ಪ್ರಮೀಳೆಯರ ನಾಡಿನಲ್ಲಿ (ಮಣಿಪುರ ರಾಜ್ಯ ಪ್ರವಾಸ ಕಥನ) ಲೇಖಕ ಸಂತೋಷಕುಮಾರ ಮೆಹೆಂದಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು-560 002. ದೂರವಾಣಿ:080-22211730/22106460 www.karnatakasahithyaacademy.org Email: sahithya.academy@gmail.com ii PRAMILAYARA NADINALLI A Travelogue of Manipura Written by: Santoshkumar Mahendal Published by C.H.Bhagya Registrar Karnataka Sahithya Academy Kannada Bhavana J.C.Road, Bengaluru-560 002. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಟಗಳು : xii+236 ಬೆಲೆ : ` 100/- ಮೊದಲ ಮುದ್ರಣ : 2016 ಪ್ರತಿಗಳು : 1000 ಮುಖಪುಟ ವಿನ್ಯಾಸ : ಅರುಣ್‍ಕುಮಾರ್ ಜಿ. Pages : xii+236 Price : ` 100/- First impression : 2016 Copies : 1000 ಪ್ರಕಾಶಕರು: ಸಿ.ಎಚ್.ಭಾಗ್ಯ ರಿಜಿಸ್ಟ್ರಾರ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು-560 002. ಮುದ್ರಕರು: ಸರ್ಕಾರಿ ಕೇಂದ್ರ ಮುದ್ರಣಾಲಯ ಆರ್.ವಿ.ಕಾಲೇಜ್ ಅಂಚೆ 8ನೇ ಮೈಲಿ, ಮುತ್ತುರಾಯನಗರ ಜ್ಞಾನಭಾರತಿ, ಮೈಸೂರು ರಸ್ತೆ ಬೆಂಗಳೂರು-560 059. 080- 28483133 / 28484518 ಅಧ್ಯಕ್ಷರ ನುಡಿ ಪ್ರವಾಸ ಕಥನವು ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಅದು ಪ್ರವಾಸ ಕೈಗೊಂಡ ಸ್ಥಳದ ವರದಿಯೂ ಅಲ್ಲ. ಪ್ರವಾಸಿಗಳ ಮಾರ್‌ಗದರ್ಶಿಯೂ ಅಲ್ಲ. ಅದು ಪ್ರವಾಸಿಯ ಸ್ವಾನುಭವದ ರಸಾಭಿವ್ಯಕ್ತಿ. ಪ್ರವಾಸ ಸ್ಥಳದ ಭೌಗೋಳಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಿಕ, ಸಾಂಸ್ಕೃತಿಕ ಅಧ್ಯಯನದ ಜೊತೆ ಪ್ರವಾಸಿಯ ಅನುಭವ ಬೆರೆತುಕೊಂಡ ರಸಪಾಕದಂತಿರುತ್ತದೆ. ಸಾವಿರಾರು ವರ್ಷಗಳ ಹಿಂದೆ ಪ್ರಪಂಚದ ಸುಪ್ರಸಿದ್ಧ ಮಹತ್ವಾಕಾಂಕ್ಷಿ ಪ್ರವಾಸಿಗಳಾದ ಮಾರ್ಕೋಪೋಲೋ, ಕೊಲಂಬಸ್, ಹೆನ್ರಿ ಹಡ್ಸನ್, ಫರ್ಡಿನಾಂಡ್ ಮೆಗೆ ಲ್ಲೊ , ಇಬ್ನಬತೂತಾರಂಥ ಸಾಹಸಿ ಪಯಣಿಗರು ತಮ್ಮ ಶೋಧದ ಸಾಹಸ ಯಾತ್ರೆಗಳನ್ನು ಬರೆದಿಟ್ಟು ಮಾಡಿದ ಉಪಕಾರ ಚಿರಸ್ಮರಣೀಯ. ಭಾರತಕ್ಕೆ ಪ್ರವಾಸ ಕೈಗೊಂಡ ಅನೇಕ ಪ್ರವಾಸಿಗಳಲ್ಲಿ ನಾವು ನೆನಪಿಡ ಲೇಬೇಕಾದವರು- ಚೀನಾದೇಶದ ಫಾಹಿಯಾನ್, ಹುಯೆನ್‍ಸ್ತಾಂಗ್, ಮೊಹೊರ ಲ್ಲಾ ದೇಶದ ಇಬ್ನಬತೂತಾ ಪರ್ಷಿಯಾದೇಶದ ಅಲ್ಬರೂನಿ, ಅಬ್ದುಲ್ ರಜಾಕ್, ಅವರು ಆ ಕಾಲದ ಭಾರತದ ಸ್ಥಿತಿಗತಿಗಳ ಇತಿಹಾಸವನ್ನೂ ಬರೆದಿಟ್ಟರು. ಹಾಗೆ ಪ್ರವಾಸ ಕಥನಗಳು ಕೇವಲ ಮನರಂಜನೆಗಾಗಿ ಕೈಗೊಂಡ ಪ್ರವಾಸಗಳಾಗದೆ ಅಧ್ಯಯನಪೂರ್ಣ ಸಂಶೋಧನೆಗಳೂ ಆದರೆ ಅವುಗಳ ಮೌಲಿಕತೆ ಅಧಿಕವಾಗುತ್ತದೆ. ಕಳೆದ ಎರಡು ದಶಕಗಳಿಗಿಂತ ಮೇಲ್ಪಟ್ಟು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರವಾಸ ಕಥನದ ಬರವಣಿಗೆಗೆ ಪ್ರೋತ್ಸಾಹ ನೀಡಲು ಸಹಾಯಧನ ನೀಡಿ ಯುವ ಬರಹಗಾರರನ್ನು ಆಹ್ವಾನಿಸಿ ಅವರ ಆಯ್ಕೆಯಂತೆ ಭಾರತದ ರಾಜ್ಯಗಳಿಗೆ ಕಳಿಸಿಕೊಟ್ಟು ಅವರಿಂದ ಪ್ರವಾಸ ಕಥನಗಳನ್ನು ಬರೆಸಲು ಇಟ್ಟುಕೊಂಡ ಯೋಜನೆಯನ್ನು ನಾವು ಮುಂದುವರಿಸಿದ್ದೇವೆ. 2014-15ನೇ ವರ್ಷದಲ್ಲಿ ಆಯ್ಕೆಯಾಗಿ ಪ್ರವಾಸ ಕೈಗೊಂಡವರು 1. ಶ್ರೀ ಮೋದೂರು ತೇಜ ತೆಲಂಗಾಣದ ಪ್ರವಾಸ ಕೈಗೊಂಡು ಬರೆದ ಪ್ರವಾಸ ಕಥನ-“ತೇಟ ತೆಲುಗು ನಾಡಿನಲ್ಲಿ” 2. ಡಾ. ಪಜ್ಞಾ ಮತ್ತಿಹಳ್ಳಿಯವರು ಕೇರಳ ರಾಜ್ಯದ ಪ್ರವಾಸ ಕೈಗೊಂಡು ಬರೆದದ್ದು “ದೇವರ ಸ್ವಂತ ನಾಡಿನಲ್ಲಿ” iv 3. ಡಾ. ಶೈಲಜಾ ಬಾಗೇವಾಡಿಯವರು ತಮಿಳುನಾಡು ಪ್ರವಾಸ ಕೈಗೊಂಡು ಬರೆದ ಪ್ರವಾಸ ಕಥನದ ಶೀರ್ಷಿಕೆ “ದೇವಾಲಯಗಳ ನಾಡಿನಲ್ಲಿ” 4. ಶ್ರೀ ಶಿವರುದ್ರಯ್ಯಸ್ವಾಮಿ ಅವರು ಕೈಗೊಂಡ ಮಿಜೋರಾಂ ಪ್ರವಾಸ ಕಥನದ ಹೆಸರು “ಬೊಗಸೆಯಲ್ಲಿ ಈಶಾನ್ಯ” 5. ಸಂತೋ ಷ ಕುಮಾರ್ ಮೆಹಂದಳೆಯವರು ಕೈಗೊಂಡ ಮಣಿಪುರ ಪ್ರವಾಸ ಕಥನದ ಹೆಸರು “ಪ್ರಮಿಳೆಯರ ನಾಡಿನಲ್ಲಿ” 6. ಶ್ರೀಮತಿ ಅಂಜಲಿ ರಾಮಣ್ಣ ಅವರು ಅರುಣಾಚಲ ಪ್ರವಾಸ ಕೈಗೊಂಡು ರಚಿಸಿದ ಪ್ರವಾಸ ಕಥನದ ಹೆಸರು “ಬೆಳಕಿನ ಸೆರಗು” ಇವರೆಲ್ಲರದ್ದು, ತಮ್ಮ ಪ್ರವಾಸದ ಅನುಭವಗಳನ್ನು ಸಾಹಿತ್ಯಿಕ ಮೌಲ್ಯದ ಕೃತಿಗಳನ್ನಾಗಿಸಿದ್ದಕ್ಕೆ ಅವರಿಗೆ ಹಾರ್ದಿಕ ಧನ್ಯವಾದಗಳು. ಪ್ರತಿವರ್ಷ ಪ್ರತಿಭಾನ್ವಿತ ಹೊಸ ಬರಹಗಾರರನ್ನು ಗುರುತಿಸುವುದು, ಅವರಿಗೆ ಅನುದಾನ ನೀಡಿ ಪ್ರವಾಸ ಕೈಗೊಳ್ಳಲು ಮಾರ್‌ಗದರ್ಶನ ಮಾಡುವುದು, ಅವರು ಆಯ್ದುಕೊಂಡ ರಾಜ್ಯಗಳ ಕುರಿತು ಪ್ರವಾಸ ಕಥನವನ್ನು ಬರೆಸುವುದು, ಮುದ್ರಿಸುವುದು- ಈ ಪ್ರವಾಸ ಕಥನಗಳಿಂದ ಕನ್ನಡದ ಓದುಗರಲ್ಲಿ ಪ್ರವಾಸದ ಹವ್ಯಾಸ ಬೆಳೆಸುತ್ತಾ ಪ್ರವಾಸ ಕಥನಗಳ ರಚನೆಯು ಪ್ರೋತ್ಸಾಹಿಸುವುದು- ಹೀಗೆ ಕೈಗೊಂಡ ಒಂದು ಯೋಜನೆಯು ಎಷ್ಟು ಬಗೆಯಿಂದ ಫಲಕಾರಿಯಾಗುತ್ತದೆ ಎಂಬುದಕ್ಕೆ ನಮ್ಮ ಪ್ರವಾಸ ಕಥನಗಳ ಯೋಜನೆಯೇ ಸಾಕ್ಷಿ. ಬೊಗಸೆಯಲ್ಲಿ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿನ ತಮ್ಮ ಅನುಭವಗಳನ್ನು ತುಂಬಿಕೊಟ್ಟ ಶ್ರೀ ಶಿವರುದ್ರಯ್ಯಸ್ವಾಮಿಯವರಿಗೆ ತಂದೆಯ ವರ್‌ಗಾವರ್‌ಗಿ ನೌಕರಿಯಿಂದಾಗಿ ವೈವಿಧ್ಯಮಯ ಪ್ರದೇಶಗಳನ್ನು ನೋಡಬೇಕೆಂಬ ಆಕರ್ಷಣೆ ಅವರ ಬಾಲ್ಯದಲ್ಲಿ ಇತ್ತೆಂದು ತಮ್ಮ ಪ್ರವಾಸ ಕಥನದ ಮುನ್ನುಡಿಯಲ್ಲಿ ದಾಖಲಿಸಿದ್ದಾರೆ. “ದೇವರ ಸ್ವಂತ ನಾಡಿನಲ್ಲಿ” ಶೀರ್ಷಿಕೆಯಡಿ ಪ್ರವಾಸ ಕಥನ ರಚಿಸಿದ ಡಾ. ಪ್ರಜ್ಞಾಮತ್ತಿಹಳ್ಳಿ ಅವರು ಕಲೆಸಾಹಿತ್ಯ, ನಿಸರ್‌ಗ, ಇತಿಹಾಸಗಳ ಸಂಗಮದಂತಿದ್ದು, ಕೇರಳ ಪ್ರವಾಸ ಕುರಿತು ಹೀಗೆ ಬರೆಯುತ್ತಾರೆ: ಕೇರಳದ v ಕಲೆ, ಸಾಹಿತ್ಯ, ನಿಸರ್‌ಗ ಸೌಂದರ್ಯವನ್ನು ವರ್ಣಿಸಲು ಒಂದು ಪ್ರವಾಸ ಸಾಧ್ಯವೇ? ಒಂದು ಪುಸ್ತಕದಲ್ಲಿ ಬರೆದಿಡುವುದು ಸಾಧ್ಯವೇ? ಎಂದು. “ದೇವಾಲಯಗಳ ನಾಡಿನಲ್ಲಿ” ಪುಸ್ತಕದ ಕರ್ತೃ ಡಾ. ಶೈಲಜಾ ಬಾಗೇವಾಡಿಯವರ ತಮ್ಮ ಪುಸ್ತಕದ ತುಂಬ ತಮಿಳುನಾಡಿನ ಸುಂದರ ಶಿಲ್ಪದ ದೇವಾಲಯಗಳ ಬಗ್ಗೆ ಸವಿಸ್ತರವಾಗಿ ಬರೆಯುತ್ತಾರೆ. ಶ್ರೀ ಮೋದೂರು ತೇಜರವರು ತಮ್ಮ ತೇಟ ತೆಲುಗುನಾಡಿನಲ್ಲಿ ಪ್ರವಾಸ ಕಥನದಲ್ಲಿ ಮುಖ್ಯವಾಗಿ ಸ್ಪಂದಿಸಿದ್ದು, ಆಂಧ್ರ ಪ್ರದೇಶವು ಇಬ್ಭಾಗವಾದ ನಂತರದ ತೆಲುಗು ಜನ ಅನುಭವಿಸುತ್ತಿರುವ ನೋವು ತಲ್ಲಣಗಳನ್ನು ದಾಖಲಿಸಿದ್ದಾರೆ. ಒಬ್ಬ ಸಂಶೋಧಕನ ಕ್ಷೇತ್ರಕಾರ್ಯವೆಂಬಂತೆ ಹತ್ತು ಹಲವು ಹೊಸ ವಿಷಯಗಳನ್ನು ತೆರೆದಿಟ್ಟ ಶ್ರೀ ಸಂತೋಷ ಕುಮಾರ ಮೆಹೆಂದಳೆ ಅವರ ಪ್ರಮೀಳೆಯರ ನಾಡಿನಲ್ಲಿ ಪ್ರವಾಸ ಕಥನವು ಮನಸ್ಸಿಗೆ ಮುದ ನೀಡುತ್ತದೆ. ಈ ಪ್ರವಾಸ ಕಥನವು ವಿವರಗಳ ಪಟ್ಟಿಯಾಗದೆ ಒಂದು ಸಾಹಿತ್ಯಕ ಸಂಪ್ರಬಂಧದಂತಿದೆ. ಶ್ರೀಮತಿ ಅಂಜಲಿ ರಾಮಣ್ಣ ಅವರ ಅರುಣಾಚಲ ಪ್ರದೇಶದ ಪ್ರವಾಸ ಕಥನದ ಹೆಸರು ಬೆಳಕಿನ ಸೆರಗು ಶೀರ್ಷಿಕೆಯು ತುಂಬಾ ರೂಪಕಾತ್ಮಕವಾಗಿದೆ. ಭಾರತದ ನಕಾಶೆಯಲ್ಲಿ ಪೂರ್ವೋತ್ತರದ ಈ ಪ್ರಾಂತವು ಸೆರಗಿನಂತೆಯೇ ಕಾಣಿಸುತ್ತದೆ. ಇಲ್ಲಿಯ ಬಹುತೇಕ ಕುಟುಂಬಗಳ ಕೇಂದ್ರ ಸದಸ್ಯೆ ಮಹಿಳೆ. ಪುರುಷ ಬೇeವಾಬ್ದಾರನಾಗಿದ್ದಾಗ ಪರಿವಾರಗಳ ಹೊಣೆಗಾರಿಕೆ ಇಲ್ಲಿಯ ಮಹಿಳೆಯದ್ದೆಂಬುದು ಪ್ರಶಂಸನೀಯ. ಪ್ರತಿಯೊಂದು ಮನೆಯಲ್ಲಿ ಚಿಕ್ಕ ಗಾತ್ರದ ಮಗ್ಗದಲ್ಲಿ ಕುಳಿತು ನೇಯುತ್ತಾ ಕುಟುಂಬಕ್ಕೆ ಆಧಾರ ಸ್ತಂಭದಂತಿರುವ ಅರುಣಾಚಲದ ಮಹಿಳೆಯರ ಬಗ್ಗೆ ಅಭಿಮಾನ ಮೂಡುತ್ತದೆ. ನಮ್ಮ ಪ್ರವಾಸ ಕಥನಕಾರರಿಗೆ ನಾವು ಅನುವು ಮಾಡಿಕೊಟ್ಟ ದೇಶೀಯ ರಾಜ್ಯಗಳ ಪ್ರವಾಸದ ಅನುಭವವು ಪ್ರಪಂಚದ ಪ್ರವಾಸಕ್ಕೆ ನಾಂದಿಯಾಗಲಿ, ಅವರು ನಮಗೆ ಬರೆದುಕೊಟ್ಟ ಪ್ರವಾಸ ಕಥನಗಳಿಗಾಗಿ ಪಟ್ಟ ಪರಿಶ್ರಮಗಳನ್ನು ನೆನೆಯುತ್ತಾ ಮತ್ತೊಮ್ಮೆ ಅಭಿನಂದಿಸುತ್ತೇನೆ. ಹೀಗೆ ಕನ್ನಡದ ಓದುಗರಿಗೆ ಪ್ರವಾಸ ಕಥನದ ಗ್ರಂಥಗಳನ್ನು ನೀಡಿ ಅವರುಗಳು ಇಂಥ ಯಾತ್ರೆಗಳಿಗಾಗಿ ಹೊರಡುವಂಥ ಮನಸ್ಸು ಮಾಡಿ, ಪ್ರವಾಸ ಕೈಗೊಂಡು ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ತರುವಂತಾದರೆ, ಕನ್ನಡ ಸಾಹಿತ್ಯ ಭಂಡಾರಕ್ಕೆ ಹೀಗೆ ಹೆಚ್ಚು ಸಂಖ್ಯೆಯಲ್ಲಿ vi ಪ್ರವಾಸ ಕಥನಗಳನ್ನು ಸೇರಿಸಿ ಶ್ರೀಮಂತಗೊಳಿಸುವುದಾದರೆ, ಎಷ್ಟು ಚೆನ್ನ ಎಂದು ನಾನು ಯೋಚಿಸುತ್ತೇನೆ. ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಅನೇಕ ಹೊಸ ಹೊಸ ಯೋಜನೆಗಳಲ್ಲಿ ಪಾಪಾಲ್ಗೊಂಡರೆ ನಮ್ಮ ಪ್ರಯತ್ನಗಳು ಸಾರ್ಥಕವಾಗಬಲ್ಲವು ಎಂಬ ಆಶಯವನ್ನು ಪ್ರವಾಸ ಕಥನದ ಆರು ಪುಸ್ತಕ ಮಾಲಿಕೆಯನ್ನು ಪ್ರಕಟಿಸುವ ಸಂದರ್ಭದಲ್ಲಿ ಅಭಿವ್ಯಕ್ತಿಸಲು ತುಂಬ ಸಂತೋಷವೆನಿಸುತ್ತದೆ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಎರಡನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560 002. ಮಣಿಪುರ ಎಂಬ ಮಾನಿನಿಯರ ನಾಡಿಗೂ ಮುನ್ನ... .. ನನ್ನ ನಿರೀಕ್ಷೆಗೂ ಮೀರಿ ನಾಡೊಂದರ ದರ್ಶನ ಮತ್ತು ಅಷ್ಟೇ ಕೌತುಕಗಳ ಕಥೆಯನ್ನು ಕಟ್ಟಿ ಕೊಟ್ಟ ಪ್ರವಾಸ ಇದು. ನಿರಂತರವಾಗಿ ಹದಿನೈದು ದಿನಕ್ಕೂ ಮಿಗಿಲು ನಾನು ಎಲ್ಲೆಂದರಲ್ಲಿ ಸುತ್ತುತ್ತಿದ್ದರೆ ಸ್ಥಳೀಯರು ನನ್ನನ್ನು ಯಾವುದೋ ಪ್ರಾಣಿಯಂತೆ ಗಮನಿಸಿ ಮಜ ತೆಗೆದುಕೊಳ್ಳುತಿದ್ದ ಸಮಯದಲ್ಲೂ ಮುದ ನೀಡಿದ ಕಥಾನಕ ಈ ಪ್ರವಾಸದ್ದು. ಎಲ್ಲೋ ಬೆಂಗಳೂರಿನಿಂದ ಹೊರಟರೆ ಅನಾಮತ್ತು ನಾಲ್ಕಾರು ದಿನಗಳನ್ನೇ ಕೇಳುವ ತೀರ ಭಾರತದ ಮೂಲೆಯೊಂದಕ್ಕೇ ಆತುಕೊಂಡಂತೆ, ಅಡರಿಕೊಂಡು ಬೆಳೆಯುತ್ತಿರುವ ರಾಜ್ಯ ಮಣಿಪುರ. ಅದ್ಯಾಕೆ ನಾನು ಮಣಿಪುರವನ್ನೇ ಆಯ್ದುಕೊಂಡೆ ನಿಜಕ್ಕೂ ಗೊತ್ತಿಲ್ಲ. ಆದರೆ ಖಂಡಿತಕ್ಕೂ ಅಯ್ಕೆಗೂ ಮೊದಲಿನಿಂದಲೂ ಇದ್ದ ಪ್ರವಾಸದ ಬಗೆಗಿನ ನನ್ನ ಕುತೂಹಲವನ್ನು ಮತ್ತು ನಿರೀಕ್ಷೆಯನ್ನೂ ಬದಲಿಸಿದ ಪ್ರವಾಸ ಇದು. ಕಾರಣ ಮಣಿಪುರ ಸುಲಭಕ್ಕೆ, ಸಾಮಾನ್ಯ ಪ್ರವಾಸಿಗನಿಗೆ ಒಂದು ಕೈಯ್ಯಳತೆಗೆ ಅಥವಾ ಆತುಕೊಂಡೆನೆಂದರೆ ಒಂದು ಸುಲಭದ ತೆಕ್ಕೆಗೆ ಸಿಕ್ಕುವ ಪ್ರವಾಸ ಮಾಡಬಲ್ಲ ರಾಜ್ಯ ಅಲ್ಲ. ಹೀಗೆ ಹೋಗಿ ಹಾಗೆ ಬರುತ್ತೇನೆಂದು ಹೊರಟರೆ ಸುಲಭಕ್ಕೆ ನೂರಾರು ಕಿ.ಮೀ. ಕ್ರಮಿಸಬಹುದಾದ ನಮ್ಮ ಇತರ ನಗರಗಳ ಹಾಗೂ ಅಲ್ಲ. ಏನಿದ್ದರೂ ಸಂಪೂರ್ಣ ಮಾಹಿತಿ ಮತ್ತು ಸಾಂಗತ್ಯವಿದ್ದರೆ ಅದರ ಅನುಭವ ಮತ್ತು ಸಿಗುವ ಕುತೂಹಲಕಾರಿ ಕಥಾನಕಗಳ ಸಾರವೇ ಅದ್ಭುತ. ಮಣಿಪುರದ ಯಾವ ಜಾಗವೂ ನಾವು ನೀವಂದುಕೊಂಡಂತೆ ಇಲ್ಲವೇ ಇಲ್ಲ. ಅದಕ್ಕೂ ಮಿಗಿಲಾಗಿ ಅಲ್ಲಿನ ಭಾಷೆ ಪ್ರತಿ ಇಪ್ಪತ್ತು ಕಿ.ಮೀ. ಗಳಿಗೊಮ್ಮೆ ಬದಲಾಗುವ ಪಂಗಡಗಳ ಕಟ್ಟುಪಾಡು ಮತ್ತು ಅವಗಾಹನೆಗೆ ನಿಲುಕದ ಸರಕಾರಿ, ಅರೆ ಸರಕಾರಿ, ಮಿಲಿಟರಿ ಹೀಗೆ ಯಾವ ಕಾನೂನು ಯಾವ ಕಾಯಿದೆ ಗೊತ್ತಾಗದ, ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುವ ವ್ಯವಹಾರದ ಪರಿಸ್ಥಿತಿಯ ಜೊತೆಗೆ, ತೀರ ಅರಿವಿಗೆ ಬಾರದ viii ಬುಡಕಟ್ಟು ಜನಾಂಗಗಳ ನೀತಿ ನಿಯಮ ಮತ್ತು ಅಹಾರ ಪದ್ಧತಿಗಳಿಂದಾಗಿ ಸಂಪೂರ್ಣ ದೇಶದ ಹೊರಭಾಗಕ್ಕೆ ಬಂದು ಬಿದ್ದಂತಾಗುವ, ಬಾಯಿಗೆ ಸುಲಭಕ್ಕೆ ದಕ್ಕಲಾಗದ ಹೆಸರಿನೊಂದಿಗೆ ಹೋರಾಡುತ್ತಾ ಜನರನ್ನು ಗುರುತಿಸಬೇಕಾಗುವ, ಎಲ್ಲಾ ದಿಕ್ಕಿನಿಂದಲೂ ಗೊಂದಲ ಮತ್ತು ಆಗೀಗ ಅಸುರಕ್ಷತೆಗೀಡುಮಾಡುವ ಪ್ರದೇಶ. ಅಕ್ಷರಶ: ಸ್ವತಂತ್ರ ಭಾರತದ ಮೊದಲಿನ ಪರಿಸ್ಥಿತಿಗೆ ಬಂದು ನಿಂತ ಅನುಭವವಾಗುವುದರಲ್ಲಿ ಸಂಶಯವಿಲ್ಲ. ಭಾಷೆ ಮತ್ತು ಅಹಾರ, ವೇಷಭೂಷಣ ಸಾರಿಗೆ ದಿನವಹಿ ವ್ಯವಹಾರ ಸಂಸ್ಕೃತಿ ಆಟೋಟ ಹೀಗೆ ಎಲ್ಲಾ ಪ್ರಕಾರದಲ್ಲೂ ನಮ್ಮ ಸಹಜ ಬದುಕಿನಾಚೆಗೆ ಬಂದು ನಿಲ್ಲುವ ಮಣಿಪುರಿಗಳ ವೈವಿಧ್ಯಮಯ ಜೀವನ ಸಾಧಾರಣಕ್ಕೆ ಅರ್ಥವಾಗುವಂತಹದ್ದೂ ಅಲ್ಲ ಮತ್ತು ನೂರಾರು ಬುಡಕಟ್ಟುಗಳ ಕೈಗೆ ಸಿಕ್ಕಿ ಉತ್ತರ, ದಕ್ಷಿಣದ ಪಾಲುಗಳಿಗೆ ಈಡಾಗಿರುವ ಕಾರಣ ರಾಜ್ಯ ಪ್ರವಾಸಿಗಳಿಗೆ ತೀರ ಸಂಶಯಕ್ಕೂ ಈಡು ಮಾಡುತ್ತದೆ. ಸುಲಭಕ್ಕೆ ಪ್ರವಾಸಿಗರನ್ನು ಆಕರ್ಷಿಸಲಾಗದೆ ವಿನಾ ಕಾರಣ ಕೆಳಕ್ಕೆ ಸರಿಯುತ್ತಿದೆ. ಅದಕ್ಕಾಗೇ ಭಾರತದ ಆಭರಣ ಎನ್ನುವ ಹೆಸರಿನ ರಾಜ್ಯ ಮೊದಲ ಬಾರಿಗೆ ಸಂದರ್ಶಿಸುವ ಪ್ರವಾಸಿಗರಿಗೆ ಕೊಂಚ ಕಠಿಣ ಎನ್ನಿಸುತ್ತದೆ. ಕಾರಣ ಮಣಿಪುರ ಒಂದು ವೈರುಧ್ಯಗಳ ಆಗರ.. ಒಂದು ವೃತ್ತಗಳಲ್ಲಿ ಬದುಕುತ್ತಿರುವವರ ಸಾಗರ.. ಎಲ್ಲೂ ಸಲ್ಲಲಾಗದ ಜನಜೀವನದ ಪ್ರವಾಹ ಈ ಎಲ್ಲದರ ಮಧ್ಯೆ ಪ್ರವಾಸಿಯಾಗಿ ಕಾಲಿಟ್ಟ ನನಗೆ ಇತಿಹಾಸದಿಂದ ಪ್ರಸ್ತುತದವರೆಗೂ ಸಂಶೋಧನೆ, ಅಭ್ಯಾಸ, ಪ್ರಾಕೃತಿಕ ನೋಟಕ್ಕೆ ಲಭ್ಯವಾದ ಹಲವು ವಿಷಯ ಮತ್ತು ನನ್ನ ಅನಿಸಿಕೆಗಳನ್ನು ಸಾಕ್ಷಾತ್ ವಿವರಗಳೊಂದಿಗೆ ವಿಫುಲವಾದ ಮಾಹಿತಿಯನ್ನು ಕಟ್ಟಿ ಕೊಟ್ಟಿದ್ದೇನೆ. ಪ್ರವಾಸದ ದೃಷ್ಟಿಯಿಂದ ಇದು ಗೈಡ್ ಆಗುವುದಕ್ಕಿಂತಲೂ ಮಣಿಪುರಗಳ ಸಂಗ್ರಾಹ್ಯ ಮಾಹಿತಿಯ ಮತ್ತು ಇತಿಹಾಸದಿಂದ ಪ್ರಸ್ತುತದವರೆಗಿನ ಎಲ್ಲಾ ಸಾಮಾಜಿಕ ಅಂಶಗಳ ಮೇಲೆ ಬೆಳಕು ಬೀರುವ ಕಥಾನಕದಂತೆ ಅರ್ಥೈಸಬಹುದು. ಅಲ್ಲದೆ ಇದು ಪ್ರವಾಸಿಗರಿಗೆ ಸಿದ್ಧ ಕೈಪಿಡಿ ix ಯಾಗುವುದಕ್ಕಿಂತಲೂ ವ್ಯವಸ್ಥಿತ ಸಮಗ್ರ ಮಾಹಿತಿಯ ಪ್ರಸ್ತುತ ಸ್ಥಿತಿಗತಿಗಳ ಸಂಚಿಕೆಯಂತೆನ್ನಿಸಿದರೂ ಅಚ್ಚರಿಯಲ್ಲ. ಕಾರಣ ಮಣಿಪುರವನ್ನು ನಾನು ಪ್ರತಿ ಹೆಜ್ಜೆಯಲ್ಲೂ ಅನುಭವಿಸಿದ್ದನ್ನೆ ಇಲ್ಲಿ ಬರೆದು ರೂಪಿಸಿದ್ದೇನೆ. ಹೀಗೆ ಮಾಹಿತಿಯನ್ನು ದಾಖಲಿಸುವಾಗ ನಾನು ಅಂತರ್ಜಾಲದಿಂದ ಮಾಹಿತಿಗಾಗಿ ಪಡೆದ ಪುಟವನ್ನೂ ನೇರವಾಗಿ ಬಳಸಿದ್ದೇನೆ. ಕಾರಣ ಮಣಿಪುರ ಇಲಾಖಾ ದಸ್ತಾವೇಜುಗಳಿಂದ ಪಡೆದ ಮಾಹಿತಿಯನ್ನು ಕನ್ನಡೀಕರಣಗೊಳಿಸಿ ಪ್ರಕಟಿಸುವ ಸುದ್ದಿಗೆ ಹೋದಲ್ಲಿ ಬಹುಶ: ನಮ್ಮ ಉಚ್ಚಾರಕ್ಕೆ ಸಿಲುಕಿ ಮಣಿಪುರದ ಇತಿಹಾಸದಲ್ಲಿ ದಾಖಲಾದ ಸತ್ಯಗಳೆ ಬದಲಾಗಿ ಹೋದಾವು. ಅದಕ್ಕಾಗಿ ಆ ಎಚ್ಚರಿಕೆಯಿಂದ ಕೆಲವು ಮಾಹಿತಿಯನ್ನು ಇದ್ದುದರಲ್ಲಿ ಉತ್ತಮ ಎನ್ನಿಸಿದ್ದನ್ನು ಮತ್ತು ನೇರವಾಗಿ ಇಂಗ್ಲಿಷಿನಲ್ಲೇ ಕೊಟ್ಟಿದ್ದೇನೆ. ಆಕಸ್ಮಿಕವಾಗಿ ಈ ಬರಹದ ತೆಕ್ಕೆಗೆ ನಾನು ಸಿಕ್ಕಿ ಮಣಿಪುರ ರಾಜ್ಯ ಪ್ರವಾಸ ಬರೆಯುವಂತೆ ಮಾಡಿದ "ಕರ್ನಾಟಕ ಸಾಹಿತ್ಯ ಅಕಾಡೆಮಿ", ಮತ್ತದರ ಬಳಗಕ್ಕೆ, ಸಮಿತಿ ಸದಸ್ಯರಿಗೆ, ಆತ್ಮೀಯ ಸ್ನೇಹಿತ ವಲಯಕ್ಕೆ ಇದರ ಬಹುಪಾಲು ಶ್ರೇಯಸ್ಸು ಸಲ್ಲಬೇಕು. ಕಾರಣ ಇದೆಲ್ಲದರ ಹಿಂದೆ ಅವರ ಶ್ರಮವಿದೆ ಮತ್ತು ಬೆಂಬಲವಿದೆ. ಮಣಿಪುರದ ನೋಟಕ್ಕೆ ಮತ್ತು ಅಲ್ಲಿನ ಪರಿಸರದ ಪ್ರವಾಸಿ ಕೋನದಲ್ಲಿ ಹೊಸ ಹುಡುಕಾಟದ ಪ್ರಯತ್ನ ಮಾಡಿದ ಖುಶಿಯಂತೂ ನನಗಿದೆ. ಸಾಮಾನ್ಯ ಪ್ರವಾಸಿ ಲೇಖನದಲ್ಲಿ ಆಗುವಂತೆ ತುಂಬ ಚೆಂದಗೆ ಇದ್ದುದಕ್ಕಿಂತಲೂ ಅದ್ಭುತ ಎನ್ನುವ ರೀತಿಯಲ್ಲಿ ವರ್ಣಿಸಲು ಹೋಗಿಲ್ಲ. ಓದಿದವನೊಬ್ಬ ಹೋಗಿಯೇಬಿಡಬೇಕು ಎನ್ನುವ ಅವಸರಕ್ಕೆ ಬಿದ್ದು ಅಲ್ಲಿ ಹೋಗಿ ಬೈದುಕೊಳ್ಳುವಂತಾಗಬಾರದು ಎನ್ನುವ ದೃಷ್ಟಿಯಿಂದಲೂ, ಭವಿಷ್ಯತ್ತಿನಲ್ಲಿ ಇಂಥಾ ಕಾರಣದಿಂದ ಪ್ರವಾಸವನ್ನೇ ಕೈಬಿಡದಂತಾಗಲಿ ಎಂದು ಇದ್ದುದನ್ನು ಇದ್ದಂತೆ ಬರೆದಿದ್ದೇನೆ. ಇನ್ನು ಪ್ರತಿ ಪ್ರವಾಸವೂ ಅವರವರ ಭಾವಕ್ಕೆ, ಅನುಭವಿಸುವ ಉಮೇದಿಗೆ ಬಿಟ್ಟಿದ್ದು. ಹೊರತಾಗಿ ಪ್ರವಾಸಿ ಲೇಖನವೊಂದು ಹೀಗೆ ಇರಬೇಕು x ಅಥವಾ ಪ್ರವಾಸಿ ಸ್ಥಳದ ಬಗ್ಗೆ ತುಂಬಾ ಚೆಂದವಾಗೇ ಬರೆಯಬೇಕೆಂದೇನೂ ಇಲ್ಲ. ಇನ್ನು ಯಾರನ್ನೋ ಮೆಚ್ಚಿಸಲು ಬರೆಯುವುದು ನನ್ನಿಂದ ಸಾಧ್ಯವೂ ಇಲ್ಲ. ಹಾಗಾಗಿ ಇಲ್ಲಿ ಇನ್ನುಳಿದದ್ದೇಲ್ಲಾ ಓದುಗರಿಗೆ ಸೇರಿದ್ದು. ವಿಷಯದ ಅರಿವಾದಲ್ಲಿ ಅಷ್ಟರಮಟ್ಟಿಗೆ ಇದು ಸಾರ್ಥಕ. 20, ಏಪ್ರಿಲ್ 2015. ಸಂತೋಷ ಕುಮಾರ ಮೆಹೆಂದಳೆ ನಂ.ಡಿ-29. ಕೈಗಾ ವಸತಿ ಸಂಕೀರ್ಣ ಕೈಗಾ ಅಂಚೆ. ಉ.ಕ.ಜಿಲ್ಲೆ. 581400 ಪರಿವಿಡಿ ಅಧ್ಯಕ್ಷರ ನುಡಿ iii ಮಣಿಪುರ ಎಂಬ ಮಾನಿನಿಯರ ನಾಡಿಗೂ ಮುನ್ನ vii 1. ಪ್ರಮೀಳೆಯರ ನಾಡಿನಲ್ಲಿ 1-8 2. ಮಣಿಪುರಿ ಸಂಸ್ಕೃತಿ , ಹಬ್ಬಗಳು ಮತ್ತು ಕಲೆ1 9-23 3. ಕಣಿವೆ ಮತ್ತು ಪರ್ವತಗಳ ರಾಜ್ಯ 24-212 4. ಮಣಿಪುರ ಪ್ರವಾಸ 213-223 5. ಶರ್ಮಿಳಾ ಜಾಮ 224-231 6. ಅನುಬಂಧ-1 232-235 7 ಆಕರ ಗ್ರಂಥಗಳು 236 ಪ್ರಮೀಳೆಯರ ನಾಡಿನಲ್ಲಿ..! ಒಳಗಿನ ತಣ್ಣಗಿನ ಕೃತ್ರಿಮ ಹವೆಗಿಂತ ಹೊರಗಿನ ಹಿತವಾದ ಬಿಸಿ ಹವೆ ತುಂಬಾ ಚೆಂದ ಎನ್ನಿಸಿತು. ಬಾಗಿಲು ತೆರೆದು ಹೊರ ಬಂದು, ರಕ್ಷಣಾ ದಳದವರ ಕೈಯಿಂದ ಮುಕ್ತನಾಗುತ್ತಿದ್ದಂತೆ ಕೊಂಚ ಉಪ್ಪಿನ ಸೊಗಡು ಮಿಶ್ರಿತ ಮಸಾಲೆಯ ವಾಸನೆಯನ್ನು ಹೀರುತ್ತಾ ದೀರ್ಘವಾಗಿ ಉಸಿರೆಳೆದುಕೊಂಡೇ ಆಚೀಚೆ ಮೈಗೆ ಮುತ್ತುತ್ತಿದ್ದ ಟ್ಯಾಕ್ಸಿಗಳನ್ನು ದೂಡಿಕೊಂಡೆ ನನ್ನ ಹಿಂದೆ ಕಿರೀಟದಂತೆ ಆವರಿಸಿದ್ದ ಎತ್ತರದ ರ್ಯಾಕ್‍ಸ್ಯಾಕ್‍ನ್ನು ಇನ್ನಷ್ಟು ಮೇಲಕ್ಕೇರಿಸುತ್ತಾ ಹೊರಭಾಗದತ್ತ ಕಾಲು ಹರಿಸಿದೆ. ರಾಜ್ಯದ ಯಾವುದೇ ರಾಜಧಾನಿಗೆ ಹೋಲಿಸಿದರೆ ಚಿಕ್ಕದೇ ಎನ್ನಿಸುವಷ್ಟು ಅಂಗೈಯಗಲದ ಏರ್‌ಪೋರ್ಟ್ ಇಲ್ಲಿದೆ. ಅನಾಮತ್ತಾಗಿ ಲಗೇಜುಗಳ ಜೊತೆಗೆ ಎರಡೇ ನಿಮಿಷದಲ್ಲಿ ಮುಖ್ಯ ರಸ್ತೆ ತಲುಪಿ, ಸಾರ್ವಜನಿಕ ಸಾರಿಗೆ (?) ಬಳಸಿಕೊಳ್ಳಬಹುದು. ಹಾಗೆಂದರೆ ಯಾವುದೇ ಸರಕಾರಿ ಅಥವಾ ಸಾಗಾಣಿಕೆ ವಾಹನ ಅಲ್ಲ. ನಿಮ್ಮನ್ನು ಜನಸಾಮಾನ್ಯರೊಂದಿಗೆ ಕೂಡಿಸಿ ಕೇವಲ ಹತ್ತೇ ರೂಪಾಯಿಯಲ್ಲಿ ನಗರಕ್ಕೆ ಕರೆತರುವ, ಕೈತೋರಿದಲ್ಲಿ ನಿಲ್ಲುವ ಖಾಸಗಿ ಸಾರಿಗೆ ವ್ಯವಸ್ಥೆ ಇಲ್ಲಿದೆ. ಅತ್ತ ಏನು ಮಾಡುವುದೆಂದು ತಿರುಗುವುದರೊಳಗಾಗಿ ಆ ಕೂಗಿಗೆ ಸ್ಪಂದಿಸಿದ್ದೆ. "ಓಯ್.. ಬಾಬು .." ಎಂದ ಹೆಂಗಸಿನ ಕರೆಗೆ ಅದು ನನಗಾ ಇನ್ಯಾರಿಗಾದರೋ ಎನ್ನುತ್ತಾ ಅತ್ತಿತ್ತೊಮ್ಮೆ ನೋಡಿದೆ. ಅದು ನನ್ನನ್ನೆ ಕರೆದುದಾಗಿತ್ತು. ಅಷ್ಟು ದೂರದಲ್ಲಿ ಆಟೋ ರಿಕ್ಷಾವೊಂದನ್ನು ನಿಲ್ಲಿಸಿಕೊಂಡು ನಿಂತಿದ್ದ ಹೆಂಗಸೊಬ್ಬಳು (ಅಹಾ..ಕೊಂಚ ಹೆಚ್ಚೇ ಸುಂದರಿ ಎನ್ನಬಹುದು) ಯಾವ ಮುಲಾಜು ಇಲ್ಲದೆ ನನ್ನನ್ನು ಕರೆದು ಚೌಕಾಸಿಗೆ ಇಳಿಸಿದ್ದಳು. ಅದು ಚೌಕಾಸಿ ಎನ್ನುವುದಕ್ಕಿಂತಲೂ ಸೂಕ್ತ ಮತ್ತು ವ್ಯವಸ್ಥಿತ ವ್ಯವಸ್ಥೆಯೊಂದು ನನಗೆ ಲಭ್ಯವಾಗುವ ಸೂಚನೆಯಾಗಿತ್ತು. ಆಕೆಯ ಹೆಸರು.. ಗೊಬ್ಸಿ.. ಅಭ್ಯಾಯಂ ಗೋಬ್ಸಿ.. (ಅಪ್ಪಟ ಮಿಥೀಸ್ ಶೈಲಿಯ ಅಂದರೆ ಮಣಿಪುರಿ ಹೆಸರು). ಮರುಮಾತಾಡದೆ ಆಕೆಯನ್ನು ಹಿಂಬಾಲಿಸಿದ್ದೆ. ತುಂಬಾ ಚೆಂದದ ಬಣ್ಣ, ಮೈತುಂಬಾ ಧರಿಸಿದ್ದ ಬಟ್ಟೆ, ಮೂಗಿನ ಪ್ರಮೀಳೆಯರ ನಾಡಿನಲ್ಲಿ 2 ಮೇಲೆ ಅದಕ್ಕಿಂತಲೂ ಉದ್ದದ ಚಂದನದ ನಾಮ, ಕಿವಿಗೆ ಸ್ಪಷ್ಟ ಆಭರಣ, ಹಣೆ ಮಧ್ಯೆ ಉರಿಯುವ ಕೆಂಪು.. ತುಂಬಾ ಚೆಂದನೆಯ ಪ್ರಮೀಳೆಯರ ರಾಜ್ಯದ ಸ್ತ್ರೀಯರು ಮೊದಲ ನೋಟಕ್ಕೆ ಆಕರ್ಷಿಸುತ್ತಾರೆ. ಕಾರಣ ಅವರ ಬಣ್ಣದಂತೆ ಉಡುಗೆ ತೊಡುಗೆಯೂ ಇಲ್ಲಿ ಗಾಢ ರಕ್ತ ವರ್ಣದ್ದೇ. ಅಲ್ಲಿಗೆ ಪ್ರಮೀಳೆಯರ ರಾಜ್ಯದಲ್ಲಿ ನನ್ನ ಮೊದಲ ಪಯಣ ವಿಮಾನ ಇಳಿಯುತ್ತಿದ್ದಂತೆ ಆರಂಭವಾಗಿದ್ದು ಪ್ರಮೀಳೆಯೊಬ್ಬಳ ಆಟೋದಲ್ಲಿ. ಆದರೆ ಆ ಕ್ಷಣಕ್ಕೆ ನನಗೆ ಗೊತ್ತಾಗಿರಲಿಲ್ಲ ಮುಂದಿನ ನನ್ನೆಲ್ಲ ಹದಿನೆಂಟು ದಿನಗಳು ಈ ರಾಜ್ಯದಲ್ಲಿ ಮಹಿಳೆಯರ ಸುತ್ತಲೇ ಸುತ್ತಲಿದೆ ಎಂದೂ, ಇಲ್ಲಿ ಸರ್ವ ಸರ್ವೀಸಿಗೂ ಸ್ತ್ರೀಯರೆ ಮುಂದಾಗುತ್ತಾರೆಂದು. ಕಾರಣ ಇಂಫಾಲ ಎಂಬ ಹೆಸರಿನ ಚಿಕ್ಕ, ಒಂದು ಉಸುರಿಗೆ ಓಡಿ ಪೂರೈಸಬಹುದಾದ ಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದ ರಾಜ್ಯ ಮಣಿಪುರ ಸಂಪೂರ್ಣ ಮಹಿಳೆಯರ ಹಿಡಿತದಲ್ಲಿದೆ. ಆದರೆ ರಾಜಕೀಯವಾಗಲ್ಲ, ಸಾಮಾಜಿಕವಾಗಿ ಮಾತ್ರ. ವಾಯುನೆಲೆಯಿಂದ ಹೊರಟ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ಇದು ನಮ್ಮ ಅನುಭವಕ್ಕೆ ಬರುತ್ತಲೇ ಹೋಗುತ್ತದೆ. ಕಂಡ ಕಡೆಯಲ್ಲೆಲ್ಲ ರಸ್ತೆ ಅಕ್ಕಪಕ್ಕದ ಇಂತಹದ್ದೇ ಅಂತಿಲ್ಲ, ಎಲ್ಲಾ ವ್ಯವಹಾರದಲ್ಲೂ ಮಹಿಳೆಯರ ಪಾಲು ಹೆಚ್ಚಿದೆ. ಕುಚೋದ್ಯ ಎನ್ನುವಂತೆ ಒಂದೇ ಉಸಿರಿಗೆ ನಾಗಾಲೋಟದಲ್ಲಿ ಓಡಿ ಮುಗಿಸುವ ಈ ರಾಜಧಾನಿಯನ್ನು ಎರಡು ಜಿಲ್ಲಾ ಕೇಂದ್ರಗಳಾಗಿ ವಿಭಜಿಸಲಾದ ಔಚಿತ್ಯ ಮಾತ್ರ ಅಪ್ಪಟ ರಾಜಕೀಯವಲ್ಲದೇ ಬೇರೇನಲ್ಲ. ಈಚೆ ರಸ್ತೆಗೆ ಹೋದರೆ ಪೂರ್ವ ಇಂಫಾಲ, ಆಚೆ ರಸ್ತೆಗೆ ಹೋದರೆ ಪಶ್ಚಿಮ ಇಂಫಾಲ. ಯಾವಾಗ ಯಾವ ಜಿಲ್ಲೆಯಲ್ಲಿದ್ದೇವೆ ಎಂದು ಗೊತ್ತಾಗದಂತಹ ಪರಿಸ್ಥಿತಿ. ಈ ಸಿಗ್ನಲ್ಲು ಪೂರ್ವ ಜಿಲ್ಲೆಯದ್ದಾದರೆ, ದಾಟುತ್ತಿದ್ದಂತೆ ಪಶ್ಚಿಮ ಜಿಲ್ಲೆಯ ಸರಹದ್ದಿಗೆ ಕಾಲಿಟ್ಟಿರುತ್ತೇವೆ. ಎಲ್ಲೆಂದರಲ್ಲಿ ಕಾಫಿ ಶಾಪ್‍ನಿಂದ ಹಿಡಿದು ಮಣಿಪುರದ ಅದ್ಭುತವಾದ ಸ್ಥಳೀಯ ಅಕ್ಕಿಯಿಂದ ತಯಾರಿಸುವ ವೈನ್ ಮಾರಾಟದವರೆಗೂ ಎಲ್ಲಾ ವಯಸ್ಸಿನ ಮಹಿಳೆಯರೇ ಇಲ್ಲಿ ಸೇವೆ ಮತ್ತು ದುಡಿಮೆ ಎರಡಕ್ಕೂ ಬದ್ಧರು. ಈ 3 ಪ್ರಮೀಳೆಯರ ನಾಡಿನಲ್ಲಿ ಮಣಿಪುರಿ ವೈನ್‍ಗೆ ಹಲವು ರೀತಿಯ ಹೆಸರುಗಳಿದ್ದು ಆಗೀಗ ವಿದೇಶದಲ್ಲಿ ಕೂಡಾ ಇಲ್ಲಿನ ವೈನ್‍ನ್ನು ಮಹಿಳೆಯರೇ ನಿರ್ವಹಿಸುವುದರಿಂದ ಲೇಡೀಸ್ ವೈನ್ ಎಂದೂ ಗುರುತಿಸುವವರಿದ್ದಾರೆ ಹಾಗೆಯೇ ಪ್ರಸಿದ್ಧಿ ಕೂಡಾ. ಇರಲೂಬಹುದೇನೋ, ಕಾರಣ ಗೋವೆಯ ಇತ್ತ ಕಡೆಯ ತುತ್ತ ತುದಿಯಿಂದ, ಅತ್ತಕಡೆಯ ಕೊನೆವರೆಗೂ ಲಭ್ಯವಾಗದ ರುಚಿರುಚಿಯಾದ ತಣ್ಣಗಿನ ಕೆಂಪು, ಅರೆಗೆಂಪು, ಅಚ್ಚ ಬಿಳಿ, ಕಡು ಹಳದಿ, ನಸು ಹಳದಿ ಹೀಗೆ ಇದ್ದಷ್ಟು ದಿನವೂ ವಿವಿಧ ಮನೆಯ ದ್ರಾಕ್ಷಾರಸಗಳ ಅದ್ಭುತ ರುಚಿಗೆ ನಾನೇ ಸಾಕ್ಷಿ. ಅಷ್ಟೇಕೆ ನಮ್ಮ ಉತ್ತರ ಕರ್ನಾಟಕದ ಕಡೆಯಲ್ಲಿ ಸಂಜೆ ಹೊತ್ತು ಬೀಡಿ ಎಳೆಯುತ್ತ ಕೆಮ್ಮುತ್ತಾ ಕೂರುವ ಗೂರಲು ಮುದುಕರಂತೆ ಕೂತಿರುವವರಲ್ಲಿ ಹೆಚ್ಚಿನಂಶ ಮಹಿಳೆಯರೇ ಎನ್ನುವುದು ಅಚ್ಚರಿಗೆ ಕಾರಣವಾದರೂ ವಾಸ್ತವ. ಪೂರ್ತಿ ಕುಟುಂಬವೇ ತಂಬಾಕು, ಪಾನು, ಸಿಗರೇಟು ಮತ್ತು ಬೀಡಿಗಳ ಗುಂಪುಗಳು ಎನ್ನುವುದು ಇನ್ನೂ ಅಚ್ಚರಿ. ಅವರಿಂದಾಗೆ ಇಲ್ಲಿನ ಸಾಮಾಜಿಕ ವ್ಯವಸ್ಥೆ ಅದ್ಭುತ ಎನ್ನುವ ಹಂತದಲ್ಲಿದೆ ಎನ್ನುವುದೂ ಸುಳ್ಳಲ್ಲ. ಅಂಥಾ ಊರಿನಲ್ಲಿ ನಡು ಮಧ್ಯಾಹ್ನ ಇಳಿದವನಿಗೆ ತನ್ನ ಆಟೋದಲ್ಲಿ ಕರೆದೊಯ್ದು ಇಂಫಾಲದ ಎದೆಯ ತಿರುವಿನಲ್ಲೊಂದು ಚಿಕ್ಕ ಕೊಠಡಿಯ ಕಡಿಮೆ ಖರ್ಚಿನ ವಾಸದ ವ್ಯವಸ್ಥೆ ಮಾಡಿದವಳಿಗೆ ಥ್ಯಾಂಕ್ಸ್ ಎಂದೆ. ತಿರುಗಿ ನಿಂತು ಕೆನ್ನೆ ಹಿಂಡಿದ "ಅಮಾಯ್ ಗೊಬ್ಸಿ" ಅಮ್ಮನಿಗೂ ಥ್ಯಾಂಕ್ಸ್ ಹೇಳ್ತಿಯಾ ಎಂದಳು. ಹಿ.. ಹಿ.. ಎಂದು ಹಲ್ಕಿರಿಯುತ್ತಾ ನಡುಬಗ್ಗಿಸಿ ರ್ಯಾಕ್‍ಸ್ಯಾಕ್ ಏರಿಸಿದ್ದೆ. ಮೇಲ್ಮಹಡಿಯಲ್ಲಿದ್ದ ಕೋಣೆ ಸೇರಿ ಇರುಕು ಕಿಟಕಿಯ ಅಗಲ ಬಾಗಿಲು ತೆರೆದು ನಿಂತೆ. ಎದುರಿಗೆ ವಿಶಾಲವಾಗಿ ಬೆನ್ನು ಹರವಿಕೊಂಡು ಮಲಗಿತ್ತು ಇಂಫಾಲದ ನಡು. ಒಂದೇ ಸಮನೆ ಭರಭರನೆ ಚಲಿಸುವ ವಾಹನಗಳು.. ನಾಲ್ಕೂ ದಿಕ್ಕಿಗೂ ವಾಹನಗಳ ಪಾರ್ಕಿಂಗ್. ಮಧ್ಯದಲ್ಲಿ ಎಲ್ಲಾ ನಗರಗಳಂತೆ ಗಾಂಧಿ ಪ್ರತಿಮೆ. ಅದಕ್ಕೊಂದು ಚಿಕ್ಕ ನಿರ್ವಹಣೆಯೂ ಇಲ್ಲದ ಪುಟಾಣಿ ಪಾರ್ಕು. ಉಳಿದೆಡೆಯಲ್ಲೆಲ್ಲಾ ಕಣ್ಣು ಹರಿಸಿದ ಮೂಲೆ ಮೂಲೆಯಲ್ಲೂ ಅಸ್ಸಾಂ ರೈಫಲ್ಸ್‌, ಮಣಿಪುರಿ ಪೊಲೀಸ್ ಮತ್ತು ಇಂಡಿಯನ್ ಆರ್ಮಿ ಕಮ್ಯಾಂಡೊಗಳು ಜನರಿಗಿಂತ ಹೆಚ್ಚಾಗಿ ಅವರೇ ಆವರಿಸಿದ್ದಾರೆ ಎನ್ನುವಂತೆ ಸಂಪೂರ್ಣ ಇಂಫಾಲ ಪ್ರಮೀಳೆಯರ ನಾಡಿನಲ್ಲಿ 4 ನಗರವನ್ನು ಬಳಸಿ ನಿಂತಿದ್ದಾರೆ. ಅಷ್ಟೇಕೆ ಪೂರ್ತಿ ಮಣಿಪುರದ ಜನಜೀವನದ ರಕ್ಷಣೆ ಮತ್ತು ನೆರಳು ಎರಡೂ ಈ ಪಡೆಗಳ ಬಯೋನೆಟ್ ಕೆಳಗಿದೆ ಎಂದರೂ ತಪ್ಪಿಲ್ಲ. ಆದರೆ ಒಮ್ಮೆ ಹೊರಗಿನಿಂದ ಹೋದ ಪ್ರವಾಸಿಗರಿಗೆ ಇದನ್ನು ಅರಗಿಸಿಕೊಳ್ಳಲು ನಿಜಕ್ಕೂ ಗಂಟಲಲ್ಲಿ ಕಡುಬು ತುರುಕಿಟ್ಟ ಅನುಭವ. ಯಾರನ್ನೂ ನಂಬದ ಪಡೆಗಳು ಇದ್ದುದರಲ್ಲಿ ಪ್ರವಾಸಿಗರ ಜೊತೆಗೆ ಸೌಹಾರ್ದಯುತವಾಗಿವೆ. ಅದನ್ನು ಬಳಸಿ ಮೂರು ಕಡೆಯಿಂದ ಪೂರ್ತಿ ಅರ್ಧ ಮಣಿಪುರಕ್ಕೆ ನೀರು ಉಣಿಸುತ್ತಿರುವ ಜೀವನದಿ ನಂಬುಲಾ.. ಅದೇ ನಂಬುಲಾ ರೀವರ್. .. ಇದು ಒಂದು ಜಿಲ್ಲೆಯಲ್ಲಿ ಹರಿದರೆ ಅದರ ಪಕ್ಕದಲ್ಲೇ ಕತ್ತು ಹೊರಳಿಸಿದರೆ ಹರಿಯುವ ಜೀವನದಿ ಇಂಫಾಲ. ಮಣಿಪುರಿಗಳ ಜೀವ ನದಿ. ಈ ಜೀವನದಿಗೆ ಸ್ಪರ್ಧೆಗೆ ಬಿದ್ದವರಂತೆ ಸಮಾನಾಂತರವಾಗಿ ಇನ್ನೂ ಎರಡ್ಮೂರು ನದಿಗಳು ಈ ನಗರವನ್ನು ಬಳಸಿ ಹಿಡಿದಿರುವುದರಿಂದ ಕೆಲವೊಮ್ಮೆ ಇಂಫಾಲವನ್ನು ಸುತ್ತುವಾಗ ನಡುಗಡ್ಡೆಯಲ್ಲಿದ್ದೀವಾ ಎನ್ನಿಸುವುದೂ ಸುಳ್ಳಲ್ಲ. ಕಾರಣ ಸರಿಯಾಗಿ ಎಡಗಡೆಗೆ ಕಾಂಗ್ರಾ ಅದರ ಪಕ್ಕದಲ್ಲೇ.. ಟ್ರೈಲ್ ನದಿ ಹರಿಯುತ್ತಿದ್ದರೆ ಮನೆಯಲ್ಲಿ ದೇವ್ರು ಎನ್ನುವಂತೆ ಈ ಮಧ್ಯದಲ್ಲೇ ಬಳಸಿ ಹರಿಯುವ ನದಿ ಇಂಫಾಲ. ಇದಕ್ಕೆ ಮಣಿಪುರಿ ನದಿ ಎನ್ನುವ ಹೆಸರೂ ಇದೆ. ಹೀಗಾಗಿ ಮೂರ್‌ನಾಲ್ಕು ಕಡೆಯಲ್ಲಿ ನದಿಗಳು ಹರಿಯುತ್ತಿರುವುದರಿಂದ ಹಸಿರು ಸಮೃದ್ಧಿ ಮತ್ತು ನೀರಿನ ವಿಶೇಷ ಬರ ಕಾಣಿಸದಿದ್ದರೂ ಸ್ವಚ್ಛತೆಗೆ ಇಲ್ಲೂ ಬರ ಬಂದಿರುವುದು ಸುಳ್ಳಲ್ಲ. ಯಾವುದೇ ನದಿಗಳೂ ಇಲ್ಲಿ ನದಿ ರೀತಿಯಲ್ಲಿ ಕಾಣಬೇಕಿದ್ದರೆ ಬಹುಶ: ಅದು ಮಳೆಗಾಲದಲ್ಲಿ ಮಾತ್ರ ಸಾಧ್ಯ. ಉಳಿದಂತೆ ಮಳೆಗಾಲದ ನೀರು ಇಳಿಕೆಯಾಗುತ್ತಿದ್ದಂತೆ ಇವೆಲ್ಲಾ ದೊಡ್ಡ ಪ್ರಮಾಣದ ಮೋರಿಯಾಗಿ ಬದಲಾಗುತ್ತವೆ. ಮತ್ತೂ ಒಂದು ತಿಂಗಳು ಕಳೆಯುವ ಹೊತ್ತಿಗೆ ಅಲ್ಲಿ ಕೊಚ್ಚೆ ಮಡುಗಟ್ಟುತ್ತದೆ. ಆಮೇಲಿನದ್ದು ವಿವರಿಸುವ ಅಗತ್ಯವಿಲ್ಲ. ಪೂರ್ತಿ ವರ್ಷವಿಡಿ ಕೊಳೆ ಸಂಗ್ರಹಕಾರವಾಗಿ ಬದಲಾಗುತ್ತದೆ. ಪೂರ್ತಿ ಇಂಫಾಲಕ್ಕೆ ಘಮ್ಮೆನ್ನುವ 5 ಪ್ರಮೀಳೆಯರ ನಾಡಿನಲ್ಲಿ ವಾಸನೆ ಹರಡುತ್ತಾ ನಿಲ್ಲುತ್ತವೆ. ಪ್ರವಾಸಿಗರಿಗೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುವ ಅನಿವಾರ್ಯ ಕರ್ಮ ಎದುರಾಗುತ್ತದೆ. ಆದರೂ ಅದರ ಪಕ್ಕದಲ್ಲೇ ನಿಮ್ಮ ಊಹೆಗೂ ದಕ್ಕದ ಜನಜೀವನ ಬೆಳೆದು ನಿಲ್ಲುತ್ತಲೇ ಇರುತ್ತದೆ. ಕಾರಣ ಕಾಲ ಕಾಯುವುದಿಲ್ಲ ಮತ್ತು ಜನರು ಅದಕ್ಕೂ ಮೊದಲೇ ಇದ್ದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ ಎನ್ನುವುದಕ್ಕೆ ಮಿಥೀಸ್‍ಗಳ ಜೀವನ ಅಪ್ಪಟ ಉದಾಹರಣೆ. ಕಾರಣ ಟ್ರೈಲ್ ಮತ್ತು ಕಾಂಗ್ರಾಗಳ ಕೆಲ ಭಾಗದಲ್ಲಿ ನೀರಿಗಿಂತ ಕೊಚ್ಚೆ ಹೆಚ್ಚಾಗಿದ್ದುದು ಕಾಣಿಸುತ್ತಿತ್ತು. ಆದರೂ ನೀರಿನ ಹರಿವಿಗೆ ಅಗಾಧ ಕೊಡುಗೆಯನ್ನು ಈ ನದಿಗಳು ಜಿದ್ದಿಗೆ ಬಿದ್ದಂತೆ ಪೂರೈಸುತ್ತಿವೆ ಎನ್ನುವುದು ಸುಳ್ಳಲ್ಲ. ಕಾರಣ ಇಲ್ಲಿನ ಪ್ರಮುಖ ಆಹಾರವಾಗಿರುವ ಮೀನಿನ ಕೃಷಿಗೆ ಹ್ಯಾಚರಿ ಪದ್ಧತಿಗೆ ಮನೆಯ ಪಕ್ಕದಲ್ಲಿ ಇದ್ದ ಹತ್ತು ಬೈ ಹತ್ತು ಅಡಿಯ ಹೊಂಡಗಳು ಇಲ್ಲಿನ ಪ್ರಮುಖ ಕೊಚ್ಚೆಯ ರೂವಾರಿಗಳು ಎಂದರೂ ತಪ್ಪಿಲ್ಲ. ಕಾರಣ ಎಲ್ಲೆಂದರಲ್ಲಿ ಹೀಗೆ ಮೀನಿನ ಕೃಷಿಗೆ ಜಾಗದಲ್ಲಿ ರಾಡಿ ಎಬ್ಬಿಸಿ ಕೂತಿರುವ ಮಣಿಪುರಿಗಳು ಅದಕ್ಕಾಗಿ ನೀರು ಬದಲಿಸುವ, ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಇಂಫಾಲ ಮಣಿಪುರದ ಹೃದಯ ಭಾಗದಲ್ಲಿದ್ದು ಸುತ್ತಲೂ ಇದ್ದ ಬದ್ದ ಜಿಲ್ಲೆಗಳನ್ನು ಅಗತ್ಯ ಮತ್ತು ಆರ್ಥಿಕ ಸ್ಥಿತಿಗತಿಗಿಂತ ಜಾತಿ ಮತ್ತು ಬುಡಕಟ್ಟುಗಳ ಹಾಗು ಪರ್ವತ ಮತ್ತು ಕಣಿವೆಯ ಭೂ ಪರಿಸರಕ್ಕನುಗುಣುವಾಗಿ ವಿಂಗಡಿಸಲಾಗಿದೆ ಎಂದರೂ ತಪ್ಪಿಲ್ಲ. ಆದರೂ ಎಲ್ಲಾ ಜಿಲ್ಲೆಗಳಿಗಿಂತಲೂ ಈಗಲೂ ಸಬ್ ಡಿವಿಶನಲ್ ಅಧಿಕಾರ ವ್ಯಾಪ್ತಿಯೇ ದೊಡ್ಡದು. ಇಂತಹ ಡಿವಿಜಿನಲ್ಲುಗಳೇ ಇತ್ತೀಚಿನ ಒಂದೆರಡು ದಶಕಗಳಲ್ಲಿ ಜಿಲ್ಲೆಗಳಾಗಿ ಬದಲಾದವು. ಹಾಗೆ ಬದಲಾಗುವಾಗ ಯಾವ ಮಾನದಂಡವೂ ಇಲ್ಲದಿದ್ದುದರಿಂದಲೇ ಎರಡೇ ಕಿ.ಮೀ. ಗೂ ಒಂದೊಂದು ಜಿಲ್ಲೆ. ಜಿಲ್ಲೆಯ ಇನ್ನೊಂದು ತುಂಡು ಆಚೆ ಜಿಲ್ಲೆಯ ಇನ್ನೊಂದು ಬದಿಗೂ ಹಂಚಿಕೊಂಡ ಅದ್ಭುತ ವೈಪರೀತ್ಯಗಳು ನಮ್ಮ ಕಣ್ಣಿಗೆ ರಾಚುತ್ತವೆ. ಕಿಟಕಿಯ ಸಣ್ಣ ಸಣ್ಣ ಸರಳುಗಳ ನಡುವೆಯಿಂದ ಇನ್ನೊಮ್ಮೆ "ನಂಬುಲಾ" ನೋಡುತ್ತಾ ಕೈಗೆ ಕ್ಯಾಮೆರಾ ಬ್ಯಾಗೆತ್ತಿಕೊಂಡು ರಾತ್ರಿಯಾಗುವ ಮೊದಲೇ ರಸ್ತೆಗಿಳಿದಿದ್ದೆ. ಪ್ರಮೀಳೆಯರ ನಾಡಿನಲ್ಲಿ 6 ಕಾರಣ ಪ್ರತಿ ಸಂಜೆಗಳು ಆಯಾ ಊರಿನ ಹೊಸ ಹೊಸ ಪರಿಚಯ ಮಾಡಿಕೊಡುತ್ತವೆ. ಸಂಜೆಗಳು ಪ್ರತಿ ಬಾರಿಯೂ ಹೊಸ ಆಯಾಮವನ್ನು ಪಡೆಯುತ್ತವೆ. ಒಂದು ಹೊಸ ಜಾಗಕ್ಕೆ ಹೋಗುವಾಗ ಅಲ್ಲಿನ ಇತಿಹಾಸವನ್ನು ಓದಿಕೊಳ್ಳುವುದು ಹೇಗೆ ಅಗತ್ಯವೋ, ಇತಿಹಾಸದ ಪರಿಚಯ ಮೊದಲೇ ಗೊತ್ತಿದ್ದರೆ ಒಳ್ಳೆಯದು ಎನ್ನುವುದು ಹೇಗೆ ಸತ್ಯವೋ ಹಾಗೆ ಪ್ರತಿ ಊರಿನ ನಿಜ ಮುಖಗಳು ಅನಾವರಣಗೊಳ್ಳುವುದು ಸಂಜೆಯ ಮಬ್ಬುಗತ್ತಲಲ್ಲೆ. ಅದರ ಅಂದ ಚೆಂದ ವೈಯ್ಯಾರ.. ನಗರದ ಬುದ್ಧಿವಂತಿಕೆ, ನಿಧಾನಗತಿಯಲ್ಲಿ ಗೊತ್ತೆ ಆಗದಂತೆ ಹೊತ್ತು ತೆವಳುವಿಕೆ.. ಅರಿವೇ ಆಗದ ಗಮ್ಮತ್ತು.. ಗೊತ್ತಾಗಿಯೂ ಕೈಗೆಟುಕದ ನಗರ ವಿನ್ಯಾಸದ ಚಿತ್ರಣ.. ಎಲ್ಲ ನೋಡಿದ ನಂತರವೂ ಎಲ್ಲಾ ತಿಳಿದೂ ಕೈಗೆ ಸಿಗದ ಹೆಣ್ಣಿನಂತೆ ಸಂಜೆಯ ಹೊತ್ತಿನ ನಗರ ಸ್ಥಿತಿಗತಿಗಳು ಅರಿವಿಗೆ ಬರುವುದು ಅರೆ ತಿಳಿಗತ್ತಲಲ್ಲಿ ರಸ್ತೆಗಳಿಗೆ ಕಾಲಿಟ್ಟಾಗಲೇ. ಹಾಗಾಗಿ ಕತ್ತಲಡರುವ ಮುಂಚೆ ರಸ್ತೆಗಿಳಿದಿದ್ದೆ. ಆದರೆ ಇಲ್ಲಿ ಕತ್ತಲು ಎನ್ನುವುದಕ್ಕಿಂತಲೂ ಸಂಜೆಯ ನಾಲ್ಕೂವರೆಗೆ ಮಬ್ಬು ಅಡರಿ ಐದು ಗಂಟೆಗೆಲ್ಲಾ ಅಗಾಧ ರಾತ್ರಿ ನೀರವತೆಯೂ ಕತ್ತಲೂ ಆವರಿಸಿಕೊಂಡು ಜನ ಜೀವನ ಸ್ತಬ್ಧವಾಗುವ ಮೊದಲ ಹಂತದಲ್ಲಿರುತ್ತದೆ. ಅದರಲ್ಲೂ ನನ್ನಂತಹ ಅಲೆಮಾರಿ ಕೈಗೆ ಕ್ಯಾಮೆರಾ, ಮೂಗಿಗೆ ಕವರು, ಕಿವಿಗೆ ಚಳಿ ಅಡರದಂತಿರಲು ಕ್ಯಾಪು ಎಂದೆಲ್ಲಾ ಹಾಕಿಕೊಂಡು ರಸ್ತೆಗಿಳಿದರೆ ಮೊದಲ ದೃಷ್ಟಿಗೆ ಸಿಗುವ ಮಿಕಗಳೇ ನಾವು. ಆದದ್ದೂ ಹಾಗೇನೆ. ಎಲ್ಲಿಯೇ ಹೋಗಿ ಅಲ್ಲಿನ ಪರಿಚಯ ಆರಂಭವಾಗುವುದೇ ಸ್ಥಳೀಯ ಚಹದ ಪುಟ್ಟ ಪುಟ್ಟ ಅಂಗಡಿಗಳಿಂದ ಎನ್ನುವುದನ್ನು ಅರಿತಿದ್ದರೆ ಒಳ್ಳೆಯದೇ. ಈ ಪುಟ್ಟ ಜಾಗಗಳು ಕಟ್ಟಿಕೊಡುವ ಮತ್ತು ನಗರದ ವಿವರವನ್ನು ಅನಾವರಣಗೊಳಿಸುವ ಪರಿ ಅನೂಹ್ಯವಾದುದು ಮತ್ತು ಅಲೆಮಾರಿಯೊಬ್ಬನಿಗೆ ಇದಕ್ಕಿಂತಲೂ ಮಿಗಿಲಾದ ಜಾಗವಿನ್ನೊಂದು ಇರಲಾರದು. ದುರದೃಷ್ಟ ಎಂದರೆ ಇಂಫಾಲದಲ್ಲಿ ಹಾಗೆ ಅಲ್ಲೊಂದು ಇಲ್ಲೊಂದು ಚಹದಂಗಡಿಗಳು ಕಣ್ಣಿಗೆ ಬೀಳುತ್ತವಾದರೂ ಅದು ನಾವು ಊಹಿಸಿಕೊಂಡಂತಿಲ್ಲ ಮತ್ತು ಅಲ್ಲಿ ನನಗ್ಯಾವ ಮಾಹಿತಿಯೂ ದಕ್ಕುವುದಿಲ್ಲ ಎನ್ನುವುದು 7 ಪ್ರಮೀಳೆಯರ ನಾಡಿನಲ್ಲಿ ಕಾಲಿಡುತ್ತಿದ್ದಂತೆ ಅರಿವಾಗಿತ್ತು. ಕಾರಣ, ಇಲ್ಲಿ ಹಿಂದಿ ಅಥವಾ ಇಂಗ್ಲೀಷು ಅಪೂಟು ತ್ಯಾಜ್ಯದಂತೆ ನಿರ್ವಹಿಸಲ್ಪಡುತ್ತಿವೆ. ಆದರೂ ಸಂವಹನಕ್ಕೆ ಮಾತ್ರ ಸಾಧ್ಯ. ಅದರಾಚೆಗೆ ಮಣಿಪುರಿಗಳ "ಮಿಥೇಲೇಯಿನ್" ಕಿವಿಗೆ ಕಣ್ಣಿಗೆ ರಾಚುತ್ತದೆ ಎಲ್ಲೆಂದರಲ್ಲಿ ಕಾಣಿಸುವ ಸುಂದರ ಮಣಿಪುರಿ ಪ್ರಮೀಳೆಯರಂತೆ. ರಸ್ತೆಯಲ್ಲಿ ಇಳಿದು ಎದುರಿಗಿದ್ದ ಚೌಕ ಹಾಯ್ದು ಕಣ್ಣಳತೆಯಲ್ಲಿ ದೂರವನ್ನು ಅಂದಾಜಿಸುತ್ತಾ ಸಾಗಿದರೆ ಇಂಫಾಲದ ತಣ್ಣನೆಯ ಒಗರು ಮಿಶ್ರಿತ ಮೀನು ವಾಸನೆಯ ಜೊತೆಗೆ ಸ್ಥಳೀಯ ಮದ್ಯದ ಕಹಿ ದ್ರವದ ಘಾಟು ಮೂಗಿಗಡರಿತ್ತು. ಮೊದಲ ಹದಿನೈದು ನಿಮಿಷದಲ್ಲೇ ಶುದ್ಧ ಗಾಳಿಗಾಗಿ ನನ್ನ ಪುಪ್ಪುಸ ಚಡಪಡಿಸಿದ್ದು ಸ್ಪಷ್ಟ. ಅಲ್ಲಲ್ಲಿ ನಿಂತು ನಿಂತು ನಿರುಕಿಸುತ್ತಾ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಟ್ಟರೆ ಮೊದಲ ಬಾರಿಗೆ ಈ ಮಣಿಪುರವನ್ನು "ಭಾರತದ ಆಭರಣ" ಎಂದು ಬಣ್ಣಿಸಿದವರ ಮೇಲೆ ಅನುಮಾನ ಬಂದಿತ್ತು. ಆತ ಇದನ್ನು ಕೂತಲ್ಲಿಂದ ಊಹಿಸಿ ಹೇಳಿದ್ದನಾ ಅಥವಾ ಯಾರಾದರೂ ಆ ಮಹಾಶಯನನ್ನು ತಪ್ಪು ದಾರಿಗೆಳೆದಿದ್ದರಾ ಗೊತ್ತಿಲ್ಲ. ಖಂಡಿತಕ್ಕೂ ಬರುವ ದಿನಗಳು ನನ್ನ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸಲಿದ್ದವು. ಕಾರಣ ರಾಜಧಾನಿಯಿಂದಲೇ ಸ್ವಚ್ಛತೆಯ ಪಾಠ ಆರಂಭವಾಗಬೇಕಿದೆ ಇಲ್ಲಿ. ಶುದ್ಧತೆ ಮತ್ತು ಶಿಸ್ತು ಎನ್ನುವ ಪದಗಳಿಗೆ ಮಣಿಪುರಿಗಳು ಬದ್ಧ ವೈರಿಗಳು ಎನ್ನುವುದು ಹೆಜ್ಜೆ ಹೆಜ್ಜೆಗೂ ಸಾಬೀತಾಗುತ್ತಲೇ ಇತ್ತು. ನಾನು ಮಣಿಪುರದ ರಾಜಧಾನಿಯ ಬೀದಿಯಲ್ಲಿ ಅದೇ ಶುದ್ಧ ಕಬೋಝಿಯಂತೆ ಇನ್ನು ಹದಿನೈದು ದಿನ ಪ್ರತಿ ಜಿಲ್ಲೆಯ ಸಂದುಗಳನ್ನು ಹೀಗೆಯೆ ಅಲೆಯುವುದಕ್ಕಾಗಿ ಸಿದ್ಧವಾಗಿದ್ದೆ. ಜೊತೆಗೆ ಇದ್ದುದು ಕೇವಲ ಶುದ್ಧ ಬರಹಗಾರನೊಬ್ಬನ ಚಡಪಡಿಕೆ ಮತ್ತು ಕುತೂಹಲ ಅಷ್ಟೇ. ಹಾಗಾಗೇ ಶುದ್ಧ ಅಪರಿಚಿತ ನಗರದಲ್ಲಿ ರಾತ್ರಿ ಏಳಕ್ಕೆಲ್ಲಾ ಮಧ್ಯರಾತ್ರಿಯ ಗತ್ತನ್ನು ಪಡೆಯುವ ನಗರದ ಮಧ್ಯೆ ತೀರ ನಿರ್ಮಾನುಷ ಬೀದಿಗಳಲ್ಲಿ ಕೇವಲ ಕಿವಿಗಪ್ಪಳಿಸುವುದು ಮಿಲಿಟರಿ ಬೂಟುಗಳ ಶಬ್ದದ ಜೊತೆಗೆ ವಿಶಿಲ್‍ಗಳ ಧ್ವನಿಯಲ್ಲದೇ ಇನ್ನೇನಲ್ಲ. ಕಾರಣ ಇಲ್ಲಿ ಟಿ.