೇಳಿ ಪ್ರತಿಸಲವೂ ಜಾರಿಕೊಂಡರು. ಸ್ಥಾನಮಾನಗಳಿಗೆಂದು, ಕೀರ್ತಿಗೆಂದು ಅವರ ಜೀವ ಎಂದೂ ಹಾತೊರೆಯಲಿಲ್ಲ. ಶ್ರೇಷ್ಠ ಉಪನ್ಯಾಸಕರಾದ ವೆಂಕಣ್ಣಯ್ಯ ಪರಿಷತ್ತಿನ ವೇದಿಕೆಯ ಮೇಲೆ ನೀಡಿದ ಉಪನ್ಯಾಸಗಳು ಅಸಂಖ್ಯಾತ. ಅಂತಹ ಒಂದು ಉಪನ್ಯಾಸವನ್ನು ಡಿ.ವಿ.ಜಿ. ಹೀಗೆ ವರ್ಣಿಸುತ್ತಾರೆ-’1934-35ರ ಸುಮಾರಿನಲ್ಲಿ ಪರಿಷತ್ತಿನ ವಿಶೇಷ ಉಪನ್ಯಾಸ ಕಾಲದಲ್ಲ ವೆಂಕಣ್ಣಯ್ಯ ಮಾಡಿದ ಒಂದು ಭಾಷಣ ಅದನ್ನು ಕೇಳಿದವರ ಜ್ಞಾಪಕದಲ್ಲಿ ಬಹುಕಾಲ ಸ್ಫುಟದಲ್ಲಿ ನಿಂತಿದ್ದೀತು. ವೆಂಕಣ್ಣಯ್ಯ ಅಂದು ಬೆಳಿಗ್ಗೆ ಮಾಡಿದ ಭಾಷಣದಷ್ಟು ಪರಿಣಾಮಕಾರಿಯಾದದ್ದನ್ನು ನಾನು ಎಂದೂ ಕೇಳಿಲ್ಲ. ಅಂದಿನ ವಿಷಯ ನನಗೆ ಜ್ಞಾಪಕದಲ್ಲಿರುವ ಮಟ್ಟಿಗೆ - ಪ್ರಾಚೀನ, ನವೀನಗಳ ಸಮನ್ವಯ. ವೆಂಕಣ್ಣಯ್ಯ ಸುಮಾರು ಒಂದೂವರೆ ಘಂಟೆ ಕಾಲ ಮಾತನಾಡಿದರು. ಇಂಗ್ಲಿಷ್‌ನಲ್ಲಿ He spoke like one inspired ಎಂದು ಹೇಳುವಂತೆ. ಆ ದಿನ ವೆಂಕಣ್ಣಯ್ಯನಲ್ಲಿ ಒಂದು ದೈವಾಂಶ ಆವೇಶಮಾಡಿದಂತೆ ಕೇಳುವವರಿಗೆ ತೋರುತ್ತಿತ್ತು. ಆ ಭಾಷಣದ ವಿಶೇಷಗುಣ ವಾಗ್‍ಧೋರಣೆಯಲ್ಲ. ಆಡಂಬರವಲ್ಲ, ಅಲಂಕಾರದ ಬೆಡಗಲ್ಲ. ಅದು ವಿಷಯ ನಿರೂಪಣೆಯ ಸ್ವಾರಸ್ಯ. ಪ್ರಾಚೀನ ಸಂಪ್ರದಾಯ, ನವೀನ ಸುಧಾರಣೆ - ಈ ಎರಡು ಪಕ್ಷಗಳನ್ನೂ ಕುರಿತು ಹೇಳಬಹುದಾಗಿದ್ದ ವಾದ-ಪ್ರತಿವಾದಗಳನ್ನು ತೋಲನ ಮಾಡಿ, ದಿಗ್ದರ್ಶನ ಮಾಡಿಸಿದ್ದು ವೆಂಕಣ್ಣಯ್ಯನ ಬುದ್ಧಿಸೂಕ್ಷ್ಮದ ಕಾರ್ಯ. ಮಾತುಗಳೇನೋ ಮಿತವಾಗಿದ್ದುವು, ಭಾಷೆ ಸರಳವಾಗಿತ್ತು. ರೀತಿ ಸಾಮಾನ್ಯವಾದದ್ದೆ, ಆದರೆ ವಿಷಯಸಾಮಗ್ರಿ ಭಾರವಾದದ್ದು, ನಿರೂಪಣಾ ಶೈಲಿ ಗಂಭೀರವಾದದ್ದು, ವಾಕ್ಯ ವಾಕ್ಯದಲ್ಲಿಯೂ ತೇಜಸ್ಸೂ ಕಾಂತಿಯೂ ತುಂಬಿದ್ದುವು. ಅದು ಬುದ್ಧಿ ಪ್ರಸಾದದ ತೇಜಸ್ಸು’. ಶ್ರೀ ವೆಂಕಣ್ಣಯ್ಯನವರು 1920-21ರ ಸುಮಾರಿನಲ್ಲಿ ಶಂಕರಪುರಕ್ಕೆ ವಾಸಮಾಡಲು ಬಂದರು. ಅಲ್ಲಿನ ನಾಲ್ಕನೇ ಬೀದಿಯಲ್ಲಿ ಗೋಲ್ಕೊಂಡ ನಿವಾಸ ಎಂಬುದು ಅವರ ವಾಸ ಸ್ಥಳವಾಗಿತ್ತು. ಆಗ ಸಾಹಿತ್ಯ ಪರಿಷತ್ತಿನ ಹೊಸ ಕಟ್ಟಡವಿನ್ನೂ ನಿರ್ಮಾಣವಾಗಿರಲಿಲ್ಲ. ವೆಂಕಣ್ಣಯ್ಯನರು ವಾಸಿಸುತ್ತಿದ್ದ ಪಕ್ಕದ ಬೀದಿಯಲ್ಲಿ ಒಂದು ಬಾಡಿಗೆ ಮನೆ ಪರಿಷತ್ತಿನ ಕಛೇರಿಯಗಿತ್ತು. ಅದರ ಮುಂದಿನ ಬೀದಿಯಲ್ಲಿ ಡಿ.ವಿ.ಜಿ. ಯವರು ವಾಸಿಸುತ್ತಿದ್ದರು. ಆದ್ದರಿಂದ ವೆಂಕಣ್ಣಯ್ಯನವರು, ಡಿ.ವಿ.ಜಿ. ಯವರು ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಕೆಲವೇ ದಿನಗಳಲ್ಲಿ ಇದು ಗಾಢ ಸ್ನೇಹವಾಯಿತು. ತಮ್ಮ ಈ ಸ್ನೇಹವನ್ನು ಕುರಿತು ಡಿ.ವಿ.ಜಿ. ಬೆಂಗಳೂರಿನ ಜೀವನ 283 ಯವರು ಹೀಗೆ ಹೇಳುತ್ತಾರೆ: ‘ಮನುಷ್ಯ ಜೀವನದಲ್ಲಿ ಎಷ್ಟೋ ಸ್ನೇಹಗಳು ಷರಟು, ಕೋಟುಗಳಂತೆ ನಮ್ಮ ಮೈಗೆ ಅಂಟಿಕೊಂಡಿರುತ್ತವೆ. ಒಂದೋ ಎರಡೋ ಸ್ನೇಹಗಳು ಮಾತ್ರ ಮೈಚರ್ಮವಾಗಿ, ಮಾಂಸ ಮೂಳೆಗಳಾಗಿ ಜೀವನದ ಆಶ್ರಯವಸ್ತುಗಳಾಗುತ್ತವೆ. ವೆಂಕಣ್ಣಯ್ಯ ಹಾಗೆ ನನ್ನ ಜೀವನದ ಅಂತದ್ರ್ರವ್ಯವಾದವರು; ಹೊರಗಣ ಪದಾರ್ಥವಲ್ಲ’. ಅವರಿಬ್ಬರೂ ದಿನಕ್ಕೊಂದು ಸಾರಿಯಾದರೂ ಕಲೆಯದೆ ಇರುತ್ತಿರಲಿಲ್ಲ. ಎಷ್ಟೋ ಸಾರಿ ಅರ್ಧದಿನವೆಲ್ಲ ಸಾಹಿತ್ಯಿಕ ವಿಷಯಗಳನ್ನು ಕುರತು ಚರ್ಚಿಸುತ್ತಿದ್ದರಂತೆ! ಡಿ.ವಿ.ಜಿ. ಹೇಳುತ್ತಾರೆ. ‘ನಾವು ಚರ್ಚಿಸದೆ ಬಿಟ್ಟ ವಿಷಯ ಸೂರ್ಯಮಂಡಲದ ಕೆಳಗೆ ಯಾವುದೂ ಇರಲಾರದು’ ಎಂದು. ವೆಂಕಣ್ಣಯ್ಯನವರು ಆಗ ತಾನೆ ಅಂಕುರಿಸುತ್ತಿದ್ದ ನವೋದಯ ಸಾಹಿತ್ಯದ ವಿಚಾರದಲ್ಲಿ ತೃಪ್ತರಾಗಿರಲಿಲ್ಲ. ಆಗ ಬಳಕೆಯಲ್ಲಿದ್ದ ಬರವಣಿಗೆಯ ಬಹುಭಾಗವನ್ನು ‘ಇದೇನು ಹುರಿಟ್ಟಿನ ಬರವಣಿಗೆ’ ಎನ್ನುತ್ತಿದ್ದರಂತೆ! ‘ಅರಳಿನಲ್ಲಿ ಭಾರವಿಲ್ಲ, ಒಂದು ಚೀಲದಷ್ಟು ಸುಲಭವಾಗಿ ಆಗಿದು ನುಂಗಬಹುದು. ದೇಹಕ್ಕೆ ಅದರಿಂದ ಬರುವ ತ್ರಾಣ ಕಡಿಮೆ; ಬರವಣಿಗೆಯಲ್ಲಿ ವಿಷಯ ಗೌರವ ಇರಬೇಕು. ಹತ್ತು ಮಾತಿನಲ್ಲಿ ಅಡಕಬಹುದಾದ ವಿಷಯವನ್ನು ನೂರು ಮಾತುಗಳಲ್ಲಿ ಹರಡಿದರೆ ಪುಸ್ತಕ ದೊಡ್ಡದಾಯಿತು. ವಾಚಕರಿಗೆ ಪ್ರಯೋಜನ ಕಡಿಮೆ’ ಹೀಗೆನ್ನುತ್ತಿದ್ದರು ವೆಂಕಣ್ಣಯ್ಯ. ವೆಂಕಣ್ಣಯ್ಯನವರ ಪಾಂಡಿತ್ಯ ಅಪಾರವಾಗಿತ್ತು. ಆದರೆ ಅವರು ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಡಿ.ವಿ.ಜಿ. ಅವರೊಡನೆ ಅವರು ಚರ್ಚಿಸುತ್ತಿದ್ದಾಗ ಇಂಗ್ಲಿಷ್‌ ಕವಿಗಳು, ಸಂಸ್ಕೃತದ ಕವಿಗಳು ಕನ್ನಡದ ಕವಿಗಳು ಪದೇ ಪದೇ ಟೀಕೆಗೆ ಬರುತ್ತಿದ್ದರಂತೆ! ಹಾಗೆಯೇ ಧ್ವನ್ಯಾಲೋಕ, ಕಾವ್ಯಪ್ರಕಾಶ, ವಕ್ರೋಕ್ತಿಜೀವಿತ, ಸಾಹಿತ್ಯ ದರ್ಪಣ ಇತ್ಯಾದಿ ಅಲಂಕಾರಗ್ರಂಥಗಳಲ್ಲಿನ ಸೂತ್ರಗಳ ಮೇಲೆ ವಾದ ವಿವಾದಗಳು ನಡೆಯುತ್ತಿದ್ದುವಂತೆ. ಅವುಗಳ ಆಧಾರದ ಮೇಲೆ ಡಿ.ವಿ.ಜಿಯವರು “ಅವರದು ಬಹು ಸೂಕ್ಷ್ಮವಾದ ತೀವ್ರ ಸಂವೇದನೆ. ಅವರಿಗಿದ್ದ ಸಾಹಿತ್ಯದ ಅಂತರ್ದೃಷ್ಟಿ ಅಸಾಧಾರಣವಾದದ್ದು. ಇದನ್ನು ಇಂಗ್ಲೀಷಿನಲ್ಲಿ feel for literature ಎಂದು ಹೇಳುವುದುಂಟು. ವೆಂಕಣ್ಣಯ್ಯನವರಿಗೆ ಸಾಹಿತ್ಯದ ಗುಣವು ಸ್ಪರ್ಶ ಮಾತ್ರ ಗ್ರಾಹ್ಯವಾಗಿತ್ತು. ಒಂದು ಪದ್ಯವನ್ನೋ ಒಂದು ಪಂಕ್ತಿಯನ್ನೋ ಹಾಗೆಯೇ ಒಂದು ಸನ್ನಿವೇಶವನ್ನೋ, ಒಂದು ಪಾತ್ರದ ಉಕ್ತಿಯನ್ನೋ ನೋಡಿದ ಕೂಡಲೇ ‘ಸ್ವಾರಸ್ಯವುಳ್ಳ ಸ್ಥಳ’, ‘ಬರಿಯ ಬುಡುಬುಡಿಕೆ’, ‘ಇದು ಖರ್ಚಿಕಾಯಿ’ ಎಂದು ನಿರ್ಣಯಿಸುವ ಶಕ್ತಿ ಇತ್ತು” ಎಂದು ಹೇಳುತ್ತಾರೆ. 284 ಮೂರು ತಲೆಮಾರು ವೆಂಕಣ್ಣಯ್ಯನವರಿಗೆ ಸಂಗೀತ ಬಹು ಪ್ರಿಯವಾದ ಕಲೆ. ಅವರು ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡದಿದ್ದರೂ ರಾಗಗಳ ಸ್ವಭಾವವನ್ನು ಅನುಭವದಿಂದ ಕಂಡುಕೊಂಡಿದ್ದರು. ಸಂಗೀತಕ್ಕೆ ಯೋಗ್ಯವಾದ, ಇಂಪಾದ, ಕೋಮಲವಾದ ಶಾರೀರ ಸಂಪತ್ತನ್ನು ಹೊಂದಿದ್ದರು. ಮದ್ರಾಸಿಗೆ ಎಂ.ಎ. ಪರೀಕ್ಷೆಗೆಂದು ಹೋಗಿದ್ದಾಗ ತಮ್ಮ ಕೊಠಡಿಯ ಸುತ್ತಮುತ್ತಲಿನ ವೈದ್ಯವಿದ್ಯಾರ್ಥಿಗಳನ್ನು ತಮ್ಮ ಕಾವ್ಯವಾಚನದಿಂದ ಹೇಗೆ ಆಕರ್ಷಿಸಿದರೆಂದು ಹಿಂದೆಯೇ ಬಂದಿದೆ, ಅವರು ಕಾವ್ಯ ಓದುವುದೇ ಒಂದು ಸೊಗಸು, ‘ವೆಂಕಣ್ಣಯ್ಯ, ನಿಮ್ಮ ಓದುವ ಧಾಟಿಯಲ್ಲಿ ನಿಮಗೆ ಮನಸ್ಸು ಬಂದರೆ ಕೊಳಕು ಕಗ್ಗವನ್ನು ಸೊಗಸಾದ ಕಾವ್ಯ ಎನಿಸುವಂತೆ ಮಾಡುತ್ತೀರಿ, ಮನಸ್ಸು ಬಾರದಿದ್ದರೆ ಸೊಗಸಾದ ಪದ್ಯವನ್ನು ಅದು ಕೆಲಸಕ್ಕೆ ಬಾರದ ಕಂತೆ ಮಾಡುತ್ತೀರಿ’ ಎಂದು ಡಿ.ವಿ.ಜಿ. ಟೀಕಿಸುತ್ತಿದ್ದರಂತೆ! ಹೊಸ ಹೊಸ ಪಂಕ್ತಿ ಬರೆದು ಸರ್ಟಿಫಿಕೇಟ್‍ಗಾಗಿ ಬಂದವರು ಪಂಕ್ತಿಯನ್ನು ಹೀಗೆ ರಾಗವಾಗಿ ಹಾಡಿ ಅವರನ್ನು ಖುಷಿ ಪಡಿಸುತ್ತಿದ್ದರು. ಇದನ್ನು ಆಕ್ಷೇಪಿಸಿದರೆ ವೆಂಕಣ್ಣಯ್ಯನವರು ‘ಇನ್ನೇನು ಮಾಡಲಪ್ಪ, ಒಳ್ಳೇ ಹುಡುಗ, ಈ ಹುಚ್ಚು ಹಿಡಿದಿದೆ. ಬೇಡವೆಂದರೆ ಹುಚ್ಚು ಇನ್ನೂ ಹೆಚ್ಚಾಗುತ್ತದೆ. ಅದಕ್ಕಾಗಿ ಹೀಗೆ ಉಪಾಯವಾಗಿ ತಳ್ಳುವುದು’ ಎಂದು ನಗುವರು. ವೆಂಕಣ್ಣಯ್ಯನವರು ಬಾಳಿನಲ್ಲಿ ಸಾಕಷ್ಟು ಕಷ್ಟ ಕಾರ್ಪಣ್ಯಗಳನ್ನು ಕಂಡುಂಡವರು. ಆದ್ದರಿಂದ ಕಷ್ಟವನ್ನು ಹೇಳಿಕೊಂಡು ಅವರ ಬಳಿ ಹೋದವರಿಗೆ ಅವರಿಂದ ಎಷ್ಟು ಸಾಧ್ಯವೋ ಅಷ್ಟು ನಿವಾರಣೆಯನ್ನು ಖಂಡಿತವಾಗಿ ನಿರೀಕ್ಷಿಸಬಹುದಾಗಿತ್ತು. ಅವರು ಶ್ರೀಮಂತಿಕೆಯ ಕಾಲವನ್ನು ಕಂಡವರೇ ಅಲ್ಲ. ಪ್ರೊಫೆಸರಾಗುವವರೆಗೆ ಅವರದು ಅಹನ್ಯಹನಿ ಕಾಲಕ್ಷೇಪವೆಂದೇ ಹೇಳಬೇಕು. ಅಂತಹ ದುಃಸ್ಥಿತಿಯಲ್ಲಿಯೂ ಅವರು ಹತ್ತಾರು ಮಂದಿಗೆ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿದ್ದರು. ಶ್ರೀ ವಿ. ಸೀತಾರಾಮಯ್ಯನವರು ಕಣ್ಣಾರೆ ಕಂಡ ಒಂದು ಸಣ್ಣ ಘಟನೆ ಇದಕ್ಕೊಂಡು ಅತ್ಯುತ್ತಮ ಉದಾಹರಣೆ ಎನಿಸುತ್ತದೆ. ಅವರು ಹೇಳುತ್ತಾರೆ - “ವೆಂಕಣ್ಣಯ್ಯ ದಿನಸಿ ಅಂಗಡಿಯ ಮೂರು ತಿಂಗಳ ಸಾಲವನ್ನು ಹಾಗೆಯೇ ಉಳಿಸಿಕೊಂಡಿದ್ದರಿಂದ ಬಹಳ ತಾಪತ್ರಯವಾಗಿ ಸಾಲಕ್ಕೆಂದು ಬ್ಯಾಂಕಿಗೆ ಅರ್ಜಿ ಹಾಕಿಕೊಂಡ. Personal fame ಮೇಲೆಯೇ ಸಾಲ ಕೊಡಲು ಒಪ್ಪಿದರು. ಹಣ ತಂದ ದಿವಸ ನಾನೂ ಹೋಗಿದ್ದೆ. ಸ್ಯಾಂಕ್ಷನ್ ಆಗಿದ್ದ ಮುನ್ನೂರು ರೂಪಾಯಿ ತಗೊಂಡು ಬಂದೆವು. ಅಲ್ಲಿ ಚಾಮರಾಜ ಪೇಟೆಯಲ್ಲಿ ಬ್ಯಾಂಕು- ಅಲ್ಲಿಂದ ಸೀದಾ ಮನೆಗೆ ಬಂದೆವು. ಮೊದಲು ಅವನೇ ಮನೆಯೊಳಗೆ ಹೋದ, ಬೆಂಗಳೂರಿನ ಜೀವನ 285 ನಾನು ಹಿಂದಿನಿಂದ ಬರುತ್ತಿದ್ದೆ. ಅಷ್ಟರಲ್ಲಿ ‘ಸರ್’ ಎಂದು ಯಾರೋ ಕೂಗಿದರು. ‘ಏನು ಬೇಕಾಗಿತ್ತಪ್ಪ? ಯಾರು ನೀವು?’ ಎಂದೆ. ಆತ ‘ವೆಂಕಣ್ಣಯ್ಯನವರು ಇದ್ದಾರೆಯೆ ಸರ್’ ಎಂದರು. ‘ಬನ್ನಿ ಇದ್ದಾರೆ’ ಎಂದೆ. ಆತ ‘ಒಂದು ನಿಮಿಷ ವೆಂಕಣ್ಣಯ್ಯನವರನ್ನೇ ಅರ್ಜೆಂಟಾಗಿ ನೋಡಬೇಕಿತ್ತು’ ಎಂದ. ಅಷ್ಟರಲ್ಲಿಯೇ ವೆಂಕಣ್ಣಯ್ಯನೇ ಈಚೆಗೆ ಬಂದ. ನಾನು ‘ಒಳಗೆ ಬನ್ನಿಯಪ್ಪ ಕುಳಿತುಕೊಂಡು ಮಾತಾಡಿ’ ಅಂದರೂ ‘ಇಲ್ಲ ಸರ್, ಪರವಾಗಿಲ್ಲ. ಒಂದು ನಿಮಿಷ, ತಾವು ಈಚೆಗೆ ಬಂದರೆ’ ಎಂದು ವೆಂಕಣ್ಣಯ್ಯನಿಗೆ ಹೇಳಿದರು. ಆಗ ವೆಂಕಣ್ಣಯ್ಯ ‘ಇವರಿದ್ರೆ ಏನೂ ಪರವಾಗಿಲ್ಲ, ಸಂಕೋಚವಿಲ್ಲದೆ ಹೇಳಪ್ಪಾ, ಏನಾಗಬೇಕಿತ್ತು’ ಎಂದರು. ಬಂದಿದ್ದವರು ‘ನೋಡಿ ಸರ್, ನಮ್ಮ ತಾಯಿವರು ತೀರಿ ಹೋದರು... ಇನ್ನೂ ಕರ್ಮಗಳೆಲ್ಲಾ ಆಗಬೇಕು... ಏನೂ ಮುಗಿದಿಲ್ಲ... ತಮ್ಮಿಂದ ಸ್ವಲ್ಪ ಸಹಾಯವಾಗಬೇಕು’ ಎಂದರು. ‘ಛೇ ಛೇ... ಅನ್ಯಾಯವಾಯಿತು.... ನಿಮಗೆಷ್ಟು ಬೇಕಿತ್ತಪ್ಪಾ?’ ವೆಂಕಣ್ಣಯ್ಯ ಕೇಳಿದರು. ‘ಕಡೇ ಪಕ್ಷ ಒಂದು ಇನ್ನೂರೈವತ್ತಾದರೂ ಬೇಕಿತ್ತು ಸರ್’. ‘ಎಲ್ಲಿ ಸಾಲುತ್ತಪ್ಪಾ... ಹೇಗೆ ತಾನೆ ಸಾಕು? ನೋಡಿ ಈಗ ನನ್ನ ಹತ್ತಿರ ಇಷ್ಟಿದೆ. ನಿಮಗೆ ಸಾಲುತ್ತದೆಯೇನೋ ಗೊತ್ತಿಲ್ಲ... ತಗೊಳ್ಳಿ.. ಸಾಂಗವಾಗಿ ಎಲ್ಲ ನೆರವೇರಿಸಿ.. ಇನ್ನೂ ಇದ್ದಿದ್ರೆ ಕೊಡುತ್ತಿದ್ದೆ, ಏನೂ ತಿಳಿದುಕೊಳ್ಳಬೇಡಿ. ಇಷ್ಟೇ ಇರೋದು’ ಎಂದು, ಆಗತಾನೇ ಬ್ಯಾಂಕಿನಿಂದ ಸಾಲ ತಂದ ಮುನ್ನೂರು ರೂಪಾಯಿಯನ್ನು ಹಾಕಿಕೊಂಡಿದ್ದ ಕವರನ್ನು ಕೋಟಿನಿಂದ ತೆಗೆದಿತ್ತರು ನಮ್ಮ ವೆಂಕಣ್ಣ... ಆತ ತೆಗೆದುಕೊಂಡ. ‘ಹೋಗೀಪ್ಪಾ... ಮುಂಚೆ ಮುಗಿಸಿ ಕೆಲಸಗಳನ್ನೆಲ್ಲಾ.. ನಿಧಾನವಾಗಿ ಬನ್ನಿ. ದುಡ್ಡೆಲ್ಲೂ ಹೋಗೊಲ್ಲ! ಹೋಗಿ ಬನ್ನಿ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟು ಏನೂ ಆಗದಿದ್ದವನಂತೆಯೇ ಒಳಕ್ಕೆ ಬಂದ ಮಹರಾಯ. ನನಗೆ ರೇಗಿ ಹೋಯಿತು. ತಂದಿದ್ದ ಹಣಾನ ಹೀಗೆ ಹೇಳದೆ ಕೇಳದೆ ಯಾರಿಗೋ ಕೊಟ್ಟು ಕಳಕೊಂಡನಲ್ಲ ಅಂತ ಸ್ವಲ್ಪ ಜೋರಾಗಿಯೇ ಹೇಳಿದೆ. ಆದರೆ ಅವನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ... ಎಷ್ಟು ಕಷ್ಟಪಟ್ಟಿದ್ದ ಪಾಪ... ಮೂರು ತಿಂಗಳು!” ವೆಂಕಣ್ಣಯ್ಯನವರು ಬೆಂಗಳೂರಿನಲ್ಲಿ ಒಂದು ಉಚಿತ ವಿದ್ಯಾರ್ಥಿನಿಲಯವನ್ನು ನಡೆಸುತ್ತಿದ್ದರೆಂದೂ ಹತ್ತು ಜನ ಉದಾರಿಗಳು ಯಾರಿಗೂ ತಿಳಿಯದಂತೆ ಅವರ ಸಹಾಯಕರಾಗಿ ನಿಂತು ಅದನ್ನು ನಡೆಸಿಕೊಂಡು ಹೋಗುತ್ತಿದ್ದರೆಂದೂ ಆ ವಿದ್ಯಾರ್ಥಿ ನಿಲಯದಲ್ಲಿ ಇಪ್ಪತ್ತೈದು ಜನ ವಿದ್ಯಾರ್ಥಿಗಳಿದ್ದರೆಂದೂ ನನ್ನ ಗೆಳೆಯರ ಬಾಯಿಂದ ಕೇಳಿದ್ದೇನೆ. ಆದರೆ ‘ಇದಮಿತ್ಥಂ’ ಎಂದು ಇದನ್ನು ಹೇಳಲು ಸಾಕಷ್ಟು ಸಹಾಯಕ ವಸ್ತುಗಳು 286 ಮೂರು ತಲೆಮಾರು ನನ್ನಲ್ಲಿಲ್ಲ. ಹಾಗೆ ಹೇಳುತ್ತಿದ್ದ ನನ್ನ ಗೆಳೆಯರೂ ಈಗ ಇಲ್ಲ. ವೆಂಕಣ್ಣಯ್ಯನವರು ಬೆಂಗಳೂರಿನಲ್ಲಿದ್ದಾಗ ನಡೆದ ಇನ್ನೆರಡು ಘಟನೆಗಳು ಉಲ್ಲೇಖಾರ್ಹವಾಗಿವೆ. ಒಂದು, ಅವರ ಕಡೆಯ ತಂಗಿ ಸುಂದರಮ್ಮನ ವಿವಾಹ. ಆ ವಿವಾಹಕ್ಕಾಗಿ ಅವರು ಸಾಕಷ್ಟು ಸಾಲವೊಂದಿಗರಾಗಬೇಕಾಯಿತು. ವರನ ಕಡೆಯವರೆಲ್ಲರ ಅಪೇಕ್ಷೆಗಳನ್ನೂ ಸಲ್ಲಿಸಿದುದಾಯಿತು. ಆದರೂ ಅವರು ಸಾಕಷ್ಟು ಕಷ್ಟ-ನಿಷ್ಟುರಗಳಿಗೆ ಒಳಗಾಗಬೇಕಾಯಿತು. ತಾಯಿಯ ಮೇಲಿನ ಭಕ್ತಿಯಿಂದ ತಮ್ಮ ಮನೋವೇದನೆಯನ್ನೆಲ್ಲ ನುಂಗಿಕೊಂಡು ಮೌನಧಾರಿಗಳಾಗಬೇಕಾಯಿತು. ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಈ ವಿವಾಹದ ಕಥೆಯನ್ನು ‘ಅಗ್ಗದ ಮದುವೆ’ ಎಂಬ ಹೆಸರಿನಿಂದ ಅಂದಿನ ‘ಪ್ರಬುದ್ಧ ಕರ್ನಾಟಕದಲ್ಲಿ’ ಪ್ರಕಟಿಸಿದ್ದಾರೆ. ಕೆಲಕಾಲ ಈ ಹೊಸ ಮೈದುನನನ್ನು ಹೊಟೆಲಿನಲ್ಲಿಟ್ಟು ಖರ್ಚು ವೆಚ್ಚಗಳನ್ನು ವಹಿಸಬೇಕಾಯಿತು. ತಮ್ಮ ಇಬ್ಬರು ಮಕ್ಕಳು ಮತ್ತು ಒಬ್ಬ ತಮ್ಮನನ್ನು ಹೈಸ್ಕೂಲಿನಲ್ಲಿ ಓದಿಸಬೇಕಾಗಿತ್ತು. ವಾರಾನ್ನ, ಭಿಕ್ಷಾನ್ನ ವಿದ್ಯಾರ್ಥಿಗಳಿಗೂ ಅವರ ಮನೆಯ ಬಾಗಿಲು ಸದಾ ತೆರೆದಿರುತ್ತಿತ್ತು. ಹೀಗಾಗಿ ಅವರು ಸಾಲದಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆಯ ಮಧ್ಯದಲ್ಲಿ ಸಿಡಿಲು ಬಡಿದಂತೆ ಅವರ ಧರ್ಮಪತ್ನಿ ದಿವಂಗತರಾದರು. ಅಂದು ಕಾರ್ತಿಕ ಶುದ್ಧ ಏಕಾದಶಿ. ರಾತ್ರಿ ಹಾಲು ಚೆಲ್ಲಿದಂತೆ ಬೆಳದಿಂಗಳು ಸುರಿದಿದೆ. ವೆಂಕಣ್ಣಯ್ಯನವರು ಮನೆಯ ಕಾಂಪೌಂಡಿನಲ್ಲಿ ಶತಪಥ ಹಾಕುತ್ತಿದ್ದಾರೆ. ಅವರ ಹಲವು ಮಿತ್ರರು ಬಂದು ಬಂದು ರೋಗಿಯನ್ನು ವಿಚಾರಿಸುತ್ತಿದ್ದರು. ಅಂದು ರಾತ್ರಿ ಕಟ್ಟಕಡೆಯದಾಗಿ ಬಂದವರು ಎ.ಎನ್. ನರಸಿಂಹಯ್ಯ. ಆಗ ಸುಮಾರು ಹತ್ತು ಗಂಟೆಯ ಸಮಯ. ಅವರು ವೆಂಕಣ್ಣಯ್ಯನವರನ್ನು ಕುರಿತು ‘ಏನು ಇನ್ನೂ ಮಲಗಲಿಲ್ಲವೆ?’ ಎಂದು ಕೇಳಿದರು. ವೆಂಕಣ್ಣಯ್ಯ ಶಾಂತರಾಗಿ ‘ಹೇಗೆ ಮಲಗಲಿ? ನನ್ನ ಹೆಂಡತಿ ಪರಲೋಕಕ್ಕೆ ಪ್ರಯಾಣ ಬೆಳೆಸುತ್ತಿದ್ದಾಳೆ’ ಎಂದರು. ಇಬ್ಬರೂ ರೋಗಿ ಮಲಗಿದ್ದ ಕೊಠಡಿಯನ್ನು ಪ್ರವೇಶಿಸಿದರು. ಮರುಕ್ಷಣದಲ್ಲಿಯೇ ಆಕೆಯ ಪ್ರಾಣಪಕ್ಷಿ ಹಾರಿಹೋಯಿತು. ವೆಂಕಣ್ಣಯ್ಯನವರು ಉಕ್ಕಿ ಬಂದ ಕಣ್ಣೀರನ್ನು ಒರೆಸಿಕೊಂಡು ಮುಂದಿನ ವ್ಯವಸ್ಥೆಗಾಗಿ ಗೆಳೆಯರೊಡನೆ ಸಮಾಲೋಚಿಸುತ್ತ ಕುಳಿತರು. ಪತ್ನಿಯ ವಿಯೋಗವಾದಾಗ ವೆಂಕಣ್ಣಯ್ಯನವರಿಗೆ ಇನ್ನೂ ನಡುವಯಸ್ಸು, ಆದ್ದರಿಂದ ಮತ್ತೆ ಮದುವೆ ಪ್ರಯತ್ನ ಮಾಡುವುದು ಲೌಕಿಕವಾಗಿಯೇ ಸಹಜವಾಗಿತ್ತು. ಇದಕ್ಕೆ ಕೆಲವೇ ತಿಂಗಳುಗಳ ಹಿಂದೆ ಡಿ.ವಿ.ಜಿ.ಯವರು ಅದೇ ನಿಶ್ಚಯದಲ್ಲಿದ್ದರು. ಆದರೆ ಅವರ ತಾಯಿ ಅದಕ್ಕೆ ಒಪ್ಪಲಿಲ್ಲ. ತಮಗೆ ಸಾಕಷ್ಟು ಬೆಂಗಳೂರಿನ ಜೀವನ 287 ವಯಸ್ಸಾಗಿದೆಯೆಂದೂ, ಹಕ್ಕಿಯಂತೆ ಸ್ವತಂತ್ರವಾಗಿ ಇರಬಯಸುವುದಾಗಿಯೂ ಹೇಳಿದರೂ ಮರುಮದುವೆಗೆ ಅವರು ಒತ್ತಾಯವನ್ನು ತಂದರು. ಜೊತೆಗೆ ಎರಡನೇ ಮದುವೆಯಾಗಿದ್ದ ಅವರ ಭಾವಮೈದುನ ಕಾಶಿನಾಥಶಾಸ್ತ್ರಿ ಯಾವ ಧರ್ಮಕಾರ್ಯವನ್ನು ಮಾಡಬೇಕಾದರೂ ಜೊತೆಗೆ ಧರ್ಮಪತ್ನಿ ಇರಲೇಬೇಕೆಂದು ವಾದಿಸಿ, ಅವರ ತಾಯಿಗೆ ಬೆಂಬಲ ಕೊಟ್ಟರು. ವೆಂಕಣ್ಣಯ್ಯನವರು ಎಂದೂ ತಾಯಿಯ ಮಾತನ್ನು ಮೀರಿದವರಲ್ಲ. ಅವರ ಒತ್ತಡಕ್ಕೆ ಕಟ್ಟು ಬಿದ್ದು ಅವರು ಮರು ಮದುವೆಯನ್ನು ಮಾಡಿಕೊಳ್ಳಲೇಬೇಕಾಯಿತು. ಮನೆಗೆ ಬಂದ ಆ ಮಹಾಲಕ್ಷ್ಮಿ ಆದರ್ಶ ಮಹಿಳೆ. ಆಕೆಯನ್ನು ಕೈ ಹಿಡಿದ ಆರು ತಿಂಗಳಲ್ಲಿಯೇ ವೆಂಕಣ್ಣಯ್ಯನವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಮೈಸೂರಿಗೆ ಹೋಗಬೇಕಾಯಿತು. * * * * 288 ಮೂರು ತಲೆಮಾರು 5. ಮೈಸೂರು ಜೀವನ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ 1926 ನೆಯ ಇಸವಿ ಚಿರಸ್ಮರಣೀಯವಾದ ಒಂದು ಸಂವತ್ಸರ. ಕನ್ನಡದ ಕಣ್ವರೆಂದು ಕನ್ನಡನಾಡಿನ ಉದ್ದಗಲಕ್ಕೂ ವಿಖ್ಯಾತರಾಗಿರುವ ದಿವಂಗತ ಬಿ.ಎಂ. ಶ್ರೀಯವರು ಅಂದು ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿದ್ದರು. ಸ್ವಾಮಿ ವಿವೇಕಾನಂದರ ಸಹಪಾಠಿಯಾಗಿದ್ದ ಬ್ರಜೇಂದ್ರನಾಥಶೀಲರು ಉಪಕುಲಪತಿಗಳಾಗಿದ್ದರು. ಕನ್ನಡನಾಡು ನುಡಿಗಳ ಏಳಿಗೆಗಾಗಿ ಅತ್ಯಂತ ಕಳಕಳಿಯಿಂದ ಇದ್ದ ಮೈಸೂರು ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅದರ ಕುಲಪತಿಗಳಾಗಿದ್ದರು. 1919ನೆಯ ಇಸವಿಯಲ್ಲಿ ಸ್ವತಂತ್ರವಾದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀಕೃಷ್ಣರಾಜ ಒಡೆಯರು ವಿಶ್ವವಿದ್ಯಾನಿಲಯದ ಜ್ಞಾನ ಪ್ರವಾಹವು ಜನಸಾಮಾನ್ಯನನ್ನು ಮುಟ್ಟಿ, ಅವನ ಸಂಸ್ಕೃತಿಯನ್ನು ಸಂಸ್ಕರಿಸಬೇಕೆಂದು ಆಸೆಪಟ್ಟಿದ್ದರು; ಅದಕ್ಕಾಗಿ ಸಕಾಲವನ್ನು ಕಾಯುತ್ತಿದ್ದರು. ಉಪಕುಲಪತಿಗಳಾಗಿದ್ದ ಬ್ರಜೇಂದ್ರನಾಥಶೀಲರು ಬಂಗಾಳ ದೇಶದವರು; ಎಲ್ಲ ಬಂಗಾಳಿಗಳಂತೆ ಮಾತೃಭಾಷಾ ಪ್ರೇಮಿಗಳು. ಬಿ.ಎಂ.ಶ್ರೀ.ಯವರು ಕನ್ನಡ ಪ್ರೇಮಿಗಳಲ್ಲಿ ಅಗ್ರಗಣ್ಯರು; ಆದರೆ ತಮ್ಮ ಉತ್ಸಾಹ, ಆಸೆಗಳನ್ನು ಅನಿವಾರ್ಯವಾಗಿ ಹತ್ತಿಕ್ಕಿಕೊಂಡಿದ್ದವರು. ವಿಶ್ವವಿದ್ಯಾನಿಲಯದಲ್ಲಿ ಈ ತ್ರಿಮೂರ್ತಿಗಳ ಜೋಡಣೆ ಆಕಸ್ಮಿಕವಾದರೂ ಅರ್ಥಪೂರ್ಣವಾಗಿತ್ತು. ಕನ್ನಡ ನುಡಿ ದೇವಿಯ ಉತ್ಕರ್ಷಕ್ಕೆ ಸೂಚಕವಾಗಿತ್ತು. ಅದುವರೆಗೆ ಕನ್ನಡವು ತನ್ನ ಮನೆಯಲ್ಲಿಯೇ ತಾನು ಕಾಲು ಕಸವಾಗಿ ಬಿದ್ದಿತ್ತು. ಇತರ ಎಲ್ಲ ವಿಷಯಗಳಿಗೂ ಪ್ರಾಧ್ಯಾಪಕರಿದ್ದರು, ಎಂ.ಎ. ತರಗತಿಗಳಿದ್ದುವು. ಅವನ್ನು ಓದುವ ವಿದ್ಯಾರ್ಥಿಗಳಿದ್ದರು. ಇಂಗ್ಲಿಷ್‌ ಇತ್ಯಾದಿ ಇತರ ಶಾಖೆಗಳೂ ಹಾಗಿರಲಿ, ಸಂಸ್ಕೃತ, ಉರ್ದುಗಳಿಗೆ ಕೂಡ ಎಂ.ಎ. ತರಗತಿಗಳಿದ್ದುವು, ಪ್ರಾಧ್ಯಾಪಕರಿದ್ದರು. ಆದರೆ ಕನ್ನಡಕ್ಕೆ ಆ ಸೌಲಭ್ಯ ಇಲ್ಲವಾಗಿತ್ತು. ಜನ್ಮತಃ ಬಂಗಾಳಿಗಳಾದ ಡಾ. ಬ್ರಜೇಂದ್ರನಾಥಶೀಲರು ತಮ್ಮ ಅಧಿಕಾರ ಸ್ಥಾನವಾದ ಕರ್ಣಾಟಕದಲ್ಲಿ ಕನ್ನಡಕ್ಕಿದ್ದ ದುರವಸ್ಥೆಯನ್ನು ಕಂಡು ಸೋಜಿಗಗೊಂಡರು, ಖೇದಗೊಂಡರು. ಇವರ ಈ ಮನೋಭಾವವನ್ನು ಅರ್ಥ ಮಾಡಿಕೊಂಡ ‘ಶ್ರೀ’ ಮೈಸೂರು ಜೀವನ 289 ಯವರು ತಮ್ಮ ಮೇಲಿನವರ ಸಹಕಾರದೊಂದಿಗೆ ಕನ್ನಡ ಬಿ.ಎ. ಆನರ್ಸ್ ಮತ್ತು ಎಂ.ಎ. ತರಗತಿಗಳನ್ನು ಅಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತೆರೆದರು. ಸ್ವಾಭಾವಿಕವಾಗಿಯೇ ಆ ಶಾಖೆಗೆ ಒಂದು ಪ್ರೊಫೆಸರ್ ಸ್ಥಾನ ನಿರ್ಮಿತವಾಯಿತು. ಕನ್ನಡ ಪ್ರಾಧ್ಯಾಪಕರಾಗಲು ಯಾರು ಅರ್ಹರು ಎಂಬ ಪ್ರಶ್ನೆ ಬಂದಿತು. ಅಲ್ಲಿಯವರೆಗೆ ಮಹಾರಾಜಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಶ್ರೀ ಬಿ. ಕೃಷಪ್ಪ್ಣನವರು ನಿಧನರಾಗಿದ್ದು ಆ ಸ್ಥಾನಕ್ಕೆ ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳನ್ನು ನೇಮಿಸಲಾಗಿತ್ತು. ಆದರೆ ಪ್ರಾಧ್ಯಾಪಕಸ್ಥಾನಕ್ಕೆ ಅರ್ಹತೆಯ ಪ್ರಶ್ನೆ ಬಂದಾಗ ಬಹು ಜನರು ವೆಂಕಣ್ಣಯ್ಯನವರ ಹೆಸರನ್ನು ಸೂಚಿಸಿದರು. ಒಂದು ಮಿತ್ರಗೋಷ್ಠಿಯಲ್ಲಿ ಆ ಪ್ರಸ್ತಾಪ ಬಂದಾಗ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎನ್.ಎನ್. ಸುಬ್ಬರಾಯರು ವೆಂಕಣ್ಣಯ್ಯನವರಿಗಿದ್ದ ಯೋಗ್ಯತಾವಿಶೇಷವನ್ನು ಪ್ರಶಂಸೆ ಮಾಡುತ್ತ ‘He is man with a feel for literature, a very rare type- ಎಂದರು. ಸಿಂಡಿಕೇಟ್ ಸದಸ್ಯರಾಗಿದ್ದ ಡಿ.ವಿ.ಜಿ.ಯವರೂ ಅದೇ ಅಭಿಪ್ರಾಯವನ್ನು ಸೂಚಿಸಿದರು. ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಮೆಟ್‍ಕಾಫ್ ಸಾಹೇಬರ ಅಭಿಪ್ರಾಯವೂ ಅದೇ ಆಗಿತ್ತು. ವೆಂಕಣ್ಣಯ್ಯನವರ ಗೆಳೆಯರಲ್ಲಿ ಅನೇಕರು ಪ್ರಾಧ್ಯಾಪಕ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ವೆಂಕಣ್ಣಯ್ಯನವರನ್ನು ಬಲವಂತ ಪಡಿಸಿದರು. ಆದರೆ ಅವರು ಅದನ್ನು ಒಪ್ಪಲಿಲ್ಲ. ಕೃಷ್ಣಶಾಸ್ತ್ರಿಗಳು ತಮಗಿಂತ ಮುಂಚೆ ವಿಶ್ವವಿದ್ಯಾನಿಲಯವನ್ನು ಸೇರಿದ್ದವರು. ಅವರೇ ಆ ಸ್ಥಾನಕ್ಕೆ ಅರ್ಹರು ಎಂಬುದು ಅವರ ವಾದವಾಗಿತ್ತು. ಕೊನೆಯವರೆಗೂ ಅವರು ಅರ್ಜಿಯನ್ನು ಸಲ್ಲಿಸಲಿಲ್ಲ. ಅವರು ‘ಶ್ರೀ’ಯವರ ಶಿಷ್ಯರು, ಪರಮ ಗುರುಭಕ್ತಿಯುಳ್ಳವರು. ಆ ‘ಶ್ರೀ’ಯವರೇ ವೆಂಕಣ್ಣಯ್ಯನವರಿಗೆ ಪತ್ರ ಬರೆದು ‘ನೀನು ಅರ್ಜಿಯನ್ನು ಹಾಕಿಕೊಳ್ಳದಿದ್ದರೆ ಆ ಸ್ಥಾನ ನಿಮ್ಮಿಬ್ಬರಿಗೂ ತಪ್ಪಿ ಮೂರನೆಯವರ ಪಾಲಾಗುತ್ತದೆ’ ಎಂದು ಹೇಳಿಕಳುಹಿಸಿದರೂ ವೆಂಕಣ್ಣಯ್ಯ ತಮ್ಮ ನಿಶ್ಚಯವನ್ನು ಕದಲಿಸಲಿಲ್ಲ. ಅಂದು ಅರ್ಜಿ ಹಾಕಿಕೊಳ್ಳಲು ಕಡೆಯ ದಿನ. ಅಂದು ರಾತ್ರಿ ಎಂಟು ಗಂಟೆಯ ವೇಳೆಯಲ್ಲಿ ಪ್ರಾಂಶುಪಾಲರಾದ ಮೆಟ್‍ಕಾಫ್ ಸಾಹೇಬರಿಂದ ವೆಂಕಣ್ಣಯ್ಯನವರಿಗೆ ಬುಲಾವ್ ಬಂದಿತು. ಅವರು ಪ್ರಾಂಶುಪಾಲರ ಬಂಗಲೆಗೆ ಹೋದರು. ಅಲ್ಲಿ ಬೆರಳಚ್ಚಿನಿಂದ ತಯಾರಾದ ಅರ್ಜಿಯೊಂದು ಸಿದ್ಧವಾಗಿತ್ತು. ಪ್ರಾಂಶಪಾಲರ ಬಲವಂತಕ್ಕೆ ಕಟ್ಟುಬಿದ್ದು ವೆಂಕಣ್ಣಯ್ಯನವರು ಅದಕ್ಕೆ ರುಜು ಹಾಕಬೇಕಾಯಿತು. ಶ್ರೀಕಂಠಯ್ಯನವರು ವೆಂಕಣ್ಣಯ್ಯನವರ ರುಜು ಹಾಕಿಸಿ, 290 ಮೂರು ತಲೆಮಾರು ಅಂದು ರಾತ್ರಿಯೇ ಅದನ್ನು ತಮಗೆ ಕಳುಹಿಸುವಂತೆ ಪ್ರಾಂಶುಪಾಲರಿಗೆ ದೂರ ವಾಣಿಯ ಮೂಲಕ ನಿರ್ದೇಶಿಸಿದ್ದರು. ಸೆಂಟ್ರಲ್ ಕಾಲೇಜಿನ ಗುಮಾಸ್ತನೊಬ್ಬ ಆ ಅರ್ಜಿಯನ್ನು ಅಂದು ರಾತ್ರಿ ರೈಲಿನಲ್ಲಿ ಮೈಸೂರಿಗೆ ಕೊಂಡೊಯ್ದು ವಿಶ್ವವಿದ್ಯಾನಿಲಯಕ್ಕೆ ಮುಟ್ಟಿಸಿದ. ವೆಂಕಣ್ಣಯ್ಯನವರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದರು. ಉಳಿದ ಪ್ರಾಧ್ಯಾಪಕರಂತೆ ಅವರಿಗೂ ಒಂದು ಕೊಠಡಿ ಮೀಸಲಾಗಿತ್ತು. ಪ್ರಾಧ್ಯಾಪಕರಾದವರು ಇತರ ಅಧ್ಯಾಪಕರೊಡನೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಶ್ರೀಮದ್ಗಾಂಭೀರ್ಯದಿಂದ ತಮ್ಮ ಕೊಠಡಿಗಳಲ್ಲಿಯೇ ಕಾರ್ಯಮಗ್ನರಾಗಿರುತ್ತಿದ್ದರು. ಇತರ ಅಧ್ಯಾಪಕರು ಅವರನ್ನು ಕಾಣಬೇಕೆಂದಾಗ ಅವರ ಕೊಠಡಿಗೆ ಹೋಗಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಿತ್ತು. ವೆಂಕಣ್ಣಯ್ಯನವರ ಪದ್ಧತಿ ಇದಕ್ಕೆ ವಿರುದ್ಧವಾಗಿತ್ತು. ಅವರು ಆಗ ತಾನೆ ತಲೆಯೆತ್ತಿದ ಕನ್ನಡದ ಏಳ್ಗೆಗಾಗಿ ಕೆಲಸ ಮಾಡಬೇಕಾಗಿತ್ತು. ಅದಕ್ಕಾಗಿ ಕನ್ನಡ ಪ್ರೇಮಿಗಳ ಒಂದು ದಂಡನ್ನೇ ಕಟ್ಟಬೇಕಾಗಿತ್ತು. ಮೂಲೆಯಲ್ಲಿ ಕುಳಿತರೆ ಕೆಲಸವಾಗುವಂತಿರಲಿಲ್ಲ. ಅವರು ಎಲ್ಲರಲ್ಲಿಯೂ ಹಾಲು-ನೀರಿನಂತೆ ಹೇಗೆ ಸಮರಸವಾಗಿ ಬೆರೆತರೆಂಬುದನ್ನು ಶ್ರೀ ಎ.