i ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಕಟಣೆ - 20 ಸಾಹಿತ್ಯಮಾಲೆ - 19 ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಕಥಾ ಸಂಸ್ಕೃತಿ (ಭಾಗ - 1) iii ಸಂಪಾದಕ ಕಮಲೇಶ್ವರ ಕನ್ನಡ ಅನುವಾದ ಆರ್. ಪಿ. ಹೆಗಡೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು iv KATHA SAMSKRUTI - Part-1 : An Anthology of short stories from ancient to Modern Times edited by Kamaleshwar; Kannada Translation by R.P. Hegde; Editor-in-Chief : Dr. Pradhan Gurudatta; Published by Registrar, Karnataka Anuvada Sahitya Academy ; Kannada Bhavana, J.C. Road, Bangalore - 560 002; 2007; Pp. xviii + 291, Price : Rs. 100/- © : ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮುದ್ರಣ : 2007 ಪುಟಗಳು : xviii + 291 ಬೆಲೆ : ರೂ. 100/- ಪ್ರತಿಗಳು : 3200 ಪ್ರಕಾಶಕರು : ಪಿ. ನಾರಾಯಣಸ್ವಾಮಿ ರಿಜಿಸ್ಟ್ರಾರ್ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ದೂ : 22107770 ಸಹಕಾರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮುಖಪುಟ ವಿನ್ಯಾಸ ಮತ್ತು ಚಿತ್ರ : ಶ್ರೀಪಾದ್ ಮುದ್ರಕರು : ಮೆ||ಮಯೂರ ಪ್ರಿಂಟ್ ಆಡ್ಸ್ ನಂ. 69, ಸುಭೇದಾರ್‌ಛತ್ರಂ ರಸ್ತೆ ಬೆಂಗಳೂರು - 560020 ದೂ : 23342724 v ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳು ವಿಧಾನಸೌಧ ಬೆಂಗಳೂರು - 560 001 ದಿನಾಂಕ : 15.03.2007 ಮುನ್ನುಡಿ ಕರ್ನಾಟಕ ರಾಜ್ಯ ಪುನರ್ ಘಟನೆಯ ಐವತ್ತು ವರ್ಷಗಳ ನೆನಪಿಗಾಗಿ ಕರ್ನಾಟಕ ಸರ್ಕಾರ `ಸುವರ್ಣ ಕರ್ನಾಟಕ'ದ ಸಂಭ್ರಮಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ನಿರ್ಧರಿಸಿತು. ಈ ಹೊತ್ತಿಗೆ ಸರಿಯಾಗಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಸ್ಥಾಪನೆಯ ಮೂಲಕ ಕರ್ನಾಟಕ ಸರ್ಕಾರ ಇನ್ನೊಂದು ಹೊಸ ಹೆಜ್ಜೆಯನ್ನೂ ಇಟ್ಟಿತ್ತು. ಭಾರತೀಯ ಭಾಷೆಗಳ ನಡುವಣ ಪಾರಸ್ಪರಿಕ ಅರಿವನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ನಾಡು-ನುಡಿಗಳ ಹಿರಿಮೆಯನ್ನು ಇತರ ಭಾಷಾ-ಬಾಂಧವರಿಗೆ ಹಾಗೂ ಜಾಗತಿಕ ನೆಲೆಯಲ್ಲಿ ಪರಿಚಯಿಸಿ ಕೊಡುವುದು ಮತ್ತು ಜಗತ್ತಿನ ಇತರ ಭಾಷೆಗಳ ಶ್ರೇಷ್ಠ ಸಾಹಿತ್ಯವನ್ನು ಕನ್ನಡಿಗರಿಗೆ ಒದಗಿಸುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಅನುವಾದ ಸಾಹಿತ್ಯ ಈ ಹೊತ್ತು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲದಿರುವುದರಿಂದ, ಜ್ಙಾನ- ವಿಜ್ಙಾನ-ತಂತ್ರಜ್ಙಾನಗಳ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದೂ ಇದರಲ್ಲಿ ಸೇರಿದೆ. ಇದರಿಂದ ಐತಿಹಾಸಿಕ ಹಿರಿಮೆಯ ಜೊತೆಗೆ, ಕನ್ನಡದ ಸಾಮರ್ಥ್ಯ, ವೈಶಿಷ್ಟ್ಯ, ಹಿರಿಮೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಕಂಗೊಳಿಸುವಂತಾಗುತ್ತದೆ. `ಸುವರ್ಣ ಕರ್ನಾಟಕ' ಸಂಭ್ರಮದ ಸಂದರ್ಭದಲ್ಲಿ, ಈ ಹಿಂದೆ ನಾಡು ನುಡಿಗೆ ಸೇವೆಯನ್ನು ಸಲ್ಲಿಸಿರುವ ಹಿರಿಯ ಚೇತನಗಳು ಸ್ವಪ್ರೇರಣೆಯಿಂದ ಕನ್ನಡಕ್ಕೆ ತಂದುಕೊಟ್ಟಿರುವ ಶ್ರೇಷ್ಠ ಕೃತಿಗಳಲ್ಲಿ ಆಯ್ದ ಗ್ರಂಥಗಳನ್ನು `ಸುವರ್ಣ ಅನುವಾದ ಮಾಲೆಯ' ಅಂಗವಾಗಿ ಹೊರತರಲಾಗುತ್ತಿದೆ. ಅಂತೆಯೇ, ಇತರ ಭಾಷೆಗಳಲ್ಲಿನ ಹಾಗೂ ವಿಶ್ವದಲ್ಲಿನ ಶ್ರೇಷ್ಠ ಕೃತಿಗಳನ್ನೂ ಪರಿಚಯಿಸಿ ಕೊಡಲಾಗುತ್ತಿದೆ. ಇವು ಕನ್ನಡಿಗರಿಗೆ ಪ್ರಿಯವಾಗುತ್ತವೆಂದು ನಂಬಿದ್ದೇನೆ. ಈ ಕೃತಿಗಳನ್ನು ಸಹೃದಯತೆಯಿಂದ ಸ್ವಾಗತಿಸುವ ಮೂಲಕ, ಅನುವಾದ ಸಾಹಿತ್ಯ ಅಕಾಡೆಮಿಯ ಇಂಥ ಕೆಲಸಗಳಿಗೆ ಕನ್ನಡ ನಾಡಿನ ಜನತೆ ಪ್ರೋತ್ಸಾಹ ನೀಡುತ್ತದೆ ಎಂದು ಭಾವಿಸಿದ್ದೇನೆ. (ಹೆಚ್.ಡಿ. ಕುಮಾರಸ್ವಾಮಿ) vi ಹೆಚ್.ಎಸ್. ಮಹದೇವ ಪ್ರಸಾದ್ ಕನ್ನಡ ಮತ್ತು ಸಂಸ್ಕೃತಿ ಸಚಿವರು ನಂ. 330, 3ನೇ ಮಹಡಿ, ವಿಧಾನಸೌಧ, ಬೆಂಗಳೂರು - 560 001 ದಿನಾಂಕ : 08-02-2007 ಕರ್ನಾಟಕ ಸರ್ಕಾರ ಶುಭಾಕಾಂಕ್ಷೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಅನುವಾದ ಸಾಹಿತ್ಯ ಅಕಾಡೆಮಿ, ರಾಷ್ಟ್ರದಲ್ಲಿಯೇ ಇಂಥ ಆದ್ಯ ಸಂಸ್ಥೆಯಾಗಿದ್ದು ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಕೈಗೊಂಡು, ಕನ್ನಡ ಸಾಹಿತ್ಯ ಮತ್ತು ಜ್ಙಾನ-ವಿಜ್ಙಾನ ಕ್ಷೇತ್ರಕ್ಕೆ ಅರ್ಥಪೂರ್ಣವಾದ ಕೊಡುಗೆಗಳನ್ನು ನೀಡುವ ಹಂಬಲವನ್ನು ಹೊಂದಿದೆ. ಇದರ ಸ್ಥಾಪನೆಯ ತರುಣದಲ್ಲಿಯೇ ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮದ ಉತ್ಸವವೂ ಕೂಡಿಬಂದಿರುವ ಕಾರಣದಿಂದಾಗಿ, ಅನುವಾದ ಸಾಹಿತ್ಯ ಅಕಾಡೆಮಿ ಗಾಂಧೀಜಿ, ನೆಹರೂ ಇಂಥ ಶ್ರೇಷ್ಠ ವ್ಯಕ್ತಿಗಳನ್ನು ಕುರಿತ ಮಹತ್ವದ ಕೃತಿಗಳನ್ನೇ ಅಲ್ಲದೆ, ವಿವಿಧ ಭಾಷೆಗಳಲ್ಲಿನ ಅತ್ಯುತ್ತಮ ಸಾಹಿತ್ಯ ಗ್ರಂಥಗಳನ್ನು ಮತ್ತು ಇತರ ಕೃತಿಗಳನ್ನು ಕನ್ನಡಿಗರಿಗೆ ಒದಗಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದು ನನಗೆ ತುಂಬಾ ಸಂತೋಷವನ್ನು ಉಂಟುಮಾಡಿದೆ. ಇದರಲ್ಲಿ ದೇಶ-ವಿದೇಶಗಳ ಕಥೆ-ಕಾದಂಬರಿಗಳೂ, ನಾಟಕಗಳೂ, ಮಕ್ಕಳ ಸಾಹಿತ್ಯ, ವಿಜ್ಙಾನ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳ ಕೃತಿಗಳೂ ಸೇರಿದ್ದು, ಕನ್ನಡಿಗರಿಗೆ ವೈವಿಧ್ಯಮಯ ಅನುಭವವನ್ನು ತಂದುಕೊಡುವಲ್ಲಿ ನೆರವಾಗುತ್ತವೆ ಎಂದು ನಂಬಿದ್ದೇನೆ. ಈ ಮಾಲೆಯಲ್ಲಿ ಈ ಬಗೆಯ ಇನ್ನೂ ಅನೇಕ ಕೃತಿಗಳು ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ದೊರೆಯಲಿವೆ ಎಂಬ ವಿಚಾರ ನನಗೆ ಹೆಚ್ಚಿನ ಸಂತೋಷವನ್ನು ಉಂಟುಮಾಡಿದೆ. ಇದೇ ರೀತಿ ಕನ್ನಡದ ಶ್ರೇಷ್ಠ ಕೃತಿಗಳನ್ನು ಇತರ ಭಾರತೀಯ ಭಾಷೆಗಳಿಗೆ ಹಾಗೂ ವಿದೇಶೀ ಭಾಷೆಗಳಿಗೆ ಅನುವಾದಿಸಿ ಕೊಡುವ ಕಾರ್ಯಗಳೂ ಸಾಕಷ್ಟು ಪ್ರಮಾಣದಲ್ಲಿ ನಡೆದು ಕನ್ನಡಿಗರ ಸಾಧನೆ ಜಗತ್ತಿಗೆ ಚೆನ್ನಾಗಿ ತಿಳಿದು ಬರುವಂಥ ಸಾರ್ಥಕ ಪ್ರಯತ್ನಗಳು ನಡೆಯಲಿ ಎಂದು ಹಾರೈಸುತ್ತೇನೆ. ಈಗ ಹೊರಬರುತ್ತಿರುವ ಕೃತಿಗಳಿಗೆ ಕನ್ನಡ ವಾಚಕಲೋಕದ ಸಹೃದಯಪೂರ್ಣ ಸ್ವಾಗತ ದೊರೆಯುತ್ತದೆಂದು ನಂಬಿದ್ದೇನೆ. ಇಂಥ ಸ್ವಾಗತ ಮತ್ತು ಪ್ರೋತ್ಸಾಹಗಳು ಅಕಾಡೆಮಿಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಪ್ರೇರಣೆಯನ್ನೊದಗಿಸಲಿ ಎಂದು ಹಾರೈಸುತ್ತೇನೆ. (ಹೆಚ್.ಎಸ್. ಮಹದೇವ ಪ್ರಸಾದ್) vii ಐ.ಎಂ. ವಿಠ್ಠಲಮೂರ್ತಿ, ಭಾ.ಆ.ಸೇ. ಸರ್ಕಾರದ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಹಾಗೂ ಪ್ರವಾಸೋದ್ಯಮ ಇಲಾಖೆ ಕಛೇರಿ : 22255482 22034007 ಕರ್ನಾಟಕ ಸರ್ಕಾರದ ಸಚಿವಾಲಯ ಕೊ.ನಂ.5, ನೆಲಮಹಡಿ, ವಿಕಾಸಸೌಧ, ಬೆಂಗಳೂರು-560 001 ಹೊಸ ಹೆಜ್ಜೆ ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿರುವ `ಶ್ರೀ ಕುವೆಂಪು ಭಾಷಾಭಾರತೀ' ಎಂಬ ರಾಷ್ಟ್ರೀಯ ಸಂಸ್ಥೆಯ ಒಂದು ಸ್ವತಂತ್ರ ವಿಭಾಗವಾಗಿ ಕರ್ನಾಟಕ ಸರ್ಕಾರ `ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ'ಯನ್ನು ಈಗಾಗಲೇ (2006ರಲ್ಲಿ) ಅಸ್ತಿತ್ವಕ್ಕೆ ತಂದಿದೆ. ಇಂಥ ಉಪಕ್ರಮವನ್ನು ಮೆರೆಯುವಲ್ಲಿ ಕರ್ನಾಟಕವೇ ಮೊದಲನೆಯ ರಾಜ್ಯವಾಗಿದೆ ಎಂಬುದು ಹೆಮ್ಮೆಯ ಸಂಗತಿಯೇ ಆಗಿದೆ. ಈ ಅನುವಾದ ಅಕಾಡೆಮಿ, ಪ್ರಾರಂಭಗೊಂಡ ತರುಣದಲ್ಲಿಯೇ ಕರ್ನಾಟಕ ರಾಜ್ಯದ ಪುನರ್-ರಚನೆಯ ಸುವರ್ಣ ಮಹೋತ್ಸವದ ಸಂದರ್ಭ ಕೂಡಿ ಬಂದದ್ದು ಒಂದು ವಿಶಿಷ್ಟ ಯೋಗಾಯೋಗವೇ ಆಗಿದೆ. ಈ ಸುವರ್ಣ ಮಹೋತ್ಸವದ ಸಂದರ್ಭದ ಆಚರಣೆಯ ಅಂಗವಾಗಿ ಅನುವಾದ ಅಕಾಡೆಮಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಕೈಗೊಂಡಿದೆ. ಈ ಮೊದಲೇ ವಿಭಿನ್ನ ಭಾಷೆಗಳಲ್ಲಿನ ಹಲವು ಶ್ರೇಷ್ಠ ಲೇಖಕರ ಹಲವಾರು ಶ್ರೇಷ್ಠ ಕೃತಿಗಳು ನಮ್ಮ ಸಾಹಿತಿಗಳ ಗಮನವನ್ನು ಸೆಳೆದಿದ್ದು, ಅವುಗಳ ಯಥಾವತ್ತಾದ, ಸಂಗ್ರಹರೂಪವಾದ, ಅಳವಡಿಕೆಯಂತಿರುವ ಅನುವಾದಗಳನ್ನು ಅವರು ನಮಗೆ ಕೊಡಮಾಡಿದ್ದಾರೆ. `ಒಬ್ಬನೇ ಉಂಡ ಊಟ ಹಬ್ಬವಲ್ಲ; ಒಬ್ಬನೇ ಸವಿದ ರುಚಿ ರುಚಿಯಲ್ಲ' ಎಂಬ ಗಾದೆ ಮಾತನ್ನು ಸಾರ್ಥಕಗೊಳಿಸುವಂತೆ, ಅವರು ಈ ಕೆಲಸವನ್ನು ಮಾಡಿದ್ದಾರೆ. ಇಂಥ ಪ್ರಸಿದ್ಧ, ಜನಪ್ರಿಯ, ಅಲಭ್ಯ ಕೃತಿಗಳನ್ನು `ಸುವರ್ಣ ಕರ್ನಾಟಕ' ಯೋಜನೆಯ ಅಂಗವಾಗಿ ಹೊರತರಲಾಗುತ್ತಿದೆ. ಅಂತೆಯೇ, ಇತರ ಭಾಷೆಗಳಲ್ಲಿನ ಹೊಸ ಶ್ರೇಷ್ಠ ಗ್ರಂಥಗಳನ್ನು ಕನ್ನಡಿಗರಿಗೆ ಪರಿಚಯಿಸಿಕೊಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಹೀಗೆ, ದೇಶ-ವಿದೇಶಗಳ ಉತ್ಕೃಷ್ಟ ಕೃತಿಗಳಿಂದ ಕನ್ನಡ ಭಾಷೆ-ಸಾಹಿತ್ಯಗಳನ್ನು ಸಮೃದ್ಧಗೊಳಿಸುವ ದಿಕ್ಕಿನಲ್ಲಿ ಅನುವಾದ ಅಕಾಡೆಮಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಅನುವಾದ ಇಂದು ತನ್ನ ಆಯಾಮವನ್ನು ಬಹುವಾಗಿ ವಿಸ್ತರಿಸಿಕೊಂಡು ಜ್ಙಾನ-ವಿಜ್ಙಾನ- ತಂತ್ರಜ್ಙಾನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಒಳಪಡಿಸಿಕೊಂಡಿದೆ. ಹೀಗಾಗಿ. ಈ ದಿಕ್ಕಿನಲ್ಲಿಯೂ ಕನ್ನಡವನ್ನು ಸಮೃದ್ಧಗೊಳಿಸುವತ್ತ ನಮ್ಮ ಗಮನ ಹರಿಯಬೇಕಾಗಿದೆ. ಅಕಾಡೆಮಿ ಈ ದಿಕ್ಕಿನಲ್ಲಿಯೂ ಕಾರ್ಯೋನ್ಮುಖವಾಗಿರುವುದು ಸಂತೋಷದ ವಿಚಾರವೇ ಆಗಿದೆ. ಈ ಬಗೆಯ ಬಹುಮುಖೀ viii ಕಾರ್ಯಚಟುವಟಿಕೆಗಳಿಂದ ಭಾರತೀಯ ಭಾಷೆಗಳಲ್ಲಿ ಈಗಾಗಲೇ ತನ್ನದೇ ಆದ ಹಿರಿಮೆಯನ್ನು ಮೆರೆದಿರುವ, ಮೆರೆಯುತ್ತಿರುವ ಕನ್ನಡ ಭಾಷೆ-ಸಾಹಿತ್ಯ ಮತ್ತಷ್ಟು ಕಂಗೊಳಿಸುವಂತಾಗುತ್ತದೆ. ಅನೇಕ ಮಹತ್ವದ ಗ್ರಂಥಗಳು ದೊರೆಯುವಂತಾಗುತ್ತಿರುವುದು ವೈಯಕ್ತಿಕವಾಗಿಯೂ ನನಗೆ ಸಂತೋಷವನ್ನು ಉಂಟುಮಾಡುತ್ತಿದೆ. ಇಂಥ ಕಾರ್ಯಗಳಿಗೆ ಸರ್ಕಾರದ ಬೆಂಬಲದ ಜೊತೆಗೆ, ಜನತೆಯ ಹೃತ್ಪೂರ್ವಕ ಪ್ರೋತ್ಸಾಹವೂ ಅಗತ್ಯವಾಗುತ್ತದೆ. ವಿವೇಚನಾಶೀಲರೂ, ಸಹೃದಯರೂ ಆದ ಕನ್ನಡಿಗರು ಇಂಥ ಪ್ರೋತ್ಸಾಹ ನೀಡುವಲ್ಲಿ ಮುಂದಾಗುತ್ತಾರೆ ಎಂದು ನಂಬಿದ್ದೇನೆ. ಅಕಾಡೆಮಿಯ ಕಾರ್ಯಚಟುವಟಿಕೆಗಳು ಇತೋಪ್ಯತಿಶಯವಾಗಿ ಮುಂದುವರಿಯಲಿ ; ಕರ್ನಾಟಕದ ಜನತೆಗೆ ಹೊಸ ಅನುಭವಗಳ ಲೋಕವನ್ನು ತೆರೆದು ತೋರುವ ಕಾರ್ಯಗಳು ಅವಿಚ್ಛಿನ್ನವಾಗಿ ನಡೆಯಲಿ ಎಂದು ಈ ಸಂದರ್ಭದಲ್ಲಿ ಹಾರೈಸಬಯಸುತ್ತೇನೆ. (ಐ.ಎಂ. ವಿಠ್ಠಲಮೂರ್ತಿ) ix ಪ್ರಸ್ತಾವನೆ ಭಾರತದಲ್ಲಿ ಯಾವುದೇ ರಾಜ್ಯವೊಂದರಲ್ಲಿ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಮೊಟ್ಟಮೊದಲ ಬಾರಿಗೆ ಸ್ಥಾಪಿಸಿದ ಹಿರಿಮೆ ಕರ್ನಾಟಕ ಸರ್ಕಾರದ್ದಾಗಿದೆ. ಜನವರಿ 6, 2006ರಂದು ಅಂದಿನ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರ್ಮಸಿಂಗ್ ಅವರು ವಿಧ್ಯುಕ್ತವಾಗಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಉದ್ಘಾಟಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳೂ ಹಾಗೂ ಭಾಷಾಂತರವನ್ನು ವಿಶ್ವವಿದ್ಯಾಲಯದ ಹಂತದಲ್ಲಿ ಶಿಕ್ಷಣ ವಿಷಯವಾಗಿ ಅಳವಡಿಸಿದ ಭಾಷಾಂತರ ಕ್ಷೇತ್ರದ ಭೀಷ್ಮಾಚಾರ್ಯರೂ ಆದ ಪ್ರೊ||ದೇ. ಜವರೇಗೌಡ ಅವರೂ, ಹಿರಿಯ ವಿದ್ವಾಂಸರಾದ ಪ್ರೊ|| ಎಲ್.ಎಸ್. ಶೇಷಗಿರಿರಾವ್ ಅವರೂ ಅಕಾಡೆಮಿಯ ಕಾರ್ಯಚಟುವಟಿಕೆಗಳ ದಿಕ್ಕು-ದೆಸೆಗಳನ್ನು ನಿರ್ದೇಶಿಸಿದರು. ನಮ್ಮ ನಾಡಿನಲ್ಲಿರುವ ವಿಚಿತ್ರ ಪರಿಸ್ಥಿತಿ ಎಂದರೆ ವಿದೇಶೀಯ ಭಾಷಾಸಾಹಿತ್ಯಗಳ ಅಷ್ಟಿಷ್ಟು ಪರಿಚಯವಾದರೂ ಇರುವ ನಮಗೆ ನಮ್ಮ ನಾಡಿನ ನೆರೆಹೊರೆಯ ಭಾಷೆಗಳಲ್ಲಿನ ಶ್ರೇಷ್ಠ ಸಾಹಿತ್ಯದ, ಶ್ರೇಷ್ಠ ಸಾಹಿತಿಗಳ ಪರಿಚಯ ಬಹುಮಂದಿಗೆ ಇಲ್ಲವೇ ಇಲ್ಲದಂತಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಇತರ ಕೆಲವು ರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಅನುವಾದಗಳನ್ನು ಹೊರತರುವ ಕೆಲವು ಯೋಜನೆಗಳನ್ನು ಕೈಗೊಳ್ಳುತ್ತಿರುವುದುಂಟು. ಆದರೆ, ಈ ಕಾರ್ಯಗಳು ಅಪೇಕ್ಷಣೀಯ ಪ್ರಮಾಣದಲ್ಲಿ ಹಾಗೂ ಪರಸ್ಪರ ಪೂರಕವಾಗುವ ರೀತಿಯಲ್ಲಿ ಆಗುತ್ತಿಲ್ಲ. ಮೇಲಾಗಿ ಈ ಕಾರ್ಯಕ್ರಮಗಳು ಬಹುಮಟ್ಟಿಗೆ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿವೆ. ಹೀಗಾಗಿ, ಪರಸ್ಪರ ಕೊಳು-ಕೊಡೆಯ ಕಾರ್ಯಕ್ರಮಗಳು ಹೆಚ್ಚು-ಹೆಚ್ಚಾಗಿ ಹಾಗೂ ವೈವಿಧ್ಯಮಯವಾಗಿ ಆಗಬೇಕಾದ ಅಗತ್ಯವೂ ಇದೆ. ಭಾರತೀಯ ಭಾಷಾಸಾಹಿತ್ಯಗಳು ಸಮೃದ್ಧವಾಗಿ ಬೆಳೆಯಬೇಕಾದರೆ, ಎರಡು ಮುಖಗಳಲ್ಲಿ ಕಾರ್ಯಗಳು ಆಗಬೇಕಾಗಿದೆ : (1) ರಾಷ್ಟ್ರೀಯ ಮಟ್ಟದಲ್ಲಿ; (2) ಅಂತಾರಾಷ್ಟ್ರೀಯ ಮಟ್ಟದಲ್ಲಿ. ರಾಷ್ಟ್ರೀಯ ಸ್ತರದಲ್ಲಿ ನಮ್ಮ ಭಾಷಾ ಸಾಹಿತ್ಯವನ್ನು ಬಿಂಬಿಸುವ ಕೆಲಸ ಎಷ್ಟು ಮುಖ್ಯವೋ, ಇತರ ಭಾಷೆಗಳಲ್ಲಿನ ಶ್ರೇಷ್ಠ ಸಾಹಿತ್ಯವನ್ನು ಕನ್ನಡಕ್ಕೆ ತಂದುಕೊಳ್ಳುವುದು ಅಷ್ಟೇ ಮುಖ್ಯ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಹತ್ವದ ಸಾಹಿತ್ಯವನ್ನು ಕನ್ನಡಕ್ಕೆ ತಂದುಕೊಳ್ಳುವುದು ಹಾಗೂ ಕನ್ನಡ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದೂ ಅಷ್ಟೇ ಮುಖ್ಯ. ಈ ದೃಷ್ಟಿಯಿಂದ ನೊಬೆಲ್ ಪ್ರಶಸ್ತಿ, ಬೂಕರ್ ಪ್ರಶಸ್ತಿ, ಜ್ಙಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮೊದಲಾದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿರುವ ಲೇಖಕರ ಮಹತ್ವದ ಕೃತಿಗಳನ್ನು ಇತರ ಭಾಷೆಗಳಲ್ಲಿ ಹೊರತರುವ ಯೋಜನೆಗಳನ್ನು ಅನುವಾದ ಸಾಹಿತ್ಯ ಅಕಾಡೆಮಿ ತಮ್ಮ ಮುಂದಿರಿಸಿಕೊಂಡಿದೆ. ಅಷ್ಟೇ x ಅಲ್ಲದೆ, ವಿಜ್ಙಾನ-ತಂತ್ರಜ್ಙಾನ, ವೈದ್ಯಕೀಯ, ಮಾನವಿಕ ಮೊದಲಾದ ಕ್ಷೇತ್ರಗಳಲ್ಲಿನ ಶ್ರೇಷ್ಠ ಕೃತಿಗಳನ್ನು ಕನ್ನಡದಲ್ಲಿ ತರುವ ಯೋಜನೆಗಳೂ ಅಕಾಡೆಮಿಯ ಮುಂದಿವೆ. ಇತರ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ, ಅಂತೆಯೇ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗ, ಕೇಂದ್ರೀಯ ಹಿಂದೀ ನಿರ್ದೇಶನಾಲಯ, ವೈಜ್ಙಾನಿಕ ಮತ್ತು ತಾಂತ್ರಿಕ ಪಾರಿಭಾಷಿಕ ಪದಾವಲಿ ಆಯೋಗ ಇತ್ಯಾದಿ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಈ ದಿಕ್ಕಿನಲ್ಲಿ ಸಹಕಾರವನ್ನು ಪಡೆದುಕೊಳ್ಳುವ ಆಲೋಚನೆಯನ್ನೂ ಅಕಾಡೆಮಿ ಇರಿಸಿಕೊಂಡಿದೆ. ಅಕಾಡೆಮಿಯ ಕಾರ್ಯಚಟುವಟಿಕೆಗಳ ಅಂಗವಾಗಿ ಕಾರ್ಯಶಿಬಿರಗಳನ್ನು ಆಯೋಜಿಸಿ, ಅನುವಾದದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ, ಸಮರ್ಥ ಭಾಷಾಂತರಕಾರರನ್ನು ಗುರುತಿಸುವ ಪ್ರಯತ್ನಗಳನ್ನು ಅಕಾಡೆಮಿ ಮಾಡುತ್ತಿದೆ. ಈಗಾಗಲೇ ಕನ್ನಡ-ತೆಲುಗು, ಕನ್ನಡ-ಹಿಂದೀ, ಯಂತ್ರಾನುವಾದ, ವಿಜ್ಙಾನ ಸಾಹಿತ್ಯ ಅನುವಾದ ಇವುಗಳಿಗೆ ಸಂಬಂಧಿಸಿದಂತೆ ರಾಜ್ಯದ ಬೇರೆ-ಬೇರೆ ಕೇಂದ್ರಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯಶಿಬಿರಗಳನ್ನೂ, ವಿಚಾರಗೋಷ್ಠಿಗಳನ್ನೂ ನಡೆಸಲಾಗಿದೆ. ಉರ್ದೂ ಮತ್ತು ತಮಿಳು ಭಾಷೆಗಳ ಕಾರ್ಯಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಭಾಷಾಂತರ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಕ್ಕೆ ತೆಗೆದುಕೊಂಡು ಆ ದಿಕ್ಕಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಆಲೋಚನೆಯೂ ಇದೆ. ಇತ್ತೀಚೆಗೆ ಸ್ಯಾಮ್ ಪಿಟ್ರೋಡಾ ಅವರು ‘ರಾಷ್ಟ್ರೀಯ ಅನುವಾದ ಮಿಷನ್’ (National Translation Mission) ಅನ್ನು ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯೋಜನೆಯೊಂದನ್ನು ಸಲ್ಲಿಸಿದ್ದು, ಕೇಂದ್ರ ಸರ್ಕಾರ ಆ ಯೋಜನೆಯನ್ನು ಒಪ್ಪಿಕೊಂಡಿರುವ ವಿಚಾರ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ, ಜ್ಙಾನ-ವಿಜ್ಙಾನ-ತಂತ್ರಜ್ಙಾನಗಳು ಜನಸಾಮಾನ್ಯರವರೆಗೂ ಯಶಸ್ವಿಯಾಗಿ ಮುಟ್ಟುವುದು ಸಾಧ್ಯವಾಗುತ್ತದೆ ಹಾಗೂ ರಾಷ್ಟ್ರದ ಪ್ರಗತಿಯೂ ಅಭೂತಪೂರ್ವ ರೀತಿಯಲ್ಲಿ ಆಗುತ್ತದೆ ಎಂದು ಆಶಿಸಲಾಗಿದೆ. ಈ ಯೋಜನೆ ಉದ್ಯೋಗಸೃಷ್ಟಿಯ ಮಹತ್ತರ ಯೋಜನೆಯೂ ಆಗಲಿದೆ. ಇಂಥ ಸಂದರ್ಭದಲ್ಲಿ ಅಗತ್ಯವಾಗುವ ಲಕ್ಷಾಂತರ ಮಂದಿ ಅನುವಾದಕರ ಪಡೆಯನ್ನು ಸಿದ್ಧಪಡಿಸುವುದು ಇಂಥ ಸಂಸ್ಥೆಗಳ ಮತ್ತು ವಿಶ್ವವಿದ್ಯಾನಿಲಯಗಳ ಹೊಣೆಯೇ ಆಗಿರುತ್ತದೆ. ರಾಜ್ಯದ ಹಾಗೂ ಹೊರಗಿನ ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಭಾಷಾಂತರ ವಿಭಾಗಗಳು ಸ್ಥಾಪಿತವಾಗಿದ್ದು, ಅವು ಕಾರ್ಯಶೀಲವಾಗುತ್ತಿರುವುದು ಶುಭಸೂಚಕವಾಗಿದೆ. ಇದುವರೆಗೆ ವಿದ್ವಾಂಸರ ವೈಯಕ್ತಿಕ ಪಾಂಡಿತ್ಯ, ವ್ಯುತ್ಪತ್ತಿ ಮತ್ತು ಒಲವನ್ನು ಆಧರಿಸಿ ಅನುವಾದ ಕಾರ್ಯಗಳು ನಡೆಯುತ್ತಾ ಬಂದಿವೆ. ಆದರೆ ಇಂಥ ಕಾರ್ಯಗಳು ವ್ಯವಸ್ಥಿತವಾಗಿ ಹಾಗೂ ಉತ್ತಮ ಗುಣಮಟ್ಟದೊಂದಿಗೆ ನಡೆಯಬೇಕಾದ್ದು ಅಪೇಕ್ಷಣೀಯವಾಗಿರುವ ಹಿನ್ನೆಲೆಯಲ್ಲಿ, ಭಾಷಾಂತರ ಸಂಬಂಧವಾದ ಶಿಕ್ಷಣ-ಕ್ರಮಗಳನ್ನು ರೂಪಿಸುವುದು ಹಾಗೂ ದ್ವಿಭಾಷಾ ಮತ್ತು ಬಹುಭಾಷಾ ನಿಘಂಟುಗಳನ್ನು, ನುಡಿಗಟ್ಟುಗಳ ಮತ್ತು ಗಾದೆಗಳ ಕೋಶಗಳು, ಸಮಾನಾರ್ಥಕ ಮತ್ತು ಭಿನ್ನಾರ್ಥಕ ಕೋಶಗಳು ಹಾಗೂ ವಾಕ್ಯರಚನಾ ಕೈಪಿಡಿಗಳನ್ನು ಹೊರತರುವುದು - ಇವೇ ಮೊದಲಾದ ಕಾರ್ಯಗಳು ಆದ್ಯತೆಯ ಮೇರೆಗೆ ನಡೆಯಬೇಕಾಗಿದೆ. ಅನುವಾದ ಅಕಾಡೆಮಿ ಸ್ಥಾಪಿತವಾದ ಅತ್ಯಲ್ಪ ಅವಧಿಯಲ್ಲಿಯೇ xi ಇತರ ಸಂಘ-ಸಂಸ್ಥೆಗಳ ಗಮನವನ್ನು ಸೆಳೆದಿದ್ದು, ಅಂತರರಾಷ್ಟ್ರೀಯ ಕನಕದಾಸ ಮಿಷನ್‍ನಂತಹ ಸಂಸ್ಥೆ ಅನುವಾದ ಅಕಾಡೆಮಿಯೊಂದಿಗೆ ಸಹಕರಿಸಲು ಮುಂದೆ ಬಂದಿರುವುದು ಗಮನಾರ್ಹವಾದ ವಿಚಾರವೇ ಆಗಿದೆ. ಅಂತೆಯೇ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಇಂಜಿನಿಯರಿಂಗ್ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕನ್ನಡದಲ್ಲಿ ಹೊರತರುವ ಬಗ್ಗೆಯೂ ಆಲೋಚನೆ ಮಾಡಲಾಗುತ್ತಿದೆ. ಹೀಗೆ ಅನುವಾದ ಅಕಾಡೆಮಿ ಅನೇಕ ದಿಕ್ಕುಗಳಲ್ಲಿ ಮುಂದುವರಿದು ಸಾಧನೆ ಮಾಡಬೇಕಾಗಿದೆ. ಕರ್ನಾಟಕ ಸರ್ಕಾರ ಅನುವಾದ ಅಕಾಡೆಮಿಯ ವಿಷಯದಲ್ಲಿ ವಿಶೇಷವಾದ ಆಸಕ್ತಿಯನ್ನು ತೋರಿ ಅಗತ್ಯವಾದ ನೆರವನ್ನು ನೀಡಲು ಮುಂದೆ ಬಂದಿರುವುದು ಅಕಾಡೆಮಿಗೆ ವಿಶೇಷ ಸಂತೋಷದ ವಿಚಾರವೇ ಆಗಿದೆ. ಅದರಲ್ಲಿಯೂ ಈ ಬಾರಿ ಸುವರ್ಣ ಕರ್ನಾಟಕ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಧನಸಹಾಯ ನೀಡಿರುವುದರಿಂದ ಪ್ರಸಿದ್ಧ/ಅಲಭ್ಯ ಅನುವಾದಗಳ ಮರುಪ್ರಕಟಣೆ ಕಾರ್ಯವನ್ನು ಕೈಗೊಳ್ಳುವುದು, ಮತ್ತಿತರ ಮಹತ್ವದ ಪ್ರಕಟಣೆಗಳನ್ನು ಕೈಗೊಳ್ಳುವುದು ಸಾಧ್ಯವಾಗಿದೆ. ಈ ದಿಕ್ಕಿನಲ್ಲಿ ನಾಡಿನ ವಿದ್ವಾಂಸರು ವಿಶೇಷವಾದ ಸಹಾಯ-ಸಹಕಾರಗಳನ್ನು ನೀಡಲು ಮುಂದೆ ಬಂದಿರುವುದು ಅಕಾಡೆಮಿಗೆ ಗೌರವದ, ಸಂತೋಷದ ಹಾಗೂ ಹೆಮ್ಮೆಯ ವಿಚಾರವೇ ಆಗಿದೆ. ಈ ಸಂದರ್ಭದಲ್ಲಿ ವಿಲ್ ಡ್ಯೂರಾಂಟ್ ಅವರ ಜಗತ್-ಪ್ರಸಿದ್ಧವಾಗಿರುವ ಹಾಗೂ ಭಾರತದ ಬೇರಾವ ಭಾಷೆಯಲ್ಲೂ ಇನ್ನೂ ಬೆಳಕು ಕಾಣದಿರುವ ‘ದಿ ಸ್ಟೋರಿ ಆಫ್ ಸಿವಿಲಿಜೇಷನ್’ ಸಂಪುಟಗಳ ಕನ್ನಡ ಅನುವಾದವನ್ನು ಹೊರತರುವಲ್ಲಿ ಪ್ರೊ|| ಎಲ್.ಎಸ್. ಶೇಷಗಿರಿರಾವ್ ಅವರೂ, ಬಹಳ ಹಿಂದೆಯೇ ಇಂಗ್ಲಿಷ್ನಲ್ಲಿ 10 ಸಂಪುಟಗಳಲ್ಲಿ ಪ್ರಕಟಣೆಗೊಂಡಿರುವ ಸಂಸ್ಕೃತ ಸಾಹಿತ್ಯದ ವಿಶಿಷ್ಟ ಕೃತಿಯಾದ ಸೋಮದೇವನ ‘ಕಥಾಸರಿತ್ಸಾಗರ’ದ ಕನ್ನಡ ಅನುವಾದವನ್ನು ನೇರವಾಗಿ ಸಂಸ್ಕೃತದಿಂದ ಅನುವಾದಿಸಿ ಹೊರತರುವಲ್ಲಿ ಡಾ||ಪಿ.ಎಸ್.ರಾಮಾನುಜಮ್ ಅವರೂ ನೆರವು ನೀಡುತ್ತಿರುವುದು ವಿಶೇಷವಾಗಿ ಸ್ಮರಣೀಯವಾಗಿದೆ. ಕನ್ನಡ ಸಹೃದಯ ಲೋಕ ಅಕಾಡೆಮಿಯ ಈ ಕಾರ್ಯಚಟುವಟಿಕೆಗಳ ವಿಷಯದಲ್ಲಿ ತನ್ನ ಸಹೃದಯತೆಯನ್ನು ಮೆರೆಯುತ್ತದೆ ಎಂದು ಆಶಿಸಿದ್ದೇನೆ. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಧರ್ಮಸಿಂಗ್ ಅವರಿಗೂ, ಅಕಾಡೆಮಿಯ ಕಾರ್ಯಚಟುವಟಿಕೆಗಳ ವಿಷಯದಲ್ಲಿ ವಿಶೇಷ ಆಸಕ್ತಿಯನ್ನು ತೋರಿ, ಎಲ್ಲ ನೆರವನ್ನು ನೀಡುತ್ತಿರುವ ಇಂದಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಮಹದೇವ ಪ್ರಸಾದ್ ಅವರಿಗೂ ಅಕಾಡೆಮಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತದೆ. ಅಕಾಡೆಮಿಯ ಕಾರ್ಯಚಟುವಟಿಕೆಗಳಿಗೆ ಎಲ್ಲ ಬಗೆಯ ಸಹಾಯ-ಸಹಕಾರ-ಮಾರ್ಗದರ್ಶನ ನೀಡುತ್ತಾ ಬಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಮುಖ ಕಾರ್ಯದರ್ಶಿಗಳಾಗಿದ್ದ ಶ್ರೀಮತಿ ಉಷಾ ಗಣೇಶ್ ಅವರಿಗೂ, ಚೈತನ್ಯಶೀಲರೂ, ದೂರಗಾಮಿ ದೃಷ್ಟಿಯನ್ನುಳ್ಳವರೂ ಆದ ಇಂದಿನ ಕಾರ್ಯದರ್ಶಿಗಳಾದ ಶ್ರೀ ಐ.ಎಂ.ವಿಠ್ಠಲಮೂರ್ತಿ ಅವರಿಗೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ xii ಹಿಂದಿನ ಆಯುಕ್ತರಾಗಿದ್ದ ಶ್ರೀ ಕೆ.ಆರ್.ನಿರಂಜನ್ ಮತ್ತು ಶ್ರೀ ಎಸ್.ಎಫ್. ಯೋಗಪ್ಪನವರ್ ಅವರಿಗೂ, ನಿರ್ದೇಶಕರಾಗಿರುವ ಶ್ರೀ ಕಾ.ತ. ಚಿಕ್ಕಣ್ಣ ಅವರಿಗೂ ಅಕಾಡೆಮಿ ವಿಶೇಷ ವಂದನೆಗಳನ್ನು ಸೂಚಿಸಬಯಸುತ್ತದೆ. ಅಕಾಡೆಮಿಯ ಕಾರ್ಯಚಟುವಟಿಕೆಗಳಿಗೆ ಎಲ್ಲ ಸಹಾಯ, ಸಹಕಾರ ಮತ್ತು ಮಾರ್ಗದರ್ಶನ ಮಾಡುತ್ತಿರುವ ಅಕಾಡೆಮಿಯ ಎಲ್ಲ ಗೌರವಾನ್ವಿತ ಸದಸ್ಯರಿಗೂ ನಮ್ಮ ವಂದನೆಗಳು ಸಲ್ಲುತ್ತವೆ. ಹಿಂದಿಯ ಖ್ಯಾತ ಲೇಖಕರಾದ ಶ್ರೀ ಕಮಲೇಶ್ವರ್ (1933-2007) ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿರುವ ವಿರಳ ಲೇಖಕರಲ್ಲಿ ಒಬ್ಬರು. `ಕಿತನೇ ಪಾಕೀಸ್ತಾನ್' ಮೊದಲಾದ ಕಾದಂಬರಿಗಳು, `ಜಾರ್ಜ್ ಪಂಚಮ್ ಕೀ ನಾಕ್' ಮೊದಲಾದ ಹಲವಾರು ಕಥಾಸಂಕಲನಗಳು, ವಿಮರ್ಶೆ, ಪ್ರವಾಸ ಕಥನ, ದಿನಚರಿ (ಬಾಂಗ್ಲಾ ದೇಶದ ಯುದ್ಧ ಮತ್ತು ದೇಶ-ದೇಶಾಂತರ) ಮೊದಲಾದ ವೈವಿಧ್ಯಮಯ ಸಾಹಿತ್ಯವನ್ನು ಸೃಷ್ಟಸಿರುವ ಶ್ರೀಯುತರು ಹಿಂದಿಯ ಹಲವಾರು ಅತ್ಯಂತ ಪ್ರಭಾವಿ ಪತ್ರಿಕೆಗಳು ಸಂಪಾದಕರೂ ಆಗಿದ್ದರು. ಇಂಗ್ಲೆಂಡ್, ಜರ್ಮನಿ, ಸ್ವಿಜರ್ಲೆಂಡ್, ಫ್ರಾನ್ಸ್, ಇಟಲಿ, ಸೋವಿಯಟ್ ರಷ್ಯಾ, ಚೀನಾ, ಪಾಕಿಸ್ತಾನ ಮೊದಲಾದ ದೇಶಗಳಲ್ಲಿ ಸಂಚರಿಸಿರುವ ಅವರು ಕೇಂದ್ರ ಸಾಹಿತ್ಯ ಅಕಾದೆಮಿ ಮತ್ತಿತರ ಹಲವು ಹತ್ತು ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ಆಳವಾದ ಅಧ್ಯಯನ, ವ್ಯಾಪಕವಾದ ಪ್ರವಾಸ, ಹಲವಾರು ಭಾಷಾ-ಸಾಹಿತ್ಯಗಳ ಪರಿಚಯ-ಇವುಗಳ ಫಲವಾಗಿಯೇ ಜಾಗತಿಕ ಕಥಾಸಾಹಿತ್ಯದ ಒಂದು ಸಮಗ್ರ ನೋಟವನ್ನು ನೀಡಬಲ್ಲಂಥ `ಕಥಾ ಸಂಸ್ಕೃತಿ' ಯಂಥ ಮಹತ್ವದ ಗ್ರಂಥವನ್ನು ಮಿತ್ರರ ನೆರವಿನೊಂದಿಗೆ ಸಂಪಾದಿಸಿದರು. ಇದರ ವೈಶಿಷ್ಟ್ಯ-ಉಪಯುಕ್ತತೆಗಳನ್ನು ಮನಗಂಡ ಭಾರತೀಯ ಜ್ಞಾನಪೀಠ 2006ರಲ್ಲಿಯೇ ಇದನ್ನು ಪ್ರಕಟಿಸಿತು. ಭಾರತೀಯ ಭಾಷೆಗಳಲ್ಲೇ ಇಂಥ ಬಹು-ಆಯಾಮದ ಇನ್ನೊಂದು ಗ್ರಂಥ ಬಂದಿಲ್ಲವೆಂಬುದು ಇದರ ವೈಶಿಷ್ಟ್ಯ - ಮಹತ್ವಗಳನ್ನು ಸಾರಿ ಹೇಳುತ್ತದೆ. ಗ್ರೀಕ್-ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳಲ್ಲಿನ ಕಥೆಗಳಿಂದ ಹಿಡಿದು ಆಧುನಿಕ ಭಾರತೀಯ ಭಾಷೆಗಳವರೆಗೆ ವಿವಿಧ ಧರ್ಮ-ಸಂಸ್ಕೃತಿಗಳಿಗೆ ಸಂಬಂಧಿಸಿದ ಬೃಹತ್ ಕಥಾಲೋಕವೇ ಇಲ್ಲಿನ ಹನ್ನೊಂದು ಭಾಗಗಳಲ್ಲಿ ತೆರೆದುಕೊಳ್ಳುತ್ತದೆ. ಇಷ್ಟಾಗಿಯೂ ಭಾರತೀಯ ಕಥಾ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುವ ಕನ್ನಡ, ಮಲೆಯಾಳಂನಂಥ ಮಹತ್ವದ ಭಾಷೆಗಳ ಪ್ರಾತಿನಿಧಿಕ ಕಥೆಗಾರರ ಕಥೆಗಳಾವುವೂ ಇದರಲ್ಲಿ ಸೇರ್ಪಡೆಗೊಳ್ಳದಿರುವುದು ಒಂದು ಬಹು ದೊಡ್ಡ ಕೊರತೆಯೇ ಆಗಿದೆ. ಸಂಸ್ಕೃತದಲ್ಲೇ ಇಂದು ಅಲಭ್ಯವಾಗಿರುವ `ಪಂಚತಂತ್ರ'ದ ಆವೃತ್ತಿಯನ್ನು ಹೊಂದಿರುವ, `ವಡ್ಡಾರಾಧನೆ'ಯಂಥ ಜೈನ ಕಥೆಗಳ ಭಂಡಾರವನ್ನೇ ಕಾಣಿಕೆಯನ್ನಾಗಿ ನೀಡಿರುವ, ಆಧುನಿಕ ಕಥಾ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟಿರುವ ಕನ್ನಡ ಸಾಹಿತ್ಯದ ಉಲ್ಲೇಖವೇ ಇಲ್ಲದಿರುವುದು ಆಶ್ಚರ್ಯ-ವಿಷಾದಗಳನ್ನುಂಟು ಮಾಡುತ್ತದೆ. ಇಷ್ಟಾಗಿಯೂ ಈ ಗ್ರಂಥ ಗಣನೀಯವೇ ಆಗಿದೆ. ಇದನ್ನು ಕನ್ನಡದಲ್ಲಿ ಹೊರತರುವ ನಮ್ಮ ಯೋಜನೆಗೆ ಸಂಪೂರ್ಣ ಸಹಕಾರ ನೀಡಿ, ನಿಃಶುಲ್ಕವಾಗಿ ಪ್ರಕಟಣೆಯ ಹಕ್ಕುಗಳನ್ನು ನೀಡಿದ ಕಮಲೇಶ್ವರ್ ಅವರಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕೃತಜ್ಞವಾಗಿದೆ. ಈ ಕೃತಿಯ ಕನ್ನಡ ಆವೃತ್ತಿ ಪ್ರಕಟವಾಗುವ ಮುನ್ನವೇ ಕಮಲೇಶ್ವರ್ ಅವರು ತೀರಿಕೊಂಡಿದ್ದು ಅಕಾಡೆಮಿಗೆ ತುಂಬ ವ್ಯಥೆಯನ್ನುಂಟುಮಾಡಿದೆ. xiii ಈ ಬೃಹತ್ ಸಂಪುಟವನ್ನು ಅನುವಾದಿಸಿಕೊಟ್ಟಿರುವ ಶ್ರೀ ಆರ್.ಪಿ. ಹೆಗಡೆ ಅವರಿಗೆ ಅಕಾಡೆಮಿ ವಂದನೆಗಳನ್ನು ಸಲ್ಲಿಸುತ್ತದೆ. ಸಂಪುಟದ ಬೃಹದಾಕಾರವನ್ನು ಗಮನಿಸಿ, ಇದನ್ನು ಮೂರು ಭಾಗಗಳಲ್ಲಿ ಪ್ರಕಟಿಸಲಾಗುತ್ತಿದೆ. ಮೊದಲನೆಯ ಭಾಗದಲ್ಲಿ ಮೂರು ಖಂಡಗಳನ್ನೂ (291 ಪುಟಗಳು), ಎರಡನೆಯ ಭಾಗದಲ್ಲಿ ನಾಲ್ಕರಿಂದ ಒಂಬತ್ತರವರೆಗಿನ ಆರು ಖಂಡಗಳನ್ನೂ (167 ಪುಟಗಳು), ಮೂರನೆಯ ಭಾಗದಲ್ಲಿ ಹತ್ತು ಮತ್ತು ಹನ್ನೊಂದನೆಯ ಖಂಡಗಳನ್ನೂ (287 ಪುಟಗಳು) ಅಳವಡಿಸಲಾಗಿದೆ. ಹೀಗೆ ವಿಭಜಿಸುವಾಗ ವೈಚಾರಿಕ ಪರಿಪೂರ್ಣತೆಯನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ. ಅನುವಾದ ಅಕಾಡೆಮಿಯ ಕೆಲಸ-ಕಾರ್ಯಗಳಲ್ಲಿ ಹಾಗೂ ಪ್ರಕಟಣೆಯ ವಿಚಾರದಲ್ಲಿ ಹೃತ್ಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅಕಾಡೆಮಿಯ ರಿಜಿಸ್ಟ್ರಾರ್ ಪಿ. ನಾರಾಯಣಸ್ವಾಮಿ ಮತ್ತು ಇವರ ಸಿಬ್ಬಂದಿವರ್ಗದವರಿಗೂ, ಈ ಬೃಹತ್ ಸಂಪುಟದ ಅನುವಾದ ಕಾರ್ಯವನ್ನು ಸಾಕಷ್ಟು ತೃಪ್ತಿಕರವಾಗಿ ನಿರ್ವಹಿಸಿರುವ ಶ್ರೀ ಆರ್.ಪಿ. ಹೆಗಡೆ ಅವರಿಗೂ, ತಮ್ಮ ಅನೇಕ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ತಾಳ್ಮೆಯಿಂದ ಕರಡು ಪರಿಶೀಲನೆಯಲ್ಲಿ ನಮಗೆ ನೆರವಾಗಿರುವ ಶ್ರೀ ಅ.ಲ. ನರಸಿಂಹನ್ ಅವರಿಗೂ, ಸುಂದರವಾಗಿ ಮುದ್ರಿಸುವಲ್ಲಿ ಸಹಕರಿಸಿರುವ ಮೆ. ಮಯೂರ್ ಪ್ರಿಂಟ್ ಆ್ಯಡ್ಸ್‍ನ ಶ್ರೀ ಬಿ.ಎಲ್. ಶ್ರೀನಿವಾಸ ಮತ್ತು ಅವರ ಸಿಬ್ಬಂದಿ ವರ್ಗದವರಿಗೂ ನಮ್ಮ ವಂದನೆಗಳು. ಪ್ರಧಾನ್ ಗುರುದತ್ತ ಅಧ್ಯಕ್ಷ xiv ಅರಿಕೆ ‘ಕಥಾ ಸಂಸ್ಕೃತಿ’ ಯ ವಿಚಾರ, ಆ ಕುರಿತು ಏನಾದರೂ ಗಟ್ಟಿಯಾದ ಕೆಲಸ ಮಾಡಬೇಕೆಂಬ ವಿಚಾರ ಈಗ್ಗೆ ಮೂವತ್ತೈದು ವರ್ಷಗಳಷ್ಟು ಹಿಂದೆಯೇ ನನ್ನ ಮನಸ್ಸಿನಲ್ಲಿ ಬಂದಿತ್ತು. ಓದುವುದು, ಹೇಳುವುದು, ಸಂಚಯನ, ಸಂಕಲನ, ಪರಿಷ್ಕರಣ ಇತ್ಯಾದಿ ಕೆಲಸಗಳು ಇತರ ಎಲ್ಲ ಚಟುವಟಿಕೆಗಳ ಜೊತೆಗೇ ನಡೆಯುತ್ತ ಬಂದವು. ಈ ಪುಸ್ತಕದ ಬಗೆಗೆ ನನ್ನ ಸಂಗಡಿಗ, ಸಹಕಾರಿ ಹಾಗೂ ಕತೆಗಾರ ಸುದೀಪರೊಂದಿಗೆ ಯೋಜನೆಯನ್ನು ಕುರಿತು ವಿಸ್ತೃತವಾದ ಕೆಲಸ ಪ್ರಾರಂಭಿಸುವಾಗ ಮೊದಲ ಹಂತದ ಸ್ವರೂಪವೆಲ್ಲ ಸಿದ್ಧವಾಯಿತು. ಹಾಗೆ ಪ್ರಾರಂಭವಾದ ಹಾಗೂ ಆಧಾರ ಭೂತವಾದ ಕಾರ್ಯ ನಿಧಾನವಾಗಿ ಮುಂದುವರಿಯಿತು. ಈಗ ನಾನು ಇದನ್ನು ಸುಮಾರಾಗಿ ಪೂರ್ಣರೂಪದಲ್ಲಿ ಸುಜ್ಞ ಓದುಗರ ಕೈಗೆ ಒಪ್ಪಿಸುತ್ತಿದ್ದೇನೆ. ಮೊದಲೇ ಹೇಳಿದ ಹಾಗೆ ಪ್ರಾರಂಭದಲ್ಲಿಯೇ ಸುದೀಪ ಅವರ ಸಹಯೋಗ, ಸಹಕಾರ ದೊರೆಯದೆ ಹೋಗಿದ್ದರೆ ಇದರ ಪರಿಕಲ್ಪನೆ ಕಲ್ಪನೆಯ ರೂಪದಲ್ಲಿಯೇ ಇರುತ್ತಿತ್ತು. ಈ ಕಾರ್ಯದಲ್ಲಿ ನನಗೆ ತರುಣ ಕತೆಗಾರ ಹರಿಲಾಲ ನಾಗರ, ಮತ್ತು ಮಾಧ್ಯಮ ಲೇಖಕ ಸಂಜೀವ ಶ್ರೀವಾಸ್ತವ ಅವರ ನಿರಂತರ ಸಹಕಾರ ಸಿಗುತ್ತಲೇ ಇತ್ತು. ನಾನು ಈ ನನ್ನ ಮೂವರು ಜೊತೆಗಾರರು, ಸಹಕಾರಿಗಳಿಗೆ ತುಂಬ ಆಭಾರಿಯಾಗಿದ್ದೇನೆ, ಕೃತಜ್ಞನಾಗಿದ್ದೇನೆ. ಈಗ ಒಂದು ಮುಖ್ಯಮಾತು, ಈ ಗ್ರಂಥದಲ್ಲಿ ಸೇರಿದ ಮೂವರು ವಿದ್ವಾಂಸ ಲೇಖಕರ ಬರಹಗಳನ್ನು ಒಳಗೊಳ್ಳುವಾಗ ಅವರ ಔಪಚಾರಿಕ ಸಮ್ಮತಿಯನ್ನು ಅವರಿಂದ ಪಡೆಯಲಾಗಲಿಲ್ಲ. ಇದು ನನ್ನ ಇತ್ತೀಚಿನ ಅವ್ಯವಸ್ಥೆ ಹಾಗೂ ಆಕಸ್ಮಿಕಗಳ ಕಾರಣದಿಂದ ಉಂಟಾದ ಲೋಪ. ಅಲ್ಲದೆ ಅವರ ಮೇಲಿನ ನನ್ನ ಗೆಳೆತನದ ಅಧಿಕಾರದ ಭಾವನೆಯಿಂದಲೂ ಕೂಡ. ಆ ಮೂವರ ಬರಹಗಳಿಲ್ಲದೆ ‘ಕಥಾ ಸಂಸ್ಕೃತಿ’ ಯ ಕಾರ್ಯ ಪೂರ್ಣಗೊಳ್ಳುತ್ತಿರಲಿಲ್ಲ. ಅಷ್ಟೇಅಲ್ಲ, ಈ ಬೃಹತ್ ಕಾರ್ಯವು ಬಹುಶಃ ಅಪೂರ್ಣ ಹಾಗೂ ಅಪ್ರಕಾಶಿತವಾಗಿಯೇ ಉಳಿದುಬಿಡುತ್ತಿತ್ತು. ಇದು ನನ್ನ ಪ್ರಮಾದವಲ್ಲ. ನನ್ನ ಮನಸ್ಸು ಹಾಗೂ ಈ ಮಹತ್ವದ ಯೋಜನೆಯ ಅನಿವಾರ್ಯತೆಯಾಗಿತ್ತು. ಈ ಗ್ರಂಥದಲ್ಲಿ ಪಾಲುಗೊಳ್ಳುವ ಅವರ ಅನುಮತಿಯ ಅಪೇಕ್ಷೆಯೊಂದಿಗೇ ಅವರ ಉಪಸ್ಥಿತಿಯನ್ನು ಆಭಾರ ಸಹಿತ ಸ್ವೀಕರಿಸುತ್ತಿದ್ದೇನೆ. ಕೊನೆಯಲ್ಲಿ ನಮ್ಮ ಸುಜ್ಞ ಓದುಗರು, ಸಮಕಾಲೀನ ಬರಹಗಾರರು ಹಾಗೂ ಸಮಸ್ತ ಬುದ್ಧಿಜೀವಿ ವರ್ಗಕ್ಕೆ ಈ ಗ್ರಂಥವನ್ನು ವಿನತ ಭಾವನೆಯೊಂದಿಗೆ ಸಮರ್ಪಿಸುತ್ತಿದ್ದೇನೆ. ಕಮಲೇಶ್ವರ xv ಅನುವಾದಕರ ಮಾತು ಭಾರತೀಯ ಜ್ಞಾನಪೀಠ ಸಂಸ್ಥೆಯು ಈ ಪುಸ್ತಕವನ್ನು 2006ರಲ್ಲಿ ಪ್ರಕಾಶಿಸಿದ ಕೆಲವೇ ದಿನಗಳಲ್ಲಿ ನಾನು ಈ ಪುಸ್ತಕವನ್ನು ಕೊಂಡು ಓದಿದೆ. ತುಂಬ ಪ್ರಭಾವಿತವಾದೆ. ವಿಶ್ವದ ವಿವಿಧ ನಾಗರಿಕತೆಗಳ ಆದಿಯಲ್ಲಿ ಹುಟ್ಟಿಕೊಂಡ ಅದ್ಭುತ ಕತೆಗಳನ್ನು ಒಳಗೊಂಡ ಈ ಗ್ರಂಥವು ಕಾಲಾನುಕ್ರಮದಲ್ಲಿ ಕಥಾ ಸಂಸ್ಕೃತಿಯು ಬೆಳೆದು ಬಂದ ರೀತಿಯನ್ನು ದಾಖಲಿಸುವ ವಿನೂತನ ಪ್ರಯತ್ನವಾಗಿ ನನಗೆ ಕಂಡಿತು. ಅಲ್ಲದೆ, ಬಹುಶಃ ಕನ್ನಡ ಓದುಗರಿಗೆ ಅಲಭ್ಯವಾದ ಅನೇಕ ಭಾರತೀಯೇತರ ಪ್ರಾಚೀನ ಕಥಾ ಮಾದರಿಗಳು ಈ ಸಂಗ್ರಹದಲ್ಲಿರುವುದರಿಂದ ಇದನ್ನು ಅನುವಾದಿಸಿ ಕನ್ನಡದ ಓದುಗರ ಕೈಗೆ ಇಟ್ಟರೆ ತುಂಬ ಉಪಯುಕ್ತ ಕೊಡುಗೆಯಾದೀತು ಅನಿಸಿತು. ಶ್ರೀ ಕಮಲೇಶ್ವರ ಅವರು ಹಿಂದೀ ಸಾಹಿತ್ಯಲೋಕದಲ್ಲಿ ಸುಪ್ರಸಿದ್ಧರು, ಬಹುಶ್ರುತ ವಿದ್ವಾಂಸರು. ಅವರು ಸಂಪಾದಿಸಿದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಾಶಿಸುವಾಗ ಅವರ ಅನುಮತಿಯನ್ನು ನಾನು ಪಡೆಯಬೇಕಾದುದು ಸಹಜ. ಹಾಗೆ ಅವರಲ್ಲಿ ಅನುಮತಿಗಾಗಿ ವಿನಂತಿಸಿಕೊಂಡಾಗ ಅವರು ವಿಶ್ವಾಸದಿಂದ ತಕ್ಷಣ ಅನುಮತಿಯ ಪತ್ರವನ್ನು ಕಳಿಸಿದ್ದಲ್ಲದೆ ದೂರವಾಣಿಯ ಮೂಲಕ ಸಂಪರ್ಕಿಸಿ ಪ್ರೋತ್ಸಾಹದ ಪ್ರೀತಿಯ ಮಾತುಗಳನ್ನು ಆಡಿ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿ ಉಪಕಾರ ಮಾಡಿದ್ದಾರೆ. ಅವರ ಋಣ ಎಂದಿಗೂ ಮರೆಯುವಂತಹುದಲ್ಲ. ಹಾಗೆಯೇ ಈ ಕೃತಿಯ ಲೇಖನಗಳ ಹಾಗೂ ಕತೆಗಳ ಬರಹಗಾರರೆಲ್ಲರಿಗೂ ನಾನು ಋಣಿ. ಭಾರತೀಯ ಜ್ಞಾನಪೀಠವು ಪ್ರಕಟಿಸಿದ ಈ ಕೃತಿಯನ್ನು ಅನುವಾದಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ಆದರೆ 700 ಪುಟಗಳ ಈ ಗ್ರಂಥದ ಅನುವಾದ ಕಾರ್ಯ ಸುಲಭವಾಗಲಿಲ್ಲ. ನನ್ನ ತಾಳ್ಮೆ-ಪರಿಶ್ರಮಕ್ಕೆ ಸವಾಲಾಗಿ ಪರಿಣಮಿಸಿದ್ದ ಇದರ ಅನುವಾದ ಕಾರ್ಯ ಮುಗಿದಾಗ ಮನಸ್ಸಿನ ಭಾರ ಕಡಿಮೆಯಾಯಿತು. ನನ್ನ ಕೈಬರಹದ ತೊಡಕಿನ ನಡುವೆಯೂ ಬೇಸರಗೊಳ್ಳದೆ ಪ್ರಾರಂಭಿಕ ಡಿ.ಟಿ.ಪಿ ಕೆಲಸ ಮಾಡಿಕೊಟ್ಟ ಅನುಪ್ ಗ್ರಾಫಿಕ್ಸ್, ಸಿದ್ದಾಪುರ ಅವರಿಗೂ ನನ್ನ ನೆನಕೆಗಳು. ಅನುವಾದಕಾರ್ಯ ಎಲ್ಲಿಯವರೆಗೆ ಬಂತು ಎಂದು ಆಗಾಗ ವಿಚಾರಿಸಿ ಪ್ರೋತ್ಸಾಹಿಸಿದ್ದಲ್ಲದೆ ಪ್ರಕಾಶನದ ಜವಾಬ್ದಾರಿಯನ್ನು ಹೊರಲು ಮುಂದಾದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಾನ್ಯ ಡಾ|| ಪ್ರಧಾನ ಗುರುದತ್ತ ಅವರು ಅಕಾಡೆಮಿ ಮೂಲಕ ತುಂಬ ಅಚ್ಚುಕಟ್ಟಾಗಿ ಈ ಪುಸ್ತಕವನ್ನು ಹೊರತಂದಿದ್ದಾರೆ. ಅಂದವಾಗಿ ಇದನ್ನು ಮುದ್ರಿಸಿಕೊಟ್ಟ ಮಯೂರ್ ಪ್ರಿಂಟ್ ಆ್ಯಡ್ಸ್, ಬೆಂಗಳೂರು ಅವರಿಗೂ, ಅಕ್ಷರ ಪುಟ ಜೋಡಣೆಯ ಕೆಲಸ ಮಾಡಿದ ಮಹೇಶ್ ಅವರಿಗೂ, ನನ್ನನ್ನು ಸದಾ ಪ್ರೋತ್ಸಾಹಿಸಿ ಉತ್ತೇಜಿಸುತ್ತ ಆಶೀರ್ವದಿಸಿರುವ ಶ್ರೀ ಗಣೇಶ ಹೆಗಡೆ ದೊಡ್ಮನೆಯವರಿಗೂ ನಾನು ತುಂಬ ಕೃತಜ್ಞನಾಗಿದ್ದೇನೆ. ಹಾಗೆಯೇ ಅನುವಾದ ಕಾರ್ಯದಲ್ಲಿ ಸಲಹೆ-ಸಹಕಾರ ನೀಡಿದ ಪ್ರೋ|| ಶ್ರೀಮತಿ ಬಂಗಾರಿಶೆಟ್ಟಿ xvi ಅವರಿಗೂ ನಾನು ಆಭಾರಿ. ಈ ಕೃತಿಯ ಸಹೃದಯ ಓದುಗರ ಪ್ರತಿಕ್ರಿಯೆಯ ಬಗೆಗೆ ನಾನು ಆಶಾವಾದಿಯಾಗಿದ್ದೇನೆ. ಸಹಕಾರ ನೀಡಿದವರಿಗೆಲ್ಲ ವಂದನೆಗಳು. ಆರ್. ಪಿ. ಹೆಗಡೆ ‘ಸೃಷ್ಟಿ’ ಅವರಗುಪ್ಪಾ, ಸಿದ್ದಾಪುರ (ಉ.ಕ) 581 355 xvii ಪರಿವಿಡಿ ಮುನ್ನುಡಿ v ಶುಭಾಕಾಂಕ್ಷೆ vi ಹೊಸಹೆಜ್ಜೆ vii ಪ್ರಸ್ತಾವನೆ ix ಅರಿಕೆ xiv ಅನುವಾದಕರ ಮಾತು xv ಮೊದಲನೆಯ ಖಂಡ - ಕಥಾ ವಿಚಾರ ಕಥಾ ಸಂಸ್ಕೃತಿ : ಜಾಗತಿಕ ನೋಟ - ಕಮಲೇಶ್ವರ 3 ವಿಶ್ವಕಥಾ ಯಾತ್ರೆ : ಜಲಪ್ರಳಯದಿಂದ ಅಣು ಪ್ರಳಯದವರೆಗೆ - ಕಮಲೇಶ್ವರ 28 ಗ್ರೀಕ್ ಪುರಾಣ ಕತೆಗಳ ಭೂಮಿಕೆ - ಕಮಲ ನಸೀಮ 42 ಭಾರತೀಯ ಕಥಾ ಪರಂಪರೆ - ರಾಧಾವಲ್ಲಭ ತ್ರಿಪಾಠಿ 51 ಆಧುನಿಕ ಕತೆಗಳ ರಚನಾ ಸಂಸ್ಕೃತಿ - ಇಂತಿಜಾರ ಹುಸೇನ್ 69 ಆದಿ ಕತೆಯ ಸ್ರೋತ ಹೋಮರ್ : `ಇಲಿಯಡ್' ಮತ್ತು `ಒಡಿಸ್ಸಿ' ಕುಬೇರನಾಥರಾಯ್ 81 ಎರಡನೆಯ ಖಂಡ - ಕಥಾ ಭೂಮಿ ಜಲಪ್ರಳಯದ ಪ್ರಾಚೀನ ಕತೆಗಳು - ಭಗವತಶರಣ ಉಪಾಧ್ಯಾಯ 101 ನಾಗಸಾಕಿಯ ಮೇಲೆ ನೂರು ಸೂರ್ಯರ ಬೆಳಕು - ಫ್ರ್ಯಾಂಕ್ ಡಬ್ಲು ಚಿನಾಕ್ 110 ಉರ್ವಶೀ ಮತ್ತು ಪುರೂರವ (`ಋಗ್ವೇದ'ದಿಂದ) 116 ಪೃಥುವಿನ ಕತೆ - ಠಾಕುರ್ ಪ್ರಸಾದ ಸಿಂಹ 120 ತ್ರಿಶಂಕುವಿನ ಕತೆ - ರಘುನಾಥ ಸಿಂಹ 123 ಉಪೇಕ್ಷಿತೆ ಮಾಧವಿ - ರಾಮಪ್ರತಾಪ ತ್ರಿಪಾಠೀ ಶಾಸ್ತ್ರೀ 128 ಮೈತ್ರೇಯಿಗೆ ಸಿಕ್ಕಿದ್ದೇನು - ಭಗವಾನ್ ಸಿಂಹ 134 ಸಾಧು ಮತ್ತು ವೇಶ್ಯೆಯ ಕತೆ - ರಾಧಾವಲ್ಲಭ ತ್ರಿಪಾಠೀ 147 ಧೂರ್ತೋಪಾಖ್ಯಾನ - ರಾಧಾವಲ್ಲಭ ತ್ರಿಪಾಠೀ 149 xviii ರೋಮಹರ್ಷಣ:ವ್ಯಾಸಗದ್ದುಗೆಯ ಮೇಲೆ ದಲಿತ ಅಮರನಾಥ ಶುಕ್ಲ 170 ಅಷ್ಟಾವಕ್ರ - ಅಮರನಾಥ ಶುಕ್ಲ 175 ಲೋಹಜಂಘನ ವೃತ್ತಾಂತ - (`ಬೃಹತ್ಕಥೆ'ಯಿಂದ) 181 ಶಸ್ತ್ರ - ಸಹಾಯ ಹಾಗೂ ವಿನಮ್ರತೆ - (`ಮಹಾಭಾರತ'ದಿಂದ) 185 ಮೂರನೆಯ ಖಂಡ - ವಿದೇಶೀ ಪೌರಾಣಿಕ ಕತೆಗಳು ಗಿಲ್‍ಗಮಿಶ್‍ನ ಮಹಾಗಾಥೆ - ಭಗವತ ಶರಣ ಉಪಾಧ್ಯಾಯ 191 ಸ್ಯೂಸನ ಪ್ರೇಮಕತೆಗಳು - ಕಮಲ ನಸೀಮ 200 ಜಾದೂ ಪುಸ್ತಕ - ರೂಪಾಂತರ: ಹೀರಾಲಾಲ ನಾಗರ 213 ಈಫಿಸಸ್‍ನ ಮಹಿಳೆ - ಪೆಟ್ರೋನಿಯಸ್ 219 ಆದರ್ಶ ಕಳ್ಳ - ಜೆ. ಎಚ್. ಆನಂದ 224 ಹೆರಾಕ್ಲಿಸ್ - ಕಮಲ ನಸೀಮ 226 ಪ್ರೊಮಿಥ್ಯೂಸ್‍ನ ಬಂಡಾಯ - ಜೆ. ಎಚ್. ಆನಂದ 260 ಸ್ವರ್ಣ ಸೂರ್ಯ 267 ರೊಡೊಪಿಸ್ 270 ಮುಕ್ತ-ಛಂದ - ಜೆ. ಎಚ್. ಆನಂದ 272 ಹೆಣ್ಣಿನ ಬಂಡಾಯ - ಅರಿಸ್ಟೊಫೆನಿಸ್ 274 ಮಹಾಯಾತ್ರೆ - ಅಜ್ಞಾತ 276 ತಾಯಿ ಮಗಳ ಸಂವಾದ - ಲೂಸಿಯನ್ 278 ಆಸ್ಥೆ ಮತ್ತು ಮುಕ್ತಿ - ಜೆ. ಎಚ್. ಆನಂದ 280 ಯೂಡಿಥ್ - ಜೆ. ಎಚ್. ಆನಂದ 282 ಶಾಂತಿ-ಸುರಕ್ಷತೆ - ಈಸೋಪ 288 ಮರಳುವ ಸೂರ್ಯನ ನಿರೀಕ್ಷೆ - ಹೋಮರ್ 290 ಕಥಾ ಸಂಸ್ಕೃತಿ 1 ಕಥಾ ಸಂಸ್ಕೃತಿ (ಭಾಗ - 1) ಮೊದಲನೆಯ ಖಂಡ ಜಾಗತಿಕ ನೋಟ 3 ಕಥಾ ಸಂಸ್ಕೃತಿ : ಜಾಗತಿಕ ನೋಟ - ಕಮಲೇಶ್ವರ ಭಾರತವು ಜಗತ್ತಿನ ಮೊದಲ ಹಾಗೂ ಸರ್ವಶ್ರೇಷ್ಠ ಕಥಾವೇದಿಕೆಯಾಗಿದೆ ಯೆನ್ನುವುದು ಪ್ರಾಮಾಣಿಕವೂ ಯೋಗ್ಯವೂ ಆಗಿದೆ. ಈ ದೇಶ ಕತೆಗಳ ತವರೂರು. ವಿಶ್ವದ ಸಮಸ್ತ ಅರ್ವಾಚೀನ, ಲುಪ್ತ ಹಾಗೂ ಪ್ರಾಚೀನತಮ ನಾಗರಿಕತೆಗಳ ಅಡಿಯಿಂದ ಕತೆಗಳ ಆಧಾರಸ್ತಂಭಗಳನ್ನು ತಳ್ಳಿ ಹಾಕಿದರೆ ಎಲ್ಲ ನಾಗರಿಕತೆಗಳೂ ಸರಭರನೆ ದುರ್ಬಲ ಮಣ್ಣಿನ ಹಾಗೆ ಉದುರಿಬೀಳುತ್ತವೆ ಎಂದು ಹೇಳಿದರೆ ಅನುಚಿತವಾಗಲಾರದು. ನಾಗರಿಕತೆಯ ಅಸ್ತಿತ್ವ ಹಾಗೂ ಅವುಗಳ ಸಂರಚನೆಯ ಪರಿಚಯದ ಒಂದು ಮಹತ್ವಪೂರ್ಣ ಆಕರಗಳೂ ಕತೆಗಳೇ ಆಗಿವೆ. ಕತೆಗಳಿಲ್ಲದೆ ದೊಡ್ಡ ದೊಡ್ಡ ನಾಗರಿಕತೆಯ ಪ್ರಾರಂಭದ ಬಗೆಗೆ ತಿಳಿದುಕೊಳ್ಳುವುದೂ ಸಾಧ್ಯವಿಲ್ಲ. ಜಗತ್ತಿನ ಮೊದಲ ಗ್ರಂಥಗಳ ಸಂರಚನೆಯೆಲ್ಲವೂ ಕತೆಗಳನ್ನಾಧರಿಸಿಯೇ ನಿಂತಿದೆ. ವೈದಿಕ ಸಂಹಿತೆಗಳು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ವಿಶ್ವ ಸಾಹಿತ್ಯದ ಪ್ರಾಚೀನತಮ ಗ್ರಂಥಗಳಾಗಿವೆ. ಇವುಗಳ ವರ್ತುಲದಲ್ಲಿಯೂ ಕಥೆಗಳು, ಕಿಂವದಂತಿಗಳು, ಮಿಥ್‍ಗಳು ಹಾಗೂ ಆಖ್ಯಾನಗಳಿಗೇನೂ ಕೊರತೆಯಿಲ್ಲ. ಪ್ರತಿಯೊಂದು ವೈದಿಕ ದೇವತೆಯ ಹುಟ್ಟೂ ಕತೆಯಿಂದಲೇ ಆಗುತ್ತದೆ. ಎಲ್ಲ ನಾಗರಿಕತೆಗಳ ನಿಜ ಇದು. ಇದು ಅಮೇರಿಕದ ಆದಿವಾಸಿಗಳ ಅಜಟೆಕ್-ಮಾಯಾ ನಾಗರಿಕತೆಯದಾಗಿರಬಹುದು, ಚೀನದ್ದೋ, ಇಜಿಪ್ತದ್ದೋ, ಸುಮೇರಿಯನ್ ಅಥವಾ ಅಕ್ಕಾದಿ. ಭಾರತೀಯ ನಾಗರಿಕತೆಯಂತೂ ವೇದ, ಬ್ರಾಹ್ಮಣ, ಪುರಾಣ, ಉಪನಿಷತ್ತು, ರಾಮಾಯಣ, ಮಹಾಭಾರತ ಇತ್ಯಾದಿ ಅಸಂಖ್ಯಾತ ಕತೆಗಳ ಭಂಡಾರವಾಗಿದೆ. ಅವುಗಳ ಮೂಲಕವೇ ಲೌಕಿಕ ಮತ್ತು ಅಲೌಕಿಕ ಜೀವನದ ತಥ್ಯಗಳನ್ನು - ಸತ್ಯಗಳನ್ನು ನಿರೂಪಿಸಲಾಯಿತು. ಧರ್ಮಗ್ರಂಥಗಳ ಅಲೌಕಿಕ ಪ್ರಸಂಗ ಅಥವಾ ವಿವರಣೆಗಳೆಲ್ಲವೂ ಕತೆಯಿಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಆಧ್ಯಾತ್ಮ ಮತ್ತು ದರ್ಶನಗಳಲ್ಲಿ ಕೂಡ ಕಥಾ ದೃಷ್ಟಾಂತಗಳು ಮುಖ್ಯವಾಗಿ ಇದ್ದೇ ಇರುತ್ತವೆ. ಇಂದಿಗೂ ಭಾರತದಲ್ಲಿ ಜನಪದ ಕಥಾವೇದಿಕೆಗಳ ಕೊರತೆಯಿಲ್ಲ. ಈ ಜನಪದ ಕತೆಗಳೇ ಸಾಹಿತ್ಯದಲ್ಲಿಯೂ ಪ್ರವೇಶವನ್ನು ಪಡೆದವು. ಯಾಕೆಂದರೆ ಕತೆಗಳ ಮೂಲಸ್ರೋತ ಲೋಕಧರ್ಮೀ ಕಥಾಪ್ರತಿಭೆಯೇ ಆಗಿದೆ. ವೈದಿಕ ಕಥಾಸಾಹಿತ್ಯದ ಜೊತೆಗೆ, ಬೌದ್ಧ ಹಾಗೂ ಜೈನ ಕತೆಗಳಿಗೂ ಭಾರತವು ಆದಿ 4 ಕಥಾ ಸಂಸ್ಕೃತಿ ದೇಶವಾಗಿದೆ. ಬೌದ್ಧ ವಾಙ್ಮಯದ ಜಾತಕ ಕತೆಗಳಂತೂ ಇಂದಿಗೂ ಶ್ರೀಲಂಕಾ, ಕಾಂಬೋಡಿಯಾ, ಮ್ಯಾನಮಾರ್ ಇತ್ಯಾದಿ ದೇಶಗಳಲ್ಲಿ ತುಂಬ ಜನಪ್ರಿಯವಾಗಿದೆ. ಭಗವಾನ್ ಗೌತಮಬುದ್ಧನ ಪೂರ್ವಜನ್ಮಗಳ ವಿವರಣೆಗಳನ್ನು ರಾತ್ರಿಯೆಲ್ಲ ಕೂತು ಕೇಳಲಾಗುತ್ತದೆ. ರಾಮನ ಕತೆಯಂತೆಯೇ ಇವು ಮನೆಮನೆಗಳಲ್ಲಿಯೂ ಪ್ರಚಲಿತವಾಗಿವೆ. ಇಷ್ಟೇ ಅಲ್ಲ, ಜಾತಕ ಕತೆಗಳ ಈ ಭಂಡಾರವು ಜಗತ್ತಿನಲ್ಲೆಲ್ಲ ದೊಡ್ಡ ಕಥಾಕೋಶವಾಗಿದೆ. ಪಂಚತಂತ್ರದ ಪಶು-ಪಕ್ಷಿಗಳ ಕತೆಗಳಂತೂ ಎಣೆಯಿಲ್ಲದವು. ಈ ಕತೆಗಳು ಲೋಕಸ್ಮೃತಿಯಲ್ಲಿ ಮಾತ್ರ ದಾಖಲಾಗಿಲ್ಲ, ಅವುಗಳ ದೃಶ್ಯಗಳು ಸಾಂಚಿ, ಭರಹುತ ಮುಂತಾದ ಬೌದ್ಧಸ್ತೂಪಗಳ ಮೇಲೂ ಅಂಕಿತವಾಗಿವೆ. ವೈದಿಕ ಕತೆಗಳಂತೂ ಬಹಳ ಪ್ರಾಚೀನವಾದವುಗಳು. ಪುರಾಣ ಕತೆಗಳ, ರಾಮಾಯಣ-ಮಹಾಭಾರತಗಳ ರಚನಾಕಾಲದ ಅಂತಿಮ ನಿರ್ಣಯ ಇನ್ನೂ ಆಗಿಲ್ಲ. ಆದರೆ ಬೌದ್ಧಕತೆಗಳ ಕಾಲ ಕ್ರಿಸ್ತ ಜನನಕ್ಕೆ ಐದು ಶತಮಾನ ಮುಂಚಿನಿಂದ ಹಿಡಿದು ಕ್ರಿಸ್ತನ ಅನಂತರದ ಒಂದು ಎರಡನೇ ಶತಮಾನದವರೆಗೂ ಹರಡಿಕೊಂಡಿದೆ. ಭಗವಾನ್ ಮಹಾವೀರ ಸ್ವಾಮಿ ಹಾಗೂ ಭಗವಾನ್ ಗೌತಮಬುದ್ಧ ಸಮಕಾಲೀನರು. ಜೈನ ಶ್ರಮಣ ಸಾಹಿತ್ಯವೂ ಕತೆಗಳಿಂದ ತುಂಬಿಕೊಂಡಿದೆ. ಆದರೆ ಜೈನಕಾಲದ ಪ್ರಾಕೃತ ಭಾಷೆಯ ಕಥಾಗ್ರಂಥಗಳು ಸುರಕ್ಷಿತವಾಗಿ ಉಳಿಯಲಿಲ್ಲ. ಹಾಗೆಂದು ಬೌದ್ಧಕಾಲೀನ ಪಾಲಿ ಭಾಷೆಯ ಧಮ್ಮ ಮತ್ತು ಕಥಾಗ್ರಂಥಗಳು ಇಂದಿಗೂ ಸಾಕಷ್ಟು ಸುರಕ್ಷಿತವಾಗಿವೆ. ವೈದಿಕ, ಬೌದ್ಧ, ಜೈನ ಕತೆಗಳ ಕೊಡು-ಕೊಳುವಿಕೆ ಹಾಗೂ ಬೆಳವಣಿಗೆ ನಡೆಯುತ್ತಲಿದೆ. ಬೌದ್ಧ ವಿದ್ವಾಂಸ ಭದಂತ ಆನಂದ ಕೌಸಲ್ಯಾಯನರು ಬರೆದ ಜಾತಕ ಗ್ರಂಥಗಳ ಟೀಕೆಗಳಲ್ಲಿ, ಪ್ರಾಚೀನ ಬೌದ್ಧ ಕತೆಗಳಲ್ಲಿನ ಕೆಲವೊಂದು ಕತೆಗಳು ವಿಕಸಿತ ರೂಪದಲ್ಲಿ ರಾಮಾಯಣ - ಮಹಾಭಾರತದಲ್ಲಿ ದೊರೆಯುತ್ತವೆಯೆಂದು ಅವರು ಬರೆದಿದ್ದಾರೆ. ಹಾಗೆ ಕೌಸಲ್ಯಾಯನರ ಈ ಮಂಡನೆಯು ವಾದ-ವಿವಾದದ ವಿಷಯವಾಗಬೇಕಾಗಿಲ್ಲ. ಯಾಕೆಂದರೆ ಕತೆಗಳ ಕೊಡು-ಕೊಳುವಿಕೆ ನಿರಂತರ ನಡೆದೇ ಇರುವುದನ್ನು ಸಹಜವೆಂದು ಭಾವಿಸಬಹುದಾಗಿದೆ. ಇದು ಕೇವಲ ಸಂಸ್ಕೃತ, ಪಾಲಿ ಮತ್ತು ಪ್ರಾಕೃತ ಭಾಷೆಗಳ ನಡುವೆಯಷ್ಟೇ ನಡೆದಂಥವಲ್ಲ, ಸ್ಥಾನಿಕ ಹಾಗೂ ಜನಪದ ಮಾತುಗಳಲ್ಲಿ ಹಾಗೂ ಭಾಷೆಗಳಲ್ಲಿ ಜನಪದ ಕತೆಗಳ ಕೊಳು-ಕೊಡುವಿಕೆ ಚಾಲನೆಯಲ್ಲಿತ್ತು. ಬೌದ್ಧ ಮತ್ತು ಜೈನ ಕತೆಗಳು ಧರ್ಮ ಪ್ರಚಾರ ಕಾರ್ಯದಲ್ಲಿ ಪ್ರಮುಖ ಭೂಮಿಕೆಯನ್ನು ವಹಿಸಿದ್ದವು. ಈ ಕತೆಗಳಲ್ಲಿ ಹೆಚ್ಚಿನವು ವೈದಿಕ ಸಂಸ್ಕೃತವು ಲುಪ್ತವಾಗುತ್ತಿದ್ದ ಕಾಲದವಾಗಿವೆ. ಇದು ಪಾಲಿ, ಪ್ರಾಕೃತ ಹಾಗೂ ಅಪಭ್ರಂಶ ಭಾಷೆಗಳ ಹಾಗೂ ಸಾಹಿತ್ಯದ ಉದಯಕಾಲವಾಗಿತ್ತು. ವೈದಿಕ ಸಂಸ್ಕೃತವು ಲೌಕಿಕ ಸಂಸ್ಕೃತವಾಗಿ ಪರಿವರ್ತಿತವಾಗಿತ್ತು, ಮತ್ತು ಬ್ರಾಹ್ಮಣವಾದೀ ವೈದಿಕ ಧರ್ಮದ ಬಗ್ಗೆ ಜಾಗತಿಕ ನೋಟ 5 ಜನಸಾಮಾನ್ಯರು ಅನಾಸಕ್ತರಾಗಿದ್ದರು ಅಥವಾ ಆಗುತ್ತಿದ್ದರು. ಲೌಕಿಕ ಸಂಸ್ಕೃತವು, ವಿಕಸಿತಗೊಳ್ಳುತ್ತಿದ್ದ ಪಾಲಿ ಮತ್ತು ಪ್ರಾಕೃತದ ಎದುರು ನಿಲ್ಲದಾಯಿತು. ಅಲ್ಲದೆ ವೈದಿಕ ಸಮಾಜವು ವರ್ಣವಾದೀ ಬ್ರಾಹ್ಮಣರ ಕೈ ಸೇರಿತು. ಹಾಗಾಗಿ ಅದರ ಸಾಮಾಜಿಕ ಸಂರಚನೆ ಹಾಗೂ ಕೆಲಸದ ಶ್ರೇಣಿ ವಿಭಜನೆಯು ಸಾಮಾನ್ಯ ಜನರಿಗೆ ಸರಿಬರುತ್ತಿರಲಿಲ್ಲ. ಅವರ ಪೌರಾಣಿಕ ಪ್ರವಚನ ಹಾಗೂ ಆಧ್ಯಾತ್ಮಿಕ ವಿಮರ್ಶೆಗಳು ಜನರ ಸಾಂಸಾರಿಕ ಜೀವನ ಮತ್ತು ಅವರ ಸಮಸ್ಯೆಗಳಿಂದ ದೂರವಾಗಿದ್ದವು. ಆರ್ಯ ಆಧ್ಯಾತ್ಮಿಕತೆ ಮತ್ತು ತಮ್ಮ ತಮ್ಮ ಪರ ಜೀವನ, ಈಶ್ವರ ಮತ್ತು ಆತ್ಮಗಳ ಅಸ್ತಿತ್ವದ ಪ್ರಶ್ನೆಗಳು ಸಮಾಜದ ಸಾಮೂಹಿಕತೆಯನ್ನು ಅಲ್ಲಗಳೆದು, ವ್ಯಕ್ತಿಯ ಸ್ವಂತ ವೈಯಕ್ತಿಕತೆಗೆ ಒತ್ತುಕೊಡುತ್ತಿದ್ದವು. ವರ್ಣವಾದವು ಪ್ರತಿಪಾದಿಸಿದ ಶ್ರಮ ವಿಭಜನೆಯ ಸಿದ್ಧಾಂತವು ಸಮಾಜದಲ್ಲಿ ಶ್ರಮ ಮಾಡುವ ಮತ್ತು ಬದುಕುವ ಅಧಿಕಾರದ ನಿಯಮಗಳಿಗಿಂತ ಹೆಚ್ಚಾಗಿ ವರ್ಣ ವಿಶ್ಲೇಷಣೆಯ ವರ್ಚಸ್ಸನ್ನು ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿತ್ತು. ಹಾಗಾಗಿ ಸಾಧಾರಣ ಜನಸಮೂಹದಲ್ಲಿ ಹೆಚ್ಚಿನವರು ವೈದಿಕ ಪುರಾಣ, ಹುಟ್ಟಿನಿಂದ ಬರುವ ಸಾಮಾಜಿಕ ಶೋಷಣೆಯ ಸಿದ್ಧಾಂತ, ಕರ್ಮಠತೆ ಹಾಗೂ ಪುರೋಹಿತ ವಾದಗಳಿಂದ ಬೇಸತ್ತು ಆರ್ಯ ವ್ಯವಸ್ಥೆಯ ವಿರೋಧಿಗಳಾಗತೊಡಗಿದ್ದರು. ದೇವಭಾಷೆ ಅಥವಾ ದೈವೀಭಾಷೆ ಎಂದು ಭಾವಿಸಲಾಗುತ್ತಿದ್ದ ಸಂಸ್ಕೃತ ಭಾಷೆಯು ಅವರ ಮನಸ್ಸಿನಿಂದ ದೂರವಾಗತೊಡಗಿತ್ತು. ನಿಜವಾಗಿ ಹೇಳಬೇಕೆಂದರೆ ಇದು ವೈದಿಕ ಸಂಸ್ಕೃತದ ಅವಸಾನಕಾಲವಾಗಿತ್ತು. ಆ ಕಾಲದಲ್ಲಿ ಮಾತನಾಡುವ ಸಶಕ್ತ ಭಾಷೆಯಾಗಿ ಪಾಲಿ, ಪ್ರಾಕೃತ ಹಾಗೂ ಅಪಭ್ರಂಶಗಳು ವಿಕಸಿತಗೊಳ್ಳತೊಡಗಿದ್ದವು. ಬಹುತೇಕವಾಗಿ ಹೆಚ್ಚಿನ ಬೌದ್ಧ ಸಾಹಿತ್ಯ ಹಾಗೂ ಭಿಕ್ಷುಗಳ ಪರಸ್ಪರ ವ್ಯವಹಾರದ ಭಾಷೆ ಪಾಲಿಯಾಗಿತ್ತು. ಮತ್ತು ಜೈನಧರ್ಮ - ಸಂಪ್ರದಾಯ, ಶ್ರಮಣರ ಭಾಷೆಯು ಪ್ರಾಕೃತವಾಗಿತ್ತು. ಇದರಿಂದಾಗಿಯೇ ಭಾರತೀಯ ಕತೆಹೇಳುವ ಮತ್ತು ಕತೆ ರಚಿಸಿರುವ ಭಾಷೆಯೂ ಮುಖ್ಯವಾಗಿ ಪಾಲಿ ಮತ್ತು ಪ್ರಾಕೃತವಾಗಿಬಿಟ್ಟವು. ಬೌದ್ಧರ ಬಹುಮಟ್ಟಿನ ಸಾಹಿತ್ಯವೆಲ್ಲ ಪಾಲಿಯಲ್ಲಿ ರಚನೆಯಾಗಿದ್ದರೆ, ಜೈನ ಹಾಗೂ ಅನ್ಯ ಸಾಹಿತ್ಯವೆಲ್ಲ ಪ್ರಾಕೃತದಲ್ಲಿ. ಪಾಲಿಯಲ್ಲಿ ಬರೆಯಲಾದ ಬೌದ್ಧಸಾಹಿತ್ಯದಂತೆಯೇ ಜೈನ ಸಂಪ್ರದಾಯದ ಧಾರ್ಮಿಕ ಹಾಗೂ ಕಥಾಸಾಹಿತ್ಯವನ್ನು ಪ್ರಾಕೃತದಲ್ಲಿ ಬರೆಯಲಾಯಿತು. ಇದರಲ್ಲಿಯೂ ಕತೆಗಳ ವಿಪುಲ ಭಂಡಾರವಿದೆ. ಬೌದ್ಧಬಿಕ್ಷುಗಳಂತೆಯೇ ಜೈನ ಸಾಧುಗಳು ಕೂಡ ತಮ್ಮ ಧರ್ಮ ಪ್ರಚಾರಕ್ಕಾಗಿ ದೂರದೂರದ ದೇಶಗಳಲ್ಲಿ ಸುತ್ತುತ್ತಿದ್ದರು. ಅವರಿಗೆ ಇದು ಅವಶ್ಯಕವೂ ಆಗಿತ್ತು. ಧರ್ಮಗಳಲ್ಲಿ ಸಂಹಿತೆಗಳು 6 ಕಥಾ ಸಂಸ್ಕೃತಿ ಹಾಗೂ ಧಾರ್ಮಿಕ ಆದೇಶಗಳ ನಿಯಮಗಳು ಇರುತ್ತವೆ. ಜೈನರ ಈ ಬಗೆಯ ಒಂದು ಗ್ರಂಥವಾದ ‘ಬೃಹತ್ಕಲ್ಪಭಾಷ್ಯ’ದಲ್ಲಿ ಇವನ್ನೆಲ್ಲ ಹೇಳಲಾಗಿದೆ. ಜೈನ ಸಾಧುವು ಆತ್ಮಶುದ್ಧಿಯ ಸಲುವಾಗಿ ಹಾಗೂ ಬೇರೆಯವರನ್ನು ಧರ್ಮದಲ್ಲಿ ಸ್ಥಿರವಾಗಿಡಲು ನಿರಂತರ ಜನಪದದಲ್ಲಿ ವಿಹಾರ ಮಾಡಬೇಕು. ಹಾಗೆ ಜನಪದ ವಿಹಾರ ಮಾಡುವ ಸಾಧುವು ಮಗಧ, ಮಾಲವ, ಮಹಾರಾಷ್ಟ್ರ, ಕರ್ನಾಟಕ, ಗೌಡ, ದ್ರಾವಿಡ, ವಿದರ್ಭ ಮುಂತಾದ ದೇಶಭಾಷೆಗಳಲ್ಲಿ ಜನಸಾಧಾರಣರಿಗೆ ಉಪದೇಶ ಮಾಡಬೇಕು. ಅವರಿಗೆ ಈ ಎಲ್ಲ ದೇಶಗಳ ರೀತಿ ರಿವಾಜುಗಳ, ಆಚಾರ ವಿಚಾರಗಳ ಜ್ಞಾನವಿರಬೇಕು. ಇಲ್ಲವಾದರೆ ಜನರ ಅಪಹಾಸ್ಯಕ್ಕೆ ಈಡಾಗಬೇಕಾಗುತ್ತದೆ. ಈ ಬಗೆಯ ಯಾತ್ರೆಗಳಿಂದ ಕ್ಷೇತ್ರೀಯ ಆಡುಭಾಷೆಯ ನಡುವೆ ನಿಶ್ಚಯವಾಗಿಯೂ ಕೊಡು-ಕೊಳುವಿಕೆ ನಡೆಯಿತು ಹಾಗೂ ಪ್ರತಿಯೊಂದು ಕ್ಷೇತ್ರದ ಲೋಕೋಕ್ತಿಗಳು - ಲೋಕಕಥೆಗಳಲ್ಲಿ ಪರಸ್ಪರ ಸಾಮಾಜಿಕತೆ ನಿಶ್ಚಯವಾಗಿಯೂ ಸ್ಥಾಪಿತವಾಗಿರಬಹುದೆಂಬುದು ಸ್ಪಷ್ಟವಾಗಿದೆ. ಜೈನಸಾಹಿತ್ಯದ ಪ್ರಾಚೀನತಮ ಕಥಾಸಂಪದವನ್ನು ಆಗಮ ಸಾಹಿತ್ಯವೆಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಈ ಕತೆಗಳನ್ನು ಪೈಶಾಚೀ ಪ್ರಾಕೃತಭಾಷೆಯಲ್ಲಿ ಬರೆಯಲಾಗಿದೆ. ಪಾಲಿ, ಪ್ರಾಕೃತ ಹಾಗೂ ಲೌಕಿಕ ಸಂಸ್ಕೃತದ ಸಂಮಿಶ್ರಣದಿಂದ ಜನಿಸಿದ ಅಪಭ್ರಂಶ ಕೂಡ ಆಗ ಪ್ರಸ್ತುತವಿತ್ತು. ಸಾಧಾರಣ ಜನರಲ್ಲಿ ಈ ಭಾಷೆಗಳು ಬಹಳ ಪ್ರಚಲಿತವಾಗಿದ್ದವು. ವೈದಿಕ ಸಂಸ್ಕೃತವು ಜನಸಾಧಾರಣರ ಭಾಷೆಯಾಗಿರಲಿಲ್ಲ. ಸ್ವತಃ ವೈದಿಕ ಬ್ರಾಹ್ಮಣರು ವೈದಿಕ ಸಂಸ್ಕೃತದಲ್ಲಿ ರಚನೆ ಮಾಡುತ್ತಿದ್ದರೂ, ಅವರು ಮಾತನಾಡುವ ಭಾಷೆಯು ಪಾಲಿ ಅಥವಾ ಪ್ರಾಕೃತ ಆಗಿತ್ತು. ಸಾಧಾರಣ ಜನರಲ್ಲಿ ವೈದಿಕ ಸಂಸ್ಕೃತ ಭಾಷೆಯ ಬಗೆಗೆ ಅರುಚಿ ಹುಟ್ಟಿತ್ತು. ಮರಾಠಿಯ ಸಂಶೋಧಕ ವಿದ್ವಾಂಸ ಡಾ|| ಮಾಧವ ಮುರಲೀಧರ ದೇಶಪಾಂಡೆ ಹಾಗೂ ಹಿಂದಿಯ ವಿದ್ವಾಂಸ ಡಾ || ರಾಜಮಲ್ ಬೋರಾ ಅವರು ಇದರ ಒಂದು ದೃಷ್ಟಾಂತವನ್ನು ಮುಂದಿಟ್ಟಿದ್ದಾರೆ. “ಒಬ್ಬ ರಾಜಪುತ್ರನು ಮರದ ಕೆಳಗಡೆ ಕುಳಿತಿದ್ದ. ಆಗ ಅವನು ಒಂದು ಸಂಭಾಷಣೆಯನ್ನು (ತಮ್ಮೊಳಗಿನ ಮಾತುಕತೆ) ಕೇಳಿದನು. ಅವನು ಅವರ ಭಾಷೆಯ ಬಗೆಗೆ ಊಹೆ ಮಾಡತೊಡಗಿದನು. ಅವನು ಹೇಳುವ ಹಾಗೆ ಮೊದಲನೆಯದಾಗಿ ಅವರ ಭಾಷೆಯು ಸಂಸ್ಕೃತವಾಗಿರಲಿಲ್ಲ. ಯಾಕೆಂದರೆ ಸಂಸ್ಕೃತವು ಅರ್ಥಮಾಡಿಕೊಳ್ಳಲು ಅತ್ಯಂತ ಕಷ್ಟಕರವಾದ ಭಾಷೆ. ಅಲ್ಲದೆ ಕಠಿಣವೂ ಹೌದು, ದುರ್ಜನರ ಹೃದಯದಂತೆ ಕಠೋರವೂ ಹೌದು. ಈ ಸಂಭಾಷಣೆಯು ಪ್ರಾಕೃತದಲ್ಲಿಯೂ ಇಲ್ಲ. ಯಾಕೆಂದರೆ ಪ್ರಾಕೃತವು ಸಜ್ಜನರ ಹೃದಯದಂತೆ ಸುಖಕರವಾಗಿರುತ್ತದೆ. ಪ್ರಕೃತಿಯ ಸುಂದರವರ್ಣನೆಯೂ ಇರುತ್ತದೆ. ಮತ್ತು ಜಾಗತಿಕ ನೋಟ 7 ಪ್ರಾಕೃತ ಶಬ್ದಗಳು ಸಂಸ್ಕೃತ ಶಬ್ದಗಳ ಹಾಗೆ ಒಂದು ಇನ್ನೊಂದರ ಜೊತೆ ಸಂಧಿಯುಕ್ತವಾಗಿರುವುದಿಲ್ಲ. ಈ ಸಂಭಾಷಣೆಯು ಅಪಭ್ರಂಶದಲ್ಲಿಯೂ ಇಲ್ಲ. ಯಾಕೆಂದರೆ ಅಪಭ್ರಂಶದಲ್ಲಿ ಶುದ್ಧ-ಅಶುದ್ಧ ಸಂಸ್ಕೃತ ಹಾಗೂ ಪ್ರಾಕೃತಗಳ ಮಿಶ್ರಣ ಇರುತ್ತದೆ. ಅದು ಉಕ್ಕುವ ಪ್ರವಾಹದ ನೀರಿನ ಹಾಗೆ ಅನಿಯಂತ್ರಿತವಾಗಿರುತ್ತದೆ. ಆದರೆ ಈ ಸಂಭಾಷಣೆಯು ಪ್ರಿಯ ಹಾಗೂ ಪ್ರೇಯಸಿಯ ನಡುವಣ ಮಾತುಕತೆಯ ಹಾಗೆ ಸುಂದರವಾಗಿದೆ. ಈ ಸಂಭಾಷಣೆಯು ಈ ಮೂರು ಭಾಷೆಗಳಿಗೆ ಸರಿಹೊಂದುವುದಿಲ್ಲವಾದ್ದರಿಂದ ಪೈಶಾಚೀಯೆಂದು ಹೇಳುವುದೇ ಹೆಚ್ಚು ಸೂಕ್ತ. ಹೀಗೆ ಈ ಸಂಭಾಷಣೆಯು ಪೈಶಾಚಿಯದೇ ಆಗಿರಬೇಕೆಂಬುದು ರಾಜಕುಮಾರನ ನಿರ್ಣಯವಾಗಿತ್ತು. ಹೀಗೆ ಒಮ್ಮೆ ಭಾರತೀಯ ಪ್ರಾಕೃತವನ್ನು ಪೈಶಾಚಿಯೆಂದು ಭಾವಿಸುವುದಾದರೆ ಪೈಶಾಚಿಯ ಭೌಗೋಲಿಕ ವಿಸ್ತಾರವು ಚೀನ-ತುರ್ಕಸ್ತಾನದ ವರೆಗೆ ಎಂದು ಭಾವಿಸಬೇಕಾಗುತ್ತದೆ. ಇನ್ನೊಂದು ಕಡೆ ಸಿಂಧು ನದಿಯ ದಡದವರೆಗಂತೂ ಅದರ ವಿಸ್ತಾರವಿದ್ದೇ ಇತ್ತು. ಸಿಂಧು ನದಿಯ ಪೂರ್ವದಲ್ಲಿ ಯಮುನಾವರೆಗೆ ಶೌರಸೇನಿಯ ವಿಸ್ತಾರವಿತ್ತು. ಈ ರೀತಿಯಲ್ಲಿ ಪೈಶಾಚಿಯು ಶೌರಸೇನಿಯ ಸಂಸ್ಕಾರವನ್ನೂ ಪಡೆದುಕೊಳ್ಳುತ್ತಿತ್ತು. ಓರಿಸ್ಸಾದ ವಿದ್ವಾಂಸ-ಭಾಷಾವಿದ ಮಾರ್ಕಂಡೇಯ ಅವರ ಪ್ರಕಾರ ಪೈಶಾಚಿಯ ಮೂರು ಪ್ರಧಾನಭೇದಗಳನ್ನು ಹೇಳಲಾಗಿದೆ. ಅವುಗಳಲ್ಲಿ ಕೇಕಯದ ಅನಂತರ ಎರಡನೆಯ ಭೇದ ಶೌರಸೇನೀ ಪೈಶಾಚಿಯದು, ಮೂರನೆಯ ಭೇದ ಪಾಂಚಾಲಿ ಪೈಶಾಚಿ. ಪೈಶಾಚಿಗೆ ಸಂಸ್ಕೃತದೊಂದಿಗಷ್ಟೇ ಅಲ್ಲ, ಪ್ರಾಕೃತದ ರೂಪದೊಂದಿಗೆ ನಂಟಿದೆಯೆಂದು ಭಾವಿಸುವ ಪ್ರಯತ್ನವು ವ್ಯಾಕರಣ ಗ್ರಂಥಗಳಲ್ಲಿ ಯಾಕಾಯಿತು, ಇದಕ್ಕೆ ಕಾರಣವನ್ನು ಭಾಷಾ ಸಮುದಾಯಗಳ ಪರಸ್ಪರ ಸಂಬಂಧದಲ್ಲಿಯೇ ಹುಡುಕಬೇಕಾಗಬಹುದು. ಕ್ರಿ.ಶ. ಎಂಟನೇ ಶತಮಾನದಲ್ಲಿ ಜೈನ ಸಾಹಿತಿ ಉದ್ಯೋತನ ಸೂರಿಯು ‘ಕುವಲಯಮಾಲಾ’ ಗ್ರಂಥದಲ್ಲಿ ಪ್ರಾಕೃತದ ಕತೆಯನ್ನು ಕೊಟ್ಟಿದ್ದಾನೆ. ಆ ಕತೆಯ ಸಂಕ್ಷಿಪ್ತ ವಿವರಣೆಯನ್ನು ಡಾ|| ಮಾಧವ ಮುರಲೀಧರ ದೇಶಪಾಂಡೆಯವರು ‘ಸಂಸ್ಕೃತ ಆಣಿ ಪ್ರಾಕೃತಭಾಷಾ’ (ಮರಾಠಿಭಾಷೆ)ದಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಸಂಕಲಿಸಿದ ಒಂದು ಕತೆಯಲ್ಲಿ ಪೈಶಾಚಿಯ ವಿಶದವಾದ ಉಲ್ಲೇಖವಿದೆ. ವಿಶೇಷ ಗಮನಕೊಡಬೇಕಾದ ಸಂಗತಿಯೆಂದರೆ ಪೈಶಾಚಿಯನ್ನು ಅನ್ಯಭಾಷೆಗಳಿಗಿಂತ ಬೇರೆಯಾದದ್ದೆಂದು ಹೇಳಲಾಗಿದೆ. ಗುಣಾಢ್ಯನ ಪೈಶಾಚಿಯನ್ನೂ ಹೀಗೆಯೇ ಬೇರೆಯೆಂದು ಭಾವಿಸಲಾಗಿದೆ. ಪ್ರಾಕೃತಗಳಲ್ಲಿ ಅದನ್ನು ಗಣಿಸಲಾಗುವುದಿಲ್ಲ. ಪ್ರಾಕೃತದ ರೂಪಗಳಿಗೆ ಸಿಗುವಷ್ಟು ಸಂಮಾನವೂ ಪೈಶಾಚಿಗೆ ಸಿಗಲಿಲ್ಲ. ವಿಶೇಷವಾಗಿ ಗುಣಾಢ್ಯನ ಕಾಲದಲ್ಲಿ ಅದಕ್ಕೆ ಗೌರವ ದೊರೆಯಲಿಲ್ಲ. 8 ಕಥಾ ಸಂಸ್ಕೃತಿ ಅನಂತರದಲ್ಲಿ ವಿದ್ವಾಂಸರು ಪೈಶಾಚಿಯು ಕೇಕಯದ ಭಾಷೆಯೆಂಬುದನ್ನೂ ಮರೆತುಬಿಟ್ಟರು. ಅವರು ಅದನ್ನು ವಿಂಧ್ಯಾತಲದ ಸಮೀಪದ ಭಾಷೆಯೆಂದು ಭಾವಿಸತೊಡಗಿದರು. ಪಿಶಾಚಭಾಷೆ ಎನ್ನತೊಡಗಿದರು. ರಾಜಶೇಖರನಂತೂ ಅದನ್ನು ‘ಭೂತಭಾಷೆ’ ಅಂದಿದ್ದಾನೆ. ಹೀಗೆ ಯಾಕಾಯಿತು? ಪೈಶಾಚೀ ಭಾಷೆಯ ಮಾಧ್ಯಮದಿಂದಲೇ ಬೌದ್ಧ ಹಾಗೂ ಜೈನ ಧರ್ಮದ ವಿಸ್ತಾರವು ಮಧ್ಯ ಏಶಿಯದ ದೇಶಗಳಲ್ಲಿ ಹಾಗೂ ಭಾಷೆಗಳಲ್ಲಿ ಆದರೂ ಭಾರತದಲ್ಲಿ ಕಾಣದಿರುವಂತೆ ಮಾಡಲಾಯಿತು. ಗುಣಾಢ್ಯನ ಬೃಹತ್ಕಥೆಯನ್ನು ಪೈಶಾಚಿಯ ಏಕಮಾತ್ರ ಸಾಹಿತ್ಯಕ ರಚನೆಯೆಂದು ತಿಳಿಯಲಾಗುತ್ತದೆ. ಮೂಲಗ್ರಂಥವು ಲುಪ್ತವಾಗಿದೆ. ಅದರ ಸಂಸ್ಕೃತ ಅನುವಾದ ಲಭ್ಯವಿದೆ. ಮರಾಠಿಯಲ್ಲಿ ಕಥಾಸರಿತ್ಸಾಗರದ ಅನುವಾದವು ಐದು ಭಾಗಗಳಲ್ಲಿ ದೊರೆಯುತ್ತದೆ. ಅದು ಸೋಮದೇವನು ಅನುವಾದಿಸಿರುವ ಕಥಾಸರಿತ್ಸಾಗರದ ಅನುವಾದ. ಅದರ ಕಥಾಖಂಡ ಲಂಬಕದ ಎಂಟನೆಯ ತರಂಗದಲ್ಲಿ ಗುಣಾಢ್ಯನ ಕತೆಯಿದ್ದು, ಅದರ ಉಲ್ಲೇಖವನ್ನು ಡಾ|| ಮಾಧವ ದೇಶಪಾಂಡೆಯವರು ಮಾಡಿದ್ದಾರೆ. ಅದು ಇಲ್ಲಿ ಪ್ರಸ್ತುತವಿದೆ - ಗುಣಾಢ್ಯನಿಗೆ ಗುಣದೇವ ಮತ್ತು ನಂದಿದೇವರೆಂಬ ಇಬ್ಬರು ಶಿಷ್ಯರಿದ್ದರು. ಆ ಕತೆಗಳು ಸಾತವಾಹನ ರಾಜನಿಗೆ ಯೋಗ್ಯವಾದವು ಎಂದು ಶಿಷ್ಯರು ಪ್ರಸ್ತಾಪ ಮಾಡಿದರು. ಗುಣಾಢ್ಯನು ಶಿಷ್ಯರ ಮಾತನ್ನು ಒಪ್ಪಿದನು. ಗುಣಾಢ್ಯನು ರಾಜಧಾನಿಗೆ ಹೋಗಿ ದೇವಿಯ ಮಂದಿರದಲ್ಲಿ ಉಳಿದನು. ಆ ಇಬ್ಬರು ಶಿಷ್ಯರು ಸಾತವಾಹನ ರಾಜನ ದರಬಾರವನ್ನು ತಲುಪಿದರು. ಅವರೊಂದಿಗೆ ಆ ಮಹಾಕಥಾಗ್ರಂಥವೂ ಇತ್ತು. ಅವರು ಆ ಗ್ರಂಥವನ್ನು ರಾಜನಿಗೆ ತೋರಿಸಿ ಹೇಳಿದರು - “ಇದು ಗುಣಾಢ್ಯನ ರಚನೆ.” ಆದರೆ ರಾಜನು ಆ ಸಮಯದಲ್ಲಿ ಸ್ವಯಂ ತನ್ನದೇ ವಿದ್ಯೆಯಿಂದ ಪೀಡಿತನಾಗಿದ್ದ. ಅವನಲ್ಲಿ ಮತ್ಸರದ ಭಾವನೆಯಿತ್ತು. ಅವನಿಗೆ ಈ ಇಬ್ಬರು ಶಿಷ್ಯರು ಪಿಶಾಚಿಗಳಂತೆಯೇ ಕಾಣತೊಡಗಿದ್ದರು. ಮೇಲಾಗಿ ಆ ಗ್ರಂಥವನ್ನು ಪೈಶಾಚಿಯಲ್ಲಿ ಬರೆಯಲಾಗಿತ್ತು. ಮತ್ತೇನು? ರಾಜನು ಹೇಳಿದನು - “ಈ ಮಹಾಗ್ರಂಥದಲ್ಲಿ ಏಳು ಲಕ್ಷ ಶ್ಲೋಕಗಳಿವೆ. ಆದರೆ ಪೈಶಾಚಿ ಭಾಷೆಯಲ್ಲಿವೆ. ಈ ಭಾಷೆ ತುಂಬ ನೀರಸವೆನಿಸುತ್ತದೆ. ಇದಲ್ಲದೆ ಇದನ್ನು ರಕ್ತದಲ್ಲಿ ಬರೆಯಲಾಗಿದೆ. ಈ ಪೈಶಾಚೀ ಕತೆಗೆ ಧಿಃಕ್ಕಾರವಿರಲಿ.” ಶಿಷ್ಯರಿಗೆ ಅಚ್ಚರಿಯಾಯಿತು. ಅವರು ಗ್ರಂಥದೊಂದಿಗೆ ಗುಣಾಢ್ಯನ ಬಳಿ ಬಂದರು. ಎಲ್ಲ ವೃತ್ತಾಂತಗಳನ್ನೂ ಹೇಳಿದರು. ಕೇಳಿದ ಗುಣಾಢ್ಯನ ಮನಸ್ಸು ಖಿನ್ನವಾಯಿತು. ಬೇಸರದ ಭಾವನೆಯಿಂದ ಅವನು ಅಲ್ಲಿಗೆ ಹತ್ತಿರದ ಅಡವಿಯಲ್ಲಿನ ಬೆಟ್ಟದ ಮೇಲೆ ಹೋದನು. ಪ್ರದೇಶವು ತುಂಬ ರಮಣೀಯವಾಗಿತ್ತು, ಏಕಾಂತವಿತ್ತು. ಅಲ್ಲಿ ಅವನು ಆ ಗ್ರಂಥದ ಒಂದೊಂದೇ ಪುಟ ತೆಗೆದು ಓದತೊಡಗಿದನು. ಜಾಗತಿಕ ನೋಟ 9 ಅದನ್ನು ಪಶು-ಪಕ್ಷಿಗಳು ಕೇಳುತ್ತಿದ್ದವು. ಓದುವುದು - ಪೂರ್ಣ ಮುಗಿದ ಮೇಲೆ ಅವನು ಆ ಪ್ರತಿಗಳನ್ನು ಅಗ್ನಿಕುಂಡಕ್ಕೆ ಸಮರ್ಪಿಸಿದನು. ಅವನ ಶಿಷ್ಯರ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಆದರೆ ಅವರು ಏನೂ ಮಾಡಲಾರದವರಾಗಿದ್ದರು. ಕೊನೆಯಲ್ಲಿ ಆ ಇಬ್ಬರು ಅವನು ಅಗ್ನಿಕುಂಡಕ್ಕೆ ಪುಟಗಳನ್ನು ಅರ್ಪಿಸುವುದನ್ನು ತಡೆದರು. ಈವರೆಗೆ ಅವನು ನರವಾಹನದತ್ತನ ಚರಿತ್ರೆಯನ್ನು ಮಾತ್ರ ಸುಟ್ಟಿರಲಿಲ್ಲ. ಏಳು ಕತೆಗಳಲ್ಲಿ ಈ ಒಂದು ಕತೆಯೇ ಒಂದು ಲಕ್ಷ ಶ್ಲೋಕಗಳದ್ದಾಗಿತ್ತು. ಗುಣಾಢ್ಯನು ಕತೆಯನ್ನು ಓದುತ್ತಿರುವಾಗ ಅಡವಿಯ ಪಶು-ಪಕ್ಷಿ, ಕಾಡೆಮ್ಮೆ, ಹರಿಣ, ಹಂದಿ ಇತ್ಯಾದಿಯೆಲ್ಲವೂ ಅವನನ್ನು ಸುತ್ತುವರಿದು ನಿಂತು ಕತೆ ಕೇಳುತ್ತಿದ್ದವು. ಅವುಗಳ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯುತ್ತಿತ್ತು. ಅವು ಎಲ್ಲವೂ ಸ್ತಬ್ಧ, ನಿಶ್ಶಬ್ದವಾಗಿ ಕುಳಿತಿದ್ದವು. ಅದೇ ಸಮಯಕ್ಕೆ ಸರಿಯಾಗಿ ರಾಜನು ಅಸ್ವಸ್ಥನಾದನು. ವೈದ್ಯರು ಪರೀಕ್ಷೆ ಮಾಡಿ ಹೇಳಿದರು. - ‘ಒಣಮಾಂಸ ತಿಂದಿದ್ದರಿಂದ ಹೀಗಾಗಿದೆ.’ ರಾಜನು ಅಡುಗೆಯವರನ್ನು ಕರೆಸಿ ಕೇಳಿದನು. ಅವರು ಹೇಳಿದರು - “ನಾವೇನು ಮಾಡಲಿ? ಮಾಂಸ ತರುವವನು ನಮಗೆ ರಸಹೀನ ಮಾಂಸ ಕೊಡುತ್ತಿದ್ದಾನೆ.” ಅವನು ಬೇಟೆಗಾರನನ್ನು ಕರೆಸಿದನು. ಅವನು ಹೇಳಿದ “ಈ ವೇಳೆಯಲ್ಲಿ ಹತ್ತಿರದ ಅಡವಿಯಲ್ಲಿ ಒಂದು ಅಗ್ನಿಕುಂಡವನ್ನು ಹೊತ್ತಿಸಿಕೊಂಡು ಒಬ್ಬ ಕಥಾವಾಚಕನು ಕುಳಿತಿದ್ದಾನೆ. ಅವನು ತನ್ನ ಗ್ರಂಥದ ಸಂಪೂರ್ಣ ಹಾಳೆಗಳನ್ನು ಓದುತ್ತಾನೆ, ಮತ್ತು ಓದಿದ ಪುಟವನ್ನು ಅಗ್ನಿಗೆ ಆಹುತಿಯಾಗಿಸುತ್ತಾನೆ. ಅವನು ಕತೆ ಹೇಳುವುದನ್ನು ವನದ ಪಶುಗಳೆಲ್ಲ ಕೇಳುತ್ತವೆ. ಅವು ಹುಲ್ಲು ಮೇಯುವುದನ್ನು ನಿಲ್ಲಿಸಿವೆ. ಆದ್ದರಿಂದಲೇ ಅವುಗಳ ಮಾಂಸವು ಶುಷ್ಕವಾಗುತ್ತಿದೆ.” ಈ ಚಮತ್ಕಾರವನ್ನು ಕೇಳಿ ರಾಜನು ಸ್ವಯಂ ಆ ಅಡವಿಗೆ ಹೋದನು. ಆ ಕಥಾವಾಚಕನು ನಿಜವಾಗಿಯೂ ಆ ಪುಟಗಳನ್ನು ಅಗ್ನಿಗೆ ಅರ್ಪಿಸುತ್ತಿರುವುದನ್ನು ಅವನು ನೋಡಿದನು. ಅವನ ತಲೆಗೂದಲು ಉದ್ದವಾಗಿತ್ತು. ಪಶುಗಳ ಕಣ್ಣುಗಳಿಂದ ಅಶ್ರುಧಾರೆ ಸುರಿಯುತ್ತಿತ್ತು. ಗುಣಾಢ್ಯನ ಶರೀರವೂ ಕೃಶವಾಗಿತ್ತು. ಪಶುಗಳೆಲ್ಲ ಅವನನ್ನು ಸುತ್ತುವರಿದು ಕುಳಿತಿದ್ದವು. ರಾಜನು ಆಗ ಎಲ್ಲ ಸಂಗತಿಗಳನ್ನು ತಿಳಿಸಬೇಕೆಂದು ಗುಣಾಢ್ಯನನ್ನು ಕೇಳಿದನು. ಗುಣಾಢ್ಯನು ತನ್ನೆಲ್ಲ ವೃತ್ತಾಂತವನ್ನೂ ಹೇಳಿದನು. ಗುಣಾಢ್ಯನು ‘ಮೌಲ್ಯವಾನ್‍ಗಣ’ದ ಅವತಾರವೆಂದು ರಾಜನಿಗೆ ಅನ್ನಿಸಿತು. ರಾಜನು ತನ್ನ ತಲೆಯನ್ನು ಗುಣಾಢ್ಯನ ಪಾದಗಳ ಮೇಲೆ ಇಟ್ಟನು. ‘ಶ್ರೀ ಶಂಕರನು ತಮ್ಮ ಬಾಯಿಂದ ಹೇಳಿಸಿದ ಕತೆಗಳೆಲ್ಲವನ್ನು ನನಗೆ ಹೇಳಿರಿ’ ಎಂದು ಅವನು ಕೇಳಿದನು. ಗುಣಾಢ್ಯನು ಹೇಳಿದನು - “ಹೇ ರಾಜಾ, ನಾನು ಏಳು ಲಕ್ಷ ಶ್ಲೋಕಗಳನ್ನು ಕಳಿಸಿದ್ದೆ. ಅದನ್ನು ನೀವು ಸ್ವೀಕರಿಸಲಿಲ್ಲ. ಏಳು ಕತೆಗಳಲ್ಲಿ ಆರು ಕತೆಗಳನ್ನು ನಾನು ಈಗಾಗಲೇ ಅಗ್ನಿಗೆ ಅರ್ಪಿಸಿದ್ದೇನೆ. ಆರು ಲಕ್ಷ ಶ್ಲೋಕಗಳು 10 ಕಥಾ ಸಂಸ್ಕೃತಿ ಭಸ್ಮವಾಗಿವೆ. ಈಗ ಏಳನೆಯ ಕತೆ, ಒಂದು ಲಕ್ಷ ಶ್ಲೋಕಗಳದ್ದು - ಉಳಿದಿದೆ. ಅದನ್ನು ತಾವು ಸ್ವೀಕರಿಸಿ. ನನ್ನ ಶಿಷ್ಯರು ಇದನ್ನು ಸಂಸ್ಕೃತದಲ್ಲಿ ತಿಳಿಸುವರು.” ಅನಂತರ ರಾಜನು ಉಳಿದ ಕತೆಯನ್ನು ತೆಗೆದುಕೊಂಡು ಹಿಂತಿರುಗಿದನು. ಆ ಇಬ್ಬರು ಶಿಷ್ಯರನ್ನು ಕರೆಯಿಸಿದನು. ಅವರನ್ನು ಗೌರವಿಸಿದನು. ಗುಣಾಢ್ಯನು ಅನಂತರ ಸಮಾಧಿ ಮರಣವನ್ನು ಸ್ವೀಕರಿಸಿದ್ದನು. ಅವನು ಶಾಪಮುಕ್ತನಾಗಿ ಸ್ವರ್ಗದಲ್ಲಿದ್ದ ತನ್ನ ಪದವಿಯನ್ನು ಪಡೆದನು. ರಾಜ ಶಿಷ್ಯರಿಂದ ಎಲ್ಲ ವೃತ್ತಾಂತಗಳನ್ನು ಕೇಳಿ ಆರಂಭದ ಕಥಾಪೀಠವನ್ನು ಬರೆಯಲು ಹೇಳಿದನು. ಆ ಕಥಾಪೀಠಿಕೆಯೇ ಲಂಬಕದ ಎಂಟು ತರಂಗಗಳು. ಆ ಎಂಟೂ ತರಂಗಗಳಲ್ಲಿ ಮೇಲೆ ಹೇಳಿದ ಕತೆಯು ಅಂತಿಮವಾದದ್ದು - ಎಂಟನೇ ತರಂಗಕ್ಕೆ ಸೇರಿದ್ದು. ರಾಜನು ಅಡವಿಗೆ ಹೋಗುವುದು, ಗುಣಾಢ್ಯನು ಕತೆ ಹೇಳುವುದನ್ನು ಕೇಳುವುದು, ಬೃಹತ್ಕಥೆಯ ಪುಟಗಳನ್ನು ಅಗ್ನಿಕುಂಡದಲ್ಲಿ ಸುಡುತ್ತ ಹೋಗುವುದು, ಅದರಿಂದ ಸಾತವಾಹನ ರಾಜನಿಗಾಗುವ ಪಶ್ಚಾತ್ತಾಪವನ್ನು ನಿರೂಪಿಸಿರುವುದು - ಇದೂ ಒಂದು ಕತೆಯೇ ಆಗಿದೆ. ಯಾಕೆಂದರೆ ಇದು ನಿಜವಾಗಿಯೂ ನಂತರ ಜೋಡಿಸಿದ ಪ್ರಕ್ಷಿಪ್ತಭಾಗವೇ ಆಗಿದೆ. ಯಾವುದೇ ರಚನೆ, ಸಂರಚನೆ, ವಿಚಾರದ ಕ್ಷೇತ್ರದಲ್ಲಿ ಸಾರ್ವಜನಿಕ ಸ್ವೀಕೃತಿ ದೊರಕಿದಾಗ, ಅವುಗಳ ಬಗ್ಗೆ ತಿರಸ್ಕಾರವಿದ್ದರೂ ಆ ರಚನೆ-ವಿಚಾರಗಳನ್ನು ನಿರಾಕರಿಸಲಾಗದೆ ಮಿಥ್ ರೂಪಕೊಟ್ಟು ತಮ್ಮ ಸಾಹಿತ್ಯದಲ್ಲಿ ಸೇರಿಸಿಕೊಳ್ಳುವುದು ಬ್ರಾಹ್ಮಣವಾದೀ ವರ್ಣವಾದೀ ಆರ್ಯ ಸಮುದಾಯದ ಚರಿತ್ರೆಯೇ ಆಗಿದೆ. ಬೌದ್ಧಧರ್ಮದ ಸಂದರ್ಭದಲ್ಲಿಯೂ ಹೀಗೆಯೇ ಆಗಿರಲಿಲ್ಲವೇ? ಸನಾತನ ಬ್ರಾಹ್ಮಣ-ವರ್ಣವಾದೀ ಧರ್ಮವು ಪ್ರಾಚೀನಕಾಲದಲ್ಲಿ ಬೌದ್ಧಧರ್ಮ (ಜೈನಧರ್ಮವೂ) ವನ್ನು ತೀವ್ರವಾಗಿ ವಿರೋಧಿಸಿತ್ತು ಎಂಬುದು ಜಗತ್ತಿಗೇ ಗೊತ್ತಿರುವ ವಿಚಾರ. ಶಂಕರಾಚಾರ್ಯರು ಬೌದ್ಧಧರ್ಮವನ್ನು ದೇಶದ ಹೊರಗೆ ತಳ್ಳಿದ್ದರು. ಭಾರತದಲ್ಲಿ ಆಗ ವೈದಿಕ ಬ್ರಾಹ್ಮಣರು - ಬೌದ್ಧಬಿಕ್ಷುಗಳ ನಡುವೆ ಧರ್ಮಯುದ್ಧವೇ ನಡೆದಿತ್ತು. ಎಲ್ಲ ಬೌದ್ಧವಿಹಾರಗಳನ್ನು ಮತ್ತು ಜೈನ ಪೂಜಾಸ್ಥಳಗಳನ್ನು ಮಂದಿರವಾಗಿ ಪರಿವರ್ತಿಸಲಾಗಿತ್ತು. ಬೌದ್ಧ ಮತ್ತು ಜೈನಧರ್ಮದ ಕೇಂದ್ರವಾದ ಸಾಕೇತದಲ್ಲಿ ಇಂದು ಯಾವುದೇ ಮಹತ್ವಪೂರ್ಣ ಬೌದ್ಧ-ಜೈನ ಅವಶೇಷಗಳೂ ದೊರೆಯುವುದಿಲ್ಲ. ಅದನ್ನು ಸನಾತನ ಹಿಂದುಗಳ ರಾಮನಗರಿ ಅಯೋಧ್ಯೆಯ ರೂಪದಲ್ಲಿ ಸ್ಥಾಪಿಸಲಾಯಿತು. ಇಷ್ಟಾದರೂ ಗೌತಮ ಬುದ್ಧ ಹಾಗೂ ಬೌದ್ಧಧರ್ಮವನ್ನು ಬ್ರಾಹ್ಮಣವಾದೀ-ವರ್ಣವಾದಿಗಳು ನಾಶಪಡಿಸಲು ಸಾಧ್ಯವಾಗದಿದ್ದಾಗ, ಗೌತಮ ಬುದ್ಧನನ್ನು ನಿರಾಕರಿಸಲಾಗದಿದ್ದಾಗ, ಅದೇ ಗೌತಮ ಬುದ್ಧನನ್ನು ತಮ್ಮ ಪೌರಾಣಿಕ ಕಥಾಸಂಸ್ಕೃತಿಯಲ್ಲಿ ವಿಷ್ಣುವಿನ ಎಂಟನೇ ಅವತಾರದ ರೂಪದಲ್ಲಿ ಸ್ವೀಕರಿಸಿದರು. ಜಾಗತಿಕ ನೋಟ 11 ಅನಿವಾರ್ಯವಾದರೂ ಕೂಡ, ಭಾರತೀಯ ವಿಚಾರ ಪರಂಪರೆಯಲ್ಲಿ ಸಮನ್ವಯದ ಸಾರ್ಥಕ ರೀತಿಯಲ್ಲಿ ಇದೂ ಒಂದು! ಕಥಾಸಂಸ್ಕೃತಿಯನ್ನು ಕುರಿತು ಮಾತನಾಡುವಾಗ ಭಾಷೆ ಹಾಗೂ ಅದರ ಅಸ್ತಿತ್ವವನ್ನು ನಿರಾಕರಿಸಲಾಗುವುದಿಲ್ಲ. ಯಾಕೆಂದರೆ ಸಾಮಾನ್ಯ ಮನುಷ್ಯನು ತನ್ನ ಕಾಲದ ಸರ್ವ ಸಾಧಾರಣ ವ್ಯಕ್ತಿಗಳ ಭಾವನೆಗಳಿಗೆ ಕತೆಗಳಲ್ಲಿ ಮಾತುಕೊಟ್ಟಿದ್ದಾನೆ. ಕತೆಗಳು ಎಂದಿಗೂ ಒಂದು ಸಮಸಾಮಯಿಕ, ಸಮಕಾಲೀನ, ಸರ್ವಸಾಧಾರಣ ಅಭಿವ್ಯಕ್ತಿಯದೇ ದನಿಗಳಾಗಿವೆ. ಹಾಗಾಗಿಯೇ ಯಾವುದೇ ಯುಗಮಾನ, ಜಾತಿ, ಅಥವಾ ಸಮುದಾಯದ ಸಾಮಾನ್ಯ ಮನುಷ್ಯನ ಜೀವನಗತ-ಸಮಾಜಗತ ಸತ್ಯವನ್ನು ಆಯಾ ಕಾಲಘಟ್ಟಗಳ ಕತೆಗಳಿಂದಲ್ಲದೆ ತಿಳಿದುಕೊಳ್ಳಲಾಗುವುದಿಲ್ಲ. ಪ್ರತಿಯೊಂದು ಶತಮಾನದ ಸಾಮಾನ್ಯ ಮನುಷ್ಯನ ಇತಿಹಾಸವನ್ನು ಕತೆಗಳಲ್ಲಿ ಶೋಧಿಸಬಹುದಾಗಿದೆ. ಆದರೆ ಭಾರತದಲ್ಲಿ ಸಾಹಿತ್ಯದ ಒಂದು ಶಿಷ್ಟ ಪರಂಪರೆ ಯಾವಾಗೂ ಇದೆ. ಜನಸಾಧಾರಣರ ರಚನೆಗಳನ್ನು, ವಿಧಗಳನ್ನು, ಅವರ ಭಾಷೆಯನ್ನು ಕುಲೀನತೆಯ ಅಹಂಕಾರದಲ್ಲಿ ನಿರಾಕರಿಸುತ್ತದೆ. ಭಾರತೀಯ ಸಾಹಿತ್ಯದ ಮುಖ್ಯಧಾರೆಯಲ್ಲಿ ವಿಚಾರ, ಆಲೋಚನೆ ಹಾಗೂ ರಚನೆಗಳ ಸ್ವೀಕಾರ ಹಾಗೂ ನಿರಾಕರಣೆಯ ಈ ಪರಂಪರೆಯು ಶತಮಾನಗಳಷ್ಟು ಹಳೆಯದು. ಸಾಹಿತ್ಯದ ಅಧಿಕಾರದಲ್ಲಿ ಪ್ರವೇಶವಿಟ್ಟುಕೊಳ್ಳುವ ಋಷಿಗಳು, ಮನೀಷಿಗಳು ಹಾಗೂ ಗ್ರಂಥಕಾರರು ತಮ್ಮ ಭಾಷಾಗತ ಮತ್ತು ಯಥಾಸ್ಥಿತಿವಾದೀ ವೈಚಾರಿಕ ಜಗತ್ತನ್ನು ನಿರ್ಮಿಸಿಕೊಂಡು ಬಿಟ್ಟಿದ್ದರು, ಸಾಹಿತ್ಯದ ಸೌಂದರ್ಯಶಾಸ್ತ್ರವನ್ನು ತಯಾರಿಸಿಕೊಂಡಿದ್ದರು. ಅವರಿಗೆ ಬೇರೆಯದೆನಿಸಿದ್ದು, ಸಹಮತವಿಲ್ಲದ್ದು ಅದರ ಭಾಷಾ ಸಹಿತವಾಗಿ ಅಸ್ಪೃಶ್ಯವಾಗಿ ಬಿಡುತ್ತಿತ್ತು. ವೈದಿಕ ಸಾಹಿತ್ಯ ಹಾಗೂ ವೈದಿಕ ಸಂಸ್ಕೃತದ ಕಾಲಘಟ್ಟದವರೆಗೆ ವಿಚಾರದ ಮುಕ್ತತೆಯ ಪರಂಪರೆ ಅಖಂಡವಾಗಿ ನಡೆದುಕೊಂಡು ಬಂದಿತು. ವೈದಿಕ ಸಂಹಿತೆಗಳ - ಋಗ್ವೇದ, ಯುಜುರ್ವೇದ, ಸಾಮವೇದ ಹಾಗೂ ಅಥರ್ವವೇದ - ವರೆಗಂತೂ ವೈದಿಕದೇವತೆಗಳ ಕತೆಗಳು ಮತ್ತು ಕಿಂವದಂತಿಗಳು ನಡೆಯುತ್ತ ಬಂದವು. ಅಲ್ಲಿಯವರೆಗೆ ಲೌಕಿಕ ಸಂಸ್ಕೃತ ಭಾಷೆಯ ಸ್ವರೂಪವೂ ಎದುರಿಗೆ ಬಂದಿರಲಿಲ್ಲ. ಆದರೆ ಜಡವಾದಿಗಳಾದ ಆರ್ಯ ಪಂಡಿತರು ಸ್ವತಃ ವೈದಿಕ ಸಂಸ್ಕೃತದ ಸ್ವಾಭಾವಿಕ ವಿಕಾಸಕ್ಕೆ ದಾರಿಕಟ್ಟಿ ನಿಂತಿದ್ದರು. ಸೃಜನಶೀಲ ಕ್ಷೇತ್ರದಲ್ಲಿಯೂ ಇದೇ ಆಯಿತು. ಇಂದ್ರ ಮತ್ತು ಅನ್ಯ ವೈದಿಕ ದೇವತೆಗಳ ಹೊರತಾಗಿ ಏನನ್ನೂ ಬರೆಯುವುದು ಸಾಧ್ಯವಿರಲಿಲ್ಲ. ವೈದಿಕ ಮಹಾಪುರುಷರ ಮಹಾನಾಯಕತ್ವಕ್ಕೆ ಅಸಹಮತ ವ್ಯಕ್ತಪಡಿಸುವುದೂ ಅಸಂಭವವಾಗಿತ್ತು. ಅಲ್ಲಿಯವರೆಗೆ ಧಾರ್ಮಿಕ, ನೈತಿಕ, ಅಲೌಕಿಕ (ಜಾದೂ) ಕತೆಗಳನ್ನು ಬರೆಯಬಹುದಾಗಿತ್ತು. ಆದರೆ ಲೌಕಿಕ ಕತೆಗಳು (ಸಾಹಿತ್ಯ) ಅವಾಂಛಿತ, 12 ಕಥಾ ಸಂಸ್ಕೃತಿ ಅಲಕ್ಷಿತ, ಅನಪೇಕ್ಷಿತ ಹಾಗೂ ನಿರ್ಲಕ್ಷ್ಯಿತವಾಗಿದ್ದವು. ಇಂದೂ ಸಂಸ್ಕೃತವಿದ್ವಾಂಸರು ಸೀಮಿತ ಸಮಾಜದಲ್ಲಿ ಕಾಣುತ್ತಾರೆ. ಯಥಾಸ್ಥಿತಿವಾದೀ ವೈದಿಕ ಸಾಹಿತ್ಯದ ಹಾಗೂ ಜೊತೆಗೇನೇ ಭಾಷಿಕ ಸ್ತರದಲ್ಲಿ ವೈದಿಕ ಸಂಸ್ಕೃತದ ನಡಿಗೆ ಮಹಾಭಾರತ ಕಾಲದವರೆಗೆ ಅಗಾಧರೂಪದಲ್ಲಿ ನಡೆಯುತ್ತ ಉಳಿಯಿತು. ಈ ಅಲಿಖಿತವಾದ ಹೇಳದ ವರ್ಜನೆಯು ಕೇವಲ ರಚನೆಯ ನೆಲೆಯಲ್ಲಿ ಮಾತ್ರವಾಗಿರದೆ ಭಾಷೆಯ ಸ್ತರದಲ್ಲಿಯೂ ಇತ್ತು. ಹೊಸ ಕತೆಗಳ ಆವೃತ್ತಿಯ ಹೊಸ ಹೇಳುವಿಕೆ ಹಾಗೂ ಭಾಷಿಕವಾದ ಪ್ರಾದೇಶಿಕ ಪ್ರಯೋಗಶೀಲತೆಯನ್ನು ನೆನಪುಮಾಡಿಕೊಳ್ಳಿ!. ರೇಣು ಅವರ ‘ಮೈಲಾ ಆಂಚಲ್’ನ ನವೀನ ಹಾಗೂ ಯಾರೂ ಇನ್ನೂ ಸ್ಪರ್ಶಿಸಿರದ ವಾಸ್ತವವಾದಿ ರಾಜನೀತಿಕ ಅಭಿವ್ಯಕ್ತಿಯನ್ನು ಅದರ ಭಾಷೆಯ ಪ್ರಾದೇಶಿಕತೆಯ ಕಾರಣದಿಂದ ಸಾಹಿತ್ಯದ ಸೌಂದರ್ಯಶಾಸ್ತ್ರಜ್ಞರು ಮತ್ತು ಯಥಾಸ್ಥಿತಿವಾದಿಗಳು ಬಹುಮಟ್ಟಿಗೆ ಕಿತ್ತುಹಾಕಿದ್ದರು. ಇದು ಎಲ್ಲಿಯವರೆಗೆ ಮುಂದುವರಿಯಿತೆಂದರೆ ಬಾಬೂ ಶಿವಪೂಜನ ಸಹಾಯ ಅವರ ‘ಗ್ರಾಮೀಣ ದುನಿಯಾ’ ಮತ್ತು ನಾಗಾರ್ಜುನರ ಕಾದಂಬರಿ ‘ರತಿನಾಥ ಕೀ ಚಾಚೀ’ ಮತ್ತು ‘ಬಲಚನಮಾ’ ಗಳನ್ನು ಬೆಳಕಿಗೆ ಬರಲು ಕೊಟ್ಟಿರಲಿಲ್ಲ. ಯಾಕೆಂದರೆ ಆ ರಚನೆಗಳ ಹೇಳಿಕೆ ಹಾಗೂ ಅವರ ಭಾಷೆಯು ಆ ಕಾಲದ ರೂಢ ಸಾಹಿತ್ಯಜ್ಞರಿಗೆ ಸ್ವೀಕಾರಾರ್ಹವಾಗಿರಲಿಲ್ಲ. ಸುಮಾರಾಗಿ ಇಂಥದೇ ಉಪಕ್ರಮ ಆಗಲೂ ವೈದಿಕ ಕಥಾ ವಾಙ್ಮಯ ಹಾಗೂ ಸಂಸ್ಕೃತ ಭಾಷೆಗೆ ಸಂಬಂಧಿಸಿದಂತೆ ನಡೆಯುತ್ತಿತ್ತು. ಆ ಸಂದರ್ಭವನ್ನು ನೋಡಿದರೆ, ಮಹಾಭಾರತದ ಅನಂತರ ಭಾರತೀಯ ಕಥಾ ಪರಂಪರೆಯಲ್ಲಿ ಗುಣಾಢ್ಯನ ಮಹಾಧಾರೆಯಾದ ಬೃಹತ್ಕಥೆಯು ಸಮ್ಮುಖದಲ್ಲಿ ಬಂದು ನಿಂತಿತು. ಇದು ಲೌಕಿಕ ಕತೆಗಳ ಮಹಾಸಾಗರವಾಗಿತ್ತು. ಉದ್ದಾಮ ವಿದ್ವಾಂಸರಾದ ರಾಧಾವಲ್ಲಭ ತ್ರಿಪಾಠಿ ಅವರ ಶಬ್ದಗಳಲ್ಲಿ - ಬೃಹತ್ಕಥೆಯಲ್ಲಿ ಕತೆಯು ತನ್ನ ಸಹಜ (ಲೌಕಿಕ) ರೂಪವನ್ನು ಪಡೆಯಿತು. ಜನರ ಮನಸ್ಸಿನಲ್ಲಿ ನೆಲೆಸಿತು. ಸಮಾಜದಲ್ಲಿ ಹೇಳುವ ಕೇಳುವ ಕತೆಗಳೊಂದಿಗೆ ಸೇರಿಕೊಂಡು ಬೆಳೆಯಿತು. ರಾಮಾಯಣ ಮತ್ತು ಮಹಾಭಾರತದ ಅನಂತರ ಬೃಹತ್ಕಥೆಯು ಬಹುಶಃ ಭಾರತೀಯ ಸಾಹಿತ್ಯವನ್ನು ಹೆಚ್ಚಾಗಿ ಪ್ರಭಾವಿಸಿತು. ಗುಣಾಢ್ಯನು ಕತೆ ಹಾಗೂ ಭಾಷೆಯಲ್ಲಿನ ವಜ್ರ್ಯ ಅಂಶಗಳ ಬೇಲಿಯನ್ನು ಮುರಿದು ಹಾಕಿದ್ದ. ಗುಣಾಢ್ಯನ ಕತೆಗಳು ಬ್ರಾಹ್ಮಣವಾದೀ ವೈದಿಕವಾಗಿರದೇ ಲೌಕಿಕವಾಗಿದ್ದವು. ಮತ್ತು ಅದರ ಭಾಷೆ ವೈದಿಕ ಸಂಸ್ಕೃತವಲ್ಲ, ಲೌಕಿಕ ಸಂಸ್ಕೃತ (ಪೈಶಾಚೀ)ವಾಗಿತ್ತು - ಅದೇ ಶಿವಪೂಜನ ಸಹಾಯ, ನಾಗಾರ್ಜುನ, ಹಾಗೂ ರೇಣು ಅವರಂತೆ. ಜಾಗತಿಕ ನೋಟ 13 ಗುಣಾಢ್ಯನ ಬೃಹತ್ಕಥೆಯು ಭಾರತವನ್ನು ಜಗತ್ತಿನ ಮೊದಲ ಕಥಾಪೀಠವನ್ನಾಗಿ ಮಾಡಿದ ಭಾರತದ ಮೊದಲ ಗ್ರಂಥವೆಂಬುದನ್ನು ಬಹುಶಃ ಇಲ್ಲಿ ಹೇಳಬೇಕಾದ ಅವಶ್ಯಕತೆಯಿಲ್ಲ. ಕ್ಷೇಮೇಂದ್ರ ಹಾಗೂ ಸೋಮದೇವರು ಎಲ್ಲ ಪ್ರೇರಣೆ ಪಡೆದದ್ದು ಗುಣಾಢ್ಯನಿಂದಲೇ. ಮೊದಮೊದಲು ಗುಣಾಢ್ಯನನ್ನು ನಿರಾಕರಿಸಲಾಯಿತಷ್ಟೇ ಅಲ್ಲ, ಧಿಃಕ್ಕರಿಸಲಾಯಿತು. ಅವನು ಬ್ರಾಹ್ಮಣರ ಪೌರಾಣಿಕ ಸಾಹಿತ್ಯದ ಅನುಗಾಮಿಯಾಗಿರಲಿಲ್ಲವೆಂದು ಶತಮಾನಗಳಷ್ಟು ಕಾಲ ಅವನನ್ನು ನಿರ್ಲಕ್ಷಿಸಲಾಯಿತು. ಅವನು ಮೌಲಿಕ-ಪರಂಪರೆಗಿಂತ ಭಿನ್ನವಾಗಿದ್ದರಿಂದ ಯಥಾಸ್ಥಿತಿವಾದೀ ವಿದ್ವಾಂಸರು ಗುಣಾಢ್ಯನನ್ನು ಒಪ್ಪುವುದು ಸಾಧ್ಯವಿರಲಿಲ್ಲ. ಯಥಾಸ್ಥಿತಿವಾದಿಗಳು ಅವನನ್ನು ಬಹುಮಟ್ಟಿಗೆ ಅಸ್ಪೃಶ್ಯ ಹಾಗೂ ಇಷ್ಟಪಡದವನೆಂದು ಭಾವಿಸಿದ್ದರು. ಅವನ ಲೌಕಿಕಗುಣದ ಕತೆಗಳ ಸುದ್ದಿ ಹಾಗಿರಲಿ, ಅವನ ಲೌಕಿಕ ಸಂಸ್ಕೃತ (ಪೈಶಾಚೀ) ಭಾಷೆಯನ್ನೂ ಕೂಡ ಸಮಕಾಲೀನ ಸಂಸ್ಕೃತ ವಿದ್ವಾಂಸರು ಒಪ್ಪಿರಲಿಲ್ಲ. ಪರಿವರ್ತನಶೀಲ ಗುಣಾಢ್ಯ ಹಾಗೂ ಅವನ ಭಾಷೆಯ ಬಗೆಗೆ ಯಥಾಸ್ಥಿತಿವಾದಿಗಳಲ್ಲಿ ಎಷ್ಟೊಂದು ಆಸಡ್ಡೆಯಿತ್ತೆಂದರೆ ಅವನ ಸಹಜಲೌಕಿಕ ಸಂಸ್ಕೃತಕ್ಕೆ ಅವರು ಪೈಶಾಚಿ ಎಂಬ ಹೆಸರು ಕೊಟ್ಟರು. ಅಂದರೆ ಪಿಶಾಚಿಗಳ ಭಾಷೆ ! ಕಥ್ಯವನ್ನು ನಿರಾಕರಿಸುವ ಸಲುವಾಗಿ ಜಡವಾದಿಗಳಾದ ವಿದ್ವಾಂಸರು ಲೌಕಿಕ ಭಾಷೆಯನ್ನೇ ತಳ್ಳಿ ಹಾಕಿದ್ದರು. ಯಾಕೆಂದರೆ ಇರುವ ವ್ಯವಸ್ಥೆ-ಯಥಾಸ್ಥಿತಿಯನ್ನು ಬದಲಿಸುವ ಮತ್ತು ನವ್ಯವನ್ನು ಸ್ವೀಕರಿಸುವುದರ ಪರವಾಗಿ ಅವರು ಇರಲಿಲ್ಲ. ಬೌದ್ಧ ಮತ್ತು ಜೈನ ಧರ್ಮಗಳು ವೈದಿಕ ಧರ್ಮದ ಜಡತ್ವದ ವಿರುದ್ಧ ಬಂಡೆದ್ದು ಎದುರಿಗೆ ಬಂದು ನೆಲೆಗೊಂಡಿದ್ದ ಸಂದರ್ಭದಲ್ಲಿ ಇದು ನಡೆಯಿತು. ಬೌದ್ಧರು ಪಾಲಿ ಭಾಷೆಯನ್ನು, ಜೈನರು ಪ್ರಾಕೃತ ಭಾಷೆಯನ್ನು ಒಪ್ಪಿಕೊಂಡಿದ್ದರು. ಎಂಟನೆಯ ಶತಮಾನದ ಹೊತ್ತಿಗೆ ಸಂಸ್ಕೃತ ವ್ಯವಹಾರದಿಂದ ದೂರವಾಗಿತ್ತು. ಕ್ರಿ.ಪೂ. ಒಂದನೇ ಶತಮಾನಕ್ಕಿಂತ ಮೊದಲಿನ ಗುಣಾಢ್ಯನ ಬೃಹತ್ಕಥೆಯಿಂದ ಕ್ಷೇಮೇಂದ್ರನ ಬೃಹತ್ಕಥಾ ಮಂಜರಿ, ಸೋಮದೇವನ ಕಥಾಸರಿತ್ಸಾಗರ (ಹತ್ತು- ಹನ್ನೊಂದನೆ ಶತಮಾನ) ಹುಟ್ಟಿಕೊಂಡಿವೆ. ಅಂತಿಮವಾಗಿ ಅಹಂಕಾರಿ ವೈದಿಕ ಬ್ರಾಹ್ಮಣರು ಬೃಹತ್ಕಥೆಯ ಅನೇಕ ಅನುವಾದಗಳನ್ನು ಸಂಸ್ಕೃತದಲ್ಲಿ ಮಾಡಬೇಕಾಯಿತು. ಜಡವಾದಿಗಳಿಂದ ಸಾಹಿತ್ಯಕಾರರು ತಿರಸ್ಕರಿಸಿದ ಭಾಷೆಯ ಭೌಗೋಲಿಕ ಕ್ಷೇತ್ರವು ವೈದಿಕ ಸಂಸ್ಕೃತಕ್ಕಿಂತ ಇಪ್ಪತ್ತೈದುಪಟ್ಟು ಹೆಚ್ಚು ವಿಸ್ತಾರವಾಗಿತ್ತು. ಅದು ಚೀನ, ತುರ್ಕಸ್ತಾನದಿಂದ ಹಿಡಿದು, ಇರಾನ್, ಸಿಂಧುಕೊಳ್ಳ, ಮಥುರಾ, ವಿಂಧ್ಯಾಚಲದವರೆಗೆ ಹಬ್ಬಿತ್ತು. ಸಾತವಾಹನ ರಾಜರ ಕಾಲದ ಹೊತ್ತಿಗೆ ವೈದಿಕ ಸಂಸ್ಕೃತದ ಕ್ಷೇತ್ರವು ತುಂಬ ಸೀಮಿತವಾಗಿತ್ತು. ಅದು ಸರ್ವಸಾಧಾರಣ ಜನರು 14 ಕಥಾ ಸಂಸ್ಕೃತಿ ಓದಬಹುದಾದದ್ದಾಗಿರಲಿಲ್ಲ. ಸಂಸ್ಕೃತ ಕಾವ್ಯ ರಚನೆ ಬತ್ತಿಹೋಗಿತ್ತು. ಆದರೆ ಭಾಷಿಕ ಹಾಗೂ ಬೌದ್ಧಿಕ ಅಹಂಕಾರದ ಸ್ಥಿತಿ ಭಯಾನಕವಾಗಿತ್ತು. ಎರಡು ಮೂರು ದಶಕಗಳ ಮೊದಲು ದಲಿತ ರಚನೆಗಳ ಬಗೆಗೆ ನಡೆದುಕೊಂಡ ರೀತಿಯಲ್ಲಿ, ಇಂದೂ ಕೂಡ ಭಾಷಿಕ ಸಂಸ್ಕಾರಶೀಲತೆಯ ಪ್ರಶ್ನೆಯನ್ನೆತ್ತಿಕೊಂಡು ಆದಿವಾಸಿ-ಜನಜಾತೀಯ ರಚನೆಗಳೊಂದಿಗೆ ವ್ಯವಹರಿಸುವ ರೀತಿಯಲ್ಲೇ ಅಂದು ಗುಣಾಢ್ಯ ಹಾಗೂ ಆತನ ಜೀವಂತ ರಚನೆ ಬೃಹತ್ಕಥೆಯೊಂದಿಗೂ ನಡೆದುಕೊಳ್ಳಲಾಯಿತು. ಪ್ರಾಕೃತವನ್ನು ಪೈಶಾಚಿಯೆಂದು ಹೀಗಳೆದರೂ, ಇಂದು ಅದರ ಹೆಸರು ಕೂಡ ಉಳಿಯದಿದ್ದರೂ ಅದು ಬಹುದೊಡ್ಡ ಭೂಭಾಗದ ಭಾಷೆಯಾಗಿತ್ತು ಮತ್ತು ಮೌಲಿಕ ಕಥಾರಚನೆಯು ಅದೇ ಪೈಶಾಚೀ ಪ್ರಾಕೃತದಲ್ಲಿ ಆಗುತ್ತಲಿತ್ತು. ಭಾರತೀಯ ಕಥಾ-ಭಾಷಾ ಕ್ಷೇತ್ರವು ವೈದಿಕ ಮತ್ತು ಲೌಕಿಕ ಸಂಸ್ಕೃತಕ್ಕಿಂತ ವಿಶಾಲವಾಗಿತ್ತೆಂಬುದು ಡಾ|| ರಾಜಮಲ್ ಬೋರಾ ಅವರ ವಿವರಣೆಯಿಂದ ಸ್ಪಷ್ಟವಾಗುತ್ತದೆ. ಸದ್ಯಕ್ಕೆ ಇಷ್ಟೇ ಹೇಳಬೇಕಾಗಿದೆ. ಇರಾನದ ಸಂಬಂಧವು ಮಗಧದವರೆಗಿತ್ತು ಮತ್ತು ಅಲ್ಲಿನ ಮಗ ಪಂಗಡದ ಜನರು ಪೇಶಾವರವನ್ನು ತಲುಪಿ ರಾಜ್ಯವನ್ನಾಳುತ್ತಿದ್ದರು. ಈ ಮಗರನ್ನು ದಾರಯವಹುವು ಸೋಲಿಸಿ ಅಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿದನು. ಪೇಶಾವರದ ಮಗರ ರಾಜಭಾಷೆ ಪೈಶಾಚಿಯಾಗಿದೆ. ಈ ಪೈಶಾಚಿಯು ವೈದಿಕ ಸಂಸ್ಕೃತವನ್ನು ಹೋಲುತ್ತದೆ. ಈ ಭಾಷೆಯನ್ನು ಆಗ ಖರೋಷ್ಟಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇರಾನ್ ಮತ್ತು ಅದರ ಪೂರ್ವದ ದೇಶಗಳಲ್ಲಿ - ಸಿಂಧೂ ನದಿಯ ದಡದವರೆಗಿನ ದೇಶಗಳಲ್ಲಿ - ಖರೋಷ್ಟಿ ಲಿಪಿಯು ಪ್ರಚಲಿತವಿತ್ತು. ಆ ಸಮಯದಲ್ಲಿ ಪೈಶಾಚೀಯಲ್ಲಿ ಬರೆದದ್ದೆಲ್ಲ ಖುರೋಷ್ಟಿ ಲಿಪಿಯಲ್ಲಿ ಬರೆಯಲಾಗುತ್ತಿದ್ದಿರಬಹುದು. ಈ ಲಿಪಿಯನ್ನು ನಿರಾಕರಿಸಲಾಯಿತು. ಅದನ್ನು ಸರಿಯಾಗಿ ಓದಲಾಗಲಿಲ್ಲ. ಆದ್ದರಿಂದಲೇ ಪೈಶಾಚಿಯ ಲೋಕವಾಙ್ಮಯವು ಲುಪ್ತವಾಯಿತು. ಬೌದ್ಧರಕಾಲದಲ್ಲಿ ಪೈಶಾಚಿಯ ವ್ಯವಹಾರವು ಲೋಕಭಾಷೆ (ಸಂಪರ್ಕಭಾಷೆ)ಯ ರೂಪದಲ್ಲಿ ಭಾರತದಲ್ಲಿ ಆಗತೊಡಗಿತು. ಪ್ರಾಕೃತ ಭಾಷೆಯ ವ್ಯಾಕರಣ ಬರೆಯುವವರಿಗೆ ಆ ಭಾಷೆಯ ಮಹತ್ವ ತಿಳಿಯಿತು. ತಮ್ಮ ವ್ಯಾಕರಣ ಗ್ರಂಥಗಳಲ್ಲಿ ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ. ಪೈಶಾಚಿಯು ತನ್ನ ಕಾಲದ ಜೀವಂತ ಭಾಷೆಯಾಗಿತ್ತು ಎಂಬುದಕ್ಕೆ ಈ ಸಂಗತಿ ಸಾಕ್ಷಿಯಾಗಿದೆ. ಆದರೆ ಭಾಷೆಯೊಂದಿಗೆ ಮಾತ್ರ ಧರ್ಮವು ದೇಶದ ಗಡಿಯಾಚೆಗೆ ಹೋಗಲಿಲ್ಲ. ಧರ್ಮ ಮತ್ತು ಅದರ ಪ್ರಚಾರಕರ ಸಂಪರ್ಕದಲ್ಲಿ ಬಂದ ಕಥಾಪರಂಪರೆಯೂ ಆ ದೇಶಗಳಿಗೆ ಹೋಯಿತು, ನಿಶ್ಚಯವಾಗಿಯೂ ಕೊಡು-ಕೊಳುವಿಕೆ ಎರಡೂ ಕಡೆಯಿಂದ ಆಗಿರಬಹುದು. ......... ಜಾಗತಿಕ ನೋಟ 15 ಜೈನಧರ್ಮದ ಕತೆಗಳನ್ನು ತೆಗೆದುಕೊಂಡರೆ ವಿಷಯ ಬೇರೆಯೇ ಆಗುತ್ತದೆ. ಜೈನಕತೆಗಳ ಆಗಮ ಗ್ರಂಥವು ಬಹಳ ಪ್ರಾಚೀನವಾಗಿದೆ. ವೈದಿಕ ಸಾಹಿತ್ಯದಲ್ಲಿ ವೇದ, ಬೌದ್ಧ ಸಾಹಿತ್ಯದಲ್ಲಿ ತ್ರಿಪಿಟಕಗಳಿಗೆ ಇರುವ ಸ್ಥಾನವೇ ಜೈನ ಸಾಹಿತ್ಯದಲ್ಲಿ ಆಗಮಗಳಿಗೆ ಇದೆ. ಆಗಮ ಗ್ರಂಥಗಳಲ್ಲಿ ಮಹಾವೀರ ಸ್ವಾಮಿಯ ಉಪದೇಶ, ಜೈನ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಕತೆಗಳು ಸಂಕಲಿತವಾಗಿವೆ. ಆಚಾರ್ಯ ಜಗದೀಶ ಚಂದ್ರ ಜೈನರ ಶಬ್ದಗಳಲ್ಲಿ - “ಜೈನ ಪರಂಪರೆಯ ಅನುಸಾರ ಮಹಾವೀರ ನಿರ್ವಾಣ (ಇಸವಿ 527ಕ್ಕೆ ಮುನ್ನ) ದ 160 ವರ್ಷಗಳ ಅನಂತರ (ಸುಮಾರು ಇಸವಿ 367 ಕ್ಕೆ ಮುನ್ನ) ಮಗಧ ದೇಶದಲ್ಲಿ ಭಾರೀ ಬರಗಾಲ ಬಂದಿತ್ತು. ಅದರ ಪರಿಣಾಮವಾಗಿ ಜೈನ ಭಿಕ್ಷುಗಳು ಬೇರೆಕಡೆ ವಿಹಾರಗಳನ್ನು ಮಾಡಿಕೊಳ್ಳಬೇಕಾಯಿತು. ಕ್ಷಾಮ ಮುಗಿದ ಮೇಲೆ ಜೈನ ಶ್ರಮಣರು ಪಾಟಲಿಪುತ್ರ (ಪಾಟ್ನಾ) ದಲ್ಲಿ ಒಂದೆಡೆ ಸೇರಿದರು. ಇಲ್ಲಿ ಖಂಡ ಖಂಡವಾಗಿ ಹನ್ನೊಂದು ಅಂಗಗಳನ್ನು ಸಂಕಲನ ಮಾಡಲಾಯಿತು. ಹನ್ನೆರಡನೆಯ ಅಂಗ ಯಾರಿಗೂ ನೆನಪಿರಲಿಲ್ಲ. ಹಾಗಾಗಿ ಅದನ್ನು ಸಂಕಲಿಸಲು ಸಾಧ್ಯವಾಗಲಿಲ್ಲ. ಈ ಸಮ್ಮೇಲನವನ್ನು ‘ಪಾಟಲಿಪುತ್ರ ವಾಚನಾ’ ಎಂದು ಕರೆಯಲಾಗುತ್ತದೆ. ಕೆಲಸಮಯದ ಅನಂತರ ಆಗಮ ಸಾಹಿತ್ಯದ ವಿಚ್ಛೇದ ಮತ್ತೆ ಆಗತೊಡಗಿದಾಗ, ಮಹಾವೀರ ನಿರ್ವಾಣದ 827 ಅಥವಾ 840 ವರ್ಷಗಳ ನಂತರ (300-313 ಇಸವಿಗೆ ಮುನ್ನ) ಜೈನ ಸಾಧುಗಳ ಎರಡನೆಯ ಸಮ್ಮೇಲನವಾಯಿತು. ಮೊದಲನೆಯದಾಗಿ, ಆರ್ಯಸ್ಕಂದಿಲರ ಅಧ್ಯಕ್ಷತೆಯಲ್ಲಿ ಮಥುರೆಯಲ್ಲಿ ಹಾಗೂ ಎರಡನೆಯದಾಗಿ ನಾಗಾರ್ಜುನ ಸೂರಿಯ ಅಧ್ಯಕ್ಷತೆಯಲ್ಲಿ ವಲ್ಲಭಿಯಲ್ಲಿ. ಮಥುರೆಯ ಸಮ್ಮೇಲನವನ್ನು ‘ಮಾಥುರೀ ವಾಚನಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅದರ ಅನಂತರ ಸುಮಾರು 150 ವರ್ಷಗಳ ಮೇಲೆ, ಮಹಾವೀರ ನಿರ್ವಾಣದ 980 ಅಥವಾ 993 ವರ್ಷದ ಅನಂತರ (ಇಸವಿ ಸನ್ 453-466 ನೇ ವರ್ಷ) ವಲ್ಲಭಿಯಲ್ಲಿ ದೇವರ್ಥಿಗಣ ಕ್ಷಮಾಶ್ರಮಣರ ಅಧ್ಯಕ್ಷತೆಯಲ್ಲಿ ಸಾಧುಗಳ ಮೂರನೆಯ ಸಮ್ಮೇಲನವಾಯಿತು. ಅದರಲ್ಲಿ ಸುವ್ಯವಸ್ಥಿತರೂಪದಲ್ಲಿ ಆಗಮಗಳನ್ನು ಕೊನೆಯಬಾರಿಗೆ ಸಂಕಲಿಸಲಾಯಿತು. ಇದಕ್ಕೆ ‘ವಲ್ಲಭೀ ವಾಚನಾ’ ಎಂದು ಕರೆಯಲಾಗುತ್ತದೆ. ಇಂದಿನ ಆಗಮಗಳು ಅದೇ ಸಂಕಲನದ ರೂಪಗಳು.” ಹೀಗೆ ಮೂರು ಬಾರಿ ಆಗಮಗಳನ್ನು ಸಂಕಲಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಕಾಲಕಾಲಕ್ಕೆ ಆಗಮಸಾಹಿತ್ಯವು ಸಾಕಷ್ಟು ಹಾನಿ ಅನುಭವಿಸಬೇಕಾಯಿತೆಂಬುದು, ಮತ್ತು ಈ ಸಾಹಿತ್ಯವು ತನ್ನ ಮೌಲಿಕ ರೂಪವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲವೆಂಬುದು ಗೊತ್ತಾಗುತ್ತದೆ. ಬೌದ್ಧರ ವಿಪುಲವಾದ ಸಾಹಿತ್ಯದ ಎದುರಿಗೆ, ಈ ಸಾಹಿತ್ಯವು ತುಂಬ ಕಡಿಮೆಯಾಗಲು, 16 ಕಥಾ ಸಂಸ್ಕೃತಿ ಮತ್ತು ಈ ಸಾಹಿತ್ಯದಲ್ಲಿ ವಿಕೃತಿಯುಂಟಾಗಿದ್ದರಿಂದ ಬಹುಶಃ ದಿಗಂಬರ ಸಂಪ್ರದಾಯವು ಇದಕ್ಕೆ ಮಾನ್ಯತೆಯನ್ನು ಕೊಡಲು ಒಪ್ಪದೆ ಇರಲು ಇದೇ ಕಾರಣವೆಂದು ಅನಿಸುತ್ತದೆ. ಏನೇ ಇರಲಿ, ಇಂದು ಜೈನರಲ್ಲಿ ಈ ನಿಧಿಯೇ ಅವಶೇಷವಾಗಿ ಉಳಿದಿದೆ. ಅದರ ಸಹಾಯದಿಂದಲೇ ಜೈನಸಂಸ್ಕೃತಿಯ ಮೂಲ ಆಧಾರವನ್ನು ಸಿದ್ಧ ಪಡಿಸಬಹುದಾಗಿದೆ. ಹೀಗೆ ನಷ್ಟ-ಭ್ರಷ್ಟ. ಛಿನ್ನ-ವಿಚ್ಛಿನ್ನ ಆಗಮ ಗ್ರಂಥಗಳಲ್ಲಿ ಇಂದಿಗೂ ಐತಿಹಾಸಿಕ ಸಾಮಗ್ರಿಗಳು ವಿಪುಲವಾಗಿವೆ. ಅದರ ಆಧಾರದ ಮೇಲೆ ಭಾರತದ ಪ್ರಾಚೀನ ಇತಿಹಾಸದ ಒಂದು ಮಹತ್ವಪೂರ್ಣ ಅಧ್ಯಾಯವನ್ನು ಬರೆಯಬಹುದಾಗಿದೆ. ಆಗಮ ಕತೆಗಳ ಈ ಗ್ರಂಥವು ಕೇವಲ ಕತೆಗಳ ಗ್ರಂಥವಾಗಿರದೆ, ಸಮಾಜಶಾಸ್ತ್ರೀಯ ಮಾಹಿತಿಗಳ ವಿಪುಲ ಭಂಡಾರವೂ ಅದರಲ್ಲಿದೆ. ಇವು ಸಾಮಾಜಿಕ ಇತಿಹಾಸ ಗ್ರಂಥಗಳೆಂದೂ ಸಿದ್ಧವಾಗಿವೆ. ಕ್ರಿ.ಪೂ. ಸುಮಾರು ನಾಲ್ಕನೇ ಶತಮಾನದಿಂದ ಹಿಡಿದು ಇಸವಿ ಸನ್ ಐದನೇ ಶತಮಾನದವರೆಗೆ ಭಾರತದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯ ಚಿತ್ರಣ ಮಾಡುವ ಈ ಕಥಾ ಸಾಹಿತ್ಯವು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಆಗಮ ಗ್ರಂಥಗಳಲ್ಲಿ ಜೈನ ಭಿಕ್ಷುಗಳ ಆಚಾರ-ವಿಚಾರಗಳ ವಿಸ್ತೃತವಾದ ವರ್ಣನೆಯಿದ್ದು, ಅದು ಬೌದ್ಧರ ಧಮ್ಮಪದ, ಸುತ್ತನಿಪಾತ, ಹಾಗೂ ಮಹಾಭಾರತ (ಶಾಂತಿಪರ್ವ) ಇತ್ಯಾದಿ ಗ್ರಂಥಗಳನ್ನು ಅನೇಕ ಅಂಶಗಳಲ್ಲಿ ಹೋಲುತ್ತದೆ. ಡಾ || ವಿಂಟರನಿಟ್ಸ ಮುಂತಾದ ವಿದ್ವಾಂಸರ ಹೇಳಿಕೆಯಂತೆ ಇದು ಶ್ರಮಣ ಕಾವ್ಯದ ಪ್ರತೀಕವಾಗಿದೆ. ಭಾಷೆ ಮತ್ತು ವಿಷಯ ಮುಂತಾದ ದೃಷ್ಟಿಯಿಂದ ಜೈನ ಆಗಮಗಳ ಈ ಭಾಗವು ತುಂಬ ಹಿಂದಿನದೆನಿಸುತ್ತದೆ. ಡಾ|| ಜೈನರದೇ ಅಭಿಪ್ರಾಯದಂತೆ “ಭಗವತೀ, ಕಲ್ಪಸೂತ್ರ, ಆವೋಯಿಯ, ಠಾಣಾಂಗ, ನಿರಯಾವಲಿ ಮುಂತಾದ ಗ್ರಂಥಗಳಲ್ಲಿ ಭಗವಾನ್ ಮಹಾವೀರ, ಅವರ ಚರ್ಯೆ, ಅವರ ಉಪದೇಶಗಳು, ಹಾಗೂ ಆ ಕಾಲದ ರಾಜರು, ರಾಜಕುಮಾರ ಹಾಗೂ ಅವರ ಯುದ್ಧ ಇತ್ಯಾದಿಗಳ ವಿಸ್ತೃತ ವರ್ಣನೆಯಿದೆ. ಜೈನ ಇತಿಹಾಸದಲ್ಲಿ ಕಾಣೆಯಾದಂತಿರುವ ಅನೇಕ ಅನುಶ್ರುತಿಗಳ ಮಾಹಿತಿ ದೊರೆಯುತ್ತದೆ. ನಾಯಾಧಮ್ಮಕಹಾ, ಉವಾಸಗದಸಾ, ಅಂತಗಡದಸಾ, ಅನುತ್ತರೋವವಾಯಿಸದಸಾ, ವಿವಾಗಸುಯ ಇತ್ಯಾದಿ ಗ್ರಂಥಗಳಲ್ಲಿ ಮಹಾವೀರನು ಹೇಳಿದ ಅನೇಕ ಕತೆಗಳು ಹಾಗೂ ಅವರ ಅನೇಕ ಶಿಷ್ಯ-ಶಿಷೆ್ಯಯರ ವರ್ಣನೆಯಿದೆ. ಅವುಗಳಿಂದ ಜೈನ ಪರಂಪರೆಗೆ ಸಂಬಂಧಿಸಿದ ಅನೇಕ ಸಂಗತಿಗಳ ಪರಿಚಯ ದೊರೆಯುತ್ತದೆ. ರಾಯಪ ಸೋಣಿಯ, ಜೀವಾಭಿಗಮ, ಪನ್ನವಣಾ ಮುಂತಾದ ಅನ್ಯಗ್ರಂಥಗಳಲ್ಲಿ ವಾಸ್ತುಶಾಸ್ತ್ರ, ಸಂಗೀತ, ವನಸ್ಪತಿ ಮುಂತಾದವುಗಳಿಗೆ ಸಂಬಂಧಿಸಿದ ಅನೇಕ ಮಹತ್ವಪೂರ್ಣ ವಿಷಯಗಳ ವರ್ಣನೆಯಿದೆ. ಅವು ಬಹುಶಃ ಬೇರೆಡೆ ಸಿಗಲಾರವು.” ಹಾಗಾಗಿ ಜಾಗತಿಕ ನೋಟ 17 ಭಾರತೀಯ ಕತೆಗಳ ಪರಂಪರೆಯು ಕೇವಲ ಧಾರ್ಮಿಕ, ನೈತಿಕ ಹಾಗೂ ಪ್ರಚಾರವಾದಿ ಆಗಿರಲಿಲ್ಲ. ಆ ಕತೆಗಳಲ್ಲಿ ನಮಗೆ ಆ ಕಾಲದ ಆಚಾರ-ವ್ಯವಹಾರ, ಶಿಷ್ಟಾಚಾರ, ಸಾಮಾಜಿಕ-ಸಾಂಸ್ಕೃತಿಕ ಕುರುಹುಗಳು ಮತ್ತು ವಿವರಣೆ ದೊರೆಯುತ್ತದೆ. ಅವು ಕೇವಲ ಉಪದೇಶ ಅಥವಾ ಮನೋರಂಜನೆಗೇ ಸೀಮಿತವಾಗಿರದೆ, ಅವು ತಮ್ಮ ಕಾಲದ ನಾಗರಿಕತೆಗೆ ಸಂಬಂಧಿಸಿದ ವ್ಯಾವಹಾರಿಕ ಮಾಹಿತಿಗಳೊಂದಿಗೆ ಸಮಾಜದಲ್ಲಿ ನಡೆಸಲಾಗುತ್ತಿದ್ದ ವ್ಯವಹಾರಿಕ, ವೈಚಾರಿಕ ಮತ್ತು ಮನುಷ್ಯನ ವಿಕಾಸಶೀಲ ಜೀವನದ ಪ್ರಾಮಾಣಿಕ ಪರಿಚಯವನ್ನೂ ಒದಗಿಸುತ್ತವೆ. ನಿಜವಾಗಿ ಕೇಳಿದರೆ ನಮ್ಮ ಕತೆಗಳ ಲೌಕಿಕ ಪರಂಪರೆಯು ಪಾಲಿ ಮತ್ತು ಪ್ರಾಕೃತಗಳಲ್ಲಿರುವಷ್ಟು ಸಂಸ್ಕೃತದಲ್ಲಿ ಇಲ್ಲ. ಅದರಲ್ಲೂ ಬಹುದೊಡ್ಡ ಕಥಾಭಂಡಾರ ಪೈಶಾಚೀ ಪ್ರಾಕೃತದಲ್ಲಿತ್ತು. ಡಾ|| ರಾಜಮಲ್ ಬೋರಾ ಅವರ ಹೇಳಿಕೆಯಂತೆ - ಪೈಶಾಚೀಭಾಷೆಯು ಭಾರತದ ಪ್ರಾಚೀನತಮ ಭಾಷೆಗಳಲ್ಲಿ ಒಂದು. ಅದು ವೈದಿಕ ಸಂಸ್ಕೃತದ ಸಮಕಾಲೀನ ಮತ್ತು ಲೋಕ ವ್ಯವಹಾರದ ಭಾಷೆಯಾಗಿದೆ. ವೈದಿಕ ಕಾಲದಲ್ಲಿ ವೈದಿಕ ಸಂಸ್ಕೃತದ ವ್ಯವಹಾರ ಮಾಡುವ ಋಷಿಮುನಿಗಳೂ ಕೂಡ ಲೋಕ ವ್ಯವಹಾರದಲ್ಲಿ, ಆಡುಮಾತಿನಲ್ಲಿ - ಪೈಶಾಚಿಯನ್ನೇ ಬಳಸುತ್ತಿದ್ದರು. ವೈದಿಕ ಭಾಷೆಯು ಬಳಕೆಯಾಗುವ ಭೌಗೋಲಿಕ ಕ್ಷೇತ್ರದಲ್ಲಿ ಉಪಯೋಗವಾಗುತ್ತಿದ್ದ ಕಡೆಗಳಲ್ಲೆಲ್ಲ ಪೈಶಾಚಿಯು ಲೋಕಭಾಷೆಯ ರೂಪದಲ್ಲಿ ಪ್ರಚಲಿತವಿತ್ತು. ದರದ ಪರಿವಾರದ ಭೌಗೋಲಿಕ ಕ್ಷೇತ್ರವು ಪೈಶಾಚಿಯ ಕ್ಷೇತ್ರವೇ ಆಗಿದೆ. ಈ ರೀತಿಯಲ್ಲಿ ವಿಚಾರ ಮಾಡಿದಾಗ ಪೈಶಾಚಿಯು ದರದೀಯ ಪರಿವಾರದ ಪ್ರಮುಖ ಭಾಷೆಯೆನಿಸುವುದು. ಮೊದಲು ದರದೀಯ ಭಾಷೆಗಳ ಬಗ್ಗೆ ವಿಚಾರ ಮಾಡುವಾಗ ಗ್ರಿಯರ್ಸನ್‍ನು ದರದ ಪರಿವಾರಕ್ಕೆ ವಿಕಲ್ಪವಾಗಿ ಪೈಶಾಚೀ ಪರಿವಾರ ಎಂದೇ ನಾಮಕರಣ ಮಾಡಲು ಬಯಸಿದ್ದನು. ಆದರೆ ಪೈಶಾಚಿಯನ್ನು ಕುರಿತು ಲೋಕಭಾವನೆಯನ್ನು ನೋಡಿ ಆ ಹೆಸರನ್ನು ಇಡಲಿಲ್ಲ. ಗ್ರಿಯರ್ಸನ್‍ನು ಕಾಶ್ಮೀರಿಯನ್ನು ದರದ ಪರಿವಾರದ ಭಾಷೆಯೆಂದೇ ಹೇಳಿದ್ದಾನೆ. ಈ ಸಂಬಂಧದ ದೃಷ್ಟಿಯಿಂದ ಕಾಶ್ಮೀರಿಯ ಭೌಗೋಲಿಕ ಕ್ಷೇತ್ರವು ಪೈಶಾಚಿಯ ಭೌಗೋಲಿಕ ಕ್ಷೇತ್ರವೂ ಆಗುತ್ತದೆ. ಕಾಶ್ಮೀರದಿಂದ ಹಿಮಾಲಯಕ್ಕೆ ಪಶ್ಚಿಮದಲ್ಲಿ, ಗಾಂಧಾರಕ್ಕಿಂತ ಮುಂದೆ ಇರಾನದ ಗಡಿಯವರೆಗೆ ಮತ್ತು ದಕ್ಷಿಣದಲ್ಲಿ ಸಿಂಧದವರೆಗೆ ಪೈಶಾಚಿಭಾಷೆಯ ಭೌಗೋಲಿಕ ವಿಸ್ತಾರವು ಲೋಕವ್ಯವಹಾರದ ಭಾಷೆಯ ರೂಪದಲ್ಲಿ ಇದ್ದಿತ್ತು. ಸಾತವಾಹನ ವಂಶದ ರಾಜರುಗಳ ಕಾಲದಲ್ಲಿ ಆ ಭಾಷೆ ಮಧ್ಯಪ್ರದೇಶದಲ್ಲಿ ಮಗಧದ ಎಲ್ಲೆಯವರೆಗೆ ತಲುಪಿತ್ತು, ಅನಂತರ ಸಾತವಾಹನರ ದರಬಾರವನ್ನೂ ತಲುಪಿತು. ಪೈಶಾಚಿಯಲ್ಲಿ ಬರೆಯಲಾದ ವಿಪುಲವಾದ ಲೋಕ ವಾಙ್ಮಯವು ಈಗೆಲ್ಲ ಲುಪ್ತವಾಗಿದೆ. ಆ ಸಾಹಿತ್ಯದಲ್ಲಿ ಗುಣಾಢ್ಯನ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ. 18 ಕಥಾ ಸಂಸ್ಕೃತಿ ಪೈಶಾಚಿಯಲ್ಲಿ ಬರೆದ ಕತೆಗಳ ಸಂಸ್ಕೃತ ಅನುವಾದ ನಮಗೆ ದೊರಕಿದೆ. ಮೂಲ ಪೈಶಾಚಿಯ ಗ್ರಂಥ ದೊರೆಯುವುದಿಲ್ಲ. ಹೀಗೆ ಪೈಶಾಚಿಯ ಭೌಗೋಲಿಕ ವಿಸ್ತಾರದಷ್ಟೇ, ಅದರ ಕಾಲವೂ ವೈದಿಕ ಸಂಸ್ಕೃತ ಕಾಲದಿಂದ ಸಾತವಾಹನ ರಾಜರ ಕಾಲದವರೆಗೆ ವ್ಯಾಪಕವಾಗಿದೆ. ಮಾರ್ಕಂಡೇಯ, ಹೇಮಚಂದ್ರ ಮತ್ತು ರಾಜಶೇಖರ ತಮ್ಮ ಗ್ರಂಥಗಳಲ್ಲಿ ಪೈಶಾಚಿಯನ್ನು ಉಲ್ಲೇಖಿಸಿದ್ದಾರೆ. ಗ್ರೀಯರ್ಸನ್‍ನೂ ಪೈಶಾಚಿ ಭಾಷೆಯನ್ನು ಕುರಿತು ಸ್ವತಂತ್ರ ಪುಸ್ತಕ ಬರೆದಿದ್ದಾನೆ. ಸಂಸ್ಕೃತದ ವ್ಯಾಕರಣ ಗ್ರಂಥಗಳಂತೆಯೇ ನಂತರ ಪ್ರಾಕೃತ ಗ್ರಂಥಗಳನ್ನು ಬರೆಯಲಾಯಿತು. ಆಗ ಪ್ರಾಕೃತದ ವಿವಿಧ ಭೇದಗಳನ್ನು ಹೇಳುವಾಗ ಪೈಶಾಚಿಯನ್ನೂ ಸೇರಿಸಲಾಯಿತು. ಈ ಪ್ರಕ್ರಿಯೆಯು ಹೇಮಚಂದ್ರನ ಕಾಲದವರೆವಿಗೂ ನಡೆದುಬಂತು. ಅನಂತರ ಮಾರ್ಕಂಡೇಯನೂ ಪೈಶಾಚಿ ಭಾಷೆಯ ಬಗೆಗೆ ವಿಚಾರ ಮಾಡಿದ. ಪೈಶಾಚಿಯ ಉಪಯೋಗವನ್ನು ವ್ಯವಹಾರದಲ್ಲಿ ಮಾಡಲಾಗುತ್ತಿದ್ದರೂ, ಆ ಭಾಷೆಯ ಬಗೆಗೆ ಒಳ್ಳೆಯ ಭಾವನೆಯಿರಲಿಲ್ಲ. ಐತಿಹಾಸಿಕ ಕಾಲದಲ್ಲಿ ಅದರ ಬಗ್ಗೆ ಅಸಡ್ಡೆಯಾಯಿತು. ಹಾಗಾಗಿ ಅದು ಲುಪ್ತವಾಯಿತು.” ಕಥಾಸಂಸ್ಕೃತಿಯ ರೂಪದಲ್ಲಿ ಮಾತ್ರವೇ ಕೇವಲ ಭಾರತೀಯವೆಂದು ತಿಳಿಯಲಾಗುತ್ತಿದ್ದರೂ ಆ ಕಥಾ ಸಂಸ್ಕೃತಿಯು ವೈಶ್ಪಿಕವಾದದ್ದೆಂಬುದನ್ನು ಓದುಗರಿಗೆ ಮತ್ತೊಮ್ಮೆ ಹೇಳಬೇಕಾಗಿದೆ. ವಾಸ್ತವವಾಗಿ ಗುಣಾಢ್ಯನ ‘ಬೃಹತ್ಕಥೆ’ ವೈಶ್ಪಿಕ ಕಥಾಸಂಸ್ಕೃತಿಯ ಮೂಲ ಸ್ರೋತವಾಗಿದೆ. ಬೃಹತ್ಕಥೆಯ ಕಥನಶೈಲಿ ವಿಲಕ್ಷಣ, ಅದ್ಭುತವಷ್ಟೇ ಅಲ್ಲ, ಮೂಲತಃ ಪ್ರಯೋಗಶೀಲವಾದದ್ದು. ಪೈಶಾಚೀ ಪ್ರಾಕೃತದಲ್ಲಿ ಬರೆದದ್ದು ಲುಪ್ತವಾಗಿದೆಯೆಂಬುದು ನಿಜ. ವೈದಿಕ ಸಂಸ್ಕೃತದಲ್ಲಿ ಅನೇಕ ಅನುವಾದಗಳನ್ನು ಕಂಡದ್ದು ಇದೊಂದೇ ಗ್ರಂಥವಾಗಿದೆ. ಕ್ಷೇಮೇಂದ್ರ ಹಾಗೂ ಸೋಮದೇವ ಇಬ್ಬರೂ ಕಾಶ್ಮೀರದವರು. ಸೋಮದೇವನೇ ಬೃಹತ್ಕಥೆಯ ಸಂಸ್ಕೃತ ಅನುವಾದವನ್ನು ಕಥಾ ಸರಿತ್ಸಾಗರದ ರೂಪದಲ್ಲಿ ಮಾಡಿದನು. ಸೋಮದೇವನ ಈ ಕೃತಿಯು ದೊರೆತಿರದಿದ್ದರೆ ಭಾರತದ ಬಹುಮೂಲ್ಯವಾದ ಕಥಾ ಸಂಪತ್ತು ನಮ್ಮ ಬಳಿ ಇರುತ್ತಿರಲಿಲ್ಲ. ವೈದಿಕ ಸಂಸ್ಕೃತದ ಉದ್ದಾಮ ವಿದ್ವಾಂಸರು ಮತ್ತೆ ಮತ್ತೆ ಪೈಶಾಚಿಯ ಕಥಾಕೃತಿಯನ್ನು ಆದರದಿಂದ ಉಲ್ಲೇಖ ಮಾಡಿರುವುದು ಬೃಹತ್ಕಥೆಗೆ ನಮ್ಮ ಕಥಾಪರಂಪರೆಯಲ್ಲಿ ಎಷ್ಟೊಂದು ಗೌರವ ಹಾಗೂ ಮಹತ್ವವಿದೆಯೆಂಬ ತಥ್ಯವನ್ನು ಸ್ಪಷ್ಟಪಡಿಸುತ್ತದೆ. ನಿಜವಾಗಿ ಕೇಳಿದರೆ ಬೃಹತ್ಕಥೆಗೆ ರಾಮಾಯಣ - ಮಹಾಭಾರತಕ್ಕಿಂತ ಯಾವ ರೀತಿಯಲ್ಲಿಯೂ ಗೌರವ ಕಡಿಮೆ ಇರಲಿಲ್ಲ. ಧಾರ್ಮಿಕವಾದ ಮಗ್ಗುಲನ್ನು ಬಿಟ್ಟರೆ, ಲೌಕಿಕದ ಕಥಾರಚನೆಯಲ್ಲಿ ಬೃಹತ್ಕಥೆಯು ರಾಮಾಯಣ - ಮಹಾಭಾರತಕ್ಕಿಂತ ಹೆಚ್ಚು ರೋಚಕ, ಪರಿಪುಷ್ಟ ಹಾಗೂ ಪ್ರಯೋಗಶೀಲವಾಗಿದೆ. ಕತೆಗಳಲ್ಲಿ ಕತೆಗಳು ಜಾಗತಿಕ ನೋಟ 19 ಹುಟ್ಟಿಕೊಳ್ಳುತ್ತ ಹೋಗುವ ಇದರ ಶೈಲಿಗೆ ತಲೆಬಾಗಬೇಕು. ಶತಮಾನಗಳ ಅನಂತರ ಕತೆಹೇಳುವ ಈ ಶೈಲಿಯನ್ನು ‘ಅರೇಬಿಯನ್ ನೈಟ್ಸ್’ನಲ್ಲಿ ಅನುಕರಿಸಲಾಗಿದೆ. ಶಹರಜಾದ ಪ್ರತಿರಾತ್ರಿಯೂ ಒಂದು ಅಪೂರ್ಣ ಕತೆ ಹೇಳುವುದು, ಸುಲ್ತಾನ ಶಹರಯಾರ ಕತೆಯು ಮುಗಿಯುವುದನ್ನೇ ನಿರೀಕ್ಷಿಸುವ ರೀತಿಯಲ್ಲಿ ಅದನ್ನು ಒಂದು ಉತ್ಸುಕತೆಯ ಬಿಂದುವಿನಲ್ಲಿ ನಿಲ್ಲಿಸುವುದು, ಮತ್ತು ಕತೆ ಹೇಳುವ ಶಹರಜಾದಳನ ಪ್ರಾಣವು ಪ್ರತಿಯೊಂದು ರಾತ್ರಿಯೂ ಬಚಾವಾಗುತ್ತ ಹೋಗುವುದು - ಹೀಗೆ. ಅರೇಬಿಯನ್ ನೈಟ್ಸ್‍ನ ಈ ಅದ್ಭುತ ಕಥಾಶೈಲಿಯಜನಕ ಕತೆಗಾರನಾದ ಗುಣಾಢ್ಯನಾಗಿದ್ದ! ಗುಣಾಢ್ಯನ ಈ ವಿಲಕ್ಷಣ ಕಥಾಶೈಲಿಯ ಬಳಕೆಯು ಜೈನ ಆಗಮ ಕತೆಗಳಲ್ಲಿನ ಒಂದು ಕತೆ ‘ಚಾತುರ್ಯದ ಬೆಲೆ’ಯಲ್ಲಿಯೂ ಆಗಿದೆ. ಅದರ ಒಂದು ಪಾತ್ರವಾದ ಕನಕಮಂಜರಿಯು ಅರೇಬಿಯನ್ ನೈಟ್ಸ್‌ನ ಶಹರಜಾದಳಂತೆಯೇ ಉತ್ಸುಕತೆಯಿಂದ ತುಂಬಿದ ಕತೆಯನ್ನು ಅರ್ಧ ಮಾತ್ರ ಹೇಳುತ್ತಾಳೆ. ಗುಣಾಢ್ಯನ ಹಾಗೂ ಜೈನ ಆಗಮಕತೆ ‘ಚಾತುರ್ಯದ ಬೆಲೆ’ಯ ವಿಲಕ್ಷಣ ಶೈಲಿಯು ಅರೇಬಿಯನ್ ನೈಟ್ಸ್ ಬರೆಯುವುದಕ್ಕೆ ಶತಮಾನಗಳಷ್ಟು ಹಿಂದೆಯೇ ವಿಕಸನಗೊಂಡಿತ್ತು. ಶಹರಜಾದಳನಿಗೆ ಸಂಬಂಧಿಸಿದ ಈ ವಿಲಕ್ಷಣ ಕಥಾಶೈಲಿಯ ರಚನಾತ್ಮಕ ವೈಶಿಷ್ಟ್ಯವನ್ನು ಜನಾಬ್ ಇಂತಜಾರ ಹುಸೇನರ ಬರಹ - ‘ಆಧುನಿಕ ಕತೆಗಳ ರಚನಾ ಸಂಸ್ಕೃತಿ’ಯಲ್ಲಿ ನೋಡಬಹುದು, ಪರಿಶೀಲಿಸಬಹುದು, ತಿಳಿಯಬಹುದು. ಹಾಗೆ ಪಂಚತಂತ್ರ ಹಾಗೂ ಸಂಸ್ಕೃತದ ಅನ್ಯ ಕಥಾಗ್ರಂಥಗಳಲ್ಲಿಯೂ ಕತೆಯ ಈ ಅದ್ಭುತ ಶೈಲಿಯ ಪ್ರಯೋಗವಾಗಿದೆ. ಬೃಹತ್ಕಥೆಯ ಕತೆಹೇಳುವ ಈ ಸಮೃದ್ಧ ಪರಂಪರೆಯ ನಿರಂತರ ಬಳಕೆಯು ನಮ್ಮ ಜನಪದ ಕತೆಗಳಲ್ಲಿಯೂ ಆಗಿದೆ. ಬೇತಾಳ ಪಂಚವಿಂಶತಿ, ಸಿಂಹಾಸನ ಬತ್ತೀಸಿ, ಪಂಚತಂತ್ರ ಹಾಗೂ ಹಿತೋಪದೇಶ ಇತ್ಯಾದಿ ರಚನೆಗಳು ಬೃಹತ್ಕಥೆಯಿಂದ ನೇರವಾಗಿ ಪ್ರಭಾವಿತಗೊಂಡು ವಿಕಸಿತಗೊಂಡಿವೆ. ನಮ್ಮ ಕಥಾ ಪರಂಪರೆಯ ಲೌಕಿಕ ಲೋಕವಾಙ್ಮಯವು ಮನೆಗಳಿಂದ ಹಿಡಿದು ಲೋಕೋಕ್ತಿಗಳವರೆಗೆ ಹರಡಿರುವುದು ಕಾಣುತ್ತದೆ. ಬೇತಾಳ ಕತೆಗಳ ಅನೇಕ ರೂಪ ಹಾಗೂ ಸಂಸ್ಕರಣಗಳು ದೊರೆಯತ್ತವೆ. ಅವು ಸೋಮದೇವ ಹಾಗೂ ಕ್ಷೇಮೇಂದ್ರರ ಕಥಾರಚನೆಗಳಲ್ಲಿಯೂ ಒಳಗೊಂಡಿವೆ. ‘ಗಿಳಿ ಮೈನಾ ಪ್ರಸಂಗ’ ಕೂಡ ಇಂಥದೇ ಒಂದು ಲೋಕಕಥೆ. ಪ್ರೇಮಿ-ಪ್ರೇಯಸಿ, ಪತಿ-ಪತ್ನಿಯರ ನಡುವೆ ಉದ್ಬೋಧಕ ಶೈಲಿಯಲ್ಲಿ ರಚಿತವಾಗಿವೆ. ಇದರ ಹೊರತಾಗಿ ‘ಶುಕ ಸಪ್ತತಿ’ಯಲ್ಲಿಗಿಳಿಯು ಒಬ್ಬ ವ್ಯಾಪಾರಿಯ ಪತ್ನಿ ಪ್ರಭಾವತಿಗೆ 70 ಬೋಧಕತೆಗಳನ್ನು ಹೇಳುತ್ತದೆ. ವಿಶ್ವಕಥಾ ಪರಿದೃಶ್ಯದ ಹಿನ್ನೆಲೆಯಲ್ಲಿ ನೋಡಿದಾಗ, ನಾವಿಕ ಸಿಂದ್‍ಬಾದ್‍ನ ಕತೆ, ಈಸೋಪ ಮತ್ತು ಬೋಕಾಶಿಯೋನ ಕತೆಗಳು, ‘ಕಲೇಲಾ ದಮನಾ ಕತೆಗಳು’ 20 ಕಥಾ ಸಂಸ್ಕೃತಿ ಮುಂತಾದವು ಅರಬದೇಶಗಳ ಮಾರ್ಗವಾಗಿ ಸಂಪೂರ್ಣ ಜಗತ್ತನ್ನೇ ತಲುಪಿವೆಯೆಂಬುದು ನಿರ್ವಿವಾದವಾಗಿ ಸಿದ್ಧವಾಗುತ್ತದೆ. ಗ್ರೀಸ್, ರೋಮ್, ಅರಬ್, ಪರ್ಶಿಯಾ ಹಾಗೂ ಆಫ್ರಿಕಾ ಮಹಾದ್ವೀಪಗಳೂ - ಇವುಗಳಿಂದ ದೂರ ಉಳಿಯಲಿಲ್ಲ. ಈ ಕತೆಗಳು ನಮ್ಮ ಸಾಂಸ್ಕೃತಿಕ ವಿರಾಸತ್‍ಗಳಾಗಿವೆ. ವೈಶ್ಪಿಕ ಕಥಾಸಭ್ಯತೆ ಹಾಗೂ ಸಂಸ್ಕೃತಿಯ ಸ್ವರೂಪವನ್ನು ನಮ್ಮೆದುರು ಇಡುತ್ತವೆ. ಈ ಕತೆಗಳು ದೀರ್ಘ ಯಾತ್ರೆ ಮಾಡಿವೆ. ನಮ್ಮ ಜೈನ ಆಗಮಗಳಲ್ಲಿನ ಪ್ರಥಮ ಕತೆ ‘ಬತ್ತದ ಐದು ಕಾಳುಗಳು’ ಇದಕ್ಕೆ ಬಲವಾದ ಪ್ರಮಾಣವಾಗಿದೆ. ಬೈಬಲ್‍ನ ನಾಲ್ಕನೆಯ ಕತೆ - ಇದು ಸೇಂಟ್‍ಮೆಥ್ಯೂನ ಸುವಾರ್ತೆಯ 25 ಹಾಗೂ ಸೇಂಟ್ ಲ್ಯೂಕ್‍ನ ಸುವಾರ್ತೆಯ 19 ರಲ್ಲಿಯೂ ಹಾಗೆಯೇ ಇದೆ. ಇದೇರೀತಿ ‘ವಿಚಾರ ಮಾಡದಿರುವುದರ ಫಲ’, ‘ಚಿಕ್ಕವರ ದೊಡ್ಡ ಕೆಲಸ’ ‘ಭಿಕ್ಷುಕನ ಕನಸು’ `ಚತುರ ರೋಹಕ’ ಮುಂತಾದ ಕತೆಗಳು ಕೆಲವು ರೂಪಾಂತರಗಳೊಂದಿಗೆ ಸಾಮಾನ್ಯ ಜನರಲ್ಲೆಲ್ಲ ಪ್ರಚಲಿತವಿದೆ. ಇವು ಯಾವುದೇ ಸಂಪ್ರದಾಯ ವಿಶೇಷಕ್ಕೆ ಸಂಬಂಧಿಸಿದವುಗಳಲ್ಲ. ಈ ಲೋಕಕತೆಗಳು ಭಾರತದಲ್ಲಿ ಪಂಚತಂತ್ರ, ಹಿತೋಪದೇಶ, ಕಥಾಸರಿತ್ಸಾಗರ, ಶುಕ ಸಪ್ತತಿ, ಸಿಂಹಾಸನ ಬತ್ತೀಸಿ, ಬೇತಾಲ ಪಂಚವಿಂಶತಿ, ಮುಂತಾದ ಗ್ರಂಥಗಳಲ್ಲಿ ಕಾಣಸಿಗುತ್ತವೆ. ಹಾಗೆಯೇ ‘ಈಸೋಪನ ಕತೆಗಳು’ ‘ಅರೇಬಿಯನ್ ನೈಟ್ಸ್’ನ ಕತೆಗಳು, ಕಲೇಲಾ ದಮನಾ ಕತೆಗಳು - ಮುಂತಾದ ರೂಪದಲ್ಲಿ ಗ್ರೀಸ್, ರೋಮ್, ಅರಬ್, ಪರ್ಶಿಯಾ, ಆಫ್ರಿಕಾ ಮುಂತಾದ ದೂರದ ದೇಶಗಳಿಗೂ ತಲುಪಿವೆ. ಈ ಕತೆಗಳ ಉಗಮ ಸ್ಥಾನವು ಮೂಲತಃ ಭಾರತವೇ ಎನ್ನಲಾಗುತ್ತಿದೆ. ಹಾಗೆಂದು ಕಾಲಕಾಲಕ್ಕೆ ಅನ್ಯದೇಶಗಳಿಂದಲೂ ಕೂಡ ದೇಶ ವಿದೇಶಗಳ ಪ್ರವಾಸಿಕರು ಬಹಳಷ್ಟು ಕತೆಗಳನ್ನು ತಮ್ಮೊಂದಿಗೆ ಭಾರತಕ್ಕೆ ತರುತ್ತಿದ್ದಾರೆ. ಈಗ ಕಥಾ ಸಂಸ್ಕೃತಿಯ ಈ ವೈಶ್ಪಿಕ ಸಂಕಲನ ಮತ್ತು ಸ್ವರೂಪದ ಬಗೆಗೆ ಕೆಲವು ಮಹತ್ವದ ಸಂಗತಿಗಳನ್ನು ದಾಖಲಿಸುವುದು ಅವಶ್ಯವಾಗಿದೆ. ಪೌರಾಣಿಕ ಕತೆಗಳು ನಮ್ಮ ಸಂಸ್ಕೃತಿಯ ಪ್ರಮುಖ ಆಧಾರ ಪ್ರಾಚೀನ ವಾಙ್ಮಯವಾಗಿದೆ. ಹಾಗಾಗಿ ಕತೆ ಹೇಳುವ - ಕೇಳುವ ಪರಂಪರೆಯ ವಿಕಾಸಕ್ಕೆ ಇದು ಪ್ರಮುಖ ಆಕರವೂ ಆಗಿದೆ. ಪ್ರಾಚೀನ ಸಾಹಿತ್ಯದ ವಿಚಾರ, ಸಂದರ್ಭ, ಚಿಂತನೆ, ಮಾನ್ಯತೆಗಳು ಇಂದಿಗೂ ಅಷ್ಟೇ ಪ್ರಾಸಂಗಿಕವಾಗಿವೆ. ವೇದ, ಪುರಾಣ, ಉಪನಿಷತ್ತು, ಆರಣ್ಯಕ, ಮಹಾಭಾರತ, ರಾಮಾಯಣ ಇತ್ಯಾದಿಗಳಲ್ಲಿ ಅಂತರ್ನಿಹಿತವಾದ ಕತೆಗಳು-ಉಪಕತೆಗಳು ಆ ಜಾಗತಿಕ ನೋಟ 21 ಕಾಲದ ಸಮಾಜವನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿದ್ದರೂ, ಅವುಗಳ ಮಾನವೀಯ ಮೌಲ್ಯ, ಹಾಗೂ ಸಾಮಾಜಿಕ ಮಹತ್ವವನ್ನು ಶಾಶ್ವತವೆಂದು ಭಾವಿಸಲಾಗಿದೆ. ಪೌರಾಣಿಕ ಕತೆಗಳು ಕಥಾ ಸಂಸ್ಕೃತಿಯ ರಚನಾಶೈಲಿಯಲ್ಲಿವೆ. ಮೂಲತಃ ಉಪದೇಶ ವಾಚಕಗಳಾಗಿವೆ. ಇದರಲ್ಲಿ ನೀತಿ - ಅನೀತಿ, ಸುವಿಚಾರ - ಕುವಿಚಾರ ಮುಂತಾದ ಮಾನವೀಯ ಪ್ರವೃತ್ತಿಗಳ ಮಾನದಂಡಗಳನ್ನು ಸಿದ್ಧಗೊಳಿಸಲಾಗಿದೆ. ಇವುಗಳಲ್ಲಿ ಚಿಂತನೆ-ಉಪಯುಕ್ತತೆ ಶಾಶ್ವತವಾಗಿದೆ ಹಾಗೂ ಭಾರತೀಯ ಸಂಸ್ಕೃತಿ-ಸಂಸ್ಕಾರ ದರ್ಶನಗಳ ಆರಂಭವು ಇಲ್ಲಿಂದಲೇ ಎಂದು ಭಾವಿಸಲಾಗಿದೆ. ಪೌರಾಣಿಕ ಕತೆಗಳಲ್ಲಿ ದೃಷ್ಟಾಂತವು ಆಧಾರಭೂಮಿಯಾಗಿದೆ. ಈ ಪುಸ್ತಕದಲ್ಲಿ ಸಂಕಲಿಸಿದ ಪೌರಾಣಿಕ ಕತೆಗಳು ಕೇವಲ ಮಾನವ ಮೌಲ್ಯಗಳನ್ನಷ್ಟೇ ಚಿತ್ರಣ ಮಾಡುವುದಿಲ್ಲ. ಸೃಷ್ಟಿಯ ಆರಂಭ, ಸಮಾಜದ ನಿರ್ಮಾಣದ ಕತೆಯನ್ನೂ ಹೇಳುತ್ತವೆ. ಸುಮೇರಿಯನ್ ನಾಗರಿಕತೆಯ ಗಿಲ್‍ಗಮೆಶ್‍ನ ಮಹಾಕಥೆ, ಜಲಪ್ರಳಯದ ಪ್ರಾಚೀನ ಕತೆಗಳು, ಪ್ರಥುವಿನ ಕತೆ, ತ್ರಿಶಂಕುವಿನ ಕತೆ, ಪ್ರೊಮಿಥ್ಯೂ ಬಂಡಾಯ, ಸಾವಿತ್ರಿ ಸತ್ಯವಾನರ ಕತೆ, ಸಾಧು ಮತ್ತು ವೇಶ್ಯೆಯ ಕತೆ, ರೋಮಹರ್ಷಣ, ಅಷ್ಟಾವಕ್ರರ ಕತೆಗಳು ಇವೆಲ್ಲ ಪ್ರಮುಖವಾದವು. ಈ ಪೌರಾಣಿಕ ಕತೆಗಳು ಕಾಲಾಂತರದಲ್ಲಿ ಕಥಾ ಪರಂಪರೆಯ ವಾಹಕಗಳಾದವು. ಈ ಆರಂಭಿಕ ಕತೆಗಳಲ್ಲಿಯೂ ಸಾಮಾಜಿಕ ಆಶಯದ ಪ್ರಕಟೀಕರಣವಿದೆ. ಪೌರಾಣಿಕ ಕತೆಗಳ ಮೂಲ ಆಧಾರ ಆಧ್ಯಾತ್ಮ ವಿಮರ್ಶೆ, ಹಾಗೂ ಧಾರ್ಮಿಕ - ದೈವೀ ಹೇಳಿಕೆಗಳಾಗಿವೆ. ಆದರೆ ದಲಿತರು - ವಿಕಲಾಂಗರ ಬಗೆಗೆ ವಿನೋದ, ಅಸಡ್ಡೆಯನ್ನು ಮಾಡುವ ರೋಮಹರ್ಷಣ - ಅಷ್ಟಾವಕ್ರರ ಕತೆಗಳೂ ಇಲ್ಲಿವೆ. ಕಥಾಸರಿತ್ಸಾಗರ ಸೋಮದೇವನು ರಚಿಸಿದ ಕಥಾಸರಿತ್ಸಾಗರದ ರಚನಾಕಾಲ ಸನ್ 1029 ರಿಂದ 1064 ರ ನಡುವೆ ಎಂದು ಭಾವಿಸಲಾಗುತ್ತಿದೆ. ಇದೇ ಸಮಯದಲ್ಲಿ ಆಚಾರ್ಯ ಕ್ಷೇಮೇಂದ್ರನು ಬೃಹತ್ಕಥಾಮಂಜರಿಯನ್ನೂ ರಚಿಸಿದ್ದನು. ಇದಕ್ಕೆ ಮೊದಲು ಗುಪ್ತರ ಕಾಲದಲ್ಲಿ ಬುಧ ಸ್ವಾಮಿಯು ಬೃಹತ್ಕಥಾ ಶ್ಲೋಕ ಸಂಗ್ರಹದ ರಚನೆ ಮಾಡಿದ್ದನು. ಈ ಗ್ರಂಥದಲ್ಲಿ ಚಿಕ್ಕ ಚಿಕ್ಕ ಉಪದೇಶ ಕತೆಗಳ ಸಂಗ್ರಹವಿದೆ. ಆದರೆ ಈ ಮೂರೂ ಗ್ರಂಥಗಳು ಗುಣಾಢ್ಯನ ‘ಬಡ್ಡಕಹಾ’ (ಪ್ರಾಕೃತ) ಅಂದರೆ ಬೃಹತ್ಕಥೆಯಿಂದ ಪ್ರೇರಣೆ ಪಡೆದವು ಎನ್ನಲಾಗುತ್ತದೆ. ಕಥಾ ಸಾಹಿತ್ಯದಲ್ಲಿ ಗುಣಾಢ್ಯನಿಗೆ ವ್ಯಾಸ - ವಾಲ್ಮೀಕಿಯರಷ್ಟೇ ಸಮಾನವಾದ ಪ್ರತಿಷ್ಠೆ ಪ್ರಾಪ್ತವಾಗಿದೆ. ಗುಣಾಢ್ಯನು ಆಂಧ್ರದ ರಾಜ ಸಾತವಾಹನನ ಸಮಕಾಲೀನನಾಗಿದ್ದನೆಂದು ಹೇಳಲಾಗುತ್ತದೆ. ಪುರಾಣದ ಪ್ರಕಾರ ಅವನ ಕಾಲವು ಕ್ರಿ.ಪೂ. 495 ರಿಂದ 490 ಆಗಿದೆ. ಕೆಲವು 22 ಕಥಾ ಸಂಸ್ಕೃತಿ ಆಧುನಿಕ ಸಂಶೋಧಕರು ಸಾತವಾಹನ-ಶಾಲಿವಾಹನ ಇಬ್ಬರೂ ಒಂದೇ ಎಂದು ತಿಳಿದು ಗುಣಾಢ್ಯನ ಕಾಲ ಕ್ರಿ.ಶ. 78 ರ ಆಚೀಚೆ ಎಂದು ಭಾವಿಸುತ್ತಾರೆ. ಕಥಾಸರಿತ್ಸಾಗರದ ಅರ್ಥ ಕತೆಗಳ ಸಮುದ್ರ. ಇದರಲ್ಲಿ ಕ್ರಿ.ಪೂರ್ವ ಕಾಲದಿಂದ ಹಿಡಿದು ಮಧ್ಯಕಾಲದವರೆಗಿನ ಭಾರತೀಯ ಪರಂಪರೆ ಹಾಗೂ ಸಾಂಸ್ಕೃತಿಕ ಧಾರೆಗಳ ಅಭೂತಪೂರ್ವ ಭಂಡಾರವಿದೆ. ಇದರಲ್ಲಿ ಸಂಸ್ಕೃತ ಸಾಹಿತ್ಯದ ಅನೇಕ ಅಮರ ರಚನೆಗಳಾದ ದಶಕುಮಾರ ಚರಿತೆ, ಕಾದಂಬರಿ, ಮಾಲತೀ ಮಾಧವ, ಹಾಗೂ ಐತಿಹಾಸಿಕ ಕಿಂವದಂತಿಗಳು, ಬೇತಾಳ ಪಂಚವಿಂಶತಿ, ಗಿಳಿ-ಮೈನಾ ಪ್ರಸಂಗ, ಸಿಂಹಾಸನ ಬತ್ತೀಸಿಗಳ ಹೊರತಾಗಿ, ಈಸೋಪನ ನೀತಿಕತೆಗಳು, ವಿಶ್ವದ ಅನೇಕ ದೇಶಗಳಲ್ಲಿ ಪ್ರಚಲಿತವಾದ ಮೂರ್ಖ ಕತೆಗಳು ಯಾತ್ರೆಗೆ ಸಂಬಂಧಿಸಿದ ಕತೆಗಳು ಕಿನ್ನರ ಕತೆಗಳ ಬೀಜಗಳೂ ಇವೆ. ವಾಸ್ತವವಾಗಿ ಬೃಹತ್ಕಥೆಯಿಂದ ಹುಟ್ಟಿದ ಕಥಾಸರಿತ್ಸಾಗರವು ನಮ್ಮ ಕಥನ ಕಲೆಗಳ ಪರಂಪರೆ, ನಮ್ಮ ಜಾತೀಯ ಸಾಂಸ್ಕೃತಿಕ ವಿಸ್ತಾರದ ಉತ್ತಮ ಪ್ರತಿನಿಧಿಗಳು. ಇವುಗಳಲ್ಲಿ ಅನೇಕ ಸಾಕ್ಷ್ಯ- ಪ್ರಮಾಣಗಳು ಒಂದೇ ಬಾರಿಗೆ ದೊರೆಯುತ್ತವೆ. ಈ ಸಂಕಲನದಲ್ಲಿ ಕಥಾ ಪರಂಪರೆಯ ಈ ಪ್ರಮುಖ ಆಕರವನ್ನು ತಿಳಿಯಲು ವರರುಚಿಯ ಕತೆ, ಗುಣಾಢ್ಯನ ಕತೆ, ರಾಜಾ ವಿಕ್ರಮ ಹಾಗೂ ಇಬ್ಬರು ಬ್ರಾಹ್ಮಣರ ಕತೆ, ಸೂರಸೇನ ಮತ್ತು ಕೈವರ್ತಕಕುಮಾರರ ಕತೆಗಳನ್ನು ಸೇರಿಸಲಾಗಿದೆ. ಬೌದ್ಧ-ಜೈನ ಕತೆಗಳು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಎರಡು ಪರಂಪರೆಗಳು ಮುಖ್ಯವಾಗಿ ಕಾಣುತ್ತ ಬಂದಿವೆ. ಒಂದು ಬ್ರಾಹ್ಮಣ ಪರಂಪರೆ, ಇನ್ನೊಂದು ಶ್ರಮಣ ಪರಂಪರೆ, ಬ್ರಾಹ್ಮಣ ಪರಂಪರೆಯ ಉಪಾಸಕರು ಮುಖ್ಯವಾಗಿ ಬ್ರಾಹ್ಮಣ ಜಾತಿಯ ಜನರು. ಅವರು ವೇದವನ್ನು ಪ್ರಮುಖ ಸ್ರೋತವೆಂದು ಭಾವಿಸುತ್ತಿದ್ದರು ಹಾಗೂ ಈಶ್ವರೀಯ ಜ್ಞಾನದ ಪ್ರಮುಖ ಕಾರಣವೆಂದು ಭಾವಿಸುತ್ತಿದ್ದರು. ವೈದಿಕ ದೇವತೆಗಳ ಪೂಜೆ ಅರ್ಚನೆ ಮಾಡುತ್ತಿದ್ದರು. ಕರ್ಮಕಾಂಡದಲ್ಲಿ ವಿಶ್ವಾಸವಿಡುತ್ತಿದ್ದರು, ಹಾಗೂ ವರ್ಣಾಶ್ರಮ ವ್ಯವಸ್ಥೆಯನ್ನು ಸ್ವೀಕರಿಸಿದ್ದರು. ಆದರೆ ಶ್ರಮಣ ಪರಂಪರೆಯನ್ನು ಒಪ್ಪುವವರು ವೇದಗಳ ಸ್ಥಾನದಲ್ಲಿ ಲೋಕ ಪ್ರಚಲಿತವಾದ ಮಾನ್ಯತೆಗಳನ್ನು ಕತೆಗಳನ್ನು ಸ್ವೀಕರಿಸಿದರು. ವೈದಿಕ ಋಷಿಗಳ ಜಾಗದಲ್ಲಿ ಯೋಗಿ ಹಾಗೂ ತಪಸ್ವಿಗಳನ್ನು ಒಪ್ಪಿಕೊಂಡರು, ಹಾಗೂ ವೈದಿಕ ಕರ್ಮಕಾಂಡಗಳ ಸ್ಥಾನದಲ್ಲಿ ಚಿಂತನೆ, ಮನನ, ತಪ, ಸಂಯಮ, ತ್ಯಾಗ ಹಾಗೂ ಬ್ರಹ್ಮಚರ್ಯಗಳಿಗೆ ಪ್ರಾಶಸ್ತ್ಯ ಕೊಟ್ಟರು. ಜಾತಿ ವ್ಯವಸ್ಥೆಯ ಸ್ಥಾನದಲ್ಲಿ ಕರ್ಮವ್ಯವಸ್ಥೆಯನ್ನು ಮಹತ್ವಪೂರ್ಣವೆಂದು ತಿಳಿದರು. ಜಾಗತಿಕ ನೋಟ 23 ಬೌದ್ಧಧರ್ಮ ಹಾಗೂ ಜೈನಧರ್ಮ ಇದೇ ಶ್ರಮಣ ಪರಂಪರೆಯ ಅನುಗಾಮಿಗಳೆಂದು ಸಿದ್ಧವಾದವು. ಈ ಧರ್ಮಗಳಿಂದ ಹುಟ್ಟಿದ ಕತೆಗಳು ಉಪದೇಶೋಕ್ತಿಗಳು ಇತ್ಯಾದಿ ಬೌದ್ಧಕತೆ / ಜಾತಕ ಕತೆ / ಜೈನಕತೆ / ಆಗಮ ಕತೆ ಮುಂತಾದ ಹೆಸರುಗಳಿಂದ ಕರೆಯಲಾಯಿತು. ಬೌದ್ಧ ಹಾಗೂ ಜೈನ ಧರ್ಮದ ಪದ್ಧತಿಗಳಲ್ಲಿ ತಾತ್ವಿಕ ಅಂಶ ಕಡಿಮೆಯೆಂಬುದು ವಿದ್ವಾಂಸರ ಅಭಿಪ್ರಾಯ. ಅದರ ಪರಿಣಾಮವಾಗಿ ಬೌದ್ಧಕತೆಗಳು ಹಾಗೂ ಜೈನ ಕತೆಗಳ ಸ್ವರೂಪದಲ್ಲಿ ಹಾಗೂ ಆಂತರಿಕ ವಿವೇಚನೆಯಲ್ಲಿ ಕೂಡ ಕಡಿಮೆ ಅಂತರವಿದೆ. ಡಾ || ಜಗದೀಶ ಚಂದ್ರ ಜೈನ ಅವರು ತಮ್ಮ ‘ಪ್ರಾಚೀನ ಭಾರತದ ಶ್ರೇಷ್ಠಕತೆಗಳು’ ಪುಸ್ತಕದಲ್ಲಿ ಈ ಬಗ್ಗೆ ವಿಶೇಷ ರೂಪದಲ್ಲಿ ಸಂಕೇತ ನೀಡಿದ್ದಾರೆ. ಈ ಎರಡೂ ಧರ್ಮಗಳು ಒಂದೇ ದೇಶದಲ್ಲಿ ಹುಟ್ಟಿ ಬೆಳೆದುದೇ ಇದಕ್ಕೆ ಕಾರಣವೆಂದು ತಮ್ಮ ಪುಸ್ತಕದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಎರಡೂ ಕೂಡ ವೇದ-ವರ್ಣವ್ಯವಸ್ಥೆ-ಯಜ್ಞ ಇತ್ಯಾದಿಗಳನ್ನು ಸ್ವೀಕರಿಸಲಿಲ್ಲ, ಲೋಕಾಚಾರ ಮತ್ತು ಲೋಕಭಾಷೆಯನ್ನು ಆಶ್ರಯಿಸಿದವು. ಮತ್ತು ಲೋಕೋಪಯೋಗಿ ಕತೆಗಳ ಮೂಲಕ ಸಾಮಾನ್ಯ ಜನರನ್ನು ತಲುಪುವ ಪ್ರಯತ್ನ ಮಾಡಿದವು. ಎರಡೂ ಧರ್ಮಗಳ ಕಥಾ ಸಾಹಿತ್ಯದಲ್ಲಿ ಒಂದೇ ಬಗೆಯಾದ ಅನೇಕ ಆಚಾರ ವಿಚಾರಗಳು, ಉಪದೇಶ ವಾಕ್ಯಗಳು, ಗಾಥೆಗಳು, ಪಾರಿಭಾಷಿಕ ಪದಗಳು ದೊರೆಯುತ್ತವೆ. ಬುದ್ಧ-ಹಾಗೂ ಜೈನಕಾಲದ ರೀತಿ ರಿವಾಜುಗಳು ಹೇಗಿದ್ದವು, ಅವುಗಳ ಸಾಮಾಜಿಕ ಗುರಿಗಳು ಏನಿದ್ದವು ಎಂಬುದು ಇಲ್ಲಿ ಸಂಕಲಿಸಿದ ಕತೆಗಳ ಮೂಲಕ ತಿಳಿಯುತ್ತದೆ. ಬೌದ್ಧ ಮತ್ತು ಜೈನ ಧರ್ಮೋಪದೇಶಕರು ಒಂದು ನೀತಿವಂತ ಕರ್ಮಪ್ರಧಾನ ಸಮಾಜವನ್ನು ನಿರ್ಮಾಣ ಮಾಡಬಯಸಿದ್ದರೆಂಬುದು ಈ ಕತೆಗಳ ಮೂಲಕ ಸಿದ್ಧವಾಗುತ್ತದೆ. ಈ ಕತೆಗಳಲ್ಲಿ ಅನೇಕವು ಜಗತ್ತನ್ನೇ ತಿರುಗಾಡಿವೆ. ‘ಮರಣಕ್ಕೆ ಮದ್ದು’ ‘ಕೃತಘ್ನ ರಾಜಕುಮಾರ’ ಮುಂತಾದ ಕತೆಗಳು ಅನ್ಯ ಪ್ರದೇಶಗಳನ್ನು ತಲುಪಿವೆ. ಅದರ ದೃಷ್ಟಾಂತ ಮಹಾಭಾರತ, ರಾಮಾಯಣ, ಪಂಚತಂತ್ರ, ಹಿತೋಪದೇಶ, ಈಸೋಪನ ಕತೆಗಳು, ಅರೇಬಿಯನ್ ನೈಟ್ಸ್ ಮುಂತಾದವುಗಳಲ್ಲಿ ಕಾಣಸಿಗುತ್ತವೆ. ಈ ಸಂಗ್ರಹದ ‘ಸೂಕರ ಜಾತಕ’ ಒಂದು ಮಹತ್ವಪೂರ್ಣ ಜಾತಕ ಕತೆಯಾಗಿದೆ. ಅದನ್ನು ಭದಂತ ಆನಂದ ಕೌಶಲ್ಯಾಯನರು ಪ್ರಸ್ತುತ ಪಡಿಸಿದ್ದಾರೆ. ಜೈನಕತೆಗಳಲ್ಲಿ ‘ಬತ್ತದ ಐದುಕಾಳುಗಳು’ ಎಲ್ಲಕ್ಕಿಂತ ಲೋಕಪ್ರಿಯವಾದ, ಗೌರವಪಡೆದ ಐತಿಹಾಸಿಕ ಕತೆ. ಈ ಪುಸ್ತಕದಲ್ಲಿ ಇಂದ್ರ ಚಂದ್ರ ಶಾಸ್ತ್ರಿ ಮತ್ತು ಜಗದೀಶಚಂದ್ರ ಜೈನ ಶೋಧಿಸಿ ಪ್ರಸ್ತುತ ಪಡಿಸಿದ ಕತೆಗಳಲ್ಲಿ ಬೌದ್ಧ ಮತ್ತು ಜೈನ ಕತೆಗಳ ಕೆಲವು ವಿಶೇಷ ಹೊಳಹುಗಳಿವೆ. 