ವಿ.ಯೂ ಸಿನೇಮಾ ಮಂದಿರಗಳೂ ಕೂಡಾ ಅಷ್ಟಾಗಿ ಇಲ್ಲ. ಇದ್ದರೂ ಯಾವುದೇ ಹಿಂದಿ ಅಥವಾ ಇನ್ನಾವುದೇ ಭಾಷೆಯ ಚಿತ್ರಗಳಾಗಲಿ ಇನ್ನಾವುದೇ ಮನರಂಜನೆಯ ವಿಷಯವಾಗಲಿ ನಡೆಯುವುದೇ ಇಲ್ಲ. ಇಲ್ಲಿ ಕೇವಲ ಶುದ್ಧ ಮತ್ತು ಅಪ್ಪಟ ಮೀಥಿಲೇಯನ್ ಭಾಷೆ ರಾಜ್ಯವಾಳುತ್ತಿದೆ. ಅದನ್ನು ಬಿಟ್ಟರೆ ಒಳಭಾಗಗಳಲ್ಲಿ ಅವರವರದ್ದೇ ಸಂಪ್ರದಾಯದ ಭಾಷೆಗಳು ಕಾಲೂರಿ ನಿಂತಿವೆ. ಇದ್ದುದರಲ್ಲಿ ಇಂಫಾಲ ನಗರ ಪ್ರಮೀಳೆಯರ ನಾಡಿನಲ್ಲಿ 8 ಮತ್ರ ನಗರೀಕರಣಕ್ಕೆ ಈಡಾಗುತ್ತಿದ್ದರೆ ಉಳಿದ ಜಿಲ್ಲಾ ಕೇಂದ್ರಗಳೂ ಸಹಿತ ಇವತ್ತಿಗೂ ಇಟ್ಟಿಗೆ ಗೂಡು ಮತ್ತು ಕಲ್ಲಿದ್ದಲು ಸರಕು ಮಾರುವ ಅಪ್ಪಟ ಅಂಗಡಿಗಳು. (ಚುರ್ಚಾಂಡಪುರ ಜಿಲ್ಲೆ ಜೀವಂತ ಉದಾ.) ಅಷ್ಟರ ಮಟ್ಟಿಗೆ ಇತರ ಸ್ಥಳಗಳು ಇನ್ನೂ ಮುಖ್ಯವಾಹಿನಿಯಿಂದ ದೂರ ಇದ್ದರೂ ಮೊಬೈಲು ಮತ್ತು ಟಿ.ವಿ. ಜೊತೆಗೆ ಕೂಲ್ ಡ್ರಿಂಕ್ಸ್, ಕುರ್‍ಕುರೆ, ಲೇಸ್ ಹಾಗು ಕೋಕಾ ಕೋಲಾ ಯಾವ ಮೂಲೆಗೂ ತಲುಪಿರುವುದು ಬದುಕಿನ ಹಾಗು ನಮ್ಮ ಸಾಮಾಜಿಕ ವ್ಯವಸ್ಥೆಯ ಗಮನೀಯ ವಿಪರ್ಯಾಸ. ಕುಡಿಯುವ ನೀರಿನ ವ್ಯವಸ್ಥೆಯೇ ಇರದ ಜಾಗದಲ್ಲೂ ಧಾರಾಳವಾಗಿ ಈ ತಂಪು ಪಾನೀಯಗಳು ಬಿಕರಿಯಾಗುತ್ತವೆ. ಹಾಗಾಗೇ ಈ ನೆಲದಲ್ಲಿ ಹರಿದಾಡುವ ಮೊದಲು ಒಂದಿಷ್ಟು ಇಲ್ಲಿನ ಇತಿಹಾಸ ನಮ್ಮ ನೆನಪಿಗಿದ್ದರೆ ಮುಂದಿನ ತಿರುವುಗಳು ಹಾಗು ನಡೆಗಳು ಸುಲಭವಾಗುತ್ತವೆ ಇದು ನನ್ನ ಅನುಭವ ಕೂಡಾ. ಅದಕ್ಕೂ ಮೊದಲು ಒಂದಷ್ಟು ಮಣಿಪುರದ ಅದ್ಭುತ ಮತ್ತು ಚಿತ್ರವಿಚಿತ್ರ ಹೆಸರುಗಳ ಇತಿಹಾಸವನ್ನು ಒಮ್ಮೆ ತಿರುವಿ ಹಾಕಲೇಬೇಕು. ಕಾರಣ ಅನಾಮತ್ತಾಗಿ 108 ರಾಜರನ್ನು ಅವರ ಚಿತ್ರ ವಿಚಿತ್ರ ತಿಕ್ಕಲುತನಗಳನ್ನು, ಪ್ರತಿ ರಾಜನೂ ಒಂದೊಂದು ಆಟವನ್ನು, ಹಬ್ಬವನ್ನು ಪೋಷಿಸಿದ ಅದ್ಭುತ ವಿಚಿತ್ರ ಇತಿಹಾಸ ಇದರದ್ದು. ಇಂತಹವರನ್ನೆಲ್ಲಾ ಸಹಿಸಿಕೊಂಡು, ಹಲವು ಬಾರಿ ಮಣ್ಣು ಮಣ್ಣಾಗಿ, ಮತ್ತೆ ಮತ್ತೆ ಮೈ ಕೊಡವಿ ಎದ್ದು ನಿಂತು ಈಗ ಭರ್ತಿ ಯೌವ್ವನೆಯಂತೆ ಬೆಳೆದ ನಾಡು ಮಣಿಪುರ. ಅಂದ ಹಾಗೆ ಇದೀಗ ಮಣಿಪುರ ಅದಕ್ಕೂ ಮೊದಲು ಶತಮಾನಕ್ಕೊಮ್ಮೆ ಹೆಸರು ಸೇರಿದಂತೆ ಪ್ರಾಕೃತಿಕವಾಗೂ ತನ್ನ ಓರೆ ಕೋರೆಗಳನ್ನು ಬದಲಿಸಿಕೊಳ್ಳುತ್ತಾ ಬಂದ ನಾಡು ಇದು. ಇಂಥಾ ನಾಡಿಗೆ ಕ್ರಿ.ಪೂ. 33 ರಲ್ಲಿ ಶ್ರೀಕಾರ ಹಾಕಿದವನು ಆಗಿನ ಪಾಳೇಯಗಾರ "ನೋಂಗ್ಡಾ ಲೈರೇನ್ ಪಾಕಾಂಗ್ಬಾ." ಕಂಗ್ಲಾ ನಾಡಿನ ಕಥಾನಕದಲ್ಲಿ ಬರುವ ಧೀಮಂತ ನಾಯಕ. ಒಂದು ರೀತಿಯಲ್ಲಿ ಹೆಚ್ಚಿನ ಬುಡಕಟ್ಟುಗಳಿಗೆ ಈಗಲೂ ದೇವರು ಈತ. ಈ ಪಕಾಂಗ್ಬಾ ಈಗ ಪ್ರಮುಖ ಪ್ರವಾಸಿ ಸ್ಥಳದಲ್ಲಿ "ಗರ್ಭಗುಡಿಯಲ್ಲಿ" ನೆಲೆಸಿದ್ದಾನೆ. ಮಣಿಪುರಿ ಸಂಸ್ಕೃತಿ, ಹಬ್ಬಗಳು ಮತ್ತು ಕಲೆ ನೀನು "ಲೈ ಹರೋಬಾ" ನೋಡಿದೀಯಾ..? ... ತಾಂಗ್ಬಿ ಕೇಳುತ್ತಿದ್ದರೆ ನಾನು ಹಲ್ಕಿರಿದೆ. ಹಾಗೆಂದರೆ ಏನೆಂದು ಅರ್ಥವಾಗದೇ ನಾನು ಪಿಳಿ ಪಿಳಿ ಕಣ್ಬಿಟ್ಟು ಹುಬ್ಬೇರಿಸಿದೆ.. ಚುರ್ಚಾಂಡ್ಪುರ್ ರಸ್ತೆಯಲ್ಲಿ ಹೆದ್ದಾರಿ ದಾಟಿ.. ವಿಂಥಾಪೈನಲ್ಲಿ "ಅಸ್ಸಾಂ ರೈಫಲ್ಸ್‌" ಕೈಗೆ ಸಿಕ್ಕಿ ವಾಪಸ್ಸು ಕಳಿಸುವಾಗ ನನ್ನ ಟೀ ಶಾಪಿನಲ್ಲಿ ಕೂರಿಸಿಕೊಂಡು ಚಹ ಮಾಡಿಕೊಟ್ಟವಳು. ಆವತ್ತು "ತಾಂಗ್ಬಿ" ನನ್ನನ್ನು ತಮ್ಮ ಹುಡುಗನ ಜೊತೆಗೆ ಸೇರಿಸಿ, ಮುಚ್ಚಿಹೋಗಿರುವ ಕಳ್ಳ ದಾರಿಯಲ್ಲಿ, ಮುಚ್ಚಿಹೋಗಿರುವ ಅತ್ಯುತ್ತಮ ಸ್ಥಿತಿಯಲ್ಲಿದ್ದರೂ ನೀರಿದ್ದರೂ ಉಪಯೋಗಕ್ಕೇ ಬಾರದೆ ರಾಜಕೀಯಕ್ಕೆ ತುತ್ತಾಗಿರುವ ಖುಗಾ ಡ್ಯಾಂ ನೋಡಲೇ ಆಗುತ್ತಿರಲಿಲ್ಲ. (ಖುಗಾ ಡ್ಯಾಂ ಚುರ್ಚಾಂಡ್ಪುರ್‌ದಿಂದ ಮೂರೇ ಕಿ.ಮೀ. ದೂರದಲ್ಲಿದ್ದರೂ ಇವತ್ತು ಉಪಯೋಗಕ್ಕೆ ಬಾರದೇ ಸಾರ್ವಜನಿಕರಿಗೆ ಕೈಗೆ ಸಿಕ್ಕದಂತಿದೆ. ಮತ್ತೆ ಮಾಹಿತಿ ಮುಂದೆ ಬರುತ್ತದೆ.) ಹಸಿವಿದ್ದರೂ ನಾನು ಅಲ್ಲಿನ ಯಾವ ಐಟಂನ್ನು ತಿನ್ನುವುದಿಲ್ಲ ಎಂದು ಗೊತ್ತಾದಾಗ ಬಟಾಟೆ ಬೇಯಿಸಿ ಅದಕ್ಕಿಷ್ಟು ಹಿಟ್ಟು, ಖಾರದ ಪುಡಿ ಸವರಿ ಕರಿದು ಕೊಟ್ಟಿದ್ದಳು. ಹೆಚ್ಚಿನ ಖಾರಕ್ಕಾಗಿ ಮೇಲ್ಗಡೆಯಿಂದ ಮೆಣಸಿನ ಕಾಳು ಪುಡಿ ಉದುರಿಸಿ, ಒಂಥರಾ ಪ್ರ್ಹೆಂಚ್ ಫ್ರೈಸ್ ಇದ್ದಂಗೆ.. ಆ ಥರ. "ಪುಂಗಾ ಚೊಲೆಂ ಕುಣಿತಿಯಾ..." ಕೋಲೆ ಬಸವನಂತೆ ಅಡ್ಡಡ್ಡಕ್ಕೂ ಉದ್ದುದ್ದಕ್ಕೂ ತಲೆ ಆಡಿಸಿದೆ.. ಗೊತ್ತೂ ಗೊತ್ತಿಲ್ಲ ಎನ್ನುವಂತೆ, ಅದಕ್ಕೂ ಮೊದಲೇ ತಾಂಗ್ಬಿ "ಹೋಗಲಿ ರಾಧಾ ಕ್ರಿಷ್ಣ ಗೊತ್ತಾ..?" (ಮಾಯ್ಚೋ.. ರಾಧ ರಾಸ್ ಲೀಲ..) ಇದಕ್ಕೆ ಮಾತ್ರ "ಅದ್ಯಾಕೆ ಗೊತ್ತಿಲ್ಲ ನನಗೆಲ್ಲಾ ಗೊತ್ತು.." ಎನ್ನುವಂತೆ, ಅವಳಿಗೆ ಅರ್ಥವಾಗುವಂತೆ ಉತ್ತರಿಸಲು ಎದ್ದು ನಿಂತು ಗುಜರಾತಿನಲ್ಲಿ ಕಲಿತಿದ್ದ ನಾಲ್ಕಾರು ಹೆಜ್ಜೆ ದಾಂಡೀಯಾದ ಗರ್ಭಾ ಸೇರಿಸಿ "ಹೆಂಗೇ.." ಎನ್ನುವಂತೆ ಕುಣಿದರೆ ಆಕೆ "... ಕ್ಕೆ ಕ್ಕೀ.. ಕ್ಕೆ ಕ್ಕೀ.." ಎನ್ನುತ್ತಾ ಕೆಂಪು ಹಲ್ಲು ಬಿಟ್ಟು ಪ್ರಮೀಳೆಯರ ನಾಡಿನಲ್ಲಿ 10 ನಗತೊಡಗಿದ್ದಳು. ನನಗೆ ಗೊತ್ತಿತ್ತು ಮತ್ತೊಮ್ಮೆ ಪೆದ್ದುತನ ತೋರಿಸುತ್ತಿದ್ದೇನಾ ಎಂದು, ಆದರೆ ಅದಾಗಲೇ ಘಟಿಸಿಯಾಗಿತ್ತು. "... ನಿನಗೆ ಗೊತ್ತಾ (ಮಿಥೀಸ್) ನಾವು ಇರೋದೆ ರಾಸ್‍ಲೀಲಾದ ಸಂಸ್ಕೃತಿಯಲ್ಲಿ. ನಮ್ಮನ್ನೆಲ್ಲ ಹಿಡಿದಿಟ್ಟಿರೋದೆ ಕೃಷ್ಣ – ರಾಧೆಯರ ಆ ಅದ್ಭುತ ಡಾನ್ಸ್ ವಿಧಾನದಲ್ಲಿ.." ಎನ್ನುತ್ತಾ ತಾಂಗ್ಬಿ ವಿವರಿಸುತ್ತಿದ್ದರೆ ನಾನು ಬಾಯಿ ಮುಚ್ಚಿಕೊಂಡು ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಮಣಿಪುರಿಗಳ ಜೀವನದ ಖುಷಿ ಉಲ್ಲಾಸ ಮತ್ತು ಉತ್ಸಾಹದ ಚಿಲುಮೆ ಚಿಮ್ಮುವುದೇ ಅವರ ನೃತ್ಯ ಪ್ರಕಾರದಲ್ಲಿ ಮತ್ತು ಸಂಗೀತದಲ್ಲಿ. ಮುಖ್ಯವಾಗಿ ರಾಸಲೀಲಾ ಎನ್ನುವ ಪ್ರೀತಿಯ ವಿವಿಧ ಮುಖವನ್ನು ಪರಿಚಯಿಸುವ ಸಂಗೀತ ನೃತ್ಯದಲ್ಲಿ ರಾಜ್ಯದ 29 (ಇಪ್ಪತ್ತೊಂಬತ್ತು) ಅಧಿಕೃತ ಬುಡಕಟ್ಟುಗಳನ್ನು ಸಾಮೂಹಿಕವಾಗಿ ಆವರಿಸಿಕೊಂಡು ಹಿಡಿದಿರಿಸಿಕೊಂಡಿದೆ. ಅಷ್ಟೂ ಬುಡಕಟ್ಟುಗಳು ಒಳಗೊಳಗೇ ಸಂಪ್ರದಾಯ, ಮಡಿ-ಮೈಲಿಗೆ ಎಂದು ಏನೇ ಬಡಿದಾಡಿಕೊಂಡರೂ ಒಬ್ಬರನ್ನೊಬ್ಬರು ಸರಿಸಿ ಓಡಾಡಿದರೂ ಈ ರಾಸ್- ಲೀಲಾ ಬಂದಾಗ ಮಾತ್ರ ಪುಕ್ಕ ಕೆದರಿಕೊಂಡ ಕೆಂಭೂತಗಳ ತರಹ ರಂಗಕ್ಕಿಳಿಯುತ್ತಾರೆ. ಅಷ್ಟು ಹೊತ್ತು ಮಾತ್ರ ಅಪ್ಪಟ ಮಣಿಪುರಿಗಳೆ. ಆ ಒಂದು ಸಂಗೀತದ "ರಿದಮ್ಮೇ" ಸಾಕು ಅವರನ್ನು ಇನ್ನಿಲ್ಲದಂತೆ ಒಂದು ಮಾಡಲು ಮತ್ತು ಕುಣಿಯಲು, ಹೀಗಾಗಿ ಈಗಲೂ ಸಮುದಾಯದ ಹೆಚ್ಚಿನ ಸುಧಾರಣೆ ಅಥವಾ ಒಮ್ಮತಗಳು ಮೂಡುವುದೂ ಕೂಡಾ ಸಂಗೀತ ನೃತ್ಯದ ಮೂಲಕವೇ ಎನ್ನುವುದು ಅಶ್ಚರ್ಯವಾದರೂ ಸತ್ಯವೆ. ಎಲ್ಲೆಲ್ಲೂ ನಡೆಯುವ ಉತ್ಸವದಲ್ಲೇ ಹೆಚ್ಚಿನ ವ್ಯಾಜ್ಯಗಳು, ವಿವಾದಗಳು ಸಮುದಾಯದ ನಡುವಿನ ತಪ್ಪು ತಿಳುವಳಿಕೆಗಳು ಬಗೆಹರಿಯುತ್ತವೆ. ಕೆಲವೊಮ್ಮೆ ಹೆಚ್ಚಿನ ಅನಾಹುತಕ್ಕೂ ಕಾರಣವಾಗುತ್ತದೆ ಕೂಡಾ. ಅಲ್ಲಲ್ಲಿ ಬೇರೆ ಬೇರೆ ನೃತ್ಯ ಮತ್ತು ಸಂಗೀತದ ಪ್ರಕಾರಗಳಿದ್ದರೂ ಪೂರ್ತಿ ರಾಜ್ಯಕ್ಕೆ ರಾಸ-ಲೀಲಾ ಮಾತ್ರ ಚಿರನೂತನ. ಇದಲ್ಲದೆ "...ಲೈ ಹಾರೊಭಿ (ನಿರ್ದಿಷ್ಟ ಬುಡ ಕಟ್ಟುಗಳು, ನಿರ್ದಿಷ್ಟ ದೇವರನ್ನು ಸ್ತುತಿಸುತ್ತ ಸಂಗೀತ ನೃತ್ಯದ ಮೂಲಕ ಅರ್ಚಿಸುವುದು), ಪುಂಗಾ ಚೊಲೆಂ...(ಮೃದಂಗ ನೃತ್ಯ) – 11 ಪ್ರಮೀಳೆಯರ ನಾಡಿನಲ್ಲಿ ಇದೊಂದು ರೀತಿಯಲ್ಲಿ ನಮ್ಮ ಕಡೆಯ ಗುಮುಟೆ ಪಾಂಗದ ಭಾಗವೂ ಅನ್ನಿಸುತ್ತದೆ. "ಮಾವೋ ನಾಗಾ" ಇದು ತಾಯಿ ದೇವರನ್ನು ಅರ್ಚಿಸುವ ನಾಗಾಗಳು ಆಚರಿಸುವ ನೃತ್ಯ ಪ್ರಕಾರ. "ಮಲ್ಬೆ ಜಾಗೋಯಿ"- ಪೂಜಾರಿಗಳು ಪಂಡಿತರು ಶಾಸ್ತ್ರಬದ್ಧವಾಗಿ ಆಚರಿಸಿದರೆ, "...ತಮ್ಗಲ್ ಸುರಾಗ್" ಎನ್ನುವುದು ಇನ್ನೊಂದು ರೀತಿಯ ನೃತ್ಯ ಪ್ರಕಾರ ಮಣಿಪುರಿಗಳ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಮಣಿಪುರಿಗಳ ಜೀವನೋತ್ಸಾಹಕ್ಕೆ ಮೂಲ ಕಾರಣವೇ ಅವರ ಸಂಗೀತ. "..ನೋಡು ಒಂದೆರಡು ಗುಟುಕು ವೈನು, ಎರಡು ರಿದಂ ಮ್ಯೂಜಿಕ್ಕು.. ಸ್ವರ್‌ಗ ಇಲ್ಲೇ ಇದೆ.. ಇದಕ್ಕಿಂತ ಚೆಂದದ ಜೀವನ ಅನುಭವಿಸಿದ್ದೀಯಾ..?" ಎನ್ನುತ್ತಾ ಆಂಡ್ರೆಯ ವಾಸಿ, ಅಲ್ಲಿ ಚಿಕ್ಕ ಹಳ್ಳಿಯ ಜನರಿಗೆ ಅಂಗಡಿ ಜೊತೆಗೆ ಸ್ಥಳೀಯ ಪೂಜಾ ವಿಧಿ ಸಾಮಾನು ನಿರ್ವಹಿಸುವ ಸುಂದರ ಮೂಗುತಿಯ "ಸಾರ್ಮಿ ಚೌಗಾ.." .. ಕೇಳುತ್ತಿದ್ದರೆ, (ಶಾರ್ಟಾಗಿ "ಚಾರ್ಮಿ" ಎನ್ನುತ್ತಾರೆ ಆಕೆಗೆ, ತನ್ನ ವ್ಯವಹಾರ ನಡೆಯಲು ಅಗತ್ಯದ ಗ್ಲಾಮರ್ ಕೂಡಾ ಪ್ರದರ್ಶಿಸುತ್ತಾಳೆ ಆಕೆ ಅನ್ನಿಸಿತು ನನಗೆ). ಅವರ ಪದ್ಧತಿ ಮತ್ತು ಅಲ್ಲಿನ ಜೀವನ ವಿಧಾನದ ಬಗೆಗಿನ ಹೆಮ್ಮೆ ಆಕೆಯಲ್ಲಿ ಎದ್ದು ಕಾಣುತ್ತಿತ್ತು. ನಾನೂ ಕೂಡಾ ಒಮ್ಮೆ "..ಕರ್ನಾಟಕಕ್ಕೆ ಬಂದು ನೋಡು, ಬರೀ ಸಹ್ಯಾದ್ರಿ ಶ್ರೇಣಿಯೆ ಸಾಕು.." ಎನ್ನುವ ಮನಸ್ಸಾದರೂ ತರ್ಕ, ವಾದಕ್ಕೆ ಇದು ಸಮಯವಲ್ಲ ಎಂದು ಸುಮ್ಮನಾಗಿದ್ದೆ. "ನೋಡು ಸ್ಯಾಮ್.. ಖುಲ್ಲಾಂಗ್ ಇಶಾಯಿ.. ಹಾಡುತ್ತಾ "ಲೈ ಹರೋಬಾ" ಡಾನ್ಸ್ ಮಾಡುತ್ತಾ ಇದ್ರೆ ಬಹುಶ: ದೇವರೂ ನಮ್ಮೊಂದಿಗೆ ಇಲ್ಲಿ ಗೊತ್ತಾಗದಂತೆ ಹೆಜ್ಜೆ ಹಾಕಿ ಕುಣಿಯುತ್ತಾನೆ. ಅದಕ್ಕಾಗೆ ಈ ರಾಜ್ಯದಲ್ಲಿ ನಿಸರ್‌ಗ ಹೆಚ್ಚೆ ಅರಳಿಕೊಂಡಿದೆ. ಎಲ್ಲಿ ಸಂಗೀತ ಇರುತ್ತದೋ ಅಲ್ಲಿ ಜೀವನ ನಳನಳಿಸುತ್ತದೆ..." ಚಾರ್ಮಿ ವಾದಕ್ಕೆ ಬೀಳುವ ಲಕ್ಷಣದಲ್ಲಿದ್ದಳು. ಅದಕ್ಕಾಗಿ ನನಗೆ ಚಹದ ಮೇಲೆ ಚಹದ ಲಂಚ ಕೊಡುತ್ತಿದ್ದಳು. ಆಕೆಗೆ ಹೀಗೆ ದೂರದೂರಿನ ಬೆಂಗಳೂರು ಕಡೆಯವನೊಬ್ಬ ಅನಾಮತ್ತಾಗಿ ಪಕ್ಕದ ಚಾಪೆಯ ಮೇಲೆ ಕಾಲು ನೀಡಿಕೊಂಡು ದೀನನಾಗಿ ಪ್ರಮೀಳೆಯರ ನಾಡಿನಲ್ಲಿ 12 ಕೂತು ಹಲ್ಕಿರಿಯುತ್ತಿದ್ದುದು ಸೋಜಿಗವೂ, ಆಕೆಗೆ ಆಪ್ತ ಖುಶಿಯೂ ನೀಡಿದ್ದು ಸುಳ್ಳಲ್ಲ. ಕಾರಣ ಹೆಚ್ಚಿನ ಪ್ರವಾಸಿಗರು ಹೀಗೆ ಇತಿಹಾಸ ಎಲ್ಲಾ ಹರವಿಕೊಂಡು ಕೂತು ಚರ್ಚೆಗಿಳಿಯುವುದಿಲ್ಲ. ಇದ್ದರೂ ಅವರದ್ದೇ ಮನೆಯ ವಾಸನೆಯಲ್ಲಿ ಗಲೀಜು ಎನ್ನದೆ ಅದೇ ಆಗ ಷ್ಟೆ ಹಂದಿ ಮೈ ಹೊಸೆದು ಹೋದ ಚಾಪೆಯ ಮೇಲೆ, ನಾನು ಕೂತಂತೆ, ಮಾವನ ಮನೆಯಲ್ಲಿ ಕೂರುವಂತೆ ಅಂಡು ಊರುವುದಿಲ್ಲ. ಅದೇ ಈ ಎಲ್ಲಾ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಸ್ಥಳದ ಮತ್ತು ಜನರ ಪ್ರಾದೇಶಿಕತೆಗೆ ತಕ್ಕಂತೆ ನಾವಿರುವುದೇ ಬಹುಶ: ಬಹುಪಾಲು ಯಶಸ್ಸಿನ ಕಾರಣ ಎನ್ನುವುದು ನನ್ನ ಅನುಭವ. ಅದರಲ್ಲೂ ಸ್ತ್ರೀಯರು ಮಾತಾಡುತ್ತಿದ್ದರೆ ಏನೋ ತಿಳಿದದ್ದು ಮಾತಾಡಿ ಎದ್ದು ಹೋಗ್ತಾರೆ ಎನ್ನುವುದು ಆಕೆಯ ವಾದ. ಅದಕ್ಕಾಗಿ ನಾನು ಪಟ್ಟಾಗಿ ಕೂತು "..ಇದೆಂಗೆ..? ಇದು ಯಾಕೆ ಹಿಂಗೆ.. ..?" ಎನ್ನುತ್ತಾ ಆಕೆಯನ್ನು ಪ್ರಶ್ನಿಸುವ ಉಮೇದಿಗೆ, ಆಕೆಗೂ ಹುರುಪು ಬರತೊಡಗಿತ್ತು. ಮಣಿಪುರಿಗಳ ಮಾತಿನ ವಿಶೇಷವೆ ಅದು. ಸರಿಯಾದ ಭಾಷೆಯಲ್ಲಿ ಲಯಕ್ಕೆ ಬಿದ್ದರೆ ಮಾತು ನಿಲ್ಲುವುದೇ ಇಲ್ಲ. ಅವಳೂ ಹಾಗೆಯೆ. ಅದಕ್ಕೆ ಬಿಟ್ಟರೆ, ಎಲ್ಲಿ ಇವನಂಥ ಇನ್ನೊಬ್ಬ ಪ್ರವಾಸಿ ಈ ಹಳ್ಳಿಯ ಮೂಲೆಗೆ ಇನ್ಯಾಕಾದರೂ ಬಂದಾನು ಎನ್ನುವ ಹುಕಿಯಾ ಗೊತ್ತಿಲ್ಲ. ಕಾರಣ ನಾನು, ಆಕೆ ತೋರಿಸುತ್ತಿದ್ದ ಚಿತ್ರಗಳಿಗೆಲ್ಲಾ "..ಹಾ ಇದು ನಿಮ್ಮ ರಾಜ ಪಕಾಂಗ್ಬಾ.. ಇದು ನಿಮ್ಮ ದೋಣಿ ..ಇದು ನಿಮ್ಮ ಇನ್ನಾಪಿ .." ಎಂದು ಎಲ್ಲಾ ಅರಿತುಕೊಂಡ ವಿದ್ವಾಂಸನಂತೆ ಗುರುತಿಸತೊಡಗಿದ್ದೇನಲ್ಲ, ಇನ್ನೇನು ಬೇಕಿತ್ತು ಆಕೆ ಶುರುವಿಟ್ಟುಕೊಳ್ಳುತ್ತಿದ್ದಳು ಹಳೆಯ ಕಥೆಗಳನ್ನು. ಇದ್ದ ಬದ್ದ ಎಲ್ಲಾ ಆಂಡ್ರೆಯ ಹಳ್ಳಿಯ ಸ್ನೇಹಿತರನ್ನು ಆಕೆ ಒಟ್ಟುಗೂಡಿಸತೊಡಗಿದ್ದಳು. ಸಂಜೆಯ ಅಮಲು ಅಡರುತ್ತಿದ್ದಂತೆ ಅಲ್ಲಿ ಸಂಗೀತ, ಕುಡಿತ.. ದಟ್ಟ ಗಂಜಾ ಮತ್ತು ತಂಬಾಕು ಜೊತೆಗೆ ಸ್ಥಳೀಯ " ಮುಸಾಯಿ ಸಾವ್ಝೆಯ " ಘಾಟು ಏರತೊಡಗಿತ್ತು. ನಾನೂ ಹೇಳಿದ್ದಕ್ಕೆಲ್ಲ "..ಹೌದು ಹೌದು.." ಎನ್ನುತ್ತಾ ತಲೆ ಅಲ್ಲಾಡಿಸಿದ್ದೆ. ಕಾರಣ ಆಗಲೇ ಆಕೆ "ಪೇನಾ" ತೆಗೆದು ನುಡಿಸಲು ಆರಂಭಿಸಿದ್ದಳು. 13 ಪ್ರಮೀಳೆಯರ ನಾಡಿನಲ್ಲಿ ಸುತ್ತಲೂ ಮಂಪರು ಕವಿಯುತ್ತಿದ್ದರೆ, ಕಟ್ಟೆಗಳ ಮೇಲೆ ನಿಧಾನಕ್ಕೆ ಆವರಿಸಿಕೊಳ್ಳುವ ಬೀಡಿಯ ಧೂಮದೊಂದಿಗೆ ಮಾಂಸಾಹಾರದ ಅಡುಗೆಯ ಜೊತೆಗೆ "ಪೇನಾ ಶಾಹಿ"ಯ ಸಂಗೀತ ಅಡರಿಕೊಳ್ಳತೊಡಗುತ್ತದೆ. ನಾನು ಇವೆಲ್ಲದಕ್ಕೂ ಮಿಕ ಮಿಕ ಎನ್ನುತ್ತಾ ಕುಳಿತುಕೊಳ್ಳುತ್ತಿದ್ದರೆ ಅವರ ಪಾಲಿಗೆ ನಾನೊಂದು ಶೋಪೀಸ್. ಅಪ್ಪಟ ಕಪಾಟಿನಲ್ಲಿದ್ದ ಬೆದುರು ಬೊಂಬೆ. ಅದ್ಭುತ ಬಿದಿರಿನ (ಕೆಲವೊಮ್ಮೆ ಲೋಹದ್ದೂ ಮಾಡಿ ಇರಿಸಿಕೊಳ್ಳುವುದೂ ಇದೆ) "ಹರೋಬಾ ಇ ಷಾ ಯಿ, ಪೇನಾ ಇ ಷಾ ಯಿ" ಇತ್ಯಾದಿಗಳೆಲ್ಲಾ ಸ್ಥಳೀಯ ಸಂಗೀತ ಉಪಕರಣಗಳು. ಇದರಲ್ಲಿ ಸ್ಥಳೀಯ ಸಂಗೀತದಲ್ಲಿ ಹೆಸರುವಾಸಿಯಾದ ಥಬಾಲ್ ಚೊಂಗ್ಬಾ, ನಾಟ್, ನಾಪಿಪಾಲಾ, ಗೌರ್ ಪಡಾಶ್ ಮತ್ತು ಧೋಬ್. ಇವೆಲ್ಲವೂ ಹೆಚ್ಚಿನಂಶ ದೇವರ ಮತ್ತು ಇತಿಹಾಸ ಭಕ್ತಿ ಪ್ರಧಾನ ಸಂಗೀತಕ್ಕೆ ಮೀಸಲಾಗಿದ್ದರೂ 95ರ ದಶಕದಿಂದೀಚೆಗೆ ಇವುಗಳನ್ನು ಇತರೆ ಸಂಗೀತ ಪ್ರಕಾರದಲ್ಲೂ ಬಳಸಲಾಗುತ್ತಿದೆ. ಇದ್ದುದ್ದರಲ್ಲೇ ಎಂಥವರನ್ನೂ ಅತ್ಯಂತ ಮಂತ್ರಮುಗ್ಧರನ್ನಾಗಿಸುವ ಸಂಗೀತ ಎಂದರೆ "ಮನೊಹರ್ ಸಾಯಿ" ಎನ್ನುವ ಸಂಗೀತ ಪ್ರಕಾರ. ಇದನ್ನು 19ನೆಯ ಶತಮಾನದ ಕಾಲಪುರುಷನೊಬ್ಬನಿಗೆ ಸಮರ್ಪಿಸಲಾಗಿದ್ದು, ಕೇವಲ ಚಪ್ಪಾಳೆಯ ಮೂಲಕ ವಿವಿಧ ರೀತಿಯ ನಾದ ಹೊಮ್ಮಿಸಿ, ಎಂಥವರನ್ನು ಕುಣಿಯಲು ಪ್ರೇರೇಪಿಸುವ ಸಂಗೀತ ಮತ್ತು ನೃತ್ಯವೆಂದರೆ "ಖುಬೈ ಶಾಯಿ...". ಪಾಶ್ಚಾತ್ಯರ "ಪೆಟಲ್ ಮ್ಯೂಸಿಕ್" ನ್ನು ನೆನಪಿಸುವ ಈ ಖುಬೈ.. ನಿಜಕ್ಕೂ ಅರ್ಧ ಗಂಟೆಗಟ್ಟಲೇ "ರಿದಂ" ತಪ್ಪದೆ ಚಪ್ಪಾಳೆ ನುಡಿಸುವಾಗ ಅಚ್ಚರಿಯಾಗುತ್ತದೆ. ಎಂಥಾ ಅರಸಿಕನೂ ನಾಚಿಕೆ ಸ್ವಭಾವದವನಿದ್ದರೂ ಈ ಲಯಕ್ಕೆ ಕಾಲು ಕುಣಿಸದೇ ಇರಲಾರ. ನಿರಂತರವಾಗಿ ಚಪ್ಪಾಳೆಯಲ್ಲಿ ಸರದಿಯ ಮೇರೆಗೆ ಬೇರೆ ಬೇರೆ ರೀತಿಯಲ್ಲಿ ಧ್ವನಿ ಹೊರಡಿಸುವ ತಂಡಗಳು ಕೊನೆ ಕೊನೆಗೆ ಒಮ್ಮೆಲೆ ತಾರಕಕ್ಕೇರಿಸುತ್ತಾ ದೇಹದ ಹಲವು ಭಾಗಗಳಲ್ಲಿ ತಾಡಿಸುತ್ತಾ ಎಂತಹವರನ್ನು ಕುಣಿಯಲು ಪ್ರೇರೇಪಿಸುವ ನಾದ ಅದ್ಭುತ. ಈ ಶೋ ಅಥವಾ ಇಂಥಾ ಗುಂಪುಗಳ ಮೋದಕ್ಕಾಗಿಯೇ, ಕಾರ್ಯಕ್ರಮಕ್ಕಾಗೇ ಜನ ಎಲ್ಲೆಲ್ಲಿಂದಲೋ ಬರುವುದೂ ಇದೆ. ಪ್ರಮೀಳೆಯರ ನಾಡಿನಲ್ಲಿ 14 ಅಲ್ಲಲ್ಲಿ ಗುಂಪಾಗಿ ಜನ ಮನರಂಜನೆಗಾಗಿ ನಡೆಯುತ್ತಿರುವ ಈ ಚಪ್ಪಾಳೆ ಕ್ಲಬ್ ಈಗೀಗ ಉದ್ಯಮವಾಗಿ ಪ್ರವಾಸೋದ್ಯಮ ಆಕರ್ಷಣೆಯೂ ಆಗುತ್ತಿದೆ. ಹೆಚ್ಚಿನಂಶ ನಾನು ಅವರೊಂದಿಗೆ ಸುಲಲಿತವಾಗೇ ಈ ನಾದಕ್ಕೆ ಕೈ ಜೋಡಿಸುತ್ತಿದ್ದೆ. ಕೇವಲ ಎರಡ್ಮೂರು ಬಾರಿ ಮತ್ತು ಹಲವು ಏರಿಳಿತಗಳ ಚಪ್ಪಾಳೆಯಲ್ಲಿ ಮಾತ್ರ ನನ್ನ ಕೈ ಹದ ತಪ್ಪುತ್ತಿತ್ತು. ಆದರೂ ಲುಕ್ಷಾನು ಏನೂ ಇರಲಿಲ್ಲ. ಯಾಕೆಂದರೆ ಈ " ಖುಬೈ ಶಾಯಿ " ಯಲ್ಲಿ ಮೊದಲಿಗೆ ನಿಮ್ಮನ್ನು ಗೈಡ್ ಮಾಡುವ, ಅಂದರೆ ನಿರ್ದೇಶಕ ಅಂತಿಟ್ಟುಕೊಳ್ಳಿ. ಆತ ಒಂದು ಹಂತದವರೆಗೆ ಚಪ್ಪಾಳೆಯಲ್ಲಿ ನಿಮ್ಮನ್ನು ಏರುಗತಿಗೆ ಕರೆದೊಯ್ಯುವಾಗಲೇ ಅವರ ಹದಕ್ಕೆ ಬರುವಂತೆ ತರಬೇತಿಗೀಡು ಮಾಡಿಬಿಡುತ್ತಾನೆ. ನಂತರ ಏನಿದ್ದರೂ ಅವನ ಕೈಗಳ ತಾಳಕ್ಕೆ ನಾವು ಚಪ್ಪಾಳೆಯ ಶಬ್ದ ಸೇರಿಸುವುದ ಷ್ಟೆ. ಹಾಗಾಗಿ "ಖುಬೈ ಶಾಯಿ"ಯಲ್ಲಿ ಒಮ್ಮೆ ನಾವು ನಾದಕ್ಕೆ ಬಿದ್ದರೆ ಅದರ ಏರುಗತಿಯಿಂದಾಚೆಗೆ ಬರುವುದೇ ಇಲ್ಲ. ಇದು ಯಾವುದೇ ಇತರೆ ಸಂಗೀತ ಉಪಕರಣದ ಹಂಗಿಲ್ಲದೆ ಕೇವಲ ಮಧ್ಯದಲ್ಲಿ ಅಲ್ಲಲ್ಲಿ ಕಥೆಯ ರೂಪಕ ಅಥವಾ ಇತ್ತೀಚಿಗಿನ ಹಾಡಿನ ಟ್ಯೂನನ್ನು ಹಾಡಿ ಮುಂದುವರೆಸಲು ನಾಯಕನೊಬ್ಬನಿದ್ದರೆ ಸಾಕೇ ಸಾಕು, ಸಂಜೆಗೆ ಅದ್ಭುತ ಅನುಭವ ನೀಡಬಲ್ಲದಾಗುತ್ತದೆ. ಹಾಗೆ ಆಂಡ್ರೆಯಿ ಹಳ್ಳಿಯಲ್ಲಿ ಆವತ್ತು ಕುಳಿತು "ಖುಬೈ ಶಾಯಿ" ಹಾಡುತ್ತಾ ಚಪ್ಪಾಳೆ ಶಬ್ದಕ್ಕೆ ನಾನು ತಲೆದೂಗುತ್ತಿದ್ದರೆ, ಅಚ್ಚರಿಗೆ ದೂಡಿದ್ದು ಸಾಮೂಹಿಕ ಅಮಲಿನಲ್ಲೂ ಮಹಿಳೆಯರನ್ನು ಎಲ್ಲೂ ಅತ್ಯಂತ ಸಭ್ಯವಾಗಿಯೂ, ಗೌರವ ಪೂರ್ವಕವಾಗಿಯೂ ಸೇರಿಸಿಕೊಳ್ಳುವ ತಂಡ ಕಾರ್ಯಾಚರಣೆ ನಾವು ಮರೆಯದೇ ಕಲಿಯಬೇಕಿರುವ ತುರ್ತು ಸಂಗತಿ. ಮೊದಲೇ ಹೇಳಿದಂತೆ ಮಣಿಪುರಿಗಳ ಜೀವಾಳ ಇರುವುದೇ ಅವರ ಬದುಕಿನ ಸಂಭ್ರಮದಲ್ಲಿ, ನೃತ್ಯದಲ್ಲಿ. ಸರ್ವರ ಸಾಮಾಜಿಕ ಮತ್ತು ಸಾಹಿತ್ಯಕ ಹಿನ್ನೆಲೆಯಲ್ಲೆಲ್ಲಾ ಈ ವಿಷಯ ಅನುರಣಿಸುತ್ತಲೇ ಇರುತ್ತದೆ. ಕೊನೆಗೆ ಅವರ ಕರಕುಶಲ ಕಲೆಯಲ್ಲೂ ಇದೇ ನೃತ್ಯ ಮತ್ತು ಸಂಗೀತಕ್ಕೆ ಮೊದಲ ಆದ್ಯತೆ ಅದ್ಭುತ ಎನ್ನಿಸುತ್ತದೆ. ಮಣಿಪುರಿಗಳ ಹಬ್ಬದ ಈ ಸಂಭ್ರಮವನ್ನು ಅಲ್ಲಿದ್ದು ಅನುಭವಿಸಿಯೇ ಅರಿಯಬೇಕು. ಅದರಲ್ಲಿ ಕೆಲವನ್ನು ಇಲ್ಲಿ ಮಾಹಿತಿಗಾಗಿ ವಿವರಿಸಿದ್ದೇನೆ. ಹಬ್ಬ ಹರಿದಿನಗಳು ನಿಂಗೊಲ ಚಾಕೌಬ್ : ಇದೊಂದು ಅಪರೂಪದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಸ್ಥಿತಿಗತಿಯನ್ನು ಬಿಂಬಿಸುವ ಆಚರಣೆಯ ಪ್ರಕಾರವೆಂದರೂ ತಪ್ಪಾಗಲಾರದು. ಮದುವೆಯಾದ ಹೆಣ್ಣು ಮಕ್ಕಳು ತನ್ನ ಬಾಲ್ಯ ಮತ್ತು ಮಗುವಿನ ಸ್ಥಿತಿಯನ್ನು ಮರುಪೂರ್ಣ ಮಾಡಿಕೊಳ್ಳುವ, ಮತ್ತೆ ಮಗುವಿನಂತಾಗುವ ಸ್ಥಿತ್ಯ0ತರದ ಅದ್ಭುತ ಆಚರಣೆ ನೃತ್ಯ ಪ್ರಕಾರವೂ ಹೌದು. ತನ್ನ ತವರು ಮನೆಯಲ್ಲಿ ಸಂಪೂರ್ಣ ಬಂಧು ಮಿತ್ರರನ್ನು ಕರೆದು ಆಚರಿಸಿ ಸಂಭ್ರಮಿಸುವ ಈ ಪದ್ಧತಿ ಸಾಮಾನ್ಯವಾಗಿ ನವಂಬರ್ (ಹಿಯಾಂಗೈ)ನ ಹುಣ್ಣಿಮೆಯ ಎರಡನೆಯ ದಿನ ಆಚರಿಸಲ್ಪಡುತ್ತದೆ. ಮುಖ್ಯವಾಗಿ ಮನೆಯ ಹೆಣ್ಣು ಮಕ್ಕಳ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಈ ಹಬ್ಬ ಆಚರಿಸಲಾಗುತ್ತಿದ್ದು ಪ್ರತಿ ವರ್ಷ ಇದೊಂದು ನಮ್ಮಲ್ಲಿನ ದೀಪಾವಳಿಯಂತೆ ಸಂಭ್ರಮಾಚರಣೆಗೆ ಕಾರಣವಾಗುತ್ತದೆ. ಇತ್ತೀಚಿನ ದಶಕದ ಅಚ್ಚರಿಯ ಬೆಳವಣಿಗೆ ಎಂದರೆ ಪ್ರಸ್ತುತ ಇಲ್ಲಿನ ಮುಸ್ಲಿಂ ಬಾಹುಳ್ಯ "ಪಾಂಗಾಳ" ಗಳಲ್ಲೂ ಕೂಡ ಇದನ್ನು ಅಂದರೆ "ನಿಂಗೊಲ ಚಾಕೌಬ್..." ಎನ್ನುವ ಹಬ್ಬವನ್ನು ಆಚರಿಸುವ ಅಭ್ಯಾಸ ಆರಂಭವಾಗಿದ್ದು ಇದರಿಂದಾಗಿ ಸಂಪೂರ್ಣ ಮಣಿಪುರ ರಾಜ್ಯದಲ್ಲಿ ಇದು ಆಚರಿಸಲ್ಪಡುತ್ತಿದೆ. ಈ ಒಂದು ವಿಶೇಷ ಹಬ್ಬಕ್ಕಾಗಿ ಕಾಯುವ ಹೆಣ್ಣು ಮಕ್ಕಳು ತಮ್ಮ ಮಕ್ಕಳೊಂದಿಗೆ ತವರಿಗೆ ಆಗಮಿಸಲು ಕಾತರದಿಂದ ಕಾಯ್ದು ಬರುತ್ತಾರಾದರೆ, ತಂದೆ ತಾಯಿಗಳೂ ಕೂಡಾ ಮಕ್ಕಳು ಮೊಮ್ಮಕ್ಕಳನ್ನು ಬರಮಾಡಿಕೊಳ್ಳಲು ಹದಿನೈದು ದಿನಗಳಿಂದಲೇ ಕಾಯ್ದಿದ್ದು ಹಬ್ಬದ ತಯಾರಿಗಿಳಿಯುತ್ತಾರೆ. ಹಿರಿಯರು ಆಶೀರ್ವಾದ ಮಾಡಿದರೆ ಕಿರಿಯರು ಹಬ್ಬದೂಟ ಪೂಜೆ ಹಾಗು ನೃತ್ಯದ ಮೂಲಕ ದೇವರನ್ನು ಅರ್ಚಿಸಿ ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ. ಬರುಬರುತ್ತಾ ಅಲ್ಲಲ್ಲಿ ಸಾಂಪ್ರದಾಯಿಕ ನೃತ್ಯ ಶೈಲಿಯಾಗಿ ಕೇವಲ ದೇವಾಲಯದ ಆವರಣದಲ್ಲಿ ಮಾತ್ರ ಪ್ರದರ್ಶಿಸುವ ಪ್ರಕಾರವಾಗಿ ಉಳಿದಿದ್ದು ಅಷ್ಟಾಗಿ ಜನರ ಮಧ್ಯೆ ಉಳಿಯುತ್ತಿಲ್ಲ. ಕಾರಣ ಅದಕ್ಕಿರುವ ಹಲವು ವಿಧಿ ವಿಧಾನ ಮತ್ತು ನಿಯಮಿತ ಸಮಯವೂ ಇರಬಹುದು. ಹಾಗಾಗಿ ಕ್ಲಾಸಿಕಲ್ ಪ್ರಮೀಳೆಯರ ನಾಡಿನಲ್ಲಿ 16 ಎನ್ನುವ ಶಾಸ್ತ್ರೀಯ ನೃತ್ಯ ಪ್ರಕಾರ ರಾಸ್-ಲೀಲಾವೇ ಇವತ್ತಿಗೂ ಮಣಿಪುರದಾದ್ಯಂತ ಪ್ರಸಿದ್ಧ. "ಕಾಕೌಬಾ ಮತ್ತು ಯಶಾಂಗ್" ನಲ್ಲೂ ರಾಧಾ-ಮಾಧವ ನೃತ್ಯವೇ ಪ್ರಮುಖ ಆಕರ್ಷಣೆಯಾಗಿದ್ದು ಹೆಣ್ಣು ಗಂಡುಗಳಿಬ್ಬರೂ ಬಿಗಿಯಾದ ಮಣಿಪುರಿ ಶಾಸ್ತ್ರೀಯ ಉಡುಪು ಧರಿಸಿ ನರ್ತಿಸುವುದು ಆಕರ್ಷಣೀಯ. "..ಖಂಬಾ ಥೋಯ್ಬಿ..." ಎನ್ನುವ ಇನ್ನೊಂದು ಪ್ರಕಾರ ಉತ್ತರ ಮಣಿಪುರಗಳಲ್ಲಿ ಪ್ರಸಿದ್ಧವಾಗಿದ್ದು ರಾಜವಂಶಸ್ಥರಾದ ಶಲ್ವನ್ ಕುಟುಂಬಕ್ಕೆ ಸೇರಿದ ಕಥೆಯನ್ನು ಹೇಳುತ್ತದೆ. "ಮೈಬಿ" ನೃತ್ಯ ಪ್ರಸ್ತುತ ಮತ್ತು ಆಗಿಹೋಗಿರುವ ಕಾಲಘಟ್ಟಗಳ ಇತಿಹಾಸವನ್ನು ನೆನಪಿಸುವ ಶಾಸ್ತ್ರೀಯ ನೃತ್ಯವಾದರೆ ಇದರಲ್ಲಿ "ಲೈ ಹಾರೋಬಿ"ಯನ್ನು ಸೇರಿಸಿ ನರ್ತಿಸುವುದೂ ಇದೆ. "ನುಪಾ ಪಾಲಾ..ಅಥವಾ ನುಪಿ ಪಾಲಾ..." ಎನ್ನುವುದು ಕೂಡಾ ನೃತ್ಯಾಕಾರವಾಗಿದ್ದು ಸಹಜ ಶೈಲಿಯ ನೃತ್ಯಕ್ಕೆ ಪ್ರಸಿದ್ಧವಾಗಿದೆ. "ಅತಿಯಾ ಗುರು ಮತ್ತು ಉಸಿಬಾಡಾ ಗುರು" ಎನ್ನುವ ಐತಿಹಾಸಿಕ ಪುರುಷರ ಸುತ್ತ ಸುತ್ತುವ "ಲೈ ಹರೋಬಾ" ನೃತ್ಯ ಪ್ರಕಾರದಿಂದ ಅದ್ಭುತ ಎನ್ನುವ ಕಥಾನಕವನ್ನು ಹೊರಹಾಕುವ ಮಣಿಪುರಿಗಳು ಇದಕ್ಕಾಗಿ ತಿಂಗಳಾನುಗಟ್ಟಲೆ ಶ್ರಮವಹಿಸುತ್ತಾರೆ. ಒಟ್ಟಾರೆ ಮಣಿಪುರದ ಜಿಲ್ಲೆ ಜಿಲ್ಲೆಗಳಲ್ಲಿ ಅದ್ಭುತ ಎನ್ನುವ ಸಂಗೀತ ನೃತ್ಯಕ್ಕೆ ಕೊನೆಯಿಲ್ಲದ ಗಂಟೆಗಳಲ್ಲಿ ಬದುಕಿನ ಆಮೋದವನ್ನು ಅನುಭವಿಸುತ್ತಾರೆ. ಇದು ಹೊರಗಿನಿಂದ ಬಂದ ಆಗಂತುಕ ಪ್ರವಾಸಿಗಳಿಗೆ ಒಂಥರಾ ವಿಚಿತ್ರ ಎನ್ನಿಸುತ್ತದೆಯಾದರೂ ಯಾವುದೇ ಕ್ಷಣದಲ್ಲೂ ಅತ್ಯುತ್ತಮ ಸಂಗೀತದ ಸಂಕೀರ್ಣ ವಿಷಯದ ಐತಿಹಾಸಿಕ ವಿಷಯಗಳನ್ನು ಕೂಡಾ ಇದರಲ್ಲಿ ಪ್ರಸ್ತುತಪಡಿಸುವ ಕಾರಣ ಮಣಿಪುರಿ ಅದ್ಭುತ ಸಾಂಗತ್ಯವನ್ನು ಕೊಡುತ್ತಾ ಸಾಗುತ್ತದೆ. ಮುಖ್ಯವಾಗಿ ಮಣಿಪುರಿ ಅಥವಾ ಮಿಥೀಸ್‍ಗಳಲ್ಲಿ ಸಂಗೀತ, ನೃತ್ಯ, ಆನಂದಗಳು ಅದ್ಭುತವಾಗಿ ಮೇಳೈಸುವುದರೊಂದಿಗೆ ಹಲವು ಬಗೆಯನ್ನು 17 ಪ್ರಮೀಳೆಯರ ನಾಡಿನಲ್ಲಿ ಅರಿಯದಿದ್ದರೆ ಅರ್ಥವೂ ಆಗದಷ್ಟು ಸಂಗೀತ ಮತ್ತು ನೃತ್ಯ ಪ್ರಕಾರಗಳನ್ನು ಮಣಿಪುರಿಗಳು ಅಳವಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ದಾಖಲಾಗುವಂಥವು ಇವು. ಗೌರ್ ಪಡಾಸ್ : ಇದೊಂದು ಭಕ್ತಿ ಪ್ರಧಾನ ಸಂಗೀತ ಪ್ರಕಾರವಾಗಿದ್ದು ಮೂಲತ: ಗುರುಗಳಾದ ಚೈತನ್ಯ ಮಹಾಪ್ರಭುಗಳ ಧೀಮಂತತೆಯನ್ನು ವಿವರಿಸುವ ಹಾಗು ಅವರ ಉದಾತ್ತತೆಯನ್ನು ಸ್ಮರಿಸುವ ಸಂಗೀತ ಪ್ರಾಧಾನ್ಯತೆ ಇದರಲ್ಲಿದೆ. ಭಕ್ತಿಯಲ್ಲಿ ಮೀಯುವ ಮತ್ತು ತಾದಾತ್ಮ್ಯತೆಯನ್ನು ಹೊಂದುವ ವಿಷಯಕ್ಕೆ ಇಲ್ಲಿ ಪ್ರಾಧಾನ್ಯತೆ. ಮನೋಹರ್ ಶಾಯಿ : ಡ್ರಮ್ಸ್ ಮತ್ತು ಬಿದಿರಿನ ವಿಶಿಷ್ಟ ವಾದ್ಯದ ಜೊತೆಯಲ್ಲಿ ಸಂಗೀತವನ್ನು ನುಡಿಸುವ ಮನೋಹರ್ ಶಾಯಿ.. ಪ್ರೇಮ ಗೀತೆಗಳ ಪ್ರಕಾರ ಇದು. ಹಳೆಯ ಐತಿಹಾಸಿಕ ಪ್ರೇಮ ಕಥೆಗಳನ್ನು (ಜಾನಪದೀಯ ಶೈಲಿ ಎನ್ನಬಹುದು) ಶೃಂಗಾರಾತ್ಮಕವಾಗಿ ಹಾಡಲಾಗುತ್ತದೆ. ಲೈ ಹರೋಬಾ ಇಶಾಯಿ : ಏರುಮಟ್ಟದ ಡ್ರಮ್ಸ್‍ಗಳ ನಿನಾದದಲ್ಲಿ ಹಾಡುವ ಮತ್ತು ನೃತ್ಯ ಮಾಡುವ ಲೈ ಹರೋಬಾದಲ್ಲಿ ನೈಜವಾದ ಹಾಡಿನ ಅರ್ಥವನ್ನು ದ್ವಂದ್ವಾರ್ಥದಲ್ಲಿ ತಿಳಿಸಲಾಗುತ್ತದೆ. ಅಲ್ಲಲ್ಲಿ ಒಮ್ಮೆಲೆ ಡ್ರಮ್‍ಗಳನ್ನು ನಿಲ್ಲಿಸಿ ಚಪ್ಪಾಳೆಯ ಏರುಗತಿಯನ್ನು ಬಳಸಿಕೊಳ್ಳುವ ದೊಡ್ಡ ದೊಡ್ಡ ಗುಂಪಿನ ನೃತ್ಯ ಪ್ರಕಾರ. ಥೌಬಾಲ್ ಚೊಂಗ್ಬಾ : ಜಾನಪದೀಯ ಕಥೆಗಳ ಆಧಾರಿತ ಸಂಗೀತ ಪ್ರಕಾರ, ಸ್ಥಳೀಯ ವಾದ್ಯ ಆಧಾರಿತವಾಗಿದೆ. ಆಯಾ ಪ್ರಾಂತ್ಯವಾರು ಆಯಾ ಸ್ಥಳೀಯ ನಾಯಕರ ಕಥೆಗಳನ್ನು ಹಾಡುಗಳಲ್ಲಿ ಅಳವಡಿಸಲಾಗಿದ್ದು, ಅಷ್ಟ ರಸಗಳನ್ನು ಪ್ರಸ್ತುತಪಡಿಸುತ್ತಾರೆ. (ನಮ್ಮ ಕಡೆಯ ಸಂಗ್ಯಾ- ಬಾಳ್ಯಾ ಇದ್ದಂತೆ.) ಪ್ರಮೀಳೆಯರ ನಾಡಿನಲ್ಲಿ 18 ಪೇನಾ ಇಶಾಯಿ : ಪೇನಾ ಎನ್ನುವ ಬಿದಿರಿನ ಸಂಗೀತ ವಾದ್ಯವನ್ನು ಬಳಸಿ ನುಡಿಸುವ ಸಂಗೀತ. ಖುಲ್ಲಾಂಗ್ ಇಶಾಯಿ : ಇದೊಂದು ಸಹಜವಲ್ಲದ ಸಂಗೀತ ಪ್ರಕಾರವಾಗಿದ್ದು ಕೇವಲ ಭತ್ತದ ಗದ್ದೆಗಳಲ್ಲಿ ಮತ್ತು ಶ್ರಮದ ತೋಟಗಾರಿಕೆಯ ಕೆಲಸದಲ್ಲಿ ನುಡಿಸುವ, ಹಾಡುವ ಸಂಪ್ರದಾಯಬದ್ಧ ಸಂಗೀತವಾಗಿದೆ. ಅದರಿಂದಾಗಿ ಜನಪ್ರಿಯತೆಯ ದೃಷ್ಟಿಯಿಂದ ಇದು ಅಷ್ಟೇೂಂದು ಪ್ರಸಿದ್ಧಿ ಪಡೆದಿಲ್ಲವಾದರೂ ಇದನ್ನು ನುಡಿಸದೆ ಉಳಿದ ಮಣಿಪುರಿ ಇಲ್ಲ. ಹಳೆಯ ತಲೆಮಾರಿಗೆ ಕೃಷಿಯ ಕಾಯಕದಲ್ಲಿ ಅತ್ಯಂತ ಖುಶಿಯಿಂದ ರಂಜಿಸುತ್ತಿದ್ದ ಸಂಗೀತದಲ್ಲಿ ಖುಲ್ಲಾಂಗ್ ಇಶಾಯಿಗೆ ಅಗ್ರ ಸ್ಥಾನವಿದೆ. ನಾಟ್: ಮಣಿಪುರಿಗಳ ಅತ್ಯಂತ ಶಾಸ್ತ್ರೀಯ ಸಂಗೀತ ಪ್ರಕಾರವಾಗಿದ್ದು ಇದನ್ನು ಸಾಮಾನ್ಯವಾಗಿ ಮನೆ ಗೃಹ ಪ್ರವೇಶ, ಮಗುವಿನ ನಾಮಕರಣ, ಮದುವೆಯ 19 ಪ್ರಮೀಳೆಯರ ನಾಡಿನಲ್ಲಿ ದಿನಗಳಲ್ಲಿ ಮತ್ತು ವಾರ್ಷಿಕೋತ್ಸವದಂತಹ ಉತ್ಸವಗಳಲ್ಲಿ ಹಾಡುವ ಸಂಪ್ರದಾಯ ಬದ್ಧ ಸಂಗೀತ ಇದಾಗಿದೆ. ಇದಲ್ಲದೆ ಧೋಬ್ ಮತ್ತು ನಾಪಿ ಪಾಲಾ ಎನ್ನುವ ಸಂಗೀತಗಳು ಒಳ ನಾಡಿನ ಬುಡುಕಟ್ಟುಗಳಲ್ಲಿ ತುಂಬಾ ಪ್ರಸಿದ್ಧಿಯಾಗಿದೆ. ಇದಲ್ಲದೆ ಸ್ಥಳೀಯವಾಗಿ ಪ್ರಸಿದ್ಧಿಯಾದ ವಾದ್ಯಗಳೆಂದರೆ ಹೀಗಿವೆ. 1. ಪುಂಗ (ನಮ್ಮ ಕಡೆಯ ಮೃದಂಗದಂತಿದೆ) 2. ಕರ್ಟಾಲ್ ಮತ್ತು ಮಂಜಿಲ್ಲಾ 3. ಹಾರ್ಮೊನಿಯಂ (ಕಾಲ್ಪೆಟ್ಟಿಗೆ ) 4. ಅಡ್ಡಕೊಳಲು (ಬಾನ್ಸುರಿ ) 5. ಈಸ್ರಾಜ್ (ಬಿದಿರಿನ ವಾದ್ಯ) 6. ಪೇನಾ (ಸಣ್ಣ ಕೊಳಲು) 7. ಝಾಲ್ (ಪೀಪಿ ವಾದ್ಯ) 8. ಶಂಕು (ಕೋಂಚ) ಈ ಎಲ್ಲಾ ವಾದ್ಯಗಳನ್ನು ತುಂಬಾ ಶ್ರದ್ಧೆಯಿಂದಲೂ ಮತ್ತು ನಿರಂತರವಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಬಳಸುವುದು ಮಣಿಪುರಿಗಳಲ್ಲಿ ಹಾಸುಹೊಕ್ಕಾಗಿದೆ. ಅದರಲ್ಲೂ ಪೇನಾ ಎನ್ನುವ ಬಿದಿರಿನ ಪೊಳ್ಳಾದ ಕೋಲಿಗೆ ಖಾಲಿಯಾದ ತೆಂಗಿನ ಬುರುಡೆಯನ್ನು ಕಟ್ಟಿ ಸಂಗೀತ ಹೊರಡಿಸುವ ವಾದ್ಯದ ಸಂಗೀತ ಜನಪ್ರಿಯತೆಯ ತುತ್ತ ತುದಿಯಲ್ಲಿದೆ. ಖಾಲಿ ಬುರುಡೆಗೊಂದು ತೂತು ಕೊರೆದು ಅದರಲ್ಲಿಂದ ತಂತಿಯ ಸಹಾಯದಿಂದ ಸ್ಪ್ರಿಂಗ್ ಮಾಡಿ ಬಿದಿರಿನ ಕೋಲಿಗೆ ಬಿಗಿದು ಅದನ್ನು ಶಬ್ದದ ನಾದ ಹೊರಡಿಸಲು ಬಳಸುವ ಪದ್ಧತಿ ತುಂಬಾ ಜನಪ್ರಿಯ. ನಮ್ಮಲ್ಲಿ ಮನೆ ಮನೆ ಎದುರಿಗೆ ನುಡಿಸುತ್ತಾ ಬರುವ ಸಂಗೀತ ಸಾಧನವಿದೆಯಲ್ಲ (ತಂಬೂರಿ) ಹಾಗಿರುತ್ತದೆ. ಇದನ್ನು ಚೆಂದ ಮತ್ತು ಒಪ್ಪ ಪ್ರಮೀಳೆಯರ ನಾಡಿನಲ್ಲಿ 20 ಓರಣವಾಗಿರಿಸಿ ಅಲಂಕರಣಗೊಳಿಸಲು ಕುದುರೆಯ ಬಾಲದ ಕೂದಲಿನಿಂದ ಶೃಂಗಾರ ಮಾಡಲಾಗಿರುತ್ತದೆ. ಮಣಿಪುರದ ಸಂಸ್ಕೃತಿ ಮತ್ತು ನಾಡಿನ ಚೆಂದವನ್ನು ಅರಿಯಬೇಕಾದಲ್ಲಿ ನಕಾಶೆ ಇಲ್ಲದೆ ತಿರುಗಾಡಬೇಡ ಎನ್ನುವುದನ್ನು ಅಲ್ಲಲ್ಲಿ ನಮೂದಿಸಲಾಗಿದ್ದು ಅಕ್ಷರಶ: ನಿಜ. ಕಾರಣ ನಾಡಿನ ಪ್ರತಿ ಐವತ್ತು ಕಿ.ಮೀ.ಗೊಮ್ಮೆ ಬದಲಾಗುವ ಸಂಸ್ಕೃತಿ ಮತ್ತು ಹಬ್ಬ ಸಡಗರಗಳು ನಮ್ಮನ್ನು ದಿಕ್ಕುತಪ್ಪಿಸುತ್ತವೆ. ತುಂಬ ಚೆಂದದ ಜೀವನವನ್ನು ಅನುಭವಿಸುವ ಮಿಥೀಸ್‍ಗಳಿಗೆ ಇಲ್ಲಿ ಯಾವಾಗ ನೋಡಿದರೂ ಬದುಕು ಒಂದು ಸಂಭ್ರಮವೇ. ಊರಿನ ವೈಪರೀತ್ಯಗಳು, ಬದುಕಿನ ಜಂಜಡಗಳು, ಹವಾಮಾನದ ವೈಪರೀತ್ಯಗಳು, ದೇಶದ ವಿದ್ಯಮಾನಗಳು, ಅಕಾಲಿಕ, ನೆರೆ ಅಥವಾ ನೈಸರ್‌ಗಿಕ ವಿಕೋಪ, ನಿರಂತರವಾಗಿ ಸೈನ್ಯದ ನೆರಳಲ್ಲೇ ಬದುಕುತ್ತಿರುವ, ಅಕಾಲಿಕ ಎಲ್ಲೆಂದರಲ್ಲೆ ಅವರನ್ನು ತಡೆದು ಪರೀಕ್ಷಿಸುವ, ಇದ್ದಕ್ಕಿದ್ದಂತೆ ಸಿಡಿದುಬಿಡುವ ಬಾಂಬುಗಳು, ಆಗೀಗ ಬಂದೆರಗುವ ಮೃತ್ಯುಭಯ ಇವ್ಯಾವುದಕ್ಕೂ ಇವರ ಸಂತೋಷವನ್ನು ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಇಲ್ಲಿ ಪ್ರತಿ ತಿಂಗಳೂ ಎಲ್ಲಿ ಯಾವ ಹಬ್ಬ ಇದೆ.. ಆಚರಣೆ ಇದೆ.. ಸಂಭ್ರಮ ಇದೆ.. ಸಂತಸ ಇದೆ ಎನ್ನುವುದನ್ನು ಅರಿಯಲು ಕ್ಯಾಲೆಂಡರೂ ಜೊತೆಗೊಂದು ನಕಾಶೆಯನ್ನೂ ಇಟ್ಟುಕೊಂಡೇ ಓಡಾಡಬೇಕಾಗುತ್ತದೆ. ಪ್ರತಿ ಹಬ್ಬವನ್ನು ಆಮೋದದಿಂದ ಬರಮಾಡಿಕೊಳ್ಳುವ ಬದುಕಿನ ಸಡಗರ ಪೂರ್ತಿ ಸಂಗೀತ ನೃತ್ಯ ಮತ್ತು ಹಬ್ಬಗಳೊಂದಿಗೆ ಮಿಳಿತಗೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಗೌಶಾಂಗ್ : ಗೌಶಾಂಗ್ ಎನ್ನುವ ಸಡಗರದ ಹಬ್ಬ ಬಹುಶ: ಮಣಿಪುರಿಗಳ ಜೀವನಾಡಿಯಂತಿದೆ. ಪ್ರತಿ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬಕ್ಕೆ ಮುಂಚಿತ ಅಥವಾ ಹಿಂದಿನ ಐದು ದಿನಗಳನ್ನು ಮೀಸಲಿಡಲಾಗಿರುತ್ತದೆ. ಆ ಸಮಯದಲ್ಲಿ ಎಗ್ಗಿಲ್ಲದೆ ನಡೆಯುವ ಬುಡಕಟ್ಟು ಜನಾಂಗದ ನೃತ್ಯವಾದ ಚೊಂಗ್ಬಾ ಜನಪದೀಯ ನೃತ್ಯ 21 ಪ್ರಮೀಳೆಯರ ನಾಡಿನಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ವೃತ್ತಾಕಾರವಾಗಿ ಕ್ರಿಡಾಂಗಣದಲ್ಲಿ ಗಂಡು ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ನರ್ತಿಸುವ ಈ ಕಾರ್ಯಕ್ರಮ ಅತಿ ದೊಡ್ಡ ಆಕರ್ಷಣೆ. ಇದನ್ನು ಇತ್ತಿಚೆಗೆ ಪ್ರವಾಸೋದ್ಯಮದಲ್ಲಿ ಸೇರಿಸಲಾಗುತ್ತಿದ್ದು ಜನ ಇದಕ್ಕಾಗಿಯೇ ಮುಗಿಬೀಳುತ್ತಿದ್ದಾರೆ. ಬುಡಕಟ್ಟಿನ ಪ್ರಮುಖ ಪಾಳೆಯಗಳಾದ ಮಿಥೀಸ್. ಕುಕಿ, ನಾಗ, ಕುಬೈಸ್, ಥಾಂಗ್ಖುಲ್, ಲಿಂಗ್ಮೈ, ಮರಮ್, ಥಂಗಾಲ್, ಮಾರಿಂಗ್, ಜೆಮ್ಸಿ, ಅನಾಲ್, ಮೊಯನ್ ಮತ್ತು ಇನ್ನಿತರ ಒಳ ಪಂಗಡಗಳಿಗೆಲ್ಲ ಈ ಸಂಪ್ರದಾಯ ಹಾಸು ಹೊಕ್ಕಾಗಿದ್ದು ಇದನ್ನು ಪಾಲಿಸಲು ಯಾವುದೇ ಒತ್ತಡವಿಲ್ಲ. ಆದರೆ ಬಿಡದೆ ಅನುಸರಿಸುವಂತಹ ಸಹಜ ಅಭ್ಯಾಸ ಜೀವನಾನುಕ್ರಮದಲ್ಲಿ ಇದು ಸೇರಿಹೋಗಿದೆ. ಅಚ್ಚರಿಯೆಂದರೆ ಈ ಎಲ್ಲಾ ಸಮುದಾಯಗಳಲ್ಲೂ ಮಹಿಳೆಯರದೇ ಪ್ರಾಬಲ್ಯ ಹಾಗು ಕುಟುಂಬ ಪದ್ಧತಿಯಲ್ಲಿ ಅವರದ್ದೇ ಪಾರುಪತ್ಯೆ ಎದ್ದು ಕಾಣುತ್ತದೆ. ಚೆರಿಯೋಬಾ: ಚೆರಿಯೋಬಾ ಹಬ್ಬ ಎಪ್ರಿಲ್‍ನಲ್ಲಿ ಆಚರಿಸಲಾಗುತ್ತಿದ್ದು, ಇದಕ್ಕಾಗಿ ಪ್ರತಿ ವರ್ಷ ಮನೆ ಮಠವನ್ನೆಲ್ಲಾ ಸ್ವಚ್ಛಗೊಳಿಸಿ ಆಚರಿಸುವ ಸಂಪ್ರದಾಯ ಸಾಮಾನ್ಯ. ಇತರೆ ಹಬ್ಬಗಳಂತೆ ಇದ್ದರೂ ಇಂತಿಷ್ಟು ಪಾಲು ದಾನ ಕೊಡಬೇಕೆನ್ನುವುದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ಹಬ್ಬವನ್ನು ಮಣಿಪುರದಲ್ಲಿರುವ ಎಲ್ಲಾ ಹಿಂದೂ, ಮುಸ್ಲಿಂ ಧರ್ಮ ಸೇರಿದಂತೆ ಸರ್ವ ಧರ್ಮದವರೂ ಆಚರಿಸುತ್ತಾರೆ. ಗಂಗನಾಗೈ : ಗಂಗನಾಗೈ ಎನ್ನುವ ಹಬ್ಬದ ಅಚರಣೆ ಡಿಸೆಂಬರ್ ಅಥವಾ ಜನೇವರಿ ಮೊದಲ ಭಾಗದಲ್ಲಿ ಆಚರಿಸಲಾಗುತ್ತಿದ್ದು, ಇದಕ್ಕಾಗಿ ವಿಶೇಷ ಪೂಜೆ ಪ್ರಾರ್ಥನೆಗಳ ತಯಾರಿ ನಡೆಯುತ್ತದೆ. ಹಳೆಯ ತಲೆ ಮಾರಿನ ಹಿರಿಕರನ್ನು ಅವರ ಆತ್ಮಗಳನ್ನು ಗೌರವಿಸುವ ಅವರಿಗೆ ನೈವೇದ್ಯವನ್ನು ಅರ್ಪಿಸುವ ಮೂಲಕ ಆಚರಿಸಲಾಗುತ್ತದೆ. ಮೊದಲ ದಿನ ಪೂರ್ತಿ ಉಪವಾಸ ಇದ್ದು ಗೌರವ ಸಮರ್ಪಿಸುವ ಮೂಲಕ ಆದರಿಸುವ ಈ ಹಬ್ಬದಲ್ಲಿ ನಂತರದ ಮೂರು ದಿನಗಳನ್ನು ಅಧ್ಬುತವಾದ ಸಂಭ್ರಮಾಚರಣೆಯಿಂದ ನಡೆಸುತ್ತಾರೆ. ಎಂದಿನಂತೆ ಪ್ರಮೀಳೆಯರ ನಾಡಿನಲ್ಲಿ 22 ತರತರಹದ ಸಂಗೀತ ನೃತ್ಯ ಇಲ್ಲಿ ಪ್ರಮುಖ ಆಚರಣೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಕುಟ್ : ಅತ್ಯಂತ ಜನಪ್ರಿಯ ಕುಟ್ ಎನ್ನುವ ಹಬ್ಬವನ್ನು ನಿರ್ದಿಷ್ಟವಾಗಿ ನವಂಬರ್ 1 ರಂದು ಆಚರಿಸಲಾಗುತ್ತಿದ್ದು, ಕುಕಿ, ಚಿನ್, ಮಿಝೊ ಸಮುದಾಯದವರು ಇದರ ಪ್ರಮುಖ ಸಂಭ್ರಮಕಾರರು. ಇದೊಂದು ರೀತಿಯಲ್ಲಿ ಬೈಸಾಖಿ ಹಬ್ಬದ ಹೋಲಿಕೆಯನ್ನು ಹೊಂದಿದ್ದು ಸಂಗೀತಕ್ಕಿಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇದ್ದೇ ಇದೆ. ಕುಕಿಗಳಲ್ಲದೆ "ಅಬೋರಿಜಿನಲ್" ಮತ್ತು "ಚವಾಂಗ ಕುಟ್" ಜೊತೆಗೆ "ಖೊಡೌ" ಸಮುದಾಯಗಳಲ್ಲಿ ಇದಕ್ಕೆ ಪ್ರಮುಖ ಪ್ರಾಧಾನ್ಯತೆ. ಕುಕಿಗಳ ಬುಡಕಟ್ಟು ಆಟೋಟಗಳ ಪ್ರದರ್ಶನ ಕೂಡಾ ಇಲ್ಲಿ ನಡೆಯುತ್ತಿರುತ್ತದೆ. ಕಂಗ್ : ಇದೊಂದು ಅಪ್ಪಟ ಹಿಂದೂಗಳಾಗಿರುವ ನಿರ್ದಿಷ್ಟ ಸಮುದಾಯದ ಮಿಥೀಸ್‍ಗಳು ಆಚರಿಸುತ್ತಿರುವ ಪ್ರಮುಖ ಹಬ್ಬ. ಇನ್ನೊಂದು ರೀತಿಯಲ್ಲಿ ಇದಕ್ಕೆ ನೇರವಾಗಿ ರಥಯಾತ್ರೆ ಎಂದೂ ಹೇಳಬಹುದು. ಗೋವಿಂದ ಜೀ ದೇವಸ್ಥಾನ ಇದರ ಪ್ರಮುಖ ನೆಲೆಯಾಗಿದ್ದು ಇಲ್ಲಿಂದ ದೇವರನ್ನು ರಥದ ಮೂಲಕ ನಗರದುದ್ದಕ್ಕೂ ಪ್ರದಕ್ಷಿಣೆ ಮತ್ತು ಮೆರವಣಿಗೆ ಮಾಡಲಾಗುತ್ತದೆ. ಅದಕ್ಕಾಗಿ ಇದರ ರಥ ಯಾತ್ರೆ ತುಂಬಾ ಪ್ರಸಿದ್ಧಿ. ಕಂಗ್ ಎಂದರೆ ದೇವರ ರಥ ಅಥವಾ ವಾಹನ ಎಂದಾಗಿದ್ದು ಇದನ್ನು ವಿಶೇಷ ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಇದು ಮಣಿಪುರಿ ಹಬ್ಬಗಳಲ್ಲೇ ಅತಿ ದೀರ್ಘವಾದ ಹಬ್ಬವಾಗಿದ್ದು ಸತತ ಹತ್ತು ದಿನ ಕಾಲ ಈ ಉತ್ಸವ ನಡೆಯುತ್ತಿದೆ. ಇದಕ್ಕಾಗಿ ಹಲವು ಮನರಂಜನಾ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗುತ್ತದೆ. ಇದೊಂದು ಸರ್ವಧರ್ಮದ ಹಬ್ಬವಾಗಿದ್ದು ನಾಡಿನಾದ್ಯಂತ ರಥ ಯಾತ್ರೆಯ ಮೂಲಕ ಆಚರಿಸಲಾಗುತ್ತದೆ. ಇಲ್ಲಿ ಒಂದು ವಿಷಯ ಗಮನಿಸಬೇಕು. ಅಪ್ಪಟ ಪೂರಿ ಜಗನ್ನಾಥ ರಥಯಾತ್ರೆಯ ಪ್ರಭಾವ ಇವರ ಮೇಲೆ ಅಥವಾ ಈ ಹಬ್ಬದ ಮೇಲೆ 23 ಪ್ರಮೀಳೆಯರ ನಾಡಿನಲ್ಲಿ ಆಗಿರುವುದು ತುಂಬಾ ಸ್ಪಷ್ಟ. ಅದೇ ಮಾದರಿಯಲ್ಲಿ ಪೂಜೆ ಇತ್ಯಾದಿಗಳೊಂದಿಗೆ ರಥಯಾತ್ರೆ ಮತ್ತು ಅದರ ತಯಾರಿಯು ನಡೆಯುತ್ತದೆ. ಒಟ್ಟಾರೆ ಸಂಪೂರ್ಣ ಮಣಿಪುರಿಗಳು ಹಬ್ಬ, ಸಂಗೀತ, ಸಂಪ್ರದಾಯ ಆಚರಣೆ, ಆದರಣೆ ಸಂಭ್ರಮಗಳಿಲ್ಲದೆ ಇರಲಾರರು. ಹಾಗಾಗೇ ವರ್ಷದುದ್ದಕ್ಕೂ ಇಲ್ಲಿ ಹಬ್ಬ ಹರಿ ದಿನಗಳದ್ದೇ ದೊಡ್ಡ ಪಾಲು. ನಾಡೂ ಬಣ್ಣ ಬಣ್ಣದ ಸಂಭ್ರಮದಲ್ಲಿ ತೇಲುತ್ತಿರುತ್ತದೆ. ಕಣಿವೆ ಮತ್ತು ಪರ್ವತಗಳ ರಾಜ್ಯ ಮಣಿಪುರದ ಹೆಚ್ಚಿನ ಜಿಲ್ಲೆಗಳನ್ನು ಒಂದೋ ಕಣಿವೆ ಜಿಲ್ಲೆ ಅಥವಾ ಪರ್ವತ ಪ್ರದೇಶ ಎಂದೇ ಗುರುತಿಸಲಾಗುತ್ತಿದೆ. ಕಾರಣ ಹೆಚ್ಚಿನವು ಗುಡ್ಡದ ಬುಡದಲ್ಲಿ ಬೆಳೆದಿದ್ದರೆ ಉಳಿದವು ಎರಡು ಪರ್ವತ ಪ್ರದೇಶದ ಸೀಳುದಾರಿಯಲ್ಲಿ ಬೆಳೆದು ಕಣಿವೆಯನ್ನು ಆಕ್ರಮಿಸಿವೆ. ಹೀಗಾಗಿ ಮಣಿಪುರ ಎನ್ನುವುದು ಪರ್ವತ ಪ್ರದೇಶದ ಸಂಕೀರ್ಣತೆಯಲ್ಲಿ ಹಂಚಿಹೋಗಿರುವ ಪ್ರದೇಶವಾಗಿದೆ. ಇದೊಂದು ಅಪ್ಪಟ ಕಣಿವೆ ರಾಜ್ಯವಾಗಿದ್ದು ನಮ್ಮ ಶಿರಾಡಿ ಘಾಟಿನ ಮಧ್ಯೆ ಊರು ಹೊರಳಿಸಿದರೆ ಹೇಗಿದೆಯೋ ಹಾಗೆ ಎರಡು ಪ್ರಮುಖ ಕಣಿವೆಯ ಸೆರಗಿನಲ್ಲಿ ಹರಡಿಕೊಂಡಿದೆ. ಕೇಂದ್ರ "ಇಂಫಾಲ ವ್ಯಾಲಿ" ಮತ್ತು "ಝಿರಿಬಮ್ ವ್ಯಾಲಿ"ಯ ಸಂದಿನಲ್ಲಿ ಅರಳಿರುವ ಪೂರ್ವ ಇಂಫಾಲ ಜಿಲ್ಲೆ ಭಾಗ ಅಪಾರ ಸೌಂದರ್ಯ ಮತ್ತು ಇದ್ದುದರಲ್ಲಿ ಅಧುನಿಕತೆಯತ್ತ ಮುಖ ಮಾಡಿರುವ ನಗರ. ರಾಷ್ಟ್ರೀಯ ಹೆದ್ದಾರಿ 39, 53 ಮತ್ತು 150 ನ್ನು ಹಂಚಿಕೊಂಡಿರುವ ಈ ಜಿಲ್ಲೆ ಸರಹದ್ದನ್ನು ಅಸ್ಸಾಂ ರಾಜ್ಯದ ಕಂಚಾರ್ ಜಿಲ್ಲೆಗೆ ತಾಗಿಕೊಂಡು ಬೆಳೆಯುತ್ತಿದೆ. ಚಳಿಗಾಲದಲ್ಲಿ ವಾಹ್.. ಎನ್ನಿಸುವ ಚಳಿಯನ್ನು ಅನುಭವಿಸಲು ದಕ್ಕುವ ಜಿಲ್ಲೆಗೆ ಕನಿಷ್ಠ 01 ರಷ್ಟು ಉಷ್ಣಾಂಶ, ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ 25 ಪ್ರಮೀಳೆಯರ ನಾಡಿನಲ್ಲಿ ರಮಣೀಯ ಕೊಡುಗೆ ನೀಡುತ್ತಿದೆ. ಹಳ್ಳಿ ಮತ್ತು ಪಟ್ಟಣದ ಕಡೆಯಲ್ಲಿ ಸಮಾನವಾಗಿ ಹಂಚಿಹೋಗಿರುವ ಜನಸಂಖ್ಯೆ ಒಟ್ಟು ಜಿಲ್ಲೆಯಲ್ಲೇ ನಾಲ್ಕು ಲಕ್ಷ ದಾಟುತ್ತಿಲ್ಲ. ಆದರೆ ಸಾಕ್ಷರತೆಯಲ್ಲಿ ಶೇ.68 ಪ್ರಗತಿ ಸಾಧಿಸಿದ್ದಾರೆ. ಲಭ್ಯವಿರುವ ಜಾಗದಲ್ಲೆಲ್ಲಾ ಕೃಷಿಯನ್ನು ಬೆಳೆಸುತ್ತಿರುವ ಸ್ಥಳೀಯರಿಗೆ ಕಬ್ಬು, ಭತ್ತ ಮತ್ತು ಬಟಾಟೆ ಜೊತೆಗೆ ಶುಂಠಿ, ಅರಿಷಿಣ ಪ್ರಮುಖ ವಾಣಿಜ್ಯ ಬೆಳೆಗಳಾಗಿ ಫಲ ನೀಡುತ್ತಿವೆ. ಸುಮಾರು 60 ಸಾವಿರದಷ್ಟು ಜನ ಜಿಲ್ಲೆಯಲ್ಲಿ ಕೃಷಿಯನ್ನೇ ಅವಲಂಬಿಸಿದ್ದು ಅದರಲ್ಲೂ 40 ಸಾವಿರದಷ್ಟು ಮಹಿಳೆಯರದ್ದೆ ಸಿಂಹಪಾಲು. "ನಗ್ರಿಯಾನ್ ಪರ್ವತ" ಪ್ರದೇಶದಲ್ಲಿ ಯಥೇಚ್ಛವಾಗಿ "ಅನಾನಸು" ಬೆಳೆಯುತ್ತಿದ್ದು, (ದಾರಿಯ ಮೇಲೆ ಎಲ್ಲೇ ಹೋದರೂ ಅಲ್ಲೊಂದು ಚಿಕ್ಕ ಗುಡಿಸಲು ಮತ್ತು ಅದರಲ್ಲಿ ಹೂಡಿಕೊಂಡು ಮಾರಾಟಕ್ಕೆ, ಕುಳಿತಿರುವ ಅನಾನಸಿನ ಗುಡ್ಡೆ ಆಯಾ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ). ಜೊತೆಗೆ ಬಾಳೆಹಣ್ಣು, ಪಪ್ಪಾಯ ಮತ್ತು ನಿಂಬೆಹಣ್ಣಿಗೂ ಈಗೀಗ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಅಂದ ಹಾಗೆ ಅನಾನಸು ಬೆಳೆಯುವ ವೈಖರಿಯನ್ನು, ಮಹಿಳೆಯರ ಗದ್ದೆಯ ಸಂಭ್ರಮ ಇಲ್ಲಿ ನೋಡಿಯೇ ಅನುಭವಿಸಬೇಕು. ಒಂದಷ್ಟು ಇತ್ತೀಚಿನ ಮಾಹಿತಿ "ಚಾಂಡೆಲ್" ಎನ್ನುವ ಜಿಲ್ಲೆಯದ್ದು ಹೀಗಿದೆ ನೋಡಿ ಬೆಳೆಗಳು ಪ್ರತಿ ಹೆಕ್ಟೇರ್‌ಗೆ ವಾರ್ಷಿಕ ( ಮೆ.