ಎನ್. ಮೂರ್ತಿರಾಯರು ಬಹು ಸುಂರವಾಗಿ ವರ್ಣಿಸಿದ್ದಾರೆ - ‘ಅವರು ನಮ್ಮೆಲ್ಲರಿಗಿಂತ ವಯಸ್ಸಿನಲ್ಲಿ, ಜ್ಞಾನದಲ್ಲಿ, ಪರಿಪಕ್ವತೆಯಲ್ಲಿ, ಕೊನೆಗೆ ಎತ್ತರದಲ್ಲಿ ಕೂಡ ಹಿರಿಯರು; ಅಲ್ಲದೆ ಪ್ರಾಧ್ಯಾಪಕವರ್ಗಕ್ಕೆ ಸೇರಿದ್ದವರು. ಆದ್ದರಿಂದ ಕಾಮನ್ ರೂಮಿನ (ಪ್ರಾಧ್ಯಾಪಕರಲ್ಲದ ಅಧ್ಯಾಪಕರು ಒಟ್ಟಿಗೆ ಕುಳಿತುಕೊಳ್ಳುವ ಕೊಠಡಿ) ಸದಸ್ಯರಾಗಲು ಅವರಿಗೆ ಯಾವ ಹಕ್ಕೂ ಇರಲಿಲ್ಲ. ಆದರೂ ಅವರು ಸದಸ್ಯತ್ವಪಡೆದರು! ಯಾವಾಗ ಅವರು ಆ ಹಕ್ಕನ್ನು ಸಂಪಾದಿಸಿದರೋ ನಮಗೆ ತಿಳಿಯದು, ಬಹುಶಃ ಅವರಿಗೂ ತಿಳಿಯದು. ಅವರು ಮೊದಲಿನಿಂದಲೂ ನಮ್ಮೊಡನೆಯೇ ಇದ್ದಂತೆ ತೋರಿತು. ಅವರು ಸದಸ್ಯರಾದುದು ಮಾತ್ರವಲ್ಲ, ಗುಪ್ತವಾಗಿ ಕ್ರಾಂತಿಯೊಂದನ್ನು ಎಬ್ಬಿಸಿ, ಇಡೀ ಕಾಮನ್‍ರೂಮನ್ನು ವಶಪಡಿಸಿಕೊಂಡು ಅದನ್ನು ತಮ್ಮ ಉದ್ದೇಶಸಾಧನೆಗಾಗಿ ಉಪಯೋಗಿಸಿಕೊಂಡರು. ಎಂದೋ ಒಂದು ದಿನ ಕಣ್ಣುಬಿಟ್ಟು ನೋಡಿದರೆ ನಾವೆಲ್ಲ ಅವರ ಬಂದಿಗಳಾಗಿದ್ದೆವು. ಆ ಸೆರೆಯಿಂದ ಬಿಡಿಸಿಕೊಳ್ಳಬೇಕೆಂಬ ಹಂಬಲವೂ ನಮಗಿರಲಿಲ್ಲ.’ ಹೌದು, ವೆಂಕಣ್ಣಯ್ಯನವರ ಸ್ವಭಾವಸಹಜವಾದ ಸೌಜನ್ಯ, ಸ್ನೇಹ, ಔದಾರ್ಯಗಳಿಗೆ ಮಾರುಹೋದ ಅಧ್ಯಾಪಕ ವೃಂದ ತಮಗೆ ಅರಿವಿಲ್ಲದಂತೆಯೇ ಮೈಸೂರಿನ ಜೀವನ 291 ಅವರ ಅನುಯಾಯಿಗಳಾದರು. ವೆಂಕಣ್ಣಯ್ಯನವರು ತಾವು ದೊಡ್ಡವರೆಂದು ತೋರಿಸಿಕೊಳ್ಳಲು ಎಂದೂ ಹೋದವರಲ್ಲ; ಇತರರನ್ನು ಕೀಳಾಗಿ ಕಂಡವರೂ ಅಲ್ಲ. ಎಲ್ಲರಿಗೂ ಅವರಲ್ಲಿ ಭಕ್ತಿ ಮಿಶ್ರಿತವಾದ ಸಲುಗೆ. ಯಾರಿಂದ ಯಾವ ಕೆಲಸ ಹೇಗೆ ನಡೆಯಬಹುದೆಂಬುದನ್ನು ಅರಿತು, ಪ್ರೀತಿ, ಸಲಿಗೆ, ವಿನೋದಗಳಿಂದ ಅವರನ್ನು ಒಲಿಸಿಕೊಂಡು ಅವರ ನೆರವನ್ನು ಪಡೆಯುತ್ತಿದ್ದರು. ಸ್ವಾರ್ಥ, ಕೀರ್ತಿಕಾಮನೆ ಅವರಿಂದ ಬಲು ದೂರ. ಆದ್ದರಿಂದಲೇ ಅವರ ಸುತ್ತ ಬೆಲ್ಲಕ್ಕೆ ಮುಸುರುವ ಇರುವೆಗಳಂತೆ ಜನ ತುಂಬಿರುತ್ತಿದ್ದರು. ಸಂಜೆಯ ವಾಕಿಂಗ್‍ಗಾಗಿ ತರುಣರ ತಂಡ ದಿನವೂ ಅವರ ಮನೆಗೆ ಮುತ್ತಿಗೆ ಹಾಕುತ್ತಿದ್ದುದು ವಾಡಿಕೆ. ಕೆಲವು ವೇಳೆ ವಿದ್ವತ್ ಗೋಷ್ಠಿಗಳೂ ಅಲ್ಲಿ ನಡೆಯುತ್ತಿದ್ದವು. ಈ ಸಮಯದಲ್ಲಿ ಅವರ ಮನೆಯ ವರಾಂಡದಲ್ಲಿ ಪಾದರಕ್ಷೆಗಳ ಪರಿಷತ್ತು ನಡೆಯುತ್ತದೆಯೆಂದು ಗೆಳೆಯರು ವಿನೋದವಾಗಿ ಹೇಳುತ್ತಿದ್ದುದುಂಟು. ಯೂನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್ (U.T.A. ಅದನ್ನು ಊಟ ಎಂದು ಹಾಸ್ಯಕ್ಕೆ ಕರೆಯುತ್ತಿದ್ದುದುಂಟು.)ಸ್ಥಾಪಿಸಿದವರು ವೆಂಕಣ್ಣಯ್ಯನವರು. ಅವರೇ ಅದರ ಪ್ರಥಮ ಅಧ್ಯಕ್ಷರು. ಹನುಮಂತರಾಯರು ಅದರ ಪ್ರಥಮ ಕಾರ್ಯದರ್ಶಿಗಳು. ಈಗ ಅದು ‘ಪ್ರಸಾರಾಂಗ’ ಎಂಬ ಹೆಸರಿನಿಂದ ದೇಶೋವಿಶಾಲವಾಗಿ ಬೆಳೆದು, ವಿಶ್ವವಿದ್ಯಾನಿಲಯದ ಒಂದು ಮುಖ್ಯ ಅಂಗವಾಗಿ ಕೆಲಸ ಮಾಡುತ್ತಿದೆ. ಅಂದು ಅದು ನಡೆಸಿದ ಕಾರ್ಯಕಲಾಪಗಳಲ್ಲಿ ಮುಖ್ಯವಾದುವು ಪ್ರಚಾರೋಪನ್ಯಾಸಗಳು, ಅವುಗಳನ್ನೊಳಗೊಂಡ ಪುಸ್ತಕಗಳ ಪ್ರಕಟಣೆ - ಇವು ಅತ್ಯಂತ ಉಪಯುಕ್ತವಾಗಿದ್ದುವು. ಪ್ರಿನ್ಸಿಪಾಲ್ ಜೆ.ಸಿ. ರಾಲೋರವರು ಇಂಗ್ಲೆಂಡಿನಲ್ಲಿ ನಡೆದ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಈ ಚಟುವಟಿಕೆಯನ್ನು ‘ಮೈಸೂರು ಪ್ರಯೋಗ’ ಎಂದು ಕರೆದು, ಇದು ವಿಶ್ವಕ್ಕೇ ಆದರ್ಶ ಎಂದು ಶ್ಲಾಘಿಸಿದರು. ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆ ಬಿ.ಎಂ.ಶ್ರೀ.ಯವರ ಹೆಸರಿನಲ್ಲಿ ನಡೆಯುತ್ತಿದ್ದರೂ ಅದರ ಕರ್ತವ್ಯಸರ್ವಸ್ವವೂ ವೆಂಕಣ್ಣಯ್ಯನವರ ನೇತೃತ್ವದಲ್ಲಿ ನಡೆಯುತ್ತಿತ್ತು. ಇತರರನ್ನು ಮುಂದೆ ಮಾಡಿ ತಾವು ಹಿಂದೆ ನಿಲ್ಲುತ್ತಿದ್ದುದು ಅವರ ವ್ಯಕ್ತಿತ್ವದ ಒಂದು ದೊಡ್ಡ ಲಕ್ಷಣ. ಕನ್ನಡದ ಕೈಂಕರ್ಯದಲ್ಲಿ ಅವರು ಭಗವಂತನಂತೆ ಅವ್ಯಕ್ತವಾಗಿ ಇದ್ದರು. ಶ್ರೀ ಕುವೆಂಪುರವರು ವೆಂಕಣ್ಣಯ್ಯನವರ ಅತ್ಯಂತ ಪ್ರೀತಿಯ ಶಿಷ್ಯರು. ಹಾಗೆಯೆ ವೆಂಕಣ್ಣಯ್ಯನವರು ಅವರ ಪರಮ ಪ್ರೀತಿಯ ಗುರು. ಅವರಿಬ್ಬರ ಸಂಬಂಧ ಕುವೆಂಪು ಹೇಳುವಂತೆ ದೈವಿಕವಾಗಿತ್ತು! ಅವರು ತಮ್ಮ ಗುರುವನ್ನು 292 ಮೂರು ತಲೆಮಾರು ಕುರಿತು ತುಂಬು ಹೃದಯದಿಂದ ಹೀಗೆ ವರ್ಣಿಸುತ್ತಾರೆ- ‘ವೆಂಕಣ್ಣಯ್ಯನವರ ವ್ಯಕ್ತಿತ್ವ ಪ್ರಖರವಾದುದಲ್ಲ. ಸೌಮ್ಯವಾದದ್ದು. ಸೂರ್ಯಕಾಂತಿಯಂತೆ ಕಣ್ಣು ಕೋರೈಸುತ್ತಿರಲಿಲ್ಲ. ಚಂದ್ರಕಾಂತಿಯಂತೆ ಸಂಮೋಹಕವಾಗಿತ್ತು. ಇತರ ಯಾವ ಪ್ರಾಧ್ಯಾಪಕರೂ ವೆಂಕಣ್ಣಯ್ಯನವರಂತೆ ನನ್ನಲ್ಲಿ ಆತ್ಮೀಯತಾಭಾವವನ್ನು ಉಂಟು ಮಾಡಲಿಲ್ಲ. ನನ್ನ ಪ್ರಶಂಸೆಗೂ, ಗೌರವಕ್ಕೂ ಪಾತ್ರರಾಗಿದ್ದ ಪ್ರಾಧ್ಯಾಪಕರಲ್ಲಿಯೂ, ನಾನು ವೆಂಕಣ್ಣಯ್ಯನವರಲ್ಲಿ ಅನುಭವಿಸಿದ ಆತ್ಮೀಯತೆಯನ್ನು ಅನುಭವಿಸಲು ಸಮರ್ಥನಾಗಲಿಲ್ಲ. ಇತರ ಯಾರಲ್ಲಿಯೂ ನಿಕಟತ್ವ ಉಂಟಾಗಲಿಲ್ಲ. ವೆಂಕಣ್ಣಯ್ಯನವರಿಗೂ ನನಗೂ ಉಂಟಾದ ಸಂಬಂಧದಲ್ಲಿ ಅಕ್ಕರೆಯ ಸ್ವರೂಪವಿತ್ತು. ಅವರೊಡನೆ ತುಂಬ ಸಲುಗೆಯಿಂದ ಇರುತ್ತಿದ್ದೆ. ಆದರೆ ಆ ಸಲುಗೆಯಲ್ಲಿ ಎಂದೂ ಲಘುತ್ವವಾಗಲಿ, ಅಗೌರವ ಭಾವನೆಯಾಗಲಿ ಇಣುಕಿಯೂ ಇರಲಿಲ್ಲ. ನನಗೆ ಅವರಲ್ಲಿ ಯಾವಾಗಲೂ ಒಂದು ವಿಶ್ವಾಸಪೂರ್ವಕವಾದ ಪೂಜ್ಯಭಾವನೆ ಇತ್ತು. ವೆಂಕಣ್ಣಯ್ಯನವರಲ್ಲಿ ನನಗಿದ್ದ ಆತ್ಮೀಯತೆಗೆ ಯಾವ ಒಂದು ಕಾರಣವನ್ನೂ ನಾನು ಒಡ್ಡಲಾರೆ. ಅದು ನಿಷ್ಕಾರಣವಾಗಿತ್ತು ಅಥವಾ ಆಕಾರಣವಾಗಿತ್ತು ಅಥವಾ ಅಹೇತುಕವಾಗಿ ದೈವಿಕವಾಗಿತ್ತು’. ವೆಂಕಣ್ಣಯ್ಯನವರು ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದುದನ್ನು ಅವರ ಹಲವು ಶಿಷ್ಯರು ಮನೋಜ್ಞವಾಗಿ ವರ್ಣಿಸಿದ್ದಾರೆ. ಆದರೆ ಕುವೆಂಪುರವರು ತಮ್ಮ ಕವಿವಾಣಿಯಿಂದ ಅದನ್ನು ವರ್ಣಿಸುವುದು ಅತ್ಯಂತ ಹಾರ್ದಿಕವಾಗಿದೆ. “ವೆಂಕಣ್ಣಯ್ಯನವರು ತರಗತಿಗೆ ಬರುವಾಗಲೆ, ಅವರ ಪ್ರವೇಶಭಂಗಿಯೇ ಒಂದು ಸಂತೋಷಾಗಮನದಂತಿರುತ್ತಿತ್ತು. ಮಹಾರಾಜಾ ಕಾಲೇಜಿನ ಮೇಲು ಅಂತಸ್ತಿನ ಮೂಲೆಯಲ್ಲಿ ಉದ್ದವಾಗಿ ತೋರುತ್ತಿದ್ದ ಅವರು ತಮ್ಮ ಎತ್ತರವನ್ನು ತೋರಗೊಡಬಾರದೆಂಬ ವಿನಯದ ದಾಕ್ಷಿಣ್ಯಭಾರಕ್ಕೆಂಬಂತೆ ತುಸು ಬಾಗಿ, ನಡೆದು ಬಂದು ಕುರ್ಚಿಯಲ್ಲಿ ಕುಳಿತೊಡನೆಯೆ ಒಂದು ವಿಶ್ವಾಸಪೂರ್ವಕ ಗೌರವಾನುಭವ, ಭಾವೋಲ್ಲಾಸ ವಿದ್ಯಾರ್ಥಿಗಳ ಹೃದಯಸರೋವರದಲ್ಲಿ ತರಂಗಿತವಾಗಿ ಸ್ಪಂದಿಸುತ್ತಿತ್ತು. ಅವರು ಇತರ ಅನೇಕ ಪ್ರಾಧ್ಯಾಪಕರಂತೆ ಗೌನು ತೊಟ್ಟು ಠೀವಿಯಿಂದ ಉಪನ್ಯಾಸ ಮಾಡುತ್ತಿರಲಿಲ್ಲ; ಕುರ್ಚಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಅವರಲ್ಲಿ ಉಪನ್ಯಾಸದ ಪ್ರತಿಷ್ಠೆಯಾಗಲಿ, ಭಾಷಣದ ವಾಗ್ಮಿತಾಧೋರಣೆಯಾಗಲಿ ಇರದೆ, ವಿದ್ಯಾರ್ಥಿಯ ಮನಸ್ಸಿಗೆ ಹೋಗುವ ಸಂವಾದಸಹಜನಿಷ್ಠೆ ಇರುತ್ತಿತ್ತು. ಅವರು ಎಲ್ಲ ವಿದ್ಯಾರ್ಥಿಗಳನ್ನೂ ಕುರಿತು ಸಾಮೂಹಿಕವಾಗಿ ಮಾತನಾಡುತ್ತಿದ್ದರೂ ಪ್ರತಿಯೊಬ್ಬನಿಗೂ ತಮ್ಮನ್ನೇ ಗಮನಿಸಿ, ಮೈಸೂರಿನ ಜೀವನ 293 ಗುರಿಮಾಡಿ ಸಂಭಾಷಿಸುತ್ತಿದ್ದಾರೆ ಎಂಬ ವೈಯಕ್ತಿಕ ಭಾವನೆ ಮೂಡುತ್ತಿತ್ತು. ಅದುವರೆಗೆ ಇಂಗ್ಲಿಷ್‌ ತರಗತಿಗಳಲ್ಲಿ ಮಾತ್ರವೇ ಕೇಳುತ್ತಿದ್ದ ಪಠ್ಯವಿಷಯ ಪ್ರತಿಪಾದನಾ ವಿಧಾನವನ್ನು ಮತ್ತು ಕಾವ್ಯ ಮೀಮಾಂಸಾತ್ಮಕವಾದ ಸಾಹಿತ್ಯ ವಿಮರ್ಶಾತ್ಮಕ ರೀತಿಯನ್ನು ಕನ್ನಡದ ತರಗತಿಗಳಲ್ಲೂ ಕೇಳುವಂತಾಗಿ ನಮ್ಮ ಭಾಷಾಭಿಮಾನಕ್ಕೆ ಕೋಡು ಮೂಡಿದಂತಾಯಿತು. ನಮ್ಮ ಕವಿಗಳು, ಕಾವ್ಯಗಳು ಇಂಗ್ಲಿಷ್‌ ಕವಿಗಳು, ಕಾವ್ಯಗಳಿಗೆ ಬಿಟ್ಟು ಕೊಡುವುದಿಲ್ಲ ಎಂಬ ಹೆಮ್ಮೆಯಿಂದ ಹೃದಯ ಹಿಗ್ಗುವಂತಾಯಿತು. ನಮ್ಮ ಸಾಹಿತ್ಯದ ಭಾಗಗಳನ್ನು ಕುರಿತು ವಿಮರ್ಶಿಸುವಾಗ ವೆಂಕಣ್ಣಯ್ಯನವರು ವಿದ್ಯಾರ್ಥಿಗಳನ್ನು ರಸವಶರನ್ನಾಗಿ ಮಾಡುತ್ತಿದ್ದರು. “ಆದರೆ ಎಚ್ಚರಿಕೆ, ವೆಂಕಣ್ಣಯ್ಯನವರು ನಮ್ಮ ಕವಿ, ಕಾವ್ಯಗಳನ್ನು ಹೊಸ ಬೆಳಕಿನಲ್ಲಿಟ್ಟು ಉಜ್ವಲಗೊಳಿಸುತ್ತಿದ್ದರೆಂದ ಮಾತ್ರಕ್ಕೆ ‘ಸತೃಣಾಭ್ಯವಹಾರಿ’ ಗಳಾಗಿದ್ದರೆಂದು ಯಾರೂ ಭಾವಿಸದಿರಲಿ. ಅವರು ಚಾಮರ ಬೀಸುತ್ತಿದ್ದಂತೆಯೇ ಪೊರಕೆಯನ್ನು ಹಿಡಿದೂ ಗುಡಿಸುತ್ತಿದ್ದರು. ಕುಕವಿ, ಕುಕಾವ್ಯಗಳನ್ನು, ಪಾಂಡಿತ್ಯ ಪ್ರದರ್ಶನ ಕಸರತ್ತನ್ನು, ಮತಭ್ರಾಂತಿಯ ಕ್ಷುದ್ರ ಕಾವ್ಯಟೋಪಗಳನ್ನು, ರಸವಿಹೀನ ಕೃತಕತೆಯನ್ನು ಸಂಧಿಸಿದಾಗ ಅವರ ಕೈಗೆ ಅಗ್ನಿ ಖಡ್ಗ ಬರುತ್ತಿತ್ತು. ನಾಲಗೆ ಮೂದಲಿಕೆಯ ಕರವಾಳವಾಗಿ ಝಳಪಿಸುತ್ತಿತ್ತು. ದ್ವಿತೀಯ ವರ್ಗದ ಕವಿ ಕಾವ್ಯಗಳಂತಿರಲಿ, ಪ್ರಥಮ ವರ್ಗದ, ಮಹಾಕವಿಗಳು ಅವರ ರಸಾವೇಶ ವಿಹೀನವಾದ, ಆಲಸ್ಯಮಯವಾದ ಸೃಜನ ಭಾಗಗಳಲ್ಲಿ ತಕ್ಕ ಶಾಸ್ತಿಗೆ ಒಳಗಾಗುತ್ತಿದ್ದರು. ಪೊನ್ನ, ಚಾಮರಸ, ಷಡಕ್ಷರದೇವನಂತಹವರೂ ಅವರ ಉಗ್ರ ಟೀಕೆಯ ಗಾಣಕ್ಕೆ ತಲೆಯೊಡ್ಡಿ ಜರ್ಝರಿತರಾಗುತ್ತಿದ್ದರೆಂದ ಮೇಲೆ ಮತ್ತೆ ಉಳಿದವರ ಪಾಡೇನು? ಅವರ ಮೇಧಾಶಕ್ತಿ ಮತ್ತು ವಿಚಾರ ಶಕ್ತಿ ಯಾವ ಮೋಹಕ್ಕೂ ತಮ್ಮ ನಿಶಿತತ್ವವನ್ನು ಮೊಂಡುಗೊಳಿಸುತ್ತಿರಲಿಲ್ಲ. ಅವರು ಮುಖ ನೋಡಿ ಮಣೆ ಹಾಕುವವರ ಜಾತಿಗೆ ಸೇರಿರಲಿಲ್ಲ. ನಿಜವಾದ ಪ್ರತಿಭೆಯನ್ನು ಅದು ಎಲ್ಲಿಯೇ ಇರಲಿ, ಯಾರಲ್ಲಿಯೇ ಇರಲಿ ಕಾಣುವ ವಿಶಾಲಬುದ್ಧಿಯೂ, ಗುರುತಿಸುವ ಉದಾರಹೃದಯವೂ ವೆಂಕಣ್ಣಯ್ಯನವರಿಗೆ ದೈವದತ್ತವಾಗಿದ್ದುವು. ಸಣ್ಣ ಮನಸ್ಸು ಮತ್ತು ಸಂಕುಚಿತ ಸ್ವಭಾವ ಅವರ ಬಳಿ ಸುಳಿಯುತ್ತಿರಲಿಲ್ಲ. ಚೇತನಗಳಿಗೆ ಪ್ರೋತ್ಸಾಹದ ಗೊಬ್ಬರ ಹಾಕಿ. ಪ್ರಶಂಸೆಯ ನೀರೆರೆದು ನಿರ್ಮತ್ಸರರಾಗಿ ಪೋಷಿಸುತ್ತಿದ್ದರು. ಆದರೆ ಕಸಿ ಮಾಡುವ ಕತ್ತರಿಯನ್ನು ಹಿಡಿದಿರುತ್ತಿದ್ದರು. ರೋಗಿಷ್ಠ ರೆಂಬೆಗಳನ್ನು ನಿಷ್ಠುರವಾಗಿ, ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿ, ಗಿಡ 294 ಮೂರು ತಲೆಮಾರು ಆರೋಗ್ಯವಾಗಿ, ಸದೃಢವಾಗಿ ಅಭಿವರ್ಧಿಸುವಂತೆ ಅವರ ಈ ಮಾತೃ ಲಕ್ಷಣದ ಹೊಂಬಿಸಿಲಿನಲ್ಲಿ ಚಳಿ ಕಾಯಿಸಿಕೊಂಡು ಬದುಕಿ ಬಾಳಿದ ಅನೇಕ ಚೇತನಗಳಲ್ಲಿ ನಾನೂ ಒಬ್ಬನು’. ವೆಂಕಣ್ಣಯ್ಯನವರ ಶಿಷ್ಯಪ್ರೇಮ ಎಷ್ಟು ಅಪಾರವಾಗಿತ್ತೆಂಬುದನ್ನು ಅವರ ಶಿಷ್ಯವರ್ಗ ಹತ್ತಾರು ಸಂದರ್ಭಗಳಲ್ಲಿ ಎತ್ತಿ ಹೇಳಿದ್ದಾರೆ. ಮಹಾಕವಿ ಕುವೆಂಪು ತಮ್ಮ ಆ ಗುರುವನ್ನು ನೆನೆದು ಹೀಗೆ ಹೇಳುತ್ತಾರೆ: “ವೆಂಕಣ್ಣಯ್ಯನವರ ಮನಸ್ಸಿಗೆ ಸಂತೋಷವಾಗುತ್ತದೆ ಎಂದರೆ ನಾನು ಏನನ್ನು ಮಾಡಲೂ ಹೇಸುತ್ತಿರಲಿಲ್ಲವೆಂದು ತೋರುತ್ತದೆ. ನಾನು ಅಧ್ಯಕ್ಷನಾಗಿಯೋ, ಮುಖ್ಯ ಅತಿಥಿಯಾಗಿಯೋ ಅನೇಕ ಕನ್ನಡ ನವೋದಯ ಸಮಾರಂಭಗಳಲ್ಲಿ ಭಾಗವಹಿಸುವ ಪ್ರೋತ್ಸಾಹವಿತ್ತವರು ವೆಂಕಣ್ಣಯ್ಯನವರೆ. ಬಿ.ಎಂ.ಶ್ರೀಯವರು ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ‘ಯಮನ ಸೋಲು’ ನಾಟಕದಲ್ಲಿ ನಾನೇ ಸತ್ಯವಾನನ ಪಾತ್ರ ವಹಿಸುವಂತೆ ಮಾಡಿದ್ದೂ ವೆಂಕಣ್ಣಯ್ಯನವರೇ, ಬೇಸಿಗೆ ರಜಾಕ್ಕೆ ಊರಿಗೆ ಹೋಗಿ ಮಲೆನಾಡಿನ ಕಾಡುಮಲೆಗಳಲ್ಲಿ ಹುದುಗಿ ಅಲೆಯುತ್ತಿದ್ದವನನ್ನು ಟೆಲಿಗ್ರಾಂ ಕೊಟ್ಟು ಕರೆಸಿಕೊಂಡು ಹುಬ್ಬಳ್ಳಿಯ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ‘ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ’ ಎಂಬ ನನ್ನ ಭಾಷಣ ಸರ್ವತೋಮುಖ ಪ್ರಶಂಸೆಗೆ ಭಾಜನವಾಗುವಂತೆ ಮಾಡಿದವರೂ ಅವರೇ. ಬಹುಶಃ ವೆಂಕಣ್ಣಯ್ಯನವರು ಹೋಗದಿದ್ದ ಯಾವ ಸಾಹಿತ್ಯ ಸಮ್ಮೇಳನಕ್ಕೂ ನಾನು ಹೋಗಲಿಲ್ಲವೆಂದು ಕಾಣುತ್ತದೆ, ಅವರು ಬದುಕಿದ್ದಷ್ಟು ಕಾಲವೂ. “ಒಮ್ಮೆ ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನದ ಸಂದರ್ಭದಲ್ಲಿ ಬಿ.ಎಂ.ಶ್ರೀಯವರ ಅಧ್ಯಕ್ಷತೆಯಲ್ಲಿ ‘ನಾವು ಯುವಕರು ನಿರಂಕುಶಮತಿಗಳಾಗಬೇಕು’ ಎಂಬ ಭಾಷಣ ಮಾಡಿದೆ. ಪತ್ರಿಕೆಗಳಲ್ಲಿ ಕ್ರೋಧಯುಕ್ತವಾದ ಅನೇಕ ಟೀಕೆಗಳು ಬಂದು ಕೋಲಾಹಲವೆದ್ದುವು. ದೂರು ವಿಶ್ವವಿದ್ಯಾನಿಲಯಕ್ಕೂ ಹೋಯಿತು. ವಿಶ್ವವಿದ್ಯಾನಿಲಯ ತನಿಖೆ ನಡೆಸಲು ಇಲಾಖೆಯ ಮುಖ್ಯಸ್ಥರೂ, ಪ್ರೊಫೆಸರರೂ ಆಗಿದ್ದ ವೆಂಕಣ್ಣಯ್ಯನವರನ್ನು ನೇಮಿಸಿತು. ಅವರು ಆ ಭಾಷಣದ ಪ್ರತಿ ತರಿಸಿಕೊಂಡು ಓದಿ ವಿಶ್ವವಿದ್ಯಾನಿಲಯಕ್ಕೆ ಬರೆದರಂತೆ - ‘ನನ್ನ ಮಗನಿಗೆ ನಾನು ಬುದ್ಧಿ ಹೇಳಬೇಕೆಂದರೆ ಇದಕ್ಕಿಂತಲೂ ಉತ್ತಮವಾಗಿ ಏನನ್ನೂ ಹೇಳಲಾರೆ”. ಸಂಸ್ಕೃತದಲ್ಲಿ ಒಂದು ಸುಂದರವಾದ ಚೆನ್ನುಡಿ ಇದೆ. ‘ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ’- ಸತ್ಯವನ್ನು ನುಡಿ, ಪ್ರಿಯವಾದುದನ್ನು ನುಡಿ, ಅಪ್ರಿಯವಾದ ಸತ್ಯವನ್ನು ನುಡಿಯಬೇಡ - ಇದನ್ನು ಮೈಸೂರಿನ ಜೀವನ 295 ವೆಂಕಣ್ಣಯ್ಯನವರು ಅಕ್ಷರಶಃ ಪಾಲಿಸುತ್ತಿದ್ದರು. ಇತರರಿರಲಿ, ತಮ್ಮ ವಿದ್ಯಾರ್ಥಿಗಳಲ್ಲಿ ಕೂಡ ಅವರು ಈ ಧರ್ಮವನ್ನು ಆಚರಿಸುತ್ತಿದ್ದರು. ಶ್ರೀ ಡಿ.ಎಲ್. ನರಸಿಂಹಾಚಾರ್ಯರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರು. ಆಗ ವೆಂಕಣ್ಣಯ್ಯನವರು ಅಲ್ಲಿ ಉಪಪ್ರಾಧ್ಯಾಪಕರಾಗಿದ್ದರು. ಅಲ್ಲಿನ ಕರ್ನಾಟಕ ಸಂಘದಲ್ಲಿ ಪ್ರತಿ ವರ್ಷವೂ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನವನ್ನು ಬೆಳೆಸುವ ರೂಢಿ ಇತ್ತು. ಅದರಂತೆ ಒಂದು ವರ್ಷ ಭಾರತವಾಚನ ಸ್ಪರ್ಧೆ ಏರ್ಪಾಟಾಗಿತ್ತು. ಶ್ರೀ ಡಿ.ಎಲ್. ನರಸಿಂಹಾಚಾರ್ಯರು ಆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರ ನಗೆಗೀಡಾದರು. ಸಂಘದ ಅಧ್ಯಕ್ಷರಾಗಿದ್ದ ವೆಂಕಣ್ಣಯ್ಯನವರು ಅದನ್ನು ಕುರಿತು ಒಂದು ಮಾತನ್ನೂ ಆಡಲಿಲ್ಲವಂತೆ! ಆದರೆ ‘ಕನ್ನಡ ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ’ ಎಂಬ ಪ್ರಬಂಧ ಒಂದನ್ನು ಪ್ರಬಂಧ ಸ್ಪರ್ಧೆಯಲ್ಲಿ ಡಿ.ಎಲ್. ನರಸಿಂಹಾಚಾರ್ಯರು ಓದಿದಾಗ ಅದನ್ನು ಮುಕ್ತಕಂಠದಿಂದ ಹೊಗಳಿದರಂತೆ! ಇಂತಹ ಸನ್ನಿವೇಶಗಳು ಇನ್ನೂ ಎಷ್ಟೋ ಇವೆ. ಸದ್ದಿಲ್ಲದೆ ತಿದ್ದುವುದು ವೆಂಕಣ್ಣಯ್ಯನವರ ವ್ಯಕ್ತಿತ್ವದ ಒಂದು ಮುಖ. ಅದ್ವಿತೀಯ ಕನ್ನಡ ಪಂಡಿತರೆನಿಸಿದ ಶ್ರೀ ಡಿ.ಎಲ್. ನರಸಿಂಹಾಚಾರ್ಯರು ವೆಂಕಣ್ಣಯ್ಯನವರಿಂದ ತಮಗೆ ಎಂತಹ ತರಬೇತಿ ದೊರೆಯಿತೆಂಬುದನ್ನು ತುಂಬು ಹೃದಯದಿಂದ ಹೇಳಿಕೊಂಡು ಮುಕ್ತಕಂಠದಿಂದ ಹೊಗಳಿದ್ದಾರೆ. ಅವರು ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರುವುದಕ್ಕೂ ಮುಂಚೆ ಸಂಶೋಧಕ ವಿದ್ಯಾರ್ಥಿಯಾಗಿ ಕೆಲಸ ಮಾಡುತ್ತಿದ್ದಾಗ ಓಲೆ ಪ್ರತಿಗಳನ್ನು ಓದಿ ಪಾಠಾಂತರಗಳನ್ನು ಗುರುತು ಹಾಕಿಕೊಳ್ಳುವ ಕಲೆಯನ್ನು ವೆಂಕಣ್ಣಯ್ಯನವರು ಕಲಿಸಿದರಂತೆ. ವಿದ್ಯಾರ್ಥಿಗಳಿಗೆ ಯಾವ ರೀತಿ ಶಿಕ್ಷಣ ಕೊಟ್ಟಿರೆ ಅವರ ಸಹಜ ಪ್ರವೃತ್ತಿಗಳು ಸಂಪೂರ್ಣ ವಿಕಾಸಗೊಳ್ಳಬಹುದೆಂಬುದನ್ನು ವೆಂಕಣ್ಣಯ್ಯನವರು ಅರಿತಿದ್ದರು. ವೆಂಕಣ್ಣಯ್ಯನವರಿಗೆ ಇದ್ದ ಶಿಷಾ್ಯಭಿಮಾನ ಎಷ್ಟು ಅಪಾರವಾದುದು ಎಂದರೆ, ಒಂದೆರಡು ದಿನ ಅವರ ಪ್ರೀತಿಯ ಶಿಷ್ಯರು ಅವರ ಮನೆಗೆ ಹೋಗದಿದ್ದರೆ ಮಾರನೆಯ ದಿನ ಅವರೇ ಶಿಷ್ಯರ ಮನೆಗೆ ಹೋಗುತ್ತಿದ್ದರು. ಒಮ್ಮೆ ಅವರು ಯಾವುದೋ ಒಂದು ಸಮಿತಿಯ ಸಭೆಗಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು. ಹಾಗೆ ಹೋದವರು ಬೆಂಗಳೂರಿನಲ್ಲಿ ರೈಲಿನಿಂದ ಇಳಿದವರೇ ತಮ್ಮ ಪುಟ್ಟ ಕೈ ಪೆಟ್ಟಿಗೆಯನ್ನು ಕೈಲಿ ಹಿಡಿದುಕೊಂಡು ಮಲ್ಲೇಶ್ವರದಲ್ಲಿದ್ದ ತಮ್ಮ ಶಿಷ್ಯನೊಬ್ಬನ ಮನೆಗೆ ಹೋದರು. ಅದು ಊಟದ ಹೊತ್ತು. ಅಂದು ಆ ಶಿಷ್ಯನ ಮಡದಿ ಮಕ್ಕಳು ಊರಲ್ಲಿ ಇರಲಿಲ್ಲ. ಶಿಷ್ಯ ಎಂತಹುದೋ ಸ್ವಯಂಪಾಕ ಮಾಡಿಕೊಂಡು 296 ಮೂರು ತಲೆಮಾರು ಊಟಕ್ಕೆ ಸಿದ್ಧನಾಗಿದ್ದ. ಆ ಶಿಷ್ಯನಿಗೇನೋ ಗುರುಗಳು ಮನೆಗೆ ಬಂದರೆಂದು ಬಹಳ ಸಂತೋಷವಾದರೂ ತಾನು ಮಾಡಿಕೊಂಡಿದ್ದ ಸಾಮಾನ್ಯ ಅಡಿಗೆಯನ್ನು ಬಡಿಸುವುದು ಹೇಗೆ? ಅವರನ್ನು ಊಟಕ್ಕೆ ಎಬ್ಬಿಸುವುದು ಹೇಗೆ? ಅವನ ಈ ಗಲಿಬಿಲಿಯನ್ನು ಗುರುಗಳು ಅರ್ಥಮಾಡಿಕೊಂಡರು. ಅವರು ಮುಗುಳ್ನಗುತ್ತ ‘ಎಲೆ ಹುಡುಗ, ನೀನೇನು ಊಟ ಮಾಡುತ್ತೀಯೋ ನನಗೂ ಅದನ್ನೇ ಬಡಿಸು’ ಎಂದು ಹೇಳಿ ತಾವೇ ಒಂದು ಎಲೆಯನ್ನು ಹಾಕಿಕೊಂಡು ಊಟಕ್ಕೆ ಕುಳಿತೇಬಿಟ್ಟರು. ಇಂತಹ ವಾತ್ಸಲ್ಯ, ಸರಳತೆ, ಸೌಜನ್ಯ, ಸಲಿಗೆ ಇದೆಲ್ಲಕ್ಕೂ ಹೆಚ್ಚಾಗಿ ಆ ಹೃದಯವಂತಿಕೆ ಬೇರೆ ಯಾರಲ್ಲಿ ಕಾಣಲು ಸಾಧ್ಯ? ವೆಂಕಣ್ಣಯ್ಯನವರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದ ವಿಧಾನವನ್ನು ಹಿಂದೆಯೇ ಹೇಳಿದ್ದೇನೆ. ಇತರರಿಗೆ ಮಾರ್ಗದರ್ಶನ ಮಾಡುವುದರಲ್ಲಿಯೂ ಅವರದೇ ಆದ ಒಂದು ವಿಶಿಷ್ಟ ರೀತಿ ಇತ್ತು. ಅದು ಬಹು ಸಮಂಜಸವಾದ ಮಾರ್ಗ. ಅವರು ಯಾವುದನ್ನೇ ಆಗಲಿ ಖಚಿತವಾಗಿ ಹೊಗಳುತ್ತಿರಲಿಲ್ಲ, ತೆಗಳುತ್ತಿರಲಿಲ್ಲ. ರುಚಿ ಸ್ವಾತಂತ್ರ್ಯವನ್ನು, ಅಭಿಮತ ಸ್ವಾತಂತ್ರ್ಯವನ್ನು ಬೆಳೆಸಿ ರೂಢಿಸುವ ರೀತಿಯಲ್ಲಿ, ಅರ್ಥಗರ್ಭಿತವಾದ ವಿಧಾನದಿಂದ ಮಾರ್ಗದರ್ಶನ ಮಾಡುತ್ತಿದ್ದರು. ಒಮ್ಮೆ ಅವರು ತುಮಕೂರಿನ ಕಾಲೇಜಿನಲ್ಲಿ ಭಾಷಣಕ್ಕಾಗಿ ಹೋಗಬೇಕಾಯಿತು. ಶ್ರೀ ಎಸ್.ವಿ. ರಂಗಣ್ಣನವರು ಆ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರು ‘ವಿಕ್ರಮಾರ್ಜುನ ವಿಜಯ’ದ ‘ಘೋಷಯಾತ್ರೆ’ಯ ಪ್ರಕರಣವನ್ನು ಅತ್ಯಂತ ಉತ್ಸಾಹದಿಂದ ಪ್ರಶಂಸೆ ಮಾಡಿದರು. ವೆಂಕಣ್ಣಯ್ಯನವರು ತಾಳ್ಮೆಯಿಂದ ಎಲ್ಲವನ್ನೂ ಕೇಳಿ ‘ಕುಮಾರವ್ಯಾಸನಲ್ಲಿ ಆ ಭಾಗ ಹೇಗಿದೆ, ನೋಡಿದ್ದೀರಾ?’ ಎಂದು ಕೇಳಿದರು. ರಂಗಣ್ಣನವರು ಕುಮಾರವ್ಯಾಸನನ್ನು ಓದಿರಲಿಲ್ಲ. ಆದರೂ ‘ಏನೂ? ಪಂಪನಿಗಿಂತ ಹೆಚ್ಚು ಚೆಲುವಾಗಿ ಬರೆದಿದ್ದಾನೆಯೆ?’ ಎಂದು ಪ್ರಶ್ನಿಸಿದರು. ವೆಂಕಣ್ಣಯ್ಯನವರು ಖಚಿತವಾಗಿ ಉತ್ತರ ಕೊಡಲಿಲ್ಲ. ‘ಮೊದಲು ನೀವು ಅದನ್ನು ಓದಿ ನೋಡಿ’ ಎಂದು ಮಾತ್ರ ಹೇಳಿದರು. ಎಸ್.ವಿ. ರಂಗಣ್ಣನವರು ಅಂದೇ ಬೆಂಗಳೂರಿನಿಂದ ಕುಮಾರವ್ಯಾಸ ಭಾರತವನ್ನು ತಂದು ಅಂದು ರಾತ್ರಿಯೇ ಆ ಭಾಗವನ್ನು ಓದಿದರಂತೆ! ಅವರು ಹೇಳುತ್ತಾರೆ- ‘ಅದನ್ನು ಓದಿದೆ, ತಲೆದೂಗಿದೆ, ಮುಗ್ಧನಾದೆ. ಅಪಾರವಾದ ತವನಿಧಿ ಕೈವಶವಾದಂತೆ ನನ್ನ ಆಂತರ್ಯ ಹಿಗ್ಗಿ ಕುಣಿದಾಡಿತು.’ ವಿದ್ಯಾರ್ಥಿಗಳ ಲಾಲನೆ, ಪಾಲನೆಗಳ ವಿಷಯದಲ್ಲಿಯೂ ವೆಂಕಣ್ಣಯ್ಯನವರು ಆಸಕ್ತರಾಗಿದ್ದರು. ಅಹರ್ನಿಶಿ ಅವರ ಹಿತ ಚಿಂತನೆಯಲ್ಲಿಯೇ ಮಗ್ನರಾಗಿದ್ದ ಮಹಾನುಭಾವರು, ಅವರು. ಅಂದಿನ ಎಂ.ಎ. ತರಗತಿಯ ಏಕಮಾತ್ರ ಮೈಸೂರಿನ ಜೀವನ 297 ವಿದ್ಯಾರ್ಥಿಯಾಗಿದ್ದ ಶ್ರೀ ಪರಮೇಶ್ವರ ಭಟ್ಟರು ತಮ್ಮ ಅನುಭವಗಳನು ಹೇಳಿಕೊಳ್ಳುತ್ತ ‘ಅವರು ತರಗತಿಗೆ ಬಂದೊಡನೆಯೇ ತಮ್ಮ ಕಷ್ಟ-ನಿಷ್ಠುರಗಳನ್ನು ಮರೆತು ವಿದ್ಯಾರ್ಥಿಯ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಕಾಲೇಜಿನ ಆಳನ್ನು ಕರೆದು ಅವನಿಂದ ತಿಂಡಿ-ಕಾಫಿಗಳನ್ನು ತರಿಸಿ, ವಿದ್ಯಾರ್ಥಿಯ ಜೀವವನ್ನು ತಂಪು ಮಾಡಿದ ಮೇಲೆಯೇ ಪಾಠದ ಮಾತು. ವಿದ್ಯಾರ್ಥಿಗಳಿಂದ ಪ್ರಬಂಧಗಳನ್ನು ಬರೆಸಿ ತರಗತಿಗಳಲ್ಲಿಯೇ ಓದಿಸಿ, ರಚನಾತ್ಮಕ ಸಲಹೆಗಳನ್ನು ಕೊಟ್ಟು, ಬರಹಗಳನ್ನು ತಿದ್ದಿಸುತ್ತಿದ್ದರು. ಮೊಳಕೆಗಳನ್ನು ಹಿಸುಕಿ ಹಾಕುವ ಪ್ರವೃತ್ತಿ ಅವರಿಂದ ಸಾವಿರ ಮೈಲಿ ದೂರ. ಅವರೇನಿದ್ದರೂ ಕಾಲಕಾಲಕ್ಕೆ ನೀರು, ಗೊಬ್ಬರ ಕಾಣಿಸಿ ತೋಟಗಾರನಂತೆ ಕೆಲಸ ಮಾಡತಕ್ಕವರು. ಮೊಳಕೆಯನ್ನು ಬೆಳೆಯಿಸಿ, ಬಲಿಯಿಸಿ, ಅದು ಗಿಡವಾಗಿ, ಬಳ್ಳಿಯಾಗಿ ಬೆಳೆದು, ಹೂ - ಹಣ್ಣು, ನೆರಳು ಕೊಟ್ಟು, ತಾನೂ ಸುಖವಾಗಿ, ಅಂದವಾಗಿ, ಚಂದವಾಗಿ ಬಾಳಿ, ತನ್ನನ್ನು ಆಶ್ರಯಿಸಿದವರಿಗೂ ಸುಖ, ಅಂದ-ಚೆಂದಗಳನ್ನು ಈಯುವಂತಾಗಲಿ ಎಂಬುದೇ ಅವರ ಪ್ರವೃತ್ತಿ. ನಾನು ವಿದ್ಯಾರ್ಥಿಯಾಗಿದ್ದಾಗ ಅವರು, ನೀಡಿದ ಸಲಹೆ. ಸಹಕಾರ, ಪ್ರೋತ್ಸಾಹಗಳ ಫಲವಾಗಿಯೇ ಈಗ ನಾನೂ ಇಷ್ಟರ ಮಟ್ಟಿಗೆ ಸಾಹಿತ್ಯ ನಂದನವನದಲ್ಲಿ ಇತರ ತರುಮರಗಳೊಂದಿಗೆ ಬೇರೂರಿ ನಿಂತಿದ್ದೇನೆ.’ ವೆಂಕಣ್ಣಯ್ಯನವರ ತರಗತಿಯಲ್ಲಿ ಕುಳಿತು ಪಾಠ ಕೇಳುವುದೆಂದರೆ ಒಂದು ಹಬ್ಬ. ಆತ್ಮೀಯವಾಗಿ ವಿದ್ಯಾರ್ಥಿಗಳೊಡನೆ ಭಾವೈಕ್ಯವನ್ನು ತಾಳಿ, ನಕ್ಕು - ನಗಿಸಿ, ರಸವತ್ತಾಗಿ ಪಾಠ ಹೇಳುವುದು ವೆಂಕಣ್ಣಯ್ಯನವರ ಸ್ವಭಾವ. ಅವರು ಪಾಠ ಹೇಳುತ್ತಿದ್ದ ‘ಪಂಪ ಭಾರತ’ವಾಗಲಿ, ‘ಶಬ್ದಮಣಿದರ್ಪಣ’ವಾಗಲಿ ಒಂದೊಂದು ಪುಟದೊಡನೆ ಬಿಳಿಯ ಹಾಳೆಗಳಿಂದ ಕೂಡಿದ ರಟ್ಟು ಪುಸ್ತಕಗಳು. ವೆಂಕಣ್ಣಯ್ಯನವರು ಈ ಬಿಳಿಯ ಹಾಳೆಗಳಲ್ಲಿ ತಮ್ಮ ಟಿಪ್ಪಣಿಗಳನ್ನು ಬರೆದಿಟ್ಟಿದ್ದರು. ‘ಪಂಪ ಭಾರತ’, ‘ಶಬ್ದಮಣಿ’ಗಳ ಜೊತೆ ‘ಸಾಹಿತ್ಯ ಚರಿತ್ರೆ’ಯನ್ನೂ ಅವರೇ ಪಾಠ ಹೇಳುತ್ತಿದ್ದರು. ಅವರ ತೀಕ್ಷ್ಣವಾದ ವಿಮರ್ಶನಾಶಕ್ತಿ, ಸಮರ್ಪಕವಾಗಿ ವಿವರಿಸಿ ಪರಿಶೀಲಿಸುವ ಜಾಣ್ಮೆ, ಪಾಂಡಿತ್ಯದ ಪ್ರಭಾವವನ್ನು ಬೀರಬೇಕೆಂಬ ಹಂಬಲವಿಲ್ಲದ, ವಿನಯಾನ್ವಿತ ಸುಕುಮಾರ ಸ್ವಭಾವ, ಎಳೆಯ ಮಕ್ಕಳಂತಿರುವ ಸುಕೋಮಲ ಮನಸ್ಸು ವಿದ್ಯಾರ್ಥಿಗಳಲ್ಲಿ ವೆಂಕಣ್ಣಯ್ಯನವರನ್ನು ಕುರಿತು ಬಹಳ ಪೂಜ್ಯಭಾವವನ್ನು ತಳೆಯುವಂತೆ ಮಾಡದೆ ಬಿಡುತ್ತಿರಲಿಲ್ಲ. ವಿದ್ಯಾರ್ಥಿಗಳೊಡನೆಯೂ ಅವರು ಆತ್ಮೀಯರಾಗಿ ಹಾಸ್ಯ ಮಾಡುವರು; ಮನನೋಯಿಸುವ ಹಾಸ್ಯವಲ್ಲ, ಅದು; ನಳನಳಿಸುವ ನಿರ್ದುಷ್ಟ ಹಾಸ್ಯ. ಮೊದಲನೇ 298 ಮೂರು ತಲೆಮಾರು ಆನರ್ಸ್‍ನಲ್ಲಿದ್ದ ಹೆಚ್.