24 ಕಥಾ ಸಂಸ್ಕೃತಿ ನೈತಿಕ ಕತೆಗಳು ನೈತಿಕ ಕತೆಗಳೆಂದರೆ ಅರ್ಥ-ನೀತಿ ಪ್ರಧಾನವಾದವು, ನೀತಿ-ಅನೀತಿಯನ್ನು ತಿಳಿಸಿಕೊಡುವ ಕತೆಗಳು. ಆದ್ದರಿಂದ ನೈತಿಕ ಕತೆಗಳನ್ನು ಯಾವುದೇ ನಿಶ್ಚಿತ ಕಾಲಕ್ರಮದಲ್ಲಿ ವಿಭಜಿಸಲಾಗುವುದಿಲ್ಲ. ನೈತಿಕ ಕತೆಗಳ ಮೂಲದಲ್ಲಿ ಶುದ್ಧ ಆಚರಣೆಗೆ ಒತ್ತುಕೊಡುವುದು, ಉತ್ತಮ ಸಾಮಾಜಿಕ ಜ್ಞಾನವನ್ನು ದೊರಕಿಸಿಕೊಡುವ ಅಂಶಗಳಿವೆ. ಅಂದರೆ, ಯಾವ ವೇಳೆಯಲ್ಲಿ ಯಾವುದು ಸರಿ, ಯಾವುದು ತಪ್ಪು, ಈ ಪರಿಜ್ಞಾನವನ್ನು ಕತೆಗಳು ಯಾವುದಾದರೂ ಪಾತ್ರ-ಘಟನೆ ಮೂಲಕ ಮಾಡಿಕೊಡುತ್ತವೆ. ಯಾವುದೇ ಐತಿಹಾಸಿಕ ಅಥವಾ ಕಾಲ್ಪನಿಕ ಪಾತ್ರದ ಮೂಲಕ ಯಾವುದೇ ಕಥಾವಾಚಕನು ಈ ಶಿಕ್ಷಣವನ್ನು ಪ್ರಚಾರ-ಪ್ರಸಾರ ಮಾಡುತ್ತಾನೆ. ಲೋಕ ಕತೆಗಳಂತೆಯೇ ನೈತಿಕ ಕತೆಗಳೂ ಶ್ರಮಣ ಪರಂಪರೆಯ ಕೊಡುಗೆಗಳಾಗಿವೆ. ಕಾಲಾಂತರದಲ್ಲಿ ಲೋಕ ಕತೆಗಳಂತೆಯೇ ನೀತಿಕತೆಗಳನ್ನು ಕೂಡ, ಕಥಾ ಪರಂಪರೆ ಮತ್ತು ವಿಕಾಸದಲ್ಲಿ ಇವುಗಳ ಮಹತ್ವದ ಕೊಡುಗೆಯಿದೆಯೆಂಬುದನ್ನು ಅರಿತು ಸಂಕಲಿಸಲಾಯಿತು. ಪುಸ್ತಕದಲ್ಲಿ ಸಂಕಲಿಸಿದ ನೈತಿಕ ಕತೆಗಳು ತಮ್ಮ ಕಾಲದ ಶ್ರೇಷ್ಠ ಲೋಕಪ್ರಿಯ ರಚನೆಗಳಾಗಿವೆ. ಪಂಚತಂತ್ರ ಮತ್ತು ಹಿತೋಪದೇಶ ಪಂಚತಂತ್ರ ಮತ್ತು ಹಿತೋಪದೇಶದ ಕತೆಗಳು ಈಗ ಗಾದೆಗಳಾಗಿಬಿಟ್ಟಿವೆ. ಪಂಚತಂತ್ರದ ಲೆಕ್ಕವಿಲ್ಲದಷ್ಟು ಕತೆಗಳು ಪೇಟೆಯಲ್ಲಿ ಹರಡಿಕೊಂಡಿವೆ. ಅವುಗಳ ಭಾಷೆ ಮತ್ತು ಶೈಲಿಯಲ್ಲಿ ತುಂಬ ಅಂತರವಿದ್ದರೂ, ಉಪದೇಶ ಅಥವಾ ಸಂದೇಶದ ಕೇಂದ್ರವು ಸಮಾನವಾಗಿದೆ. ಪಂಚತಂತ್ರವು ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಪ್ರಮುಖ ಕಥಾಕೃತಿಗಳಲ್ಲಿ ಒಂದಾಗಿದೆ. “ವಿಶ್ವದ ಅತ್ಯಂತ ಲೋಕಪ್ರಿಯ ಐದು ಕಲಾಕೃತಿಗಳಲ್ಲಿ ಒಂದು ಹೆಸರು ಪಂಚತಂತ್ರದ್ದು. ಈ ಐದರಲ್ಲಿಯೂ ಅದರ ಸ್ಥಾನ ಎಲ್ಲಕ್ಕಿಂತ ಮೊದಲನೆಯದಾಗಿದ್ದರೆ ಯಾವ ಆಶ್ಚರ್ಯವೂ ಇಲ್ಲ” - ಹೀಗೆಂದು ನ್ಯಾಶನಲ್ ಬುಕ್‍ಟ್ರಸ್ಟ್ ಪ್ರಕಟಿಸಿದ ‘ಪಂಚತಂತ್ರದ ಕತೆಗಳು’ ಪುಸ್ತಕದ ಪ್ರಸ್ತಾವನೆಯಲ್ಲಿ ಸುಪ್ರಸಿದ್ಧ ಲೇಖಕ - ಇತಿಹಾಸಕಾರ ಭಗವಾನ್‍ಸಿಂಹ ಬರೆದಿದ್ದಾರೆ. ವಿಷ್ಣುಶರ್ಮಾ ಪಂಚತಂತ್ರದ ಕತೆಗಳನ್ನು ಬರೆದವರು ಎಂಬುದು ಜಗತ್ತಿಗೆ ಗೊತ್ತಿದೆ. ಖುಸರೋ ಭಾರತವನ್ನು ಅದರ ಹತ್ತು ಕೊಡುಗೆಗಳಿಗಾಗಿ ಶ್ರೇಷ್ಠವೆಂದು ಘೋಷಿಸಿದ್ದರಲ್ಲಿ ಚದುರಂಗದ ಆಟ ಹಾಗೂ ಪಂಚತಂತ್ರದ ರಚನೆಗಳೂ ಸೇರಿವೆ ಎನ್ನಲಾಗುತ್ತದೆ. ಜಗತ್ತಿನಲ್ಲೆಲ್ಲ ಇವುಗಳ ಪ್ರಚಾರ ತುಂಬ ಜೋರಾಗಿ ಆಗಿದೆಯೆಂಬುದು ಉಲ್ಲೇಖನೀಯ. ಯಾಕೆಂದರೆ ಪಂಚತಂತ್ರ ಕತೆಗಳು ರಹಸ್ಯಮಯತೆ, ರೋಮಾಂಚಕತೆ, ಸಮಯಸ್ಫೂರ್ತಿಯಿಂದ ಉತ್ತರಿಸುವುದು ಹಾಗೂ ಜ್ಞಾನ ಇವುಗಳ ಕೋಶವಾಗಿದ್ದು, ಮೂಲ ಪಂಚತಂತ್ರದ ಕತೆಗಳ ಶೈಲಿ ಜಾಗತಿಕ ನೋಟ 25 ಹಾಗೂ ಧಾಟಿಯನ್ನು ಅನುಸರಿಸಿ ಜಗತ್ತಿನಲ್ಲೆಲ್ಲ ಅನೇಕ ಕತೆಗಳು ಸೃಷ್ಟಿಯಾಗಿವೆ. ಪಂಚತಂತ್ರದ ಕತೆಗಳು ಅಲೆಮಾರಿ, ಬಣ್ಣದ ನರಿ, ವ್ಯರ್ಥ ಜಂಜಾಟದಲ್ಲಿರುವುದು, ಮೊಸಳೆಯ ಕಣ್ಣೀರು, ನಕಲಿ ಸಿಂಹ, ಹುಲಿಯಚರ್ಮ, ಡೊಳ್ಳಿನ ಪೊಳ್ಳು, ಮಂಗಕ್ಕೆ ಉಪದೇಶ, ಕತ್ತೆಯ ಆಲಾಪ, ಸತ್ತಸಿಂಹವನ್ನು ಸುಡುವುದು, ಮಲಗಿದ ಸಿಂಹವನ್ನು ಎಬ್ಬಿಸುವುದು, ಸುಶಿಕ್ಷಿತ ಮೂರ್ಖ, ನಕಲು ಮಾಡಲೂ ಅಕಲುಬೇಕು, ಬಂಗಾರದ ನಾಣ್ಯಕೊಡುವ ಸರ್ಪ, ಬಂಗಾರದ ಮೊಟ್ಟೆ ಇಡುವ ಕೋಳಿ, ಹಾಸ್ಯಗಾರನ ಹಾರಾಟ, ಹಕ್ಕಿಯ ಸಂಕಲ್ಪ ಮುಂತಾದ ಕತೆಗಳು ಗಾದೆಯಂತೆ ಪ್ರಚಲಿತವಾಗಿವೆ. ಈ ಗ್ರಂಥಗಳನ್ನು ಜ್ಞಾನದಕೋಶವೆಂದೂ ಹೇಳಬಹುದು. ಪಂಚತಂತ್ರದ ಐತಿಹಾಸಿಕತೆಯ ಬಗ್ಗೆ ಟಿಪ್ಪಣಿ ಮಾಡುತ್ತ ಭಗವಾನ್ ಸಿಂಹ ಬರೆಯುತ್ತಾರೆ - “ಇವು ಯಾವುದೋ ಒಬ್ಬ ಪಂಡಿತನಿಂದ ಒಂದು ದಿನದಲ್ಲಿ ಅಥವಾ ಒಂದು ಕಂತಿನಲ್ಲಿ ಬರೆದು ಮುಗಿಸಲಾದ ಕತೆಗಳಲ್ಲ. ವೈದಿಕ ಕಾಲಕ್ಕಿಂತ ಹಿಂದೆ ಹೋಗುವ ಒಂದು ದೀರ್ಘ ಪರಂಪರೆಯೇ ಇವಕ್ಕಿದೆ. ಋಗ್ವೇದದಲ್ಲಿ ಕಪ್ಪೆ, ಸರ್ಪ, ನಗಾರಿ, ಅಪ್ಸರೆ, ದೇವತೆ, ರಾಕ್ಷಸ, ನದಿ ಎಲ್ಲವನ್ನೂ ಪಾತ್ರಗಳನ್ನಾಗಿ ಮಾಡಿ ಪ್ರಸ್ತುತಗೊಳಿಸಲಾಗಿದೆ. ಬ್ರಾಹ್ಮಣ ಗ್ರಂಥಗಳು ಮುಂತಾದವುಗಳಲ್ಲಿ ಆ ತಂತ್ರವನ್ನು ಸಾಕಷ್ಟು ಬಳಸಿಕೊಳ್ಳಲಾಗಿದೆ. ಪ್ರಾಚೀನ ಸಮಾಜದಲ್ಲಿ ಜೀವನದ ಮರ್ಮವನ್ನು ಕತೆಗಳಲ್ಲಿ ಪೋಣಿಸುವ ಪರಂಪರೆ ಬೇರೆಡೆಗೂ ಇದೆ. ಭಾರತವಲ್ಲದೆ ಚೀನಾ, ಗ್ರೀಸ್, ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಇತ್ಯಾದಿ ದೇಶಗಳಲ್ಲಿ ಪ್ರಚಲಿತವಿರುವ ಕತೆಗಳಲ್ಲಿಯೂ ಇದಕ್ಕೆ ಸಾಕ್ಷಿ ದೊರೆಯುತ್ತದೆ. ಆದರೆ ಕೆಲವು ಸಂಗತಿಗಳಲ್ಲಿ ಭಾರತದ್ದೇ ವಿಶೇಷತೆಗಳಿವೆ. ಆ ವೈಶಿಷ್ಟ್ಯಗಳೇ ಪಂಚತಂತ್ರವನ್ನು ಪಂಚತಂತ್ರವನ್ನಾಗಿ ಮಾಡಲು ಸಹಾಯ ಮಾಡಿವೆ. ಅದೆಂದರೆ ಜ್ಯೋತಿಷ್ಯ, ಚಿಕಿತ್ಸೆ, ಗಣಿತ, ದೋಣಿಸಂಚಾರ, ಶಿಲ್ಪಶಾಸ್ತ್ರ, ದಂಡಸಂಹಿತೆ, ಅರ್ಥಶಾಸ್ತ್ರ, ವ್ಯಾಕರಣ ಮುಂತಾದವುಗಳನ್ನು ಪದ್ಯಬದ್ಧವಾಗಿ ಬರೆಯುವುದು.” ನಿಶ್ಚಯವಾಗಿಯೂ ಈ ಭಾರತೀಯ ವಿಶಿಷ್ಟತೆಗಳಿಂದಲೇ ಪಂಚತಂತ್ರದ ಕತೆಗಳು ಎಲ್ಲಕ್ಕಿಂತ ಲೋಕಪ್ರಿಯವಾದವು. ಈ ಪುಸ್ತಕದಲ್ಲಿ ಕಥಾಪರಂಪರೆಯ ಈ ಅಖಂಡ ಸೂತ್ರದ ವಿಕಾಸಕ್ರಮವನ್ನು ತೋರಿಸುವ ಸಲುವಾಗಿ ಕೆಲವು ಕತೆಗಳನ್ನು ಸಂಕಲಿಸಿಕೊಡಲಾಗಿದೆ. ವಿಶ್ವಕತೆಗಳು : ಪ್ರಾಚೀನ ಹಾಗೂ ಕೆಲವು ಆಧುನಿಕ ಕತೆಗಳು ಭಾರತವು ಜಗತ್ತಿನ ಮೊದಲ ಕಥಾವೇದಿಕೆಯಂತೂ ನಿಜ. ಆದರೆ ಜಗತ್ತಿನ ಅನ್ಯನಾಗರಿಕತೆಗಳ ದೇಶಗಳಾದ ಚೀನಾ ಗ್ರೀಸ್, ರಶ್ಯಾ, ಐರ್ಲೆಂಡ್, ಜರ್ಮನಿ, ದಕ್ಷಿಣ ಆಫ್ರಿಕಾಗಳಲ್ಲಿಯೂ ಸಂಸ್ಕೃತಿ, ಮಿಥ್‍ಕತೆಗಳು, ದಂತ ಕತೆಗಳು, ಜನಪದ ಕತೆಗಳ ಒಂದು ದೀರ್ಘ ಇತಿಹಾಸವಿದೆ. ಇಲ್ಲಿ ನಾವು ವಿಶ್ವಕತೆಗಳ ಕೆಲವು ಆಯ್ದ 26 ಕಥಾ ಸಂಸ್ಕೃತಿ ಪ್ರಾಚೀನತಮ ಕತೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇವು ಲೋಕಪ್ರಿಯ ಲೋಕ ಕಥೆಗಳಾಗಿವೆ “ಬಿಳಿಮಂಗ” ಯಾವುದೋ ಅಜ್ಞಾತ ಚೀನೀ ಲೇಖಕನು ಬರೆದ ಕತೆ. ಇದು ಏಳನೇ ಶತಮಾನದ ಪೂರ್ವಾರ್ಧದಲ್ಲಿ ಬರೆದದ್ದು. ಈ ಕತೆ ಪ್ರಾಚೀನ ಒಪ್ಪಿತ ರೀತಿಗಳು, ಹಾಗೂ ಅನುಭೂತಿಗಳ ಉತ್ಕೃಷ್ಟ ಮಿಶ್ರಣವಾಗಿದೆ. ಅದೇ ರೀತಿ ‘ಸ್ವಾಗತಮ್’ದಂತಹ ಕತೆಗಳ ರಚನೆಯು ರೋಮನ್ ಸಾಹಿತ್ಯದ ಮೊದಲ ಕೃತಿಗಳಲ್ಲಿನದು. ಇದನ್ನು ಎಪೋಲಿಯಸ್ ಮೊದಲ ಶತಮಾನದಲ್ಲಿ ಬರೆದ. ಮೊದಲ ಶತಮಾನದ್ದೇ ರಚನೆ - ‘ಪ್ರೀತಿಯ ಹುಡುಕಾಟ’ ಇದರ ಲೇಖಕರು ಓವಿಡ್. ‘ಪ್ರೀತಿಯ ಹುಡುಕಾಟ’ ಆ ಕಾಲದ ಬಹುಚರ್ಚಿತ ಕೃತಿ. ಇದೇ ಕೃತಿಯಿಂದ ‘ಪ್ರೇಯಸಿಯ ಸಲಹೆ’ಯನ್ನು ತೆಗೆದುಕೊಳ್ಳಲಾಗಿದೆ. ಜಪಾನೀಕತೆ ‘ಉಪಾಹಾರದ ಅನಂತರ’ ಡೈರಿ ಶೈಲಿಯಲ್ಲಿ ಬರೆದ ಕತೆ. ಇದರ ಲೇಖಕಿ ರೊಯೀ ಶೊನಾಗೊನ್. ಆ ಕಾಲದ ಮಹಾರಾಣಿಯ ಸಹಚರಿಯಾಗಿದ್ದಳು. ಇದರ ರಚನಾಕಾಲ ಹತ್ತನೇ ಶತಮಾನ. ತಾತ್ಪರ್ಯವೆಂದರೆ - ವಿಶ್ವಕತೆಗಳಿಂದ ತೆಗೆದುಕೊಂಡ ಈ ಪ್ರಾಚೀನತೆಯ ಕತೆಗಳಲ್ಲಿ ಆ ಕಾಲದ ವಿಚಾರ, ಸಮಾಜ, ಜೀವನಶೈಲಿಯ ಹೊಳಹುಗಳಿವೆ. ಬಹಳ ಮುಖ್ಯವಾದದ್ದೆಂದರೆ ಕಥಾಪರಂಪರೆಯ ಇತಿಹಾಸ ಪುರಾತನವಾದದ್ದು, ಕಾಲಾಂತರದಲ್ಲಿ ವಿಕಸಿತವಾದದ್ದು, ಹಾಗೂ ನಾಗರಿಕತೆಯಲ್ಲಿ ಈ ಕತೆಗಳ ಕೊಡುಗೆ ಸಾರ್ವಕಾಲಿಕವಾಗಿ ಉಲ್ಲೇಖನೀಯವಾದದ್ದು ಎಂಬುದನ್ನು ಸ್ಪಷ್ಟಗೊಳಿಸುವುದು ಹಾಗೂ ಸಾಬೀತು ಮಾಡುವುದು. ಜೊತೆಗೆ ಈ ಸಂಗ್ರಹದಲ್ಲಿ ಕೆಲವು ಕಾಲಜಯೀ ಆಧುನಿಕ ಕತೆಗಳನ್ನು ಸೇರಿಸಲಾಗಿದೆ. ಅವು ಇಲ್ಲಿ ಸೇರುವುದು ‘ಕಥಾಸಂಸ್ಕೃತಿ’ಯ ದೃಷ್ಟಿಯಿಂದ ತುಂಬ ಅವಶ್ಯಕವಾಗಿವೆ. ಯಾತ್ರಾ ಕತೆಗಳು ಈ ಪುಸ್ತಕದ ಪರಿಶಿಷ್ಟದ ರೂಪದಲ್ಲಿ ಇದು ದಸ್ತಾವೇಜ ಖಂಡವಾಗಿದೆ. ಈ ಭಾಗದಲ್ಲಿ ದುರ್ಲಭವಾದ ಯಾತ್ರಾ ಸಂಸ್ಮರಣೆಗಳಿವೆ. ಹಿಂದುಸ್ತಾನದ ಸಾಂಸ್ಕೃತಿಕ ಸಮೃದ್ಧಿಯು ವಿದೇಶಿ ಅಧ್ಯಯನಕಾರರಿಗೆ - ಆಡಳಿತಗಾರರಿಗೆ ಸದಾ ಆಕರ್ಷಣೆಯ ಕೇಂದ್ರವಾಗಿದೆ. ಹಾಗೂ ಅಧ್ಯಯನ ಅಥವಾ ಜಿಜ್ಞಾಸೆಯ ತೃಪ್ತಿಯ ದೃಷ್ಟಿಯಿಂದ ಮಾಡಲಾದ ಯಾತ್ರೆಗಳ ಘಟನಾ ಕ್ರಮಗಳ ವಿವರಣೆ-ವಿಶ್ಲೇಷಣೆಯನ್ನು ಪ್ರಸ್ತುತ ಪಡಿಸಲಾಗಿದೆ. ಅವು ಎಲ್ಲೋ ಒಂದುಕಡೆ ಕಥಾ ಸಂಸ್ಕೃತಿಯ ವಿಕಾಸದ ಭಾಗವಾಗಿ ನಮ್ಮೆದುರು ನಿಲ್ಲುತ್ತವೆ. ಯಾತ್ರೆಯ ವೃತ್ತಾಂತಗಳಿಗೆ ಯಾತ್ರಾ ಕತೆಗಳು ಎಂದು ಕರೆಯುವುದು ಯೋಗ್ಯವಲ್ಲವೆಂದು ತಿಳಿಯಬಾರದು- ಇತಿವೃತ್ತ ವ್ಯಕ್ತಿಯ ಬಗೆಗೂ ಆಗಬಹುದು, ಸ್ಥಾನವಿಶೇಷದ ಬಗೆಗೂ ಆಗಬಹುದು ಅಥವಾ ಇತಿಹಾಸ ಖಂಡದ ಇತಿವೃತ್ತವೂ ಆಗಬಹುದು. ಪುಸ್ತಕದಲ್ಲಿ ಫಿರದೌಸಿ, ತೈಮೂರಲಂಗ, ಜಾಗತಿಕ ನೋಟ 27 ಇಬನ್‍ಬಟೂಟಾ, ಅಬೆದರ್ ರಜಾಕ್, ಸಮರ ಕಂದಿ, ಆಫಾನಾಸಿ ನಿಕೀಟಿನ್, ಡಾ|| ಬರ್ನರ್, ವಾಲ್ಟೇರ್, ರಿಚರ್ಡ್ ಬರ್ಟನ್, ಮಾರ್ಕಟ್ವೇನ್, ಲಿಯೋ ಟಾಲ್‍ಸ್ಟಾಯ್, ಡೇವಿಡ್ ರೆನ್, ಶಿವ ನೈಪಾಲ್, ವಿ.ಎಸ್.ನೈಪಾಲ್, ಮೊಪಾಸಾ . . . ಇತ್ಯಾದಿ ವಿದ್ವಾಂಸರಾದ ಸಾಹಿತಿಗಳ ಭಾರತ ಸಂಬಂಧೀ ಯಾತ್ರಾಕತೆಗಳು ಇಲ್ಲಿ ಸಂಕಲಿತಗೊಂಡಿವೆ. ಈ ಯಾತ್ರಾ ಕತೆಗಳು ಹಿಂದುಸ್ತಾನದ ಕಥಾಸಂಸ್ಕೃತಿಯಲ್ಲಿ ತನ್ನದೇ ಕೊಡುಗೆಯನ್ನು ನೀಡಿವೆ. ಜೊತೆಗೆ ಹಿಂದುಸ್ತಾನದ ಕಥಾ ಸಮೃದ್ಧಿಯ ಬಗೆಗೆ ತಮ್ಮ ದೃಷ್ಟಿಯನ್ನು ಹರಿಸಿದೆ. ಈ ದೃಷ್ಟಿಯಿಂದ ಪರೀಕ್ಷಿಸಿದಾಗ ಆತ್ಮ ಸಂಭ್ರಮ ದೂರವಾಗುವ ತಥ್ಯದೊಂದಿಗೆ, ಮನುಷ್ಯ ನಾಗರಿಕತೆಯ ಇತಿಹಾಸದಲ್ಲಿ ಕತೆಗಳ ಮಹತ್ವ, ಮತ್ತು ಅವುಗಳ ಶಾಶ್ವತ ಅವಶ್ಯಕತೆ, ಅವುಗಳ ಇರುವಿಕೆಯ ಅನಿವಾರ್ಯತೆಯ ಅಳಿಸಲಾರದ ಸಾಕ್ಷ್ಯವೂ ಆಗಿದೆ. 28 ಕಥಾ ಸಂಸ್ಕೃತಿ ಜಲ-ಪ್ರಳಯದಿಂದ ಅಣು-ಪ್ರಳಯದವರೆಗೆ - ಕಮಲೇಶ್ವರ ಶತಮಾನಗಳು, ನಾಗರಿಕತೆಗಳು, ಸಂಸ್ಕೃತಿಗಳು, ಹಾಗೂ ಇತಿಹಾಸಗಳ ನಡುವೆ ಹಾಯ್ದು ಕತೆಯು ಪಡೆಯುತ್ತ ಬಂದಿರುವ ರೂಪವನ್ನು ಮಾನವ ವಿಕಾಸದ ಜೊತೆ ಜೋಡಿಸಿದರೆ, ಮನುಷ್ಯನ ಲೌಕಿಕ ಅಸ್ತಿತ್ವ ಹಾಗೂ ಪಾರಲೌಕಿಕ ಅಸ್ತಿತ್ವಗಳಿಗೆ ಮೂಲತಃ ಕತೆಗಳೇ ಮಾತುಕೊಟ್ಟಿವೆ ಎಂಬುದು ಸಹಜವಾಗಿಯೇ ಗೊತ್ತಾಗುತ್ತದೆ. ಈ ಕತೆಗಳನ್ನು ನಾಗರಿಕತೆಯ ತಳದಿಂದ ಹೊರತಳ್ಳಿದರೆ ನಾಗರಿಕತೆಗಳು ದಸಕ್ಕೆಂದು ಕುಸಿದು ಹೋಗುತ್ತವೆ. ಆದಿಮ ಮಾನವ ನಾಗರಿಕತೆಯ ಮೊದಲ ಕಾವ್ಯ ಕತೆ (ಮಹಾಕಾವ್ಯ: ಗಿಲ್‍ಗಮೆಶ್)ಯ ಕೇಂದ್ರೀಯ ಚಿಂತನೆಯೆಂದರೆ ಮಾನವ ಜಾತಿಯು ಹೇಗೆ ಮೃತ್ಯುವಿನಿಂದ ಬಿಡುಗಡೆಯನ್ನು ಪಡೆಯಬಹುದೆಂಬುದು. ನಾಯಕ ಗಿಲ್‍ಗಮೆಶ್ ಇದೇ ಚಿಂತೆಯಲ್ಲಿದ್ದಾಗ, ಅಮರತ್ವವನ್ನು ಪಡೆದ ಜಿಉಸುದ್ದೂ ಅವನಿಗೆ ಹೇಳುತ್ತಾನೆ- “ಈ ಅಮರತೆಯೆಂಬುದು ದೊರೆವುದು ಒಂದು ಔಷಧ (ಸಸ್ಯ) ದಿಂದ ಅದು ಬೆಳೆವುದು ಸಮುದ್ರದ ತಳದಲಿ ಅದರ ಮುಳ್ಳು ಚುಚ್ಚುತ್ತವೆ ನಿನ್ನ ಕೈಗಳನು ಗುಲಾಬಿಯ ಹಾಗೆ ಅಂತಾದರೂ ನೀನದನು ಪಡೆಯುವಿಯಾದರೆ ಜೀವನವನು (ಅಮರತ್ವ) ಪಡೆವೆ” ಆಗ ಗಿಲ್‍ಗಮೆಶ್ ಕಾಲಿಗೆ ಕಲ್ಲು ಕಟ್ಟಿಕೊಂಡು ಕತ್ತಲ ಸಮುದ್ರ ತಳಕ್ಕೆ ಇಳಿಯತೊಡಗುತ್ತಾನೆ. ಔಷಧವನ್ನು ಹುಡುಕಿ ಪಡೆದು, ಕಲ್ಲು ಕಟ್ಟಿದ ಹಗ್ಗ ಕತ್ತರಿಸಿ ಭಾರಮುಕ್ತನಾಗಿ ಮೇಲಕ್ಕೆ ಬರುತ್ತಾನೆ. ಅಗ ಅವನು ತುಂಬ ದಣಿದಿರುತ್ತಾನೆ. ಅಲ್ಲೇ ಒಂದು ಸರೋವರದ ದಡದಲ್ಲಿ ಜೀವನ-ಔಷಧವನ್ನು ಇಟ್ಟು ಸ್ನಾನಕ್ಕಾಗಿ ಹೋಗುತ್ತಾನೆ. ಆಗ ‘ಸರ್ಪ’ವು ಆ ಔಷಧದ ಸುಗಂಧವನ್ನು ಗ್ರಹಿಸಿ ಅಲ್ಲಿಗೆ ಬಂದು ಅದನ್ನೆತ್ತಿಕೊಂಡು ಹೋಗಿಬಿಡುತ್ತದೆ. ತನ್ನ ಪ್ರಯತ್ನವು ಈ ರೀತಿಯಲ್ಲಿ ನಿರರ್ಥಕವಾಗಿ ಪರಿಣಮಿಸಿದ್ದರಿಂದ ವಿಷಣ್ಣನಾದ ಗಿಲ್‍ಗಮೆಶ್ ಅಳತೊಡಗುತ್ತಾನೆ. ಬಹುಶಃ ಅಂದಿನಿಂದ, ಸಾಯಲೆಂದೇ ಹುಟ್ಟಿದ ಮನುಷ್ಯನು, ತನ್ನ ಪ್ರತಿಯೊಂದು ಪ್ರಯತ್ನವೂ ನಿರರ್ಥಕವೆಂದು ತಿಳಿದರೂ ಮತ್ತೆ ಮತ್ತೆ ಪ್ರಯತ್ನ ವಿಶ್ವಕಥಾಯಾತ್ರೆ 29 ಮಾಡುತ್ತಲೇ ಇದ್ದಾನೆ. ಪ್ರತಿಬಾರಿಯೂ ಯಾವುದೋ ಸರ್ಪವು ಔಷಧವನ್ನು ಎತ್ತಿಕೊಂಡು ಓಡಿಹೋಗುತ್ತದೆ. ಶತಮಾನಗಳು ಬಂದವು, ಹೋದವು. ನಾಗರಿಕತೆ ಉದಿಸಿದವು-ನಾಶವಾದವು. ಆದರೆ ಮೃತ್ಯುವನ್ನು ಕುರಿತಾದ ಈ ಕೇಂದ್ರೀಯ ಯೋಚನೆ ಹಾಗೆಯೇ ಶಾಶ್ವತವಾಗುಳಿಯಿತು. ಯಾಕೆಂದರೆ ಮನವ ಬುದ್ಧಿ ಶಕ್ತಿಯು ಔಷಧವನ್ನು ಹುಡುಕಿದಂತೆಲ್ಲ ಸರ್ಪವು ಅದನ್ನೆತ್ತಿಕೊಂಡು ಓಡಿ ಹೋಯಿತು. ಮೃತ್ತಿಕೆಯ ಪಟ್ಟಿಕೆಗಳ ಮೇಲೆ ಶಿಲಾಕ್ಷರಗಳಲ್ಲಿ ಕೆತ್ತಿದ ಈ ಮಹಾನ್‍ಗಾಥೆಯು, ಈವರೆಗೆ ದೊರೆತ ಪ್ರಾಚೀನತಮ ಸಾಹಿತ್ಯದಲ್ಲಿ ತುಂಬ ಹಳೆಯದು. ದಜಲಾ- ಫರಾತ್ ನದಿಗಳ ದಕ್ಷಿಣ ಭಾಗವು ಈ ಕತೆಯ ಘಟನಾ ಕ್ಷೇತ್ರ. ಮನುಷ್ಯರು ನದಿಗಳ ಮೇಲಿನ ಭಾಗದಲ್ಲಿ ವಾಸಿಸುತ್ತಿದ್ದರೆ, ದೇವತೆಗಳೆನಿಸಿದವರು ನದಿಗಳ ಮುಖಜದಲ್ಲಿ ಇರುತ್ತಿದ್ದರು. ಕೆಲವು ವಿದ್ವಾಂಸರು ಈ ಕತೆಯ ಘಟನಾಕಾಲವನ್ನು ಕ್ರಿ.ಪೂ. 8000 ವರ್ಷಗಳವರೆಗೆ ಒಯ್ದರೆ, ಕೆಲವು ಶತಮಾನಗಳ ಅನಂತರ ಅಂದರೆ ಕ್ರಿ.ಪೂ 3000-2000 ವರ್ಷಗಳಷ್ಟು ಹಿಂದೆ ಇವು ಲಿಪಿಬದ್ಧವಾದುವು ಎಂದು ಭಾವಿಸುತ್ತಾರೆ. ವಾಸ್ತವವಾಗಿ ಆದಿಮ ಮನುಷ್ಯನ ಆಡುಂಬೊಲ ಮಧ್ಯ ಏಶಿಯಾ ಆಗಿತ್ತು. ಅಲ್ಲಿ ಅನೇಕ ನಾಗರಿಕತೆಗಳು, ಸಂಸ್ಕೃತಿಗಳು, ಇತಿಹಾಸಗಳು ಜನ್ಮ ತಾಳಿದವು. ಅನೇಕ ದೊಡ್ಡ ಧರ್ಮಗಳು ಇಲ್ಲಿಂದಲೇ ಪ್ರಾರಂಭವಾದವು. ಮಾನವತೆಯ ಮೊದಲ ಗಾಥೆಯು ಜನ್ಮ ತಾಳಿದ ಈ ಕ್ಷೇತ್ರವು ನಾಗರಿಕತೆಗಳ ಫಲವತ್ತಾದ ನೆಲ. ಪ್ರಾಚೀನತಮ ಆರ್ಯ, ಮಿಸ್ರ ಸುಮೇರಿಯನ್, ಅಸ್ಸಿರೀ, ಬ್ಯಾಬಿಲೋನೀ, ಹಿಬ್ರೂ, ಹಿಟ್ಟೀ, ಯೂನಾನೀ, ರೋಮನ್ ನಾಗರಿಕತೆಗಳು ಭೂಮಧ್ಯ ಸಾಗರದ ನಾಲ್ಕೂ ಕಡೆಗಳಲ್ಲಿ ಇದ್ದವು. ಈ ಸಾಗರವೆಂಬುದು ಹೂ ನಡುವಣ ಬೀಜಪಿಂಡದಂತಿದ್ದರೆ, ಈ ನಾಗರಿಕತೆಗಳು, ಹೂವಿನ ದಳಗಳು. ಅತ್ಯಂತ ಹಳೆಯದಾದ ಆರ್ಯ ನಾಗರಿಕತೆ (ಭಾರತಕ್ಕಿಂತ ಮೊದಲು) ಇದೇ ಸ್ಥಳದಲ್ಲಿ ಹುಟ್ಟಿತು. ಇಷ್ಟೊಂದು ನಾಗರಿಕತೆಗಳು ಹುಟ್ಟಿದ ಮೇಲೆ ಕತೆಯು ಹುಟ್ಟದಿರುವುದು ಹೇಗೆ ಸಾಧ್ಯ? ಶಿಲಾಲೇಖ, ಅಭಿಲೇಖ, ಪಟ್ಟಿಕಾಲೇಖ, ನರಕುಲ ಪಟ್ಟಿಕಾ(ಪೆಪಿರಸ್) ಮೃತ್ತಿಕಾ ಪಟ್ಟಿಕಾ, ಚರ್ಮಪಟ್ಟಿಕಾ, ಧಾತು ಪಟ್ಟಿಕಾ-ಮುಂತಾದ ಸಾಧನಗಳಿಂದ ಬರೆಹಗಳನ್ನು ಜೀವಂತವಾಗಿ ಇಡಲು ಸಾಧ್ಯವಾಗಿದೆ. ಅವುಗಳಲ್ಲಿ ಆದೇಶ, ನಿಯಮ, ಸೂಚನೆ, ವಿಜಯ ವಿವರಣೆ, ಸಂಧಿಗಳು, ಗೆಲುವಿನ ಸೀಮೆಗಳು, ಪ್ರಶಸ್ತಿಗಳು, ಆಜ್ಞೆಗಳು ಮುಂತಾದವು ಇರುತ್ತಿದ್ದವು. ಇವುಗಳಲ್ಲಿ ‘ಕತೆಗಳು’ ಇರುತ್ತಿದ್ದಿಲ್ಲ ನಿಜ, ಆದರೆ ಕತೆಯ ಪ್ರಾಚೀನತೆಯ ಅವಶೇಷಗಳು ಇವೇ ಆಗಿವೆ. ಯಾಕೆಂದರೆ 30 ಕಥಾ ಸಂಸ್ಕೃತಿ ಇವುಗಳಲ್ಲಿ ವಿವರಣೆಯೇ ಮುಖ್ಯವಾಗಿವೆ- ಸಾರ್ಥಕ ಮತ್ತು ಸಾಮಯಿಕ ವಿವರಣೆ. ಮನುಷ್ಯನು ಈ ವಿವರಣೆಗಳನ್ನು ಸುರಕ್ಷಿತವಾಗಿಟ್ಟು ಮುಂದಿನ ಜನಾಂಗಕ್ಕೆ ಕೇಳಿಸಲು ಬಯಸಿದ್ದ. ಆದಿಯ ಯುಗದಲ್ಲಿ ಶುದ್ಧ ಕಾವ್ಯ ಕೃತಿಗಳು ಮುಖ್ಯವಾಗಿರಲಿಲ್ಲ, ಇದ್ದರೂ ಅವು ಗೇಯ ಕಥನಗಳಾಗಿದ್ದವು. ಸುಮೇರಿಯನ್, ಇಜಿಪ್ತ, ಅಸ್ಸೀರಿ, ಬ್ಯಾಬಿಲೋನ್, ಹಿಟ್ಟೈಟ, ಅಥವಾ ಆರ್ಯ ಯಾವುದೇ ಆಗಿರಲಿ, ಅಥವಾ ನಂತರ ಸಿಗುವ ಇಜಿಪ್ತ ರಾಜವೃತ್ತಾಂತ, ಕ್ರೀಟ (ಯೂನಾನ್) ನಾಗರಿಕತೆಯ ಅನುವೃತ್ತ, ಅಥವಾ ಯೂನಾನೀ ಸಂವಾದ ಕತೆಗಳು ಅಥವಾ ಆರ್ಯಗೇಯ ಕತೆಗಳು, ಅಥವಾ ಚೀನೀಗದ್ಯಕಾವ್ಯ (ಫ್ಯೂ) ಅಥವಾ ಬ್ಯಾಬಿಲೋನಿಯನ್ ಲೋಕಕಥೆಗಳು ಹಿಟ್ಟೈಟ ಚರಿತ್ರೆ, ಅಥವಾ ಗಾನ ಮಧುರಗದ್ಯ, ಅಥವಾ ಆರ್ಯ ನೀತಿಕತೆಗಳು, ಅಥವಾ ಹಿಬ್ರೂ ಕತೆಗಳು (ಗಾದೆಗಳ ಹಿಂದೆ ನಿಶ್ಚಯವಾಗಿಯೂ ಅವುಗಳ ಸಾರ್ಥಕ ಘಟನಾ ಸಂದರ್ಭಗಳಿವೆ) ಅಥವಾ ಎಲ್ಲ ನಾಗರಿಕತೆಗಳಲ್ಲಿ ಸಮಾನರೂಪದಲ್ಲಿ ದೊರೆಯುವ ಪ್ರಸಂಗಗಳು. ಲೋಕೋತ್ತರ ಶಕ್ತಿಗಳಿಂದ ತುಂಬಿರುವ ಈ ಸಂಪೂರ್ಣ ವಿಶ್ವವು ಕತೆಗಳ ಸಹಾಯದಿಂದಲೇ ನಿಂತಿದೆ. ಅರ್ಥಗತ ಕವಿತೆಯು ಲೌಕಿಕವನ್ನು ಬಹುಮಟ್ಟಿಗೆ ಪಾರಲೌಕಿಕಗೊಳಿಸಿದರೆ, ಕತೆಗಳು ಪಾರಲೌಕಿಕತೆಗೆ ಲೌಕಿಕ ಆಧಾರಭೂಮಿಯನ್ನೊದಗಿಸುವ ಮಹತ್ವಪೂರ್ಣ ಭೂಮಿಕೆಯನ್ನು ನಿಭಾಯಿಸಿದವು. ಕೆಲವು ನಾಗರಿಕತೆಗಳು ಹೇಗಿವೆಯೆಂದರೆ, ಅವುಗಳ ಅಡಿಯಲ್ಲಿನ ವೃತ್ತಾಂತಗಳ ಅಡಿಪಾಯವನ್ನು ಎಳೆದು ಹಾಕಿದರೆ ಅವು ಸರಭರನೆ ಕುಸಿದು ಬೀಳುತ್ತವೆ. ಪ್ರಾಚೀನ ವಿಶ್ವವು ದೇವಿ ದೇವತೆಗಳಿಂದ, ಅರೆದೇವರು, ಬಲಶಾಲಿ ರಾಕ್ಷಸರು, ಮಂತ್ರಶಕ್ತಿಯುಕ್ತರಾದ ನರ-ನಾರಾಯಣ ಹಾಗೂ ಅಲೌಕಿಕ ಪಕ್ಷಿಗಳಿಂದ ತುಂಬಿದೆ. ಜಾದೂ, ರಹಸ್ಯ, ಮಂತ್ರ, ಶಾಪ, ವರದಾನ, ‘ಕರ್ಸೆಸ್’ ಆಶೀರ್ವಾದ ಮತ್ತು ಚಮತ್ಕಾರಗಳಿಂದ ತುಂಬಿದ ಈ ನಾಗರಿಕತೆಯಲ್ಲಿ ದೇವಿ, ದೇವತೆ, ನರಸಿಂಹ, ಗರುಡ, ಸರ್ಪ, ಸೂರ್ಯ, ಇಂದ್ರ, ವಜ್ರ, ವಾಯು, ನದಿ, ಆನೆ, ಹುಲಿ, ಹಂದಿ, ಪರ್ವತ, ಅಡವಿ, ಸರೋವರ, ಹೆಣ್ಣು, ಪುರುಷ, ಇರುವೆ, ಮೊಲ -ಎಲ್ಲವೂ ಇವೆ. ಎಲ್ಲವೂ ಒಂದಾಗಿ ಸೇರಿ ‘ಸೃಷ್ಟಿ’ಯನ್ನು ಸಂಬಾಳಿಸಿಕೊಂಡಿವೆ. ಅದು ಬೃಹತ್ಕಥೆಯ ಲೋಹಜಂಘನಾಗಿರಲಿ, ಬ್ಯಾಬಿಲೋನ್‍ಕತೆಯ ಎತ್ನಾ ಆಗಿರಲಿ-ಎರಡೂ ಗರುಡನನ್ನು ಬಳಸಿವೆ. (ಒಂದು ಪೈಶಾಚೀ ಭಾಷೆಯ ಕತೆಯ ಭಾರತೀಯ ಪಾತ್ರ, ಮತ್ತೊಂದು ಅಕ್ಕಾದಿ ಪುರಾಣಗಳ ಒಂದು ಕಥಾ ಪಾತ್ರ) ವಿಶ್ವಕಥಾಯಾತ್ರೆ 31 ಆದರೆ ಈ ಸಂಪೂರ್ಣ ಪುರಾತನ ಜಗತ್ತಿನಲ್ಲಿ ಪ್ರಚಲಿತವಿರುವ ಕತೆಗಳು -ಎಲ್ಲ ಸಂಸ್ಕೃತಿಗಳ ಮೂಲ ಸ್ರೋತ ಒಂದೇ ಆಗಿದೆ ಎಂಬ ಮಾತಿಗೆ ನಿಶ್ಚಯವಾಗಿ ಪ್ರಮಾಣವನ್ನು ಒದಗಿಸುತ್ತವೆ. ಎಲ್ಲಕ್ಕಿಂತ ಗಟ್ಟಿಯಾದ ಸಾಕ್ಷ್ಯವೆಂದರೆ ಜಲಪ್ರಳಯದ ಆ ಕತೆಗಳು -ಎಲ್ಲದರಲ್ಲಿಯೂ ಸಮಾನವಾಗಿವೆ. (ಚೀನಿ ಒಂದನ್ನು ಬಿಟ್ಟು) ಅದು ಜಿಉಸೂದ್ದು ಆಗಿರಲಿ, ಮನು ಆಗಿರಲಿ, ಅಥವಾ ಹಜರತ್ ನೂಹ !! ಮಾನವ ಗಾಥೆಯ ಉದ್ಭವ - ಮತ್ತು ಮೂಲಭೂತ ಪ್ರಶ್ನೆಗಳ ಸರಣಿ. ನಮ್ಮ ಮೊದಲ ಮೂಲ ಪುರುಷ (ಈ ವರೆಗೆ ಗೊತ್ತಿರುವ) ಗಿಲ್‍ಗಮೆಶ್ `ಮೃತ್ಯುವಿನಿಂದ ಬಿಡುಗಡೆ’ಗಾಗಿ ಚಡಪಡಿಸುತ್ತಿದ್ದಾನೆ. ಜಲಪ್ರಳಯದ ಸೃಷ್ಟಿ ಕತೆಗಳು ಮೃತ್ಯುವಿನ ಅನಂತರದ ಜೀವನದ ಕಾಮನೆಯಿಂದ ಓತಪ್ರೋತವಾಗಿದೆ. ಅಂದರೆ ಮತ್ತೆ ಅದೇ ಮೃತ್ಯುವಿನ ಮೇಲೆ ಗೆಲವು ಸಾಧಿಸುವ ಪ್ರಯತ್ನ. ಅದೇ ಮನು ಅಥವಾ ಮನುಷ್ಯ ಪ್ರತಿಯೊಂದು ಸಂಕಟ ಅಥವಾ ಸಂಹಾರದ ಅನಂತರ ಈ ಸೃಷ್ಟಿಯನ್ನು ರಕ್ಷಿಸುತ್ತ ಬಂದಿದ್ದಾನೆ. ಅವನು ಆದೇಶವನ್ನು ದೈವೀಶಕ್ತಿಗಳಿಂದ ಪಡೆಯಲಿ - ಪ್ರತಿಯೊಂದು ಯುಗದ ಪ್ರತಿಯೊಂದು ನಾಗರಿಕತೆಯ ನಾಯಕನು ಮನುಷ್ಯೋಚಿತ ಪ್ರಶ್ನೆಗಳನ್ನು ಕೇಳುತ್ತ ಬಂದಿದ್ದಾನೆ - ಅವನು ಗಿಲ್‍ಗಮೆಶ್ ಆಗಿರಲಿ ಅಥವಾ ಪ್ರೊಮಿಥ್ಯೂ, ಅಥವಾ ಸ್ವರ್ಗದಿಂದ ಅಮೃತವನ್ನು ತಂದ ಗರುಡ, ಅಥವಾ ಯಯಾತಿ ಅಥವಾ ಎತ್ನಾ, ಜನ್ಮದ ವ್ಯಾಖ್ಯೆಯನ್ನು ಮಾಡಲು ಇಚ್ಛಿಸುವ ಅದಪಾ, ಅಥವಾ ಮರಣದ ಹುಡುಕಾಟದಲ್ಲಿ ತೊಡಗಿರುವ ಯೂಡಿಥ್! ಅಥವಾ ಚೀನೀ ಜಲಪ್ರಳಯದ ನಾಯಕ (ಸದಾ ಲೌಕಿಕ-ಭೌತಿಕನಾಗಿರುವ) ಮತ್ತೆ ಹೇಳುತ್ತಾನೆ- ಈ ಜಲಪ್ಲಾವನವನ್ನು ನಾನು ಸಂಯಮಿಸಿದ್ದೇನೆ. ಅನ್ನ ಬೆಳೆಯುವುದಕ್ಕೆ ನಾನು ಹೇಳಿದ್ದೇನೆ. ಹಾಗೆ ನೋಡಿದರೆ ಇಂದಿನ ಸಂದರ್ಭದಲ್ಲಿ ಈ ಕತೆಗಳ ಚಹರೆಗಳು ಕೆಲವು ಸ್ತರದವು ಅನ್ನಿಸಿದರೆ ಅದರಲ್ಲಿ ಎತ್ತಲಾದ ಮೂಲಭೂತ ಪ್ರಶ್ನೆಗಳ ಅಖಂಡ ಸರಣಿ ಇಂದಿನವರೆಗೂ ನಡೆದುಕೊಂಡು ಬಂದಿದೆ. ವೇದವ್ಯಾಸ, ಹೋಮರ್, ಅರಿಸ್ಟೋಫೆನಿಸ್, ಈಸೋಪ, ಗುಣಾಢ್ಯ, ಓವಿಡ್, ಪೆಟ್ರೋನಿಯಸ್, ಲೂಸಿಯನ್, ಶೇಖಸಾದಿ ಮುಂತಾದವರ ದಾರಿಯಲ್ಲಿ ಡಾನ್ ಜುಆನ್ ಮ್ಯಾನ್ಯಯಲ್, ಚಾಸರ್, ಬೊಕಾಶಿಯೋ, ಪೋಗಿಯೋ ವರೆಗೆ, ಅವರ ಅನಂತರ ವಾಲ್ಟೇರ್, ಗೊಗೊಲ ಫ್ಲಾಬೆಯರ್, ಜೋಲಾ, ದಾಸ್ತೊವಸ್ಕಿ, ಮೂಲಕ ಹಾದು, ಚೆಖಾವ್, ಕಾಫ್ಕಾ, ಪ್ರೇಮಚಂದ, ಗಾರ್ಕಿ, ಲೂಸಾನ್, ಹಾಗೆಯೇ ಸಾತ್ರ್ರ, ಜೇಮ್ಸ್ಜಾಯ್ಸ್, ಕಮೂ, ಓ’ ಕೂನರ್, ಹಮಿಂಗ್ವೆ, ಬೆಕೆಟ್, ಮಂಟೋವರೆಗೆ.! 32 ಕಥಾ ಸಂಸ್ಕೃತಿ ಕತೆಯ ಚಲನೆ ಹಾಗೂ ಆದಿಮ ಸಂಸ್ಕೃತಿಯ ಅನುರಣನ ಈ ದೀರ್ಘಕಥಾಯಾತ್ರೆ, ಇಷ್ಟೊಂದು ವಿಚಿತ್ರ ನಾಗರಿಕತೆಗಳು, ಸಂಸ್ಕೃತಿಗಳು ಹಾಗೂ ಇತಿಹಾಸಗಳ ಯಾತ್ರೆಯಲ್ಲಿ ಹೊರಟಿರುವುದನ್ನು ನೋಡಿದರೆ ವಿಸ್ಮಿತವಾಗಿರಬೇಕಾಗುತ್ತದೆ. ಈ ಯುಗಗಳೇ ಆದಿಮ ಕತೆಗಳನ್ನು ಕೊಟ್ಟಿವೆ. ಅಕ್ಕಾದಿ (ಸುಮೇರಿಯನ್, ಅಸೀರಿಯನ್, ಬ್ಯಾಬಲೋನಿಯನ್, ಕ್ರಿ. ಪೂ. 3000 ವರ್ಷಕ್ಕೂ ಮೊದಲು) ನಾಗರಿಕತೆಯು ಅದಮ್ಯ ಶೌರ್ಯ ಹಾಗೂ ಮನುಷ್ಯನ ಜೀವಿತದ ಕಾವ್ಯ ಕತೆಗಳನ್ನು ಕೊಟ್ಟಿದೆ. ಪ್ರಾಚೀನ ಸೂರ್ಯೋಪಾಸಕ ಇಜಿಪ್ತ (ಕ್ರಿ.ಪೂ 3000 ವರ್ಷಕ್ಕೂ ಮೊದಲು) ವೃತ್ತಾಂತ, ಚರಿತ್ರ, ಹಾಗೂ ಫಂತಾಸಿ (ನೋವಿಪ್ಲೂಪ್ ಮಾಂಜಿಯ ಕತೆ) ಯಜ್ಞನಿರತ ಆರ್ಯರು (ಕ್ರಿ.ಪೂ .3000 ವರ್ಷ)ಕೊಟ್ಟಿರುವ ಛಂದೋಬದ್ಧ ಆಖ್ಯಾನ, ಹಾಗೂ ಸಂವಾದ ಕತೆಗಳು, ಚೀನೀ ನಾಗರಿಕತೆ (ಕ್ರಿ. ಪೂ 2000ವರ್ಷ) ನಮಗೆ ಕೊಟ್ಟಿದ್ದು, ಗದ್ಯಕಾವ್ಯ, ಛಂದೋಬದ್ಧ ಆಖ್ಯಾಯಿಕೆ, ಮತ್ತು ವೃತ್ತ, (ಶಿಶಿರ ಮತ್ತು ವಸಂತದ್ದು) ಹಿಟ್ಟ್ವಾಟ್ ನಾಗರಿಕತೆಯು (ತುರ್ಕಿಯಲ್ಲಿನ ಆ ಯುಗ ವಂಶಜರ ಸಭ್ಯತೆ ಕ್ರಿ.ಪೂ. 2800 ವರ್ಷ) ಇಂದ್ರ, ವರುಣ ಮಿತ್ರ ಮುಂತಾದ ಋಗ್ವೇದೀಯ ದೇವತೆಗಳನ್ನು ಸಾಕ್ಷಿಯನ್ನಾಗಿ ಮಾಡಿ ರಾಜವೃತ್ತ, ಆಖ್ಯಾನ, ಪತ್ರ ಕಥೆಗಳನ್ನು ಕೊಟ್ಟಿದೆ. ಒಂದು ಪತ್ರ ಕತೆಯಂತೂ ತುಂಬ ಸೊಗಸಾಗಿದೆ - “ರಾಜಾ ಶುಪ್ಪಿಲುಲೀನಿ ಉಮಾಶ್‍ನಿಗೆ ಇಜಿಪ್ತನ ರಾಣಿ ಬರೆದಿದ್ದಾಳೆ- ಹಿಟ್ಟ್ವಾಟ್ ರಾಜನು ತನ್ನ ಒಬ್ಬ ಪುತ್ರನನ್ನು ಅವಳ ಪತಿಯಾಗಲು ಕಳಿಸಿಕೊಡಬೇಕು. ಕೆಲಸಮಯದ ಅನಂತರ ರಾಜನು ಒಬ್ಬ ಮಗನನ್ನು ಕಳಿಸಿದ, ಆದರೆ ಅವನನ್ನು ಇಜಿಪ್ತಿಯನ್ನರು ಕೊಂದು ಹಾಕಿದರು.” (ಜರ್ಮನ್ ಪುರಾತತ್ವವೇತ್ತ ಹ್ಯೂಗೋ ವಿಂಕ್ಲರ್ ಅಭಿಪ್ರಾಯದಂತೆ) ಇತ್ತ ಆರ್ಯ ಸಭ್ಯತೆಯಲ್ಲಿ ರಾಮಕಥಾ ಮತ್ತು ಕೃಷ್ಣಕಥಾ ತುಂಬ ಮಹತ್ವ ಪೂರ್ಣವಾದವುಗಳು. (ಧಾರ್ಮಿಕ ಹಾಗೂ ಅನ್ಯ ಕಾರಣಗಳಿಗಾಗಿ ಕೂಡ) ಗ್ರೀಕ ಸಭ್ಯತೆಯಲ್ಲಿ (ಕ್ರಿ.ಪೂ. 1000 ವರ್ಷ) ಕುರುಬನ ಗೇಯ ಗಾಥೆಗಳು ಬರುತ್ತವೆ. (ಕ್ರೀಟ ಸಭ್ಯತೆ ಕ್ರಿ.ಪೂ.2500 ವರ್ಷಗಳಿಂದ ನಡೆದು ಬರುತ್ತಿದೆ) ಯುಗಲವಿವರಣ, ಸಂವಾದ ವೃತ್ತ, ನಾಟಕದ ಕತೆಗಳು, ವ್ಯಾಖಾನ ಮತ್ತು ಇತಿಹಾಸ ಕತೆಗಳು. (ಹಿರೋಡೋಟಸ್‍ನವು) ಹಿಬ್ರೂ ನಾಗರಿಕತೆ (ಕ್ರಿ.ಪೂ. 1000 ವರ್ಷ) ಯು ವ್ರತ-ಹಬ್ಬಗಳ ನಿಯಮಗಳನ್ನು ಮಾಡಿದ್ದು, ಅವುಗಳಲ್ಲಿ ವಿಶ್ವಾಸ ಹುಟ್ಟಿಸಲು ಕತೆಗಳನ್ನು ಅಳವಡಿಸಿದೆ. ಮತ್ತು ಬೈಬಲ್‍ಗೆ ತನ್ನ ಸಶಕ್ತ ಲೋಕಕತೆಗಳ ಪರಂಪರೆಯನ್ನು ಕೊಟ್ಟಿದೆ. ಆಗಲೇ ಭಾರತದಲ್ಲಿ ಗುಣಾಢ್ಯನ ‘ಬೃಹತ್ಕಥೆ’ ಬರುತ್ತದೆ. ಮತ್ತು ಭಾರತೀಯ ಆರ್ಯ ವಿಶ್ವಕಥಾಯಾತ್ರೆ 33 ಪ್ರತಿಭೆಯ ಕತೆಗಳ ಮೊದಲ ವಿಶುದ್ಧ ರೂಪವು ‘ಹಿತೋಪದೇಶ’ (ಡಾ|| ವಾಸುದೇವಶರಣ ಅಗ್ರವಾಲ ಹಿತೋಪದೇಶವು ಪಂಚತಂತ್ರದಿಂದ ಪ್ರಭಾವಿತವಾದದ್ದೆಂದು ಭಾವಿಸುವರಾದರೂ ಅದು ಬಹಳ ಅನಂತರದ್ದು) ವಿಷ್ಣುಶರ್ಮನ ‘ಪಂಚತಂತ್ರ’ ವನ್ನು ಪ್ರಸ್ತುತ ಪಡಿಸುತ್ತದೆ. ಇವು ಆರ್ಯರ ಲೌಕಿಕ ಕತೆಗಳು, ಮತ್ತು ಬಹುಶ: ಇವುಗಳ ಮೌಖಿಕ ಧಾರೆಯು ತುಂಬ ಮೊದಲಿನಿಂದ ನಡೆದು ಬಂದಿರಬಹುದು. ಭಾರತ ವಿಶ್ವದ ಮೊದಲ ಕಥಾಪೀಠ ‘ಪಂಚತಂತ್ರ’ ಹಾಗೂ ‘ಹಿತೋಪದೇಶ’ದ ಕತೆಗಳು ಭಾರತವಷ್ಟೇ ಅಲ್ಲ, ವಿಶ್ವವನ್ನೇ ಇಡಿಯಾಗಿ ಆಕ್ರಮಿಸಿಕೊಳ್ಳುತ್ತವೆ. ಮತ್ತು ಅದರಿಂದ ನಿಶ್ಚಯವಾಗಿಯೂ ಭಾರತವು ವಿಶ್ವದ ಮೊದಲ ಕಥಾಪೀಠವಾಗುತ್ತದೆ. ಭಾರತೀಯ ಕಥಾಪೀಠಕ್ಕೆ ಇನ್ನಷ್ಟು ಮಹತ್ವ ಬರುವುದು ಜೈನ ಆಗಮ ಕತೆಗಳಿಂದ, ಜಾತಕಗಳಿಂದ ಥೆರಿಗಾಥಗಳಿಂದ. ಇಲ್ಲಿಂದಲೇ ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕಿನಲ್ಲಿ ಈ ಮಹಾನ್ ಕಥಾಪೀಠದ ಕತೆಗಳು ಹರಡತೊಡಗುತ್ತವೆ. ಭೂಮಧ್ಯ ಸಾಗರದಿಂದ ಉತ್ತರ ಆಫ್ರಿಕಾ, ಸ್ಪೇನ್, ಇಟಲಿ, ಗ್ರೀಸ್ ಮತ್ತು ಪೂರ್ಣಮಧ್ಯ ಯುರೋಪನಲ್ಲಿ ಪಂಚತಂತ್ರ ಹಾಗೂ ಹಿತೋಪದೇಶದ ಕಥಾ ಸಂಸ್ಕೃತಿ ಹರಡುತ್ತದೆ. ಹಾಗೆಯೇ ಜಾತಕ ಹರಡುತ್ತದೆ. ‘ಧರ್ಮ’ ವನ್ನು ಒಳಗೊಂಡ ಕತೆಗಳೂ ಪ್ರಸ್ತುತಗೊಂಡಿವೆ. ಗುಣಾಢ್ಯನ ಲೌಕಿಕ ಕತೆಗಳು ತುಂಬ ಪ್ರಾಚೀನವಾಗಿದ್ದು, ಪೈಶಾಚಿ ಭಾಷೆಯಲ್ಲಿದ್ದುದರಿಂದ ಕತ್ತಲೆಯಲ್ಲಿ ಉಳಿದವು. ಅತ್ತ ಭೂಮಧ್ಯ ಸಾಗರದ ಹತ್ತಿರದ ನಾಗರಿಕತೆಗಳಲ್ಲಿ ಹೊರೆಸ್, ಒವಿಡ್, ಡಾಂಟೆ (ಲ್ಯಾಟಿನ್) ಕವಿಗಳ ರೂಪದಲ್ಲಿ ಉದಿಸುತ್ತಾರೆ- ನಂತರದ ಕತೆಗಾರರಿಗೆ ಪ್ರೇರಣೆಯಾಗುತ್ತಾರೆ. ಇಲ್ಲಿಯವರೆಗೆ ಬರುತ್ತ ಬರುತ್ತ ನಾವು ಕ್ರಿ.ಶ.ದ ಉದಯ ಕಾಲದವರೆಗೆ ಬಂದು ತಲುಪುತ್ತೇವೆ. ಮೊದಲ ಶತಮಾನದಲ್ಲಿ ಯುರೋಪ್ ತನ್ನ ಮೊದಲ ಸಮರ್ಥ ಕತೆಗಾರನಿಗೆ ಜನ್ಮ ಕೊಡುತ್ತದೆ- ಪೆಟ್ರೋನಿಯಸ್! ಎಪೂಲಿಯಸ್ ಕೂಡ ಅದೇ ಸಮಯದಲ್ಲಿ ಬರೆಯಲು ಶುರುಮಾಡುತ್ತಾನೆ. ಆದರೆ ಕತೆಯರೂಪದ ದೃಷ್ಟಿಯಿಂದ ಪೆಟ್ರೋನಿಯಸ್‍ನನ್ನು, ಸಂಕ್ಷಿಪ್ತತೆಯ ಸಲುವಾಗಿ ಮಾರ್ಶಲ್‍ನನ್ನು ಸ್ವೀಕರಿಸುವುದು ಅನಿವಾರ್ಯವಾಗುತ್ತದೆ. ಪೆಟ್ರೋನಿಯಸ್‍ನ ಪ್ರತಿಭೆಯು ತನ್ನ ಕಾಲದಲ್ಲಿ ಹರಡಿದ ಮೋಸದ ಮೇಲೆ ಬೆಳಕು ಚೆಲ್ಲುತ್ತದೆ. ಮತ್ತು ರೂಢಿಗತ ಮೌಢ್ಯ-ತ್ಯಾಜ್ಯಗಳ ಬಗೆಗೆ ತುಂಬ ಸಶಕ್ತ ವಿನೋದ ಕತೆಗಳನ್ನು ಬರೆದನು. ಅದೇ ಶತಮಾನದ ಜೊವೆನಲ್ ಮೊದಲ ವ್ಯಂಗ್ಯಕಾರನೆಂದು, ಸೆನೆಕಾ ವಿಷಾದ ಕತೆಗಾರನೆಂದು 34 ಕಥಾ ಸಂಸ್ಕೃತಿ ಖ್ಯಾತರಾದರು. ಮೊದಲನೆ ಶತಮಾನ ಮುಕ್ತಾಯವಾಗುತ್ತಿದ್ದಂತೆ, ಪಶ್ಚಿಮದ ಕತೆಯ ಅಸ್ತಿವಾರವನ್ನು ಈ ಲೇಖಕರು ಹಾಕಿದರು. ಈ ಪ್ರಖ್ಯಾತ ಪ್ರತಿಭೆಯ ಅನಂತರ ಸುಮಾರು ಹತ್ತು ಶತಮಾನಗಳವರೆಗೆ ಭಾರತೀಯ ಕಥಾ ಸಂಸ್ಕೃತಿಯ ಪ್ರಚಾರ- ಪ್ರಸಾರ ಮಧ್ಯಏಶಿಯಾವನ್ನು ಹಾಯ್ದು ಯುರೋಪವರೆಗೆ ಹೋಯಿತು. ಪ್ರಾಚೀನ ಮೊದಲ ಮನುಷ್ಯ ಗಿಲಗಮೆಶ್ ಕಳೆದುಕೊಂಡ ‘ಅಮೃತ’ವನ್ನು ಇರಾನ್ ಸಮ್ರಾಟ್ ಖುಸುರೋನ ರಾಜವೈದ್ಯ ಹಾಗೂ ಮಂತ್ರಿ ಬುರ್ಜುಯೆ ಮತ್ತೊಮ್ಮೆ ಹುಡುಕಿದ, ಮತ್ತು ಹೇಳಿದ. ‘ಪಂಚತಂತ್ರವೆಂಬ ಹೆಸರಿನ ಗ್ರಂಥವೇ ಅಮೃತ.’ ಅವನು ನಿಜವಾಗಿಯೂ ಭಾರತಕ್ಕೆ ಸಂಜೀವಿನಿಯನ್ನು ಹುಡುಕಿಕೊಂಡು ಬಂದಿದ್ದ, ಮತ್ತು ‘ಪಂಚತಂತ್ರ’ವನ್ನು ತೆಗೆದುಕೊಂಡುಹೋದ (ಇಸವಿ 550) ಹಿಬ್ರೂ ಟಾಲಮೂಡ್‍ನ ಬೋಧಕತೆಗಳ ಜೊತೆಜೊತೆಗೆ ಲೋಕಕತೆಗಳ ಒಂದು ಸಶಕ್ತ ಪ್ರವಾಹವು ಈ ಶತಮಾನಗಳಲ್ಲಿಯೇ ಹರಿಯುತ್ತಲಿತ್ತು. ಚೀನಿ ಕತೆಗಳ ವಿಚಿತ್ರ ಜಗತ್ತು ತೆರೆದುಕೊಳ್ಳುತ್ತಿತ್ತು. ಜಪಾನ್‍ನಲ್ಲಿ ರಾಜಮನೆತನದ ವಿಲಾಸಕತೆಗಳನ್ನು ಬರೆಯಲಾಗುತ್ತಿತ್ತು. ಪಂಚತಂತ್ರದ ಅನುವಾದ ಪಹ್ಲವಿ ಭಾಷೆಯಲ್ಲಿ ಆಗುತ್ತ ಮಧ್ಯ ಏಶಿಯಾ, ಅರಬ ದೇಶಗಳು, ಉತ್ತರ ಆಫ್ರಿಕಾ, ಸ್ಪೇನ್‍ದವರೆಗೆ ತಲುಪುತ್ತದೆ. ಇನ್ನೊಂದು ಕತೆ ಗ್ರೀಕ್‍ನಲ್ಲಿ ಅನುವಾದವಾಗುತ್ತದೆ, ರಶ್ಯಾ-ಜರ್ಮನಿಯಲ್ಲಿ ಹಾಯ್ದು ಯುರೋಪನ್ನು ತಲುಪುತ್ತದೆ. ಇಂಗ್ಲೆಂಡ್‍ನಲ್ಲಿ ಶೇಕ್ಸ್‍ಪಿಯರನ ಉದಯಕ್ಕೆ ಮುಂಚೆ ಭಾರತೀಯ ಪ್ರತಿಭೆಯ ಈ ಕೊಡುಗೆ ಸ್ಥಾಪಿತವಾಗುತ್ತದೆ. ಹತ್ತು ಶತಮಾನಗಳವರೆಗೆ ಭಾರತೀಯ ಕಥಾಪೀಠವು ತನ್ನ ಕಥಾ ಸಂಸ್ಕೃತಿಯನ್ನು ಹಬ್ಬಿಸುತ್ತ ಇರುತ್ತದೆ. ಅರಬ್ಬೀ ಕತೆಗಳು, ಇದರಿಂದ ಪ್ರಭಾವಿತ ಅಥವಾ ಪ್ರೇರಿತವಾದವು. ಇದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಅರಬರು ಆನೆ, ನವಿಲು, ನರಿ, ಹುಲಿ ಮುಂತಾದ ಪ್ರಾಣಿಗಳ ಪರಿಚಯವನ್ನು ಭಾರತೀಯ ಕತೆಗಳಿಂದಲೇ ಪಡೆದರು ಹಾಗೂ ಅಲ್ಲಿನ ಕತೆಗಳಲ್ಲಿ ಮತ್ತೆ ಮತ್ತೆ ಬರುವ ಇವು ಅಲ್ಲಿ ದೊರೆಯುವುದಿಲ್ಲ. 12ನೇ ಶತಮಾನಕ್ಕೆ ಬರುತ್ತಿದ್ದಾಗ ಈ ಕಥಾ ಸಂಸ್ಕೃತಿಯ ಸಂಜೀವಿನಿಯನ್ನು ವಿದೇಶೀ ಆಕ್ರಮಣದ ಸರ್ಪವು ಕಸಿದುಕೊಂಡಿತು. 13ನೇ ಶತಮಾನದಲ್ಲಿ ಸ್ಪೇನ್, ಒಂದು ಅತ್ಯಂತ ಮಹತ್ವದ ಪ್ರತಿಭೆಗೆ ಜನ್ಮವಿತ್ತಿತು. - ಡಾ|| ಜುಆನ್ ಮ್ಯಾನ್ಯುಅಲ್. ಮ್ಯಾನ್ಯುಅಲ್‍ನಿಗೆ ರಚನೆಗೆ ಪ್ರೇರಣೆ ದೊರಕಿದ್ದು ಭಾರತೀಯ ಕತೆಗಳಿಂದಲೇ. ಆದರೆ ಇದರೊಂದಿಗೆ ಅವನು ಮುಂದಿನ ಶತಮಾನದ ಕತೆಗಳಿಗೆ ಒಂದು ಸಶಕ್ತ ಸಾಹಿತ್ಯ ಪ್ರಕಾರದ ರೂಪವನ್ನು ಸ್ಥಾಪಿಸಬಲ್ಲ ದೃಷ್ಟಿಗೆ ಜನ್ಮವಿತ್ತನು. ವಿಶ್ವಕಥಾಯಾತ್ರೆ 35 ಧರ್ಮ-ರೋಮನ್ಸ್, ರಾಜನೀತಿಯ ವ್ಯೂಹ, ಮತ್ತು ಕಥನಕಲೆಯ ವಿಕಾಸ. ಮಧ್ಯಕಾಲೀನ ಯುಗಗಳಲ್ಲಿ (13 ರಿಂದ 16ನೇ ಶತಮಾನ) ಮಠಗಳು ಮತ್ತು ಸಾಮಾಜಿಕ ಮೌಲ್ಯಗಳ ಸಮಾಜದ ನಡುವೆ ಭಾರೀ ಸಂಘರ್ಷ ನಡೆಯಿತು. ಧರ್ಮಸತ್ತೆಯನ್ನು ಆಗ ಕತೆಗಳೇ ಕಿತ್ತೆಸೆಯಲು ಪ್ರಾರಂಭಿಸಿದವು ಮತ್ತು ಇಟಲಿಯಲ್ಲಿ ಬೊಕ್ಯಾಶಿಯೋನಿಗೆ ಜನ್ಮ ಕೊಟ್ಟಿತು. ಪೋಗಿಯೋ ಮತ್ತು ಸ್ಟ್ರೆಪಕೋಲಾ ಕೂಡ ಅದೇ ಸಮಯದಲ್ಲಿ ಬಂದರು. ಮತ್ತು ಅತ್ತ ಛಾಸರ್‍ನು ಅದನ್ನು ಸಮೃದ್ಧಗೊಳಿಸಿದನು. (ತನ್ನ ಕಾವ್ಯ-ಕಥೆಗಳ ಮೂಲಕ) ಆ ಕಾಲದಲ್ಲಿ ರೋಮ್ ಧರ್ಮದ ದೊಡ್ಡ ಕೇಂದ್ರವಾಗಿತ್ತು ಅಲ್ಲಿಯೇ ಕತೆಗಾರರು ಮನುಷ್ಯನ ಸ್ವತಂತ್ರತೆಗಾಗಿ (ಧರ್ಮದಿಂದ) ತಮ್ಮ ಪ್ರತಿವಾದವನ್ನು ಅಂಕಿತಗೊಳಿಸಿದ್ದರು. ಧಾರ್ಮಿಕ ಅಸಹಿಷ್ಣುತೆ, ಕರ್ಮಕಾಂಡ, ಜಡತೆ, ಹಾಗೂ ಧರ್ಮ ಲಂಡತನವನ್ನು ಹೊರಗೆಳೆಯುವಲ್ಲಿ ಆ ಕಾಲದ ಕತೆಗಳು ಕೊಡುಗೆ ನೀಡಿದವು. ಅತ್ತ ಫ್ರಾನ್ಸ್‍ನಲ್ಲಿ (16ನೇ ಶತಮಾನದ ಪ್ರಾರಂಭ) ಆಗಷ್ಟೇ ರೊಮ್ಯಾಂಟಿಕ ಯುಗ ಪ್ರಾರಂಭವಾಗಿತ್ತು. ಮತ್ತು ಮಾರ್ಗರೇಟಳು (ನೆವೆಯರ್‍ನರಾಣಿ) ಅದ್ಭುತ ಪೌರಾಣಿಕ ಕತೆಗಳನ್ನು ಬರೆದಳು. 16-17 ನೇ ಶತಮಾನದಲ್ಲಿ ಮತ್ತೊಂದು ಪ್ರಯಾಣವಾಯಿತು. ಈ ಶತಮಾನಗಳು ರಾಜನೈತಿಕ ಚಂಚಲತೆ, ದಿಕ್ಕುತಪ್ಪುವಿಕೆ, ಮೋಹಭಂಗ ಮತ್ತು ರಾಜನೈತಿಕ ಅಧಿಕಾರದ ಮೂರ್ಖತನದ ಸಂಸ್ಕೃತಿಯದಾಗಿದ್ದವು. ಇದು ಸರ್ವಾಂಟಿಸ್‍ನಂತಹ ಕತೆಗಾರರನ್ನು ಸೃಷ್ಟಿಸಿತು. ಅವನು ರಾಜನೀತಿಯ ಡಾಂಭಿಕತೆಯನ್ನು ಬಯಲಿಗಿಟ್ಟನು. ಸರ್ವಾಟಿಸ್‍ನ ಯುಗದ ಪರಿಸ್ಥಿತಿಗಳ ಸಾಮ್ಯವನ್ನು ಇಂದು ನಮ್ಮ ದೇಶದಲ್ಲಿಯೇ ಕಾಣಬಹುದಾಗಿದೆ. (ಪರಸಾಯೀ ಮತ್ತು ಶರದ ಜೋಶಿ ಅವರ ಲೇಖನದ ರೂಪದಲ್ಲಿ) ಡಾನ್‍ಕ್ವಿಗ್ಸೋಟ್‍ನಂತಹ ಕಥಾನಾಯಕನ ಕತೆಯು ತನ್ನ ಕಾಲದ ವಿಸಂಗತಿಯನ್ನು ಹಾಗೂ ಡಂಬಾಚಾರವನ್ನು ಹಿಂಡಿ ಎದುರಿಗೆ ಇಡುತ್ತದೆ. 18ನೇ ಶತಮಾನವು ಔದ್ಯೋಗಿಕ ಕ್ರಾಂತಿಯದು. ಇಲ್ಲಿಂದಲೇ ಆಧುನಿಕ ಕಾದಂಬರಿಯ ಪ್ರಾರಂಭವು ಫೀಲ್ಡಿಂಗ್ ಹಾಗೂ ರಿಚರ್ಡ್‍ಸನ್ ಮೂಲಕ ಆಗುತ್ತದೆ. ರಿಚರ್ಡ್‍ಸನ್‍ನಿಗೆ ಪ್ರಥಮ ಕಾದಂಬರಿಕಾರನ ಗೌರವ ಪ್ರಾಪ್ತವಾಗಿದೆ. ಅವನು ನೇರವಾಗಿ ಫ್ರಾನ್ಸ್‍ನ ರೊಮ್ಯಾಂಟಿಕ್ ಧಾರೆಯಿಂದ ಪ್ರಭಾವಿತನಾಗಿ ‘ಪಮೇಲಾ’ ಮತ್ತು ನಾಲ್ಕು ಸಾವಿರ ಪುಟಗಳ ‘ಕ್ಲೆರಿಸಾಹಾರ್ಲೋ’ ಬರೆಯುತ್ತಾನೆ. ಪತ್ರ ಶೈಲಿಯಲ್ಲಿ ಈ ಕಾದಂಬರಿಯನ್ನು ವರ್ಷಗಟ್ಟಲೆ ಬರೆಯಲಾಗಿದೆ. ಈ ಕಾದಂಬರಿಯು ರೊಮ್ಯಾಂಟಿಕ್ ಹಾಗೂ ಗದ್ಗದಿತವಾಗುವ ಭಾವುಕತೆ ಎರಡರ 36 ಕಥಾ ಸಂಸ್ಕೃತಿ ಮಿಶ್ರಣವಾಗಿದೆ. ಇದನ್ನು (ಕೆರಿಸಾಹಾರ್ಲೋ) ಬರೆಯುತ್ತ ಬರೆಯುತ್ತ ಸ್ವಯಂ ರಿಚರ್ಡ್‍ಸನ್ ಅಳುತ್ತಿದ್ದನು. ಬುಲದುಂಗ್ಸರೋಮಾ : ತುಂಡಾಗುತ್ತಿರುವ ಕತೆ ಮತ್ತು ಅಖಂಡ ನಾಯಕನ ಮರಳುವಿಕೆ. ಫೀಲ್ಡಿಂಗ್‍ನ ಕಾದಂಬರಿ ಹೆಚ್ಚು ಪ್ರೌಢ, ಚಿಂತನಶೀಲ, ಹಾಗೂ ಸಾಹಸೀ ಕಥಾನಕದ್ದಾಗಿತ್ತು. ಫೀಲ್ಡಿಂಗ್‍ನ ಮಾರ್ಗದ ವಿಕಾಸವು ಜರ್ಮನಿ (ಹರ್‍ಮನ್‍ಹೇಸ್) ಮತ್ತು ನಂತರದಲ್ಲಿ ಮಾರ್ಕಟ್ವೇನ್ ಮೂಲಕ ಅಮೇರಿಕಾದಲ್ಲಿ ಆಯಿತು. ಜರ್ಮನಿಯಲ್ಲಿ ಒಂದು ಹೊಸ ಪ್ರಕಾರಕ್ಕೆ ಜನ್ಮಕೊಡಲಾಯಿತು, ಅದನ್ನು ‘ಬುಲದುಂಗ್ಸರೋಮಾ’ ಎಂದು ಹೇಳಲಾಯಿತು. ಬುಲದುಂಗ್ಸರೋಮಾದಲ್ಲಿ ಕತೆಯು ಕತ್ತರಿಸುತ್ತ ಹೋದರೂ ನಾಯಕನು ಯಾವಾಗಲೂ ಅಖಂಡಿತನಾಗಿ ಮರಳಿಬರುತ್ತಾನೆ. ಮಾರ್ಕಟ್ವೇನ್ (ಈಧಾರೆಯನ್ನು ಎಲ್ಲಕ್ಕಿಂತ ಹೆಚ್ಚು ಸಮೃದ್ಧಗೊಳಿಸಿದವನು, ಅಮೇರಿಕದಲ್ಲಿ ಕಥಾ ಸಾಹಿತ್ಯದ ಸರಿಯಾದ ಅಸ್ತಿವಾರ ಹಾಕಿದನು) ನ ಕಾದಂಬರಿ ‘ಹಕಲಬೆರಿಫಿನ್’ ಈ ವಿಧಾನದ ಅದ್ಭುತ ಮಾದರಿ. ಇಲ್ಲಿ ಮೌಲ್ಯಗಳು ಮಹತ್ವದವು, ಮನುಷ್ಯನೂ ಮಹತ್ವದವನು, ಆದರೆ ಕತೆ ಅಷ್ಟೊಂದಲ್ಲ - ಈ ಕಾದಂಬರಿ ಅನುಭವದ ಶೋಧ ಯಾತ್ರೆ. 19ನೇ ಶತಮಾನದಲ್ಲಿ ಕಥಾ ಕ್ಷೇತ್ರದಲ್ಲಿ ಮೂವರು ಮಹಾನ್ ಪ್ರತಿಭೆಗಳು ಬರುತ್ತಾರೆ- ಗೋಗೊಲ್, ಬಾಲ್ಜಾಕ್, ಮತ್ತು ಪೊ ಮೊದಲನೆಯವನು ರಶಿಯದಲ್ಲಿ, ಎರಡನೆಯವನು ಫ್ರಾನ್ಸ್‍ನಲ್ಲಿ, ಮೂರನೆಯವನು ಅಮೇರಿಕದಲ್ಲಿ ಜನಿಸಿದರು. ಅನುಭವದ ಶೋಧಯಾತ್ರೆಯ ನೆಲೆಯಲ್ಲಿ ಈ ಮೂವರು ಕತೆಗಾರರು ಸಿಗುತ್ತಾರೆ. ಗೋಗೊಲ ಅನುಭವವನ್ನು ಕಾಲದ ವಾಸ್ತವದೊಂದಿಗೆ ಜೋಡಿಸುತ್ತಾನೆ. ಬಾಲ್ಜಾಕ್ ವಾಸ್ತವದ ಕತ್ತಲೆಯನ್ನು ಸೀಳುತ್ತ ಅಪ್ರಿಯ ವಾಸ್ತವದ ಸ್ತರದವರೆಗೆ ಒಯ್ಯುತ್ತಾನೆ. ಮತ್ತು ಪೋ ಆಂತರಿಕ ರೋಮಾನ್ಸ್‍ನತ್ತ ಹೊರಳುತ್ತಾನೆ. ಈ ಕತೆಗಾರರಿಗೆ ಓದುಗರ ಕೊರತೆಯಿರಲಿಲ್ಲವೆಂಬುದು ಸ್ಪಷ್ಟ. ಯಾಕೆಂದರೆ ಸಂಪೂರ್ಣ ಯುರೋಪನಲ್ಲಿ ಓದುಗರ ಸಂಖ್ಯೆ ದಿನೇ ದಿನೇ ವೃದ್ಧಿಯಾಗುತ್ತಿತ್ತು. ರಿಚರ್ಡಸನ್, ಫೀಲ್ಡಿಂಗ್ ಮತ್ತು ಅವನ ನಂತರದ ಕಾದಂಬರಿಕಾರರು ಮತ್ತು 19ನೇ ಶತಮಾನದ ಆರಂಭದ ಕಥಾಲೇಖಕರು ಧಾರಾವಾಹಿಕ ಕಾದಂಬರಿಗಳಿಂದ ಮಾರುಕಟ್ಟೆಯನ್ನು ತುಂಬಿಬಿಟ್ಟರು. ಅದನ್ನು ಓದದಿರುವುದು ಅಸಭ್ಯವೆಂದು ಭಾವಿಸಲಾಗುತ್ತಿತ್ತು. ವಿಶ್ವಕಥಾಯಾತ್ರೆ 37 ಮತ್ತೆ ಮೂವರು ವಿಶ್ವಕಥಾ ಸಾಹಿತ್ಯದ ಕ್ಷಿತಿಜದಲ್ಲಿ ಹೊಳೆಯುವ ನಕ್ಷತ್ರಗಳಂತೆ ಮೂಡಿಬರುತ್ತಾರೆ. ಗೋಗೊಲ ಮೊದಲ ವಾಸ್ತವವಾದಿ. ಸಾಮಂತ ಯುಗದ ಮುಕ್ತಾಯದ ರಚನಾತ್ಮಕ ಘೋಷಣೆಯನ್ನು ತನ್ನ ಕಾಲದ ಸಂದರ್ಭದಲ್ಲಿ ನಿರೀಕ್ಷೆ ಮಾಡುತ್ತಾನೆ. ಮತ್ತು ವಾಸ್ತವವನ್ನು ಮೀರಿದ ವಾಸ್ತವವನ್ನು ಕಾಣುತ್ತಾನೆ. ಬಾಲ್ಜಾಕ್ ಧೂಮಕೇತುವಿನಂತೆ ಉಜ್ವಲವಾಗಿ ಉರಿಯುತ್ತ ಉರಿಯುತ್ತ ಉರಿಸುತ್ತ ಹೋಗುತ್ತಾನೆ. ಪೋ ನಲ್ಲಿ ಈ ಇಬ್ಬರಿಗಿಂತಲೂ ಕಲ್ಪನಾ ಶೀಲತೆಯಿತ್ತು. ಆದರೆ ಅವನ ಜಗತ್ತು ವಿಕ್ಷಿಪ್ತತೆ, ಭಯ, ನಾಟಕೀಯತೆ ಮತ್ತು ಆಕಸ್ಮಿಕತೆಯಿಂದ ತುಂಬಿಹೋಯಿತು. ಅನಂತರದ ಶತಮಾನದಲ್ಲಿ ಪತ್ತೇದಾರಿ ಜಗತ್ತಿಗೆ ಪೀಠಿಕೆಯಾಯಿತು. ಆಧುನಿಕ ಯುಗದಲ್ಲಿ ಮೂರು ಕಥಾವೇದಿಕೆಗಳು ಸ್ಥಾಪಿತವಾದವು- ರಷ್ಯಾ, ಅಮೇರಿಕಾ ಮತ್ತು ಫ್ರಾನ್ಸ್. ನಕ್ಷತ್ರ ತಜ್ಞನು ಖಗೋಲವನ್ನು ಪರೀಕ್ಷಿಸುವಂತೆ, ಶತಮಾನಗಳಿಂದ ಫ್ರಾನ್ಸ್ ವೈಚಾರಿಕ ವಿಕಾಸವನ್ನು ಅದೇರೀತಿ ದಾಖಲಿಸುತ್ತಲಿತ್ತು. ಫ್ರಾನ್ಸ್ ಪ್ರತಿಭೆಯು ಕತೆಯ ಹಿಂದೆ ಅಡಗಿರುವ ವಿಚಾರ ತತ್ವವನ್ನು ಎಲ್ಲಕ್ಕಿಂತ ಮೊದಲು ಶೋಧಿಸಿತು. ಯಾಕೆಂದರೆ ಫ್ರಾನ್ಸ್‍ನ ಬೌದ್ಧಿಕ ಜನರು ‘ವಿಚಾರಗಳ ಇತಿಹಾಸ’ ದ ಬಗ್ಗೆ ಯಾವಾಗಲೂ ಎಚ್ಚರವಾಗಿರುತ್ತಾರೆ. ಕತೆ : ಅಂತರರಾಷ್ಟ್ರೀಯ ಸ್ತರ, ಸಾರ್ವಜನಿಕ ಬಗೆ ಮತ್ತು ವಾಸ್ತವವಾದದ ಸ್ವರ್ಣಯುಗ ಪ್ರಾರಂಭ. ಆದ್ದರಿಂದ ಮೂರು ಕಥಾಪೀಠಗಳ ಮಹಾಪೀಠವು ಫ್ರಾನ್ಸ್ ಆಗುತ್ತದೆ. ಫ್ಲಾಬೆರ್, ಟಾಲಸ್ಟಾಯ್, ಮತ್ತು ತುರ್ಗನೇವ್ ಬಂದು ಸೇರುತ್ತಾರೆ. ವಾಸ್ತವತಾವಾದದ ಸ್ವರ್ಣಯುಗ ಪ್ರಾರಂಭವಾಗುತ್ತದೆ. ಇದೇ ವೇಳೆಗೆ ಸಂಕ್ಷಿಪ್ತೀಕರಣ ಅಥವಾ ಶಬ್ದಬಾಹುಳ್ಯದಿಂದ ರಕ್ಷಣೆ ಒಂದು ಸಾಹಿತ್ಯಕ ಅವಶ್ಯಕತೆಯಾಗುತ್ತದೆ. ಕತೆಯು ತನ್ನ ವಿಶಿಷ್ಟರೂಪವನ್ನು ಪಡೆದುಕೊಳ್ಳುತ್ತದೆ. (ಪೆಟ್ರೋನಿಯಸ್ ಹಾಗೂ ಮಾರ್ಶಲ್ ಮೊದಲ ಶತಮಾನದಲ್ಲಿ ಮಾಡಿದ ಹಾಗೆ) ಫ್ಲಾಬೆರ್‍ನಂತಹ ಕಾದಂಬರಿಕಾರನೂ ಮೊನಚು ಮತ್ತು ಪ್ರಖರವಾದ ವಿಧವನ್ನು ಒಂದು ನಿಕಷದ ರೂಪದಲ್ಲಿ ತನ್ನದಾಗಿಸಿಕೊಳ್ಳುತ್ತಾನೆ. ಮತ್ತು ಗೋಗೊಲನ ಕಲಾತ್ಮಕತೆಯ ಕೊರತೆಯನ್ನು (ಕತೆಯಲ್ಲಿ) ತುಂಬುತ್ತಾನೆ. ಫ್ರಾನ್ಸ್‍ದಲ್ಲಿ ಕಥಾ ವೇದಿಕೆಯ ಸ್ಥಾಪನೆಯಾದ್ದರಿಂದ ಕತೆಗೆ ಅಂತಾರಾಷ್ಟ್ರೀಯ ಸ್ತರದಲ್ಲಿ ಸಾರ್ವಜನಿಕ ಬಗೆಯರೂಪದಲ್ಲಿ ಸ್ವೀಕೃತಿ ದೊರೆಯುತ್ತದೆ. ಇಲ್ಲಿ ಪೂರ್ವ ಮತ್ತು ಪಶ್ಚಿಮದ ಕಥಾಧಾರೆಗಳು ಬಂದು ಸೇರುತ್ತವೆ. ಈ ಕಾರ್ಯವು ರಷ್ಯಾದ 38 ಕಥಾ ಸಂಸ್ಕೃತಿ ಗೋಗೊಲ್‍ನ ವಾಸ್ತವತಾವಾದ ಮತ್ತು ತುರ್ಗನೇವ್‍ನ ಸೂಕ್ಷ ರಚನೆಗಳಿಂದ ಆಗುತ್ತದೆ. ಕಾದಂಬರಿ ಸಾಹಿತ್ಯದ ಸಲುವಾಗಿ ಆಗಲೂ ರಷ್ಯಾದ ಕಡೆಗೆ, ನೋಡಬೇಕಾಗುತ್ತಿತ್ತು. ಯಾಕೆಂದರೆ ಟಾಲಸ್ಟಾಯ್ ಹಾಗೂ ದಾಸ್ತೋವಸ್ಕಿಯ ವಿಶ್ಲೇಷಕನ ಗರುಡ ದೃಷ್ಟಿ ಹಾಗೂ ಕೃತಿಕಾರನ ಸಂವೇದನೆಯು ಆ ಕಾಲವನ್ನು ಸೃಷ್ಟಿಸುತ್ತಲಿತ್ತು. ಇದು ಅವರ ಆತ್ಮೋದ್ಘಾಟನೆಯ ಯುಗವಾಗಿತ್ತು. ಆಗಲೇ ಮೊಪಾಸಾ ಪ್ರಾಕೃತವಾದವನ್ನು ಸ್ವೀಕರಿಸಿದನು. ಮತ್ತು ಹೇಳಿದನು- ನನ್ನ ಪಾತ್ರಗಳು ಏನೇ ಹೇಳುವುದಿದ್ದರೂ ಅದು ಅವುಗಳದು. ಅವುಗಳು ಏನೇ ಮಾಡಿದರೂ ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಕೇವಲ ಅವುಗಳನ್ನು ಅವು ಇರುವ ಹಾಗೆ ಇಡುತ್ತೇನೆ. ಅಷ್ಟೇ ಮೊಪಾಸಾನ ಕತೆಗಳು ಅವನ ಹೇಳಿಕೆಯನ್ನು ಬಹುಮಟ್ಟಿಗೆ ತಪ್ಪು ಮಾಡುತ್ತವೆ. ಆದರೆ ಅವನ ಹೇಳಿಕೆಯು ಓ’ ಹೆನ್ರಿಯಂತಹ ಪ್ರತಿಭೆಯನ್ನು (ನೆರೆಟರ್ ರೂಪದಲ್ಲಿ) ಮಹಾನ್‍ಗೊಳಿಸುತ್ತದೆ. ಮತ್ತು ಪ್ರಪಾತದಲ್ಲಿಯೂ ಬೀಳಿಸುತ್ತದೆ. ಓ ಹೆನ್ರಿಯು ತನ್ನ ಹೇಳಿಕೆಯಲ್ಲಿ ಎಲ್ಲಿಯವರೆಗೆ ಹೋಗುತ್ತಾನೆಂದರೆ-“ (ಕತೆಯನ್ನು) ಮೂರ್ಖರ ದೃಷ್ಟಿಗೆ ಬೀಳದ ಹಾಗೆ ವಸ್ತ್ರದಲ್ಲಿ ಚೆನ್ನಾಗಿ ಕಟ್ಟಿಡಬೇಕು.” ಮುಕ್ತಾಯವಿರುವ ಕತೆಗಳ ತನ್ನದೇ ಆದ ರೀತಿಯ ಒಬ್ಬ ಲೇಖಕ ಓ ಹೆನ್ರಿ, ಲೋಕಪ್ರಿಯ ಕತೆಗಳ ಜನಕನೆಂದು ಭಾವಿಸಬಲ್ಲ ಏಕಮೇವ ಲೇಖಕ. ಇಂದಿಗೂ ಅಮೇರಿಕಾ ಹಾಗೂ ಅನ್ಯ ದೇಶಗಳ ಕತೆಗಳ ಅಗಾಧ ಲೋಕ ಪ್ರಿಯತೆಯ ಮಾರ್ಗವು ಅವನ ಫಾಮ್ರ್ಯುಲಾದ ಮೇಲೆಯೇ ಬದುಕುತ್ತಿದೆ. ಡಿ.ಎಚ್.ಲಾರೆನ್ಸ್‍ನ ಮಹತ್ವವು ಕತೆಗಾರನ ರೂಪದಲ್ಲಿ ಈಗ ಇನ್ನಷ್ಟು ಬೆಳೆಯುತ್ತಿದೆ. ಯಾಕೆಂದರೆ ಅವನ ಕತೆಗಳು ಕಲಾತ್ಮಕ ಸಂಕ್ಷಿಪ್ತತೆಯ ಮಾದರಿಯಾಗಿವೆ. ಮೊಪಾಸಾ ಗೋಗೊಲ, ಫ್ಲಾಬೆಯರ್, ಜೋಲಾ, ತುರ್ಗನೆವ್ ಮತ್ತು ಟಾಲಸ್ಟಾಯ್ ಅವರ ಮಾರ್ಗಕ್ಕೆ ತಡೆಹಾಕಿದನು. ಮತ್ತು ಕತೆಯನ್ನೆತ್ತಿಕೊಂಡು ಅವನು ವ್ಯಾವಸಾಯಿಕ ಲೇಖನದ ಎಲ್ಲೆಯವರೆಗೆ ತಲುಪಿದನು. ಇದರಿಂದ ಸತ್ಯದ ಅನ್ವೇಷಣೆ ಹಾಗೂ ಅಂತರಂಗದ ಪ್ರಕಟಣೆಯ ವಿಶ್ಲೇಷಣಾತ್ಮಕ ದೃಷ್ಟಿಯು ಮಸಕಾಗತೊಡಗಿತು. ಅತ್ತ ದಾಸ್ತೋವಸ್ಕಿಯು ಜರ್ಮನ್, ಆಸ್ಟ್ರಿಯನ್, ಜೆಕ್ ಕತೆಗಾರರನ್ನು ಪ್ರಭಾವಿಸಿದನು. ಚೆಖಾವ್ ಕತೆಗಳಿಗೆ ಕತೆಗಳ ಕಲಾತ್ಮಕತೆಯನ್ನು ಪುನಃ ದೊರಕಿಸಿಕೊಟ್ಟನು. ಚೆಖಾವ್ ಇಲ್ಲದಿದ್ದರೆ, ಬಹುಶಃ ಕತೆಯು ಒಂದು ಕಲಾ ಪ್ರಕಾರದ ರೂಪದಲ್ಲಿ ಜೀವಿತವಿರುತ್ತಿರಲಿಲ್ಲ. ಅಂದರೆ, ಕತೆಯ ಆಂತರಿಕ ಗಂಭೀರ ವೈಚಾರಿಕ ಮಗ್ಗಲು ಮತ್ತು ಮೇಲ್ಮೆಯ ಸಂವೇದನಾತ್ಮಕ ಪ್ರತೀತಿ ಕಳೆದುಹೋಯಿತು. ಆದರೆ ಅಂಥ ಸಂದರ್ಭದಲ್ಲಿಯೂ ವಿಶ್ವಕಥಾಯಾತ್ರೆ 39 ಮೂವರು ಕತೆಗಾರರು ಅದನ್ನು ಸಂಬಾಳಿಸಿದರು. ಗಾರ್ಕಿ, ಪ್ರೇಮ್‍ಚಂದ್, ಮತ್ತು ಲೂಸುನ್ ಅವರು. ಗಾರ್ಕಿ ಶ್ರಮಿಕವರ್ಗದವರನ್ನ ಎತ್ತಿಹಿಡಿದರು. ಪ್ರೇಮಚಂದರು ಸಮಕಾಲೀನತೆಯನ್ನು ಪ್ರತಿನಿಧಿಸಿದರು. ಹಾಗೂ ಕತೆಗೆ ಭಾರತೀಯ ಮಧ್ಯಮ ವರ್ಗ ಹಾಗೂ ನಿಮ್ನ ವರ್ಗದ, ವಿಶೇಷವಾಗಿ ಗ್ರಾಮ ಸಮುದಾಯದ ಮೂಲ ಪ್ರವಾಹವನ್ನು ಜೋಡಿಸಿದರು. ಗೋಗೊಲ್ ರಷ್ಯಾದಲ್ಲಿ ಮಾಡಿದ ಕೆಲಸವನ್ನೇ ಪ್ರೇಮಚಂದರು ಮಾಡಿದರು. ಶರತ್ ಹಾಗೂ ಪ್ರೇಮಚಂದರು ಗೋಗೊಲ್ ಹಾಗೂ ತುರ್ಗನೇವ್ ಅವರಂತೆ ಜೀವನ ಹಾಗೂ ಸಾರ್ಥಕ ಚಿಂತನೆಗಳೊಂದಿಗೆ ಜೋಡಿಸಿ, ಈ ಮಹಾದ್ವೀಪದಲ್ಲಿ ಮಾನವೀಯ ಹುಡುಕಾಟದ ನೆಲಗಟ್ಟನ್ನು ಸಿದ್ಧಪಡಿಸಿದರು. ಅತ್ತ ಗೋಗೊಲ್ ಹಾಗೂ ಚೆಖಾವ್ ಅವರ ಮಾರ್ಗವು ಫ್ರಾನ್ಸ್‍ನಲ್ಲಿ ಸೊರಗಿ ಆಯರ್ಲಂಡ್‍ನಲ್ಲಿ ಜೀವ ತಳೆಯಿತು. ಸ್ಥೂಲವಾಗಿ ‘ಬ್ರೂಮ್ಸಬರಿ ಸ್ಕೂಲ್’ ಎಂಬ ಹೆಸರಿನಿಂದ ಕರೆಯಲಾಗುವ ಪಂಥವು ಕತೆಗಳನ್ನು ರಕ್ಷಿಸಿತು. ಇದರಲ್ಲಿ ಲಾರೆನ್ಸ್ ಹಾಗೂ ಜೇಮ್ಸ್‍ಜಾಯಿಸ್ ಕೂಡ ಇದ್ದಾರೆ. ವ್ಯಕ್ತಿಯ ಅಧಿಕಾರದಲ್ಲಿ ಈಗ ಆಮೂಲ ಪರಿವರ್ತನೆಯಾಗುತ್ತದೆ. ಅದು ಒಂದು ಆರ್ಥಿಕ- ರಾಜನೈತಿಕ ಐಕ್ಯವಾಗಿಬಿಡುತ್ತದೆ. ಮತ್ತು ಎರಡು ಮಹಾ ಯುದ್ಧಗಳಿಂದ ನಾಶವಾದ ಯುರೋಪನ ಧ್ವಂಸಾವಶೇಷವನ್ನು ನೋಡುತ್ತದೆ. ವ್ಯಕ್ತಿ ಮತ್ತು ಸಂದಣಿಯ ಅಸ್ತಿತ್ವದ ಸಂಘರ್ಷ ಈಗಲೂ ಜಾರಿಯಲ್ಲಿದೆ. ಅರಿಸ್ಟಾಟಲ್ ಹಾಗೂ ಸಾಕ್ರಟೀಸ್‍ರ ಅಭಿಪ್ರಾಯಗಳು ವ್ಯರ್ಥವಾಗುತ್ತವೆ. ಅತ್ತ ಮಾಕ್ರ್ಸ ಅರ್ಥಪುರುಷನಿಗೆ ಜನ್ಮ ನೀಡುತ್ತಾನೆ. ಮೆದುಳನ್ನು ತೆಗೆದು ಬೆಣ್ಣೆಯಹಾಗೆ ಮೇಜಿನ ಮೇಲೆ ಸಜ್ಜುಗೊಳಿಸಿ ಇಡಬಹುದು- ಅಂದರೆ ಅದರ ರಹಸ್ಯಮಯ ಕ್ರಿಯೆಗಳನ್ನೂ ಸರಳಗೊಳಿಸಿ ಇಡಬಹುದು. ಎಂದು ಫ್ರಾಯಿಡ್ ಘೋಷಿಸುತ್ತಾನೆ. ಆದರೆ ಏನೂ ಆಗಿಲ್ಲವೆಂಬುದನ್ನು ಯೂರೋಪನ ವ್ಯಕ್ತಿ ನೋಡುತ್ತಾನೆ............ ಹುಚ್ಚರ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತದೆ, ಅರ್ಥಪುರುಷನು ಜನಸಂದಣಿಯಲ್ಲಿ ಪರಿವರ್ತಿತನಾಗುತ್ತಾನೆ. ಮತ್ತು ಶತಮಾನಗಳ ಜೀವಂತ ಪ್ರಶ್ನೆಯ ಉತ್ತರದಲ್ಲಿ ಮಹಾಯುದ್ಧಗಳು ಸೇರಿಕೊಂಡವು. ಸಂಬಂಧಗಳು ಹೊಯ್ದಾಡಿದವು, ಮತ್ತು ಅಂತರಂಗದ ಬದಲು ಬಾಹ್ಯ ವಾಸ್ತವಗಳು ಮಹತ್ವ ಪೂರ್ಣವೆನಿಸತೊಡಗಿದವು. ವಾಸ್ತವದಾಚೆ ನೋಡಬೇಕಾದ ವಾಸ್ತವ ಸತ್ತು ಹೋಯಿತು. ಬಹಿರ್ ಜಗತ್ತಿನ ಎದುರು ಮನುಷ್ಯನ ಅಂತರಂಗದ ಅಸ್ತಿತ್ವ ವಿಘಟಿತವಾಗುತ್ತ ಹೋಯಿತು. ಒಬ್ಬನು ಮನುಷ್ಯನನ್ನಲ್ಲ, ಸಂದಣಿಯನ್ನು ಸ್ವೀಕರಿಸಿದನು, ಇನ್ನೊಬ್ಬನು 40 ಕಥಾ ಸಂಸ್ಕೃತಿ ‘ವ್ಯಕ್ತಿ’ ಯ ಹೆಸರಿನಲ್ಲಿ ‘ಸಂಸ್ಥಾನ ಯಂತ್ರ’ಕ್ಕೇ ವ್ಯಕ್ತಿಯ ಸಂಕೇತವನ್ನು ಕೊಟ್ಟನು. ಅಂದರೆ ಇಬ್ಬರೂ ವ್ಯಕ್ತಿತ್ವ ಸಂಪನ್ನ ವ್ಯಕ್ತಿಯನ್ನು ಒಪ್ಪಲಿಲ್ಲ. ಶೋಧನೆ ಮಾಡುವ, ಅಂತರಂಗವನ್ನು ತೆರೆದಿಡುವ, ವಾಸ್ತವವನ್ನು ಮೀರಿದ ವಾಸ್ತವವನ್ನು ನೋಡಬಲ್ಲ ವ್ಯಕ್ತಿಯ ಹತ್ಯೆಯಾಯಿತು. ಆದ್ದರಿಂದ ತನ್ನ ಸಮಯದ ಜೊತೆ ಸೇರಿಕೊಂಡ, ತುಸು ತೆಗೆದುಕೊಳ್ಳಲು ಹಾಗೂ ಕೊಡಲು ಬಯಸುತ್ತಿದ್ದ ಆ ವ್ಯಕ್ತಿಯು ‘ಕೊಡಲು’ ಮುಕ್ತವಾಗಿ ಉಳಿಯಲಿಲ್ಲ, ಆದರೆ ‘ತೆಗೆದುಕೊಳ್ಳಲು’ ಅವನನ್ನು ಜವಾಬ್ದಾರನನ್ನಾಗಿ ಮಾಡಲಾಯಿತು. ಮತ್ತು ಅದನ್ನು ಅವನ ಮೇಲೆ ಹೇರಲಾಯಿತು. ಇದೇ ಬಿಂದುವಿನಲ್ಲಿ ವಿಚಾರಶೀಲ ಪ್ರತಿಭೆಯು ವ್ಯಕ್ತಿಯು ತನ್ನನ್ನು ಮೊದಲು ಸ್ವಲ್ಪ ತಿಳಿದುಕೊಳ್ಳಲಿ ಎಂಬ ‘ತನ್ನಪರಿಚಯ’ದ ಅಥವಾ ‘ಆತ್ಮಬೋಧ’ದ ಪ್ರಶ್ನೆಯನ್ನು ಎತ್ತಿತು. ಇಲ್ಲಿಂದಲೇ ದಾಸ್ತೋವಸ್ಕಿಯ ವಿಚಾರದ ಬೀಜಾಂಕುರವಾಯಿತು. ಕಿರ್ಕಗಾರ್ಡ, ಕಾಫ್ಕಾ, ಸಾತ್ರ್ರ, ಮತ್ತು ಕಮೂ ಈ ಪ್ರಶ್ನೆಯನ್ನೆತ್ತಿದರು. ಸಾತ್ರ್ರ ಹೇಳಿದ -“ನನ್ನನ್ನು ವ್ಯಕ್ತಪಡಿಸುವ ನನ್ನ ‘ನಾನು’ವಿನ ಆ ಭಾಗ ಯಾವುದು ಎಂಬುದು ನನಗೆ ತಿಳಿಯುವವರೆಗೆ ನಾನು ಏನನ್ನಾದರೂ ಹೇಗೆ ಮಾಡಬಲ್ಲೆ?” ಅದು ಎಲ್ಲೆಲ್ಲಿ, ಯಾವ ಯಾವ ಮತ್ತು ಎಂಥೆಂಥ ಸ್ಥಿತಿಗಳಲ್ಲಿ ಕರಗಿ ಅಳಿಸಿ ಹೋಗಿದೆಯೆಂಬ ನನ್ನದೇ ಅಸ್ತಿತ್ವ ನನಗೆ ಗೊತ್ತಾಗದಿದ್ದರೆ ವ್ಯಕ್ತಿಗತಸ್ತರದಲ್ಲಿ ನಾನು ಏನೂ ಮಾಡಲಾರೆ. ಆದ್ದರಿಂದ ಎಲ್ಲಕ್ಕಿಂತ ಮೊದಲ ಸವಾಲು ‘ಆತ್ಮ’ಶೋಧದ್ದು, ವ್ಯಕ್ತಿತ್ವದ ತುಸುಭಾಗ ಆಯಿಸ್‍ಬರ್ಗನ ರೀತಿಯಲ್ಲಿ ಮುಳುಗುವುದರಿಂದ ಬಚಾವಾಗಿದೆಯೆಂದು ‘ಆತ್ಮ’ದ ಶೋಧದಲ್ಲಿ ಸಾತ್ರ್ರನು ಗ್ರಹಿಸಿಕೊಂಡನು. ಮುಳುಗಿದ ಪೂರ್ಣ ವ್ಯಕ್ತಿತ್ವ ಮತ್ತು ನಿರರ್ಥಕ ಮೌಲ್ಯಗಳ ಅಸ್ವೀಕಾರ ಇದರ ಮೇಲೆ ರೋಬಗ್ರಿಲೆ, ಸಾರುತ್, ಬೆಕೆಟ್, ಬ್ರೆಬರ್, ಅಯನೆಸ್ಕೊ ಮತ್ತು ಪಿಂಟರ್ ಕೇಳಿದರು -“ಈಗ ವ್ಯಕ್ತಿತ್ವದ ಯಾವಭಾಗವೂ ಮುಳುಗುವುದರಿಂಧ ತಪ್ಪಿಸಿಕೊಂಡಿಲ್ಲವೆಂದು ನಾವು ಯಾಕೆ ಭಾವಿಸಬಾರದು? ಯಾವುದೋ ಭಾಗವು ಉಳಿದುಕೊಂಡಿದೆಯೆನ್ನಲು ಸಾತ್ರ್ರ ಯಾವ ಸಾಕ್ಷ್ಯವನ್ನು ಕೊಡಬಲ್ಲರು? ಏನೂ ಉಳಿದಿಲ್ಲವೆಂದಮೇಲೆ ‘ಆತ್ಮಾನ್ವೇಷಣೆ’ಯ ಪ್ರಶ್ನೆಯೇ ಏಳುವುದಿಲ್ಲ. ಚಹರೆಗಳೆಲ್ಲವೂ ಒಂದೇ ಬಗೆಯವಾಗಿರುವುದರಿಂದ ಅದನ್ನು ಗುರುತಿಸಲು ಸಾಧ್ಯವಾಗದು.” ಬೆಕೆಟ್ ಆಗ ಅಂತಿಮ ಟಿಪ್ಪಣಿ ಮಾಡುತ್ತಾನೆ ``ಏನೂ ಇಲ್ಲದಿರುವುದಕ್ಕಿಂತ ಒಳ್ಳೆಯದು ಏನೂ ಇಲ್ಲ” ಅರ್ಥಾತ್ ನಾಗರಿಕತೆ-ಸಂಸ್ಕೃತಿಯ ಎಲ್ಲ ಮೌಲ್ಯಗಳೂ ನಿರರ್ಥಕವಾಗಿವೆ. ವಿಶ್ವಕಥಾಯಾತ್ರೆ 41 ಶತಮಾನಗಳ ತಪ್ಪು ನಿರ್ಣಯದ ಸರ್ಪವು ಮತ್ತೆ ಔಷಧವನ್ನು ಕದ್ದುಕೊಂಡು ಹೋಗಿರುವಾಗ, ಜಗತ್ತು ಜಗಪ್ರಳಯದಿಂದ ಖಂಡ ಪ್ರಳಯದ ತನಕ ತಲುಪಿರುವಾಗ, ಮನುಷ್ಯನಿಗೆ ತನ್ನ ಪ್ರತಿಯೊಂದು ಪ್ರಯತ್ನದ ಉತ್ತರವು ನಾಗಾಸಾಕಿ- ಹಿರೋಶೀಮಾಗಳ ಕುರೂಪ-ಭೀಭತ್ಸ-ಸುಟ್ಟ ಮುಖಚರ್ಯೆಯ ರೂಪದಲ್ಲಿ ದುರುಗುಟ್ಟಿ ನೋಡುವಾಗ, ಗಿಲಗಮೆಶ್‍ನ ರೀತಿಯಲ್ಲಿ ನಿರರ್ಥಕತೆಯ ಈ ಅನುಭೂತಿಯನ್ನು ತಲುಪಿ ಸೃಷ್ಟಿಯ ಬಯಕೆ ಮಾಡುತ್ತ ಕೆಲವು ಶಾಶ್ವತ ಸ್ವರಗಳು ಪುನಃ ಕೇಳುತ್ತವೆ- (ಹೊಸ ಐರಿಶ್ ಕಥಾಪೀಠದ) ಜಾಯ್ಸ್, ಹೆಮಿಂಗ್ವೆ, ಓ ಕೂನರ್, ಶಾ ಓ’ಪ್ಲಾ ಮತ್ತು ಬೆಕೆಟ್‍ನದು. ಬೆಕೆಟ್‍ನ ಮುದಿ ಕ್ರುಪ್ ಅನೇಕ ವರ್ಷ ಮುಂಚೆ ಸ್ವಯಂ ಹೇಳಿದ ತನ್ನದೇ ಒಂದು ಶಬ್ದದ ಅರ್ಥವನ್ನು ಮರೆಯುತ್ತಾನೆ. ಮತ್ತು ಅದೇ ಶಬ್ದದ ಅರ್ಥವನ್ನು ಶಬ್ದಕೋಶದಲ್ಲಿ ಹುಡುಕುತ್ತಿದ್ದಾನೆ. ಬಹುಶಃ ಇತಿಹಾಸ ತನ್ನನ್ನು ಮರಳಿಸಿಕೊಳ್ಳುತ್ತದೆ. ಇತಿಹಾಸವು ತನ್ನನ್ನು ಅದೇ ಕ್ಷಣದಲ್ಲಿ ಎಂದಿಗೂ ಮರು ಪ್ರಕಟಿಸಿಕೊಳ್ಳಲಾರದು ಎಂಬುದು ಮಾತ್ರ ಸತ್ಯ. ಮತ್ತು ಮನುಷ್ಯ ಇತಿಹಾಸದ ಇದೇ ವಿಕೃತಿ ಹಾಗೂ ಅವಶ್ಯಕತೆಗಳು ಕತೆಯ ನಿರಂತರತೆಯನ್ನು ಉಳಿಸಿಕೊಂಡಿವೆ. 42 ಕಥಾ ಸಂಸ್ಕೃತಿ ಗ್ರೀಕ್ ಪುರಾಣಕತೆಗಳ ಭೂಮಿಕೆ - ಕಮಲ ನಸೀಮ ಪ್ರತಿಯೊಂದು ದೇಶ-ಕಾಲಕ್ಕೂ ತನ್ನದೇ ಆದ ಸತ್ಯವೆಂಬುದಿದೆ. ಕಾಲ ಸರಿಯುತ್ತದೆ. ಪರಿಸ್ಥಿತಿ ಬದಲಾಗುತ್ತದೆ, ಸಂದರ್ಭ ಬದಲಾಗುತ್ತವೆ. ಯುಕ್ತಿ ಮತ್ತು ಬುದ್ಧಿಯ ತಕ್ಕಡಿಯಲ್ಲಿ ಪ್ರಾಚೀನ ಕತೆಗಳು ಇಂದು ಪೂರ್ಣವೆನಿಸದಿದ್ದರೇನು, ಅವುಗಳ ಸಹಜ ಸೌಂದರ್ಯ, ಕೋಮಲ ಕಲ್ಪನೆಗಳು, ಹಾಗೂ ತತ್ಕಾಲದ ಮಾನವ ಸಮುದಾಯದಿಂದ ಅವುಗಳ ಸಹಜ ಸ್ವೀಕೃತಿಯನ್ನು ಸುಳ್ಳೆನ್ನಲಾಗುವುದಿಲ್ಲ. ಈ ಕತೆಗಳು ಆ ಪುರಾತನ ಮಾನವ ಮನಸ್ಸಿನ ನಿರ್ಮಲ ಕನ್ನಡಿಗಳು. ಜೀವನದ ಎಲ್ಲ ಒತ್ತಡಗಳು ಹಾಗೂ ಸೌಲಭ್ಯಗಳಿಂದ ಮುಕ್ತವಾಗಿ, ವನಪರ್ವತಗಳಲ್ಲಿ ಸ್ವಚ್ಛಂದವಾಗಿ ಅಲೆದಾಡುತ್ತವೆ. ಅದರ ಕಣ್ಣುಗಳು ಉದಯಿಸುವ ಸೂರ್ಯ, ಸುರಿಯುವ ಮಳೆ, ಸದ್ದುಮಾಡುವ ಮಿಂಚುಗಳನ್ನು ನೋಡುತ್ತ ಕುತೂಹಲದಿಂದ ತುಂಬಿಹೋಗುತ್ತಿದ್ದವು. ಅದರ ಮನಸ್ಸು, ಧರ್ಮ ಮತ್ತು ದರ್ಶನದ ಪೂರ್ವಗ್ರಹಗಳಿಂದ ಸ್ವತಂತ್ರವಾಗಿ ಯೋಚಿಸತೊಡಗುತ್ತಿತ್ತು. ಈ ಭೂಮಿಯನ್ನು ಮಾಡಿದವರು ಯಾರು? ಈ ಮಳೆ ಸುರಿದದ್ದು ಹೇಗೆ? ಬೆಳಗು ಹೇಗಾಯಿತು? ಹೂವುಗಳನ್ನು ಅರಳಿಸಿದ್ದು ಯಾರು? ಜಿಜ್ಞಾಸೆಗೆ ಯಾವುದೇ ಭೌಗೋಲಿಕ ಎಲ್ಲೆಯಿರುವುದಿಲ್ಲ. ಭಾರತ ಹಾಗೂ ಇಜಿಪ್ತದಂತೆಯೇ ಗ್ರೀಸ್ ಮತ್ತು ರೋಮ್‍ಗಳಲ್ಲಿ ಪುರಾಣಕತೆಗಳಿಗೆ ಈ ಜಿಜ್ಞಾಸೆಯೇ ಅಖಂಡ ಯೌವನವನ್ನು ಅನಂತಜೀವನದ ವರದಾನವನ್ನೂ ಕೊಟ್ಟಿದೆ. ಶ್ರೀಮಾನ್ ರೋಜ್ ಅವರ ಶಬ್ದಗಳಲ್ಲಿ ಹೇಳುವುದಾದರೆ ಅವರ ‘ವಿಜ್ಞಾನ ಮತ್ತು ಕಲೆ’ಯು ಈ ಕತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ಮಳೆ ಸುರಿಯುತ್ತದೆ. ಇದೊಂದು ಪ್ರಾಕೃತಿಕ ಘಟನೆ. ಪ್ರಶ್ನೆಯೇಳುತ್ತದೆ - ಮಳೆ ಯಾಕೆ ಸುರಿಯುತ್ತದೆ? ವೈಜ್ಞಾನಿಕ ಉತ್ತರ - “ವಾತಾವರಣದಲ್ಲಿ ಇಂಥದ್ದರ ಒತ್ತಡದಿಂದ” ಪುರಾಣಕತೆಗಳು ಹೇಳುತ್ತವೆ. - `ಸ್ಯೂಸ್ ಆಕಾಶದಿಂದ ನೀರನ್ನು ಚೆಲ್ಲಿಸುತ್ತಿದ್ದಾನೆ.’ ‘ಇಂದ್ರನ ಕೃಪೆ’ ‘ಯಹೋವಾ ಅಂತರಿಕ್ಷದ ಕಿಟಕಿಯನ್ನು ತೆರೆದಿದ್ದಾನೆ’ ಅಥವಾ `ದೇವದೂತರು ಆಕಾಶದಲ್ಲಿರುವ ಛಿದ್ರಗಳುಳ್ಳ ದೊಡ್ಡ ಟಬ್‍ನಲ್ಲಿ ನೀರನ್ನು ತುಂಬಿದ್ದಾರೆ.’. ಇಂದಿನ ವೈಜ್ಞಾನಿಕ ಯುಗದಲ್ಲಿ ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ, ಸೂರ್ಯನ ಚಲನೆಯಿಂದಲ್ಲ ಎಂಬುದು ಗೊತ್ತಿದ್ದರೂ, ಸೂರ್ಯನು ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದೇ ಗ್ರೀಕ್ ಪುರಾಣಕತೆಗಳ ಭೂಮಿಕೆ 43 ನಾವು ಹೇಳುತ್ತೇವೆ. ದೇವತೆಯು ಪ್ರತಿದಿನ ಬೆಳಿಗ್ಗೆ ತನ್ನ ಅಲೌಕಿಕವಾದ ಅಶ್ವಗಳನ್ನು ಜೋಡಿಸಿದ ರಥದಲ್ಲಿ ಕುಳಿತು ಪೂರ್ವದಿಂದ ಹೊರಡುತ್ತಾನೆ. ಮತ್ತು ನಾಲ್ಕು ಪ್ರಹರಗಳ ಆಕಾಶ ಯಾತ್ರೆಯಿಂದ ದಣಿದು ಸಂಜೆಯ ವೇಳೆಗೆ ಸ್ನಾನಕ್ಕಾಗಿ ಸಮುದ್ರದಲ್ಲಿ ಇಳಿಯುತ್ತಾನೆ ಎಂಬ ಪ್ರಾಚೀನ ಮಾನವನ ಅದೇ ವಿಶ್ವಾಸದ ಪ್ರತಿಧ್ವನಿ ಅಲ್ಲವಾ? ಆಕ್ಸಫರ್ಡ ಕ್ಲಾಸಿಕಲ್ ಡಿಕ್ಷನರಿಯಲ್ಲಿ ಪುರಾಣ ಕತೆಯ (ಮಿಥ್) ಪರಿಭಾಷೆಯನ್ನು ಕೊಡುತ್ತ ಬರೆಯಲಾಗಿದೆ : “ಇದರ ಪರಿಭಾಷೆಯು ವಿಜ್ಞಾನದ ಅಭ್ಯುದಯಕ್ಕೆ ಮುಂಚಿನ ಒಂದು ಕಲ್ಪನಾಶೀಲ ಪ್ರಯತ್ನದ ರೂಪದಲ್ಲಿ ಮಾಡಿರಬಹುದಾದದ್ದು. ಯಾವುದೇ ಘಟಿತ ಅಥವಾ ಸಂಭಾವಿತ ಘಟನೆಯ ವ್ಯಾಖ್ಯೆಗಾಗಿ ಪುರಾಖ್ಯಾನ ರಚನೆಯ ಕುತೂಹಲವನ್ನು ಉದ್ದೀಪ್ತಗೊಳಿಸುತ್ತದೆ. ಇಂಥ ಘಟನೆಗಳಿಂದ ಮನಸ್ಸಿನಲ್ಲಿ ಜನಿಸಿದ ಮುಕ್ಕಾದ ಸಂಭ್ರಮದಿಂದ ಹೊರಬಂದು ಸಂತೋಷದ ಸ್ಥಿತಿಗೆ ತಲುಪುವ ಪ್ರಯತ್ನವೇ ಇದರ ಹಿಂದಿದೆ.” ಮತ್ತು ಪುರಾಶಾಸ್ತ್ರದ ವಿಷಯವಾಗಿ: “ವ್ಯುತ್ಪತ್ತಿ ಶಾಸ್ತ್ರದ ಪ್ರಕಾರ ಈ ಶಬ್ದದ ಅರ್ಥವು ಕತೆ ಹೇಳುವುದು ಮಾತ್ರವೇ ಆಗಿದ್ದರೂ, ಆಧುನಿಕ ಭಾಷೆಗಳಲ್ಲಿ ಇದರ ಪ್ರಯೋಗವು ಕೆಲವು ಜನರ ಅಥವಾ ಸಮಸ್ತ ಜನರ ಪರಂಪರಾಗತ ಕತೆಗಳ ವ್ಯವಸ್ಥಿತ ಅಧ್ಯಯನಕ್ಕಾಗಿ ಮಾಡಲಾಗಿದ್ದು. ಈ ಕತೆಗಳು ಹೇಗೆ ಅಸ್ತಿತ್ವಕ್ಕೆ ಬಂದವು. ಮತ್ತು ಯಾವ ಮಿತಿಯವರೆಗೆ ಅವುಗಳ ಮೇಲೆ ವಿಶ್ವಾಸವಿಡಲಾಗುತ್ತಿತ್ತು, ಅಥವಾ ವಿಶ್ವಾಸವಿಡಲಾಗುತ್ತದೆ, ಎಂಬುದನ್ನು ತಿಳಿಯುವುದೇ ಅವರ ಉದ್ದೇಶವಾಗಿದೆ.” ಪುರಾಣ ಕತೆಗಳು ಪುರಾತನ ಮಾನವನ ಸಕ್ರಿಯ ಕಲ್ಪನೆಯ ಪ್ರಮಾಣಗಳಾಗಿವೆ. ಇದು ‘ಮಿಥ್’ ದ ಪರಿಭಾಷೆಯಿಂದ ಸ್ಪಷ್ಟ ಮಾಡಲಾಗಿದೆ. ಆದರೆ ಜೊತೆಗೇ, ದೈವ ಕಥಾ ಶಾಸ್ತ್ರಕ್ಕೆ ಸಂಬಂಧಿಸಿದ ಮೇಲೆ ಹೇಳಿದ ಹೇಳಿಕೆಯಲ್ಲಿ ಆ ಶಾಸ್ತ್ರದ ವ್ಯವಸ್ಥಿತ ಅಧ್ಯಯನದ ಅಪೇಕ್ಷೆ ಮಾಡಲಾಗಿದೆ. ಅಂದರೆ, ಕೇವಲ ‘ಮಿಥ್’ನ್ನು ತಿಳಿಯುವುದಷ್ಟೇ ಸಾಲದು ಧರ್ಮ ಹಾಗೂ ದರ್ಶನಗಳ ಜೊತೆಗಿನ ಅವುಗಳ ಸಂಬಂಧ, ಪ್ರಾಸಂಗಿಕ- ಸಾಮಾಜಿಕ ಪ್ರಾಚುರ್ಯ, ಧಾರ್ಮಿಕ ಅನುಷ್ಠಾನದ ವಿವೇಚನೆ, ‘ಮಿಥ್’ ನ ಉತ್ಪತ್ತಿ, ಅದರ ಸಾಗಾ ಮತ್ತು ಮಾರ್ಯೆನ್ (ಇದೇ ಪ್ರಸ್ತಾವನೆಯಲ್ಲಿ ಈ ಎರಡೂ ವಿಧಗಳ ಬಗೆಗೂ ಹೇಳಲಾಗಿದೆ) ಜೊತೆಗೆ ತುಲನೆ ಕೂಡ ಅಪೇಕ್ಷಿತವಾಗಿದೆ. ಪುರಾಣ ಕತೆಗಳ ಹುಟ್ಟು ಹಾಗೂ ಅದರ ವ್ಯಾಖ್ಯೆಯನ್ನು ಕುರಿತು ವಿಭಿನ್ನ ವಿಚಾರಧಾರೆಗಳಿವೆ. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ವಿಚಾರ ಮಾಡಲಾಗುವುದು. ಒಂದು ಬಹಳ ಪುರಾತನವಾದ ಹಾಗೂ ಪ್ರಚಲಿತವಾದ ತಿಳಿವಳಿಕೆಯೆಂದರೆ ಈ ಪುರಾಣ ಕತೆಗಳು ರೂಪಕಾತ್ಮಕವಾಗಿವೆ ಮತ್ತು ತಮ್ಮ ತಳತಳಿಸುವ ಆವರಣದಲ್ಲಿ ಯಾವುದೋ ‘ಆಳವಾದ, ಸನ್ಮಾರ್ಗ ನಿರ್ದೇಶಕವಾದ’ ಅರ್ಥವನ್ನು ಅಡಗಿಸಿಕೊಂಡಿವೆ. 44 ಕಥಾ ಸಂಸ್ಕೃತಿ ಹೀಗೆ ಈ ಕತೆಗಳ ಮೇಲ್ಪದರದಲ್ಲಿ ಕಾಣುವುದೊಂದೇ ಅರ್ಥವಲ್ಲ, ಅವುಗಳ ಮಾಧ್ಯಮದಿಂದ ಒಂದು ಸುಸಂಬದ್ಧ ದರ್ಶನವನ್ನು ಓದುಗರ ವರೆಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದೆ. ಉದಾಹರಣೆಗಾಗಿ ಕ್ಯೂಪಿಡ್ ಮತ್ತು ಸಾಯಿಕೆ ಪ್ರೇಮಕಥೆ ಸಹಜವಾದ ಮನಮೋಹಕ ಕತೆಯಷ್ಟೇ ಅಲ್ಲ, ಒಂದು ರೂಪಕವೂ ಹೌದು. ಕ್ಯುಪಿಡ್ ಇಲ್ಲಿ ಅನಂತವಾದ ಶಾಶ್ವತವಾದ ಪ್ರೇಮದ ಪ್ರತೀಕ, ಮತ್ತು ಸಾಯಿಕೆ ಮಾಯಾಜಾಲದಲ್ಲಿ ಸಿಲುಕಿ ದುಃಖ ಸಹಿಸುವ ಆತ್ಮವಾಗಿದ್ದಾಳೆ. ದುಃಖದಿಂದ ಆತ್ಮದ ಪರಿಮಾರ್ಜನೆಯಾಗುತ್ತದೆ. ಮತ್ತು ಅವಳು ಪ್ರಿಯನೊಂದಿಗೆ ಸೇರಲು ಯೋಗ್ಯಳಾಗುತ್ತಾಳೆ. ಹೆಡಿಸ್ ಮೂಲಕ ಪರ್ಸಿಫನಿಯ ಅಪಹರಣವು ಒಬ್ಬ ದೇವತೆಯ ಆಸಕ್ತಿಯ ಕತೆ ಮಾತ್ರವಲ್ಲ, ಸ್ಯೂಸ್ ಮೂಲಕ ಪರ್ಸಿಫನಿಯ ನಾಲ್ಕು ತಿಂಗಳು ಮೃತ್ಯು ಲೋಕ ಹಾಗೂ ಎಂಟು ತಿಂಗಳು ಭೂಮಿಯ ಮೇಲೆ ಕಳೆಯುವ ನಿರ್ಣಯವು ಋತು ಪರಿವರ್ತನೆಯೊಂದಿಗೆ ಹೊಂದಿಸಬಹುದಾಗಿದೆ. ಪರ್ಸಿಫನಿಯು ಭೂಮಿಯ ಮೇಲೆ ಇರುವುದರಿಂದ ತಾಯಿ ಡಿಮಿಟರ್‍ಳಿಗೆ ಸಂತೋಷವಾಗುತ್ತದೆ. ಅದರಿಂದ ಬೆಳೆ ಹುಲುಸಾಗುತ್ತದೆ, ಹೂ ಅರಳುತ್ತವೆ. ಆದರೆ ಪರ್ಸಿಫನಿ ಮೃತ್ಯುಲೋಕಕ್ಕೆ ಹಿಂತಿರುಗುತ್ತಲೇ ಡಿಮಿಟರ್ ಶೋಕಮಗ್ನಳಾಗುತ್ತಾಳೆ, ಹಸಿರು ಅದೃಶ್ಯವಾಗುತ್ತದೆ,. ಮತ್ತು ಇಡೀ ಭೂಮಿ ಹಿಮದ ಚಾದರದಿಂದ ಮುಚ್ಚಿ ಹೋಗುತ್ತದೆ. ಕರಡಿಯ ಮೂಲಕ ಎಡೋನಿಸ್ ಸಾಯುವುದು, ಅವಳು ಮೃತ್ಯುಲೋಕದಿಂದ ಪ್ರತಿವರ್ಷ ಅಫ್ರೋಡಿಟಿಯ ಸಲುವಾಗಿ ಭೂಮಿಗೆ ಬರುವುದು ಕೂಡಾ ಇಂತಹದೇ ಒಂದು ರೂಪಕವಾಗಿದೆ. ಇಯೋ ಚಂದ್ರನು, ಮತ್ತು ನೂರು ಕಣ್ಣುಗಳ ಆಗೂ ನಕ್ಷತ್ರಗಳಿಂದ ತುಂಬಿದ ಆಕಾಶ, ರಾತ್ರಿಯೆಲ್ಲಾ ಅದನ್ನು ನೋಡುತ್ತಿರುತ್ತಾನೆ. ಸೆಲೊಸ್ಟಿಯಸ್ ಪ್ರಕಾರ ದೇವಿಯರ ಸೌಂದರ್ಯ ಸ್ಪರ್ಧೆಯಲ್ಲಿ ಪ್ಯಾರಿಸ್ ಆತ್ಮ ಮತ್ತು ಸೆಬ ಸಮಷ್ಟಿ. ಸ್ಪರ್ಧಾಳುಗಳಾದ ದೇವಿಯರು ಆಸೆ ತೋರಿಸಿ ಪ್ಯಾರಿಸ್‍ನನ್ನು ತಮ್ಮ ಕಡೆಗೆ ಮಾಡಿಕೊಳ್ಳಲು ಬಯಸುತ್ತಾರೆ. ಅಫ್ರೋಡಿಟಿ ಅವನಿಗೆ ಭೂಮಿಯ ಸುಂದರ ಸ್ತ್ರೀಯನ್ನು ಪತ್ನಿಯ ರೂಪದಲ್ಲಿ ಕೊಡುವ ವಚನವೀಯುತ್ತಾಳೆ. ಮಾಯಾ ಮೋಹದಲ್ಲಿ ಸಿಕ್ಕ ಆತ್ಮವು ಕೇವಲ ಇಂದ್ರಿಯಗಳಿಂದ ಬಾಹ್ಯ ಜಗತ್ತಿನ ಸಾಕ್ಷಾತ್ಕಾರ ಮಾಡುತ್ತದೆ. ಅಫ್ರೋಡಿಟಿಯನ್ನು ವಿಜಯಿಯೆಂದು ಘೋಷಿಸುತ್ತಾ ಸೇಬನ್ನು ಅವನಿಗೆ ಕೊಡುತ್ತಾಳೆ. ಗ್ರೀಕ್ ಪುರಾಣ ಕತೆಗಳಿಂದ ಕೆಲವೊಂದು ವ್ಯಾಖ್ಯೆಯನ್ನು ರೂಪಕ ಅಥವಾ ಅನ್ಯೋಕ್ತಿಯ ರೂಪದಲ್ಲಿ ಮಾಡಲಾಗಿದೆ. ಆದರೆ ಎಲ್ಲ ಆಖ್ಯಾನಗಳಲ್ಲಿಯೂ ರಹಸ್ಯಾತ್ಮಕ ಅರ್ಥವನ್ನು ಆರೋಪಿಸುವುದೆಂದರೆ ಮುತ್ತನ್ನು ಬಿಟ್ಟು ಚಿಪ್ಪನ್ನು ಹುಡುಕಿದಂತಾಗುತ್ತದೆ. ಈ ಕತೆಗಳ ಸೌಂದರ್ಯವು ಅವುಗಳ ಸಹಜತೆಯಲ್ಲಿದೆ. ಇವುಗಳ ಮಾಧ್ಯಮದಿಂದ ನಮ್ಮ ಸಾಕ್ಷಾತ್ಕಾರವು ಆ ದೇವತೆಗಳೊಂದಿಗೆ ಆಗುತ್ತದೆ. ಗ್ರೀಕ್ ಪುರಾಣಕತೆಗಳ ಭೂಮಿಕೆ 45 ಅವು ಶಕ್ತಿಯಲ್ಲಿ ಮಾನವನಿಗಿಂತ ಶ್ರೇಷ್ಠತರವಾಗಿರಲೊಲ್ಲವೇಕೆ, ಆದರೆ ಮೂಲತಃ ರೂಪ-ಗುಣಗಳಲ್ಲಿ ಮಾನವನದೇ ಪ್ರತಿಕೃತಿಗಳಾಗಿವೆ. ಅವೂ ಕೂಡ ಪ್ರೇಮದಿಂದ ಕುರುಡಾಗಿ ಉಚಿತ - ಅನುಚಿತಗಳ ವಿಚಾರವನ್ನು ಕಳೆದುಕೊಳ್ಳುತ್ತವೆ. ಪ್ರಿಯನನ್ನು ಪಡೆಯಲು ಬಗೆ ಬಗೆಯ ರೂಪ ತಾಳುತ್ತವೆ. ಈ ಪ್ರೇಮ ಕತೆಗಳಲ್ಲಿ ಎಲ್ಲಿಯೂ ರೂಪಕಾತ್ಮಕತೆ ಇಲ್ಲ. ಇವು ಅವರ ಭಾವನೆಗಳ ಸೀದಾ ಸಾದಾ ಚಿತ್ರಣಗಳಾಗಿವೆ. ಸ್ಯೂಸ್ ಹೇರಾರ ಪ್ರಣಯ ಮತ್ತು ವಿವಾಹ ಸಂಬಂಧದಲ್ಲಿ ಎಲ್ಲಿಯೂ ಯಾವ ಅನ್ಯೋಕ್ತಿಯೂ ಇಲ್ಲ. ದೇವಸಾಮ್ರಾಜ್ಞಿಯಾದರೂ ಹೇರಾ ಯಾವುದೇ ಸಾಮಾನ್ಯ ಮಾನವ ಹೆಣ್ಣುಗಳಂತೆ ತನ್ನ ಪತಿಯ ಕಾಮುಕ ಸ್ವಭಾವದ ಬಗ್ಗೆ ಶಂಕೆ ತಾಳುತ್ತಾಳೆ. ಅದೇ ಪ್ರಕಾರ ಎರಿಸ್, ಹೆಫಾಸ್ಟಸ್, ಹೆಮೀಜ್, ಆರ್ಟೆಮಿಸ್ ಹೆಸ್ಟಿಯಾ ಮುಂತಾದ ಪ್ರಮುಖ ದೈವಶಕ್ತಿಗಳ ಜೀವನದೊಂದಿಗೆ ಸಂಬಂಧಿಸಿದ ಯಾವುದೇ ಘಟನೆಯನ್ನು ರೂಪಕದ ರೂಪದಲ್ಲಿ ವಿವೇಚನೆ ಮಾಡುವುದು, ನಿರ್ದೋಷಿಯ ಮೇಲೆ ಬಲಪ್ರಯೋಗ ಮಾಡಿದಂತೆಯೇ ಆಗಿದೆ. ಎಚ್.ಜೆ.ರೋಜ್ ತುಂಬ ಸ್ಪಷ್ಟ ಶಬ್ದಗಳಲ್ಲಿ ಈ ಅಭಿಪ್ರಾಯವನ್ನು ನಿರಾಧಾರವೆಂದು ಹೇಳುತ್ತ, ತಮ್ಮ ಪುಸ್ತಕ ‘ಎ ಹ್ಯಾಂಡ್‍ಬುಕ್ ಟು ಮೈಥಾಲಜಿ’ಯ ಪ್ರಸ್ತಾವನೆಯಲ್ಲಿ ಕೆಲವು ಸಂಗತಿಗಳನ್ನು ಬರೆದಿದ್ದಾರೆ. ಈ ಅಭಿಪ್ರಾಯಕ್ಕೆ ಕೆಲಕಾಲದ ಮುಂಚೆ ಗೌರವ ಪ್ರಾಪ್ತವಾಗಿದ್ದರೂ, ನಮ್ಮ ಗ್ರೀಕ ಮತ್ತು ರೋಮ್ ಇತಿಹಾಸದ ಇಂದಿನ ತಿಳಿವಳಿಕೆಯ ಆಧಾರದ ಮೇಲೆ ನಾವು ನಿಶ್ಚಿತವಾಗಿ ಹೇಳಬಹುದಾದ ಸಂಗತಿಯೆಂದರೆ, ಹಿಂದಿನ ವ್ಯಾಖ್ಯಾನವನ್ನು ಸೃಷ್ಟಿ ಮಾಡುವವರ ಬಳಿ ಬ್ರಹ್ಮಾಂಡ ಹಾಗೂ ಅದರ ದೃಶ್ಯ-ಅದೃಶ್ಯ ಶಕ್ತಿಗಳೊಂದಿಗೆ ಸಂಬದ್ಧವಾದ ಯಾವುದೇ ವ್ಯವಸ್ಥಿತವಾದ ದರ್ಶನವಿರಲಿಲ್ಲ ಹಾಗೂ ಅವರ ನೈತಿಕ ಚೈತನ್ಯವೂ ಅಷ್ಟೊಂದು ವಿಕಸಿತವಾಗಿರಲಿಲ್ಲ. ಒಮ್ಮೆ ಅವರು ಯಾವುದೇ ಆಧಾರವನ್ನು ಕೊಡಬಲ್ಲರಾಗಿದ್ದರೆ, ಶತಮಾನಗಳ ಅನಂತರ ಬರುವ ಅವರ ಮಹಾನ್ ದಾರ್ಶನಿಕರಿಗೆ ಅಬಕಡದಿಂದ ಪ್ರಾರಂಭಸಿಬೇಕಾದ್ದು ಇರುತ್ತಿರಲಿಲ್ಲ. ವಾಸ್ತವವಾಗಿ ರೂಪಕ ಎಂಬ ಹೆಸರಿನ ಯಾವುದೇ ರಚನಾವಿಧಾನ ಅವರಿಗೆ ಪರಿಚಿತವಾಗಿರಲಿಲ್ಲ. ಅವರು ಕೇವಲ ತಮ್ಮ ಸಂತೋಷಕ್ಕಾಗಿ ಸೃಷ್ಟಿ ಮಾಡುತ್ತಿದ್ದರು. ಮತ್ತು ಈ ರಚನೆಗಳನ್ನು ಶತಮಾನಗಳ ಅನಂತರ ಕವಿಗಳು ಲೇಖನಿಬದ್ಧಗೊಳಿಸಿದರು. ಈ ಅಭಿಪ್ರಾಯದ ಲೋಕಪ್ರಿಯತೆಯ ಕಾರಣವನ್ನು ತಿಳಿಸುತ್ತ ರೋಜ್ ಬರೆಯುವುದೇನೆಂದರೆ ಗ್ರೀಸ್‍ವಾಸಿಗಳಲ್ಲಿ ತಮ್ಮ ಪೂರ್ವಜರ ಬಗೆಗೆ ಅಸೀಮ ಶ್ರದ್ಧೆಯಿತ್ತು ಹಾಗೂ ಬಹುಶಃ ಈ ಕಾರಣದಿಂದಲೇ ಅವರು ತಮ್ಮ ಶೋಧದ ಶ್ರೇಯಸ್ಸನ್ನು ಅವರಿಗೆ ಕೊಟ್ಟುಬಿಡುತ್ತಿದ್ದರು. ರೂಪಕವು ಗ್ರೀಸ್‍ನಲ್ಲಿ ಲೋಕಪ್ರಿಯವಾಗಿದೆ. ದೇವಸ್ಥಾನಗಳಲ್ಲಿ ಭವಿಷ್ಯವಾಣಿಯನ್ನು ಕೂಡ ಬಹಳ ಕ್ಲಿಷ್ಟ ಶಬ್ದಗಳಲ್ಲಿ ಮಾಡಲಾಗುತ್ತಿತ್ತು. ಬಹುಶಃ ಇದೇ ಕಾರಣದಿಂದಲೇ 46 ಕಥಾ ಸಂಸ್ಕೃತಿ ಒಂದು ಹೇಳಿಕೆಗೆ ಅನೇಕ ಅರ್ಥ ಹೊರಡಿಸುವುದು ರಿವಾಜಿನಂತೆ ಆಗಿಬಿಟ್ಟಿತ್ತು. ಮತ್ತು ಪ್ರತಿಯೊಂದು ಆಖ್ಯಾನದಲ್ಲಿ ಒಂದಕ್ಕಿಂತ ಹೆಚ್ಚು ಅರ್ಥವನ್ನು ಕಾಣಲು ಪ್ರಯತ್ನಗಳು ನಡೆಯತೊಡಗಿದವು. ಪುರಾಣಕತೆಗಳ ಉತ್ಪತ್ತಿಗೆ ಸಂಬಂಧಿಸಿದಂತೆ ಪ್ರಚಲಿತವಾದ ಇನ್ನೊಂದು ಅಭಿಪ್ರಾಯವಿದೆ. ಈ ಆಖ್ಯಾನಗಳ ನಾಯಕರಾದ ದೇವಿ ದೇವತೆಗಳು ಪ್ರಾಚೀನ ಸಮ್ರಾಟರೋ - ಸಾಮ್ರಾಜ್ಞಿಗಳೋ ಅಥವಾ ವೀರ ಯೋಧನೋ ಆಗಿದ್ದು, ಅದರ ದೈವೀಕರಣವಾಗಿದೆ. ಇದು ಸಂಪೂರ್ಣವಾಗಿ ಅಲ್ಲದಿದ್ದರೂ ಆಂಶಿಕವಾಗಿ ಖಂಡಿತವಾಗಿಯೂ ಐತಿಹಾಸಿಕ ಅಥವಾ ಅರೆ ಐತಿಹಾಸಿಕ ವ್ಯಕ್ತಿತ್ವಗಳನ್ನು ಪ್ರತಿನಿಧಿಸುತ್ತವೆ. ಈ ತಿಳಿವಳಿಕೆ ಅವ್ಯವಸ್ಥಿತ ರೂಪದಿಂದ ಮೊದಲಿನಿಂದಲೂ ಇದ್ದೇ ಇತ್ತು. ಆದರೆ ಇದಕ್ಕೊಂದು ಸುಸಂಬದ್ಧ ರೂಪವನ್ನು ಸಿಕಂದರ್ ದಿ ಗ್ರೇಟ್‍ನ ಕೆಲಸಮಯದ ಅನಂತರ ಯುಮೆರಾಸ್ ಮಾಡಿದನು. ಅವನ ಪ್ರಕಾರ ಸ್ಯೂಸ್ ಪ್ರಾಚೀನ ಕ್ರೀಟ್‍ನ ಒಬ್ಬ ಶಕ್ತಿಶಾಲಿ ಸಾಮ್ರಾಟನಾಗಿದ್ದ. ಯುಮೆರಾಸ್‍ನ ಹೇಳಿಕೆ ಸಂಪೂರ್ಣ ತಪ್ಪೆಂದು ನಿರ್ಣಯಿಸಲಾಗುವುದಿಲ್ಲ. ಯಾಕೆಂದರೆ ಮಹಾನ್ - ಶಕ್ತಿಶಾಲಿ ವ್ಯಕ್ತಿತ್ವಗಳ ದೈವೀಕರಣದ ಪ್ರವೃತ್ತಿ ಮನುಷ್ಯನಲ್ಲಿ ಯಾವಾಗಿನಿಂದಲೂ ಇದೆ. ಆದರೆ ಶ್ರೀಮಾನ್ ರೋಜ್ ಹೇಳುವ ಹಾಗೆ, ಮನುಷ್ಯನ ದೈವೀಕರಣಕ್ಕಾಗಿ ಮಾನವ ಮಿದುಳಿನಲ್ಲಿ ದೈವತ್ವದ ಪೂರ್ವ ಅವಧಾರಣೆ ಆಗಬೇಕಾದದ್ದು ಅವಶ್ಯಕ. ಅಲ್ಲದೆ ಈ ಅಭಿಪ್ರಾಯವನ್ನು ಕೆಲವೊಂದು ಆಖ್ಯಾನಗಳಿಗೆ ಅನ್ವಯಿಸಬಹುದೇ ವಿನಾ ಎಲ್ಲವಕ್ಕಲ್ಲ. ಟ್ರಾಯ್ ಯುದ್ಧದ ಐತಿಹಾಸಿಕ ಪರಿಪ್ರೇಕ್ಷ್ಯವನ್ನು ಶ್ಲೀಮನ್‍ನ ಪ್ರಯತ್ನವು ಇಂದಿಗೆ ನೂರು ವರ್ಷ ಮುಂಚೆಯೇ ಸಿದ್ಧ ಮಾಡಿಬಿಟ್ಟಿದೆ. ಗ್ರೀಕ್‍ನಾಗರಿಕತೆಯ ಆರಾಧಕರಾದ ಈ ಜರ್ಮನ್‍ರು ಟ್ರಾಯ್‍ನಗರವನ್ನು ಅಗೆದು ತೆಗೆದದ್ದು ಮಾತ್ರವಲ್ಲ, ಅದಕ್ಕಿಂತಲೂ ನೂರಾರು ವರ್ಷ ಹಿಂದಿನ ಕ್ರೀಟ್ ನಾಗರಿಕತೆಯ ಅವಶೇಷ, ಮಾಯನೋಸ್‍ನ ಅರಮನೆ, ಬಂಗಾರದ ಆಭರಣಗಳ ರಾಶಿ, ಒಂದರ ಮೋಲೊಂದರಂತೆ ನಿರ್ಮಾಣಗೊಂಡ ಒಂಬತ್ತು ನಗರಗಳನ್ನು ಭೂಗರ್ಭದಿಂದ ಹೊರತೆಗೆದು ಜಗತ್ತೇ ಆಶ್ಚರ್ಯ ಚಕಿತವಾಗುವಂತೆ ಮಾಡಿದರು. ಹೆರಾಕ್ಲೀಸ್ ಅವಶ್ಯವಾಗಿಯೂ ಪ್ರಾಚೀನ ಗ್ರೀಸ್‍ನ ಯಾವುದೋ ಮಹಾನ್‍ಯೋಧ ಆಗಿದ್ದಿರಬಹುದು. ಬಹುಶಃ ಓಡಿಸಿಯಸ್ ಎಂಬ ಹೆಸರಿನ ಯಾವುದೋ ವ್ಯಕ್ತಿಯು ಸಮುದ್ರದ ಮೂಲಕ ಬಹುದೊಡ್ಡ ಯಾತ್ರೆಯನ್ನು ಕೈಗೊಂಡಿರಬೇಕು. ಅದನ್ನು ಆಧರಿಸಿ ಹೋಮರ್ ‘ಓಡಿಸೀ’ ಮಹಾಕಾವ್ಯ ರಚನೆ ಮಾಡಿದ. ಸಂಸ್ಕೃತದ ವಿದ್ವಾಂಸರಾದ ಶ್ರೀ ಮ್ಯಾಕ್ಸಮುಲ್ಲರ್ ಪ್ರಕಾರ ಪುರಾಣಕತೆಗಳ ಹುಟ್ಟು ಭೌತಿಕಶಕ್ತಿಗಳ ಕಲ್ಪನಾಶೀಲ ನಿರೂಪಣೆಯಿಂದ ಉಂಟಾಗಿದ್ದು, ಆಕಾಶದ ಯಾವ ದೇವತೆಯೂ ಇಲ್ಲ, ಆಕಾಶವೇ ದೇವತೆ. ಸೂರ್ಯನ ಯಾವುದೇ ಗ್ರೀಕ್ ಪುರಾಣಕತೆಗಳ ಭೂಮಿಕೆ 47 ದೇವತೆ ಇಲ್ಲ ಸೂರ್ಯನೇ ದೇವತೆ. ಹೀಗೆಯೇ ನದಿಯ ದೇವತೆ ಅಥವಾ ದೇವಿ ನದಿಯೇ ಆಗಿದೆ. ಈ ರೀತಿಯಲ್ಲಿ ಆದಿ ಮಾನವನು ತನ್ನ ಸೀಮಿತ ಶಬ್ದಾವಳಿಗಳಲ್ಲಿ ಪ್ರಾಕೃತಿಕ ಶಕ್ತಿಗಳ ಮಾನವೀಕರಣ ಮಾಡಿದ. ಆದರೆ ವಿಚಾರ ಮಾಡಬೇಕಾದ ಸಂಗತಿಯೆಂದರೆ, ಸ್ಯೂಸ್ ಆಕಾಶವಲ್ಲ, ಆಕಾಶವು ಅವನ ನಿವಾಸ. ಪೊಸಾಯ್ಡನ್ ಸಮುದ್ರವಲ್ಲ, ಸಮುದ್ರ ಅವನ ಅರಮನೆ. ಹೀಗೆಯೇ ಹೆಡಿಸ್ ಭೂಗರ್ಭವಲ್ಲ, ಭೂಗರ್ಭದಲ್ಲಿ ಅವನ ಆಡಳಿತವಿದೆ. ಆದ್ದರಿಂದ ಈ ದೇವತೆಗಳನ್ನು ಪ್ರಾಕೃತಿಕ ಶಕ್ತಿಗಳ ಮಾನವೀಕರಣವೆನ್ನಲಾಗುವುದಿಲ್ಲ. ನಾವು ಈ ಮೊದಲೇ ಹೇಳಿದಂತೆ, ಭಾಷೆಯ ಅಲಂಕಾರಗಳ ಪರಿಚಯ ಪ್ರಾಚೀನ ಮಾನವನಿಗೆ ಇರಲಿಲ್ಲ. ದೇವ ಜಗತ್ತಿನ ಸೃಷ್ಟಿಯಲ್ಲಿ ಅವನ ಬುದ್ಧಿಗಿಂತ ಕಲ್ಪನೆಯೇ ಹೆಚ್ಚು ಸಕ್ರಿಯವಾಗಿತ್ತು. ಮಾನವ ಮನಸ್ಸಿನ ಕಲ್ಪನೆಯು ಮನೋವಿಜ್ಞಾನದ ಕ್ಷೇತ್ರಕ್ಕೆ ಸೇರಿದ್ದು. ಹಾಗಾಗಿ ಫ್ರೈಡ್ ಹಾಗೂ ಯೂಂಗ್‍ನ ಶಿಷ್ಯರು ಕೂಡ ಈ ಆಧಾರದ ಮೇಲೆ ಪುರಾಣಕತೆಗಳ ಉತ್ಪತ್ತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರ ಹೇಳಿಕೆಯಂತೆ “ಪುರಾಣ ಕತೆಗಳು, ಪೂರ್ವ ಚೇತನ ಮನಸ್ಸಿನ ಮೌಲಿಕವಾದ ರಹಸ್ಯೋದ್ಘಾಟನೆ, ಅಚೇತನ ಮನಸ್ಸಿನ ಘಟನೆಗಳ ಸಂಕಲ್ಪರಹಿತ ಹೇಳಿಕೆ” ಆದರೆ ಗ್ರೀಕ್ ಪ್ರಾಚೀನ ಆಖ್ಯಾನಗಳಲ್ಲಿ ಸ್ವಲ್ಪವೂ ರಹಸ್ಯಾತ್ಮಕತೆ ಮತ್ತು ಸಂದಿಗ್ಧಗಳಿಲ್ಲ. ಒಂದು ಬಗೆಯ ಸ್ಪಷ್ಟತೆ ಗ್ರೀಸ್‍ವಾಸಿಗಳ ವೈಶಿಷ್ಟ್ಯವಾಗಿದೆ. ಭಾವನೆಗಳ ದಮನವನ್ನು ಕಲಿಸುವ ನೈತಿಕ ಮೌಲ್ಯಗಳವರೆಗೂ ವಿಕಸಿತವಾಗಿರಲಿಲ್ಲ. ರಾಬರ್ಟ ಗ್ರೇವ್ಸನು ‘ದಿ ಗ್ರೀಕ್ ಮಿಥ್ಸನ ಪ್ರಸ್ತಾವನೆಯಲ್ಲಿ ಹೇಳಿದ್ದಾನೆ - ಸಾಮೂಹಿಕ ಹಬ್ಬಗಳಲ್ಲಿ ನಡೆಯುವ ಪ್ರಹಸನ ಅನುಷ್ಠಾನಗಳ ಆಶುಲಿಪಿಯಲ್ಲಿ ದೊರೆತ ವರ್ಣನೆಗಳನ್ನೇ ನಿಜವಾದ ಪುರಾಣ ಕತೆಗಳ ರೂಪದಲ್ಲಿ (ಮಿಥ್) ಪರಿಭಾಷಿತಗೊಳಿಸಬಹುದಾಗಿದೆ. ಬಹುಶಃ ಇವುಗಳನ್ನೇ ಚಿತ್ರಗಳ ರೂಪದಲ್ಲಿ, ಮಂದಿರದ ಗೋಡೆಗಳ ಮೇಲೆ, ಹೂದಾನಿಗಳು, ಬಟ್ಟಲುಗಳು, ಕನ್ನಡಿಗಳು, ಪೆಟ್ಟಿಗೆಗಳು, ಕವಚಗಳು ಮತ್ತು ಸಚಿತ್ರ ಪರದೆಗಳ ಮೇಲೆ ದಾಖಲಿಸಲಾಗಿದೆ. ಹೀಗೆ ಗ್ರೇವ್ಸ ಪ್ರಕಾರ ಪ್ರಾಚೀನ ಗ್ರೀಸ್ ನಿವಾಸಿಗಳು ಕಾಲಕಾಲಕ್ಕೆ ಆಯೋಜಿಸುತ್ತಿದ್ದ ಸಾಮೂಹಿಕ ಅನುಷ್ಠಾನಗಳು ನಾಟಕೀಯ ಪ್ರದರ್ಶನಗಳಿಂದ ಪುರಾಣ ಕತೆಗಳ ಉತ್ಪತ್ತಿಯಾಗಿದೆ. ಗ್ರೇವ್ಸ ಯೂರೋಪನ ಇತಿಹಾಸ, ಧರ್ಮ, ಪುರಾತತ್ವ ರಾಜನೀತಿ, ಹಾಗೂ ಮಾನವ ವಿಜ್ಞಾನದ ಆಳವಾದ ಅಧ್ಯಯನದ ಅನಂತರ ಈ ಫಲಿತಾಂಶಕ್ಕೆ ಬಂದು ತಲುಪುತ್ತಾನೆ; ದೂರದ ಉತ್ತರ ಹಾಗೂ ಪೂರ್ವದಿಂದ ಆರ್ಯರು ಬರುವ ಮುನ್ನ ಯೂರೋಪನಲ್ಲಿ ಧಾರ್ಮಿಕ ವಿಚಾರಗಳಲ್ಲಿ ಒಂದು ಸಮಾನರೂಪದ ಪದ್ಧತಿ ಇತ್ತು, ಹಾಗೂ ಅದರ ಆಧಾರವೆಂದರೆ ಬಹಳಷ್ಟು ಉಪಾಧಿಗಳ ಮಾತೃದೇವಿಯ ಅರ್ಚನೆ - ಸಿರಿಯಾ - ಲಿಬಿಯಾಗಳಲ್ಲೂ ಪ್ರಚಲಿತವಿದ್ದ ಹಾಗೆ. 48 ಕಥಾ ಸಂಸ್ಕೃತಿ “ಪ್ರಾಚೀನ ಯೂರೋಪ್‍ನಲ್ಲಿ ದೇವತೆಗಳಿರಲಿಲ್ಲ. ಅನಾದಿಯಾದ, ಪರಿವರ್ತನೆಯಿಲ್ಲದ, ಸರ್ವವ್ಯಾಪಿಯೆಂದು ಭಾವಿಸಲಾಗುತ್ತಿದ್ದ ಒಬ್ಬ ದೇವಿಯಿದ್ದಳು. ಧಾರ್ಮಿಕ ಪದ್ಧತಿಯಲ್ಲಿ ಪಿತೃತ್ವದ ಅವಧಾರಣೆಯು ಸೇರಿಕೊಂಡಿರಲಿಲ್ಲ. ಅವಳು ಪ್ರೇಮಿಯನ್ನು ತನ್ನ ಸುಖಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಳು, ತನ್ನ ಮಕ್ಕಳಿಗೆ ಅಪ್ಪನನ್ನ ಕೊಡುವುದಕ್ಕಾಗಿ ಅಲ್ಲ. ಪುರುಷರು ಮಾತೃದೇವಿಯ ಬಗ್ಗೆ ಭಯ ತಾಳುತ್ತಿದ್ದರು. ಅವಳ ಆರಾಧನೆ ಮಾಡುತ್ತಿದ್ದರು. ಅವಳ ಆಜ್ಞೆಯನ್ನು ಪಾಲಿಸುತ್ತಿದ್ದರು. ಅವಳು ಪೋಷಿಸುತ್ತಿದ್ದ, ಅಗ್ನಿಕುಂಡವುಳ್ಳ ಆ ಗುಹೆ ಅಥವಾ ಮನೆಯೇ ಅವಳ ಸರ್ವಪ್ರಥಮ ಸಮಾಜ ಕೇಂದ್ರವಾಗಿತ್ತು. ಮತ್ತು ಮಾತೃತ್ವವೆಂಬುದು ಅವಳ ಗಹನತಮರಹಸ್ಯ. ಈ ಕಾರಣದಿಂದಲೇ ಗ್ರೀಸ್‍ವಾಸಿಗಳು ಸಾಮೂಹಿಕ ರೂಪದಿಂದ ಬಲಿ ಅರ್ಪಿಸುವಾಗ ಮೊದಲ ಕಾಣಿಕೆ ಸದಾ ಅಗ್ನಿಕುಂಡದ ರಕ್ಷಕಿಯಾದ ‘ಹೇಸ್ಟಿಯಾ’ಳಿಗೆ ಅರ್ಪಿತವಾಗುತ್ತಿತ್ತು.” ಈ ಸಿದ್ಧಾಂತದ ಪ್ರಕಾರ ಚಂದ್ರ ಹಾಗೂ ಸೂರ್ಯರು ಮಾತೃದೇವತೆಯ ಪ್ರತೀಕವಾಗಿದ್ದರು. ಕಾಲಾಂತರದಲ್ಲಿ ಚಂದ್ರನಿಗೆ ಸೂರ್ಯನಿಗಿಂತ ಹೆಚ್ಚಿನ ಮಾನ್ಯತೆ ದೊರಕತೊಡಗಿತು. ಯಾಕೆಂದರೆ ಅವನು ರಾತ್ರಿಗೆ ಸಂಬಂಧಿಸಿದ ತನ್ನ ಕಡಿಮೆಯಾಗುವ ವೃದ್ಧಿಸುವ ಆಕಾರದಿಂದಾಗಿ ಅಂಧವಿಶ್ವಾಸದ ಭಯವನ್ನು ಹುಟ್ಟಿಸುತ್ತಾನೆ, ಮತ್ತು ಸ್ತ್ರೀ ಜೀವನವನ್ನು ನಿರೂಪಿಸುತ್ತಾನೆ. ಅವನ ಹೊಸ, ಪೂರ್ಣ ಹಾಗೂ ಕ್ಷಯಿಸಿದ ರೂಪವನ್ನು ಮಾತೃದೇವಿಯ ಮೂರು ಅವಸ್ಥೆಗಳೊಂದಿಗೆ ಜೋಡಿಸಲಾಗುತ್ತದೆ - ಕನ್ಯಾ (ಮೆಡನ್) ಅಪ್ಸರಾ (ನಿಂಫ) ಮತ್ತು ಅರೆಮರಳುವೃದ್ಧೆ (ಕ್ರೋನ್) ಅಲ್ಲದೆ ಮಾತೃದೇವಿಯ ಈ ಅವಸ್ಥೆಗಳನ್ನು ಋತುಗಳೊಂದಿಗೂ ಹೊಂದಿಸಬಹುದು - ವಸಂತಾಕನ್ಯಾ, ಗ್ರೀಷ್ಮ ಅಪ್ಸರಾ, ಮತ್ತು ಶೀತವೃದ್ಧಾ. ಕನ್ಯೆಯನ್ನು ಆಕಾಶ, ರೂಪಸಿಯಾದ ಯುವತಿಯನ್ನು ಪೃಥ್ವಿ ಹಾಗೂ ಸಮುದ್ರ, ವೃದ್ಧೆಯನ್ನು ಪಾತಾಲವೆಂದು ಹೇಳಲಾಯಿತು. ಇವುಗಳನ್ನು ಕ್ರಮಶಃ ಪ್ರತಿನಿಧಿಸುವವರೆಂದರೆ - ಸಿಲೋನೆ, ಅಫ್ರೊದಿತೆ ಮತ್ತು ಹೆಕ್ಟಿ. ಇವು ಮೂಲತಃ ಒಂದೇ ದೇವಿಯ ಮೂರು ಹೆಸರುಗಳು. ಮತ್ತು ಆ ದೇವಿಯ ಉಪಾಸನೆಯು ಬಹುಕಾಲದವರೆಗೆ ಹೆರಾಳ ಹೆಸರಿನಿಂದ ಆಯಿತು. ಕಾಲಾಂತರದಲ್ಲಿ ಪುರುಷರ ಧಾರ್ಮಿಕ ಸ್ಥಿತಿ ಸುಧಾರಿಸಿತು. ಹಾಗೂ ಹುಟ್ಟಿನಲ್ಲಿ ಅವನ ಮಹತ್ವವನ್ನು ಸ್ವೀಕರಿಸತೊಡಗಿದರು. ಪಂಗಡದ ಯುವತಿಯು (ನಿಂಫ್) ಈಗಲೂ ಪಂಗಡದ ಯಾವುದಾದರೂ ಯುವಕನನ್ನು ತನ್ನ ಪ್ರೇಮಿಯ ರೂಪದಲ್ಲಿ ಆಯ್ಕೆ ಮಾಡುತ್ತಿದ್ದಳು. ಮತ್ತು ಒಂದು ವರ್ಷದ ಅನಂತರ ಆ ಯುವಕನನ್ನು ಬಲಿಗೊಟ್ಟು, ಅವನ ರಕ್ತವನ್ನು ಒಳ್ಳೆಯ ಬೆಳೆಗಾಗಿ ಹೊಲದಲ್ಲಿ ಸಿಂಪಡಿಸಲಾಗುತ್ತಿತ್ತು. ಹೀಗೆ ಪ್ರಜನನಕ್ಕೆ ಪುರುಷ ಸಂಬಂಧವನ್ನು ಜೋಡಿಸಲಾಯಿತಾದರೂ ಈಗಲೂ ಅವನು ಮಾತೃದೇವತೆಯ ಅಧೀನದಲ್ಲೇ ಇದ್ದ. ಮಾತೃ ಅಧಿಕಾರ ಕ್ಷೀಣಿಸಿದ ಅನಂತರವೂ ಗ್ರೀಕ್ ಪುರಾಣಕತೆಗಳ ಭೂಮಿಕೆ 49 ಅನೇಕಕಾಲ ಹೀಗೆಯೇ ನಡೆಯಿತು. ವಿಶೇಷ ಸಂದರ್ಭಗಳಲ್ಲಿ ಅವನು ಆಗಲೂ ಸ್ತ್ರೀ ವಸ್ತ್ರಧಾರಣ ಮಾಡುತ್ತಿದ್ದ. ಆದರೆ ನಿಧಾನವಾಗಿ ಅವನ ಬಲಿ ಪದ್ಧತಿ ನಿಂತಿತು ಹಾಗೂ ಅವನ ಬದಲಿಗೆ ಪಶುಬಲಿ ಕೊಡಲು ಪ್ರಾರಂಭವಾಯಿತು. ಪರಸಿಯಸ್ ಕೈಯಲ್ಲಿ ಹೆಲೆನಿಸ್ ಮೂಲಕ ಗಾರಗನ್ ಮೆಂಡೂಸಾ ವಧೆಯು ಮಾತೃದೇವಿಯ ಪ್ರಮುಖ ಮಂದಿರಗಳಲ್ಲಿ ನಾಶದ ಪ್ರತೀಕವಾಗಿದೆ. ಬೆಲರಫೆನ್ ಕಿಮೆರಾನ ವಧೆ ಮಾಡುವುದರ ಅರ್ಥವೆಂದರೆ, ಹೆಲನಿಸ್ ಆಕ್ರಮಣಕಾರಿಗಳು ಮೆಂಡೂಸಾನ ಹಳೆಯ ಕ್ಯಾಲೆಂಡರನ್ನು (ಕಿಮೆರಾ ಸರ್ಪದತಲೆ, ಕುರಿಯ ಶರೀರ, ಸರ್ಪದ ಬಾಲದ ಕಾರಣದಿಂದ ವರ್ಷದ ಪ್ರತೀಕ) ಮುಕ್ತಾಯಗೊಳಿಸಿ ತಿಂಗಳು ಎಣಿಕೆಯ ಹೊಸ ಪದ್ಧತಿಯನ್ನು ಪ್ರತಿಪಾದನೆ ಮಾಡಿದನು. ಡೆಲ್ಫಿಯಲ್ಲಿ ಅಪೊಲೋ ಮೂಲಕ ಪಾಯಥನ್ ಹತ್ಯೆಯು ಬಹುಶಃ ಎಕಿಯನ್ಸ ಮೂಲಕ ಕ್ರೀಟನ ಪೃಥ್ವಿದೇವಿಯ ಮಂದಿರವನ್ನು ವಶಮಾಡಿಕೊಳ್ಳುವ ಘಟನೆಯ ಕಲ್ಪನಾಶೀಲ ವಿವರಣೆಯಾಗಿದೆ. ಡಾಫನೆಯ ಸತೀತ್ವ ಭಂಗಕ್ಕಾಗಿ ಅಪೊಲೋ ಪ್ರಯತ್ನ ಮತ್ತು ಹೆರಾ ಅವನನ್ನು ಲಾರೆಲ್ ವೃಕ್ಷವಾಗಿ ಪರಿವರ್ತಿಸುವುದು ಕೂಡ ಇದನ್ನೇ ಸಂಕೇತಿಸುತ್ತದೆ. ಕ್ರಿ.ಪೂ. 13ನೇ ಶತಮಾನದ ಎಕಿಯನ್ಸ ಮತ್ತು ಅವನ ನಂತರದ ಡೊರಿಯನ್ಸನ ಆಕ್ರಮಣದೊಂದಿಗೆ ಮಾತೃಸತ್ವ ಪೂರ್ಣ ಕೊನೆಗೊಂಡಿತು. ಆಗ ಸ್ತ್ರೀಯು ವಿವಾಹದ ಅನಂತರ ತನ್ನ ಮನೆಬಿಟ್ಟು ಪತಿಯ ದೇಶಕ್ಕೆ ಹೋಗತೊಡಗಿದಳು. ಹೆಸ್ಟಿಯಾ ಸ್ಥಾನವನ್ನು ಓಲಿಂಪಸ್ ಮೇಲೆ ಡಯನಾಯ್ಸಸ್ ಸ್ವೀಕರಿಸಿದನು. ಸ್ಯೂಸ್‍ನು ಮೆಟಿಸ್‍ನನ್ನು ನುಂಗುವುದು, ತಲೆಯಿಂದ ಎಥಿನಿಗೆ ಜನ್ಮಕೊಡುವುದು, ಎಥಿನಿ ಪಿತೃಸತ್ತೆಯನ್ನು ಒಪ್ಪಿಕೊಳ್ಳುವುದು - ಈ ಎಲ್ಲವೂ ಈ ವಿಚಾರಧಾರೆಯನ್ನು ಪುಷ್ಟೀಕರಿಸುತ್ತವೆ. ಪುರಾಣಕತೆಗಳು ಮೂಲತಃ ‘ಅನುಭೂತ ತಥ್ಯಗಳನ್ನಾಧರಿಸಿದ ಉದ್ದೀಪ್ತ ಕಲ್ಪನೆಯ ಪರಿಣಾಮ’ (ರೋಜ್). ಇವುಗಳಲ್ಲಿ ಅಕ್ಕಪಕ್ಕದ ವಾತಾವರಣ, ಪ್ರಾಕೃತಿಕ ಘಟನೆಗಳು, ಮತ್ತು ಅದರ ಬಗ್ಗೆ ಮಾನವನ ಪ್ರತಿಕ್ರಿಯೆಗಳು ಆಗಿವೆ. ಅಲ್ಲಲ್ಲಿ ಆ ಕಾಲದ ರಾಜನೀತಿಕ ಘಟನೆಗಳು, ಅರೆ ಐತಿಹಾಸಿಕ ವ್ಯಕ್ತಿಗಳ ಸಮಾವೇಶವೂ ಆಗಿದ್ದು, ಸಾಗಾ (Saga) ಕ್ಷೇತ್ರವಾಗಿದೆ. ಸಾಗಾದೊಂದಿಗಿನ ಇವುಗಳ ಸಂಬಂಧವನ್ನು ಸ್ಪಷ್ಟಪಡಿಸಬೇಕಾಗಿದೆ. ಮಿಥ್, ಸಾಗಾ ಹಾಗೂ ಮಾರ್ಥೆನ್ ಮೂರು ಭಿನ್ನ ಶೈಲಿಗಳಿವೆ. ಮನುಷ್ಯನು ನಾಯಕನಾಗಿರುವ ರಚನೆಯನ್ನು ಸಾಗಾ ಎಂದು ಹೇಳಲಾಗುತ್ತದೆ. ಇವು ಮರೆತ ಐತಿಹಾಸಿಕ ವ್ಯಕ್ತಿತ್ವದ್ದೂ ಆಗಿರಬಹುದು. ಸಾಗಾ ಇಂಥ ವ್ಯಕ್ತಿಗಳ ಕಾರ್ಯ ಸಾಹಸಗಳ ಗಾಥೆಯಾಗಿದೆ. ಮತ್ತು ಮಾರ್ಯೆನ್ ಮುಖ್ಯವಾಗಿ ಮನೋರಂಜನೆ ಮಾಡುವ ಕಥೆಗೆ ಹೇಳಲಾಗುತ್ತದೆ. ಇವುಗಳಿಗೆ ಇಂಗ್ಲೀಷ್ನಲ್ಲಿ ಫೇರಿಟೇಲ್ಸ (ದೇವದೂತರ ಕತೆಗಳು) ಎಂದೂ ಹೇಳಲಾಗುತ್ತದೆ. 50 ಕಥಾ ಸಂಸ್ಕೃತಿ ಸಿಕ್ಕ ಕೆಲವು ಪುರಾಣ ಕತೆಗಳಲ್ಲಿ ಅನೇಕ ಕಡೆ ಮೂರು ಶೈಲಿಗಳು ಪರಸ್ಪರ ಹೆಣೆದುಕೊಂಡಿರುವುದರಿಂದ ‘ಮಿಥ್’ನ್ನು ಬೇರ್ಪಡಿಸುವುದು ಅಸಂಭವವೆನಿಸುತ್ತದೆ. ಹೆರಾಕ್ಲಿಸ್, ಓಡಿಸ್ಯೂಸ್, ಎಗನೊಟಸ್‍ರ ಯಾತ್ರೆಯ ವಿವರಣೆಯಲ್ಲಿ ಈ ಮೂರರ ಮಿಶ್ರಣವಿದೆ. ಪಿರೆಯಸ್ ಥಿಸ್‍ಬಿ ಹಾಗೂ ನೊರೊಸಿಸಸ್ ಈಕೋ ಸಂವೇದನಶೀಲ ಪ್ರೇಮಕತೆಗಳು, ಪಿಗ್‍ಮೆಲಿಯನ್ ಗೆಲೋಶಿಯಾ ಮೂಲತಃ ಮನೋರಂಜನೆಗಾಗಿ. ಹಾಸ್ಯ-ವಿನೋದದ ಪ್ರಸಂಗಗಳೂ ಅಲ್ಲಲ್ಲಿ ದೊರಕುತ್ತವೆ. - ಹೆರಾಕ್ಲಿಸ್, ಆಂಫೆಲ್, ಪೈನ್ ಕತೆಗಳಲ್ಲಿ ಹೀಗಿವೆ. ಕೆಲವು ಕಥೆಗಳು ಸ್ಪಷ್ಟವಾಗಿ ಉಪದೇಶಾತ್ಮಕವಾಗಿವೆ. ವಾಸ್ತವವಾಗಿ ನಮ್ಮ ಮುಂದಿರುವ ಪುರಾಣಕತೆಗಳು ಮಹಾನ್ ಕವಿಗಳು - ಲೇಖಕರ ಲೇಖನಿಯ ಚಮತ್ಕಾರಗಳು. ಅವುಗಳ ಮೂಲರೂಪ ಏನಿರಬಹುದೆಂಬುದನ್ನು ಊಹಿಸುವುದು ಕಷ್ಟ. ಅವುಗಳ ಕಾಲವೂ ಅನಿಶ್ಚಿತ. ಎಲ್ಲಕ್ಕಿಂತ ಮೊದಲು ಯಾವಾಗ ಹೇಗೆ ಯಾವುದೇ ಕತೆ ಮೂಲರೂಪದಲ್ಲಿ ಅಸ್ತಿತ್ವಕ್ಕೆ ಬಂದಿತು, ತಲೆಮಾರಿನಿಂದ ತಲೆಮಾರಿಗೆ ಅದರಲ್ಲಿ ಏನು ಪರಿವರ್ತನೆಗಳಾದವು, ಒಬ್ಬನು ಇನ್ನೊಬ್ಬನಿಗೆ ಕತೆ ಹೇಳುವಾಗ ಏನನ್ನು ಜೋಡಿಸಿದನು ಅಥವಾ ಏನನ್ನು ತೆಗೆದು ಹಾಕಿದನು - ಇದನ್ನು ಹೇಳಲು ಸಾಧ್ಯವಿಲ್ಲ. ಈ ಪುರಾಣಕತೆಗಳು ಯಾವುದೋ ಒಂದು ಕಾಲದ ವ್ಯಕ್ತಿ ಅಥವಾ ಜಾತಿಯ ಕಲ್ಪನೆಯ ಪರಿಣಾಮಗಳಲ್ಲ. ಗ್ರೀಕ್ ಕವಿಗಳವರೆಗೆ ಇವು ತಲುಪಲು ಅನೇಕ ತಲೆಮಾರುಗಳ ಕೊಡುಗೆಯಿದೆ. ಭಾರತೀಯ ಕಥಾ ಪರಂಪರೆ 51 ಭಾರತೀಯ ಕಥಾ ಪರಂಪರೆ - ರಾಧಾವಲ್ಲಭ ತ್ರಿಪಾಠಿ ಭಾರತದೇಶವು ಕತೆಗಳ ಜನ್ಮಭೂಮಿ, ಇದು ಕತೆಗಳ ಆದಿದೇಶ. ಮನುಷ್ಯನು ಈ ದೇಶದ ಭೂಮಿಯ ಮೇಲೆ ಮೊದಲಬಾರಿ ಕಾಲೂರಿದಾಗಿನಿಂದ ಬಹುಶ: ನಮ್ಮಲ್ಲಿ ಕತೆಗಳು ಪ್ರಚಲಿತವಾಗಿರಬಹುದು. ಋಗ್ವೇದವು ವಿಶ್ವಸಾಹಿತ್ಯದ ಪ್ರಾಚೀನತೆಯ ಗ್ರಂಥ . ಅದರ ರಚನೆಯು ಕ್ರಿ. ಪೂ. ಕೆಲವು ಸಾವಿರ ವರ್ಷಗಳಷ್ಟು ಮೊದಲೇ ಆಗಿತ್ತು. ಋಗ್ವೇದಿಕ ಸಮಾಜದಲ್ಲಿ ಅನೇಕ ಮಿಥ್‍ಗಳು, ಕಿಂವದಂತಿಗಳು ರೂಪುಗೊಂಡಿದ್ದವು. ಕತೆ ಈ ಮಿಥ್ ಹಾಗೂ ವದಂತಿಗಳಲ್ಲಿ ಒಳನುಸುಳಿಕೊಂಡಿವೆ. ಇಂದ್ರನ ಚರಿತ್ರಗಾಥೆಯು ತನ್ನಷ್ಟಕ್ಕೆ ತಾನೆ ಕಾದಂಬರಿಯ ವಿಸ್ತಾರವನ್ನು ಒಳಗೊಂಡ ಕತೆಯ ಮೂಲಾಧಾರವನ್ನು ಎದುರು ಇಡುತ್ತದೆ. ಈ ದೃಷ್ಟಿಯಿಂದ ಋಗ್ವೇದದ ಈ ಅಂಶ ಓದಬಹುದಾದ್ದು- “ವಜ್ರಧಾರಿಯಾದ ಇಂದ್ರನು ಎಲ್ಲಕ್ಕೂ ಮೊದಲು ತೋರಿಸಿದ ಪರಾಕ್ರಮವನ್ನು ನಾನು ವರ್ಣಿಸುತ್ತೇನೆ. ಅವನು ಅಹಿಯನ್ನು (ಆ ಹೆಸರಿನ ರಾಕ್ಷಸ) ಕೊಂದನು, ನೀರಿನ ಧಾರೆಯನ್ನು ಪ್ರವಹಿಸಿದನು, ಪರ್ವತಗಳ ಮೇಲೆ ನದಿಗಳಿಗೆ ದಾರಿಯನ್ನು ತೆರೆದನು. ಇಂದ್ರನು ಪರ್ವತದ ಮೇಲೆ ಇರುತ್ತಿದ್ದ ಅಹಿಯನ್ನು ಕೊಂದು ಹಾಕಿದನು. ತ್ವಷ್ಟ್ರನು ಇಂದ್ರನಿಗಾಗಿ ವಜ್ರವನ್ನು ತಯಾರಿಸಿದ್ದನು. (ಇಂದ್ರನು ನದಿಗಳಿಗೆ ದಾರಿಯನ್ನು ತೆರೆಯುತ್ತಲೇ ಅಂಬಾ ಎಂದು ಓಡುವ ದನಗಳ ಹಾಗೆ ನೀರು ಕೆಳದಿಕ್ಕಿನಲ್ಲಿ ಹರಿಯಿತು.) ಅವನು ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಸೋಮಪಾನವನ್ನು ಮಾಡಿದನು. ಮತ್ತು ವಜ್ರದಿಂದ ಅಹಿಯನ್ನು ಪ್ರಹಾರ ಮಾಡಿದನು. ಇಂದ್ರನು ಮಾಯಾವಿಗಳ ಮಾಯೆಯನ್ನು ವಿರೋಧಿಸಿದನು. ಅವನು ಸೂರ್ಯ, ಉಷೆ ಹಾಗೂ ಆಕಾಶವನ್ನು ತೆರೆದನು. ಅನಂತರ ಇಂದ್ರನಿಗೆ ಯಾರೂ ಶತ್ರಗಳು ಇರಲಿಲ್ಲ. ಇಂದ್ರನು ವೃತ್ರನ ಅಂಗಗಳನ್ನು ಮರದ ಟೊಂಗೆಗಳನ್ನು ಕತ್ತರಿಸುವಂತೆ ಕತ್ತರಿಸಿ ಹಾಕಿದನು. ವೃತ್ರನು ಭೂಮಿಯ ಮೇಲೆ ಬಿದ್ದನು. ಮದ್ಯಪಾನ ಮಾಡಿ ವೃತ್ರನು ವೀರ ಇಂದ್ರನೊಡನೆ ಯುದ್ಧಕ್ಕೆ ಹೋಗಿದ್ದನು. ಇಂದ್ರನು ಸೋಮಪಾನಿ, ಅನೇಕ ಶತ್ರುಗಳನ್ನು ದಮನ ಮಾಡಿದವನು. ವೃತ್ರನು ಇಂದ್ರನ ಪ್ರಹಾರವನ್ನು ಸಹಿಸುವುದು ಹೇಗೆ ಸಾಧ್ಯ? ಅವನು ಹೀನಾಯವಾಗಿ ಸೋತನು. ಕೈ-ಕಾಲು ಕತ್ತರಿಸಿದರೂ ಅವನು ಇಂದ್ರನೊಡನೆ ಯುದ್ಧವನ್ನು ಮುಂದುವರಿಸಿದನು. ಇಂದ್ರನು ಅವನ 52 ಕಥಾ ಸಂಸ್ಕೃತಿ ಬೆನ್ನ ಮೇಲೆ ವಜ್ರದಿಂದ ಪ್ರಹಾರ ಮಾಡಿದನು. ಸಾಧಾರಣ ಎತ್ತು ಗೂಳಿಯನ್ನು ಎದುರಿಸಿ ನಿಲ್ಲಬಲ್ಲುದೇ?. ವೃತ್ರನು ಚೂರು ಚೂರಾದನು. ಆಗ ನೀರಿನ ಪ್ರವಾಹವು ಜನರ ಬಾಯಾರಿಕೆಯನ್ನು ನೀಗಿಸಲು ವೃತ್ರನ ಮೇಲಿಂದ ಹರಿಯಿತು. ವೃತ್ರನು ನೀರಿನ ಪ್ರವಾಹವನ್ನು ಬಲವಂತವಾಗಿ ತಡೆದಿದ್ದ . ಈಗ ಅದೇ ನೀರು ‘ಅವನನ್ನು ತುಳಿಯುತ್ತ ಹರಿದುಹೋಯಿತು. ಇಂದ್ರನು ವೃತ್ರನ ಶಕ್ತಿಹೀನ ತಾಯಿಯನ್ನು ಪ್ರಹಾರ ಮಾಡಿದನು. ತಾಯಿ ಮೇಲಿದ್ದಳು. ವೃತ್ರನು ಕೆಳಗಡೆ ಬಿದ್ದಿದ್ದನು. ಹಸುವು ಕರುವಿನೊಂದಿಗೆ ಬೀಳುವ ಹಾಗೆ ವೃತ್ರನ ತಾಯಿಯು ಬಿದ್ದಿದ್ದಳು. ವೃತ್ರನ ಶರೀರವು ಚಲಿಸುವ ಜಲ ಧಾರೆಯಲ್ಲಿ ಬಿದ್ದಿತ್ತು. ಆ ನೀರು ಅವನ ವಶದಲ್ಲಿಯೇ ಇದ್ದು ಇಷ್ಟು ಹೊತ್ತು ನಿಂತಿತ್ತು. ಅಹಿ ಅದರ ರಕ್ಷಕನಾಗಿದ್ದ. ಸರ್ಪಗಳು ಹಸುವನ್ನು ತಡೆದು ನಿಲ್ಲಿಸುವ ಹಾಗೆ ಅವನು ನೀರಿನ ಧಾರೆಯನ್ನು ನಿಲ್ಲಿಸಿದ್ದನು. ಇಂದ್ರನು ವೃತ್ರನನ್ನು ಕೊಂದು ನೀರಿನ ಬಾಗಿಲನ್ನು ತೆರೆದನು. ವೃತ್ರನು ಇಂದ್ರನ ವಜ್ರದ ಮೇಲೆ ಹೊಡೆದಾಗ, ಇಂದ್ರನು ಕುದುರೆಯ ಬಾಲದಂತೆ (ಸ್ಫೂರ್ತಿಯ) ಆಗಿಬಿಟ್ಟ. ಅವನ ಪ್ರಹಾರವನ್ನು ನಿವಾರಿಸಿಕೊಂಡ. ಇಂದ್ರ ಮತ್ತು ವೃತ್ರರ ಯುದ್ಧವಾದ ಸಮಯದಲ್ಲಿ ವೃತ್ರನ ಮೂಲಕ ಉಂಟಾದ ಮಿಂಚು, ಗುಡುಗು, ಹಿಮಪಾತ ಎಲ್ಲವೂ ವ್ಯರ್ಥವಾದವು. ಇಂದ್ರನಿಗೆ ಶಾಶ್ವತ ಗೆಲವು ಸಿಕ್ಕಿತು. ಹೇ ಇಂದ್ರ, ವೃತ್ರನನ್ನು ಕೊಂದಮೇಲೆ ನೀನು ತೊಂಬತ್ತೊಂಬತ್ತು ಯೋಜನದೂರ ಓಡಿ ಹೋಗುವಂತೆ ವೃತ್ರನ ಯಾವ ಸಹಾಯಕನು ನಿನಗೆ ಕಾಣಿಸಿಕೊಂಡ? ಅಲ್ಲದೇ ಗಿಡುಗನ ಹಾಗೆ ಆಕಾಶದಲ್ಲಿ ಹಾರಿದೆಯಲ್ಲ?” ನಿಶ್ಚಯವಾಗಿಯೂ, ಇಂದ್ರನಿಗೆ ಸಂಬಂಧಿಸಿದ ಈ ಸೂಕ್ತವು ಭಾರತೀಯ ಆಖ್ಯಾನ ಪರಂಪರೆಯ ಪೀಠಿಕೆಯನ್ನು ಪ್ರಸ್ತುತಪಡಿಸುತ್ತದೆ. ಆಖ್ಯಾನ ಅಥವಾ ಭಾರತೀಯ ಕತೆಯ ಈ ಒಂದು ರೂಪವು ಮಿಥ್ ಮತ್ತು ಪ್ರತೀಕಾತ್ಮಕ ಆವರಣದಲ್ಲಿಯೂ ಜೀವನ ಸ್ಪಂದನಯುಕ್ತವಾಗಿದೆ. ಇಂದ್ರನ ಗಾಥೆಯಲ್ಲಿನ ಕಲ್ಪನಾಶೀಲತೆ, ಕತೆಯ ರಹಸ್ಯ ಮತ್ತು ರೋಮಾಂಚ, ಕತೆ ಹೇಳುವ ಭಂಗಿ, ಮತ್ತು ಮಾನವೀಯ ಸಂಬಂಧಗಳ ಪರಿಕಲ್ಪನೆ ಸಿಗುತ್ತದೆ. ನಿರ್ಮಾಣ ತತ್ವದ ಮೂಲಕ ಕತೆಯನ್ನು ಆಕರ್ಷಕ ರೋಮಾಂಚಕಗೊಳಿಸಲಾಗಿದೆ. ಮೇಲೆ ಕೊಟ್ಟ ಉದ್ಧರಣದ ಕೊನೆಯ ವಾಕ್ಯ ಇದಕ್ಕೆ ಸುಂದರ ಮಾದರಿಯಾಗಿದೆ. ಇಂದ್ರನ ವಿಷಯಕವಾದ ಋಗ್ವೇದದ ಮತ್ತೊಂದು ಸೂಕ್ತ (4/18) ದಲ್ಲಿ ಹೇಳಿದ ಹಾಗೆ, ಇಂದ್ರನು ಸೋಮವನ್ನು ಪಡೆದು ವೈಭವಶಾಲಿಯಾಗಲು ಇಚ್ಛಿಸಿದ್ಧ. ಅವನ ತಾಯಿ ಅವನಿಗೆ ಸೋಮವನ್ನು ಕೊಟ್ಟಳು. ತಾಯಿ ಕದ್ದು ಮುಚ್ಚಿ ಕೊಟ್ಟ ಸೋಮವನ್ನು ಇಂದ್ರನು ಪಡೆದ, ಆಗ ಅಪ್ಪ-ಮಗನ ಮಧ್ಯೆ ಜಗಳವಾಯಿತು. ಕೊನೆಯಲ್ಲಿ ಭಾರತೀಯ ಕಥಾ ಪರಂಪರೆ 53 ಇಂದ್ರನು ಅಪ್ಪನನ್ನು ಕೊಂದೇಬಿಟ್ಟ. ಇಂದ್ರನು ತ್ವಷ್ಟಾನನ್ನು ಪರ್ವತದ ಮೇಲಿಂದ ನೂಕಿ ಶಾಶ್ವತವಾಗಿ ಸಾವಿನ ಮಡಿಲಲ್ಲಿ ಮಲಗುವಂತೆ ಮಾಡಿದ. ಈ ರೀತಿಯ ಪ್ರಾಚೀನ ಕತೆಗಳಲ್ಲಿ ಮಿಥ್ ಜೊತೆಗೆ ಇತಿಹಾಸವೂ ಸೇರಿಕೊಂಡಿದೆ. ಅವು ಪೌರಾಣಿಕ ಆಖ್ಯಾನಗಳೊಂದಿಗೆ ಐತಿಹಾಸಿಕ ಕತೆಗಳ ಪರಂಪರೆಯನ್ನು ಪ್ರಾರಂಭಿಸುತ್ತವೆ. ಆ ಕಾಲದ ಯಶಸ್ವಿ-ಪರಾಕ್ರಮಿ ರಾಜರ ಬಗೆಗಿನ ಆಖ್ಯಾನ ಅಥವಾ ಕತೆಗಳ ರಚನೆಯ ಪ್ರಾರಂಭ ವೈದಿಕ ಕಾಲದಲ್ಲಿ ಆಯಿತು. ಅದು ಕತೆ ಮತ್ತು ಪ್ರಬಂಧ ಸಾಹಿತ್ಯದ ಫಲವತ್ತಾದ ನೆಲವನ್ನು ಸಿದ್ಧಗೊಳಿಸಿತು. ಪುರೂರವ- ಉರ್ವಶಿಯರ ಪ್ರಣಯ ಕತೆ ಆ ಕಾಲದ ಇಂಥದೇ ಜನಪ್ರಿಯ ಕತೆಗಳಲ್ಲಿ ಒಂದಾಗಿರಬಹುದು. ಅದರಲ್ಲಿ ಐತಿಹಾಸಿಕತೆಯ ಪುಟವೂ ಸೇರಿಕೊಂಡಿದೆ, ಮಿಥಕಶಾಸ್ತ್ರವೂ ಸೇರಿದೆ. ಮತ್ತು ಲೋಕ ಕಥೆಯ ಆಧಾರವೂ ಕೂಡ. ಋಗ್ವೇದದ ಒಂದು ಸೂಕ್ತದಲ್ಲಿ ಉರ್ವಶಿ-ಪುರೂರವ ಸಂವಾದವೂ ಸೇರಿಕೊಂಡಿದೆಯಾದರೂ ಆ ಸಂವಾದವು ಯಾವ ಪ್ರಸಂಗದಲ್ಲಿ ನಡೆದದ್ದು, ಅದರ ಪೂರ್ವಕತೆಯೇನು ಎಂಬುದರ ಬಗೆಗೆ ಅಲ್ಲಿ ಬೆಳಕು ಬೀರಿಲ್ಲ. ಈ ಕತೆ ಶತಪಥ ಬ್ರಾಹ್ಮಣದಲ್ಲಿ ಹೇಳಲಾಗಿದೆ. ಋಗ್ವೇದದಲ್ಲಿ ಉಕ್ತವಾದ ಸಂವಾದ ಸೂಕ್ತ ಹಾಗೂ ಶತಪಥ ಬ್ರಾಹ್ಮಣದಲ್ಲಿ ಅವರ ಕತೆ- ಈ ಎರಡನ್ನು ಸೇರಿಸಿ ವೈದಿಕ ಕಾಲದ ಈ ಲೋಕಪ್ರಿಯ ಕತೆಯ ಪೂರ್ಣರೂಪ ಎದುರಿಗೆ ಬರುತ್ತದೆ. ಇದು ಭಾರತೀಯ ಕಥಾ ಸಾಹಿತ್ಯದ ಪ್ರಾಚೀನತೆಯ ಇಡುಗಂಟಾಗಿದೆ. ಆದ್ದರಿಂದ ಈ ಸಂಕಲನದಲ್ಲಿ ಋಗ್ವೇದ ಹಾಗೂ ಶತಪಥ ಬ್ರಾಹ್ಮಣದಿಂದ ಅನುವಾದಿಸಿದ ಪುರೂರವ ಉರ್ವಶಿಯ ಕತೆಯನ್ನು ಎಲ್ಲಕ್ಕೂ ಮೊದಲು ಕೊಡಲಾಗಿದೆ. ಪುರಾಣಕತೆಗಳ ಹೊರತಾಗಿ ಸಾಮಾಜಿಕ ಸಂದರ್ಭಗಳೊಂದಿಗೆ ಹೆಣೆದುಕೊಂಡ ಚಿಕ್ಕಚಿಕ್ಕ ಕತೆಗಳು ಹಿಂದಿನಕಾಲದಿಂದಲೂ ನಮ್ಮಲ್ಲಿ ಪ್ರಚಲಿತವಿರಬಹುದು. ಅವುಗಳಲ್ಲಿ ಅಲೌಕಿಕ ವಿಶ್ವದ ಜಾಗದಲ್ಲಿ ದೈನಂದಿನ ಜೀವನವಿದೆ, ನಮ್ಮ ಮನೆಬಾಗಿಲ ಕತೆಯಿದೆ, ಅಥವಾ ನಮ್ಮ ನಡುವಣ ಯಾವುದಾದರೊಬ್ಬ ವ್ಯಕ್ತಿಯ ಸಂದರ್ಭದಲ್ಲಿ ನಡೆದದ್ದಿದೆ, ಮಾತುಕತೆ ಹಾಗೂ ಗೋಷ್ಠಿಗಳ ಆವರಣದಲ್ಲಿ ಸ್ವಾನುಭವಕ್ಕಿಂತ ಹೆಚ್ಚಿನ ರುಚಿಕರವಾದ ವಸ್ತು ಇನ್ನೇನಿದ್ದೀತು? ಆದರೆ ನಡೆದದ್ದನ್ನು ಹೇಳುವ ಈ ಪರಂಪರೆ ತನ್ನ ಇಂದಿನ ರೂಪದಲ್ಲಿ ವಾಚಿಕ ಪರಂಪರೆಯಲ್ಲೇ ಬೆಳೆಯಲು ಸಾಧ್ಯ. ಸಾಹಿತ್ಯಕ ಪರಂಪರೆಯಲ್ಲಿಯೂ ಇದರ ಆಕರ್ಷಕ ಕೌಶಲ ‘ಧೂರ್ತಾಖ್ಯಾನ’ ಅಥವಾ ‘ದಶಕುಮಾರ ಚರಿತ’ ದಂತಹ ಕಥಾಕೃತಿಗಳಲ್ಲಿ ನಮಗೆ ದೊರೆಯುತ್ತದೆ. ಆದರೆ ನಡೆದದ್ದನ್ನು ಕಥಾ ರೂಪದಲ್ಲಿ ಹೇಳುವ ಈ ಪರಂಪರೆ ಎಷ್ಟು ಹಳೆಯದು ಇದಕ್ಕೆ ಸಾಕ್ಷ್ಯವೂ ನಮಗೆ ಋಗ್ವೇದದಲ್ಲಿಯೇ ಸಿಗುತ್ತದೆ. ಋಗ್ವೇದದ ಕಿತವ ಸೂಕ್ತವು (10/34) ಒಬ್ಬ ಜೂಜಾಡುವವನ ವೃತ್ತಾಂತವೇ 54 ಕಥಾ ಸಂಸ್ಕೃತಿ ಆಗಿದೆ. ಜೂಜುಗಾರನು ತನ್ನ ಜೀವನದ ಸ್ಥಿತಿಯನ್ನು ತಿಳಿಸುತ್ತ ಹೇಳುತ್ತಾನೆ. “ನನ್ನ ಪತ್ನಿ (ಮೊದಲು) ನನಗೆ ಬೈಯುತ್ತಿದ್ದಿಲ್ಲ. ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದಿಲ್ಲ. ಅವಳು ನನ್ನ ಬಗೆಗೆ ನನ್ನ ಮಿತ್ರರ ಬಗೆಗೆ ದಯಾಳುವಾಗಿದ್ದಳು. ನಾನು ಪಗಡೆಯ ವ್ಯೂಹದಲ್ಲಿ ಸಿಕ್ಕು ನನ್ನ ಆ ಸಾಧ್ವಿ ಹೆಂಡತಿಯನ್ನು ಮನೆಯಿಂದ ಹೊರತಳ್ಳಿದೆ. ಈಗ ನನ್ನ ಅತ್ತೆ ನನ್ನನ್ನು ತಿರಸ್ಕರಿಸುತ್ತಾಳೆ. ನನ್ನ ಹೆಂಡತಿ ಈಗ ನನ್ನಿಂದ ಬೇರೆಯಾಗಿ ಇರುತ್ತಾಳೆ. ದುಃಖಿಗೆ ನಿಜವಾಗಿಯೂ ಯಾರೂ ಸಂಬಂಧಿಗಳಿರುವುದಿಲ್ಲ. ನನ್ನ ಸ್ಥಿತಿಯು ಹುಲ್ಲು ಹಾಕದ ಮುದಿ ಕುದುರೆಯ ಹಾಗಿದೆ........ ಮತ್ತೆ ಮತ್ತೆ ಯೋಚಿಸುತ್ತೇನೆ. ಇನ್ನು ಆಡಬಾರದು ಪಗಡೆಯನ್ನು, ಜೂಜುಗಾರರ ಸಹವಾಸವನ್ನು ಬಿಡಬೇಕು ಅಂತ. ಆದರೆ ಕಂದು ಬಣ್ಣದ ಕವಡೆಯನ್ನು (ಜೂಜು ಮನೆಯಲ್ಲಿ) ಎಸೆಯಲು ಪ್ರಾರಂಭಿಸುತ್ತಲೇ ನನಗೆ ನನ್ನನ್ನು ನಿಯಂತ್ರಿಸಲಾಗುವುದಿಲ್ಲ. ಅದರ ಸದ್ದು ಕೇಳುತ್ತಲೇ ಹೊರಟು ಬಿಡುತ್ತೇನೆ. ಯುವತಿ ಪ್ರಿಯನನ್ನು ಭೇಟಿಯಾಗಲು ಹೋಗುವ ಹಾಗೆ.” ಹೀಗೆ ಋಗ್ವೇದದ ಕಾಲದಿಂದ ನಮ್ಮ ದೇಶದಲ್ಲಿ ಪ್ರಾರಂಭವಾದ ಆಖ್ಯಾನ ಅಥವಾ ಕಥಾ ಪರಂಪರೆಯಲ್ಲಿ ಪೌರಾಣಿಕ, ಐತಿಹಾಸಿಕ, ಹಾಗೂ ಸಾಮಾಜಿಕ ಅಂಶಕ್ಕೆ ಸಮಾನ ಸ್ಥಾನ ಸಿಕ್ಕಿದೆ. ಆದ್ದರಿಂದ ಅಥರ್ವವೇದದಲ್ಲಿ ಇತಿಹಾಸ, ಪುರಾಣ, ಗಾಥಾ ಮತ್ತು ನಾರಾಶಂಸಿ - ನಾಲ್ಕು ಲೋಕ ಪ್ರಿಯ ರೀತಿಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಇತಿಹಾಸದ ಸಂಬಂಧವು ಗತಕಾಲದೊಂದಿಗೆ, ಪುರಾಣವು ಮಿಥಕ ಅಥವಾ ಅಲೌಕಿಕ ವೃತ್ತಾಂತಗಳೊಂದಿಗೆ, ಗಾಥಾ ಹಾಗೂ ನಾರಾಶಂಸಿಗಳ ಸಂಬಂಧವು ಸಮಕಾಲೀನ ಮನುಷ್ಯ ಜೀವನದೊಂದಿಗೆ ಸಂಬಂಧವನ್ನು ಹೊಂದಿದೆ. ವೈದಿಕ ಸಂಹಿತೆಗಳ (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.) ನಂತರ ಅಖ್ಯಾನ ಮತ್ತು ಇತಿಹಾಸ ಪುರಾಣಗಳ ಪರಂಪರೆಯ ವಿಸ್ತಾರ ಸುಮಾರು ಕ್ರಿ. ಪೂ. 1000 ದವರೆಗೆ ಬ್ರಾಹ್ಮಣ ಗ್ರಂಥಗಳ ಮೂಲಕ ಆಗುತ್ತಲಿತ್ತು. ಶಾಬರಭಾಷ್ಯದಲ್ಲಿ ಬ್ರಾಹ್ಮಣ ಗ್ರಂಥಗಳ ಹತ್ತು ವಿಧಗಳನ್ನು ಹೇಳಲಾಗಿದೆ. ಅದರಲ್ಲಿ ವಣ್ರ್ಯ ವಿಷಯಗಳ ಸಮಾವೇಶವಾಗುತ್ತವೆ. - ಹೇತು, ನಿರ್ವಚನ, ನಿಂದಾ, ಪ್ರಶಂಸಾ, ಸಂಶಯ, ವಿಧಿ, ಪರಕ್ರಿಯಾ, ಪುರಾಕಲ್ಪ, ವ್ಯವಧಾರಣಾ ಕಲ್ಪನಾ, ಹಾಗೂ ಉಪಮಾನ. ಇವುಗಳಲ್ಲಿ ನಿಂದಾ ಮತ್ತು ಪ್ರಶಂಸಾ ಎರಡರ ಬಗೆಗೂ ಅರ್ಥವಾದದ ಪ್ರವಿಧಿಯ ಉಪಯೋಗ ಮಾಡಲಾಗುತ್ತದೆ. ಅರ್ಥವಾದದ ಸಂಬಂಧವು ಇತಿಹಾಸ, ಆಖ್ಯಾನ ಮತ್ತು ಪುರಾಣಗಳೊಂದಿಗೆ ಹೊಂದಿಕೊಳ್ಳುತ್ತದೆ. ಹೀಗೆ ಬ್ರಾಹ್ಮಣಗ್ರಂಥಗಳಲ್ಲಿ ಯಜ್ಞಗಳ ವಿಧಿಯನ್ನು ತಿಳಿಸುವ ಪ್ರಸಂಗದಲ್ಲಿ ಅರ್ಥವಾಗದ ದೃಷ್ಟಿಯಿಂದ ಇತಿಹಾಸ, ಪುರಾಣ ಅಥವಾ ಆಖ್ಯಾನಗಳ ಕತೆಗಳನ್ನು ಭಾರತೀಯ ಕಥಾ ಪರಂಪರೆ 55 ಪ್ರಸ್ತುತ ಪಡಿಸಲಾಗಿದೆ ಅವುಗಳಲ್ಲಿ ಕಥಾ ಎಂದು ಹೇಳಲಾಗುವ ಪ್ರಾಚೀನ ಶೈಲಿಯ ಪರಿಚಯ ಮೊದಲಬಾರಿಗೆ ದೊರೆಯುತ್ತದೆ. ಶತಪಥ ಬ್ರಾಹ್ಮಣದಲ್ಲಿ ರಾತ್ರಿ ಹಾಗೂ ಪರ್ವತಗಳ ರೆಕ್ಕೆಗಳನ್ನು ಕುರಿತ ಎರಡು ಸುಂದರ ಕತೆಗಳು ಸಿಗುತ್ತವೆ. ಇದರಲ್ಲಿ ರಾತ್ರಿಯ ಸೃಷ್ಟಿಯ ಕತೆಯನ್ನು ಈ ರೀತಿ ಹೇಳಲಾಗಿದೆ. ಯಮನು ಮರಣ ಹೊಂದಿದ್ದ. ಯಮಿಯು ಅವನನ್ನು ಮರೆಯಲೆಂದು ದೇವತೆಗಳು ಪ್ರಯತ್ನಿಸುತ್ತಿದ್ದರು. ಯಮಿಯೊಡನೆ ಯಾವಾಗ ಕೇಳಿದರೂ, ಅವಳು ಯಮನು ಈಗಷ್ಟೇ ಸತ್ತಿದಾನೆ. ಎಂದೇ ಹೇಳುತ್ತಿದ್ದಳು ಈ ರೀತಿಯಾದರೆ ಯಮನನ್ನು ಅವಳು ಎಂದೂ ಮರೆಯಲಾರಳು ಎಂದು ದೇವತೆಗಳು ಹೇಳಿದರು - ‘ನಾವು ರಾತ್ರಿಯನ್ನು ಸೃಷ್ಟಿಸೋಣ.’ ಎಂದು ಆಗ ದೇವತೆಗಳು ರಾತ್ರಿಯನ್ನು ಮಾಡಿದರು. ರಾತ್ರಿಯ ಅನಂತರ ಹಗಲು ಬಂತು, ಅದನ್ನು ಇನ್ನೊಂದು ದಿನವೆಂದು ಕರೆಯಲಾಯಿತು. ಯಮಿ ಯಮನನ್ನು ಮರೆತುಬಿಟ್ಟಳು. ಆದ್ದರಿಂದಲೇ ಜನರು ಹೇಳುತ್ತಿರುತ್ತಾರೆ - ರಾತ್ರಿ ಹಾಗೂ ದಿನಗಳ ಕ್ರಮದಿಂದ ಮನುಷ್ಯನು ತನ್ನ ದುಃಖವನ್ನು ಮರೆಯುತ್ತಾನೆ. ಸೃಷ್ಟಿಯ ಬಗೆಗೂ ಬ್ರಾಹ್ಮಣ ಗ್ರಂಥಗಳಲ್ಲಿ ಅನೇಕ ಕತೆಗಳು ದೊರೆಯುತ್ತವೆ. ಈ ಕಥೆಗಳಲ್ಲಿ ಮನುಷ್ಯ ಜಾತಿಯ ಜೀವನ ಮತ್ತು ಜಗತ್ತಿನ ವಿಷಯವಾಗಿ ಪ್ರಾಚೀನತಮ ಪರಿಕಲ್ಪನೆಗಳು ಎದುರಿಗೆ ಬರುತ್ತವೆ. ಬೇರೆ ದೇಶಗಳಲ್ಲಿ ಪ್ರಚಲಿತವಾದ ಸೃಷ್ಟಿ ಮತ್ತು ಪ್ರಳಯಕ್ಕೆ ಸಂಬಂಧಿಸಿದ ಪ್ರಾಚೀನ ಕತೆಗಳ ಜೊತೆ ಹೋಲಿಕೆಯು ರೋಚಕವಾಗಬಹುದು. ಈ ಸಂಕಲನದಲ್ಲಿ ಶತಪಥ ಬ್ರಾಹ್ಮಣದಿಂದ ತೆಗೆದುಕೊಳ್ಳಲಾದ ಪ್ರಳಯದ ಕತೆಯು ಇದೇ ಬಗೆಯದು. ನಿಜವಾಗಿಯೂ ನಮ್ಮ ದೇಶದಲ್ಲಿ ಕತೆಗಳ ಪ್ರಾಚೀನ ಪರಂಪರೆ ಮೊಳೆಯಿತು, ಅದು ಅನ್ಯದೇಶಗಳ ಯಾತ್ರೆಯನ್ನು ಮಾಡಿತು. ಸಿಂದಬಾದ ಹಾಗೂ ಈಸೋಪರ ಕತೆಗಳ ಮೂಲವು ಭಾರತವೆಂದೇ ಭಾವಿಸಲಾಗುತ್ತಿದೆ. ಪಂಚತಂತ್ರದ ವಿಜಯಯಾತ್ರೆಯಂತೂ ಗೊತ್ತಿರುವುದೇ ಆಗಿದೆ. ವೈದಿಕ ಸಾಹಿತ್ಯದ ಸಮಾನಾಂತರ ಆಖ್ಯಾನ ಅಥವಾ ಪ್ರಾಚೀನ ಕತೆಗಳ ಲೋಕಪ್ರಿಯ ಸಾಹಿತ್ಯ ವಿಕಸಿತವಾಗುತ್ತಲಿತ್ತು, ಅದರ ಪರಿಣತಿಯು ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ರೂಪದಲ್ಲಿ ಕ್ರಿಸ್ತನಿಗೆ ಮುಂಚಿನ ಕೆಲವು ಶತಮಾನಗಳಲ್ಲಿ ಆಗತೊಡಗಿತು. ಪಾಣಿನಿ (ಕ್ರಿ. ಪೂ. 500)ಯು ಇತಿಹಾಸ ಹಾಗೂ ಪುರಾಣದೊಂದಿಗೆ ಆಖ್ಯಾನ ಹಾಗೂ ಆಖ್ಯಾಯಿಕೆಯ ಉಲ್ಲೇಖವನ್ನು ಮಾಡಿದ್ದಾನೆ. ಪತಂಜಲಿಯು (ಎರಡನೆಯ ಶತಮಾನ) ವಾಸವದತ್ತ, ಸಮಾನೋತ್ತರೆ, ಮತ್ತು ಭೈಮರಥೀ- ಈ ಮೂರು ಆಖ್ಯಾಯಿಕಗಳ ಹೆಸರನ್ನು ಸೂಚಿಸಿದ್ದಾನೆ. ಆ 56 ಕಥಾ ಸಂಸ್ಕೃತಿ ಯುಗದಲ್ಲಿ ಈ ಮೂರು ಆಖ್ಯಾಯಿಕೆಗಳನ್ನು ಬರೆಯಲಾಗಿತ್ತು. ಆದರೆ ಈಗ ಇವು ದೊರೆಯುತ್ತಿಲ್ಲ. ಆಖ್ಯಾನ, ಉಪಾಖ್ಯಾನ, ಆಖ್ಯಾಯಿಕೆ ಮುಂತಾದ ಆ ಕಾಲದ ಲೋಕ ಪ್ರಿಯ ಕಥಾರೂಪಗಳನ್ನು ಸೂತ, ಮಾಗಧ, ಚಾರಣ, ಹಾಗೂ ಕುಶೀಲವರು ಜನರೆದುರು ಹಾಡಿಹಾಡಿ, ಅಥವಾ ಹೇಳಿ ಪ್ರಸ್ತುತ ಪಡಿಸುತ್ತಿದ್ದರು. ಮುಂದೆ ಈ ಕಥಾ ರೂಪಗಳನ್ನು ಪರಿಷ್ಕೃತ ಸಾಹಿತ್ಯ ರೂಪಗಳಲ್ಲಿ ಬಳಸಲಾಯಿತು. ಸಂಸ್ಕೃತ ಸಾಹಿತ್ಯದಲ್ಲಿ ಕತೆ ಮತ್ತು ಆಖ್ಯಾಯಿಕೆ ಈ ಎರಡು ವಿಧಗಳ ವಿಕಾಸವಾಯಿತು. ನಂತರದಲ್ಲಿ ಆಖ್ಯಾನ ಉಪಾಖ್ಯಾನ ಮುಂತಾದವುಗಳ ಲಕ್ಷಣವನ್ನು ಕಾವ್ಯ ಶಾಸ್ತ್ರದ ಕೆಲವು ಆಚಾರ್ಯರು ನಿರ್ಧರಿಸುವ ಪ್ರಯತ್ನ ಮಾಡಿದರು. ಭೋಜನ ಪ್ರಕಾರ ಆಖ್ಯಾನ-ಉಪಾಖ್ಯಾನಗಳೂ ಕೂಡ ಅಭಿನಯ, ಪಾಠ, ಹಾಗೂ ಗಾಯನದೊಂದಿಗೆ ಪ್ರಸ್ತುತ ಪಡಿಸಿದ ರೂಪವಾಗಿದೆ. ಇದನ್ನು ಯಾವುದೇ ಗ್ರಂಥದಿಂದ ಓದಿ ಓದಿ ಪ್ರಸ್ತುತ ಪಡಿಸಲಾಗುತ್ತದೆ. ಭೋಜನು ಉಪಾಖ್ಯಾನದ ಲಕ್ಷಣವನ್ನು ತಿಳಿಸುತ್ತ ಯಾವುದೇ ಪ್ರಬಂಧ (ಸಂಪೂರ್ಣಗ್ರಂಥ) ದ ಒಳಗೆ ಯಾರಿಗಾದರೂ ಉಪದೇಶ ಮಾಡುವಾಗ ದೃಷ್ಟಾಂತದ ರೂಪದಲ್ಲಿ ಹೇಳಲಾದ ಕತೆಯೇ ಉಪಾಖ್ಯಾನ ಎಂದು ಹೇಳುತ್ತಾನೆ. ನಳ ದಮಯಂತೀ ಕತೆ , ಸಾವಿತ್ರೀ-ಸತ್ಯವಾನರ ಕತೆ - ಈ ಬಗೆಯ ಕತೆಗಳು ಇದರ ಉದಾಹರಣೆಗಳಾಗಿವೆ. ಮಹಾಭಾರತವು ಭಾರತೀಯ ಉಪಾಖ್ಯಾನಗಳ ಮಹಾಕೋಶ. ವಾಚಿಕ ಪರಂಪರೆಯಲ್ಲಿರುವ ಸಹಸ್ರ ಸಹಸ್ರ ಕತೆಗಳನ್ನು ಇದರಲ್ಲಿ ಸೇರಿಕೊಳ್ಳಲಾಗಿದೆ. ಇವುಗಳಲ್ಲಿ ನಳೋಪಾಖ್ಯಾನ. ಸಾವಿತ್ರ್ಯೋಪಾಖ್ಯಾನ, ಶಕುಂತಲೋಪಾಖ್ಯಾನ ಮುಂತಾದ ಕತೆಗಳಿವೆ. ಅವು ಅತ್ಯಂತ ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜದಲ್ಲಿ ಬಹಳ ಲೋಕ ಪ್ರಿಯವಾಗಿವೆ. ಈ ಉಪಾಖ್ಯಾನಗಳನ್ನು ಅನೇಕ ಪುರಾಣಗಳಲ್ಲಿ, ಸಂಸ್ಕೃತದ ಅನೇಕ ಪ್ರಬಂಧಕಾವ್ಯಗಳಲ್ಲಿ ಮತ್ತೆ ಮತ್ತೆ ಪ್ರಸ್ತುತ ಪಡಿಸಲಾಗಿದೆ. ಆದರೆ ಪ್ರಾಚೀನವಾದ ರಸ-ಗಂಧ-ಹಾಗೂ ವಿವಿಧ ರೂಪದೊಂದಿಗೆ ಇವು ಮಹಾಭಾರತದಲ್ಲಿ ಬಂದಿದ್ದು, ಭಾರತೀಯ ಕಥಾ ಸಾಹಿತ್ಯದ ಅಮೂಲ್ಯ ನಿಧಿಯಾಗಿವೆ. ಆದ್ದರಿಂದ ಭಾರತೀಯ ಕಥಾ ಪರಂಪರೆಯ ಈ ಪ್ರತಿನಿಧಿ ಆಯ್ಕೆಯಲ್ಲಿ ಮಹಾಭಾರತದಿಂದ ಇಂಥ ಉಪಾಖ್ಯಾನಗಳನ್ನು ಸಂಕಲಿಸಿದ್ದು ಯೋಗ್ಯವೇ ಆಗಿದೆ. ಪ್ರಾಚೀನಕಾಲದಿಂದಲೇ ಭಾರತೀಯ ಕಥಾ ಪರಂಪರೆ ಅನೇಕ ಧಾರೆಗಳಲ್ಲಿ ಪ್ರವಹಿಸುತ್ತಿದೆ. ಅದರ ಎಲ್ಲ ಪ್ರವಾಹಗಳು ಮಹಾಭಾರತದ ಮಹಾಸಾಗರದಲ್ಲಿಯೂ ವಿಲೀನವಾಗಲಿಲ್ಲ. ಪ್ರಾಚೀನ ಮಹಾಪುರುಷರು, ಮಹಾನಾಯಕರನ್ನು ಆಧರಿಸಿ ಕತೆಗಳನ್ನು ರಚಿಸುವ ಪರಂಪರೆ ವೈದಿಕ ಕಾಲದಿಂದಲೇ ಪ್ರಾರಂಭವಾಯಿತು. ಭಾರತೀಯ ಕಥಾ ಪರಂಪರೆ 57 ಅದು ಕಥಾಚಕ್ರದ ರೀತಿಯಲ್ಲಿ ಅನಂತರದಲ್ಲಿ ಮತ್ತಷ್ಟು ವಿಪುಲ ಆಯಾಮಗಳನ್ನು ಪಡೆಯುತ್ತ ಉಳಿಯಿತು. ಕ್ರಿ.ಪೂ ಶತಮಾನಗಳಲ್ಲಿ ಉದಯನ, ವಿಕ್ರಮಾದಿತ್ಯ, ಸಾತವಾಹನ, ಮತ್ತು ಶೂದ್ರಕ (?) ಇಂಥ ರಾಜರುಗಳ ಬಗೆಗೆ ಅನೇಕ ಕಥಾ ಸರಣಿಗಳು ನಮ್ಮಲ್ಲಿ ಪ್ರಚಲಿತವಾದವು. ಇವುಗಳಲ್ಲಿ ಕೆಲವು ರಾಜರುಗಳ ಕತೆಯನ್ನು ಮಹಾಕವಿಗಳು ತಮ್ಮ ಮಹಾಕಾವ್ಯಕ್ಕಾಗಿ ನಾಟಕಕ್ಕಾಗಿ ಬಳಸಿಕೊಂಡರು. ಮಹಾಭಾರತದ ಅನಂತರ ಭಾರತೀಯ ಕಥಾ ಪರಂಪರೆಯ ಮಹಾ ಆಕರ ಗ್ರಂಥವಾದ ಬೃಹತ್ಕಥೆಯು ರೂಪುಗೊಂಡಿತು. ಬೃಹತ್ಕಥೆಯಲ್ಲಿ ಕತೆಯು ತನ್ನ ಸಹಜರೂಪವನ್ನು ಪಡೆಯಿತು. ಅದು ಜನರ ಮನಸ್ಸಿನಲ್ಲಿ ನೆಲೆಸಿತು, ಸಮಾಜದಲ್ಲಿ ಹೇಳುವ ಕೇಳುವ ಕತೆಗಳನ್ನೂ ಒಳಗೊಳ್ಳುತ್ತ ಮುಂದುವರಿಯಿತು. ರಾಮಾಯಣ- ಮಹಾಭಾರತದ ಅನಂತರ ಬಹುಶಃ ಭಾರತೀಯ ಸಾಹಿತ್ಯವನ್ನು ಎಲ್ಲಕ್ಕಿಂತ ಹೆಚ್ಚು ಪ್ರಭಾವಿತ-ಹಾಗೂ ಜೀವ ತುಂಬುವ ಗ್ರಂಥವೆನಿಸಿತು. ಇದರ ಲೇಖಕ ಗುಣಾಢ್ಯನು ಸ್ವಯಂ ಒಂದು ದಂತಕತೆಯಾದನು. ಮತ್ತು ಅವನ ಕೃತಿಗೆ ರಾಮಾಯಣ ಮಹಾಭಾರತಗಳ ಅನಂತರ ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅವಲಂಬನ ಗ್ರಂಥದ ರೂಪದಲ್ಲಿ ಅತಿಹೆಚ್ಚು ಆದರ ದೊರೆಯಿತು. ಸ್ವಯಂ ಗುಣಾಢ್ಯನಿಗೆ ನಮ್ಮ ಸಾಹಿತ್ಯಕ ಪರಂಪರೆಯಲ್ಲಿ ವ್ಯಾಸ-ವಾಲ್ಮೀಕಿಗೆ ಸಮಾನವಾದ ಪೂಜ್ಯತೆ ದೊರೆಯಿತು. ಕತೆಗಳ ಈ ಬೃಹತ್ ಸಂಕಲನವನ್ನು ಗುಣಾಢ್ಯನು ಕ್ರಿ.ಪೂ. ಒಂದನೇ ಶತಮಾನದ ಹೊತ್ತಿಗೆ ಸಿದ್ಧ ಪಡಿಸಿದನು. ಆದರೆ ಇದು ಅನಂತರ ಲುಪ್ತವಾಗಿ ಹೋಯಿತು. ಸಂಸ್ಕೃತದಲ್ಲಿ ಬೃಹತ್ಕಥೆಯ ಅನೇಕ ರೂಪಾಂತರಗಳು ಸಿದ್ಧಗೊಂಡದ್ದು ಅದರ ಲೋಕ ಪ್ರಿಯತೆಗೆ ನಿದರ್ಶನ. ಸಂಸ್ಕೃತದ ಅನೇಕ ರಚನಾಕಾರರು ಬೇರೆ ಬೇರೆ ಅನುವಾದ ರೂಪಾಂತರಗಳನ್ನು ಪ್ರಾಚೀನ ಕಾಲದಲ್ಲಿ ಮಾಡಿದ ಬಹುಶಃ ಏಕೈಕ ಈ ಬಗೆಯ ಕೃತಿಯಾಗಿದೆ. ಇದರ ಪ್ರಾಚೀನವಾದ ನಾಲ್ಕು ರೂಪಾಂತರಗಳು ಕನಿಷ್ಠ ಪಕ್ಷ ಕಾಣಸಿಗುತ್ತವೆ. ಕ್ಷೇಮೇಂದ್ರನ ಬೃಹತ್ಕಥಾಮಂಜರಿ, ಸೋಮದೇವನ ಕಥಾಸರಿತ್ಸಾಗರ, ಬುಧ ಸ್ವಾಮಿಯ ಬೃಹತ್ಕಥಾ ಶ್ಲೋಕ ಸಂಗ್ರಹ, ಮತ್ತು ವಾಮನಭಟ್ಟನ ಬೃಹತ್ಕಥಾ ಮಂಜರಿ (ಅಪೂರ್ಣ). ಇದಲ್ಲದೆ ಪ್ರಾಕೃತದಲ್ಲಿಯೇ ಸಂಘದಾಸಮಣಿಯು ‘ವಸುದೇವಹಿಂಡೀ’ ಹೆಸರಿನಲ್ಲಿ ಬೃಹತ್ಕಥೆಯ ಹೊಸರೂಪಾಂತರವನ್ನು ಸಿದ್ಧಗೊಳಿಸಿದನು. ಈ ರೂಪಾಂತರಗಳಲ್ಲಿ ಬುಧ ಸ್ವಾಮಿಯ ಬೃಹತ್ಕಥಾಶ್ಲೋಕ ಸಂಗ್ರಹವು ತುಂಬ ಹಳೆಯದೆಂದು (ಸುಮಾರು 5ನೇ ಶತಮಾನ) ಭಾವಿಸಲಾಗುತ್ತದೆ. ಸಂಘದಾಸಮಣಿಯ ರೂಪಾಂತರ ಅನಂತರದ್ದು. ಕ್ಷೇಮೇಂದ್ರ- ಸೋಮದೇವ ಇಬ್ಬರೂ ಕಾಶ್ಮೀರದವರು, ಇಬ್ಬರೂ ಬಹುಮಟ್ಟಿಗೆ ಸಮಕಾಲೀನರು 11-12 ನೇ ಶತಮಾನದ ಆಚೀಚಿನವರು. 