ಟ) ಅನಾನಸು 650 3,700 ಬಾಳೆಹಣ್ಣು 50 392 ನಿಂಬೆ ಹಣ್ಣು 56 224 ಪಾಂ/ ಚೆರ್ರಿ 30 180 ಪಪ್ಪಾಯಿ 230 1,150 ಮಾವಿನ ಹಣ್ಣು 12 60 ಗೌವಾ ಇತ್ಯಾದಿ 30 138 ಪ್ರಮೀಳೆಯರ ನಾಡಿನಲ್ಲಿ 26 ಇವೆಲ್ಲದಕ್ಕಿಂತಲೂ ಪ್ರಮುಖ ಆಕರ್ಷಣೆಯಾಗಿ ಇಂಫಾಲ ಖ್ಯಾತಿಗೆ ಬಂದಿದ್ದು ತನ್ನಲ್ಲಿನ ಎರಡು ಪ್ರಮುಖ ಪ್ರವಾಸಿ ತಾಣಗಳ ಮೂಲಕ, ಅದರಲ್ಲೂ ಪ್ರಮುಖವಾಗಿ ಖೈನಾ ಮತ್ತು ಝಿರೀಬಮ್ ವ್ಯಾಲಿ. ಖೈನಾ ಎನ್ನುವುದು ಹಿಂದೂಗಳ ಪ್ರಮುಖ ಶಕ್ತಿ ಕೇಂದ್ರವಾಗಿ ಗುರುತಿಸಲ್ಪಟ್ಟಿದ್ದು, ಹಳೆಯ ಗೋವಿಂದಾಜೀ ದೇವಸ್ಥಾನ ಇಲ್ಲಿನ ಮುಖ್ಯ ಆಕರ್ಷಣೆ. ಇದರೊಂದಿಗೆ ಮಹಾಬಲಿ ಹಾಗು ಹನುಮಾನ ದೇವಸ್ಥಾನಗಳು ಪ್ರಮುಖ ಆಕರ್ಷಣೆಯ ಸ್ಥಳಗಳು. ಈ ದೇವಸ್ಥಾನ ಮತ್ತು ಕಾಡುದಾರಿಯಂತಹ ಪರ್ವತ ಪ್ರದೇಶದ ಆವರಣ ಇವುಗಳಿಗೆ ವಿಶೇಷ ವಿನ್ಯಾಸವನ್ನು ಕಲ್ಪಿಸಿದೆ. ಇಲ್ಲಿ ಇಂಫಾಲದ ಸ್ಥಳೀಯ ಪ್ರವಾಸದ ಬಗ್ಗೆ ಹೇಳಬೇಕೆಂದರೆ ಪ್ರವಾಸಿಗರು ಮಣಿಪುರದಲ್ಲಿ ಏನು ನೋಡಬೇಕು ಮತ್ತು ಯಾವ ರೀತಿಯ ಪ್ರವಾಸ ಕೈಗೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಮಯವನ್ನು ನಿಗದಿಪಡಿಸಬೇಕಾಗುತ್ತದೆ. ಕಾರಣ ಹೆಚ್ಚಿನ ಇಂಫಾಲದ ನಗರದ ಭಾಗ ಹೊರತುಪಡಿಸಿದರೆ ಸಾಮಾನ್ಯ ಪ್ರವಾಸಿಗರು ಆಯ್ದುಕೊಳ್ಳಬಹುದಾದಂತಹ ಯಾವುದೇ ಭಾಗಗಳು ಈ ರಾಜ್ಯದಲ್ಲಿ ಇಲ್ಲ. ಕಾರಣ ಬುಡಕಟ್ಟು ಜನಾಂಗ, ಒಳಭಾಗದ ಸಮುದಾಯಗಳು, ಕಾಡು ಮೇಡು.. ಮೂಲ ನಿವಾಸಿಗಳ ಸ್ಥಳ ವೀಕ್ಷಣೆ ಇವೆಲ್ಲದಕ್ಕಾದರೆ ವಾರಗಟ್ಟಲೆ ಇದ್ದರೂ ಸಾಲುವುದಿಲ್ಲ. ಕಾರಣ ದಿನಕ್ಕೊಂದು ಸ್ಥಳವನ್ನು ಮಾತ್ರ ಇಲ್ಲಿ ಸಂದರ್ಶಿಸಬಹುದಾಗಿದ್ದು ನಾವು ಕೂತಲ್ಲಿಂದಲೇ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಎಂದೆಲ್ಲಾ ಹಾಕುವ ಲೆಕ್ಕಾಚಾರಗಳು ನೈಜ ವಾದದಲ್ಲಿ ತುಂಬಾ ದುಬಾರಿಯಾಗಿ ಪರಿಣಮಿಸುವುದು ಗ್ಯಾರಂಟಿ. ಹೆಚ್ಚಿನ ಪ್ರದೇಶಗಳೂ ಮತ್ತು ನೋಡಬೇಕಾದ ಅಥವಾ ಸಂದರ್ಶಿಸಲೇ ಬೇಕಾದ ಸ್ಥಳಗಳು ನಮ್ಮ ನಿಲುವಿನಿಂದ ತುಂಬಾ ದೂರವೇ ಇರುವುದರಿಂದ ಕಾಗದದ ಲೆಕ್ಕಾಚಾರಕ್ಕೂ ವಾಸ್ತವಕ್ಕೂ ತುಂಬಾ ವ್ಯತ್ಯಾಸ ಬೀಳುತ್ತದೆ. ಇನ್ನು ಕೇವಲ ಇಂಫಾಲ ನಗರ ಮತ್ತು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಕೇವಲ ಎರಡು ದಿನಗಳು ತುಂಬಾ ಸಾಕಾಗುತ್ತದೆ. 27 ಪ್ರಮೀಳೆಯರ ನಾಡಿನಲ್ಲಿ ಕಾರಣ ಸ್ಥಳೀಯವಾಗಿ ಎಲ್ಲೆಲ್ಲೂ ಹತ್ತು ರೂಪಾಯಿಗಳ ಆಟೋರಿಕ್ಷಾಗಳ ಸವಾರಿ ನಮ್ಮನ್ನು ಒಂದು ಕಡೆಯಿಂದ ಇನ್ನೊಂದು ಕಡೆವರೆಗೆ ಒಯ್ದುಬಿಡುತ್ತವೆ. ಯಾವ ಕಡೆಗೆ ಬೇಕಾದರೂ ಇಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲು ನಗರ ಸೈಕಲ್ ರಿಕ್ಷಾ ಮತ್ತು ಆಟೋ ರಿಕ್ಷಾ ಅನುಕೂಲಕರವಾಗಿ ಇವೆ. ಆದರೆ ಗೊತ್ತಿಲ್ಲದೆ ವ್ಯವಹಾರಕ್ಕಿಳಿದರೆ ಎಲ್ಲಿಗೆ ಕೈಯಿಟ್ಟರೂ ನೂರು ರೂಪಾಯಿ ಎನ್ನುತ್ತಾರೆ. ಮೂಲತ: ಇಂಫಾಲದಲ್ಲಿ ಇರುವ ಸ್ಥಳೀಯ ಸ್ಥಳಗಳನ್ನು ಹೀಗೆ ಪಟ್ಟಿ ಮಾಡಬಹುದು. 1. ಕಂಗ್ಲಾ ಅರಮನೆಯ ಆವರಣ. 2. ಅದರ ಒಳಗಡೆಯೇ ಇರುವ ಕಂಗ್ಲಾ ಮ್ಯೂಸಿಯಂ. 3. ಗೋವಿಂದಾಜಿ ದೇವಸ್ಥಾನ. 4. ಮೂಲ ರಾಜ ಮನೆತನದ ಪಖಾಂಗ್ಬಾ ದೇವರ ಆವಾಸ. 5. ನೀರಿನ ಕಾಲುವೆ ಪದ್ಧತಿಯ ಸಂರಕ್ಷಿತ ಪ್ರದೇಶ. 6. ಅಲ್ಲಲ್ಲಿ ಆಯಾ ರಾಜರುಗಳ ಸಮಾಧಿ ಪ್ರದೇಶ 7. ಎರಡನೆಯ ಮಹಾಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥ ನಿರ್ಮಿತವಾಗಿರುವ "ವಾರ್ ಸಿಮಿಟ್ರಿ" 8. ಚಿಕ್ಕ ಶಾಂಘೈ ಜಿಂಕೆಗಳಿರುವ ಪ್ರಾಣಿ ಸಂಗ್ರಹಾಲಯ. 9. ಇಮಾ ಮಾರುಕಟ್ಟೆ. 10. ವಿಶ್ವದ ಅತ್ಯಂತ ಪುರಾತನ ಪೋಲೋ ಮೈದಾನ. 11. ಟಿಕೇಂದ್ರಜೀತ್ ಸಿಂಗ್ ಉದ್ಯಾನ. 12. ನುಪಿ ಭವನ. 13. ಸ್ಥಳೀಯ ಖರೀದಿಗಾಗಿ ಇಮಾ ಬಝಾರ್. 14. ಹೆಚ್ಚಿನ ಶೋಕಿಗಾಗಿ ಪಾವಣಾ ಬಝಾರ್. ಪ್ರಮೀಳೆಯರ ನಾಡಿನಲ್ಲಿ 28 ಹೀಗೆ ಅಲ್ಲಲ್ಲಿ ನಗರದಲ್ಲೇ ಸೇರಿಹೋಗಿರುವ ಇವುಗಳಲ್ಲಿ ಹೆಚ್ಚಿನವು ನಡೆದೇ ಪೂರೈಸಿ ಬಿಡಬಹುದಾದ ಅಂತರದಲ್ಲಿ ಲಭ್ಯವಾಗುತ್ತವೆ. ವಾರ್ ಸಿಮಿಟ್ರಿ : ಬಹುಶ: ಇದು ಮಣಿಪುರದ ಇತಿಹಾಸದಲ್ಲೇ ಅತ್ಯಂತ ಯಾತನಾದಾಯಕ ಮತ್ತು ಕರಾಳ ಅಧ್ಯಾಯ ಎಂದರೂ ತಪ್ಪಿಲ್ಲ. ಕಾರಣ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಇಲ್ಲಿನ ಜನರನ್ನು ಮತ್ತು ಮಣಿಪುರವನ್ನು ಆಕ್ರಮಿಸಿದ್ದ ಜಪಾನಿಯರನ್ನು ಹಿಮ್ಮೆಟಿಸಲು, ಆಚೆ ಕಡೆಯಿಂದ ರಂಗೂನ್ ಕಡೆಯ ದಾಳಿಯನ್ನು ಸಮರ್ಥವಾಗಿ ಎದುರಿಸಲು ನಡೆಸಿದ ಸಮಯದಲ್ಲಿ ಅವರಿದ್ದರು. ಅವರ ಬದುಕಿನ್ನು ಆರಂಭವಾಗಿರಲೇ ಇಲ್ಲ. "ನೋಡು ಸ್ಯಾಮ್.. ಇವರಲ್ಲಿ ಅರ್ಧಕ್ಕಿಂತ ಕಮ್ಮಿ ಜನರಿಗೆ ಮದುವೆನೂ ಆಗಿರಲಿಲ್ಲ. ಎ ಷ್ಟೊ ಜನಕ್ಕೆ ಆಗ ಷ್ಟೆ ಮದುವೆ ಆಗಿದ್ದರೆ ಉಳಿದವರಲ್ಲಿ ಅರ್ಧದಷ್ಟು ಜನರಿಗೆ ಮದುವೆ ಫಿಕ್ಸ್ ಆಗಿತ್ತು. ಒಟ್ಟಾರೆ ಇವರೆಲ್ಲರ ಬದುಕೂ ಇನ್ನೇನು ಅರಳುವ ಹಂತದಲ್ಲಿತ್ತು. ಆಗಲೇ ಮುಗಿದುಹೋಗಿದ್ದು ಇತಿಹಾಸದ ದುರಂತ ಎಂದರೆ ಸಣ್ಣ ಶಬ್ದವಾಗಲಾರದೆ..?" ಇಂಫಾಲದ "ಖೈರಂ ಬಝಾರ್"ನಲ್ಲಿ ಬಿದಿರಿನ ಕಳಿಲೆಯ ಸಿಪ್ಪೆಯಂತಹ ಪದರನ್ನು ಮಾರಾಟ 29 ಪ್ರಮೀಳೆಯರ ನಾಡಿನಲ್ಲಿ ಮಾಡುವ ಅಂಗಡಿ ಇಟ್ಟುಕೊಂಡಿರುವ ಅಪ್ಪಟ ಮಣಿಪುರಿ "ರುಂಗಾಮೈ" ಜನಾಂಗದ "ಸಂಚಾನ್ಬಿ" ಮುಖ ಸಣ್ಣಗೆ ಮಾಡಿ ವಿವರಿಸುತ್ತಿದ್ದರೆ ನಾನು ಎದುರಿಗಿದ್ದ ಸಾಲು ಸಾಲು ಗೋರಿಗಳನ್ನೇ ಮೂಕವಾಗಿ ನೋಡುತ್ತಾ ನಿಂತಿದ್ದೆ. ಆ ದಿನ ನನ್ನ ಪ್ರವಾಸದ ಕೊನೆಯ ದಿನವಾಗಿದ್ದರಿಂದ ಮತ್ತು ಮೊದಲೇ ಯೋಜಿಸಿದ್ದಂತೆ ಸ್ಥಳೀಯವಾಗಿ ಒಂದು ಶಾಲೆ ಮತ್ತು ಉಳಿದಿದ್ದ ಒಂದೆರಡು ಪ್ರದೇಶಗಳನ್ನು ನೋಡುವ ಉದ್ದೇಶದಿಂದ ಮೊದಲೇ "ಸಂಚಾನ್ಬಿ" ಗೆ ಹೇಳಿದ್ದೆ. ಆಕೆ ಬರುವ ಭರವಸೆ ಏನೂ ಇರಲಿಲ್ಲ. ಅಂಗಡಿ ಮುಚ್ಚಿ ದಿನದ ವ್ಯವಹಾರ ಲುಕ್ಷಾನು ಮಾಡಿಕೊಂಡು ಯಾಕಾದರೂ ಬಂದಾಳು ನನ್ನ ಜೊತೆ ತಿರುಗೋಕೆ..? ಆದರೆ ನನ್ನ ಅನಿಸಿಕೆ ಸುಳ್ಳು ಮಾಡಿ ಬೆಳ್‍ಬೆಳಗ್ಗೆ ಎಂಟಕ್ಕೆ ಇಂಫಾಲದ ಹೃದಯ ಭಾಗವಾದ "ಗಾಂಧಿ ಪಾರ್ಕ್"ಗೆ ಬಂದು ರಿಕ್ಷಾ ನಿಲ್ಲಿಸಿದ್ದಳು. ಇದ್ದುದರಲ್ಲಿ ಓದಿಕೊಂಡಿದ್ದು, ಕೊಂಚ ಇತಿಹಾಸ ತಿಳಿದುಕೊಂಡಿದ್ದು ಈಗೀಗ ಮಣಿಪುರದಲ್ಲಾಗುತ್ತಿದ್ದ ಸ್ಥಿತ್ಯಂತರದ ಮೇಲೆ ತುಂಬಾ ಪಕ್ವವಾದ ಮಾತುಗಳನ್ನಾಡುತ್ತಿದ್ದಳು ಸಂಚಾನ್ಬಿ. ಹಾಗಾಗಿ ಮೊದಲಿಗೇ ನಿಶ್ಚಯಿಸಿದಂತೆ ನಗರದಿಂದ ನಾಲ್ಕು ಕಿ.ಮೀ. ದೂರದ "ವಾರ್ ಸಿಮಿಟ್ರಿ"ಗೆ ಬಂದು ನಿಂತಿದ್ದೆವು. ಎದುರಿನಲ್ಲಿ ಕೆಸರು ಕೆಸರಾಗಿದ್ದ ಅಷ್ಟಾಗಿ ಯಾವ ನಿರ್ವಹಣೆಯನ್ನೂ ಕಾಣದ ಅಕ್ಕಪಕ್ಕದ ಕಾಲೇಜು ಹುಡ್ಗ ಹುಡ್ಗಿಯರಿಗೆ ಕೂತುಕೊಳ್ಳುವ ಪಾರ್ಕ್‍ನಂತಾಗಿರುವ, ಅಲ್ಲಲ್ಲಿ ಗಾಂಜಾ, ತಂಬಾಕಿನ ಸ್ಥಳೀಯ "ಝುರ್ಕಿ" ಎಳೆಯುವ ಪಡ್ಡೆಗಳಿಗೆ ಅಡ್ಡೆಯಾಗಿರುವ ಈ ಗೋರಿಗಳ ತಾಣ ಅನಾಮತ್ತಾಗಿ ಎರಡೂವರೆ ಸಾವಿರ ಸೈನಿಕರ ಆತ್ಮಗಳಿಗೆ ನೆಲೆಯಾಗಿದೆ. ಸುಮಾರು ಸಾವಿರದಷ್ಟು ಸೈನಿಕರ ಆತ್ಮಗಳು ಇಲ್ಲಿ ಮಗ್ಗಲು ಬದಲಿಸುತ್ತಿರುತ್ತವೆ. ಆಗೀಗ ಸ್ಥಳೀಯ ಆಡಳಿತ ಇವುಗಳ ಮೇಲೆ ನೀರು ಹನಿಸಿ ತಂಪಾಗಿಸೋ ಪ್ರಯತ್ನ ಮಾಡುತ್ತಿರುತ್ತದೆ. "ಇವರ್ಯಾರಿಗೂ ಯುದ್ಧದ ಬಿಸಿ ಎಂದರೇನೆಂದೆ ಗೊತ್ತಿರಲಿಲ್ಲ. ಅಷ್ಟಕ್ಕೂ ಅವರಿಗೆಲ್ಲಾ ಇದು ಮೊದಲ ಯುದ್ಧವೇ ಆಗಿದ್ದಿತ್ತು. 1939 ರಿಂದ 1945 ರವರೆಗಿನ ವರ್ಷ ಇದೆಯಲ್ಲ.. ಭಾರತದ ಯಾವ ಮೂಲೆಗೂ ಇಲ್ಲಿನ ಪ್ರಮೀಳೆಯರ ನಾಡಿನಲ್ಲಿ 30 ವರ್ತಮಾನವೇ ಹೋಗುತ್ತಿರಲಿಲ್ಲ. ಸರಿಯಾಗಿ ವಾರಕ್ಕೊಮ್ಮೆ ಆ ಕಡೆಯಿಂದ ಕುದುರೆ ಮೇಲೆ ವರ್ತಮಾನ ಬಂದರೆ ಅದೇ ದೊಡ್ಡದಾಗಿತ್ತು. ಹಾಗಾಗಿ ಇನ್ನು ಸರಿಯಾಗಿ ಅನುಭವ ಮತ್ತು ಯುದ್ಧ ಭೂಮಿ ಕಂಡೇ ಇರದ ಇಲ್ಲಿನ ಹುಡುಗರನ್ನು ಇಳಿಸಿಬಿಟ್ಟರು ನೋಡು. ಹುಳುಗಳಂತೆ ಹುಡುಗರು ಸತ್ತು ಹೋಗುತ್ತಿದ್ದರು. ಎಲ್ಲೆಡೆಯೂ ಬಾಂಬಿಂಗು.. ಜಪಾನಿಗರು ಮೊದಲೇ ರಂಗೂನ್ ಕಡೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಬಂದು ಕೂತಿದ್ದರಲ್ಲ. ಅಷ್ಟೇ.. ಇಲ್ಲಿಂದ ಹಿಡಿದು ಮಾವೋ ತನಕ. ಆಚೆ ಕಡೆಯಲ್ಲಿ ಚುರ್ಚಾಂಡ್ಫುರ್ ಸಹಿತ ಇತ್ತಲಿನ ಬಿಷ್ಣುಪುರ್ ಎಲ್ಲಾ ಪೂರ್ತಿ ತೋಪೆದ್ದು ಹೋಗಿತ್ತು. ಸಂಪೂರ್ಣ ಮಣಿಪುರ್ ಮಣ್ಣಾಗಿತ್ತು. ಇದನ್ನು ರಕ್ಷಿಸಲು ಹೋರಾಡಿದ ಈ ಹುಡುಗರು ಮಿಡತೆಗಳಂತೆ ಸತ್ತುಹೋದರು. ಬದುಕು ಅಲ್ಲೆ ಮುರುಟಿ ಹೋಗಿತ್ತು. ಯಾವ ಸರಕಾರ ಯಾವ ಅಧಿಕಾರಿಯೂ ಅದನ್ನು ಮರಳಿಸಲು ಆಗಲ್ಲ. ಆದರೆ ಅವರಿಗೊಂದು ಗೌರವಯುತ ಸಲಾಂ ಆದರೂ ಬೇಡವಾ.. ?" "ಸಂಚಾನ್ಬಿ" ಗೋರಿಗಳ ಮಧ್ಯೆ ನಿರ್ಮಿಸಿದ್ದ ಸ್ಮಾರಕವೊಂದರ ಕಟ್ಟೆಯ ತುದಿಗೆ ಕೂತು ಮಾತಾಡುತ್ತಿದ್ದರೆ ನಾನು ಮೌನವಾಗಿ ಆಗಿನ ಸ್ಥಿತಿಗತಿಯನ್ನು ನೆನೆಯುತ್ತಿದ್ದೆ. ಈಗಲೇ ಇನ್ನು ಇಂಫಾಲ ಬೆರಗಿಗೆ ಹೊಸ ಬದುಕಿಗೆ ಕಣ್ಣು ಬಿಡುತ್ತಿದೆ. ಇನ್ನು ಏಳು ದಶಕಗಳ ಹಿಂದೆ ಅದಿನ್ನೆಂಗೆ ಇದ್ದೀತು..? ತೀರ ಈಗಲೂ ಅಲ್ಲಲ್ಲಿ ಕುಟುಂಬ ಸಮೇತ ತಂಬಾಕಿನ ಘಾಟಿಗೆ ಒಡ್ಡಿಕೊಳುವ ಜನಾಂಗ ಆಗ ಅದಿನ್ನೆಂಗೆ ಇದ್ದೀತು..? ಈಗಲೂ ಇಲ್ಲಿಗೆ ತಲುಪಲು ಸರಾಸರಿ ವೇಗ ಗಂಟೆಗೆ ಕೇವಲ 25-30 ರ ಆಸುಪಾಸಿನಲ್ಲಿರುವಾಗ ಆ ಕಾಲದಲ್ಲಿ ಅದೂ ಯುದ್ಧದ ಸಂದರ್ಭದಲ್ಲಿ ಅದಿನ್ಯಾವ ನಾಯಕ ಈ ಸ್ಥಳವನ್ನು ಸಂಭಾಳಿಸಿಯಾನು..? ಆ ಕಾಲದಲ್ಲಿ ಹುತಾತ್ಮರಾದವರ ನೆನಪಿಗೆ ಅಲ್ಲೊಂದು ನೀರಿನ ಮಡುವನ್ನು ನಿರ್ಮಿಸಿ ಅದರ ಸುತ್ತಲೂ ಮತ್ತು ಗೋರಿಗಳ ಸುತ್ತಲೂ ಹೂವಿನ / ಹಸಿರಿನ ಪೊದೆಗಳನ್ನು ಹೂಡಿ ಸಾಲು ಸಾಲಾಗಿ ಅವರವರ ಹೆಸರು ಪದವಿ ಮತ್ತು ಅವರ ಹುಟ್ಟಿದ ದಿನಾಂಕ ಮತ್ತು ತೀರಿಕೊಂಡಾಗಿನ ವಯಸ್ಸನ್ನು 31 ಪ್ರಮೀಳೆಯರ ನಾಡಿನಲ್ಲಿ ನಮೂದಿಸಿದ ಯುದ್ಧ ಸ್ಮಾರಕ ಒಮ್ಮೆ ಕರುಳು ಹಿಂಡುತ್ತದೆ. ಸುತ್ತಲೂ ಜಾಗ ಅತಿಕ್ರಮಣವಾಗದಂತೆ ಆವಾರವನ್ನು ನಿರ್ಮಿಸಿ ಮಧ್ಯದಲ್ಲಿ ಸಾಲು ಸಾಲು ಸ್ಮರಣ ಫಲಕ ಅಳವಡಿಸಲಾಗಿದ್ದು, ಅಗತ್ಯ ಮತ್ತು ಮೂಲಭೂತ ಸೌಕರ್ಯವೇನೂ ಇಲ್ಲವೇ ಇಲ್ಲ. ಬಿಸಿಲಿಗೆ ಬಾಯಾರಿದರೆ ನೀರು ಹೋಗಲಿ ಶೌಚದಂತಹದರ ಕಡೆಯೂ ಲಕ್ಷ್ಯ ನೀಡಲಾಗಿಲ್ಲ. ಅರ್ಧಗಂಟೆಯಲ್ಲಿ ಇಲ್ಲಿಂದ ಯಾತ್ರಿ ಹೊರಬರುತ್ತಾನೆ. ಇತಿಹಾಸ ಗೊತ್ತಿಲ್ಲದಿದ್ದರೆ ಅದಕ್ಕೂ ಮೊದಲೇ ಕೂಡಾ. ಫಲಕಗಳ ಮೇಲೆ ಯಾರ ಮಾಹಿತಿ ಮತ್ತು ದಿನಾಂಕ ಲಭ್ಯವಿಲ್ಲವೋ ಅವರ ಸ್ಮಾರಕಕ್ಕೆ, ಹುಟ್ಟಿದ ದಿನಾಂಕದ ಜಾಗದಲ್ಲಿ "ದೇವರಿಗೆ ಗೊತ್ತು" ಎನ್ನುವ ಅಕ್ಷರಗಳನ್ನು ಓದುವಾಗ ಜಗತ್ತಿಗಲ್ಲ, ಯಾವ ಕಾಲಕ್ಕೂ ಯುದ್ಧ ಯಾಕೆ ಬೇಕು ಎನ್ನಿಸುವ ಅಗೋಚರ ಅರಿವಾಗದ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ಸ್ಥಳೀಯ ಪ್ರಾಧಿಕಾರ ಇವುಗಳನ್ನೆಲ್ಲಾ ತನ್ನ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡುತ್ತಿದೆಯಾದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಪ್ರಚಾರ ಮಾಡುವಾಗ ಇದರ ವ್ಯಾಪ್ತಿ ದೊಡ್ಡದಾಗಬೇಕಿತ್ತು. ಸುತ್ತಲೂ ಸ್ಥಳೀಯ ನಿವಾಸಿಗಳು ಆವರಿಸಿಕೊಂಡಿದ್ದು ಬರುವ ಪ್ರವಾಸಿಗರಿಗೆ ಅನೂಹ್ಯ ಅನುಭವಕ್ಕೀಡುಮಾಡುತ್ತಾರೆ. ಅವರ ಹಿಡಿತದಿಂದಾಗಿ ವೀರರ ಸಮಾಧಿಗೆ ಬರುವ ಹೊರರಾಜ್ಯದ ಪ್ರವಾಸಿಗರಿಗೆ ಅಷ್ಟಾಗಿ ಆಪ್ಯಾಯ ಎನ್ನಿಸುವುದಿಲ್ಲ. ಹೊರಬಂದು ಸಿಂಚಾನ್ಬಿಯೊಂದಿಗೆ ಅಷ್ಟು ದೂರದ ರಸ್ತೆ ಬದಿಗಿದ್ದ ಚಹದಂಗಡಿ ತಲುಪಿ ಕೂತು, ನಾನು ನೀರಿನ ಬಾಟಲ್ಲು ತಡಕಾಡುತ್ತಿದ್ದರೆ ಆಕೆ ನಗುತ್ತ ಹಂಡೆಯಂತಹ ಮಡಿಕೆಯಲ್ಲಿ ತುಂಬಿಸಿಟ್ಟಿದ್ದ ನೀರಿನಲ್ಲಿ "ಜಗ್" ಅದ್ದಿ ತೆಗೆದು ಬಾಯಿ ತುಂಬಾ ತುಂಬಿಕೊಂಡು ಕುಡಿಯತೊಡಗಿದಳು. ಅಭ್ಯಾಸ ಬಲ. ಎಂದಿನಂತೆ ಇಲ್ಲಿ ತಿಂಡಿಯ ಸಮಸ್ಯೆ ಅಷ್ಟಾಗಿ ಬಾಧಿಸದಿದ್ದರೂ ಅದೇ ಆಲೂ ಪರಾಠ ಬಿಟ್ಟರೆ ಬೇರೆ ಲಭ್ಯವಿರಲಿಲ್ಲ. "ಆಟೋ ನಾನು ಓಡಿಸಲಾ ಎಂದೆ. ." "ಮತ್ತೆ ಆಗಿನಿಂದ ಮಹಾರಾಜನಂತೆ ಹಿಂದೆ ಕೂತು ಬರ್ತಿದಿಯಲ್ಲ ಬಾ ಮುಂದಕ್ಕೆ.. ಹೋಗ್ಲಿ ಡ್ರೈವಿಂಗ್ ಲೈಸನ್ಸು ಸರಿಯಾಗಿ ಇದೆಯಾ..?" ಪ್ರಮೀಳೆಯರ ನಾಡಿನಲ್ಲಿ 32 ಎನ್ನುವಷ್ಟರಲ್ಲಿ ಚಲಿಸಲಾರಂಭಿಸಿದ್ದ ಆಟೋದಲ್ಲಿ ಹಾಗೇ ನುಸುಳಿ ನಾನು ಮುಂದೆ ಕೂತು ಆಕೆಯ ಪಕ್ಕದಲ್ಲಿ ಸ್ಟೇರಿಂಗ್‍ಗೆ ಕೈ ಇಟ್ಟಿದ್ದೆ. ರಾ.ಹೆದ್ದಾರಿ ದಾಟಿ ಇಂಫಾಲ - ಕೆಂಚುಪ್ ರಸ್ತೆಯಲ್ಲಿ ಅಷ್ಟು ದೂರ ಓಡಿಸಿಕೊಂಡು ಬಲ ತಿರುವು ತೆಗೆದುಕೊಂಡು ಸುಮಾರು ಐದಾರು ಕಿ.ಮೀ. ಕ್ರಮಿಸಿದರೆ ಜಿಂಕೆ ವನಕ್ಕೆ ಬರಬಹುದು. ನಾನು ಆಕೆಯ ನಿರ್ದೇಶನದಂತೆ ಅಷ್ಟು ದೂರದಲ್ಲಿದ್ದ ಶಾಂಘೈ ಜಿಂಕೆ ಪಾರ್ಕಿಗೆ ಆಟೋ ಓಡಿಸಿಕೊಂಡು ಬಂದಿದ್ದೆ. ಶಾಂಘೈ ಪಾರ್ಕ್ : ಜಿಂಕೆ ಮತ್ತು ಇತರೆ ಸಾಮಾನ್ಯ ಪ್ರಾಣಿವರ್‌ಗಗಳ ಸಣ್ಣ ಪಾರ್ಕು ಶಾಂಘೈ ಪಾರ್ಕು. ಅಸಲಿಗೆ ಮಣಿಪುರದ ವಿಶೇಷ ಶಾಂಘೈ ಜಿಂಕೆ ಇಲ್ಲಿನ ಆಕರ್ಷಣೆ. ಇದು ನಮ್ಮ ಕಾಡುಗಳಲ್ಲಿನ ಜಿಂಕೆಗಳಂತೆ ಇದ್ದರೂ ಕೊಂಚ ದಪ್ಪ ಮತ್ತು ಚೆಂದವಾದ ಫಿನಿಶಿಂಗ್ ಇರುವ ಕೊಂಬುಗಳ ಕಾರಣ ವಿಭಿನ್ನ ಆಕರ್ಷಣೆಗೆ ಕಾರಣವಾಗಿದೆ. ರೂಪಾಯಿ ಹತ್ತರ ಪ್ರವೇಶ ಫೀ ಯನ್ನು ನಿಗದಿ ಪಡಿಸಿರುವ ಪ್ರಾಧಿಕಾರ ಅದಕ್ಕೆ ತಕ್ಕಷ್ಟು ಸೌಲಭ್ಯವನ್ನೇನೂ ಪೂರೈಸುತ್ತಿಲ್ಲ. ಹೊರತಾಗಿ ಪಾರ್ಕಿನೊಳಗೆ ಬೋನಿನಲ್ಲಿರುವ ಮತ್ತು ಇತರ ಜಾಗದಲ್ಲಿ ಜಿಂಕೆಯ ಆಕರ್ಷಣೆ ಮತ್ತು ಜೀವ ವಿಧಾನದ ವ್ಯತ್ಯಾಸ ಸ್ಪಷ್ಟವಾಗೇ ತೋರುತ್ತದೆ. ಮೊದಲೆಲ್ಲಾ ಇಲ್ಲಿನ ಊರುಗಳಲ್ಲೇ ಶಾಂಘೈಗಳು ಓಡಾಡಿಕೊಂಡಿರುತ್ತಿದ್ದವು. ಈಗೆಲ್ಲಾ ಊರಿನಲ್ಲಿ ಬಿಡಿ "ಲಂಮ್ಝಾವೋ"ದಲ್ಲೂ ನೋಡಲು ಸಿಗುವುದಿಲ್ಲ ಗೊತ್ತಾ.. (ಈ "ಲಂಮ್ಝಾವೋ" ಎನ್ನುವುದು ಶಾಂಘೈ ಪ್ರಾಂತ್ಯವನ್ನೇ ತೋರ್ಪಡಿಸುವ ಶಾಂಘೈಗಳಿಗಾಗಿ ಮೀಸಲಿರುವ "ಕೈಬುಲ್" ಎನ್ನುವಲ್ಲಿನ ಕಾಡು ಪ್ರದೇಶ. ವಿವರ ಮುಂದೆ ಬರಲಿದೆ - ಲೇ. ಇತ್ತೀಚೆಗೆಲ್ಲಾ ಒಳ್ಳೆಯ ಕಾಡು ಸವರಿದರಲ್ಲದೆ, ಈ ಅಸ್ಸಾಂ ರೈಫಲ್ಸ್‌ನವರು ಎಷ್ಟೋ ಬೇಟೆಯಾಡಿ ತಿಂದು ತಿಂದೇ ಮುಗಿದುಹೋಗಿವೆ.." ಎಂದು "ಸಿಂಚಾನ್ಬಿ" ಶಾಂಘೈಗಳ ಇತಿಹಾಸ ಕೆದರತೊಡಗಿದ್ದರೆ ನನಗೆ ಅಚ್ಚರಿಯೂ, ಅಸ್ಸಾಂ ರೈಫಲ್ಸ್‌ ಅದನ್ನು ಹೊಡೆಯುವ ಬಗ್ಗೆ ಆಕರ್ಷಕ ಬೇಟೆಯ ಅನುಭವದ ಕಾತರತೆಯೂ ಹೆಚ್ಚಾಗತೊಡಗಿತ್ತು. 33 ಪ್ರಮೀಳೆಯರ ನಾಡಿನಲ್ಲಿ ಕಾರಣ ಮಣಿಪುರದ ಕಾಡುಗಳಲ್ಲಿ ಬೇಟೆ ಅಷ್ಟು ಸುಲಭವಿಲ್ಲ ಮತ್ತು ಸಾಧ್ಯವೂ ಇಲ್ಲ, ಜನ ಸಾಮಾನ್ಯರಿಂದ ಅವುಗಳಿರಲಿ ಯಾವುದನ್ನೂ ಬೇಟೆಯಾಡಲು. ಅದೇನಿದ್ದರೂ ಹಿಂದಿನ ಕಾಲಮಾನದವರಿಗೇ ಮುಗಿದುಹೋಗಿರುವ ಕಥೆಯಾಗಬೇಕಿತ್ತು. ಈಗೇನಿದ್ದರೂ ಆಧುನಿಕ ವಿಧಾನಗಳು ಹಲವಾರು ಇವೆಯಲ್ಲ. ಆದರೆ ಬೇಟೆಯನ್ನೇ ಈಗ ಅತ್ಯಂತ ಕಠಿಣವಾಗಿ ನಿ ಷೆೀಧಿಸಲಾಗಿದೆಯಲ್ಲ. ಕಾರಣ ಇಲ್ಲಿ ಕಾಡುಗಳು ಅರಳಿರುವುದೇ, ಅರಣ್ಯ ಎನ್ನುವ ಅದ್ಭುತ ಬೆಳೆದಿರುವುದೇ ಪರ್ವತದ ಇಳಿಜಾರಿನಲ್ಲಿ ಮತ್ತು ಅದರ ಏರುಗತಿಯ ಭೌಗೋಳಿಕ ಪರಿಸರದಲ್ಲಿ. ಹಾಗಾಗಿ ಇಲ್ಲಿ ಬೆನ್ನತ್ತಿ ಓಡುವುದು ಅಥವಾ ಕಾಯುತ್ತಾ ಬಯಲು ಪ್ರದೇಶದಲ್ಲಿ ಬೇಟೆ ಎನ್ನುವುದು ಸಾಧ್ಯವೇ ಇಲ್ಲ. ಹಾಗಾಗಿ ಯಾರಾದರೂ ಶಾಂಘೈಗಳು ಬಲಿಯಾಗಿಯೇ ಕಡಿಮೆಯಾದವು ಎನ್ನುವ ತರ್ಕ ಮೊದಲ ನಿಲುವಿಗೇ ಸಹ್ಯ ಎನ್ನಿಸುವುದಿಲ್ಲ. ಆದರೂ ಸದ್ಯಕ್ಕೆ ಕೈಯಲ್ಲೇ ಲಭ್ಯವಿರುವ ಶಾಂಘೈ ಜಿಂಕೆಗಳನ್ನು ನೋಡಲು ಈ ಪಾರ್ಕ್‍ನ್ನು ಮಿಸ್ ಮಾಡಿಕೊಳ್ಳದಿರುವುದು ಪ್ರವಾಸದ ದೃಷ್ಟಿಯಿಂದ ಒಳ್ಳೆಯದು. ಕಾರಣ ಜಿಂಕೆ ತಳಿಗಳಲ್ಲಿ ಅಪರೂಪದ ವರ್‌ಗಕ್ಕೆ ಸೇರುವ ಇವನ್ನು ರಾಷ್ಟ್ರೀಯ ಉದ್ಯಾನಕ್ಕೆ ಹೋಗುವ ಬದಲಾಗಿ ಇಲ್ಲಿ ವೀಕ್ಷಿಸುವುದು ವಾಸಿ. ಒಟ್ಟಾರೆ ಶಾಂಘೈ ಪಾರ್ಕು ಮತ್ತು ಅದರ ಇತಿಹಾಸದ ವಿವರ ಹೊಸ ಕುತೂಹಲ ಮತ್ತು ಶಾಂಘೈಗಳ ಬಗೆಗಿನ ಹುರುಪನ್ನು ಹೆಚ್ಚಿಸಿದ್ದು ಸುಳ್ಳಲ್ಲ. ಹಾಗೆ ಮಾತಾಡುತ್ತಿದ್ದಾಗಲೇ ಸಿಂಚಾನ್ಬಿ ಕೂಗಿಕೊಂಡಳು, "ಹೇಯ್ ಸ್ಯಾಮ್ .. ಸಮಯ ಮೂರು ಗಂಟೆಯಾಗ್ತಿದೆ.. ಇನ್ನೇನು ಮಾರ್ಕೆಟ್ ಮುಗಿಯುತ್ತೆ ಕೊನೆಯ ಒಂದು ಗಂಟೆ ನಾನಲ್ಲಿ ಇರ್ಬೆಕು. ಆಗೋ ವ್ಯಾಪಾರ ಪೂರ್ತಿ ಏನಿದ್ದರೂ ಇವತ್ತು ಒಂದಿನದ ಸಂಜೆಯ ಈ ಮೂರ‍್ನಾಲ್ಕು ಗಂಟೆಯ ಒಳಗೆ ಆಗುತ್ತೆ ಬಾ ಬಾ.." ಎಂದು ಸರಿಸತೊಡಗಿದಳು. ಈ ಸಿಂಚಾನ್ಬಿಯದ್ದೂ ಒಂದು ಅಂಗಡಿ ಆ ಮಾರ್ಕೆಟ್‍ನಲ್ಲಿದೆ. ಅದು ಖೈರಾಂಬಂದ್ ಮಾರುಕಟ್ಟೆ ಪ್ರದೇಶದ ಆಯಕಟ್ಟಿನ ಜಾಗದಲ್ಲಿದೆ". ಇಮಾ - ಮಾರ್ಕೆಟ್". ಇಮಾ ಎಂದರೆ ತಾಯಿ ಅಥವಾ ಹೆಣ್ಣು ಅಥವಾ ಸ್ತ್ರೀ. ಹೀಗೆ ಪ್ರಮೀಳೆಯರ ನಾಡಿನಲ್ಲಿ 34 ಆಯಾ ಸಂದರ್ಭಕ್ಕೆ ತಕ್ಕ ಶಬ್ದವಾಗಿ ಉಪಯೋಗಕ್ಕೆ ಬರುವ ಇಮಾಗಳಿಂದಲೇ ನಡೆಯುವ ಮಾರ್ಕೆಟ್ ಇಮಾ ಮಾರ್ಕೆಟ್ ಎಂದಾಗಿದೆ. ಇಮಾ ಮಾರುಕಟ್ಟೆ : ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿ ಮಾರುವ ಮೊಸರು, ರಸಗುಲ್ಲ, ಜಾಮೂನು.. ಇತ್ಯಾದಿ ಅದರ ಪಕ್ಕದಲ್ಲೇ ಇನ್ನೂ ಜಿಗಿದಾಡುತ್ತಿರುವ, ಜೀವಂತವಾಗಿರುವ ಪಕ್ಕದ ಇಂಫಾಲ ನದಿಯ ರಾಡಿಯಲ್ಲಿ ಹಿಡಿದ ಕರೀ ಮೀನುಗಳು, ಅದರೊಂದಿಗೆ ಅರ್ಧ ಹೆಚ್ಚಿಸಿಕೊಂಡು ಇನ್ನರ್ಧ ನೊಣಗಳಿಗೆ ಆಹಾರವಾಗುತ್ತ ಭಯಾನಕ ವಾಸನೆಗೆ ಕಾರಣವಾಗಿರುವ ದೊಡ್ಡ "ನುಶ್ತೆ" ಮೀನು, ಅಷ್ಟು ದೂರದಲ್ಲಿ ಆಗ ಷ್ಟೆ ಕಿತ್ತ ಬಿದಿರ ಬುಡದ ರಾಡಿ ತೊಳೆಯುತ್ತಿರುವ ಹೆಂಗಸು, ಪಕ್ಕದಲ್ಲೇ ಖಾಯಂ ಜೀವನಾಡಿಯಾಗಿರುವ ಪಾನು ಕಟ್ಟುತ್ತಿರುವಾಕೆಯ ಕೆಂಪಡರಿದ ಕೈಗಳ ಸಂದಿನಲ್ಲಿ ಮಡಚಿಕೊಳ್ಳುತ್ತಿರುವ ಹಸಿರೆಲೆ ಮೇಲೆ ರಪರಪನೆ ರಾಚುವ ಅಚ್ಚ ಬಿಳಿ ಸುಣ್ಣ, ಅದರ ಪಕ್ಕದಲ್ಲಿ ಮಂಡಕ್ಕಿ ಕಟ್ಟಿ ಕಟ್ಟಿ ಎರಚುತ್ತಿರುವ ಮಧ್ಯವಯಸ್ಕಳ ಮಾರಾಟದ ಭರಾಟೆ. ಅದರಾಚೆಗೆ ಸುಣ್ಣದ ಮಾರಾಟ, ಹಿಂದೆ ಕುಂಬಳಕಾಯಿಯಿಂದ ಹಿಡಿದು ಹಸಿ ಅಡಿಕೆಯವರೆಗೂ ಲಭ್ಯ, ಅದರಾಚೆಗೆ ಮೀನು ಸೀಗಡಿಯಿಂದ ಇತರೆ 35 ಪ್ರಮೀಳೆಯರ ನಾಡಿನಲ್ಲಿ ಎಲ್ಲಾ ಜೀವಿಗಳ ಖಾದ್ಯಕ್ಕೆ ಬೇಕಾದ ಮಾಂಸದಾದಿಯಾಗಿ ಮಸಾಲೆ ಸಿದ್ಧ, ಅದಕ್ಕೂ ಮೊದಲೇ ದಿನವಹಿ ಶೃಂಗಾರಕ್ಕೆ ಅಗತ್ಯದ ಇನ್ನಾಪಿಗಳ ಸುಂದರ ಕಸೂತಿಯ ಹೊದಿಕೆಯ ಬಟ್ಟೆಯ ವ್ಯಾಪಾರ, ಈಗಿನ ಹುಡುಗಿಯರಿಗಾಗಿ ಫ್ಯಾಶನಬಲ್ ಟಾಪ್‍ಗಳ ಸಾಲು ಸಾಲು.. ಅದರ ಪಕ್ಕ ಬಣ್ಣ ಬಣ್ಣದ ಚೋಲಿಗಳ ರಾಶಿ. ರಸ್ತೆಯ ಮುಗ್ಗುಲಲ್ಲಿ ಹಂದಿಯ ಹೇರಳ ಕೊಬ್ಬಿನ ಬಹಿರಂಗ ಅನಾವರಣ, ತೇಗದ ಎಲೆಯಲ್ಲಿ ಕಟ್ಟಿ ಮಾರುತ್ತಿರುವ ಕೆಂಪು ಕೆಂಪು ಮಾಂಸ. ಅದರ ಹಿಂದಿನವಳ ಕೈಯ್ಯಲ್ಲಿ ತೆಕ್ಕೆಗಟ್ಟಲೇ ಮಣಿಪುರಿ ಹಾಡುಗಳ ಸಿ.ಡಿ.ಗಳು, ಅದಕ್ಕೂ ಹಿಂದಿನ ವಯಸ್ಕಳ ಹತ್ತಿರ ತರಹೇವಾರಿ ಸ್ಥಳೀಯ ಔಷಧಿಯ ಬೇರು, ಚಕ್ಕೆಗಳ ಸಾಲು ಸಾಲು ಕವರ್‌ಗಳು.. ಹೀಗೆ ಏನುಂಟು ಏನಿಲ್ಲ.. ಎಲ್ಲಾ ಒಂದೇ ಸೂರಿನಡಿಯಲ್ಲಿ ಸಾವಿರಾರು ಹೆಂಗಸರ ದಿನವಹಿ ಓಡಾಟ ಮತ್ತು ವ್ಯವಹಾರದ ಕಸರತ್ತಿಗೆ ಸಾಕ್ಷಿಯಾಗಿ, ಮಿಥೀಸ್‍ಗಳ ಬೆನ್ನೆಲುಬಾಗಿ ವ್ಯವಹಾರದಲ್ಲಿ ತನ್ನದೇ ಛಾಪು ಮೂಡಿಸಿ ನಿಂತಿರುವುದೇ ಹೆಂಗಸರದ್ದೇ ಹಿರಿತನವಿರುವ ಇಮಾ ಮಾರ್ಕೇಟ್. ಸರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ವ್ಯವಹಾರಸ್ಥ ಎರಡು ವಿಭಾಗದಲ್ಲಿ ಹರಡಿಕೊಂಡಿರುವ ಅಂಗಡಿಗಳು ಮತ್ತು ಅಷ್ಟೇ ಸಂಖ್ಯೆಯ ಸಹವರ್ತಿಗಳಾದ ಇತರೆ ಹೆಂಗಸರಿಂದಲೇ ನಡೆಯುವ ಮಾರುಕಟ್ಟೆ ಇಮಾ ಮಾರುಕಟ್ಟೆ. ಒಂದು ಕಾಲದಲ್ಲಿ ರಸ್ತೆ ಬದಿಯಲ್ಲೇ ನಡೆಯುತ್ತಿದ್ದ ಮಾರುಕಟ್ಟೆಯನ್ನು ನವೀಕರಿಸಿ ಅದಕ್ಕೊಂದು ವ್ಯವಸ್ಥಿತ ರೂಪ ಮತ್ತು ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಇದು ನಗರದ ಪ್ರಮೀಳೆಯರ ನಾಡಿನಲ್ಲಿ 36 ಹೃದಯಭಾಗದಲ್ಲಿದ್ದು ಇಮಾ ಮಾರ್ಕೆಟ್ ನಗರದ ಎಲ್ಲ ವರ್‌ಗದ ಜನರ ಆಗುಹೋಗುಗಳಿಂದ ಹಿಡಿದು ಇನ್ನಾಪಿಗಳವರೆಗೂ ಖರೀದಿಗೆ ಇಲ್ಲಿಯೇ ಬರುವ ಸಂಪ್ರದಾಯ ಮತ್ತು ಅದರೊಂದಿಗಿನ ಅಟ್ಯಾಚ್‍ಮೆಂಟ್ ಮಿಥೀಸ್ ಗಳ ಸಾಂಪ್ರದಾಯಿಕತೆಗೆ ಸಾಕ್ಷಿ. ನಗರದ ಪ್ರಮುಖ ಸ್ಥಳದಲ್ಲಿ ಇರುವ ಇಮಾ ಮಾರ್ಕೆಟ್ ಎದುರಿಗೆ ಈಗ ಒಂದೇ ಒಂದು ಪ್ಲೈ ಓವರ್ ಆಗಿದೆ. ಅದರ ಕೆಳಗೆ ಇರುವ ಇನ್ನೊಂದು ಸೇತುವೆ ಮೇಲೆ ಕಣ್ಣಿಗೆ ಕಂಡಿರದ, ಕೈಗೆ ತೆಗೆದುಕೊಳ್ಳುವುದಿರಲಿ, ನಿಲ್ಲಲೂ ಆಗದಿರುವಷ್ಟು ವಾಸನೆಯ ಒಣ ಮೀನುಗಳ ಭರ್ಜರಿ ವ್ಯಾಪಾರ ನಡೆದಿರುತ್ತದೆ. ಅದರಾಚೆಗಿರುವುದೇ ಪೂರ್ತಿ ಇಂಫಾಲದ ಫ್ಯಾಶನ್ ಸ್ಟ್ರೀಟ್ ಎಂದೇ ಕರೆಸಿಕೊಳ್ಳುವ "ಪಾವುಣಾ ಬಝಾರ್" ಸರಿ ಸುಮಾರು ಎರಡ್ಮೂ ಕಿ.ಮೀ. ಉದ್ದದ ಈ ಬಝಾರ್ ಮೇಲ್ವರ್‌ಗದ ಪೂರೈಕೆಗಾಗೇ ಸೃಷ್ಟಿಯಾದ ಮಾರ್ಕೆಟ್ಟು. "ಖೈರಾಂಬಂಧ್ ನುಪಿ ಖೈತಾಲ್ – 1 ಮತ್ತು 2 ಎಂದು ನಾಮಕರಣಗೊಂಡಿರುವ ಈ ಮಾರುಕಟ್ಟೆಯನ್ನು ಇದೇ ಹೆಸರಲ್ಲಿ ಕರೆಯಲು ಹೋದರೆ ಪಕ್ಕದಲ್ಲಿದ್ದವರೂ ಗುರುತಿಸಲಾರರು ಮತ್ತು ಇದರ ಅಡ್ರೆಸ್ಸು ಹೇಳಲಾರರು. ಆದರೆ ಮೂಲವಾಗಿ ಇದು ಖೈತಾಲ್ ಮಾರ್ಕೆಟ್ಟು. 2007 ಅಕ್ಟೋಬರ್ 25 ರಂದು ಹೊಸದಾಗಿ ಈ ಕಟ್ಟಡದಲ್ಲಿ ವ್ಯವಸ್ಥಿತವಾಗಿ ಅಸ್ತಿತ್ವಕ್ಕೆ ಬರುವುದರೊಂದಿಗೆ ಇದಕ್ಕೊಂದು ವಿಶೇಷ ಕಳೆ ಬಂದಿದ್ದು ಸುಳ್ಳಲ್ಲ. ಇಲ್ಲವಾದರೆ ಇದಕ್ಕೂ ಮೊದಲಿನ ರೂಪ ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಈ "ಖೈರಾಮ್‍ಬಂಧ್ ನುಪಿ ಖೈತಾಲ್" ಇವತ್ತು ಮುಂಬೈ ಡಬ್ಬಾವಾಲಗಳ ಕಥೆಯಂತೆ ಅಲ್ಲಲ್ಲಿ ಚಾಲ್ತಿಯಲ್ಲಿದೆ. ಒಟ್ಟಾರೆ ನಮ್ಮಲ್ಲಿನ ಸ್ಥಳೀಯ ಮಾರುಕಟ್ಟೆಯ ಸಂತೆಗಳಂತೆ ಇದು ನಿತ್ಯದ ಜಾತ್ರೆ. ಹೊರತಾಗಿ ಪ್ರವಾಸಿಗರಿಗೆ ಅಲ್ಲಿ ಖರೀದಿಸುವಂತಹದ್ದೇನೂ ಇಲ್ಲ. ಕಾರಣ ಇದು ದಿನನಿತ್ಯದ ಸಾಮಾನು ವಹಿವಾಟಿನ ಅಂಗಡಿಗಳ ಸಮೂಹವೇ ಹೊರತು ಬೇರೆ ಬೇರೆ ವಿಶೇಷ ಮಾರಾಟ ಮಳಿಗೆ ಏನಲ್ಲ. ಹಾಗಾಗಿ ಪ್ರವಾಸಿಗರ ದೃಷ್ಟಿಯಿಂದ ಅಲ್ಲಿಗೆ ಸಂದರ್ಶಿಸುವಾಗ ಯಾವ ಹೊಸತನವೂ ಕಂಡುಬರುವುದಿಲ್ಲ. ಆದರೆ ಒಮ್ಮೆ ಸುಮ್ಮನೆ ನಗರದಲ್ಲಿದ್ದಾಗ 37 ಪ್ರಮೀಳೆಯರ ನಾಡಿನಲ್ಲಿ ಇಲ್ಲಿನ ಜನಜೀವನ ನಡವಳಿಕೆ ಬಾಹ್ಯ ಪ್ರಪಂಚದ ಆಗು ಹೋಗು ಇತ್ಯಾದಿಗಳ ನೇರ ಅರಿವಿಗೆ ಇಂಫಾಲದಲ್ಲಿ ಒಂದೆರಡು ಗಂಟೆ ಇಲ್ಲಿ ಕಳೆಯಬಹುದಾಗಿದೆ. ನಾನು "ಸಿಂಚಾನ್ಬಿ"ಯ ಅಂಗಡಿಯ ಕಟ್ಟೆಯ ಮೇಲೆ ಕುಳಿತು ಒಂದಷ್ಟು ಹೊತ್ತು ಆಗು ಹೋಗುಗಳನ್ನು ನಿರುಕಿಸುತ್ತಿದ್ದೆ. ಅರ್ಧ ಗಂಟೆಯಲ್ಲಿ ಎಲ್ಲೆಲ್ಲಿಂದಲೋ ಜನ ಬಂದು ಸೇರತೊಡಗಿ ಕಲಕಲ ಎನ್ನತೊಡಗಿದರು. ಕಾಳು, ಕಡ್ಡಿ, ಎಲೆ, ಸುಣ್ಣ, ಮೀನು ತರಕಾರಿ ಹೀಗೆ ಹಲವಾರು ಸಂಗತಿಗಳ ಬಿಕರಿಯಾಗತೊಡಗಿದಂತೆ ಆಕೆ ಗೌಜಿಯಲ್ಲಿ ಕಳೆದುಹೋಗುವ ಅರಿವಿಗೆ ಬರುತ್ತಿದ್ದಂತೆ ನಾನು ಅಲ್ಲಿಂದ ಹೊರಡುವ ತಯಾರಿ ಮಾಡಿ ಎದ್ದು ನಿಂತೆ. ಇದ್ದಕ್ಕಿದ್ದಂತೆ ಮಣಿಪುರಿ ಭಾಷೆಯಲ್ಲಿ ಲೌಡ್‍ಸ್ಪೀಕರ್‌ನಲ್ಲಿ ಮಾತುಗಳು ಕೇಳಿ ಬರತೊಡಗಿದವು. ಉದ್ದುದ್ದಕ್ಕೆ ಏನೇನೋ ಹೇಳುತ್ತಿದ್ದುದು ಗೊತ್ತಾಗುತ್ತಿತ್ತು. ಏನೆಂದು ಅರ್ಥವಾಗುತ್ತಿರಲಿಲ್ಲ. ಮಿಕ ಮಿಕ ನೋಡಿದೆ. ಆಕೆ ಅತ್ತಿತ್ತ ಬಿರುಸಾಗಿ ವ್ಯಾಪಾರಕ್ಕಿಳಿದ್ದಿದ್ದವಳಿಗೆ ನನ್ನ ಸಂಧಿಗ್ಧತೆ ಅರ್ಥವಾಗಲಿಲ್ಲ. ಸಂಜೆಯ ಐದಕ್ಕೆಲ್ಲ ಸ್ಪಷ್ಟವಾಗೇ ಕತ್ತಲಾಗುವ ಇಂಫಾಲದ ಬೀದಿಗಳಲ್ಲಿ ಏಳು ಗಂಟೆಗೆಲ್ಲಾ ಜನ ಜೀವನ ಸ್ತಬ್ಧವಾಗುತ್ತದೆ. ಹಾಗಾಗಿ ಮೂರೂವರೆಯ ಈ ಸಂಜೆಯ ಹೊತ್ತಿಗೆ ಸದ್ದು ಕೇಳಿಸೋಕೆ ಇದು ಪಂಗಾಳಗಳ ಆಝಾನ್ ಸಮಯವೂ ಅಲ್ಲ. ಅದೂ ಕೂಡಾ ಐದಕ್ಕೆ ಆರಂಭವಾಗುತ್ತದೆ ಎನ್ನುವುದು ಗೊತ್ತಾಗಿತ್ತು. ಅಷ್ಟರಲ್ಲಿ ಆಕೆ ಇತ್ತ ತಿರುಗಿ. "ಅಲ್ಲಿ ಹೋಗು ಪೋಲೋ ಆರಂಭವಾಗ್ತಿದೆ, ಇವತ್ತು ಸೆಮಿಫೈನಲ್ ಇದೆ" ಎನ್ನುತ್ತ ಮತ್ತೆ ಹೊರಳಿಕೊಂಡಳು. ಅಷ್ಟು ಸಾಕಾಯಿತು ಚಕಚಕನೆ ಕ್ಯಾಮೆರಾ ಕೈಗೆತ್ತಿಕೊಂಡು ಖೈರಾಂಬಂಧ್‍ನಿಂದ ಹೊರಬಂದಿದ್ದೆ. ಎದುರಿಗಿನ ಫ್ಲೈ ಓವರ್ ದಾಟಿದರೆ ಅಲ್ಲೇ ಇದೆ ವಿಶ್ವದ ಅತ್ಯಂತ ಪುರಾತನ ಪೋಲೊ ಮೈದಾನ. ಇನ್ನು ಕಿರುಚಿಕೊಳ್ಳುತ್ತಿದ್ದ ಕಾರಣ ಇನ್ನೇನು ಪಂದ್ಯ ಶುರುವಾಗುತ್ತಲಿದೆ ಎನ್ನಿಸುತ್ತಿದ್ದಂತೆ ಬಳಸು ದಾರಿ ಬಿಟ್ಟು ಮಧ್ಯದಲ್ಲೇ ಟ್ರಾಫಿಕ್ಕು ತಪ್ಪಿಸುತ್ತಾ ಅಲ್ಲಿಗೆ ಓಡಿದೆ. ಆಗಲೇ ರಾಜ ಟೀಕೇಂದ್ರ ತಂಡ ಮೊದಲ ಗೋಲುಗಳಿಸಿ ಕುದುರೆಯ ವೇಗಕ್ಕಿಂತಲೂ ರಭಸದಿಂದ ರಂಗದಲ್ಲಿ ಸುತ್ತತೊಡಗಿದ್ದರು. ನಾನು ಪ್ರಮೀಳೆಯರ ನಾಡಿನಲ್ಲಿ 38 ಸಾವರಿಸಿಕೊಳುತ್ತಾ ಮಧ್ಯದಲ್ಲಿ ಖಾಲಿ ಇದ್ದ ಎದುರಿಗೇ ಕಾಣುವಂತೆ ಒಂದು ಕುರ್ಚಿ ಹಿಡಿದು ಕೂತೆ. ಹೆಚ್ಚಿನ ತಂಡಗಳು ಈಗಲೂ ಮಹಾರಾಜರುಗಳ ಹೆಸರನ್ನೇ ಹೊಂದಿವೆ. ಅಲ್ಲಿ ಆಟಗಾರರಿಗಿಂತಲೂ ತಮ್ಮ ಆಟಗಾರ ಮತ್ತು ಕುದುರೆಯ ಮೇಲೆ ಜೂಜು ಕಟ್ಟಲು ಬಂದವರೇ ಜಾಸ್ತಿ ಇದ್ದಂತೆ ಅನ್ನಿಸಿದರು ನನಗೆ. ಪೋಲೋ.. ಕುದುರೆ ಆಟ : ವಿಶ್ವಕ್ಕೆ ಈ ಆಟವನ್ನು ಕೊಟ್ಟ ಹೆಮ್ಮೆಯಾದರೆ ವಿಶ್ವದಲ್ಲೇ ಜೀವಂತವಾಗುಳಿಸಿಕೊಂಡಿರುವ ಪೋಲೋ ಮೈದಾನ ಎನ್ನುವುದೂ ನಮ್ಮದೇ ಎನ್ನುವ ಅಭಿಮಾನ ಮತ್ತು ಗರ್ವಭರಿತ ಹೆಮ್ಮೆ ಮಣಿಪುರಿಗಳದ್ದು. ಎರಡನೆಯ ಕಾಂಗ್ಬಾನ ಹುಟ್ಟಿದ ಪ್ರಯುಕ್ತ ಮೊದಲನೆಯ ಕಾಂಗ್ಬಾ ಕುದುರೆಯ ಪೋಲೋ ಆಟದ ಹೊಸ ಮಾದರಿಯನ್ನು ಅನ್ವೇಷಿಸಿ ಪ್ರಸಿದ್ಧಿಗೆ ತರುತ್ತಾನೆ. ಜಗತ್ತಿನಲ್ಲೇ ಮೊಟ್ಟ ಮೊದಲಿಗೆ ಆಟ ಆರಂಭಿಸಿದ ಖ್ಯಾತಿ ಹಾಗು ಈ ಕ್ರೀಡಾಂಗಣವನ್ನು ನಿರ್ಮಿಸಿದ ಖ್ಯಾತಿಗೂ ಈತ ಸಲ್ಲುತ್ತಾನೆ. ಇವತ್ತಿಗೂ ಜಗತ್ತಿನ ಅತ್ಯಂತ ಪುರಾತನ ಪೋಲೋ – ಕುದುರೆಯಾಟದ ಕ್ರೀಡಾಂಗಣ ಮತ್ತು ಆಟ ಹಾಗೆಯೇ ಆಡಲಾಗುತ್ತಿದೆ ಮತ್ತು ಆ ಸಂಪ್ರದಾಯ ಬದ್ಧ ಶೈಲಿ ಹಾಗು ಅದರ ಶ್ರೀಮಂತಿಕೆಯನ್ನು ಉಳಿಸಿಕೊಂಡು ಬರಲಾಗಿದೆ. ಹಾಗಾಗಿ ಇಲ್ಲಿನ ಹುಡುಗರಿಗೆ ಮತ್ತು ಕುದುರೆಗಳಿಗೆ ಈ ಪೋಲೋ ದೆಸೆಯಿಂದಾಗಿ ಚೆಂಡಿನ ಗತಿ ಮತ್ತು ನಿಯಂತ್ರಣ ಸಾಮಾನ್ಯವಾಗಿ 39 ಪ್ರಮೀಳೆಯರ ನಾಡಿನಲ್ಲಿ ಬಂದುಬಿಟ್ಟಿದೆ. ಮಣಿಪುರದ ಹೃದಯ ಭಾಗದಲ್ಲಿ ಇರುವ ಈ ಕ್ರೀಡಾಂಗಣ ಯಾವುದೇ ದೃಷ್ಟಿಯಿಂದಲೂ ಜಗತ್ತಿನ ಅತ್ಯಂತ ಪುರಾತನ ಮೈದಾನ ಎಂದು ದಾಖಲಾಗಿದೆ. ಇಲ್ಲಿ ಈಗಲೂ ಅದೇ ಮಾದರಿಯ ಆಟ ಮತ್ತು ಅದರ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಾಗುತ್ತಿದೆ. ಒಮ್ಮೆ ಈ ಆಟವನ್ನು ಜಾರಿಗೆ ತಂದ ನಂತರ ಹಾಗೆಯೇ ಬೆಳೆಸಿ ಇದನ್ನು ಬ್ರಿಟಿಷರು ಇನ್ನಷ್ಟು ಪ್ರಚುರಪಡಿಸಿದರು. ಅವರ ಕಾಲದಲ್ಲೇ ಇದಕ್ಕೆ ಕಾರ್ಕ್‍ಬಾಲ್‍ನ ಆವಿಷ್ಕಾರವೂ ಆಯಿತು. ಕುದುರೆಗಳಿಗೆ ಇನ್ನಷ್ಟು ರಕ್ಷಣೆಯ ವ್ಯವಸ್ಥೆ ಆಯಿತು. ಅದಕ್ಕೊಂದು ಕ್ರೀಡೆಯ ಸ್ವರೂಪದ ಜೊತೆಗೆ ವಾಣಿಜ್ಯಾತ್ಮಕ ರೂಪವನ್ನು ಕೊಟ್ಟ ಹಿರಿಮೆ ಅವರದ್ದು. ಹೀಗಾಗಿ ಮಣಿಪುರದ ಇತಿಹಾಸ ಹಾಗು ಅವರ ಕಾಲಾವಧಿಯನ್ನು ಅಭ್ಯಸಿಸುವಾಗ ವಿಶೇಷ ಗಮನ ಸೆಳೆಯುವ ರಾಜ ವಂಶಸ್ಥನೆಂದರೆ "ಕಾಂಗ್ಬಾನೇ ಟಿಲ್ಲಿ". ಬಹುಶ: ಅವನ ಈ ಅವಿಷ್ಕಾರ ಆಗ ಕುದುರೆ ಮತ್ತು ಈ ಚೆಂಡಿನ ಆಟಕ್ಕೆ ಜಾಗತಿಕ ಮಹತ್ವ ಹಾಗು ಅದರೊಂದಿಗೆ ಮಣಿಪುರಕ್ಕೂ ಮಹತ್ವ ಬರುತ್ತದೆಂದು ಗೊತ್ತಿತ್ತಾ..? ಅವನ ಲೆಕ್ಕಾಚಾರಗಳೇನೆ ಇರಲಿ. ಕುದುರೆಯ ಆಟದ ಈ ಮೋಜು ಮತ್ತು ಕ್ರೀಡೆಯಲ್ಲಿ ಮಣಿಪುರಿಗಳು ಮೈದುಂಬಿ ರಂಗಕ್ಕಿಳಿಯುತ್ತಾರೆ. ಇದು ನಾನು ಕಂಡ ಸತ್ಯ. ಈ ಆಟದ ಮಹತ್ವದಿಂದಾಗೇ ಬ್ರಿಟಿಷರು ನಾವಿವತ್ತಿಗೂ ಕಾಲಿಡಲು ಆಗದ ಜಾಗದಲ್ಲೂ ತಮ್ಮ ಕುದುರೆಗಳನ್ನು ಏರಿಸಿದ್ದರು. ಕಾಲ್ದಾರಿ ಗುರುತಿಸಿದ್ದರು. ಪ್ರಮುಖ ಜಾಗಗಳನ್ನು ಮತ್ತು ಬರ್ಮಾಕ್ಕೆ ವ್ಯವಸ್ಥಿತ ಹೆದ್ದಾರಿ ನಿರ್ಮಾಣಕ್ಕೂ ಕಾರಣರಾದರು ಎನ್ನುವುದು ಸತ್ಯ. ಇಲ್ಲವಾದಲ್ಲಿ ಬಹುಶ: ಮಣಿಪುರದ ಇತರ ಭಾಗಗಳಂತೆ ಇವತ್ತಿಗೂ ಇಂಫಾಲ ಮತ್ತು ಹೆದ್ದಾರಿಗಳು ಮೂಲೆಗುಂಪಾಗಿರುತ್ತಿದ್ದವು. ಹಾಗಾಗಿ ಮಣಿಪುರದ ಇತಿಹಾಸದಲ್ಲಿ ಪೋಲೋ ಕಾಲಾವಧಿ ಹೊಸ ಬಗೆಯ ಬದಲಾವಣೆಗೆ ನಾಂದಿ ಹಾಡಿದ ಪ್ರಮುಖ ಘಟ್ಟವಾಗಿ ಗುರುತಿಸಲಾಗುತ್ತದೆ. ನಗರದ ಮಧ್ಯಭಾಗದ ವಿಶ್ವದ ಪುರಾತನ ಪೋಲೋ ಮೈದಾನ ಎಂದೇ ಬೆಳೆಸುತ್ತಿರುವ ಮೈದಾನವಿದ್ದು ವರ್ಷದುದ್ದಕ್ಕೂ ಆಗೀಗ ವಿಶೇಷ ಸಂದರ್ಭಗಳಿಗೆ ಪ್ರಮೀಳೆಯರ ನಾಡಿನಲ್ಲಿ 40 ತಕ್ಕಂತೆ ಆಟೋಟ ಇಲ್ಲಿ ನಡೆಯುತ್ತಲೇ ಇರುತ್ತದೆ. ಕ್ಷಣಾರ್ಧದಲ್ಲಿ ರಭಸದಿಂದ ಓಡುವ ಕುದುರೆಗಳ ಅಪರಿಮಿತ ವೇಗದ ನಡೆ, ಆಟದ ಚಾಕಚಕ್ಯತೆ ಇತ್ಯಾದಿ ನೋಡುವಾಗ ರೋಚಕತೆ ತರುತ್ತದೆ. ಹಾಗಾಗಿ ನೋಡುವವರಲ್ಲಿ ಬೆಟ್ಟಿಂಗ್ ನಡೆಯುವುದು ಸಾಮಾನ್ಯ. ಮತ್ತದಕ್ಕಾಗೇ ಹೆಚ್ಚಿನ ಜನಸಂಖ್ಯೆ ಕೂಡಾ ಸೇರುತ್ತದೆ ಇಲ್ಲಿ. ಕಂಗ್ಲಾ ಕೋಟೆ ಆವರಣ : ಸಂಪೂರ್ಣ ಇಂಫಾಲ ನಗರದ ಷ್ಟೆ ಆವರಣವನ್ನು ಹೊಂದಿರುವ ಕಂಗ್ಲಾ ಹೃದಯ ಭಾಗದಲ್ಲಿ ವಿಶಾಲ ವ್ಯವಸ್ಥೆಯ ಪ್ರವಾಸಿ ಸ್ಥಳ. ಪ್ರತಿ ಬುಧವಾರ ರಜೆಯ ಅವಧಿಯನ್ನು ಹೊರತುಪಡಿಸಿದರೆ ದಿನವೂ 10 ಗಂಟೆಯಿಂದ 4 ಗಂಟೆಯವರೆಗೆ ಸಂದರ್ಶನಕ್ಕೆ ಲಭ್ಯವಿದೆ. ಕೇವಲ ಹತ್ತು ರೂಪಾಯಿಯ ಪ್ರವೇಶ ಫೀಸು ನಮ್ಮನ್ನು ಸ್ವಾಗತಿಸುತ್ತದೆ. ಅರಮನೆಯ ಆವರಣದಲ್ಲಿ ಸ್ಥಳೀಯ ಸೆಕ್ಯೂರಿಟಿಗಳು ಕಾಯಲಿಕ್ಕಿದ್ದಾರೆ. ಎದುರಿಗೇ ಇರುವ ಮಣಿಪುರ ಮುಖ್ಯಮಂತ್ರಿಯವರ ಗೃಹ ಕಛೇರಿ ಮತ್ತು ಮನೆ ಇರುವುದು ಕೂಡಾ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಅಭೇದ್ಯವಾದ ಕೋಟೆಯಂತೆ ಭಾಸವಾಗುತ್ತದೆ. 41 ಪ್ರಮೀಳೆಯರ ನಾಡಿನಲ್ಲಿ ಸೆಕ್ಯೂರಿಟಿ ಮತ್ತು ಪೊಲೀಸ್ ಲೆಕ್ಕದಲ್ಲಿ ಪೂರ್ತಿ ಇಂಫಾಲ ಅಷ್ಟೇ ಅಲ್ಲ, ಸಂಪೂರ್ಣ ಮಣಿಪುರವೇ ಖಾಕಿ ಮತ್ತು ಹಸಿರು ಉಡುಗೆಗಳಿಂದ ಆವರಿಸಿಕೊಂಡಿವೆ ಎಂದರೂ ತಪ್ಪಿಲ್ಲ. ಇದೇ ಆವರಣದ ಮೊದಲಿಗೇ ಕಂಗ್ಲಾ ಇತಿಹಾಸ ಹಾಗು ರಾಜ ಪರಿವಾರದ ಮಾಹಿತಿಯನ್ನು ಸೂಚಿಸುವ ಸಣ್ಣ ಮ್ಯೂಸಿಯಂ ಇದ್ದು ಸಂಪೂರ್ಣ ಕಂಗ್ಲಾ ನೋಡುವ ಮೊದಲು ಇದನ್ನು ದರ್ಶಿಸಿದರೆ ಒಮ್ಮೆ ಕಂಗ್ಲಾ ಮತ್ತು ಮಣಿಪುರ ಅರಸು ಮನೆತನದ ಬಗ್ಗೆ ಒಂದು ಯೋಜಿತ ಚಿತ್ರಣ ದೊರೆಯುತ್ತದೆ. ಸುಮಾರು ಎರಡು ಕೀ.