ಎಂ. ಶಂಕರನಾರಾಯಣರಾಯರನ್ನು - ಹೆಚ್.ಎಂ. ಎಂಬ ಅಕ್ಷರಗಳಿಗೆ His Majesty ಎಂದು ಹಾಸ್ಯ ಮಾಡಿ ಕರೆಯುತ್ತಿದ್ದರು. ವೆಂಕಣ್ಣಯ್ಯನವರ ಮನೆಯ ಬಾಗಿಲು ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿ ಗಳಿಗೇನು? ಎಲ್ಲರಿಗೂ) ಮುಕ್ತದ್ವಾರ. ಮಾನವತೆಯ ಮೂರ್ತಿವಂತ ವ್ಯಕ್ತಿ ವೆಂಕಣ್ಣಯ್ಯನವರು ಇತರರ ಕಷ್ಟಕ್ಕೆ ಕೊರಗುವ ಹೃದಯ. ವಿದ್ಯಾರ್ಥಿಗಳ ದುಃಖವನ್ನು ನೋಡಿ ಗದ್ಗದ ಕಂಠರಾಗುವರು. ಅಪರಿಚಿತರನ್ನೂ ಆತ್ಮೀಯರೆಂದು ಭಾವಿಸುವ ಔದಾರ್ಯ ಅವರದು. ಸುಸಂಸ್ಕೃತಿಯ ಸುಂದರ ಮೂರ್ತಿ, ಅವರು. ಪಾಂಡಿತ್ಯದ ಹೆಮ್ಮೆಯಾಗಲಿ, ಅಧಿಕಾರದ ದರ್ಪವಾಗಲಿ ಅವರಲ್ಲಿ ಎಳ್ಳಷ್ಟೂ ಇರಲಿಲ್ಲ. ಇಂತಹ ಉದಾತ್ತ ಪುರುಷರ ಸಂಸರ್ಗ ಸಿಕ್ಕಬೇಕಾದರೆ ಪೂರ್ವಜನ್ಮದ ಪುಣ್ಯವಿರಬೇಕೆಂದು ಅವರನ್ನು ಬಲ್ಲ ವಿದ್ಯಾರ್ಥಿಗಳಿಗೆ ಅನ್ನಿಸುತ್ತಿತ್ತು. ವಿದ್ಯಾರ್ಥಿಗಳು ತಮ್ಮ ಸುಖದುಃಖಗಳನ್ನು ನಿರ್ಭಯವಾಗಿ ಅವರಲ್ಲಿ ನಿವೇದಿಸಿಕೊಳ್ಳುತ್ತಿದ್ದರು. ವೆಂಕಣ್ಣಯ್ಯನವರು ವಿದ್ಯಾರ್ಥಿಗಳಿಗೆ ಎಲ್ಲ ತರಹದ ಸಹಾಯವನ್ನೂ ಮಾಡುತ್ತಿದ್ದರು. ಹೆಚ್ಚೇನು? ವಿದ್ಯಾರ್ಥಿಗಳೆಂದರೆ ತಮ್ಮ ಮಕ್ಕಳಿಗಿಂತ ಹೆಚ್ಚು, ಅವರಿಗೆ. ವೆಂಕಣ್ಣಯ್ಯನವರು ಸಂತ, ಸಜ್ಜನರಾದುದರಿಂದ ಸೌಜನ್ಯದ ಸನ್ನಿವೇಶದಲ್ಲಿ ಅವರ ಮನಸ್ಸು ತುಂಬಿ ಬರುತ್ತಿತ್ತು. ಅವರು ಕಲಿಸುವ ಪಾಠ, ಗಿಳಿಪಾಠವಾಗಿರದೆ ಮನುಷ್ಯನ ಹಾರ್ದಿಕ ಪರಿವರ್ತನೆಯ ಹೃದಯಂಗಮ ಪಾಠವಾಗಿರುತ್ತಿತ್ತು. ಅವರ ಮನಸ್ಸು ಬೆಣ್ಣೆ, ಮಾತು ಸಕ್ಕರೆ, ತಾವು ನೊಂದರೂ ಚಿಂತೆಯಿಲ್ಲ, ಅನ್ಯರನ್ನು ನೋಯಿಸಬಾರದು ಎಂಬುದೇ ಅವರ ಜೀವನ ಸಿದ್ಧಾಂತ. ನಿಷ್ಕಲ್ಮಶ ಹೃದಯ, ಅವರದು. ವಿದ್ಯಾ - ವಿನಯಸಂಪನ್ನ ವೆಂಕಣ್ಣಯ್ಯನವರ ವ್ಯಕ್ತಿತ್ವ ಅವರ ವಿದ್ಯಾರ್ಥಿಗಳ ಹೃದಯಾಕಾಶದಲ್ಲಿ ಧ್ರುವತಾರೆಯಾಗಿ ಬೆಳಗುತ್ತಲಿದೆ. ಶ್ರಿ ಎಂ.ವಿ. ಸೀತಾರಾಮಯ್ಯನವರು ಗುರು ಪರಂಪರೆಯನ್ನು ಕುರಿತು ‘ನಿಮ್ಮೆತ್ತರಕ್ಕೆ ನಾನು ಬರಲಾರೆ ಕುಬ್ಜನೆನೆ, ನಾನೇ ಬಾಗುವೆ ಹಿಡಿ ಎನುತ ಫಲಿತ ಕದಳಿಯ ತೆರದಿ ಕೈ ನಿಲುಕಿಸುತ ನೀಡಿ ವಿದ್ಯಾಫಲಕ, ಜೀವನದ ಕಾವ್ಯಕೆ ಮುನ್ನುಡಿಯ ಬರೆದ ಸಾಹಿತ್ಯ ಗುರು’ ಎಂದು ಬಣ್ಣಿಸಿರುವುದು ಪೂಜ್ಯ ವೆಂಕಣ್ಣಯ್ಯನವರಿಗೆ ಸಂಪೂರ್ಣವಾಗಿ ಒಪ್ಪುತ್ತದೆ. ಶ್ರೀ ಸೀತಾರಾಮಯ್ಯನವರು ಚಿತ್ರಕಲೆಯ ಕಲಿಕೆಗಾಗಿ ಕಲ್ಕತ್ತೆಗೆ ಹೋಗಬೇಕೆಂದು ಪ್ರಯತ್ನಿಸಿದಾಗ ವೆಂಕಣ್ಣಯ್ಯನವರು ಹಣ ಸಹಾಯ ಮಾಡುವಂತೆ ರಾಮಮೋಹನ್ ಕಂಪೆನಿಯ ಬಿ. ಎಸ್. ರಾಮರಾಯರಿಗೂ, ಮೈಸೂರಿನ ಜೀವನ 299 ಕಲ್ಕತ್ತೆಯಲ್ಲಿದ್ದ ಬಿ. ವಿ. ರಾಮಯ್ಯನವರ ಮನೆಯಲ್ಲಿ ಊಟ ವಸತಿಗಳ ಏರ್ಪಾಡಿಗಾಗಿ ಶಿಫಾರಸ್ಸು ಮಾಡುವಂತೆ ಬಿ.ಎಂ.ಶ್ರೀ. ಯವರಿಗೂ ಪ್ರಾರ್ಥನಾ ಪತ್ರಗಳನ್ನು ಬರೆದುಕೊಟ್ಟರು. ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಯಾಣದ ದಿನ ಆತನನ್ನು ಬೀಳ್ಕೊಡಲು ಮೈಸೂರು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು. ಪ್ರೀತಿಯ ಮಗನನ್ನು ಅಗಲಲಾರದೆ ಕಣ್ಣೀರು ಸುರಿಸುತ್ತಿದ್ದ ಶಿಷ್ಯನ ತಂದೆಯನ್ನು ಕುರಿತು ‘ನೀವೇನೂ ಯೋಚನೆ ಮಾಡಬೇಡಿ. ನಿಮ್ಮ ಮಗ ಒಳ್ಳೆ ಹುಡುಗ. ನಮ್ಮ ದುರದೃಷ್ಟವೋ, ಅವನ ದುರದೃಷ್ಟವೋ ಚಿತ್ರಕಲೆ ಚೆನ್ನಾಗಿ ಕಲಿಯುವುದಕ್ಕೆ ನಮ್ಮ ಮೈಸೂರು ಸೀಮೆಯಲ್ಲಿ ಉತ್ತಮ ವ್ಯವಸ್ಥೆಯಿಲ್ಲ. ಪ್ರೋತ್ಸಾಹವೂ ಇಲ್ಲ. ಹಾಗಿದ್ದಿದ್ದರೆ ಅವನು ಕಲ್ಕತ್ತೆಗೆ ಹೋಗಬೇಕೆ? ಸಾಲದ್ದಕ್ಕೆ ಅವನ ಪ್ರಯಾಣವೆಚ್ಚಕ್ಕೆ ಏನಾದರೂ ಕೊಡೋಣವೆಂದರೆ ನನ್ನ ಬಳಿಯೂ ಮೂರು ಕಾಸಿಲ್ಲ. ಹೆಸರಿಗೆ ಪ್ರೊಫೆಸರು, ನಿಜವಾದ ಪುರಂದರದಾಸ. ನಶ್ಯಕ್ಕೆ ಕೂಡ ಕಾಸಿಲ್ಲ ಇವತ್ತು’ ಎಂದರಂತೆ. ಶ್ರೀ ವೆಂಕಣ್ಣಯ್ಯನವರು ಅರಿತ ನುರಿತ ಅಧ್ಯಾಪಕರು. ಅಧ್ಯಾಪಕರಲ್ಲಿ ಅನೇಕರಿಗಿರುವ ಮಾತಿನ ಗೀಳು, ಸಂದರ್ಭಕ್ಕೆ ಉಚಿತವಲ್ಲದ ವ್ಯಾಖ್ಯಾನ ವಿಮರ್ಶೆಗಳು, ಅನುಚಿತ ಪ್ರಶಂಸೆ, ಕಟು ಟೀಕೆ-ಇವಾವುವೂ ಅವರಲ್ಲಿರಲಿಲ್ಲ. ಕಾವ್ಯವೇ ಆಗಿರಲಿ, ಶಾಸ್ತ್ರಗ್ರಂಥವೇ ಆಗಿರಲಿ, ಅವರಿಂದ ಪ್ರವಚನವಾಗುವಾಗ ಅದರ ಸಾರಸರ್ವಸ್ವವನ್ನು, ಜೀವರಸವನ್ನು ಕಂಡುಹಿಡಿದು ಹೃದಯಂಗಮವಾದ, ಸ್ಪಷ್ಟವಾದ, ಸ್ವಚ್ಛವಾದ ಮಾತುಗಳಲ್ಲಿ ಮನಗಾಣಿಸುವುದು ಶ್ರೀಯುತರ ಅಧ್ಯಾಪಕತನದ ವೈಶಿಷ್ಟ್ಯ. ಅವರ ವಿಮರ್ಶಾ ವೈಖರಿ ಎಂದರೆ ಒಂದು ಪೆಟ್ಟು, ಎರಡು ತುಂಡು. “ನಾವು ಶಾಸನಪದ್ಯಮಂಜರಿಯ ಹಲವಾರು ವೃತ್ತಗಳನ್ನು ಅಧ್ಯಯನ ಮಾಡಬೇಕಿತ್ತು. ಎಲ್ಲವೂ ಅಚ್ಚ ಹಳಗನ್ನಡ ಛಂದೋಬದ್ಧ ಶೈಲಿ, ಸಂಸ್ಕೃತ ಸಮಸ್ತ ಪದಗಳ ಸುರಿಮಳೆ, ಶ್ಲೇಷೆ, ಉಪಮಾ, ವಿರೋಧಾಭಾಸಾದಿ ಅಲಂಕಾರಗಳ ಹೇರು, ಅನ್ವಯ ಮತ್ತು ಅರ್ಥ ಅನೇಕ ಪ್ರಾಚೀನ ಪಂಡಿತರಿಗೂ ತೊಡಕು. ನಮಗಂತೂ ಕಾವ್ಯ ಕಬ್ಬಿಣದ ಕಡಲೆಯೇ ಆಗಿತ್ತು. ಒಮ್ಮೆ ನಮ್ಮ ಈ ಕಷ್ಟವನ್ನು ಶ್ರೀ ವೆಂಕಣ್ಣಯ್ಯನವರಲ್ಲಿ ನಿವೇದಿಸಿಕೊಂಡೆವು. ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಗುರುಗಳು ಒಪ್ಪಿಕೊಂಡರು. ಒಂದು ದಿನ ಈ ಕಾವ್ಯವಿಮರ್ಶೆಗೆ ಮೀಸಲಾಯಿತು. ಗುರುಗಳು ಕೆಲವೇ ಮಾತುಗಳಲ್ಲಿ ಕಾವ್ಯದ ವಿಮರ್ಶೆ ಮುಗಿಸಿದರು. ‘ಶಾಸನಪದ್ಯಮಂಜರಿ’ಯಲ್ಲಿರುವ ಒಂದೊಂದು ವೃತ್ತವೂ ಪಂಡಿತ ರಂಜಕವಾಗಿದೆ. ಪ್ರಾಸ, ಗಣನಿಯಮಗಳಿಂದ ಛಂದೋಬದ್ಧವಾಗಿದೆ. ಶ್ಲೇಷೆ, ವಿರೋಧಾಭಾಸಾದಿ ಅಲಂಕಾರಗಳೆಲ್ಲ ತುಂಬಿವೆ. ಏನಿದ್ದರೇನು? ರಸವಿಲ್ಲ, 300 ಮೂರು ತಲೆಮಾರು ಜೀವವಿಲ್ಲ, ಸತ್ವವಿಲ್ಲ. ಶವಕ್ಕೆ ಶೃಂಗಾರ ಮಾಡಿದಂತಿದೆ ಕಾವ್ಯ ವೈಖರಿ. ಹೀಗೆಂದ ಗುರುಗಳ ಮಾತು ಇಂತಹ ಕಾವ್ಯವನ್ನು ನಾವು ಹೇಗೆ ಸ್ವೀಕರಿಸಬೇಕೆಂಬುದನ್ನು ಮನಗಾಣಿಸಿತು. ವೆಂಕಣ್ಣಯ್ಯನವರ ವಿಮರ್ಶನಾ ಪ್ರತಿಭೆಗೆ ಇದು ಸಾಕ್ಷಿ” ಎಂದು ಅವರ ಶಿಷ್ಯರಲ್ಲೊಬ್ಬರಾದ ಶ್ರೀ ಎಸ್. ರಾಜಗೋಪಾಲೈಯಂಗಾರ್ ಹೇಳಿದ್ದಾರೆ. ಒಮ್ಮೆ ವೆಂಕಣ್ಣಯ್ಯನವರು ನೂರಾರು ವಿದ್ಯಾರ್ಥಿಗಳಿದ್ದ ಬಿ.ಎಸ್ಸಿ. ತರಗತಿಗೆ ಪಾಠ ಹೇಳುತ್ತಾ ಇದ್ದಾರೆ. ಹಿಂದಿನ ಬೆಂಚಿನಲ್ಲಿದ್ದ ಯಾರೋ ಒಬ್ಬನು ‘ಕೇಳಿಸೊಲ್ಲ ಸಾರ್, ಸ್ವಲ್ಪಗಟ್ಟಿಯಾಗಿ ಹೇಳಬೇಕು’ ಎಂದನಂತೆ. ಅವರು ಒಮ್ಮೆ ತಲೆ ಎತ್ತಿ ವಿದ್ಯಾರ್ಥಿ ಸಮೂಹವನ್ನು ದಿಟ್ಟಿಸಿದರು. ಆ ನೋಟದಲ್ಲಿ ಕ್ರೋಧವಿರಲಿಲ್ಲ, ಬೇಸರವಿರಲಿಲ್ಲ ಸಂಮೋಹಕತೆ ಇತ್ತು. ವೆಂಕಣ್ಣಯ್ಯನವರು ಶಾಂತವಾಗಿ ಹೇಳಿದರು- ‘ನಾನು ಇದೇ ಧ್ವನಿಯಲ್ಲಿ ಸಾವಿರಾರು ಜನ ಇದ್ದಂತಹ ಸಭೆಯಲ್ಲಿ ಮಾತನಾಡಿದ್ದೇನೆ. ಕೇಳಲಿಲ್ಲ ಎಂದವರಿಲ್ಲ. ಕೇಳುವ ಅಭಿಲಾಷೆ ಇದ್ದರೆ ಕೇಳಿಸಿಯೇ ತೀರುತ್ತದೆ; ಎಂದು ಪುಸ್ತಕ ನೋಡಿ ಪಾಠವನ್ನು ಮುಂದುವರಿಸಿದರು ಧ್ವನಿ ಏರಲಿಲ್ಲ. ‘ಹಾಲಿನಲ್ಲಿ ಆ ಗಂಭೀರ ಧ್ವನಿ ಕೇಳಿ ಬರುತ್ತಿದ್ದುದು ನಾನು ಎಂದಿಗೂ ಮರೆಯಲಾಗದ ಧ್ವನಿ. ಪರವಶಗೊಳಿಸುವ, ಭಾವಗರ್ಭಿತವಾದ ಕನ್ನಡ ಪಾಠವನ್ನು ಕೇಳಿದುದು, ಅದುವರೆಗಿನ ನನ್ನ ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿ” ಎನ್ನುತ್ತಾರೆ ಅವರ ವಿದ್ಯಾರ್ಥಿ ಹೆಚ್. ಎನ್. ರಾಮಕೃಷ್ಣಪ್ಪ. ವೆಂಕಣ್ಣಯ್ಯನವರಿಗೆ ತಮ್ಮ ಶಿಷ್ಯರಲ್ಲಿ ಹೇಗೊ ಹಾಗೆ ಕೈಕೆಳಗಿನವರ ಮೇಲೂ ಅಪಾರವಾದ ಪ್ರೀತಿ, ಸಲುಗೆ. ಒಮ್ಮೆ ತೀ. ನಂ. ಶ್ರೀಕಂಠಯ್ಯ ಪರಸ್ಥಳದಿಂದ ಬಂದಿದ್ದ ಹಿರಿಯ ಮಿತ್ರನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಅಂದಿನ ಅತಿಥಿಗಳು ವೆಂಕಣ್ಣಯ್ಯನವರಿಗೂ ಆಪ್ತರು. ಆದರೆ ಆ ಗೊಷ್ಠಿಗೆ ತಮ್ಮ ಪ್ರೊಫೆಸರರನ್ನು ಕರೆಯುವುದು ಹೇಗೆ ಎಂದು ಸಂಕೋಚಪಟ್ಟುಕೊಂಡು ಈ ವಿಚಾರವನ್ನು ವೆಂಕಣ್ಣಯ್ಯನವರಿಗೆ ತಿಳಿಸಿರಲಿಲ್ಲ. ಅಂದು ಬೆಳಿಗ್ಗೆ 12 ಗಂಟೆ ಸಮಯ. ವೆಂಕಣ್ಣಯ್ಯನವರು ತೀ.ನಂ.ಶ್ರೀ. ಮನೆಯ ಹತ್ತಿರ ಬಂದು ಅವರನ್ನು ಕರೆದು ‘ಶ್ರೀಕಂಠಯ್ಯ!......... ಊಟಕ್ಕೆ ಕರೆದಿದ್ದಿರಂತೆ, ನನಗೇಕೆ ಹೇಳಲಿಲ್ಲ? ನಾನೇ ಅವರನ್ನು ಕರೆಯಬೇಕೆಂದಿದ್ದೆ, ಈಗ ತಾನೇ ಏನಾಯಿತು? ನಾನು ನಿಮ್ಮ ಮನೆಗೇ ಬಂದುಬಿಡ್ತೇನೆ; ಇಲ್ಲೇ ಅವರ ಜೊತೆಯಲ್ಲಿ ಊಟ ಮಾಡಿದರೆ ಸರಿ’ ಎಂದರು. ತಮ್ಮ ಸಂಕುಚಿತ ಭಾವನೆಗಾಗಿ ಶ್ರೀಕಂಠಯ್ಯನವರು ಭೂಮಿಗಿಳಿದು ಹೋದರು. ‘ಸಾರ್ ತಪ್ಪಾಯಿತು. ನೀವು ಖಂಡಿತ ಇಲ್ಲಿಗೆ ಬರಬೇಕು’-ಎಂದು ತುಟಿಗಳನ್ನು ಅಲುಗಿಸಲು ಹೇಗೆ ಸಾಧ್ಯವಾಯಿತೋ! ‘ನಾನಾಗಿಯೇ ಬರುತ್ತೇನೆ ಮೈಸೂರಿನ ಜೀವನ 301 ಎಂದವನು ಬರದೇ ಇರುತ್ತೇನೆಯೆ? ನಿಮಗೇಕೆ ಯೋಚನೆ? ಮೀಟಿಂಗಿನಿಂದ ಹಾಗೆಯೇ ಬರುತ್ತಿದ್ದೇನೆ. ಮನೆಗೆ ಹೋಗಿ ಹಿಂತಿರುಗಿ ಬರುತ್ತೇನೆ’ ಎಂದು ಹೇಳಿ ತೀ. ನಂ. ಶ್ರೀ.ಯವರ ಮನಸ್ಸನ್ನು ಹದಕ್ಕೆ ತಂದು, ಊಟಕ್ಕೂ ಬಂದರು. ‘ಅವರ ಹತ್ತಿರ ಮೇಲಿನ ಅಧಿಕಾರಿಗಳೆಂಬಂತೆ ನಡೆದುಕೊಳ್ಳಕೂಡದು. ಪ್ರೀತಿಯ ಅಣ್ಣನ ಹತ್ತಿರ ಹೇಗೋ ಹಾಗಿರಬೇಕು ಎಂದು ನಿಶ್ಚಯಿಸಿ ಕೊಂಡೆ. ಕಡೆ ಕಡೆಗೆ ಅವರನ್ನು ಸಂಧಿಸಿದಾಗ ಸಂಪ್ರದಾಯದಂತೆ ಕೈ ಮುಗಿದು ನಮಸ್ಕಾರ ಮಾಡುವುದನ್ನೂ ನಾವು ಕೆಲವರು ಬಿಟ್ಟೆವು. ಆತ್ಮೀಯತೆಗೆ ಅದು ಒಂದು ಅಡ್ಡಿ ಎಂಬ ಭಾವ ಮನಸ್ಸಿನಲ್ಲಿ ಬಲಿತುಹೋಗಿತ್ತು. ಆದರೆ ಆ ಅವ್ಯಾಜ ಹಿತೈಷಿಗಳನ್ನು, ಉದಾರ ಹೃದಯರನ್ನು, ಉದಾತ್ತ ಸತ್ವರನ್ನು ಕಣ್ಣಾರೆ ಕಾಣುವುದು ಇನ್ನೆಲ್ಲಿ ಬಂತು?’ ಎನ್ನುತ್ತಾರೆ ತೀ.ನಂ.ಶ್ರೀ. ಶ್ರೀ ಎ. ಎನ್. ಮೂರ್ತಿರಾಯರು ತಮ್ಮ ಬಂಧುಗಳಿಗೂ ತಮ್ಮಲ್ಲಿ ಸಹಾನುಭೂತಿಯಿಲ್ಲವೆಂಬ ಕಾರಣದಿಂದ ಉದ್ರಿಕ್ತ ಮನಸ್ಕರಾಗಿ ಕುಳಿತಿದ್ದಾಗ ಸಂಜೆಯ ವಾಕಿಂಗ್‍ಗೆಂದು ಹೊರಟಿದ್ದ ವೆಂಕಣ್ಣಯ್ಯನವರು, ಹತ್ತು ಹೆಜ್ಜೆ ಮುಂದಕ್ಕೆ ಹೋಗಿದ್ದವರು ಹಠಾತ್ತಾಗಿ ಹಿಂದಿರುಗಿ ಬಂದು ಅವರ ಪಕ್ಕದಲ್ಲೇ ಕುಳಿತರು. ಅವರು ಚಿರಪರಿಚಿತರಂತೆ ವಿಶ್ವಾಸದಿಂದ ಹೆಗಲ ಮೇಲೆ ಕೈಯಿಟ್ಟು, ಪೀಠಿಕೆಯ ಮಾತೇನೂ ಇಲ್ಲದೆ, ಮೊದಲೇ ನಡೆದಿದ್ದ ಸಂಭಾಷಣೆಯನ್ನು ಮುಂದುವರಿಸುತ್ತಿದ್ದಾರೋ ಎಂಬಂತೆ ‘ಅದೇನು ಹೇಳಿ’ ಎಂದರು. ಇದನ್ನು ಅಷ್ಟಾಗಿ ಒಪ್ಪದೆ, ಬಿಗುಮಾನದಿಂದ ಮೂರ್ತಿರಾಯರು ಸ್ವಲ್ಪ ಒರಟಾಗಿಯೇ ‘ಏನು? ಏನೂ ಇಲ್ಲವಲ್ಲ’ ಎಂದರಂತೆ. ಆಗ ವೆಂಕಣ್ಣಯ್ಯನವರು ಸ್ವಲ್ಪ ನಕ್ಕು ‘ಹಾಗಲ್ಲವಪ್ಪಾ, ಸಂಕೋಚವೇಕೆ? ನಿಮ್ಮ ಮುಖದಲ್ಲಿ ಉದ್ವೇಗ ತೇಲುತ್ತಾ ಇದೆ. ಅದೆನು ಹೇಳಿ, ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ’ ಎಂದರಂತೆ. ಅವರ ಅಕೃತ್ರಿಮ ಸರಳತೆ, ವಿಶ್ವಾಸ, ಮೂರ್ತಿರಾಯರ ನಾಲಗೆಯನ್ನು ಸಡಿಲಿಸಿತಂತೆ. ವೆಂಕಣ್ಣಯ್ಯನವರು ಹೆಗಲ ಮೇಲೆ ಕೈಯಿಟ್ಟಿದ್ದೂ ಪ್ರಯತ್ನಪೂರ್ವಕವಾಗಿ ಅಲ್ಲ; ಅವರಲ್ಲಾಗಲಿ, ಅವರ ಮಾತಿನಲ್ಲಾಗಲಿ ಎಳ್ಳಷ್ಟೂ ಕೃತಕತೆ ಇಲ್ಲ-ಅದು ತೀರ ಸ್ವಾಭಾವಿಕ ಎನಿಸಿತಂತೆ. ‘ಆ ವಿಶ್ವಾಸ ಅಂದು ಆರಂಭವಾದುದಲ್ಲ, ಎಂದಿನಿಂದಲೂ ಇದ್ದದ್ದೇ’ ಎನ್ನುವಂತಿತ್ತು. ಇದೇ ಅವರಲ್ಲಿ ಎಲ್ಲರೂ ಕಂಡಿರುವ ದೊಡ್ಡ ಗುಣ. ಅವರು ಎಂಥ ಹೊಸಬರಿಗೂ ಹೊಸಬರಲ್ಲ. ಒಂದೆರಡು ಮಾತಿನ ವಿನಿಮಯವಾಗುವುದರೊಳಗೇ ಹಳೆಯ ವಿಶ್ವಾಸಿಗಳಾಗುತ್ತಿದ್ದರು. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಅದೊಂದು ಆಧ್ಯಾತ್ಮಿಕ ಸಿದ್ಧಿ ಎಂದೇ ಹೇಳಬೇಕು. 302 ಮೂರು ತಲೆಮಾರು ಅದರ ಪ್ರಭಾವದಿಂದಾಗಿ ಮೂರ್ತಿರಾಯರ ಮನಸ್ಸಿನಲ್ಲಿ ಕುದಿಯುತ್ತಿದ್ದುದೆಲ್ಲ ಉಕ್ಕಿ ಹೊರಹೊಮ್ಮಿತಂತೆ. ವೆಂಕಣ್ಣಯ್ಯನವರು ಕಥೆಯನ್ನೆಲ್ಲ ತಾಳ್ಮೆಯಿಂದ ಕೇಳಿ, ಅನಂತರ ಮುಗುಳು ನಗುತ್ತಾ ‘ನಿಮಗೆ ಆಗಿರುವುದು ನ್ಯಾಯವೋ, ಅನ್ಯಾಯವೋ ನನಗೆ ಗೊತ್ತಿಲ್ಲ. ನಿಮಗೂ ಗೊತ್ತಿಲ್ಲ. ನಿಜವಾಗಿ ನೋಡಿದರೆ ಇನ್ನು ಹತ್ತು ವರ್ಷ ಕಳೆದ ಮೇಲೆ ಗೊತ್ತಾಗಬಹುದು. ಒಂದು ವೇಳೆ ಅನ್ಯಾಯ ಅಂತಲೇ ಇಟ್ಟುಕೊಳ್ಳೋಣ. ಹಾಗಾಗಿರುವುದು ನಿಮ್ಮೊಬ್ಬರಿಗಲ್ಲ. ಅಂತಹ ವೈಶಿಷ್ಟ್ಯವೇನೂ ನಿಮಗಿಲ್ಲ’ ಎಂದು ಹೇಳಿ, ತಮ್ಮ ಸ್ವಂತ ಕಹಿ ಅನುಭವಗಳಲ್ಲಿ ಒಂದೆರಡನ್ನು ಹೇಳಿದರು. ಹೊಸಬರಲ್ಲಿ ಇದನ್ನೆಲ್ಲ ಹೇಳಬಾರದೆಂಬ ಯೋಚನೆ ಅವರನ್ನು ಬಾಧಿಸಿದಂತೆ ಕಾಣಲಿಲ್ಲ. ಕೊನೆಯಲ್ಲಿ ‘ಮೂರ್ತಿರಾವ್, ನಿಮ್ಮನ್ನು ಸದಾ ಸುಖವಾಗಿಟ್ಟಿರುತ್ತೇನೆ ಅಂತ ದೇವರೇನಾದರೂ ಬಾಂಡ್ ಬರೆದುಕೊಟ್ಟಿದ್ದಾನೇನು? ಭ್ರಾಂತಿ! ಏಳಿ’ ಎಂದು ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರಂತೆ. ‘ವೆಂಕಣ್ಣಯ್ಯನವರು ಲೋಕಮರ್ಯಾದೆಯನ್ನು ಲೆಕ್ಕಿಸದೆ ನನ್ನೊಡನೆ ಆ ಪ್ರಸ್ತಾಪವನ್ನೆತ್ತಿದ್ದು, ನನ್ನಲ್ಲಿ ವಿಷದಂತೆ ವ್ಯಾಪಿಸುತ್ತಿದ್ದ ಆತ್ಮಾನುಕಂಪ ಅದರಿಂದಾಗಿ ತೊಡೆದು ಹೋಗಿ ನನ್ನ ದೃಷ್ಟಿ ಸ್ವಚ್ಛವಾಯಿತು. ಅಲ್ಲದೆ ಪರಿಪಕ್ವಸಂಸ್ಕಾರವುಳ್ಳ ಮಹನೀಯರೊಬ್ಬರ ಸ್ನೇಹವೂ ದೊರೆಯಿತು’ ಎನ್ನುತ್ತಾರೆ ಮೂರ್ತಿರಾಯರು. ವೆಂಕಣ್ಣಯ್ಯನವರ ಸರಳ ಸ್ವಭಾವ ಜನರನ್ನು ಮುಗ್ಧರನ್ನಾಗಿ ಮಾಡುತ್ತಿತ್ತು. ಅವರದು ಮಗುವಿನಂತಹ ನಿಷ್ಕಪಟ ಸ್ವಭಾವ. ಆಳವಾದ ಪಾಂಡಿತ್ಯವಿದ್ದರೂ ಅದರ ಪ್ರದರ್ಶನಕ್ಕೆ ಎಂದೂ ಬಗ್ಗದ ವಿನಯ, ಸ್ನೇಹಪರತೆ, ಸೌಜನ್ಯಗಳು ಅವರ ಮಾತಿನಲ್ಲಿಯೂ, ನಡತೆಯಲ್ಲಿಯೂ ಸೊಂಪಾಗಿ ಅರಳಿದ್ದುವು. ಒಮ್ಮೆ ದಿವಂಗತ ಶ್ರೀ ಯಾಮುನಾಚಾರ್ಯರು ಚಿತ್ರದುರ್ಗದಲ್ಲಿ ಪ್ರಚಾರೋಪನ್ಯಾಸ ಮಾಡಬೇಕಾಗಿತ್ತು. ಪ್ರಾಧ್ಯಾಪಕ ವೆಂಕಣ್ಣಯ್ಯನವರು ಅದರ ಅಧ್ಯಕ್ಷರು. ಅದನ್ನು ಕೇಳಿ ಯಮುನಾಚಾರ್ಯರಿಗೆ ಜಂಘಾಬಲವೇ ಉಡುಗಿ ಹೋದಂತಾಯಿತಂತೆ. ಅವರಿಗೆ ಕನ್ನಡದಲ್ಲಿ ಮಾತನಾಡಿ ಅಭ್ಯಾಸವಿರಲಿಲ್ಲ. ಉಪನ್ಯಾಸದ ದಿನ ಅವರು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ತಮ್ಮ ಕೊಠಡಿಯಲ್ಲಿ ಕುಳಿತು ಸಾಯಂಕಾಲದ ಉಪನ್ಯಾಸವನ್ನು ಕುರಿತು ಮೆಲುಕು ಹಾಕುತ್ತಾ ಇದ್ದರು. ಅನುಭಾವಮಾರ್ಗದ ಮೇಲೆ ಅವರು ಉಪನ್ಯಾಸ ಮಾಡಬೇಕಿತ್ತು. ಅದಕ್ಕೆ ಅಗತ್ಯವಾದ ಕನ್ನಡ ಪಾರಿಭಾಷಿಕ ಶಬ್ದಗಳನ್ನು ನಿಘಂಟಿನ ಸಹಾಯದಿಂದ ಪಟ್ಟಿ ಮಾಡಿ ಇಟ್ಟುಕೊಂಡಿದ್ದಾರೆ. ಆದರೂ ಆ ಹೊಸ ಪದಗಳ ಬಳಕೆಯಿಂದ ಭಾಷಣ ಹೇಗಾಗುತ್ತದೆಯೋ ಮೈಸೂರಿನ ಜೀವನ 303 ಎಂದು ಆತಂಕ ಪಡುತ್ತಿದ್ದರು. ಮಧ್ಯಾಹ್ನ ಊಟದ ವೇಳೆಯಲ್ಲಿ ಹನುಮಂತರಾಯರು ‘ಕನ್ನಡದಲ್ಲಿ ಉಪನ್ಯಾಸ ಮಾಡಲು ಯಾಮುನಾಚಾರ್ಯರು ಹೆದರಿಕೊಳ್ಳುತ್ತಿದ್ದಾರೆ’ ಎಂದು ವೆಂಕಣ್ಣಯ್ಯನವರಿಗೆ ತಿಳಿಸಿದರು. ವೆಂಕಣ್ಣಯ್ಯನವರು ಊಟವಾಗುತ್ತಲೇ ಸ್ವಲ್ಪ ಹೊತ್ತು ವಿಶ್ರಮಿಸಿದ್ದು ಆಮೇಲೆ ಯಮುನಾಚಾರ್ಯರ ಕೊಠಡಿಯೊಳಕ್ಕೆ ಹೋದರು. ಅಲ್ಲಿ ಅವರ ಪಕ್ಕದಲ್ಲಿಯೇ ಹಾಸಿಗೆಗೆ ಒರಗಿಕೊಂಡು ಭಾಷಣದ ವಿಚಾರವಾಗಿ ಮಾತು ತೆಗೆದರು. ಕರ್ಣಾಟಕದ ಅನುಭಾವಿಗಳಾದ ಶಿವಶರಣರು, ಹರಿದಾಸರು ಹಾಗೂ ವೇಮನ, ಸರ್ವಜ್ಞ ಮೊದಲಾದವರಲ್ಲಿ ಅನುಭಾವಮಾರ್ಗದ ಲಕ್ಷಣಗಳು ಹೇಗೆ ಮೂಡಿವೆ ಎಂಬ ವಿಚಾರವನ್ನು ಹೇಳುತ್ತ ಹೋದರು. ಯಾಮುನಾಚಾರ್ಯರು ಮೈಮರೆತು ಅದನ್ನೆಲ್ಲ ಆಲಿಸಿದರು. ಅವರಿಬ್ಬರ ಸಂಭಾಷಣೆಯಲ್ಲಿ ವೆಂಕಣ್ಣಯ್ಯನವರದು ಸಂಪೂರ್ಣ ಕನ್ನಡವಾಗಿದ್ದರೆ, ಯಾಮುನಾಚಾರ್ಯರದು ಇಂಗ್ಲಿಷ್‌ ಮಿಶ್ರವಾದ ಕನ್ನಡವಾಗಿತ್ತು. ಆಚಾರ್ಯರು ಪ್ರಸ್ತಾಪಿಸುತ್ತಿದ್ದ ಇಂಗ್ಲಿಷ್‌ ಮಾತುಗಳಿಗೆಲ್ಲ ಕನ್ನಡದ ಪರ್ಯಾಯ ಶಬ್ದಗಳನ್ನು ವೆಂಕಣ್ಣಯ್ಯನವರು ತಿಳಿಸುತ್ತ ಹೋದರು. ಸಂಜೆಯಾಯಿತು. ಜನರು ತುಂಬಿದ ಸಭೆಯಲ್ಲಿ ಆಚಾರ್ಯರು ಭಾಷಣ ಮಾಡಬೇಕಾಯಿತು. ವೆಂಕಣ್ಣಯ್ಯನವರು ಅವರ ಕಿವಿಯಲ್ಲಿ ‘ಇಂದು ಮಧ್ಯಾಹ್ನ ನನ್ನ ಹತ್ತಿರ ಹೇಳಿದ ವಿಷಯವನ್ನು ಆಗ ಹೇಳಿದ ಹಾಗೆಯೇ ಹೇಳಿ. ನಿಮ್ಮ ವಿಷಯ ವಿವೇಚನೆ ತುಂಬ ಚೆನ್ನಾಗಿದೆ’ ಎಂದರು. ಯಾಮುನಾಚಾರ್ಯರು ಹೇಳುತ್ತಾರೆ. ‘ಅವರು ನೀಡಿದ ಪ್ರೋತ್ಸಾಹ ನನ್ನನ್ನು ಕನ್ನಡದಲ್ಲಿ ಸೊಗಸಾಗಿ ಉಪನ್ಯಾಸ ಮಡಲು ಹುರಿದುಂಬಿಸಿತು. ಪುಷ್ಪ- ಫಲಭರಿತವಾದ ಒಂದು ಎತ್ತರವಾದ ಮರದಂತಿದ್ದ ಅವರ ವೃಕ್ಷಚ್ಛಾಯೆಯಲ್ಲಿ ಸ್ವಲ್ಪ ಕಾಲ ಕುಳಿತು, ಜೀವನದ ದಣಿವನ್ನು ಆರಿಸಿಕೊಂಡವರಲ್ಲಿ ನಾನೊಬ್ಬ. ಅವರು ನೀಡಿದ ಸ್ಫೂರ್ತಿ ನನ್ನನ್ನು ಕನ್ನಡದಲ್ಲಿ ಉಪನ್ಯಾಸ ಮಾಡಲು, ಕನ್ನಡದಲ್ಲಿ ಗ್ರಂಥ ಬರೆಯಲು ಉದ್ಯುಕ್ತನನ್ನಾಗಿ ಮಾಡಿತು. ಕಾಲೇಜಿನಲ್ಲಿ ಪಾಠ-ಪ್ರವಚನ, ಶಿಷ್ಯರಿಗೆ ಮಾರ್ಗದರ್ಶನಗಳ ಜೊತೆಗೆ ಪ್ರೊ. ಟಿ. ಎಸ್. ವೆಂ. ರವರು ಕಾಲೇಜಿನ, ವಿಶ್ವವಿದ್ಯಾನಿಲಯದ, ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಭಾರಗಳನ್ನು ಹೊತ್ತು ಯಶಸ್ವಿಯಾಗಿ ನಡೆಸುತ್ತಿದ್ದರು. ಶ್ರೀ ವೆಂಕಣ್ಣಯ್ಯನವರ ಕಾರ್ಯವೈಖರಿಯನ್ನು ಉಚ್ಚಮಟ್ಟದಲ್ಲಿ ಪ್ರಕಟಿಪಡಿಸುವುದು ಅವರ ನೇತೃತ್ವದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ. ಇದು ನಡೆದದ್ದು 1930 ರಲ್ಲಿ. ಕರ್ಣಾಟಕದ ವೃದ್ಧ ಪಿತಾಮಹ ಆಲೂರು ವೆಂಕಟರಾಯರು ಆ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಂದಿನ ವ್ಯವಸ್ಥೆ ‘ನಭೂತೋ ನ ಭವಿಷ್ಯತಿ’ 304 ಮೂರು ತಲೆಮಾರು ಎನ್ನುವಂತಿತ್ತು. ಸುಮಾರು 350 ಜನ ಪ್ರತಿನಿಧಿಗಳಿಗೆ ಚೊಕ್ಕ ಭೋಜನ, ‘ಶ್ರೀ’ಯವರ ‘ಅಶ್ವತ್ಥಾಮನ್’ ನಾಟಕದ ಪ್ರದರ್ಶನ, ಗಾನವಿಶಾರದ ಬಿಡಾರಂ ಕೃಷ್ಣಪ್ಪನವರ ನಾಲ್ಕು ಘಂಟೆಗಳ ಕನ್ನಡ ದೇವರನಾಮಗಳ ಹಾಡುಗಾರಿಕೆ, ಪ್ರತಿನಿಧಿಗಳಿಗೆ ಬೇಲೂರು, ಹಳೇಬೀಡುಗಳ ಪ್ರವಾಸ-ಈ ಒಂದೊಂದೂ ವೆಂಕಣ್ಣಯ್ಯನವರ ಕಾರ್ಯಕೌಶಲಕ್ಕೆ ಪ್ರತ್ಯಕ್ಷ ಪ್ರಮಾಣದಂತಿತ್ತು. ‘ಕುಮಾರವ್ಯಾಸ ಪ್ರಶಸ್ತಿ’ ಗ್ರಂಥದ ಸಂಪಾದನೆ ಮತ್ತು ಪ್ರಕಟಣೆಗೆ ವೆಂಕಣ್ಣಯ್ಯನವರು ವಹಿಸಿದ ಶ್ರಮಶ್ರದ್ಧೆಗಳು ಅಷ್ಟಿಷ್ಟಲ್ಲ. ಅದರ ಜೊತೆಗೆ ಕುಮಾರವ್ಯಾಸಭಾರತದ ಸಂಗ್ರಹಕ್ಕೆಂದು ಅವರು ಮಾಡಿದ ಪ್ರಯತ್ನ ಸ್ತುತ್ಯರ್ಹವಾದುದು. ಕುಮಾರವ್ಯಾಸ ಭಾರತವನ್ನು ಪ್ರಕಟಿಸಬೇಕೆಂದು ಹಲವಾರು ಓಲೆ ಪ್ರತಿಗಳನ್ನು ತರಿಸಿ, ತಮ್ಮ ಸಿಷ್ಯರಾದ ಡಿ.ಎಲ್.ಎನ್., ತೀ. ನಂ. ಶ್ರೀ. ಗಳ ಸಹಾಯದಿಂದ ಪಾಠಾಂತರಗಳನ್ನು ಗುರುತು ಮಾಡಿ ಅಚ್ಚಿಗೆ ಸಿದ್ಧಮಾಡಿಟ್ಟಿದ್ದರು. ಪ್ರತಿ ವರ್ಷವೂ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿ ಹೋಗುವವರಿಗೆ ಕುಮಾರವ್ಯಾಸ ಭಾರತದ ಒಂದೊಂದು ಪ್ರತಿಯನ್ನು ಕೊಡಬೇಕೆಂಬುದು ಅವರ ದೂರದ ಆಸೆಯಾಗಿತ್ತು. ಕನ್ನಡಿಗರ ದುರದೃಷ್ಟದಿಂದ ಆ ಕಾರ್ಯ ನೆರವೇರಲಿಲ್ಲ. ಅವರಿಗೆ ಇಡೀ ಭಾರತವನ್ನು ಸಂಗ್ರಹಿಸಿ ವಿಶ್ವವಿದ್ಯಾನಿಲಯದಿಂದ ಪ್ರಕಟಿಸಬೇಕೆಂಬ ಒಂದು ಉದ್ದೇಶವೂ ಇತ್ತೆಂದು ತೋರುತ್ತದೆ. ಅದನ್ನೀಗ ಶ್ರೀ ಎಂ.ವಿ. ಸೀತಾರಾಮಯ್ಯನವರು ಬಿ. ಎಂ. ಶ್ರೀ. ಪ್ರತಿಷ್ಠಾನದಿಂದ ಪ್ರಕಟಿಸುವರಾಗಿದ್ದಾರೆ. ವೆಂಕಣ್ಣಯ್ಯನವರು ಪ್ರಾಧ್ಯಾಪಕರಾಗಿ ಮೈಸೂರಿಗೆ ಹೊರಟು ಹೋದ ಮೇಲೆ ವಿಶ್ವವಿದ್ಯಾನಿಲಯದವರು ‘ಪ್ರಬುದ್ಧ ಕರ್ನಾಟಕ’ವನ್ನು ವಿಶ್ವವಿದ್ಯಾನಿಲಯದ ಪ್ರಕಟಣೆಯಾಗಿ ಮುಂದುವರೆಸಲು ನಿಶ್ಚಯಿಸಿದರು. ಇದರಿಂದ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕೆಲವು ಅಭಿಮಾನಿಗಳಿಗೆ ಕಸಿವಿಸಿಯಾಯಿತು. ಅವರು ರೊಚ್ಚಿಗೆದ್ದು ಇದಕ್ಕೆ ಕಾರಣವೇನೆಂದು ವೆಂಕಣ್ಣಯ್ಯನವರನ್ನು ಪ್ರಶ್ನಿಸಿದರು. ವೆಂಕಣ್ಣಯ್ಯನವರು ಇತ್ತ ಉತ್ತರ ಅವರ ತಳಮಳವನ್ನು ಹೋಗಲಾಡಿಸಿತು. ಅವರು ಹೇಳಿದರು- ‘ಪ್ರಬುದ್ಧ ಕರ್ನಾಟಕ’ವನ್ನು ವಿಶ್ವವಿದ್ಯಾನಿಲಯ ಸ್ವೀಕರಿಸಿದುದರಿಂದ ಸೆಂಟ್ರಲ್ ಕಾಲೇಜಿಗೂ ಅದರ ಕರ್ನಾಟಕ ಸಂಘಕ್ಕೂ ನಷ್ಟವಾಗುತ್ತದೆ ನಿಜ. ಆದರೆ ಕೃಷ್ಣನ ಕೈಯಲ್ಲಿಯೇ ಇದ್ದರೆ ಅದು ಹೆಚ್ಚು ಕಾಲ ಉಳಿಯಲಾರದು. ಆತನ ಸಂಪಾದಕೀಯಗಳಿಂದ ಜನ ಸಿಟ್ಟಿಗೆದ್ದಿದ್ದಾರೆ. ಆತ ಸಾಚಾ ಮನುಷ್ಯ, ಖಂಡಿತವಾದಿ. ಅವನ ಪ್ರಕೃತಿಯನ್ನು ಬದಲಾಯಿಸುವುದು ಅಸಾಧ್ಯ, ಬದಲಾಯಿಸಲೂ ಬಾರದು. ಪತ್ರಿಕೆಯ ಆಡಳಿತವನ್ನು ವಿಶ್ವವಿದ್ಯಾನಿಲಯಕ್ಕೆ ಮೈಸೂರಿನ ಜೀವನ 305 ವರ್ಗಾಯಿಸಿ ಸಂಪಾದಕ ಮಂಡಳಿಯನ್ನು ನೇಮಿಸಿದರೆ ಎಲ್ಲವೂ ಅಧಿಕೃತವಾಗುತ್ತದೆ; ಪತ್ರಿಕೆಗೂ ಪ್ರತಿಷ್ಠೆ ಹೆಚ್ಚುತ್ತದೆ. ಇದರಿಂದ ವಿಶ್ವವಿದ್ಯಾನಿಲಯ ಕನ್ನಡವಾಗುವುದಕ್ಕೆ ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆಯಲ್ಲವೆ? ಇಷ್ಟಕ್ಕೂ ಸೆಂಟ್ರಲ್ ಕಾಲೇಜು ವಿಶ್ವವಿದ್ಯಾನಿಲಯದ ಒಂದು ಭಾಗವೇ ತಾನೆ?’ ಈ ಮಾತುಗಳನ್ನು ಕೇಳಿದ ಸಂಕುಚಿತ ರಾಗಾವೇಶದ ಜನ ವೆಂಕಣ್ಣಯ್ಯನವರ ಭಾವನೆ ಧಾರಾಳವಾದುದೆಂದು, ಅವರು ದೂರದರ್ಶಿಗಳೆಂದು ಅರ್ಥಮಾಡಿಕೊಂಡು ಶಾಂತರಾದರು. 1932ನೇ ಡಿಸೆಂಬರ್ ಅಂತ್ಯದಲ್ಲಿ ಹದಿನೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ಡಿ.ವಿ.