58 ಕಥಾ ಸಂಸ್ಕೃತಿ ಬುಧ ಸ್ವಾಮಿಯ ರೂಪಾಂತರವು ಬೃಹತ್ಕಥೆಯ ನೇಪಾಳೀ ಸಂಸ್ಕರಣವನ್ನು ಆಧರಿಸಿದ್ದು ಎನ್ನಲಾಗಿದೆ. ವಾಮನ ಭಟ್ಟನದು ಅದರ ದಕ್ಷಿಣ ಸಂಸ್ಕರಣವನ್ನವಲಂಬಿಸಿದ್ದರೆ, ಕ್ಷೇಮೇಂದ್ರ-ಸೋಮದೇವರು ಕಾಶ್ಮೀರಿ ಪ್ರಚಲಿತ ರೂಪವನ್ನು ಅನುಸರಿಸಿರಬಹುದು. ಕ್ರಿಸ್ತನ ನಂತರದ ಶತಮಾನಗಳಲ್ಲಿ ರಾಮಾಯಣ ಮಹಾಭಾರತ ಪುರಾಣಗಳಂತೆಯೇ ದೇಶದ ಬೇರೆ ಬೇರೆ ಭಾಗಗಳಲ್ಲಿ ಬೃಹತ್ಕಥೆಯ ಬೇರೆ ಬೇರೆ ರೂಪಗಳು ಕಾಣಿಸಿಕೊಂಡಿರಬಹುದು ಎನಿಸುತ್ತದೆ. ಎಲ್ಲ ರೂಪಾಂತರಗಳಲ್ಲಿಯೂ ಬೃಹತ್ಕಥೆಯ ಮೂಲ ಕಥಾ ಯೋಜನೆ ಒಂದೇ ಬಗೆಯಾಗಿದೆ. ಆದರೆ ಮಧ್ಯವರ್ತಿ ಕತೆಗಳು ಹಾಗು ಕತೆಗಳ ವಿನ್ಯಾಸದ ದೃಷ್ಟಿಯಿಂದ ಸಾಕಷ್ಟು ಅಂತರವಿದೆ. ನಮ್ಮ ಸಾಹಿತ್ಯಕ ಪರಂಪರೆಯಲ್ಲಿ ಬೃಹತ್ಕಥೆಗೆ ಇರುವ ಮಹತ್ವವು ಗುಣಾಢ್ಯ ಹಾಗೂ ಅವನ ರಚನೆಯ ಬಗೆಗೆ ಸಂಸ್ಕೃತದ ಅನೇಕ ಗಣ್ಯಮಾನ್ಯ ಕವಿಗಳು ಪ್ರಕಟಿಸಿದ ಹೇಳಿಕೆಗಳಿಂದ ಗೊತ್ತಾಗುತ್ತದೆ. ಉದ್ಯೋತನ ಸೂರಿಯು 779ನೇ ಇಸವಿಯಲ್ಲಿ ರಚಿಸಿದ ತನ್ನ ‘ಕುವಲಯ ಮಾಲಾ ಕಹಾ’ ದ ಪ್ರಾರಂಭದಲ್ಲಿ ಬೃಹತ್ಕಥೆಯನ್ನು ಹೊಗಳುತ್ತ ಹೇಳುತ್ತಾನೆ. “ಬೃಹತ್ಕಥೆಯೆಂದರೇನು, ಸಾಕ್ಷಾತ್ ಸರಸ್ವತಿ. ಗುಣಾಢ್ಯನು ಸ್ವಯಂ ಬ್ರಹ್ಮ. ಈ ಕಥಾಗ್ರಂಥವು ಸಮಸ್ತ ಕಲೆಗಳ ಗಣಿ. ಕವಿಗಳು ಇದನ್ನು ಓದಿ ರಚನಾಕಾರ್ಯದಲ್ಲಿ ತರಬೇತಿ ಪಡೆಯುತ್ತಾರೆ” 7ನೇ ಶತಮಾನದ ಮಹಾನ್ ಗದ್ಯ ಕವಿ ಬಾಣ ಬೃಹತ್ಕಥೆಯನ್ನು ಶಿವಲೀಲೆಗೆ ಹೋಲಿಸಿದ್ದಾನೆ. ಹನ್ನೊಂದನೆಯ ಶತಮಾನದ ಕವಿ ಧನಪಾಲನು ತನ್ನ ‘ತಿಲಕಮಂಜರಿ’ಯಲ್ಲಿ ಬೃಹತ್ಕಥೆಗೆ ಸಮುದ್ರದ ಉಪಮೆಯನ್ನು ಕೊಟ್ಟಿದ್ದಾನೆ. ಅದರ ಒಂದೊಂದು ಹನಿಯಿಂದ ಎಷ್ಟೊಂದು ಕತೆಗಳು ಹುಟ್ಟಿಕೊಳ್ಳುತ್ತವೆ. ಬೃಹತ್ಕಥೆಯನ್ನು ಅಧ್ಯಯನ ಮಾಡುವುದು, ಹಾಗೂ ಅವುಗಳ ರೂಪಾಂತರವನ್ನು ಸಿದ್ಧಗೊಳಿಸುವುದು ಪ್ರಾಚೀನಕಾಲದಲ್ಲಿ ಗೌರವದ ಸಂಗತಿಯೆಂದು ತಿಳಿಯಲಾಗುತ್ತಿತ್ತು. ಕೋಲಾರ ಕ್ಷೇತ್ರದ ಗುಮ್ಮರೆಡ್ಡಿಪುರದಲ್ಲಿ ದೊರೆತ ಒಂದು ತಾಮ್ರ ಶಾಸನದಲ್ಲಿ, ಆರನೆಯ ಶತಮಾನದ ಪೂರ್ವಾರ್ಧದ ಒಬ್ಬ ಆಡಳಿತಗಾರನಾದ ರಾಜಾ ದುರ್ವಿನೀತನ ಬಗೆಗೆ ಹೇಳಲಾಗಿದೆ. ಆ ರಾಜನು ಒಂದು ವ್ಯಾಕರಣ, ಕಿರಾತಾರ್ಜುನೀಯ ಮಹಾಕಾವ್ಯದ ಹದಿನೈದು ಸರ್ಗಗಳ ಟೀಕೆ ಹಾಗೂ ಬೃಹತ್ಕಥೆಯ ಒಂದು ಸಂಸ್ಕೃತ ರೂಪಾಂತರವನ್ನು ಸಿದ್ಧಪಡಿಸಿದ್ದ. ಬೃಹತ್ಕಥೆಯ ಖ್ಯಾತಿಯು ಭಾರತದ ಹೊರಗೆ ಅಥವಾ ಬೃಹತ್ ಭಾರತದಲ್ಲಿ ಹರಡಿತ್ತು. ಕಾಂಬೋಜದ ರಾಜನಾದ ಯಶೋವರ್ಮನ್‍ನ ಶಿಲಾಲೇಖದಲ್ಲಿ ಮೂರುಬಾರಿ ಗುಣಾಢ್ಯನನ್ನು ಉಲ್ಲೇಖಿಸಲಾಗಿದೆ. ಭಾರತೀಯ ಕಥಾ ಪರಂಪರೆ 59 ಕ್ಷೇಮೇಂದ್ರ ಹಾಗೂ ಸೋಮದೇವರು ತಮ್ಮ ರೂಪಾಂತರಗಳಲ್ಲಿ ಗುಣಾಢ್ಯನ ವಿಷಯವಾಗಿ ಕೇಳಿ ಬಂದ ಮಾಹಿತಿಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಅದರ ಪ್ರಕಾರ ಗುಣಾಢ್ಯನ ಜನ್ಮವು ಗೋದಾವರೀ ತೀರದ ಪ್ರತಿಷ್ಠಾನ ನಗರದಲ್ಲಿ ಆಯಿತು. ಆ ಕಾಲದಲ್ಲಿ ಪ್ರತಿಷ್ಠಾನ ನಗರವು ಸಾತವಾಹನ ದೊರೆ ಹಾಲನ ರಾಜಧಾನಿಯಾಗಿತ್ತು. ಅವನ ಕಾಲ ಕ್ರಿ. ಶ. ಮೊದಲನೇ ಶತಮಾನವೆಂದು ಭಾವಿಸಲಾಗಿದೆ. ಬೃಹತ್ಕಥೆಯ ಉತ್ಪತ್ತಿಗೆ ಸಂಬಂಧಿಸಿದಂತೆ ತನ್ನಷ್ಟಕ್ಕೆ ತಾನೆ ಒಂದು ರೋಚಕ ಮಿಥ್ ಪ್ರಾಚೀನಕಾಲದಿಂದ ನಡೆದು ಬಂದಿದೆ. ಅದರ ವಿವರಣೆಯನ್ನು ರೂಪಾಂತರಕಾರರು ನೀಡಿದ್ದಾರೆ. ಕಥಾಸರಿತ್ಸಾಗರದ ಲೇಖಕ ಸೋಮದೇವನ ಪ್ರಕಾರ ಈ ಕತೆ ಹೀಗಿದೆ- “ಒಂದು ಬಾರಿ ಶಿವನು ಪಾರ್ವತಿಗೆ ಕತೆಗಳನ್ನ ಹೇಳಲು ಕುಳಿತುಕೊಂಡ, ಅವನು ವಿದ್ಯಾಧರ ಚಕ್ರವರ್ತಿಯ ಏಳು ಆಶ್ಚರ್ಯಜನಕ ಕತೆಗಳನ್ನು ಪಾರ್ವತಿಗೆ ಹೇಳಿದ. ಈ ಕತೆಗಳನ್ನು ಶಿವನು ಅತ್ಯಂತ ಏಕಾಂತದಲ್ಲಿ ಪಾರ್ವತಿಯ ಎದುರಿಗೆ ಹೇಳಿದ್ದರೂ, ಶಿವನ ಒಬ್ಬ ಅನುಚರನಾದ ಪುಷ್ಪದಂತನು ಆ ಕತೆಗಳನ್ನು ಮರೆಯಲ್ಲಿದ್ದು ಕದ್ದು ಕೇಳಿದ್ದ. ಅವನು ತನ್ನ ಹೆಂಡತಿ ಜಯಾಳಿಗೆ ಈ ಕತೆಗಳನ್ನು ಹೇಳಿದ. ಅವಳು ತನ್ನ ಸಖಿಯರ ಎದುರು ಈ ಕತೆಗಳನ್ನು ಹೇಳಿದಳು. ಹೀಗೆ ಆಗುತ್ತ ಆಗುತ್ತ ಈ ಕತೆಗಳ ವಿಷಯ ಪಾರ್ವತಿಯ ಎದುರುಬಂದಿತು. ಪುಷ್ಪದಂತನು ಮರೆಯಲ್ಲಿ ನಿಂತು ಈ ಕತೆಗಳನ್ನು ಕೇಳಿಸಿಕೊಂಡನೆಂಬ ಸಂಗತಿಯು ಪಾರ್ವತಿಗೆ ಗೊತ್ತಾದಾಗ ಪಾರ್ವತಿ ಸಿಟ್ಟಾಗಿ ಪುಷ್ಪದಂತನು ಮತ್ರ್ಯಲೋಕದಲ್ಲಿ ಜನ್ಮವೆತ್ತಲಿ ಎಂಬ ಶಾಪವನ್ನು ಕೊಟ್ಟಳು. ಪುಷ್ಟದಂತನ ಸಹೋದರ ಮೌಲ್ಯವಾನನು ಅವನ ಪರವಾಗಿ ಕ್ಷಮೆ ಕೇಳಿದನು. ತುಂಬ ಸಿಟ್ಟಾಗಿದ್ದ ಪಾರ್ವತಿಯು ಮೌಲ್ಯವಾನನಿಗೂ ಅದೇ ಶಾಪ ಕೊಟ್ಟಳು. ಪುಷ್ಪದಂತನ ಪತ್ನಿ ಜಯಾ ಪಾರ್ವತಿಯ ಸಖಿಯಾಗಿದ್ದಳು. ಅವಳ ದುಃಖವನ್ನು ನೋಡಿ ಅನಂತರ ಪಾರ್ವತಿಗೆ ಕರುಣೆ ಬಂದಿತು. ಆಗ ಅವಳು ತನ್ನ ಶಾಪಕ್ಕೆ ಒಂದು ಪರಿಹಾರವನ್ನು ಹೇಳಿದಳು. ಪುಷ್ಪದಂತನು ಮನುಷ್ಯನಾಗಿ ಹುಟ್ಟಿ ವಿಂಧ್ಯಾಚಲ ಪರ್ವತದ ಮೇಲೆ ಕಾಣಭೂತಿಯನ್ನು ಭೇಟಿಯಾದಾಗ, ತಾನು ಕದ್ದುಕೇಳಿದ ಕತೆಗಳನ್ನು ಅವನಿಗೆ ಹೇಳುತ್ತಾನೆ. ಆಗ ಅವನಿಗೆ ಶಾಪದಿಂದ ಮುಕ್ತಿಯಾಗುತ್ತದೆ. ಅಲ್ಲದೇ ಮನುಷ್ಯನಾಗಿ ಜನ್ಮ ತಾಳಿದರೂ ಅವನು ತನ್ನ ವಾಸ್ತವಿಕ ಪರಿಚಯವನ್ನು ಮರೆಯುವುದಿಲ್ಲ. ಇದೇ ರೀತಿ ಮೌಲ್ಯವಾನನು ಕಾಣಭೂತಿಯಿಂದ ಈ ಕತೆಗಳನ್ನು ಕೇಳುತ್ತಾನೆ. ಇವುಗಳನ್ನು ಲೊಕದಲ್ಲಿ ಪ್ರಚಾರ ಮಾಡುತ್ತಾನೆ. ಅನಂತರ ಅವನು ಶಿವಲೋಕಕ್ಕೆ ಹಿಂತಿರುಗುತ್ತಾನೆ”. ಪಾರ್ವತಿಯ ಶಾಪದಂತೆ ಪುಷ್ಪದಂತನು ಕೌಶಾಂಬಿ ನಗರದಲ್ಲಿ ವರರುಚಿ (ಕಾತ್ಯಾಯನ) ಯಾಗಿ ಜನ್ಮತಾಳುತ್ತಾನೆ. ಅವನು ಮಹಾ ವೈಯಾಕರಣಿಯಾಗಿ ನಂದ ವಂಶದ ಅಂತಿಮ ದೊರೆ ಯೋಗನಂದನ 60 ಕಥಾ ಸಂಸ್ಕೃತಿ ಮಂತ್ರಿಯಾಗುತ್ತಾನೆ. ಜೀವನದ ಉತ್ತರಾರ್ಧದಲ್ಲಿ ವಿರಕ್ತನಾಗಿ ಅವನು ವಿಂಧ್ಯಾಚಲದ ವಿಂಧ್ಯವಾಸಿನೀ ದೇವಿಯ ಯಾತ್ರೆಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಕಾಣಭೂತಿಯ ಭೇಟಿಯಾಗುತ್ತದೆ. ಅವನಿಗೆ ತನ್ನ ಪೂರ್ವಜನ್ಮದ ಸ್ಮರಣೆಯಾಗುತ್ತದೆ. ಆಗ ಅವನು ಕಾಣಭೂತಿಗೆ ಆ ಏಳೂ ಕತೆಗಳನ್ನು ಹೇಳುತ್ತಾನೆ. ಹಾಗೆಯೇ ಶಾಪಮುಕ್ತನಾಗಿ ಶಿವಲೋಕಕ್ಕೆ ಬಂದು ಬಿಡುತ್ತಾನೆ. ಅವನ ಸೋದರ ಮೌಲ್ಯವಾನನು ಪ್ರತಿಷ್ಠಾನಪುರಿಯಲ್ಲಿ ಗುಣಾಢ್ಯನೆಂಬ ಹೆಸರಿನಲ್ಲಿ ಜನ್ಮ ತಾಳುತ್ತಾನೆ. ಅವನು ಅಲ್ಲಿಯ ಸಾತವಾಹನ ರಾಜನ ಮಂತ್ರಿಯಾಗುತ್ತಾನೆ. ಅವನಿಗೆ ಇಬ್ಬರು ಶಿಷ್ಯರು - ಗುಣದೇವ ಹಾಗೂ ನಂದಿದೇವ. ಈ ಇಬ್ಬರನ್ನು ಕರೆದುಕೊಂಡು ಅವನು ಕಾಣಭೂತಿಯ ಬಳಿ ಬರುತ್ತಾನೆ. ಅವನು ಕಾಣಭೂತಿಯಿಂದ ಆ ಏಳೂ ಬೃಹತ್ಕಥೆಗಳನ್ನು ಪಡೆದುಕೊಂಡು ಅವನ್ನು ಒಂದೊಂದನ್ನು ಒಂದೊಂದು ಲಕ್ಷ ಶ್ಲೋಕಗಳಲ್ಲಿ ತನ್ನ ರಕ್ತದಿಂದ ಬರೆಯುತ್ತಾನೆ. ನಂತರ ಅವನು ತನ್ನ ಶಿಷ್ಯರ ಒತ್ತಾಯದ ಮೇರೆಗೆ ಆ ಬೃಹತ್ಕಥೆಗಳನ್ನು ರಾಜಾ ಸಾತವಾಹನನ ಬಳಿ ಕಳಿಸುತ್ತಾನೆ. ಅದರಿಂದ ಆ ಮಹಾಗ್ರಂಥಕ್ಕೆ ಯೋಗ್ಯ ಮನ್ನಣೆ ಹಾಗೂ ರಕ್ಷಣೆ ದೊರಕೀತೆಂದು ಅವನು ಭಾವಿಸಿದ್ದ. ಆದರೆ ರಾಜನಿಗೆ ಆ ಕತೆಗಳು ಇಷ್ಟವಾಗಲಿಲ್ಲ. ಯಾಕೆಂದರೆ ಅವನ್ನು ಪ್ರಾಕೃತ ಭಾಷೆಯಲ್ಲಿ (ಪೈಶಾಚೀ ಪ್ರಾಕೃತ) ಬರೆಯಲಾಗಿತ್ತು. ಇದರಿಂದ ಗುಣಾಢ್ಯನಿಗೆ ತುಂಬ ಆಘಾತವಾಯಿತು. ರಾಜನಿಂದ ಅನಾದರಿತವಾಗಿ ಮರಳಿಬಂದ ಪುಸ್ತಕವನ್ನು ಅವನು ಒಂದೊಂದು ಪುಟವಾಗಿ ಓದಿ ಬೆಂಕಿಗೆ ಚೆಲ್ಲಿ ಸುಡಲು ಪ್ರಾರಂಭ ಮಾಡಿದ. ಅಡವಿಯ ಎಲ್ಲ ಪಕ್ಷಿಗಳು ಒಟ್ಟಾಗಿ ಸೇರಿ ಅವನು ಹೇಳುತ್ತಿದ್ದ ಕತೆಗಳನ್ನು ಮುಗ್ಧವಾಗಿ ಕೇಳುತ್ತಿದ್ದವು. ಇದರಿಂದ ರಾಜಾ ಸಾತವಾಹನನಿಗೆ ಪಕ್ಷಿಗಳ ಒಳ್ಳೆಯ ಮಾಂಸ ದೊರೆಯುವುದು ನಿಂತು ಹೋಯಿತು. ಅವನು ಇದರ ಕಾರಣವನ್ನು ತಿಳಿಯ ಬಯಸಿದಾಗ, ತಾನು ಬೃಹತ್ಕಥೆಗಳನ್ನು ಅನಾದರಿಸಿದ್ದರ ಬಗೆಗೆ ಅವನಿಗೆ ಪಶ್ಚಾತ್ತಾಪವಾಯಿತು. ಆದರೆ ಆ ವೇಳೆಗೆ ಗುಣಾಢ್ಯನು ತನ್ನ ಬೃಹತ್ಕಥೆಯ ಆರು ಖಂಡಗಳನ್ನು ಸುಟ್ಟುಹಾಕಿದ್ದನು. ಸಾತವಾಹನನು ಅಲ್ಲಿಗೆ ತಲುಪಿ ಉಳಿದವುಗಳು ಬೆಂಕಿಗೆ ಆಹುತಿಯಾಗುವುದನ್ನು ತಡೆದನು. ಈ ರೀತಿಯಲ್ಲಿ ಬೃಹತ್ಕಥೆಯ ಒಂದು ಲಕ್ಷ ಶ್ಲೋಕಗಳ ಕೇವಲ ಏಳನೆಯ ಖಂಡ ಮಾತ್ರ ಉಳಿಯಲು ಸಾಧ್ಯವಾಯಿತು. ವಾಸ್ತವವಾಗಿ ಬೃಹತ್ಕಥೆ ಭಾರತೀಯ ಕಥಾಸಾಹಿತ್ಯದ ಒಂದು ಅಮೂಲ್ಯ ನಿಧಿ. ತನ್ನ ಮೂಲದಲ್ಲಿ ದೊರಕದಿದ್ದರೂ ಅನೇಕ ರೂಪಾಂತರಗಳ ಮೂಲಕ ಅನಂತರದ ಕಾಲದಲ್ಲಿಯೂ ಅಷ್ಟೇ ಲೋಕಪ್ರಿಯವಾಗಿ ಉಳಿಯಿತು. ಈ ರೂಪಾಂತರಗಳಲ್ಲಿ ಸೋಮದೇವನ ಕಥಾ ಸರಿತ್ಸಾಗರವು ಕಥಾನಕದ ಪ್ರಸ್ತುತಿಯ ದೃಷ್ಟಿಯಿಂದ, ವರ್ಣನಶೈಲಿ, ಪಾಂಡಿತ್ಯ, ಹಾಗೂ ಕವಿ ಪ್ರತಿಭೆಗಳೆಲ್ಲ ಸೇರಿಕೊಂಡ ಕಾರಣದಿಂದ ಎಲ್ಲಕ್ಕಿಂತ ವಾಚನಯೋಗ್ಯ - ರೋಚಕವಾಗಿದೆ. ಹಾಗಾಗಿ ಈ ಭಾರತೀಯ ಕಥಾ ಪರಂಪರೆ 61 ಸಂಕಲನದಲ್ಲಿ ಬೃಹತ್ಕಥೆಯ ಪರಂಪರೆಯ ಕತೆಗಳ ಪರಿಚಯಕ್ಕಾಗಿ ಕಥಾ ಸರಿತ್ಸಾಗರದಿಂದಲೇ ನಾಲ್ಕು ಕತೆಗಳನ್ನು ಆಯ್ಕೆಮಾಡಲಾಗಿದೆ. ಬೃಹತ್ಕಥೆಯಲ್ಲಿ ಭಾರತೀಯ ಕತೆಯ ಒಂದು ವಿಶೇಷ ಸ್ವರೂಪ ಎದ್ದು ಕಾಣುತ್ತದೆ. ಒಂದು ಕತೆಯ ಒಳಗಿನಿಂದ ಇನ್ನೊಂದು, ಇನ್ನೊಂದರ ಒಳಗಿನಿಂದ ಮತ್ತೊಂದು ಕತೆ ಹೊರಡುತ್ತ ಹೋಗುತ್ತದೆ. ಹೀಗೆ ಕತೆಯ ಒಂದು ಸರಣಿಯೇ ತಯಾರಾಗಿ ಬಿಡುತ್ತದೆ. ಪಂಚತಂತ್ರ ಹಾಗೂ ಸಂಸ್ಕೃತದ ಅನ್ಯ ಕಥಾ ಗ್ರಂಥಗಳಲ್ಲಿಯೂ ಈ ವಿಶಿಷ್ಟಶೈಲಿಯ ಪ್ರಯೋಗ ಆಗಿದೆ. ಅದರಲ್ಲಿ ಒಂದು ಕತೆಯ ಯಾವುದೋ ಒಂದು ಪಾತ್ರವು ಇನ್ನೊಂದು ಪಾತ್ರಕ್ಕೆ ಮತ್ತಾವುದೋ ಒಂದು ಕತೆಯನ್ನು ಪ್ರಸಂಗವಶಾತ್ ಹೇಳಲು ತೊಡಗುತ್ತದೆ. ಅಥವಾ ಯಾವುದೋ ಪಾತ್ರ ತನ್ನ ವೃತ್ತಾಂತವನ್ನು ಹೇಳುತ್ತ ಒಂದು ಬೇರೆಯದೆ ಕಥಾ ಜಗತ್ತನ್ನು ಕಟ್ಟಿಕೊಡುತ್ತದೆ. ಅನಂತರದ ಯುಗದಲ್ಲಿ ಬೃಹತ್ಕಥೆಯ ಪರಂಪರೆಯಲ್ಲಿ ವಿಪುಲವಾದ ಕಥಾ ಸಾಹಿತ್ಯ ರಚನೆಯಾಗತೊಡಗಿತು. ಬೇತಾಳ ಪಂಚ ವಿಂಶತಿ, ಶುಕ ಸಪ್ತತಿ, ಸಿಂಹಾಸನದ್ವಾತ್ರಿಂಶಿಕಾ, ಪಂಚತಂತ್ರ, ಹಿತೋಪದೇಶ ಮುಂತಾದ ಕಥಾರಚನೆಗಳ ಹಲವು ಸಂಸ್ಕರಣಗಳು ಸಂಸ್ಕೃತದಲ್ಲಿಯೇ ಪ್ರಾಚೀನ ಕಾಲದಿಂದ ಪ್ರಚಲಿತವಾಗಿದೆ. ಲೋಕಕತೆಗಳು-ಲೋಕ ಸಾಹಿತ್ಯ ಪರಂಪರೆಯೊಂದಿಗೆ ಕೂಡ ಈ ರಚನೆಗಳು ಆಳವಾದ ಸಂಬಂಧವನ್ನು ಜೋಡಿಸಿಕೊಂಡಿವೆ. ಬೇತಾಳ ಪಂಚವಿಂಶತಿಯು ಬೇತಾಳ ಪಚ್ಚೀಸೀಯ ರೂಪದಲ್ಲಿ ಶುಕ ಸಪ್ತತಿಯ ಕತೆಯು ಗಿಳಿ-ಮೈನಾ ರೂಪದಲ್ಲಿ, ಸಿಂಹಸನದ್ವಾತ್ರಿಂಶಿಕಾ ಸಿಂಹಾಸನ ಬತ್ತೀಸಿ ರೂಪದಲ್ಲಿ ಲೋಕಭಾಷೆಗಳಲ್ಲಿ ರೂಪಾಂತರಗೊಂಡು ಮನೆಮನೆಯಲ್ಲಿ ಓದಿ, ಹೇಳಿ, ಕೇಳಲಾಗುತ್ತಿದೆ. ಬೇತಾಳ ಪಂಚವಿಂಶತಿಯ ಇಪ್ಪತ್ತೈದು ಕತೆಗಳು ಬೃಹತ್ಕಥೆಯ ಕ್ಷೇಮೇಂದ್ರ ಹಾಗೂ ಸೋಮದೇವ ಅವರ ರೂಪಾಂತರದಲ್ಲಿ ಸೇರಿಕೊಂಡಿದ್ದರೂ ಬೇತಾಳ ಪಂಚವಿಂಶತಿಯು ಮೂಲ ಬೃಹತ್ಕಥೆಗಿಂತ ಸ್ವತಂತ್ರವಾಗಿ ಒಂದು ಪ್ರತ್ಯೇಕ ಕಥಾ ಚಕ್ರದ ರೂಪದಲ್ಲಿ ವಿಕಸಿತವಾಗಿರಬಹುದು ಎಂಬ ಅನುಮಾನವಿದೆ. ಬೇತಾಳ ಪಂಚವಿಂಶತಿಯ ಸಂಸ್ಕೃತದ ಕನಿಷ್ಠ ನಾಲ್ಕು ಸಂಸ್ಕರಣಗಳು ಇದ್ದುದು ಗೊತ್ತಾಗುತ್ತದೆ. ಇವುಗಳಲ್ಲಿ ಶಿವದಾಸ ರಚಿತ ಬೇತಾಳ ಪಂಚವಿಂಶತಿ ಹೆಚ್ಚಾಗಿ ಉಲ್ಲೇಖನೀಯವಾಗಿದೆ. ಇದರಲ್ಲಿ ಗದ್ಯದೊಂದಿಗೆ ನಡುನಡುವೆ ಪದ್ಯದ ಪ್ರಯೋಗವೂ ಆಗಿದೆ. ಇದರ ಸಮಯವು ಹದಿನೈದನೆಯ ಶತಮಾನದ ಆಚೀಚೆ ಎಂದು ಭಾವಿಸಲಾಗಿದೆ. ಇನ್ನೊಂದು ಬೇತಾಳ ಪಂಚವಿಂಶತಿಯು ಯಾವುದೋ ಅಜ್ಞಾತ ಲೇಖಕನಿಂದ ಗದ್ಯದಲ್ಲಿ ಸಿದ್ಧಪಡಿಸಲಾಗಿದ್ದು. ಮೂರನೆಯ ತೀರಾ ಸಂಕ್ಷಿಪ್ತ ರೂಪವನ್ನು ವಲ್ಲಭದೇವನು ರೂಪಿಸಿದ್ದಾನೆ. ಇದರ ಹೊರತಾಗಿ ಬೇತಾಳ ಪಂಚವಿಂಶತಿಯ ನಾಲ್ಕನೆಯ ರೂಪವನ್ನು ಜಂಭಲದತ್ತನು ರಚಿಸಿದ್ದಾನೆ. ಶುಕ 62 ಕಥಾ ಸಂಸ್ಕೃತಿ ಸಪ್ತತಿಯಲ್ಲಿ ಒಂದು ಗಿಳಿಯು ವ್ಯಾಪಾರಿಯ ಪತ್ನಿ ಪ್ರಭಾವತಿಗೆ ಹೇಳಿದ ಎಪ್ಪತ್ತು ಕತೆಗಳಿವೆ. ಇದರ ಎರಡು ಪ್ರಾಚೀನ ಸಂಸ್ಕರಣಗಳಿದ್ದುದು ಗೊತ್ತಾಗುತ್ತದೆ. ಒಂದು ಅಲಂಕೃತ ಸಂಸ್ಕರಣ, ಮತ್ತೊಂದು ಸರಳ, ಮೊದಲನೆಯ ಸಂಸ್ಕರಣ ಹನ್ನೆರಡನೆಯ ಶತಮಾನದ ಆಚೀಚೆಯದೆಂದು ಭಾವಿಸಲಾಗಿದೆ. ಕತೆಯ ಕ್ಷೇತ್ರದಲ್ಲಿ ಪಂಚತಂತ್ರವು ಭಾರತೀಯ ಸಾಹಿತ್ಯಕ್ಕೆ ಬಹು ದೊಡ್ಡಕೊಡುಗೆಯೆಂದು ಹೇಳಬಹುದಾಗಿದೆ. ಐದನೆಯ ಶತಮಾನದಿಂದಲೇ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಳ್ಳುವ ಪರಂಪರೆಯು ಅಕಾರಣವಾದದ್ದಲ್ಲ. ಪಶ್ಚಿಮದ ವಿದ್ವಾಂಸರೂ ಕೂಡ ಕಥಾ ಪರಂಪರೆಗೆ ಪಂಚತಂತ್ರದ ಕೊಡುಗೆಯ ಮಹತ್ವವನ್ನು ಒಪ್ಪಿಕೊಂಡಿದ್ದಾರೆ. “ಜಗತ್ತಿನ ಯಾವುದೇ ಜಾತಿಯ ಬಳಿ ಬಹುಶಃ ಭಾರತಿಯರ ಬಳಿ ಇರುವಂಥ ಇಷ್ಟೊಂದು ಸಂಪನ್ನ ಕಥಾ ಸಾಹಿತ್ಯವಿಲ್ಲ. ಬೇರೆದೇಶಗಳಲ್ಲಿಯೂ ಇರುವ ಪ್ರಾಚೀನ ಕಥಾ ಸಾಹಿತ್ಯವು ಭಾರತೀಯ ಕತೆಗಳದೇ ಕೊಡುಗೆಯೆನ್ನಬಹುದಾಗಿದೆ” - ವಿಂಟರ್ ನಿಟ್ಸ್ ಅವರ ಈ ಹೇಳಿಕೆಯಲ್ಲಿ ಕತೆಗಳ ಭಾರತೀಯ ಪರಂಪರೆಯ ದೊಡ್ಡಸ್ತಿಕೆ ಹಾಗೂ ವೈಶಾಲ್ಯವಿದ್ದು, ಅದರ ಕೇಂದ್ರದಲ್ಲಿ ಪಂಚತಂತ್ರವಿದೆ. ಹೆಚ್ಚಾಗಿ ಪಂಚತಂತ್ರದ ಶರೀರವು ಪಶುಕತೆಗಳನ್ನು ಹಾಸುಹೊಕ್ಕಾಗಿ ನೇಯ್ದಿದ್ದು. ಹೀಗಿದ್ದರೂ ಅದರಲ್ಲಿ ನೇರವಾಗಿ ಮನುಷ್ಯನೊಂದಿಗೆ ಸಂಬದ್ಧವಾದ ಅನೇಕ ಕತೆಗಳಿವೆ. ಪಶು ಕತೆಗಳ ಪರಂಪರೆ ವೈದಿಕ ಆಖ್ಯಾನಗಳಿಂದ ಪ್ರಾರಂಭವಾಗಿ ಮಹಾಭಾರತ, ಪುರಾಣ ಹಾಗೂ ಜಾತಕ ಕತೆಗಳವರೆಗೆ ಬಂದು ತಲುಪುತ್ತದೆ. ಕತೆಯ ಒಂದು ದೀರ್ಘ-ವಿರಾಸತ್ ಇರುವಾಗ, ಕಾವ್ಯ ಶಾಸ್ತ್ರದ ಆಚಾರ್ಯರ ಮೂಲಕ ಕತೆಯನ್ನು ಹೋಲುವ ವಿಧಗಳ ಪರಿಗಣನೆ ಮತ್ತು ಅವುಗಳ ಲಕ್ಷಣಗಳ ವ್ಯವಸ್ಥಾಪನೆ ಸ್ವಾಭಾವಿಕವೇ ಆಗಿತ್ತು. ಉಪನ್ಯಾಸ, ಆಖ್ಯಾನ, ನಿದರ್ಶನ ಪ್ರವಹ್ಲಿಕಾ, ಮಂಥುಲ್ಲೀ, ಮಣುಕುಲ್ಯಾ, ಪರಿಕಥಾ, ಖಂಡಕಥಾ, ಬೃಹತ್ಕಥಾ- ಇತ್ಯಾದಿ ಅನೇಕ ವಿಧಗಳನ್ನು ಆನಂದವರ್ಧನ ಮುಂತಾದ ಸಂಸ್ಕೃತ ಕಾವ್ಯ ಶಾಸ್ತ್ರದ ಆಚಾರ್ಯರು ಪರಿಗಣಿಸಿದರು. ಭೋಜನಂಥ ಆಚಾರ್ಯರು ಅದನ್ನು ವಿಸ್ತಾರವಾಗಿ ಸೋದಾಹರಣ ಲಕ್ಷಣವನ್ನೂ ನಿರೂಪಿಸಿದರು. ಆಧುನಿಕ ಕತೆಗಳ ವ್ಯಾಪಕ ಲಕ್ಷಣವನ್ನು ಸಿದ್ಧಗೊಳಿಸಿದರೆ, ಈ ವಿಧಗಳ ಹೆಚ್ಚಿನ ಲಕ್ಷಣಗಳು ಅದರಲ್ಲಿ ಉಪಲಕ್ಷಣವಾಗಿ ಸೇರಿಕೊಳ್ಳುತ್ತದೆ. ಈ ಆಚಾರ್ಯರುಗಳು ಪಂಚತಂತ್ರವನ್ನು ನಿದರ್ಶನಾ ಎಂಬ ಹೆಸರಿನ ಕಥಾ ವಿಧಾನದಲ್ಲಿ ಅಂತರ್ಗತಗೊಳಿಸಿದ್ದಾರೆ, ಯಾಕೆಂದರೆ ಇದರಲ್ಲಿ ಮನುಷ್ಯ ಜಗತ್ತಿನ ಯಾವುದೇ ಸತ್ಯದ ನಿದರ್ಶನಕ್ಕಾಗಿ ಪಶುಕತೆಗಳನ್ನು ಅಥವಾ ಪಶು ಪ್ರತೀಕಗಳನ್ನು ಬಳಸಿಕೊಳ್ಳಲಾಗಿದೆ. ನಿದರ್ಶನದ ಈ ವಿಶಿಷ್ಟ ಪದ್ಧತಿಯು ಪಂಚತಂತ್ರವನ್ನು ಆಧುನಿಕ ಕತೆಗಳ ಸಮೀಪ ತರುತ್ತದೆ. ಮತ್ತು ಅದಕ್ಕಿಂತ ತುಸು ಭಾರತೀಯ ಕಥಾ ಪರಂಪರೆ 63 ಮುಂದೆಯೂ ಕೊಂಡೊಯ್ಯುತ್ತದೆ. ಪಂಚತಂತ್ರವು ತನಗಿಂತ ಮುಂಚಿನ ಪಶುಕತೆಗಳ ಪರಂಪರೆಯನ್ನು ಸಂಗ್ರಹಿಸಿದೆ ಮಾತ್ರವಲ್ಲ, ಅದರಲ್ಲಿ ಒಂದು ಹೊಸ ಸಂಗತಿಯನ್ನು ಹುಟ್ಟುಹಾಕಿದೆ. ಪಂಚತಂತ್ರದ ಕತೆಗಳಲ್ಲಿ ಮನುಷ್ಯ ಜಗತ್ತನ್ನು ವಿವಿಧತೆಗಳೊಂದಿಗೆ ಚಿತ್ರಿಸಲಾಗಿದ್ದು, ಅದು ಕತೆಗಳನ್ನು ಸಮಕಾಲೀನಗೊಳಿಸುತ್ತದೆ. ಹಾಗೂ ಆಧುನಿಕವನ್ನೂ ಕೂಡ. ಮಾನವೀಯ ವ್ಯಾಪಾರವನ್ನು ಪಶುಜಗತ್ತಿನ ಮೇಲೆ ಆರೋಪಿಸುವುದು ಇಲ್ಲಿ ಒಂದು ವಿಶಿಷ್ಟಯೋಜನೆ ಮತ್ತು ಅಭಿಪ್ರಾಯದ ಅಧೀನ ಮಾಡಲಾಗಿದೆ. ಈ ಯೋಜನೆಯಲ್ಲಿ ಮನುಷ್ಯ ಮತ್ತು ಪಶು ಒಂದು ಇನ್ನೊಂದರ ಎದುರು ಬದುರು ಬಂದು ನಿಲ್ಲುತ್ತಾರೆ. ಪಂಚತಂತ್ರದ ಈ ಯೋಜನೆಯಿಂದ ಕತೆಯ ಪ್ರತಿಮಾನವೂ ಹೊಮ್ಮಿ ಎದುರು ಬರುತ್ತದೆ - ಪಂಚತಂತ್ರವು ಕತೆಗಳ ಮಾಧ್ಯಮದಿಂದ ಮನುಷ್ಯನ ದುರ್ಬಲತೆ, ಅಸಾಮರ್ಥ್ಯ, ಮೂರ್ಖತೆಯನ್ನೂ ಕೂಡ, ಹಾಗೂ ಅವನ ಸಾಮರ್ಥ್ಯ- ಕರ್ತೃತ್ವವನ್ನೂ ಬಹಳ ಮೊನಚಾದ ವ್ಯಂಗ್ಯ, ಆಳವಾದ ಸಂವೇದನಾಶೀಲತೆಯೊಂದಿಗೆ ವ್ಯಕ್ತ ಮಾಡಲು ಶಕ್ತವಾಗಿದೆ. ಕತೆಯಲ್ಲಿ ಪಶು ಪ್ರತೀಕಗಳ ಬಳಕೆ ಅಥವಾ ಪಶುಕತೆಯ ಈ ಪರಂಪರೆ ಜಾತಕ ಕತೆಗಳು - ಈಸೋಪನ ನೀತಿಕತೆಗಳಿಗಿಂತ ತುಸುಭಿನ್ನವಾಗಿದೆ. ಈಸೋಪ ಅಥವಾ ಸಿಂದಬಾದನ ಕತೆಗಳೂ ಕೂಡ ತನ್ನ ಮೂಲರೂಪದಲ್ಲಿ ನಮ್ಮ ಕಥಾ ಪರಂಪರೆಯಲ್ಲೇ ಇದ್ದವು. ಮತ್ತು ಇಲ್ಲಿಂದಲೇ ಹೋದವು - ಇದು ಸಂಶೋಧಕರ ಹೇಳಿಕೆಯಾಗಿದೆ. ಪಂಚತಂತ್ರದ ಕತೆಗಳು ಕಥಾ ಪರಂಪರೆಯನ್ನು ವಿಸ್ತಾರಗೊಳಿಸುತ್ತವೆ. ಇಲ್ಲಿ ಪಶುಗಳ ಮೂಲಕ ಅನ್ಯೋಕ್ತಿಯ ಶೈಲಿಯಲ್ಲಿ ಮಾನವೀಯ ಭಾವವನ್ನು ಮಾತ್ರ ವ್ಯಂಜಿತಗೊಳಿಸಲಾಗಿಲ್ಲ. ಮನುಷ್ಯನ ವಿಶಿಷ್ಟ ಸ್ವಭಾವಗಳನ್ನು ಮತ್ತು ಮಾನವೀಯ ಜಗತ್ತಿನ ಕಾರ್ಯ ವ್ಯಾಪಾರಗಳನ್ನು ಅವುಗಳ ಮೇಲೆ ಆರೋಪಿಸುತ್ತ, ಪಶು ಮತ್ತು ಮನುಷ್ಯರನ್ನು ಪ್ರತ್ಯಕ್ಷ-ಪರೋಕ್ಷ ವಿಶಿಷ್ಟ ಶೈಲಿಯಲ್ಲಿ ಪಶುಗಳ ಮೂಲಕ ಮಾನವೀಯ ಜಗತ್ತಿನ ಸಾಕ್ಷತ್ಕಾರವಷ್ಟೇ ಅಲ್ಲ, ಪಶುವಿನ ಮಾನವತೆ, ಮತ್ತು ಮಾನವನ ಪಶುತೆಯನ್ನು ಕೂಡ ನಾವು ಒಂದು ಇನ್ನೊಂದರ ದ್ವಂದ್ವದಲ್ಲಿ ನೋಡುತ್ತೇವೆ. ಅಧಿಕಾಂಶ ಕತೆಗಳಲ್ಲಿ ನಾವು ಪಶು ಪಾತ್ರಗಳಲ್ಲಿ ಬಿರುಕನ್ನು ನೋಡುತ್ತೇವೆ. ಪಂಚತಂತ್ರದ ಎಲ್ಲ ಕತೆಗಳಲ್ಲಿ ಕೇಂದ್ರೀಯ ವಿಚಾರವನ್ನು ಸೂತ್ರ ರೂಪದಲ್ಲಿ ಮೊದಲಿನಿಂದಲೇ ನೆಲೆಗೊಳಿಸಲಾಗಿದೆ. ಆ ಸೂತ್ರದ ದೃಷ್ಟಾಂತವೇ ಕತೆ. ಈ ಶೈಲಿ ಬೋಧಕಥೆಗಳದು ಅಥವಾ ನೀತಿ ಕಥೆಗಳದು. ಈ ಕಾರಣದಿಂದಲೇ ನಮ್ಮ ಆಚಾರ್ಯರು ಪಂಚತಂತ್ರವನ್ನು ನಿದರ್ಶನಾ ವಿಧದ್ದೆಂದು ಪರಿಗಣಿಸಿದ್ದಾರೆ. ಆದರೆ ಪಂಚತಂತ್ರವು ಕತೆಯ ಈ ಸೂತ್ರ ಅಥವಾ ಕೇಂದ್ರೀಯ ವಿಚಾರವನ್ನು ಎರಡು 64 ಕಥಾ ಸಂಸ್ಕೃತಿ ಪಾತ್ರಗಳ ಚರ್ಚೆಯ ಭಾಗವಾಗಿ ಮಾಡುತ್ತ ಕತೆಯ ಜೀವನದೃಷ್ಟಿ ಮತ್ತು ಕತೆಯ ಶಿಲ್ಪ ಎರಡನ್ನೂ ಸಮರಸಗೊಳಿಸುತ್ತದೆ. ಈ ಸಾಮರಸ್ಯದಲ್ಲಿ ಕತೆಯ ಪರ್ಯವಸಾನ ಆಗುತ್ತದೆ. ಕಥಾಶಿಲ್ಪ ಮತ್ತು ಕಥಾ ದೃಷ್ಟಿಯ ಸೇರುವಿಕೆ ಬೇತಾಳ ಪಂಚವಿಂಶತಿಯ ಕೆಲವು ಕತೆಗಳಲ್ಲಿ ಹೆಚ್ಚು ಪರಿಷ್ಕೃತರೂಪದಲ್ಲಿ ದೊರೆಯುತ್ತದೆ. ಇದರ ಕತೆಗಳಲ್ಲಿ ಅನ್ವಯಗೊಳಿಸಿದ ಕಥಾ ಪ್ರಕ್ರಿಯೆ ಕೂಡ ಪಂಚತಂತ್ರದ ಕತೆಗಳಿಗಿಂತ ಹೆಚ್ಚು ಆಕರ್ಷಕ. ಕತೆ ಮುಗಿಯುತ್ತಿದ್ದಂತೆ ಒಂದು ಜಟಿಲವಾದ ಗಂಟು ಬಂದು ನಿಲ್ಲುತ್ತದೆ. ಈ ಗಂಟನ್ನು ಬಿಡಿಸುವಲ್ಲಿ ಇಡೀ ಕತೆಯ ಕೇಂದ್ರೀಯ ವಿಚಾರ ತೆರೆದುಕೊಳ್ಳುತ್ತದೆ. ಪಂಚತಂತ್ರದ ಕತೆಗಳಂತೆ ಇಲ್ಲಿ ಕೇಂದ್ರೀಯ ವಿಚಾರವನ್ನು ಸೂತ್ರಬದ್ಧಗೊಳಿಸಿ ಮೊದಲೇ ಹೇಳಲಾಗುವುದಿಲ್ಲ. ಆ ಕಾರಣದಿಂದಲೇ ಕತೆಯ ಗಂಟು ಬಿಡಿಸಿದ ಸಮಧಾನದ ಆಕಸ್ಮಿಕತೆ ಮತ್ತು ವಿಸ್ಮಯದ ಆಸ್ವಾದ ತುಸು ಬೇರೆಯದೇ ಆಗಿರುತ್ತದೆ. ಜೊತೆಗೆ ಬೇತಾಳದ ಕೆಲವು ಕತೆಗಳು ಮನುಷ್ಯನ ಅಸ್ತಿತ್ವದ ಅರ್ಥವಂತಿಕೆಯ ಕುರುಹು ಹಾಗೂ ಮನುಷ್ಯನ ಶ್ರೇಷ್ಠತೆಯ ಸ್ಥಾಪನೆಯಲ್ಲಿ ತುಸು ಮುಂದು ಮುಂದಿನವರೆಗೂ ಹೋಗುತ್ತವೆ. ಜೀವನದ ಬಗೆಗಿನ ಆಸಕ್ತಿಯು ಅನೇಕ ಕಡೆ ಹೆಚ್ಚು ಆಳವೆನಿಸುತ್ತದೆ. 2 ವೈದಿಕ ಕಾಲದಲ್ಲಿ ರಚಿಸಿದ ಕತೆಗಳಿಂದ ಹಿಡಿದು ಮಹಾಭಾರತ ಬೃಹತ್ಕಥೆಯವರೆಗಿನ ಭಾರತೀಯ ಕಥಾ ಪರಂಪರೆಯಲ್ಲಿ ಕತೆಯ ಮೌಖಿಕ ಹೇಳಿಕೆಯ ಶೈಲಿಯ ದರ್ಶನವಾಗುತ್ತದೆ. ಬ್ರಾಹ್ಮಣಗ್ರಂಥಗಳಲ್ಲಿ ಗದ್ಯಬರೆಹದ ಆಖ್ಯಾನಗಳಲ್ಲಿ ವಾಚಿಕ ಶೈಲಿಯ ರಹಸ್ಯವನ್ನು ನಾವು ಅನುಭವಿಸುತ್ತೇವೆ. ಅಲ್ಲಿ ವ್ಯಕ್ತಿವಾಚಕ ಸಂಜ್ಞೆಯ ಬದಲು ಸರ್ವನಾಮಗಳು - ಇದರ, ಅದರ, ಅದು, ಇದು, ಅವನು, ಕೆಲವು ಸಾವಿರ ವರ್ಷಗಳ ಅವಧಿಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಕಂಠಸ್ಥಗೊಳಿಸುತ್ತ ನಮ್ಮ ಪೂರ್ವಜರು ಹೇಗೆ ಯಥಾ ಪ್ರಕಾರ ಉಳಿಸಿಕೊಂಡು ಬಂದರೋ - ಮುಂತಾದವುಗಳ ಪ್ರಯೋಗರೂಪ ಹೆಚ್ಚಾಗುತ್ತದೆ. ಇಂಥ ಗದ್ಯರೂಪವನ್ನು ನೋಡಿದರೆ ವೇದ ಮಂತ್ರಗಳ ವಿಪುಲ ಭಂಡಾರವನ್ನು ಹಾಗೆಯೇ ಕತೆಗಳ ಗದ್ಯವನ್ನು ಕೂಡ ಪಾಠಾಂತರ ಮಾಡದೆ ಉಳಿಸಲಾಯಿತು ಎಂದೆನಿಸುತ್ತದೆ. ಅನಂತರದಲ್ಲಿ ಅಲಂಕೃತ ಶೈಲಿಯ ಸಾಹಿತ್ಯಕ ಗದ್ಯದಲ್ಲಿ ಕತೆಗಳನ್ನು ಬರೆಯತೊಡಗಿದರು. ಆದರೆ ಕತೆಗಳ ವಾಚಿಕ ಶೈಲಿಯ ಆ ವಿಶೇಷತೆ ಅವುಗಳಲ್ಲಿ ಇಲ್ಲವಾಯಿತು. ಅಲ್ಲಿ ಕತೆಯ ಸಹಜ ಪ್ರವಾಹವನ್ನು ಕಾವ್ಯಾತ್ಮಕತೆ ಹಾಗೂ ಶೈಲಿಯ ಶೃಂಗಾರವು ಮುಚ್ಚಿಬಿಟ್ಟಿತು. ಭಾರತೀಯ ಕಥಾ ಪರಂಪರೆ 65 ವೈದಿಕ ಪರಂಪರೆಯ ಕತೆಯ ಈ ವಾಚಿಕ ರೂಪದ ದರ್ಶನವು ನಮಗೆ ಬೌದ್ಧ ಸಾಹಿತ್ಯದಲ್ಲಿಯೂ ಆಗುತ್ತದೆ. ಈ ದೃಷ್ಟಿಯಿಂದ ಬೌದ್ಧ ಅವದಾನ ಸಾಹಿತ್ಯವು ಹೆಚ್ಚಾಗಿ ಗದ್ಯದಲ್ಲಿದ್ದು ಬಹಳ ಮಹತ್ವಪೂರ್ಣವಾಗಿದೆ. ಒಂದೊಂದು ಅವದಾನವೂ ಆಕಾರದಲ್ಲಿ ತುಂಬ ವಿಶಾಲವಾದದ್ದು. ಹಾಗೂ ಕತೆಗಳ ದೊಡ್ಡ ಭಂಡಾರವನ್ನೇ ಕಟ್ಟಿಕೊಂಡದ್ದು. ಇಲ್ಲಿ ತೆಗೆದುಕೊಂಡ ಅಶೋಕಾವದಾನದ ಎರಡು ಕತೆಗಳು ದಿವ್ಯಾವದಾನದ ಒಂದು ಅಂಶವಾಗಿದೆ. ಅಶೋಕಾವದಾನದ ಪ್ರತಿಯೊಂದು ಕತೆಯು ಮಹಾಕಾವ್ಯಾತ್ಮಕ ಹಾಗೂ ಕಾದಂಬರಿಯ ವಿಸ್ತಾರವನ್ನು ಒಳಗೊಂಡಿವೆ. ಶಾರ್ದೂಲ ಕರ್ಣಾವದಾನದಲ್ಲಿ ಇದೇ ರೀತಿಯ ಒಂದು ಸಂಪೂರ್ಣ ಕತೆಯಿದೆ. ಚೀನೀ ಭಾಷೆಯಲ್ಲಿ ಕ್ರಿ.ಶ. 148ರ ಆಚೆ ಈಚೆ ಶಾರ್ದೂಲ ಕರ್ಣಾವದಾನದ ಅನುವಾದ ಮಾಡಲಾಯಿತು. ಲೋಕಪ್ರಿಯ ಕತೆಗಳ ಉಕ್ತ ಪರಂಪರೆಯನ್ನು ಬೌದ್ಧ ಹಾಗೂ ಜೈನ ಲೇಖಕರು ಉಪದೇಶಾತ್ಮಕ ಅಥವಾ ಧಾರ್ಮಿಕ ರೂಪಕೊಟ್ಟು ಪ್ರಸ್ತುತ ಪಡಿಸಿದ್ದಾರೆ. ಎರಡೂ ಧರ್ಮಗಳಿಗೆ ಸೇರಿದ ರಚನಾಕಾರರು. ಕಥಾಸಾಹಿತ್ಯಕ್ಕೆ ಅಪಾರ ಸಮೃದ್ಧಿಯನ್ನು ತಂದುಕೊಟ್ಟರು. ಧಾರ್ಮಿಕ ಉದ್ದೇಶದಿಂದ ಪ್ರೇರಿತವಾದರೂ ಈ ಬಗೆಯ ಕಥಾ ಸಾಹಿತ್ಯದಲ್ಲಿ ಅಂತರಂಗದ ಮಾನವೀಯ ಅನುಭೂತಿ ಹಾಗೂ ಕತೆಯ ಕೌತುಕಕ್ಕೆ ಕೊರತೆಯೇನೂ ಇಲ್ಲ. ಕೆಲವು ಬೌದ್ಧ ಮತ್ತು ಜೈನ ಕತೆಗಳಲ್ಲಿ ಸಾಮಾಜಿಕ ವಾಸ್ತವಿಕತೆಗಳ ಸಾಕ್ಷಾತ್ಕಾರದೊಂದಿಗೆ ತೀಕ್ಷ್ಣವಾದ ವ್ಯಂಗ್ಯವೂ ಸಿಗುತ್ತದೆ. ಈ ದೃಷ್ಟಿಯಿಂದ ಜೈನ ಲೇಖಕ ಹರಿಭದ್ರ ಸೂರಿಯ ಧೂರ್ತಾಖ್ಯಾನವು ಒಂದು ಉಲ್ಲೇಖನೀಯ ರಚನೆಯಾಗಿದೆ. ಹರಿಭದ್ರಸೂರಿಯ ಕೃತಿ ರಚನಾಕಾಲ ಕ್ರಿ. ಶ. 788 ರಿಂದ 820ರ ಮಧ್ಯೆ ಎಂದು ಭಾವಿಸಲಾಗುತ್ತದೆ. ಅವರು ವಿದ್ಯಾಧರ ಕುಲದ ಆಚಾರ್ಯ ಜಿನದತ್ತರ ಶಿಷ್ಯರಾಗಿದ್ದರು. ಅವರು ಚಿತೌರನಲ್ಲಿ ಹುಟ್ಟಿದರು. ಜೈನದರ್ಶನದ ಮಹಾನ್ ಆಚಾರ್ಯ ಮತ್ತು ಗ್ರಂಥಕಾರರ ರೂಪದಲ್ಲಿ ಅವರ ಪ್ರಸಿದ್ಧಿಯಿದೆ. ‘ಕುವಲಯ ಮಾಲಾ ಕಹಾ’ ದ ಲೇಖಕ ಉದ್ಯೋತನ ಅವರ ಶಿಷ್ಯರು. ಆರಂಭದಲ್ಲಿ ಇವರು ಬ್ರಾಹ್ಮಣರು, ನಂತರ ಜೈನಧರ್ಮದ ಅನುಯಾಯಿಗಳಾದರು. ಇವರು ಬರೆದ 26 ಗ್ರಂಥಗಳ ಉಲ್ಲೇಖ ದೊರೆಯುತ್ತದೆ. ಅವುಗಳಲ್ಲಿ 20 ಪ್ರಕಾಶಿತವಾಗಿದೆ. ಕಲ್ಯಾಣ ವಿಜಯದ ಪ್ರಕಾರ ಹರಿಭದ್ರರು 88 ಗ್ರಂಥಗಳ ರಚನೆ ಮಾಡಿದ್ದರು. ಹರಿಭದ್ರರು ಸಂಸ್ಕೃತ ಹಾಗೂ ಪ್ರಾಕೃತ ಎರಡೂ ಭಾಷೆಗಳಲ್ಲಿ ಸಮಾನ ಪಾಂಡಿತ್ಯದೊಂದಿಗೆ ವಿಪುಲ ಸಾಹಿತ್ಯ ರಚನೆ ಮಾಡಿದರು. ದಾರ್ಶನಿಕ ಗ್ರಂಥಗಳನ್ನು ಕಾವ್ಯಕೃತಿಗಳನ್ನೂ ಬರೆದರು. ಪ್ರಾಕೃತದಲ್ಲಿ ಧೂರ್ತಾಖ್ಯಾನದ ಹೊರತಾಗಿ ಇವರ ‘ಸಮರಾಯಿಚ್ಚ ಕಹಾ’ (ಸಮರಾದಿತ್ಯ ಕಥೆ) ಉಲ್ಲೇಖನೀಯವಾಗಿದೆ. 66 ಕಥಾ ಸಂಸ್ಕೃತಿ ಸತಿ-ಸಾಧ್ವಿಯರ ಚರಿತ್ರೆಯನ್ನು ಕುರಿತು ಜೈನ ಪರಂಪರೆಯಲ್ಲಿ ಅನೇಕ ಕಥಾಚಕ್ರ ಪ್ರಚಲಿತವಾಗಿವೆ. ನರ್ಮದಾ ಸುಂದರಿ, ಮದನ ರೇಖಾ, ವಿಲಾಸವತಿ ಮುಂತಾದ ಶ್ರೇಷ್ಠ ಮಹಿಳೆಯರನ್ನು ಅನೇಕ ಕಥಾ ಕಾವ್ಯಗಳ ವಿಷಯವನ್ನಾಗಿ ಮಾಡಲಾಯಿತು. ಇವುಗಳಲ್ಲಿ ನರ್ಮದಾ ಸುಂದರಿಯ ಕತೆ ಅತ್ಯಂತ ಮಾರ್ಮಿಕವಾಗಿದೆ. ಮತ್ತು ಇದು ತುಂಬ ಲೋಕ ಪ್ರಿಯವಾಗಿದೆ. ಇದರ ಮೇಲೆ ಅನೇಕ ಜೈನ ಕಥಾಕಾರರು ತಮ್ಮ ಲೇಖನಿಯನ್ನು ಚಲಾಯಿಸಿದರು. ಪ್ರಾಕೃತ, ಅಪಭ್ರಂಶ ಮುಂತಾದ ಭಾಷೆಗಳಲ್ಲಿ ನರ್ಮದಾ ಸುಂದರಿಯ ಕಥೆಯನ್ನು ಆಧರಿಸಿ ಮಾಡಿದ ರಚನೆಗಳಲ್ಲಿ ಉಲ್ಲೇಖನೀಯವಾದವು ಇವು 1. ದೇವಚಂದ್ರಸೂರಿ ಕೃತ ಪ್ರಾಕೃತ ಮತ್ತು ನಮ್ಮಯಾ ಸುಂದರಿ. 2. ಜಿನಪ್ರಭ ಸೂರಿಯ ನಮ್ಮಯ ಸುಂದರಿ ಸಂಧಿ, 3. ಮಹೇಂದ್ರ ಸೂರಿಯ ನಮ್ಮಯ ಸುಂದರಿ ಕಹಾ- ಪ್ರಾಕೃತದಲ್ಲಿ, ಹಾಗೂ 4. ಮೇರು ಸುಂದರನ ನರ್ಮದಾ ಸುಂದರೀ ಕಥಾ ಪ್ರಾಚೀನ ಗುಜರಾತಿ ಗದ್ಯದಲ್ಲಿ, ಇದರಲ್ಲಿ ಮಹೇಂದ್ರ ಸೂರಿಯ ಕತೆ ಗದ್ಯ-ಪದ್ಯ ಸೇರಿಸಿ ಬರೆಯಲಾಗಿದೆ, ಇದು ಅತ್ಯಂತ ವಿಶಾಲವೂ ವಿಸ್ತೃತವೂ ಆಗಿದೆ. ಕಥಾನಕದ ಸಂಪೂರ್ಣ ಕಾದಂಬರೀಯ ವಿಸ್ತಾರದ ಸಾಧ್ಯತೆಗಳು ಅದರಲ್ಲಿ ಪ್ರತಿಫಲಿತವಾಗಿದೆ. ಈ ಕತೆಯು ವಿಕ್ರಮಸಂವತ್ 1187 (ಕ್ರಿ.ಶ. 1130) ರಲ್ಲಿ ರಚಿತವಾದದ್ದು. ದೇವಚಂದ್ರಸೂರಿಯ ನಮ್ಯಾ ಸುಂದರಿ ಕತೆ ತುಸು ಸಂಕ್ಷಿಪ್ತವಾಗಿದೆ. ಆದರೆ ಇದೂ ತುಂಬ ರಸಪೂರ್ಣವಾಗಿದ್ದು ಮೂಲಕತೆಯ ರುಚಿಯನ್ನು ಒದಗಿಸುತ್ತದೆ. ದೇವಚಂದ್ರಸೂರಿ ಆಚಾರ್ಯ ಹೇಮಚಂದ್ರರ ಗುರುಗಳಾಗಿದ್ದರು. ಹೇಮಚಂದ್ರರು ಜೈನಧರ್ಮ-ದರ್ಶನ ಮತ್ತು ಸಾಹಿತ್ಯ ಶಾಸ್ತ್ರದ ಪ್ರಖ್ಯಾತ ಆಚಾರ್ಯರು. ಅವರ ಸಮಯ ಕ್ರಿ.ಶ. 1088ರಿಂದ 1172 ಆಗಿದೆ. ಈ ದೃಷ್ಟಿಯಿಂದ ದೇವಚಂದ್ರ ಸೂರಿಯವರ ಕಾಲವೂ ಹನ್ನೊಂದನೆಯ ಶತಮಾನವಾಗಿದೆ. ವಸ್ತುತಃ ಜೈನ ಪರಂಪರೆಯಲ್ಲಿ ಕಥಾ ಸಾಹಿತ್ಯದ ಅತ್ಯಂತ ವಿಶಾಲ ಭಂಡಾರವಿದೆ. ಕಥಾ ಕೋಶ ಪ್ರಕರಣ ಹಾಗೂ ಕಹಾರಣಕೋಶ ಈ ಪರಂಪರೆಯ ನಂತರದ ಮಹತ್ವಪೂರ್ಣ ಕಥಾ ಸಂಗ್ರಹಗಳಾಗಿವೆ. ಅವುಗಳಿಂದ ಒಂದೊಂದು ಕತೆಯನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಉತ್ತಮಕುಮಾರ ಚರಿತ ಅಥವಾ ಪಾಪಬುದ್ಧಿ ಧರ್ಮಬುದ್ಧಿ ಕತೆಯಂತಹ ಜೈನ ರಚನೆಗಳು ಉಪದೇಶ ಪ್ರಧಾನವಾಗಿವೆ. ಜಿನಕೀರ್ತಿಯಂತಹ ಲೇಖಕರು ಬರೆದ ಚಂಪಕ ಶ್ರೇಷ್ಠ ಕಥಾನಕ ಅಥವಾ ಪಾಲಗೋಪಾಲ ಕಥಾನಕ ಕತೆಗಳು ಚಮತ್ಕಾರಪೂರ್ಣ ಫಂತಾಸಿ ಕತೆಗಳಾಗಿವೆ. ಭಾರತೀಯ ಕತೆಗಳ ವಿಕಾಸದಲ್ಲಿ ಜೈನ ಪ್ರಬಂಧಕಾವ್ಯಗಳ ಕೊಡುಗೆಯೂ ಉಲ್ಲೇಖನೀಯವಾಗಿದೆ. ಈ ಪ್ರಬಂಧ ಕಾವ್ಯದ ಹಿನ್ನೆಲೆ ಇತಿಹಾಸಿಕವಾಗಿದೆ. ಮತ್ತು ಇದರಲ್ಲಿ ಜೈನ ಸಂತರು ಅಥವಾ ಜೈನ ಧರ್ಮದ ಅನುಯಾಯಿ ಭಾರತೀಯ ಕಥಾ ಪರಂಪರೆ 67 ರಾಜರುಗಳೊಂದಿಗೆ ಹೆಣೆದುಕೊಂಡ ಕತೆಗಳು ಪ್ರಮುಖವಾಗಿದೆ. ಹೀಗೆ ಪ್ರಬಂಧಕಾವ್ಯಗಳಲ್ಲಿ ಮೇರು ತುಂಗಾಚಾರ್ಯರ ಪ್ರಬಂಧ ಚಿಂತಾಮಣಿ (ಕ್ರಿ.ಶ. 1306) ಹಾಗೂ ರಾಜಶೇಖರ ಸೂರಿಯ ಪ್ರಬಂಧಕೋಶ (ಕ್ರಿ.ಶ 1348) ಮಹತ್ವದವಾಗಿವೆ. ಪ್ರತಿಯೊಬ್ಬ ರಾಜ ಅಥವಾ ಸಂತನೊಂದಿಗೆ ಜೋಡಿಸಿಕೊಂಡ ಚಿಕ್ಕ ಚಿಕ್ಕ ಕತೆಗಳ ಸಮುಚ್ಚಯವನ್ನು ಇಲ್ಲಿ ಒಂದು ಪ್ರಬಂಧವೆಂದು ಹೇಳಲಾಗಿದೆ. ಮೇರುತುಂಗನ ಕೃತಿಯಲ್ಲಿ ವಿಕ್ರಮಾದಿತ್ಯ, ಸಾತವಾಹನ, ಚಾಲುಕ್ಯರಾಜ, ಧಾರಾನಗರಿಯ ಪರಮಾರ ರಾಜ ಮುಂಡ ಮತ್ತು ಭೋಜ ಇತ್ಯಾದಿ ರಾಜರ ಪ್ರಬಂಧಗಳಿವೆ. ರಾಜಶೇಖರ ಸೂರಿಯ ಕಥಾಕೃತಿಯಲ್ಲಿ ಒಟ್ಟು 24 ಪ್ರಬಂಧಗಳಿವೆ. ವಿಭಿನ್ನ ರಾಜರುಗಳಿಗೆ ಸೇರಿದ 7 ಪ್ರಬಂಧ, ಧಾರ್ಮಿಕ ಸಂತರು-ಆಚಾರ್ಯರುಗಳಿಗೆ ಸೇರಿದ 10 ಪ್ರಬಂಧ, ಕವಿಗಳಿಗೆ ಸಂಬಂಧಿಸಿದ ಕೆಲವು ಪ್ರಬಂಧಗಳಿವೆ. ಜೈನ ಸಾಹಿತ್ಯದಲ್ಲಿ ಸೇರ್ಪಡೆಯಾದ ಕತೆಗಳ ಮತ್ತೊಂದು ಉಲ್ಲೇಖನೀಯ ಸಂಗ್ರಹವೆಂದರೆ ಕಥಾ ಮಹೋದಧಿ. ಇದರಲ್ಲಿ 126 ಕತೆಗಳಿವೆ. 3 ಕಥಾ ಪರಂಪರೆಯ ಒಂದು ರೋಚಕ ಕಥಾ ಸಂಗ್ರಹ ಭರಟಕದ್ವಾತ್ರಿಂಶಿಕಾ. ಈ ಪುಸ್ತಕ ಭಾರತದಲ್ಲಿ ಲಭ್ಯವಿಲ್ಲ. ಈ ಲೇಖಕನು ಅದರ ಒಂದು ಸಂಸ್ಕರಣವನ್ನು ಹಿಂದೀ ಅನುವಾದದೊಂದಿಗೆ ನಾಲ್ಕು ವರ್ಷಗಳ ಹಿಂದೆ ಪ್ರಕಟಿಸಿದ್ದಾನೆ. ಭರಟಕದ್ವಾತ್ರಿಂಶಿಕಾದ ಕತೆಗಳು ಕತೆಗಳೆಂದು ಕರೆಯಲಾಗುವ ವಾಚಿಕಶೈಲಿಗೆ ಸೇರಿದವು. ಈ ಕತೆಗಳನ್ನು ಶ್ರಿ ಸೋಮಸುಂದರ ಶಿಷ್ಯ ಶ್ರೀ ಸಾಧುರಾಜರಿಂದ ಕೇಳಿ ಅವರ ಯಾವುದೋ ಶಿಷ್ಯನು ಬರೆದದ್ದು ಎಂದು ಇದರ ಪ್ರಾಚೀನ ಗ್ರಂಥದಲ್ಲಿ ಹೇಳಲಾಗಿದೆ. ಈ ಪುಸ್ತಕದ ಮೊದಲ ಸಂಸ್ಕರಣವನ್ನು 1922 ರಲ್ಲಿ ಜರ್ಮನಿಯಲ್ಲಿ ಮುದ್ರಿಸಿದ ಜರ್ಮನ್ ವಿದ್ವಾಂಸ ಹರ್ಟೆಲ್‍ನು ಭರಟಕದ್ವಾತ್ರಿಂಶಿಕಾದ ಕಾಲವು 14ನೇ ಶತಮಾನವೆಂದು ಭಾವಿಸಿದ್ದಾನೆ. ಬಹುಶಃ ಈ ಪುಸ್ತಕವು ಅದಕ್ಕಿಂತ ಹಿಂದಿನ ರಚನೆಯಾಗಿರಬಹುದು. ಇದರಲ್ಲಿ 32 ಕತೆಗಳಿವೆ. ಭರಟಕವೆಂಬುದು ಶಿವಭಕ್ತ ಸಾಧುಗಳ ಒಂದು ಪ್ರಾಚೀನ ಸಂಪ್ರದಾಯ. ಈ ಸಾಧು ಅಲೆಮಾರಿ ಮತ್ತು ಜಡಬುದ್ಧಿಯವರಾದುದರಿಂದ ಸಮಾಜದಲ್ಲಿ ಉಪಹಾಸಕ್ಕೆ ಪಾತ್ರರಾಗುತ್ತಿದ್ದರು. ಭರಟಕ ದ್ವಾತ್ರಿಂಶಿಕಾದಲ್ಲಿ ಇದೇ ಭರಟಕರ ಮೂರ್ಖತೆಯ 32 ಕತೆಗಳಿವೆ. ಸಂಸ್ಕೃತದಲ್ಲಿ ಮೂರ್ಖರ ಕತೆಗಳ ತನ್ನದೇ ಬಗೆಯ ಏಕಮೇವ ಸಂಗ್ರಹ ಇದಾಗಿದೆ; ಸಂಸ್ಕೃತ ಕಥಾಪರಂಪರೆಯ ಮಹತ್ವಪೂರ್ಣ ಆಯಾಮವು 14ನೇ ಶತಮಾನದ ಮೈಥಿಲಿ - ಸಂಸ್ಕೃತ ಭಾಷೆಗಳ ಸುಪ್ರಸಿದ್ಧ ವಿದ್ವಾಂಸ ಮಹಾಕವಿ ವಿದ್ಯಾಪತಿಯ ‘ಪುರುಷ ಪರೀಕ್ಷಾ’ದಿಂದ ಪ್ರಾರಂಭವಾಯಿತು. ಇದರಲ್ಲಿ 41 68 ಕಥಾ ಸಂಸ್ಕೃತಿ ಲೋಕಪ್ರಿಯ ಕತೆಗಳಿವೆ. ಈ ಕತೆಗಳ ದನಿಯು ಲೋಕ ಕತೆಗಳಿಗೆ ಅತಿ ನಿಕಟವಾಗಿದೆ. ವಿದ್ಯಾಪತಿಯ ಕಲ್ಪನಾಶೀಲತೆ, ವಿನೋದಬುದ್ಧಿ, ಮತ್ತು ಸ್ವಯಂ ಕಥನಶೈಲಿಯ ಮುದ್ರೆಯು ಈ ಸಂಗ್ರಹದ ಎಲ್ಲ ಕತೆಗಳ ಮೇಲೆ ಸ್ಪಷ್ಟವಾಗಿದೆ. ಇದರೊಂದಿಗೆ ವಿದ್ಯಾಪತಿಯ ಕತೆಗಳು ವೈವಿಧ್ಯ ಮತ್ತು ಮಾನವ ಸ್ವಭಾವ ವೈಚಿತ್ರ್ಯದ ಚಿತ್ರಣದ ದೃಷ್ಟಿಯಿಂದ ತುಂಬ ಸಮೃದ್ಧವಾಗಿದೆ. ಸಮಗ್ರವಾಗಿ ನೋಡುವುದಾದರೆ ಭಾರತೀಯ ಕಥಾ ಪರಂಪರೆಯ ಸಂಪನ್ನ ಹಾಗೂ ವಿರಾಟ ಫಲಕವನ್ನು ತೆಗೆದುಕೊಂಡರೆ, ಪಾತ್ರಗಳು, ಸ್ವಭಾವ ಚಿತ್ರಣದ ವೈವಿಧ್ಯ, ಕಥಾ ಸಂವಿಧಾನ, ಕಥಾ ಅಭಿವ್ಯಕ್ತಿಯ ನಮ್ಮದೇ ಆದ ವಿಶಿಷ್ಟಶೈಲಿ, ಹಾಗೂ ದುರ್ಲಭ ಐತಿಹಾಸಿಕ ಸಾಮಾಜಿಕ ವಿಷಯವಸ್ತು ಇವುಗಳಿಂದಾಗಿ ಮಹತ್ವಪೂರ್ಣವಾಗಿವೆಯಷ್ಟೇ ಅಲ್ಲ, ತಮ್ಮ ಪ್ರತೀಕಾತ್ಮಕತೆ, ಭಾರತೀಯ ಜೀವನದೃಷ್ಟಿ, ಮತ್ತು ಮೌಲ್ಯಬೋಧೆಯನ್ನು ಸುಂದರವಾದ ರೀತಿಯಲ್ಲಿ ಇಡುವ ಬಗೆಯಿಂದಾಗಿ, ಇಂದಿನ ಓದುಗರಿಗೆ ಅವಶ್ಯಕ ಸಾಮಗ್ರಿಯನ್ನು ಒದಗಿಸುತ್ತದೆ. ಆಧುನಿಕ ಕತೆಯ ರಚನಾ ಸಂಸ್ಕೃತಿ 69 ಆಧುನಿಕ ಕತೆಯ ರಚನಾ ಸಂಸ್ಕೃತಿ - ಇಂತಿಜಾರ ಹುಸೇನ್ ‘ಆಧುನಿಕ ಕತೆಯ ಸಂಘರ್ಷ’ ಎಂಬ ಬರೆಹವನ್ನು ನಾನು ವಿಶೇಷವಾಗಿ ಕೊಡುತ್ತಿದ್ದೇನೆ. ‘ಕಥಾ ಸಂಸ್ಕೃತಿ’ಯಲ್ಲಿ ಮಾನವ ಜಗತ್ತಿನ ಎಲ್ಲ ಶತಮಾನಗಳೂ ಮಾತನಾಡುತ್ತಿವೆ. ತನ್ನದೇ ನಿಜವನ್ನು ಬೆಳಕಿಗೆ ಹಿಡಿಯುತ್ತವೆ. ಈ ಗ್ರಂಥವನ್ನು ಇಪ್ಪತ್ತೊಂದನೆಯ ಶತಮಾನದ ಕಥಾರಚನೆಯವರೆಗೆ ವಿಸ್ತರಿಸಿದರೆ, ಕಥಾ ಸಂಸ್ಕೃತಿಯ ವಿಸ್ತಾರವನ್ನು ಒಳಗೊಳ್ಳಲು ಲಕ್ಷಗಟ್ಟಲೆ ಪುಟಗಳು ಬೇಕಾದೀತು. ಭಾರತವು ಜಗತ್ತಿನ ಅತ್ಯಂತ ಪ್ರಾಚೀನದೇಶ. ಹಾಗೆಯೇ ಎಲ್ಲಕ್ಕಿಂತ ನವೀನ ಕಥಾಕೇಂದ್ರವೂ ಹೌದು. ಈ ಹೊಸ ಕಥಾಕೇಂದ್ರದ ಪ್ರಧಾನ ಆಚಾರ್ಯರಾದ ಇಂತಿಜಾರ ಹುಸೇನರ ಈ ಲೇಖನವು ಇಂದಿನ ದಿನಗಳಲ್ಲಿ ಕತೆಯ ಇರುವಿಕೆಯ ಅವಶ್ಯಕತೆಯನ್ನು ಗುರುತಿಸುತ್ತದೆ. ಮಾನವನ ತನ್ನತನವನ್ನು ತೆರೆದಿಡಲು ಕತೆಯ ಅವಶ್ಯಕತೆ ಇದೆಯೆಂಬುದನ್ನು ತೋರಿಸುತ್ತದೆ. ಪ್ರತಿಯೊಬ್ಬ ಕತೆಗಾರನೂ ಅತ್ಯಾಚಾರ, ಶೋಷಣೆ, ಅನ್ಯಾಯ ಹಾಗೂ ಮನುಷ್ಯ ಅಂತರದ ಈ ಸುದೀರ್ಘ ಕತ್ತಲರಾತ್ರಿಯನ್ನು ಕತ್ತರಿಸಿ ಮಾನವೀಯತೆಯನ್ನು ಜೀವಂತವಾಗಿಡಲು ಶಹರಜಾದಳಂತೆಯೇ ಕತೆಯನ್ನು ಹೇಳಲು ಬದ್ಧನಾಗಿರಬೇಕು. ಶಹರಜಾದಳಿಗೆ - ನನ್ನ ಕತೆಯು ಇತ್ತೀಚೆಗೆ ತುಂಬ ತೊಡಕಿನಲ್ಲಿದೆ. ನಾನು ಬರೆಯಲು ಕುಳಿತುಕೊಂಡಾಗೆಲ್ಲ ಹಠಾತ್ತನೆ ಏನಾದರೂ ದುರ್ಘಟನೆ ನಡೆಯುತ್ತದೆ. ‘ಇಂಥದೊಂದು ಮಸೀದಿಯ ಮೇಲೆ ಭಯೋತ್ಪಾದಕರು ಆಕ್ರಮಣ ಮಾಡಿದರು. ಆಯಕಟ್ಟಿನ ಸ್ಥಳದಿಂದ ಮುಸುಕು ಧರಿಸಿ ಬಂದ ಆಯುಧಧಾರಿಗಳು ನಮಾಜಿಗೆ ಕುಳಿತವರನ್ನು ಸುಟ್ಟುಹಾಕಿದರು. ಅಥವಾ ಧರ್ಮಗುರುಗಳ ಸಭೆಯ ಮೇಲೆ ಆಕ್ರಮಣ ಮಾಡಿದರು. ಕ್ಷಣಾರ್ಧದಲ್ಲಿ ಶೋಕಾಚರಣೆಯ ಸ್ಥಳದಲ್ಲಿ ಕೊಲೆ ನಡೆಯಿತು. ಅಥವಾ ಲಾರಿಯ ಶೆಡ್‍ನಲ್ಲಿ ಬಾಂಬ್ ಸ್ಫೋಟವಾಯಿತು. ರಸ್ತೆಯಲ್ಲಿ ತಿರುಗಾಡುತ್ತಿದ್ದ 70 ಕಥಾ ಸಂಸ್ಕೃತಿ ಜನರು ಚೂರುಚೂರಾಗಿ ಸಿಡಿದುಹೋದರು.’ ಇಂಥ ಸುದ್ದಿಯನ್ನು ಕೇಳಿದಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. ಕತೆ ಎಲ್ಲಿಯೋ ಕಾಲುಕೀಳುತ್ತದೆ. ಪೆನ್ನು ಅಲ್ಲಿಗೆ ನಿಲ್ಲುತ್ತದೆ. ಆದರೆ ನಾನು ಮತ್ತೊಮ್ಮೆ ಯೋಚಿಸುತ್ತೇನೆ. - ನಾನು ಮಾಡುವುದಾದರೂ ಏನು? ನನ್ನ ಕತೆ ಯಾವ ಲೆಕ್ಕದ್ದು? ಈಗ ಸಂಕಟದಲ್ಲಿ ಜಗತ್ತು ಸಿಕ್ಕಿಕೊಂಡಿದೆ. ಹಿಂಸೆ - ಅತ್ಯಾಚಾರಗಳ ಅತಿರೇಕದಿಂದಾಗಿ ಭಯೋತ್ಪಾದಕರದೇ ಆಗಿಬಿಟ್ಟಿದೆ. ಅವರು ಜಗತ್ತಿನ ಸೂಪರ್ ಪವರ್ ಅಮೇರಿಕಾದಲ್ಲಿ ಕೋಲಾಹಲವೆಬ್ಬಿಸಿ ವಿನಾಶ ಮಾಡಿದರೆಂದರೆ ಇಡೀ ಅಮೇರಿಕಾ ‘ಕಾಪಾಡಿ ಕಾಪಾಡಿ’ ಎಂದು ಕೂಗಿತು. ಇಡೀ ವಿಶ್ವವೇ ತಲ್ಲಣಿಸಿತು. ‘ಎಂಥ ವೀರರಿಂದಲೂ ಸಾಧ್ಯವಿಲ್ಲದ ಕೆಲಸವನ್ನು ನಾವು ಮಾಡಿದ್ದೇವೆ’ ಎಂದು ಅವರು ಬೀಗಿದರೆ ಅಮೆರಿಕಾ ಇದಕ್ಕೆ ಉತ್ತರವಾಗಿ ಅಫಗಾನಿಸ್ತಾನದ ಮೇಲೆ ತಿರುಗೇಟು ಹಾಕಿತು. ಅವರು ಸೇರಾದರೆ ನಾವು ಸವಾಸೇರು.!! ಈ ಚಿತ್ರವನ್ನು ನೋಡಿದಾಗ ಆ ಹಳೆಯಕಾಲದ ನೆನಪು ಬರುತ್ತದೆ. ನಾಗರಿಕ ನೆಲೆಗಳ ಮೇಲೆ, ಪಟ್ಟಣಗಳ ಮೇಲೆ ಒಮ್ಮಿಂದೊಮ್ಮೆಲೇ ಕಾಡಿನ ಅನಾಗರಿಕ ಜನರ ಗುಂಪು ದಾಳಿ ಮಾಡುತ್ತಿತ್ತು. ಸಂಸ್ಕೃತಿ-ನಾಗರಿಕತೆಗಳ ವಸಾಹತುಗಳನ್ನು ಧ್ವಂಸ ಮಾಡುತ್ತಿದ್ದರು. ಅವರು ಪ್ರಾಚೀನಕಾಲದ ಕಾಡುಜನರಾಗಿದ್ದರು. ಆದರೆ ನಾವೀಗ ಹೊಸ ಬರ್ಬರತೆಯ ಯುಗದಲ್ಲಿ ಬದುಕುತ್ತಿದ್ದೇವೆ. ಇವರಿಗಂತೂ ಟೆಕ್ನಾಲಜಿಯ ನೆರವು ದೊರಕಿದೆ. ಹಳೆಯಕಾಲದ ಕಾಡುಜನರು ಹೊಸಯುಗದ ಭಯೋತ್ಪಾದಕರ ಎದುರು ಹಸುಳೆಗಳಂತೆ ಕಾಣುತ್ತಾರೆ. ಆಟಂಬಾಂಬ್ ಹೊಂದುವ ಮಾತು ಹಾಗಿರಲಿ ಸಾಮಾನ್ಯ ಗನ್ನೂ ಕೂಡ ಅವರ ಅಳವಿನಲ್ಲಿ ಇರಲಿಲ್ಲ. ಈ ಹೊಸ ಕಾಡು ಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಜೊತೆಗೆ ಒಂದು ದೃಷ್ಟಿಕೋನದ ಬೆಂಬಲವಿದೆ. ಹಳೆಯ ಅನಾಗರಿಕರು ಶುದ್ಧ ಅನಾಗರಿಕರು ಅಷ್ಟೇ. ಅವರಿಗೆ ತಮ್ಮ ಕಾಡುತನದ ಮೇಲೆ ಇಲ್ಲದ ಗಿಲೀಟು ಹಚ್ಚಿ ನಿಜವು ತೋರದಂತೆ ಬಚ್ಚಿಡುವುದು ಗೊತ್ತಿರಲಿಲ್ಲ. ನಮ್ಮ ಹೊಸಯುಗದ ಕಾಡುಜನರು ತಮ್ಮ ಕಾಡುತನವನ್ನು ತಮ್ಮ ಹೊರನೋಟದ ನಾಗರಿಕ ಭವ್ಯತೆಯಲ್ಲಿ ಮರೆಮಾಡಬಲ್ಲ ಚತುರರು. ಭಯೋತ್ಪಾದನೆಯಿಂದ ಹಿಡಿದು ಸೆಣಸಾಟದವರೆಗೆ, ಹಿಂಸೆಯ ಪ್ರತಿಯೊಂದು ಆಯಾಮಕ್ಕೂ ಒಂದಿಲ್ಲೊಂದು ಬಗೆಯ ನೈತಿಕ ಔಚಿತ್ಯವನ್ನು ಪಡೆದುಕೊಳ್ಳಬಲ್ಲರು. ಅವರ ಪ್ರಕಾರ ರಾಷ್ಟ್ರೀಯತೆ, ಜಾತೀಯತೆ, ಧರ್ಮದಂತಹ ಸಂಗತಿಯ ಹಿನ್ನೆಲೆಯಲ್ಲಿ ಹಿಂಸೆಯು ನೈತಿಕ ಔಚಿತ್ಯವನ್ನು ಪಡೆದುಕೊಳ್ಳುತ್ತದೆ. ಈ ಆತಂಕವಾದಿಗಳು ನಮಾಜು ಮಾಡುವವರ ಮೇಲೆ ಗುಂಡಿನ ಮಳೆಗರೆಯುತ್ತ, ಆಧುನಿಕ ಕತೆಯ ರಚನಾ ಸಂಸ್ಕೃತಿ 71 “ಇವರು ಮುಸಲ್ಮಾನರಲ್ಲ, ವಾಸ್ತವವಾಗಿ ವಿಧರ್ಮಿಗಳು” ಎಂದು ಹೇಳಿದರೆ ಸಾಕು, ಅದು ಆತಂಕವಾದವೆನಿಸುವುದಿಲ್ಲ, ಅದು ಪುಣ್ಯದ ಕೆಲಸವಾಗಿ ಬಿಡುತ್ತದೆ. ನಮ್ಮ ಯುಗ ಕೇವಲ ಭಯಾನಕ ಯುಗವಲ್ಲ. ಭಯೋತ್ಪಾದನೆಯ ದೃಷ್ಟಿಕೋನವುಳ್ಳದ್ದು. ಹಿಂದಿನ ಶತಮಾನದಲ್ಲಿ ಕ್ರಾಂತಿಯ ಹೆಸರಿನಲ್ಲಿ ನಡೆಯುವ ಎಲ್ಲ ಹಿಂಸೆಯೂ ಯೋಗ್ಯವಾದದ್ದೇ ಆಗಿದೆಯೆನ್ನುವ ಯುಗ ಕಳೆದುಹೋಗಿದೆ. ಈಗ ಇಸ್ಲಾಂನ ಹೆಸರಿನಲ್ಲಿ ಆತಂಕವಾದ ಮಾಡುವ ಗುಂಪುಗಳು ಹುಟ್ಟಿಕೊಂಡಿವೆ. ಆಗಿನ ಕಾಲದ್ದು ಕ್ರಾಂತಿಯ ಹೆಸರಿನ ಹಿಂಸೆಯಾಗಿತ್ತು. ಈಗಿನ ಹಿಂಸೆಗೆ ಏನು ಹೆಸರು ಕೊಡೋಣ? ಇಂಥ ಸ್ಥಿತಿಯಲ್ಲಿ ಬರೆಯುವವನು ಏನು ಬರೆಯಬಲ್ಲ? ಹೋಗಲಿ, ನಾನಾದರೂ ಏನು ಮಾಡಲಿ? ನನ್ನ ಕತೆಯನ್ನು ಏನು ಮಾಡಲಿ? ನಾನಿಲ್ಲಿ ಏಕವಚನವನ್ನು ಬಳಸುತ್ತಿದ್ದೇನೆ. ಶಿಷ್ಟಾಚಾರದಲ್ಲಿ ಆಂಶಿಕ ನಿರ್ಣಯವಿರುವುದಿಲ್ಲ. ಪ್ರತಿಯೊಬ್ಬ ಬರೆಹಗಾರನೂ ತನ್ನ ಕತೆ ಅಥವಾ ಅನುಭವದ ಅಭಿವ್ಯಕ್ತಿಯ ಸಂದರ್ಭದಲ್ಲಿ ಅವನೇ ಹೊಣೆಗಾರನಾಗಬೇಕಾಗುತ್ತದೆ. ಮನುಷ್ಯನು ಸಾವು ಹಾಗೂ ಏಕಾಂತದ ಸಂದರ್ಭದಲ್ಲಿ ಯಾವಾಗಲೂ ಒಂಟಿಯಾಗಿರುತ್ತಾನೆ. ಹುಟ್ಟಿದ ಮನುಷ್ಯ ಮರಣವನ್ನು ಹೊಂದಲೇಬೇಕಾದ್ದು ಅನಿವಾರ್ಯ. ಯಾವನೇ ಆಗಲಿ, ಸಾವನ್ನು ಎದುರಿಸುವಾಗ, ಏಕಾಕಿಯಾಗಿರುವಂತೆ, ಬರೆಹಗಾರನೂ ಕೂಡ ತನ್ನ ಅನುಭವವನ್ನು ಅನುಭವಿಸುವಾಗ ಏಕಾಕಿಯಾಗಿರುತ್ತಾನೆ. ಒಬ್ಬ ಸಾಹಿತಿಯು ತನ್ನ ಯೋಗ್ಯತೆಗೆ ಅನುಗುಣವಾಗಿ ಅನೇಕ ನಿರ್ಣಯಗಳನ್ನು ಒಬ್ಬನೇ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇಪ್ಪತ್ತನೆಯ ಶತಮಾನದ ದೃಷ್ಟಿಕೋನವೇ ಬದಲಾಯಿತು. ಅವನು ಶಿಷ್ಟಾಚಾರವನ್ನು ಸುತ್ತಿ ಬದಿಗಿಟ್ಟನು. ಅಲ್ಲದೆ ಯಾವುದೇ ಆಂದೋಲನವು ತನ್ನದೇ ಆದ ನಿರ್ಣಯವನ್ನು ಅನುಮತಿಸುವುದಿಲ್ಲ. ಆ ಆಂದೋಲನದ ಪ್ರಭಾವಕ್ಕೆ ಒಳಗಾದ ಸಾಹಿತ್ಯಕಾರನಿಗೆ ಈ ಅನುಮತಿ ಹೇಗೆ ಸಿಗಬಲ್ಲುದು? ಯಾಕೆ ಸಿಗಬೇಕು? ನೋವಿನ ಪ್ರಭಾವವನ್ನು ಯಾರು ನೋಡಿದ್ದಾರೆ? ಕವಿತೆ ಮತ್ತು ಕತೆಯ ವಿಷಯವೂ ನೋವಿನಿಂದ ಕೂಡಿರುತ್ತದೆ. ಅದು ಪ್ರೀತಿಗೆ ಸಂಬಂಧಿಸಿದ್ದು ಇರಬಹುದು, ಅಥವಾ ಅತ್ಯಾಚಾರೀ ಆಡಳಿತಗಾರನದೇ ಇರಬಹುದು. ನೋವು ಪ್ರಭಾವರಹಿತವೇ ಆಗಿರುತ್ತದೆ. ಸಂಸ್ಕೃತ ಕವಿ ಭರ್ತೃಹರಿಯ ಮಾತನ್ನು ಕವಿ ಇಕಬಾಲರು ಮತ್ತೊಮ್ಮೆ ಉಚ್ಚರಿಸಿದ್ದಾರೆ. ಹೂವಿನ ಪಕಳೆಯಿಂದ ವಜ್ರದಂತಹ ಹೃದಯವನ್ನು ಕತ್ತರಿಸಬಹುದು. ಮೂರ್ಖ ಮನುಷ್ಯನ ಮೇಲೆ ಮೃದುವಚನಗಳು ಯಾವ ಪ್ರಭಾವವನ್ನು ಬೀರಲಾರವು. 72 ಕಥಾ ಸಂಸ್ಕೃತಿ ಇಂತಹ ಪರಿಸ್ಥಿತಿಯಲ್ಲಿ ಲೇಖಕನ ಹೇಳಿಕೆ - ಅಥವಾ ಧೋರಣೆಗೆ ವಿಶ್ವಾಸವೆಲ್ಲಿ ಉಳಿಯುತ್ತದೆ. ಲೇಖಕನನ್ನು ಅವು ಮುಕ್ತವಾಗಿ ಹೇಗೆ ಇಡಬಲ್ಲವು? ಆಗ ಸಾಹಿತಿಗಳು ಪಾಲುಗೊಳ್ಳುವ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರಿಗೆ ಬರೆಯಲು ಹಾಳೆಗಳನ್ನು ಕೊಡಲಾಯಿತು. ಹೀಗೆ ಬರೆಯಿರಿ, ಹೀಗೆ ಬರೆಯಬೇಡಿ ಎಂಬ ಸೂಚನೆಗಳನ್ನು ನೀಡಲಾಯಿತು. ಆಜ್ಞಾಧಾರಕ ಸಾಹಿತಿಗಳು ಅವರ ಮಾತನ್ನು ಕೇಳಿದರು. ಆ ಯುಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಎಲ್ಲರೂ ಸೇರಿ ಬರೆದರು. ಆದರೆ ಅಂತಹ ಸಾಹಿತಿಗಳ ಬರೆಹದ ಪರಿಣಾಮವಾದರೂ ಏನಾಯಿತು? ಮುಂದೇನು? ಅಧಿವೇಶನ, ಮೆರವಣಿಗೆ, ಪತ್ರಿಕಾ ಹೇಳಿಕೆಗಳು. ಕೊನೆಗೂ ನಮ್ಮ ಕಲೆಯ ಸ್ಥಿತಿ ಇದೇನಾ? ಯುದ್ಧ, ಬಾಂಬ್‍ಸ್ಫೋಟ, ಭಯೋತ್ಪಾದನೆಯ ವಿರುದ್ಧ ವಾಗ್ದಾಳಿಯನ್ನು ಮಾಡಲಾಯಿತು. ಸಾಹಿತಿಗಳು, ದಾನಿಗಳು ಶಾಂತಿ ಮೆರೆವಣಿಗೆ ನಡೆಸಿದರು. ಭಾಷಣ ಬಿಗಿದರು, ಅತ್ಯಾಚಾರದ ವಿರುದ್ಧ ದನಿ ಏರಿಸಲೇಬೇಕಾಗಿತ್ತು. ಇವೆಲ್ಲ ಸರಿಯೇ. ಆದರೆ ಈ ಆಕ್ರಂದನದ ಪರಿಣಾಮವೇನೂ ಆಗದಿದ್ದಾಗ ಮತ್ತೆ ಪುನಃ ಘೋಷಣೆ ಕೂಗುವುದು, ದನಿಯೇರಿಸುವುದು, ಹಾಗಾಗಿ ನನ್ನ ಕತೆ ಇನ್ನೂ ಕಷ್ಟದಲ್ಲಿಯೇ ಇದೆ. ಗುಲಾಮರು ಈ ಜಗತ್ತಿನಲ್ಲಿಯೂ ಆ ಜಗತ್ತಿನಲ್ಲಿಯೂ ಗುಲಾಮರೇ ನಾನು ಕತೆಯನ್ನು ಮಾತ್ರ ಬರೆಯಬಲ್ಲೆ. ಅಷ್ಟೇ ನನ್ನ ಸಾಮರ್ಥ್ಯ. ಘೋಷಣೆಯನ್ನು ಕೂಗಲಾರೆ. ಭಯ, ಬಾಂಬ್ ಸ್ಫೋಟದ ವಾತಾವರಣದಲ್ಲಿ ಕತೆಯನ್ನು ಬರೆಯಲಾಗುವುದಿಲ್ಲ. ಘೋಷಣೆಯನ್ನು ಬರೆಯಬಹುದಾದರೂ ಆದರೆ ಅದು ಕೂಗುವ ಸಂಗತಿಯೇ ವಿನಾ ಬರೆಯುವ ಸಂಗತಿಯಲ್ಲ. ಅದನ್ನು ಬರೆಯಲು ಹೊರಟರೆ ಬರೆಯುವವನೇ ಹಾಳಾಗುತ್ತಾನೆ, ಕತೆ ಕವಿತೆ ಬರೆಯಲೂ ಅವನು ಯೋಗ್ಯನಾಗಿರುವುದಿಲ್ಲ. ಒಮ್ಮೊಮ್ಮೆ ಕವನವು ಘೋಷಣೆ ಬಲದ ಮೇಲೆಯೇ ಮಿಂಚುತ್ತದೆ, ಗರ್ಜಿಸುತ್ತದೆ. ಆದರೆ ಕತೆಯು ಮುಟ್ಟಿದರೆ ಮುನಿ ಹಾಗೆ. ಘೋಷಣೆಯ ನೆರಳು ಬಿದ್ದರೂ ಅದು ಮುದುಡಿ ಹೋಗುತ್ತದೆ. ಹಾಗಾದರೆ ಕತೆ ಏನು ಮಾಡಬೇಕು? ಒಂದು ಕಡೆ ಯುದ್ಧ, ಭಯೋತ್ಪಾದನೆ, ಮೂಲಭೂತವಾದ, ಎ.ಕೆ.-47, ಬಾಂಬ್‍ಸ್ಫೋಟ, ತಾತ್ವಿಕ ದೃಷ್ಟಿಕೋನ, ಇವುಗಳ ನೆರಳಿನಲ್ಲಿ ನೈತಿಕ ಔಚಿತ್ಯವನ್ನು ಪ್ರಸ್ತುತಪಡಿಸುವ ಸಿದ್ಧತೆ. ಇನ್ನೊಂದು ಕಡೆ ಇದರ ಆಧುನಿಕ ಕತೆಯ ರಚನಾ ಸಂಸ್ಕೃತಿ 73 ವಿರುದ್ಧ ಘೋಷಣೆ-ಭಾಷಣ, ಬೀಸುವ ಕಲ್ಲಿನ ಒಂದು ಭಾಗ ಅವರು, ಇನ್ನೊಂದು ಭಾಗ ಇವರು. ಬೀಸುತ್ತಿರುವ ಬೀಸುಕಲ್ಲನ್ನು ನೋಡಿ ಕಬೀರರು ಅತ್ತರು, ನನ್ನ ಲೇಖನಿ ಬರೆಯುವುದನ್ನು ನಿಲ್ಲಿಸಿತು. ಪ್ರೀತಿಯ ದಮನದಲ್ಲಿ ಇದಕ್ಕೂ ಹೆಚ್ಚಿಗೆ ಆಗಿತ್ತು. ಅಲ್ಲಿ ಪ್ರೀತಿಯ ಬಾಗಿಲೇ ಮುಚ್ಚಿಹೋಗಿತ್ತು. ಪ್ರೀತಿಗೇ ಬರಗಾಲ ಬಂದಿರುತ್ತದೆ. ಪ್ರೇಮಿಯು ತನ್ನ ಪ್ರಿಯತಮೆಯನ್ನು ಪ್ರೀತಿಯನ್ನು ಮರೆತುಬಿಟ್ಟಿರುತ್ತಾನೆ. ಆದರೆ ಜಗತ್ತಿನಲ್ಲಿ ಏನಾಯ್ತು? ಉನ್ಮಾದ ವಿಷದ ನಗೆ ನಕ್ಕಿತ್ತು. ಬಡವರಿಗೆ ಕೆನೆಯುವ ಶಕ್ತಿಯಿರುವುದಿಲ್ಲ. ಮೊಗಲರ ಕಾಲದ ರಾಜ ಸವಾರರ ವೇಗದ ಕುದುರೆಯ ಸ್ಥಿತಿ ಇಂದು ಹೀಗೆ. ಆದರಿಂದ ಆ ಕಾಲದ ಅಂದಾಜು ಮಾಡಬಹುದು. ನಮ್ಮಲ್ಲಿ ಒಂದುಗೂಡುವ ಲಕ್ಷಣ ಎಲ್ಲಿದೆ? ಎಲ್ಲಿಯೂ ಇಲ್ಲ. ಸುಖ- ಶಾಂತಿಯಾದರೂ ಎಲ್ಲಿದೆ? ಕೇವಲ ಹೆಸರಿಗೆ ಮಾತ್ರ. ಮತ್ತೆ ಅದೇ ವ್ಯಾಪಾರೀ ಜಗತ್ತು ಮರಳಿಬಂದಿದೆ. ಒಂದು ರೀತಿಯಲ್ಲಿ ಅದಕ್ಕಿಂತ ಕೆಟ್ಟದ್ದು. ಹೊಸ ದರೋಡೆಕೋರರು, ಹೊಸ ಕಳ್ಳ ಖದೀಮರು ನಗಾರಿ ಬಾರಿಸುತ್ತ ನಡೆದಿದ್ದಾರೆ. ದ್ವೇಷದ್ದೇ ಕಾರಬಾರ ಎಲ್ಲೆಲ್ಲೂ. ಪ್ರೀತಿಯ ಮಾತುಕತೆ ಕಣ್ಮರೆಯಾಗಿಬಿಟ್ಟಿದೆ. ನಮ್ರತೆಯ, ನಯದ ಮಾತುಗಳು ಪರಿಣಾಮವೇ ಆಗುವುದಿಲ್ಲ. ಅಂದಮೇಲೆ ಎಲ್ಲಿಯ ಕವಿತೆ, ಎಲ್ಲಿಯ ಕತೆ? ಹೃದಯದಲ್ಲಿ ಅವಕ್ಕೆಲ್ಲಿ ಸ್ಥಾನ? ಕಬೀರ ಅತ್ತ, ಹುಚ್ಚುತನ ವ್ಯಂಗ್ಯವಾಡಿತು. ಇದರಿಂದಾಗಿ ಲೇಖನಿ ನಿಂತಿತು. ನಾನೀಗ ಒಂದು ಬಗೆಯ ಇಕ್ಕಟ್ಟಿನಲ್ಲಿದ್ದೇನೆ. ರಾಜಕುಮಾರನು ಕಠಿಣವಾದ ಸವಾಲನ್ನು ಅಕಸ್ಮಾತ್ತಾಗಿ ಎದುರಿಸಬೇಕಾಗಿ ಬಂದಾಗಿನ ರೀತಿಯ ಸಂಕಟ ಅದು. ಎದುರಿಗೆ ಕಂದಕ, ಹಿಂದೆ ಸಮುದ್ರ, ಮುಂದೇನು ಮಾಡುವುದು ಎಂದು ತೋಚುವುದಿಲ್ಲ. ಅಷ್ಟುಹೊತ್ತಿಗೆ ಖ್ವಾಜಾ ಖಿಜ್ರರು ಪ್ರತ್ಯಕ್ಷರಾಗಿ ಹೇಳುತ್ತಾರೆ. - “ನನ್ನ ಬೆರಳನ್ನು ಹಿಡಿದುಕೊಂಡು ಮುಂದೆ ನಡೆ.” ಯಾವುದೋ ಅಜ್ಞಾತ ಧ್ವನಿ ಕೇಳಿಸುತ್ತದೆ. - “ಗ್ರಂಥಗಳನ್ನು ಅಧ್ಯಯನ ಮಾಡು. ಅದರಲ್ಲಿ ಹೇಳಿದಂತೆ ಮಾಡು. ಆದರೆ ನನ್ನ ಬಳಿ ಯಾವ ಪುರಾಣ ಇದೆ? ಹಾಂ, ಇದೆ. ಇದೆ. ಆಲಿಫ್ ಲೈಲಾ. ನನ್ನ ಬಳಿ ಈ ಮುಖ್ಯವಾದ ಪುಟ ಇದೆ. ಕತೆ ಅನ್ನಿ, ಕಾಲ್ಪನಿಕ ಮಾತ್ರ ಅನ್ನಿ. ನಿಜ, ಈಗ ಮತ್ತೇನೋ ಮತ್ತೇನೋ ಧ್ವನಿ ಕೇಳಿಸುತ್ತಿದೆ. ಅರೆ! ಇದು ಆಲಿಫ್ ಲೈಲಾ ಕಥನದ ಪುಟಗಳೊಳಗಿಂದ ಕೇಳಿ ಬರುತ್ತಿದೆ. ಖಂಡಿತವಾಗಿಯೂ ಇದು ಶಹರಜಾದಳ ಧ್ವನಿ. ಏನು ಹೇಳುತ್ತಿವೆ? ಏನೂ ಹೇಳುತ್ತಿಲ್ಲ. ಅಲ್ಲಿ ಯಾವ ನಿರ್ದೇಶನವಿಲ್ಲ, ಯಾವ ಸಂದೇಶವಿಲ್ಲ, ಯಾವುದೇ ದರ್ಶನವಿಲ್ಲ, ಯಾವುದೇ ಧೋರಣೆಯಿಲ್ಲ. 74 ಕಥಾ ಸಂಸ್ಕೃತಿ ಕೇವಲ ಕತೆಯನ್ನು ಮಾತ್ರ ಹೇಳಿಕೊಂಡು ಹೋಗಲಾಗುತ್ತಿದೆ. ಒಂದು ಕತೆ, ಇನ್ನೊಂದು ಕತೆ, ಮತ್ತೊಂದು ಕತೆ, ಹೀಗೇ ಮುಂದುವರಿಯುತ್ತದೆ. ಸರಣಿ ನಿಲ್ಲುವುದರೊಳಗೆ ಬಂದೇಬಿಟ್ಟಿತು. ಎಲೈ ಮಂತ್ರಿಯ ಮಗಳೇ, ಕತೆಗಳ ರಾಣಿಯೇ, ಇಂಥ ಸಂದರ್ಭದಲ್ಲಿ ನಿನಗೆ ಕತೆ ಹೊಳೆದಿದೆ. ಜೀವದ ರಕ್ಷಣೆಯನ್ನು ಬೇಡು. ಇವೆಲ್ಲ ರಾತ್ರೋರಾತ್ರಿಯ ಆಟ. ಬೆಳಗಾದರೆ ನಿನ್ನ ಕತ್ತು ಮತ್ತು ಕಟುಕನ ಕತ್ತಿ. ಈ ತಲೆಯೂ ಅದೇ ರೀತಿ ಲೇಖನಿಯಾಗುತ್ತದೆ. ಹಿಂದಿನ ಅತ್ಯಾಚಾರದ ಬೆಳಗಿನಲ್ಲಿ ನಿನಗಿಂತ ಮೊದಲು ನಡೆದ ಸುಂದರಿಯರ ಧಾರ್ಮಿಕರ ತಲೆಗಳಂತೆ. ಶಹರಯಾರ ರಾಜನದು ಒಂದು ವಿಚಿತ್ರ ಪದ್ಧತಿ ಇತ್ತು. ಪ್ರತಿದಿನ ಸಂಜೆ ಒಬ್ಬ ರಾಜಕುಮಾರಿಯನ್ನು ಮಹಲಿಗೆ ಕರೆತರುತ್ತಿದ್ದ. ಅವಳೊಂದಿಗೆ ರಾತ್ರಿ ಕಳೆಯುತ್ತಿದ್ದ. ಬೆಳಗಾಗುತ್ತಲೇ ಅವರ ತಲೆ ಕತ್ತರಿಸಿ ಹಾಕುತ್ತಿದ್ದ. ಶಹರಜಾದಳ ತಲೆಯೊಳಗೆ ಏನು ಬಂದಿತ್ತೋ ಏನೋ. ಅವಳು ತನ್ನ ತಂದೆಯೊಡನೆ ಹಟ ಮಾಡಿ ಸ್ವ ಇಚ್ಛೆಯಿಂದ ಪಲ್ಲಕ್ಕಿಯಲ್ಲಿ ಕೂತು ಆ ಕೆಟ್ಟ ಅರಮನೆಗೆ ಬಂದಿಳಿದಳು. ಅವಳು ಬಂದು ಏನು ಮಾಡಿದಳು? ಏನೂ ಮಾಡಲಿಲ್ಲ. ಸುಮ್ಮನೇ ಕತೆ ಹೇಳಲು ಪ್ರಾರಂಭಿಸಿದಳು. ಪ್ರಸ್ತದ ರಾತ್ರಿ. ಮದುಮಗಳು ಸೊಳ್ಳೆಪರದೆ ಕಟ್ಟಿದ ಪಲ್ಲಂಗದ ಮೇಲೆ ಕೂತು ಕತೆ ಹೇಳುತ್ತಿದ್ದಾಳೆ! ರಾತ್ರಿಯೆಲ್ಲಾ ಕತೆಯಲ್ಲೇ ಕಳೆಯಿತು. ಬೆಳಗಿನ ಬೆಳ್ಳಿಚುಕ್ಕಿ ಹೊಳೆದು, ಕೋಳಿ ಕೂಗಿದ ಮೇಲೆ ಶಹರಜಾದೆ ಮಾತನಾಡುತ್ತಿದ್ದಂತೆ ಸುಮ್ಮನಾದಳು. ರಾಜ ವ್ಯಾಕುಲಗೊಂಡು ಕೇಳಿದ - “ಮುಂದೇನಾಯ್ತು?” ಅದಕ್ಕೆ ಅವಳು ಈಗ ಬೆಳಗಾಗಿದೆ. ಯಾರಾದರೂ ಹಗಲಿನಲ್ಲಿ ಕತೆ ಹೇಳುತ್ತಾರೆಯೇ? ಯಾವುದಾದರೂ ಬಡ ಪ್ರಯಾಣಿಕ ರಸ್ತೆಯಲ್ಲಿ ನಡೆಯುತ್ತಿದ್ದರೆ ಅವನು ರಸ್ತೆಯನ್ನು ತಪ್ಪಬಹುದು. ಆದ್ದರಿಂದ ರಾತ್ರಿಯಾಗಲಿ. ಮುಂದೇನಾಯಿತು ಎಂಬುದನ್ನು ಆಗ ಹೇಳುವೆ.” ರಾಜ ಮನಸ್ಸಿನಲ್ಲೇ ಅಂದುಕೊಂಡ - “ಆಗಲಿ, ಒಂದು ದಿನದ ಅವಕಾಶ ಸಿಕ್ಕಿದಂತಾಯಿತು. ಕತೆ ಮೊದಲು ಪೂರ್ಣವಾಗಲಿ.” ರಾತ್ರಿ ಬಂದೇ ಬಿಟ್ಟಿತು. ಶಹರಜಾದಳು ಹಿಂದಿನ ದಿನ ಕತೆಬಿಟ್ಟಲ್ಲಿಂದ ಎಳೆ ಹಿಡಿದು ಕತೆಯನ್ನು ಮುಂದುವರಿಸಿದಳು. ಆದರೆ ಮತ್ತೆ ಕತೆಯ ನಡುವೆಯೇ ಬೆಳಗಿನ ಬೆಳ್ಳಿ ಮೂಡಿತು. ಕೋಳಿ ಕೂಗಿತು. ಕತೆ ಒಂದು ಸೂಕ್ಷ್ಮ ತಿರುವಿಗೆ ಬಂದು ನಿಂತಿತು. ಮತ್ತೆ ಅದೇ ಪ್ರಶ್ನೆ. “ಮುಂದೇನಾಯ್ತು?” ಮತ್ತೆ ಅದೇ ಉತ್ತರ - “ಕೋಳಿ ಕೂಗಿತು, ಬೆಳಗಾಯಿತು. ಉಳಿದೆದ್ದಲ್ಲ ರಾತ್ರಿಗೆ.” ಇದೇ ರೀತಿ ರಾತ್ರಿ ಕಳೆಯುತ್ತ ಹೋಯಿತು. ಕತೆಯಿಂದ ಕತೆ ಹುಟ್ಟಿಕೊಳ್ಳುತ್ತ ಹೋಯಿತು. ಸಾವಿರ ಬಾರಿ ಬೆಳಗಾಯಿತು. ಸಾವಿರಬಾರಿ ಕೋಳಿ ಕೂಗಿತು. ಸಾವಿರದ ಒಂದನೆಯ ರಾತ್ರಿಯಲ್ಲಿ ಅಂತೂ ಕತೆ ಮುಗಿಯಿತು. ಆದರೆ ಈ ಆಧುನಿಕ ಕತೆಯ ರಚನಾ ಸಂಸ್ಕೃತಿ 75 ಅವಧಿಯಲ್ಲಿ ರಾಜನಲ್ಲಿ ಅಪೂರ್ವ ಪರಿವರ್ತನೆಯಾಗಿತ್ತು. ಕತೆಯನ್ನು ಕೇಳಿದವರಿಗೂ ಹೇಳಿದವರಿಗೂ ಶುಭ-ಲಾಭವಾಗಿತ್ತು. ಶಹರಜಾದಳ ಪ್ರಾಣ ಉಳಿದಿತ್ತು. ಹೆಂಗಸರನ್ನು ಕೊಲೆಮಾಡುವುದಿಲ್ಲವೆಂದು ರಾಜನು ಪ್ರತಿಜ್ಞೆ ಮಾಡಿದ್ದ, ನೆಮ್ಮದಿಯನ್ನೂ ಪಡೆದಿದ್ದ. ಇದು ಅಲಿಫಲೈಲಾ ಹುಟ್ಟಿಗೆ ಕಾರಣ. ನನಗೆ ಶಹರಜಾದಳ ಗುಟ್ಟು ಗೊತ್ತಾಗಿತ್ತು. ಕತೆಯನ್ನು ರಾತ್ರಿಯೇ ಹೇಳುವುದು ಯಾಕೆಂದರೆ ಸಮಯ ಕಳೆಯಲಿ, ರಾತ್ರಿ ಸರಿಯಲಿ ಎಂದು. ನಾನು ಸಹ ಒಂದು ದೀರ್ಘವಾದ ರಾತ್ರಿಯ ನಡುವೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ರಾತ್ರಿಯ ಸಂಬಂಧ ಶಹರಜಾದಳ ರಾತ್ರಿಯನ್ನೇ ಹೋಲುತ್ತದೆ. ಅಂದರೆ ಅರ್ಥಾತ್ ರಾತ್ರಿಯನ್ನು ಮುರಿಯುವುದೇ ಕತೆಯನ್ನು ಮುಂದುವರಿಸುವುದಕ್ಕೆ. ರಾತ್ರಿ ಮುಂದುವರಿಯುವವರೆಗೂ ಕತೆಯೂ ಮುಂದುವರಿಯುತ್ತದೆ. ಶಹರಜಾದ ಅಧಿಕಾರ ಸ್ಥಾಪಿಸಿದ್ದಳು. ಯಾಕೆಂದರೆ ಸುತ್ತಲಿನ ಆವರಣದಲ್ಲಿ ರಕ್ತದ ವಾಸನೆಯಿತ್ತು. ಮನುಷ್ಯನ ಪ್ರಾಣಕ್ಕೆ ಯಾವುದೇ ಬೆಲೆ ಇರಲಿಲ್ಲ. ಕೊಲೆ, ಭಯ, ಅಪಾಯ, ಆತಂಕ ಸೇರಿಕೊಂಡಿತ್ತು. ಆಗ ಅವಳು ಪ್ರತಿಭೆಗೆ ಸಂಬಂಧವಿಲ್ಲದ ಉಪಾಯವನ್ನು ಅನುಸರಿಸಿದಳು. ಕತೆಯ ಸುಂದರ ಜಗತ್ತಿನಲ್ಲಿ ಪಯಣ ಹೊರಟಳು. ಆ ಆವರಣದ ದೃಷ್ಟಿಯಿಂದ ನಿಶ್ಚಿತವಾಗಿಯೂ ಒಂದು ಪ್ರತಿರೋಧ ಸೃಷ್ಟಿಯಾಗಿತ್ತು. ನಾವೂ ಇದೇ ದಾರಿಯಲ್ಲಿ ಹೋಗೋಣವೆಂದು ಅದೇ ಜಗತ್ತಿಗೆ ತೆರಳೋಣವೆಂದು ನಾನು ಯೋಚಿಸಿದೆ. ಅಲ್ಲಿ ಕೇವಲ ರಾತ್ರಿಯಿತ್ತು, ಕತೆಯಿತ್ತು, ಕತೆಗಳು, ವೃತ್ತಾಂತಗಳು, ಕಥನಗಳು, ಗುಲ್‍ಳು ಸನೋಬರ್‍ನ ಜೊತೆ ಏನು ಮಾಡಿದಳು? ಹುಸ್ನಬಾನಳು ಹಾತಿಮನಿಗೆ ಯಾವ ಯಾವ ಪ್ರಶ್ನೆ ಕೇಳಿದಳು? ಹಾತಿಮನು ಏನೆಂದು ಉತ್ತರ ಕೊಟ್ಟನು? ದೇವನ ಕೋಟೆಯಲ್ಲಿ ಬಂಧಿತಳಾದ ರಾಜಕುಮಾರಿಯು ರಾಜಕುಮಾರನನ್ನು ನೋಡಿ ಯಾಕೆ ಅತ್ತಳು? ಕುಲೈಲಾದಮನಾಳಿಗೆ ಏನೆಂದು ಸಲಹೆ ನೀಡಿದ? ಅದಕ್ಕೆ ದಮನಾ ಏನೆಂದು ಉತ್ತರಕೊಟ್ಟಳು? ಎಷ್ಟು ಪ್ರಶ್ನೆಗಳೋ ಅಷ್ಟು ಕತೆಗಳು. ಪ್ರತಿಯೊಂದು ಕತೆಯೂ ಅಪಾಯ ತುಂಬಿದ ಪ್ರಯಾಣದ ಸಂಕಟಗಳು. ಇಣುಕಿ ಹೊರಗಡೆ ನೋಡಿದೆ. ಎಷ್ಟೊಂದು ಆತಂಕಕಾರಿ ರಾತ್ರಿಗಳು ದೀರ್ಘವಾಗಿ ಕಳೆದಿವೆ! ಮತ್ತೆ ಕತೆ ಶುರುವಾಯಿತು. ಒಬ್ಬ ರಾಜಕುಮಾರ ಕಾಡು-ಮೇಡು ಅಲೆದು, ನಗರಗಳನ್ನು ಸುತ್ತುತ್ತ, ದುರ್ದೆಶೆಗ್ರಸ್ತನಾಗಿ ಒಂದು ಅದ್ಭುತ ನಗರಕ್ಕೆ ಬಂದ. ಅಲ್ಲಿ ಒಂದು ಎತ್ತರವಾದ ಕೋಟೆ, ಆಕಾಶವನ್ನು ಮುಟ್ಟುವ ಬುರುಜುಗಳು, ಎಷ್ಟೊಂದು ತಲೆಬುರುಡೆಗಳು, ಕೋಟೆಯ ಬುರುಜುಗಳ ಮೇಲೆ ತೂಗಾಡುತ್ತಿವೆ! ಇವನ್ನೆಲ್ಲ ನೋಡಿ ಅವನು ಗಾಬರಿಯಾದ, ಚಿಂತಿತನಾದ. ಹಾಗೆ ಮುಂದಕ್ಕೆ ಹೋದಾಗ ಒಬ್ಬ ಮುದುಕ ಕಣ್ಣಿಗೆ ಬಿದ್ದ. ಬೇಗನೇ ಅವನ ಬಳಿ ಹೋಗಿ ಕೇಳಿದ - 76 ಕಥಾ ಸಂಸ್ಕೃತಿ “ಯಜಮಾನರೇ, ಈ ನಗರ ಯಾವುದು? ಬುರುಜಿನ ಮೇಲೆ ತಲೆಗಳನ್ನು ತೂಗಾಡಿಸಿಕೊಂಡಿರುವ ಈ ಕೋಟೆ ಯಾವುದು? ಈ ಕತ್ತರಿಸಿದ ತಲೆಗಳು ಯಾರವು? ಈ ತಲೆಗಳನ್ನು ಕತ್ತರಿಸಿದ ನೀಚ ಯಾರು?” ಮುದುಕನು ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿದ. ನಂತರ ಹೇಳಿದ - “ಎಲೈ ಯುವಕನೇ, ನೀನು ಈ ನಗರಕ್ಕೆ ಹೊಸದಾಗಿ ಬಂದಿದ್ದೀಯ. ನಿನ್ನ ದುರದೃಷ್ಟವು ನಿನ್ನನ್ನು ಇಲ್ಲಿಗೆ ಕರೆದು ತಂದಿದೆ. ನಿನ್ನ ಯೌವನದ ಬಗ್ಗೆ ಕನಿಕರ ತೋರಿ ದಯಮಾಡಿ ತಕ್ಷಣ ಇಲ್ಲಿಂದ ಹೊರಡು. ಇದು ಕೈಮೂಸ್ ನಗರ. ಈ ಕೋಟೆ ಕೈಮೂಸ ರಾಣಿಯದು. ಏಳುಲೋಕದಲ್ಲೂ ಅವಳಷ್ಟು ಸುಂದರಿಯರಿಲ್ಲ. ಅವಳದೇ ಅಧಿಕಾರ ಎಲ್ಲ ಕಡೆ. ತನ್ನನ್ನು ಬಯಸುವವರಿಗೆ ಕಠಿಣ ಹೃದಯದ ಆಕೆ ಪ್ರಶ್ನೆ ಕೇಳುತ್ತಾಳೆ. - “ಗುಲ ಸನೋಬರನ ಜೊತೆ ಏನು ಮಾಡುತ್ತಾಳೆ” ಉಮೇದುವಾರನು ಈ ಪ್ರಶ್ನೆಗೆ ಉತ್ತರ ಕೊಡಬೇಕು. ಇದು ಅವಳ ಷರತ್ತು. ಸರಿಯಾದ ಉತ್ತರ ಕೊಟ್ಟವನನ್ನು ತನ್ನ ಮುಕುಟಮಣಿಯಾಗಿಸಿಕೊಳ್ಳುತ್ತೇನೆ ಎನ್ನುತ್ತಾಳೆ. ಉತ್ತರವನ್ನು ಸರಿಯಾಗಿ ಕೊಡದಿದ್ದರೆ ಅವರ ತಲೆಯನ್ನು ಕತ್ತರಿಸಿ ಕೋಟೆಯ ಮೇಲೆ ತೂಗುಹಾಕಿಸುತ್ತಾಳೆ. ಕೋಟೆಯ ಹೆಬ್ಬಾಗಿಲಿನ ಬಳಿ ನಗಾರಿ ಮತ್ತು ಚಿನ್ನದ ಕೋಲು ಇವೆ. ಎಷ್ಟೊಂದು ಜನ ರಾಜಕುಮಾರರು ಬಂದರು. ನಗಾರಿಯನ್ನು ಚಿನ್ನದ ಕೋಲಿನಿಂದ ಬಾರಿಸಿದರು. ರಾಜಕುಮಾರಿಯ ಎದುರು ಅವರನ್ನು ಕರೆದುಕೊಂಡು ಹೋಗಲಾಯಿತು. ಅವಳು ಪುನಃ ಅದೇ ಪ್ರಶ್ನೆಯನ್ನು ಕೇಳುತ್ತಾಳೆ. ಗುಲ್ ಸನೋಬರ್ ಜತೆ ಏನು ಮಾಡುತ್ತಾಳೆ? ಈವರೆಗೆ ಯಾರೂ ಉತ್ತರಿಸಲಿಲ್ಲ. ಇಲ್ಲಿ ತೂಗಾಡುತ್ತಿರುವುದೆಲ್ಲ ಅವರದೇ ತಲೆ.” ರಾಜಕುಮಾರನು ಹಿಂದು ಮುಂದು ನೋಡಲಿಲ್ಲ. ನಗಾರಿಯ ಕಡೆ ಜಿಗಿದ. ಪಾಪ ಆ ಮುದುಕ ಚೀರುತ್ತ - ಕೂಗುತ್ತ ಇದ್ದ- “ಅಯ್ಯೋ...... ಇದೇನಾಯ್ತು? ಏನು ಮಾಡುತ್ತಿದ್ದಾನೆ ಇವನು? ರತ್ನದಂತಹ ಜೀವವನ್ನು ಯಾಕೆ ಹಾಳು ಮಾಡಿ ಕೊಳ್ಳುತ್ತಿದ್ದಾನೆ?” ಆದರೆ ಅವನು ಏನನ್ನೂ ಕೇಳಲಿಲ್ಲ. ಇಡೀ ನಗರದಲ್ಲಿ ಪ್ರತಿಧ್ವನಿಸುವ ಹಾಗೆ ನಗಾರಿ ಬಾರಿಸಿಯೇ ಬಿಟ್ಟ. ನಗರದಲ್ಲಿ ಎಲ್ಲರೂ ಕರುಣೆಯಿಂದ ಕೂಗಿದರು - “ಮತ್ತೊಂದು ಪ್ರಾಣ ಹೋಯಿತು, ಮತ್ತೊಂದು ತಲೆಗೆ ತೂಗಾಡುವ ಸರದಿ ಬಂತು. . .” ಆದರೆ ಇದೇನಿದು? ಅಕಸ್ಮಾತ್ತಾಗಿ ಕೂಗುವ - ಅಳುವ ಧ್ವನಿ ಬರುತ್ತಿದೆ. ಹೇ ದೇವರೇ, ಇದೆಂಥ ಕಥೆ, ಏನಿದು ಗಲಾಟೆ? ಎಲ್ಲಿಯ ಗುಲ್ ಮತ್ತು ಸನೋಬರ್? ವಠಾರದಲ್ಲಿ ಪ್ರಳಯ ಉಂಟಾಗಿದೆ. ಏನಣ್ಣಾ. . . ಏನಾಯ್ತು? ಭಯೋತ್ಪಾದಕರಾ? . . . ಏನು ಹೇಳುತ್ತಿದ್ದೀ? ಆತಂಕವಾದಿಗಳು ಇಲ್ಲಿ ಎಲ್ಲಿ ಬಂದರು? ಸರಿ, ಬಂದರು. ಮುಖವಾಡ ಧರಿಸಿ ಎ.ಕೆ. 47 ಹಿಡಿದು ಮಸೀದೆಯಲ್ಲಿ ಆಧುನಿಕ ಕತೆಯ ರಚನಾ ಸಂಸ್ಕೃತಿ 77 ಧುಮುಕಿದರು. “ಠಾಂಯ್. . . ಠಾಂಯ್” ಉಸಿರು ಬಿಡುವುದರೊಳಗೇ ಎಷ್ಟೊಂದು ಜನ ನಮಾಜಿಗೆ ಕುಳಿತ ಮಂದಿ ರಕ್ತಸಿಕ್ತರಾಗಿ ಮಸೀದಿಯ ಅಂಗಳದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಕೇಳುವ ಭಯೋತ್ಪಾದಕರು ಮಾತ್ರ ಉಳಿದಿದ್ದಾರೆ. ಇದನ್ನು ನೋಡಿ ನನಗೆ ಪ್ರಾಣ ಹಾರಿತು. ತಲೆಯಲ್ಲಿ ಏನೋ ಗಲಿಬಿಲಿ. ಒಬ್ಬ ವೃದ್ಧರು ತಣ್ಣಗಿನ ನಿಶ್ವಾಸ ಬಿಡುತ್ತ ಹೇಳಿದರು. ಎಂಥಾ ಕಾಲ ಬಂದಿದೆ. ಮುಸ್ಲಿಮರೇ, ಮುಸ್ಲಿಮರ ರಕ್ತದೋಕುಳಿಯಾಡುತ್ತಿದ್ದಾರೆ. ಅದೂ ಅಲ್ಲಾನ ಮನೆಯೊಳಗೆ ಬಂದು! ಇನ್ನೊಬ್ಬ ವೃದ್ಧ ದಾಡಿಯ ಮೇಲೆ ಕೈ ಆಡಿಸುತ್ತ “ಇವರು ಮುಸಲ್ಮಾನರಾಗಿದ್ದರು ಅನ್ನುವುದನ್ನು ನಾನು ಒಪ್ಪುವುದಿಲ್ಲ. ಮುಸಲ್ಮಾನರು ಮುಸಲ್ಮಾನರ ಮೇಲೆ ಗುಂಡು ಹಾರಿಸಲು ಸಾಧ್ಯವಿಲ್ಲ. ಅದೂ ಖುದಾನ ಮನೆಯೊಳಗೆ!”. “ಹಾಗಾದರೆ ಯಾರಾಗಿದ್ದರು?” ಒಬ್ಬ ಯುವಕ ಸಿಟ್ಟಿನಿಂದ ಕೇಳಿದ. “ಶತ್ರುಗಳ ಏಜಂಟರು. . .” ಮತ್ತೊಬ್ಬ ಮುದುಕ ವಿಶ್ವಾಸದಿಂದ ಹೇಳಿದ. ಯುವಕ ಸಿಟ್ಟಿನಿಂದ ಕಂಪಿಸುತ್ತ ಹೇಳಿದ - ‘ಮೌಲಾನಾ, ಎಲ್ಲಿಯವರೆಗೆ ಇಂತಹ ಮಾತುಗಳನ್ನಾಡಿ ನಮಗೆ ನಾವೇ ಮೋಸ ಮಾಡಿಕೊಳ್ಳಬೇಕು?’ ಸ್ವಲ್ಪ ತಡೆದು ಹೇಳಿದ - “ಮುಸಲ್ಮಾನರು ಮುಸಲ್ಮಾನರ ಮೇಲೆ ಗುಂಡು ಹೊಡೆಯಲಾರರು, ಸ್ವಾಮೀ, ತಾವು ಬಹುಶಃ ಮುಸಲ್ಮಾನರ ಇತಿಹಾಸ ಓದಿಲ್ಲ” “ಹಾಂ. . . ಇಂದಿನ ಮಕ್ಕಳು ನಮಗೆ ಇತಿಹಾಸ ಕಲಿಸಬೇಕು.” ಈ ಬಗೆಯ ಚರ್ಚೆಯು ನನ್ನ ಬುದ್ಧಿಯನ್ನು ಇನ್ನಷ್ಟು ಕೆಡಿಸಿತು. ನಾನು ಮರಳಿ ಮನೆಗೆ ಬಂದೆ. ಏನು ಮಾಡಲಿ! ಏನೂ ತೋಚುತ್ತಿಲ್ಲ. ಮತಿ ವಿಕಲವಾಯಿತು. ಆರೋಗ್ಯದಲ್ಲೂ ಯಾಕೋ ಕಿರಿಕಿರಿ. ಎಲ್ಲ ಸರಿಹೋಗುವ ಸ್ಥಿತಿಯೇ ಕಾಣಲಿಲ್ಲ. ತಿಂಗಳುಗಟ್ಟಲೆ ಇದೇ ಸ್ಥಿತಿ ಇತ್ತು. ಕತೆ ಬರೆಯುವ ವಿಚಾರ ಓಡಿಹೋಯಿತು. ಆರೋಗ್ಯ ತುಸು ಮರಳಿದರೂ ಗುಲ್ ಮತ್ತು ಸನೋಬರ ಕತೆಯ ಬಗ್ಗೆ ನನಗೆ ಜುಗುಪ್ಸೆ ಮೂಡಿತ್ತು. ಈ ಕತೆಯ ಕಡೆಗೇ ನನ್ನ ಗಮನ ಯಾಕೆ ಹರಿಯಿತು ಎಂದು ನಾನು ಯೋಚನೆಗೆ ಬಿದ್ದೆ. ಬರೆಯುವವರಿಗಾಗಿ ನಾನು ಈ ಕತೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡೆ? ಒಬ್ಬ ರಾಜಕುಮಾರಿ ಭಯೋತ್ಪಾದಕಳಾಗಿ ಕುಳಿತಿದ್ದಾಳೆ. ಪ್ರೀತಿಯ ಆಕರ್ಷಣೆಯಿಂದ ತುಂಬಿ ತುಳುಕುತ್ತ ಅವಳ ಮುಂದೆ ಬಂದು ತಲೆಬಾಗಿಸಿದರೆ, ಇವಳು ಅವನ ತಲೆಯನ್ನು ಕತ್ತರಿಸುತ್ತಾಳೆ! ಇದರ ಅರ್ಥ ಏನು? ನಾವು ಹಿಂದಿನ ಚಲನೆಯ ಕಡೆಗೂ ಹೋಗುತ್ತೇವೆ. ನಮ್ಮದೇ ನೀತಿಯ ಬೆಂಕಿಯನ್ನೂ ಜೊತೆಗೆ ಒಯ್ಯುತ್ತಿದ್ದೇವೆ. ಅಥವಾ ಇದು ನನ್ನ 78 ಕಥಾ ಸಂಸ್ಕೃತಿ ದೌರ್ಬಲ್ಯವಾಗಿತ್ತೇ? ನಾನು ನನ್ನ ಕಾಲದ ಹಿಂಸೆಯಿಂದ ತುಂಬಿದ ಆವರಣದ ಕೊಂಡಿ ಕತ್ತರಿಸಿಕೊಂಡು ಹಳೆಯ ಕತೆಯ ಜಗತ್ತಿನಲ್ಲಿ ಶಾಂತಿಯನ್ನು ಪಡೆಯಬಯಸಿದೆ. ಆದರೆ ನನ್ನ ಕಾಲದ ಬೆಂಕಿಯು ನನ್ನದೇ ಅಸ್ತಿತ್ವಕ್ಕೆ ಅಂಟಿಕೊಂಡು ನನ್ನೊಂದಿಗೆ ಬಂದುಬಿಟ್ಟಿದೆಯೆಂಬುದರ ಕಡೆ ನಾನು ಗಮನ ಕೊಡಲೇ ಇಲ್ಲ. ನಾನು ಮತ್ತೆ ಶಹರಜಾದಳನ್ನು ನೆನಪು ಮಾಡಿಕೊಂಡೆ. ಅವಳು ಎಂಥ ಕೌಶಲದಿಂದ ತನ್ನ ಸುತ್ತಲಿನ ಹಿಂಸೆ-ಆತಂಕಗಳ ವಾತಾವರಣದಿಂದ ತನ್ನ ಮನಸ್ಸು-ಬುದ್ಧಿಗಳನ್ನು ಮುಕ್ತಗೊಳಿಸಿದ್ದಳು. ಅವಳು ಹೇಳಿದ ಕತೆಯನ್ನು ಓದುವಾಗ, ಕೆಲವೇ ಗಂಟೆಗಳ ಸಮೀಪದಲ್ಲಿ ಮೃತ್ಯುವು ನಿಂತು ನಿರೀಕ್ಷೆ ಮಾಡುತ್ತಿರುವ ವ್ಯಕ್ತಿಯ ವ್ಯಕ್ತಿತ್ವದ ಕಲ್ಪನೆಯ ಸೃಷ್ಟಿಯಿದು ಎಂದು ತುಸುವೂ ಸಂಶಯ ಬರುತ್ತಿರಲಿಲ್ಲ. ಇವು ಶಹರಜಾದಳ ಚಮತ್ಕಾರವಾಗಿತ್ತೇ, ಅಥವಾ ಕತೆ ಹೇಳುವವರ ಅದ್ಭುತ ಕಲ್ಪನೆಯು ಇಂಥ ಶ್ರೇಷ್ಠ ಶೈಲಿಯನ್ನು ಸೃಷ್ಟಿಸಿದೆಯೇ - ಗೊತ್ತಿಲ್ಲ. ಹಾಗೆ ಕತೆ ಹೇಳುವವರು ಯಾರಾಗಿದ್ದರು ಎಂಬುದೂ ನಮಗೆ ಗೊತ್ತಿಲ್ಲ. ನನ್ನ ಮಟ್ಟಿಗಂತೂ ಶಹರಜಾದಳೇ ಅಲಿಫಲೈಲಾದ ಕೇಂದ್ರ ಶೈಲಿಯ ಹಾಗೂ ಅಲಿಫಲೈಲಾ ಕತೆಯ ಸೃಷ್ಟಿಕರ್ತಳು. ಗಾಲಿಬ್ ತನ್ನ ಪತ್ರದಲ್ಲಿ ಒಂದು ಕಡೆ ಹೇಳಿದ್ದಾನೆ - ಕವಿಯ ಚರಮಸೀಮೆಯಿರುವುದೇ ಅವನು ಫಿರ್ದೌಸಿಯಾಗುವುದರಲ್ಲಿ. ನನ್ನ ದೃಷ್ಟಿಯಲ್ಲಿ ಕತೆಗಾರನ ಅಂತಿಮ ಸಾಧನೆಯಿರುವುದು ಶಹರಜಾದ ಆಗುವುದರಲ್ಲಿ. ಇರಲಿ, ನಾನು ಶಹರಜಾದಳಿಂದ ಪ್ರಮಾಣ ಪತ್ರ ಪಡೆದು ಕತೆಯ ಕಡೆ ಮತ್ತೆ ಹೊರಳಿಕೊಂಡೆ. ನನ್ನ ಕಾಲದಿಂದಾಚೆ ಹೋಗುವುದಿಲ್ಲವೆಂದು ನಿರ್ಧಾರ ಮಾಡಿದೆ. ಆದರೆ ನನ್ನ ಕಾಲದ ಕೆಂಡವನ್ನು ಹತ್ತಿರ ಬರಗೊಡುವುದಿಲ್ಲ. ಒಂದೆರಡು ಕತೆ ಬರೆದಿದ್ದೆ ಅಷ್ಟೇ. ಅಷ್ಟರಲ್ಲಿ ನನ್ನ ಬುದ್ದಿಜೀವಿ ಗೆಳೆಯನೊಬ್ಬ ಆಕ್ಷೇಪ ಮಾಡಿದ. - ಒಳ್ಳೆಯ ಕತೆ ಬರೆಯುವವನು ನೀನು! ಅಫಗಾನಿಸ್ತಾನದಲ್ಲಿ ಬಾಂಬ ಸುರಿಮಳೆ ಆಗುತ್ತಿದೆ. ಪಾಕಿಸ್ತಾನದ ಗಡಿಯಲ್ಲಿ ಅಪಾಯದ ಭಯಾನಕ ಸ್ಥಿತಿ ಇದೆ. ಜಗತ್ತಿನ ನಾಡಿಗಳಲ್ಲಿ ಭಯೋತ್ಪಾದನೆ ತುಂಬಿದೆ. ಹೀಗಿರುವಾಗ ನೀನು ಇಲ್ಲಿ ಕೂತು ಹಕ್ಕಿಗಳ ಕತೆ ಬರೆಯುತ್ತಿದ್ದೀಯೆ. ಇದು ಪಲಾಯನವಾದ ಅಲ್ಲದೆ ಮತ್ತೇನು? ಈ ನಿಷ್ಪ್ರಯೋಜಕ ಹೇಳಿಕೆಯು ನನ್ನನ್ನು ತೃಪ್ತನನ್ನಾಗಿ ಮಾಡಿತು. ಅರ್ಥಾತ್ ಸುತ್ತಲಿನ ಆವರಣದ ಗೊಂದಲದಿಂದ ಸಂಬಂಧ ಕಡಿದುಕೊಂಡು ಕತೆ ಬರೆಯುವ ಪ್ರಯತ್ನ ಯಶಸ್ವಿಯಾಯಿತು. ಇದೇ ಸಂದರ್ಭದಲ್ಲಿ ನನಗೆ ಮನೀರ ನಿಯಾಜೀಯವರ ಒಂದು ಕವನ ನೆನಪಿಗೆ ಬಂತು. ಅದರ ಶೀರ್ಷಿಕೆ - “ಯುದ್ಧದ ನೆರಳಿನಲ್ಲಿ ಇಳೆಯ ಸ್ವರ್ಗೀಯ ಸೌಂದರ್ಯ.” ಕವನ ಹೀಗಿದೆ. ಒಮ್ಮೆ ನೇರಿಳೆಯ ಟೊಂಗೆಗಳಲ್ಲಿ ಇನ್ನೊಮ್ಮೆ ಪೇರಲದ ಗಿಡದಲ್ಲಿ ಆಧುನಿಕ ಕತೆಯ ರಚನಾ ಸಂಸ್ಕೃತಿ 79 ಪ್ರೀತಿಯ ರಾಗಿಣಿಯನ್ನು ಹಾಡುತ್ತಿದೆ ಬುಲ್‍ಬುಲ್ ತೆರೆದ ಬೋಳು ಜಮೀನಿನಲ್ಲಿ ಸಂಜೆ ಬಲೂನುಗಳು ಹಾರುತ್ತವೆ ಶ್ರಮಿಕ ಜನರ ಕೂಗುಗಳು ಮನೆಗೆ ಮರಳುತ್ತಿವೆ. ಕ್ಷಿತಿಜದವರೆಗಿನ ಸಾಸಿವೆ ಹೊಲಗಳು ಗುಲಾಬಿ ಹಾಗೂ ತಾಜಾ ಗೋದಿಯದು ಮಹಲಿನ ಮರಗಳ ಮೇಲೆ ಹಕ್ಕಿಗಳ ಹಾಡು ವಿಚಿತ್ರ ದಣಿವು ತುಂಬಿದೆ ಮನೆಗಳಲ್ಲಿ ಗುಡಿಸಲುಗಳಲ್ಲಿ ಹಳ್ಳಿಯ ಅಡವಿಗಳು ಸುಗಂಧಿತವಾಗುವ ಸಮಯ ಬಂದಿದೆ. ಈ ಕವನದಲ್ಲಿ ಯುದ್ಧ ಎಲ್ಲಿದೆ? ಬಡಿದಾಟದ ಗುರುತೂ ಅಲ್ಲಿಲ್ಲ. ಆದರೆ ಇದರಲ್ಲಿಯೇ ಕವನದ ಯಶಸ್ಸಿನ ಗುಟ್ಟು ಇದೆ. ಇದರರ್ಥ : ಇಲ್ಲಿ ಸೃಜನಶೀಲ ಪ್ರತಿಭೆಯು ಯುದ್ಧದ ವಿಚಾರಕ್ಕೆ ಅಧೀನವಾಗುವುದನ್ನು ನಿರಾಕರಿಸಿದೆ. ಒಂದು ರೀತಿಯಲ್ಲಿ ಇದು ಯುದ್ಧದ ವಿರುದ್ಧವಾದ ಸೃಜನಶೀಲ ಗೆಲುವಿನ ಸಂದೇಶ. ನಾನು ಮುನೀರ ನಿಯಾಜಿಯವರನ್ನು ಪ್ರಶಂಸಿಸುವುದರ ಜೊತೆಗೆ ನನಗೆ ನಾನೇ ನಾನು ಬರೆದ ಹಕ್ಕಿಗಳ ಕತೆಗಳ ಬಗೆಗೂ ಮೆಚ್ಚುಗೆಯನ್ನು ತಾಳಿದೆ. ಆದರೆ ಈ ಕತೆಗಳ ಓದುಗರೊಬ್ಬರು ಆ ಕತೆಯಿಂದ ಮತ್ತೇನೋ ಒಂದು ಅರ್ಥ ಹೊರಡಿಸಿದರು. ಅದನ್ನು ಅವರು ಸಾಂಕೇತಿಕ ಕತೆಯಾಗಿ ಓದಿದರು. ಮತ್ತು ನಮ್ಮ ಕಾಲದ ಮನುಷ್ಯ ಚಹರೆಯ ಸ್ಥಿತಿಯ ಪ್ರತಿಬಿಂಬವನ್ನು ಕಂಡರು. ಕತೆಯ ಈ ಪರಿಣಾಮವು ನನ್ನನ್ನು ಚಿಂತಿತನನ್ನಾಗಿ ಮಾಡಿತು. ನನ್ನೆಲ್ಲ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮವಾಯಿತು. ಅಂದರೆ ಇದರರ್ಥ ನಮ್ಮ ಕಾಲದ ಕೆಂಡಗಳು ಕತೆಯಲ್ಲಿ ಮತ್ತೆ ತಮ್ಮ ದಾರಿಯನ್ನು ಕಂಡುಕೊಂಡಿವೆ. ಕೊನೆಗೂ ನಾನು ಪಲಾಯನದ ಕತೆ ಬರೆಯುವಲ್ಲಿ ಸಫಲನಾಗಿದ್ದೇನೆಂದು ಭಾವಿಸಿದ್ದೆ. ಆ ಓದುಗನು ಕತೆಯನ್ನು ಈ ರೀತಿಯಲ್ಲಿ ಅರ್ಥೈಸಿ ಕೊಂಡಿದ್ದಾನೆಂದ ಮೇಲೆ, ನಾವು ಎಷ್ಟು ನಮ್ಮ ಕಾಲದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಕಾಲವು ನಮ್ಮ ಬೆನ್ನು ಬಿಡುವುದಿಲ್ಲವೆಂದೇ ತಿಳಿಯಬೇಕಾಗಿದೆ. ಏಳು ಮುಸುಕಿನ ಒಳಗೆ ಅಡಗಿ ಕೂತು ಕತೆ ಬರೆದರೂ, ಯುಗಮಾನದ ತಪ್ತಸ್ಥಿತಿಯು ಅಲ್ಲಿಗೂ ತಲುಪಿ ಕತೆಗೆ ಕಾವು ಕೊಡಬಲ್ಲುದು. ನಾನು ಮತ್ತೊಂದುಬಾರಿ ಶಹರಜಾದಳ ಕಡೆ ತಿರುಗಿದೆ. ಯಾವಕಡೆ ನೋಡಲಿ, ಯಾರನ್ನು ಕೇಳಲಿ? ಕತೆಯಲ್ಲಿ ಅಂತಿಮ ಅಕ್ಷರ ಶಹರಜಾದಳದೇ. ಕವಿಯ ಅಂತಿಮ ಗುರಿ ಫಿರದೌಸಿಯಾಗುವುದು. ಕತೆಗಾರನ ಅಂತಿಮ ಸಿದ್ಧಿ ಶಹರಜಾದಾ ಆಗುವುದು. ಈ ಚರಮಸೀಮೆಯನ್ನು ಬೇರಾರು ಕಂಡಿದ್ದಾರೆ? 80 ಕಥಾ ಸಂಸ್ಕೃತಿ ನಾನು ಹೇಗೆ ಈ ಗುರಿಯನ್ನು ಮುಟ್ಟಲಿ? ಆದರೆ ಬಯಸುವುದರಲ್ಲಿ ತಪ್ಪೇನಿದೆ? ಹಾಗಾದರೆ ಇದೇ ನಿಷ್ಠೆಯಲ್ಲಿ ಬರೆಯಲು ಕುಳಿತುಕೊಳ್ಳುತ್ತೇನೆ. ಆದರೆ ಅದೇ ಬಗೆಯ ಅಪೂರ್ಣ. ಅರೆಬರೆ ಕತೆ. ಈಗ ನನಗೆ ಇನ್ನೂ ಒಂದು ಯೋಚನೆ ಬಂದಿದೆ. ಯುಗಮಾನವು ನಿನ್ನ ಬೆನ್ನು ಬಿಡದಿದ್ದ ಮೇಲೆ ನೀನು ಓಡುವುದಾದರೂ ಎಲ್ಲಿಗೆ? ಅಂದಮೇಲೆ ಈಗ ಒಂದುಸಾರಿ ಈ ಕಹಿಗುಳಿಗೆ ನುಂಗಿಬಿಡು. ಅಂದರೆ ನಮ್ಮಕಾಲದಲ್ಲಿ ನಡೆಯುವ ಸಂಗತಿಗಳಿಂದ ನುಣುಚಿಕೊಳ್ಳಬೇಡ. ಮೊದಲು ಅದನ್ನೆಲ್ಲ ಒಪ್ಪಿಕೋ. ಆಮೇಲೆ ಬಹುಶಃ ಇದರಿಂದ ಬಿಡುಗಡೆಯ ದಾರಿಯೂ ದೊರೆಯಬಹುದು. ಸರಿ, ಹಾಗಾದರೆ ಹೀಗೇ ಆಗಲಿ. ಅದನ್ನೂ ಮಾಡಿ ನೋಡೋಣ. ನಾನೇನು ‘ಧರ್ಮಯುದ್ಧ’ ಮಾಡಬೇಕಾಗಿಲ್ಲ. ಕತೆಯನ್ನಷ್ಟೇ ಬರೆಯಬೇಕಾಗಿದೆ. ಬರೆಯಲು ಸಾಧ್ಯವಾದ ರೀತಿಯಲ್ಲಿ, ಸಾಧ್ಯವಾಗುವ ತನಕ, ರಾತ್ರಿಯೂ ಉಳಿದಿದೆ, ಕತೆಯೂ ಉಳಿದಿದೆ. ಎಲ್ಲಿಯವರೆಗೆ ನನ್ನಲ್ಲಿ ಶಕ್ತಿ ಇರುವುದೋ ಮುಂದುವರಿಯುತ್ತದೆ. ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 81 ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ - ಕುಬೇರನಾಥರಾಯ್ ಹೋಮರನ ಕಥಾಕೌಶಲದ ಒಂದು ನೋಟವನ್ನು ಪ್ರಸ್ತುತ ಪಡಿಸಲು ‘ಇಲಿಯಡ್’ ಮತ್ತು ‘ಓಡಿಸ್ಸಿ’ಯ ಕಥಾನಕವನ್ನು ಸರ್ಗಕ್ರಮವನ್ನು ಅನುಸರಿಸಿ ಸಂಕ್ಷಿಪ್ತವಾಗಿ ಈ ಮುಂದೆ ನೀಡಲಾಗಿದೆ. ಇಲಿಯಡ್ ಮಂಗಲಾಚರಣ : ಓ ಸರಸ್ವತೀ (ಮ್ಯೂಸ್), ಅಕಿಲಸ್‍ನ ಮಹಾಕ್ರೋಧವನ್ನು ವರ್ಣಿಸು. ಆ ಮಹಾಕ್ರೋಧದ ಕಾರಣವಾಗಿ ಹಾಗೂ ದೇವರಾಜನ ಇಚ್ಛೆಗನುಸಾರವಾಗಿ, ಅನೇಕ ಗ್ರೀಕರು ದುಃಖವನ್ನು ಅನುಭವಿಸಬೇಕಾಗಿ ಬಂದುದನ್ನು, ಅನೇಕ ಶೂರರು ತಮ್ಮ ಸುಂದರ ಶರೀರವನ್ನು ನಾಯಿ ಹದ್ದು ಕಾಗೆಗಳಿಗೆ ಔತಣವಾಗಿ ಬಿಟ್ಟು ಮರಣ ಹೊಂದಬೇಕಾಯಿತೆಂಬುದನ್ನು ವರ್ಣಿಸು. ಹೇ ದೇವಿ, ನೀನು ನನಗಾಗಿ ಆ ಕ್ರೋಧವನ್ನು ಹಾಡಾಗಿ ಹಾಡು. ಸರ್ಗ 1 : ಅಪೋಲೋನ ಪೂಜಾರಿಯ ಪುತ್ರಿ ಯುದ್ಧ ಕೈದಿಯ ರೂಪದಲ್ಲಿ ಸೇನಾಪತಿ ಅಗಮೆಮ್ನಾನ್‍ನ ಸೇವೆಯಲ್ಲಿ -ಅವಳ ವೃದ್ಧ ತಂದೆಯ ಆಗಮನ, ಮತ್ತು ಮಗಳ ಬದಲು ಹಣವನ್ನು ದಂಡವಾಗಿ ಕೊಡುವ ಪ್ರಸ್ತಾಪ ಮಾಡಿ ಮಗಳನ್ನು ಬೇಡಿದ್ದು - ಈ ಸುಂದರ ಕೆನ್ನೆಯ ಹುಡುಗಿಯ ಬಗೆಗೆ ಮುಗ್ಧನಾದ ರಾಜನು ಅವಳ ತಂದೆಯನ್ನು ತಿರಸ್ಕರಿಸಿ ಹೊರಹಾಕಿದ್ದು - ಪೂಜಾರಿಯ ಅಪಮಾನದಿಂದ ಬಿಲ್ಲುಧಾರಿ ದೇವತೆ ಅಪೋಲೋ ಸಿಟ್ಟಿಗೆದ್ದು ಬಾಣ ಹೂಡಿದ್ದು - ಅ ಉಜ್ವಲವಾದ ದೇವತೆಯ ರಜತಬಾಣ ಗ್ರೀಕ್ ಸೈನ್ಯ ಶಿಬಿರದ ಮೇಲೆ ಅದೃಶ್ಯ ರೂಪದಲ್ಲಿ - ಗ್ರೀಕ್ ಶಿಬಿರದಲ್ಲಿ ಘೋರ ಮಹಾಮಾರಿ - ಅಪೋಲೋ ಸಿಟ್ಟಿನ ವಿಚಾರವು ಸೈನ್ಯದಲ್ಲಿ ಪ್ರಚಾರವಾದದ್ದು - ದೊರೆ ಅಗಮೆಮ್ನಾನ್ ಬಳಿ ಪೂಜಾರಿಯ ಮಗಳನ್ನು ಹಿಂತಿರುಗಿಸುವಂತೆ ಅಕಿಲಸ್ 82 ಕಥಾ ಸಂಸ್ಕೃತಿ ತುಂಬ ಒತ್ತಾಯಿಸಿದ್ದು - ರಾಜನು ಮಹಾಯೋಧನಾದ ಅಕಿಲಸ್‍ನನ್ನು ತಿರಸ್ಕರಿಸಿ ಅಪಮಾನ ಮಾಡಿದ್ದು - ಅಗಮೆಮ್ನಾನ್ ಸುಂದರಿಯಾದ ಆ ಹುಡುಗಿಯನ್ನು ಹಿಂತಿರುಗಿಸಿ, ಅಕಿ¯ಸ್‍ನಿಗೆ ಯುದ್ಧದಲ್ಲಿ ಪಾರಿತೋಷಕ ರೂಪದಲ್ಲಿ ದೊರಕಿದ ಅವನ ಪ್ರೇಯಸಿ ದಾಸಿ ಬ್ರಿಸಿಸ್‍ಳನ್ನು ಬಲಾತ್ಕಾರವಾಗಿ ಒಯ್ದದ್ದು - ಅಪಮಾನ ಹಾಗೂ ಮನೋವೇದನೆಯಿಂದ ಅಕಿಲಸ್‍ನು ಯದ್ಧದಲ್ಲಿ ಪಾಲುಗೊಳ್ಳದಿರಲು ಪ್ರತಿಜ್ಞೆ ಮಾಡಿದ್ದು ದುಃಖ ಹಾಗೂ ಅಪಮಾನದಿಂದ ಪೀಡಿತನಾಗಿ ಕಣ್ಣೀರು ತುಂಬಿದ ಅಕಿಲಸ್ ಸಮುದ್ರ ದಂಡೆಯ ಮೇಲೆ ಕುಳಿತಿದ್ದು - ಅದೇ ಹೊತ್ತಿಗೆ ಸಮುದ್ರಗರ್ಭದಿಂದ ತೆರೆಗಳ ಮೇಲೆ ಕುಳಿತ ಅವನ ತಾಯಿ ಸಮುದ್ರಕನ್ಯೆ ಥೆಟಿಸ್ ತನ್ನ ಮಗನಿಗೆ ಆಶ್ವಾಸನೆಯಿತ್ತು, ಸ್ವರ್ಗದಲ್ಲಿಯ ದೇವರಾಜನಿಗೆ ಟ್ರೋಜನ್‍ರಿಗೆ ಸ್ವಲ್ಪಕಾಲದವರೆಗೆ ಗೆಲುವು ದೊರೆಯುವಂತೆ ಪ್ರಾರ್ಥನೆ ಮಾಡಿದ್ದು, ಮತ್ತು ಗ್ರೀಕರು ಅವಳ ಮಗನ ಬಳಿ ಬಂದು ಶರಣಾಗತರಾದದ್ದು - ಹೆರಾ ಅದನ್ನು ವಿರೋಧಿಸಿದ್ದು, ಆದರೆ ದೇವರಾಜನ ಒಂದು ಹುಬ್ಬಿನ ಸನ್ನೆಯಿಂದ ಹೆರಾ ಹಾಗೂ ಸ್ವರ್ಗವೆಲ್ಲವೂ ಸಂಕಟಗ್ರಸ್ತವಾದದ್ದು. ಸರ್ಗ 2 : ದೇವರಾಜನ ಮೂಲಕ ಪ್ರೇರಿತ ಗ್ರೀಕ್ ಸೇನಾಪತಿ ಅಗಮೆಮ್ನಾನ್‍ನಿಗೆ ಒಂದು ಮಿಥ್ಯಾಸ್ವಪ್ನ, ಆಕ್ರಮಣದ ಸಂದೇಶ ಹಾಗೂ ವ್ಯೂಹ ರಚನೆ. ಸರ್ಗ 3 : ಎರಡೂ ಸೈನ್ಯಗಳ ನಡುವೆ ಹೆಕ್ಟರ್‍ನಿಂದ ಪ್ರೇರಿತವಾದ ಮೆನಲಾಸ್‍ನಿಂದ ದ್ವಂದ್ವ ಯುದ್ಧಕ್ಕೆ ಆಹ್ವಾನ - ಹೆಲೆನ್ ದುಃಖಿತಳಾಗಿ ಕೋಟೆಯ ಶಿಖರದ ಮೇಲೆ ಬಂದದ್ದು - ಅಲ್ಲಿ ಕುಳಿತು ರಾಜ ಪ್ರಾಯಮ್‍ನಿಗೆ ಗ್ರೀಕ್ ಸೇನಾಪತಿಗಳ ಪರಿಚಯ ಮಾಡಿಕೊಟ್ಟದ್ದು - ಪ್ರಾಯಮ್ ಹಾಗೂ ಅಗಮೆಮ್ನಾನ್‍ರ ಸಂಯುಕ್ತ ಶಪಥ ಹಾಗೂ ದ್ವಂದ್ವ ಯುದ್ಧದ ಷರತ್ತುಗಳ ಮಾನ್ಯತೆ - ದೇವಿ ಎಥನಿ ಮೂಲಕ ಮೆನಲಾಸ್‍ನಲ್ಲಿ ಸ್ಫೂರ್ತಿ ತುಂಬಿದ್ದು ಹಾಗೂ ಪ್ಯಾರಿಸ್‍ಗೆ ಹೊಡೆತ - ದೇವಿ ಅಪ್ರೋದಿತಿ ಮೂಲಕ ಪ್ಯಾರಿಸ್‍ನ ಶರೀರದ ರಕ್ಷಣೆ ಹಾಗೂ ಪಲಾಯನ. ಸರ್ಗ 4 : ಯುದ್ಧಭೂಮಿಯಲ್ಲಿ ಎರಡೂ ಸೇನೆಗಳು ಶಾಂತವಾಗಿ ನಿಂತಿರುತ್ತವೆ. ಯುದ್ಧದಿಂದ ಟ್ರೋಜನ್‍ರ ವಿನಾಶ ಬಯಸುವ ಎಥನಿ ಪೆಂಡ್ರಸ್‍ನಿಂದ ಮೋಸದಿಂದ ಬಾಣ ಪ್ರಯೋಗವನ್ನು ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 83 ಮೆನಲಾಸ್ ಮೇಲೆ ಮಾಡಿ ಶಾಂತಿಯನ್ನು ಭಂಗಪಡಿಸುತ್ತಾಳೆ - ಭಯಂಕರ ಯುದ್ಧ ಪ್ರಾರಂಭ. ಸರ್ಗ 5 : ಎಥನಿ ಗ್ರೀಕ್ ಯೋಧನಾದ ಡಯೋಮಿಡಿಸ್‍ನಲ್ಲಿ ಬಲ ಪ್ರೇರಣೆಯನ್ನು ತುಂಬುವುದು ಹಾಗೂ ಅವನು ಭಯಂಕರವಾಗಿ ಯುದ್ಧ ಮಾಡುವುದು, ಎಥೆನಿಯ ಪ್ರಚೋದನೆಯಿಂದ ಟ್ರೋಜನ್ನರ ಸಹಾಯಕ ದೇವಿ ಅಪ್ರೋದಿತಿಯ ಮೇಲೆ ಪ್ರಹಾರ, ಯುದ್ಧದೇವತೆಯಾದ ಆರ್ಸ (ಮಾರ್ಸ)ಳ ಕ್ರೋಧ, ಅದೃಶ್ಯ. ಎಥನಿಯ ಸಹಾಯದಿಂದ ಡಯೋಮಿಡಿಸ್‍ನು ಆರ್ಸಳನ್ನೂ ಸೋಲಿಸುತ್ತಾನೆ. ಸರ್ಗ 6 : (ಮಹಾಕಾವ್ಯದ ಅತ್ಯಂತ ಹೃದಯಸ್ಪರ್ಶಿ ಭಾಗ) ಹೆಕ್ಟರ್ ಟ್ರೋಜನ್ನರ ಮರಣವನ್ನು ನೋಡಿ ಪತ್ನಿ ಎಂಟೊಮೆಸಿ (ಎಂಟೊಮೆಕಿ) ಯುದ್ಧದಿಂದ ವಿದಾಯ ಹೇಳುವುದು - ಕರುಣಾಯುಕ್ತವಾದ ಭಾಗ - ದೇವರಾಜ ಸ್ಯೂಸ್‍ನ ಸೂಚನೆಯಿಂದ ದೇವತೆ ಅಪೋಲೊ ಹೆಕ್ಟರ್‍ನನ್ನು ರಕ್ಷಿಸಲು ಹಾಗೂ ಪ್ರೇರಣೆ ನೀಡಲು ಉದ್ಯುಕ್ತನಾಗುವುದು. ಸರ್ಗ 7 : ಹೆಕ್ಟರ್ ಮತ್ತು ಎಜಾಕ್ಸರ ಯುದ್ಧ. ಸರ್ಗ 8 : ಭಾರೀ ಯುದ್ಧ - ಟ್ರೋಜನ್ನರ ಗೆಲವು - ಟ್ರೋಜನ್ ಸೈನ್ಯವು ಗ್ರೀಕರ ಶಿಬಿರದ ಗೋಡೆಯವರೆಗೆ ಬರುವುದು. ಸರ್ಗ 9 : ಅಕಿಲಸ್ ಯುದ್ಧದಲ್ಲಿ ಪಾಲುಗೊಳ್ಳಬೇಕೆಂದು ಗ್ರೀಕರಿಂದ ಪ್ರಾರ್ಥನೆ, ಮನವೊಲಿಸುವಿಕೆ, ಸೇನಾಪತಿಗಳ ಸೋಲು - ಮಹಾನ್ ಯೋಧರು ಗಾಯಾಳುವಾಗುವುದು - ಆದರೆ ಅಕಿಲಸ್ ತನ್ನ ಹಟಕ್ಕೆ ಅಂಟಿಕೊಂಡಿರುವುದು. ಸರ್ಗ 10 : ರಾತ್ರಿ ಗುಪ್ತಚರ ಅಲೆದಾಟ. ಓಡಿಸ್ಯೂಸ್ ಮತ್ತು ಡಯೊಮಿಡಿಸ್‍ರು ಶತ್ರು ಶಿಬಿರವನ್ನು ಪ್ರವೇಶಿಸಿ ಮಲಗಿದ ಅನೇಕ ವೀರರನ್ನು ಕೊಂದು ಹಾಕುವುದು, ಕುದುರೆಗಳ ಅಪಹರಣ. ಸರ್ಗ 11 : ಮರುದಿನ ಮತ್ತೆ ಘೋರ ಯುದ್ಧ - ಗ್ರೀಕ್ ಸೇನಾಪತಿಗಳಲ್ಲಿ ಅಗಮೆಮ್ನಾನ್, ಮೆನಲೊಸ್, ಡಯೊಮಿಡಿಸ, ಅಯೆಸ್, ಒಡಿಸ್ಯೂಸ್ ಎಲ್ಲರೂ ಗಾಯಾಳುವಾಗಿದ್ದು - ಪರಾಜಯ. ಸರ್ಗ12-13: ಯುದ್ಧ - ಹೆಕ್ಟರ್‍ನ ಗೋಡೆಯನ್ನು ಮುರಿದು ಗ್ರೀಕ್ ಹಡಗಿನ ಹತ್ತಿರ ಯುದ್ಧ. 84 ಕಥಾ ಸಂಸ್ಕೃತಿ ಸರ್ಗ 14 : ಟ್ರೋಜನ್ನರ ವಿಜಯದಿಂದ ಇಂದ್ರಾಣಿ ಹೆರಾಗೆ ದುಃಖ - ಅವಳು ಚೆನ್ನಾಗಿ ಸಿಂಗರಿಸಿಕೊಂಡು ತನ್ನ ಕಾಮಕಲೆಯಿಂದ ದೇವರಾಜನನ್ನು ಕಾಮ ಮೋಹಿತನನ್ನಾಗಿ ಮಾಡುವುದು - ಹೆರಾಳ ಸೌಂದರ್ಯದಿಂದ ದೇವತೆಯ ಹೃದಯ ಚಂಚಲವಾಗುವುದು - ಸ್ವರ್ಗದಲ್ಲಿ ಆಲಿಂಗನ. ಕೆಳಗೆ ಭೂಮಿಯಲ್ಲಿ ಒಮ್ಮಿಂದೊಮ್ಮೆಲೇ ಹೂ ಬಳ್ಳಿಗಳು ಕುಸುಮಿತವಾಗುವುದು, ಗಾಳಿ ಸುಗಂಧಿತವಾಗುವುದು - ಇತ್ತ ಸಂದರ್ಭ ಸಾಧಿಸಿ, ಗ್ರೀಕ ಪಕ್ಷದ ದೇವತೆ ಟ್ರೋಜನ್ನರನ್ನು ಸಂಹರಿಸುವುದು. ಸರ್ಗ 15 : ಉನ್ಮಾದ ಇಳಿದ ಮೇಲೆ ದೇವರಾಜನು ಹೆರಾಳ ಬಗೆಗೆ ಸಿಟ್ಟಾಗುವುದು. ಟ್ರೋಜನ್ನರಿಗೆ ವಿಜಯ ಪ್ರದಾನ, ಗ್ರೀಕ ಸೇನೆ ಸಂಕಟದಲ್ಲಿ, ಅಕಿಲಸ್‍ನ ಪ್ರಾಣಸ್ನೇಹಿತ ಪೆಟ್ರಾಕ್ಲಸ್ ಅಕಿಲಸ್‍ನ ಕವಚವನ್ನು ತೊಟ್ಟು ಯುದ್ಧಕ್ಕೆ ಬರುವುದು - ಜನರು ಅವನನ್ನು ಅಕಿಲಸ್‍ನೆಂದು ತಿಳಿದು ಭಯಭೀತರಾಗುವುದು. ಸರ್ಗ 16 : ಪೆಟ್ರಾಕ್ಲಸ್ ಭಯಂಕರವಾಗಿ ಯುದ್ಧ ಮಾಡುವುದು - ಟ್ರೋಜನ್ನರ ದೇವತೆ ಅಪೊಲೊ ಅದೃಶ್ಯವಾಗಿದ್ದು ಅವನನ್ನು ವಧಿಸುವುದು. ಸರ್ಗ 17 : ಅಕಿಲಸ್‍ನ ಕವಚಕ್ಕಾಗಿ ಭಾರೀ ಯುದ್ಧ - ಪೆಟ್ರಾಕ್ಲಸ್‍ನ ಶವಕ್ಕಾಗಿ ಎಳೆದಾಟ - ಕೊನೆಯಲ್ಲಿ ಕವಚವನ್ನು ಹೆಕ್ಟರ್ ಒಯ್ಯುತ್ತಾನೆ. (ಇಡೀ ಮಹಾಕಾವ್ಯದಲ್ಲಿ ಅನೇಕ ಸ್ಥಳಗಳಲ್ಲಿ ಪ್ರತಿಸ್ಪರ್ಧಿಯ ಮರಣದ ಅನಂತರ ಅವನ ರಥ, ಕುದುರೆ ಕವಚಗಳನ್ನು ದರೋಡೆ ಮಾಡುವುದು ಕಾಣುತ್ತದೆ). ಸರ್ಗ 18 : ಅಕಿಲಸ್‍ನಿಗೆ ತನ್ನ ಸ್ನೇಹಿತನ ಮರಣದ ಸಮಾಚಾರ ತಲುಪುವುದು. ತೀವ್ರವಾದ ಕರುಣೆ, ದುಃಖ ಹಾಗೂ ಸೇಡು ತೀರಿಸಿಕೊಳ್ಳುವ ಕ್ರೋಧ - ಸಿಟ್ಟು ಹಾಗೂ ದುಃಖದಿಂದ ವಿಕ್ಷಿಪ್ತನಾದ ಅಕಿಲಸ್‍ನಿಗೆ ಅವನ ತಾಯಿಯ ಆಶ್ವಾಸನೆ, ಸ್ವರ್ಗದಿಂದ ಅದ್ಭುತ ಕವಚ ಹಾಗೂ ಢಾಲುಗಳನ್ನು ಮಾಡಿಸಿ ತಂದುಕೊಡುವುದು. ಸರ್ಗ 19 : ತಮ್ಮೊಳಗಿನ ಭಿನ್ನಾಭಿಪ್ರಾಯದ ಅಂತ್ಯ - ಅಕಿಲಸ್ ಯುದ್ಧಕ್ಕೆ ಹೋಗುವುದು. ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 85 ಸರ್ಗ 20 : ಭಯಂಕರ ಯುದ್ಧ - ಎರಡೂ ಪಕ್ಷಗಳ ದೇವಗಣಗಳು ಮಾನವೀಯ ಶರೀರದಲ್ಲಿ ಪ್ರವೇಶಿಸಿ ಯುದ್ಧದಲ್ಲಿ ತೊಡಗುವುದು. ಸರ್ಗ 21 : ಅಕಿಲಸ್‍ನಿಂದ ಯುದ್ಧಭೂಮಿಯಲ್ಲಿ ಪ್ರಳಯವೇ ಉಂಟಾಗುವುದು, ರಕ್ಷಿಸಿ, ರಕ್ಷಿಸಿ ಎಂಬ ಕೂಗಿನಿಂದ ಆಗಸ ತುಂಬುವುದು, ಟ್ರಾಯ್‍ನಗರದ ಸಮೀಪದಲ್ಲಿ ಹರಿಯುವ ಜೆಂಥಮ್ ನದಿಯಲ್ಲಿ ಮುಂಡಗಳೇ ಮುಂಡಗಳು - ನದೀದೇವತೆಯ ಸಿಟ್ಟು, ಅಕಿಲಸ್‍ನೊಂದಿಗೆ ಯುದ್ಧ - ಅಕಿಲಸ್‍ನ ಪ್ರಾಣ ಸಂಕಟದಲ್ಲಿ - ಹೆರಾ ಮೂಲಕ ಅಕಿಲಸ್‍ನಿಗೆ ಬಲ ತುಂಬುವಿಕೆ - ನದಿದೇವತೆಯ ಸೋಲು. ಸರ್ಗ 22 : ಟ್ರೋಜನ್ನರ ಭಾರೀ ಪರಾಭವ, ಅಕಿಲಸ್ ಮತ್ತು ಹೆಕ್ಟರರ ದ್ವಂದ್ವಯುದ್ಧ, ದೇವರಾಜ ಸ್ಯೂಸ್ ಭಾರವಾದ ಹೃದಯದಿಂದ ಅನಿವಾರ್ಯವಾಗಿ ಹೆಕ್ಟರನ ಮರಣವನ್ನು ನಿರ್ಣಯಿಸುವುದು. ಅಕಿಲಸ್ ಹೆಕ್ಟರನನ್ನು ಕೊಲ್ಲುವುದು, ಮತ್ತು ಮೃತದೇಹವನ್ನು ಅಪಮಾನಿಸುವುದು.1 ಸರ್ಗ 23 : ಪೆಟ್ರಾಕ್ಲಸ್‍ನ ಶರೀರದ ದಹನಸಂಸ್ಕಾರ, ಅವನ ಚಿತೆಯ ಬಳಿ ಬಂದಿಗಳಾದ ಟ್ರೋಜನ್ನರನ್ನು ಕೊಲ್ಲುವುದು, ದಹನ ಸಂಸ್ಕಾರದೊಂದಿಗೆ ಕ್ರೀಡಾ ಸ್ಪರ್ಧೆ. ಸರ್ಗ 24 : ಅಕಿಲಸ್‍ನ ಬಳಿ ಪ್ರಾಯಮ್ ಬಂದು ಮಗನ ಶರೀರವನ್ನು ಕೇಳುವುದು. ಪ್ರಾಯಮ್‍ನನ್ನು ನೋಡಿದಾಗ ಅಕಿಲಸ್‍ನಿಗೆ ತನ್ನ ವೃದ್ಧ ತಂದೆಯ ನೆನಪಾಗುವುದು. - ಅಕಿಲಸ್‍ನ ಹೃದಯ ಕರಗುವುದು - ಶವ ಕೊಡುವುದು - ದಹನ ಸಂಸ್ಕಾರದವರೆಗೆ ಶಾಂತಿ ವ್ಯವಸ್ಥೆ - ಸಂಸ್ಕಾರ ಕಾರ್ಯದ ವರ್ಣನೆ. ಒಡಿಸ್ಸಿ ಮಂಗಲಾಚರಣ - ಓದೇವಿ, ನೀನು ಈ ಕುಶಲ ಮಾನವ ಓಡಿಸ್ಯೂಸ್‍ನ ಕತೆಯನ್ನು ಹೇಳುವ ಶಕ್ತಿಯನ್ನು ಕೊಡು. ಟ್ರಾಯ್ ಕೋಟೆಯನ್ನು ಕೆಡವಿದವನು, ಇಡೀ ವಿಶ್ವವನ್ನು ತಿರುಗಾಡಿದವನು, ವಿವಿಧ ಜಾತಿ - ನಗರಗಳನ್ನು ನೋಡಿದವನೂ, ಹಾಗೂ ಉಕ್ಕೇರಿದ ಸಮುದ್ರದ ತೆರೆಗಳ ಮೇಲೆ ಪ್ರಾಣ ರಕ್ಷಿಸಿಕೊಳ್ಳಲು ಹೋರಾಡಿದವನೂ ಆದ ಆತನ ಕತೆ ಹೇಳುವ ಶಕ್ತಿಯನ್ನು ಕೊಡು. 1.ಸ್ಯೂಸ್ ಕೂಡ ಸ್ವತಂತ್ರನಲ್ಲ. ಅವನೂ ನಿಯತಿಯ ನಿಯಮದಿಂದ ಬಂಧಿತನಾದವನು. ತನ್ನ ಮಗ ಶಾರ್ಪಿಡಾನ್‍ನಿಗೂ ಕೂಡ ಇಷ್ಟವಿಲ್ಲದಿದ್ದರೂ ಮರಣವನ್ನು ವಿಧಿಸಬೇಕಾಗುತ್ತದೆ. 86 ಕಥಾ ಸಂಸ್ಕೃತಿ ಸರ್ಗ 1 : (ಟ್ರಾಯ್ ಯುದ್ಧದ ಅನಂತರ ಹತ್ತು ವರ್ಷಗಳವರೆಗೆ ಯೋಧನಾದ ಓಡಿಸ್ಯೂಸ್ ವರುಣನ ಸಿಟ್ಟಿಗೆ ತುತ್ತಾಗಿ ಕಷ್ಟವನ್ನು ಸಹಿಸುತ್ತ, ಅಲೆಯುತ್ತ ಇದ್ದನು. ಈ ಕಷ್ಟಮಯ ಕಾಲದ ಅಂತಿಮ ಭಾಗದಿಂದ ಈ ಕತೆ ಪ್ರಾರಂಭವಾಗುತ್ತದೆ.) ಸ್ವರ್ಗ ಸಭೆಯಲ್ಲಿ ಎಥನಿ ದೇವರಾಜ ಸ್ಯೂಸ್‍ನನ್ನು ಪ್ರಾರ್ಥಿಸುವುದು, ಒಡಿಸ್ಯೂಸ್‍ನ ಪುತ್ರ ಟೆಲ್ಮೆಕಸ್‍ನ ಬಳಿಗೆ ಹಾಗೂ ಒಡಿಸ್ಯೂಸ್‍ನನ್ನು ತನ್ನ ಪ್ರೇಮಿಯ ರೂಪದಲ್ಲಿ ದ್ವೀಪದಲ್ಲಿ ಬಂದಿಯನ್ನಾಗಿ ಮಾಡಿಟ್ಟುಕೊಂಡ ಅಪ್ಸರೆ ಕೆಲಿಪ್ಸೊ ಬಳಿ ಟರ್ಮಿಸ್‍ನನ್ನು ಕಳಿಸಲು ದೇವರಾಜ ಸ್ಯೂಸ್ ಎಥನಿಯನ್ನು ಕಳಿಸುವುದು - ಓಡಿಸ್ಯೂಸ್‍ನ ಸಂಗಡಿಗರೆಲ್ಲ ಸಮುದ್ರದಲ್ಲಿ ಮುಳುಗಿ ಸತ್ತಿರುವುದರಿಂದ ಒಡಿಸ್ಯೂಸ್ ಒಬ್ಬಂಟಿಯಾಗಿ ದುಃಖವನ್ನು ಅನುಭವಿಸಬೇಕಾಗಿ ಬಂದಿರುವುದು - ಇತ್ತ ಅವನ ಪತ್ನಿ ಪೆನಲೋಪೆಯನ್ನು ಗ್ರೀಕ್ ಕುಮಾರರು ಪೀಡಿಸುತ್ತಿರುವುದು, ಒಡಿಸ್ಯೂಸ್‍ನ ಸಂಪತ್ತನ್ನು ವಿಲಾಸ ಮಾಡಿ ಹಾಳು ಮಾಡುತ್ತಿರುವುದು, ಮತ್ತು ಪೆನಲೂಪೆಯಲ್ಲಿ ಪ್ರಣಯನಿವೇದನೆ ಮಾಡಿಕೊಳ್ಳುತ್ತಿರುವುದು - ಟೆಲ್ಮೆಕಸ್ ಇನ್ನೂ ಶಿಶು. ಪೆನಲೊಪೆ ಅಸಹಾಯಕಳು, ಹೆಣ್ಣಾಗಿರುವುದು - ಎಥನಿ ಇಥೆಕಾ ನಗರಕ್ಕೆ ಹೋಗಿ ಟೆಲ್ಮೆಕಸ್‍ನನ್ನು ಗುಪ್ತವಾಗಿ ಗ್ರೀಕ್ ನಾಯಕರ ಬಳಿ ಕಳುಹಿಸಿ ಅವನ ತಂದೆಯು ಇರುವ ಸ್ಥಳವನ್ನು ಕೇಳಿ ತಿಳಿದುಕೊಳ್ಳಬೇಕೆಂದು ಹೇಳುವುದು. ಸರ್ಗ 2 : ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವ ಗ್ರೀಕ್ ಯುವಕರನ್ನು ತಮ್ಮ ತಮ್ಮ ಮನೆಗೆ ತೆರಳುವಂತೆ ಇಥೆಕಾ ನಗರದ ನಾಗರಿಕರು ಒತ್ತಾಯಪಡಿಸುವುದು, ಉದ್ವಿಗ್ನತೆ ಹಾಗೂ ಸಭಾ ಭಂಗ - ಒಡಿಸ್ಯೂಸ್‍ನ ಒಬ್ಬ ಮಿತ್ರನಾದ ಮೆಂಟರ್‍ನ ರೂಪ ಧರಿಸಿದ ಎಥನಿ ಟೆಲ್ಮೆಕಸ್‍ನೊಂದಿಗೆ ರಹಸ್ಯಯಾತ್ರೆಗೆ ಹೊರಡುವುದು - ಈ ಯಾತ್ರೆಯ ಸಂಗತಿಯು ಒಬ್ಬ ಮುದಿ ದಾದಿಗಲ್ಲದೆ ಅನ್ಯರಾರಿಗೂ ತಿಳಿಯದಿರುವುದು. ಸರ್ಗ 3 : ಟೆಲ್ಮೆಕಸ್ ವೃದ್ಧನಾದ ನೆಸ್ಟರ್‍ನನ್ನು ಭೇಟಿಯಾಗುವುದು - ಆದರೆ ಒಡಿಸ್ಯೂಸ್ ಬಗ್ಗೆ ಅಲ್ಲಿ ಯಾವ ಮಾಹಿತಿಯನ್ನು ತಿಳಿಯಲು ಸಾಧ್ಯವಾಗದಿರುವುದು. ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 87 ಸರ್ಗ 4 : ಮೆನಲೋಸ್ ಹಾಗೂ ಹೆಲೆನ್‍ರನ್ನು ಟೆಲ್ಮೆಕಸ್ ಭೇಟಿಯಾಗುವುದು - ಸುಖೀ ದಂಪತಿಗಳು - ಇತ್ತ ಇಥೆಕಾದಲ್ಲಿ ಗ್ರೀಕ್ ಕುಮಾರರಿಗೆ ಟೆಲ್ಮೆಕಸ್‍ನ ಪ್ರಯಾಣದ ವಿಷಯ ತಿಳಿದು ಅವನನ್ನು ಕೊಲ್ಲಲು ಒಂದು ಹಡಗುಪಡೆಯನ್ನು ಕಳಿಸುವುದು. ಸರ್ಗ 5 : ಎಥನಿಯ ಪ್ರಾರ್ಥನೆಯ ಮೇರೆಗೆ ಸ್ಯೂಸ್ ತನ್ನ ದೂತನನ್ನು ಕೆಲಿಪ್ಸೂ ಅಪ್ಸರೆಯ ಬಳಿ ಒಡಿಸ್ಯೂಸ್‍ನನ್ನು ತನ್ನ ಪ್ರೇಮಬಂಧನದಿಂದ ಮುಕ್ತಗೊಳಿಸುವ ಬಗ್ಗೆ ಹೇಳಿಕಳಿಸುವುದು - ಕೆಲಿಪ್ಸೂಳ ದುಃಖ ಭಾರವಾದ ಮನಸ್ಸಿನಿಂದ ಒಡಿಸ್ಯೂಸ್‍ನ ಯಾತ್ರೆಯ ವ್ಯವಸ್ಥೆ - ಒಡಿಸ್ಯೂಸ್ ಉಕ್ಕೇರಿದ ಸಮುದ್ರದ ಮೇಲೆ - ವರುಣನ ವಕ್ರದೃಷ್ಟಿ ಹಗೂ ಹಳೆಯ ಸಿಟ್ಟು ಇನ್ನಷ್ಟು ತೀವ್ರವಾಗುವುದು - ಒಡಿಸ್ಯೂಸ್‍ನ ಹಡಗು ಒಡೆಯುವುದು - ನಾಶವಾಗಲಿರುವ ಹಡಗು, ತೆರೆಗಳೊಂದಿಗೆ ಹೋರಾಟ ಒಡಿಸ್ಯೂಸ್ ತೆರೆಗಳ ಮೇಲೆ ಜಿಗಿದು ತೇಲುತ್ತ ತೇಲುತ್ತ ಅರ್ಧ ಚೇತನಾವಸ್ಥೆಯಲ್ಲಿ ದಡಕ್ಕೆ ತಲುಪುವುದು. ಸರ್ಗ 6 : ಆ ಸಮುದ್ರ ದಂಡೆಯಲ್ಲಿ ರಾಜಕುಮಾರಿ ನಾಸಿಕಾ ತನ್ನ ಗೆಳತಿಯರೊಂದಿಗೆ ಬಟ್ಟೆ ತೊಳೆಯಲು ಬಂದಿರುವುದು - ಒಡಿಸ್ಯೂಸ್‍ನಿಗೆ ಪ್ರಜ್ಞೆ ಬಂದಾಗ ಆ ಹುಡುಗಿಯನ್ನು ನೋಡುವುದು - ಅವಳ ಸೌಂದರ್ಯಕ್ಕೆ ಮನಸೋತು ಅವಳು ಯಾವುದೋ ಸ್ನೇಹಮಯಿ ದೇವತೆಯೆಂದು ಭಾವಿಸುವುದು - ನಾಸಿಕಾ ಒಡಿಸ್ಯೂಸ್‍ನನ್ನು ತನ್ನ ನಗರಕ್ಕೆ ಕರೆದೊಯ್ಯುವುದು. ಸರ್ಗ 7-8 : ಆ ದೇಶದ ರಾಜನಿಂದ ಒಡಿಸ್ಯೂಸ್‍ನ ಸ್ವಾಗತ, ಮರುದಿನ ರಾಜ ಸಭೆಯಲ್ಲಿ ಉತ್ಸವದ ಅಂಗವಾಗಿ ಚಾರಣರು ಅಫ್ರೋದಿತ ಹಾಗೂ ಆರ್ಸರ ಅನ್ಯಪ್ರೇಮವನ್ನು ಟ್ರಾಯ್ ನಗರಪತನವನ್ನು ಕುರಿತ ಗಾಯನವನ್ನು ಹಾಡುವುದು - ಓಡಿಸ್ಯೂಸ್‍ನಿಗೆ ತನ್ನ ಸಂಗಡಿಗರ ನೆನಪು ಮರುಕಳಿಸಿ ಅವನ ಕಣ್ಣಲ್ಲಿ ನೀರು ಬರುವುದು - ಕಾರಣ ಕೇಳಿದಾಗ ತನ್ನ ಪರಿಚಯವನ್ನು ಒಡಿಸ್ಯೂಸ್ ಮಾಡಿಕೊಡುವುದು, ಅಲ್ಲದೆ ತನ್ನ ದುಃಖದ ಕತೆಯನ್ನೆಲ್ಲ ಹೇಳಿಕೊಳ್ಳುವುದು. 88 ಕಥಾ ಸಂಸ್ಕೃತಿ ಸರ್ಗ 9 : ಒಡಿಸ್ಯೂಸ್ ಹೇಳುತ್ತಾನೆ - ಟ್ರಾಯ್ ಯುದ್ಧ ಮುಗಿದು ನಾವು ಮನೆಗೆ ಮರಳುವಾಗ, ದಾರಿಯಲ್ಲಿ ಸೆಕೊನಿಸ್‍ರ ಮೇಲೆ ಆಕ್ರಮಣ ಮಾಡಿ ಸೋತೆವು. ಒಂಬತ್ತು ಹಗಲು, ಒಂಬತ್ತು ರಾತ್ರಿ ಒಂದೇ ಸಮನೆ ಉತ್ತರದ ಗಾಳಿಯ ಹೊಡೆತದಿಂದ ನಮ್ಮ ಯುದ್ಧ ನೌಕೆಯು ದಾರಿಬಿಟ್ಟು ತುಂಬ ದೂರ ಸರಿದುಹೋಯಿತು. - ಕೊನೆಯಲ್ಲಿ ನಾವು ಲೋಟಸ್‍ಗಳ ದೇಶಕ್ಕೆ ತಲುಪಿದ್ದೆವು - ಈ ಲೋಟಸ್ ಎಂಬ ಒಂದು ಮಧುರ ವನಸ್ಪತಿಯನ್ನು ತಿನ್ನುವುದರಿಂದ ನಮ್ಮ ನಾವಿಕರು ಘೋರ ಪ್ರಮಾದದಲ್ಲಿ ಸಿಲುಕಿದ್ದರಿಂದ ಬಲಾತ್ಕಾರದಿಂದ ಅವರನ್ನು ಎಳೆದುಕೊಂಡು ಹಡಗಿನ ಮೇಲೆ ಏರಿಸಿಕೊಳ್ಳಲಾಯಿತು. ಮುಂದೆ ನಾವು ಒಂಟಿಕಣ್ಣುಳ್ಳವರ ದೇಶಕ್ಕೆ ಹೋದೆವು. ಅಲ್ಲಿ ನಮ್ಮ ಮೂರ್ಖತನದಿಂದ ಒಬ್ಬ ರಾಕ್ಷಸನ ಗುಹೆಯಲ್ಲಿ ಬಂಧಿತರಾದೆವು. ಅನಂತರ ಅವನಿಗೆ ಚನ್ನಾಗಿ ಮದ್ಯ ಕುಡಿಸಿ, ಅವನ ಕಣ್ಣುಗಳನ್ನು ಕಟ್ಟಿಗೆಯ ತುಂಡಿನಿಂದ ಒಡೆದು ಬಿಟ್ಟವು. ಬೆಳಿಗ್ಗೆ ಅವನು ತನ್ನ ಗುಹಾದ್ವಾರವನ್ನು ತೆರೆದು ಕುರಿಗಳನ್ನು ಹೊರಗೆ ಹೋಗಲು ಬಿಡುವಾಗ ನಾವು ಹೊರಗೆ ಬಂದೆವು. ಈ ರಾಕ್ಷಸನು ಸಮುದ್ರ ಹಾಗೂ ಭೂಕಂಪದ ಅಧಿಪತಿಯಾದ ವರುಣನ ಮಗನಾಗಿದ್ದನು. ಇದರಿಂದಾಗಿ ವರುಣನು ನಮ್ಮ ಮೇಲೆ ಸಿಟ್ಟಾದನು. ಸರ್ಗ 10 : ಅನಂತರ ಮತ್ತೆ ಯಾತ್ರೆ ಪ್ರಾರಂಭವಾಯಿತು. ಇಯೋಲಿಯಸ್ ದ್ವೀಪದ ನಿವಾಸಿಗಳಿಂದ ಆತಿಥ್ಯ. ಲಾಸ್ಟ್ರೆಜಿಯನ್ (ಅಸುರಾಕಾರ) ಮಾನವರ ದೇಶದಲ್ಲಿ - ಅಲ್ಲಿಂದ ಪಲಾಯನ. ಸೂರ್ಯದೇವತೆ ಹಾಗೂ ಸಮುದ್ರಕನ್ಯೆಯಿಂದ ಜನಿಸಿದ ಅಪ್ಸರೆ ಸರ್ಸಿಯ ಕಾಮದ್ವೀಪದಲ್ಲಿ - ಅದರ ದಡದಲ್ಲಿನ ವನದಲ್ಲಿ ಸರ್ಸಿಯ ಪ್ರಮದ ವನ, ಸಮ್ಮೋಹನ ಅರಮನೆ, ಅಲ್ಲಿಗೆ ಅಲೆಯುತ್ತ ಬಂದ ಅನೇಕ ಯೋಧರು ರಾಜಕುಮಾರರನ್ನು ಪಶುರೂಪದಲ್ಲಿ ಪರಿವರ್ತನೆಗೊಳಿಸಿ ಸರ್ಸಿಯು ತನ್ನ ಬಯಕೆ ಈಡೇರಿಸಿಕೊಳ್ಳಲು ಬಂದಿಯನ್ನಾಗಿ ಮಾಡಿ ಇಟ್ಟುಕೊಂಡಿದ್ದಳು - ಆದರೆ ಹರ್ಮಿಜ್ ಮೂಲಕ ನನಗೆ ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 89 ಈ ರಹಸ್ಯ ತಿಳಿದಿತ್ತು. ಮತ್ತು ಈ ದೇವತೆಯಿಂದ ನೀಡಲಾದ ಮೂಲಿಕೆಯಿಂದಾಗಿ ಸಂಮೋಹನ ಶಕ್ತಿಯಿಂದಾಗಿ ಮುಕ್ತಿ ಸಿಕ್ಕಿತು. ನನ್ನ ಬೆದರಿಸುವಿಕೆಯಿಂದ ಸರ್ಸಿಯು ನನ್ನ ಜೊತೆಗಿನ ಶೂರರನ್ನು ಸಂಮೋಹನದಿಂದ ಬಿಡುಗಡೆಗೊಳಿಸಿದಳು. ಆದರೂ ಸರ್ಸಿಯೊಂದಿಗೆ ಒಂದು ವರ್ಷಕಾಲ ಸುಖಭೋಗ- ಅನಂತರ ಆಕೆ ಭಾರವಾದ ಹೃದಯದಿಂದ ನನ್ನನ್ನೂ ನನ್ನ ಸೈನಿಕರನ್ನೂ ಬಿಡುಗಡೆಗೊಳಿಸಿದಳು - ದಾರಿಯ ವೆಚ್ಚ ಕೊಟ್ಟು ಮುಂದೆ ಹೋಗಬೇಕಾದ ದಾರಿಯನ್ನು ತಿಳಿಸಿದಳು ; ನಾನು ಯಮಲೋಕಕ್ಕೆ (ಪಾತಾಳ, ಹೆಡಿಸ್) ಹೋಗಬೇಕು, ಅಲ್ಲಿ ಟೈರಿಸಿಯಸ್ (ಭವಿಷ್ಯದರ್ಶಿ)ನಿಂದ ನನ್ನ ಮುಂದಿನ ಭವಿಷ್ಯವನ್ನು ಹಿಂತಿರುಗುವ ಮಾರ್ಗವನ್ನು ಕೇಳಬೇಕು. ಮೊದಲು ನಾನು ದಕ್ಷಿಣದತ್ತ ಹೊರಡಬೇಕು. ಹೋಗುತ್ತಿರುವಾಗ ಅತಿ ಭಯಂಕರವಾದ ಪರ್ವತ ಯಾತ್ರೆಯ ಅನಂತರ ಪರ್ಸಿಫೋನ್‍ದ ವನ ಸಿಗುವುದು - ಅಲ್ಲಿಂದ ಮುಂದಿನ ಯಮಲೋಕದಿಂದ ಹೆರಾಕ್ಲಿಸ್‍ನನ್ನು ಬಿಟ್ಟರೆ ಬೇರಾವ ಮಾನವನೂ ಹಿಂತಿರುಗಲಿಲ್ಲ. ಅಲ್ಲಿಂದ ಮುಂದೆ ಉರಿಯುವ ಅಗ್ನಿಯ ನದಿ ಹಾಗೂ ಕಣ್ಣೀರಿನ ನದಿಯ ಸಂಗಮವಿದೆ. ಅಲ್ಲಿ ನಾನು ಟೈರಿಯಾನನ್ನು ಅನಂತರ ಅನ್ಯ ಮೃತಾತ್ಮಗಳನ್ನು ಭೇಟಿಮಾಡಿ ಟಗರಿನ ರಕ್ತದಿಂದ ಅಘ್ರ್ಯವನ್ನು ಕೊಡಬೇಕು, ಮತ್ತು ನನ್ನ ದಾರಿಯ ಬಗೆಗೆ ತಿಳಿದುಕೊಳ್ಳಬೇಕು - ಈ ವಿಷಯಗಳನ್ನು ಸರ್ಸಿಯು ಹೇಳಿದಳು. ಎಲ್ಲ ಮಾತುಗಳನ್ನು ಕೇಳಿದ ಮೇಲೆ ನನ್ನ ನಾವಿಕರು ಧೈರ್ಯಗುಂದಿದರು. ಭಯದಿಂದ ಅವರ ಮೋರೆ ಬಿಳುಪೇರಿತು. ನಾನು ಧೈರ್ಯ ಹೇಳಿದ ಮೇಲೆ ಯಾತ್ರೆ ಪ್ರಾರಂಭ ಮಾಡಿದರು. ಸರ್ಗ 11 : ನಾನು ಮೃತಾತ್ಮಗಳ ದೇಶಕ್ಕೆ ಹೋದೆ. ಅಲ್ಲಿ ಟೈರೀಸಿಯಾಳಿಗೆ ಟಗರಿನ ರಕ್ತವನ್ನು ಅಘ್ರ್ಯವಾಗಿ ಕೊಟ್ಟು ಮುಂದಿನ ಮಾರ್ಗದ ರೂಪುರೇಷೆಗಳನ್ನೂ, ವಿವಿಧ ಅಪಾಯಗಳನ್ನು ತಿಳಿದುಕೊಂಡೆ. ಥ್ರಿನೆಸಿ ದ್ವೀಪದಲ್ಲಿ ಮೇಯುವ ಆಕಳುಗಳನ್ನು ಮುಟ್ಟಬಾರದಾಗಿ ವಿಶೇಷ ರೂಪದಲ್ಲಿ ಎಚ್ಚರಿಕೆ ಕೊಟ್ಟಳು. 90 ಕಥಾ ಸಂಸ್ಕೃತಿ ನನ್ನ ತಾಯಿಯ ಆತ್ಮ, ನನ್ನೊಂದಿಗೆ ಟ್ರಾಯ್ ರಣರಂಗದಲ್ಲಿ ಯುದ್ಧಮಾಡಿದ ಯೋಧರ ಹಾಗೂ ಪ್ರಾಚೀನಪುರುಷರ ನೆರಳಿನಂತಹ ಆತ್ಮಗಳು ನನ್ನ ಕಣ್ಣೆದುರು ಬಂದವು. ಅಗಮೆಮ್ನಾನನ ಹೆಂಡತಿಯು ಅವನ ಅನುಪಸ್ಥಿತಿಯಲ್ಲಿ ಜಾರನನ್ನು ಇಟ್ಟುಕೊಂಡಿದ್ದು, ತನ್ನ ಪುತ್ರಿಯನ್ನು ಬಲಿಕೊಟ್ಟದ್ದರ ಸೇಡಿಗೆ ಹೇಗೆ ಅವನನ್ನು ಕೊಲೆಮಾಡಿಸಿದಳೆಂಬುದನ್ನು ಅಗಮೆಮ್ನಾನ್ ಹೇಳಿದನು. ಅಯೆಸ್‍ನ ಆತ್ಮವು ಇನ್ನೂ ತನ್ನ ಸಿಟ್ಟನ್ನು ಮರೆತಿರಲಿಲ್ಲ. ಅವನು ಮೌನವಾಗಿ ಮುಖ ತಿರುವಿದನು. ಅಕಿಲಸ್‍ನ ಮರಣದ ಅನಂತರ ಅವನ ಕವಚವನ್ನು ನಮಗೆ ಕೊಡಲಾಯಿತು. ಶೂರ ಅಯೆಸ್ ಇದನ್ನು ತನ್ನ ಅವಮಾನವೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಪ್ಯಾರಿಸ್‍ನ ರೂಪದಲ್ಲಿದ್ದ ಅಪೊಲೋ ಸಂಧಾನಿಸಿದ ಬಾಣವು ಕಾಲಿನ ಹಿಂಬದಿಗೆ ತಾಗಿ ಸತ್ತ ಅಕಿಲಸ್ (ಯಾಕೆಂದರೆ ಅವನ ಉಳಿದ ಇಡೀ ಶರೀರ ಅಭೇದ್ಯವಾಗಿತ್ತು) ಯುದ್ಧದ ಅನಂತರದ ಸಂಗತಿಗಳನ್ನು ನನ್ನಿಂದ ಕೇಳಿದ. ಅವನ ಮರಣದ ಅನಂತರ ಮೋಸದಿಂದ ನಾವು ಟ್ರಾಯ್‍ನ್ನು ನಾಶ ಮಾಡಿದ್ದನ್ನು ಹೇಳಿದೆನು. ಸಮುದ್ರ ದಂಡೆಯ ಮೇಲೆ ಕಟ್ಟಿಗೆಯ ದೊಡ್ಡ ಕುದುರೆಗಳ ಮೂರ್ತಿಗಳಲ್ಲಿ ನಾನು ಹಾಗೂ ಆಯ್ದ ಕೆಲವು ಯೋಧರು ಅಡಗಿದ್ದೆವು. ಯುದ್ಧನೌಕೆಯನ್ನು ಮರಳಿಸಿಕೊಂಡು ಹೋಗುವ ನಾಟಕವಾಡಿದೆವು. ಮೂರ್ಖ ಟ್ರೋಜನ್ನ್‍ರು ಆಟಕ್ಕಾಗಿ ಆ ಮರದ ಕುದುರೆಗಳನ್ನು ನಗರಕ್ಕೆ ಕೊಂಡೊಯ್ದು, ಆಮೋದ-ವಿಲಾಸಗಳಲ್ಲಿ ಮುಳುಗಿ ಗಾಢ ನಿದ್ರೆಯಲ್ಲಿದ್ದಾಗ, ಆ ಭಯಂಕರ ರಾತ್ರಿಯಲ್ಲಿ ನಾವು ಆ ಕುದುರೆಗಳಿಂದ ಹೊರಬಿದ್ದು ನಗರದ ಹೆಬ್ಬಾಗಿಲನ್ನು ತೆರೆದೆವು. ಅಷ್ಟುಹೊತ್ತಿಗೆ ನಮ್ಮ ಯುದ್ಧದ ಹಡಗು ಮರಳಿ ಬಂದಿತ್ತು. ನಾವು ಮಲಗಿರುವ ಶತ್ರುಗಳನ್ನು ಕ್ರೂರವಾಗಿ ಸಂಹರಿಸಿ ಟ್ರಾಯ್ ನಗರವನ್ನು ಧ್ವಂಸಗೊಳಿಸಿದೆವು - ಎಂಬುದನ್ನು ಹೇಳಿದೆ. ತನ್ನಮಗ ಪಿರಸ್‍ನು ವೃದ್ಧನಾದ ಪ್ರಾಯಮ್ ಹಾಗೂ ಟ್ರೋಜನ್ನರನ್ನು ಸಂಹರಿಸಿದನೆಂದು ಕೇಳಿ ಅಕಿಲಸ್‍ನಿಗೆ ಸಂತೋಷವಾಯಿತು. ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 91 ಸರ್ಗ 12 : ಟೈರೆಸಿಯಾ ಹೇಳಿದ ದಾರಿಯಲ್ಲಿ ನಾವು ಯಾತ್ರೆಯನ್ನು ಪ್ರಾರಂಭಿಸಿದೆವು. ಅಲ್ಲಿಂದ ಹಿಂತಿರುಗಿ ಮತ್ತೆ ಸರ್ಸಿಯ ಬಳಿ ಬಂದೆವು. ಆ ಅಪ್ಸರೆಯು ನಮ್ಮ ಮುಂದಿನ ಪ್ರಯಾಣದ ಬಗ್ಗೆ ಕೆಲ ಸಂಗತಿಗಳನ್ನು ಹೇಳಿದಳು. ಅವಳು ಹೇಳಿದಂತೆ ನಮ್ಮ ನೌಕೆಯು ಮೊದಲು ಜಲಕನ್ಯೆಯರ ದ್ವೀಪಕ್ಕೆ ಹೋಯಿತು. ಈ ಜಲಕನ್ಯೆಯರು ನೀರೊಳಗಿನ ಬಂಡೆಯ ಮೇಲೆ ಕುಳಿತು ಮೋಹಕವಾಗಿ ಸಂಗೀತವನ್ನು ಹಾಡುತ್ತಾರೆ. ನಾವಿಕರು ಅದರಿಂದ ಮುಗ್ದರಾಗಿ ಅವರತ್ತ ಆಕರ್ಷಿತರಾಗುತ್ತಾರೆ. ಆದರೆ ದಾರಿಯಲ್ಲಿನ ಬಂಡೆಗೆ ಅಪ್ಪಳಿಸಿ ಅವರ ನಾವೆಯು ಚೂರು ಚೂರಾಗುತ್ತದೆ. ಜಲಸಮಾಧಿ ಹೊಂದುತ್ತದೆ. ಇವರು ಆ ಮೋಸಗಾರ್ತಿ ಸುಂದರಿಯರ ಜಾಲದಲ್ಲಿ ಸಿಕ್ಕು ಪ್ರಾಣ ಕಳೆದುಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ನಡೆಯುವ ಸಂಗತಿ. ನಾನು ಮೊದಲೇ ನನ್ನನ್ನು ನಾವೆಯ ಕೂವೆ ಕಂಬಕ್ಕೆ ಗಟ್ಟಿಯಾಗಿ ಬಿಗಿದುಕೊಂಡಿದ್ದೆ. ನಾವಿಕರ ಕಿವಿಗಳಲ್ಲಿ ಮೇಣವನ್ನು ತುಂಬಿಸಿದ್ದೆ. ನಾನು ಆ ಕನ್ಯೆಯರ ಸ್ವರ ಕೇಳಿ ತಡೆಯಲಾರದೆ ನೀರಿನಲ್ಲಿ ಹಾರಿಕೊಳ್ಳುವವನಿದ್ದೆನಾದರೂ ನನ್ನನ್ನು ಕಟ್ಟಿಹಾಕಿಕೊಂಡಿದ್ದರಿಂದ ಬಚಾವಾಗಿ ಆ ಅಪಾಯವನ್ನು ದಾಟಿ ಬೇರೊಂದು ಅಪಾಯದ ಕಡೆ ಹೋದೆ. ಅದಕ್ಕೆ “ಸಿಲಾ ಮತ್ತು ಚೆರಿಬ್ಡಿಸ್‍ನ ಜಲಮಾರ್ಗ”1 ಎಂದು ಕರೆಯುತ್ತಾರೆ. ದೂರದಿಂದಲೇ ಆರುಮುಖದ ನಾಯಿ ರಾಕ್ಷಸಿ ಸಿಲಾಳ ಹಗುರವಾದ ಬೊಗಳುವಿಕೆ ಕೇಳುತ್ತಿತ್ತು. ಹತ್ತಿರದಲ್ಲಿಯೇ ಪಾತಾಳಗಾಮಿಯಾದ ಭಯಂಕರವಾಗಿ ಕುದಿಯುವ ನೀರಿನ ವರ್ತುಳವಿತ್ತು. ಇನ್ನೊಂದು ಕಡೆ ಈ ಎರಡರ ನಡುವೆ ಅತ್ಯಂತ ಸಂಕೀರ್ಣವಾದ ಮಾರ್ಗವಿತ್ತು. ಅ ಸಮಯದಲ್ಲಿ ನೀರಿನ ಸುಳಿಯು ಪಾತಾಳಗಾಮಿಯಾಗಿದ್ದರಿಂದ, ನಾವು ನೌಕೆಯನ್ನು ಇನ್ನೊಂದು ದಡದ ಸಮೀಪ ಒಯ್ಯುವುದೇ ಯೋಗ್ಯವೆಂದು ಭಾವಿಸಿದೆವು. ನಮ್ಮ ನೌಕೆಯು ಬಾಣದ ಹಾಗೆ ಮುಂದುವರಿಯಿತಾದರೂ, ಆ ಕಂದರದ ನಡುವೆಯೇ ಕತ್ತು 1.ಮಿಲ್ಟನ್ ಹಾಗೂ ಡಾಂಟೆ ಕೂಡ ತಮ್ಮ ಮಹಾಕಾವ್ಯಗಳಲ್ಲಿ ಈ ಜಲಪಥದ ಉಲ್ಲೇಖ ಮಾಡಿದ್ದಾರೆ. 92 ಕಥಾ ಸಂಸ್ಕೃತಿ ಮೇಲೆತ್ತಿದ ಆ ರಾಕ್ಷಸೀ ನಾಯಿಯು ನನ್ನ ಆರುಜನ ಸಂಗಡಿಗರನ್ನು ಸೆಳೆದುಕೊಂಡಿತು. ಅದು ಅವರನ್ನು ಅಗಿದು ತಿನ್ನುವಾಗ ಅವರ ಮರ್ಮಭೇದಿಯಾದ ನರಳುವಿಕೆ ಇನ್ನೂ ನನ್ನ ಕಿವಿಗಳಲ್ಲಿ ಮೊಳಗುತ್ತಿದೆ. ಈವರೆಗೆ ಇಲ್ಲಿ ಹೋದವರಾರೂ ಮರಳಲೇ ಇಲ್ಲ. ಅನಂತರ ನಾವು ಸೂರ್ಯನ ದ್ವೀಪಕ್ಕೆ ಹೋದೆವು. ಅಲ್ಲಿ ದೇವತೆಯ ಪವಿತ್ರ ಹಸುಗಳು ಮೇಯುತ್ತಿದ್ದವು. ಸೌಭಾಗ್ಯವಶಾತ್ ಅಲ್ಲಿ ದಕ್ಷಿಣದ ಗಾಳಿಯ ಹೊಡೆತದಿಂದ ನಾವೆಯು ತಿಂಗಳುಗಟ್ಟಲೆ ಅಲ್ಲೇ ನಿಲ್ಲಬೇಕಾಯಿತು. ಹಸಿವಿನಿಂದ ಪೀಡಿತರಾದ ನನ್ನ ಕೆಲವು ಸಂಗಾತಿಗಳು ಅಲ್ಲಿನ ಕೆಲವು ಹಸುಗಳನ್ನು ತಿಂದುಬಿಟ್ಟರು. ಸೂರ್ಯದೇವತೆ ಅತ್ಯಂತ ಸಿಟ್ಟಾಗಿ ಹಸಿರುತುಂಬಿದ ಭೂಮಿ ಹಾಗೂ ಸ್ವರ್ಗದಲ್ಲಿ ಪ್ರಕಾಶಿಸುವ ಬದಲಾಗಿ ಪಾತಾಳಕ್ಕೆ ಹೋಗಿ ಇದ್ದು ಬಿಡುವುದಾಗಿ ಬೆದರಿಕೆ ಹಾಕಿದನು. ದೇವರಾಜ ಸ್ಯೂಸ್‍ನು ಅವನ ಸಂತೋಷಕ್ಕಾಗಿ ಸಮುದ್ರದಲ್ಲಿನ ನಮ್ಮ ನೌಕೆಯ ಮೇಲೆ ವಜ್ರದಿಂದ ಹೊಡೆದನು. ನಮ್ಮ ಎಲ್ಲ ನಾವಿಕರು ಹಾಗೂ ನೌಕೆಯು ನೀರಿನಲ್ಲಿ ಮುಳುಗಿಹೋಯಿತು. ನಾನೊಬ್ಬ ಹೇಗೋ ತೇಲುತ್ತ ಇದ್ದೇನೆ. ನನ್ನ ಜೀವ ಮುರುಟಿಹೋಯಿತು. ಟೆರಿಬ್ಡಿಸ್‍ನ ಕಡೆ ಮುಂದುವರಿದೆ. ಅದೃಷ್ಟವಶಾತ್ ಅಂಜೂರದ ಮರದ ಟೊಂಗೆಯೊಂದು ಕೈಗೆ ಬಂತು, ನಾನು ಟೊಂಗೆಯನ್ನು ಅಪ್ಪಿಕೊಂಡೆ. ಅಲ್ಲದೇ ನನ್ನ ಕೈಯಲ್ಲಿನ ಹಾಯಿ ಅರಿವೆಯಿಂದಾಗಿ ನಾನು ಸುಳಿಯಲ್ಲಿ ಸಿಕ್ಕು ಪಾತಾಳಕ್ಕೆ ಹೋದರೂ ತುಸು ಸಮಯದ ಅನಂತರ ಮತ್ತೆ ಮೇಲೆ ಚಿಮ್ಮುವ ನೀರಿನ ಆವರ್ತದಿಂದಾಗಿ ಹೊರಗೆ ತಳ್ಳಲ್ಪಟ್ಟೆ. ಹಾಗೆಯೇ ತೇಲುತ್ತ ತೇಲುತ್ತ ಸುಂದರರೂಪದ ಡಾಕಿನಿ ಕೆಲಿಪ್ಸೊ ಅಪ್ಸರೆಯ ದ್ವೀಪದ ಸಮೀಪ ಬಂದೆ, ಅಲ್ಲಿ ಕೆಲ ಕಾಲವಿದ್ದ ಮೇಲೆ ನನಗೆ ಆ ಡಾಕಿನಿಯಿಂದ ಮುಕ್ತಿ ಸಿಕ್ಕಿತು. ನಾನು ತೆಪ್ಪ ತಯಾರಿಸಿಕೊಂಡು ಸಮುದ್ರದಲ್ಲಿ ಮುನ್ನಡೆದೆ. ಆದರೆ ವರುಣನ ಸಿಟ್ಟಿನಿಂದಾಗಿ ಆ ತೆಪ್ಪವೂ ನಾಶವಾಯಿತು. ಅನಂತರ ನಾನು ತೇಲುತ್ತ ತೇಲುತ್ತ ಅರೆಜೀವವಾಗಿ ಈ ದಡಕ್ಕೆ ಬಂದು ಬಿದ್ದೆ.” ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 93 ಸರ್ಗ 13 : ಒಡಿಸ್ಯೂಸ್‍ನ ಕತೆಯನ್ನು ಕೇಳಿ ಆ ರಾಜನು ಅವನ ಪ್ರಯಾಣದ ವ್ಯವಸ್ಥೆ ಮಾಡಿದ್ದು- ಒಡಿಸ್ಯೂಸ್ ಅನೇಕ ದಿನಗಳ ಅನಂತರ ತನ್ನ ದೇಶಕ್ಕೆ ಬಂದು ನೋಡಿದಾಗ ಗುರುತು ಹತ್ತದ್ದು- ಎಥನಿ ಮೂಲಕ ಸಲಹೆ ಹಾಗೂ ಸಹಾಯ. ಸರ್ಗ14-18 : ಒಡಿಸ್ಯೂಸ್ ಮೊದಲು ತನ್ನ ಪಶುಗಳ ಕೊಟ್ಟಿಗೆಯಲ್ಲಿ ರಾತ್ರಿಯಿಡೀ ಅಪರಿಚಿತವಾಗಿ ಇದ್ದುದು. ಅದೇ ಸಮಯದಲ್ಲಿ ಮೆನಲೋಸ್ ಕಡೆಯಿಂದ ಅವನ ಮಗ ಟೆಲ್ಮೆಕಸ್ ಕೂಡ ಹಿಂತಿರುಗುವುದು-ಮೂವರಲ್ಲಿಯೂ ಪರಿಚಯವಾಗಿ ಮೂವರೂ ಸ್ಥಿತಿಯ ಬಗೆಗೆ ವಿಚಾರ ಮಾಡುವುದುದುಷ್ಟರಾದ ಗ್ರೀಕ್ ಕುಮಾರರನ್ನು ಕೊಲ್ಲುವ ಯೋಜನೆ - ಬೆಳಿಗ್ಗೆ ಭಿಕ್ಷುಕನ ವೇಷದಲ್ಲಿ ಒಡಿಸ್ಯೂಸ್ ತನ್ನ ಅರಮನೆ ಪ್ರವೇಶಿಸುವುದು. ಸರ್ಗ19-20 : ವೃದ್ಧ ದಾಯಿಯು ಒಡಿಸ್ಯೂಸ್‍ನನ್ನು ಗುರುತು ಹಿಡಿಯುವುದು, ಅವಳಿಗೆ ಸುಮ್ಮನಿರುವಂತೆ ಒಡಿಸ್ಯೂಸ್‍ನಿಂದ ಕಠಿಣವಾದ ಆಜ್ಞೆ - ಪೆನೆಲೊಪಿಗೂ ತುಸುವೂ ತಿಳಿಯದಿರುವುದುದುಷ್ಟ ಕುಮಾರರ ಉಪಟಳ ಹಾಗೂ ಒಡಿಸ್ಯೂಸ್‍ನಿಗೆ ಅಪಮಾನ ಮಾಡುವುದು. ಸರ್ಗ 21 : ಎಥನಿಯು ಪೆನೆಲೊಪೆಯ ಸ್ವಯಂವರಕ್ಕೆ ಸಲಹೆ ಮಾಡುವುದು, ಒಡಿಸ್ಯೂಸ್‍ನ ವಿಶಾಲವಾದ ಬಿಲ್ಲನ್ನು ಹೆದೆಯೇರಿಸಬಲ್ಲವನನ್ನು ಅವಳು ವರಿಸುತ್ತಾಳೆ- ಈ ಸೂಚನೆ ಕೇಳಿ ಅನೇಕ ಕುಮಾರರು ಬಿಲ್ಲನ್ನು ಹೆದೆಯೇರಿಸಲು ಪ್ರಯತ್ನಿಸಿ ವಿಫಲರಾಗುವುದು - ಭಿಕ್ಷುಕನಾದ ಒಡಿಸ್ಯೂಸ್ ಇವೆಲ್ಲವನ್ನು ನೋಡಿ ಬಿಲ್ಲನ್ನು ಕೊಡಲು ಕೇಳುವುದು- ಕುಮಾರರು ತಿರಸ್ಕಾರಪೂರ್ವಕ ಮೋಜೆಂದು ಬಿಲ್ಲನ್ನು ಕೊಡುವುದು - ಒಡಿಸ್ಯೂಸ್ ತನ್ನ ಮಗನಿಗೆ ಸಂಕೇತ ಮಾಡುವುದು. ಸರ್ಗ 22 : ಬಾಗಿಲು ಮುಚ್ಚುವುದು - ಶಾಂತಿ ಭಂಗದ ಹಿನ್ನೆಲೆಯಲ್ಲಿ ಟೆಲ್ಮೆಕಸ್‍ನು ಕುಮಾರರ ಶಸ್ತ್ರಗಳನ್ನೆಲ್ಲ ತೆಗೆದಿರಿಸಿದ್ದು- ಅನಂತರ ನಿರ್ದಯವಾಗಿ ಅವರನ್ನೆಲ್ಲ ಕೊಂದದ್ದು. 94 ಕಥಾ ಸಂಸ್ಕೃತಿ ಸರ್ಗ 23 : ಪತಿ-ಪತ್ನಿಯರ ಭೇಟಿ. ಪೆನೆಲೊಪೆ ತನ್ನ ಗಂಡನ ಗುರುತು ಹಿಡಿಯುವುದು ಇಬ್ಬರೂ ಪ್ರೀತಿಯಿಂದ ಅಳುವುದು. ಸರ್ಗ 24 : ದುಷ್ಟ ಕುಮಾರರ ಆತ್ಮಗಳು ಯಮಲೋಕದಲ್ಲಿ - ಅವರ ಸಂಬಂಧಿಗಳು ಯುದ್ಧದ ಯೋಜನೆ ಮಾಡುವುದು, ಯುದ್ಧ ಪ್ರಾರಂಭವಾಗುವ ಮುನ್ನವೇ ದೇವೀ ಎಥನಿಯ ಭಯಂಕರ ಉದ್ಘೋಷವನ್ನು ಕೇಳಿ ಶತ್ರುಗಳು ಭಯಪಡುವುದು- ಕೊನೆಯಲ್ಲಿ ಶಾಂತಿ ಹಾಗು ಸಂಧಿ. ಹೋಮರನ ಕಥಾ ಕೌಶಲ ನಾವು ಈ ಮೊದಲು ಎರಡೂ ಮಹಾಕಾವ್ಯಗಳ ಕಥಾನಕವನ್ನು ವಿಶ್ಲೇಷಿಸಿದ್ದೇವೆ. ಈಲಿಯಡ್‍ನ ಕಥಾನಕವು ಸುಮಾರು 50 ದಿನಗಳದು - ಹತ್ತನೆಯ ವರ್ಷದ ಅಂತಿಮ ಎರಡು ತಿಂಗಳ ನಡುವೆ ನಡೆಯುವ ಘಟನೆಗಳು. ಕಥಾನಕವು ಮೊದಲಿನಿಂದ ಪ್ರಾರಂಭವಾಗುವುದಾದರೆ ಆ ಲೀಡಾ ಮತ್ತು ಹಂಸದ ಸಂಯೋಗದಿಂದ ಪ್ರಾರಂಭವಾಗಬೇಕಾಗಿತ್ತು. ಆದರೆ ಹೋಮರ್ ಕಥೆಯ ಅಂತಿಮಭಾಗವನ್ನು ಎತ್ತಿಕೊಳ್ಳುತ್ತಾನೆ. ನಡುನಡುವೆ ಪೂರ್ವದ ಕತೆಯನ್ನು ಸೂಚಿಸುತ್ತ ಹೋಗುತ್ತಾನೆ. ಅದೂ ಒಂದು ಕ್ರಮದಿಂದ ಅಲ್ಲ, ಗ್ರೀಕ್‍ನ ಶ್ರೋತೃಗಳಿಗೆ ಕತೆ ಮೊದಲಿನಿಂದ ಗೊತ್ತಿರುವುದೇ ಆಗಿದೆ. ಆದ್ದರಿಂದ ಅವರಿಗೆ ತಿಳಿಯಲು ಯಾವ ಕಷ್ಟವೂ ಆಗುವುದಿಲ್ಲ. ಇಲ್ಲವಾದರೆ ಒಬ್ಬ ಅಪರಿಚಿತ ವ್ಯಕ್ತಿಗೆ ಕತೆಯ ಪ್ರಥಮ ಭಾಗವು ಸ್ಪಷ್ಟವಾಗುವದು ಒಂದು ಬಾರಿ ಅವನು ಸಂಪೂರ್ಣ ಕಾವ್ಯವನ್ನು ಓದಿದ ಮೇಲೆಯೇ. ಈಲಿಯಡ್‍ನ ಗಮನಾರ್ಹ ಇನ್ನೊಂದು ಅಂಶವೆಂದರೆ ಮಂಗಲಾಚರಣದಲ್ಲಿಯೇ ವಿಷಯವು ಸ್ಪಷ್ಟವಾದಂತೆ ಅದು ಅಕಿಲಸ್‍ನ ಕ್ರೋಧದ ಗಾನ. ಅವನ ಈ ಸಿಟ್ಟು ಚರಮ ಸೀಮೆಯನ್ನು ತಲುಪಿ ಸಮಾಪ್ತವಾಗುವುದು. ಇದಕ್ಕಿಂತ ತುಸು ಮುಂದೆ, ಅವನ ಕ್ರೋಧದ ಪ್ರತ್ಯಕ್ಷ ಫಲವಾಗಿ ಪೆಟ್ರಾಕ್ಲಸ್‍ನ ಮರಣ, ಅಪ್ರತ್ಯಕ್ಷ ಫಲವಾಗಿ ಹೆಕ್ಟರ್‍ನ ಮೃತ್ಯುವಿನವರೆಗೆ ಮುಂದುವರಿದು ಕತೆಯು ಸಮಾಪ್ತವಾಗುತ್ತದೆ. ಆದರೆ ಅಕಿಲಸ್‍ನ ಮೃತ್ಯು, ಟ್ರಾಯ್ ಧ್ವಂಸ ಮುಂತಾದವು ಈ ಕಾವ್ಯದಲ್ಲಿ ಬರುವುದಿಲ್ಲ. ಹೋಮರ್ ತನ್ನ ಮಹಾಕಾವ್ಯದಲ್ಲಿ ಘೋಷಿತ ವಿಷಯದ ಬಗೆಗೆ ತುಂಬ ತೀಕ್ಷ್ಣವಾಗಿ ‘ಟು ದಿ ಪಾಯಿಂಟ್’ ಅಂಟಿಕೊಂಡಿರುತ್ತಾನೆ. ತುಸುವೂ ಆಚೀಚೆ ಹೋಗುವುದಿಲ್ಲ. ಈ ಬಲವಾದ ಸಂಯಮದ ಪರಿಣಾಮವೇ ಕತೆಯ ಅಥವಾ ವಿಷಯದ ಐಕ್ಯ (ಯುನಿಟಿ ಆಫ್ ಆ್ಯಕ್ಷನ್). ಪ್ರತಿಯೊಂದು ಘಟನೆಯೂ ಸಮಗ್ರ ವಿನ್ಯಾಸದ ಒಳಗಡೆ ಕಟ್ಟಲಾದ ಆಂಗಿಕ ಸಂಗತಿಗಳೊಂದಿಗೆ ಅಡಕವಾಗಿ ಕೂತಿರುತ್ತದೆ. ಭಾರತೀಯ ಮಹಾಕಾವ್ಯಗಳಲ್ಲಿ ಇದೇ ಏಕತೆ ಮತ್ತು ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 95 ಸಂಗತಿಯ ಅಭಾವವಿರುತ್ತದೆ. ಮತ್ತು ಇಡೀ ಚೌಕಟ್ಟು ಸಡಿಲವಾದ ಕಥಾವ್ಯವಸ್ಥೆಯೊಂದಿಗೆ ಮುಗಿಯುತ್ತದೆ. ವಾಲ್ಮೀಕಿ ರಾಮಾಯಣದ ವಿಷಯ ರಾವಣ ವಧೆ. ಆದರೆ ಅದರೊಳಗಿನ ಘಟನೆಗಳು ಬಹಳ ಸಡಿಲವಾದ ಸೂತ್ರಗಳಿಂದ ಸೇರಿವೆ. ಮಹಾಭಾರತದಲ್ಲಿಯಂತೂ ಈ ಐಕ್ಯ ಇಲ್ಲವೇ ಇಲ್ಲ. ಅದನ್ನು ವಿಶ್ವಕೋಶದ ಶೈಲಿಯಲ್ಲಿ ಬರೆಯಲಾಗಿದೆ. ತುಲಸೀದಾಸರ ರಾಮಚರಿತ ಮಾನಸದಲ್ಲಿ ಅವಶ್ಯವಾಗಿ ಈ ಗಟ್ಟಿಯಾದ ಏಕತೆ ಮತ್ತು ಆಂಗಿಕ ಸಂಗತಿ ಹೋಮರ್‍ನಂತೆಯೇ ಕಾಣಸಿಗುತ್ತದೆ. ವಿಷಯದ ಏಕತೆ ಮತ್ತು ಪ್ರಭಾವಾನ್ವಿತಿಯ (ಯನಿಟಿ ಆಫ್ ಇಂಪ್ರೆಶನ್) ದೃಷ್ಟಿಯಿಂದ ಯಾವುದೇ ಭಾರತೀಯ ಕವಿ - ಅವನು ಕಾಳಿದಾಸನೇ ಆಗಿರಬಹುದು - ತುಳಸೀದಾಸರನ್ನು ಸರಿಗಟ್ಟಲಾರ. ಈ ಮಾತನ್ನು ಇಲ್ಲಿ ಅಭಿಧಾರ್ಥದಲ್ಲಿ ಬರೆಯಲಾಗಿದೆ. ಹೋಮರ್‍ನು ಅಕಿಲಸ್‍ನ ಕ್ರೋಧ ಹಾಗೂ ಅದರ ವಿಕಾಸದ ಪ್ರತಿಫಲವನ್ನು 9 ಸರ್ಗಗಳಲ್ಲಿ ವಿವರಿಸುತ್ತಾನೆ. ಕತೆಯನ್ನು ಅದರ ಪ್ರತ್ಯಕ್ಷ - ಅಪ್ರತ್ಯಕ್ಷ ಫಲಗಳವರೆಗೆ ಒಯ್ದು ಮುಗಿಸುತ್ತಾನೆ. ಅವನು ಮುಂದಿನ ಘಟನೆಯನ್ನು ಅಕಿಲಸ್‍ನ ಮರಣ - ಟ್ರಾಯ್ ಧ್ವಂಸದ ವರೆಗೆ ವರ್ಣನೆ ಮಾಡುವ ಪ್ರಲೋಭನೆಗೆ ಸಿಲುಕಿದ್ದರೆ ಕಾವ್ಯದಲ್ಲಿ ಕತ್ತರಿಸಿದ ಗಟ್ಟಿ ಚೌಕಟ್ಟಿನ ಏಕತೆ ಬರುತ್ತಿರಲಿಲ್ಲ. ಅದರ ರಚನೆ (ಸ್ಟ್ರಕ್ಚರ್) ಸಡಿಲವಾಗುತ್ತಿತ್ತು. ಅರಿಸ್ಟಾಟಲ್ ತನ್ನ ‘ಪೊಯೆಟಿಕ್ಸ್’ನ ಅಧ್ಯಾಯಗಳಲ್ಲಿ ಹೋಮರನ ಪ್ರತಿಭೆಯನ್ನು ಪ್ರಶಂಸಿಸಿದ್ದಾನೆ. ಹೋಮರನದೇ ಅನುಕರಣೆಯ ಆದರ್ಶವನ್ನು ಪರಿಗಣಿಸಲು ಹೇಳಿದ್ದಾನೆ. ಅವನು ಅಲ್ಲಿ ತ್ರಯೈಕ್ಯ (ದೇಶ, ಕಾಲ, ಹಾಗೂ ವಿಷಯ)ದ ಹಾಗೂ ಪ್ರಭಾವಾನ್ವಿತಿಯ ಚರ್ಚೆ ಮಾಡುತ್ತಾನೆ. ಗ್ರೀಕ್ ಸಾಹಿತ್ಯದಲ್ಲಿ ರೂಪ (ಛಂದ-ಫಾವರ್i)ಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಈ ರೂಪ ವಿಧಾನದ ಜ್ಯಾಮಿತಿಕ ಸಂಗತಿಯು (ಜಾಮೆಟ್ರಿಕಲ್ ಸಿಮೆಟ್ರಿ) ಅವರ ಮೂರ್ತಿಕಲೆ, ನಾಟ್ಯಕಲೆ ಮುಂತಾದ ಎಲ್ಲದರಲ್ಲಿಯೂ ಸ್ಪಷ್ಟsವಾಗಿದೆ. ಅವರು ರೂಪಕ್ಕೆ ಭಾವಾನುಭೂತಿ ಹಾಗೂ ಅಲಂಕಾರಗಳಿಗಿಂತ ಕಡಿಮೆ ಮಹತ್ವವನ್ನು ಕೊಡಲಿಲ್ಲ. ಈ ಪ್ರವೃತ್ತಿಯು ಹೋಮರ್‍ನಲ್ಲಿ ಬೀಜರೂಪವಾಗಿ ಮಾತ್ರವಲ್ಲ, ಅದರ ಸರ್ವೋತ್ತಮ ರೂಪವು ಹೋಮರ್‍ನಲ್ಲಿಯೇ ದೊರೆಯುತ್ತದೆ. ಈಲಿಯಡ್‍ನಲ್ಲಿ ಸಂಪೂರ್ಣ ‘ಆ್ಯಕ್ಷನ್’ ವೃತ್ತಾಕಾರವಾಗಿದೆ ಪ್ರಾರಂಭವಾಗಿರುವಲ್ಲಿಗೇ ಮರಳಿ ಬಂದು ಮುಕ್ತಾಯಗೊಳ್ಳುತ್ತದೆ. ಗ್ರೀಕ್ ಟ್ರಾಜಿಡಿಗಳಿಗೆ ರೂಪ ಹಾಗೂ ಭಾವಭೂಮಿಯನ್ನು ಒದಗಿಸಿದ ಸಂಸ್ಕಾರವೇ ಗ್ರೀಕರ ಜಾತೀಯ ನಿಧಿಯಾಗಿದೆಯಷ್ಟೇ ಅಲ್ಲ, ಅವೇ ಹೋಮರನ ಪ್ರತಿಭೆಯಲ್ಲಿ ಕೂಡ ಪ್ರಾಣ ಪ್ರತಿಷ್ಠಾಪನೆ ಮಾಡುತ್ತವೆ. ಇದರಿಂದಾಗಿಯೇ ಹೋಮರ್ ಹಾಗೂ ಕಾಲಾಂತರದ ಟ್ರೆಜಡಿ ಸಾಹಿತ್ಯದಲ್ಲಿ ರಚನಾಗತ (ಸ್ಟ್ರಕ್ಚರಲ್) ಮತ್ತು ಭಾವಗತ (ಇಮೋಶನಲ್) ಸಮಾನತೆಯಿದೆ. ಗ್ರೀಕ್ ಟ್ರೆಜಡಿಯ ಸ್ಟ್ರಕ್ಚರನ್ನು - ಒಂದು 96 ಕಥಾ ಸಂಸ್ಕೃತಿ ದೇಶ - ಒಂದು ಕಾಲ - ಒಂದು ವಿಷಯ ಇವು ಮೂರೇ ತತ್ವಗಳು ನಿಯಂತ್ರಿಸುತ್ತವೆ. ಈಲಿಯಡ್‍ನಲ್ಲಿ ‘ದೇಶ’ವು ಒಂದೇ ಆಗಿದೆ, ಅರ್ಥಾತ್ ಎಲ್ಲ ಘಟನೆಗಳು ಟ್ರಾಯ್‍ನ ಮಹಲುಗಳಲ್ಲಿ ಹಾಗೂ ಎದುರಿನ ಸಮುದ್ರ ದಡದಲ್ಲಿ ನಡೆಯುತ್ತವೆ. ಕಾಲವೂ ಒಂದೇ ಆಗಿದೆ. ಯಾಕೆಂದರೆ ಮಹಾಕಾವ್ಯದ ಘಟನಾಸೂತ್ರವು ನಿರಂತರ 50 ದಿನಗಳ ಅವಧಿಯದು. ಅಂದರೆ ಕಾಲದ ಒಂದು ಅಖಂಡ ರೂಪವನ್ನು ಕೊಡಲಾಗಿದೆ. ಕಾವ್ಯ ವೃತ್ತವನ್ನು 10 ವರ್ಷಗಳ ಪಾತಾಳಿಯಲ್ಲಿ ಹರಡದೆ 50 ದಿನಗಳೊಳಗೇ ಅಡಕಗೊಳಿಸಲಾಗಿದೆ, ವ್ಯಾಪಾರ ಅಥವಾ ವಿಷಯವೂ ಕೂಡ ಒಂದೇ. ಅಕಿಲಸ್‍ನ ಕ್ರೋಧ, ಅದರ ಶಮನ, ಉಪಸಂಹಾರ ರೂಪದಲ್ಲಿ ಅದರ ಫಲ. ಸರಿ, ಇಲ್ಲಿಗೆ ಮಹಾಕಾವ್ಯ ಸಮಾಪ್ತವಾಗುತ್ತದೆ. ಓಡಿಸಿಯ ವಿಷಯ ವಿಸ್ತಾರವಾದದ್ದು. ಮಹಾಕಾವ್ಯದ ನಾಯಕ ಒಡಿಸ್ಯೂಸ್ ಟ್ರಾಯ್ ಯುದ್ಧದ ಅನಂತರ 10 ವರ್ಷಗಳವರೆಗೆ ಅಲೆಯುತ್ತಿದ್ದ. ಈ ದಶಕದ ಅಂತಿಮಭಾಗದಿಂದಲೇ ಈ ಕತೆಯೂ ಪ್ರಾರಂಭವಾಗುತ್ತದೆ. ರಚನೆ ಸಂಪೂರ್ಣ ಈಲಿಯಡ್‍ನಂತೆಯೇ. ಈಲಿಯಡ್‍ನ 50 ದಿನಗಳ ಘಟನೆಯಲ್ಲಿ ವರ್ತಮಾನಕ್ಕೆ ಪ್ರಾಧಾನ್ಯ. ಆ 50 ದಿನಗಳಲ್ಲಿ ಏನು ನಡೆಯಿತು ಅದನ್ನು ವರ್ಣಿಸುವುದೇ ಕವಿಯ ಉದ್ದೇಶ. ದಾರಿಯಲ್ಲಿ ನಡೆಯುವಾಗಿನ ಚರ್ಚೆಯಂತೆ ಅಲ್ಲಲ್ಲಿ ಪೂರ್ವ ಘಟನೆಗಳು ಬರುತ್ತವೆ. ಆದರೆ ಓಡಿಸಿಯಲ್ಲಿ ಹೀಗಲ್ಲ. ಓಡಿಸಿಯ ವಿಷಯವೇ ‘ಓಡಿಸ್ಯೂಸ್‍ನ ದುಃಖಮಯ ಪಯಣ’. ಅದ್ದರಿಂದ ಹತ್ತು ವರ್ಷಗಳ ಭ್ರಮಣ ವೃತ್ತಾಂತವೇ ಇದರ ಉದ್ದೇಶ. ಈಲಿಯಡ್‍ನಂತೆಯೇ ಅದು ದಶಕದ ಕೊನೆಯಲ್ಲಿ ಪ್ರಾರಂಭವಾಗುತ್ತದೆ. ಆದರೆ ಅದರ ಉದ್ದೇಶವು ವರ್ತಮಾನಕ್ಕಿಂತ ಹೆಚ್ಚಾಗಿ ಗತಕಾಲದೊಂದಿಗೆ ಸಂಬಂಧಿಸಿದ್ದು. ಇದಕ್ಕಾಗಿ ಹೋಮರ್ ಆಧುನಿಕ ಫಿಲ್ಮ್‍ನ ಫ್ಲ್ಯಾಶ್‍ಬ್ಯಾಕ್ ತಂತ್ರವನ್ನು ಬಳಸುತ್ತಾನೆ. ಮಹಾಕಾವ್ಯ ಪ್ರಾರಂಭವಾಗುವುದು 10 ನೆಯ ವರ್ಷದಲ್ಲಿ. ಒಡಿಸ್ಯೂಸ್ ಅಪ್ಸರೆ ಕೆಲಿಪ್ಸೊಳ ದ್ವೀಪದಿಂದ ಯಾತ್ರೆ ಪ್ರಾರಂಭಿಸುತ್ತಾನೆ. ಅವನ ಒಡೆದ ಹಡಗು ಮುಳುಗುತ್ತದೆ. ಅವನು ನಾಸಿಕಾಳ ದೇಶಕ್ಕೆ ತೇಲಿಬಂದು, ಅಲ್ಲಿನ ರಾಜನಿಗೆ ತನ್ನ 9 ವರ್ಷಗಳ ದೀರ್ಘ ಕತೆಯನ್ನು ಸರ್ಗ 9 ರಿಂದ 12 ರವರೆಗೆ ಹೇಳುತ್ತಾನೆ. ಪೂರ್ವಸ್ಮೃತಿ ತಂತ್ರ (ಫ್ಲ್ಯಾಶ್‍ಬ್ಯಾಕ್ ಟೆಕ್ನಿಕ್) ಇದೇ 9 ರಿಂದ 12 ನೇ ಸರ್ಗಗಳಲ್ಲಿದೆ. ಆದರೆ ಈ ಪೂರ್ವಸ್ಮೃತಿಯ ಗರ್ಭದಲ್ಲಿ ಅಂತಃಪೂರ್ವಸ್ಮೃತಿ ಇದೆ. - ಹನ್ನೊಂದನೆ ಸರ್ಗದಲ್ಲಿ ಅವರು ಅಕಿಲಸ್‍ನಿಗೆ ಟ್ರಾಯ್ ಯುದ್ಧದ ಕತೆಯ ಉಳಿದ ಭಾಗವನ್ನು ಹೇಳುತ್ತಾನೆ. ಓಡಿಸಿಯ ಕಾಲ ಸಂಘಟನೆ ತುಂಬ ಜಟಿಲವಾದದ್ದು. ‘ವರ್ತಮಾನ’ದ ಗರ್ಭದಲ್ಲಿ ‘ಪೂರ್ವ’, ಪೂರ್ವದ ಗರ್ಭದಲ್ಲಿ ‘ಅಂತಃಪೂರ್ವ’ ಇವೆ. ಸಮಗ್ರ ಕಾಲ ಬಂಧ (ಟೈಮ್ ಅರೇಂಜಮೆಂಟ) ಕ್ಕೆ ‘ಮುಕುಲ ಪತ್ರ ಬಂಧ’ ದ ಸಂಕೇತವನ್ನು ಆದಿಕತೆಯ ಸ್ರೋತ ಹೋಮರ್ : ‘ಇಲಿಯಡ್’ ಮತ್ತು ‘ಒಡೆಸ್ಸಿ’ 97 ನೀಡಬಹುದಾಗಿದೆ. ಮೊಗ್ಗಿನ ಪಕಳೆಗಳ ಪಂಕ್ತಿಯ ಒಳಗಡೆ ಇನ್ನೊಂದು ಪಂಕ್ತಿ, ಇನ್ನೊಂದರ ಒಳಗಡೆ ಮತ್ತೊಂದು ಪಂಕ್ತಿ ಇರುತ್ತದೆ. ಅದೇ ರೀತಿ ಓಡಿಸಿಯ ಕಾಲಬಂಧ ಇದೆ. ಈ ಕಾಲ ವ್ಯವಸ್ಥಾಪನೆ ಇನ್ನಷ್ಟು ಪೇಚಿನದಾಗುವುದಕ್ಕೆ ಕಾರಣವೆಂದರೆ ಓಡಿಸಿಯ ‘ದೇಶ’ ಒಂದಲ್ಲದಿರುವುದು. ಓಡಿಸಿಯ ವಿಷಯ ‘ಭಯಂಕರ ಸಮುದ್ರ ಪಯಣ ಹಾಗೂ ಗುಹಾಗಮನ’ ಆದ್ದರಿಂದ ವಿಷಯದ ಕೇಂದ್ರ ಎರಡಾಗುತ್ತವೆ. ಮೊದಲನೆಯದು ಪೆನಲೊಪೆ ನಿರೀಕ್ಷೆ ಮಾಡುತ್ತ ಕುಳಿತಿರುವ ಇಥೆಕಾ, ಒಡಿಸ್ಯೂಸ್‍ನ ಹೆಂಡತಿ ಮಕ್ಕಳನ್ನು ಅಲ್ಲಿ ಶತ್ರುಗಳು ಸುತ್ತುವರಿದಿದ್ದಾರೆ. ಎರಡನೆಯದು ಒಡಿಸ್ಯೂಸ್ ಸ್ವಯಂ ಸಮುದ್ರದಲ್ಲಿ ತೇಲುತ್ತಿರುವ ಸ್ಥಿತಿ. ಈ ಎರಡು ದೇಶಗಳ ಘಟನೆಗಳು ಸರಿದು ಹೋಗುತ್ತವೆ - ಮಹಾನ್ ಸೂತ್ರಧಾರ ಸ್ಯೂಸ್ ಮೂಲಕ. ದೇಶದ ಏಕತೆ ಇಲ್ಲವಾದರೂ ವಿಷಯ ಅಥವಾ ವ್ಯಾಪಾರದ ಏಕತೆ ಅದೇ ರೀತಿ ಚಚ್ಚೌಕಾಗಿ ಕತ್ತರಿಸಿದ ರೂಪದಲ್ಲಿ - ಈಲಿಯಡ್‍ನಂತೆಯೇ ಇದೆ. ಕವಿಯು ಒಂದು ಘಟನೆಯ ಪದರದಲ್ಲಿ ಮತ್ತೊಂದನ್ನು ಇಡುತ್ತ, ಸಮಗ್ರ ವ್ಯಾಪಾರದ ಸಂಗತಿಯನ್ನು ಚಂದವಾದ ರೀತಿಯಲ್ಲಿ ಕಾಯ್ದುಕೊಂಡು ಬರುವ ಧೈರ್ಯವನ್ನು ತೋರುತ್ತಾನೆ. ಈಲಿಯಡ್‍ನ ವಿಷಯ ವಸ್ತು ಸೀಮಿತವಾದ್ದರಿಂದ ಟ್ರ್ಯಾಜಿಡಿಯ ಪ್ಯಾಟರ್ನ ಸರಿಹೊಂದಿತು. ಬಹಳ ಸರಳವಾಗಿ ಕಾರ್ಯ ಪ್ರಭಾವದ ಐಕ್ಯವನ್ನು ಸಾಧಿಸಲಾಯಿತು. ಆದರೆ ಓಡಿಸಿಯ ವಿಷಯ ವಿಸ್ತಾರವಾದದ್ದು. ಇದು ಕಾದಂಬರಿಯ ಹಾಗೆ. ಹೀಗಿದ್ದರೂ ತುಂಬ ಜಾಗರೂಕತೆಯಿಂದ ಕಾರ್ಯ-ಪ್ರಭಾವಗಳ ಏಕತೆಯನ್ನು ಸಂಪಾದಿಸಲಾಗಿದೆ. ಈ ದೃಷ್ಟಿಯಿಂದ ನಮ್ಮ ಇಂದಿನ ಶೈಲಿಪ್ರಧಾನ ಅಥವಾ ರೂಪ ಪ್ರಧಾನ ಕಾದಂಬರಿಗಳೂ ಅದರ ಎದುರು ಪೇಲವವಾಗಿ ತೋರುತ್ತವೆ. ಒಬ್ಬ ಆದಿಕವಿಗೆ, ಒಬ್ಬ ಪ್ರಾರಂಭಕರ್ತನಿಗೆ ಈ ಬಗೆಯ ಕುಶಲ ಕೈಗಾರಿಕೆ ಆಶ್ಚರ್ಯದ ವಿಷಯವೇ ಆಗಿದೆ. ಸಂಕ್ಷೇಪವಾಗಿ ಹೇಳುವುದಿದ್ದರೆ ಈಲಿಯಡ್‍ನ ಫಾರ್ಮ ಟ್ರ್ಯಾಜಿಡೀಯವಾಗಿದ್ದರೆ ಓಡಿಸಿಯದು ಕಾದಂಬರೀಯ. ಇಷ್ಟೆಲ್ಲ ಇದ್ದರೂ ಅನೇಕ ವಿಷಯಗಳಲ್ಲಿ ಓಡಿಸಿ - ಈಲಿಯಡ್ ಸಮನಾಂತರವಾಗಿವೆ. ಈ ಎರಡೂ ಕಾವ್ಯಗಳ ಪ್ರಾರಂಭವು ಕಥಾಕಾಲದ ಅಂತಿಮ ಅಂಚನ್ನು ಹಿಡಿದುಕೊಂಡಿವೆ. ಎರಡರ ಅಂತ್ಯವೂ ಪ್ರಾರಂಭದಲ್ಲಿ ಘೋಷಿತವಾದ ವಿಷಯದ ಮೇಲೇ ಆಗುತ್ತದೆ. ಎರಡರ ಚಲನಾಕ್ರಮ ವೃತ್ತಾಕಾರವಾದದ್ದು. ಎರಡರಲ್ಲೂ ಸರ್ಗಗಳು 24. ಈಲಿಯಡ್‍ನ ಅಂತ್ಯದಲ್ಲಿ ಹೆಕ್ಟರ್‍ನ ನಿಧನವಿದ್ದರೆ, ಓಡಿಸಿಯ ಕೊನೆಯಲ್ಲಿ ರಾಜಕುಮಾರರದು, ಈಲಿಯಡ್‍ನ ಕೊನೆಯಲ್ಲಿ ಕೆಲವು ಕಾಲದ ಮಟ್ಟಿಗಾದರೂ ಶಾಂತ ವಾತಾವರಣವಿದೆ. ಎರಡೂ ಪಕ್ಷದವರು ದಹನ ಸಂಸ್ಕಾರ ಮಾಡುತ್ತಾರೆ. ಓಡಿಸಿಯಲ್ಲಿ ಅಂತ್ಯದಲ್ಲಿ ಪ್ರಿಯ ಮಿಲನದಿಂದ ಸ್ಥಾಯೀ 98 ಕಥಾ ಸಂಸ್ಕೃತಿ ಶಾಂತಿ ಬಂದುಬಿಡುತ್ತದೆ. ಎರಡೂ ಮಹಾಕಾವ್ಯಗಳಲ್ಲಿ ಬಂದ ಪಾತ್ರಗಳು ಒಂದೇ ಬಗೆಯಲ್ಲಿ ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತಿವೆ. ಎಥನಿ ಈಲಿಯಡ್ ಮತ್ತು ಓಡಿಸಿಗಳೆರಡಲ್ಲಿಯೂ ಸಮಾನವಾಗಿ ಕುಟಿಲತೆ ಮತ್ತು ತತ್ಪರತೆಯೊಂದಿಗೆ ಗ್ರೀಕ್ ಯೋಧರಿಗೆ ಸಹಾಯ ಮಾಡುತ್ತಾಳೆ. ಪಾಸಿಡಾನ್ (ವರುಣ) ಎರಡರಲ್ಲಿಯೂ ಒಬ್ಬ ಕ್ರೂರ - ವಿಧ್ವಂಸಕ ದೇವತೆಯಂತೆ ಕಾಣುತ್ತಾನೆ. ಓಡಿಸ್ಯೂಸ್ ಎರಡೂ ಮಹಾಕಾವ್ಯಗಳಲ್ಲಿ ಸಾಹಸಿ, ವೀರ, ಕುಟಿಲ ಹಾಗೂ ಕ್ರೂರಕರ್ಮಿಯಾಗಿ ಚಿತ್ರಿತನಾಗಿದ್ದಾನೆ. ಮೆನಲೋಸ್ ಅದೇ ತರಹ ಶ್ರೀಮಂತ, ಉದಾರಹೃದಯ ಯೋಧನಾಗಿ ಎರಡರಲ್ಲಿಯೂ ಕಾಣುತ್ತಾನೆ. ಬುದ್ಧಿವಂತ ವೃದ್ಧ ನೆಸ್ಟರ್‍ನ ಮಿತ್ರನೂ ಅಲ್ಲೇ ಇರುತ್ತಾನೆ. ಈ ಮಹಾಕಾವ್ಯಗಳ ನಿರ್ಮಾತೃಗಳು ಬೇರೆ ಬೇರೆಯವರಾಗಿದ್ದರೆ, ಪಾತ್ರಗಳ ಚರಿತ್ರ ಚಿತ್ರಣದಲ್ಲಿ ಅಂತರ ಖಂಡಿತವಾಗಿ ಕಂಡು ಬರುತ್ತಿತ್ತು. ಉದಾಹರಣೆಗಾಗಿ ಹೋಮರನ ಡಯೊಮಿಡೆಲ್ ಅಥವಾ ಅಫ್ರೋದಿತಿಯರು ವರ್ಜಿಲ್‍ನ ಡಯೊಮಿಡೆಲ್ ಹಾಗೂ ಅಫ್ರೋದಿತಿಗಿಂತ ನಿಶ್ಚಯವಾಗಿಯೂ ಬೇರೆಯೇ. ಕಥಾನಕ ಹಾಗೂ ಪಾತ್ರ ಚರಿತ್ರಗಳ ಸಮಾನ ಪ್ಯಾಟರ್ನ್‍ದಿಂದ ಎರಡೂ ಮಹಾಕಾವ್ಯಗಳು ಒಬ್ಬನೇ ವ್ಯಕ್ತಿಯ ಪ್ರತಿಭೆಯಿಂದ ಹುಟ್ಟಿದವು ಎಂದು ಹೇಳಬಹುದು. 