ಮಿ. ದೂರದವರೆಗೆ ಆವರಿಸಿಕೊಂಡಿರುವ ಆವರಣದಲ್ಲಿ ಹಳೆಯ ಗೋವಿಂದಜೀ ದೇವಸ್ಥಾನ ಬಲಭಾಗಕ್ಕಿದ್ದರೆ ಮಣಿಪುರಿಗಳ ಮೂಲ "ಇಭುದೌ ಪಖಾಂಗ್ಬಾ"ನ ದೇವಸ್ಥಾನ ಹೊಸದಾಗಿ ನಿರ್ಮಿತವಾಗಿ ಆಕರ್ಷಣೀಯವಾಗಿದೆ. ಗೋವಿಂದಜೀ ದೇವಸ್ಥಾನ : 1842 ರಲ್ಲಿ ಮಹಾರಾಜ ನಾರಾಸಿಂಗನಿಂದ ಕಟ್ಟಲ್ಪಟ್ಟ ಈ ದೇವಸ್ಥಾನ ಮಣಿಪುರ ಇತಿಹಾಸದ ಒಂದು ಭಾಗ. ಆದರೆ ಮಾರ್ಚ್ 1868ರ ಭಾರಿ ಭೂಕಂಪಕ್ಕೆ ಹೆಚ್ಚಿನ ಇಂಫಾಲದೊಂದಿಗೆ ಈ ದೇವಸ್ಥಾನ ಕೂಡಾ ಹಾನಿಗೊಳ ಗಾಯಿತು. ಆದರೆ "ಮಹಾರಾಜ್ ಚಂದ್ರಕೀರ್ತಿ" ಯಿಂದ ಪುನ: 1869ರಲ್ಲಿ ಪುನರುತ್ಥಾನಗೊಂಡ ಈ ದೇವಸ್ಥಾನ ಇಂಫಾಲದ ಪ್ರಮುಖ ಸ್ಥಳಗಳಲ್ಲಿ ಒಂದು. ಒಂದೂವರೆ ಮೀಟರ್ ಎತ್ತರ ಆವಾರದ ಮೇಲೆ ಕಟ್ಟಲ್ಪಟ್ಟಿರುವ ದೇವಸ್ಥಾನ ಆಗಿನ ಶಿಲ್ಪಕಲೆಗಳ ಒಂದು ವಿಸ್ಮಯವಾಗಿದೆ. ಪ್ರಮೀಳೆಯರ ನಾಡಿನಲ್ಲಿ 42 ಎದುರುಗಡೆ ಇರುವ ಹಲವು ಹಳೆಯ ಕಂಬಗಳ ಅರೆ ನಿರ್ಮಿತ ಭವನ ಅದರ ಸದ್ಯದ ಸ್ಥಿತಿಗೆ ಕೈಗನ್ನಡಿಯಾಗುತ್ತದೆ. ಒಳಭಾಗಗಳು ಪುಂಡರ ಉಪಯೋಗಕ್ಕೆ ಜಾಗವಾಗಿದ್ದರೆ ರಾತ್ರಿಯಲ್ಲಿ ಬಾವಲಿಗಳ ಆವಾಸವಾಗುತ್ತಿರುವುದು ಸ್ಪಷ್ಟ. ಶ್ರೀಕೃಷ್ಣನ ಆರಾಧನೆಗಾಗಿ ಅವನ ಹೆಸರಿನಲ್ಲೆ ಆರಂಭಿಸಲಾದ ಈ ದೇವಸ್ಥಾನವನ್ನು 1976 ರಲ್ಲಿ ಪುರಾತತ್ವ ಇಲಾಖೆ ತನ್ನ ಸುಪರ್ದಿಗೆ ವಹಿಸಿಕೊಳ್ಳುವುದರ ಮೂಲಕ ಕೊಂಚ ಪುನರುತ್ಥಾನ ಆರಂಭಿಸಿದ್ದರೆ, ಇನ್ನು ಆಗಬೇಕಿರುವ ಹಲವು ಉತ್ಖನನದ ಭಾಗಗಳು ಹಾಗೇ ರಕ್ಷಿಸಲ್ಪಟ್ಟಿವೆ. ಅರಣ್ಯ ಮತ್ತು ಸಾಕಷ್ಟು ಕಾಡು ಉತ್ಪನ್ನಗಳ ಜೊತೆಯಲ್ಲಿ ಕಾಡಿನ ತುಂಬೆಲ್ಲ ಇರುವ ನೂರಾರು ಬಗೆಯ ಪಕ್ಷಿ ಸಂಕುಲ ಇಲ್ಲಿನ ಅರಣ್ಯದ ಅನುಭವಕ್ಕೆ ಈಡು ಮಾಡುವ ದೇವಸ್ಥಾನದ ಆವರಣಕ್ಕೆ ಕೊಂಚ ಮುದ ನೀಡುತ್ತದೆ. ಹಾಗಾಗಿ ವರ್ಷದುದ್ದಕ್ಕೂ ಬೇರೆ ಕಡೆಯಿಂದ ಪ್ರವೇಶಿಸುವ ಹಕ್ಕಿಗಳ ಸಂಖ್ಯೆ ಪ್ರತಿ ವರ್ಷವೂ ವೃದ್ಧಿಸುತ್ತಿದೆ. ಅಸಲಿಗೆ ಇಂಫಾಲ ಎನ್ನುವುದು ಎರಡು ಪ್ರಮುಖ ಜಿಲ್ಲೆಗಳ ಸಂಗಮ ಎಂದರೂ ತಪ್ಪಿಲ್ಲ. ಆದರೆ ಆಡಳಿತಾತ್ಮಕವಾಗಿ ಇದನ್ನು ಪೂರ್ವ ಮತ್ತು ಪಶ್ಚಿಮ ಇಂಫಾಲ ಎಂದು ವಿಂಗಡಿಸಲಾಗಿದೆ. ಹೊರತುಪಡಿಸಿದರೆ ಯಾವ ವ್ಯತ್ಯಾಸವೂ ಇದರಲ್ಲಿ ಕಂಡುಬರುವುದಿಲ್ಲ. ಕಂಗ್ಲಾ ಮ್ಯೂಸಿಯಂ : ಚಿಕ್ಕಹಾಲ್‍ನಲ್ಲಿ ಸಂಪೂರ್ಣ ಕಂಗ್ಲಾ ನಾಡಿನ ಮತ್ತು ಅರಸು ಮನೆತನದ ಬಗೆಗಿನ ವಿವರಣೆ, ಉಡುಗೆ ತೊಡುಗೆ, ಕಂಗಾಯಿ ದೋಣಿಗಳ ವಿವರ, ಅರಮನೆಯ ಸಂಪೂರ್ಣ 3ಡಿ ಮಾಡೆಲ್ ಚಿತ್ರ ಹಾಗು ಸಂಪೂರ್ಣ ಕ್ರಿ.ಪೂ. 43 ಪ್ರಮೀಳೆಯರ ನಾಡಿನಲ್ಲಿ 33ರ ಕಾಲದಿಂದಲೂ ಮಣಿಪುರ ಅರಸುಮನೆತನಗಳ ಮತ್ತು ಅದಕ್ಕೆ ಸಂಬಂಧಿಸಿದ ಕೈಪಿಡಿ ಹಾಗು ಹಸ್ತಾಕ್ಷರಗಳು, ಓಲೆಗರಿಗಳ ಮಾಹಿತಿ, ಆಗಿನ ಕಾಲದ ರಾಜರು ಮತ್ತು ಇತ್ತೀಚೆಗೆ ಕಾಲಿಟ್ಟು ಮಣಿಪುರಕ್ಕೆ ಗವರ್‌ನರ್‌ಗಳಾಗಿದ್ದ ಬ್ರಿಟಿಷ್‌ ವೈಸ್‍ರಾಯ್‍ಗಳ ಆಯಿಲ್ ಪೇಯಿಂಟಿಂಗ್‍ಗಳು, ಕೊನೆಗೆ ಪೂರ್ತಿ ಕಾಂಗ್ಲಾ ಕ್ಷೇತ್ರವನ್ನು ನಮ್ಮ ಪ್ರಧಾನಿಗೆ ಹಸ್ತಾಂತರಿಸಿದ ರಾಜ ಮನೆತನದ ಅಪರೂಪದ ಚಿತ್ರಗಳು ಇಲ್ಲಿವೆ. ಆಯುಧ, ಆಟೋಟದ ಪರಿಕರಗಳು, ಅವರು ಉಪಯೋಗಿಸುತ್ತಿದ್ದ ಪಾತ್ರೆ ವಸ್ತ್ರ ಸೇರಿದಂತೆ ಸಂಪೂರ್ಣ ಮಣಿಪುರ ಅರಸು ಮನೆತನದ ಕಂಗ್ಲಾ ನಾಡಿನ ಪರಿಚಯವನ್ನು ಈ ಮ್ಯೂಸಿಯಂ ನೀಡುತ್ತದೆ. ಜೊತೆಗೆ ಬ್ರಿಟಿಷ್‌ ಹೋರಾಟದಲ್ಲಿ ಅಸು ನೀಗಿದ ಸೈನಿಕರ, ಬ್ರಿಟಿಷ್‌ ಮೇಲೆ ಆಕ್ರಮಣ ಮಾಡಿದ ಹಲವು ಮಾಹಿತಿಗಳನ್ನು ಚಿತ್ರಗಳ ಮೂಲಕ ಇಲ್ಲಿ ತೋರಿಸಲಾಗಿದೆ. ಇಭೌದು ಪಖಾಂಗ್ಬಾ ಶಾಂಘೈ ದೇವಸ್ಥಾನ : ಅಪ್ಪಟ ಭೌದ್ದಿಯರ ಮತ್ತು ಬರ್ಮೀಯರ ಶೈಲಿಯಲ್ಲಿರುವ ನೂತನವಾಗಿ ನಿರ್ಮಿಸಲ್ಪಟ್ಟಿರುವ ಈ ಮೂಲ ದೇವರ ದೇವಸ್ಥಾನ "ಇಡೌಭು ಶಾಂಘೈ ಪಖಾಂಗ್ಬಾ" ಎಂದೇ ಗುರುತಿಸಲಾಗುತ್ತಿದೆ. ಹದಿನೆಂಟು ಅಡಿ ಎತ್ತರದ ಆವರಣದ ಕಟ್ಟೆಯ ಮೇಲೆ ಅಚ್ಚ ಬಿಳಿಯ ಶಿಲೆಯಲ್ಲಿ ನಿರ್ಮಿತ ದೇವಸ್ಥಾನ ತುಂಬಾ ಸುಂದರವಾಗಿದ್ದು, ಒಳಗಡೆ ಜೋಡಿ ದೇವರ ಗರ್ಭಗುಡಿಯಿದೆ. ಸುತ್ತುಬರುವಂತೆ ಆವರಣವನ್ನು ನಿರ್ಮಿಸಲಾಗಿದ್ದು ತೀವ್ರ ಆಸ್ತಿಕ ಸ್ಥಳೀಯರು ಇದಕ್ಕೆ ವಾರಕ್ಕೊಮ್ಮೆಯಾದರೂ ನೂರೊಂದು ಸುತ್ತು ಪ್ರದಕ್ಷಿಣೆ ಹಾಕುವುದು ವಾಡಿಕೆ. ಅಂದ ಹಾಗೆ ಈ ದೇವರಿಗೆ ಅರಳು ಮತ್ತು ಬೆಲ್ಲದ ನೈವೇದ್ಯ ಮಾಡಲಾಗುತ್ತದೆ. "ಪಖಾಂಗ್ಬಾ" ಎನ್ನುವ ಇತಿಹಾಸ ಪ್ರಸಿದ್ಧ ಮೊಟ್ಟ ಮೊದಲ ಪ್ರಮೀಳೆಯರ ನಾಡಿನಲ್ಲಿ 44 ಮಣಿಪುರಿಗಳ ಅಸ್ತಿತ್ವವನ್ನು ಹುಟ್ಟುಹಾಕಿದ ಮತ್ತು ಆ ಮೂಲಕ ಭೂಮುಖದಲ್ಲಿ ಮೈಥೇಯಿಗಳಿಗೊಂದು ವ್ಯವಸ್ಥಿತ ಹಾಗು ಶಾಶ್ವತ ಸ್ಥಾನ ಕಲ್ಪಿಸಿದ ಹಿರಿಮೆ ಈತನದು. ಹಾಗಾಗಿ ಹೆಚ್ಚಿನ ಇತಿಹಾಸ ಮತ್ತು ಪೌರಾಣಿಕ ಕಥೆಗಳೂ ಸೇರಿದಂತೆ ಪ್ರತಿ ಮಣಿಪುರಿಗಳ ದಾಖಲೆಗಳಲ್ಲಿ ಆಗಿನಿಂದ ಈಗಿನ ಸೈನ್‍ಬೋರ್ಡುಗಳವರೆಗೂ ಇಲ್ಲಿ ಹೆಚ್ಚಿನ ದಾಖಲು "ಪಖಾಂಗ್ಬಾ" ಗೆ ಸಲ್ಲುತ್ತದೆ. ಹಿಜಾಗಂಗ್ : ಇದೊಂದು ಹಳೆಯ ಮಾದರಿಯ ಸಂರಕ್ಷಿಸಲ್ಪಟ್ಟ ಕಯಾಕಿಂಗ್ ಮಾದರಿಯ ದೋಣಿ ಮನೆಯಾಗಿದ್ದು, ಸುಮಾರು ಇನ್ನೂರ ಎಂಭತೈದು ಅಡಿ ಉದ್ದದ ದೋಣಿಯನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಮಣಿಪುರದ ಮುಖ್ಯಮಂತ್ರಿಯೇ ಈ ಟ್ರಸ್ಟ್ ಅಧ್ಯಕ್ಷರೂ ಆಗಿರುವುದರಿಂದ ಇದರ ಉದ್ಘಾಟನೆ ಮತ್ತು ನಿರ್ವಹಣೆಯನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಸ್ವಚ್ಛತೆ ಮತ್ತು ಆವರಣವನ್ನು ಪೂರ್ತಿ ಯಾಗಿಯೇ ಪ್ರವಾಸಿಗರಿಂದ ಪ್ರತ್ಯೇಕಿಸುವ ಸಲುವಾಗಿ ಸಂಪೂರ್ಣ ಗಾಜಿನ ಹೊದಿಕೆಯ ಆವರಣದೊಳಗೆ ಈ ದೋಣಿಗಳನ್ನು ಇಡಲಾಗಿದ್ದು ಇವಕ್ಕೆ ಆಕರ್ಷಣೆಯ ದೃಷ್ಟಿಯಿಂದ ಆಧುನಿಕ ಬಣ್ಣ ಮತ್ತು ನಿರ್ವಹಣೆಯ ಟಚ್ ಕೊಡಲಾಗಿದೆ. ಇನ್ನು ಆಧುನಿಕತೆಯ ಮತ್ತು ಆಕರ್ಷಣೆಯ ದೃಷ್ಟಿಯಿಂದ ಅಲ್ಲಲ್ಲಿ ಗುಲಾಬಿ ತೋಟ, ಕುಳಿತುಕೊಳ್ಳಲು ಅಲ್ಲಲ್ಲಿ ಗುಡಿಸಲು ಮಾದರಿಯ ಚಿಕ್ಕ ಚಿಕ್ಕ ತಂಗುದಾಣಗಳು, ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಆಯಾ ಕಾಲಾವಧಿಯಲ್ಲಿ ಗತಿಸಿದ ಮಖ್ಯ ಅರಸು ಮನೆತನಗಳವರ ಸಮಾಧಿ ಕೂಡಾ ಇದೇ ಕೋಟೆಯ ಆವರಣದಲ್ಲಿ ಮಾಡಲಾಗಿದೆ. ಎರಡ್ಮೂರು ಗಂಟೆಗಳ 45 ಪ್ರಮೀಳೆಯರ ನಾಡಿನಲ್ಲಿ ಕಾಲಾವಧಿಯನ್ನು ಬೇಡುವ ಕಂಗ್ಲಾ ಒಮ್ಮೆ ಪ್ರವಾಸಿಗರು ದರ್ಶಿಸಬಹುದಾದ ಐತಿಹಾಸಿಕ ಸ್ಥಳ. ಟೀಕೇಂದ್ರ ಜಿತ್‍ಸಿಂಗ್ ಪಾರ್ಕ್ : ಸುಮಾರು 1886 ಮತ್ತು 1890 ರ ಕಾಲಾವಧಿಯಲ್ಲಿ ಸಾಕಷ್ಟು ರಾಜಕೀಯ ವಿಪ್ಲವಗಳಿಗೆ ಕಾರಣನಾದ ಈ ರಾಜ "ಜುಬ್ರಾಜ ಟೀಕೇಂದ್ರಜಿತ್‍ಸಿಂಗ್" ಈ ಅವಧಿಯಲ್ಲಿ ಮಣಿಪುರದ ಪ್ರಮುಖ ಘಟನಾವಳಿಗಳಿಗೆ ಕಾರಣನಾಗುತ್ತಾನಲ್ಲದೇ ಇದೇ ಪಾರ್ಕಿನ ಪಕ್ಕದ ಮೈದಾನದಲ್ಲಿ ವಿಶ್ಯದ ವಿಖ್ಯಾತ ಪೊಲೋ ಮೈದಾನದಲ್ಲಿ ಗಲ್ಲಿಗೇರಿಸಲ್ಪಡುತ್ತಾನೆ ಕೂಡಾ. ಮುಂದೆ ಅವನ ಕಾಲದ ಹಲವು ಸಮಯದ ನಂತರ ಅವನ ನೆನಪಿಗಾಗಿ ನಿರ್ಮಿಸಲಾದ ಸ್ತಂಭದ ಚಿಕ್ಕ ಆವರಣ ಇಲ್ಲಿದೆ. ಇವನು "ಕುಳ್ಳ ಚಂದ್ರ"ನ ಜೊತೆಗೆ ಸೇರಿ ನಿರ್ಮಿಸುವ ಸಂಚಿನಿಂದಾಗಿ ಬ್ರಿಟಿಷ್‌ ನಾಲ್ವರು ಪ್ರಮುಖ ಅಧಿಕಾರಿಗಳೇ ಕೊಲೆಯಾಗಿ ಹೋಗುತ್ತಾರೆ. ಕೊನೆಗೆ ಬ್ರಿಟಿಷ್‌ ಮೂರು ಕಡೆಯಿಂದ ಲಗ್ಗೆಯಿಟ್ಟು ಮಣಿಪುರವನ್ನು ವಶಪಡಿಸಿ ಕೊಳ್ಳುವುದರೊಂದಿಗೆ ಜುಬ್ರಾಜ್ ಟೀಕೇಂದ್ರಜಿತ್ ಸಿಂಗ್ ಸೆರೆ ಸಿಕ್ಕು ಕೊಲೆಯಾಗುತ್ತಾನೆ. ಅವರ ಹೋರಾಟ ಮತ್ತು ಇತಿಹಾಸದ ನೆನಪಿಗೆ ಈ ಸ್ಮಾರಕ ನಿರ್ಮಿಸಲಾಗಿದೆ. ಮಣಿಪುರ ಮ್ಯೂಸಿಯಂ : ಇದೊಂದು ಪ್ರವಾಸಿಗರಿಗೆ ಪ್ರಮುಖ ಮಾಹಿತಿಯ ಸಾರವಾಗಬಲ್ಲ ಸ್ಥಳ. ಆದರೆ ಮಣಿಪುರಿ ಅಥಾರಿಟಿಯವರ ಅನಾದರದ ನಿರ್ವಹಣೆಯಿಂದ ಇದು ಭಾರತೀಯರಿಗೆ ಸರಿಯಾಗಿ ನಿಲುಕುತ್ತಿಲ್ಲ. ಸರ್ವರೀತಿಯ ಮಣಿಪುರದ ಇತಿಹಾಸವನ್ನು ಇಲ್ಲಿ ಶಿಲಾಯುಗದಿಂದ ಇಲ್ಲಿವರೆಗಿನ ಸಂಪೂರ್ಣ ಮಾಹಿತಿಯ ಜೊತೆಗೆ, ಕಲೆ, ಸಾಹಿತ್ಯ, ಸಂಸ್ಕೃತಿ, ನೆಲ ಜಲದ ಪ್ರಾಚೀನ ತಾಳೆ ಗರಿಗಳಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೂ ಮಾಹಿತಿ ಇದೆ. ಪ್ರಮೀಳೆಯರ ನಾಡಿನಲ್ಲಿ 46 ಆದರೆ ಭಾರತೀಯ ಪ್ರವಾಸಿಗರೆಂದರೆ ಇಲ್ಲಿನ ಕ್ಯೂರೇಟರ್ ಮತ್ತು ಇತರರಿಗೆ ಅದೇನೋ ಅಲರ್ಜಿ. ಯಾವುದೇ ಕಾಯಿದೆ ಇಲ್ಲದಿದ್ದರೂ (ಇದ್ದರೂ ಹೇಳದೆ ಇರುವ) ನಮ್ಮನ್ನು ಕ್ಯಾಮೆರಾ ಒಯ್ಯುವಂತಿಲ್ಲ, ಮೊಬೈಲ್ ಒಯ್ಯುವಂತಿಲ್ಲ, ಟೊಕನ್ ತೊಗೊಳ್ಳಿ ಎಂದೆನ್ನುತ್ತ ಕಿರಿಕಿರಿಗೆ ದೂಡುವ ಅಧಿಕಾರಿಗಳ ವರ್‌ಗ, ವಿದೇಶಿಯರ ಡಾಲರ್ ಎದುರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಡೆದುಕೊಳ್ಳುವುದಕ್ಕೆ ನಾನೇ ಸಾಕ್ಷಿ. ವಿದೇಶಿಯರ ದಂಡಿಗೆ ಏನೆಲ್ಲಾ ಸವಲತ್ತು ಬೇಕೋ ಅದನ್ನು ಒದಗಿಸುತ್ತಾ ಹಿಂದೆ ಮುಂದೆ ಸುತ್ತುತ್ತಾ ನಡೆದುಕೊಳ್ಳುವ ಗುಂಪಿಗೆ ಯಾರೂ ವಿರೋಧಿಸುತ್ತಲೂ ಇಲ್ಲ. ಹಲವು ರೀತಿಯ ಪಂಗಡ ಸಮುದಾಯ ಮತ್ತು ಕಾಡಿನ ಉತ್ಪನ್ನಗಳ ಸಹಿತ ಸರ್ವ ಮಾಹಿತಿಯ ಭಂಡಾರವೇ ಇಲ್ಲಿದೆ. ಜಗತ್ತಿನಲ್ಲೆಲ್ಲೂ ಇರದ ಬಿದಿರಿನ ಸಂಗ್ರಹದ ಮತ್ತದರ ಸಮಗ್ರ ಮಾಹಿತಿಯ ಭಂಡಾರವೇ ಇಲ್ಲಿದೆ. ಹೀಗೆ ಹಲವು ದಿಕ್ಕುಗಳಲ್ಲಿ ತನ್ನ ಆಕರ್ಷಣೆಯನ್ನು ಹಂಚಿಕೊಂಡಿರುವ ಇಂಫಾಲ ಎರಡು ದಿನದ ಮಟ್ಟಿಗೆ ನಿಮ್ಮನ್ನು ಎಂಗೇಜ್ ಮಾಡಬಲ್ಲದು. ಆಹಾರ ಇತ್ಯಾದಿಯ ದೃಷ್ಟಿಯಿಂದ ಅಷ್ಟಾಗಿ ತೊಂದರೆ ಇಲ್ಲದಿದ್ದರೂ 47 ಪ್ರಮೀಳೆಯರ ನಾಡಿನಲ್ಲಿ ಸಸ್ಯಾಹಾರಿಗಳಿಗೆ ಇರುಸು ಮುರುಸಾಗುವುದು ಮತ್ತು ಸಾಧಾರಣ ದರ್ಜೆಯ ಹೋಟೆಲುಗಳು ಸಂಕಷ್ಟಕ್ಕೆ ದೂಡುವುದು ನಿಶ್ಚಿತ. ಜನಜೀವನ ಇನ್ನು ಇಂಫಾಲದಿಂದ ಹೊರಭಾಗದತ್ತ ಕಾಲು ಹರಿಸಿದಲ್ಲಿ ಯಾವುದೇ ಸಾರಿಗೆ ನಿಮ್ಮನ್ನು ಒಯ್ಯುವುದಾಗಲಿ, ಇಂತಿಷ್ಟೆ ಹೊತ್ತಿಗೆ ಹೋಗುವುದಕ್ಕೆ ಸಾಧ್ಯ ಎಂಬ ಅನುಕೂಲವಾಗಲಿ ಇಲ್ಲ. ಕಾರಣ ಮಣಿಪುರ ಸರಕಾರದ ಸಾರ್ವಜನಿಕ ಸಾರಿಗೆ ಎಂಬ ಸೇವಾ ವಿಭಾಗವೇ ಇಲ್ಲ. ಏನಿದ್ದರೂ ಸ್ಥಳೀಯ ಜನರು ನಿರ್ವಹಿಸುವ ಊರಿನ ನಾಲ್ಕೂ ದಿಕ್ಕಿನ ಆಯಾ ನಿಲ್ದಾಣ ಎನ್ನುವ ರಸ್ತೆ ಬದಿಯ ಟೆಂ ಪೋ, ವಿಂಗರ್ ಮತ್ತು ಮಾರುತಿ ವ್ಯಾನ್‍ಗಳ ಸಾರಿಗೆಯೆ ಇಲ್ಲಿ ಸಾಗಾಟಕ್ಕೆ ಜೀವನಾಧಾರ. ಇಂಫಾಲ ನಗರದಿಂದ ಹಾಯ್ದು ಹೋಗುವ ಮೂರ್‌ನಾಲ್ಕು ರಾ.ಹೆ. ಗಳ ಮೇಲೆ ಚಲಿಸುವ ಎಲ್ಲಾ ವಾಹನಗಳು ಆಯಾ ಊರಿನ ದಿಕ್ಕಿಗೆ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಲ್ಲಿಂದ ಜನರನ್ನು ಪಿಕ್‍ಅಪ್ ಮಾಡುತ್ತವೆ. ಉದಾಹರಣೆಗೆ ಇಲ್ಲಿಂದ ಚುರ್ಚಾಂಡ್ಪುರ್, ವಿಷ್ಣುಪುರ್, ಮೈರಾಂಗ್ ಕಡೆಗೆ ಹೋಗುವುದಿದ್ದರೆ "ಕಾಶಂ ಪೇಟ್" ಎನ್ನುವ ಹೊರ ವಲಯದ ಜಾಗಕ್ಕೆ ಮೊದಲು ಆಟೊ ಅಥವಾ ರಿಕ್ಷಾ ಹಿಡಿದು (ಇಲ್ಲಿ ಆಟೊ ಅಂದರೆ ಇಂಜಿನ್ ಚಾಲಿತ, ರಿಕ್ಷಾ ಎಂದರೆ ಮಾನವ ಚಾಲಿತ ತುಳಿದು ಹೊಡೆಯುವ ಸೈಕಲ್ ರಿಕ್ಷಾ) ಅಲ್ಲಿಗೆ ತಲುಪಿದರೆ ಅಲ್ಲಿ ಊರೆಲ್ಲಾ ಸುತ್ತುವರೆದು ಬರುವ ವಾಹನಗಳು ಪಿಕ್ ಅಪ್ ಮಾಡುತ್ತವೇ ಸೀಟ್ ಇದ್ದರೆ. ಇಲ್ಲಿಂದ ಹೊರಡುವ ವಾಹನಗಳು ಆ ದಿಕ್ಕಿನ ಹೆದ್ದಾರಿಯ ಮೇಲೆ ನಮ್ಮನ್ನು ಆಯಾ ಊರಿನವರನ್ನೂ ಇಳಿಸುತ್ತವೆ. ಅಲ್ಲಿಂದ ಆಟೋ ರಿಕ್ಷಾಗಳು ಆಯಾ ದಿಕ್ಕಿನ ಹಳ್ಳಿಗಳ ಕಡೆಗೆ ಚಲಿಸುತ್ತ. ಕಿಕ್ಕಿರಿದು ತುಂಬಿಸಿಕೊಂಡು, ಅದರಲ್ಲಿ ಮನುಷ್ಯರು, ಸತ್ತ ಮೀನುಗಳು, ತರಹೆವಾರಿ ಕಾಯಿಪಲ್ಲೆಯ ಮೂಟೆಗಳು, ದಿನಸಿ ಸಾಮಗ್ರಿಗಳು, ಬಟ್ಟೆ ಬರೆ ಗಂಟುಗಳು ಹೀಗೆ ಏನೇನು ಸಾಧ್ಯವೋ ಎಲ್ಲಾ ತುಂಬಿಸುತ್ತಾರೆ. ಎರಡೂ ಕಡೆಯಲ್ಲಿ ಸೀಟಿಂಗ್ ವ್ಯವಸ್ಥೆಯ ಕಾರಣ ಮಧ್ಯದಲ್ಲೂ ಚಿಕ್ಕ ಚಿಕ್ಕ ಸ್ಟೂಲುಗಳನ್ನಿಟ್ಟು ಅಲ್ಲೂ ಜನರನ್ನು ಕೂರಿಸುತ್ತಾರೆ. ಪ್ರಮೀಳೆಯರ ನಾಡಿನಲ್ಲಿ 48 ಸಾಕಷ್ಟು ವಾಹನಗಳು ಇಲ್ಲಿ ಲಭ್ಯವಿದೆಯಾದರೂ ನಮ್ಮ ಸಮಯಕ್ಕೆ ಸಿಗುತ್ತವೆ ಮತ್ತು ವೇಗದ ಸಾರಿಗೆಯಾಗುತ್ತದೆ ಎನ್ನುವಂತಿಲ್ಲ. ಕಾರಣ ಸಾರ್ವಜನಿಕರನ್ನು ಎಲ್ಲೆಂದರಲ್ಲಿ ತುಂಬಿಸುವ ಇಳಿಸುವ ಪ್ರಕ್ರಿಯೆಯಿಂದಾಗಿ ಗಂಟೆಗೆ 35 ಕಿ.ಮೀ ಕ್ರಮಿಸಿದರೆ ಜಾಸ್ತಿ. ಅದೇ ಕೆಲವೊಮ್ಮೆ ಗಂಟೆಗೊಮ್ಮೆ ನೇರ ವಾಹನ ಇದ್ದು ಅವುಗಳು ವಾಸಿ. ಆದರೆ ಸಾರಿಗೆಯ ಬೆಂಬಲ ನಮ್ಮ ಅನುಕೂಲಕ್ಕೆತಕ್ಕಂತೆ ನಿರ್ವಹಿಸಬೇಕಾದ ಸರಕಾರದ ಜವಾಬ್ದಾರಿ ಮಾತ್ರ ಎಲ್ಲೂ ಕಂಡುಬರುವುದಿಲ್ಲ. ತೀರ ವಿಮಾನ ನಿಲ್ದಾಣದಿಂದಲೇ ನಗರಕ್ಕೆ ಆಟೊ ಸಂಚಾರ ಶೇರಿಂಗ್ ಪದ್ಧತಿಯಲ್ಲಿ ಲಭ್ಯವಿದೆ. ಎಲ್ಲೆಲ್ಲೂ ಈಗಲೂ ಸಾರಿಗೆ ಅಥವಾ ಸಮಯದ ಬಗ್ಗೆ ತೀರ ತಲೆ ಕೆಡಿಸಿಕೊಳುವವರು ಕಮ್ಮಿ. ಕಾರಣ ಸಮಯ ಸಿಕ್ಕಿದ ಕೊಡಲೇ ಪಾನು ಮತ್ತು ತಂಬಾಕು ಹಾಗು ಸ್ಥಳೀಯ ಜರ್ದಾ ಸೇರಿದಂತೆ ಇತರೆ ಮಾದಕ ಪದಾರ್ಥಗಳ ಸೇವನೆ ಏನಿಲ್ಲದಿದ್ದರೂ ಸಿಗರೇಟು, ಬೀಡಿ ಇಲ್ಲಿ ಪುರುಷ ಮಹಿಳೆ ಭೇದವಿಲ್ಲದೆ ಉಪಯೋಗಿಸುತ್ತಾರೆ. ಇಂಥದ್ದೇ ಅದ್ಭುತ ಹಿಂದೂಳಿದ ಜಿಲ್ಲೆ ಮತ್ತು ಹಳ್ಳಿಗಳಲ್ಲೇ ನಿಜವಾದ ಮಣಿಪುರದ ಅನಾವರಣವಾದದ್ದು. ಅಂತೆಯೆ ಮೊದಲ ದಿನದ ಸುತ್ತಿನ ನಂತರ ನಾನು ಕಾಲಿಟ್ಟಿದ್ದೇ ಚುರ್ಚಾಂಡ್ಫುರ್ ಜಿಲ್ಲೆಗೆ. ಹಾಗೆ ಹೊರಡುವ ಮೊದಲೇ ಕಾಲಿಗಡರುವುದು ವಿಷ್ಣುಪುರ್ ಜಿಲ್ಲೆ. ಇಲ್ಲಿ ಜಿಲ್ಲೆಗಳನ್ನು ಯಾವ ಆಧಾರದ ಮೇಲೆ ಅಥವಾ ಮಾನದಂಡದ ಮೇಲೆ ವಿಭಾಗಿಸಲಾಗಿದೆ ಪ್ರಶ್ನಿಸುವಂತಿಲ್ಲ. ಕಾರಣ ಕೇವಲ ದಾಪುಗಾಲಿಡುತ್ತ ನಡೆದೇ ಪೂರೈಸಬಹುದಾದಷ್ಟು ಚಿಕ್ಕ ಕ್ಷೇತ್ರವಿದ್ದರೂ ಇಂಫಾಲ ನಗರವನ್ನೇ ಪೂರ್ವ ಮತ್ತು ಪಶ್ಚಿಮ ಇಂಫಾಲ ಜಿಲ್ಲೆಯಾಗಿಸಿದ್ದಾರೆ. ಅದರ ಹಿಂದಿರುವ ತಾಂತ್ರಿಕ ಮತ್ತು ಸಾಮಾಜಿಕ ನೆಲೆಯ ಯಾವ ಲಾಕ್ಕೂ ಇಲ್ಲಿ ಇಂಥಾ ಪಾಲುದಾರಿಕೆಗೆ ಧನಾತ್ಮಕ ಬೆಂಬಲ ಕೊಡಲಾರದು. ಆದರೂ ಕೇವಲ ಎರಡ್ಮೂರು ಕೀ.ಮಿ. ವ್ಯಾಪ್ತಿಗೂ ಒಂದು ಜಿಲ್ಲಾ ಸ್ಥಾನಮಾನ ಇನ್ನೊಂದು ಪಕ್ಕದಲ್ಲೇ ನೂರಾರು ಕೀ.ಮಿ. ವಿಸ್ತಾರಕ್ಕೂ ಅದೇ ಸ್ಥಾನಮಾನ. ಅಲ್ಲಿಗೆ ಮಾನದಂಡದ ಲೆಕ್ಕಾಚಾರ ಇಲ್ಲಿ ಗೋವಿಂದ. 49 ಪ್ರಮೀಳೆಯರ ನಾಡಿನಲ್ಲಿ ಈ "ಕಾಶಂಪೇಟ್" ಮಾರ್‌ಗವಾಗಿ ಹೊರಟ ನನಗೆ ದಾರಿಯುದ್ದಕ್ಕೂ ಸಿಕ್ಕಿದ ಎಲ್ಲ ಹಳ್ಳಿಗಳೂ ಒಂದೇ ತರಹ ಮತ್ತು ಒಂದೇ ತರಹದ ಹಸಿ ಅಡಿಕೆಯ ವಾಸನೆಯ ಜೊತೆಗೆ ಮೀನು ಖಾದ್ಯದ ಅಬ್ಬರ. ಅಷ್ಟಕ್ಕೂ ಯಾವ ಊರಿಗೆ ನಿಂತರೂ ಒಂದೇ ಕೂಗು.. ಮೈರಾಂಗ್.. ಮೈರಾಂಗ್.. ಅಲ್ಲಿಗೆ ಯಾವ ಮಧ್ಯದ ಊರಿಗೂ ಗಾಡಿ ನಿಲ್ಲುತ್ತದೆ. ಇದು ಒಂದು ರಸ್ತೆಯ ವಿವರ ಇದೇ ಎಲ್ಲಾ ಹೆದ್ದಾರಿಗೂ ಅನ್ವಯವಾಗುತ್ತದೆ. ಘಾರಿ, ಲೊಂಗ್ ಜಿಂಗ್, ಚೆಂಗ ಘಾಯಿ, ನಂಬೊಲ್, ಓಯಿನಾಂ, ಜಾಯೊ ಪೈ, ಹೀಗೆ ಹಲವು ಹಳ್ಳಿಗಳ ಸಂಭ್ರಮದ ನಂತರ ಸಿಗುವುದೇ ವಿಷ್ಣುಪುರ್. ಇದೂ ಒಂದು ಜಿಲ್ಲೆ. ಬಿಷ್ಣುಪುರ್ ಜಿಲ್ಲೆ..: ಮೇ 5. 1983 ರಂದು ಆಸ್ತಿತ್ವಕ್ಕೆ ಬಂದ ಬಿಷ್ಣುಪುರ್ ಅಥವಾ ವಿಷ್ಣುಪುರ್ ಜಿಲ್ಲೆ ಮೂಲತ: ಚಿಕ್ಕ ಜಿಲ್ಲೆ. ಕೇವಲ 520 ಚದರ ಕಿ.ಮೀ. ಅಗಲದ ಜಿಲ್ಲೆಯನ್ನು ಒಂದೇ ಗುಕ್ಕಿಗೆ ಓಡಿ ಮುಗಿಸಬಹುದು. ಕೇವಲ ಬೆರಳೆಣಿಕೆಯ ಊರನ್ನು ಎಣಿಸಬಹುದಾದ ರೀತಿಯಲ್ಲಿ ಆಚೀಚೆಗೆ ಬೆಳೆದಿರುವ ವಿಷ್ಣುಪುರ್ ಇಂಫಾಲದಿಂದ ಕೇವಲ ಅರ್ಧಗಂಟೆ ರಸ್ತೆಯಲ್ಲಿ ಪಯಣಿಸಿದರೆ ಅಥವಾ ಸಂಜೆವರೆಗೆ ನಡೆದುಬಿಟ್ಟರೆ ತಲುಪಬಹುದಾದ ಊರು. ಒಂದು ಕಡೆಯಲ್ಲಿ ಇಂಫಾಲ ಪಶ್ಚಿಮವನ್ನು ಸುತ್ತುವರೆದಿದ್ದರೆ, ಇನ್ನೊಂದು ಕಡೆಯಿಂದ ಬಂದರೆ ಥೌಬಾಲ್.. ಮಗದೊಂದೆಡೆಯಿಂದ ಚುರ್ಚಾಂಡ್ಪುರ ಜಿಲ್ಲೆಯನ್ನು ಆತುಕೊಂಡಿರುವ ಬಿಷ್ಣುಪುರ್ ಜಿಲ್ಲೆಗೆ ಯಾವ ಕಡೆಯಿಂದ ಬಂದರೂ ಒಂದೇ ದಿನ ತಿರುಗಿ ಮುಗಿಸಬಹುದಾದ ಜಿಲ್ಲೆ ಇದು. ಕೇವಲ 2 ಲಕ್ಷದ ಆಸುಪಾಸು ಜನಸಂಖ್ಯೆ ಹೊಂದಿರುವ ತನ್ನ ಆದಾಯಕ್ಕಾಗಿ ಹಳ್ಳಿಗಳನ್ನೇ ನಂಬಿಕೊಂಡಿರುವ ಜಿಲ್ಲೆ ಬಿಷ್ಣುಪುರ್. ಆಡಳಿತ ಸುಧಾರಣೆಗಾಗಿ ಬಿಷ್ಣುಪುರ್ ಸಬ್‍ಡಿವಿಶನ್, ನಂಬೊಲಾ ಸಬ್‍ಡಿವಿಶನ್, ಮೊಯ್‍ರಾಂಗ್ ಸಬ್‍ಡಿವಿಶನ್ ಹಾಗು ಇತರೆ ಕೆಲವು ಇಲಾಖೆಗಳನ್ನು ವಿಭಾಗಿಸಿರುವ ಜಿಲ್ಲೆಯಲ್ಲಿ ಮೊಯ್‍ರಾಂಗ್ ಮತ್ತು ಕುಂಭಿ ಇದ್ದುದರಲ್ಲಿ ಪ್ರಮುಖ ಡಿವಿಶನ್‍ಗಳು ಜೊತೆಗೆ ಕೊಂಚ ದೊಡ್ಡ ಊರುಗಳು ಕೂಡಾ. ಪ್ರಮೀಳೆಯರ ನಾಡಿನಲ್ಲಿ 50 ಮೈಥೇಯಿಗಳ ಹೆಚ್ಚಿನ ಬುಡಕಟ್ಟು ಮತ್ತು ಪಂಗಾಳಗಳು (ಮಣಿಪುರಿ ಮುಸ್ಲಿಂ) ಇಲ್ಲಿ ಸೇರಿಕೊಂಡಿದ್ದು ಜಿಲ್ಲೆ ಪೂರ್ತಿ ಎಲ್ಲೆಂದರಲ್ಲಿ ಆಚಾರ ವಿಚಾರಗಳಿಗಾಗಿ ಬದ್ಧವಾಗಿ ಬದುಕುತ್ತಿದೆ. ಸಂಪ್ರದಾಯಗಳು ಹೆಜ್ಜೆ ಹೆಜ್ಜೆಗೂ ಕಾಲಿಗಡರುತ್ತವೆ. ಈ ಮಧ್ಯೆ ಬಿಹಾರಿಗಳು ಮತ್ತು ಜಿಲ್ಲೆಯಲ್ಲಿ ಎಲ್ಲೂ ಕಂಡುಬರದ ಮಾರ್ವಾಡಿಗಳು ಈ ಜಿಲ್ಲೆಯಲ್ಲಿ ಅಲ್ಲಲ್ಲಿ ವಾಸಿಸುವುದು ಕಂಡುಬರುತ್ತದೆ. ಈ ಜಿಲ್ಲೆಯನ್ನು 24 ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಡಿಸಿದ್ದು ನಾಲ್ಕು ಮುನ್ಸಿಪಲ್‍ಗಳು ಜಿಲ್ಲೆಯನ್ನು ನಡೆಸಲು ಶ್ರಮಿಸುತ್ತಿವೆ. ಪ್ರಮುಖ ಪ್ರವಾಸಿ ತಾಣಗಳಾದ ಲೋಕ್ತಾಕ ಮತ್ತು ಇತರ ಸ್ಥಳಗಳು ಈ ಜಿಲ್ಲೆಯಲ್ಲಿದ್ದು ಪ್ರವಾಸಿಗಳು ಇಂಫಾಲದಿಂದ ನೇರ ಇಲ್ಲಿಗೆ ತಲುಪುತ್ತಾರೆ. ಹ್ಯಾರಿ ಮಾದರಿಯ ಮೀನು ಸಾಗಾಣಿಕೆ ಇಲ್ಲಿದ್ದು ವರ್ಷಕ್ಕೆ ವಿಷ್ಣುಪುರ್ ಜಿಲ್ಲೆಯಲ್ಲಿ ಸರಾಸರಿ 4600 ಟನ್ ಮೀನು ಉತ್ಪನ್ನ ನಡೆಯುತ್ತದೆ. ಖಾದ್ಯವಾಗಿ ಪೂರೈಕೆಗಾಗಿ ಸಂಪೂರ್ಣ ಮಾಂಸಾಹಾರಿಗಳೆ ಇರುವ ಜಿಲ್ಲೆಯಲ್ಲಿ ಚಹದ ಅಂಗಡಿ ಬಿಟ್ಟರೆ ಸಿಗುವುದು ಮೀನು ಅಥವಾ ಇತರ ಅಂಗಡಿಗಳೇ. ಯಾವ ದೃಷ್ಟಿಯಿಂದಲೂ ಸಸ್ಯಾಹಾರಿಗಳು ಇಲ್ಲಿ ನಿರೀಕ್ಷೆಯನ್ನು ಮಾಡುವಂತಿಲ್ಲ. ಲೋಕ್ತಾಕ ಲೇಕ್ : ಈ ಲೋಕ್ತಾಕ ಮೊದಲೆ ವಿವರಿಸಿದ ಸರೋವರವೇ ಆಗಿದೆ. ಲೋಕ್ತಾಕ ಲೇಕ್ ಅಥವಾ ತೇಲುವ ಸರೋವರ ಎಂದೇ ಖ್ಯಾತಿ ಪಡೆದಿರುವ ಈ ಸರೋವರದ ಅಥವಾ ಕೆರೆಯ ವಿಸ್ತೀರ್ಣವೆ ಅನಾಮತ್ತು 312 ಚ.ಕಿ.ಮೀ. ಜಿಲ್ಲೆಯ ಹೆಚ್ಚಿನ ಭಾಗವನ್ನು ಈ ಸರೋವರದ ನೀರು ಸುತ್ತುವರೆದಿದ್ದು ಜಿಲ್ಲೆಯನ್ನು ಒಂದು ರೀತಿಯಲ್ಲಿ ನೀರಾವರಿ ಅಥವಾ ಮೀನುಗಾರಿಕೆಯ ಜಿಲ್ಲೆಯನ್ನಾಗಿಸಿದೆ ಎಂದರೂ ಅಡ್ಡಿಯಿಲ್ಲ. ಇಂಫಾಲದಿಂದ 48 ಕಿ.ಮೀ. ದೂರ ಇರುವ ಲೋಕ್ತಾಕನ್ನು ಸೆಂಡ್ರಾ ದ್ವೀಪದ ಮೂಲಕ ಗಮನಿಸುವಾಗ ಇದನ್ನು ತೇಲುವ ಸರೋವರ ಎಂದೇ ಕರೆಯಲಾಗುತ್ತಿದೆ. 51 ಪ್ರಮೀಳೆಯರ ನಾಡಿನಲ್ಲಿ ನೂರಾರು ಬೋಟ್ ಉದ್ದಿಮೆದಾರರು ಇಲ್ಲಿ ಪ್ರವಾಸಿಗರಿಗೆ ಬೋಟಿಂಗ್ ಸೇವೆ ಪೂರೈಸುವುದರ ಮೂಲಕ ಜೀವನವನ್ನು ನಡೆಸುತ್ತಿದ್ದರೆ ಲೋಕ್ತಾಕ ಪ್ರವಾಸೋದ್ಯಮಕ್ಕೂ ಅತಿ ದೊಡ್ಡ ಕೊಡುಗೆಯಾಗಿದೆ. ಇದರ ಮಧ್ಯದಲ್ಲಿರುವ ಸೆಂಡ್ರಾ ದ್ವೀಪ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವುದಲ್ಲದೇ, ಅಲ್ಲೇ ಇರುವ ಕೆಫೆಟೆರಿಯಾ ಪ್ರವಾಸಿಗರಿಗೆ ಮುದ ನೀಡುವುದು ಸುಳ್ಳಲ್ಲ. ಸುತ್ತ ಮುತ್ತಲೂ ಇರುವ ಹಲವು ಬಣ್ಣದ ಮರಗಿಡಗಳು ಮತ್ತು ಪಕ್ಷಿಗಳ ಹಿಮ್ಮೇಳ ಸರೋವರಕ್ಕೆ ಅದ್ಭುತ ಮೆರಗು ನೀಡುತ್ತಿದೆ. ಖೈಬುಲ್ ಲಮ್ಝಾವೋ ರಾಷ್ಟ್ರೀಯ ಉದ್ಯಾನವನ : "ಖೈಬುಲ್ ಲಮ್ಝಾವೋ ರಾಷ್ಟ್ರೀಯ ಉದ್ಯಾನವನ" ಬಿಷ್ಣುಪುರ್ ಜಿಲ್ಲೆಯಲ್ಲಿದ್ದರೂ ಆರಂಭದಿಂದಲೂ ಇಂಫಾಲದಿಂದ 43 ಕಿಮೀ. ದೂರದಲ್ಲಿರುವ ಮೈರಾಂಗ್ (ಮೈರಾಂಗ್ ವಿಷ್ಣುಪುರ ಜಿಲ್ಲೆಯ ಪ್ರಮುಖ ನಗರ (?)) ಉದ್ಯಾನವನ ಎಂದೇ ಗುರುತಿಸಲ್ಪಡುತ್ತಿದೆ. ಇದು ಲೋಕ್ತಾಕ ಸರೋವರದ ಮಧ್ಯಭಾಗದಲ್ಲಿದ್ದು ಸುತ್ತಲೂ ಲೋಕ್ತಾಕ ಸರೋವರ ಸುತ್ತುವರೆದಿರುವುದರಿಂದ ಜಗತ್ತಿನ ಏಕೈಕ ತೇಲಾಡುವ ರಾಷ್ಟ್ರೀಯ ಉದ್ಯಾನವನ ಎಂದೇ ಖ್ಯಾತಿ ಪಡೆದಿದೆ. ಇದರ ಪ್ರಮುಖ ಆಕರ್ಷಣೆ ಎಂದರೆ ಜಗತ್ತಿನೆಲ್ಲೆಡೆಯಲ್ಲಿ ಪ್ರಸಿದ್ಧಿ ಹೊಂದಿರುವ "ಡಾನ್ಸಿಂಗ್ ಡೀರ್" ಅಂದರೆ ನೃತ್ಯಗಾತಿ ಜಿಂಕೆ ಭಾರಿ ಪ್ರಸಿದ್ಧಿ. ಈ ಉದ್ಯಾನವನದಲ್ಲಿ ಅದರಲ್ಲೂ ತೇಲುವ ವನದಲ್ಲಿ ಡಾನ್ಸಿಂಗ್ ಡೀರ್ ಪ್ರವಾಸಿಗರ ದೃಷ್ಟಿಯಿಂದ ಆಕರ್ಷಣೆಯಾಗುತ್ತಿದೆ. ಇದಲ್ಲದೆ ಇಲ್ಲಿನ ತರಹೇವಾರಿ ವನ್ಯ ಜೀವಿಗಳು ವಲಸೆ ಹಕ್ಕಿಗಳು ಮತ್ತು ಸಾಂಬಾರ, ಕಡವೆಗಳ ದಂಡು ಆಕರ್ಷಣೀಯ. ಮಾರ್ಚ್‍ನಿಂದ ನವಂಬರ್ ಇಲ್ಲಿಗೆ ಭೇಟಿ ಕೊಡಲು ಸೂಕ್ತವಾದ ಸಮಯವಾಗಿದ್ದು ಸ್ಥಳೀಯ ಅರಣ್ಯ ಇಲಾಖೆ ಇದನ್ನು ನಿರ್ವಹಿಸುತ್ತಿದೆ (ಹಾಗಂತ ತನ್ನ ಇಲಾಖೆ ವೆಬ್ ಸೈಟಿನಲ್ಲಿ ಹೇಳಿಕೊಂಡಿದೆ). ಆದರೆ ದುರಂತ ಎಂದರೆ ಯಾವುದೆಂದರೆ ಯಾವುದೇ ಪ್ರವಾಸಿ ಸಹಾಯವಾಗಲಿ ಸಿಬ್ಬಂದಿಯ ಬೆಂಬಲವಾಗಲಿ ನಿರೀಕ್ಷಿಸುವಂತಿಲ್ಲ. ಏನಿದ್ದರೂ ಅವರದ್ದು ಹತ್ತು ರೂಪಾಯಿ ಪಡೆದು ಒಳಬಿಡುವುದ ಷ್ಟೆ ಕೆಲಸ. ಇಲ್ಲಿ ಡಾನ್ಸಿಂಗ್ ಪ್ರಮೀಳೆಯರ ನಾಡಿನಲ್ಲಿ 52 ಜಿಂಕೆ ಸಿಗುತ್ತದೋ ಇಲ್ಲವೊ ಬೇರೆ ಮಾತು. ಈ ಪ್ರವಾಸೋದ್ಯಮವನ್ನು ಅವರ ಅಂತರ್ಜಾಲ ಮಾಹಿತಿಯನ್ನು ನಂಬಿಕೊಂಡು ಹೋದಲ್ಲಿ ಆ ಕಾಡಲ್ಲಿ ನೀರಿಲ್ಲದೆ ಒಣಗುವುದು ಖಚಿತ. ಕಾರಣ ಇಲ್ಲಿಗೆ ಯಾವುದೇ ನೇರ ವಾಹನ ಸಂಪರ್ಕ ಇಲ್ಲವೇ ಇಲ್ಲ. ಪ್ರಸ್ತುತ ವಾಹನದ ಸೇವೆಯೇ ಇಲ್ಲದಿರುವಾಗ ಈ ಮೂಲೆಯಲ್ಲಿರುವ ಈ ಉದ್ಯಾನವನಕ್ಕೆ ಯಾರಾದರೂ ಯಾಕಾದರೂ ಸೇವೆ ನೀಡುತ್ತಾರೆ..? ಅಲ್ಲಿಗೆ ಮೊದಲು ಮೈರಾಂಗ್ ತಲುಪಿಕೊಳ್ಳಬೇಕು. ಅಲ್ಲಿಂದ ಒಂದು ಕಿ.ಮೀ. ನಡೆದು ಸರ್ಕಲ್ಲಿನಲ್ಲಿ ಹೊರಡುವ ಆಟೊ ರಿಕ್ಷಾದಲ್ಲಿ "ಖೈಬುಲ್" ತಲುಪಬೇಕಾದರೆ ಅಲ್ಲಿ ಆ ರಿಕ್ಷಾ ತುಂಬುವವರೆಗೂ ಕಾಯಬೇಕು (ಹಾಗಂತ ಖೈಬುಲ್ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ನ್ಯಾಷನಲ್ ಪಾರ್ಕ್ ಎಂದುಬಿಡಿ. ಅಷ್ಟೇ, ಗೇಟಿಗೇ ಇಳಿಸುತ್ತಾರೆ). ಆಮೇಲೆ ಇದ್ದ ಬದ್ದ ದಿನಸಿ ಸಾಮಾನು, ಮೂಟೆಯೊಂದಿಗೆ ಸ್ಥಳೀಯ ಆದಿವಾಸಿಗಳು ಆ ದಿಕ್ಕಿಗೆ ಹೊರಡುವ ಈ ವಾಹನದಲ್ಲಿ ಹೊರಡಬೇಕು. ಆತ ನೇರವಾಗಿ ಈ ಖೈಬುಲ್‍ನ ಪ್ರವೇಶ ದ್ವಾರಕ್ಕೆ ನಿಮ್ಮನ್ನು ಇಳಿಸುತ್ತಾನೆ. ಎದುರಿಗೇ ದೊಡ್ಡ ಫಲಕದ "ಖೈಬುಲ್ ಲಮ್ಝಾವೋ ರಾಷ್ಟ್ರೀಯ ಉದ್ಯಾನವನ” ಇದೆ. ಆದರೆ ಅದೊಂದು ಅಪ್ಪಟ ಕಾಡು ದಾರಿಯ ಹತ್ತಾರು ಕಿ.ಮಿ. ವಿಸ್ತೀರ್ಣ ಬಿಟ್ಟರೆ ಬೇರೇನಿಲ್ಲ. ತೀರ ಅಲ್ಲಿನ ಅರಣ್ಯಾಧಿಕಾರಿಯ ಪ್ರವೇಶ ಪತ್ರ ಅನುಮತಿ ಇದ್ದರೆ ನಿಮ್ಮನ್ನು ಅದರೊಳಗೇ ಇರುವ ಅತಿಥಿ ಗೃಹಕ್ಕೆ ಬಿಟ್ಟುಕೊಳ್ಳುತ್ತಾರೆ. ಅದಕ್ಕೂ ಬಾಗಿಲು ತೆರೆಯಲು ಮೊದಲೇ ಮಾಹಿತಿ ಇದ್ದಲ್ಲಿ ಬಿಷ್ಣುಪುರ್‌ದಿಂದ ಅದರದೇ ಸಿಬ್ಬಂದಿ ಅದರ ಕೀಲಿಯೊಂದಿಗೆ ಬರುತ್ತಾನೆ. ಅಲ್ಲೇ ನಡೆದು ಹೋದರೆ ಮೂರು. ಕಿ.ಮೀ. ನಂತರ ಒಂದು ವೀಕ್ಷಣಾ ಗೋಪುರ ಇದೆ. ಅದನ್ನೇರಿ ನೋಡಿದರೆ ಆಚೆಗೆ ಬೆಟ್ಟಗಳ ಅಡಿಗೆ ಹರಡಿಕೊಂಡಿರುವ ಶಾಂಘೈ ಅರಣ್ಯ ಪ್ರದೇಶ ಕಂಡುಬರುತ್ತದೆ. ಇದರ ಹೊರತಾಗಿ ಪ್ರವೇಶ ದ್ವಾರದಲ್ಲಿ ಹಾಕಿರುವ ಫಲಕದಂತೆ ಯಾವೊಂದು ಮಾಹಿತಿಯೂ ಕರಾರುವಾಕ್ಕಾಗಿಲ್ಲ. ಹೋಗಲಿ ಹಕ್ಕಿ ಪಕ್ಕಿ ಕಂಡುಬರುವ ಪ್ರದೇಶ ಇದಾಗಿರಬಹುದೆಂದು ನನಗೇನೂ ಅನ್ನಿಸಲಿಲ್ಲ. ಎಂದಿನಂತೆ ಇದರಲ್ಲೂ ಎಲ್ಲೆಡೆಯಲ್ಲಿ ಅಸ್ಸಾಂ ರೈಫಲ್ಸ್‌ ಪಡೆ ಬೀಡುಬಿಟ್ಟಿದೆ ಅಷ್ಟೇ.. ಯಾವ ಜಿಂಕೆ ಅದರ 53 ಪ್ರಮೀಳೆಯರ ನಾಡಿನಲ್ಲಿ ಕೊಂಬೂ ಕಾಣದೇ ಇದಕ್ಕಿಂತ ಉತ್ತಮವಾದ ಉತ್ತರ ಕನ್ನಡ ಜಿಲ್ಲೆಯ ಅರಣ್ಯವನ್ನು ನೆನೆಸಿಕೊಳ್ಳುತ್ತಾ ಹೊರಬಿದ್ದೆ. ಬಾಗಿಲಲ್ಲಿ ಕೂತಿದ್ದ ಅರಣ್ಯ ಸಿಬ್ಬಂದಿಯಲ್ಲೊಬ್ಬಾತ " ಮೈಚೋಬಾ ಖಾರಿತ್ ಕಾಯೋಂಗ್ ಥೌಬಾ.." ಎನ್ನುವ ಮೈಲುದ್ದದ ಹೆಸರಿನ ಸೆಕ್ಯೂರಿಟಿಯವ ತನ್ನ ಕಷ್ಟ ಹೇಳಿಕೊಳ್ಳುತ್ತಾ ತಾನು ತಂದಿರಿಸಿದ್ದ ಕೂಲ್ ಡ್ರಿಂಕ್ಸ್ ಖರೀದಿಸಲು ಒತ್ತಾಯಿಸುತ್ತಿದ್ದರೆ ಮೊದಲೇ ಸಹನೆ ಕಳೆದುಕೊಳುತ್ತಿದ್ದ ನಾನು ದುರುಗುಟ್ಟಿಕೊಂಡು ದಾಪುಗಾಲಿಟ್ಟು ಮುಖ್ಯರಸ್ತೆ ತಲುಪಿದ್ದೆ. ಈಗ ಇಲ್ಲಿಂದ ಎಂಟು ಕಿ.ಮೀ. ಹಿಮ್ಮೊಗವಾಗಿ ಕ್ರಮಿಸಿ ನಾನು ಮೈರಾಂಗ್ ತಲುಪಬೇಕಿತ್ತು. ಅದಕ್ಕೆ ಬರುವಾಗ ಬಿಟ್ಟಿದ್ದ ರಿಕ್ಷಾ ಇತ್ತಲ್ಲ ಹಾಗೆ ಇತ್ತ ಕಡೆಯಿಂದ ಹಾಯ್ದ ಅವನ ಫೇರಿ ಮತ್ತೆ ವಾಪಸ್ಸು ಬರುವವರೆಗೆ ಇಲ್ಲಿಯೇ ಕಾಯಬೇಕಿತ್ತು. ಅಲ್ಲಿಗೆ ಅರ್ಧ ದಿನ ದೇಣಿಗೆ ಕೊಟ್ಟಂತೆನೆ. ಎದುರಿಗಿದ್ದ ಕಲ್ಲಿನ ಕಟ್ಟೆಯ ಮೇಲೆ ಕೂತು ನಿರೀಕ್ಷೆಯಲಿದ್ದಾಗಲೇ ಸ್ಥಳೀಯ ಶಾಲಾ ಶಿಕ್ಷಕನೊಬ್ಬ ಬೈಕು ಏರಿ ಬರುತ್ತಿದ್ದವ ನನ್ನ ಪರಿಸ್ಥಿತಿ ನೋಡಿಯೇ ನಿಲ್ಲಿಸಿದ್ದ. ಅವನು ಇತ್ತ ತಿರುಗಿ ಕೇಳುವುದರೊಳಗಾಗೇ "ಮೈರಾಂಗ್ ಮೈರಾಂಗ್" ಎಂದು ಬಡಬಡಿಸಿದೆ. ಪ್ರಾಣಿ ತರಹ ನೋಡಿ ಹತ್ತಿಸಿಕೊಳ್ಳುತ್ತಾ ಮಾತಿಗಿಳಿದ. ನಾನು ಬೆಂಗಳೂರಿನಿಂದ ಬಂದಿರುವುದನ್ನೂ ಖಚಿತ ಪಡಿಸಿಕೊಂಡ. ಹಾಗೆಯೇ ಅರ್ಧ ಗಂಟೆಯ ಪಯಣದ ನಂತರ ಕೆಳಗಿಳಿಸುತ್ತಾ ಕೇಳಿದ, "ಯಾಕೆ ಬೆಂಗಳೂರಿನಲ್ಲಿ ಅಷ್ಟೇಲ್ಲಾ ಸುತ್ತೋಕಿದೆಯಲ್ಲ ಇಲ್ಲೇನಿದೆ ಅಂತಾ ಕಾಡಿಗೆ ಹೋಗಿದ್ದೆ ..?" ಎಂದ. ನಾನು ಮಾತನಾಡದೆ ಹಲ್ಕಿರಿದೆ. ಮೇಲಿಂದ ಕೆಳಗಿನವರೆಗೆ ನೋಡಿ "ಇದೇ ಆಯ್ತು ನಿಮ್ಮದೆಲ್ಲಾ" ಎನ್ನುತ್ತಾ ಮುಂದೆ ಸರಿದ. ನಾನು ಅಲ್ಲಲ್ಲಿ ವಿಚಾರಿಸುತ್ತಾ ಸಾಗಿದ್ದು ದೇಶದ ಹೆಮ್ಮೆಯ ಮೊದಲ ಸೇನಾಪತಿಯಂತಿದ್ದ ಸುಭಾಶ್ ಚಂದ್ರ ಭೋಸ್ ಅವರ ಮ್ಯೂಸಿಯಂ ಕಡೆಗೆ. ಐ.ಎನ್.ಎ. ವಾರ್ ಮ್ಯೂಸಿಯಂ : ಯುದ್ಧದ ಮೂಲಕವೇ ಬ್ರಿಟಿಷರನ್ನು ಓಡಿಸಿ ಭಾರತಕ್ಕೆ ಸ್ವತಂತ್ರ ತರೋಣ ಎನ್ನುತ್ತಾ ಭಾರತದ ಮೊದಲ ಸೈನ್ಯ "ಅಜಾದ್ ಹಿಂದ್.."ನ್ನು ಕಟ್ಟಿದ ನೇತಾಜಿ ಪ್ರಮೀಳೆಯರ ನಾಡಿನಲ್ಲಿ 54 ಸುಭಾಷರ ಅಪರೂಪ ಎನ್ನುವಂತಹ ಮಾಹಿತಿಗಳು ಇಲ್ಲಿವೆ. ಇದಕ್ಕೆ ಕಾರಣ ಜಪಾನಿಗಳ ಬೆಂಬಲ ಪಡೆದು ನೇತಾಜಿ ಸೈನ್ಯ ಕಟ್ಟಿದ್ದರಲ್ಲ ಆಗ ಸೈನ್ಯವನ್ನು ನಡೆಸಿ ಅಮೋಘ 2832 ಕಿ.ಮೀ. ಕ್ರಮಿಸಿ ಇಲ್ಲಿಗೆ ಪಡೆಯನ್ನು ತಂದಿದ್ದರಲ್ಲ, ಮೊದಲಿಗೆ ಇಲ್ಲಿಗೇ ಆ ಪಡೆ ಕಾಲಿಟ್ಟಿತ್ತು. ಅಂದರೆ ಇದೇ ಪ್ರದೇಶದ ಕೆಳಗಿರುವ "ತಾಮು"ವಿನಿಂದ ಪ್ರವೇಶಿಸಿ, “ಮೊಮಿಂಗ್” ಮೂಲಕ ಉಕ್ರುಲ್ ಹಾಯ್ದು ಕೊಹಿಮಾ ತುದಿಯನ್ನು ತಲುಪಿತ್ತು ಪಡೆ. ಆದರೆ ಆಗಿನ ರಾಜಕೀಯ ವಿಡಂಬನೆಯಿಂದ ನೇತಾಜಿಯ ಸೈನ್ಯ ಮತ್ತೆ 1100 ಕಿ.ಮೀ. ನಷ್ಟು ಹಿಂದಕ್ಕೆ ಸರಿಯಬೇಕಾಯಿತು. ಅದಕ್ಕಿಂತಲೂ ಅಚ್ಚರಿ ಎಂದರೆ ಯಾವ ಭಾರತೀಯ ಮತ್ತು ಇತರ ಪಡೆಗಳಿಗೆ ಅಸಾಧ್ಯವಾಗಿದ್ದ "ಪಲ್ಲೇಲ" ಮತ್ತು ಇಂಫಾಲದ ಹತ್ತಿರದ "ಮೈಬಾ" ಪ್ರದೇಶವನ್ನೂ ಇವರ ಸುಭಾ ಷ ಬ್ರಿಗೇಡ್ ಸುಲಭವಾಗಿ ಕ್ರಮಿಸಿದ್ದವು. ಆದರೆ ಮತ್ತೆ ಅಲ್ಲಿಂದ ಸಿಂಗಾಪುರ್‍ವರೆಗೆ ಹಿಂದೆ ಸರಿದ ಮಹಾನ್ ಸಾಹಸಯಾತ್ರೆಯ ಕಥೆ ಇಲ್ಲಿ ಅನಾವರಣಗೊಳ್ಳುತ್ತದೆ. ಪ್ರತಿ ನಡೆ ಮತ್ತು ಹಂತಗಳ ಹಾಗು ಸುಭಾಷರ ಜೀವನಗಾಥೆಯ ಅಪರೂಪದ ಚಿತ್ರಗಳು, ಅವರ ಮೂಲ ಯುದ್ಧ ಸಮವಸ್ತ್ರ, ಹೆಲ್ಮೆಟ್ಟು, ಇನ್ನು ಜೀವಂತವಾಗಿರುವಾಗಲೇ ಸಿಕ್ಕ ಬಂದೂಕಿನ ಗುಂಡುಗಳ ಸಾಲು, ಆಯುಧಗಳು ಮತ್ತು ಯುದ್ಧ ಕಾಲದಲ್ಲಿ ಆಗಿನ ಕಾಲಕ್ಕೇ ಅಪರೂಪವಾಗಿದ್ದ ಚಿತ್ರಣವನ್ನು ಸೆರೆಹಿಡಿದಿಟ್ಟಿದ್ದು ಪ್ರವಾಸಿಗರಿಗೆ. ಅವರ ಪ್ರತಿ ರಾಜಕೀಯ ಜೀವನದ ಚಿತ್ರಗಳ ಸಂಗ್ರಹ ಇಲ್ಲಿದೆ. ಹೊರಗಡೆ ತುಂಬಾ ಚೆಂದದ ಒಂದು ವಿಗ್ರಹವನ್ನು ಸ್ಥಾಪಿಸಲಾಗಿದ್ದು ಅವರ ಯುದ್ಧದ ಸ್ಮಾರಕವನ್ನಾಗಿ ಇದನ್ನು ಸ್ಥಾಪಿಸಲಾಗಿದೆ. ಆದರೆ ದುರದೃಷ್ಟವಶಾತ್ ಇದಕ್ಕೂ ಮೂಲಭೂತ ಸೌಕರ್ಯ ಇಲ್ಲದೆ ಸೊರಗಿದೆ. ಎಲ್ಲೆಲ್ಲಿಂದಲೋ ಬರುವ ಪ್ರವಾಸಿಗರು ಇದರ ಸಂಗ್ರಹಕ್ಕಾಗಿ ಖುಶಿ 55 ಪ್ರಮೀಳೆಯರ ನಾಡಿನಲ್ಲಿ ಪಡುತ್ತಾರೆ. ಆದರೆ ಸ್ವತ: ವಾಹನ ಇಲ್ಲದೆ ಗೋಳಾಡುವ ಪರಿಸ್ಥಿತಿಯಲ್ಲಿ ಯಾವ ಸ್ಮಾರಕಗಳೂ ಬೇಕು ಎನ್ನಿಸುವುದಿಲ್ಲ ಎನ್ನುವುದೇ ದುರಂತ. ಇಲ್ಲಿಂದ ಹೊರಬಿದ್ದು ಮತ್ತೆ ಇಂಫಾಲ ಸೇರಬೇಕು ಅಥವಾ ಪಯಣ ಮುಂದುವರೆಸಿದರೆ ಚುರ್ಚಾಂಡ್ಪುರ್ ಜಿಲ್ಲೆಯನ್ನೂ ಸೇರಬಹುದು. ಆದರೆ ಇಳಿ ಸಂಜೆಯ ಹೊತ್ತಿನ ಅಪರಿಚಿತಕ್ಕಿಂತಲೂ ಅಷ್ಟೇನೂ ಸ್ನೇಹಿಯಲ್ಲದ ಜಿಲ್ಲೆಗೆ ಕಾಲಿಡುವ ಬದಲು ವಿಷ್ಣುಪುರ್‍ದ "ಲಾಕೋಯಿ ಪಾಟ್" ನೋಡಿ ಬಿಡಲು ಮತ್ತೆ ದಾರಿ ಮೇಲೆ ಹೋಗುತ್ತಿದ್ದ ಇನ್ನೊಂದು ರಿಕ್ಷಾ ಹಿಡಿದು ಕೂತೆ. ಅವನು ಸರಿಯಾಗಿ ಹತ್ತೇ ಕಿ.ಮೀ.ಗೆ ನನ್ನ ಇಳಿಸಿ ತಾನು ಇಲ್ಲಿಂದ ಮುಂದೆ ಆ ಪ್ರದೇಶಕ್ಕೆ ಬರುವಂತಿಲ್ಲ ಎಂದೂ ಬೇರೆ ವಾಹನ ನೋಡಿಕೋ ಎಂದೂ ನನ್ನ ಹತ್ತಿರ ಹಣ ಕಿತ್ತುಕೊಂಡು ಪರಾರಿಯಾದ. ಅಷ್ಟೇ ದಾರಿಯಲ್ಲಿ ಬರುತ್ತಿದ್ದ ಹೋಂ ಗಾರ್ಡ್‍ಗಳ ವಾಹನದ ಹಿಂಭಾಗಕ್ಕೆ ಏರಿ ಕೂತುಕೊಂಡೆ. ಪುಣ್ಯಕ್ಕೆ ಅದು ಅದೇ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಗೆ ಹೊರಟಿತ್ತು. ನನ್ನನ್ನು ಸಲೀಸಾಗಿ ಅಲ್ಲಿಯವರೆಗೆ ಕರೆದೊಯ್ದು ಇಳಿಸಿದ. ಎದುರಿಗಿದ್ದ ಜಿಲ್ಲಾಧಿಕಾರಿ ಕಚೇರಿ ನೋಡಿದರೆ ನಮ್ಮ ಯಾವುದಾದರೂ ತಾಲೂಕು ಪಂಚಾಯ್ತಿ ಇದಕ್ಕಿಂತಲೂ ಚೆಂದ ಇರುತ್ತವೆ ಎನ್ನಿಸಿತು. ಯಾವ ಕೋನದಲ್ಲೂ ಜಿಲ್ಲಾಧಿಕಾರಿಯೊಬ್ಬ ಇಲ್ಲಿ ಕಾರ್ಯ ನಿರ್ವಹಿಸುತ್ತಾನೆ ಎನ್ನುವ ಲಕ್ಷಣಗಳೆ ಅಲ್ಲಿರಲಿಲ್ಲ. "ಇಲ್ಲಿಂದ ಆ ಕಡೆಯ ಇಳಿಜಾರು ಇಳಿದರೆ ಎದುರಿಗೆ ಸುಂದರ "ಲಾಕೋಯಿ ಪ್ರಮೀಳೆಯರ ನಾಡಿನಲ್ಲಿ 56 ಪಾಟ್" ಬರುತ್ತೆ ನೋಡು ಹೋಗು" ಎಂದವನ ಮುಖದಲ್ಲ್ಯಾಕೋ ಹುಳ್ಳಗಿನ ನಗು ಕಂಡಿತು. ಅವನ ನಿರ್ದೇಶನದಂತೆ ನಾನು ಅತ್ತ ಕಡೆಯ ಗೇಟಿಗೆ ಕಾಲು ಹರಿಸಿದ್ದೆ. ಬಹುಶ: ಪ್ರವಾಸಿಗರನ್ನು ಇದಕ್ಕಿಂತಲೂ ಮೂರ್ಖರನ್ನಾಗಿಸುವ ಇಲಾಖೆ ಬೇರಾವುದೂ ಇರಲಿಕ್ಕಿಲ್ಲ ಎನ್ನಿಸಿತು. ಎಕೋಲಾಜಿಕಲ್ ಪಾರ್ಕ್ ಅಥವಾ " ಲಾಕೋಯಿ ಪಾಟ್ " ಸರಿಯಾಗಿ ಒಂದು ಗುಂಪು ಜನ ಸ್ನಾನ ಮಾಡಿದರೆ ಮುಗಿದು ಹೋಗುವಷ್ಟಿರುವ ನೀರಿನ ಕೆರೆಯೊಂದಕ್ಕೆ ದಂಡೆ ಕಟ್ಟಿ ನೇರ್ಪುಗೊಳಿಸಿ ಇಟ್ಟಿದ್ದಾರೆ. ಒಂದೆರಡು ಬೋಟಿಂಗ್ ಇವೆ ಚಿಕ್ಕ ಚಿಕ್ಕ ಮೋಟಾರು ದೋಣಿಗಳು. ಮರಗಿಡ ಕೊಂಚ ನೇರ್ಪುಗೊಳಿಸಿ ಅದಕ್ಕೊಂದು ಪ್ರವೇಶ ದ್ವಾರ ಆ ಚೀಟಿಗೆ ಹತ್ತು ರೂಪಾಯಿ. ಇದೇ "ಲಾಕೋಯಿ ಪಾಟ್" ಯಾವ ಪ್ರವಾಸಿಗ ಸಿರ್ರೆನ್ನಲಿಕ್ಕಿಲ್ಲ. ಅದಕ್ಕೆ ಆ ಡ್ರೈವರ್ ನನ್ನನ್ನು ನೋಡಿ ಒಳಗೊಳಗೇ ನಕ್ಕಿದ್ದ ಅಷ್ಟೇ. ಹಾಗೆ ಚಿಲ್ಲರೆ ಇಲ್ಲದಿದ್ದರೆ ಕೊಟ್ಟ ನೋಟು ಹಿಂದಿರುಗಿಸುವ ಯಾವ ಸಂಪ್ರದಾಯವೂ ಇಲ್ಲಿ ಇಲ್ಲ. ಕೇಳಿದರೆ "ನಿಮ್ಮಂಥವರೇನು ದಿನವೂ ಬರುತ್ತಾರಾ ಇರಲಿ ಬಿಡು" ಎನ್ನುತ್ತಾರೆ. ಅಲ್ಲಿಗೆ ಇಪ್ಪತ್ತು, ಐವತ್ತು ನೋಟುಗಳ ಗತಿ ಗೋವಿಂದ. ಪುಟ್ಟ ಕೊಳವನ್ನು ಅಂತರ್ಜಾಲದಲ್ಲಿ ವಿವರಿಸಿರುವ ಪರಿ ಮಾತ್ರ ದೊಡ್ಡದು. ಆ ಕಡೆಯಲ್ಲಿ ಎಂದಿನಂತೆ ಅಸ್ಸಾಂ ರೈಫಲ್ಸ್‌ ಪಡೆಯ ಬೀಡು. ಇತ್ತ ಅಷ್ಟು ದೂರದ ದಿಬ್ಬದ ಮೇಲೆ ಬೀಡಿ ಎಳೆಯುವ ಮಕ್ಕಳ ಗುಂಪು. ಮಧ್ಯೆ ಯಾವ ಕಡೆಯೂ ನೋಡಲು ಸಾಧ್ಯವಾಗದೆ ನಿರಾಶೆಗೊಳಪಡುವ ಎಲ್ಲಾ ಪ್ರವಾಸಿಗರಂತೆ ನಾನೂ... ಅಷ್ಟೇ "ಲಾಕೋಯಿ ಪಾಟ್" ಮುಗಿದಿತ್ತು. 1992 ರಲ್ಲಿ ಬಿಷ್ಣುಪುರ್ ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಕಾಲಾಜಿಕಲ್ ಪಾರ್ಕ್ ಇವತ್ತು ಹಲವು ಆಯಾಮಗಳನ್ನು ಪಡೆದು ಬೆಳೆಯುತ್ತಿದೆ. ಕಾರಣ ಮೊದಲಿಗೆ ಕೇವಲ ಎಕಾಲಾಜಿಕಲ್ ಪಾರ್ಕ್ ಎಂದು ಆರಂಭಗೊಂಡಿದ್ದ ಪಾರ್ಕ್ ಕೊನೆಯಲ್ಲಿ ಹಲವು ಹಂತದ ಬೆಳವಣಿಗೆಗಳನ್ನು ಕಂಡಿದ್ದರಿಂದ ಅದಕ್ಕೆ ರಾಕ್‍ಗಾರ್ಡನ್, ಅಹ್ವಾ ಘರ್, ವೃತ್ತಾಕಾರದ ಬೀದಿ ಮತ್ತು ಜಪಾನೀಸ್ ಕೆರೆ 57 ಪ್ರಮೀಳೆಯರ ನಾಡಿನಲ್ಲಿ ಎನ್ನುವ ಹೊಸ ಆಕರ್ಷಣೆಗಳು ಸೇರಿಕೊಂಡಿವೆ. ಇದೆಲ್ಲವೂ ನಾನು ಮೇಲೆ ಹೇಳಿದ ಸಣ್ಣ ಕ್ಷೇತ್ರದೊಳಗೇ ಎರಡೆರಡು ನಿಮಿಷದಲ್ಲಿ ಮುಗಿಸಿಬಿಡಬಹುದಾದ ಸ್ಥಳದಲ್ಲಿ ನಿರ್ಮಿಸಿಲಾಗಿದೆ. ನಿರ್ವಹಣೆ ಮಾತ್ರ ಕೇಳುವಂತಿಲ್ಲ. ಈ ಪಾರ್ಕ್‍ನ್ನು ಪ್ರವಾಸಿ ಆಕರ್ಷಣೆಯ ದೃಷ್ಟಿಯಿಂದ ನಾಲ್ಕು ವಾಟರ್ ಸ್ಪೋಟ್ರ್ಸ ಬೋಟ್‍ಗಳನ್ನು ಕೂಡಾ ಇಲ್ಲಿಗೆ ತರಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಇವುಗಳನ್ನು ನಿರ್ವಹಿಸುತ್ತಿದೆ. ಬೇಕಾಬಿಟ್ಟಿ ರೂಪಾಯಿಗೆ ತಲಾ ಟಿಕೆಟು ಮಾರುವ, ಈ ಪ್ರವಾಸಿ ಕೇಂದ್ರ ಬಿಷ್ಣುಪುರ್ ಜಿಲ್ಲೆಯಲ್ಲಿದ್ದರೂ ಇಂಫಾಲ ಸುತ್ತ ಮುತ್ತಲಿನ ಪಟ್ಟಿಯಲ್ಲಿ ಜಾಗ ಪಡೆದಿದೆ. ಹಾಗಾಗಿ ಏಕಾಲಜಿಕಲ್ ಪಾರ್ಕ್‍ಗೆ ಹೆಚ್ಚಿನ ವಿವರಣೆ ಇಂಫಾಲದಲ್ಲೇ ದೊರಕುತ್ತದೆ. ಆದರೆ ಅದನ್ನು ಭೇಟಿ ಮಾಡಿ ನೋಡಿದಾಗ ಅದು ಯಾವ ದೃಷ್ಟಿಯಿಂದ ಏಕಾಲಾಜಿಕಲ್ ಪಾರ್ಕ್ ಎನ್ನುವ ಲಾಜಿಕ್ ಮಾತ್ರ ನನಗರ್ಥವಾಗಲೇ ಇಲ್ಲ. ಈ ಮಧ್ಯೆ ಇಲ್ಲಿಂದ ಹೊರಟು ಇಂಫಾಲ ಸೇರಿಬಿಡುವ ಇರಾದೆಯನ್ನು ಬದಲಿಸಿದ್ದು ಎರಡನೆಯ ಜಾಗತಿಕ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ "ಮೈಬಾಲೊಪ್ತಾಚಿಂಗ್" ಒಮ್ಮೆ ನೋಡಿಬಿಡುವಂತೆ ಎಳೆಯುತ್ತಿತ್ತು. ಇಂಫಾಲದಿಂದ 25 ಕಿ.