ಜಿ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅನೇಕ ಉದ್ಧಾಮ ಕನ್ನಡ ಸಾಹಿತಿಗಳೊಡನೆ ಶ್ರೀ ವೆಂಕಣ್ಣಯ್ಯನವರೂ ಬಂದಿದ್ದರು. ಅವರು ಅಲ್ಲಿನ ಶ್ರೀ ಅನಂತಪದ್ಮ ನಾಭರಾವ್ ಅವರಿಗೆ ಕನ್ನಡದಲ್ಲಿದ್ದ ಅದರ, ಅಭಿಮಾನ, ಉತ್ಸಾಹಗಳನ್ನು ಕಂಡು ಮೆಚ್ಚಿಕೊಂಡರು. ಹಿರಿಯರು, ಕಿರಿಯರೆಂಬ ಭೇದವೆಣಿಸದೆ ‘ಹಿರಿಯರಿಗೆ ತಾ ಹಿರಿಯನೆಂಬ ಗೌರವತನವನು ಬಿಸುಟು’ ಆಗತಾನೆ ಪರಿಚಯವಾದ ಈ ಮಿತ್ರರೊಡನೆ ಎಷ್ಟೋ ಕಾಲ ಪರಿಚಯವಿದ್ದವರಂತೆ ಮನೆಯವರೆಲ್ಲರ ಕ್ಷೇಮ ಸಮಾಚಾರ ತಿಳಿದುಕೊಂಡು ತಮ್ಮ ಸಹಜ ಗುಣವಾದ ವಿಶ್ವಾಸವನ್ನು ವ್ಯಕ್ತಪಡಿಸಿದರು. ವೆಂಕಣ್ಣಯ್ಯನವರು ಪ್ರಾಧ್ಯಾಪಕರು; ಅನಂತ ಪದ್ಮನಾಭರಾಯರು ಒಬ್ಬ ಸಾಮಾನ್ಯ ಸ್ಟೆನೋಗ್ರಾಫರ್, ಈ ಅಂತರವನ್ನು ಸ್ವಲ್ಪವೂ ಗಮನಿಸದೆ, ಅಂದಿನ ನೂತನ ಸ್ನೇಹಕ್ಕೆ ಮತ್ತಷ್ಟು ಪುಟಗೊಡುವಂತೆ ಅನೇಕ ವಿಷಯಗಳಿಂದ ರಾಯರಲ್ಲಿ ಜ್ಞಾನ ತುಂಬಿದರು. ಕೊಡಗಿನ ಇತಿಹಾಸಕ್ಕೆ ಸಂಬಂಧಿಸಿದ ಎಷ್ಟೋ ವಿಷಯಗಳನ್ನು ಅವರಿಂದ ಕೇಳಿ ತಿಳಿದುಕೊಂಡರು. 1939ನೇ ಇಸವಿಯ ಕೊಡಗಿನ ಕರ್ಣಾಟಕ ಸಂಘದ ವಾರ್ಷಿಕ ಸಮಾರಂಭಕ್ಕೆ ವೆಂಕಣ್ಣಯ್ಯನವರನ್ನು ಆಹ್ವಾನಿಸಲಾಯಿತು. ಇದಕ್ಕೆ ಕಾರಣ ಅಲ್ಲಿನ ಸಂಘದ ಮುಖ್ಯ ಪ್ರಾಣರಾಗಿದ್ದ ಅನಂತಪದ್ಮನಾಭರಾಯರೇ. ಮೈಸೂರಿನಿಂದ ಅವರನ್ನು ಕರೆದುತಂದ ಶ್ರೀ ಗಣೇಶ ಮೋಟಾರು ಸರ್ವಿಸಿದ ಡ್ರೈವರ್ ಬಾಬಾಸಾಹೇಬನಿಗೆ ಅವರಲ್ಲಿ ಅಪಾರ ಗೌರವ. ಅವನು ಅನಂತ ಪದ್ಮನಾಭರಾಯರನ್ನು ಕುರಿತು ‘ಅವರು ಯಾರು ಸ್ವಾಮಿ? ಅವರ ಸೌಜನ್ಯ, ಸಜ್ಜನಿಕೆ, ಗಾಂಭಿರ್ಯ, ನಿರಾಡಂಬರತೆ-ಇವೆಲ್ಲಕ್ಕಿಂತ ಹೆಚ್ಚಾಗಿ ಆ ಸಮಾಧಾನ ಇವನ್ನು ಕಂಡು ನೀವೇ ಕರೆಸಿರಬೇಕೆಂದು ಊಹಿಸಿದೆ. ಬಹಳ ದೊಡ್ಡವರು ಸ್ವಾಮಿ ಅವರು’ ಎಂದು ಹೇಳಿದನಂತೆ. ಹೀಗೆ ಅಪರಿಚಿತರಿಗೂ ಗೌರವ 306 ಮೂರು ತಲೆಮಾರು ಉಂಟಾಗುವಂತೆ ಮಾಡುವ ವ್ಯಕ್ತಿತ್ವ ಅವರದು. ವೆಂಕಣ್ಣಯ್ಯನವರು ಬಹುಮಟ್ಟಿಗೆ ಮಿತಭಾಷಿ. ಆದರೆ ಮಾತನಾಡಿದರೆ ಮುತ್ತು ಸುರಿಯುತ್ತಿತ್ತು. ಅಸಾಧಾರಣವಾದ ಅವರ ಸಂಭಾಷಣಾಚಾತುರ್ಯ, ವಾಕ್ ಪ್ರೌಢಿಮೆ ಜನರನ್ನು ಮುಗ್ಧರನ್ನಾಗಿ ಮಾಡುತ್ತಿತ್ತು. ಅವರು ಮಡಿಕೇರಿಯ ವಿದ್ಯಾಧಿಕಾರಿಗಳಾಗಿದ್ದ ರಾಮರಾಯರೊಡನೆ ಬಿಡಾರ ಮಾಡಿದ್ದರು. ಅಂದು ರಾತ್ರಿ ಒಂದು ಗಂಟೆಯವರೆಗೂ ಅವ್ಯಾಹತವಾಗಿ ಗೀತಾವಿಚಾರವಾಗಿ ಸಂಭಾಷಣೆ ನಡೆಯಿತಂತೆ. ಮರುದಿನ ಬೆಳಿಗ್ಗೆ ರಾಮರಾಯರು ವೆಂಕಣ್ಣಯ್ಯನವರ ಗೀತಾಜ್ಞಾನವನ್ನು ಬಾಯ್ತುಂಬ ಹೊಗಳಿ, ಇಂತಹ ಸತ್ಪುರುಷರ ಸಹವಾಸ ದೊರೆತುದು ನನ್ನ ಸುಕೃತ ಎಂದು ಸಂತೋಷಪಟ್ಟರಂತೆ ! ಮರುದಿನ ಸಂಜೆ ‘ಕನ್ನಡ ಸಾಹಿತ್ಯದ ಬೆಳವಣಿಗೆ’ ಎಂಬ ವಿಷಯದ ಮೇಲೆ ಕರ್ನಾಟಕ ಸಂಘದಲ್ಲಿ ಅವರ ಭಾಷಣವಾಯಿತು. ಅದರ ಜೊತೆಯಲ್ಲಿಯೇ ಸಂಘದ ಪುಸ್ತಕ ಭಂಡಾರದ ಉದ್ಘಾಟನೆಯನ್ನು ಅವರು ನೆರವೇರಿಸಿದರು. ಅವರ ಭಾಷಣವೂ ಒಂದು ರಸದ ಹೊಳೆಯಾಗಿತ್ತು. ಅವರ ಭಾಷಣವನ್ನು ಮತ್ತೆ ಸವಿಯಬೇಕೆಂಬ ಆಸೆಯಿಂದ ಮರುದಿನವೂ ಭಾಷಣ ಮಾಡುವಂತೆ ಬೇಡಿಕೊಂಡರು. ವೆಂಕಣ್ಣಯ್ಯನವರು ಪಂಪ ಮಹಾಕವಿಯ ಬಗ್ಗೆ ಭಾಷಣ ಮಾಡಿ ಜನರೆಲ್ಲರನ್ನೂ ರಾಗರಸದಲ್ಲಿ ತೇಲಾಡಿಸಿದರು. ವೆಂಕಣ್ಣಯ್ಯನವರ ಭಾಷಣಗಳಿಂದ ಪ್ರಭಾವಿತರಾದ ಪುರಜನರು ತಮ್ಮ ಮನೆಗಳಿಗೆ ಭೇಟಿ ನೀಡುವಂತೆ ಬಹು ಸಂಖ್ಯೆಯಲ್ಲಿ ಆಹ್ವಾನಿಸಿದರು. ಮಡಿಕೇರಿ ಚಿಕ್ಕ ಊರಾದರೂ. ಏರುಪೇರು ರಸ್ತೆಗಳಲ್ಲಿ ಬಹುಜನಗಳ ಮನೆಗೆ ಹೋಗಿ ಬರುವುದು ಸುಲಭವಲ್ಲ. ವ್ಯವಧಾನವೂ ಇರಲಿಲ್ಲ. ಆದರೂ ವಿಶ್ವಾಸದಿಂದ ಕರೆಯುತ್ತಿರುವವರ ಮನಸ್ಸಿಗೆ ನಿರುತ್ಸಾಹ ಉಂಟುಮಾಡಲು ಅವರ ಮೃದು ಹೃದಯ ಒಪ್ಪಲಿಲ್ಲ. ಅವರ ಕಷ್ಟವನ್ನು ಕಂಡ ಯಾರೋ ಒಬ್ಬ ಶ್ರೀಮಂತರು ಒಂದು ಮೋಟರು ಕಾರನ್ನು ತಂದು ಅವರ ಓಡಾಟಕ್ಕಾಗಿ ನಿಲ್ಲಿಸಿದರು. ವೆಂಕಣ್ಣಯ್ಯನವರು ಅದರಲ್ಲಿ ಹೋಗಿ ತಮ್ಮ ಹಿರಿಯ ಸಂಸ್ಕೃತಿಗೆ ತಕ್ಕಂತೆ ಮನೆಯವರೆಲ್ಲರ ಯೋಗಕ್ಷೇಮವನ್ನು ವಿಚಾರಿಸಿ, ಸಂಸಾರದ ಗೃಹಿಣಿಯರ ಪರಿಚಯ ಮಾಡಿಕೊಂಡು, ಮಕ್ಕಳನ್ನು ಮುದ್ದಿಸಿ ಅವರಿತ್ತ ಹೂ, ಹಾಲು, ಜೇನು, ಹಣ್ಣುಗಳನ್ನು ಸ್ವೀಕರಿಸಿ ಪ್ರತಿಯಾಗಿ ಗೀತಾ ವಾಕ್ಯಗಳ ಸವಿಯನ್ನು ಉಣಿಸಿ ರಾತ್ರಿ ತಡವಾಗಿ ತಮ್ಮ ಬೀಡಿಗೆ ಹಿಂದಿರುಗಿದರು. ಈ ಕಾರ್ಯಕ್ರಮದಿಂದ ಅಲ್ಲಿನ ಜನರಿಗಾದ ಸಂತೋಷ, ತೃಪ್ತಿ ಅಪಾರ. ಮರುದಿನ ಮಧ್ಯಾಹ್ನ ಶ್ರೀ ವೆಂಕಣ್ಣಯ್ಯನವರು ಆ ವೇಳೆಗೆ ತಮ್ಮ ಮೈಸೂರಿನ ಜೀವನ 307 ಗೆಳೆಯರಾಗಿದ್ದ ರಾಮರಾಯರನ್ನೂ ಮತ್ತು ಆತ್ಮಾರಾಮಶಾಸ್ತ್ರಿಗಳೆಂಬುವರನ್ನೂ ಜೊತೆಯಲ್ಲಿ ಕರೆದುಕೊಂಡು ಪದ್ಮನಾಭರಾಯರ ಮನೆಗೆ ಊಟಕ್ಕೆ ಹೋದರು. ಆಗ ರಾಯರು ‘ಬಡವರ ಮನೆಗೆ ದೇವರಂತೆ ಒಲಿದು ಬಂದಿದ್ದೀರಿ. ನನ್ನ ಅಲ್ಪ ಆತಿಥ್ಯವನ್ನು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಿ’ ಎಂದರು. ಎಲೆಯ ಮೇಲೆ ಬಡಿಸಿದ್ದ ಭಕ್ಷ್ಯಗಳನ್ನು ಕಂಡ ವೆಂಕಣ್ಣಯ್ಯನವರು ‘ಮನೆಯೇನೋ ಬಡವರದೆ, ಆದರೆ ಊಟ ಬಡವರದಲ್ಲ. ಈ ಚಿರೋಟಿಯನ್ನು ಅಲ್ಪವೆಂದು ಕರೆದು ನೀವು ಅದಕ್ಕೆ ಅಪಮಾನ ಮಾಡಬಾರದು. ಚಿರೋಟಿ ಅಲ್ಪವಾದರೆ ಇನ್ನುಳಿದ ಭಕ್ಷ್ಯಗಳ ಸ್ಥಾನಮಾನವೇನು? ಮನಸ್ಸಿನಿಂದ ಮನುಷ್ಯನು ದೊಡ್ಡವನಾಗಬಲ್ಲ ಹಾಗೆ ಕೆಳಗಿಳಿಯಲೂಬಹುದು. ಇಲ್ಲಿ ಹಿರಿಯ ನಡವಳಿಕೆಗೆ ಸ್ಥಾನ. ಆದರದ ಆತಿಥ್ಯಕ್ಕೆ ಅಲ್ಪತನ, ಬಡತನ ಹೇಗೆ ಬರಬೇಕು? ಆ ಆತಿಥ್ಯದ ಸಂಪನ್ನತೆ ದೈವಕೃಪೆಯಿಂದ ಬರುವುದು!’ ಎಂದರು. ಉಪಚಾರಕ್ಕಾಗಿ ಆಡಿದ ನುಡಿ ತನ್ನ ಅಲ್ಪತೆಗಾಗಿ ತಲೆಮರೆಸಿಕೊಂಡು ಮಾಯವಾಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಂದ ಮೊದಲ ತಂಡದ ಎಂ.ಎ. ವಿದ್ಯಾರ್ಥಿಗಳಲ್ಲಿ ವೆಂಕಣ್ಣಯ್ಯನವರಿಗೆ ಎಲ್ಲರಲ್ಲಿಯೂ ಅಪಾರವಾದ ಪ್ರೀತಿ ಇತ್ತಾದರೂ ಕೆ. ವಿ. ಪುಟ್ಟಪ್ಪನವರನ್ನು ಕಂಡರೆ ವಿಶೇಷ ಆತ್ಮೀಯತೆ. ವೆಂಕಣ್ಣಯ್ಯನವರೊಡನೆ ತಮ್ಮ ನಿಕಟ ಸಂಪರ್ಕ, ಒಡನಾಟ, ಅವರು ಕೊಟ್ಟ ಪ್ರೋತ್ಸಾಹ - ಇವುಗಳನ್ನೆಲ್ಲ ಶ್ರೀ ಕುವೆಂಪು ತಮ್ಮ ‘ನೆನಪಿನ ದೋಣಿ’ ಕೃತಿಯಲ್ಲಿ ದಾಖಲು ಮಾಡಿದ್ದಾರೆ. ಅವರು ರೊಮೆ ರೋಲಾ, ಟಾಲ್‍ಸ್ಟಾಯ್, ಥಾಮಸ್ ಹಾರ್ಡಿ, ಗಾಲ್ಸ್‍ವರ್ದಿ-ಮೊದಲಾದವರ ಮಹಾ ಕಾದಂಬರಿಗಳನ್ನು ಓದಿದ ಮೇಲೆ ನಮ್ಮ ಕನ್ನಡದಲ್ಲಿ ಅಂತಹ ಕಾದಂಬರಿಗಳು ಎಂದು ಹುಟ್ಟುತ್ತವೆಯೊ ಎಂದು ಹಂಬಲಿಸುತ್ತಿದ್ದರಂತೆ. ಒಂದು ದಿನ ಸಂಜೆ ಪ್ರಾಧ್ಯಾಪಕ ವೆಂಕಣ್ಣಯ್ಯನವರೊಡನೆ ಈ ವಿಚಾರವಾಗಿ ಮಾತನಾಡುತ್ತ ಕುಕ್ಕರಹಳ್ಳಿ ಕೆರೆ ದಂಡೆಯ ಹಾದಿಯಲ್ಲಿ ಹೋಗುತ್ತಿದ್ದಾಗ ವೆಂಕಣ್ಣಯ್ಯನವರು ನೀವೇ ಏಕೆ ಬರೆಯಬಾರದು?’ ಎಂದರು. ಪುಟ್ಟಪ್ಪ ಹೆದರಿ ಹಿಂಜರಿದು ‘ಅದೇನು ಭಾವಗೀತೆ, ಸಣ್ಣ ಕಥೆ, ನಾಟಕ ಬರೆದಂತೆಯೇ ಅಥವಾ ಕಾದಂಬರಿಯಂತೆಯೇ? ಮಹಾ ಕಾದಂಬರಿಗೆ ಇಂಗ್ಲಿಷ್‌ನಲ್ಲಿ Greater Novel ಎನ್ನುತ್ತಾರೆ. ಅದರ ಪಾತ್ರ ಸಂಖ್ಯೆ, ವಿಫುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ - ಆಲೋಚಿಸಿದರೆ ಮೈ ಜುಂ ಎನ್ನುತ್ತದೆ. ಅದನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ, ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು 308 ಮೂರು ತಲೆಮಾರು ಪುಟಗಳಲ್ಲಿ ನಡೆಸುವುದು ಸಾಧ್ಯವೆ? ನಾನು ಬರೆಯ ಹೊರಟರೆ ಉತ್ತರಕುಮಾರನ ರಣಸಾಹಸವಾಗುವುದಷ್ಟೆ’ ಎಂದು ನಕ್ಕುಬಿಟ್ಟರು. ಆದರೆ ವೆಂಕಣ್ಣಯ್ಯನವರು ಗಂಭೀರವಾಗಿಯೇ ಮುಂದುವರೆದರು- ‘ನೋಡಿ ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೇ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನಾ-ಈ ಮೂರು ಶಕ್ತಿಗಳು ನಿಮ್ಮಲ್ಲಿ ಪ್ರಕಟಗೊಂಡು ಸಾರ್ಥಕವಾಗಿವೆ. ಸಣ್ಣ ಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ. ಇನ್ನೊಬ್ಬರಿಗೆ ಹೇಳುತ್ತ ಹೋಗುವ ಬದಲು ನೀವೇ ಒಂದು ಕೈ ನೋಡಿಬಿಡಿ.’ ಹೀಗೆ ಪುಟ್ಟಪ್ಪನವರ ಹಂಬಲದ ತೀವ್ರತೆಗೆ ಗುರುವರ್ಯರ ಪ್ರೋತ್ಸಾಹರೂಪದ ಆಶೀರ್ವಾದದ ಬೆಂಬಲ ದೊರೆತಿದ್ದರಿಂದಲೋ ಏನೋ ಕುವೆಂಪು ಮಹಾ ಕಾದಂಬರಿ ರಚಿಸುವ ಗೀಳಿಗೆ ವಶವಾಗಿಬಿಟ್ಟು ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಎಂಬ ಶೀರ್ಷಿಕೆಯಲ್ಲಿ ಮೊದಲ ಮಹಾ ಕಾದಂಬರಿಯನ್ನು ಹೊರತಂದರು. 1933ನೆ ಇಸವಿ ಡಿಸೆಂಬರ್ ಕೊನೆಯ ವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯಬೇಕಾಯಿತು. ಅದರ ಅಂಗವಾಗಿ ನಡೆಯುವ ಕವಿ ಸಮ್ಮೇಳನಕ್ಕೆ ಪುಟ್ಟಪ್ಪನವರನ್ನು ಅಧ್ಯಕ್ಷರನ್ನಾಗಿ ಕರೆದಿದ್ದರು. ಅವರು ಹಿಂದೆ ಮುಂದೆ ನೋಡುತ್ತಿದ್ದಾಗ ವೆಂಕಣ್ಣಯ್ಯನವರು ಹುರಿದುಂಬಿಸಿ ಅವರನ್ನು ಒಪ್ಪಿಸಿದರು. ಅವರು ಬರೆದಿದ್ದ ಅಧ್ಯಕ್ಷ ಭಾಷಣವನ್ನು ಓದಿಸಿ ಅವರ ಬೆನ್ನು ತಟ್ಟಿದರು. ಇದಕ್ಕೆ ಒಂದು ವಾರದ ಮುಂಚೆ ಶಿವಮೊಗ್ಗೆಯಲ್ಲಿ ವಿಶ್ವವಿದ್ಯಾನಿಲಯದ ಸಾಪ್ತಾಹಿಕ ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ಉದ್ಘಾಟಿಸಲು ವೆಂಕಣ್ಣಯ್ಯನವರು ಹೋಗಿದ್ದರು. ಅಲ್ಲಿಂದಲೇ ತಾವಿಬ್ಬರೂ ಜೊತೆಯಾಗಿ ಸಮ್ಮೇಳನಕ್ಕೆ ಹೋಗಬಹುದೆಂದು ನಿಶ್ಚಿಯಿಸಿದ್ದರು. ಆ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ‘ಆಧುನಿಕ ಮಾನವ’ ಎಂಬ ವಿಷಯವಾಗಿ ಮಾತನಾಡಿದರು. ವೆಂಕಣ್ಣಯ್ಯನವರು ಅಧ್ಯಕ್ಷರಾಗಿದ್ದರು. ‘It was a great speech’ ಎಂದು ಅವರು ಅದನ್ನು ಹೊಗಳಿದರು. ಮರುದಿನ ಹುಬ್ಬಳ್ಳಿಗೆ ಹೋಗಬೇಕಾಗಿತ್ತು. ಸಮ್ಮೇಳನದ ಪ್ರಾರಂಭದ ದಿನ ಸಮ್ಮೇಳನದ ಅಧ್ಯಕ್ಷರೊಡನೆ, ಕವಿ ಸಮ್ಮೇಳನದ ಅಧ್ಯಕ್ಷರನ್ನೂ ಆನೆಯ ಮೇಲೆ ಮೆರವಣಿಗೆ ಮಾಡಲು ನಿಶ್ಚಯಿಸಿದ್ದರು. ಪುಟ್ಟಪ್ಪನವರಿಗೆ ಈ ಬೀದಿ ಮೆರವಣಿಗೆ ಬೇಕಾಗಿರಲಿಲ್ಲ. ಅದನ್ನು ವೆಂಕಣ್ಣಯ್ಯನವರಲ್ಲಿ ನಿವೇದಿಸಿಕೊಂಡರು. ಮೆರವಣಿಗೆ ಮುಗಿದ ಮೇಲೆ ಇಬ್ಬರೂ ಮೈಸೂರಿನ ಜೀವನ 309 ರೈಲಿನಿಂದ ಇಳಿಯುವಂತೆ ವೆಂಕಣ್ಣಯ್ಯನವರು ಉಪಾಯಮಾಡಿದರು. ಹುಬ್ಬಳ್ಳಿಯ ಸಮ್ಮೇಳನಕ್ಕೆ ಹೋದಾಗ, ಪುಟ್ಟಪ್ಪನವರ ಭಾಷಣದ ಪ್ರತಿಯನ್ನು ಪ್ರಕಟಿಸಲು ಪತ್ರಿಕೆಯವರು ಬೇಡಿದರು. ಪುಟ್ಟಪ್ಪ ಕೊಡಲಿಲ್ಲ. ಅವರಿಂದ ಪಡೆಯಲು ಒಂದೇ ಉಪಾಯವೆಂದರೆ ವೆಂಕಣ್ಣಯ್ಯನವರನ್ನು ಮೊರೆ ಹೋಗುವುದು. ಅವರ ಬೇಡಿಕೆಯನ್ನು ಕೇಳಿದ ವೆಂಕಣ್ಣಯ್ಯನವರು ಪುಟ್ಟಪ್ಪನವರ ಕೊಠಡಿಗೆ ಹೋಗಿ ‘ಅವರಿಗೆ ಹಸ್ತಪ್ರತಿಯನ್ನು ಕೊಡಬೇಡಿ, ಅವರು ಇಲ್ಲಿಯೇ ಕುಳಿತು ಭಾಷಣದ ಕೆಲವು ಭಾಗಗಳನ್ನು ಪತ್ರಿಕೆಗಾಗಿ ಬರೆದುಕೊಳ್ಳುತ್ತಾರೆ’. ಪುಟ್ಟಪ್ಪ ಅವರ ಮಾತಿಗೆ ಪ್ರತಿಯಾಡಲಿಲ್ಲ. ವೆಂಕಣ್ಣಯ್ಯನವರು ತಮ್ಮ ಗೆಳೆಯರೊಡನೆ ಕುಪ್ಪಳ್ಳಿಗೆ ಹೋಗಿ ಪುಟ್ಟಪ್ಪನವರ ಮುಂದಾಳುತನದಲ್ಲಿ ನವಿಲುಕಲ್ಲುಗುಡ್ಡಕ್ಕೆ ಹೋಗಿದ್ದರಂತೆ! ಎಲ್ಲರೂ ಪಂಕ್ತಿಯ ಹಿಂದೆ ಪಂಕ್ತಿಯಂತೆ ಮೇಲು ಮೇಲಕ್ಕೆದ್ದು ಪೂರ್ವ ದಿಗಂತದಲ್ಲಿ ವಿಶ್ರಾಂತವಾಗಿದ್ದ ಪರ್ವತ ಶ್ರೇಣಿಗಳನ್ನು ಬಿಡುಗಣ್ಣಾಗಿ ಸುಮಾರು ಒಂದೂವರೆ ಗಂಟೆವರೆಗೆ ನಿಶ್ಯಬ್ದರಾಗಿ ನೋಡುತ್ತಿದ್ದರು. ರಸಾನುಭವದ ತುತ್ತ ತುದಿಯಲ್ಲಿ ಸಮಾಧಿ ಸ್ಥಿತಿಯಿಂದ ಇಳಿದು ಬಂದವರಂತೆ ಎಚ್ಚೆತ್ತು. ನಿಟ್ಟುಸಿರು ಬಿಡುತ್ತಿದ್ದಂತೆ, ಧ್ಯಾನಲೀನಸ್ನಿಗ್ದಮಂದಸ್ಮಿತರಾಗಿದ್ದ ವೆಂಕಣ್ಣಯ್ಯನವರು ಸಾವಧಾನದಿಂದ, ತಮ್ಮ ಆದ್ರ್ರಗಂಭೀರವಾದ ಧ್ವನಿಯಲ್ಲಿ ಪುಟ್ಟಪ್ಪನವರ ಕಡೆಗೆ ಏನನ್ನೋ ಯಾಚಿಸುತ್ತಿರುವರೋ ಅಥವಾ ಆಜ್ಞಾಪಿಸುತ್ತಿರುವರೋ ಎಂಬಂತೆ ನೋಡುತ್ತ ‘ಪುಟ್ಟ, ಇದನ್ನು ಹಿಡಿದಿಟ್ಟುಕೊ’ ಎಂದು ಮತ್ತೆ ಆ ದಿವ್ಯದೃಶ್ಯದತ್ತ ಕಣ್ಣಾಗಿ. ಮುಂದೆ ಮಾತನಾಡಲಾರದಂತೆ ಮೌನಿಯಾದರು. ಮಲೆನಾಡಿನ ಚಿತ್ರಗಳಲ್ಲಿ ಮತ್ತು ಭಾವಗೀತೆಗಳಲ್ಲಿ ಕುಪ್ಪಳ್ಳಿಯ ಮನೆ ಸುತ್ತಮುತ್ತಣ ಕಾಡು, ಬೆಟ್ಟ, ಕಣಿವೆಗಳ ಸೌಂದರ್ಯವನ್ನು ಓದಿ ತಿಳಿದಿದ್ದ ಪ್ರಾಧ್ಯಾಪಕ ವೆಂಕಣ್ಣಯ್ಯನವರಿಗೆ ‘ಕಾಡು ಮುತ್ತು ಕೊಡುತಲಿರುವ ಸೊಬಗು ಬೀಡು’ ಪುಟ್ಟಪ್ಪನವರ ಮನೆಯನ್ನು ಕಣ್ಣಾರೆ ನೋಡಲು ವಿಶ್ವಾಸಪೂರ್ವಕ ಕುತೂಹಲ. ತಾವೇ ಪುಟ್ಟನವರಿಂದ ಬರೆಸಿದ ಭಾವಪ್ರಬಂಧಗಳ ಕ್ಷೇತ್ರವಾಗಿದ್ದ ಕುಪ್ಪಳ್ಳಿ ಮನೆಯ ಉಪ್ಪರಿಗೆಯನ್ನು ಕಂಡು ಅವರಿಗೆ ತುಂಬ ಪ್ರಮೋದವಾಯಿತು. * * * * 310 ಮೂರು ತಲೆಮಾರು 6. ವೆಂಕಣ್ಣಯ್ಯನವರ ವ್ಯಕ್ತಿತ್ವ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ವೆಂಕಣ್ಣಯ್ಯನವರ ಅಭೌತಿಕ, ಆಧ್ಯಾತ್ಮಿಕ ವ್ಯಕ್ತಿತ್ವದ ಚಿತ್ರವನ್ನು ತಮ್ಮ ಕವಿಸಹಜ ವಾಣಿಯಿಂದ ಹೀಗೆ ಚಿತ್ರಿಸಿದ್ದಾರೆ: ‘ಒಬ್ಬರಿದ್ದರು ಕಲ್ಪವೃಕ್ಷದಂತೆ ಎತ್ತರವಾಗಿ, ತಂಪಾಗಿ, ಪ್ರಬಲವಾಗಿ, ಕಣ್ತುಂಬ ಪ್ರೀತಿ, ಮನಸ್ಸು ಎತ್ತರದಲ್ಲಿ ಜಯಶಾಲಿಯಾಗಿ ಕೆಲಸ ಮಾಡುತ್ತಿತ್ತು. ಹೊರನೋಟಕ್ಕೆ ಮರೆಯದ ಜೀವ ಒಳಗೇ ಮಿಂಚಿನ ಲಾಳಿಯಂತೆ ದುಡಿದು ಸಾರಸ್ವತ ಪೀತಾಂಬರಗಳನ್ನೇ ಸಿದ್ಧಪಡಿಸುತ್ತಿತ್ತು. ಎಂಥ ಅಚ್ಚುಕಟ್ಟು! ‘ಕೃಷ್ಣಾರ್ಪಣಮಸ್ತು’ ಎನ್ನುವುದು ಸುಮ್ಮನೆ ಬಾಯಿ ಮಾತಾಗದೆ ಮಾಡಿದ ಕೆಲಸದಲ್ಲಿ ಒಡ ಮೂಡಿತ್ತು. ಆಡಿದ ಮಾತು ಅಟ್ಟಡುಗೆಯಂತೆ ಖಚಿತ. ತನ್ನ ಕೆಲಸದ ಗುರು, ಗುರಿ, ಸಿದ್ಧಿ, ಸಾಧನೆ, ಎಲ್ಲವೂ ತಾನೇ ತನ್ನ ಆನಂದವೇ. ಆ ಪ್ರತಿಭೆಯಿಂದ ಬರೆದು ಬಂದದ್ದು ಒಂದೋ ಎರಡೋ ಮುತ್ತಿನ ಹಾರವಾಯಿತೇ ಹೊರತು, ಭೂಮಿಗೆ ಭಾರವಾಗಲಿಲ್ಲ. ಅದೆಂಥ ಗಾಂಭೀರ್ಯ! ಅದರ ಬೆಳ್ದಿಂಗಳ ಬೆರಳು ಬೆಟ್ಟಗಳನ್ನೇ ಮುಟ್ಟಿ ಆಡಿಸಿತು. ತನ್ನ ಕೃತಿಗಿಂತ ತನ್ನ ಮಹಿಮೆ ಹಿರಿದಾಯಿತು; ಮಾಡಿದ ಕೆಲಸಕ್ಕಿಂತ ಮಾಡಿಸಿದ ಕೆಲಸವೇ ಮುಂದಾಯಿತು. ಒಬ್ಬರ ಧ್ವನಿಯಲ್ಲಿ, ಇನ್ನೊಬ್ಬರ ಶೈಲಿಯಲ್ಲಿ, ಮತ್ತೊಬ್ಬರ ರೀತಿಯಲ್ಲಿ, ಮಗದೊಬ್ಬರ ಬಾಳ್ನಡೆಯಲ್ಲಿ ಆ ಜೀವ ಸೇರಿಹೋಯಿತು. ಕಬ್ಬಿನ ಗದ್ದೆಯಲ್ಲಿ ಕಣ್ಮರೆಯಾದ ನವಿಲಿನಂತೆ ಆ ಜೀವ ಹಾರಿಹೋಯಿತು. ಭೂಮಿಯ ಮೇಲೆ ತನ್ನ ಕಿರಣಗಳನ್ನೆಲ್ಲ ಎಂದೋ ಏಕೋ ಮರೆತು ಮುಳುಗಿದ ರವಿಯಂತೆ ಆ ಜೀವ ಬಾನಿಗೆ ಸೇರಿಹೋಯಿತು. ತಾನೇ ಮಾಡಬೇಕಾಗಿದ್ದ ಎಷ್ಟೋ ಕೆಲಸ ಇನ್ನೂ ಬಹಳವಿದ್ದಾಗ, ತನ್ನ ಕಾರ್ಯ ಸಮೃದ್ಧಿಯ ನಡುವೆ, ತಾನೊಂದು ಮಾತ್ರ ಕಣ್ಮರೆಯಾಯಿತು. ಒಂದು ದೊಡ್ಡ ಬದುಕು ಕಣ್ಮರೆಯಾಯಿತು. ನಿರ್ಭಯವಾಗಿ, ನಿರಾತಂಕವಾಗಿ ತಗ್ಗು, ಎತ್ತರ, ಬನ, ಬಯಲು, ನೆರಳು, ಬೆಳಕುಗಳನ್ನೆಲ್ಲ ಸಮವಾಗಿ ಆಧರಿಸಿದ ಅದರ ಸಮತಾ ವೇದಸ್ವಸ್ತಿ ವಾಚನ: ‘ನಮೋ ಮಹದ್ಭ: ‘ನವೋ ಯುವಭ್ಯ;’ ನಮೋ ಅರ್ಭಕೇಭ್ಯಃ’ ‘ಈ ಮಾತು ಸುಲಭ; ಇದರಂತೆ ನಡೆಯುವುದಕ್ಕೆ ಇಷ್ಟವಿದ್ದರೂ, ಕಷ್ಟತಪ್ಪಿದ್ದಲ್ಲ. ಇದರಂತೆ ನಡೆದು ಹಿರಿಯರಾದವರಲ್ಲಿ ಎತ್ತರವಾದ ಆಳು ದಿವಂಗತ ವೆಂಕಣ್ಣಯ್ಯನವರ ವ್ಯಕ್ತಿತ್ವ 311 ವೆಂಕಣ್ಣಯ್ಯನವರು. ಬಹುಕಾವ್ಯ ಪರಿಚಯವಿದ್ದೂ ಬರವಣಿಗೆಗಿಂತ ಅಲೋಚನೆ. ಆಲೋಚನೆಗಿಂತ ಜೀವನ ದೊಡ್ಡದು ಎಂದು ಆ ಜೀವ ನಂಬಿದ್ದಂತೆ ತೋರುತ್ತದೆ. ಈ ಮಾತನ್ನು ಅದು ಸ್ಪಷ್ಟವಾಗಿ ಹೇಳಲಿಲ್ಲ. ಅದಲ್ಲವೇ ಆ ಜೀವನದ ಸಂಸ್ಕೃತಿ! ಪ್ರಾಚೀನ ಸಾಹಿತ್ಯದ ಸೌಂದರ್ಯವನ್ನು ಕಂಡು, ಹೃದಯದಲ್ಲಿ ತುಂಬಿಕೊಂಡು, ಆಗತಾನೆ ನಮ್ಮ ಕಣ್ಣೆದುರಿಗೆ ಅಂಕುರಿಸುತ್ತಿದ್ದ ಒಂದು ಹೊಸ ರೀತಿಯ ಸಾಹಿತ್ಯ ಸೃಷ್ಟಿಗೆ ಬೆಂಬಲವಾಗಿ ನಿಂತು, ಅದಕ್ಕೆ ಸರ್ವಶಕ್ತಿಯನ್ನೂ ದಾನ ಮಾಡಿದ ಹಿರಿಯರ ಪಂಕ್ತಿಯಲ್ಲಿ ಎತ್ತರವಾದ ಆಳು ವೆಂಕಣ್ಣಯ್ಯನವರು. ಇಂದು ಬೆಳಗುತ್ತಿರುವ ಎಷ್ಟೋ ದೀಪಗಳಲ್ಲಿ ಇವರ ಬೆಳಕು. ಸಾಹಿತ್ಯದಲ್ಲಿ ಕ್ರಾಂತಿಯಾದದ್ದೂ ಇಂಥವರ ಇರುವಿಕೆಯಿಂದಲೇ ಹೊರತು ಪ್ರಯತ್ನದಿಂದಲ್ಲ. ಆಜ್ಞೆಗೆ ಒಳಗಾಗದೆ, ಆಜ್ಞೆ ಮಾಡದೆ ಎಷ್ಟೋ ಕೆಲಸ ಎತ್ತಿದ ಹೂವಾಯ್ತು, ಇಂಥವರ ಪ್ರಭಾವದಿಂದ. ‘ತಮ್ಮ ಕಾಲದ ಸಾಹಿತ್ಯದ ಸಂಸಾರದಲ್ಲಿ ಹೆಚ್ಚಾಗಿ ನುಡಿಯದೆ ತಮ್ಮ ನಂಬಿಕೆಯಂತೆ ನೇರವಾಗಿ ನಿರಕ್ಕಾಗಿ ನಡೆದು, ಮುಚ್ಚಿದ ವೀಣೆಯಂತೆ ಒಳಗೆ ಇದ್ದು, ಪರಿಮಳದಂತೆ ದಾಟಿ ಹೋದವರು ಯಜಮಾನ ವೆಂಕಣ್ಣಯ್ಯನವರು. ಇವರು ಸದಾ ವಸಂತ; ಇವರಿಗೆ ನಿತ್ಯೋತ್ಸವ. ಜನನ, ಮರಣ, ಜನ್ಮ ಜನ್ಮಾಂತರಗಳೆಲ್ಲ ಇಂಥ ಶಕ್ತಿ ಪುರುಷರು ದಾಟುವ ಸೇತುವೆಗಳು. ಇಂಥವರು ಆಗಾಗ ಬರುತ್ತಾರೆ; ಬಂದು ಸಾಮಾನ್ಯ ಸುಲಭವಲ್ಲದ ಕೆಲಸವನ್ನು ಒಂದು ಬೆರಳಿನಿಂದ ಮಾಡಿಬಿಡುತ್ತಾರೆ. ವಜ್ರದ ಬಳ್ಳಿಯಂಥ ಆ ಬೆರಳಿಗೆ ಕೀರ್ತಿಗೂ ಮಿಗಿಲಾದ ಧನ್ಯತೆ ಸಹಜವಾದ ಉಂಗುರವಾಗುತ್ತದೆ’. ವೆಂಕಣ್ಣಯ್ಯನವರ ವ್ಯಕ್ತಿತ್ವವೇ ಹೀಗೆ. ಸೂಜಿಗಲ್ಲಿನಂತೆ ಕ್ಷಣಕಾಲ ಕಂಡವರನ್ನು ಅದು ಆಕರ್ಷಿಸಿ ಬಿಡುತ್ತಿತ್ತು. ಕಾರಣ ಒಂದೆ? ಎರಡ? ಒಬ್ಬೊಬ್ಬರಿಗೆ ಒಂದೊಂದು ಒಟ್ಟಾರೆ ಅವರ ವ್ಯಕ್ತಿತ್ವದ ಪ್ರಭಾವಲಯಕ್ಕೆ ಬಂದು ತಪ್ಪಿಸಿಕೊಂಡವರಿಲ್ಲ. ಅವರ ವಜ್ರಸಮ ವ್ಯಕ್ತಿತ್ವ ತನ್ನ ಹಲವಾರು ಮುಖಗಳಲ್ಲಿ ಕಾಂತಿಯನ್ನು ಬೀರುತ್ತಿತ್ತು. ತನ್ನ ಅಪಾರ, ಸದ್ಗುಣ ಸಂಪನ್ನತೆಯಿಂದ ಅವರು ಪರಿಪೂರ್ಣ ವ್ಯಕ್ತಿಯಂತೆ ಭಾಸವಾಗುತ್ತಿದ್ದರು. ಪುರುಷೋತ್ತಮಸಮ ವ್ಯಕ್ತಿತ್ವದ ಅವರು ಮಗುವಿನಂತೆ ಸಹಜ ಮುಗ್ಧತೆಯಿಂದ ಜನರನ್ನು ಮರಳು ಮಾಡಿ ಬಿಡುತ್ತಿದ್ದರು. ಅವರ ಬರಹಕ್ಕಿಂತ ಬದುಕು ದೊಡ್ಡದಾಗಿತ್ತು. ಅವರ ನುಡಿಗಿಂತ ನಡೆ ಉನ್ನತವಾಗಿತ್ತು. ಅವರ ಬದುಕು ಬರಹ, ನಡೆ-ನುಡಿ ಪ್ರಪಂಚವೇ ಮೆಚ್ಚಿ ಅಹುದೆನ್ನುವಂತಿತ್ತು. ಈ ಗೊಮ್ಮಟ ಮೂರ್ತಿಯ ಸುಂದರ, ಭೌತಿಕ ಶಬ್ದ ಚಿತ್ರವನ್ನು ಸ್ವತಃ 312 ಮೂರು ತಲೆಮಾರು ಚಿತ್ರಕಾರರಾದ ಶ್ರೀ ಎಂ.ವಿ. ಸೀತಾರಾಮಯ್ಯನವರು ಜೀವಂತವಾಗಿ ಕೊಟ್ಟಿದ್ದಾರೆ; ‘ವೆಂಕಣ್ಣಯ್ಯನವರನ್ನು ನೆನೆದೊಡನೆಯೇ ಅವರ ಎತ್ತರದ ನಿಲವು, ಉನ್ನತ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ಹಳೆಯ ಪೀಳಿಗೆಯ ವ್ಯಕ್ತಿಗಳಲ್ಲಿ ವೆಂಕಣ್ಣಯ್ಯನವರ ವಿಶಿಷ್ಟ ಲಕ್ಷಣವೆಂದರೆ ಆರಡಿ ಅಥವಾ ಅದಕ್ಕೂ ಎತ್ತರ. ಎತ್ತರಕ್ಕೆ ತಕ್ಕ ಮೈಕಟ್ಟು ಇಲ್ಲದಿದ್ದುದರಿಂದ ಸಣಕಲು ಅಲ್ಲದಿದ್ದರೂ ನೀಡುನಿಲುವಾದ ತೆಳ್ಳನೆಯ ದೇಹ. ದೇಹ ಉನ್ನತವಾದರೂ ಸಮಾಧಾನದ ಶಿರಸ್ಸು. ಶಿರಸ್ಸನ್ನಲಂಕರಿಸಿದ್ದ ಎರಡು ಬೆರಳಂಚಿನಜರಿಯ ರುಮಾಲು, ರುಮಾಲಿನ ತ್ರಿಕೋನಕ್ಕೆ ಕಲಾ ಚತುರಸ್ರದಂತೆ ಕಾಣುತ್ತಿದ್ದ ಚೌಕಮುಖ, ಚೌಕಮುಖವನ್ನು ಚಚ್ಚೌಕ ಮಾಡಿದ್ದ ಇಕ್ಕೆಡೆಯ ಕೆನ್ನೆ ಮೂಳೆ. ಈ ಮೂಳೆಗೂ ತುಟಿಯ ಕೊನೆಗೂ ನಡುವಣ ಹಳ್ಳಬಿದ್ದ ಕೆನ್ನೆ. ಅಸುಂದರವಲ್ಲದ, ಪುರುಷ ಲಕ್ಷಣದಮುಖಕ್ಕೆ ಒಪ್ಪುವಂತಹ, ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದೆ ಸಮನಿರುತ್ತಿದ್ದ ಮೀಸೆ, ಎಣ್ಣೆಗೆಂಪು ಎನ್ನಬಹುದಾದ ಮುಖವರ್ಣ... ಯಾವಾಗಲೂ ಗಾಢಚಿಂತನೆಯಲ್ಲಿರುವಂತಹ ಮುಖಭಾವ. ಆದರೆ ಸಂದರ್ಭೋಚಿತವಾಗಿ ಸೂಸುತ್ತಿದ್ದ ಅವರ ಸ್ನಿಗ್ಧ, ಮಧುರ, ಮೃದುಹಾಸವನ್ನು ಮರೆಯುವುದು ಸಾಧ್ಯವೇ ಇಲ್ಲ. ಮುಖದಿಂದ ದೃಷ್ಟಿಯನ್ನು ಕೆಳಕ್ಕೆ ತಂದರೆ ನಮಗೆ ಕಾಣುತ್ತಿದ್ದುದು ಕಪ್ಪು ಬಣ್ಣದ ಸರ್ಜ್‍ಕೋಟು. ಅವರು ಸಾಧಾರಣವಾಗಿ ಉಡುತ್ತಿದ್ದುದು ಮೇಲುಕೋಟೆ ಅಂಚಿನ ಪಂಚೆ, ಇನ್ನು ಅವರ ಚಪ್ಪಲಿ - ಪೂಜ್ಯ ಪ್ರೊಫೆಸರ್ ತೀ.ನಂ.ಶ್ರೀಯವರು ತಮ್ಮ ಗುರುಸ್ಮರಣೆಯಲ್ಲಿ ಉಲ್ಲೇಖಿಸಿರುವ ಪಾದರಕ್ಷೆಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಮೆರೆಯುತ್ತಿರುವಂತೆ ಭಾಸವಾಗುತ್ತಿತ್ತು ಅದನ್ನು ಕಂಡಕೂಡಲೇ’. ವೆಂಕಣ್ಣಯ್ಯನವರ ವ್ಯಕ್ತಿತ್ವದ ಹಲವಾರು ಮುಖಗಳನ್ನು ದೀಪಿಸಿ ತೋರಿಸುವ ಅವರ ಜೀವನದ ಉದಾತ್ತ ಘಟನೆಗಳ ಇತಿಹಾಸ ಅಪಾರವಾದುದು. ವೆಂಕಣ್ಣಯ್ಯನವರು ಮೂಲತಃ ಒಬ್ಬ ಆಧ್ಯಾತ್ಮಿಕ ವ್ಯಕ್ತಿ, ಸಾಧಕ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿರುವ ಚಿದಂಬರಾಶ್ರಮ ವೆಂಕಣ್ಣಯ್ಯನವರ ಪ್ರೇರಣೆಯ ಫಲ. ಆμರ್Éೀಯ ಸಂಪ್ರದಾಯದ ಪ್ರತೀಕವೆನ್ನಿಸಿಕೊಳ್ಳಬಹುದಾದ ಆದರ್ಶ ವಿದ್ಯಾಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ನಮ್ಮ ಮಕ್ಕಳಿಗೆ ತಮ್ಮ ಹಿರಿಯರ ಆದರ್ಶವೇ ಜ್ಞಾಪಕಕ್ಕೆ ಬರದಂತಿದೆ, ಇಂದಿನ ನಮ್ಮ ವಿದ್ಯಾಸಂಸ್ಥೆಗಳು, ವಿದ್ಯಾರ್ಥಿಗೆ ತಾನು ಆರ್ಯಋಷಿಗಳ ಪವಿತ್ರ ವಂಶದವನೆಂದೂ, ಸಂಸ್ಕೃತ ತನ್ನ ಸಂಸ್ಕೃತಿ, ನಾಗರಿಕತೆಗಳ ಭಾಷೆಯೆಂದು ನಮ್ಮ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ಇದರ ಜೊತೆಗೆ ಆಧುನಿಕ ವಿದ್ಯಾಭ್ಯಾಸ ಕ್ರಮದಲ್ಲಿ ಸೆಕೆಂಡರಿ ವೆಂಕಣ್ಣಯ್ಯನವರ ವ್ಯಕ್ತಿತ್ವ 313 ಶಿಕ್ಷಣ ಮಟ್ಟಕ್ಕೆ ಬರುವಷ್ಟು ವ್ಯವಹಾರಜ್ಞಾನಬೇಕು; ತನ್ನ ಜೀವನೋಪಾಯಕ್ಕೆ ಒದಗಬಲ್ಲ ಒಂದು ಕೈಗಾರಿಕೆಯನ್ನು ಅವಲಂಬಿಸಿ ಸ್ವತಂತ್ರ ಜೀವನವನ್ನು ನಡೆಸಲು ಸಾಧ್ಯವಾಗಬೇಕು. ಇಂತಹ ವಿದ್ಯಾಭ್ಯಾಸಕ್ರಮವುಳ್ಳ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯವನ್ನು ಶ್ರೀ ಚಿದಂಬರರೊಡನೆ ತಿಳಿಸುತ್ತ ಒಂದು ತೆಂಗಿನ ಮರದ ಕೆಳಗೆ ನಿಂತಿದ್ದ ವೆಂಕಣ್ಣಯ್ಯನವರು ಉತ್ಸಾಹದಿಂದ ತುಂಬಿ ತುಳುಕುತ್ತ. ‘If you start an institution of this kind, my rupees thirty a month is there towards the salary of a teacher’ ಎಂದು ಹೇಳುತ್ತ ಕಾಲಿನಿಂದ ನೆಲವನ್ನು ಕುಟ್ಟಿದರಂತೆ! ಇದು ಮರೆಯಲಾಗದ ಒಂದು ಅನುಭವವೆಂದು ಶ್ರೀ ಶ್ರೀ ಚಿದಂಬರರು ಆಗಾಗ ಹೇಳುತ್ತಿದ್ದರು. ಇದು ನಡೆದುದು 1938ರಲ್ಲಿ. ವೆಂಕಣ್ಣಯ್ಯನವರು ಕಂಡ ಈ ಹೊಂಗನಸು ಇಂದು ಸಂಸ್ಕೃತ ಪಾಠಶಾಲೆ, ಪ್ರೈಮರಿ ಶಾಲೆ, ಪ್ರೌಢಶಾಲೆ, ವೇದಪಾಠಶಾಲೆಗಳಲ್ಲಿ ಪರ್ಯವಸಾನವಾಗಿದೆ. ಶ್ರೀ ಚಿದಂಬರರು, ಗುಬ್ಬಿಯಲ್ಲಿ ಚಿದಂಬರಾಶ್ರಮವನ್ನು ಸ್ಥಾಪಿಸಿದುದಕ್ಕೆ ವೆಂಕಣ್ಣಯ್ಯನವರೇ ಕಾರಣರೆಂದು ಹೀಗೆ ಹೇಳುತ್ತಾರೆ -”ನನ್ನ ಅಂತಃಕರಣ 1935ನೇ ಡಿಸೆಂಬರ್ ತಿಂಗಳಿನಲ್ಲಿ ಮಾರ್ಪಾಟಾಯಿತು. ಇದಕ್ಕೆ ಕಾರಣರಾದವರು ದಿವಂಗತ ವೆಂಕಣ್ಣಯ್ಯನವರು. ಆ ವರ್ಷದ ಡಿಸೆಂಬರ್ ರಜೆಯಲ್ಲಿ ಅವರು ಚಿಂತಾಮಣಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ತಂಗಿದ್ದರು. ನಾನು 1932ರಲ್ಲಿ ನನ್ನ ಹಿಮಾಲಯ ಯಾತ್ರೆಯನ್ನು ಪೂರೈಸಿಕೊಂಡು ಬಂದ ಮೇಲೆ ಬಾಬಾ ಕಾಲೇಕಮಲೀವಾಲೇರವರ ಆಶ್ರಮದಲ್ಲಿ ನನ್ನ ಜೀವಿತವನ್ನೆಲ್ಲ ಕಳೆಯಬೇಕೆಂದು ಸಂಕಲ್ಪಿಸಿ, ಅದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ಚಿಕ್ಕಬಳ್ಳಾಪುರದಲ್ಲಿ ತಂಗಿದ್ದ ವೆಂಕಣ್ಣಯ್ಯನವರ ಮುಂದೆ ನನ್ನ ಈ ಸಂಕಲ್ಪವನ್ನು ವಿವರಿಸಿದೆ. ಅವರು ಚಿಂತಾಮಣಿಯನ್ನು ಮರೆತು (ಅದು ಅತ್ತೆಯ ಮನೆ) ಎರಡು ದಿನಗಳ ಕಾಲ ಅಖಂಡವಾಗಿ ನನ್ನೊಡನೆ ಚರ್ಚಿಸಿದರು. ಅವರ ಗೆಳೆಯರಾದ ರಾಜೀವ ಲೋಚನರಾಯರು ಅವರ ಬೆಂಬಲಕ್ಕೆ ನಿಂತರು. ‘ನೀವು ಹುಟ್ಟಿದ್ದು ಕರ್ನಾಟಕದಲ್ಲಿ, ನಿಮ್ಮ ಸೇವೆ ಕರ್ನಾಟಕಕ್ಕೆ ಮೀಸಲಾಗಬೇಕು. ಗುರುನಾಥರು ನಿಮಗೆ ಕೊಡಬೇಕಾದ್ದನ್ನು ಆಗಲೇ ಕೊಟ್ಟಿದ್ದಾರೆ. ಹಿಮಾಲಯಕ್ಕೆ ಹೋಗಿ ಏಕಾಂತದಲ್ಲಿ ನೀವು ಗಳಿಸಬೇಕಾದದ್ದು ಏನೂ ಇಲ್ಲ. ನಿಮ್ಮ ಸೇವೆ ಜನತಾ ಜನಾರ್ದನನದಾಗಲಿ. ಸನಾತನ ಧರ್ಮದ ಜೀರ್ಣೋದ್ಧಾರವಾಗಲಿ’ ಎಂದು ವಾದ ಮಾಡಿದರು. 