99 ಎರಡನೆಯ ಖಂಡ ಕಥಾ ಭೂಮಿ 100 ಕಥಾ ಸಂಸ್ಕೃತಿ ಜಲಪ್ರಳಯದ ಪ್ರಾಚೀನ ಕಥೆಗಳು 101 ಜಲಪ್ರಳಯದ ಪ್ರಾಚೀನ ಕಥೆಗಳು - ಭಗವತಶರಣ ಉಪಾಧ್ಯಾಯ ಜಲಪ್ರಳಯದ ಪ್ರಾಚೀನ ಕತೆ ಗ್ರೀಸ್ ಅಕ್ಕಾದಿ ನಾಗರಿಕತೆಯದು. ಈ ಕತೆ ಇಟ್ಟಿಗೆಗಳ ಮೇಲೆ ಕೀಲಾಕ್ಷರಗಳಲ್ಲಿ ಬರೆದದ್ದು ದೊರೆತಿದೆ. ಈ ಕತೆ ಹನ್ನೊಂದನೆಯ ಇಟ್ಟಿಗೆಯ ಮೇಲೆ ಇತ್ತು. ಮಾನವ ನಾಗರಿಕತೆಯ ಮಹಾಗಾಥೆ ಗಿಲಗಮೆಶ್‍ನ ಕತೆಯದೇ ಒಂದು ಅಂಶ ಇದು. ಕ್ರಿ.ಪೂ. 2000 ವರ್ಷಗಳಷ್ಟು ಮೊದಲು. ಗ್ರೀಕ್ ಅಕ್ಕಾದಿ : ಮೊದಲ ಕತೆ ಜಿಉಸುದ್ದೂ ಶುರುಪ್ಪಕ ನಗರದ ನಿವಾಸಿಯಾಗಿದ್ದ. ಅವನು ಗಿಲಗಮೇಶ್‍ನಿಗೆ ಈ ಕತೆಯನ್ನು ಹೇಳುತ್ತಾನೆ - “ನಾನು ನಿನಗೆ ಒಂದು ನಿಗೂಢ ವಿಷಯವನ್ನು ಹೇಳುತ್ತೇನೆ. ರಹಸ್ಯ. . . . ನಿಗೂಢತೆಯ ರಹಸ್ಯ. ಫರಾತ್ ನದಿಯ ದಡದ ಮೇಲಿರುವ ಶುರುಪ್ಪಕ ನಗರ ನಿನಗೆ ಗೊತ್ತು. ಆ ಪ್ರಾಚೀನ ನಗರದ ದೇವತೆಗಳ ಮನಸ್ಸಿನಲ್ಲಿ ಜಲಪ್ರಳಯ ಮಾಡೋಣ ಅನ್ನಿಸಿತು. ದಿವ್ಯಸ್ವಾಮಿ ಎಂಕಿ - ಈ ದೇವತೆಗಳ ಈ ಯೋಜನೆಯ ವಿರುದ್ಧವಾಗಿದ್ದ. ಅವನಿಗೆ ದೇವತೆಗಳ ಈ ಯೋಜನೆಯ ವಿಚಾರ ತಿಳಿಯಿತು. ಎಂಕಿಯು ಮನುಷ್ಯ ಕುಲದ ಒಂದು ಜೋಪಡಿಯನ್ನುದ್ದೇಶಿಸಿ ಹೇಳಿದ - ಯಾಕೆಂದರೆ ಜೋಪಡಿಯ ನೆವದಲ್ಲಿ ನನಗೆ ಕೇಳಲಿ ಎಂದು. ದಿವ್ಯಸ್ವಾಮಿ ಎಂಕಿ ಹೇಳಿದ . . . . ‘ಶುರುಪ್ಪಕದ ಮನುಷ್ಯನೇ, ಉವರ್ಬುದನ ಮಗನೇ ! ಮನೆಯನ್ನು ಕೆಡವಿಬಿಡು. ಒಂದು ನೌಕೆಯನ್ನು ಸಿದ್ಧ ಮಾಡು. ಆಸ್ತಿ-ಪಾಸ್ತಿ ಬಿಟ್ಟುಬಿಡು. ಜೀವದ ಬಗ್ಗೆ ಚಿಂತಿಸು. ಎಲ್ಲ ಜೀವಿಗಳ ಬೀಜವನ್ನು ಸಂಗ್ರಹಿಸು. ಬೀಜಗಳನ್ನು ನೌಕೆಯ ನಡುವೆ ತಂದಿಟ್ಟುಕೋ -‘ “ನಾನು ನೌಕೆಯನ್ನು ತಯಾರಿಸಿದೆ. ಜೀವನಬೀಜಗಳನ್ನು ಸಂಗ್ರಹಿಸಿ ಅದರ ನಡುವೆ ಇಟ್ಟೆ. ಆಹಾರವನ್ನು ತುಂಬಿದೆ. ಮನೆಯವರನ್ನೆಲ್ಲ ಕೂರಿಸಿದೆ. ವಾಯುದೇವತೆಗೆ ನನ್ನ ಬಗ್ಗೆ ಅಸಮಾಧಾನವಿದೆ. ಅದಕ್ಕಾಗಿ ನಾನಿಲ್ಲಿ ಇರಲಾರೆ - ಎಂದು ನಾನು ಹೊರಡುವ ಸಮಯದಲ್ಲಿ ನಗರವಾಸಿಗಳಿಗೆ ಹೇಳಿದೆ. ಇಷ್ಟು ಹೇಳಿ ನಾನು ನಾವೆಯಲ್ಲಿ ಕೂತು ಹೊರಟುಬಿಟ್ಟೆ. ನಾವೆಯನ್ನು ನಾಲ್ಕೂ ದಿಕ್ಕಿನಿಂದ 102 ಕಥಾ ಸಂಸ್ಕೃತಿ ಬಂದ್ ಮಾಡಲಾಗಿತ್ತು. ಆಗ ಭಯಂಕರ ಬಿರುಗಾಳಿ ಬಂತು. ಕಪ್ಪು ಕರಾಳ ಮೋಡಗಳ ನಡುವೆ ದೀವಟಿಗೆ ಬೆಳಗಿಸುತ್ತಿದ್ದ ದೇವತೆಗಳನ್ನು ನಗರವಾಸಿಗಳು ನೋಡಿದರು. ಅಣ್ಣ ತಮ್ಮಂದಿರು ಒಬ್ಬರಿಗೊಬ್ಬರು ಕಾಣಲಾರದಷ್ಟು ಭಾರೀ ಕತ್ತಲೆ ಭಾರೀ ಬಿರುಗಾಳಿಯಿತ್ತು. ದೇವತೆಗಳೂ ಭಯ ಪಡುವಷ್ಟು ನೀರಿನ ಪ್ರವಾಹವಿತ್ತು. ಅವರು ಓಡಿ ಓಡಿ ದೇವತಾ ಆ್ಯನ್‍ರ ಸ್ವರ್ಗವನ್ನು ತಲುಪಿದರು. ಎಲ್ಲ ದೇವತೆಗಳೂ ಭಯದಿಂದ ಕಂಪಿಸುತ್ತಿದ್ದರು. ಸ್ವರ್ಗದ ಹೆಬ್ಬಾಗಿಲಿನಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು. ಆಗ ದೇವಿ ಇನನ್ನಾ ಆರ್ತನಾದ ಮಾಡಿದಳು - ‘ಯಾಕೆ ನಾನು ನನ್ನದೇ ಪ್ರಜಾ ಸಂತತಿಗಾಗಿ ಈ ಬಿರುಗಾಳಿಯನ್ನು ಎಬ್ಬಿಸಿದೆ! ನನ್ನ ಸಂತತಿ ಹೀಗೆ ಸಾಯಲೆಂದೇ?’ ಆರು ಹಗಲು ಏಳು ರಾತ್ರಿ ಬಿರುಗಾಳಿ ನಿಲ್ಲಲಿಲ್ಲ. ಪ್ರವಾಹ ಏರುತ್ತಾ ಹೋಯಿತು. ನಾನು ನೀರಿನ ಮೇಲ್ಮೈ ಮೇಲೆ ತೇಲುತ್ತ ನನ್ನ ಸಂಗಡಿಗರ ಜೊತೆ ದುಃಖದಿಂದ ಅಳುತ್ತಲಿದ್ದೆ. ಆ ಭಯಂಕರ ಜಲಪ್ರವಾಹದಲ್ಲಿ ಕೆಲವೇ ಕೆಲವು ಪರ್ವತ ಶಿಖರಗಳು ಮುಳುಗದೆ ಉಳಿದಿದ್ದವು. ಕೊನೆಯಲ್ಲಿ ನನ್ನ ನಾವೆಯು ಒಂದು ಪರ್ವತ ಶಿಖರಕ್ಕೆ ತಾಗಿ ನಿಂತಿತು. ಒಂದು ವಾರದವರೆಗೆ ನಾವೆಯು ಅಲ್ಲಿಯೇ ನಿಂತಿತು. ಏಳನೆಯ ದಿನ ನಾನು ಒಂದು ಪಾರಿವಾಳವನ್ನು ಹೊರತೆಗೆದು ಹಾರಿಬಿಟ್ಟೆ. ಅದು ಹಾರುತ್ತಲೇ ಉಳಿಯಿತು, ಅದಕ್ಕೆ ಕೂಡ್ರಲು ಸ್ಥಳ ಸಿಗಲಿಲ್ಲ. ಅದು ಮರಳಿ ಬಂದಿತು. ಅನಂತರ ನಾನು ಒಂದು ಕೃಷ್ಣ ಪಕ್ಷಿಯನ್ನು ಹಾರಿಸಿದೆ. ಅದೂ ಸೋತು ಮರಳಿ ಬಂದಿತು. ಅನಂತರ ನಾನು ಒಂದು ಕಾಗೆಯನ್ನು ಹಾರಿಸಿದೆ. ಅದು ಇಳಿಯುತ್ತಿರುವ ಪ್ರವಾಹವನ್ನು ನೋಡಿತು. ಕಾಳುಗಳನ್ನು ಹೆಕ್ಕಿತು, ಮುಳುಗು ಹಾಕಿತು, ಮರಳಿ ಬರಲಿಲ್ಲ. ಆಗ ನಾನು ಹವಿಸ್ಸನ್ನು ತೆಗೆದು ನಾಲ್ಕೂ ವಾಯುದೇವತೆಗಳಿಗೆ ಬಲಿ ಅರ್ಪಿಸಿದೆ. ಪರ್ವತ ಶಿಖರದ ಮೇಲೆ ನಾನು ಮದ್ಯವನ್ನು ಅರ್ಪಿಸಿದೆ. ಧೂಪ- ಅಗರು ಚೆಲ್ಲಿದೆ. ಅದರ ಸುವಾಸನೆ ಅಘ್ರಾಣಿಸಿ ದೇವತೆಗಳು ಬಂದರು. ಮತ್ತು ಯಜ್ಞದ ಸ್ವಾಮಿಯ ನಾಲ್ಕೂ ಕಡೆ ಒಂದುಗೂಡಿದರು. ಆಗ ದೇವಿ ಇನನ್ನಾ ಬಂದಳು. ಅವಳು ಹೇಳಿದಳು. “ದೇವತೆಗಳೇ, ನಾನು ನನ್ನ ಕಂಠದಲ್ಲಿ ಧರಿಸಿದ ನೀಲಮಣಿಯನ್ನು ಮರೆಯಲು ಸಾಧ್ಯವಿಲ್ಲ. ಹಾಗೇ ಈ ಜಲಪ್ರಳಯದ ದಿನಗಳನ್ನೂ ಮರೆಯಲಾರೆ. ಈಗ ದೇವತೆಗಳು ಯಜ್ಞಕ್ಕೆ ಆಗಮಿಸಲಿ. ಆದರೆ ಎಲ್ಲಿಲ ಬರಬಾರದು. . .! ಜಲಪ್ರಳಯದ ಪ್ರಾಚೀನ ಕಥೆಗಳು 103 ಈ ಯಜ್ಞದ ಭಾಗವನ್ನು ಅವನು ಪಡೆಯಬಾರದು. ಯಾಕೆಂದರೆ ಅವನು ಹೇಳಿಕೆಯನ್ನು ಮನ್ನಿಸಲಿಲ್ಲ. ಅವನು ಜಲಪ್ರಳಯ ಮಾಡಿ ನನ್ನ ಸಂತತಿಯ ಒಬ್ಬೊಬ್ಬರನ್ನೂ ನಾಶ ಮಾಡಿದ.” ಆಗ ಸಿಟ್ಟಿಗೆದ್ದ ಎಲ್ಲಿಲ ದೇವತೆ ಅಲ್ಲಿಗೆ ಬಂದ. ಅವನು ನನ್ನ ನೌಕೆಯನ್ನು ನೋಡಿದ ನಂತರ ಮತ್ತಷ್ಟು ಕ್ರೋಧಗೊಂಡ. ಅವನು ಹೇಳಿದ - ‘ಯಾವನೊಬ್ಬ ಮನುಷ್ಯ ಹೇಗೆ ಈ ಜಲಪ್ರಳಯದಲ್ಲಿ ಬಚಾವಾಗಿ ತಪ್ಪಿಸಿಕೊಂಡ?’ ಆಗ ದಿವ್ಯಸ್ವಾಮಿ ಎಂಕಿಯು ಅವನನ್ನು ಸಮಾಧಾನ ಪಡಿಸಿದ “ದೇವತೆಗಳ ದೇವತೆ, ವೀರ ಎಲ್ಲಿಲ! ನೀನು ಯಾಕೆ ಹೇಳಿದ್ದನ್ನು ಕೇಳಲಿಲ್ಲ? ಪಾಪಿಗಳಾದವರ ಮೇಲೆ ಪಾಪವನ್ನು ಹಾಕು. ಅಪರಾಧಿಗೆ ಅಪರಾಧಿಯ ದಂಡವನ್ನು ಕೊಡು. ಕೃಪೆ ಮಾಡು. ಯಾರೂ ಒಮ್ಮೆಲೇ ಏಕಾಕಿಯಾಗಬಾರದು. ಯಾರೂ ಒಮ್ಮೆಲೇ ವಿಭ್ರಮೆ ಹೊಂದಬಾರದು. ನೀನು ಸಿಂಹವನ್ನು ಕಳಿಸಿ ಜನಸಂಖ್ಯೆಯನ್ನು ಕಡಿಮೆ ಮಾಡುವುದು ಜಲಪ್ರಳಯಕ್ಕಿಂತ ಒಳ್ಳೆಯದು.” ದಿವ್ಯಸ್ವಾಮಿ ಎಂಕಿಯ ಮಾತುಕೇಳಿ ಕ್ರುದ್ಧ ದೇವತೆ ಎಲ್ಲಿಲ ಶಾಂತನಾಗಿ ಹೋದನು. ಕೆಲವರ ಪಾಪಕ್ಕಾಗಿ ಅವನು ಅನೇಕರಿಗೆ ದಂಡವನ್ನು ಯಾಕೆ ಕೊಟ್ಟ ಎಂದು ದಿವ್ಯಸ್ವಾಮಿ ಎಂಕಿಯು ಅವನನ್ನು ನಿಂದಿಸುತ್ತ ಹೋದನು. ಆಗ ಎಲ್ಲಿಲ ದೇವತೆಗೆ ಎಲ್ಲ ಸಂಗತಿ ಅರಿವಿಗೆ ಬಂತು. ಅವನು ನನ್ನ ನೌಕೆಯ ಬಳಿಗೆ ಬಂದ. ಅವನು ನನ್ನ ಕೈ ಹಿಡಿದುಕೊಂಡ. ಅವನು ನನ್ನನ್ನು ನನ್ನ ಪತ್ನಿಯನ್ನೂ ಹೊರೆಗೆ ಕರೆತಂದ. ಅವನು ಮೊಣಕಾಲೂರಿ ನಮಸ್ಕರಿಸಿದ. ನಮ್ಮ ತಲೆಗಳನ್ನು ಮುಟ್ಟಿದ. ಮಧ್ಯದಲ್ಲಿ ನಿಂತು ನಮಗೆ ಆಶೀರ್ವಾದ ಮಾಡಿದ - ‘ಮೊದಲು ಜಿಉಸುದ್ದು ಮನುಷ್ಯನಾಗಿದ್ದ. ಆದರೆ ಇಂದಿನಿಂದ ಅವನು ಹಾಗೂ ಅವನ ಪತ್ನಿ ನನ್ನಂತೆಯೇ ದೇವತೆಗಳಾಗುತ್ತಾರೆ. ಜಿಉಸುದ್ದು ಹಾಗೂ ಅವನ ಪತ್ನಿ ನದಿಯ ಮುಖಜ ಪ್ರದೇಶದಲ್ಲಿ ವಾಸವಾಗುತ್ತಾರೆ. ಯಾಕೆಂದರೆ ನದಿಗಳ ಮುಖದಲ್ಲಿಯೇ ದೇವತೆಗಳು ವಾಸ ಮಾಡುತ್ತಾರೆ.” ವೈದಿಕ ಗಾಥಾ : ಎರಡನೆಯ ಕತೆ ಭಾರತೀಯ ಜಲಪ್ರಳಯದ ಕತೆಗಳು ಶತಪಥ ಬ್ರಾಹ್ಮಣ, ಮಹಾಭಾರತ ಮತ್ತು ಪುರಾಣಗಳಲ್ಲಿ ದೊರೆಯುತ್ತದೆ. ಪ್ರಾಚೀನವಾದ ಕತೆಯನ್ನು ಕ್ರಿ.ಪೂ. 800 ರಲ್ಲಿ ಶತಪಥ ಬ್ರಾಹ್ಮಣರಲ್ಲಿ ಸಾದರಪಡಿಸಲಾಗಿದೆ. ಹಾಗೆಂದು ಇದು ಘಟಿಸಿದ ಸಮಯ ತುಂಬ ಪುರಾತನವಾಗಿದೆ. ಬೆಳಗಿನ ಸಂಧ್ಯಾವಂದನೆಯ ಆಚಮನದ ಸಂದರ್ಭದಲ್ಲಿ ಮನುವಿನ ಕೈಯಲ್ಲಿನ ನೀರಿನೊಂದಿಗೆ ಚಿಕ್ಕ ಮೀನೂ ಬಂದಿತು. ಆ ಮೀನು ಹೇಳಿತು - 104 ಕಥಾ ಸಂಸ್ಕೃತಿ “ನೋಡು . . . ನನ್ನನ್ನು ಎಸೆಯಬೇಡ. ನನ್ನನ್ನು ರಕ್ಷಿಸು. ಬರಲಿರುವ ವಿಪತ್ತಿನ ಸಂದರ್ಭದಲ್ಲಿ ನಾನು ನಿನ್ನ ರಕ್ಷಣೆ ಮಾಡುವೆ. ಜಲಪ್ರಳಯ ಆಗಲಿಕ್ಕಿದೆ. ಅದರಲ್ಲಿ ಎಲ್ಲ ಪ್ರಾಣಿಗಳೂ ನಾಶವಾಗುತ್ತವೆ. ಆದರೆ ನಾನು ನಿನ್ನನ್ನು ಉಳಿಸುತ್ತೇನೆ. ನೀನು ನನ್ನನ್ನು ಕೊಡದಲ್ಲಿ ಹಾಕು, ನಾನು ದೊಡ್ಡವನಾದ ಮೇಲೆ ಸರೋವರದಲ್ಲಿ ಬಿಡು. ನಾನು ಇನ್ನಷ್ಟು ದೊಡ್ಡವನಾದಾಗ ನನ್ನನ್ನು ಸಮುದ್ರದಲ್ಲಿ ಬಿಡು. ಪ್ರಳಯದ ಸಮಯ ಬಂದಾಗ ನನ್ನನ್ನು ಸ್ಮರಣೆ ಮಾಡು. ನಾನಾಗ ಬಂದು ನಿನ್ನನ್ನು ರಕ್ಷಿಸುತ್ತೇನೆ. ಏಳುದಿನಗಳ ಅನಂತರ ನೀರಿನ ಪ್ರವಾಹ ಪ್ರಾರಂಭವಾಯಿತು. ಆಕಾಶದಿಂದ ಧಾರಾಕಾರ ಮಳೆ ಸುರಿಯಿತು. ಭೂಮಿ ಕೊಚ್ಚಿಹೋಯಿತು. ಮನು ಮೀನು ಹೇಳಿದಂತೆ ನಡೆದುಕೊಳ್ಳತೊಡಗಿದ. ಮೀನಿನ ಆಕಾರ ಹೆಚ್ಚುತ್ತಾ ಹೋಯಿತು. ಅದು ಸಮುದ್ರವನ್ನು ಸೇರಿತು. ಒಂದು ನಾವೆಯನ್ನು ಸಿದ್ಧಪಡಿಸಿಕೊಳ್ಳಲು ಮೀನು ಮನುವಿಗೆ ಹೇಳಿತ್ತು. ನೀರಿನ ಪ್ರವಾಹ ಹೆಚ್ಚುತ್ತ ಹೋದಂತೆ ಮನು ಜೀವಗಳ ಜೋಡಿಗಳನ್ನು ಒಂದೆಡೆ ಸೇರಿಸಿದ. ಅವರೊಂದಿಗೆ ನಾವೆಗೆ ಬಂದ. ಮತ್ತೂ ನೀರು ಏರುತ್ತಿದ್ದಂತೆ ಮನು ಮೀನನ್ನು ಸ್ಮರಿಸಿದ. ಸ್ಮರಿಸಿದ ಕೂಡಲೇ ವಿಶಾಲವಾದ ಶರೀರದ ಮೀನು ಒಮ್ಮೆಲೇ ಈಜುತ್ತ ಅಲ್ಲಿಗೆ ಬಂದಿತು. ಮೀನು ಹೇಳಿತು - “ನಾವೆಗೆ ಒಂದು ಹಗ್ಗ ಕಟ್ಟಿ ಅದನ್ನು ನನ್ನ ಕೊಂಬಿಗೆ ಕಟ್ಟಿಬಿಡು.” ಮನು ಹಾಗೆ ಮಾಡಿದ - ಮೀನು ತೇಲುತ್ತಿದ್ದ ನಾವೆಯನ್ನು ನೀರಿನಿಂದ ದಾಟಿಸತೊಡಗಿತ್ತು. ಕೊನೆಯಲ್ಲಿ ಅದು ಜಲಯಾನವನ್ನು ಎತ್ತರದ ಗಿರಿಶಿಖರದ ಕಡೆ ಒಯ್ದಿತು. ಅಲ್ಲಿಗೆ ಹೋದ ನಂತರ ಮೀನು ಹೇಳಿತು - “ನಿನ್ನ ನಾವೆಯನ್ನು ಈ ಗಿರಿಶಿಖರದ ಯಾವುದಾದರೂ ಗಿಡಕ್ಕೆ ಕಟ್ಟು. ನೀರು ಇಳಿಯುವುದನ್ನೇ ಕಾಯುತ್ತಿರು. ನೀರು ಸಂಪೂರ್ಣ ಕ್ಷೀಣಿಸಿದ ಮೇಲೆ ಒಣಗಿದ ನೆಲದಲ್ಲಿ ಯಜ್ಞದ ಅನುಷ್ಠಾನ ಮಾಡು.” ಮೀನು ಹೇಳಿದಂತೆ, ನೀರಿಳಿದು ನೆಲ ಒಣಗಿದ ಮೇಲೆ ಮನುವು ಯಜ್ಞಾನುಷ್ಠಾನ ಮಾಡಿದ. ಅನುಷ್ಠಾನ ಕ್ರಿಯೆಯನ್ನು ನೆರವೇರಿಸಲು ಮನುವು ಕಿಲಾಲ ಹಾಗೂ ಆಕುಲೀ ಎಂಬ ಹೆಸರಿನ ಅಸುರ ಬ್ರಾಹ್ಮಣರನ್ನು ಆಮಂತ್ರಿಸಿದ. ಆ ಯಜ್ಞದಿಂದ ಶ್ರದ್ಧಾ ಜನ್ಮಿಸಿದಳು. ಅನಂತರ ಮನು ಹಾಗೂ ಶ್ರದ್ಧಾಳ ಸಂಯೋಗದಿಂದ ಹೊಸ ಸೃಷ್ಟಿಯ ಅವಿರ್ಭಾವವಾಯಿತು. ಭಾಗವತ ಪುರಾಣಕಥೆ 8, 24 ರ ಶ್ಲೋಕದಿಂದ ಪ್ರಾರಂಭವಾಗುತ್ತದೆ. ಮತ್ತು ಶತಪಥ ಬ್ರಾಹ್ಮಣದ ಕತೆಯನ್ನು ಮಹಾಭಾರತದ ಕತೆಯೊಂದಿಗೆ ಜೋಡಿಸಿ ಇನ್ನಷ್ಟು ವಿಸ್ತಾರವನ್ನು ಪಡೆದುಕೊಂಡಿತು. ಜಲಪ್ರಳಯದ ಪ್ರಾಚೀನ ಕಥೆಗಳು 105 ಬ್ರಹ್ಮನು ನಿದ್ರೆಯಲ್ಲಿದ್ದಾಗ ಒಮ್ಮೆಲೆ ಜಲಪ್ರಳಯವಾಯಿತು. ಹಯಗ್ರೀವನೆಂಬ ದೈತ್ಯನು ವೇದಗಳನ್ನು ಕದ್ದೊಯ್ದನು. ವೇದಗಳ ರಕ್ಷಣೆಗಾಗಿ ಹರಿ (ವಿಷ್ಣು) ಮೀನಿನ ರೂಪವನ್ನು ಧರಿಸಿದನು. ಈ ಮೀನು ಮೊದಲು ಚಿಕ್ಕದಿದ್ದು ಅನಂತರ ಲಕ್ಷಾಂತರ ಯೋಜನಗಳಷ್ಟು ವಿಸ್ತಾರವನ್ನು ತಳೆಯಿತು. ಹರಿ (ಕೋಡುಳ್ಳ ಮೀನು)ಯು ತನ್ನ ರಹಸ್ಯವನ್ನು ನೀರಿನಲ್ಲಿಯೇ ವಾಸಿಸುವ ಹಾಗೂ ನೀರನ್ನೇ ಆಹಾರವಾಗಿಸಿಕೊಂಡ ರಾಜಾ ಸತ್ಯವ್ರತನಿಗೆ ಹೇಳಿದನು. ನಿರ್ಮಾಣ ಮಾಡಿದ ಒಂದು ಪೆಟ್ಟಿಗೆಯು ತೇಲುತ್ತ ರಾಜಾ ಸತ್ಯವ್ರತನ ಬಳಿ ಬಂದಿತು. ರಾಜನು ಬ್ರಾಹ್ಮಣರೊಂದಿಗೆ ಅದನ್ನು ಪ್ರವೇಶಿಸಿದನು. ಅದರಲ್ಲಿ ಪ್ರವೇಶಿಸಿದ ಸತ್ಯವ್ರತ ಹಾಗೂ ಬ್ರಾಹ್ಮಣರು ಹರಿಯನ್ನು ಸ್ತುತಿಸುತ್ತ ಋಕ್‍ಗಳನ್ನು ಪಠಿಸತೊಡಗಿದರು. ಕೊನೆಯಲ್ಲಿ ಹರಿಯು ಹಯಗ್ರೀವನನ್ನು ಕೊಂದು ವೇದಗಳನ್ನು ರಕ್ಷಿಸಿದ. ಅನಂತರ ಹರಿಯು ಸತ್ಯವ್ರತನನ್ನು ದೈವೀ ಮತ್ತು ಮಾನವೀ ಜ್ಞಾನದಲ್ಲಿ ದಕ್ಷನನ್ನಾಗಿ ಮಾಡಿದನು. ಮತ್ತು ಅವನನ್ನು ಏಳನೆಯ ಮನುವೆಂದು ಘೋಷಿಸಿದನು. ಆಗ ಒಂದು ಹೊಸ ಮನ್ವಂತರ ಪ್ರಾರಂಭವಾಯಿತು ಹಾಗೆಯೇ ಹೊಸ ಸೃಷ್ಟಿಯೂ ಜನ್ಮ ತಳೆಯಿತು ಎಂದು ಹೇಳುತ್ತಾರೆ. ಬೈಬಲ್ : ಮೂರನೆಯ ಕತೆ ಜಲಪ್ರಳಯದ ಆರ್ಯಗಾಥೆ ಅಸೂರಿ ಗಾಥೆಯಿಂದ ಪ್ರಭಾವಿತವಾಗಿದೆ. ಬೈಬಲ್‍ನ ಗಾಥೆಯು ಸುಮೇರಿಯನ್ ಗಾಥೆಯಿಂದ ಪ್ರಭಾವಿತವಾಗಿದೆ ಯೆನಿಸುತ್ತದೆ. ಅಲ್ಲದೆ ಹಜರತ್ ನೂಹನ ಈ ಗಾಥೆಯಿಂದ ಭಾರತದ ಬ್ರಾಹ್ಮಣಗಾಥೆಗಳು ಪ್ರಭಾವಿತವಾಗಿದೆ ಎಂದೂ ಹೇಳಲಾಗುತ್ತಿದೆ. ಭೂಮಿಯ ಮೇಲೆ ಮನುಷ್ಯನ ದುಷ್ಟತನ ಅತಿಯಾಗಿಬಿಟ್ಟಿದೆ. ಅವನ ಹಾರ್ದಿಕ ವಿಚಾರಗಳ ಪ್ರತಿಯೊಂದು ಕಲ್ಪನೆಗಳೂ ಕೇವಲ ಕೆಟ್ಟತನದಲ್ಲಿಯೇ ಮುಗಿಯುತ್ತವೆಯೆಂಬುದನ್ನು ದೇವರು ನೋಡಿದ. ಭಗವಂತನು ನೂಹನಿಗೆ ಹೇಳಿದ. -“ನಾನು ಸೃಷ್ಟಿಸಿದ ಮನುಷ್ಯನನ್ನು, ಅಷ್ಟೇಕೆ ಪ್ರತಿಯೊಂದು ಜೀವಧಾರಿಯನ್ನು ನಾನು ಸಾಯಿಸುತ್ತೇನೆ. ಭೂಮಿಯು ಹಿಂಸೆಯಿಂದ ತುಂಬಿ ಹೋಗಿದೆ. ಜೀವಿಗಳ ಆಚಾರ-ವಿಚಾರಗಳು ಭ್ರಷ್ಟವಾಗಿವೆ, ನೀನು ನಿನ್ನ ಸಲುವಾಗಿ ಮರದ ಒಂದು ದೊಡ್ಡ ಪೆಟ್ಟಿಗೆಯನ್ನು ಮಾಡಿಸು. ಅವುಗಳಲ್ಲಿ ಕೋಣೆ ಮಾಡಿಸು. ಅದಕ್ಕೆ ಕಿಡಕಿಗಳನ್ನು ಮಾಡಿಸು. ನಾನು ಭೂಮಿಯ ಮೇಲೆ ಜಲಪ್ರಳಯ ಉಂಟುಮಾಡಿ ಎಲ್ಲ ಜೀವಿಗಳನ್ನೂ ಕೊಲ್ಲುವೆ. ಆದರೆ ನಾನು ನಿನ್ನ ಜೊತೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಯಾಕೆಂದರೆ ಈ ಪೀಳಿಗೆಯಲ್ಲಿ ನೀನೊಬ್ಬನೇ ಆಚಾರವಂತನಾಗಿ ಉಳಿದಿರುವೆ. 106 ಕಥಾ ಸಂಸ್ಕೃತಿ ನೀನು ಪೆಟ್ಟಿಗೆಯನ್ನು ಪ್ರವೇಶಿಸುವೆ. ನೀನು ನಿನ್ನ ಜೊತೆ ನಿನ್ನ ಮಕ್ಕಳು, ಹೆಂಡತಿ, ಸೊಸೆಯಂದಿರು ಎಲ್ಲರೂ ಪೆಟ್ಟಿಗೆಯಲ್ಲಿ ಪ್ರವೇಶಿಸುವರು. ಎಲ್ಲ ಜೀವಧಾರಿಗಳಲ್ಲಿ ಪ್ರತಿಯೊಂದು ಜಾತಿಯ ಒಂದು ಜೋಡಿಯನ್ನು ನೀನು ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಬೇಕು. ನಿನ್ನ ಜೊತೆಯಲ್ಲಿ ಅವರದೂ ರಕ್ಷಣೆಯಾಗಬೇಕು. ಜೋಡಿಯೆಂದರೆ ಒಂದು ಗಂಡು - ಒಂದು ಹೆಣ್ಣು. ಎಲ್ಲ ರೀತಿಯ ಆಹಾರಗಳನ್ನು ಇಟ್ಟುಕೋ.” ದೇವರು ಆದೇಶಕೊಟ್ಟ ರೀತಿಯಲ್ಲೇ ನೂಹನು ಎಲ್ಲವನ್ನೂ ಮಾಡಿದನು. ಆಗ ಭಗವಂತನು ನೂಹನಿಗೆ ಹೇಳಿದನು “ಇಂದಿಗೆ ಏಳು ದಿನಗಳಲ್ಲಿಯೇ ನಾನು ಪ್ರಳಯದ ಮಳೆ ಹೊಯ್ಯಿಸುವೆ.” ಪ್ರಳಯದ ಮಳೆ ಭೂಮಿಯ ಮೇಲೆ ಬೀಳತೊಡಗಿತು. ಒಂದೇ ಸಮನೆ ನಲವತ್ತು ದಿನ ನಲವತ್ತು ರಾತ್ರಿ ಮುಸಲಧಾರೆ ಮಳೆ ಸುರಿಯಿತು. ಆಕಾಶದ ಕೆಳಗಿನ ಎಲ್ಲ ಗಿರಿ-ಪರ್ವತಗಳು ಜಲದಲ್ಲಿ ಮುಳುಗಿದವು. ಭೂಮಿಯ ಎಲ್ಲ ಜೀವರಾಶಿಗಳು ನಾಶವಾದವು. ನೂಹ ಹಾಗೂ ಅವನೊಂದಿಗಿನ ಜೀವಗಳು ಮಾತ್ರ ಉಳಿದವು. ನೂರೈವತ್ತು ದಿನಗಳ ಅನಂತರ ಮಳೆ ಸುರಿಯುವುದು ನಿಂತಿತು. ಏಳನೆಯ ತಿಂಗಳ ಹದಿನೇಳನೆಯ ದಿನ ನೂಹನ ಪೆಟ್ಟಿಗೆಯು ಆರಾತ ಪರ್ವತದ ಮೇಲಿನ ಭೂಮಿಗೆ ಹೋಗಿ ನಿಂತಿತು. ಅದರ ಮುಂದಿನ ತಿಂಗಳು ಇಪ್ಪತ್ತೇಳನೆಯ ದಿನ ನೆಲ ಒಣಗಿತು. ಆಗ ಮತ್ತೆ ದೇವರು ಹೇಳಿದನು. - ‘ಈಗ ನೀನು ಪೆಟ್ಟಿಗೆಯಿಂದ ಹೊರಗೆ ಬಾ. ನಿನ್ನ ಹೆಂಡತಿ, ನಿನ್ನ ಮಕ್ಕಳು, ಅವರ ಹೆಂಡಂದಿರು ಎಲ್ಲರೂ ನಿನ್ನೊಂದಿಗೆ ಹೊರಗೆ ಬರಲಿ. ನಿನ್ನೊಂದಿಗೆ ಬಂದ ಎಲ್ಲ ಜೀವಧಾರಿಗಳನ್ನು ಹೊರಗಡೆ ಕರೆ. ಅದರಿಂದ ಅವರೆಲ್ಲ ಸಂತಾನವಂತರಾಗಿ ಬೆಳೆಯಲಿ, ಭೂಮಿ ತುಂಬಲಿ.’ ಆಗ ನೂಹನು ದೇವರ ಪೂಜೆಗಾಗಿ ಬಲಿವೇದಿಕೆಯನ್ನು ಸಿದ್ಧಪಡಿಸಿ, ಪವಿತ್ರಪಶುಗಳನ್ನು ಪವಿತ್ರ ಪಕ್ಷಿಗಳನ್ನು ಒಂದೊಂದು ತೆಗೆದುಕೊಂಡು ಅವನ್ನು ಬೆಂಕಿಯಲ್ಲಿ ಹುರಿದು ದೇವರಿಗೆ ಅರ್ಪಿಸಿದನು. ಆ ಬಲಿಗಳ ಮೋಹಕವಾದ ಗಂಧವು ದೇವರಿಗೆ ತಲುಪಿತು. ಆಗ ಭಗವಂತನು ಮನಸ್ಸಿನಲ್ಲಿಯೇ ಹೇಳಿದನು - “ಇನ್ನೆಂದೂ ಭೂಮಿಯನ್ನು ಶಾಪಗ್ರಸ್ತಗೊಳಿಸಲಾರೆ. ಯಾಕೆಂದರೆ ಮನುಷ್ಯನ ತಾರುಣ್ಯದಿಂದಲೇ ಅವನ ಕಲ್ಪನೆಯು ಕೆಟ್ಟದ್ದು ಮತ್ತು ಪಾಪಮಯವಾದದ್ದು ಆಗಿರುತ್ತದೆ. ಅಲ್ಲದೆ ನಾನು ಎಂದೂ ಪ್ರಾಣಿಗಳನ್ನು ಕೊಲ್ಲಲಾರೆ. ಭೂಮಿ ಇರುವವರೆಗೆ ಬೀಜ ಬಿತ್ತುವುದು, ಬೆಳೆ ಕೊಯ್ಯುವುದು ಶಾಶ್ವತವಾಗಿ ಇರುತ್ತದೆ. ಚಳಿ ಮತ್ತು ಉಷ್ಣ, ಹಗಲು ಮತ್ತು ರಾತ್ರಿಗಳು ಕಾಯಂ ಆಗಿರುತ್ತವೆ.” 107 ಜಲಪ್ರಳಯದ ಪ್ರಾಚೀನ ಕಥೆಗಳು ಗ್ರೀಕ್ ಮತ್ತು ಲ್ಯಾಟಿನ್ ಗಾಥೆಗಳು : ನಾಲ್ಕನೆಯ ಕತೆ. ಗ್ರೀಕ್ ಮತ್ತು ಲ್ಯಾಟಿನ್‍ನ ಈ ಕತೆಗಳು ನೇರವಾಗಿ ಬೈಬಲ್‍ನಿಂದ ಪ್ರಭಾವಿತವಾಗಿದೆ. ಇವೆಲ್ಲವುಗಳ ಮೂಲದಲ್ಲಿ ಸುಮೇರಿಯನ್ - ಅಕ್ಕಾದಿ ಕತೆಗಳು ಇವೆ. ಯಾಕೆಂದರೆ ಅಸುರರ ರಾಜ್ಯವು ಇಜಿಪ್ತದಿಂದ ಕ್ಯಾಸ್ಪಿಯನ್ ಸಮುದ್ರದವರೆಗೆ ಯೂನಾನ್‍ದಿಂದ ಇರಾನ್‍ವರೆಗೆ ಹಬ್ಬಿದೆ. ದೇವರಾಜ ಜೀಮಸ (ವೈದಿಕ ದ್ಯೌಸ) ಒಮ್ಮೆ ಮನುಷ್ಯ ಜಾತಿಯ ಮೇಲೆ ಭಾರೀ ಸಿಟ್ಟಾಗಿದ್ದ. ಅವನು ಮನುಷ್ಯ ಜಾತಿಯನ್ನು ಸಂಪೂರ್ಣ ನಾಶಮಾಡುವ ನಿರ್ಧಾರ ಮಾಡಿದ. ಪ್ರೊಮಿಥ್ಯೂಸ್‍ನಿಗೆ ಇದರಿಂದ ತುಂಬ ಚಿಂತೆಯಾಯಿತು. ಅವನು ತನ್ನ ವಂಶದ ರಕ್ಷಣೆಗಾಗಿ ತನ್ನ ಮಗ ಡ್ಯೂಕಾಲಿಯನ್‍ನನ್ನು ಕರೆದು ಪ್ರಾಮಾಣಿಕವಾದ ಸಲಹೆ ಕೊಟ್ಟನು, ``ಸರ್ವನಾಶಕಾರಿಯಾದ ಜಲಪ್ರಳಯ ಬರಲಿದೆ. ನೀನು ಒಂದು ವಿಶಾಲವಾದ ಪೆಟ್ಟಿಗೆಯನ್ನು ಸಿದ್ಧಪಡಿಸು, ಮತ್ತು ನಿನ್ನ ಪತ್ನಿಯೊಂದಿಗೆ ಆಹಾರ ಮುಂತಾದ ಸಾಮಗ್ರಿಗಳನ್ನು ಜೊತೆಗೆ ತೆಗೆದುಕೊಂಡು ಪೆಟ್ಟಿಗೆಯನ್ನು ಪ್ರವೇಶಮಾಡು, ನಿನ್ನ ರಕ್ಷಣೆಯಾಗುವುದು, ಹಾಗೂ ಮಾನವ ಜಾತಿ ನಾಶವಾಗುವುದರಿಂದ ಬಚಾವಾಗುವುದು.” - ಮಗನು ಹಾಗೆ ಮಾಡಿದನು. ದೇವರಾಜ ಜೀಮಸ್‍ನು ಮೋಡಗಳಿಗೆ ಆಕಾಶದ ದಾರಿಯನ್ನು ತೆರೆದನು. ಮಳೆಯಿಂದ ಜೀವಜಂತುಗಳೆಲ್ಲ ನಾಶವಾದವು. ದೇವತೆಗಳ ಆವಾಸ ಸ್ಥಾನವಾದ ಓಲಿಂಪಸ್ ಪರ್ವತ ಶಿಖರ ಮಾತ್ರ ಜಳಪ್ರಳಯದಿಂದ ಉಳಿಯಿತು. ಮತ್ತೆಲ್ಲ ಗಿರಿ ಶಿಖರಗಳೂ ನೀರಿನಲ್ಲಿ ಮುಳುಗಿದವು. ಡ್ಯುಕಾಲಿಯನ್ ಮತ್ತು ಪೀರ್ಹಾ ಒಂಬತ್ತುದಿನಗಳವರೆಗೆ ನೀರಿನ ಮೇಲೆ ತೇಲುತ್ತ ಉಳಿದರು. ಅನಂತರ ಪರ್ನಾಸ್‍ನ ಒಣನೆಲದ ಮೇಲೆ ಹೋಗಿ ತಲುಪಿ ತಮ್ಮನ್ನು ರಕ್ಷಿಸಿಕೊಂಡರು. ಡ್ಯುಕಾಲಿಯನ್ ದೇವರಾಜನಿಗೆ ಬಲಿಯನ್ನು ಅರ್ಪಿಸಿದನು. ಬಲಿಯಿಂದ ಸಂತೋಷಗೊಂಡ ದೇವರಾಜನು ಅವನಿಗೆ ಸಂತಾನದ ವರವನ್ನು ನೀಡಿದನು. ಪತಿಯು ಎಸೆದ ಕಲ್ಲು ಪುರುಷನಾದನು, ಪತ್ನಿಯು ಎಸೆದ ಕಲ್ಲು ಹೆಣ್ಣಾದಳು. ಹೀಗೆ ಹೊಸ ಸೃಷ್ಟಿ ಶುರುವಾಯಿತು. ಮಾನವ ಜಾತಿಯು ಸಂಪೂರ್ಣ ನಾಶವಾಗುವುದರಿಂದ ತಪ್ಪಿಸಿಕೊಂಡಿತು. ಅರ್ದಾತಿಸ್‍ನ ಮರಣದ ಅನಂತರ ಅವನ ಮಗ ಜಿಸುಥ್ರಸ್ 64,800 ವರ್ಷಗಳವರೆಗೆ ರಾಜ್ಯಭಾರ ಮಾಡಿದನು. ಅವನ ಶಾಸನ ಕಾಲದಲ್ಲಿ ನೀರಿನ ಮಹಾಪ್ರವಾಹ ಬಂದಿತು. ಕ್ರೋನಸ್ ಸ್ವಪ್ನದಲ್ಲಿ ಅವನಿಗೆ ಹೇಳಿದನು. ``ದೆಇಸಿಯಸ್ ಮಾಸದ ಹದಿನೈದನೆಯದಿನ ಭಯಾನಕವಾದ ಮಹಾಪೂರ ಬರಲಿದೆ. ಅದರಲ್ಲಿ ಸಂಪೂರ್ಣ ಮನುಷ್ಯಜಾತಿ ನಾಶ ಹೊಂದುತ್ತದೆ. ನೀನು ಸೂರ್ಯದೇವತೆಯ ನಗರವಾದ ಸಿಪ್ಪಾರದಲ್ಲಿ ಎಲ್ಲ ಹಸ್ತಪ್ರತಿಗಳನ್ನು ಒಯ್ದು ಹೂಳಿಬಿಡು. ಅನಂತರ 108 ಕಥಾ ಸಂಸ್ಕೃತಿ ಒಂದು ನೌಕೆಯನ್ನು ಸಿದ್ಧಪಡಿಸಿಕೋ. ನಿನ್ನ ಸಂಬಂಧಿಗಳು - ಮಿತ್ರರೊಂದಿಗೆ ಅದರ ಮೇಲೆ ಹೋಗಿ ಕುಳಿತುಕೋ. ಅದರಲ್ಲಿ ಕುಡಿಯಲು - ತಿನ್ನಲು ಆಹಾರವನ್ನು ತುಂಬಿಕೋ. ಇದರಿಂದ ಜೀವನವು ಉಳಿಯುತ್ತದೆ. ಪಶು- ಪಕ್ಷಿಗಳಿಗೂ ನಿನ್ನ ನಾವೆಯಲ್ಲಿ ರಕ್ಷಣೆ ಕೊಡು.” ಮಹಾಪ್ರವಾಹ ಬಂದು ಚರಾಚರ ವಿಶ್ವವೆಲ್ಲ ಅದರಲ್ಲಿ ಮುಳುಗಿತು. ಜಿಸುಥ್ರಸ್‍ನ ನೌಕೆ ಮಾತ್ರ ನೀರಿನ ಮೇಲೆ ತೇಲುತ್ತಾ ಉಳಿಯಿತು. ನೀರಿನ ಪ್ರವಾಹವಿಳಿದು, ನೆಲ ಒಣಗಿದ ಮೇಲೆ ಅವನು ನೌಕೆಯ ಒಂದು ಭಾಗವನ್ನು ಒಡೆದು ಹೊರಬಂದನು. ನೌಕೆಯು ಒಂದು ಪರ್ವತದ ಎತ್ತರದ ಸ್ಥಳಕ್ಕೆ ಹೋಗಿ ತಗಲಿಕೊಂಡಿರುವುದನ್ನು ಅವನು ನೋಡಿದನು. ಅವನು ಪತ್ನಿ ಮತ್ತು ಪುತ್ರಿಯರೊಂದಿಗೆ ಹೊರಗೆ ಬಂದನು. ಬಲಿವೇದಿಕೆಯನ್ನು ಸಿದ್ಧಗೊಳಿಸಿ ದೇವತೆಗಳಿಗೆ ಬಲಿ ಅರ್ಪಿಸಿದನು. ನೌಕೆಯಿಂದ ಇಳಿದ ತನ್ನವರೊಂದಿಗೆ ಇದ್ದಕ್ಕಿದ್ದಂತೆ ಅವನು ಮಾಯವಾದನು. ಅಳಿದುಳಿದ ಜನರಿಗೆ ದೇವವಾಣಿ ಕೇಳಿಸಿತು - ‘ಜಿಸುಥ್ರಸ್ ತನ್ನ ಪುಣ್ಯದಿಂದಾಗಿ ಪರಿವಾರ ಸಹಿತ ದೇವಲೋಕದಲ್ಲಿ ವಾಸಿಸಲು ಹೋಗಿದ್ದಾನೆ.’ ಅವನ ನೌಕೆಯ ಒಂದು ಅಂಶವು ಇಂದಿಗೂ ಅರ್ಮಿನಿಯಾದ ಕಡಿದಾದ ಪರ್ವತದ ಮೇಲೆ ಬಿದ್ದುಕೊಂಡಿದೆ. ದೇವವಾಣಿಯ ಆದೇಶದಂತೆ ಜನರು ಸಿಪ್ಪಾರಾದಲ್ಲಿ ಹುಗಿದ ಹಸ್ತಲಿಪಿಗಳನ್ನು ಅಗೆದು ತೆಗೆದರು. ಬಾಬುಲ್ ಮತ್ತು ಬೇರೆ ಅನೇಕ ನಗರಗಳು ಹಾಗೂ ಮಂದಿರಗಳನ್ನು ನಿರ್ಮಿಸಿದರು. ಚೀನೀಗಾಥಾ : ಐದನೆಯ ಕತೆ ಜಲಪ್ರಳಯದ ಈ ಚೀನೀಗಾಥೆಯು ‘ದೈವಿಕೋಪ’ದಿಂದ ಮುಕ್ತವಾಗಿದೆ. ಪಾರಲೌಕಿಕ ಶಕ್ತಿಗಳಿಂದ ದೂರವಾದ, ಪ್ರಕೃತಿಯ ಭೀಷಣತೆ ಹಾಗೂ ಮನುಷ್ಯನ ವಿಹಾರಕ್ಕೆ ಸಂಬಂಧಿಸಿದ ಮೊದಲ ಕತೆಯಾಗಿದೆ. ಬಹುಶಃ ಪ್ರಾಚೀನಕಾಲದ ಕತೆಗಳಲ್ಲಿ ಇದೊಂದು ಮಹತ್ವಪೂರ್ಣವಾದ ಸಂಕ್ರಮಣದ ಬಿಂದುವಾಗಿದೆ. ಮಹಾಪೂರದ ನೀರು ಆಕಾಶಕ್ಕೇರಿತು. ಗಿರಿಪರ್ವತಗಳ ಶಿಖರಗಳು ತೆರೆಗಳಲ್ಲಿ ಮುಳುಗಿದವು. ನೀರು ಅವುಗಳ ಮೇಲೆ ಹರಿಯತೊಡಗಿತು. ಜನರು ನಾಶವಾದರು. ನಾನು (ಯೂ) ನನ್ನ ನಾಲ್ಕು ವಾಹನಗಳ ಮೇಲೆ (ಗಾಡಿ, ನಾವೆ, ಬರ್ಫದ ಮೇಲೆ ನಡೆಯುವ ಸ್ಲೇಜ್ ಹಾಗೂ ಮೊಳೆಯುಕ್ತವಾದ ಬೂಟು) ಚಲಿಸುತ್ತ, ಗಿರಿಪರ್ವತಗಳಿಗೆ ಹೊಂದಿಕೊಂಡಿದ್ದ ಎಲ್ಲ ಕಾಡುಗಳನ್ನು ಕತ್ತರಿಸಿ ಹಾಕಿದೆ. ಜೊತೆಗೆ ಊಟಕ್ಕಾಗಿ ಮಾಂಸವನ್ನು ಹೇಗೆ ಸಂಪಾದಿಸಬಹುದೆಂಬುದನ್ನು ಜನರಿಗೆ ತಿಳಿಸಿದೆ. ಒಂಬತ್ತು ಸ್ಥಳಗಳಲ್ಲಿ ನೀರು ಹೋಗಲು ದಾರಿಮಾಡಿಕೊಟ್ಟು ಅಣುಪ್ರಳಯದ ಕತೆ 109 ನೀರನ್ನು ಸಮುದ್ರಕ್ಕೆ ಹರಿಸಿದೆ. ಚೀ ದಂಡೆಯ ಮಣ್ಣಿನಲ್ಲಿ ಬೀಜವನ್ನು ಹಾಕಿದೆ. ಮಾಂಸವಲ್ಲದೆ ಅನ್ನವನ್ನು ಹೇಗೆ ಬೆಳೆಯಬಹುದೆಂಬುದನ್ನು ಜನಗಳಿಗೆ ಕಲಿಸಿದೆ. ವಸ್ತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪರಂಪರೆಯನ್ನೂ ನಾನು ಪ್ರಚಲಿತಗೊಳಿಸಿದೆ. ಹೀಗೆ ಅವರ ಸಂಘಟನೆಯು ಉಪಯೋಗಕ್ಕೆ ಬರತೊಡಗಿತು. ಜನರ ಬಳಿ ಧನ-ಧಾನ್ಯ ವೃದ್ಧಿಯಾಯಿತು. ದೇಶದಲ್ಲಿ ಒಳ್ಳೆಯ ಆಡಳಿತದ ಸ್ಥಾಪನೆಯಾಯಿತು. ಯಾವೋನ ಕಾಲದಲ್ಲಿ ಭೂಮಿಯ ಮೇಲೆ ಯಾವುದೇ ಬಗೆಯ ವ್ಯವಸ್ಥೆಯಿದ್ದಿಲ್ಲ. ಜ್ಞಾನ ಪ್ರಸಾರವೂ ಅನಿಯಮಿತವಾಗಿತ್ತು. ಪ್ರವಾಹವು ಇಡೀ ಭೂಮಿಯನ್ನು ಆವರಿಸಿಬಿಡುತ್ತಿತ್ತು. ವನಸ್ಪತಿಯ ವಿಸ್ತಾರ ಅನಂತವಾಗಿತ್ತು. ಪಕ್ಷಿಗಳು ಹಾಗೂ ಅನ್ಯ ಜೀವಿಗಳ ಸಂಚಾರವು ಅಸಾಧಾರಣ ಪ್ರಮಾಣದಲ್ಲಿ ಆಗುತ್ತಿತ್ತು. ಇನ್ನೂ ಅನ್ನವನ್ನು ಬೆಳೆಯಲಾಗುತ್ತಿರಲಿಲ್ಲ. ಪಶುಗಳ ಸಂಖ್ಯೆ ಹೆಚ್ಚಾಗಿ ಅವುಗಳ ಆವರಿಸುವಿಕೆಯಿಂದ ಮನುಷ್ಯನು ದೀನನಾಗಿದ್ದ. ಯಾವೋ ನು ಶೂನ್‍ನಿಗೆ ವ್ಯವಸ್ಥೆಯನ್ನು ಒಪ್ಪಿಸಿದನು. ಮತ್ತು ಯೀಗೆ ಬೆಂಕಿಯ ಮೇಲಿನ ನಿಯಂತ್ರಣದ ಶಕ್ತಿಯನ್ನು ಕೊಟ್ಟನು. ಯೀ ಪರ್ವತ ಹಾಗೂ ಜಲ ತುಂಬಿದ ಭಾಗದ ಮೇಲೆ ಬೆಂಕಿ ಹಾಕಿದನು. ಪಶುಗಳು ರಕ್ಷಣೆಯನ್ನು ಅರಸುತ್ತ ಓಡಿ ಹೋದವು. ಯೀ ಒಂಬತ್ತು ನದಿಗಳನ್ನು ವಿಭಜಿಸಿದನು. ಇದರಿಂದ ಜನರು ನಡುವೆ ಆಹಾರವನ್ನು ಪಡೆದುಕೊಳ್ಳುವುದು ಸಾಧ್ಯವಾಯಿತು. ಜಲಪ್ರಳಯದ ಹೊತ್ತಿಗೆ ಸರ್ಪ ಹಾಗೂ ಹೆಬ್ಬಾವು ಎಲ್ಲಕಡೆ ಹರಡಿಕೊಂಡವು. ಯೀ ಅವುಗಳನ್ನು ಓಡಿಸಿ ನೀರು- ನೆಲವನ್ನು ಸಂಕಟಮುಕ್ತಗೊಳಿಸಿದ. ಹೀಗೆ ಮನುಷ್ಯನ ರಕ್ಷಣೆ ಮಾಡಿದ. 110 ಕಥಾ ಸಂಸ್ಕೃತಿ ನಾಗಾಸಾಕಿಯ ಮೇಲೆ ನೂರು ಸೂರ್ಯರ ಬೆಳಕು - ಫ್ರ್ಯಾಂಕ್ ಡಬ್ಲು ಚಿನಾಕ್ ವಿಡಂಬನೆ ನೋಡಿ, ಅಣುಬಾಂಬ್ ಎಸೆಯಲು ನಿರ್ಧರಿಸಿ ಅಮೇರಿಕದ ಯುದ್ಧ ಮಂತ್ರಿ ಹೆನ್ರಿಎಚ್, ಸ್ಟಿಮ್ಸನ್‍ನ ಎದುರು ವಿಚಾರಕ್ಕಾಗಿ ಇಟ್ಟ ನಾಲ್ಕು ಸ್ಥಾನಗಳ ಪಟ್ಟಿಯಲ್ಲಿ ನಾಗಾಸಾಕಿಯ ಹೆಸರೇ ಇದ್ದಿಲ್ಲ. ದೌರ್ಭಾಗ್ಯದ ವಿಷಯವೆಂದರೆ ಶೇಷ ವಿಶ್ವದ ಹಾಗೆ ಜಪಾನ್‍ನಲ್ಲಿಯೂ ಎಲ್ಲರ ಗಮನ ಹಿರೋಶೀಮಾ ಮೇಲೆಯೇ ಕೇಂದ್ರಿಕೃತವಾಗಿತ್ತು. ನಾಗಾಸಾಕಿಯ ಮಹಾವಿನಾಶವನ್ನು ಬಹುಶಃ ಮರೆಸಿಬಿಡಲಾಗಿತ್ತು. ನಾಗಾಸಾಕಿಯ ಬುದ್ಧಿಜೀವಿಗಳು ಇದನ್ನು ತುಂಬ ವಿಷಾದದಿಂದ ಹೇಳಬಹುದಾಗಿದೆ - “ಅಣುಬಾಂಬಿನ ದಾಳಿಗೆ ಸಿಗುವುದು ಕೆಟ್ಟದ್ದೇ, ಆದರೆ ಎರಡನೆಯ ನಂಬರಿನ ಅಣುಬಾಂಬಿನ ದಾಳಿಗೆ ಸಿಗುವುದು ಇನ್ನೂ ಕೆಟ್ಟದ್ದು.” ಇಲ್ಲಿ ನಾಗಾಸಾಕಿಯ ಕಲ್ಪಿಸಲಸಾಧ್ಯವಾದ ಆ ಅಣುಪ್ರಳಯದ ರೋಮಾಂಚಕಾರಿ ವರ್ಣನೆಯಿದೆ. ಸರಕಾರಿ ಕ್ಯಾಲೆಂಡರ್‍ನಲ್ಲಿ ತಾರೀಕು ಬದಲಾಗಿತ್ತು - 9 ಆಗಸ್ಟ್ 1945. ಅಗಸ್ಟ್ 8 ರ ರಾತ್ರಿ ತುಸುಹೊತ್ತಿನ ಮೊದಲಷ್ಟೇ ಮುಗಿದಿತ್ತು. 2 ಗಂಟೆ 56 ನಿಮಿಷಗಳಾಗಿದ್ದವು. ತಿವಿರನ್ ದ್ವೀಪದ ಎರಡುಮೈಲುದ್ದದ ವಿಮಾನ ನೆಲೆ ಮಹಾವಿನಾಶದ ದೂತನಿಗೆ ವಿದಾಯ ಹೇಳುವ ಮೌನ ಕ್ಷಣಗಣನೆಯಲ್ಲಿತ್ತು. ಬಿ-29 ವಿಮಾನ ಆಕಾಶಕ್ಕೆ ಜಿಗಿಯಲು ಈ ಉದ್ದದ ಪ್ರತಿಯೊಂದು ಇಂಚೂ ಅವಶ್ಯಕವಾಗಿತ್ತು. ಈ ವಿಮಾನದ ಮೇಲೆ ಕೇವಲ ಒಂದು ಬಾಂಬನ್ನು ಏರಿಸಲಾಗಿತ್ತು. ಈ ಬಾಂಬು ಯಾವುದೋ ಭೀಮಾಕಾರದ ಕಲ್ಲಂಗಡಿ ಹಣ್ಣಿನಂತಿತ್ತು. ಅದರ ತೂಕ 10000 ಪೌಂಡ್ ಆಗಿತ್ತು. ಇದರ ಹೊರತಾಗಿ ಪ್ರಶಾಂತ ಸಾಗರದ ಈ ವೈಮಾನಿಕ ನೆಲೆಯಿಂದ ಜಪಾನ್‍ವರೆಗೆ ಹೋಗಿ ಮರಳುವ ಯಾತ್ರೆಯ 3400 ಮೈಲು ದೂರವನ್ನು ಕ್ರಮಿಸಲು ಅವಶ್ಯಕವಾದ ಹಲವು ಟನ್ ಇಂಧನವನ್ನು ವಿಮಾನಕ್ಕೆ ತುಂಬಲಾಗಿತ್ತು. ಬಿ-29 ರ ಮೆಲೆ ಹೇರಿದ ಬಾಂಬ್ ಅಣುಬಾಂಬ್ ಆಗಿತ್ತು. ತನ್ನ ನೆಲದ ಮೇಲೆ ಶತ್ರು ಇಳಿದರೂ, ಕೊನೆಯ ಕಂದಕ ಕೊನೆಯ ಇಂಚಿನವರೆಗೂ ಯುದ್ಧವನ್ನು ಅಣುಪ್ರಳಯದ ಕತೆ 111 ಮುಂದುವರಿಸುವುದಾಗಿ ಜಪಾನ್ ಘೋಷಣೆ ಮಾಡಿತ್ತು. ಜಪಾನ್‍ನ ಈ ಆಹ್ವಾನಕ್ಕೆ ಉತ್ತರವನ್ನು ಅಣುಬಾಂಬಿನಿಂದ ಕೊಡಲು ಅಮೇರಿಕಾ ನಿರ್ಧರಿಸಿತ್ತು. ಆಗಸ್ಟ 6 ರಂದು ಮೊದಲ ಅಣುಬಾಂಬ್ ಹಿರೋಶೀಮಾ ಮೇಲೆ ಹಾಕಲಾಗಿತ್ತು. ಇಂದಿನ ಈ ಎರಡನೆಯ ಅಣುಬಾಂಬಿನ ಗುರಿಯು 400000 ಜನಸಂಖ್ಯೆಯ ಔದ್ಯೋಗಿಕ ನಗರ ಕೊಕುರಾ ಆಗಿತ್ತು. ಜಪಾನ್‍ನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹೆಚ್ಚಿನ ಸಂಖ್ಯೆಯ ಮದ್ದು ಗುಂಡು ತಯಾರಿಸುವ ಫ್ಯಾಕ್ಟರಿಗಳು ಅಲ್ಲಿ ಇದ್ದವು. ನಿಧಾನವಾಗಿ ಹಾರುತ್ತ - ಬಿ-29 ವಿಮಾನ ಮೋಡಗಳಿಂದ ಮೇಲೇರಿದಾಗ ಮೇಜರ್ ಚಾಲ್ರ್ಸ್ ಸ್ಪೀನಿ ಸಮಾಧಾನದ ಉಸಿರ್ಗರೆದ. ಒಮ್ಮೆಲೇ ಮೇಜರ್ ಕೂಗಿದ - “ಪಾವರ್ ಟೂ.” ಇದರ ಅರ್ಥವೆಂದರೆ ವಿಮಾನದ ಹಾರಾಟಕ್ಕೆ ನಿರ್ಧರಿಸಿದ ಎತ್ತರದವರೆಗೆ ಒಯ್ಯುವ ಶಕ್ತಿ ಮತ್ತು ವೇಗವನ್ನು ಅವನು ಅಪೇಕ್ಷಿಸಿದ್ದ. ವಿಮಾನವು 7000 ಫೂಟ ಎತ್ತರಕ್ಕೆ ತಲುಪಿದ ಅನಂತರ ನೇರವಾಗಿ ಮುಂದುವರಿಯಿತು. ವಿಮಾನವನ್ನು ಏರಿದ 13 ವ್ಯಕ್ತಿಗಳು ಪ್ರಯಾಣಕ್ಕಾಗಿ ತಮ್ಮ ತಮ್ಮ ಸ್ಥಾನದಲ್ಲಿ ಕೂತಿದ್ದರು. ವಿಮಾನದ ವೇಗ 220 ಮೈಲು ಪ್ರತಿಗಂಟೆ ಇತ್ತು. ಬೆಳಗಿನ 9 ಗಂಟೆ 50 ನಿಮಿಷಕ್ಕೆ ಕೆಳಗೆ ಹರಡಿದ ಕೊಕುರಾ ನಗರ ದೃಷ್ಟಿಗೋಚರವಾಗತೊಡಗಿತು. ಆಗ ಬಿ-29 ವಿಮಾನ 31000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಬಾಂಬನ್ನು ಇಷ್ಟು ಎತ್ತರದಿಂದಲೇ ಹಾಕಬೇಕಾಗಿತ್ತು. ನಗರದ ಮೇಲ್ಗಡೆ ಮೋಡಗಳು ಹರಡಿಕೊಂಡಿದ್ದವು. ಬೀಹನ್ ಕೂಗಿದ - “ನನಗೆ ಶಸ್ತ್ರಾಗಾರ ಎಲ್ಲಿಯೂ ಕಣ್ಣಿಗೆ ಕಾಣ್ತಾ ಇಲ್ಲ. ಮತ್ತೊಮ್ಮೆ ತಿರುಗಿ ನಮ್ಮ ಗುರಿಯ ಮೇಲ್ಗಡೆಯಿಂದ ಸಾಗಬೇಕು.” ಸ್ಪೀನಿ ‘ಇಂಟರಕಾಮ್’ ನಲ್ಲಿ ಹೇಳಿದ - “ಬಾಂಬ್ ಹಾಕಬೇಡಿ . . . ಮತ್ತೊಮ್ಮೆ ಕೇಳಿ . . . ಬಾಂಬ್ ಹಾಕಬೇಡಿ. . . ನಾವು ಇನ್ನೊಂದು ದಿಕ್ಕಿನಿಂದ ಗುರಿಯ ಮೇಲೆ ತಲುಪುವ ಪ್ರಯತ್ನ ಮಾಡೋಣ. . . .” ಕೆಲವು ನಿಮಿಷಗಳ ನಂತರವಷ್ಟೇ ಸ್ಪೀನಿ ಪೂರ್ವದ ಕಡೆಯಿಂದ ಬಂದು ನಗರದ ಮೇಲ್ಗಡೆ ಹಾರಲುತೊಡಗಿದ. ಆದರೆ ಕೊನೆಯ ಕ್ಷಣದಲ್ಲಿ ನಗರದ ಮೇಲೆ ಆವರಿಸಿದ ಹೊಗೆಯು ಮತ್ತೊಮ್ಮೆ ಎಲ್ಲವನ್ನು ಅಸ್ತವ್ಯಸ್ತಗೊಳಿಸಿತು. ಕೆಳಗಿನಿಂದ ವಿಮಾನಭೇದಿಸುವ ಬೆಂಕಿಯ ಮಳೆ ಅಪಾಯಕಾರಿ ಎಲ್ಲೆಯನ್ನು ತಲುಪಲು ಪ್ರಾರಂಭಿಸಿತ್ತು. ಕೊಕುರಾದ ರಕ್ಷಣೆಗಾಗಿ ಇಡೀ ಜಪಾನ್ ಸಾಮ್ರಾಜ್ಯದ ದಕ್ಷತಮ ತೋಪುಗಾರರನ್ನು ನಿಯುಕ್ತಿಗೊಳಿಸಲಾಗಿತ್ತೆಂಬುದು ಸ್ಪೀನಿಗೆ ಗೊತ್ತಿತ್ತು. ಅವನು ಅಂತಿಮ ಪ್ರಯತ್ನಕ್ಕಾಗಿ ಎಚ್ಚರಿಕೆ ಕೊಟ್ಟ. “ಉತ್ತರದ ಕಡೆಯಿಂದ ಬಂದು ನಾವು ಮತ್ತೊಮ್ಮೆ ಪ್ರಯತ್ನಿಸೋಣ”, 112 ಕಥಾ ಸಂಸ್ಕೃತಿ ಆದರೆ ಮೂರನೆಯ ಬಾರಿಯೂ ಯಶಸ್ಸು ದೊರೆಯಲಿಲ್ಲ. ಆಗ ಸಾರ್ಜೆಂಟ ಕುಹಾರೆಕ್‍ನ ಧ್ವನಿ ಕೇಳಿಸಿತು - “ಇಂಧನ ಕಡಿಮೆಯಾಗುತ್ತಲಿದೆ. ನಾವು ಹಿಂತಿರುಗಿ ಈವೋವರೆಗೆ ಹೋಗುವಷ್ಟು ಮಾತ್ರ ಇಂಧನ ಉಳಿದಿದೆ.” ಆದರೆ ಅಣುಬಾಂಬ್‍ನೊಂದಿಗೆ ವಾಪಸ್ ಹೋಗುವುದಿಲ್ಲವೆಂದು ಸ್ಪೀನಿ ನಿರ್ಣಯ ಮಾಡಿದ್ದ. ಇಲ್ಲಿ ವಿಫಲವಾದರೂ ಬೇರೆ ಗುರಿಯನ್ನು ಸಾಧಿಸಬಹುದಾಗಿತ್ತು. ಎಶ್‍ವರ್ಥನನ್ನು ಕೇಳಿದಾಗ ಅವನಿಂದಲೂ ಸಹಮತ ವ್ಯಕ್ತವಾಯಿತು. ಸ್ಪೀನಿ ಎಡಗಡೆ ಬಾಗಿ ವಿಮಾನದ ದಿಕ್ಕನ್ನು ಒಮ್ಮೇಲೆ ಬದಲಿಸಿದ. ಹಾಗೆಯೇ ಘೋಷಣೆ ಮಾಡಿದ - “ನಾವೀಗ ನಾಗಾಸಾಕಿಯ ಕಡೆ ಮುಂದುವರಿಯುತ್ತಿದ್ದೇವೆ.” ಆ ವರ್ಷದ ಗ್ರೀಷ್ಮ ಕಾಲದಲ್ಲಿ ಜಪಾನಿನ ದೊಡ್ಡ ದೊಡ್ಡ ನಗರಗಳು ಅಮೇರಿಕದ ವಿಮಾನದ ದಾಳಿಗೆ ಸಿಕ್ಕಿದ್ದವು. ಆದರೆ ಈ ಎಲ್ಲ ವಿನಾಶಲೀಲೆಯ ಮಧ್ಯೆ ನಾಗಾಸಾಕಿ ಬಹುಮಟ್ಟಿಗೆ ಸುರಕ್ಷಿತವಾಗಿಯೇ ಉಳಿದಿತ್ತು. ಇಲ್ಲಿಯೂ ಕೂಡ ಅಮೇರಿಕದ ವೈಮಾನಿಕ ದಾಳಿಕೋರರು ಜಗತ್ತಿನ ಭೂಪಟದಿಂದ ಅಳಿಸಿ ಹಾಕಲು ಇಷ್ಟಪಡುವ ಕೆಲವು ಮಹತ್ವದ ಕೇಂದ್ರಗಳು ಇದ್ದವು. ತನ್ನ ಟಾರಪೆಡೋದಿಂದ ಪರ್ಲಹಾರ್ಬರನ್ನು ಉದ್ವಸ್ತಗೊಳಿಸಿ ಸರ್ವನಾಶಕ್ಕೆ ಕಾರಣವಾದ ಮಿಟ್ಸುಬಿಶಿಯ ಶಸ್ತಾಸ್ತ್ರ ಕಾರಖಾನೆ ನಾಗಾಸಾಕಿಯಲ್ಲೇ ಇತ್ತು. ಅದೇ ಬೆಳಿಗ್ಗೆ 29 ವರ್ಷದ ಒಬ್ಬ ಅಧ್ಯಾಪಕಿ ತೀ ಅದಾಚಿ - ತನ್ನ ಗಂಡನನ್ನು ಯುದ್ಧದಲ್ಲಿ ಕಳೆದುಕೊಂಡವಳು - ಉಪಾಹಾರದ ಮೇಜಿನ ಎದುರುಕೂತು ರೇಡಿಯೋ ಅಲಿಸುತ್ತಿದ್ದಳು. ಆಗ ಅಮೇರಿಕದ ಯಾವುದೋ ಪ್ರಸಾರ ಕೇಂದ್ರದಿಂದ ಪ್ರಸಾರಿತವಾದ ಈ ಶಬ್ದಗಳು ಅವಳ ಕಿವಿಯ ಮೇಲೆ ಬಿದ್ದವು. ``ಆಗಸ್ಟ್ ಆರರಂದು ಬೆಳಿಗ್ಗೆ 8 ಗಂಟೆ 15 ನಿಮಿಷದ ಹೊತ್ತಿಗೆ ಹಿರೋಶೀಮಾದ ಮೇಲೆ ಒಂದು ಹೊಸ ಬಾಂಬ್ ಹಾಕಲಾಯಿತು. ಅನೇಕ ಸಾವಿರ ಜನ ಸತ್ತರು. ಬಾಂಬಿನ ನಂಬಲಸಾಧ್ಯವಾದ ಶಕ್ತಿಯಿಂದ, ಬಾಂಬ್ ಸ್ಫೊಟದ ಉರಿಯಿಂದ ಈ ಜನರ ಶರೀರಗಳು ಚೂರು ಚೂರಾದವು. . . . ಜಪಾನೀ ಸೈನ್ಯವು ಆತ್ಮಸಮರ್ಪಣೆ ಮಾಡದಿದ್ದರೆ, ಸರ್ವನಾಶದ ಈ ಕ್ರಮವನ್ನು ಮುಂದುವರಿಸಲಾಗುವುದು.'' ಶ್ರೀಮತಿ ಅದಾಚಿಯ ಅಂಗಾಂಗಳೆಲ್ಲ ಕಂಪಿಸತೊಡಗಿದವು. ನಿನ್ನ ಸಂಜೆಯಷ್ಟೇ ಶತ್ರುಪಕ್ಷದವರು ನಾಗಾಸಾಕಿಯ ಮೇಲೆ ಕಾಗದದ ತುಣುಕುಗಳ ಮಳೆಗರೆದಿದ್ದರು. ಅದರಲ್ಲಿ ನಗರವಾಸಿಗಳು ನಗರವನ್ನು ಬರಿದುಮಾಡಲು ಸಲಹೆ ನೀಡಲಾಗಿತ್ತು. ಅಣುಪ್ರಳಯದ ಕತೆ 113 ``ಏಪ್ರಿಲ್ ತಿಂಗಳಲ್ಲಿ ನಾಗಾಸಾಕಿಯಲ್ಲಿ ವಸಂತಕಾಲದ ಹೂವಿನ ಸಂಭ್ರಮವಿತ್ತು. ಆಗಸ್ಟನಲ್ಲಿ ನಾಗಾಸಾಕಿಯ ಮೇಲೆ ಬೆಂಕಿಯ ಮಳೆ ಸುರಿಯಲಿದೆ.” ಮೇಜರ್ ಸ್ಪೀನಿಯ ಮುಖಮುದ್ರೆಯಲ್ಲಿ ಭಾರೀ ಒತ್ತಡದಗೆರೆಗಳಿದ್ದವು. ಅವರು ಓಕಿತಾಬಾಕ್ಕೆ ಹಿಂತಿರುಗುವುದಾದರೆ, ಕೇವಲ ಒಂದು ಸುತ್ತು ನಾಗಾಸಾಕಿಯ ಮೇಲೆ ಸುತ್ತಬಹುದಾಗಿತ್ತು. ಇದಕ್ಕಿಂತ ಹೆಚ್ಚಿನ ಇಂಧನ ಅವರ ಬಳಿ ಇರಲಿಲ್ಲ. ಸ್ಪೀನಿ ಕಮಾಂಡರ ಎಶ್‍ವರ್ಥ ಅವರಿಗೆ ಸಮಸ್ಯೆಯ ಗಂಭೀರತೆಯ ಮಾಹಿತಿ ನೀಡಿದ. - “ಬರಿಗಣ್ಣುಗಳಿಂದ ನೋಡಿ ಗುರಿಯ ಮೇಲೆ ಬಾಂಬ್ ಹಾಕುವುದು ಸಾಧ್ಯವಿಲ್ಲವೆಂಬುದು ಬೀಹನ್‍ನ ಅಭಿಪ್ರಾಯ. ಬಾಂಬನ್ನು ರಾಡಾರ್‍ನ ಸಹಾಯದಿಂದ ಕೆಡವಬೇಕೆಂಬುದು ನನ್ನ ವಿಚಾರ.” ಎಶ್‍ವರ್ಥ್ ಬೀಹನ್‍ಗೆ ಕೇಳಿದ - “ರಾಡಾರ್‍ನ ಸಹಾಯದಿಂದ ಎಷ್ಟರಮಟ್ಟಿಗೆ ಸರಿಯಾಗಿ ಗುರಿಸಾಧಿಸಲು ಸಾಧ್ಯವಾದೀತು ಬೀಹನ್?” ಬಾಂಬು ಗುರಿಯ ಕೇಂದ್ರ ಬಿಂದುವಿನಿಂದ ಒಂದು ಸಾವಿರ ಅಡಿಯಷ್ಟು ವರ್ತುಲದ ಹೊರಗೆ ಬೀಳಲಿಕ್ಕಿಲ್ಲವೆಂದು ನಾನು ಭರವಸೆ ಕೊಡಬಲ್ಲೆ.” “ಆಯಿತು ಸ್ಪೀನಿ . . . ಬಾಂಬನ್ನು ರಾಡಾರ್‍ನ ನೆರವಿನಿಂದಲೇ ಹಾಕು” ಎಶ್‍ವರ್ಥ್ ತುಸು ಯೋಚಿಸಿ ಅಪ್ಪಣೆ ಕೊಟ್ಟ. ಒಮ್ಮೆಲೇ ಬೀಹನ್ ಚೀರಿದ - “ರಾಡಾರ್‍ನಲ್ಲಿ ನಗರ ಕಾಣಿಸುತ್ತಿದೆ. ಅದೋ ಅಲ್ಲಿದೆ ನಮ್ಮ ಗುರಿ. . . ಅದೇ ಮಿತ್ಸುಬಿಶಿಯ ಹಡಗು ಕಾರ್ಖಾನೆ. . . .”. ಸ್ಪೀನಿ ವಿಮಾನದ ನಿಯಂತ್ರಣವನ್ನು ಬಾಂಬ್ ಹಾಕುವವರ ಕೈಗೆ ಒಪ್ಪಿಸಿದ. ಬೀಹನ್ ತುಸುವೂ ಹಿಂಜರಿಯದೆ ಬಾಂಬ್ ಕೆಳಗೆ ಚೆಲ್ಲುವ ಸ್ವಯಂಚಾಲಿತ ಉಪಕರಣವನ್ನು ಚಾಲೂ ಮಾಡಿದ. ತುಸುವೇ ಕ್ಷಣದ ಅನಂತರ ಆ ಭೀಮಕಾಯದ ಬಾಂಬ್ ವೇಗವಾಗಿ ಭೂಮಿಯ ಕಡೆ ನುಗ್ಗುತ್ತಿತ್ತು. ಬಿ-29 ರಿಂದ ಬಾಂಬ್ ಬೀಳುತ್ತಲೇ ಅದರ ಒಳಗಡೆ ಜೋಡಿಸಿದ ಸ್ವಯಂಚಾಲಿತ ಯಂತ್ರೋಪಕರಣಗಳು ಸಕ್ರಿಯವಾದವು. 52 ಸೆಕೆಂಡ್‍ಗಳವರೆಗೆ ಬೀಳುತ್ತಲಿದ್ದ ಬಾಂಬ್ ನೆಲಕ್ಕೆ 500 ಅಡಿ ಎತ್ತರದಲ್ಲಿ ಸ್ಫೋಟಗೊಂಡಿತು. ಸಮಯ 11 ಗಂಟೆ 2 ನಿಮಿಷ. ವಿಸ್ಫೋಟದ ಅನಂತರ ಕೆಳಗಡೆ ಭೀಮಕಾಯದ ಬೆಂಕಿಯ ಚೆಂಡೊಂದು ತೂಗಾಡಿತು. ಆ ಗೋಲದ ಮಧ್ಯದ ತಾಪಮಾನ 10 ಕೋಟಿ ಡಿಗ್ರಿ ಸೆಂಟಿಗ್ರೇಡ್ ಇತ್ತು. ಒಂದು ಮೈಲು ದೂರದಿಂದ ನೋಡಿದರೂ ಈ ಗೋಳದ ಪ್ರಖರತೆ ಸೂರ್ಯನಿಗಿಂತ ನೂರುಪಟ್ಟು ಅಧಿಕವಾಗಿತ್ತು. ಒಂದು ಸೆಕೆಂಡ್‍ನ ಒಳಗೆ ಆ ಗೋಲದ ವ್ಯಾಸ 200 ಗಜದಷ್ಟಾಯಿತು. ಹಾಗೆಯೇ ನಿರಂತರವಾಗಿ ಹಬ್ಬುತ್ತಾ ಈ ಗೋಲವು ವೇಗವಾಗಿ ಸಂಪೂರ್ಣ ನಗರವನ್ನು ನುಂಗಲು ಹೊರಟಿತ್ತು. 114 ಕಥಾ ಸಂಸ್ಕೃತಿ ನಾಗಾಸಾಕಿಯ ಸಮುದ್ರತಟ ಜ್ವಾಲೆಯ ಸುಳಿಯೊಳಗೆ ಸಿಕ್ಕ ನಗರದ ಪ್ರತಿಬಿಂಬದಿಂದಲೇ ಕೆಂಪಾಗಿಬಿಟ್ಟಿತು. ನೀರಿನ ಮೇಲ್ಮೈ ಮೇಲೆ ತೇಲುತ್ತಿರುವ ಬಂದರಿನಲ್ಲಿ ನಿಂತಿರುವ ಎಲ್ಲ ನೌಕೆಗಳಿಗೆ ಬೆಂಕಿ ಹೊತ್ತಿಕೊಂಡಿತು. ಮೂರು ಸಾವಿರ ಅಡಿ ವಿಸ್ತಾರದ ವರ್ತುಲದೊಳಗೆ ಹಾಜರಿದ್ದ ಯಾವ ವ್ಯಕ್ತಿಗೂ ಏನಾಗುತ್ತಿದೆಯೆಂಬುದು ಗೊತ್ತಾಗಲಿಲ್ಲ. ಆಗಿದ್ದರ ತುಸು ಮಾತ್ರ ಆಭಾಸಕ್ಕೆ ಮುನ್ನವೇ ಅವರೆಲ್ಲ ಸತ್ತಿದ್ದರು. ಒಬ್ಬ ಟೆಲಿಫೋನ್ ಲೈನ್‍ಮನ್ ಸೆಇಚಿ ಮುರಾಸಾಫಿ ಇಪ್ಪತ್ತು ಫೂಟು ಎತ್ತರದ ಕಂಬದ ಮೇಲೆ ಕೂತು ಕೆಲಸ ಮಾಡುತ್ತಿದ್ದ. ಒಮ್ಮೆಲೇ ನೂರು ಸೂರ್ಯರು ಪ್ರಜ್ವಲಿಸಿದರು. ಅವನು ಅದರ ತಾಪಕ್ಕೆ ಸುಟ್ಟು ಬೂದಿಯಾಗಿದ್ದ. ಎಂಟುವರ್ಷದ ಒಬ್ಬ ಹುಡುಗ ಮಾತ್ಸುವೊ ತನ್ನ ಆರು ಮಂದಿ ಸಂಗಾತಿಗಳೊಂದಿಗೆ ಅಡಗುವುದು-ಹುಡುಕುವುದು ಆಟ ಆಡುತ್ತಿದ್ದ. ಒಂದು ಸೆಕೆಂಡ್‍ನಲ್ಲಿ ಅವರ ಹೆಸರೂ ಅಳಿಸಿಹೋಗಿತ್ತು. ಉರಾಕಾಮಿ ಜೈಲಿನ 95 ಕೈದಿಗಳು 15 ಗಾರ್ಡುಗಳು ಸತ್ತರು. ಜೈಲಿನ ಮಜಬೂತಾದ ಕಟ್ಟಡದ ಗುರುತು ಉಳಿಯಲಿಲ್ಲ. ಸದ್ದು ಕೇಳಲಾಗದ, ಬೆಳಕು ಕಾಣಲಾಗದ ಅಂಧರು-ಕಿವುಡರು ಮಕ್ಕಳ ಸಂಸ್ಥೆಯ 45 ಮಕ್ಕಳು ಎಲ್ಲಿ ಹೋಗಿದ್ದರೋ ಅದೇ ಸ್ಥಿತಿಯಲ್ಲೇ ಕಲ್ಲಿದ್ದಲಿನ ಮೂರ್ತಿಯಾದರು. ಇಡೀ ಶಹರದಲ್ಲಿ ಬೆಂಕಿಯ ಜ್ವಾಲೆಯ ಸುಡುವಿಕೆ ಸೆಕೆಂಡುಗಳಲ್ಲಿ ಬದಲಾಗುತ್ತಿತ್ತು. ನೂರಾರು, ಸಾವಿರಾರು, ಹತ್ತು ಸಾವಿರ, ಹೀಗೇ ಮುಂದುವರಿಯಿತು. ನಾಗಾಸಾಕಿ ನಗರದಲ್ಲಿ ಸುಮಾರು 50000 ಇಮಾರತುಗಳಿದ್ದವು. ಅವುಗಳಲ್ಲಿ ಕನಿಷ್ಠ 20000 ಇಮಾರತುಗಳು ಸಂಪೂರ್ಣ ನಾಶವಾದವು. ಜಪಾನಿ ಅಧಿಕಾರಿಗಳ ಹೇಳಿಕೆಯ ಪ್ರಕಾರ 74800 ವ್ಯಕ್ತಿಗಳು ಮರಣ ಹೊಂದಿದರು. 75000 ಕ್ಕೂ ಹೆಚ್ಚು ಜನ ತೀವ್ರ ಗಾಯಾಳುಗಳಾದರು. ಈ ಮಹಾವಿನಾಶದ ತೀವ್ರ ತರವಾದ ವೇಗದ ಅಂದಾಜು ಮಾಡಲು ಈ ಒಂದು ಘಟನೆ ಸಾಕು. 12 ವರ್ಷದ ಹುಡುಗನೊಬ್ಬ ಕೊಇಚಿ ಹನ್ನೊಂದು ಗಂಟೆಯ ವೇಳೆಗೆ ಇತರ ಮಕ್ಕಳೊಂದಿಗೆ ಈಜುವ ಉಡುಪಿನಲ್ಲಿ ಉರಾಕಾಮಿ ನದಿಯ ದಂಡೆಯ ಮೇಲೆ ನಿಂತಿದ್ದ. ಅವರು ಒಂದು ಚಿಕ್ಕಗಂಟೆಯನ್ನು ನೀರಿನಲ್ಲಿ ಎಸೆಯುತ್ತಿದ್ದರು. ನಂತರ ನೀರಿಗೆ ಧುಮುಕಿ ಅದನ್ನು ಹುಡುಕಿ ತರುವ ಪ್ರಯತ್ನ ಮಾಡುತ್ತಿದ್ದರು. ಎಲ್ಲಕ್ಕಿಂತ ಮೊದಲು ಗಂಟೆಯನ್ನು ಹುಡುಕಿ ತರುವವನು ವಿಜೇತನಾಗುತ್ತಿದ್ದ. ಈ ಬಾರಿ ಗಂಟೆಯನ್ನು ಹುಡುಕುವ ಪಾಳಿ ಕೊಇಚಿಯದಾಗಿತ್ತು. ಅವನು ನೀರಿನಲ್ಲಿ ಜಿಗಿದು ಸುಮಾರು ಒಂದು ನಿಮಿಷ ನೀರೊಳಗೆ ಇದ್ದ. ಭಾರತ 115 ಅವನು ನೀರಿನ ಪಾತಳಿಯಿಂದ ತಲೆಯೆತ್ತಿ ನೋಡಿದಾಗ ಕಕ್ಕಾಬಿಕ್ಕಿಯಾಗಿದ್ದ. ಅವನ ಸಂಗಡಿಗರೆಲ್ಲ ನದಿಯ ತಟದ ಉಸುಕಿನ ಮೇಲೆ ಸತ್ತು ಬಿದ್ದಿದ್ದರು. ನಾಗಾಸಾಕಿಯ ಬಾಂಬ್ ಸ್ಪೋಟದಲ್ಲಿ ಉಳಿದವರು ಅದೃಷ್ಟವಶಾತ್ ಬದುಕುಳಿದಿದ್ದರು. ಒಬ್ಬ ವ್ಯಕ್ತಿ ಮೂರು ಫೂಟು ಎತ್ತರದ ಗೋಡೆಯ ಬದಿಯಲ್ಲಿ ಕುಕ್ಕುರುಗಾಲಿನಲ್ಲಿ ಕೂತು ತನ್ನ ಮನೆಯ ಹೂಬನದ ಸೌಂದರ್ಯ ಸವಿಯುತ್ತಿದ್ದ. ಅವನ ಸಮೀಪವೇ ಅವನ ಹಂಡತಿ ನಿಂತು ಏನೋ ಸಲಹೆ ಕೊಡುತ್ತಿದ್ದಳು. ವಿಸ್ಫೋಟವಾಗುತ್ತಲೇ ಅವನ ಹೆಂಡತಿ ಮಾತನಾಡುತ್ತಿದ್ದಂತೆ ನಿಲ್ಲಿಸಿದಳು. ವಿಸ್ಫೋಟದ ಉಷ್ಣತೆಯ ಝಳ ಆ ಗೋಡೆಯ ಮೇಲಿಂದಲೇ ಹಾಯ್ದು ಹೋಗಿತ್ತು. ಜೊತೆಯಲ್ಲಿ ಅವನ ಹೆಂಡತಿಯನ್ನು ಒಯ್ದಿತ್ತು. ಶಹರದ ಒಂದು ವ್ಯಾಪಾರ ಕ್ಷೇತ್ರದಲ್ಲಿ ಒಬ್ಬ ವ್ಯಾಪಾರಿ ತನ್ನ ಸೆಕ್ರೆಟರಿಯಿಂದ ಕೆಲವು ಕಾಗದ ಪತ್ರಗಳನ್ನು ತೆಗೆದುಕೊಳ್ಳುತ್ತಿದ್ದ. ಕೆಲವು ಕಾಗದಗಳು ಮೇಜಿನ ಕೆಳಗೆ ಬಿದ್ದವು. ಅವನು ಆ ಕಾಗದಗಳನ್ನು ತೆಗೆಯಲು ಮೇಜಿನ ಕೆಳಗೆ ಬಗ್ಗಿದಾಗ ಕೊಠಡಿಯ ಗೋಡೆ ಮುರಿದು ಬಿದ್ದಿತು. ಆಘಾತ ಸರಿದುಹೋಗುತ್ತಿದ್ದಂತೆ ವ್ಯಾಪಾರಿ ಮೇಜಿನ ಕೆಳಗೆ ಜೀವಂತವಿದ್ದ. ಅವನ ಸೆಕ್ರೆಟರಿ ಅಸುನೀಗಿದ್ದಳು. ಯುದ್ಧಮಂತ್ರಿ ಹಾಗೂ ಅನ್ಯ ಸೈನ್ಯಾಧಿಕಾರಿಗಳು ಆಗಲೂ ಶರಣಾಗತಿಗೆ ವಿರುದ್ಧವಾಗಿದ್ದರು. ಆದರೆ ಪ್ರಧಾನಮಂತ್ರಿ ಕಾಂತಾರೋ ಸುಜುಕೋ ಬಾಂಬ್ ಸ್ಫೋಟಿಸಿದ ಕೆಲವೇ ಗಂಟೆಗಳ ಅನಂತರ ಆಪತ್ಕಾಲೀನ ಸಭೆ ಕರೆದಿದ್ದ. ಜಪಾನಿನ ಸಂಪ್ರದಾಯಕ್ಕೆ ವಿರುದ್ಧವಾಗಿ ಸಮ್ರಾಟರು ಸ್ವಯಂ ಆ ಸಭೆಯಲ್ಲಿ ಹಾಜರಿದ್ದು ಘೋಷಣೆ ಮಾಡಿದರು. - “ನಾನು ತಕ್ಷಣ ಯುದ್ಧ ನಿಲ್ಲಿಸುವ ನಿರ್ಣಯ ಮಾಡಿದ್ದೇನೆ.” ಸಮ್ರಾಟರ ನಿರ್ಣಯವನ್ನು ಕೇಳಿ ಅನೇಕ ಜನರಲ್‍ಗಳು ಆತ್ಮಹತ್ಯೆ ಮಾಡಿಕೊಂಡರು. ಆದರೆ ಸಾಮ್ರಾಟರು ತಮ್ಮ ನಿರ್ಣಯಕ್ಕೆ ಅಚಲವಾಗಿ ಅಂಟಿಕೊಂಡರು. ಮತ್ತು 6 ದಿನಗಳ ಅನಂತರ 15 ಆಗಸ್ಟಗೆ ಜಪಾನ ಬೇಷರತ್ತಾಗಿ ಶರಣಾಗತವಾಯಿತು. 116 ಕಥಾ ಸಂಸ್ಕೃತಿ ಉರ್ವಶೀ ಮತ್ತು ಪುರೂರವ - `ಋಗ್ವೇದ'ದಿಂದ ಉರ್ವಶೀ ಮತ್ತು ರಾಜಾ ಪುರೂರವರ ಕತೆ ಋಗ್ವೇದದಲ್ಲಿ ಬಂದ, ವೈದಿಕ ಸಂಸ್ಕೃತಿಯ ಮೊದಲಕತೆ. ವಿದ್ವಾಂಸರು ಇದರ ಕಾಲವನ್ನು ಕ್ರಿ.ಪೂ. 1600 ಎಂದು ಭಾವಿಸಿದ್ದಾರೆ. ಈ ಮಾರ್ಮಿಕವಾದ ಪ್ರಣಯಕತೆಯು ಎರಡು ಭಿನ್ನ ಸಂಸ್ಕೃತಿಗಳ ನಡುವಣ ತಿಕ್ಕಾಟವಾಗಿದೆ. ಉರ್ವಶಿಯು ಸ್ವರ್ಗಲೋಕದ ಮುಖ್ಯ ಅಪ್ಸರೆಯಾಗಿದ್ದಳು. ಅವಳು ದೇವತೆಗಳ ರಾಜನಾದ ಇಂದ್ರನ ಕೃಪಾಪಾತ್ರಳಾಗಿದ್ದಳು. ಅವಳು ಅವನ ದರಬಾರಿನಲ್ಲಿ ಪ್ರತಿದಿನ ಸಂಜೆ ನೃತ್ಯಮಾಡುತ್ತಿದ್ದಳು. ಅವಳು ಸುಂದರಿಯಾಗಿದ್ದಳು. ಅವಳು ತನ್ನ ಹೃದಯವನ್ನು ಯಾರಿಗೂ ಅರ್ಪಿಸಿರಲಿಲ್ಲ. ಅವಳನ್ನು ಯಾರೂ ಕೂಡಾ ಬಾಲಿಕೆಯಾಗಿ, ಕಿಶೋರಿಯಾಗಿ, ಅಥವಾ ಮಾತೆಯಾಗಿ ಭಾವಿಸಿರಲಿಲ್ಲ. ಉರ್ವಶಿಯನ್ನು ಎಲ್ಲ ದೇವತೆಗಳ ಮಹಿಳಾ ಮಿತ್ರಳ ರೂಪದಲ್ಲಿಯೇ ತಿಳಿಯಲಾಗುತ್ತಿತ್ತು. ಒಂದು ಬಾರಿ ಅವಳು ಹಾಗೂ ಅವಳ ಗೆಳತಿ - ಮತ್ತೊಬ್ಬ ಅಪ್ಸರೆಚಿತ್ರ ಲೇಖಾ ಇಬ್ಬರೂ ಭೂಲೋಕದಲ್ಲಿ ಸುತ್ತಾಡಿ ಬರಲು ಹೋಗಿದ್ದರು. ಅಲ್ಲಿ ಒಬ್ಬ ಅಸುರನ ದೃಷ್ಟಿಯು ಅವರ ಮೇಲೆ ಬಿತ್ತು, ಮತ್ತು ಅವನು ಅವರನ್ನು ಅಪಹರಿಸಿದ. ಅವನು ಅವರನ್ನು ಒಂದು ರಥದಲ್ಲಿ ಕರೆದೊಯ್ಯುತ್ತಿರುವಾಗ ಅವರು ಜೋರಾಗಿ ಆಕ್ರಂದನ ಮಾಡತೊಡಗಿದರು. ಭೂಲೋಕದ ಒಬ್ಬ ದೊರೆ ಪುರೂರವನು ಅವರ ಚೀತ್ಕಾರವನ್ನು ಕೇಳಿದನು. ಪುರೂರವನು ಸಿಂಹದಂತೆ ನಿರ್ಭೀತನಾಗಿದ್ದನು. ಅವನು ಹಿಂಜರಿಯದೆ ಆ ಅಸುರನ ಮೇಲೆ ಆಕ್ರಮಣ ಮಾಡಿ ಕೊನೆಯಲ್ಲಿ ಅವನನ್ನು ತನ್ನ ಖಡ್ಗದಿಂದ ಕೊಂದುಹಾಕಿದನು. ಉರ್ವಶಿಯು ವಿಜಯಿಯಾದ ಪುರೂರವನ ಪ್ರೇಮಪಾಶದಲ್ಲಿ ಸಿಲುಕಿದ್ದಳು. ಪುರೂರವನೂ ಆ ಸುಂದರ ಅಪ್ಸರೆಯ ರಸಿಕ-ಪ್ರೇಮಿಯಾದನು. ಆದರೆ ಉರ್ವಶಿಯು ಸ್ವರ್ಗಲೋಕಕ್ಕೆ ಹಿಂತಿರುಗಲೇಬೇಕಾದ್ದರಿಂದ ಪುರೂರವನು ಅವಳಿಗಾಗಿ ಚಿಂತಿತನಾದನು. ಏನು ಮಾಡಬೇಕೆಂದು ಪುರೂರವನಿಗೆ ತೋಚಲಿಲ್ಲ. ಅವನು ತನ್ನ ಬಾಲ್ಯ ಸ್ನೇಹಿತ ವಿದೂಷಕನಿಗೆ ತನ್ನ ದುಃಖವನ್ನು ಹೇಳಿಕೊಂಡನು. ಒಂದು ದಿನ ಅವನು ಉದ್ಯಾನದಲ್ಲಿ ಕುಳಿತುಕೊಂಡು ವಿದೂಷಕನೊಂದಿಗೆ ಭಾರತ 117 ಉರ್ವಶಿಯನ್ನು ಕುರಿತು ಹೇಳಿಕೊಳ್ಳುತ್ತಿದ್ದಾಗ, ಉರ್ವಶಿಯು ಅವನ ಹಿಂದೆ ಬಂದು ನಿಂತುಕೊಂಡಿದ್ದರೂ ಅವನಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅನಂತರ ಅವಳು ತನ್ನ ಇರುವಿಕೆಯನ್ನು ಪುರೂರವನಿಗೆ ಮಾಡಿಕೊಟ್ಟಳು. ಇಬ್ಬರೂ ಪರಸ್ಪರ ಆಲಿಂಗನದಲ್ಲಿ ಬಂಧಿತರಾದರು. ಅದೇ ಹೊತ್ತಿಗೆ ಸ್ವರ್ಗಲೋಕದಿಂದ ಒಬ್ಬ ದೂತನು ಬಂದು ದೇವರಾಜ ಇಂದ್ರನ ಸಂದೇಶವನ್ನು ತಿಳಿಯಪಡಿಸಿದನು. ತಕ್ಷಣ ಅವಳು ಸ್ವರ್ಗಲೋಕಕ್ಕೆ ಬಂದು ಒಂದು ವಿಶೇಷ ನೃತ್ಯನಾಟಕದಲ್ಲಿ ಪಾಲುಗೊಳ್ಳಬೇಕೆಂದು ಇಂದ್ರನು ಅವಳಿಗೆ ಆಜ್ಞಾಪಿಸಿದ್ದನು. ಅನಿವಾರ್ಯವಾಗಿ ಊರ್ವಶಿಯು ಮರಳಿ ಹೋಗಲೇಬೇಕಾಯಿತು. ಆದರೆ ಉರ್ವಶಿಯ ಮನಸ್ಸು ಆ ನೃತ್ಯನಾಟಕದಲ್ಲಿ ಆಸಕ್ತವಾಗಿರಲಿಲ್ಲ. ಅವಳಿಗೆ ಅರಿವಿಲ್ಲದಂತೆಯೇ ಅವಳು ನಾಟಕದ ಮಧ್ಯೆ ಪುರೂರವನನ್ನು ಕರೆದಳು. ನೃತ್ಯ ನಾಟಕದ ರಚನಾಕಾರ ಭರತಮುನಿಯು ಇದರಿಂದ ಸಿಟ್ಟುಗೊಂಡನು. ಮತ್ತು ಅವಳಿಗೆ ತಕ್ಷಣ ಶಾಪ ಕೊಟ್ಟನು. “ನೀನು ನನ್ನ ನಾಟಕದಲ್ಲಿ ಮನಸ್ಸನ್ನು ತೊಡಗಿಸಲಿಲ್ಲ. ನೀನು ಭೂಲೋಕಕ್ಕೆ ಹೋಗಿ ಅಲ್ಲಿ ಪುರೂರವನೊಂದಿಗೆ ಮನುಷ್ಯರಂತೆಯೇ ಇರು.” ಉರ್ವಶಿಯು ಪುರೂರವನನ್ನು ಪ್ರೀತಿಸುತ್ತಿದ್ದಳು. ಆದರೆ ಮರ್ತ್ಯಲೋಕದಲ್ಲಿ ವಾಸವಾಗಿರಲು ಆಕೆಗೆ ಇಷ್ಟವಿರಲಿಲ್ಲ. ಆದ್ದರಿಂದ ಅವಳು ದೇವರಾಜ ಇಂದ್ರನ ಬಳಿ ಹೋಗಿ ನಮಸ್ಕರಿಸಿ ಅಂಗಲಾಚಿಕೊಳ್ಳುತ್ತ ಈ ಶಾಪದಿಂದ ಮುಕ್ತಗೊಳಿಸಲು ಬೇಡಿಕೊಂಡಳು. ಇಂದ್ರನಿಗೆ ತನ್ನ ಪ್ರೀತಿಯ ಅಪ್ಸರೆಯ ಮೇಲೆ ದಯೆ ಬಂದು ಹೇಳಿದ - “ಉರ್ವಶೀ, ನೀನು ಭೂಲೋಕಕ್ಕೆ ಹೋಗು. ಆದರೆ ನೀನು ಅಲ್ಲಿ ಬಹಳ ದಿನ ಇರುವುದಿಲ್ಲ.” ಹಾಗಾಗಿ ಉರ್ವಶಿಯು ಪುರೂರವನ ಬಳಿ ಹೋದಳು. ಅವನ ಬಳಿ ಹೋಗಲು ಅವಳಿಗೆ ಸಂತೋಷವಿತ್ತು. ಹಾಗೆಯೇ ಸ್ವರ್ಗಲೋಕದ ಎಲ್ಲ ಆನಂದಗಳಿಂದ ವಂಚಿತಳಾದ ಬಗ್ಗೆ ದುಃಖವೂ ಇತ್ತು. ಅವಳು ಪುರೂರವನಿಗೆ ಹೇಳಿದಳು - “ರಾಜಾ, ನಾನು ನಿನ್ನ ಬಳಿ ಇರುತ್ತೇನೆ. ನಿನ್ನ ವಧುವಾಗಿ ವಾಸಿಸುತ್ತೇನೆ. ಆದರೆ ಒಂದು ಶರ್ತದ ಮೇಲೆ. . . . .” “ಆ ಶರ್ತವೇನು ಹೇಳು. ನಿಶ್ಚಯವಾಗಿಯೂ ನಾನು ಅದನ್ನು ಪಾಲಿಸುವೆನು.” “ನಾನು ನಿನ್ನನ್ನು ವಿವಸ್ತ್ರನನ್ನಾಗಿ ಎಂದೂ ನೋಡುವಂತಾಗಬಾರದು.” “ಹಾಗೆ ಆಗಲಿ, ಈ ನಿನ್ನ ಶರ್ತಕ್ಕೆ ನನ್ನ ಒಪ್ಪಿಗೆ ಇದೆ.” ಒಂದು ವರ್ಷದ ಅನಂತರ ಉರ್ವಶಿಯು ಪುರೂರವನ ಮಗನಿಗೆ ಜನ್ಮವಿತ್ತಳು. ಉರ್ವಶಿಯು ಎರಡು ಕುರಿಮರಿಗಳನ್ನು ಸಾಕಿಕೊಂಡಿದ್ದಳು. ಅವುಗಳ 118 ಕಥಾ ಸಂಸ್ಕೃತಿ ಬಗ್ಗೆ ಎಷ್ಟೊಂದು ಅಕ್ಕರತೆಯಿತ್ತೆಂದರೆ, ತಾನು ಮಲಗಿ ಏಳುವವರೆಗೆ ಅವುಗಳನ್ನು ತನ್ನ ಮಂಚದ ಕಾಲಿಗೆ ಕಟ್ಟಿರುತ್ತಿದ್ದಳು. ಅತ್ತ ಸ್ವರ್ಗಲೋಕದಲ್ಲಿ ಸಂಗೀತಕಾರರಿಗೆ ಗಂಧರ್ವರಿಗೆ ಅವಳಿಲ್ಲದೆ ಕಲೆಯು ಅಪೂರ್ಣವೆಂದೇ ಭಾಸವಾಗುತ್ತಿತ್ತು. ಉರ್ವಶಿಯು ಪುರೂರವನಿಗೆ ವಿಧಿಸಿದ್ದ ಶರ್ತದ ಬಗೆಗೂ ಅವರಿಗೆ ತಿಳಿದಿತ್ತು. ಆದ್ದರಿಂದ ಮಧ್ಯರಾತ್ರಿಯಲ್ಲಿ ಅವರು ಒಂದು ಕುರಿಮರಿಯನ್ನು ಕದ್ದೊಯ್ದರು. ಅವರು ಉದ್ದೇಶಪೂರ್ವಕವಾಗಿಯೇ ಸದ್ದು ಮಾಡಲು ಊರ್ವಶಿಗೆ ಎಚ್ಚರವಾಯಿತು. ಅವಳು ಪುರೂರವನಿಗೆ ಕೂಗಿ ಹೇಳಿದಳು - “ಇಲ್ಲಿ ನೀವು ನಿದ್ದೆ ಮಾಡುತ್ತಿದ್ದೀರಿ, ಅಲ್ಲಿ ನನ್ನ ಕುರಿಮರಿಯನ್ನು ಗಂಧರ್ವರು ಕದ್ದೊಯ್ಯುತ್ತಿದ್ದಾರೆ.” ಆದರೆ ಪುರೂರವನು ಆಕಳಿಸಿ ಮಗ್ಗುಲು ಬದಲಿಸಿದನು. ಮರುದಿನ ಉರ್ವಶಿಯು ಸಿಟ್ಟಾಗಿಯೇ ಇದ್ದಳು. ಅವಳನ್ನು ಸಮಾಧಾನಪಡಿಸಲು ಪುರೂರವನು ವಿಫಲನಾದನು. ಕೆಲದಿನಗಳ ಅನಂತರ ಗಂಧರ್ವರು ಪುನಃ ಬಂದರು. ಉರ್ವಶಿಯು ಮತ್ತೆ ಚೀರಿದಳು. . . .” ಗಂಧರ್ವರು ನನ್ನ ಕುರಿಮರಿಯನ್ನು ಕದ್ದೊಯ್ಯುತ್ತಿದ್ದಾರೆ. ಈ ಬಾರಿ ಪುರೂರವನು ತಕ್ಷಣ ಎದ್ದು ಗಂಧರ್ವರನ್ನು ಹಿಂಬಾಲಿಸಿದನು. ಗಡಿಬಿಡಿಯಲ್ಲಿ ಅವನು ರಾತ್ರಿ ಕಾಲದಲ್ಲಿ ಧರಿಸಿದ್ದ ವಸ್ತ್ರವು ಕಳಚಿಹೋಯಿತು. ನೋಡ ನೋಡುತ್ತಿದ್ದಂತೆ ಗಂಧರ್ವರು ಒಮ್ಮೆ ಮಿಂಚು ಹೊಳೆಯುವ ವ್ಯವಸ್ಥೆ ಮಾಡಿದರು. ಉರ್ವಶಿಯು ಅವನನ್ನು ವಿವಸ್ತ್ರ ನೋಡಿದಳು. ಹಾಗೆಯೇ ಅಂತರ್ಧಾನಳಾದಳು. ಪುರೂರವನು ಅವಳಿಗಾಗಿ ಇಡಿಯ ಭೂಲೋಕವನ್ನೆಲ್ಲ ಹುಡುಕಿದನು. ಪರ್ವತಗಳು, ಕೊಳ್ಳಗಳಲ್ಲಿ ತಿರುಗಾಡಿದನು. ಮನಸ್ಸು ವಿಕ್ಷಿಪ್ತಗೊಂಡು ಒಮ್ಮೊಮ್ಮೆ ಉರ್ವಶಿಯೆಂದೇ ಭಾವಿಸಿ ಕಾನನದ ಲತೆಗಳನ್ನು ಬಿಗಿದಪ್ಪುತ್ತಿದ್ದನು. ಮರಗಳಿಂದ ಉದುರುವ ನೀರಿನ ಹನಿಗಳ ಸದ್ದಿನಲ್ಲಿ ಅವನು ಉರ್ವಶಿಯ ಹೆಜ್ಜೆಯ ಸದ್ದುಗಳನ್ನು ಆಲಿಸುತ್ತಿದ್ದನು. ಆಕಾಶವು ನಿರಭ್ರವಾಗಿ ಹಕ್ಕಿಗಳು ಚಿಲಿಪಿಲಿ ಸದ್ದು ಮಾಡಿದಾಗ ಅವನು ಉರ್ವಶಿಯು ನಕ್ಕಂತೆ - ಹಾಡಿದಂತೆ ಭ್ರಮಿತಗೊಳ್ಳುತ್ತಿದ್ದನು. ಆಕಾಶವು ಮೋಡಗಳಿಂದ ಮುಸುಕಿರಲು, ಅವನು ಊರ್ವಶಿಯು ಅಲ್ಲೆಲ್ಲೋ ಅಡಗಿರಬೇಕೆಂದೂ ಹುಡುಕಿದರೆ ಸಿಗುವಳೆಂದೂ ಭಾವಿಸುತ್ತಿದ್ದನು. ಆದರೆ ಅವನ ಹುಡುಕಾಟ ವ್ಯರ್ಥವಾಯಿತು, ಊರ್ವಶಿಯು ಅವನಿಗೆ ದೊರೆಯಲಿಲ್ಲ. ಅನೇಕ ವರ್ಷಗಳ ಅನಂತರ ಉರ್ವಶಿಗೆ ಅವನ ಬಗೆಗೆ ದಯೆಯುಂಟಾಯಿತು. ಅವಳು ಅವನ ಎದುರು ಪ್ರಕಟಳಾದಳು. ಅವಳು ಹೇಳಿದಳು - “ನೀನು ನನ್ನನ್ನು ವರ್ಷದ ಕೊನೆಯ ದಿನ ಮಾತ್ರ ಪಡೆಯಬಲ್ಲೆ.” ಸೃಷ್ಠಿಕತೆ (ಭಾರತ) 119 ಹಾಗೆ ವರ್ಷದಲ್ಲಿ ಒಂದು ದಿನ ಅವಳು ಪುರೂರವನಿಗೆ ದೊರೆಯುತ್ತಿದ್ದಳು, ವರ್ಷದ ಉಳಿದ ದಿನಗಳು ಅವನು ವಿರಹಾಗ್ನಿಯಲ್ಲಿ ಬೇಯುತ್ತಿದ್ದ, ಅವಳಿಗಾಗಿ ಹುಡುಕಾಡುತ್ತಿದ್ದ, ಆ ಸೌಂದರ್ಯ, ಲಾವಣ್ಯ, ಮೋಹಕತೆ, ಹಾಗೂ ಭವ್ಯತೆಯನ್ನು ಕಾಣಲಾರದೆ ವ್ಯಥಿತನಾಗುತ್ತಿದ್ದ. ಮತ್ತು ಅಲ್ಲಿಂದಲೇ ಸಾಹಿತ್ಯದ ಪ್ರಾರಂಭವೂ ಆಯಿತು. 120 ಕಥಾ ಸಂಸ್ಕೃತಿ ಪೃಥುವಿನ ಕತೆ - ಠಾಕೂರ್ ಪ್ರಸಾದ ಸಿಂಹ ಇದು ವೈದಿಕ ಕಾಲದಲ್ಲಿ ಬರೆದ ಮೊದಲ ಸಾಹಿತ್ಯಕ ರಚನೆ. ಆರ್ಯರ ಸಂಕ್ರಮಣಕಾಲ ಮುಗಿದಿತ್ತು. ಅವರ ಸಾಮಾಜಿಕ, ರಾಜಕೀಯ ಜೀವನದಲ್ಲಿ ಸ್ಥಿರತೆ ಬಂದಿತ್ತು. ಆಗ ಘಟಿಸಿದ ಕೆಲವು ಘಟನೆಗಳಿಂದ ಅವರ ಜೀವನ ಸಂಚಲನಗೊಂಡಿತ್ತು. ಅಂಥ ಕಲ್ಲೋಲಕಾಲದ ಒಂದು ಮಹಾಗಾಥೆ ಇಲ್ಲಿದೆ. ಅದು ಪರಿಸ್ಥಿತಿಯನ್ನು ಪುನರ್ಮೌಲ್ಯಾಂಕನ ಹಾಗೂ ಪುನರ್ನಿರ್ಮಾಣ ಮಾಡಲು ಕಾರಣವೆನಿಸಿತು. ಮಿಂಚು ಹೊಳೆದು ತಣ್ಣಗಾಯಿತು. ಅಸಾಧ್ಯ ಆವೇಶದ ಒಂದು ಕ್ಷಣ ಮಿಂಚಿ ಮರೆಯಾಗುತ್ತಿದ್ದಂತೆ ಜನ ನೋಡಿದರು. ಸಿಟ್ಟಿನಿಂದ ಉರಿಯುತ್ತಿದ್ದ ಋಷಿಗಳ ಪಾದಗಳ ಬಳಿ ಪ್ರತಾಪಶಾಲಿಯಾದ ರಾಜಾ ವೇನನು ಸತ್ತುಬಿದ್ದಿದ್ದ. ವೈವಸ್ವತ ಮನುವು ನಾಲ್ಕೂ ಕಡೆ ಅಸುರರು, ಗಂಧರ್ವರು, ಕಿನ್ನರರು ಮತ್ತೆಷ್ಟೋ ಜನಜಾತಿಗಳ ನಡುವೆ ಉಳಿಸಿ, ಸರಸ್ವತೀ ನದಿಯ ತೀರದಲ್ಲಿ ನೆಲೆಗೊಳಿಸಿದ ಜೀವಿಗಳು ಅವರ ಏಳನೇ ತಲೆಮಾರಿನಲ್ಲೇ ಅವರ ಬುಡ-ಬೇರು ಸಹಿತ ಅಲುಗಾಡತೊಡಗಿದ್ದರು. ಹಾಗಾದರೆ ಇವೆಲ್ಲ ಆಗಿದ್ದಾದರೂ ಯಾಕೆ? ನಾಲ್ಕೂ ಕಡೆಗಳಿಂದ ಶತ್ರುಗಳಿಂದ ಸುತ್ತುವರಿದ ಆರ್ಯರು ಎಂದೂ ಅಷ್ಟೊಂದು ನಿಶ್ಚಿಂತರಾಗಿರಲಿಲ್ಲ. ತಾವೇ ಆಯ್ಕೆ ಮಾಡಿದ ರಾಜರನ್ನು ತಮ್ಮ ಕೈಯಿಂದಲೇ ಕೊಂದುಹಾಕಲು ಯುದ್ಧಕ್ಕೆ ತಯಾರಾಗುವುದು ಸಾಧ್ಯವಿರಲಿಲ್ಲ. ಅಂದೊಮ್ಮೆ ಋಷಿಗಳ ಗಾಯನದಿಂದ ಪ್ರಸನ್ನರಾಗಿ ಋಷಿಗಳಿಗೆ ವಿಶೇಷಾಧಿಕಾರಕೊಟ್ಟ ಅವರು ಸರಸ್ವತೀ ನದೀತೀರದ ಎಲ್ಲಕ್ಕಿಂತ ಉತ್ತಮ ಕೃಷಿಭೂಮಿಯನ್ನು ಕೊಟ್ಟು ಗೌರವಿಸಿದ ವಿಶೇಷಾಧಿಕಾರವೇ ಒಂದು ದಿನ ತಮ್ಮ ವಂಶಜರ ಪ್ರಾಣವನ್ನು ತೆಗೆದುಕೊಂಡೀತೆಂದು ಬಹುಶಃ ಎಂದೂ ಯೋಚಿಸಿರಲಿಲ್ಲ. ಸಂಪೂರ್ಣ ವಿಶ್ವದ ಮೇಲೆ ‘ಬರ’ದ ಘನಘೋರ ನೆರಳು ಕವಿದು ಬಂದಿತ್ತು. ಮಳೆಯಿಲ್ಲದೆ ಹೊಲ ಒಣಗಿ ಹೋಗಿತ್ತು. ಶತಮಾನಗಳ ಹಿಂದಿನಿಂದ ಸ್ಥಾಪಿಸಿದ್ದ ನಿಯಮದ ಪರಂಪರೆಯನ್ನು ಮುರಿಯಬೇಕಾದ ಸ್ಥಿತಿ ಬಂದು ಬಿಟ್ಟಿತ್ತು. ಈ ನಿಯಮವನ್ನು ಮನುವಿನ ವಂಶಜರು ‘ಋತ’ ಎಂದು ಕರೆಯುತ್ತಿದ್ದರು, ಸೃಷ್ಠಿಕತೆ (ಭಾರತ) 121 ಮತ್ತು ಅದನ್ನು ಕಲ್ಪಿಸಿಕೊಂಡಾಗೆಲ್ಲ ರೋಮಾಂಚದ ಅನುಭವ ಪಡೆಯುತ್ತಿದ್ದರು. ಇಂದು ಅದೇ ‘ಋತ’ವು ರಥದ ಮೇಲಿನ ಬಾವುಟದಂತೆ ಜೋರಾದ ಗಾಳಿಗೆ- ಬಿರುಗಾಳಿಗೆ ತಟಪಟ ಬಡಿದುಕೊಳ್ಳುತ್ತಿತ್ತು. ಆರ್ಯರ ನೆಲೆಗಳೆಲ್ಲ ಉದಾಸವಾಗಿದ್ದವು. ಹಸಿವಿನಿಂದ ಅವರ ಅಂಗಾಗಗಳು ಕಂಪಿಸುತ್ತಿದ್ದವು. ಆದರೆ ಸರಸ್ವತೀ ತೀರದಲ್ಲಿ ಋಷಿಗಳಿಗಾಗಿ ಬಿಟ್ಟ ಸುರಕ್ಷಿತ ಕ್ಷೇತ್ರದಲ್ಲಿ ಈಗಲೂ ಬೆಳೆ ಹಸಿರಾಗಿ ಕಂಗೊಳಿಸುತ್ತಿತ್ತು. ಋಷಿಗಳು ಸುಖವಾಗಿ ಯಜ್ಞದಲ್ಲಿ ನಿರತರಾಗಿದ್ದರು. ಹಸಿವೆಯಿಂದ ಕಂಗೆಟ್ಟು ನರಳುವಾಗ ಋಷಿಗಳು ಆ ಸೌಕರ್ಯದಲ್ಲಿ ಬದುಕುವುದು ಯೋಗ್ಯವೇ ಎಂಬ ಪ್ರಶ್ನೆಯು ಎಲ್ಲರ ಮನದಲ್ಲಿ ಉದಿಸುತ್ತಿತ್ತು. ಆದರೆ ಈ ಪ್ರಶ್ನೆಯನ್ನು ಎತ್ತುವುದರ ದುಷ್ಪರಿಣಾಮವು ಎಲ್ಲರ ಎದುರಿಗಿತ್ತು. ವಿಶದ ಪ್ರಮುಖನಾದ ವೇನನನ್ನು ವಧಿಸಲಾಗಿತ್ತು. ಆದರೆ ವೇನನ ತಪ್ಪಾದರೂ ಏನು? ಬರಬಿದ್ದಾಗ ಇದ್ದುದ್ದನ್ನು ಹಂಚಿಕೊಂಡು ಅನುಭವಿಸಬೇಕೆಂದು ಅವನು ಹೇಳಿದ್ದನಷ್ಟೇ. ವೇನನು ಇಡಿಯ ವಿಶ್ವದ ಪ್ರಧಾನನಾಗಿದ್ದನು. ಮತ್ತು ಎಲ್ಲರ ಹಸಿದ ಕಣ್ಣುಗಳನ್ನು ಎಂದಿನಿಂದಲೂ ನೋಡುತ್ತಿದ್ದನು. ಅವನು ಕೇವಲ ತನ್ನ ಮನಸ್ಸಿನ ಸಂಶಯವನ್ನಷ್ಟೇ ಹೇಳಿದ್ದನು. ವೇನನ ಮರಣದಿಂದ ಯಾವ ಸಮಸ್ಯೆಯೂ ಬಗೆಹರಿದಿರಲಿಲ್ಲ. ಬದಲಿಗೆ ಸಮಸ್ಯೆ ಇನ್ನಷ್ಟು ಭೀಕರವಾಗಿ ಎದುರು ನಿಂತಿತ್ತು. ವೇನನು ಹಸಿವಿನಿಂದ ನರಳುವ ವಿಶ್ವಕ್ಕಾಗಿ ಸತ್ತಿದ್ದನು ಎಂಬ ಮಾತು ಹಸಿದ ಜನರಿಗೆ ದೊಡ್ಡದಾಗಿತ್ತು. ಅದರ ಅನಂತರ ಸ್ಫೋಟಿಸಿದ ಪ್ರಳಯವನ್ನು ಶಮನಗೊಳಿಸುವುದು ಋಷಿಗಳ ವಶದಲ್ಲಿರಲಿಲ್ಲ. ಋಷಿಗಳು ಬರದಲ್ಲಿ ಚೆಲ್ಲಾಪಿಲ್ಲಿಯಾದರು. ನಳನಳಿಸುತ್ತಿದ್ದ ಪೈರನ್ನು ತುಳಿಯಲಾಯಿತು. ಇಡಿಯ ವಿಶ್ವ ಆತ್ಮಘಾತುಕವಾದ ಯುದ್ಧದಲ್ಲಿ ಮುಳುಗಿತ್ತು. ವೇನನ ಮಗ ಪೃಥು ವೇನನಿಂದ ಬೇರೆಯಾಗಿ ಹೋಗಿದ್ದ. ಅವನು ಆ ಸಮಯದಲ್ಲಿ ಏನೂ ಮಾಡಲಾರದವನಾದರೂ ಯೋಚಿಸುವುದನ್ನು ನಿಲ್ಲಿಸಿರಲಿಲ್ಲ. ತನ್ನ ಕೆಲವು ಸಂಗಡಿಗರೊಂದಿಗೆ ಸರಸ್ವತಿ ದಡದಿಂದ ದೂರ ಸರಿದು ಅವನು ಸಮಸ್ಯೆಯ ಸಮಾಧಾನವನ್ನು ಹುಡುಕಿಕೊಳ್ಳಲು ಪ್ರಯತ್ನಿಸಿದರೂ, ಅವನ ಎದುರು ಅದೇ ಅದೇ ದೃಶ್ಯಗಳು ಬಂದು ಕುಣಿಯುತ್ತಿದ್ದವು. ಸರಸ್ವತಿಯ ದಂಡೆಯಿಂದ ಮುಂದುವರಿಯುತ್ತ ಪೃಥುವು ಅತ್ಯಂತ ದಟ್ಟ ಅಡವಿಗೆ ಬಂದಿದ್ದ. ಏಕಾಂತವನ್ನು ನೋಡಿ ಅವನು ನೀರಿಗಿಳಿದು ಬೊಗಸೆಯಲ್ಲಿ ನೀರನ್ನೆತ್ತಿ, ನಿಧನರಾದ ತನ್ನ ತಂದೆಗೆ ತರ್ಪಣವನ್ನು ಕೊಟ್ಟ. ನೀರಿನಲ್ಲಿ ಅವನ ತುಣುಕು ಪ್ರತಿಬಿಂಬವು ಮತ್ತೆ ಮತ್ತೆ ಸ್ಥಿರವಾಗಿ ಅನಂತರ ಹರಡಿಹೋಗುತ್ತಿತ್ತು. ಅವನ ಇಡೀ ಮನಸ್ಸು ತಪಿಸುತ್ತಿತ್ತು. ಪ್ರಜೆಗಳು ಚಡಪಡಿಸುತ್ತಿದ್ದರು. ಹತ್ತುದಿನಗಳವರೆಗೆ ಅವನು ನಿರಾಹಾರ ನೀರಿನಲ್ಲಿ ನಿಂತೇ ಇದ್ದ, ತನ್ನನ್ನೇ ಸಮರ್ಪಿಸಿಕೊಂಡು 122 ಕಥಾ ಸಂಸ್ಕೃತಿ ಬಿಡಬೇಕೆಂಬ ತೀವ್ರತರವಾದ ಪ್ರೇರಣೆಯು ಅವನ ಮನಸ್ಸನ್ನು ಕಟೆಯತೊಡಗಿತು. ಇಡಿಯ ವಿಶ್ವವನ್ನೇ ಮೃತ್ಯುವಿನ ಬಾಯಿಗೆ ಎಸೆದರೂ ತಂದೆಯ ಸಾವಿನ ಪ್ರತೀಕಾರವನ್ನು ಸಾಧಿಸುವುದು ಸಾಧ್ಯವಿರಲಿಲ್ಲ. ಯಾವ ಜನರಿಗಾಗಿ ಅವನ ತಂದೆ ಸತ್ತಿದ್ದರೋ ಆ ಜನ ಈಗಲೂ ಹಸಿದಿದ್ದರು. ಮತ್ತು ವಿಕ್ಷಿಪ್ತರಂತೆ ತಮ್ಮದೆಲ್ಲವನ್ನೂ ನಾಶಪಡಿಸಿಕೊಳ್ಳುವಲ್ಲಿ ನಿರತರಾಗಿದ್ದರು. ತಂದೆಯ ಮರಣಕ್ಕೆ ಪ್ರತಿಕಾರವೆಂದರೆ, ಈ ಹಸಿದು ಅಂಡಲೆಯುತ್ತಿರುವ ವಿಶ್ವದ ಜನರಿಗೆ ಶಾಂತ ಜೀವನವನ್ನು ಒದಗಿಸುವುದು. ಒಂದು ದೃಢವಿಶ್ವಾಸದೊಂದಿಗೆ ಪೃಥುವು ಮರಳಿ ಬಂದ. ಬೆಂಕಿಯ ಸಹಾಯದಿಂದ ಆ ದಟ್ಟ ಅರಣ್ಯವನ್ನು ಸುಟ್ಟ. ನಿಧಾನವಾಗಿ ಭೂಮಿಯು ತನ್ನ ಒಳ ಸತ್ವವನ್ನು ತೆರೆಯಿತು. ಪೃಥುವು ಬೆಳೆ ಬೆಳೆಯಲು ನಿಧಾನವಾಗಿ ನೆಲವನ್ನು ಉತ್ತನು. ಇದಕ್ಕೆ ಮುನ್ನ ಆರ್ಯರು ಹೀಗೆಯೇ ಮೊನಚಾದ ಕಟ್ಟಿಗೆಯ ಮೊನೆಯಿಂದ ನೆಲದಲ್ಲಿ ತಗ್ಗು ತೆಗೆಯುವುದನ್ನು ನೋಡಿದ್ದ. ಈ ನೆಲಕ್ಕೆ ನೀರಷ್ಟೇ ಸಾಲದು, ನೇಗಿಲಗೆರೆಯೂ ಬೇಕು ಎಂಬುದನ್ನು ಅನುಭವದಿಂದ ಕಂಡುಕೊಂಡ. ಇದರಿಂದ ಅವನಿಗೆ ನೇಗಿಲ ಕಲ್ಪನೆ ಹೊಳೆಯಿತು. ಸುಟ್ಟು ಭಸ್ಮವಾದ ಗಿಡಮರಗಳ ಗೊಬ್ಬರ, ನೇಗಿಲಧಾರೆಯ ಉಳುವಿಕೆಯಿಂದ ಭೂಮಿಯು ತನ್ನ ಎದೆಯನ್ನು ತೆರೆದುಕೊಂಡಿತು. ಹಸಿದು ಆರ್ದ್ರತೆಯೊಣಗಿದ, ವಿನಾಶದ ಅಂಚಿನಲ್ಲಿ ನಿಂತ ಒಂದು ಜಾತಿಯು ಇದರಿಂದ ಹೊಸ ಚೈತನ್ಯದ ಸ್ಪರ್ಶವನ್ನು ಪಡೆದುಕೊಂಡಿತು. ವಿಶ್ವ ವೇನನ ಮಗ ಪೃಥುವನ್ನು ಪುನಃ ತನ್ನ ಹೆಗಲಿನಮೇಲೆ ಕುಳ್ಳಿರಿಸಿಕೊಂಡಿತು. ಮತ್ತು ಹೊಸ ಜೀವನದ ಆಭಾರವನ್ನು ಸ್ವೀಕರಿಸಲು ಅವರು ಆ ದಿನದಿಂದ ಭೂಮಿಯ ಹೆಸರನ್ನು ಬದಲಿಸಿ ‘ಪೃಥ್ವಿ’ ಎಂದು ಕರೆದರು. ಪೃಥುವು ಬಾಗಿಲಲ್ಲಿ ನಿಂತ ಹಸುವಿನ ಸೇವೆ ಮಾಡಿದಂತೆ ಭೂಮಿಗೆ ಸೇವೆ ಸಲ್ಲಿಸಿ ಕೈವಶ ಮಾಡಿಕೊಂಡನು, ಮತ್ತು ತನ್ನ ಇಚ್ಛಾನುಸಾರ ಹಾಲು ಹಿಂಡಿದನು. ಎಂದೋ ನಿಂತುಹೋಗಿದ್ದ ಜೀವನ ಪ್ರವಾಹ ನಿರಂತರ ಭಾವದಿಂದ ಸರಸ್ವತಿಯ ದಡದ ಮೇಲೆ ಹರಿಯತೊಡಗಿತು. ಹೊಸ ಬಾವುಟದಂತೆ, ಆರ್ಯರು ಹೊಸ ಋತವನ್ನು ಬೀಡಿನಲ್ಲಿ ಸ್ಥಾಪಿಸಿದರು. ಆದರೆ, ಈ ಋತವು ಋಷಿಗಳ ವಸತಿಯಲ್ಲಿ ಹಾರಾಡುವ ಬಾವುಟದಂಥದ್ದಲ್ಲ. ಅದು ಸಂಪೂರ್ಣ ವಿಶ್ವದ ಋತವಾಗಿತ್ತು, ಅಲ್ಲಿ ಎಲ್ಲರಿಗೂ ಸಮಾನ ಅಧಿಕಾರವಿತ್ತು ಮತ್ತು ಎಲ್ಲರೂ ಸಮಾನ ಸುಖ-ದುಃಖಗಳಲ್ಲಿ ಸಮಾನ ಮನಸ್ಸಿನಿಂದ, ಸಮಾನಚಿತ್ತ ಸಮಾನ ವೇಗದಿಂದ ಒಂದುಗೂಡಿ ಮುಂದುವರಿಯುವ ಭಾವನೆಯಿಂದ ಪ್ರೇರಿತರಾಗಿದ್ದರು. ತ್ರಿಶಂಕುವಿನ ಕತೆ 123 ತ್ರಿಶಂಕುವಿನ ಕತೆ - ರಘುನಾಥ ಸಿಂಹ ಜನಪದದಲ್ಲಿ ಪ್ರಚಲಿತವಿರುವ ರಾಮಕತೆಯು ಲಿಖಿತ ರಾಮಾಯಣ ಕಾಲಕ್ಕಿಂತ (ಕ್ರಿ.ಪೂ1200) ಹಳೆಯದು ಮಹಾಭಾರತಕ್ಕಿಂತಲೂ ಮೊದಲಿನದು. ವಾಲ್ಮೀಕಿ ರಾಮಾಯಣದ ಒಂದು ಕತೆಯನ್ನು ಇಲ್ಲಿ ಕೊಡಲಾಗಿದೆ. ಇಂದಿಗೂ ಮನುಷ್ಯನ ನಿಯತಿಯ ಸಂದರ್ಭದಲ್ಲಿ ಅತ್ಯಾಧುನಿಕವೆನಿಸುತ್ತವೆ. “ಗುರುದೇವ” - ಇಕ್ಷ್ವಾಕುಕುಲ ವರ್ಧನ ವಿಖ್ಯಾತ ಮಹಾರಾಜ ತ್ರಿಶಂಕುವು ಗುರುವಸಿಷ್ಠರಿಗೆ ನಮಸ್ಕರಿಸಿದ. “ರಾಜಾ, ಕುಶಲವೇ?”- ಮಹಾತ್ಮ ವಸಿಷ್ಠರು ಸ್ನೇಹ ಪೂರ್ವಕ ಕೇಳಿದರು. “ಭಗವನ್, ಯಜ್ಞ ಮಾಡುವ ಬಯಕೆಯಾಗಿದೆ.” “ಪ್ರಯೋಜನ?” “ನಾನು ಸಶರೀರವಾಗಿ ದೇವತೆಗಳಿರುವ ಸ್ವರ್ಗಕ್ಕೆ ಹೋಗಬಯಸುತ್ತೇನೆ.” “ರಾಜಾ,” ವಿಸ್ಮಿತರಾದ ಮಹಾತ್ಮಾ ವಸಿಷ್ಠರು ಹೇಳಿದರು. -“ನಾನು ಅಸಮರ್ಥನು. ಈ ಯಜ್ಞದ ಸಿದ್ಧತೆ ಮಾಡಲಾಗುವುದಿಲ್ಲ” ತ್ರಿಶಂಕು ಉದಾಸನಾದ. ಮಹಾತೇಜಸ್ವಿಯಾದ ರಾಜಾ ತ್ರಿಶಂಕು ದಕ್ಷಿಣ ದಿಕ್ಕಿನತ್ತ ತೆರಳಿದ. ಗುರುವಸಿಷ್ಠರ ಒಂದು ನೂರು ಮಕ್ಕಳು ಅಲ್ಲಿ ತಪಸ್ಸು ಮಾಡುತ್ತಿದ್ದರು. ರಾಜನು ಅವರ ಬಳಿ ಹೋಗಿ ಹೇಳಿದ- “ಮುನಿವರ್ಯರೇ, ಈ ಬಡವನು ಶರಣಾಗತನಾಗಿದ್ದಾನೆ” ವಸಿಷ್ಠ ಪುತ್ರರು ಹೇಳಿದರು “ನಿಮಗೆ ನಾವೇನು ಉಪಕಾರ ಮಾಡಬಲ್ಲೆವು?” “ಗುರುಪುತ್ರರೇ, ಸದೇಹವಾಗಿ ಸ್ವರ್ಗಕ್ಕೆ ಹೋಗಲು ಯಜ್ಞವನ್ನು ಆಯೋಜಿಸುವಂತೆ ಗುರುವಸಿಷ್ಠರಿಗೆ ಪ್ರಾರ್ಥನೆ ಮಾಡಿಕೊಂಡಿದ್ದೆ. ಗುರುಗಳು ತಾವು ಅಸಮರ್ಥರು ಎಂದರು. ತಪೋಧನರೇ, ಈಗ ನಿಮ್ಮನ್ನುಳಿದು ನನಗೆ ಬೇರಾರು ಸಹಾಯ ಮಾಡಬಲ್ಲರು?” ತ್ರಿಶಂಕುವು ವಿನಯದ ಸ್ವರದಲ್ಲಿ ಹೇಳಿದನು. “ಇಕ್ಷ್ವಾಕು ಕುಲಕ್ಕೆ ವಸಿಷ್ಠರೇ ಪುರೋಹಿತರು. ಅವರೇ ಪರಮಗತಿ. ತಾವು ಆ ಸತ್ಯವಾದಿಯಾದ ಗುರುವಿನ ವಚನವನ್ನು ಅತಿಕ್ರಮಿಸಿದರೆ ಒಳ್ಳೆಯ ಕಾರ್ಯ ಮಾಡಿದಂತಾಗಲಿಕ್ಕಿಲ್ಲ” ವಸಿಷ್ಠಪುತ್ರರು ಉಗ್ರ ಸ್ವರದಲ್ಲಿ ಹೇಳಿದರು. “ಮಹಾತ್ಮರೇ, ಭಗವಾನ್ ವಸಿಷ್ಠರು ಯಜ್ಞವು ಅಶಕ್ಯವೆಂದಿದ್ದಾರೆ” 124 ಕಥಾ ಸಂಸ್ಕೃತಿ “ಯಜ್ಞವನ್ನು ಮಾಡಿಸುವ ಸಾಮರ್ಥ್ಯವು ನಮ್ಮಲ್ಲಿ ಎಲ್ಲಿಂದ ಬರಬೇಕು.?” “ತಪೋಧನರೇ” ರಾಜನು ಗಂಭೀರ ಪೂರ್ವಕ ಹೇಳಿದನು” ಗುರುಗಳು ಯಜ್ಞ ಮಾಡುವುದನ್ನು ಅಸ್ವೀಕಾರ ಮಾಡಿದರು, ಗುರುಪುತ್ರರೇ, ತಮ್ಮಲ್ಲಿಯೂ ನಿವೇದಿಸಿಕೊಂಡೆ. ತಾವೂ ಇದಕ್ಕೆ ಒಪ್ಪಲಿಲ್ಲ. ನಾನು ಮತ್ತೆಲ್ಲಿ ಹೋಗಲಿ?” ಗುರುಪುತ್ರರ ಮುಖ ಕೆಂಪಾಯಿತು ರಾಜನ ಮಾತನ್ನು ಕೇಳಿ ಅವರು ಹೇಳಿದರು “ಚಾಂಡಾಲನಾಗು......” “ಓಡಿ...... ಓಡಿ....... ಓಡಿ........” ನಾಗರಿಕರು ಆತಂಕಗೊಂಡಿದ್ದರು. ನೂಕು ನುಗ್ಗಲು ಇತ್ತು. ನಾಗರಿಕರು ಓಡುತ್ತಿದ್ದರು. ಒಬ್ಬನು ಓಡುತ್ತಲೇ ಕೇಳಿದ - “ಆಗಿದ್ದಾದರೂ ಏನು?” “ಜನರು ಸಂಸಾರ ತೆಗೆದುಕೊಂಡು ಹೊರಟಿದ್ದಾರೆ” “ಚಾಂಡಾಲ ರಾಜ್ಯದಲ್ಲಿ ಯಾರು ಇರುತ್ತಾರೆ?” ರಥದ ಮೇಲೆ ಸಾಮಾನು ಹೇರಿಕೊಂಡು ಹೋಗುತ್ತಿದ್ದ ಸ್ತ್ರೀಯರು ಹೇಳಿದರು. “ಮಂತ್ರಿಗಳೂ ರಾಜರ ಒಡನಾಟವನ್ನು ಬಿಟ್ಟರು” ಕುದುರೆ ಸವಾರನು ಹೇಳಿದನು. ರಾಜನ ವಸ್ತ್ರ ನೀಲಿಯಾಗಿತ್ತು. ಅವನ ಬಣ್ಣ ನೀಲಿಯಾಗಿತ್ತು. ಶರೀರವು ಕಪ್ಪಾಗಿತ್ತು. ತಲೆಗೂದಲು ಚಿಕ್ಕದಾಗಿದ್ದವು. ಚಿತಾಭಸ್ಮವು ಅಂಗರಾಗವಾಗಿತ್ತು. ಸ್ಮಶಾನ ಮಾಲೆಯು ಕಂಠದ ಅಶುಭ ಶೋಭೆಯಾಗಿತ್ತು. ಹಾಕಿಕೊಂಡಿದ್ದ ಒಡವೆಗಳು ಲೋಹದವಾಗಿದ್ದವು. ರಾಜನು ಜಿತೇಂದ್ರಿಯನಾಗಿದ್ದನು. ಆತನು ಭಯಪಡಲಿಲ್ಲ. ಸಂಯಮದಿಂದಲೇ ಕಾರ್ಯನಿರ್ವಹಿಸಿದ. ಅಂಥ ಪರಿಸ್ಥಿತಿಯಲ್ಲೂ ವಿಚಲಿತನಾಗಲಿಲ್ಲ. ವಿವೇಕವು ಅವನ ಜೊತೆಯಲ್ಲಿತ್ತು. ಆದರೆ ಭವಿಷ್ಯದ ಚಿಂತೆಯು ಅವನನ್ನು ಆವರಿಸಿತ್ತು. “ರಾಜಾ” ವಿಶ್ವಾಮಿತ್ರನ ಕಾರುಣ್ಯ ಮಿಶ್ರಿತವಾಣಿ ಮುಖರಿತವಾಯಿತು, “ಅಯೋಧ್ಯಾಪತಿ, ಇದೇನಿದು ನಿನ್ನ ವೇಷ?” ರಾಜನ ಕಣ್ಣುಗಳಲ್ಲಿ ಕಾರುಣ್ಯದ ಯಾಚನೆಯಿತ್ತು; ನೀರು ತುಂಬಿತ್ತು. ರಾಜನು ತನ್ನ ವೈಫಲ್ಯದ ಕತೆಯನ್ನು ಹೇಳಿಕೊಂಡ. “ಮಹಾಬಲ” ವಿಶ್ವಾಮಿತ್ರನ ಸ್ವರದಲ್ಲಿ ಸಾಂತ್ವನವಿತ್ತು. “ನಿಮ್ಮ ಮನೋರಥವನ್ನು ನಾನು ಪೂರೈಸಲೇ?’ “ಸೌಮ್ಯ” ತ್ರಿಶಂಕುವು ಕರುಣವಾಣಿಯಿಂದ ಕಣ್ಣೀರು ಹರಿಸುತ್ತ ಹೇಳಿದನು - “ನಾನು ಸಶರೀರ ಸ್ವರ್ಗಕ್ಕೆ ಹೋಗಲು ಬಯಸುತ್ತೇನೆ. ಗುರುವಸಿಷ್ಠರಿಂದ ತಿರಸ್ಕೃತನಾಗಿದ್ದೇನೆ. ಗುರು ಪುತ್ರರೂ ತಳ್ಳಿಹಾಕಿದ್ದಾರೆ. ಗುರುಪುತ್ರರ ಶಾಪದಿಂದಲೇ ನನಗೆ ಈ ಗತಿ ಬಂದಿದೆ. ಸ್ವರ್ಗಕ್ಕೆ ಹೋಗಲಾಗಲಿಲ್ಲ. ಚಾಂಡಾಲನೇನೋ ತ್ರಿಶಂಕುವಿನ ಕತೆ 125 ಆಗಿಬಿಟ್ಟಿದ್ದೇನೆ. ಪುರುಷಾರ್ಥ ನಿರರ್ಥಕ -ಭಾಗ್ಯವೇ ಪ್ರಧಾನ ಎಂದು ಅನಿಸತೊಡಗಿದೆ.” “ಭಾಗ್ಯ?.......” ವಿಶ್ವಾಮಿತ್ರನು ಆಕಾಶದಕಡೆ ನೋಡುತ್ತ ಹೇಳಿದನು. “ದೇವ, ಭಾಗ್ಯವೇ ಪ್ರಧಾನವಾದದ್ದು, ಭಾಗ್ಯವೇ ಜೀವನವನ್ನು ನಡೆಸುತ್ತದೆ. ನಾನೇನು ಅಪರಾಧ ಮಾಡಿದ್ದೇನೆ? ಪುರುಷಾರ್ಥದ ಮೂಲಕ ಸ್ವರ್ಗಕ್ಕೆ ಹೋಗಲು ಬಯಸಿದ್ದೆ. ಪುರುಷಾರ್ಥದಿಂದಾಗಿ ನಾನು ಅನುಭವಿಸುತ್ತಿರುವ ಅವಸ್ಥೆಯನ್ನು ತಾವು ಸ್ವಯಂ ನೋಡುತ್ತಿದ್ದೀರಿ. ನನ್ನ ಭಾಗ್ಯವು ಪುರುಷಾರ್ಥವನ್ನು ನಾಶಮಾಡಿದೆ” ವಿಶ್ವಾಮಿತ್ರರು ಯೋಚನೆಯಲ್ಲಿ ತೊಡಗಿದರು. “ಮುನಿವರ, ನಾನು ಆರ್ತನಾಗಿದ್ದೇನೆ. ತಮ್ಮ ಕೊಡುಗೆಗಾಗಿ ಕಾದಿದ್ದೇನೆ. ದೈವದ ಅವಕೃಪೆಗೆ ಒಳಗಾದ ಈ ಬಡವನ ಮೇಲೆ ತಾವು ದಯೆ ತೋರಬಲ್ಲಿರಾ? ನನಗೆ ಮತ್ತೆಲ್ಲೂ ಗತಿ ಇಲ್ಲ. ಪುರುಷಾರ್ಥದಿಂದ ಭಾಗ್ಯವನ್ನು ಬದಲಿಸಲು ಸಾಧ್ಯವಿಲ್ಲವೇ?” “ಐಕ್ಷ್ವಾಕ” ವಿಶ್ವಾಮಿತ್ರರ ಮಧುರವಾಣಿ ಕರಗಿತ್ತು. “ನಾನು ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ- ನೀವು ಧಾರ್ಮಿಕರು, ನನಗೆ ಗೊತ್ತಿದೆ. ನಾನು ನಿಮಗೆ ಆಶ್ರಯಕೊಡುತ್ತಿದ್ದೇನೆ. ಭಯಭೀತರಾಗಬೇಡಿ. ಪುಣ್ಯಕರ್ಮಿಗಳಾದ ಮಹರ್ಷಿಗಳನ್ನು ನಾನು ಆಮಂತ್ರಿಸುತ್ತೇನೆ. ಆ ಋಷಿಗಣಗಳು ಯಜ್ಞದಲ್ಲಿ ಸಹಾಯ ಮಾಡುತ್ತಾರೆ. ಗುರುವಿನ ಮೂಲಕವಾಗಿ ಬಂದ ಈ ಚಂಡಾಲ ರೂಪದಿಂದಲೇ ನೀವು ಸ್ವರ್ಗಕ್ಕೆ ಹೋಗುತ್ತೀರಿ. ಸ್ವರ್ಗವು ನಿಮಗೆ ಸಮೀಪದಲ್ಲಿಯೇ ಇದೆ. ನೀವು ಈ ಕೌಶಿಕನಿಗೆ ಶರಣಾಗತರಾಗಿದ್ದೀರಿ.” ರಾಜಾ ತ್ರಿಶಂಕುವಿನ ಮುದುಡಿದ ಮುಖ ಅರಳಿತು. ವಿಶ್ವಾಮಿತ್ರರಲ್ಲಿ ಪುರುಷಾರ್ಥದ ಉತ್ಸಾಹದ ಉಬ್ಬರವಿತ್ತು. ಮುಖ ಕಾಂತಿಪೂರ್ಣವಾಗಿತ್ತು. “ಮಕ್ಕಳೇ” ವಿಶ್ವಾಮಿತ್ರರ ಸಂಬೋಧನೆಯನ್ನು ಕೇಳಿದ ಎಲ್ಲ ಪುತ್ರರೂ ಪರಮಧಾರ್ಮಿಕ ಮುನಿಯ ಸಮ್ಮುಖದಲ್ಲಿ ನತಮಸ್ತಕರಾಗಿ ನಿಂತುಕೊಂಡರು. “ಮಕ್ಕಳೇ” ವಿಶ್ವಾಮಿತ್ರರು ತುಂಬ ಉತ್ಸಾಹದಿಂದ ಹೇಳಿದರು......” ಯಜ್ಞ,ದ ಸಾಮಗ್ರಿಯನ್ನು ಒಂದೆಡೆ ಸೇರಿಸಿ” ಧಾರ್ಮಿಕರಾದ ಮಕ್ಕಳು ಆಜ್ಞೆಯಂತೆ ಕಾರ್ಯ ಮಾಡಿದರು. ತುಸು ಹೊತ್ತಿನ ಅನಂತರ ವಿಶ್ವಾಮಿತ್ರರು ಶಿಷ್ಯರನ್ನು ಕರೆದರು. ಗಂಭೀರ ವಾಣಿಯಲ್ಲಿ ಹೇಳಿದರು....... “ಶಿಷ್ಯರೇ, ಋಷಿಗಳು ಹಾಗೂ ವಸಿಷ್ಠರನ್ನು ಆಮಂತ್ರಿಸಿರಿ. ಬಹುಶ್ರುತರಾದ ಅವರು ತಮ್ಮ ಶಿಷ್ಯರು, ಸಹೃದಯರು, ಹಾಗೂ ಋಷಿಗಳೊಂದಿಗೆ ಈ ಆಶ್ರಮಕ್ಕೆ ಬರಲಿ. ಯಾರಾದರೂ ನನ್ನ ವಿರುದ್ಧ ಅನಾದರ ಪೂರ್ವಕ ಮಾತುಗಳನ್ನಾಡಿದರೆ ಶಾಂತಿಯಿಂದ ಕೇಳಿಸಿಕೊಳ್ಳಿ.” ಗುರುವಿನ ಆದೇಶ ಪಡೆದ ಶಿಷ್ಯರು ಬೇರೆ ಬೇರೆ ದಿಕ್ಕಿಗೆ ತೆರಳಿದರು. 126 ಕಥಾ ಸಂಸ್ಕೃತಿ ಋಷಿಗಳ ಮಧ್ಯೆಇದ್ದ ವಿಶ್ವಾಮಿತ್ರನು ಹೇಳಿದನು........ “ಮಹರ್ಷಿಗಳೇ, ತಾವು ಧರ್ಮನಿಷ್ಠ-ದಾನಿ-ಪ್ರಸಿದ್ಧ ಇಕ್ಷ್ವಾಕು ಕುಲೋತ್ಪನ್ನ ರಾಜಾ ತ್ರಿಶಂಕುವನ್ನು ನೋಡುತ್ತಿದ್ದೀರಿ. ಇವರು ನಮಗೆ ಶರಣು ಬಂದಿದ್ದಾರೆ. ಇದೇ ಶರೀರದೊಂದಿಗೆ ಸ್ವರ್ಗಕ್ಕೆ ಹೋಗಲು ಬಯಸುತ್ತಿದ್ದಾರೆ. ಈ ಪ್ರಯೋಜನವು ಸಿದ್ಧಿಸಲು ಅವಶ್ಯವಾದ ಯಜ್ಞವನ್ನು ನನ್ನ ಜೊತೆಗೆ ಆಯೋಜಿಸಿರಿ.” ಧರ್ಮಜ್ಞ ಋಷಿಗಳು ಪರಸ್ಪರ ಮಾತನಾಡಿಕೊಂಡರು. ‘ವಿಶ್ವಾಮಿತ್ರ ಸಿಟ್ಟಿನವನು. ನಾವು ಈಗ ಯಾವುದೇ ಸಂಶಯ ಬಾರದ ರೀತಿಯಲ್ಲಿ ಮಾತನ್ನು ಪಾಲಿಸಬೇಕು. ಅದಿಲ್ಲವಾದರೆ ಇವನ ಶಾಪಕ್ಕೆ ಈಡಾಗಬೇಕು..” ಮಹರ್ಷಿಗಳು ಯಜ್ಞ ಪ್ರಾರಂಭಿಸಲು ನಿರ್ಧರಿಸಿದರು. ಮಹಾತೇಜಸ್ವಿ ವಿಶ್ವಾಮಿತ್ರರು ಯಜ್ಞದ ಯಾಜಕರಾಗಿದ್ದರು. ಮಂತ್ರಗಳನ್ನು ಚನ್ನಾಗಿ ಬಲ್ಲ ಋಷಿಗಳು ಋತ್ವಿಜರಾದರು. ಮೊದಲೇ ಯೋಚಿಸಿದಂತೆ ಕಾರ್ಯ ನಡೆಯಿತು. ಮಹಾತಪಸ್ವಿ ವಿಶ್ವಾಮಿತ್ರನು ಯಜ್ಞವನ್ನು ಮುಗಿಸಿ, ಯಜ್ಞದಪಾಲನ್ನು ಸಮರ್ಪಿಸಲು ದೇವತೆಗಳನ್ನು ಆಹ್ವಾನಿಸಿದನು. ದೇವತೆಗಳು ಭಾಗವನ್ನು ತೆಗೆದುಕೊಂಡು ಹೋಗಲು ಬರಲಿಲ್ಲ. ವಿಶ್ವಾಮಿತ್ರರಿಗೆ ಅಪಾರ ಸಿಟ್ಟು ಬಂತು. ಕಮಂಡಲು ಮೇಲೆತ್ತಿ ಹಿಡಿದು ತ್ರಿಶಂಕುವನ್ನು ಉದ್ದೇಶಿಸಿ ಹೇಳಿದರು..... “ರಾಜಾ, ನಾನು ಅರ್ಜಿಸಿದ ತಪಸ್ಸಿನ ಶಕ್ತಿಯನ್ನಾದರೂ ನೋಡು. ನಾನು ನಿನ್ನನ್ನು ಇದೇ ಶರೀರದಿಂದಲೇ ಸರಾಗವಾಗಿ ಸ್ವರ್ಗಕ್ಕೆ ಕಳಿಸುವೆ” ವಿಶ್ವಾಮಿತ್ರ ಮಾತು ನಿಲ್ಲಿಸಿದ. ಮಹಾರಾಜ ತ್ರಿಶಂಕು ಸ್ವರ್ಗಕ್ಕೆ ಹೊರಟನು. “ಚಾಂಡಾಲ.......ಚಾಂಡಾಲ........ಚಾಂಡಾಲ.........” ದೇವಲೋಕದಲ್ಲಿ ಕೋಲಾಹಲವೆದ್ದಿತು. “ತ್ರಿಶಂಕು” . . . . ಇಂದ್ರನು ಹೇಳಿದನು “ಸ್ವರ್ಗದಲ್ಲಿ ವಾಸಿಸಲು ನಿನಗೆ ಯೋಗ್ಯವಾದ ಸ್ಥಾನವಿಲ್ಲ. ಮರಳಿ ಭೂಲೋಕಕ್ಕೆ ಹೋಗು” “ದೇವೇಂದ್ರ........ಕಾರಣ?........”ತ್ರಿಶಂಕು ಚಕಿತನಾಗಿ ಕೇಳಿದ. “ಮೂಢ, ........ನಿನಗೆ ಗುರುಶಾಪವಿದೆ........” “ಆದರೆ ನಾನು ವಿಶ್ವಾಮಿತ್ರರ ಪುರುಷಬಲದಿಂದ, ಅವರ ತಪಸ್ಸು ಹಾಗೂ ತೇಜಸ್ಸಿನ ಬಲದಿಂದ ಬಂದಿದ್ದೇನೆ.” “ದೇವಲೋಕದಲ್ಲಿ ನಿನಗೆ ಸ್ಥಾನವಿಲ್ಲ, ನೀನು ತಲೆಕೆಳಗಾಗಿ ಬೀಳುವೆ” “ಸತ್ತೆ........ಸತ್ತೆ........ಸತ್ತೆ........ ಭಗವನ್........ಕಶ್ಯಪರೇ........ರಕ್ಷಣೆ ಕೊಡಿ........” ಸ್ವರ್ಗದಿಂದ ಬೀಳುತ್ತಿದ್ದ ತ್ರಿಶಂಕು ಕರುಣ ಆಕ್ರಂದನ ಮಾಡುತ್ತಿದ್ದ. ವಿಶ್ವಾಮಿತ್ರರು ಆಶ್ರಮದಲ್ಲಿದ್ದರು. ಸ್ವರ್ಗದಿಂದ ಬೀಳುತ್ತಿರುವ ತ್ರಿಶಂಕುವನ್ನು ಕಂಡು ಸಿಟ್ಟಿಗೆದ್ದರು. “ನಿಲ್ಲು........ನಿಲ್ಲು”- ನಾರಿಶೋಷಣ (ಭಾರತ) 127 ವಿಶ್ವಾಮಿತ್ರರು ರೋಷದಿಂದ ಹೇಳಿದರು. ತ್ರಿಶಂಕು ಅರ್ಧದಲ್ಲಿಯೇ ನಿಂತು ಬಿಟ್ಟನು. ವಿಶ್ವಾಮಿತ್ರರು ಆಶ್ರಮದ ಋಷಿಗಳ ಸಹಕಾರದಿಂದ ದಕ್ಷಿಣ ದಿಕ್ಕಿನಲ್ಲಿ ಮತ್ತೊಂದು ಸಪ್ತರ್ಷಿಮಂಡಲವನ್ನು ಸೃಷ್ಟಿಸಿದರು. ವಿಶ್ವಾಮಿತ್ರರು ಋಷಿಗಳೊಡನೆ ಹೇಳಿದರು.....``ನಾನು ಪ್ರತಿ ಇಂದ್ರನನ್ನೇ ತಯಾರುಮಾಡುತ್ತೇನೆ. ನಮ್ಮ ಲೋಕವು ಇಂದ್ರನಿಲ್ಲದೆ ಇರಬಲ್ಲದು.” ಮುನಿಪುಂಗವ ವಿಶ್ವಾಮಿತ್ರ ದೇವತೆಗಳನ್ನು ಸೃಷ್ಟಿಸತೊಡಗಿದರು. ಅದಮ್ಯ ಉತ್ಸಾಹ ಹಾಗೂ ಪೌರುಷದ ಮೂಲಕ ನಡೆಸುತ್ತಿದ್ದ ವಿಶ್ವಾಮಿತ್ರನ ಸೃಷ್ಟಿರಚನೆಯ ಕಾರ್ಯವನ್ನು ದೇವತೆಗಳು ನೋಡಿ ಅವಾಕ್ಕಾದರು. ಅವರು ವಿಶ್ವಾಮಿತ್ರನ ಆಶ್ರಮಕ್ಕೆ ಬಂದರು. ವಿನಮ್ರ ನಿವೇದನೆ ಮಾಡಿಕೊಂಡರು........ “ತಪೋಧನರೇ, ಶಾಪಾನ್ವಿತವಾದ ವ್ಯಕ್ತಿಯು ಸ್ವರ್ಗದಲ್ಲಿ ಹೇಗೆ ಇರಬಲ್ಲ? “ಪುರುಷಾರ್ಥ ಬಲದಿಂದ ಅವನು ಸ್ವರ್ಗದಲ್ಲಿ ಇರಬಲ್ಲ” ವಿಶ್ವಾಮಿತ್ರರು ಅಧಿಕಾರವಾಣಿಯಿಂದ ಉತ್ತರವಿತ್ತರು. “ಆದರೆ......” ಎಂದು ದೇವಗಣ ಹೇಳುತ್ತಿದ್ದಂತೆಯೇ ಮುನಿ ಹೇಳಿದರು.......... “ದೇವತೆಗಳು ,ಕೇಳಿ! ಸಶರೀರನಾಗಿ ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸುವ ಪ್ರತಿಜ್ಞೆ ಮಾಡಿದ್ದೇನೆ. ಪ್ರತಿಜ್ಞಾಭಂಗದ ದೋಷಿ ನಾನಾಗಲಾರೆ. ತ್ರಿಶಂಕುವು ಇದೇ ಶರೀರದಿಂದಲೇ ಸ್ವರ್ಗದಲ್ಲಿರುತ್ತಾನೆ. ನಾನು ಸೃಷ್ಟಿಸಿದ ನಕ್ಷತ್ರಗಳು ಸ್ಥಾಯಿಯಾಗಿ ಉಳಿಯುತ್ತವೆ. ಮಹಾಪ್ರಳಯದವರೆಗೆ ನಾನು ರಚಿಸಿದ ಸೃಷ್ಟಿ ಇರುತ್ತದೆ.” ``ಭಗವನ್, ತಮ್ಮ ಪುರುಷಾರ್ಥ, ತಮ್ಮ ತೇಜಸ್ಸು ಅಲೌಕಿಕವಾದದ್ದು, ಈ ಬಡವನು, ತಮ್ಮ ಬಲದಿಂದ ತಮ್ಮ ಸೃಷ್ಟಿಕಾರ್ಯದಿಂದ ಸ್ವರ್ಗವನ್ನು ಪಡೆದುಕೊಂಡೆ. ಭಗವನ್! ನನ್ನ ನಮಸ್ಕಾರ ಸ್ವೀಕರಿಸಿ'' ತ್ರಿಶಂಕುವು ನಮಸ್ಕರಿಸುತ್ತ ಹೇಳಿದನು. ದೇವಗಣ ಅವರನ್ನು ಸ್ತುತಿಸತೊಡಗಿತು. 128 ಕಥಾ ಸಂಸ್ಕೃತಿ ಉಪೇಕ್ಷಿತೆ ಮಾಧವಿ - ರಾಮಪ್ರತಾಪ ತ್ರಿಪಾಠೀ ಶಾಸ್ತ್ರಿ ಪುರಾಣಗಳ ರಚನಾಕಾಲವನ್ನು ಕ್ರಿ.ಪೂ. 800 ಎಂದು ವಿದ್ವಾಂಸರು ಭಾವಿಸಿದ್ದಾರೆ. ಎಲ್ಲ ಪುರಾಣಗಳೂ ಒಂದೇ ಕಾಲದಲ್ಲಿ ರಚಿತವಾದುವೆಂದು ಹೇಳಲಾಗುವುದಿಲ್ಲ. ಆದರೆ ಅವುಗಳ ಲೇಖನ ಪ್ರಕಾರ, ಉದ್ದೇಶ, ಜೀವನದ ಬಗೆಗಿನ ದೃಷ್ಟಿಕೋನಗಳಲ್ಲಿ ಸಮಾನವಾದವುಗಳಾಗಿವೆ. ಪೌರಾಣಿಕ ಕಾಲದ ಗುರುಶಿಷ್ಯ ಪರಂಪರೆ, ಆ ಕಾಲದ ಸಾಮಾಜಿಕ ಮಾನ್ಯತೆ, ಮತ್ತು ಹೆಣ್ಣಿನ ಬಗೆಗಿನ ರಾಜಕೀಯ ನ್ಯಾಯದ ಒಂದು ನಿಲುವು - ಇವುಗಳ ಮೇಲೆ ಬೆಳಕು ಚೆಲ್ಲುವ ಒಂದು ಕಥೆಯನ್ನು ಇಲ್ಲಿ ಕೊಡಲಾಗಿದೆ. ಪುರಾಣಗಳಲ್ಲಿ, ಬಹುಪತಿ ಪದ್ಧತಿಗೆ ಸಂಬಂಧಿಸಿದಂತೆ ದೊರೆಯುವ ಕತೆಗಳಲ್ಲಿ ನಾಯಿಕೆಯಾಗಿ ದ್ರೌಪದಿಯೇ ಕಾಣಿಸಿಕೊಳ್ಳುತ್ತಾಳೆ. ಇಂಥ ಪ್ರಾಚೀನ ಪದ್ಧತಿಗೆ ಉದಾಹರಣೆಯನ್ನೊದಗಿಸುವ, ದ್ರೌಪದಿಯಲ್ಲದೆ ಬೇರೆ ನಾಯಕಿಯರ ಕತೆಗಳೂ ಪುರಾಣಗಳಲ್ಲಿ ಕಾಣಸಿಗುತ್ತವೆ. ತಮ್ಮ ಅದ್ಭುತ ಪ್ರತಿಭೆ, ತೇಜಸ್ಸು, ಹಾಗೂ ಸಾಧನೆಗಳ ದಣಿಯೆನಿಸಿದ ವಿಶ್ವಾಮಿತ್ರನ ಕತೆ ಪುರಾಣಗಳಲ್ಲಿ ಉಜ್ವಲವಾಗಿ ಕಾಣುತ್ತದೆ. ಒಂದು ಬಾರಿ ಅವರಿಗೆ ತಮ್ಮ ಅನನ್ಯ ಶಿಷ್ಯ ಗಾಲವನ ಬಗೆಗೆ ತೀವ್ರವಾದ ತಿರಸ್ಕಾರ ಉಂಟಾಯಿತು. ವಿಷಯ ಅಷ್ಟೇನೂ ಗಂಭೀರವಾದುದಾಗಿರಲಿಲ್ಲ. ಸಾಧಾರಣ ಸಂಗತಿಯಾಗಿತ್ತು. ಆದರೆ ತೇಜಸ್ವಿಗಳ ಸ್ವಭಾವ - ನಿಲವುಗಳು ಸಾಮಾನ್ಯವಾದ ರೀತಿಯಲ್ಲಿ ಇರುವುದಿಲ್ಲ. ಗಾಲವನು ವಿಶ್ವಾಮಿತ್ರರ ಅತ್ಯಂತ ಪ್ರಿಯ ಹಾಗೂ ಹತ್ತಿರದ ಶಿಷ್ಯನಾಗಿದ್ದ. ಅಧ್ಯಯನವು ಸಾಂಗವಾಗಿ ಮುಗಿಯುತ್ತಲೇ ನಿಯಮಾನುಸಾರ ಗುರುವಿನಿಂದ ದೀಕ್ಷೆ ತೆಗೆದುಕೊಂಡು ಗೃಹಸ್ಥಾಶ್ರಮ ಸ್ವೀಕರಿಸಲು ಅನುಮತಿ ಪಡೆಯುವ ಸಂದರ್ಭ ಬಂದಿತು. ಗುರುವಿನ ಬಗ್ಗೆ ತನಗಿರುವ ಭಕ್ತಿ-ಶ್ರದ್ಧೆಗಳನ್ನು ಪರಿಚಯ ಮಾಡಿಕೊಡಲು ಇದೊಂದು ಒಳ್ಳೆಯ ಅವಕಾಶ ಎಂದು ಗಾಲವ ಭಾವಿಸಿದ. ತನ್ನ ಶಕ್ತ್ಯಾನುಸಾರ ಏನಾದರೂ ಗುರುದಕ್ಷಿಣೆಯನ್ನು ಕೊಟ್ಟೇ ಆಶ್ರಮದಿಂದ ಬೀಳ್ಕೊಳ್ಳಬೇಕೆಂದು ಅವನು ನಿರ್ಧರಿಸಿದ. ಆದರೆ ಅವನ ಸ್ಥಿತಿ ಏನೆಂಬುದು ವಿಶ್ವಾಮಿತ್ರರಿಗೆ ಗೊತ್ತಿತ್ತು. ಹಾಗಾಗಿ ಗಾಲವನು ಎಷ್ಟೇ ಬಲವಂತ ಮಾಡಿದರೂ ಒತ್ತಾಯ ಮಾಡಿದರೂ ಅವನ್ನೆಲ್ಲ ಕ್ಷಮಿಸಿ ಅವರು ಅವನಿಗೆ ಗೃಹಸ್ಥಾಶ್ರಮ ಸ್ವೀಕರಿಸಲು ಅನುಮತಿ ನೀಡಿದರು. ನಾರಿಶೋಷಣ (ಭಾರತ) 129 ಆದರೆ ಗಾಲವನೂ ತನ್ನ ನಿರ್ಧಾರದ ಬಗ್ಗೆ ಅಚಲನಾಗಿದ್ದ. ಅವನಿಗೆ ಇದು ಸರಿಬರಲಿಲ್ಲ. ಗುರುವಿಗೆ ಏನೂ ದಕ್ಷಿಣೆ ಕೊಡದೇ ಹಾಗೆಯೇ ಹೋಗುವುದು ಅವನಿಗೆ ಇಷ್ಟವಿರಲಿಲ್ಲ. ಅವನೂ ತನ್ನ ನಿಶ್ಚಯಕ್ಕೆ ಅಂಟಿಕೊಂಡ. ಗುರುದೇವ ವಿಶ್ವಾಮಿತ್ರರು ಎಷ್ಟೇ ತಿಳಿವಳಿಕೆ ಹೇಳಿದರೂ ಕೊನೆಯತನಕ ಅವನು ಹೇಳುತ್ತಲೇ ಇದ್ದ - “ಗುರುದೇವ, ತಮಗೆ ನಾನೇನಾದರೂ ದಕ್ಷಿಣೆ ಕೊಟ್ಟ ಹೊರತು ನಾನು ತಮ್ಮಿಂದ ಪಡೆದ ಶಿಕ್ಷಣಕ್ಕೆ ಫಲವಿಲ್ಲ. . . . .” ವಿಶ್ವಾಮಿತ್ರರ ಸಹಜ ಕ್ಷಾತ್ರತೇಜಸ್ಸು ಗಾಲವನ ಈ ದುರಾಗ್ರಹದಿಂದ ಸಿಡಿದೆದ್ದಿತು. ಬಡವ ಹಾಗೂ ತರುಣ ಬ್ರಾಹ್ಮಣ ಪುತ್ರನ ಈ ಅವಿಧೇಯತೆಯು ಅವರ ಮನಸ್ಸನ್ನು ಚುಚ್ಚಿತು. ಅವನು ನೀಡುವ ದಕ್ಷಿಣೆಗೆ ತಾನು ಪಾತ್ರನೆಂದು ಭಾವಿಸಿರುವ ಬಗ್ಗೆ ಬೇಸರವಾಯಿತು. ವಿಶ್ವಾಮಿತ್ರರು ರಾಜನ ಮಗನಾಗಿದ್ದರು. ಸಾಮ್ರಾಟೋಚಿತವಾದ ವೈಭವವೆಲ್ಲವನ್ನು ಕಾಲುಕೆಳಗೆ ತುಳಿದು ಹೊರಬಂದ ಅವರಿಗೆ ಈ ಭಿಕಾರಿ ಬ್ರಾಹ್ಮಣಯುವಕನು ದಕ್ಷಿಣೆ ನೀಡಲು ಬಂದಿರುವುದು ಎಂಥ ವಿಡಂಬನೆ! ವಿಶ್ವಾಮಿತ್ರರು ವಿಚಲಿತರಾದರು. ಗಾಲವನ ಈ ಹಠ ಹಾಗೂ ಅಭಿಮಾನವು ಅವರ ವಿವೇಕವನ್ನು ಸಂಯಮವನ್ನು ಅಲುಗಾಡಿಸಿತು. ಅಪಾರವಾದ ಕ್ರೋಧದಿಂದ ಕಂಪಿಸುವ ದನಿಯಲ್ಲಿ ಗಾಲವನನ್ನು ಬೆರಳು ತೋರಿಸುತ್ತಾ ಹೇಳಿದರು - “ದುರಾಗ್ರಹೀ ಗಾಲವ, ವಿಶ್ವಾಮಿತ್ರನಂತಹ ಗುರುವನ್ನು ಸಂತುಷ್ಟಪಡಿಸಲು ಚಂದ್ರನಷ್ಟು ಬಿಳಿಯದಾದ, ಆದರೆ ಕಪ್ಪು ಕಿವಿಗಳುಳ್ಳ ಎಂಟುನೂರು ಕುದುರೆಗಳನ್ನು ಕೊಡಬೇಕಾಗುವುದು.” ಗಾಲವನಿಗೆ ಅತ್ಯಂತ ಕಠಿಣವಾದ ಷರತ್ತು!. ಆದರೆ ವಿಶ್ವಾಮಿತ್ರರ ವಜ್ರವಾಣಿಯನ್ನು ಆಲಿಸಿದರೂ ಸ್ವಾಭಿಮಾನಿಯೂ ದೃಢನಿಶ್ಚಯನೂ ಆದ ಗಾಲವನು ವಿಚಲಿತನಾಗಲಿಲ್ಲ. ಅವನು ಅತ್ಯಂತ ವಿನಯಪೂರ್ಣ ಶಬ್ದಗಳಿಂದ ತನ್ನ ಆಚಾರ್ಯರ ಕ್ರೋಧವನ್ನು ತತ್ಕಾಲಕ್ಕೆ ಉಪಶಮನಗೊಳಿಸಿದನು. ಮತ್ತು ಈ ದುರ್ಲಭವಾದ ದಕ್ಷಿಣೆಯನ್ನು ಸಂಗ್ರಹಿಸಲು ಸಾಕಷ್ಟು ಸಮಯವನ್ನು ಕೊಡಬೇಕೆಂದು ಬೇಡಿಕೊಂಡನು. ಇದಕ್ಕೆ ವಿಶ್ವಾಮಿತ್ರರೂ ಒಪ್ಪಿಗೆ ನೀಡಿದರು. ತೇಜಸ್ವಿಯಾದ ಗಾಲವನಿಗೆ ಪಕ್ಷಿ ರಾಜ ಗರುಡನೊಂದಿಗೆ ವಿಶೇಷವಾದ ಸ್ನೇಹವಿದ್ದಿತು. ಹಾಗಾಗಿ ವಿಶ್ವಾಮಿತ್ರನ ಕ್ರೋಧಾಗ್ನಿಯಿಂದ ಬಚಾವಾಗಲು ಗರುಡನು ಗಾಲವನಿಗೆ ನೆರವಾದನು. ತನ್ನ ಕೆಲಸಗಳಿಂದ ಬಿಡುವು ಮಾಡಿಕೊಂಡು ಅವನು ಗಾಲವನ ಜೊತೆಯಲ್ಲಿ ಭೂಮಂಡಲವನ್ನು ಪ್ರದಕ್ಷಿಣೆ ಹಾಕಿ, ಕಪ್ಪು ಕಿವಿಯುಳ್ಳ ಎರಡುನೂರು ಕುದುರೆಗಳನ್ನು ಹುಡುಕಲು ಹೊರಟನು. ಗರುಡನ ಮೇಲೆ ಕುಳಿತು ಅತ್ಯಂತ ವೇಗವಾಗಿ ಭೂಮಂಡಲವನ್ನು ಸುತ್ತಿದರೂ ಗಾಲವನಿಗೆ ಸಫಲತೆಯ ಯಾವ ಆಸೆಯೂ ಕಾಣಿಸಲಿಲ್ಲವಾದ್ದರಿಂದ ನಿರಾಶನಾದ ಅವನು ಆತ್ಮಹತ್ಯೆಗೆ 130 ಕಥಾ ಸಂಸ್ಕೃತಿ ಉದ್ಯುಕ್ತನಾದನು. ಆದರೆ ಗರುಡನು ಆಗಲೂ ಅವನನ್ನು ಬಿಡಲಿಲ್ಲ. ಚನ್ನಾಗಿ ತಿಳಿವಳಿಕೆ ಹೇಳಿ ಗಾಲವನ ಜೀವ ಉಳಿಸಿದ ಗರುಡನು, ತನ್ನ ಅಭೀಷ್ಟ ಸಿದ್ಧಿಗಾಗಿ ಗಂಗಾ-ಯಮುನಾ ಸಂಗಮ ಸ್ಥಳದಲ್ಲಿದ್ದ ಪೈಠಣಪುರದ ಒಡೆಯನಾದ ಮಹಾರಾಜ ಯಯಾತಿಗೆ ಶರಣುಹೋಗಲು ಗಾಲವನಿಗೆ ಪ್ರೇರಣೆ ನೀಡಿದನು. ಆ ದಿನಗಳಲ್ಲಿ ಭೂಮಂಡಲದ ರಾಜರಲ್ಲೆಲ್ಲ ಮಹಾರಾಜ ಯಯಾತಿಗೆ ವಿಶೇಷ ಗೌರವವಿತ್ತು. ತನ್ನ ಅತಿಥಿಗಳಿಗೆ, ಯಜ್ಞಗಳಿಗೆ, ಪ್ರಜಾಹಿತಕಾರಿಯಾದ ಕಾರ್ಯಗಳಿಗೆ ಯಯಾತಿಯು ಏನನ್ನು ಬೇಕಾದರೂ ಕೊಡುತ್ತಿದ್ದ. ಗರುಡನೊಂದಿಗೆ ಋಷಿಕುಮಾರ ಗಾಲವನ ಬರುವಿಕೆಯ ಸಂಗತಿಯು ತಿಳಿಯುತ್ತಲೇ ರಾಜನು ಅವರನ್ನು ಹಾರ್ದಿಕವಾಗಿ ಸ್ವಾಗತಿಸಿ ಸತ್ಕರಿಸಿದನು. ಗರುಡನು ತಾವು ಬಂದ ಕಾರಣವನ್ನು ತಿಳಿಸುತ್ತ ಹೇಳಿದನು. “ರಾಜಾ, ತಪೋನಿಧಿಯಾದ ಈ ಗಾಲವರು ನನ್ನ ಆತ್ಮೀಯ ಸ್ನೇಹಿತರು, ಮಹರ್ಷಿ ವಿಶ್ವಾಮಿತ್ರರ ಪ್ರಿಯ ಶಿಷ್ಯರು. ಆದರೆ ಗುರುದಕ್ಷಿಣೆಯ ವಿಷಯವಾಗಿ ಗುರು-ಶಿಷ್ಯರಲ್ಲಿ ಅತ್ಯಂತ ವಿಷಮ ಸ್ಥಿತಿ ಏರ್ಪಟ್ಟಿದ್ದು, ಅದನ್ನು ಶಾಂತಿಯಿಂದ ಪರಿಹರಿಸುವ ಕೃಪೆಯು ತಮ್ಮಿಂದ ಮಾತ್ರವೇ ಸಾಧ್ಯವಾದೀತು. ಯಜ್ಞಾದಿ ಶುಭಕಾರ್ಯದಲ್ಲಿ ಶುಭಕಾರಿಯಾದ ಕಪ್ಪು ಕಿವಿಗಳುಳ್ಳ ಎಂಟುನೂರು ಕುದುರೆಗಳನ್ನು ಇವರು ಗುರುದಕ್ಷಿಣೆಯಾಗಿ ಸಮರ್ಪಿಸಬೇಕಾಗಿದೆ. ತಮ್ಮ ಕೃಪೆಯಿದ್ದರೆ ಇದು ಸಾಧ್ಯವೆಂಬ ವಿಶ್ವಾಸ ನನಗಿದೆ. ಇಲ್ಲವಾದರೆ ಗಾಲವರಿಗೆ ಈ ಭೂಮಿಯಲ್ಲಿ ಎಂಟುನೂರೇಕೆ, ಮೂರು-ನಾಲ್ಕು ಅಶ್ವಗಳೂ ದೊರೆಯಲಾರವು. ಇಂಥ ಕಠಿಣ ಸ್ಥಿತಿಯಲ್ಲಿ ತಾವು ನನ್ನ ಮಿತ್ರರಾದ ಗಾಲವರಿಗೆ ಸಹಾಯವನ್ನೂ ರಕ್ಷಣೆಯನ್ನೂ ನೀಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ. ನಹುಷನಂದನ, ನನ್ನ ಮಿತ್ರರಾದ ಗಾಲವರು ತಪಸ್ಸಿನ ಮೂಲಕ, ಪಡೆದ ಅವರ ಬ್ರಹ್ಮತೇಜಸ್ಸು ಅದ್ವಿತೀಯವಾದದ್ದು. ಇವರನ್ನು ತಾವು ಉಳಿಸಿದರೆ, ಇವರು ತಮ್ಮ ಅಮೋಘ ತಪಸ್ಸಿನಿಂದ ತಮ್ಮನ್ನು ಎಂದಾದರೂ ಅನುಗ್ರಹಿಸುತ್ತಾರೆ. ನರೇಶ್ವರ! ಗಾಲವರಂಥ ಮಹಾನ್ ವಿದ್ವಾಂಸ, ಸದಾಚಾರಿ, ಹಾಗೂ ತೇಜಸ್ವಿಯಾದ ಯಾಚಕರು ತಮ್ಮ ಬಳಿ ಬಂದಿರುವುದು ತಮ್ಮ ಬಳಿಗೆ ಒಂದು ಸುಯೋಗವೇ ಬಂದಂತೆ.” ತಮ್ಮ ಸ್ನೇಹಿತನೂ ಆದ ಗರುಡನ ಆಪ್ತವಾದ ಮಾತುಗಳನ್ನು ಕೇಳಿ ರಾಜಾ ಯಯಾತಿಗೆ ಸಂತೋಷವಾಯಿತು. ಆದರೆ ಆ ಸಂದರ್ಭದಲ್ಲಿ ಅವನ ಸ್ಥಿತಿಯು ಗರುಡನು ತಿಳಿದ ರೀತಿಯಲ್ಲಿ ಇರಲಿಲ್ಲ. ಅನೇಕ ರಾಜಸೂಯ ಮತ್ತು ಅಶ್ವಮೇಧ ಯಜ್ಞಗಳಿಗಾಗಿ ಅವನು ತನ್ನ ಕೋಶವನ್ನೇ ಬರಿದು ಮಾಡಿದ್ದನು. ತುಸು ಹೊತ್ತು ನಾರಿಶೋಷಣ (ಭಾರತ) 131 ಗಂಭೀರವಾಗಿ ಆಲೋಚಿಸಿದ ಅನಂತರ ಅವನು ತಮ್ಮ ತ್ರಿಲೋಕ ಸುಂದರಿಯಾದ ಮಗಳು ಮಾಧವಿಯನ್ನು ಅರ್ಪಿಸುತ್ತ ಗಾಲವರಿಗೆ ಹೇಳಿದನು. “ಋಷಿಕುಮಾರ, ನನ್ನ ಮಗಳು ದಿವ್ಯಗುಣಗಳಿಂದ ಭೂಷಿತಳಾದವಳು. ದೈವೀ ವರದಾನಕ್ಕೆ ಅನುಸಾರವಾಗಿ ಇವಳ ಮೂಲಕ ನಮ್ಮ ದೇಶದಲ್ಲಿನ ನಾಲ್ಕು ರಾಜಮನೆತನಗಳು ಗೌರವಾನ್ವಿತವಾಗುವವು. ಇವಳನ್ನು ಜೊತೆಯಲ್ಲಿ ಕರೆದುಕೊಂಡು ತಾವು ಈ ಭೂಮಂಡಲದ ಅನ್ಯ ರಾಜರ ಬಳಿ ಹೋಗಿರಿ. ಇಂಥ ಸರ್ವಗುಣ ಸಂಪನ್ನ ಸುಂದರಿಗಾಗಿ ರಾಜರು ತಮ್ಮ ರಾಜ್ಯವನ್ನೇ ಕೊಡಬಲ್ಲರು. ಅಂದ ಮೇಲೆ ಕಪ್ಪು ಕಿವಿಯ ಎಂಟುನೂರು ಕುದುರೆಗಳೇನು ಮಹಾ? ಆದರೆ ಇವಳನ್ನು ಶುಲ್ಕವನ್ನಾಗಿ ಬಳಸಿಕೊಂಡು ಎಂಟುನೂರು ಕುದುರೆಗಳನ್ನು ಪಡೆದುಕೊಂಡ ನಂತರ ತಾವು ನನ್ನ ಕನ್ಯೆಯನ್ನು ನನಗೆ ಮರಳಿಸಬೇಕು ಎಂಬುದು ನನ್ನ ಪ್ರಾರ್ಥನೆ.” ನಿಧಾನವಾಗಿ, ಯಯಾತಿಯ ಪುತ್ರಿಯಾದ ಮಾಧವಿಯನ್ನು ಜೊತೆಗೆ ಕರೆದುಕೊಂಡು ಹೊರಟ ಗರುಡ ಹಾಗೂ ಗಾಲವರು ಮೊಟ್ಟಮೊದಲು ಅಯೋಧ್ಯೆಯ ರಾಜನಾದ ಹರ್ಯಶ್ವನ ಬಳಿ ಹೋದರು. ಅವನು ಆ ಕಾಲದಲ್ಲಿ ತನ್ನ ದಾನಶೀಲತೆ, ಶೌರ್ಯ, ಇನ್ನೊಬ್ಬರ ದುಃಖದಲ್ಲಿ ದಯೆ ತೋರಿಸುವಿಕೆ ಹಾಗೂ ಸಮೃದ್ಧಿಯಿಂದ ಭೂಮಂಡಲದಲ್ಲಿ ಪ್ರಸಿದ್ಧಿ ಪಡೆದುದಷ್ಟೇ ಅಲ್ಲದೆ, ಆಯ್ದ ಶ್ರೇಷ್ಠ ಅಶ್ವಗಳನ್ನು ಹೊಂದಿರುವುದಕ್ಕಾಗಿ ವಿಶ್ವದಲ್ಲೇ ಪ್ರಸಿದ್ಧನಾಗಿದ್ದನು. ಹರ್ಯಶ್ವನು ಅವರು ಬಂದ ಕಾರಣವನ್ನು ಕೇಳಿದನು. ಋಷಿಕುಮಾರ ಗಾಲವನು ರಾಜನೊಡನೆ ಮಾಧವಿಯ ಕುಲ-ಶೀಲ-ಗುಣಗಳನ್ನೆಲ್ಲ ವರ್ಣಿಸಿ ತನ್ನ ಮನದಾಸೆಯನ್ನು ಹೇಳಿಕೊಂಡಾಗ, ರಾಜ ಹರ್ಯಶ್ವನ ಆನಂದಕ್ಕೆ ಪಾರವೇ ಇರಲಿಲ್ಲ. ವಿಡಂಬನೆಯ ಸಂಗತಿಯೆಂದರೆ ಅಂಥ ಕಪ್ಪುಕಿವಿಯ ಕುದುರೆಗಳು ಅವನ ಬಳಿ ಕೇವಲ ಎರಡುನೂರು ಮಾತ್ರ ಇದ್ದವು. ಹರ್ಯಶ್ವನು ತನ್ನ ಅಸಹಾಯಕತೆಯನ್ನು ಪ್ರಕಟಿಸುತ್ತ ಗಾಲವ ಮತ್ತು ಗರುಡರಿಗೆ ಹೇಳಿದನು - “ತಾವು ನನ್ನಂತೆಯೇ ಅನ್ಯ ರಾಜರುಗಳಿಗೂ ಮಾಧವಿಯನ್ನು ಶುಲ್ಕರೂಪವಾಗಿ ಒಪ್ಪಿಸಿ, ಇಂಥವೇ ಕಪ್ಪುಕಿವಿಯ ಕುದುರೆಗಳನ್ನು ಪಡೆಯುವ ಉಪಾಯ ಮಾಡಬೇಕು. ನಾನು ನನ್ನ ಬಳಿಯ ಎರಡು ನೂರು ಕುದುರೆಗಳನ್ನು ಕೊಟ್ಟು, ಪ್ರತಿಯಾಗಿ ಮಾಧವಿಯಿಂದ ಒಂದೇ ಒಂದು ಪುತ್ರನನ್ನು ಪಡೆಯಲು ಅನುಮತಿ ನೀಡಬೇಕೆಂದು ಪ್ರಾರ್ಥಿಸುತ್ತೇನೆ.” ಬೇರೆ ಉಪಾಯ ಕಾಣದ ಗಾಲವ ಮತ್ತು ಗರುಡರು ಅಯೋಧ್ಯಾಪತಿ ಹರ್ಯಶ್ವನ ಮಾತಿಗೆ ಒಪ್ಪಿಗೆ ನೀಡಿ, ಯಯಾತಿ ಪುತ್ರಿಯಾದ ಮಾಧವಿಯನ್ನು ಅಯೋಧ್ಯೆಯಲ್ಲಿ ನಿರ್ದಿಷ್ಟ ಅವಧಿಯವರೆಗೆ ಬಿಟ್ಟು, ಕೆಲಕಾಲ ಬೇರೆ ಕಡೆಗೆ ಹೋದರು. ರಾಜಾ ಹರ್ಯಶ್ವನ ಸಂಯೋಗದಿಂದ ಮಾಧವಿಯಲ್ಲಿ ವಸುಮನಾ 132 ಕಥಾ ಸಂಸ್ಕೃತಿ ಎಂಬ ಹೆಸರಿನ ಸರ್ವಗುಣ ಸಂಪನ್ನ ಪುತ್ರನು ಜನಿಸಿದನು. ಅನಂತರ ಅವನು ಅಯೋಧ್ಯೆಯ ರಾಜವಂಶದಲ್ಲಿ ಪ್ರಸಿದ್ಧನಾದನು. ನಿಶ್ಚಿತ ಅವಧಿಯು ಮುಗಿದ ಅನಂತರ ಗಾಲವ ಮತ್ತು ಗರುಡರು ಪುನಃ ಅಯೋಧ್ಯೆಗೆ ಹೋಗಿ ಮಾಧವಿಯ ಶುಲ್ಕರೂಪದಲ್ಲಿ ಪಡೆದ ಆ ಎರಡುನೂರು ಕುದುರೆಗಳನ್ನು ಕೆಲದಿನಗಳವರೆಗೆ ಅಯೋಧ್ಯೆಯಲ್ಲಿಯೇ ಬಿಟ್ಟು, ಮಾಧವಿಯೊಂದಿಗೆ ಮತ್ತೆ ಕುದುರೆಗಳನ್ನು ಹುಡುಕಲು ಹೊರಟರು. ಅಯೋಧ್ಯೆಯಿಂದ ಹೊರಟ ಗಾಲವ ಮತ್ತು ಗರುಡರು ಕಾಶೀರಾಜನಾದ ದೀವೋದಾಸನ ಆಸ್ಥಾನಕ್ಕೆ ಹೋದರು. ಆ ದಿನಗಳಲ್ಲಿ ಅವನ ಕೀರ್ತಿಯ ಬೆಳದಿಂಗಳು ಇಡೀ ಭೂಮಂಡಲದಲ್ಲಿ ವ್ಯಾಪಿಸಿತ್ತು. ಗಾಲವ ಮತ್ತು ಗರುಡರ ಪ್ರಸ್ತಾಪವನ್ನು ಕೇಳಿದಾಗ ತನ್ನಲ್ಲಿರುವ ಎರಡು ನೂರು ಕುದುರೆಗಳನ್ನು ಕೊಟ್ಟು, ಮಾಧವಿಯಂಥ ಸುಂದರಿ ಹಾಗೂ ದೈವಿ ಪ್ರಭಾವವುಳ್ಳ ಸ್ತ್ರೀಯಿಂದ ಒಂದು ಪುತ್ರನನ್ನು ಪಡೆದುಕೊಳ್ಳುವ ಲೋಭವನ್ನು ಅವನಿಗೆ ತಡೆದುಕೊಳ್ಳಲಾಗಲಿಲ್ಲ. ನಿಯತ ಸಮಯದಲ್ಲಿ ಮಾಧವಿಯ ಸಂಯೋಗದಿಂದ ಕಾಶೀರಾಜ ದಿವೋದಾಸನು ಪ್ರತರ್ದನನೆಂಬ ಮಗನನ್ನು ಪಡೆದನು. ಅವನು ಅನಂತರ ರಾಜರುಗಳೆಲ್ಲಲ್ಲ ಶ್ರೇಷ್ಠನೆನಿಸಿ ಕಾಶೀರಾಜ್ಯದ ಪುನರುದ್ಧಾರಕನಾಗಿ, ಪರಂಪರಾಗತ ಶತ್ರುಗಳನ್ನೆಲ್ಲ ಸದೆ ಬಡಿದು ಪ್ರಖ್ಯಾತನೆನಿಸಿದನು. ಈ ಬಾರಿ ಗಾಲವನು ಮಾಧವಿಯೊಂದಿಗೆ ಗರುಡನನ್ನು ಕರೆದುಕೊಂಡು ಭೋಜರಾಜನಾದ ಉಶೀನರಬಳಿ ತಲುಪಿದನು. ಉಶೀನರನು ತನ್ನ ಸಂಪತ್ತು, ದಾನಶೀಲತೆಗಳಿಂದಾಗಿ ತನ್ನ ಕಾಲದ ರಾಜರ ನಡುವೆ ಪ್ರಸಿದ್ಧನಾಗಿದ್ದ. ಆದರೆ ಅವನ ಬಳಿಯೂ ಕೇವಲ ಎರಡುನೂರು ಕಪ್ಪುಕಿವಿಯ ಅಶ್ವಗಳಿದ್ದವು. ಗಾಲವ ಮತ್ತು ಗರುಡನ ಪ್ರಾರ್ಥನೆಯಂತೆ ರಾಜಾ ಉಶೀನರನೂ ತ್ರಿಲೋಕ ಸುಂದರಿ ಮಾಧವಿಯ ಸಂಪರ್ಕದಿಂದ ಒಬ್ಬ ಪುತ್ರನನ್ನು ಪಡೆದು ತನ್ನಲ್ಲಿದ್ದ ಎರಡು ನೂರು ಕುದುರೆಗಳನ್ನು ಅವರಿಗೆ ಒಪ್ಪಿಸಿದನು. ಭೋಜರಾಜನ ಈ ಮಗನು ಅನಂತರ ಶಿಬಿ ಎಂಬ ಹೆಸರಿನಲ್ಲಿ ಖ್ಯಾತನಾಗಿ ಪುರಾಣಗಳಲ್ಲಿಯೂ ಸ್ಥಾನ ಪಡೆದನು. ಈ ಮಗನನ್ನು ಪಡೆದ ಮೇಲೆ ಕೂಡ ಮಾಧವಿಯ ರೂಪ-ಯೌವನ ಹಾಗೆಯೇ ಇತ್ತು. ಗಾಲವನಿಗೆ ತನ್ನ ಗುರುವಿಗಾಗಿ ದಕ್ಷಿಣೆ ಕೊಡಲು ಇನ್ನೂ ಎರಡು ನೂರು ಕುದುರೆಗಳ ಅವಶ್ಯಕತೆ ಇತ್ತು. ದುರದೃಷ್ಟವಶಾತ್ ಗಾಲವನು ವಿಶ್ವಾಮಿತ್ರನಿಂದ ಪಡೆದುಕೊಂಡ ಕಾಲಾವಧಿ ಮುಗಿಯುತ್ತಲಿತ್ತು, ಮತ್ತು ಭೂಮಿಯಮೇಲೆ ಈ ಆರುನೂರು ಕಪ್ಪು ಕಿವಿಯ ಕುದುರೆಗಳ ಹೊರತು ಮತ್ತೊಂದೂ ಕೂಡ ಬೇರೆಡೆ ಲಭ್ಯವಿಲ್ಲವೆಂಬ ಸಂಗತಿಯು ಗರುಡನಿಗೆ ಗೊತ್ತಾಗಿತ್ತು. ಉಪನಿಷದ್ ಕಥಾ (ಭಾರತ) 133 ಈಗ ವಿಶ್ವಾಮಿತ್ರನಿಗೆ ಶರಣು ಬರುವುದನ್ನು ಬಿಟ್ಟರೆ ಗಾಲವನಿಗೆ ಬೇರೆ ದಾರಿಯಿರಲಿಲ್ಲ. ಗರುಡನ ಸಲಹೆಯಂತೆ ಆರು ನೂರು ಆಶ್ವಗಳನ್ನೂ ತ್ರಿಲೋಕ ಸುಂದರಿ ಮಾಧವಿಯನ್ನೂ ಗರುಡನೊಂದಿಗೆ ಕರೆದುಕೊಂಡು ವಿಶ್ವಾಮಿತ್ರನ ಬಳಿ ಹೋದ ಗಾಲವನು ಇನ್ನೂ ಎರಡುನೂರು ಅಶ್ವಗಳನ್ನು ಪಡೆದುಕೊಳ್ಳಲಾಗದ ಬಗ್ಗೆ ನಿವೇದಿಸಿಕೊಳ್ಳುತ್ತ ಹೇಳಿದನು “ಗುರುವರ್ಯ, ತಮ್ಮ ಅಪ್ಪಣೆಯಂತೆ ಭೂಮಂಡಲವನ್ನೆಲ್ಲ ತಿರುಗಿ ಕಪ್ಪುಕಿವಿಯ ಆರುನೂರು ಅಶ್ವಗಳನ್ನು ತಂದಿದ್ದೇನೆ. ತಾವು ದಯವಿಟ್ಟು ಸ್ವೀಕರಿಸಬೇಕು. ಭೂಮಿಯ ಮೇಲೆ ಇನ್ನೊಂದು ಕುದುರೆಕೂಡ ಲಭ್ಯವಿಲ್ಲ. ಆದ್ದರಿಂದ ಉಳಿದ ಎರಡುನೂರು ಕುದುರೆಗಳ ಶುಲ್ಕರೂಪದಲ್ಲಿ ತಾವು ಈ ದಿವ್ಯಾಂಗನೆ ಮಾಧವಿಯನ್ನು ಸ್ವೀಕರಿಸಬೇಕು” ಗಾಲವನ ಈ ಪ್ರಾರ್ಥನೆಯನ್ನು ಗರುಡನೂ ಅನುಮೋದಿಸಿದ. ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯನ ಮಾತನ್ನು ಒಪ್ಪಿಕೊಂಡನು. ಉಳಿದ ರಾಜರುಗಳಂತೆ ಮಾಧವಿಯ ಸಂಯೋಗದಿಂದ ಒಬ್ಬ ತೇಜಸ್ವಿ ಪುತ್ರನನ್ನು ಪಡೆದನು. ಅವನೇ ಕಾಲಾಂತರದಲ್ಲಿ ಅಷ್ಟಕನೆಂಬ ಹೆಸರಿನಿಂದ ಪ್ರಸಿದ್ಧನಾಗಿ, ವಿಶ್ವಾಮಿತ್ರನ ರಾಜ್ಯಕಾರ್ಯಭಾರವನ್ನೆಲ್ಲ ನಿರ್ವಹಿಸಿದನಲ್ಲದೆ ಕಪ್ಪು ಕಿವಿಯ ಆರುನೂರು ಕುದುರೆಗಳ ಒಡೆಯನಾದನು. ಹೀಗೆ ನಾಲ್ವರು ಪುತ್ರರನ್ನು ಪಡೆದ ಅನಂತರ ಮಾಧವಿಯು ಗಾಲವನನ್ನು ಋಣ ಮುಕ್ತಗೊಳಿಸಿದಳು. ಆ ಮೇಲೆ ಆಕೆಯನ್ನು ಆಕೆಯ ತಂದೆ ಯಯಾತಿಗೆ ಮರಳಿ ಒಪ್ಪಿಸಲಾಯಿತು. ಯಾಕೆಂದರೆ ಕೇವಲ ಕಪ್ಪು ಕಿವಿಯ ಎಂಟುನೂರು ಅಶ್ವಗಳಿಗೆ ಬದಲಾಗಿ ಶುಲ್ಕವಾಗಿ ಅವಳನ್ನು ಗಾಲವನಿಗೆ ಕೊಡಲಾಗಿತ್ತು. ತನ್ನ ತಂದೆಯ ಮನೆಗೆ ಮರಳಿದ ಮೇಲೆ ಅವಳು ಮೊದಲಿನಂತೆ ಆದರಕ್ಕೆ ಪಾತ್ರಳಾದಳು. ನಾಲ್ಕು ಪುತ್ರರನ್ನು ಪಡೆದರೂ ಅವಳ ರೂಪ-ಯೌವನ ಅನಂತವಾಗಿಯೇ ಉಳಿದಿತ್ತು. ಯಯಾತಿ ಪುತ್ರಿ ಮಾಧವಿಯ ಈ ನಾಲ್ವರು ಪತಿಗಳು ಹಾಗೂ ನಾಲ್ವರು ಪುತ್ರರು ಪುರಾಣಗಳ ನೂರಾರು ರೋಚಕ ಕತೆಗಳ ನಾಯಕರಷ್ಟೇ ಅಲ್ಲ, ಭಾರತದ ಭಿನ್ನ ಭಿನ್ನ ರಾಜವಂಶಗಳ ಪ್ರವರ್ತಕರೂ ಅಮಿತ ಯಶಸ್ವೀ ಮಹಾಪುರುಷರೂ ಆಗಿದ್ದಾರೆ. ತನ್ನ ನಾಲ್ವರು ಯಶಸ್ವೀ ಪುತ್ರರಿಗೆ ಜನ್ಮ ಕೊಟ್ಟು ಮರಳಿ ತಂದೆಯ ಮನೆಗೆ ಬಂದ ಮೇಲೆ, ತಂದೆ ಯಯಾತಿಯು ಅವಳ ಸ್ವಯಂವರವನ್ನು ಏರ್ಪಡಿಸುವ ವಿಚಾರವನ್ನು ಪ್ರಕಟಿಸಿದ. ಆದರೆ ಮಾಧವಿಯು ಬೇರಾವುದೇ ಪುರುಷನನ್ನು ಪತಿಯನ್ನಾಗಿ ವರಿಸುವ ಇಚ್ಛೆ ತನಗಿಲ್ಲವೆಂದು ನಿರಾಕರಿಸಿ ತಪೋವನದ ಕಡೆ ಪ್ರಯಾಣ ಬೆಳೆಸಿದಳು. 134 ಕಥಾ ಸಂಸ್ಕೃತಿ ಮೈತ್ರೇಯಿಗೆ ಸಿಕ್ಕಿದ್ದೇನು? - ಭಗವಾನ್ ಸಿಂಹ ಪ್ರಾಚೀನ ಕಾಲದಲ್ಲಿ ಬ್ರಹ್ಮವಿದರಿಗೂ ಬಹುವಿವಾಹವು ವರ್ಜಿತವಾಗಿರಲಿಲ್ಲ. ಇಂಥ ವಿಷಯಗಳಲ್ಲಿ ಬ್ರಹ್ಮವು ಅಡ್ಡಿಪಡಿಸುತ್ತಿರಲಿಲ್ಲ. ಬ್ರಹ್ಮವೆಂಬುದು ಒಂದು ಮತ್ತು ಅದ್ವಿತೀಯ. ಉಳಿದವೆಲ್ಲವೂ ಭ್ರಮೆ. ಇರುವುದು ಅದೊಂದೇ, ಉಳಿದುದೇನೂ ಇಲ್ಲ. ಅದೇ ತನ್ನಿಂದ ಬೇರೆಯಾಗುತ್ತದೆ. ಅದೇ ತನ್ನೊಡನೆ ಸೇರುತ್ತದೆ. ಅದು ಒಂದಾಗಿ ಎರಡೆನಿಸಲಿ, ಎರಡಾಗಿ ಒಂದೆನಿಸಲಿ, ಅದರಲ್ಲಿ ವ್ಯತ್ಯಾಸವೇನು? ಆದ್ದರಿಂದ ಬ್ರಹ್ಮವಿದನಾದ ಯಾಜ್ಞವಲ್ಕ್ಯರು ಮೈತ್ರೇಯಿ ಹಾಗೂ ಕಾತ್ಯಾಯಿನಿ ಎಂಬ ಇಬ್ಬರು ಪತ್ನಿಯರನ್ನು ಅರ್ಧಾಂಗಿನಿಯರಾಗಿ ಪಡೆದಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಅವರ ಚತುರ್ಥಾಂಗಿನಿಯಷ್ಟೇ ಆಗಿದ್ದಳೆಂಬುದು ಏನೂ ಅನುಚಿತ ವಿಷಯವಾಗಿರಲಿಲ್ಲ. ಭೇದ ಬುದ್ಧಿಯನ್ನಿಟ್ಟುಕೊಂಡವರಿಗೆ ಇದು ಏನೇ ಅನ್ನಿಸಲಿ, ಸ್ಥಿತಿಯು ವಿರುದ್ಧವಾದಾಗ ತತ್ವಾದರ್ಶಿಗಳಿಗೆ ಇದು ಬಾಧಿಸುತ್ತಿತ್ತು. ಅವರ ಪೂರ್ಣ ಜೀವನಕಾಲದಲ್ಲಿ ಅವರಿಗೆ ಈ ಇಬ್ಬರು ಪತ್ನಿಯರನ್ನು ಮಾಡಿಕೊಳ್ಳುವ ಅವಕಾಶವಷ್ಟೇ ದೊರಕಿತ್ತೇ ಅಥವಾ ಈ ಸಂಖ್ಯೆಯು ದ್ವಿವಚನದಿಂದ ಬಹುವಚನದತ್ತಲೂ ಮುಂದುವರಿದಿತ್ತೇ ಇದೇನೂ ನಮಗೆ ಗೊತ್ತಿಲ್ಲ. ಈ ಘಟನೆಯ ಕಾಲದಲ್ಲಿ ಅವರಿಗೆ ಪ್ರಾಯಶಃ ಇಬ್ಬರೇ ಪತ್ನಿಯರಿದ್ದರು. ನಿಶ್ಚಯವೆಂದು ನಾವು ವಿಶ್ವಾಸಕೊಟ್ಟ ಮಾತೂಕೂಡ ಅಷ್ಟೊಂದು ನಿಶ್ಚಿತವಾದುದಲ್ಲ. ಯಾಕೆಂದರೇ ‘ಮೈತ್ರಾಯಣೀ ಸಂಹಿತೆ’ ಯೆಂಬ ಹೆಸರು ಕೇಳಿದಾಗ, ಈ ಹೆಸರಿನ ಯಾವುದೋ ಋಷಿಕಾ ಉಪನಿಷದ್ಕಾಲಕ್ಕಿಂತ ಮೊದಲು ಆಗಿದ್ದರೂ ಆಗಿರಬಹುದು ಅನಿಸುತ್ತದೆ. ಆದರೆ ಅವಳು ಯಾಜ್ಞವಲ್ಕ್ಯರ ಪತ್ನಿಯೇ ಆಗಿರಬೇಕೆಂದೇನೂ ಇಲ್ಲ. ಅಥವಾ ಅವಳು ಯಾಜ್ಞವಲ್ಕ್ಯರ ಪತ್ನಿಯಾಗಿದ್ದರೂ ಈ ಕತೆಯೂ ಅವಳನ್ನು ಪಾತ್ರವನ್ನಾಗಿಸಿಕೊಂಡು ಕೇವಲ ಕಲ್ಪನೆಯ ಆಧಾರದ ಮೇಲೆ ರೂಪಿಸಿದ್ದಾಗಿರಬಾರದೆಂದೇನೂ ಇಲ್ಲ. ಕತೆಯಲ್ಲಿ ಹೇಳಿದಂತೆ ಯಾಜ್ಞವಲ್ಕ್ಯರಿಗೆ ವಯಸ್ಸು ಇಳಿದಿತ್ತು. ಶರೀರ ಜರ್ಜರಿತವಾಗಿತ್ತು. ಈ ಜೀವನಕ್ಕೆ ಇನ್ನೇನು ಅವಸ್ಥೆಯೋ ಎಂದು ಇದ್ದಕ್ಕಿದ್ದಂತೆ ಒಮ್ಮೆ ಅವರಿಗನ್ನಿಸಿತು. ಯಾವಾಗ ಕರೆ ಬರುವುದೋ ಗೊತ್ತಿಲ್ಲ. ನಾನು ಇಲ್ಲವಾದರೆ ಏನುಗತಿ? ಹಿರಿಯ ಪತ್ನಿ ಕಾತ್ಯಾಯಿನಿಯು ಮೈತ್ರೇಯಿಗೆ ಜೀವನ ನಿರ್ವಹಣೆಗಾಗಿ ಏನಾದರೂ ಕೊಡುತ್ತಾಳೋ....... ಬಿಡುತ್ತಾಳೋ.......... ‘ಕತಿ’ ಯೆಂಬುದರ ಅರ್ಥವೇ ಉಪನಿಷದ್ ಕಥಾ (ಭಾರತ) 135 ಲಾಲಸೆ. ಅವಳ ಹೆಸರನ್ನು ಕೇಳಿದರೇ ಗೊತ್ತಾಗುತ್ತದೆ. ಯಾವ ವಸ್ತುವಿನಿಂದಲೂ ಅವಳ ಮನಸ್ಸು ಸಮಾಧಾನವಾಗುವುದೇ ಇಲ್ಲ. ಯಾವಾಗಲೂ ಬೇಡಿಕೆಯನ್ನು ಇಡುತ್ತಲೇ ಇರುತ್ತಾಳೆ. ಅದನ್ನು ತಾ, ಇದನ್ನು ತಾ, ಯಾಜ್ಞವಲ್ಕ್ಯರಿಗೆ ತಮ್ಮ ಕಾಲದ ಸಾಮಂತರ ನಡುವೆ ಗೌರವವಿದ್ದುದರಿಂದ, ಅವರ ಬಳಿ ತುಂಬ ಸಮೃದ್ಧಿಯೂ ಇತ್ತು. ಬ್ರಹ್ಮವಾದಿಯಾದ್ದರಿಂದ ಬ್ರಾಹ್ಮಣನಿಗೆ ಲಕ್ಷ್ಮಿಯೊಡನೆ ವೈರವಿದೆಯೆಂಬ ನಿಯಮವನ್ನು ಇತರ ಹಳೆಯ ವಿಧಾನಗಳಂತೆ ಒಪ್ಪುತ್ತಿರಲಿಲ್ಲ. ಹೀಗಿದ್ದರೂ ಕೊನೆಯಂತೂ ಆಗಲೇ ಬೇಕಲ್ಲ. ಇಷ್ಟಾದರೂ ಕಾತ್ಯಾಯಿನಿಯ ಬೇಡಿಕೆಗೆ ಮಿತಿಯೇ ಇರಲಿಲ್ಲ. ಮೇಲಿಂದ ದೂರುಗಳು ಬೇರೆ. ಯಾಜ್ಞವಲ್ಕ್ಯರು ಸಾಯುವ ಭಯದಿಂದ ಹೀಗೆಲ್ಲ ಯೋಚಿಸಿರಲಿಲ್ಲವೆಂದು ಕೆಲವರು ಭಾವಿಸುತ್ತಾರೆ. ಅವರು ಸನ್ಯಾಸವನ್ನು ಸ್ವೀಕರಿಸಹೊರಟಿದ್ದರು. ಅವರು ತಮ್ಮ ಈ ಪ್ರಸ್ತಾಪವನ್ನು ಗೂಢ ಭಾಷೆಯಲ್ಲಿ ಇಟ್ಟಿದ್ದರಿಂದ ಅದಕ್ಕೆ ಯಾವ ಅರ್ಥವನ್ನೂ ಹಚ್ಚಬಹುದಾಗಿತ್ತು. ಅವರು ಹೇಳಿದ್ದೆಂದರೆ- “ಮೈತ್ರೇಯಿ, ನಾನು ಈ ಸ್ಥಾನದಿಂದ ಮೇಲೆ ಹೋಗುವವನಿದ್ದೇನೆ. ‘ವಿದ್ಯಾಸು ಅನು ಆ ಅರೆ ಅಹಂ ಅಸ್ಮಾತ್ ಸ್ಥಾನಾತ್ ಅಸ್ಮಿ’ - ಆದ್ದರಿಂದ ನಿನ್ನ ಮತ್ತು ಕಾತ್ಯಾಯಿನಿಯ ನಡುವೆ ನಾಳೆ ಯಾವುದೇ ಜಗಳವಾಗದಂತೆ ವಿಭಾಗ ಮಾಡಿಬಿಡುವೆ” ಇಂಥ ಮಾತನ್ನು ಸನ್ಯಾಸ ತೆಗೆದುಕೊಳ್ಳುವ ಸಮಯದಲ್ಲಿಯೂ ಹೇಳಬಹುದಾಗಿತ್ತು. ಆದರೆ ಬ್ರಹ್ಮವಾದಿಗಳೂ ಸನ್ಯಾಸವನ್ನು ತೆಗೆದುಕೊಳ್ಳಬೇಕಾದರೆ, ಅನಾಸಕ್ತಿ ಕರ್ಮಯೋಗಕ್ಕೇನರ್ಥ? ಆದ್ದರಿಂದ ಗೃಹಸ್ಥಾಶ್ರಮದಿಂದ ಮೇಲಿನ ಸನ್ಯಾಸದ ಕಡೆ ಹೋಗುವುದನ್ನು ಒಪ್ಪಿಕೊಳ್ಳದಿದ್ದರೂ ಗೊಂದಲವೇನೂ ಇಲ್ಲ ‘ಮೈತ್ರೇಯಿ’ ಹೆಸರಿನಿಂದಲೇ ಗೊತ್ತಾಗುತ್ತದೆ- ಆಕೆಗೆ ಬ್ರಹ್ಮವಾದಿನಿಯಾಗುವುದರಲ್ಲಿ ಹೆಚ್ಚು ಇಷ್ಟವಿದ್ದಿರಬಹುದು. ಹಾಗಾಗಿ ಮೈತ್ರೇಯಿಯ ಬಳಿ ಈ ಪ್ರಸ್ತಾಪವನ್ನು ಇಡಲಾಯಿತು. ಮೈತ್ರೇಯಿಯೊಡನೆ ಅವರು ಪ್ರೇಮದ ಹೊರತಾಗಿ ಬ್ರಹ್ಮದ ಬಗೆಗೂ ಚರ್ಚಿಸುತ್ತಿದ್ದಿರುವ ಸಾಧ್ಯತೆ ಇದೆ. ಪತ್ನಿಯ ಎದುರು ದರ್ಶನ ಹಾಗೂ ಶಾಸ್ತ್ರಗಳ ಚರ್ಚೆಯು ವಯಸ್ಸಾದ ಗಂಡನ ಅಂತಿಮ ರಕ್ಷಣೆ. ಮೂರ್ತ ವಿಚಾರಗಳಿಗಿಂತ ಅಮೂರ್ತ ವಿಚಾರಗಳ ಬಗೆಗೆ ಹೆಚ್ಚಿನ ಆಸಕ್ತಿ ಬೆಳೆದಿತ್ತು. ಯಾಜ್ಞವಲ್ಕ್ಯರಿಗೆ ಆಕಾಂಕ್ಷೆ ಇದ್ದರೂ ಮೈತ್ರೇಯಿ ಹೆಣ್ಣಾದ್ದರಿಂದ ಅವಳಿಗೆ ಅಂಥ ಆಸೆಗಳು ಇರಲಿಲ್ಲವೆಂಬ ಸೂಕ್ಷ್ಮ ಪ್ರಶ್ನೆಯನ್ನೂ ಅವಳು ಕೇಳಿದ್ದಳು. ಮೈತ್ರೇಯಿ ಕೇಳಿದಳು “ಪ್ರಭು, ತಾವಂತೂ ಮೇಲೆ ಹೋಗುತ್ತಿದ್ದೀರಿ. ತಾವೇ ಇಲ್ಲವಾದ ಮೇಲೆ ನನಗೆ ಈ ಎಲ್ಲ ಸಂಪತ್ತಿನಿಂದ ಯಾವ ಪ್ರಯೋಜನ? ಇಡೀ ಜಗತ್ತಿನ ಸಂಪತ್ತೆಲ್ಲ ನನಗೆ ದೊರೆತರೂ ನಾನು ಅಮರಳಾಗಬಲ್ಲೆನೇನು?- ಹೇಳಿ” 136 ಕಥಾ ಸಂಸ್ಕೃತಿ ಹಾಗೆ ನೋಡಿದರೆ ಇದು ಅಷ್ಟೊಂದು ಆಧ್ಯಾತ್ಮಿಕ ಪ್ರಶ್ನೆಯೂ ಆಗಿರಲಿಲ್ಲ. ಬಡ ತಂದೆ ತಾಯಿಗಳು, ಗಂಡಿನ ವಯಸ್ಸು ನೋಡದೆ, ಅವನ ಆಸ್ತಿ- ಸಂಪತ್ತು ನೋಡಿ ಕಣ್ಣು ಮುಚ್ಚಿಕೊಂಡು ಮಗಳನ್ನು ಅವನ ಕೈಗೆ ಒಪ್ಪಿಸಿದ್ದಾಗ, ಅವನು ಅದನ್ನೆಲ್ಲ ಬಿಟ್ಟು ಹೊರಟುಹೋಗುವ ಮಾತುಗಳನ್ನು ಆಡಿದಾಗ, ಆ ನವವಧು ಪತ್ನಿಯು ಕೇಳಬಹುದಾದ ಗಟ್ಟಿ ಪ್ರಶ್ನೆ ಇದು. ಸಂಪತ್ತು, ಸಂಪತ್ತು, ಸಂಪತ್ತು. ಸಂಪತ್ತು ತೆಗೆದುಕೊಂಡು ಅವಳು ಮಾಡುವುದಾದರೂ ಏನು? ಆದರೆ ಆಸಕ್ತಿಯಿರುವವರು ಏನನ್ನು ಎಲ್ಲಿಂದ ಯಾವಾಗಬೇಕಾದರೂ ಹುಟ್ಟಿಸಿಕೊಳ್ಳಬಲ್ಲರಾದ್ದರಿಂದ, ಈ ಪ್ರಶ್ನೆಯಿಂದಲೂ ಆಧ್ಯಾತ್ಮಿಕ ಸಾರವನ್ನು ಹೊರಡಿಸಿದರೆ ನಾವು ಅದನ್ನು ಒಪ್ಪಲೇಬೇಕಾಗುತ್ತದೆ. ಹಾಗೆ ನೋಡಿದರೆ ಯಾಜ್ಞವಲ್ಕ್ಯರು ತಮ್ಮ ವಿಚಾರಗಳಲ್ಲಿ ಅನೇಕ ದೃಷ್ಟಿಯಿಂದ ತುಂಬ ಆಧುನಿಕರಾಗಿದ್ದರು. ಮತ್ತು ತಮಗೆ ತಾವೇ ಆಸಕ್ತರ ಪ್ರಶ್ನೆಗಳಿಗೆ ಉತ್ತರವೂ ಆಗಿದ್ದರು. ಯಾಜ್ಞವಲ್ಕ್ಯರು ಹೇಳಿದರು - “ಇಲ್ಲ, ನೀನಿದರಿಂದ ಅಮರಳೇನೂ ಆಗುವುದಿಲ್ಲ. ಭೋಗ್ಯವಸ್ತುಗಳ ಸಂಗ್ರಹದಿಂದ ಮನುಷ್ಯನಿಗೆ ಸಿಗಬಹುದಾದ ಸುಖ-ಸೌಕರ್ಯಗಳೆಲ್ಲವೂ ನಿನಗೆ ಇದರಿಂದ ಪ್ರಾಪ್ತವಾಗುತ್ತವೆ. ನಿಜ, ಹಣದಿಂದ ಅಮರತ್ವ ದೊರೆಯುವುದಿಲ್ಲ.” ಮೈತ್ರೇಯಿ ಹೇಳಿದಳು - “ಅಂದಮೇಲೆ ಇವೆಲ್ಲವೂ ನನ್ನ ಪಾಲಿಗೆ ವ್ಯರ್ಥ. ಅಮರತ್ವವನ್ನು ಪಡೆಯುವ ಉಪಾಯವು ತಮಗೆ ಗೊತ್ತಿದ್ದರೆ ಅದನ್ನು ನನಗೆ ಅವಶ್ಯ ಹೇಳಿ. ನನಗೆ ಆ ಜ್ಞಾನ ಬೇಕು, ತಮ್ಮ ಸಂಪತ್ತಲ್ಲ.” ಯಾಜ್ಞವಲ್ಕ್ಯರು ಪ್ರಸನ್ನರಾದರು. ಅವರು ಹೇಳಿದರು...... “ಮೈತ್ರೇಯಿ, ನೀನು ಧನ್ಯಳು. ಅಮೂರ್ತವಾದ ಸಂಗತಿಗಳಲ್ಲಿ ಸಂತೋಷಿತಳಾಗಿರುವ ನಿನ್ನ ಈ ಸ್ವಭಾವದಿಂದಾಗಿಯೇ ನೀನು ನನಗೆ ಈ ಮೊದಲೂ ಇಷ್ಟಳಾದವಳು. ಇಂದೂ ನನಗೆ ಪ್ರಿಯವಾದ ಮಾತುಗಳನ್ನೇ ಆಡುತ್ತಿದ್ದೀಯೇ. ಬಾ, ಕುಳಿತುಕೋ ನಾನು ನಿನಗೆ ಇದರ ವಿವರಣೆ ಕೊಡುತ್ತೇನೆ. ನೀನು ನನ್ನ ಹೇಳಿಕೆಯನ್ನು ಗಮನವಿಟ್ಟುಕೇಳು, ಆ ಬಗೆಗೆ ಗಂಭೀರವಾಗಿ ಯೋಚಿಸು” ಅನಂತರ ಯಾಜ್ಞವಲ್ಕ್ಯರು ಒಂದು ದೀರ್ಘ ಭಾಷಣವನ್ನು ಮಾಡಿದರು. ಯಾಕೆಂದರೆ ಸಾವಿರ ಎರಡು ಸಾವಿರ ಮೂರು ಸಾವಿರ ವರ್ಷಗಳ ಅನಂತರವೂ ಕೆಲವರಾದರೂ ಇದನ್ನು ಅವಶ್ಯಕೇಳುತ್ತಾರೆ, ಆದ್ದರಿಂದ ಇತಿಹಾಸದ ಸದ್ದು- ಗದ್ದಲದಲ್ಲಿ ಇದು ಕರಗಿ ಹೋಗಬಾರದು, ಆಗಲೂ ಇದರ ಮೊಳಗು ಸ್ಪಷ್ಟವಾಗಿ ಕೇಳಿರಬೇಕು, ಮತ್ತು ಗ್ರಹಿಸಬಲ್ಲ ಕಿವಿಗಳಲ್ಲಿ ಇದು ದೂರದ ಢೋಲಿನ ಸದ್ದಿನಂತೆ ಪ್ರವೇಶಿಸುತ್ತಿರಬೇಕು. - ಎಂದು ಆಲೋಚಿಸಿಯೇ ಈ ಭಾಷಣವನ್ನು ನೀಡಲಾಗಿತ್ತು. ಉಪನಿಷದ್ ಕಥಾ (ಭಾರತ) 137 ಅವರು ಹೇಳಿದರು........ ``ಮೈತ್ರೇಯೀ, ಸಂಸಾರದ ಸಂಬಂಧಗಳೆಲ್ಲ ಸ್ವಾರ್ಥದ ಸಂಬಂಧಗಳು. ಪರೋಪಕಾರದ ಭಾವನೆಯಿಂದ ಯಾರೂ ಯಾವ ಕೆಲಸವನ್ನೂ ಮಾಡುವುದಿಲ್ಲ. ಯಾವುದೇ ಸ್ತ್ರೀ ತನ್ನ ಪತಿಯನ್ನು ಪ್ರೀತಿಸುವುದು ಪತಿಯ ಮೇಲಿನ ಪ್ರೀತಿಯಿಂದಲ್ಲ, ತನ್ನ ಸ್ವಾರ್ಥಕ್ಕಾಗಿ ಅವನನ್ನು ಪ್ರೀತಿಸುತ್ತಾಳೆ. ಪತಿಯು ಅವಳನ್ನು ಅದೇ ರೀತಿಯಲ್ಲಿ ಪ್ರೀತಿಸದಿದ್ದರೆ ಅವನನ್ನು ಆಕೆ ಪ್ರೀತಿಸುತ್ತ ಇರಲಾರಳು. ಬೇರೆ ಯಾರಾದರೂ ಪ್ರೀತಿಯನ್ನು ಆದರವನ್ನು ತೋರಿಸಿದರೆ, ಪತಿಯಿಂದ ಉಪೇಕ್ಷಿತಳಾಗಿ ಅವಳು ಅವನತ್ತ ಅವಶ್ಯವಾಗಿ ಒಲಿಯುವಳು. ಯಾಜ್ಞವಲ್ಕ್ಯನು ಸರಿಯಾಗಿ ಇದೇ ಶಬ್ದಗಳಲ್ಲಿ ಹೇಳಿರದಿದ್ದರೂ, ತಾನು ಹೇಳಿದ್ದನ್ನು ಆಳವಾಗಿ ವಿಚಾರಮಾಡು ಎಂಬುದನ್ನು ಮೈತ್ರೇಯಿಗೆ ಮೊದಲೇ ಹೇಳಿದ್ದನು. ಇದರಿಂದ ಪರ್ಯಾಯವಾಗಿ ಅವರು ಹೇಳಿದ್ದೇನು? ವಯಸ್ಸಿನಲ್ಲಿ ಅಂತರವಿದ್ದರೂ ನಾನು ನಿನ್ನನ್ನು ವಿವಾಹವಾದದ್ದು ನಿನಗಾಗಿ ಅಲ್ಲ, ನನಗಾಗಿ ಮಾಡಿಕೊಂಡದ್ದು. ಸತೀತ್ವ ಇತ್ಯಾದಿಯಾಗಿ ಹೇಳುವ ಮಾತುಗಳೆಲ್ಲವೂ ಜನರು ಸ್ತ್ರೀಯರನ್ನು ಮೂರ್ಖರನ್ನಾಗಿ ಮಾಡಿ ಸ್ವಾರ್ಥಸಾಧಿಸಿಕೊಳ್ಳುವುದೇ ಆಗಿದೆಯೆಂಬುದನ್ನು ಅವರು ತಿಳಿಸಿದ್ದರು. ಅಂದರೆ ಜನರು ಇದನ್ನು ಸ್ತ್ರೀಯರ ಒಳಿತಿನ ಸಲುವಾಗಿ ಮಾಡುತ್ತಿಲ್ಲ, ಬದಲಾಗಿ ಮಾನಸಿಕವಾಗಿ ವಿಕಲಗೊಳಿಸಿ ಅವಳನ್ನು ಕಟ್ಟಿಹಾಕಿಡಲು ಮಾಡುತ್ತಾರೆ. ವಾಸ್ತವವಾಗಿ ಬ್ರಹ್ಮವಿದ್ಯೆಯ ತೆರೆಗಳು ಚಲಿಸುತ್ತಿರದಿದ್ದರೆ ನಾನೂ ಪುರಾಣವಾದಿಗಳಂತೆ ಈ ಸಮಯದಲ್ಲಿ ಸತೀತ್ವದ ಮಾತುಗಳನ್ನೇ ಆಡುತ್ತಿದ್ದೆ. ಅದೇ ರೀತಿ ಪುರುಷನು ಸ್ತ್ರೀಯನ್ನು ಸ್ತ್ರೀಯ ಹಿತಕ್ಕಾಗಿ ಪ್ರೀತಿಸುವುದಿಲ್ಲ. ತನ್ನ ಸ್ವಾರ್ಥಕ್ಕಾಗಿ ಅವಳನ್ನು ಪ್ರೀತಿಸುತ್ತಾನೆ. ಯಾಜ್ಞವಲ್ಕ್ಯರು ಈ ಮಾತುಗಳನ್ನು ಹೇಳಿರದಿದ್ದರೂ, ಕನಿಷ್ಠಪಕ್ಷ ಮೈತ್ರೇಯಿಗೆ ಇದನ್ನು ತಿಳಿದುಕೊಳ್ಳಲು ಕಷ್ವವಾಗುತ್ತಿರಲಿಲ್ಲ. ಉದಾಹರಣೆಯು ಅಲ್ಲಿಯೇ ಲಭ್ಯವಿತ್ತು. ಪತಿಯು ಪತ್ನಿಯನ್ನು ಪತ್ನಿಯೆಂಬ ಕಾರಣಕ್ಕಾಗಿ ಪ್ರೀತಿಸುತ್ತಿದ್ದರೆ ಸ್ವಯಂ ಯಾಜ್ಞವಲ್ಕ್ಯರು ಒಬ್ಬಳು ಪತ್ನಿಯಿರುತ್ತಲೂ ಮತ್ತೊಂದು ಮದುವೆಯನ್ನೇಕೆ ಮಾಡಿಕೊಳ್ಳುತ್ತಿದ್ದರು? ತಮ್ಮ ಯುಗದ ಅನ್ಯ ಋಷಿಗಳಂತೆಯೇ ಯಾಜ್ಞವಲ್ಕ್ಯರೂ ತಮ್ಮ ಮಾತನ್ನು ಕೇಳುವವರ ಮೇಲೆ ವಿಶ್ವಾಸವಿಡುತ್ತಿರಲಿಲ್ಲ. ಮನುಷ್ಯನ ಮನಸ್ಸು ಏನಾದರೊಂದು ವಿಚಾರವನ್ನು ಕೇಳುವಾಗ, ನೋಡುವಾಗ, ಅಥವಾ ಓದುವಾಗ ಒಮ್ಮೊಮ್ಮೆ ವಿಚಲಿತವಾಗುತ್ತದೆಯೆಂಬುದನ್ನು ಅವರು ತಮ್ಮ ಚಿಂತನೆ ಅಥವಾ ಅನುಭವದಿಂದ ಕಂಡುಕೊಂಡಿದ್ದರು. ಹಾಗಾಗಿಯೇ ಯಾವುದಾದರೊಂದು ಮಾತು ಕೇಳುಗನ ಮನಸ್ಸಿನಲ್ಲಿ ಪೂರ್ಣವಾಗಿ ಇಳಿಯಲು, ಅದೇ ಮಾತನ್ನು ವಿವಿಧ ರೀತಿಯ ಉದಾಹರಣೆಗಳಿಂದ ಪುನರಪಿ ಹೇಳಬೇಕಾಗುತ್ತದೆ. ಇದರಿಂದ ಪುನರಾವೃತ್ತಿಯ ಅಪಾಯವಿದ್ದರೂ, ಒಂದು ಬೇರೆ ಲಾಭವೂ ಆಗುತ್ತದೆ. ಎಲ್ಲ ಪರಿಸ್ಥಿತಿಗಳಲ್ಲಿ ಎಲ್ಲ 138 ಕಥಾ ಸಂಸ್ಕೃತಿ ಕ್ಷೇತ್ರಗಳಲ್ಲಿ ಅದೇ ಸತ್ಯವನ್ನು ಸಾಕ್ಷಾತ್ಕಾರ ಮಾಡಿದ ಮೇಲೆ ಕೇಳುಗನಿಗೆ ಅಖಂಡತೆಯಲ್ಲಿ - ಸಾರ್ವಭೌಮತೆಯಲ್ಲಿ ಸಂದೇಹವೇ ಉಳಿಯುವುದಿಲ್ಲ. ಆದ್ದರಿಂದ ಅವರು ಈ ಮಾತನ್ನು ಅನೇಕಾನೇಕ ಉದಾಹರಣೆಗಳಿಂದ ಎಷ್ಟರಮಟ್ಟಿಗೆ ಮೈತ್ರೇಯಿಯ ಅರಿವಿಗೆ ತಂದಿದ್ದರೆಂದರೆ, ಮಗನು ಮಗನೆಂಬುದಕ್ಕಾಗಿ ಪ್ರಿಯನಾಗುವುದಿಲ್ಲವೆಂಬದೂ ಮೈತ್ರೇಯಿಯ ಅರಿವಿಗೆ ಬಂದಿತು. ಇಲ್ಲವಾದರೆ ತಂದೆ-ತಾಯಿಗಳಿಗೆ ಒಬ್ಬನೇ ಮಗ ಸಾಕಾಗಿತ್ತು. ಅವರು ಮಕ್ಕಳದೇ ತಂಡವನ್ನು ತಯಾರು ಮಾಡುತ್ತಿರಲಿಲ್ಲ. ಮಕ್ಕಳ ಹೆಚ್ಚಳವೆಂದರೆ ಸಂತಾನದ ಸ್ನೇಹದ ವಿತರಣೆಯೇ ಆಗಿದೆ. ಆದ್ದರಿಂದ ಅವರು ತಮ್ಮ ವ್ಯಕ್ತಿಗತ ಸ್ವಾರ್ಥಕ್ಕಾಗಿ ಮಕ್ಕಳನ್ನು ಪ್ರೀತಿಸುತ್ತಾರೆ. ತಮ್ಮ ವೃದ್ಧಾಪ್ಯದಲ್ಲಿ ಸಹಾಯಕ್ಕಾಗಿ, ಸತ್ತಮೇಲೆ ಉದ್ಧಾರಕ್ಕಾಗಿ ತರ್ಪಣ ನೀಡುವುದಕ್ಕಾಗಿ - ಇತ್ಯಾದಿ ಕಾರಣಗಳಿಂದ ಸಂತಾನವನ್ನು ಸೃಷ್ಟಿಸುತ್ತಾರೆ. ಒಂದಕ್ಕಿಂತ ಹೆಚ್ಚು ಪುತ್ರರನ್ನು ಹುಟ್ಟಿಸುತ್ತಾರೆ. ಪುತ್ರ ಜನನ ಆಗುವವರೆಗೂ ವಿವಶರಾಗಿ ಹೆಣ್ಣುಮಕ್ಕಳ ತಂದೆಯಾಗುತ್ತ ಹೋಗುತ್ತಾರೆ. ಯಾವುದಾದರೂ ಕಾರಣದಿಂದ ಒಬ್ಬ ಪುತ್ರನು ಕಾಲಾಧೀನನಾದರೆ ಎರಡನೆಯವನೋ, ಮೂರನೆಯವನೋ, ನಾಲ್ಕನೆಯವನೋ ಅವರ ಪ್ರಯೋಜನಕ್ಕೆ ಬಂದಾರೆಂದು. ಹೆಚ್ಚಿನ ತಂದೆಯರು ತಮ್ಮ ಮಕ್ಕಳನ್ನು ನೌಕರರು ಅಥವಾ ಪಶುಗಳ ರೀತಿಯಲ್ಲಿ ತಮ್ಮ ಹಿತಕ್ಕಾಗಿ ಅಥವಾ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಹಣವನ್ನು ಹಣವೆಂಬ ಕಾರಣಕ್ಕಾಗಿ ಯಾರೂ ಪ್ರೀತಿಸುವುದಿಲ್ಲ ಹಾಗೊಮ್ಮೆ ಆಗಿದ್ದರೆ, ಹಣ ಅಥವಾ ದ್ರವ್ಯವು ತನ್ನದಾಗಿರಲಿ ಅಥವಾ ಬೇರೆಯವರದಾಗಿರಲಿ, ಅದರಿಂದ ಅವರು ಸಂಗೀತ-ಸಾಹಿತ್ಯ-ಸೌಂದರ್ಯಗಳ ರೀತಿಯಲ್ಲಿ ಆನಂದವನ್ನು ಪಡೆಯುತ್ತಿದ್ದರು. ತಮ್ಮ ಮತ್ತು ಅನ್ಯರದೆಂಬ ಭೇದವನ್ನು ಮಾಡುತ್ತಿರಲಿಲ್ಲ. ಹಣವು ನಿನ್ನಲ್ಲಿರಲಿ, ಕಾತ್ಯಾಯನಿಯ ಬಳಿಯಲ್ಲಿರಲಿ, ಅಥವಾ ಇನ್ನಾರದೋ ಬಳಿಯಲ್ಲಿರಲಿ ನಿನಗೆ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ. ಅವರು ಹಣವನ್ನು ತಮಗಾಗಿ ಪ್ರೀತಿಸುತ್ತಾರೆ, ಆದ್ದರಿಂದಲೇ ಯಾವುದೋ ಹಣ ತನ್ನದಾಗುತ್ತಲೇ ಪ್ರೀತಿಸತೊಡಗುತ್ತಾರೆ. ಬೇರೆಯವರ ಹಣವನ್ನು ನೋಡಿ, ಪ್ರೀತಿಸುವುದರ ಬದಲು ಮತ್ಸರ ಪಡುತ್ತಾರೆ. ಆದ್ದರಿಂದ ನಾನು ನನ್ನ ಸಂಪತ್ತನ್ನು ನಿನ್ನ ಹಾಗೂ ಕಾತ್ಯಾಯನಿಯ ಮಧ್ಯೆ ಹಂಚಿ ಬಿಡಲು ಇಚ್ಛಿಸುತ್ತೇನೆ. ಬ್ರಾಹ್ಮಣನ ಒಳಿತಿಗಾಗಿ ಯಾರೂ ಬ್ರಾಹ್ಮಣನನ್ನು ಪ್ರೀತಿ-ಗೌರವಗಳಿಂದ ನೋಡುವುದಿಲ್ಲ. ತಮ್ಮ ಲಾಭಕ್ಕಾಗಿಯೇ ಅವರು ಬ್ರಾಹ್ಮಣನ ಬಗ್ಗೆ ಪ್ರೇಮಾದರಗಳನ್ನು ವ್ಯಕ್ತಪಡಿಸುತ್ತಾರೆ. ಬ್ರಾಹ್ಮಣನಿಂದ ಶಿಕ್ಷಣವೋ ಧರ್ಮವೋ ಉಪದೇಶವೋ ಜ್ಞಾನವೋ ಇತ್ಯಾದಿ ಯಾವುದಾದರೂ ಉಪಯೋಗ ಕಾಣದಿದ್ದರೆ, ಯಾರೂ ಬ್ರಾಹ್ಮಣನನ್ನು ಆದರಿಸುತ್ತಿದ್ದಿಲ್ಲ, ಪ್ರೀತಿಯಿಂದ ಕಾಣುತ್ತಿರಲಿಲ್ಲ. ದಾನವನ್ನು ಕೊಡುತ್ತಿರಲಿಲ್ಲ. ಉಪನಿಷದ್ ಕಥಾ (ಭಾರತ) 139 ಬ್ರಾಹ್ಮಣನಲ್ಲಿ ಯೋಗ್ಯತೆಯು ತುಸುವೂ ಇಲ್ಲದಿದ್ದರೆ, ಅವನಿಂದ ಯಾವ ಕೆಲಸವೂ ಆಗದಿದ್ದರೆ, ಯಾರೂ ಅವನನ್ನು ಆದರಿಸುತ್ತಿರಲಿಲ್ಲ. ಕ್ಷತ್ರಿಯನನ್ನು ಜನರು ಯಾಕೆ ಪ್ರೀತಿಸುವುದಿಲ್ಲವೆಂದರೆ, ಸಮ್ಮಾನದಿಂದ ಕಾಣುವುದಿಲ್ಲವೆಂದರೆ ಅವನು ಕ್ಷತ್ರಿಯನಾಗಿರುವುದಕ್ಕೆ. ಅಂದರೆ ಯಾರಾದರೂ ಕ್ಷತ್ರಿಯ ಕುಲದಲ್ಲಿ ಜನ್ಮಿಸಿದರಷ್ಟೇ ಸಾಲದು. ಜನರು ತಮ್ಮ ಸ್ವಾರ್ಥಕ್ಕಾಗಿ ಕ್ಷತ್ರಿಯನನ್ನು ಗೌರವಿಸುತ್ತಾರೆ. ಯಾಕೆಂದರೆ ಅವನು ಪ್ರಾಣವನ್ನು ಪಣವಾಗಿಟ್ಟು ಹೋರಾಡಿ ಅನ್ಯರ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತಾನೆ. ಅವನಲ್ಲಿ ಈ ಗುಣದ ಕೊರತೆಯಿದ್ದಿದ್ದರೆ, ಅವನು ನಿಷ್ಪ್ರಯೋಜಕನಾಗಿದ್ದರೆ, ಅವನನ್ನಾರೂ ಗೌರವಿಸುತ್ತಿದ್ದಿಲ್ಲ. ಆದ್ದರಿಂದ ಹುಟ್ಟಿನ ಶ್ರೇಷ್ಠತೆಗೆ ಅರ್ಥವೇ ಇಲ್ಲ. ಸಮಾಜಕ್ಕೆ ವ್ಯಕ್ತಿಯ ಉಪಯೋಗವೇ ಅವನಿಗೆ ಸಮಾಜದಿಂದ ಯೋಗ್ಯ ಗೌರವ-ಪ್ರೀತಿಗಳನ್ನು ಒದಗಿಸಿಕೊಡುತ್ತದೆ. ಜನರು ಜನರಾಗಿರುವ ಕಾರಣ ಯಾರಿಗೂ ಪ್ರಿಯರಾಗಿರುವುದಿಲ್ಲ. ಅವರ ಲಾಭಕ್ಕಾಗಿ ಜನರು ಅವರನ್ನು ಪ್ರೀತಿಸುವುದಿಲ್ಲ. ತಮ್ಮ ಪ್ರಯೋಜನಕ್ಕಾಗಿ ಜನರು ಜನರನ್ನು ಪ್ರೀತಿಸುತ್ತಾರೆ, ಯಾಕೆಂದರೆ, ಜನರ ನಡುವೆ ಇರುತ್ತ ನಾವು ಮನುಷ್ಯನ ರೂಪದಲ್ಲಿ ಏನನ್ನೋ, ತಿಳಿದುಕೊಳ್ಳುತ್ತೇವೆ. ಕಲಿತುಕೊಳ್ಳುತ್ತೇವೆ. ಅವರ ನಡುವೆ ಇರುವುದರಿಂದಲೇ ನಮಗೆ ಸುರಕ್ಷಿತತೆಯ ಅನುಭವ ಆಗುತ್ತದೆ. ಒಬ್ಬರು ಇನ್ನೊಬ್ಬರ ಸುಖ-ದುಃಖಗಳಲ್ಲಿ ಪಾಲುಗೊಳ್ಳುತ್ತೇವೆ. ದೇವತೆಗಳ ಲಾಭಕ್ಕಾಗಿ ಯಾರೂ ದೇವತೆಗಳನ್ನು ಪ್ರೀತಿಸುವುದಿಲ್ಲ. ಅವರ ಬಗ್ಗೆ ನಮ್ಮ ಭಕ್ತಿ-ಪ್ರೀತಿಗೆ ಕಾರಣವೆಂದರೆ-ಅವರು ನಮಗೆ ಬೆಳಕು ಗಾಳಿ ಮಳೆ, ಉಷ್ಣ, ಸುರಕ್ಷೆಯನ್ನು ನೀಡುತ್ತಾರೆ. ನಮ್ಮ ಬಯಕೆಗಳನ್ನು ಪೂರೈಸುತ್ತಾರೆ- ಹೀಗಾಗಿರದಿದ್ದರೆ, ದೇವತೆಗಳಿಂದ ಅನುಗ್ರಹ ಹಾಗೂ ವಿಪತ್ತು ನಿವಾರಣೆಯಲ್ಲಿ ನಮಗೆ ಭರವಸೆ ಇರದಿದ್ದರೆ, ಇನ್ನೊಂದು ಸಂಪ್ರದಾಯದಲ್ಲಿಯೂ ಭಕ್ತಿಯನ್ನು ಇಡಬಹುದಾಗಿತ್ತು. ಇದೇ ರೀತಿ ವಿಭಿನ್ನ ಪ್ರಾಣಿಗಳನ್ನೂ ಅವರ ಸಲುವಾಗಿ ಪ್ರೇಮದಿಂದ ಕಾಣುವುದಿಲ್ಲ. ನಾಯಿ, ಹಸು, ಕುರಿ ಮುಂತಾದ ಪ್ರಾಣಿಗಳಿಂದ ನಮಗೆ ರಕ್ಷಣೆ, ಹಾಲು, ಮಾಂಸ ಇತ್ಯಾದಿ ದೊರೆಯವುದರಿಂದ ಅದನ್ನು ಸಾಕುವುದು. ಸಿಂಹ, ಕರಡಿ, ಹಾವು, ಚೇಳು ಮುಂತಾದವುಗಳಿಂದ ಹಾನಿಯಾಗಬಹುದು, ಕೆಲವು ಕೊಳಕು ರೋಗಗಳನ್ನು ಹರಡಬಹುದಾದ ಕೀಟ-ಹುಳು ಹುಪ್ಪಡಿಗಳಿರಬಹುದು, ನಾವು ಅವುಗಳನ್ನು ತಿರಸ್ಕಾರದಿಂದ ನೋಡುತ್ತೇವೆ. ಹೀಗೆ ತನ್ನದಾಗುವುದು, ತನ್ನ ಸ್ವಂತದ್ದಾಗುವುದು, ಅಥವಾ ಆತ್ಮತತ್ವವೇ ಪ್ರಿಯ-ಅಪ್ರಿಯಗಳ ನಿರ್ಧಾರಕ. ಆದ್ದರಿಂದಲೇ ಆತ್ಮವು ಕೇಳಲು ಯೋಗ್ಯ, ತಿಳಿಯಲು ಯೋಗ್ಯ, ಮನನ ಮಾಡಲು ಯೋಗ್ಯ, ಗಮನವಿಡಲು ಯೋಗ್ಯವಾಗಿದೆ. 140 ಕಥಾ ಸಂಸ್ಕೃತಿ ಇದನ್ನೇ ತಿಳಿಯಲು, ಕೇಳಲು, ನೋಡಲು, ಅನುಚಿಂತನ ಮಾಡಲು ಪ್ರಯತ್ನಿಸುವುದರಿಂದ, ಉಳಿದೆಲ್ಲದರ ಅರಿವೂ ಆಗುತ್ತದೆ. ಆತ್ಮವನ್ನು ಕೇಳುವುದರಿಂದ, ನೋಡುವುದರಿಂದ, ತಿಳಿಯುವುದರಿಂದ, ಭಾವಿಸುವುದರಿಂದ ಎಲ್ಲ ಸಂಗತಿಗಳನ್ನೂ ಕೇಳಲು, ತಿಳಿಯಲು, ನೋಡಲು ಭಾವಿಸಲು ಸಾಧ್ಯವಾಗುವುದಾದರೆ, ಬಾಹ್ಯ ಜಗತ್ತನ್ನು ನೋಡುವುದರಿಂದ, ಕೇಳುವುದರಿಂದ, ತಿಳಿಯುವುದರಿಂದ, ಭಾವಿಸುವುದರಿಂದ, ಆತ್ಮವನ್ನು ಯಾಕೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲವೆಂಬ ಅಂಶವು ಮೈತ್ರೇಯಿಯ ತಿಳಿವಳಿಕೆಗೆ ಬರುತ್ತಿರಲಿಲ್ಲ. ಅವಳು ಯಾವುದೋ ಗೊಂದಲವನ್ನು ಮನಸ್ಸಿನಲ್ಲಿ ತಳೆದಿದ್ದಾಳೆ ಎಂದು ಅನಿಸಿತು. ಅತಿವಿಸ್ತಾರದ ಕಾರಣದಿಂದಾಗಿ ಈ ಗೊಂದಲ ಹೆಚ್ಚಿರಬಹುದು. ಅವರು ತಮ್ಮ ಕಥನದ ಸಮಾಹಾರ ಮಾಡುತ್ತ ಇದೇ ಮಾತನ್ನೇ ಭಿನ್ನ ರೂಪದಲ್ಲಿ ಇಟ್ಟರು- “ಹೊರ ಮತ್ತು ಒಳಗಿನ ಈ ಭಿನ್ನತೆಯ ಕಾರಣದಿಂದ, ತನ್ನದು - ಹೆರವರದು ಎಂಬ ತಿಳಿವಳಿಕೆಯ ಕಾರಣದಿಂದ, ಕೆಲವು ಜನರು ತನ್ನವರು ಉಳಿದವರೆಲ್ಲ ಬೇರೆಯವರು ಎಂದು ಭಾವಿಸುವ ಕಾರಣದಿಂದ ಜಗತ್ತಿನಲ್ಲಿ ಅಧಿಕಾಂಶ ಬಿಕ್ಕಟ್ಟುಗಳು ಹುಟ್ಟುತ್ತವೆ. ಯಾರನ್ನು ನಾವು ನಮ್ಮವರೆಂದು ತಿಳಿದುಕೊಳ್ಳುವುದಿಲ್ಲವೋ, ಅವರು ನಮ್ಮನ್ನು ತಮ್ಮವರೆಂದು ಭಾವಿಸುವುದು ಹೇಗೆ? ಈ ಭಿನ್ನತೆ ಹೀಗೆಯೇ ಬೆಳೆದರೆ, ಅವಿಶ್ವಾಸ, ವೈಮನಸ್ಯ ಹಾಗೂ ಸಂದೇಹಗಳು ಹೆಚ್ಚುತ್ತವೆ. ಮತ್ತು ಅವೇ ಉಗ್ರ ವಿರೋಧದ ರೂಪ ತಾಳುತ್ತವೆ, ನಮ್ಮ ವಿನಾಶದ ಕಾರಣಗಳಾಗುತ್ತವೆ. ಈ ಕಾರಣದಿಂದಲೇ ಬ್ರಾಹ್ಮಣನನ್ನು ಬೇರೆಯವನೆಂದು ತಿಳಿದರೆ ಅವನನ್ನು ಬ್ರಾಹ್ಮಣನು ಸೋಲಿಸುತ್ತಾನೆ. ಕ್ಷತ್ರಿಯನನ್ನು ಬೇರೆಯವನೆಂದು ಭಾವಿಸಿದರೆ ಅವನನ್ನು ಕ್ಷತ್ರಿಯನು ಸೋಲಿಸುತ್ತಾನೆ. ಲೋಕವನ್ನು ನಮಗಿಂತ ಭಿನ್ನವೆಂದು ಭಾವಿಸಿದರೆ, ಲೋಕವು ನಮಗೆ ವಿರೋಧಿಯಾಗುತ್ತದೆ, ಮತ್ತು ನಮಗೆ ಹಾನಿ ಮಾಡಲು ಟೊಂಕ ಕಟ್ಟುತ್ತದೆ. ದೇವತೆಗಳನ್ನು ಬೇರೆಯವರೆಂದು ಭಾವಿಸಿದರೆ, ದೇವತೆಗಳು ಅವನನ್ನು ಅಳಿಸಿಹಾಕಲು ಸಿದ್ಧವಾಗುತ್ತಾರೆ. ವಿಭಿನ್ನಮತ-ಸಂಪ್ರದಾಯಗಳ ತಿಕ್ಕಾಟಕ್ಕೆ ಇದೇ ಕಾರಣ. ಎಲ್ಲರೂ ತನ್ನ ಶತ್ರುಗಳೆಂದು ತಿಳಿದರೆ, ಎಲ್ಲರೂ ಅವನ ಶತ್ರುಗಳೇ ಆಗುತ್ತಾರೆ. ಈ ನಾನಾ ಜನ, ವರ್ಣ ಸಂಪ್ರದಾಯ, ಪ್ರಾಣಿ, ದೇವತೆ, ಭೂತಗಣ- ಆತ್ಮನಿಂದ ಭಿನ್ನವಾಗಿ ಎಲ್ಲಿವೆ? ಆತ್ಮದೊಡನೆ ಅವುಗಳಿಗೆ ಯಾವ ವಿರೋಧವೂ ಇಲ್ಲ. ಈ ಆತ್ಮವನ್ನೇ ಎಲ್ಲವೂ ಎಂದು ತಿಳಿ. ಇದರಿಂದ ಎಲ್ಲವೂ ಅಭಿನ್ನವೆಂದು ಭಾವಿಸು. ಆತ್ಮನಃ ಸರ್ವಂವೇದ, ಇದಂಬ್ರಹ್ಮಮ್, ಇದಂಕ್ಷತ್ರಮ್, ಇಮೆ ಲೋಕಾ, ಇಮೆ ದೇವಾ, ಇಮಾನಿ ಭೂತಾನಿ, ,ಇದಂಸರ್ವಂಯತ್ ಅನ್ಯಂ ಆತ್ಮಾ,” “ಆತ್ಮನನ್ನ ತಿಳಿಯುವುದು, ನೋಡುವುದು, ಹಿಡಿಯುವುದು ಮತ್ತು ನಿಯಂತ್ರಿಸುವುದು ಇಷ್ಟೊಂದು ಸುಲಭವೇ?” ಮೈತ್ರೇಯಿಯು ಹೀಗೆಂದು ಕೇಳಿದಾಗ ಉಪನಿಷದ್ ಕಥಾ (ಭಾರತ) 141 ಯಾಜ್ಞವಲ್ಕ್ಯರು ಇಕ್ಕಟ್ಟಿನಲ್ಲಿ ಸಿಲುಕಿದರು. ಇದೇ ಪ್ರಶ್ನೆಯನ್ನೆತ್ತಿಕೊಂಡು ಅವರು ಜನಕನಂಥ ತತ್ವವಿದನೊಡನೆ ನಿರಂತರ ಚರ್ಚೆ ಮಾಡುತ್ತ ಬಂದಿದ್ದಾರೆ. ಮತ್ತೆ ಮತ್ತೆ ಮಥಿಸಿದ ಅನಂತರವೂ, ಅನೇಕ ಪ್ರಕಾರಗಳ ಧ್ಯಾನ-ಚಿಂತನಗಳ ನಂತರವೂ, ಕೆಲವು ಸಂದೇಹಗಳು ಮತ್ತೆ ಮತ್ತೆ ಎದುರು ನಿಲ್ಲುತ್ತಿವೆ. ಅದು ಹಾಗೂ ಅಲ್ಲ- ಹೀಗೂ ಅಲ್ಲ, ಅದೂ ಅಲ್ಲ - ಇದೂ ಅಲ್ಲ, ಎಂದು ಹೇಳುತ್ತ ಸಂತೋಷಪಡುತ್ತಿರಬೇಕಾಗಿದೆ. ಆ ಕಠಿಣ ವಿಷಯವನ್ನು ಮೈತ್ರೇಯಿಗೆ ತಿಳಿಸಿಕೊಡುವುದು ಹೇಗೆ? ಅವಳು ಅಷ್ಟೊಂದು ಓದು ಬರಹ ಬಲ್ಲವಳೂ ಅಲ್ಲ. ಗಂಭೀರ ವಿಷಯಗಳ ಮೇಲೆ ಚಿಂತನೆ ಮಾಡುವ ಸ್ವಭಾವದವಳೂ ಅಲ್ಲ. ಮನೆ ಗೃಹಸ್ತಿಕೆಯ ಕೆಲಸದಲ್ಲಿಯೇ ಇಷ್ಟು ವಯಸ್ಸನ್ನು ಕಳೆದಿದ್ದಾಳೆ. ಯಾಜ್ಞವಲ್ಕ್ಯರು ತನ್ನನ್ನು ಹೆಚ್ಚು ಪ್ರೀತಿಸುತ್ತಾರೋ ಕಾತ್ಯಾಯಿನಿಯನ್ನೋ ಎಂಬ ಸಂಕುಚಿತ ವರ್ತುಲದಲ್ಲಷ್ಟೇ ಯೋಚಿಸಿರಬಹುದು. ಹೀಗೆ ಅವರು ಯೋಚನೆಯಲ್ಲಿ ಮುಳುಗಿರುವಾಗಲೇ ಅವರಿಗೆ ಹಠಾತ್ತನೆ ಒಂದು ಉಪಮೆ ಹೊಳೆಯಿತು, ಹಾಗೆಯೇ ಒಂದು ತತ್ವಬೋಧೆ ಕೂಡ. ಅಮೂರ್ತವನ್ನು ಹಿಡಿಯಹೊರಟರೆ ಅದನ್ನು ಹಿಡಿಯುವುದು ಅಸಂಭವ. ಆದರೆ ಮೂರ್ತವನ್ನು ಹಿಡಿದು ಅದರ ಮೂಲಕ ಅಮೂರ್ತ ಮತ್ತು ಮೂರ್ತ ಎರಡನ್ನೂ ನಿಯಂತ್ರಿಸಬಹುದು. ಭೌತಿಕ ಜಗತ್ತನ್ನು ಅರಿತರೆ ಆತ್ಮ ತತ್ವವು ಹೆಚ್ಚು ಸುಲಭವಾಗಿ ಅರಿವಿಗೆ ನಿಲುಕುವುದು. ಅವರಿಗನ್ನಿಸಿತು - ಇದನ್ನೇ ಅವರು ಜೀವನದುದ್ದಕ್ಕೂ ಜನರಿಗೆ ತಿಳಿಯಪಡಿಸುತ್ತ ಬಂದಿದ್ದಾರೆ. ಆತ್ಮನನ್ನು ಗ್ರಹಿಸುವ ದಾರಿಯು ತನ್ನ ಇಂದ್ರಿಯಗಳನ್ನು ನಿಯಂತ್ರಣ ಮಾಡುವ ಪ್ರಯತ್ನದಿಂದ ಪ್ರಾರಂಭವಾಗಬೇಕು. ಹೊರಗೆ ನುಗ್ಗುವಿಕೆ ನಿಂತರೆ, ಅದರ ಹಿಂದೆ ಬಿದ್ದು ದುಃಖಿತನಾಗುವುದು ನಿಂತರೆ, ವಿಷಯಾಸಕ್ತಿ ಸಮಾಪ್ತವಾದರೆ, ಆತ್ಮ ನಿಯಂತ್ರಣವಾದಂತೆಯೇ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ಮುಕ್ತಿ ದೊರೆತರೆ, ಆತ್ಮದ ಅಸ್ತಿತ್ವದ ಬೋಧವಾಗುತ್ತದೆ. ಆತ್ಮದ ಕೂಗು ಕೇಳಿಸತೊಡಗುತ್ತದೆ. ಆತ್ಮ ಸಾಕ್ಷಾತ್ಕಾರವಾಗುತ್ತದೆ. ಮತ್ತು ಆತ್ಮ ವಿಜಯವೂ ಸಂಭವನೀಯವಾಗುತ್ತದೆ. ಅಲ್ಲಿಗೆ ತಲುಪಿದರೆ ನನ್ನದು-ತನ್ನದು ಎಂಬ ಜಂಜಾಟವೂ ಹಾಗೆಯೇ ಲುಪ್ತವಾಗಿಬಿಡುತ್ತದೆ. ಯಾಜ್ಞವಲ್ಕ್ಯರ ಮನಸ್ಸಿನಲ್ಲಿ ಉಮ್ಮಳಿಸಿದ ಉಪಮೆ ದುಂದುಭಿಯದಾಗಿತ್ತು. ದುಂದುಭಿಯ ಧ್ವನಿಯನ್ನು ಹಿಡಿಯುವುದು ಯಾರಿಂದಲಾದರೂ ಸಾಧ್ಯವೇ?. ಧ್ವನಿ ಹುಟ್ಟುತ್ತಲೇ ತನ್ನ ಪ್ರಸಾರ ಕ್ಷೇತ್ರದವರೆಗೆ ವ್ಯಾಪಿಸುತ್ತದೆ. ಒಮ್ಮೆ ನಾವು ದುಂದುಭಿಯನ್ನು ಹಿಡಿದರೆ, ಅದು ನಮ್ಮ ಕೈಯಲ್ಲಿ ಬಂದರೆ, ಆಗ ದುಂದುಭಿ ಹಾಗು ಅದರ ಧ್ವನಿ ಎರಡೂ ನಮ್ಮ ವಶಕ್ಕೆ ಬಂದಂತೆ, ನಾವು ಬೇಕಾದರೆ 142 ಕಥಾ ಸಂಸ್ಕೃತಿ ಮೊಳಗಿಸಬಹುದು, ಬೇಡವಾದರೆ ಬಿಡಬಹುದು. ಬಯಸಿದಷ್ಟು ದೊಡ್ಡದಾಗಿ, ಎತ್ತರದ ದನಿಯಲ್ಲಿ ಬಾರಿಸಬಹುದು. ಎಷ್ಟು ಬೇಕಾದರೂ ವಿರಾಮವಾಗಿ ಬಿಡುವಿನಲ್ಲಿ ಮೊಳಗಿಸಬಹುದು. ಇದೇ ಮಾತು ಶಂಖಕ್ಕೆ, ವೀಣೆಗೆ ಅನ್ವಯಿಸುತ್ತದೆ. ಇವುಗಳ ಧ್ವನಿಯಲ್ಲಿ ಭಿನ್ನತೆ ಇದೆ. ಆದರೆ ಇವುಗಳ ಧ್ವನಿಯನ್ನು ಹಾಗೂ ಭಿನ್ನತೆಯನ್ನು ಧ್ವನಿಯ ದಿಕ್ಕಿನಿಂದಲ್ಲ, ವಸ್ತುವಿನ ದಿಕ್ಕಿನಿಂದ, ದುಂದುಭಿ - ಶಂಖ - ವೀಣೆಯ ದಿಕ್ಕಿನಿಂದ ಹಿಡಿಯಬಹುದಾಗಿದೆ. ಸೂಕ್ಷ್ಮದ ಜ್ಞಾನವು ಸ್ಥೂಲದ ಮಾಧ್ಯಮದಿಂದಲೇ ಸಂಭವವಾಗಿದೆ. ಈ ಮಾತನ್ನು ಹೇಳುತ್ತಲೇ ಮೈತ್ರೇಯಿಯ ಮುಖದ ಮೇಲೆ ಕಾಣಿಸಿದ ಹೊಳಪಿನಿಂದ ಅವರು ನೀಡಿದ ಉಪಮೆ ವ್ಯರ್ಥವಾಗಲಿಲ್ಲವೆಂದು ನಿಶ್ಚಯವಾಯಿತು. ಉದಾಹರಣೆಗಳಿಂದ ವಿಚಾರಗಳು ಎಷ್ಟು ಸ್ಪಷ್ಟವಾಗುತ್ತವೆ. ಈಗ ಅವರು ಒಂದು ಹೊಸ ಉದಾಹರಣೆಯಿಂದ ಒಂದು ಹೊಸ ವಿಷಯವನ್ನು ಮೈತ್ರೇಯಿಗೆ ತಿಳಿಸಲು ಇಚ್ಛಿಸಿದರು. ಯಾಕೆಂದರೆ ಅದು ಮೈತ್ರೇಯಿಗೆ ಸ್ಪಷ್ಟವಾಗಿ ತಿಳಿಯುವುದೋ ಇಲ್ಲವೋ ಎಂಬ ಬಗ್ಗೆ ಪೂರ್ಣ ವಿಶ್ವಾಸವಿರಲಿಲ್ಲ. ಅದೆಂದರೆ, ವೇದ ಮತ್ತು ಶಾಸ್ತ್ರಗಳ ಭ್ರಮೆಯನ್ನು ಸ್ಪಷ್ಟಪಡಿಸುವುದು. ಪುರಾತನವಾದಿಗಳು ಮತ್ತೆ ಮತ್ತೆ ಘೋಷಣೆ ಕೂಗುತ್ತ, ವ್ಯರ್ಥ ವಿಚಾರಗಳನ್ನು ಮಾನ್ಯತೆಗಳನ್ನು ಹೇರುತ್ತ ಇರುತ್ತಾರೆ, ಮತ್ತು ನಮ್ಮ ಅರಿವನ್ನು ಕುಂಠಿತಗೊಳಿಸುತ್ತಿರುತ್ತಾರೆ. ಜ್ಞಾನದಿಂದ ಪ್ರಕಾಶ ಹೊಮ್ಮಬೇಕೇ ವಿನಾ ಹೊಗೆಯಲ್ಲ. ಯಾಜ್ಞವಲ್ಕ್ಯರು ತಮ್ಮ ಅಭಿಪ್ರಾಯವನ್ನು ಮುಂದಿಡುವುದಕ್ಕೆ ಮುನ್ನ ಒಂದು ಪ್ರಶ್ನೆಯನ್ನು ಕೇಳಿದರು. “ವೇದ-ಶಾಸ್ತ್ರಗಳಲ್ಲಿ ನಿನಗೆ ಆಸ್ಥೆಯಿದೆಯಲ್ಲವಾ ಮೈತ್ರೇಯಿ?” ಮೈತ್ರೇಯಿ ಹೌದೆನ್ನುವಂತೆ ತಲೆದೂಗಿದಳು. ಯಾಜ್ಞವಲ್ಕ್ಯರು ಗಂಭೀರರಾದರು. ಇಡೀ ವಿಶ್ವಕ್ಕೆಲ್ಲ ಅವರು ಜ್ಞಾನವನ್ನು ಹರಡುತ್ತಿದ್ದರೂ ತಮ್ಮ ಮನೆಯೊಳಗೇ ಕತ್ತಲೆಯು ಹಬ್ಬಿತ್ತು. ಇದರ ಹಿಂದೆ ಇವುಗಳ ರಚನಾಕರ್ತರ ಸ್ವಾರ್ಥವೂ ಅಡಗಿದೆಯೆಂಬುದನ್ನು ಒಂದು ಬಾರಿಯೂ ಹೇಳಲಿಲ್ಲ. ಅವರು ತಮ್ಮ ಸ್ವಾರ್ಥದ ಸಲುವಾಗಿ, ತಮ್ಮನ್ನು ಶ್ರೇಷ್ಠರೆಂದು ಸಿದ್ಧ ಮಾಡುವ ಸಲುವಾಗಿ, ಜ್ಞಾನದ ಬಳಕೆ ಮಾಡಲು ಬಯಸಿದರು. ಈ ಆಸಕ್ತಿಯಿಂದಾಗಿ ಪ್ರಕಾಶವನ್ನು ಬೆಳಗಬಲ್ಲ ಆ ಜ್ಞಾನದ ಕಟ್ಟಿಗೆಯನ್ನು ಒದ್ದೆ ಮಾಡಿ, ಅದರಿಂದ ಉಷ್ಣ ಹಾಗೂ ಪ್ರಕಾಶ ಹೊರಡುವ ಬದಲು ಹೊಗೆ ಹುಟ್ಟುವಂತೆ ಮಾಡಿಬಿಟ್ಟಿದ್ದಾರೆ. ಇದು ಕಣ್ಣಿನಲ್ಲಿ ಉರಿಯನ್ನೂ ಅಸ್ಪಷ್ಟತೆಯನ್ನೂ ಉಂಟು ಮಾಡುತ್ತದೆ. ಇಂದು ಈ ವಿಷಯವನ್ನು ಅವರು ಹೇಳಲೇ ಬೇಕಾಗಿದೆ. ಅದಕ್ಕೆ ಇದಕ್ಕಿಂತ ಬೇರೆಯಾದ ಉಪಮೆಯೂ ಇನ್ನೇನಿದ್ದೀತು? ಈಗ ಅವರು ಸ್ವಲ್ಪ ಆವೇಶದಿಂದ ಸಂಸ್ಕೃತದಲ್ಲಿ ಹೇಳಲು ಪ್ರಾರಂಭಿಸಿದರು - ‘ಸ ಯಥಾ ಆರ್ದೈಧಾ ಅಗ್ನೇಃ ಅಭಿ ಅಹಿತಾತ್ ಪ್ರಥಕ್ ಧೂಮಾ ವಿನಿಶ್ಚಿರಂತಿ ಏವಂವಾ ಅರೆ ಅಸ್ಯ ಮಹತೋ ಭೂತಸ್ಯ ನಿಶ್ವಸಿತಂ ಏತತ್ ಯತ್ ಋಗ್ವೇದೋ ಉಪನಿಷದ್ ಕಥಾ (ಭಾರತ) 143 ಯಜುರ್ವೇದಃ ಸಾಮವೇದೋ ಅಥರ್ವಾಂಗಿರಸ ಇತಿಹಾಸಃ ಪುರಾಣಂ ವಿದ್ಯಾ ಉಪನಿಷದಃ ಶ್ಲೋಕಾಃ ಸೂತ್ರಾಣಿ ಅನುವ್ಯಾಖ್ಯಾನಿ ಅನುಅಸ್ಯ ಏವ ಏತಾನಿ ನಿಶ್ವಸಿತಾನಿ’ ಸಂಸ್ಕೃತದಲ್ಲಿ ಹೇಳಿದ ಮಾತಿನ ಮೇಲೆ ಬಡಪಾಯಿ ಮೈತ್ರೇಯಿ ಸಂದೇಹವನ್ನಾದರೂ ಹೇಗೆ ತಾಳಬಲ್ಲಳು? ಇದರಲ್ಲಿ ಯಾಜ್ಞವಲ್ಕ್ಯರು ಉಪನಿಷತ್ತಿನವರೆಗಿನ ಪುಸ್ತಕೀಯ ಜ್ಞಾನವನ್ನು ಸಮ್ಮಿಲಿತಗೊಳಿಸಿದ್ದರು. ಅವರು ವೇದಗಳ ಬಗ್ಗೆ ತಿರಸ್ಕಾರ ಭಾವನೆಯಿಂದ ಈ ಮಾತನ್ನು ಹೇಳಿದ್ದಾರೆಂಬ ಆರೋಪವನ್ನು ಯಾರೂ ಹೊರಿಸಲು ಸಾಧ್ಯವಿರಲಿಲ್ಲ. ವೇದ ಮತ್ತು ಶಾಸ್ತ್ರಗಳ ಅವರ ಈ ವಿಮರ್ಶೆಯು ಒಬ್ಬ ಫಕೀರನಿಗೆ ಎಷ್ಟೊಂದು ಇಷ್ಟವಾಗುವುದೆಂಬುದನ್ನು ಯಾಜ್ಞವಲ್ಕ್ಯರು ಏನು ಬಲ್ಲರು? ರಾಮಾನಂದರಂಥ ಗುರುವಿನ ಶಿಷ್ಯತ್ವದಲ್ಲಿ ಉಪನಿಷತ್ತಿನ ಮನೋಯೋಗದಿಂದ ಅಧ್ಯಯನ ಮತ್ತು ಸಾರಗ್ರಹಣ ಮಾಡಿದ ನಂತರವೂ ಅವನು ವೇದ ಹಾಗೂ ಗ್ರಂಥಗಳ ವ್ಯರ್ಥತೆಯ ವಿಚಾರವನ್ನಷ್ಟೇ ಅಲ್ಲ, ತನ್ನನ್ನು ಪಕ್ಕಾ ಅಶಿಕ್ಷಿತನೆಂದು ಸಿದ್ಧಪಡಿಸಲು `ಮಸಿಕಾಗದ ಮುಟ್ಟಲಿಲ್ಲ, ಕೈಯಲಿ ಲೇಖನಿ ಹಿಡಿಯಲಿಲ್ಲ,’ ಎಂಬ ಘೋಷಣೆಯನ್ನು ಮಾಡಿಕೊಂಡಿದ್ದಾನೆ. ಪುಸ್ತಕೀಯ ವಿದ್ಯೆಯಿಂದ ವಂಚಿತರಾದ ತಮ್ಮ ಅನುಯಾಯಿಗಳಲ್ಲಿ ವೇದ ವಿದ್ಯೆಯನ್ನು ಬಲ್ಲವರ ಜಂಭವನ್ನು ಚೂರು ಚೂರು ಮಾಡುವ ಆತ್ಮವಿಶ್ವಾಸವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತಾನೆ ಎಂದು ಯಾರಿಗೆ ಗೊತ್ತಿತ್ತು? ಈ ಎಲ್ಲ ಜ್ಞಾನವೂ ಭ್ರಾಮಕವೆಂದಾದರೆ ಭ್ರಾಂತಿರಹಿತವಾದದ್ದಾವವು? ಇವು ಪ್ರಕಾಶದ ಬದಲಿಗೆ ಹೊಗೆಯನ್ನು ಕೊಡುತ್ತವೆಂದಾದರೆ ಪ್ರಕಾಶದ ಸ್ರೋತವೆಲ್ಲಿ?” ಮೈತ್ರೇಯಿ ಓದುಬರೆಹ ಬಲ್ಲವಳಲ್ಲವಾದರೂ ತರ್ಕ ಮಾಡಬಲ್ಲವಳಾಗಿದ್ದಳು. ಕನಿಷ್ಠ ಪಕ್ಷ ತನ್ನ ಸಂಶಯವನ್ನು ಸ್ಪಷ್ಟ ಶಬ್ದಗಳಲ್ಲಿ ಇಡಲು ಸಫಲಳಾಗಿದ್ದಳು. “ಪ್ರಕಾಶದ ಮೂಲವೆಂಬುದು ಈ ಅರಿವು. ಸಮಸ್ತ ಐಂದ್ರಿಯ ವಿಷಯಗಳ ಮೂಲಸ್ಥಾನ, ಅಂತಿಮ ಆಶ್ರಯ ಅಥವಾ ವಿಲಯ ಸ್ಥಳವು ನಮ್ಮ ಸ್ವಂತ ಇಂದ್ರಿಯಗಳು. ಈ ರೀತಿಯಲ್ಲಿ ಬಾಹ್ಯ ಜಗತ್ತೆಂಬುದು ನಮ್ಮ ಒಳಗಡೆಯೇ ನಿಮಜ್ಜಿತವಾಗುತ್ತದೆ.” ಅವರು ಒಂದೊಂದೇ ಉದಾಹರಣೆ ಕೊಡುತ್ತಾ ಹೇಳಲು ಪ್ರಾರಂಭಿಸಿದರು. - “ಮೈತ್ರೇಯೀ, ಸಮಸ್ತ ನೀರಿನ ಸ್ರೋತ ಮತ್ತು ವಿಲಯ ಸ್ಥಳ ಸಮುದ್ರವಾಗಿರುವಂತೆ, ಸಮಸ್ತ ಸ್ಪರ್ಶಗಳ ಸ್ರೋತ ನಮ್ಮ ಚರ್ಮ, ಸಮಸ್ತ ಗಂಧಗಳ ಸ್ರೋತ ನಮ್ಮ ಮೂಗು, ಸಮಸ್ತ ರಸಗಳ ಮೂಲ ನಮ್ಮ ನಾಲಿಗೆ, ಸಮಸ್ತ ರೂಪಗಳ ಒಂದು ಸ್ರೋತವೇ ನಮ್ಮ ಕಣ್ಣುಗಳು, ಸಮಸ್ತ ಶಬ್ದಗಳ ಸ್ರೋತವು ನಮ್ಮ ಕಿವಿಗಳು, ಸಮಸ್ತ ಸಂಕಲ್ಪಗಳ ಒಂದು ಸ್ರೋತ ಮನಸ್ಸು, ಸಮಸ್ತ ವಿದ್ಯೆಗಳ ಒಂದು ಮೂಲವೆಂದರೆ ಹೃದಯ, ಎಲ್ಲ ಕಾರ್ಯಗಳ ಅಯನವೆಂದರೆ ಕೈಗಳು, ಎಲ್ಲ ಆನಂದಗಳ ಸ್ರೋತವೆಂದರೆ ಉಪಸ್ಥ, ಎಲ್ಲ 144 ಕಥಾ ಸಂಸ್ಕೃತಿ ವಿಸರ್ಜನೆಯ ಒಂದು ಮೂಲವೆಂದರೆ ಗುದ, ಎಲ್ಲ ದಾರಿಗಳ ಒಂದು ಅಯನವೆಂದರೆ ಚರಣ, ಹಾಗೆಯೇ ಸಮಸ್ತ ವೇದಗಳ ಒಂದು ಸ್ರೋತವೆಂದರೆ ವಾಣಿಯಾಗಿದೆ.” “ಆದರೆ, ನಮ್ಮ ಅಂತಿಮ ಪರಿಣತಿಯಲ್ಲಿ ಸ್ವಯಂ ನಾವು ಏನಾಗಿದ್ದೇವೆ? ಸಮುದ್ರದಿಂದ ಬೇರೆಯಾಗಿ, ಒಣಗಿ ಹರಳಾಗಿ ಬದಲಾದ ಉಪ್ಪಿಲ್ಲವೆ? ನೋಡಿದರೆ ಅದು ಸಮುದ್ರದ ನೀರಿಗಿಂತ ಭಿನ್ನ ಹಾಗೂ ಬೇರೆ. ಆದರೆ ಈ ಭಿನ್ನತೆಯ ಭೇದವಳಿದರೆ, ಉಪ್ಪಿನ ಹರಳು ಅದೇ ನೀರಿನಲ್ಲಿ ವಿಲೀನವಾದರೆ ನಾವು ನೀರಿಗಿಂತ ಭಿನ್ನವಾಗಿ ಅದನ್ನು ಗುರುತಿಸಬಲ್ಲೆವೇನು? ಸಮಗ್ರ ಜಲದಲ್ಲಿ ಅದೆಲ್ಲೋ ಕಾಣೆಯಾಗಿರುತ್ತದೆ. ಅದು ಅದೇ ಮಹಾತತ್ವದ ಅಂಶವಾಯಿತು ಮತ್ತು ಅದರಲ್ಲೇ ವಿಲೀನವಾಯಿತು. ಪ್ರಕಾಶದ ಸ್ರೋತವಿರುವುದೇ ಈ ಅರಿವಿನಲ್ಲಿ, ಮೈತ್ರೇಯೀ. ದೇಹಬದ್ಧತೆ ಹಾಗೂ ಇಂದ್ರಿಯ ಬದ್ಧತೆಗಳಿಂದ ಮುಕ್ತನಾದ ಮೇಲೆ ವ್ಯಕ್ತಿಗೆ ತನ್ನದೇ ಸ್ಥಿತಿಯೆಂಬುದಿರುವುದಿಲ್ಲ. ತನ್ನದೆಂಬ ವಿಶೇಷ ಗುರುತೂ ಉಳಿಯುವುದಿಲ್ಲ.” ಯಾಜ್ಞವಲ್ಕ್ಯರು ಸಾವಿರ ಎರಡು ಸಾವಿರ ವರ್ಷಗಳ ಅನಂತರ ಹುಟ್ಟಿದ್ದರೆ ಈ ಉದಾಹರಣೆ ಕೊಡುತ್ತಿದ್ದರೇನೋ. ``ನೀರಿನಲ್ಲಿ ಕರಗಿದ ಉಪ್ಪು, ಕುಂಭದಲಿ ಜಲ-ಜಲದಲಿ ಕುಂಭ ಒಳಹೊರಗೆ ನೀರು, ಕುಂಭ ಒಡೆದರೆ ನೀರಿನಲಿ ನೀರು ಸಮರಸ, ಇದು ಅದೇ ಎಂದು ಹೇಳುತ್ತಾರೆ ಜ್ಞಾನಿಗಳು.'' ಯಾಜ್ಞವಲ್ಕ್ಯರು ತತ್ವದರ್ಶಿಗಳಾಗಿದ್ದರು. ಅವರಿಗೆ ಮೃತ್ಯುವಿನ ಕಲ್ಪನೆಯು ಮುಕ್ತಿಯ ಕಲ್ಪನೆಗಿಂತ ಬೇರೆಯಾಗಿರಲಿಲ್ಲ. ಅವರಿಗೆ ಮುಕ್ತಿ ಹೊಂದಲು ಮರಣದ ಅವಶ್ಯಕತೆಯೂ ಇರಲಿಲ್ಲ. ತನ್ನ ಸ್ವರೂಪಜ್ಞಾನ ಮಾತ್ರವೇ ಸಾಕಾಗಿತ್ತು. ಆದರೆ ಮೈತ್ರೇಯಿಗೆ ಮೃತ್ಯುವಿನ ಅರ್ಥ ಬೇರೆಯದೇ ಆಗಿತ್ತು. ಸಮಗ್ರವಾಗಿ ವಿಲೀನವಾಗುವ ಈ ಕಲ್ಪನೆಯೇ ಅವಳಿಗೆ ತುಂಬ ವ್ಯಗ್ರಗೊಳಿಸುವುದಾಗಿತ್ತು. ಸ್ತ್ರೀಜಾತಿ. ಸ್ವಭಾವದಿಂದಲೇ ದುರ್ಬಲಳು. ಪತಿಯು ಮಾತನ್ನು ಪ್ರಾರಂಭಿಸಿದ ಸಂಗತಿಯ ನೆನಪು ಬೇರೆ. ಭೌತಿಕ ಜಗತ್ತಿನಿಂದ ಬೇರೆಯಾದ ಯಾವುದೇ ಬ್ರಹ್ಮ ಅಥವಾ ಈಶ್ವರನ ಅಸ್ತಿತ್ವವೇ ಇಲ್ಲವೆಂದು ಭಾವಿಸುವವರಲ್ಲಿಯೂ ಮರಣೋತ್ತರ ಜೀವನ ಅಥವಾ ಅಸ್ತಿತ್ವದ ಆಕಾಂಕ್ಷೆ ಇದ್ದೇ ಇರುತ್ತದೆ. ಇದನ್ನು ಒಪ್ಪುವ ಮಾತು ಬೇರೆ. ಒಂದೇ ಬ್ರಹ್ಮ ಅಥವಾ ಪರಮಸತ್ತೆಯಿಂದ ಹುಟ್ಟಿ ಹಾಗೂ ಮೃತ್ಯುವಿನ ಅನಂತರ ಅದರಲ್ಲಿಯೇ ವಿಲೀನವಾಗುವವರು ಎಲ್ಲ ಪ್ರಾಣಿಗಳು ಎಂಬುದನ್ನು ತಮ್ಮದೇ ರೀತಿಯಲ್ಲಿ ಎಲ್ಲ ಬ್ರಹ್ಮವಾದಿಗಳೂ ಹೇಳುತ್ತಿದ್ದರು. ವ್ಯತ್ಯಾಸವಿಷ್ಟೇ; ಅವರು ತಮ್ಮ ಯುಗಕ್ಕೆ ಯುಕ್ತವಾದ ಒಂದು ಭಿನ್ನ ರೂಢಿಗತವಾದ ಮತ್ತು ಭಿನ್ನ ಅರಿವಿನ ಒಂದು ಮಾತಿನಲ್ಲಿ ಹೇಳುತ್ತಿದ್ದರು. ಅವರು ಸಮಸ್ತ ಪ್ರಕೃತಿಯನ್ನೂ ಬ್ರಹ್ಮಮಯವೆಂದು ಭಾವಿಸಿ ಅದಕ್ಕೆ ಒಂದು ಬೇರೆಯದೇ ಹೆಸರು ಕೊಟ್ಟಿದ್ದರು, ಮತ್ತು ಬ್ರಹ್ಮಾಂಡದ ಉತ್ಪತ್ತಿ, ವಿಕಾಸ, ಲಯದ ಉಪನಿಷದ್ ಕಥಾ (ಭಾರತ) 145 ವಿಚಾರದಲ್ಲಿ ಭಿನ್ನ ದೃಷ್ಟಿಯನ್ನು ತಾಳಿದ್ದರು. ನಾವು ಅವರ ಬ್ರಹ್ಮವನ್ನು ಭೌತಿಕ ಪ್ರಪಂಚದಲ್ಲಿಯೇ ಸೇರಿಸಿಬಿಟ್ಟೆವು, ಮತ್ತು ಚೈತನ್ಯವನ್ನು ಅದರದೇ ಒಂದು ವಿಶೇಷ ವಿಪಾಕವೆಂದು ಭಾವಿಸಿದೆವು. ಏನೇ ಇರಲಿ, ಸಮಗ್ರವಾಗಿ ವಿಲೀನವಾಗುವ ಕಲ್ಪನೆಯು ಮೈತ್ರೇಯಿಯನ್ನು ದುಃಖ - ಸುಖ ಸಹಿಸುವುದರಾಚೆ ತನ್ನ ಬೇರೆಯದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳುವ ಆತ್ಮನ ಜೀವನ ಮರಣ ಚಕ್ರದಿಂದಲೂ ಹೆಚ್ಚು ವಿಚಲಿತಗೊಳಿಸಿತ್ತು ಎಂಬುದಂತೂ ಸತ್ಯ. ಅವಳು ಹೇಳಿದಳು - “ಶರೀರದ ಅವಸಾನದ ಅನಂತರ ವ್ಯಕ್ತಿಯ, ಪ್ರಾಣಿಯ ಯಾವುದೇ ಅಸ್ತಿತ್ವ ಅಥವಾ ಗುರುತು ಉಳಿದಿರುವುದಿಲ್ಲವೆಂದು ತಾವು ಹೇಳಿ ನನ್ನನ್ನು ಮೋಹದಲ್ಲಿ ಕೆಡವಿದಿರಿ.” ಎಲ್ಲಿಂದ ಮೇಲಕ್ಕೆತ್ತಲೆಂದು ಯಾಜ್ಞವಲ್ಕ್ಯರು ಇಷ್ಟೆಲ್ಲ ಉಪದೇಶ-ವ್ಯಾಖ್ಯಾನ ಮಾಡಿದ್ದರೋ, ಅದೆಲ್ಲ ವ್ಯರ್ಥವಾಗುವುದೆನ್ನಿಸಿತು. ಅವರು ಹೇಳಿದರು - “ಅಯ್ಯೋ ಹುಚ್ಚಿ, ನಾನು ನಿನ್ನ ಮನಸ್ಸಿನಲ್ಲಿ ಮೋಹವನ್ನು ಹುಟ್ಟಿಸಲು ಈ ಮಾತನ್ನು ಹೇಳಿದ್ದೆನೇ? ಅದು ನಾನು ನಿನಗೆ ಆ ಮಹತತ್ವ ಬ್ರಹ್ಮವನ್ನು ವಿಜ್ಞಾನಗೊಳಿಸಲು ಹೇಳಿದ್ದಾಗಿತ್ತು. ಅಮರತ್ವದ ಉಪದೇಶ ಮಾಡಬೇಕೆಂದು ನೀನು ಕೇಳಿದ್ದೆಯಲ್ಲ, ಅದು ಇದೇ ಆಗಿದೆ. ಯಾವುದೇ ಇತರವನ್ನು ಸ್ಪರ್ಶಿಸುವುದು, ಇತರವನ್ನು ನೋಡುವುದು, ಇತರವನ್ನು ಅಘ್ರಾಣಿಸುವುದು, ಇತರವನ್ನು ಕೇಳುವುದು, ಇತರವನ್ನು ಮನನ ಮಾಡುವುದು - ಈ ಎಲ್ಲ ಭೇದ ಬುದ್ಧಿಯ ಕಾರಣದಿಂದಲೇ ಆಗುತ್ತವೆ ಎಂಬುದನ್ನು ನಾನು ಹೇಳುತ್ತಿದ್ದೆ. ಈ ಭೇದಬುದ್ಧಿಯು ಯಾವಾಗ ಸಮಾಪ್ತವಾಗಿ, ಪೃಥಕತೆಯೆಂಬುದು ಅಳಿಯುವುದೋ, ಆಗ ಯಾವುದು ನಿನ್ನದು, ಯಾವುದು ನನ್ನದು? ಆಗ ಎಲ್ಲವೂ ಆತ್ಮಮಯವಾಗಿ ಬಿಡುತ್ತದೆ. ಬ್ರಹ್ಮಮಯವಾಗಿಬಿಡುತ್ತದೆ. ಕಣ್ಣು ತನ್ನನ್ನು ತಾನು ನೋಡಬಲ್ಲುದೇ? ಚರ್ಮವು ತನ್ನನ್ನೇ ಸ್ಪರ್ಶಿಸಿಕೊಳ್ಳಬಲ್ಲುದೇ. ಮೂಗು ತನ್ನನ್ನು ಮೂಸಬಲ್ಲುದೇ? ನಾಲಿಗೆಯು ತನ್ನ ರುಚಿಯನ್ನು ತಾನು ನೋಡಬಲ್ಲುದೇ, ಸಾಧ್ಯವಿಲ್ಲ ಅಲ್ಲವಾ? ಅಂದ ಮೇಲೆ ಬ್ರಹ್ಮಮಯವಾದ ಮೇಲೆ ಬೇರ್ಪಡುವಿಕೆಯ ಅರಿವು ಹೇಗೆ ಉಳಿಯಬಲ್ಲದು? ‘ಯತ್ರ ವಾ ಅಸ್ಯ ಸರ್ವಂ ಆತ್ಮ ಏವ ಅಭೂತ ತತ್ ಕೇನ ಕಂ ಜಿಘ್ರೇತ್, ಕೇನ ಕಂ ಪಶ್ಯೇತ್, ಕೇನ ಕಂ ಶೃಣುಯಾತ್, ಕೇನ ಕಂ ಅಭಿವದೇತ್, ಕೇನ ಕಂ ಮನ್ವೀತ್, ತತ್ ಕೇನ ಕಂ ವಿಜಾನೀಯಾತ್,’ ಯಾವುದರ ಮೂಲಕ ಎಲ್ಲವನ್ನೂ ತಿಳಿಯಲಾಗುತ್ತದೆಯೋ ಅದನ್ನು ಯಾವುದರ ಮೂಲಕ ತಿಳಿಯುವುದು? ವಿಜ್ಞಾತನನ್ನು ಯಾವುದರ ಮೂಲಕ ಅರಿಯುವುದು? ‘ಯೇನ ಇದಂ ವಿಜಾನಾತಿ ತಂ ಕೇನವಿಜಾನೀಯಾತ್, ವಿಜ್ಞಾತಾರಂ ಅರೆ ಕೇನ ವಿಜಾನೀಯಾತ್,’ 146 ಕಥಾ ಸಂಸ್ಕೃತಿ ಮೈತ್ರಾಯಣಿಗೆ ಅವಳ ಎದುರೇ ಪ್ರಕೃತಿ ಮತ್ತು ಜೀವ ಮತ್ತು ಬ್ರಹ್ಮದ ಎಲ್ಲ ವ್ಯಾಪಾರಗಳೂ ಸ್ಪಷ್ಟವಾಗಿ ಬಿಟ್ಟಿವೆಯೆಂದು, ಮಾಯೆಯ ಕನ್ನಡಿಯು ಎದುರಿನಿಂದ ದೂರವಾಗಿದೆಯೆಂದು ನಿಜವಾಗಿ ಅನ್ನಿಸಿತು. ಭಾರತ 147 ಸಾಧು ಮತ್ತು ವೇಶ್ಯೆಯ ಕತೆ - ರಾಧಾವಲ್ಲಭ ತ್ರಿಪಾಠೀ ಭಗವಾನ್ ಮಹಾವೀರನ ನಿರ್ವಾಣದ ಅನಂತರ ಸಮಯ ಕಳೆಯುತ್ತಿದ್ದಂತೆ ಬೋದಿಯ ನಿಹ್ರವ ಎಂಬ ಒಂದು ಸಾಧುಗಳ ಸಂಪ್ರದಾಯ ಹುಟ್ಟಿಕೊಂಡಿತು. ಒಮ್ಮೆ ಹೀಗಾಯಿತು. ಸಂಗಮ ಹೆಸರಿನ ಸ್ಥವಿರ (ಶ್ವೇತಾಂಬರ) ಆಚಾರ್ಯರು ತಮ್ಮ ಐದುನೂರು ಶಿಷ್ಯರು ಸಹಿತವಾಗಿ ಉಜ್ಜಯ ಎಂಬ ಹೆಸರಿನ ವಿಹಾರದಲ್ಲಿ ವಾಸಿಸುತ್ತಿದ್ದರು. ಅವರ ಸಮುದಾಯದಲ್ಲಿ ‘ದತ್ತ’ ಹೆಸರಿನ ಒಬ್ಬ ಅಲೆಮಾರಿ ಸಾಧುವಿದ್ದ - ಒಂದುಬಾರಿ ಆಚಾರ್ಯ ಸಂಗಮರು ಅವನನ್ನು ಯಾವುದೋ ಕೆಲಸಕ್ಕಾಗಿ ನೆರೆಯ ಊರಿಗೆ ಕಳಿಸಿದರು. ಆ ಊರನ್ನು ಸಾಧು ತಲುಪುವಾಗ ರಾತ್ರಿಯಾಗಿತ್ತು. ರಾತ್ತಿ ಕಳೆಯಲು ಅವನು ಸ್ಥಳವನ್ನು ಹುಡುಕತೊಡಗಿದ. ಅವನಿಗೆ ವಸತಿಗೆ ಎಲ್ಲೂ ಜಾಗ ಸಿಗಲಿಲ್ಲ. ಆಗ ಅವನು ಬೋದಿಯ ಚೈತ್ಯಾಲಯಕ್ಕೆ ಹೋದ ಇದು ತಮ್ಮದೇ ಧರ್ಮದ ಸಾಧುಗಳ ನಿವಾಸವಾದ್ದರಿಂದ ತನ್ನದೇ ಸ್ಥಳವೆಂದು ಆತ ಭಾವಿಸಿದ. ಹಾಗಾಗಿ ಅಲ್ಲಿ ರಾತ್ರಿಯನ್ನು ಕಳೆಯಲು ಚೈತ್ಯಾಲಯದ ಒಳಗಡೆ ಹೋದ. ಅವನನ್ನ ಬೋದಿಯ ಶ್ರಾವಕರು ನೋಡಿದರು. ಆತನ ಸಂಪ್ರದಾಯದ ಬಗ್ಗೆ ಅಕಾರಣ ದ್ವೇಷವಿಟ್ಟುಕೊಂಡಿದ್ದ ಆ ಬೋದಿಯದ ಶ್ರಾವಕರು ಒಬ್ಬ ವೇಶ್ಯೆಗೆ ಹಣಕೊಟ್ಟು ಅವನ ಬಳಿ ಕಳಿಸಿದರು. ಆ ವೇಶ್ಯೆಯನ್ನು ಅವನ ಕೊಠಡಿಗೆ ಕಳಿಸಿ ಹೊರಗಿನಿಂದ ಬೀಗ ಹಾಕಿದರು. ರಾತ್ರಿಯ ಒಂದು ಪ್ರಹರ ಕಳೆಯುತ್ತಲೇ ಆ ಗಣಿಕೆಯು ಅವನಿಗೆ ತೊಂದರೆ ಕೊಡತೊಡಗಿದಳು, ದತ್ತ ಸಾಧು ಧೈರ್ಯಶಾಲಿಯಾಗಿದ್ದ. ಅವನು ಅವಳ ಚೇಷ್ಟೆಗಳನ್ನು ಕಂಡೂ ಸ್ಥಿರವಾಗಿದ್ದ. ಅವನು ವಿಚಲಿತನಾಗದಿರುವುದನ್ನು ಕಂಡು ಆ ವೇಶ್ಯೆಯೂ ಪ್ರಭಾವಿತಳಾದಳು. ಆಗ ಅವಳು ತನ್ನ ಪ್ರಯತ್ನ ನಿಲ್ಲಿಸಿ ಶಾಂತವಾಗಿ ಅವನಿಗೆ ಹೇಳಿದಳು. “ದಿಗಂಬರ ಸಾಧುಗಳು ನಿನ್ನನ್ನು ಭ್ರಷ್ಟಗೊಳಿಸಲು ಹಣಕೊಟ್ಟು ನನ್ನನು ಕಳಿಸಿದ್ದಾರೆ” ದತ್ತನು ಹೇಳಿದ -“ ಒಳ್ಳೆಯದು. ನಿನಗೆ ಹಣ ಬೇಕಾಗಿತ್ತು. ಇರಲಿ, ನೀನು ಈಗ ಒಂದು ಕಡೆ ಮಲಗಿಕೋ” ಅನಂತರ ಅವನು ಆ ಗಣಿಕೆಯು ನೋಡುತ್ತಿದ್ದಂತೆಯೇ ಆ ಕೊಠಡಿಯಲ್ಲಿ ಉರಿಯುತ್ತಿದ್ದ ದೀಪದ ಸಹಾಯದಿಂದ ತನ್ನೆಲ್ಲ ಬಟ್ಟೆ ಸಾಮಗ್ರಿಗಳನ್ನು ಸುಟ್ಟುಬಿಟ್ಟ. ಮತ್ತು ಅಲ್ಲಿ ಬಿದ್ದಿದ್ದ ಹಳೆಯ ಒಂದು ನವಿಲುಗರಿಯನ್ನು ಕೈಯಲ್ಲಿ ಹಿಡಿದುಕೊಂಡ. 148 ಕಥಾ ಸಂಸ್ಕೃತಿ ಬೆಳಗಾಗುತ್ತಲೇ ದಿಗಂಬರ ಶ್ರಾವಣರು ಜನರನ್ನು ಕಲೆಹಾಕಿ ಅವರಿಗೆ ಹೇಳಿದರು -“ಜನರೇ ನೋಡಿರಿ........ ಒಬ್ಬ ಶ್ವೇತವಸ್ತ್ರಧಾರಿ ಸಾಧುವು ಮಂದಿರದ ಒಳಗೆ ಒಬ್ಬ ಗಣಿಕೆಯೊಂದಿಗೆ ಮಲಗಿದ್ದಾನೆ” ಸೂರ್ಯನ ಉದಯವಾಗುತ್ತಿದ್ದಂತೆ ಆ ಕೊಠಡಿಯ ಬಾಗಿಲು ತೆರೆಯಲಾಯಿತು. ದತ್ತನು ಒಳಗಿನಿಂದ ಆ ವೇಶ್ಯೆಯ ಹೆಗಲ ಮೇಲೆ ಕೈಯಿಟ್ಟುಕೊಂಡು ಹೊರಬಂದ. ಜನರು ಇದನ್ನು ನೋಡಿ ಹೇಳಿದರು..... “ಅರೆ..... ಇವನು ಕ್ಷಪಣಕ. ವೇಶ್ಯೆಯ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾನೆ, ನಿರ್ಲಜ್ಜ !! ಇನ್ನೂ ಅವಳನ್ನು ಅಪ್ಪಿಕೊಂಡೇ ಇದ್ದಾನೆ......” ದತ್ತ ಹೇಳಿದನು. “ನನ್ನನ್ನೇ ಯಾಕೆ ಹಾಸ್ಯ ಮಾಡುತ್ತಿರುವಿರಿ? ರಾತ್ರಿ ವೇಶ್ಯೆಯರೊಂದಿಗೆ ಕಳೆಯುವ ಬೇರೆ ಕ್ಷಪಣಕರೂ ಇದ್ದಾರಲ್ಲವಾ?” ಆಗ ಜನರು ಬೋದಿಯ ಶ್ರಾವಕರ ಬಗ್ಗೆ ನಗುತ್ತ ಹೇಳಿದರು. “ಎಲಾ! ಹೀಗಿದ್ದಾರಾ ನಿಮ್ಮ ಗುರುಜನರು!! ಅಥವಾ ಬೆತ್ತಲೆಯ ಈ ಜನ ಬೇರೇನು ಮಾಡಬಲ್ಲರು? ಬಹುಶಃ ಇಂಥ ನಿರ್ಲಜ್ಜತೆಯಿಂದ ರಕ್ಷಿಸಿಕೊಳ್ಳಲಿಕ್ಕಾಗಿಯೇ ಶ್ವೇತಾಂಬರರು ವಸ್ತ್ರವನ್ನು ಧರಿಸಲು ಪ್ರಾರಂಭಿಸಿರಬೇಕು. ನಿಮಗಿಂತ ಅವರೇ ಪ್ರಾಮಾಣಿಕರು” * * * * * * * * * * * * * * ಭಾರತ 149 ಧೂರ್ತೋಪಾಖ್ಯಾನ ರಾಧಾವಲ್ಲಭ ತ್ರಿಪಾಠೀ ಕ್ಲೇಶವನ್ನು ದೂರಮಾಡುವ ಶ್ರೇಷ್ಠನಾದ ಜಿನೇಂದ್ರನಿಗೆ ನಮಸ್ಕರಿಸಿ, ವಿದ್ವಜ್ಜನರ ಬೋಧನೆಗಾಗಿ ನಾನು ಧೂರ್ತೋಪಾಖ್ಯಾನವನ್ನು ಹೇಳುತ್ತಿದ್ದೇನೆ. ಸುಂದರ- ಸಂಪನ್ನ ಜನರಿಂದ ತುಂಬಿರುವ, ಸ್ವರ್ಗವನ್ನೂ ಮೀರಿಸುವ ಉಜ್ಜಯಿನಿ ಎಂಬ ನಗರವಿದೆ. ಆ ನಗರದ ಉತ್ತರ ದಿಕ್ಕಿನಲ್ಲಿ ಅನೇಕ ಬಗೆಯ ಹೂಗಿಡಗಳಿಂದ ಬಳ್ಳಿಗಳಿಂದ ತುಂಬಿರುವ, ದುಂಬಿಗಳ ಗುಂಜಾರವದಿಂದ ಕೂಡಿರುವ, ನಂದನಕಾನನದಂತಹ ಉದ್ಯಾನವಿದೆ. ಅದೆಲ್ಲಿಂದಲೋ ತಿರುಗಾಡುತ್ತ ಐವರು ಜನ ಧೂರ್ತರು ಆ ಉದ್ಯಾನದಲ್ಲಿ ಬಂದು ಸೇರಿದರು. ಅವರು ಅನೇಕ ಪ್ರಕಾರದ ಮಾಯೆಯಲ್ಲಿ ನಿಪುಣರು, ಕೆಟ್ಟಕೆಲಸದಲ್ಲಿ ತೊಡಗಿರುವವರು, ನಿರ್ದಯರು, ಜನರನ್ನು ಮೋಸಗೊಳಿಸುವುದರಲ್ಲಿ ಪ್ರವೀಣರು ಆಗಿದ್ದರು. ಆ ಐವರು ಧೂರ್ತರು ಯಾರೆಂದರೆ - ಮೂಲಶ್ರೀ, ಕಂಡರೀಕ, ಏಲಾಷಾಢ, ಶಶ, ಹಾಗೂ ಖಂಡಪಾನಾ. ಒಬ್ಬೊಬ್ಬ ಧೂರ್ತರ ಜೊತೆಗೂ ಐದು ಐದುನೂರು ಜನರು ಅನುಯಾಯಿಗಳು ಇದ್ದರು. ಖಂಡಪಾನಾಳ ಬಳಿಯೂ ಐದು ನೂರು ಧೂರ್ತ ಸ್ತ್ರೀಯರು ಇದ್ದರು. ಅವರು ಅದೇ ಉದ್ಯಾನದಲ್ಲಿ ವಾಸ ಮಾಡಿಕೊಂಡಿದ್ದರು. ಆಗ ಮಳೆಗಾಲ ಬಂದಿತು. ಸೂರ್ಯ-ಚಂದ್ರರು ಕಾಣುತ್ತಲೇ ಇರಲಿಲ್ಲ. ಮಿಂಚು ಒಂದೇ ಸಮನೇ ಬೆಳಕು ಮಾಡುತ್ತಲೇ ಇತ್ತು. ಮೋಡಗಳು ಸದ್ದು ಮಾಡುತ್ತಿದ್ದವು. ಒಂದು ವಾರ ಒಂದೇ ಸವನೇ ಮಳೆ ಬಿದ್ದುದರ ಪರಿಣಾಮವಾಗಿ ಕೆರೆ ಬಾವಿಗಳು ತುಂಬಿದ್ದವು. ಗಲ್ಲಿರ ಸ್ತೆಗಳಲ್ಲಿ ಕೆಸರುತುಂಬಿ ಹೋಗಿಬರುವುದೂ ಕಠಿಣವಾಯಿತು. ಹೀಗಿರುವಾಗ ಹಸಿವಿನಿಂದ ಕಂಗಾಲಾದ ಐವರು ಧೂರ್ತರು ಈಗ ತಮಗೆ ಊಟ ಹಾಕುವವರಾರು ಎಂದು ವಿಚಾರ ಮಾಡತೊಡಗಿದರು. ಮೂಲದೇವನು ಹೇಳಿದನು- “ನಾವು ಐವರು ಧೂರ್ತರೂ ಒಂದೆಡೆ ಸೇರಿ ಯಾರು ಏನು ಕೇಳಿದ್ದಾರೋ ಅನುಭವ ಪಡೆದಿದ್ದಾರೋ ಅದನ್ನು ಹೇಳಲಿ, ನಾವು ಪ್ರತಿಯೊಬ್ಬರೂ ಘಟನೆಗಳನ್ನು ಹೇಳುವಾಗ ಯಾರಿಗಾದರೂ ವಿಶ್ವಾಸ ಹುಟ್ಟದಿದ್ದರೆ, ಸುಳ್ಳೆನಿಸಿದರೆ, ಅವನು ನಮ್ಮೆಲ್ಲರಿಗೂ ಅನ್ನ-ನೀರು ಕೊಡಬೇಕು. ಪುರಾಣ, ರಾಮಾಯಣ, ಮಹಾಭಾರತ ಮತ್ತು ಶ್ರುತಿ ವಚನಗಳ ಆಧಾರದಿಂದ ಆ ಪ್ರಕರಣವನ್ನು ಸತ್ಯವೆಂದು ಸಿದ್ಧಪಡಿಸಿ, ಎಲ್ಲರಿಗೂ ಅತ್ಯಂತ ಚನ್ನಾಗಿ ಅದರ 150 ಕಥಾ ಸಂಸ್ಕೃತಿ ಸತ್ಯತೆಯ ವಿಶ್ವಾಸ ಹುಟ್ಟಿಸುತ್ತಾರೋ, ಅವರು ನಮ್ಮ ಧೂರ್ತರಲ್ಲಿ ಅತ್ಯಂತ ಬಲಿಷ್ಠರು ಬುದ್ಧಿವಂತರು. ಮೂಲದೇವನು ಹೀಗೆ ಹೇಳುತ್ತಲೇ ಎಲ್ಲರೂ ಹೇಳಿದರು ..... “ಇದು ಒಳ್ಳೆಯದು, ಹೀಗೆಯೇ ಮಾಡೊಣ, ಆದರೆ ಎಲ್ಲಕ್ಕಿಂತ ಮೊದಲು ನೀನು ನಿನ್ನ ಅನುಭವಗಳನ್ನು ಹೇಳು.” (12-16) ಮೂಲದೇವನು ಹೇಳಿದನು- “ನಾನು ಯುವಕನಾಗಿದ್ದಾಗ ಪಡೆದ ಅನುಭವಗಳನ್ನು ಯುಕ್ತಿಪೂರ್ವಕ ಹೇಳುತ್ತೇನೆ. ನೀವೆಲ್ಲ ಗಮನವಿಟ್ಟು ಕೇಳಿ. ನಾನು ತರುಣನಾಗಿದ್ದಾಗ ನನಗೆ - ಸುಖ- ಸಂಪತ್ತು ಪಡೆಯಲು ತುಂಬಾ ಇಚ್ಛೆಯಾಯಿತು. ನನ್ನ ಯಜಮಾನನು ಹೇಳಿದ - ‘ನೀನು ಆರುತಿಂಗಳು ಗಂಗೆಯನ್ನು ತಲೆಯ ಮೇಲೆ ಇಟ್ಟುಕೊಂಡರೆ ನಿನಗೆ ನಾನು ತುಂಬ ಸಂಪತ್ತನ್ನು ಕೊಡುತ್ತೇನೆ” ಅಂತ ನಾನು ಛತ್ರ ಮತ್ತು ಕಮಂಡಲ ಕೈಯಲ್ಲಿ ಹಿಡಿದು ಕಂಬಳಿಯನ್ನು ಬೆನ್ನಿಗೆ ಹಾಕಿ ಹೊರಟೇ ಬಿಟ್ಟೆ. ಹೋಗುವಾಗ ರಸ್ತೆಯಲ್ಲಿ ಬೆಟ್ಟದಷ್ಟು ಭಾರಿಯಾದ ಆನೆಯೊಂದು ಸಿಕ್ಕಿತು. ಆ ಅಡವಿಯ ಆನೆಯನ್ನು ನೋಡಿ ನಾನು ಬೆದರಿದೆ. ಇದರಿಂದ ಬಚಾವಾಗಲು ಎಲ್ಲಿ ಅಡಗಲಿ ಎಂದು ಯೋಚಿಸಿ ನಾನು ನನ್ನ ಕೈಯಲ್ಲಿಯ ಕಮಂಡಲುವಿನಲ್ಲಿಯೇ ಪ್ರವೇಶಿಸಿದೆ. ಆದರೆ ಆ ಅಡವಿಯ ಆನೆಯೂ ನನ್ನನ್ನು ಹಿಂಬಾಲಿಸುತ್ತ ಕಮಂಡಲುವಿನಬಳಿ ಬಂದು ಬಿಟ್ಟಿತು. ಆಗ ನಾನು ಕಮಂಡಲುವಿನ ನಳಿಗೆಯೊಳಗೆ ಹೊಕ್ಕುಬಿಟ್ಟೆ. ನಾನು ಅಡಗುವ ಸ್ಥಳ ಹುಡುಕುತ್ತ ಆರು ತಿಂಗಳು ಆ ಕಮಂಡಲುವಿನ ಒಳಗೇ ಅಲೆದಾಡುತ್ತ ಉಳಿದೆ. ಕೊನೆಗೆ ನಾನು ಕಮಂಡಲುವಿನ ಬಾಯಿಂದ ಹೊರಬಂದೆ. ನನ್ನ ಹಿಂದೆ ಹಿಂದೆ ಆ ಆನೆಯೂ ಆ ಕಮಂಡಲುವಿನಿಂದ ಹೊರಬರಲು ತೊಡಗಿದಾಗ, ಕಮಂಡಲುವಿನ ರಂಧ್ರದಲ್ಲಿ ಸಿಕ್ಕಿಕೊಂಡ ನನ್ನ ಕೂದಲಿನಿಂದಾಗಿ ಅಲ್ಲಿಯೇ ಸಿಕ್ಕಿಕೊಂಡು ಬಿಟ್ಟಿತು. ನಾನು ಹೊರಬಂದಾಗ ನನಗೆ ಆಕಾಶಗಂಗೆ ಹರಿಯುವುದು ಕಾಣಿಸಿತು. ಅದರ ತೆರೆಗಳು ಮೇಲೆ ಜಿಗಿಯುತ್ತಿದ್ದು ನೊರೆಯನ್ನುಗುಳುತ್ತ ಅಟ್ಟಹಾಸ ಮಾಡುತ್ತಿದ್ದಂತೆ ಅನಿಸುತ್ತಿತ್ತು. ಅದರಲ್ಲಿ ಮೀಯುತ್ತಿದ್ದ ಅಡವಿಯ ಆನೆಗಳು ಅದರ ದಡಗಳನ್ನು ಅಪ್ಪಳಿಸುತ್ತಿದ್ದವು. ಮೀನು, ಮೊಸಳೆ, ಆಮೆಗಳು ಅದರಲ್ಲಿ ತುಂಬಿಕೊಂಡಿದ್ದವು. ಹಸುವಿನ ಕಾಲಿನ ಹೆಜ್ಜೆಯಿಂದಾದ ಹೊಂಡವನ್ನು ದಾಟಿದಂತೆ ನಾನು ಆ ನದಿಯನ್ನು ಈಸಿ ದಾಟಿಬಿಟ್ಟೆ. ಅನಂತರ ಹಸಿವು ನೀರಡಿಕೆಯನ್ನು ಸಹಿಸುತ್ತ ನಾನು ಆರು ತಿಂಗಳು ಕಾಲ ಗಂಗೆಯನ್ನು ತಲೆಯ ಮೇಲೆ ಧರಿಸಿಕೊಂಡಿದ್ದೆ. ಅನಂತರ ನಾನು ಅದನ್ನು ಕೆಳಗಿಳಿಸಿದೆ. ದೇವರಿಗೆ ವಂದನೆ ಸಲ್ಲಿಸಿ ಅಲ್ಲಿಂದ ಹೊರಟು ಉಜ್ಜಯಿನಿಗೆ ಬಂದೆ. ಇಲ್ಲಿ ನೀವೆಲ್ಲ ಸಿಕ್ಕಿದಿರಿ. ಈಗ ನೀವು ಈ ಘಟನೆಯನ್ನು ಸತ್ಯವೆಂದು ಭಾರತ 151 ತಿಳಿದರೆ ಅದರ ಸತ್ಯತೆಯನ್ನು ಸಿದ್ಧಪಡಿಸಿರಿ. ಇದನ್ನು ಯಾರಾದರೂ ಸುಳ್ಳೆಂದು ಭಾವಿಸಿದರೆ ಎಲ್ಲ ಧೂರ್ತರಿಗೂ ಅನ್ನಕೊಡಿ’ (17-30) ಕಂಡರೀಕನು ಹೇಳಿದನು- “ನೀನು ಸುಳ್ಳು ಪ್ರಕರಣವನ್ನು ಹೇಳಿದ್ದೀಯೆಂದು ಯಾರು ಹೇಳುತ್ತಾರೆ? ಮಹಾಭಾರತ, ಪುರಾಣ, ಮತ್ತು ರಾಮಾಯಣಗಳನ್ನು ತಿಳಿದವರಾರೂ ಇದನ್ನು ಸುಳ್ಳು ಎಂದು ಹೇಳಲಾರರು.” ಮೂಲದೇವನು ಹೇಳಿದನು- “ ಆನೆಯು ಕಮಂಡಲುವಿನಲ್ಲಿ ಹೋದದ್ದಾದರೂ ಹೇಗೆ? ಅದು ಆರುತಿಂಗಳು ಕಮಂಡಲುವಿನಲ್ಲಿ ಅಲೆದಾಡುತ್ತಿದ್ದುದು ಹೇಗೆ? ನಾನು ಮತ್ತು ಆ ಆನೆ ಕಮಂಡಲುವಿನ ಚಿಕ್ಕ ರಂಧ್ರದಿಂದ ಹೇಗೆ ಹೊರ ಬಂದೆವು? ಹಾಗೆ ಹೊರಗೆ ಬರುತ್ತ ಆನೆಯು ಕೂದಲಿನ ಕೊನೆಯಲ್ಲಿ ಹೇಗೆ ಸಿಕ್ಕಿಬಿದ್ದಿತು? ಅಷ್ಟೊಂದು ವಿಶಾಲವಾದ ಗಂಗೆಯನ್ನು ನಾನು ದಾಟಿದ್ದಾದರೂ ಹೇಗೆ? ಮತ್ತು ಆರು ತಿಂಗಳಕಾಲ ಹಸಿವು ಬಾಯಾರಿಕೆ ಸಹಿಸುತ್ತ ಗಂಗೆಯನ್ನು ಹೇಗೆ ಧರಿಸಿಕೊಂಡಿದ್ದೆ?” (31-34) ಮೂಲದೇವನ ಕತೆಗೆ ಕಂಡರೀಕನ ಉತ್ತರ ಆಗ ಕಂಡರೀಕನು ಹೇಳಿದನು.- “ಮಹಾಭಾರತ ಪುರಾಣಗಳನ್ನು ನಂಬುವವರು ನಿನ್ನ ಮಾತುಗಳನ್ನೂ ನಂಬುತ್ತಾರೆ. ಬ್ರಹ್ಮನ ಮುಖದಿಂದ ಬ್ರಾಹ್ಮಣ, ಬಾಹುಗಳಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ, ಪಾದದಿಂದ ಶೂದ್ರ ಹುಟ್ಟಿದ್ದರೆ. ಬ್ರಹ್ಮನ ಶರೀರದಲ್ಲಿ ಇಷ್ಟೊಂದು ಜನಗಳು ಹಿಡಿಸಬಹುದಾದರೆ ಒಂದು ಕಮಂಡಲುವಿನಲ್ಲಿ ಅಡವಿಯ ಆನೆ ಯಾಕೆ ಹಿಡಿಸಲಿಕ್ಕಿಲ್ಲ? ಮತ್ತೂ ಕೇಳು. ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಮೇಲೆ ಮತ್ತು ಕೆಳಗೆ ದಿವ್ಯ ಸಹಸ್ರವರ್ಷಗಳವರೆಗೆ ಓಡುತ್ತ ಉಳಿದರು, ಆದರೆ ಅವರಿಗೆ ಶಿವಲಿಂಗದ ಅಂತಪಾರ ಹತ್ತಲಿಲ್ಲ-ಅದೇ ವಿರಾಟ ಶಿವಲಿಂಗ ಉಮೆಯ ಶರೀರದಲ್ಲಿ ಹೇಗೆ ಸೇರಿಕೊಂಡಿತು? ಅಂದ ಮೇಲೆ ಕಮಂಡಲುವಿನಲ್ಲಿ ಆನೆ ಹಿಡಿಸುವುದರಲ್ಲಿ ತಪ್ಪೇನು? ಮತ್ತೂ ಕೇಳು, ಮಹರ್ಷಿವ್ಯಾಸನು ಮಹಾಭಾರತದಲ್ಲಿ ಹೇಳಿದ್ದಾನೆ. ಬಿದಿರಿನ ಒಂದು ಗಣ್ಣಿನಲ್ಲಿ ಒಂದು ನೂರು ಬಿದಿರುಗಳು ಹುಟ್ಟಿದವು. ಅವುಗಳಿಂದ ಕೀಚಕ ವಂಶದ ನೂರು ಜನ ಸಹೊದರರು ಜನಿಸಿದರು. ಅವರ ಸೋದರಿ ವಿರಾಟರಾಜನ ಪಟ್ಟದರಾಣಿಯಾಗಿದ್ದಳು. ಅವಳಿಗೆ ಮಕ್ಕಳಿರಲಿಲ್ಲ. ಅವಳು ಆಶ್ರಮಕ್ಕೆ ಹೋಗಿ ಋಷಿಗಳನ್ನು ಆರಾಧಿಸಿದಾಗ ಅವರು ಚರುವನ್ನು ಕೊಟ್ಟರು. ಈ ಮಧ್ಯೆ ಗಾಗಲಿ ಎಂಬ ಹೆಸರಿನ ಋಷಿಯು ಬಿದಿರಿನ ಕೊಳವೆಯಲ್ಲಿ ಇದ್ದು ಪದ್ಮ ಸರೋವರದ ದಡದಲ್ಲಿ ತಪಸ್ಸು ಮಾಡುತ್ತಿದ್ದನು. ಅವನು ಅಪ್ಸರೆಯರು ಸ್ನಾನಮಾಡುವುದನ್ನು ನೋಡಿದನು. ಅವನಲ್ಲಿ ಕಾಮಭಾವವು ಉದ್ದೀಪ್ತವಾಯಿತು. ಹಾಗೂ ಅವನಶುಕ್ರಬಿಂದುವು ಬಿದಿರಿನ ಕೊಳವೆಯಲ್ಲಿ ಬಿದ್ದಿತು. ಅದರಿಂದ ಮಹಾಬಲಶಾಲಿಯಾದ ಮೊದಲ ಕೀಚಕನು ಹುಟ್ಟಿದನು. ಅನಂತರ 152 ಕಥಾ ಸಂಸ್ಕೃತಿ ಅತ್ಯಂತ ರೂಪ ಲಾವಣ್ಯವತಿಯರಾದ ಅಪ್ಸರೆಯರನ್ನು ನೋಡುತ್ತ ಹೋದಂತೆ ಬೀಜವು ಬೀಳುತ್ತ ಅದರಿಂದ ಕೀಚಕರು ಉತ್ಪನ್ನವಾಗುತ್ತ ಹೋದರು. ಅನಂತರ ಅವನು ಆ ಕೊಳವೆಯನ್ನು ತ್ಯಜಿಸಿ ತನ್ನ ಮನೆಗೆ ಹೋದ ಮೇಲೆ ರಾಜನು ಆ ನಳಿಕೆಯನ್ನು ತೆಗೆದುಕೊಂಡು ಹೋದನು. ಅದರಿಂದ ಉತ್ಪನ್ನವಾದ ನೂರುಜನ ಮಕ್ಕಳು ರಾಣಿಯ ಮಕ್ಕಳಾದರು. ನೂರುಮಂದಿ ಕೀಚಕ ವೀರರು ಬಿದಿರಿನ ನಳಿಕೆಯಲ್ಲಿ ಇರಬಹುದಾದರೆ, ನೀನು ಕಮಂಡಲುವಿನಲ್ಲಿ ಸೇರಿಕೊಂಡಿದ್ದು ಏನು ಆಶ್ಚರ್ಯ? ಸಹಸ್ರವರ್ಷಗಳವರೆಗೆ ಶಂಕರನ ಜಟೆಯಲ್ಲಿ ಗಂಗೆಯು ಅಲೆದಾಡುತ್ತ ಇದ್ದಳೆಂದಮೇಲೆ, ಕಮಂಡಲುವಿನಲ್ಲಿ ನೀನು ಆರುತಿಂಗಳು ಅಲೆದಾಡಿದ್ದು ಸತ್ಯವೆ ಹೌದು. ಕಮಂಡಲುವಿನಿಂದ ಆನೆಯು ಹೊರಗೆ ಬರುವಾಗ, ಕೂದಲಿನ ಮೊನೆಯಿಂದಾಗಿ ಸಿಕ್ಕಿಬಿದ್ದಿತೆಂಬುದಕ್ಕೆ ಪುರಾಣೋಕ್ತ ಪ್ರಮಾಣವನ್ನು ಕೇಳು. ಜಗತ್ತಿನ ಕರ್ತ ವಿಷ್ಣು ಕ್ಷೀರಸಾಗರದಲ್ಲಿ ಮಲಗಿದ್ದ. ಅವನ ನಾಭಿಯಲ್ಲಿ ಕಮಲ ಹೊರಟಿತು. ಅದರಲ್ಲಿ ದಂಡ ಕಮಂಡಲುಧಾರಿಯಾದ ಬ್ರಹ್ಮನಿದ್ದನು. (35-59) ಒಂದು ಬಾರಿ ಸೂರ್ಯನು ಕುಂತಿಯ ರೂಪದಿಂದ ಉನ್ಮತ್ತನಾದನು. ಅವನು ಅವಳೊಡನೆ ಸಂಯೋಗ ಮಾಡಿದನು. ಕುಂತಿಯ ಹೊಟ್ಟೆಯಲ್ಲಿ ಗರ್ಭಬೆಳೆಯಿತು. ಕವಚಧಾರಿಯಾದ ಕರ್ಣನು ಅವಳ ಕಿವಿಯಿಂದ ಹೊರಬಂದ. ಅಂದ ಮೇಲೆ ನೀನು ಕಮಂಡಲುವಿನ ನಳಿಕೆಯಿಂದ ಹೊರಬರಲಾರೆಯಾ? ಅಪಾರವಾದ ಗಂಗೆಯನ್ನು ಹೇಗೆ ದಾಟಿದೆನೆಂದು ನೀನು ಕೇಳಿದೆ. ಇದರ ಬಗ್ಗೆ ವಿಶ್ವಾಸಹುಟ್ಟಲು ರಾಮಯಣದ ಕತೆಯನ್ನು ಹೇಳುತ್ತೇನೆ. ಸೀತೆಯನ್ನು ಹುಡುಕಲು ರಾಮನು ಹನುಮಂತನನ್ನು ಕಳಿಸಿದ್ದ. ಅವನು ಲಂಕೆಯನ್ನು ತಲುಪಲು ಸಮುದ್ರವನ್ನೇ ಈಜುತ್ತ ಸಮುದ್ರವನ್ನು ದಾಟಿದನು. ಅವನು ವಾನರನಾಗಿಯೂ, ದಾಟಲಾಗದ ಮಹಾ ಸಮುದ್ರವನ್ನು ಕೈಯಿಂದ ಈಜಿ ದಾಟಿದನೆಂದ ಮೇಲೆ ನೀನು ನರಶ್ರೇಷ್ಠನಾಗಿ ಗಂಗೆಯನ್ನು ದಾಟಲಾರೆಯಾ? ಆರು ತಿಂಗಳ ವರೆಗೆ ಗಂಗೆಯನ್ನು ತಲೆಯಲ್ಲಿ ಹೇಗೆ ಧರಿಸಿದೆನೆಂದು ಕೇಳಿದೆಯಲ್ಲ. ಇದಕ್ಕಾಗಿ ವಿಶ್ವಾಸ ನೀಡಲು ಪುರಾಣದ ಕತೆಯನ್ನು ಹೇಳುತ್ತೇನೆ. ದೇವತೆಗಳು ಗಂಗೆಯನ್ನು ಲೋಕಹಿತಕ್ಕಾಗಿ ಭೂಲೋಕಕ್ಕೆ ಅವತರಿಸಲು ಕೇಳಿಕೊಂಡವು. ನನ್ನನ್ನು ಧರಿಸುವವರು ಯಾರು? ಎಂದು ಗಂಗೆ ಕೇಳಲು ಪಶುಪತಿಯು ನಿನ್ನನ್ನು ಧರಿಸುವನು ಎಂದು ಹೇಳಿದರು. ಆಗ ಗಂಗೆಯು ಕೆಳಗೆ ಧುಮುಕಿದಳು. ಪಶುಪತಿಯು ಆಕೆಯನ್ನು ಒಂದು ಸಾವಿರ ದಿವ್ಯ ವರ್ಷದ ವರೆಗೆ ತಲೆಯಲ್ಲಿ ಧರಿಸಿದನು. ಅಂದಮೇಲೆ ನೀನು ಆರು ತಿಂಗಳು ಗಂಗೆಯನ್ನು ತಲೆಯಲ್ಲಿ ಧರಿಸುವುದು ಯಾಕೆ ಸಾಧ್ಯವಿಲ್ಲ?” ಮೂಲದೇವನು ಸೊಲೊಪ್ಪಿಕೊಂಡು ಕಂಡರೀಕನಿಗೆ ಹೇಳಿದನು.... “ನೀನು ಕೇಳಿರುವುದು, ನೋಡಿರುವುದು, ಅನುಭವಿಸಿರುವುದನ್ನು ಈಗ ನೀನು ಹೇಳು” ಭಾರತ 153 ಕಂಡರೀಕನು ಹೇಳಿದನು....... “ನಾನು ಚಿಕ್ಕಂದಿನಲ್ಲಿ ತುಂಬ ದಿಟ್ಟನಾಗಿದ್ದೆ. ತಂದೆ ತಾಯಿಗಳು ನನ್ನನ್ನು ನಿಯಂತ್ರಿಸಲು ಸಾಧ್ಯವಾಗದೆ ಸಿಟ್ಟಿನಿಂದ ಮನೆಯಿಂದ ಹೊರ ತಳ್ಳಿದರು. ತಿರುಗಾಡುತ್ತ ತಿರುಗಾಡುತ್ತ ನಾನು ಒಂದು ಹಳ್ಳಿಗೆ ಹೋದೆ. ಆ ಹಳ್ಳಿಯು ಹಸುಗಳು, ಎಮ್ಮೆಗಳು, ಕುರಿಗಳು, ಆಡುಗಳು, ಕತ್ತೆಗಳು, ಹೇಸರಗತ್ತೆಗಳಿಂದ ತುಂಬಿತ್ತು. ಹಣ್ಣು ಹೂವುಗಳಿಂದ ತುಂಬಿದ ಹೂದೋಟಗಳು ನಾಲ್ಕೂ ಕಡೆ ಇದ್ದವು. ಸಮೃದ್ಧವಾದ ನೂರಾರು ಮನೆಗಳು ಆ ಹಳ್ಳಿಯಲ್ಲಿ ಇದ್ದವು. ಅದರ ನಡುವೆ ಸುಂದರವಾದ ಒಂದು ಆಲದ ಮರವಿತ್ತು. ನೂರಾರು ಪಕ್ಷಿಗಳು ಅಲ್ಲಿ ಮನೆಮಾಡಿಕೊಂಡಿದ್ದವು. ಆ ವಟವೃಕ್ಷದಲ್ಲಿ ಒಬ್ಬ ಯಕ್ಷನೂ ವಾಸವಾಗಿದ್ದನು. ಅವನು ತುಂಬ ಸದ್ಗುಣ ಯಕ್ಷನಾಗಿದ್ದನು. ಅವನು ಸುಂದರ ಸ್ತ್ರೀಯರಿಗೆ ವರವನ್ನು ಕೊಡುತ್ತಿರುತ್ತಿದ್ದನು. (1-6) ನಾನು ಅಲ್ಲಿಗೆ ಹೋದಾಗ, ಆ ಯಕ್ಷನ ಜಾತ್ರೆಯ ಉತ್ಸವ ನಡೆದಿತ್ತು. ಜನಜಂಗುಳಿದೊಡ್ಡ ಸಂಖ್ಯೆಯಲ್ಲಿ ಅಲ್ಲಿ ಸೇರಿತ್ತು. ಧೂಪ, ಬಲಿಪುಷ್ಪಗಳನ್ನು ಹಿಡಿದುಕೊಂಡು ಜನರು ನಿಂತಿದ್ದರು. ಅವರು ವಿಭಿನ್ನ ರೀತಿಯ ಸುಂದರ ವಸ್ತ್ರ -ಅಲಂಕಾರ ಧರಿಸಿದ್ದರು. ದೇಹದ ಮೇಲೆ ಚಂದನವನ್ನು ಧರಿಸಿದ್ದರು. ಇದನ್ನೆಲ್ಲ ನೋಡಿ ಕೌತುಕದಿಂದ ನಾನೂ ಜನಸಂದಣಿಯಲ್ಲಿ ಸೇರಿಕೊಂಡೆ. ಯಕ್ಷನಿಗೆ ವಂದಿಸಿದೆ. ಅಷ್ಟರಲ್ಲಿ ಜೋರಾಗಿ ಕೂಗುತ್ತ ಆರ್ಭಟಿಸುತ್ತ, ಅಸ್ತ್ರಶಸ್ತ್ರ ಧಾರಿಗಳಾದ ಕಳ್ಳರು ಕವಚಧರಿಸಿ ಬಂದೇ ಬಿಟ್ಟರು. ಇದನ್ನು ನೋಡಿ ಮಕ್ಕಳು, ಮುದುಕರು, ಸ್ತ್ರೀಯರು, ಪುರುಷರು, ಪಶುಗಳು ಎಲ್ಲರೂ ಸೇರಿ ಒಂದು ಸವತೆಕಾಯಿಯೊಳಗೆ ನುಗ್ಗಿಬಿಟ್ಟರು. ಕಳ್ಳರು ತಮ್ಮ ಕುದುರೆಗಳಿಂದ ಇಳಿದರು. ಇಡೀಹಳ್ಳಿಗೆ ಹಳ್ಳಿಯೇ ಮಾಯ. ಆಗ ಅವರು “ಹಳ್ಳಿ ನಾಶವಾಯಿತು” ಎಂದು ಹೇಳುತ್ತ ಹೊರಟುಹೋದರು. ಇತ್ತ ಹಳ್ಳಿಯ ಸಕಲ ಪಶುಗಳೂ ಆ ಸವತೆಯೊಳಗೆ ಮೇಯತೊಡಗಿದವು. ಅಷ್ಟರಲ್ಲಿ ಒಂದು ಆಡು ಆ ಸವತೆಯನ್ನು ನುಂಗಿ ಬಿಟ್ಟಿತು. ಹಾಗೆಯೇ ಒಂದು ಹೆಬ್ಬಾವು ಆ ಆಡನ್ನು ನುಂಗಿಬಿಟ್ಟಿತು. ಆ ಹೆಬ್ಬಾವನ್ನು ಒಂದು ಬಕಪಕ್ಷಿಯು ನುಂಗಿಬಿಟ್ಟಿತು. ಅನಂತರ ಅದು ಒಂದು ವಿಶಾಲವಾದ ಆಲದ ಮರದ ಮೇಲೆ ಹೋಗಿ ಕೂತಿತು. ಆ ಮರದ ಕೆಳಗೆ ಒಬ್ಬ ರಾಜನು ಡೇರೆಯನ್ನು ಹಾಕಿದ್ದನು. ಅವನ ಒಬ್ಬ ಸೇವಕನು ಆ ಬಕ ಪಕ್ಷಿಯ ಕಾಲನ್ನು ಆಲದ ಮರದ ದಪ್ಪ ಟೊಂಗೆಯೆಂದು ಭಾವಿಸಿ ಒಂದು ಮದ ಮತ್ತವಾದ ಆನೆಯನ್ನು ಕಟ್ಟಿಹಾಕಿದನು. ಹಾಗೆ ಕಟ್ಟುತ್ತಲೇ ಬಕ ಪಕ್ಷಿಯು ತನ್ನ ಕಾಲನ್ನು ಮಡಚಿಕೊಂಡು ಮೇಲಕ್ಕೆಳೆದುಕೊಂಡಿತು. ಆಗ ಆನೆಯು ಚೀತ್ಕರಿಸುತ್ತ ಮೇಲಕ್ಕೆಳೆಯಲ್ಪಟ್ಟಿತು. ಮಾವುತರು ‘ಯಾರೋ ಆನೆಯನ್ನು ಮೇಲಕ್ಕೆಳೆದುಕೊಳ್ಳುತ್ತಿದ್ದಾರೆ.’ ಎಂದು ಬೊಬ್ಬಿಡತೊಡಗಿದರು. ಅವರ ಕೂಗನ್ನು ಕೇಳಿ ಶಬ್ದವೇದಿ ಬಾಣಗಳನ್ನು 154 ಕಥಾ ಸಂಸ್ಕೃತಿ ಪ್ರಯೋಗಿಸುವ ಯೋಧರು ಬಿಲ್ಲು-ಬಾಣಹಿಡಿದು ಕೂಗುತ್ತ ಓಡಿದರು. ಆನೆಯು ಬಕನ ರೆಕ್ಕೆಯೊಳಗೆ ಅವಿತು ಹೋಗಿತ್ತು. ಅವರು ಅದರ ರೆಕ್ಕೆಯನ್ನು ಕತ್ತರಿಸುತ್ತಲೇ ಬಕವು ಚೀತ್ಕರಿಸುತ್ತ ಪರ್ವತದ ತುದಿಯಲ್ಲಿ ಬಿದ್ದಿತು. ಅದರ ಹೊಟ್ಟೆಯೊಡೆದು ಅದರಿಂದ ಹೆಬ್ಬಾವು ಹೊರಬಂತು. “ಈ ಹೆಬ್ಬಾವನ್ನು ಸೀಳಿರಿ. ಇದರಲ್ಲಿ ಸ್ತ್ರೀ- ಪುರುಷರು ಇರಬಹುದು” ಎಂದು ರಾಜನು ಹೇಳಲು ಹೆಬ್ಬಾವನ್ನು ಸೀಳಲಾಯಿತು. ಆಗ ಅದರೊಳಗಿಂದ ಭಾರಿಯಾದ ಕುರಿಯೊಂದು ಹೊರಬಂತು. ಆ ಕುರಿಯನ್ನು ಸೀಳಲಾಗಿ ದೊಡ್ಡ ಸವತೆಕಾಯಿ ಹೊರಬಂತು. ಅಷ್ಟರಲ್ಲಿ ರಾಜನು ‘ನೋಡಿ! ಎಷ್ಟು ದೊಡ್ಡ ಸವತೆ!!’ ಎನ್ನುತ್ತಿದ್ದಂತೆ, ಬಿಲದಿಂದ ಪತಂಗಗಳು ಹೊರಬರುವಂತೆ ಅದರಿಂದ ಜನರು ಹೊರಬರತೊಡಗಿದರು. ಎಲ್ಲ ಜನರೂ ಶ್ರೇಷ್ಠನಾದ ಜಿನೇಂದ್ರನಿಗೆ ನಮಸ್ಕರಿಸಿ ತಮ್ಮ ತಮ್ಮ ಸ್ಥಳಗಳಿಗೆ ಹೋದರು. ನಾನು ಅಲ್ಲಿಂದ ಈ ನಗರಕ್ಕೆ ಬಂದೆ. ಹೀಗೆ ನಾನು ಆ ಮನುಷ್ಯ ಲೋಕದಲ್ಲಿ ಪ್ರತ್ಯಕ್ಷ ನಡೆದ ಎಲ್ಲ ಘಟನೆಯನ್ನು ನನ್ನ ಅನುಭವವಾಗಿ ಹೇಳುತ್ತಿದ್ದೇನೆ. ಯಾರಿಗಾದರೂ ಇದರಲ್ಲಿ ನಂಬಿಕೆಯಾಗದಿದ್ದರೆ ಅವರು ನಮ್ಮೆಲ್ಲ ಧೂರ್ತರಿಗೆ ಅನ್ನ ಕೊಡಲಿ” ಏಲಾಷಾಢನಿಂದ ಕಂಡರೀಕನ ಕತೆಗೆ ಉತ್ತರ ಏಲಾಷಾಢನು ಹೇಳಿದನು - “ ಈ ಕತೆಯಲ್ಲಿ ನಮಗೆ ಪೂರ್ಣ ವಿಶ್ವಾಸವಿದೆ. ಇದರಲ್ಲಿ ನಮಗೇನೂ ಸಂದೇಹವಿಲ್ಲ.'' ಕಂಡರೀಕನು ಮರುಪ್ರಶ್ನೆ ಮಾಡಿದನು. ``ಒಂದು ಇಡೀ ಹಳ್ಳಿ ಒಂದು ಸವತೆಯಲ್ಲಿ ಹೇಗೆ ಸೇರಿಕೊಂಡಿತು.?'' ಏಲಾಷಾಢನು ಹೇಳಿದನು - “ಇದು ಪುರಾಣ - ಮಹಾಭಾರತಗಳಲ್ಲಿ ಚನ್ನಾಗಿ ಪ್ರತಿಪಾದಿತವಾದದ್ದೇ ಆಗಿದೆ. ನೀನು ವಿಷ್ಣು ಪುರಾಣ ಕೇಳಿಲ್ಲವಾ? ಮೊದಲು ಈ ಜಗತ್ತಿನಲ್ಲಿ ಏನೂ ಇರಲಿಲ್ಲ, ಒಂದು ಗುಹೆ ಮಾತ್ರ ಇದ್ದು ಅದು ಸಮುದ್ರದಲ್ಲಿ ಸೇರಿಕೊಂಡಿತ್ತು. ಅದೇ ನೀರಿನ ಮೇಲೆ ಒಂದು ಮೊಟ್ಟೆ ತೇಲುತ್ತ, ತೆರೆಗಳ ಪೆಟ್ಟು ತಿನ್ನುತ್ತ ತುಂಬ ಹೊತ್ತಿನವರೆಗೆ ಅಲ್ಲಿ ಇಲ್ಲಿ ತೇಲುತ್ತಲಿತ್ತು. ದುರ್ಭಾಗ್ಯವಶಾತ್ ಆ ಮೊಟ್ಟೆ ಒಡೆದುಹೋಯಿತು. ಆಗ ಅದರ ಅರ್ಧಭಾಗದಿಂದ ಭೂಮಿ ಸಿದ್ಧವಾಯಿತು. ಅದರಲ್ಲಿಯೇ ದೇವತಾ, ಮನುಷ್ಯ, ರಾಕ್ಷಸ, ಪಶುಗಳು ಈ ಎಲ್ಲವೂ ಹೊರಬಂದವು. ಈ ಎಲ್ಲವೂ ಒಂದು ಮೊಟ್ಟೆಯಲ್ಲಿ ಸೇರಿಕೊಂಡಿದ್ದಿರಬಹುದಾದರೆ ಒಂದು ಸವತೆಯಲ್ಲಿ ಇಡಿಯ ಹಳ್ಳಿ ಏಕೆ ಸೇರಿಕೊಳ್ಳುವುದಿಲ್ಲ? ಮತ್ತೂ ಕೇಳು, ಅರಣ್ಯಕ ಪರ್ವದಲ್ಲಿ ಯುಧಿಷ್ಠಿರನಿಗೆ ಮಾರ್ಕಂಡೇಯನು ಸ್ವಾನುಭೂತ ವೃತ್ತಾಂತವನ್ನು ಹೇಳಿದ್ದನು. ಪ್ರಳಯದ ಸಮಯದಲ್ಲಿ ಇಡೀ ಜಗತ್ತೇ ಸಮುದ್ರದಲ್ಲಿ ಸೇರಿಹೋದಾಗ, ಅವರು ಕೂಡ ಸಾಗರದಲ್ಲಿ ತೆರೆಗಳ ಹೊಡೆತ ತಿನ್ನುತ್ತ ಅಲೆದಾಡುತ್ತಿದ್ದರು. ಅವರು ಮಂದರ ಭಾರತ 155 ಪರ್ವತದಷ್ಟು ಎತ್ತರವಾದ ಸಾಗರದಷ್ಟು ವಿಶಾಲವಾದ ವಿಸ್ತಾರದ ಆಲದ ಮರವೊಂದನ್ನು ಅದೇ ಸಮುದ್ರದಲ್ಲಿ ಕಂಡರು. ಅದರ ಒಂದು ಟೊಂಗೆಯ ಮೇಲೆ ಒಬ್ಬ ಸುಂದರನಾದ ಬಾಲಕನಿದ್ದನು. ಅವನು ತುಂಬ ಮೃದುಶರೀರದವನಾಗಿದ್ದು ಅವನ ಮೈಯಿಂದ ಕಾಂತಿ ಚಿಮ್ಮುತ್ತಿತ್ತು. ಋಷಿಯು ತನ್ನ ಕೈಯನ್ನು ಚಾಚಿ ಹೇಳಿದನು “ಮಗೂ ಬಾ. ಬಾ. ನನ್ನ ಹೆಗಲ ಮೇಲೆ ಇಳಿದು ಬಾ. ಇಲ್ಲವಾದರೆ ಈ ಸಮುದ್ರದಲ್ಲಿ ತೇಲಿ ಹೋಗಿ ಸಾಯುವೆ.” ಹುಡುಗನು ಋಷಿಯ ಕೈ ಹಿಡಿದುಕೊಳ್ಳಲು ತಿರುಗಿದಾಗ ಋಷಿಯು ಕಂಡಿದ್ದೇನು? ಆ ಹುಡುಗನ ಹೊಟ್ಟೆಯಲ್ಲಿ ಪರ್ವತ, ಅಡವಿ, ಎಲ್ಲವೂ ಒಳಗೊಂಡಿವೆ. ಋಷಿಯೂ ಆ ಹುಡುಗನ ಹೊಟ್ಟೆಯನ್ನು ಸೇರಿದನು. ಒಂದು ಸಾವಿರ ದಿವ್ಯ ವರ್ಷದವರೆಗೆ ಆ ಹುಡುಗನ ಹೊಟ್ಟೆಯಲ್ಲಿ ಋಷಿಯು ಅಲೆಯುತ್ತಿದ್ದನು. ಕೊನೆಗೂ ಅದರ ಅಂತ್ಯ ಕಾಣದೆ ಅದರಿಂದ ಹೊರಬಂದನು. ಎಲೈ ಕಂಡರೀಕನೇ, ಬಾಲಕನ ಹೊಟ್ಟೆಯಲ್ಲಿ ದೇವಾಸುರ ಮನುಷ್ಯ ಸಹಿತವಾದ ಇಡೀ ಜಗತ್ತು ಸೇರಿಕೊಂಡಿದೆಯೆಂದಾದ ಮೇಲೆ ಒಂದು ಸವತೆಯಲ್ಲಿ ಒಂದು ಹಳ್ಳಿಯು ಸೇರಿಕೊಳ್ಳುವುದೇನು ದೊಡ್ಡದು? ಈಗ ಕೇಳು, ಕುರಿಯ ಹೊಟ್ಟೆಯಲ್ಲಿ ಸವತೆ, ಮತ್ತು ಆ ಕುರಿ ಹೆಬ್ಬಾವಿನ ಹೊಟ್ಟೆಯಲ್ಲಿ ಸೇರಿಕೊಂಡದ್ದು ಹೇಗೆ? ಕೇಳಿಲ್ಲಿ, ದೇವಕಿಯ ಟೊಂಕವು ಒಂದು ಕೈ ಮುಷ್ಟಿಯಲ್ಲಿ ಹಿಡಿಯಬಹುದಾದಷ್ಟು ತೆಳ್ಳಗಿತ್ತು. ಆ ದೇವಕಿಯ ಗರ್ಭದಿಂದ ಕೇಶವ ಬಂದ. ಆ ಕೇಶವನ ಹೊಟ್ಟೆಯೊಳಗೆ ಬೆಟ್ಟ, ಅಡವಿ, ಇವೆಲ್ಲ ಸೇರಿದ ಇಡಿಯ ಭೂಮಂಡಲವೇ ಇತ್ತು.” (26-41) ಕಂಡರೀಕನು ಕೇಳಿದನು - “ಸರಿ, ಆದರೆ ಸವತೆಯ ಒಳ ಸೇರಿದ ಹಳ್ಳಿಯ ಎಲ್ಲ ಜನರು ಸಾಯಲಿಲ್ಲವೇಕೆ? ಅದರ ಉತ್ತರ ಹೇಳು.” ಏಲಾಷಾಢನು ಹೇಳಿದನು - “ಕೃಷ್ಣನ ಹೊಟ್ಟೆಯಲ್ಲಿ ಭೂಮಿಯಿತ್ತು, ಕೃಷಿ, ಒಕ್ಕಲುತನ, ಯುದ್ಧ, ಹುಟ್ಟು, ಮದುವೆ, ಇತ್ಯಾದಿ ಎಲ್ಲ ಉತ್ಸವಗಳು ನಡೆಯುತ್ತಿದ್ದವು. ಹಾಗೆಯೇ ಸವತೆಯ ಒಳಗೂ ನಡೆಯುತ್ತಿತ್ತು. ಈ ವಿಷಯದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ಮಧ್ಯೆ ವಿವಾದವೂ ನಡೆದಿತ್ತು. ಬ್ರಹ್ಮ ಹೇಳಿದ. - ‘ನಾನೇ ಶ್ರೇಷ್ಠ, ನನ್ನ ಮುಖ, ಬಾಹು, ತೊಡೆ, ಪಾದಗಳಿಂದ ನಾಲ್ಕೂ ವರ್ಣ ನಿರ್ಮಾಣಗೊಂಡಿವೆ.’ ವಿಷ್ಣುವು ಈ ಮಾತಿಗೆ ಪರಿಹಾಸ್ಯ ಮಾಡುತ್ತ ಹೇಳಿದ. - ‘ನೀನು ನನ್ನ ದಾಸನಂತೆ. ಹೀಗೆ ಹೇಳುವುದು ನಿನಗೆ ಒಳಿತಲ್ಲ. ಭೂಮಿಯು ನನ್ನ ಕಂಠ, ಪರ್ವತಗಳು ನನ್ನ ಗದ್ದ, ಸಮುದ್ರ ನನ್ನ ನಾಲಿಗೆ, ನೀರಿನಲ್ಲಿ ನಾನು ಮಲಗಿದಾಗ ನನ್ನ ಹೊಕ್ಕಳಿನಿಂದ ಹುಟ್ಟಿದ ಕಮಲದಿಂದಲೇ ಉತ್ಪತ್ತಿಯಾದೆ. ಆದ್ದರಿಂದ ಬ್ರಹ್ಮಾ, ನಿನಗಿಂತ ಹಿರಿಯರ ಎದುರು ಹೀಗೆಲ್ಲ ಹೇಳುವುದು ಒಳಿತಲ್ಲ’ (42-49) 156 ಕಥಾ ಸಂಸ್ಕೃತಿ ಏಲಾಷಾಢನು ಹೀಗೆ ಕಂಡರೀಕನ ಕತೆಗೆ ಸಮಾಧಾನ ಹೇಳಿದಾಗ ಕಂಡರೀಕನು ಹೇಳಿದ - “ಏಲಾಷಾಡ, ಈಗ ನೀನು ನಿನ್ನ ಅನುಭವಗಳನ್ನು ಹೇಳು. . .” ಏಲಾಷಾಢನ ಕತೆ ಏಲಾಷಾಢನು ಹೇಳಿದನು - “ನಾನು ನನ್ನ ಯೌವನದ ದಿನಗಳಲ್ಲಿ ಹಣ ಸಂಪಾದಿಸುವ ಲಾಲಸೆಯಿಂದ ಇಡೀ ಭೂಮಂಡಲವನ್ನೇ ಸುತ್ತುತ್ತಿದ್ದೆ. ಇಲ್ಲಿ ಬಿಲ ಇದೆ. - ಇದರಲ್ಲಿ ರಸ ಇರಬಹುದು, ಇಲ್ಲಿ ಪರ್ವತವಿದೆ - ಇಲ್ಲಿ ಧಾತುಗಳಿರಬಹುದು, - ಹೀಗೆ ಹುಡುಕುತ್ತ ತಡಕುತ್ತ ನಾನು ಅಲೆಯುತ್ತಿದ್ದೆ. ಪೂರ್ವದಿಕ್ಕಿನಲ್ಲಿ ಸಹಸ್ರ ಯೋಜನ ದೂರ ಹೋದರೆ ಅಲ್ಲಿ ಒಂದು ಪರ್ವತ ಸಿಗುವುದು ಎಂದು ನನಗೆ ಗೊತ್ತಾಯಿತು, ಅಲ್ಲದೆ ಅದರಲ್ಲಿ ಸಹಸ್ರವೇಧೀ ರಸಗಳಿವೆ. ಒಂದು ಯೋಜನ (8 ಮೈಲು) ಉದ್ದದ ಕಲ್ಲಿನಿಂದ ಮುಚ್ಚಿದ ಒಂದು ಬಿಲ ಇದೆ. ಅದರಲ್ಲಿ ರಸಗಳಿವೆ. ಆ ಶಿಲೆಯನ್ನು ಜರುಗಿಸಿ ಅಲ್ಲಿರುವ ಬಂಗಾರದ ಕುಂಡದಿಂದ ರಸವನ್ನು ತೆಗೆಯಬೇಕು. ಆಶೆಯ ಪಾಶದಿಂದ ಬಂಧಿತನಾದ ನಾನು ನೂರು ಯೋಜನ ನಡೆದು ಪರ್ವತ ತಲುಪಿದೆ. ಆ ಶಿಲೆಯನ್ನೂ ಎತ್ತಿ ಆ ರಸವನ್ನೂ ತೆಗೆದೆ, ಅನಂತರ ಮತ್ತೆ ಆ ಶಿಲೆಯಿಂದ ಗುಹೆಯನ್ನು ಮುಚ್ಚಿದೆ, ಮತ್ತು ರಸ ತೆಗೆದುಕೊಂಡು ನನ್ನ ಮನೆಗೆ ಬಂದೆ. ಆ ರಸವನ್ನು ಹೊಂದಿದ್ದರಿಂದ ನನ್ನ ಬಳಿ ಕುಬೇರನ ವೈಭವ ಬಂದಿತ್ತು. ನನ್ನನ್ನು ಸುಂದರಿಯರು ಸುತ್ತುವರಿದಿದ್ದರು. ನೂರಾರು ಹೊಗಳು ಭಟರು ನನ್ನ ಸ್ತುತಿ ಮಾಡುತ್ತಿದ್ದರು. ಸುಂದರ ನರ್ತಕಿಯರು ನೃತ್ಯದಿಂದ ನನ್ನ ಮನಸ್ಸನ್ನು ಸಂತೋಷಪಡಿಸುತ್ತಿದ್ದರು. ಅಪ್ಸರೆಯರಿಂದ ಸುತ್ತುವರಿದ ಕುಬೇರನಂತೆ ನಾನು ವಿಲಾಸದಲ್ಲಿ ತೊಡಗಿದ್ದೆ. ಭಿಕ್ಷುಗಳಿಗೆ ಸಾಧುಗಳಿಗೆ ನಾನು ದಾನ ನೀಡುತ್ತಿದ್ದೆ. ಕುಬೇರನಂಥ ನನ್ನ ವೈಭವದ ಖ್ಯಾತಿಯನ್ನು ಕೇಳಿ ಒಂದು ದಿನ ರಾತ್ರಿ ಕಳ್ಳರು ನನ್ನ ಮನೆಯ ಮೇಲೆ ದಾಳಿ ಮಾಡಿದರು. ಅವರು ಕವಚ ಧರಿಸಿ ಶಸ್ತ್ರ ಹಿಡಿದಿದ್ದರು. ಅವರು ಮನೆಯನ್ನು ಸುತ್ತುವರಿದರು. ನಾನು ಸಂಗ್ರಹಿಸಿದ ಹಣವನ್ನು ಲೂಟಿ ಮಾಡತೊಡಗಿದರು. ನಾನು ನನ್ನ ಭುಜಬಲದಿಂದ ಸಂಪಾದಿಸಿದ ಸಂಪತ್ತೆಲ್ಲವೂ ಹೊರಟುಹೋಗುವುದೆಂದು ಯೋಚಿಸಿದೆ. ಆಗ ನಾನು ಬಿಲ್ಲು ಹಾಗೂ ಸಾವಿರ ಬಾಣಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಬಂದೆ. ಕಳ್ಳರ ಜೊತೆ ಭಾರಿ ಯುದ್ಧವಾಯಿತು. ಒಂದೊಂದು ಬಾಣದಿಂದ ಏಳು, ಎಂಟು, ಹತ್ತು - ಹನ್ನೆರಡು ಹೀಗೆ ಕಳ್ಳರನ್ನು ಹೊಡೆದು ಕಳಿಸಿದೆ. ನೂರು ಕಳ್ಳರನ್ನು ಕ್ಷಣಾರ್ಧದಲ್ಲಿ ನಾನು ಸಾಯಿಸಿಬಿಟ್ಟೆ. ಉಳಿದವರೆಲ್ಲ ಸೇರಿಕೊಂಡು ನನ್ನ ಮೇಲೆ ಆಕ್ರಮಣ ಮಾಡಿದರು. ಅವರು ನನ್ನನ್ನು ತುಂಡು ತುಂಡು ಮಾಡಿ ತಲೆಯನ್ನು ಕತ್ತರಿಸಿಬಿಟ್ಟರು. ಅನಂತರ ನನ್ನ ತಲೆಯನ್ನು ಬದರಿ ಮರಕ್ಕೆ ತೂಗು ಭಾರತ 157 ಹಾಕಿ, ಸಂಪತ್ತನ್ನು ಎತ್ತಿಕೊಂಡು ಹೊರಟುಬಿಟ್ಟರು. ನನ್ನ ರುಂಡದಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಅದರ ಕಿವಿಗಳಲ್ಲಿ ಕುಂಡಲ ತೂಗಾಡುತ್ತಿದ್ದವು. ಆ ಸತ್ತ ರುಂಡವು ಆರಾಮಾಗಿ ಆ ಮರದ ಮೇಲೆ ತೂಗಾಡುತ್ತ, ಆ ಮರದ ಹಣ್ಣನ್ನು ತಿನ್ನುತ್ತಲಿತ್ತು. ಬೆಳಗಾದ ಮೇಲೆ ಜನರು ನನ್ನ ತಲೆಯು ಮರದ ಮೇಲೆ ಬದರೀಫಲವನ್ನು ತಿನ್ನುತ್ತಿರುವುದನ್ನು ಕಂಡು ಇದು ಜೀವಿತವಿದೆ ಎಂದರು. ಅನಂತರ ಅವರು ನನ್ನ ತಲೆಯನ್ನು ಮರದಿಂದ ಕೆಳಗಿಳಿಸಿ, ನನ್ನ ಎಲ್ಲ ಅಂಗಗಳನ್ನು ಹುಡುಕಿ ಜೋಡಿಸಿ ಅದಕ್ಕೆ ನನ್ನ ತಲೆಯನ್ನು ಜೋಡಿಸುತ್ತಲೇ ನಾನು ಪುನಃ ಅಪೂರ್ವ ಸೌಂದರ್ಯವಂತನಾದೆ. ಇದು ನಾನು ಇದೇ ಮತ್ರ್ಯಲೋಕದಲ್ಲಿ ಪಡೆದ ಅನುಭವ. ಯಾರಾದರೂ ಇದರಲ್ಲಿ ವಿಶ್ವಾಸವಿಡದಿದ್ದರೆ, ಅವರು ಧೂರ್ತ ಜನರಿಗೆ ಅನ್ನವನ್ನು ಕೊಡಲಿ” (1-19) ಏಲಾಷಾಢನ ಕತೆಗೆ ಶಶನ ಸಮಾಧಾನ ಶಶ ಹೇಳಿದನು - “ನೀನು ಹೇಳಿದ ಸ್ವಾನುಭವ ವೃತ್ತಾಂತವನ್ನು ಯಾರು ತಾನೆ ಸರಿಪಡಿಸಬಲ್ಲರು, ಸುಳ್ಳೆಂದು ಹೇಳಬಲ್ಲರು? ಪುರಾಣ, ಶ್ರುತಿ, ಮಹಾಭಾರತ, ರಾಮಾಯಣಗಳಲ್ಲಿ ಆಸ್ಥೆ ಇದ್ದವರಾರೂ ಈ ಬಗ್ಗೆ ಅನುಮಾನ ತಾಳಲಾರರು. ಜಮದಗ್ನಿಯೆಂಬ ಋಷಿಯಿದ್ದನು. ಅವನ ಪತ್ನಿಯ ಹೆಸರು ರೇಣುಕಾ. ಹೂವಿನಿಂದ ತುಂಬಿದ ಮರಗಳೂ ಬಾಗಿಬಾಗಿ ನಮಸ್ಕರಿಸುವಷ್ಟು ಅವಳು ಶೀಲವತಿಯಾಗಿದ್ದಳು. ಒಂದು ಬಾರಿ ಅವಳು ರಾಜ ಅಶ್ವಪತಿಯನ್ನು ನೋಡಿದಳು. ಅವಳ ಮನಸ್ಸು ಚಂಚಲವಾಯಿತು. ಅನಂತರ ಮರಗಳು ಬಾಗಿ ನಮಸ್ಕರಿಸುವುದನ್ನು ನಿಲ್ಲಿಸಿದವು. ಆಗ ಜಮದಗ್ನಿಯು ಸಿಟ್ಟಿಗೆದ್ದು ತನ್ನ ಮಗನಾದ ಪರಶುರಾಮನಿಗೆ ಅಪ್ಪಣೆ ಮಾಡಿದ. - “ಈ ಶೀಲಗೆಟ್ಟವಳ ತಲೆಯನ್ನು ಕತ್ತರಿಸಿ ಹಾಕು.” ತಂದೆಯ ಆಜ್ಞಾಧಾರಕನಾದ ಅವನು ತಕ್ಷಣ ತನ್ನ ತಾಯಿಯ ತಲೆಯನ್ನು ಕತ್ತರಿಸಿದ. ಜಮದಗ್ನಿ ಹೇಳಿದನು. ‘ಮಗನೇ’ ನಿನಗೆ ಇಷ್ಟವಾದ ವರವನ್ನು ಕೇಳು’. ಪರಶುರಾಮನು ಹೇಳಿದನು “ನನ್ನ ತಾಯಿ ಪುನಃ ಜೀವಿತಳಾಗಲಿ”. ರೇಣುಕೆಯು ಪುನಃ ಜೀವಿತಳಾದಳು. ಇದು ಮೊದಲೇ ಹೀಗೆ ಆಗಿರುವುದರಿಂದ, ನೀನು ನಿನ್ನ ತಲೆ ಕತ್ತರಿಸಿದರೂ ಮತ್ತೆ ಜೀವಿತವಾಗಿರುವುದು ಸತ್ಯ. ಯುದ್ಧದಲ್ಲಿ ಪರಾಕ್ರಮ ಮೆರೆಯಲು ಪ್ರಸಿದ್ಧನಾದ ಜರಾಸಂಧನೆಂಬ ರಾಜನಿದ್ದ. ಎರಡು ತುಂಡಾಗಿದ್ದ ಅವನನ್ನು ಜರಾ ಎಂಬ ಹೆಸರಿನ ರಾಕ್ಷಸಿಯು ಜೋಡಿಸಿದ್ದಳು. ಅವನಲ್ಲಿ ಒಂದು ಸಾವಿರ ರಾಜರಿಗಿಂತ ಅಧಿಕ ಶಕ್ತಿಯಿತ್ತು. ಮತ್ತು ಕೇಳು, ಸುಂದ ಮತ್ತು ನಿಸುಂದರೆಂಬ ಇಬ್ಬರು ವೀರರಿದ್ದರು, ಸ್ವರ್ಗದಲ್ಲಿಯೂ ಅವರ ಭಯ ಹರಡಿತ್ತು. ಆಗ ದೇವತೆಗಳು ಅವರನ್ನು ಮೋಹಗೊಳಿಸಲು ತಮ್ಮ ತಮ್ಮ ದೇಹದಿಂದ ಒಂದು ತಿಲಾಂಶವನ್ನು 158 ಕಥಾ ಸಂಸ್ಕೃತಿ ತೆಗೆದು ತಿಲೋತ್ತಮೆ ಎಂಬ ಅಪ್ಸರೆಯನ್ನು ಸೃಷ್ಟಿಸಿದ್ದರು. ಅವಳ ಅಂಗಾಂಗಳೆಲ್ಲವೂ ತುಂಬ ಸುಂದರವೂ ಪ್ರಮಾಣಬದ್ಧವೂ ಆಗಿದ್ದು ಲಾವಣ್ಯವತಿಯಾಗಿದ್ದಳು. ಸಮುದ್ರದಿಂದ ಲಕ್ಷಿಯು ಜನಿಸಿದ ಹಾಗೆ ಅವಳು ಉತ್ಪನ್ನಳಾಗಿದ್ದಳು. ಅರಳಿದ ನೀಲಕಮಲದಂತಹ ಕಣ್ಣುಗಳ ಆ ಅಪ್ಸರೆಯು ನಯ ವಿನಯಗಳಿಂದ ದೇವತೆಗಳ ಬಳಿ ಬಂದು “ಹೇಳಿ ನನ್ನಿಂದೇನಾಗಬೇಕು?” ಎಂದಳು. ದೇವತೆಗಳು ಹೇಳಿದರು - “ಸುಂದ - ನಿಸುಂದರಿಬ್ಬರೂ ದೇವತೆಗಳಿಗೆ ಮುಳ್ಳಾಗಿದ್ದಾರೆ. ಅವರನ್ನು ಕಿತ್ತೆಸೆಯಬೇಕು.” ಹಾರ ಕೇಯೂರಗಳನ್ನು ಧರಿಸಿ ಎಲ್ಲರ ಮನವನ್ನೂ ಸೂರೆಗೊಳ್ಳುವ ಆ ಅಪ್ಸರೆಯು ಅಲ್ಲಿ ಹೋಗಿ ಅವರನ್ನು ಆಕರ್ಷಿಸತೊಡಗಿದಳು. ಅವರಿಬ್ಬರೂ ಇವಳ ಮೇಲೆ ಮೋಹವಶರಾಗಿ ತಮ್ಮಲ್ಲಿ ಯುದ್ಧಕ್ಕೆ ತೊಡಗಿದರು. ಒಬ್ಬರು ಇನ್ನೊಬ್ಬರ ಮೇಲೆ ಶಸ್ತ್ರಗಳಿಂದ ಪ್ರಹಾರ ಮಾಡಿ ಇಬ್ಬರೂ ಪ್ರಾಣವನ್ನು ಕಳೆದುಕೊಂಡರು. ದೇವತೆಗಳು ತಿಲೋತ್ತಮೆಯಂಥ ಅಪ್ಸರೆಯನ್ನು ತಮ್ಮ ಶರೀರದ ತುಣುಕುಗಳಿಂದ ಸೃಷ್ಟಿಸಿದ್ದರೆ, ನೀನು ನಿನ್ನ ಅಂಗ ಜೋಡಿಸಿದರೆ ಯಾಕೆ ಜೋಡಿಸಲಾಗದು? ಇಂಥದೇ ಮತ್ತೊಂದು ಕತೆಯಿದೆ. ಚಿಕ್ಕಂದಿನಲ್ಲಿ ಹನುಮಂತನು ತನ್ನ ತಾಯಿಯಾದ ಅಂಜನಾದೇವಿಗೆ ‘ನಾನು ಹಸಿದಿದ್ದೇನೆ, ನನಗೇನು ಆಹಾರ?’ ಎಂದು ಕೇಳಿದನು. ಅಡವಿಯ ಕೆಂಪು ಹಣ್ಣುಗಳೇ ನಿನ್ನ ಆಹಾರವೆಂದು ತಾಯಿ ಹೇಳಿದಳು. ಆಗ ಹನುಮಂತನು ಕೆಂಪಗಿರುವ ಸೂರ್ಯನನ್ನು ಹಿಡಿಯಲು ಮೇಲೆ ಜಿಗಿದನು. ಸೂರ್ಯನೂ ಅವನಿಗೆ ಒಂದು ಹೊಡೆತ ಹಾಕಿದನು. ಹನುಮಂತನು ಚೂರು ಚೂರಾದನು. ತಾಯಿಯು ತನ್ನ ಪತಿ ವಾಯುವಿನ ಬಳಿ ಹೋಗಿ ಕರುಣ ಕತೆಯನ್ನು ಹೇಳಿಕೊಂಡಳು (20-40) ಆಗ ಸಿಟ್ಟಿಗೆದ್ದ ವಾಯುವು ಪಾತಾಳದಲ್ಲಿ ಹೋಗಿ ಅಡಗಿ ಕುಳಿತನು. ಗಾಳಿಯ ಚಲನೆಯು ನಿಂತಿದ್ದರಿಂದ ಸುರಾಸುರ ಸಹಿತವಾದ ಸಕಲ ಜಗತ್ತು ಕಷ್ಟದಲ್ಲಿ ಸಿಲುಕಿತು. ಆಗ ದೇವತೆಗಳು ಪಾತಾಳಕ್ಕೆ ಹೋಗಿ ಪವನನಿಗೆ ಸಮಜಾಯಿಷಿ ಹೇಳಿದರು ಮತ್ತು ಹನುಮಂತನ ದೇಹದ ತುಣುಕುಗಳನ್ನು ಜೋಡಿಸಿ ಜೀವಕೊಟ್ಟರು. ಆದರೆ ಇಷ್ಟೇ, ಆತನ ಕೆನ್ನೆಯ ಎಲುಬು ಎಲ್ಲಿಯೂ ಸಿಗಲಿಲ್ಲ, ಬೇರೆ ಎಲುಬನ್ನು ಜೋಡಿಸಿದ್ದರಿಂದ ಅವನನ್ನು ‘ಹನುಮಾನ್’ ಎಂದು ಕರೆಯಲಾಯಿತು. ಹೀಗೆ ವಾಯುಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಮತ್ತೊಮ್ಮೆ ಅವನನ್ನು ಜೀವಿತಗೊಳಿಸಿರುವುದು ಸತ್ಯವೆಂದಾದರೆ ನಿನ್ನ ಕತ್ತರಿಸಿದ ದೇಹವು ಸಜೀವವಾಗುವುದರಲ್ಲಿ ಯಾವ ಸಂದೇಹವಿದೆ ? ರಾಮಾಯಣದಲ್ಲಿ ಸೀತಾದೇವಿಯ ಅಪಹರಣದ ಕತೆ ಬರುತ್ತದೆ. ಅದರಲ್ಲಿ ರಾಮನು ಸೀತೆಯನ್ನು ಹುಡುಕಲು ಲಂಕಾದ್ವೀಪಕ್ಕೆ ಹೋದನು. ರಾಮ ಮತ್ತು ರಾವಣರ ನಡುವೆ ಭೀಕರ ಯುದ್ಧವಾಯಿತು. ರಾವಣನು ಪ್ರಯೋಗಿಸಿದ ಬಾಣ - ಪರಶು ಭಾರತ 159 ಮುಂತಾದವುಗಳಿಂದಾಗಿ ಜರ್ಜರಿತಗೊಂಡ ಲಕ್ಷ್ಮಣನು ಶಸ್ತ್ರ ಪ್ರಹಾರದಿಂದ ಪ್ರಾಣ ಕಳೆದುಕೊಂಡು ಭೂಮಿಯ ಮೇಲೆ ಬಿದ್ದನು. ಆಗ ಹನುಮಂತನು ದ್ರೋಣಗಿರಿಗೆ ಹೋಗಿ ಶಕ್ತಿಶಾಲಿಯಾದ ಸಂಜೀವಿನಿ ಸಸ್ಯವನ್ನು ತಂದುಕೊಟ್ಟನು. ಅದರಿಂದಾಗಿ ಲಕ್ಷ್ಮಣನಲ್ಲದೆ ಅಂಗಾಂಗಗಳು ಕತ್ತರಿಸಿ ಬಿದ್ದ ವಾನರ ವೀರರೂ ಪುನಃ ಜೀವಿತರಾದರು. ಆ ವಾನರರೆಲ್ಲ ಅಂಗಾಂಗ ಕತ್ತರಿಸಿದರೂ ಜೀವಿತರಾದರೆ, ಏಲಾಷಾಢ, ನೀನೂ ಕೂಡ ಸಹಸ್ರಾರು ತುಣುಕುಗಳಾಗಿಯೂ ಜೀವಂತನಾದೆ. (42-52) ಏಲಾಷಾಢನು ಹೇಳಿದನು - “ಕತ್ತರಿಸಿದ ತಲೆಯಿಂದ ಹಣ್ಣು ತಿನ್ನುವ ಕ್ರಿಯೆ ನಡೆಯಲು ಸಾಧ್ಯವಾ?” ಶಶನು ಉತ್ತರಿಸಿದ - “ರಾಹುವೂ ತಲೆ ಕತ್ತರಿಸಿದವನೇ. ಅವನು ಆಕಾಶದಲ್ಲಿ ತಿರುಗಾಡುತ್ತ ಸೂರ್ಯಚಂದ್ರರನ್ನು ನುಂಗುತ್ತಾನಲ್ಲ. . .” ಏಲಾಷಾಢನು ಹೇಳಿದನು. “ನೂರು ಯೋಜನ ದೂರವನ್ನು ಇಷ್ಟು ಕಡಿಮೆ ಸಮಯದಲ್ಲಿ ದಾಟಲು ಹೇಗೆ ಸಾಧ್ಯ.” ಶಶ ಹೇಳಿದ - “ಬಲಿಯಿಂದ ದಾನವಾಗಿ ಪಡೆದ, ಪರ್ವತಗಳು ಸಹಿತವಾದ ಇಡೀ ಭೂಮಿಯನ್ನು ವಿಷ್ಣುವು ಮೂರು ಹೆಜ್ಜೆಗಳಲ್ಲಿ ಅಳೆದುಬಿಟ್ಟ. ನೀನು ನೂರು ಯೋಜನವನ್ನು ಕ್ಷಣದಲ್ಲಿ ದಾಟಿಬಿಟ್ಟೆ - ಇದರಲ್ಲೇನು ತಪ್ಪಿದೆ?” ಏಲಾಷಾಢನು ಮತ್ತೆ ಹೇಳಿದ - “ಅಂಥ ಭಾರೀ ಶಿಲೆಯನ್ನು ನಾನು ಹೇಗೆ ಎತ್ತಿರಬಹುದು, ಇದಕ್ಕೇನು ವಿಶ್ವಾಸ ಇದೆ?” ಶಶನು ಹೇಳಿದ - “ನೀನು ರಾಮಾಯಣದ ಕತೆಯನ್ನು ಕೇಳಿಲ್ಲವಾ? ರಾಮ-ರಾವಣರ ಯುದ್ಧ ನಡೆಯುತ್ತ ಇರುವಾಗ, ಕುಮಾರ ಲಕ್ಷ್ಮಣನು ಯುದ್ಧರಂಗದಲ್ಲಿ ಬಿದ್ದಾಗ ಹನುಮಂತನು ಎತ್ತರವಾದ ಭಾರೀ ದ್ರೋಣ ಪರ್ವತವನ್ನೇ ಗಿಡಮರ ಬೇರು ಸಹಿತವಾಗಿ ಕಿತ್ತುಕೊಂಡು ಬಂದಿದ್ದ. ಅಂಥ ದೊಡ್ಡ ಬೆಟ್ಟವನ್ನು ಒಬ್ಬ ವಾನರನು ಕಿತ್ತುಕೊಂಡು ಬಂದನೆಂದ ಮೇಲೆ ಒಂದು ಯೋಜನ ವಿಸ್ತೀರ್ಣದ ಶಿಲೆಯನ್ನು ನೀನು ಎತ್ತಿದ್ದರಲ್ಲಿ ಸಂದೇಹವೇನಿದೆ? ವರಾಹ ರೂಪಧಾರಿ ವಿಷ್ಣುವು ಪರ್ವತ-ಕಾನನ-ಯುಕ್ತವಾದ, ಸಮುದ್ರದಲ್ಲಿ ಮುಳುಗಿದ ಇಡೀ ಭೂಮಿಯನ್ನೇ ಎತ್ತಲಿಲ್ಲವಾ? ಅವರು ಇಡೀ ಭೂಮಿಯನ್ನೇ ಎತ್ತಲು ಸಾಧ್ಯವಾದರೆ, ನೀನು ಕೂಡ ಚಿಕ್ಕ ಶಿಲೆಯನ್ನು ಎತ್ತಬಲ್ಲೆ. . . .” ಏಲಾಷಾಢನು ಹೇಳಿದನು - “ಹಾಗಾದರೆ ಈಗ ನೀನು ಕಂಡಿದ್ದು - ಕೇಳಿದ್ದನ್ನು ಹೇಳು. (87-98) 160 ಕಥಾ ಸಂಸ್ಕೃತಿ ಶಶನ ಕತೆ ಶಶನು ಹೇಳಿದನು - “ಶರತ್ಕಾಲದ ಸಮಯದಲ್ಲಿ ನಾನು ನನ್ನ ಹೊಲಕ್ಕೆ ಹೋಗಿದ್ದೆ. ನನ್ನ ಹೊಲವು ಹಳ್ಳಿಯಿಂದ ದೂರದ ಬೆಟ್ಟದ ತಪ್ಪಲಿಗೆ ಹೊಂದಿಕೊಂಡಿತ್ತು. ನಾನು ಹೊಲದಲ್ಲಿ ತಿರುಗಾಡುತ್ತಿದ್ದಾಗ ಬೆಟ್ಟದ ಮೇಲಿನಿಂದ ಒಂದು ಮದವೇರಿದ ಆನೆಯು ನನ್ನತ್ತ ಓಡಿ ಬಂದಿತು. ‘ಅಯ್ಯೋ ಇದು ನನ್ನನ್ನ ಹಿಡಿದುಕೊಂಡೇ ಬಿಟ್ಟಿತು’ ಎಂದು ಯೋಚಿಸಿದ ನಾನು ಹೆದರಿಕೆಯಿಂದ ನಡುಗುತ್ತ ಓಡತೊಡಗಿದೆ. ಆಗ ನಾನು ಒಂದು ವಿಶಾಲವಾದ ಎಳ್ಳಿನ ಮರವನ್ನು ನೋಡಿದೆ. ಅಡವಿಯ ಆನೆಗೆ ಹೆದರಿ ನಾನು ಆ ಮರವೇರಿ ಅಡಗಿಕೊಂಡೆ. ಆನೆಯೂ ಅಲ್ಲಿಗೆ ಬಂದು ಘೀಳಿಡುತ್ತ ಆ ಮರವನ್ನು ಕುಂಬಾರ ಚಕ್ರದಂತೆ ತಿರುಗಿಸತೊಡಗಿತು. ಅದು ತಿರುಗಿಸುವ ರಭಸಕ್ಕೆ ಅ ಮರದಿಂದ ಎಳ್ಳು ಭಾರೀ ಮಳೆ ಸುರಿಯುವಂತೆ ಸುರಿಯತೊಡಗಿತು. ಆನೆಯು ಆ ಎಳ್ಳುಗಳನ್ನು ಗಾಣಕ್ಕೆ ಕೊಟ್ಟಹಾಗೆ ತುಳಿದು ಹಾಕಿತು. ಎಳ್ಳಿನ ಜಿಗುಟಿನಲ್ಲಿ ಸಿಕ್ಕಿ ಹಾಕಿಕೊಂಡ ಆನೆಯು ಅಲ್ಲಿಂದ ತಪ್ಪಿಸಿಕೊಳ್ಳಲಾರದೆ, ಆಹಾರವಿಲ್ಲದೆ ಹಸಿವಿನಿಂದ ಸತ್ತು ಹೋಯಿತು. ಆನೆಯ ಹೆದರಿಕೆಯಿಂದ ಮರದ ಮೇಲೆಯೇ ಅವಿತುಕೊಂಡಿದ್ದ ನಾನು ಮರುಜನ್ಮ ಪಡೆದವನಂತೆ ಹೇಗೋ ಹಗಲು ಕಳೆದ ಮೇಲೆ ಮರದಿಂದ ಕೆಳಗೆ ಇಳಿದೆ. ಸತ್ತ ಆನೆಯ ಚರ್ಮ ತೆಗೆದು ಚೀಲ ಮಾಡಿ ಎಳ್ಳಿನ ಎಣ್ಣೆಯನ್ನೆಲ್ಲ ತುಂಬಿಕೊಂಡೆ. ಉಳಿದ ಹತ್ತು ಕೊಡ ಎಣ್ಣೆಯನ್ನು ನಾನು ಕುಡಿದುಬಿಟ್ಟೆ. ಮತ್ತು ಎಳ್ಳಿನ ಹಿಂಡಿಯನ್ನೂ ತಿಂದುಬಿಟ್ಟೆ. ಎಣ್ಣೆ ತುಂಬಿದ ಚೀಲವನ್ನು ತೆಗೆದುಕೊಂಡು ಊರಿಗೆ ಹೋದೆ. ಆ ಚೀಲವನ್ನು ಒಂದು ಮರದ ಟೊಂಗೆಗೆ ತೂಗುಹಾಕಿ ನಾನು ಮನೆಯನ್ನು ತಲುಪಿದೆ. ಮತ್ತು ಆ ಚೀಲವನ್ನು ತರಲು ನನ್ನ ಮಗನನ್ನು ಕಳಿಸಿದೆ. ಅವನಿಗೆ ಮರದ ಮೇಲೆ ಆ ಚೀಲ ಕಾಣಿಸಲಿಲ್ಲವಾದ್ದರಿಂದ ಅವನು ಮರವನ್ನೇ ಕಿತ್ತು ಮನೆಗೆ ತಂದುಬಿಟ್ಟ. ಈ ಮನುಷ್ಯ ಲೋಕದಲ್ಲಿ ನಾನು ಸ್ವತಃ ಈ ಅನುಭವವನ್ನು ಪಡೆದೆ. ಇದನ್ನು ನಂಬದವರು ಧೂರ್ತರಿಗೆ ಅನ್ನ ಕೊಡಲಿ” (1-13) ಖಂಡಪಾನಳು ಶಶನ ಕತೆಗೆ ಸಮಾಧಾನ ಹೇಳಿದ್ದು. ಆಗ ಎಲ್ಲ ಕತೆಗಳಲ್ಲಿಯೂ ನಿಪುಣಳಾದ ಧೂರ್ತ ಖಂಡಪಾನಾ ಶಶನಿಗೆ ಹೇಳಿದಳು - “ನನಗೂ ಮಹಾಭಾರತ ಮತ್ತು ರಾಮಾಯಣದ ಜ್ಞಾನ ಚನ್ನಾಗಿದೆ.” ಶಶನು ಅವಳಿಗೆ ಹೇಳಿದನು “ಹಾಗಾದರೆ ಹೇಳು, ಮಹಾಭಾರತ, ರಾಮಾಯಣ, ಪುರಾಣಗಳಲ್ಲಿ ಇಂಥ ವಿಷಯ ಎಲ್ಲಿ ಬಂದಿದೆ? ಎಳ್ಳಿನ ಅಷ್ಟೊಂದು ದೊಡ್ಡ ಮರ ಇರಲು ಸಾಧ್ಯವೇ? ಅಥವಾ ಎಳ್ಳಿನಿಂದ ಅಂಥ ಮಹಾನದಿಯೇ ಹರಿಯಬಹುದೇ? ಯಾರಾದರೂ ಹತ್ತು ಕೊಡ ಎಣ್ಣೆಯನ್ನು ಕುಡಿಯಬಹುದೇ? ಅಷ್ಟೊಂದು ಎಳ್ಳಿನ ಜಿಗುಟನ್ನು ತಿನ್ನಬಹುದೆ?” ಭಾರತ 161 ಖಂಡಪಾನಾ ಹೇಳಿದಳು - “ನೀನು ಜಗತ್ತಿನಿಂದ ಹೊರಗೆಲ್ಲೋ ಇರಬೇಕು. ಪಾಟಲೀಪುತ್ರನಗರ ಪಾಟಲದ ಮರದಿಂದಲೇ ಪ್ರಸಿದ್ಧವಾದದ್ದು. ಪಾಟಲದ ಮರ ಅಷ್ಟೊಂದು ದೊಡ್ಡದಿರಲು ಸಾಧ್ಯವೆಂದಾದರೆ, ಎಳ್ಳಿನ ಅಷ್ಟು ದೊಡ್ಡ ಮರ ಇರಲು ಸಾಧ್ಯವಿಲ್ಲವೇ? ಆನೆಗಳ ಗಂಡಸ್ಥಲದಿಂದ ಸುರಿಯುವ ಮದಜಲ ಮಹಾನದಿಯಂತೆ ಹರಿಯತೊಡಗಿತ್ತು ಎಂದು ಮಹಾಭಾರತದಲ್ಲಿ ಹೇಳಿದೆ. ಅದರಲ್ಲಿ ಆನೆ-ಕುದುರೆ-ರಥಗಳು ತೇಲಿಹೋದವು. (14-19) ಆನೆ-ಕುದುರೆ-ರಥಗಳು ತೇಲುವಷ್ಟು ದೊಡ್ಡದಾದ ನದಿಯು ಆನೆಗಳ ಮದ ಜಲದಿಂದ ಹರಿಯಬಲ್ಲುದಾದರೆ, ಎಳ್ಳಿನಿಂದ ಎಣ್ಣೆಯ ನದಿ ಯಾಕೆ ಹರಿಯಲಿಕ್ಕಿಲ್ಲ? ಭೀಮಸೇನನು ಏಕಚಕ್ರನಗರದಲ್ಲಿ ಘೋರನಾದ ಬಕ ರಾಕ್ಷಸನನ್ನು ವಧೆ ಮಾಡಿದ್ದ. ಆಗ ಅವನು ಎಷ್ಟೊಂದು ಕೊಡಗಳಷ್ಟು ಅನ್ನವನ್ನು, ಒಂದು ಸಾವಿರ ಕೊಡಗಳಷ್ಟು ಮದ್ಯವನ್ನು ಕುಡಿದಿದ್ದ. ಅವನ್ನೆಲ್ಲ ಬಕ ರಾಕ್ಷಸನಿಗಾಗಿ ಅವನು ಒಯ್ದಿದ್ದ. ಬಕರಾಕ್ಷಸನ ಅನ್ನವನ್ನು ಭೀಮಸೇನನೊಬ್ಬನೇ ತಿಂದ ಮೇಲೆ, ನೀನು ಎಳ್ಳಿನ ಹಿಂಡಿಯನ್ನು ತಿಂದದ್ದು ಏನು ಆಶ್ಚರ್ಯ? ಹೇಳುತ್ತಾರೆ - ಕುಂಭಕರ್ಣನು ಮಲಗಿ ಎದ್ದಮೇಲೆ ಎಷ್ಟೊೀ ಸಾವಿರ ಕೊಡ ಮದ್ಯ ಕುಡಿಯುತ್ತಿದ್ದ, ಎಷ್ಟೋ ಸಾವಿರ ಮನುಷ್ಯರನ್ನು ತಿನ್ನುತ್ತಿದ್ದ. ಕುಂಭಕರ್ಣನಿಗೆ ಇದು ಸಾಧ್ಯವಾದರೆ ನೀನು ಹತ್ತು ಕೊಡ ಎಣ್ಣೆ ಕುಡಿಯುವುದು ಯಾವ ದೊಡ್ಡ ಸಂಗತಿ! (21-26) ಸ್ವರ್ಗದ ಗಂಗೆಯು ಶಿವನ ಜಡೆಯಿಂದ ಇಳಿದ ಜಹ್ನು ಋಷಿಯ ಆಶ್ರಮಕ್ಕೆ ಹೊಂದಿ ಹರಿಯತೊಡಗಿದಾಗ, ಜಹ್ನು ಋಷಿ ಅದನ್ನು ಕುಡಿದುಬಿಟ್ಟರು. ಒಂದು ಸಾವಿರ ವರ್ಷಗಳವರೆಗೆ ಗಂಗೆಯು ಅವರ ಹೊಟ್ಟೆಯೊಳಗೆ ತಿರುಗುತ್ತ ಉಳಿದಳು. ಅನಂತರ ಜಹ್ನು ಅವಳನ್ನು ಬಿಟ್ಟಿದ್ದರಿಂದ ಆಕೆ ಜಾಹ್ನವಿಯಾದಳು. ಅಗಸ್ತ್ಯನು ಸಮುದ್ರವನ್ನು, ಜಹ್ನುವು ಗಂಗೆಯನ್ನು ಕುಡಿಯಬಲ್ಲರಾದರೆ, ನೀನು ಎಳ್ಳಿನ ಹತ್ತುಕೊಡ ಎಣ್ಣೆ ಕುಡಿದಿದ್ದರಲ್ಲಿ ಆಶ್ಚರ್ಯವೇನಿದೆ?” ಶಶನು ಕೇಳಿದನು - ಅಷ್ಟೊಂದು ದೊಡ್ಡ ಚೀಲವನ್ನು ನಾನು ಹೊತ್ತುಕೊಂಡು ಹಳ್ಳಿಯವರೆಗೆ ಒಯ್ದದ್ದು ಹೇಗೆ? ಖಂಡಪಾನಾ ಜೋರಾಗಿ ನಕ್ಕು ಹೇಳಿದಳು. “ಅಯ್ಯಾ ಶಶ, ನೀನು ಗರುಡನ ಕತೆಯನ್ನು ಕೇಳಿಲ್ಲವೆಂದು ತೋರುತ್ತದೆ. ಕಶ್ಯಪ ಮುನಿಗೆ ಇಬ್ಬರು ಮಡದಿಯರು - ಕದ್ರು ಮತ್ತು ವಿನತೆ. ಅವರು ಒಂದು ದಿನ ಒಂದು ಶರ್ತವೇರ್ಪಡಿಸಿಕೊಂಡರು. ಶರ್ತದಲ್ಲಿ ಸೋತವರು ಗೆದ್ದವರ ಆಜನ್ಮದಾಸಿಯಾಗಬೇಕಾಗುತ್ತದೆ. ಅಥವಾ ದಾಸತ್ವದಿಂದ ಬಿಡುಗಡೆ ಹೊಂದಬೇಕಾದರೆ ಅಮೃತವನ್ನು ತಂದುಕೊಡಬೇಕಾಗುತ್ತದೆ. ವಿನತೆಯು ಸೋತಳು, ಅದರಿಂದ ಅವಳು ಕದ್ರುವಿನ ದಾಸಿಯಾಗಬೇಕಾಯಿತು. 162 ಕಥಾ ಸಂಸ್ಕೃತಿ ಕದ್ರು ತನ್ನ ಸವತಿಯನ್ನು ತುಂಬ ಸತಾಯಿಸುತ್ತಿದ್ದಳು. ದಾಸ್ಯದ ಅಸಹನೀಯವಾದ ಭಾರದಿಂದ ವಿನತೆಯು ದುಃಖಿತಳಾದಳು. ಅವಳು ಮೂರು ಮೊಟ್ಟೆಗಳಿಗೆ ಜನ್ಮವಿತ್ತಳು. ದಾಸ್ಯದ ಮುಕ್ತಿಗಾಗಿ ಅವಳು ಒಂದು ಮೊಟ್ಟೆಯನ್ನು ಒಡೆದಳು. ಆ ಮೊಟ್ಟೆಯಿಂದ ಅಪೂರ್ಣ ಚೇಳು ಜನಿಸಿತು. ತನ್ನ ಒಂದು ಮೊಟ್ಟೆಯೂ ಹಾಳಾಯಿತು ಎಂದು ವಿನತೆ ದುಃಖಿಸಿದಳು. ತಾನು ಯೋಚಿಸುವುದೊಂದು ಆಗುವುದು ಇನ್ನೊಂದು. ಈ ದಾಸ್ಯತೆಯ ಬಿಡುಗಡೆಗಾಗಿ ದುರಾಸೆಯಿಂದ ನಾನು ಮೊಟ್ಟೆಯನ್ನು ಒಡೆದೆ - ಎಂದು ಅತ್ತಳು. ಆದರೆ ಕೆಲದಿನಗಳ ಅನಂತರ ಆಸೆಯಿಂದ ಇನ್ನೊಂದು ಮೊಟ್ಟೆಯನ್ನು ಒಡೆದಳು. ಆ ಮೊಟ್ಟೆಯಿಂದ ತೊಡೆಯಿಲ್ಲದ ಅರುಣನು ಜನಿಸಿದನು. ಅವನು ಹೇಳಿದನು - “ಅಮ್ಮಾ, ಸಮಯಕ್ಕೆ ಮುನ್ನ ನೀನು ಮೊಟ್ಟೆಯನ್ನು ಏಕೆ ಒಡೆದೆ? ನಿನ್ನ ಮನೋಭಿಲಾಷೆಯನ್ನು ನಾನು ಪೂರ್ಣಗೊಳಿಸುತ್ತಿದ್ದೆ. ಆದರೇನು ಮಾಡಲಿ? ನಾನು ನಡೆದಾಡಲಾರದ ನತದೃಷ್ಟ. ಈಗ ನೀನು ಈ ಮೂರನೆಯ ಮೊಟ್ಟೆಯನ್ನು ಪ್ರಯತ್ನಪೂರ್ವಕ ರಕ್ಷಣೆ ಮಾಡು. ಇದರಿಂದ ಹುಟ್ಟಿದವನು ನಿನ್ನನ್ನು ಮುಕ್ತಗೊಳಿಸುತ್ತಾನೆ.” ಆ ತೊಡೆಯಿಲ್ಲದ ಅರುಣನನ್ನು ಸೂರ್ಯನು ತನ್ನ ರಥದ ಸಾರಥಿಯನ್ನಾಗಿ ಮಾಡಿಕೊಂಡನು. ಅನಂತರ ಅವಧಿ ಬಂದ ಮೇಲೆ ವಿನತೆಯು ಮೂರನೆಯ ಮೊಟ್ಟೆಯನ್ನು ಒಡೆದಳು. ಅದರಲ್ಲಿ ಸರ್ಪಕುಲಕ್ಕೆ ಭಯ ಹುಟ್ಟಿಸುವ, ವಿನತೆಯ ಮನಸ್ಸಿಗೆ ಸಂತೋಷ ಕೊಡುವ ಮಹಾಬಲಶಾಲಿಯಾದ ಗರುಡನು ಹುಟ್ಟಿದನು. ಆಗ ಇವನು ನನ್ನ ಮಕ್ಕಳನ್ನು (ನಾಗ) ನಾಶ ಮಾಡುತ್ತಾನೆ ಎಂದು ಯೋಚಿಸಿದ ಕದ್ರು ವಿನತೆಗೆ ಇನ್ನಷ್ಟು ಕಷ್ಟಕೊಡತೊಡಗಿದಳು. ಒಂದು ದಿನ ಕದ್ರುವಿನ ಹಿಂಸೆಯನ್ನು ತಾಳಲಾರದೆ ವಿನತೆಯು ಅಳುತ್ತಿದ್ದಳು. ಆಗ ಗರುಡನು ಕೇಳಿದನು - “ಅಮ್ಮಾ ಯಾಕೆ ಅಳುತ್ತಿದ್ದೀಯೆ?” ಆಕೆ ಹೇಳಿದಳು “ಮಗನೇ, ನಾನು ನನ್ನ ಸವತಿಯ ದಾಸಿಯಾಗಿ ಬಾಳುತ್ತಿದ್ದೇನೆ. ಹಗಲೂ ರಾತ್ರಿ ಅವಳ ಆಜ್ಞೆಯನ್ನು ಪಾಲಿಸಬೇಕಾಗಿದೆ.” ಗರುಡನು ಕೇಳಿದನು “ಈ ದಾಸ್ಯತೆಯಿಂದ ನಿನಗೆ ಬಿಡುಗಡೆ ಹೇಗೆ?” ವಿನತೆಯು ಹೇಳಿದಳು “ಅಮೃತವನ್ನು ತಂದುಕೊಡುವುದರಿಂದ ಮುಕ್ತಿ ಸಿಗುತ್ತದೆ. ಆದರೆ ಅಮೃತವು ಎಲ್ಲಿ ಸಿಗುವುದೆಂಬುದನ್ನು ನಿನ್ನ ತಂದೆಯವರಿಂದ ಕೇಳಿ ತಿಳಿದುಕೊಳ್ಳಬೇಕು.” “ತಂದೆಯವರೆಲ್ಲಿದ್ದಾರೆ” ಎಂದು ಗರುಡನು ಕೇಳಲು ವಿನತೆ “ಬದರಿಕಾಶ್ರಮದಲ್ಲಿ” ಎಂದಳು. ಗರುಡನು ಬದರಿಕಾಶ್ರಮಕ್ಕೆ ಹೋದನು. ತನ್ನ ತಂದೆಯ ಪಾದಗಳಿಗೆ ವಂದಿಸಿ ಹೇಳಿದನು “ತಂದೆಯೇ, ನಾನು ತುಂಬ ಹಸಿದಿದ್ದೇನೆ” ಕಶ್ಯಪರು ಹೇಳಿದರು - “ಹನ್ನೆರಡು ಯೋಜನ ವಿಸ್ತೀರ್ಣದ ಒಂದು ಆನೆ, ಅಷ್ಟೇ ದೊಡ್ಡದಾದ ಒಂದು ಆಮೆ - ಈ ಎರಡೂ ಭಾರೀ ಗಾತ್ರದ ಪ್ರಾಣಿಗಳು ಒಂದು ಸರೋವರದಲ್ಲಿ ಭಾರತ 163 ಬಡಿದಾಡುತ್ತಿವೆ. ಅವುಗಳ ನಡುವಣ ಯುದ್ಧದಿಂದ ಸರೋವರದಲ್ಲಿ ಹಗಲು ರಾತ್ರಿ ಗೊಂದಲವುಂಟಾಗುತ್ತಿದೆ. ಮಗನೇ ನೀನು ಹಸಿದಿರಬೇಡ. ನೀನು ಹೋಗಿ ಅವರೆಡನ್ನೂ ತಿಂದುಬಿಡು.” ಗರುಡನು ಅಲ್ಲಿಗೆ ಹೋದನು. ಮತ್ತು ಒಂದೊಂದು ಬಾರಿಗೆ ಒಂದೊಂದರಂತೆ ಆನೆ ಹಾಗೂ ಆಮೆಗಳೆರಡನ್ನೂ ತಿಂದು ಬಿಟ್ಟನು. ಅಲ್ಲಿಂದ ತಿರುಗಿ ಬರುವಾಗ, ವಿಶಾಲವಾದ ಟೊಂಗೆಗಳನ್ನು ಹೊಂದಿರುವ, ಪ್ರಳಯಕಾಲದ ಮೇಘದ ಸದ್ದಿನಂತೆ ಕಲರವ ಮಾಡುವ ಪಕ್ಷಿಗಳನ್ನು ಹೊಂದಿದ ಭಾರೀ ಆಲದ ಮರವೊಂದನ್ನು ನೋಡಿದನು. ಆ ಮರದ ಮೇಲೆ ವಾಲಖಿಲ್ಯ ಋಷಿ ತಲೆ ಕೆಳಗಾಗಿ ಜೋತುಬಿದ್ದು ತಪಸ್ಸಿನಲ್ಲಿ ಮಗ್ನನಾಗಿದ್ದನು. ಗರುಡನು ಆ ಮರದ ಮೇಲೆ ಕೂತಿದ್ದೇ ತಡ, ಆ ಮರ ಲಟಲಟನೆ ಮುರಿದು ಹೋಯಿತು. ಮರ ಉರುಳಿದರೆ ಋಷಿಗಳೇನಾದರೂ ಸತ್ತರೆ?. . . . . ಎಂದು ಚಿಂತಿತನಾದ ಗರುಡನು ಆ ಮರವನ್ನು ತನ್ನ ಚುಂಚಿನಲ್ಲಿ ಹಿಡಿದೆತ್ತಿಕೊಂಡು ಸಮುದ್ರ ಮಧ್ಯದ ಸುಂದರ ದ್ವೀಪವೊಂದರಲ್ಲಿ ಆ ವಟವೃಕ್ಷವನ್ನು ಸ್ಥಾಪಿತಮಾಡಿದನು. ಇದನ್ನು ಮನುಷ್ಯರು, ಕಿನ್ನರು, ದೇವತೆಗಳು ವಿಸ್ಮಿತವಾಗಿ ನೋಡುತ್ತಿದ್ದರು. ವಟವೃಕ್ಷದಿಂದ ಅಲಂಕೃತವಾದುದರಿಂದ ಅದು ಲಂಕೆಯೆಂದು ಹೆಸರಾಯಿತು. ಅನಂತರ ರಾಕ್ಷಸನಾದ ರಾವಣನ ನೆಲೆಯಾಯಿತು. ಹೀಗೆ ಆನೆ ಮತ್ತು ಆಮೆಯನ್ನು ತಿಂದು ತನ್ನ ತಂದೆಯ ಬಳಿಹೋದ ಗರುಡನು. . .” ಆನೆ-ಆಮೆಗಳನ್ನು ತಿಂದರೂ ನನ್ನ ಹಸಿವು ಹಿಂಗಲಿಲ್ಲ. ಮತ್ತೇನು ತಿನ್ನಲಿ?” ಎನ್ನಲು ಕಶ್ಯಪನು “ನಿಶಾಚರಗಳನ್ನು ತಿನ್ನು” ಎಂದನು. ಗರುಡನು ನಿಶಾಚರಗಳನ್ನು ತಿಂದನು. ಅನಂತರ ತಂದೆಯಿಂದ ಅಮೃತವು ಇರುವ ಸ್ಥಳದ ಬಗ್ಗೆ ಪ್ರಶ್ನಿಸಿದನು. ಕಶ್ಯಪನು ಹೇಳಿದನು” ಮಗನೇ, ಅಮೃತದ ಕುಂಭವು ಪಾತಾಳದಲ್ಲಿದೆ. ಬೆಂಕಿಯ ಬಾರೀ ಜ್ವಾಲೆಗಳಿಂದ ಸುತ್ತುವರಿದಿದೆ. ದೇವತೆಗಳು-ರಾಕ್ಷಸರು ಸೇರಿ ಅದನ್ನು ರಕ್ಷಣೆ ಮಾಡುತ್ತಾರೆ.” ಗರುಡನು ಹೇಳಿದನು- “ ನಾನು ಅಮೃತವನ್ನು ತರಲೇ ಬೇಕಾಗಿದೆ. ಅದಕ್ಕೇನು ಉಪಾಯ?” ಅದಕ್ಕೆ ಕಶ್ಯಪರು “ ಉಪಾಯವೇನೋ ಇದೆ. ಆದರೆ ತುಂಬ ಕಷ್ಟದಾಯಕವಾದದ್ದು. ಅಗ್ನಿಗೆ ತುಪ್ಪವನ್ನು ಕೊಟ್ಟು ತೃಪ್ತಗೊಳಿಸಿದರೆ ಅಮೃತವನ್ನು ತರಬಹುದು. ಅಮೃತವು ದೊರೆತ ಮೇಲೆಯೂ ಅನೇಕ ಉಪದ್ರವಗಳು ಎದುರಾಗುವವು.” ಎಂದನು. ಕಶ್ಯಪನ ಮಾತನ್ನ ಕೇಳಿ ಗರುಡನು ಹೊರಟೇಬಿಟ್ಟನು. ತನ್ನ ರೆಕ್ಕೆಗಳಲ್ಲಿ ಒಯ್ದಿದ್ದ ತುಪ್ಪ ಹಾಗೂ ಜೇನುಗಳನ್ನು ಸುರಿದು ಅಗ್ನಿಯನ್ನು ಸಂತೃಪ್ತಗೊಳಿಸಿದನು. ಅಗ್ನಿಯು ಸಂತೃಪ್ತನಾಗಿ ಅಮೃತದ ಕೊಳಕ್ಕೆ ಪ್ರವೇಶಿಸಲು ಬಿಟ್ಟನು. ಗರುಡನು ಅಮೃತವನ್ನು ತೆಗೆದುಕೊಂಡನು. ಆಗ ದೇವತೆಗಳು ಕೂಗಿದರು. ಈ ಪಕ್ಷಿಯು ಅಮೃತದ ಕೊಳದಿಂದ ಅಮೃತವನ್ನು ಕದ್ದಿದೆ. ಈ ಮಾತನ್ನು ಕೇಳಿ ಸುರಾಸುರರೆಲ್ಲ ಸಿಟ್ಟಿಗೆದ್ದರು. ಗರುಡನ ಜೊತೆ ಯುದ್ದಕ್ಕೆ ಇಳಿದರು. ಮುದ್ಗರ, ಭುಶುಂಡಿ, ಪಟ್ಟಿಶ, 164 ಕಥಾ ಸಂಸ್ಕೃತಿ ಭಂಡಿಪಾಲ, ಹಲ, ಮುಸಲ, ಶೂಲ ಮುಂತಾದ ಆಯುಧಗಳನ್ನು ಗರುಡನತ್ತ ಎಸೆದರು. ಅವರ ಕೋಲಾಹಲದಿಂದ ಆಕಾಶವು ತುಂಬಿತು. “ಬಡಿ, ಕತ್ತರಿಸು, ಹಿಡಿ, ರಸಾತಲಕ್ಕೆ ಹೋದರೂ ಅವನನ್ನು ಬಿಡಬೇಡಿ. . . . .” ಹೀಗೆ ಕೂಗುತ್ತ ನೂರಾರು-ಸಾವಿರಾರು ದೇವತೆಗಳು-ರಾಕ್ಷಸರು ಗರುಡನನ್ನು ಸುತ್ತುವರಿದರು-“ ಏಯ್,. . . . . ಅಮೃತವನ್ನು ಕದ್ದೊಯ್ಯುವವನೇ, ಈಗ ನೀನು ಸಾಯ್ತೀಯಾ. ........!!” ಒಂದು ಕಡೆ ಇಡಿಯ ದೇವಲೋಕ, ಇನ್ನೊಂದು ಕಡೆ ಏಕಾಕಿ ಪಕ್ಷಿ. ಆದರೂ ಗರುಡನು ಅಂಜುಕುಳಿಗಳು ಭಯದಿಂದ ನಡುಗುವಂತೆ ಯುದ್ಧ ಮಾಡಿದನು. ತನ್ನ ರೆಕ್ಕೆಯಿಂದ ಪ್ರಹಾರ ಮಾಡಿ ನೂರು, ಸಾವಿರ, ಲಕ್ಷ, ಕೋಟಿ ದೇವತೆಗಳನ್ನು ಕೊಂದನು. ಗರುಡ ಹಾಗೂ ದೇವತೆಗಳ ಯುದ್ಧದಿಂದ ಮೂರು ಲೋಕವೂ ವಿಸ್ಮಿತವಾಯಿತು. ಗರುಡನ ಎದುರು ದೇವತೆಗಳು ಸೋತು ಯುದ್ಧವನ್ನು ತ್ಯಜಿಸಿ ನಡೆದರು. ಇದನ್ನು ನೋಡಿ ಇಂದ್ರನು ಪ್ರಳಯಾಗ್ನಿಯಂತೆ ಗರುಡನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು. ಆ ವಜ್ರವು ಕಠಿಣ ಶಿಲೆಯಂತಹ ಗರುಡ ಶರೀರಕ್ಕೆ ತಾಗಿ ಒಡೆದುಹೋಯಿತು. ಆಗ ಇಂದ್ರನು ಗಾಬರಿಯಾಗಿ ವಿಷ್ಣುವನ್ನು ಕರೆದನು. ವಾಸ್ತವವಾಗಿ ಇಂದ್ರನ ವಜ್ರದಿಂದ ದೇಹಕ್ಕೆ ಆಘಾತವಾಗಿದೆಯೆಂದು ದೇವಾಸುರರಿಗೆ ಭರವಸೆ ಹುಟ್ಟಿಸಲು ಗರುಡನು ತನ್ನ ಚಂಚುವಿನಿಂದ ತನ್ನ ಒಂದು ರೆಕ್ಕೆಯನ್ನು ಕಿತ್ತು ತೋರಿಸಿದನು. ಆಗ ವಿಷ್ಣವು ಕ್ರೋಧದಿಂದ ಉರಿಯುತ್ತ ಚಕ್ರವನ್ನು ಹಿಡಿದು ಗರುಡನನ್ನು ಹಿಂಬಾಲಿಸಿದನು. ಋಷಿ ಸಮೂಹವು ಭಯದಿಂದ ವ್ಯಾಕುಲವಾಗಿ ದಿಗಿಲುಗೊಂಡು “ಇದೇನಾಯಿತು” ಏನಿದು?” ಎನ್ನುತ್ತ ಅವರನ್ನು ತಡೆಯುತ್ತ ಹೇಳತೊಡಗಿದರು. . . .” ನೀವು ಸುರಾಸುರ ಲೋಕಕ್ಕೆ ಪ್ರಭುವಾಗಿದ್ದೀರಿ. ನೀವು ನಿಮ್ಮ ಬಂಧುವಿನ ಮೇಲೆಯೇ ಸಿಟ್ಟಾಗಿದ್ದೀರಿ. ಗರುಡ ತಮ್ಮ ಸಹಚರ. ದಾವಾನಲಕ್ಕೆ ಸಮಾನವಾದ ನಿಮ್ಮ ಕ್ರೋಧವನ್ನು ತಡೆಯಿರಿ. ಮೂಢನಂತೆ ನಿಮ್ಮ ಸೋದರನ ದೇಹಕ್ಕೆ ಹೊಡೆಯಬೇಡಿ” ಋಷಿಜನರ ಮಾತುಗಳನ್ನು ಕೇಳಿದ ವಿಷ್ಣುವು ಯೋಚಿಸಿದನು. ‘ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು ನನ್ನ ಬಂಧುವನ್ನೇ ನಾನು ಕೊಂದುಬಿಡುತ್ತಿದ್ದೆ. ಜ್ಞಾನಿಯೂ ಶಾಸ್ತ್ರಾರ್ಥಗಳನ್ನು ತಿಳಿದವನೂ ಕೂಡ ಕ್ರೋಧಾಗ್ನಿಯ ಬಲೆಗೆ ಬಿದ್ದು ಕಾರ್ಯ-ಅಕಾರ್ಯಗಳನ್ನು ಲೆಕ್ಕಿಸುವುದಿಲ್ಲ.’ ಅನಂತರ ವಿಷ್ಣು ಮತ್ತು ಗರುಡನ ನಡುವೆ ಸಂಧಿಯಾಯಿತು. ಗರುಡನಿಗೆ ಅಮೃತವನ್ನು ನೀಡಲಾಯಿತು. ಹಾಗೂ ಅದರಿಂದ ವಿನತೆಯ ದಾಸ್ಯದಿಂದ ಬಿಡುಗಡೆಯಾಯಿತು. ಗರುಡನು ಆನೆ, ಆಮೆ, ವಟವೃಕ್ಷಗಳನ್ನೇ ಎತ್ತಿಕೊಂಡಿರುವಾಗ ನೀನು ಒಂದು ಚೀಲವನ್ನು ಎತ್ತಿಕೊಳ್ಳುವುದು ಸ್ವಾಭಾವಿಕ. ಕೃಷ್ಣನು ಗೋವರ್ಧನ ಪರ್ವತವನ್ನು ಒಂದುವಾರಕಾಲ ಎತ್ತಿಹಿಡಿದಿದ್ದ. ಅಂದಮೇಲೆ ನೀನು ಎಣ್ಣೆ ತುಂಬಿದ ಚೀಲವನ್ನು ಎತ್ತಿಕೊಳ್ಳಲಾರೆಯೇನು? ವಾನರರು ಸೇತುವೆ ಕಟ್ಟುವಾಗ ಅನೇಕ ಭಾರತ 165 ಯೋಜನ ಉದ್ದವಾದ ಕಲ್ಲುಗಳನ್ನು ಎತ್ತಿ ಎತ್ತಿ ಸಮುದ್ರಕ್ಕೆ ಎಸೆದಿದ್ದರಂತೆ. ಅಂದಮೇಲೆ ನಿನ್ನ ಮಗನು ಒಂದು ಭಾರೀ ಮರವನ್ನು ಕಿತ್ತಿದ್ದರಲ್ಲಿ ಆಶ್ಚರ್ಯವೇನಿದೆ? (7- 10) ಈಗ ಸೋಲನ್ನು ಒಪ್ಪಿಕೊಂಡ ಶಶನು ಧೂರ್ತಳಾದ ಖಂಡಪಾನಳಿಗೆ ಹೇಳಿದನು.- “ಈಗ ನಿನ್ನ ಅನುಭವಗಳನ್ನು ಹೇಳು” ಖಂಡಪಾನಳ ಕತೆ ಮಹಾ ಮಾಯಾವಿನಿಯೂ, ಆ ನಾಲ್ವರು ಧೂರ್ತರಿಗಿಂತ ಬುದ್ಧಿಯಲ್ಲಿ ಮೇಲಾದವಳೂ ಆದ ಖಂಡಪಾನಳು ನಗುತ್ತ, ಅವರ ಮಾತುಗಳಿಗೆ ಸರಿಸಮವಾಗಿ ಹೇಳಿದಳು. . .” ನೀವುಗಳು ನಿಮ್ಮ ತಲೆಯ ಮೇಲೆ ಎರಡೂ ಕೈಗಳನ್ನು ಜೋಡಿಸಿ ನನ್ನ ಬಳಿ ಕುಳಿತುಕೊಂಡರೆ ನಾನು ಎಲ್ಲರಿಗೂ ಆಹಾರವನ್ನು ಕೊಡುತ್ತೇನೆ.” ಆ ಧೂರ್ತರು ಹೇಳಿದರು. . . . ಇಡೀ ಜಗತ್ತನ್ನೇ ನಮ್ಮ ಮುಂದೆ ಯಃಕಶ್ಚಿತ್‍ವಾಗಿ ನಾವು ಭಾವಿಸುತ್ತೇವೆ. ನಿನ್ನೆದುರು ದೀನವಾಗಿ ನಾವು ಹೇಗೆ ಕುಳಿತುಕೊಳ್ಳಬಲ್ಲೆವು? ಸ್ವಾಭಿಮಾನಿಗಳಾದ ಜನರು ಸಾವನ್ನಾದರೂ ಸ್ವೀಕರಿಸಿಯಾರು, ಆದರೆ ಅಪಮಾನವನ್ನೆಂದೂ ಸಹಿಸರು. ಆಗ ನಕ್ಕು ಖಂಡಪಾನಾ ಹೇಳಿದಳು “ ಹಾಗಾದರೆ ನಾನು ಖುದ್ದಾಗಿ ಅನುಭವಿಸಿದ ಸತ್ಯವಾದ ಕತೆಯನ್ನು ಕೇಳಿ. ನನ್ನ ತಾರುಣ್ಯಾವಸ್ಥೆಯಲ್ಲಿ ನಾನು ಯೌವನ- ರೂಪ- ಲಾವಣ್ಯಗಳ ಗಣಿಯಾಗಿದ್ದೆನು. ಅದ್ವಿತೀಯ ಸೌಂದರ್ಯವತಿಯಾಗಿದ್ದೆನು. ಜನರ ಕಣ್ಣುಗಳಿಗೆ ನಾನೊಂದು ಹಬ್ಬವಾಗಿದ್ದೆ. ಒಂದುದಿನ ನಾನು ಮನೆಯ ಉಪ್ಪರಿಗೆಯ ಮೇಲೆ ಸುಖವಾಗಿ ಮಲಗಿದ್ದೆ. ನನ್ನ ರೂಪ-ಗುಣದ ಕಾರಣದಿಂದ ಉನ್ಮತ್ತನಾದ ವಾಯುವು ನನ್ನನ್ನು ಉಪಭೋಗಿಸಿದನು. ಅದರಿಂದ ನನಗೊಬ್ಬ ಮಗನು ಉಂಟಾದನು. ಹುಟ್ಟುತ್ತಿದ್ದಂತೆಯೇ ಅವನು ನೋಡುತ್ತಿದ್ದಂತೆಯೇ ಮಾಯವಾಗಿ ಬಿಟ್ಟನು. ಈಗ ಹೇಳಿ, ವಾಯುವಿನಿಂದ ಪುತ್ರನು ಉತ್ಪನ್ನವಾಗುವುದು ನಿಜವೇ!? ಒಮ್ಮೆ ನಿಜವೇ ಆಗಿದ್ದರೆ ಜಗತ್ತಿನಲ್ಲಿ ಯಾರೂ ನಿಪುತ್ರಿಕರಾಗುತ್ತಿರಲಿಲ್ಲ. ಮೂಲದೇವ ಮುಂತಾದ ಧೂರ್ತರಿಂದ ಖಂಡಪಾನಾಳ ಕತೆಯ ಸಮರ್ಥನೆ. ಮೂಲದೇವ ಹೇಳಿದನು- “ವಾಯುವಿನ ಸಂಯೋಗದಿಂದಲೇ ಕುಂತಿಯು ಭೀಮನನ್ನು ನೀಲಾಳು ಹನುಮಂತನನ್ನು ಪಡೆದರೆಂಬುದು ಲೋಕದಲ್ಲಿ ಜನಜನಿತವಾಗಿದೆ. ಪರಾಶರನ ಸಂಯೋಗದಿಂದ ಮತ್ಸ್ಯಕನ್ಯೆ (ಸತ್ಯವತಿ)ಗೆ ಜನಿಸಿದ 166 ಕಥಾ ಸಂಸ್ಕೃತಿ ವ್ಯಾಸನೆಂಬ ಮಗನು ತನ್ನ ತಾಯಿಗೆ ಅವಶ್ಯಕತೆ ಬಿದ್ದಾಗ ನನ್ನನ್ನು ಸ್ಮರಿಸಿಕೋ” ಎಂದು ಎಲ್ಲಿಯೋ ಹೊರಟು ಹೋಗಿದ್ದನು. ಋಷಿಯ ಪ್ರಭಾವದಿಂದ ಯೋಜನಗಂಧಿಯು ಪುನಃ ಅಕ್ಷತಯೋನಿಯೆನಿಸಿದ್ದಳು. ಮತ್ತು ಶಂತನುವಿನ ಮೂಲಕ ಅವಳು ವಿಚಿತ್ರವೀರ್ಯನಿಗೆ ಜನ್ಮವಿತ್ತಳು. ಅವನಿಗೆ ಪುತ್ರರಿಲ್ಲದಾದಾಗ ಯೋಜನಗಂಧಿಯು ವ್ಯಾಸನನ್ನು ಸ್ಮರಿಸಿದಳು, ಕ್ಷಣಾರ್ಧದಲ್ಲಿ ವ್ಯಾಸನು ತಾಯಿಯು ಬಳಿ ಬಂದನು. ತಾಯಿ ಅವನಿಗೆ ಹೇಳಿದಳು. “ಮಗನೇ, ಈ ವಂಶವು ಸಂತಾನವಿಹೀನವಾಗಿ ಮುಳುಗಲಿಕ್ಕಿದೆ. ಆದ್ದರಿಂದ ಈ ಕುಲಕ್ಕೆ ಸಂತಾನವನ್ನು ಕರುಣಿಸು.” ವ್ಯಾಸನು ವಂಶವನ್ನು ಉದ್ಧರಿಸಿದನು. ಅವನಿಂದ ಪಾಂಡು ಮಹಾರಾಜ, ಧೃತರಾಷ್ಟ್ರರಲ್ಲದೇ ಮಹಾವಿವೇಕಿಯಾದ ವಿದುರನು ಜನಿಸಿದರು. ಭೀಮಸೇನ ಹಾಗೂ ಹನುಮಂತರು ವಾಯುಸುತರಾದರೆ, ಜನ್ಮಿಸುತ್ತಲೇ ವ್ಯಾಸರು ತಾಯಿಯನ್ನು ತ್ಯಜಿಸಿ ಹೊರಟು ಹೋಗಿದ್ದರೆ, ನೀನು ಹೇಳುವ ಮಾತುಗಳೆಲ್ಲವೂ ಸತ್ಯವೇ ಹೌದು. (11-19) ಆಗ ಖಂಡಪಾನಳು ಹೇಳಿದಳು. . . “ ನಿಮಗೆ ನನ್ನ ಕುಲ ಗೋತ್ರಗಳೇನಾದರೂ ಗೊತ್ತೆ?” ಮೂಲದೇವನು ಹೇಳಿದನು. “ನೀನು ಪಾಟಲಿಪುತ್ರ ನಗರದಲ್ಲಿ ನಾಗಶರ್ಮನೆಂಬ ಬ್ರಾಹ್ಮಣನ ಮನೆಯಲ್ಲಿ ಸೋಮಶ್ರೀಯ ಮಗಳಾಗಿದ್ದವಳು. ನಿನ್ನದು ಗೌತಮ ಗೋತ್ರ” ಖಂಡಪಾನಳು ಹೇಳಿದಳು. “ಅಲ್ಲ, ಅವಳು ನಾನಲ್ಲ. ಅವಳ ಹಾಗೆಯೇ ಕಾಣಿಸುವುದರಿಂದ ನಿನಗೆ ಭ್ರಮೆಯಾಗಿದೆ. ನಾನು ಒಬ್ಬ ರಾಜನ ಅಗಸಗಿತ್ತಿ. ನಮ್ಮ ಮನೆಯು ಧನ ಧಾನ್ಯಗಳಿಂದ ಸಮೃದ್ಧವಾಗಿ ರಾಜರಂತೆಯೇ ಇದೆ. ನನ್ನ ಹೆಸರು ದಗ್ಧಿಕಾ. ನಾನು ರಾಜರ ಅನುಯಾಯಿಗಳು ಹಾಗು ಅಂತಃಪುರದ ರಾಣಿಯರ ಬಟ್ಟೆಗಳನ್ನು ಸಾವಿರಾರು ಗಾಡಿಗಳ ಮೇಲೆ ಹೇರಿಕೊಂಡು ಹೋಗಿ ಸಾವಿರಾರು ಜನರಿಂದ ಬಟ್ಟೆಯನ್ನು ತೊಳೆಸುತ್ತಿದ್ದೆ. ಒಮ್ಮೆ ನಾನು ಅನೇಕ ಪ್ರಕಾರದ ಬಟ್ಟೆಗಳನ್ನು ಗಾಡಿಯಲ್ಲಿ ತುಂಬಿಕೊಂಡು ಸಾವಿರಾರು ಗಂಡಸರೊಂದಿಗೆ ಪ್ರವಾಹದಿಂದ ತುಂಬಿದನದಿಯ ದಡಕ್ಕೆ ಹೋದೆ. ಛಡ್.......ಛಡ್....... ಶೀಶೀ ಎಂದು ಸದ್ದು ಮಾಡುತ್ತ ಅವರು ಬಟ್ಟೆಯನ್ನು ಒಗೆಯುತ್ತ ಚಂದ್ರನಷ್ಟು ಬಿಳುಪಾಗಿಸುತ್ತಿದ್ದರು. ಅದೇ ವೇಳೆಗೆ ಭಾರೀ ಬಿರುಗಾಳಿ ಉಂಟಾಯಿತು. ಆ ಗಾಳಿಯು ಎಲ್ಲ ಬಟ್ಟೆಗಳನ್ನು ಹಾರಿಸಿಕೊಂಡು ಹೋಯಿತು. ನೀವೆಲ್ಲ ಮನೆಗೆ ಹೋಗಿರಿ ಎಂದು ನಾನು ಕೆಲಸಗಾರರಿಗೆ ಹೇಳಿದೆ. ಏನೇ ತಪ್ಪಿದ್ದರೂ ಅದಕ್ಕೆ ನಾನು ಜವಾಬ್ದಾರಳಾಗಿದ್ದೆ. ಇದರಿಂದಾಗಿ ರಾಜನಿಗೆ ಹೆದರಿ ನಾನು ಉಡದ ರೂಪಧರಿಸಿ ರಾತ್ರಿಯಲ್ಲಿ ನಗರದ ಉದ್ಯಾನದಲ್ಲಿ ನಿಶ್ಚಿಂತೆಯಿಂದ ನಾಲ್ಕೂ ಕಡೆ ಅಲೆಯುತ್ತಿದ್ದೆ. ಆದರೆ ಉಡದ ಚರ್ಮ ಮತ್ತು ಮಾಂಸಕ್ಕಾಗಿ ಜನರು ಕಾಯುತ್ತಿರುತ್ತಾರೆ. ಭಾರತ 167 ಅವರಿಂದ ತಪ್ಪಿಸಿಕೊಳ್ಳುವ ಉಪಾಯ ಯಾವುದು ಎಂದು ನಾನು ಆ ರಾತ್ರಿ ತುಸು ಚಿಂತಿತಳಾದೆ. ಬಹಳ ಯೋಚನೆ ಮಾಡಿದ ಅನಂತರ ಉಡದ ರೂಪವನ್ನು ತ್ಯಜಿಸಿ, ಒಂದು ಕೆಂಪು ಅಶೋಕ ಮರದ ಬಳಿಯಲ್ಲಿ ಮಾವಿನ ಚಿಗುರಾಗಿ ಅಡಗಿಬಿಟ್ಟೆ. ಸೆರಗು ಮುಚ್ಚಿಕೊಂಡು ರಾತ್ರಿಕಳೆಯುವ ಶೀಲಗೆಟ್ಟ ಹೆಣ್ಣಿನಂತೆ ಮುಖಮರೆಸಿಕೊಂಡು ರಾತ್ರಿಯನ್ನು ಕಳೆದೆ. ಕಮಲವನ್ನು ಅರಳಿಸುವ ಸೂರ್ಯನು ಉದಯಿಸಿದನು. ಮಳೆಗಾಲದ ಗುಡುಗು-ಸಿಡಿಲಿನ ಅಬ್ಬರದಂತೆ ನಗರದ ನಗಾರಿಯ ಸದ್ದು ಮೊಳಗಿತು. ಅದನ್ನು ಕೇಳಿ ನಾನು ಪುನ: ರೂಪ-ಲಾವಣ್ಯ-ಗುಣಯುಕ್ತಳಾದ ಹೆಣ್ಣಾಗಿ ಬದಲಾದೆ. ಈ ಮಧ್ಯೆ ನಮ್ಮ ಸಾವಿರಾರು ಹಗ್ಗಗಳನ್ನು ನರಿಗಳು ಜಗಿದು ಹಾಕಿದ್ದವು. ಹಗ್ಗವನ್ನು ಹುಡುಕಲು ನನ್ನ ತಂದೆಯು ಹೊರಟಾಗ ಅವನಿಗೆ ಒಂದು ಇಲಿಯ ಬಾಲ ಕಾಣಿಸಿತು. ಅದರಿಂದ ಅವನು ಎಲ್ಲಗಾಡಿಗಳ ಹಗ್ಗಗಳನ್ನಾಗಿ ಕಟ್ಟಿದನು. ಈಗ ಹೇಳಿ........ ಇದು ನಿಜವೇ? ಶಶನು ಹೇಳಿದನು. “ಬ್ರಹ್ಮ ಮತ್ತು ವಿಷ್ಣುಗಳಿಬ್ಬರೂ ಶಿವಲಿಂಗದ ಕೊನೆ ಮೊದಲನ್ನು ಕಾಣಲು ಸಾಧ್ಯವಾಗದ ಮೇಲೆ ನಿನ್ನ ಮಾತು ಸುಳ್ಳಾಗುವುದು ಹೇಗೆ? ರಾಮಾಯಣದಲ್ಲಿ ನಾವು ಕೇಳಿದಂತೆ ಹನುಮಂತನಿಗೆ ಬಹುದೀರ್ಘವಾದ ಬಾಲವಿತ್ತು. ಅದನ್ನು ಬೆಳೆಸಲು ಸಾವಿರಾರು ವರ್ಷ ಎಣ್ಣೆಯ ಕೊಳದಲ್ಲಿ ಮೀಯಿಸಲಾಗಿತ್ತು. ದೇವಲೋಕ ಸದೃಶವಾದ ಲಂಕಾನಗರಿಯನ್ನು ಹನುಮಂತನು ಅದೇ ಬಾಲದಿಂದ ಸುಟ್ಟು ಹಾಕಿದ್ದನು. ಹನುಮಂತನಿಗೆ ಅಷ್ಟೊಂದು ದೊಡ್ಡಬಾಲವಿರುವುದು ನಿಜವಾಗಿದ್ದರೆ, ಇಲಿಯ ಬಾಲವೂ ಅಷ್ಟುದ್ದ ಯಾಕಿರಲಾರದು? ಪುರಾಣ ಹಾಗೂ ಶೃತಿಯಲ್ಲಿ ಈ ಒಂದು ಮಾತನ್ನು ಕೇಳು....” ದೇವತೆಗಳ ಅಧಿಪತಿಯಾದ ಇಂದ್ರನನ್ನು ಯುದ್ಧದಲ್ಲಿ ಸೋಲಿಸಿದ ಒಬ್ಬ ಮಹಾನ್ ಬಲ-ಪರಾಕ್ರಮಶಾಲಿಯಾದ ರಾಜನು ಕುರುವಂಶದಲ್ಲಿ ಆಗಿದ್ದನು. ಅವನು ಋಷಿಗಳನ್ನು ಅಪಮಾನ ಮಾಡಿದನು. ದೇವತೆಗಳ ಗುರುವಾದ ಬೃಹಸ್ಪತಿಯು ಅವನಿಗೆ ಶಾಪವನ್ನು ಕೊಟ್ಟನು. ಅವನು ಅಡವಿಯಲ್ಲಿ ಹೆಬ್ಬಾವು ಆದನು. ರಾಜ್ಯವನ್ನು ಕಳೆದುಕೊಂಡ ಪಾಂಡವರು ಅಡವಿಯಲ್ಲಿ ಇರುತ್ತಿದ್ದಾಗ, ಆ ಹೆಬ್ಬಾವು ಭೀಮನನ್ನು ನುಂಗಿಬಿಟ್ಟಿತು. ಧರ್ಮರಾಜನಿಗೆ ಈ ಸಂಗತಿ ತಿಳಿದು ಅವನು ಆ ಹೆಬ್ಬಾವಿನ ಬಳಿ ಬಂದನು. ಅವನ ಕೋರಿಕೆಯಂತೆ ಅದು ಭೀಮನನ್ನು ಉಗುಳಿತು. ಹಾಗೆಯೇ ಆ ಅಜಗರದ ಶಾಪವೂ ಅಂತ್ಯವಾಯಿತು. ಇದು ನಿಜವಾದರೆ ನೀನು ಉಡ ಆಗಿದ್ದು, ಮಾವಿನ ಚಿಗುರಾಗಿದ್ದು, ಅನಂತರ ಹೆಣ್ಣಾದದ್ದು ಸತ್ಯವಾಗಲೇಬೇಕು.” ಖಂಡಪಾನಳು........ ಹೇಳಿದಳು. . . ``ಎಲೈ ಧೂರ್ತರೇ, ಈಗಲೂ ನನ್ನ ಮಾತಿಗೆ ಒಪ್ಪಿದರೆ ನಿಮಗೆ ಅನ್ನವನ್ನು ನಾನು ಕೊಡುವೆ. ನೀವೆಲ್ಲರೂ ಸೇರಿ ನನ್ನೊಬ್ಬಳಿಂದ ಪರಾಜಿತರಾದರೆ ನಿಮಗೆ ಈ ಜಗತ್ತಿನಲ್ಲಿ ಒಂದು ಕವಡೆಯ 168 ಕಥಾ ಸಂಸ್ಕೃತಿ ಬೆಲೆಯೂ ಸಿಗುವುದಿಲ್ಲ” ಧೂರ್ತರು ಹೇಳಿದರು “ನಮ್ಮನ್ನ ಯಾರು ಗೆಲ್ಲಬಲ್ಲರು? ಬೇಕಾದರೆ ಮಾಯಾವಿಯಾದ ಇಂದ್ರನೋ, ವಿಷ್ಣುವೋ ಬಂದರೂ ಅಷ್ಟೇ” ಇದರಿಂದ ಅಸಂತುಷ್ಟಳಾದ ಖಂಡಪಾನಳು ಹೇಳಿದಳು “ಈಗ ನಾನು ನಿಮ್ಮನ್ನು ಸೋಲಿಸುತ್ತೇನೆ. ರಾಜನ ಆ ಬಟ್ಟೆಗಳೆಲ್ಲ ಮಾಯವಾದ ಮೇಲೆ ಅವನ್ನು ಹುಡಕಲು ನಾನು ಗ್ರಾಮ, ನಗರ, ಪುರಗಳನ್ನೆಲ್ಲ ಅಲೆದೆ. ಅದೇ ಸಮಯದಲ್ಲಿ ನನ್ನ ನಾಲ್ವರು ಸೇವಕರೂ ಮಾಯವಾಗಿದ್ದರು. ಆ ನನ್ನ ಸೇವಕರನ್ನು ಹುಡುಕಿಕೊಂಡೇ ನಾನು ಇಲ್ಲಿಗೆ ಬಂದದ್ದು. ಆ ನನ್ನ ನಾಲ್ವರು ಸೇವಕರು ನೀವೇ ಆಗಿದ್ದೀರಿ. ಮತ್ತು ನೀವೇ ಆ ಬಟ್ಟೆಗಳನ್ನು ಕದ್ದಿದ್ದೀರಿ. ಇದನ್ನು ಯಾರಾದರೂ ನಂಬದಿದ್ದರೆ ಅವರು ಎಲ್ಲರಿಗೂ ಆಹಾರವನ್ನು ಕೊಡಲಿ.” ಆಗ ನಾಚಿಕೆಪಟ್ಟುಕೊಂಡ ಧೂರ್ತರು ಹೇಳಿದರು ನೀನು ನಮ್ಮನ್ನೆಲ್ಲ ಸೋಲಿಸಿದೆ. ನೀನು ನಿನ್ನ ಬುದ್ಧಿಯಿಂದ ನಮಗಿಂತ ಶ್ರೇಷ್ಠಳಾಗಿರುವೆ. ಹಾಗಾಗಿ ನೀನೆ ನಮಗೆಲ್ಲ ಅನ್ನವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇವೆ. (71-81) ‘ಆಗಲಿ’ ಎಂದು ಹೇಳಿದ ಖಂಡಪಾನಳು ನರಿಗಳು, ಡಾಕಿನಿಯರು, ಪ್ರೇತ ಪಿಶಾಚಿಗಳು ತುಂಬಿದ ಸ್ಮಶಾನಕ್ಕೆ ನಡೆದಳು. ಅಲ್ಲಿ ಬೇತಾಳಗಳು ಕುಣಿಯುತ್ತಿದ್ದು ಅವುಗಳ ಭಯಾನಕ ಅಟ್ಟಹಾಸ ಮೊಳಗುತ್ತಿತ್ತು. ಭಯಂಕರ ದುರ್ಗಂಧದಿಂದ ಕೂಡಿದ ಗಾಳಿ ಅಲ್ಲಿ ಬೀಸುತ್ತಿತ್ತು. ಇಂಥ ಆ ಸ್ಮಶಾನದಲ್ಲಿ ಅದೇ ತಾನೇ ಮರಣ ಹೊಂದಿದ ಒಂದು ಮಗುವನ್ನು ಹುಡುಕಿ ತೆಗೆದಳು. ಆ ಮಗುವಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಿಕೊಂಡು ಉಜ್ಜಯಿನಿ ನಗರವನ್ನು ಹೊಕ್ಕಳು. ಅಲ್ಲಿಯ ಸಂಪದ್ಭರಿತ ಶ್ರೇಷ್ಠಿಯೊಬ್ಬನ ಮನೆಯನ್ನು ತಲುಪಿದಳು. ಶ್ರೇಷ್ಠಿಯನ್ನು ಅನೇಕ ಜನರು ಸುತ್ತುವರಿದಿದ್ದರು. ಅವಳು ಅವನಿಗೆ ಹೇಳಿದಳು. ``ನಾನು ಬ್ರಾಹ್ಮಣನ ಮಗಳು. ಈಗ ಸಂಕಟದಲ್ಲಿ ಸಿಲುಕಿದ್ದೇನೆ. ಕೆಲದಿನಗಳ ಹಿಂದೆ ನನಗೆ ಈ ಮಗುವಾಗಿದೆ. ನನಗೆ ಯಾರೂ ಬಂಧು ಬಾಂಧವರಿಲ್ಲ. ನಾನು ಅಸಹಾಯಕಳು. ನನ್ನ ಪತಿಯು ಪರದೇಶಕ್ಕೆ ಹೋಗಿದ್ದಾನೆ. ನೀನು ತುಂಬ ಪ್ರಭಾವಶಾಲಿ. ನನ್ನ ಮಾವನ ಮನೆಯ ಹಣವನ್ನು ನನಗೆ ಕೊಡು.......” ಶ್ರೇಷ್ಠಿಯ ಮನಸ್ಸು ಕೆಲಸದ ಒತ್ತಡದಲ್ಲಿ ಸಿಲುಕಿತ್ತು. ಮತ್ತೆ ಮತ್ತೆ ಅವಳು ಅದೇ ಮಾತುಗಳನ್ನು ಪುನರುಚ್ಚರಿಸತೊಡಗಿದಾಗ ಅವನು ತನ್ನ ಸೇವಕರಿಗೆ “ಇವಳನ್ನು ಈಗಿಂದೀಗಲೆ ಹೊರಗೆ ತಳ್ಳಿರಿ” ಎಂದು ಹೇಳಿದನು. ಅವಳಿಗೆ ಹೊರಹೋಗುವಂತೆ ಸೇವಕರು ತಿಳಿಸಿದಾಗ, ಅವಳು ಹೇಳಿದಳು...... “ಹಾಗಾದರೆ ನಾನು ಬೇರೆ ಸ್ಥಳವನ್ನು ಹುಡುಕಿಕೊಳ್ಳುವವರೆಗೆ ಈ ನನ್ನ ಮಗುವನ್ನು ಇಲ್ಲಿಯೇ ಬಿಟ್ಟಿರುತ್ತೇನೆ,” ಅವಳು ಹೊರಗೆ ಹೊರಡಲು ಸಿದ್ಧವಾಗದಿರುವಾಗ, ಆ ಸೇವಕರು ಅವಳನ್ನು ತಳ್ಳಿದರು. ಅವಳು ನೆಲದಮೇಲೆ ಬಿದ್ದು ಚೀರಾಡತೊಡಗಿದಳು...... “ಅಯ್ಯೋ, ನನ್ನ ಮಗುವನ್ನು ಭಾರತ 169 ಕೊಂದುಬಿಟ್ಟರು. ಇವನು ನಾಳೆ ದೊಡ್ಡವನಾದ ಮೇಲೆ ನನ್ನನ್ನು ಪಾಲನೆ- ಪೋಷಣೆ ಮಾಡುತ್ತಾನೆ ಎಂದು ನಾನು ಬಗೆದಿದ್ದೆ. ಈ ಕಟುಕರು ನನ್ನ ಮನದ ಆಸೆಯನ್ನು ನಾಶ ಮಾಡಿದರು. ಎಲೈ ಜನರೇ, ನೋಡಿರಿ. ಸಂಪತ್ತಿನ ಮದದಿಂದ ಸೊಕ್ಕೇರಿದ ಈ ಶ್ರೇಷ್ಠಿಯು, ಯಾವತಪ್ಪನ್ನೂ ಮಾಡದ ನನ್ನ ಮಗನನ್ನು ಕೊಲ್ಲಿಸಿದನು” ಹೀಗೆಂದು ಅವಳು ತನ್ನ ತಲೆ ಹಾಗೂ ಎದೆಯನ್ನು ಕುಟ್ಟಿಕೊಳ್ಳುತ್ತ ಕೂಗತೊಡಗಿದಳು. ಇವಳ ಗದ್ದಲದಿಂದ ತನ್ನ ತಲೆಯೇ ಬಿರಿದಂತಾದ ಶ್ರೇಷ್ಠಿಯು ಖಂಡಪಾನಾಳನ್ನು ತನ್ನ ಪರಿಜನರೊಂದಿಗೆ ಸಮಾಧಾನ ಪಡಿಸತೊಡಗಿದನು “ಹೇ ಸುಂದರೀ, ದುಃಖಿಸಬೇಡ. ನಿನ್ನ ಮಗನ ಬದಲಿಗೆ ನಾನು ಈ ಉಂಗುರವನ್ನು ನಿನಗೆ ಕೊಡುವೆನು. ಇದನ್ನು ತೆಗೆದುಕೊಂಡು ಇಲ್ಲಿಂದ ಹೊರಟು ಹೋಗು” ಖಂಡಪಾನಳು ಆ ಉಂಗುರ ಹಾಗೂ ಮಗುವಿನ ಶವದೊಂದಿಗೆ ಹೊರಟಳು, ಸೇಠನೂ ದಾನಮಾಡಿ ಅಪರಾಧ ಮುಕ್ತನಾದನು. ಮೃತಶಿಶುವನ್ನು ಪುನಃ ಸ್ಮಶಾನದಲ್ಲಿ ಬಿಟ್ಟು ಖಂಡಪಾನಾಳು ಮುತ್ತು ರತ್ನ ಬಂಗಾರದ ಒಡವೆಗಳು ಮಾರಾಟವಾಗುವ ಪೇಟೆಯನ್ನು ತಲುಪಿದಳು. ಆ ಉಂಗುರವನ್ನು ಮಾರಿ ಅದರಿಂದ ಆ ಧೂರ್ತರಿಗೆ ಅನೇಕ ಪ್ರಕಾರದ ಖಾದ್ಯಗಳನ್ನೂ ಪೇಯಗಳನ್ನೂ ರುಚಿಕರವಾದ ಊಟವನ್ನೂ ತಂದಳು. ಊಟಮಾಡಿ ಸಂತುಷ್ಟರಾದ ಎಲ್ಲರೂ ಹೇಳಿದರು. “ನಿನ್ನ ಜೀವನವೇ ಸರಿಯಾದ ಜೀವನ. ನೀನು ನಿನ್ನ ಬುದ್ಧಿ ಬಲದಿಂದ ಎಲ್ಲ ಧೂರ್ತರನ್ನೂ ಗೆದ್ದೆ. ಎಲ್ಲರಿಗೂ ಹೊಟ್ಟೆತುಂಬ ಭೋಜನ ಪಾನೀಯಗಳನ್ನು ಕೊಟ್ಟು ತೃಪ್ತಗೊಳಿಸಿದೆ. ಸುಶಿಕ್ಷಿತ ಪುರುಷರೂ ಈ ರೀತಿ ಮಾತನಾಡಲು ತಿಳಿಯದಿರುವಾಗ ಅಶಿಕ್ಷಿತ ಮಹಿಳೆಯರು ಹಾಗೆ ಮಾತನಾಡಲೂ ಬಲ್ಲರು. ಮಹಿಳೆಯರು ತಮ್ಮ ಸಹಜ ಬುದ್ಧಿಯಬಲದಿಂದ ಎಲ್ಲವನ್ನೂ ತಿಳಿದಿರುತ್ತಾರಾದರೆ, ಶಾಸ್ತ್ರಗಳನ್ನು ಓದಿದರೂ ಪುರುಷರು ಅದರ ಅರ್ಥವನ್ನು ತಿಳಿಯಲಾರದವರಾಗಿದ್ದಾರೆ.” 170 ಕಥಾ ಸಂಸ್ಕೃತಿ ರೋಮಹರ್ಷಣ : ವ್ಯಾಸ ಗದ್ದುಗೆಯ ಮೇಲೆ ದಲಿತ - ಅಮರನಾಥ ಶುಕ್ಲ ರೋಮಹರ್ಷಣನು ಹುಟ್ಟಿದ್ದು ಸೂತಜಾತಿಯಲ್ಲಿ -ಬ್ರಾಹ್ಮಣಿ ತಾಯಿ ಹಾಗೂ ಕ್ಷತ್ರಿಯ ತಂದೆಯಿಂದ ಉತ್ಪನ್ನವಾದ ಸಂತಾನವನ್ನು ಸೂತ ಜಾತಿಯಲ್ಲಿ ಗಣಿಸಬೇಕೆಂದು ಶಾಸ್ತ್ರಗಳಲ್ಲಿ ಬರೆದಿದೆ. ರಥ ಸಾರಥ್ಯ ಹಾಗೂ ಕುದುರೆಗಳನ್ನು ಪಳಗಿಸುವುದು, ನಡೆಸುವುದು ಈ ಜಾತಿಯ ಮುಖ್ಯ ಕೆಲಸವಾಗಿತ್ತು. ಜಾತಿಯು ವಿಸ್ತರಿಸಿದಂತೆ, ಸಾರಥಿಯ ಕೆಲಸದಿಂದ ಇವರೆಲ್ಲರ ಜೀವನ ವ್ಯವಸ್ಥೆ ಆಗದಿರುವುದರಿಂದ ರಾಜನು ಸ್ತುತಿಪಾಠ ಹಾಗೂ ವಂಶ ಕೀರ್ತಿಸುವ ಕೆಲಸವನ್ನು (ಹೊಗಳು ಭಟ) ಇವರಿಗೆ ಕೊಟ್ಟನು. ಆದರೆ ವೇದ ವಿದ್ಯೆಯನ್ನು ಪಡೆಯುವ ಅಧಿಕಾರ ಇವರಿಗಿರಲಿಲ್ಲ. ಮಹರ್ಷಿ ವ್ಯಾಸರು ತುಂಬ ಉದಾರ ವಿಚಾರಗಳುಳ್ಳವರು. ರೋಮಹರ್ಷಣನ ಸ್ತುತಿಪಾಠ ಹಾಗೂ ಶಾಸ್ತ್ರ-ಪುರಾಣಗಳಲ್ಲಿನ ಆಸಕ್ತಿಯನ್ನು ನೋಡಿ ವ್ಯಾಸರು ರೋಮಹರ್ಷಣನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ರೋಮಹರ್ಷಣನು ಪುರಾಣವಿದ್ಯೆಗಳನ್ನು ಚನ್ನಾಗಿ ಪಾರಾಯಣ ಮಾಡಿದ್ದರಿಂದ ಅವರ ಪ್ರತಿಭೆಗೆ ಹೊಳಪು ಬಂದಿತು. ಜಾತಿಯಿಂದ ಅಂತ್ಯಜರಾದರೂ ವ್ಯಾಸರ ಕೃಪೆಯಿಂದ ಪುರಾಣ-ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿದ್ದಲ್ಲದೆ ಅನೇಕ ಗ್ರಂಥಗಳನ್ನು ರಚಿಸಿದರು. ರೋಮಹರ್ಷಣರನ್ನು ಪುರಾಣ-ಶಾಸ್ತ್ರ ವಿದ್ವಾಂಸರಲ್ಲಿ ಒಬ್ಬರೆಂದು ಗಣಿಸಲಾಯಿತು. ಒಂದು ಬಾರಿ ಅನೇಕ ಸಾವಿರ ಋಷಿಗಳು ಸೇರಿ ನೈಮಿಷಾರಣ್ಯದಲ್ಲಿ ಬಹುದೊಡ್ಡ ಯಜ್ಞಸತ್ರವನ್ನು ಮಾಡಿದರು. ಯಜ್ಞ-ಸತ್ರ ಒಂದು ಸಾವಿರ ದಿನಗಳದ್ದಾಗಿರುತ್ತದೆ. ಇದರಲ್ಲಿ ಅನೇಕ ಋತ್ವಿಕರು - ಹೋತಾರರು ಆಗಿರುತ್ತಾರೆ. ಯಜ್ಞದ ಮುಖ್ಯ ಯಜಮಾನ ಶೌನಕ ಋಷಿಗಳಾಗಿದ್ದರು. ಈ ರೀತಿಯ ಯಜ್ಞದಲ್ಲಿ ಆಹುತಿ ಹಾಗೂ ಮಂತ್ರಪಾಠದ ಕೆಲಸವು ಪ್ರತಿದಿನ ಸ್ವಲ್ಪ ಸಮಯದ್ದಾಗಿರುತ್ತದೆ. ಉಳಿದ ಸಮಯವೆಲ್ಲ ಹಾಗೆಯೇ ಇರುತ್ತದೆ. ಆದರೆ ಯಜ್ಞದಲ್ಲಿ ಭಾಗವಹಿಸಿದ ಋಷಿಗಳು ಯಜ್ಞಸ್ಥಳವನ್ನು ಬಿಟ್ಟು ಬೇರೆಲ್ಲಿಗೂ ಹೋಗುವಂತಿರಲಿಲ್ಲವಷ್ಟೇ ಅಲ್ಲ, ಯಾವುದೇ ಲೌಕಿಕ ಕೆಲಸವನ್ನೂ ಮಾಡುವಂತಿರಲಿಲ್ಲ, ಇದರಿಂದ ಸಮಯ ಕಳೆಯುವುದು ಕಷ್ಟವಾಗುತ್ತಿತ್ತು. ಭಾರತ 171 ಎಲ್ಲ ಋಷಿಗಳೂ ಸೇರಿಕೊಂಡು ಒಂದುದಿನ ಈ ಬಗ್ಗೆ ವಿಚಾರ ಮಾಡಿದರು. ಖಾಲಿ ಸಮಯವನ್ನು ಕಳೆಯುವ ಸಲುವಾಗಿ, ಭಗವಾನ್ ವೇದವ್ಯಾಸರ ಮೂಲಕ ಆವಿಷ್ಕೃತವಾದ ಪುರಾಣಗಳ ಮೇಲೆ ಅವರ ವಿಚಾರಗಳನ್ನು ಹೇಳಬೇಕೆಂದು ಅವರನ್ನು ಕೇಳಿಕೊಂಡರು. ವ್ಯಾಸರು ಸಂತೋಷಪಟ್ಟು ಹೇಳಿದರು - “ತಾವುಗಳು ತಮ್ಮ ಖಾಲಿ ಸಮಯವನ್ನು ಕಳೆಯಲು ಪುರಾಣ ಕತೆಗಳ ಜ್ಞಾನವನ್ನು ಪಡೆದುಕೊಳ್ಳಲು ರೋಮಹರ್ಷಣರಿಗೆ ಯಜ್ಞ ಸ್ಥಾನದಲ್ಲಿ ಆಸನವನ್ನು ಕೊಟ್ಟು ಹೊಸ ತಿಳಿವಳಿಕೆಯನ್ನು ಪಡೆದುಕೊಳ್ಳಿ.” ವ್ಯಾಸರ ಈ ಮಾತನ್ನು ಕೇಳಿ ಕೆಲವು ಋಷಿಗಳು ಹೇಳಿದರು - “ಭಗವನ್, ರೋಮಹರ್ಷಣರು ಸೂತ ಜಾತಿಯವರಲ್ಲವೇ? ಅವರನ್ನೆಂತು ಗದ್ದುಗೆಯ ಮೇಲೆ ಕುಳ್ಳಿರಿಸಲಾದೀತು?” ವ್ಯಾಸರು ಹೇಳಿದರು - “ಋಷಿಗಳೇ, ವಿದ್ಯೆಯು ಯಾವ ಜಾತಿ - ಮತ್ತು ಧರ್ಮವನ್ನು ಅಪೇಕ್ಷಿಸುವುದಿಲ್ಲ. ನೀಚ ಜಾತಿಯಾದರೇನು, ಉತ್ತಮ ವಿದ್ಯೆ ಪಡೆಯಿರಿ. ತಾವು ಗುಣಗ್ರಾಹಿಗಳಾಗಿರಿ. ಜಾತಿಯನ್ನು ನೋಡಬೇಡಿ. ರೋಮಹರ್ಷಣರು ತಮ್ಮ ಆಳವಾದ ಅಧ್ಯಯನದಿಂದ ವಿದ್ಯೆಯನ್ನು ಪಡೆದಿದ್ದಾರೆ. ಅದು ಜಾತಿ-ಧರ್ಮವನ್ನು ಮೀರಿದ್ದು.” ಯಜ್ಞಸತ್ರದ ಋಷಿಗಳ ಮನಸ್ಸಿಗೂ ಈ ಮಾತು ಸರಿಯೆನಿಸಿತು. ಶೌನಕರೂ ಕೂಡ ಸೂತಜಾತಿಯಲ್ಲಿ ಜನಿಸಿದ ರೋಮಹರ್ಷಣರಿಂದ ಪುರಾಣ ಪುಣ್ಯಕತೆಗಳನ್ನು ಕೇಳಲು ಅವರನ್ನು ವ್ಯಾಸ ಗದ್ದುಗೆಯ ಮೇಲೆ ಎತ್ತರದ ವೇದಿಕೆಯ ಮೇಲೆ ಕೂಡ್ರಿಸಿ ವ್ಯಾಸ ಪದವನ್ನು ನೀಡಿದರು. ಹೀಗೆ ರೋಮಹರ್ಷಣರು ಬಿಡುವಿನ ಸಮಯದಲ್ಲಿ ಪುರಾಣಕತೆಗಳನ್ನು ಹೇಳತೊಡಗಿದರು. ಇದು ಆಗುತ್ತಿದ್ದ ಸಮಯದಲ್ಲೇ ಮಹಾಭಾರತ ಯುದ್ಧವೂ ಪ್ರಾರಂಭವಾಯಿತು. ಭಗವಾನ್ ಕೃಷ್ಣನು ಪಾಂಡವರ ಪಕ್ಷಕ್ಕೆ ಸಲಹೆಯನ್ನು ಮಾತ್ರ ಕೊಡುವುದಾಗಿಯೂ, ಶಸ್ತ್ರಗಳನ್ನು ಹಿಡಿಯುವುದಿಲ್ಲವಾಗಿಯೂ ಶರ್ತಮಾಡಿ ಸೇರಿಕೊಂಡನು. ಬಹುಶಃ ದುರ್ಯೋಧನನ ಶಸ್ತ್ರ ಗುರುವಾದ ತನ್ನ ಅಣ್ಣ ಬಲಭದ್ರನು ದುರ್ಯೋಧನನ ಪಕ್ಷಕ್ಕೆ ಹೋದರೆ, ತಾವಿಬ್ಬರು ಅಣ್ಣ-ತಮ್ಮಂದಿರ ನಡುವೆಯೂ ಯುದ್ಧ ಪ್ರಸಂಗ ಬಂದೀತೆಂದು ಭಾವಿಸಿ ಕೃಷ್ಣನು ಈ ರೀತಿಯ ಪ್ರತಿಜ್ಞೆಯನ್ನು ಮಾಡಿರಬೇಕು. ಕೃಷ್ಣನು ಪಾಂಡವ ಪಕ್ಷದಲ್ಲಿ ಯುದ್ಧ ಮಾಡುವುದಿಲ್ಲವಾದ್ದರಿಂದ ಶಿಷ್ಯ ದುರ್ಯೋಧನನಿಗೆ ಯಾವ ಅಹಿತವೂ ಆಗಲಾರದೆಂದು ಅತ್ತ ಬಲಭದ್ರನು ಯೋಚಿಸಿದನು. ಅಲ್ಲದೇ ಅರ್ಜುನನು ತನ್ನ ತಂಗಿಯನ್ನು 172 ಕಥಾ ಸಂಸ್ಕೃತಿ ಮದುವೆಯಾಗಿರುವುದರಿಂದ ತಾನು ಯುದ್ಧದಲ್ಲಿ ತಟಸ್ಥನಾಗಿ ಉಳಿಯುವುದೇ ಹೆಚ್ಚು ಸರಿ. ಆದರೆ ಇಲ್ಲಿ ದ್ವಾರಕೆಯಲ್ಲಿ ಇರುವುದರಿಂದ ಮತ್ತೇನು ಸಮಸ್ಯೆ ಬರುವುದೋ ತಿಳಿಯದು. ಆದ್ದರಿಂದ ನಾನು ಈ ಸಮಯವನ್ನು ತೀರ್ಥಾಟನೆಯಲ್ಲಿ ಕಳೆಯುತ್ತೇನೆ - ಹೀಗೆ ವಿಚಾರ ಮಾಡಿ ಅವನು ತೀರ್ಥಾಟನೆಗೆ ಹೊರಟುಹೋದನು. ತೀರ್ಥಕ್ಷೇತ್ರಗಳಲ್ಲಿ ತಿರುಗುತ್ತ ತಿರುಗುತ್ತ ಅವನು ನೈಮಿಷಾರಣ್ಯಕ್ಕೆ ಬಂದನು. ಈ ಯಜ್ಞ ಸತ್ರದಲ್ಲಿ ಮಂತ್ರಪಾಠ ಹಾಗೂ ಯಜ್ಞಾಹುತಿಯ ಅನಂತರ ಎಲ್ಲ ಋಷಿಗಳೂ ಒಂದು ಮಂಟಪದ ಕೆಳಗೆ ಕುಳಿತುಕೊಳ್ಳುವುದನ್ನು, ಕೆಳ ಜಾತಿಯ ಒಬ್ಬ ವ್ಯಕ್ತಿಯು ವ್ಯಾಸ ಗದ್ದುಗೆಯ ಮೇಲೆ ಕುಳಿತು ಪುರಾಣಕತೆಯನ್ನು ಹೇಳುತ್ತಿರುವುದನ್ನು ಅವನು ನೋಡಿದನು. ಬಲಭದ್ರನು ಆ ಮಂಟಪಕ್ಕೆ ಬರುತ್ತಲೇ ಇಡೀ ಋಷಿಗಣ ಎದ್ದು ನಿಂತು ಅವನಿಗೆ ಗೌರವ ಸೂಚಿಸಿತು, ಸ್ವಾಗತ ಮಾಡಿತು. ಆದರೆ ವ್ಯಾಸ ಗದ್ದುಗೆಯ ಮೇಲೆ ಕುಳಿತ ರೋಮಹರ್ಷಣರು ಮಾತ್ರ ಮೊದಲಿನಂತೆ ನಿರ್ವಿಕಾರ ಭಾವದಿಂದ ಗದ್ದುಗೆಯ ಮೇಲೆ ಕುಳಿತೇ ಇದ್ದರು. ಈ ನಡುವೆ ತುಸು ಹೊತ್ತು ಅವರು ತಮ್ಮ ಪ್ರವಚನವನ್ನು ನಿಲ್ಲಿಸಿದರು. ರೋಮಹರ್ಷಣರ ಈ ವರ್ತನೆಯು ಬಲಭದ್ರನಿಗೆ ಅವಿಧೇಯತೆಯದ್ದಾಗಿಯೂ ಅಹಂಕಾರದ್ದಾಗಿಯೂ ಅನಿಸಿತು. ಒಬ್ಬ ಕೆಳಜಾತಿಯ ವ್ಯಕ್ತಿಯು ಉನ್ನತವಾದ ವ್ಯಾಸಪೀಠದ ಮೇಲೆ ಕುಳಿತು ವಿದ್ವಾಂಸರಾದ ಋಷಿಗಳ ಸಮಕ್ಷಮದಲ್ಲಿ ಪ್ರವಚನ ಮಾಡುತ್ತಿರುವುದೇ ಅನುಚಿತವಾದದ್ದು, ಎರಡನೆಯದಾಗಿ ನನಗೆ ಗೌರವ ಸೂಚಿಸಲು ಇಡಿಯ ಋಷಿಗಣ ಎದ್ದುನಿಂತು ಸ್ವಾಗತ ಮಾಡುತ್ತಿದ್ದಾರೆ, ಆದರಿವನು ತನ್ನ ಆಸನದಿಂದ ಅಲುಗಾಡಲೂ ಇಲ್ಲ. ಬಲಭದ್ರನಿಗೆ ಇದು ಸಹಿಸಲಿಲ್ಲ. ವರ್ಣಾಶ್ರಮಧರ್ಮದ ಮರ್ಯಾದೆಯನ್ನು ಭಂಗ ಮಾಡಿದ್ದಕ್ಕೆ ರೋಮಹರ್ಷಣನಿಗೆ ದಂಡವನ್ನು ಕೊಡಲೇಬೇಕಾಗುತ್ತದೆ. ಇವನ ಅಹಂಕಾರವನ್ನು ಮುರಿಯಬೇಕು. ಹೀಗೆ ಯೋಚಿಸುತ್ತಿದ್ದ ಅವನು ತನ್ನ ಕೋಪವನ್ನು ನಿಯಂತ್ರಿಸಲಾರದಾದ. ಮುಖ್ಯ ಯಜಮಾನರಾದ ಶೌನಕರನ್ನಾಗಲಿ ಋಷಿಗಳನ್ನಾಗಲಿ ಕೇಳದೆಯೇ ಇವನಿಗೆ ವರ್ಣಾಶ್ರಮ ಧರ್ಮದ ಮರ್ಯಾದೆಗೆ ಭಂಗ ತರುವ ಅಧಿಕಾರವನ್ನು ಯಾರು ಕೊಟ್ಟರು? ಈ ಕೆಳ ಜಾತಿಯ ವ್ಯಕ್ತಿಯನ್ನು ವ್ಯಾಸ ಗದ್ದುಗೆಯ ಮೇಲೆ ಯಾರು ಕುಳ್ಳಿರಿಸಿದರು? ಹೀಗೆ ಯೋಚಿಸಿದ ಬಲಭದ್ರನು ಮಂತ್ರ ಆವಾಹಿತವಾದ ದರ್ಭೆಯ ಪ್ರಹಾರದಿಂದ ವ್ಯಾಸ ಗದ್ದುಗೆಯ ಮೇಲೆ ಕುಳಿತಿದ್ದಂತೆಯೇ ರೋಮಹರ್ಷಣರನ್ನು ಕೊಂದುಬಿಟ್ಟನು. ಬಲಭದ್ರನ ಈ ಕಾರ್ಯದಿಂದ ಇಡಿಯ ಯಜ್ಞಮಂಟಪದಲ್ಲಿ ಹಾಹಾಕಾರವೆದ್ದಿತು. ಯಜ್ಞಕ್ಷೇತ್ರದಲ್ಲಿ ಈ ನರಬಲಿಯಾಯಿತು. ಎಲ್ಲ ಋಷಿಗಳೂ ಭಾರತ 173 ಇದರಿಂದ ಕುಪಿತರೂ ದುಃಖಿಗಳೂ ಆದರು. ಮಹರ್ಷಿ ಶೌನಕರಿಗೆ ಈ ಸಂಗತಿ ತಿಳಿದಾಗ ಅವರು ಬಲಭದ್ರನ ಬಳಿ ಬಂದು ಕೇಳಿದರು - “ನೀವು ಇದೊಂದು ದೊಡ್ಡ ಅನರ್ಥ ಮಾಡಿದಿರಿ. ಹೀಗೆ ಮಾಡುವ ಮುನ್ನ ನನ್ನನ್ನು ಕೇಳಬಹುದಾಗಿತ್ತು. ಕಾರಣವನ್ನು ತಿಳಿಯದೆ ಅಕಾರಣವಾಗಿ ಒಬ್ಬ ನಿರ್ದೋಷಿಯನ್ನು ವಧಿಸಿದಿರಿ. ರೋಮಹರ್ಷಣರು ಭಗವಾನ್ ವೇದ ವ್ಯಾಸರ ಪುರಾಣ-ಶಾಸ್ತ್ರ ಪಾರಂಗತ ವಿದ್ವಾಂಸ ಶಿಷ್ಯರಾಗಿದ್ದರು. ಅವರ ಸಲಹೆಯ ಮೇರೆಗೆ, ಇವರ ವಿದ್ವತ್ತಿನ ಲಾಭ ಪಡೆಯಲು ನಾವೆಲ್ಲರೂ ಬಿಡುವಿನ ಸಮಯದಲ್ಲಿ ಅವರಿಂದ ಪುರಾಣ ಕಥಾ ಶ್ರವಣ ಮಾಡಲು ಅವರಿಗೆ ವ್ಯಾಸ ಆಸನವನ್ನು ನೀಡಿದ್ದೆವು. ಅವರು ಬ್ರಾಹ್ಮಣ ಜಾತಿಯವರಲ್ಲದಿದ್ದರೂ ವ್ಯಾಸ ಆಸನದಲ್ಲಿ ಕುಳಿತ ವ್ಯಕ್ತಿಗೆ ವ್ಯಾಸ ಪದವಿ ಪ್ರಾಪ್ತವಾಗಿರುತ್ತದೆ. ಎಲ್ಲರೂ ಆ ಪದವಿ ಹಾಗೂ ಘನತೆಯನ್ನು ಗೌರವಿಸುತ್ತಾರೆ. ಅಲ್ಲಿ ಕುಳಿತಿರುವ ವ್ಯಕ್ತಿಯು ಎದ್ದು ಯಾವುದೇ ವ್ಯಕ್ತಿಯನ್ನು ಸ್ವಾಗತಿಸುವುದು ವ್ಯಾಸ ಆಸನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಆ ಆಸನದ ಮರ್ಯಾದೆ ಹಾಗೂ ಗೌರವಕ್ಕಾಗಿ ನೀವು ಬಂದಾಗ ರೋಮಹರ್ಷಣರು ಎದ್ದು ನಿಲ್ಲಲಿಲ್ಲ. ಆದರೆ ನೀವು ಅದನ್ನು ಅಪಮಾನವೆಂದು ಭಾವಿಸಿ ಅವರನ್ನು ಕೊಂದಿರಿ. ನೀವು ತುಂಬ ಅನುಚಿತ ಕಾರ್ಯ ಮಾಡಿದ್ದೀರಿ. ವ್ಯಾಸ ಗದ್ದುಗೆಯ ಮೇಲೆ ಕುಳಿತ ವ್ಯಕ್ತಿಯು ಬ್ರಾಹ್ಮಣನೇ ಆಗುತ್ತಾನೆ. ಅವರನ್ನು ವಧಿಸಿ ಒಂದು ರೀತಿಯಿಂದ ನೀವು ಬ್ರಾಹ್ಮಣ ವಧೆ ಮಾಡಿದ್ದೀರಿ. ಇದರಿಂದ ನಿಮಗೆ ‘ಬ್ರಹ್ಮಹತ್ಯೆ’ಯ ದೋಷ ಪ್ರಾಪ್ತವಾಗುತ್ತದೆ. ರೋಮಹರ್ಷಣರನ್ನು ವಧಿಸಿ ನೀವು ಬ್ರಹ್ಮಹತ್ಯೆಯ ದೋಷಿಯಾಗಿದ್ದೀರಷ್ಟೇ ಅಲ್ಲ, ನಮ್ಮೆಲ್ಲ ಋಷಿಗಳಿಗೆ ಅಹಿತವನ್ನುಂಟು ಮಾಡಿದ್ದೀರಿ. ರೋಮಹರ್ಷಣರ ವಧೆಯಿಂದ ಪುರಾಣವಿದ್ಯೆ ಲೋಪವಾಗುವ ಭಯವಿದೆ. ವಿಚಾರ ಮಾಡದೆ ಮಾಡುವ ಕಾರ್ಯದ ದುಷ್ಪರಿಣಾಮವು ಸ್ವಯಂ ತನಗೆ ಮಾತ್ರವಲ್ಲದೆ ಬೇರೆಯವರಿಗೂ ಅಹಿತವನ್ನು ಮಾಡಬಲ್ಲದು.'' ಮಹರ್ಷಿ ಶೌನಕರು ವ್ಯಥೆಯಿಂದ ಹೇಳಿದ ಮಾತನ್ನು ಕೇಳಿ ಬಲಭದ್ರನು ಸ್ತಬ್ಧನಾದನು. ಆದರೆ ಈಗ ಏನು ಮಾಡಲು ಸಾಧ್ಯವಿತ್ತು? ಖೇದ ಮತ್ತು ದುಃಖದಿಂದ ತಲೆಬಗ್ಗಿಸಿ ಹೇಳಿದನು - “ಋಷಿವರ್ಯರೇ, ನಿಶ್ಚಯವಾಗಿಯೂ ನಾನು ಅಪರಾಧಿ’. ನೀವೆಲ್ಲ ಸೇರಿ ಸ್ವಯಂ ರೋಮಹರ್ಷಣರನ್ನು ಈ ರೀತಿ ಗೌರವಿಸಿದ್ದೀರಿ ಎಂಬುದು ನನಗೆ ಗೊತ್ತಿರಲಿಲ್ಲ. ಅವರು ತಾವಾಗಿಯೇ ಅಭಿಮಾನದಿಂದ ಈ ಆಸನದ ಮೇಲೆ ಕುಳಿತು ಸೊಕ್ಕು ಪ್ರದರ್ಶಿಸುತ್ತಿದ್ದಾರೆಂದು ನಾನು ತಿಳಿದುಕೊಂಡಿದ್ದೆ. ನನ್ನ ಅವಿವೇಕದಿಂದ ನಾನು ಮಾಡಿದ ಕರ್ಮಫಲವನ್ನು ನಾನು ಅನುಭವಿಸುತ್ತೇನೆ. ಆದರೆ ಪುರಾಣಕಥಾ ಪ್ರವಚನ ಮುಂದುವರಿಯಲು ಏನು ದಾರಿ?” 