ಮೀ.ದೂರದ ಇದನ್ನು ಯುದ್ಧ ಭಾಷೆಯಲ್ಲಿ ಅಥವಾ ಮಿಲಿಟರಿ ಭಾಷೆಯಲ್ಲಿ "ರೆಡ್ ಹಿಲ್" ಅಥವಾ ಪಾಯಿಂಟ್ "2926" ಎಂದು ಕರೆಯಲಾಗುತ್ತಿತ್ತು. "ಮೈಬಾಲೊಪ್ತಾಚಿಂಗ್" ಅಥವಾ "ರೆಡ್‍ಹಿಲ್" : ಭಾರತೀಯ ಪಡೆಗಳ "ವೈಟ್ ಟೈಗರ್ಸ್" ಮತ್ತು ಬ್ರಿಟಿಷ್‌ ಪಡೆಗಳ "ದಿ ಬ್ಲಾಕ್ ಕ್ಯಾಟ್ಸ್"ಗಳು ಜಂಟಿಯಾಗಿ ಲೆ.ಜ. ಡಿ.ಟಿ. ಕೊವಾನ್ ನಾಯಕತ್ವದಲ್ಲಿ ಹೋರಾಡಿ, ಮೈಬಾ ಎನ್ನುವ ಹಳ್ಳಿಯ ಈ ಆಯಕಟ್ಟಿನ ಪ್ರದೇಶವನ್ನು ಹಿಂದಿರುಗಿ ಪಡೆದ ಜಾಗ ಇದು. ಎರಡನೆಯ ಮಹಾಯುದ್ಧದಲ್ಲಿ ಇದೇ ಪರ್ವತ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಆಕ್ರಮಿಸಿದ ಜಪಾನಿಯರನ್ನು ಹಿಮ್ಮೆಟ್ಟಿಸಲು ಬ್ರಿಟಿಷ್‌ ಪಡೆ ಎಲ್ಲಾ ರೀತಿಯ ಅಸ್ತ್ರಗಳನ್ನು ಉಪಯೋಗಿಸಿ ಕೊನೆಯಲ್ಲಿ ವಾಯುದಾಳಿಗೂ ಈಡಾಗುತ್ತದೆ. ಪ್ರಮೀಳೆಯರ ನಾಡಿನಲ್ಲಿ 58 ಆದರೆ ಅದಾವುದಕ್ಕೂ ಜಗ್ಗದ ಜಪಾನಿ ಪಡೆಗಳ ಮೇಲೆ ಸ್ಥಳೀಯ ನಾಯಕ ಲೆ.ಜ.ಟಂಕಾ ನಿರಂತರ 9 ದಿನಗಳ ಕಾಲ ಹೋರಾಡಿ ಈ ಮೈಬಾ ಪ್ರದೇಶವನ್ನು ಹಿಂಪಡೆಯುತ್ತಾರೆ. ಮೇ 21, 1944 ರಲ್ಲಿ ನಡೆದ ಇಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರ ಬಳಸು ದಾರಿಯಲ್ಲಿ ನಡೆದು ಈ ಪರ್ವತವನ್ನು ಏರಿದರೆ ಈ ಪ್ರದೇಶದ ಮಹತ್ವ ಅರಿವಾಗುತ್ತದೆ. ಈ ಪರ್ವತ ಮತ್ತು ಹಳ್ಳಿ ಒಂದರ್ಥದಲ್ಲಿ ಎರಡು ಕಡೆಯ ಪ್ರದೇಶಕ್ಕೆ ಕುತ್ತಿಗೆಯ ಭಾಗದಂತಿದೆ. ಅದಕ್ಕಾಗೆ "ಇಂಪೀರಿಯಲ್ಸ್‌ ಜಾಪಾನೀಸ್ ಆರ್ಮಿ" ಜಪಾನಿಗಳು ಇದನ್ನು ಆವರಿಸಿದ್ದರು. ಹಿಂಭಾಗದ ಪರ್ವತ ಏರುವುದು ತುಸು ಕಷ್ಟ ಸಾಧ್ಯವಾದರೂ ಒಂದು ಭೌಗೋಳಿಕ ಪರ್ವತ ಪ್ರದೇಶದ ಸ್ಪಷ್ಟ ಕಲ್ಪನೆಯನ್ನು ಈ ರೆಡ್ ಹಿಲ್ಸ್‌ ಕೊಡುತ್ತದೆ. ಎಂದಿನಂತೆ ಕಾಲಾಡಿಸ್ಕೊಂಡು, ಇನ್ನು ಐದೂವರೆಯಾಗುವ ಮೊದಲೇ ಹರಿದಿದ್ದ ಕತ್ತಲಿನಲ್ಲಿ ಮಿಣಿ ಮಿಣಿ ಬೆಳಕು ಬೀರುತ್ತಾ ಆಗೊಂದು ಈಗೊಂದರಂತೆ ಬರುತ್ತಿದ್ದ ವಿಂಗರ್ ಹಿಡಿದು 59 ಪ್ರಮೀಳೆಯರ ನಾಡಿನಲ್ಲಿ ನಾನು ಇಂಫಾಲಕ್ಕೆ ವಾಪಸ್ಸು ಬಂದಿದ್ದೆ. ಆವತ್ತಿಗೆ ಹಿಂದಿರುಗಿದೆನಾದರೂ ಮರುದಿನಕ್ಕೆ ನನಗೆ ಅಸ್ಸಾಮ್ ರೈಫಲ್ಸ್‌ ಬ್ಯಾರಕ್ ಗತಿಯಾದೀತೆಂದು ಗೊತ್ತಿರಲಿಲ್ಲ. ಕಾರಣ ಮರುದಿನದ ನನ್ನ ಯೋಜನೆ ಎಂದೋ ನಿಂತು ಹೋಗಿರುವ ಖುಗಾ ಡ್ಯಾಂ ಮತ್ತು ಚುರ್ಚಾಂಡ್ಪುರದ ಒಳಭಾಗವನ್ನು ಸಂದರ್ಶಿಸುವುದಾಗಿತ್ತು. ಚುರ್ಚಾಂಡಪುರ ಜಿಲ್ಲೆ: ಮಣಿಪುರದಲ್ಲಿ ಇದ್ದುದರಲ್ಲೇ ಇನ್ನೊಂದು ದೊಡ್ಡದಾದ ಜಿಲ್ಲೆಯೆಂದರೆ ಈ ಚುರ್ಚಾಂಡ್ಪುರವೇ. ಅಪ್ಪಟ ಪರ್ವತ ಪ್ರದೇಶವಾಗಿರುವ ಜಿಲ್ಲೆಗೆ ರಸ್ತೆಯನ್ನುಳಿದು ಭಾಗವೆಲ್ಲ ಒಂದೋ ದಿಬ್ಬದ ಮೇಲೆ ಇಲ್ಲ.. ಕಣಿವೆಯ ಕೆಳಗೆ.. ಎಲ್ಲೆ ನಡೆದಾಡುವುದಾದರೂ ಒಂದೋ ಮೇಲಕ್ಕೆ ಹತ್ತುತ್ತಿರುತ್ತೇವೆ ಅಥವಾ ಕೆಳಕ್ಕೆ ಇಳಿಯುತ್ತಿರುತ್ತೇವೆ. ಇಂಥಾ ಸಂದಿನ ಜಾಗದಲ್ಲೇ ಭತ್ತದ ಪೈರು ಮತ್ತು ಇಳುವರಿಯನ್ನು ಇಲ್ಲಿನ ಜನರು ಬೆಳೆಯುತ್ತಿದ್ದಾರೆ. ಹಾಗಾಗಿ ಮೂರ್‌ನಾಲ್ಕು ಅಡಿಗಳ ನೂರಾರು ಭತ್ತದ ಪೈರಿನ ಪಟ್ಟಿಗಳಂತಹ ಹೊಲಗಳು ಇಲ್ಲಿ ಸಾಮಾನ್ಯ. ಎಲ್ಲೂ ದೊಡ್ಡ ದೊಡ್ಡ ಗದ್ದೆಗಳ ನೋಟದ ಪ್ರಶ್ನೆಯೇ ಬರುವುದಿಲ್ಲ. ಇತಿಹಾಸ : 1942ರ ನಂತರದ ಅವಧಿಯಲ್ಲಿ ನಡೆದ ಅನಾಹುತಕಾರಿ ಎರಡನೆಯ ಮಹಾ ಯುದ್ಧದ ಕಾಲಾವಧಿಯಲ್ಲಿ ಇನ್ನಿಲ್ಲದಂತೆ ನಾಶಕ್ಕೆ ಗುರಿಯಾದ ಈಶಾನ್ಯ ಭಾಗಗಳಲ್ಲಿ ಇದೂ ಒಂದು. ಎರಡನೆಯ ಮಹಾಯುದ್ಧದಲ್ಲಿ ಇದನ್ನು "ಥುಥಾಪೈ" ಎಂದೇ ಗುರುತಿಸಲಾಗಿದ್ದು, ಸ್ವಾತಂತ್ರ್ಯ ನಂತರ ಸಬ್ ಡಿವಿಶನ್ ಆಗಿದ್ದ ಈ ಭಾಗ ಜಿಲ್ಲೆಯಾಗುವಾಗ ರಾಜನ ಹೆಸರಿನೊಂದಿಗೆ ಗುರುತಿಸಿಕೊಂಡಿತು. "ಖುಗಾ" ನದಿಯ ಪಶ್ಚಿಮ ದಂಡೆಯ ಮೇಲಿನ ಚಿಕ್ಕ ಊರು ಇದು ಆಗ. 1930ರ ಸುಮಾರಿಗೆ ಆದ ಭತ್ತದ ಕ್ರಾಂತಿಯ ಫಲವಾಗಿ ಕೊಂಚ ಬೆಟ್ಟದಿಂದ ಕೆಳಗಿಳಿದು ಬಂದ ಜನಾಂಗಗಳು ಈ ಪರ್ವತದ ಸೆರಗಿನಲ್ಲಿ ಕಣಿವೆಯ ಊರನ್ನು ರೂಪಿಸಿದವು. ಆಗ ನಡೆದ ಸಮತಟ್ಟಾದ ಜಾಗ ಸಿಕ್ಕಲೆಲ್ಲ ಪ್ರಮೀಳೆಯರ ನಾಡಿನಲ್ಲಿ 60 ಭತ್ತದ ಇಳುವರಿಯನ್ನು ತೆಗೆಯುವ ಯುದ್ಧೋಪಾದಿಯ ಕಾಮಗಾರಿಯಿಂದಾಗಿ ಮೊದಲ ಬಾರಿಗೆ ಈ ಪರ್ವತ ಬಿಟ್ಟು ಕೆಳಗಿಳಿದಿದ್ದ ಜನರಿಗೆ ಭತ್ತದ ಫಸಲನ್ನು ಭರಿಸಲಾರದಷ್ಟು ಬೆಳೆದದ್ದೇ ದೊಡ್ಡ ಬದಲಾವಣೆಯ ದಾರಿಯಾಯಿತು. ಅಲ್ಲಿನ ಹೆಚ್ಚುವರಿ ಫಸಲು ಮತ್ತು ಬೆಳೆಯಿಂದಾಗಿ ಕಡಿಮೆ ಬೆಲೆಯ ಇಳುವರಿಯನ್ನು ಕೊಳ್ಳಲು ಎಲ್ಲೆಡೆಯಿಂದ ಬಂದ ಜನಸಾಗರ ಇಲ್ಲಿಯೇ ನೆಲೆ ನಿಲ್ಲಲು ಮನಸ್ಸು ಮಾಡಿತು ಕೂಡಾ. ಅದರಿಂದಾಗಿ ಹೆಚ್ಚಿನ ಜನವಸತಿಗಾಗಿ ಮತ್ತೆ ಬೆಟ್ಟದ ಸೆರಗಿನಲ್ಲಿ ಊರು ಮೈದಳೆಯಿತು. ಅಲ್ಲಿಗೆ "ಥುಥಾಪೈ" ಹೊಸ ಜಿಲ್ಲೆಯಾಗುವ ಮುನ್ನವೇ ದೊಡ್ಡ ವಸಾಹತುವಾಗಿ ಕಾಣಿಸಿಕೊಂಡಿತ್ತು. "ರಾಜಾ ಚುರ್ಚಾಂಡಸಿಂಘ್" ನೆನಪಿಗಾಗಿ ಈ ಜಿಲ್ಲೆಯನ್ನು ಅವನ ಹೆಸರಿಂದಲೇ ಗುರುತಿಸಲಾಗುತ್ತಿದೆ. ಮುಖ್ಯವಾಗಿ ಈ ಯುದ್ಧದಲ್ಲಿ ಅವನ ವಸಾಹತುವಾಗಿದ್ದಲ್ಲದೇ ಅವನ ಜೊತೆಗೆ ವಲಸೆ ಬಂದ ಜನರೆಲ್ಲಾ ಇಲ್ಲಿಯೇ ಇದ್ದು ಮತ್ತೇ ಈ "ಥುಥಾಪೈ"ಯನ್ನು ಬೆಳೆಸಲು ನೆರವಾಗಿದ್ದರು ಎನ್ನುವುದು ಗಮನಾರ್ಹ. ಹಾಗಾಗಿ ರಾಜಾ ಚುರ್ಚಾಂಡಸಿಂಗ್‍ನ ನೆನಪು ಸ್ಥಿರವಾಗುವಂತೆ ಪೂರ್ತಿ ಜಿಲ್ಲೆಗೆ ಅವನ ಹೆಸರನ್ನೇ ಇಡಲಾಯಿತು. ಹೆಚ್ಚಿನಂಶ ಸ್ಥಳೀಯರೆಂದು ಪೈಟೀಸ್ಗಳು, ಸಿಮ್ಟೆಗಳು, ಜ್ಯೂಸ್, ವೈಫೀಸ್, ಲುಶಾಯಿ, ಥಡೌ ಮತ್ತು ಹಮ್ರಾಗಳು ಈ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇವರಲ್ಲದೆ ಗಣನೀಯ ಸಂಖ್ಯೆಯಲ್ಲಿ ಆದರೆ ಇವರೊಂದಿಗೆ ಸೇರಿಹೋದಂತಿರುವ, ಮಾರವ್ಡಿಗಳು, ಮಿರಿಯಾ, ಮತ್ತು ಮಿಝೊಗಳು ಇದ್ದಾರೆ. ಇವೆಲ್ಲಾ ಸಮುದಾಯಗಳು ಸಾವಿರಾರು ಸಾವಿರಾರು ವರ್ಷಗಳಿಂದ ಅಲ್ಲಿ ಬೀಡುಬಿಟ್ಟು ಒಬ್ಬರೊಂದಿಗೆ ಹೊಂದಿಕೊಂಡೇ ಇರುವುದರಿಂದ ಎ ಷ್ಟೇ ಒಳ ಪಂಗಡಗಳಿದ್ದರೂ ಎಲ್ಲಾ ಬುಡಕಟ್ಟುಗಳ ಭಾಷೆ ಒಬ್ಬರಿಗೊಬ್ಬರದ್ದು ಅರ್ಥವಾಗುತ್ತದೆ. ಹಾಗಾಗಿ ಯಾವಾಗ ಯಾವ ಭಾಷೆ ಮಾತಾಡುತ್ತಿರುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ಆದರೆ ಬರುಬರುತ್ತಾ ಇತ್ತೀಚಿನ ಪೀಳಿಗೆಯಲ್ಲಿ ಈ ಹಲವು ಭಾಷೆಗಳ ಹಿಡಿತ ಮಾಯವಾಗುತ್ತಿದೆ ಮತ್ತು ಅಷ್ಟಾಗಿ ಯಾರೂ ಈಗಿನ 61 ಪ್ರಮೀಳೆಯರ ನಾಡಿನಲ್ಲಿ ಜನಜೀವನ ಶೈಲಿಯಲ್ಲಿ ಹಳೆಯ ಹಲವು ಭಾಷೆಗಳಿಗೆ ಪಕ್ಕಾಗುತ್ತಿಲ್ಲ. ಇಂಗ್ಲಿ ಷ ಮತ್ತು ಇತರೆ ಭಾಷೆಗೆ ಮಾರು ಹೋಗುತ್ತಿದ್ದಾರೆ. "ಲಮ್ಖಾ" ಚುರ್ಚಾಂಡ್ಪುರದ ಪ್ರಮುಖ ಮುಖ್ಯ ಪಟ್ಟಣ ಪ್ರದೇಶ. ಪಶ್ಚಿಮ ಚುರ್ಚಾಂಡ್ಪುರದಲ್ಲಿ ಬೆಳೆದಿರುವ ನಗರ, ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿಯೂ ಹೌದು. ಸುಮಾರು 1970 ರಲ್ಲಿ ಇದರ ಪೂರ್ವ ಮತ್ತು ಪಶ್ಚಿಮದ ಭಾಗಗಳಾದ "ನೆಹಸಿಲ್" ಮತ್ತು "ಚಿಂಖೋಪಾವ್"ಗಳನ್ನು ಲಮ್ಖಾಗೆ ಸೇರಿಸಲಾಯಿತು. ಹೀಗಾಗಿ ಚುರ್ಚಾಂಡ್ಪುರಕ್ಕಿಂತಲೂ ದೊಡ್ಡದಾಗಿ ಬೆಳೆದ ಲಮ್ಖಾ ಇವತ್ತಿಗೂ ಜನನಿಬಿಡ ಪಟ್ಟಣವೂ ಹೌದು. ಹಾಗಾಗಿ ಇಲ್ಲಿ ಪ್ರಮುಖ ಪ್ರಸಿದ್ಧ ವ್ಯಕ್ತಿಗಳಿಂದ ಇತರೇ ಕಾರ್ಯಕ್ರಮಗಳಾದಿಯಾಗಿ ಜಿಲ್ಲಾ ಉತ್ಸವವೂ ಇಲ್ಲೆ ನಡೆಯುತ್ತದೆ. ಇವತ್ತಿಗೂ ಇದನ್ನು ಚುರ್ಚಾಂಡ್ಪುರ್ ಎಂದು ಕರೆಯುವುದು ಕಡಿಮೆಯೇ, ಜಿಲ್ಲೆಯನ್ನು "ಲಮ್ಖಾ" ಎಂದೇ ಗುರುತಿಸಲಾಗುತ್ತಿದೆ. ಇಂಫಾಲದಿಂದ 60 ಕಿ.ಮೀ. ದೂರದ ಲಮ್ಖಾ ಮಣಿಪುರಿಯ ಭಾಷೆಯಲ್ಲಿ ಅರ್ಥೈಸಿದರೆ "ಕೂಡು ದಾರಿ" ಎಂದಾಗುತ್ತದೆ. ಕಾರಣ "ಲಮ್" ಎಂದರೆ ದಾರಿ ಎಂದೂ, "ಕಾ" ಎಂದರೆ ಜಂಕ್ಷನ್ ಎಂದೂ ಅರ್ಥ ಕೊಡುವ ಇದಕ್ಕೆ ಮಣಿಪುರಿಗಳು ಕೂಡಾ "ಕಾಲುದಾರಿ" ಎಂದೆ ಕರೆಯಲಿಚ್ಚಿಸುತ್ತಾರೆ. ಸ್ಥಳೀಯವಾಗಿ ತಯಾರಿಸುವ ಕರಕುಶಲ ವಸ್ತುಗಳನ್ನು ಬಹಳ ಆಸ್ಥೆಯಿಂದ ಮಾರುವ ಜನರಿಗೆ ವ್ಯಾಪಾರ ಸುಲಭಕ್ಕೆ ಸಿದ್ಧಿಸಿದಂತೆ ಕಾಣುತ್ತದೆ. ಎಲ್ಲೆಲ್ಲೂ ಪಾನ್ ಬೀಡಾಗಳ ನಡುವೆಯೂ ನಗುಮೊಗದ ಸೇವೆ ಸಿದ್ಧ. ನಿರಂತರ ಪಕ್ಕದ ಹಳ್ಳಿಗಳಿಂದ ವಲಸೆ ಮತ್ತು ಬೆಳೆಯುತ್ತಿರುವ ಒತ್ತಡದಿಂದಾಗಿ ಮೊದಲೇ ಪರ್ವತದ ಪ್ರದೇಶವಾಗಿರುವುದರಿಂದ ಲಮ್ಖಾವನ್ನು ಬೆಳೆಸುವುದೇ ಕಷ್ಟವಾಗುತ್ತಿದೆ. ಎಲ್ಲರಿಗೂ ಮೂಲಭೂತ ಸೌಲಭ್ಯವನ್ನು ಒದಗಿಸುವುದು ಇನ್ನೂ ಕಷ್ಟವಾಗುತ್ತಿದೆ. ಇದರಿಂದಾಗಿ ಪಕ್ಕದ ಹಳ್ಳಿಗಳು ಕಸ ಒಗೆಯುವ ಯಾರ್ಡ್‍ಗಳಾಗಿ ಬೆಳೆಯುತ್ತಿರುವ ಸಮಸ್ಯೆ ಇಲ್ಲೂ ಇದೆ. ಪಕ್ಕದ ನೇಪಾಳದಲ್ಲಿ ಹಾಲಿನ ಮತ್ತು ಹೈನೋತ್ಪನ್ನಗಳನ್ನು ಬೆಳೆಯುವ ಉದ್ಯಮ ಆರಂಭಿಸುತ್ತಿದ್ದಂತೆ ಅದನ್ನಾಗಲೇ ಅರಿತಿದ್ದ ಮಾರ್ವಾಡಿಗಳೂ ಇಲ್ಲಿನ ಪ್ರಮೀಳೆಯರ ನಾಡಿನಲ್ಲಿ 62 ಲಮ್ಖಾದಲ್ಲೂ ಅದನ್ನು ಆರಂಭಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಇವತ್ತಿಗೂ ಪೂರ್ತಿ ಮಣಿಪುರಕ್ಕೆ ಹಾಲಿನ ಸಮರ್ಪಕ ಪೂರೈಕೆಯಾಗುತ್ತಿರುವುದು ಇದೇ ಲಮ್ಖಾದಿಂದಲೇ. ಇದೆಲ್ಲಾ ಸರಿ, ಆದರೆ ಮನೆಯಲ್ಲೇ ಕರಿ ದೇವ್ರು ಎನ್ನುವಂತೆ ಯಾವುದೇ ಹೊಸ ವಿಚಾರ ಮತ್ತು ಆಚಾರಗಳಿಗೆ ತೆರೆದುಕೊಳ್ಳದೆ ಉಳಿದುಹೋದ ಜಿಲ್ಲೆಯೂ ಹೌದು. ಎಲ್ಲಕ್ಕಿಂತಲೂ ಮಣಿಪುರ ಪ್ರವಾಸೋದ್ಯಮದಲ್ಲಿ ಇದನ್ನು ವಿವರಿಸಿರುವಂತೆ ಇದು ಯಾವ ಲೆಕ್ಕದಲ್ಲೂ ಹನಿಮೂನ್ ಕ್ಷೇತ್ರವಂತೂ ಅಲ್ಲವೇ ಅಲ್ಲ. ಹಾಗಂತ ತಪ್ಪಿ ಇದನ್ನು ನಂಬಿಕೊಂಡು ಏನಾದರೂ ಇಲ್ಲಿಗೆ ಕಾಲಿಟ್ಟರೆ ಮುಖ್ಯ ರಸ್ತೆಯ ಬದಿಯಲ್ಲಿರುವ ಪರಾಠ ಅಂಗಡಿ ಬಿಟ್ಟರೆ ಬೇರೇನೂ ಇಲ್ಲ. ಯಾವ ಲೆಕ್ಕದಲ್ಲೂ ಇಲ್ಲಿ ವಸತಿಯ ವ್ಯವಸ್ಥೆಯಾಗುವುದಿಲ್ಲ. ಜಿಲ್ಲಾ ಕೇಂದ್ರವಾಗಿರುವ ಈ ಲಮ್ಖಾದ ಬಸ್‍ಸ್ಟ್ಯಾಂಡಿನಲ್ಲೇ ಇವತ್ತಿಗೂ ಕಲಿದ್ದಲು ತುಂಬಿತುಂಬಿ ಮಾರುವ ಅಂಗಡಿಗಳ ಪ್ಲಾಸ್ಟಿಕ್ಕು ಇಳಿಬಿಟ್ಟು ಸಾಸ್‍ಗಳಲ್ಲಿ ಹುರಿದ ಮಾಂಸದ ತುಂಡಿನೊಂದಿಗೆ, ನೂಡಲ್ ಎಳೆಗಳನ್ನು ಸುತ್ತಿ ಸುತ್ತಿ ತಿನ್ನುವ, ಪಕ್ಕದಲ್ಲೇ ಮೋರಿಯ ಮೇಲೆ ನಾಲ್ಕಾರು ಕನ್ನಡಿಗಳೊಂದಿಗೆ ಕ್ಷೌರಿಕ ಕಾಯಕ ನಡೆಸುತ್ತಿರುವ (ಅಲ್ಲಿ ಒಬ್ಬಾತ ಕೂದಲು ಒಪ್ಪವಾಗಿ ಕತ್ತರಿಸಿಕೊಂಡು ಕ್ಷೌರಿಕನ ಹತ್ತಿರದಿಂದ ಎದ್ದು ಬರುವವರೆಗೂ ಒಂದಿಡಿ ವಿಂಗರ್ ವಾಹನ ಅವನಿಗಾಗಿಯೂ ಕಾಯುತ್ತಿದ್ದ ಅಭೂತ ಪೂರ್ವ ಘಳಿಗೆಗೆ ನಾನು ಅಪರೂಪದ ಸಾಕ್ಷಿದಾರ) ಹೀಗೆಲ್ಲಾ ಲಭ್ಯವಾಗುವ ಸುಂದರ ದೃಶ್ಯದಿಂದಾಗಿ ಇತ್ತ ಕಡೆಯಿಂದ ಹೋಗುವ ಪ್ರವಾಸಿಗ ಕಂಗಾಲಾಗುವುದು ಸರ್ವೇ ಸಾಮಾನ್ಯ. ಚಹದ ಅಂಗಡಿ ಎನ್ನುವ ಪ್ರದೇಶಗಳಲ್ಲಿ ಇರುವ ವಾಸನೆಗಳ ಕಾರಣ ಯಾವುದೇ ಪ್ರವಾಸಿಗ ಕಾಲಿಡುವುದು ಕಾಣಿಸುವುದಿಲ್ಲ. ಅಸಲಿಗೆ ಈ ಲಮ್ಖಾಕ್ಕೆಂದು ಪ್ರವಾಸಿಗರು ಬಂದಿರುವುದು ಸುಳ್ಳು. ಎಲ್ಲೋ ನನ್ನಂಥ ಅಲೆಮಾರಿ ಮಾತ್ರ ಕಾಲಿಟ್ಟು ದೊಡ್ಡ ರಸ್ತೆ ಅಥವಾ ಹೊಸ ಲಮ್ಖಾ ಎನ್ನುವ ಪ್ರದೇಶದಲ್ಲಿ ಕಣ್ಬಿಟ್ಟಿರುವ ಹಲವು ಹೊಸ ಮನೆಗಳ ಸೂರು ದಿಟ್ಟಿಸುತ್ತಾ ನಡೆದದ್ದು ಇರಬೇಕು. ಹೆಚ್ಚಿನಂಶ ಮಿಶಿನರಿಗಳ ಹಿಡಿತದಲ್ಲಿರುವ ಇಲ್ಲಿನ ಹೊರವಲಯದ ಹಳ್ಳಿಗಳಲ್ಲಿ ತೀರ ಆಧುನಿಕ ಜನರ ಸಹವಾಸವೇ ಬೇಡ ಎನ್ನುವ ನಿರ್ಧಾರಕ್ಕೆ ಬದ್ಧವಾಗಿರುವ ಕುಟುಂಬಗಳೇ ಅಧಿಕ. ಹಾಗು ಇಲ್ಲೆಲ್ಲ 63 ಪ್ರಮೀಳೆಯರ ನಾಡಿನಲ್ಲಿ ಮಿಶಿನರಿಗಳ ಹೆಚ್ಚಿನ ಹಿಡಿತ ಇವರನ್ನು ಮುಖ್ಯವಾಹಿನಿಯಿಂದ ದೂರವಿರಲು ಪ್ರಮುಖ ಕಾರಣ ಕೂಡಾ. ಮುಖ್ಯ ಹೆದ್ದಾರಿ ಎನ್ನುತ್ತಾ ಚುರ್ಚಾಂಡ್ಪುರ್ ಪ್ರವೇಶಿಸುವ ದಾರಿಬಿಟ್ಟರೆ ಉಳಿದೆಲ್ಲಾ ಗದ್ದೆಗಳಂತಹ ರಸ್ತೆಗಳು. ಅಲ್ಲಲ್ಲಿ ಯಾವಾಗಲೋ ಹಾಕಿದ್ದ ಟಾರ್ ಹೆಸರಿನ ಪಳೆಯುಳಿಕೆಗಳಿಂದ, ಹಿಂದ್ಯಾವಾಗಲೋ ಇಲ್ಲಿ ರಸ್ತೆ ಆಗಿದ್ದ ಕುರುಹುಗಳಿದ್ದವು. ಇದು ಜಿಲ್ಲಾ ಕೇಂದ್ರದ ಪರಿಸ್ಥಿತಿಯಾದರೆ ಇನ್ನು ಜಿಲ್ಲೆಯ ಒಳ ಭಾಗಗಳು ಹೇಗಿದ್ದಾವು..? ಈ ಲಮ್ಖಾ ಎನ್ನುವ ಹೆಸರಿನ ಬಗ್ಗೆಯೇ ಇವತ್ತಿಗೂ ಪರ ವಿರೋಧ ಇದೆ ಇಲ್ಲಿ. ಹಾಗಾಗಿ ಹೊರ ಊರಿಂದ ಬರುವವರಿಗೆ ಇದು ಚುರ್ಚಾಂಡ್ಪುರ್ ಆದರೆ, ಇಲ್ಲೆ ಓಡಾಡುವ ಪ್ರತಿಯೊಬ್ಬರು ಇದನ್ನು ಲಮ್ಖಾ ಎಂದೇ ಬದಲಿಸುವ ಶಪಥಕ್ಕೆ ಬದ್ಧರಾಗಿದ್ದಾರೆ. ಪ್ರವಾಸಿ ತಾಣಗಳು ಚುರ್ಚಾಂಡ್ಪುರ ಜಿಲ್ಲೆ : 1. ಖುಗಾ ಡ್ಯಾಂ : 2. ಬುಡಕಟ್ಟು ಮ್ಯೂಸಿಯಂ 3. ತುಯಿ ಬೊಂಗ್ / ಥಂಗ್ ಜಾಮ್ ರಸ್ತೆ 4. ಗಾಲೋಯಿ ಫಾಲ್ಸ್‌ ಹೀಗ್ 5. ಟಂಗ್ಲನ್ ಕೇವ್ಸ್ 6. ಚೆಕ್ಲಾ ಪಾಯಿ. 7. ಬಿಹೈಂಗ್ 8. ಖಿಲ್ಲಾಂ ಪರ್ವತ ಪ್ರದೇಶ 9. ತಿಪೈಮುಖ್ ಹೀಗೆ ಕೆಲವು ಹೆಸರಿಸಬಹುದಾದ ಪ್ರವಾಸಿ ಆಕರ್ಷಣೆಗಳು ಈ ಲಮ್ಖಾ ಜೊತೆಗಿರಿಸಿಕೊಂಡಿದೆ. ಆದರೆ ಇಲ್ಲಿಂದ ಅಂದರೆ ದಕ್ಷಿಣದ ಕಡೆಯಿಂದ ವಿಶೇಷ ಪ್ರವಾಸ ಅಕರ್ಷಣೆಯಾಗಿಸಿಕೊಂಡು ತಿರುಗುವ ಉಮೇದಿಯನ್ನು ಹುಟ್ಟಿಸುವಂತಹ ಒಂದೇ ಒಂದು ಪ್ರದೇಶವೂ ಇಲ್ಲಿಲ್ಲ. ಆದರೆ ಗುಹೆ ಪ್ರಮೀಳೆಯರ ನಾಡಿನಲ್ಲಿ 64 ಕಂದರದಂತಹ ಪುರಾತನ ಸ್ಥಳಗಳಿದ್ದಾವಾದರೂ ಅವೆಲ್ಲಾ ಒಂದೆರಡು ದಿನದ ಪ್ರವಾಸಿಗರಿಗೆ ಹೇಳಿಮಾಡಿಸಿರುವ ಜಾಗವಲ್ಲ. ಖುಗಾ ಡ್ಯಾಂ : ಜಿಲ್ಲೆಯ ಮಟ್ಟಿಗೆ ಅಷ್ಟೇ ಅಲ್ಲ ಪೂರ್ತಿ ಮಣಿಪುರಕ್ಕೇನೆ ಆರ್ಥಿಕ ಬದಲಾವಣೆಗೆ ಅವಕಾಶವನ್ನು ಒದಗಿಸಿದ ಶ್ರೇಯಸ್ಸು ಈ ಅಣೆಕಟ್ಟೆಗೆ ಸಲ್ಲುತ್ತದೆ. ಕಾರಣ ಇದರಿಂದಾಗಿ ಉಂಟಾಗಿರುವ ಕೃತಕ ಸರೋವರದ ಆಕರ್ಷಣೆಯಲ್ಲಿ ಬೆಳೆದಿರುವ ಪ್ರವಾಸೋದ್ಯಮ ಹಲವು ಜನರಿಗೆ ಇವತ್ತಿಗೆ ಜೀವನ ಮಾಧ್ಯಮವಾಗಿದೆ. ಸುಮಾರು 150 ಚ.ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಹರಡಿಕೊಂಡಿರುವ ಖುಗಾ ವಿವಿಧೋದ್ದೇಶ ಯೋಜನೆಯಡಿಯಲ್ಲಿ ನಿರ್ಮಾಣವಾದ ಅಣೆಕಟ್ಟೆಯಾಗಿದೆ. ದಿನಕ್ಕೆ ಸುಮಾರು 23 ಸಾವಿರ ಘನ ಅಡಿಯಷ್ಟು ನೀರಿನ ಪೂರೈಕೆಯನ್ನು ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಿರುವುದಲ್ಲದೆ, 175 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪನ್ನ ಕೂಡಾ ನಡೆಯುತ್ತದೆ. 1983 ರ ಸುಮಾರಿಗೆ ಯೋಜನೆ ಆರಂಭವಾಗುವುದರೊಂದಿಗೆ ಇಲ್ಲಿನ ಜನರ ಬದುಕೇ ಬದಲಾಗಿಹೋಗಿದ್ದು ಈಗ ಇತಿಹಾಸ. ರಸ್ತೆ ಸಾರಿಗೆಯಿಂದ ಹಿಡಿದು ಮಾರುಕಟ್ಟೆಯವರೆಗೂ ಲಮ್ಖಾ ಈ "ಖುಗಾ ಡ್ಯಾಂ"ನಿಂದಾಗಿ ಹೊಸ ಹುಟ್ಟು ಪಡೆಯಿತು ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ಆಗಿನ ಕಾಲಕ್ಕೆ ಅತಿ ಹೆಚ್ಚು ಋಣಾತ್ಮಕ ಸಂಗತಿಗಳನ್ನು ಎದುರಿಸಿಯೂ ಖುಗಾ ಡ್ಯಾಂ ಇವತ್ತು ಸುಂದರ ಸರೋವರದ ಶೈಲಿಯಲ್ಲಿ ನಿಂತಿದೆ. 65 ಪ್ರಮೀಳೆಯರ ನಾಡಿನಲ್ಲಿ ಅಷ್ಟ್ಯಾಕೆ? ಇವತ್ತಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಖುಗಾ ಡ್ಯಾಂ ಕೂಡಾ ಒಂದೆಂದು ಗಣಿಸಲ್ಪಡುತ್ತಿದೆ. ಅಪಾರ ಹಸಿರು ಮತ್ತು ಎಷ್ಟು ನೋಡಿದರೂ ತೀರದ ಹರಿವಿನ ವಿಸ್ತಾರದ ಸರೋವರದ ಹಿನ್ನೀರು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ ಎನ್ನಿಸುವುದು ಹಳೆಯ ವೈಭವ ಮಾತ್ರ ಎನ್ನುತ್ತದೆ ಈಗಿನ ಪರಿಸ್ಥಿತಿ. ಇವತ್ತಿಗೂ ದೇಶದ 250 ಅತಿ ಹಿಂದೂಳಿದ ಜಿಲ್ಲೆಗಳಲ್ಲಿ ಚುರ್ಚಾಂಡ್ಪುರಕ್ಕೂ ಸ್ಥಾನವಿದೆ ಎಂದರೆ ಅದೆಷ್ಟು ಕಣಿವೆಯ ಜಿಲ್ಲೆಯಾಗಿರಬೇಕು ಊಹಿಸಿ. ಕಾರಣ ಕಠಿಣತಮ ಮತ್ತು ದುರ್‌ಗಮ ದಾರಿ ಎಲ್ಲಾ ಅಭಿವೃದ್ಧಿಗೂ ಇಲ್ಲಿ ಹಿನ್ನಡೆಯುಂಟು ಮಾಡುತ್ತದೆ. ಪ್ರಮುಖವಾಗಿ ವಾಹನ ಸೌಕರ್ಯದ ಇಲ್ಲಿನ ವೇಗ ಹೆಚ್ಚೆಂದರೆ ಗಂಟೆಗೆ 20 ದಾಟೀತು ಅಷ್ಟೇ. ಇಂಫಾಲ ಹೊರತುಪಡಿಸಿ ಇನ್ಯಾವುದೇ ನಗರಕ್ಕೂ ಸುಲಭ ಸಂಪರ್ಕ ಇಲ್ಲಿಂದ ಸಾಧ್ಯವಿಲ್ಲ. ಬರ್ಮಾಗೆ ಸೇರುವ "ತಿದ್ದಾಮ" ರಸ್ತೆ ಇಲ್ಲಿಗೂ ಸಂಪರ್ಕಿಸುತ್ತದೆ. "ತುವಾಯಿ" ನದಿ ದಂಡೆಯ ಮೇಲಿರುವ ಮೀಝೋರಂನಿಂದ ಇಲ್ಲಿಗೆ ಸಂಪರ್ಕ ಸಾಧ್ಯವಿದೆ. ಹಾಗಾಗಿ ಖುಗಾ ಡ್ಯಾಮ್‍ಗೆ ಎಲ್ಲೆಡೆಯಿಂದಲೂ ಪ್ರವಾಸಿಗರು ಇಂಫಾಲದಲ್ಲಿ ವಿಚಾರಿಸುತ್ತಾರೆ. ಕಾರಣ ಮಣಿಪುರ್ ಪ್ರವಾಸೋದ್ಯಮ ಅವರಿಗೆ ನೀಡಿರುವ ಮಾಹಿತಿಯ ಆಧಾರದ ಮೇಲೆ ಅದೊಂದು ಪ್ರವಾಸಿ ಕೇಂದ್ರ ಎಂದೇ ಗುರುತಿಸಿಕೊಂಡಿರುತ್ತಾರೆ. ಆದರೆ ಅಸಲಿಗೆ ಅಂಥಾ ಬರಗೆಟ್ಟು ನಿಂತಿರೋ ಡ್ಯಾಂಗಳು ನಮ್ಮಲ್ಲಿ ಅಂದರೆ ಕರ್ನಾಟಕದಲ್ಲಿ ಎಲ್ಲೆಂದರಲ್ಲಿ ಸಿಕ್ಕುತ್ತವೆ. ಹಾಗಾಗಿ ಅದನ್ನು ನೋಡಲು ಹೋಗಿದ್ದೇ ಆದರೆ ನಿಜಕ್ಕೂ ಪ್ರವಾಸದ ಒಂದಿನ ಕಳೆದುಕೊಂಡ ಹಾಗೇನೆ. ಕಾರಣ ಯಾವುದೇ ನಿರ್ದಿಷ್ಟ ಪ್ರವಾಸಿ ಮಾಹಿತಿ ಇಲ್ಲದ, ತೀರ ಮಾಮೂಲಿನ ಒಂದು ಅಣೆಕಟ್ಟೆ ಅಷ್ಟೇ. ಅದೂ ಕೂಡಾ ಸ್ಥಳೀಯ ರಾಜಕೀಯ ಮತ್ತು ಸಮುದಾಯದ ಜಗಳಗಳ ಕಾರಣ ನಿಂತು ಹೋಗಿ ಮೂರು ವರ್ಷ ಆಗಿದೆ. ಇಲ್ಲಿಗೆ ತಲುಪಲು ಯಾವುದೇ ವಾಹನ ಸೌಕರ್ಯವಂತೂ ಇಲ್ಲವೇ ಇಲ್ಲ. ಇನ್ನು ಸ್ಥಳೀಯರ ಸಮಸ್ಯೆಗಳು ಮತ್ತು ಕಿತ್ತುಹೋದ ಗದ್ದೆಯಂತಹ ರಸ್ತೆ ಹಾಗು ಅಸ್ಸಾಂ ರೈಫಲ್ಸ್‌ನವರ ಮಧ್ಯಸ್ಥಿಕೆ, ಹೀಗೆ ಹಲವು ಕಾರಣಗಳ ಜೊತೆಗೆ ಪ್ರಮೀಳೆಯರ ನಾಡಿನಲ್ಲಿ 66 ಹಿಡಿತ ಸಾಧಿಸಿರುವ ಸ್ಥಳೀಯ ಬುಡಕಟ್ಟುಗಳ ನಿರ್ಧಾರ ಎಲ್ಲ ಸೇರಿ ಖುಗಾ ಡ್ಯಾಂ ನೀರು ಕಟ್ಟಿಕೊಂಡು ಮಲೆಯುತ್ತಾ ನಿಂತು ಮೂರು ವರ್ಷವಾಯಿತು. ಅನಾಮತ್ತು 150 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಕೇಂದ್ರದ ನಿರ್ವಹಣೆ ಇಲ್ಲದೆ ಕಿತ್ತುಹೋದ ಕೊಂಡವಾಡೆಯಂತಾಗಿದೆ. ಸುತ್ತಮುತ್ತಲ ಪ್ರದೇಶ ನೋಡುತ್ತಿದ್ದರೆ ಇಲ್ಲಿ ಬದುಕು 1950ರ ಈಚೆಗೆ ಬೆಳೆದೇ ಇಲ್ಲವೆ ಎನ್ನಿಸುತ್ತದೆ. ಆದರೆ ಅಲ್ಲಲ್ಲಿ ಸದ್ದು ಮಾಡುವ ಮೊಬೈಲ್ ಫೋನ್ ರಿಂಗ್‍ಟೋನ್ ಮಾತ್ರ ನಮ್ಮ ಹಲವು ಅನುಮಾನಗಳನ್ನು ಸುಳ್ಳು ಮಾಡುತ್ತಲೇ ಇರುತ್ತದೆ. ಸುತಮುತ್ತಲೂ ವಿಭಿನ್ನ ಸಂಸ್ಕೃತಿ ಮತ್ತು ಗುಡಿಸಲುಗಳಾಚೆಗೆ ಬೆಳೆಯದಿರುವ ಜನಸಾಮಾನ್ಯರ ಪರಿಸ್ಥಿತಿಯಿಂದಾಗಿ ಹೊರಗಿನವರಿಗೆ ದಿಗಿಲು, ಅವರ ಆವಾಸ ಸ್ಥಾನದೊಳಕ್ಕೆ ಬಿಟ್ಟುಕೊಳ್ಳದಿರುವ ಅನಿವಾರ್ಯತೆಗಳೂ ಸೇರಿ ಏನೇ ನಾವು ಹಾಡಿಗಳನ್ನು ಪ್ರವೇಶಿಸಲು ಪ್ರಯತ್ನಿಸಿದರೂ, ನಮ್ಮನ್ನು ಎದುರಿಸಲಿಷ್ಟಪಡದೆ ಅಲ್ಲಲ್ಲೇ ಕಣ್ಮರೆಯಾಗಿಬಿಡುವ ಜನರೇ ಜಾಸ್ತಿ. ಹೆಚ್ಚಿನ ಕುಕಿ ಮತ್ತು ನಾಗಾಗಳ ಈ ವರಸೆಯಿಂದಾಗಿ ಅತ್ತ ನಗರವೂ ಆಗದ ಇತ್ತ ಹಳ್ಳಿಯ ಹಾಡಿಯೂ ಆಗದ ಎಡಬಿಡಂಗಿ ಸಮುದಾಯದಂತೆ ಜನಜೀವನ ಎತ್ತೆತ್ತಲಾಗೋ ಬೆಳೆಯುತ್ತಿದೆ. ಮುಖ್ಯ ಹೆದ್ದಾರಿಯಿಂದ ಒಳಗೆ ಬೆಳೆಯದೇ ಇರುವ ಊರುಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಆಗದೇ ಇರುವ ಕಾಮಗಾರಿಗಳು ಇವರನ್ನು ಇನ್ನು ಹಾಗೇಯೇ ಉಳಿಸಿದೆ ಎಂದರೂ ತಪ್ಪೇನಿಲ್ಲ. ಒಳಪ್ರವೇಶದ ಯೋಜನೆಯಂತೆ ಸ್ನೇಹಿತ ಮತ್ತು ಸ್ಥಳೀಯ ನನ್ನ ಸಂಗಾತಿಯೂ ಆಗಿದ್ದ "ಮೊವ್ವಾನ್" ಅಪ್ಪಟ ಕುಕಿ ಮತ್ತು ನಾಗಾಗಳ ಸಂಪೂರ್ಣ ಭಾಷೆ ಹಾಗು ಅಭಿವ್ಯಕ್ತಿ ಎರಡನ್ನು ಸಮರ್ಥವಾಗಿ ಅರ್ಥೈಸುತ್ತಾ ಆದಷ್ಟು ಹಿಂದಿಯಲ್ಲಿ ನನಗೆ ತರ್ಜುಮೆಯನ್ನೂ ಮಾಡುತ್ತಿದ್ದ. ಆದ್ದರಿಂದಲೇ ಯಾವ ಸಮುದಾಯದ ಜನರೂ ಕೂಡಾ ಉಳಿದವರಿಗಾಗುವ ಅನುಭವದಂತೆ ನನ್ನನ್ನು ಮಾತಾಡಿಸದೇ ಎದ್ದು ಹೋಗುವ ಕ್ರಿಯೆಗಿಳಿಯಲಿಲ್ಲ. ಇಲ್ಲೆಲ್ಲ ಸಾಮ್ಯತೆ ಎಂದರೆ ಸಂಜೆಯ ಏಳು ಗಂಟೆಯ ನಂತರ ಯಾವ ಅಪರಿಚಿತರು ಊರು ಪ್ರವೇಶಿಸುವುದಿರಲಿ, ಸ್ವತ: ಊರ ಜನರೇ ಎಲ್ಲೂ 67 ಪ್ರಮೀಳೆಯರ ನಾಡಿನಲ್ಲಿ ಹೊರಗಡೆ ತಿರುಗಾಡಬಾರದು ಎನ್ನುವ ನಿಯಮಗಳು ಸರ್ವೇ ಸಾಮಾನ್ಯ. ಇದರಿಂದಾಗಿ ಸಂಜೆಯ ಐದಕ್ಕೆ ಕತ್ತಲಾಗುವ ಈ ಊರುಗಳಲ್ಲಿ ಏಳು ಗಂಟೆಗೆಲ್ಲಾ ಹೆಚ್ಚೆಂದರೆ ಅಲ್ಲಲ್ಲಿ ಹಾಡಿಯ ಮನೆಗಳಿಂದ ಶಬ್ದಗಳು ಕೇಳಿಬರಬಹುದೇ ವಿನ: ಮನುಷ್ಯರು ಕಂಡುಬರಲಾರರು. ಜೊತೆಗೆ ಯಾವ ಬುಡಕಟ್ಟಿನ ಜನರೂ ಇಂತಹ ಸಾಮೂಹಿಕ ಸಂಪ್ರದಾಯಗಳನ್ನು ಮುರಿಯಲಾರರು. ಹೀಗಾಗಿ ಸಾಂಯಂಕಾಲದ ಹೊತ್ತಿಗೆ ಊರು ತಲುಪಿ ಮಾತುಕತೆಗಿಳಿದಿದ್ದ ನನಗೆ ರಾತ್ರಿ ಕಳೆಯುವ ಪರಿಸ್ಥಿತಿ ಕ್ರಮೇಣ ಗಂಭೀರ ಎನ್ನಿಸತೊಡಗಿತ್ತು. ಸುತ್ತಲೂ ಅನಾಯಾಸವಾಗಿ ಹಬ್ಬುವ ಮಾಂಸದ ಮತ್ತು ಸ್ಥಳೀಯ ತಿನಿಸುಗಳ ವಾಸನೆ (ಇದು ನನ್ನನ್ನು ಅತ್ಯಂತ ಬಾಧಿಸಿದ ಅಂಶ) ಯಾವ ರೀತಿಯಲ್ಲೂ ಸ್ವಚ್ಛತೆಗಿಲ್ಲದ ಮನ್ನಣೆ, ಎಲ್ಲೆಲ್ಲೂ ಹರಿವ ಕೊಳಚೆ ನೀರು ಮತ್ತು ಮೂರ್‌ನಾಲ್ಕು ಪದರದ ವೇಷ ಭೂಷಣದಿಂದಲೂ (ಚಳಿಗಾಲದ ಕೊನೆಯಾದರೂ ಅಗತ್ಯವಿದ್ದುದ್ದು ಸಹಜ ಕೂಡಾ) ಹೊರಡುವ ಅವರದೇ ಆದ ಸ್ಥಳೀಯ ಸೊಗಡಿನ ವಾಸನೆ ನನ್ನನ್ನು ವಿಚಿತ್ರ ಹಿಂಸೆಗೀಡುಮಾಡುತ್ತಿದ್ದವು. ಯಾವ ಪದಾರ್ಥವನ್ನೂ ನಾನು ಸ್ವೀಕರಿಸದಿದ್ದುದು ಮತ್ತು ಅವರಲ್ಲಿನ ಭೋಜನದ ವಿನಂತಿಯನ್ನು ನಯವಾಗೇ ತಿರಸ್ಕರಿಸಿದ್ದು ಕೂಡ ಆ ಸಮುದಾಯದ ಸ್ಥಳೀಯರಿಗೆ ಸರಿ ಬರಲಿಲ್ಲ ಎನ್ನುವುದು ಗೊತ್ತಾಗುತ್ತಿತ್ತು. ನಾನು ಮುಖಂಡನೊಡನೆ ಅವರ ಸಂಪ್ರದಾಯ, ಸ್ಥಳೀಯ ಜನಜೀವನ ಪದ್ಧತಿ, ಜೀವನ ಶೈಲಿ, ಮಕ್ಕಳ ಶಾಲೆ ಇತ್ಯಾದಿಗಳ ಬಗ್ಗೆ ಮಾತಾಡುತ್ತಲೆ ಒಂದಷ್ಟು ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದೆ. ವಿಚಿತ್ರ ಎಂದರೆ ಯಾವ ಬರಹಗಾರ ಅಥವಾ ಲೇಖಕನೂ ಹೀಗೆಲ್ಲ ಇವರನ್ನು ವಿಚಾರಿಸಿಕೊಂಡ ಲಕ್ಷಣಗಳು ನನಗೆ ಸಂಪೂರ್ಣ ಮಣಿಪುರದಲ್ಲೆಲ್ಲೂ ಕಂಡುಬರಲಿಲ್ಲ. ಹಾಗಾಗೇ ಇದೆಲ್ಲ ಇವರಿಗೆ ಕೊಂಚ ವಿಚಿತ್ರವೂ ಎಲ್ಲಿಂದಲೋ ಬಂದ ಇವನಿಗೆ ಇದೆಲ್ಲಾ ಯಾಕೆ ಎನ್ನುವ ಅನುಮಾನಗಳು ಮೂಡುತ್ತಿದ್ದುದು ಗೊತ್ತಾಗುತ್ತಿತ್ತು. "ವಿಂಥಾಫೈ" ಎನ್ನುವ ಚುರ್ಚಾಂಡ್ಪುರ್ ಜಿಲ್ಲೆಯ ಲಮ್ಖಾದಿಂದ ನಲ್ವತ್ತು ಕೀ.ಮೀ. ಒಳಗೆ ನನ್ನೊಂದಿಗೆ ಪಯಣಿಸಿದ್ದ ನನ್ನ ಸ್ಥಳೀಯ ಮಿತ್ರ ಆಗಲೇ ಪ್ರಮೀಳೆಯರ ನಾಡಿನಲ್ಲಿ 68 ಆಕ್ಕಿಯಿಂದ ತಯಾರಿಸುವ ವೈನ್‍ನಂತಹ ಸೋಮರಸಕ್ಕೆ ಅಣಿಯಾಗುತ್ತಿದ್ದ. ಸಮಯ ಆಗಲೇ ಆರರ ಹತ್ತಿರವಾಗುತ್ತಿತ್ತು. ನಾನು ಅಲ್ಲಿಂದ ಹೇಗೆ ಹೊರಟರೂ ಮುಖ್ಯ ಹೆದ್ದಾರಿ ತಲುಪುವುದು ಎಂಟು ಗಂಟೆಯಾಗುತ್ತದೆ. ಆಮೇಲೆ ಹೆದ್ದಾರಿಯಲ್ಲಿ ಹೋಗಲಿ ಈ ಒಳ ದಾರಿಯಲ್ಲೇ ತಿರುಗಾಡುವುದೂ ಕೂಡಾ ಅಪಾಯಕಾರಿ. ಕೂತಿದ್ದ ಮಿತ್ರ ಏಳುವ ಲಕ್ಷಣ ಕಾಣಿಸುತ್ತಿಲ್ಲ. ಸೋಮರಸದೊಂದಿಗೆ ದೇವರಂತೆ ಜಗುಲಿಯ ಮೇಲೆ ಕಾಲು ಚಾಚುವ ಅವನ ಯೋಜನೆ ಆಗಲೇ ನನಗೆ ಸ್ಪಷ್ಟವಾಗತೊಡಗಿತ್ತು. ಕೂಡಲೇ ಅವರ ಮುಖಂಡನಿಗೆ ನಮಸ್ಕರಿಸಿ ಬ್ಯಾಗನ್ನು ಬೆನ್ನಿಗೇರಿಸುತ್ತಾ ಎದ್ದು ನಿಂತೆ. ಮಿತ್ರನಿಗೆ ಸಮಜಾಯಿಸಿ ಬೈಕನ್ನೇರಿ ದೌಡಾಯಿಸಿದರೆ ಅನಾಮತ್ತು ಇಪ್ಪತ್ತು ಕಿ.ಮೀ. ದೂರದ ಪೊಲೀಸ್ ಸ್ಟೇಷನ್ ಬಂದ ಮೇಲೇನೆ ನಿಲ್ಲಿಸಿದ್ದೆ. ಅಲ್ಲಿನ ಅಧಿಕಾರಿಯ ಪ್ರಕಾರ ಬೈಕ್ ಮೇಲೆ ಈ ಹೊತ್ತಲ್ಲಿ ಇಂಫಾಲದವರೆಗೆ ಹೋಗುವುದು ತರವಲ್ಲ. ಹಾಗಂತ ಸಲಹೆಗೆ ಅವನು ಸಿದ್ಧನೂ ಇರಲಿಲ್ಲ. ಇನ್ನು ಉಳಿಯಲು ವಸತಿ ಗೃಹ ಹೋಗಲಿ, ಬೇಕೆಂದರೆ ಕೊಳ್ಳಲು ನೀರೂ ಸಿಗದಂತಹ ಜಾಗ ಅದು. ಜಿಲ್ಲಾ ಕೇಂದ್ರ ಲಮ್ಖಾದಲ್ಲೇ ವಸತಿ ಗೃಹಗಳಿಲ್ಲ. ಇದ್ದರೂ ಅಲ್ಲಿ ನಿಲ್ಲುವ ಪ್ರಶ್ನೆಯೇ ಇರಲಿಲ್ಲ. ಕಡೆಗೆ ನನ್ನನ್ನು ಅಷ್ಟರವರೆಗೆ ಸಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗೆ ನಿಧಾನಕ್ಕೆ ನನ್ನ ಪರಿಸ್ಥಿತಿ ಮನದಟ್ಟು ಮಾಡಿಸಿ, ಕೊನೆಯ ಬೇಡಿಕೆ ಮುಂದಿಟ್ಟೆ. "ಇವತ್ತೊಂದು ರಾತ್ರಿ ಇಲ್ಲಿಯೇ ಮಲಗಲೇ.." ? ಹೌಹಾರಿದ ಅಧಿಕಾರಿ ಮೊದಲು ಹೊರಗಟ್ಟುವವನಂತೆ ಕಾಣಿಸಿದ. ಅರ್ಧ ಗಂಟೆಯ ಮಾತು, ನನ್ನೆಲ್ಲಾ ಚೀಲ ಬೈಕಿನ ಚಾವಿಯಿಂದ ಹಿಡಿದು, ತಪಾಸಣೆ ಸಾಂಗವಾಗಿ ಸಾಗಿದ ಮೇಲೆ ಸರಿ ಎಂದ. ಅವರಿಗೇನೋ ಬೇಗ ಕತ್ತಲು, ಬೇಗ ನಿದ್ರೆ. ಬೇಗ ಬೆಳಗು.. ಆದರೆ ಆ ಅಭ್ಯಾಸಕ್ಕೆ ಸಿದ್ಧನಿರದ ನಾನು ಅರೆಬರೆ ಬಣ್ಣದಲ್ಲಿ ಗುರುಗುಡುತ್ತಿದ್ದ ಮಿಥೇಲಿಯನ್ ಭಾಷೆಯಲ್ಲಿ ಬರುತ್ತಿದ್ದ ಚಾನೆಲ್ಲನ್ನು ನೋಡುತ್ತಾ ಕುಳಿತೆ. ಎಂಟೂವರೆಗೂ ಮೊದಲೇ ಸಿಲ್ವರ್ ಡಬ್ಬಿಯಲ್ಲಿದ್ದ ಊಟವನ್ನು ಟೇಬಲ್ಲಿಗೆ ಹರಡಿಕೊಂಡ ಅಧಿಕಾರಿ ಯಾವ ಎಗ್ಗು ಸಿಗ್ಗಲ್ಲದೇ ಬೆರಳು ಸೀಟುತ್ತಾ "ಮೀನು ಜೊತೆಗೆ ಮತ್ತಿನ್ಯಾವುದೋ ಮಾಂಸ ಮಿಶ್ರಿತ ಅಡುಗೆ" ಉಣ್ಣುತ್ತಿದ್ದರೆ ನಾನು ಮೂಗು ಮುರಿಯದೆ ತೆಪ್ಪಗೆ ಕೂತಿದ್ದೆ. ಆಗೀಗ ನನ್ನನ್ನು ಕೊಂಚ 69 ಪ್ರಮೀಳೆಯರ ನಾಡಿನಲ್ಲಿ ಅನುಮಾನದಿಂದಲೇ ದೃಷ್ಟಿಸುತ್ತಾ, ಉಂಡೆದ್ದು ಸ್ಟೇಷನ್ ಎಂಬ ಆ ಕೊಂಡವಾಡೆಯ ಮುಂಬಾಗಿಲ ಹೊರಗಿದ್ದ ತಗಡಿನ ಕಾಂಪೌಂಡಿನ ಗೋಡೆಯ ಚಿಲಕ ಹಾಕಿ ಲೈಟ್ ಉರಿಸಿಟ್ಟು ಬಂದು ಕೂತ. ನನಗರ್ಥವಾಗಿ ನಾನೂ ಇನ್ನು ಮಲಗುವ ತಯಾರಿಗಿಳಿಯಬೇಕೆಂದು ಬ್ಯಾಕ್‍ಪ್ಯಾಕಿನಲ್ಲಿದ್ದ ಬಿಸ್ಕೆಟ್ಟು, ನೀರಿನ ಬಾಟಲ್ಲು ತೆಗೆದಿಟ್ಟುಕೊಂಡು ಅನಾಥವಾಗಿ ಕೂತು, ತಿಂದು ಬಾಯೊರೆಸಿಕೊಂಡು ಎದ್ದೆ. "ಒಳಗೆ ಮಲಗಿಕೊ ಬೇಕಿದ್ದರೆ ಅಂದ.." ಅತ್ತ ನೋಡಿದೆ. ಎರಡು ಗೋಣಿ ಚೀಲ ಮಡಚಿ ಹಾಕಿದ್ದವು. ಅದರಾಚೆಗೆ ಒಂದು ಮುರಕು ಕುರ್ಚಿ. ಅದೂ ಎಲ್ಲಿ ಸೆಲ್‍ನೊಳಗೆ. ಯಾರ್ಯಾರನ್ನು ಅಲ್ಲಿ ಬೆತ್ತಲೇ ಮಲಗಿಸಿ ಅರಿದಿದ್ದರೋ ದೇವರಿಗೇ ಗೊತ್ತು. ಕೂಡಲೆ "ಬೇಡ ಇಲ್ಲೇ ಪರವಾಗಿಲ್ಲ.." ಎನುತ್ತ ಬ್ಯಾಕ್ ಪ್ಯಾಕ್ ತಲೆದಿಂಬಾಗಿಸಿ ಬೆಂಚಿನ ಮೇಲೆ ಕಾಲು ಹರಿಸುವ ಮೊದಲು ಸೌಜನ್ಯಕ್ಕೆಂದು " ಗುಡ್ ನೈಟ್ " ಅಂದೆ ನಗುತ್ತಾ. "...ಏನೋ ಕೇಳಲೇ .." ಎಂದ. ಹೂ ಅಂದೆ. "...ಅಲ್ಲಯ್ಯಾ ಅಷ್ಟು ಚೆಂದದ ಬೆಂಗಳೂರು ಅಂಬೋ ಊರು, ಮನೆ, ಮಠ ಬಿಟ್ಟು ಈ ರಸ್ತೆ ಬದಿಯ ಸ್ಟೇಷನ್ನಿನೊಳಗೆ ಬಿಸ್ಕಿಟು ತಿಂದು ನೀರು ಕುಡಿದು ಮಲಗುವ ಪರಿಸ್ಥಿತಿ ನಿನಗೆ ಬೇಕಿತ್ತಾ..? ಏನು ಮಾಡುತ್ತಿ ಇದೆಲ್ಲಾ ಮಾಡಿ ..? ಇದೇನು ನೌಕರಿನಾ..?" ರಪ್ಪನೆ ಮುಖಕ್ಕೆ ಅಪ್ಪಳಿಸಿದ ಈ ಬುಡ ಮಟ್ಟದ ಪ್ರಶ್ನೆಗೆ, "ಬ್ಬೆ.. ಬ್ಬೆ.. ಬ್ಬೆ.." ಎಂದೆ. ಅಸಲಿಗೆ ಅಂಥಾ ನೇರ ಪ್ರಶ್ನೆ, ಆ ಹೊತ್ತಿನಲ್ಲಿ ನನ್ನ ಹತ್ತಿರವೂ ಸಮಜಾಯಿಸಿ ಕೊಡುವಂತಹ ಉತ್ತರವಿರಲಿಲ್ಲ. ಆದರೆ ಅರಿವಾಗದ ಆತ್ಮ ತೃಪ್ತಿಯೋ ಅಥವಾ ಅಹಂನ ತಣಿಯುವಿಕೆಯೋ ಎರಡರಲ್ಲಿ ಒಂದಂತೂ ಈ ಪ್ರವಾಸದಿಂದ ಆಗುತ್ತಿದ್ದುದು ಹೌದು. ತೆಪ್ಪಗೆ ಐ.ಎಸ್.ಟಿವಿಯಲ್ಲಿ ಬರುತ್ತಿದ್ದ, ಒಂದಿನಿತೂ ಅರಿವಾಗದ ಆದರೆ ಗುನುಗುನಿಸಬಲ್ಲಷ್ಟು ಚೆಂದನೆಯ ಮಣಿಪುರಿ ಪ್ರಮೀಳೆಯರ ನಾಡಿನಲ್ಲಿ 70 ಹಾಡಿಗೆ ಅಷ್ಟೇ ಚೆಂದದ ಹುಡುಗಿ ಸೊಂಟ ಕುಣಿಸುತ್ತಿದ್ದಳು. ಒಂದಷ್ಟು ಹೊತ್ತು ನೋಡುತ್ತಿದ್ದವನಿಗೆ ತಿರುಗಿದ ಆಯಾಸಕ್ಕೆ ಯಾವಾಗ ಕಣ್ಣೆವೆ ಎಳೆದವೋ ಗೊತ್ತಿಲ್ಲ. ಬೆಳಗ್ಗೆ ಎದ್ದಾಗ ರಾತ್ರಿಯ ಚಳಿಯಾಗದೆ ಮಲಗಿದ್ದು ಹೇಗೆಂದು ಅರ್ಥವಾಗುವಂತೆ, ಸೆಲ್‍ನೊಳಗಿದ್ದ ಗೋಣಿ ಪಾಟಿನ ಎರಡೂ ತುಂಡನ್ನು ರಾತ್ರಿ ಯಾವಾಗಲೋ ಪೇದೆಯೊಬ್ಬ ನನ್ನ ಮೈಮೇಲೆ ಮುಚ್ಚಿದ್ದ. ಕೊಡವಿಕೊಂಡು ಎದ್ದು ಬಾಟಲ್ ನೀರಿನಲ್ಲಿ ಮುಖ ಮಾರ್ಜನ ಮುಗಿಸಿ, ರಾತ್ರಿಯ ಮಿತ್ರನಿಗೆ ರಿಂಗಿಸತೊಡಗಿದ್ದೆ. ಕಾರಣ ಮುಂದಿನ ಅಮೋಘ ಯಾತ್ರೆಯ ಮತ್ತು ಮಣಿಪುರಿಗಳ ಮೂಲವನ್ನು ಹುಡುಕುವ ಸೇನಾಪತಿ ಜಿಲ್ಲೆಗೆ ಕಾಲು ಹರಿಸಬೇಕಿತ್ತು. ಈ ಹೆದ್ದಾರಿಯಲ್ಲಿ ಯಾವುದೇ ರಸ್ತೆಗೆ ಹೋದರೂ ಮೊದಲು ಕೇಳುವುದು ಟ್ಯಾಂಕ್ ತುಂಬಾ ಪೆಟ್ರೋಲ್ ತುಂಬಿಸಿದ್ದೀಯಾ ಅಂತಾ. ಇದು ಮೊದಲೇ ಅನುಭವವಾಗಿದ್ದರಿಂದ ಟ್ಯಾಂಕ್ ಬೆಳ್‍ಬೆಳಗ್ಗೆ ಭರ್ತಿ ಮಾಡಿಬಿಡುತ್ತಿದ್ದೆ ಎರಡರದ್ದೂ. ಒಂದಕ್ಕೆ ಪೆಟ್ರೋಲು, ಇನ್ನೊಂದಕ್ಕೆ ಪರಾಠಗಳು. ಅಷ್ಟೇ ಅಲ್ಲಿಗೆ ಮಣಿಪುರದ ಇನ್ನೊಂದು ದಿಕ್ಕು ಕಣ್ಣೆದುರು ಬಿಚ್ಚಿಕೊಳ್ಳುತ್ತಿತ್ತು. ಕಾರಣ ಸೇನಾಪತಿಯ ಕಡೆಗೆ ಹೋಗುವ ನನ್ನ ಯೋಜನೆ ಬದಲಿಸಿದ್ದು ಹಿಂದಿನ ದಿನ ಮಧ್ಯರಾತ್ರಿಯಿಂದ ಮುಖ್ಯ ಹೆದ್ದಾರಿಯನ್ನು ಅಲ್ಲಿನ ಆದಿವಾಸಿಗಳ ಗುಂಪು ಮತ್ತು ಇನ್ನಿತರ ಸಮುದಾಯಗಳು ಸೇರಿ ಮುಚ್ಚಿ ಬಿಟ್ಟಿದ್ದು. ಅಲ್ಲಿಗೆ "ವಿಲೊಂಗ್ ಖುಲ್ಲೇನ್" ಸಂದರ್ಶಿಸುವ ಯೋಜನೆ ಮತ್ತೆ ಮುಂದಕ್ಕೆ ಹೋಗಿದ್ದು ಸ್ಪಷ್ಟವಾಗಿತ್ತು. ಬೇರೆ ಯೋಚನೆಗೆ ಅವಕಾಶ ಸಮಯ ಎರಡೂ ಇರಲಿಲ್ಲ. ಕಾರಣ ಮಣಿಪುರದಂತಹ ರಾಜ್ಯದಲ್ಲಿ ಸರಿದು ಹೋಗುವ ಹೊತ್ತಿಗೆ ತುಂಬಾ ಬೆಲೆ. ನೋಡು ನೋಡುತ್ತಿದ್ದಂತೆ ಸಂಜೆಯಾಗಿಬಿಡುವ ಕಾರಣ ನಾವಿನ್ನೂ ಅಲ್ಲೆ ಇರುತ್ತೇವೆ. ಹೊತ್ತು ಮಾತ್ರ ಕಳೆದು ದಿನ ಜಾರಿಬಿಟ್ಟಿರುತ್ತದೆ. ಹಾಗಾಗಿ ಕೂಡಲೇ ವಾಹನವನ್ನು ಚಲಾಯಿಸಿಕೊಂಡು ಥೌಬಾಲ್ ಮೂಲಕ ಚಾಂಡೇಲ್ ಪ್ರವೇಶಿಸಿ ಅಲ್ಲಿಂದ "ಮೊರ್ರೆ" ಮುಟ್ಟಿ ಬಂದುಬಿಡೋಣ ಎಂದು ಆ ದಿಕ್ಕಿಗೆ ಸರಿದಿದ್ದಾಯಿತು. ಆದರೆ ಅಲ್ಲೂ ರಾ.ಹೆ. ಅಡ್ಡಗಟ್ಟಿ ಕೂತಿದ್ದ ವಿಷಯ ಆ 71 ಪ್ರಮೀಳೆಯರ ನಾಡಿನಲ್ಲಿ ಹೊತ್ತಿಗೆ ನನಗೆ ಗೊತ್ತಿರಲಿಲ್ಲ. ಹಾಗಾಗಿ ಸೇನಾಪತಿಗೆ ಹೊರಟವನು ನಾನು ಚಾಂಡೆಲ್ ಪ್ರವೇಶಿಸಿದ್ದೆ. ಚಾಂಡೆಲ್ ಜಿಲ್ಲೆ.. ಥೌಬಾಲ್ ಮೂಲಕ... ರಾಷ್ಟ್ರೀಯ ಹೆದ್ದಾರಿ ಜೊತೆಗೆ ಅಂತಾರಾಷ್ಟ್ರೀಯ ಹೆದ್ದಾರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ " ಇಂಫಾಲ - ಮೊರ್ರೆ - ಬರ್ಮಾ " ರಸ್ತೆಯ ಮೇಲೆ ಚಲಿಸುವಾಗ ಒಂದು ಅಚ್ಚರಿ ಎಂದರೆ ಎಲ್ಲೂ ಇದು ನಿಮಗೆ ದೊಡ್ಡ ರಸ್ತೆ, ಚಲಿಸುವುದೋ ಎನ್ನುವ ಅನೂಹ್ಯ ಅನುಭವಕ್ಕೆ ಈಡು ಮಾಡದೆ ಸೈಕಲ್ಲು, ಆಟೊ, ಟೆಂಪೋ, ಮಿನಿ ಬಸ್ಸು, ಕಾಯಿಪಲ್ಯೆ ಲಾರಿ ಅಲ್ಲೊಂದು ಇಲ್ಲೊಂದು ಕಾರುಗಳು ಹೀಗೆ ಎಲ್ಲದರ ಜೊತೆಗೆ ಊರ ರಸ್ತೆ ಎನ್ನಿಸುವ ಅನುಭವ ನೀಡುತ್ತಲೇ ಅಂತಾರಾಷ್ಟ್ರೀಯ ಹೆದ್ದಾರಿಯ ಪಯಣ ಸಾಗುತ್ತದೆ. ಎಂದಿನಂತೆ ಅಲ್ಲಲ್ಲಿ ಚಿಕ್ಕ ಚಿಕ್ಕ ಹಳ್ಳಿಗಳ ಹೊರವಲಯದಲ್ಲಿ ಅನಾಮತ್ತಾಗಿ ನಿಟಾರನೆ ನಿಲ್ಲಿಸಿ ಅಥವಾ ನೇತಾಡಿಸಿರುವ ಕೆಂಪು ಮಾಂಸದ ಸಣ್ಣ ಸಣ್ಣ ಪರ್ವತದಂತಹ ದೃಶ್ಯಗಳು ಅಭ್ಯಾಸ ಇಲ್ಲದಿರುವವರಿಗೆ ಇರಸು ಮುರುಸು ಉಂಟುಮಾಡುತ್ತವೆ. ಇಂಫಾಲದಿಂದ ಹೊರಬೀಳುತ್ತಲೇ ಹೆದ್ದಾರಿ ಎನ್ನುವ ರಸ್ತೆಯ ಮೂಲಕ, ಸಂಖ್ಯೆ 39 ರಲ್ಲಿ " ಥಂಗಾಲ್ ಬಜಾóರ್ " ಎನ್ನುವ ಎಂದಿನ ಹೊರಸಂಚಾರಿ ಜಾಗದಲ್ಲಿ ಒಮ್ಮೆ ಬೈಕು ನಿಲ್ಲಿಸಿ ಮುಂದುವರೆದಿದ್ದೆ. ಇಲ್ಲಿಂದಲೇ ಇಂಫಾಲದಿಂದ "ಮೊರ್ರೆ"ವರೆಗೂ ವಾಹನಗಳು ಚಲಿಸುತ್ತವೆ. ಅಸಲಿಗೆ "ಮೊರ್ರೆ" (ಇದು ಭಾರತ - ಬರ್ಮಾ ಸರಹದ್ದಿನ ನಗರವಾಗಿದ್ದು ಇಲ್ಲಿಂದಲೇ ಬರ್ಮಾ ಪ್ರವೇಶಿಸಬಹುದಾಗಿದೆ)ವರೆಗೆ ಇಲ್ಲಿನ ವಿಂಗರ್‍ದಲ್ಲಿ ಹೋಗಬೇಕಾದರೆ ಬೆಳಗ್ಗೆ ಆರು ಗಂಟೆಗೆ ಹೊರಡಬೇಕು. ಇಲ್ಲವಾದರೆ ದಾರಿಯ ಮೇಲೆ ಕಾಕ್ಸಿಂಗ್ ಅಥವಾ ಲಿಲ್ಲೊಂಗ್‍ವರೆಗೆ ಹೊರಡುವ ವಾಹನದಲ್ಲಿ ಕೂತು ಅಲ್ಲಿಳಿದು ಅಲ್ಲಿಂದ ಬೇರೆ ಟೆಂ ಪೊ ಹಿಡಿಯಬೇಕಾಗುತ್ತದೆ. ಇದರ ಮಧ್ಯೆ ಅತಿ ದೊಡ್ಡ ತಮಾ ಷೆಯೆಂದರೆ ಇಂಫಾಲದಿಂದ ಪಯಣ ಆರಂಭಿಸಿದ ಅರ್ಧ ಗಂಟೆಯೊಳಗಾಗಿ ನಾಲ್ಕು ಜಿಲ್ಲೆಗಳನ್ನು ದಾಟಿ ಬಿಟ್ಟಿರುತ್ತೇವೆ. ಇಂಫಾಲ ಈಸ್ಟ್ ಮತ್ತು ವೆಸ್ಟ್ ಅಂತೂ ಎಲ್ಲಿ ತಿರುಗಿದರೂ ಕಾಲಿಗೆ ತೊಡರುತ್ತಿರುತ್ತವಲ್ಲ.. ಅದರ ಮಗ್ಗುಲಿಗೆ ಪುಟ್ಟದಾದ ಇನ್ನೊಂದು ಜಿಲ್ಲೆ ಪ್ರಮೀಳೆಯರ ನಾಡಿನಲ್ಲಿ 72 "ಥೌಬಾಲ್" ಇದೆ ಅದನ್ನು ಕ್ರಮಿಸಿ ಚಾಂಡೆಲ್‍ನಲ್ಲಿ ಪಯಣಿಸುತ್ತಲೇ ಗೊತ್ತಾಗೋ ಮೊದಲೇ ಮೂರು ಜಿಲ್ಲೆಗಳ ಸರಹದ್ದು ದಾಟಿರುತ್ತದೆ. ಈ ಸಾರಿಗೆಯಲ್ಲಿ ಚಲಿಸಿದರೆ ಒಂದು ದಿನಕ್ಕೆ ಒಮ್ಮುಖ ಪ್ರಯಾಣ ಮಾತ್ರ ಸಾಧ್ಯವಾದೀತು. ಕಾರಣ "ಥಂಗಾಲ್ ಬಜಾರ್"ನಿಂದ ಹೊರಟರೆ ಶಿಂಗ್ಝಾ ಮಯಿ, ಭೋಂಗಾ ಮಾಯಿ, ಲಿಲ್ಲೊಂಗ್ (ಇಲ್ಲಿ ಪಂಗಾಲ್ಸ್‌ಗಳದ್ದೆ ಹಿಡಿತ), ಚಾಜಿಂಗ್, ವೈಥುಚಿರು, ಥೌಬಾಲ್, ಮೈರಾ ಪೈಭಿ, ಖಗಾಬಾಕ್, ಆವಾಂಗ್ ಖುಲ್ಲೇನ್, ಟುಂವಾಂಗ್ ಲಖಾಯಿ, ಟಾಂಗ್ ಬಾಲ್, ವಾಂಗ್ ಛಿಂಗ್, ಲಾಲ್ಚಿಂಗ್, ಚೇರಾಪುರ್, ಕಾಂಗ್ ಸೋಮಾರಮ್, ಪಾಪೆಟ್, ಸಪಾಂ, ಲೊಯ್ಸಿ ಪೇಟ್, ಲಿಂಗ್ಝಿಂಗ್ (ಇಲ್ಲಿ ಅಸ್ಸಾಂ ರೈಫಲ್ಸ್‌ ಪಡೆ ಬಹು ದೊಡ್ಡ ಕ್ಷೇತ್ರವೇ ಇದೆ – ಇಲ್ಲಿ ಬಿಟ್ಟರೆ ಮುಂದೆ "ಮೊರೆ"್ರವರೆಗೂ ಯಾವ ನೆರವು ಸಿಗುವುದಿಲ್ಲ. ಸಂಪೂರ್ಣ ಅರಣ್ಯದ ಘಾಟ್ ದಾರಿ ಇದು), ಪಲ್ಲೇಲ್, ಮಮಾಂಗ್ ಲಖಾಯಿ, ಢಿಮಾಲ್ ಖಾನೋವ್, ಥಂಗುಪಾವ್ಲ್, ಖುಡೆನ್‍ಂಗ್ ಥಾಭಿ.. ಹೀಗೆ ಒಂದ ಎರಡಾ.. ದಾರಿಯುದ್ದಕ್ಕೂ ಊರುಗಳು. ಮಣಿಪುರದ ಆಡಳಿತದ ಲೆಕ್ಕದಲ್ಲಿ ಇವೆಲ್ಲ ಹೆಸರಿಸಬಹುದಾದ ನಗರ ಅಥವಾ ಪಟ್ಟಣಗಳು. ಆದರೆ ಅದಕ್ಕೆ ಇರುವ ಯಾವ ಮಾನದಂಡ ಏನು ಹೇಗೆ ಎತ್ತ ನನಗರ್ಥವಾಗಿಲ್ಲ ಇಲ್ಲಿಯವರೆಗೂ. ಅಷ್ಟಕ್ಕೂ ಇದ್ದುದರಲ್ಲಿ "ಮೊರೆ"್ರ ಮಣಿಪುರದಲ್ಲಿ ಕೊಂಚ ಜನವಸತಿ ಮತ್ತು ನಿಭಿಡತೆಯ ಜೊತೆಗೆ ಕಾಸ್ಮೊಪಾಲಿಟಿನ್ ಸಂಸ್ಕೃತಿಯ ನಗರ ಎಂದರೂ ಪರವಾಗಿಲ್ಲ. ಭಾರತದ ಭಾಗವೇ ಅಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಬದಲಾಗಿರುವ ಇತರ ನಗರಗಳ ಮಧ್ಯೆ ಇಲ್ಲಿ ಅಪ್ಪಟ ತಮಿಳರು ಕಾಣಸಿಗುತ್ತಾರೆ. ಈ ಮೊರ್ರೆ ನಗರದಿಂದ ಒಂದು ಹೆದ್ದಾರಿ ನೇರವಾಗಿ ಇನ್ನೊಂದು ದಿಕ್ಕಿನ ಮಾವೋ ನಗರಕ್ಕೂ ಸಂಪರ್ಕ ಕಲ್ಪಿಸುತ್ತದೆ. ಈ ನಗರ ಸೇನಾಪತಿ ಜಿಲ್ಲೆಯಲ್ಲಿದ್ದು ಆಮೇಲೆ ಇದಕ್ಕೆ ಬರುತ್ತೇನೆ. ಈ ಉದ್ದನೆಯ ದಾರಿಯುದ್ದಕ್ಕೂ ಎಲ್ಲೆಲ್ಲೊ ಸಿಕ್ಕುವ ಚಾಂಡೇಲ್ ಮೂಲ ನಿವಾಸಿಗಳಾದ ಖಾಸಿಗಳು ಮತ್ತು ನಾಗಾಗಳು ಅಪ್ಪಟ ಬುಡಕಟ್ಟು ವಾಸಿಗಳು. ಈಗಲೂ ಇದ್ದುದರಲ್ಲಿ ಈ ಜಿಲ್ಲೆ ಅನಾನಸ್ಸು ಮತ್ತು ಪಪ್ಪಾಯಿ ಕೃಷಿಯನ್ನು ಮಾಡಿಕೊಂಡು ಸಾಕಷ್ಟು ಹೊರ ಜಗತ್ತಿನ ಸಂಪರ್ಕಕ್ಕೆ ಈಡಾಗುತ್ತಿದೆ. 