314 ಮೂರು ತಲೆಮಾರು ಇಷ್ಟೇ ಇಲ್ಲ, ನಾನು ನಿರ್ಮಿಸಿಕೊಳ್ಳಬೇಕೆಂದಿದ್ದ ಆಶ್ರಮದ ನಕ್ಷೆಯನ್ನು ಉರಿಯುತ್ತಿದ್ದ ದೀಪಕ್ಕೆ ಹಿಡಿದು ಸುಟ್ಟು ಹಾಕಿದರು. ಅಂದಿನ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದೆ. ಅದೆಂತಹ ಸವಿನೆನಪು! ಅಂದೇ ನನ್ನ ಜೀವನ ಸಮಾಜಸೇವೆಯ ಕಡೆಗೆ ತಿರುಗಿತು. ಇದು ಬಹುಶಃ ಈಶ್ವರಾಜ್ಞೆಯೆಂದೇ ತೋರುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ ನನ್ನ ಸಮಾಜ ಸೇವೆಗೆ ವೆಂಕಣ್ಣಯ್ಯನವರ ಪ್ರೇರಣೆಯೇ ಗಣಪತಿ ಪೂಜೆ. ವೆಂಕಣ್ಣಯ್ಯನವರು ಚಿದಂಬರರ ಗುರುಬಂಧು. ಅವರಿಬ್ಬರೂ ಒಬ್ಬರೇ ಮಹಾತ್ಮರ ಕೃಪಾಕಟಾಕ್ಷವೀಕ್ಷಣೆಗೆ ಒಳಗಾದವರು. ತಮ್ಮ ಅಂತಃಕರಣವನ್ನು ಆ ಮಹಾತ್ಮನ ಪ್ರೇರಣೆಯಿಂದ ತಿದ್ದಿಕೊಳ್ಳಲು ಯತ್ನಿಸಿದ ಸಾಧಕರು. ಅವರ ಕಾರ್ಯಕ್ಷೇತ್ರಗಳು ಬೇರೆ ಬೇರೆಯಾದರೂ ಪ್ರೇರಣೆಯಾದುದು ಒಂದು ಉದ್ಭವ ಸ್ಥಾನದಿಂದ. “ವೆಂಕಣ್ಣಯ್ಯನವರು ಸಂಸಾರಿಗಳು, ಆದರ್ಶ ಸಂಸಾರಿಗಳು, ‘ಯೋಗಃಕರ್ಮಸು ಕೌಶಲಂ’ ಎಂಬ ಗೀತಾವಚನವನ್ನು ಅರ್ಥಮಾಡಿ ಕೊಳ್ಳಬೇಕಾದರೆ ವೆಂಕಣ್ಣಯ್ಯನವರ ಸಮೀಪದಲ್ಲಿ ಕೆಲಕಾಲ ನಿಲ್ಲಬೇಕಾಗಿತ್ತು. ಅಂಟಿಯೂ ಅಂಟದಂತಿದ್ದ ಅವರ ಜೀವನವನ್ನು ನಿರೀಕ್ಷಿಸಬೇಕಾಗಿತ್ತು. ಸಂಸಾರಿಯಾದವನಿಗೆ ಲೆಕ್ಕವಿಲ್ಲದಷ್ಟು ಪ್ರಲೋಭಗಳು. ಅವುಗಳಿಂದ ತಪ್ಪಿಸಿಕೊಳ್ಳಲು ಕಷ್ಟ. ಮನುಷ್ಯನನ್ನು ಅಧಃಪತನಕ್ಕೆ ಒಡ್ಡುವ ಪ್ರಲೋಭನೆಗಳಿಗೆ ಅವರ ಅಂತಃಕರಣ ಆಜೇಯವಾಗಿತ್ತು” ಎನ್ನುತ್ತಾರೆ ಶ್ರೀ ಚಿದಂಬರರು. ಇಹ ಜೀವನದ ಅಸ್ಥಿರತೆ, ಆತ್ಮಪಾರಮ್ಯ - ಇವೆರಡೂ ಅವರ ಅಂತರಂಗದ ಆಳದಲ್ಲಿ ನೆಲೆಸಿದ್ದ ಭಾವನೆಗಳು. ವೆಂಕಣ್ಣಯ್ಯನವರ ಎಲ್ಲ ಮಾತುಗಳಲ್ಲಿಯೂ, ಎಲ್ಲ ನಡವಳಿಕೆಯಲ್ಲಿಯೂ ಈ ಎರಡೂ ಮೂಲ ಭಾವನೆಗಳು ಹರಿದು ಬರುತ್ತಿತ್ತು. ಅವರಿಗೆ ಜೀವನದಲ್ಲಿ ಸಂತೋಷವುಂಟು. ಭೋಗಭಾಗ್ಯದಲ್ಲಿ ಉತ್ಸಾಹವುಂಟು. ಆದರೆ ಆ ಸಂತೋಷವೂ ಉತ್ಸಾಹವೂ ಮಿತಿಗೆ ಒಳಪಟ್ಟವು. ಜಗತ್ತು ಅಶಾಶ್ವತವೆಂಬುದರ ಸ್ಮರಣೆ ಅವರ ಸಂತೋಷ ಉತ್ಸಾಹಗಳನ್ನು ಮಿತಿಯಲ್ಲಿಟ್ಟಿತು. ವೆಂಕಣ್ಣಯ್ಯನವರು ಮಿತವಾಗಿ ಆಚಾರಶೀಲರು. ಸಂಧ್ಯಾವಂದನೆಯ ಅನಂತರ ಶ್ರೀಮದ್‍ರಾಮಾಯಣ ಪಾರಾಯಣ ಮಾಡುತ್ತಿದ್ದರು. ಅವರ ಇನ್ನೊಂದು ನಿತ್ಯ ಪಾರಾಯಣ ಗ್ರಂಥ ಭಗವದ್ಗೀತೆ. ಅದು ಅವರಿಗೆ ಬಾಯಿ ಪಾಠವಾಗಿತ್ತು. ಗ್ರಂಥವನ್ನು ಎಲ್ಲೆಂದರಲ್ಲಿ ಉದಾಹರಿಸುವಷ್ಟು ಅದರ ವಾಕ್ಯಗಳು ಅವರಿಗೆ ಸ್ವಾಧೀನವಾಗಿದ್ದುವು. ಮಹಾಪುರುಷರ ಪವಾಡಗಳಲ್ಲಿ ಅವರಿಗೆ ಸಂಪೂರ್ಣ ವೆಂಕಣ್ಣಯ್ಯನವರ ವ್ಯಕ್ತಿತ್ವ 315 ನಂಬಿಕೆ ಇತ್ತು. ಒಮ್ಮೆ ಶೇಷಾಚಲ ಭಗವಾನರ ಬಳಿಗೆ ದೆವ್ವ ಹಿಡಿದ ಒಬ್ಬ ಹೆಣ್ಣು ಮಗಳನ್ನು ಕರೆದುಕೊಂಡು ಬಂದಾಗ, ಆಕೆ ಮಾಡುತ್ತಿದ್ದ ರಚ್ಚೆಯೆಲ್ಲವೂ ಗುರುಗಳ ಪ್ರಸಾದ ರೂಪವಾದ ಕುಂಕುಮವನ್ನು ಮುಟ್ಟುತ್ತಲೇ ನಿಂತುಹೋಗಿ ಆಕೆ ಪರಮಸಾಧ್ವಿಯಾದುದನ್ನು ಹೃದಯಂಗಮವಾಗಿ ವರ್ಣಿಸಿ ಅವರು ಹೇಳುತ್ತಿದ್ದರು. ಪವಾಡ ದರ್ಶನದಲ್ಲಿ ಅವರಿಗೆ ಕುತೂಹಲವೇನೂ ಇರಲಿಲ್ಲವಾದ್ದರಿಂದ ಲೋಕಸಂಗ್ರಹಕ್ಕಾಗಿ ಮಹಾಪುರುಷರು ಇಂತಹ ಪವಾಡ ಮೆರೆಯುವುದನ್ನು ಅವರು ಒಪ್ಪುತ್ತಿದ್ದರು. ವೆಂಕಣ್ಣಯ್ಯನವರ ನಂಬಿಕೆ, ಆಚಾರಗಳು ಎಂದೂ ಮೌಢ್ಯಾಚಾರವಾಗಿರಲಿಲ್ಲ. ಒಂದು ದಿನ ಭಿಕ್ಷಾನ್ನದ ಹುಡುಗನೊಬ್ಬನು ಬಂದು ‘ಭವತಿ ಭಿಕ್ಷಾಂ ದೇಹಿ’ ಎಂದು ಗಟ್ಟಿಯಗಿ ಕೂಗಿದ. ನಡುಮನೆಯಲ್ಲಿದ್ದ ವೆಂಕಣ್ಣಯ್ಯ ನವರ ಮಾತೋಶ್ರೀಯವರು ‘ಮುಂದೆ ಹೋಗಿ ಬಾಪ್ಪ’ ಎಂದರು. ಅದನ್ನು ಕೇಳುತ್ತಲೇ ವೆಂಕಣ್ಣಯ್ಯನವರು ಎದ್ದು ಹೋಗಿ ವಿದ್ಯಾರ್ಥಿಗೆ ಸ್ವಲ್ಪ ನಿಂತಿರುವಂತೆ ಹೇಳಿ ಒಳಗೆ ಹೋಗಿ ತಾಯಿಯವರನ್ನು ಕುರಿತು ‘ಇನ್ನೂ ಅಡಿಗೆ ಆಗಿಲ್ಲವೆ? ಯಾಕಮ್ಮ ಅನ್ನ ಹಾಕಲಿಲ್ಲ?’ ಎಂದು ಕೇಳಿದರು. ತಾಯಿಯವರು ‘ಅಡಿಗೆ ಏನೋ ಆಗಿದೆ, ದೇವರ ಪೂಜೆ ಇನ್ನೂ ಆಗಿಲ್ಲ.ದೇವರಿಗೆ ನೈವೇದ್ಯವಾಗದೆ ಹೇಗಪ್ಪ ಹಾಕುವುದು?’ ಅಂದರು. ವೆಂಕಣ್ಣಯ್ಯನವರು ‘ವಿದ್ಯಾರ್ಥಿ ರೂಪದಿಂದ ಪ್ರತ್ಯಕ್ಷವಾಗಿ ಬಂದು ಕೇಳುತ್ತಿರುವ ದೇವರಿಗೆ ಅನ್ನವನ್ನು ಕೊಡದೆ ತಿನ್ನದ ದೇವರ ಮುಂದೆ ಇಡಬೇಕೆ ಅಮ್ಮಾ ?’ ಶಬರಿ ಎಂಜಲು ಮಾಡಿ ಕೊಟ್ಟ ಹಣ್ಣು ಹಂಪಲುಗಳನ್ನು ಶ್ರೀರಾಮ ಪ್ರೀತಿಯಿಂದ ತಿನ್ನಲಿಲ್ಲವೆ? ಭಿಕ್ಷಾನ್ನ ಹಾಕಿಬಿಡು. ವಿದ್ಯಾರ್ಥಿ ಇನ್ನೂ ನಿಂತಿದ್ದಾನೆ. ಅವನಿಗೆ ಹಾಕಿದ ಮೇಲೂ ದೇವರಿಗೆ ಆಗುತ್ತದೆ. ಮೀಸಲಳಿಯಿತೆಂದು ದೇವರಿಗೆ ನೈವೇದ್ಯ ಮಾಡಲು ನಿನ್ನ ಮನಸ್ಸು ಸುತರಾಂ ಒಪ್ಪದೇ ಇದ್ದರೆ ದೇವರಿಗೆ ಈ ದಿನ ಹಾಲು-ಹಣ್ಣುಗಳೇ ನೈವೇದ್ಯವಾಗಲಿ ಎಂದು ಹೇಳಿ ತಮ್ಮ ಕೊಠಡಿಗೆ ಹಿಂದಿರುಗಿದರು. ನಮ್ಮಲ್ಲಿರುವ ಮೂಢ ನಂಬಿಕೆ, ಅವಿವೇಕದ ಆಚಾರ, ವ್ಯವಹಾರಗಳಿಗಾಗಿ ಅವರು ಪಶ್ಚಾತ್ತಾಪ ಪಡುತ್ತಿದ್ದರು. ವೆಂಕಣ್ಣಯ್ಯನವರಿಗೆ ಭಗವದ್ಗೀತೆ ವಾಚೋವಿಧೇಯವಾಗಿತ್ತೆಂದು ಹಿಂದೆಯೇ ಹೇಳಿದೆ. ಅಲ್ಲಿನ ಉದಾತ್ತ ತತ್ವಗಳನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರಲ್ಲಿದ್ದಂತಹ ಅನಾಸಕ್ತಿ ಸನ್ಯಾಸಿಯಲ್ಲಿಯೂ ಅಪೂರ್ಣ. ನಾನು ಪ್ರತ್ಯಕ್ಷವಾಗಿ ಕಂಡ ಒಂದು ಘಟನೆಯನ್ನು ನೆನೆದೊಡನೆ 316 ಮೂರು ತಲೆಮಾರು ನನ್ನ ಚೇತನ ಭಕ್ತಿಪುಲಕಿತವಾಗುತ್ತದೆ. 1931ನೆ ಇಸವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿದುದು ಈ ಹಿಂದೆಯೇ ಪ್ರಸ್ಥಾಪಿತವಾಗಿದೆ. ಕನ್ನಡ ಪ್ರಾಧ್ಯಾಪಕರಾಗಿದ್ದ ವೆಂಕಣ್ಣಯ್ಯನವರು ಅದರಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾದುದು ಸ್ವಾಭಾವಿಕವಾಗಿತ್ತು. ಆ ಸಮ್ಮೇಳನದ ಅಂಗವಾಗಿ ಗಮಕ ಕಲೆಯ ಪ್ರದರ್ಶನವನ್ನು ನಡೆಸಬೇಕೆಂದುಕೊಂಡು ಆ ಕಲೆಯಲ್ಲಿ ಪ್ರವೀಣರಾಗಿದ್ದ ಶ್ರೀಯುತರುಗಳಾದ ಬಿಂದೂರಾವ್, ಮಾಯಿಗೌಡ. ಕೃಷ್ಣರಾವ್, ಸಂಪತ್ಕುಮಾರಾಚಾರ್ ಮೊದಲಾದವರನ್ನು ಒಂದು ದಿನ ಬೆಳಿಗ್ಗೆ ತಮ್ಮ ಮನೆಗೆ ಆಹ್ವಾನಿಸಿದರು. ಕಾಲೇಜು ರಸ್ತೆಯಲ್ಲಿದ್ದ ಅವರ ಮನೆಯ ಮಹಡಿ ಮೇಲಿನ ಕೊಠಡಿ ಕಲಾವಿದರಿಂದ ಒಬ್ಬಿಬ್ಬರು ಬೇರೆ ಆಹ್ವಾನಿತರಿಂದ ತುಂಬಿತ್ತು. ನಂಜನಗೂಡಿನ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ರಾಜೀವ ಲೋಚನಂ ಎಂಬ ವೆಂಕಣ್ಣಯ್ಯನವರ ಆಪ್ತ ಮಿತ್ರರು ಅಲ್ಲಿ ಉಪಸ್ಥಿತರಿದ್ದರು. ಗದುಗಿನ ಭಾರತದ ರಸವತ್ತಾದ ಭಾಗಗಳಲ್ಲಿ ಒಂದೊಂದನ್ನು ಒಬ್ಬೊಬ್ಬ ಪಂಡಿತ ಓದುವ ಕಾರ್ಯಕ್ರಮ ಭರದಿಂದ ಸಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಆಹ್ವಾನಿತರಾದವರಿಗೆಲ್ಲರಿಗೂ ಅಲ್ಲಿಯೇ ಭೋಜನಕ್ಕೂ ಅಹ್ವಾನವಿದ್ದುದರಿಂದ ಪಾಕಗೃಹದಲ್ಲಿ ಅಡಿಗೆಯ ಕಾರ್ಯಕ್ರಮವೂ ಭರದಿಂದ ಸಾಗಿತ್ತು. ಅದಕ್ಕಾಗಿ ಒಳ್ಳೆಯ ಅಡಿಗೆಯವನೊಬ್ಬನನ್ನು ನೇಮಿಸಲಾಗಿತ್ತು. ಮಹಡಿಯ ಕೊಠಡಿಯಲ್ಲಿ ನಡೆಯುತ್ತಿದ್ದ ಸಂತೋಷ, ಸಂಭ್ರಮ, ಸಡಗರಗಳ ನಡುವೆ ಹೃದಯವನ್ನು ಭೇದಿಸುವಂತೆ `ಅಯ್ಯೋ ಅಯ್ಯೋ’ ಎಂಬ ಚೀತ್ಕಾರ ಕೇಳಿಬಂತು. ವೆಂಕಣ್ಣಯ್ಯನವರು ರಾಜೀವಲೋಚನಂರವರನ್ನು ತಮ್ಮ ಪ್ರತಿನಿಧಿಯಾಗಿ ಕೂರಿಸಿ ಕೆಳಗಿಳಿದು ಹೋದರು. ಎರಡು ನಿಮಿಷಗಳ ನಂತರ ಮಹಡಿಯ ಮೇಲಿನ ಮತ್ತೊಂದು ಕೊಠಡಿಯಲ್ಲಿದ್ದ ನನ್ನನ್ನೂ, ಅವರ ಅಳಿಯನಾದ ವೆಂಕಟೇಶನನ್ನೂ ಕೆಳಗಿಳಿದು ಬರುವಂತೆ ಕೂಗಿ ಕರೆದರು. ಹೋಗಿ ನೋಡಿದರೆ ಅದೊಂದು ಹೃದಯವಿದ್ರಾವಕ ದೃಶ್ಯ. ಅವರ ಎರಡನೆ ಹೆಂಡತಿಯ ಚೊಚ್ಚಲಮಗು, ಮುದ್ದಾದ ಮಗು ಕೊನೆಯುಸಿರೆಳೆದಿತ್ತು. ಅವರ ಮಡದಿ ಮಗುವಿನ ಶವವನ್ನು ತೊಡೆಯ ಮೇಲೆ ಹಾಕಿಕೊಂಡು ರೋದಿಸುತ್ತಿದ್ದರು. ವೆಂಕಣ್ಣಯ್ಯನವರ ಕಣ್ಣಲ್ಲಿಯೂ ನೀರು ತುಂಬಿತ್ತು. ಅವರು ತಕ್ಷಣವೇ ಅದನ್ನು ಒರೆಸಿಕೊಂಡರು, ಹೆಂಡತಿಗೆ ಕ್ಷಣಕಾಲ ಸಮಾಧಾನ ಹೇಳಿದರು. ಆಕೆ ಅವರಿಗೆ ತಕ್ಕ ಪತ್ನಿ. ಅವರ ಮಾತಿನಲ್ಲಿ ಅದೇನು ಮೋಡಿಯಿತ್ತೊ! ಅಕೆಯ ರೋದನ ನಿಂತಿತು. ಕಣ್ಣುಗಳು ಮಾತ್ರ ಕಂಬನಿಯನ್ನು ಸುರಿಸುತ್ತಿದ್ದುವು. ವೆಂಕಣ್ಣಯ್ಯನವರು ವೆಂಕಣ್ಣಯ್ಯನವರ ವ್ಯಕ್ತಿತ್ವ 317 ನನ್ನ ಕಡೆ ತಿರುಗಿ, ಆ ಶವವನ್ನು ಮೌನವಾಗಿ ಕೊಂಡೊಯ್ದು, ರುದ್ರಭೂಮಿಯಲ್ಲಿ ಒಪ್ಪ ಮಾಡಿ ಬರುವಂತೆ ತಿಳಿಸಿದರು. ಹಾಗೆ ತಿಳಿಸುವಾಗ ಅವರ ಮನದಲ್ಲಿ ವಿಷಾದದ ಛಾಯೆಯೆಲ್ಲಾ ಹೋಗಿ, ಮುಖ ಪ್ರಶಾಂತವಾಗಿತ್ತು. ಸ್ಮಶಾನದಿಂದ ನಾವು-ನಾನು ಮತ್ತು ವೆಂಕಣ್ಣಯ್ಯನವರ ಅಳಿಯ ವೆಂಕಟೇಶಯ್ಯ ಹಿಂದಿರುಗಿದ ನಂತರ ಮನೆಯಲ್ಲಿ ಊಟದ ಸಂಭ್ರಮ ಜರುಗುತ್ತಿತ್ತು. ಎಲ್ಲರೊಡನೆ ವೆಂಕಣ್ಣಯ್ಯನವರು ಊಟಕ್ಕೆ ಕುಳಿತು, ಒಮ್ಮೊಮ್ಮೆ ತಮ್ಮ ಉಪಚಾರೋಕ್ತಿಗಳಿಂದ ಎಲ್ಲರನ್ನೂ ಸಂತೋಷಗೊಳಿಸುತ್ತಿದ್ದರು. ತೊವ್ವೆ, ಮಜ್ಜಿಗೆ ಹುಳಿ, ಚಿತ್ರಾನ್ನ, ಖೀರು, ಬೋಂಡ, ಇವುಗಳ ಮೇಲಿನ ವ್ಯಾಖ್ಯಾನ! ಆಗ ತಾನೇ ಓದಿ ಮುಗಿಸಿ ಬಂದಿದ್ದ ದೂರ್ವಾಸಾತಿಥ್ಯ, ಧರ್ಮರಾಯನ ರಾಜಸೂಯ ಯಾಗದ ಮೃಷ್ಟಾನ್ನ ಭೋಜನ ಇತ್ಯಾದಿ, ಇತ್ಯಾದಿಗಳ ಮೇಲೆ ಟೀಕೆ-ಟಿಪ್ಪಣಿಗಳನ್ನು ನಡೆಸುತ್ತ ಮಂದಗತಿಯಿಂದ ಎಲ್ಲರೂ ಆಕಂಠ ಪರಿಪೂರ್ತಿಯಾಗಿ ಭೋಜನ ಮಾಡಿದರು. ಊಟವಾದ ಮೇಲೆ ತಾಂಬೂಲ ಚರ್ವಣ ಮಾಡುತ್ತ ಮತ್ತೊಮ್ಮೆ ಲೋಕಾಭಿರಾಮವಾಗಿ ಹರಟೆಹೊಡೆದು, ನಾಲ್ಕು ಗಂಟೆಯ ವೇಳೆಗೆ ಬಂದ ಮಧ್ಯಾಹ್ನದ ಕಾಫಿಯ ಪರಿಸೇವನೆಯ ನಂತರ ಎಲ್ಲರೂ ಹೊರಟುಹೋದರು, ಆಪ್ತಮಿತ್ರರಾದ ಶ್ರೀ ರಾಜೀವಲೋಚನಂ ಒಬ್ಬರ ಹೊರತು. ಮನೆಯಲ್ಲಿ ನಡೆದ ಸಂತೋಷ-ಸಂಭ್ರಮದಲ್ಲಿ ಗೃಹಿಣಿಯ ಸುಳಿವೇ ಇಲ್ಲದಿದ್ದುದನ್ನು ಕಂಡು ರಾಜೀವಲೋಚನಂಗೆ ಕೌತುಕ, ಕುತೂಹಲ. ಅತಿಥಿ ಸೇವೆಯಲ್ಲಿ ಆಕೆ ಎತ್ತಿದ ಕೈ, ಇಂದು ಆಕೆಯ ಸುಳಿವೇ ಇಲ್ಲವಲ್ಲ! ಆತ ಪ್ರಶ್ನಿಸಿದರು- ‘ನಿಮ್ಮ ಶ್ರೀಮತಿ ಊರಲಿಲ್ಲವೆ?’ ಎಂದು. ವೆಂಕಣ್ಣಯ್ಯನವರು ಆ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ ಪಂಪನ ಆದಿಪುರಾಣದಲ್ಲಿ ಬರುವ ನೀಲಾಂಜನೆಯ ನೃತ್ಯದ ಕಥೆಯನ್ನು ಹೇಳಿದರು. ‘ವೃಷಭನಾಥನಿಗೆ ಗೊತ್ತಾಯಿತು, ಅದು ಯಾರ ಗಮನಕ್ಕೂ ಬರಲಿಲ್ಲ, ಆದರೆ ವೃಷಭನಾಥನಿಗೆ ಗೊತ್ತಾಯಿತು. ನಾನು ಇಂದು ದೇವೇಂದ್ರನ ಪಾತ್ರವನ್ನು ವಹಿಸಿದ್ದೆ. ನನ್ನ ಮನೆಯಲ್ಲಿ ನಡೆದ ಆಚಾತುರ್ಯ ಯಾರಿಗೂ ಗೊತ್ತಾಗಲಿಲ್ಲ. ನಿನ್ನ ಕಣ್ಣಿಗೆ ಆ ಆಭಾಸ ಗೊತ್ತಾಗಿದೆ. ನೀನು ವೃಷಭನಾಥನಂತೆ ಪುಣ್ಯಜೀವಿ’ ಎಂದರು. ಈ ಮಾತುಗಳನ್ನು ಕೇಳಿ ರಾಜೀವಲೋಚನಂರವರು ನಿಡುಗಣ್ಣುಗಳಿಂದ ವೆಂಕಣ್ಣಯ್ಯನವರನ್ನು ನೋಡುತ್ತಿರಲು ಅವರು ನಡೆದ ವಿಷಯವನ್ನೆಲ್ಲ ವಿವರಿಸಿದರು. ಅದನ್ನು ಕೇಳಿ ರಾಜೀವಲೋಚನಂ ತಮ್ಮ ಕೋಪವನ್ನು ಹತ್ತಿಕ್ಕಲಾರದೆ ‘ವೆಂಕಣ್ಣಯ್ಯ ನೀನು ಮನುಷ್ಯನಲ್ಲ’ ಎಂದರು. ಆಗ ವೆಂಕಣ್ಣಯ್ಯನವರು “ಅಯ್ಯಾ ಈ 318 ಮೂರು ತಲೆಮಾರು ಸಂದರ್ಭದಲ್ಲಿ ನಾನು ಇನ್ನೇನು ಮಾಡಬೇಕಿತ್ತು? ಮಗು ಇರುವವರೆಗೆ ನನ್ನ ಕರ್ತವ್ಯವನ್ನು ನಾನು ಮಾಡಿದೆ. ವೈದ್ಯರು ಬಂದು ನಿತ್ಯವೂ ಮಗುವನ್ನು ನೋಡಿಕೊಂಡು ಹೋಗುತ್ತಿದ್ದರು. ನಿನ್ನೆ, ಈ ದಿನ ಬೆಳಿಗ್ಗೆ ಸಹ ಅದನ್ನು ನೋಡಿದಾಗ ಗುಣಮುಖವಾಗುತ್ತಿದೆಯೆಂದು ತಿಳಿಸಿದರು. ಇದ್ದಕ್ಕಿದ್ದಂತೆ ಅದು ಅಸು ನೀಗಿದರೆ ಮುಂದೇನು ಮಾಡಬೇಕು? ನಾನು ನೀನು ಇಬ್ಬರೂ ಒಬ್ಬರೇ ಗುರುಗಳ ಶಿಷ್ಯರು; ಗುರುಗಳ ಉಪದೇಶ ಕೇಳಿದ್ದೇವೆ, ಭಗವದ್ಗೀತೆ ಓದಿದ್ದೇವೆ, ‘ಶಾಸ್ತ್ರ ಓದುವುದಕ್ಕೆ, ಬದನೇಕಾಯಿ ತಿನ್ನುವುದಕ್ಕೆ’ ಎಂದಾಗಬೇಕೇನು? ನಮ್ಮ ವೇದಾಂತ ಕರ್ಣನ ಅಸ್ತ್ರವಾದರೆ ಹೇಗೆ?” ಎಂದರು. ರಾಜೀವಲೋಚನಂ ಮತ್ತೊಮ್ಮೆ ‘ವೆಂಕಣ್ಣಯ್ಯ ನೀನು ಮನುಷ್ಯನಲ್ಲ’ ಎಂದರು. ವೆಂಕಣ್ಣಯ್ಯನವರು ಅಧ್ಯಾತ್ಮದಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಅವರ ದೃಷ್ಟಿ ಸಂಪ್ರದಾಯ ಸೀಮಿತವಾಗಿರಲಿಲ್ಲ. ಒಮ್ಮೆ ವೆಂಕಣ್ಣಯ್ಯನವರ ಬಾಲ್ಯದಲ್ಲಿ ನೆರವಿತ್ತ ಅವರ ಬಂಧುಗಳೊಬ್ಬರು ಅವರ ಮನೆಗೆ ಬಂದರು. ಅವರು ವೆಂಕಣ್ಣಯ್ಯನವರನ್ನು ಕಾಮಧೇನು ಎಂದು ಕರೆದು, ಅವರ ಖರ್ಚಿನಲ್ಲಿ ಮಡದಿಯೊಡನೆ ಕಾಶೀಯಾತ್ರೆ ಮುಗಿಸಿದರು. ಆ ಮೂಕಪ್ರಾಣಿಯ ಕೆಚ್ಚಲಿನಲ್ಲಿ ಇನ್ನೂ ಹಾಲಿದೆ ಎಂದು ಭ್ರಮಿಸಿ ಆ ಯಾತ್ರೆಯ ಸಮಾರಾಧನೆಯನ್ನು ವೆಂಕಣ್ಣಯ್ಯನವರ ನೆರವಿನೊಂದಿಗೆ ಮಡಬೇಕೆಂದು ಮೈಸೂರಿಗೆ ಬಂದಿಳಿದರು. ಅವರು ಬಂದುದು ತಿಂಗಳ ಮಧ್ಯಭಾಗದಲ್ಲಿ. ಅವರ ಕಾಮಧೇನುವಿನ ಕೆಚ್ಚಲು ತುಂಬಿಕೊಳ್ಳಲು ಇನ್ನೂ 15 ದಿವಸ ಬೇಕಾಗಿತ್ತು. ಆದ್ದರಿಂದ ಅವರು ತಮ್ಮ ಮಡದಿಯೊಡನೆ ಕಾಮಧೇನುವಿನ ಕೊಟ್ಟಿಗೆಯಲ್ಲಿಯೇ ಠಿಕಾಣಿ ಹಾಕಿದರು. ವೆಂಕಣ್ಣಯ್ಯನವರನ್ನು ಅನುಸರಿಸಿ, ಅನುಕರಿಸಿ ಮನೆಯಲ್ಲಿದ್ದವರೆಲ್ಲರೂ ಅವರನ್ನು ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆಯುತ್ತಿದ್ದರು. ದೊಡ್ಡಪ್ಪನವರು ಮನೆಗೆ ಬಂದಿಳಿದ ಒಂದು ಗಂಟೆಯೊಳಗಾಗಿ ಮನೆಯ ಸರ್ವಾಧಿಕಾರಿಯಾದರು. ನಾಲ್ಕು ದಿನ ಉರುಳುವಷ್ಟರಲ್ಲಿ ಅವರೊಬ್ಬ ಹಿಟ್ಲರ್ ಆದರು. ‘ಅವನು ಸ್ನಾನ ಮಾಡದೆಯೇ ಕಾಫಿ ಕುಡಿದ, ಇವನು ಸಂಧ್ಯಾವಂದನೆ ಮಾಡಲಿಲ್ಲ, ಊಟಕ್ಕೆ ಮುಂಚೆ ಹಣೆಗೆ ಗಂಧಾಕ್ಷತೆ ಹಚ್ಚಿಕೊಳ್ಳಲಿಲ್ಲ. ಅವಳು ಸೊಟ್ಟ ಬೈತಲೆ ತೆಗೆದುಕೊಂಡಿದ್ದಾಳೆ, ಕುಂಕುಮ ಕಾಣಿಸುತ್ತಲೇ ಇಲ್ಲ, ಬಟ್ಟಲನ್ನು ಕಚ್ಚಿಕೊಂಡು ನೀರು ಕುಡೀತಾ ಇದಾರಲ್ಲ, ಅಯ್ಯೊ ಅಯ್ಯೊ ಕೊಂಗರ ಹಾಗೆ ಮುಂಜುಟ್ಟು ಬಿಟ್ಟಿದ್ದಾನೆ’ ಇತ್ಯಾದಿ ಇತ್ಯಾದಿ ಅಕ್ಷೇಪಣೆ ಮಾಡುತ್ತಿದ್ದರು. ಒಂದು ದಿನ ವೆಂಕಣ್ಣಯ್ಯನವರ ತಮ್ಮ ಮುಖಕ್ಷೌರ ಮಾಡಿಕೊಂಡಿದ್ದನ್ನು ಕಂಡಾಗಲಂತೂ ವೆಂಕಣ್ಣಯ್ಯನವರ ವ್ಯಕ್ತಿತ್ವ 319 ಅವರ ಕೋಪ ದಳ್ಳುರಿಯಾಯಿತು. ‘ವ್ರಾತ್ಯ’ ಎಂದು ಅವನನ್ನು ಬೈದು ‘ನೀನು ಸಹಪಂಕ್ತಿಗೆ ಅಯೋಗ್ಯ’ ಎಂದು ಬಿಟ್ಟರು. ಇವೆಲ್ಲವೂ ವೆಂಕಣ್ಣಯ್ಯನವರ ಗಮನಕ್ಕೆ ಬರುತ್ತಿದ್ದವಾದರೂ, ಅವರು ‘ಪಾಪ, ಅವರು ಸಂಪ್ರದಾಯಶೀಲರು. ಮಡಿವಂತಿಕೆ ಹೆಚ್ಚು, ಈ ವಯಸ್ಸಿನಲ್ಲಿ ಅವರನ್ನು ಬದಲಾಯಿಸಲು ಸಾಧ್ಯವೆ?’ ಎಂದು ದೊಡ್ಡಪ್ಪನವರಲ್ಲಿ ಅನುಕಂಪ ತೋರಿಸುತ್ತಿದ್ದರು. ಇದರಿಂದ ಕೋಪ-ರೋಷಗಳು ಹೆಡೆ ಮುಚ್ಚಿಕೊಳ್ಳಬೇಕಾಗಿತ್ತು. ಒಂದು ದಿನ ಬೆಳಗ್ಗೆ ದೊಡ್ಡಪ್ಪ ಸ್ನಾನ, ಸಂಧ್ಯಾದಿಗಳು ಮುಗಿದ ಮೇಲೆ ವೆಂಕಣ್ಣಯ್ಯನವರ ಮೇಜಿನ ಮೇಲಿದ್ದ ಪುಸ್ತಕವೊಂದರಲ್ಲಿ ತೆಗೆದುಕೊಂಡು ಓದುತ್ತಿದ್ದರು. ಉಪನಿಷತ್ತುಗಳನ್ನು ಕುರಿತು ಬರೆದಿದ್ದ ಆ ಪುಸ್ತಕವನ್ನು ಓದುತ್ತ ಅವರು ಇದಕ್ಕಿದ್ದಂತೆ ‘ಇವನು ಯಾರೋ ಈ ಪುಟ್ಟಪ್ಪ ಎನ್ನುವವನು?’ ಎಂದರು. ಅಲ್ಲಿಯೇ ಇದ್ದ ನಾನು ‘ಅವರು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು, ಬಹು ದೊಡ್ಡ ಕವಿ, ನಮ್ಮ ಮೇಷ್ಟ್ರು’ ಎಂದೆ, ‘ಅವರೇನು ಸ್ಮಾರ್ತರೋ ವೈಷ್ಣವರೋ?’ ಎಂಬ ಅವರ ಪ್ರಶ್ನೆಗೆ ‘ಎರಡೂ ಅಲ್ಲ, ಅವರು ಒಕ್ಕಲಿಗರು’ ಎಂದೆ. ದೊಡ್ಡಪ್ಪನವರಿಗೆ ರೇಗಿ ಹೋಯಿತು. ‘ನಿನ್ನ ತಲೆ, ನಿನಗೇನು ಗೊತ್ತು? ಶಂಕರಾಚಾರ್ಯ, ಅದ್ವೈತವೇದಮತವನ್ನೆಲ್ಲ ಓದಿರಬೇಕು. ಹೀಗೆ ಬರೆಯಬೇಕಾದರೆ, ಆತ ಸ್ಮಾರ್ತ ಬ್ರಾಹ್ಮಣನೇ ಸರಿ’ ಎಂದರು. ‘ಆತ ಪ್ರಾಚ್ಯ, ಪ್ರಾಶ್ಚಾತ್ಯ ವೇದಾಂತವನ್ನೆಲ್ಲ ಓದಿದ್ದಾರೆ. ಶ್ರೀರಾಮಕೃಷ್ಣಾಶ್ರಮದಲ್ಲಿ ವಾಸ. ಅವರ ವಿಚಾರವೆಲ್ಲ ನನಗೆ ಗೊತ್ತು. ಅವರು ಬ್ರಾಹ್ಮಣರಲ್ಲ, ಒಕ್ಕಲಿಗರು’ ಎಂದು ನಾನು ಪ್ರತಿವಾದ ಹೂಡಿದೆ. ಇದರಿಂದ ಅವರ ತಾಳ್ಮೆ ತಪ್ಪಿತು. ‘ಏತಿ ಎಂದರೆ ಪ್ರೇತಿ ಎಂಬುದು ಈ ಕಾಲದ ಹುಡುಗರ ಲಕ್ಷಣ. ನಿನ್ನ ಮುಖಕ್ಷೌರವೇ ಹೇಳುತ್ತದೆ ನಿನ್ನ ಸ್ವಭಾವವನ್ನು, ನಿಮ್ಮ ಕಾಲದಲ್ಲಿ ಧರ್ಮ ನಾಶವಾಗುತ್ತದೆ’ ಇತ್ಯಾದಿಯಾಗಿ ಕಿರಿಚಿದರು. ಅವರ ಬಾಯಿಗೆ ಹೆದರಿ ನಾನು ನನ್ನ ಕೊಠಡಿಯನ್ನು ಹೊಕ್ಕೆ. ಆ ದಿನ ಮಧ್ಯಾಹ್ನ ಊಟಕ್ಕೆ ಕುಳಿತಾಗ ನಾನು ವೆಂಕಣ್ಣಯ್ಯನವರ ಮುಂದೆ ಈ ಸುದ್ದಿ ಎತ್ತಿದೆ, ನನಗೂ ದೊಡ್ಡಪ್ಪನರಿಗೂ ನಡೆದ ವಾಗ್ವಾದವನ್ನು ಸೂಕ್ಷ್ಮವಾಗಿ ತಿಳಿಸಿ, ‘ಪುಟ್ಟಪ್ಪ ಒಕ್ಕಲಿಗರಲ್ಲವಂತೆ! ದೊಡ್ಡಪ್ಪ ಅವರನ್ನು ಬ್ರಾಹ್ಮಣರೆನ್ನುತ್ತಾರೆ’ ಎಂದೆ. ಯಾವಾಗಲೂ ದೊಡ್ಡಪ್ಪನ ಪರ ವಹಿಸುತ್ತಿದ್ದ ವೆಂಕಣ್ಣಯ್ಯನವರು ಅವರ ವಾದವನ್ನು ತಿರಸ್ಕರಿಸುತ್ತಾರೆ. ಅವರ ತೇಜೋವಧೆಯಾಗುತ್ತದೆ’- ಎಂದು ನಾನೆಣಿಸಿದ್ದೆ. ಆದರೆ ವೆಂಕಣ್ಣಯ್ಯನವರು ನಸುನಗುತ್ತ ‘ದೊಡ್ಡಪ್ಪನ ಮಾತು ನಿಜ. ಪುಟ್ಟಪ್ಪ ಬ್ರಾಹ್ಮಣ, ಹದಿನಾರಾಣೆ ಬ್ರಾಹ್ಮಣ. 320 ಮೂರು ತಲೆಮಾರು ಬ್ರಾಹ್ಮಣರಲ್ಲಿ ಬ್ರಾಹ್ಮಣ’ ಎಂದರು. ತೇಜೋವಧೆಯೇನೋ ಆಯಿತು. ಆದರೆ ಅದು ಆದದ್ದು ದೊಡ್ಡಪ್ಪನಿಗಲ್ಲ. ನನಗೆ! ದೊಡ್ಡಪ್ಪನವರು ಗೆದ್ದ ಹುಂಜದಂತೆ ತಲೆಯೆತ್ತಿಕೊಂಡು ಕೋ ಕೋ ಎಂದು ನಕ್ಕರು ! ನಾನು ಅರ್ಧಂಬರ್ಧ ಊಟ ಮಾಡಿ ಮೇಲಕ್ಕೆದ್ದೆ. ಆ ದಿನ ಸಂಜೆ ನಾನು ವೆಂಕಣ್ಣಯ್ಯನವರನ್ನು ಏಕಾಂತದಲ್ಲಿ ಸಂಧಿಸಿ ‘ಇದೇಕೆ ಸತ್ಯಕ್ಕೆ ಅಪಚಾರ ಮಾಡಿದಿರಿ?’ ಎಂದು ಧೈರ್ಯಮಾಡಿ ಕೇಳಿದೆ. ಅವರು ಮುಗುಳ್ನಗುತ್ತ “ಸತ್ಯಕ್ಕೆ ಎಲ್ಲಿ ಅಪಚಾರವಯ್ಯಾ? ಪುಟ್ಟಪ್ಪನನ್ನು ಬ್ರಾಹ್ಮಣನೆಂದು ಕರೆದರೆ ಸತ್ಯಕ್ಕೆ ಅಪಚಾರವೆ? ಬ್ರಾಹ್ಮಣನೆಂದರೆ ಏನೆಂದು ತಿಳಿದುಕೊಂಡೆ? ಗೀತೆಯಲ್ಲಿ ‘ಚಾತುರ್ವಣ್ರ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ ಎಂದು ಹೇಳಿದ್ದಾನೆ. ವರ್ಣಭೇದವಿರುವುದು ಹುಟ್ಟಿನಲ್ಲಿ ಅಲ್ಲ. ಗುಣಕರ್ಮಗಳಲ್ಲಿ. ಬ್ರಾಹ್ಮಣನ ಗುಣಕರ್ಮಗಳು ಯಾವುದೆಂದು ಹೇಳಿದೆಯೋ ಅವು ಪುಟ್ಟಪ್ಪನಲ್ಲಿವೆ. ಆದ್ದರಿಂದ ಆತ ಬ್ರಾಹ್ಮಣ. ‘ಚತುಸ್ಸಾಗರ ಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು’ ಎಂಬ ಶಾಂತಿಮಂತ್ರವನ್ನು ನೀನು ಕೇಳಿಲ್ಲವೆ? ಹುಟ್ಟಿನಿಂದ ಬ್ರಾಹ್ಮಣ್ಯವನ್ನು ನಿರ್ಧರಿಸುವಂತಿದ್ದರೆ ಆ ಮಂತ್ರದ ಗತಿಯೇನು? ಇಂಗ್ಲೆಂಡಿನಲ್ಲಿ, ಅಮೆರಿಕಾದಲ್ಲಿ ಬ್ರಾಹ್ಮಣರಿದ್ದಾರಯ್ಯಾ! ವಾಲ್ಮೀಕಿ, ವ್ಯಾಸರನ್ನು ನಾವು ಬ್ರಾಹ್ಮಣರೆಂದು ಪೂಜಿಸುತ್ತಿಲ್ಲವೆ? ಅವರು ಹುಟ್ಟಿನಿಂದ ಬ್ರಾಹ್ಮಣರೇನು? ಎಂದರು. ಆದರೆ ನಮ್ಮ ದೊಡ್ಡಪ್ಪ ಈ ಅರ್ಥದಲ್ಲಿ ಬ್ರಾಹ್ಮಣರೆಂದು ಕರೆದಿದ್ದರೆ? ನನ್ನ ಮನಸ್ಸಿನಲ್ಲಿ ಮೂಡಿದ ಸಂದೇಹ ನಿವಾರಣೆಯಾಗುವಂತೆ ತಮ್ಮ ಬಾಲ್ಯದ ಒಂದು ಸಣ್ಣ ಘಟನೆಯನ್ನು ತಿಳಿಸಿದರು. ಆಗ ಅವರು ಈ ದೊಡ್ಡಪ್ಪನವರ ಮನೆಯಲ್ಲಿಯೇ ಒಂದು ವರ್ಷ ಇರಬೇಕಾಯಿತಂತೆ, ಲೋಯರ್ ಸೆಕೆಂಡರಿ ಓದುತ್ತಾ, ಸಂಪ್ರದಾಯಜೀವಿಯಾದ ಈ ದೊಡ್ಡಪ್ಪನವರಲ್ಲಿ ಮಡಿವಂತಿಕೆ ಬಹು ಹೆಚ್ಚು. ಹುಚ್ಚೆಂದರೂ ತಪ್ಪಲ್ಲ. ಒಂದು ದಿನ ಮನೆಯಲ್ಲಿ ವೈದಿಕ ನಡೆಯುತ್ತಿದೆ. ದೊಡ್ಡಪ್ಪನವರು ಪಿಂಡಪ್ರದಾನ ಕಾರ್ಯವನ್ನು ಮಾಡುತ್ತಿದ್ದಾರೆ. ಆ ಸಮಯದಲ್ಲಿ ವೆಂಕಣ್ಣಯ್ಯನವರು ‘ಹಳ್ಳಿಯಿಂದ ಯಾರೋ ನಿಮ್ಮನ್ನು ನೋಡಲು ಬಂದಿದ್ದಾರೆ’ ಎಂದು ದೊಡ್ಡಪ್ಪನವರಿಗೆ ತಿಳಿಸಿದರು. ತಕ್ಷಣವೇ ಅವರು ಪಕ್ಕದಲ್ಲಿದ್ದ ಉದ್ಧರಣೆಯನ್ನು ರೊಯ್ಯನೆ ಅವರತ್ತ ಎಸೆದರಂತೆ! ವೈದಿಕಕ್ಕೆಂದು ಮಡಿ ಉಟ್ಟಿರುವಾಗ ಸಂಸ್ಕೃತ ಇಲ್ಲವೆ ಮಾತೃಭಾಷೆ ತೆಲುಗನ್ನು ಬಳಸಬೇಕಂತೆ! ಕನ್ನಡವನ್ನು ಕಿವಿಯಿಂದ ಕೇಳುವುದು ಮೈಲಿಗೆ. ಇಂತಹ ದೊಡ್ಡಪ್ಪನನ್ನು ಈ ಇಳಿವಯಸ್ಸಿನಲ್ಲಿ ಸರಿಮಾಡಲು ಸಾಧ್ಯವೇನಯ್ಯಾ?; ಎಂದರು ವೆಂಕಣ್ಣಯ್ಯನವರು. ನಾನು ತೆಪ್ಪಗಾದೆ. ವೆಂಕಣ್ಣಯ್ಯನವರ ವ್ಯಕ್ತಿತ್ವ 321 ವೆಂಕಣ್ಣಯ್ಯನವರ ಮನೆ ಎಂದರೆ ಅದೊಂದು ಮಾನವ ಜೀವಿಗಳ ಮ್ಯೂಸಿಯಂ ಗಿಳಿಯಂತೆ ಮಾತನಾಡುವವರಿಂದ ಹಿಡಿದು ಹಾವಿನಂತೆ ಬುಸುಗುಟ್ಟುವವರು. ಕೋತಿಯಂತೆ ಚಂಚಲ ಮನಸ್ಸುಳ್ಳವರು, ನರಿಯಂತೆ ಉಪಾಯಗಾರರು, ನಾಯಿಯಂತೆ ಸ್ವಾಮಿನಿಷ್ಠರು, ಆನೆಯಂತೆ ಗಂಭೀರವಾಗಿರುವವರು, ಹುಲಿಯಂತೆ ಆರ್ಭಟಿಸುವವರು ಅಲ್ಲಿದ್ದರು. ಇಂತಹ ಭಿನ್ನ ಸ್ವಭಾದವರು ಏಕತ್ರರಾದಾಗ ತಿಕ್ಕಾಟ, ಗೊಣಗಾಟಗಳು ಸ್ವಾಭಾವಿಕವಷ್ಟೆ! ಆದರೆ ಇವು ಯಾವುವೂ ವೆಂಕಣ್ಣಯ್ಯನವರ ಕಿವಿಯ ತನಕ ಹೋಗುತ್ತಿರಲಿಲ್ಲ. ಮನೆಯಲ್ಲಿದವರೆಲ್ಲರಿಗೂ ಅವರಲ್ಲಿ ಭಕ್ತಿ, ಏನೋ ಒಂದು ಬಗೆಯ ಭಯ ಕೂಡ. ಇದಕ್ಕೆ ಕಾರಣ ಬಹುಮಟ್ಟಿಗೆ ಅವರ ಮೌನ, ಇದೇ ಅವರ ಬ್ರಹ್ಮಾಸ್ತ್ರ. ಈ ಬ್ರಹ್ಮಾಸ್ತ್ರದ ಪ್ರಭಾವಲಯದ ಮಧ್ಯದಲ್ಲಿ ಅವರು ‘ಪದ್ಮಪತ್ರಮಿವಾಂಭಸ’ರಂತೆ ಇರುತ್ತಿದ್ದರು. ವೆಂಕಣ್ಣಯ್ಯನವರ ಮ್ಯೂಸಿಯಂನಲ್ಲಿದ್ದವರಲ್ಲಿ ವೆಂಕಣ್ಣ ತುಂಬ ಸಾಧು. ಅಗಡಿಯಿಂದ ಬಂದಿದ್ದ ಆ ಬಡಹುಡುಗ ಚಾಮರಾಜೇಂದ್ರ ಟೆಕ್ನಿಕಲ್ ಸ್ಕೂಲ್‍ನಲ್ಲಿ ಬಡಗಿ ಕೆಲಸ ಕಲಿಯುತ್ತಿದ್ದ. ಅಗಡಿಯಿಂದಲೇ ಬಂದಿದ್ದ ಮತ್ತೊಬ್ಬ ಹುಡುಗ ದೇಸಾಯಿ ಶ್ರೀಮಂತ; ಅದೇ ಟೆಕ್ನಿಕಲ್ ಕಾಲೇಜಿನಲ್ಲಿಯೇ ಚಿತ್ರಕಲೆ ವಿದ್ಯಾರ್ಥಿಯಾಗಿದ್ದ. ವೆಂಕಣ್ಣ ತುಂಬ ನಮ್ರ, ದೇಸಾಯಿ ತುಂಬ ಗಂಭೀರ. ‘ಸಾಧುವಾದ ಎತ್ತಿಗೆ ಎರಡು ಹೇರು’ ಎಂಬ ಗಾದೆಯಂತೆ ಮನೆಯಲ್ಲಿದ್ದವರೆಲ್ಲರೂ ವೆಂಕಣ್ಣನಿಗೆ ಸಣ್ಣಪುಟ್ಟ ಕೆಲಸ ಹೇಳುವರು. ಮೌನಿಯಾದ ಹುಡುಗ ಎಲ್ಲರ ಆಜೂಜುವಾರಿಯನ್ನು ಮಾಡುತ್ತಿದ್ದ. ಬೆಳಿಗ್ಗೆ ಏಳು ಘಂಟೆಗೆ, ಮನೆಯಿಂದ ಮೂರು ಮೈಲು ದೂರವಿದ್ದ ಶಾಲೆಗೆ ಹೋದವನು ಮಧ್ಯಾಹ್ನ ಹನ್ನೆರಡಕ್ಕೆ ಮನೆಗೆ ಬರುವನು. ಊಟ ಮಾಡಿಕೊಂಡು ಪುನಃ ಶಾಲೆಗೆ ಹೋಗುವನು. ಸಂಜೆ ಆರು ಘಂಟೆಗೆ ಹಿಂದಿರುಗಿ, ಕೊಟ್ಟ ತಿಂಡಿಯನ್ನು ತಿಂದು, ಹೇಳಿದ ಕೆಲಸ ಮಾಡುವನು. ಇದು ವೆಂಕಣ್ಣಯ್ಯನವರ ಗಮನಕ್ಕೆ ಬಂತು. ಅವರು ಅವನಿಗೊಂದು ಬೈಸಿಕಲ್ತೆಗೆಸಿ ಕೊಟ್ಟರು. ವೆಂಕಣ್ಣ ಬೈಸಿಕಲ್ಲಿನಲ್ಲಿ ಬಂದುದನ್ನು ಕಂಡು ಹುಲಿ ಆರ್ಭಟಿಸಿತು. ಹಾವು ಬುಸುಗುಟ್ಟಿತು. ಕೋತಿ ಕುಣಿದಾಡಿತು. ಈ ಅಶಾಂತಿ ವೆಂಕಣ್ಣಯ್ಯನವರ ಗಮನಕ್ಕೆ ಬಂತು. ಮನೆ ಎಂಬುದು ಸಂಸಾರಿಯಾದವನಿಗೆ ಬಂದು ಟ್ರೈನಿಂಗ್ ಕಾಲೇಜು. ಇಲ್ಲಿ ನೀವೆಲ್ಲರೂ ತಯಾರಿ ಆಗಬೇಕು. ಇಲ್ಲಿ ನೀವೆಲ್ಲರೂ ಸಮಾನರು. ಇವನು ಮಗ. ಇವನು ಅಳಿಯ, ಇವನು ತಮ್ಮ, ಇವನು ಹೊರಗಿನವನು- ಎಂಬ 322 ಮೂರು ತಲೆಮಾರು ಪಕ್ಷಪಾತಕ್ಕೆ ಎಡೆಯಿಲ್ಲ. ಯಾರಿಗೆ ಯಾವುದು ಅಗತ್ಯವೆಂದು ತೋರುತ್ತದೆಯೋ ಅದನ್ನು ನಾನು ಮಾಡುತ್ತೇನೆ. ಇದಕ್ಕೆ ನಾನೂ ಹೊರತಲ್ಲ. ನಾನು, ನನ್ನ ಹೆಂಡತಿ ಮಕ್ಕಳು ಮಾತ್ರವೇ ನನ್ನದೆಂದುಕೊಂಡಿದ್ದರೆ ಒಂದು ಕಾರನ್ನು ಇಟ್ಟುಕೊಂಡು ಭೋಗಪಡಬಹುದಿತ್ತು. ನನಗದು ಅಗತ್ಯವಿಲ್ಲ, ಬೇಡ. ವೆಂಕಣ್ಣ ಮೂರು ಮೈಲಿ ದೂರದ ಶಾಲೆಗೆ ನಿತ್ಯವೂ ನಡೆದುಹೋಗಬೇಕು. ಹೋಗಿ ಬರಲು ಎರಡು ಘಂಟೆ ವ್ಯರ್ಥವಾಗುತ್ತದೆ. ಮನೆಗೆ ಬಂದೊಡನೆಯೇ ತಲೆಗೊಬ್ಬರಂತೆ ಅವನಿಗೆ ಕೆಲಸ ಹೇಳುತ್ತೀರಿ. ಮೂಕ ಪ್ರಾಣಿಯಂತೆ ಅವನು ದುಡಿಯುತ್ತಾನೆ. ಅವನಿಗೆ ಬೈಸಿಕಲ್ ಕೊಡಿಸಿದರೆ ನಿಮಗೆ ಹೊಟ್ಟೆಕಿಚ್ಚೆ? ಈಗ ಹೇಳಿ. ನಿತ್ಯವೂ ಸಂಜೆ ತಪ್ಪದೆ ಮಾರ್ಕೆಟ್ಟಿಗೆ ಹೋಗಿ ತರಕಾರಿಯನ್ನು ತರಲು ಯಾರು ಸಿದ್ಧರಿದ್ದೀರಿ? ಅವರಿಗೆ ಒಂದು ಬೈಸಿಕಲ್ ಕೊಡಿಸುತ್ತೇನೆ’ ಸವಾಲಿನಂತಿದ್ದ ಈ ಮಾತನ್ನು ಕೇಳಿ ಎಲ್ಲರೂ ತೆಪ್ಪಗಾದರು. ನಾನು ಬಿ.ಎ. ಅನರ್ಸ್ ಓದುತ್ತಿದ್ದಾಗ ನಡೆದ ಒಂದು ಪುಟ್ಟ ಘಟನೆ ನನಗೀಗ ಜ್ಞಾಪಕಕ್ಕೆ ಬರುತ್ತಿದೆ. ಆ ವೇಳೆಗೆ ಶಿಕ್ಷಣ ಇಲಾಖೆಯಲ್ಲಿ ನನಗಾಗಲೇ ಹತ್ತು ವರ್ಷ ಸರ್ವಿಸಾಗಿತ್ತು. ಉಪಾಧ್ಯಾಯ ವೃತ್ತಿಯಲ್ಲಿ ನನ್ನ ವಿದ್ಯಾರ್ಥಿಗಳಾಗಿದ್ದವರು ನನ್ನ ಸಹಪಾಠಿಗಳಾಗಿದ್ದರು; ನನ್ನ ಸಹಪಾಠಿಗಳಾಗಿದ್ದವರು ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದವರು. ನನ್ನ ಖರ್ಚುವೆಚ್ಚಗಳೆಲ್ಲವನ್ನೂ ನಾನೇ ವಹಿಸಿಕೊಳ್ಳುವೆನೆಂದು ಅಸಭ್ಯತನದಿಂದ ವಾದಿಸಿ ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಾನು ವೆಂಕಣ್ಣಯ್ಯನವರಿಂದ ಅಸ್ತು ಎನಿಸಿಕೊಂಡಿದ್ದೆ. ಪರಿಸ್ಥಿತಿ ಹೀಗಿರುವಾಗ ಯಾವುದಾದರೊಂದು ಸ್ಕಾಲರ್‍ಷಿಪ್ ದೊರೆತೀತೇ ಎಂದು ಚಾತಕಪಕ್ಷಿಯಂತೆ ಬಾಯಿಬಿಟ್ಟುಕೊಂಡಿದ್ದೆ. ಬಹುಕಾಲ ವಿದ್ಯಾಭ್ಯಾಸ ನಿಲ್ಲಿಸಿದ್ದರಿಂದ ನನ್ನ ಪರೀಕ್ಷೆಯ ಶೇಕಡ 78 ಅಂಕಗಳು ನನಗೇನೂ ಪ್ರಯೋಜನಕ್ಕೆ ಬರಲಿಲ್ಲ. ನನ್ನ ಮೊದಲ ವರ್ಷದ ವಿದ್ಯಾಭ್ಯಾಸಕ್ಕಾಗಿ ನಾನು ಸಂಗ್ರಹಿಸಿಟ್ಟುಕೊಂಡಿದ್ದ ಹಣದಲ್ಲಿ ಅರ್ಧ ಕರಗಿ ಹೋಯಿತು. ಮುಂದೇನು ಗತಿ ಎಂಬ ಆತಂಕದಲ್ಲಿಯೇ ನಾನು ಎರಡನೇ ಆನರ್ಸ್ ತರಗತಿಗೆ ಕಾಲಿಟ್ಟೆ. ದೇವರ ದಯೆ! ನನಗೆ ಬಿ.ಎಂ.ಶ್ರೀಯವರ ಸ್ಕಾಲರ್‍ಷೀಪ್. ನನ್ನ ಸಂತೋಷಕ್ಕೆ ಪಾರವಿಲ್ಲ. ನನಗಿದ್ದ ಇಬ್ಬರು ಗೆಳೆಯರಿಗೆ ಕಾಫಿ, ತಿಂಡಿ ಕೊಡಿಸಿದೆ. ಮಾರ್ಕೆಟ್ಟಿಗೆ ಹೋಗಿ ಹೂವು, ಹಣ್ಣು ತಂದು ಅದನ್ನು ಮನೆಯಲ್ಲಿದ್ದವರಿಗೆಲ್ಲ ಸಂತಸದ ಸುದ್ದಿಯೊಂದಿಗೆ ಹಂಚಿದೆ. ನನ್ನ ಸಂತೋಷ ಅತ್ಯಂತ ಅಲ್ಪಾಯುವಾಗಿತ್ತು. ಮರುದಿನ ಬೆಳಿಗ್ಗೆ ಕಾಲೇಜಿಗೆ ವೆಂಕಣ್ಣಯ್ಯನವರ ವ್ಯಕ್ತಿತ್ವ 323 ಹೋದಾಗ ನನ್ನ ಹೆಸರನ್ನು ಹೊಡೆದು ಶ್ರೀಯವರ ಸ್ಕಾಲರ್‍ಷಿಪ್ ಅನ್ನು ಎಂ.ಎ. ವಿದ್ಯಾರ್ಥಿಯೊಬ್ಬನಿಗೆ ಕೊಟ್ಟಿರುವುದಾಗಿ ನೋಟೀಸ್ ಬೋರ್ಡ್ ಸೂಚಿಸಿತು! ಆನರ್ಸ್ ವಿದ್ಯಾರ್ಥಿಗೆಂದೇ ನಿಶ್ಚಿತವಾಗಿದ್ದ ಆ ಸ್ಕಾಲರ್‍ಷಿಪ್ ಎಂ.ಎ. ವಿದ್ಯಾರ್ಥಿಗೆ ಹೇಗೆ ಹೋಯಿತು? ಮನಸ್ಸಿಗೆ ತುಂಬ ಕಸಿವಿಸಿಯಾಯಿತು. ನೇರವಾಗಿ ಪ್ರಿನ್ಸಿಪಾಲ್ ರಾಲೋ ಬಳಿ ಹೋಗಿ ನನ್ನ ಹೃದಯ ವೇದನೆಯನ್ನು ತೋಡಿಕೊಂಡೆ. ನನ್ನ ಅಸಹನೆಯ ನುಡಿಗಳಿಗೆ ಅವರು ಅಷ್ಟೇ ಅಸಹನೆಯಿಂದ ಉತ್ತರಿಸಿದರು - ‘ಹೋಗಿ ಆ ಮಹರಾಯ ಕನ್ನಡ ಪ್ರೊಫೆಸರನ್ನು ಕೇಳು. ಅದಕ್ಕೆ ಆತನೇ ಜವಾಬ್ದಾರ’ ಎಂದರು. ಅವರ ಉದ್ರಿಕ್ತ ನುಡಿಗಳಿಂದ ಅಧೀರನಾದ ನಾನು ಕಾಲೇಜಿನಲ್ಲಿ ವಿಚಾರಿಸಿದೆ, ‘ಹಿಂದಿನ ದಿನದ ಮಧ್ಯಾಹ್ನವೇ ಪ್ರೊ. ವೆಂಕಣ್ಣಯ್ಯನವರು ಪ್ರಿನ್ಸಿಪಾಲರೊಡನೆ ಮಾತನಾಡಿ ಅದನ್ನು ಬದಲಾಯಿಸಿದರು. ಆ ವಿಷಯದಲ್ಲಿ ಅವರಿಬ್ಬರಿಗೂ ಬಿಸಿಬಿಸಿಯಾದ ವಾಗ್ವಾದವೇ ನಡೆಯಿತೆಂದು ತೋರುತ್ತದೆ. ಇಲ್ಲಿ ನೋಡಿ, ಸ್ಕಾಲರ್‍ಷಿಪ್‍ನ ನಿಯಮಗಳನ್ನೇ ಬದಲಾಯಿಸಿ ಈ ದಿನ ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆಯುತ್ತಿದ್ದೇವೆ. ಬಿ.ಎ. ಆನರ್ಸ್ ಎಂದಿದ್ದ ಕಡೆ ಬಿ.ಎ. ಆನರ್ಸ್ ಅಥವಾ ಎಂ.ಎ. ಎಂದು ಬದಲಾಯಿಸಿದೆ. ಇದಕ್ಕಾಗಿ ವೆಂಕಣ್ಣಯ್ಯನವರು ನಿನ್ನೆಯೇ ವೈಸ್‍ಛಾನ್ಸಲರ್ ಅವರನ್ನು ಕಂಡಿದ್ದರು’ ಎಂದು ಆಫೀಸಿನವರು ತಿಳಿಸಿದರು. ವೆಂಕಣ್ಣಯ್ಯನವರ ಚರ್ಯೆಯನ್ನು ಕಂಡು ನನಗೆ ತುಂಬ ಕೋಪ ಬಂತು. ಅಂದು ಅವರ ತರಗತಿಗೆ ಚಕ್ಕರ್ ಹೊಡೆದು ನಾನು ಮನೆಗೆ ಹೊರಟು ಹೋದೆ. ಅಂದು ಸಂಜೆ ಕಾಲೇಜಿನಿಂದ ಮನೆಗೆ ಹಿಂದಿರುಗಿದ ವೆಂಕಣ್ಣಯ್ಯನವರು ನನ್ನ ಬಳಿಗೆ ಬಂದು, ಏನೂ ಅರಿಯದವರಂತೆ ‘ಏನಯ್ಯ ವಾಕಿಂಗ್‍ಗೆ ಬರುತ್ತೀಯಾ? ಹೋಗೋಣ?’ ಎಂದರು. ನಾನು ನನ್ನ ಬೇಗೆಯನ್ನು ನುಂಗಿಕೊಂಡು ಅವರ ಹಿಂದೆ ಹೊರಟೆ. ಹತ್ತು ನಿಮಿಷಗಳವರೆಗೆ ಮೌನವಾಗಿ ದಾರಿ ನಡೆದು ಕಾಲೇಜನ್ನು ದಾಟಿದ ಮೇಲೆ ಅವರು ಮೆಲ್ಲನೆ ಕೆದರಿದರು - ‘ಏಕೆ, ಈ ದಿನ ಏನೋ ಒಂದು ತರಹ ಇದ್ದೀಯಲ್ಲ?’ ಎಂದು. ನಾನು ಸ್ವಲ್ಪ ಕಟುವಾಗಿಯೇ ನುಡಿದೆ - ‘ನಾನು ನಿಮ್ಮಿಂದ ಒಂದು ಕಾಸನ್ನೂ ಕೇಳುತ್ತಿಲ್ಲ. ನನ್ನ ಸಂಪಾದನೆಯಿಂದ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೇನೆ. ತಾನಾಗಿ ಬಂದ ನನ್ನ ಸ್ಕಾಲರ್‍ಷಿಪ್ಪನ್ನು ನೀವು ಕಿತ್ತುಹಾಕಿದ್ದೇಕೆ?’ ವೆಂಕಣ್ಣಯ್ಯನವರು ನಗುತ್ತ ‘ಇಷ್ಟೇನೆ? ಇಷ್ಟು ಸಣ್ಣ ವಿಷಯಕ್ಕಾಗಿ ಕೊರಗುತ್ತಿದ್ದೀಯಾ? ನೀನು ಬಹು ಅಲ್ಪ ಮನುಷ್ಯ’ ಎಂದರು. ನನ್ನ ಕಣ್ಣು ಹನಿಗೂಡಿತು. ಇದನ್ನು ಕಂಡರೂ 324 ಮೂರು ತಲೆಮಾರು ಕಾಣದವರಂತೆ ವೆಂಕಣ್ಣಯ್ಯನವರು ಮಾತನ್ನು ಮುಂದುವರಿಸಿ ‘ನಿನಗೆ ದೇವರು ಏನು ಕಡಿಮೆ ಮಾಡಿದ್ದಾನೆ. ಈ ಜುಜುಬಿ ಒಂದು ನೂರು ರೂಪಾಯಿಗಳಿಗಾಗಿ ನೀನೇಕೆ ಅಷ್ಟು ಬಾಯಿ ಬಿಡಬೇಕು? ನಾನು ಒಮ್ಮೆ ಮದರಾಸಿಗೆ ಹೋಗಿ ಬಂದರೆ ನನ್ನ ಟಿ.ಎ.ಬಿಲ್. ಅಷ್ಟಾಗುತ್ತದೆ. ಈಗ ತಾನೇ ಆ ಬಿಲ್ಲಿನ ಹಣ ಬಂದಿದೆ. ಅದನ್ನು ನೀನು ತೆಗೆದುಕೊ. ಪಾಪ ಆ ಬಡ ಹುಡುಗ ಹೈದರಾಬಾದಿನಿಂದ ಎಂ.ಎ. ಓದಲೆಂದು ಇಲ್ಲಿಗೆ ಬಂದಿದ್ದಾನೆ. ದೊಡ್ಡ ಸಂಸಾರವೊಂದಿಗ. ಅಲ್ಲಿನ ಸರ್ಕಾರದಿಂದ ಬರುತ್ತಿದ್ದ ಸಹಾಯಧನ ಏತಕ್ಕೂ ಸಾಲದು. ಅವನ ಖರ್ಚಿಗಾಗಿ ನಾನು ಆಗಾಗ ಅಷ್ಟು ಇಷ್ಟು ಸಹಾಯ ಮಾಡುತ್ತಿದ್ದೇನೆ. ಹೆಚ್ಚು ಕೇಳುವುದಕ್ಕೆ ಅವನಿಗೂ ಸಂಕೋಚ. ಅವನಿಗೆ ಸಹಾಯವಾಗಲೆಂದು ಬಿ.ಎಂ.ಶ್ರೀ ಸ್ಕಾಲರ್‍ಷಿಪ್ಪನ್ನು ಅವನಿಗೆ ಕೊಡಿಸಿದ್ದೇನೆ. ಅದನ್ನು ನೀನು ಸಹಿಸಲಾರೆಯಾ? ದೇವರು ನಿನಗೆ ನನ್ನಂತಹ ಅಣ್ಣನನ್ನು ಕೊಟ್ಟಿಲ್ಲವೆ?’ ಎಂದರು. ತಮ್ಮವರಿಗಾಗಿ, ಸ್ವಾರ್ಥಕ್ಕಾಗಿ ಎಂತಹ ಅನ್ಯಾಯಕ್ಕೂ ಕೈಯ್ಯಿಕ್ಕಿ ಕಾರ್ಯ ಸಾಧನೆ ಮಾಡುವ ಜನರ ಮಧ್ಯದಲ್ಲಿ ಇಂತಹ ಮಹಾನುಭಾವರುಂಟೆ? ದೇವರು ನಿಜವಾಗಿ ನನಗೆ ಎಂತಹ ಅಣ್ಣನನ್ನು ಕೊಟ್ಟಿದ್ದಾನೆ! ಈತ ನನ್ನ ಅಣ್ಣ ಎಂಬ ಹೆಮ್ಮೆ ಹೃದಯದಲ್ಲಿ ಮೂಡಿತು. ನಾನರಿಯದಂತೆಯೇ ನನ್ನ ಬಾಯಿಂದ ‘ನನ್ನದು ತಪ್ಪಾಯಿತು’ ಎಂಬ ಮಾತು ಹೊರ ಹೊರಟಿತು. ವೆಂಕಣ್ಣಯ್ಯನವರು ಯಾವುದಾದರೊಂದು ಮೀಟಿಂಗಿಗಾಗಿ ಪ್ರತಿವಾರವೂ ಬೆಂಗಳೂರಿಗೆ ಹೋಗುವ ಪದ್ಧತಿ. ಅವರ ಪ್ರಯಾಣ ಸಾಮಾನ್ಯವಾಗಿ ರಾತ್ರಿಯ ರೈಲಿನಲ್ಲಿ. ಒಂದು ಸಣ್ಣ ದಿಂಬು, ಒಂದು ಮಗ್ಗಲು ಹಾಸಿಗೆ, ಒಂದು ಶಾಲು ಇವಿಷ್ಟನ್ನು ಮಡಿಸಿಟ್ಟ ಒಂದು ಚೀಲ ಕೈಲಿ ಹಿಡಿದು ಮನೆಯಲ್ಲಿದ್ದ ಯಾರದರೊಬ್ಬರು ಅವರೊಡನೆ ರೈಲ್ವೇ ಸ್ಟೇಷನ್‍ಗೆ ನಡೆದುಕೊಂಡು ಹೋಗಿ. ರೈಲಿನಲ್ಲಿ ಕೂರಿಸಿ ಹಿಂದಿರುಗಿ ಬರಬೇಕು. ಆ ಕಾಲದಲ್ಲಿ ಕುದುರೆ ಗಾಡಿಯಲ್ಲಿ ಹೋಗಿದ್ದರೆ ಆರಾಣೆ ಖರ್ಚಾಗುತ್ತಿತ್ತು. ಅದನ್ನು ಅವರು ಖರ್ಚು ಮಾಡುತ್ತಿರಲಿಲ್ಲ. ಅವರ ಆರೋಗ್ಯ ಅಷ್ಟು ಸಮರ್ಪಕವಾಗಿರಲಿಲ್ಲವಾದ್ದರಿಂದ ಅವರ ಈ ಚರ್ಯೆ ನನಗೆ ಹಿಡಿಸುತ್ತಿರಲಿಲ್ಲ. ಒಮ್ಮೆ ನನ್ನ ಅಸಹನೆಯನ್ನು ಅವರ ಮುಂದೆ ಮಗುಂ ಆಗಿ ತಿಳಿಸಿದೆ. ಅವರು ನಗುತ್ತ ‘ಅಯ್ಯಾ, ಆರಾಣೆ ಖರ್ಚು ಮಾಡದಷ್ಟು ಬಡತನವೇನೂ ನನಗಿಲ್ಲ. ಆದರೆ ಆ ಖರ್ಚು ಏಕೆ ಬೇಕು? After supper walk a mile - ರಾತ್ರಿ ಊಟವಾದ ಮೇಲೆ ಸ್ವಲ್ಪ ದೂರ ನಡೆದುಕೊಂಡು ವೆಂಕಣ್ಣಯ್ಯನವರ ವ್ಯಕ್ತಿತ್ವ 325 ಹೋದರೆ ಆರೋಗ್ಯಕರ, ಬೆಳಿಗ್ಗೆ ಐದು ಘಂಟೆಗೆ ಬೆಂಗಳೂರು ಸೇರುತ್ತೇನೆ. ಕೈಚೀಲದೊಡನೆ ನಡೆದುಕೊಂಡು ಹೋದರೆ Morning walk ಆಯಿತು. ಕಾಫಿಯ ಹೊತ್ತಿಗೆ ಗೆಳೆಯನ ಮನೆ ಸೇರುತ್ತೇನೆ. ಎರಡೂ ಕಡೆಯೂ ವಾಹನಕ್ಕಾಗಿ ಖರ್ಚು ಮಾಡುವ ಹಣವನ್ನು ಕೊಟ್ಟರೆ ಒಂದು ಬಡ ಕುಟುಂಬಕ್ಕೆ ಒಂದು ದಿನದ ಊಟವಾಗುತ್ತದೆ’ ಎಂದರು. ಕ್ಷಣಕಾಲದ ಮೇಲೆ ಕೈಲಿದ್ದ ನಶ್ಯದ ಚಿಟಿಕೆಯತ್ತ ದೃಷ್ಟಿ ಹಾಯಿಸಿ ‘ನೋಡಯ್ಯ, ಇದೊಂದು ದುಶ್ಚಟ; ದೇವರಿಗಿಲ್ಲ, ಧರ್ಮಕ್ಕಿಲ್ಲ. ‘ಕಾಸು ಹಾಳು ತಲೆ ಬೋಳು’ ಎಂಬಂತೆ ನಿತ್ಯವೂ ಹಾಳಾಗುತ್ತಿರುವ ಈ ಮೂರು ಕಾಸನ್ನು ಒಬ್ಬ ದಾಸಯ್ಯನಿಗೆ ಕೊಟ್ಟಿದ್ದರೆ!” ಎಂದರು. ವೆಂಕಣ್ಣಯ್ಯನವರು ಈ ಮಾತು ಆಡುತ್ತಿರುವಷ್ಟರಲ್ಲಿ ಅಂದಿನ ಟಪಾಲು ಬಂದು ಒಳಗೆ ಬಿದ್ದಿತು. ಅವರು ಕಾಗದಗಳನ್ನು ಒಂದೊಂದಾಗಿ ಓದುತ್ತ ಒಂದು ಲಕೋಟೆಯನ್ನು ಒಡೆದರು. ಅದೊಂದು ಸುದೀರ್ಘವಾದ ಪತ್ರ. ಅದನ್ನು ಓದುತ್ತ ಹೋದಂತೆ ಅವರ ಮುಖದಲ್ಲಿ ವಿವಿಧ ಭಾವಗಳು ಮೂಡಿದುವು. ಓದಿ ಮುಗಿಸಿದ ಮೇಲೆ ನಿಟ್ಟುಸಿರೊಂದನ್ನು ಬಿಟ್ಟು ಕ್ಷಣಕಾಲ ಅಂತರ್ಮುಖಿಗಳಾದರು. ಆಮೇಲೆ ‘ಶಾಮಣ್ಣ, ಆ ಬೀರುವಿನಲ್ಲಿ ಎಷ್ಟು ಹಣ ಇದೆ ನೋಡು’ ಎಂದರು. ನಾನು ನೋಡಿ ‘ನೂರೈವತ್ತು’ ಎಂದೆ. ‘ಅದು ಸಾಲದು, ಸೊಸೈಟಿಗೆ ಹೋಗಿ ಇನ್ನೊಂದು ನೂರು ರೂ.ಗಳನ್ನು ತೆಗೆದುಕೊಂಡು ಬಾ’ ಎಂದರು. ಸೊಸೈಟಿಯ ಪಾಸ್ ಬುಕ್ ತೆಗೆದು ನೋಡಿದರೆ ಅದರಲ್ಲಿ 40 ರೂಪಾಯಿ ಮಾತ್ರವಿತ್ತು. ಇದನ್ನು ತಿಳಿದ ವೆಂಕಣ್ಣಯ್ಯನವರು ‘ಚಿಂತೆಯಿಲ್ಲ. ನಾನು ಆ ಸೊಸೈಟಿಯ ಡೈರೆಕ್ಟರ್. ನನಗೆ ಒಂದು ನೂರನ್ನು ಓವರ್ ಡ್ರಾ ಮಾಡುವ ಸೌಲಭ್ಯ ಇದೆ’ ಎಂದು ಹೇಳಿ ಚೆಕ್ಕನ್ನು ಬರೆದುಕೊಟ್ಟು ಕಳುಹಿಸಿದರು. ಸೊಸೈಟಿಯಿಂದ ಹಣ ತೆಗೆದುಕೊಂಡು ಬಂದ ಮೇಲೆ ಅವರು ಓದುತ್ತಿದ್ದ ಕಾಗದದ ಮೇಲೆ ಲಕೋಟೆಯ ವಿಳಾಸ ಬರೆದು ಕೊಟ್ಟು, ತಗ್ಗಿಸಿದ ಧ್ವನಿಯಲ್ಲಿ “ಈ ವಿಳಾಸಕ್ಕೆ 250 ರೂಪಾಯಿಗಳನ್ನು ಮನಿಯಾರ್ಡರ್ ಮಾಡಿ ಬಾ; ಪಾಪ poor fellow, ಲಾ ಕಾಲೇಜಿನ ಫೀಸ್ ಕಟ್ಟಿಲ್ಲ, ಪರೀಕ್ಷೆಗೆ ಕಟ್ಟಲು ಹಣವಿಲ್ಲ. ವರ್ಷವೆಲ್ಲ ಓದಿದ್ದು ವ್ಯರ್ಥವಾಗುತ್ತದೆ” ಎಂದರು. ನಾನು ಮೂಕನಂತೆ ಅವರ ಅಪ್ಪಣೆಯನ್ನು ಪಾಲಿಸ ಹೊರಡಲು, ಹೊರಬಾಗಿಲಿನಲ್ಲಿದ್ದ ನನ್ನನ್ನು ಹಿಂದಕ್ಕೆ ಕರೆದು ‘ಮನಿಯಾರ್ಡರ್ ರಶೀತಿಯನ್ನೂ, ವಿಳಾಸವಿರುವ ಕವರನ್ನೂ ಹಾದಿಯಲ್ಲಿ ಹರಿದು ಹಾಕಿ ಬಾ’ ಎಂದು ಹೇಳಿ, ಅದಕ್ಕೆಲ್ಲ ಕಾರಣವಾಗಿದ್ದ ಪತ್ರವನ್ನು ಪರಪರನೆ ಹರಿದು ವೇಸ್ಟ್ ಪೇಪರ್ ಬ್ಯಾಸ್ಕೆಟ್‍ಗೆ ತುಂಬಿದರು. 326 ಮೂರು ತಲೆಮಾರು ‘ನಶ್ಯಕ್ಕಾಗಿ ನಿತ್ಯವೂ ಮೂರು ಕಾಸು ಹಾಳಾಗುವುದೆಂದು ಹಳಹಳಿಸಿ ಭಾಷಣ ಮಾಡಿದವರು ಈ ಮಹಾನುಭಾವರೇನು?’ ಎಂದು ನನ್ನ ಚೇತನ ವಿಸ್ಮಯಗೊಂಡಿತು. ವೆಂಕಣ್ಣಯ್ಯನವರು ದಿವಂಗತರಾಗುವುದಕ್ಕೆ ಸುಮಾರು ಆರು ತಿಂಗಳ ಮುನ್ನ ಒಂದು ರಾತ್ರಿ ಅವರ ಮನೆಯಲ್ಲಿ ಕಳ್ಳತನವಾಯಿತು. ಬೆಳಿಗ್ಗೆ ಎದ್ದು ನೋಡಿಕೊಂಡಾಗ ಮನೆಯಲ್ಲಿದ್ದುದೆಲ್ಲ ಸೂರೆಯಾಗಿ ಹೋಗಿತ್ತು. ಮನೆಯಲ್ಲಿದ್ದವರ ಮೈ ಮೇಲಿನ ಬಟ್ಟೆಗಳನ್ನು ಬಿಟ್ಟರೆ ಮತ್ತಾವ ವಸ್ತುವೂ ಉಳಿದಿಲ್ಲ. ಆಗ ಇನ್ನೂ ಮಲಗಿದ್ದ ವೆಂಕಣ್ಣಯ್ಯನವರನ್ನು ಎಬ್ಬಿಸಿ ಈ ವಿಚಾರವನ್ನು ತಿಳಿಸಿದುದಾಯಿತು. ಅದನ್ನು ಕೇಳಿ ಅವರ ಬಾಯಿಂದ ಬಂದ ಮೊದಲ ಮಾತೆಂದರೆ “ಅಯ್ಯೋ ಪಾಪ! ಇದು ದೊಡ್ಡ ಪ್ರೊಫೆಸರರ ಬಂಗಲೆ ಎಂದು ಕಳ್ಳತನಕ್ಕಾಗಿ ಬಂದಿದ್ದಾರೆ! ಅವರಿಗೆ ಇಲ್ಲಿ ಏನು ಸಿಕ್ಕೀತು? ಪೆಟ್ಟಿಗೆಗಳನ್ನು ತೆರೆದು, ಹಣಕಾಸು, ಒಡವೆ ವಸ್ತುಗಳಿಲ್ಲದಿರುವುದನ್ನು ಕಂಡು ‘ಇವನೆಂಥ ದರಿದ್ರ ಪ್ರೊಫೆಸರು! ಇವನಿಗಿಂತ ನಾವೇ ವಾಸಿ’ ಎಂದುಕೊಂಡರೇನೊ? ಇದ್ದಬದ್ದಹಳೆ ಬಟ್ಟೆಗಳನ್ನೆಲ್ಲ ಹೊತ್ತುಕೊಂಡು ಹೋಗಿದ್ದಾರೆ” ಹೀಗೆ ಹೇಳಿ ಗಟ್ಟಿಯಾಗಿ ನಕ್ಕರು. ಹೋದ ವಸ್ತುಗಳಲ್ಲಿ ಅವರು ಊಟ ಮಾಡುತ್ತಿದ್ದ ಬೆಳ್ಳಿ ತಟ್ಟೆಯೂ ಒಂದು. ಅದನ್ನು ಕೇಳಿ ಅವರು ನಗುತ್ತ ‘ಊಟಕ್ಕೆ ಬೆಳ್ಳಿಯ ತಟ್ಟೆ ಬೇಡವೆಂದೆ. ಎಲ್ಲರಂತೆ ನಾನು ಆಲ್ಯೂಮಿನಿಯಂ ತಟ್ಟೆ ಹಾಕಿಕೊಳ್ಳುತ್ತೇನೆ ಎಂದೆ. ನೀವು ಅವಕಾಶ ಕೊಡಲಿಲ್ಲ. ಈಗ ನನ್ನ ಆದರ್ಶ ನೆರವೇರಿದಂತಾಯ್ತು. ಅದಕ್ಕಾಗಿ ಕಳ್ಳರಿಗೆ Thanks! ಎಂದರು. ದೇವರ ಮಂಟಪದಲ್ಲಿದ್ದ ಬೆಳ್ಳಿಯ ವಿಗ್ರಹಗಳೆಲ್ಲ ಕಳುವಾಗಿದ್ದವು. ಅವರು ಅದನ್ನು ಕೇಳಿ ನಗುತ್ತ ‘ದೇವರು ಬೆಳ್ಳಿ ಬಂಗಾರಗಳಲ್ಲಿ ಕಾಣಿಸಿಕೊಂಡರೆ ಅವನ ಗತಿ ಇಷ್ಟೇ ಸರಿ’ ಎಂದರು. ಆಳುತ್ತಿದ್ದ ತಾಯಿಯನ್ನೂ, ಹೆಂಡತಿಯನ್ನೂ ಸಮಾಧಾನ ಮಾಡಿ ಎಲ್ಲರೂ ಈಗಿಂದೀಗಲೆ ಸೊಸೈಟಿಗೆ ಹೊರಡಿ. ಯಾರು ಯಾರಿಗೆ ಯಾವ ಯಾವ ಬಟ್ಟೆ ಇಷ್ಟವೋ ಅದನ್ನು ಕೊಂಡುಕೊಳ್ಳಿ. ಇಷ್ಟೊಂದು ಸಣ್ಣ ವಿಚಾರಕ್ಕೆ ಇಷ್ಟು ಸಂಕಟಪಡಬೇಕೆ?’ ಎಂದರು. ಅಂದು ವೆಂಕಣ್ಣಯ್ಯನವರ ಕಡೇ ಮಗನ ಹುಟ್ಟು ಹಬ್ಬ ಆಚರಿಸಬೇಕೆಂದು ಹಿಂದೆಯೇ ನಿಶ್ಚಯಿಸಲಾಗಿತ್ತು. ಇಂದು ಅದು ಬೇಡವೆಂದು ಹೆಂಡತಿ ಕಣ್ಣೀರು ಮಿಡಿಯುತ್ತ ತಿಳಿಸಿದರು. ಆದರೆ ವೆಂಕಣ್ಣಯ್ಯನವರು ಇಷ್ಟು ಸಣ್ಣ ವಿಚಾರಕ್ಕೆ ಹಬ್ಬವನ್ನೇಕೆ ನಿಲ್ಲಿಸಬೇಕು’ ಎಂದು ಅವರನ್ನು ಸಮಾಧಾನಪಡಿಸಿ, ಹೋಳಿಗೆ - ಪಾಯಸದ ಅಡುಗೆಯನ್ನು ಮಾಡಿಸಿದರು. ಎಲ್ಲರೂ ಹೊಸ ವಸ್ತ್ರವನ್ನು ಧರಿಸಿ, ಸಿಹಿ ಉಂಡು ಸಂತೋಷದಿಂದ ವೆಂಕಣ್ಣಯ್ಯನವರ ವ್ಯಕ್ತಿತ್ವ 327 ನಲಿಯುವಂತೆ ಮಾಡಿದರು. ಅಯ್ಯೋ ಪಾಪ, ವೆಂಕಣ್ಣಯ್ಯನವರ ಮನೆಯಲ್ಲಿ ಕಳ್ಳತನವಾಯಿತಂತೆ’ ಎಂದುಕೊಂಡು ತಮ್ಮ ಸಂತಾಪವನ್ನು ಸೂಚಿಸಲೆಂದು ಬಂದ ಗೆಳೆಯರೆಲ್ಲರೂ ಆ ಮನೆಯ ಸಂಭ್ರಮವನ್ನು ಕಂಡು ಪೆಚ್ಚಾದರು. ಅವರಲ್ಲಿ ಕೆಲವರು ಅಲ್ಲಿಯೇ ರಸಕವಳವನ್ನು ಹೊಡೆದರು. ‘ವೆಂಕಣ್ಣಯ್ಯನವರ ಮನೆಯ ಕಳ್ಳತನ’ ಎಂಬುದು ಜನರ ಬಾಯಲ್ಲಿ ಒಂದು ಗಾದೆಯ ಮಾತಾಗಿ ಹೋಗಿತ್ತು. ಒಮ್ಮೆ ಆಳುವ ಮಹಾಸ್ವಾಮಿಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ವೆಂಕಣ್ಣಯ್ಯನವರನ್ನು ಅರಮನೆಗೆ ಕರೆಸಿಕೊಂಡರು. ಅವರು ಅಲ್ಲಿಂದ ಹಿಂದಿರುಗಿದಾಗ ಅವರೇಕೆ ಕರೆಸಿಕೊಂಡರೆಂದು ಮನೆಯವರಿಗೆಲ್ಲ ತುಂಬ ಕುತೂಹಲ. ಅದಕ್ಕೆ ಕಾರಣ ಕೇಳಿದಾಗ ವೆಂಕಣ್ಣಯ್ಯನವರು ‘ಮುಂದೆ ಮಹಾರಾಜರಾಗಲಿರುವ ಶ್ರೀಜಯಚಾಮರಾಜ ಒಡೆಯರ್ ಅವರಿಗೆ ಕನ್ನಡ ಪಾಠವನ್ನು ಹೇಳಿಕೊಡಲೆಂದು ನನಗೆ ಆಹ್ವಾನ ಬಂದಿತ್ತು. ನಾನು ಅತ್ಯಂತ ನಮ್ರತೆಯಿಂದ ನನ್ನ ಅಶಕ್ತತೆಯನ್ನು ಅವರಿಗೆ ತಿಳಿಸಿ, ಸಮರ್ಥರಾದ ಉಪಾಧ್ಯಾಯರೊಬ್ಬರನ್ನು ನನಗೆ ಬದಲಾಗಿ ಕಳುಹಿಸುವೆನೆಂದು ಹೇಳಿ ಬಂದೆ’ ಎಂದರು. ‘ತಿಂಗಳಿಗೆ ಎಷ್ಟು ಕೊಡುತ್ತಾರೊ?’ ‘ತಿಂಗಳಿಗೆ ಇನ್ನೂರ ಐವತ್ತು ರೂಪಾಯಿ. ಹೋಗಿ ಬರಲು ಕಾರಿನ ಅನುಕೂಲ. ಆದರೂ ನನಗೆ ಸಾಧ್ಯವಿಲ್ಲವೆಂದೆ’ ಎಂದರು. ಮುಂದೆ ಮಹಾರಾಜರಾಗತಕ್ಕವರಿಗೆ ಪಾಠ ಹೇಳುವುದೆಂದರೆ ಅದೇನು ಸಾಮಾನ್ಯ ಅದೃಷ್ಟವೆ? ಮತ್ತೊಬ್ಬರಾಗಿದ್ದರೆ ‘ನಾನು ಧನ್ಯನಾದೆ’ ಎಂದು ಕೊಳ್ಳುತ್ತಿದ್ದರು ಆದರೆ ವೆಂಕಣ್ಣಯ್ಯನವರ ದೃಷ್ಟಿಯಲ್ಲಿ ಅದು ಅಂತಹ ಅದೃಷ್ಟವೇನಲ್ಲ. ಮನೆಯ ಜನ ಕೆದರಿ ಕೇಳಿದಾಗ ಅವರು ಹೀಗೆ ಉತ್ತರ ಕೊಟ್ಟರು: ‘ರಾಜಕುಮಾರನಿಗೆ ಪಾಠ ಹೇಳುವುದು ಇತರರಿಗೆ ಹೇಳಿದಂತಲ್ಲ. ಪಾಠ ಹೇಳಿದ ಮೇಲೆ ‘ಅರ್ಥವಾಯಿತೆ?’ ಎನ್ನುವುದಕ್ಕೆ ಬದಲಾಗಿ ‘ಬುದ್ಧಿಯವರ ಚಿತ್ತಕ್ಕೆ ವೇದ್ಯವಾಯಿತೆ?’ ಎಂದು ನಮ್ರವಾಗಿ ವಿಧೇಯತೆಯಿಂದ ಕೇಳಬೇಕು. ಹೇಳಿದುದನ್ನು ಚಿತ್ತಗೊಟ್ಟು ಕೇಳದಿದ್ದರೆ ಆಕ್ಷೇಪಿಸುವಂತಿಲ್ಲ. ಹೇಳಿದುದನ್ನೇ ಮತ್ತೆ ಹೇಳಿದರೆ ಪುನರಾವೃತ್ತಿ ಎಂಬ ಆಕ್ಷೇಪಣೆ ಬರಬಹುದು. ಮೈಯೆಲ್ಲ ಕಣ್ಣಾಗಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನನ್ನ ಸ್ವಭಾವಕ್ಕೆ ಇದು ಹೊರತು. ಇದರ ಮೇಲೆ ಅರಮನೆಯಿಂದಾಗಲಿ, ಸರ್ಕಾರದಿಂದಾಗಲಿ ಯಾವ ಫಲಾಪೇಕ್ಷೆಯೂ ನನಗಿಲ್ಲ. ದೇವರು, ಬಂದುದರಲ್ಲಿ ಹೆಚ್ಚು ಹಣದ ಅಗತ್ಯವಿರುವ, ಸಾಕಷ್ಟು ಬುದ್ಧಿವಂತರಾಗಿರುವ ಶ್ರೀಕಂಠಯ್ಯನವರಿಗೆ ಈ ಕಾರ್ಯವನ್ನು 328 ಮೂರು ತಲೆಮಾರು ಒಪ್ಪಿಸಿದ್ದೇನೆ’ ಎಂದು ಹೇಳಿದರು. ವೆಂಕಣ್ಣಯ್ಯನವರಲ್ಲಿ ನಿರ್ಲಿಪ್ತತೆ, ಅಷ್ಟೇ ಅಲ್ಲ, ಅತ್ಮಗೌರವವೂ ಅಪಾರವಾಗಿತ್ತು.’ ನಂದಗೋಕುಲದಂತಿದ್ದ ದೊಡ್ಡ ಸುಬ್ಬಣ್ಣನವರ ಮನೆಯಲ್ಲಿ ಮಕ್ಕಳು ಯಾರಾದರೂ ತುಂಬ ಹಟ ಮಾಡಿದಾಗ ಸಾಧು ಮನುಷ್ಯರಾದ ಸುಬ್ಬಣ್ಣನವರು ‘ಆಗಲಿ ತಡಿ, ಪುಟ್ಟ ಬರಲಿ, ಅವನಿಗೆ ಹೇಳಿ ಮಾಡಿಸ್ತೀನಿ’ ಎಂದು ಹೆದರಿಸುವರು. ಆ ಗರುಡ ಮಂತ್ರವನ್ನು ಕೇಳುತ್ತಲೇ ಮಕ್ಕಳ ಹಟದ ಹೆಡೆ ಮುಚ್ಚಿಕೊಳ್ಳುತ್ತಿತ್ತು. ಆ ಗೋಕುಲದ ಯಾವ ಭಾಗದಲ್ಲಿಯಾದರೂ ದಂಗೆಯೇಳುವ ಸೂಚನೆ ಕೇಳಿಬಂದರೆ ‘ಏನದು?’ ಎಂಬ ವೆಂಕಣ್ಣಯ್ಯನವರ ಹರಕಂಠ ಗರ್ಜನೆಯಿಂದ ಅದು ಹಾಗೆಯೇ ಅಡಗಿಹೋಗುತ್ತಿತ್ತು. ಅವರು ಮನೆಯಲ್ಲಿ ಇರುವಷ್ಟು ಕಾಲವೂ ಶಾಂತಿ ನೆಲೆಸಿರುತ್ತಿತ್ತು. ಮಕ್ಕಳೆಲ್ಲ ಬೆಳೆದು ದೊಡ್ಡವರಾಗಿ ಉದ್ಯೋಗಕ್ಕೆ ಸೇರಿ ಸಂಸಾರವೊಂದಿಗರಾದ ಮೇಲೂ ‘ಪುಟ್ಟನ ಭಯ’ ಹಾಗೆಯೇ ಹೆಪ್ಪು ಕಟ್ಟಿ ಕುಳಿತಿರುತ್ತಿತ್ತು. ಆದರೆ ನನಗೆ ಜ್ಞಾಪಕವಿರುವಂತೆ ಆ ಪುಟ್ಟ ಯಾರನ್ನಾದರೂ ರೇಗಿ ಬೈದುದನ್ನಾಗಲಿ, ಹೊಡೆದುದನ್ನಾಗಲಿ ನಾನು ಕಂಡಿಲ್ಲ. ವೆಂಕಣ್ಣಯ್ಯನವರು ಗತಿಸಿ ಹೋದ ಎಷ್ಟೋ ದಿನಗಳ ಮೇಲೆ, ಅವರು ಯುವಕರಾಗಿದ್ದಾಗ ಒಮ್ಮೆ ಮಗನನ್ನು, ಮತ್ತೊಮ್ಮೆ ತಮ್ಮನನ್ನು ಶಿಕ್ಷೆಗೆ ಗುರಿ ಮಾಡಿದ್ದರೆಂದು ಕೇಳಿದ್ದೇನೆ. ವೆಂಕಣ್ಣಯ್ಯನವರಿಗೆ ಕೋಪ ಬಂದುದನ್ನು ನಾನು ಕಂಡಿರಲಿಲ್ಲವೆಂದು ಹೇಳಿದ್ದೇನೆಯಲ್ಲವೆ? ಆದರೆ ಒಂದೇ ಒಂದು ಸಲ ಅವರು ಪ್ರಚಂಡ ಕೋಪದಿಂದ ಕನಲಿ ಕೆಂಡವಾದುದನ್ನು ನಾನು ಕಂಡೆ. ಅದೊಂದು ಸಂಜೆ ನಾಲ್ಕು ಗಂಟೆಯ ಸಮಯ. ನಮ್ಮ ಮನೆಯ ಹಾಲಿನವಳು ವೆಂಕಣ್ಣಯ್ಯನವರ ಮಡದಿಯೊಂದಿಗೆ ವಾದವಿವಾದಕ್ಕೆ ತೊಡಗಿ ಹೀನಾಯವಾದ ಮಾತುಗಳಿಂದ ಅವರನ್ನು ನಿಂದಿಸಿದಳೆಂದು ತೋರುತ್ತದೆ, ತಮ್ಮ ಕೊಠಡಿಯಲ್ಲಿ ಏನನ್ನೋ ಬರೆಯುತ್ತ ಕುಳಿತಿದ್ದ ವೆಂಕಣ್ಣಯ್ಯನವರ ಕಿವಿಗೆ ಅಸಭ್ಯವಾದ ಈ ನುಡಿಗಳು ಕೇಳಿದುವು. ಇದ್ದಕ್ಕಿದ್ದಂತೆ ರೋಷಭೀಷಣ ಮೂರ್ತಿಯಾಗಿ ಹೊರಕ್ಕೆ ಧಾವಿಸಿ ಬಂದರು. ಅವರ ಮೈಯೆಲ್ಲ ನಡುಗುತ್ತಿತ್ತು. ಕಣ್ಣುಗಳಿಂದ ಆ ಹಾಲಿನವಳನ್ನು ದಹಿಸಿಬಿಡುವಂತೆ ಬಿರಬಿರನೆ ದಿಟ್ಟಿಸಿ ನೋಡುತ್ತ, ನಾಲಗೆಯನ್ನು ಕಡಿದುಕೊಂಡು ‘ನಿನ್’ ಎಂದು ಆರ್ಭಟಿಸಿ ಮೈದುಂಬಿದವರಂತೆ ವಿಜೃಂಭಿಸಿದರು. ಅವರು ಬಯ್ಯಬೇಕೆಂದು ಬಂದಿದ್ದಾರೆ. ಆದರೆ ಬೈಗಳು ಗೊತ್ತಿಲ್ಲ, ಅಭ್ಯಾಸವಿಲ್ಲ, ಆ ಭೈರವಮೂರ್ತಿಯನ್ನು ಕಂಡು ಹಾಲಿನವಳು ಓಡಿ ಹೋದಳು. ಅವರು ಐದು ನಿಮಿಷ ಕಾಲ ಚಡಪಡಿಸುತ್ತ ದಾಪುಗಾಲು ಹಾಕಿಕೊಂಡು ಕಾಂಪೌಂಡಿನಲ್ಲಿ ಓಡಾಡುತ್ತಿದ್ದರು. ಅನಂತರ ಬಚ್ಚಲ ವೆಂಕಣ್ಣಯ್ಯನವರ ವ್ಯಕ್ತಿತ್ವ 329 ಮನೆಗೆ ಹೋಗಿ ಹತ್ತಾರು ಕೊಡ ತಣ್ಣೀರನ್ನು ತಲೆಯ ಮೇಲೆ ಸುರಿದುಕೊಂಡರು. ಅಲ್ಲಿಗೆ ಕೋಪ ಶಾಂತವಾಯಿತೆಂದು ತೋರುತ್ತದೆ. ಮುಗುಳ್ನಗುತ್ತ ‘ಥೂ ಈ ಕೋಪ ಅನ್ನೋದು ಬಹು ದೊಡ್ಡ ಮೈಲಿಗೆ, ಇದನ್ನು ಗೆದ್ದವನು ಮಹಾತ್ಮ’ ಎಂದು ಹೇಳಿಕೊಂಡು ತಮ್ಮ ಕೊಠಡಿಗೆ ಹೋದರು. ಅವರ ಚರ್ಯೆಯಿಂದ ಉಸಿರು ಕಟ್ಟಿದಂತಾಗಿದ್ದ ಮನೆಯವರಿಗೆಲ್ಲ ಮತ್ತೆ ಉಸಿರು ಬಂದಂತಾಯಿತು. ವೆಂಕಣ್ಣಯ್ಯನವರಲ್ಲಿ ಹಾಸ್ಯಪ್ರವೃತ್ತಿ ಬಹಳ ಕಡಿಮೆ. ಆದರೆ ವ್ಯಂಗ್ಯವಾಗಿ ಬರುವ ಅವರ ಮಾತುಗಳಲ್ಲಿ ಅಮೂಲ್ಯವಾದ ಹಾಸ್ಯವಿರುತ್ತಿತ್ತು. ಒಮ್ಮೆ ಪ್ರಚಾರೋಪನ್ಯಾಸದ ಶಿಬಿರದಲ್ಲಿ ಬದನೇಕಾಯಿ ರಸವಾಂಗಿ ತಯಾರಾಗಿತ್ತು. ಕಾರ್ಯದರ್ಶಿಗಳಾದ ಹನುಮಂತರಾಯರು ವೆಂಕಣ್ಣಯ್ಯನವರನ್ನು ಕುರಿತು ‘ವೆಂಕಣ್ಣಯ್ಯನವರೆ! ನೀವು ರಸವಾಂಗಿಯನ್ನು ಮುಟ್ಟಕೂಡದು. ನಿಮ್ಮ ಆರೋಗ್ಯಕ್ಕೆ ಅದು ಸರಿಹೋಗುವುದಿಲ್ಲ’ ಎಂದು ಸುಗ್ರೀವಾಜ್ಞೆ ಮಾಡಿದರು. ವೆಂಕಣ್ಣಯ್ಯನವರು ಸ್ವಲ್ಪವೂ ಕದಲದೆ, ಧ್ವನಿಯನ್ನು ಎತ್ತದೆ, ಕಾಪಿಪುಸ್ತಕದ ಪಂಕ್ತಿಯನ್ನು ಅಕ್ಷರ ಅಕ್ಷರವಾಗಿ ಉಚ್ಚರಿಸುವ ರೀತಿಯಲ್ಲಿ ಹೀಗೆ ಹೇಳಿದರು- ‘ಬದನೆಯಕಾಯಿ ಅಡುಗೆ ನನ್ನ ದೇಹಕ್ಕೆ ಒಳ್ಳೆಯದಲ್ಲ. ದಿಟ, ಸರಿ, ಈಗ ಅದನ್ನು ತಿಂದುಬಿಡೋಣ. ನಂತರ ಏನು ಬರುತ್ತದೋ ಅನುಭವಿಸೋಣ’ ಎಂದು ಹೇಳಿದರು. ಇದನ್ನು ಕೇಳಿ, ತನ್ನ ಕೈಗೆ ಮೀರಿದ ವಿಚಾರವೆಂದು ಸುಗ್ರೀವ ಸುಮ್ಮನಾದ, ಶ್ರೀ ಡಿ.ವಿ.ಜಿಯವರಿಗೆ ಒಂದೊಂದು ಸಾರಿ ಸಂಜೆಯ ಹೊತ್ತು ಹೊಟ್ಟೆನೋವು ಬರುತ್ತಿತ್ತು. ಅದಕ್ಕೆ ವೆಂಕಣ್ಣಯ್ಯನವರು ಪದೇ ಪದೇ ಹೇಳುತ್ತಿದ್ದ ಔಷಧ ಸೊಗಸಾದ ಬದನೆಯಕಾಯಿಹುಳಿ, ‘ಬೇಳೆ ಧಂಡಿಯಾಗಿರಬೇಕು, ಕೈ ತುಂಬ ತುಪ್ಪ ಬೀಳಬೇಕು. ಅದನ್ನು ಒಂದು ದಿವಸ ಊಟ ಮಾಡಿ ‘ನೋಡ್ರಲಾ!’ ಎನ್ನುವರು. ‘ಅಜೀರ್ಣಕ್ಕೆ ಬೇಳೆಹುಳಿ ರಾಮಬಾಣ’ ಎಂಬುದು ವೆಂಕಣ್ಣಯ್ಯನವರ ಚಟಾಕಿ. ಮಡಿಕೇರಿ ಅನಂತಪದ್ಮನಾಭರಾಯರ ಮನೆಗೆ ಊಟಕ್ಕೆಂದು ಹೋದಾಗ ನಡೆದ ಒಂದು ಸಣ್ಣ ಘಟನೆ ಇದು. ಅವರ ಮನೆಯ ಬಾಗಿಲುಗಳು ತುಂಬ ಕುಳ್ಳು. ಕುಳ್ಳರು ಹೋಗಬೇಕಾದರೂ ಬಾಗಿ ಹೋಗಬೇಕಾಗಿತ್ತು. ವೆಂಕಣ್ಣಯ್ಯನವರು ಮನೆಯ ಒಳಗೆ ಹೋಗುವಾಗ ಬಾಗಿಲಿಗೆ ಅವರ ರುಮಾಲು ತಾಗಿ ಬಿದ್ದು ಹೋಯಿತು. ಆಗ ವೆಂಕಣ್ಣಯ್ಯನವರು ನಗುತ್ತ ‘ಮನುಷ್ಯ ವಯಸ್ಸಾದಂತೆ ಬಾಗಿ ನಡೆಯಬೇಕೆಂಬ ಪಾಠವನ್ನು ಈ ಬಾಗಿಲು ಇಂದು ಕಲಿಸಿತು. ಸಾತ್ವಿಕರ ಮುಂದೆ ಅಹಂಕಾರದಿಂದ ನಡೆಯಬಾರದು’ ಎಂದರು. ‘ಇದು ಬಡವರ ಮನೆ’ ಎಂದು ಹೇಳಿದ ಆತಿಥೇಯನಿಗೆ ಅವರು ‘ಬಡವನದು. ಅದರಲ್ಲಿ ಸಂದೇಹವಿಲ್ಲ. 330 ಮೂರು ತಲೆಮಾರು ಎಂದರೆ, ಮನೆಯನ್ನು ಬಾಡಿಗೆಗೆ ಕೊಟ್ಟವನು ಬಡವನಾದ, ಬಾಡಿಗೆಗೆ ತೆಗೆದುಕೊಂಡವನು ಶ್ರೀಮಂತನಾದ’ ಎಂದು ಹೇಳಿದರು. ನಸ್ಯದ ಮಹಾತ್ಮೆಯನ್ನು ವೆಂಕಣ್ಣಯ್ಯನವರು ರಸವತ್ತಾಗಿ ವಿವರಿಸುತ್ತಿದ್ದರು. ಬಿಲ್ವಪತ್ರೆ, ತುಳಸಿಗಳಂತೆ ಹೊಗೆಸೊಪ್ಪು ಅತ್ಯಂತ ಪವಿತ್ರವಾದುದು. ಇದು ಬ್ರಹ್ಮ ಪತ್ರ, ತ್ರಿಮೂರ್ತಿಗಳಿಗೂ ಪ್ರಿಯವಾದುದು. ಇದರಿಂದ ಸೃಷ್ಟಿಯಾದ ನಸ್ಯವನ್ನು ತುಚ್ಛೀಕರಿಸುವುದು ಮಹಾ ದೋಷಕರ - ಎಂದು ನಸ್ಯದ ಚಿಟಿಕೆಯನ್ನು ಬೆರಳುಗಳಲ್ಲಿ ಹಿಡಿದು ಹೇಳುತ್ತ ನಗುತ್ತಿದ್ದರು. ಒಮ್ಮೆ ಕೈಲಾಸಂರವರು ವೆಂಕಣ್ಣಯ್ಯನವರ ಮನೆಗೆ ಬಂದಾಗ ಬಾಗಿಲಲ್ಲಿಯೇ ಎತ್ತರವಾಗಿ ನಿಂತಿದ್ದ ಅವರನ್ನು ಕುರಿತು ‘ಸ್ವರ್ಗದಲ್ಲಿ ಎಲ್ಲವೂ ಸುಕ್ಷೇಮವೆ?’ ಎಂದು ಕೇಳಿದರಂತೆ. ಆಗ ವೆಂಕಣ್ಣಯ್ಯನರು ಕುಳ್ಳರಾಗಿದ್ದ ಕೈಲಾಸಂರನ್ನು ‘ಪಾತಾಳದಿಂದ ಯಾವಾಗ ಬಂದಿರಿ?ಅಲ್ಲೇನು ವಿಶೇಷ?’ ಎಂದು ಪ್ರತಿಹಾಸ್ಯ ಮಾಡಿದರು. * * * * 331 7. ಸಾಹಿತ್ಯ ಸೃಷ್ಟಿ ವೆಂಕಣ್ಣಯ್ಯನವರು ಬರೆದುದು ಬಹಳ ಸ್ವಲ್ಪ. ಬರಹಕ್ಕಿಂದಲೂ ಬದುಕು ದೊಡ್ಡದು ಎನ್ನುವ ಸಾರ್ಥಕ ಜೀವಿಗಳು ಅವರು. ಶ್ರೀ ಕುವೆಂಪುರವರು ಅವರ ಬರಹವನ್ನು ಕುರಿತು ‘ಅವರು ಸ್ವತಃ ಅಷ್ಟು ಹೆಚ್ಚಾಗಿ ಸಾಹಿತ್ಯ ಕೃತಿಗಳನ್ನು ಸೃಷ್ಟಿಸದೆ ಹೋಗಿರಬಹುದು. ಆದರೆ ನನ್ನಂತಹ ಸಾಹಿತ್ಯ ಸೃಷ್ಟಿಕರ್ತರನ್ನೇ ಸೃಷ್ಟಿಸಿ ಹೋಗಿದ್ದಾರೆ’ ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯ. ಕುವೆಂಪುವೇ ಮೊದಲಾದ ಸುಪ್ರಸಿದ್ದ ಬರಹಗಾರನೇಕರು ಅವರ ಗರಡಿಯಲ್ಲಿ ತಯಾರಾದವರು. ಹೆಚ್ಚು ಬರೆಯದಿದ್ದರೇನು? ಅವರು ಬರೆದುದೆಲ್ಲ ಬಂಗಾರ. ಆವರ ಸಾಹಿತ್ಯ ಸೃಷ್ಟಿಯಲ್ಲಿ ಗಾತ್ರಕ್ಕಿಂತ ಗುಣಕ್ಕೆ ಪ್ರಾಧಾನ್ಯ. ಅವರು ಹೊತ್ತಿಗೆ ತಕ್ಕಂತೆ ಮೂರು ಮೊಳ ನೇಯುವ ಜಾತಿಯವರಲ್ಲ; ಮೈಯೆಲ್ಲ ಕಣ್ಣಾಗಿ ಬಹು ಎಚ್ಚರಿಕೆಯಿಂದ, ತಮ್ಮ ಮನೋಭಾವಗಳನ್ನು ಬರವಣಿಗೆಗೆ ಇಳಿಸುತ್ತಿದ್ದರು. ಸ್ವಂತವಾಗಿ ಕವಿತೆ ಬರೆಯುವ ಶಕ್ತಿ ಇದ್ದೂ, ಕೆಲವನ್ನು ಬರೆದಿದ್ದರೂ ಅವರು ಅವುಗಳನ್ನೆಲ್ಲ ಹರಿದೊಗೆದರಂತೆ. ಅವರು ಬರೆದುದೆಲ್ಲ ಗದ್ಯವೇ. ಹಾಗೆ ಬರೆಯುವಾಗ ಬರೆದುದನ್ನು ಓದಿ, ಮತ್ತೆ ಮತ್ತೆ ಓದಿ, ಹೊಡೆದು, ತಿದ್ದಿ, ಅಳೆದು ತೂಗಿ, ಸರಿಪಡಿಸಿದ ಮೇಲೆ ಅಚ್ಚಿಗೆ ಕಳುಹಿಸುತ್ತಿದ್ದರು. ಶ್ರೀ ಕೆ.ವಿ. ಪುಟ್ಟಪ್ಪನವರು ಹೇಳುವಂತೆ ‘ಹಲಗೆ ಬಳಪವ ಹಿಡಿಯದೊಂದಗ್ಗಳೀಕೆ’ಗೂ ಅವರ ಲೇಖನಿಗೂ ಎಣ್ಣೆ ಸೀಗೆಯ ಸಂಬಂಧವಿತ್ತು. ಅದು ಕೀರ್ತಿಶನಿಯ ಪ್ರೇರಣೆಗೂ, ಧನ ಪಿಶಾಚಿಯ ಅವಸರಕ್ಕೂ ದೂರವಾಗಿತ್ತು. ವೆಂಕಣ್ಣಯ್ಯನವರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಶ್ರೀರಾಮ ಕೃಷ್ಣಾಶ್ರಮದ ನಿಕಟ ಸಂಬಂಧ ಹೊಂದಿದ್ದರು. ಅಲ್ಲಿನ ಬಂಗಾಳಿ ಸನ್ಯಾಸಿಗಳ ಸಹಾಯದಿಂದ ಅವರು ಬಂಗಾಳಿ ಭಾಷೆಯನ್ನು ಕಲಿತರು. ಆ ಭಾಷೆಯ ಗ್ರಂಥಗಳ ಆಧಾರದ ಮೇಲೆ ಶ್ರೀರಾಮಕೃಷ್ಣಪರಮಹಂಸರ ಜೀವನಚರಿತ್ರೆಯನ್ನು ಶ್ರೀ ಕೃಷ್ಣಶಾಸ್ತ್ರಿಗಳ ಜೊತೆಗೆ ಸೇರಿ ಬರೆದರು. ಇದು ಶ್ರೀ ರಾಮಕೃಷ್ಣರ ಬಗ್ಗೆ ಕನ್ನಡದಲ್ಲಿ ಬಂದ ಮೊದಲ ಪುಸ್ತಕ. ಅಂತೆಯೇ ಶ್ರೀವೆಂಕಣ್ಣಯ್ಯನವರು ‘ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ’ದ ಮೊದಲ ಭಾಗವನ್ನು ಬಂಗಾಳಿಯಿಂದ ಕನ್ನಡಕ್ಕೆ ಭಾಷಾಂತರಿಸಿದರು. 332 ಮೂರು ತಲೆಮಾರು ಶ್ರೀ ವೆಂಕಣ್ಣಯ್ಯನವರು ಪ್ರಾಧ್ಯಾಪಕರಾಗಿ ಮೈಸೂರಿಗೆ ಬಂದ ಮೇಲೆ ‘ಪ್ರಬುದ್ಧ ಕರ್ಣಾಟಕ’ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದಿಂದ ಮೈಸೂರು ವಿಶ್ವಿದ್ಯಾನಿಲಯಕ್ಕೆ ಸಾಗಿ ಬಂದಿತಷ್ಟೆ. ಅದರ ಹೊರೆ ಹೊಣೆಗಳು ವೆಂಕಣ್ಣಯ್ಯನವರ ಹೆಗಲೇರಿತು. ಅದಕ್ಕೆ ಸಾಕಷ್ಟು ವಿಷಯಗಳನ್ನು ಒದಗಿಸುವ ಸನ್ನಿವೇಶದಲ್ಲಿ ಅವರು ವಿಶ್ವ ಕವಿ ರವೀಂದ್ರನಾಥ ಠಾಕೂರರ ಹಲವು ಸಾಹಿತ್ಯಿಕ ವಿಷಯದ ಪ್ರಬಂಧಗಳನ್ನು ಕನ್ನಡಿಸಿ, ‘ಪ್ರಬುದ್ಧ ಕರ್ನಾಟಕ’ದಲ್ಲಿ ಪ್ರಕಟಗೊಳಿಸಿದರು. ಅವು ‘ಪ್ರಾಚೀನ ಸಾಹಿತ್ಯ’ ಎಂಬ ಗ್ರಂಥರೂಪದಲ್ಲಿ ಪ್ರಕಟವಾದುವು. ಇವು ಭಾಷಾಂತರಗಳೆಂಬ ಭಾವನೆ ಓದುಗರಲ್ಲಿ ಮೂಡದಷ್ಟು ಸರಳ, ಸುಂದರವಾಗಿವೆ, ಸಾಹಿತಿಗಳ ಮನವನ್ನು ಸೂರೆಗೊಂಡಿದೆ. ಇವು ಶ್ರೀ ವೆಂಕಣ್ಣಯ್ಯನವರ ಬಂಗಾಳಿ ಭಾಷೆಯ ನಿಕಟ ಪರಿಚಯಕ್ಕೆ ಸಾಕ್ಷಿಯಾಗಿವೆ. ವೆಂಕಣ್ಣಯ್ಯನವರದು ಶುಷ್ಕ ಪಾಂಡಿತ್ಯವಲ್ಲ; ಆ ಪಾಂಡಿತ್ಯ ಮಾನವತೆಯ ತನಿರಸದಲ್ಲಿ ಮಿಂದು ಪವಿತ್ರವಾದುದು. ಈ ಗ್ರಂಥವನ್ನು ಕುರಿತು ಶ್ರೀ ಕುವೆಂಪುರವರು ‘ಇದು ನಮ್ಮ ಆಧುನಿಕ ಸಾಹಿತ್ಯ ವಿಮರ್ಶಾದೃಷ್ಟಿಗೆ ನಮ್ಮ ನೂತನ ಸಾಕಷ್ಟು ದಾರಿದೀಪವಾಯಿತು’ ಎಂದು ಹೇಳಿದ್ದಾರೆ. ಇಲ್ಲಿನ ಲೇಖನಗಳು ಹಲವಾರು ಕನ್ನಡ ಸಾಹಿತಿಗಳಿಗೆ ಪ್ರತ್ಯೇಕ ಗ್ರಂಥಗಳನ್ನು ರಚಿಸಲು ಪ್ರೇರಣೆ ನೀಡಿವೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆಯನ್ನು ಪ್ರಾರಂಭಿಸಿದಾಗ ಅದರ ಸಂಪಾದಕ ಸಮಿತಿಯಲ್ಲಿ ಇದ್ದ ವೆಂಕಣ್ಣಯ್ಯನವರು ಆ ಮಾಲೆಯ ಮೊದಲ ಗ್ರಂಥವಾದ ‘ಹರಿಶ್ಚಂದ್ರ ಕಾವ್ಯ ಸಂಗ್ರಹ’ವನ್ನು ಶ್ರೀ ಕೃಷ್ಣಶಾಸ್ತ್ರಿಗಳ ಸಹಸಂಪಾದಕತ್ವದಲ್ಲಿ ಹೊರತಂದರು. ಈ ಮಾಲೆಯಲ್ಲಿ ಹೊರಬಂದ ಈ ಜಾತಿಯ ಇತರ ಗ್ರಂಥಗಳಿಗೆಲ್ಲ ಇದೊಂದು ಮಾದರಿಯಾಗಿತ್ತು. ಈ ಮಾಲೆಯಲ್ಲಿ ಎರಡನೆಯದು ‘ಕಾದಂಬರಿ ಸಂಗ್ರಹ’. ಇದು ಸಂಪೂರ್ಣವಾಗಿ ವೆಂಕಣ್ಣಯ್ಯನವರೇ ಸಂಪಾದಕರಾಗಿ ರಚಿಸಿದುದು. ಇದರ ಸಂಗ್ರಹವನ್ನು ವಿಮರ್ಶರು ಬಾಯ್ತುಂಬ ಹೊಗಳಿದ್ದಾರೆ. ‘ಬಾಣಭಟ್ಟ, ಆತನನ್ನು ಕನ್ನಡಕ್ಕೆ ತಂದುಕೊಟ್ಟಿರುವ ನಾಗವರ್ಮ- ಇವರ ಕಾವ್ಯ ಒಂದು ದಟ್ಟವಾದ ಅರಣ್ಯವಾದರೆ ವೆಂಕಣ್ಣಯ್ಯನವರು ಕಾಡನ್ನು ಸವರಿ ಅದನ್ನು ಒಂದು ಸುಂದರವಾದ ನಂದನವನವನ್ನಾಗಿ ಮಾಡಿದ್ದಾರೆ.’ ವೆಂಕಣ್ಣಯ್ಯನವರು ಸ್ವತಂತ್ರವಾಗಿ ಸಂಪಾದಿಸಿ ತಾವೇ ಪ್ರಕಟಿಸಿದ ಗ್ರಂಥವೆಂದರೆ ಹರಿಹರನ ‘ಬಸವರಾಜದೇವರ ರಗಳೆ’. ಬಸವಣ್ಣನ ಜೀವನವನ್ನು ಕುರಿತು ಕನ್ನಡದಲ್ಲಿ ಹರಿಹರನ ರಗಳೆಯೇ ಅತ್ಯಂತ ಪ್ರಾಚೀನವಾದುದು. ಸಾಹಿತ್ಯ ಸೃಷ್ಟಿ 333 ಆದ್ದರಿಂದಲೇ ಅದು ಅತ್ಯಂತ ವಿಶ್ವಸನೀಯವಾದುದು. ವೆಂಕಣ್ಣಯ್ಯನವರು ತಮ್ಮ ಗ್ರಂಥದಲ್ಲಿರುವ ಕತೆಗೂ, ಅಲ್ಲಿಂದೀಚೆಗೆ ಹುಟ್ಟಿದ ಬಸವಣ್ಣನವರ ಇತರ ಕತೆಗಳಿಗೂ ಇರುವ ವ್ಯತ್ಯಾಸಗಳನ್ನು ಎತ್ತಿ ತೋರಿಸಿ. ಸಾಹಿತ್ಯ ದೃಷ್ಟಿಯಿಂದ ಹರಿಹರನ ರಗಳೆ ಅನೇಕ ಚಂಪೂಗ್ರಂಥಗಳಿಗಿಂತ ಹೆಚ್ಚು ಆದರಣೀಯವಾದುದೆಂಬುದನ್ನು ಸರ್ವಜನಾದರಣೀಯವಾಗುವಂತೆ, ಸುಸಂಬದ್ಧವಾಗಿ ವಿವರಿಸಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ ಬಸವಣ್ಣನ ವ್ಯಕ್ತಿತ್ವದ ಹಿರಿತನವನ್ನು ಮುಗಿಲಿಗೇರಿಸಿ ಮೆರೆಸಿದ್ದಾರೆ. ವೆಂಕಣ್ಣಯ್ಯನವರು ‘ಕನ್ನಡ ಕೈಪಿಡಿ’ಯಲ್ಲಿ ನಾಲ್ಕನೆಯ ಭಾಗವಾಗಿ ಬಂದಿರುವ ‘ಭಾಷಾಚರಿತ್ರೆ’ಯನ್ನು ಶ್ರೀ ಬಿ.ಎಂ. ಶ್ರೀಯವರ ಸಹಲೇಖಕರಾಗಿ ಬರೆದಿದ್ದಾರೆ. ಇದನ್ನು ಬರೆಯುವ ಕಾಲಕ್ಕೆ ಈ ವಿಷಯವೇ ಕನ್ನಡಕ್ಕೆ ಹೊಸದಾಗಿತ್ತು. ಅನೇಕ ಇಂಗ್ಲಿಷ್‌ ಗ್ರಂಥಗಳ ಸಹಾಯದಿಂದ ಇದನ್ನು ಕನ್ನಡಕ್ಕೆ ಅನ್ವಯಿಸಿಕೊಂಡು ಈ ಶಾಸ್ತ್ರ ಗ್ರಂಥವನ್ನು ಹೊಸದಾಗಿ ತಂದು ಕೊಡಬೇಕಾಗಿತ್ತು. ವೆಂಕಣ್ಣಯ್ಯನವರ ಇತರ ಬರವಣಿಗೆಯಂತೆ ಇದಾದರೂ ಸರಳವಾಗಿರುವಷ್ಟೇ ನಿಷ್ಕøಷ್ಟವಾಗಿ, ಓದುಗರಿಗೆ ಸುಲಭಗ್ರಾಹ್ಯವಾಗಿದೆ. ವಿದ್ವತ್ಪೂರ್ಣವಾಗಿದ್ದರೂ ಇಲ್ಲಿನ ಮಾತುಗಳು ಹಿತ, ಮಿತ ಮತ್ತು ಸ್ವಾರಸ್ಯಭರಿತ. ವೆಂಕಣ್ಣಯ್ಯನವರು, ಡಿ.ಎಲ್. ನರಸಿಂಹಾಚಾರ್ಯರ ಸಹ ಸಂಪಾದಕತ್ವದಲ್ಲಿ ರಾಘವಾಂಕನ ‘ಸಿದ್ದರಾಮ ಚರಿತೆ’ಯನ್ನು ಹೊರತಂದರು. ಅದು, ಅವರು ಕಾಲವಾದ ಮೇಲೆ ಹೊರಬಂದಿತು. ಕನ್ನಡ ಸಾಹಿತ್ಯ ನವೋದಯದ ಮಹಾಪುರುಷರಲ್ಲಿ ಒಬ್ಬರಾದ ವೆಂಕಣ್ಣಯ್ಯನವರ ಅಕಾಲಮರಣದಿಂದ ನೊಂದು ಬಾಷಾ್ಪಂಜಲಿಯನ್ನು ಸುರಿಸುತ್ತ ಕನ್ನಡದ ಕಾರಣ ಪುರುಷರಾದ ದಿ.ಬಿ.ಎಂ ಶ್ರೀಯವರು ‘ಪರಿಶೋಧನೆಯಲ್ಲಿ ಅವರು ಒಳ್ಳೆಯ ಪ್ರಮುಖತೆಯ ಪ್ರಶ್ನೆಗಳನ್ನೆತ್ತಿ ವಿಚಾರ ಮಾಡುತ್ತಿದ್ದರು. ಅವರ ಈ ಬಗೆಯ ಪ್ರಾಸ್ತಾವಿಕ ಲೇಖನಗಳು ಕೆಲವೇ ಇದ್ದರೂ, ಇವರ ಆಧಾರ ಪೂರ್ವಕವಾದ ವಿಚಾರಸರಣಿಗೂ, ತೂಕದ ಶೈಲಿಗೂ ಅವು ನಿದರ್ಶನವಾಗಿವೆ. ‘ಕನ್ನಡದಲ್ಲಿ ಬೌದ್ಧ ಸಾಹಿತ್ಯವಿತ್ತೆ?’ ‘ನಿಜಾಂ ಕರ್ನಾಟಕದ ಸುರಪುರವೇ ಲಕ್ಷ್ಮೀಶನ ಊರೆ?’ ‘ಬಿಜ್ಜಳನು ಜೈನನೆ?’ ಈ ಬಗೆಯ ದೊಡ್ಡ ಬೇಟೆಯನ್ನೇ ಅವರು ಮಾಡುತ್ತಿದ್ದುದು. ಈ ಲೇಖನ ಮಾಲೆ ಬೇಗನೆ ಪುಸ್ತಕ ರೂಪದಲ್ಲಿ ಹೊರಬೀಳಲೆಂದು ಹಾರೈಸುತ್ತೇನೆ’. ಅವರ ಹಾರೈಕೆ ಫಲಿಸಿ, ಅವರ ಬಿಡಿಲೇಖನಗಳನ್ನೆಲ್ಲ ಒಳಗೊಂಡ `ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು’ ಎಂಬ ಗ್ರಂಥ ಹೊರಬಂದಿದೆ. ‘ಕನ್ನಡ ಸಾಹಿತ್ಯ ಚರಿತ್ರೆ’, ‘ಹತ್ತನೆ 334 ಮೂರು ತಲೆಮಾರು ಶತಮಾನದ ಕರ್ಣಾಟಕ ಸಾಹಿತ್ಯ ಚರಿತ್ತೆ’ ಮತ್ತು ‘12, 13, 14ನೇ ಶತಮಾನಗಳ ಕನ್ನಡ ಸಾಹಿತ್ಯ ಚರಿತ್ರೆ’- ಈ ಮೂರು ಅಪ್ಪಟ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದುವು. ಇವುಗಳಲ್ಲಿ ಕಾಣಬರುವ ಗಹನ ಸಮಸ್ಯೆಗಳು ಮತ್ತು ಆ ಸಮಸ್ಯೆಗಳ ಜಟಿಲತೆಯನ್ನು ಬಿಡಿಸಿ ಒದುಗರಿಗೆ ಮನಮುಟ್ಟುವಂತೆ ವಿವರಿಸುವ ಅವರ ವೈಖರಿ ಗಮನಾರ್ಹವಾದುದು. ‘ಕವಿರಾಜಮಾರ್ಗ’ ಗ್ರಂಥದ ಕರ್ತೃ ಯಾರು?’ ಎಂಬ ಲೇಖನ ಹಲವು ದೃಷ್ಟಿಯಿಂದ ಬಹು ಮುಖ್ಯವಾದುದು. ಶ್ರೀ ರಾಜಪುರೋಹಿತರವರು ಇವರು ಮತ್ತು ಎ.ಆರ್.ಕೃ. ಬರೆದಿದ್ದ ಲೇಖನದ ಮೇಲೆ ಕಟುವಾಗಿ ಒಂದು ವಿಮರ್ಶೆಯನ್ನು ಬರೆದಿದ್ದರು. ಆದರೆ ವೆಂಕಣ್ಣಯ್ಯನವರು ಅದಕ್ಕೆ ಉತ್ತರವಾಗಿ ಬರೆದ ವಿಮರ್ಶಾ ಲೇಖನದ ಮಾತು ಅತ್ಯಂತ ಮೃದುವಾಗಿ, ಗಂಭೀರವಾಗಿದೆ. ಎದುರಾಳಿ ಉದ್ಧಟತನದಿಂದ ಬರೆದಿರುವ ಮಾತನ್ನು ಎತ್ತಿಕೊಂಡು ವೆಂಕಣ್ಣಯ್ಯನವರು ಮಾಡಿದ ವಾದಸರಣಿ ಅತ್ಯಂತ ಸ್ವಾಭಾವಿಕವಾದುದರಿಂದ ಅಲ್ಲಿಂದ ಮುಂದೆ ರಾಜಪುರೋಹಿತರು ಆ ವಿಷಯವನ್ನು ಕುರಿತು ಬಾಯಿ ಬಿಡಲಿಲ್ಲ. ‘ಬಿಜ್ಜಳನು ಜೈನನೆ?’ ಎಂಬ ಲೇಖನದಲ್ಲಿ ಅವನು ಶೈವನಾಗಿದ್ದನೆಂಬ ಕೆಲವು ವಿದ್ವಾಂಸರ ಅಭಿಪ್ರಾಯಗಳನ್ನು ವೆಂಕಣ್ಣಯ್ಯನವರು ಹಲವಾರು ಶಾಸನಗಳಿಂದ ಸ್ಪಷ್ಟಪಡಿಸಿದ್ದಾರೆ. ಅಷ್ಟೆ ಅಲ್ಲ, ಶಾಸನಾಧಾರಗಳಿಂದ ಅವರ ವಂಶದವರೆಲ್ಲರೂ ಶೈವರಾಗಿದ್ದರೆಂದು ಸ್ಪಷ್ಟಪಡಿಸಿದ್ದಾರೆ. ವೆಂಕಣ್ಣಯ್ಯನವರ ಲೇಖನಗಳಲ್ಲೆಲ್ಲ ‘ಪಂಪಭಾರತ’ ಅತ್ಯಂತ ಸುಂದರವಾದುದು. ಸಂಸ್ಕೃತದ ಸಾಹಿತ್ಯಕ್ಕೆ ವಾಲ್ಮೀಕಿ ಆದಿಕವಿಯಾಗಿರುವಂತೆ, ಕನ್ನಡ ಸಾಹಿತ್ಯಕ್ಕೆ ಪಂಪನು ಆದಿಕವಿ ಎಂದು ಹೇಳಿ ಪಂಪ ಭಾರತವು ಸಮಸ್ತ ಭಾರತವೆಂದು ಕರೆಯುವುದರ ಅರ್ಥವನ್ನು ಸ್ಪಷ್ಟಪಡಿಸಿದ್ದಾರೆ. ವೆಂಕಣ್ಣಯ್ಯನವರ ‘ಶಿವತತ್ತ್ವಸಾರ’ ಎಂಬ ಲೇಖನ ತೆಲುಗು ಭಾಷೆಯಲ್ಲಿರುವ ಗ್ರಂಥವೊಂದರ ಕುರಿತು ಆ ಭಾಷೆಯನ್ನು ತಿಳಿಯದ ಕನ್ನಡಿಗರಿಗೆ ಅದರ ಪರಿಚಯವನ್ನು ಮಾಡಿಕೊಡುವ ಒಂದು ಲೇಖನ. ಇವರ ಲೇಖನಗಳನ್ನೆಲ್ಲ ನೋಡಿದಾಗ ಒಂದು ಮಾತು ಸುಸ್ಪಷ್ಟವಾಗಿ ಗೋಚರವಾಗುತ್ತದೆ. ತಾವು ಹೇಳುವುದೇ ಸರಿ ಎಂಬ ಠೇಂಕಾರ ಅವರ ಬರವಣಿಗೆಯಲ್ಲಿ ಎಲ್ಲೂ ಕಾಣುವುದಿಲ್ಲ. ಅವರು `ಕಾಣುತ್ತದೆ’, `ತೋರುತ್ತದೆ’, `ಭಾಸವಾಗುತ್ತದೆ’, `ಇರುಬಹುದು’ ಎಂಬ ಮಾತುಗಳನ್ನು ಪದೆ ಪದೇ ಬಳಸುತ್ತಾರೆ. ಸತ್ಯ ಯಾರೊಬ್ಬರ ಸ್ವತ್ತಲ್ಲ, ತಮ್ಮದೇ ಪರಮ ಸಿದ್ಧಾಂತವಲ್ಲದಿರಬಹುದು- ಎಂಬ ನಮ್ರತೆ ಅವರಲಿರುವುದಕ್ಕೆ ಇದು ಸಾಕ್ಷಿ. ಅವರನ್ನು ನೋಡದಿದ್ದವರೂ, ಅವರ ಬರವಣಿಗೆಯನ್ನು ಓದಿಯೇ ಸಾಹಿತ್ಯ ಸೃಷ್ಟಿ 335 ಅವರ ವ್ಯಕ್ತಿತ್ವದ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಸಾಧ್ಯ. ನಿರ್ಮಲ ಹೃದಯರೂ ಮೃದುಭಾಷಿಯೂ, ಸೌಜನ್ಯ ಸಂಪನ್ನನೂ ಆದ ಒಬ್ಬ ಸತ್ಯಾನ್ವೇಷಕನ ಉನ್ನತ ಮೂರ್ತಿಯೊಂದು ಈ ಲೇಖನಗಳಿಂದ ಎದ್ದು ನಮ್ಮ ಬರಿಗಣ್ಣಿನ ಮುಂದೆ ನಿಲ್ಲುತ್ತದೆ. ಅದು ಆದರ್ಶಪ್ರಾಯವಾದುದು, ನಮಸ್ಕಾರ ಯೋಗ್ಯವಾದದ್ದು. * * * * 336 ಮೂರು ತಲೆಮಾರು 8. ಕೊನೆಯ ದಿನಗಳು 1939ನೆಯ ಇಸವಿಯ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಿತು. ಆ ಸಮಯದಲ್ಲಿ ವೆಂಕಣ್ಣಯ್ಯನವರ ಆರೋಗ್ಯ ಅಷ್ಟು ಸಮರ್ಪಕವಾಗಿರಲಿಲ್ಲ. ಆದರೂ ಅವರು ಅಲ್ಲಿಗೆ ಹೋಗುವುದು ಅನಿವಾರ್ಯವಾಗಿತ್ತು. ಈ ಸಮ್ಮೇಳನ ತುಂಬ ಗೊಂದಲದಿಂದ ಕೂಡಿತ್ತು. ‘ಕರ್ನಾಟಕ’, ‘ಕರ್ಣಾಟಕ’-ಈ ನ-ಣ-ಚರ್ಚೆ ಅತಿ ತೀವ್ರವಾದ ಸಂಗ್ರಾಮದ ಸ್ಥಿತಿಯನ್ನು ಮುಟ್ಟಿತು. ಅದರ ಚರ್ಚೆ ಸಮ್ಮೇಳನದ ಮೊದಲ ದಿನದ ರಾತ್ರಿ ತುಂಬ ರಭಸದಿಂದ ನಡೆದು ಯಾವ ನಿರ್ಣಯವೂ ಆಗಲಿಲ್ಲ. ಮತ್ತೆ ಮರುದಿನ ರಾತ್ರಿ ಒಂಭತ್ತು ಗಂಟೆಗೆ ಚರ್ಚೆ ಮುಂದುವರಿಯಿತು. ಅಂದು ಸಂಜೆ ಏಳು ಗಂಟೆ ಸಮಯದಲ್ಲಿ ವೆಂಕಣ್ಣಯ್ಯನವರು ಸಭಾಂಗಣದ ಹೊರಗೆ ಬಂದು ಕಲ್ಲುಬೆಂಚಿನ ಮೇಲೆ ಒಬ್ಬರೇ ಚಿಂತಾಮಗ್ನರಾಗಿ ಕುಳಿತಿದ್ದರು. ನ-ಣ ಸಂಗ್ರಾಮದಲ್ಲಿ ಸಾಹಿತ್ಯ ಪರಿಷತ್ತೇ ಒಡೆದು ಹೋಗುವ ಸನ್ನಿವೇಶ. ಹಲವು ವರ್ಷಗಳಿಂದ ಹಿರಿಯರು ಕಟ್ಟಿದ ಕಟ್ಟಡದ ತಳಪಾಯಕ್ಕೆ ಕೊಡಲಿಯ ಏಟು ಬೀಳುತ್ತಲಿದೆ. ಇದರ ಸ್ಪರ್ಧಿ ಪ್ರತಿಸ್ಪರ್ಧಿಗಳಿಬ್ಬರೂ ವೆಂಕಣ್ಣಯ್ಯನವರ ಆತ್ಮೀಯರು. ಕೊನೆಗೆ ಅವರು ತಮ್ಮ ಶಿಷ್ಯರಾದ ಎಸ್.ವಿ. ಕೃಷ್ಣ ಮೂರ್ತಿರಾಯರನ್ನು ಕರೆದು, ಅವರ ಸಲಹೆಯಂತೆಯೇ, ಅವರ ಮೂಲಕವೇ ‘ಕನ್ನಡ ಸಾಹಿತ್ಯಪರಿಷತ್ತು’ ಎಂಬ ತಿದ್ದುಪಡಿ ಕಳುಹಿಸಿದರು. ರಾತ್ರಿಯೆಲ್ಲಾ ಚರ್ಚೆಯಾದ ನಂತರ ಠರಾವಾಯಿತು. ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದ ವೆಂಕಣ್ಣಯ್ಯನವರು ಮುಂದಿನ ದಿನವೆಲ್ಲ - ಪ್ರಯಾಣ ಮಾಡಿ ಮೈಸೂರನ್ನು ಸೇರುತ್ತಲೇ ಹಾಸಿಗೆ ಹಿಡಿದರು. ಆದರೆ ಅವರ ಚಿಂತೆ ಖಾಯಿಲೆಯಲ್ಲ; ವಿದ್ಯಾರ್ಥಿಗಳಿಗೆ ಸಮೀಪಿಸಿದ್ದ ಪರೀಕ್ಷೆ. ‘ಪರೀಕ್ಷೆ ಹತ್ತಿರ ಬಂತು, ಪಾಠಗಳು ಇನ್ನೂ ಮುಗಿದಿಲ್ಲ’ ಎಂಬುದು ಅವರ ಕೊರಗು, ದಿನದಿನಕ್ಕೆ ಅವರ ಸ್ಥಿತಿ ವಿಷಮಿಸಿತು. 24-2-1939ರ ರಾತ್ರಿ ಅವರ ಖಾಯಿಲೆ ಉಲ್ಬಣಿಸಿತು. ಡಾಕ್ಟರನ್ನು ಕರೆತರಲಾಯಿತು. ಅವರು ಪರೀಕ್ಷಿಸಿದರು. ಹಾಗೆ ಪರೀಕ್ಷಿಸುವಾಗ ಡಾಕ್ಟರ್ ಕೈ ನಡುಗಿತು. ಖಾಯಿಲೆ ಎಟುಕದಷ್ಟು ಕೈ ಮೀರಿದೆ ಎಂದು ಅವರು ಭಾವಿಸಿದ್ದರೇನೋ, ಯಾವುದೋ ಔಷಧವನ್ನು ಕೊಟ್ಟು ಅವರು ಅತ್ತ ಹೋಗುತ್ತಲೇ, ಕೊನೆಯ ದಿನಗಳು 337 ಇತ್ತ ವೆಂಕಣ್ಣಯ್ಯನವರು ತಮ್ಮನ್ನು ನೋಡಿಕೊಳ್ಳುತ್ತಿದ್ದ, ತಮ್ಮ ಪ್ರೀತಿಯ ತಮ್ಮನ ಕಡೆ ತಿರುಗಿ ‘The doctor needs another doctor’ ಎಂದು ನಗುತ್ತ ಹೇಳಿದರು. ಆ ನಗುವಿನೊಡನೆ ಅವರ ಪ್ರಾಣವಾಯು ಹೊರಟು ಹೋಯಿತು. ತೆಳ್ಳನೆಯ ದೀರ್ಘ ದೇಹ ಹಸನ್ಮುಖದಿಂದ ದೀರ್ಘ ನಿದ್ರೆಯಲ್ಲಿ ಮುಳುಗಿ ಹೋಯಿತು. ಹಾಗೆ ಹೋಗುವ ಮುನ್ನ ಅವರ ಕಣ್ಣು ತಲೆಯ ಕಡೆ ಗೋಡೆಯ ಮೇಲಿದ್ದ ಶಾರದಾಮಣಿದೇವಿಯವರ ಚಿತ್ರದ ಕಡೆ ನೋಡಿತು. ವೆಂಕಣ್ಣಯ್ಯನವರ ನಿಧನದ ಸುದ್ದಿ ತಿಳಿದ ಕೂಡಲೇ ಕುವೆಂಪು ಅವರನ್ನು ಮೊದಲುಗೊಂಡು ಮೈಸೂರಿನ ಸಾರಸ್ವತಲೋಕದ ಪ್ರಮುಖರೆಲ್ಲರೂ ಅವರ ಮನೆಗೆ ಬಂದು ಶ್ರದ್ಧಾಂಜಲಿ ಅರ್ಪಿಸಿದರು. ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಅರಮನೆಯ ಪ್ರತಿನಿಧಿ, ಅಪಾರವಾದ ಶಿಷ್ಯವೃಂದದವರು ಬಂದು ಶೋಕ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್‍ರವರೂ ಧಾವಿಸಿ ಬಂದರು. ಅಪಾರವಾದ ಬಂಧುಮಿತ್ರರು, ಶಿಷ್ಯರ ತಂಡದೊಡನೆ ಅವರ ಸ್ಮಶಾನಯಾತ್ರೆ ನಡೆಯಿತು. ವೆಂಕಣ್ಣಯ್ಯನವರು ಆ ಕಾಲಕ್ಕೆ ಕೈ ತುಂಬ ಸಂಬಳ ತರುತ್ತಿದ್ದವರು. ತುಂಬ ಸರಳ ಜೀವಿಗಳು ಆದರೂ ಅವರ ಜೇಬು ಸದಾ ಬರಿದು. ಅವರದು ಅಂಥ ಕೊಡುಗೈ. ಎಷ್ಟು ಜನ ಬಡವಿದ್ಯಾರ್ಥಿಗಳು ಅವರ ಹೆಸರನ್ನು ಹೇಳಿಕೊಂಡು ತಮ್ಮ ಮನೆಯ ದೀವಿಗೆಗಳನ್ನು ಬೆಳಗುತ್ತಿದ್ದಾರೆಯೋ! ಎಷ್ಟು ನೊಂದ ಜೀವಿಗಳು ಅವರಿಂದ ಸಾಂತ್ವನ ಪಡೆದರು! ಅವರು ಹಣವನ್ನು ಕೂಡಿಡುವುದು, ಆಸ್ತಿಯನ್ನು ಮಾಡುವುದು ಹಾಗಿರಲಿ, ಅವರು ದಿವಂಗತರಾದಾಗ ಅವರ ಉತ್ತರ ಕ್ರಿಯೆಗಳಿಗೆ, ಬಾಕಿ ನಿಂತಿದ್ದ ಅವರ ಎರಡು ತಿಂಗಳ ಸಂಬಳಕ್ಕಾಗಿ ಕಾಲೇಜಿಗೆ ಅಲೆಯಬೇಕಾಯಿತು. ಆಗ ನಡೆದ ಒಂದು ಸಣ್ಣ ಸಂಗತಿಯನ್ನು ಕುತೂಹಲಕ್ಕಾಗಿ ಹೇಳಬೇಕೆನಿಸುತ್ತದೆ. ವೆಂಕಣ್ಣಯ್ಯನವರ ನಿಧನದ ವಾರ್ತೆಯನ್ನು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾದ ರಾಲೋರವರಿಗೆ ಪತ್ರ ಮುಖೇನ ತಿಳಿಸಿ ಅವರ ಎರಡು ತಿಂಗಳ ಸಂಬಳವನ್ನು ಅವರ ಸಂಸಾರಕ್ಕೆ ಕರ್ಮಾಂತರಗಳಿಗೆ ಕೊಡಿಸಿಕೊಡಬೇಕೆಂದು ನಾನು ಪತ್ರ ಬರೆದ ಮೂರು ದಿನಗಳಾದ ಮೇಲೆ ನಾನೇ ಅವರ ಬಳಿಗೆ ಹೋದೆ. ಅವರು ಯಾವುದೋ ಪತ್ರ ವ್ಯವಹಾರದಲ್ಲಿ ಮಗ್ನರಾಗಿದ್ದರು. ನನ್ನನ್ನು ಮಾತನಾಡುವಂತೆ ಪ್ರೇರೇಪಿಸಿದರು. ಎರಡು ನಿಮಿಷ ಮಾತನಾಡುವಷ್ಟರಲ್ಲಿ ಅವರು ದಿಗ್ಗನೆ ಮೆಟ್ಟಿ ಬಿದ್ದವರಂತೆ ನೆಟ್ಟಗ ಕುಳಿತು ನನ್ನ ಕಡೆಗೆ ದಿಟ್ಟಿಸಿ ನೋಡುತ್ತ ‘I Thought that the ghost of venkanniah 338 ಮೂರು ತಲೆಮಾರು was talking to me by my side. I have never seen such identity ! writing and the tone’ ಎಂದು ಹೇಳಿ, ಅಲ್ಲಿಯೇ ಆ ಕ್ಷಣವೇ ವೆಂಕಣ್ಣಯ್ಯನವರ ಸಂಬಳವನ್ನು ಪಾವತಿ ಮಾಡುವಂತೆ ಖಜಾನೆಗೆ ಕಾಗದ ಬರೆದು ಕೊಟ್ಟರು. ಅದನ್ನು ತಂದು ಕರ್ಮಾಂತರಗಳನ್ನು ನೆರವೇರಿಸಬೇಕಾಯಿತು. ವೆಂಕಣ್ಣಯ್ಯನವರ ನಿಧನದ ವಾರ್ತೆಯನ್ನು ಕೇಳಿ ಇಡೀ ಕನ್ನಡ ನಾಡು ಕಣ್ಣೀರು ಗರೆಯಿತು. ಸುಮಾರು ಆರು ತಿಂಗಳವರೆಗೂ ನಾಡಿನ ಬೇರೆ ಬೇರೆ ಕಡೆಗಳಲ್ಲಿ ಸಂತಾಪ ಸೂಚಕ ಸಭೆಗಳು ನಡೆದುವು. ಸಂತಾಪಸೂಚಕ ಪತ್ರಗಳು, ನಿರ್ಣಯಗಳು ಒಂದಾದ ಮೇಲೊಂದು ಬರುತ್ತಲೇ ಇದ್ದುವು. ವೆಂಕಣ್ಣಯ್ಯನವರನ್ನು ಕುರಿತು ಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟವಾದುವು. ವೆಂಕಣ್ಣಯ್ಯನವರು ನಾಡಿನಲ್ಲಿ ಎಷ್ಟು ಜನಪ್ರಿಯರಾಗಿದ್ದರು, ಅವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಎಂತಹ ಪ್ರಭಾವ ಬೀರಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಶ್ರೀ ಡಿ.