174 ಕಥಾ ಸಂಸ್ಕೃತಿ ಶೌನಕರು ಹೇಳಿದರು - “ರೋಮಹರ್ಷಣರ ಮಗ ಉಗ್ರಶ್ರವಾ ಇವರಿಗಿಂತ ದೊಡ್ಡ ವಿದ್ವಾಂಸ. ನಾವು ಅವರನ್ನು ಕರೆದು ಪುರಾಣ ಶ್ರವಣ ಕಾರ್ಯ ಮುಂದುವರಿಯಲು ವ್ಯವಸ್ಥೆ ಮಾಡುತ್ತೇವೆ. ಈ ವಿದ್ಯೆಗೆ ಲೋಪಬರದಂತೆ ನೋಡಿಕೊಳ್ಳುತ್ತೇವೆ. ಶ್ರುತಿಯ ಮಾಧ್ಯಮದಿಂದ ನಾವಿದನ್ನು ಗ್ರಹಿಸುವ ಈ ಪರಂಪರೆಯನ್ನು ಮುಂದುವರಿಸುತ್ತೇವೆ.'' ಬಲಭದ್ರನು ಶೌನಕರ ಚರಣಗಳಿಗೆ ಮಣಿದು ಹೇಳಿದನು - “ಮುನಿವರ್ಯರೇ, ತಾವು ಉಗ್ರಶ್ರವಾರನ್ನು ಕರೆಸಿ ವ್ಯಾಸ ಗದ್ದುಗೆಯ ಮೇಲೆ ಕೂಡ್ರಿಸಿರಿ. ಅವರು ಆಸನದಲ್ಲಿ ಕುಳಿತ ನಂತರ ನಾನು ಅವರಲ್ಲಿ ನನ್ನ ಅಪರಾಧಕ್ಕೆ ಕ್ಷಮಾಯಾಚನೆಯನ್ನು ಮಾಡುತ್ತೇನೆ. ಮತ್ತು ಬ್ರಹ್ಮಹತ್ಯಾ ದೋಷ ನಿವಾರಣೆಯ ಸಲುವಾಗಿ ತೀರ್ಥಗಳಲ್ಲಿ ತಿರುಗಿ ತಿರುಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ.” ಋಷಿ ಶೌನಕರು ಉಗ್ರಶ್ರವಾರನ್ನು ಕರೆಸಿ ಅವರಿಗೆ ಎಲ್ಲ ವಿಚಾರಗಳನ್ನು ತಿಳಿಸಿ ವ್ಯಾಸ ಗದ್ದುಗೆಯ ಮೇಲೆ ಕುಳ್ಳಿರಿಸಿದರು. ಬಲಭದ್ರನು ತನ್ನ ಅಪರಾಧಕ್ಕೆ ಕ್ಷಮಾಯಾಚನೆ ಮಾಡಿದನು. ಅನಂತರ ಪ್ರಾಯಶ್ಚಿತ್ತಕ್ಕಾಗಿ ಹೊರಟು ಹೋದನು. ಉಗ್ರಶ್ರವರು ಪುರಾಣ ಹೇಳಲು ಪ್ರಾರಂಭಿಸಿದರು. ಇಂದು ಲಭ್ಯವಾಗುವ ಅನೇಕ ಪುರಾಣಗಳಲ್ಲಿ ರೋಮಹರ್ಷಣರ ಸಂವಾದವಿದೆ. ಕೆಲವದರಲ್ಲಿ ಉಗ್ರಶ್ರವಾರದೂ ದೊರೆಯುತ್ತದೆ. ರೋಮಹರ್ಷಣರ ಜೀವನಕಾಲದಲ್ಲಿಯೇ ಉಗ್ರಶ್ರವಾರಿಗೆ ಋಷಿ ಹಾಗೂ ಬ್ರಾಹ್ಮಣ ಸಮಾಜದಲ್ಲಿ ತುಂಬ ಪ್ರತಿಷ್ಠೆ ದೊರಕಿತ್ತು. ಉಗ್ರಶ್ರವರು ಋಷಿಗಳ ಶ್ರೇಣಿಯಲ್ಲಿದ್ದರು. ಇದರಿಂದಾಗಿ, ಪ್ರಾಚೀನ ಕಾಲದಲ್ಲಿ ಜಾತಿಗಿಂತ ಹೆಚ್ಚಾಗಿ ಗುಣಕ್ಕೆ ಗೌರವ ದೊರಕುತ್ತಿತ್ತೆಂಬುದು ತಿಳಿಯುತ್ತದೆ. ಪ್ರಾಚೀನ ಕಾಲದಲ್ಲಿ ಪ್ರತಿಷ್ಠೆಯನ್ನು ಗಳಿಸಲು, ವಿದ್ಯೆಯನ್ನು ಅರ್ಜಿಸಲು ಜಾತಿಯು ಬಾಧಕವಾಗಿರಲಿಲ್ಲ. - (ಪದ್ಮಪುರಾಣ) ಭಾರತ 175 ಅಷ್ಟಾವಕ್ರ - ಅಮರನಾಥ ಶುಕ್ಲ ಉದ್ದಾಲಕರೆಂಬ ಒಬ್ಬ ಋಷಿ ಇದ್ದರು. ಅವರ ಮಗಳು ಸುಜಾತಾ ತನ್ನ ಪತಿಯ ನಿಧನಾನಂತರ ತನ್ನ ಪ್ರೀತಿಯ ಪುಟ್ಟಮಗನೊಂದಿಗೆ ತಂದೆಯ ಆಶ್ರಮಕ್ಕೆ ಬಂದಳು. ಸುಜಾತಾಳ ಮಗ ದೌರ್ಭಾಗ್ಯವಶಾತ್ ಅಂಕುಡೊಂಕಾದ ಅವಯವವುಳ್ಳವನಾಗಿದ್ದ. ಅವನ ಕೈ ಕಾಲು ವಕ್ರವಾಗಿದ್ದವು. ಆಳ್ತನ ಕುಳ್ಳಾಗಿತ್ತು. ಬೆನ್ನಿನ ಮೇಲೆ ಡುಬ್ಬ ಬಂದಿತ್ತು. ಮೋರೆ ವಿಕಾರವಾಗಿತ್ತು. ಆದ್ದರಿಂದ ಅವನಿಗೆ ಅಷ್ಟಾವಕ್ರನೆಂಬ ಹೆಸರಾಗಿತ್ತು. ಆದರೆ ತಾಯಿ ಸುಜಾತಾಳಿಗೆ ಅವನೊಬ್ಬನೇ ಆಶ್ರಯವಾಗಿದ್ದ. ಹಾಗಾಗಿ ಅವನ ಮುಖ ನೋಡಿಕೊಂಡು ಮುಂದೆ ಒಳ್ಳೆಯ ದಿನಗಳು ಬಂದಾವೆಂಬ ಆಸೆಯಲ್ಲಿದ್ದಳು. ತನ್ನ ವಿಧವೆ ಮಗಳು ಹಾಗೂ ಮೊಮ್ಮಗನನ್ನು ಉದ್ದಾಲಕರು ತಮ್ಮ ಆಶ್ರಮದಲ್ಲಿ ತುಂಬ ಆದರದಿಂದ, ಪ್ರೀತಿಯಿಂದ ನೋಡಿಕೊಂಡಿದ್ದರು. ಅವರ ಮನಸ್ಸಿನಲ್ಲಿ ಯಾವುದೇ ಬಗೆಯ ದುಃಖ ಅಥವಾ ಕೀಳರಿಮೆಯ ಭಾವನೆ ಬಾರದಂತೆ ಜಾಗ್ರತೆವಹಿಸಿದ್ದರು. ಅಷ್ಟಾವಕ್ರನು ಶರೀರದಲ್ಲಿ ಎಷ್ಟೇ ವಿಕಲ-ವಿರೂಪನಾಗಿದ್ದರೂ ಅವನ ಬುದ್ಧಿ ತುಂಬ ಪ್ರಖರವಾಗಿತ್ತು. ತನ್ನ ಅಜ್ಜನ ಆಶ್ರಮದಲ್ಲಿ ಓದುವ ಮಕ್ಕಳಲ್ಲಿ ಅವನು ಎಲ್ಲರಿಗಿಂತ ಕಡಿಮೆ ವಯಸ್ಸಿನವನಾಗಿದ್ದರೂ ಓದಿನಲ್ಲಿ ಮುಂದಿದ್ದ. ತನ್ನ ತೀವ್ರಬುದ್ಧಿಯಿಂದಾಗಿ ಅತ್ಯಲ್ಪ ವಯಸ್ಸಿನಲ್ಲಿಯೇ ವೇದ-ಶಾಸ್ತ್ರ-ಧರ್ಮಗ್ರಂಥಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದನು. ತನ್ನ ತಾಯಿ ಹಾಗೂ ಅಜ್ಜನ ಅಕ್ಕರತೆಯಲ್ಲಿ ಬೆಳೆದ ಅವನಿಗೆ ತಾನು ಅಜ್ಜನ ಆಶ್ರಿತನೆಂದು, ತನಗೆ ತಂದೆಯಿಲ್ಲವೆಂದು ಯೋಚಿಸಲು ಸಂದರ್ಭವೇ ದೊರೆಯಲಿಲ್ಲ. ಒಂದು ದಿನ ಸಂಯೋಗವಶಾತ್ ಒಂದು ಘಟನೆ ನಡೆಯಿತು. ಆಶ್ರಮದ ಎಲ್ಲ ವಿದ್ಯಾರ್ಥಿಗಳೂ ರಜೆಯಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಅಷ್ಟಾವಕ್ರ ತನ್ನ ಅಜ್ಜನ ಮಡಿಲಲ್ಲಿ ಕುಳಿತಿದ್ದ. ಅಷ್ಟರಲ್ಲಿ ಉದ್ದಾಲಕರ ಸ್ವಂತಮಗ ಶ್ವೇತಕೇತು ಬಂದವನು ಅಷ್ಟಾವಕ್ರನು ತನ್ನ ತಂದೆಯ ಮಡಿಲಲ್ಲಿ ಕುಳಿತಿರುವುದನ್ನು ನೋಡಿ ಹೇಳಿದನು- 176 ಕಥಾ ಸಂಸ್ಕೃತಿ “ಅಷ್ಟಾವಕ್ರ, ನೀನು ಇಲ್ಲಿಂದ ಏಳು. ನಾನು ನನ್ನ ತಂದೆಯ ಮಡಿಲಲ್ಲಿ ಕುಳಿತುಕೊಳ್ಳುತ್ತೇನೆ.” ಅಷ್ಟಾವಕ್ರ ಹೇಳಿದ- “ನಾನು ಮೊದಲಿನಿಂದ ಕುಳಿತಿದ್ದೇನೆ. ನಾನು ಏಳುವುದಿಲ್ಲ” ಶ್ವೇತಕೇತುವು ಅಷ್ಟಾವಕ್ರನ ಕೈ ಹಿಡಿದು ಹೇಳಿದ- “ಇದು ನಿನ್ನ ಅಪ್ಪನ ಮಡಿಲಲ್ಲ. ನಿನ್ನ ಅಪ್ಪನ ಮಡಿಲಲ್ಲಿ ನೀನು ಹೋಗಿ ಕೂತುಕೋ” ಮಹರ್ಷಿ ಉದ್ದಾಲಕರಿಗೆ ಶ್ವೇತಕೇತುವಿನ ಈ ಮಾತು ಕೆಡುಕೆನಿಸಿತು. ಈ ಬಗೆಯ ವರ್ತನೆಗಾಗಿ ಅವರು ಅವನಿಗೆ ಗದರಿಸಿದರು. ಅಷ್ಟಾವಕ್ರನನ್ನು ತುಂಬ ಅನುನಯದಿಂದ ಕರೆದರು. ಆದರೆ ಅವನು ಅಪಮಾನಿತ ಮನಸ್ಸಿನಿಂದ ತನ್ನ ತಾಯಿಯ ಬಳಿಹೋಗಿ ಹೇಳಿದ- “ಅಮ್ಮಾ, ನನ್ನ ಅಪ್ಪಾಜಿ ಎಲ್ಲಿ?” ಮಗನಿಂದ ಮೊದಲ ಬಾರಿಗೆ ಈ ಮಾತನ್ನ ಸುಜಾತಾ ಕೇಳಿ ಅವಾಕ್ಕಾದಳು, ತನ್ನನ್ನು ನಿಯಂತ್ರಿಸಿಕೊಂಡು ಹೇಳಿದಳು - “ಮಹರ್ಷಿ ಉದ್ದಾಲಕರೇ ನಿನ್ನ ತಂದೆ” “ಅವರು ನನ್ನ ಅಜ್ಜ, ಗುರು. ನಾನು ಕೇಳುತ್ತಿರುವುದು ನನ್ನ ಅಪ್ಪನ ಬಗೆಗೆ ಅಮ್ಮಾ..........” ಸುಜಾತಾ ಪ್ರೀತಿಯಿಂದ ಕೇಳಿದಳು “ಇಂದು ನಿನಗೆ ಅಪ್ಪನ ಬಗೆಗೆ ಕೇಳುವ ಸಂದರ್ಭ ಯಾಕೆ ಬಂತು?” ಶ್ವೇತಕೇತುವಿನೊಂದಿಗೆ ನಡೆದ ಮಾತುಕತೆಗಳನ್ನೆಲ್ಲ ಅಷ್ಟಾವಕ್ರನು ತಾಯಿಗೆ ಹೇಳಿದನು. ಅದನ್ನು ಕೇಳಿ ಸುಜಾತಾಳ ಕಣ್ಣುಗಳು ಹನಿಗೂಡಿದವು. ಅವಳು ತನ್ನ ಮಗನಿಗೆ ಅವನ ಅಪ್ಪನ ವಿಚಾರವಾಗಿ ಹೇಳಲು ಇಷ್ಟಪಟ್ಟಿರಲಿಲ್ಲ. ಆದರೀಗ ಹೇಳಲೇ ಬೇಕಾಯಿತು. “ಮಗನೇ, ನೀನು ಹುಟ್ಟುವುದಕ್ಕಿಂತ ಮುಂಚಿನ ಮಾತು. ನಿನ್ನ ತಂದೆಯವರು ಒಂದು ಬಾರಿ ಸ್ವಲ್ಪ ಹಣ ಸಹಾಯ ಪಡೆಯಲು ಜನಕರಾಜನ ದರಬಾರಕ್ಕೆ ಹೋಗಿದ್ದರು. ಅವರ ದರಬಾರಿನಲ್ಲಿ ಬಂದಿ ಎಂಬ ಹೆಸರಿನ ಒಬ್ಬ ಲೌಕಿಕ ಶಾಸ್ತ್ರಿಯಿದ್ದ. ಅವನಿಗೆ ಒಂದು ದುಷ್ಟ ಹವ್ಯಾಸವಿತ್ತು. ಯಾರೇ ಅವನಿಂದ ಶಾಸ್ತ್ರಾರ್ಥದಲ್ಲಿ ಸೋತರೆ ಅವರನ್ನು ನೀರಿನಲ್ಲಿ ಮುಳುಗಿಸಿ ಕೊಂದು ಬಿಡುತ್ತಿದ್ದ. ದೌರ್ಭಾಗ್ಯದಿಂದ ನಿನ್ನ ತಂದೆಯವರು ಅವನ ಕುತರ್ಕಗಳಿಂದ ಸೋತು ಹೋದರು. ಆ ದುಷ್ಟನು ನಿರ್ದಯವಾಗಿ ಅವರನ್ನು ನೀರಿನಲ್ಲಿ ಮುಳುಗಿಸಿ ಕೊಂದುಬಿಟ್ಟ. ಅನಂತರ ಹೊಟ್ಟೆಪಾಡಿನ ದಾರಿಕಾಣದೆ ನಾನು ನಿನ್ನನ್ನು ಕಟ್ಟಿಕೊಂಡು ಇಲ್ಲಿಗೆ ನನ್ನ ಅಪ್ಪನ ಬಳಿಗೆ ಬಂದೆ.” - ಹೀಗೆ ಹೇಳುತ್ತ ಹೇಳುತ್ತ ಸುಜಾತಾಳ ಕಣ್ಣುಗಳಲ್ಲಿ ನೀರು ಹರಿದವು. ಭಾರತ 177 ಅಷ್ಟಾವಕ್ರ ಹೇಳಿದ- “ಅಮ್ಮಾ, ಅಳಬೇಡ. ಆದರೆ ಆ ಬಂದಿ ಈಗ ಎಲ್ಲಿದ್ದಾನೆ ಎಂಬುದನ್ನು ಹೇಳಬಲ್ಲೆಯಾ?” “ಹಾಂ, ಮಗನೇ, ಈಗಲೂ ಅವನು ಮಹಾರಾಜ ಜನಕನ ಆಸ್ಥಾನದಲ್ಲಿ ಇರುತ್ತಾನೆ. ನೀನು ಅದನ್ನು ತಿಳಿದುಕೊಂಡು ಏನು ಮಾಡುವೆ? ಇನ್ನೂ ಚನ್ನಾಗಿ ಓದಿ ಬರೆದು ದೊಡ್ಡ ವಿದ್ವಾಂಸನಾಗು. ಆ ಪಾಪಿಯ ಹತ್ತಿರ ಹೋಗುವ ಅವಶ್ಯಕತೆ ಇಲ್ಲ” “ಅವಶ್ಯಕತೆ ಇದೆಯಮ್ಮಾ. ಅವನಂಥ ದುಷ್ಟರನ್ನು ಅವರೇ ಅಗೆದ ಹೊಂಡದಲ್ಲಿ ಬೀಳಿಸುವುದರಿಂದ ಒಳಿತಾಗುತ್ತದೆ. ನಾನು ಅವನ ಮೇಲೆ - ನನ್ನ ಅಪ್ಪನನ್ನು ಕೊಂದ ಸೇಡುತೀರಿಸಿಕೊಳ್ಳುತ್ತೇನೆ.” ಹೀಗೆ ಹೇಳಿದವನೇ ಅಷ್ಟಾವಕ್ರನು ನೇರವಾಗಿ ಉದ್ದಾಲಕನ ಬಳಿಹೋದ “ಗುರುದೇವ, ರಾಜಾ ಜನಕನ ದರಬಾರಕ್ಕೆ ಹೋಗಿ ಬಂದಿಯೊಡನೆ ಶಾಸ್ತ್ರಾರ್ಥ ಮಾಡುವುದಕ್ಕೆ ನನಗೆ ಅಪ್ಪಣೆಕೊಡಿ” ಮಹರ್ಷಿಗಳು ಹೇಳಿದರು-“ ಮಗೂ, ಶಾಂತನಾಗು. ಇನ್ನೂ ನಿನ್ನ ಶಿಕ್ಷಣ ಮುಗಿದಿಲ್ಲ. ನಿನ್ನ ಶರೀರ ಹಾಗೂ ವಯಸ್ಸನ್ನು ನೋಡಿ ಮಹಾರಾಜ ಜನಕನು ದರಬಾರದಲ್ಲಿ ಪ್ರವೇಶಕ್ಕೇ ಅವಕಾಶ ನೀಡಲಿಕ್ಕಿಲ್ಲ. ಶಾಸ್ತ್ರಾರ್ಥ ದೂರದ ಮಾತು.” ಅಷ್ಟಾವಕ್ರ ಹೇಳಿದ- “ ಗುರುದೇವ, ತಾವು ನನಗೆ ಆಶೀರ್ವಾದ ಮಾಡಿ. ತಮ್ಮ ಕೃಪೆಯಿಂದ ನಾನು ಬಂದಿಯೊಡನೆ ಅವಶ್ಯ ಶಾಸ್ತ್ರಾರ್ಥ ಮಾಡುತ್ತೇನೆ” ಉದ್ದಾಲಕರಿಗೆ ತಮ್ಮ ಮೊಮ್ಮಗನ ವೇದ ಶಾಸ್ತ್ರಗಳ ಗಹನವಾದ ಅಧ್ಯಯನ, ಮತ್ತು ಬುದ್ಧಿಮತ್ತೆ ಚನ್ನಾಗಿ ಗೊತ್ತಿತ್ತು, ಅವನ ದೃಢ ನಿಶ್ಚಯವನ್ನು ನೋಡಿ ಹೇಳಿದರು- “ಹೋಗು ಮಗೂ, ನಿನ್ನಮನಸ್ಸಿನ ಬಯಕೆ ಪೂರ್ಣವಾಗಲಿ. ಈಶ್ವರನು ನಿನಗೆ ಸಫಲತೆಯನ್ನು ಕೊಡಲಿ” ಅಷ್ಟಾವಕ್ರನು ತಾಯಿ ಹಾಗೂ ಗುರುವಿನ ಅಪ್ಪಣೆ ಪಡೆದು ಹೊರಟನು. ಅವನು ನಗರಕ್ಕೆ ಹೋದಾಗ ಸಂಯೋಗವಶದಿಂದ ಜನಕ ಮಹಾರಾಜನು ರಾಜಮಾರ್ಗದಲ್ಲಿ ಬರುತ್ತಿದ್ದನು. ಮುಂದೆ ಹೋಗುತ್ತಿರುವ ಸೇವಕರು ಅವನನ್ನು ನೋಡಿ ಹೇಳಿದರು-“ ಏ ಹುಡುಗಾ, ಒಂದು ಬದಿಗೆ ಹೋಗು. ಕಾಣುವುದಿಲ್ಲವಾ, ಮಹಾರಾಜರು ಈ ಕಡೆ ಚಿತ್ತೈಸುತ್ತಿದ್ದಾರೆ?” ಅಷ್ಟಾವಕ್ರನು ಹೇಳಿದನು “ದಾರಿಯಲ್ಲಿ ನಡೆಯುವ ಪ್ರಾಶಸ್ತ್ಯವನ್ನು ಕುರುಡ, ಸ್ತ್ರೀ, ಕಿವುಡ, ವಿಕಲಾಂಗ, ಅಸಹಾಯ ಹಾಗೂ ಭಾರಹೊತ್ತವರಿಗೆ ಕೊಡಬೇಕು. ರಾಜನು ತನ್ನ ಸಲುವಾಗಿ ಈ ಪ್ರಥಮ ಪ್ರಾಶಸ್ತ್ಯವನ್ನು ಪಡೆಯಕೂಡದು” ರಾಜಾ ಜನಕನು ಅಷ್ಟರಲ್ಲಿ ಸಮೀಪ ಬಂದಿದ್ದನು. ಅಷ್ಟಾವಕ್ರನ ಎಲ್ಲ ಮಾತುಗಳನ್ನು ಕೇಳಿದನು. ರಾಜ ಸ್ವಯಂ ವಿದ್ವಾಂಸ. ಅವನು ಯೋಚಿಸಿದ...... 178 ಕಥಾ ಸಂಸ್ಕೃತಿ “ಈ ಹುಡುಗ ಸರಿಯಾದ ಮಾತುಗಳನ್ನು ಹೇಳುತ್ತಿದ್ದಾನೆ.” ಅವನನ್ನು ರಸ್ತೆಯಿಂದ ಸರಿಸದೆ ಅವನೇ ಒಂದು ಬದಿಯಿಂದ ಮುಂದುವರಿದನು. ಅಷ್ಟಾವಕ್ರನು ಮರುದಿನ ಬೆಳಿಗ್ಗೆ ರಾಜದರ್ಬಾರಿಗೆ ಹೊರಡಲು ತಯಾರಾದನು. ಅರಮನೆಯ ರಾಜದರ್ಬಾರದ ದ್ವಾರ ಪಾಲಕನು ಅವನನ್ನು ತಡೆದು ಅವನು ಯಾರು ಮತ್ತು ಯಾಕೆ ಒಳಗೆ ಹೋಗಲು ಇಚ್ಛಿಸುತ್ತಾನೆ ಎಂಬುದನ್ನು ಕೇಳಿದನು. ಅಷ್ಟಾವಕ್ರನು ತನ್ನ ಪರಿಚಯವನ್ನು ತಾನು ಬಂದಿರುವ ಕಾರಣವನ್ನೂ ಹೇಳಿದನು. ಅದನ್ನು ಕೇಳಿ ದ್ವಾರಪಾಲಕನು ಹೇಳಿದನು- “ನೀನಿನ್ನೂ ಹುಡುಗ. ಯಜ್ಞವೇದಿಕೆಯಲ್ಲಿ ವೇದಪಾಠ ಮಾಡುವುದರ ಹೊರತಾಗಿ, ಯಾರಾದರೂ ಆಚಾರ್ಯರ ಆಶ್ರಮಕ್ಕೆ ಹೋಗಿ ಅಧ್ಯಯನ ಮಾಡು” “ಜ್ಞಾನಕ್ಕೆ ವಯಸ್ಸಿನ ಸಂಬಂಧವೆಲ್ಲಿದೆ? ನನ್ನ ವಯಸ್ಸು ಚಿಕ್ಕದಿರಬಹುದು, ಆದರೆ ನಾನು ವೇದ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದೇನೆ. ಶರೀರದಿಂದ ನಾನು ಕುರೂಪಿನಿಜ, ಇದರರ್ಥ ಬುದ್ಧಿಯಿಂದಲೂ ನಾನು ಕುರೂಪನೆಂದಲ್ಲ ಶಾಲ್ಮಲಿಮರ ದೊಡ್ಡದಾದರೂ ಶಕ್ತಿಶಾಲಿಯಾಗಿರುವುದಿಲ್ಲ. ಬೆಂಕಿಯ ಚಿಕ್ಕ ಕಿಡಿಯಲ್ಲಿಯೂ ಯಾರನ್ನಾದರೂ ಸುಟ್ಟು ಬಿಡಬಲ್ಲ ಶಕ್ತಿಯಿರುತ್ತದೆ. ಯಾವುದಾದರೂ ಋಷಿ ಕೇವಲ ಕೂದಲು ಹಣ್ಣಾದ ಮಾತ್ರಕ್ಕೆ ವಿದ್ವಾಂಸನಾಗಿರುವುದಿಲ್ಲ. ದೇವತೆಗಳೂ ಯುವಕ ಋಷಿಗಳನ್ನು ಆದರಿಸುತ್ತಾರೆ. ನೀನು ಜನಕ ಮಹಾರಾಜರಿಗೆ ನಾನು ಬಂದಿರುವ ಸೂಚನೆಯನ್ನು ಕೊಡು.” ಅಷ್ಟಾವಕ್ರನು ತುಂಬ ಆತ್ಮ ವಿಶ್ವಾಸದಿಂದ ಹೇಳಿದನು. ಅಷ್ಟಾವಕ್ರನ ಗಟ್ಟಿಯಾದ ಮಾತು ದರಬಾರಿನಲ್ಲಿ ಕುಳಿತ ಜನಕನಿಗೂ ಕೇಳಿಸುತ್ತಿತ್ತು. ಅವನು ತನ್ನ ಒಬ್ಬ ಸೇವಕನನ್ನು ಕಳಿಸಿ ಆ ತೇಜಸ್ವಿಯೂ ಸ್ವಾಭಿಮಾನಿಯೂ ಆದ ಬ್ರಾಹ್ಮಣ ಯುವಕನನ್ನು ಒಳಗೆ ಬರಲು ಆಜ್ಞೆ ನೀಡಿದ. ಅಷ್ಟಾವಕ್ರನು ದರಬಾರಕ್ಕೆ ಬರುತ್ತಲೇ ಅವನ ವಕ್ರಶರೀರವನ್ನೂ ಚಿಕ್ಕ ವಯಸ್ಸನ್ನೂ ಕಂಡು ದರಬಾರಿಗಳೆಲ್ಲ ನಗತೊಡಗಿದರು. ಅವರು ನಗುವುದನ್ನು ನೋಡಿ ಅಷ್ಟಾವಕ್ರನೂ ಜೋರಾಗಿ ನಕ್ಕು ಬಿಟ್ಟನು. ಜನಕರಾಜನು ಉತ್ಸುಕತೆಯಿಂದ ಕೇಳಿದನು-“ ಬ್ರಾಹ್ಮಣದೇವತಾ, ನೀವು ಯಾಕೆ ನಗುತ್ತಿದ್ದೀರಿ?” ಅಷ್ಟಾವಕ್ರನು ಅಷ್ಟೇ ತೇಜಸ್ವಿತೆಯಿಂದ ಉತ್ತರಿಸಿದನು-“ ಇದು ವಿದ್ವಜ್ಜನರ ಸಭೆ, ನಾನು ಬಂದಿಯೊಡನೆ ಶಾಸ್ತ್ರಾರ್ಥ ಮಾಡಬೇಕು ಎಂದುಕೊಂಡು ಇಲ್ಲಿಗೆ ಬಂದೆ. ಆದರೀಗ ಅನಿಸುತ್ತಿದೆ-ನಾನು ಮೂರ್ಖರ ಸಭೆಗೆ ಬಂದಿದ್ದೇನೆ. ನಾನು ನಕ್ಕ ಕಾರಣವನ್ನು ಹೇಳಿದೆ.- ಈಗ ತಾವು ತಮ್ಮ ಮೂರ್ಖವಿದ್ವಜ್ಜನರಿಗೆ ಕೇಳಿರಿ- ಅವರು ನನ್ನನ್ನು ನೋಡಿನಕ್ಕರೇ? ನನ್ನ ಈ ಶಾರೀರಿಕ ಸ್ವರೂಪಕ್ಕೆ ನಾನು ಕಾರಣನಲ್ಲ. ಭಾರತ 179 ಕಾರಣ ಆ ಕುಂಬಾರ (ಈಶ್ವರ), ಅವನೇ ನನ್ನನ್ನು ಹೀಗೆ ರೂಪಿಸಿದ್ದು. ಕೇಳಿ, ಅವರು ಯಾಕೆ ನಕ್ಕದ್ದು?” ಜನಕ ರಾಜನು ಅಷ್ಟಾವಕ್ರನನ್ನು ಆಸನದಲ್ಲಿ ಕೂರಿಸಿ ಗೌರವದಿಂದ ಹೇಳಿದನು” ಬ್ರಾಹ್ಮಣ ಕುಮಾರ, ನನ್ನನ್ನೂ ನನ್ನ ದರಬಾರಿಗಳನ್ನೂ ಇದಕ್ಕಾಗಿ ಕ್ಷಮಿಸಿ. ನನ್ನದೊಂದು ನಿವೇದನೆ. ಬಂದಿಯೊಡನೆ ಶಾಸ್ತ್ರಾರ್ಥ ನಡೆಸಲು ನೀವಿನ್ನೂ ವಯಸ್ಕರಾಗಿಲ್ಲ. ಬಂದಿಯೊಡನೆ ಶಾಸ್ತ್ರಾರ್ಥ ಮಾಡುವುದು ಕಷ್ಟ. ಅವನಿಂದ ಶಾಸ್ತ್ರಾರ್ಥದಲ್ಲಿ ಸೋತವರು ಜಲಸಮಾಧಿ ಹೊಂದಬೇಕಾಗುತ್ತದೆ. ತಾವು ಇನ್ನಷ್ಟು ಅಧ್ಯಯನ ಮಾಡಿ” “ರಾಜಾ, ನಾನು ಗುರುಚರಣದಲ್ಲಿ ಕುಳಿತು ಮಾಡಿದ ಶಾಸ್ತ್ರಾಭ್ಯಾಸವು ಬಂದಿಯಂಥ ಶಾಸ್ತ್ರಿಯೊಡನೆ ಶಾಸ್ತ್ರಾರ್ಥ ಮಾಡಲು ಸಾಕು ಬೇಕಾದಷ್ಟಿದೆ. ಸೋತರೆ ಮರಣದ ಭಯವೇಕೆ? ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಪ್ರಾಣವನ್ನು ತೆರಬೇಕಾಗಿ ಬಂದರೂ ಹೆದರಬಾರದು” ಅಷ್ಟಾವಕ್ರನು ವಿಶ್ವಾಸದಿಂದ ಹೇಳಿದನು. ಬಂದಿಯನ್ನು ಕರೆಸಲಾಯಿತು. ಶಾಸ್ತ್ರಾರ್ಥ ಪ್ರಾರಂಭವಾಯಿತು. ಬಂದಿಯ ಪ್ರಶ್ನೆ ಹಾಗೂ ತರ್ಕಗಳಿಗೆ ಉತ್ತರವನ್ನು ಅಷ್ಟಾವಕ್ರನು ತುಂಬ ಸುಲಭವಾಗಿ ಸರಳವಾಗಿ ಕೊಡತೊಡಗಿದ. ತನ್ನ ಕಠಿಣವಾದ ತರ್ಕ ಹಾಗು ಪ್ರಶ್ನೆಗಳಿಗೂ ಉತ್ತರವನ್ನು ಪಡೆದ ಬಂದಿಗೆ ಗಾಬರಿಯಾಯಿತು. ಬಹುಶಃ ತಾನೇ ಜಲಸಮಾಧಿ ಪಡೆಯಬೇಕಾಗುವುದೆಂದು ಅವನಿಗೆ ಅನಿಸತೊಡಗಿತು. ತುಸುಹೊತ್ತಿನ ಅನಂತರ ಅಷ್ಟಾವಕ್ರನು ಪ್ರಶ್ನೆ ಕೇಳಲು ತೊಡಗುತ್ತಲೇ ಬಂದಿಯು ಉತ್ತರ ಕೊಡದಾದನು. ಕೊನೆಯಲ್ಲಿ ಅವನು ತನ್ನ ಸೋಲನ್ನು ಒಪ್ಪಿಕೊಂಡನು ಮತ್ತು ಜಲ ಸಮಾಧಿಗೆ ಸಿದ್ಧನಾದನು. ಅಷ್ಟಾವಕ್ರನು ಹೇಳಿದನು- “ಬಂದಿ, ಋಷಿ ಕಾಹೋಡನ ಮಗ ನಾನು, ನಿನಗೆ ನೆನಪಿರಬಹುದು. ನೀನು ನಿನ್ನ ಕುತರ್ಕದಿಂದ ಶಾಸ್ತ್ರಾರ್ಥದಲ್ಲಿ ಅವನನ್ನು ಪರಾಜಿತಗೊಳಿಸಿ ಜಲಸಮಾಧಿ ಹೊಂದುವಂತೆ ಮಾಡಿದ್ದೆ. ನಾನೂ ಕೂಡ ಶರ್ತದ ಅನುಸಾರವಾಗಿ ನಿನಗೆ ಜಲಸಮಾಧಿಯನ್ನು ನೀಡಬಲ್ಲೆ. ಆದರೆ ನಾನು ಹಾಗೆ ಮಾಡುವುದಿಲ್ಲ. ಜೀವ ತೆಗೆದುಕೊಳ್ಳುವುದು ಸುಲಭ. ಆದರೆ ಜೀವನ ಕೊಡುವುದು ದೊಡ್ಡದು. ಜ್ಞಾನವು ಮಾನವತೆಯ ವಿಕಾಸಕ್ಕಾಗಿ ಇರಬೇಕು, ಅದನ್ನು ನಾಶಪಡಿಸಲು ಅಲ್ಲ. ಈ ರೀತಿಯಲ್ಲಿ ನೀನು ಅಹಂಕಾರದಿಂದ ಯಾರ ಜೀವನವನ್ನೂ ನಷ್ಟಮಾಡುವುದಿಲ್ಲವೆಂದು ಇಂದು ನನಗೆ ವಚನ ಕೊಡಬೇಕು” ಬಂದಿಯ ಸೊಕ್ಕು ಪುಡಿಪುಡಿಯಾಗಿತ್ತು. ಓಡಿಬಂದು ಅಷ್ಟಾವಕ್ರನ ಪಾದಗಳ ಮೇಲೆ ಬಿದ್ದು ಹೇಳಿದ- “ಪ್ರಾಣವನ್ನು ತೆಗೆದುಕೊಳ್ಳುವುದಕ್ಕಿಂತ ದೊಡ್ಡ ದಂಡವನ್ನು ತಾವು ನನಗೆ ನೀಡಿದ್ದೀರಿ. ನಾನು ಅಹಂಕಾರದಿಂದ ಈವರೆಗೆ ಮಾಡಿದ ಪಾಪದ 180 ಕಥಾ ಸಂಸ್ಕೃತಿ ಪ್ರಾಯಶ್ಚಿತ್ತವನ್ನು ತಮ್ಮ ಸೇವೆ ಮಾಡುವುದರಿಂದ ತೀರಿಸಿಕೊಳ್ಳುತ್ತೇನೆ. ಬಾಲ ವಿಜ್ಞಾನಿ, ನನ್ನ ತಪ್ಪುಗಳನ್ನೆಲ್ಲ ಕ್ಷಮಿಸಿ ನನ್ನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ” ಅಷ್ಟಾವಕ್ರ ಹೇಳಿದನು......... “ನಾನು ಗುರುವಾಗಲಾರೆ, ನೀನು ನಿನ್ನ ಶಾಸ್ತ್ರಜ್ಞಾನದಿಂದ ಬೇರೆಯವರನ್ನು ಸೋಲಿಸಿ, ಅವರ ಜೀವನವನ್ನು ನಾಶಮಾಡುವುದರ ಬದಲು, ಅವರಿಗೆ ಒಳ್ಳೆಯ ಉಪದೇಶ ನೀಡಿ ಜ್ಞಾನಿಗಳನ್ನಾಗಿ ಮಾಡು; ಅದೇ ನಿನಗೆ ಶಿಕ್ಷೆ. ಮನುಷ್ಯ ಹಾಗೂ ಮಾನವತೆಯ ವಿಕಾಸದಲ್ಲಿ ಸಹಾಯಕನಾಗು. ಶಾಸ್ತ್ರವನ್ನು ಶಸ್ತ್ರವನ್ನಾಗಿ ಮಾಡಬೇಡ. ಶಾಸ್ತ್ರಜ್ಞಾನವು ಜೀವನವನ್ನು ಅರಳಿಸುತ್ತದೆ. ಶಸ್ತ್ರವು ಜೀವನವನ್ನು ನಾಶಗೊಳಿಸುತ್ತದೆ. ಜ್ಞಾನಿಯಾಗಿರುವ ಅಹಂಕಾರವು ನಿನ್ನ ಬುದ್ಧಿಯನ್ನು ದೂಷಿತಗೊಳಿಸಿದೆ. ಮುಂದಿನ ದಿನಗಳಲ್ಲಿ ನೀನು ಸಾಯುವವರೆಗೆ ಎಂದೂ ನಿನಗೆ ಜ್ಞಾನಿಗಳ-ಋಷಿಗಳ ಆದರ ದೊರೆಯುವುದಿಲ್ಲ. ಇಷ್ಟು ಹೇಳಿ ಅಷ್ಟಾವಕ್ರನು ಜನಕ ಮಹಾರಾಜನ ಸಭೆಯಿಂದ ಹೊರನಡೆದನು. (ವಿಷ್ಣುಪುರಾಣ) ಭಾರತ 181 ಲೋಹಜಂಘನ ಪ್ರಕರಣ (`ಬೃಹತ್ಕಥೆ'ಯಿಂದ) ಉಜ್ಜಯನಿಯ ರಾಜನಾದ ಚಂಡ ಮಹಾಸೇನನು ಸಂಗೀತಪ್ರೇಮಿ ವತ್ಸರಾಜ ಉದಯನನನ್ನು ಒಂದುವ್ಯೂಹದಲ್ಲಿ ಸಿಲುಕಿಸಿ ಬಂದಿಯನ್ನಾಗಿ ಮಾಡಿದ್ದನು. ಅನಂತರ ಅವನು ಉದಯನನನ್ನು ಗಂಧರ್ವವಿದ್ಯೆ ಕಲಿಯಲು ವಾಸವದತ್ತೆಯ ಹತ್ತಿರ ಕಳಿಸಿದನು. ಉದಯನನನ್ನು ಬಂದಿಯನ್ನಾಗಿ ಮಾಡಿದ ಸೂಚನೆಯು ರಾಜ್ಯಕ್ಕೆ ತಲುಪುತ್ತಲೇ ಮಹಾಮಂತ್ರಿ ಯೌಗಂಧರಾಯಣನೂ ಮತ್ತು ವಸಂತಕನೂ ವೇಷ ಬದಲಿಸಿಕೊಂಡು ತಮ್ಮ ದೊರೆಯನ್ನು ಬಿಡಿಸಿಕೊಳ್ಳಲು ವಾಸವದತ್ತೆಯ ಮನೆಗೆ ಹೋಗುತ್ತಾರೆ. ಅಲ್ಲಿ ವಸಂತಕನು ಈ ಕತೆಯನ್ನು ಹೇಳುತ್ತಾನೆ. ಪೈಶಾಚೀ ಭಾಷೆಯಲ್ಲಿ ಗುಣಾಢ್ಯನಿಂದ ರಚಿತವಾದ ಬೃಹತ್ಕಥಾ (ಕಿ.ಪೂ 100) ದ ಕಥಾಪೀಠ ಲಂಬಕದ ನಾಲ್ಕನೆಯ ತರಂಗ ಇದು. ವಸಂತಕನು ಕತೆ ಹೇಳತೊಡಗಿದನು. “ಮಥುರೆಯಲ್ಲಿ ರೂಪಣಿಕಾ ಎಂಬ ಹೆಸರಿನ ರೂಪವತಿಯಾದ ವೇಶ್ಯೆಯಿದ್ದಳು. ಒಂದುದಿನ ಮಂದಿರದಲ್ಲಿ ಪೂಜೆ ಸಲ್ಲಿಸಲು ರೂಪಣಿಕಾ ಹೊರಟಿದ್ದಳು. ರಸ್ತೆಯಲ್ಲಿ ಅವಳು ಒಬ್ಬ ಬ್ರಾಹ್ಮಣ ಯುವಕ ಲೋಹಜಂಘನನ್ನು ಕಂಡು ಮೋಹಿತೆಯಾದಳು. ಆ ದಿನದಿಂದ ಅವನ ಸಂಗ ಮಾಡತೊಡಗಿದಳು-ಬೇರೆ ಎಲ್ಲರನ್ನು ಅವಳು ತ್ಯಜಿಸಿಬಿಟ್ಟಳು. ವೇಶ್ಯೆಯಾದವಳು ಯಾರಾದರೊಬ್ಬ ವ್ಯಕ್ತಿಯನ್ನು ಪ್ರೇಮಿಸಬಾರದೆಂದು ಅವಳ ತಾಯಿಯು ಅವಳಿಗೆ ಬಹಳ ತಿಳಿವಳಿಕೆ ಹೇಳಿದಳು, ಆದರೆ ಆ ಹುಡುಗಿ ಕೇಳಲಿಲ್ಲ. ಒಂದು ದಿನ ಆ ಕುಂಟಲಗಿತ್ತಿ ತಾಯಿಯು ಒಬ್ಬ ನಿರ್ಧನ ರಾಜಕುಮಾರನನ್ನು ನೋಡಿದಳು. ಅವನೊಂದಿಗೆ ಶಸ್ತ್ರಾಸ್ತ್ರ ಸಜ್ಜಿತ ಜನರು ಇರುವುದನ್ನೂ ನೋಡಿದಳು. ರೂಪಣಿಕಾಳ ತಾಯಿಯು ಅವನನ್ನು ತನ್ನ ಬಳಿ ಕರೆದಳು. ಅವನಿಗೆ ಹೇಳಿದಳು. “ನಮ್ಮ ಮನೆಯಲ್ಲಿ ಒಬ್ಬ ದರಿದ್ರ ಕಾಮುಕ ಹುಡುಗನಿದ್ದಾನೆ. ಅವನನ್ನು ಇಂದೇ ನೀನು ನನ್ನ ಮನೆಯಿಂದ ಹೊರಗೆ ಹಾಕು. ಮತ್ತು ನನ್ನ ಮಗಳನ್ನು ತೆಗೆದುಕೋ” ರಾಜಪುತ್ರನ ಸೈನಿಕರು ಲೋಹಜಂಘನನ್ನು ಕೆಸರು ತುಂಬಿದ ಒಂದು ಹೊಂಡಕ್ಕೆ ತಳ್ಳಿದರು. ಕೆಸರಿನಿಂದ ಹೇಗೋ ಮೇಲೆದ್ದು ಅವನು ಓಡಿಹೋದನು. 182 ಕಥಾ ಸಂಸ್ಕೃತಿ ಬಿಸಿಲಿನಲ್ಲಿ ಓಡುತ್ತ ಓಡುತ್ತ ಅವನು ದುಃಖಿತನಾದನು. ಅವನಿಗೆ ದಾರಿಯ ಬದಿಯಲ್ಲಿ ಒಂದು ಸತ್ತ ಆನೆ ಗೋಚರಿಸಿತು. ಅದರ ಶರೀರದ ಒಳಗಿನ ಮಾಂಸವನ್ನೆಲ್ಲ ಹದ್ದುಗಳು ತಿಂದುಹಾಕಿದ್ದವು. ಆದರೆ ಹೊರಗಿನ ಚರ್ಮವು ಹಾಗೆಯೇ ಉಳಿದಿತ್ತು. ಮತ್ತೆಲ್ಲೂ ನೆರಳು ಕಾಣದಿರಲು ಲೋಹಜಂಘನು ಆ ಆನೆಯ ಪೊಳ್ಳುದೇಹವನ್ನು ಹೊಕ್ಕು, ದಣಿವಿನಿಂದಾಗಿ ಹಾಗೆಯೇ ಮಲಗಿಬಿಟ್ಟನು. ಅನಂತರ ಭಾರೀ ಮಳೆ ಬಂದಿತು. ಒದ್ದೆಯಾದ ಆನೆಯ ಚರ್ಮವು ಮದುಡಿಕೊಂಡು ಮುಚ್ಚಿಕೊಂಡಿತು. ಮಳೆಯಿಂದುಂಟಾದ ಪ್ರವಾಹದಲ್ಲಿ ಆನೆಯ ಶರೀರವು ಲೋಹಜಂಘನ ಸಮೇತ ತೇಲಿಹೋಗಿ ಗಂಗಾನದಿಯ ಮೂಲಕವಾಗಿ ಸಮುದ್ರವನ್ನು ತಲುಪಿತು. ಅಲ್ಲಿ ಗರುಡನ ವಂಶಕ್ಕೆ ಸೇರಿದ ಪಕ್ಷಿಯು ಆನೆಯ ಮಾಂಸದ ಲೋಭದಿಂದ ಅದನ್ನು ಎತ್ತಿ ಸಮುದ್ರದಾಚೆ ಒಯ್ದಿತು. ಅಲ್ಲಿ ಹೋದ ಅನಂತರ ಆ ಪಕ್ಷಿಯು ಆನೆಯ ಚರ್ಮವನ್ನು ತನ್ನ ಕೊಕ್ಕಿನಿಂದ ಬಿಡಿಸಿತು. ಆದರೆ ಅದರೊಳಗೆ ಮನುಷ್ಯನಿರುವುದನ್ನು ಕಂಡು ಅಲ್ಲಿಂದ ಹಾರಿ ಹೋಯಿತು. ಲೋಹಜಂಘನು ಚಕಿತನಾಗಿ ಅತ್ತಿತ್ತ ನೋಡುತ್ತಿರುವಾಗ ಅಲ್ಲಿ ಅವನು ಇಬ್ಬರು ರಾಕ್ಷಸರು ನಿಂತಿರುವುದನ್ನು ನೋಡಿದನು. ಅವರಲ್ಲಿ ಒಬ್ಬ ರಾಕ್ಷಸನು ವಿಭೀಷಣನ ಬಳಿ ಹೋಗಿ ಯಾವನೋ ಒಬ್ಬ ಮನುಷ್ಯನು ಬಂದಿರುವುದಾಗಿ ತಿಳಿಸಿದನು. ಲೋಹಜಂಘನನ್ನು ವಿಭೀಷಣನ ಬಳಿ ಕರೆದೊಯ್ದಾಗ ವಿಭೀಷಣನು ಕೇಳಿದನು “ಮಹಾರಾಜರೇ, ತಾವು ಎಲ್ಲಿಂದ ಬಂದಿರಿ?” ಲೋಹಜಂಘನು ತುಂಬ ಧೂರ್ತತೆಯಿಂದ ಉತ್ತರವಿತ್ತನು - “ನನ್ನ ಹೆಸರು ಲೋಹಜಂಘ. ನಾನು ಮಥುರೆಯಲ್ಲಿ ವಾಸ ಮಾಡುತ್ತೇನೆ. ಹಣವನ್ನು ಪಡೆಯಲು ನಿರಾಹಾರಿಯಾಗಿ ಒಂದು ದೇವಾಲಯದಲ್ಲಿ ತಪಸ್ಸು ಮಾಡಿದೆನು. ಭಗವಂತನು ನನ್ನ ಸ್ವಪ್ನದಲ್ಲಿ ಕಾಣಿಸಿಕೊಂಡು ನೀನು ನನ್ನ ಭಕ್ತ ವಿಭೀಷಣನ ಬಳಿ ಹೋಗು, ಅವನು ನಿನಗೆ ಅವಶ್ಯವಾಗಿ ಸಂಪತ್ತನ್ನು ಕೊಡುತ್ತಾನೆ ಎಂದನು” ವಿಭೀಷಣನು ಅವನನ್ನು ಲಂಕೆಯಲ್ಲಿಯೇ ಉಳಿಸಿಕೊಂಡನು. ಮರುದಿನವೇ ಚತುರರಾದ ರಾಕ್ಷಸರನ್ನು ಕಳಿಸಿ ಗರುಡ ವಂಶದಲ್ಲಿ ಉತ್ಪನ್ನವಾದ ಪಕ್ಷಿಯ ಮರಿಯನ್ನು ತರಿಸಿದನು. ಮತ್ತು ಅವನಿಗೆ ಹೇಳಿದನು “ತಾವು ಈ ಪಕ್ಷಿಯ ಮೇಲೆ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಭ್ಯಾಸವಾದ ಮೇಲೆ ಮಥುರೆಗೆ ಸುಲಭವಾಗಿ ಹೋಗಬಹುದು” ಲೋಹಜಂಘನು ಕೆಲದಿನಗಳವರೆಗೆ ಆ ಪಕ್ಷಿಯ ಮರಿಯ ಮೇಲೆ ಸವಾರಿ ಮಾಡುವುದನ್ನು ಅಭ್ಯಾಸ ಮಾಡಿದನು. ಸಮಯ ದೊರೆತಾಗ ಲಂಕೆಯಲ್ಲಿ ಸುತ್ತಾಡಿ ಬರುತ್ತಿದ್ದನು. ಕೆಲದಿನಗಳವರೆಗೆ ಲಂಕೆಯಲ್ಲಿದ್ದು ಅವನು ಮಥುರೆಗೆ ಹೊರಡಲು ಸಿದ್ಧನಾದಾಗ, ವಿಭೀಷಣನು ಅವನಿಗೆ ಬಹುಮೂಲ್ಯ ರತ್ನಗಳನ್ನು ನೀಡಿದನು. ಭಾರತ 183 ನಾರಾಯಣನಿಗೆ ಅವಶ್ಯವಾದ ಬಂಗಾರದ ಶಂಖ, ಚಕ್ರ, ಗದಾ, ಪದ್ಮಗಳನ್ನು ಕೊಟ್ಟನು. ಅನಂತರ ಲಕ್ಷಯೋಜನ ದೂರ ಹಾರಬಲ್ಲ ಗರುಡ ಪಕ್ಷಿಯ ಮೇಲೆ ಕುಳಿತು ಲೋಹಜಂಘನು ಕ್ಷಣದಲ್ಲಿ ಮಥುರೆಯನ್ನು ತಲುಪಿದನು. ಸಂಜೆಯಾಗುತ್ತಲೇ ಅವನು ಹೊಸ ಉಡುಪು, ಆಭರಣ ಧರಿಸಿ, ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದುಕೊಂಡು ಪಕ್ಷಿಯನ್ನು ಏರಿದನು. ನಂತರ ನೇರವಾಗಿ ಹಾರುತ್ತ ಅದೇ ರೂಪಣಿಕಾ ಮನೆಗೆ ಬಂದು ಆಕಾಶದಿಂದಲೇ ಅವಳನ್ನು ಕರೆದು ‘ನಾನು ವಿಷ್ಣು ಬಂದಿದ್ದೇನೆ ನಿನ್ನ ಸಲುವಾಗಿ ಮಾತ್ರ ನಾನು ಈ ಮಥುರಾನಗರಿಗೆ ಬಂದಿದ್ದೇನೆ’- ಎಂದನು. ಆ ರಾತ್ರಿಯನ್ನು ಅಲ್ಲಿ ಕಳೆದು ಬೆಳಿಗ್ಗೆ ಹೊರಟು ಹೋದನು. ಇದರ ಅನಂತರ ರೂಪಣಿಕಾ ತನ್ನನ್ನು ವಿಷ್ಣು ಪತ್ನಿಯೆಂದು ತಿಳಿಯತೊಡಗಿದಳು. ಅನ್ಯ ಮನುಷ್ಯರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಅವಳ ತಾಯಿ ಮಗಳೊಡನೆ ಹೇಳಿದಳು - “ನೀನು ಈಗ ವಿಷ್ಣುವಿನ ಕೃಪೆಯಿಂದ ದೇವಿಯಾಗಿದ್ದೀಯೆ. ನಾನು ನಿನ್ನ ತಾಯಿ. ನಿನ್ನ ಈ ಸೌಭಾಗ್ಯದ ಲಾಭವನ್ನು ನಾನೂ ಪಡೆಯಬಯಸುತ್ತೇನೆ. ನೀನು ನಿನ್ನ ವಿಷ್ಣುವಿಗೆ - ನನ್ನ ತಾಯಿಯನ್ನು ಸ್ವರ್ಗಕ್ಕೆ ಕಳಿಸು - ಎಂದು ಹೇಳು”. ರೂಪಣಿಕಾ ತನ್ನ ತಾಯಿಯ ಪರವಾಗಿ ಪ್ರಾರ್ಥಿಸಿಕೊಂಡಳು. ಅದನ್ನು ಕೇಳಿದ ಲೋಹಜಂಘನು ಹೇಳಿದನು -“ಏಕಾದಶಿಯ ದಿನ ಬೆಳಿಗ್ಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಮೊದಲು ಅದನ್ನು ಶಿವಗಣಗಳು ಪ್ರವೇಶ ಮಾಡುತ್ತಾರೆ. ನಿನ್ನ ತಾಯಿ ತಲೆ ಬೋಳಿಸಿಕೊಂಡು ಮುಂಡಮಾಲೆಯನ್ನು ಧರಿಸಿ ಅರ್ಧ ಮುಖಕ್ಕೆ ಕಾಡಿಗೆಯನ್ನೂ ಅರ್ಧಮುಖಕ್ಕೆ ಸಿಂಧೂರವನ್ನೂ ಬಳಿದುಕೊಳ್ಳಲಿ. ಈ ಅವಸ್ಥೆಯಲ್ಲಿ ಅವಳನ್ನು ನಾನು ಸ್ವರ್ಗಕ್ಕೆ ಕರೆದೊಯ್ಯುವೆನು. ರೂಪಣಿಕಾ ಹಾಗೆಯೇ ಮಾಡಿದಳು. ಲೋಹಜಂಘನು ಅವಳ ಕುಂಟಲಗಿತ್ತಿ ತಾಯಿಯನ್ನು ಕರೆದುಕೊಂಡು ಹಾರಿ, ಒಂದು ದೇವಾಲಯದ ಬಳಿ ಬಂದು ಅಲ್ಲಿನ ಕಂಬವೊಂದಕ್ಕೆ ಅವಳನ್ನು ತೂಗುಹಾಕಿದನು. ಮತ್ತು ಆಕಾಶದಿಂದ ಹೇಳಿದನು. “ಎಲೈ ಮಥುರಾ ವಾಸಿಗಳೇ, ನಿಮ್ಮ ಮೇಲೆ ಮಹಾಮಾರಿ ಅಪ್ಪಳಿಸುವಳು.” ಇದನ್ನು ಕೇಳಿ ಮಥುರಾನಿವಾಸಿಗಳು ಗಾಬರಿಯಾಗಿ ಭಗವಂತನನ್ನು ಸ್ತುತಿಸತೊಡಗಿದು. ಆದರೆ ಮರುದಿನ ಬೆಳಿಗ್ಗೆ ಕಂಬಕ್ಕೆ ತೂಗಾಡುತ್ತಿರುವ ಕುಂಟಲಗಿತ್ತಿಯನ್ನು ನೋಡಿ ಎಲ್ಲರೂ ಅವಳನ್ನು ಗುರುತಿಸಿದಾಗ ಅವರ ಭಯ ದೂರವಾಯಿತು. ಅವರೆಲ್ಲರೂ ನಗತೊಡಗಿದರು. ಈ ಸಮಾಚಾರವು ರಾಜನ ಕಿವಿಯನ್ನು ತಲುಪಿತು. ರಾಜನು ತಕ್ಷಣ ಒಂದು ಡಂಗುರವನ್ನು ಹೊಡೆಸಿದನು. ‘ಎಲ್ಲರನ್ನೂ ಪೀಡಿಸುತ್ತಿದ್ದ ಈ ಕುಂಟಲಗಿತ್ತಿಗೆ 184 ಕಥಾ ಸಂಸ್ಕೃತಿ ಯಾರು ಈ ಪ್ರಾಯಶ್ಚಿತ್ತ ಮಾಡಿದವರು. ಅವರು ಧೈರ್ಯದಿಂದ ಎದುರಿಗೆ ಬರಬೇಕು. ಆಗ ಲೋಹಜಂಘನು ಎಲ್ಲ ವೃತ್ತಾಂತವನ್ನೂ ರಾಜನಿಗೆ ಹೇಳಿ, ಅವನಿಗೆ ಶಂಖ ಚಕ್ರ ಗದಾ ಪದ್ಮಗಳನ್ನು ನೀಡಿದನು. ಲೋಹಜಂಘನು ಹೀಗೆ ಪ್ರತಿಕಾರ ತೀರಿಸಿದ ಅನಂತರ, ರಾಜನ ಆಜ್ಞೆಯಂತೆ ರೂಪಣಿಕಾಳೊಂದಿಗೆ ಸುಖವಾಗಿದ್ದನು. ಹೀಗೆ ವಸಂತಕನು ಈ ಕತೆಯನ್ನು ಮುಗಿಸಿದನು. ಈ ಕತೆಯನ್ನು ಕೇಳಿದ ವಾಸವದತ್ತೆಯು ತುಂಬ ಸಂತೋಷಗೊಂಡಳು, ಮತ್ತು ಬಂಧನದಲ್ಲಿದ್ದ ಉದಯನನೊಂದಿಗೆ ಆನಂದದಿಂದ ಇರತೊಡಗಿದಳು. ಭಾರತ 185 ಶಸ್ತ್ರ ಸಹಾಯ ಮತ್ತು ವಿನಮ್ರತೆ (`ಮಹಾಭಾರತ'ದಿಂದ) ಮಹಾಭಾರತವು ಪ್ರಾಚೀನ ಭಾರತೀಯ ಸಂಸ್ಕೃತಿ ಜ್ಞಾನ-ವಿಜ್ಞಾನ ಮತ್ತು ಇತಿಹಾಸದ ಒಂದು ಅಪೂರ್ವವಾದ ಗಟ್ಟಿಯಾದ ಭಂಡಾರ. ಇದರ ರಚನಾಕಾಲವು ಕ್ರಿ.ಪೂ. 1400 ವರ್ಷಗಳಷ್ಟು ಹಿಂದೆ ಎಂದು ಭಾವಿಸಲಾಗಿದೆ. ಇಲ್ಲಿ ತೆಗೆದುಕೊಂಡ ಮಹಾಭಾರತದ ಘಟನೆಗಳನ್ನು ಕತೆಯರೂಪದಲ್ಲಿ ಪುನರ್ಲೇಖನ ಮಾಡಲಾಗಿದೆ. ಆ ಸಮಯದಲ್ಲಿದ್ದಂತೆಯೇ ಇಂದಿನ ರಾಜಕೀಯ ಸಂದರ್ಭದಲ್ಲಿಯೂ ಈ ಕತೆ ತುಂಬ ಮಹತ್ವಪೂರ್ಣವಾಗಿದೆ. ಪಾಂಚಾಲದೇಶದ ರಾಜ ದ್ರುಪದ ಮತ್ತು ದ್ರೋಣರು ಆತ್ಮೀಯ ಮಿತ್ರರಾಗಿದ್ದರು. ಅವರು ಸಹಪಾಠಿಗಳಾಗಿದ್ದರು. ದ್ರುಪದ-ದ್ರೋಣರ ನಡುವಣ ಗೆಳೆತನ ಎಷ್ಟೊಂದು ಗಾಢವಾಗಿತ್ತೆಂದರೆ ದ್ರುಪದನು ದ್ರೋಣನಿಗೆ ಹೇಳಿದನು.- “ನಾನು ಪಾಂಚಾಲದೇಶದ ಸಿಂಹಾಸನವನ್ನು ಏರುತ್ತಲೇ ನನ್ನ ಅರ್ಧ ರಾಜ್ಯವನ್ನು ನಿನಗೆ ಕೊಡುತ್ತೇನೆ. ಇದರಿಂದ ನನ್ನ-ನಿನ್ನ ನಡುವಣ ಮೈತ್ರಿ ಅವಿಚ್ಛಿನ್ನವಾಗಿ ಉಳಿಯುತ್ತದೆ.” ದ್ರೋಣನು ಬ್ರಾಹ್ಮಣನಾಗಿದ್ದನು. ಅವನು ಭರದ್ವಾಜ ಮುನಿಯ ಮಗ- ಮುನಿಭರದ್ವಾಜರು ಅನ್ಯ ಕ್ಷತ್ರಿಯ ಕುಮಾರರಂತೆಯೇ ತಮ್ಮ ಮಗನಿಗೂ ಎಲ್ಲ ವಿದ್ಯೆಗಳನ್ನು ಕಲಿಸಿದ್ದರು. ವೇದ-ವೇದಾಂಗಗಳನ್ನು ಅಧ್ಯಯನ ಮಾಡಿ ಮುಗಿಸಿದ ಅನಂತರ ದ್ರೋಣಾಚಾರ್ಯನು ಕೃಪಾಚಾರ್ಯರ ಸೊದರಿಯನ್ನು ಮದುವೆಯಾದನು. ಅವನಿಗೊಬ್ಬ ಮಗನು ಜನಿಸಿದನು. ಆದರೆ ದ್ರೋಣನ ಆರ್ಥಿಕ ಸ್ಥಿತಿ ಬಿಗಡಾಯಿಸಿತು. ಆಗ ದ್ರುಪದನ ಮಾತನ್ನು ನೆನಪಿಸಿಕೊಂಡು ಅವನು ಪಾಂಚಾಲಕ್ಕೆ ಹೋದನು. ಆದರೆ ಅಲ್ಲಿ ಅವನ ಆತ್ಮೀಯ ಮಿತ್ರನಾಗಿದ್ದ ದ್ರುಪದನು ಅವನಿಗೆ ತುಂಬ ಅವಮಾನ ಮಾಡಿ, ಚೆನ್ನಾಗಿ ಹೊಡೆದು ಹೊರ ತಳ್ಳಿಸಿದನು. ದ್ರೋಣನಿಗೆ ಇದರಿಂದ ತುಂಬ ವೇದನೆಯಾಯಿತು. ಮೇಲಿಂದ ಹಸಿವಿನಿಂದ ನರಳುವಿಕೆ ಬೇರೆ, ಬಾಲಕ ಅಶ್ವತ್ಥಾಮನು ಹಸಿವಿನಿಂದ ಆಕ್ರಂದನ ಮಾಡುವುದನ್ನು ಅವನಿಂದ ನೋಡಲಾಗದೆ, ಅವನು ಭಿಕ್ಷಾಟನೆಗೆಂದು ಹೊರಟ. ಅವನು ಹೋಗುತ್ತಿದ್ದ ಅಡವಿಯಲ್ಲಿ ಭಿಕ್ಷೆಯಾದರೂ ಎಲ್ಲಿ ಸಿಗಬೇಕು? ಅಲ್ಲಿಯೇ ಅವನಿಗೆ ಪರಶುರಾಮರ 186 ಕಥಾ ಸಂಸ್ಕೃತಿ ಆಶ್ರಮ ಸಿಕ್ಕಿತು. ಪರಶುರಾಮರು ಇತ್ತೀಚೆಗೆ ತನ್ನಲ್ಲಿದ್ದ ಎಲ್ಲವನ್ನು ದಾನ ಮಾಡುತ್ತಿದ್ದ ಸಂಗತಿಯೂ ತಿಳಿಯಿತು. ದ್ರೋಣ ಅಲ್ಲಿಗೆ ಹೋಗಿ ಭಿಕ್ಷೆಯನ್ನು ಯಾಚಿಸಿದನು. ಆಗ ಪರಶುರಾಮನು ಹೇಳಿದನು - “ನನ್ನಲ್ಲಿರುವ ಸಂಪೂರ್ಣ ಸಂಪತ್ತನ್ನೂ ನಾನು ಕೊಟ್ಟುಬಿಟ್ಟು ತುಂಬದಿನಗಳಾದವು. ಈಗ ನನ್ನ ಬಳಿ ಏನೂ ಉಳಿದುಕೊಂಡಿಲ್ಲ.” ನಿರಾಶನಾಗಿ ದ್ರೋಣನು ಹೊರಡಲು ಸಿದ್ಧನಾದಾಗ ಪರಶುರಾಮನಿಗೆ ತುಂಬ ಕೆಡುಕೆನಿಸಿತು. ಒಬ್ಬ ಬ್ರಾಹ್ಮಣನು ಅವನಿಂದ ಏನನ್ನೂ ಪಡೆದುಕೊಳ್ಳದೆ ಹಿಂತಿರುಗುವುದು ಅವನಿಗೆ ಸರಿಕಾಣಲಿಲ್ಲ. ಆಗ ಅವನು ದ್ರೋಣನನ್ನು ಮರಳಿ ಕರೆದು ಹೇಳಿದನು-“ ಈಗ ನನ್ನ ಬಳಿ ಈ ಕೆಲವು ದಿವ್ಯಾಸ್ತ್ರಗಳು ಉಳಿದುಕೊಂಡಿವೆ. ಮತ್ತೂ ಕೆಲವು ಅಸ್ತ್ರ-ಶಸ್ತ್ರಗಳೂ ಇವೆ.........ನೀವು ಅವನ್ನು ತೆಗೆದುಕೊಳ್ಳಿ” ಪರಶುರಾಮ ತನ್ನಲ್ಲಿದ್ದ ಎಲ್ಲ ಅಸ್ತ್ರ-ಶಸ್ತ್ರಗಳನ್ನೂ ದಿವ್ಯಾಸ್ತ್ರಗಳನ್ನೂ ದ್ರೋಣನಿಗೆ ಕೊಡುತ್ತ ಹೇಳಿದನು-“ ಈಗ ನಾನು ಇವನ್ನಷ್ಟೇ ಕೊಡಬಲ್ಲೆ. ಇದನ್ನೇ ನೀವು ನಾನು ಮಾಡಿದ ಸಹಾಯವೆಂದು ಪರಿಗ್ರಹಿಸಿ” ಅಸ್ತ್ರ ಶಸ್ತ್ರಗಳು ಶಕ್ತಿ ಶಾಲಿಯಾಗುವಂತಹ ಹಲವು ಮಂತ್ರಗಳನ್ನೂ ಕೊಟ್ಟಿದ್ದಲ್ಲದೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ವಿಧಾನದಲ್ಲಿ ತರಬೇತಿಯನ್ನು ದ್ರೋಣನಿಗೆ ನೀಡಿದನು. ಮಹಾಭಾರತ ಯುದ್ಧ ಪ್ರಾರಂಭವಾದಾಗ, ಐದು ದಿನಗಳ ಕಾಲ ಸೇನಾಪತಿಗಳಾಗಿದ್ದ ದ್ರೋಣಾಚಾರ್ಯನು ಪಾಂಡವ ಸೇನೆಯಲ್ಲಿ ಹಾಹಾಕಾರವುಂಟಾಗುವಂತೆ ಮಾಡಿದನು. ಹಸಿವಿನಿಂದ ಪೀಡಿತನಾಗಿ ಅನ್ನವನ್ನು ಭಿಕ್ಷೆ ಕೇಳಲು ಹೋದಾಗ, ಪರಶುರಾಮನು ನೀಡಿದ್ದ ದಿವ್ಯಾಸ್ತ್ರಗಳು ಮಂತ್ರಪೂರಿತ ಬ್ರಹ್ಮಾಸ್ತ್ರ ಹಾಗೂ ಇತರ ಅಸ್ತ್ರಗಳ ನೆರವಿನಿಂದಲೇ ದ್ರೋಣಾಚಾರ್ಯನು ಕೌರವನಿಗಾಗಿ ಇಷ್ಟನ್ನೆಲ್ಲ ಮಾಡಿದ್ದನು. ಕುರುಕ್ಷೇತ್ರದಲ್ಲಿ ಕೌರವ ಪಾಂಡವ ಎರಡೂ ದಳಗಳು ಯುದ್ಧಕ್ಕಾಗಿ ಸನ್ನದ್ಧವಾಗಿದ್ದವು. ಸೇನೆಗಳು ವ್ಯೂಹವನ್ನು ರಚಿಸಿದವು. ಯುದ್ಧವು ಪ್ರಾರಂಭವಾಗಲು ಹೆಚ್ಚು ಸಮಯ ಇರಲಿಲ್ಲ. ಆಗ ಧರ್ಮರಾಜ ಯುಧಿಷ್ಠಿರನು ತನ್ನ ಕವಚಗಳನ್ನು ತೆಗೆದು ರಥದಲ್ಲಿಟ್ಟು, ಅಸ್ತ್ರ-ಶಸ್ತ್ರಗಳನ್ನು ತೆಗೆದಿಟ್ಟು, ರಥದಿಂದಿಳಿದು ಕಾಲುನಡಿಗೆಯಲ್ಲೇ ಕೌರವ ಸೈನ್ಯದಲ್ಲಿದ್ದ ಭೀಷ್ಮ ಪಿತಾಮಹನನ್ನು ಕಾಣಲು ಹೋದನು. ಯುಧಿಷ್ಠಿರನು ಹೀಗೆ ಶಸ್ತ್ರವಿಲ್ಲದೆ ಕಾಲುನಡಿಗೆಯಲ್ಲಿ ಶತ್ರು ಸೈನ್ಯದ ಕಡೆ ಹೊರಟಿರುವುದನ್ನು ಕಂಡು ಅರ್ಜುನ, ಭೀಮಸೇನ, ನಕುಲ, ಸಹದೇವ ಹಾಗೂ ಶ್ರೀಕೃಷ್ಣನೂ ಅವರೊಂದಿಗೆ ನಡೆದರು. ಚಿಂತಿತನಾದ ಅರ್ಜುನನು ಕೇಳಿದನು - “ಮಹಾರಾಜಾ, ನೀವಿದೇನು ಮಾಡುತ್ತಿದ್ದೀರಿ?”. ಭಾರತ 187 ಯುಧಿಷ್ಠಿರನು ಯಾರಿಗೂ ಏನೂ ಉತ್ತರ ಕೊಡಲಿಲ್ಲ. ಅತ್ತ ಕೌರವ ದಳದಲ್ಲಿ ಹರ್ಷ ಮಿಶ್ರಿತ ಕೋಲಾಹಲವೆದ್ದಿತು. ಜನರು ಹೇಳತೊಡಗಿದರು - “ಯುಧಿಷ್ಠಿರನು ಅಂಜುಕುಳಿ. ನಮ್ಮ ಸೈನ್ಯವನ್ನು ಕಂಡು ಭಯಪಟ್ಟು ಭೀಷ್ಮನಿಗೆ ಶರಣಾಗಲು ಬರುತ್ತಿದ್ದಾನೆ” ಭೀಷ್ಮನನ್ನು ತನ್ನತ್ತ ಒಡೆದುಕೊಳ್ಳುವ ಹುನ್ನಾರವಿರಬೇಕು ಎಂದು ಕೆಲವರು ಆಡಿಕೊಂಡರು. ಯುಧಿಷ್ಠಿರನು ನೇರವಾಗಿ ಭೀಷ್ಮ ಪಿತಾಮಹನ ಬಳಿಹೋಗಿ ಅವನಿಗೆ ನಮಸ್ಕರಿಸಿ ಹೇಳಿದನು -“ಪಿತಾಮಹ, ನಾವು ನಿಮ್ಮೊಂದಿಗೆ ಯುದ್ಧ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ನೀವು ನಮಗೆ ಆಜ್ಞೆಯನ್ನೂ ಆಶೀರ್ವಾದವನ್ನೂ ನೀಡಿ.” ಭೀಷ್ಮನು ಹೇಳಿದನು -“ಯುಧಿಷ್ಠಿರ, ನೀನು ಹೀಗೆ ನನ್ನ ಬಳಿ ಬಂದು ನನ್ನಿಂದ ಯುದ್ಧಕ್ಕೆ ಅನುಮತಿಯನ್ನು ಕೇಳದೇ ಇದ್ದಿದ್ದರೆ, ನಾನು ನಿನಗೆ ಸೋಲುಂಟಾಗಲೆಂದು ಶಾಪ ಕೊಡುತ್ತಿದ್ದೆ. ನಡೆ, ಯುದ್ಧಮಾಡು, ವಿಜಯಿಯಾಗು. ಮನುಷ್ಯನು ಹಣದ ದಾಸ, ಹಣ ಯಾರ ದಾಸನೂ ಅಲ್ಲ. ನನ್ನನ್ನು ಹಣದ ಮೂಲಕ ಕೌರವರು ವಶದಲ್ಲಿಟ್ಟುಕೊಂಡಿದ್ದಾರೆ. ಆದ್ದರಿಂದಲೇ ನಾನು ನಪುಂಸಕನಂತೆ ಮಾತನಾಡುತ್ತಿದ್ದೇನೆ. ನಿನ್ನ ಪಕ್ಷದಿಂದ ಯುದ್ಧ ಮಾಡುವುದೊಂದನ್ನು ಬಿಟ್ಟು ನೀನು ನನ್ನಿಂದ ಬೇರೇನು ಬೇಕಾದರೂ ಕೇಳು.” “ನೀವು ಅಜೇಯರು. ಆದ್ದರಿಂದ ನಿಮ್ಮನ್ನು ನಾನು ಈ ಯುದ್ಧದಲ್ಲಿ ಸೋಲಿಸುವ ಸಾಧ್ಯತೆ ಹೇಗೆ?” ಹೀಗೆ ಧರ್ಮರಾಜನು ಕೇಳುತ್ತಲೇ ಭೀಷ್ಮನು ‘ನೀನು ಇನ್ನೊಮ್ಮೆ ನನ್ನನ್ನು ಬಂದು ಕೇಳು’ ಎಂದುಬಿಟ್ಟನು. ಅನಂತರ ಯುಧಿಷ್ಠಿರನು ಆಚಾರ್ಯ ದ್ರೋಣರಿದ್ದಲ್ಲಿಗೆ ಹೋಗಿ ನಮಸ್ಕರಿಸಿ ಯುದ್ಧಕ್ಕೆ ಅನುಮತಿಯನ್ನು ಕೇಳಿದನು. ಆಚಾರ್ಯ ದ್ರೋಣರು ಅದೇ ಮಾತನ್ನು ಹೇಳಿ ಆಶೀರ್ವದಿಸಿದರು. ಆದರೆ ಯುಧಿಷ್ಠಿರನು ಆಚಾರ್ಯರೊಡನೆ ಅವರ ಪರಾಜಯದ ಉಪಾಯವನ್ನು ಕೇಳಿದಾಗ ದ್ರೋಣನು ಸ್ಪಷ್ಟವಾಗಿ ಹೇಳಿದನು - “ನನ್ನ ಕೈಯಲ್ಲಿ ಶಸ್ತ್ರಗಳು ಇರುವವರೆಗೆ ಯಾರೂ ನನ್ನನ್ನು ಸೋಲಿಸಲಾರರು. ಆದರೆ ಯಾವುದೇ ವಿಶ್ವಸನೀಯ ವ್ಯಕ್ತಿಯ ಮೂಲಕ ಯುದ್ಧದಲ್ಲಿ ಯಾವುದಾದರೂ ಅಪ್ರಿಯ ಸಮಾಚಾರವನ್ನು ಕೇಳಿದರೆ, ನಾನು ಬಿಲ್ಲನ್ನು ತೆಗೆದಿಟ್ಟು ಧ್ಯಾನಸ್ಥನಾಗುವುದು ನನ್ನ ಸ್ವಭಾವ. ಆಗ ನನ್ನನ್ನು ಕೊಲ್ಲಬಹುದು. ಅಲ್ಲಿಂದ ಧರ್ಮರಾಜನು ಕೃಪಾಚಾರ್ಯನ ಬಳಿ ಹೋದನು. ಅವರಿಗೆ ನಮಸ್ಕರಿಸಿ ಯುದ್ಧಕ್ಕೆ ಅನುಮತಿ ಕೇಳಿದಾಗ ಅವನೂ ಹಾಗೆಯೇ ಎಲ್ಲವನ್ನೂ ಹೇಳಿದನು. ಆದರೆ ತನ್ನ ಕುಲಗುರುವಾದ ಅವರಿಂದ ಅವರ ಮೃತ್ಯುವಿನ ಉಪಾಯವನ್ನು ಧರ್ಮರಾಜನು ಕೇಳದಾದನು. ಆದರೂ ಈ ದಾರುಣವಾದ ಕಥಾ ಸಂಸ್ಕೃತಿ 188 ಮಾತನ್ನು ಕೇಳುತ್ತ ಕೇಳುತ್ತ ಅವನು ಅತ್ತುಬಿಟ್ಟನು. ಕೃಪಾಚಾರ್ಯನಿಗೆ ಅವನ ಮನಸ್ಸಿನ ದ್ವಂದ್ವ ಅರ್ಥವಾಯಿತು. ಅವನು ಹೇಳಿದನು - “ರಾಜಾ ನಾನು ಅವಧ್ಯನು. ಆದರೆ ನಾನು ನಿನ್ನ ವಿಜಯಕ್ಕೆ ಅಡ್ಡಿಯಾಗುವುದಿಲ್ಲ.” ಅನಂತರ ಯುಧಿಷ್ಠಿರನು ಮಾವ ಶಲ್ಯನ ಬಳಿ ಹೋದನು -“ಶಲ್ಯನೂ ಆಶೀರ್ವಾದ ಮಾಡಿದನು ಮತ್ತು ಕರ್ಣನ ಉತ್ಸಾಹ ಭಂಗವನ್ನು ಮಾಡುತ್ತಿರುವುದಾಗಿ ವಚನವಿತ್ತನು. ಹೀಗೆ ಗುರು ಜನರಿಗೆ ನಮಸ್ಕರಿಸಿ, ಅವರಿಂದ ಅನುಮತಿಯನ್ನು ವಿಜಯದ ಆಶೀರ್ವಾದವನ್ನೂ ಪಡೆದು ಯುಧಿಷ್ಠಿರನು ತಮ್ಮಂದಿರೊಂದಿಗೆ ತನ್ನ ಸೈನ್ಯಕ್ಕೆ ಮರಳಿ ಬಂದನು. ಅವನ ಈ ವಿನಮ್ರತೆಯು ಭೀಷ್ಮ, ದ್ರೋಣ ಮುಂತಾದವರ ಮನದಲ್ಲಿ ಸಹಾನುಭೂತಿಯನ್ನು ಮೂಡಿಸಿತು. ಅವರ ಈ ಸಹಾನುಭೂತಿಯಿಲ್ಲದಿದ್ದರೆ ಪಾಂಡವರ ವಿಜಯವು ಸಂಧಿಗ್ದವೇ ಆಗಿತ್ತು. ಮೂರನೆಯ ಖಂಡ ವಿದೇಶೀ ಪೌರಾಣಿಕ ಕತೆಗಳು 190 ಕಥಾ ಸಂಸ್ಕೃತಿ ಸುಮೇರಿಯನ್ ಕತೆ (ಇರಾಕ್) 191 ಗಿಲ್‍ಗಮಿಶ್‍ನ ಮಹಾಗಾಥೆ - ಭಗವತ ಶರಣ ಉಪಾಧ್ಯಾಯ ಜಲಪ್ರಳಯದ ಕತೆಗಳು. ಜಗತ್ತಿನ ಪ್ರಾಯಶಃ ಎಲ್ಲ ಪ್ರಾಚೀನ ಜಾತಿಗಳ ಸಾಹಿತ್ಯದಲ್ಲಿ ಅಂಕಿತವಾಗಿವೆ. ಈಗ ಈ ಜಲಪ್ರಳಯದ ಮೂಲಸ್ಥಾನವನ್ನು ಕೂಡ ಸರ್ ಲಿಯೋನಾರ್ಡ ವೂಲಿ ದಜಲಾಫರಾತ್‍ನ ಕೆಳಗಿನ ಸಂಗಮದಲ್ಲಿ ಕಂಡು ಹಿಡಿದಿದ್ದಾರೆ. ಇಲ್ಲಿ ನಾವು ಪ್ರಾಚೀನತಮವಾದ ಸುಮೇರು - ಅಕ್ಕಾದಿ ಜಲಪ್ರಳಯದ ಕತೆಯನ್ನು ಕೊಡುತ್ತಿದ್ದೇವೆ. ಇದರ ಅಂತರಂಗವೆಂದರೆ ಗಿಲಗಮಿಶ್‍ನ ವೀರಗಾಥೆ. ಸನ್ 1872 ರಲ್ಲಿ ಜಾರ್ಜ್ ಸ್ಮಿಥ್‍ರಿಗೆ ನಿನೆವೆಯ ಬಿದ್ದಮನೆಯ ಇಟ್ಟಿಗೆಗಳಲ್ಲಿ 12 ಇಟ್ಟಿಗೆಗಳು (ಪಟ್ಟಿಕೆ) ಸಿಕ್ಕಿದವು. ಅದರಲ್ಲಿ ಹನ್ನೊಂದನೆಯದರ ಮೇಲೆ ಜಲಪ್ರಳಯದ ಕತೆಯನ್ನು ಕೀಲಾಕ್ಷರಗಳಲ್ಲಿ ಕೊರೆಯಲಾಗಿದೆ. ಈ ಬರೆಹ ಕ್ರಿ.ಶ.ಪೂ. 660ರ ಸುಮಾರಿನದು. ಆದರೆ ಕನಿಷ್ಠಪಕ್ಷ ಇದು ಕ್ರಿ.ಪೂ. 2000 ವರ್ಷಗಳಷ್ಟು ಹಿಂದೆ ಬರೆಯಲಾದ ಗಾಥೆಯ ಪ್ರತಿಲಿಪಿ ಮಾತ್ರ. ಜಲಪ್ರಳಯದ ಈ ಆದಿಮ ಘಟನೆ, ಅಕ್ಕಾದಿ ಬಾಬುಲಿ ಕತೆಯ ಮೂಲಸ್ಥಾನ ಸುಮೇರಿ ನಗರಗಳಾದ ಸಿಪ್ಪರ್, ಊರ, ಉರುಕ ಮುಂತಾದವುಗಳಲ್ಲಿ ಘಟಿತವಾದವು. ಮಾನವ ಜಾತಿಯ ಪ್ರಥಮ ಮಹಾಗಾಥೆ, ‘ಗಿಲಗಮಿಶ್’ನ ನಾಯಕ ಒಬ್ಬ ಅತ್ಯಂತ ಶಕ್ತಿಶಾಲಿ, ಸಾಹಸೀ ಯೋಧನಾಗಿದ್ದ. ರೋಗದ ಔಷಧ ಜ್ಞಾನಕ್ಕಾಗಿ ಅವನು ತನ್ನ ಪೂರ್ವಜ ಶಿಲ್ನಪಿಶ್ತಿ (ನುಹ್ನಪಿ-ಶ್ತಿಮ, ಮೂಲ ಸುಮೇರಿ ವೀರ ಜಿಉಸುದ್ದೂ)ಯ ಶೋಧಕ್ಕಾಗಿ ಹೊರಡುತ್ತಾನೆ. ಫರಾತದ ಮುಖಜ ಪ್ರದೇಶದಲ್ಲಿ ಶಿಲ್ನಪಿಶ್ತಿ ಅವನೊಂದಿಗೆ ಜಲಪ್ರಳಯದ ಕತೆ ಹೇಳುತ್ತಾನೆ. ಇಲ್ಲಿ ಗಿಲಗಮಿಶ್‍ನ ಮೂಲಕತೆಯ ರೂಪಾಂತರವನ್ನು ಪ್ರಸ್ತುತಪಡಿಸಲಾಗಿದೆ. ಇದು ನಾಗರಿಕತೆಯ ಮೊದಲ ಮಹಾಗಾಥೆ. ಕುಲಾಬನ ಒಡೆಯ, ಯುರುಕ್‍ನ ಸಾಮ್ರಾಟ ಗಿಲ್‍ಗಮಿಶ್‍ನನ್ನು ಎಷ್ಟು ಹೊಗಳಿದರೂ ಕಡಿಮೆಯೇ ಸರಿ. ವಿಶ್ವದ ಪ್ರತಿಯೊಂದು ವಸ್ತುವಿನ ಬಗೆಗೆ ತಿಳಿದಿದ್ದ ಅವನು ವಿಶಿಷ್ಟ ಮನುಷ್ಯನಾಗಿದ್ದ. ಜಗತ್ತಿನ ಎಲ್ಲ ದೇಶಗಳ ಪರಿಚಯವಿರುವ ಸಾಮ್ರಾಟನಾಗಿದ್ದ. ಅವನು ತುಂಬ ಚತುರನೂ, ದೊಡ್ಡ ವಿದ್ವಾಂಸನೂ, ಅಧಿಕ ಶಕ್ತಿಶಾಲಿಯೂ, ಜಗತ್ತಿನ ಅನೇಕ ರಹಸ್ಯಗಳನ್ನು ಬಲ್ಲವನೂ ಆಗಿದ್ದನು. ಅವನ 192 ಕಥಾ ಸಂಸ್ಕೃತಿ ಶರೀರದ ಎರಡು ಮೂರಂಶ ಭಾಗದಲ್ಲಿ ಭಗವಂತನೇ ವಾಸವಾಗಿದ್ದಾನೆಂದು ಅನಿಸುತ್ತಿತ್ತು. ಯುರುಕ್‍ನಲ್ಲಿ ಅವನು ಒಂದು ದೊಡ್ಡ ಗೋಡೆಯನ್ನು ಹಾಗೂ ಈನಾ ಮಂದಿರವನ್ನು ಕಟ್ಟಿಸಿದ್ದನು. ಅಲ್ಲಿ ಅನು (ಸರ್ವೋಚ್ಛ ಸತ್ತೆ - ದೇವರ ದೇವರು) ಮತ್ತು ಇಶ್ತರ್ (ಪ್ರೇಮ ಮತ್ತು ಯುದ್ಧದ ದೇವಿ - ಸ್ವರ್ಗದ ರಾಣಿಯೆಂದೂ ಕರೆಯಲಾಗುತ್ತಿತ್ತು.) ರ ವಿಶಾಲವಾದ ಪ್ರತಿಮೆಗಳನ್ನು ಸ್ಥಾಪಿತಗೊಳಿಸಿದ್ದ. ಒಮ್ಮೆ ಹೀಗಾಯಿತು, ಗಿಲ್‍ಗಮಿಶ್ ವಿಶ್ವ ವಿಜಯಕ್ಕಾಗಿ ಹೊರಟ. ಯುರುಕ್‍ಗೆ ಮರಳಿ ಬರುವವರೆಗೆ ಅವನನ್ನು ಇದಿರಿಸುವ ಯಾವ ವೀರನೂ ಸಿಗಲಿಲ್ಲ. ಇದು ಅವನಿಗೆ ರೋಮಾಂಚಕಾರಿಯೂ ಧೈರ್ಯ ಹೆಚ್ಚಿಸುವ ಸಂಗತಿಯೂ ಆಗಿತ್ತು. ಅವನು ಕುಮಾರಿ ಕನ್ಯೆಯರ ಕೌಮಾರ್ಯ ಭಂಗ ಮಾಡಿದ. ಯೋಧರ ಹೆಣ್ಣುಮಕ್ಕಳನ್ನು ತನ್ನ ಬಯಕೆಯ ಬಲಿಯಾಗಿಸಿದ. ಅವರ ಪತ್ನಿಯರನ್ನು ತನ್ನ ಪ್ರೇಮಿಕೆಯರನ್ನಾಗಿಸುವುದರಲ್ಲಿಯೂ ಅವನು ಹಿಂಜರಿಯಲಿಲ್ಲ. ಜನರೆಲ್ಲ ತ್ರಾಹಿ ತ್ರಾಹಿ ಎಂದು ಕೂಗಿದರು. ದೇವೀ ದೇವತೆಗಳಿಗೆ ಜನರ ಅಳುವಿಕೆಯ ದನಿ ಕೇಳಿದಾಗ, ಅವರು ಚಿಂತಿತರಾದರು. ಅವರು ಈ ವಿಲಕ್ಷಣ ಪ್ರಚಂಡ ವ್ಯಕ್ತಿಯನ್ನು ಮುಗಿಸುವ ಬಗೆಗೆ, ಅಥವಾ ಸಾಧಾರಣ ಮನುಷ್ಯನನ್ನಾಗಿ ಬದಲಾಯಿಸುವ ಬಗೆಗೆ ಆಲೋಚಿಸತೊಡಗಿದರು. ಕೊನೆಯಲ್ಲಿ ಅನು ಸಾಕಷ್ಟು ತರ್ಕ-ವಿತರ್ಕ ಮಾಡಿದ ಅನಂತರ ಎಂಕಿಡೂ (ಆಕಾಶದೇವತೆ)ವಿಗೆ ಜನ್ಮಕೊಟ್ಟು ಭೂಮಿಗೆ ಕಳಿಸಿದಳು. ಎಂಕಿಡೂ ಪಶುವಿನಂತೆ ಸಂಪೂರ್ಣ ಅಡವಿಯ ಆದಿಮ ಮನುಷ್ಯನಾಗಿದ್ದ. ಅವನಿಗೆ ಹೆಂಗಸರಂತೆ ಉದ್ದನೆಯ ಕೂದಲುಗಳಿದ್ದವು. ಅವನಿಗೆ ಮನುಷ್ಯನಾಗಿ, ಮನುಷ್ಯನ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ವಿಕಾಸದ ಬಗೆಗಾಗಲಿ ಏನೂ ತಿಳಿದಿರಲಿಲ್ಲ. ಅವನು ಅಡವಿಯ ಪ್ರಾಣಿಗಳಂತೆ ಹುಲ್ಲು ಮೇಯುತ್ತ ಅವುಗಳೊಂದಿಗೆ ಇದ್ದ. ಒಂದು ಬಾರಿ ಒಬ್ಬ ಬೇಟೆಗಾರನು ಬೇಟೆಯಾಡಲು ಅಡವಿಗೆ ಬಂದ. ಅವನಿಗೆ ಎಂಕಿಡೂ ಭೇಟಿಯಾದಾಗ ಅವನು ಭಯಭೀತನಾದ. ಕೈಗೆ ಸಿಕ್ಕ ಬೇಟೆಯನ್ನು ತೆಗೆದುಕೊಂಡು ಅವನು ಮರಳಿಬಂದುಬಿಟ್ಟ. ಹೆದರಿಕೆಯಿಂದ ಅವನ ಬಾಯಿಂದ ಮಾತುಗಳು ಹೊರಡುತ್ತಿರಲಿಲ್ಲ. ನಡುಗುತ್ತ ತೊದಲುತ್ತ ಅವನು ತನ್ನ ತಂದೆಯೊಡನೆ ಹೇಳಿದ. - “ಅಡವಿಯಲ್ಲಿ ನಾನೊಬ್ಬ ಅದ್ಭುತ ಮನುಷ್ಯನನ್ನು ನೋಡಿರುವೆ. ಅವನು ಪ್ರಾಣಿಗಳೊಂದಿಗೆ ವಾಸವಾಗಿದ್ದಾನೆ. ಅವುಗಳಂತೆಯೇ ಹುಲ್ಲು-ಚಿಗುರು ತಿನ್ನುತ್ತಾನೆ. ಅವನನ್ನು ನೋಡಿದರೆ ಅವನೊಬ್ಬ ಅವತಾರೀ ವ್ಯಕ್ತಿಯ ಹಾಗೆ ಕಾಣುತ್ತಾನೆ.” ಸುಮೇರಿಯನ್ ಕತೆ (ಇರಾಕ್) 193 ತಂದೆ ಹೇಳಿದ - “ಮಗನೇ, ಗಿಲ್‍ಗಮಿಶ್‍ನ ಬಳಿ ಹೋಗಿ ಈ ಅಪರಿಚಿತ ಅಡವಿ ಮನುಷ್ಯನ ಬಗೆಗೆ ಸೂಚನೆ ಕೊಡು. ಜೊತೆಗೆ ಅವನನ್ನು ಬಲೆಗೆ ಬೀಳಿಸಲು ಪ್ರೇಮಮಂದಿರದಿಂದ ಒಬ್ಬ ದೇವದಾಸಿಯನ್ನು ಕರೆದುಕೊಂಡು ಹೋಗು.” ಬೇಟೆಗಾರನು ಯುರುಕ್‍ಗೆ ಹೋಗಿ ಗಿಲ್‍ಗಮಿಶ್‍ನಿಗೆ ಎಲ್ಲ ವಿಷಯಗಳನ್ನು ತಿಳಿಸಿದನು. ಗಿಲ್‍ಗಮಿಶ್ ಹೇಳಿದ - “ನೀನು ದೇವದಾಸಿಯನ್ನು ಕರೆದುಕೊಂಡು ಅಲ್ಲಿಗೆ ಹೋಗು. ಜಲಪಾತದ ಅಂಚಿಗೆ ಅವನು ನೀರು ಕುಡಿಯಲು ಬಂದಾಗ, ದೇವದಾಸಿಯನ್ನು ಅವನ ಬಳಿ ಕಳುಹಿಸು. ನಿಶ್ಚಯವಾಗಿಯೂ ಅವನು ಹೆಣ್ಣಿನ ಸೊಬಗಿಗೆ ಮಾರುಹೋಗುತ್ತಾನೆ. ಅನಂತರ ಅಡವಿಯ ಮೃಗಗಳು ಅವನನ್ನು ತಮ್ಮ ಜೊತೆಗೆ ಇರಿಸಿಕೊಳ್ಳಲು ನಿರಾಕರಿಸುತ್ತವೆ.” ದೇವದಾಸಿಯನ್ನು ಜೊತೆಗೆ ಕರೆದುಕೊಂಡು ಶಿಕಾರಿ ಮರಳಿ ಬಂದವನು ಜಲಪಾತದ ಅಂಚಿನಲ್ಲಿ ಕುಳಿತು ಎಂಕಿಡೂವಿನ ನಿರೀಕ್ಷೆ ಮಾಡತೊಡಗಿದರು. ಮೂರುದಿನಗಳ ಅನಂತರ ಪ್ರಾಣಿಗಳ ಒಂದು ಗುಂಪು ಅತ್ತ ಬಂದಿತು. ಅದರಲ್ಲಿ ಎಂಕಿಡೂ ಕೂಡ ಇದ್ದ. ನೀರುಕುಡಿದ ಅನಂತರ ಅವನು ಅಲ್ಲಿ ಇಲ್ಲಿ ಪ್ರಾಣಿಗಳೊಂದಿಗೆ ಹುಲ್ಲು ಮೇಯತೊಡಗಿದ. ಬೇಟೆಗಾರನು ದೇವದಾಸಿಗೆ ಹೇಳಿದ. - “ಇವನೇ ಅವನು. ಈಗ ನೀನು ನಿನ್ನ ಎದೆಯ ಆವರಣವನ್ನು ಕಳಚಿಹಾಕು. ನಾಚಿಕೊಳ್ಳಬೇಡ, ತಡಮಾಡಬೇಡ. ನೀನು ನಗ್ನಳಾದುದನ್ನು ನೋಡಿದರೆ ಅವನು ನಿನ್ನ ಕಡೆ ಆಕರ್ಷಣೆಗೊಳಗಾಗುತ್ತಾನೆ. ಆಗ ನೀನು ಅವನಿಗೆ ಪಾಠ ಕಲಿಸು.” ದೇವದಾಸಿಯು ತನ್ನನ್ನು ನಗ್ನಗೊಳಿಸಿಕೊಂಡಳು. ಅನಂತರ ಅವಳು ಎಂಕಿಡೂವನ್ನು ಮೋಹಿಸುವ ಪ್ರಯತ್ನ ಮಾಡತೊಡಗಿದಳು. ಎಂಕಿಡೂ ಬೇಗನೇ ಅವಳ ಬಲೆಯಲ್ಲಿ ಬಿದ್ದ. ಆರುದಿನ - ಏಳುರಾತ್ರಿ ಅವರು ಒಟ್ಟಿಗೇ ಇದ್ದರು. ಒಂದು ದಿನ ದೇವದಾಸಿ ಹೇಳಿದಳು - “ನೀನು ಎಷ್ಟೊಂದು ಬುದ್ಧಿವಂತ, ಎಂಕಿಡೂ! ನೀನು ಈ ಭೂಮಿಯ ಮೇಲೆ ಅವತಾರವನ್ನೇ ಮಾಡಿದ್ದೀಯ! ಅಂದ ಮೇಲೆ ಈ ಪ್ರಾಣಿಗಳ ಜೊತೆ ಗುಡ್ಡಗಳ ಮೇಲೆ ಇರುವುದು ಎಲ್ಲಿಯ ಬುದ್ಧಿವಂತಿಕೆ? ನಡೆ ನನ್ನ ಜೊತೆ. ನಾನು ನಿನಗೆ ಯುರುಕ್‍ನ ಭವ್ಯವಾದ ಗೋಡೆ ಹಾಗೂ ಮಹಾಮಂದಿರವನ್ನು ತೋರಿಸುತ್ತೇನೆ. ಅಲ್ಲಿ ಅನು ಮತ್ತು ಇಶ್ತರ್ ವಾಸವಾಗಿದ್ದಾರೆ. ಅಲ್ಲಿ ಗಿಲ್‍ಗಮಿಶ್ ಇದ್ದಾನೆ. ಅವನು ತುಂಬ ಶಕ್ತಿಶಾಲಿ, ಅವನ ಅಧೀನದಲ್ಲಿ ಅನೇಕ ಜನರಿದ್ದಾರೆ !”. ದೇವದಾಸಿಯು ತನ್ನ ಬಟ್ಟೆಯನ್ನು ಎರಡು ಪಾಲು ಮಾಡಿ, ಒಂದು ಭಾಗವನ್ನು ಎಂಕಿಡೂವಿಗೆ ಧರಿಸಲು ಕೊಟ್ಟಳು. ಎಂಕಿಡೂ ತನ್ನ ಶರೀರದ ಕೂದಲುಗಳನ್ನು ಸ್ವಚ್ಛಗೊಳಿಸಿಕೊಂಡ. ತಲೆಗೂದಲನ್ನು ಕಿರಿದುಗೊಳಿಸಿದ. ಎಣ್ಣೆ 194 ಕಥಾ ಸಂಸ್ಕೃತಿ ಹಚ್ಚಿ ಮಾಲಿಶ್ ಮಾಡಿದ. ದೇವದಾಸಿಯು ಅವನಿಗೆ ಹಾಲುಕುಡಿಯುವುದನ್ನು, ರೊಟ್ಟಿ ತಿನ್ನುವುದನ್ನು ಮುಂತಾಗಿ ಕಲಿಸಿ ಸಂಪೂರ್ಣ ಸಾಧಾರಣ ಮನುಷ್ಯನನ್ನಾಗಿ ಮಾಡಿದಳು. ಅವನನ್ನು ಜೊತೆಗೆ ಕರೆದುಕೊಂಡು ಯುರುಕ್‍ಗೆ ಹೊರಟಳು. ಅವರಿಬ್ಬರೂ ಯುರುಕ್‍ನ ಪೇಟೆಯಲ್ಲಿ ಕಾಲಿಟ್ಟಾಗ, ಅಪಾರ ಸಂಖ್ಯೆಯ ಜನರು ಅವನನ್ನು ನೋಡಲು ಮುಗಿಬಿದ್ದರು. ಭವ್ಯವಾದ ಗೋಡೆಯ ಬಾಗಿಲಬಳಿ ಎಂಕಿಡೂ ಹಾಗೂ ಗಿಲ್‍ಗಮಿಶ್ ಮುಖಾಮುಖಿಯಾದರು. ಎಂಕಿಡೂ ಮೂಗಿನಿಂದ ಗುರುಗುರು ಸದ್ದು ಮಾಡಿದನು. ಇಬ್ಬರೂ ಗೂಳಿಗಳಂತೆ ಹೋರಾಡತೊಡಗಿದರು. ಅವರ ತಿಕ್ಕಾಟದಲ್ಲಿ ಬಾಗಿಲು ಕಿತ್ತುಹೋಯಿತು, ಗೋಡೆ ಕುಸಿಯುವ ಸ್ಥಿತಿ ಉಂಟಾಯಿತು. ಕೊನೆಯಲ್ಲಿ ಗಿಲ್‍ಗಮಿಶ್‍ನು ತನ್ನ ಬಲಿಷ್ಠ ಕಾಲುಗಳಿಂದ ಎಂಕಿಡೂವಿನ ಮೊಣಕಾಲನ್ನು ತಿರುವಿ ಅವನನ್ನು ಎತ್ತಿ ಎಸೆದುಬಿಟ್ಟನು. ಎಂಕಿಡೂವಿನ ಎಲ್ಲ ಸಿಟ್ಟು ಎಲ್ಲ ಅಹಂಕಾರ ಕ್ಷಣಾರ್ಧದಲ್ಲಿ ಆವಿಯಾಯಿತು. ಅವನು ಗಿಲ್‍ಗಮಿಶ್‍ನಿಗೆ ಹೇಳಿದ. - “ಜಗತ್ತಿನಲ್ಲಿ ನಿನ್ನಷ್ಟು ಬಲಶಾಲಿ ಬೇರಾರೂ ಇಲ್ಲ. ಈಗ ನೀನು ಸಮಸ್ತ ಮಾನವ ಸಮುದಾಯದ ಮೇಲೆ ಶಾಸನ ನಡೆಸಬಲ್ಲೆ.” ಹೀಗೆ ಆ ಇಬ್ಬರೂ ಒಬ್ಬರನ್ನೊಬ್ಬರು ಉತ್ಸಾಹದಿಂದ ಆಲಂಗಿಸಿದರು. ಅವರಲ್ಲಿ ಗಟ್ಟಿಯಾದ ಗೆಳೆತನ ಉಂಟಾಯಿತು. ಒಂದು ರಾತ್ರಿ ಗಿ¯ಗಮೆಶ್‍ನಿಗೆ ಸ್ವಪ್ನ ಬಿತ್ತು. ಅದರಲ್ಲಿ ಅವನನ್ನು ಧಿಃಕ್ಕರಿಸಲಾಗುತ್ತಿತ್ತು. . . . ಗಿಲ್‍ಗಮಿಶ್, ಭಗವಂತನು ನಿನ್ನನ್ನು ದೊರೆಯನ್ನಾಗಿ ಮಾಡಿದ್ದಾನೆ. ಆದರೆ ನೀನು ನಿನ್ನ ಹುದ್ದೆ ಹಾಗೂ ಅಧಿಕಾರವನ್ನು ಎಷ್ಟೊಂದು ದುರುಪಯೋಗ ಪಡಿಸಿಕೊಳ್ಳುತ್ತಿರುವೆ! ಬಂಧುತ್ವ, ಮಮತೆ ಹಾಗೂ ನ್ಯಾಯದ ಆಧಾರದ ಮೇಲೆ ನೀನೇಕೆ ನಿನ್ನ ರಾಜ್ಯವನ್ನು ನಡೆಸಿಕೊಂಡು ಹೋಗುವುದಿಲ್ಲ? ಅವನು ತನ್ನ ಸ್ವಪ್ನದ ಕುರಿತು ತನ್ನ ಮಿತ್ರ ಎಂಕಿಡೂ ಜೊತೆ ಚರ್ಚಿಸಿದ. ಎಂಕಿಡೂ ಆ ಸ್ವಪ್ನವನ್ನು ಇನ್ನಷ್ಟು ವಿಶ್ಲೇಷಿಸಿದ. ಆಗ ಗಿಲ್‍ಗಮಿಶ್ ಇಂದಿನಿಂದ ವಿಶ್ವಬಂಧುತ್ವ ಹಾಗೂ ಜನತಾ ಜನಾರ್ದನನ ಸೇವೆಗೆ ತನ್ನ ಜೀವನವನ್ನು ಸಮರ್ಪಿಸುವುದಾಗಿ ಪ್ರತಿಜ್ಞೆ ಮಾಡಿದ. ಅನಂತರ ಅವನು ಸೂರ್ಯದೇವತೆಗೆ ನಮಸ್ಕರಿಸುತ್ತಾ ಹೇಳಿದ - “ಓ ಮೆಮೆಶ್! ಮಾನವತೆಯು ಸಂಕಷ್ಟಕ್ಕೆ ಸಿಲುಕಿದ ದೇಶದತ್ತ ನಾನು ಹೋಗುತ್ತೇನೆ. ದೊಡ್ಡ ಶಕ್ತಿಗಳ ಶ್ರೇಣಿಯಲ್ಲಿ ಗುರುತಿಸುವ ರೀತಿಯಲ್ಲಿ ನಾನು ಅಲ್ಲಿ ಕಾರ್ಯಮಾಡುವೆ. ನನ್ನ ಹೆಸರು ಕಲ್ಲಿನಲ್ಲಿ ಅಂಕಿತವಾಗಲಿ.” ಮರುದಿನ ನಿಜವಾಗಿಯೂ ಅವನು ಎಂಕಿಡೂವಿನ ಜೊತೆಯಲ್ಲಿ ಯಾತ್ರೆ ಹೊರಟುಬಿಟ್ಟ. ಹೋಗುತ್ತ ಹೋಗುತ್ತ ಅವರು ಹುಂಬಾಬಾ (ವನದೇವತೆ) ಕಾವಲುಗಾರನಾಗಿರುವ ಒಂದು ಪರ್ವತದ ಬಳಿ ತಲುಪಿದರು. ಹುಂಬಾಬಾ ಸುಮೇರಿಯನ್ ಕತೆ (ಇರಾಕ್) 195 ಗರ್ಜಿಸುತ್ತ ಗಿಲ್‍ಗಮಿಶ್‍ನ ಮೇಲೆ ಜಿಗಿದನು. ಇಬ್ಬರಲ್ಲಿಯೂ ಭಾರೀಯುದ್ಧ ಸ್ಫೋಟಿಸಿತು. ಕೊನೆಯಲ್ಲಿ ಗಿ¯ಗಮೆಶ್ ಹುಂಬಾಬಾನನ್ನು ಮುಗಿಸಿಬಿಟ್ಟನು. “ಇದರ ನಂತರ ಗಿಲ್‍ಗಮಿಶ್ ತನ್ನ ಆಯುಧಗಳನ್ನೆಲ್ಲ ಸ್ವಚ್ಛಗೊಳಿಸಿದನು, ಬಟ್ಟೆಯನ್ನು ಬದಲಿಸಿ ರಾಜಮುಕುಟವನ್ನು ಧರಿಸುತ್ತಿದ್ದಂತೆ ಇಶ್ತರಳ ಆಗಮನವಾಯಿತು. ಅವಳು ಗಿಲ್‍ಗಮಿಶ್‍ನಿಗೆ ಹೇಳಿದಳು - “ನನ್ನ ಜೊತೆ ಬಾ ಗಿಲ್‍ಗಮಿಶ್! ನನ್ನನ್ನು ವಿವಾಹವಾಗು. . . .” “ಅಸಂಭವ” ಗಿಲ್‍ಗಮಿಶ್ ಉತ್ತರಿಸಿದನು “ನಿನಗೆ ನಾನು ಏನು ತಾನೆ ಕೊಡಬಲ್ಲೆ? ಯಾಕೆ ನೀನು ನನ್ನನ್ನು ವಿವಾಹವಾಗುವೆ? ನಾನು ಈಗ ಒಬ್ಬ ಪಯಣಿಗ. ನಾನು ನಿನ್ನ ಜೀವನರಕ್ಷಣೆಯ ಅವಶ್ಯಕತೆಗಳನ್ನು ಹೇಗೆ ಪೂರೈಸಬಲ್ಲೆ? ನಾನು ನಿನ್ನೊಡನೆ ಹೇಗಾದರೂ ವಿವಾಹವಾಗುವೆನೆಂದಿಟ್ಟುಕೊಂಡರೂ, ಬಹುಸಂಖ್ಯೆಯಲ್ಲಿರುವ ನಿನ್ನ ಪ್ರೇಮಿಗಳ ಗತಿಯೇನು?” ಗಿಲ್‍ಗಮಿಶ್‍ನ ಉತ್ತರದಿಂದ ತನಗೆ ತುಂಬ ಅವಮಾನವಾಯಿತೆಂದು ಇಶ್ತರ್ ಭಾವಿಸತೊಡಗಿದಳು. ಅವಳು ನೇರವಾಗಿ ತನ್ನ ತಂದೆ-ತಾಯಿಗಳಿರುವ ಸ್ವರ್ಗಕ್ಕೆ ಹೋಗಿ ತನ್ನ ತಂದೆ ಆ್ಯನ್‍ನಿಗೆ ಹೇಳಿದಳು - “ಗಿಲ್‍ಗಮಿಶ್ ನನಗೆ ಅವಮಾನ ಮಾಡಿದ್ದಾನೆ. ಅವನು ನನ್ನ ಮೇಲೆ ಅನೇಕ ಬಗೆಯ ಕಲಂಕ ಹಾಕಿದ್ದಾನೆ. ನನ್ನೊಂದಿಗೆ ಕೆಟ್ಟ ರೀತಿಯಿಂದ ನಡೆದುಕೊಂಡಿದ್ದಾನೆ. ಅವನನ್ನು ನಾಶ ಮಾಡುವ ಉಪಾಯ ಹೇಳಿರಿ.” ಆ್ಯನ್ ಒಂದು ಭಯಂಕರ ಗೂಳಿಗೆ ಜನ್ಮಕೊಟ್ಟು, ಭೂಲೋಕಕ್ಕೆ ಕಳಿಸಿದ. ಆ ಗೂಳಿಯು ಎಂಕಿಡೂವಿನ ಮೇಲೆ ಆಕ್ರಮಣ ಮಾಡಿತು. ಆದರೆ ಎಂಕಿಡೂ ಹೇಗೋ ತಪ್ಪಿಸಿಕೊಂಡ. ಅವನು ಹಾರಿ ಅದರ ಕೊಂಬು ಹಿಡಿದುಕೊಂಡ. ಆ ಎತ್ತು ಅವನ ಮುಖದ ಮೇಲೆ ನೊರೆಯನ್ನು ಉಗುಳತೊಡಗಿತು. ಜೊತೆಗೆ ತನ್ನ ದಪ್ಪನೆಯ ಬಾಲದಿಂದ ಬಾರಿಸತೊಡಗಿತು. ಎಂಕಿಡೂ ಗಿಲ್‍ಗಮಿಶ್‍ನಿಗೆ ಹೇಳಿದ - “ಈ ರೀತಿ ಮಾಡಿದರೆ ನಮ್ಮ ಹೆಸರೇ ಅಳಿಸಿಹೋಗುವುದು. ನೀನು ಅದರ ಕುತ್ತಿಗೆಯ ಹಿಂಭಾಗ ಹಾಗೂ ಕೋಡಿನ ಮೇಲೆ ಪ್ರಹಾರ ಮಾಡು.” ಗಿಲ್‍ಗಮಿಶ್ ತಕ್ಷಣ ಎತ್ತಿನಮೇಲೆ ಆಕ್ರಮಣ ಮಾಡಿದ. ಅವನು ಅದರ ಬಾಲ ಹಿಡಿದುಕೊಂಡು ಅದರ ಕುತ್ತಿಗೆ ಹಾಗೂ ಕೋಡುಗಳ ಮೇಲೆ ಖಡ್ಗದಿಂದ ಪ್ರಹಾರ ಮಾಡಿದ. ಎತ್ತು ಸತ್ತುಹೋಯಿತು. ಆದರೆ ಎಂಕಿಡೂ ಸಾಕಷ್ಟು ಗಾಯಾಳುವಾಗಿದ್ದ. ಅವನು ಜೀವಚ್ಛವದಂತೆ ಇದ್ದ. ಅವನು ತುಂಬ ಭಯಭೀತನೂ ಆಗಿದ್ದ. ಅವನಿಗೆ ಬಗೆಬಗೆಯ ಸ್ಪಪ್ನಗಳು ಆಗತೊಡಗಿದ್ದವು. 196 ಕಥಾ ಸಂಸ್ಕೃತಿ ಆ ರಾತ್ರಿ ಎಂಕಿಡೂ ಒಂದು ಭಯಾನಕ ಸ್ವಪ್ನ ನೋಡಿದ. ಎಂಕಿಡೂ ವೃಷಭವನ್ನು ಕೊಂದಿದ್ದರಿಂದ ಅವನಿಗೆ ಮರಣವಾಗಲಿ, ಗಿಲ್‍ಗಮಿಶ್ ಜೀವಂತವಾಗಿರಲಿ ಎಂದು ದೇವತೆಗಳು ತಮ್ಮ ಸಭೆಯಲ್ಲಿ ನಿಶ್ಚಯ ಮಾಡಿದರು. - ಎಂದು ಸ್ವಪ್ನವನ್ನು ನೋಡಿದ. ತನ್ನನ್ನು ಪಶುಜೀವನದ ನಿಶ್ಚಲ ವಾತಾವರಣದಿಂದ ವಂಚಿಸಿ ಕರೆತಂದು ಈ ಸಂಕಟಕರವಾದ ಮಾನವ ಜಗತ್ತಿನಲ್ಲಿ ಎಸೆದಳೆಂದು ಅವನು ಹೋಗಿ ಆ ಹೆಣ್ಣಿಗೆ ಕೆಟ್ಟರೀತಿಯಲ್ಲಿ ದೂರತೊಡಗಿದ. ಆಗ ಸೂರ್ಯದೇವತೆಯು ಅವನನ್ನು ಧಿಕ್ಕರಿಸಿ - ಎಂಕಿಡೂ, ನೀನು ದೇವದಾಸಿಗೆ ಕೆಟ್ಟ ಮಾತೇಕೆ ಆಡುವೆ ಆ ಆನಂದ ಕನ್ಯೆಗೆ ? ನಿನಗೆ ತಿನ್ನಲು ರೊಟ್ಟಿಯನ್ನು ಕೊಟ್ಟವಳಿಗೆ ನಿನ್ನನ್ನು ಪ್ರಶಸ್ತವಾದ ವಸ್ತ್ರದಿಂದ ಮುಚ್ಚಿದವಳಿಗೆ ಅಲ್ಲದೆ ನಿನಗೆ, ಎಂಕಿಡೂ ನಿನಗೆ ಗಿಲ್‍ಗಮಿಶ್‍ನಂಥ ಅಪ್ರತಿಮ ಮಿತ್ರನನ್ನು ಕೊಟ್ಟಳು. ನೋಡು ಮತ್ತೆ, ಗಿಲ್‍ಗಮಿಶ್ ನಿನ್ನ ಅಣ್ಣ ಅವನು ನಿನ್ನನ್ನು ಸರಿಯಾದ ಪಲ್ಲಂಗದ ಮೇಲೆ ಮಲಗಿಸುವ (ಸತ್ತ ನಂತರ) ನಿನ್ನ ಸೇವೆಗಾಗಿ ಅವನು ಇಟ್ಟುಕೊಳ್ಳುವವಳನ್ನು ಸೇವಕರನ್ನು ನೇಮಕ ಮಾಡುವ. (ಉರ್ ಮತ್ತು ಕೀಶ್‍ನ ಸಮಾಧಿಗಳಲ್ಲಿ ಈ ಹೇಳಿಕೆಯ ಸತ್ಯತೆ ಸಿದ್ಧವಾಗುತ್ತಿದೆ. ಅಲ್ಲಿ ರಾಜರು ಹಾಗೂ ಶ್ರೀಮಂತರ ಶವಗಳ ಜೊತೆಗೆ ಜೀವಂತ ಹೆಂಗಸರು, ದಾಸ-ದಾಸಿಯರು, ಸುಖದ ಎಲ್ಲ ಸಾಮಗ್ರಿಗಳನ್ನು ಸುಡುವುದು ಗೊತ್ತಾಗಿದೆ.) ಆಗ ಎಂಕಿಡೂ ಸಂತೋಷಗೊಂಡು ದೇವದಾಸಿಗೆ ಆಶೀರ್ವಾದ ಮಾಡುತ್ತಾನೆ. “ಮಹಾರಾಜ, ರಾಜ, ಶ್ರೀಮಂತರು ನಿನ್ನನ್ನು ಪ್ರೀತಿಸಲಿ.” ಎಂಕಿಡೂ ಮತ್ತೊಂದು ಸ್ವಪ್ನ ನೋಡಿದ. ಅದರಲ್ಲಿ ಯಮಲೋಕದ ವರ್ಣನೆಯಿತ್ತು. “ಪ್ರವೇಶ ಮಾಡಿದವರೆಲ್ಲ ಹಿಂತಿರುಗಿ ಬಾರದ ಸದನದ ಕಡೆಗೆ ವಾಸ ಮಾಡಿದವರಿಗೆ ಬೆಳಕೇ ಇಲ್ಲದ ಸದನದ ಕಡೆಗೆ ಧೂಳು ಮಾಂಸವಾಗಿ (ಆಹಾರಕ್ಕಾಗಿ) ಮಣ್ಣುರೊಟ್ಟಿಯಾಗಿ ಇರುವ ಕಡೆಗೆ ಪಕ್ಷಿಗಳಂತೆ ರೆಕ್ಕೆಗಳ ವಸ್ತ್ರ ಧರಿಸಿರುವ ಕಡೆಗೆ .. . .” ಗಿಲ್‍ಗಮಿಶ್ ಸಾವಿಗೆ ಹತ್ತಿರವಾದ ತನ್ನ ಸ್ನೇಹಿತನಿಗೆ ಧೈರ್ಯ ತುಂಬುತ್ತಾನೆ. “ಹೇಗಿದ್ದೀ, ಎಂಥ ನಿದ್ದೆಯದು ನಿನ್ನನು ಹಿಡಿದಿಹುದು. ಸುಮೇರಿಯನ್ ಕತೆ (ಇರಾಕ್) 197 ಕಪ್ಪಾಗಿರುವೆ ನೀನು, ಕೇಳದು ನಿನಗೆ ನನ್ನ ದನಿ.” ಆದರೆ ಅವನು ತನ್ನ ಕಣ್ಣುಗಳನ್ನು ತೆಗೆಯಲಿಲ್ಲ. ಗಿಲ್‍ಗಮಿಶ್ ಅವನ ಹೃದಯದ ಮೇಲೆ ಕೈಯಿಟ್ಟು ನೋಡಿದ. ಬಡಿತ ನಿಂತಿತ್ತು. ಅವನು ತನ್ನ ಮೃತ ಮಿತ್ರನಿಗೆ ವಧುವಿನಂತೆ ಮೈ ತುಂಬ ಬಟ್ಟೆ ಮುಚ್ಚಿದ. ಗಿಲ್‍ಗಮಿಶ್ ಅವನಿಗಾಗಿ ದುಃಖಿಸಿ ಅಳತೊಡಗಿದ. ಆಗ ಅವನಿಗೆ ಸ್ವಯಂ ಒಂದು ದಾರುಣವಾದ ವಿಚಾರ ಮನದಲ್ಲಿ ಸುಳಿಯಿತು. ನನ್ನ ಮಿತ್ರನಂತೆ ನಾನೂ ಹೀಗೆಯೇ ಸಾಯುತ್ತೇನೆಯೇ? ಸೆಟೆದುಹೋಗಿ ಕಿವುಡನಾಗುವೆನೇ? ಹೀಗೆ ಚಿಂತಿತನಾದ ಅವನು ದೂರದಲ್ಲಿ ವಾಸಿಸುವ ತನ್ನ ಪೂರ್ವಜ ಜಿಉಸುದ್ದೂನನ್ನು ಹುಡುಕಲು, ಅವನಿಂದ ಅಮರತ್ವದ ರಹಸ್ಯವನ್ನು ಅರಿಯಲು ಯೋಚಿಸಿದ. ಮೊದಲು ಅವನು ಚೇಳು ಮನುಷ್ಯನು ರಕ್ಷಣೆ ಮಾಡುತ್ತಿದ್ದ ಭಯಾನಕ ಪರ್ವತದ ಮೇಲೆ ಏರಿದ. ಹೇ ರಾಜಾ, ನೀವು ಇದನ್ನೇನು ಮಾಡುತ್ತಿದ್ದೀರಿ? - ಒಬ್ಬ ದ್ವಾರಪಾಲಕ ಅವನಿಗೆ ಸಮಾಧಾನ ಹೇಳುತ್ತ ಹೇಳಿದನು - “ಜೀವಂತ ಮನುಷ್ಯ ಈ ಪರ್ವತಕ್ಕೆ ಪ್ರವೇಶ ಮಾಡುವುದಿಲ್ಲ ಇಲ್ಲಿ ಗಾಢವಾದ ಕತ್ತಲೆ, ಭಯಂಕರವಾದ ನಿಶ್ಯಬ್ದವಿದೆ.” “ಎನೂ ತೊಂದರೆಯಿಲ್ಲ” ಗಿಲ್‍ಗಮೆಶ್ ಉತ್ತರಿಸಿದ - “ನಾನು ಕತ್ತಲೊಡನೆ ಹೋರಾಡುತ್ತೇನೆ. ನೋವು-ಯಾತನೆಗಳನ್ನು ಸಹಿಸುವೆ. ನೀನು ಬಾಗಿಲು ತೆರೆ.” ಬಾಗಿಲು ತೆರೆಯುತ್ತ ದ್ವಾರಪಾಲಕನು ಹೇಳಿದನು - “ನಡೆ . . . ನಡೆ ಗಿಲ್‍ಗಮಿಶ್! ಭಗವಂತನು ನಿನ್ನನ್ನು ರಕ್ಷಿಸಲಿ. . .” ಮುಂದೆ ಅವನಿಗೆ ಒಬ್ಬಳು ಮತ್ಸ್ಯಕನ್ಯೆ ಸಿಕ್ಕಿದಳು. ಅವಳು ಸಾಗರದ ಆಳದಲ್ಲಿ ವಾಸ ಮಾಡುತ್ತಿದ್ದಳು. ಗಿಲ್‍ಗಮಿಶ್ ಅವಳಿಗೆ ತನ್ನ ಮೊದಲಿನ ಸಾಹಸಯಾತ್ರೆಗಳ ವರ್ಣನೆ ಮಾಡಿ, ಅಮರತ್ವ ಪಡೆಯುವ ತನ್ನ ಮಹತ್ವಾಕಾಂಕ್ಷೆಯನ್ನು ಹೇಳಿದನು. ಆಗ ಆ ಮತ್ಸ್ಯಕನ್ಯೆ ಹೇಳಿದಳು. ಗಿಲ್‍ಗಮಿಶ್. . . ನೀನೇಕೆ ವಿದೇಶಕ್ಕೆ ತೆರಳುತ್ತಿರುವೆ ನೀನು ಹುಡುಕುತ್ತಿರುವ ಆ ಜೀವನ (ಅಮರ) ಸಿಗಲಾರದು ನಿನಗೆ ದೇವತೆಗಳು ಮಾನವ ಜಾತಿಯನ್ನು ಸೃಷ್ಟಿಸುವಾಗ ಅವನಿಗಾಗಿ ಮಾಡಿದರು ಮೃತ್ಯುವಿನ ವ್ಯವಸ್ಥೆಯನ್ನು ನೋಡು ಗಿಲ್‍ಗಮಿಶ್, ನೀನು ನಿನ್ನ ಹೊಟ್ಟೆ ತುಂಬಿಕೋ ಹಗಲು-ರಾತ್ರಿ ನೀನು ಸುಖ ಅನುಭವಿಸು. . . . ಗಿಲಗಮೇಶನಿಗೆ ಯಾವ ಆಶ್ವಾಸನೆಯೂ ದೊರಕದಿದ್ದಾಗ ಅವನು ಮುಂದುವರಿದನು. ಮೃತ್ಯುವಿನ ಸಮುದ್ರದಲ್ಲಿ ನಾವೆಯನ್ನು ನಡೆಸುವ ಜಿಉಸುದ್ದೂನ ನಾವಿಕನನ್ನು ಹುಡುಕಿ ತೆಗೆಯುವುದು ಅವನ ಗುರಿ. ಸಿಟ್ಟಿಗೆದ್ದ ಅವನು ನಾವೆಯ 198 ಕಥಾ ಸಂಸ್ಕೃತಿ ಅರಿವೆಯನ್ನು ಹರಿದು ಹಾಕಿದ. ನಾವೆಯ ನಡುವಣ ಕಂಬವನ್ನು ಮುರಿದುಹಾಕಿದ. ಆಗ ನಾವಿಕನೂ ಕೂಡ ‘ಮರಣವು ಜನ್ಮಸಿದ್ಧವಾದದ್ದು, ಹಿಂತಿರುಗಿ ನಡೆ’ ಎಂದನು. ಅವನು ಹಿಂತಿರುಗಲು ಒಪ್ಪದಿದ್ದಾಗ, ನಾವೆಯನ್ನು ನಡೆಸಲು ಬೇಕಾದ ಬಿದಿರುಗಳನ್ನು ಕತ್ತರಿಸಿ ಕೊಡುವುದಾದರೆ ಅವನನ್ನು ಒಯ್ಯುವುದಾಗಿ ನಾವಿಕನು ಷರತ್ತು ಹಾಕಿದನು. ಮೃತ್ಯುವಿನ ಸಮುದ್ರವು ವಿಷಮಯವಾಗಿತ್ತು. ಆದ್ದರಿಂದ, ನಾವೆಯನ್ನು ಮುಂದೂಡಲು ಪ್ರತಿಯೊಂದು ಬಾರಿ ಹುಟ್ಟು ಹಾಕಿದ ಅನಂತರ ಅದನ್ನು ಎಸೆದು ಬಿಡಬೇಕಾಗುತ್ತಿತ್ತು. ಐವತ್ತೊಂದು ಬಾರಿ ಹುಟ್ಟುಹಾಕಿದ ಅನಂತರ ಅವನು ಮೃತ್ಯುಸಾಗರವನ್ನು ದಾಟಿ, ವಿಸ್ಮಿತನಾಗಿದ್ದ ಜಿಉಸುದ್ದೂನ ಎದುರು ನಿಂತಿದ್ದ. ಮಾನವ ಜಾತಿಗೆ ಇರುವ ಪರಮ ಭಯದಿಂದ ಮುಕ್ತಗೊಳಿಸುವ ತನ್ನ ಉತ್ಕಟ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತ ಗಿಲ್‍ಗಮಿಶ್ ಜಿಉಸುದ್ದೂನೊಡನೆ ಅವನು ಸ್ವತಃ ಯಾವ ರೀತಿ ಮರಣಭಯದಿಂದ ಮುಕ್ತನಾಗಲು ಸಾಧ್ಯವಾಯಿತು ಎಂದು ಕೇಳಿದ. ಆಗ ಜಿಉಸುದ್ದೂ ಜಲಪ್ರಳಯದ ಕತೆಯನ್ನು ಹೇಳಿದ. ಕತೆ ಹೇಳಿದ ಅನಂತರ ಜಿಉಸುದ್ದೂ ಹೇಳಿದ - “ನೀನು ಅಮರ ಜೀವನವನ್ನು ಪಡೆಯಬಯಸುವಿಯಾದರೆ, ಮೊದಲ ಒಂದು ವಾರ ಮಲಗದೆ ಎಚ್ಚರವಾಗಿರು.” ಆದರೆ ಗಿಲಗಮೆಶ ಪ್ರಯಾಣದ ಆಯಾಸದಿಂದ ಸುಸ್ತಾಗಿ, ಎಚ್ಚರಿರುವುದರ ಬದಲು ಮಲಗಿಬಿಟ್ಟ. ಆಗ ಜಿಉಸುದ್ದೂ ಅವನನ್ನು ಸ್ನಾನ ಮಾಡಿ ಪ್ರಫುಲ್ಲನಾಗಲು ತನ್ನ ನಾವಿಕನೊಂದಿಗೆ ಕಳಿಸಿದ. ಹಿಂತಿರುಗಿ ಬಂದ ಮೇಲೆ ಸಮುದ್ರದ ತಳದಲ್ಲಿ ಬೆಳೆಯುವ ಒಂದು ಔಷಧಸಸ್ಯದಿಂದ ಅಮರತ್ವ ದೊರೆಯುತ್ತದೆಯೆಂಬುದನ್ನು ತಿಳಿಸಿದ. - “ಅದರ ಮುಳ್ಳುಗಳು ನಿನ್ನ ಕೈಗೆ ಗುಲಾಬಿಯಂತೆ ನಾಟುವವು ಆದರೂ ನೀನು ಆ ಔಷಧವ ಪಡೆದೆಯಾದರೆ ಜೀವನದಲ್ಲಿ ಅಮರತೆಯನ್ನು ಪಡೆವೆ” “ಗಿಲ್‍ಗಮಿಶ್ ಇದನು ಕೇಳಿ ಟೊಂಕವನು ಕಟ್ಟಿದ ಕಾಲುಗಳಿಗೆ ಭಾರೀ ಕಲ್ಲುಗಳ ಕಟ್ಟಿಕೊಂಡ ಅವು ಅವನನ್ನು ಆಳವಾದ ನೀರಿನ ತಳಕೆ ಒಯ್ದವು ಅಲ್ಲಿ ಅವನು ಆ ಔಷಧವ ನೋಡಿದನು. ಅವನು ಔಷಧವನು ಕಿತ್ತುಕೊಂಡನು ಅದರ ಮುಳ್ಳುಗಳು ಅವನ ಕೈಗೆ ನಟ್ಟವು.” ಗಿಲ್‍ಗಮಿಶ್ ಕಾಲಿಗೆ ಕಟ್ಟಿದ ಕಲ್ಲಿನ ದಾರ ಕತ್ತರಿಸಿಕೊಂಡು ಮುಕ್ತನಾದ. ಮೇಲೆ ಬಂದ ನಂತರ ಪ್ರಸನ್ನವದನನಾದ ಅವನನ್ನು ನಾವಿಕನು ಮೃತ್ಯಜಗತ್ತಿನ ಕಡೆ ಕರೆದೊಯ್ದನು. 60 ಗಂಟೆಗಳ ಕಾಲ ನಿರಂತರ ಚಲಿಸುತ್ತಿರುವುದರಿಂದ ಸುಮೇರಿಯನ್ ಕತೆ (ಇರಾಕ್) 199 ದಣಿದ ಗಿಲ್‍ಗಮಿಶ್ ವಿಶ್ರಾಂತಿಗಾಗಿ ಹಾಗೂ ಸರೋವರದಲ್ಲಿ ಸ್ನಾನ ಮಾಡಲಿಕ್ಕಾಗಿ ಅಲ್ಲಿ ನಿಂತನು. ಸರ್ಪವು ಔಷಧದ ಪರಿಮಳವ ಗುರುತಿಸಿತು ನೀರಿನಿಂದ ಹೊರಬಂದ ಸರ್ಪವು ಔಷಧ ತೆಗೆದುಕೊಂಡು ಮಾಯವಾಯಿತು. (ಸರೋವರ)ಕ್ಕೆ ಮರಳಿದ ಸರ್ಪವು ತನ್ನ ಪೊರೆ ಕಳಚಿತು, ಅದಕ್ಕೆ ಹೊಸ ಜನ್ಮ ಬಂತು. ಆಗ ಗಿಲ್‍ಗಮಿಶ್ ಕೂತು ಅಳತೊಡಗಿದ. . . . ``ಯಾರಿಗಾಗಿ ನಾನು ನನ್ನ ಹೃದಯದ ರಕ್ತ ಒಣಗಿಸಿಕೊಂಡೆ? ನಾನು ನನಗಾಗಿ ಏನೂ ಮಾಡಲಿಲ್ಲ. ಕೇವಲ ಧೂಳಿನ ಕ್ರೂರಜೀವ (ಸರ್ಪ)ಕ್ಕೆ ಒಳಿತು ಮಾಡಿದೆ.. . .” ಕೊನೆಯಲ್ಲಿ ವೃದ್ಧ ಹಾಗೂ ವ್ಯಾಕುಲ ಗಿಲ್‍ಗಮಿಶ್ ಪರಲೋಕದ ವ್ಯವಸ್ಥೆ ತಿಳಿಯಲು, ತನ್ನ ಮಿತ್ರನ ಪ್ರೇತದೊಡನೆ ಸಾಕ್ಷಾತ್ಕಾರ ಮಾಡಿಕೊಳ್ಳಲು ಪ್ರೇತದ ಛಾಯೆಯಿಂದ ಮಾನವನನ್ನು ರಕ್ಷಿಸಲು ಇರುವ ಎಲ್ಲ ತಾಪಸ ವಿಧಾನಗಳನ್ನು ಮುರಿದು ಹಾಕಿದ. ಯಮಲೋಕ ತಲುಪಿ ಮರಳಿ ಓಡಿದ ದೇವ ನರ್ಗಲನು ಭೂಮಿಯಲ್ಲಿ ರಂಧ್ರ ಮಾಡಿದ, ಮತ್ತು - “ಎಂಕಿಡೂನ ಪ್ರೇತವು ವಾಯುವಿನ ಹಾಗೆ ಭೂಮಿಯಿಂದ ಹೊರಟಿತು ಇಬ್ಬರೂ ತಕ್ಷಣ ಆಲಂಗಿಸಿದರು. ಅಳುತ್ತ ಇಬ್ಬರೂ ಮಾತನಾಡತೊಡಗಿದರು ಹೇಳು ನನ್ನ ಗೆಳೆಯಾ, ಹೇಳು ಸಮಾಧಿಯ ವಿಧಾನ, ನೀನು ನೋಡಿದ್ದನ್ನು.” “ಹೇಳಲಾರೆ ಮಿತ್ರಾ . . . ನಿನಗೆ ಹೇಳುವುದಿಲ್ಲ, ಯಾಕೆಂದರೆ ನಾನು ನೋಡಿದ ಸಮಾಧಿಯ ವಿಧಾನವ ನಿನಗೆ ತಿಳಿಸಿದರೆ, ನೀನು ಕೂತು ಅಳುವೆ.” “ಆಗಲಿ. . . (ಏನೂ ತೊಂದರೆಯಿಲ್ಲ) ನಾನು ಕುಳಿತು ಅಳಲುಬಿಡು.” ಹೇಗೆ ಕೀಟಗಳು ಶರೀರವನ್ನು ಬಟ್ಟೆಯಂತೆ ತಿಂದು ಹಾಕುತ್ತವೆಯೆಂಬುದನ್ನು ಎಂಕಿಡೂವಿನ ಪ್ರೇತವು ಹೇಳಿತು. ಸಮಾಧಿಗೆ ಜೀವಿತ ಆಹಾರ ಅರ್ಪಿತವಾದರೆ ಮಾತ್ರ ಅವರು ಪರಲೋಕದಲ್ಲಿ ಶಾಂತಿ ಪಡೆಯುತ್ತಾರೆ. ಇಲ್ಲವಾದರೆ ಪ್ರೇತವು ನಿರಂತರ ರಸ್ತೆಯಲ್ಲಿ ಅಲೆಯುತ್ತ, ಮಲ ತಿನ್ನುತ್ತ, ಗಟಾರದ ಕೊಚ್ಚೆಯ ನೀರು ಕುಡಿಯುತ್ತಿರುತ್ತದೆ. ಇಲ್ಲಿಗೇ, ಗಿಲ್‍ಗಮಿಶ್‍ನ ವೀರಕಾವ್ಯ ಪೂರ್ಣ ನಿರಾಶೆಯಲ್ಲಿ ಕೊನೆಗೊಳ್ಳುತ್ತದೆ. ಸದ್ಯ ದೊರೆತ ಕಾವ್ಯದ ಇನ್ನೊಂದು ಪ್ರತಿಯಲ್ಲಿ ಗಿಲ್‍ಗಮಿಶ್‍ನೂ ಕೊನೆಯಲ್ಲಿ ಸಾಯಬೇಕಾಯಿತು, ಸತ್ತು ಅವನು ಪರಲೋಕದ ದಂಡಧರ (ನ್ಯಾಯಾಧೀಶ) ರಲ್ಲಿ ಸ್ಥಾನ ಪಡೆದನೆಂದು ತಿಳಿಯುತ್ತದೆ. 200 ಕಥಾ ಸಂಸ್ಕೃತಿ ಸ್ಯೂಸ್‍ನ ಪ್ರೇಮ ಕತೆಗಳು - ಕಮಲ ನಸೀಮ ಸ್ಯೂಸ್‍ನ ಈ ಪ್ರಣಯಲೀಲೆಯ ಸಂದರ್ಭದಲ್ಲಿ ಹೆರಾ ಎಲ್ಲಿದ್ದಳು ಎಂಬುದನ್ನು ಹೇಳಲು ಸಾಧ್ಯವಾಗದು. ಇಓ ಹಾಗೂ ಕೆಲಿಸ್ಟೋ ಹಾಗೆಯೇ ಯುರೋಪೆ ಹಾಗೂ ಸ್ಯೂಸ್‍ರ ಪ್ರೇಮದ ಬೆಲೆ ತೀರಿಸಲಾಗಲಿಲ್ಲ. ಸ್ಯೂಸ್ ಮತ್ತು ಯೂರೋಪೆಯ ಪ್ರೇಮಕತೆಯ ಉಲ್ಲೇಖವು ಅಪೋಲೋಡಾರಸ್, ಹೈಜಿನಸ್ ಹಾಗೂ ಓವಿಡ್‍ದಿಂದ ಸಿಗುತ್ತವೆ. ಆದರೆ ಇದಕ್ಕಿಂತ ಹೆಚ್ಚು ವಿಸ್ತಾರವಾದ ರೋಚಕವಾದ ವರ್ಣನೆಯನ್ನು ಅಲೆಗ್ಸಾಂಡ್ರಿಯನ್ ಕವಿ ಮೋಸ್ಕಸ್ ಮಾಡಿದ್ದಾನೆ. ಮೇಲೆ ವರ್ಣಿತವಾದ ಈ ಮೂವರ ಹೊರತಾಗಿಯೂ ಸ್ಯೂಸನಿಗೆ ಕೆಲವು ಮತ್ರ್ಯ ಪ್ರೇಮಿಕೆಯರಿದ್ದರು. ಮತ್ತು ಅನೇಕ ನಿಷಿದ್ಧ ಬಾಲಕರಿದ್ದರು! ಸ್ಯೂಸ್ ಹಾಗೂ ಪ್ಯಾಸಿಫೆಯ ಸಂಸರ್ಗದಿಂದ ಲಿಬಿಯಾದ ಎಮಾನ್‍ನ ಜನನವಾಯಿತು. ಆ್ಯಂಟಿಯೋಪಿಯು ಎಂಫಿಯನ್ ಹಾಗೂ ಜಿಯಸ್‍ರಿಗೆ ಜನ್ಮಕೊಟ್ಟಳು. ಲಾಮಿಯಾ ಹಾಗೂ ಎಗಿನಾ ಮೇಲೆ ಕೂಡ ದೇವ ಸಮ್ರಾಟನ ಅನುಕಂಪವಿತ್ತು. ಸ್ಯೂಸ್ ಮತ್ತು ಸಿಮಿಲೆ ಸಂಸರ್ಗದಿಂದ ಮದ್ಯದದೇವತೆ ಡಯನಾಯಸಸ್, ಮತ್ತು ಡಾನೆ ಸಂಸರ್ಗದಿಂದ ವೀರ ಸರ್ಸಿಯಸ್‍ನ ಜನ್ಮವಾಯಿತು. ಇವುಗಳ ವಿಸ್ತಾರವಾದ ವರ್ಣನೆ ಗ್ರೀಕ್ ಪೌರಾಣಿಕ ಕತೆಗಳಲ್ಲಿವೆ. ಗ್ರೀಕ್ ಸಮಾಜದಲ್ಲಿ ಪ್ರಚಲಿತವಾದ ಏಕ ವಿವಾಹ ಪದ್ಧತಿಗನುಗುಣವಾಗಿ ಸ್ಯೂಸನ ಅಧಿಕೃತ ಹೆಂಡತಿ ಹೆರಾ ಇದ್ದಳು. ಇದು ನಿಸ್ಸಂದೇಹವಾಗಿಯೂ ಒಂದು ಪ್ರೇಮ ವಿವಾಹವಾಗಿತ್ತು. ಸ್ಯೂಸ್ ಖಂಡಿತವಾಗಿ ಹೆರಾಳ ಪ್ರೇಮದಲ್ಲಿ ಹುಚ್ಚನಾಗಿದ್ದ. ಆದರೆ ಮದುವೆಯಾದ ಮೇಲೆ ಸ್ಯೂಸ್‍ನ ಕಾಮಲಾಲಸೆ ಸಂತುಷ್ಟವಾಗಲಾರದ್ದಾಗಿತ್ತು. ಅದರ ತೃಪ್ತಿಯು ಕೇವಲ ಹೆರಾಳಿಂದ ಅಸಂಭವವಾಗಿತ್ತು. ಅವನು ದಿನಾಲೂ ಹೊಸ ಪ್ರೇಮಿಕೆಯರನ್ನು ಹುಡುಕುತ್ತಿದ್ದ. ನಿತ್ಯವೂ ಹೊಸ ಸಂಬಂಧಗಳನ್ನು ಸ್ಥಾಪಿತಗೊಳಿಸುತ್ತಿದ್ದ. ಲಭ್ಯವಾದ ಎಲ್ಲ ಮೂಲಗಳ ಪ್ರಕಾರ, ಹೆರಾ ತನ್ನ ಪತಿಯ ಬಗೆಗೆ ಪ್ರಾಮಾಣಿಕಳಾಗಿದ್ದಳು. ಆದರೆ ಅವಳ ನೈತಿಕತೆಯ ಪ್ರಭಾವವೂ ಸ್ಯೂಸ ಮೇಲೆ ಆಗಿರಲಿಲ್ಲ. ಅವನ ಅಸೀಮ ಶಕ್ತಿಯ ಹಾಗೆ ಅವನ ಪ್ರಣಯೋನ್ಮಾದವೂ ಅನಂತವಾಗಿತ್ತು. ಗ್ರೀಸ್ (ಯುನಾನ್) 201 ಸ್ಯೂಸ್‍ನಿಗೆ ಕೃಷಿಯ ದೇವತೆ ಡಿಮಿಟರ್ ಜೊತೆ ಮಹತ್ವಪೂರ್ಣ ಸಂಬಂಧವಿತ್ತು. ಡಿಮಿಟರ್ ಒಲಿಂಪಸ್‍ನ ಪ್ರಮುಖದೇವತೆಗಳಲ್ಲಿ ಒಬ್ಬಳು. ಸ್ಯೂಸ್ ಹಾಗೂ ಡಿಮಿಟರ್ ಸಂಯೋಗವು ಆಕಾಶ ಹಾಗೂ ಧಾನ್ಯಗಳ ವಿವಾಹದ ಪ್ರತೀಕ. ಈ ಸಂಬಂಧದಿಂದ ಪರ್ಸಿಫನಿ ಅಥವಾ ಕೋರ್‍ಳು ಹುಟ್ಟಿದಳು. ಮತ್ತೊಂದು ಅರಾಫಿಕ್ ಕತೆಯ ಪ್ರಕಾರ ಸ್ಯೂಸ್‍ನು ತನ್ನ ಮಗಳಾದ ಪರ್ಸಿಫನಿಯನ್ನು ಒಂದು ಸರ್ಪ ಅಥವಾ ದೈತ್ಯನ ರೂಪದಲ್ಲಿ ಭೋಗಿಸಿದ್ದ. ಪರ್ಸಿಫನಿಯು ಜೆಗರಿಯಸ್ ಎಂಬ ಅದ್ಭುತ ಬಾಲಕನನ್ನು ಪಡೆದಳು. ಸ್ಯೂಸ್‍ನ ಈ ಅನುಚಿತ ಸಂಬಂಧದ ಸುದ್ದಿ ಹೆರಾಳಿಗೆ ಗೊತ್ತಾಗಿತ್ತು. ಆದ್ದರಿಂದ ಸ್ಯೂಸ್ ಈ ಬಾಲಕನ ಸಂರಕ್ಷಣೆಗಾಗಿ ಕ್ರೀಟನ ಕ್ಯೂರೆಟಸ್‍ನನ್ನು ನೇಮಿಸಿದ. ಜೆಗರಿಯಸ್‍ನ ಪಾಲನೆ ಈಡಿಯಸ್ ಗುಹೆಯಲ್ಲಾಯಿತು. ಅಲ್ಲಿ ಕ್ಯೂರೆಟಸ್ ಅವನ ಸುತ್ತಲೂ ಹಾಡುತ್ತ ಕುಣಿಯುತ್ತ ಮತ್ತು ಆಯುಧಗಳ ಸದ್ದು ಮಾಡುತ್ತಿದ್ದ. ಅವನು ‘ಸ್ಯೂಸ್’ ಮೊದಲು ಶಿಶುವಾಗಿದ್ದಾಗಲೂ ಹೀಗೇ ಮಾಡಿದ್ದ. ಆದರೆ ಸ್ಯೂಸ್‍ನ ಶತ್ರು ಟೈಟನ್ಸ ಹೆರಾಳಿಂದ ಪ್ರಚೋದಿತವಾಗಿ ಅವಕಾಶಕ್ಕಾಗಿ ಹೊಂಚುಹಾಕಿ ಕಾದಿದ್ದ. ಒಂದು ರಾತ್ರಿ ಕ್ಯೂರೆಟಸ್ ನಿದ್ದೆ ಮಾಡಿದ್ದು ಟೈಟನ್ಸಗೆ ಅನುಕೂಲವಾಯಿತು. ಅವನು ಮೈಮೇಲೆ ಬಿಳಿ ಮಣ್ಣು ತೊಡೆದುಕೊಂಡ, ಮುಖವನ್ನೂ ಬಿಳಿದು ಮಾಡಿಕೊಂಡ. ಜೆಗರಿಯಸ್ ಭಯಪಡಬಾರದೆಂದು ಹಾಗೆ ಮಾಡಿಕೊಂಡ ಅವನು ಮಧ್ಯರಾತ್ರಿಯ ನಂತರ ಕಾರ್ಯೋನ್ಮುಖನಾದ. ಟೈಟನ್ಸನ ಶಂಖ, ಗರ್ಜಿಸುವ ಎತ್ತು, ಬಂಗಾರದ ಸೇಬು ಕನ್ನಡಿ ಮುಂತಾದವುಗಳನ್ನು ಕೊಟ್ಟು ಬಾಲಕ ಜೆಗರಿಯಸ್‍ನನ್ನು ಪುಸಲಾಯಿಸಿದ. ನಂತರ ಅವನ ಮೇಲೆ ಆಕ್ರಮಣ ಮಾಡಿದ. ಜೆಗರಿಯಸ್ ಆತ್ಮರಕ್ಷಣೆಗಾಗಿ ಅನೇಕ ರೂಪ ಬದಲಿಸಿದ. ಸ್ಯೂಸ್‍ನ ರೂಪ ಒಮ್ಮೆ ಧರಿಸಿದರೆ ಇನ್ನೊಮ್ಮೆ ಕ್ರಾನಸ್. ಆದರೆ ಟೈಟನ್ಸನನ್ನು ಮೋಸಗೊಳಿಸುವುದು ಸುಲಭವಾಗಿರಲಿಲ್ಲ. ಅವನು ಒಂದು ಕುದುರೆಯಾದ, ಕೊಂಬುಳ್ಳ ಸರ್ಪವಾದ, ಸಿಂಹವಾದ, ಎತ್ತಾದ. ಎತ್ತಾದ ಜಿಗರಿಯಸನನ್ನು ಟೈಟನ್ಸ ಕಾಲು ಮತ್ತು ಕೋಡುಗಳನ್ನು ಹಿಡಿದುಕೊಂಡ. ಅವನ ಶರೀರವನ್ನು ತನ್ನ ಹಲ್ಲುಗಳಿಂದ ಸೀಳಿಬಿಟ್ಟ, ಮತ್ತು ಹಸಿಹಸಿಯಾಗಿ ಅವನನ್ನು ತಿನ್ನತೊಡಗಿದ. ಟೈಟನ್ಸ ಜೆಗರಿಯಸ್‍ನನ್ನು ಭಕ್ಷಿಸುತ್ತಿದ್ದಾಗಲೇ ಎಥಿನಿ ಆಕಡೆಯಿಂದ ಬಂದಳು. ಭಾಗ್ಯವಶಾತ್ ಟೈಟನ್ಸ್‍ನು ಹೃದಯವನ್ನು ಇನ್ನೂ ತಿಂದಿರಲಿಲ್ಲ. ಎಥಿನಿ ಅವನಿಂದ ಹೃದಯವನ್ನು ಉಳಿಸಿ, ಅದನ್ನು ಒಂದು ಮಣ್ಣಿನ ಮೂರ್ತಿಯಲ್ಲಿ ಹಾಕಿ ಜೀವ ತುಂಬಿದಳು. ಹೀಗೆ ಜೆಗರಿಯಸ್ ಅಮರನಾದ. ಅವನ ಎಲುಬುಗಳನ್ನು ಡೊಲ್ಫಿಯಲ್ಲಿ ದಹನ ಮಾಡಲಾಯಿತು. ಸಿಟ್ಟಿಗೆದ್ದ ಸ್ಯೂಸ್ ವಜ್ರದಿಂದ ಟೈಟನ್ಸನನ್ನು ಕೊಂದು ಹಾಕಿದ. 202 ಕಥಾ ಸಂಸ್ಕೃತಿ ಟೈಟನೆಸ್ ನಿಮಾಜಿನಿ (ಸ್ಮೃತಿ)ಯು ಸ್ಯೂಸ್‍ನ ಸಂಸರ್ಗದಿಂದ ಒಂಬತ್ತು ಮ್ಯಾಸಸ್‍ಗಳಿಗೆ ಜನ್ಮವಿತ್ತಳು. ಈ ದಿವ್ಯಸ್ಮೃತಿಯ ಸಹಾಯದಿಂದಲೇ, ಸಾಹಿತ್ಯ, ಕಲೆ, ಶಿಲ್ಪ ಇತ್ಯಾದಿಗಳ ಅಭಿವೃದ್ಧಿಯಾಗುತ್ತದೆ. ಕೆಲವು ಮೂಲಗಳ ಪ್ರಕಾರ, ಒಕಿನಾಸ್‍ನ ಮಗಳು ಸೇಡಿನ ದೇವಿ ನೆಮೆಸಿಸ್ ಕೂಡ ಸ್ಯೂಸ್‍ನ ಕಾಮಕ್ಕೆ ಬಲಿಯಾದಳು. ನೆಮೆಸಿಸ್ ಅವನಿಂದ ತಪ್ಪಿಸಿಕೊಳ್ಳಲು ಅನೇಕ ಬಾರಿ ರೂಪ ಬದಲಿಸಿದಳು, ಸ್ಥಳ ಬದಲಿಸಿದಳು, ಆದರೆ ಸ್ಯೂಸ್ ಭೂಮಿ, ಆಕಾಶ, ಸಮುದ್ರಗಳಲ್ಲೆಲ್ಲಾ ಅವಳನ್ನು ಹಿಂಬಾಲಿಸಿದ. ಕೊನೆಯಲ್ಲಿ ನೆಮೆಸಿಸ್ ಹೆಣ್ಣು ಹಂಸದ ರೂಪ ತಾಳಿದಾಗ ಸ್ಯೂಸ್ ಹಂಸದ ರೂಪದಲ್ಲಿ ಬಂದು ಅವಳ ಸಂಪರ್ಕ ಮಾಡಿದ. ಕೆಲಸಮಯದ ಅನಂತರ ನೆಮೆಸಿಸ್ ಒಂದು ಮೊಟ್ಟೆಯನ್ನು ಇಟ್ಟಳು. ಅದರಿಂದಲೇ ವಿಶ್ವಸುಂದರಿ ಹೆಲೆನ್‍ಳ ಜನ್ಮವಾಯಿತು. ನೆಮೆಸಿಸ್ ಒಬ್ಬ ಸಮುದ್ರ ಕನ್ಯೆಯ ರೂಪದಲ್ಲಿ ಲಿಡಾ ಎಂಬ ಹೆಸರಿನಿಂದಲೂ ಪರಿಚಿತಳಾಗಿದ್ದಾಳೆ. ಸ್ಯೂಸ್‍ನ ಪ್ರೇಮಿಕೆಯರಲ್ಲಿ ಇನ್ನೊಂದು ಮಹತ್ಪಪೂರ್ಣ ಹೆಸರು ಎಟಲಸ್‍ನ ಪುತ್ರಿ ಮಾಯಾಳದು. ಒಂದು ರಾತ್ರಿ ಹೆರಾ ಗಾಢನಿದ್ರೆಯಲ್ಲಿರುವಾಗ ಸ್ಯೂಸ್ ಮತ್ತು ಮಾಯಾ ಅರ್ಕೆಡಿಯಾದಲ್ಲಿ ಸೇರಿದರು. ಈ ಸಂಯೋಗದಿಂದ ಹೆಮಿಜ್ ಹುಟ್ಟಿದ. ಅವನು ಒಲಿಂಪಸ್‍ನ ಹನ್ನೆರಡು ಮುಖ್ಯ ದೇವತೆಗಳಲ್ಲಿ ಒಬ್ಬ. ಫೀಬಿಯ ಮಗಳು ಲೀಟೋ ಮತ್ತು ಸ್ಯೂಸ್ ಸಂಬಂಧದಿಂದ ಅಪೊಲೊ ಹಾಗೂ ಅರ್ಟೆಮಿಸ್‍ನ ಜನ್ಮವಾಯಿತು. ಹೆರಾಳ ಹೊಟ್ಟೆಕಿಚ್ಚಿನ ಪರಿಣಾಮವಾಗಿ ಲೀಟೋ ತುಂಬ ಕಷ್ಟಗಳನ್ನು ಅನುಭವಿಸಬೇಕಾಯಿತು. ಈ ಅಮೂಲ್ಯ ದೇವಿಗಳೊಂದಿಗಷ್ಟೇ ಅಲ್ಲ, ಮನುಷ್ಯರ ಸೃಷ್ಟಿಯಾದ ಮೇಲೆ ಸ್ಯೂಸ್‍ನು ನಶ್ವರರೆನಿಸಿದ ಅನೇಕ ರಮಣಿಯರೊಂದಿಗೆ ಕೂಡ ಶಾರೀರಿಕ ಸಂಬಂಧವನ್ನು ಇರಿಸಿಕೊಂಡಿದ್ದ. ಪುರುಷರಿಗೆ ದಂಡ ವಿಧಿಸಲೆಂದೇ ಸೃಷ್ಟಿಗೊಂಡಿದ್ದ ಪಂಡೋರಾಳನ್ನೂ ಕೂಡ ಸ್ಯೂಸ್ ಪ್ರಣಯಕ್ಕಾಗಿ ಪ್ರಾರ್ಥಿಸಿಕೊಂಡಿದ್ದ. ಸ್ಯೂಸ್ ಮತ್ತು ಇಓ ನದಿಯ ದೇವತೆ ಇನಾಕಸ್‍ನ ಮಗಳು, ಹೆರಾಳ ದೇವಾಲಯದ ಪೂಜಾರಿಣಿ ಇಓ ಅದ್ವಿತೀಯ ಸುಂದರಿಯಾಗಿದ್ದಳು. ಯೌವನದ ಪರಾಗ ತುಂಬಿದ ಅಂಗಗಳು, ಹಾಲಿನಂಥ ಗೌರವರ್ಣ, ಕೆನ್ನೆಯ ಮೇಲೆ ಚಿಮ್ಮುವ ಉಷೆಯ ಚೆಂಬಣ್ಣ, ಲಿಲಿಯ ಶರೀರದಲ್ಲಿ ರಕ್ತ ಸಂಚಾರವಾದವಳ ಹಾಗೆ ಇದ್ದಳು. ಸ್ಯೂಸ್ ಅವಾಕ್ಕಾಗಿದ್ದ. ಭೂಮಿಯ ಮೇಲೆ ಇಂಥ ರೂಪಸಿಯ ಕಲ್ಪನೆಯನ್ನೂ ಅವನು ಮಾಡಿರಲಿಲ್ಲ. ದೇವ ಸಮ್ರಾಟ ಒಬ್ಬ ಮನುಷ್ಯಕುಮಾರಿಗೆ ಹೃದಯವನ್ನು ತೆತ್ತಿದ್ದ. ಇಓಳ ಸ್ವಪ್ನದಲ್ಲಿ ಒಂದು ದೇವ ಆಕೃತಿ ಕಾಣತೊಡಗಿತು. ಅದು ಹೇಳಿತು - ``ಇಓ, ನಾನು ದೇವ ಗ್ರೀಸ್ (ಯುನಾನ್) 203 ಸಾಮ್ರಾಟ ಸ್ಯೂಸ್ ನಿನ್ನ ಪ್ರಣಯಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ನಿನ್ನ ಸರಳರೂಪವು ನನ್ನ ಮನವನ್ನು ಗೆದ್ದಿದೆ. ಸೌಂದರ್ಯ ಮತ್ತು ಯೌವನದ ಅಮೂಲ್ಯ ನಿಧಿಯನ್ನು ಹೀಗೆಯೇ ಕಳೆದುಕೊಳ್ಳುವಿಯಾ? ಬಾ . . . ನನ್ನ ಬಳಿಗೆ . . ಬಾ. . ಇಓ. .” ಆ ಆಕೃತಿಯು ತೋಳುಗಳನ್ನು ಮುಂದೆ ಚಾಚಿ ಮುಂದುವರಿಯತೊಡಗಿತು. ಇಓ ಕಂಪಿಸುತ್ತಿದ್ದಳು. ಒಂದು ದಿನ ಸ್ಯೂಸ್ ಮತ್ತು ಇಓ ನದಿಯ ದಂಡೆಯ ಮೇಲೆ ವಿಹರಿಸುತ್ತಿದ್ದರು. ಹೆರಾಳ ಸಂದೇಹದ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸ್ಯೂಸ್‍ನು ಆ ಭೂಭಾಗವನ್ನು ಒಂದು ಮೋಡದಿಂದ ಮರೆಯಾಗುವಂತೆ ಮಾಡಿದ್ದ. ಹೆರಾ ಆ ಸಮಯದಲ್ಲಿ ಓಲಿಂಪಸ್‍ನ ತನ್ನ ಸ್ವರ್ಣ ಸೌಧದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು. ಸ್ಯೂಸ್ ಮತ್ತು ಇಓ ಪ್ರೇಮಮಗ್ನರಾಗಿದ್ದರು. ಆಗ ಅಕಸ್ಮಾತ್ತಾಗಿ ಹೆರಾಳ ನೋಟವು ಆ ಮೋಡದ ತುಣುಕಿನತ್ತ ಸರಿಯಿತು. ಸಂಪೂರ್ಣ ಆಕಾಶವು ಕನ್ನಡಿಯಂತೆ ಸ್ವಚ್ಛವಾಗಿರುವಾಗ ಅಂತರಿಕ್ಷದ ಒಂದು ಮೂಲೆಯಲ್ಲಿ ಈ ಮೋಡವೇಕೆ? ಇದರಲ್ಲೇನೋ ರಹಸ್ಯವಿದೆ. ಹೆರಾಳಿಗೆ ತನ್ನ ಗಂಡನ ಮನೋವೃತ್ತಿಯ ಪರಿಚಯವಿತ್ತು. ತಕ್ಷಣ ಆ ಸುರುಳಿ ಮೋಡಕ್ಕೆ ಒಂದು ಕಡೆಯಿಂದ ಹೊಡೆತ. ಸ್ಯೂಸ್‍ನಿಗೆ ಹೆರಾಳು ಬರಲಿದ್ದಾಳೆಂಬುದು ಗೊತ್ತಾಗಿ ಬಿಟ್ಟಿತು. ಅವನು ತಕ್ಷಣ ಇಓಳನ್ನು ಒಂದು ಹಸುವನ್ನಾಗಿ ಬದಲಿಸಿದ. ಹೆರಾಳ ಮನಸ್ಸಿನಲ್ಲಿ ಸಂದೇಹ ಹುಟ್ಟಬಾರದು. ಈ ಸಂಕಟ ಸರಿದುಹೋಗಲಿ. ಹಸುವಿನ ರೂಪ ಬದಲಿಸಿದರಾಯಿತು. ಹೀಗೆಂದು ಸ್ಯೂಸ್ ಯೋಚಿಸಿದ. ಮೋಡ ಸರಿದ ತಕ್ಷಣ, ಕನ್ನಡಿಯಂತೆ ನಿರ್ಮಲವಾದ ನದಿಯ ದಂಡೆಯ ಮೇಲೆ ಸ್ಯೂಸ್‍ನ ಬಳಿ ಒಂದು ಹಸು ನಿಂತಿದೆ. ಹಸು ತುಂಬ ಸುಂದರವಾಗಿತ್ತು. ಅದರಲ್ಲಿ ಇಓಳ ಮಾನವ ಆಕೃತಿಯನ್ನುಳಿದು ಮತ್ತೆಲ್ಲ ಸೌಂದರ್ಯವಿತ್ತು. ಹೆರಾ ಹತ್ತಿರ ಬಂದಳು. ಸ್ನೇಹದಿಂದ ಹಸುವಿನ ಬೆನ್ನನ್ನು ಸವರುತ್ತ ಹೇಳಿದಳು - “ಇಷ್ಟೊಂದು ಸುಂದರವಾದ ಹಸುವನ್ನು ನಾನು ಭೂಮಿಯ ಮೇಲೆ ನೋಡಿಯೇ ಇಲ್ಲ. ಈ ಅದ್ಭುತ ಪ್ರಾಣಿ ಎಲ್ಲಿಂದ ಬಂದಿತು ಮಹಾರಾಜಾ! ಈ ಸಂಪತ್ತಿನ ಒಡೆಯ ಯಾವ ಭಾಗ್ಯಶಾಲಿ?”. ಸ್ಯೂಸ್ ಮತ್ತಷ್ಟು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಕ್ಷಣ ತುಂಬ ಸಹಜದನಿಯಲ್ಲಿ ಉತ್ತರ ಕೊಟ್ಟನು - “ದೇವಿ, ಇದು ಈ ಭೂಮಿಯ ಹೊಸ ನಿರ್ಮಾಣ. ಇದನ್ನು ಈಗಷ್ಟೇ ರಚಿಸಲಾಗಿದೆ.” “ಆಶ್ಚರ್ಯ!!” ಹೇರಾ ಹೇಳಿದಳು. ಅವಳ ಸಂದೇಹವಿನ್ನೂ ದೂರವಾಗಿರಲಿಲ್ಲ. ಅವಳಿಗೆ ಒಂದು ಸಂಗತಿ ಹೊಳೆಯಿತು. ``ಸಮಸ್ತ ಪ್ರಾಣಿಗಳ ಒಡೆಯರೂ ಮಹಾರಾಜಾಧಿರಾಜರೂ ಆದ ಸ್ಯೂಸ್ ನನ್ನ ಒಂದು ಪ್ರಾರ್ಥನೆಯನ್ನು ಒಪ್ಪಿ 204 ಕಥಾ ಸಂಸ್ಕೃತಿ ಅನುಗ್ರಹಿಸುವರೇ? ಈ ಹಸು ನನ್ನ ಮನಸ್ಸನ್ನು ಸೆಳೆದಿದೆ. ಇದನ್ನು ಈ ದಾಸಿಗೆ ಕೊಡುವ ಕೃಪೆಯಾಗಬೇಕು.” “ಅವಶ್ಯ. . . . ಅವಶ್ಯ . . .” ಸ್ಯೂಸನು ತನ್ನ ಮನೋಭಾವವನ್ನು ಮುಚ್ಚಿಟ್ಟುಕೊಳ್ಳುತ್ತ ಹೇಳಿದನು. ಹೆರಾಳ ಈ ಸಣ್ಣ ಬೇಡಿಕೆಯನ್ನು ಒಪ್ಪದಿರುವುದು ಹೇಗೆ. ಇಲ್ಲವೆಂದು ಹೇಳಿದರೆ ಸಂದೇಹ ಹುಟ್ಟಬಹುದು. ಹೀಗೆ ಯೋಚಿಸಿ ಸ್ಯೂಸ್‍ನು ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಇಚ್ಛೆಯಿಲ್ಲದಿದ್ದರೂ ಹಸುವಿನ ರೂಪದಲ್ಲಿದ್ದ ತನ್ನ ಪ್ರೇಯಸಿ ಇಓಳನ್ನು ಹೆರಾಳಿಗೆ ಕೊಟ್ಟುಬಿಟ್ಟನು. ಹೆರಾ ಇನ್ನೂ ಸಂದೇಹದಿಂದ ಮುಕ್ತಳಾಗಿರಲಿಲ್ಲ. ಆದ್ದರಿಂದ ಅವಳು ಹಸುವಿನ ರಕ್ಷಣೆಯ ಭಾರವನ್ನು ತನ್ನ ನಂಬಿಕಸ್ತ ಸೇವಕ ಆಗೂವಿಗೆ ವಹಿಸಿದಳು. ಆಗೂ ಹೇರಾಳ ಆಜ್ಞೆಯಂತೆ ಗುಪ್ತಮಾರ್ಗದಿಂದ ಆ ಸುಂದರವಾದ ಹಸುವನ್ನು ನೆಮಿಯಾಕ್ಕೆ ಒಯ್ದು ಅಲ್ಲಿ ಒಂದು ಮರಕ್ಕೆ ಕಟ್ಟಿಹಾಕಿದನು. ಹೆರಾಳ ಈ ಸೇವಕ ಆಗೂವಿಗೆ ನೂರು ಕಣ್ಣುಗಳಿದ್ದವು. ಮತ್ತು ಅವನು ಮಲಗುವಾಗ ಎಲ್ಲ ಕಣ್ಣುಗಳನ್ನೂ ಮುಚ್ಚುತ್ತಿದ್ದಿಲ್ಲ. ಸಾಮಾನ್ಯವಾಗಿ ಒಂದೇ ಸಮಯಕ್ಕೆ ಅವನ ಎರಡು ಕಣ್ಣುಗಳು ಮಾತ್ರ ಮುಚ್ಚಿರುತ್ತಿದ್ದವು. ಬಡಪಾಯಿ ಇಓ ಒಂದು ಕ್ಷಣ ಕೂಡ ಅವನ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಅವಳ ಆಕೃತಿ ಬದಲಾದರೂ, ಅವಳ ಮನಸ್ಸು ಮತ್ತು ಬುದ್ಧಿ ಮನುಷ್ಯನಂತೆಯೇ ಇದ್ದವು. ಆಗೂನನ್ನು ಬಿಡುಗಡೆಗಾಗಿ ಪ್ರಾರ್ಥಿಸಿಕೊಳ್ಳಬೇಕೆನಿಸಿದರೂ ಭಾಷೆಯ ಮೇಲೆ ಅವಳಿಗೆ ಈಗ ಅಧಿಕಾರವಿರಲಿಲ್ಲ. ಅಲ್ಲಿ ಹೋಗಿ ಬರುವ ಜನರೊಡನೆ ಮಾತನಾಡಬಯಸಿದರೂ ‘ಅಂಬಾ’ ಎಂಬುದನ್ನು ಬಿಟ್ಟರೆ ಬೇರೆ ಸ್ವರ ಹೊರಡುತ್ತಿರಲಿಲ್ಲ. ಇದರಿಂದ ಅವಳು ಸ್ವಯಂ ಹೆದರಿದ್ದಳು. ಅವಳ ಮನಸ್ಸು ದುಃಖಿತವಾಗಿತ್ತು. ಜನರು ಬರುತ್ತಿದ್ದರು, ಅದರ ಸೌಂದರ್ಯ-ಸೌಷ್ಠವವನ್ನು ಹೊಗಳುತ್ತಿದ್ದರು, ಸ್ನೇಹದಿಂದ ಅದರ ಬೆನ್ನು ಸವರಿ ಹೋಗಿಬಿಡುತ್ತಿದ್ದರು. ಬಡಪಾಯಿ ಇಓ ಕಣ್ಣೀರು ಸುರಿಸುತ್ತ ನಿಂತಿದ್ದಳು. ಒಂದು ದಿನ ನದಿ ದೇವತೆಯಾದ ಇನಾಕಸ್ ಅಲ್ಲಿಗೆ ಬಂದ. ಸುಂದರವಾದ ಹಸುವನ್ನು ನೋಡಿ ಅಲ್ಲಿ ನಿಂತನು. ತನ್ನ ತಂದೆಯನ್ನು ನೋಡಿ ಇಓಳ ಮನಸ್ಸಿಗೆ ಇನ್ನಷ್ಟು ದುಃಖವಾಯಿತು. ತನ್ನ ತಂದೆಯ ಬಳಿ ತನ್ನ ದೌರ್ಭಾಗ್ಯದ ಕತೆಯನ್ನು ಹೇಳಿ, ಬಿಡುಗಡೆ ಮಾಡುವಂತೆ ಕೇಳಿಕೊಳ್ಳಬೇಕೆಂದು ಅವಳು ಬಯಸುತ್ತಿದ್ದಳು. ಅವಳ ಕಂಠ ಬಿಗಿಯುತ್ತಿತ್ತು. ಶಬ್ದಗಳು ಅದರೊಳಗೇ ಸಾಯುತ್ತಿದ್ದವು. ಹೃದಯದಲ್ಲಿ ಭಾವನೆಗಳಿದ್ದವು. ಆದರೆ ಅಭಿವ್ಯಕ್ತಿಸಲು ಭಾಷೆಯಿರಲಿಲ್ಲ. ಅವಳು ಪ್ರೀತಿಯ ತೀವ್ರತೆಯಿಂದ ತನ್ನ ತಂದೆಯ ಕೈಯನ್ನು ನೆಕ್ಕತೊಡಗಿದಳು. ಆಗ ಅವಳಿಗೆ ಅಕಸ್ಮಾತ್ತಾಗಿ ಒಂದು ಉಪಾಯ ಹೊಳೆಯಿತು. ಅವಳು ತನ್ನ ಕೊಂಬಿನಿಂದ ಮಣ್ಣಿನಲ್ಲಿ ಬರೆದಳು - “ಇಓ” ಗ್ರೀಸ್ (ಯುನಾನ್) 205 ಇನಾಕಸ್ ತನ್ನ ಕಳೆದುಹೋದ ಮಗಳನ್ನು ಗುರುತಿಸಿದನು. ಅವನು ಕಾತರದ ದನಿಯಲ್ಲಿ ಶೋಕಿಸತೊಡಗಿದನು - “ಹಾಂ . . . ನನ್ನ ಮಗಳೇ, ನಾನಿದನ್ನೇನು ನೋಡುತ್ತಿದ್ದೇನೆ. ನಿನಗೆಂಥ ಸ್ಥಿತಿ ಬಂದಿದೆ? ಹೂವಿನಂತಹ ಸುಕುಮಾರಳಾದ ನನ್ನ ಇಓ ಮೇಲೆ ಯಾರು ಈ ಅತ್ಯಾಚಾರ ಮಾಡಿದವರು? ಹೇ ಪ್ರಭು ಸ್ಯೂಸ್! ಇದಕ್ಕಿಂತ ಇವಳ ಪ್ರಾಣ ತೆಗೆದುಕೊಳ್ಳುವುದೇ ಒಳ್ಳೆಯದಿತ್ತು. . . .” ಈ ದೃಶ್ಯವನ್ನು ನೋಡಿದ ಆಗೂ ಜಾಗ್ರತನಾಗಿ ಹಸುವನ್ನು ದೂರ ಒಯ್ದನು. ಹಸುವನ್ನು ಬೇರೊಂದು ಮರಕ್ಕೆ ಕಟ್ಟಿ ಅವನು ತುಸು ಎತ್ತರದ ಮೇಲೆ ಕುಳಿತನು. ಅಲ್ಲಿ ಅವನಿಗೆ ಎಲ್ಲ ದಿಕ್ಕುಗಳೂ ಕಾಣುತ್ತಿದ್ದವು. ಇತ್ತ ಓಲಿಂಪಸ್‍ನಲ್ಲಿ ಸ್ಯೂಸ್‍ನಿಗೆ ವಿಶ್ರಾಂತಿಯಿರಲಿಲ್ಲ. ಇಓಳ ದುರ್ದೆಸೆಗೆ ಅವನೇ ಹೊಣೆಗಾರನಾಗಿದ್ದ. ತುಂಬ ವಿಚಾರ ಮಾಡಿದ ನಂತರ ಅವನು ಇಓಳ ಉದ್ಧಾರದ ಹೊಣೆಯನ್ನು ತನ್ನ ಮಗ ಹೆಮಿಜ್‍ನಿಗೆ ವಹಿಸಿದ. ಹೆಮಿಜ್ ತಕ್ಷಣ ತನ್ನ ರೆಕ್ಕೆಯುಳ್ಳ ಪಾದರಕ್ಷೆ ಧರಿಸಿ, ರೆಕ್ಕೆಯುಳ್ಳ ಟೊಪ್ಪಿಗೆ ಹಾಕಿಕೊಂಡು, ಕೈಯಲ್ಲಿ ಕೊಳಲು ಮತ್ತು ಜಾದುವಿನ ಛಡಿಯನ್ನು ಹಿಡಿದು ನೆಮಿಯಾದ ಕಡೆಗೆ ಹೊರಟನು. ನಿರ್ದಿಷ್ಟವಾದ ಸ್ಥಳಕ್ಕೆ ಹೋದಮೇಲೆ ಅವನು ತನ್ನ ಚಪ್ಪಲಿ ಹಾಗೂ ಟೊಪ್ಪಿಗೆಗಳನ್ನು ಅಡಗಿಸಿಟ್ಟು, ಒಬ್ಬ ದನಗಾಹಿಯ ವೇಷ ಧರಿಸಿದನು. ಕೈಯಲ್ಲಿ ಕೋಲು ಹಿಡಿದು, ಕೊಳಲಿನ ದಿವ್ಯ ರಾಗವನ್ನು ಬಿತ್ತರಿಸಿದ. ಅಂಥ ಸಂಗೀತ ಭೂಮಿಯ ಮೇಲೆ ಎಲ್ಲಿಂದ ಬಂದೀತು? ಮುಗ್ಧ ದನಗಾಹಿ ಹಾಗೂ ಅವನ ಮಧುರ ರಾಗಿಣಿಯು ಆಗೂನ ಮನಸ್ಸನ್ನು ಮೋಹಿಸಿಬಿಟ್ಟಿತು. ಅವನು ತುಂಬ ಸ್ನೇಹದಿಂದ ಹೆಮಿಜ್‍ನನ್ನು ತನ್ನ ಬಳಿ ಕರೆದು ಒಂದು ಮರದ ಕೆಳಗಿನ ನೆರಳಿನಲ್ಲಿ ಕೂಡಿಸಿಕೊಂಡನು. ಅವನೊಡನೆ ಮಾತಿನಲ್ಲಿ ತೊಡಗಿದನು. ಹೆಮಿಜ್ ಕೇವಲ ಒಬ್ಬ ದಕ್ಷ ಕೊಳಲುವಾದಕನಾಗಿರದೇ ಒಬ್ಬ ಕುಶಲ ಮಾತುಗಾರನೂ ಆಗಿದ್ದ. ಅವನು ಬಗೆಬಗೆಯ ಮಾತುಗಳಿಂದ ಆಗೂನ ಮನಸ್ಸನ್ನು ಸಂತೋಷಪಡಿಸುತ್ತಿದ್ದ. ಸಾಕಷ್ಟು ಸಮಯ ಕಳೆಯಿತು. ಕತ್ತಲು ಕವಿಯಿತು. ಆಗೂವಿಗೆ ನಿದ್ದೆ ಬರತೊಡಗಿತು. ಕೊಳಲಿನ ಮಧುರ ನಾದದಿಂದಾಗಿ ಅವನ ಒಂದೊಂದೇ ಕಣ್ಣುಗಳು ಮುಚ್ಚತೊಡಗಿದ್ದವು. ಆದರೆ ಕೆಲವು ಕಣ್ಣುಗಳು ಇನ್ನೂ ತೆರೆದಿದ್ದವು. ಅವನ ತಲೆ ಮುಂದಕ್ಕೆ ಬಾಗಿತು. ಈಗ ಹೆಮಿಜ್ ಖಡ್ಗದಿಂದ ಒಂದೇ ಹೊಡೆತಕ್ಕೆ ಅವನ ರುಂಡವನ್ನು ಮುಂಡದಿಂದ ಬೇರ್ಪಡಿಸಿದನು. ಆಗೂವಿನ ನೂರು ಕಣ್ಣುಗಳು ಎಂದೆಂದಿಗೂ ಮುಚ್ಚಿ ಹೋದವು. ಹೆಮಿಜ್ ಇಓಳನ್ನು ಬಿಡುಗಡೆಗೊಳಿಸಿದ. ಆದರೆ ಅವಳ ಕಷ್ಟದ ದಿನಗಳು ಮುಗಿದಿರಲಿಲ್ಲ. ಆಗೂ ಹೆರಾಳ ಆಜ್ಞೆಯನ್ನು ಪಾಲಿಸುವಾಗ ಸತ್ತಿದ್ದನು. ಆದ್ದರಿಂದ ಹೆರಾ ಅವನ ನೂರು ಕಣ್ಣುಗಳನ್ನು ನವಿಲಿನ ಗರಿಗಳಿಗೆ ಹಚ್ಚಿದಳು. 206 ಕಥಾ ಸಂಸ್ಕೃತಿ ಇಓಳ ಬಗೆಗಿನ ಹೆರಾಳ ಸಿಟ್ಟು ಇನ್ನೂ ಕಡಿಮೆಯಾಗಿರಲಿಲ್ಲ. ಹಾಗಾಗಿ ಇಓಳನ್ನು ಅವಳ ವಾಸ್ತವಿಕ ರೂಪದಲ್ಲಿ ಬದಲಿಸುವ ಅವಕಾಶವನ್ನು ಅವಳು ಸ್ಯೂಸ್‍ನಿಗೆ ಕೊಡಲೇ ಇಲ್ಲ. ಹೆರಾಳು ಹಸುವಿನ ರೂಪದ ಇಓಳ ಹಿಂದೆ ಹಸುವಿನ ನೊಣಗಳನ್ನು ಬಿಟ್ಟಳು. ಅವುಗಳ ಕಡಿತವನ್ನು ತಾಳಲಾರದೆ ಇಓ ದೇಶ-ವಿದೇಶಗಳಲ್ಲಿ ತಿರುಗತೊಡಗಿದಳು. ಮೊದಲು ಅವಳು ಡೊಡೊನಾಕ್ಕೆ ಹೋದಳು. ಮತ್ತು ಅನಂತರ ಇಓನಿಯನ್ ಸಮುದ್ರವೆಂದೇ ಹೆಸರಾದ ಸಮುದ್ರ ದಂಡೆಯವರೆಗೆ ಹೋದಳು. ದುಃಖ ಸಂತ್ರಸ್ತ ಇಓ ಅತ್ತ ಇತ್ತ ಅಲೆಯುತ್ತ ಸ್ಯೂಸನಿಗೆ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುತ್ತಿದ್ದಳು. ಆದರೆ ಆ ದುರದೃಷ್ಟವಂತೆಯ ದುಃಖಕ್ಕೆ ಕೊನೆಯಿರಲಿಲ್ಲ. ಇಓನಿಯನ್ ಸಮುದ್ರದಿಂದ ಹಿಂತಿರುಗಿ ಉತ್ತರದ ಕಡೆ ನಡೆದು ಹೆಮಸ್ ಪರ್ವತದ ಮೇಲ್ಗಡೆ ಹೋದಳು. ನಂತರ ಕಪ್ಪು ಸಮುದ್ರದ ಮಾರ್ಗವಾಗಿ ಕ್ರೀಮಿಯನ್ ಬಾಸ್‍ಫಾರಸ್ ದಾಟಿ ಹಿಬ್ರೀಸ್ಟೀಸ್ ನದಿಯ ಮೂಲವಾದ ಕಾಕೆಸಸ್ ಪರ್ವತವನ್ನೇರಿದಳು. ಒಂದು ಉನ್ನತ ಶಿಖರದ ಮೇಲೆ ಇಓಳಿಗೆ ಒಂದು ವಿಶಾಲ ಆಕೃತಿ ಕಾಣಿಸಿತು. ಒಂದು ಗರುಡವು ಆ ಆಕೃತಿಯ ಮಾಂಸವನ್ನು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಅವನು ಸ್ಯೂಸ್‍ನ ಸಿಟ್ಟಿಗೆ ತುತ್ತಾಗಿದ್ದ ಮಾನವನ ಸಮರ್ಥಕನಾಗಿದ್ದ ಪ್ರೊಮಿಥ್ಯೂಸ್ ಆಗಿದ್ದ. ಇಓ ಬಂಡೆಗೆ ಬಿಗಿದ ಆ ವಿಶಾಲಕಾಯದ ಮೇಲೆ ಅಸಹಾಯ ಟೈಟನ್‍ನನ್ನು ನೋಡಿ ಅವನ ಬಳಿ ನಿಂತು ಅವಳು ದುಃಖಿತ ಸ್ವರದಲ್ಲಿ ಕೇಳಿದಳು - “ಈ ಭಯಂಕರ ಯಾತನೆಯನ್ನು ನಿಶ್ಯಬ್ದವಾಗಿ ಸಹಿಸುತ್ತಿರುವ ವೀರನೇ, ನೀನು ಯಾರು? ಪ್ರಚಂಡ ಸೂರ್ಯ, ಅಬ್ಬರಿಸುವ ಬಿರುಗಾಳಿ, ಜ್ವಲಿಸುವ ಬೆಂಕಿಯ ನಿರಂತರ ಹೊಡೆತವನ್ನು ಸಹಿಸುವ ದಂಡವನ್ನು ಭೋಗಿಸಲು ನೀನು ಮಾಡಿದ ಅಪರಾಧವಾದರೂ ಏನು? ನನ್ನಂತೆಯೇ ನಿನ್ನ ದುಃಖಕ್ಕೆ ಕೊನೆಯಿಲ್ಲವೇ? ಮುಕ್ತಿಯನ್ನು ಕಾಯುತ್ತಿರುವುದೇ ನಮ್ಮ ವಿಧಿಯೇ? ಮಾತನಾಡು ವೀರ! ನನ್ನನ್ನು ಪಶುವೆಂದು ತಿಳಿಯಬೇಡ. ನಾನೊಬ್ಬ ಹೆಣ್ಣು. ನಿನ್ನ ದುಃಖವನ್ನು ತಿಳಿಯಬಲ್ಲೆ.” ಭವಿಷ್ಯ ದೃಷ್ಟಾರನಾದ ಪ್ರೊಮಿಥ್ಯೂಸ್ ಇಂಥ ಸಂವೇದನಾಯುಕ್ತ ಸ್ವರವನ್ನು ಕೇಳಿ ಇಓಳತ್ತ ನೋಡಿದನು. ಕ್ಷಣಾರ್ಧದಲ್ಲಿ ಅವಳ ಇತಿಹಾಸವನ್ನು ತಿಳಿದುಕೊಂಡನು. “ಇನಾಕಸ್‍ನ ಮಗಳಾದ ಇಓ, ಸ್ಯೂಸ್‍ನನ್ನು ಸಿಟ್ಟಿಗೆಬ್ಬಿಸಿದ ಫಲವನ್ನು ನಾನು ಅನುಭವಿಸುತ್ತಿದ್ದೇನೆ. ಮತ್ತೆ ನೀನು? ನೀನು ಅವನ ಪ್ರೇಮದ ಬಲಿ! ನಿನ್ನ ಬಗೆಗೆ ಸ್ಯೂಸನ ಪ್ರೀತಿಯನ್ನು ಅರಿತ ಹೆರಾ, ನಿನ್ನ ಬಗೆಗಿನ ಮತ್ಸರದಿಂದ ನಿನಗೆ ಇಂಥ ಕಷ್ಟ ಕೊಡುತ್ತಿದ್ದಾಳೆ” ಎಂದನು. ಗ್ರೀಸ್ (ಯುನಾನ್) 207 ಇಓಳಿಗೆ ಆಶ್ಚರ್ಯವಾಯಿತು. ಈ ನಿರ್ಜನ ಹಿಮಪ್ರದೇಶದಲ್ಲಿ ಮನುಷ್ಯರೇನು, ಪಕ್ಷಿಗಳೂ ಕೂಡ ತಡೆದುಕೊಳ್ಳುವುದು ಕಷ್ಟವಾಗಿರುವಾಗ, ಬಂಡೆಗೆ ಕಟ್ಟಲಾದ ಈ ಏಕಾಕಿ ಪ್ರಾಣಿ ಅವಳ ಹೆಸರನ್ನು ಹೇಗೆ ತಿಳಿದುಕೊಂಡ? ಯಾರಿವನು ಈ ದಿವ್ಯದೃಷ್ಟಿಯವನು? ಪ್ರೊಮಿಥ್ಯೂಸ್ ಅವಳ ಮನೋಭಾವವನ್ನು ಓದಿದದವನಂತೆ ತನ್ನ ಪರಿಚಯವನ್ನು ನೀಡಿದನು. “ಇಓ, ಮಾನವ ಜಾತಿಗೆ ಅಗ್ನಿಯನ್ನು ಕೊಟ್ಟ ಪ್ರೊಮಿಥ್ಯೂಸ್ ನಿನ್ನೆದುರು ನಿಂತಿದ್ದಾನೆ.” “ಪ್ರೊಮಿಥ್ಯೂಸ್” ಹಠಾತ್ತನೆ ಇಓಳ ಬಾಯಿಂದ ಹೊರಟಿತು - “ಮಾನವ ಜಾತಿಯನ್ನು ಸೃಷ್ಟಿಸಿದವನು, ಉದ್ಧಾರಕನು ಆದ ಪ್ರೊಮಿಥ್ಯೂಸ್ ! ನಮ್ಮ ಹಿತಕ್ಕಾಗಿ ದೇವತೆಗಳೊಂದಿಗೆ ಹೋರಾಡಿದ ಪ್ರೊಮಿಥ್ಯೂಸ್ ! ಆಹ್. . .” ಅವಳ ಕಣ್ಣುಗಳಿಂದ ನೀರು ಸುರಿಯತೊಡಗಿತು. “ಮಾನವರಿಗಾಗಿ ನೀನು ಇಂಥ ಕಷ್ಟವನ್ನು ಸಹಿಸುತ್ತಿರುವೆಯಾ? ಮಾನವನ ಸುಖಕ್ಕಾಗಿ ಈ ಮರ್ಮಾಂತಿಕವಾದ ವೇದನೆಯನ್ನು ಸುಮ್ಮನೇ ಸಹಿಸುತ್ತಿರುವೆಯಾ? ಮನುಷ್ಯನಿಗಾಗಿ ನೀನು ಯಾಕೆ ಸ್ಯೂಸ್‍ನ ಕ್ರೋಧವನ್ನು ನಿನ್ನ ಮೇಲೆ ಎಳೆದುಕೊಂಡೆ!” “ಹಾಗೆ ಹೇಳಬೇಡ ಇಓ! ನನಗೆ ಯಾವುದು ಉಚಿತವೆನಿಸಿತೋ ಅದನ್ನು ನಾನು ಮಾಡಿದೆ, ಮಾನವನು ಸುಖೀ-ಸಮೃದ್ಧನಾಗಿರುವುದನ್ನು ನಾನು ಬಯಸುತ್ತಿದ್ದೆ. ನನ್ನ ಸ್ವಪ್ನ ಸಾಕಾರವಾಯಿತು. ನನ್ನ ಮನಸ್ಸಿನಲ್ಲಿ ಯಾವ ದ್ವಂದ್ವವೂ ಇಲ್ಲ. ಸ್ಯೂಸ್ ತನ್ನ ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡು ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಪ್ರೊಮಿಥ್ಯೂಸ್‍ನ ವಿಶ್ವಾಸವು ಅಚಲವಾದುದೆಂಬುದು ಅವನಿಗೆ ಗೊತ್ತಿಲ್ಲ. ಅವನು ನನ್ನ ಶರೀರವನ್ನು ಚೂರು ಚೂರು ಮಾಡಬಹುದು. ಆದರೆ ನನ್ನ ಅಂತರಾತ್ಮವನ್ನಲ್ಲ.” “ಆದರೆ ಈ ಕಷ್ಟಗಳಿಗೆ ಎಂದಿಗೂ ಕೊನೆಯೇ ಇಲ್ಲವೇ?'' - ಇಓ ಕೇಳಿದಳು. “ಇದೆ. . . ಇಓ. . . ಖಂಡಿತವಾಗಿಯೂ ಇದೆ.” - ಭವಿಷ್ಯ ದೃಷ್ಟಾರ ಪ್ರೊಮಿಥ್ಯೂಸ್ ನುಡಿದ “ಒಂದು ದಿನ ಈ ಅತ್ಯಾಚಾರಕ್ಕೆ ಕೊನೆಯಾಗುತ್ತದೆ. ಸ್ಯೂಸ್‍ನಿಗೆ ಅವನ ಕರ್ಮಗಳ ಫಲ ಸಿಕ್ಕುತ್ತದೆ. ಅವನ ಸ್ವಂತ ಮಗನೇ ಅವನನ್ನು ಪದಚ್ಯುತಗೊಳಿಸುತ್ತಾನೆ. ಅಲ್ಲದೆ ಇಓ, . . . ನಿನಗೂ ಬಿಡುಗಡೆಯಾಗುತ್ತದೆ. ಆದರೆ ಇನ್ನೂ ಕಾಯಬೇಕು. ದೇಶ, ವಿದೇಶ, ಅಡವಿ ಅಡವಿ ತಿರುಗುತ್ತ ಹೋಗು, ನದಿ-ಹಳ್ಳಗಳನ್ನು ದಾಟುತ್ತ ಹೋಗು, ಕೊನೆಯಲ್ಲಿ ನೈಲ್‍ನದಿಯ ಬಳಿ ಹೋದಾಗ ನಿನ್ನ ಉದ್ಧಾರವಾಗುತ್ತದೆ. ಅಲ್ಲೇ ಸ್ಯೂಸ್ ನಿನಗೆ ಸ್ತ್ರೀರೂಪವನ್ನು ಕೊಡುತ್ತಾನೆ. ಅಲ್ಲದೆ ನಿನಗೆ ಒಬ್ಬ ಮಗನೂ ಆಗುತ್ತಾನೆ. ನಡೆ. . . ನಡೆಯುತ್ತಾ 208 ಕಥಾ ಸಂಸ್ಕೃತಿ ಹೋಗು. ಈ ದೀರ್ಘವಾದ ಕರಾಳ ರಾತ್ರಿಗೆ ನಿಶ್ಚಯವಾಗಿಯೂ ಒಂದು ಬೆಳಗು ಇದ್ದೇ ಇದೆ.” “ಮತ್ತೆ ನೀನು ? ತಂದೆಯೇ . . . .” ಇಓ ವ್ಯಗ್ರಳಾಗಿ ಕೇಳಿದಳು. “ಇನ್ನೂ ಶತಮಾನಗಳ ಕಾಲ ನಾನು ಈ ಅತ್ಯಾಚಾರದೊಡನೆ ಸೆಣಸಲೇಬೇಕಾಗಿದೆ. ಅಂತ್ಯದಲ್ಲಿ ನಿನ್ನ ವಂಶಜನಾದ ಒಬ್ಬನ ಕೈಯಿಂದ ನನ್ನ ಈ ಯಾತನೆ ಕೊನೆಗೊಳ್ಳುವುದು. ದೇವತೆಗಳಂತೆಯೇ ಶಕ್ತಿಶಾಲಿಯಾದ ಆ ಯುವಕ ನನ್ನ ಈ ಸರಪಳಿಗಳನ್ನು ಕತ್ತರಿಸುತ್ತಾನೆ. ಒಂದು ಬಾರಿ ಮತ್ತೆ ನಾನು ಸ್ವತಂತ್ರ ಗಾಳಿಯಲ್ಲಿ ಉಸಿರಾಡಿಸಬಲ್ಲೆ. ನನ್ನ ಕಷ್ಟವು ನಿನ್ನ ಕಷ್ಟಕ್ಕಿಂತ ದೊಡ್ಡದು. ಬಿಡುಗಡೆಯೂ ಕಠಿಣ. ಆದರೆ ನಾನು ನಿರಾಶನಾಗಿಲ್ಲ. ನೀನು ಧೈರ್ಯಗೆಡಬೇಡ. ಹಾಗೇ ಮುಂದುವರಿಯುತ್ತ ಹೋಗು.” ಇಓ ಮನಸ್ಸಿನಲ್ಲಿಯೇ ಪ್ರೊಮಿಥ್ಯೂಸ್‍ನಿಗೆ ವಂದಿಸಿದಳು. ತನ್ನ ದಾರಿ ಹಿಡಿದು ನಡೆದಳು. ಕೊಲಚಿಸ್ ಮತ್ತು ಥ್ರೆಶಿಯನ್ ಬಾಸ್ಫಾರಸ್ ಮಾರ್ಗವಾಗಿ ಯೂರೋಪ ತಲುಪಿದಳು. ಮತ್ತೆ ಏಶಿಯಾ ಮೈನರ್‍ನಿಂದ ಟಾರಸಸ್, ಜೊಪ್ಪಾ, ಮೀಡಿಯಾ, ಬ್ಯಾಕ್ಟ್ರಿಯಾ, ಭಾರತ ಮತ್ತು ಅರಬ್ ಮೂಲಕ ಇಥಿಯೋಪಿಯಾ ತಲುಪಿದಳು ನೈಲ್ ಹುಟ್ಟಿದಲ್ಲಿಂದ ಮುನ್ನಡೆಯುತ್ತ ಇಜಿಪ್ತಗೆ ಬಂದಳು. ಇಲ್ಲೇ ಅವಳ ಯಾತನೆಗೆ ಕೊನೆಯಾಯಿತು. ಸ್ಯೂಸ್ ಅವಳಿಗೆ ಸ್ತ್ರೀರೂಪವನ್ನು ಕೊಟ್ಟನು. ಟೆಲೊಗೊನಸ್‍ನೊಡನೆ ವಿವಾಹದ ನಂತರ ಅವಳು ಸ್ಯೂಸ್‍ನ ಮಗ ಇಪೆಕಸ್‍ನಿಗೆ ಜನ್ಮ ನೀಡಿದಳು. ಇಪೆಕಸ್ ತುಂಬ ಕಾಲದವರೆಗೆ ಇಜಿಪ್ತನ್ನು ಆಳಿದನು. ಕೆಲಿಮೆಕಸ್‍ನ ಹೇಳಿಕೆಯ ಪ್ರಕಾರ ಅವಳ ಮಗಳು ಲಿಬಿಯಾ ಸಮುದ್ರದೇವತೆ ಪಾಸ್ಪಾಯ್ಡನ್‍ನ ಸಂಸರ್ಗದಿಂದ ಎಗನರ್ ಮತ್ತು ಬೀಲಸ್ ಎಂಬ ಇಬ್ಬರು ಶೂರರಾದ ಮಕ್ಕಳ ತಾಯಿಯಾದಳು. ಸ್ಯೂಸ್ ಮತ್ತು ಕೆಲಿಸ್ಟೊ ಸ್ಯೂಸ್‍ನ ಕಾಮುಕತೆ ಹಾಗೂ ಹೆರಾಳ ಮತ್ಸರಕ್ಕೆ ಬಲಿಯಾದ ಮತ್ತೊಬ್ಬ ನಿರ್ಭಾಗ್ಯ ಸ್ತ್ರೀ ಕೆಲಿಸ್ಟೊ. ಕೆಲಿಸ್ಟೊ ಆರ್ಕೆಡಿಯಾದ ರಾಜನ ಮಗಳು. ಹೆಸರಿನಂತೆ ಗುಣ ಕೂಡ. ಕೆಲಿಸ್ಟೊ ಅಂದರೆ ಅರ್ಥ ಸುಂದರಿ. ಕೆಲಿಸ್ಟೊ ರೂಪವತಿ ಹಾಗೂ ಶುಚಿತ್ವದ ದೇವಿ ಆರ್ಟೆಮಿಸ್‍ಳ ಸಖಿಯಾಗಿದ್ದಳು. ಒಂದು ಬಾರಿ ಅವಳು ಅನ್ಯ ಕುಮಾರಿಯರ ಜೊತೆ ಬೇಟೆಯಾಡುತ್ತಿದ್ದಾಗ ಸ್ಯೂಸ್ ಅವಳನ್ನು ನೋಡಿದ. ಅವಳಲ್ಲಿ ಆಸಕ್ತನಾದ. ಸ್ಯೂಸನ ಸಂಪರ್ಕದಿಂದ ಕೆಲಿಸ್ಟೊ ಗರ್ಭವತಿಯಾದಳು. ಆರ್ಟೆಮಿಸ್‍ಳಿಗೆ ಈ ಸಂಗತಿ ತಿಳಿದಾಗ ಅವಳು ಕೆಲಿಸ್ಟೊಳನ್ನು ತನ್ನ ಪಂಗಡದಿಂದ ತೆಗೆದು ಹಾಕಿದಳು. ಕೆಲಿಸ್ಟೊ ಒಬ್ಬ ಮಗನನ್ನು ಹೆತ್ತಳು. ಆಗಲೇ ಹೆರಾಳಿಗೆ ಈ ಗ್ರೀಸ್ (ಯುನಾನ್) 209 ಸಂಗತಿ ಗೊತ್ತಾಯಿತು. ಸ್ಯೂಸನ ಮೇಲೆ ಅವಳ ಹಿಡಿತವೇನೂ ಇರಲಿಲ್ಲ. ಅದಕ್ಕಾಗಿ ಅವಳು ಕೆಲಿಸ್ಟೊಳಿಗೇ ದಂಡನೆ ಕೊಡಬಯಸಿದಳು. ಸ್ಯೂಸ್‍ನ ಮನಸ್ಸನ್ನು ಮೋಹಿಸಿದ ಅವಳ ಅನುಪಮ ರೂಪವನ್ನೇ ಹೆರಾ ನಾಶ ಮಾಡಿದಳು. ಕೆಲಿಸ್ಟೊ ತುಂಬ ಅತ್ತಳು. ಅಂಗಲಾಚಿದಳು. ಆದರೆ ಹೆರಾ ಅವಳನ್ನು ಒಂದು ಕರಡಿಯನ್ನಾಗಿಸಿದಳು. ನೋಡನೋಡುತ್ತಿದ್ದಂತೆ ಅವಳ ದೇಹದ ಬಣ್ಣ ಕಪ್ಪಾಗಿ, ಉದ್ದನೆಯ ಕೂದಲುಗಳಿಂದ ತುಂಬಿಹೋಯಿತು. ಸುಕುಮಾರ ಕೈ-ಕಾಲುಗಳೆಲ್ಲ ಪಂಜಾ ಆದವು. ಸ್ಯೂಸನ ಕಿವಿಗೆ ಮಧುರ ರಸ ಸುರಿಯುವ ಅವಳ ಸ್ವರ ಗುರ್ರೆಂದು ಬದಲಾಯಿತು. ಇಓಳಂತೆಯೇ ಅವಳ ಆಕೃತಿ ಬದಲಾದರೂ, ಪ್ರಕೃತಿ ಮನುಷ್ಯರಂತೆಯೇ ಇತ್ತು. ಅವಳು ಕರಡಿಯ ರೂಪದಲ್ಲಿದ್ದರೂ ಎರಡೇ ಕಾಲಿನ ಮೇಲೆ ನಡೆಯುವ ಪ್ರಯತ್ನ ಮಾಡುತ್ತಿದ್ದಳು. ಬೇಟೆಗಾರರನ್ನು ನೋಡಿ ಮಾತನಾಡಲು ಬಯಸುತ್ತಿದ್ದಳು. ಇತರ ಕರಡಿಗಳ ನಡುವೆ ಅವಳಿಗೆ ಶಾಂತಿಯಿರಲಿಲ್ಲ. ಒಮ್ಮೊಮ್ಮೆ ರಾತ್ರಿ ಅವಳು ಭಯಪಡುತ್ತಿದ್ದಳು. ಮನುಷ್ಯರು ದೇವತೆಗಳಿಂದ ಅಲ್ಲ - ವನ್ಯ ಪಶುಗಳಿಂದ. ಹೀಗೆ ಮಾನಸಿಕ ಕಷ್ಟ ಸಹಿಸುತ್ತ, ಅಡವಿ ಅಡವಿ ಅಲೆಯುತ್ತ ಅನೇಕ ವರ್ಷಗಳು ಕಳೆದವು. ಒಂದುದಿನ ಒಬ್ಬ ಯುವಕ ಆ ವನಕ್ಕೆ ಬೇಟೆಯಾಡಲು ಬಂದ. ಅವನು ಕೆಲಿಸ್ಟೊಳ ಮಗನಾಗಿದ್ದ. ಹೆರಾಳ ಪ್ರೇರಣೆ ಅವನನ್ನು ಅಲ್ಲಿಗೆ ಕರೆತಂದಿತ್ತು. ಕೆಲಿಸ್ಟೋ ತನ್ನ ಮಗ ಎರಕಾಸ್‍ನನ್ನು ಗುರುತು ಹಿಡಿದಳು. ತಾಯಿಯ ಮಮತೆ ಉಕ್ಕಿತು. ಅವಳು ತನ್ನ ರೂಪವನ್ನು ಮರೆತು, ಸ್ನೇಹದಿಂದ ಆರ್ದ್ರಗೊಂಡು ಅವನತ್ತ ನುಗ್ಗಿದಳು. ಒಂದು ಕರಡಿ ತನ್ನತ್ತ ಬರುವುದನ್ನು ನೋಡಿದ ಎರಕಾಸ್ ಜಾಗ್ರತನಾದ. ತಕ್ಷಣ ಅವನ ಭಲ್ಲೆಯನ್ನು ಹಿಡಿದು ಕರಡಿಯ ಎದೆಗೆ ಗುರಿಯಿಟ್ಟ. ಎರಕಾಸ್ ಮಾತೃಹತ್ಯೆಯ ಅಪರಾಧವನ್ನು ಮಾಡುವ ಮುನ್ನವೇ ಸ್ಯೂಸ್‍ನು ತಾಯಿ ಮತ್ತು ಮಗ ಇಬ್ಬರನ್ನೂ ನಕ್ಷತ್ರವಾಗಿಸಿ ಆಕಾಶದಲ್ಲಿ ಸ್ಥಾನ ಕಲ್ಪಿಸಿದ. ತನ್ನ ಪ್ರತಿದ್ವಂದ್ವಿಗೆ ಈ ರೀತಿಯ ಸಮ್ಮಾನ ದೊರೆತುದನ್ನು ನೋಡಿ ಹೇರಾ ಉರಿದೆದ್ದಳು. ಕೆಲಿಸ್ಟೊಳನ್ನು ಮಣ್ಣುಗೂಡಿಸಬೇಕೆಂದಿದ್ದರೆ ಸ್ಯೂಸ್ ಅವಳನ್ನು ಆಕಾಶದಲ್ಲಿ ಕೂಡಿಸಿದ್ದಾನೆ. ಹೆರಾಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅಮರಲೋಕದ ಸಾಮ್ರಾಜ್ಞಿಯು ತನ್ನ ಇಚ್ಛೆಯಂತೆ ಒಬ್ಬ ಮತ್ರ್ಯನನ್ನು ದಂಡಿಸಲು ಸಾಧ್ಯವಾಗದಿದ್ದರೆ ಅವಳ ಮಾನ-ಸಮ್ಮಾನ, ಕೃಪೆ-ಅವಕೃಪೆಗಳಿಗೆ ಅರ್ಥವೆಲ್ಲಿ ಉಳಿದೀತು? ಇದು ಅಪಮಾನ, ಹೆರಾಳ ಪ್ರತಿಷ್ಠೆಗೆ ಧಕ್ಕೆಯಾಗಿತ್ತು. ಆದರೆ ಈಗೇನು ಮಾಡುವುದು! ನಕ್ಷತ್ರಗಳನ್ನು ಚ್ಯುತಗೊಳಿಸುವುದು ಸಾಧ್ಯವಿರಲಿಲ್ಲ. ವರದಾನವನ್ನು ಮರಳಿಸಲು ಸಾಧ್ಯವಿರಲಿಲ್ಲ. ಈಗ ಅವಳು ಸಮುದ್ರದ ಶಕ್ತಿಗಳ ಬಳಿ ಬಂದು ಹೇಳಿದಳು - “ದೇವ ಸಮ್ರಾಟನು ನನಗೆ ಅವಮಾನ ಮಾಡಿದ್ದಾನೆ. ತನ್ನ ಪ್ರೇಯಸಿ ಹಾಗೂ 210 ಕಥಾ ಸಂಸ್ಕೃತಿ ಅನಧಿಕೃತ ಮಗನಿಗೆ ನಕ್ಷತ್ರ ಮಾಡಿದ್ದಾನೆ. ನೀವು ನನಗೆ ಸಹಾಯ ಮಾಡಿ. ನೀವು ಈ ಇಬ್ಬರು ಅಪರಾಧಿ ನಕ್ಷತ್ರಗಳನ್ನು ಎಂದೂ ನಿಮ್ಮ ನಿರ್ಮಲ ಜಲದಲ್ಲಿ ವಿಶ್ರಾಂತಿ ಪಡೆಯಲು ಕೊಡಬೇಡಿ. ಇವು ಸದಾ ಆಕಾಶ ಮಂಡಲದಲ್ಲಿಯೇ ಅಲೆಯುತ್ತಿರಲಿ - ಇದು ನನ್ನ ಆಗ್ರಹ” ಹೆರಾಳ ಇಚ್ಛೆ ಪೂರ್ಣವಾಯಿತು. ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಿದ ಎಲ್ಲ ನಕ್ಷತ್ರಗಳು ಸಮುದ್ರದ ನೀರಿಗೆ ಬಂದು ತಮ್ಮ ದಣಿವನ್ನು ನಿವಾರಿಸಿಕೊಳ್ಳುತ್ತವೆ. ಆದರೆ ಕೆಲಿಸ್ಟೊ ಹಾಗೂ ಎರಕಾಸ್‍ರ ಭಾಗ್ಯದಲ್ಲಿ ವಿಶ್ರಾಂತಿಯಿಲ್ಲ. ಅವರು ಸದಾ ನಡೆಯುತ್ತಿರುತ್ತಾರೆ. ಸ್ಯೂಸ್ ಮತ್ತು ಯೂರೋಪೆ ಲೀಬಿಯಾಳ ಮಗ ಹಾಗೂ ಬೀಲಸ್‍ನ ಹೊದ್ದಿನ ತಮ್ಮ ಎಗನರ್ ಇಜಿಪ್ತನಿಂದ ಕೆನನ್ ದೇಶಕ್ಕೆ ಬಂದ. ಅಲ್ಲಿ ರಾಜ್ಯವಾಳತೊಡಗಿದ. ಇದೇ ಎಗನರ್ ಟೆಲ್‍ಫಾಸಾಳ ಜೊತೆ ವಿವಾಹವಾದ. ಟೆಲಫಾಸಳು ಕ್ಯಾಡ್ಮಸ್ ಫೀನಿಕ್ಸ, ಸಿಲಿಕಸ್, ಥಾಸಸ್, ಫೀನಿಯಸ್ ಎಂಬ ಹೆಸರಿನ ಪುತ್ರರನ್ನು ಹಾಗೂ ಯೂರೋಪೆ ಹೆಸರಿನ ಪುತ್ರಿಯನ್ನು ಹೆತ್ತಳು. ಎಗನರ್‍ನ ಪ್ರೀತಿಯ ಮಗಳು, ಅಣ್ಣಂದಿರ ಅಕ್ಕರೆಯ ತಂಗಿ ಯೂರೋಪೆ ಅಸಾಧಾರಣ ಸುಂದರಿ. ಒಂದು ದಿನ ಯೂರೋಪೆ ಅದ್ಭುತ ಸ್ವಪ್ನ ನೋಡಿದಳು. ಇಓಳಂತೆ ಅವಳೊಂದಿಗೆ ಯಾರೋ ಪ್ರಣಯ ಯಾಚನೆ ಮಾಡಲಿಲ್ಲ. ಎರಡು ಸ್ತ್ರೀಯರ ರೂಪದಲ್ಲಿ ಎರಡು ಮಹಾದ್ವೀಪಗಳು ಅವಳ ಬಳಿ ಬಂದಿವೆಯೆಂಬುದನ್ನು ನೋಡಿದಳು. ಈ ಎರಡೂ ಸ್ತ್ರೀಯರು ಅವಳ ಮೇಲೆ ಅಧಿಕಾರ ಸ್ಥಾಪಿಸಲು ಯತ್ತಿಸುತ್ತಿದ್ದಾರೆ. ಅವಳಲ್ಲಿ ಒಬ್ಬಳ ಹೆಸರು ಏಶಿಯಾ. ಮತ್ತೊಬ್ಬಳಿಗೆ ಇನ್ನೂ ಯಾವುದೇ ಹೆಸರಿಲ್ಲ. ಏಶಿಯಾ ಯೂರೋಪೆಗೆ ತಾನು ಜನ್ಮ ಕೊಟ್ಟಿರುವುದಾಗಿ ಹೇಳುತ್ತಿದ್ದಳು. ಅವಳೇ ಪಾಲನೆ-ಪೋಷಣೆ ಮಾಡಿರುವುದರಿಂದ ಅವಳ ಮೇಲೆ ಅಧಿಕಾರವಿದೆ. ಇನ್ನೊಬ್ಬ ಹೆಸರಿಲ್ಲದ ಸ್ತ್ರೀ ಮತ್ತೆ ಮತ್ತೆ ಹೇಳುತ್ತಿದ್ದಳು - “ಪ್ರಭು ಸ್ಯೂಸ್‍ನು ಯೂರೋಪೆಯನ್ನು ನನಗೆ ಕೊಡುವುದಾಗಿ ವಚನವಿತ್ತಿದ್ದಾನೆ. ನೀನು ಏನೇ ಹೇಳು, ಯೂರೋಪೆ ನನಗೇ ಸಿಗುತ್ತಾಳೆ.” ಯೂರೋಪೆ ಎದ್ದುಕುಳಿತಳು. ಗುಲಾಬಿ ಪ್ರಭಾವಲಯ ಅಂಟಿಸಿಕೊಂಡ ಅರೋರಾ ಸೂರ್ಯನ ರಥದ ಸಲುವಾಗಿ ಪೂರ್ವದ ವಿಶಾಲ ಬಾಗಿಲು ತೆರೆಯಲು ಸಿದ್ಧವಾಗಿದ್ದಳು. ಯೂರೋಪೆ ತನ್ನ ಸಖಿಯರನ್ನು ಕರೆದಳು. ಸಮುದ್ರ ತಟಕ್ಕೆ ಹತ್ತಿರದ ಉಪವನದಲ್ಲಿ ಆಟವಾಡಲು ಹಾಗೂ ಹೂ ಕೊಯ್ಯಲು ಹೋದಳು. ಈ ಉಪವನ ಯೂರೋಪೆಗೆ ತುಂಬ ಪ್ರಿಯವಾಗಿತ್ತು. ಆಗ ವಸಂತ ಋತುವಾಗಿತ್ತು. ಗ್ರೀಸ್ (ಯುನಾನ್) 211 ಯುರೋಪೆಯ ಎಲ್ಲ ಗೆಳತಿಯರೂ ಕುಲೀನ ಕುಟುಂಬದವರಾಗಿದ್ದರು. ಇಂದು ಅವರು ಹೂ ಆರಿಸಲು ಚಿಕ್ಕ ಬುಟ್ಟಿ ಹಿಡಿದು ಬಂದಿದ್ದರು. ಯೂರೋಪೆಯ ಕೈಯಲ್ಲಿ ಬಂಗಾರದ ಕೆತ್ತನೆ ಕೆಲಸ ಮಾಡಿದ ಹೂಬುಟ್ಟಿ ಇತ್ತು. ತನ್ನ ಗೆಳತಿಯರೊಂದಿಗೆ ಕೈಯಲ್ಲಿ ಬುಟ್ಟಿ ಹಿಡಿದು ನಗುತ್ತ ಯೂರೋಪೆ ಹೂ ಕೊಯ್ಯುತ್ತಿದ್ದಳು. ಎಲ್ಲರೂ ಕುಮಾರಿಯರು, ನೋಡಿದರೆ ಸಂತೋಷ ಉಕ್ಕಿಸುವವರು. ಆದರೆ ಅವರ ಮಧ್ಯೆ ಯೂರೋಪೆ ನಕ್ಷತ್ರಗಳ ನಡುವಣ ಚಂದ್ರನಂತೆ ಬೇರೆಯಾಗಿಯೇ ತೋರುತ್ತಿದ್ದಳು. ಓಲಿಂಪಸ್‍ನಲ್ಲಿ ಕುಳಿತ ಸ್ಯೂಸ್ ಈ ರೂಪರಾಶಿಯನ್ನು ನೋಡುತ್ತಿದ್ದ. ಆಗಲೇ ಅಫ್ರೋಡಿಟಿಯ ತುಂಟ ಕುಮಾರ ಎರಾಸ್ (ಕ್ಯುಪಿಡ್) ತನ್ನ ಪುಷ್ಪಬಾಣಗಳಿಂದ ಅವನ ಹೃದಯವನ್ನು ಭೇದಿಸುತ್ತಿದ್ದ. ಈಗ ದೇವ ಸಾಮ್ರಾಟನಲ್ಲಿ ಧೈರ್ಯವಾದರೂ ಎಲ್ಲಿ? ತಕ್ಷಣ ಯೂರೋಪೆಯ ಅಪಹರಣದ ಯೋಜನೆಯನ್ನು ಸಿದ್ಧಪಡಿಸಿದ. ಹೆರಾಳ ಸಂಶಯದ ದೃಷ್ಟಿಯಿಂದ ಬಚಾವಾಗಲು ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ಯೋಚಿಸಿ ಸ್ಯೂಸ್‍ನು ಒಂದು ಹೋರಿಯ ರೂಪ ತಾಳಿದನು. ಭೂಮಿಯ ಎಲ್ಲ ಪಶುಗಳಿಗಿಂತ ಶ್ರೇಷ್ಠವೂ ಸುಂದರವೂ ಆದ ಈ ಎತ್ತು ಹಾಲಿನಂತೆ ಬಿಳುಪಾಗಿತ್ತು. ಇದರ ತಲೆಯ ಮೇಲೆ ಚಂದ್ರನ ಜುಟ್ಟಿನ ಹಾಗೆ ಎರಡು ಚಿಕ್ಕ ಚಿಕ್ಕ ಕೊಂಬುಗಳಿದ್ದವು. ಕೊಂಬಿನ ನಡುವೆ ಒಂದು ಕಪ್ಪುಗೆರೆ. ಅಷ್ಟೇ ಅಲ್ಲ, ಅದು ಕುರಿಯ ಹಾಗೆ ಸುಕುಮಾರ ಮತ್ತು ಸರಳವಾಗಿತ್ತು. ಈ ಹೋರಿ ಸಮುದ್ರ ದಂಡೆಯ ಮೇಲೆ ಕೆನೆಯುತ್ತ ಯುವತಿಯರ ನಡುವೆ ಬಂದು ನಿಂತಿತು. ಯುವತಿಯರು ಭಯಪಡಲಿಲ್ಲ. ಬದಲಿಗೆ ಅವರು ಸುತ್ತಲೂ ಮುತ್ತಿಗೆ ಹಾಕಿದರು. ಯಾರೋ ಅದರ ಮೈ ಸವರುತ್ತಿದ್ದರೆ ಇನ್ಯಾರೋ ಅದನ್ನು ಹೂವಿನಿಂದ ಸಿಂಗರಿಸಿದರು. ಕೆಲವರು ಅದರ ಕೊರಳಿಗೆ ಹೂವಿನ ಹಾರ ಹಾಕಿದರು. ಹೋರಿ ಏನೂ ವಿರೋಧ ಮಾಡಲಿಲ್ಲ. ಅದು ಯೂರೋಪೆಯ ಬಳಿ ಹೋಯಿತು. ಅವಳು ಮುಟ್ಟಿದೊಡನೆ ‘ಅಂಬಾ’ ಎಂದು ಕೂಗಿತು. ಯೂರೋಪೆ ಪ್ರೀತಿಯಿಂದ ಅದರ ಬೆನ್ನು ಸವರತೊಡಗಿದಳು. ಆ ಹೋರಿಯು ಯುರೋಪೆಗೆ ತನ್ನ ಬಿಳಿಯ ಬೆನ್ನೇರಲು ಸೂಚನೆ ಕೊಡುತ್ತಿದೆಯೇನೋ ಅನ್ನುವಂತೆ ಅವಳ ಕಾಲುಗಳ ಬಳಿ ಬಂದು ಮಲಗಿತು. ಯೂರೋಪೆ ನಿರ್ಭಯದಿಂದ ಅದರ ಬೆನ್ನೇರಿ ಕಿಲಕಿಲನೆ ನಗುತ್ತ ತನ್ನ ಸಖಿಯರನ್ನು ಕರೆಯತೊಡಗಿದಳು. ಆದರೆ ಯಾರಾದರೂ ಹತ್ತಿರ ಬರುವ ಮುನ್ನವೇ ಆ ಹೋರಿಯು ವಾಯುವೇಗದಿಂದ ಸಮುದ್ರದ ಕಡೆಗೆ ನಡೆಯಿತು. ಭಯದಿಂದ ಗಾಬರಿಗೊಂಡ ಯೂರೋಪೆ ನೆರವಿಗಾಗಿ ಕಂಪಿಸುವ ಸ್ವರದಿಂದ ಕೂಗುತ್ತಿದ್ದಳು. ತುಸುಹೊತ್ತಿನಲ್ಲಿಯೇ ಆ ಹೋರಿಯು ನೀರಿನ ತೆರೆಗಳ ಮೇಲೆ ಓಡತೊಡಗಿತು. ಆದರೆ ಸ್ಯೂಸ್‍ನನ್ನು ತಡೆಯುವುದು ಯಾರಿಗೆ ಸಾಧ್ಯವಿತ್ತು? ಯೂರೋಪೆಯ ಸಖಿಯರು 212 ಕಥಾ ಸಂಸ್ಕೃತಿ ಅಳತೊಡಗಿದರು. ಯೂರೋಪೆ ಹೆದರಿಕೆಯಿಂದ ಕಂಗಾಲಾಗಿದ್ದಳು. ಪ್ರತಿಯೊಂದು ಹೆಜ್ಜೆಗೂ ಮರಣವೇ ಎದುರು ಕಾಣುತ್ತಿತು. ಯೂರೋಪೆ ಒಂದು ಕೈಯಿಂದ ಹೋರಿಯ ಕೊಂಬು ಹಿಡಿದುಕೊಂಡಿದ್ದಳು. ಇನ್ನೊಂದರಲ್ಲಿ ಬಂಗಾರದ ಬುಟ್ಟಿ. ಹೋರಿಯು ಸಮುದ್ರದ ಮೇಲೆ ನಡೆಯುವುದು ಒಂದು ಅದ್ಭುತ ಘಟನೆಯಾಗಿತ್ತು. ಅದು ಮುಂದೆ ಹೋಗುತ್ತಿದ್ದ ಹಾಗೆ ಭಯಂಕರ ತೆರೆಗಳು ಶಾಂತವಾಗುತ್ತಿದ್ದವು. ಸಮುದ್ರದಿಂದ ಅನೇಕ ಪ್ರಾಣಿಗಳು ಹೊರಬಂದವು. ನದಿಯ ಸಂರಕ್ಷಕ ಶಕ್ತಿಗಳು, ಸಮುದ್ರ ಕನ್ಯೆಯರು, ಶಂಖಧ್ವನಿ ಮಾಡುತ್ತ ಟ್ರಿಟನ್ ಬಾಲಕ, ಅವನ ನೇತೃತ್ವದಲ್ಲಿ ಕೈಯಲ್ಲಿ ತ್ರಿಶೂಲ ಹಿಡಿದ ಸಮುದ್ರ ದೇವತೆ ಪೊಸಾಯ್ಡನ್. ಯೂರೋಪೆ ಆಶ್ಚರ್ಯಚಕಿತಳಾಗಿ ಈ ದೃಶ್ಯ ನೋಡಿದಳು. ಈ ಹೋರಿಯು ನಿಶ್ಚಯವಾಗಿ ಯಾವುದೋ ದೇವತೆಯಾಗಿರಬೇಕೆಂದು ಯೂರೋಪೆಗೆ ವಿಶ್ವಾಸವಾಯಿತು. ಆಗ ಅವಳಿಗೆ ಭರವಸೆ ಕೊಡಲು ಅದು ಮಾನವ ಸ್ವರದಲ್ಲಿ ಹೇಳಿತು. “ಹೆದರಬೇಡ ಯೂರೋಪೆ! ನಿನಗೇನೂ ಅಹಿತವಾಗದು. ನಾನು ಓಲಿಂಪಸ್ ಸಾಮ್ರಾಟ ಸ್ಯೂಸ್ . . . ನಿನ್ನ ಪ್ರಣಯದ ಪ್ರಾರ್ಥಿ. ನಾನು ನಿನ್ನನ್ನು ದೂರದೇಶಕ್ಕೆ ಕರೆದೊಯ್ಯುತ್ತೇನೆ. ಅಲ್ಲಿ ಭವಿಷ್ಯವು ನಿನ್ನ ದಾರಿ ನೋಡುತ್ತಿದೆ. ಆ ಮಹಾದ್ವೀಪಕ್ಕೆ ನಿನ್ನದೇ ಹೆಸರಾಗುವುದು. ನಿನಗೆ ತೇಜಸ್ವಿಗಳಾದ ಪುತ್ರರು ದೊರೆಯುವರು. ನಿನ್ನ ಹೆಸರು ಸದಾ ಅಮರವಾಗುವುದು. ಯೂರೋಪೆ ಸಂಘರ್ಷವನ್ನು ಬಿಟ್ಟು ಪ್ರೀತಿಯಿಂದ ತನ್ನ ಬಾಹುಗಳ ಹಾರವನ್ನು ಅವನ ಕೊರಳಿಗೆ ಹಾಕಿದಳು. ಸ್ಯೂಸ್ ಕ್ರೀಟ್‍ನಲ್ಲಿ ತನ್ನ ಯಾತ್ರೆಯನ್ನು ಮುಗಿಸಿದನು. ಅನಂತರ ತನ್ನ ಸ್ವಾಭಾವಿಕ ರೂಪವನ್ನು ಧರಿಸಿದನು. ಅವನ ಜೊತೆಗಿನ ಸಂಬಂಧದಿಂದ ಯೂರೋಪೆ ಮಾಯನಾಸ್, ರೆಡ್‍ಮೆಂಥಸ್, ಮತ್ತು ಸಾರಪೀಡನ್ ಹೆಸರಿನ ಮೂವರು ಗಂಡುಮಕ್ಕಳಿಗೆ ಜನ್ಮಕೊಟ್ಟಳು. ಅವರಲ್ಲಿ ಮೊದಲಿನ ಇಬ್ಬರು ತಮ್ಮ ನ್ಯಾಯಕ್ಕಾಗಿ ಭೂಮಂಡಲದಲ್ಲಿ ಪ್ರಸಿದ್ಧರಾದುದಲ್ಲದೆ ಅನಂತರ ಮರಣ ಹೊಂದಿದವರ ನ್ಯಾಯಾಧೀಶರಾಗಿ ಪಾತಾಳ ಲೋಕದಲ್ಲಿ ನೇಮಕಗೊಂಡರು. ಮೂರನೆಯವನು ಟ್ರಾಯ್ ಯುದ್ಧದಲ್ಲಿ ವೀರಗತಿಯನ್ನು ಪಡೆದನು. ಹೆಸರಿಲ್ಲದ ಆ ಎರಡನೆಯ ಮಹಾದ್ವೀಪವನ್ನು ಯೂರೋಪ್ ಎಂದು ಗುರುತಿಸಲಾಯಿತು. ಇಜಿಪ್ತ 213 ಜಾದೂಪುಸ್ತಕ ರಾಜಕುಮಾರ ಖಮವಾಸಸೆತ್ನಾ ಸಮ್ರಾಟನಾದ ಯೂಸೆರ ಮಾತ್ರಾನ ಮಗ. ಅವನು ಪುರಾತತ್ವ ಭಾಷೆ, ಜಾದೂ, ಮಂತ್ರವಿದ್ಯೆ ಪ್ರಾಚೀನ ವಸ್ತುಗಳ ಸಂಗ್ರಹ ಇತ್ಯಾದಿ ಕಾರ್ಯಗಳಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಸಾಕ್ಷಾತ್ ಭಗವಾನ್ ಥೋಟನು ತನ್ನ ಕೈಯಾರೆ ಬರೆದ ಯಾವುದೋ ಒಂದು ಗ್ರಂಥವನ್ನು ಹಿಂದಿನ ಸಮ್ರಾಟನಾದ ನಾನೆಫರ್ ಕಾ ಪ್ತಾಹನ ಸಮಾಧಿ ಮಂದಿರದಲ್ಲಿ ಮುಚ್ಚಿಡಲಾಗಿದೆಯೆಂಬ ಸಂಗತಿ ಅವನಿಗೆ ಒಂದು ದಿನ ತಿಳಿಯಿತು. ಸಾಕಷ್ಟು ಶೋಧ-ಹುಡುಕಾಟ ನಡೆಸಿದ ಮೇಲೆ ರಾಜಕುಮಾರ ಖಮವಾಸ ಸೆತ್ನಾನು ನಾನೆಫರ ಕಾ ಪ್ತಾಹನ ಸಮಾಧಿ ಮಂದಿರವನ್ನು ಹುಡುಕಿ ತೆಗೆದನು. ಈ ಕಾರ್ಯದಲ್ಲಿ ಅವನ ಸೋದರ ಇನಾರೋಜನು ಅವನಿಗೆ ಸಹಾಯ ಮಾಡಿದನು. ರಾಜಕುಮಾರ ಖಮವಾಸ ಅಲ್ಲಿಗೆ ಹೋಗಿ ಸಮಾಧಿ ಮಂದಿರದ ಬಾಗಿಲು ತೆರೆಸಿದನು. ಅಲ್ಲಿ ಜಾದೂವಿನ ಪುಸ್ತಕವನ್ನು ಇಡಲಾಗಿದ್ದು ಅದರ ಬೆಳಕಿನ ಕಿರಣಗಳು ಹರಡಿರುವುದನ್ನು ಅವನು ನೋಡಿದನು. ಅವನು ಆ ಪುಸ್ತಕವನ್ನು ತೆಗೆದುಕೊಳ್ಳಬಯಸಿದನು. ಆಗ ಸಮಾಧಿಯ ಆಚೀಚೆಯಿದ್ದ ನಾನೆಫರ್ ಕಾಪ್ತಾಹನ ಹೆಂಡತಿ ಅಶ್ವರ (ಅಹೂರಾ)ಳ ಆತ್ಮವು ಎಚ್ಚತ್ತಿತ್ತು. ಅಶ್ವರಳ ಆತ್ಮವು ಖಮವಾಸನ ಎದುರು ಪ್ರತ್ಯಕ್ಷವಾಯಿತು. ಅವನು ಆ ಪುಸ್ತಕವನ್ನು ಮುಟ್ಟುವುದನ್ನು ತಡೆಯಿತು. ಖಮವಾಸನು ಇದಕ್ಕೆ ಒಪ್ಪದಿದ್ದಾಗ ಅಶ್ವರಳು ಹೇಳಿದಳು . . . ``ಪುಸ್ತಕವನ್ನು ತೆಗೆದುಕೊಳ್ಳಲು ನೀನೇನಾದರೂ ಪ್ರಯತ್ನ ಮಾಡಿದ್ದೇ ಆದರೆ ನಾನೆಫರ ಕಾಪ್ತಾಹ ನು ತನ್ನ ಹೆಂಡತಿ ಮಕ್ಕಳನ್ನು ಕಳೆದುಕೊಳ್ಳಬೇಕಾದಂತೆ ನೀನು ತುಂಬಾ ಸಂಕಟದಲ್ಲಿ ಸಿಲುಕುವೆ.'' ಮುಂದೆ ಅಶ್ವರಳು ಹೇಳಿದ ಕತೆ ಹೀಗಿತ್ತು. ನಮ್ಮ ತಂದೆ ‘ಮರನೆಬ ಕಾಪ್ತಾಹ’ ನಿಗೆ ನಾವು ಇಬ್ಬರು ಮಕ್ಕಳು. ಒಬ್ಬಳು ನಾನು. ಇನ್ನೊಬ್ಬನು ನನ್ನ ಪತಿ ‘ನಾನೆಫರ ಕಾಪ್ತಾಹ’. ನಾವಿಬ್ಬರೂ ಅಣ್ಣ ತಂಗಿಯರು. ಚಿಕ್ಕಂದಿನಿಂದಲೂ ನಾವು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಿದ್ದೆವು. ನಾವು ಯೌವನಕ್ಕೆ ಬಂದ ಮೇಲೆ, ತಂದೆ ಮರನೆಬ ಕಾಪ್ತಾಹನು ನಮ್ಮ ವಿವಾಹವನ್ನು ಜನರಲ್‍ನ ಕುಟುಂಬದ ಜೊತೆ ಮಾಡುವ ಬಯಕೆಯನ್ನು ಪ್ರಕಟಿಸಿದನು. ಇದನ್ನು ಕೇಳಿ ನನಗೆ ತುಂಬ ಕೆಡುಕೆನಿಸಿತು. ಸಮ್ರಾಟ ಮರನೆಬ ಕಾಪ್ತಾಹನ ವಿಶ್ವಾಸಿಕ ಸಲಹೆಗಾರನೊಡನೆ 214 ಕಥಾ ಸಂಸ್ಕೃತಿ ನಾನು ನಾನೆಫರ ಕಾಪ್ತಾಹನೊಡನೆ ಮದುವೆ ಮಾಡಿಕೊಳ್ಳುವ ನನ್ನ ಇಚ್ಛೆಯನ್ನು ಹೇಳಿದೆ. ಸಮ್ರಾಟ ಮರನೆಬ ಕಾಪ್ತಾಹರು ವಿಚಾರದಲ್ಲಿ ಮುಳುಗಿದರು. “ತಾವು ಇಷ್ಟೊಂದು ಯಾಕೆ ಚಿಂತೆ ಮಾಡುತ್ತಿದ್ದೀರಿ” ಎಂದು ಸಲಹೆಗಾರನು ಕೇಳಿದನು. “ನನಗೆ ಎರಡೇ ಮಕ್ಕಳು - ಒಬ್ಬ ಮಗ ಒಬ್ಬ ಮಗಳು. ಇವರು ಪರಸ್ಪರ ವಿವಾಹ ಬಂಧನದಲ್ಲಿ ಸಿಲುಕುವುದು ಯೋಗ್ಯವೇ? ನಾನೆಫರ ಕಾಪ್ತಾಹನ ವಿವಾಹವನ್ನು ಜನರಲ್‍ನ ಮಗಳೊಡನೆ ಮತ್ತು ಅಶ್ವರಳ ವಿವಾಹವನ್ನು ಜನರಲ್‍ನ ಮಗನೊಡನೆ ನಾನು ಮಾಡಲು ಬಯಸಿದ್ದೇನೆ. ಇದರಿಂದ ನಮ್ಮ ಕುಟುಂಬ ಸಮೃದ್ಧವಾದೀತು.” - ಹೀಗೆ ಮರನೆಬ ಕಾಪ್ತಾಹನು ತನ್ನ ಚಿಂತೆಯನ್ನು ತೆರೆದಿಟ್ಟನು. ಮರುದಿನ ರಾತ್ರಿಯ ಊಟದ ವೇಳೆಗೆ ನಾನು ಕಾಪ್ತಾಹರ ಎದುರು ಕುಳಿತುಕೊಳ್ಳಲು ಇಷ್ಟಪಟ್ಟಿರಲಿಲ್ಲ. ಆದರೆ ಅವರು ನನ್ನನ್ನು ಕರೆದು ಹೇಳಿದರು. - “ನೀನು ನಿನ್ನ ಸೋದರ ನಾನೆಫರ ಕಾಪ್ತಾಹನನ್ನು ಮದುವೆಯಾಗುವ ತಯಾರಿ ನಡೆಸಿದ್ದೀ, ನನಗೆ ಇದರಿಂದ ದುಃಖವಾಗಿದೆ.” ನಾನು ಕಾಪ್ತಾಹರೊಡನೆ ಮನವಿ ಮಾಡಿಕೊಂಡೆ - “ಬೇಡ . . . ನೀವು ಜನರಲ್ ಕುಟುಂಬದವರೊಡನೇ ನಮ್ಮ ವಿವಾಹ ಮಾಡಿರಿ. ತಮ್ಮ ಪರಿವಾರ ಸಮೃದ್ಧವಾಗಲಿ. . . .” ರಾಜರು ಸುಮ್ಮನಾದರು. ಅನಂತರ ಅವರು ಸಲಹೆಗಾರನನ್ನು ಕರೆದು ಇಂದು ರಾತ್ರಿ ಅಶ್ವರಳನ್ನು ವಧುವಾಗಿ ಅಲಂಕರಿಸಿ ನಾನೆಫರ ಕಾಪ್ತಾಹನ ಕೊಠಡಿಗೆ ಕರೆದುಕೊಂಡು ಹೋಗುವಂತಾಗಲಿ ಹಾಗೂ ಬಹುಮೂಲ್ಯ ಉಡುಗೊರೆಗಳನ್ನು ಅರ್ಪಿಸಲಿ ಎಂದು ಆಜ್ಞೆಯಿತ್ತನು. ಆ ರಾತ್ರಿ ನನ್ನನ್ನು ಮದುಮಗಳ ರೀತಿಯಲ್ಲಿ ನಾನೆಫರ ಕಾಪ್ತಾಹರ ಕೋಣೆಗೆ ಕರೆದುಕೊಂಡು ಹೋಗಲಾಯಿತು. ಕುಟುಂಬದ ಜನರೆಲ್ಲ ನಮಗೆ ಬಂಗಾರ, ಬೆಳ್ಳಿ, ಮತ್ತು ಮುತ್ತು ರತ್ನಗಳ ವಸ್ತ್ರ ಭೂಷಣಗಳಿಂದ ಸಿಂಗರಿಸಿದರು. ಆ ರಾತ್ರಿ ನಾನು ಹಾಗೂ ನಾನೆಫರ ಕಾಪ್ತಾಹ ಒಂದೇ ಕೋಣೆಯಲ್ಲಿದ್ದೆವು. ನಾವಿಬ್ಬರೂ ಪರಸ್ಪರ ತುಂಬ ಪ್ರೀತಿಸಿದೆವು. ನಾನು ಪ್ರಮಾಣೀಕರಣ ನೀಡುವ ಸಮಯ ಬಂದಾಗ ನಾನೆಫರ ಕಾಪ್ತಾಹರು ನಾವು ಸುಖವಾಗಿದ್ದೇವೆ ಎಂದು ಸ್ವಯಂ ತಮ್ಮ ಸೂಚನೆಯನ್ನು ಪ್ರಕಟಿಸಿದರು. ಈ ಶುಭ ಸೂಚನೆ ದೊರೆತೊಡನೆಯೇ ಸಮ್ರಾಟರು ನಮಗಾಗಿ ಅಮೂಲ್ಯವಾದ ವಸ್ತುಗಳ ಭಂಡಾರವನ್ನೇ ತೆರೆದಿಟ್ಟರು ಮತ್ತು ಬಡವರಿಗೆ ಹಣವನ್ನು ಸೂರೆ ಮಾಡಿದರು. ಇಜಿಪ್ತ 215 ಅನಂತರ ಸಮ್ರಾಟರು ನಮ್ಮನ್ನು ಪೂಜೆಗಾಗಿ ಮಂದಿರಕ್ಕೆ ಕಳಿಸಿದರು. ಯುವರಾಜ ನಾನೆಫರ ಕಾಪ್ತಾಹರು ಮಂದಿರದ ಗೋಡೆಗಳ ಮೇಲೆ ಕೆತ್ತಿರುವ ಆಯತಗಳನ್ನು ಓದತೊಡಗಿದಾಗ ಮಂದಿರದ ವೃದ್ಧ ಪೂಜಾರಿಯು ನಕ್ಕನು. ಯುವರಾಜರು ಅವನ ನಗುವಿನ ಕಾರಣವನ್ನು ಕೇಳಿದರು. ವೃದ್ಧ ಪೂಜಾರಿಯು ಹೇಳಿದನು - “ತಾವು ಈ ಆಯತಗಳನ್ನು ಓದುವುದರಿಂದ ಪ್ರಯೋಜನವೇನು? ನಿಜವಾಗಿಯೂ ತಾವು ಏನಾದರೂ ಓದಬೇಕೆಂದಿದ್ದರೆ ಆ ಜಾದೂವಿನ ಪುಸ್ತಕವನ್ನು ಓದಿರಿ. ಅದನ್ನು ಓದಿದರೆ ನೆಲ - ಆಕಾಶಗಳ ಎಲ್ಲವೂ ವಶವಾಗುವವು.” “ಆ ಜಾದೂ ಪುಸ್ತಕ ಎಲ್ಲಿದೆ?” - ಯುವರಾಜರು ಕೇಳಿದರು. ಪೂಜಾರಿಯು ನಿವೇದನೆ ಮಾಡಿಕೊಂಡನು - “ಈ ಕೆಲಸಕ್ಕೆ ಪ್ರತಿಯಾಗಿ ತಾವು ಬೆಳ್ಳಿಯ ನೂರು ನಾಣ್ಯಗಳನ್ನು ಕೊಡಬೇಕಾಗುವುದು. ಮತ್ತು ದಕ್ಷಿಣೆಯಾಗಿ ಕರರಹಿತವಾದ ಎರಡು ಜೀವನ - ವೃತ್ತಿಗಳನ್ನು ಕೊಡಲು ಒಪ್ಪಬೇಕಾಗುವುದು. ಯುವರಾಜರು ಒಪ್ಪಿದರು. ಮತ್ತು ಪೂಜಾರಿಯು ಮನಸ್ಸಿನಲ್ಲಿ ಬಯಸಿದಷ್ಟು ಹಣವನ್ನು ಕೊಟ್ಟರು. ಪೂಜಾರಿಯು ಆ ಜಾದೂವಿಗೆ ಸಂಬಂಧಿಸಿದ ಪುಸ್ತಕದ ಬಗ್ಗೆ ವಿಸ್ತಾರವಾಗಿ ಹೇಳಿದನು -“ಕೆಪ್ಟೋಸ್ ಬಳಿ ಒಂದು ದೊಡ್ಡ ನದಿ ಹರಿಯುತ್ತದೆ. ಅದರ ಅತ್ಯಂತ ಆಳವಾದ ನೀರಿನ ತಳದಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿದೆ. ಅದರ ನಾಲ್ಕೂ ಕಡೆ ಸದಾ ನೀರಿನಲ್ಲಿಯ ಪ್ರಾಣಿಗಳು ಕಾಯುತ್ತಿರುತ್ತವೆ. ಮತ್ತು ಒಂದು ಭಾರಿಯಾದ ಸರ್ಪವು ಅದನ್ನು ತನ್ನ ಬಾಲದಿಂದ ಸುತ್ತಿಕೊಂಡಿರುತ್ತದೆ. ಸುಮಾರು ಆರು ಮೈಲು ಸುತ್ತಳತೆಯಲ್ಲಿ ವಿಷಕಾರಿಯಾದ ಸರ್ಪಗಳ ಸಮೂಹವೇ ಇದೆ. ಕಬ್ಬಿಣದ ಆ ಪೆಟ್ಟಿಗೆಯ ಒಳಗಡೆ ತಾಮ್ರದ ಬಣ್ಣದ ಮಜಬೂತಾದ ಪೆಟ್ಟಿಗೆಯಿದೆ. ತಾಮ್ರದ ಪೆಟ್ಟಿಗೆಯೊಳಗೆ ಆನೆದಂತದಿಂದ ಕೆತ್ತನೆ ಕೆಲಸ ಮಾಡಿದ ಕಪ್ಪು ಮರದ (ಸೀಸಂ?) ಚಿಕ್ಕದೊಂದು ಪೆಟ್ಟಿಗೆಯಿದೆ. ಅದರ ಒಳಗೆ ಬೆಳ್ಳಿಯ ಪೆಟ್ಟಿಗೆಯಿದೆ. ಬೆಳ್ಳಿಯ ಪೆಟ್ಟಿಗೆಯೊಳಗೆ ಇರುವ ಬಂಗಾರದ ಪೆಟ್ಟಿಗೆಯಲ್ಲಿ ಆ ಜಾದೂ ಪುಸ್ತಕವಿದೆ.” ಯುವರಾಜ ನಾನೆಫರ ಕಾಪ್ತಾಹ ಮನೆಗೆ ಬಂದೊಡನೆ ಆ ಜಾದೂ ಪುಸ್ತಕದ ವರ್ಣನೆ ಮಾಡಿದರು. ಸಮ್ರಾಟ ಮರನೆಬ ಕಾಪ್ತಾಹರು ಕೇಳಿದರು - “ನೀನು ನಿನ್ನ ಅಭಿಪ್ರಾಯವನ್ನು ಹೇಳು'' ಅನಂತರ ಯುವರಾಜರು ತಮ್ಮ ನಿಶ್ಚಯವನ್ನು ಹೇಳುವರು ``ನಾನು ಎಂಥ ಪರಿಸ್ಥಿತಿಯಲ್ಲೂ ಆ ಪುಸ್ತಕವನ್ನು ಪಡೆಯಬಯಸುತ್ತೇನೆ. ಇದಕ್ಕಾಗಿ ತಮ್ಮ ದೋಣಿ ಹಾಗೂ ಕುಶಲರಾದ ನಾವಿಕರನ್ನು ನನ್ನ ಸಹಾಯಕ್ಕಾಗಿ ಕೊಡಿ.” ಸಮ್ರಾಟರು ತಕ್ಷಣ ಯುವರಾಜರ ಇಚ್ಛೆಯಂತೆ ‘ಜಲಯಾತ್ರೆ’ಯ ಎಲ್ಲ ವ್ಯವಸ್ಥೆ ಮಾಡಿದರು. 