73 ಪ್ರಮೀಳೆಯರ ನಾಡಿನಲ್ಲಿ ಪರ್ವತ ಇಳಿಜಾರಿನಲ್ಲಿ ಕಾಡು ಸವರಿ ಮಾಡಿರುವ ಸಾಲು ಸಾಲು ಪಟ್ಟಿಯಂತಹ ಜಾಗದಲ್ಲಿ ಅನಾನಸ್ಸು, ಪಪ್ಪಾಯಿ ಮತ್ತು ಬಾಳೆ ತೋಟಗಳ ನಿರ್ಮಾಣದ ವಸಾಹತುಗಳು ಸರ್ವೇ ಸಾಮಾನ್ಯ. ಇಂಫಾಲದಿಂದ ಎಲ್ಲಿಂದ ಎಲ್ಲಿಗೇ ಹೋದರೂ ಇಲ್ಲಿ ಪರ್ವತಗಳ ಸೆರಗಿನಲ್ಲೇ ರಸ್ತೆಗಳನ್ನು ನಿರ್ಮಿಸಲಾಗಿದ್ದು ಒಂದು ಪರ್ವತ ಶ್ರೇಣಿ ದಾಟುತ್ತಿದ್ದಂತೆ ಆ ನೆತ್ತಿಯ ಮೇಲೊಂದು ಊರು. ಅದರಾಚೆಗೆ ಇಳಿದರೆ ಅಲ್ಲೊಂದು ಸಮುದಾಯ ಮತ್ತೆ ಇನ್ನೊಂದು ಸಾಲು ಸಾಲು ಬೆಟ್ಟಗಳ ನಡುಮಧ್ಯೆ ಗೆರೆಯಂತಹ ರಸ್ತೆಯ ಮೇಲೆ ಚಲಿಸುತ್ತಲೇ ಇದ್ದರೆ ಧುತ್ತನೆ ಎದುರಾಗುವ ಅಸ್ಸಾಂ ರೈಫಲ್ಸ್‌ ಬ್ಯಾರಕ್ಕು ನಮ್ಮನ್ನು ತಡೆದು ನಿಲ್ಲಿಸುತ್ತವೆ. ಪ್ರತಿ ಬಾರಿಯೂ ಸಂಪೂರ್ಣ ಚೆಕ್ಕಿಂಗ್ ಎನ್ನುವ ಸಮಯ ಹಿಂಡುವ ಪ್ರಾಸ್ಸೆಸ್ಸು ನಮ್ಮ ಸಹನೆ ಪರೀಕ್ಷಿಸುತ್ತದೆ. ಆದರೆ ಇಲ್ಲಿ ಅನಿವಾರ್ಯವಾಗಿರುವ ಈ ಚೆಕ್ಕಿಂಗ್‍ಗೆ ಕಾರಣ, ಪಕ್ಕದ ಬರ್ಮಾ ಹಾಗು ಇತರ ಸರಹದ್ದುಗಳಿಂದಾಗಿ ಮತ್ತು ಸ್ಥಳೀಯರು ಮುಗಿಬಿದ್ದು ಬಳಸುವ ಮಾದಕ ವಸ್ತುಗಳ ಸಾಗಾಟ ತಡೆಯಲು ಇಲ್ಲಿ ಅನಿವಾರ್ಯವಾಗಿದೆ. ಸ್ಥಳೀಯ ಜನರು ಈ ಸಮಯವನ್ನೂ ಸೇರಿಸಿಕೊಂಡೆ ಇಲ್ಲಿಂದ ಪಯಣ ಆರಂಭಿಸುವುದರಿಂದ ಅಭ್ಯಾಸಕ್ಕೆ ಒಗ್ಗಿ ಹೋಗಿದ್ದಾರೆ. ಪ್ರಮೀಳೆಯರ ನಾಡಿನಲ್ಲಿ 74 ಆದರೆ ಬರ್ಮಾ ಗಡಿಯಿಂದ ಒಳಬರುವ ಮತ್ತು ಗಡಿಯಲ್ಲಿ ತಪಾಸಣೆಗೊಳಪಡುವ ಮಾರ್‌ಗವಿದೆಯಲ್ಲ ಅದನ್ನು ಯಾಮಾರಿಸುವುದು ಆಗದ ಮಾತು. ಹಾಗಾಗಿ ನಿರ್ದಿಷ್ಟ ಪರ್ವತದ ನೆತ್ತಿಯಲ್ಲಿ ಹಾಯ್ದು ಹೋಗುವ ಜಾಗದಲ್ಲಿ ಅಸ್ಸಾಂ ರೈಫಲ್ಸ್‌ ಪಡೆ ತನ್ನ ಪೋಸ್ಟ್‍ವೊಂದನ್ನು ತೆರೆದಿದೆ. ಇಲ್ಲಿ ಅಕ್ಷರಶ: ಮನುಷ್ಯರ ಬಟ್ಟೆ ಬಿಚ್ಚಿ ಬೆತ್ತಲೆ ನಿಲ್ಲಿಸುವುದೊಂದು ಬಾಕಿ. ಹಾಗೆ ನಡೆಯುತ್ತದೆ ತಪಾಸಣೆ. ನಾನು ನೋಡುತ್ತಿದ್ದಾಗಲೇ ಸಿಮೆಂಟು, ಖಾರ ಪುಡಿ ಇತ್ಯಾದಿ ಸೇರಿದಂತೆ ಕಾಯಿಪಲ್ಯೆ ಚೀಲಗಳು ರಸ್ತೆಯ ಮೇಲೆ ಬರಿದಾಗುತ್ತಿದ್ದವು. ಕೆಲವೊಮ್ಮೆ ಅಕ್ಕಿ ಮೂಟೆಗಳು ಕೂಡಾ ಹೊರಳಾಡುತ್ತಿದ್ದವು. ಯಾವ ಚೀಲಕ್ಕೆ ಸರಳು ನುಗ್ಗುತ್ತದೆ ಯಾವ ಚೀಲದ ಮೇಲೆ ನಾಯಿಗಳ ದಾಳಿಯಾಗುತ್ತದೆ ಹೇಳಲಾಗುವುದಿಲ್ಲ. ಕಾರಣ ಅತ್ತ ಕಡೆಯಲ್ಲಿರುವ "ತಾಮು" ಎಂಬ ನಗರ ಕೇವಲ ಐದು ಕಿ.ಮೀ. ದೂರದಲ್ಲಿದೆ. ಅಲ್ಲಿ ಭಾರತೀಯ ಮಾರುಕಟ್ಟೆಗಿಂತ ಹಲವು ಪಟ್ಟು ಕಡಿಮೆ ದರದಲ್ಲಿ ಕೆಲವೊಮ್ಮೆ ಅಕ್ಷರಶ: ತೀರ ಕೆಳದರದಲ್ಲಿ ಹೋಲ್‍ಸೇಲ್ ಮಾಲು ಬಿಕರಿಯಾಗುತ್ತದೆ. ಯಾವ ವ್ಯಾಪಾರಿ ತಾರದೇ ಬಿಟ್ಟಾನು..? ಪೂರ್ತಿ ಮಾರುತಿ ವ್ಯಾನ್ ತುಂಬಾ ಸಾಮಾನು ತುಂಬಿಕೊಂಡು ಲಕ್ಷಾಂತರ ರೂಪಾಯಿಗೆ ಸಾಮಾನು ಖರೀದಿಸಿ ತರುತ್ತಾರೆ. ಚಾಪೆ, ಪ್ಲಾಸ್ಟಿಕ್ ಕುರ್ಚಿಯಿಂದ ಕಾಂಡೊಮ್‍ವರೆಗೂ ಇಲ್ಲಿ ಖರೀದಿಸಿ ತರುವವರಿದ್ದಾರೆ. ಈ ಸಾಮಾನುಗಳನ್ನು ಮಾರುತಿ ಮತ್ತು ವಿಂಗರ್‍ವ್ಯಾನಿನಲ್ಲಿ ತರುವ ಸರಕುದಾರರು ಅದನ್ನು ದಾರಿಯ ಮೇಲೆ ಮೊದಲೇ ನಿಗದಿಪಡಿಸಿದ ಚಿಕ್ಕ ಚಿಕ್ಕ ಸಗಟು ಮಾರುಕಟ್ಟೆಗೆ ಪೂರೈಸುವ ಕಾರಣ, ಸರಾಸರಿ ದಿನವೊಂದರ ವಹಿವಾಟು ಇಲ್ಲಿ ನಲ್ವತ್ತು ಲಕ್ಷಕ್ಕೂ ಹೆಚ್ಚಿದೆ. ದಾರಿಯ ಮೇಲೆ ಸಿಕ್ಕುವ ಪರ್ವತ ಪ್ರದೇಶದ ಘಾಟ್ ರಸ್ತೆಗಳಲ್ಲಿ ಎಲ್ಲಿ ಬೇಕಾದರೂ ನಿಂತು ನಮ್ಮ ಕುದುರೆ ಮುಖದ ಹೊರಳುಗಳಂತಹ ರಸ್ತೆಯಲ್ಲಿ ನಿಸರ್‌ಗವನ್ನು ಇಲ್ಲಿ ಸವಿಯಬಹುದು. ಆದರೆ ಮಳೆಗಾಲ ಮುಗಿದ ತಕ್ಷಣ ಮಾತ್ರ ಚೆನ್ನಾಗಿರುತ್ತದೆ ಎನಿಸಿತು ನನಗೆ. 75 ಪ್ರಮೀಳೆಯರ ನಾಡಿನಲ್ಲಿ ಕಾರಣ ಅಂಥಾ ಹಸಿರನ್ನೇನೂ ಹೊಂದಿರದ ಇಲ್ಲಿನ ಪ್ರದೇಶದಲ್ಲಿ ಕುರುಚಲು ಕಾಡಿನ ಆವರಣ ಮಳೆಯ ಹೊಡೆತ ಮುಗಿಯುತ್ತಿದ್ದಂತೆ ಬೇಗ ಹಸಿರನ್ನು ಕಳಚಿ ನಿಲ್ಲುತ್ತದೆ. ಹಾಗಾಗಿ ನೈಜವಾಗಿ ಹಸಿರಿನ ಆಮೋದಕ್ಕೆ ಮಳೆಗಾಲದ ನಂತರ ಪ್ರವಾಸ ಸರಿಯಾದ ಸಮಯ ಇಲ್ಲಿ. ಹೀಗೆ ಮೊರ್ರೆ ಸೇರಿದಂತೆ ಬರ್ಮಾದ ಸರಹದ್ದು ಮುಟ್ಟಿ ಹಿಂದಿರುಗುವಾಗ ಹಲವು ಬುಡಕಟ್ಟು ಮತ್ತು ಸಮುದಾಯದ ವಿಭಿನ್ನತೆ ನಮಗೆದುರಾಗುತ್ತದೆ. ಸಂಜೆಯ ವೇಳೆಯಾಗುವಾಗಲಂತೂ ಬದಲಾಗಿ ಬಿಡುವ ದಿರಿಸು ಮತ್ತು ಆಯಾ ಊರ ವ್ಯಾಪ್ತಿಗೆ ಒಳಪಡುವ ಸ್ಥಳೀಯ ಕಾನೂನುಗಳ ಕಾರಣದಿಂದಾಗಿ ಊರುಗಳ ಚಹರೆಯೇ ಬದಲಾಗಿ ಬಿಡುತ್ತದೆ. ಹಾಗಾಗಿ ಥೌಬಾಲ್ ಮತ್ತು ಚಾಂಡೇಲ್ ಜಿಲ್ಲಾ ವ್ಯಾಪ್ತಿಯಲ್ಲಿ ಸಾಲು ಸಾಲು ಊರುಗಳಿದ್ದರೂ ಹೀಗೆ ಪ್ರವಾಸಿಗರು ಸಂದರ್ಶಿಲೆಬೇಕೆನ್ನುವ "ಮೊರ್ರೆ" ಎನ್ನುವ ಊರಿನ ಪ್ರಸಿದ್ಧಿ ಬಿಟ್ಟರೆ ಬೇರೆ ಸ್ಥಳಗಳ ಬಗ್ಗೆ ಯಾವ ಆಸಕ್ತಿಯೂ ಕಾಣಸಿಗುವುದಿಲ್ಲ. ಎಲ್ಲೆಂದರಲ್ಲಿ ನಿಂತು ಫೋಟೊ ಕ್ಲಿಕ್ಕಿಸಲು ಬೆಟ್ಟ ಗುಡ್ಡಗಳ ಬೆಂಬಲ ಹೊರತು ಪಡಿಸಿದರೆ ಬೋಳು ಬೆಟ್ಟಗಳನ್ನಾವರಿಸಿರೋ ಅನಾನಸ್ಸಿನ ಮತ್ತು ಬಾಳೆಯ ತೋಟದ ಚೆಂದ ಒಂದಷ್ಟು ನಮ್ಮನ್ನು ಆವರಿಸುತ್ತದೆ. ಆದರೆ ಚಾಂಡೆಲ್‍ನಲ್ಲಿ ಕೇವಲ ಹೆದ್ದಾರಿ ಹಾಯ್ದು ಹೋಗಿದ್ದು ಬಿಟ್ಟರೆ ಹೆಚ್ಚಿನಂಶ ಇಂಫಾಲದಿಂದ ಮೊದಲಿಗೆ ಲಭ್ಯವಾಗೋ "ಥೌಬಾಲ್" ಜಿಲ್ಲೆಯೇ ವಾಸಿ ಎನ್ನಿಸುತ್ತದೆ. ಚಿಕ್ಕದಾದರೂ ಸಾಕಷ್ಟು ವೈವಿಧ್ಯಮಯಗಳಿಗೆ ಈಡಾದ ನಾಡು ಕೂಡಾ. ಕಾರಣ ಇತಿಹಾಸದಿಂದ ಹಿಡಿದು ಆಧುನಿಕ ಜಗತ್ತಿನ ಆಗು ಹೋಗುಗಳಿಗೆ ತೆರೆದುಕೊಳ್ಳುವ, ಮೊರ್ರೆಯ ರಸ್ತೆಯನ್ನು ನಿರಂತರವಾಗಿ ರಾಸ್ತಾ ರೋಕೊಗಳಿಗೆ ಈಡು ಮಾಡುವ ಮೂಲಕ ಪ್ರಮುಖ ಕುತ್ತಿಗೆಯ ಜಾಗದಲ್ಲಿ ನಿಲ್ಲುತ್ತದೆ. ನಾನು "ಮೊರ್ರೆ" ಸಂದರ್ಶಿಸಲು ಹೊರಟುನಿಂತ ದಿನ ಕೂಡಾ ಇದ್ದಕ್ಕಿದ್ದಂತೆ ಈ ರಾ.ಹೆ.ಯಲ್ಲಿ ಮರದ ಬೊಡ್ಡೆಗಳನ್ನಿಟ್ಟು ಅರ್ಧ ರಸ್ತೆ ಪೂರ್ತಿ ಆವರಿಸಿ ಕೂತ ಸಮುದಾಯದ ಜನರಿಗೆ ಬೆಂಬಲವಾಗಿ ಅಷ್ಟು ದೂರದಲ್ಲಿ ಪ್ರಮೀಳೆಯರ ನಾಡಿನಲ್ಲಿ 76 ಕಾಯುತ್ತಿದ್ದ ಗಂಡಸರ ಗುಂಪಿನಿಂದಾಗಿ ಪಕ್ಕದ ಹಳ್ಳಿಯನ್ನು ಹಾಯ್ದು ಬರುವಂತಾಯಿತು. ಅದಕ್ಕಾಗಿ "ಖೊಂಗ್ಜೊಂ" ಹಳ್ಳಿಯ ಹೆಬ್ಬಾಗಿಲಲ್ಲೇ ಹಾಯ್ದು ಹೆದ್ದಾರಿಯ ಮೇಲೆ ಬಲಕ್ಕೆ ತಿರುಗಿ ಹಲವು ಹಳ್ಳಿಗಳ ಗದ್ದೆಯಂತಹ ರಸ್ತೆಯನ್ನು ಹಾರುತ್ತಾ ಸಾಗಿ ಕೊನೆಗೂ ಪ್ರಮುಖ ನಗರವಾದ (?) "ಕಾಕ್ಸಿಂಗ್"ನ ಬಾಗಿಲು ತಲುಪಿದ್ದೆ. ಮಧ್ಯದ ಹನ್ನೆರಡು ಕಿ.ಮಿ. ರಸ್ತೆ ಸಂಪೂರ್ಣ ಹೋರಾಟಗಾರರ ಕೈಯ್ಯಲ್ಲಿ ಸಿಕ್ಕು ಮುಖ್ಯ ರಸ್ತೆಯ ಸಂಪರ್ಕ ಕಡಿದು ಹಾಕಲ್ಪಟ್ಟಿತ್ತು. ಅದಿನ್ಯಾವತ್ತಿಗೆ ಸರಿ ಹೋಗುತ್ತದೋ ಗೊತ್ತಿಲ್ಲ. ಥೌಬಾಲ್ ಜಿಲ್ಲೆ : ಥೌಬಾಲ್ ಮಣಿಪುರ ಇತಿಹಾಸ ಮತ್ತು ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲೂ ವಿಭಿನ್ನವಾಗಿಯೂ ವಿಶೇಷವಾಗಿಯೂ ಆಗೀಗ ಉಲ್ಲೇಖಕ್ಕೊಳಗಾಗುವ ಜಿಲ್ಲೆ. ಕಾರಣ ಪುರಾತನ ಕಾಲದಿಂದಲೂ ಹಲವು ರಕ್ತಪಾತ ಮತ್ತು ಭಯಾನಕ ಯುದ್ಧಗಳಿಗೆ ಸಾಕ್ಷಿಯಾಗಿರುವ ಅತ್ಯಂತ ಭೀಕರ ಇತಿಹಾಸದ ಪಳೆಯುಳಿಕೆಗಳನ್ನು ಉಳಿಸಿಕೊಂಡಿರುವ ಜಿಲ್ಲೆ ಈ ಥೌಬಾಲ್. ಒಂದೆಡೆಗೆ ಚುರ್ಚಾಂಡ್ಪುರ್, ಮಗದೊಂದೆಡೆಗೆ ಇಂಫಾಲವನ್ನು ಬೆನ್ನಿಗೆ ಕಟ್ಟಿಕೊಂಡು ಹೆಚ್ಚು ಕಡಿಮೆ ಮಣಿಪುರದ ಹೃದಯಭಾಗದಲ್ಲಿ ಇಂಫಾಲದೊಂದಿಗೆ ಜಾಗ ಹಂಚಿಕೊಂಡಿರುವ ಥೌಬಾಲ್ ಇನ್ನೊಂದು ತುದಿಗೆ ಬಿಷ್ಣುಪುರ್ ಜಿಲ್ಲೆಗೆ ಆಸರೆಯಾಗಿ ನಿಂತಿದೆ. ಕೇವಲ 514 ಚ.ಕಿ.ಮೀ. ವ್ಯಾಪ್ತಿಯ ಜಿಲ್ಲೆ ಸಮುದ್ರ ಮಟ್ಟದಿಂದ ಹೆಚ್ಚು ಎಂದರೆ 800 ಮಿ. ಎತ್ತರದಲ್ಲಿದೆ. ಹೆಚ್ಚಿನ ಭಾಗ ಕಣಿವೆಯಲ್ಲೇ ಕಳೆದುಹೋಗುವ ಥೌಬಾಲ್ ಹೊರಜಗತ್ತಿಗೆ ಉಳಿಸಿಕೊಂಡಿರುವ ಜಾಗ ತುಂಬಾ ಕಮ್ಮಿ. ಇದ್ದುದರಲ್ಲೇ ಜಿಲ್ಲೆಯ ಜನವಸತಿ ಅಗತ್ಯತೆಯ ಪೂರೈಕೆಯನ್ನು ಹಂಚಿಕೊಳ್ಳುವ ಅನಿವಾರ್ಯತೆ. ಹಾಗಾಗಿ ಕನಿಷ್ಟ ಸೈಜಿನ ಉತ್ತಮವಾದ ಒಂದು ಕ್ರೀಡಾಂಗಣ ನಿರ್ಮಿಸಲೂ ಕೂಡಾ ಇಲ್ಲಿ ಪರದಾಡಬೇಕಾಗುತ್ತದೆ. ಹೆಚ್ಚಿನ ಕಣಿವೆಯ ಸಂದಿನಲ್ಲೆಲ್ಲ ನೀರಿನ ಹರಿವೆ ಇರುವುದರಿಂದ ಪ್ರಪಾತದ ಕಡೆಯಲ್ಲೆಲ್ಲೂ ನೆಲಕ್ಕೆ ಆಸ್ಪದವೇ ಇಲ್ಲ. 77 ಪ್ರಮೀಳೆಯರ ನಾಡಿನಲ್ಲಿ ಇದರಿಂದಾಗಿ ಇಲ್ಲಿನ ಇತಿಹಾಸದೊಂದಿಗೆ ನದಿಗಳೂ ಕೂಡಾ ಥಳಕು ಹಾಕಿಕೊಂಡಿವೆ. ಪುರಾಣ ಪ್ರಸಿದ್ಧ ಮತ್ತು ಮಣಿಪುರದ ಇತಿಹಾಸದಲ್ಲಿ ಈ ನದಿಗಳು ಅದರ ಉಪಕಥೆಗಳು ಅವ್ಯಾಹತವಾಗಿ ಬಂದಿವೆ. ಇಲ್ಲಿನ ಲೆಜೆಂಡ್ ಕಥೆಯಾಗಿರುವ "ಖಂಬಾ-ಥಯೋಭಿ"ಯಲ್ಲೂ ಈ ನದಿಗಳ ಪ್ರಸ್ತಾಪವಿದೆಯೆಂದರೆ ಥೌಬಾಲ್ ಜಿಲ್ಲೆಯನ್ನು ಈ ನದಿಗಳು ಅದೆಷ್ಟು ಆಕ್ರಮಿಸಿವೆ ಎಂದು ಅರಿವಾದೀತು. "ಯೆಯಿರಿ ಫೌಕ್" ಮತ್ತು "ಇಂಫಾಲ"ವನ್ನು ಬಳಸಿ ಹರಿಯುವ ನದಿ ಅಸಲಿಗೆ ಬರುವುದೇ "ಉಖ್ರುಲ್"ನಿಂದ (ಇದಿನ್ನೊಂದು ಜಿಲ್ಲೆ. ಮೇಲ್ಮುಖವಾಗಿ ಇಂಫಾಲದಿಂದ ಚಲಿಸುವಾಗ ಸಿಕ್ಕುತ್ತದೆ. ಆಮೇಲೆ ಇದಕ್ಕೆ ಬರುತ್ತೇನೆ). ಇದು "ಇರಾಂಗ್"ನಿಂದ ಪ್ರವೇಶಿಸಿ ಇಂಫಾಲ ದಾಟುವ ಮೊದಲೆ "ಮಯಾಂಗ್"ನ್ನು ಆವರಿಕೊಳ್ಳುತ್ತಾ ಥೌಬಾಲ್‍ಗೆ ನೀರುಣಿಸುತ್ತದೆ. ಇದರ ಅಪರಿಮಿತ ಹರಿವಿನಿಂದಾಗೇ ಕಣಿವೆಗಳು ನಿರಂತರ ಹರಿವಿಗೆ ಈಡಾಗಿವೆ ಎಂದರೂ ತಪ್ಪಿಲ್ಲ. ಬೇಸಿಗೆಯಲ್ಲಿ ನದಿಯ ಪಾತ್ರಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತದಾದರೂ ನಿರಂತರತೆ ಇದ್ದೇ ಇರುತ್ತದೆ. ಆದರೆ ಇದ್ದ ನೀರೆಲ್ಲಾ ಕೊಳಚೆಯ ಪಾಲಾಗುವುದರಿಂದ ನದಿಯ ನೀರು ಎನ್ನುವುದಕ್ಕಿಂತಲೂ ರಾಜ ಕಾಲುವೆ ಎನ್ನುವುದು ಸೂಕ್ತವಾಗುತ್ತದೆ. ಆದರೆ ನದಿಯ ಹೊರವಲಯದಲ್ಲಿ ಅಲ್ಲಲ್ಲಿ ನದಿಯನ್ನು ಪವಿತ್ರವಾಗಿರಿಸಿರುವ ಕಾರಣ ಸ್ಫಟಿಕದಷ್ಟು ಶುದ್ಧ ನೀರು ಬೇಸಿಗೆಯಲ್ಲಿ ಇಲ್ಲಿನ ನದಿ ಸರೋವರಗಳಲ್ಲಿ ಕಾಯ್ದ ಮತ್ತುಆಯ್ದ ಜಾಗಗಳಲ್ಲಿ ಲಭ್ಯ ಹಾಗೆಯೇ ಆಕರ್ಷಣೆಯ ಕೇಂದ್ರಗಳೂ ಕೂಡ. ಇಲ್ಲಿನ ನದಿ ತೀರಗಳಲ್ಲಿ ಅಲ್ಲಲ್ಲಿ ಟೆಂಟುಗಳನ್ನು ಹಾಕಿಕೊಂಡ ಚಾರಣಿಗರು ಪ್ರವಾಸಿಗರು ಸಿಗುತ್ತಲೇ ಇರುತ್ತಾರೆ. ಝುಕೋ ವ್ಯಾಲಿ ಬಿಟ್ಟರೆ ಇದೊಂದೇ ಅಂತಹ ಜಾಗ ಕೊಂಚ ಪ್ರವಾಸಿಗರಿಗೆ ಮುದ ನೀಡುತ್ತದೆ. ಆದರೆ ಮಳೆಗಾಲದಲ್ಲಿ ತುಂಬಿ ಹರಿಯುವ ಇಲ್ಲಿನ ನದಿಗಳು ಪ್ರತಿ ಬಾರಿಯೂ ಇರುವ ಚೂರೇ ಚೂರು ಜಮೀನನ್ನು ಕೂಡ ಕಬಳಿಸಿ ಪ್ರಮೀಳೆಯರ ನಾಡಿನಲ್ಲಿ 78 ಮುನ್ನಡೆಯುತ್ತವೆ. ಹಾಗಾಗಿ ಹೆಚ್ಚಿನ ಪಾಲು ಇಲ್ಲಿ ಕೃಷಿಗಿಂತ ಕೃಷಿಯೇತರ ಚಟುವಟಿಕೆಗಳೇ ನಿರಂತರವಾಗಿ ನಡೆಯುತ್ತವೆ. "ವಾಂಗ್‍ಜಿಂಗ್, ಆರೋಂಗ್ ಮತ್ತು ಶೇಕ್ಮಾಯಿ" ನದಿಗಳು ಇತರ ಪ್ರಮುಖ ಜಿಲ್ಲೆಯ ನದಿಗಳಾಗಿದ್ದು ವ್ಯಾಪಾರ ವಾಣಿಜ್ಯಾತ್ಮಕ ಚಟುವಟಿಕೆಗಳಿಗೆ ನದಿ ಸಾರಿಗೆಯ ಪ್ರಮುಖ ಜಲದಾರಿಗಳಾಗಿವೆ. ರಸ್ತೆ ಸಾರಿಗೆಯ ಮೂಲಕವೇ ಹೆಚ್ಚಿನ ವ್ಯವಹಾರಗಳಿದ್ದರೂ ಕಟ್ಟಡ ನಿರ್ಮಾಣದ ಪ್ರಮುಖ ಸಾಮಗ್ರಿಗಳ ಪೂರೈಕೆಯೆಲ್ಲಾ ಇನ್ನೊಂದು ತೀರದಾಚೆಗಿನ ಜನಜೀವನಕ್ಕೆ ಇವು ಹೆಚ್ಚಿನ ಸಹಕಾರಿಯಾಗಿವೆ. ದಕ್ಷಿಣ ಮುಖಜ ಭೂಮಿಯಲ್ಲಿ ಅಲ್ಪ ಸ್ವಲ್ಪ ಬೆಳೆಗಳಿಗೆ ಅನುಕೂಲದಾಯಕ ವಾತಾವರಣ ಇದ್ದರೆ, ಉತ್ತರದ ಕಡೆಯಲ್ಲಿ "ವಿಥೌ ಪರ್ವತ" ಪ್ರದೇಶದ ಮಧ್ಯೆ ಸ್ಯಾಂಡ್‍ವಿಚ್ ಆಗಿರುವ ಸ್ಥಳದಲ್ಲಿ ನೀರಿನ ಕೊರತೆಯನ್ನು ಇದೇ ನದಿ ನೀಗಿಸುತ್ತಿದೆ. ಇಲ್ಲೆಲ್ಲ ಮೀನುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಕೊರಕಲು ಮತ್ತು ಸಂದುಗಳಿಂದ ಕೂಡಿದ ಹರಿವಿನಲ್ಲಿ ಮೀನು ಕೃಷಿ ಯಥೇಚ್ಚ. ಸಂಡಿಗೆಯಂತೆ ಮೀನನ್ನು ಬಳಸುವುದು ಮತ್ತು ಮನೆಗೆ ಬಂದವರಿಗೆ ಖಾದ್ಯವಾಗಿ ಬಡಿಸುವುದು ಇಲ್ಲಿ ಸಾಮಾನ್ಯ ಪದ್ಧತಿ. ಅದರಲ್ಲೂ "ಘಟೊನ್ ಮತ್ತು ಗಾರೋಯಿ" ಮೀನಿನ ಜೊತೆಗೆ ಆಗೀಗ ಸಿಗುವ ಅಪರೂಪದ "ಪೆಂಗ್ಬಾ ತಾರಕ್" ಹಾಗು "ಗಾಹೌ ಮೀನು" ಸಂಡಿಗೆಯಂತೆ ಬಳಸಲು ಕಾಯ್ದಿಡುವುದು ವಿಶೇಷ ಸಂಗತಿ. ಇದರಿಂದಾಗಿ ಅತಿಥಿ ಉಪಚಾರದಲ್ಲಿ ವಿಶೇಷ ಸ್ಥಾನ ಪಡೆದಿರುವ ಮೀನು ರಾಜ್ಯದೆಲ್ಲೆಡೆ "ಥೌಬಾಲ್ ಮೀನು" ಎಂದೇ ಪ್ರಖ್ಯಾತಿ ಪಡೆದಿದೆ. ಇತರ ರಾಜ್ಯ ಅದರಲ್ಲೂ ಬಂಗಾಲಕ್ಕೆ ಹೋಗುವ ಈ ಮೀನಿನ ರುಚಿಗೆ ವಿದೇಶಿಯರು ಮಾರುಹೋಗಿದ್ದು ಈಗೀಗ ರಫ್ತಾಗುವ ಮಟ್ಟಕ್ಕೆ ಬೆಳೆಯಲಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ಮೀನಿನ ಸಂತತಿ ಹಾಗು ಸಾಕಣೆಯನ್ನು ಬೆಳೆಸಲಾಗುತ್ತಿದ್ದು ಸುಮಾರು 3.4 ಟನ್ ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ. 79 ಪ್ರಮೀಳೆಯರ ನಾಡಿನಲ್ಲಿ ಮಣಿಪುರದ ಎಲ್ಲಾ ಹೆಸರಾಂತ ಸರೋವರಗಳು, ಕೆರೆ ಇತ್ಯಾದಿ ನೀರಿನ ಪ್ರಸಿದ್ಧ ಸ್ಥಳಗಳೂ ಇದೇ ಜಿಲ್ಲೆಯಲ್ಲಿವೆ. ಲೊಕ್ತಾಕವೊಂದನ್ನು ಹೊರತುಪಡಿಸಿದರೆ ಶೇ.95 ಸರೋವರಗಳು ಇದೇ ಜಿಲ್ಲೆಯಲ್ಲಿವೆ. ಆದರೆ ಯಾವುದನ್ನೂ ಅಭಿವೃದ್ಧಿಪಡಿಸಿ ಸಾಮಾಜಿಕವಾಗಿ ಉಪಯೋಗಕ್ಕೆ ಬಳಸುವ ಆಸಕ್ತಿ ತೋರಿದ್ದು ಕಾಣಲಿಲ್ಲ. ರಕ್ತ ಸಿಕ್ತ ಇತಿಹಾಸವೂ ಕೂಡಾ ಇಲ್ಲಿನ ಜನಜೀವನದ ಮೇಲೆ ಪ್ರಭಾವ ಬೀರಿರಬಹುದೇನೋ. 1881ರ ಏಪ್ರಿಲ್‍ನಲ್ಲಿ ಇಲ್ಲಿನ "ಖಂಗ್‍ಜಾಮ್" ಅಥವಾ "ಖೊಂಗ್ಝಾಮ್" ಎನ್ನುವಲ್ಲಿ ಕೊನೆಯ ಭಾರತದ ಸ್ವತಂತ್ರ ಹೋರಾಟ ನಡೆಸಿದ ದಾಖಲೆ ಈ ಜಿಲ್ಲೆಗಿದೆ. ಮೇಜರ್ "ಪಾಯೋನಾ ಬೃಜ್ ಭಾಶಿ" ಮತ್ತವನ ಸಂಗಡಿಗರು ಬ್ರಿಟಿಷ್‌ ಸರಕಾರದ ಆಧುನಿಕ ಪಡೆಗಳೆದುರಿಗೆ ಸೋಲುತ್ತಾರಾದರೂ ಹೋರಾಟದ ಕೆಚ್ಚಿನಿಂದ ಮಣಿಪುರದ ಮಾಡೆಲ್‍ಗಳಾಗಿದ್ದಾರೆ. ಈ ತಂಡವೇ ಬ್ರಿಟಿಷ್‌ ರ ಐವರು ಅಧಿಕಾರಿಗಳ ಕೊಲೆಗೂ ಕಾರಣರಾಗುತ್ತಾರೆ. ಇಲ್ಲಿ ಒಂದು ಯುದ್ಧ ಸ್ಮಾರಕವನ್ನೇ ನಿರ್ಮಿಸಲಾಗಿದೆ. ಭಾರತ ಸ್ವತಂತ್ರಗೊಂಡ ಎಷ್ಟೋ ವರ್ಷಗಳ ನಂತರ 1983 ರಲ್ಲಿ ಥೌಬಾಲ್ ಹೊಸ ಮತ್ತು ಸಂಪೂರ್ಣ ಸ್ವತಂತ್ರ ಜಿಲ್ಲೆಯಾಗಿ ಮಾನ್ಯತೆ ಪಡೆಯುತ್ತದೆ. ಅಲ್ಲಿಯ ವರೆಗೂ ಸಬ್‍ಡಿವಿಶನ್ ಎಂದೇ ಗುರುತಿಸಿ ಕೊಳ್ಳುತ್ತಿದ್ದ ಥೌಬಾಲ್ ನಂತರದಲ್ಲಿ ಪ್ರವಾಸಿ ಪ್ರಿಯರಿಗೆ ತೆರೆದುಕೊಂಡಿದ್ದು ಮತ್ತು ಚೇತರಿಸಿಕೊಂಡಿದ್ದು ಅದ್ಭುತ. "ಕಾಕಚಿಂಗ್" ಇಲ್ಲಿನ ಜಿಲ್ಲಾ ಮುಖ್ಯ ಸ್ಥಳವಾಗಿದ್ದರೆ, ಒಂಭತ್ತು ಮುಖ್ಯ ನಗರ(?)ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಪ್ರಮೀಳೆಯರ ನಾಡಿನಲ್ಲಿ 80 1. ಲಿಲಾಂಗ್ (ಥೌಬಾಲ್) 2. ಯೆಯಿರಿ ಪೋಕ್ 3. ಶಿಕೋಂಗ್ ಶೇಕ್ಮಾಯಿ 4. ವಾಂಗ್‍ಝಿಂಗ್ 5. ಕಾಕ್ಚಿಂಗ್ 6. ಕಾಕ್ಚಿಂಗ್ ಕುನೌ 7. ಸುಗ್ಣು 8. ಸಮಾರೌ ಇದರಲ್ಲಿ ಇವನ್ನೆಲ್ಲಾ ನಗರಗಳೆಂದು ಗುರುತಿಸಲ್ಪಟ್ಟಿದ್ದರೂ ಕೇವಲ ಕಾಕ್ಚಿಂಗ್ ಮತ್ತು ಥೌಬಾಲ್ ಮಾತ್ರ ಸಿಟಿ ಮುನ್ಸಿಪಲ್‍ಗಳಾಗಿವೆ. ಈ ಜಿಲ್ಲೆಯಾದ್ಯಂತ ಅಲ್ಲಲ್ಲಿ ಪರ್ವತ ಶ್ರೇಣಿ ಆಗೀಗ ಹಣಕುತ್ತಿರುತ್ತದೆ. ಖೇಕ್ ಮಾನ್, ಮಾಂಟಕ್, ವರಾಕ್ ಮತ್ತು ಥೊಂಗಾಮ್ ಮಾಂಡೊಮ್ ಸುಮಾರು 3300 ಮೀ. ಎತ್ತರ ಮುಟ್ಟುತ್ತವೆ. ಪ್ರತಿ ಪರ್ವತ ತಪ್ಪಲು ಪ್ರದೇಶದಲ್ಲಿ ಕಾಯಿ ಪಲ್ಲೆ ಬೆಳೆಯುವ ಯೋಜನೆಗೆ ಮತ್ತು ಬೆಳೆಸುವಿಕೆಗೆ ಒತ್ತು ಕೊಡಲಾಗಿದ್ದು ಅದರಿಂದಾಗಿ ಜಿಲ್ಲೆಯ ಬೇಡಿಕೆ ಬಹುಪಾಲು ಪೂರೈಕೆಯಾಗುತ್ತಿದೆ. ಇದರಲ್ಲಿ ಪೈನಾಪಲ್, ಬಟಾಟೆ ಹಾಗು ಗೆಣಸು ಮೂಲ ಉತ್ಪನ್ನಗಳಾಗಿವೆ. ಆದರೆ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯ ಈ ಜಿಲ್ಲೆಯನ್ನೂ ಬಿಟ್ಟಿಲ್ಲ. ಆಕಸ್ಮಿಕವಾಗಿ ಸುರಿದುಬಿಡುವ ಕೆಲವೊಮ್ಮೆ ಭಾರಿ ಬಿರುಗಾಳಿಯ ತಿರುವುಗಳಿಂದಾಗಿ ಯಾವೆಲ್ಲಾ ಅನಾಹುತಕ್ಕೀಡಾಗುತ್ತದೋ ಹೇಳಲಾಗುವುದಿಲ್ಲ. ಚಳಿಗಾಲದ ಕೊನೆಯವರೆಗೂ ಮಳೆಯನ್ನು ಕಾಣುವ ಏಕೈಕ ಜಿಲ್ಲೆ ಥೌಬಾಲದಲ್ಲಿ ಫೆಬ್ರವರಿಯ ಕೊನೆಯವರೆಗೂ ತುಂತುರು ಮಳೆ ಇಲ್ಲಿ ಲಭ್ಯ. ಇಲ್ಲಿನ ಅಂತಾರಾಷ್ಟ್ರೀಯ ರಸ್ತೆ ಇದೇ ಜಿಲ್ಲೆ ಮೂಲಕ ಹಾಯ್ದು ಮ್ಯಾನ್ಮಾರ್‌ನ್ನು ಸೇರುತ್ತದೆ. ಭಾರತ ಸ್ವತಂತ್ರಕ್ಕಿಂತ ಮೊದಲು ಇಲ್ಲಿ ಭಾರತದ ಮಿಲಿಟರಿ ಹಾಗು ಕೆಲವೊಮ್ಮೆ ಬರ್ಮಿಗಳೂ ಇದನ್ನು ಯುದ್ಧದ ಅಭ್ಯಾಸಕ್ಕೆ 81 ಪ್ರಮೀಳೆಯರ ನಾಡಿನಲ್ಲಿ ಬಳಸಿಕೊಳ್ಳುವ ತಾಣವಾಗಿ ಮಾರ್ಪಟ್ಟಿತ್ತು. ಇದೊಂದು ಜಿಲ್ಲೆ ಮಾತ್ರ ಮಣಿಪುರದಲ್ಲಿ ತನ್ನ ಚ.ಕಿ. ಲೆಕ್ಕಕ್ಕಿಂತಲೂ ಹೆಚ್ಚಿನ ಕಿ.ಮೀ. ರಸ್ತೆಯನ್ನು ಹೊಂದಿರುವ ಜಿಲ್ಲೆ. ಅದಕ್ಕಾಗಿ ಪ್ರತಿ ಚ.ಕಿ.ಮೀ.ಗೂ ರಸ್ತೆಯ ಭಾಗ್ಯ ಇದಕ್ಕಿದೆ. ಕಾರಣ ಇಲ್ಲಿ ಇರುವ ಜಾಗವೆಲ್ಲವೂ ರಸ್ತೆಯೇ ಉಳಿದೆಲ್ಲಾ ಪರ್ವತದ ತಪ್ಪಲೇ .. ಒಂದು ರೀತಿಯಲ್ಲಿ ಪ್ರತಿ ಓಡಾಟವೂ ಪರ್ವತದ ಸೆರಗಿನ ಇಳಿಜಾರಿನಲ್ಲೇ ನಡೆಯುತ್ತದೆ. ಪ್ರತಿ ರಸ್ತೆಯ ಮಗ್ಗುಲಲ್ಲೆ ಅಷ್ಟು ದೂರದಲ್ಲಿ ಕೋಟೆಯಂತೆ ಪರ್ವತದ ಸಾಲು ಸಾಲು ಓಡುತ್ತಲೇ ಇರುತ್ತವೆ. ರಾಷ್ಟ್ರೀಯ ಹೆದ್ದಾರಿ 39 ನೇರವಾಗಿ ಬರ್ಮಾ ಮತ್ತು ಭಾರತವನ್ನೂ ಬೆಸೆಯುತ್ತಿದ್ದು "ಲಿಲೊಂಗ್" ಮತ್ತು "ಥೌಬಾಲ್"ನ್ನು ಕೂಡಾ ಇದು ಸಂಪರ್ಕಿಸುತ್ತದೆ. ಪ್ರತಿ ತಿರುವಿನಲ್ಲೂ ಒಂದೊಂದು ಕಲ್ವರ್ಟು ಅಥವಾ ಒಂದೊಂದು ಸೇತುವೆಯನ್ನು ಹೊಂದಿರುವ ಅತಿ ಹೆಚ್ಚು ಸೇತುವೆಗಳ ರಸ್ತೆಯನ್ನು ಹೊಂದಿರುವ ಖ್ಯಾತಿ ಈ ಜಿಲ್ಲೆಗೆ ಸಲ್ಲುತ್ತದೆ. ಭಾರತದ ಯಾವ ಭಾಗದಲ್ಲೂ ಇಷ್ಟೊಂದು ಸೇತುವೆಗಳಿಲ್ಲ. ಕೆಲವೆಡೆ ಸೇತುವೆ ಮತ್ತು ಕಲ್ವರ್ಟ್‍ಗಳ ಸರಣಿ ಮುಗಿಯುವುದೇ ಇಲ್ಲ. ಥೌಬಾಲ್ ಅಪ್ಪಟ ಮಣಿಪುರಿಗಳ ಅಥವಾ ಮಿಥೀಸ್‍ಗಳ ಪದ್ಧತಿಯ ಮೇಲೆ ಬೆಳೆದ ನಾಡು. ಅದಕ್ಕಿಂತಲೂ ತೀವ್ರ ಹಿಂದೂತ್ವದ ಪ್ರಭಾವಕ್ಕೊಳಗಾಗಿರುವ ಜಿಲ್ಲೆ. ಅಪ್ಪಟ ಹಿಂದೂ ಸಂಸ್ಕೃತಿ ಮತ್ತು ಪದ್ಧತಿಗಳು ಇಲ್ಲಿ ಕಂಡುಬರುತ್ತವೆ. ಇಲ್ಲಿನ ಅತಿ ದೊಡ್ಡ ಜಾತ್ರೆ ಮತ್ತು ಉತ್ಸವ ಎಂದರೆ ಡೊಲ್‍ಜಾತ್ರಾ.. (ಯಾಸೊಂಗ್ – ಮಣಿಪುರಿ ಭಾಷೆಯಲ್ಲಿ) ನಮ್ಮಲ್ಲಿ ಫಲ್ಗುಣ ಎನ್ನುವುದನ್ನು "ಲಮಡಾ" ಎನ್ನುವ ಮಿಥೀಸ್‍ಗಳು ಮಾರ್ಚ್ ಮೊದಲನೆಯ ವಾರದಲ್ಲಿ ಬರುವ ಹುಣ್ಣಿಮೆಯ ದಿನಂದಂದು ಅಥವಾ ಫಲ್ಗುಣದ ಹುಣ್ಣಿಮೆಯ ದಿನ ಇದನ್ನು ಆರಂಭಿಸುತ್ತಾರೆ. ಡೊಲ್ ಜಾತ್ರಾ : ಫಲ್ಗುಣದ ಹುಣ್ಣಿಮೆಯ ದಿನದಿಂದ ನಿರಂತರ ಐದು ದಿನ ಡೊಲ್ ಜಾತ್ರಾ ಜಿಲ್ಲೆಯಾದ್ಯಂತ ನಡೆಯುವ ಮತ್ತು ಪೂರ್ತಿ ಮಣಿಪುರದ ಕೇವಲ ಪ್ರಮೀಳೆಯರ ನಾಡಿನಲ್ಲಿ 82 ಥೌಬಾಲ್‍ನಲ್ಲಿ ಮಾತ್ರ ನಡೆಯುವ ಬಣ್ಣದ ಹಬ್ಬ ಇದಾಗಿದೆ. ಸರ್ವ ರೀತಿಯ ಜನರೂ ಭಾಗಿಯಾಗುವ ಹಬ್ಬದ ಮತ್ತು ನೃತ್ಯದ ಸಡಗರಕ್ಕೆ ಯೋಸಾಂಗ್‍ನ್ನು ನೋಡಿಯೇ ಅರಿಯಬೇಕು. ಸ್ತ್ರೀ ಪುರುಷರಿಬ್ಬರೂ ಹಂಗಿಲ್ಲದೆ ಎಗ್ಗಿಲ್ಲದೆ ಕುಣಿಯುವ ಡೊಲ್ ಜಾತ್ರದಲ್ಲಿ ವಿಶೇಷವಾಗಿ ಮದುವೆಯ ನಿರ್ಣಯಗಳೂ ಹುಡುಗ ಹುಡುಗಿಯರು ಸಂಗಾತಿಗಳನ್ನು ಆರಿಸಿಕೊಳ್ಳುವುದೂ ನಡೆಯುತ್ತದೆ. ರಥ ಯಾತ್ರಾ (ಖಂಗಾ) : ರಥ ಯಾತ್ರಾ (ಖಂಗಾ) ಇನ್ನೊಂದು ಉತ್ಸವವಾಗಿದ್ದು ಜೇಷ್ಠ ಮಾಸದಲ್ಲಿ (ಸ್ಥಳೀಯವಾಗಿ ಎಂಗೇನ್) ಆರಂಭದ ಏಳು ದಿನ ನಡೆಯುವ ಹಬ್ಬವಾಗಿದ್ದು ಮೊದಲ ದಿನ ಉಪವಾಸದಿಂದ ಆರಂಭವಾಗಿ ಏಳನೆಯ ದಿನ ಇಲ್ಲಿನ ರಥದಲ್ಲಿ ಜಗನ್ನಾಥನ ಮೆರವಣಿಗೆ ನಡೆಯುತ್ತದೆ. ಇದೊಂದು ಅಪ್ಪಟ "ಪುರಿ ಜಗನ್ನಾಥನ ರಥ" ಯಾತ್ರೆಯನ್ನು ಹೋಲುವ ಮತ್ತು ಅದರ ಸಂಪ್ರದಾಯವನ್ನೇ ಹಿಂಬಾಲಿಸುವ ಸಂಸ್ಕೃತಿಯಾಗಿದ್ದು ಪದ್ಧತಿಗಳೂ ಕೂಡಾ ಹೆಚ್ಚು ಕಡಿಮೆ ಒಂದೇ ತೆರನಾಗಿವೆ. ಇಲ್ಲಿಯೂ ಬಲಭದ್ರ ಸುಭದ್ರೆಯರ ರಥಗಳು ಕೂಡಾ ಹಿಂಬಾಲಿಸುತ್ತವೆ. ರಾತ್ರಿಯಲ್ಲಿ ವಿಶೇಷ ಪೂಜೆ ಮತ್ತು ಹಾಡುಗಳ ಕೀರ್ತನೆ ಇರುತ್ತದೆ. ಇನ್ನುಳಿದ ಹಿಂದೂ ಹಬ್ಬಗಳಾದ ಜನ್ಮಾಷ್ಟಮಿ, ದುರ್‌ಗಾ ಪೂಜಾ ಸೇರಿದಂತೆ ಸ್ಥಳೀಯ "ನಿಂಗೋಲ್ ಚಾಕೋಬಾ" ಮತ್ತು ಮಣಿಪುರಿ ಹೊಸ ವರ್ಷ ಮುಖ್ಯ ಆಚರಣೆಗಳು. ಎಂದಿನಂತೆ "ಲೈ ಹಾರೋಬ ಮತ್ತು ರಾಸ್ 83 ಪ್ರಮೀಳೆಯರ ನಾಡಿನಲ್ಲಿ ಲೀಲಾ" ನೃತ್ಯಗಳು ಪೂರ್ತಿ ಅಶ್ವಿನಿ, ವೈಶಾಖ ಮಾಘದ ದಿನಗಳಲ್ಲಿ ನಡೆಯುತ್ತಿರುತ್ತದೆ. ಕೊನೆಯಲ್ಲಿ ಸ್ಥಳೀಯ ಮಣಿಪುರಿ ಕಡುದೇವರಾದ "ಉಮಾಂಗ್ ಲೈಸ್"ಗೆ ಹರಕೆ ಪೂರೈಕೆ ಹಾಗು ನಮನ ಸಲ್ಲಿಕೆ ಸೇವೆ ನಡೆಯುತ್ತದೆ. ಇವರನ್ನು ಹೊರತುಪಡಿಸಿದರೆ ಇಲ್ಲಿನ ಎರಡನೆ ಪ್ರಾಬಲ್ಯ ಮತ್ತು ಜನಾಂಗೀಯ ಬಾಹುಳ್ಯವಿರುವ ಪಂಗಡವೆಂದರೆ ಮುಸ್ಲಿಂರದ್ದು. ಎಂದಿನಂತೆ ಮುಸ್ಲಿಂ ಸಮುದಾಯ ಅವರ ಹಬ್ಬವನ್ನು ಆಚರಿಸುತ್ತದೆಯಾದರೂ ಹೆಚ್ಚಾಗಿ ಸ್ಥಳೀಯ ಹಬ್ಬದಲ್ಲಿ ಪಾಲ್ಗೊಳ್ಳುವುದೇ ಜಾಸ್ತಿ. ಹಾಗಾಗಿ "ಲೈ ಹಾರೋಬ"ದಲ್ಲಿ ಯಾರು ಮುಸ್ಲಿಂ ಯಾರು ಮಣಿಪುರಿ ಯಾರು ಎಂದು ಗುರುತಿಸುವುದೇ ಅತಿ ದೊಡ್ಡ ಕಷ್ಟ. ಉಳಿದಂತೆ ಕ್ರಿಶ್ಚಿಯನ್‍ರ ಡಿಸೆಂಬರ್ ಹಬ್ಬವನ್ನೂ ಕೂಡಾ ಆಚರಿಸಲಾಗುತ್ತದೆ. ಪ್ರವಾಸಿ ತಾಣಗಳು ಖೊಂಗ್ಝೊಮ್ : ಇದನ್ನು ಪ್ರವಾಸಿ ತಾಣ ಎನ್ನುವುದಕ್ಕಿಂತಲೂ ಥೌಬಾಲ್‍ನ ಹೆಬ್ಬಾಗಿಲು ಎಂದರೆ ಸೂಕ್ತ. ಇಂಫಾಲದಿಂದ ಕೇವಲ 32 ಕಿ.ಮೀ ದೂರದ ಈ ಊರು ಒಂದು ರೀತಿಯಲ್ಲಿ ಜಿಲ್ಲಾ ಮುಖ್ಯ ಸ್ಥಳ ಕೂಡಾ. ಬ್ರಿಟಿಷ್‌ ಸೈನಿಕರ ಜೊತೆಗೆ ಹೋರಾಡಿದ ಕೊನೆಯ ಹೋರಾಟ ಕೂಡಾ ಇಲ್ಲಿಯೇ ನಡೆದಿದ್ದು, ಅದರ ಸ್ಮರಣಾರ್ಥ ಇಲ್ಲಿನ ಬೆಟ್ಟದ ಮೇಲೆ ಒಂದು ಚಿಕ್ಕ ಸ್ಮರಣಿಕೆಯನ್ನು ನಿರ್ಮಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ಸುಲಭವಾಗಿ ತಲುಪಬಹುದಾದ ಸ್ಥಳವಾಗಿದೆ. ಆದರೆ ಪ್ರವಾಸಿಗರಿಗಾಗಿ ಯಾವ ಸೌಕರ್ಯವೂ ಇಲ್ಲದೆ ಕೇವಲ 8 ಹಾಸಿಗೆಯ ಒಂದೇ ಒಂದು ಟೂರಿಸ್ಟ್ ಬಂಗ್ಲೆ ಇಲ್ಲಿದೆ. ಅದು ಬಾಗಿಲು ಹಾಕಿದ್ದು ಯಾವತ್ತು ಎಂದು ಯಾರಿಗೂ ನೆನಪಿಲ್ಲ. ಅಕಸ್ಮಾತ್ ತೆಗೆದರೂ ಅದರಲ್ಲಿ ಯಾವ ಪ್ರವಾಸಿಯೂ ಉಳಿಯುವ ಧೈರ್ಯ ಮಾಡಲಿಕ್ಕಿಲ್ಲ. ಇರುವ ವ್ಯವಸ್ಥೆಯಲ್ಲೇ ಎಲ್ಲದಕ್ಕೂ ಹೊಂದಿಕೊಳ್ಳಬೇಕಿದೆ. ಆದರೆ ಕೇವಲ 32 ಕಿ.ಮಿ. ದೂರದಲ್ಲಿ ಇಂಫಾಲ ಇರುವುದರಿಂದ ಇಲ್ಲಿಗೆ ಸುಲಭವಾಗಿ ಪ್ರಮೀಳೆಯರ ನಾಡಿನಲ್ಲಿ 84 ಬಂದು ಹೋಗಿ ಮಾಡುವ ಅವಕಾಶವೂ ಇರುವುದರಿಂದ ಪ್ರವಾಸಿಗರು ಇಂಫಾಲವನ್ನೇ ಥೌಬಾಲ್ ಪ್ರವಾಸಕ್ಕೆ ಕೇಂದ್ರವನ್ನಾಗಿ ಮಾಡಿಕೊಳ್ಳುವುದೊಳಿತು. ಸುಗ್ಣು : ಇಂಫಾಲದಿಂದ 74 ಕಿ.ಮಿ. ದೂರ ಇದ್ದು ದಕ್ಷಿಣ ರಾಜ್ಯದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ ಇದು. ಇಲ್ಲೊಂದು ಪ್ರವಾಸಿಗರ ವೀಕ್ಷಣ ಕೇಂದ್ರವಿದ್ದು ಅಲ್ಲಿಂದ ಇಂಫಾಲ ನದಿಯ ಅತ್ಯಂತ ಸುಂದರ ದೃಶ್ಯವನ್ನು ಸವಿಯಬಹುದಾಗಿದೆ. ಇದನ್ನು ತಲುಪಲು ಇಂಫಾಲ ಸುಗ್ಣು ರಾಜ್ಯ ಹೆದ್ದಾರಿಯ ಮೇಲೆ ಚಲಿಸಿದರೆ ನೇರ ತಲುಪಬಹುದಾಗಿದೆ. ಆದರೆ ಇಂಥ ಹಲವು ವ್ಯೂ ಪಾಯಿಂಟ್‍ಗಳು ಕರ್ನಾಟಕದ ರಸ್ತೆಯುದ್ದಕ್ಕೂ ಇವೆ. ಹಾಗಾಗಿ ಇತ್ತಲಿನ ಪ್ರವಾಸಿಗರಿಗೆ ಇದು ಮುದ ನೀಡುವುದಿಲ್ಲ. ವೈಥು : ಸುಂದರ ಸರೋವರ ದೃಶ್ಯ ಮತ್ತು ಹಲವು ನಿಸರ್‌ಗ ರಮಣೀಯ ದೃಶ್ಯಗಳನ್ನು ನೋಡಲು ವೈಥು ಸೂಕ್ತ ಪ್ರದೇಶ. ಇದರ ಸವಿಯನ್ನು ಸವಿಯಲು ಇಲ್ಲೊಂದು ಇನ್‍ಸ್ಪೆಕ್ಷನ್ ಬಂಗ್ಲೆ ಇದ್ದು ಅಲ್ಲಿಂದ ವೀಕ್ಷಣೆಗೆ ಹಲವು ರಮಣೀಯ ನೋಟಗಳು ಕಾಣಿಸುತ್ತವೆ. ಇಲ್ಲಿನ ಪೈನಾಪಲ್ ತುಂಬಾ ರುಚಿಕರವಾಗಿದ್ದು ಸ್ಥಳೀಯವಾಗಿ ಲಭ್ಯವಾಗುವುದರಿಂದ ತುಂಬಾ ಅಗ್ಗವಾಗಿಯೂ ದೊರಕುತ್ತವೆ. ಅದರೊಂದಿಗೆ ಸ್ಥಳೀಯವಾಗಿ ಪ್ರಸಿದ್ಧಿಯಾಗಿರುವ " ಘಾಟೊಣ್ ಮೀನು " ತುಂಬಾ ಪ್ರಸಿದ್ಧ. ಜಿಲ್ಲೆಯ ಪ್ರಮುಖ ಕೇಂದ್ರದಿಂದ ಕೇವಲ ಮೂರು ಕಿ.ಮೀ. ದೂರವಿದ್ದು ರಾ.ಹೆ. ಮೂರು ಕಿ.ಮೀ ದೂರದಲ್ಲಿದೆ. ಆದರೆ ಮಳೆಗಾಲ ಮುಗಿದು ಕೊಂಚ ಹಸಿರಿದ್ದ ಸಮಯದಲ್ಲಿ ಮಾತ್ರ ಈ ಸ್ಥಳಗಳೆಲ್ಲಾ ಸೂಕ್ತ. ಕಾಕ್ಚಿಂಗ್ : ಸಬ್ ಡಿವಿಶನಲ್ ಹೆಡ್ ಕ್ವಾರ್ಟರ್ ಎಂದೇ ಪ್ರಸಿದ್ಧಿಯಾಗಿರುವ ನಗರ ಇದು. ನಗರ ಎಂದು ಹೆಸರಿಸಬಹುದಾದ ಆದರೆ ಅದರ ಯಾವುದೇ ಗುಣ ಲಕ್ಷಣಗಳೂ ಕಂಡುಬಾರದ ಊರಿದು (ಇಲ್ಲಿ ಒಂದು ಸಂದೇಹವಿದೆ ಅಥವಾ ನನ್ನ ಅರೆಜ್ಞಾನವೂ ಇರಬಹುದೇನೋ...? ಜಿಲ್ಲಾ ಕೇಂದ್ರವಾಗಿಸಲು ಅಥವಾ ನಗರ ಎಂದು ಗುರುತಿಸಲು ನಿರ್ದಿಷ್ಟ ಮಾನದಂಡಗಳಿಲ್ಲವಾ..? ಇದ್ದಿದ್ದೇ ಆದರೆ 85 ಪ್ರಮೀಳೆಯರ ನಾಡಿನಲ್ಲಿ ಇವನ್ನೆಲ್ಲಾ ಯಾವ ಮಾನದಂಡದಡಿಯಲ್ಲಿ ನಗರವನ್ನಾಗಿಸಿದರು..? ಬರೀ ಜನಸಂಖ್ಯೆಯೇ ಆಧಾರವಾಗುವುದಾದರೆ, ಬಹುಶ: ಈ ನಗರಗಳ ಮುಖವನ್ನೇ ಕಂಡಿರದ ಸಮುದಾಯ ಬುಡಕಟ್ಟುಗಳನ್ನೆಲ್ಲಾ ಲೆಕ್ಕಕ್ಕೆ ಹಿಡಿದಿದ್ದಾರಾ.. ?). ಜಿಲ್ಲೆಯ ಪ್ರಮುಖ ಕಾಯಿಪಲ್ಯೆಯ ಮಾರುಕಟ್ಟೆ ಇದಾಗಿದೆ. ಥೌಬಾಲ್ ಮೀನು ಮತ್ತು ಭತ್ತದ ವ್ಯಾಪಾರದ ಪ್ರಮುಖ ಸ್ಥಳ ಕೂಡಾ ಇದಾಗಿದ್ದು ಜಿಲ್ಲೆಯ ಅತಿ ದೊಡ್ಡ ನಗರ ಪ್ರದೇಶ ಕೂಡಾ. ರಾ.ಹೆ. ಹೊಂದಿಕೊಂಡಿದ್ದು ಸುಲಭಕ್ಕೆ ಇದನ್ನು ತಲುಪಬಹುದಾಗಿದೆ. ಆದರೆ ಸರಿಯಾದ ಸೌಲಭ್ಯಗಳೂ ಇಲ್ಲಿ ತುಂಬಾ ಕಮ್ಮಿಯಾಗಿದೆ. ಥೌಬಾಲ್ : ಥೌಬಾಲ್ ಜಿಲ್ಲೆಯ ಪ್ರಮುಖ ಜಿಲ್ಲಾ ಕೇಂದ್ರ ಮತ್ತು ಮುಖ್ಯ ಸಬ್ ಡಿವಿಶನ್ ಕೇಂದ್ರ ಕೂಡಾ. ಇಂಫಾಲದಿಂದ 22 ಕಿ.ಮೀ. ದೂರದಲ್ಲಿದ್ದು ರಾ.ಹೆ. ಯ 39ರ ಮೇಲೆ ಲಭ್ಯವಾಗುವ ನಗರ ಇದು. ಈ ನಗರವನ್ನು ಉತ್ತರ ದಕ್ಷಿಣವಾಗಿ ವಿಭಜಿಸಿ ಥೌಬಾಲ್ ನದಿಯು ಹರಿಯುತ್ತಿದ್ದು, ಸಂಪೂರ್ಣ ನಗರ ಇದರ ದಂಡೆಯ ಮೇಲೆ ಬೆಳೆದಿದೆ. ಇದು ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ನಗರವಾಗಿದ್ದು ಮುಖ್ಯ ವಾಣಿಜ್ಯ ನಗರಿಯಾಗಿಯೂ ಗುರುತಿಸಿಕೊಂಡಿದೆ. ಇದರೊಂದಿಗೆ ಇದರ ಸುತ್ತಲಿನ ಗ್ರಾಮೀಣ ಭಾಷೆಗಳೂ ತೀವ್ರ ಬೆಳವಣಿಗೆ ಕಾಣುತ್ತಿವೆ ಕೂಡಾ. ಪಲ್ಲೇಲ : ಥೌಬಾಲ್ ಮತ್ತು ಚಾಂಡೆಲ್ ಜಿಲ್ಲೆಗಳ ಗಡಿಯ ಭಾಗವಾಗಿದ್ದು ಇದ್ದುದರಲ್ಲಿ ಜಿಲ್ಲೆಯಲ್ಲೇ ಕೊಂಚ ಸಮತಟ್ಟಾದ ಪ್ರದೇಶ ಇದು. ಇಂಡೊ- ಮ್ಯಾನ್ಮರ್ ಅಂತಾರಾಷ್ಟ್ರೀಯ ಹೆದ್ದಾರಿ ನಗರದ ಮೂಲಕ ಹಾಯ್ದು ಹೋಗುತ್ತದೆ. ಈ ಸ್ಥಳ ತೀರ ನದಿ ಪರ್ವತಗಳ ಕಾಂಬಿನೇಶನ್ನಿನ ಲ್ಯಾಂಡ್‍ಸ್ಕೇಪ್ ಇದ್ದು ಅಪ್ಪಟ ಕೃಷಿ ಉತ್ಪನ್ನಗಳು ಇಲ್ಲಿನ ವಿಶೇಷತೆ. ಹಾಗೆಯೇ ಪರ್ವತ ಪ್ರದೇಶದ ಹ್ಯಾಂಡಿಕ್ರಾಫ್ಟ್ ಇಲ್ಲಿ ಪ್ರತಿದಿನ ಮಾರ್ಕೆಟ್‍ನಲ್ಲಿ ಲಭ್ಯವಾಗುವುದು ವಿಶೇಷತೆ. ಪ್ರಮೀಳೆಯರ ನಾಡಿನಲ್ಲಿ 86 ಇಂಥಾ ಯಾವ ವಿಶೇಷತೆಗೂ ನನ್ನನ್ನು ಈಡು ಮಾಡದೆ ಸುತ್ತಿಸಿದ, ಹೆದ್ದಾರಿ ರಾಸ್ತ ರೊಖೊಗೆ ಪ್ರತ್ಯಕ್ಷ ದರ್ಶಿಯಾಗಿಸಿದ ಎರಡೂ ಜಿಲ್ಲೆಗಳ ಪ್ರವಾಸ ಸಂದರ್ಶಿಸುವ ದೃಷ್ಟಿಯಲ್ಲಿ "ಮೊರ್ರೆ" ಹೊರತುಪಡಿಸಿದರೆ ಉಳಿದವು ಅಷ್ಟಾಗಿ ಮುದ ನೀಡುವುದಿಲ್ಲ. ಆದರೂ ಅಂತಾರಾಷ್ಟ್ರೀಯ ಹೆದ್ದಾರಿ ಹೀಗೇ ಇರಬೇಕೆನ್ನುವ ಕಲ್ಪನೆಗಳೇನಾದರೂ ಇದ್ದರೆ ಅದನ್ನು ಈ ಪ್ರವಾಸ ಸುಳ್ಳು ಮಾಡುತ್ತದೆ. ಕಾರಣ ಇಲ್ಲಿ ಕೂಡಾ ಆರಂಭದಲ್ಲಿ ಗಂಟೆಗೆ ಮೂವತ್ತು ಕಿ.ಮೀ. ಜಾಸ್ತಿ ಪ್ರಯಾಣದ ಅಂತರ ದಕ್ಕಲಾರದು. ಜೊತೆಗೆ ಎಂದಿನ ಊಟ ಮತ್ತು ಇತರೆ ಅವಶ್ಯಕತೆಗಳ ದೃಷ್ಟಿಯಿಂದ ಹೊರ ಭಾಗದವರಿಗೆ ಹೇಳಿಕೊಳ್ಳುವಂತಹ ಸೌಲಭ್ಯಗಳೇನೂ ಸಲ್ಲುವುದೇ ಇಲ್ಲ. ಹಾಗಾಗಿ ಏನೇ ಇದ್ದರೂ ಇಂಫಾಲಕ್ಕೆ ಪ್ರವಾಸಿಗ ವಾಪಸ್ಸು ಬರಬೇಕು. ಇಲ್ಲ ಇದ್ದುದರಲ್ಲಿ ಹೊಂದಿಸಿಕೊಂಡು "ಮೊರ್ರೆ" ನಲ್ಲಿಯೇ ವಾಸ್ತವ್ಯ ಹೂಡಬೇಕು. ಹಾಗೆ ಭಾರತದ ಸರಹದ್ದನ್ನು ಸ್ಪರ್ಶಿಸಿ ನಾನು ಬರ್ಮಾದ ತುದಿಯಲ್ಲಿ ನಿಂತು ಹೊರಟಾಗ ಭರ್ತಿ ಸಂಜೆಗೆ ಸೂರ್ಯ ಅಸ್ತಮಿಸಲು ಸಜ್ಜಾಗುತ್ತಿದ್ದ. ಕಾರು ಹತ್ತಿ ಸ್ಟೇರಿಂಗ್ ತೆಗೆದುಕೊಂಡು ಅರ್ಧ ಗಂಟೆಯೂ ಸರಿದಿರಲಿಲ್ಲ. ಮೈಲುದ್ದದ ತಪಾಸಣಾ ಚೌಕಿಯಲ್ಲಿ ನೂರಾರು ವಾಹನಗಳು ಅತ್ಯಂತ ವ್ಯವಸ್ಥಿತವಾಗಿ ಎಡಕ್ಕೆ ನಿಂತುಕೊಂಡಿದ್ದವು. ಕೆಲವು ಡ್ರೈವರ್‌ಗಳು ಅದರಲ್ಲೇ ನಿದ್ದೆ ಹೋಗಿದ್ದರು. ಕೆಲವರು ಅದರಲ್ಲಿ ಕುಳಿತೇ ಊಟದ ಗಂಟು ಬಿಚ್ಚುತ್ತಿದ್ದರು. ಅಲ್ಲಿ ನಿಂತರೆ ಕನಿಷ್ಠ ಎರಡ್ಮೂರು ಗಂಟೆ ನಮ್ಮ ಸರದಿ ಕದಲಿಕ್ಕಿಲ್ಲ ಎಂದು ನೇರವಾಗಿ ಮುಂದಕ್ಕೆ ಬಂದು ನಿಂತು ಅಲ್ಲಿಯ ಅಧಿಕಾರಿಗೆ ನನ್ನ ಪ್ರವಾಸ ಮತ್ತು ನಾನೊಬ್ಬನೇ ಇರುವ ಕುರಿತು ಮಾಹಿತಿ ಒದಗಿಸಿದೆ. ಪುಣ್ಯಕ್ಕೆ ಹದಿನೈದೆ ನಿಮಿಷದಲ್ಲಿ ನನ್ನನ್ನು ಆಚೆಗೆ ಬಿಟ್ಟ. ಇಲ್ಲಿ ಡ್ರೈವರ್ ಕಡ್ಡಾಯವಾಗಿ ತಪಾಸಣೆಗೆ ಈಡಾಗಬೇಕು ಮೊದಲಿಗೆ. ಹಾಗೆ ತಪಾಸಿಸಿದ ಮೇಲೆ ಆ ಡ್ರೈವರ್‌ನ ಅಂಗೈ ಮೇಲೆ ಪೆನ್ನಿನಿಂದ ಒಂದು ನಿರ್ದಿಷ್ಟ ಗುರುತನ್ನು ಅಲ್ಲಿದ್ದ ಸೈನಿಕ ಮಾಡುತ್ತಾನೆ. ಅದನ್ನು ನೋಡಿದ ಮೇಲೆಯೇ ವಾಹನ ತಪಾಸಣೆ ನಡೆಯುತ್ತದೆ. ಹೀಗೆ ಅವರವರದ್ದೇ ಆದ ರೀತಿಯ ತಪಾಸಣೆ ಬೆಟ್ಟದ ನೆತ್ತಿಯ ಮೇಲೆ ಹೊಸ ಅನುಭವಕ್ಕೀಡುಮಾಡುತ್ತದೆ. ಅಷ್ಟು ಸಮಯ ಆಗುವುದರಿಂದಲೇ ಉತ್ತಮವಾದ 87 ಪ್ರಮೀಳೆಯರ ನಾಡಿನಲ್ಲಿ ಶೌಚ ಮತ್ತು ಒಂದು ಚಿಕ್ಕದಾದರೂ ಉತ್ತಮ ಟೀ ಶಾಪ್‍ನ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗಾಗಿ ಕೊಂಚ ಆ ಜಾಗ ಸಹ್ಯವೆನ್ನಿಸುತ್ತದೆ. ಈ ಏರಿನ ನಂತರ ನಿರಂತರ ಕಾಡುದಾರಿಯ ಘಾಟ್‍ರಸ್ತೆ ಲಿಂಗ್ಝಿಂಗ್‍ವರೆಗೂ ನಡೆಯುತ್ತದೆ. ಇಲ್ಲೆಲ್ಲಾ ದರೋಡೆ ಮತ್ತು ಹೆದ್ದಾರಿಯ ಅಪಹರಣದ ಸಂಖ್ಯೆ ಹೆಚ್ಚಿರುವುದರಿಂದ ಈ ಸುಮಾರು 30 ಕಿ.ಮೀ. ವ್ಯಾಪ್ತಿಯ ಈ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಯಾರೂ ವಾಹನವನ್ನು ನಿಲ್ಲಿಸಲಾರರು. ಅಲ್ಲಲ್ಲಿ ಮಿಲಿಟರಿ ಬೆನ್ನಿಗೆ ನಿಲ್ಲುವ ಭರವಸೆಯ ಅವರ ಕವಾಯತು ನಡೆಯುತ್ತಿರುತ್ತದೆಯಾದರೂ, ಆಗೀಗ ಅಪಹರಣ, ಒತ್ತೆ ಪ್ರಕರಣ ಇಲ್ಲಿ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗೇ ಇಲ್ಲಿ ಪ್ರವಾಸಿಗರ ಸಂಖ್ಯೆ ತೀರ ಇಲ್ಲವೆಂದರೂ ಸರಿಯೇ. ಹೊರಡುವ ವಾಹನಗಳೂ ಕೂಡಾ ಸಾಲುಸಾಲಾಗಿ ಕ್ಯಾನ್ವಾಯ್ ತರಹ ಹೊರಡುತ್ತವೆ. ನಾನೂ ಕೂಡಾ ಸಾಲೊಂದರ ಮುಂಭಾಗದಲ್ಲಿದ್ದು ಭರ ಭರನೆ ಸ್ಟೇರಿಂಗ್ ಎಳೆಯುತ್ತಾ ಕೆಳಕ್ಕಿಳಿದೆ. ಕಾರಣ ರಾತ್ರಿಯ ಸರಹೊತ್ತಿಗಾದರೂ ನಾನು ಇಂಫಾಲ ತಲುಪಲೇಬೇಕಿತ್ತು. ಇಲ್ಲವಾದರೆ ನನ್ನ ಯೋಜನೆಯ ಪ್ರಮುಖ ನೆಲೆ "ವಿಲ್ಲಂಗ್ ಖುಲ್ಲೇನ್" ಮತ್ತು "ಮಖೇಲ್". ಮತ್ತೆ ನಾಳೆನೂ ದಕ್ಕುವ ಬಗ್ಗೆ ಖಾತ್ರಿ ಇರಲಿಲ್ಲ. ಜೊತೆಗೆ ಕ್ಯಾಮೆರಾದಲ್ಲಿದ್ದ ಮೆಮೊರಿ ಕಾರ್ಡು ತುಂಬಿಹೋಗಿತ್ತು. ಅದನ್ನೆಲ್ಲಾ ಸರಿಪಡಿಸಿಕೊಳ್ಳಲು ಇಂಫಾಲಕ್ಕೆ ಹಿಂದಿರುಗಲೇಬೇಕಿತ್ತು. ಜೊತೆಗೆ ನಾಳೆಗೆ ಹೊರಡುವ ನನ್ನ ಸಾರಥಿ ಬೇರೆಯವನು. ಅವನನ್ನು ಸರಿಪಡಿಸಿಕೊಳ್ಳಬೇಕು. ಇದೆಲ್ಲವೂ ಇವತ್ತು ರಾತ್ರಿ ಇಂಫಾಲ ತಲುಪಿದ ಮೇಲೆ ಆಗಬೇಕಾದ ಕೆಲಸಗಳು. ಆಮೇಲೆ ನಿದ್ರೆಯ ಸುದ್ದಿ. ಬೇಕಿತ್ತಾ ಇದು ನನ್ಗೆ..? ಆದರೆ ಬೆಟ್ಟವಿಳಿಯುವಾಗಲೇ ಆರು ಗಂಟೆಯಾಗುತ್ತಿತ್ತಲ್ಲ. ಇನ್ನು ಇಂಫಾಲ ಮುಟ್ಟುವುದು ಕನಿಷ್ಠ ಹತ್ತು ಗಂಟೆಯಾಗುತ್ತದೆ. ಅಲ್ಲಿಗೆ ಮೊದಲೇ ಏಳು ಗಂಟೆಗೆ ನಿದ್ರೆಗೆ ಜಾರಿದಂತಾಗುವ ನಗರದಲ್ಲಿ ರಾತ್ರಿ ಹತ್ತು ಗಂಟೆಗೆ ನನಗ್ಯಾವನು ಕಂಪ್ಯೂಟರ್ ಸರ್ವೀಸು ಕೊಟ್ಟಾನು..? ಪ್ರಮೀಳೆಯರ ನಾಡಿನಲ್ಲಿ 88 ಸಿಗ್ನಲ್ ಇರುವ ಕಡೆ ನಿಂತು, ಚುಟುಕಾಗಿ ನನ್ನ ಕಥೆ ಹೇಳಿ ಇಂಫಾಲದಲ್ಲಿದ್ದ ನನ್ನ ಸ್ನೇಹಿತ/ಅಂಕಲ್/ಮಾಹಿತಿದಾರ ಎಲ್ಲವೂ ಆಗಿದ್ದ "ಸಿಂಗ್‍ಜಿತ್ ಥೊಬಾ" ಗೆ ಕರೆ ಮಾಡಿ, "ಏನಾದರೂ ಆಗಬಹುದಾ..." ಎಂದೆ. "ಏನೂ ಆಗೋದಿಲ್ಲ. ಆದರೆ ಒಂದು ವ್ಯವಸ್ಥೆ ಮಾಡುತ್ತೇನೆ. ನಿನಗೆ ಕಂಪ್ಯೂಟರ್ ಅಂಗಡಿ ಚಾಲು ಮಾಡಲು ಬರುತ್ತಾ.. ? " ಎಂದರು. "ಯಾಕೆ.. ? ಏನು ಮಾಡ್ಬೇಕು ?" ಕೇಳಿದೆ. "ಏನಿಲ್ಲ. ಯಾವನೂ ಹತ್ತು ಗಂಟೆಯವರೆಗೆ ನಮಗಾಗಿ ಅದರಲ್ಲೂ ನಿನಗಾಗಿ ಕಾಯೋದಿಲ್ಲ. ನಾನೂ ಕೂಡಾ ಈಗ ವೈನ್ ಕುಡಿಯಲು ಕೂರ್ತಾ ಇದ್ದೇನೆ. ಎಂಟು ಗಂಟೆಗೆ ಮಲಗುತ್ತೇನೆ. ನೀನು ಬಂದು ಮುಟ್ಟಿದ ಮೇಲೆ ಫೋನ್ ಮಾಡು. ಚಾವಿ ತೊಗೊಂಡು ಬರ್ತೀನಿ. ಅಸ್ಸಾಂ ರೈಫಲ್ಸ್‌ನವರು ದಾರಿಲಿ ನಿಲ್ಲಿಸಿದಾಗಲ್ಲೆಲ್ಲ ಕಥೆ ಹೇಳೋದು ನಿನ್ನ ಕೆಲಸ. ನನ್ನ ಎಳ್ಕೊಂಡು ಹೋದ್ರೆ ಜಾಮೀನಿಗೂ ನೀನೇ ಬರ್ಬೇಕು. ಅವರಿಗೆ ಏನು ಹೇಳ್ತಿಯೋ ನಿನಗೆ ಬಿಟ್ಟಿದ್ದು. ಗಾಂಧಿ ಪಾರ್ಕು ಬಳಿಗೆ ಬಾ.. ಕಂಪ್ಯೂಟರ್ ಅಂಗಡಿ ಬಾಗಿಲು ತೆಗೆದುಕೊಡ್ತೇನೆ. ಅದೇನು ಮಾಡ್ಕೋತಿಯೋ ಮಾಡ್ಕೊ.. ಈಗ ನನ್ನ ಬಿಡು.." ಎಂದುಬಿಡಬೇಕೆ. "ಆಯ್ತು ಅಂಕಲ್.. ಆದರೆ ಫೋನ್ ಆನ್ ಇರಲಿ, ಕಿವಿ ಪಕ್ಕದಲ್ಲೇ ಸೆಟ್ ಇರಲಿ.. ಸಶಬ್ದವಾಗಿ ಇರಲಿ.. ಇಲ್ಲದಿದ್ದರೆ ಅಕ್ಕಿ ವೈನು ನನ್ನೆಲ್ಲ ಪ್ಲಾನ್ ಹಾಳು ಮಾಡೀತು.." ಎನ್ನುತ್ತಾ ಮತ್ತೆ ಕಾರನ್ನೇರಿ ನಾನು ಪೆಡಲ್ಲು ತುಳಿಯತೊಡಗಿದ್ದೆ. ಕಾರಣ ಪಕ್ಕದಲ್ಲಿದ್ದ ಮಿತ್ರ "ಓನಿಲ್" ಯಾವ ಕಾರಣಕ್ಕೂ ಅರವತ್ತಕ್ಕಿಂತ ಜಾಸ್ತಿ ಓಡಿಸುವುದಿಲ್ಲ. ಹೈ ಬೀಮ್ ಹಾಕುವುದಿಲ್ಲ. ಎದುರಿಗಿನ ಕಾರಿಗೆ ಏರ್ ಕಂಡಿಶನ್ ಇಲ್ಲದಿದ್ರೆ ಓವರ್ ಟೇಕ್ ಮಾಡುವುದಿಲ್ಲ. ಅವರಿಗೆ ನಮ್ಮ ಕಾರಿನಿಂದಾಗಿ ಧೂಳು ಆಗಿ ತೊಂದರೆಯಾಗುತ್ತದಲ್ಲ ಅದಕ್ಕಾಗಿ. ಹೀಗೆ ಅವನ ಸಮಾಜ ಮುಖಿ ಮತ್ತು ಕಾಳಜಿಯ ಹಲವು ಕಾರಣಗಳು ನನ್ನನ್ನು ಆವತ್ತೇ ಇಂಫಾಲ ತಲುಪಿಸುವಲ್ಲಿ ವಿಫಲವಾಗುವ ಲಕ್ಷಣಗಳಿದ್ದವು (ಅಂತಹದ್ದೊಂದು 89 ಪ್ರಮೀಳೆಯರ ನಾಡಿನಲ್ಲಿ ಕೆಲಸವನ್ನು ಓನಿಲ್ ಮರುದಿನ ಮಾಡಿದ. ಅದು ಮುಂದಿನ ಕಥೆ. 