ವಿ.ಜಿ. ಯವರು ವೆಂಕಣ್ಣಯ್ಯನವರ ನಿಧನವನ್ನು ಕುರಿತು ಹೀಗೆ ಹೇಳುತ್ತಾರೆ ‘ವೆಂಕಣ್ಣಯ್ಯ ದೈವಾಧೀನರಾಗಿ ಇಂದಿಗೆ ಸುಮಾರು 30 ವರ್ಷಗಳಾಗಿವೆ (ಈಗಿನ ಲೆಕ್ಕದಲ್ಲಿ 46 ವರ್ಷ). ಆದರೂ ನನಗೆ ಈ ದುಃಖ ಈಗಲೂ ಹೊಸದಾಗಿಯೇ ಇದೆ. ನಾನು ವಿಯೋಗ ದುಃಖಕ್ಕೆ ಒಳಗಾಗಿರುವುದು ಅಪರೂಪವೇನಲ್ಲ. ಆದರೆ ವೆಂಕಣ್ಣಯ್ಯನವರ ಮೃತಿಯಿಂದ ಆದ ಗಾಯ ಎಂದಿಗೂ ಮರೆಯಲಾರದಂತಹುದು ಅನ್ನಿಸುತ್ತದೆ. ಈ ವಿಶೇಷ ದುಃಖಕ್ಕೆ ಕಾರಣ ಏನಿರಬಹುದು? ಪ್ರೀತಿಗೂ ದುಃಖಕ್ಕೂ ಕಾರಣಗಳನ್ನು ಹೇಳುವೆನೆಂದು ಹೊರಟರೆ ಅದು ಹೃದಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಪ್ರೀತಿ ಅಳತೆಗೆ ಸಿಗುವ ವಸ್ತುವಲ್ಲ. ಕಾರಣ ಹೇಳಿದರೆಒಂದು ಮಿತಿಯನ್ನು ಗೊತ್ತು ಮಾಡಿದಂತಾಗುತ್ತದೆ. ಆ ಕಾರಣವಿಲ್ಲದಿದ್ದರೆ ಆ ಕಾರ್ಯವಾಗಲಾರದೆಂದು ಸೂಚಿಸಿ ಪ್ರೀತಿಗೆ ಉಪಾಧಿಗಳನ್ನು ಕಲ್ಪಸಿದಂತೆ ಆಗುತ್ತದೆ. ಪ್ರೀತಿ ಅಂತಹ ಪರಿಮಿತವಾದ ವಸ್ತುವಲ್ಲ. ವ್ಯತಿಷಜತಿ ಪದಾರ್ಥಾನ್ ಆಂತರಃ ಕೋಪಿ ಹೇತುಃ| ನ ಖಲು ಬಹಿರುಪಾಧೀನ್ ಪ್ರೀತಯಃ ಸಂಶ್ರಯನ್ತೇ|| ತತ್ವ ಹೀಗಿದ್ದರೂ ನನಗೆ ತೋರಿದ ಮಟ್ಟಿಗೆ ನನ್ನ ದುಃಖದ ಒಂದು ವಿಶೇಷ ಕಾರಣವನ್ನು ಸೂಚಿಸಬೇಕೆನ್ನಿಸುತ್ತದೆ. ವೆಂಕಣ್ಣಯ್ಯನ ಮರಣದಿಂದ ಆಗಿರುವ ನಷ್ಟ ವ್ಯಕ್ತಿಮಾತ್ರದ್ದಲ್ಲ. ಅದು ನಮ್ಮ ದೇಶದ ಸಮಸ್ತ ಸಾರ್ವಜನಿಕ ಕೊನೆಯ ದಿನಗಳು 339 ಶ್ರೇಯಸ್ಸಿನ ದೃಷ್ಟಿಯಿಂದ ಉಂಟಾಗಿರುವ ದುಃಖ. ಕನ್ನಡ ಸಾಹಿತ್ಯದ ನವೀಕರಣವೂ ಸಮಸ್ತ ಭಾರತದ ಸಮಾಜ ಜೀವನದ ನವೀಕರಣವೂ ಈಗ ನಡೆಯಬೇಕಾಗಿರುವ ಶ್ರೇಯಃಕಾರ್ಯಗಳಲ್ಲಿ ಮುಖ್ಯವಾದುವು. ಈ ಎರಡೂ ಕಾರ್ಯಗಳಿಗೂ ವೆಂಕಣ್ಣಯ್ಯನಂತೆ ಒದಗಿಬರಲು ಸಮರ್ಥರಾದವರು ಬಹುಮಂದಿ ಇಲ್ಲ’. ಆಗ ಸೆಂಟ್ರಲ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದಲ್ಲಿ ಸಂತಾಪ ಸೂಚಕ ಸಭೆಯನ್ನು ನಡೆಸಿ ಹೀಗೆ ಬರೆದರು : ‘ನಮ್ಮೆಲ್ಲರಿಗೂ ಹಿರಿಯಣ್ಣನಾದ ವೆಂಕಣ್ಣಯ್ಯನ ಅಕಾಲಮೃತ್ಯುವನ್ನು ಕೇಳಿ ನಾವು ಶೋಕದಲ್ಲಿ ಮುಳುಗಿ ಹೋಗಿದ್ದೇವೆ. ನೀವು ಈ ಶೋಕವನ್ನು ಹೇಗೆ ತಡೆದು ಕೊಂಡಿದ್ದೀರಿ ಎಂದು ಯೋಚಿಸುವುದು ಸಾಧ್ಯವಾಗುವಂತಿಲ್ಲ’. ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘದ ಆಶ್ರಯದಲ್ಲಿ ಸಂತಾಪ ಸೂಚಕ ಸಭೆ ನಡೆದು ಈ ನಿರ್ಣಯವನ್ನು ಕೈಗೊಂಡಿತು : ‘ಸೆಂಟ್ರಲ್ ಕಾಲೇಜಿನಲ್ಲಿ ಎಂಟು ವರ್ಷ ಕನ್ನಡದ ಅಧ್ಯಾಪಕರಾಗಿಯೂ, ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿಯೂ ಇದ್ದು ಕನ್ನಡದ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನೂ, ನವಚೈತನ್ಯವನ್ನೂ ತುಂಬಿ ತಮ್ಮ ಉದಾತ್ತ ಜೀವನ, ನಯವಾದ ಮಾತು, ಮೃದುವಾದ ಹೃದಯ, ಸರಳವಾದ ನಡತೆ, ಸರಳವಾದ ಸಂಭಾಷಣೆ ಶಾಂತಿ, ಸ್ನೇಹ ಮುಂತಾದವುಗಳಿಂದ ಎಲ್ಲರ ಪ್ರೀತಿ, ಮೆಚ್ಚುಗೆ, ಗೌರವಗಳಿಗೂ ಪಾತ್ರವಾಗಿದ್ದು, ತಮ್ಮ ಘನವಾದ ಪಾಂಡಿತ್ಯದಿಂದ ವಿದ್ವನ್ಮಾನ್ಯರಾಗಿ, ಕಳೆದ ಹನ್ನೆರಡು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಮುಖ್ಯಾಧ್ಯಾಪಕ ಪದವಿಯನ್ನಲಂಕರಿಸಿದ್ದ ಶ್ರೀ ಟಿ.ಎಸ್. ವೆಂಕಣ್ಣಯ್ಯನವರು ನೆನ್ನೆ ರಾತ್ರಿ ಸ್ವರ್ಗಸ್ಥರಾದರೆಂಬುದನ್ನು ಕೇಳಿ ಕರ್ನಾಟಕ ಸಂಘದ ಸಭೆಯು ಈ ಮೂಲಕ ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಕನ್ನಡ ಪ್ರಪಂಚಕ್ಕೆ ಒಂದು ರತ್ನದಂತಿದ್ದ ಈ ವಿದ್ವಾಂಸರ ನಷ್ಟದಿಂದ ಕರ್ನಾಟಕ ಸಂಘ, ‘ಪ್ರಬುದ್ಧ ಕರ್ನಾಟಕ’ಗಳಿಗೂ, ಕನ್ನಡ ಭಾಷಾ, ಸಾಹಿತ್ಯಗಳಿಗೂ ಅಪಾರವಾದ ನಷ್ಟವುಂಟಾಗಿದೆ. ಅವರ ವಿದ್ಯಾರ್ಥಿಗಳಿಗೂ, ಸಹೋಪಾಧ್ಯಾಯರಿಗೂ, ಅಷ್ಟೇಕೆ ಅವರನ್ನು ನೋಡಿ ಬಲ್ಲ, ಕೇಳಿ ಬಲ್ಲ ಎಲ್ಲರಿಗೂ ಇಂತಹ ದೊಡ್ಡ ವ್ಯಕ್ತಿಯ ಮರಣದಿಂದ ಅತ್ಯಂತ ಶೋಕ ಉಂಟಾಗಿದೆ. ಈ ವರುಷ ಎಂದಿನಂತೆ ನಡೆಯಬೇಕಾಗಿದ್ದ ಸಂತೋಷಕೂಟವನ್ನು ನಿಲ್ಲಿಸಿದೆ’. ಅವರ ನಿಧನವಾರ್ತೆಯನ್ನು ಕೇಳಿದ ಶ್ರೀ ಬಿ.ಎಂ. ಶ್ರೀಕಂಠಯ್ಯನವರು 340 ಮೂರು ತಲೆಮಾರು ತಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತ ಹೀಗೆ ಹೇಳುತ್ತಾರೆ: ‘ತೆರೆಯ ಹಿಂದೆ ಅವರು ಎಷ್ಟು ದುಡಿಯುತ್ತಿದ್ದರೆಂಬುದನ್ನು ಬಲ್ಲವರೇ ಬಲ್ಲರು. ಲೇಖಕರನ್ನು ಒಂದುಗೂಡಿಸುವ ಅವರ ಸ್ನೇಹಶಕ್ತಿಯೂ, ಎಳೆಯ ಸಾಹಿತಿಗಳನ್ನು ಹುರುಪುಗೊಳಿಸುವ ಅವರ ಉದಾರ ಹೃದಯವೂ, ಗಟ್ಟಿಯನ್ನಾಯುವ ಅವರ ವಿಮರ್ಶಾಸೂಕ್ಷ್ಮತೆಯೂ, ವೈವಿಧ್ಯವನ್ನು ಪ್ರಚೋದನೆ ಮಾಡುವ ಅವರ ವಿಶಾಲದೃಷ್ಟಿಯೂ ಅನ್ಯಾದೃಶವಾದುದು. ಕನ್ನಡ ಪ್ರೊಫೆಸರ್ ಆಗಿದ್ದವರು ನಿಷ್ಕøಷ್ಟ ಜ್ಞಾನವುಳ್ಳವರು. ಹಳದರಲ್ಲಿ ಅತಿಭಕ್ತಿ ಇಲ್ಲದೆ, ಹೊಸದರಲ್ಲಿ ಅತಿ ಕ್ರಾಂತಿಗೆ ಹೋಗದೆ ಮಧ್ಯ ಮಾರ್ಗಿಗಳಾದವರು. ವಿದ್ಯಾರ್ಥಿಗಳಲ್ಲಿ ತಂದೆಯಂತೆ, ಹಿರಿಯಣ್ಣನಂತೆ ನಡೆದುಕೊಂಡು ಅವರ ಜ್ಞಾನಾಭಿವೃದ್ಧಿ, ಯೋಗಕ್ಷೇಮ, ಸಚ್ಚಾರಿತ್ರ್ಯಗಳಲ್ಲಿಯೇ ಸದಾ ಗಮನವಿಟ್ಟವರು. ಸಹೋಪಾಧ್ಯಾಯರಲ್ಲಿ ಸರಳತೆಯಿಂದ ವರ್ತಿಸಿ, ಅವರ ಗೌರವ -ಪ್ರೀತಿಗಳಿಗೆ ಪೂರ್ಣಪಾತ್ರರಾದವರು...ಕನ್ನಡ ಚಳುವಳಿಗೆ ಚತುರ್ಭುಜವಾಗಿದ್ದವರು... ಮುಖ್ಯವಾಗಿ ಸಾಹಿತಿಗಳನ್ನು ತಯಾರು ಮಾಡುವುದರಲ್ಲಿ, ಸಾಹಿತ್ಯಪ್ರಚಾರದಲ್ಲಿ ಅವರು ಮಗ್ನರಾಗಿದ್ದರೇ ಹೊರತು ತಮ್ಮ ಕೀರ್ತಿಗಾಗಿ ಹಂಬಲಿಸಿದವರಲ್ಲ... ಲೋಕವರಿಯುವಂತೆ ತಾನು ಮಾಡಿದ ಕಾರ್ಯಕ್ಕಿಂತಲೂ ಮನುಷ್ಯ ದೊಡ್ಡವನೆಂದು ಹಿರಿಯರು ಹೇಳಿರುವರು. ಅಂತಹ ಹಿರಿಮೆಯ ಮನುಷ್ಯರು ವೆಂಕಣ್ಣಯ್ಯನವರು. ‘ನನಗಂತೂ ಅವರೊಂದು ಹೆಮ್ಮೆ, ಬೆಳಕು, ಕಾವಲು. ಅವರು ಕಣ್ಮರೆಯಾದರೆಂದು ಕೇಳಿದ ಕಾರಿರುಳಿನಲ್ಲಿ ನನಗೆ ಪ್ರಾಣ ಹಾರಿತು; ಒಂದು ಕೈ ಮುರಿಯಿತು. ನನ್ನಂತೆ ಒಳಗುದಿ ಕುದಿಯುತ್ತಿರುವ ಗೆಳೆಯರು ಹಲವರು. ನಾವೆಲ್ಲ ಈ ಹಡಗು ಮುಳುಗಿ ಬಡವರು’. ವೆಂಕಣ್ಣಯ್ಯನವರ ನಿಧನವಾರ್ತೆಯನ್ನು ಕೇಳಿ ಅಂದು ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದ ಶ್ರೀ ಎನ್.ಎಸ್. ಸುಬ್ಬರಾವ್ ವೆಂಕಣ್ಣಯ್ಯನವರ ಅಕಾಲ ಮರಣದಿಂದ ನಮ್ಮ ವಿಶ್ವವಿದ್ಯಾನಿಲಯಕ್ಕೆ ದೊಡ್ಡ ಆಘಾತವಾಗಿದೆ. ಒಬ್ಬ ನುರಿತ ವಿದ್ವಾಂಸರನ್ನು ಸತ್ಪುರುಷರನ್ನು ನಾವು ಕಳೆದುಕೊಂಡೆವು. ವಿದ್ವತ್ತು, ಸರಳವಾದ ನಡತೆ, ಲೌಕಿಕ ಪ್ರಯೋಜನದಲ್ಲಿ ಅತ್ಯಂತ ಅನಾಸಕ್ತಿ, ಶಿಷ್ಯರಲ್ಲಿ ವಾತ್ಸಲ್ಯ - ಇವೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ವ್ಯಾಸಂಗವನ್ನು ಮುಂದುವರಿಸುವುದರಲ್ಲೂ, ಜನಸಾಮಾನ್ಯರಲ್ಲಿ ತಾಯ್ನುಡಿಯ ಮೂಲಕ ಸಂಸ್ಕೃತಿಯನ್ನು ಹರಡುವುದರಲ್ಲೂ ಅವರಿಗಿದ್ದ ಗಲಭೆಯಿಲ್ಲದ ಉತ್ಸಾಹ - ಇಂಥ ಅನೇಕ ಅಂಶಗಳಲ್ಲಿ ಅವರು ಪಾಶ್ಚಾತ್ಯ ವಿಶ್ವವಿದ್ಯಾನಿಲಯಗಳ ಕೊನೆಯ ದಿನಗಳು 341 ಪ್ರೊಫೆಸರುಗಳನ್ನು ಹೋಲುತ್ತಿದ್ದರು. ಅವರ ಪ್ರಸನ್ನಮುಖವೂ, ಮನಸ್ಸಿಗೆ ನೆಮ್ಮದಿ ಕೊಡುತ್ತಿದ್ದ ಅವರ ಸ್ನೇಹವೂ ಇನ್ನು ನಮಗೆ ಮರೆಯಾದವು’. ಇದೇ ಸಂದರ್ಭದಲ್ಲಿ ಕವಿ ಕುವೆಂಪು ಅವರಿಗಾದ ಒಂದು ಅನುಭವ ಉಲ್ಲೇಖನಾರ್ಹ. ವೆಂಕಣ್ಣಯ್ಯನವರು ತೀರಿಕೊಂಡಂದು ರಾತ್ರಿ ಹತ್ತು ಗಂಟೆ ವೇಳೆಯಲ್ಲಿ ಅವರು ಏನನ್ನೋ ಬರೆಯುತ್ತ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಇದ್ದಕ್ಕಿದ್ದಂತೆ ಆ ಕೊಠಡಿಯ ಬಾಗಿಲ ಮೇಲೆ ಟಪ್ ಟಪ್ ಎಂದು ಬಡಿವ ಶಬ್ದವಾಯಿತು. ಆ ಕಾಲದಲ್ಲಿ ಅವರ ಮನೆ ಒಂಟಿಕೊಪ್ಪಲಿನಲ್ಲಿ ಒಂಟಿಯಾಗಿತ್ತು. ಸುತ್ತಮುತ್ತ ಬಹುದೂರದವರೆಗೆ ಯಾವ ಮನೆಯೂ ಇನ್ನೂ ಹುಟ್ಟಿಕೊಂಡಿರಲಿಲ್ಲ. ಆದ್ದರಿಂದ ಪುಟ್ಟಪ್ಪನವರು ಸ್ವಲ್ಪ ಗಾಬರಿಯಿಂದಲೇ ಬಾಗಿಲು ತೆಗೆದು ಹೊರಕ್ಕೆ ಇಣಿಕಿದರು, ಅಲ್ಲಿ ಯಾರೂ ಇರಲಿಲ್ಲ. ಆ ಶಬ್ದ ತಮ್ಮ ಭ್ರಾಂತಿಯೆಂದು ಭಾವಿಸಿ, ಬಾಗಿಲು ಮುಚ್ಚಿಕೊಂಡು, ತಮ್ಮ ಬರವಣಿಗೆಯನ್ನು ಮುಂದುವರಿಸಲು ಕುಳಿತುಕೊಂಡರು. ಇದೇನು! ಮತ್ತೆ ಅದೇ ಬಾಗಿಲು ಬಡಿತದ ಶಬ್ದ. ಪುಟ್ಟಪ್ಪನವರು ಧೈರ್ಯವನ್ನು ತಂದುಕೊಂಡು ಬಾಗಿಲು ತೆರೆದರು. ಮನೆಯ ಕಾಂಪೌಂಡಿನ ಒಳಗೆ, ಹೊರಗೆ, ಸುತ್ತಮುತ್ತ ಓಡಾಡಿ ನೋಡಿದರು. ಯಾವ ನರಪ್ರಾಣಿಯೂ ಅಲ್ಲಿಲ್ಲ. ಅವರು ಬಾಗಿಲು ಹಾಕಿಕೊಂಡು ತಮ್ಮ ಪ್ರಾರ್ಥನಾ ಮಂದಿರವನ್ನು ಹೊಕ್ಕರು; ಅಲ್ಲಿ ಕುಳಿತು ಪ್ರಾರ್ಥನೆಯನ್ನು ಸಲ್ಲಿಸಿದರು. ಕೆಲದಿನದ ಮೇಲೆ ನಾನು ಅವರನ್ನು ಸಂಧಿಸಿದಾಗ ಅವರು ತಮ್ಮ ಈ ಅನುಭವವನ್ನು ನನಗೆ ತಿಳಿಸುತ್ತ ‘ವೆಂಕಣ್ಣಯ್ಯನವರ ಆತ್ಮವೇ ಅಂದು ನನ್ನಲ್ಲಿಗೆ ಬಂದು ಹೋಗಿರಬೇಕೆಂದು ಕಾಣಿಸುತ್ತದೆ’ ಎಂದು ಹೇಳಿದರು. ವೆಂಕಣ್ಣಯ್ಯನವರು ನಿಧನರಾದ ವರ್ಷ ತಳುಕಿನ ಮಹಾಜನರು ವೆಂಕಣ್ಣಯ್ಯನವರ ಜ್ಞಾಪಕಾರ್ಥ ಒಂದು ಉತ್ಸವವನ್ನು ಏರ್ಪಡಿಸಿದ್ದರು. ಅದಕ್ಕಾಗಿ ಬೆಂಗಳೂರಿನಿಂದ ಶ್ರೀನಿಟ್ಟೂರ್ ಶ್ರೀನಿವಾಸರಾಯರ ನೇತೃತ್ವದಲ್ಲಿ ಶ್ರೀ ಡಿ.ವಿ. ಗುಂಡಪ್ಪ, ಚಂದ್ರಶೇಖರಶಾಸ್ತ್ರಿ, ಬಿ. ಕೃಷ್ಣಶಾಸ್ತ್ರಿ, ಕವಿಯಿತ್ರಿ ಜಾನಕಮ್ಮ ಇತ್ಯಾದಿ ಹಲವು ಜನ ವೆಂಕಣ್ಣಯ್ಯನವರ ಆಪ್ತವರ್ಗದವರು, ತಳುಕಿಗೆ ಬಂದು, ಮೂರು ದಿನಗಳು ಅಲ್ಲಿ ತಂಗಿ, ವೆಂಕಣ್ಣಯ್ಯನವರ ಭಾವಚಿತ್ರದ ಮೆರವಣಿಗೆ, ಸಭೆ, ಭಾಷಣಗಳು, ಕಾವ್ಯವಾಚನ-ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿದರು. ಸುತ್ತಮುತ್ತಲ ಊರುಗಳಿಂದ ಸಹಸ್ರಾರು ಜನ ಬಂದು ಸೇರಿದ್ದರು. ಈ ಸಮಾರಂಭವನ್ನು ನಿಟ್ಟೂರು ಶ್ರೀನಿವಾಸರಾಯರ ಸರ್ಕಸ್ ಎಂದು ತಮಾಷೆಯಾಗಿ ಕರೆಯುತ್ತಿದ್ದರು. ಆಗಲೇ ವೆಂಕಣ್ಣಯ್ಯನವರು ಹುಟ್ಟಿದ ಆ 342 ಮೂರು ತಲೆಮಾರು ಊರಿನಲ್ಲಿಯೇ ಅವರ ಸ್ಮಾರಕವೊಂದನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಯಿತು. ಆದರೆ ಈ ಯೋಜನೆ ನಿಶ್ಚಿತ ರೂಪವನ್ನು ತಾಳಿದ್ದು ಶ್ರೀ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ. ವೆಂಕಣ್ಣಯ್ಯನವರ ಸ್ಮಾರಕ ಪುಸ್ತಕ ಭಂಡಾರವೊಂದನ್ನು ನಿರ್ಮಿಸಬೇಕೆಂಬ ಯೋಜನೆಯನ್ನು ಅವರು ಬೆಂಬಲಿಸಿದರು; ಪುಸ್ತಕ ಭಂಡಾರದ ಕಟ್ಟಡಕ್ಕೆ ಅಸ್ತಿಭಾರವನ್ನು ಹಾಕಿದರು. ಆಗ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀ ಹೆಚ್. ರಂಗನಾಥ್ ಮತ್ತು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಜಯತೀರ್ಥ ರಾಜಪುರೋಹಿತರು ಈ ಯೋಜನೆಯಲ್ಲಿ ತುಂಬ ಆಸಕ್ತಿ ವಹಿಸಿದ್ದರು. ಆದರೇನು? ಕಾರ್ಯ ಮುಂದುವರಿಯಲಿಲ್ಲ. ನಿಜವಾಗಿ ಕಾರ್ಯರೂಪಕ್ಕಿಳಿದು ಪುಸ್ತಕ ಭಂಡಾರ ನಿರ್ಮಾಣಗೊಂಡುದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಸನ್ಮಾನ್ಯ ಶ್ರೀ ಅಬ್ದುಲ್ ನಜೀರ್ ಸಾಹೇಬರವರ ಉದಾರದೃಷ್ಟಿಯಿಂದ, ಆಳವಾದ ಅಭಿಮಾನದಿಂದ, ಅಪಾರವಾದ ಆಸಕ್ತಿಯಿಂದ. * * * * 343 9. ಶ್ರೀಗುರುವಿಗಿದೊ ವಂದನೆ ಅದೊಂದು ದಿನ ಬೆಳಿಗ್ಗೆ ನಾನು ವೆಂಕಣ್ಣಯ್ಯನವರೊಂದಿಗೆ ವಾಕಿಂಗ್ ಹೊರಟೆ. ಹಾಗೆ ಅವರ ಜೊತೆಯಲ್ಲಿ ಹೋದಾಗಲೆಲ್ಲ ಅವರು ಯಾವುದಾದರೊಂದು ಆಧ್ಯಾತ್ಮಿಕ ಅಥವಾ ಸಾಹಿತ್ಯಿಕ ವಿಚಾರ ಹೊರತು ಬೇರಾವ ಕೀಳು ಲೌಕಿಕ ಹವ್ಯಾಸಕ್ಕೆ ಹೋಗುತ್ತಿರಲಿಲ್ಲ. ಆ ದಿನವೂ ಅವರು ಗೀತೆಯ ಮೇಲೆ, ಶ್ರೀಕೃಷ್ಣನ ಮೇಲೆ ಮಾತನಾಡುತ್ತ, ಆಡುತ್ತ ನಡೆದಿದ್ದರು. ನಮಗರಿವಿಲ್ಲದಂತೆಯೇ ಚಾಮುಂಡಿ ಬೆಟ್ಟದ ತಪ್ಪಲನ್ನು ಮುಟ್ಟಿದ್ದೆವು. ಅಂದಿನ ಅವರ ಪ್ರವಚನ ಅಷ್ಟು ಸ್ವಾರಸ್ಯವಾಗಿತ್ತು. ಅವರ ಆದ್ರ್ರ ಹೃದಯದಿಂದ ಬರುತ್ತಿದ್ದ ಜೇನ್ ಹನಿಯಂತಿದ್ದ ನುಡಿಗಳನ್ನು ಆಲಿಸುತ್ತಿದ್ದ ನನ್ನ ಚೇತನ ಬುದ್ಧನ ಹಿಂದೆ ಹೋಗುತ್ತಿದ್ದ ಆನಂದನಂತಾಗಿತ್ತು. ಆಗತಾನೇ ಪೂರ್ವ ದಿಗಂತದಲ್ಲಿ ಮೂಡುತ್ತಿದ್ದ ಸೂರ್ಯನ ಕಡೆ ನೋಡುತ್ತ ವೆಂಕಣ್ಣಯ್ಯನವರು ವಿಸ್ತಾರವಾದ ಒಂದು ಬಂಡೆಯ ಮೇಲೆ ಕುಳಿತರು ನಾನು ಅಂತರ್ಮುಖಿಯಾಗಿ ಅವರ ಬಳಿಯಲ್ಲಿ ಕುಳಿತೆ. ಅವರ ಜ್ಞಾನದ ಹರವು ಆಳಗಳನ್ನು ಮೆಲುಕು ಹಾಕುತ್ತಿದ್ದ ನನ್ನ ಮನಸ್ಸು ತಟ್ಟನೆ ಎಚ್ಚೆತ್ತು ಅವರನ್ನು ಪ್ರಶ್ನಿಸಿತು : ‘ನೀವೇಕೆ ಶ್ರೀಕೃಷ್ಣನನ್ನು ಕುರಿತು ಒಂದು ಗ್ರಂಥವನ್ನು ಬರೆಯಬಾರದು? ಅವನನ್ನು ಕುರಿತು ನೀವು ಭಾಷಣ ಮಾಡುವುದನ್ನು ಕೇಳಿದ್ದೇನೆ. ಅದು ತುಂಬ ಬೋಧಪ್ರದವಾಗಿರುತ್ತದೆ. ಇಂದಿನ ನಿಮ್ಮ ಪ್ರವಚನವಂತೂ ನನ್ನನ್ನು ಪರವಶನನ್ನಾಗಿಮಾಡಿದೆ’ ಎಂದೆ. ಅವರು ನಗುತ್ತ ‘ಏಕೆ ಬರೆಯಬೇಕು?’ ಎಂದು ಕೇಳಿದರು. ‘You must leave the foot prints on the sands of time’ ಎಂದೆ. ಅವರು ಕ್ಷಣಕಾಲ ಅಂತರ್ಮುಖಿಗಳಾಗಿದ್ದು, ಅನಂತರ ಮುಗುಳು ನಗೆಯೊಂದನ್ನು ತುಟಿಗಳ ಮೇಲೆ ಕುಣಿಸುತ್ತ ಭವಿಷ್ಯದ ತೆರೆಯನ್ನು ಓರೆಮಾಡಿ ನೋಡಿದ ಕಾರಣಪುರುಷರಂತೆ - ‘ಓಹೋ! ನಿನ್ನ ಅಣ್ಣ ಬಹು ದೊಡ್ಡವನೆಂದು ನೀನು ಭಾವಿಸಿದ್ದೀಯಲ್ಲವೆ? ನೀನೊಬ್ಬ ಶುದ್ಧ ದಡ್ಡ, ಲೋಕದ ಜನ ನನ್ನನ್ನು ಎಂದೆಂದಿಗೂ ನೆನಯುವರೆಂದು, ನೆನೆಯಬೇಕೆಂದು ಭಾವಿಸುತ್ತಿರುವೆಯಲ್ಲವೆ? ಜನ ಶ್ರೀರಾಮ ಶ್ರೀಕೃಷ್ಣನಂತಹವರನ್ನು ನೆನೆಯುವುದೇ ಕಷ್ಟ; ಈ ಯಃಕಶ್ಚಿತ್ ವೆಂಕಣ್ಣಯ್ಯನನ್ನು ನೆನೆಯಬೇಕೆ? ವೇದದ್ರಷ್ಟಾರರಂತಹವರೇ ತಮ್ಮನ್ನು ಜನ 344 ಮೂರು ತಲೆಮಾರು ನೆನೆಯಬೇಕೆಂದುಕೊಳ್ಳಲಿಲ್ಲ. ತಮ್ಮ ಹೆಸರನ್ನು ಹೇಳಿಕೊಳ್ಳಲಿಲ್ಲ. ನಾನು ಹೇಳಿಕೊಳ್ಳಬೇಕೆ? ಹೆಚ್ಚೆಂದರೆ ಕೆಲವು ಜನ ಇಪ್ಪತ್ತು ವರ್ಷ ನನ್ನನ್ನು ಜ್ಞಾಪಿಸಿಕೊಂಡಾರು. ಆಮೇಲೆ ಎಲ್ಲರಂತೆ ನಾನೂ ಮರವೆಯ ಮಹಾಸಾಗರದಲ್ಲಿ ಲೀನವಾಗಿ ಹೋಗುತ್ತೇನೆ’ ಎಂದರು. ವೆಂಕಣ್ಣಯ್ಯನವರು ಕಾಲವಾದ ಕೆಲತಿಂಗಳ ಮೇಲೆ ಒಂದು ದಿನ ಈ ವಿಚಾರವನ್ನು ಪುಟ್ಟಪ್ಪನವರಿಗೆ ತಿಳಿಸಿದೆ. ಅವರೂ ದಿ. ವೆಂಕಣ್ಣಯ್ಯನವರಂತೆಯೇ ನಕ್ಕು ‘ನಿಜ, ಹೆಸರಿನ ಶಾಶ್ವತತೆಗಿಂತಲೂ ಹಿರಿದಾದುದೂ ಇದೆಯಯ್ಯಾ. ಬದುಕು ಸಾಧಿಸುವುದಕ್ಕೆ! ಅವರೊಬ್ಬ ಮಹಾಸಾಧಕರು’ ಎಂದರು. ತಾವು ಆಗ ಬರೆಯುತ್ತಿದ್ದ ‘ಶ್ರೀರಾಮಯಣ ದರ್ಶನಂ’ ಮಹಾಕಾವ್ಯವನ್ನು ಅವರಿಗೆ ಅರ್ಪಿಸುವುದಾಗಿಯೂ ‘ಶ್ರೀರಾಮಾಯಣದರ್ಶನಂ’ ಇರುವಷ್ಟು ಕಾಲವೂ ಅವರ ಹೆಸರು ಉಳಿಯುವುದಾಗಿಯೂ ತಿಳಿಸಿದರು. ವೆಂಕಣ್ಣಯ್ಯನವರು ಸ್ವರ್ಗಸ್ಥರಾದ ಕೆಲದಿನಗಳಲ್ಲಿಯೇ ಮಾಸ್ತಿಯವರ ‘ಆದಿಕವಿ ವಾಲ್ಮೀಕಿ’ ಪ್ರಕಟವಾಯಿತು. ಅದರ ಒಂದು ಪ್ರತಿಯನ್ನು ಕವಿ ಕುವೆಂಪು ಅವರಿಗೆ ಕಳುಹಿಸಿದ್ದರು. ಕುವೆಂಪು ಮಾಸ್ತಿಯವರಿಗೆ ವಂದನೆಗಳನ್ನು ಅರ್ಪಿಸುತ್ತ ಒಂದು ಪತ್ರವನ್ನು ಬರೆದು, ಅದರಲ್ಲಿ ಹೀಗೆ ಹೇಳಿದ್ದಾರೆ - ‘ಕಿರಿಯನಾದ ನಾನು, ನನ್ನ ಹೊಗಳಿಕೆ, ಮೆಚ್ಚಿಗೆ ನಿಮಗೆ ಬೇಕು ಎಂದಲ್ಲ ಬರೆಯುತ್ತಿರುವುದು. ದಯವಿಟ್ಟು ಕ್ಷಮಿಸಿ, ನನ್ನ ಹೃದಯವನ್ನು ಬಿಚ್ಚಿ ಹೇಳುತ್ತಿದ್ದೇನೆ-ಪೂಜ್ಯ ವೆಂಕಣ್ಣಯ್ಯನವರು ಇದ್ದಿದ್ದರೆ, ಬಹುಶಃ ನಿಮಗೆ ನಾನು ಈ ಕಾಗದ ಬರೆಯುತ್ತಿರಲಿಲ್ಲ. ಅವರಿಗೇ ಇದನ್ನೆಲ್ಲ ಹೇಳಿ, ಸಂತೋಷಪಟ್ಟು ಸುಮ್ಮನಾಗುತ್ತಿದ್ದೆ. ಆದರೆ ಆ ಭಾಗ್ಯ ಈಗ ಅಲಭ್ಯ. ಅವರೂ ನಾನೂ ಸೇರಿದಾಗ ತಮ್ಮ ವಿಚಾರ ಬಹಳ ಮಾತನಾಡುತ್ತಿದ್ದೆವು. ಪ್ರಾಸಂಗಿಕವಾಗಿ ಈಗ ಆ ಕೆಲಸ ಮಾಡಲು ಬೇರೆ ಯಾರೂ ನನಗಿಲ್ಲ. ಆದ್ದರಿಂದ ನಿಮ್ಮೊಡನೆ ಹೇಳುತ್ತಿದ್ದೇನೆ. ‘ಅವರು ನಾನು ಬರೆಯುತ್ತಿರುವ ರಾಮಾಯಣದ ಭಾಗಗಳನ್ನು ಕೇಳುವುದಕ್ಕಾಗಿ ಒಂದು ದಿನ ಬೆಳಿಗ್ಗೆ ನಮ್ಮ ಮನೆಗೆ ಬಂದು, ಅಲ್ಲಿಯೇ ಇದ್ದು, ಸಾಯಂಕಾಲ ಹಿಂದಿರುಗಿ ಹೋಗಿದ್ದರು. ಆದರೆ ರಾಮಾಯಣ ಕೇಳಲಿಲ್ಲ, ಬೇರೆ ಸಣ್ಣ ಕವನಗಳನ್ನೇ ಓದುತ್ತ ಕಾಲ ಹೋಯಿತು. ಆಮೇಲೆ ಅವರು ‘ಇರಲಿ. ಈಗ ಬೇಡ ಮತ್ತೊಂದು ದಿನ ಬರುತ್ತೇನೆ. ಬೆಳಗಿನಿಂದ ಸಂಜೆಯವರೆಗೂ ಓದುವೆಯಂತೆ’ ಎಂದಿದ್ದರು. ಅವರು ಬರಲೇ ಇಲ್ಲ. ಹೋಗಿಯೇ ಬಿಟ್ಟರು. ಅವರೊಬ್ಬರ ಸಲುವಾಗಿ ಹತ್ತಾರು ವರ್ಷಗಳು ಒಂದೇ ಸಮನಾಗಿ ದುಡಿದು ಶ್ರೀಗುರುವಿಗಿದೊ ವಂದನೆ 345 ರಾಮಾಯಣವನ್ನು ಪೂರೈಸಿ, ಓದಿ ಕಡಲಿಗೆಸೆಯಲೂ ಸಿದ್ಧನಿದ್ದೆ. ಅವರೊಬ್ಬರು ಕೋಟಿ ಸಹೃದಯರಿಗೆ ಸಮಾನರಾಗಿದ್ದರು. ಕೋಟಿ ಸರಸ ಹೃದಯಗಳು ಸೇರಿ ಅವರದೊಂದು ಹೃದಯವಾಗಿತ್ತು. ಅವರನ್ನು ಕಳೆದುಕೊಂಡ ನನಗೆ ನನ್ನ ಕಾವ್ಯವನ್ನು ಕೇಳಿ, ಆನಂದಿಸುವ ಸಹೃದಯ ಸದಸ್ಯವರ್ಗದಲ್ಲಿ ಅರ್ಧಭಾಗವನ್ನೇ ಕಳೆದುಕೊಂಡಂತಾಗಿದೆ. ಆದರೆ ಒಂದು ಅಂಧಧೈರ್ಯ. ಅಂಧವಾಗಿರುವುದರಿಂದಲೇ ಭದ್ರವಾಗಿದೆ. ಅವರ ಆತ್ಮ ಮೊಟ್ಟೆಯ ಮೇಲೆ ಕಾವು ಕೂತಿದೆ. ಇಲ್ಲಿ ಒಂದು ಉತ್ತೇಜನದ ಹಸ್ತ ಮರೆಯಾದರೂ ಅಲ್ಲಿ ಮತ್ತೊಂದು ಆಶೀರ್ವಾದದ ಹಸ್ತ ನನಗೆ ಬೆಂಬಲವಾಯಿತೆಂದು ನಂಬುತ್ತೇನೆ. ನನ್ನ ರಾಮಾಯಣವು ಮುಗಿದ ಮೇಲೆ ಅದನ್ನು ಅವರ ಪವಿತ್ರ, ಪ್ರಶಾಂತವಾದ ನೆನಪಿಗೆ ನಿವೇದಿಸಬೇಕೆಂದು ಸಂಕಲ್ಪ ಮಾಡಿದ್ದೇನೆ. ಇನ್ನೂ ಹತ್ತಾರು ವರ್ಷಗಳಾಗಬಹುದು. ಈಗ ನಾಲ್ಕು ವರ್ಷಗಳಾಗಿವೆ’. ಶ್ರೀ ಕುವೆಂಪು ಅವರು ಈ ಕಾಗದವನ್ನು ಬರೆದದ್ದು ದಿನಾಂಕ : 24- 3-1939ರಂದು. ಆದಾದ ಹತ್ತು ವರ್ಷಗಳ ತರುವಾಯ ‘ಶ್ರೀ ರಾಮಾಯಣ ದರ್ಶನಂ’ ಪ್ರಕಟವಾಯಿತು. ಅದನ್ನು ಶ್ರೀ ಟಿ.ಎಸ್. ವೆಂಕಣ್ಣಯ್ಯನವರಿಗೆ ಈ ರೀತಿ ನಿವೇದಿಸಿದ್ದಾರೆ: ಶ್ರೀ ವೆಂಕಣ್ಣಯ್ಯನವರಿಗೆ, ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ. ಓ ಪ್ರಿಯಗುರುವೆ. ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ, ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತಕೃತ್ಯನಂ ಧನ್ಯನಂ ಮಾಡಿ. ನೀಮುದಯರವಿಗೈತಂದು ಕೇಳಲೆಳಸಿದಿರಂದು, ಕಿರುಗವನಗಳನೋದಿ ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ; ರಾಮಾಯಣಂ ಅದು ವಿರಾಮಾಯಣಂ ಕಣಾ!” ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ; ದಿಟದ ಮನೆಗೈದಿದಿರಿ! ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ 346 ಮೂರು ತಲೆಮಾರು ಬೇರೆ ಕಥೆಯೆಂಬಂತೆ, ಬೇರೆ ಮೈಯ್ಯಾಂತಂತೆ, ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿಮಾಡಿಹೆನ್, ನಿಮ್ಮ ಕೃಪೆಯಿಂದೆ - ಪೂರ್ವದ ಮಹಾಕವಿಗಳೆಲ್ಲರುಂ ನೆರೆದ ಸಗ್ಗದ ಸಭೆಗೆ ಪರಿಚಯಸಿರೆನ್ನನುಂ : ಸಂಘಕೆ ಮಹಾಧ್ಯಕ್ಷರಲ್ತೆ ನೀಂ? ಕಿರಿಯನಾಂ ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ! ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್ ಆಲಿಸಾ ಗುರುಕೃಪೆಯ ಶಿಷ್ಯಕೃತಿ ಸಂಕೀರ್ತಿಯಂ : “ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸಂತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ, ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ ! ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ ! ವಾಗರ್ಥರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ ಸಹೃದಯ ಹೃದಯಭಕ್ತಿ ನೈವೇದ್ಯಮಂ ಕೊಂಡು ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ ! ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ, ಪ್ರಾಣಮಯದೊಳ್ ಚರಿಸುತನ್ನ ಮಯಕವತರಿಸೆ;- ಶ್ರೀರಾಮನಾ ಲೋಕದಿಂದವತರಿಸಿ ಬಂದು ಈ ಲೋಕಸಂಭವೆಯನೆಮ್ಮ ಭೂಜಾತೆಯಂ ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ;- ರಾವಣಾವಿದ್ಯೆಯೀ ನಮ್ಮ ಮತ್ರ್ಯಪ್ರಜ್ಞೆ ತಾಂ ಶ್ರೀಗುರುವಿಗಿದೊ ವಂದನೆ 347 ತನ್ನ ತಮದಿಂ ಮುಕ್ತಮುಪ್ಪುದು, ದಿಟಂ, ನಿಮ್ಮ ದೀಪ್ಯದಯವೀಪ್ರಜ್ಞೆಯಮೃತ ಗೋಪುರಕೇರ್ವವೋಲ್! ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್ ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್!” ಶ್ರೀ ಶಂಕರಾಚಾರ್ಯರ ‘ಪ್ರಶ್ನೋತ್ತರ ಮಾಲಿಕೆ’ಯಲ್ಲಿ ಬರುವ ಈ ಎರಡು ವಾಕ್ಯಗಳು ದಿ. ವೆಂಕಣ್ಣಯ್ಯನವರ ಹೆಸರನ್ನು ಕೇಳುತ್ತಲೇ ನೆನಪಿಗೆ ಬರುತ್ತವೆ. ‘ಕಾ ಕಲ್ಪಲತಾಲೋಕೆ?’ ಲೋಕದಲ್ಲಿ ಯಾವುದು ಕಲ್ಪಲತೆ? ‘ಸಚ್ಚಿಷಾ್ಯಯಾರ್ಪಿತಾ ವಿದ್ಯಾ’ ಸಚ್ಚಿಷ್ಕನಿಗೆ ಕಲಿಸಿದ ವಿದ್ಯೆ; ಕೋ ಗುರುಃ?’ ಗುರುವೆಂಬುವವನಾರು? ‘ಅಧಿಗತತತ್ವಃ ಶಿಷ್ಯಹಿತಯೋದ್ಯತಃ ಸತತಂ’ ಯಥಾರ್ಥವನ್ನು ತಿಳಿದು ಯಾವಾಗಲೂ ಶಿಷ್ಯರ ಕ್ಷೇಮವನ್ನು ಬಯಸುವವನು. ಅಧ್ಯಾಪಕರಾದ ಪೂಜ್ಯ ವೆಂಕಣ್ಣಯ್ಯನವರಿಗೆ ಶಂಕರಾಚಾರ್ಯರು ಹೇಳುವ ಕಲ್ಪಲತೆಗಳು ದೊರೆತುವು; ಅವರು ಗುರುವಿನ ಗುಣವನ್ನು ಹೊಂದಿ, ಸದ್ಗುರುವೆಂಬ ಅಜರಾಮರವಾದ ಕೀರ್ತಿಯನ್ನು ಪಡೆದು ಧನ್ಯರಾದರು. * * * *