216 ಕಥಾ ಸಂಸ್ಕೃತಿ ಎಲ್ಲಕ್ಕೂ ಮೊದಲು ನಾವು ‘ಕೆಪ್ಟೋಸ್’ಗೆ ಸಮೀಪದ ‘ಆಯಿಸಿಸ್’ ದ್ವೀಪವನ್ನು ತಲುಪಿದೆವು. ಆಯಿಸಿಸ್ ದ್ವೀಪದ ಪೂಜಾರಿಗಳು ನಮ್ಮನ್ನು ಬರಮಾಡಿಕೊಂಡು ನಮ್ಮ ವಸತಿ ಊಟದ ವ್ಯವಸ್ಥೆ ಮಾಡಿದರು. ಮೂರು ನಾಲ್ಕು ದಿನ ನಾವು ಆ ಪೂಜಾರಿಗಳ ಹಾಗೂ ಅವರ ಪತ್ನಿಯರ ಆದರ ಸತ್ಕಾರಗಳಲ್ಲಿ ಇದ್ದೆವು. ಐದನೆಯ ದಿನ ‘ಕೆಪ್ಟೋಸ್’ಗೆ ನಾವು ಪ್ರಯಾಣ ಬೆಳೆಸಿದೆವು. ಹಗಲು ರಾತ್ರಿಯ ಪ್ರವಾಸದ ಅನಂತರ ನಾವು ವಿಶಾಲವಾದ ಸಮುದ್ರದಂತಿರುವ ನದಿಯ ಮಧ್ಯಭಾಗವನ್ನು ತಲುಪಿದೆವು. ನಮ್ಮನ್ನು ನಾವೆಯಲ್ಲಿಯೇ ಬಿಟ್ಟು ನಾನೆಫರ ಕಾಪ್ತಾಹ ಏಕಾಂಗಿಯಾಗಿ ಆ ಆಳವಾದ ನೀರಿನ ತಳಕ್ಕೆ ಇಳಿದರು. ಒಳಗೆ ಇಳಿದ ಮೇಲೆ ಯುವರಾಜರು ವಿಷಪೂರಿತ ಸರ್ಪಗಳೊಂದಿಗೆ ಸೆಣಸಾಡಬೇಕಾಯಿತು. ಎಲ್ಲ ಅಡೆತಡೆಗಳನ್ನು ದಾಟಿ ಅವರು ಆ ಪೆಟ್ಟಿಗೆಯ ಸಮೀಪ ಹೋದರು. ಆ ಪೆಟ್ಟಿಗೆಯು ಒಂದು ಹೆಬ್ಬಾವಿನ ಬಂಧನದಲ್ಲಿರುವುದನ್ನು ಅವರು ನೋಡಿದರು. ರಾಜರು ಖಡ್ಗದಿಂದ ಅದರ ತಲೆಯನ್ನು ಶರೀರದಿಂದ ಕತ್ತರಿಸಿ ಹಾಕಿದರು. ಆದರೆ ತಲೆಯು ಬೇರೆಯಾಗುತ್ತಲೇ ಪುನಃ ಸೇರಿಕೊಂಡು ಬಿಟ್ಟಿತು. ಯುವರಾಜರು ಐದನೇ ಬಾರಿಗೆ ಯುಕ್ತಿಯಿಂದ ಅದರ ತಲೆಯನ್ನು ಕೆಳಗಿನ ಮರಳಲ್ಲಿ ಹುಗಿದುಬಿಟ್ಟರು. ಆಗ ಆ ಸರ್ಪವು ಸತ್ತುಹೋಯಿತು. ಅವರು ಆ ಪೆಟ್ಟಿಗೆಯನ್ನು ಪಡೆದುಕೊಂಡರು. ಆ ಪೆಟ್ಟಿಗೆಯಿಂದ ಜಾದೂ ಪುಸ್ತಕವನ್ನು ಎತ್ತಿಕೊಂಡು ಮೇಲೆ ಬಂದರು. ನಾನು - ಅಶ್ವರಳು ಹೇಳಿದಳು _ ಆ ಪುಸ್ತಕವನ್ನು ಯುವರಾಜರ ಕೈಯಿಂದ ಕಸಿದುಕೊಂಡು ಓದತೊಡಗಿದೆನು. ಅದರ ಒಂದು ಮಂತ್ರ ಓದುತ್ತಿದ್ದಂತೆ ನನ್ನೆದುರು ಆಕಾಶವು ತೆರೆದುಕೊಂಡಿತು. ಭೂಮಿ, ಬೆಟ್ಟ, ನದಿ, ಪ್ರಪಾತಗಳು ಹರಡಿಕೊಂಡವು. ಅಸಂಖ್ಯ ಪಕ್ಷಿಗಳ ಕಲರವ ಕೇಳಿ ಬರತೊಡಗಿತು. ನಾನು ಎರಡನೆಯ ಮಂತ್ರವನ್ನು ಓದುತ್ತಿದ್ದ ಹಾಗೆ ಭೂಮಿ ಮತ್ತು ಆಕಾಶಗಳ ಅಂಚಿನಿಂದ ಚಂದ್ರನು ಹೊರಬರುವುದು ಕಾಣಿಸಿತು. ಆಕಾಶದ ಅಸಂಖ್ಯ ನಕ್ಷತ್ರಗಳು ಕಾಣಿಸತೊಡಗಿದವು. ಅನೇಕ ಘನಫೂಟುಗಳಷ್ಟು ನೀರು ಉರುಳಿಹೋಗುತ್ತಿರುವ, ನೀರಿನೊಳಗಿನ ಮೀನುಗಳು ಕಾಣಿಸಿಕೊಂಡವು. ಅನಂತರ ನಿದಾನವಾಗಿ ಆ ಅದ್ಭುತ, ಆಕಾಶ, ಜಲಪಾತ, ಬೆಟ್ಟ, ನದಿಗಳು ಮಾಯವಾದವು. ನಾನು ಈ ಎಲ್ಲ ದೃಶ್ಯಗಳ ವರ್ಣನೆ ಮಾಡುತ್ತಲೇ ನಾನೆಫರ ಕಾಪ್ತಾಹರು ಸಂತೋಷದಲ್ಲಿ ತೇಲಿದರು. ಆದರೆ ಅವರ ಈ ಸಂತೋಷವು ಬಹಳ ಹೊತ್ತು ಉಳಿಯಲಿಲ್ಲ. ನಾವು ಆಯಿಸಿಸ್ ದ್ವೀಪಕ್ಕೆ ಮರಳಿದೆವು. ನಾನೆಫರ ಕಾಪ್ತಾಹರು ತಮ್ಮ ಪುಸ್ತಕವನ್ನು ಕೆಪ್ಟೋಸ್‍ನ ಗುಪ್ತತಳದಿಂದ ಎತ್ತಿಕೊಂಡು ಬಂದಿದ್ದಾರೆಂಬ ಸುದ್ದಿಯನ್ನು ಭಗವಾನ್ ಥೋಟರು ಕೇಳುತ್ತಲೇ ಇಜಿಪ್ತ 217 ಸಮಗ್ರ ದೈವೀ ಶಕ್ತಿಗಳನ್ನು ನಮ್ಮ ವಿರುದ್ಧ ಬಡಿದೆಬ್ಬಿಸಿದರು. ಆ ದೈವೀಶಕ್ತಿಗಳು ನಮ್ಮ ಮಗ ಮೆರಿಬ್‍ನ ಜೀವವನ್ನು ಬಲಿ ತೆಗೆದುಕೊಂಡವು. ಮೆರಿಬ್ ನಾವೆಯಿಂದ ಹೊರಟವನು ನೀರಿನಲ್ಲಿ ಬಿದ್ದನು. ನಾನೆಫರ ಕಾಪ್ತಾಹರು ಹೇಗೋ ಮಗನ ಶವವನ್ನು ಹುಡುಕಿ ತರುವಲ್ಲಿ ಸಫಲರಾದರು. ಮುಂದೆ ಹೋದರೆ ನಾನೆಫರ ಕಾಪ್ತಾಹ ನೀರಿನಲ್ಲಿ ಮುಳುಗಿಹೋದರು. ಅನಂತರ ನಾನು ಜೀವಂತ ಉಳಿಯುವ ಯಾವುದೇ ಭರವಸೆ ಇರಲಿಲ್ಲ. ಸಮ್ರಾಟ ಮರನೆಬ ಕಾಪ್ತಾಹ ಈ ಸುದ್ದಿ ಕೇಳಿ ದುಃಖದಿಂದ ಹುಚ್ಚರಾದರು. ಅವರು ತಮ್ಮ ಮಗ ನಾನೆಫಹರ ಕಾಪ್ತಾರ ಶವವನ್ನು ಪಡೆದು ಈ ಸಮಾಧಿಯಲ್ಲಿ ದಫನ್ ಮಾಡಿದರು. ಮತ್ತು ಜಾದೂ ಪುಸ್ತಕವನ್ನೂ ಇಲ್ಲಿ ಇರಿಸಿದರು. ಈಗ ನೀನದನ್ನು ಪಡೆಯಲು ಇಚ್ಛಿಸುತ್ತಿರುವೆ. ಆದರೆ ಖಮವಾಸ ಸೆತ್ನಾ ಈ ಕತೆಯನ್ನು ಕೇಳಿದ ಮೇಲೂ ಲೆಕ್ಕಿಸಲಿಲ್ಲ. ಅವನು ಹೇಳಿದನು - ಹೇಗಾದರೂ ಆ ಪುಸ್ತಕವನ್ನು ಪಡೆದೇ ಪಡೆಯುತ್ತೇನೆ. ಅವನು ಒಪ್ಪದಿದ್ದಾಗ ನಾನೆಫರ ಕಾ ಪ್ತಾಹರ ಆತ್ಮವು ಜೀವಂತವಾಯಿತು. ಮತ್ತು ಖಮವಾಸ ಸೆತ್ನಾನ ಎದುರು ಒಂದು ಷರತ್ತನ್ನು ಇಟ್ಟಿತು. - ಇಪ್ಪತ್ನಾಲ್ಕು ಕೊಂಡಿಗಳ ಆಟದಲ್ಲಿ ನೀನು ನನ್ನನ್ನು ಸೋಲಿಸಿದರೆ ಈ ಪುಸ್ತಕವನ್ನು ಒಯ್ಯಬಹುದು. ಖಮವಾಸ ಸಿದ್ಧನಾದ. ಇಬ್ಬರಲ್ಲಿಯೂ ಪಣ ಪ್ರಾರಂಭವಾಯಿತು. ನಾನೆಫರ ಕಾಪ್ತಾಹ ಮೊದಲ ಗೇಮ್‍ನಲ್ಲಿ ಗೆದ್ದುಬಿಟ್ಟರು. ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಲು ಅವರು ಖಮವಾಸನಿಗೆ ಹೇಳಿದರು. ಖಮವಾಸ ಕುಳಿತನು. ಕುಳಿತುಕೊಳ್ಳುತ್ತಲೇ ಅವನ ಮೊಣಕಾಲು ನೆಲದಲ್ಲಿ ಕುಸಿಯಿತು. ಎರಡನೇ ಗೇಮ್‍ನಲ್ಲಿಯೂ ನಾನೆಫರ ಕಾಪ್ತಾಹ ಖಮವಾಸನನ್ನು ಸೋಲಿಸಿಬಿಟ್ಟರು. ಖಮವಾಸನ ಮುಂಡ ಭೂಮಿಯಲ್ಲಿ ಹುಗಿದುಹೋಯಿತು. ಮೂರನೆಯ ಹಾಗೂ ಕೊನೆಯ ಗೇಮ್‍ನಲ್ಲಿ ಖಮವಾಸನು ಭೂಮಿಯಲ್ಲಿ ಮಾಯವಾಗಬೇಕಾಗಿತ್ತು. ಆದರೆ ಅವನ ಸೋದರ ಇನಾರೋಸ್‍ನು ಅವನನ್ನು ಬಚಾವು ಮಾಡಿದ. ಇನಾರೋಸ್‍ನು ತುಂಬ ಬುದ್ಧಿವಂತಿಕೆಯಿಂದ ಆ ಜಾದು ಪುಸ್ತಕವನ್ನು ಪಡೆದುಕೊಂಡ. ಖಮವಾಸ ಸೆತ್ನಾನನ್ನು ಹೊರತೆಗೆದು ಆ ಸಮಾಧಿಯಿಂದ ಹೊರಬಂದರು. ಖಮವಾಸ ಸೆತ್ನಾ ಆ ಪುಸ್ತಕವನ್ನು ಪಡೆದುಕೊಂಡು ತುಂಬ ಸಂತೋಷಪಟ್ಟ. ಈಗ ಅವನ ಅಧೀನದಲ್ಲಿ ಭೂಮಿ ಮತ್ತು ಆಕಾಶಗಳಿದ್ದವು. ಆದರೆ ಈ ಪುಸ್ತಕವನ್ನು ಪಡೆದ ಮೇಲೆ ಖಮವಾಸ ಸೆತ್ನಾ ಏನೆಲ್ಲ ಸಂಕಟಗಳನ್ನು ಅನುಭವಿಸಬೇಕಾಯಿತು ಎಂಬ ಕತೆಯೇ ಬೇರೆ ಇದೆ. ಅವನ ಎಲ್ಲ ಮಕ್ಕಳೂ ಸತ್ತರು. ಖಮವಾಸ ತುಂಬ ದುಃಖಿತನಾಗಿ ಭಗವಾನ್ ಥೋಟನನ್ನು ಸ್ಮರಿಸಿದ. ಭಗವಾನ್ ಥೋಟನು ಹೇಳಿದ - “ಆ ಜಾದೂವಿನ ನಿಜವಾದ ಅಧಿಕಾರಿ 218 ಕಥಾ ಸಂಸ್ಕೃತಿ ನಾನೆಫರ ಕಾಪ್ತಾಹನೇ ಆಗಿದ್ದಾನೆ. ಆದ್ದರಿಂದ ಅದನ್ನು ಅವನಿಗೆ ತಲುಪಿಸು. ಖಮವಾಸ ಹಾಗೆಯೇ ಮಾಡಿದ. ಅವನ ತಲೆಯ ಮೇಲೆ ಸುತ್ತುತ್ತಿದ್ದ ಸಂಕಟಗಳ ಮೋಡಗಳು ಹರಿದವು. ಅವನು ತನ್ನ ಸಂಪೂರ್ಣ ಜೀವನವನ್ನು ಪ್ರಾಚೀನ ವಸ್ತುಗಳ ಸಂಗ್ರಹ ಕಾರ್ಯದಲ್ಲಿಯೇ ಕಳೆದನು. ಖಮವಾಸ ಸೆತ್ನಾ ಜೀವಿತನಾಗಿಲ್ಲ. ಅದರೆ ಅವನು ಸಂಗ್ರಹಿಸಿದ ಪ್ರಾಚೀನ ವಸ್ತುಗಳು ಈಗಲೂ ಉಪಸ್ಥಿತವಿದೆ. - ಹೀಗೆಂದು ಜನರ ಹೇಳಿಕೆಯಾಗಿದೆ. ಗ್ರೀಸ್ (ಯೂನಾನ್) 219 ಈಫಿಸಸ್‍ನ ಮಹಿಳೆ - ಪೆಟ್ರೋನಿಯಸ್ ಟೈಟಸ್ ಪೆಟ್ರೋನಿಯಸ್ ಐಬಿಟರ್ (ಮೊದಲ ಶತಮಾನ) ಜಗತ್ತಿನ ಮೊದಲ ಕಾದಂಬರಿಕಾರನೆಂದು ಭಾವಿಸಲಾಗುತ್ತಿದೆ. ಅವನ ಕಾದಂಬರಿ ‘ಸೆಟಿರಿಕೋನ್’ವನ್ನು ಸಮ್ರಾಟ ನೀರೋ ನಾಶಪಡಿಸಿದ್ದ. ಯಾಕೆಂದರೆ ಅವನು ಪೆಟ್ರೋನಿಯಸ್ ಮೇಲೆ ಸಿಟ್ಟುಗೊಂಡಿದ್ದ. ಕಳೆದ 500 ವರ್ಷಗಳಿಂದ ನಿರಂತರ ಶೋಧ ನಡೆಸಿದ ವಿದ್ವಾಂಸರು ಈ ಪುಸ್ತಕದ ಬಹಳಷ್ಟು ಭಾಗವನ್ನು ಹುಡುಕಿ ತೆಗೆದಿದ್ದಾರೆ. ಇಲ್ಲಿ ಕೊಟ್ಟ ಕತೆಯನ್ನು ಕಾದಂಬರಿಯ ಒಂದು ಪಾತ್ರ ಯೂಮೊಲ್ಪಸ್ ಹೇಳುತ್ತಾನೆ. ಒಂದು ಕಾಲದಲ್ಲಿ ಈಫಿಸಸ್‍ನಲ್ಲಿ ಒಬ್ಬ ಗುಣವಂತೆಯೂ ಸಾಧ್ವಿಯೂ ಆದ ಮಹಿಳೆ ವಾಸಿಸುತ್ತಿದ್ದಳು. ಅಕ್ಕಪಕ್ಕದ ದೇಶಗಳಿಂದಲೂ ಹೆಂಗಸರು ಅವಳ ದರ್ಶನಕ್ಕಾಗಿ ಬರುತ್ತಿದ್ದರು. ಹೀಗಾಗಿ ಅವಳ ಪತಿ ನಿಧನನಾದಾಗ, ಶವವನ್ನು ಹೊತ್ತೊಯ್ಯುವ ಸಿದಿಗೆಯ ಮುಂದೆ ತಲೆಗೂದಲು ಕೆದರಿಕೊಂಡು ಎದೆಗೆ ಕೈಗಳಿಂದ ಬಡಿದುಕೊಳ್ಳುವಷ್ಟಕ್ಕೆ ಸಾಮಾನ್ಯ ರೀತಿಯಲ್ಲಿ ಮುಗಿಯಲಿಲ್ಲ. ಜನಸಂದಣಿಯು ಪ್ರಶಂಸೆ ತುಂಬಿದ ಕಣ್ಣುಗಳಿಂದ ನೋಡುತ್ತಿರುವಾಗ ಅವಳು ದಿವಂಗತನ ಸಮಾಧಿ ಸ್ಥಳದವರೆಗೆ ಹೋದದ್ದಲ್ಲದೆ, ಹಗಲೂ ರಾತ್ರಿ ಅಲ್ಲೇ ಕುಳಿತು ಅಳತೊಡಗಿದಳು. ಗ್ರೀಸ್‍ನ ಜನರು ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಬಳಸುವ ನೆಲಮಾಳಿಗೆಯಲ್ಲಿ ಈ ಕೆಲಸ ಮುಂದುವರಿಯಿತು. ಅವಳ ತಂದೆ-ತಾಯಿ, ಸಂಬಂಧಿಕರು ಯಾರೂ ಅವಳನ್ನು ತಡೆಯದಾದರು. ಅವಳು ತನಗೆ ತಾನೇ ಕಷ್ಟಕೊಟ್ಟುಕೊಳ್ಳುತ್ತ, ಹಸಿದಿದ್ದು ಮರಣವನ್ನು ಆಮಂತ್ರಿಸತೊಡಗಿದಳು. ಅವಳು ಅಧಿಕಾರಿಗಳಿಗೂ ಗದರಿಸಿದಾಗ ಅವರು ಅವಳನ್ನು ಅಲ್ಲಿಯೇ ಬಿಟ್ಟು ಹೋದರು. ಅವಳು ಇನ್ನು ಸಾಯುವಳು ಎಂದು ಎಲ್ಲರೂ ಯೋಚಿಸಿದರು. ಒಂದು ಅದ್ವಿತೀಯ ವ್ಯಕ್ತಿತ್ವ ನಾಶವಾಗುವುದೆಂಬ ದುಃಖದೊಂದಿಗೆ ಅವರೆಲ್ಲ ಹೊರಟು ಹೋದರು. ಉಪವಾಸದ ಐದನೆಯ ದಿನ. ಅವಳು ತುಂಬ ದುರ್ಬಲಳಾಗಿದ್ದಳು. ಒಬ್ಬ ಸ್ವಾಮಿಭಕ್ತ, ಸೇವಕಿ ಅವಳೊಂದಿಗೆ ಕುಳಿತಿದ್ದಳು. ಅವಳೂ ತನ್ನ ಸ್ವಾಮಿನಿಯ ಕಣ್ಣೀರಿನೊಂದಿಗೆ ತನ್ನ ಕಣ್ಣೀರನ್ನು ಸೇರಿಸುತ್ತಿದ್ದಳು. ಸಮಾಧಿಯಲ್ಲಿ ಉರಿಯುವ ದೀಪವು ಆರದ ಹಾಗೆ ಆಗಾಗ ಅದಕ್ಕೆ ಎಣ್ಣೆ ಎರೆಯಲಾಗುತ್ತಿತ್ತು. ಇಡೀ ನಗರ 220 ಕಥಾ ಸಂಸ್ಕೃತಿ ಅವಳ ಬಗೆಗೆ ಚರ್ಚಿಸುತ್ತಿತ್ತು. ಪ್ರತಿಯೊಂದು ವರ್ಗದ ಪ್ರತಿಯೊಬ್ಬ ಮನುಷ್ಯನೂ ಅವಳು ಪಾವಿತ್ರ್ಯ ಮತ್ತು ಪ್ರೇಮದ ಆದರ್ಶದ ರೂಪದಲ್ಲಿ ಎಲ್ಲರ ಎದುರು ಬೆಳಗುತ್ತಿದ್ದಾಳೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದರು. ಆಗ ಒಂದೇನಾಯಿತೆಂದರೆ, ಆ ಮಹಿಳೆಯು ಶೋಕಮಗ್ನಳಾಗಿರುವ ಸ್ಥಳದ ಸಮೀಪದಲ್ಲಿಯೇ ಕೆಲವು ದರೋಡೆಕೋರರನ್ನು ಶಿಲುಬೆಗೇರಿಸಬೇಕೆಂದು ಆ ಪ್ರಾಂತದ ಗವರ್ನರನು ಆಜ್ಞೆ ಹೊರಡಿಸಿದನು. ಶಿಲುಬೆಗೇರಿಸಿದ ಎಲ್ಲರ ಶರೀರಗಳನ್ನು ಯಾರೂ ಸಮಾಧಿ ಮಾಡದಂತೆ ರಕ್ಷಿಸಲೆಂದು ನೇಮಕಗೊಂಡಿದ್ದ ಆ ಸಿಪಾಯಿಯು ಮರುದಿನ ಅಲ್ಲಿಗೆ ಬಂದಾಗ ಸಮಾಧಿಯ ನಡುವೆ ಸ್ವಲ್ಪ ದೂರದಲ್ಲಿ ಬೆಳಕನ್ನು ನೋಡಿದನು. ಶೋಕಮಗ್ನಳಾಗಿ ಯಾರೋ ಅಳುತ್ತಿರುವುದನ್ನು ಕೇಳಿದನು. ಜಿಜ್ಞಾಸೆಯು ಮನುಷ್ಯನ ಮೂಲಭೂತ ದೌರ್ಬಲ್ಯ. ಅದಕ್ಕೆ ಸಿಕ್ಕ ಅವನು ಅಳುತ್ತಿರುವವರು ಯಾರು, ಅಲ್ಲಿ ಏನು ನಡೆಯುತ್ತಿದೆಯೆಂಬುದನ್ನು ತಿಳಿಯಲು ಬಯಸಿದನು. ಅವನು ನೆಲಮಾಳಿಗೆಯೊಳಕ್ಕೆ ಹೋದನು. ಅಲ್ಲಿ ಅವನಿಗೆ ಪಾತಾಳ ಸುಂದರಿಯೋ, ಪಾತಾಳ ಕನ್ಯೆಯೋ ಎನ್ನುವಷ್ಟು ಸುಂದರಿಯಾದ ಒಬ್ಬ ಮಹಿಳೆಯನ್ನು ನೋಡಿದಾಗ ತಲೆಸುತ್ತಿದಂತಾಗಿ ನಿಂತುಬಿಟ್ಟನು. ಆ ಮಹಿಳೆಯ ನೀರುತುಂಬಿದ ಕಣ್ಣುಗಳನ್ನು ಮುಖದ ಮೇಲಿನ ಉಗುರುಗಳ ಗೀರುಗಳನ್ನು ಅವನು ನೋಡಿದನು. ಎಲ್ಲ ದೃಶ್ಯದ ಅರ್ಥವೂ ಅವನಿಗಾಯಿತು. ಅವನು ತನ್ನ ಊಟವನ್ನು ಅಲ್ಲಿಗೇ ತಂದನು. ಅಲ್ಲದೇ ಶೋಕಮಗ್ನಳಾದ ಮಹಿಳೆಗೆ, ತನ್ನ ದುಃಖದಿಂದ ಆಕೆ ಹೊರಬರಬೇಕೆಂದೂ, ನಿಟ್ಟುಸಿರಿನಿಂದ ಹೃದಯವನ್ನು ಒಡೆದುಕೊಳ್ಳಬಾರದೆಂದೂ ಅದರಿಂದ ಯಾರಿಗೂ ಒಳಿತು ಮಾಡಲು ಸಾಧ್ಯವಾಗದೆಂದೂ ಅವನು ವಿನಂತಿಸಿಕೊಂಡನು. ಒಂದಲ್ಲ ಒಂದು ದಿನ ಎಲ್ಲರಿಗೂ ಹೀಗೆಯೇ ಕೊನೆಯಾಗಬೇಕಾಗುತ್ತದೆ. . . ಇತ್ಯಾದಿ ಇತ್ಯಾದಿಯಾದ, ಎಲ್ಲರೂ ಆತ್ಮಗಳ ಸಮಾನತೆಯನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಉಪದೇಶ ಮಾಡುವ ಅದೇ ವಾಕ್ಯಗಳನ್ನು ಆಡಿದನು. ಆದರೆ ಅವಳು ಅವನ ಕರುಣೆಯತ್ತ ಸ್ವಲ್ಪವೂ ಗಮನ ಕೊಡಲಿಲ್ಲ. ಬದಲಿಗೆ ತನ್ನ ಎದೆಯನ್ನು ಮತ್ತಷ್ಟು ಜೋರಾಗಿ ಬಡಿದುಕೊಳ್ಳತೊಡಗಿದಳು. ತನ್ನ ಮುಂಗುರುಳನ್ನು ಕಿತ್ತುಕೊಳ್ಳುತ್ತ ಅದನ್ನು ಶವದ ಮೇಲೆ ಹಾಕತೊಡಗಿದಳು. ಇಷ್ಟಾದರೂ ಆ ಸಿಪಾಯಿಯೂ ಸೋಲೊಪ್ಪಿಕೊಳ್ಳಲಿಲ್ಲ. ಅವಳು ಏನಾದರೂ ತುಸು ತಿನ್ನಬೇಕೆಂದು ಹೇಳತೊಡಗಿದ. ಅವಳನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ ತೊಡಗಿದ. ಕೊನೆಗೆ ಕೆಲಸದವಳು ಅವನು ತಂದ ಮದ್ಯದ ವಾಸನೆಯಿಂದ ಕರಗಿ ಎರಡೂ ಕೈಗಳನ್ನು ಮುಂದೆ ಮಾಡಿ ಆ ಸಿಪಾಯಿಯ ಆಮಂತ್ರಣವನ್ನು ಗ್ರೀಸ್ (ಯೂನಾನ್) 221 ಸ್ವೀಕರಿಸಿದಳು. ಅನಂತರ ಮದ್ಯ ಹಾಗೂ ಭೋಜನದಿಂದ ಸ್ಫೂರ್ತಿ ಪಡೆದ ಅವಳೂ ಸಿಪಾಯಿಯನ್ನು ಸಮರ್ಥಿಸಲು ಪ್ರಾರಂಭಿಸಿದಳು. ಈಗ ಅವರಿಬ್ಬರೂ ಒಡತಿಯ ಹಟಮಾರಿತನದ ಬಹಿರಂಗ ವಿರೋಧಿಗಳಾಗಿಬಿಟ್ಟಿದ್ದರು. “ನೀವು ಹಸಿವಿನಿಂದ ಮೂರ್ಛಿತರಾದರೆ, ಅಥವಾ ನಿಮ್ಮನ್ನು ನೀವೇ ಜೀವಂತ ದಫನ ಮಾಡಿಕೊಂಡರೆ, ಅಥವಾ ಅವಧಿಗೆ ಮುನ್ನವೇ ನೀವು ಉಸಿರು ಕಳೆದುಕೊಂಡರೆ ನಿಮಗೆ ಸಿಗುವುದಾದರೂ ಏನು? ನಿಮ್ಮ ಅಭಿಪ್ರಾಯವಾದರೂ ಏನು? ಬೂದಿಯಾದ ಅಥವಾ ದಫನ್ ಆದ ವ್ಯಕ್ತಿಯು ಕೇಳಬಲ್ಲನೇ ನೋಡಬಲ್ಲನೇ? ನೀವು ಯಾಕೆ ಮತ್ತೆ ಹೊಸ ಬದುಕನ್ನು ಪ್ರಾರಂಭಿಸಬಾರದು? ಹೆಂಗಸರ ಈ ಬಗೆಯ ಮೂರ್ಖತನವನ್ನು ನೀವು ಯಾಕೆ ಬಿಡಬಾರದು? ಜೀವವಿರುವವರೆಗೆ ತೆರೆದ ಗಾಳಿಯನ್ನು ಆಸ್ವಾದಿಸುತ್ತ ಜೀವನವನ್ನು ಆರಾಮಾಗಿ ಯಾಕೆ ಅನುಭವಿಸಬಾರದು? ನಿಮ್ಮೆದುರು ಬಿದ್ದುಕೊಂಡಿರುವ ನಿಮ್ಮ ಪತಿಯ ಶರೀರದಿಂದಲೇ “ಬದುಕು. . . ಬದುಕು. . .” ಎಂಬ ಧ್ವನಿ ನಿಮ್ಮವರೆಗೆ ಬರುತ್ತಿರಬಹುದು.” ಯಾರಿಗೆ ಆಗಲಿ, ತಿಂದು-ಉಂಡು ಬದುಕಲು ಹೇಳಿದಾಗ, ಆ ಮಾತಿನ ಕಡೆ ಲಕ್ಷ್ಯ ಕೊಡದಿರುವುದು ಕಷ್ಟವೇ ಆಗುತ್ತದೆ. ಆದ್ದರಿಂದ ಹಸಿವಿನಿಂದ ದುಸ್ಥಿತಿಯಲ್ಲಿರುವ ಆ ಹೆಂಗಸೂ ತನ್ನ ವ್ರತವನ್ನು ಮುರಿಯುವ ಮನಸ್ಸು ಮಾಡಿದಳು. ಅನಂತರ ಅವಳೂ ಅಷ್ಟೇ ಆಸೆಬುರುಕ ದೃಷ್ಟಿಯಿಂದ, ಅವಳ ಸೇವಕಿಯು ಹೊಟ್ಟೆ ತುಂಬಿಕೊಂಡಂತೆ ತಾನೂ ಹೊಟ್ಟೆ ತುಂಬ ಉಂಡಳು. ಸರಿ, ಹೊಟ್ಟೆ ತುಂಬಾ ಊಟ ಸಿಕ್ಕರೆ ಮನುಷ್ಯನ ಶರೀರವು ಏನನ್ನು ಬಯಸುತ್ತದೆಂಬುದು ತಮಗೆ ಗೊತ್ತಿರುವಂಥದೇ. ಅವಳು ಬದುಕಿ ಉಳಿಯಲು ಸಿದ್ಧಳಾಗುವಂತೆ ಮಾಡಲು ಆ ಸಿಪಾಯಿಯು ಬಳಸಿದ ತರ್ಕದ ಆಧಾರದ ಮೇಲೆ ಮತ್ತೊಂದು ಬಾರಿ ಅದೇ ತರ್ಕವನ್ನು ಅವನು ಅವಳ ಮೇಲೆ ಪ್ರಯೋಗಿಸಲು ತಯಾರಾದನು. ಅವಳು ತನ್ನ ‘ಪವಿತ್ರತೆ’ಯನ್ನು ತ್ಯಾಗ ಮಾಡಲಿ ಎಂಬುದೇ ಅವನ ಉದ್ದೇಶವಾಗಿತ್ತು. ಆ ಸದ್ಗುಣಿಯಾದ ಹೆಂಗಸು ಒಮ್ಮೆ ಸಿಪಾಯಿಯನ್ನು ನೋಡಿದಳು ; ಅವನು ಯುವಕನಾಗಿದ್ದ, ನೋಡಲು ಒಳ್ಳೆಯವನಂತೆ ಅನಿಸುತ್ತಿದ್ದ. ಅವನ ಮಾತುಗಳಿಗಂತೂ ಉತ್ತರವೇ ಇರಲಿಲ್ಲ. ಇನ್ನೊಂದು ಕಡೆ ಅವಳ ಸೇವಕಿಯು ಮತ್ತೆ ಮತ್ತೆ ಹೇಳುತ್ತಿದ್ದಳು - ನನ್ನ ಹೃದಯದ ದನಿಯನ್ನು ಕೇಳಿ ಒಡತೀ. . . . “ಆನಂದವನ್ನು ಕೊಡುವ ಪ್ರೀತಿಯ ಜೊತೆಗೆ ನಿಮ್ಮ ಜಗಳವೇ? ನೀವು ಯಾರ ಭೂಮಿಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದೀರೆಂಬುದನ್ನಾದರೂ ನೆನಪು ಮಾಡಿಕೊಳ್ಳಬಾರದೇ?” 222 ಕಥಾ ಸಂಸ್ಕೃತಿ ಮಾತನ್ನು ತೂಗಾಡಿಸುವುದರಿಂದ ಪ್ರಯೋಜನವೇನು? ಆ ಮಹಿಳೆಯು ತನ್ನ ಶರೀರದ ಒಂದೊಂದೇ ಭಾಗವನ್ನು ಒಂದೊಂದಾಗಿ ಅರ್ಪಿಸಲು ಶುರು ಮಾಡಿದಳು. ಸಿಪಾಯಿಯೂ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದ. ಅವಳೂ ಅವನನ್ನು ಆಲಂಗಿಸಿಕೊಂಡಳು. ಆ ರೀತಿ ಆ ರಾತ್ರಿಯನ್ನು ಮಾತ್ರ ಕಳೆಯಲಿಲ್ಲ. ಮುಂದಿನ ರಾತ್ರಿ, ಆ ಮುಂದಿನ ರಾತ್ರಿ ಎಲ್ಲ. ನೆಲಮಾಳಿಗೆಯ ಬಾಗಿಲನ್ನು ಮುಚ್ಚುವ ಬಗ್ಗೆ ಮಾತ್ರ ಅವನು ಜಾಗರೂಕತೆ ವಹಿಸುತ್ತಿದ್ದ. ಯಾಕೆಂದರೆ ಮಿತ್ರರೋ ಅಪರಿಚಿತರೋ ಯಾರಾದರೂ ಬಂದರೂ ಆ ಗುಣವಂತೆಯು ತನ್ನ ಪತಿಯ ಶವದೊಂದಿಗೆ ತಾನೂ ಪ್ರಾಣತ್ಯಾಗ ಮಾಡಿರುವಳೆಂದು ತಿಳಿಯುವಂತೆ ವ್ಯವಸ್ಥೆ ಮಾಡಿದ್ದ. ಸಿಪಾಯಿಯೂ ಅವಳ ಸೌಂದರ್ಯದ ರಹಸ್ಯದ ಬಗ್ಗೆ ಮುಗ್ಧನಾಗಿದ್ದ. ಸಂಬಳ ಬರುವಷ್ಟನ್ನು, ಅವನು ಐಷಾರಾಮಿನ ಸಾಮಗ್ರಿಗಳನ್ನು - ಸಾಮಾನುಗಳನ್ನು ಖರೀದಿಸಿ ರಾತ್ರಿಯಾಗುತ್ತಲೇ ಅವುಗಳನ್ನು ಸಮಾಧಿಗೆ ತಲುಪಿಸುತ್ತಿದ್ದ. ಅತ್ತ ಒಂದುದಿನ ಈ ಕಾವಲು ಕಾಯುವವನ ಬೇಜವಾಬ್ದಾರಿಯನ್ನು ನೋಡಿದ, ಶಿಲುಬೆಗೇರಿಸಿದ ದರೋಡೆಗಾರನ ತಂದೆ ತಾಯಿಗಳು ಒಂದು ರಾತ್ರಿ ತಮ್ಮ ಮಗನ ಶರೀರವನ್ನು ಶಿಲುಬೆಯಿಂದ ಇಳಿಸಿ ಅವಶ್ಯಕ ಅಂತಿಮಸಂಸ್ಕಾರ ಮಾಡಿ ಮುಗಿಸಿ ಹೊರಟು ಹೋಗಿದ್ದರು. ಸಿಪಾಯಿ ತನ್ನ ಕರ್ತವ್ಯವನ್ನು ಪೂರ್ಣ ಮಾಡುತ್ತಿರಲಿಲ್ಲ. ಅವನಿಲ್ಲದ್ದರಿಂದಲೇ ಇದೆಲ್ಲ ಆಗಿದ್ದು. ಆದರೆ ಮರುದಿನ ಒಂದು ಶಿಲುಬೆಯ ಮೇಲೆ ಇದ್ದ ಶವ ಮಾಯವಾದದ್ದನ್ನು ಗಮನಿಸಿದ ಅವನು ಗಾಬರಿಗೊಂಡ. ತನಗೆ ಇನ್ನು ಸಜಾ ಆಗುತ್ತದೆಂದು ಓಡೋಡಿ ಬಂದು ಅವನು ಆ ಹೆಂಗಸಿನ ಬಳಿ ಎಲ್ಲ ಸಂಗತಿಯನ್ನು ಹೇಳಿದ. ಅವನು ಹೇಳಿದ. . . ``ನಾನು ಕೋರ್ಟ ಮಾರ್ಶಲ್‍ಗಾಗಿ ಕಾಯುವುದಿಲ್ಲ. ಅದಕ್ಕಿಂತ ನನ್ನ ಕತ್ತಿಯಿಂದ ನಾನೇ ಶಿಕ್ಷೆ ಕೊಟ್ಟುಕೊಳ್ಳುವುದು ಒಳ್ಳೆಯದು. ಹಾಗಾಗಿ ನೀನು ಮತ್ತೊಂದು ಶವಕ್ಕೆ ಸ್ಥಳ ಸಿದ್ಧ ಮಾಡು. ಒಂದೇ ಸಮಾಧಿಯಲ್ಲಿ ನಿನ್ನ ಪತಿ ಹಾಗೂ ಪ್ರೇಮಿ ಇಬ್ಬರೂ ವಿಶ್ರಾಂತಿ ಪಡೆಯಲಿ.” ಆದರೆ ಆ ಹೆಂಗಸು ಗುಣವತಿಯಾದಂತೆ ದಯಾಳುವೂ ಆಗಿದ್ದಳು. “ದೇವರು ಇದನ್ನು ಬಯಸುವುದಿಲ್ಲ” ಅವಳು ಹೇಳಿದಳು “ನಾನು ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟಪಡುವ ಇಬ್ಬರು ವ್ಯಕ್ತಿಗಳನ್ನು ಒಂದೇ ಸ್ಥಾನದಲ್ಲಿ ಒಂದೇ ಸಮಯದಲ್ಲಿ ಅಂತಿಮ ಸಂಸ್ಕಾರ ಮಾಡಲು ನಾನು ಒಪ್ಪುವುದಿಲ್ಲ. ಒಬ್ಬ ಜೀವಂತ ವ್ಯಕ್ತಿಯು ಸಾಯುವುದನ್ನು ನಾನು ನೋಡುವುದಕ್ಕಿಂತ, ಒಬ್ಬ ಸತ್ತ ವ್ಯಕ್ತಿಯು ಶಿಲುಬೆಗೇರುವುದನ್ನು ನಾನು ನೋಡುವುದು ಒಳ್ಳೆಯದು.” ಗ್ರೀಸ್ (ಯೂನಾನ್) 223 ‘ನೀನು ನನ್ನ ಪತಿಯ ಶವವನ್ನು ಶವಪೆಟ್ಟಿಗೆಯಿಂದ ಹೊರತೆಗೆ, ಆ ಖಾಲಿ ಶಿಲುಬೆಯ ಮೇಲೆ ಏರಿಸು ! ಎಂದು ಅವಳು ಸಿಪಾಯಿಗೆ ಹೇಳಿದಳು. ಸಿಪಾಯಿಯು ಆ ಗುಣವಂತೆಯ ಅತ್ಯುತ್ತಮ ಸಲಹೆಯ ಲಾಭ ಪಡೆದನು. ಮರುದಿನ ಜನರು ಅದನ್ನು ನೋಡಿ ‘ಒಬ್ಬ ಸತ್ತ ವ್ಯಕ್ತಿಯು ಶಿಲುಬೆಗೇರಿದ್ದಾದರೂ ಹೇಗೆ?’ ಎಂದು ದಂಗಾದರು. 224 ಕಥಾ ಸಂಸ್ಕೃತಿ ಆದರ್ಶ ಕಳ್ಳ - ಜೆ. ಎಚ್. ಆನಂದ ಯಹೂದಿ ಧರ್ಮಗ್ರಂಥ ಟಾಲಮಡ್ (ಒಂದನೇ ಶತಮಾನ) ಕತೆಗಳ ಒಂದು ಮಹಾಗ್ರಂಥ. ಯಹೋವಾ ಅನುಯಾಯಿಗಳೂ ಸಾಕಷ್ಟು ರೀತಿಯಿಂದ ಸಂಶಯವಾದಿಗಳಾಗಿದ್ದರು ಮತ್ತು ಅವರು ತಮ್ಮ ಸ್ವಾಭಾವಿಕ ಜಿಜ್ಞಾಸೆ ಹಾಗೂ ಮಾನವೀಯ ಗುಣಗಳನ್ನು ಅದುಮಿಟ್ಟುಕೊಂಡಿರಲಿಲ್ಲವೆಂಬುದನ್ನು ಈ ಕತೆಗಳು ಸ್ಪಷ್ಟರೂಪದಲ್ಲಿ ತಿಳಿಸುತ್ತವೆ. ಮಹಾತ್ಮಾ ಏಸುವಿನ ಸಮಕಾಲೀನ ಯಹೂದಿ ಧರ್ಮಶಾಸ್ತ್ರ ಪಂಡಿತರು, ಪ್ರಜೆಗಳು ಮತ್ತು ರಾಜರುಗಳೆಲ್ಲರ ಶ್ರದ್ಧೆಗೆ ಪಾತ್ರರಾದ ಗಮ್‍ಲಿಯೆಲ್ ಎಂಬ ಧರ್ಮಗುರು ಇದ್ದರು. ಅವರು ಯಹೂದಿ ನಿಯಮ ಶಾಸ್ತ್ರ (ತೋರಹ)ದ ಆಚಾರ್ಯರಾಗಿದ್ದರು. ಒಮ್ಮೆ ಅವರು ಯಹೂದಿ ರಾಜನಿಗೆ ಯಹೋವಾ (ಯಹೂದಿ ಈಶ್ವರನ ಹೆಸರು)ನ ಹತ್ತು ಆಜ್ಞೆಗಳ ಬಗೆಗೆ ವ್ಯಾಖ್ಯಾನ ಮಾಡಿ ತಿಳಿಸುತ್ತಿದ್ದರು. ಎಂಟನೇ ಆಜ್ಞೆ ಹೀಗಿತ್ತು : “ನೀನು ಕಳ್ಳತನ ಮಾಡಬೇಡ” ರಾಜನು ನಗುತ್ತ ಹೇಳಿದನು “ರಬ್ಬೀ (ಗುರು) ಗಮ್‍ಲಿಯೆಲ್, ಉಪದೇಶ ಮಾಡುವುದರಲ್ಲಿ ಅನೇಕರು ಜಾಣರು.” ಗಮ್‍ಲಿಯೆಲ್ ಆಶ್ಚರ್ಯದಿಂದ ರಾಜನೊಡನೆ ಹೇಳಿದರು. “ಮಹಾರಾಜರೇ, ನನಗೆ ತಮ್ಮ ಮಾತಿನ ಇಂಗಿತ ಅರ್ಥವಾಗಲಿಲ್ಲ.” “ನಮ್ಮ ಆದಿಮಾತೆ ಹವ್ವಾಳ ನಿರ್ಮಾಣ ಹೇಗಾಯಿತೆಂಬುದು ತಮಗೆ ಗೊತ್ತೇ ಇದೆ. ಆದಮ್ ಮಲಗಿದ್ದಾಗ ಅವನ ಪಕ್ಕೆಯ ಎಲುಬನ್ನು ಯಹೋವಾನು ಕದ್ದುಬಿಟ್ಟ. ಹಾಗೆ ಕದ್ದ ಎಲುಬಿನಿಂದ ಹವ್ವಾಳನ್ನು ನಿರ್ಮಾಣ ಮಾಡಿದ.” “ಮಹಾರಾಜಾ, ಇದು ದೇವರ ನಿಂದೆ. . . .” ಗುರು ಹೇಳಿದರು. “ನಾನು ಯಹೋವಾ ನಿಂದೆ ಮಾಡುತ್ತಿಲ್ಲ. ಆದರೆ ನಾನು ಹೇಳಿದ್ದು ತಪ್ಪೇ? ಯಹೂದಿ ಧರ್ಮಶಾಸ್ತ್ರದ ಮಹಾಪಂಡಿತ ಗಮ್‍ಲಿಯೆಲ್ ನಿರುತ್ತರರಾಗಿದ್ದರು. ಅವರು ಮನೆಗೆ ಹಿಂತಿರುಗಿದರು. ಅವರು ಯಹೂದಿ ಧರ್ಮ ಮಹಾಸಭೆಯ ಎಪ್ಪತ್ತು ಸದಸ್ಯರ ತುರ್ತು ಸಭೆಯನ್ನು ಕರೆದರು. ಈ ಎಪ್ಪತ್ತು ಮಹನೀಯರೂ ಯಹೂದಿ (ಪುರಾತನ ಇಸ್ರೇಲ್‌) 225 ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಆದರೆ ರಾಜನ ಹೇಳಿಕೆಗೆ ಯಾವ ರೀತಿಯಲ್ಲಿ ಉತ್ತರಿಸಬೇಕೆಂಬುದು ಅವರಿಗೂ ಹೊಳೆಯಲಿಲ್ಲ. ಗಮ್‍ಲಿಯೆಲ್‍ನ ಮಗಳಿಗೆ ತಂದೆಯ ಚಿಂತೆಯ ಕಾರಣ ತಿಳಿದಾಗ ಅವಳು ಅರಮನೆಗೆ ಹೋಗಿ ರಾಜನನ್ನು ಭೇಟಿ ಮಾಡಿದಳು. ಅವಳು ರಾಜನಿಗೆ ಹೇಳಿದಳು - “ಮಹಾರಾಜಾ . . . ನನಗೆ ನ್ಯಾಯ ಬೇಕಾಗಿದೆ.” ‘ನ್ಯಾಯ?’ . . . “ಹೌದು, ನ್ಯಾಯ, ನಿನ್ನೆ ರಾತ್ರಿ ಒಬ್ಬ ಕಳ್ಳನು ನನ್ನ ಮನೆಯೊಳಕ್ಕೆ ಪ್ರವೇಶಿಸಿದ. ಅವನು ನನ್ನ ಬೆಳ್ಳಿಯ ದೀವಿಗೆಯನ್ನು ಕದ್ದಿದ್ದಾನೆ. ಆದರೆ ಅದರ ಬದಲಿಗೆ ಅವನು ಅಲ್ಲಿ ಬಂಗಾರದ ದೀವಿಗೆಯನ್ನು ಇಟ್ಟು ಹೋಗಿದ್ದಾನೆ.” ರಾಜನು ಆಕಾಶವೇ ಸ್ಫೋಟಿಸುವಂತೆ ಅಟ್ಟಹಾಸ ಮಾಡಿದ. ಗುರು ಗಮ್‍ಲಿಯೆಲ್‍ನ ಮಗಳು ರಾಜನು ನಗು ನಿಲ್ಲುಸುವುದನ್ನೇ ಕಾಯುತ್ತಿದ್ದಳು. ಅವಳು ತನ್ನ ಬೇಡಿಕೆಯನ್ನು ಪುನರುಚ್ಚರಿಸಿದಳು. “ಮಹಾರಾಜಾ . . . ನನಗೆ ನ್ಯಾಯ ಬೇಕಾಗಿದೆ.” ರಾಜನು ಮುಗುಳ್ನಕ್ಕು ಹೇಳಿದನು “ನನ್ನ ಮಹಲಿಗೆ ಪ್ರತಿದಿನವೂ ಇಂಥ ಆದರ್ಶ ಕಳ್ಳ ಬಂದಿದ್ದರೆ ಎಷ್ಟು ಚನ್ನಾಗಿತ್ತು!” ಗುರು ಗಮ್‍ಲಿಯೆಲ್‍ನ ಮಗಳು ಗಂಭೀರ ಸ್ವರದಲ್ಲಿ ಹೇಳಿದಳು “ತಮ್ಮ ಹೇಳಿಕೆ ನೂರಕ್ಕೆ ನೂರು ನ್ಯಾಯವಾದದ್ದು. ನಮ್ಮ ಪರಮೇಶ್ವರನಾದ ಯಹೋವಾ ಮಾಡಿದ್ದೂ ಇದೇ ತಾನೆ? ಅವನು ಆದಿಪುರುಷ ಆದಮನ ಪಕ್ಕೆಯಿಂದ ಒಂದು ಎಲುಬನ್ನು ತೆಗೆದುಕೊಂಡ. ಆದರೆ ಅದರ ಬದಲು ಅವನಿಗೆ ಒಬ್ಬ ಸುಂದರ ಸ್ತ್ರೀಯನ್ನು ಕೊಟ್ಟ.” 226 ಕಥಾ ಸಂಸ್ಕೃತಿ ಹೆರಾಕ್ಲಿಸ್ - ಕಮಲ ನಸೀಮ ಹೆರಾಕ್ಲಿಸ್ ಅಥವಾ ಹಕ್ರ್ಯುಲಸ್‍ನನ್ನು ಪ್ರಾಚೀನ ಗ್ರೀಸಿನ ವೀರ ಯೋಧರಲ್ಲಿ ಶ್ರೇಷ್ಠತಮನೆಂದು ಭಾವಿಸಲಾಗಿದೆ. ಶಾರೀರಿಕ ಸಾಮರ್ಥ್ಯ, ಯುದ್ಧ - ಪರಾಕ್ರಮ ಅದ್ವಿತೀಯ ಸಾಹಸ, ನಿರ್ಭೀತತೆ, ಆತ್ಮವಿಶ್ವಾಸ ಇಂಥ ಗುಣಗಳು ಅವನ ವ್ಯಕ್ತಿತ್ವದಲ್ಲಿ ಕೇಂದ್ರಸ್ಥವಾಗಿದ್ದವು. ಅದು ಬಾಹುಬಲದ ಯುಗವಾಗಿತ್ತು. ದೊಡ್ಡ ದೊಡ್ಡ ಯುದ್ಧಗಳೂ ಎದುರು ಬದರಾಗಿ ಬಾಣಗಳು - ಕತ್ತಿಗಳ ಮೂಲಕವೇ ನಡೆಯುತ್ತಿದ್ದವು. ಅಮಾನವೀಯ ಶಕ್ತಿಗಳನ್ನು ಹೊಂದಿ, ಜನಸಾಧಾರಣರಿಗೆ ಅಹಿತವನ್ನುಂಟು ಮಾಡುವ ದೈತ್ಯರು-ರಾಕ್ಷಸರನ್ನು ದಮನ ಮಾಡಲು ಕುಶಾಗ್ರ ಬುದ್ಧಿಗಿಂತ ಕಬ್ಬಿಣದಂತಹ ಶರೀರ ಅವಶ್ಯವಾಗಿತ್ತು. ಮಾಂಸಖಂಡಗಳಿಂದ ಬಲಿಷ್ಠವಾದ ದೇಹದೊಂದಿಗೆ ವಿಚಾರಶಕ್ತಿಯನ್ನು ವಿಕಸಿತಗೊಳಿಸಿಕೊಂಡ ವ್ಯಕ್ತಿಗಳು ದೊರೆಯುವುದೇ ಕಷ್ಟವಾಗಿತ್ತು. ಇದರ ಏಕಮಾತ್ರ ಉತ್ಕೃಷ್ಟ ಮಾದರಿಯೆಂದರೆ ಅಥೆನ್ಸನ ವೀರ ಥೀಸಿಯಸ್. ಹೆರಾಕ್ಲಿಸ್ ತನ್ನ ಕಾಲದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದ. ಶೌರ್ಯ ಪರಾಕ್ರಮಗಳಲ್ಲಿ ಇಡೀ ವಿಶ್ವದಲ್ಲಿಯೇ ಅವನನ್ನು ಮೀರಿಸುವವರು ಮತ್ತೊಬ್ಬರಿರಲಿಲ್ಲ. ಅವನನ್ನು ದೇವತೆಗಳೊಂದಿಗೆ ಹೋಲಿಸುತ್ತಿದ್ದರು. ಇಷ್ಟೇ ಅಲ್ಲ ; ಅನೇಕ ಬಾರಿ ದುಃಸ್ಸಾಧ್ಯ ಕೆಲಸಗಳಲ್ಲಿ ದೇವತೆಗಳೂ ಹೆರಾಕ್ಲಿಸ್‍ನ ನೆರವು ಪಡೆಯುತ್ತಿದ್ದರು. ಹೆರಾಕ್ಲಿಸ್ ಯಾವ ಕಾರ್ಯವನ್ನೇ ಎತ್ತಿಕೊಂಡರೂ ಪೂರ್ಣ ಮಾಡುತ್ತಿದ್ದ. ಶತ್ರು ಎಷ್ಟೇ ಭಯಕಾರಿಯಾಗಿದ್ದರೂ ಹೆರಾಕ್ಲಿಸ್‍ನಿಗೆ ವಿಜಯವೆಂಬುದು ನಿಶ್ಚಿತವಾಗಿತ್ತು. ಇಡೀ ಜೀವನದಲ್ಲಿ ಅವನೆಂದೂ ಸೋಲಿನ ರುಚಿ ಕಂಡವನೇ ಅಲ್ಲ. ಕೆಲವರು ಅವನನ್ನು ದೇವತೆಯೆಂದು ಭಾವಿಸಿದರೂ, ಹೆರಾಕ್ಲಿಸ್ ಹೆಸರನ್ನು ಆಧರಿಸಿ ಈ ಧೋರಣೆಯು ತಪ್ಪು ಎನ್ನಬಹುದಾಗಿತ್ತು. ಹೆರಾಕ್ಲಿಸ್ ಹೆರಾನಿಂದ ನಿರ್ಮಾಣವಾದವನು, ಅಂದರೆ ಇದರ ಅರ್ಥ ‘ಹೆರಾಳ ಗೌರವ’. ಯಾವುದೇ ದೇವೀ ದೇವತೆಯ ಹೆಸರು ಇನ್ನೊಬ್ಬರ ಹೆಸರಿನ ಸಂಯೋಜನೆಯಿಂದ ಆಗಲಿಲ್ಲ. ಹೆರಾಕ್ಲಿಸ್‍ನ ಹುಟ್ಟು ವೀರ ಪರಸಿಯಸ್‍ನ ಮಗ ಇಲೆಕ್ಟ್ರಯೊ ಮಾಯಸೀನಿಯ ರಾಜನಾಗಿದ್ದ. ಅವನು ತನ್ನ ಸುಂದರ - ಉಪಯುಕ್ತ ದನ-ಕರುಗಳಿಗಾಗಿ ಪ್ರಸಿದ್ಧನಾಗಿದ್ದ. ಸಂದರ್ಭ ಸಾಧಿಸಿ ಟೊಲಬೊನ್ಸ ಹಾಗೂ ಟೈಫಿಯನ್ಸ ಆಕಸ್ಮಿಕವಾಗಿ ಆಕ್ರಮಣ ಗ್ರೀಸ್ (ಯೂನಾನ್) 227 ಮಾಡಿ ಅವನ ದನಕರುಗಳನ್ನು ಕಸಿದು ಕೊಂಡರು. ಅವನ್ನು ಮರಳಿ ಪಡೆಯುವ ವಿಫಲ ಪ್ರಯತ್ನದಲ್ಲಿ ಇಲೆಕ್ಟ್ರಯೋನ ಎಂಟು ಮಕ್ಕಳು ಸತ್ತರು. ಆಗ ಇಲೆಕ್ಟ್ರಯೋ ತಾನೇ ಖುದ್ದಾಗಿ ಶತ್ರುಗಳ ಮೇಲೆ ಏರಿಹೋಗುವ ನಿರ್ಧಾರ ಮಾಡಿದನು. ತನ್ನ ಮಗಳು ಎಲ್ಕಮೀನಿ ಹಾಗೂ ರಾಜ್ಯದ ಭಾರವನ್ನೆಲ್ಲ ತನ್ನ ಸಹೋದರನ ಮಗ ಎಂಫ್ರಿಟ್ರಯೋನಿಗೆ ತುಸುಕಾಲದವರೆಗೆ ಒಪ್ಪಿಸಿ, ಯುದ್ಧದಿಂದ ಮರಳಿ ಬಂದ ಮೇಲೆ ಎಲ್ಕಮೀನಿಯ ವಿವಾಹವನ್ನು ಎಂಫ್ರಿಟ್ರಯೋನೊಂದಿಗೆ ಮಾಡಿಕೊಡುವುದಾಗಿ ಮಾತುಕೊಟ್ಟನು. ಇಲೆಕ್ಟ್ರಯೋ ಮರಳಿ ಬಂದ ಮೇಲೆ ಅವನ ಹಾಗೂ ಎಂಫ್ರಿಟ್ರಯೋನ ನಡುವೆ ತುಸು ವಾದ ವಿವಾದವಾಯಿತು. ಆ ಸಂದರ್ಭದಲ್ಲಿ ಎಂಫ್ರಿಟ್ರಯೋ ಮೈಮರೆತು ಇಲೆಕ್ಟ್ರಯೋನನ್ನು ಕೊಂದುಬಿಟ್ಟ. ಇದರಿಂದಾಗಿ ಎಂಫ್ರಿಟ್ರಯೋನನ್ನು ಸ್ಥೆನಲಸ್ ದೇಶದಿಂದಲೇ ಹೊರಹಾಕಿದ. ಅಲ್ಲದೇ, ಮಾಯಸೀನಿಯ ರಾಜ್ಯ ಫಿಲಾಪ್ಸನ ಮಕ್ಕಳಾದ ಎಟರಿಯಸ್ ಮತ್ತು ಥೆಪಟಿಸ್ ಅವರಿಗೆ ದೊರಕಿತು. ಎಂಫ್ರಿಟ್ರಯೋ ಎಲ್ಕಮೀನಿಯನ್ನು ಕರೆದುಕೊಂಡು ಥೀಬ್ಸಗೆ ಹೋದನು. ಅಲ್ಲಿನ ತಾತ್ಕಾಲಿಕ ರಾಜನಾದ ಕ್ರಿಯೋ ಅವನನ್ನು ಹತ್ತಿರದ ಸಂಬಂಧಿಯ ಹತ್ಯೆಯ ಅಪರಾಧದಿಂದ ಶುದ್ಧಗೊಳಿಸಿ ತನ್ನಲ್ಲಿ ಆಶ್ರಯ ಕೊಟ್ಟನು. ಎಲ್ಕಮೀನಿ ಪತಿವ್ರತಾ ಸ್ತ್ರೀಯಾದರೂ, ತನ್ನ ಎಂಟು ಜನ ಸೋದರರ ಹತ್ಯೆಯ ಸೇಡು ತೀರಿಸಿಕೊಂಡ ಹೊರತು ಎಂಫ್ರಿಟ್ರಯೋನೊಂದಿಗೆ ದೇಹಸಂಬಂಧವನ್ನು ಹೊಂದುವುದಿಲ್ಲವೆಂದು ನಿರಾಕರಿಸಿದಳು. ಎಂಫ್ರಿಟ್ರಯೋ ಈ ಬಗೆಗೆ ವಚನವಿತ್ತುದಷ್ಟೇ ಅಲ್ಲ, ಕ್ರಿಯೋನ ಸಹಾಯದಿಂದ ಟೆಲಿಬೋನ್ಸ್ ಹಾಗು ಟೆಫಿಯನ್ಸರ ಮೇಲೆ ವಿಜಯವನ್ನು ಸಾಧಿಸಿ ಅವರ ರಾಜ್ಯವನ್ನು ತನ್ನ ಸಂಬಂಧಿಕರಿಗೆ ಹಂಚಿದನು. ಇತ್ತ ಸ್ಯೂಸನ ದೃಷ್ಟಿಯು ಎಲ್ಕಮೀನಿಯ ಮೇಲೆ ಬಿದ್ದಿತ್ತು. ಆದರೆ ಈ ಬಾರಿ ದೇವ ಸಾಮ್ರಾಟನ ಉದ್ದೇಶವು ಕೇವಲ ಕಾಮವಾಸನೆಯ ಪೂರ್ತಿಯಾಗಿರಲಿಲ್ಲ. ಪ್ರಾಯಪ್ರಬುದ್ಧನಾದ ಮೇಲೆ ಮನುಷ್ಯನಂತೆ ದೇವತೆಯಂತೆ ಉಪಯುಕ್ತವಾದ ಒಂದು ಬಾಲಕನನ್ನು ಅವನು ಪಡೆಯಬಯಸಿದ್ದ. ದುಷ್ಟರನ್ನು ದಮನ ಮಾಡಲು, ದೈತ್ಯರು ರಾಕ್ಷಸರನ್ನು ನಾಶಮಾಡಿ ದೈವಸತ್ತೆಯನ್ನು ಗಟ್ಟಿಗೊಳಿಸಲು, ಹಾಗೂ ತನ್ನ ಅಪರಿಮಿತ ಬಾಹುಬಲದಿಂದ ಹೊಸ ಕೀರ್ತಿಸ್ತಂಭವನ್ನು ಸ್ಥಾಪಿಸಲು ಒಬ್ಬ ಮಹಾನ್ ಶೂರ-ವೀರನ ಅವಶ್ಯಕತೆಯಿತ್ತು. ಇಂಥ ಒಬ್ಬ ಬಾಲಕನನ್ನು ಧಾರಣ ಮಾಡಲು ಎಲ್ಕಮೀನಿಗಿಂತ ಉಪಯುಕ್ತವಾದ ಮನುಷ್ಯ ಸ್ತ್ರೀ ಮತ್ತೊಬ್ಬಳಿರಲಿಲ್ಲ. ಎಲ್ಕಿಮೀನಿ ಅದ್ಭುತವಾದ ರೂಪ-ಗುಣ- ಮಹತ್ವ ಹಾಗೂ ಬುದ್ಧಿಮತ್ತೆಯೊಂದಿಗೆ ಏಕನಿಷ್ಠೆಯುಳ್ಳವಳೂ ಆಗಿದ್ದಳು. ಅವಳಲ್ಲಿ ಪ್ರಣಯವನ್ನು ಯಾಚಿಸಿ ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಎಂಫ್ರಿಟ್ರಯೋ 228 ಕಥಾ ಸಂಸ್ಕೃತಿ ಮರಳುವುದಕ್ಕೆ ಒಂದು ದಿನ ಮೊದಲು ಅವನ ರೂಪವನ್ನು ಧರಿಸಿ ಎಲ್ಕಮೀನಿಯ ಜೊತೆ ಬೆರೆತ. ಎಲ್ಕಮೀನಿ ಅವನನ್ನು ಎಂಫ್ರಿüಟ್ರಯೋ ಎಂದೇ ಭಾವಿಸಿದಳು. ಅವಳ ಸಹೋದದರ ಬಗೆಗಿನ ಸೇಡು ತೀರಿದೆಯೆಂಬುದನ್ನು ತಿಳಿದ ಅನಂತರ ಸ್ವೇಚ್ಛೆಯಿಂದ ತನ್ನನ್ನು ಅವನಿಗೆ ಅರ್ಪಿಸಿಕೊಂಡಳು. ದೇವ ಸಾಮ್ರಾಟ ಸ್ಯೂಸ್‍ನು ಆ ಒಂದು ರಾತ್ರಿಯನ್ನು ಮೂರು ರಾತ್ರಿಗಳಷ್ಟು ದೀರ್ಘ ಮಾಡಿದ. ಅವನು ದೇವದೂತ ಹೆಮಿಜ್ ಮೂಲಕವಾಗಿ ಸೂರ್ಯದೇವತೆ ಹೀಲಿಯಸ್‍ನಿಗೆ ಒಂದುದಿನ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಸಂದೇಶ ಕಳಿಸಿದ. ನಿಧಾನವಾಗಿ ಚಲಿಸಲು ಚಂದ್ರನಿಗೆ ಆಜ್ಞೆ ಮಾಡಲಾಯಿತು. ಇದರಿಂದ ಹಿಂದಿನ ರಾತ್ರಿ ಎಂಫ್ರಿüಟ್ರಯೋನ ಶಯನಾಗಾರದಲ್ಲಿ ಯಾವ ಎರಡು ಆತ್ಮಗಳ ಮಿಲನವಾಯಿತೆಂಬ ಸುದ್ದಿ ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಲಾಯಿತು. ಎಲ್ಕಿಮೀನಿ ಇಡೀರಾತ್ರಿ ತನ್ನ ಗಂಡನ ವಿಜಯಯಾತ್ರೆಯ ವಿವರಗಳನ್ನು ಕೇಳುತ್ತ ಸುಖ ಅನುಭವಿಸಿದಳು. ಮೂವತ್ತಾರು ಗಂಟೆಗಳ ಅನಂತರ ಬೆಳಗಾಗುತ್ತಲೇ ನಿಜವಾದ ಎಂಫ್ರಿಟ್ರಿಯೋ ವಿಜಯದ ಗರ್ವದಿಂದ ಬೀಗುತ್ತ, ಎಲ್ಕಮೀನಿಯ ಜೊತೆಗಿನ ಅನುಭವದ ಕಲ್ಪನೆಯಿಂದಲೇ ಮದಮತ್ತನಾಗುತ್ತ ಹಿಂತಿರುಗಿ ಬಂದ. ಎಲ್ಕಮೀನಿಯು ಅವನನ್ನು ಉತ್ಸಾಹದಿಂದ ಬರಮಾಡಿಕೊಳ್ಳಲು ಬರದಿರುವುದನ್ನು ಕಂಡು ಆಕೆಯ ನಿರೀಕ್ಷೆಯಲ್ಲಿದ್ದ ಅವನಿಗೆ ಆಶ್ಚರ್ಯವಾಯಿತು. ಅಲ್ಲದೆ ಶಯನಗೃಹದಲ್ಲಿ ಆಕೆಯ ಕಣ್ಣುಗಳು ನಿದ್ದೆಯಿಂದ ಮುಚ್ಚಿಕೊಳ್ಳುತ್ತಿದ್ದವು. ಎಂಫ್ರಿಟ್ರಿಯೋನ ಸಾಧನೆಗಳ ಮಾತುಗಳ ಬಗ್ಗೆ ಅವಳಿಗೆ ಆಸಕ್ತಿಯೇ ಇರಲಿಲ್ಲ. ಆಗೀಗ ಆಕಳಿಸುತ್ತ ಹೇಳುತ್ತಿದ್ದಳು - “ನಿನ್ನೆ ರಾತ್ರಿ ಒಂದು ಕ್ಷಣ ಕೂಡ ನಿದ್ದೆ ಮಾಡಲಿಲ್ಲ. ಈಗಲಾದರೂ ಮಲಗಿ.” ಎಂಫ್ರಿಟ್ರಿಯೋನಿಗೆ ತುಸು ಸಂದೇಹ ಬಂತು. ಅವನು ಥೀಬ್ಸನ ಪ್ರಸಿದ್ಧ ಭವಿಷ್ಯಕಾರ ಟೈರಿಸಿಯಸ್‍ನಲ್ಲಿ ಈ ಬಗ್ಗೆ ಮಾತುಕತೆಯಾಡಿದಾಗ ಎಲ್ಲ ನಿಜವಾದ ಸಂಗತಿಗಳು ಗೊತ್ತಾದವು. ದೇವ ಸಮ್ರಾಟ ಸ್ಯೂಸ್ ಸಂಬಂಧ ಮಾಡಿದ ಕೊನೆಯ ಮತ್ರ್ಯ ಸ್ತ್ರೀ ಎಲ್ಕಮೀನಿ ಆಗಿದ್ದಳು. ಅವಳು ಸ್ಯೂಸ್‍ನ ಪ್ರಥಮ ಪ್ರೇಮಿಕೆ ನಿಯೋಬಿಯ ಹದಿನಾರನೆಯ ತಲೆಮಾರಿನಲ್ಲಿದ್ದಳು. ಎಲ್ಕಮೀನಿ ಹೆತ್ತ ಈ ಪುತ್ರನಷ್ಟು ಪರಾಕ್ರಮಿ ಭೂಮಿಯ ಮೇಲೆ ಯಾರೂ ಆಗಲಿಲ್ಲ. ಈ ಘಟನೆಯ ಸುಮಾರು ಒಂಬತ್ತು ತಿಂಗಳ ಅನಂತರ ತನ್ನ ಉತ್ಸಾಹವನ್ನು ಅದುಮಿಡಲು ಅಸಮರ್ಥನಾದ ದೇವ ಸಮ್ರಾಟ ಸ್ಯೂಸ್ ಓಲಿಂಪಸ್‍ನಲ್ಲಿ ಗರ್ವದಿಂದ ಉಬ್ಬುತ್ತ ಕೆಲವೇ ಸಮಯದಲ್ಲಿ ತಾನೊಬ್ಬ ಅಸಾಧಾರಣ ಪುತ್ರನ ತಂದೆಯಾಗಲಿರುವುದನ್ನು ಹೇಳಿಕೊಂಡ - ಈ ಬಾಲಕನು ಹೆರಾಕ್ಲಿಸ್ ಎಂದು ಹೆಸರಾಗುವನು, ಮತ್ತು ಪರಸಿಯಸ್ ವಂಶದ ಅತ್ಯಂತ ತೇಜಸ್ವಿ ಗ್ರೀಸ್ (ಯೂನಾನ್) 229 ಆಡಳಿತಗಾರನಾಗುವನು ಎಂದೂ ಹೇಳಿದ. ಸ್ಯೂಸ್‍ನ ಹೆಂಡತಿ ಹೆರಾ ಅವನ ಕಾಮುಕ ಸ್ವಭಾವದಿಂದಾಗಿ ಸದಾ ದುಃಖಿತಳಾಗಿರುತ್ತಿದ್ದಳು. ಅವಳು ಈ ಬಾಲಕನು ಯಾರ ಗರ್ಭದಲ್ಲಿ ಜೀವಿಸುವನೆಂಬುದನ್ನು ತಕ್ಷಣ ಪತ್ತೆ ಹಚ್ಚಿದಳು. ಆ ಸಂಜೆ ಮುಗಿಯುವುದರೊಳಗೆ ಪರಸೀಯಸ್ ವಂಶದಲ್ಲಿ ಜನಿಸುವ ಬಾಲಕನೇ ಸಮ್ರಾಟನಾಗುವನು ಎಂದು ಸ್ಯೂಸ್‍ನಿಂದ ಪ್ರಮಾಣ ಮಾಡಿಸಿ ವಚನ ತೆಗೆದುಕೊಂಡಳು. ಹೆರಾಳ ಚಾತುರ್ಯದಿಂದ ಸ್ಯೂಸ್ ಮೋಸ ಹೋದನು. ಯಾಕೆಂದರೆ ಎಲ್ಕಮೀನಿಯ ಹೊರತಾಗಿ ಪರಸಿಯಸ್ ವಂಶದಲ್ಲಿ ಮಾಯಸೀನಿಯ ರಾಜನಾದ ಸ್ಥಿನಿಲಸ್‍ನ ರಾಣಿ ಸಿಸಿಪೆ ಕೂಡ ಏಳುತಿಂಗಳ ಗರ್ಭಿಣಿಯಾಗಿದ್ದಳು. ಹೆರಾ ತ್ವರಿತವಾಗಿ ಮಾಯಾಸೀನಿಗೆ ಹೋದಳು. ಸಿಸಿಪೆಗೆ ಅವಧಿಗೆ ಎರಡು ತಿಂಗಳ ಮುನ್ನವೇ ಪ್ರಸವವೇದನೆ ಪ್ರಾರಂಭವಾಗುವಂತೆ ಮಾಡಿದಳು. ಮತ್ತೆ ಅವಳು ಥೀಬ್ಸಗೆ ಓಡೋಡಿ ಬಂದಳು. ಮೊಣಕಾಲು ಕೂಡಿಸಿ, ಎರಡೂ ಕೈಗಳ ಬೆರಳುಗಳನ್ನು ಹೆಣೆದುಕೊಂಡು, ತನ್ನ ವಸ್ತ್ರಕ್ಕೆ ಗಂಟು ಹಾಕಿಕೊಂಡು ಎಲ್ಕಮೀನಿಯ ಬಾಗಿಲ ಬಳಿ ಹೋಗಿ ಕುಳಿತಳು. ಈ ರೀತಿಯಲ್ಲಿ ಕುಳಿತುಕೊಳ್ಳುವುದರ ಅರ್ಥವೆಂದರೆ, ಪ್ರಸವವೇದನೆ ಪ್ರಾರಂಭವಾದರೂ ಈಗಲೇ ಬಾಲಕನ ಜನ್ಮವಾಗುವುದಿಲ್ಲ ಎಂದು. ಸಿಸಿಪೆಗೆ ಯುರಿಸ್ಥಿಯಸ್ ಎಂಬ ಮಗ ಹುಟ್ಟುವವರೆಗೂ ಅವಳು ಅಲ್ಲಿ ಕುಳಿತೇ ಇದ್ದಳು. ಯುರಿಸ್ಥಿಯಸ್‍ನು ಹುಟ್ಟಿದ ಒಂದು ಗಂಟೆಯ ಅನಂತರ ಹೆರಾಕ್ಲಿಸ್‍ನು ಜನಿಸಿದನು. ಹೀಗೆ ಒಂದು ಗಂಟೆ ತಡವಾದುದರಿಂದ ಹೆರಾಕ್ಲಿಸ್ ಭಾಗ್ಯದಿಂದ ವಂಚಿತನಾದ. ಹೆರಾಕ್ಲಿಸ್‍ನಿಗೆ ಅನಂತರದ ದಿನಗಳಲ್ಲಿ ಇಫಿಕ್ಲಿಸ್ ಎಂಬ ಒಬ್ಬ ತಮ್ಮನಾದ. ಅವನು ಎಂಫ್ರಿüಟ್ರಯೋನ ಮಗ.’ ಹೆರಾಳು ಹೆರಾಕ್ಲಿಸ್‍ನ ಹುಟ್ಟಿನಲ್ಲಿ ವಿಳಂಬವನ್ನುಂಟು ಮಾಡಲು ಕೆಲವು ಡಾಕಿನಿಯರನ್ನು ಎಲ್ಕಮೀನಿಯ ದ್ವಾರದಲ್ಲಿ ಕೂರಿಸಿದ್ದಳು. ಹೆರಾ ಶಿಶುವಿನ ಜನ್ಮದ ಅಧಿಷ್ಠಾನ ದೇವಿಯಾದ ಎಲಿಥಿಯಾಳಿಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಳು ಎಂಬ ಒಂದು ಅಭಿಪ್ರಾಯವೂ ಇದೆ. ಅವಳು ಒಂದು ವಿಶೇಷ ಭಂಗಿಯಲ್ಲಿ ಎಲ್ಕಮೀನಿಯ ದ್ವಾರದಲ್ಲಿ ಕುಳಿತಿದ್ದಳು. ಎಲ್ಕಮೀನಿಯ ಒಬ್ಬ ವಿಶ್ವಾಸಸ್ಥ ದಾಸಿಯು ಗೊತ್ತಿದ್ದೂ ಸಂತೋಷದಿಂದ ಕೂಗುತ್ತ ಒಡತಿಗೆ ಮಗ ಹುಟ್ಟಿದನೆಂದು ಘೋಷಿಸಿದ್ದಳು. ಇದರಿಂದ ಎಲಿಥಿಯಾ ಬೆಚ್ಚಿಬಿದ್ದು ಎದ್ದು ಕುಳಿತಳು. ಆಗ ಅವಳು ಕುಳಿತಿದ್ದ ವಿಶಿಷ್ಟ ಭಂಗಿ ಸಡಿಲವಾಗುತ್ತಲೆ, ಹೆರಾಕ್ಲಸ್‍ನ ಜನನವಾಯಿತು. ಎಲಿಥಿಯಾ ಸೊಕ್ಕಿನಿಂದ ನಗುತ್ತಿದ್ದ ದಾಸಿಯನ್ನು ಒಂದು ಪಶುವಿನ ರೂಪದಲ್ಲಿ ಬದಲಿಸಿದಳು. ಹೆರಾಳ ಉದ್ದೇಶ ಸಫಲವಾಯಿತು. ಹೆರಾಕ್ಲಿಸ್‍ನಿಗೆ ಮುಂಚೆಯೇ ಯುರಿಸ್ಥಿಯಸ್‍ನ ಜನನವಾಯಿತು. ಹೀಗೆ ಹೆರಾಳ ಹೊಟ್ಟೆಕಿಚ್ಚಿನಿಂದಾಗಿ ಹೆರಾಕ್ಲಿಸ್ 230 ಕಥಾ ಸಂಸ್ಕೃತಿ ಉತ್ತರಾಧಿಕಾರದಿಂದ ವಂಚಿತನಾದ. ಸ್ಯೂಸ್‍ನಿಗೆ ಇವೆಲ್ಲ ಗೊತ್ತಾದಾಗ ಅವನು ಸಿಟ್ಟಿನಿಂದ ಉರಿದೆದ್ದನು. ಅವನು ತನ್ನ ಹಾಗೂ ಹೆರಾಳ ಮಗಳು ಎಟಿಯನ್ನು - ತನ್ನ ತಂದೆಯಿಂದ ಈ ಸಂಗತಿಗಳನ್ನು ಬಚ್ಚಿಟ್ಟಿದ್ದ ಅಪರಾಧಕ್ಕಾಗಿ ಓಲಿಂಪಸ್‍ನಿಂದ ಕೆಳಗಡೆ ಭೂಮಿಗೆ ತಳ್ಳಿಬಿಟ್ಟನು. ಅನಂತರ ಅವನು ಯೂರಿಸ್ಥಿಯಸ್ ಮೂಲಕ ಹನ್ನೆರಡು ಕಠಿಣ ಕ್ರಮಗಳಲ್ಲಿ ಪೂರ್ಣತೆಯನ್ನು ಹೊಂದಿದ ಮೇಲೆ ತನ್ನ ಮಗ ಹೆರಾಕ್ಲಿಸ್ ಅಮರತ್ವ ಪಡೆಯುವನೆಂದು ಸ್ಯೂಸ್ ಹೆರಾಳಿಂದ ಒಪ್ಪಿಗೆ ಪಡೆದನು. ಹೆರಾಳ ಮತ್ಸರದ ದೃಷ್ಟಿಯಿಂದ ಶಿಶು ಹೆರಾಕ್ಲಿಸ್‍ನನ್ನು ಬಚಾವು ಮಾಡಲಿಕ್ಕಾಗಿ ಎಲ್ಕಮೀನಿ ಥೀಬ್ಸದ ಸೀಮೆಯ ಹೊರಗೆ ನಿರ್ಜನ ಪ್ರದೇಶದಲ್ಲಿ ಹೆರಾಕ್ಲಿಸ್‍ನನ್ನು ಬಿಟ್ಟು ಬರಲು ಹೇಳಿದಳು. ಸರ್ವಜ್ಞನಾದ ಸ್ಯೂಸ್ ಈ ಸ್ಥಿತಿಯ ಲಾಭ ಪಡೆಯಲು ದೇವಿ ಎಥಿನಿಗೆ ತನ್ನ ಯೋಜನೆಯನ್ನು ತಿಳಿಸಿ ಹೆರಾಳ ಬಳಿ ಕಳಿಸಿದನು. ಎಥಿನಿಯು ಸಮ್ರಾಜ್ಞಿಯಾದ ಹೆರಾಳನ್ನು ವಿಹಾರದ ನೆವದಲ್ಲಿ ಶಿಶು ಹೆರಾಕ್ಲಿಸ್ ಬಿದ್ದುಕೊಂಡಿದ್ದ ಸ್ಥಳಕ್ಕೆ ಕರೆದುಕೊಂಡು ಹೋದಳು. ತಿರುಗಾಡುತ್ತ ತಿರುಗಾಡುತ್ತ ಅವರು ಬಾಲಕನ ಬಳಿ ಹೋದರು. ಎಥಿನಿ ಅತ್ಯಂತ ಆಶ್ಚರ್ಯವನ್ನು ಪ್ರಕಟಿಸುತ್ತ ಹೇಳಿದಳು. .. . “ಓಹ್ . . . ನೋಡು . . . ಎಷ್ಟೊಂದು ಸುಂದರವಾದ ಆರೋಗ್ಯಶಾಲಿಯಾದ ಮಗು! ಯಾವ ಹುಚ್ಚಿ ತಾಯಿಯೋ ಇವನನ್ನು ಇಲ್ಲಿ ಕಲ್ಲು ತುಂಬಿದ ಪ್ರದೇಶದಲ್ಲಿ ಸಾಯಲೆಂದು ಬಿಟ್ಟು ಹೋಗಿದ್ದಾಳೋ ಏನೋ ! ಪಾಪ. . . . ಬಡಪಾಯಿ ಮಗು ಹಸಿದಿದೆ. ನೀನು ಇದಕ್ಕೆ ಸ್ವಲ್ಪ ಹಾಲು ಕೊಡು. . . .” ಹೆರಾ ಏನನ್ನೂ ಯೋಚಿಸದೆ ಮಗುವನ್ನು ಎತ್ತಿಕೊಂಡು ಎದೆಗವಚಿಕೊಂಡು ಮಗುವಿಗೆ ಸ್ತನಪಾನ ಮಾಡಿಸಲು ತೊಡಗಿದಳು. ಆದರೆ ಶಿಶು ಹೆರಾಕ್ಲಿಸ್‍ನು ಆಕೆ ನೋವಿನಿಂದ ಚೀರಿಕೊಳ್ಳುವಷ್ಟು ಜೋರಾಗಿ ಸ್ತನದಿಂದ ಹಾಲನ್ನು ಹೀರಿದನು. ಆಗ ಆಕೆ ಅವನನ್ನು ತನ್ನ ಎದೆಯಿಂದ ಎಳೆದು ಬೇರ್ಪಡಿಸಿದಳು. ಹಾಲಿನ ಒಂದು ಧಾರೆ ಚಿಮ್ಮಿ ಆಕಾಶದಲ್ಲಿ ಬಿದ್ದು ಆಕಾಶ ಗಂಗೆಯ ಹೆಸರು ಪಡೆಯಿತು. ಹೆರಾ ಬೈಯುತ್ತಲೇ ಇದ್ದಳು. ಆದರೆ ಹೆರಾಕ್ಲಿಸ್ ಅವಳ ಹಾಲು ಕುಡಿದು ಅಮರತ್ವವನ್ನು ಪಡೆದನು. ಸ್ಯೂಸ್‍ನು ಹೆರಾಳನ್ನೇ ಅವನ ದಾದಿಯನ್ನಾಗಿ ಮಾಡಿದನು. ಎಥೆನಿಯು ಆ ಶಿಶುವನ್ನು ಎಲ್ಕಮೀನಿಗೆ ಒಪ್ಪಿಸಿ ಅವನಿಗೆ ಯೋಗ್ಯ ಶಿಕ್ಷಣ-ತರಬೇತಿ ನೀಡಲು ತಿಳಿಸಿದಳು. ಎಲ್ಕಮೀನಿ ತನ್ನ ಹೊಟ್ಟೆಯಲ್ಲಿಯೇ ಹುಟ್ಟಿದ ಮಗನನ್ನು ಪುನಃ ಪಡೆದು ಕೃತಾರ್ಥಳಾದಳು. ಅವನ ಪಾಲನೆ- ಪೋಷಣೆ ಮಾಡತೊಡಗಿದಳು. ಈ ಘಟನೆಯು ಘಟಿಸಿದ ಸ್ಥಳವನ್ನು ‘ಹೆರಾಕ್ಲಿಸ್‍ನ ಪ್ರದೇಶ’ (ದ ಪ್ಲೇಸ್ ಆಫ್ ಹೆರಾಕ್ಲಿಸ್) ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹೆರಾಕ್ಲಿಸ್‍ನ ಶೈಶವಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಅನೇಕ ಮೂಲಗಳು ಉಲ್ಲೇಖಿಸುತ್ತವೆ. ಆಗ ಹೆರಾಕ್ಲಿಸ್ 8-9 ತಿಂಗಳು ಅಥವಾ ಒಂದು ಗ್ರೀಸ್ (ಯೂನಾನ್) 231 ವರ್ಷದವನಾಗಿದ್ದ. ಒಂದು ಸಂಜೆ ಎಲ್ಕಮೀನಿಯು ಹೆರಾಕ್ಲಿಸ್ ಮತ್ತು ಇಫಿಕ್ಲಿಸ್ ಇಬ್ಬರಿಗೂ ಸ್ನಾನ ಮಾಡಿಸಿ. ಹಾಲು ಕುಡಿಸಿ ಟಗರಿನ ಚರ್ಮದಿಂದ ಹೊದೆಸಿ ಜೋಗುಳ ಹಾಡಿ ಮಲಗಿಸಿದಳು. ತನ್ನ ಮಲಗುವ ಕೋಣೆಗೆ ಹೋದಳು. ಮಧ್ಯರಾತ್ರಿಯ ಹೊತ್ತಿಗೆ ಹೆರಾ ಹೆರಾಕ್ಲಿಸ್‍ನನ್ನು ಕೊಲ್ಲಲು ವಿಷಕಾರಿಯಾದ ಸರ್ಪವನ್ನು ಎಂಫ್ರಿಟ್ರಯೋನ ಮನೆಗೆ ಕಳಿಸಿದಳು. ತನ್ನ ವಿಷಾಕ್ತವಾದ ನಾಲಿಗೆಯನ್ನು ಹೊರಸೂಸುತ್ತ ಸಂಗಮವರಿಯ ನೆಲದ ಮೇಲೆ ಸದ್ದಿಲ್ಲದೆ ಜಾರುತ್ತ ಹಾವು ಶಿಶುಮಂದಿರಕ್ಕೆ ಹೋಯಿತು. ಮತ್ತು ಮಕ್ಕಳ ಶರೀರದ ಮೇಲೆ ಚಲಿಸತೊಡಗಿತು. ಇಬ್ಬರೂ ಮಕ್ಕಳು ಎದ್ದು ಕುಳಿತರು. ಇಫಿಕ್ಲಿಸ್ ಭಯದಿಂದ ಗಾಬರಿಯಾಗಿ ಜೋರಾಗಿ ಅಳತೊಡಗಿದ. ತನ್ನ ಹೊದಿಕೆಯನ್ನು ತಳ್ಳುವ ಪ್ರಯತ್ನದಲ್ಲಿ ಕೆಳಕ್ಕೆ ಬಿದ್ದ. ಅವನ ಚೀರುವಿಕೆಯನ್ನು ಕೇಳಿ, ಮತ್ತು ಆ ಕೊಠಡಿಯಿಂದ ಬರುತ್ತಿರುವ ದಿವ್ಯಪ್ರಕಾಶವನ್ನು ನೋಡಿ ಎಲ್ಕಮೀನಿ ಭಯಭೀತಳಾದಳು. “ಎಂಫ್ರಿಟ್ರಯೋ . . . ಏಳು. . . . ಏಳು. . . ತ್ವರೆಮಾಡು. . .” ಎನ್ನುತ್ತ ಅವಳು ಬರಿಗಾಲಿನಲ್ಲಿಯೇ ಆ ಕೊಠಡಿಯತ್ತ ಹೋದಳು. ಎಂಫ್ರಿಟ್ರಯೋ ಜಿಗಿದೆದ್ದು ಒರೆಯಿಂದ ಖಡ್ಗವನ್ನು ಹೊರತೆಗೆದ. ಇಡೀ ಮನೆಯ ದಾಸ-ದಾಸಿಯರು ಗಡಬಡಿಸಿ ಎದ್ದು ಕೈಯಲ್ಲಿ ದೀಪ ಹಿಡಿದು ಮಕ್ಕಳ ಕೊಠಡಿಯತ್ತ ಓಡಿದರು. ಆಗಲೇ ಕೋಣೆಯ ಸಂದಿನಿಂದ ಬರುತ್ತಿದ್ದ ದಿವ್ಯ ಪ್ರಕಾಶವು ನಿಂತುಹೋಯಿತು. ಎಂಫ್ರಿಟ್ರಿಯೋ ಬಾಗಿಲು ತೆರೆದವನು ಸ್ತಬ್ಧನಾಗಿಬಿಟ್ಟ, ಹೆರಾಕ್ಲಿಸ್‍ನ ಎರಡೂ ಕೈಗಳಲ್ಲಿ ಎರಡು ಉದ್ದನೆಯ ಕಪ್ಪುಬಣ್ಣದ ವಿಷಕಾರಿ ಸರ್ಪಗಳಿದ್ದವು. ಅವನು ಅವುಗಳ ಕುತ್ತಿಗೆಯನ್ನು ಹಿಡಿದುಕೊಂಡಿದ್ದ. ಹೆರಾಕ್ಲಿಸ್‍ನ ಬಲಿಷ್ಠವಾದ ಹಿಡಿತದಿಂದ ಅವುಗಳ ಕಣ್ಣುಗಳು ಹೊರಬಂದಿದ್ದವು. ಶಿಶು ಹೆರಾಕ್ಲಿಸ್ ಆ ಭಯಾನಕ ಆಟಿಗೆಗಳ ಜೊತೆ ಕಿಲಕಿಲ ನಗುತ್ತ ಆಡುತ್ತಿದ್ದ. ಎಂಫ್ರಿಟ್ರಿಯೋನನ್ನು ನೋಡಿದ ಅವನು ಗರ್ವದಿಂದ ಆ ಸತ್ತ ಎರಡೂ ಸರ್ಪಗಳನ್ನು ಅವನ ಪಾದಗಳ ಬಳಿ ಎಸೆದುಬಿಟ್ಟ. ಇಫಿಕ್ಲಿಸ್ ಈಗಲೂ ಚೀರುತ್ತಲೇ ಇದ್ದ. ಅವನನ್ನು ಶಾಂತಗೊಳಿಸಿ ಮಲಗಿಸಿದ ಅನಂತರ ಎಂಫ್ರಿಟ್ರಿಯೋ ಮತ್ತು ಎಲ್ಕಮೀನಿ ತಮ್ಮ ಶಯ್ಯಾಗಾರಕ್ಕೆ ಬಂದರು. ಮುಂಜಾನೆ ಎಲ್ಕಮೀನಿ ಭವಿಷ್ಯ ನುಡಿಯುವ ಟೈರಿಸಿಯಸ್‍ನಿಗೆ ಕರೆಕಳುಹಿದಳು. ಅವನಿಗೆ ಈ ಅದ್ಭುತ ಘಟನೆಯ ವಿವರ ನೀಡಿದಳು. ಟೈರಿಸಿಯಸ್ ತನ್ನ ದೃಷ್ಟಿ ವಿಹೀನ ಆದರೆ ದಿವ್ಯದೃಷ್ಟಿಯಿಂದ ಹೆರಾಕ್ಲಿಸ್‍ನ ಉಜ್ವಲ ಭವಿಷ್ಯವನ್ನು ನೋಡಿ ಹೇಳಿದ. - “ಹೇ ಎಲ್ಕಮೀನಿ ಮುಂಬರುವ ದಿನಗಳಲ್ಲಿ ಸಂಜೆಯ ಹೊತ್ತಿನಲ್ಲಿ ಉಣ್ಣೆಯನ್ನು ನೇಯುತ್ತಿರುವ ಸ್ತ್ರೀಯರು ನಿನ್ನ ಹಾಗೂ ನಿನ್ನ ಮಗನ ಹಾಡು ಹಾಡುವರು. ಹೆರಾಕ್ಲಿಸ್ ಭೂಮಂಡಲದ ಅತ್ಯಂತ ಶ್ರೇಷ್ಠ ವೀರನಾಗುತ್ತಾನೆ.” ಅವನು ಒಣಕಟ್ಟಿಗೆ, ಎಲೆ ಮತ್ತು ಬಿದಿರಿನ ತುಣುಕುಗಳಿಂದ ಒಂದು ಚಿತೆಯನ್ನು ತಯಾರಿಸಿ ಎರಡೂ ನಾಗಗಳನ್ನು ಅರ್ಧರಾತ್ರಿಯಲ್ಲಿ ಸುಟ್ಟು 232 ಕಥಾ ಸಂಸ್ಕೃತಿ ಹಾಕುವಂತೆ ಎಲ್ಕಮೀನಿಗೆ ಸೂಚಿಸಿದನು. ಅಲ್ಲದೆ ಮರುದಿನ ಬೆಳಿಗ್ಗೆ ಯಾವುದಾದರೂ ದಾಸಿಯು ಅದರ ಬೂದಿಯನ್ನು ಬೆಟ್ಟದ ಮೇಲಿನ ಸ್ಫಿಂಕ್ಸ್ ಬಳಿ ಗಾಳಿಯಲ್ಲಿ ತೂರಿ ಹಿಂದೆ ನೋಡದೆ ಬರುವಂತೆ, ಇಡೀ ಮಹಲನ್ನು ತೊರೆಯ ಸ್ವಚ್ಛ ನೀರಿನಿಂದ ಗಂಧಕದಿಂದ ಶುದ್ಧಗೊಳಿಸಿ ಈ ಘಟನೆಯ ಯಾವುದೇ ದುಷ್ಪ್ರಭಾವ ಉಳಿಯದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದನು. ಅಲ್ಲದೆ ಮಹಲಿನ ಮೇಲ್ಛಾವಣಿಯ ಮೇಲೆ ಜೈತೂನ್ ಎಣ್ಣೆ ಹಾಕಬೇಕು ಮತ್ತು ಸ್ಯೂಸ್‍ನ ವೇದಿಕೆಯ ಮೇಲೆ ಒಂದು ಕರಡಿಯನ್ನು ಬಲಿ ಕೊಡಬೇಕು ಎಂದನು. ಈ ಸಂದರ್ಭದಲ್ಲಿ ಸರ್ಪಗಳನ್ನು ಹೇರಾ ಕಳಿಸಿರಲಿಲ್ಲ, ಎಂಫ್ರಿಟ್ರಿಯೋ ಕಳಿಸಿದ್ದ ಎಂಬೊಂದು ಅಭಿಪ್ರಾಯವೂ ಇದೆ. ಆ ಇಬ್ಬರು ಮಕ್ಕಳಲ್ಲಿ ಅವನ ಮಗ ಯಾರು ಎಂಬುದನ್ನು ಅವನು ತಿಳಿಯಲು ಬಯಸಿದ್ದ. ಎಂಫಿಕ್ಲಿಸ್‍ನು ಅಳುವುದು - ಚೀರುವುದು ಅವನ ನರಗಳಲ್ಲಿ ಹರಿಯುವುದು ಮನುಷ್ಯನ ರಕ್ತವೆಂಬುದನ್ನು ಸಾಬೀತು ಪಡಿಸಿತು. ಹೆರಾಕ್ಲಿಸ್ ದೊಡ್ಡವನಾದ ಮೇಲೆ ಅವನ ಶಿಕ್ಷಣದ ಭಾರವನ್ನು ಬೇರೆ ಬೇರೆ ವಿದ್ಯಾ ವಿಶಾರದರಿಗೆ ಒಪ್ಪಿಸಲಾಯಿತು. ಎಂಫ್ರಿüಟ್ರಿಯೋ ಅವನಿಗೆ ರಥ ಚಾಲನೆ ವಿದ್ಯೆಯನ್ನು ಕಲಿಸಿದನು. ಕೆಸ್ಟರ್ ಅವನಿಗೆ ಕತ್ತಿವರಸೆ, ಹೊಡೆತದಿಂದ ತಪ್ಪಿಸಿಕೊಳ್ಳುವುದು, ಕಾಲಾಳು ಮತ್ತು ಕುದುರೆ ಸೈನ್ಯದ ನೇತೃತ್ವ ವಹಿಸುವುದು, ಚಕ್ರವ್ಯೂಹ ರಚಿಸುವುದು, ಮುಂತಾದ ಕಲೆಗಳನ್ನು ಕಲಿಸಿದ. ದೇವದೂತ ಹೆಮಿಜ್‍ನ ಮಗ ಆಟೊಲಿಕಸ್ ಅವನಿಗೆ ಕುಸ್ತಿಯ ನಿಯಮಗಳನ್ನು ಕಲಿಸಿದ. ಆಟೊಲಿಕಸ್ ತನ್ನ ಸಮಯದ ದಕ್ಷ ಬಾಕ್ಸರ್ ಆಗಿದ್ದ. ಕುಸ್ತಿಯಾಡುವಾಗ, ಸಾಧಾರಣ ವ್ಯಕ್ತಿಯು ಅವನತ್ತ ನೋಡುವುದೂ ಸಾಧ್ಯವಾಗದಷ್ಟು ಅವನ ಮುಖ ವಿಕೃತವಾಗುತ್ತಿತ್ತು. ಯೂರಿಟಸ್ ಅವನಿಗೆ ಬಿಲ್ಲು ವಿದ್ಯೆಯನ್ನು ಕಲಿಸಿದ. ಬಿಲ್ಲುವಿದ್ಯೆಯಲ್ಲಿ ತನ್ನ ಸಂಗಡಿಗರನ್ನೆಲ್ಲ ಹಿಂದೆ ಹಾಕುವಷ್ಟು ಹೆರಾಕ್ಲಿಸ್ ಪ್ರವೀಣನಾದ. ಶಸ್ತ್ರವಿದ್ಯೆಗಳ ಹೊರತಾಗಿ, ಶಿಕ್ಷಣದಲ್ಲಿ ಲಲಿತಕಲೆಗಳ ಜ್ಞಾನವೂ ಅವಶ್ಯಕ ಅಂಗವೆಂದು ಗ್ರೀಸ್‍ನಲ್ಲಿ ಭಾವಿಸಲಾಗುತ್ತಿತ್ತು. ಯೂಮೊಲಪಸ್‍ನಿಂದ ಅವನು ವೀಣಾವಾದನ ಹಾಗೂ ಗಾಯನ ಕಲಿತ. ಅವನಿಗೆ ದರ್ಶನಶಾಸ್ತ್ರ ಹಾಗೂ ನಕ್ಷತ್ರ ವಿಜ್ಞಾನವೂ ಚನ್ನಾಗಿ ತಿಳಿದಿತ್ತು. ನದಿಯದೇವತೆ ಇಸ್‍ಮೋನಿಯಸ್‍ನ ಮಗ ಲಾಯನಸ್ ಹೆರಾಕ್ಲಿಸ್‍ನಿಗೆ ಸಾಹಿತ್ಯದ ಆಸಕ್ತಿ ಮೂಡಿಸಿದ. ಒಂದು ಬಾರಿ ಯೂಮೊಲಪಸ್‍ನ ಅನುಪಸ್ಥಿತಿಯಲ್ಲಿ ಲಾಯನಸ್ ಹೆರಾಕ್ಲಿಸ್‍ನಿಗೆ ಗಾಯನ ವಾದನದ ಶಿಕ್ಷಣ ನೀಡಲು ಬಯಸಿದ. ಹೆರಾಕ್ಲಿಸ್ ಅದನ್ನು ಒಪ್ಪಲಿಲ್ಲ. ಬಹಳ ಹಟ ಮಾಡಿದ್ದಲ್ಲದೆ ಶಿಕ್ಷಕನು ಅವನನ್ನು ಹೊಡೆದದ್ದರಿಂದ ಹೆರಾಕ್ಲಿಸ್ ಸಿಟ್ಟಾಗಿ ವೀಣೆಯಿಂದ ಲಾಯನಸ್‍ನ ತಲೆಯ ಮೇಲೆ ಹೊಡೆದ. ಆಗ ಅವನು ತಕ್ಷಣ ಗ್ರೀಸ್ (ಯೂನಾನ್) 233 ಮರಣ ಹೊಂದಿದ. ಹೆರಾಕ್ಲಿಸ್ ಮೇಲೆ ಕೊಲೆಯ ಆರೋಪ ಹೊರಿಸಲಾಯಿತು. ಅವನು ತನ್ನ ಪಕ್ಷವನ್ನು ತಾನೇ ಸಮರ್ಥಿಸಿಕೊಂಡ. ರೆಡಮೆಂಥಸ್‍ನ ನಿಯಮವನ್ನು ಉಲ್ಲೇಖಿಸಿ, ಆಕ್ರಮಣಕಾರನ ವಿರುದ್ಧ ಶಕ್ತಿ ಪ್ರಯೋಗ ನ್ಯಾಯ ಸಮ್ಮತವಾದದ್ದು ಎಂದು ವಾದಿಸಿದ. ಹೆರಾಕ್ಲಿಸ್‍ನನ್ನು ಈ ಆಧಾರದ ಮೇಲೆ ದೋಷ ಮುಕ್ತಗೊಳಿಸಲಾಯಿತು. ಹೆರಾಕ್ಲಿಸ್‍ನಿಗೆ ಬಿಡುಗಡೆಯಾದರೂ ಎಂಫ್ರಿಟ್ರಿಯೋ ಅವನನ್ನು ಉದ್ಧಟ ಸ್ವಭಾವದವನೆಂದು ಶಂಕಿಸಿ ನಗರದಿಂದ ದೂರವಿರುವ ಒಂದು ಪಶುಪಾಲನ ಕೇಂದ್ರಕ್ಕೆ ಕಳಿಸಿದ. ಹೆರಾಕ್ಲಿಸ್ 18ನೇ ವರ್ಷದವರೆಗೆ ಅಲ್ಲಿದ್ದು ಎಲ್ಲ ವಿಚಾರಗಳಲ್ಲಿ ದಕ್ಷತೆಯನ್ನು ಪಡೆದ. ಇಲ್ಲಿ ಅವನನ್ನು ಅಪೋಲೋವಿನ ಜಯಪತ್ರವಾಹಕನೆಂದು ಆರಿಸಲಾಯಿತು. ಹೆರಾಕ್ಲಿಸ್‍ನ ಎತ್ತರದ ವಿಷಯವಾಗಿ ಭಿನ್ನ ಮತಗಳಿವೆ. ಅಪೊಲೋಡಾಕಸ್‍ನ ಪ್ರಕಾರ ಅವನು ಆರುಫೂಟು ಎತ್ತರದವನಾಗಿದ್ದ. ಆದರೆ ವೆಂಡಾರನ ವಿಚಾರದಂತೆ ಅವನು ಚಿಕ್ಕ ಆಳ್ತನದ ಗಟ್ಟಿಮುಟ್ಟಾದ ವ್ಯಕ್ತಿಯಾಗಿದ್ದ. ಹೆರಾಕ್ಲಿಸ್‍ನ ಕಣ್ಣುಗಳು ತೀಕ್ಷ್ಣವಾಗಿದ್ದವು. ಅವನ ಬಾಣ ಹಾಗೂ ಭಲ್ಲೆಯ ಗುರಿ ಎಂದೂ ತಪ್ಪುತ್ತಿರಲಿಲ್ಲ. ಹಗಲು ಅವನು ಕಡಿಮೆ ಆಹಾರ ಸೇವಿಸುತ್ತಿದ್ದ. ಆದರೆ ರಾತ್ರಿಯಲ್ಲಿ ಅಡುಗೆ ಮಾಡುವವರೇ ಚಿಂತಿತರಾಗುವಷ್ಟು ಉಂಡುಬಿಡುತ್ತಿದ್ದ. ಹುರಿದ ಮಾಂಸ, ಗೋದಿಯ ಕೇಕ್ ಅವನಿಗೆ ಪ್ರಿಯವಾಗಿತ್ತು. ಅವನು ಒಂದು ಚಿಕ್ಕ ಸ್ವಚ್ಛ ವಸ್ತ್ರವನ್ನು ಕೆಳಭಾಗದಲ್ಲಿ ಉಡುತ್ತಿದ್ದ. ಐಶ್ವರ್ಯ-ವಿಲಾಸಗಳ ಬಗ್ಗೆ ಅವನಿಗೆ ಹೆಚ್ಚಿನ ಆಸಕ್ತಿಯಿರಲಿಲ್ಲ. ಮನೆಯ ಛಾವಣಿಯ ಅಡಿ ಮಲಗುವುದಕ್ಕಿಂತ ತೆರೆದ ಆಕಾಶದ ಅಡಿ ಮಲಗುವುದನ್ನು ಇಷ್ಟಪಡುತ್ತಿದ್ದ. ಗಿಡುಗ ಅತ್ಯಂತ ವಿಚಾರಶೀಲ ಹಾಗೂ ನ್ಯಾಯಪರ ಪಕ್ಷಿ, ಯಾಕೆಂದರೆ ಅದು ಎಂದೂ ಜೀವಂತ ಪ್ರಾಣಿಯ ಮೇಲೆ ಆಕ್ರಮಣ ಮಾಡುವುದಿಲ್ಲ ಎಂದು ಹೇಳುತ್ತಿದ್ದ. ಹೆರಾಕ್ಲಿಸ್ ಶತ್ರುಪಕ್ಷದ ಶವಗಳನ್ನು ಯಾವುದೇ ನೆವ-ತರ್ಕ ಮಾಡದೆ ಅಂತಿಮ ಸಂಸ್ಕಾರಕ್ಕಾಗಿ ಒಪ್ಪಿಸಿಬಿಡುತ್ತಿದ್ದ. ಹದಿನೆಂಟನೆಯ ವಯಸ್ಸಿನಲ್ಲಿ ಅವನ ವ್ಯವಹಾರಿಕ ಜೀವನ ಶುರುವಾಯಿತು. ಶಸ್ತ್ರಾಸ್ತ್ರಗಳ ಪ್ರಯೋಗದ ಸಮಯವೂ ಬಂದಿತು. ಆ ಸಮಯದಲ್ಲಿ ಸೀಥರೋ ಪರ್ವತದ ಮೇಲೆ ಭಯಾನಕವಾದ ಹುಲಿಯೊಂದು ತಿರುಗಾಡುತ್ತ ಎಂಫ್ರಿಟ್ರಯೋ ಹಾಗೂ ನೆರೆಯ ರಾಜ ಥೆಸ್ಪಿಯಸ್‍ನ ದನಕರುಗಳನ್ನು ಹೊತ್ತುಕೊಂಡು ಹೋಗಿಬಿಡುತ್ತಿತ್ತು. ದನಕರುಗಳ ಸಂಖ್ಯೆ ಕಡಿಮೆಯಾದದ್ದಲ್ಲದೆ, ದನಗಾಹಿಗಳು ದನಮೇಯಿಸಲು ಹೋಗಲು ಭಯಪಡುತ್ತಿದ್ದರು. ಹೆರಾಕ್ಲಿಸ್ ಏಕಾಕಿಯಾಗಿ ಈ ಹುಲಿಯನ್ನು ಕೊಲ್ಲುವ ಶಪಥ ಮಾಡಿದ. ಅದರ ಒಂದು ಗುಹೆ ಹೆಲಿಕಾನ ಪರ್ವತದ ಮೇಲಿತ್ತು. ಥೆಸ್ಪಿಯಾದ ರಾಜನು ಹೆರಾಕ್ಲಿಸ್‍ನನ್ನು ಸ್ವಾಗತಿಸಿದ. ಈ 234 ಕಥಾ ಸಂಸ್ಕೃತಿ ರಾಜನಿಗೆ ಐವತ್ತು ಪುತ್ರಿಯರು ಇದ್ದರು. ಸರಿಯಾದ ವರ ಸಿಗದೆ ಎಲ್ಲರೂ ಕನ್ಯೆಯರಾಗಿಯೇ ಉಳಿಯುವ ಭಯವಿತ್ತು. ಅದಕ್ಕಾಗಿ ರಾಜನು ಹೆರಾಕ್ಲಿಸ್‍ನಿಂದ ಅವರು ಮಕ್ಕಳನ್ನು ಪಡೆಯಲಿ ಎಂದು ಬಯಸಿದ. ಹೆರಾಕ್ಲಿಸ್‍ನಿಗೆ ಹುಲಿಯನ್ನು ಹುಡುಕಲು ಐವತ್ತು ದಿನಗಳು ಹಿಡಿದವೆಂದೂ, ಪ್ರತಿಯೊಂದು ರಾತ್ರಿಯೂ ಅವನು ಒಬ್ಬೊಬ್ಬ ರಾಜಕನ್ಯೆಯೊಂದಿಗೆ ಸಂಪರ್ಕ ಮಾಡಿದನೆಂದೂ ಹೇಳಲಾಗುತ್ತದೆ. ಒಂದು ಅಭಿಪ್ರಾಯದಂತೆ ಕೊನೆಯ ಹುಡುಗಿ ಹೆರಾಕ್ಲಿಸ್‍ನ ಸಂಬಂಧವನ್ನು ನಿರಾಕರಿಸಿ, ನಂತರ ಒಂದು ಮಂದಿರದ ಪೂಜಾರಿಣಿಯಾಗಿ ಪವಿತ್ರಳಾಗಿಯೇ ಉಳಿದಳು. ಉಳಿದ ನಲವತ್ತೊಂಬತ್ತು ರಾಜಪುತ್ರಿಯರಿಂದ ಹೆರಾಕ್ಲಿಸ್‍ನಿಗೆ ಐವತ್ತೊಂದು ಜನ ಗಂಡು ಮಕ್ಕಳಾದರು. ತುಂಬ ಶೋಧ ನಡೆಸಿದ ಅನಂತರ ಹೆರಾಕ್ಲಿಸ್ ಹುಲಿಯನ್ನು ಕಂಡುಹಿಡಿದನು. ಹೆಲಿಕಾನ ಪರ್ವತದ ಮೇಲೆ ತನ್ನ ಗದೆಯಿಂದ ಅದನ್ನು ಕೊಂದನು. ಹುಲಿಯನ್ನು ಕೊಂದ ಮೇಲೆ ಹೆರಾಕ್ಲಿಸ್ ಅದರ ಚರ್ಮವನ್ನು ತನ್ನ ಕೆಳ ಉಡುಗೆಯನ್ನಾಗಿ ಮಾಡಿಕೊಂಡನು. ಅದರ ತಲೆಯನ್ನು ಶಿರಸ್ತ್ರಾಣವಾಗಿ ಧರಿಸಿದನು. ಥೀಬ್ಸಗೆ ಹಿಂತಿರುಗುವಾಗ ಥೀಬ್ಸದಿಂದ ಕಪ್ಪವನ್ನು ವಸೂಲು ಮಾಡಲು ಬಂದಿದ್ದ ಮಿನಿಯಾಯಿಯ ಕೆಲವು ದೂತರನ್ನು ಅವನು ಭೇಟಿ ಮಾಡಿದ. ಕೆಲವೇ ವರ್ಷ ಮೊದಲು ಪೊಸಾಯ್ಡನ್ ಹುಟ್ಟಿದ ಹೊತ್ತಿಗೆ ಒಂದು ಸಾಧಾರಣ ವಾದ-ವಿವಾದದಲ್ಲಿ ಮಿನಿಯಾಯಿಯ ರಾಜ ಕ್ಲೈಮೆನಸ್ ಥೀಬ್ಸದ ಕ್ರೆಯೋನ ತಂದೆಯ ರಥಚಾಲಕನ ಮೂಲಕ ಸಾವಿಗೀಡಾಗಿದ್ದ. ಗಾಯಾಳುವಾದ ಕ್ಲೈಮೆನಸ್ ಸಾಯುವಾಗ, ಥೀಬ್ಸದ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ತನ್ನ ಮಕ್ಕಳಿಂದ ವಚನ ತೆಗೆದುಕೊಂಡಿದ್ದ. ಅವನ ಹಿರಿಯ ಮಗ ಎರ್ಗಿನಸ್ ಥೀಬ್ಸದ ಮೇಲೆ ಆಕ್ರಮಣ ಮಾಡಿ ಅದನ್ನು ಸೋಲಿಸಿ, ಥೀಬ್ಸದ ರಾಜನು ಪ್ರತಿವರ್ಷ ಒಂದುನೂರು ದನಕರುಗಳನ್ನು ಕಾಣಿಕೆಯಾಗಿ ಒಪ್ಪಿಸಬೇಕೆಂಬ ಶರ್ತದಮೇಲೆ ಸಂಧಿ ಮಾಡಿಕೊಂಡ. ಇದೇ ಶುಲ್ಕವನ್ನು ವಸೂಲು ಮಾಡಲು ಎರ್ಗಿನಸ್‍ನ ದೂತರು ಪ್ರತಿವರ್ಷ ಬರುತ್ತಿದ್ದರು. ಹೆರಾಕ್ಲಿಸ್‍ನು ಅವರು ಬರುತ್ತಿರುವ ಕಾರಣ ತಿಳಿಯಲು ಅಪೇಕ್ಷಿಸಿದಾಗ ಅವರು ಸೊಕ್ಕಿನಿಂದ ನಾವು ಪ್ರತಿವರ್ಷ ಥೀಬ್ಸದ ಜನತೆಗೆ ಎರ್ಗಿನಸ್‍ನ ಕೃಪೆಯನ್ನು ನೆನಪು ಮಾಡಲು ಬರುತ್ತೇವೆ. ಥೀಬ್ಸನ್ನು ಗೆದ್ದರೂ ಅವನು ಥೀಬ್ಸನ ನಾಗರಿಕರ ಕಿವಿ-ಮೂಗು ಕತ್ತರಿಸದೆ ಕೇವಲ ನೂರು ದನಕರುಗಳ ಶುಲ್ಕದ ಮೇಲೆ ಅವರನ್ನು ಕ್ಷಮಿಸಿದ ಎಂದರು. ಹೆರಾಕ್ಲಿಸ್‍ನಿಗೆ ಈ ಅಪಮಾನ ಸಹಿಸದಾಯಿತು. ಅವನು ಎರ್ಗಿನಸ್‍ನ ಎಲ್ಲ ದೂತರ ಕಿವಿ-ಮೂಗು ಕತ್ತರಿಸಿ ಅವನ್ನು ಕೊರಳಿಗೆ ತೂಗು ಹಾಕಿ ಹಿಂದಕ್ಕೆ ಗ್ರೀಸ್ (ಯೂನಾನ್) 235 ಮಿನೆಯಾಯಿಗೆ ಕಳಿಸಿದ. ಎರ್ಗಿನಸ್ ಥೀಬ್ಸದ ಈ ದುಸ್ಸಾಹಸ ಕಂಡು ಕುಪಿತನಾದ. ಅವನು ‘ಆ ಸೊಕ್ಕಿನ ಯುವಕನನ್ನು ಮಿನಿಯಾಯಿಗೆ ಒಪ್ಪಿಸಿ ಕೊಡದಿದ್ದರೆ ಪರಿಣಾಮ ಭಯಂಕರವಾಗುವುದು’ ಎಂಬ ಸಂದೇಶವನ್ನು ಕ್ರೆಯೊ ಬಳಿ ಕಳಿಸಿದ. ಕ್ರೆಯೋ ಭಯಭೀತನಾದ. ಪಕ್ಕದ ದೇಶದಿಂದ ಅವನಿಗೆ ಸಹಾಯವಿರಲಿ, ಸಹಾನಭೂತಿಯೂ ದೊರೆಯುವುದಿಲ್ಲವೆಂಬುದು ಅವನಿಗೆ ಗೊತ್ತಿತ್ತು. ಆದರೆ ಹೆರಾಕ್ಲಿಸ್‍ನಿಗೆ ಅದು ಸ್ವಾತಂತ್ರ್ಯ ಯುದ್ಧವಾಗಿತ್ತು. ಪಾರತಂತ್ರದ ಈ ತಿರಸ್ಕಾರದ ಬಂಧನವನ್ನು ಹರಿದೊಗೆಯಲು ತನಗೆ ಸಹಾಯ ಮಾಡಬೇಕೆಂದು ಹೆರಾಕ್ಲಿಸ್ ತನ್ನೆಲ್ಲ ಯುವ ಸಂಗಡಿಗರಿಗೆ ಆಹ್ವಾನವಿತ್ತ. ಅವನು ಥೀಬ್ಸದ ಎಲ್ಲ ಮಂದಿರಗಳಿಗೆ ಹೋಗಿ, ಯುದ್ಧದಲ್ಲಿ ಗೆದ್ದಾಗ ಶತ್ರುಗಳಿಂದ ಅಪಹರಿಸಿ ದೇವರಿಗೆ ಕಾಣಿಕೆಯಾಗಿ ಅರ್ಪಿಸಿದ ಖಡ್ಗ, ಭಲ್ಲೆ, ಢಾಲು, ಬಿಲ್ಲು, ಬಾಣ, ಕವಚ-ಶಿರಸ್ತ್ರಾಣಗಳನ್ನು ತೆಗೆದೆಸೆದ. ಅವನ ಕೂಗಿಗೆ ಥೀಬ್ಸದ ಎಲ್ಲ ಯುವಕರು ಒಂದುಗೂಡಿದರು. ಹೆರಾಕ್ಲಿಸ್ ಅವರಿಗೆ ಶಸ್ತ್ರ ವಿದ್ಯೆಯಲ್ಲಿ ತರಬೇತಿ ನೀಡಿದ. ದೇವಿ ಎಥನಿ ಅವನ ಉತ್ಸಾಹ - ದೃಢನಿಶ್ಚಯವನ್ನು ನೋಡಿ ಹೆರಾಕ್ಲಿಸ್‍ನಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಳು. ತನ್ನ ಸಂದೇಶಕ್ಕೆ ಯಾವ ಉತ್ತರವೂ ಬಾರದಿರಲು ಎರ್ಗಿನಸ್ ಥೀಬ್ಸದ ಮೇಲೆ ಆಕ್ರಮಣ ಮಾಡಲು ಹೊರಟ. ಹೆರಾಕ್ಲಿಸ್‍ನು ಅವನನ್ನು ದಾರಿಯಲ್ಲಿಯೇ ಇಕ್ಕಟ್ಟಾದ ಸ್ಥಳದಲ್ಲಿ ತಡೆದನು. ಯುದ್ಧದಲ್ಲಿ ಎರ್ಗಿನಸ್ ತನ್ನ ಸೇನಾನಾಯಕರೊಂದಿಗೆ ಸ್ವತಃ ತಾನೂ ಸತ್ತನು. ಥೀಬ್ಸಕ್ಕೆ ಯಾವ ಹಾನಿಯೂ ಆಗಲಿಲ್ಲ. ಹೆರಾಕ್ಲಿಸ್ ಒಬ್ಬನೇ ಶತ್ರುಗಳ ಭಾಗ್ಯವನ್ನು ನಿರ್ಣಯಿಸಿದ. ಎರ್ಗಿನಸ್‍ನನ್ನು ಕೊಂದ ಮೇಲೆ ಹೆರಾಕ್ಲಿಸ್ ಮಿನಿಯಾಯಿ ಮೇಲೆ ದಂಡೆತ್ತಿ ಹೋದ. ಆಕ್ರಮಣ ಮಾಡಿದ. ಸೆಫ್ರಿಸಸ್ ನದಿಯ ನೀರು ಸಮುದ್ರ ಸೇರುವಂತೆ ಮಾಡುವ ಎರಡು ಸುರಂಗ ಮಾರ್ಗಗಳನ್ನು ಅವನು ಮುಚ್ಚಿಸಿಬಿಟ್ಟ. ಸುರಂಗ ಮುಚ್ಚಿದ್ದರಿಂದ ಮಿನಿಯಾಯಿಯಲ್ಲಿ ನೆರೆಹಾವಳಿ ಉಂಟಾಗಿ ಅದರ ಫಲವತ್ತಾದ ಜಮೀನು ಹಾಗೂ ಬೆಳೆ ನೀರಿನಲ್ಲಿ ಮುಳುಗಿತು. ಹೆರಾಕ್ಲಿಸ್‍ನ ಅಭಿಪ್ರಾಯ ಬೆಳೆ ನಷ್ಟ ಮಾಡುವುದಾಗಿರಲಿಲ್ಲ. ಮಿನಿಯಾಯಿಯ ಜನರಿಗೆ ಅಲ್ಲಿನ ಕುದುರೆ ಸವಾರ ಸೈನಿಕರ ಬಗ್ಗೆ ಅಭಿಮಾನ - ವಿಶ್ವಾಸವಿದ್ದು, ಆ ಸೈನ್ಯವನ್ನು ಸೋಲಿಸಲು ಹೆರಾಕ್ಲಿಸ್ ಈ ಕ್ರಮ ತೆಗೆದುಕೊಂಡಿದ್ದ. ಆದರೆ ಜನಸಾಧಾರಣರಿಗೆ ಅಹಿತವಾಗುವುದನ್ನು ಮನಗಂಡು ಸುರಂಗದ ದ್ವಾರವನ್ನು ತೆರೆದ ಮಿನಿಯಾಯಿಯ ರಾಜನು ಪ್ರತಿವರ್ಷ ಥೀಬ್ಸಕ್ಕೆ ಎರಡುನೂರು ದನಗಳನ್ನು ಕಾಣಿಕೆಯಾಗಿ ಒಪ್ಪಿಸುವ ಶರ್ತದ ಮೇಲೆ ಒಪ್ಪಂದವಾಯಿತು. ಹೆರಾಕ್ಲಿಸ್ ಥೀಬ್ಸದ ಅಪಮಾನಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಂಡ. ವಿಜೇತನಾಗಿ ಥೀಬ್ಸಗೆ ಮರಳಿದ. ದುರ್ಬಾಗ್ಯವಶಾತ್ ಈ ಯುದ್ಧದಲ್ಲಿ ಅವನ ಪಾಲಕ ಎಂಫ್ರಿಟ್ರಿಯೋ ಮರಣ ಹೊಂದಿದ. 236 ಕಥಾ ಸಂಸ್ಕೃತಿ ಥೀಬ್ಸಗೆ ಹಿಂತಿರುಗಿದ ಹೆರಾಕ್ಲಿಸ್ ಈ ವಿಜಯದ ನೆನಪಿನಲ್ಲಿ ಒಂದು ದೇವಾಲಯವನ್ನು ದೇವ ಸಾಮ್ರಾಟ ಸ್ಯೂಸ್‍ನಿಗೆ ಅರ್ಪಿಸಿದ. ಅರ್ಟೆಮಿಸ್‍ನಿಗೆ ಹುಲಿಯ ಪ್ರತಿಮೆಯನ್ನು ಅರ್ಪಿಸಿದ. ಕಲ್ಲಿನ ಎರಡು ಪ್ರತಿಮೆಗಳನ್ನು ಎಥನಿಗೆ ಅರ್ಪಿಸಿದ. ಥೀಬ್ಸವಾಸಿಗಳು ಅವನನ್ನು ಸ್ವಾಗತಿಸಿ ಹೆರಾಕ್ಲಿಸ್‍ನ ಒಂದು ಪ್ರತಿಮೆ ಮಾಡಿ ಅದಕ್ಕೆ ‘ಮೂಗುಕತ್ತರಿಸುವ ಹೆರಾಕ್ಲಿಸ್’ ಎಂದು ಹೆಸರಿಟ್ಟರು. ಕ್ರೆಯೋ ಸಂತೋಷಗೊಂಡು ತನ್ನ ಮಗಳು ಮೆಗಾರಾಳನ್ನು ಅವನಿಗೆ ಮದುವೆ ಮಾಡಿಕೊಟ್ಟನು. ಅವನನ್ನು ನಗರ ರಕ್ಷಕನೆಂದು ನೇಮಿಸಿದ. ಮೆಗಾರಾಳ ತಂಗಿಯ ವಿವಾಹವು ಇಫಿಕ್ಲಿಸ್‍ನೊಂದಿಗೆ ಆಯಿತು. ಮದುವೆಯ ನಂತರ ಕೆಲವರ್ಷಗಳವರೆಗೆ ಹೆರಾಕ್ಲಿಸ್ ಸುಖವಾಗಿದ್ದ. ಅವನಿಗೆ ಮೂವರು ಪುತ್ರರಾದರು. ಸುಶೀಲೆಯಾದ ಪತ್ನಿ, ಸುಂದರ ಪುತ್ರರು, ಅನೇಕ ಸೌಕರ್ಯಗಳ ನಡುವೆ ಏರಿಳಿತವಿಲ್ಲದ ಜೀವನ ಅವನದಾಗಿತ್ತು. ಆದರೆ ವಿಧಿಗೆ ಈ ರೀತಿ ಸುಮ್ಮನಿರುವುದು ಹೇಗೆ ಸಹ್ಯವಾದೀತು? ಹೆರಾಕ್ಲಿಸ್‍ನ ಜನ್ಮವೇ ಮಹಾನ್ ಉದ್ದೇಶಕ್ಕಾಗಿಯಾಗಿತ್ತು. ಹೊಟ್ಟೆಕಿಚ್ಚಿನ ಹೆರಾ ಈ ಬಾರಿ ಹೆರಾಕ್ಲಿಸ್‍ನನ್ನು ದುಃಖಿತನನ್ನಾಗಿ ಮಾಡಲು ಮತ್ತೊಂದು ಉಪಾಯ ಯೋಚಿಸಿದಳು. ಹೆರಾಕ್ಲಿಸ್‍ನಿಗೆ ಮರುಳುತನದ ಚಕ್ರ ಶುರುವಾಯಿತು. ಒಳ್ಳೆಯದು - ಕೆಟ್ಟದ್ದರ ಜ್ಞಾನವೇ ಹೊರಟುಹೋಯಿತು. ಹುಚ್ಚನಾದ ವ್ಯಕ್ತಿಯ ಶಾರೀರಿಕ ಶಕ್ತಿ ಅಷ್ಟೇ ಅನಿಯಂತ್ರಿತವಾಗಿರುತ್ತಿತ್ತು. ಹೆರಾಕ್ಲಿಸ್ ಮೊದಲೇ ಅಸಾಧಾರಣ ವ್ಯಕ್ತಿ. ವಿಕ್ಷಿಪ್ತ ಅವಸ್ಥೆಯಲ್ಲಿ ಅವನು ತನ್ನ ಮಕ್ಕಳನ್ನು ಬೆಂಕಿಯಲ್ಲಿ ಜೀವಂತ ಎಸೆದುಬಿಟ್ಟ. ಎಫಿಕ್ಲಿಸ್‍ನ ಇಬ್ಬರು ಮಕ್ಕಳು ಅವರೊಂದಿಗೆ ಆಡುತ್ತಿದ್ದರು. ಅವರಿಗೂ ಇದೇ ಗತಿಯಾಯಿತು. ಮೆಗಾರಾ ಅವರನ್ನು ರಕ್ಷಿಸಲೆಂದು ಓಡಿಬಂದಳು. ಹೆರಾಕ್ಲಿಸ್ ಅವಳನ್ನು ಕೊಂದುಬಿಟ್ಟ. ಈ ದುರ್ಘಟನೆ ಹಾಗೂ ಅದರಲ್ಲಿ ಸತ್ತವ್ಯಕ್ತಿಗಳ ನೆನಪಿನಲ್ಲಿ ಥೀಬ್ಸ್‍ನಲ್ಲಿ ಸಾವಿರವರ್ಷದವರೆಗೆ ವಾರ್ಷಿಕ ತರ್ಪಣ ಕೊಡಲಾಗುತ್ತಿತ್ತು. ಹೆರಾಕ್ಲಿಸ್‍ನಿಗೆ ತನ್ನ ಮಕ್ಕಳ ಮೇಲೆ ಅಪಾರ ಪ್ರೀತಿಯಿತ್ತು. ಆದ್ದರಿಂದ ಮೈ ತಿಳಿದ ಮೇಲೆ ಈಗ ಅವನಿಗೆ ತನ್ನ ಕೈಯಾರೆ ಆದ ಈ ಅನರ್ಥದ ತಿಳಿವಳಿಕೆ ಬಂತು. ದುಃಖ, ನಿರಾಶೆ, ಅಪರಾಧಿಭಾವನೆ ಅವನನ್ನು ಮುತ್ತಿಕೊಂಡಿತು. ಅವನು ಅನೇಕ ದಿನಗಳವರೆಗೆ ಮುಚ್ಚಿದ ಕೋಣೆಯಲ್ಲಿ ಒಬ್ಬನೇ ಬಿದ್ದುಕೊಂಡಿದ್ದ. ಯಾರನ್ನು ಭೇಟಿಯಾಗುತ್ತಿರಲಿಲ್ಲ. ಅನ್ನ-ನೀರು ತೆಗೆದುಕೊಳ್ಳುತ್ತಿರಲಿಲ್ಲ. ಈ ಹತ್ಯೆಗಳನ್ನು ಅವನು ಹುಚ್ಚು ಆವರಿಸಿಕೊಂಡಿದ್ದಾಗ ಮಾಡಿದರೂ, ತನ್ನ ಪ್ರಿಯ ಪತ್ನಿ ನಿರಪರಾಧಿ ಮಕ್ಕಳ ಕೊಲೆಯ ಅಪರಾಧದ ಭಾರದಿಂದ ಜೀವನವೇ ಭಾರವೆನಿಸಿತು. ಅವನಿಗೆ ಬದುಕಿರುವ ಇಚ್ಛೆಯೇ ಉಳಿಯಲಿಲ್ಲ. ಥೀಬ್ಸನ ನಿವಾಸಿಗಳೂ ಅವನನ್ನು ಅಪರಾಧಿಯೆಂದೇ ಭಾವಿಸಿದ್ದರು. ಅವನ ನೆರಳನ್ನು ಕಂಡರೂ ಅವರಿಗೆ ತಿರಸ್ಕಾರ. ಗ್ರೀಸ್ (ಯೂನಾನ್) 237 ಯಾರೂ ಅವನಿಗೆ ಆಶ್ರಯ ಕೊಡಲು ಸಿದ್ಧರಿರಲಿಲ್ಲ. ಇಂಥ ಸಂದರ್ಭದಲ್ಲಿ ಅಥೆನ್ಸನ ರಾಜ ಥೀಸಿಯಸ್ ಅವನಿಗೆ ಸಹಕಾರ ನೀಡಿದ. ವಿಕ್ಷಿಪ್ತ ಅವಸ್ಥೆಯಲ್ಲಿ ಗೊತ್ತಿಲ್ಲದೆ ಮಾಡಿದ ಅಪರಾಧಕ್ಕಾಗಿ ಅವನು ಹೆರಾಕ್ಲಿಸ್‍ನನ್ನು ದೋಷಿಯೆಂದು ಭಾವಿಸಲಿಲ್ಲ. ಇದು ದೋಷವೇ ಆಗಿದ್ದರೂ, ಗುಣಗ್ರಾಹಿಯಾದ ಸ್ನೇಹಿತನಾಗಿ ಅದರ ಭಾಗವನ್ನು ಹಂಚಿಕೊಳ್ಳಲು ಅವನು ಸಿದ್ಧನಾಗಿದ್ದ. ಅವನು ಹೆರಾಕ್ಲಿಸ್‍ನನ್ನು ತನ್ನ ಜೊತೆ ಅಥೆನ್ಸ್‍ಗೆ ಕರೆದುಕೊಂಡೊಯ್ದ. ಥೀಸಿಯಸ್ ಪ್ರಜೆಗಳೂ ಹೆರಾಕ್ಲಿಸ್‍ನನ್ನು ಸ್ವಾಗತಿಸಿದರು. ಆದರೆ ಹೆರಾಕ್ಲಿಸ್ ತನಗೆ ತಾನು ಕ್ಷಮೆ ಕೊಟ್ಟುಕೊಳ್ಳಲು ತಯಾರಿರಲಿಲ್ಲ. ಪ್ರತಿಕ್ಷಣವೂ ಅವನ ಆತ್ಮವು ಅವನನ್ನು ಧಿಃಕ್ಕರಿಸುತ್ತಿತ್ತು. ಅವನ ಪವಿತ್ರತೆಗೆ ಪ್ರಾಯಶ್ಚಿತ್ತ ಅವಶ್ಯವಾಗಿತ್ತು. ನಿಯಂತ್ರಣ ದಂಡನೆಯಿಲ್ಲದೆ ಶುದ್ಧೀಕರಣ ಅಸಂಭವವಾಗಿತ್ತು. ಆದ್ದರಿಂದ ಅವನು ಡೆಲ್ಫಿಯಾದ ಪ್ರಶ್ನೆ ಸ್ಥಳಕ್ಕೆ ಹೋದ. ಅಲ್ಲಿ ದೋವೋಪಾಸಕಿಯು ಅವನನ್ನು ಹೆರಾಕ್ಲಿಸ್ ಎಂದು ಸಂಬೋಧಿಸಿ ಅವನಿಗೆ ದಂಡ ವಿಧಾನವನ್ನು ಘೋಷಿಸಿದಳು. ಅವನು ಹನ್ನೆರೆಡು ವರ್ಷ ಯುರಿಸ್ಥಿಯಸ್‍ನ ಸೇವೆ ಮಾಡಬೇಕು. ಅವನ ಪ್ರತಿಯೊಂದು ಆಜ್ಞೆಯನ್ನು ಪಾಲಿಸಿದ ಮೇಲೆ, ದುಸ್ಸಾಧ್ಯವಾದ ಶ್ರಮವನ್ನು ಪೂರ್ಣ ಮಾಡಿದ ಮೇಲೆ ಅವನಿಗೆ ದೇವತ್ವ ಪ್ರಾಪ್ತವಾಗುತ್ತದೆ ಎಂದು ಹೇಳಿದಳು. ಈ ದಂಡವಿಧಾನದಿಂದ ಹೆರಾಕ್ಲಿಸ್‍ನಿಗೆ ತುಂಬ ನಿರಾಶೆಯಾಯಿತು ಎಂದು ಹೇಳುತ್ತಾರೆ. ಅವನು ತನಗಿಂತ ತೀರ ಸಾಮಾನ್ಯವ್ಯಕ್ತಿಯ ಸೇವಕನಾಗಲು ಬಯಸುತ್ತಿದ್ದಿಲ್ಲ. ಆದರೆ ನಿರಾಕರಿಸಿ ದೇವತೆಗಳನ್ನು ಸಿಟ್ಟಿಗೆಬ್ಬಿಸುವುದೂ ಉಚಿತವಲ್ಲ. ಕೊನೆಯಲ್ಲಿ ಅವನು ಈ ವಿಧಾನವನ್ನು ಒಪ್ಪಿ ಯುರಿಸ್ಥಿಯಸ್‍ನ ಸೇವೆಯಲ್ಲಿ ಸೇರಿಕೊಂಡನು. ಅವನ ಆಜ್ಞಾನುಸಾರ ಮಾಡಿದ ಹನ್ನೆರಡು ದುಸ್ಸಾಧ್ಯ ಶ್ರಮದಿಂದ ಹೆರಾಕ್ಲಿಸ್‍ಗೆ ಅನಂತವಾದ ಕೀರ್ತಿ ದೊರಕಲಿತ್ತು. ಈ ಶ್ರಮ ಕಾರ್ಯ ಮಾಡುವಲ್ಲಿ ದೇವತೆಗಳ ಆಶೀರ್ವಾದ - ಶುಭಕಾಮನೆಗಳೂ ಅವನ ಜೊತೆಗಿದ್ದವು ಎಂಬ ಹೇಳಿಕೆಯಿದೆ. ಇದಲ್ಲದೆ ಹೆಮೀಜ್‍ನು ಅವನಿಗೆ ಒಂದು ಖಡ್ಗವನ್ನು, ಅಪೋಲೋ ಅವನಿಗೆ ಗರುಡನ ರೆಕ್ಕೆಯುಳ್ಳ ಬಾಣ ಮತ್ತು ಬಿಲ್ಲನ್ನು ಕೊಡುಗೆಯಾಗಿ ಕೊಟ್ಟರು. ಎಥಿನಿ ಹಾಗೂ ಹೆಫಾಸ್ಟಸ್‍ರಲ್ಲಿ ಒಬ್ಬನು ಇನ್ನೊಬ್ಬರನ್ನು ಮೀರಿಸುವಂತೆ ಹೆರಾಕ್ಲಿಸ್‍ಗೆ ಸಹಾಯ ಮಾಡುವ ಸ್ಪರ್ಧೆಯಿತ್ತು. ಪಾಸಾಯ್ಡನ್‍ನು ವೇಗವಾಗಿ ಓಡುವ ಕುದುರೆಯನ್ನು ಉಡುಗೊರೆಯಾಗಿ ಹೆರಾಕ್ಲಿಸ್‍ನಿಗೆ ಕೊಟ್ಟನು. ಸ್ಯೂಸ್‍ನು ಎಂದೂ ಭೇದಿಸಲಾಗದ ಒಂದು ಕವಚವನ್ನು ಕೊಟ್ಟನು. ಆದರೆ ಹೆರಾಕ್ಲಿಸ್‍ನು ಈ ದೈವೀ ಉಡುಗೊರೆಗಳನ್ನು ವಿಶೇಷವಾಗಿ ಬಳಸಲಿಲ್ಲ. ಅವನಿಗೆ ತನ್ನ ಬಾಹುಬಲದ ಮೇಲೆ ನಂಬಿಕೆಯಿತ್ತು. ಅವನು ಕೈಯಲ್ಲಿ ಜಯಪತ್ರದ ಕಟ್ಟಿಗೆಯಿಂದ ಮಾಡಿದ ಗದೆಯನ್ನು ಹಿಡಿದಿರುತ್ತಿದ್ದ. ಈ ಗದೆಯನ್ನು ಅವನು ಸ್ವಯಂ ಮಾಡಿಕೊಳ್ಳುತ್ತಿದ್ದ. 238 ಕಥಾ ಸಂಸ್ಕೃತಿ ಮೊದಲ ಗದೆಯನ್ನು ಅವನು ಹೆಲಿಕಾನ್ ಪರ್ವತದ ಮೇಲೆ ಒಂದು ಮರ ಕಡಿದು ತಯಾರಿಸಿಕೊಂಡಿದ್ದ. ಎರಡನೆಯದು ನೆಮಿಯಾದಲ್ಲಿ, ಮೂರನೆಯದು ಸೆರೊನಿಕ್ ಸಮುದ್ರದ ದಂಡೆಯಲ್ಲಿ. ಇಫಿಕ್ಲಿಸ್‍ನ ಮಗ ಇಓಲಸ್ ಅವನ ಈ ಶ್ರಮಕಾರ್ಯಗಳಲ್ಲಿ ರಥವಾಹಕನ ರೂಪದಲ್ಲಿ ಹೆರಾಕ್ಲಿಸ್‍ನ ಜೊತೆಗಿದ್ದ. ಮೊದಲನೆಯ ಶ್ರಮ : ನೆಮಿಯಾದ ಸಿಂಹ ಯೂರಿಸ್ಥಿಯಸ್ ಮೊದಲಿಗೆ ಹೆರಾಕ್ಲಿಸ್‍ನಿಗೆ ವಹಿಸಿದ ಕೆಲಸವೆಂದರೆ ನೆಮಿಯಾದ ಸಿಂಹವನ್ನು ಕೊಲ್ಲುವುದು. ಅದು ಸಾಧಾರಣ ಸಿಂಹಕ್ಕಿಂತ ಎಷ್ಟೊೀ ದೊಡ್ಡದು ಮತ್ತು ಕ್ರೂರವಾದದ್ದು ಆಗಿತ್ತು. ಆಗೋಸ್ ಹಾಗೂ ಹತ್ತಿರದ ಪ್ರದೇಶಗಳಲ್ಲಿಯಂತೂ ಈ ನರಭಕ್ಷಕವು ಪ್ರಳಯವನ್ನೇ ಉಂಟುಮಾಡಿತ್ತು. ಸಾಧಾರಣ ಮನುಷ್ಯರ ಮಾತೇನು, ದೊಡ್ಡ ದೊಡ್ಡ ಬೇಟೆಗಾರರು ವೀರರೂ ಕೂಡ ಅದನ್ನು ಎದುರಿಸುವುದನ್ನು ಯೋಚಿಸಲೂ ಸಿದ್ಧರಿರಲಿಲ್ಲ. ವಾಸ್ತವಿಕವಾಗಿ ಈ ಸಿಂಹವು ಟೈಫೂನ್‍ದ ಸಂತಾನವಾಗಿತ್ತು. ಟೈಫೂನನ್ನು ಅಪೋಲೋ ಕೊಂದು ಎಟಿನಾದಲ್ಲಿ ಮಣ್ಣು ಮಾಡಿದ್ದ. ಹಾಗೆ ನೋಡಿದರೆ ಇದನ್ನು ಕಿಮರೆ ಅಥವಾ ಅರ್ಥಸ್ ನಾಯಿಯ ವಂಶಜವೆಂದೂ ಹೇಳಲಾಗುತ್ತಿತ್ತು. ಸಿಮೆಲೆ ಇದನ್ನು ಹೆತ್ತಿದ್ದಳು ಮತ್ತು ನೆಮಿಯಾದ ಎರಡು ಮುಖದ ಗುಹೆಯಲ್ಲಿ ಬಿಟ್ಟಿದ್ದಳು ಎಂಬ ಅಭಿಪ್ರಾಯವೂ ಇದೆ. ನೆಮಿಯಾದ ಜನರಿಂದ ಸೂಕ್ತ ಬಲಿ ಕಾಣಿಕೆ ಸಿಗದಿದ್ದರಿಂದ ಸಿಮಿಲೆ ಅದಕ್ಕೆ ತನ್ನ ದೇಶವನ್ನೇ ನಾಶಗೊಳಿಸುವ ಆಜ್ಞೆಯಿತ್ತಿದ್ದಳು. ಅದನ್ನು ಈ ಭಯಾನಕ ಸಿಂಹವು ಪಾಲಿಸುತ್ತಿತ್ತು. ಹೆರಾಳ ಆದೇಶಕ್ಕೆ ಅನುಗುಣವಾಗಿ ನೆಮಿಯಾ ಇದನ್ನು ನಿರ್ಮಾಣ ಮಾಡಿದ್ದಳು ಎಂದೂ ಹೇಳಲಾಗುತ್ತದೆ. ಈ ಸಿಂಹದ ವಿಶೇಷತೆಯೆಂದರೆ, ಅದರ ಮೇಲೆ ಕಬ್ಬಿಣ, ಕಂಚು, ಕಲ್ಲು ಮುಂತಾದವುಗಳಿಂದ ಸಿದ್ಧಗೊಳಿಸಿದ ಯಾವುದೇ ಶಸ್ತ್ರದ ಪ್ರಭಾವ ಏನೂ ಆಗುತ್ತಿರಲಿಲ್ಲ. ಅದರ ಚರ್ಮ ಅಭೇದ್ಯವಾಗಿತ್ತು. ಹೆರಾಕ್ಲಿಸ್ ನೆಮಿಯಾದ ಈ ಸಿಂಹವನ್ನು ಕೊಲ್ಲಲು ಆಗೋಸ್ ತಲುಪಿದ. ಅಲ್ಲಿ ಅವನು ಒಬ್ಬ ಕೂಲಿಕಾರನ ಗುಡಿಸಲಿನಲ್ಲಿದ್ದ. ಅವನ ಮಗನನ್ನು ಅದೇ ಸಿಂಹವು ಕೊಂದಿತ್ತು. ಆದ್ದರಿಂದ ಹೆರಾಕ್ಲಿಸ್‍ನ ಉದ್ದೇಶ ತಿಳಿದು ಅವನು ಸಂತೋಷಗೊಂಡಿದ್ದ. ಅದರ ಸಫಲತೆಗಾಗಿ ದೇವತೆಗಳಿಗೆ ಬಲಿಕೊಡಲು ಉದ್ಯುಕ್ತನಾದ. ಹೆರಾಕ್ಲಿಸ್ ಅವನನ್ನು ತಡೆದು ಹೇಳಿದ - “ತಡೆ, ಮೂವತ್ತು ದಿನಗಳವರೆಗೆ ನಿರೀಕ್ಷೆ ಮಾಡು. ನಾನು ಈ ಸಿಂಹವನ್ನು ಕೊಂದು ಜೀವಿತನಾಗಿ ಬಂದರೆ, ದೇವ ಸಮ್ರಾಟ ಸ್ಯೂಸ್‍ನಿಗೆ ಬಲಿ ಕೊಡು. ನಾನು ಹಿಂತಿರುಗದೇ ಹೋದರೆ, ಮೂವತ್ತನೆಯ ದಿನ ನಾನು ಹುತಾತ್ಮನಾದೆನೆಂದು ಶ್ರದ್ಧಾಂಜಲಿ ಅರ್ಪಿಸು.” ಮಧ್ಯಾಹ್ನದ ಸಮಯಕ್ಕೆ ಹೆರಾಕ್ಲಿಸ್ ನೆಮಿಯಾ ಪರ್ವತದ ಮೇಲ್ಗಡೆ ಗ್ರೀಸ್ (ಯೂನಾನ್) 239 ಹೋದ. ಆ ಸಿಂಹದ ಕೃಪೆಯಿಂದ ಆ ಪ್ರದೇಶವು ನಿರ್ಜನವಾಗಿತ್ತು. ಅಲ್ಲಿ ಹೆರಾಕ್ಲಿಸ್‍ನಿಗೆ ಮಾರ್ಗದರ್ಶನ ಮಾಡಬಲ್ಲವರೂ ಯಾರೂ ಇರಲಿಲ್ಲ. ಅಲ್ಲಿ ಯಾವ ಕಾಲುದಾರಿಯೂ ಕಾಣಿಸುತ್ತಿರಲಿಲ್ಲ. ಅಲ್ಲಿ - ಇಲ್ಲಿ ತಿರುಗಾಡಿದ ನಂತರ ಒಂದು ದಿನ ಟ್ರೆಟಸ್ ಪರ್ವತದ ಎರಡು ಬಾಯಿಯ ಗುಹೆಯನ್ನು ತಲುಪಿದ. ಅದು ಈ ಸಿಂಹದ ಗುಹೆಯಾಗಿತ್ತು. ಆಗ ಸಿಂಹವು ಅಲ್ಲಿಗೆ ಬಂದಿತು. ಹೆÀರಾಕ್ಲಿಸ್ ಅಡಗಿ ಕುಳಿತಿದ್ದ. ಅವನು ತಕ್ಷಣ ಹೆದೆಯೇರಿಸಿ ಬಾಣಗಳ ಮೇಲೆ ಬಾಣವನ್ನು ಬಿಡಲು ಪ್ರಾರಂಭಿಸಿದ. ಆದರೆ ಎಲ್ಲವೂ ವ್ಯರ್ಥ. ಸಿಂಹದ ಕಬ್ಬಿಣದ ಶರೀರಕ್ಕೆ ತಾಗಿ ಬಾಣಗಳು ಅಲ್ಲೇ ಬೀಳುತ್ತಿದ್ದವು. ಅದಕ್ಕೆ ಒಂದು ಗೆರೆಯೂ ಬೀಳಲಿಲ್ಲ. ಈಗ ಹೆರಾಕ್ಲಿಸ್ ತನ್ನ ಖಡ್ಗದೊಡನೆ ಅದರ ಮೇಲೆ ಆಕ್ರಮಣ ಮಾಡಿದ. ಆದರೆ ಖಡ್ಗವು ಗಾಜಿನಿಂದ ಮಾಡಿದ್ದೇನೋ ಅನ್ನುವಂತೆ ಮುರಿದು ಬಿತ್ತು. ಈಗ ಹೆರಾಕ್ಲಿಸ್ ತನ್ನ ಗದೆಯನ್ನು ಎತ್ತಿದ. ಮತ್ತು ಪೂರ್ಣಶಕ್ತಿಯನ್ನು ಬಳಸಿ ಅದರ ಮುಖದ ಮೇಲೆ ಪ್ರಹಾರ ಮಾಡಿದ. ಸಿಂಹಕ್ಕೆ ಪೆಟ್ಟೇನೂ ಆಗಿರದಿದ್ದರೂ ಅದು ಗುಹೆಯೊಳಗೆ ನಡೆಯಿತು. ಗಾಯಾಳುವಾದ ಸಿಂಹದಂತಾಗಿದ್ದ ಹೆರಾಕ್ಲಿಸ್‍ನು ಬಲೆ ಹಾಕಿ ಆ ಗುಹೆಯ ಬಾಯಿಯನ್ನು ಕಟ್ಟಿದ. ಮತ್ತು ಇನ್ನೊಂದು ಕಡೆಯಿಂದ ಸಿಂಹದೊಡನೆ ಗುದ್ದಾಡಲು ಒಳಗೆ ಪ್ರವೇಶಿಸಿದ. ಲೋಹಗಳಿಂದ ಮಾಡಿದ ಶಸ್ತ್ರಗಳ ಪ್ರಭಾವವು ಏನೂ ಆಗದ ಆ ಸಿಂಹದ ಕುತ್ತಿಗೆಯನ್ನು ಹೆರಾಕ್ಲಿಸ್‍ನು ತನ್ನ ಬಲಿಷ್ಠವಾದ ಬಾಹುಗಳಿಂದ ಅದರ ಪ್ರಾಣ ಹೋಗುವವರೆಗೂ ಅಮುಕಿ ಹಿಡಿದ. ಸತ್ತ ಸಿಂಹದ ಶರೀರವನ್ನು ಹೊತ್ತು ಮೂವತ್ತನೆಯ ದಿನ ಆಗೋಸ್‍ಗೆ ಮರಳಿ ಬಂದ. ಅಲ್ಲಿ ಆ ಕೂಲಿಕಾರನ ಜೊತೆಗೂಡಿ ಸ್ಯೂಸ್‍ನಿಗೆ ಬಲಿ ಅರ್ಪಿಸಿದ. ಹೆರಾಕ್ಲಿಸ್ ತನಗಾಗಿ ಒಂದು ಹೊಸ ಗದೆಯನ್ನು ತಯಾರಿಸಿದ. ಯೂರಿಸ್ಥಿಯಸ್‍ನು ಹೆರಾಕ್ಲಿಸ್ ಸಿಂಹದ ಶವದೊಂದಿಗೆ ಮರಳಿ ಬರುತ್ತಿರುವುದನ್ನು ನೋಡಿ ಚಕಿತನೂ ಭಯಭೀತನೂ ಆಗಿ ಹೆರಾಕ್ಲಿಸ್‍ನಿಗೆ ನಗರ ಪ್ರವೇಶವನ್ನು ನಿಷೇಧಿಸಿದ. ಅವನು ತಾನು ಪಡೆದದ್ದರ ಪ್ರದರ್ಶನವನ್ನು ನಗರದ ದ್ವಾರದಲ್ಲಿಯೇ ಮಾಡಬೇಕು ಎಂದು ಆಜ್ಞೆಯಾಯಿತು. ಅಪೊಲೊ ಡಾಕಸ್‍ನ ಪ್ರಕಾರ, ಯುರಿಸ್ಥಿಯಸ್ ತನ್ನ ಈ ಭಯಾನಕ ಸೇವಕನಿಂದ ತುಂಬ ಹೆದರಿದ್ದ. ತನ್ನ ಶಿಲ್ಪಿಗಳಿಂದ ಒಂದು ದೊಡ್ಡ ಕಂಚಿನ ಪಾತ್ರೆಯನ್ನು ತಯಾರಿಸಿ ನೆಲದಲ್ಲಿ ಹುಗಿಸಿದ್ದ. ಹೆರಾಕ್ಲಿಸ್ ಬರುತ್ತಿರುವುದರ ಸೂಚನೆ ಸಿಗುತ್ತಲೇ ಓಡಿಹೋಗಿ ಆ ಪಾತ್ರೆಯಲ್ಲಿ ಅಡಗಿಕೊಳ್ಳುತ್ತಿದ್ದ. ಮತ್ತು ಅಲ್ಲಿಂದಲೇ ತನ್ನ ಆಜ್ಞೆಗಳನ್ನು ದೂತರ ಮೂಲಕ ಹೆರಾಕ್ಲಿಸ್‍ನಿಗೆ ತಲುಪಿಸುತ್ತಿದ್ದ. ಈ ಸಿಂಹದ ಚರ್ಮ ಸುಲಿಯುವುದು ತುಂಬ ಕಠಿಣವಾದ ಕೆಲಸವಾಗಿತ್ತು. ಯಾಕೆಂದರೆ ಯಾವ ಆಯುಧವೂ ಅದನ್ನು ಕತ್ತರಿಸುತ್ತಿರಲಿಲ್ಲ. ತುಂಬ ಆಲೋಚನೆ ಮಾಡಿದ ಅನಂತರ ಹೆರಾಕ್ಲಿಸ್ ಆ ಸಿಂಹದ ಪಂಜದಿಂದಲೇ ಅದನ್ನು ಕತ್ತರಿಸಿದ. 240 ಕಥಾ ಸಂಸ್ಕೃತಿ ಮತ್ತು ಈ ಚರ್ಮವನ್ನು ಹೊದೆಯಲು ಬಳಸಿಕೊಂಡ. ಇದಕ್ಕಿಂತ ಉತ್ತಮ ಕವಚ ಎಲ್ಲಿ ಸಿಗುವುದು ಸಾಧ್ಯ? ಸಿಂಹದ ಚರ್ಮ ಹಾಗೂ ಅದರ ತಲೆಯ ಶಿರಸ್ತ್ರಾಣ ಧರಿಸಿದ ಹೆರಾಕ್ಲಿಸ್‍ನ ಕೀರ್ತಿ ದೂರದೂರದವರೆಗೆ ಹರಡಿತು. ಅವನ ಅಸಾಧಾರಣ ಶೌರ್ಯ, ವೀರತನಕ್ಕೆ ಜನ ಮನಸೋತರು. ನೆಮಿಯಾದಲ್ಲಿ ಅವನಿಗೆ ತುಂಬ ಗೌರವ ಸಿಕ್ಕಿತು. ಎರಡನೆಯ ಕಷ್ಟಕಾರ್ಯ : ಲರನಾದ ಅನೇಕ ಹೆಡೆಗಳ ಸರ್ಪ ಈಗ ಯೂರಿಸ್ಥಿಯಸ್ ಹೆರಾಕ್ಲಿಸ್‍ನನ್ನು ಲರನಾದ ಬಹುಮುಖಿ ಸರ್ಪವನ್ನು ಕೊಲ್ಲಲು ಆಜ್ಞಾಪಿಸಿ ಕಳಿಸಿದ. ಈ ಸರ್ಪವು ಟಾಯಫ್ಯೂನ್ ಮತ್ತು ಎಕಿಡನಿಯರಿಂದ ಉತ್ಪನ್ನವಾಗಿತ್ತು. ಅದರ ಪಾಲನೆ ಪೋಷಣೆಯನ್ನು ಹೆರಾ ಮಾಡಿದ್ದಳು. ಹೆರಾಳ ಉದ್ದೇಶ ಹೆರಾಕ್ಲಿಸ್‍ನಿಗೆ ದುಃಖವನ್ನುಂಟು ಮಾಡುವುದಾಗಿತ್ತು. ಲರನಾ ಆಗೋಸ್‍ನಿಂದ ಐದು ಮೈಲು ದೂರದಲ್ಲಿದೆ. ಇದರ ಪಶ್ಚಿಮದಲ್ಲಿ ಪಾಂಟನಸ್ ಪರ್ವತವಿದೆ. ಈ ಪರ್ವತದ ದಟ್ಟಮರಗಳು ಕೆಳಗಿನ ಸಮುದ್ರದವರೆಗೆ ಚಾಚಿದ್ದವು. ಆ ಪ್ರದೇಶದಲ್ಲಿ ದೇವೀ ದೇವತೆಗಳ ಅನೇಕ ಮಂದಿರಗಳಿವೆ. ಇದೇ ಪರ್ವತದ ತಪ್ಪಲಿನಲ್ಲಿ ಎಮಿಮೊನಿ ನದಿಯ ಉಗಮದ ಸಮೀಪದಲ್ಲಿ ನೆಲೆಯಿಲ್ಲದಷ್ಟು ಕೆಸರಿನಲ್ಲಿ ಆ ಸರ್ಪದ ವಾಸವಿದೆ. ಈ ಸರ್ಪದ ಹೆಡೆಗಳ ಸಂಖ್ಯೆಯ ವಿಷಯದಲ್ಲಿ ಮತಭೇದವಿದೆ. ಹೆಚ್ಚಾಗಿ ಇದಕ್ಕೆ ಎಂಟು ಅಥವಾ ಒಂಬತ್ತು ಹೆಡೆಗಳನ್ನು ಹೇಳಲಾಗುತ್ತದೆ. ಅವುಗಳಲ್ಲಿ ಒಂದು ನಾಶವಾಗದ್ದು. ಮತ್ತೆ ಕೆಲವು ಮೂಲಗಳಲ್ಲಿ ಅದರ ಹೆಡೆ ಐವತ್ತು, ಇನ್ನೊಂದುಕಡೆ ನೂರು ಮತ್ತೊಂದುಕಡೆ ಹತ್ತು ಸಾವಿರದವರೆಗೂ ಹೇಳಲಾಗಿದೆ. ಅದರ ಶ್ವಾಸದ ಗಾಳಿ ತಾಗಿದರೇ ಮರಣ ಹೊಂದುವಷ್ಟು ಅದು ವಿಷಕಾರಿಯಾಗಿತ್ತು. ಹೆರಾಕ್ಲಿಸ್ ಲರನಾ ತಲುಪಿದಾಗ ದೇವಿ ಎಥನಿ ಅವನಿಗೆ ಮಾರ್ಗದರ್ಶನ ಮಾಡಿದಳು. ಆ ಸರ್ಪವನ್ನು ಕೊಲ್ಲುವ ರೀತಿಯನ್ನು ಹೇಳಿಕೊಟ್ಟಳು. ಹೆರಾಕ್ಲಿಸ್ ಮೊದಲು ಬೆಂಕಿಯುಗುಳುವ ಬಾಣಗಳನ್ನು ಬಿಟ್ಟು, ನಾಗವು ತನ್ನ ಬಿಲದಿಂದ ಹೊರ ಬರುವುದು ಅನಿವಾರ್ಯವಾಗುವಂತೆ ಮಾಡಿದ. ಮತ್ತು ತನ್ನ ಶ್ವಾಸ ಕಟ್ಟಿಕೊಂಡು ಅದರ ಕುತ್ತಿಗೆಯನ್ನು ಹಿಡಿದ. ಸರ್ಪವು ಅವನ ಶರೀರವನ್ನು ಸುತ್ತಿಕೊಂಡಿತು. ಹೆರಾಕ್ಲಿಸ್ ಈ ಬಗ್ಗೆ ಲಕ್ಷಿಸದೆ ಗದಾ ಪ್ರಹಾರದಿಂದ ಅದರ ತಲೆಯನ್ನು ಜಜ್ಜಿದ. ಆದರೆ ಯಾವ ತಲೆ ಕತ್ತರಿಸಿದರೂ ಅದರ ಬದಲು ಮತ್ತೆ ಎರಡೋ ನಾಲ್ಕೋ ತಲೆಗಳು ಚಿಗುರುತ್ತಿದ್ದವು. ಸ್ಥಿತಿ ತುಂಬ ಅಪಾಯಕಾರಿಯಾಯಿತು. ಹೆರಾಕ್ಲಿಸ ಅನಿವಾರ್ಯವಾಗಿ ತನ್ನ ರಥವಾಹಕವನ್ನು ಕೂಗಿ ಕರೆದು ಬೆಂಕಿ ಹೊತ್ತಿಸಲು ಹೇಳಿದ. ಇಓಲಸ್ ಕೂಡಲೇ ಪೊದೆಯ ಒಂದು ಭಾಗದಲ್ಲಿ ಬೆಂಕಿ ಹೊತ್ತಿಸಿದ. ಹೆರಾಕ್ಲಿಸ್ ಸರ್ಪದ ಹೆಡೆ ಕತ್ತರಿಸುತ್ತಿದ್ದಂತೆ ಗ್ರೀಸ್ (ಯೂನಾನ್) 241 ಇಓಲಸ್ ಅದರ ಸ್ಥಳವನ್ನು ಬೆಂಕಿಯಿಂದ ಸುಡುತ್ತಿದ್ದ. ಅದರಿಂದ ಮತ್ತೆ ಹೆಡೆಗಳು ಏಳುತ್ತಿರಲಿಲ್ಲ. ಕೊನೆಯಲ್ಲಿ ಒಂದು ಹೆಡೆ ಉಳಿಯಿತು. ಅದು ಅಮರ ತಲೆಯಾಗಿತ್ತು. ಹೆರಾಕ್ಲಿಸ್ ಅದರ ತಲೆಯನ್ನು ಕತ್ತರಿಸಿ ದೊಡ್ಡ ಬಂಡೆಯಡಿ ಹುಗಿದುಬಿಟ್ಟ. ಹೀಗೆ ಈ ಭಯಾನಕ ದೈತ್ಯದ ಅಂತ್ಯವಾಯಿತು. ಹೆರಾಕ್ಲಿಸ್ ತನ್ನ ಬಾಣಗಳನ್ನು ಅದರ ರಕ್ತದಲ್ಲಿ ಮುಳುಗಿಸಿದ. ಇದರಿಂದ ಬಾಣವು ವಿಷಯುಕ್ತವಾಯಿತು. ಬಾಣದ ಸಾಧಾರಣ ಸ್ಪರ್ಶವೂ ಮರಣಕಾರಿಯಾಗಬಲ್ಲಷ್ಟು ಘಾತಕವಾಯಿತು. ಹೆರಾಕ್ಲಿಸ್ ತನ್ನ ಎರಡನೆಯ ಗಳಿಕೆಯ ಅನಂತರ ಮೈಸೀನಿಗೆ ಹಿಂತಿರುಗಿ ಬಂದಾಗ ಯೂರಿಸ್ಥಿಯಸ್ ಅವನ ಈ ವಿಜಯವನ್ನು ಹನ್ನೆರಡು ಶ್ರಮಗಳಲ್ಲಿ ಸೇರಿಸಲು ನಿರಾಕರಿಸಿದ. ಹೆರಾಕ್ಲಿಸ್ ಒಬ್ಬನೇ ಈ ಕೆಲಸವನ್ನು ಮಾಡಿಲ್ಲ. ಇಓಲಸ್‍ನ ಸಹಾಯದಿಂದ ಈ ಕೆಲಸ ನೆರವೇರಿದೆ. ಆದ್ದರಿಂದ ಈ ಸಫಲತೆಯನ್ನು ಮನ್ನಿಸಲಾಗುವುದಿಲ್ಲವೆಂಬುದು ಅವನ ಹೇಳಿಕೆಯಾಗಿತ್ತು. ಮೂರನೆಯ ಕೆಲಸ : ಸಿರಿಯಾದ ಹರಿಣ ಈ ಬಾರಿ ಸಿರಿಯಾದ ಅತ್ಯಂತ ವೇಗವಾಗಿ ಓಡುವ ಹೆಣ್ಣು ಜಿಂಕೆಯನ್ನು ಜೀವಂತ ಹಿಡಿದು ತಂದೊಪ್ಪಿಸುವ ಕೆಲಸವನ್ನು ಹೆರಾಕ್ಲಿಸ್‍ನಿಗೆ ಯೂರಿಸ್ಥಿಯಸ್ ವಹಿಸಿದ. ವರ್ಜಿಲ್‍ನ ಪ್ರಕಾರ ಈ ಹರಿಣದ ಖುರ ಕಂಚಿನದೂ ಕೊಂಬುಗಳು ಬಂಗಾರದವೂ ಆಗಿದ್ದವು. ಅದರ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದ್ಭುತವಾದ ಕಾಂತಿ ಹೊಮ್ಮುತ್ತಿತ್ತು. ಇದು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಹರಿಣವಾಗಿತ್ತು. ದೇವಿ ಅರ್ಟೆಮಿಸ್‍ಳಿಗೆ ವಿಶೇಷವಾಗಿ ಪ್ರಿಯವಾದ ಹರಿಣವಾಗಿತ್ತು. ಅರ್ಟಿಮಿಸ್ ಚಿಕ್ಕವಳಿದ್ದಾಗ, ದೊಡ್ಡ ಆಕಾರದ ಐದು ಹರಿಣಗಳು ಥಿಸಲಿ ನದಿಯ ದಂಡೆಯ ಮೇಲೆ ಮೇಯುತ್ತಿರುವುದನ್ನು ನೋಡಿದಳು. ಅವುಗಳ ಆಕಾರ, ಸೌಂದರ್ಯ, ಬಂಗಾರದ ಕೊಂಬು, ಅದರ ಓಟದ ಸ್ಫೂರ್ತಿಯಿಂದ ಆಕರ್ಷಿತಳಾಗಿ ಅವುಗಳನ್ನು ಹಿಂಬಾಲಿಸಿ ಓಡಿ ನಾಲ್ಕು ಹರಿಣಗಳನ್ನು ಹಿಡಿಯುವಲ್ಲಿ ಸಫಲಳಾದಳು. ಈ ನಾಲ್ಕೂ ಹರಿಣಗಳನ್ನು ಅವಳು ತನ್ನ ರಥಕ್ಕೆ ಹೂಡಿದಳು. ಐದನೆಯದು ಸಿರಿಯಾ ಪರ್ವತಗಳಲ್ಲಿ ಓಡಿ ತಪ್ಪಿಸಿಕೊಂಡಿತು. ಯಾಕೆಂದರೆ ಅದು ಒಂದು ದೇವಿಗೆ ಪ್ರಿಯವಾಗಿತ್ತು. ಅದರಿಂದಾಗಿ ಅದನ್ನು ಕೊಲ್ಲುವುದು ಉಚಿತವಾಗಿರಲಿಲ್ಲ. ಆದ್ದರಿಂದ ಅದನ್ನು ಜೀವಂತವಾಗಿ ಹಿಡಿದು ತರಲು ಹೆರಾಕ್ಲಿಸ್‍ನಿಗೆ ಹೇಳಲಾಯಿತು. ಹೆರಾಕ್ಲಿಸ್ ಈ ಮೃಗಿಯನ್ನು ಒಂದು ವರ್ಷದವರೆಗೆ ಹಿಂಬಾಲಿಸಿದ. ಅದಕ್ಕೆ ಮಿಂಚಿನ ವೇಗವಿತ್ತು. ಕಣ್ಣುರೆಪ್ಪೆ ಬಡಿಯುವುದರೊಳಗೆ ಅದು ಎಲ್ಲಿಗೋ ಹೋಗಿಬಿಡುತ್ತಿತ್ತು. ಅದನ್ನು ಹಿಂಬಾಲಿಸಿ ಈ ಭೂಮಿಯ ಅಂಚಿನವರೆಗೂ ಹೆರಾಕ್ಲಿಸ್ ಹೋದನೆಂದು ಹೇಳುತ್ತಾರೆ. ಈಸ್ಟ್ರಿಯಾ ಮತ್ತು ಹೈಪರ್‍ಬೋರಿಯನ್ಸ 242 ಕಥಾ ಸಂಸ್ಕೃತಿ ದೇಶದವರೆಗೆ ಅವನು ಹೋಗಿದ್ದಕ್ಕೆ ಅನೇಕ ಸಂಕೇತಗಳು ಸಿಗುತ್ತವೆ. ಒಂದು ವರ್ಷದವರೆಗೆ ಓಡಿ ದಣಿದ ಈ ಹರಿಣವು ಕೊನೆಗೆ ಆರ್ಟೆಮಿಯಸ್ ಪರ್ವತದ ಮೇಲೆ ಹೋಯಿತು. ಅಲ್ಲಿ ಹೆರಾಕ್ಲಿಸ್ ಓಡುತ್ತಿರುವ ಮೃಗಿಯ ಮುಂದಿನ ಕಾಲುಗಳನ್ನು ತನ್ನ ಬಾಣಗಳ ನಡುವೆ ಸಿಕ್ಕಿಸಿ ನಿಲ್ಲಿಸಿಬಿಟ್ಟ. ಇದರಿಂದ ಹರಿಣದ ಕಾಲಿನ ಎಲುಬಿಗೆ ತುಸು ಪೆಟ್ಟಾದರೂ ರಕ್ತವೇನೂ ಬರಲಿಲ್ಲ. ಈಗ ಹೆರಾಕ್ಲಿಸ್ ಅದನ್ನು ಎತ್ತಿ ಹೊತ್ತುಕೊಂಡು ಮೈಸಿನಿಯ ಕಡೆಗೆ ಜೋರಾಗಿ ಹೊರಟ. ರಸ್ತೆಯಲ್ಲಿ ಅವನು ಆರ್ಟೆಮಿಸ್ ದೇವಿಯನ್ನು ಭೇಟಿಯಾದ. ಆರ್ಟೆಮಿಸ್ ಅವನ ಈ ಅವಿಧೇಯತೆಯಿಂದಾಗಿ ತುಂಬ ಸಿಟ್ಟಾಗಿದ್ದಳು. ಆದರೆ ಹೆರಾಕ್ಲಿಸ್ ಒಬ್ಬ ದಾಸನಾಗಿದ್ದರಿಂದ ತನ್ನ ಒಡೆಯನ ಆಜ್ಞೆಯನ್ನು ಪಾಲಿಸುವುದು ಅನಿವಾರ್ಯವಾಗಿತ್ತು. ಆದ್ದರಿಂದ ಅವನು ಎಲ್ಲ ದೋಷಗಳನ್ನು ಯೂರಿಸ್ಥಿಯಸನ ಮೇಲೆ ಹೊರಿಸಿ, ಮೆಲುವಾಗಿ ಸಮಜಾಯಿಷಿ ಹೇಳಿ ದೇವಿಯನ್ನು ಪ್ರಸನ್ನಗೊಳಿಸಿದ. ಅವನಿಗೆ ಆ ಹರಿಣವನ್ನು ಒಯ್ಯಲು ಅನುಮತಿಯೂ ದೊರಕಿತು. ಹೀಗೆ ಹೆರಾಕ್ಲಿಸ್‍ನ ಮೂರನೆಯ ಕಾರ್ಯವೂ ಸಂಪನ್ನವಾಯಿತು. ನಾಲ್ಕನೆಯ ಶ್ರಮ : ಎರಿಮೆಂಥಸ್‍ನ ಹಂದಿ ಈಗ ಹೆರಾಕ್ಲಿಸ್‍ನಿಗೆ ಎರಿಮೆಂಥಸ್‍ದ ಭಯಂಕರ ಕಾಡುಹಂದಿಯನ್ನು ಜೀವಂತವಾಗಿ ಹಿಡಿದು ತರುವ ಆಜ್ಞೆ ನೀಡಲಾಯಿತು. ಈ ಹಂದಿಯು ಎರಿಮೆಂಥಸ್ ಪರ್ವತ, ಆರ್ಕೆಡಿಯಾ ಕಾಡು, ಲ್ಯಾಂಪಿಯಾ ಪರ್ವತ, ಹಾಗೂ ಸಾಫಿಸ್‍ನ ಸುತ್ತಮುತ್ತ ಬಿರುಗಾಳಿಯನ್ನೆಬ್ಬಿಸಿಬಿಟ್ಟಿತ್ತು. ಹೆರಾಕ್ಲಿಸ್ ಈ ಹೊಸ ಸಾಹಸಯಾತ್ರೆಗೆ ಹೋಗುವ ದಾರಿಯಲ್ಲಿ ಅವನಿಗೆ ಇಷ್ಟವಿಲ್ಲದಿದ್ದರೂ ಕೆಲವು ಯುದ್ಧಗಳನ್ನು ಮಾಡಬೇಕಾಗಿ ಬಂತು. ಸಾರಸ್ ಎಂಬ ಒಬ್ಬ ದರೋಡೆಕೋರನನ್ನು ಕೊಂದ. ಸೆಂಟಾರಫಾಲಸ್ ಹೆರಾಕ್ಲಿಸ್‍ನನ್ನು ತನ್ನಲ್ಲಿಗೆ ಆಮಂತ್ರಿಸಿದ. ಆತಿಥ್ಯದಲ್ಲಿ ಮಾಂಸವನ್ನು ಕೊಟ್ಟರೂ ಕುಡಿಯಲು ಮದ್ಯವನ್ನು ಕೊಡಲಿಲ್ಲ. ಮದಿರಾದೇವತೆಯಾದ ಡಾಯನಾಯಸಸ್ ಕೊಟ್ಟ, ನಾಲ್ಕು ತಲೆಮಾರುಗಳಷ್ಟು ಹಿಂದಿನ ಮದ್ಯವು ಸೆಂಟಾರ್‍ನ ಬಳಿ ಇದೆ ಎಂಬುದು ಹೆರಾಕ್ಲಿಸ್‍ನಿಗೆ ಗೊತ್ತಿತ್ತು. ಅವನು ಫಾಲಸ್‍ನಿಗೆ ಆ ಪಾತ್ರೆಯನ್ನು ತೆರೆಯಲು ಹೇಳಿದ. ಫಾಲಸ್ ತನ್ನ ಅತಿಥಿಯ ಬಯಕೆಯನ್ನು ಪೂರ್ಣ ಮಾಡಿದ. ಆದರೆ ಆ ಮದ್ಯದ ವಾಸನೆಯು ತುಂಬ ದೂರದವರೆಗೆ ಹರಡಿತು. ಇದರಿಂದ ಉಳಿದ ಸೆಂಟಾರ್ಸಗಳು ಸಿಟ್ಟಾಗಿ ಫಾಲಸ್‍ನ ಗುಹೆಯ ಮೇಲೆ ಆಕ್ರಮಣ ಮಾಡಿದರು. ಅವರು ದೊಡ್ಡ ದೊಡ್ಡ ಬಂಡೆಯ ತುಣುಕು, ಬೆಂಕಿ ಹೊತ್ತಿಸಿದ ಕಟ್ಟಿಗೆಯನ್ನು ತೆಗೆದುಕೊಂಡು ಹೆರಾಕ್ಲಿಸ್ ಮತ್ತು ಫಾಲಸ್ ಮೇಲೆ ಬಿದ್ದರು. ಹೆರಾಕ್ಲಿಸ್ ಗ್ರೀಸ್ (ಯೂನಾನ್) 243 ಅನಿರೀಕ್ಷಿತವಾದ ಈ ಆಕ್ರಮಣವನ್ನು ತಡೆದ. ಅವರೆಲ್ಲ ಹೆದರಿ ಓಡಿಹೋಗುವಂಥ ಪ್ರತ್ಯುತ್ತರವನ್ನು ಕೊಟ್ಟ. ಈ ಯುದ್ಧದಲ್ಲಿ ಅನೇಕ ಸೆಂಟಾರ್ಸ ಸತ್ತರು. ಅಳಿದುಳಿದವರು ಕೆರೋನ ಗುಹೆಯಲ್ಲಿ ಬಚ್ಚಿಟ್ಟುಕೊಂಡರು. ಹೆರಾಕ್ಲಿಸ್ ಅಲ್ಲಿಯೂ ಅವರನ್ನು ಬೆನ್ನಟ್ಟಿದ. ಅವನ ಬಿಲ್ಲಿನಿಂದ ಚಿಮ್ಮಿದ ಒಂದು ಬಾಣವು ಅದೃಷ್ಟವಶಾತ್ ಕೆರೋನ ಮೊಣಕಾಲಿಗೆ ತಾಗಿತು. ಕೆರೊ ಹೆರಾಕ್ಲಿಸ್‍ನ ಗುರು ಹಾಗೂ ಮಿತ್ರನಾಗಿದ್ದಲ್ಲದೆ ಅವನಿಗೆ ಅಮರತ್ವ ಪ್ರಾಪ್ತವಾಗಿತ್ತು. ಈ ಆಕಸ್ಮಿಕ ದುರ್ಘಟನೆಯಿಂದ ಹೆರಾಕ್ಲಿಸ್ ನೊಂದಿದ್ದ. ಆದರೆ ಈಗೇನೂ ಮಾಡಲು ಸಾಧ್ಯವಿರಲಿಲ್ಲ. ಕೆರೊ ತನ್ನ ಚಿಕಿತ್ಸಾಬುದ್ಧಿಯನ್ನು ಸಂಪೂರ್ಣ ಉಪಯೋಗಿಸಿದರೂ ಆಘಾತ ಸರಿಯಾಗಲಿಲ್ಲ. ಅವನು ಸಾಯುವುದು ಸಾಧ್ಯವಿರಲಿಲ್ಲ. ಹಾಗಾಗಿ ಬದುಕಿರುವವರೆಗೂ ಆ ಗಾಯವು ಅವನನ್ನು ಪೀಡಿಸುತ್ತಲೇ ಇತ್ತು. ಪ್ರೊಮಿಥ್ಯೂಸ್ ಅನಂತರ ಅವನ ಅಮರತ್ವವನ್ನು ಸ್ವೀಕರಿಸಿದ ಮೇಲೆ ಕೆರೊನಿಗೆ ಮುಕ್ತಿ ದೊರೆಯಿತು ಎಂದು ಹೇಳುತ್ತಾರೆ. ಅತ್ತ ಫಾಲಸ್ ಹೆರಾಕ್ಲಿಸ್‍ನ ಬಾಣದ ಶಕ್ತಿಯ ಬಗ್ಗೆ ಆಶ್ಚರ್ಯ ಚಕಿತನಾಗಿದ್ದ. ಯಾಕೆಂದರೆ ಅಷ್ಟೊಂದು ಸೆಂಟಾರ್ಸ ಅವನ ಒಂದೇ ಏಟಿಗೆ ನೆಲಕ್ಕೆ ಬಿದ್ದಿದ್ದರು. ದೌರ್ಭಾಗ್ಯವಶಾತ್ ಅವನು ಕೈಯಲ್ಲಿ ಹಿಡಿದಿದ್ದ ಹೆರಾಕ್ಲಿಸ್‍ನ ಬಾಣವು ಕೈಜಾರಿ ಅವನ ಪಾದದ ಮೇಲೆ ಬಿದ್ದಿತು. ಅಷ್ಟರಿಂದಲೇ ಫಾಲಸ್ ತೀರಿಕೊಂಡ. ಹೆರಾಕ್ಲಿಸ್ ಬಾಣ ಬಹುಮುಖ ಸರ್ಪದ ವಿಷದಲ್ಲಿ ತೊಯ್ದಿದ್ದಾಗಿತ್ತು. ಹೆರಾಕ್ಲಿಸ್ ಫಾಲಸ್‍ನ ಅಂತಿಮ ಸಂಸ್ಕಾರವನ್ನು ವಿಧಿವತ್ತಾಗಿ ಮಾಡಿ ಮುಗಿಸಿ ಎರಿಮೆಂಥಸ್ ಕಡೆ ಮುಂದುವರಿದ. ಹೆರಾಕ್ಲಿಸ್ ಹಂದಿಯನ್ನು ಹಿಂಬಾಲಿಸಿದ. ಅದು ಅವನನ್ನು ಅಡವಿಯಿಂದ ದೂರ ಒಯ್ದು ಹಿಮಾಚ್ಛಾದಿತ ಪ್ರದೇಶಕ್ಕೆ ತಂದಿತು. ಬರ್ಫದಲ್ಲಿ ಜೋರಾಗಿ ಓಡಲಾಗದ ಹಂದಿಯು ಸುಲಭವಾಗಿಯೇ ಹೆರಾಕ್ಲಿಸ್‍ನ ಹಿಡಿತಕ್ಕೆ ಸಿಕ್ಕಿತು. ಅವನು ಅದನ್ನು ಬೆನ್ನಮೇಲೆ ಹಾಕಿಕೊಂಡು ಮಾಯ್‍ಸೀನಿಗೆ ಬಂದನು. ಬೆನ್ನ ಮೇಲೆ ಹಂದಿಯನ್ನು ಎತ್ತಿ ತರುತ್ತಿರುವ ಹೆರಾಕ್ಲಿಸ್, ಮತ್ತು ಕಂಚಿನ ಪಾತ್ರೆಯಿಂದಲೇ ಇಣಕಿ ನೋಡುವ ಭಯಚಕಿತ ಯೂರಿಸ್ಥಿಯಸ್‍ನನ್ನು ಆರನೆಯ ಶತಮಾನದ ಚಿತ್ರಕಾರರನೇಕರು ದೊಡ್ಡ ಪಾತ್ರೆ, ತಂಬಿಗೆ, ಹೂದಾನಿಗಳ ಮೇಲೆ ಅಂಕಿತಗೊಳಿಸಿದ್ದಾರೆ. ಹೆರಾಕ್ಲಿಸ್ ಈ ಹಂದಿಯನ್ನು ತೆಗೆದುಕೊಂಡು ಮಾಯ್‍ಸೀನಿಯ ಪೇಟೆಯಲ್ಲಿ ಬರುತ್ತಿರುವಾಗ ಎಗನಾಟ್ಸ ಕಾಲ್‍ಕಿಸ್ ಯಾತ್ರೆಗಾಗಿ ಎಲ್ಲರೂ ಗುಂಪುಗೂಡಿದ್ದಾರೆಂಬುದು ಗೊತ್ತಾಯಿತು. ಅವನು ಹಂದಿಯನ್ನು ಅಲ್ಲಿಯೇ ಬಿಟ್ಟು, ಯೂರಿಸ್ಥಿಯಸ್‍ನಿಂದ ಆಜ್ಞೆ ಪಡೆಯುವ ಮುನ್ನವೇ ಬಂಗಾರದ ಕುರಿಯನ್ನು ಪಡೆಯುವ ಸಾಹಸಯಾತ್ರೆಯಲ್ಲಿ ಪಾಲುಗೊಳ್ಳಲು ಹೊರಟುಬಿಟ್ಟನು ಎಂದೂ ಹೇಳಲಾಗುತ್ತದೆ. 244 ಕಥಾ ಸಂಸ್ಕೃತಿ ಐದನೆಯ ಶ್ರಮ : ಪಶುಶಾಲೆಯ ಸ್ವಚ್ಛತೆ ಎಲಿಸ್‍ನ ರಾಜನಾದ ಆಜಿಯಾಸ್ ಆ ದಿನಗಳಲ್ಲಿ ಭೂ ಮಂಡಲದಲ್ಲೇ ಅತ್ಯಧಿಕ ದನಕರುಗಳ ಒಡೆಯನಾಗಿದ್ದ. ಅವನ ಕೊಟ್ಟಿಗೆ ಮೈಲುಗಟ್ಟಲೆ ಹಬ್ಬಿತ್ತು. ಅವನ ದನಗಳು ಮೇಯುವುದಕ್ಕೆ ವಿಶಾಲವಾದ ಸ್ಥಳವಿತ್ತು. ಈ ಸುಂದರವಾದ ಸುಪುಷ್ಟವಾದ ಪಶುಗಳಿಂದಾಗಿಯೇ ರಾಜನ ಹೆಸರು ದೂರದೂರದವರೆಗೆ ಹರಡಿತ್ತು. ಯಾವುದೋ ದೈವೀಶಕ್ತಿಯಿಂದ ಅವನ ಪಶುಗಳು ಕಾಯಿಲೆ ಬೀಳುತ್ತಿರಲಿಲ್ಲ. ಮತ್ತು ಅವುಗಳ ಪ್ರಜನನ ಶಕ್ತಿಯೂ ಅಸಾಧಾರಣವಾಗಿತ್ತು. ಈ ಪಶುಗಳೊಂದಿಗೆ ಅವನ ಸಮೃದ್ಧಿಯೂ ದಿನೇ ದಿನೇ ವರ್ಧಿಸುತ್ತಿತ್ತು. ಅವನ ಬಳಿ ಮೂರುಸಾವಿರ ಹಸುಗಳಿದ್ದವು ಎನ್ನಲಾಗುತ್ತದೆ. ಅವುಗಳಲ್ಲಿ ಬಿಳಿಯ ಕಾಲುಗಳ 300 ಕಪ್ಪು ಗೂಳಿಗಳು ಇದ್ದವು. ಎರಡುನೂರು ಕೆಂಪು ಗೂಳಿಗಳು, ಬೆಳ್ಳಿಗಿಂತ ಬೆಳ್ಳಗಿನ ಅತ್ಯಂತ ಸುಂದರ ಹನ್ನೆರಡು ಎತ್ತುಗಳಿದ್ದವು. ಆಜಿಯಾಸ್‍ನ ತಂದೆಯಾದ ಹೀಲಿಯಸ್‍ನಿಗೆ ಇವು ತುಂಬ ಪ್ರಿಯವಾಗಿದ್ದವು. ಈ ಹನ್ನೆರಡು ಎತ್ತುಗಳು ಶಕ್ತಿಶಾಲಿಗಳಾಗಿದ್ದವು. ಅಜಿಯಾಸ್‍ನ ಹಸುಗಳನ್ನು ಅಡವಿಯ ಮೃಗಗಳಿಂದ ರಕ್ಷಿಸುತ್ತಿದ್ದವು. ಆದರೆ ಕಳೆದ ಮೂರುವರ್ಷಗಳಿಂದ ಆಜಿಯಾಸ್‍ನ ಪಶುಶಾಲೆಯ ಸ್ವಚ್ಛತಾ ಕಾರ್ಯ ಆಗಿರಲಿಲ್ಲ. ಕೇವಲ ಪಶುಶಾಲೆಯಲ್ಲಷ್ಟೇ ಅಲ್ಲ. ಅಕ್ಕಪಕ್ಕದ ಕೊಳ್ಳ-ಬೆಟ್ಟಗಳಲ್ಲಿ ಮೇಯಲು ಹೋಗುತ್ತಿದ್ದ ಕಡೆ ಗೊಬ್ಬರ ಕೆಸರಿನಂತೆ ತುಂಬಿತ್ತು. ಈಗ ಅಲ್ಲಿ ಯಾವ ಕೃಷಿ ಮಾಡುವುದೂ ಕಷ್ಟವಾಗಿತ್ತು. ದೈವೀಕೃಪೆಯಿಂದ ಅಜಿಯಾಸ್‍ನ ಹಸುಗಳು ಕಾಯಿಲೆ ಬೀಳುತ್ತಿರಲಿಲ್ಲವಾದರೂ, ಈ ಹೊಲಸಿನ ಕಾರಣದಿಂದ ಮನುಷ್ಯರಲ್ಲಿ ರೋಗಗಳು ಹರಡತೊಡಗಿದ್ದವು. ಯೂರಿಸ್ಥಿಯಸ್ ಹೆರಾಕ್ಲಿಸ್‍ನನ್ನು ಈ ಕೆಲಸಕ್ಕೆ ನೇಮಿಸಿ ಯಾಕೆ ಅಪಮಾನ ಮಾಡಬಾರದು ಎಂದು ಯೋಚಿಸಿದ. ಗೊಬ್ಬರದ ಬುಟ್ಟಿಗಳನ್ನು ಹೊರುವುದು ಹೆರಾಕ್ಲಿಸ್‍ನಂತಹ ವೀರನಿಗೆ ಸರ್ವಥಾ ಯೋಗ್ಯವಾಗಿರಲಿಲ್ಲ. ಆದರೆ ಯೂರಿಸ್ಥಿಯಸ್‍ನ ಆಜ್ಞೆಯಂತೆ ಹೆರಾಕ್ಲಿಸ್ ಒಂದು ದಿನದಲ್ಲಿ ಆಜಿಯಾಸ್‍ನ ಪಶುಶಾಲೆಯನ್ನು ಸ್ವಚ್ಛಗೊಳಿಸಬೇಕಾಗಿತ್ತು. ಹೆರಾಕ್ಲಿಸ್ ಅವನ ಸೇವಕನಾಗಿದ್ದರಿಂದ ಈ ದ್ವೇಷಪೂರ್ವಕ ಆಜ್ಞೆಯನ್ನು ಪಾಲಿಸಲೇಬೇಕಾಗಿತ್ತು. ಅವನು ಎಲಿಸ್‍ಗೆ ಹೋದಾಗ ಆಜಿಯಸ್‍ನ ಭೇಟಿಯಾಯಿತು. ಹೆರಾಕ್ಲಿಸ್ ಯಾವ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದಿದ್ದಾನೆಂಬುದು ಆಜಿಯಾಸ್‍ನಿಗೆ ಗೊತ್ತಿರಲಿಲ್ಲ. ಮಾತುಕತೆಗಳ ಮಧ್ಯೆ ಹೆರಾಕ್ಲಿಸ್ ಕೇಳಿದ - ಒಂದು ದಿನದಲ್ಲಿ ಅವನ ಪಶುಶಾಲೆಯನ್ನು ಸ್ವಚ್ಛಗೊಳಿಸಿದರೆ ಆಜಿಯಾಸ್ ಅವನಿಗೆ ಏನು ಕೊಡುತ್ತಾನೆ? ಈ ಅಸಂಭವವಾದ ಪ್ರಸ್ತಾಪವನ್ನು ಕೇಳಿ ಆಜಿಯಾಸ್ ಮೊದಲು ಚನ್ನಾಗಿ ನಕ್ಕ. ಅನಂತರ ತನ್ನ ಹಿರಿಯಮಗ ಫೀಲಿಯಸ್‍ನ ಸಾಕ್ಷಿಯಾಗಿ ಹೆರಾಕ್ಲಿಸ್ ಈ ಕಾರ್ಯವನ್ನು ಗ್ರೀಸ್ (ಯೂನಾನ್) 245 ಸಂಜೆ ಸೂರ್ಯ ಮುಳುಗುವ ಮುನ್ನ ಪೂರ್ಣಗೊಳಿಸಿದರೆ ತನ್ನ ದನಕರುಗಳಲ್ಲಿ ಹತ್ತನೇ ಒಂದು ಭಾಗವನ್ನು ಹೆರಾಕ್ಲಿಸ್‍ನಿಗೆ ಶ್ರಮದ ಪ್ರತಿಫಲವಾಗಿ ಕೊಡುವೆನೆಂದು ಭಾಷೆಕೊಟ್ಟ. ಹೆರಾಕ್ಲಿಸ್ ಸ್ವಲ್ಪ ಆಲೋಚನೆ ಮಾಡಿದ ಅನಂತರ ಪಶುಶಾಲೆಯ ಸುತ್ತಲಿನ ಗೋಡೆಯಲ್ಲಿ ಎರಡು ಕಡೆ ದೊಡ್ಡ ರಂಧ್ರ ಮಾಡಿದ. ಅನಂತರ ಹತ್ತಿರದಲ್ಲೇ ಹರಿಯುತ್ತಿರುವ ಎಲ್ಫಿಸ್ ಹಾಗೂ ಪೆನಿಯಸ್ ಎಂಬ ಹೆಸರಿನ ಎರಡು ನದಿಗಳನ್ನು ಕತ್ತರಿಸಿ ಅವುಗಳ ಪ್ರವಾಹವನ್ನು ಕೊಟ್ಟಿಗೆಯ ಕಡೆ ತಿರುಗಿಸಿದ. ರಭಸದಿಂದ ಹರಿದುಬಂದ ನೀರು ಕೊಟ್ಟಿಗೆಯ ಕೆಸರನ್ನೆಲ್ಲ ಜೊತೆಯಲ್ಲಿ ಕೊಚ್ಚಿಕೊಂಡು ಹೋಯಿತು. ಅಷ್ಟೇ ಅಲ್ಲ, ಈ ನೀರಿನ ಧಾರೆಯಿಂದ ಎದುರಿನ ಮೇವಿನ ಬಯಲು ಗುಡ್ಡಗಳು ಸ್ವಚ್ಛವಾಯಿತು. ಹೀಗೆ ರಾತ್ರಿ ಶುರುವಾಗುವ ಮುನ್ನ ಹೆರಾಕ್ಲಿಸ್ ಅಸಂಭವ ಕಾರ್ಯವನ್ನು ಸಂಭವ ಮಾಡಿ ತೋರಿಸಿದ. ಈ ಪ್ರಕ್ರಿಯೆಯಲ್ಲಿ ಯಾವ ಹಾನಿಯೂ ಆಗಲಿಲ್ಲ. ಇಡೀ ಪ್ರದೇಶದಲ್ಲಿ ಹೊಸ ಜೀವನದ ತರಂಗ ಹರಿದಾಡಿತು. ಆಜಿಯಾಸ್‍ನಿಗೆ ಈ ವಿಷಯ ಗೊತ್ತಾದಾಗ ಅವನು ಸ್ತಬ್ಧನಾದ. ಅವನು ನಿರೀಕ್ಷಿಸದ ಕೆಲಸವನ್ನು ಹೆರಾಕ್ಲಿಸ್ ಮಾಡಿ ತೋರಿಸಿದ್ದ. ಆದರೆ ದುಷ್ಟನಾದ ಆಜಿಯಾಸ್‍ನು ಅವನನ್ನು ಪುರಸ್ಕರಿಸುವುದಿರಲಿ, ಅವನ ಶ್ರಮದ ಪ್ರತಿಫಲವನ್ನು ಕೊಡಲೂ ನಿರಾಕರಿಸಿದ. ತಮ್ಮಿಬ್ಬರ ನಡುವೆ ಯಾವ ಒಪ್ಪಂದವೂ ಆಗಿಯೇ ಇಲ್ಲವೆಂದು ಅವನು ಹೇಳಿದ. ಆದರೆ ಅಜಿಯಾಸನ ಮಗ ಫೀಲಿಯಸ್ ಅಪ್ಪನ ವಿರುದ್ಧ ಸಾಕ್ಷಿ ಹೇಳಿದ. ಇದಕ್ಕಾಗಿ ಆಜಿಯಾಸ್ ಅವನನ್ನು ಎಲಿಸ್‍ನಿಂದ ಹೊರಹಾಕಿದ. ಇತ್ತ ಆಜಿಯಾಸ್ ಹೆರಾಕ್ಲಿಸ್‍ನಿಗೆ ಅವನ ಹಕ್ಕನ್ನು ಕೊಡಲು ನಿರಾಕರಿಸಿದರೆ, ಅತ್ತ ಯೂರಿಸ್ಥಿಯಸ್ ಈ ಶ್ರಮವನ್ನು ಒಪ್ಪಿಕೊಳ್ಳಲೇ ಇಲ್ಲ. ಹೆರಾಕ್ಲಿಸ್ ಈ ಕೆಲಸವನ್ನು ಅವನ ಆಜ್ಞೆಯಂತೆ ಮಾತ್ರ ಮಾಡಿರದೆ, ಆಜಿಯಾಸ್‍ನಿಂದ ಪ್ರತಿಫಲವನ್ನು ಅಪೇಕ್ಷಿಸಿ ಮಾಡಿದ್ದಾನೆಂದು ಅವನು ಹೇಳಿದ. ಆರನೆಯ ಶ್ರಮ : ಸ್ಟಿಂಪೈಲಿಯಾದ ಪಕ್ಷಿ ಆರ್ಕೆಡಿಯಾದ ಸ್ಟಿಂಪೈಲಿಯಾ ನದಿಯ ದಂಡೆಯ ಮೇಲೆ ವಾಸಿಸುವ ಆ ಹಕ್ಕಿಗಳ ಆಕಾರವು ಕೊಕ್ಕರೆಯಂತೆ ಇತ್ತು. ಅವುಗಳ ಚುಂಚು, ಪಂಜಾ ಹಾಗೂ ರೆಕ್ಕೆಗಳು ಲೋಹದಿಂದ ಮಾಡಿದವುಗಳು. ಯುದ್ಧದೇವತೆ ಎರಿಸ್‍ನಿಗೆ ಪ್ರಿಯವಾದ ಈ ಪಕ್ಷಿಗಳು ಮಾನವನನ್ನು ತಿನ್ನುತ್ತಿದ್ದವು. ಅವುಗಳ ಲೋಹದ ಮೊನಚಾದ ಚುಂಚು ಕವಚವನ್ನೂ ಭೇದಿಸಬಲ್ಲುದಾಗಿತ್ತು. ಇವು ಗುಂಪುಗಟ್ಟಿಕೊಂಡು ಹಾರುತ್ತಿದ್ದವು. ಇವುಗಳ ಕಬ್ಬಿಣದ ರೆಕ್ಕೆಗಳ ಬಡಿತದಿಂದ ಅನೇಕ ಪ್ರಾಣಿಗಳು ಸಾಯುತ್ತಿದ್ದವು. ಅವುಗಳ ಬಾಯಿಂದ ಹೊರಡುವ ಜೊಲ್ಲಿನಿಂದ ಬೆಳೆ ನಾಶವಾಗುತ್ತಿತ್ತು. 246 ಕಥಾ ಸಂಸ್ಕೃತಿ ಈ ಹಕ್ಕಿಗಳು ಸಾಮಾನ್ಯವಾಗಿ ಬಹುಶಃ ಅರಬದೇಶದ ಮರುಭೂಮಿಯಲ್ಲಿ ವಾಸಿಸುತ್ತಿದ್ದವು. ಅಲ್ಲಿಂದ ವಲಸೆ ಹೊರಟು ಸ್ಟಿಂಫೈಲಿಯಾ ನದಿಯ ದಂಡೆಗೆ ಬಂದಿದ್ದವು. ಹೆರಾಕ್ಲಿಸ್ ಅಲ್ಲಿಗೆ ತಲುಪಿದಾಗ ಆ ಪಕ್ಷಿಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯಚಕಿತನಾದ. ಅವನ್ನು ಒಂದೊಂದಾಗಿ ಕೊಲ್ಲುವುದು ಅಸಂಭವವೆನಿಸುವಷ್ಟು ಅವುಗಳ ಸಂಖ್ಯೆಯಿತ್ತು. ಅಲ್ಲದೆ ಅವು ಕುಳಿತಲ್ಲಿ ಕೆಸರು ತುಂಬಿತ್ತು. ಆದ್ದರಿಂದ ಅವುಗಳ ಹತ್ತಿರ ಕಾಲುನಡಿಗೆಯಿಂದಾಗಲಿ, ನಾವೆಯಿಂದಾಗಲಿ ಹೋಗುವುದು ಸಾಧ್ಯವಿರಲಿಲ್ಲ. ಹೆರಾಕ್ಲಿಸ್ ಯೋಚಿಸುತ್ತಿದ್ದಂತೆಯೇ ಶೋಧ ಕುಶಲಿಯಾದ ದೇವಿ ಎಥಿನಿ ಅಲ್ಲಿ ಪ್ರಕಟಳಾದಳು. ಅವಳು ಒಲಿಂಪಸ್‍ನ ಶಿಲ್ಪಿ ಹೆಫಾಸ್ಟಸ್ ಮೂಲಕ ಸಿದ್ಧಪಡಿಸಲಾದ ಒಂದು ವಿಶಾಲವಾದ ನಗಾರಿಯನ್ನು ಅವನಿಗೆ ಕೊಟ್ಟಳು. ಅದನ್ನು ತೆಗೆದುಕೊಂಡು ಹೆರಾಕ್ಲಿಸ್ ಪರ್ವತದ ತುದಿಯನ್ನೇರಿ ಆ ನಗಾರಿಯನ್ನು ಬಾರಿಸಿದ. ಅದರಿಂದ ಹೊರಟ ತೀವ್ರತರವಾದ ಭಯಾನಕ ಧ್ವನಿಗೆ ಹಕ್ಕಿಗಳು ಗಾಬರಿಗೊಂಡು ಹಾರಾತೊಡಗಿದವು. ಈಗ ಅವುಗಳನ್ನು ಗುರಿಯಾಗಿಟ್ಟುಕೊಂಡು ಬಾಣ ಬಿಟ್ಟ. ಆಗ ಮರಣಹೊಂದಿದ ಹಕ್ಕಿಗಳ ಸಮೂಹವು ಕೆಳಗೆ ಬೀಳತೊಡಗಿತು. ಕಪ್ಪು ಸಮುದ್ರದಲ್ಲಿ ಹೋಗಿಬಿದ್ದ ಕೆಲವು ಪಕ್ಷಿಗಳ ಶವಗಳು ತೆರೆಗಳ ಮೇಲೆ ಹರಿದುಹೋಗುವುದನ್ನು ಎಗ್‍ನಾಟಸ್ ನೋಡಿದ. ಉಳಿದ ಕೆಲವು ಪಕ್ಷಿಗಳು ಗ್ರೀಸ್ ಬಿಟ್ಟು ಹೊರಗೆ ಹಾರಿಹೋದವು. ತಿರುಗಿ ಎಂದೂ ಬರಲಿಲ್ಲ. ಏಳನೆಯ ಶ್ರಮ : ಕ್ರೀಟ್‍ದ ಗೂಳಿ ಈ ಬಾರಿ ಯೂರಿಸ್ಥಿಯಸ್ ಕ್ರೀಟ್‍ನ ಗೂಳಿಯನ್ನು ವಶಪಡಿಸಿಕೊಳ್ಳಲು ಹೆರಾಕ್ಲಿಸ್‍ನಿಗೆ ಆಜ್ಞೆ ನೀಡಿದನು. ಈ ಗೂಳಿಯು ಸ್ಯೂಸ್‍ನ ಆದೇಶಾನುಸಾರ ಸುಂದರಿಯಾದ ಯೂರೋಪೆಯನ್ನು ತನ್ನ ಬೆನ್ನಮೇಲೆ ಹೊತ್ತ ತಂದ ಗೂಳಿಯಾಗಿತ್ತು. ಅದು ಕ್ರೀಟನ ರಾಜನಾದ ಮೈನಾಸ್‍ನಿಗೆ ಪಾಸಾಯ್ಡನ್‍ನಿಗೆ ಬಲಿಕೊಡಲು ಸಮುದ್ರದಿಂದ ಪಡೆದುದಾಗಿತ್ತು ಎಂಬ ಹೇಳಿಕೆಯೂ ಇದ್ದು, ಇದು ವಿವಾದಾಸ್ಪದವಾಗಿದೆ. ಆದರೆ ಈ ಹೋರಿಯು ಆ ದಿನಗಳಲ್ಲಿ ಕ್ರೀಟನಲ್ಲಿ ತುಂಬ ಗೊಂದಲವೆಬ್ಬಿಸಿತ್ತು. ಬೆಳೆಗಳು, ತೋಟ, ಉದ್ಯಾನವನ, ಯಾವುದೂ ಅದರಿಂದ ಸುರಕ್ಷಿತವಿರಲಿಲ್ಲ. ಹೆರಾಕ್ಲಿಸ್ ಈ ಹೋರಿಯನ್ನು ಹಿಡಿಯಲು ಕ್ರೀಟಿಗೆ ಬಂದಾಗ ಅಲ್ಲಿನ ರಾಜನಾದ ಮಾಯಾಸ್‍ನು ಅವನನ್ನು ಸ್ವಾಗತಿಸಿದ. ಅವನಿಗೆ ಸಾಧ್ಯವಾದ ಸಹಾಯ ಮಾಡಲು ಸಿದ್ಧನಾದ. ಆದರೆ ಬೆಂಕಿಯ ಚೆಂಡಿನಂತಿದ್ದ ಆ ಹೋರಿಯನ್ನು ಗ್ರೀಸ್ (ಯೂನಾನ್) 247 ಹೆರಾಕ್ಲಿಸ್ ಒಬ್ಬನೇ ನಿಯಂತ್ರಣಕ್ಕೆ ತಂದ. ಮತ್ತು ಅದರ ಬೆನ್ನ ಮೇಲೆ ಸವಾರಿ ಮಾಡಿಕೊಂಡು ಮೈಸೀನಿಗೆ ಬಂದ. ಅಲ್ಲಿ ಯೂರಿಸ್ಥಿಯಸ್ ದೇವಿ ಹೆರಾಳ ಹೆಸರಿನಲ್ಲಿ ಅದನ್ನು ಪುನಃ ಸ್ವತಂತ್ರಗೊಳಿಸಿದ. ಮೈಸೀನಿಯಿಂದ ಬಿಡುಗಡೆ ಹೊಂದಿದ ಆ ಗೂಳಿಯು ಸ್ಪಾರ್ಟಾ, ಆರ್ಕೆಡಿಯಾಗಳ ಮೂಲಕ ಮೆರೆಂಥೆ ತಲುಪಿದಾಗ ಅಲ್ಲಿ ಅದನ್ನು ಥೀಸಿಯಸ್ ಹಿಡಿದು ಎಥೆನ್ಸ್ ದೇವಿಯಾದ ದೇವಿ ಎಥೆನಾಳ ಮಂದಿರದಲ್ಲಿ ಅದನ್ನು ಬಲಿಕೊಟ್ಟ. ಎಂಟನೆಯ ಶ್ರಮ : ಡಾಯ್‍ಮಿಡಿಸ್‍ನ ಹೆಣ್ಣು ಕುದುರೆಗಳು ಥ್ರೆಸ್‍ನ ರಾಜನಾದ ಡೈಮಿಡೀಸ್‍ನ ಬಳಿ ಮನುಷ್ಯರನ್ನು ತಿನ್ನುವ ನಾಲ್ಕು ಕುದುರೆಗಳಿದ್ದವು. ಈ ಡೈಮೆಡಿಸ್ ಯುದ್ಧದೇವತೆಯಾದ ಎರಿಸ್‍ನ ಮಗನಾಗಿದ್ದ. ಎಟಲಸ್ ಮತ್ತು ಅವನ ಮಗಳು ಎಸ್‍ಟೆರಿ ಅವರ ಧರ್ಮಬಾಹಿರ ಸಂಬಂಧದಿಂದ ಜನಿಸಿದವನಾಗಿದ್ದ. ಸ್ವಭಾವತಃ ತುಂಬ ಸೊಕ್ಕಿನವನೂ ಧೂರ್ತನೂ ಆಗಿದ್ದ. ತನ್ನ ಅತಿಥಿಗಳನ್ನು, ತನ್ನ ದೇಶಕ್ಕೆ ಬರುವ ಅಪರಿಚಿತ ಯಾತ್ರಿಗಳನ್ನು ತನ್ನ ಬಳಿಯ ಹೆಣ್ಣು ಕುದುರೆಗಳಿಗೆ ತಿನಿಸಿಬಿಡುತ್ತಿದ್ದ. ಯೂರೆಸ್ಥಿಯಸ್ ಅವುಗಳನ್ನು ಜೀವಂತ ಹಿಡಿದು ತರುವಂತೆ ಹೆರಾಕ್ಲಿಸ್‍ನಿಗೆ ಆಜ್ಞೆ ಮಾಡಿದ್ದ. ಹೆರಾಕ್ಲಿಸ್ ಈ ಉದ್ದೇಶಕ್ಕಾಗಿ ಥ್ರೆಸ್‍ನ ಕಡೆ ಹೊರಟಾಗ ಕೆಲವು ಯುವಕರು ಸ್ವಇಚ್ಛೆಯಿಂದ ಅವನ ಜೊತೆಗೆ ಹೋದರು. ದಾರಿಯಲ್ಲಿ ತನ್ನ ಮಿತ್ರನಾದ ಫೆರಾದ ರಾಜ ಎಡಮೆಟಸ್‍ನನ್ನು ಭೇಟಿಯಾದ ನಂತರ ಹೆರಾಕ್ಲಿಸ್ ಟಿರಿಡಾಕ್ಕೆ ತಲುಪಿದ. ಡೈಯಮೆಟಸ್ ಅಶ್ವಪಾಲಕರನ್ನು ಸೋಲಿಸಿದ ನಂತರ ಆ ಹೆಣ್ಣು ಕುದುರೆಗಳನ್ನು ಬೆದರಿಸಿ ಓಡಿಸಿಕೊಂಡು ಸಮುದ್ರದತ್ತ ತೆಗೆದುಕೊಂಡು ಹೋದ. ಡೈಯಮೆಟಿಸ್ ತನ್ನ ಸಂಗಡಿಗರು ಬೈಯ್‍ಸ್ಟೋನ್ಸ್‍ರೊಂದಿಗೆ ಅವನನ್ನು ಬೆನ್ನಟ್ಟಿದ್ದ. ಡೈಯಮೆಟಸ್‍ನ ಜೊತೆಗಾರರ ಸಂಖ್ಯೆ ದೊಡ್ಡದಿದ್ದುದರಿಂದ ಹೆರಾಕ್ಲಿಸ್ ಆ ಕುದುರೆಗಳನ್ನು ತನ್ನ ವಿಶ್ವಾಸಿಯಾದ ಜೊತೆಗಾರ ಎಬ್ಬೆರಸ್‍ನ ಸಂರಕ್ಷಣೆಯಲ್ಲಿ ಬಿಟ್ಟು ಮರಳಿ ಬಂದ. ಅವನು ಒಂದು ನದಿಯನ್ನು ಬಗೆದು ಅದು ಹರಿಯುವ ದಾರಿಯನ್ನು ಬದಲಿಸಿದ. ಇದರಿಂದ ತಗ್ಗು ಪ್ರದೇಶದಲ್ಲಿ ಪ್ರವಾಹ ನುಗ್ಗಿತು. ಡೈಯಮೆಟಿಸ್ ಹಿಂತಿರುಗಿ ಓಡಿದ. ಹೆರಾಕ್ಲಿಸ್ ಅವನನ್ನು ಹಿಂಬಾಲಿಸಿದ. ಮತ್ತು ದೊಡ್ಡ ಸಂಖ್ಯೆಯಲ್ಲಿದ್ದ ಬೈಯಸ್ಟೋನ್ಸರನ್ನು ಹೊಡೆದುಹಾಕಿದ. ಡೈಯಮೆಟಸ್ ಗಾಯಾಳುವಾದ. ಹೆರಾಕ್ಲಿಸ್‍ನ ಅನುಪಸ್ಥಿತಿಯಲ್ಲಿ ನಿಯಂತ್ರಣಕ್ಕೆ ಬಾರದ ಮನುಷ್ಯ ಭಕ್ಷಣ ಮಾಡುವ ಈ ಹೆಣ್ಣುಕುದುರೆಗಳು ಹೆರಾಕ್ಲಿಸ್‍ನ ಜೊತೆಗಾರ ಎಬ್ಡೆರಸ್‍ನನ್ನು ತಿಂದುಬಿಟ್ಟವು. ಅಲ್ಲದೆ ತಮ್ಮ ಒಡೆಯನಾದ ಡೈಮೆಟಸ್‍ನನ್ನೂ ನುಂಗಿಹಾಕಿ ತಮ್ಮ ಹಸಿವೆಯನ್ನು ಹಿಂಗಿಸಿಕೊಂಡವು. ಈಗ ಹೆರಾಕ್ಲಿಸ್‍ನಿಗೆ ಅವುಗಳನ್ನು ಹಿಡಿತಕ್ಕೆ ತರಲು ವಿಶೇಷ ಕಷ್ಟವಾಗಲಿಲ್ಲ. 248 ಕಥಾ ಸಂಸ್ಕೃತಿ ತನ್ನ ಗೆಳೆಯ ಎಬ್ಡೆರಸ್‍ನ ನೆನಪಿನಲ್ಲಿ ಎಬ್ಡೆರಾ ನಗರಕ್ಕೆ ಶಿಲಾನ್ಯಾಸ ಮಾಡಿದ ಅನಂತರ ಹೆರಾಕ್ಲಿಸ್ ಆ ಕುದುರೆಗಳನ್ನು ಮೊದಲಬಾರಿಗೆ ರಥಕ್ಕೆ ಕಟ್ಟಿಕೊಂಡು ಮೈಸೀನಿಗೆ ಹೋದ. ಯೂರಿಸ್ಥಿಯಸ್ ಈ ಕುದುರೆಗಳನ್ನು ಹೆರಾಳಿಗೆ ಅರ್ಪಿಸಿ ಸ್ವತಂತ್ರಗೊಳಿಸಿದ. ಎಲಿಂಪಸ್ ಪರ್ವತದ ಮೇಲಿನ ಕಾಡುಪ್ರಾಣಿಗಳು ಇವುಗಳ ಬೇಟೆಯಾಡಿದವು ಎಂದು ಹೇಳುತ್ತಾರೆ. ಒಂಬತ್ತನೆಯ ಶ್ರಮ : ಹಿಪ್ಪಾಲಿಟಿಯ ಟೊಂಕಪಟ್ಟಿ ತನ್ನ ಮಗಳಾದ ಎಡ್‍ಮೆಟಿಯ ಸಲುವಾಗಿ ಅಮೆಜಾನ್‍ನ ರಾಣಿಯಾದ ಹಿಪ್ಪಾಲಿಟಿಯ ಟೊಂಕಪಟ್ಟಿಯನ್ನು ತಂದುಕೊಂಡಬೇಕೆಂದು ಯೂರಿಸ್ಥಿಯಸ್ ಹೆರಾಕ್ಲಿಸ್‍ನಿಗೆ ಈ ಬಾರಿ ಆಜ್ಞೆ ಮಾಡಿದ. ಈ ಟೊಂಕಪಟ್ಟಿಯನ್ನು ಅಮೇಜಾನ್ ರಾಣಿಗೆ ಯುದ್ಧದೇವತೆಯಾದ ಎರಿಸ್ ಉಡುಗೊರೆಯಾಗಿ ಕೊಟ್ಟಿದ್ದ. ಹೆರಾಕ್ಲಿಸ್ ನಾವೆಯಲ್ಲಿ ಕುಳಿತು, ತನ್ನ ಕೆಲವು ಸಂಗಡಿಗರೊಂದಿಗೆ ಥರ ಮಾರ್ಡಾನ್ ನದಿಯತ್ತ ಹೊರಟ. ಹೆರಾಕ್ಲಿಸ್ ಈ ಯಾತ್ರೆಯ ಮಧ್ಯದಲ್ಲಿ ಪೆರಾಸ್ ದ್ವೀಪದಲ್ಲಿ ಕೆಲಕಾಲ ನಿಂತನು. ಈ ದ್ವೀಪವು ಸಂಗಮವರಿ ಶಿಲೆಗಾಗಿ ಪ್ರಸಿದ್ಧವಾಗಿತ್ತು. ಅದನ್ನು ರೆಡ್‍ಮೆಂಥಸ್‍ನು ಎಂಟ್ರೋಜಿಯಸ್‍ನ ಮಗ ಎಲ್ಸಿಯಸ್‍ನಿಗೆ ಕಾಣಿಕೆಯಾಗಿ ಕೊಟ್ಟನು. ನಂತರದಲ್ಲಿ ಕ್ರೀಟನ ರಾಜನಾದ ಮೈನಾಸ್‍ನ ನಾಲ್ವರು ಮಕ್ಕಳೂ ಇದೇ ದ್ವೀಪದಲ್ಲಿ ವಾಸ ಮಾಡಿದರು. ಹೆರಾಕ್ಲಿಸ್‍ನ ಇಬ್ಬರು ಸಹಚರರು ನೀರು ತರಲು ಹೋದಾಗ ಮಾಯ್‍ನಾಸನ ಮಕ್ಕಳು ಅವರನ್ನು ಕೊಂದುಹಾಕಿದರು. ಹೆರಾಕ್ಲಿಸ್ ಸಿಟ್ಟಿಗೆದ್ದು ಆ ನಾಲ್ವರನ್ನೂ ಯಮಲೋಕಕ್ಕೆ ಕಳಿಸಿದ. ಪೆರಾಸ್‍ನ ಜನರನ್ನೂ ತುಂಬ ದುಃಖಕ್ಕೀಡು ಮಾಡಿದ. ಅವರೆಲ್ಲ ಸೇರಿ ರಾಜನಾದ ಎಲ್ಸಿಯಸ್ ಹಾಗೂ ಅವನ ಸೋದರ ಸ್ಥೆನಲಿಯಸ್ ಇಬ್ಬರನ್ನೂ ದಾಸರಾಗಿ ಹೆರಾಕ್ಲಿಸ್‍ಗೆ ಒಪ್ಪಿಸಿ ತಮ್ಮ ಪ್ರಾಣ ಉಳಿಸಿಕೊಂಡರು. ನಂತರ ಹೆರಾಕ್ಲಿಸ್ ಹೆಲಿಸಪಾಂಟ್ ಮತ್ತು ಬಾಸ್ಫಾರಸ್ ಮೂಲಕ ಹಾಯ್ದು ಮೈಸಿಯಾ ತಲುಪಿದನು. ಆ ಪ್ರದೇಶದ ರಾಜನಾದ ಲೈಕಸ್‍ನ ಆತಿಥ್ಯ ಸ್ವೀಕರಿಸಿದನು. ಲೈಕಸ್ ಬಗೆಗೆ ಸಂತೋಷ ಹೊಂದಿದ ಹೆರಾಕ್ಲಿಸ್ ಲೈಕಸ್‍ನ ಶತ್ರುಗಳ ವಿರುದ್ಧ ಸಹಾಯ ಮಾಡಿದ. ಲೈಕಸ್ ಅವನ ಹೆಸರಿನಲ್ಲಿ ಒಂದು ನಗರದ ಹೆಸರನ್ನು ಹೆರಾಕ್ಲಾಯಾ ಎಂದಿಟ್ಟ. ಥರಮಡಾನ್ ನದಿಯ ಉಗಮಸ್ಥಾನಕ್ಕೆ ತಲುಪಿ ಹೆರಾಕ್ಲಿಸ್ ಥೈಮಿಸಿರಾದ ಬಂದರದಲ್ಲಿ ಲಂಗರುಹಾಕಿದ. ಅಲ್ಲಿ ಆ ದೇಶದ ರಾಣಿ ಹಿಪ್ಪಾಲಿಟಿ ಅವನನ್ನು ಭೇಟಿಯಾಗಲು ಬಂದಳು. ಅವನ ಸಧೃಢವಾದ ಶರೀರವನ್ನು ನೋಡಿ ಆಕರ್ಷಿತಳಾಗಿ ತನ್ನ ಟೊಂಕದಪಟ್ಟಿಯನ್ನು ಹೆರಾಕ್ಲಿಸ್‍ನಿಗೆ ಪ್ರೇಮಪೂರ್ವಕ ಕಾಣಿಕೆಯಾಗಿ ಒಪ್ಪಿಸಿದಳು. ದೇವಿ ಹೆರಾಳಿಗೆ ಈ ವಿಷಯ ಗೊತ್ತಾದಾಗ ಅವಳು ಒಬ್ಬ ಅಮೇಜನ್ ಸ್ತ್ರೀಯ ರೂಪ ಧರಿಸಿ ಅವಳನ್ನು ಹೆರಾಕ್ಲಿಸ್‍ನ ವಿರುದ್ಧ ಗ್ರೀಸ್ (ಯೂನಾನ್) 249 ಉರಿದೇಳುವಂತೆ ಮಾಡಿದಳು. ಹೆರಾಕ್ಲಿಸ್ ಹಿಪ್ಪಾಲಟಿಯನ್ನು ಅಪಹರಿಸಿಕೊಂಡು ಹೋಗಲು ಬಂದಿದ್ದಾನೆಂದು ಸುಳ್ಳು ಅಪವಾದವನ್ನು ಹರಡಿದಳು. ಇದರಿಂದ ಅಮೇಜನ್ನರು ತೀವ್ರ ಸಿಟ್ಟಿಗೆದ್ದರು. ಅವರು ಶಸ್ತ್ರಧರಿಸಿ ಕುದುರೆಯೇರಿ ಹೆರಾಕ್ಲಿಸ್ ಮೇಲೆ ಆಕ್ರಮಣ ಮಾಡಿದರು. ಹೆರಾಕ್ಲಿಸ್ ಇಂಥ ಅಕಸ್ಮಾತ್ ಆಕ್ರಮಣವನ್ನು ಹಿಪ್ಪಾಲಿಟಿಯ ವಿಶ್ವಾಸಘಾತವೆಂದು ತಿಳಿದು ಅವಳನ್ನು ಕೊಂದುಬಿಟ್ಟ. ನಡೆದ ಭಾರೀ ಯುದ್ಧದಲ್ಲಿ ಅಮೇಜನ್ಸ್ ಸೇನಾನಾಯಕಿಯರು ಹತರಾದರು. ಅವರ ಸೇನೆ ದಿಕ್ಕಾಪಾಲಾಗಿ ಓಡಿತು. ಇಲ್ಲಿ ಒಂದು ಭಿನ್ನಹೇಳಿಕೆಯೂ ಇದೆ. ಅಮೇಜನ್ಸನ ರಾಣಿ ಮೆನಲಿಪ್ಪೆಯನ್ನು ಹೆರಾಕ್ಲಿಸ್ ಬಂಧಿಸಿದ್ದ. ಹಿಪ್ಪಾಲಿಟಿ ತನ್ನ ಟೊಂಕಪಟ್ಟಿಯನ್ನು ಕೊಟ್ಟು ಅವಳನ್ನು ಬಿಡಿಸಿದಳು. ಇನ್ನೊಂದು ನಂಬಿಗೆಯೆಂದರೆ, ಥೀಸಿಯಸ್‍ನು ಅಮೇಜನ್ಸರನ್ನು ಸೋಲಿಸಿದ ಮೇಲೆ ಹಿಪ್ಪಾಲಿಟಿಯೊಂದಿಗೆ ವಿವಾಹವಾಗಿದ್ದ. ಅವಳ ಮೇಖಲೆಯನ್ನು ಹೆರಾಕ್ಲಿಸ್‍ನಿಗೆ ಕಾಣಿಕೆಯಾಗಿ ಕೊಟ್ಟಳು. ಮತ್ತು ಒಂದು ಹೇಳಿಕೆಯೆಂದರೆ, ಹೆರಾಕ್ಲಿಸ್‍ನು ಹಿಪ್ಪಾಲಿಟಿಯನ್ನು ಯುದ್ಧದಲ್ಲಿ ಸೋಲಿಸಿದ. ಅವನು ಟೊಂಕಪಟ್ಟಿಯ ಬದಲಿಗೆ ಹಿಪ್ಪಾಲಿಟಿಗೆ ಜೀವನವನ್ನು ಕೊಡಬಯಸಿದ್ದ. ಯಾಕೆಂದರೆ ಜೀವಂತವಿರುವಾಗ ಆಕೆ ತನ್ನ ಕಟಿಬಂಧನವನ್ನು ಕೊಡಲು ಸಿದ್ಧಳಿರಲಿಲ್ಲ. ಅವಳ ಮರಣದ ನಂತರವೇ ಟೊಂಕಪಟ್ಟಿ ಹೆರಾಕ್ಲಿಸ್‍ನಿಗೆ ಸಿಕ್ಕಿತು. ಹೆರಾಕ್ಲಿಸ್ ಮರಳಿಬಂದ. ದಾರಿಯಲ್ಲಿ ಅವನು ಲೈಕಸ್‍ನ ನೆನಪಿನಲ್ಲಿ ಆಯೋಜಿಸಿದ್ದ ಆಟಗಳಲ್ಲಿ ಪಾಲುಗೊಂಡ. ಅಲ್ಲಿನ ಬಾಕ್ಸಿಂಗ್ ಚಾಂಪಿಯನ್ ಟೀಶಿಯಸ್‍ನನ್ನು ನೆಲಕ್ಕುರುಳಿಸಿದ. ಬಿಥೀನಿಯನ್ಸರನ್ನು ಸೋಲಿಸಿದ. ಟ್ರಾಯ್‍ನಲ್ಲಿ ಒಬ್ಬ ಜಲದೈತ್ಯನಿಂದ ಹೀಸಿಯಾನಿಯನ್ನು ರಕ್ಷಿಸಿದ. ಥೆಸಾಸ್‍ನಲ್ಲಿ ನೆಲೆಗೊಂಡ ಡೈಸ್‍ವಾಸಿಗಳನ್ನು ಸೋಲಿಸಿದ. ಟಾರಾನ್ ಪ್ರೊಟಿಯಸ್‍ನ ಇಬ್ಬರು ಮಕ್ಕಳನ್ನು ಕುಸ್ತಿಯಲ್ಲಿ ಸೋಲಿಸಿದ. ಮಾಯಸೀನಿ ತಲುಪಿ ಹೆರಾಕ್ಲಿಸ್ ಹಿಪ್ಪಾಲಟಿಯ ಟೊಂಕಪಟ್ಟಿಯನ್ನು ಯೂರಿಸ್ಥಿಯಸ್‍ಗೆ ಕೊಟ್ಟ. ಅವನು ತನ್ನ ಮಗಳು ಎಡ್‍ಮೆಟಿಗೆ ಕೊಟ್ಟನು. ಹೆರಾಕ್ಲಿಸ್ ಲೂಟಿ ಮಾಡಿತಂದ ಅಮೇಜನ್ಸ ಸ್ತ್ರೀಯರ ವಸ್ತ್ರಗಳನ್ನು ಡೆಲ್ಫಿಯ ದೇವಾಲಯಕ್ಕೆ ಅರ್ಪಿಸಿದ. ಹಿಪ್ಪಾಲಿಟಿಯ ಯುದ್ಧದ ಕೊಡಲಿಯನ್ನು ರಾಣಿ ಆ್ಯಂಫೆಲ್‍ಳಿಗೆ ಕಾಣಿಕೆಯಾಗಿ ಕೊಟ್ಟ. ಈ ಅಮೇಜನ ಸ್ತ್ರೀಯರಿಗೆ ಸಂಬಂಧಿಸಿದ ಸಂಗತಿಯ ವಿವರಗಳು ಅಲೆಗ್ಸಾಂಡರ್ ದಿ ಗ್ರೇಟನ ಕಾಲದವರೆಗೆ ದೊರೆಯುತ್ತವೆ. ಅಲೆಗ್ಸಾಂಡರ್‍ನಿಂದ ಸಂತಾನ ಪಡೆಯಲು 13 ದಿನಗಳ ಕಾಲ ಅವನೊಂದಿಗೆ ಅವರ ರಾಣಿಯು ಇದ್ದಳು ಎಂದು ಹೇಳುತ್ತಾರೆ. ದುರ್ಭಾಗ್ಯವಶಾತ್ ತುಸುದಿನಗಳಲ್ಲಿಯೇ ಅವನು ಮರಣಹೊಂದಿದನು. 250 ಕಥಾ ಸಂಸ್ಕೃತಿ ಹತ್ತನೆಯ ಶ್ರಮ : ಗೆರೊನ ದನಕರುಗಳು ಹೆರಾಕ್ಲಿಸ್ ಮಾಡಿದ ಹತ್ತನೆಯ ಕಷ್ಟದ ಕೆಲಸವೆಂದರೆ ಎರಿಥಾನಾದಿಂದ ಗೆರೊನ ವಿಶ್ವವಿಖ್ಯಾತ ದನಕರುಗಳನ್ನು ಮೈಸಿನಿಯಾಕ್ಕೆ ತಂದದ್ದು. ಕ್ರಿಸಾರ್ ಮತ್ತು ಟೈಟನ್ ಓಸಿನಸ್‍ನ ಮಗಳು ಕೆಲಿರುಈ ಯ ಮಗ ಗೆರೊ ಸ್ಪೇನ್‍ನಲ್ಲಿ ಟೈಟೆನಸ್‍ನ ರಾಜನಾಗಿದ್ದ. ಅವನು ಭೂ ಮಂಡಲದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಕ್ತಿಯೆಂದು ಖ್ಯಾತನಾಗಿದ್ದ. ಅವನಿಗೆ ಮೂರು ತಲೆಗಳು, ಆರು ಕೈ, ಟೊಂಕದ ಮೇಲೆ ಮೂರು ಮುಂಡಗಳಿದ್ದವು. ಅವನ ಹಸುಗಳು ತುಂಬ ಸುಂದರವಾಗಿದ್ದವು. ಅವನು ಅವುಗಳನ್ನು ನೋಡಿಕೊಳ್ಳಲು ಹಾಗೂ ಮೇಯಿಸಲು ಯುದ್ಧದೇವತೆಯಾದ ಎರಿಸ್‍ನ ಮಗ ಯೂರಿಶಿಯನ್‍ನನ್ನು ದನಗಾಹಿಯನ್ನಾಗಿ ನೇಮಕ ಮಾಡಿಕೊಂಡಿದ್ದ. ಅವನಲ್ಲದೆ ಟೈಫೂನ್ ಹಾಗೂ ಎಕಿಡನಿಯಿಂದ ಜನಿಸಿದ ಎರಡು ತಲೆಗಳುಳ್ಳ ಭಯಂಕರವಾದ ನಾಯಿ ಆರ್ಥ್ರಸ್ ಈ ದನಗಳನ್ನು ರಕ್ಷಣೆ ಮಾಡುತ್ತಿತ್ತು. ಯೂರೋಪ್ ಮೂಲಕ ಯಾತ್ರೆ ಮಾಡುತ್ತ ಹೆರಾಕ್ಲಿಸ್ ದಾರಿಯಲ್ಲಿ ಅನೇಕ ಅಡವಿ ಮೃಗಗಳನ್ನ ನಾಶ ಮಾಡುತ್ತ, ಮುಂದಿನ ದಿನಗಳಲ್ಲಿ ಅಲ್ಲಿ ತಿರುಗಾಡುವ ಜನರ ದಾರಿಗಳನ್ನು ಸುಗಮಗೊಳಿಸಿದ. ಟಾರಟೆಸೆಸ್ ತಲುಪಿ ಹೆರಾಕ್ಲಿಸ್ ಎರಡು ಪ್ರಸಿದ್ಧ ಸ್ತಂಭಗಳನ್ನು ಸ್ಥಾಪಿಸಿದ - ಒಂದು ಯೂರೋಪ್‍ದಲ್ಲಿ, ಇನ್ನೊಂದು ಆಫ್ರಿಕಾದಲ್ಲಿ. ಇಂದಿಗೂ ಅವನ್ನು ‘ಪಿಲ್ಲರ್ಸ್ ಆಫ್ ಹೆರಾಕ್ಲಿಸ್’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಈ ಎರಡೂ ಮಹಾದ್ವೀಪಗಳು ಮೊದಲಿನಿಂದಲೂ ಒಂದೇ ಆಗಿದ್ದು ಹೆರಾಕ್ಲಿಸ್‍ನು ಇವುಗಳ ಮಧ್ಯೆ ನೀರಿನ ಪ್ರವಾಹವನ್ನು ಕತ್ತರಿಸಿ ಹಾಕಿದ್ದನು. ಇದಕ್ಕೆ ವಿರುದ್ಧವಾಗಿ ಮತ್ತೊಂದು ವಿಶ್ವಾಸವೆಂದರೆ ಹೆರಾಕ್ಲಿಸ್‍ನು ಎರಡು ಬಂಡೆಗಳನ್ನು ಹತ್ತಿರ ಹತ್ತಿರ ಸರಿಸಿ ಈ ದಾರಿಯನ್ನು ಇಕ್ಕಟ್ಟಾಗಿಸಿದ. ವ್ಹೇಲ್ ಮೀನುಗಳು ಮತ್ತು ಅನ್ಯ ಸಮುದ್ರ ದೈತ್ಯರು ಅದರ ಮೂಲಕ ಬರಲು ಸಾಧ್ಯವಾಗದಂತೆ ವ್ಯವಸ್ಥೆ ಮಾಡಿದ್ದ. ಹೆರಾಕ್ಲಿಸ್ ಈ ಕಾರ್ಯದಲ್ಲಿ ತೊಡಗಿಕೊಂಡಾಗ ಸೂರ್ಯದೇವತೆ ಹೀಲಿಯಸ್ ಪೂರ್ಣಯೌವನದಲ್ಲಿದ್ದ. ಅವನ ತೇಜಸ್ಸು ಹಾಗೂ ತಾಪವು ತಡೆದುಕೊಳ್ಳಲು ಅಸಾಧ್ಯವಾಗಿತ್ತು. ಅವನು ಹೀಲಿಯಸ್‍ಗೆ ಗುರಿಯಿಟ್ಟು ಒಂದು ಬಾಣ ಬಿಟ್ಟ. ಇಂಥ ದುಸ್ಸಾಹಸವು ಹೀಲಿಯಸ್‍ನಿಗೆ ಸಹಿಸಲು ಅಸಾಧ್ಯವಾಗಿತ್ತು. ಅವನು ಜೋರಾಗಿ ಚೀರಿದ. ತಕ್ಷಣ ಹೆರಾಕ್ಲಿಸ್‍ನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತನ್ನ ಅವಿಧೇಯತೆಗಾಗಿ ಕ್ಷಮೆಯಾಚಿಸುತ್ತ ಬಿಲ್ಲಿನ ಹೆದೆಯನ್ನು ಇಳಿಸಿದನು. ಹೀಲಿಯಸ್ ಈ ವಿನಮ್ರತೆಗೆ ಪ್ರಸನ್ನನಾಗಿ ಹೆರಾಕ್ಲಿಸ್‍ನಿಗೆ ಯಾತ್ರೆಗಾಗಿ ಕಮಲದ ಆಕಾರದ ಒಂದು ಬಂಗಾರವರ್ಣದ ಪಾತ್ರೆಯನ್ನು ಉಡುಗೊರೆಯಾಗಿ ಕೊಟ್ಟ. ಹೆರಾಕ್ಲಿಸ್ ಈ ಬಟ್ಟಲಿನಲ್ಲಿ ಕೂತು ಸಮುದ್ರದಲ್ಲಿ ಎರಿಥಾಯಾದತ್ತ ಯಾತ್ರೆ ಮಾಡುತ್ತಿದ್ದ. ಗ್ರೀಸ್ (ಯೂನಾನ್) 251 ಟೈಟನ್ ಓಸಿನಸ್‍ನ ಅಪ್ಪಣೆಯಂತೆ ತೆರೆಗಳು ಸೊಕ್ಕಿನಿಂದ ಮೆರೆಯತೊಡಗಿದವು. ಹೆರಾಕ್ಲಿಸ್‍ನ ಚಿಕ್ಕನಾವೆಯು ಈ ಪೆಟ್ಟಿನಿಂದ ತತ್ತರಿಸತೊಡಗಿತು. ಸಿಟ್ಟಿಗೆದ್ದ ಹೆರಾಕ್ಲಿಸ್ ಮತ್ತೊಮ್ಮೆ ಬಾಣವನ್ನು ಬಿಲ್ಲಿಗೆ ಹೂಡಿದ. ಓಸಿನಸ್ ಸಮುದ್ರವನ್ನು ಶಾಂತಗೊಳಿಸದಿದ್ದರೆ ಅವನನ್ನು ದಂಡಿಸುವುದಾಗಿ ಆಜ್ಞೆ ಮಾಡಿದ. ನಿರುಪಾಯನಾದ ಓಸಿನಸ್ ಅವನ ಆಜ್ಞೆಯನ್ನು ಪಾಲಿಸಬೇಕಾಯಿತು. ಹೆರಾಕ್ಲಿಸ್ ಎಬಸ್ ಪರ್ವತದ ಬಳಿ ಹೋಗಿ ನಾವೆಯನ್ನು ದಡಕ್ಕೆ ಹಚ್ಚಿದ. ಗೆರೊನ ಹಸುಗಳು ಇಲ್ಲಿಯೇ ಇದ್ದವು. ಹೆರಾಕ್ಲಿಸ್‍ನನ್ನು ನೋಡುತ್ತಲೇ ಆಥ್ರ್ರಸ್ ನಾಯಿ ಅವನ ಮೇಲೆ ಜಿಗಿಯಿತು. ಹೆರಾಕ್ಲಿಸ್ ತನ್ನ ಗದೆಯ ಒಂದು ಪ್ರÀಹಾರದಿಂದಲೇ ಅದರ ಕೆಲಸ ಮುಗಿಸಿಬಿಟ್ಟ. ದನಗಾಹಿ ಯೂರಿಶಿಯನ್‍ನ ಅಂತ್ಯವೂ ಅಲ್ಲೇ ಆಯಿತು. ಇಬ್ಬರು ರಕ್ಷಕರನ್ನು ಕೊಂದ ಹೆರಾಕ್ಲಿಸ್ ಅವನ ಹಸುಗಳಿಗೆ ಕೈ ಹಚ್ಚಿರದಿದ್ದರೂ, ಅವನು ಓಡಿಹೋಗಿ ಗೆರೊನಿಗೆ ಎಲ್ಲ ವಿಷಯವನ್ನು ತಿಳಿಸಿದ. ಗೆರೋ ಅಲ್ಲಿಗೆ ಬಂದ ಹೆರಾಕ್ಲಿಸ್‍ನನ್ನು ಯುದ್ಧಕ್ಕೆ ಆಹ್ವಾನಿಸಿದ. ಗೆರೋ ಪೃಥ್ವಿಯ ಮೇಲೆ ಸರ್ವಾಧಿಕ ಶಕ್ತಿಶಾಲಿಯೆಂದು ಖ್ಯಾತನಾದರೂ ಹೆರಾಕ್ಲಿಸ್‍ನಿಗೆ ಅವನನ್ನು ಕೊಲ್ಲುವುದು ಏನೂ ಕಷ್ಟವಾಗಲಿಲ್ಲ. ಹೆರಾಕ್ಲಿಸ್ ಅವನ ಅಡ್ಡದಿಕ್ಕಿನಿಂದ ಒಂದು ಬಾಣಬಿಟ್ಟಾಗ ಅವನ ಮೂರೂ ಶರೀರಗಳಲ್ಲಿ ಹೊಕ್ಕು ಬಾಣವು ಹೊರಬಿದ್ದಿತು. ಸ್ಯೂಸ್‍ನ ಪತ್ನಿ ಹೆರಾ ಗೆರೊನ ಸಹಾಯಕ್ಕಾಗಿ ಒಲಿಂಪಸ್‍ನಿಂದ ಬಂದಳೆಂದೂ, ಹೆರಾಕ್ಲಿಸ್ ಬಿಟ್ಟ ಬಾಣವು ಅವಳ ಎದೆಗೆ ತಾಗುತ್ತಲೇ ಅವಳು ಓಡಿಹೋದಳೆಂದು ಹೇಳುತ್ತಾರೆ. ಹೀಗೆ ಗೆರೊನನ್ನು ನೆಲಕ್ಕೆ ಬೀಳಿಸಿ ಹೆರಾಕ್ಲಿಸ್ ಹಸುಗಳ ಸಹಿತವಾಗಿ ಬಟ್ಟಲು ಆಕಾರದ ತನ್ನ ನಾವೆಯಲ್ಲಿ ಕುಳಿತು ಟಾರಟೆಸ್‍ನ್‍ನ್ನು ತಲುಪಿ ಆ ನಾವೆಯನ್ನು ಕೃತಜ್ಞತಾಪೂರ್ವಕ ಹೀಲಿಯಸ್‍ನಿಗೆ ಮರಳಿ ಅರ್ಪಿಸಿದ. ಹನ್ನೊಂದನೆಯ ಶ್ರಮ : ಹೆಸ್ಪರಿಡಿಸ್‍ನ ಸೇಬು ಹೆರಾಕ್ಲಿಸ್‍ನು ಮೊದಲ ಹತ್ತು ಕಷ್ಟದ ಕೆಲಸಗಳನ್ನು ಎಂಟುವರ್ಷ ಒಂದು ತಿಂಗಳ ಅವಧಿಯಲ್ಲಿ ಪೂರ್ಣ ಮಾಡಿದ. ಆದರೆ ಯೂರಿಸ್ಥಿಯಸ್‍ನು ಎರಡನೆಯ ಹಾಗೂ ಐದನೆಯ ಯಶಸ್ಸನ್ನು ಅದರಲ್ಲಿ ಸೇರಿಸಲು ಒಪ್ಪಿರಲಿಲ್ಲ. ಹಾಗಾಗಿ ಮತ್ತೆರಡು ಅಸಾಧ್ಯ ಕಾರ್ಯಗಳಿಗೆ ತಯಾರಾಗಲು ಸೂಚನೆ ಕೊಟ್ಟ. ಈ ಬಾರಿ ಅವನು ಹೆಸ್ಪರಿಡಿಸ್‍ನ ಬಂಗಾರವರ್ಣದ ಮರದಿಂದ ಸೇಬನ್ನು ತರಬೇಕಾಗಿತ್ತು. ಈ ಸೇಬಿನ ಮರವನ್ನು ಭೂಮಿ ತಾಯಿಯು ದೇವರಾಜ ಸ್ಯೂಸ್ ಮತ್ತು ಹೆರಾಳ ಮದುವೆಯ ಸಂದರ್ಭದಲ್ಲಿ ಹೆರಾಳಿಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಹೆರಾಳಿಗೆ ಈ ಮರ ಹಾಗೂ ಹಣ್ಣು ತುಂಬ ಇಷ್ಟವಾದುದರಿಂದ ಆ ಮರವನ್ನು ತನ್ನ ದೈವೀ ಉದ್ಯಾನದಲ್ಲಿ ಹಾಕಿಸಿದ್ದಳು. ಅದರ ಮೇಲ್ವಿಚಾರಣೆಯ ಹೊಣೆಯನ್ನು ಎಟಿಲಿಸ್‍ನ ಪುತ್ರಿಯರಿಗೆ ವಹಿಸಿದ್ದಳು. ಹೆಸ್ಪಾರಿಡಿಸ್ ಎಂಬುದು ಪ್ರಾಯಶಃ ಈ ಕನ್ಯೆಯರ 252 ಕಥಾ ಸಂಸ್ಕೃತಿ ಹೆಸರಾಗಿತ್ತು. ಆದರೆ ಹೆರಾಳ ಈ ಉಪವನ ಎಲ್ಲಿದೆಯೆಂಬುದು ಯಾರಿಗೂ ಗೊತ್ತಿರಲಿಲ್ಲ. ಒಂದು ಹೇಳಿಕೆಯ ಪ್ರಕಾರ ಈ ಉಪವನವು ಎಟಲಿಸ್ ಪರ್ವತದ ತಪ್ಪಲಿನಲ್ಲಿತ್ತು. ಇದು ಹಗಲಿಡೀ ಯಾತ್ರೆಯ ಕೊನೆಯಲ್ಲಿ ಹೀಲಿಯಸ್‍ನ ದಣಿದ ಕುದುರೆಗಳು ಸಂಜೆಗೆ ತಲುಪುವ ಪ್ರದೇಶದಲ್ಲಿತ್ತು. ಇಲ್ಲಿ ಎಟಲಸ್‍ನ ಸಾವಿರಾರು ಹಸುಗಳು ನಿರಾತಂಕವಾಗಿ ಮೇಯುತ್ತವೆ. ಆದರೆ ಹೆಸ್ಪಾರಿಡಿಸ್ ಹೈಪರ್‍ಬೋರಿಯಸ್ ಜಾತಿಗೆ ಸಂಬಂಧಿಸಿದ ಎಟಲಿಸ್ ಪರ್ವತಭಾಗದಲ್ಲಿದ್ದರೇ, ಮಾರೆಟೋನಿಯಾದಲ್ಲಿರುವ ಎಟಲಿಸ್ ಪರ್ವತಭಾಗದಲ್ಲಿದ್ದರೇ, ಅಥವಾ ಆಫ್ರಿಕಾದ ಗಡಿಯಲ್ಲಿರುವ ‘ವೆಸ್ಟರ್ನ್ ಹಾರ್ನ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಕ್ಷೇತ್ರದ ಸಮೀಪದಲ್ಲಿನ ಎರಡು ದ್ವೀಪದಲ್ಲಿದ್ದರೇ ಎಂಬುದು ವಿವಾದಾಸ್ಪದವಾಗಿದೆ. ಒಂದು ಹೇಳಿಕೆಯ ಪ್ರಕಾರ ಆಗಿನ್ನೂ ಎಟಲಸ್‍ನನ್ನು ಭೂಮಂಡಲದ ಹೊಣೆ ಹೊರಲು ನಿಯುಕ್ತಗೊಳಿಸಲಾಗಿರಲಿಲ್ಲ. ಅವನೂ ತನ್ನ ಪುತ್ರಿಯರೊಂದಿಗೆ ಈ ವೃಕ್ಷದ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದ. ಈ ಮರವು ಹೆರಾಳಿಗೆ ಸೇರಿದ್ದಾಗಿದ್ದರೂ ಎಟಲಸ್‍ನಿಗೆ ಅದರ ಬಗ್ಗೆ ತುಂಬ ಮೋಹವಿತ್ತು. ಅದರ ರಕ್ಷಣೆ ಮಾಡುವಲ್ಲಿ ಗರ್ವವೆನಿಸುತ್ತಿತ್ತು. ಆದರೆ ಒಂದು ದಿನ ಥೆಮಿಸ್‍ನು ತನ್ನ ಭವಿಷ್ಯವಾಣಿಯಲ್ಲಿ ಸ್ಯೂಸ್‍ನ ಒಬ್ಬ ಶಕ್ತಿಶಾಲಿಯಾದ ಮಗನು ಮುಂಬರುವ ದಿನಗಳಲ್ಲಿ ಈ ವೃಕ್ಷದ ಬಂಗಾರವನ್ನು ಒಯ್ಯುವನು ಎಂದು ಹೇಳಿದ್ದ. ಎಟಲಸ್ ಈ ಭವಿಷ್ಯವಾಣಿಯ ಅನಂತರ ಮರದ ರಕ್ಷಣೆಗೆ ಹೆಚ್ಚಿನ ವ್ಯವಸ್ಥೆ ಮಾಡಿದ್ದ. ಉದ್ಯಾನದ ನಾಲ್ಕೂ ಕಡೆ ಗೋಡೆ ಕಟ್ಟಲಾಗಿತ್ತು. ಎಂದೂ ಕಣ್ಣು ಮುಚ್ಚದ ಲೆಡಾನ್ ಎಂಬ ಹೆಸರಿನ ಸರ್ಪವನ್ನು ಹೆರಾ ವೃಕ್ಷದ ಪಹರೆಗಾಗಿ ನೇಮಿಸಿದ್ದಳು. ಕೆಲವು ಮೂಲಗಳ ಪ್ರಕಾರ ಈ ಸರ್ಪವು ಟೈಫೂನ್ ಹಾಗೂ ಎಕಿಡನಿಯರಿಂದ ಜನಿಸಿದ್ದಾಗಿತ್ತು. ಇನ್ನೊಂದು ಹೇಳಿಕೆಯ ಪ್ರಕಾರ ಈ ಸರ್ಪವು ಭೂಮಿಯ ಮಗನಾಗಿತ್ತು. ಅದಕ್ಕೆ ಸಾವಿರ ತಲೆಗಳಿದ್ದು ಯಾವತ್ತೂ ನಿದ್ದೆ ಮಾಡುತ್ತಿರಲಿಲ್ಲ. ಹೆಸ್ಪಾರಿಡಿಸ್‍ನ ಉದ್ಯಾನ ಎಲ್ಲಿದೆಯೆಂಬುದು ಹೆರಾಕ್ಲಿಸ್‍ನಿಗೆ ಗೊತ್ತಿರಲಿಲ್ಲ. ಮೊದಲು ಅದರ ಸ್ಥಿತಿಯನ್ನು ಪತ್ತೆ ಮಾಡಬೇಕಾಗಿತ್ತು. ನದಿಯ ದೇವತೆಯಾದ ನೇರಿಯಸ್ ಅದರ ಮಾರ್ಗದರ್ಶನ ಮಾಡಬಲ್ಲನೆಂಬ ಸಂಗತಿ ವಿಶ್ವಾಸಾರ್ಹ ಮೂಲಗಳಿಂದ ತಿಳಿಯಿತು. ಆದ್ದರಿಂದ ಅವನು ಇಲೀರಿಯಾ ಮಾರ್ಗವಾಗಿ ಪೋ ನದಿಯಕಡೆ ಮುನ್ನಡೆದ. ರಸ್ತೆಯಲ್ಲಿ ಅವನು ಎರಿಸ್‍ನ ಮಗನ ಜೊತೆ ಮುಖಾಮುಖಿ ಆದನು. ತನ್ನ ಮಗನಿಗೆ ಸಹಾಯ ಮಾಡಲು ಯುದ್ಧದೇವತೆ ಎರಿಸ್ ಸ್ವಯಂ ಹೆರಾಕ್ಲಿಸ್‍ನೊಡನೆ ಯುದ್ಧ ಮಾಡಲು ಮುಂದೆ ಬಂದ. ಆದರೆ ಸ್ಯೂಸ್‍ನು ತನ್ನ ವಜ್ರವನ್ನು ಈ ಇಬ್ಬರ ಮಧ್ಯದಲ್ಲಿ ಎಸೆದು ಪರಿಸ್ಥಿತಿಯನ್ನು ನಿವಾರಣೆ ಮಾಡಿದನು. ಗ್ರೀಸ್ (ಯೂನಾನ್) 253 ಹೆರಾಕ್ಲಿಸ್ ಪೊ ನದಿಯ ಹತ್ತಿರ ಬಂದಾಗ ಸ್ಯೂಸನ ಮತ್ತು ಥೆಮಿಸ್‍ನ ಪುತ್ರಿಯರು ನೆರಿಯಸ್‍ನನ್ನು ಕಾಣಲು ಸಹಾಯ ಮಾಡಿದರು. ನೆರಿಯಸ್ ಅದೇ ನದಿಯ ದಂಡೆಯ ಮೇಲೆ ಮಲಗಿದ್ದ. ಅವನ ಶರೀರದಿಂದ ನೀರು ಹನಿಯುತ್ತಿತ್ತು. ಸದಾ ನೀರಿನಲ್ಲಿರುವುದರಿಂದ ಅವನ ಶರೀರದ ಮೇಲೆ ಪಾಚಿ ಮತ್ತು ಬಹಳ ಜಾರುವಿಕೆಯಿತ್ತು. ಜೊತೆಗೆ ಬೇಕಾದಾಗ ಬೇಕಾದ ರೂಪ ಧಾರಣ ಮಾಡಬಲ್ಲ ವರದಾನವೂ ಅವನಿಗಿತ್ತು. ಹೆರಾಕ್ಲಿಸ್ ಮಲಗಿದ್ದ ನೆರಿಯಾಸ್‍ನನ್ನು ತನ್ನ ಕಬ್ಬಿಣ ಸದೃಶ ಬಾಹುಗಳಿಂದ ಹಿಡಿದುಕೊಂಡ. ನೆರಿಯಸ್ ಕೈಕಾಲು ಬಡಿದುಕೊಂಡ, ಆಕೃತಿಗಳನ್ನು ಬದಲಿಸಿದ, ಆದರೆ ಹೆರಾಕ್ಲಿಸ್‍ನ ಹಿಡಿತದಿಂದ ಬಿಡುಗಡೆ ಪಡೆಯಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಅನಿವಾರ್ಯವಾಗಿ ಅವನು ಹೆರಾಕ್ಲಿಸ್‍ನಿಗೆ ಹೆಸ್ಪಾರಿಡಸ್‍ಗೆ ಹೋಗುವ ದಾರಿ ಹಾಗೂ ಸೇಬನ್ನು ಪಡೆಯುವ ವಿಧಾನವನ್ನು ಹೇಳಲೇಬೇಕಾಯಿತು. ಹೆರಾಕ್ಲಿಸ್‍ನು ಆ ಸೇಬನ್ನು ಸ್ವಯಂ ಕೊಯ್ಯಬಾರದೆಂದೂ, ಎಟಲಸ್‍ನಿಗೆ ಅದನ್ನು ತೆಗೆಯಲು ಒತ್ತಾಯ ಮಾಡಬೇಕೆಂದೂ ಅವನು ಹೇಳಿದ. ಕೆಲವು ಜನರ ಹೇಳಿಕೆ ಪ್ರಕಾರ ನೆರಿಯಸ್ ಹೆರಾಕ್ಲಿಸ್‍ನನ್ನು ಪ್ರೊಮಿಥ್ಯೂಸ್‍ನ ಬಳಿ ಕಳುಹಿಸಿದ್ದ. ಪ್ರೊಮಿಥ್ಯೂಸ್ ಅವನಿಗೆ ಹೆಸ್ಪಾರಿಡಿಸ್‍ಗೆ ಹೋಗುವ ಮಾರ್ಗವನ್ನು ತಿಳಿಸಿದ್ದ. ಹೆಸ್ಪಾರಿಡಿಸ್ ಉದ್ಯಾನಕ್ಕೆ ಹೆರಾಕ್ಲಿಸ್ ತಲುಪಿದಾಗ, ಎಟಲಸ್ ಪೃಥ್ವಿಯ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತು ನಿಂತಿದ್ದ. ಈ ಭಾರದಿಂದ ಕ್ಷಣ ಮಾತ್ರವಾದರೂ ಮುಕ್ತಿ ಪಡೆಯಲು ಅವನು ಏನು ಬೇಕಾದರೂ ಮಾಡಲು ಸಿದ್ಧನಿದ್ದ. ಸ್ವರ್ಣವೃಕ್ಷದಿಂದ ಸೇಬನ್ನು ತಂದು ಕೊಡುವುದಕ್ಕೆ ಪ್ರತಿಯಾಗಿ ಭೂಮಿಯನ್ನು ಹೆಗಲ ಮೇಲೆ ಹೊರಲು ಹೆರಾಕ್ಲಿಸ್ ಪ್ರಸ್ತಾಪ ಮಾಡಿದಾಗ ಅವನು ಸಂತೋಷದಿಂದ ಒಪ್ಪಿದ. ಪೃಥ್ವಿಯನ್ನು ಹೆರಾಕ್ಲಿಸ್‍ನ ಹೆಗಲ ಮೇಲೆ ಇರಿಸಿ ಎಟಲಸ್ ಉದ್ಯಾನಕ್ಕೆ ಹೋಗಿ ಮೂರು ಸೇಬನ್ನು ತಂದನು. ಆದರೆ ಈಗ ಅವನು ಸ್ವಾತಂತ್ರ್ಯದ ಆನಂದವನ್ನು ಅರಿತುಕೊಂಡಿದ್ದ. ಈಗ ಅವನು ಯಾವ ಬೆಲೆ ಕೊಟ್ಟರೂ ಮತ್ತೊಮ್ಮೆ ಭಾರ ಹೊರಲು ಸಿದ್ಧನಿರಲಿಲ್ಲ. ಆದ್ದರಿಂದ ಅವನು ಹೆರಾಕ್ಲಿಸ್‍ನಿಗೆ ಹೇಳಿದ. ನಾನು ಈ ಸೇಬನ್ನು ಯೂರಿಸ್ಥಿಯಸ್‍ನಿಗೆ ತಲುಪಿಸಿ ಕೆಲವೇ ತಿಂಗಳುಗಳಲ್ಲಿ ಮರಳಿ ಬರುತ್ತೇನೆ. ನೀನು ಅಲ್ಲಿಯವರೆಗೆ ಭೂಮಿಯ ಭಾರವನ್ನು ಸಂಬಾಳಿಸಿಕೊಂಡಿರು. ಹಿಂತಿರುಗಿ ಬರುತ್ತಲೇ ನಾನು ಇದನ್ನು ನನ್ನ ಹೆಗಲ ಮೇಲೆ ತೆಗೆದುಕೊಳ್ಳುತ್ತೇನೆ. ಹೆರಾಕ್ಲಿಸ್‍ನು ಎಟಲಸ್‍ನ ಅಭಿಪ್ರಾಯವನ್ನು ಅರಿತನು. ಅವನು ಈ ಅಸಹನೀಯ ಭಾರವನ್ನು ಅನಂತಕಾಲದವರೆಗೆ ಹೆರಾಕ್ಲಿಸ್‍ನಿಗೆ ಹೊರಿಸಿ ತಾನು ಬಿಡುಗಡೆ ಹೊಂದಬಯಸಿದ್ದ. ಹೆರಾಕ್ಲಿಸ್ ಪ್ರಕಟರೂಪದಲ್ಲಿ ಈ ಪ್ರಸ್ತಾವನೆಯನ್ನು 254 ಕಥಾ ಸಂಸ್ಕೃತಿ ಒಪ್ಪಿಕೊಳ್ಳುತ್ತ ಹೇಳಿದನು. ಎಟಲಸ್ ಒಂದು ಕ್ಷಣದವರೆಗೆ ತನ್ನ ಹೆಗಲ ಮೇಲೆ ಭೂಮಿಯನ್ನು ತೆಗೆದುಕೊಂಡರೆ, ತಾನು ತನ್ನ ತಲೆ ಮತ್ತು ಭುಜದ ಮೇಲೆ ಗಾದಿಯನ್ನು ಹಾಕಿಕೊಳ್ಳುತ್ತೇನೆ. ಮೂರ್ಖ ಎಟಲಿಸ್ ಹೆರಾಕ್ಲಿಸ್‍ನ ಬುದ್ಧಿವಂತಿಕೆಯಿಂದ ಮೋಸಹೋದನು. ಅವನು ತಕ್ಷಣ ಸೇಬನ್ನು ಕೆಳಗಿಟ್ಟು ಭೂಮಿಯನ್ನು ಹೊತ್ತುಕೊಂಡನು. ಹೆರಾಕ್ಲಿಸ್‍ನು ಸೇಬು ತೆಗೆದುಕೊಂಡು, ತನ್ನ ಹೆಗಲನ್ನು ನೆಟ್ಟಗೆ ಮಾಡಿಕೊಂಡು ವ್ಯಂಗ್ಯವಾಗಿ ವಿದಾಯ ಹೇಳಿ ಹೊರಟುಬಿಟ್ಟನು. ಹೆರಾಕ್ಲಿಸ್ ನೇರವಾಗಿ ಸರಳ ಮಾರ್ಗದಿಂದ ಮಾಯಸೀನಿಗೆ ಬರಲಿಲ್ಲ. ಅವನಿಗೆ ಸದಾ ಹೊಸ ಸಾಹಸದ ಉಪಕ್ರಮದ ಶೋಧವಿತ್ತು. ಲೀಬಿಯಾದ ಮರುಭೂಮಿಯಲ್ಲಿ ಹೆರಾಕ್ಲಿಸ್‍ನಿಗೆ ತುಂಬ ಬಾಯಾರಿಕೆಯಾಯಿತು. ಆದರೆ ಮರುಭೂಮಿಯಲ್ಲಿ ನೀರೆಲ್ಲಿ. ಹೆರಾಕ್ಲಿಸ್ ಜೋರಾಗಿ ನೆಲದ ಮೇಲೆ ಕಾಲಿನಿಂದ ಬಡಿದನು. ನೀರಿನ ಒಂದು ಧಾರೆ ಅಲ್ಲಿ ಹರಿದುಬಂತು. ಈ ಜಲಧಾರೆಯೇ ಅನಂತರದಲ್ಲಿ ಲಿಬಿಯಾದ ಮರುಭೂಮಿಯಲ್ಲಿ ಅಲೆಯುತ್ತಿದ್ದ ಎಗನಾಟ್ಸನ ಜೀವ ಉಳಿಸಿತು. ಆಗ ಪಾಸಾಯ್ಡಸ್ ಹಾಗೂ ಪೃಥ್ವಿಯ ಮಗ ಎಂಟಾಯಸ್ ಲಿಬಿಯಾದ ರಾಜನಾಗಿದ್ದ. ಎಂಟಾಯಸ್ ತುಂಬ ಶಕ್ತಿಶಾಲಿ ಹಾಗೂ ಚತುರ ಪೈಲ್ವಾನನಾಗಿದ್ದ. ಅವನು ಲಿಬಿಯಾಕ್ಕೆ ಬರುವ ಯಾತ್ರಿಕರಿಗೆ ಕುಸ್ತಿಗೆ ಆಮಂತ್ರಿಸಿ, ಅವರು ಸೋತಮೇಲೆ ಕೊಂದುಹಾಕುತ್ತಿದ್ದ. ಎಂಟಾಯಸ್ ಕುಸ್ತಿಯಾಡುವ ಸಮಯದಲ್ಲಿ ನೆಲವನ್ನು ಸ್ಪರ್ಶಿಸಿದಂತೆಲ್ಲ ಅವನ ನಷ್ಟವಾದ ಶಕ್ತಿಯ ಮರು ಪೂರಣವಾಗುವುದೇ ಅವನ ಸಫಲತೆಯ ರಹಸ್ಯವಾಗಿತ್ತು. ಅದೇ ಬೇರೆ ಯಾರಾದರೂ ನೆಲಕ್ಕೆ ಬಿದ್ದರೆ ಅವರ ಶಕ್ತಿ ಕ್ಷೀಣಿಸುತ್ತದೆ. ಇದಕ್ಕೆ ಕಾರಣವೆಂದರೆ ಎಂಟಾಯಸ್ ಪೃಥ್ವಿಯ ಮಗನಾಗಿದ್ದ. ತಾಯಿಯ ವಿಶೇಷ ಅನುಕಂಪ ಅವನ ಮೇಲಿತ್ತು. ಅವನು ಬೃಹದಾಕಾರದ ವ್ಯಕ್ತಿಯಾದ್ದರಿಂದ ಎತ್ತರವಾದ ಬಂಡೆಯ ಅಡಿಯ ಗುಹೆಯಲ್ಲಿ ಅವನು ವಾಸವಾಗಿದ್ದ. ಸಿಂಹಗಳ ಮಾಂಸದ ಆಹಾರ ತಿನ್ನುತ್ತಿದ್ದ. ನಿರಂತರ ಶಕ್ತಿಯನ್ನು ತುಂಬಿಕೊಳ್ಳಲು ಬರಿ ನೆಲದ ಮೇಲೆ ಮಲಗುತ್ತಿದ್ದ. ಭೂ ತಾಯಿಗೆ ಈ ಮಗನ ಬಗ್ಗೆ ಹೆಮ್ಮೆಯಿತ್ತು. ಮಲ್ಲಯುದ್ಧದಲ್ಲಿ ಎಂಟಾಯಸ್ ಮನುಷ್ಯರನ್ನಷ್ಟೇ ಯಾಕೆ, ದೇವತೆಗಳಿಗೂ ಅವನನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ಹೆರಾಕ್ಲಿಸ್ ಮತ್ತು ಎಂಟಾಯಸ್ ನಡುವೆ ಮಲ್ಲಯುದ್ಧ ಅನಿವಾರ್ಯವಾಗಿತ್ತು. ಇಬ್ಬರೂ ಪ್ರತಿದ್ವಂದ್ವಿಗಳು ಸಿದ್ಧರಾದರು. ಹೆರಾಕ್ಲಿಸ್ ತನ್ನ ಶರೀರದ ಮೇಲೆ ಎಣ್ಣೆಯನ್ನು ಸವರಿಕೊಂಡರೆ, ಎಂಟಾಯಸ್ ಮಣ್ಣಿನ ಸಂಪರ್ಕ ಹೊಂದಲು ಒಣಮಣ್ಣನ್ನು ಹಚ್ಚಿಕೊಂಡನು. ಅಖಾಡಾದಲ್ಲಿ ಇಬ್ಬರೂ ವೀರರೂ ಎದುರಿಸಿದರು. ಬೇಗನೇ ಹೆರಾಕ್ಲಿಸ್ ಎಂಟಾಯಸ್‍ನ ಮೇಲೆ ಹಿಡಿತ ಹೊಂದಿದ. ಅವನನ್ನು ಎತ್ತಿ ಭೂಮಿಗೆ ಗ್ರೀಸ್ (ಯೂನಾನ್) 255 ಅಪ್ಪಳಿಸಿದ. ಆದರೆ ಎಂಟಾಯಸ್ ನೆಲದಿಂದ ಮೊದಲಿಗಿಂತ ಹೆಚ್ಚು ಶಕ್ತಿ ಹಾಗೂ ತೇಜಸ್ಸನ್ನು ಪಡೆದು ಎದ್ದ. ಹೆರಾಕ್ಲಿಸ್ ಚಕಿತನಾಗಿದ್ದ. ಹೆರಾಕ್ಲಿಸ್ ಮತ್ತೆ ಮತ್ತೆ ಎಂಟಾಯಿಸ್‍ನನ್ನು ಕೆಡವಿದಂತೆಲ್ಲ ಅವನು ದ್ವಿಗುಣ ವೇಗದಿಂದ ಎದ್ದು ನಿಲ್ಲುತ್ತಿದ್ದ. ಎಂಟಾಯಸ್ ಮತ್ತೆ ಮತ್ತೆ ತಾನಾಗಿಯೇ ಭೂಮಿಯ ಮೇಲೆ ಬೀಳುತ್ತಿದ್ದುದನ್ನು ಹೆರಾಕ್ಲಿಸ್ ಗ್ರಹಿಸಿದ. ಆದ್ದರಿಂದ ಈ ಬಾರಿ ಎಂಟಾಯಸ್‍ನನ್ನು ಎರಡೂ ಬಾಹುಗಳಿಂದ ತನ್ನ ತಲೆಯ ಮೇಲೆತ್ತಿ ಗಾಳಿಯಲ್ಲಿ ತಿರುಗಿಸಿದ, ಅವನ ಪಕ್ಕೆಲುಬನ್ನು ಮುರಿದ. ಎಂಟಾಯಸ್ ಸಾಕಷ್ಟು ಚಡಪಡಿಸಿದರೂ, ಅವನ ಪ್ರಾಣ ಹೋಗುವವರೆಗೂ ಅವನನ್ನು ನೆಲಕ್ಕೆ ಎಸೆಯಲಿಲ್ಲ. ಇದರ ಅನಂತರ ಹೆರಾಕ್ಲಿಸ್ ಏಶಿಯಾದಲ್ಲಿ ತಿರುಗುತ್ತ, ಕಾಕೇಸಸ್ ಪರ್ವತದ ಮೇಲಕ್ಕೆ ಹೋದ. ಇಲ್ಲಿಯೇ ಪ್ರೊಮಿಥ್ಯೂಸ್ ಕಳೆದ ಸಾವಿರ-ಮೂರುಸಾವಿರ ವರ್ಷಗಳಿಂದ ಬಂಧಿತನಾಗಿ ಅನಂತ ಯಾತನೆಗಳನ್ನು ಅನುಭವಿಸುತ್ತಿದ್ದ. ಅವನ ಕೈ-ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿತ್ತು. ಮತ್ತು ಟೈಫೂನ್ ಹಾಗೂ ಎಕಿಡನಿಯಿಂದ ಉತ್ಪನ್ನವಾದ ಭೀಮಕಾಯದ ಗಿಡುಗ ಅವನ ಎದೆಯನ್ನು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಮಾನವ ಪ್ರೇಮಿಯಾದ ಪ್ರೊಮಿಥ್ಯೂಸ್‍ನಿಗೆ ಮಾನವನಿಗಾಗಿ ಅಗ್ನಿಯನ್ನು ಕದ್ದ ಅಪರಾಧಕ್ಕಾಗಿ ಓಲಿಂಪಸ್‍ನಿಂದ ಈ ದಂಡ ದೊರೆತಿತ್ತು. ಪ್ರೊಮಿಥ್ಯೂಸ್‍ನ ಯಾತನೆ ಅನಂತವಾದದ್ದಾಗಿತ್ತು. ಸ್ಯೂಸನಿಗೆ ತನ್ನ ಈ ನಿರ್ಣಯದ ಬಗ್ಗೆ ಈಗ ಪಶ್ಚಾತ್ತಾಪವಾಗಿತ್ತು. ಯಾಕೆಂದರೆ ಈ ರೀತಿ ದಂಡಿತನಾದರೂ ಪ್ರೊಮಿಥ್ಯೂಸ್ ಸ್ಯೂಸ್‍ನ ಬಗ್ಗೆ ಸದ್ಭಾವನೆಯುಳ್ಳವನಾಗಿದ್ದ. ಸ್ಯೂಸ್ ಥೆಟಸ್ ಜೊತೆ ವಿವಾಹವಾಗಲಿರುವ ಸಂಗತಿ ಪ್ರೊಮಿಥ್ಯೂಸ್‍ನಿಗೆ ದಿವ್ಯಜ್ಞಾನದಿಂದ ತಿಳಿದಾಗ ಅವನು ಈ ವಿವಾಹ ಮಾಡಿಕೊಳ್ಳಬಾರದೆಂದು ಸ್ಯೂಸ್‍ನಿಗೆ ಎಚ್ಚರಿಕೆ ಕೊಟ್ಟಿದ್ದ. ಥೆಟಿಸ್‍ಳಿಗೆ ಪುತ್ರನು ಜನಿಸಿದರೆ ಅವನು ತನ್ನ ತಂದೆಗಿಂತ ಬಲಶಾಲಿಯಾಗುವುದು ನಿಶ್ಚಿತವಾಗಿತ್ತು. ಹೆರಾಕ್ಲಿಸ್‍ನು ಪ್ರೊಮಿಥ್ಯೂಸ್‍ನ ಮುಕ್ತಿಗಾಗಿ ಸ್ಯೂಸ್‍ನನ್ನು ಪ್ರಾರ್ಥಿಸಿಕೊಂಡಾಗ ತಕ್ಷಣ ಸ್ಯೂಸ್ ಒಪ್ಪಿಕೊಂಡ. ಹೆರಾಕ್ಲಿಸ್ ಪ್ರೊಮಿಥ್ಯೂಸ್‍ನ ಸರಪಳಿಗಳನ್ನು ತುಂಡು ಮಾಡಿದ ಮತ್ತು ತನ್ನ ಒಂದು ಬಾಣದಿಂದ ಆ ಗಿಡುಗನ ಹೃದಯವನ್ನು ಒಡೆದುಹಾಕಿದ. ಈಗ ಪ್ರೊಮಿಥ್ಯೂಸ್‍ನಿಗೆ ಹೆಡಿಸ್‍ಗೆ ಹೋಗುವುದರಿಂದ ತಪ್ಪಿಸುವುದು ಅವಶ್ಯಕವಾಗಿತ್ತು. ಯಾವುದಾದರೂ ಅಮರ ಪ್ರಾಣಿಯ ನಶ್ವರತೆಯನ್ನು ಸ್ವೀಕರಿಸಿ ಅವನ ಬದಲಿಗೆ ಟಾರ್‍ಟಾರಸ್ ಹೋಗಬೇಕಾಗಿತ್ತು. ಹೆರಾಕ್ಲಿಸ್‍ನ ಬಾಣದಿಂದ ಗಾಯಾಳುವಾದ ಕೆರೋ ಇಂದಿನವರೆಗೂ ತನ್ನ ಗುಹೆಯಲ್ಲಿ ಬಿದ್ದುಕೊಂಡು ನರಳುತ್ತಿದ್ದ. ತನ್ನ ಅಮರತ್ವವನ್ನು ನಿಂದಿಸಿಕೊಳ್ಳುತ್ತಿದ್ದ. ಅವನು ಸಂತೋಷದಿಂದ ಪ್ರೊಮಿಥ್ಯೂಸ್‍ನ ಸ್ಥಾನದಲ್ಲಿ ದೇಹ ಬಿಡಲು ಸಿದ್ಧನಾದ. ಸ್ಯೂಸ್‍ನು ಅಮರತ್ವವನ್ನು ಕೊಡುವ ತಕ್ಕೊಳ್ಳುವ ಈ ಪ್ರಕ್ರಿಯೆಗೆ 256 ಕಥಾ ಸಂಸ್ಕೃತಿ ತನ್ನ ಒಪ್ಪಿಗೆಯ ಮುದ್ರೆಯನ್ನು ಒತ್ತಿದ. ಇದರಿಂದಾಗಿ ಮಾನವರೆಲ್ಲರ ನಿಜವಾದ ಮಿತ್ರ ಪ್ರೊಮಿಥ್ಯೂಸ್‍ನಿಗೆ ಬಿಡುಗಡೆಯಾಯಿತು. ಕಾಕೆಸಸ್ ಪರ್ವತದ ನಿವಾಸಿಗಳು ಇಂದಿನವರೆಗೂ ಗಿಡುಗನನ್ನು ಮಾನವನ ಶತ್ರುವೆಂದೇ ಭಾವಿಸುತ್ತಾರೆ. ಎಲ್ಲಿಯಾದರೂ ಅದರ ಗೂಡು ಕಾಣಿಸಿದರೆ ಅದಕ್ಕೆ ಉರಿಯುವ ಬಾಣ ಎಸೆದು ನಾಶ ಮಾಡುತ್ತಾರೆ. ಅವರು ಪ್ರೊಮಿಥ್ಯೂಸ್‍ನ ಬಂಧನದ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಮಾಯಸೀನಿ ತಲುಪಿ ಹೆರಾಕ್ಲಿಸ್ ಹೆಸ್ಪಾರಿಡಿಸ್‍ನ ಸೇಬನ್ನು ಯೂರಿಸ್ಥಿಯಸ್‍ನಿಗೆ ಕೊಟ್ಟ. ಅವನು ಅದನ್ನು ದೇವಿ ಎಥಿನಿಗೆ ಸಮರ್ಪಿಸಿದ. ಎಥಿನಿ ಅದನ್ನು ಪುನಃ ಹೆಸ್ಪಾರಿಡೀಸ್‍ಗೆ ಮರಳಿ ಕಳಿಸಿಕೊಟ್ಟಳು. ಯಾಕೆಂದರೆ ಅದು ಹೆರಾಳ ಸಂಪತ್ತಾಗಿತ್ತು. ಆದ್ದರಿಂದ ಅದರ ಬೇರೆ ಯಾವ ರೀತಿಯ ಉಪಯೋಗವೂ ಯೋಗ್ಯವಾಗಿರಲಿಲ್ಲ. ಹನ್ನೆರಡನೆಯ ಶ್ರಮ : ಸಿಬ್ರೆಸ್ ಸೆರೆಹಿಡಿಯುವಿಕೆ. ಯೂರಿಸ್ಥಿಯಸ್ ನೇಮಿಸಿದ ಹನ್ನೊಂದು ಶ್ರಮಗಳನ್ನು ಹೆರಾಕ್ಲಿಸ್ ಪೂರ್ಣ ಮಾಡಿದ್ದ. ಆದರೆ ಯೂರಿಸ್ಥಿಯಸ್‍ಗೆ ಸಂತೋಷವಿರಲಿಲ್ಲ. ಈ ಸಾಹಸದ ಸಂದರ್ಭದ ವಿಜಯಗಳಿಂದ ಹೆರಾಕ್ಲಿಸ್‍ನಿಗೆ ಮಾನವ ಕಲ್ಯಾಣದ ಮಹಿಮೆ ಪ್ರಾಪ್ತವಾಗಿದ್ದನ್ನು ಈ ಒಡೆಯ ಸಹಿಸಲಾರದವನಾಗಿದ್ದ. ಅದಕ್ಕಾಗಿ ಅವನು ಸಾಕಷ್ಟು ವಿಚಾರ ಮಾಡಿ, ಭೂಮಿಯ ಮೇಲಿನ ಯಾವ ಪ್ರಾಣಿಯೂ ಮಾಡಲಾರದ ಒಂದು ಕೆಲಸವನ್ನು ಹೆರಾಕ್ಲಿಸ್‍ನಿಗೆ ಆಜ್ಞೆಮಾಡಿದ. ಅದು ಟಾರ್‍ಟಾರಸನ ಮೂರು ಮುಖಗಳ ನಾಯಿ ಸೆಬ್ರೆಸ್‍ನ್ನು ಜೀವಂತವಾಗಿ ಹಿಡಿದು ತರುವುದು. ಯಾವುದೇ ವ್ಯಕ್ತಿಯೂ ಟಾರೆಟಾರಾಸ್ ಹತ್ತಿರ ಜೀವಂತವಾಗಿ ಹೋಗುವುದೇ ಸಾಧ್ಯವಿರಲಿಲ್ಲ. ಅಲ್ಲಿಂದ ಜೀವಂತವಾಗಿ ಹಿಂತಿರುಗುವುದಂತೂ ಅಸಾಧ್ಯವಾದ ಮಾತೇ ಆಗಿತ್ತು. ಆದರೆ ಹೆರಾಕ್ಲಿಸ್ ತನ್ನೊಂದಿಗೆ ಸೆಬ್ರೆಸ್‍ನ್ನೂ ತರಬೇಕಾಗಿತ್ತು. ಹೆರಾಕ್ಲಿಸ್ ಮೃತ್ಯುಲೋಕದ ರಹಸ್ಯಗಳನ್ನು ಅರಿಯುವ ಸಲುವಾಗಿ ಇಲ್ಯುಲಿಸ್‍ಗೆ ಮೊದಲು ಹೋದ. ಕೇವಲ ಅಥೆನ್ಸ್‍ನ ಜನರು ಮಾತ್ರ ಈ ರಹಸ್ಯಗಳನ್ನು ತಿಳಿಯಲು ದೀಕ್ಷಿತರಾಗಬಹುದಾದ ಪರಂಪರೆಯೇ ಬೆಳೆದುಬಂದಿತ್ತು. ಆದ್ದರಿಂದ ಪೀಲಿಯಸ್ ಎಂಬ ಹೆಸರಿನ ವೃದ್ಧರು ಹೆರಾಕ್ಲಿಸ್‍ನನ್ನು ದತ್ತಕ ಪುತ್ರನ ರೂಪದಲ್ಲಿ ಸ್ವೀಕಾರಮಾಡಿದನು. ಸೆಂಟಾರ್ಸ್‍ರ ವಧೆಯಿಂದ ಉಂಟಾದ ಪಾಪಕ್ಕಾಗಿ ಶುದ್ಧೀಕರಣ ಮಾಡಿಕೊಳ್ಳಲಾಯಿತು. ಆಗ ಅವನಿಗೆ ಪಾತಾಳಲೋಕದ ದೀಕ್ಷೆ ದೊರೆಯಿತು. ದೀಕ್ಷಾಗ್ರಹಣದ ಅನಂತರ ಹೆರಾಕ್ಲಿಸ್ ಲೆಕೋನಿಯಾದ ಟೈನಾರಸ್ ಅಥವಾ ಕಪ್ಪು ಸಮುದ್ರದ ಬಳಿಯ ಹೆರಾಕ್ಲಾಯ ಬಳಿ ಇರುವ ಎಕ್ರೂಸಿಯಸ್ ಪೆನಿನಸ್ಯೂಲಾದ ರಸ್ತೆಯಿಂದ ಟಾರಟಾರಸ್‍ಗೆ ತಲುಪಿದ. ಎಥನಿ ಮತ್ತು ಹೆಮಿಜ್ ಅವನಿಗೆ ದಾರಿ ಗ್ರೀಸ್ (ಯೂನಾನ್) 257 ತೋರಿದರು. ದಾರಿಯ ಕಷ್ಟಗಳಿಂದ, ಮತ್ತು ಶೀತದ ಅಂಧಕಾರದಿಂದ ನಿರಾಶನಾದಾಗ ಅವನಿಗೆ ಸಮಾಧಾನ ಹೇಳುತ್ತಿದ್ದರು. ಸ್ಟಿಕ್ಸ್ ನದಿಯ ದಂಡೆಯಲ್ಲಿ ಮುದುಕ ಕೆರೊ ಎಂದಿನಂತೆ ಮೃತಾತ್ಮಗಳನ್ನು ದಾಟಿಸಲು ತನ್ನ ನಾವೆಯನ್ನು ಇಟ್ಟುಕೊಂಡು ನಿಂತಿದ್ದ. ಅವನು ಹೆರಾಕ್ಲಿಸ್‍ನ ಗದರಿಸುವಿಕೆಯಿಂದ ಭಯಭೀತನಾಗಿ ಅವನ ಜೊತೆ ಮಾತನಾಡದೆ ಏನನ್ನೂ ಕೇಳದೆ ಆಚೆ ದಾಟಿಸಿಬಿಟ್ಟ. ಈ ಅಪರಾಧಕ್ಕಾಗಿ ಹೆಡಿಸ್ ಅವನನ್ನು ಒಂದು ವರ್ಷಕಾಲ ಬಂದಿಯನ್ನಾಗಿ ಇಟ್ಟ. ಸ್ಟಿಕ್ಸ್‍ನ ಆಚೆ ದಂಡೆಯಲ್ಲಿ ಹೆರಾಕ್ಲಿಸ್ ನಾವೆಯಿಂದ ಇಳಿದಾಗ ಎಲ್ಲ ಮೃತಾತ್ಮಗಳು ಅವನಿಗೆ ಹೆದರಿ ಓಡಿಹೋದವು. ಕೇವಲ ಗಾರ್ಗನ್ ಮೆಡೂಸಾ ಹಾಗೂ ಹೊಳೆಯುವ ಶಸ್ತ್ರಗಳಿಂದ ಸಜ್ಜಿತ ಮೊಲಯಗರ್‍ನ ಆತ್ಮಗಳು ಅವನನ್ನು ಎದುರಿಸಿದವು. ಹೆರಾಕ್ಲಿಸ್ ಅವರನ್ನು ಜೀವಿತರೆಂದು ತಿಳಿದು ತನ್ನ ಕಠಾರಿಯನ್ನು ಮೇಲೆತ್ತಿದ. ಆದರೆ ಹೆಮಿಜ್ ಅವೆಲ್ಲ ಮೃತಾತ್ಮಗಳೆಂದೂ ಅವುಗಳಿಂದ ಏನೂ ಭಯವಿಲ್ಲವೆಂದೂ ತಿಳಿಸಿದ. ಅನಂತರ ಕೆಲಸಮಯದವರೆಗೆ ಅವರು ಮೂವರೂ ಮಾತನಾಡುತ್ತಿದ್ದರು. ಹೆರಾಕ್ಲಿಸ್ ಭೂಮಿಗೆ ಹಿಂತಿರುಗಿದ ಅನಂತರ ತನ್ನ ದುಃಖಿತ ಸೋದರಿ ಡಿಯೋನಿಯರಾಳಿಗೆ ಸಾಂತ್ವನ ಹೇಳಬೇಕೆಂದು ಮೊಲಿಯಗರ್ ವಿನಂತಿಸಿಕೊಂಡ. ಟಾರಟಾರಿಸ್‍ನ ದಾರಿಯಲ್ಲೇ ಇಬ್ಬರು ಜೀವಿತ ವ್ಯಕ್ತಿಗಳನ್ನು ಬಂಡೆಗಲ್ಲಿಗೆ ಬಿಗಿದಿಟ್ಟದ್ದನ್ನು ಹೆರಾಕ್ಲಿಸ ನೋಡಿದ. ಹೆರಾಕ್ಲಿಸ್‍ನನ್ನು ನೋಡುತ್ತಲೇ ಅವರು ಕರುಣಾಪೂರಿತ ದನಿಯಿಂದ ಸಹಾಯಕ್ಕಾಗಿ ಹೆರಾಕ್ಲಿಸ್‍ನನ್ನು ಯಾಚಿಸತೊಡಗಿದರು. ಅವರು ಅವನ ಪರಮ ಮಿತ್ರರಾದ ಥೀಸಿಯಸ್ ಮತ್ತು ಪೆರಿಥು. ಹೆಡಿಸ್‍ನ ಪತ್ನಿಯಾದ ಪರ್ಸಿಫನಿಯನ್ನು ಅಪಹರಿಸಿ ತನ್ನ ಪತ್ನಿಯನ್ನಾಗಿ ಮಾಡಿಕೊಳ್ಳಬೇಕೆಂಬುದು ಪೆರಿಥುನ ಬಯಕೆಯಾಗಿತ್ತು. ಆ ದುಸ್ಸಾಹಸಕ್ಕಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಟಾರಟಾರಸ್‍ನ ಬಂಡೆಗಳ ಮೇಲೆ ಮಾಡಿದ ಆಸನದ ಮೇಲೆ ಒಮ್ಮೆ ಕೂತರೆ ಸರ್ವಶಕ್ತಿಯನ್ನು ಹಾಕಿದರೂ ಅಲ್ಲಿಂದ ಏಳಲು ಆಗುತ್ತಿರಲಿಲ್ಲ. ಈಗ ಅವರು ಎಂದೆಂದಿಗೂ ಹೀಗೆ ಕುಳಿತಿರಬೇಕಾಗಿತ್ತು. ಹೆರಾಕ್ಲಿಸ್ ಬಂದುದನ್ನು ನೋಡಿ ಅವರ ಕಣ್ಣಲ್ಲಿ ಆಸೆಯ ಬೆಳಕು ಮಿನುಗಿತು. ಹೆರಾಕ್ಲಿಸ್ ಥೀಸಿಯಸ್‍ನನ್ನು ಗುರುತು ಹಿಡಿದ. ಅವನ ಕೈಯನ್ನು ಜೋರಾಗಿ ಹಿಡಿದು ಎಳೆದ. ಥೀಸಿಯಸ್‍ನ ಪೃಷ್ಠಭಾಗದ ಬಹಳಷ್ಟು ಮಾಂಸವು ಕಿತ್ತುಬಂತು. ಆದರೆ ಅವನು ಅಲ್ಲಿಂದ ಬಿಡುಗಡೆ ಪಡೆದ. ಈಗ ಹೆರಾಕ್ಲಿಸ್ ಪೆರಿಥುವನ್ನು ಸ್ವತಂತ್ರಗೊಳಿಸಬೇಕೆಂದು ಬಯಸಿದ. ಅಷ್ಟರಲ್ಲಿ ಭಾರೀ ಧ್ವನಿಯ ಗರ್ಜನೆ ಕೇಳಿಸಿತು. ಇಡೀ ಮೃತ್ಯಲೋಕವು ಭೂಕಂಪದ ಸುಳಿಗೆ ಸಿಕ್ಕಂತೆ ನಡುಗತೊಡಗಿತು. ಅಂದರೆ ಪೆರಿಥುವಿನ ಬಿಡುಗಡೆ ಹೆಡಿಜ್‍ನಿಗೆ ಇಷ್ಟವಿರಲಿಲ್ಲವೆಂದರ್ಥ. ಹೆರಾಕ್ಲಿಸ್ ಮತ್ತೆ ಪ್ರಯತ್ನಿಸಲಿಲ್ಲ. ಇದರ ನಂತರ ಹೆರಾಕ್ಲಿಸ್ ಒಂದು ಬಂಡೆಯ ಕೆಳಗೆ ಬಂದಿಯಾಗಿದ್ದ 258 ಕಥಾ ಸಂಸ್ಕೃತಿ ಎಸ್ಕೆಲೆಕಸ್‍ನನ್ನು ಬಿಡುಗಡೆಗೊಳಿಸಿದ. ಪ್ರೇತಾತ್ಮಗಳನ್ನು ಸಂತೋಷಪಡಿಸಲು ಹೆಡಿಸ್‍ನ ದನಕರುಗಳಲ್ಲಿ ಒಂದನ್ನು ಹಿಡಿದು ಅದನ್ನು ಬಲಿಕೊಟ್ಟನು. ಬಿಸಿರಕ್ತದಿಂದ ಪ್ರೇತಾತ್ಮಗಳಲ್ಲಿಯೂ ಒಂದು ಬಾರಿ ಜೀವನ ಸಂಚಾರದ ಅನುಭವವಾಯಿತು. ಹೆಡಿಜ್‍ನ ದನಗಾಹಿ ಮೆನೊಟಿಸ್‍ನಿಗೆ ಇದು ಗೊತ್ತಾದಾಗ ಅವನು ಹೆರಾಕ್ಲಿಸ್‍ನನ್ನು ಮಲ್ಲಯುದ್ಧಕ್ಕೆ ಆಹ್ವಾನಿಸಿದ. ಹೆರಾಕ್ಲಿಸ್ ಅವನನ್ನು ಹಿಡಿದುಕೊಂಡು ಜೋರಾಗಿ ಅದುಮಿದಾಗ ಅವನ ಎಲುಬುಗಳೆಲ್ಲ ಪುಡಿಪುಡಿಯಾದವು. ಆಗ ಪರ್ಸಿಫನಿ ತನ್ನ ಅರಮನೆಯಿಂದ ಹೊರಬಂದಳು. ಹೆರಾಕ್ಲಿಸ್‍ನನ್ನು ಸ್ವಾಗತಿಸಿದಳು. ಅವಳ ಬೇಡಿಕೆಯಂತೆ ಮೆನೊಟಿಸ್‍ನ ಪ್ರಾಣ ಉಳಿಯಿತು. ಹೆರಾಕ್ಲಿಸ್ ಮೃತ್ಯುಲೋಕದ ಸಾಮ್ರಾಟ ಹಾಗೂ ಸಾಮ್ರಾಜ್ಞಿಯರನ್ನು ಕಂಡು, ಸೆಬ್ರೆಸ್‍ನ್ನ ಭೂಮಿಗೆ ಒಯ್ಯುವ ಅಭಿಲಾಷೆಯನ್ನು ವ್ಯಕ್ತಪಡಿಸಿದ. ಶಸ್ತ್ರಾಸ್ತ್ರಗಳ ಪ್ರಯೋಗಮಾಡದೆ ಸೆಬ್ರೆಸ್‍ನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವುದಾದರೆ ಅವಶ್ಯವಾಗಿ ಹಾಗೆ ಮಾಡಿ ಒಯ್ಯಬಹುದೆಂದು ಸಂತೋಷದಿಂದ ಹೆಡಿಸ್ ಒಪ್ಪಿಗೆ ಕೊಟ್ಟನು. ಹೆರಾಕ್ಲಿಸ್ ಹೋಗಿ ಸೆಬ್ರೆಸ್‍ನ ಕುತ್ತಿಗೆಯನ್ನು ಹಿಡಿದನು. ಸೆಬ್ರೆಸ್ ಬುಸುಗುಟ್ಟುತ್ತ ಮೂರೂ ತಲೆಯನ್ನು ಅಪ್ಪಳಿಸಿ ತಪ್ಪಿಸಿಕೊಳ್ಳಲು ಹೆಣಗಾಡಿದರೂ ಬಲಿಷ್ಠ ಹಿಡಿತದಿಂದ ಬಿಡುಗಡೆ ಸಾಧ್ಯವಿರಲಿಲ್ಲ. ಅದರ ಬಾಲದ ತೀಕ್ಷ್ಣವಾದ ಹೊಡೆತದ ಪರಿಣಾಮವು ಹೆರಾಕ್ಲಿಸ್‍ನು ಟೊಂಕಕ್ಕೆ ಸುತ್ತಿಕೊಂಡಿದ್ದ ಹುಲಿಚರ್ಮದ ಮೇಲೆ ಏನೂ ಪರಿಣಾಮ ಬೀರಲಿಲ್ಲ. ವಿಷ ತೊಟ್ಟಿಕ್ಕುವ ಅದರ ಹಲ್ಲುಗಳೂ ನಿಷ್ಪ್ರಯೋಜಕವಾದವು. ಹೆರಾಕ್ಲಿಸ್ ಅದಕ್ಕೆ ಸರಪಳಿ ಹಾಕಿ ಹಿಡಿದುಕೊಂಡು ಬೆಳಕಿನ ದೇಶದ ಕಡೆ ಹೊರಟ. ದಾರಿಯಲ್ಲಿ ಹೆರಾಕ್ಲಿಸ್ ಹೆಡಿಜ್‍ನು ತನ್ನ ಸುಂದರಿ ಪ್ರೇಯಸಿ ಲ್ಯೂಸಿಯ ನೆನಪಿನಲ್ಲಿ ಹಾಕಿಸಿದ ಚಿನಾರ್‍ನ ಮರದ ಎಲೆಗಳ ಹಾರವನ್ನು ಕೊರಳಲ್ಲಿ ಧರಿಸಿದನು. ಈ ಎಲೆಗಳ ಹೊರಮೈಯ ಬಣ್ಣ ಕಪ್ಪಾಗಿದ್ದರೂ, ಹೆರಾಕ್ಲಿಸ್ ಧರಿಸಿದ ಎಲೆಗಳ ಒಳಭಾಗವೂ ಆತನ ಮಹಿಮಾಮಯವಾದ ಬೆವರಿನ ಕಣಗಳ ಸ್ಪರ್ಶದಿಂದ ಬೆಳ್ಳಗಾಗಿದ್ದವು. ಆದ್ದರಿಂದ ಶ್ವೇತ ಚಿನಾರ್ ಹೆರಾಕ್ಲಿಸ್‍ನ ಪ್ರೀತಿಯ ಮರವೆಂದು ಪರಿಗಣಿತವಾಗುತ್ತದೆ. ಇದರ ಎರಡು ಬಣ್ಣಗಳು ಹೆರಾಕ್ಲಿಸ್‍ನು ಎರಡೂ ಲೋಕಗಳಲ್ಲಿ ಕಠಿಣ ಪರಿಶ್ರಮ ಮಾಡಿದ್ದನೆಂಬುದಕ್ಕೆ ಸಾಕ್ಷಿಯಾಗಿದೆ. ಎಥನಿಯ ಸಹಾಯದಿಂದ ಹೆರಾಕ್ಲಿಸ್ ಸ್ಟಿಕ್ಸನ್ನು ದಾಟಿ ಸೆಬ್ರೆಸ್‍ನ್ನು ಎಳೆದುಕೊಂಡು ಟ್ರಾಜಿನ್‍ದ ಗುಹೆಯ ಬಳಿ ಹೋದನು. ಈ ಗುಹೆಯ ಬಾಗಿಲಲ್ಲಿ ಥೆಸಿಯಸ್ ಮಾಡಿಸಿದ ದೇವಿ ಆರ್ಟೆಮಿಸ್‍ಳ ಪವಿತ್ರ ಮಂದಿರವಿದೆ. ಪಾತಾಳದ ಅಧಿಷ್ಠಾತ್ರಿ ಶಕ್ತಿಗಳ ವೇದಿಕೆಗಳೂ ಇವೆ. ಇಲ್ಲಿಂದಲೇ ಹೆರಾಕ್ಲಿಸ್ ಭೂಮಿಯ ಕಡೆ ಹೊರಳಿ ಬಂದು ತಲುಪಿದ. ಕಪ್ಪು ಸಮುದ್ರದ ಬಳಿಯ ಎಕೊನಿ ಎಂಬ ಗ್ರೀಸ್ (ಯೂನಾನ್) 259 ಶಿಬಿರದಿಂದ ಹೆರಾಕ್ಲಿಸ್ ಹೊರಬಿದ್ದ ಎಂದೂ ಹೇಳುತ್ತಾರೆ. ಬೆಳಕಿನ ಲೋಕವನ್ನು ಕಂಡು ಭಯಭೀತನಾದ ಸೆಬ್ರೆಸ್‍ನ ಬಾಯಿಯಿಂದ ತೊಟ್ಟಿಕ್ಕುತ್ತಿದ್ದ ಜೊಲ್ಲು ಅಲ್ಲಿನ ಹಸಿರು ತುಂಬಿದ ಹೊಲದಲ್ಲಿ ಹರಡಿ, ಎಕೊನೈಟ್ ಎಂಬ ವಿಷಕಾರಿ ಗಿಡ ಹುಟ್ಟಿಕೊಂಡಿತು. ಸೆಬ್ರೆಸ್‍ನ್ನು ತೆಗೆದುಕೊಂಡು ಹೆರಾಕ್ಲಿಸ್ ಮೈಸೀನಿ ತಲುಪಿದಾಗ ಯೂರಿಸ್ಥಿಯಸ್ ಒಂದು ಬಲಿಕೊಡುತ್ತಿದ್ದ. ಈ ವೇಳೆಗೆ ಹೆರಾಕ್ಲಿಸ್‍ನ ಶ್ರಮಗಳೆಲ್ಲವೂ ಮುಗಿದಿದ್ದವು. ಮತ್ತು ಅವನ ದಾಸತ್ವದ ಅವಧಿ ಪೂರ್ಣವಾಗಿತ್ತು. ಆದರೂ ಯೂರಿಸ್ಥಿಯಸ್ ಬಲಿಯ ಅನಂತರ ದಾಸನಿಗೆ ಕೊಡುವ ಒಂದು ಭಾಗವನ್ನು ಹೆರಾಕ್ಲಿಸ್‍ನಿಗೆ ಕೊಟ್ಟನು. ಹೆರಾಕ್ಲಿಸ್ ಈ ಅನ್ಯಾಯದಿಂದ ಸಿಟ್ಟಿಗೆದ್ದು ಯೂರಿಸ್ಥಿಯಸ್‍ನ ಮೂರುಮಕ್ಕಳನ್ನು ಕೊಂದು ಹಾಕಿದನು. ಇದರ ಅನಂತರ, ದಾಸತ್ವದಿಂದ ಮುಕ್ತನಾದ ಹೆರಾಕ್ಲಿಸ್ ತನ್ನ ಹನ್ನೆರಡು ವಿಜಯದ ಕೀರ್ತಿಯೊಂದಿಗೆ ತನ್ನ ಜನ್ಮಸ್ಥಾನವಾದ ಥೀಬ್ಸ್‍ಗೆ ಹಿಂತಿರುಗಿದನು. 260 ಕಥಾ ಸಂಸ್ಕೃತಿ ಪ್ರೊಮಿಥ್ಯೂಸ್‍ನ ಬಂಡಾಯ - ಜೆ. ಎಚ್. ಆನಂದ ಪ್ರೊಮಿಥ್ಯೂಸ್ ಯೂನಾನೀ ಪುರಾಣ ಕತೆಗಳ ಒಂದು ಪ್ರಮುಖ ಪಾತ್ರ. ಅವನು ಮಾನವ ಜಾತಿಯ ಜನ್ಮದಾತನೆಂದು ಹೇಳಲಾಗುತ್ತದೆ. ರಾಕ್ಷಸರು ಮತ್ತು ದೇವತೆಗಳ ಯುದ್ಧದಲ್ಲಿ ಅವನು ದೇವತೆಗಳ ಜೊತೆಗಿದ್ದ. ಯುದ್ಧ ಮುಗಿದ ಮೇಲೆ ಅವನನ್ನು ದೇವತೆಯೆಂದೇ ಪರಿಗಣಿಸಲಾಯಿತು. ಆದರೆ ಅವನು ತನ್ನ ಸಂಪೂರ್ಣ ಜೀವನವನ್ನು ದೇವತೆಗಳಿಗೆ ಅರ್ಪಿಸದೆ, ಮಾನವ ಜಾತಿಗೆ ಸಮರ್ಪಿಸಿದ. ಆದ್ದರಿಂದ ದೇವತೆಗಳು ಅವನ ಬಗೆಗೆ ಸಿಟ್ಟಾದರು. ಅವನು ಭಯಂಕರ ಯಾತನೆಯನ್ನು ಸಹಿಸಬೇಕಾಯಿತು. ಈ ಪೌರಾಣಿಕ ಕತೆಯ ಕಾಲ ಕ್ರಿ.ಪೂ. 8 ನೇ ಶತಮಾನವೆಂದು ಭಾವಿಸಲಾಗಿದೆ. ಅರಗೋಸ್ ನಗರದ ರಾಜನಾದ ಇನಾಕೋಸ್‍ನ ದರಬಾರದಲ್ಲಿ ದೇವತೆಗಳ ಒಡೆಯ ಸ್ಯೂಸ್‍ನ ಲೋಲುಪದೃಷ್ಟಿ ಇನಾಕೋಸ್‍ನ ಮಗಳು ಇಓ ಮೇಲೆ ಬಿತ್ತು. ಅವಳು ಸ್ಯೂಸನ ಹೆಂಡತಿಯಾದ ಹೇರಾಳ ಮಂದಿರದ ಪೂಜಾರಿಣಿಯಾಗಿದ್ದಳು. ಅವನು ಅವಳ ದಿವ್ಯ ಸೌಂದರ್ಯದಿಂದ ಮುಗ್ಧನಾಗಿದ್ದ. ಆದರೆ ಅವನು ತನ್ನ ಹೆಂಡತಿ ಹೆರಾಳ ಮೊನಚು ದೃಷ್ಟಿಯಿಂದ ಈ ವಿಷಯವನ್ನು ಬಚ್ಚಿಡಲಾಗಲಿಲ್ಲ. ಹೆರಾಳ ಸಿಟ್ಟು ಬೆಂಕಿಯಾಗಿ ತನ್ನ ಪ್ರತಿದ್ವಂದಿಯ ಬಗ್ಗೆ ಉರಿದೆದ್ದಿತು. ಮನುಷ್ಯ ಜಾತಿಯ ಕನ್ಯೆ ದೇವತೆಯಾದ ಸ್ಯೂಸ್‍ನ ಕಂಠಾಭರಣವಾದರೆ? ಅಸಂಭವ! ಅವಳು ಸಮಯ ಸಾಧಿಸಿ ಇಓಳನ್ನು ಕೊಲೆ ಮಾಡಲು ಉದ್ದೇಶಿಸಿದಳು. ಸ್ಯೂಸ್‍ನಿಗೆ ಹೆರಾಳ ಸಿಟ್ಟಿನ ಪರಿಚಯವಿತ್ತು. ಅವನ ಎಷ್ಟೊೀ ಪ್ರೇಮಿಕೆಯರು ಹೆರಾಳ ಮತ್ಸರದ ಬಲಿ ವೇದಿಕೆಯನ್ನೇರಿದ್ದರು. ಆದ್ದರಿಂದ ಅವನು ಹೆರಾಳ ಪೂಜಾರಿಣಿಯನ್ನು ಬಿಳಿಯ ಹಸುವಿನ ರೂಪದಲ್ಲಿ ಪರಿವರ್ತಿಸಿದ್ದ. ಹೆರಾ ಸ್ಯೂಸ್‍ನ ಕೆಲಸವೇನೂ ಗೊತ್ತಿಲ್ಲದವಳಂತೆ ನಟಿಸಿದಳು. ಅವಳು ಓಲಿಂಪಸ್ ಪರ್ವತಕ್ಕೆ ಹೋದಳು. ಹನ್ನೆರಡು ಪ್ರಮುಖದೇವತೆಗಳ ನಡುವೆ ಎತ್ತರದ ಬಂಗಾರದ ಸಿಂಹಾಸನದ ಮೇಲೆ ಸ್ಯೂಸ್ ಕುಳಿತಿದ್ದ. ಅದರ ಎಡಭಾಗದಲ್ಲಿ ಹೆರಾಳ ಆಸನವಿತ್ತು. ಹೆರಾ ದೇವಿ-ದೇವತೆಯ ಸಭೆಯನ್ನು ಪ್ರವೇಶಿಸಿದಾಗ ಅವಳ ಬಗೆಗೆ ಗೌರವ ತೋರಲು ಎಲ್ಲ ದೇವಿ-ದೇವತೆಗಳೂ ಎದ್ದು ನಿಂತರು. ಗ್ರೀಸ್ (ಯೂನಾನ್) 261 ಸ್ಯೂಸ್ ಕೇಳಿದನು - “ಅರಗೋಸ್‍ನ ಆರು ಅರಮನೆಗಳನ್ನು ಬಿಟ್ಟು ಇಲ್ಲಿಗೆ ಬಂದ ಕಾರಣವೇನು?” “ನಾನೊಂದು ವಸ್ತುವನ್ನು ತಮ್ಮಿಂದ ಯಾಚಿಸಲು ಬಂದಿದ್ದೇನೆ.” “ನನ್ನದೇನಿದೆಯೋ ಅದೆಲ್ಲವೂ ನಿನ್ನದೇ” “ರಾಜಾ ಇನಾಕೋಸ್‍ನ ಗೋಮಾಳದಲ್ಲಿ ಒಂದು ಬಿಳಿಯ ಹಸು ಮೇಯುತ್ತಿರುವುದನ್ನು ಕಂಡೆ. ಆ ಹಸು ನನಗೆ ಬೇಕು.” ಹೀಗೆ ಹೇಳುತ್ತ ಹೆರಾ ತನ್ನ ಸಿಂಹಾಸನದ ಮೇಲೆ ಕುಳಿತಳು. ತಾನು ಇಓಳನ್ನು ಹಸುವನ್ನಾಗಿ ಬದಲಾಯಿಸಿರುವುದು, ಆ ಬಿಳಿಯ ಹಸು ಇಓ ಆಗಿದ್ದಾಳೆನ್ನುವುದನ್ನು ದೇವಿ-ದೇವತೆಯರ ಎದುರು ತಾನು ಒಪ್ಪಿಕೊಳ್ಳುವುದು ಯೋಗ್ಯವಲ್ಲವೆಂದು ಸ್ಯೂಸ್ ಭಾವಿಸಿದ. ಆದರೆ ಅವನಿಗೆ ಹೆರಾಳ ಕ್ರೋಧದಿಂದ ಬಚಾವಾಗಬೇಕಾಗಿತ್ತು. ಹಾಗಾಗಿ ಅವನು ಆ ಬಿಳಿಯ ಹಸುವನ್ನು ಹೆರಾಳಿಗೆ ಕೊಟ್ಟುಬಿಟ್ಟ. ಹೆರಾ ತನ್ನ ಸೇವಕನಾದ ಮಹಾರಾಕ್ಷಸ ಅರಗುಸ್‍ನಿಗೆ ಆ ಹಸುವಿನ ಬಗ್ಗೆ ಹಗಲೂ ರಾತ್ರಿ ಗಮನವಿರಿಸಬೇಕೆಂದು ಆಜ್ಞೆ ಮಾಡಿದಳು. ಅರಗುಸ್‍ನಿಗೆ ಸಾವಿರಕಣ್ಣುಗಳಿದ್ದು, ಅರ್ಧ ಕಣ್ಣುಗಳನ್ನು ಮುಚ್ಚಿ ಮಲಗುತ್ತಿದ್ದ. ಅರ್ಧ ಕಣ್ಣು ತೆರೆದು ಎಚ್ಚರವಾಗಿರುತ್ತಿದ್ದ. ಸ್ಯೂಸ್ ಇನ್ನು ಸಿಂಹಾಸನದಿಂದ ಏಳುವ ಮೊದಲೇ ಕ್ರೊನೊಸ್‍ನ ಮಗ ಪ್ರವೇಶಿಸಿದ. “ಓ ಸ್ಯೂಸ್, ಮಾನವಜಾತಿಯ ಸೃಷ್ಟಿಕರ್ತನಾದ ಪ್ರೊಮಿಥ್ಯೂಸ್‍ನಿಂದ ನನ್ನನ್ನು ರಕ್ಷಿಸಿ” “ಕ್ರೊನೊಸ್‍ನ ಮಗನೇ, ಪ್ರೊಮಿಥ್ಯೂಸ್ ನಿನ್ನ ಸ್ನೇಹಿತ. ಅವನು ಪೃಥ್ವಿಯ ರಾಕ್ಷಸರಿಂದ ಅನೇಕ ಬಾರಿ ನಿನ್ನನ್ನು ರಕ್ಷಣೆ ಮಾಡಿದ್ದಾನೆ.” “ಸ್ಯೂಸ್, ಅವನು ಮನುಷ್ಯರಿಗೆ ಸಹಾಯ ಮಾಡಿ ನನ್ನ ಸಿಂಹಾಸನವನ್ನು ಕಸಿದುಕೊಳ್ಳಲು ಬಯಸುತ್ತಿದ್ದಾನೆ. ಅವನು ನನ್ನ ಸ್ಥಾನದಲ್ಲಿ ಬೇರೆ ಯಾವುದೋ ದೇವತೆಯನ್ನು ಪ್ರತಿಷ್ಠಾಪನೆ ಮಾಡಲು ಇಚ್ಛಿಸುತ್ತಿದ್ದಾನೆ.” “ಅಂದರೆ ಅವನು ನನ್ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಇಷ್ಟಪಡುತ್ತಿದ್ದಾನೆಯೋ? ಅವನು ದೇವತೆಯಲ್ಲ, ಮನುಷ್ಯ, ನಾವು ಅವನಿಗೆ ದೇವತೆಯ ಹುದ್ದೆಯನ್ನು ಕೊಟ್ಟಿದ್ದೇವೆ. ಯಾಕೆಂದರೆ ಅವನು ಟೈಟನ್‍ರ ದಂಗೆಯ ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದ್ದ.” ಸ್ಯೂಸ್‍ನ ಸಿಟ್ಟು ಏರತೊಡಗಿತ್ತು. “ಸ್ಯೂಸ್, ಪ್ರೊಮಿಥ್ಯೂಸ್ ಮುಂದಾಗುವುದನ್ನು ಬಲ್ಲವನು. ಶೀಘ್ರವೇ ತಮ್ಮನ್ನು ಕೊಂದು ತಮ್ಮ ಸಿಂಹಾಸನದ ಮೇಲೆ ತಮ್ಮ ಮಗ ಕುಳಿತುಕೊಳ್ಳುತ್ತಾನೆಂದು 262 ಕಥಾ ಸಂಸ್ಕೃತಿ ಅವನು ಭವಿಷ್ಯವಾಣಿಯನ್ನು ನುಡಿದಿದ್ದಾನೆ. ಇದಲ್ಲದೆ ಅವನು ತಾವು ಮಾನವಜಾತಿಯ ಸ್ತ್ರೀ ಇಓಳನ್ನು ಪ್ರೀತಿಸುತ್ತಿರುವುದನ್ನು ಬಹಿರಂಗವಾಗಿ ನಿಂದಿಸಿದ್ದಾನೆ.” ಅಲ್ಲಿ ಉಪಸ್ಥಿತರಿದ್ದ ದೇವಿ-ದೇವತೆಗಳು ಕಿವಿಯಲ್ಲಿ ಪಿಸುಗುಟ್ಟತೊಡಗಿದರು. ಸ್ಯೂಸ್ ಗರ್ಜಿಸುತ್ತ ಹೇಳಿದ - “ಯಾವನೇ ಆಗಲಿ, ನನ್ನ ಆಜ್ಞೆಯನ್ನು ಮೀರುವ ಸಾಹಸ ಮಾಡಿದರೆ ಅವನನ್ನು ನಾನು ಗಾಡಾಂಧಕಾರದ ಟಾರಟ್ರಸ್ ಲೋಕಕ್ಕೆ ಎಸೆದುಬಿಡುತ್ತೇನೆ. ನಾನು ಎಷ್ಟೊಂದು ಶಕ್ತಿವಂತ, ದೇವತೆಗಳ ರಾಜನೆಂಬುದು ಅವನಿಗೆ ಆಗ ಗೊತ್ತಾಗುತ್ತದೆ. ಯಾವನೇ ದೇವತೆಯಾದರೂ ನನ್ನೆದುರು ಬಂದು ತನ್ನ ಶಕ್ತಿಯನ್ನು ಪರೀಕ್ಷಿಸಿಕೊಳ್ಳಬಹುದು, ಹೆಫಾಸ್ತುಸ್” ಅಗ್ನಿದೇವತೆ ಹೆಫಾಸ್ತುಸ್ ತನ್ನ ಆಸನದಲ್ಲಿಯೇ ಎದ್ದು ನಿಂತು ಸ್ಯೂಸನಿಗೆ ಹೇಳಿದ “ಅಪ್ಪಣೆಗಾಗಿ ಕಾದಿದ್ದೇನೆ.” “ಪ್ರೊಮಿಥ್ಯೂಸ್ ನಮ್ಮ ವಿರುದ್ಧ ದಂಗೆಯೆದ್ದಿದ್ದಾನೆ. ಅವನು ಮಾನವ ಜಾತಿಯ ನೇತೃತ್ವ ವಹಿಸುವ ಸಾಹಸ ಮಾಡಿದ್ದಾನೆ. ಇದು ಅವನ ಧೂರ್ತತನ. ನೀನು ಶಕ್ತಿಯ ದೇವತೆ ಕ್ರೆಲೊಸ್ ಹಾಗೂ ಹಿಂಸೆಯ ದೇವತೆ ಬಿಯಾ ಇಬ್ಬರನ್ನೂ ಜೊತೆಗೆ ಕರೆದುಕೊಂಡು ಹೋಗು. ಪ್ರೊಮಿಥ್ಯೂಸ್‍ನನ್ನು ಹಿಡಿದು, ನಾಶವಾಗದ ಸರಪಳಿಯಿಂದ ಅವನನ್ನು ಬಿಗಿದು, ಕಾಕೇಶಸ್ ಪರ್ವತದ ಶಿಖರದಿಂದ ತೂಗಿಬಿಡು. ನಾನು ನನ್ನ ಗರುಡನನ್ನು ಅಲ್ಲಿಗೆ ಕಳಿಸುತ್ತೇನೆ. ಅದು ದಿನವೂ ಅವನ ಎದೆಯನ್ನು ಕುಕ್ಕಿ ಕುಕ್ಕಿ ಮಾಂಸ ತಿನ್ನುತ್ತದೆ. ಹಗಲು ಅದು ಎಷ್ಟು ಮಾಂಸವನ್ನು ತಿನ್ನುತ್ತದೋ, ಅದು ರಾತ್ರಿ ಪುನಃ ಬೆಳೆಯುತ್ತದೆ. ಹೀಗೆ ಅವನ ಯಾತನೆಗೆ ಕೊನೆಯೇ ಇರುವುದಿಲ್ಲ.” ಹೆಫಾಸ್ತುಸ್, ಕ್ರೆತೊಸ್ ಹಾಗೂ ಬಿಯಾ ತಮ್ಮ ಒಡೆಯನ ಆದೇಶಪಾಲನೆಗಾಗಿ ಹೊರಟುಹೋದರು. ಅವರು ಹೋದ ನಂತರ ಸ್ಯೂಸ್ ತನ್ನ ಪುತ್ರ ಹರ್ಮಿಸ್‍ನಿಗೆ ಹೇಳಿದ - “ಮಗನೇ, ನಾನು ನಿನ್ನನ್ನು ಹಸುಗಳ ರಕ್ಷಣೆ ಮಾಡುವ ಜವಾಬ್ದಾರಿಗಾಗಿ ನೇಮಿಸಿದ್ದೇನೆ. ನೀನು ಅವುಗಳ ರಕ್ಷಕ.” “ಆಜ್ಞೆ, ಸ್ಯೂಸ್.” “ನೀನು ಕೊಳಲುವಾದಕ, ನೀನೇ ಕೊಳಲನ್ನು ಶೋಧಿಸಿದವನು. ನೀನು ಕೊಳಲಿನ ಮಧುರವಾದ ಸ್ವರದಿಂದ ನನ್ನ ಬಿಳಿಯ ಹಸುವಿನ ರಕ್ಷಣೆ ಮಾಡಬಲ್ಲೆ.” “ನಾನು ನನ್ನ ಪ್ರಭುವಿನ ಅಪ್ಪಣೆಯನ್ನು ಅಕ್ಷರಶಃ ಪಾಲಿಸುತ್ತೇನೆ.” ಹರ್ಮಿಸ್ ಅರಗೋಸ್ ನಗರಕ್ಕೆ ಹೋದ. ಹೇರಾಳ ಮಂದಿರದಲ್ಲಿ ಬಿಳಿಯ ಹಸುವನ್ನು ಕಟ್ಟಿಹಾಕಲಾಗಿತ್ತು. ಸಾವಿರ ಕಣ್ಣುಳ್ಳ ಅರಗುಸ್ ರಾಕ್ಷಸ ತನ್ನ ಅರ್ಧ ಕಣ್ಣುಗಳಿಂದ ಅದರ ಮೇಲೆ ದೃಷ್ಟಿ ನೆಟ್ಟಿದ್ದ. ಹರ್ಮಿಸ್ ಮಂದ ಸ್ವರದಲ್ಲಿ ಕೊಳಲು ಗ್ರೀಸ್ (ಯೂನಾನ್) 263 ನುಡಿಸತೊಡಗಿದ. ಅರ್ಗೊಸ್ ಹರ್ಮಿಸ್‍ನ ಸಂಗೀತದ ನಾದಕ್ಕೆ ನಿದ್ದೆ ಹೋದ. ಪಶುಗಳ ರಕ್ಷಕ ದೇವತೆ ಹರ್ಮಿಸ್ ತಕ್ಷಣ ತನ್ನ ಕತ್ತಿಯನ್ನು ತೆಗೆದು ಒಂದೇ ಏಟಿಗೆ ಅವನ ರುಂಡವನ್ನು ಮುಂಡದಿಂದ ಬೇರ್ಪಡಿಸಿದ. ಹಸುವಿಗೆ ಬಿಡುಗಡೆ ದೊರೆಯಿತು. ಅರಗುಸ್‍ನ ಹತ್ಯೆಯಿಂದ ಹೆರಾಳ ಕ್ರೋಧಾಗ್ನಿಗೆ ತುಪ್ಪ ಹೊಯ್ದಂತಾಯಿತು. ಅವಳು ಹೇಳಿದಳು - “ಈ ಹಸು ಮರಣ ವೇದನೆಯಿಂದ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಲೆಯುತ್ತಿರುತ್ತದೆ. ಅದಕ್ಕೆ ಎಂದೂ ಶಾಂತಿ ದೊರೆಯುವುದಿಲ್ಲ. ಅಲ್ಲದೇ ಅರಗುಸ್ ನೀನು ನನ್ನ ಸೇವೆಗಾಗಿ ಪ್ರಾಣವನ್ನು ಅರ್ಪಿಸಿದೆ. ಆದ್ದರಿಂದ ನಾನು ನನ್ನ ಪ್ರಿಯ ಪಕ್ಷಿಯಾದ ನವಿಲಿನ ರೆಕ್ಕೆಯಲ್ಲಿ ನಿನ್ನ ಸಹಸ್ರ ನೇತ್ರಗಳನ್ನು ಅಂಕಿತಗೊಳಿಸುತ್ತೇನೆ.” ಅದಕ್ಕಾಗಿ ಹೆರಾ ಆ ಹಸುವಿನ ಹಿಂದೆ ದನಗಳನ್ನು ಕಡಿಯುವ ನೊಣಗಳನ್ನು ಬಿಟ್ಟಳು. ಅವು ಅದನ್ನು ಸದಾ ಕಡಿಯುತ್ತಿದ್ದವು. ಇಓ ಮರಣವೇದನೆಯಿಂದ ನರಳುತ್ತ ಪರ್ವತಗಳು, ಕೊಳ್ಳಗಳು, ನದಿಗಳು ಹಾಗೂ ಸಮುದ್ರಗಳನ್ನು ದಾಟುತ್ತ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಲೆದಾಡತೊಡಗಿದಳು. ಅವಳು ಒಂದು ಕ್ಷಣವೂ ವಿಶ್ರಾಂತಿಗಾಗಿ ಮಲಗಲು ಸಾಧ್ಯವಾಗುತ್ತಿರಲಿಲ್ಲ. ಮರ್ಮಾಂತಿಕವಾದ ವೇದನೆಯಿಂದ ಸತತವಾಗಿ ಅವಳ ಬಾಯಿಂದ ನರಳುವಿಕೆ ಹೊರಬೀಳುತ್ತಿತ್ತು. - “ಓ ಸ್ಯೂಸ್, ನಿನಗೆ ನನ್ನ ವೇದನೆ ಕಾಣುತ್ತಿಲ್ಲವೇ? ನೀನು ಎಷ್ಟೊಂದು ಬಾರಿ ನಿನ್ನ ಪ್ರೇಮವನ್ನು ನನ್ನೊಡನೆ ನಿವೇದಿಸಿಕೊಂಡಿದ್ದೆ! ನಾನು ಹೀಗೆ ಅಲೆದಾಡುತ್ತಿರುವುದನ್ನು ನೋಡುತ್ತಿರುವೆಯಾ? ನೀನು ನನಗೆ ಶಾಂತಿಯನ್ನು ವಿಶ್ರಾಂತಿಯನ್ನು ಕೊಡುವುದಿಲ್ಲವೇ? ನಾನು ನಿನ್ನನ್ನು ಪ್ರಾರ್ಥಿಸುತ್ತೇನೆ. ನನ್ನನ್ನು ಕೊಂದುಬಿಡು. ಈ ನೋವು ಅಸಹನೀಯವಾದದ್ದು. . . .” ಸ್ಯೂಸ್‍ನ ಕೈಯಲ್ಲಿ ಸಿಕ್ಕು ಅವಳಿಗಿಂತ ಹೆಚ್ಚಿನ ಕಷ್ಟವನ್ನು ಸಹಿಸುತ್ತಿರುವ ವ್ಯಕ್ತಿಯೊಬ್ಬ ಅವಳ ಆರ್ತನಾದವನ್ನು ಕೇಳುತ್ತಿರುವ ಸಂಗತಿ ಅವಳಿಗೆ ಗೊತ್ತಿರಲಿಲ್ಲ. ಇಓ ತನ್ನ ಕತ್ತನ್ನು ಮೇಲೆತ್ತಿದ್ದಾಗ, ಅವಳಿಗೆ ತುಂಬ ದೂರದವರೆಗೆ ಒಂದು ವಿಶಾಲ ಶರೀರದ ಆಕೃತಿ ಕಾಣಿಸಿತು. ತುಂಬ ಗಮನವಿಟ್ಟು ನೋಡಿದಾಗ ಬರಿಯ ಬಂಡೆಗಲ್ಲಿನ ತುದಿಗೆ ಆ ವಿಶಾಲ ಕಾಯವನ್ನು ತೂಗಾಡಿಸಿರುವುದು ಕಾಣಬರುತ್ತಿತ್ತು. ಅವನ ಸುತ್ತಲೂ ಕೂಗುತ್ತ ಗರುಡವು ತಿರುಗುತ್ತಿದೆ. ಇಓಳ ಕಿವಿಯಲ್ಲಿ ಶೋಕ ಸಂತಪ್ತವಾದ ಯಾತನಾಮಯವಾದ ಶಬ್ದಗಳು ಕೇಳಿಸಿದವು - “ಓ ಇನಾಕೋಸ್‍ನ ಮಗಳು ಇಓ, ಎಲ್ಲಿಂದ ಬರುತ್ತಿರುವೆ? ಈ ನಿರ್ಜನವಾದ ಪ್ರದೇಶಕ್ಕೆ ನೀನು ಬರಲು ಕಾರಣವೇನು? ಸ್ಯೂಸ್‍ನ ಪ್ರೇಮವು ನಿನ್ನನ್ನು ಈ ಹಿಮಸ್ಥಾನಕ್ಕೆ ಕರೆತಂದಿದೆಯೇ?” 264 ಕಥಾ ಸಂಸ್ಕೃತಿ ಇಓ ಮತ್ತಷ್ಟು ಅವನ ಸಮೀಪ ಹೋದಳು. ಆಶ್ಚರ್ಯ ಮತ್ತು ಭಯಮಿಶ್ರಿತ ಸ್ವರದಲ್ಲಿ ಅವಳು ಕೇಳಿದಳು - “ನಿನಗೆ ನನ್ನ ಹೆಸರು ಹಾಗೂ ನನ್ನ ಕಷ್ಟದ ವಿಷಯವಾಗಿ ಹೇಗೆ ಗೊತ್ತಾಯಿತು? ಈ ರೀತಿ ಬಂಡೆಯ ಮೇಲೆ ಸರಪಳಿಯಿಂದ ಬಂಧಿಸಿ ತೂಗುಹಾಕುವಂಥ ಅಪರಾಧವನ್ನು ನೀನೇನು ಮಾಡಿರುವೆ? ನಿನ್ನ ಆಕೃತಿಯನ್ನು ನೋಡಿದರೆ ನೀನೊಬ್ಬ ದೇವತೆಯೆಂದೂ ಮನುಷ್ಯನಲ್ಲವೆಂದೂ ಸ್ಪಷ್ಟವಾಗುತ್ತದೆ. ಯಾಕೆಂದರೆ ಇಂಥ ಆಕೃತಿಯ ದೇವತೆ ಅಥವಾ ಮಹಾನಾಯಕರು ಓಲಿಂಪಸ್ ಪರ್ವತದಿಂದಿಳಿದು ನಮ್ಮ ಮನುಷ್ಯರ ಮಧ್ಯೆ ಬರುತ್ತಾರೆ.” ಆಕೃತಿ ಹೇಳಿತು - “ಇಓ, ನೀನು ನೋಡುತ್ತಿರುವ ದೇವತೆ - ಪ್ರೊಮಿಥ್ಯೂ.ಸ್ ಮನುಷ್ಯರಿಗಾಗಿ ಓಲಿಂಪಸ್ ಪರ್ವತದಿಂದ ಅಗ್ನಿಯನ್ನು ಇಳಿಸಿಕೊಂಡು ತಂದಿದ್ದೆ. ನಿನ್ನ ಮಾನವಜಾತಿಗೆ ಮನೆಯನ್ನು ಕಟ್ಟಿಕೊಳ್ಳುವ ರೀತಿಯನ್ನು ಕಲಿಸಿದ್ದೆ. ನಿಮಗೆ ಒಕ್ಕಲುತನ ಮಾಡುವುದನ್ನು ಕಲಿಸಿದ್ದೆ, ನೂಲು ನೂಲುವುದು ಹೇಗೆ ಎಂಬುದನ್ನು ಕಲಿಸಿದ್ದೆ. ನಾನು ನಿನ್ನ ಮನುಷ್ಯ ಜಾತಿಗೆ ಜ್ಞಾನ - ವಿಜ್ಞಾನವನ್ನು ಕೊಟ್ಟೆ, ಸಂಸ್ಕೃತಿ - ಕಲೆಯನ್ನು ಕೊಟ್ಟೆ, ನಿಮ್ಮನ್ನು ಪಶುಜೀವನದಿಂದ ಮೇಲೆತ್ತಿ ಸಭ್ಯ - ಸುಸಂಸ್ಕೃತರನ್ನಾಗಿ ಮಾಡಿದೆ. ಇಓ, ನೀನು ಮನುಷ್ಯ ಹಾಗೂ ಸ್ಯೂಸ್ ದೇವತೆ ಒಂದೇ ಭೂತಾಯಿಯ ಮಕ್ಕಳು. ಇಬ್ಬರಲ್ಲಿಯೂ ಒಂದೇ ಶ್ವಾಸವಿದೆ. ದೇವತೆ ಎಂದಿಗೂ ಮನುಷ್ಯನಿಗಿಂತ ಶ್ರೇಷ್ಠನಲ್ಲ.” ಇಓ ಅಳತೊಡಗಿದಳು “ಮಾನವಜಾತಿಯ ಜನಕ ಪ್ರೊಮಿಥ್ಯೂಸ್, ನೀನು ನಮ್ಮ ಒಳಿತಿಗಾಗಿ ಸ್ಯೂಸ್‍ನ ಕೋಪಕ್ಕೆ ಬೆಲೆ ತೆತ್ತೆಯಾ?” “ಸ್ಯೂಸ್ ನನ್ನ ದೇಹವನ್ನು ನಾಶ ಮಾಡಬಹುದು. ನನ್ನ ಆತ್ಮವನ್ನಲ್ಲ, ಕ್ರೊನೊಸ್‍ನ ಮಗನಿಗೆ ಭಯವಿತ್ತು. ನಾನು ಮನುಷ್ಯರ ಸಹಾಯದಿಂದ ಅವನನ್ನು ಸಿಂಹಾಸನದಿಂದ ಪದಚ್ಯುತಗೊಳಿಸಿ ಯಾವುದೋ ಬೇರೆ ದೇವತೆಯನ್ನು ಅವನ ಸ್ಥಾನದಲ್ಲಿ ನಿಯುಕ್ತಗೊಳಿಸುತ್ತೇನೆ ಎಂದು. ಆದ್ದರಿಂದಲೇ ನಾನು ಮನುಷ್ಯ ಜಾತಿಯನ್ನು ದೇವತೆಗಳ ಎದುರಿನಲ್ಲಿ ಶ್ರೇಷ್ಠರನ್ನಾಗಿಸಿದ್ದು. ಅವನು ನಾನು ಮಾಡಿದ ಒಳ್ಳೆಯ ಕಾರ್ಯಗಳನ್ನು ಮರೆತುಬಿಟ್ಟ. ಅವನು ಸ್ಯೂಸ್‍ನನ್ನು ಕೆದಕಿದ. ನನ್ನನ್ನು ಕಾಕೇಶಸ್ ಪರ್ವತದ ಮೇಲೆ ಮೋಸದಿಂದ ಕೊಂಡೊಯ್ದ. ಮತ್ತು ಮುರಿಯಲಾರದ ಸರಪಳಿಯಿಂದ ವಂಚಿಸಿ ನನ್ನನ್ನು ಕಟ್ಟಿಹಾಕಿದ. ಹೆಫಾಸ್ತುಸ್ ಮತ್ತು ಬಿಯಾ ನನ್ನನ್ನು ಈ ಕಲ್ಲುಬಂಡೆಗೆ ತೂಗುಹಾಕಿದರು. ಇಲ್ಲಿ ಗ್ರೀಷ್ಮದಲ್ಲಿ ಬೆಂಕಿ ಉಗುಳುತ್ತದೆ. ಶೀತದಲ್ಲಿ ಹಿಮ ಬೀಳುತ್ತದೆ. ಈ ಗರುಡನು ದಿನವೂ ನನ್ನ ಎದೆಯನ್ನು ಬಗೆದು ತಿನ್ನುತ್ತಾನೆ. ರಾತ್ರಿ ಎದೆಯ ಮಾಂಸ ಮತ್ತೆ ಬೆಳೆಯುತ್ತದೆ. ನಾನು ನೋವು ಅನುಭವಿಸುತ್ತಿದ್ದರೂ ನಿರಾಶನಾಗಿಲ್ಲ. ಯಾಕೆಂದರೆ ನನಗೆ ಗೊತ್ತು ಇಓ, ನಾನು ಮನುಷ್ಯ ಜಾತಿಗಾಗಿ ಸತ್ಕಾರ್ಯ ಮಾಡಿದ್ದೇನೆ. ನೀವು ಮನುಷ್ಯರು ನನ್ನನ್ನು ಗ್ರೀಸ್ (ಯೂನಾನ್) 265 ಗೌರವಿಸುತ್ತೀರಿ, ಯಾಕೆಂದರೆ ನಾನು ನಿಮ್ಮನ್ನು ಶೀತ, ಹಸಿವು, ರೋಗಗಳಿಂದ ರಕ್ಷಿಸಿದ್ದೇನೆ. ನಾನು ಮುಂದಾಗುವುದನ್ನು ಹೇಳಬಲ್ಲೆ. ನನಗೆ ಗೊತ್ತಿದೆ. ಸ್ಯೂಸ್ ತನ್ನ ತಂದೆಯನ್ನು ಕೊಂದು ಸಿಂಹಾಸನದ ಮೇಲೆ ಕುಳಿತಿದ್ದನೋ, ಹಾಗೆಯೇ ಅವನ ಮಗ ಅವನನ್ನು ಕೊಂದು ಓಲಿಂಪಸ್ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ.” “ಓ ಮಾನವಜಾತಿಯ ತಂದೆಯೇ, ನಿನ್ನ ಶಬ್ದವನ್ನು ಹಿಂತೆಗೆದುಕೋ. ಸ್ಯೂಸ್ ನನ್ನನ್ನು ಬಯಸಿದ್ದಾನೆ.” ಇಓಳ ದುಃಖ ಸ್ಫೋಟಗೊಂಡಿತು. “ಇದು ವಿಧಿ ಇಓ, ನಿನ್ನ ದುಃಖದ ಅಂತ್ಯವೂ ಸಮೀಪದಲ್ಲಿಲ್ಲ. ನೀನು ಅನೇಕ ಯುಗಗಳವರೆಗೆ ಹೀಗೆಯೇ ಅಲೆಯುತ್ತಿರುವೆ. ನನ್ನ ಕತೆಯನ್ನು ಕೇಳಿಯೇ ನೀನು ಸೋಲನ್ನು ಒಪ್ಪಿಕೊಳ್ಳುವಿಯಾದರೆ, ಮುಂದೆ ಬರಲಿರುವ ಘಟನೆಗಳನ್ನು ಹೇಗೆ ಎದುರಿಸುವೆ?” “ಇಲ್ಲ ತಂದೆಯೇ, ಈ ಸಂಕಟ - ಈ ದುಃಖವನ್ನು ಅನುಭವಿಸುವುದಕ್ಕಿಂತ ಸಾಯುವುದು ಮೇಲು” “ಇನಕೋಸ್‍ನ ಮಗಳೇ, ಹಾಗೆನ್ನಬೇಡ. ನಿನ್ನ ಕಣ್ಣುಗಳಿಂದಲೇ ಸ್ಯೂಸ್‍ನ ಪತನವನ್ನು ಹಾಗೂ ನನ್ನ ಮುಕ್ತಿಯನ್ನು ನೀನು ನೋಡುವೆ. ನಿನ್ನದೇ ವಂಶಜನಾದ ಹರ್‍ಕ್ಯುಲಿಸ್ ಈ ಗರುಡವನ್ನು ಕೊಂದು ನನ್ನನ್ನು ಸರಪಳಿಯಿಂದ ಬಿಡುಗಡೆಗೊಳಿಸುತ್ತಾನೆ. ಆದ್ದರಿಂದ ನಿನ್ನ ದುಃಖ ಮತ್ತು ನೋವನ್ನು ಸಾಹಸದಿಂದ ಸಹಿಸುತ್ತ ಹೋಗು. ಇಓ, ನಾನು ಅನೇಕ ತಲೆಮಾರುಗಳವರೆಗೆ ಇದೇ ಬಂಡೆಗೆ ತೂಗುಬಿದ್ದಿರಬೇಕು. ನಿನ್ನ ದುಃಖ ನನ್ನದಕ್ಕಿಂತ ಕಡಿಮೆ. ಈ ವಾಸ್ತವಕ್ಕಾಗಿ ಸಂತೋಷಪಡು. ನೆನಪಿಡು, ಕೊನೆಗೂ ಸತ್ಯಕ್ಕೆ ಜಯವಾಗುವುದು. ಸ್ಯೂಸ್ ತನ್ನ ಸಿಂಹಾಸನದಿಂದ ಕೆಳಗುರುಳುತ್ತಾನೆ. ನೋಡು . . . ಹರ್ಮಿಸ್ ಬರುತ್ತಿದ್ದಾನೆ.” ಇಓ ಆರ್ತಧ್ವನಿ ತೆಗೆಯುತ್ತ ಮುಂದುವರಿದಳು. ಹರ್ಮಿಸ್ ಹತ್ತಿರಬಂದ. ಅವನು ಹೇಳಿದ. - “ಪ್ರೊಮಿಥ್ಯೂಸ್ . . . ನೀನಿನ್ನೂ ಮನುಷ್ಯ ಜಾತಿಯ ಪರವಾಗಿರುವೆಯಾ? ದೇವತೆಗಳ ಸರಪಂಚ ಸ್ಯೂಸ್‍ನ ಎದುರು ಮೊಣಕಾಲೂರುವುದಿಲ್ಲವೇ?” ಪ್ರೊಮಿಥ್ಯೂಸ್ ವ್ಯಂಗ್ಯವಾಗಿ ನಕ್ಕ. ಅವನ ಅಟ್ಟಹಾಸದಿಂದ ಹರ್ಮಿಸ್ ಗಾಬರಿಯಾದ. ಅವನು ಭಯಂಕರ ಯಾತನೆ ಅನುಭವಿಸುತ್ತಿರುವ ಪ್ರೊಮಿಥ್ಯೂಸ್‍ನ ಹತ್ತಿರ ನಿಲ್ಲದಾದ. ಕಾಕೇಶಸ್ ಪರ್ವತದಿಂದ ಹಿಮದಗಾಳಿ ಬೀಸಿತು. ಪ್ರೊಮಿಥ್ಯೂಸ್‍ನ ಶರೀರವನ್ನು ಕೊರೆಯುತ್ತ ಮುಂದೆ ಹೋಯಿತು. ಪರ್ವತದಿಂದ ಕಪ್ಪು ಮೋಡಗಳು ಇಳಿದು ಬಂದವು. ಅವು ಪ್ರೊಮಿಥ್ಯೂಸ್‍ನ ಬಂಡೆಯನ್ನು ಸುತ್ತುವರಿದವು. ಆಗಲೇ ಸಂಪೂರ್ಣ ಪರ್ವತ ಬುಡ ಸಹಿತ ಅಲುಗಿತು. ಆಕಾಶದ 266 ಕಥಾ ಸಂಸ್ಕೃತಿ ಒಂದು ಕೊನೆಯಿಂದ ಮಿಂಚು ಹೊಳೆಯುತ್ತ ಬಂದಿತು. ಮತ್ತೊಂದು ಕಡೆ ಕೊನೆಯಾಯಿತು. ಆದರೆ ಅನಂತರವೇ ಮಿಂಚಿನ ಬೆಳಕು ಪ್ರಖರವಾಯಿತು. ಪ್ರೊಮಿಥ್ಯುಸ್‍ನ ಕಣ್ಣು ಕುಕ್ಕತೊಡಗಿತು. ಮೋಡಗಳ ಅಬ್ಬರದಿಂದ ಕಿವಿ ಒಡೆದಂತಾಯಿತು. ಸ್ಯೂಸ್‍ನ ಸಮಸ್ತ ಪ್ರಾಕೃತಿಕ ಶಕ್ತಿಗಳು ಪ್ರೊಮಿಥ್ಯೂಸ್‍ವನ್ನು ನಷ್ಟ - ಭ್ರಷ್ಟಗೊಳಿಸಲು ಮುಗಿಬಿದ್ದವು. ಆದರೆ ಪ್ರೊಮಿಥ್ಯೂಸ್ ಅವುಗಳ ಎದುರು ಬಾಗಲಿಲ್ಲ. ಬಿರುಗಾಳಿ ಮತ್ತಷ್ಟು ತೀವ್ರವಾಯಿತು. ಪ್ರೊಮಿಥ್ಯೂಸ್‍ನ ದೇಹವನ್ನು ಬೆಂಕಿಯ ಜ್ವಾಲೆಯಿಂದ ಸುತ್ತುವರಿಯಿತು. ಇಷ್ಟೆಲ್ಲ ಕೋಲಾಹಲಗಳ ನಡುವೆ ಪ್ರೊಮಿಥ್ಯೂಸ್‍ನ ಧ್ವನಿ ಕೇಳಿಸಿತು - “ಸ್ಯೂಸ್ . . . ಒಂದಲ್ಲ ಒಂದು ದಿನ, ಸತ್ಕಾರ್ಯಗಳಿಗೇ ಜಯವಾಗುತ್ತದೆ. ಅನ್ಯಾಯದ ತಲೆಯನ್ನು ತುಳಿಯಲಾಗುತ್ತದೆ. ಅಲ್ಲದೆ ನೀನು ಎಂದೆಂದಿಗೂ ನಾಶವಾಗುವೆ. . . .” ಇಜಿಪ್ತ 267 ಸ್ವರ್ಣ - ಸೂರ್ಯ - (ಅಜ್ಞಾತ) ಪುರಾತನ ಇಜಿಪ್ತಿನ ಐದನೆಯ ರೆಮಸೆಜ್‍ನ ಕಾಲಕ್ಕೆ ಸಂಬಂಧಿಸಿದಂತೆ ಸಿಕ್ಕ ಹಸ್ತಪ್ರತಿಗಳಲ್ಲಿ ದೊರೆತ ಕತೆಗಳಲ್ಲಿ ಇದೂ ಒಂದು. ಇದರ ಕಾಲ 1150 ಕ್ರಿ.ಪೂ. ಬ್ಯಾಬಿಲೋನ್ ಹಾಗೂ ಇಸ್ರೇಲಿ ನಾಗರಿಕತೆಗಳಲ್ಲಿನ ಅಪ್ರಾಕೃತಿಕ ಸಂಬಂಧಗಳನ್ನು ಪ್ರಾಕೃತವೆಂದೇ ಭಾವಿಸಲಾಗುತ್ತಿತ್ತು. ಆದರೆ ಇಜಿಪ್ತನ ನಾಗರಿಕತೆಯು ಇದನ್ನು ಹೀನದೃಷ್ಟಿಯಿಂದ ನೋಡತೊಡಗಿತ್ತು. ಅಂದರೆ, ಬಹುಶಃ ಇಲ್ಲಿಂದಲೇ ಸಭ್ಯ ನೈತಿಕ ವಿಧಾನವು ಪ್ರಾರಂಭವಾಗಿರಬೇಕು. ಹೋರಸ್ ಮತ್ತು ಸೆಂತ್ ಅಣ್ಣತಮ್ಮಂದಿರಾಗಿದ್ದರು. ಇಬ್ಬರೂ ದೇವ ಸಂತಾನಗಳು. ಓಸಿರಿಸ್ ಮತ್ತು ಈರಿಸ್ ಇವರಿಗೆ ಜನ್ಮಕೊಟ್ಟವರಾಗಿದ್ದರು. ಹೋರಸ್ ಚಿಕ್ಕವನು ಹಾಗೂ ದುರ್ಬಲನೂ ಆಗಿದ್ದ. ಸೆಂತ್ ದೊಡ್ಡವನು ಹಾಗೂ ತುಂಬ ಬಲಿಷ್ಠನೂ ಆಗಿದ್ದ. ಇಬ್ಬರು ಸೋದರರ ನಡುವೆ ಭಯಂಕರ ಯುದ್ಧಗಳಾದವು. ಕೊನೆಯಲ್ಲಿ ಇಬ್ಬರೂ ಒಪ್ಪಂದ ಮಾಡಿಕೊಂಡು ಶಾಂತಿಯಿಂದ ಇರತೊಡಗಿದರು. ಆಗ ಒಂದು ಬಾರಿ ಸೆಂತ್‍ನು ಹೋರಸನಿಗೆ ಹೇಳಿದ - “ಬಾ, ಒಂದುದಿನ ನಮ್ಮ ಅರಮನೆಗೆ ಬಾ. ಇಬ್ಬರೂ ಮೋಜಿನಿಂದ ಒಂದು ದಿನ ಕಳೆಯೋಣ.” ಹೋರಸ್ ಹೇಳಿದ - “ಖಂಡಿತವಾಗಿಯೂ ನಾನು ಬರುತ್ತೇನೆ.” ಹಗಲು ಕಳೆದ ಮೇಲೆ ಹಾಸಿಗೆಯನ್ನು ಹಾಕಲಾಯಿತು. ಸೆಂತ್ ಮತ್ತು ಹೋರಸ್ ವಿಶ್ರಾಂತಿ ಮಾಡತೊಡಗಿದರು. ರಾತ್ರಿಯಾಗುತ್ತಿದ್ದಂತೆ ಸೆಂತ್ ಚಂಚಲನಾಗತೊಡಗಿದ. ಅವನು ಹೋರಸ್‍ನ ಅಂಗಾಂಗಗಳನ್ನು ಮುಟ್ಟಲು ಪ್ರಾರಂಭಿಸಿದ. ಅವನ ಚಾಂಚಲ್ಯ ಅಧಿಕವಾಗುತ್ತಲೇ ಹೋಯಿತು. ಕೊನೆಯಲ್ಲಿ ಅವನು ತುಂಬ ಅಧೀರನಾದ. ಆಗ ಹೋರಸ್ ಅವನ ವೀರ್ಯವನ್ನು ಬೊಗಸೆಯಲ್ಲಿ ಹಿಡಿದ. ತಕ್ಷಣ ಹೋರಸ್ ಓಡುತ್ತ ತನ್ನ ತಾಯಿ ಈರಿಸ್‍ಳ ಬಳಿ ಹೋಗಿ ಗಾಬರಿಯಿಂದ ಹೇಳಿದ - “ಅಮ್ಮಾ, ನೋಡು ಸೆಂತ್ ಏನು ಮಾಡಿದ್ದಾನೆ ಅಂತ” ಹೀಗೆ ಹೇಳಿ ಅವನು ತನ್ನ ಬೊಗಸೆಯನ್ನು ತೆರೆದನು. ಆಗ ತಾಯಿ ಈರಿಸ್ ವೀರ್ಯಕಣಗಳನ್ನು ನೋಡಿದಳು. ಒಂದು ಚೂರಿಯನ್ನು ತೆಗೆದುಕೊಂಡು ಅವಳು ಹೋರಸ್‍ನ ಕೈಯನ್ನು ಕತ್ತರಿಸಿದಳು. ಕತ್ತರಿಸಿದ ಕೈಗಳನ್ನು ಅವಳು ಆಳವಾದ 268 ಕಥಾ ಸಂಸ್ಕೃತಿ ನೀರಿನ ಪ್ರವಾಹಕ್ಕೆ ಎಸೆದಳು. ಅನಂತರ ತಾಯಿ ಈರಿಸ್ ಹೋರಸ್‍ನ ಮೊಳಕೈಯಿಂದಲೇ ಪುನಃ ಹೊಸಕೈಗಳನ್ನು ಉತ್ಪನ್ನ ಮಾಡಿಕೊಟ್ಟಳು. ಇದರ ಅನಂತರ ದೇವಿಯಾದ ತಾಯಿ ಈರಸ್‍ಳು ಹೋರಸ್‍ನ ಮನಸ್ಸನ್ನು ವಿಚಲಿತಗೊಳಿಸಿ ಅಧೀರನಾಗುವಂತೆ ಮಾಡಿದಳು. ಮತ್ತು ಒಂದು ಪಾತ್ರೆಯಲ್ಲಿ ಅವನ ವೀರ್ಯವನ್ನು ಸಂಗ್ರಹಿಸಿದಳು. ಹೋರಸ್‍ನ ವೀರ್ಯವನ್ನು ಸಂಗ್ರಹಿಸಿಕೊಂಡು ತಾಯಿ ಈರಿಸ್ ಸೆಂತ್‍ನ ಉದ್ಯಾನವನಕ್ಕೆ ಹೋದಳು. ಅಲ್ಲಿ ಸೆಂತ್‍ನ ತೋಟದ ಮಾಲಿ ಸಿಕ್ಕಿದನು. ದೇವಿ ಈರಿಸ್ ಮಾಲಿಯನ್ನು ಕೇಳಿದಳು - “ಯಾವ ಗಿಡದ ತೊಪ್ಪಲನ್ನು ನಿನ್ನಿಂದ ತರಿಸಿಕೊಂಡು ಸೆಂತ್‍ನು ತಿನ್ನುತ್ತಾನೆ.?” ಮಾಲಿ ಹೇಳಿದನು - “ಅವರು ಕೇವಲ ಗಜ್ಜರಿಯ ಎಲೆಗಳನ್ನು ತಿನ್ನುತ್ತಾರೆ.” ದೇವಿ ತಾಯಿ ಈರಿಸ್ ಹೋರಸ್‍ನ ವೀರ್ಯವನ್ನು ಅವೇ ಗಜ್ಜರಿ ಗಿಡಗಳ ಮೇಲೆ ಚಿಲ್ಲಿ ಹೊರಟುಹೋದಳು. ಎಂದಿನಂತೆ ಸೆಂತ್ ಉದ್ಯಾನವನಕ್ಕೆ ಬಂದವನು ಗಜ್ಜರಿಯ ಎಲೆಗಳನ್ನು ಕಿತ್ತು ತಿಂದನು, ಎಲೆಗಳನ್ನು ತಿಂದು ಏಳುವಾಗಲೇ ಅವನು ಗರ್ಭವಾನ್ ಆಗಿದ್ದನು. ಆಗ ಸೆಂತ್‍ನು ನವದೇವತೆಗಳ ದರಬಾರಕ್ಕೆ ಹೋಗಿ, ಅಲ್ಲಿ ದೇವತೆಗಳಿಗೆ ಈ ಬಗ್ಗೆ ದೂರು ಕೊಟ್ಟನು. ನವದೇವತೆಗಳ ದರಬಾರವು ಸೆಂತ್ ಹಾಗೂ ಹೋರಸರ ಮಾತುಗಳನ್ನು ಆಲಿಸಿತು. ಸೆಂತ್‍ನ ದೂರಿನಿಂದಾಗಿ ನವದೇವತೆಗಳ ದರಬಾರವು ಹೋರಸ್‍ನಿಗೆ ಛೀಮಾರಿ ಹಾಕಿತು. ಆದರೆ ಹೋರಸ್ ನಗುತ್ತ ಹೇಳಿದನು. “ದೇವತೆಗಳೇ, ಸೆಂತನು ಹೇಳಿದ್ದೆಲ್ಲ ಸುಳ್ಳು. ನಾನು ಆಣೆ ಮಾಡಿಹೇಳುತ್ತೇನೆ. ಸೆಂತ್‍ನ ವೀರ್ಯವನ್ನು ಕರೆದು ಕೇಳಿದರೆ ನಿಜ ಗೊತ್ತಾಗುತ್ತದೆ.” ಇಷ್ಟನ್ನು ಹೇಳುತ್ತಲೇ ನವದೇವತೆಗಳಲ್ಲಿ ಎಲ್ಲಕಿಂತ ಮಹಾದೇವತೆ ಥೋಥಳು ಹೋರಸ್‍ನ ಕೈಗಳನ್ನು ಹಿಡಿದುಕೊಂಡು ಸೆಂತ್‍ನ ವೀರ್ಯವನ್ನು ಆವಾಹನೆ ಮಾಡಿದಳು. ಸೆಂತ್‍ನ ವೀರ್ಯವು ಜಲದೇವತೆಯಾದ ಥೋಥಳ ಪ್ರಶ್ನೆಗಳಿಗೆ ಉತ್ತರ ನೀಡಿತು. ಅನಂತರ ಥೋಥಳು ಸೆಂತ್‍ನ ಕೈಗಳನ್ನು ಹಿಡಿದುಕೊಂಡು ಹೋರಸ್‍ನ ವೀರ್ಯವನ್ನು ಆವಾಹನೆ ಮಾಡಿದಳು. ಹೋರಸ್‍ನ ವೀರ್ಯವು ಉತ್ತರ ಕೊಟ್ಟಿತು. - “ನಾನು ಯಾವ ರಂಧ್ರದಿಂದ ಹೊರಬರಲಿ?” ಥೋಥ್‍ಳು ಹೇಳಿದಳು - “ನೀನು ಕಿವಿಯಿಂದ ಹೊರಗೆ ಬಾ” ಹೋರಸ್‍ನ ವೀರ್ಯವು ಹೇಳಿತು - “ನಾನು ಪವಿತ್ರ ವೀರ್ಯ. ಕಿವಿಯಿಂದ ಹೇಗೆ ಹೊರಬರಲಿ?” ಆಗ ಥೊಥಳು ಹೇಳಿದಳು - “ಹಾಗಾದರೆ ಪವಿತ್ರವಾದ ವೀರ್ಯವಾದ ನೀನು ತಲೆಯಿಂದ ಹೊರಗೆ ಬಾ.” ಇಜಿಪ್ತ 269 ಆಗ ಹೋರಸನ ಪವಿತ್ರ ವೀರ್ಯವು ಸೆಂತ್‍ನ ತಲೆಯಿಂದ ಸ್ವರ್ಣಸೂರ್ಯನಂತೆ ಉದಿತವಾಯಿತು. ಇದನ್ನು ನೋಡಿ ಸೆಂತ್‍ನು ತುಂಬ ಸಿಟ್ಟಾದನು. ಆಗ ಅವನು ಸ್ವರ್ಣಸೂರ್ಯನನ್ನು ಹಿಚುಕಿ ಎಸೆಯಲು ಕೈಗಳನ್ನು ಎತ್ತುತ್ತಿದ್ದಂತೆ ಥೋಥ್ ದೇವತೆಯು ಸ್ವರ್ಣಸೂರ್ಯನನ್ನು ಎತ್ತಿಕೊಂಡು ತನ್ನ ತಲೆಯಮೇಲೆ ಇಟ್ಟುಕೊಂಡಳು. ಆಗ ನವದೇವತೆಗಳ ದರಬಾರವು ಹೇಳಿತು - “ಹೋರಸ್ ಪವಿತ್ರನು, ಸೆಂತ್‍ನು ಪಾಪಿ.!!” 270 ಕಥಾ ಸಂಸ್ಕೃತಿ ರೊಡೊಪಿಸ್ - (ಅಜ್ಞಾತ) ಇದು ಒಬ್ಬ ವೇಶ್ಯೆಯ ನಿಜವಾದ ಕತೆ. ಇದನ್ನು ಇಜಿಪ್ತಿನ ಜನರು ಬರೆದು ಇಟ್ಟಿದ್ದಾರೆ. ವೇಶ್ಯೆ ರೋಡೋಪಿಸ್‍ಳನ್ನು ಕುರಿತು ಯೂನಾನಿ ಸಾಹಿತ್ಯದಲ್ಲಿ ಬಹಳಷ್ಟು ಪ್ರೇಮಗೀತೆಗಳನ್ನು ಬರೆಯಲಾಗಿದೆ. ಅವನ್ನು ಇಂದಿಗೂ ನೋಡಬಹುದು. ಬಹುಶಃ ಪ್ರೇಮ-ವ್ಯಾಪಾರ ಮತ್ತು ಪ್ರೇಮ ಪಿಪಾಸೆಯ ದ್ವಂದ್ವಾತ್ಮಕ ಸಮತೋಲನದ ಈ ಸರ್ವಪ್ರಥಮ ವಿವರಣೆ ಕ್ರಿ.ಪೂ. 1000 ವರ್ಷಗಳಷ್ಟು ಹಿಂದಿನದು. ರೋಡೋಪಿಸ್ ತನ್ನ ಜೀವನವನ್ನು ಪ್ರಾರಂಭ ಮಾಡಿದ್ದು ದಾಸಿಯ ರೂಪದಲ್ಲಿ. ಅವಳು ಸಮೊಸದ ಇಯಾಡಮೊನ್‍ನ ಬಳಿ ಕೆಲಸದವಳಾಗಿದ್ದಳು. ರೋಡೋಪಿಸ್‍ಳನ್ನು ಅವಳ ಒಡೆಯನು ಇಜಿಪ್ತಿನ ಒಬ್ಬ ಶ್ರೀಮಂತನಿಗೆ ಮಾರಿಬಿಟ್ಟನು. ಅವನು ಅವಳನ್ನು ಇಜಿಪ್ತಿಗೆ ಕರೆತಂದನು. ರೋಡೋಪಿಸ್ ಎಣೆಯಿಲ್ಲದ ಸುಂದರಿಯಾಗಿದ್ದಳು. ತನ್ನ ಬಳಿ ಒಬ್ಬ ಅಪ್ಸರೆಯಿರುವುದಾಗಿಯೂ ಅವಳು ಕಾಮಕಲೆಯಲ್ಲಿ ನಿಪುಣಳಾಗಿರುವುದಾಗಿಯೂ ಅವಳ ಮಾಲಿಕನು ನಾಲ್ಕೂ ಕಡೆ ಸುದ್ದಿ ಹರಡಿಸಿದ. ಈ ಸುದ್ದಿ ಹಬ್ಬುತ್ತಲೇ ರೋಡೋಪಿಸ್‍ಳ ಸೌಂದರ್ಯವನ್ನು ಸವಿಯಲು ಜನಸಾಲುಗಟ್ಟಿದರು. ಮಾಲಿಕನು ರೋಡೋಪಿಸ್‍ಳ ಸೌಂದರ್ಯವನ್ನು ವ್ಯಾಪಾರ ಮಾಡಿ ಅಪಾರ ಹಣ ಸಂಪಾದಿಸಿದ. ಸುಂದರಿಯಾದ ಗಣಿಕೆ ರೋಡೋಪಿಸ್‍ಳನ್ನು ಬಯಸುವ ಸಾವಿರಾರು ಜನರಲ್ಲಿ ಯೂನಾನಿ ನಾವಿಕ ಯುವಕ ಚಾರಾರಕ್ಸುಸ್ ಕೂಡ ಒಬ್ಬನಾಗಿದ್ದ. ಅವನು ರೋಡೋಪಿಸ್‍ಳ ಪ್ರೇಮಪಾಶದಲ್ಲಿ ಗಾಢವಾಗಿ ಬಂಧಿತನಾಗಿದ್ದ. ಅವನು ರೊಡೋಪಿಸ್‍ಳ ಒಡೆಯನಿಗೆ ಅವನು ಕೇಳಿದಷ್ಟು ಹಣಕೊಟ್ಟು ಅವಳನ್ನು ಮುಕ್ತಗೊಳಿಸಿದ. ಚಾರಾರಕ್ಸುಸ್ ತನ್ನ ಇನಿಯಳಿಗಾಗಿ ನೌಕ್ರೆಟಿಸ್‍ನಲ್ಲಿ ನಿವಾಸ ಸ್ಥಾನದ ವ್ಯವಸ್ಥೆಯನ್ನು ಮಾಡಿದ. ಸುಂದರಿ ರೋಡೋಪಿಸ್ ಅಲ್ಲಿ ನಿಶ್ಚಿಂತೆಯಿಂದ ಇರತೊಡಗಿದಳು. ಯುವಕ ನಾವಿಕ ಗ್ರೀಸ್‍ನಿಂದ ಇಜಿಪ್ತಿಗೆ ಬಂದಾಗೆಲ್ಲ ರೋಡೋಪಿಸ್‍ಳೊಂದಿಗೆ ತನ್ನ ಸಮಯವನ್ನೆಲ್ಲ ಕಳೆಯುತ್ತಿದ್ದ. ಇಬ್ಬರೂ ಒಬ್ಬರನ್ನೊಬ್ಬರು ತೀವ್ರವಾಗಿ ಪ್ರೀತಿಸುತ್ತಿದ್ದರು. ಇಜಿಪ್ತಿನ ಈ ಯುವನಾವಿಕ ಅಲ್ಲಿ ಇಜಿಪ್ತ 271 ಇರುವಷ್ಟು ಸಮಯ ಆಕೆ ಬೇರೆ ಯಾವ ಪ್ರೇಮಿಯ ಜೊತೆಗೂ ಸಂಬಂಧವಿರಿಸಿಕೊಳ್ಳುತ್ತಿರಲಿಲ್ಲ. ಗ್ರೀಸ್‍ನ ಈ ಪ್ರೇಮಿ ಹೋದ ಅನಂತರ ಅವಳು ತನ್ನ ಪ್ರೇಮ - ವ್ಯಾಪಾರವನ್ನು ಪ್ರಾರಂಭಿಸುತ್ತಿದ್ದಳು. ಒಂದು ಬಾರಿ ಗ್ರೀಸ್‍ನ ಪ್ರೇಮಿ ಹೊರಟುಹೋದ ಮೇಲೆ ಸುಂದರಿ ರೋಡೋಪಿಸ್ ನೈಲ ನದಿಯಲ್ಲಿ ಸ್ನಾನ ಮಾಡಲು ಹೋದಳು. ತನ್ನ ಎಲ್ಲ ಬಟ್ಟೆಯನ್ನು ಕಳಚಿ ನೈಲನದಿಯ ದಂಡೆಯ ಮೇಲೆ ಇಟ್ಟಿದ್ದಳು. ಅಷ್ಟರಲ್ಲಿ ಒಂದು ಹದ್ದು ಬಂದು ಅವಳ ಕುಪ್ಪಸವನ್ನು ಪಂಜದಲ್ಲಿ ಹಿಡಿದುಕೊಂಡು ಮೆಂಫಿಸ್‍ನಗರದ ಕಡೆ ಹಾರಿಹೋಯಿತು. ಮೆಂಫಿಸ್‍ನ ರಾಜನು ಆ ಸಮಯದಲ್ಲಿ ತನ್ನ ದರಬಾರಿಗಳೊಂದಿಗೆ ಸುತ್ತುವರಿದು ಕುಳಿತಿದ್ದ. ಆ ಹದ್ದು ಹಾರುತ್ತ ಹಾರುತ್ತ ಅಲ್ಲಿಗೆ ಬಂದಿತು. ಅದು ಪಂಜದಲ್ಲಿ ಹಿಡಿದಿದ್ದ ಕಂಚುಕವು ಹಿಡಿತ ತಪ್ಪಿ ರಾಜನ ದರಬಾರಿನಲ್ಲಿ ಬಿದ್ದಿತು. ಆ ಕುಪ್ಪಸವನ್ನು ನೋಡುತ್ತಲೇ ರಾಜನು ಕಾಮನೆಯಿಂದ ಪೀಡಿತನಾದ. ಸರಿ, ಮತ್ತೇನು? ಆ ಕುಪ್ಪಸದ ಒಡತಿಯನ್ನು ಹುಡುಕಿಕೊಂಡು ಬರಲು ನಾಲ್ಕೂ ಕಡೆ ದೂತ ದೂತಿಯರನ್ನು ಓಡಿಸಲಾಯಿತು. ಇದು ತನ್ನ ಭಾಗ್ಯೋದಯದ ಕ್ಷಣವೆಂದು ರೋಡೋಪಿಸ್ ಭಾವಿಸಿದಳು. ರಾಜನನ್ನು ಭೇಟಿಯಾಗಲು ಆಕೆ ದೂತರೊಡನೆ ರಾಜಧಾನಿಗೆ ಹೋದಳು. ಅವಳನ್ನು ನೋಡುತ್ತಲೇ ರಾಜನು ತನ್ನ ಎಚ್ಚರವನ್ನೇ ಕಳೆದುಕೊಂಡ. ಸುಂದರಿ ರೋಡೋಪಿಸ್ ತುಂಬ ಬುದ್ಧಿವಂತಿಕೆಯಿಂದ ಸಂದರ್ಭವನ್ನು ನಿಭಾಯಿಸಿದಳು. ಅವಳು ವಿವಾಹದ ಶರ್ತವನ್ನು ಮುಂದಿಟ್ಟಳು. ರಾಜನು ಅವಳ ಶರತ್ತನ್ನು ಒಪ್ಪಿದ್ದರಿಂದ ಆಕೆ ಮಹಾರಾಣಿಯಾದಳು. ಆಗಲೂ ಅವಳು ತನ್ನ ಪ್ರೇಮಿಯನ್ನು ಹೃದಯದಿಂದ ಕಿತ್ತೆಸೆಯಲಿಲ್ಲ. ಅವನೊಡನೆಯೂ ಸದಾ ಭೇಟಿಯಾಗುತ್ತಿದ್ದಳು. ಹೀಗೆ ಅವಳು ತನ್ನ ಪ್ರೇಮ ಹಾಗೂ ಕರ್ತವ್ಯದ ಕಠಿಣವಾದ ಭೂಮಿಕೆಯನ್ನು ಕೊನೆಯ ತನಕ ನಿರ್ವಹಿಸಿದಳು. ಗ್ರೀಸ್‍ನ ಲೌಕಿಕ ಕಾವ್ಯದಲ್ಲಿ ರೋಡೋಪಿಸ್‍ಳ ಪ್ರೇಮಗಾಥೆ ಅಮರವಾಯಿತು. . . . ಶತಮಾನಗಳ ನಂತರವೂ ಕವಿಗಳು ಅವಳ ಈ ಕಷ್ಟಕರವಾದ ಪ್ರೇಮ ಪ್ರಸಂಗವನ್ನು ಎತ್ತಿಕೊಂಡು ರಸಾರ್ದ್ರವಾದ ಗೀತೆಗಳನ್ನು ಬರೆಯುತ್ತಲೇ ಉಳಿದರು. 272 ಕಥಾ ಸಂಸ್ಕೃತಿ ಮುಕ್ತ - ಛಂದ - ಜೆ. ಎಚ್. ಆನಂದ ಇದೊಂದು ಗ್ರೀಕ್ ಪುರಾಣಕತೆ. ಇದರ ರಚನಾಕಾಲ ಕ್ರಿ.ಪೂ. 800. ಭಾರತೀಯ ಪುರಾಣ ಕತೆಗಳಂತೆಯೆ ಗ್ರೀಕ್ ಪುರಾಣಕತೆಗಳೂ ಕೂಡ ಜೀವನದ ಉಚ್ಚತಮ ಆಧ್ಯಾತ್ಮಿಕ ಅಭಿವ್ಯಕ್ತಿಗಾಗಿ ಸೆಣಸಾಡುತ್ತವೆ. ಈ ಕತೆ ಕೂಡ ಇಂಥದೇ ಮೌಲ್ಯಕ್ಕಾಗಿ ಸಂಘರ್ಷ ನಡೆಸುವ ಒಬ್ಬ ಹೆಣ್ಣಿನ ಕತೆಯಾಗಿದೆ. ಓಲಿಂಪಸ್ ಪರ್ವತ ಶ್ರೇಣಿಗಳ ಟೆಂಪೆ ಘಟ್ಟದಲ್ಲಿ ಹಾಗೂ ತಳದಲ್ಲಿ ಹರಿಯುವ ಪೆನಿಯೋಸ್ ಎಂಬ ಹೆಸರಿನ ತೊರೆಯ ಸಾನ್ನಿಧ್ಯದಲ್ಲಿ, ಅನುಪಮ ಸುಂದರ ಕನ್ಯೆಯಾದ ದಾಫನೆ ತನ್ನ ಕಿಶೋರ ಜೀವನವನ್ನು ಸ್ವಚ್ಛಂದತೆಯಿಂದ ಕಳೆಯುತ್ತಿದ್ದಳು. ಅವಳ ತಾರುಣ್ಯ ಉಷೆಯ ಹಾಗೆ ತಾಜಾ ಆಗಿತ್ತು. ಸೂರ್ಯೋದಯದ ಮೊದಲ ಕಿರಣಗಳನ್ನು ಸ್ವಾಗತಿಸಲು ಅವಳು ಎತ್ತರವಾದ ಶಿಖರವನ್ನು ಏರುತ್ತಿದ್ದಳು. ಭುವನ ಭಾಸ್ಕರನ ರಥವು ಆಕಾಶದ ಇನ್ನೊಂದು ಕ್ಷಿತಿಜದಲ್ಲಿ ಮುಳುಗಿ ಅಸ್ತಂಗತವಾಗುವವರೆಗೆ ಪಶ್ಚಿಮದ ಬೆಟ್ಟಗಳನ್ನು ಅವಲೋಕಿಸುತ್ತಿರುತ್ತಿದ್ದಳು. ಅವಳ ಗೆಳತಿಯರು ಪುರುಷ ಪ್ರೇಮದ ಬಗ್ಗೆ ಅವಳನ್ನು ಪ್ರಚೋದಿಸುತ್ತಿದ್ದರು, ಪ್ರೇರೇಪಿಸುತ್ತಿದ್ದರು. ಆದರೆ ದಾಫನೆ ಅದನ್ನು ಅಸಡ್ಡೆ ಮಾಡುತ್ತಿದ್ದಳು. ಆ ಬಗೆಗೆ ಅವಳು ಉದಾಸೀನಳಾಗಿದ್ದಳು. ಹಾಗೆಂದು ಹಲವರು ಗ್ರೀಕ್ ತರುಣರು ಅವಳನ್ನು ತಮ್ಮ ಜೊತೆಗಾತಿಯಾಗಿಸಿಕೊಳ್ಳುವ ಪ್ರಸ್ತಾಪವನ್ನು ಅವಳ ಮುಂದಿಟ್ಟಿದ್ದರು. ಒಂದು ದಿನ ಅವಳು ನಸುಕುಹರಿಯುವ ಮುನ್ನವೇ ಬೆಟ್ಟದ ಅಂಚಿನಲ್ಲಿ ನಿಂತು ಕೆಳಗಿನ ಹಸಿರು ತುಂಬಿದ ಬಯಲನ್ನು ತನ್ಮಯಗೊಂಡು ನೋಡುತ್ತಿದ್ದಳು. ಉದಯಿಸುತ್ತಿದ್ದ ಸೂರ್ಯನ ಬೆಳಕು ಅಕಸ್ಮಾತ್ತಾಗಿ ಅವಳ ಮುಖದ ಮೇಲೆ ಬಿದ್ದಿತು. ಹೊಂಬಣ್ಣದ ಬೆಳಕು ಅವಳ ಸ್ನಿಗ್ಧ ಚರ್ಮದ ಮೇಲೆ ಹರಡಿತ್ತು. ತನ್ನ ಎದುರು ಒಬ್ಬ ತೇಜಸ್ವಿಯಾದ ವ್ಯಕ್ತಿಯು ನಿಂತಹಾಗೆ, ಅವನ ಶರೀರದಿಂದ ದಶದಿಕ್ಕುಗಳಿಗೂ ಕಿರಣಗಳು ಚಿಮ್ಮುತ್ತಿದ್ದ ಹಾಗೆ ಅವಳಿಗೆ ಅನುಭವವಾಯಿತು. ದಾಫನೆ ಅವನನ್ನು ಗುರುತಿಸಿದಳು. ಫೀಟಸ್ ಅಪೋಲೋ (ಸೂರ್ಯ) ದಾಫನೆಯತ್ತ ಮುಂದುವರಿದ. ಅವನು ಹೇಳಿದ - “ಓ ಉಷಾ ಪುತ್ರೀ, ಕೊನೆಗೂ ನಾನು ನಿನ್ನನ್ನು ಪಡೆದೇ ಬಿಟ್ಟೆ. ನೀನು ಬೇರೆ ಪುರುಷರನ್ನು ನಿನ್ನವನನ್ನಾಗಿಸಲು ನಿರಾಕರಿಸಿದ್ದೆ. ಆದರೆ ಈಗ ನನ್ನಿಂದ ನೀನು ತಪ್ಪಿಸಿಕೊಳ್ಳಲಾರೆ. ಗ್ರೀಸ್ (ಯೂನಾನ್) 273 ನಾನು ಎಂದಿನಿಂದಲೋ ನಿನ್ನನ್ನು ಬಯಸಿದ್ದೆ. ; ಈ ದಿನ ನಾನು ನಿನ್ನನ್ನು ನನ್ನವಳಾಗಿಸಿಕೊಳ್ಳುತ್ತೇನೆ” ದಾಫನೆ ಹೆದರಲಿಲ್ಲ. ಅವಳ ಹೃದಯ ದುರ್ಬಲವಾಗಿರಲಿಲ್ಲ. ಅಪೋಲೋನ ಮಾತು ಕೇಳಿ ಅವಳ ಸುಂದರ ಮುಖ ಕೆಂಪೇರಿತು. ಸಿಟ್ಟಿನಿಂದ ಅವಳ ಅಗಲವಾದ ಕಣ್ಣುಗಳು ಉರಿದೆದ್ದವು. ದಾಫನೆ ಹೇಳಿದಳು - “ನನಗೆ ಪುರುಷ ಪ್ರೇಮವೂ ಗೊತ್ತಿಲ್ಲ, ವಿವಾಹ ಬಂಧನವೂ ಗೊತ್ತಿಲ್ಲ. ನಾನು ಈ ಪರ್ವತಗಳ ಹಾಗೂ ತೊರೆಗಳ ಸಾನ್ನಿಧ್ಯದಲ್ಲಿ ಮುಕ್ತವಾಗಿ ಕಾಲ ಕಳೆಯುತ್ತಿದ್ದೇನೆ. ಸ್ವಚ್ಛಂದವಾಗಿ ವಿಹರಿಸುತ್ತಿದ್ದೇನೆ. ನನ್ನ ಸ್ವಾತಂತ್ರ್ಯವನ್ನು ಅಪಹರಿಸಲು ನಾನು ಯಾರಿಗೂ ಬಿಡಲಾರೆ.” ಅಪೋಲೋನ ತೇಜಸ್ವಿಯಾದ ಮುಖವು ಅಪಮಾನದಿಂದ ಕಪ್ಪಾಯಿತು. ದಾಫನೆಯ ಸ್ಪಷ್ಟ ಮಾತುಗಳಿಂದ ಅವನ ಕಾಮವಾಸನೆ ಇನ್ನಷ್ಟು ತೀವ್ರವಾಯಿತು. ಅವನು ಸಿಟ್ಟಿನಿಂದ ಉನ್ಮತ್ತನಾಗಿ ಯುವಕನ್ಯೆ ದಾಫನೆಯನ್ನು ಹಿಡಿದುಕೊಳ್ಳಲು ಮುನ್ನುಗ್ಗಿದ. ಆದರೆ ದಾಫನೆ ಗಾಳಿಯ ರೆಕ್ಕೆಗಳ ಮೇಲೆ ಕೂತು, ಶರತ್ಕಾಲದ ಎಲೆಗಳು ಹಾರುವಂತೆ ಹಾರಿಬಿಟ್ಟಳು. ದಾಫನೆ ತನ್ನ ಯೌವನವನ್ನು ಸಂರಕ್ಷಿಸಿಕೊಳ್ಳಲು ಬೆಟ್ಟ, ಬಂಡೆ, ಸರೋವರ, ನದಿಗಳಲ್ಲಿ ತೇಲುತ್ತ ಜಿಗಿಯುತ್ತ ಓಡುತ್ತಿದ್ದಳು. ಆದರೆ ನಿಧಾನವಾಗಿ ಅವಳ ಶಕ್ತಿಯು ಕ್ಷೀಣವಾಗತೊಡಗಿತು. ಕಾಮಾತುರನಾದ ಅಪೋಲೋ ಆಕೆಯ ಅತ್ಯಂತ ಸಮೀಪಕ್ಕೆ ಬರುತ್ತಲಿದ್ದ. ಅವನ ಭಯಾನಕವಾದ ಅಟ್ಟಹಾಸವನ್ನು ಆಕೆ ಕೇಳಿಸಿಕೊಳ್ಳುತ್ತಿದ್ದಳು. ಅವಳು ಓಲಿಂಪಸ್ ಪರ್ವತದತ್ತ ತನ್ನ ಎರಡೂ ಬಾಹುಗಳನ್ನು ಮೇಲೆತ್ತಿ ರಕ್ಷಾದೇವತೆ ಡಿಮಿಟರ್ ಸಹಾಯಕ್ಕಾಗಿ ಕೂಗಿಕೊಂಡಳು. ಆದರೆ ಡಿಮಿಟರ್‍ಳು ಓಲಿಂಪಸ್ ಪರ್ವತದಿಂದ ಸಹಾಯಕ್ಕಾಗಿ ಅವಳ ಹತ್ತಿರ ಬರಲಿಲ್ಲ. ಅವಳ ತಲೆ ಸುತ್ತತೊಡಗಿತು. ಕಾಲುಗಳು ದಣಿವಿನಿಂದ ನಡುಗತೊಡಗಿದವು. ಪೆನಿಯೋಸ್ ಜಲಪಾತದ ವಿಶಾಲ ದಡವನ್ನು ತಲುಪುತ್ತಿದ್ದಾಗ ಅಪೋಲೋನ ಅಗಲವಾದ ಮುಷ್ಟಿಯಲ್ಲಿ ದಾಫನೆಯ ಉತ್ತರೀಯವಿತ್ತು. ಅವನ ಅಹಂಕಾರದ ಶ್ವಾಸವು ಅವಳ ಕೆನ್ನೆಗೆ ಸೋಂಕಿತು. ಒಮ್ಮೆಲೇ ದಾಫನೆ ದೊಡ್ಡದನಿಯಲ್ಲಿ ಕೂಗಿ ಹೇಳಿದಳು - “ಓ ಪೆನಿಯೋಸ್ ತಂದೆಯೇ, ನಿನ್ನ ಮಗಳನ್ನು ಸ್ವೀಕರಿಸು” ಅವಳು ಕೆಳಗುರುಳುವ ನೀರಿನ ಪ್ರವಾಹಕ್ಕೆ ಜಿಗಿದಳು. ನೀರು ಮೇಲೆಕ್ಕೆದ್ದಿತು. ಅದರ ತೆರೆಗಳು ತನ್ನ ಸಚ್ಛಂದ ಸಖಿಯನ್ನು ತನ್ನಲ್ಲಿ ಒಳಗೊಂಡವು. 274 ಕಥಾ ಸಂಸ್ಕೃತಿ ಹೆಣ್ಣಿನ ಬಂಡಾಯ - ಆರಿಸ್ಟೊಫೆನಿಸ್ ಇದು ಆರಿಸ್ಟೊಫೆನಿಸ್‍ನ ಒಂದು ಪುರಾತನ ಗ್ರೀಕ್ ನಾಟಕದ ಕಥಾಸಾರ. ಈ ನಾಟಕ ಕ್ರಿ.ಪೂ. 400 ರಲ್ಲಿ ಬರೆದದ್ದು ಮತ್ತು ಆಡಿದ್ದು. ಆದರೆ ಇದರ ಹಸ್ತಪ್ರತಿ ಕ್ರಿ.ಪೂ. 1 ನೇ ಶತಮಾನದಲ್ಲಿ ಲಭ್ಯವಾಯಿತು. ಈ ನಾಟಕದ ಹೆಸರು - ‘ಲಿಸಿಸ್ತ್ರಾತಾ.’ ಅಥೆನ್ಸ್ ಮತ್ತು ಸ್ಪಾರ್ಟಾಗಳ ನಡುವೆ ಭಾರೀ ಯುದ್ಧ ನಡೆದಿತ್ತು. ಯುದ್ಧದಿಂದಾಗುವ ವಿನಾಶದಿಂದಾಗಿ ಎಲ್ಲರೂ ಆತಂಕಿತರಾಗಿದ್ದರು. ಒಂದು ಬಾರಿ ಯುದ್ಧ ಪ್ರಾರಂಭವಾದ ಮೇಲೆ ಎರಡೂ ರಾಜ್ಯಗಳ ಸೇನೆಗಳು ಉನ್ಮತ್ತಗೊಂಡಿದ್ದವು. ಎರಡೂ ಶಕ್ತಿಶಾಲೀ ರಾಜ್ಯಗಳೇ. ಯುದ್ಧವು ಸಮಾಪ್ತವಾಗುವ ಯಾವುದೇ ಲಕ್ಷಣವು ದೃಷ್ಟಿಗೋಚರವಾಗುತ್ತಿರಲಿಲ್ಲ. ಹಗಲಿಡೀ ಯುದ್ಧವಾಗುತ್ತಿತ್ತು. ರಾತ್ರಿಯಾಗುತ್ತಲೇ ಎರಡೂ ಪಕ್ಷಗಳ ಯೋಧರು ತಮ್ಮ ಶಯ್ಯಾಗೃಹದಲ್ಲಿ ಮಲಗುತ್ತಿದ್ದರು. ಬೆಳಗಾಗುತ್ತಲೇ ಪುನಃ ಯುದ್ಧಕ್ಕಾಗಿ ಬಂದು ನಿಲ್ಲುತ್ತಿದ್ದರು. ಅಥೆನ್ಸ್ ನಗರದ ನ್ಯಾಯಾಧೀಶನ ಪತ್ನಿ ಲಿಸಿಸ್ತ್ರಾತಾ ಯುದ್ಧ ಭೀಕರತೆ ಮತ್ತು ವ್ಯರ್ಥತೆಯನ್ನು ನೋಡಿ ತಿಳಿದು ತುಂಬ ಖಿನ್ನಳಾಗಿದ್ದಳು. ಅವಳು ಯುದ್ಧ ನಿಲ್ಲಿಸಲು ಒಂದು ಹೊಸ ತಂತ್ರವನ್ನು ಯೋಚಿಸಿದಳು. ಅವಳು ಅಥೆನ್ಸನ ಒಬ್ಬೊಬ್ಬ ಯೋಧನ ಹೆಂಡತಿಯನ್ನು ಭೇಟಿಯಾದಳು. ಅವರೊಡನೆ ಮಂತ್ರಾಲೋಚನೆ ಮಾಡಿದಳು. ಅಂತಿಮವಾಗಿ ಯೋಧರ ಪತ್ನಿಯರು ತಮ್ಮ ಯುದ್ಧೋನ್ಮತ್ತ ಪತಿಗಳನ್ನು ಯುದ್ಧ ವಿಮುಖರನ್ನಾಗಿ ಮಾಡಲು ಒಂದು ಹೊಸ ಬಂಡಾಯವನ್ನು ಮಾಡಿದರು. ಅವರು ರಾತ್ರಿ ತಿರುಗಿ ಬರುವ ಯೋಧ ಪತಿಯರೊಂದಿಗೆ ರಾತ್ರಿ ಮಲಗಲು ನಿರಾಕರಿಸಿದರು. ಯಾವ ಪತ್ನಿಯೂ ತನ್ನ ಪತಿಯ ಬಳಿ ಹೋಗಲಿಲ್ಲ. ಪತ್ನಿಯರ ಈ ಬಂಡಾಯವು ಭಯಂಕರ ಸ್ಥಿತಿಯನ್ನು ಉಂಟುಮಾಡಿತು. ಯುದ್ಧವನ್ನು ನಿಲ್ಲಿಸಲು ಅಥೆನ್ಸನ ಮಹಿಳೆಯರು ಯೋಜಿಸಿದ ಈ ಹೊಸ ಪ್ರಯತ್ನದ ಸುದ್ದಿ ಸ್ಪಾರ್ಟಾದ ಮಹಿಳೆಯರನ್ನು ತಲುಪಿತು. ಅವರೂ ಬಂಡಾಯದ ಬಾವುಟ ಹಾರಿಸಿದರು. ಗಂಡಂದಿರ ಬಳಿ ಹೋಗಲು ಅವರೂ ನಿರಾಕರಿಸಿದರು. ಆಗ ಎರಡೂ ರಾಜ್ಯಗಳ ಯೋಧರಿಗೆ ಎಚ್ಚರಾಯಿತು. ತಮ್ಮ ಮನೆಗಳ ಈ ವಿಕಟ ಗ್ರೀಸ್ (ಯೂನಾನ್) 275 ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ಅವರು ಯುದ್ಧವನ್ನು ನಿಲ್ಲಿಸಬೇಕಾಯಿತು. ಹೀಗೆ ಅಥೆನ್ಸ ಮತ್ತು ಸ್ಪಾರ್ಟಾದ ನಡುವೆ ಶಾಂತಿಯು ನೆಲೆಸಿತು. 276 ಕಥಾ ಸಂಸ್ಕೃತಿ ಮಹಾಯಾತ್ರೆ - (ಅಜ್ಞಾತ) ಕ್ರಿ.ಪೂ. 800 ರ ಈ ಅಕ್ಕಾದಿ (ಯೂನಾನಿ) ಕಥೆಯು ಜೀವನದ ಮಹಾಯಾತ್ರೆಗೆ ದಾರ್ಶನಿಕ ಆಭಾಸವನ್ನು ಕೊಡುತ್ತದೆ. ಈ ಕತೆಯನ್ನು ‘ಎತ್ನಾ’ದಿಂದ ತೆಗೆದುಕೊಳ್ಳಲಾಗಿದೆ. ಎರಡನೆಯ ಗಾಥೆ ‘ಅದಪಾ’ದಲ್ಲಿ ಮನುಷ್ಯನ ಮರಣದ ಕಾರಣಗಳ ವ್ಯಾಖ್ಯೆಯಿದೆ. ಒಂದುಬಾರಿ ಸರ್ಪ ಹಾಗೂ ಗರುಡ ಇಬ್ಬರೂ ಸ್ನೇಹಿತರಾಗಿರುವ ಪ್ರತಿಜ್ಞೆ ಮಾಡಿದರು. ಆದರೆ ಒಂದು ದಿನ ಗರುಡವು ಸರ್ಪದ ಮರಿಯನ್ನು ತಿಂದುಬಿಟ್ಟಿತು. ಇದರಿಂದ ಕಾತರಗೊಂಡ ಹಾಗೂ ಸಿಟ್ಟಿಗೆದ್ದ ಸರ್ಪವು ಸೂರ್ಯದೇವನಿಗೆ ದೂರುಕೊಟ್ಟಿತು. ಸರ್ಪವು ಎಲ್ಲಿಂದಲಾದರೂ ಒಂದು ಎತ್ತಿನ ಅಸ್ಥಿಪಂಜರವನ್ನು ಹುಡುಕಿ ತರಬೇಕೆಂದೂ ಮತ್ತು ಗರುಡವು ಅದನ್ನು ತಿನ್ನಲುಬಂದಾಗ ಸರ್ಪವು ಅದನ್ನು ಹಿಡಿದುಕೊಳ್ಳಬೇಕೆಂದೂ ಸೂರ್ಯನು ಸರ್ಪಕ್ಕೆ ಸಲಹೆ ನೀಡಿದನು. ಸರ್ಪವು ಹೀಗೆಯೇ ಮಾಡಿತು. ಗರುಡ ಅಸ್ಥಿಪಂಜರ ತಿನ್ನಲು ಬಂದಾಗ, ಸರ್ಪವು ಅದನ್ನು ಹಿಡಿದುಕೊಂಡಿತು. ಅದರ ರೆಕ್ಕೆಯನ್ನು ಕತ್ತರಿಸಿತು. ಅಷ್ಟೇ ಅಲ್ಲ, ಗರುಡನನ್ನು ಒಂದು ಹಳ್ಳಕ್ಕೆ ತಳ್ಳಿಬಿಟ್ಟಿತು. ರೆಕ್ಕೆ ಇಲ್ಲದ್ದರಿಂದ ಗರುಡವು ಅಸಹಾಯಗೊಂಡು ನೋವು ಅನುಭವಿಸತೊಡಗಿತು. ಗರುಡವು ಸೂರ್ಯದೇವತೆಯನ್ನು ಪ್ರಾರ್ಥಿಸಿತು. ಸೂರ್ಯನು ಅದಕ್ಕೆ ಸಹಾಯ ಮಾಡಲು ಬಯಸುತ್ತಿದ್ದ. ಆದರೆ ಸರ್ಪವು ಮಾಡಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಅದಕ್ಕಾಗಿ ಅವನು ಸುಮ್ಮನಾದನು. ಆಗ ಒಂದು ಘಟನೆ ಸಂಭವಿಸಿತು. ಕೀಶ್‍ನ ರಾಜನಾದ ಎತನಾನ ಹೆಂಡತಿ ಗರ್ಭವತಿಯಾಗಿದ್ದಳು. ಅವನು ಅವಳ ಪ್ರಸವ ವೇದನೆಯನ್ನು ಕಡಿಮೆ ಮಾಡುವ ಸಲುವಾಗಿ ಜಾದೂವಿನ ‘ಜನ್ಮ ಔಷಧ’ವನ್ನು ಹುಡುಕತೊಡಗಿದ. ಔಷಧಕ್ಕಾಗಿ ಅವನು ಸೂರ್ಯನನ್ನು ಕೇಳಿದ. ಸೂರ್ಯನು ಈ ಸಂದರ್ಭವನ್ನು ನೋಡಿ ಹೇಳಿದ. - “ಆ ಔಷಧ ಸ್ವರ್ಗದಲ್ಲಿ ಮಾತ್ರ ಸಿಗುತ್ತದೆ. ಅಲ್ಲಿಗೆ ಗರುಡ ಮಾತ್ರ ಹೋಗಬಲ್ಲದು. ಹೊಂಡದಲ್ಲಿ ಬಿದ್ದಿರುವ ಗರುಡನನ್ನು ಗುಣಪಡಿಸಿದರೆ ನಿನ್ನ ಕೆಲಸ ಆಗುತ್ತದೆ.” ಗ್ರೀಸ್ (ಯೂನಾನ್) 277 ಎತನಾ ಗರುಡನನ್ನು ಗುಣಪಡಿಸಿದ. ಇಬ್ಬರೂ ಹಾರಿಹೋದರು. ಹಾರುತ್ತ ಹಾರುತ್ತ ಆಕಾಶವನ್ನು ತಲುಪಿ ಗರುಡ ಹೇಳಿತು. - “ಮಿತ್ರ. . . . ನೋಡು ಭೂಮಿ ಹೇಗಿದೆ! ನಾಲ್ಕೂ ದಿಕ್ಕಿಗೆ ನೀರು. ಮಧ್ಯೆ ಪರ್ವತದಂತೆ ಭೂಮಿ.” ಯಾತ್ರೆಯಿನ್ನೂ ಕೊನೆಗೊಂಡಿರಲಿಲ್ಲ. ಗರುಡ ಆನ, ಎಲ್ಲಿಲ, ಹಾಗೂ ಎಂಕಿಗಳ ಸ್ವರ್ಗದ ಬಾಗಿಲುಗಳನ್ನು ದಾಟಿ ಹೋದ. ಆದರೆ ಇನ್ನೂ ತುಂಬ ದೂರ ಹೋಗಬೇಕಾಗಿತ್ತು. ದೇವಿಯ ಸಿಂಹಾಸನದ ಬಳಿ ಔಷಧದ ಮರವಿತ್ತು. ಎತನಾನಿಗೆ ಯಾತ್ರೆ ಅಸಹನೀಯವಾಯಿತು. ಯಾಕೆಂದರೆ ಅದಕ್ಕೆ ಕೊನೆಯೇ ಇರಲಿಲ್ಲ. ಕೊನೆಗೆ ಯಾತ್ರೆಯ ಬಗೆಗೆ ತುಂಬ ಗಾಬರಿಯಾದ ಎತನಾ ಜಿಗಿದುಬಿಟ್ಟ. ಮತ್ತು ಭೂಮಿಯ ಮೇಲೆ ಬಿದ್ದ. 278 ಕಥಾ ಸಂಸ್ಕೃತಿ ತಾಯಿ - ಮಗಳ ಸಂವಾದ - ಲೂಸಿಯನ್ (ಎರಡನೆಯ ಶತಮಾನದ ಯೂನಾನಿ ವ್ಯಂಗ್ಯಕಾರನು ವಾಲ್ಟೇರ್ ಜೊತೆ ಹೋಲಿಸಬಹುದಾದಷ್ಟು ಮಹತ್ವದವನೆಂದು ಭಾವಿಸಲಾಗುತ್ತದೆ. ಯೂನಾನಿ ನಗರ ನಾಗರಿಕತೆಯ ಒಂದು ಮಗ್ಗುಲಿನ ಬಡಪಾಯಿತನದ ಕಳವಳದಿಂದ ಕೂಡಿದ ಸಂವಾದ ಚಿತ್ರವು ವಾಸ್ತವವನ್ನಷ್ಟೇ ಮುಂದಿಡದೇ, ಲೇಖಕನ ಸಂವೇದನಾತ್ಮಕ ತೊಡಗಿಕೊಳ್ಳುವಿಕೆಯನ್ನು ಪರಿಚಯಿಸುತ್ತದೆ.) ಕ್ರೊಬಾಯಿಲ್ :- ಕೊರೀನಾ ಮಗಳೇ ನೀನು ಇಂದು ಮೊದಲರಾತ್ರಿಯನ್ನು ಒಬ್ಬ ಪುರುಷನೊಂದಿಗೆ ಕಳೆದಿದ್ದೀಯಾ. ಕೌಮಾರ್ಯ ಭಂಗವೆನ್ನುವುದು ಅಷ್ಟೊಂದು ಕಷ್ಟದಾಯಕವಲ್ಲ ಅಲ್ಲವೇ? ಈ ಹಣದಿಂದ ನಿನಗೆ ನಾನು ಹಾರವನ್ನು ಖರೀದಿಸಿ ಕೊಡುತ್ತೇನೆ. ಕೊರೀನಾ :- ಉತ್ಕೃಷ್ಟವಾದ ಹಾರವಿರಲಿ ಅಮ್ಮಾ ; ಫಿಲಾಯನಿಸ್ ಬಳಿ ಇದೆಯಲ್ಲ, ಅಂಥ ಹಾರ ಇರಬೇಕು, ಹೊಳೆಯುವ ಹರಳುಗಳದ್ದು. ಕ್ರೊಬಾಯಿಲ್ :- ಅಂಥದ್ದನ್ನೇ ಖಂಡಿತವಾಗಿಯೂ ತೆಗೆಸಿಕೊಡುತ್ತೇನೆ. ಆದರೆ ನನ್ನ ಮಾತುಗಳನ್ನು ಲಕ್ಷವಿಟ್ಟು ಕೇಳು. ನೀನು ಪುರುಷರ ಜೊತೆ ಬೆರೆತುಕೊಳ್ಳುವ ಕಲೆಯನ್ನು ಅರಿತುಕೊಳ್ಳಬೇಕು. ನಿನ್ನ ತಂದೆಯ ಸಾವಿನಿಂದಾಗಿ, ನಾವಿದನ್ನೆಲ್ಲ ಮಾಡುವುದು ಅನಿವಾರ್ಯವಾಗಿದೆ. ಮಗಳೇ ಈಗ ನೀನೇ ನನ್ನ ಜೀವನದ ಆಧಾರ. - ಈಗ ನೀನು ಈ ಕಲೆಯಲ್ಲಿ ಪರಿಣಿತಳಾಗು. ಈ ಕಲೆಯನ್ನು ಸರಿಯಾಗಿ ಕರಗತ ಮಾಡಿಕೊಂಡರೆ, ನೀನು ಮಹಾರಾಣಿಯರ ಹಾಗೆ ಸಂಪತ್ತಿನಲ್ಲಿ ಮುಳುಗೇಳಬಹುದು. ಕೊರೀನಾ :- “ಅಂದರೆ . . . ಹ್ಯಾಗೆ ಅಮ್ಮಾ?” ಕ್ರೊಬಾಯಿಲ್ :- ``ಅಯ್ಯೋ ಹುಚ್ಚಿ, ಪುರುಷರನ್ನು ಸಂತೋಷಗೊಳಿಸಿ ಅಪಾರ ಹಣ ಸಂಗ್ರಹಿಸಬಹುದು. ಅವರೊಡನೆ ಆಟವಾಡಬೇಕು. ಕೊರೀನಾ :- ಲೀರಾಳ ಹಾಗೆ . . . ವೇಶ್ಯೆಯಾಗಿ? . . . . ಕ್ರೊಬಾಯಿಲ್ :- ಇದರಲ್ಲಿ ಅಳುವಂಥ ವಿಷಯವೇನಿದೆ ಮಗಳೇ, ವೇಶ್ಯೆಯಾಗುವುದು ಎಷ್ಟೊಂದು ದೊಡ್ಡ ಸಂಗತಿ ಗೊತ್ತಿದೆಯೇ? ಪ್ರತಿಯೊಬ್ಬ ತಾಯಿ - ಮಗಳ ಸಂವಾದ 279 ಪುರುಷನೂ ನಿನ್ನನ್ನು ಬಯಸಿ ಬರುತ್ತಾನೆ. ನಿನಗೆ ನೆನಪಿದೆಯಾ, ಲೀರಾ ಹ್ಯಾಗೆ ಬಡವಳಾಗಿದ್ದಳು ಅಂತ. . . . ಕೊರೀನಾ :-ಅವಳು ಇಷ್ಟೊಂದು ಹಣ ಹ್ಯಾಗೆ ಸಂಪಾದಿಸಿದಳು ಅಮ್ಮಾ. . .? ಕ್ರೊಬಾಯಿಲ್ :- ಅವಳು ತಿಳಿವಳಿಕೆ ಉಳ್ಳವಳು. ನಿನ್ನ ಹಾಗೆ ಬಾಯಿ ತೆರೆದು ನಗುವುದಿಲ್ಲ. ಸ್ವಲ್ಪ ಅಷ್ಟೇ ಮುಗುಳ್ನಗುತ್ತಾಳೆ. ಎಲ್ಲ ಗಂಡಸರೊಂದಿಗೆ ಸಂತೋಷದಿಂದ ಬೆರೆಯುತ್ತಾಳೆ. ಪಾರ್ಟಿಗಳಲ್ಲಿ ಅವಳು ಮದ್ಯಪಾನಮಾಡಿ ಎಚ್ಚರ ತಪ್ಪೋದಿಲ್ಲ. ಮಿತಿಯಲ್ಲೇ ತಿನ್ನುತ್ತಾಳೆ. ಯಾಕೆಂದರೆ ಹೊಟ್ಟೆ ತುಂಬಾ ಉಂಡರೆ ಅವಳು ಶಯ್ಯೆಯಲ್ಲಿ ಎಲ್ಲ ಪುರುಷರನ್ನೂ ಸಂತುಷ್ಟಪಡಿಸಲಾರಳು. ಲೀರಾ ತುಂಬ ಬುದ್ಧಿವಂತಳು. ಅವಳು ಎಲ್ಲಾ ಪುರುಷರೊಡನೆ ಮಾತನ್ನೂ ಆಡುವುದಿಲ್ಲ. ಯಾರು ರಾತ್ರಿಗೆ ಅಂತ ಹಣ ಕೊಟ್ಟಿರುತ್ತಾರೋ, ಅವನನ್ನು ಮಾತ್ರ ಪ್ರೀತಿಸುತ್ತಾಳೆ. ಅವನ ಬಗ್ಗೆ ಲಕ್ಷ್ಯವಹಿಸುತ್ತಾಳೆ. ಶಯ್ಯೆಯಲ್ಲಿಯೂ ಅವಳು ಅಶ್ಲೀಲವಾಗಿ ನಡೆದುಕೊಳ್ಳೋದಿಲ್ಲ. ಕೊರೀನಾ :- ಆದರೆ . . . . . ಅಮ್ಮಾ . . . . . . ಪುರುಷನು ಸುಂದರನಾಗಿರದಿದ್ದರೆ. .!! ಕೊಬಾಯಿತ :- ಗಣಿಕೆಯರಿಗೆ ಎಲ್ಲ ಪುರುಷರೂ ಸುಂದರರೇ. ಹುಚ್ಚಿ! ಎಲ್ಲಾರನ್ನೂ ಸಹಿಸಿಕೊಳ್ಳಬೇಕಾಗುತ್ತದೆ ಮಗಳೆ. ಆದರೆ ಆ ಪುರುಷರು ತುಂಬ ಒಳ್ಳೆಯವರಿರುತ್ತಾರೆ. ಒಳ್ಳೆಯ ಮನೆತನದಿಂದ ಬಂದವರ ಬಳಿ ಸಾಕಷ್ಟು ಹಣ ಇರುತ್ತದೆ. ಈ ಸಂಗತಿಗಳನ್ನೆಲ್ಲಾ ನೀನು ಲಕ್ಷ್ಯದಲ್ಲಿಟ್ಟುಕೊಂಡರೆ, ನೀನು ಎಲ್ಲರ ಕಣ್ಮಣಿಯಾಗ್ತೀಯಾ. 280 ಕಥಾ ಸಂಸ್ಕೃತಿ ಆಸ್ಥೆ ಮತ್ತು ಮುಕ್ತಿ - ಜೆ. ಎಚ್. ಆನಂದ್ ಇದು ಬೈಬಲ್‍ನ ಒಂದು ಕತೆ. ರಚನಾಕಾಲ ಮೊದಲನೆಯ ಶತಮಾನ. ಬೈಬಲ್‍ನಲ್ಲಿ ಏಸುವಿನ ಉಪದೇಶಕ್ಕೆ ಧಾರ್ಮಿಕ ವಿಶ್ವಾಸ, ಶ್ರದ್ಧೆ ಹಾಗೂ ಯೇಸುವಿಗೆ ಸಂಬಂಧಿಸಿದ ಅನೇಕ ಘಟನಾತ್ಮಕ ಕತೆಗಳಿವೆ. ಯಹೂದಿ ಧರ್ಮದ ಫರೀಸೀ ಸಂಪ್ರದಾಯದ ಮುಂದಾಳು ಶಿಮೋನ್ ಒಂದು ಬಾರಿ ಮಹಾತ್ಮಾ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದ್ದ. ಶಿಮೋನ್ ಧರ್ಮ ಹಾಗೂ ಸಂಪತ್ತುಗಳ ಅಧಿಪತಿಯಾಗಿದ್ದ. ಮಹಾತ್ಮಾ ಯೇಸುವಿನ ಗೌರವಾರ್ಥವಾಗಿ ಅವನು ದೊಡ್ಡ ಭೋಜನಕೂಟವನ್ನು ಏರ್ಪಡಿಸಿದ್ದ. ಉನ್ನತ ಅಂತಸ್ತಿನ ಜನರು ಆಗಮಿಸಿದ್ದರು. ಯೇಸುವು ನಿಮ್ನ ವರ್ಗದವರೊಂದಿಗೆ ಬೆರೆತು, ಉಂಡು - ತಿಂದು ಮಾಡುತ್ತಿದ್ದರಿಂದ ಉಚ್ಚವರ್ಗದ ಸಂಪನ್ನ ಜನರಿಗೆ ಅವರ ದರ್ಶನ ಲಾಭವಾಗುತ್ತಿರಲಿಲ್ಲ. ಯೇಸು ತಮ್ಮ ಹನ್ನೆರಡು ಜನ ಶಿಷ್ಯರೊಂದಿಗೆ ಬಂದರು. ಶಿಮೋನ್ ರೋಮನ್ ಉಚ್ಛಾಧಿಕಾರಿಗಳು ಮುಂತಾದ ಗಣ್ಯಮಾನ್ಯರ ಸ್ವಾಗತದಲ್ಲಿ ಮಗ್ನನಾಗಿದ್ದ. ಅವನು ಯೇಸುವಿನ ಕಡೆ ಗಮನ ಕೊಡಲಿಲ್ಲ. ಯೇಸು ಹಾಗೂ ಅವನ ಶಿಷ್ಯರನ್ನು ಒಂದು ಕಡೆ ಕುಳ್ಳಿರಿಸಲಾಯಿತು. ಆಗ ಭವನದ ಹೊರಗೆ ಬಾಗಿಲಲ್ಲಿ ಗದ್ದಲವಾಯಿತು. ಅನೇಕ ಸ್ತ್ರೀಯರು ಒಕ್ಕೊರಲಿನಿಂದ ಕೂಗುವುದು ಕೇಳಿಸಿತು - “ಸರಿಯಿರಿ, ಸರಿಯಿರಿ . . . ಮಗ್ದಲಾ ನಗರದ ಸೌಂದರ್ಯ ಸಾಮ್ರಾಜ್ಞಿ ಮರಿಯಮ್‍ಳಿಗೆ ದಾರಿಬಿಡಿ.” ದೇವದಾಸಿ . . . . ! ನಗರವಧೂ !! ಶಿಮೋನ್ ಫರೀಸೀ ಮನೆಯಲ್ಲಿ? “ವಿಲಾಸಿ ಕಾಮಿನಿ . . . . ಧರ್ಮಭ್ರಷ್ಟ ಹೆಣ್ಣು. . . .” - ಫರೋಸೀ ಸಂಪ್ರದಾಯದ ಧರ್ಮಗುರುಗಳು ಟೀಕೆ ಮಾಡಿದರು. ಮರಿಯಮ್ ಯೇಸುವಿನ ಚರಣಗಳ ಬಳಿ ಕುಳಿತಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳು ತನ್ನ ಕಣ್ಣೀರಿನಿಂದ ಅವರ ಚರಣಗಳನ್ನು ತೊಳೆದಳು. ತನ್ನ ಉದ್ದನೆಯ ಕೂದಲುಗಳಿಂದ ಪಾದಗಳನ್ನು ಒರೆಸಿದಳು. ಅನಂತರ ಕಾಲುಗಳಿಗೆ ಅತ್ತರು ಲೇಪಿಸಿದಳು. ಅದರ ಸುಗಂಧದಿಂದ ಜನಸಮೂಹವು ಮುಗ್ಧವಾಯಿತು. ಬೈಬಲ್ (ಪುರಾತನ ಇಸ್ರೇಲ್) 281 ಯಜಮಾನ ಶಿಮೋನ್‍ನಿಗೆ ತುಂಬ ನಿರಾಶೆಯಾಯಿತು. ಯೇಸುವೆಂದರೆ ಖುದಾನ ಮಗ. ದೇವದೂತ, ಹೀಗಿರುವಾಗ ಯೇಸುವಿಗೆ ತನ್ನನ್ನು ಸ್ಪರ್ಶಿಸುತ್ತಿರುವ ಹೆಂಗಸು ಯಾರು, ಎಂಥವಳು ಅನ್ನುವುದೂ ಗೊತ್ತಿಲ್ಲವೇ ಎಂದು ಶಿಮೋನ್ ಯೋಚಿಸುತ್ತಿದ್ದ. ಇಂಥ ಒಬ್ಬ ಸಾಮಾನ್ಯ ಮನುಷ್ಯನಿಗಾಗಿ ಇಷ್ಟೊಂದು ಅದ್ಧೂರಿಯ ಭೋಜನಕೂಟವೇ ಎಂದು ಪಶ್ಚಾತ್ತಾಪ ಪಡತೊಡಗಿದ. ಅಷ್ಟರಲ್ಲಿ ಯೇಸುವಿನ ಮಾತಿನಿಂದಾಗಿ ಅವನ ಈ ಬಗೆಯ ವಿಚಾರ ಸರಣಿ ತುಂಡಾಯಿತು. ಯೇಸು ಹೇಳುತ್ತಿದ್ದುದನ್ನು ಅವನು ಕೇಳಿದ - “ಶಿಮೋನ್ . . . ನಾನು ನಿನ್ನಲ್ಲಿ ಒಂದು ಪ್ರಶ್ನೆ ಕೇಳಬೇಕಾಗಿದೆ.” “ಕೇಳಿ” “ಹೀಗೆ ಒಬ್ಬ ಮಹನೀಯನಿಗೆ ಇಬ್ಬರು ಹಣ ಕೊಡಬೇಕಾಗಿತ್ತು. ಒಬ್ಬನ ಮೇಲೆ ಐದುನೂರು ದಿನಾರಗಳಷ್ಟು ಋಣ ಇತ್ತು. ಇನ್ನೊಬ್ಬನ ಮೇಲೆ ಐವತ್ತು ದಿನಾರ. ಕೊಡಬೇಕಾದವನು ಕೊಡಲು ಸಾಧ್ಯವಾಗದಾದಾಗ ಮಹನೀಯನು ಅವನನ್ನು ಕ್ಷಮಿಸಿಬಿಟ್ಟ. ನಿನ್ನ ವಿಚಾರದಂತೆ ಆ ಯಾವ ಕೊಡುವವನನ್ನು ಮಹನೀಯನು ಹೆಚ್ಚು ಪ್ರೀತಿಸುತ್ತಾನೆ.? “ಐದು ನೂರು ದಿನಾರಗಳನ್ನು ಕೊಡಬೇಕಾದವನನ್ನು”. . . . “ನೀನು ಹೇಳಿದ್ದು ಸರಿ. . . .” ಯೇಸುವು ಮರಿಯಮ್ಮಳ ಕಡೆ ತೋರಿಸುತ್ತ ಹೇಳಿದನು “ಶಿಮೋನ್. . . ನಾನು ನಿನ್ನ ಅತಿಥಿ. ಆದರೆ ನೀನು ನಿನ್ನ ಯಹೂದಿ ಪದ್ಧತಿ ಪ್ರಕಾರ ಕಾಲು ತೊಳೆಯಲು ನನಗೆ ನೀರು ಕೊಡಲಿಲ್ಲ, ಚುಂಬಿಸಲಿಲ್ಲ. ನೀನು ನನ್ನ ಕಾಲುಗಳ ಮೇಲೆ ಸುಗಂಧದೆಣ್ಣೆಯನ್ನು ಸುರಿಯಲಿಲ್ಲ. ನೋಡು ಈ ಸ್ತ್ರೀಯನ್ನು ! ನನಗೆ ಗೊತ್ತಿದೆ. ಇವಳು ಯಾರೆಂಬುದು. ಆದರೆ ಅವಳು ನನ್ನನ್ನು ಸ್ವಾಗತಿಸಿದಳು. ನಿನಗಿಂತ ಹೆಚ್ಚು ಪ್ರೇಮವನ್ನು ತೋರಿಸಿದಳು. ಆದ್ದರಿಂದ ನಿನ್ನ ದೃಷ್ಟಿಯಲ್ಲಿ ದೊಡ್ಡದೆನಿಸುವ ಅವಳ ಅಪರಾಧವನ್ನು ನಾನು ಹೆಚ್ಚಾಗಿ ಕ್ಷಮಿಸಿದೆ.” ಎಂದು ಹೇಳುತ್ತ ಯೇಸುವು ಮಗ್ದಲೀನಿ ಮರಿಯಮ್ಮಳ ತಲೆಯ ಮೇಲೆ ಕೈಯಿಟ್ಟು ಹೇಳಿದನು - “ನಡೆ ಮಗಳೇ . . . ನಿನ್ನ ಅಪರಾಧಗಳನ್ನು ಕ್ಷಮಿಸಲಾಗಿದೆ. ನಿನ್ನ ಶ್ರದ್ಧೆಯು ನಿನ್ನ ವಿಶ್ವಾಸವು ನಿನ್ನನ್ನು ಉಳಿಸಿತು. . . .” 282 ಕಥಾ ಸಂಸ್ಕೃತಿ ಯೂಡಿಥ್ - ಜೆ. ಎಚ್. ಆನಂದ ಯೂಡಿಥ್‍ದ ರಚನಾಕಾಲ ಮತ್ತು ಲೇಖಕ ಎರಡೂ ಅಜ್ಞಾತ. ಈ ಕತೆಯನ್ನು ಮೂಲತಃ ಹಿಬ್ರೂಭಾಷೆಯಲ್ಲಿ ಬರೆಯಲಾಗಿತ್ತಾದರೂ, ಈಗ ಅದರ ಹಿಬ್ರೂ ಸಂಸ್ಕರಣ ದೊರೆಯುವುದಿಲ್ಲ. ಇತಿಹಾಸ ಮತ್ತು ಪುರಾತತ್ವ ಸಮೀಕ್ಷಕರು ಯೂಡಿಥ್‍ದ ರಚನಾಕಾಲವು ಕ್ರಿ.ಪೂ. 356 ಎಂದು ಭಾವಿಸುತ್ತಾರೆ. ಇದು ಯಹೂದಿಗಳ ಬುದ್ಧಿಮತ್ತೆ, ತ್ಯಾಗ ಮತ್ತು ರಾಷ್ಟ್ರಪ್ರೇಮದ ಕತೆಯಾಗಿದೆ. ಕ್ರಿ.ಪೂ. ನಾಲ್ಕನೆಯ ಶತಮಾನದ ಸಂಗತಿ. ಅಸೀರಿಯಾ ಜಾತಿಯ ಒಬ್ಬ ಸಮ್ರಾಟನಿದ್ದನು. ಅವನ ಹೆಸರು ನಬೂಕದ ನಸ್ಸರ್ ಎಂದಾಗಿತ್ತು. ಅವನ ರಾಜಧಾನಿ ಸಿನಿವೆ. ವಿಶ್ವವಿಜಯಿಯಾದ ಅವನು ಸ್ವಯಂ ತನಗೆ ಸರ್ವಶಕ್ತಿವಂತನಾದ ಈಶ್ವರನ ಹುದ್ದೆಯನ್ನು ಕೊಟ್ಟುಕೊಳ್ಳಲು ಬಯಸಿದ್ದ. ಅವನ ಸಮಕಾಲೀನನಾದ ಮೀಡೆ ಜಾತಿಯ ಇನ್ನೊಬ್ಬ ಸಾಮ್ರಾಟನಿದ್ದ. ಅವನೂ ಮಹಾ ಪರಾಕ್ರಮಶಾಲಿ. ಅವನ ಹೆಸರು ಅರಪಕ್ಷದ. ಅರಪಕ್ಷದನಿಗೆ ವಾಸ್ತುಕಲೆಯ ಬಗ್ಗೆ ತುಂಬ ಪ್ರೀತಿಯಿತ್ತು. ಅವನು ತನ್ನ ರಾಜಧಾನಿಯಾದ ಬಾತಾನಾದ ನಾಲ್ಕೂ ಕಡೆ ಕೆತ್ತಿದ ದೊಡ್ಡ ಬಂಡೆಗಳನ್ನು ಗೋಡೆಯಾಗಿ ಕಟ್ಟಿಸಿದ್ದನು. ನಬೂಕದ ನಸ್ಸರ್‍ನು ಅರಪಕ್ಷದನ ಮೇಲೆ ಆಕ್ರಮಣ ಮಾಡಲು ಯೋಜನೆಯನ್ನು ರೂಪಿಸಿದನು. ಅವನು ತನ್ನ ಅಧೀನ ರಾಜ್ಯಗಳಾದ ಪರ್ಶಿಯಾ, ಸಿಲ್‍ಸಿಯಾ, ದಮಿಶ್ಕ, ಲೆಬೆನಾನ್, ಕಾರ್ಮೆಲ್, ಗಿಲಾದ್, ಗಲೀಲ, ಎಸ್ಟ್ರಾಲೋನ್, ಸುಮೇರಿಯಾ, ಯಹೂದಿಯಾ, ಇಜಿಪ್ತ, ಇಥಿಯೋಪಿಯಾ ಮುಂತಾದವುಗಳಿಗೆ ತನ್ನ ರಾಜದೂತರನ್ನು ಕಳಿಸಿ ಅರಪಕ್ಷದನ ರಾಜ್ಯವನ್ನು ನಾಶಮಾಡಲು ಸಹಾಯ ಮಾಡುವಂತೆ ಹೇಳಿಕಳಿಸಿದನು. ಈ ರಾಜ್ಯಗಳು ನಬೂಕದ ನಸ್ಸರ್‍ನ ಆಜ್ಞೆಯನ್ನು ಉಪೇಕ್ಷಿಸಿದವಷ್ಟೇ ಅಲ್ಲ, ರಾಜದೂತರನ್ನು ಅಪಮಾನ ಮಾಡಿ, ತಮ್ಮ ಸ್ವತಂತ್ರತೆಯನ್ನು ಘೋಷಿಸಿದವು. ಈ ಸಂಗತಿ ತಿಳಿಯುತ್ತಲೇ, ನಬೂಕದ ನಸ್ಸರ್ ತುಂಬ ಸಿಟ್ಟಿಗೆದ್ದನು. ಅರಪಕ್ಷದನನ್ನು ಸೋಲಿಸಿ ಅನಂತರ ಈ ರಾಜ್ಯಗಳನ್ನು ಮಣ್ಣುಗೂಡಿಸುವುದಾಗಿಯೂ, ಈ ರಾಜ್ಯಗಳ ರಾಜರಕ್ತದಿಂದ ತನ್ನ ಖಡ್ಗದ ಬಾಯಾರಿಕೆಯನ್ನು ಹಿಂಗಿಸುವುದಾಗಿಯೂ ಪ್ರತಿಜ್ಞೆ ಮಾಡಿದನು. ಯಹೂದೀ (ಪುರಾತನ ಇಸ್ರೇಲಿ) 283 ನಬೂಕದ ನಸ್ಸರ್ ಏಕಾಕಿಯಾಗಿ ಅರಪಕ್ಷದನ ಮೇಲೆ ಆಕ್ರಮಣ ಮಾಡಿದನು. ಅವನನ್ನು ಸೋಲಿಸಿದನು. ಅವನ ಅಭೇದ್ಯವಾದ ಕೋಟೆಯನ್ನು ನುಚ್ಚುನೂರು ಮಾಡಿದನು. ಅಂಗಡಿಗಳನ್ನು ಲೂಟಿ ಮಾಡಿದನು. ಪಟ್ಟಣಕ್ಕೆ ಬೆಂಕಿ ಹಚ್ಚಿದನು. ಮತ್ತು ತನ್ನ ನಗರಕ್ಕೆ ಹಿಂತಿರುಗಿ ವಿಜಯೋತ್ಸವ ಆಚರಿಸಿದನು. ಮತ್ತು ಆ ಉತ್ಸವದಲ್ಲಿಯೇ ಅವನು ತನ್ನನ್ನು ದೇವರೆಂದು ಘೋಷಿಸಿಕೊಂಡನು. ಕೆಲದಿನಗಳ ಅನಂತರ ಸಮ್ರಾಟ ನಬೂಕದ ನಸ್ಸರ್ ತನ್ನ ಪ್ರಧಾನ ಸೇನಾಪತಿಯಾದ ಹೊಲೋಫೆರನಿಸ್‍ನಿಗೆ ಒಂದು ಲಕ್ಷ ಇಪ್ಪತ್ತುಸಾವಿರ ಕಾಲಾಳುಗಳು, ಹನ್ನೆರಡು ಸಾವಿರ ಅಶ್ವಾರೋಹಿ ಧನುರ್ಧಾರಿಗಳ ದೊಡ್ಡ ದಂಡನ್ನು ತೆಗೆದುಕೊಂಡು ಹೋಗಿ ಎಲ್ಲ ಬಂಡುಕೋರ ರಾಜರುಗಳನ್ನು ಮುಗಿಸಬೇಕು. ಅವರ ಸ್ತ್ರೀಯರನ್ನು ತಮ್ಮ ಸಲುವಾಗಿ ಸೆಳೆಯಬೇಕು, ಅವರ ಮಕ್ಕಳು, ಮುದುಕರು, ಯುವಕರು ಎಲ್ಲರನ್ನೂ ಗುಲಾಮರಾಗಿಸಬೇಕು. ನದಿ - ಬೆಟ್ಟಗಳನ್ನೆಲ್ಲ ಹೆಣಗಳಿಂದ ತುಂಬಬೇಕು. ಯಾರಾದರೂ ರಾಜರು ಶರಣಾಗತರಾದರೆ, ತಾನು ಬರುವವರೆಗೆ ಅವರನ್ನು ಜೀವಂತವಾಗಿಡಬೇಕು - ಎಂದು ಅಪ್ಪಣೆ ಮಾಡಿದನು. ಹೊಲೊಫೆರನಿಸ್ ವಿಶಾಲವಾದ ಸೈನ್ಯದೊಂದಿಗೆ ವಿಜಯಯಾತ್ರೆಗೆ ಹೊರಟನು. ಸ್ವಲ್ಪ ಸಮಯದಲ್ಲಿಯೇ ಅವನು ಇಸ್ಮಾಯಿಲ್ ವಂಶೀಯರನ್ನು ನಾಶ ಮಾಡಿದನು. ಮೆಸೊಪೊಟೋಮಿಯಾಕ್ಕೆ ಬೆಂಕಿ ಹಚ್ಚಿದನು. ಸಿಸಿಲಿಯಾ ರಾಜ್ಯ ಭಗ್ನಾವಶೇಷವಾಗಿ ಬದಲಾಯಿತು. ಯೂಫೇತ್‍ನ್ನು ಲೂಟಿ ಮಾಡಿದನು. ಸೆಳೆದೊಯ್ದ ಹೆಂಗಸರನ್ನು ಸೈನಿಕರಿಗೆ ಹಂಚಲಾಯಿತು. ದಮಿಶ್ಕವನ್ನು ನಾಮಾವಶೇಷಗೊಳಿಸಲಾಯಿತು. ಸೀಡೋನ್, ತೂರ, ಸೂರ, ಓಸೀನಾ ಇತ್ಯಾದಿ ರಾಜ್ಯಗಳ ಪೂಜಾಸ್ಥಳಗಳನ್ನು ನಾಶ ಮಾಡಲಾಯಿತು. ಹಾಗೆಯೇ ಇನ್ನುಮೇಲೆ ಎಲ್ಲ ನಾಗರಿಕರೂ ಇಂದಿನಿಂದ ನಬೂಕದ ನಸ್ಸರ್‍ನನ್ನು ದೇವರೆಂದು ತಿಳಿದು ಪೂಜಿಸಬೇಕು ಮತ್ತು ಕಾಣಿಕೆ ಅರ್ಪಿಸಬೇಕು ಎಂದು ಘೋಷಿಸಲಾಯಿತು. ಸೇನಾಪತಿ ಹೊಲೊಫೆರನಿಸ್‍ನ ಮುಂದಿನಗುರಿ ಯಹೂದಿ ಜಾತಿಯಾಗಿತ್ತು. ಈ ಜಾತಿ ಪ್ಯಾಲೆಸ್ಟೈನ್‍ನ ಯಹೂದಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅಕ್ಕಪಕ್ಕದ ನಗರಗಳು ಹಾಗೂ ಪೂಜಾ ಸ್ಥಾನಗಳ ನಾಶದ ಸುದ್ಧಿಯನ್ನು ಕೇಳಿ ಯಹೂದಿಗಳು ತಮ್ಮ ಪವಿತ್ರ ನಗರ ಯರೂಸಲೇಮ್ ಹಾಗೂ ದೇವನಾದ ಯಹೋವಾ ಮಂದಿರದ ಬಗ್ಗೆ ಚಿಂತಿತರಾದರು. ಅವರು ಯಹೋವಾನ ಪೂಜೆ ಮಾಡುತ್ತ ಈ ಸಂಕಟದಿಂದ ಪಾರು ಮಾಡೆಂದು ಅವನನ್ನು ಪ್ರಾರ್ಥಿಸತೊಡಗಿದರು. ಯಹೂದಿ ಪ್ರದೇಶದ ಪ್ರವೇಶದ್ವಾರವು ಬೆಟೂಲಿಯಾ ನಗರವಾಗಿತ್ತು. ಅದು ಒಂದು ಬೆಟ್ಟದ ಮೇಲೆ ನೆಲೆಸಿತ್ತು. ದುರ್ಗಮವಾದ ಕೋಟೆಯು ಬೆಟೂಲಿಯಾವನ್ನು ಸುತ್ತುವರಿದಿತ್ತು. ಅದಕ್ಕೆ ಒಂದೇ ಒಂದಾದ ಇಕಟ್ಟಾದ ದಾರಿಯಿತ್ತು. ಅಲ್ಲಿ ಒಂದು 284 ಕಥಾ ಸಂಸ್ಕೃತಿ ಬಾರಿಗೆ ಒಬ್ಬನು ಮಾತ್ರ ಬರಲು ಸಾಧ್ಯವಿತ್ತು. ಅಲ್ಲಿ ಒಂದು ದೊಡ್ಡ ಸರೋವರವಿತ್ತು. ಅಲ್ಲಿಂದಲೇ ಸಂಪೂರ್ಣ ಯಹೂದಿ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿತ್ತು. ಯಹೂದಿ ಜಾತಿಯ ಜನ್ಮಜಾತ ಶತ್ರುಗಳಾಗಿ ಅವರ ದಾಯಾದಿ ಎಡೊಮಿ ಜಾತಿಯ ಜನರಿದ್ದರು. ಅವರು ಹೊಲೋಫೆರನಿಸ್ ಜೊತೆ ಸೇರಿಕೊಂಡರು. ಸರೋವರದ ಮೇಲೆ ಅಧಿಕಾರ ಸ್ಥಾಪಿಸಬೇಕು ಹಾಗೂ ಹೊರಹೋಗುವ ಎಲ್ಲ ದಾರಿಗಳನ್ನು ಸುತ್ತುವರಿಯಬೇಕು. ಕೆಲವೇ ದಿನಗಳಲ್ಲಿ ಯಹೂದಿಗಳು ಬಾಯಾರಿಕೆಯಿಂದ ಸಾಯತೊಡಗುವರು. ಆಗ ತಾನಾಗಿ ಶರಣಾಗುವರು. ಹೀಗೆ ಯುದ್ಧವಿಲ್ಲದೆ ವಿಜಯವನ್ನು ಪಡೆಯಬಹುದು - ಎಂದು ಎಡೊಮಿಗಳ ಸೇನಾಪತಿಯು ಹೆಲೊಫೆರನಿಸನಿಗೆ ಸಲಹೆ ನೀಡಿದನು. ಹೊಲೊಫೆರನಿಸ್ ಮತ್ತು ಆತನ ಅಧಿಕಾರಿಗಳಿಗೆ ಈ ಸಲಹೆ ಬಹಳ ಇಷ್ಟವಾಯಿತು. ಅವರು ಸರೋವರದ ಮೇಲೆ ಅಧಿಕಾರ ಸ್ಥಾಪಿಸಿ ಕಾಲುವೆಗಳ ಬಾಯಿ ಬಂದ್ ಮಾಡಿದರು. ಬೇರೆಲ್ಲ ದಾರಿಗಳಲ್ಲಿ ದೊಡ್ಡ ದೊಡ್ಡ ಸೈನಿಕ ಚೌಕಿಗಳನ್ನು ಸ್ಥಾಪಿಸಿದರು. ಯಾವ ಯಹೂದಿಯೂ ಹೊರಗೆ ಓಡಿಹೋಗುವಂತಿರಲಿಲ್ಲ. ಯಹೂದಿಗಳು ನೀರಡಿಕೆಯಿಂದ ಸಾಯತೊಡಗಿದರು. ಮಕ್ಕಳು, ಮುದುಕರು, ಹೆಂಗಸರು ಬಾಯಾರಿಕೆಯಿಂದ ಚಡಪಡಿಸುವುದನ್ನು ನೋಡಿ ಅವರು ನಗರ ಪ್ರಮುಖನಾದ ಉಜ್ಜಿಯಾಹನಿಗೆ ಶರಣಾಗತವಾಗುವುದು ಒಳ್ಳೆಯದೆಂದು ಸಲಹೆಯಿತ್ತರು. ನಗರ ಪ್ರಮುಖನು ಐದು ದಿನಗಳ ಕಾಲ ಇನ್ನೂ ಕಾಯೋಣವೆಂದು ಹೇಳಿದನು. ಯಹೋವಾ ದೇವನು ಖಂಡಿತವಾಗಿ ಸಹಾಯ ಮಾಡುವನೆಂದು ಅವನಿಗೆ ವಿಶ್ವಾಸವಿತ್ತು. ಅದೇ ನಗರದಲ್ಲಿ ಯುಡಿಥ್ ಎಂಬ ಹೆಸರಿನ ಅತ್ಯಂತ ಸುಂದರಿಯಾದ ವಿಧವೆ ಯುವತಿಯೊಬ್ಬಳಿದ್ದಳು. ಅವಳು ತನ್ನ ಸಮಯವನ್ನೆಲ್ಲ ಯಹೋವಾನ ಪೂಜೆ-ಸೇವೆಗಳಲ್ಲಿಯೇ ಕಳೆಯುತ್ತಿದ್ದಳು. ಇನ್ನೈದು ದಿನಗಳಲ್ಲಿ ಯಹೂದಿಗಳು ಆತ್ಮಸಮರ್ಪಣೆ ಮಾಡಲಿದ್ದಾರೆಂಬ ವಿಷಯವನ್ನು ಯುಡಿಥ್ ಕೇಳಿ ದುಃಖಪಟ್ಟಳು. ಅವಳು ನಗರ ಪ್ರಮುಖನನ್ನು ತನ್ನ ಬಳಿ ಕರೆಸಿ ಹೇಳಿದಳು - “ನಾವು ಆತ್ಮಸಮರ್ಪಣೆ ಮಾಡಿದ್ದೇ ಆದರೆ ನಮ್ಮ ರಾಜ್ಯ ಗುಲಾಮವಾಗುವುದು. ಯಹೂದಿ ಸ್ತ್ರೀಯರ ಪಾವಿತ್ರ್ಯವನ್ನು ಹೊಸಕಿ ಹಾಕಲಾಗುವುದು. ತಾವು ನನಗೆ ಮೂರುದಿನ ಸಮಯ ಕೊಡಿ. ನನ್ನ ದೇಶದ ರಕ್ಷಣೆ ಮಾಡಲು ಸಾಧ್ಯವಾಗುವಂತೆ ನನಗೆ ಶಕ್ತಿಯನ್ನು ಕೊಡು ಎಂದು ಯಹೋವಾ ದೇವನಲ್ಲಿ ಪ್ರಾರ್ಥಿಸುತ್ತೇನೆ. ಇಂದು ಸಂಜೆಯವೇಳೆ ತಾವು ಪ್ರವೇಶ ಮಾರ್ಗದ ಬಳಿ ಭೇಟಿಯಾಗಿ. ನಾನು ಮೂರುದಿನಗಳ ಮಟ್ಟಿಗೆ ಹೊರಗೆ ಹೋಗಲು ಬಯಸುತ್ತೇನೆ.” ಯಹೂದೀ (ಪುರಾತನ ಇಸ್ರೇಲಿ) 285 ಈ ಮಾತುಗಳನ್ನು ಹೇಳುವಾಗ ಅವಳ ಮುಖದ ಮೇಲೆ ಉಜ್ವಲ ತೇಜಸ್ಸಿತ್ತು. ನಗರ ಪ್ರಮುಖನು ಆಕೆಯ ಮಾತನ್ನು ಒಪ್ಪಿ ಹೊರಟುಹೋದನು. ಯೂಡಿಥ್ ಸಮ್ಮೋಹಕವಾಗಿ ಶೃಂಗರಿಸಿಕೊಂಡಳು. ತನ್ನ ಊಟ-ತಿಂಡಿಯ ಸಾಮಗ್ರಿಗಳನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಕೊಂಡಳು. ಸಂಜೆಯವೇಳೆಗೆ ಪ್ರವೇಶದ್ವಾರವನ್ನು ತಲುಪಿದಳು. ನಗರ ಪ್ರಮುಖನು ಅಲ್ಲಿ ಹಾಜರಿದ್ದನು. ಬಾಗಿಲು ತೆರೆಯಲಾಯಿತು. ಹಾಗೂ ಯೂಡಿಥ್ ಅವರನ್ನು ಬೀಳ್ಕೊಂಡಳು. ಯೂಡಿಥ್ ಅಸೀರಿಯನ್ನರ ಶಿಬಿರಕ್ಕೆ ಹೋದಳು. ಸೈನಿಕರು ಅವಳ ಸೌಂದರ್ಯ ಸಾಗರದಲ್ಲಿ ಮುಳುಗಿದರು. ಆಗ ತಾನು ಹೊಲೊಫೆರನಿಸ್‍ನ ಬಳಿ ಹೋಗಬೇಕಾಗಿದೆಯೆಂದು ಆಕೆ ಹೇಳಿದಳು. ತುಂಬ ಸುಲಭವಾಗಿ ಯಹೂದಿಯರ ಮೇಲೆ ವಿಜಯ ಸಾಧಿಸಬಲ್ಲ ಗುಪ್ತಮಾರ್ಗವನ್ನು ತಾನು ತಿಳಿಸಲು ಬಯಸಿರುವುದಾಗಿ ಹೇಳಿದಳು. ಸೈನಿಕರು ಅವಳನ್ನು ಹೊಲೊಫೆರನಿಸ್‍ನ ಬಳಿ ಕರೆದೊಯ್ದರು. ಹೊಲೊಫೆರನಿಸ್ ಅವಳ ಸೌಂದರ್ಯವನ್ನು ಕಂಡು ಮುಗ್ಧನಾದನು. ಅವನಲ್ಲಿ ಕಾಮನೆ ಭುಗಿಲೆದ್ದಿತು. ಇನ್ನೂ ಅವನು ಯಾವುದೇ ಯಹೂದೀ ಸ್ತ್ರೀಯ ಸಂಗ ಮಾಡಿರಲಿಲ್ಲ. ಇಂಥ ಸುಂದರಿಯನ್ನು ಅವನು ನೋಡಿರಲೂ ಇಲ್ಲ. ಅವನು ಯೂಡಿಥಳ ಸ್ವಾಗತದಲ್ಲಿ ತಲ್ಲೀನನಾದನು. ಯೂಡಿಥ್ ಹೇಳಿದಳು - “ನಾನು ನನ್ನ ದೇವನಾದ ಯಹೋವಾನ ಆಜ್ಞೆಯ ಮೇರೆಗೆ ಬಂದಿದ್ದೇನೆ. ನಾನು ತಮಗೆ ಸಹಾಯ ಮಾಡುತ್ತೇನೆ. ಮತ್ತು ಯಹೂದಿಗಳನ್ನು ಸಮಾಪ್ತಗೊಳಿಸಬಲ್ಲ ಗುಪ್ತಮಾರ್ಗವನ್ನು ತೋರಿಸುತ್ತೇನೆ. ನಾನು ಪ್ರತಿದಿನ ರಾತ್ರಿ ಬೆಟ್ಟದ ಮೇಲೆ ಹೋಗಿ ಯಹೋವಾನ ಪೂಜೆ ಮಾಡಿ ಬರುವೆ. ಯಹೋವಾನೇ ತಾವು ಆಕ್ರಮಣ ಮಾಡಲು ಶುಭಮುಹೂರ್ತವನ್ನು ತಿಳಿಸುತ್ತಾನೆ. ಆಗಲೇ ನೀವು ಯಹೂದಿ ಪ್ರದೇಶದ ಮೇಲೆ ಆಕ್ರಮಣ ಮಾಡಬಹುದಂತೆ. ......” ಯೂಡಿಥ್‍ಳಿಗೆ ಆರಾಮವಾಗಿರಲು ಹಾಗೂ ಯಹೋವಾನ ಪೂಜೆಗಾಗಿ ಹೋಗಿಬರಲು ಒಪ್ಪಿಗೆ ಸಿಕ್ಕಿತು. ಯೂಡಿಥ ಮೂರುದಿನ ಅಸೀರಿಯನ್ನರ ಶಿಬಿರದಲ್ಲಿ ಉಳಿದಳು. ಹೊಲೊಫೆರನಿಸ್ ಅವಳನ್ನು ಹೊಂದಲು ಚಡಪಡಿಸತೊಡಗಿದ್ದ. ನಾಲ್ಕನೆಯ ರಾತ್ರಿ ಪ್ರಾರಂಭವಾಯಿತು. ಹೊಲೊಫೆರನಿಸ್‍ನಿಗೆ ಇನ್ನೂ ಸಹಿಸುವುದು ಸಾಧ್ಯವಾಗಲಿಲ್ಲ. ಅವನು ಯೂಡಿಥ್‍ಳನ್ನು ತನ್ನ ಡೇರೆಗೆ ಕರೆಸಿದನು. ಯೂಡಿಥ್‍ಳು ಸಂಪೂರ್ಣ ಶೃಂಗರಿಸಿಕೊಂಡು ಅವನ ಬಳಿ ಹೋದಳು. ಅವಳೊಂದಿಗೆ ಅವಳ ದಾಸಿಯೂ ಇದ್ದಳು. ಡೇರೆಯಲ್ಲಿ ಹೋಗುತ್ತಲೇ ಆಕೆ, 286 ಕಥಾ ಸಂಸ್ಕೃತಿ ಇಷ್ಟೊಂದು ಜನರೆದುರು ತನಗೆ ನಾಚಿಕೆಯಾಗುವುದಾಗಿಯೂ, ಆದ್ದರಿಂದ ಎಲ್ಲರನ್ನೂ ಡೇರೆಯಿಂದ ಹೊರಗೆ ಕಳಿಸಬೇಕಾಗಿಯೂ ಹೊಲೋಫೆರನಿಸ್ ಬಳಿ ಪ್ರಾರ್ಥಿಸಿಕೊಂಡಳು. ಅವಳ ಪ್ರಾಥನೆಯನ್ನು ಆಜ್ಞೆಯಂತೆ ಪಾಲಿಸಲಾಯಿತು. ಎಲ್ಲ ಅಂಗರಕ್ಷಕರು ಹಾಗೂ ದಾಸಿಯರು ಬಾಗಿಲು ಮುಚ್ಚಿ ಹೊರನಡೆದು. ಬಾಗಿಲಿನಲ್ಲಿ ಯೂಡಿಥ್‍ಳ ದಾಸಿಯನ್ನು ನೇಮಿಸಲಾಯಿತು. ಯೂಡಿಥ್‍ಳು ಹೊಲೊಫೆರನಿಸ್‍ನಿಗೆ ತುಂಬ ಒನಪು ವೈಯಾರಗಳಿಂದ ಮದ್ಯವನ್ನು ಕುಡಿಸಿದಳು. ಅವನು ಮೈ ಮೇಲಿನ ಎಚ್ಚರವನ್ನೇ ಕಳೆದುಕೊಂಡನು. ಯೂಡಿಥ್ ಅವನ ಖಡ್ಗದಿಂದಲೇ ಅವನ ತಲೆ ಕತ್ತರಿಸಿದಳು. ಮತ್ತು ತನ್ನ ಗಂಟಿನಲ್ಲಿ ಸುತ್ತಿಕೊಂಡಳು. ಅನಂತರ ರಾತ್ರಿಯ ಪೂಜೆಯ ನೆವದಲ್ಲಿ ತನ್ನ ದಾಸಿಯೊಂದಿಗೆ ಘಟ್ಟದ ಮೇಲೆ ಹೋದಳು. ಘಟ್ಟದಿಂದ ಹೊರಟ ಆಕೆ ಬೆತೂಲಿಯಾದ ಪ್ರವೇಶದ್ವಾರದ ಹತ್ತಿರ ತಲುಪಿದಳು. ಬಾಗಿಲ್ನು ತೆರೆಯಲಾಯಿತು. ಅವಳು ನಗರ ಪ್ರಮುಖನಿಗೆ ಹೊಲೊಫೆರನಿಸ್‍ನ ಕತ್ತರಿಸಿದ ರುಂಡವನ್ನು ತೋರಿಸಿ ಹೇಳಿದಳು. - ‘ಬೆಳಗಾಗುತ್ತಲೇ, ಅಸೀರಿಯನ್ನರ ಮೇಲೆ ಆಕ್ರಮಣ ಮಾಡಬೇಕು. ತಮ್ಮ ಸೇನಾಪತಿಯ ಮರಣದ ಸಮಾಚಾರ ತಿಳಿದು ಸೈನಿಕರು ಓಡತೊಡಗುವರು. ಆಗ ಅವರನ್ನೆಲ್ಲ ಮುಗಿಸಬೇಕು.” ಯಹೂದಿ ಪ್ರಮುಖ ನಾಗರಿಕರು, ಸೈನಿಕರು ಎಲ್ಲರೂ ಯೂಡಿಥ್‍ಳನ್ನು ಹೊಗಳತೊಡಗಿದರು. ಅವರು ಸಂತೋಷದಿಂದ ಕುಣಿಯಲು ಹಾಡಲು ಜಯಜಯಕಾರ ಹಾಕಲು ಪ್ರಾರಂಭಿಸಿದರು. ನಗರ ಪ್ರಮುಖನು ಅವರನ್ನು ಶಾಂತಗೊಳಿಸಿದನು. ಯೂಡಿಥಳು ಹೇಳಿದ ಉಪಾಯವನ್ನು ಕಾರ್ಯರೂಪಕ್ಕೆ ತರುವ ಸಿದ್ಧತೆ ಮಾಡಿದನು. ಮರುದಿನ ಬೆಳಿಗ್ಗೆ ಯಹೂದಿಗಳು ಹೊಲೊಫೆರನಿಸ್‍ನ ತಲೆಯನ್ನು ಕೋಟೆಯ ಬತೇರಿಯ ಮೇಲೆ ತೂಗು ಹಾಕಿದರು. ಅವರು ಬೆಟ್ಟದಿಂದ ಕೆಳಗಿಳಿಯುವ ತಯಾರಿ ಮಾಡಿದರು. ಅವರು ಬೆಟ್ಟದಿಂದ ಇಳಿದು ಬರುವುದನ್ನು ನೋಡಿದ ಅಸೀರಿಯನ್ನರು ರಣಭೇರಿ ಬಾರಿಸಿದರು. ಸೈನಿಕ ಅಧಿಕಾರಿಯು ನಿರ್ದೇಶನ ಪಡೆಯುವ ಸಲುವಾಗಿ ಹೊಲೊಫೆರನಿಸ್‍ನ ಡೇರೆಯ ಬಳಿ ಹೋದನು. ಅವನು ಪ್ರಧಾನ ಅಂಗರಕ್ಷಕನನ್ನು ಸೇನಾಪತಿಯ ಭೇಟಿಗೆ ಕಳಿಸಿದನು. ಅಂಗರಕ್ಷಕನು ಪರದೆಯನ್ನು ಸರಿಸಿ ಶಯ್ಯಾಗಾರವನ್ನು ಪ್ರವೇಶಿಸಿದನು. ಎದುರಿಗೇ ತಮ್ಮ ಸೇನಾಪತಿಯ ರುಂಡವಿಲ್ಲದ ಮುಂಡ ಬಿದ್ದಿರುವುದನ್ನು ಅವನು ನೋಡಿದನು. ಅವನ ಬಾಯಿಂದ ಭಯಾನಕ ಚೀತ್ಕಾರ ಹೊರಟಿತು. ಅವನು ಉದ್ವಿಗ್ನಗೊಂಡು ಯೂಡಿಥಳ ಶಿಬಿರಕ್ಕೆ ಧಾವಿಸಿದನು. ಡೇರೆ ಖಾಲಿಯಾಗಿತ್ತು. ಅವನು ಎದೆಬಡಿದುಕೊಂಡು ಕೂಗತೊಡಗಿದನು - “ಮೋಸ.. . ವಿಶ್ವಾಸಘಾತ ಯಹೂದೀ (ಪುರಾತನ ಇಸ್ರೇಲಿ) 287 . . . ಒಬ್ಬ ಯಹೂದಿ ಹೆಂಗಸು ಸೇನಾಪತಿಯ ತಲೆಯನ್ನು ಕತ್ತರಿಸಿಕೊಂಡು ಹೋದಳು. . .” ಈ ಸುದ್ದಿ ಕೇಳಿ ಉಳಿದ ಸೇನಾಧಿಕಾರಿಗಳು ದಿಕ್ಕುತೋಚದೆ ನಿಂತುಬಿಟ್ಟರು. ಸೈನಿಕರಿಗೆ ಈ ಸುದ್ದಿ ತಿಳಿಯುತ್ತಲೇ ಭ್ರಮೆಯಲ್ಲಿ ಸಿಕ್ಕವರಂತೆ ಓಡತೊಡಗಿದರು. ಅವರು ಓಡುವುದನ್ನು ನೋಡಿ ಯಹೂದಿ ಸೈನಿಕರು ಅವರ ಮೇಲೆ ಬಿದ್ದರು. ಅಸೀರಿಯನ್ನರ ಶಿಬಿರಗಳು ಧೂಳಿಪಟವಾದವು. ಶವಗಳ ಹೊರತು ಇನ್ನೇನೂ ಉಳಿಯಲಿಲ್ಲ. ಹೀಗೆ ಯೂಡಿಥ್‍ಳ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ಯಹೂದಿ ಜಾತಿ ಗುಲಾಮರಾಗುವುದರಿಂದ ಬಚಾವಾದರು. ಯೂಡಿಥಳು ಯಹೂದಿಯರಲ್ಲಿ ಒಬ್ಬ ದೇವಿಯಂತೆ ಪೂಜನೀಯಳಾದಳು. 288 ಕಥಾ ಸಂಸ್ಕೃತಿ ಶಾಂತಿ - ಸುರಕ್ಷತೆ - ಈಸೋಪ ಗಿಲಬರ್ಟ ಮರ್ರೆ ಅಭಿಪ್ರಾಯದಂತೆ ಈಸೋಪನು ಕವಿಯಾಗಿರಲಿಲ್ಲ. ವಿಶೇಷರೀತಿಯ ಕತೆಗಳನ್ನು ಬರೆಯುವ ಲೇಖಕನಾಗಿದ್ದನು. ಅವನು ಪ್ರಾಣಿಗಳ ಕತೆಯನ್ನು ಬರೆದಿದ್ದಾನೆ. ಅವು ಒಂದಿಲ್ಲೊಂದು ನೈತಿಕ ಅಂಶವನ್ನು ಆಧರಿಸಿದೆ. ಅವನು ಕ್ರಿ.ಪೂ. ಆರನೆಯ ಶತಮಾನದಲ್ಲಿ ಒಬ್ಬ ವಿದೇಶೀ ಗುಲಾಮನ ರೂಪದಲ್ಲಿದ್ದವನು. ಹಿತೋಪದೇಶದ ಕತೆಗಳಿಂದ ಪ್ರಭಾವಿತನಾಗಿ ಅವನು ಬರೆಯಲು ಪ್ರಾರಂಭಿಸಿದ. ಎರಡು ಇಲಿಗಳಿದ್ದವು. ಒಂದು ಹಳ್ಳಿಯಲ್ಲಿ ಇರುತ್ತಿತ್ತು. ಇನ್ನೊಂದು ನಗರದಲ್ಲಿ. ಇಬ್ಬರಲ್ಲಿಯೂ ಒಳ್ಳೆಯ ಗೆಳೆತನ ಇತ್ತು. ಹಳ್ಳಿಯ ಇಲಿಯು ನಗರದ ಇಲಿಯನ್ನು ತನ್ನಲ್ಲಿಗೆ ಆಮಂತ್ರಿಸಿತು. ಶಹರದ ಇಲಿಯು ಈ ಆಮಂತ್ರಣವನ್ನು ಒಪ್ಪಿಕೊಂಡಿತು. ಹಳ್ಳಿಯ ಇಲಿಯು ಸ್ವಭಾವದಿಂದಲೇ ತುಂಬ ಸಾದಾ, ಒರಟು ಹಾಗೂ ಮಿತವ್ಯಯಿಯಾಗಿತ್ತು. ಆದರೂ ಅದು ತನ್ನ ಮಿತ್ರನ ಗೌರವಕ್ಕಾಗಿ ತನ್ನ ಹೃದಯ ಹಾಗೂ ಭಂಡಾರವನ್ನು ತೆರೆದಿಟ್ಟಿತು. ಅದು ವಟಾಣಿ, ಗಟ್ಟಿ ಮೊಸರು ಇನ್ನೂ ಕೆಲವು ಅನೇಕ ವಸ್ತುಗಳನ್ನು ಸಂಗ್ರಹಿಸಿತು. ಆದರೂ ತನ್ನ ಸ್ನೇಹಿತನ ಮನಸ್ಸಿಗೆ ಪ್ರಿಯವಾಗುವ ವಸ್ತುಗಳನ್ನು ಸಂಗ್ರಹಿಸಲಾಗುವುದೋ ಇಲ್ಲವೋ ಎಂಬ ಭಯ ಅದಕ್ಕಿತ್ತು. ಹಳ್ಳಿಯ ಇಲಿಯು ಸ್ವಲ್ಪ ಸ್ವಲ್ಪ ತಿನ್ನುತ್ತಿತ್ತು. ಆಗ ಪಟ್ಟಣದ ಇಲಿಯು ಅದನ್ನು ಹಾಸ್ಯ ಮಾಡುತ್ತ ಸೊಕ್ಕಿನಿಂದ ಹೇಳಿತು “ಗೆಳೆಯಾ, ನೀನು ಎಷ್ಟು ಆಲಸಿ, ಹಾಗೂ ಸಾಧಾರಣವಾದ ಜೀವನವನ್ನು ಬಾಳುತ್ತಿದ್ದೀಯೆ. ನೀನು ಕೂಪ ಮಂಡೂಕನಂತೆ ಇಲ್ಲಿ ಇದ್ದುಕೊಂಡಿದ್ದೀಯಾ. ಇಲ್ಲಿ ವಾಹನಗಳಿಲ್ಲ, ಜನಸಂದಣಿಯಿಲ್ಲ. ನನ್ನ ಸಮ್ಮಾನದಲ್ಲಿ ನೀನು ಸಮಯವನ್ನು ವ್ಯರ್ಥ ಮಾಡುತ್ತಿದ್ದೀಯಾ. ನೀನು ನನ್ನ ಜೊತೆ ಬಾ. ನಾನು ನಿನಗೆ ಶಹರದ ಜೀವನವನ್ನು ತೋರಿಸುತ್ತೇನೆ.” ಹಳ್ಳಿಯ ಇಲಿಯು ಅದರ ಗೌರವಯುತ ನಡವಳಿಕೆ ಹಾಗೂ ಸುಂದರವಾದ ಶಬ್ದಗಳಿಂದ ಪ್ರಭಾವಿತವಾಗಿತ್ತು. ಎರಡೂ ಸೇರಿಕೊಂಡು ನಗರಕ್ಕೆ ಹೋದವು. ಶಹರಕ್ಕೆ ತಲುಪುವಾಗ ರಾತ್ರಿಯಾಗಿತ್ತು. ಅಲ್ಲಿ ಒಂದು ದೊಡ್ಡ ಮನೆಯಿತ್ತು. ದಕ್ಷಿಣ ಯೂರೋಪ್‌ 289 ಅದರಲ್ಲಿಯೇ ಶಹರದ ಇಲಿ ವಾಸವಾಗಿತ್ತು. ಅಲ್ಲಿ ಮಖಮಲ್ಲಿನ ಮೆತ್ತೆಯಿತ್ತು. ಆನೆಯ ದಂತದ ಸಾಮಗ್ರಿಗಳಿದ್ದವು. ಸುಖ ಸಾಮಗ್ರಿಗಳೆಲ್ಲ ಅಲ್ಲಿದ್ದವು. ಶಹರದ ಇಲಿಯು ತನ್ನ ಗೆಳೆಯನನ್ನು ಚನ್ನಾಗಿ ಸ್ವಾಗತಿಸಿತು. ಅದಕ್ಕೆ ಅತ್ಯುತ್ತಮವಾದ ವಸ್ತುಗಳನ್ನು ತಿನ್ನಿಸಿತು. ಮಲಗಲು ಒಳ್ಳೆಯ ಹಾಸಿಗೆ ಕೊಟ್ಟಿತು. ಹಳ್ಳಿಯ ಇಲಿಯು ತುಂಬ ಪ್ರಭಾವಿತವಾಯಿತು. ಬದುಕಿನ ಒಂದು ಹೊಸದಾರಿಯನ್ನು ತೋರಿಸಿದ ದೇವರಿಗೆ ಕೃತಜ್ಞತೆ ಅರ್ಪಿಸಿತು. ಅಕಸ್ಮಾತ್ತಾಗಿ ಬಾಗಿಲು ತೆರೆಯಿತು. ಕೋಣೆಯೊಳಗೆ ಮನೆಯ ಜನರು ಬಂದರು. ಅವರು ಮನೋರಂಜನೆ ಮುಗಿಸಿ ಹೊರಗಿನಿಂದ ಬಂದಿದ್ದರು. ಇಲಿಯು ಭಯದಿಂದ ಓಡಿ ಒಂದು ಮೂಲೆಯಲ್ಲಿ ಅಡಗಿತು. ತುಸುಹೊತ್ತಿನ ಅನಂತರ ಅವರು ಮತ್ತೆ ಹೊರಗೆ ಹೊರಟಾಗ ಅನೇಕ ನಾಯಿಗಳು ಬೊಗಳಿದವು. ಈಗ ಇಲಿಗಳು ಇನ್ನಷ್ಟು ಹೆದರಿದವು. ಅಂತೂ ಹೇಗೋ ಶಾಂತವಾಯಿತು. ಹಳ್ಳಿಯ ಇಲಿಯು ತಾನು ಅಡಗಿದ್ದ ಸ್ಥಾನದಿಂದ ಹೊರಬರುತ್ತ ಶಹರದ ಇಲಿಗೆ ಹೇಳಿತು. - “ಒಳ್ಳೇದು ಗೆಳೆಯಾ, ನಮಸ್ಕಾರ. ನಾನಿಲ್ಲಿ ಇರಲಾರೆ. ಇಲ್ಲಿಯ ಬದುಕು ಅಭ್ಯಾಸವಾದವರಿಗೆ ಮಾತ್ರ ಈ ಸ್ಥಳ ಒಳ್ಳೆಯದು. ಇಲ್ಲಿನ ಭಯ ಹಾಗೂ ಜಾಗ್ರತೆಯ ಪಕ್ವಾನ್ನಗಳಿಗಿಂತ, ಶಾಂತ ಹಾಗೂ ಸುರಕ್ಷತೆಯಿಂದ ದೊರೆಯುವ ಒಣ ರೊಟ್ಟಿಯೇ ಒಳ್ಳೆಯದು. 290 ಕಥಾ ಸಂಸ್ಕೃತಿ ಮರಳುವ ಸೂರ್ಯನ ನಿರೀಕ್ಷೆ - ಹೋಮರ್ ಹೋಮರನ ರಚನೆಗಳು ಈಲಿಯಡ್ ಮತ್ತು ಓಡಿಸ್ಸೀ ಕ್ರಿ.ಪೂ. 1000 ವರ್ಷಗಳಷ್ಟು ಹಳೆಯವು. ಈ ಕತೆ ಓಡಿಸ್ಸೀಯ ಹದಿನೈದನೇ ಭಾಗದ ಒಂದು ಅಂಶ. ಇದೂ ಕೂಡ ಒಂದು ವಿಚಿತ್ರವಾದ ರೋಮಾಂಚಕಾರಿಯಾದ ಕತೆ. ಒಬ್ಬ ರಾಜಕುಮಾರನಿದ್ದ. ಅವನ ತಂದೆ ಒಂದು ದ್ವೀಪದ ರಾಜನಾಗಿದ್ದ. ಸೂರ್ಯನು ಅಲ್ಲಿಂದ ಮರಳಿ ಹೋಗುತ್ತಾನೆಂದು ಒಂದು ಹೇಳಿಕೆಯಿತ್ತು. ಅಲ್ಲಿನ ಜನ ಎಂದೂ ಕಾಯಿಲೆ ಬೀಳುತ್ತಿರಲಿಲ್ಲ. ಮುದುಕರಾಗುತ್ತಲೇ ಅವರನ್ನು ಮೃತ್ಯುದೇವತೆಯು ಬಂದು ಕಷ್ಟವಾಗದಂತೆ ಅವರನ್ನು ಕೊಲ್ಲುತ್ತಿತ್ತು. ಒಬ್ಬ ಸುಂದರ ಮಹಿಳೆಯು ರಾಜಕುಮಾರನ ಪಾಲನೆ ಪೋಷಣೆ ಮಾಡುತ್ತಿದ್ದಳು. ಒಂದು ದಿನ ಆ ಹೆಂಗಸು ಬರಿದಾದ ಹಡಗಿನ ಬಳಿ ಬಟ್ಟೆ ತೊಳೆಯುತ್ತಿದ್ದಳು. ಆಗ ಒಬ್ಬ ನಾವಿಕನು ಅವಳನ್ನು ತನ್ನ ವಶಕ್ಕೆ ತೆಗೆದುಕೊಂಡ. ಆ ನಾವಿಕನು ಆ ಹೆಂಗಸಿಗೆ ಕೇಳಿದನು - “ನೀನು ಎಲ್ಲಿಂದ ಬಂದಿರುವೆ? ನೀನು ಎಲ್ಲಿ ಕೆಲಸ ಮಾಡುತ್ತಿರುವೆ?” ರಾಜಕುಮಾರನು ಕತೆಯನ್ನು ಮುಂದುವರಿಸಿದ. - ಆ ಹೆಂಗಸು ತನ್ನ ತಂದೆಯ ಮನೆಯ ಕಡೆ ತೋರಿಸುತ್ತ ಹೇಳಿದಳು - “ಅವಳು ಸೀದಾನ್‍ದ ಒಬ್ಬ ಶ್ರೀಮಂತನ ಮಗಳು. ಅವಳ ತಂದೆಯ ಹೆಸರು ಅರೀಬಾಸ್. ಒಂದು ದಿನ ಅವಳು ತನ್ನ ಹೊಲದಿಂದ ಹಿಂತಿರುಗಿ ಬರುವಾಗ ಒಬ್ಬ ಸಮುದ್ರಕಳ್ಳನು ಅವಳನ್ನು ಹಿಡಿದು ಇಲ್ಲಿಗೆ ತಂದು ಒಳ್ಳೆಯ ಬೆಲೆಗೆ ಮಾರಿಬಿಟ್ಟ.'' ಅವಳ ಪ್ರೇಮಿಯು ಹೇಳಿದ - ಅವಳ ತಂದೆ ತಾಯಿ ಇನ್ನೂ ಜೀವಂತವಾಗಿದ್ದಾರೆ. ಅವನು ಅವಳನ್ನು ಅವರ ಬಳಿಗೆ ತಲುಪಿಸಬಲ್ಲ. ಮಹಿಳೆ ಹೇಳಿದಳು - “ನಿನ್ನ ಹಡಗು ತುಂಬಿಯಾದ ಮೇಲೆ ಗುಪ್ತವಾಗಿ ನನಗೆ ಒಂದು ಸಂದೇಶವನ್ನು ಕಳಿಸು. ಸಂದೇಶ ಸಿಗುತ್ತಲೇ ನಾನು ಸಾಕಷ್ಟು ಬಂಗಾರ - ಬೆಳ್ಳಿ ತೆಗೆದುಕೊಂಡು ನಿನ್ನ ಬಳಿ ಬರುವೆ. ನನ್ನ ಜೊತೆಗೆ ರಾಜನ ಮಗನನ್ನು ಕರೆತರುವೆ. ನೀನು ಅವನನ್ನು ಬೇರೆಲ್ಲಾದರೂ ಮಾರಿ ಹಣ ಸಂಪಾದಿಸಬಹುದಂತೆ.” ನಾವಿಕನು ಅವಳ ಮಾತನ್ನು ಒಪ್ಪಿದನು. ಗ್ರೀಸ್‌ (ಯೂನಾ‌ನ್‌) 291 ಹಡಗು ಒಂದು ವರ್ಷದವರೆಗೆ ಅಲ್ಲೇ ಉಳಿಯಿತು. ನಾವಿಕರು ಸಾಕಷ್ಟು ಹಣ ಸಂಗ್ರಹಿಸಿದರು. ಮತ್ತು ಸಾಮಗ್ರಿಗಳಿಂದ ಹಡಗನ್ನು ತುಂಬಿ ಹೊರಡಲು ಸಿದ್ಧರಾದರು. ಆಗ ಅವರು ಆ ಹೆಂಗಸಿಗೆ ಸಂದೇಶ ಕಳಿಸಿದರು. ಆ ಹೆಂಗಸು ನನ್ನನ್ನೂ ಜೊತೆಗೆ ಕರೆದುಕೊಂಡು ಬಹಳಷ್ಟು ಬಂಗಾರ - ಬೆಳ್ಳಿಯೊಂದಿಗೆ ಮಹಲಿನಿಂದ ಹೊರಗೆ ಬಂದು ಹಡಗಿಗೆ ಹೋದಳು. ಹಡಗು ಆರುದಿನಗಳವರೆಗೆ ಹೋಗುತ್ತಲೇ ಉಳಿಯಿತು. ಏಳನೆಯದಿನ ಹಡಗಿನ ನಾವಿಕರು ಅವಳನ್ನು ಸಮುದ್ರಕ್ಕೆ ಎಸೆದುಬಿಟ್ಟರು. ಸಮುದ್ರದ ಮೀನುಗಳು ಅವಳನ್ನು ತಿಂದುಬಿಟ್ಟವು. ನನಗೆ ಅವಳ ಮರಣದಿಂದ ದುಃಖವಾಯಿತು. ಅವರು ನನ್ನನ್ನು ಇಲ್ಲಿಗೆ ಕರೆತಂದರು. ಆಗಿನಿಂದ ನಾನು ಇಲ್ಲಿಯೇ ಇದ್ದೇನೆ. ಸೂರ್ಯನು ಅಲ್ಲಿಂದ ಹೊರಡುವ ಆ ದ್ವೀಪವನ್ನು ನಾನೆಂದಾದರೂ ಕಾಣುವೆನೋ ಇಲ್ಲವೋ. !!