30 ಕಿ.ಮಿ. ಅಂತರಕ್ಕಾಗಿ ಅನಾಮತ್ತು ಒಂದೂವರೆ ಗಂಟೆ ಚಲಿಸಿದ್ದ). ಅದಕ್ಕಾಗೇ ಒಂದೇ ಸಮನೆ ಮೂರೂವರೆ ತಾಸು ಕಾರು ಚಲಾಯಿಸಿಕೊಂಡು ಇಂಫಾಲಕ್ಕೆ ತಲುಪಿದಾಗ ಸರಿ ಒಂಭತ್ತೂವರೆ. ಪೂರ್ತಿ ನಗರ ನೆಮ್ಮದಿಯಾಗಿ ಗೊರಕೆ ಹೊಡೆಯುತ್ತಿದ್ದರೆ, ಗಾಂಧಿ ಪಾರ್ಕಿನ ಬಳಿ ಕಾರು ನಿಲ್ಲಿಸಿಕೊಂಡು ನಾನು ಸಿಂಗ್ ಜಿತ್‍ನನ್ನು ಎಬ್ಬಿಸುವ ಕಾಯಕದಲ್ಲಿದ್ದೆ. ಅವನು ಎದ್ದು ಕಣ್ಣು ಹೊಸೆಯುತ್ತಾ ಬಂದು ಹಿಂದಿನ ಸೀಟಿನಲ್ಲಿ ಬಿದ್ದುಕೊಂಡ. ಪುಣ್ಯಕ್ಕೆ ಕರೆಂಟು ಇತ್ತು. ಕೆಲಸ ಮುಗಿಸಿ ರೂಮು ಸೇರಿಕೊಂಡು ಹೊಟ್ಟೆ ಪಾಡಿಗೆ ಬಿಸ್ಕೆಟ್ಟು ಪೊಟ್ಟಣ ಕೈಗೆತ್ತಿಕೊಳ್ಳುವಾಗ ಹಿಂದಿನ ದಿನದ ಸ್ಟೇಶನ್ನು ನೆನಪಾಯಿತು. ಸೇನಾಪತಿ ಜಿಲ್ಲೆ : ಇದು ಅಪ್ಪಟ ಕಣಿವೆ ಮತ್ತು ಪರ್ವತಗಳಿಂದ ಕೂಡಿದ ಜೊತೆಗೆ ಉತ್ತರ ಮಣಿಪುರದ ಬಹುಭಾಗವನ್ನು ಆಕ್ರಮಿಸಿಕೊಂಡಿರುವ ಅಪ್ಪಟ ಚಾರಣಿಗರ ಮತ್ತು ಸಾಹಸಿಗ ಪ್ರವಾಸಿಗರ ಜಿಲ್ಲೆ. ರಾಷ್ಟ್ರೀಯ ಹೆದ್ದಾರಿ 39 ಮೇಲೆ ಅನಾಮತ್ತಾಗಿ ಹರಡಿಕೊಂಡಿರುವ ಜಿಲ್ಲೆ ಸೇನಾಪತಿ. ಹೆಚ್ಚಿನ ಐತಿಹಾಸಿಕ ಮತ್ತು ಚಾರಣಪ್ರಿಯರಿಗೆ ಹೇಳಿಮಾಡಿಸಿದ ಜಿಲ್ಲೆಯಾಗಿ ಹೆಸರು ವಾಸಿಯಾಗಿರುವ ಸೇನಾಪತಿ ಅದೇ ರೀತಿ ಕೆಲವು ಅಭ್ಯಾಸ ಯೋಗ್ಯ ಹಳ್ಳಿಗಳನ್ನು ಹೊಂದಿದ್ದು ಹೊರಭಾಗದ ಪ್ರವಾಸಿಗರಷ್ಟೆ ಅಲ್ಲ ಸಂಶೋಧಕರನ್ನೂ ಸೆಳೆಯುತ್ತಿದೆ. ಮಣಿಪುರದ ಪ್ರಮುಖ ನಗರಿ ಮತ್ತು ರಾಜಧಾನಿಯಿಂದ 62 ಕಿ.ಮೀ. ದೂರ ಇರುವ ಸೇನಾಪತಿ ಹೊಸದಾದ ವಸತಿ ಸಂಕೀರ್ಣವನ್ನೂ ಮತ್ತು ಪ್ರಮುಖ ಜಿಲ್ಲಾ ಅಡಳಿತ ವ್ಯವಸ್ಥೆಯನ್ನೂ ಹೊಂದಿದೆ. ಸುಮಾರು 30 ಕ್ಕೂ ಹೆಚ್ಚಿನ ಸರಕಾರಿ ಅಧಿಕೃತ ಕಛೇರಿಗಳು ಇಲ್ಲಿದ್ದು ತುಂಬ ಚೆಂದದ ಜಿಲ್ಲೆಯಲ್ಲಿ ಜನ ಖುಶಿಯಿಂದ ಪ್ರತಿ ಕ್ಷಣವನ್ನೂ ಅನುಭವಿಸುತ್ತಿರುವ ದೃಶ್ಯಾವಳಿಗಳು ಸಾಮಾನ್ಯ. ಗವಾಹುತಿಯ ಧಿಮಪುರ್ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಇದು ಜಿಲ್ಲೆಯನ್ನು ಮಧ್ಯದಲ್ಲಿ ಹಾಯ್ದು ಹೋಗುತ್ತದೆ. ಪ್ರಮೀಳೆಯರ ನಾಡಿನಲ್ಲಿ 90 ಪೂರ್ವದಲ್ಲಿ ಉಕ್ರುಲ್ ಮತ್ತು ಪಶ್ಚಿಮದಲ್ಲಿ ತೆಮೆನ್‍ಗ್ಲಾಂಗ್‍ನ್ನು ಗಡಿಯಾಗಿಸಿಕೊಂಡಿದ್ದು ಉತ್ತರದಲ್ಲಿ ನಾಗಾಲ್ಯಾಂಡಿನ `ಫೇಕ್’ ಜಿಲ್ಲೆ ಇದ್ದರೆ ದಕ್ಷಿಣದಲ್ಲಿ ಪೂರ್ವ ಇಂಫಾಲ ಇದನ್ನು ಸುತ್ತುವರೆದಿದೆ. 1788 ಮೀ. ಎತ್ತರದಲ್ಲಿ ಸಮುದ್ರ ಮಟ್ಟವನ್ನು ಕಾಯ್ದುಕೊಂಡಿರುವ ಈ ಕಣಿವೆ ಜಿಲ್ಲೆ, ಉತ್ತರದ ಕಡೆಯಲ್ಲಿ ಕಡಿದಾದ ಪರ್ವತ ಪ್ರದೇಶಗಳನ್ನು ಹೊಂದಿದ್ದರೆ, ದಕ್ಷಿಣಕ್ಕೆ ಇಳಿದಂತೆ ಇಳಿಜಾರಾಗುತ್ತಾ ಹೋಗುತ್ತದೆ. ಜಿಲ್ಲೆಯ ಆಡಳಿತ ಸರಳೀಕರಣಕ್ಕೆ ಅನುಗುಣವಾಗಿ ಆರು ಭಾಗವಾಗಿ ಗುರುತಿಸಿ ವಿಭಜಿಸಲಾಗಿದ್ದು ಇದರಿಂದ ಆಡಳಿತ ಸುಗಮವಾಗಿ ಸಾಗುತ್ತಿದೆ. ಚಿತ್ರಾತಿವಿಚಿತ್ರ ದಿರಿಸುಗಳಂತೆ ಪಟ್ಟಣಗಳೂ ವಿಚಿತ್ರವಾಗಿವೆ. 1. ಮಯೋ- ಮರ್ರಂ 2. ಪಯೋ ಮಾಟಾ 3. ಪರುಲ್ 4. ಕಾಂಗ್ ಪೊಕ್ಪಿ 5. ಸೈಕುಲ್ 6. ಸೈತು (ಗಾಂಫಾ ಝೋಲ್ ಗಾಮ್ನೋಂ ಸಪರ್ ಮೇನಿಯಾ) ಕಾಂಗಾ ಪೋಕಪಿ ಇದ್ದುದರಲ್ಲೇ ಸೇನಾಪತಿಯ ದೊಡ್ಡ ನಗರವಾಗಿದ್ದು ಇಲ್ಲಿ "ಥುಡೊ ಕುಖಿ"ಗಳು ಮೂಲ ನಿವಾಸಿಗಳಾಗಿದ್ದರೆ. "ಮಯೋ ಗೇಟ್" ಎನ್ನುವ ಕೊಟ್ಟ ಕೊನೆಯ ಪಟ್ಟಣ ಮತ್ತು ಅತ್ಯಂತ ಪುರಾತನ ಹಿಲ್ ಸ್ಟೇಷನ್ 91 ಪ್ರಮೀಳೆಯರ ನಾಡಿನಲ್ಲಿ ಇದರ ಆಕರ್ಷಣೆ. ನಿನ್ನೆಯ ಮೊರ್ರೆಯಂತೆ ಇದು ಈಕಡೆಗೆ ಗಡಿ ಪಟ್ಟಣ. ಇಲ್ಲಿಂದ ಸೀದಾ ಮೊರ್ರೆಗೆ ಒಂದು ಹೆದ್ದಾರಿ ಇದೆ. ಅಸಲಿಗೆ ಇದು ಮೊದಲಿಗೆ ಉತ್ತರ ಮಣಿಪುರ ಜಿಲ್ಲೆ ಎಂದೇ ಗುರುತಿಸಲಾಗುತ್ತಿದ್ದು 1969ರ ನವಂಬರ್ 14 ರಂದು ಸೇನಾಪತಿ ಜಿಲ್ಲೆಯಾಗಿ ನಾಮಕರಣಗೊಂಡಿತು. ಅಲ್ಲಿಯವರೆಗೂ "ಕರಂಗ್" ನಲ್ಲಿ ಜಿಲ್ಲಾಧಿಕಾರಿಯ ಆಡಳಿತ ನಡೆಯುತ್ತಿದ್ದು ಸೇನಾಪತಿ ಎಂಬ ಹೊಸನಗರ ತಲೆ ಏತ್ತುತ್ತಿದ್ದಂತೆ, ಅಲ್ಲಿಗೆ ಸೇನಾಪತಿ ಜಿಲ್ಲೆಯ ಹೊಸ ಆಡಳಿತ ಕಛೇರಿ 1983 ರ ಜುಲೈ 15 ರಂದು ಸ್ಥಳಾಂತರಗೊಂಡಿತು. ಒಟ್ಟಾರೆ 3271 ಚ.ಕಿ.ಮೀ. ವಿಸ್ತಾರ ಪ್ರದೇಶ ಈ ಸೇನಾಪತಿ ಜಿಲ್ಲೆಯದ್ದು. ನೀಲಿ ಪರ್ವತ ಶ್ರೇಣಿಗಳು, ಪರ್ವತ ಪ್ರದೇಶಗಳು, ಎಲ್ಲೆಂದರಲ್ಲಿ ಹರಿಯುವ ನದಿ ಮತ್ತು ಝರಿಗಳು, ಇಳಿಜಾರು ಕಣಿವೆಗಳು ಈ ಜಿಲ್ಲೆಯ ಪ್ರಮುಖ ಆಕರ್ಷಣೆ. ಇದರಿಂದಾಗಿ ಜಿಲ್ಲೆಯ ಶೇ. 81. ರಷ್ಟು ಭಾಗ ಕೇವಲ ಅರಣ್ಯ ಮತ್ತು ಪರ್ವತ ಪ್ರದೇಶಗಳಿಂದ ಕೂಡಿದ್ದರೆ ಉಳಿದ ಕೇವಲ 19% ಭೂಮಿ ಮಾತ್ರ ಜನವಾಸಕ್ಕೆ ಹಾಗು ಇತರೆ ಭೂಮಿಯಾಗಿ ಗುರ್ತಿಸಲ್ಪಟ್ಟಿದೆ. ಬರಾಕ್, ಇರ್ರಿಲಿ, ಇಥೋಯಿ, ಇರಾಂಗ್, ಇಮ್ಫಾಲ ಮತ್ತು ಲಾನೇ ನದಿಗಳು ಪ್ರಮುಖ ನೀರಿನ ಸಂಪನ್ಮೂಲಗಳಾಗಿವೆ. ಇಷ್ಟೇ ಭೂಮಿಯಲ್ಲಿ ಭತ್ತ, ಬಟಾಟೆ ಹಾಗು ಇತರ ಧಾನ್ಯ ಮತ್ತು ಕಾಳುಗಳ ಕೃಷಿ ಇಲ್ಲಿ ನಡೆಯುತ್ತಿದೆ ಜೊತೆಗೆ ಪ್ರವಾಸೋದ್ಯಮ ಕೂಡ ಪ್ರಮುಖ ಆಕರ್ಷಣೆಯ ವ್ಯವಹಾರವಾಗಿ ಬದಲಾಗುತ್ತಿದೆ. ವರ್ಷಕ್ಕೆ ಸರಾಸರಿ 1000 ರಿಂದ 1400 ಮಿ.ಮೀ. ವರೆಗೆ ಮಳೆ ಬೀಳುವ ಸೇನಾಪತಿ ಜಿಲ್ಲೆಯಲ್ಲಿ ಕನಿಷ್ಠ 3 ಡಿಗ್ರಿ ಇದ್ದರೆ ಬೇಸಿಗೆಯಲ್ಲಿ 34 ಡಿಗ್ರಿವರೆಗೆ ಉಷ್ಣಾಂಶ ಏರುತ್ತದೆ. ಇಶಿಲಿ, ಕೌಛಿ, ಹೌಡು, ನಾಗ್ಫು ಮತ್ತು ಕೌಬ್ರು ಗಳು ಪ್ರಮುಖ ಎತ್ತರದ ಪರ್ವತ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದರೆ ಭಾಷೆಯಾಗಿ ಮಣಿಪುರಿ ಚಾಲ್ತಿಯಲ್ಲಿದೆ. ಮಯೋ, ಮರಂ, ಪೌಮಾಯಿ, ಥನ್ಗಾಲ್. ಝೀಮೈ, ಲಿಂಗಾ ಮೈ, ರುಂಗಾ ಮೈ, ಠಾಂಗ್ ಖುಲ್, ಮೇಥೀ, ಕುಕೀ, ನೆಪಾಲ್ಸೆ, ವೈಫೇಯಿ, ಚೊಟೆ ಮತ್ತು ಮಾರಿಂಗ್ ಪ್ರಮುಖ ಬುಡಕಟ್ಟುಗಳಾಗಿದ್ದು ಆಯಾ ಪ್ರಮೀಳೆಯರ ನಾಡಿನಲ್ಲಿ 92 ಪ್ರಾಂತ್ಯವಾರು ಅಲ್ಲಲ್ಲಿ ಹರಡಿಕೊಂಡಿದ್ದು ತಮ್ಮದೇ ಸಂಪ್ರದಾಯ ಮತ್ತು ಪದ್ಧತಿಗಳಿಗನುಗುಣವಾಗಿ ಜೀವನ ಕ್ರಮ ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಿದ್ದಾರೆ. ಸೇನಾಪತಿ ಜಿಲ್ಲೆಯಲ್ಲಿ ಹಲವು ರೀತಿಯ ಸಂಸ್ಕೃತಿ ಮತ್ತು ಉತ್ಸವಗಳು ಸಂಪ್ರದಾಯಗಳು, ಜಿಲ್ಲಾ ಮಟ್ಟದ ಸಮಾವೇಶಗಳು ಕಾಲಕಾಲಕ್ಕೇ ಮತ್ತು ಆಯಾ ಮಾಸವಾರು ನಡೆಸುವುದು ಪ್ರಮುಖ ಬುಡಕಟ್ಟುಗಳಾದ ನಾಗಗಳು ಮತ್ತು ಕುಕಿಗಳ ಸಂಪ್ರದಾಯವಾಗಿದೆ. ಹತ್ತು ಹಲವು ಬಣ್ಣದ ಮತ್ತು ತೀರ ಕಟ್ಟುಪಾಡಿನ ಬುಡಕಟ್ಟುಗಳ ಲೆಕ್ಕದಲ್ಲಿ ರಾಜ್ಯದಲ್ಲೇ ಇದು ಎರಡನೆಯ ಸ್ಥಾನದಲ್ಲಿದೆ. (ಮೊದಲನೆಯದ್ದು ಟೆಮೆನ್ ಗ್ಲಾಂಗ್ ಜಿಲ್ಲೆ) ಅಲ್ಲಲ್ಲಿ ಪ್ರತಿ ಹತ್ತು ಕಿ.ಮೀ.ಗೊಮ್ಮೆ ನೀತಿ ನಿಯಮಗಳ ಬದಲಾವಣೆ ಕಾಣಿಸುವ ಸಮುದಾಯಗಳ ಬಿಗಿ ಹಿಡಿತ ಇಲ್ಲಿದೆ. ಸ್ಥಳೀಯ ಜನ ಬೆಂಬಲ ಅಥವಾ ಗುರುತಿನ ವ್ಯಕ್ತಿ ಇಲ್ಲದೆ ಇಲ್ಲಿ ತಿರುಗುವುದು ತುಂಬಾ ಕಷ್ಟಕರವಾದುದು. ಹೀಗೆ ಹತ್ತು ಹಲವು ಸಾಂಪ್ರದಾಯಿಕ ಸ್ಥಳೀಯ ಮಹತ್ವದ ಆಯಾ ಜನಜೀವನದ ಸಾಂಪ್ರದಾಯಿಕತೆಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕೆಲವು ಹಳ್ಳಿಗಳು ಮತ್ತು ಸ್ಥಳಗಳು ಪ್ರವಾಸಿಗರ ಪಟ್ಟಿಯಲ್ಲಿ ವಿಶೇಷ ಸ್ಥಾನಮಾನದಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಪ್ರಮುಖವಾಗಿ ಆಯಾ ಜನಾಂಗದ ಪ್ರಮುಖ ಮೂಲ ಸ್ಥಳಗಳು ಮತ್ತು ತೀರ ಒಳ ಭಾಗದಲ್ಲೂ ಅದೇ ರೀತಿಯ ಜೀವನ ಶೈಲಿ ಮತ್ತು ನಿಗದಿತ ವೃತ್ತದೊಳಗೆ ಜೀವನ ನಿರ್ವಹಿಸುತ್ತಿರುವ ಗುಂಪುಗಳ ಕಾರಣ ಹಲವು ಹಳ್ಳಿಗಳು ಇಲ್ಲಿ ಆಕರ್ಷಕ. ತೀರ ಬೆಳಗ್ಗಿನ ಜಾವ ಚಿಕ್ಕ ಹೋಟೆಲ್ಲೊಂದನ್ನು ಆರಿಸಿಕೊಂಡು ಅಲ್ಲಿ ಎದುರಿಗೆ ನಿಂತು ಸರಿಯಾಗಿ ಸುಡಿಸಿಕೊಂಡ ಸಾಲು ಸಾಲು ಪರಾಠಗಳನ್ನು ತಿಂದು, ಎರಡೂವರೆ ಲೋಟ ಚಹ ಹೀರಿ ಹೊರಟಾಗ ಮಂಜುಗತ್ತಲಿಂದ ಬೆಳಕು ಈಚೆಗೆ ಹರಿಯುತ್ತಿತ್ತು. ರಾ.ಹೆ. 39 ಹತ್ತಿಕೊಂಡು ಹೊರಟವರಿಗೆ ನಗರದಿಂದ ಹೊರ ಹೊರಡುವ ಸ್ಥಳ "ಚಿಂಗ್ ಮರೋಂಗ್" ತಲುಪಿದಾಗ ಆಗಲೇ ದೂರದ "ಮಯೋ"ಗೆ ಹೊರಡುವ ವಾಹನಗಳಲ್ಲಿ ಸಾಮಾನು ತುಂಬುವ ಭರಾಟೆ ನಡೆದಿತ್ತು. 93 ಪ್ರಮೀಳೆಯರ ನಾಡಿನಲ್ಲಿ ಈ ದಿಕ್ಕಿಗೇ ಇದೆ ರಾಜಮಾರ್‌ಗ ಇಲ್ಲಿಂದಲೇ ವಾಹನಗಳು ಚಲಿಸುತ್ತವೆ. ಅದರಲ್ಲೂ "ಮಯೋ"ಗೆ ಹೊರಡುವ ವಾಹನಗಳು ತೀರ ಬೆಳಗ್ಗೆ ಹೊರಡುತ್ತವೆ. ಕಾರಣ ಆ ಸುತ್ತು ಬಳಸು ದಾರಿಯಲ್ಲಿ ಕಂಡಲ್ಲೆಲ್ಲ ನಿಂತು ಚಲಿಸುವ ವಾಹನ ಮಯೋ ತಲುಪುವಾಗ ಕನಿಷ್ಠ ಮಧ್ಯಾಹ್ನ ಆಗುತ್ತದೆ. ಅಲ್ಲಿಂದ ಹಿಂದಿರುಗುವುದೂ ಆಗಬೇಕಲ್ಲ. ಜೊತೆಗೆ ದಾರಿಯ ಮೇಲೆ ಸಿಕ್ಕುವ ಪ್ಸ್ಟಾಂಗ್ ಬಾಮ್, ಆವಾಂಗ್, ಸೆಕ್ಮಾಯಿ, ಆವಾಂಗ್ ಸೆಕ್ಮಾಯಿ, ಕಾಂಘ್‍ಥೋಗ್ಭಿ, ಕುರು ಪೊಕ್ಪಿ, ಸಪರ್ಮೇನಿಯಾ, ಲಂಗ್ ಝೆಲ್, ಕೈಥಮಂಡಿ, ಕಾಂಗ್ ಪೊಕ್ಪಿ, ಕಾಟ ಮೊಯಿ, ನ್ಯೂ ಕುರಾಂಗ್, ಪುನಿ ಸೆಕ್ಮಾಯಿ, ಲೈರೋಚಿಂಗ್, ಕೈಭಿನಾಮ್, ಮರ್ರಮ್, ಫಖೇನ್, ಖೈರಲ ಝಿಪ್ಸಿ, ತಡುಪಿ ... ಇಲ್ಲಿಂದ ಮಯೋ... ಹೀಗೆ ಇವಿಷ್ಟು ಊರುಗಳಿಗೂ ಈ ವಿಂಗರ್ ಅಥವಾ ಮಾರುತಿ ವ್ಯಾನಿನ ಸರ್ವೀಸು ಕೊಡಲೇಬೇಕು. ತಪ್ಪಿ ನೀವು ಹೊರಟುಹೋದಿರೋ, ಒಂದೇ ಸೀಟು ಅಂತಾ ನಿಮ್ಮ ವಾಹನ ಚಲಾಯಿಸ್ಕೊಂಡು ಹೋದರೆ ನಾಳೆಯಿಂದ ಆ ರಸ್ತೆಯ ಮೇಲೆ ನಿಮ್ಮ ವಾಹನಕ್ಕೆ ಪ್ರವೇಶವಿಲ್ಲ. ಹಾಗಾಗಿ ಯಾವ ವಾಹನಗಳೂ, ಕೈ ಮಾಡಿದವನಿದ್ದರೆ ಖಾಲಿ ಇದ್ದರೆ ಬಿಟ್ಟುಹೋಗುವ ಸಂಭವನೀಯತೆ ತೀರ ಕಡಿಮೆ. ಯಾವ ರೀತಿಯಲ್ಲೂ ಮುಖ್ಯ ರಸ್ತೆಯ ಆಚೆಗಿರುವ ಸಮುದಾಯಗಳ ವಿರೋಧ ಕಟ್ಟಿಕೊಂಡು ಬದುಕುವ ಪರಿಸ್ಥಿತಿ ಇಲ್ಲ. ಸುಮ್ಮನೆ ಎರಡು ದಿನದ ಪ್ರಮೀಳೆಯರ ನಾಡಿನಲ್ಲಿ 94 ಪ್ರವಾಸ ಮಾಡುವ ಸಂದರ್ಶಕರಿಗೆ ಇವ್ಯಾವುದು ತಿಳಿಯುವುದಿಲ್ಲ. ಹಿಂದೊಮ್ಮೆ ಯಾರೋ ನುಡಿದಿದ್ದ "ಭಾರತದ ಆಭರಣ" ಯಾವ ಲೆಕ್ಕದಲ್ಲಿ ಹೇಳಿದ್ದರೋ ನನಗಿವತ್ತಿಗೂ ಅರ್ಥವಾಗಿಲ್ಲ. ಹಾಗಾಗಿ ನಾನು ಹೊರಟ ಕ್ಷಣದಿಂದಲೇ ಮೊದಲೇ ನಿರ್ಧರಿಸಿದ್ದ ಊರಿನ ವರೆಗೂ ಹೊರಡುವ ಯೋಜನೆ ಇತ್ತಾದರೂ ಹಾಗೆ ಯಾಕೆ ಎಂದು ಹಲವು ಬಾರಿ ಪ್ರಶ್ನಿಸಿದ್ದೆ. ಅವನು ಮೊದಲಿಗೆ ನನ್ನ ಒಬ್ಬನನ್ನೇ ಕಳುಹಿಸಲು ಸುತಾರಾಂ ಒಪ್ಪಿರಲಿಲ್ಲ. ಕೊನೆಗೆ ಇವತ್ತು ಮರ್ರಂ ತಲುಪುವ ಹೊತ್ತಿಗೇನೆ ಅರ್ಥವಾಗಿ ಹೋಗಿತ್ತು. ಎಲ್ಲೆಂದರಲ್ಲಿ ಸೈನ್ ಬೋರ್ಡು ಅಥವಾ ಕಂಡವರನ್ನು ಕೇಳಿ ದಕ್ಕಿಸಿಕೊಳ್ಳಬಹುದಾದ ಊರುಗಳೆ ಇವಲ್ಲ ಎಂದು ಅದಕ್ಕಾಗೇ ಅವನು ನಾನು ಒಬ್ಬನೆ ಓಡಾಡುವುದಾಗಿ ಹೇಳಿದರೂ ಬಿಡದೆ ಹೋಗಿದ್ದು. ಎಲ್ಲಾ ಊರುಗಳ ಜನರಿಗೆ ಕೇವಲ ಅವರ ಊರಿನಾಚೀಚೆಯ ಊರು ಬಿಟ್ರೆ ಬೇರೆ ಗೊತ್ತಿಲ್ಲ. ಇನ್ನು ಅನಾಮತ್ತಾಗಿ ಐವತ್ತು ಅರವತ್ತು ಕಿ.ಮೀ. ದೂರದ "ಯಾಂಖುಲ್ಲೇನ್" ಕೇಳಿದರೆ ಹೇಗೆ ಗೊತ್ತಾದೀತು..? (ಅದೂ ತೀರಾ ಸೇನಾಪತಿಯ ಜಿಲ್ಲೆಯಲ್ಲಿ ಇದ್ದರೂ ಹೆಚ್ಚಾಗಿ ಪಕ್ಕದ ನಾಗಾಲ್ಯಾಂಡ್‍ಗೆ ಹೋಗುವ ಇನ್ನೊಂದು ರಸ್ತೆಯಲ್ಲಿದೆ. ಅದನ್ನು "ಮರ್ರಮ್ - ಪರೇನೆ" 110 ಕಿಮಿ. ಹೈವೆ ಎನ್ನುತ್ತಾರೆ. ಹೀಗಿದ್ದರಂತೂ ಮುಗಿದೇ ಹೋಯಿತು.) ಹಾಗಾಗಿ ಪ್ರತಿ ಊರಿನ ಅಂತರದಲ್ಲೂ ನಮ್ಮ ಗುರಿಯ ಊರನ್ನು ವಿಚಾರಿಸಿ ಕಾರು ಚಲಾಯಿಸುವಾಗ ಕೊನೆಯಲ್ಲೊಬ್ಬ ಹೇಳಿದ. "ಅದು ಇಲ್ಲೇ ಇದೆ.. ಆದರೆ ಅಲ್ಲಿಗೆ ಹೋಗಿ ಇವತ್ತೇ ಹಿಂದಿರುಗಿ ಬರೋಕಾಗಲ್ಲ. ಅದು ಮರ್ರಂನಿಂದ ರೈಟಿಗೆ ಹೋಗ್ಬೇಕು.. " ಅಂದ. 95 ಪ್ರಮೀಳೆಯರ ನಾಡಿನಲ್ಲಿ "ಮತ್ತೇ ಮಖೇಲ್ (ಇದು ನಾಗಾ ಬುಡಕಟ್ಟು ಜನಾಂಗ ಮೊದಲಿಗೆ ಬಂದು ಇಲ್ಲಿಂದಲೇ ಎಲ್ಲಾ ಕಡೆಯಲ್ಲೂ ಹರಡಿಕೊಂಡ ಇತಿಹಾಸ ಇದೆ)ಗೆ ಹೋಗೋದು.. ? " "ಅದು ಸೀದಾ ಹೋಗಿ ತಡುಪಿಯಿಂದ ಲೆಫ್ಟಿಗೆ.. " "ಈ ತಡುಪಿ ಎಲ್ಲಿದೆ.. ? ಎಷ್ಟು ದೂರಾ ..? " "...ತಡುಪಿಗೆ ಮುಂಚೆ ಪೆಟ್ರೋಲ್ ತುಂಬ್ಕೊಳ್ಳಿ. ಮಧ್ಯೆ ಘಾಟ್ ರಸ್ತೆಲಿ ಎಲ್ಲೂ ನಿಲ್ಬೇಡಿ. ಲೋಕಲ್ ಹತ್ರ ಮಾತಾಡ್ಬೇಡಿ. ಹೀಗೆ ನಿಲ್ತಾ ಹೋದ್ರೆ ನಾಳೆ ಮುಟ್ತೀರಿ..." ಅಂದ. ಮರು ಮಾತಾಡದೆ ನಾನು ಎದ್ದು ಸ್ಟೇರಿಂಗ್ ಹಿಡಿದೆ. ಸತತ ನಾಲ್ಕು ತಾಸುಗಳ ಡ್ರೈವಿಂಗ್ ನಂತರ ನಡು ಮಧ್ಯಾಹ್ನ "ತಡುಪಿ" ಸರ್ಕಲ್‍ನಲ್ಲಿ ನಿಂತು ಓನಿಲ್ ಮೂಲಕ "ಮಖೇಲ್"ಗೆ ದಾರಿ ಕೇಳಿದರೆ ಎಲ್ಲಾ ಬ್ಬೆ ಬ್ಬೆ ಬ್ಬೆ... ಅಂತಾರೆ. ಕಾರಣ ಯಾರಿಗೂ ಮಖೇಲ್ ಸಾಯಲಿ ತಡುಪಿಯಲ್ಲೇ ಮಿಥಾಲಾಯೇನ್ ಭಾಷೆ ಬರುತ್ತಿಲ್ಲ. ಓನಿಲ್ ಕೊಂಚ ಸಮುದಾಯದ ಭಾಷೆ ಮಾತಾಡುತ್ತಾನಾದರೂ ಇಲ್ಲಿಯದು ಯಾವುದು ಅವನಿಗೇ ಗೊತ್ತಾಗುತ್ತಿಲ್ಲ. ಕೊನೆಗೆ ಅಂತರ್ಜಾಲದಿಂದ ಸಂಗ್ರಹಿಸಿದ್ದ "ಮಖೇಲ್"ನ ಚಿತ್ರ ತೋರಿಸಿ ಇದು...ಇದು ಎನ್ನುತ್ತ ಪ್ರಶ್ನಿಸಿದರೆ ಬಲಭಾಗದ ಕಚ್ಚಾ ರಸ್ತೆ ತೋರಿಸಿದರು. ಸರಿ ಎನ್ನುತ್ತಾ ಮತ್ತೊಮ್ಮೆ ಖಚಿತಪಡಿಸಿಕೊಂಡು ಅಲ್ಲಿಳಿದು ಅಕ್ಷರಶ: ಗದ್ದೆಯಂತಹ ರಸ್ತೆಗಳಲ್ಲಿ ಕಾರು ನುಗ್ಗಿಸಿ, ಕೆಲವೊಮ್ಮೆ ತೀರಾ ನಿಲ್ಲಿಸಿ ಕೆಳಗಿಳಿದು ರಸ್ತೆ ನೋಡಿಕೊಂಡು ಮುನ್ನುಗ್ಗಿದ್ದು ಇದೆ. ನಾಲ್ಕಾರು ಕಿ.ಮೀ. ನಮ್ಮನ್ನು ಸಂಶಯಾಸ್ಪದವಾಗಿ ನೋಡುತ್ತಿದ್ದ ಮುಖಗಳನ್ನು ತಪ್ಪಿಸುತ್ತಾ ಒಮ್ಮೆಲೆ ಏರಿಯನ್ನು ಏರಿ ನಿಂತರೆ ವಿಶಾಲ ಒಂದು ದಿಬ್ಬದ ಪಕ್ಕ ಗೋರಿಯಂತಹ ಜಾಗದಲ್ಲಿ ನಿಂತಿದ್ದೆ. ಎದುರಿಗೆ ಅಲ್ಲಲ್ಲಿ ಹಲವು ಭಗ್ನ ಅವಶೇಷಗಳ "ಮಖೇಲ್" ಇತ್ತು. ನಾಗಾ ಸಮುದಾಯದ ಮೂಲ ಹಳ್ಳಿ. ಅಷ್ಟು ದೂರದಲ್ಲಿ ಊರ ಮುಖಂಡನ ಮನೆ. ಮನೆಯ ಮುಂದಿನ ಬಾಗಿಲ ಜಾಗದಲ್ಲಿ ಎತ್ತರಕ್ಕೆ ಅಕ್ಷರಶ: ಅಳಿಲು, ಹಕ್ಕಿ, ಮೊಲ ಇತ್ಯಾದಿಗಳ ಚರ್ಮದ ತೋರಣ ಕಟ್ಟಲಾಗಿತ್ತು. ಅಷ್ಟು ದೂರದಲ್ಲಿ ಹಾವಿನ ಚರ್ಮವೂ ಪ್ರದರ್ಶನಕ್ಕಿತ್ತು. ಪ್ರಮೀಳೆಯರ ನಾಡಿನಲ್ಲಿ 96 ಅಲ್ಲೆ ಪಕ್ಕದ ಏರಿಯ ಮೇಲೆ ಇರುವಾ ಮರಕ್ಕೆ ವಿಶೇಷ ಭದ್ರತೆಯ ಆವಾರವನ್ನು ಕಲ್ಪಿಸಲಾಗಿದ್ದು, ಅದರಲ್ಲಿ ಸುತ್ತ ಮುತ್ತಲ ನಾಗಾ ಬುಡಕಟ್ಟುಗಳ ಊರಿನ ಹೆಸರು ಸೂಚಿಸಿ ಅವರೆಲ್ಲರ ಗುರುತರವಾದ ಜವಾಬ್ದಾರಿಯನ್ನು ಕೂಡಾ ದಾಖಲಿಸಲಾಗಿದೆ. ಮಖೇಲ್ : ಇದನ್ನು ಸೇನಾಪತಿ ಜಿಲ್ಲೆಯ ಪ್ರಮುಖ ಹಳ್ಳಿಯಾಗಿ ಗುರುತಿಸಲಾಗಿದ್ದು ಪ್ರವಾಸಿಗರನ್ನು ಆಕರ್ಷಿಸುವತ್ತ ಮಂಚೂಣಿಯಲ್ಲಿದ್ದು ಪ್ರಮುಖ ಮತ್ತು ನಾಗಾಗಳ ಮೂಲ ಸ್ಥಳಗಳೆಂದು, ಅವರನ್ನು ಅಧಿಕೃತ ಸ್ಥಳೀಯ ಜನರನ್ನಾಗಿಸಿಯೂ ದಾಖಲಿಸಿದೆ. ಆದರೆ ಇಲ್ಲಿಗೆ ತಲುಪುವಾಗ ಆಗುವ ಪ್ರಯಾಸ ಯಾವ ನಾಗಾ.. ಕುಕಿಗಳೂ ಬೇಡ ಎನ್ನಿಸುತ್ತದೆ. ಇದರಿಂದಾಗಿ ಬುಡಕಟ್ಟುಗಳ ಬಗ್ಗೆ ಅಭ್ಯಸಿಸುವ ಮತ್ತು ಅವರೊಂದಿಗೆ ಇದ್ದು ಸಂಶೋಧಿಸುವ ಜನರಿಗಾಗಿ ಈ ಹಳ್ಳಿಗಳ ಭಾಷೆ, ಸಂಸ್ಕೃತಿಯನ್ನು ತೋರಿಸುವ ಆ ಮೂಲಕ ಪ್ರವಾಸಿ ಜನರನ್ನು ಅಕರ್ಷಿಸುವ ಕೆಲಸವೂ ನಡೆಯುತ್ತಿದೆ. ಆದರೆ ರಸ್ತೆ ಮತ್ತು ಇಲ್ಲದ ಸಾರಿಗೆಯ ವ್ಯವಸ್ಥೆಯಿಂದಾಗಿ ಮಖೇಲ್ ಕೇವಲ ಹಳ್ಳಿಯಾಗಿಯೇ ಗೋಚರವಾಗುತ್ತದೆ. ಹೊರತಾಗಿ ಇದೊಂದು ಸಾಂಸ್ಕೃತಿಕ ಜನಜೀವನದ ವ್ಯವಸ್ಥೆಯನ್ನು ತೋರಿಸುವುದೇ ಇಲ್ಲ. ಪುರಾಣದ ಕಥೆ ಮತ್ತು ಅದರಲ್ಲಿ ದಾಖಲಿಸಲಾದ 97 ಪ್ರಮೀಳೆಯರ ನಾಡಿನಲ್ಲಿ ಪಾವಿತ್ರ್ಯತೆಯ ದೃಷ್ಟಿಯಿಂದ "ನಾಗಾ" ಹಾಗು "ಠೊಂಬ್" ಜನರ ಮುಂದುವರೆದ ಸಂಸ್ಕೃತಿಯ ಭಾಗ ಇದು. ಇಲ್ಲಿನ ಪ್ರಮುಖ ಪಾವಿತ್ರ್ಯದ ಮರವಾದ ಆಲದ ಮರ ಬುಡಕಟ್ಟುಗಳ ತಾಯಿಯ ವಾಸಸ್ಥಾನ ಎಂದು ನಂಬಲಾಗಿದೆ. ಅದೇ ರೀತಿ "ಮೊನೊಲಿಠ್ ಜಾತ್ರೆ" ಹಾಗು ಇದೇ ಮಖೇಲ್‍ನಿಂದ 3 ಕಿ.ಮೀ ದೂರ ಇರುವ "ಟ್ರೈ ಮೋನೊಲಿಠ್" ಕೂಡಾ ಆಕರ್ಷಣೆಯ ಪ್ರವಾಸಿ ಸ್ಥಳಗಳು. ಇದನ್ನು ಖ್ಯಾತ "ವೊಭ್ಹಿ" ಎಂದು ಕರೆಯಲಾಗುತ್ತಿದ್ದು ಅತಿ ದೊಡ್ಡ ಪುರಾತನ ಆಲದ ಮರದ ಪ್ರವಾಸಿ ಸ್ಥಳ ಸಂದರ್ಶಕರ ಯಾದಿಯಲ್ಲಿದೆ. ದಾರಿಯಲ್ಲೇ ಇದರ ಪವಿತ್ರ ಮರದ ಆವಾಸ ಸ್ಥಾನವಿದ್ದು ಅದಕ್ಕೆ ರಕ್ಷಣೆ ಒದಗಿಸಿ ಇಡಲಾಗಿದೆ. ನಾನು ಹೋದಾಗ ಅದನ್ನು ಸ್ವಚ್ಛವಾಗಿಡದೆ ಸುತ್ತ ಸಾಕಷ್ಟು ಎಲೆ ಕಸ ಕಡ್ಡಿಗಳು ಹರಡಿಕೊಂಡಿದ್ದವು. ಅದರ ಆವಾರದ ಮೇಲೆ ಬರೆದ ಪವಿತ್ರ ಮರ ಎನ್ನುವ ಫಲಕದಿಂದಾಗಿ ಮಾತ್ರ ಇದು ಗುರುತಿಗೆ ದಕ್ಕುತ್ತದೆ. ದಕ್ಷಿಣದಲ್ಲಿ 2 ಕಿ.ಮೀ. ದೂರ ಇರುವ "ಸಜೌಬಾ" ಆಲದ ಮರದೊಂದಿಗೆ ಪುರಾತನ ಯಾತ್ರಾ ಮತ್ತು ಪ್ರವಾಸಿ ಸ್ಥಳವಾಗಿ ಹೆಸರು ಮಾಡಿದ್ದರೆ ಅಲ್ಲಲ್ಲಿ ಶಿಲಾ ರಚನೆಗಳ ಗುಂಪು ಸ್ಥಳಗಳು ಇಲ್ಲಿನ ಪ್ರಮುಖ ಆಕರ್ಷಣೆಯ ಹಂತಗಳು. ಅದೇ ರೀತಿಯಲ್ಲಿ ಈ ಜಿಲ್ಲೆಯಲ್ಲಿ ಈವರೆಗೂ ಸಂಪೂರ್ಣವಾಗಿ ತೆರೆಯದಿರುವ ಗುಹೆಗಳ ಸಮೂಹವಾಗಿರುವ "ಡೈಖುಲ ಪ್ರಮೀಳೆಯರ ನಾಡಿನಲ್ಲಿ 98 ಹಾಗು ಫುಡಾ ಥಾಪೇಮ್" ಪ್ರಮುಖ ಗುಹೆಗಳ ಸರಣಿಯಲ್ಲಿದ್ದು ಇನ್ನ ಷ್ಟೆ ಹೊರಜಗತ್ತಿಗೆ ಪರಿಚಯವಾಗುವ ಕೆಲಸವಾಗಬೇಕಿದೆ. ಆದರೆ ಇವ್ಯಾವುದೂ ಸ್ಥಳೀಯರಿಗೂ ಮತ್ತು ಸುತ್ತಮುತ್ತಲಿನವರಿಗೂ ಯಾವುದೇ ಮಾಹಿತಿ ಅಥವಾ ಆಕರ್ಷಣೆಯ ಜಾಗವಾಗುಳಿದಿಲ್ಲ. ತೀರ ಪಕ್ಕದ ಊರಿನ ಹೊರತಾಗಿ ಮಾಹಿತಿಯೂ ಸಿಕ್ಕುವುದಿಲ್ಲ. ಮಣಿಪುರ ಪ್ರವಾಸೋದ್ಯಮ ನೀಡುವ ಮಾಹಿತಿ ಅಪ್ಪಟ ಅರೆಬರೆ. ನಂಬಿಕೊಂಡು ಹೊರಟಲ್ಲಿ ಅವತ್ತಿಗೆ ಆದೇ ಹಳ್ಳಿಯಲ್ಲಿ ವಾಸ ಮಾಡುವ ಪರಿಸ್ಥಿತಿ ಬಂದೀತು ಕೂಡಾ. ತೀರ ಅಲ್ಲಿಂದ ಹೊರಟು ತಡುಪಿ ಸರ್ಕಲ್ಲಿಗೆ ವಾಪಸ್ಸು ಬರುವವರೆಗೆ ಕುಡಿಯಲು ನೀರೂ ಸಿಗುವುದಿಲ್ಲ. ಕಾರಣ ಯಾವ ಮನೆಗಳ ಜನರೂ ಬಾಗಿಲು ತೆರೆದುಕೊಂಡಿದ್ದು ಕಾಣಲಿಲ್ಲ. ಅಲ್ಲಲ್ಲಿ ಒಂಚೂರು ಓಡಾಟ ಬಿಟ್ಟರೆ ಸಂಪೂರ್ಣ ಹಳ್ಳಿ ಮನೆಯೊಳಗೆ ಮುಚ್ಚಿಕೊಂಡಿರುವ ಅಭ್ಯಾಸ ಎದ್ದು ಕಾಣುತ್ತಿತ್ತು. "ತಡುಪಿ" ಸರ್ಕಲ್ ತಲುಪಿ ಮೊದಲು ಚಿಕ್ಕ ಟೀ ಅಂಗಡಿಯಲ್ಲಿ ಹೊಟ್ಟೆಗೆ ಚಹದ ಜೊತೆಗೆ ಬಿಸ್ಕೆಟ್ ಭರಿಸಿದೆವು. ಕಾರಣ ಅಲ್ಲಿಂದ ಮಾವೋ ತಲುಪಿದರೇನೆ ಮುಂದೆ ನಮಗೆ ಊಟದ ವ್ಯವಸ್ಥೆ. ಅಲ್ಲಿಯವರೆಗೆ ಇನ್ನೇನೂ ಸಿಗುವುದಿಲ್ಲ. ಮಾವೋ ಕೂಡಾ ಕೊನೆಯ ಸರಹದ್ದಿನ ನಗರ ಎನ್ನುವ ಪ್ರದೇಶವಾಗಿದ್ದು, ಚಾರಣಿಗರಿಗೆ ಹೆಚ್ಚಿನ ಆಕರ್ಷಕ ತಾಣ ಇದು. ಕಾರಣ ಇಲ್ಲಿಂದಲೇ ಸುಪ್ರಸಿದ್ಧ ಝುಕೋ ವ್ಯಾಲಿಗೆ ಚಾರಣ ಆರಂಭಿಸಲಾಗುತ್ತದೆ. ಮಯೋ : ಇದು ಮಣಿಪುರದ ಕಟ್ಟ ಕಡೆಯ ನಗರವಾಗಿದ್ದು ಕೊಹಿಮಾದಿಂದ ಕೇವಲ 27 ಕಿ.ಮೀ. ದೂರದಲ್ಲಿದ್ದು ಸದ್ಯ ಮಣಿಪುರದಲ್ಲೇ ಅತ್ಯಂತ ಗಡಿಬಿಡಿಯ ಪಟ್ಟಣ. ಸದಾ ಜನರು ಮತ್ತು ಚಟುವಟಿಕೆಗಳಿಂದ ಗಿಜಿಗುಡುವ ನಗರಿಯಾಗಿದೆ. ಇದರ ಸುತ್ತುವರೆದಿರುವ ಪರ್ವತ ಪ್ರದೇಶ ಮತ್ತು ಅದ್ಭುತ ಹಳ್ಳಿಗಳ ದೃಶ್ಯದಿಂದಾಗಿ ಮಣಿಪುರದ ಹೆಬ್ಬಾಗಿಲು ಎಂದು ಇದನ್ನು ಕರೆಯಲಾಗುತ್ತಿದೆ. ನಗರ ಎಂದರೆ ತಕ್ಕಮಟ್ಟಿಗೆ ದೊಡ್ಡ ಊರು ಅಷ್ಟೇ. ಪೂವಾ ಮೈ, ಥಾಂಗಾಲ್ ಮತ್ತು ಮೈಯಾಮೈ ಅಥವಾ ಮಾಯಾಮಿ ಗಳಿರುವ ಊರಾದ ಮಾವೋ ಮೂಲತ ನಾಗಾಗಳದ್ದೇ ಹಿಡಿತ ಹೊಂದಿರುವ 99 ಪ್ರಮೀಳೆಯರ ನಾಡಿನಲ್ಲಿ ಊರು. ಆದರೆ ಇಲ್ಲಿ "ಅನ್ಗಾಮಿ- ಪೋಚುರಿ " ಮುಖ್ಯ ಭಾಷೆಯಾಗಿದ್ದು ಮಿಥಾಲೇಯಿನ್ ಕೂಡಾ ಅಷ್ಟಾಗಿ ನಡೆಯುತ್ತಿಲ್ಲ. ಇದು ಟಿಬೇಟ್ - ಬರ್ಮನ್‍ಗಳ ಪ್ರಭಾವಕ್ಕೊಳಗಾದಾಗ ಜನಿಸಿದ ಭಾಷೆ. ಆದರೆ ಮಾವೋ–ಗೇಟ್ ಬರುತ್ತಿದ್ದಂತೆ ಇದರದ್ದೇ ಅಬ್ಬರ ಜಾಸ್ತಿ. ತುಂಬಾ ಚೆಂದದ ಊರು ಮಾವೊ .. ಹೆಚ್ಚಿನಂಶ ಮಳೆಗಾಲದ ನಂತರದ ದಿನಗಳಲ್ಲಿ ಮಾತ್ರ. "ಝುಕೋ ವ್ಯಾಲಿ" ಇಂತದ್ದೇ ಅದ್ಬುತ ಆಕರ್ಷಣೆಯನ್ನು ಹೊಂದಿದ್ದು ಅದರ ಅಕ್ಕಪಕ್ಕದ ಕಣಿವೆ ಎನ್ನುವುದು ಇಲ್ಲಿಯವರೆಗೂ ಹೊರ ಜಗತ್ತಿಗೆ ತೆರೆದುಕೊಳ್ಳದ ತಾಣವಾಗಿಯೇ ಉಳಿದಿದೆ. ನಾಗಾಗಳು ನಂಬುವ ಪ್ರಮುಖ ಸ್ಥಳವಾಗಿರುವ ಅನಾವರಣಗೊಳ್ಳದ ಕಣಿವೆ ಮತ್ತು ಗುಹೆಗಳ ಶ್ರೇಣಿಯಲ್ಲಿ "ಹಯೋ ಲೈ ಪೈ", "ಸುಪಾವೋ ಡೈಖುಲ್ಲ.." ಝುಕೋ ವ್ಯಾಲಿಯ ಪ್ರಮುಖ ಭಾಗವಾಗಿದ್ದು ಇದೇ ಶ್ರೇಣಿಯಲ್ಲಿ ಇರುವ "ಮಯೋ" ಅತ್ಯಂತ ಪುರಾತನ ಪರ್ವತ ಪ್ರದೇಶವಾಗಿದ್ದು ನಾಗಾಲ್ಯಾಂಡ್ ಮತ್ತು ಮಣಿಪುರ ಸರಹದ್ದಿನಲ್ಲಿದೆ. ಝುಕೋ ವ್ಯಾಲಿ : ಪ್ರಮುಖವಾಗಿ ಸೇನಾಪತಿ ಜಿಲ್ಲೆಯಲ್ಲಿ ನೋಡಲೇಬೇಕಾದ ಮತ್ತು ಅರಿತುಕೊಳ್ಳಬೇಕಾದ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನ ಸಲ್ಲುತ್ತಿರುವ ಸ್ಥಳಗಳಲ್ಲಿ ಝುಕೋ ವ್ಯಾಲಿ ಕೂಡಾ ಒಂದು. ಝುಕೋ ಅತ್ಯಂತ ಹಸಿರು ಕಣಿವೆ ಪ್ರದೇಶವಾಗಿದ್ದು ಹೆಚ್ಚಿನ ಆಕರ್ಷಣೀಯ ಪ್ರದೇಶವಾಗಿಯೂ ಗುರುತಿಸಲ್ಪಟ್ಟಿದೆ. ಇದನ್ನು ಮೋಡದ ಪ್ರದೇಶ ಎಂದೂ ಕರೆಯಲಾಗುತ್ತಿದ್ದು ಜನವರಿ ಮತ್ತು ಫೆಬ್ರುವರಿಗಳಲ್ಲಿ ಇಲ್ಲಿ ಕೈಗೆಟುಕುವಷ್ಟು ಸನಿಹದಲ್ಲಿ ಮೋಡಗಳು ಆವರಿಸಿರುತ್ತವೆ. ಮಣಿಪುರದ ಅತ್ಯಂತ ಎತ್ತರದ ಪರ್ವತ ಪ್ರದೇಶ "ಈಸೋ" ಇಲ್ಲಿಯೇ ಇದ್ದು ಝುಕೋ ಕಣಿವೆಯ ಹಿಂಭಾಗದಲ್ಲಿ ಆವರಣದ ಗೋಡೆಯಂತೆ ನಿಂತಿದೆ. ಚಳಿಗಾಲದಲ್ಲಿ ಹಿಮದ ಹಾರಾಟಕ್ಕೂ, ಬೇಸಿಗೆ ಮತ್ತು ವಸಂತಕಾಲದಲ್ಲಿ ಚಿಗುರು ಹೂವಿನ ಅದ್ಭುತ ಅರಳುವಿಕೆಯನ್ನು ನೋಡಲು ಅತ್ಯಂತ ಪ್ರಶಸ್ತವಾದ, ಮಯೋ ನಗರದ ಸರಹದ್ದಿಗೆ ಹೊಂದಿಕೊಂಡಿರುವ ಕಣಿವೆ "ಝುಕೋ ವ್ಯಾಲಿ". ಪ್ರಮೀಳೆಯರ ನಾಡಿನಲ್ಲಿ 100 ಇದನ್ನು ಸಂದರ್ಶಿಸದಿದ್ದರೆ ಮಣಿಪುರದ ಪ್ರವಾಸ ವ್ಯರ್ಥವೇ ಎಂದು ಹೇಳಬೇಕು. ಅಗಾಧ ಹೂವಿನ ರಾಶಿಯ ಕಣಿವೆ ಮತ್ತು ಪರ್ವತದ ಅರ್ಧಕ್ಕೂ ಹೆಚ್ಚಿನ ಭಾಗವನ್ನು ಆಕ್ರಮಿಸಿರುವ ಮೋಡಗಳ ಆವೃತ್ತ ಚೆಂದ ದೃಶ್ಯ ಇಲ್ಲಿ ಸಾಮಾನ್ಯ.. ಎಲ್ಲಿ ಬೇಕಾದರೂ ನಿಂತು ಚಿತ್ರಗಳನ್ನು ತೆಗೆಯಲು ಇಲ್ಲಿ ಪ್ರಕೃತಿ ಹೇಳಿ ಮಾಡಿಸಿದ ಹಾಗಿದೆ. ಆದರೆ ಒಂದು ನಿಜ ಝುಕೋ ಕೈಗೆಟುಕಬೇಕಾದರೆ ಅಲ್ಲಿಂದ ಚಾರಣ ಮಾಡಿಯೇ ಹೋಗಬೇಕಾಗುತ್ತದೆ. ಇಲ್ಲವಾದರೆ ಇಲ್ಲಿಂದ 30 ಕಿ.ಮೀ. ದೂರ ಕೊಹಿಮಾಗೆ ತೆರಳಿ ಅಲ್ಲಿಂದ ವಾಹನದ ಮೂಲಕ ಝುಕೋ ಪಾದವನ್ನು ತಲುಪಬಹುದು. ಅದ್ಭುತ ನಿಸರ್‌ಗದ ಝುಕೋ ಮಣಿಪುರದ ಇತರ ಪ್ರವಾಸಿ ಕ್ಷೇತ್ರಗಳಿಗಿಂತ ಭಿನ್ನವಾಗಿದೆ ಎನ್ನುವುದೇ ವಿಶೇಷ. ಇಲ್ಲಿಂದ ಹಿಮ್ಮೊಗದ ಪಯಣದ ವಿನ: ಬೇರೆ ದಾರಿ ಇಲ್ಲ ಕಾರಣ ಯಾವುದೇ ಒಳ ರಸ್ತೆಗಳೂ ಇಲ್ಲದ ಕೇವಲ ಈ ಹೆದ್ದಾರಿ ಹೊರತುಪಡಿಸಿದರೆ ಉತ್ತರ ಮಣಿಪುರದಿಂದ ದಕ್ಷಿಣದತ್ತ ಸಂಪರ್ಕ ಸಾಧ್ಯವೇ ಇಲ್ಲ. ಕಾರಣ ಸಾಲು ಪರ್ವತ ಸೆರಗಿನಲ್ಲಿರುವ ಸೇನಾಪತಿ ಜಿಲ್ಲೆಯನ್ನು ಆವರಿಸಿರುವ ಪರಿಯಿಂದಾಗಿ ಪರ್ವತದ ಸೆರಗಿನ ಹಿಮ್ಮೊಗದ ಪಯಣ ಅನಿವಾರ್ಯ. ಹೀಗಾಗಿ ಮತ್ತೆ ಮುಖ್ಯರಸ್ತೆಯಲ್ಲಿ "ಮರ್ರಂ"ವರೆಗೆ ಹಿಂದಕ್ಕೆ ಬಂದು ಅಲ್ಲಿಂದ ಎಡಕ್ಕೆ ಅಂದರೆ ಬರುವಾಗ ಬಲಕ್ಕೆ ತಿರುಗಿ ಏರಿ ಮೇಲೆ ಕಾರು ಚಲಾಯಿಸಿದೆ. ಇದು ಮರ್ರಮ್ - ಪರೇನೆ ರಸ್ತೆ ಸುಮಾರು 110 ಕಿ.ಮೆ. ಉದ್ದ ರಾ.ಹೆ. ಅಂತೆ. ಆದರೆ ಸಂಖ್ಯೆ ಲಭಿಸಿಲ್ಲ. ಈ ಪರೇನ್ ಅನ್ನೋದು ಪಕ್ಕದ ರಾಜ್ಯದ ಊರು. ಆದರೆ ತುಂಬಾ ಖುಶಿಯಾಗುವಂತೆ ಈ ರಸ್ತೆಯನ್ನು ಆಗ ಷ್ಟೆ ನೇರ್ಪುಗೊಳಿಸತೊಡಗಿದ್ದರು. ಅಷ್ಟಾಗಿ ತೀರ ಕೆಟ್ಟಿರದಿದ್ದರೂ ರಸ್ತೆ ದುರಸ್ತಿಯ ಅಗತ್ಯತೆ ತುಂಬಾ ಇದೆ. ಕಾರಣ ಸಾಕಷ್ಟು ಅಗಲ ರಸ್ತೆ ಅಪೂಟು ಪರ್ವತದ ಸೊಂಟದ ಮೇಲೆ ಕೊರೆಯಲಾಗಿದೆ. ಇದರಿಂದಾಗಿ ಎಲ್ಲೂ ರಸ್ತೆಯನ್ನು ಹೊರಳಿಸಿ ಬೇರೆ ಕಡೆಗೆ ಟಾಫಿಕ್ಕು ತಿರುಗಿಸುವ ಯೋಜನೆ ಸಾಧುವೇ ಆಗಲಾರದು. ಅಷ್ಟಕ್ಕೂ ಇಲ್ಲಿ ಟ್ರಾಫಿಕ್ಕು ಎಲ್ಲಿಂದ ಬರುತ್ತೆ..? ಒಟ್ಟಾರೆ ಈ ರಸ್ತೆಯಲ್ಲಿ 40. ಕಿ.ಮಿ. ಚಲಿಸಿದರೂ ಸಿಕ್ಕಿದ್ದು ಲಾರಿಗಳು. ಅವೂ ಟಾರು ಹೊಡೆಯುತ್ತಿದ್ದ ಕಾಂಟ್ರಾಕ್ಟುದಾರನದು. ಮತ್ತೆ..? 101 ಪ್ರಮೀಳೆಯರ ನಾಡಿನಲ್ಲಿ ಇನ್ನೇನಿಲ್ಲ ಈ ಅಗಾಧ ಪರ್ವತದ ಸೊಂಟದ ಮೇಲೆ ರಸ್ತೆಗಾಗಿ ಇದನ್ನು ಅಡ್ಡಡ್ಡ ಕೊರೆದಿದ್ದಾರಲ್ಲ.. ಹಾಡು ಹಗಲಲ್ಲೇ ಗುಡ್ಡ ಕುಸಿತ ಇರುತ್ತೆ. ಯಾವಾಗ ಎಲ್ಲಿ ರಸ್ತೆ ಹಿಸಿದು ಬೀಳುತ್ತದೋ ಗೊತ್ತಿಲ್ಲ. ಆಚೆ ಕಡೆಯವರಿಗೆ ಇದು ಮಾಮೂಲು. ಅವರು ದಾಟಿ ಮರ್ರಂಗೆ ಬರಲೇ ಹೊರಟಿರುತ್ತಾರಾದ್ದರಿಂದ ಬಿದ್ದ ಮಣ್ಣು ಮಸಿ ಅಂತಿರೋದನ್ನ ಹತ್ತಿ ಬರುತ್ತಾರೆ. ಆದರೆ ನನ್ನಂತೆ ಯಾವತ್ತೋ ಬರುವವನು... ಸಾಮಾನು ಇತ್ಯಾದಿ ಸಾಗುವ ಪರೇನ್‍ಗೆ ಹೋಗುವ ವಾಹನ ಏನು ಮಾಡ್ಬೇಕು. ಅದಕ್ಕೆ ಅಚೀಚೆ ಸಾಕಷ್ಟು ಜಾಗ ಬಿಟ್ಟಿರುತ್ತಾರೆ. ಎಡಕ್ಕೆ ಬಿದ್ದರೆ ನೂರಾರು ಅಡಿ ಆಳದ "ಬರಾಕ" ನದಿ ಬಾಯ್ತೆರೆದು ನಿಂತಿರುತ್ತದೆ. ಬಲಕ್ಕೆ ಕುಸಿಯಲು ಕಾದ "ವಿಲೊಂಗ್" ಪರ್ವತ ಶ್ರೇಣಿ. ತೀರ ಇಪ್ಪತ್ತು ಕಿ.ಮೀ. ಚಲಿಸಿದ ಮೇಲೆ ಚಿಕ್ಕ ಒಂದು ಅಸ್ಸಾಂ ರೈಫಲ್ಸ್‌ನವರ ಬಿಡಾರ ಸಿಕ್ಕಿತು. ಸರಿ ಅಲ್ಲಿ ನಿಂತು ಮಾತಾಡಿಕೊಂಡು ಹೊರಡುವುದಕ್ಕೆ ಮೊದಲು ಒಮ್ಮೆ ಅಲ್ಲಿದ್ದ ಸ್ಥಳೀಯರ ಕೆಲವು ಚಿತ್ರ ಕ್ಲಿಕ್ಕಿಸಿದೆ. ಕಾರಣ ಇವರೆಲ್ಲಾ ಅಪ್ಪಟ ಕುಕಿಗಳು ಮತ್ತು ಮಾತು ಮಾತಿಗೆ ಬೀಡಿ ಕೈಗಿಡಲು ಬರುವ ಜನರಿರುವ ಈ ಊರಿನ ಹೆಸರು "ಸಂಘಾಕುಮೈ" ಇಪತ್ತೈದು ಮನೆಗಳಿರುವ ಹಳ್ಳಿ. ಇಲ್ಲಿಗೆ ತಲುಪುವರೆಗೆ ನಮಗೆ "ವಿಲ್ಲೋಂಗ್ ಖುಲ್ಲೇನ್" ತಲುಪುವ ಯಾವ ಭರವಸೆಯೂ ಇರಲಿಲ್ಲ. ಹಾಗಾಗಿ ಅತಿ ಪ್ರಮುಖ ಈ ಶಿಲಾಯುಗದ ಸ್ಥಳಾನ್ವೇಷಣೆಯಲ್ಲಿ ಈ "ಸಂಘಾಕುಮೈ" ಮುಖ್ಯ ಪಾಯಿಂಟ್. ಅಲ್ಲಿಂದ ನೇರ ರಸ್ತೆಯಲ್ಲಿ ಆರು ಕಿ.ಮಿ. ಚಲಿಸಿದರೆ ಎದುರಿಗೆ ಸ್ವಾಗತ ಕಮಾನಿನೊಂದಿಗೆ ಎದುರಾಗುತ್ತದೆ "ವಿಲ್ಲಾಂಗ್ ಖುಲ್ಲೇನ್". ವಿಲ್ಲಾಂಗ್ ಖುಲ್ಲೇನ್ : ಪುರಾತನ ಕಾಲದ ಶಿಲಾಯುಗವನ್ನು ನೆನಪಿಸುವಂತಹ ಸ್ಥಳವನ್ನು ಹೊಂದಿರುವ ವಿಲ್ಲಾಂಗ್‍ನಲ್ಲಿ ಅದ್ಭುತವಾದ ಶಿಲಾರಚನೆಯನ್ನು ಕೃತಕವಾಗಿ ನಿರ್ಮಿಸಲಾಗಿದ್ದು ಅತಿ ಎತ್ತರದ ಶಿಲೆಯು 22 ಅಡಿಗೂ ಎತ್ತರವಿದೆ. ಇದರ ಔಚಿತ್ಯವೇನು ಇತ್ಯಾದಿ ಹಲವು ಬಾರಿ ಅಭ್ಯಾಸ ನಡೆದಿದ್ದರೂ ರಹಸ್ಯ ಮಾತ್ರ ಬಯಲಾಗಿಲ್ಲ. ಆದರೆ ಪರ್ವತದ ಇಳಿಜಾರಿನಲ್ಲಿ ಸ್ಥಾಪಿಸಲಾಗಿರುವ ಈ ಕಲ್ಲಿನ ಹಳೆಯ ಪಳೆಯುಳಿಕೆಯಂಥ ಶಿಲಾ ರಚನೆ ಮಾತ್ರ ತನ್ನ ಪ್ರಕೃತಿಯ ಪ್ರಮೀಳೆಯರ ನಾಡಿನಲ್ಲಿ 102 ಸುತ್ತಮುತ್ತಲಿನ ರಮಣೀಯತೆಯಿಂದಾಗಿ ತುಂಬ ಚೆಂದದ ಸ್ಥಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಇದರಲ್ಲಿ ಪ್ರಮುಖವಾದುದು ಲಕ್ಕಿ ಸ್ಟೋನ್ ಮತ್ತು ಸೆಟಲ್‍ಮೆಂಟ್ ಸ್ಟೋನ್‍ಗಳು. ಇವೆಲ್ಲವನ್ನೂ ಕ್ರಿ.ಪೂ. 33 ಕ್ಕೂ ಮೊದಲು ಇಲ್ಲಿಗೆ ವಲಸೆಯ ಮಹಾ ಯಾನದಲ್ಲಿ ಕಾಲಿಟ್ಟ ಮೂಲ ಮಣಿಪುರಿಗಳು ತಮ್ಮ ಗುರುತಾಗಿ ನಿಲ್ಲಿಸಿದ ಶಿಲಾಯುಗದ ಕಥೆಯ ಒಂದು ಸಂಕೇತವಾಗಿದ್ದು ಅವರು ಒಳಬಂದ ದಾರಿಯನ್ನು ನೆನಪಿಸುವ ರಾಜಮಾರ್‌ಗದ ರೀತಿಯಲ್ಲಿ ಇಲ್ಲಿ ಶಿಲಾರಚನೆಯನ್ನು ಜೋಡಿಸಲಾಗಿದ್ದು, ಯಾವ ರೀತಿಯಲ್ಲಿ ಇವುಗಳನ್ನು ನಿಲ್ಲಿಸಿದರೋ, ಯಾವ ವೈಜ್ಞಾನಿಕ ಮಾಹಿತಿ ಇದಕ್ಕೆ ಅವರಲ್ಲಿತ್ತೊ ಗೊತ್ತಾಗುವುದಿಲ್ಲ. ಆದರೆ ಬಹುಶ: ಪುರಾತತ್ವ ಇಲಾಖೆಯಂತಹ ಅಭ್ಯಾಸ ಯೋಗ್ಯ ವ್ಯಕ್ತಿಗಳು ಹೊರತುಪಡಿಸಿದರೆ, ಪ್ರವಾಸಿಗನಾಗಿ ಬಂದ ಕೆಲವೇ ಕೆಲವರಲ್ಲಿ ಬಹುಶ: ನಾನೂ ಇರಬೇಕು. ಕಾರಣ ಕಸದ ತೊಟ್ಟಿಯಲ್ಲಿ ಹೂತು ಹೋಗಿರುವ ಇದರ ಮಹತ್ವ ಗೊತ್ತಿಲ್ಲದೆ ವಿದ್ಯುತ್ ಪೂರೈಕೆಯ ಕಂಬವನ್ನು ನೆಡುವ ಮಹಾಕಾರ್ಯವನ್ನೂ ಇದರಲ್ಲಿ ಕೈಗೊಳ್ಳಲಾಗಿದೆ. ಯಾವ ರೀತಿಯಲ್ಲೂ ಇದರ ಮಹತ್ವ ಸಾರುವ ಮಾಹಿತಿಯ ಪ್ರದರ್ಶನ ಫಲಕ ಅಥವಾ ಇನ್ನಾವುದೇ ಚಿತ್ರ ಇಲ್ಲಿಲ್ಲ. 103 ಪ್ರಮೀಳೆಯರ ನಾಡಿನಲ್ಲಿ ಹಾಗಾಗಿ ಅಭ್ಯಾಸದ ದೃಷ್ಟಿಯಿಂದ ನೋಡುವುದನ್ನು ಹೊರತುಪಡಿಸಿದರೆ ಯಾರಿಗೂ ಇದೊಂದು ಸಂದರ್ಶಿಸಬೇಕಾದ ಸ್ಥಳ ಎನ್ನಿಸುವುದೇ ಇಲ್ಲ. ಅದಾಗ್ಯೂ ಸಾಕಷ್ಟು ಹುಡುಕಾಟದ ನಂತರ ಲಭ್ಯವಾಗುವ ಇದಕ್ಕೆ ನಾವು ಸಾಕ್ಷಿಯಾದೆವು. ಎಲ್ಲಾ ಚಿತ್ರದ ನಂತರ ಆಗಲೇ ಹೊತ್ತಾಗುತ್ತಿದ್ದುದರಿಂದ ಇನ್ನೊಂದು ಮಣಿಪುರದ ಕೊನೆಯ ಮತ್ತು ಅಪರೂಪದ ಸಮುದಾಯದ ಹಳ್ಳಿಯತ್ತ ಕಾರು ಚಲಾಯಿಸಿದೆ. ಯಾಂಖುಲ್ಲೇನ್ : ಈ ಸೇನಾಪತಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂದರ್ಶಿಸಬೇಕಾದ ಕೆಲವೇ ಕೆಲವು ಸ್ಥಳಗಳಲ್ಲಿ "ಯಾಂಖುಲ್ಲೇನ್" ಎನ್ನುವ ಪ್ರಮುಖ ಹಳ್ಳಿಯೂ ಒಂದು (ಹಾಗಂತ ಮಣಿಪುರ ಹೇಳಿಕೊಳ್ಳುತ್ತಿದೆ. ಆದರೆ ಅದಕ್ಕಿರುವ ಯಾವ ಮಹತ್ವವೂ ಕಂಡುಬರಲಿಲ್ಲ. ಅದರಂತಹ ಹಲವು ಹಳ್ಳಿಗಳು ಮತ್ತು ಬುಡಕಟ್ಟುಗಳ ಸಮುದಾಯ ಪ್ರದೇಶ ಸಾಕಷ್ಟು ರಾಜಧಾನಿಯ ಪಕ್ಕದಲ್ಲೇ ಗುಡ್ಡೆಯಾಗಿಸಿಕೊಂಡಿವೆ ಬದುಕನ್ನು). ಪರ್ವತದ ಇಳಿಜಾರು ಪ್ರದೇಶದಲ್ಲಿ ಅಗಾಧ ಅಗಲ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಜಿಲ್ಲೆ ಸೇನಾಪತಿಯ ಇನ್ನಷ್ಟು ಕಣಿವೆ ಭಾಗಕ್ಕೆ ಚಾಚಿಕೊಂಡಿರುವ ಹಳ್ಳಿ ಈ ಯಾಂಖುಲ್ಲೇನ್. ಜಿಲ್ಲೆಯ ಅತಿ ದೊಡ್ಡ ಹಳ್ಳಿ ಎಂದೂ ಗುರುತಿಸಿಕೊಂಡಿರುವ ಯಾಂಖುಲ್ಲೇನ್ ಮರೇಮ್ ಪ್ರಮೀಳೆಯರ ನಾಡಿನಲ್ಲಿ 104 ನಗರದಿಂದ 77 ಕಿ.ಮೀ. ದೂರದಲ್ಲಿದೆ. ಪ್ರಮುಖ "ಝೇಮೈ" ಹಳ್ಳಿ ಎಂದು ಕರೆಯಿಸಿಕೊಳ್ಳುತ್ತಿರುವ ಯಾಂಖುಲ್ಲೇನ್ ಪ್ರತಿಷ್ಠಿತ ಸಂದರ್ಶಕರ ಸ್ಥಳವೂ ಹೌದು (ಮಣಿಪುರದ ಇಲಾಖಾ ಮಾಹಿತಿ ಪ್ರಕಾರ ಇದು 45 ಕಿ.ಮೀ. ದೂರದಲ್ಲಿದೆ. ಆದರೆ ಅದನ್ನು ನಂಬಿಕೊಂಡು ಹೊರಟರೆ ಅವತ್ತು ವಾಪಸ್ಸು ಬರುವುದು ಸಾಧ್ಯವೇ ಇಲ್ಲ. ಸ್ವತ: ವಾಹನ ಇಲ್ಲದೆ ದರ್ಶನವೂ ಸಾಧ್ಯವಿಲ್ಲ). ಹೀಗೆ ಇದಕ್ಕೆ ಝೀಮೈ ಎಂದು ಕರೆಯಲು ಇಲ್ಲೆಲ್ಲ ಇರುವ ಸಮುದಾಯ ಹೆಚ್ಚಿನಂಶ ಝೀಮೈ ಬುಡಕಟ್ಟಿನ ಸಮುದಾಯವೇ. ಸಂಪೂರ್ಣ ಹಳ್ಳಿಯೇ ಇವರ ಹಿಡಿತದಲ್ಲಿದ್ದು ಇಲ್ಲಿ ಯಾವುದೇ ಬೇರೆ ರೀತಿ ರಿವಾಜಿಗೆ ಅವಕಾಶವೇ ಇಲ್ಲ. ಝೀಮೈನ ಪಂಡಿತರು ನೀಡುವ ಸೂಚನೆ ಮತ್ತು ಕಾಲಕಾಲಕ್ಕೆ ಹೊರಡಿಸುವ ಆಜ್ಞೆಗಳೆ ಇಲ್ಲಿ ಕೆಲಸ ಮಾಡಿಸುತ್ತವೆ. ಏನೇ ಆಧುನಿಕತೆಗೆ ಈಗಿನ ಹುಡುಗರು ಒಗ್ಗಿಕೊಂಡಿದ್ದಾರೆ ಎಂದರೂ ಹಳ್ಳಿಗೆ ಮರಳುತ್ತಿದ್ದಂತೆ ಝೀಮೈಗಳಾಗೇ ಬದಲಾಗುವುದು. ಬದುಕುವುದು ಅವರ ಜೀವನ ಶ್ರೀಮಂತಿಕೆಯ ಸಂಕೇತವಾ ಅಥವಾ ಬಾಲ್ಯದಿಂದಲೂ ಅವರನ್ನು ಹೀಗೇ ಎಂದು ಬೆಳೆಸುತ್ತಿರುವ ಪರಿಣಾಮವಾ..? ನಿರಂತರವಾಗಿ ಈ ಹಳ್ಳಿಯನ್ನು ಸಮರ್ಥ ಗೈಡ್‍ವೊಬ್ಬನ ಜೊತೆ ಸುತ್ತುವಾಗ ಹಲವು ಅಚ್ಚರಿಗಳಿಗೆ ನಾನು ಈಡಾದದ್ದು ಇದೆ. ಅಂಥಲ್ಲೆಲ್ಲಾ ನನ್ನ ಅನುಮಾನ ಪರಿಹರಿಸುತ್ತಿದ್ದ "ಜಂಗುಲ್ಲಕೈ" ಯಾಕೆ ಹೀಗೆ ಸಂಪ್ರದಾಯಗಳು, ಇಂಥಾ ಮಾದರಿಯಲ್ಲೇ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎನ್ನುವುದಕ್ಕೆ ಸಮರ್ಥ ಉತ್ತರ ಕೊಡಲಿಲ್ಲ ಎನ್ನುವುದು ಬೇರೆ ಮಾತು. ಆದರೆ "ಯಾಂಖುಲ್ಲೇನ್" ಇವತ್ತಿಗೂ ಅಧುನಿಕತೆಗೆ ತೆರೆದುಕೊಳ್ಳದಿರುವ ಆದರೆ, ಅಗತ್ಯದ ಮೊಬೈಲು ಇವರನ್ನೂ ಆವರಿಸಿದೆ. ಅದರಲ್ಲಿ ಏನೆಲ್ಲಾ ಮಾಡಬಹುದೋ ಅದೆಲ್ಲವನ್ನು ಇವರು ಮಾಡುತ್ತಾರೆ. ತೀರಾ ಯಾರೂ ಬಂದು ತಲುಪದ ಹಳ್ಳಿಗೆ ತಲುಪಿ ಅಲ್ಲಿ ಚಹ ಎನ್ನುವ ಪದಾರ್ಥವೇ ಇರದ ಹಳ್ಳಿಯಲ್ಲಿ ಒಂದು ಗಂಟೆ ಕಳೆದು ಹಿಂದಕ್ಕೆ ಬರುವಾಗ ಮಣಿಪುರಿಗಳ ಸ್ವಭಾವದ ಅಭ್ಯಾಸಕ್ಕೆ ನಾನು ಸಾಕ್ಷಿಯಾದೆ. ಪರ್ವತ ತಪ್ಪಲಿನ ಇಳಿಜಾರಿನಲ್ಲಿ ಬಿದ್ದು ಹೋಗುವಂತೆ ನಿಂತಿರುವ ಹಳ್ಳಿ, ಬದುಕಿನ ಮತ್ತು ತೀರ ಹೊರ ಜಗತ್ತಿನ ಸಂಪರ್ಕದಾಚೆಗೂ ಆಸಕ್ತಿ ಹುಟ್ಟಿಸುವಂತೆ ಬೆಳೆಯುತ್ತಲೆ ಇದೆ 105 ಪ್ರಮೀಳೆಯರ ನಾಡಿನಲ್ಲಿ ತೆವಳುತ್ತಾ. ಆದರೆ ಬದಲಾಗದ ಕಾಲಮಾನದಲ್ಲಿ ಇರುವ ಬದುಕಿನ ಪರಿಸ್ಥಿತಿಯ ವ್ಯಂಗ್ಯ ಮಾತ್ರ ಸ್ವಂತಂತ್ರ ಬಂದ 60 ವರ್ಷಗಳ ನಂತರವೂ ನಮ್ಮ ಈ ಪರಿಸ್ಥಿತಿಗೆ ಭಾವನೆಗಳು ಸ್ಪಂದಿಸಲಾರದಷ್ಟು ತಟಸ್ಥವಾಗಿದ್ದವು. ಯಾಂಖುಲ್ಲೇನ್ ಆವತ್ತೇ ಹಿಂದಿರುಗಲೇಬೇಕಾದ ಪರಿಸ್ಥಿತಿಯಲ್ಲಿ ಮರು ಪಯಣ ಆರಂಭಿಸಿ, ಅದೇ "ಸಂಘಕುಮೈ" ಹಳ್ಳಿ ದಾಟಿ, "ವಿಲ್ಲೊಂಗ್ ಖುಲ್ಲೇನ್" ಹಾಯ್ದು "ಮರ್ರ್‍ಂ" ಹಾಯುವ ಹೊತ್ತಿಗೆ ಸಂಜೆಯ ಮಂಪರು ಕವಿಯುತ್ತಿತ್ತು. ಇನ್ನು ಇಲ್ಲಿಂದ ರಾಜಧಾನಿ ತಲುಪಿ ನಂತರದಲ್ಲಿ ಮತ್ತೆ ಇಷ್ಟೇ ಅಂತರ ವಾಪಸ್ಸು ಬರುವ ಬದಲಾಗಿ ಇಲ್ಲೆಲ್ಲಾದರೂ ನಿಲ್ಲಬಹುದಾ ಯೋಚಿಸುತ್ತಿದ್ದೆ. ಮರ್ರಂನಲ್ಲಿ ಅಸ್ಸಾಂ ರೈಫಲ್ಸ್‌ನವರ ದೊಡ್ಡ ಬ್ರಿಗೇಡು ಕಾರ್ಯನಿರ್ವಹಿಸುತ್ತಿದೆ. ಅತ್ತಲಿನ ನಾಗಾಲ್ಯಾಂಡ್ ಮತ್ತು ಇತ್ತಲಿನ ಮಣಿಪುರದ ಮಧ್ಯೆ ಗೋಡೆಯಂತೆ ಆವರಿಸಿರುವ ಪರ್ವತ ಪ್ರದೇಶದ ನೆತ್ತಿಯ ಮೇಲೆ ಈ ಪಡೆ ಬೀಡುಬಿಟ್ಟಿದೆ. ಹಾಗಾಗಿ ಯಾವ ಭಯವೂ ಇಲ್ಲದೆ ಇಲ್ಲಿ ಬೀಡುಬಿಡಬಹುದು ಎಂದುಕೊಂಡು ರಸ್ತೆ ಮಗ್ಗುಲಿನ, ಎರಡು ಬಾರಿ ಆಗಲೇ ಚಹ ಕುಡಿದಿದ್ದ ಸರ್ದಾರ್ಜಿಯ ಶಾಪಿಗೆ ನುಗ್ಗಿ ಸ್ಥಳಾವಕಾಶ ಲಭ್ಯತೆ ಪಕ್ಕಾ ಆಗುತ್ತಿದ್ದಂತೆ ಕಾರನ್ನು ಕಳುಹಿಸಿ ರ್ಯಾಕ್‍ಸ್ಯಾಕ್ ಏರಿಸಿ ಅವನ ಹೋಟೆಲಿನ ಒಂದು ಮೂಲೆಯಲ್ಲಿ ಕಾಲು ಚಾಚಿದೆ. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆತಿಥ್ಯ ನೀಡಿದ ಸರ್ದಾರ್‍ಜಿ, ರಾತ್ರಿಗೆ ಒಳ್ಳೆಯ ಬಿಸಿಬಿಸಿ ಪರೋಠ ಮಾಡಿ ಕೂತು ಕಥೆ ಹೇಳುತ್ತಾ ಊಟ ಮುಗಿಸಿದ. ರಾತ್ರಿಯ ಎಂಟೂವರೆ ಮುಂಚೆ ರೈಫಲ್ಸ್‌ ಪಡೆಗಳ ವಿಜಿಲ್ ಶಬ್ದ ಕೇಳತೊಡಗಿದ್ದರೆ ಸರ್ದಾರ್‍ಜಿ ಬಾಗಿಲೆಳೆದು ಮಲಗುವ ತಯಾರಿಯಲ್ಲಿ ಲೈಟಾರಿಸಿದ್ದ. ನಾನು ನನ್ನ ಲ್ಯಾಂಪಿನಲ್ಲಿ ಆವತ್ತಿನ ಕಥೆಯನ್ನು ನೋಟ್ಸ್ ಮಾಡುತ್ತಾ ಬಿದ್ದುಕೊಂಡೆ. ಕತ್ತಲು ಗಾಢವಾಗಿ ನಿದ್ರೆ ಆವರಿಸುವಾಗಲು ಬೂಟುಗಾಲಿನ ಶಬ್ದ ಕೇಳಿಸುತ್ತಲೇ ಇತ್ತು. ಬೆಳಗ್ಗೆ ಅವನಿಗಿಂತಲೂ ಮೊದಲು ನಾನೆದ್ದು, ತಯಾರಾಗಿ ಸರಿಯಾಗಿ ಐದೂಕಾಲಿನ ಮೊದಲ ವಾಹನದಲ್ಲಿ ತೂರಿಕೊಂಡು ತಡುಬಿಯತ್ತ ಹೊರಟುನಿಂತಿದ್ದೆ, ಮತ್ತೆ ಪರೋಠದ ವರಾತಕ್ಕೆ ಕಿವಿಗೊಡದೆ. ಆದರೆ ಬಂದ ಮಾರುತಿ ವ್ಯಾನ್ ಕೂಡಾ ಅಲ್ಲೇ ಚಹಕ್ಕೆ ನಿಂತಾಗ ಸರ್ದಾರ್ಜಿ ಗಡ್ಡ ನೀವಿಕೊಳ್ಳುತ್ತಾ ನಗುತ್ತಿದ್ದ. ಅಲ್ಲಿಯೇ ಆವತ್ತಿನ ಊಟದ ವ್ಯವಸ್ಥೆ ಪ್ರಮೀಳೆಯರ ನಾಡಿನಲ್ಲಿ 106 ಮಾಡಿಕೊಂಡು ಮಧ್ಯಾನ್ಹಕ್ಕೂ ಎಡ್ರ್ಮೂರು ಪರೋಠ ಬಿಗಿದುಕೊಂಡು, ವ್ಯಾನಿನ ಮುಂದಕ್ಕೆ ನುಗ್ಗಿ ಕೂತು ಕೊಂಡೆ. "ಮರ್ರಂ" ಹಿಂದೆ ಸರಿಯುತ್ತಿತ್ತು. ವಿಲ್ಲೊಂಗ್ ಮತ್ತು ಯಾಂಖುಲೇನ್ ಆಗಲೇ ನೆನಪಾಗಿ ಉಳಿಯತೊಡಗಿದ್ದವು. ಲಿಯಾಯಿ : "ತಡುಬಿ" ಯಿಂದ 33 ಕಿ.ಮೀ.ದೂರದ ಈ ಹಳ್ಳಿ ಪೂರ್ವಾಭಿಮುಖವಾಗಿ ಬೆಳೆದಿರುವ ಇನ್ನೊಂದು ದೃಶ್ಯ ಕಾವ್ಯವೇ ಸರಿ. ಸಹಜ ಸುಂದರ ಹಳ್ಳಿ ಮತ್ತು ಪಟ್ಟಣದ ಬೇಸುಗೆಯಂತಿರುವ ಇಲ್ಲಿ ಹಲವು ಸುಂದರ ಜಲಪಾತಗಳು, ನೈಸರ್‌ಗಿಕ ಚಿಕ್ಕ ಚಿಕ್ಕ ಪರ್ವತ ಪ್ರದೇಶಗಳು ಮತ್ತು ತೋಟಗಳ ಸಮೂಹ ಕರ್ನಾಟಕದ ಕರಾವಳಿ ಜಿಲ್ಲೆಗಳನ್ನು ನೆನಪಿಸುತ್ತವೆ. "ಬರಾಕ್" ನದಿಯ ದಂಡೆಯ ಮೇಲೆ ಬೆಳೆಯುತ್ತಿರುವ ಈ ಅರೆ ಪಟ್ಟಣ ದೊಡ್ಡ ದೊಡ್ಡ ಆಲದ ಮರಗಳ ಕಲಾತ್ಮಕ ದೃಶಗಳಿಗೂ ತುಂಬಾ ಹೆಸರುವಾಸಿ. ಅಲ್ಲಲ್ಲಿ ಪುರುಷ ಮತ್ತು ಸ್ತ್ರೀ ಮನೆಗಳು ಎನ್ನುವ ವಿಶೇಷ ಮನೆಗಳು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ. ಹಲವು ಸ್ತರದಲ್ಲಿ ಹೀಗಿರುವ ಮನೆಯ ವಿಶೇಷತೆ ಎಂದರೆ ರಕ್ಷಣೆಯ ದೃಷ್ಟಿಯಿಂದ ನಿರ್ಮಿತವಾದವು ಎನ್ನುವುದು ಹಳ್ಳಿಯವರ ಹೇಳಿಕೆ. ಸಾಧುಚಿರಾ ಜಲಪಾತ : ಸೇನಾಪತಿ ಜಿಲ್ಲೆಯ ಅತ್ಯಂತ ಜನಪ್ರಿಯ ಮತ್ತು ಪ್ರವಾಸಿಗರ ಆಕರ್ಷಣೀಯ ಪ್ರದೇಶಗಳಲ್ಲಿ ಒಂದಾದ ಸಾಧುಚಿರಾ ವಾಟರ್ ಫಾಲ್ಸ್‌ ಪ್ರಮುಖ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಇದು "ಇಚುಂ ಕೈರಾಪಿ" ಹಳ್ಳಿಯ ಪಕ್ಕದಲ್ಲಿದ್ದು ಇಂಫಾಲ ನಗರದಿಂದ 27 ಕಿ.ಮೀ ದೂರದಲ್ಲಿದೆ. ಪಕ್ಕದ ಜಿಲ್ಲೆಯಾದ ಪೂರ್ವ ಇಂಫಾಲದ ಮಗ್ಗುಲಿಗೆ ಹೊರಳಿಕೊಂಡಿರುವ ಈ ಜಲಪಾತ ಸರ್ದಾರ ಪರ್ವತದ ಮಗ್ಗುಲನ್ನು ಬಳಸಿ ಕೆಳಕ್ಕೆ ಇಳಿಯುತ್ತಿದೆ. ದಿನಕ್ಕೆ ನೂರಾರು ಪ್ರವಾಸಿಗರನ್ನು ಆಕರ್ಷಿಸುವ ಈ ಜಲಪಾತದ ಅದ್ಭುತವನ್ನು ಕಣ್ಣು ತುಂಬಿಕೊಳ್ಳಲು ಹೊರರಾಜ್ಯದ ಜನತೆ ತುಂಬಿಕೊಂಡಿರುವುದು ಸಾಮಾನ್ಯ ದೃಶ್ಯ. ಛಾಯಾಚಿತ್ರಗಾರರಿಗೂ ಅಧ್ಬುತ ಮೋಹಕ ದೃಶ್ಯಗಳಿಗಾಗಿ ಇದು ಪ್ರಮುಖ ತಾಣವಾಗಿದೆ. 107 ಪ್ರಮೀಳೆಯರ ನಾಡಿನಲ್ಲಿ ಇದು ಮೂರು ಹಂತದಲ್ಲಿ ಬೀಳುತ್ತಿರುವ ಜಲಪಾತವಾಗಿದ್ದು ಕೆಳ ಭಾಗದ ಮೂರನೆಯ ಹಂತ ಮಾತ್ರ ನಮಗೆ ನೇರ ದರ್ಶನಕ್ಕೆ ಲಭ್ಯವಿದೆ. ಸುಮಾರು 100 ಅಡಿ ಎತ್ತರದಿಂದ ಬೀಳುತ್ತಿರುವ ಈ ಹಂತದಲ್ಲಿ ಚೆಂದದ ನೋಟ ಲಭ್ಯವಿದ್ದು ಉಳಿದೆರಡು ನೂರು ಅಡಿಯ ಜಲಪಾತದ ಪೂರ್ವ ಹಂತಗಳು ಪರ್ವತದ ಮೇಲ್ಭಾಗದಲ್ಲಿದ್ದು ಆಗೀಗ ಚಾರಣಿಗರೂ, ಪರ್ವತಾರೋಹಿಗಳು ಏರಿ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವುದಿದೆ. ಇದನ್ನು ಅಭಿವೃದ್ಧಿಪಡಿಸಲು ಮತ್ತು ಬೆಳವಣಿಗೆಗೆ ನೆರವಾಗಲು ಪಕ್ಕದ ಅರಣ್ಯ ಮತ್ತು ಪಾರ್ಕನ್ನು ಸೇರಿಸಿ "ಅಗಾಪೆ ಪಾರ್ಕ" ಸ್ಥಾಪಿಸಲಾಗಿದ್ದು ಪಕ್ಕದ "ಇಚುಂ ಕೈರಾಪಿ" ಹಳ್ಳಿಯವರು ಆಡಳಿತ ಹೊಣೆ ಹೊತ್ತಿದ್ದಾರೆ. ಹಾಗೆ ನೋಡಿದರೆ ಇದು ಪಕ್ಕದ ಬಿಷ್ಣುಪುರ್ ಜಿಲ್ಲೆಯಲ್ಲಿದೆಯೇನೋ ಎನ್ನುವ ಭಾವನೆ ಮೂಡುತ್ತದೆ. ಆದರೆ ಸೇನಾಪತಿ ಜಿಲ್ಲೆ ಬಾಲದಂತೆ ಕೆಳಗಿನವರೆಗೂ ಬೆಳೆದ ಪರಿಣಾಮ ಇಂಥ ಚಿಕ್ಕ ಒಂದೆರಡು ಕಿ.ಮೀ. ಉದ್ದ ಪಟ್ಟಿಯಂತಹ ಪ್ರದೇಶ ಬೇರೆ ಜಿಲ್ಲೆಗಳಿಗೆ ನುಸುಳಿದೆ. ಇಲ್ಲದಿದ್ದರೆ ಮೈರಾಂಗ್‍ಗೆ ಹೋಗುವಾಗ ರಸ್ತೆ ಬದಿಯಲ್ಲೇ ಮೂರು ಕಿ.ಮೀ. ಗೆ ಎಡಕ್ಕೆ ಈ ಜಲಪಾತ ಕಾಲಿಗೆ ಅಡರುತ್ತದೆ. ಪರುಲ್ : ಕುಸ್ತಿ ಆಡ್ಬೇಕೆ ..? ಪರುಲ್‍ಗೇ ಬನ್ನಿ. ಭಾರತೀಯ ಸಂಪ್ರದಾಯ ಬದ್ಧ ಕುಸ್ತಿಯ ಕಾಳಗಕ್ಕೆ ಈ ಊರು ಹೆಸರು ವಾಸಿ. ಇದರೊಂದಿಗೆ ಪುರಾತನ ಭಾರತೀಯ ಕಲೆಯಾದ, ಆಟವೂ ಆದ "ಟೌ ಟೌ" ಕೂಡಾ ಇದಕ್ಕೆ ಪ್ರಸಿದ್ಧಿ. ಪ್ರತಿವರ್ಷದ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಇಲ್ಲಿ ಕುಸ್ತಿ ಮತ್ತು ಟೌ ಟೌ ಆಟವನ್ನು ಸಾಂಕೇತಿಕವಾಗಿ ಆರಂಭಿಸಿ ಆಡಿಸಲಾಗುತ್ತದೆ. ಸಾಂಪ್ರದಾಯಿಕ ಆಟವಾದ "ಪಯೋಕಿ"ಯನ್ನು ಮೊದಲ ತಿಂಗಳ ಆರಂಭದಲ್ಲಿ ಆರಂಭಿಸಲಾಗುತ್ತದೆ. "ಮರಂ" ನಗರದಿಂದ 19 ಕಿ.ಮೀ ದೂರ ಇರುವ "ಪರುಲ್" ಭತ್ತದ ಪೈರು ಬೆಳೆದು ನಿಂತಾಗ ಅಲ್ಲಿ ನಡೆಯುವ ಉತ್ಸವಗಳನ್ನು ಕಣ್ತುಂಬಿಕೊಳ್ಳಬೇಕು.. ಅದರ ಅದ್ಭುತವೇ ಬೇರೆ.. ಇಲ್ಲಿನ ಭತ್ತದ ಪೈರು ಉತ್ಸವ ಪ್ರಮೀಳೆಯರ ನಾಡಿನಲ್ಲಿ 108 ಈಗ ವಿದೇಶಿಗರನ್ನೂ ಆಕರ್ಷಿಸುತ್ತಿದೆ. ಕಾರಣ ಭತ್ತದ ಗದ್ದೆಗಳ ಬದುವಿನ ಮೇಲೆ ಟೆಂಟು ಹಾಕಿ ಕೊಯ್ಲು ಮುಗಿಯುವವರೆಗೂ ಹಾಡಿಯ ಆಸುಪಾಸಿನಲ್ಲಿ ಸ್ಥಳೀಯ ಆಹಾರೋತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದೂ ಕೂಡಾ ಇದಕ್ಕೆ ಕಾರಣ. ಆದರೆ ಅವರ ಈ ಆಹಾರೋತ್ಸವವನ್ನು ನನ್ನಂಥ ಸಸ್ಯಾಹಾರಿ ಅದರಲ್ಲೂ ದಕ್ಷಿಣದ ಊಟ ತಿಂಡಿಗೆ ಕಟ್ಟುಬಿದ್ದವರು ಅರಗಿಸಿಕೊಳ್ಳುವುದು ದೂರದ ಮಾತು, ಗಂಟಲಿಗೂ ಇಳಿಯಲಿಕ್ಕಿಲ್ಲ. ಎಲ್ಲಾ ತರಹದ ಅರೆ ಬೆಂದ ಮಾಂಸಾಹಾರದ ಪದಾರ್ಥಗಳು ಇಲ್ಲಿ ಬಿಕರಿಯಾಗಿ ಹೊಸ ರುಚಿಯ ಆಮಿಷವನ್ನು ಒಡ್ಡುತ್ತವೆ. ಇನ್ನುಳಿದಂತೆ ಪ್ರವಾಸಿ ಸ್ಥಳಗಳ ದರ್ಶನಕ್ಕಿಂತ ಆಯಾ ಜಿಲ್ಲಾವಾರು ಅಥವಾ ಸ್ಥಳೀಯ ಜನಜೀವನ ಅಳವಡಿಸಿಕೊಂಡಿರುವ ಪದ್ಧತಿಗಳ ಅನುಗುಣವಾಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು, ಸ್ಥಳೀಯ ಪ್ರತಿನಿಧಿಗಳ ಸಹಾಯದಿಂದ ಬಂದಲ್ಲಿ ಹಲವು ಹಬ್ಬ ಆಚರಣೆ ನೋಡಬಹುದು. ನೇರ ಪ್ರವೇಶ ಇಲ್ಲಿ ಬಲು ಕಷ್ಟ. ಕೆಲವು ಊರುಗಳು, ಸಮುದಾಯಗಳು ತಮ್ಮನ್ನು ಇದಕ್ಕೆ ಒಡ್ಡಿಕೊಳ್ಳುತ್ತಿವೆಯಾದರೂ ಅಯಾ ಊರಿನ ಜನರನ್ನು ಸಂಭಾಳಿಸಬಲ್ಲ ಸ್ನೇಹಿತನೊಬ್ಬ ಜೊತೆಗಿದ್ದರೆ ಇಲ್ಲಿ ಎಲ್ಲವೂ ಸಲೀಸು. ಅಂಥಾ ಕೆಲವು ಆಚರಣೆ ಮತ್ತು ಹಬ್ಬಗಳು ನನಗೆ ಲಭ್ಯವಾದವು. ಕೆಲವನ್ನು ಮಾಹಿತಿ ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದೇನೆ. ಕೌಬ್ರು ಲೈಖಾ : ಸೇನಾಪತಿ ಜಿಲ್ಲೆಯ ಅತ್ಯಂತ ಪುರಾತನ ಶಿವ ಮಂದಿರ ಇದಾಗಿದ್ದು ಮಣಿಪುರದಲ್ಲೇ ಅತ್ಯಂತ ಹಳೆಯ ಶಿವ ಮಂದಿರ ಎನ್ನುವ ಖ್ಯಾತಿಗೂ ಒಳಪಟ್ಟಿದೆ. ಶಿವರಾತ್ರಿಯನ್ನು ಅಲ್ಲಲ್ಲಿ ಸಾಂಕೇತಿಕವಾಗಿ ಆಚರಿಸುವ ಕೆಲವೇ ಕೆಲವು ಗುಂಪುಗಳು ಇಲ್ಲಿಗೆ ಬಂದು ವರ್ಷಕ್ಕೊಮ್ಮೆ ಹಬ್ಬ ಉತ್ಸವ ಜಾಗೃತ ಅವಸ್ಥೆಗೆ ತರುವ ಕಾರ್ಯಕ್ರಮವನ್ನು ಆಚರಿಸುತ್ತವೆ. ಇದರೊಂದಿಗೆ "ಕಾನ್ವಡ್" ಎನ್ನುವ ಹಬ್ಬದ ಸಂದರ್ಭದಲ್ಲಿಯೂ ಈ ಶಿವ ಮಂದಿರದಲ್ಲಿ ಪೂಜೆ ಪುನಸ್ಕಾರಗಳು ಅವ್ಯಾಹತವಾಗಿ 3 ದಿನಗಳ ಕಾಲ ನಡೆಯುತ್ತದೆ. ಸಾಕಷ್ಟು 109 ಪ್ರಮೀಳೆಯರ ನಾಡಿನಲ್ಲಿ ಪುರಾತನ ಮಂದಿರ ಇದಾಗಿದ್ದು ವಾಸ್ತುಶಿಲ್ಪ ಮತ್ತು ಕಲ್ಲಿನ ವಿನ್ಯಾಸದ ದೃಷ್ಟಿಯಿಂದ ಮನಸೆಳೆಯುತ್ತದೆ. ಥವೋಣಿ : ಹೊಸ ವರ್ಷದ ಸಾಂಸ್ಕೃತಿಕ ಉತ್ಸವ ಇದಾಗಿದ್ದು " ಪೋವಮೈ ನಾಗಾ" ಗಳು ಆಚರಿಸುವ ಪ್ರತಿ ವರ್ಷದ ಸಂಭ್ರಮಾಚರಣೆಯನ್ನು ಇಲ್ಲಿ ಆಚರಿಸಲಾಗುತ್ತಿದೆ. ಪ್ರತಿ ಜನವರಿ 5 ರಂದು ಈ ಹಬ್ಬ ಆಚರಿಸಲಾಗುತ್ತಿದ್ದು ಪ್ರತಿ ಕುಟುಂಬಗಳು ಸಮ್ಮಿಲನ ಮತ್ತು ಇದರಲ್ಲಿ ದೈಹಿಕವಾಗಿ ಎಲ್ಲಿದ್ದರೂ ಬಂದು ಪಾಲ್ಗೊಳ್ಳುವಿಕೆ ಈ ಹಬ್ಬದ ವಿಶೇಷತೆ. ಪ್ರತಿ ಸಂಬಂಧಿಕರೂ ಮತ್ತು ಬಂಧುಗಳು ಈ ಸಂದರ್ಭದಲ್ಲಿ ಬಂದು ಸೇರುವುದರಿಂದ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ ನಡೆಯುತ್ತದೆ. ಸಮಾಜದ ಸಹಾಯ ಮತ್ತು ಕೊಡುಕೊಳ್ಳುವಿಕೆಯ ಮಾತುಕತೆಗಳು ಇತರರಿಗೆ ಬೇಕಾದ ಸಹಕಾರಗಳು ಚರ್ಚೆಯೂ ನಡೆಯುತ್ತದೆ ಅಲ್ಲಲ್ಲಿ. ಲವೋಣಿ : (ನಮ್ಮ ಲಾವಣಿ ತರಹದ್ದಿರಬಹುದೇ..?) ಭತ್ತದ ಪೈರು ಬರುವಾಗ, ಸುಗ್ಗಿಯ ಸಮಯದ ಹೊತ್ತಿಗೆ ಕಳೆಗಟ್ಟುವ ಉತ್ಸವ ಇದು. ಜುಲೈ ಕೊನೆಯ ಭಾಗದಲ್ಲಿ ಆಚರಿಸುವ ಸಂಭ್ರಮ ಇದು. ಸಹೋದರ ಸಹೋದರಿಯರ ಹಬ್ಬ ಎಂದೇ ಗುರುತಿಸಲ್ಪಡುವ ಲವೋಣಿ ವರ್ಷಕ್ಕೊಮ್ಮೆ ಸೇನಾಪತಿ ಜಿಲ್ಲೆಯಲ್ಲಿ ಆಚರಿಸುವ ಪ್ರಮುಖ ಸಾಂಪ್ರದಾಯಿಕ ಸಂಭ್ರಮವಾಗಿದೆ. ಚಿಠುಣಿ : ಆರು ದಿನಗಳ ಕಾಲ ನಡೆಯುವ ವಾರ್ಷಿಕ ಉತ್ಸವ ಸೇನಾಪತಿ ಜಿಲ್ಲೆಯ ಹೆಸರುವಾಸಿ ಸಂಭ್ರಮ. ಮಯೋ ಪಟ್ಟಣದಲ್ಲಿ ನಾಗಾಗಳ ಸಂಸ್ಕೃತಿ ಮತ್ತು ಸಂಪ್ರದಾಯದ ಅನಾವರಣ ಇಲ್ಲಿ ನಡೆಯುತ್ತದೆ. ಅದ್ಭುತವಾದ ನಾಗಾ ಬುಡಕಟ್ಟಿನ ಸಾಂಪ್ರದಾಯಿಕ ನಡೆನುಡಿ ಮತ್ತು ಪದ್ಧತಿಗಳ ಜೊತೆಗೆ ಸಂಪೂರ್ಣ ನಾಗಾ ಬುಡಕಟ್ಟಿನ ಜನಾಂಗದ ಸಮಾವೇಶವೇ ಇಲ್ಲಿ ನೆರೆಯುತ್ತದೆ. ವರ್ಷದುದ್ದಕ್ಕೂ ಈ ಹಬ್ಬಕ್ಕಾಗಿ ಕಾಯುವ ನಾಗಾಗಳು ಮಾಡದ ಉತ್ಸವ ಇಲ್ಲ. ಪ್ರಮೀಳೆಯರ ನಾಡಿನಲ್ಲಿ 110 ಎಲ್ಲೆಂದರಲ್ಲಿ ಹಬ್ಬದ ಸಡಗರದ ಮಧ್ಯದಲ್ಲಿ ಈ ಜನಾಂಗ ಮದುವೆ / ವ್ಯವಹಾರ/ ಊಟೋಪಚಾರ / ಜೋಡಿಗಳ ಸಮ್ಮಿಲನ ಹೀಗೆ ಹತ್ತು ಹಲವು ರೀತಿಯಲ್ಲಿ ವರ್ಷಕ್ಕೊಮ್ಮೆ ನಡೆಸುವ ಅಪರೂಪದ ಸಂಭ್ರಮ ವಿದೇಶಿ ಆಕರ್ಷಣೆ ಪಡೆದಿದ್ದು ವರ್ಷಕ್ಕೊಮ್ಮೆ ಡಿಸೆಂಬರ್ ಮತ್ತು ಜನವರಿಯ ಮೊದಲ ಭಾಗದಲ್ಲಿ ಆಚರಿಸಲ್ಪಡುತ್ತದೆ. ಇದಕ್ಕಾಗಿ ಸಂಪೂರ್ಣ ಮಯೋ ಪಟ್ಟಣ ಸಿಂಗಾರಗೊಂಡಿರುತ್ತದೆ. ಆದರೆ ಸ್ಥಳೀಯರಿಗೆ ಮಾತ್ರ ಪ್ರಾಮುಖ್ಯ ಸಿಗುವ ಇದರಲ್ಲೆಲ್ಲಾ ಕೇವಲ ವಾಣಿಜ್ಯಾತ್ಮಕ ಯೋಚನೆಯಿಂದ ಹೊರಗಿನವರನ್ನು ಆದರಿಸುವ ಮನೋಭಾವನೆ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಹೆಚ್ಚಿನ ಭಾಗ ಕ್ರಿಶ್ಚಿಯನ್ ಸಮುದಾಯ ಇಲ್ಲಿ ಹಿಡಿತ ಹೊಂದಿದ್ದು ಮಾವೊ ನಗರ ಚರ್ಚುಗಳ ಆಗರ ಎಂದರೂ ತಪ್ಪಿಲ್ಲ. ಸಲೇನಿ : "ಸಲೆಖ್ರೊ" ಅಂದರೆ ಜುಲೈ ತಿಂಗಳಿನಲ್ಲಿ ನಡೆಯುವ ನಾಗಾಗಳ ಇನ್ನೊಂದು ಉತ್ಸವ. ಭತ್ತದ ಪೈರು ಬೆಳೆದು ಕಟಾವ್ ಆಗಿ ಮನೆಗೆ ಬಂದಾಗ ನಮ್ಮಲ್ಲಿನ ಸುಗ್ಗಿಯ ಉತ್ಸವವನ್ನು ನೆನಪಿಸುವ ಕಾರ್ಯಕ್ರಮ ಇದು. ಬೆಳ್ಳಂಬೆಳಗ್ಗೆ ಊರ ಹೊರಗಿನ ಕೆರೆಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿ ಪೈರಿಗೆ 111 ಪ್ರಮೀಳೆಯರ ನಾಡಿನಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಭತ್ತದ ಫಸಲನ್ನು ಹೊತ್ತು, ಸಾಂಪ್ರದಾಯಿಕ ದಿರಿಸಿನಲ್ಲಿ ಊರನ್ನು ಪ್ರವೇಶಿಸುವ ಹಬ್ಬ. ಕೊನೆಯಲ್ಲಿ ಎಲ್ಲ ಅವರವರ ಮನೆಯ ಹೆಂಗಸರು ಸಾಂಪ್ರದಾಯಿಕ ದಿರಿಸಿನಲ್ಲಿ ಅವರನ್ನು ಆರತಿ ಬೆಳಗಿ ಬರ ಮಾಡಿಕೊಳ್ಳುತ್ತಾರೆ. ಇದೊಂದು ಬಣ್ಣದ ಹಬ್ಬವೆಂದರೂ ತಪ್ಪಾಗಲಾರದು. ಪೊಂಘೈ : ಏಳು ದಿನಗಳ "ಪರಂ ನಾಗಾ"ಗಳ ಸಾಪ್ತಾಹಿಕ ಉತ್ಸವ ಇದು. " ಪೊಂಘೈಕೀ" ಯ ಇಪ್ಪತ್ತನೆ ದಿನವನ್ನು ಇದನ್ನು ಆರಂಭಿಸಲಾಗುತ್ತದೆ. ಕೇವಲ ಪರಂ ಪಟ್ಟಣದಲ್ಲಿ ಮಾತ್ರ ಆಚರಿಸಲಾಗುತ್ತದೆ. ಅಂದ ಹಾಗೆ ಪೊಂಘೈ ಅಂದರೆ ಜುಲೈ ಅಂತ. ಅಂದರೆ ಇದು ಪ್ರತಿ ವರ್ಷ ಜುಲೈ 20 ನೇ ತಾರೀಖಿನ ದಿನವೇ ಇದರ ಆಚರಣೆಯ ಮೊದಲನೆಯ ದಿನ ಆರಂಭವಾಗುತ್ತದೆ. ಕಾಂಘೈ ಕೀ : ಇದೂ ಕೂಡಾ ಏಳು ದಿನಗಳ ಸಾಂಪ್ರದಾಯಿಕ ಹಬ್ಬವಾಗಿದ್ದು "ಮರಂ ನಾಗಾ"ಗಳು ಇದನ್ನು "ಪೊಂಘೈ ಕೀ"ಯ ಏಳನೆ ದಿನದಿಂದ ಆರಂಭಿಸುವ ಪರಿ ಪಾಠವಿದೆ. ಅರೆಬೆತ್ತಲೆಯಾಗಿ ಕೆಲವೊಮ್ಮೆ ಬೆತ್ತಲೆಯಾಗಿ ಕುಸ್ತಿಯನ್ನು ಆಡುವುದು ಈ ಉತ್ಸವದ ಒಂದು ಭಾಗವಾಗಿದ್ದು ಇದರಿಂದಾಗಿ ಭೂತ ಗಣಗಳು ನಾಚಿಕೆ ಪಟ್ಟು ಆ ಪ್ರದೇಶವನ್ನು ಬಿಟ್ಟು ಓಡಿ ಹೋಗುತ್ತವೆ ಎನ್ನುವುದು ನಂಬಿಕೆ. ಈ ಕುಸ್ತಿಯಲ್ಲಿ ಕೆಲವೊಮ್ಮೆ ಘನ ಘೋರ ಕಾಳಗವೂ ನಡೆದು ಅಲ್ಲಲ್ಲಿ ಪಟುಗಳು ಗಾಯಗೊಳ್ಳುವುದೂ ಇದ್ದೇ ಇದೆ. ಅಂದಹಾಗೆ "ಕಾಂಘೈ ಕೀ" ಅಂದರೆ ಡಿಸೆಂಬರ್ ತಿಂಗಳ ಮೊದಲ ಭಾಗ ಎಂದು ಅರ್ಥ. ಹೀಗೆ ಹಲವು ಹೊಸತು ಮತ್ತು ಅಚ್ಚರಿಗೆ ಕಾರಣವಾಗುವ ಸೇನಾಪತಿ ಜಿಲ್ಲೆ ಸಂಪೂರ್ಣ ಅಲ್ಲಿಯೇ ಅರಿತು ಅನುಭವಿಸುವ ದರ್ಶಕರಿಗೆ ಮಾತ್ರ ಖುಶಿ ಕೊಡಬಹುದೇನೋ. ಆದರೆ ಪ್ರವಾಸದ ದೃಷ್ಟಿಯಿಂದ ನಿಜಕ್ಕೂ ಯಾವ ಸೌಕರ್ಯವೂ ಇಲ್ಲದೆ ಇದು ಪ್ರಯಾಸವೇ. ಹಾಗೆ "ಪವಣಾ" ದಿಂದ ಬೆಳಬೆಳಗ್ಗೆ ಹೊರಟು ಮತ್ತೆ ಕೇಳಗೇಕೆ ಬರುವುದೆಂದು ಎಡಕ್ಕೆ ಲಭ್ಯವಿರುವ ಇನ್ನೊಂದು ಅಡ್ಡದಾರಿ ಹಿಡಿದು ಹೊರ ಪ್ರಮೀಳೆಯರ ನಾಡಿನಲ್ಲಿ 112 ಬಂದಿದ್ದೆ. ಕಾರಣ ಚುರ್ಚಾಂಡಪುರಕ್ಕೆ ಇವತ್ತು ಕಾಲಿಟ್ಟುಬಿಡೋಣ ಎಂದುಕೊಂಡಿದ್ದೆ. ಅದೇ ಅವಸರದಲ್ಲಿ ಭರಭರನೆ ಮೊಬೈಕು ಓಡಿಸಿಕೊಂಡು ಹೋಗಿದ್ದೊಂದೆ ಗೊತ್ತು.. ಅನಾಮತ್ತು ನಲ್ವತ್ತೈದು ಕಿ.ಮೀ ಕ್ರಮಿಸುವಷ್ಟರಲ್ಲಿ ಯಾರನ್ನೋ ನಿಲ್ಲಿಸಿಕೊಂಡು ಮೊದಲು ಚಹದ ಅಂಗಡಿ ಹುಡುಕಿಕೊಂಡೆ. ಅಲ್ಲಿಂದಲೇ ವಿಚಾರಿಸಿಕೊಂಡು ಸೇನಾಪತಿಯಿಂದ ನನ್ನ ಟ್ರಿಪ್ಪು ನಿಗದಿತ ಯೋಜನೆಯಂತೆ ಚುರ್ಚಾಂಡಪುರಕ್ಕೆ ಹೋಗಬೇಕಿತ್ತು. ಆದರೆ ಸಂಜೆಯಾದೀತು ಎನ್ನುವ ಅವಸರದಲ್ಲಿ ಅಲ್ಲಲ್ಲಿ ಸಿಕ್ಕ ದಾರಿಯ ಒಳ ತಿರುವುಗಳನ್ನು ಕೇಳುತ್ತಾ ಓಡಿಸಿಕೊಂಡು ಬಂದಿದ್ದರಿಂದ ಸರಿಯಾಗಿ ಆಗಲೇ ಬೇರೊಂದು ಜಿಲ್ಲೆಯೊಳಗೆ ಅನಾಮತ್ತಾಗಿ ಹದಿನೈದು ಕಿ.ಮೀ ಬಂದುಬಿಟ್ಟಿದ್ದೆ. ಹಾಗಾಗಿ ಚುರ್ಚಾಂಡಪುರ ಬದಲಾಗಿ ತೆಮೇಂನ್‍ಗ್ಲಾಂಗ್ ಜಿಲ್ಲೆಯ ಸರಹದ್ದಿನಲ್ಲಿ ಕೂತು ಯಾವ ಹಳ್ಳಿಯಲ್ಲಿ ಕಾಲ ಕಳೆಯಲಿ ಎಂದು ಬೀಡಿ ಪೂಕುತ್ತಿದ್ದ ಅಜ್ಜಿ " ಮಜಾಲು " ವನ್ನು ನಿರುಕಿಸುತ್ತಿದ್ದೆ. ನನ್ನಂಥ ಅಲೆಮಾರಿಯನ್ನು ಬಹಳಷ್ಟು ನೋಡಿದ್ದೇನೆ ಎನ್ನುವಂತೆ ತನ್ನ ಕೆಂಪುಕೆಂಪು ಮೂಗು ಉಜ್ಜುತ್ತ ಬೀಡಿ ಆಚೆಗೆಸೆದು ಕೇಳಿದಳು "ಎಲ್ಲಿಂದ ಬರ್ತಿದಿಯಾ..? ಎಲ್ಲಿ ಹೊಗ್ತಿಯಾ..? ಆಗಲೇ ನಾಲ್ಕೂವರೆ ಆಗ್ತಿದೆ.. ಇನ್ನೇನು ಅರ್ಧ ಗಂಟೆಗೂ ಮೊದಲೆ ನೀನು ಕತ್ತಲೆಯಲ್ಲಿ ಸಿಕ್ಕು ಬೀಳುತ್ತಿಯ. ಅಮೇಲೆ ಇಲ್ಲಿ ಉಳಿಯೋಕೆ ಯಾವ ವ್ಯವಸ್ಥೆನೂ ಆಗುವುದಿಲ್ಲ.. ಇತ್ಯಾದಿ.. ಇತ್ಯಾದಿ.." ಆಕೆಯ ಸ್ಥಳೀಯ ವಿವರಣೆಗೆ ಬೀಡಿಯ ಕೆಮ್ಮು ಅಡ್ಡ ಬರುತ್ತಿತ್ತು. ಬೇಕಾ ಎಂದು ಕೇಳಿದವಳ ಕೈಯಿಂದ ಬೀಡಿ ಕಿತ್ತುಕೊಂಡು ಒಂದು ಚುರುಕು ಸೆಳೆದು ಬಿಸಾಡುತ್ತ ನನ್ನೆಲ್ಲ ಅಲೆಮಾರಿ ತನದ ಕಥೆ ಹೇಳಿ ಎಲ್ಲಿಗೆ ಹೋಗಲಿ ಎಂದು ದೊಡ್ಡ ಯುದ್ಧಕ್ಕೆ ಹೊರಡುವವನಂತೆ ಎದ್ದು ನಿಂತಿದ್ದೆ.. ಅಷ್ಟೇ ಸೀದಾ ಹೊರಗಿನ ಬಾಗಿಲಿನ ಎಡಕ್ಕೆ ತಿರುಗಿಸಿ ಇಲ್ಲಿಂದ ಹನ್ನೆರಡು ಕಿ.ಮೀ. ಬಳಸು ದಾರಿಲಿ ಚಿಕ್ಕ ಜಲಪಾತ ಇದೆ. ಅದರಲ್ಲೆ ಗಾಡಿ ಓಡಿಸಿಕೊಂಡು ಪಕ್ಕಕ್ಕೆ ಸಿಗೋ ಕಾಲ್ದಾರಿಯಲ್ಲೇ ನಡೆದು ಬಿಡು ಅಲ್ಲಿಂದ ಮುಂದೆ ಸಿಗೋದೆ " ಕೌಲಿಂಗ್"... " ಎಂದಳು . 113 ಪ್ರಮೀಳೆಯರ ನಾಡಿನಲ್ಲಿ "ಏನಿದು ಕೌಲಿಂಗ್.. ? ಊರಾ..? ಹೋಟೆಲಾ .. ?" ಕಿರುಚಿದ್ದೆ ಗಾಡಿಯಿಂದ ದೂರವಾಗದೇ. "ನಿನ್ನಂಥಾ ತಿರುಬೋಕಿಗಳಿಗೆಂದೇ ಇರೋ ಊರು ಹೋಗು. ದಿವಿನಾದ ವೈನು, ಅದಕ್ಕೂ ದಿವಿನಾದ ಕೆಂಪು ಬಿದರಕ್ಕಿ ಅನ್ನ. ಎರಡೇ ಅಲ್ಲಿ ಸಿಗೋದು. ಅದೂ ವೆಜ್ಜು .." ಎನ್ನುತ್ತಾ "ಮಜಾಲು" ಎಂಬ ಅರವತ್ತರ ಆಸುಪಾಸಿನ ವಯಸ್ಕ ಹೆಂಗಸು ಅರ್ಧಕ್ಕಿಂತ ಹೆಚ್ಚೆ ಬಿಚ್ಚಿದ್ದ ಎದೆಯ ಗೋಜಿಗೂ ಹೋಗದೆ ಗಾಳಿಗೆ ಒಡ್ಡಿಕೊಂಡು ಕೂತು ವಿವರ ಕೊಡುತ್ತಿದ್ದರೆ ನಾನು ಭರ್ತಿ ವೇಗದಲ್ಲಿ ಗಾಡಿ ದೌಡಾಯಿಸಿದ್ದೆ. ಅಂದ ಹಾಗೆ ಹೆಚ್ಚಿನ ಬುಡಕಟ್ಟಿನವರಲ್ಲಿ ಈಗಲೂ ಎದೆಯ ಭಾಗ ಮುಚ್ಚುವ ಅಭ್ಯಾಸ ಇಲವೇ ಇಲ್ಲ. ಎಲ್ಲಾ ಬಹಿರಂಗ ಅರ್ಧ ನೇತಾಡುವ ಸರ , ಚಿಪ್ಪಿನ ಶೃಂಗಾರದ ಆಭರಣದ ಎಳೆಗಳಡಿಯಲ್ಲಿ. ಮಜಾಲು ಕರೆಕ್ಟಾಗೆ ದಾರಿಯ ಮಾಹಿತಿ ಕೊಟ್ಟಿದ್ದಳು. ನನಗೆ ``ಮೊವ್ವಾನ’’ ಕೊಟ್ಟಿದ್ದ ಬೈಕು ಸಖತ್ತಾಗೇ ಇತ್ತು. ಸುಲಭವಾಗಿ ಜಲಪಾತದ ಸರಹದ್ದಿನಲ್ಲಿ ಮುಳುಗೆದ್ದು ಬೂಟು ತೊಯಿಸಿಕೊಂಡು, ಚೆಡ್ಡಿಯತನಕ ಒಳಗೆಲ್ಲಾ ಪಿಚಿಪಿಚಿ ಮಾಡಿಕೊಂಡು ನಡುರಾತ್ರಿಯ ಅನುಭವಕ್ಕೀಡು ಮಾಡುವ ಕಾಳರಾತ್ರಿಯ ಸಂಜೆಯ ಆರು ಗಂಟೆಗೆ "ಕೌಲಿಂಗ"ನ ಹೆಬ್ಬಾಗಿಲಲ್ಲಿದ್ದೆ. ಅಲ್ಲೊಂದು ಇಲ್ಲೊಂದು ಚಿಕ್ಕ ಅಂಗಡಿಗಳು ತೆರೆದೇ ಇದ್ದವು. ನಾಯಿಗಳೆರಡು ನುಗ್ಗಿ ಬಂದವು.. ಕಾಲೆತ್ತದೆ ಕೂತೇ ಇದ್ದೆ. ನನ್ನ ಹೆಲ್ಮೆಟ್ಟು, ಬೆನ್ನಿಗಿದ್ದ ರ್ಯಾಕ್ ಸ್ಯಾಕು ಅದಕ್ಕಿಂತ ದೊಡ್ಡ ಜರ್ಕೀನು, ಗ್ಲೋವ್ಸು ಇತ್ಯಾದಿ ನೋಡಿ..ಕುಂಯ್ ಗುಟ್ಟಿ ಸುಮ್ಮನಾದವು. ಸೈಡ್‍ಸ್ಟ್ಯಾಂಡಿಗೆ ಗಾಡಿ ಎಳೆದು ಗೂಡಂಗಡಿ ಅಮ್ಮನ ಮುಂದೆ ನಿಂತು ಇವತ್ತಿಗೆ ದಾರಿ ಮತ್ತು ರೂಮು ಎಂದು ಅರೆಬರೆ ಮಣಿಪುರಿಯಲ್ಲಿ ಏನು ಹೇಳಬೇಕೆಂದು ಮೊದಲೇ ಕೇಳಿಕೊಂಡು ಬರೆದಿಟ್ಟುಕೊಳ್ಳುತ್ತಿದ್ದೆ ಬೇಕಾದ ಸಂಭಾಷಣೆಯ ಸಾಲುಗಳನ್ನು) ಹಲ್ಕಿರಿದಿದ್ದೆ. "ನಿನ್ನಂಥವರು ಇಲ್ಲಿಗೆ ಹೊಸಬರೇನಲ್ಲ ಎನ್ನುತ್ತಾ ಅಲ್ಲಿಂದ ಹದಿನೈದು ಮನೆ ದೂರ ಇದ್ದ "ಕಿಶಾ" ಎಂಬುವವಳ ಮನೆಯಲ್ಲಿ ಅಶ್ರಯ ಕೊಡಿಸಿದ್ದಳು. ಪ್ರಮೀಳೆಯರ ನಾಡಿನಲ್ಲಿ 114 ಹಿಂದಿನ ಊರಿನ "ಮಜಾಲು" ಹೇಳಿದ್ದ ವೈನು / ಕೆಂಪು ಬಿದಿರಕ್ಕಿ ಅನ್ನ ಎಂದೆ.." ಆಕೆ ಅದಕ್ಕಿಂತಲೂ ಕೆಂಪಾದ ಹಲ್ಕಿರಿಯುತ್ತ "ಏನು ಬರ್ತಿದ್ದಂತೆ ಕುಡಿಯೋಕೆ ಕೂತ್ಕೊತೀಯಾ..? " ಎಂದಳು.. "ಇಲ್ಲ ಇಲ್ಲ ಆ "ಮಜಾಲು" ಅಂಗಡಿ ಮಾಯಿ ಹೇಳಿದ್ದನ್ನು ಹೇಳಿದೆ.." ಎನ್ನುತ್ತಾ ಪೆಕರನಂತೆ ಹಲ್ಕಿರಿದು ಹುಳ್ಳಗೆ ನಗೆ ನಕ್ಕಿದ್ದೆ. "ಆ ಹೆಂಗಸಿಗೆ ಬುದ್ಧಿ ಇಲ್ಲ, ಬಂದ ಹೊರಗಿನ ಜನರಿಗೆಲ್ಲಾ ನಾನು ಹೆಂಡ ಮಾರುವವಳು ಎಂದು ಹೇಳಿ ನನ್ನ ಮರ್ಯಾದೆ ತೆಗೆಯುತ್ತಾಳೆ. ಅವಳಿಗೇನು ಕೂತು ನನ್ನ ಹೆಸರು ಹೇಳ್ತಾಳೆ. ನಾನೇನು ಧಂದೆನಾ ಮಾಡ್ತಿದೀನಿ.." ಎನ್ನುತ್ತಾ ಅಪ್ಪಟ ಹೆಂಗಸರ ಶೈಲಿಯಲ್ಲಿ ಕಿಚ ಕಿಚ ಚೀರತೊಡಗಿದ್ದಳು. ಎಲ್ಲಿ ಹೋದರೂ ಇದು ಯುನಿವರ್ಸಲ್ ಎನ್ನುವ ಭಾವನೆಗೆ ಆಕೆ ಇನ್ನಷ್ಟು ಪುಷ್ಟಿ ಒದಗಿಸುತ್ತಿದ್ದಳು. ಅಷ್ಟರಲ್ಲಿ ಆಚೆ ಕಡೆಯ ಬಾಗಿಲಲ್ಲಿ ಸದ್ದಾಗಿತ್ತು ಬಾಟಲಿಯದ್ದು. ಅದರೊಂದಿಗೆ ಸರ್ವೀಸಿಗೆ ನಿಂತಾಕೆ.. ಅಪ್ಪಟ ಮಣಿಪುರಿ "ಸೌಬಾಯಿ" ಅನ್ನೋ ಮನೆಯಾಕೆ.. ಕಾರಣ ಮಣಿಪುರದ ಜಿಲ್ಲೆಗಳಲ್ಲೆ ತುಂಬಾ ಚೆಂದಗೆ ಸರ್ವಿಸು ಸಿಗುವ ಜಿಲ್ಲೆ ಇದು. ಪಕ್ಕದಲ್ಲೇ ಹರಿಯುವ "ಅಫಾ" ನದಿ ರಭಸ ಯಾವಾಗಲೂ ಭರ್ರ್ ಎನ್ನುವ ಸಪ್ಪಳ ಮಾಡುತ್ತಿದ್ದರೆ ಅಲ್ಲೆಲ್ಲೋ "ಪುಂಗಾ – ಚೊಲೆಮ್" ನುಡಿಸುವ ಸದ್ದು ಇಲ್ಲಿ ಖಾಯಂ. ಅದರ ರಿದಂಗೆ ಎಲ್ಲೆ ಇದ್ದರೂ ತಲೆದೂಗುವ "ರಿಂಗಾ ಮೈ"ಗಳು. ಅದಕ್ಕೆ ಸರಿಯಾಗಿ ಸ್ಥಳೀಯ ವೈನ್‍ನ ಚಪ್ಪರಿಕೆ ಮಾತ್ರ ಬಿಡುವುದಿಲ್ಲ. ಮರುದಿನಕ್ಕೆ ತೆರೆದುಕೊಳ್ಳಲಿದ್ದ "ತೆಮೆನ್‍ಗ್ಲಾಂಗ್‍ನ ಅಂಗಳದಲ್ಲಿ ಆಗಲೆ ನಿದ್ರೆಯ ಮಂಪರು ಆವರಿಸಿಕೊಳ್ಳುತ್ತಿತ್ತು. ತೆಮೇನ್ ಗ್ಲಾಂಗ್ : ಒಂದು ಪಕ್ಕದಲ್ಲಿ ಸುಂದರ ಸೇನಾಪತಿ ಜಿಲ್ಲೆ ಅದರ ಪಕ್ಕದಲ್ಲೇ ನಾಗಾಲ್ಯಾಂಡಿನ "ಪರೇನ್" ಜಿಲ್ಲೆ (ಅದೇ ಮರ್ರೆಂ - ಪರೇನ್ ಹೈವೆ ಬಗ್ಗೆ ಬರೆದಿದ್ದೇನಲ್ಲ ಅದೇ ಇದು). ಇನ್ನೊಂದು ಕಡೆಯಲ್ಲಿ ಅಸ್ಸಾಂನ ಕಚೇರ್ ಪರ್ವತ ಪ್ರದೇಶ ಮತ್ತು ಜಿಲ್ಲೆ ಉಳಿದ ಭಾಗಕ್ಕೆ ತನ್ನದೇ ರಾಜ್ಯದ ಚುರ್ಚಾಂಡ್ಪುರ್ ಜಿಲ್ಲೆಯನ್ನು ಸರಹದ್ದಾಗಿ ಪಡೆದಿರುವ ಜಿಲ್ಲೆ "ತೆಮೇನ್ 115 ಪ್ರಮೀಳೆಯರ ನಾಡಿನಲ್ಲಿ ಗ್ಲಾಂಗ್". 1972ರ ಮೊದಲು "ಮಣಿಪುರ್ ಪಶ್ಚಿಮ" ಎಂದೇ ಗುರುತಿಸಲ್ಪಡುತ್ತಿದ್ದ ತೆಮೇನ್‍ಗ್ಲಾಂಗ್ ಇವತ್ತು ಮಣಿಪುರದ ರಾಜಧಾನಿ ಇಂಫಾಲದಿಂದ ಅತ್ಯಂತ ದೂರ ಇರುವ ಜಿಲ್ಲೆ ಎಂದೇ ಗುರುತಿಸಲ್ಪಟ್ಟಿದೆ. ಸುಮಾರು 147 ಕಿ.ಮೀ ಇರುವ ಈ ಜಿಲ್ಲೆ ತೆಮೇನ್‍ಗ್ಲಾಂಗ್ ರಸ್ತೆಯ ದೃಷ್ಟಿಯಿಂದಲೂ ಸಾಗಾಣೆ ನಿಧಾನವಾಗಿದ್ದುದರಿಂದ ತಲುಪುವ ವೇಗವೂ ಕಡಿಮೆಯೇ. ಕಾರಣ ಸ್ವತಂತ್ರ ಬರುವವರೆಗೂ ಯಾವ ಒಂದೇ ಒಂದು ಕಿ.ಮೀ. ವಾಹನದ ರಸ್ತೆಯನ್ನು ಹೊಂದಿಲ್ಲದ ಈ ಜಿಲ್ಲೆ ತೆಮೇನ್‍ಗ್ಲಾಂಗ್ 1956 ರಲ್ಲಿ ಮೊದಲ ಬಾರಿಗೆ ದೀರ್ಘ ಅಂದರೆ 75 ಕಿ.ಮೀ ಉದ್ದದ ವಾಹನ ರಸ್ತೆಯನ್ನು ಕಂಡಿತು. ಇಂಫಾಲ-ತೆಮೇನ್‍ಗ್ಲಾಂಗ್ ರಸ್ತೆ "ಕಂಗ್‍ ಪೊಕ್ಪಿ"ಯ ಮೂಲಕ ಹಾಯ್ದು ಪ್ರಮುಖ ಏಳು ಹಳ್ಳಿಗಳನ್ನು ಮುಟ್ಟಿ ಸಾಗಿದ್ದೇ ಅತಿ ದೊಡ್ಡ ಸಾಧನೆ ಆಗ. ನಂತರದಲ್ಲಿ ಪ್ರಥಮ ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 53. 1979ರಲ್ಲಿ ಆರಂಭವಾಗಿ "ಖೊಂಗ್ ಸ್ಯಾಂಗ್- ತೆಮೇನ್‍ಗ್ಲಾಂಗ್" ಅದ್ಭುತ ಎನ್ನುವ ಬದಲಾವಣೆಗೆ ನಾಂದಿಯಾಯಿತು. ಇದೇ ವರ್ಷದ ಅರಂಭವಾದ ತೌಸೇಮ್ – ಕೈಪುಂಡಿ ಪ್ರಮುಖ 8 ಹಳ್ಳಿಗಳನ್ನು ಬಳಸಿ ನಡೆದಿದ್ದು ಕೊಂಚ ಪ್ರವಾಸಿಗರನ್ನು ಆಕರ್ಷಿಸಲು ಕಾರಣವಾಯಿತು. ಹಳೆಯ ಬ್ರಿಟಿಷ್‌ ಕಾಲದ "ಕಚರ್" ರಸ್ತೆ ಈಗಿಲ್ಲವಾದರೂ ಆಗಿನ ಪ್ರಮುಖ ಸಂಪರ್ಕ ಸಾಧನವಾಗಿದ್ದು ಅದನ್ನು ಬೇರೆ ಪರ್ಯಾಯದ ಹಾದಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಹೆಸರಿಗೆ ಜಿಲ್ಲೆಯ ಪ್ರಮುಖ ನಗರ ಅಥವಾ ಪಟ್ಟಣ ಎಂದು ಕರೆಯಬಹುದಾದರೂ ಯಾವ ಊರೂಗಳೂ ಇತ್ತ ಪಟ್ಟಣವೂ ಅಲ್ಲದ ಅತ್ತ ನಗರವೂ ಅಲ್ಲದೆ, ಹಳ್ಳಿಯ ಬಿಸುಪು ಕಳೆದುಕೊಳ್ಳದ ಅರೆಬರೆಯಾಗಿ ಬೆಳೆದಿವೆ. ಅದರಲ್ಲಿ ಆಡಳಿತಾನುಕೂಲಕ್ಕೆ ಈ ಕೆಳಗಿನಂತೆ ಜಿಲ್ಲೆಯನ್ನು ವಿಂಗಡಿಸಲಾಗಿದೆ 1. ರೊಂಗಾಮೈ 2. ಲಿಂಗಾ ಮೈ 3. ಇಂಫು ಮೈ 4. ಕುಕಿ ಪ್ರಮೀಳೆಯರ ನಾಡಿನಲ್ಲಿ 116 5. ಚಿರು 6. ಹಮ್ರಾ 7. ಖಾಸಿ ಇದ್ದುದರಲ್ಲಿ ಜಿಲ್ಲೆಯಲ್ಲಿ ಗಮನಿಸಬಹುದಾದ ದೊಡ್ಡ ಊರುಗಳಿವು. ಬರಾಕ್, ಇರಾಂಗ್, ಮಾಖ್ರು, ಇರಿಂಗ್, ಅಗಾ ಮತ್ತು ಅಫಾ ನದಿಗಳು ಜಿಲ್ಲೆಯ ಪ್ರಮುಖ ನೀರಿನ ಸಂಪನ್ಮೂಲಗಳಾಗಿದ್ದು ಸಾಕಷ್ಟು ನೀರು ಇಲ್ಲಿನ ಕಣಿವೆಗಳಲ್ಲಿ ಹರಿದು ಹೋಗುತ್ತಿದೆ. ಇವತ್ತಿಗೂ ತೆಂಮೇನ್‍ಗ್ಲಾಂಗ್ ಜಿಲ್ಲೆಯ ಯಾವುದೇ ನದಿಯನ್ನು ಕೃಷಿ ಮತ್ತು ವಿದ್ಯುತ್ ಉತ್ಪಾದನೆಯಂತಹ ವಾಣಿಜ್ಯಾತ್ಮಕ ಕಾರಣಗಳಿಗೆ ಬಳಸಿದ್ದು ಕಂಡುಬರುತ್ತಿಲ್ಲ. ಅತ್ಯಂತ ದಟ್ಟ ಅರಣ್ಯ ಪ್ರದೇಶ ಹೊಂದಿರುವ "ಕಮ್ನಿಂಗ್ ಚಿಂಗ್" ನುಂಗ್ಬಾ ವ್ಯಾಪ್ತಿಯ ಪ್ರದೇಶದಲ್ಲಿದೆ. ಅತ್ಯಂತ ಹೆಚ್ಚಿನ ಹಸಿರು ಮತ್ತು ವನ್ಯಜೀವಿಗಳನ್ನು ಹೊಂದಿರುವ ಇಲ್ಲಿನ ಪ್ರದೇಶದಲ್ಲಿ ಲೆಂಮ್ಟಾ ನಲ್ಲೊಂಗ್, ಕಾಡಿ, ಕೌಲಿಂಗ್, ಲಂಗ್ಫ್ರಾಮ, ತೈಪ್ರಾಮ್, ಫೊಕ್ಲೊಂಗ್, ಘಿಂಗ್ ನಿಂಗ್, ಕಾಕುಯಿ ಮತ್ತು ಥಿಲ್ಲೊನ್‍ಗಳು ಈ ಅರಣ್ಯ ಪ್ರದೇಶದಲ್ಲೇ ಸೇರಿ ಹೋಗಿರುವ ಪ್ರಮುಖ ಹಳ್ಳಿಗಳು. ಇವಾವ ಹಳ್ಳಿಗಳನ್ನೂ ಇವತ್ತು ಸುಲಭಕ್ಕೆ ತಲುಪುವ ಸಾಧ್ಯತೆ ಇಲ್ಲವೇ ಇಲ್ಲ. ಈ ಹಳ್ಳಿಗಳನ್ನು ತಲುಪುವುದೆಂದರೆ ಇವತ್ತು ಹೊರಟು ನಾಳೆ ಹಿಂದಿರುಗುವ ಕಾರ್ಯಕ್ರಮವೇ. ನಾನು ಪ್ರತಿ ಬಾರಿಯೂ ಇಲ್ಲಿಗೆ ದಾರಿ ಸವೆಸುವಾಗ ಕೊನೆಯ ಪ್ರಯಾಣವನ್ನು ಇಲ್ಲಿಗೆ ಸೇರಿಸಿಕೊಳ್ಳುತ್ತಿದ್ದೆ. ಇದರಿಂದ ಮೋಟಾರ್ ಸೈಕಲ್ಲಿನ ಪ್ರಯಾಣ ಎಂಥಾ ಕಾಲು ದಾರಿಯಲ್ಲೂ ಚಲಿಸಿ ಈ ಹಳ್ಳಿಯನ್ನು ತಲುಪಿ ಅಲ್ಲಿದ್ದು ಮರುದಿನ ಇನ್ನೊಂದು ಹಳ್ಳಿಯ ಮೂಲಕ ಆಚೆಗೆ ನಡೆಯುವ ಯೋಜನೆ ರೂಪಿಸಿದ್ದರಿಂದ ಸಾಕಷ್ಟು ಒಳ ಪ್ರದೇಶಗಳನ್ನು ತಲುಪುವ ಕಾರ್ಯ ಸಾಧ್ಯವಾಯಿತು. ಅಲ್ಲದೆ ಇಲ್ಲಿನ ಒಟ್ಟು ಜಾಗದಲ್ಲಿ ಸರಿಯಾಗಿ 1000 ಹೆಕ್ಟೆರ್ ಕೂಡಾ ಸಪಾಟಾದ ನೆಲ ಸಿಗುವುದಿಲ್ಲ ಸಂಪೂರ್ಣ ಪರ್ವತ ಬೆಟ್ಟಗಳ ಪ್ರದೇಶ. ಹಾಗಾಗಿ ಇಲ್ಲಿ ಹೊಲ, ಗದ್ದೆ ಅಥವಾ ತೋಟ ಎನ್ನುವ ದುಡಿಮೆಗೆ ಕೃಷಿಗೆ ಯಾವುದೇ 117 ಪ್ರಮೀಳೆಯರ ನಾಡಿನಲ್ಲಿ ನೆಲೆ ಬೆಲೆ ಎರಡೂ ಇಲ್ಲ. ಏನಿದ್ದರೂ ಪ್ರವಾಸೋದ್ಯಮ ಇತರ ರಬ್ಬರ್‌ನಂತಹ ಕೃಷಿಗೆ ಹೇಳಿ ಮಾಡಿಸಿದ ವ್ಯವಹಾರ. ಜೊತೆಗೆ ವೈದ್ಯಕೀಯ ಆಯುರ್ವೇದದ ಔಷಧಗಳು ಮತ್ತು ಅನೇಕ ಸಸ್ಯ ಜೀವನ ಕಾರಣದಿಂದ ಸಂಪೂರ್ಣ ಜಿಲ್ಲೆ ಒಂದು ರೀತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಂತಿದೆ. ವರ್ಷಕ್ಕೆ ಸರಾಸರಿ 31.35 ಮಿ.ಮಿ. ಮಳೆ ಕಾಣುವ ಈ ಪ್ರದೇಶಕ್ಕೆ ಅಲ್ಲಲ್ಲಿ ನೀರನ್ನು ಹಿಡಿದಿಡುವ ಅರಣ್ಯ ಸಂಪತ್ತಿನ ಶೋಲಾ ಕಾಡಿನ ಬೆಂಬಲವೂ ಇದೆ. ಅತ್ಯಂತ ಕಾಡಿನ ಪ್ರದೇಶ ವಾದ "ತೆಮೇನ್‍ಗ್ಲಾಂಗ್" ಕೇವಲ ಒಂದು ಕಾಲೇಜು ಮತ್ತು 10 ಹೈಸ್ಕೂಲ್‍ಗಳನ್ನು ಹೊಂದಿರುವ ಜಿಲ್ಲೆ. ಪೂರ್ತಿ ಜಿಲ್ಲೆಗೆ ಒಟ್ಟು ಐದು ಪೊಲೀಸ್ ಸ್ಟೇಷನ್‍ಗಳಿದ್ದು ಯಾವುದೂ ಅರ್ಜೆಂಟಿಗೆ ಬಿದ್ದು ಕಾನೂನು ನಡೆಸುವ ದರ್ದು ಇಲ್ಲಿ ಬರುವುದೇ ಇಲ್ಲ. ಇಲ್ಲಿನ ಪ್ರಮುಖ ಜನ ಜೀವನದಲ್ಲಿ ಝೀಮೈಗಳೂ, ಲಿಂಗಾ ಮೈಗಳೂ, ರೊಂಗಾಮೈ, ಪುವಮೈ ಹಾಗು ಕುಕಿಗಳು ಬುಡಕಟ್ಟಿನ ವಸಾಹತುಗಳನ್ನು ಹಾಗೆ ಉಳಿಸಿಕೊಂಡು ಪಾಲಿಸಿಕೊಂಡು ಬಂದಿದ್ದಾರೆ. ಇಯಾಯಿ, ಇರಾಂಗ್, ಬಕ್ರು ಪ್ರಮುಖ ನೀರುಣಿಸುವ ನದಿಗಳು. ಉಳಿದೆಲ್ಲಾ ಅಲ್ಲಲ್ಲೆ ಗೆರೆಯಂತೆ ಹರಿಯುವ ಸಣ್ಣ ಗಾತ್ರದ ನದಿಗಳು. ಹಬ್ಬ ಮತ್ತು ಆಚರಣೆಗಳು ತೆಮೇನ್‍ಗ್ಲಾಂಗ್ ಜಿಲ್ಲೆಯಲ್ಲಿ : ತೆಮೇನ್‍ಗ್ಲಾಂಗ್ ತನ್ನ ಕಾಡು ಮತ್ತು ಪರ್ವತಗಳಿಗೆ ಹೆಸರು ವಾಸಿಯಾದಂತೆ ತನ್ನದೇ ಶೈಲಿಯ ಸಂಪ್ರದಾಯಬದ್ಧ ಹಬ್ಬ ಹರಿದಿನಗಳಿಗೂ ಹೆಸರುವಾಸಿಯಾಗಿದೆ ಅಲ್ಲದೆ ಆಯಾ ಬುಡಕಟ್ಟಿನ ಜನಾಂಗಗಳು ನಿರ್ವಹಿಸುತ್ತಿರುವ ಪದ್ಧತಿಗಳು ಈಗಲೂ ಅಭ್ಯಾಸ ಯೋಗ್ಯವಾಗಿದ್ದು ಅದರ ಬಗ್ಗೆ ಸಂಶೋಧನೆಯ ಕಾರ್ಯಗಳು ಜಾರಿಯಲ್ಲಿವೆ. ಪ್ರಮುಖ ಹಬ್ಬ ಹರಿದಿನಗಳ ಮತ್ತು ಸಂಪ್ರದಾಯ ಶೈಲಿಯ ಹಲವು ಆಚರಣೆಗಳೇ ಈ ಜಿಲ್ಲೆಯ ಬಂಡವಾಳ. ಅದರಲ್ಲಿ ಪ್ರಮುಖವಾದುವೆಂದರೆ: 1. ಗಾಂಗೈ 2. ಚಖಾನ್ ಗೈ. 3. ಕಾಟುಂಗೈ ಪ್ರಮೀಳೆಯರ ನಾಡಿನಲ್ಲಿ 118 4. ಛಾಗಂಗೈ 5. ಲಿಯೊ ಪುಟ್ ಸೌಟಂಗೈ 6. ಗುಡುಯಿಂಗೈ 7. ಖಾಮಂಗೈ 8. ನಾನುನಂಗೈ 9. ಮೆರಿಟ್ 10. ಕುಟ್ 1. ಗಾಂಗೈ : ಇದು ಮಳೆಗಾಲ ಕಳೆದ ನಂತರದ ಹಬ್ಬವಾಗಿದ್ದು ಜಿಲ್ಲೆಯ ಪ್ರಮುಖ ಹಬ್ಬವಾಗಿ ಪರಿಗಣಿಸಲ್ಪಟ್ಟಿದೆ. ಇದು ಕೃಷಿಯ ಕಾರ್ಯ ಸಂಪನ್ನವಾದ ಪ್ರಯುಕ್ತ ಕೈಗೊಳ್ಳುವ ಹಬ್ಬವಾಗಿದ್ದು ಇದರಲ್ಲಿ ಎರಡು ಪ್ರಮುಖ ಹಂತಗಳನ್ನು ಗುರುತಿಸಿ ಆಚರಿಸಲಾಗುತ್ತಿದೆ. ಮೊದಲನೆಯದು : ಕಿವಿ ಚುಚ್ಚಿಕೊಳ್ಳುವುದು. ಚಿಕ್ಕ ಮಕ್ಕಳು ಅಥವಾ ಯಾವುದೇ ಕಳೆದ ವರ್ಷದಲ್ಲಿ ಉಳಿದುಹೋದ ಚಿಕ್ಕ ಮಕ್ಕಳು ಮಹಿಳೆಯರು ಗಂಡಸರು ಹೊಸದಾಗಿ ಹಾಡಿ ಸೇರಿಕೊಂಡವರು ಸಂಪ್ರದಾಯದಂತೆ ಕಿವಿ ಚುಚ್ಚಿಕೊಂಡು ಆಚರಣೆ ಪೂರೈಸಬೇಕು. ಎರಡನೆಯದು : ಕಳೆದ ಹಬ್ಬದ ಅವಧಿಯಿಂದ ಇಲ್ಲಿಯವರೆಗೆ ಯಾರೆಲ್ಲಾ ತೀರಿಕೊಂಡಿದ್ದಾರೆ ಅವರಿಗೆಲ್ಲಾ ತರ್ಪಣೆ ಮತ್ತು ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿ ಆಚರಣೆ ಪೂರೈಸುವುದು ಇದರಿಂದಾಗಿ ಗಾಂಗೈ ಪ್ರಮುಖ ಹಬ್ಬವಾಗಿ ಗುರುತಿಸುತ್ತದೆ. 2. ಚಕಾಂಗೈ : ಡಿಸೆಂಬರ್ ನಲ್ಲಿ ನಡೆಯುವ ಹಬ್ಬ "ಚಕಾಂಗೈ". ಇದರಲ್ಲೂ ಎರಡು ಪ್ರಮುಖ ಘಟ್ಟಗಳಿದ್ದು ಅದರಲ್ಲಿ ಮೊದಲನೆಯದನ್ನು "ರೈಂಗಾಗೈ" ಎನ್ನುತ್ತಾರೆ. ಅಂದರೆ ಜೀವನ ವಿಧಿ ವಿಧಾನದಲ್ಲಿ ಯಾವುದೇ ಕೆಟ್ಟ ದೃಷ್ಟಿ ಬೀಳಬಾರದೆಂದು ಹಸಿ ಮಾಂಸ ಮತ್ತು ಹಸಿ ಎಲೆಗಳನ್ನು ತಿನ್ನುವುದರ ಮೂಲಕ ಭೂತಗಳಿಗೆ 119 ಪ್ರಮೀಳೆಯರ ನಾಡಿನಲ್ಲಿ ಸಂತೃಪ್ತಿಯನ್ನು ಉಂಟುಮಾಡುವುದು. ಎರಡನೆಯದು ಮೊದಲ ಹಬ್ಬದ ಬಳಿಕ ಅಶ್ರುತರ್ಪಣ ನೀಡಲಾಗದವರಿಗೆ ಶಾಂತಿ ಕೋರಿ ಅಘ್ರ್ಯ ನೀಡುವ ಕಾರ್ಯ ನಡೆಯುತ್ತದೆ. 3. ಕಟುಂಗೈ : ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸುಗ್ಗಿಯ ರೀತಿಯಲ್ಲಿ ಕುಕಿಗಳು ಮತ್ತು ಭತ್ತವನ್ನು ಬೆಳೆಯುವ ಕುಟುಂಬಗಳು ಆಚರಿಸುವ ಹಬ್ಬ ಇದಾಗಿದೆ. ಬೆಳೆ ಮತ್ತು ಸಂಪತ್ತು ಚೆನ್ನಾಗಿ ಬರಲಿ ಎನ್ನುವ ಸದಾಶಯದೊಂದಿಗೆ ದೇವರನ್ನು ಅರ್ಚಿಸುವ ಸಾಂಪ್ರದಾಯಿಕ ವಿಧಿ ವಿಧಾನಗಳ ಹಬ್ಬ ಇದಾಗಿದೆ. ಭತ್ತ ಗದ್ದೆಯಲ್ಲೇ ಊರ ಜನರೆಲ್ಲಾ ಸೇರಿ ಊಟೋಪಚಾರ ನಡೆಸುತ್ತಾರೆ. 4. ಛಾಗಂಗೈ : ಈ ಹಬ್ಬ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ಹಲವು ಕ್ರಮದಲ್ಲಿ ಆಚರಣೆಯಲ್ಲಿ ವಿಭಿನ್ನವಾಗಿದ್ದು, ಕೆಲವು ಕಡೆಗಳಲ್ಲಿ ಕೆಲವು ತಿಂಗಳುಗಳಲ್ಲಿ ಆಚರಿಸುವ ಹಬ್ಬವಾಗಿದೆ. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ಅವರವರ ಊರ ಅನುಕೂಲಕ್ಕೆ ತಕ್ಕಂತೆ ಮುಹೂರ್ತ ನೋಡಿ ಜನವರಿಯಿಂದ ಫೆಬ್ರುವರಿಯವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಅಪ್ಪಟ ಪುರುಷ ಪ್ರಧಾನ ಹಬ್ಬವಾಗಿದ್ದು, ರಿನಾಂಗೈ ಎಂದೂ ಕೂಡ ಕರೆಯುತ್ತಾರೆ. ಯುದ್ಧದ ಹಬ್ಬವೆಂದೂ ಇದು ಪ್ರಸಿದ್ಧಿ. ಈ ಹಬ್ಬದ ಕಾಲದಲ್ಲಿ ಸುಮಾರು ಒಂದು ವಾರ ಕಾಲ ಯಾವುದೇ ಅಪರಿಚಿತ, ಅನಾಮಧೇಯ ಹೊಸಬರು ಊರನ್ನು ಪ್ರವೇಶಿಸದಂತೆ ಊರನ್ನು ಕಾಯಲಾಗುತ್ತದೆ. ಹೊಸ ಹಬ್ಬದ ಆರಂಭದಲ್ಲಿ ಕಟ್ಟಿಗೆಯಿಂದಲೇ ಬೆಂಕಿಯನ್ನು ಉರಿಸಿ ಮನೆಗೆ ತಂದು ಅಡಿಗೆ ಮಾಡುವ ಸಂಪ್ರದಾಯದಲ್ಲಿ ಪೂರ್ತಿ ಪುರುಷರದ್ದೇ ಹಲವು ರೀತಿಯ ಆಚರಣೆಗಳು ಇದರಲ್ಲಿವೆ. 5. ಲಿಯೊ ಪುಟ್ ಸೌಟಂಗೈ : ಬಿತ್ತನೆಯ ಆರಂಭದಲ್ಲಿ ದೇವರನ್ನು ಒಳ್ಳೆಯ ಬೆಳೆ ಮತ್ತು ಕಾಳುಗಳ ಫಸಲು ನೀಡು ಎಂದು ಪ್ರಾರ್ಥಿಸಿ, ಅರ್ಚಿಸುವ ಹಬ್ಬದ ಈ ಕಾಲಕ್ಕೆ ಊರ ಪ್ರಮೀಳೆಯರ ನಾಡಿನಲ್ಲಿ 120 ಜನವೆಲ್ಲ ಸೇರಿ ನರ್ತಿಸಿ ಹೊರಗಡೆಯಲ್ಲೇ ಅಡುಗೆ ಮಾಡಿ ಊಟ ಮಾಡುವುದು ಸಂಪ್ರದಾಯ. ಒಟ್ಟಾರೆ ಮೊದಲೇ ಹೇಳಿದಂತೆ ಸಂಗೀತ ಮತ್ತು ನೃತ್ಯಕ್ಕೆ ಯಾವುದಾದರೊಂದು ನೆಪ ಬೇಕಿದೆ ಮೈಥೇಯಿಗಳಿಗೆ ಅಷ್ಟೇ. ಇದನ್ನು ಮಾರ್ಚ್ – ಮತ್ತು ಏಪ್ರಿಲ್ ಭಾಗದಲ್ಲಿ ಆಚರಿಸಲಾಗುತ್ತದೆ. 6. ಕುಟ್ : ಮುಖ್ಯವಾಗಿ "ಜುಂಪ್" ಬುಡಕಟ್ಟು ಜನಾಂಗ ಪಾಲ್ಗೊಳ್ಳುವ ಹಬ್ಬವಾಗಿದ್ದು ಮಣಿಪುರದ ಹಲವು ಭಾಗ್ಯದಲ್ಲಿ ಇದನ್ನು ಪ್ರಮುಖ ಹಬ್ಬ ಮತ್ತು ಅಚರಣೆಯಾಗಿ ದಾಖಲಿಸಲಾಗಿದೆ. 1979 ರಲ್ಲಿ "ಕೈತಲಾನ್ಬಿ" ಎಂದು ಮರುನಾಮಕರಣವಾದರೂ ಇವತ್ತಿಗೂ "ಸರ್ದಾರ್ ಹಿಲ್ಸ್‌" ವ್ಯಾಪ್ತಿಯ ಮಣಿಪುರದ ಮೂಲದಲ್ಲಿ ಹಲವು ಸಾಂಪ್ರದಾಯಿಕ ನೃತ್ಯ ಮತ್ತು ಸಂಸ್ಕೃತಿಯನ್ನು ಒಳಗೊಂಡು ವರ್ಷಕ್ಕೊಮ್ಮೆ ಆಚರಣೆಯಲ್ಲಿದೆ. 1982 ರಲ್ಲಿ ಇದನ್ನು ಮಣಿಪುರ ಜಿಲ್ಲೆಯ ಅಧಿಕೃತ ಸರಕಾರಿ ಹಬ್ಬವನ್ನಾಗಿ ಘೋಷಿಸಲಾಯಿತಲ್ಲದೇ ಇದಕ್ಕಾಗಿ ಒಂದು ದಿನದ ಸರಕಾರಿ ರಜೆಯನ್ನೂ ಘೋಷಿಸಲಾಗಿದೆ. ಆದ್ದರಿಂದ " ಕುಟ್" ಅಥವಾ "ಕೈತಲಾಂಬಿ" ಹಬ್ಬ ಅಧಿಕೃತ ಮಣಿಪುರಿಗಳ ಹಬ್ಬದ ಯಾದಿಯಲ್ಲಿದೆ. ಈ ಹಬ್ಬದಲ್ಲಿ ಹಾಡು ನೃತ್ಯ, ಸಾಂಪ್ರದಾಯಿಕ ಕುಣಿತ (ಸ್ಥಳೀಯವಾಗಿ ಭತ್ತದ ತೆನೆಯ ರಸದಿಂದ ತಯಾರಿಸಿದ ಪೇಯ), ಹಲವು ಸಾಹಸ ಕ್ರೀಡೆಗಳು, ಜಾನಪದೀಯ ನೃತ್ಯ ಮತ್ತು ಬ್ಯೂಟಿ ಕಾಂಟೆಸ್ಟ್ (ಬುಡಕಟ್ಟು ಸೌಂದರ್ಯ 121 ಪ್ರಮೀಳೆಯರ ನಾಡಿನಲ್ಲಿ ಸ್ಪರ್ಧೆ) ಇತ್ಯಾದಿಗಳ ಹಲವು ಆಕರ್ಷಕ ಕಾರ್ಯಕ್ರಮದೊಂದಿಗೆ ಬುಡಕಟ್ಟಿನ ಸಾಂಪ್ರದಾಯಿಕ ಭಕ್ಷ್ಯ ಭೋಜನಗಳ ಸಡಗರ ಈ ಹಬ್ಬದ ವೈಶಿಷ್ಟ್ಯ. ಉಳಿದಂತೆ ಇತರ ಹಬ್ಬ ಹರಿದಿನಗಳು ಇತರ ಜಿಲ್ಲೆ ಮತ್ತು ಮಣಿಪುರದ ಇತರ ಭಾಗಗಳಲ್ಲಿ ಇರುವಂತೆ ಎಂದಿನ ಸಾಂಪ್ರದಾಯಿಕತೆ ಮತ್ತು ಪದ್ಧತಿಗಳು ವಿಭಿನ್ನವಾಗೇನೂ ಇಲ್ಲ. ಏನಿದ್ದರೂ ಆಯಾ ಸ್ಥಳೀಯ ರೀತಿ ರಿವಾಜುಗಳು ಅಲ್ಲಲ್ಲಿ ಕಾಲಕಾಲಕ್ಕೆ ಅಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿವೆಯಾದರೂ ಯಾವುದೇ ಬುಡಕಟ್ಟು ಮೂಲ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಭಿನ್ನವಾಗಿ ಗುರುತಿಸುವ ಅಥವಾ ಬದಲಿಸುವ ಮಹತ್ತರ ಬದಲಾವಣೆಗೆ ಕೈಹಾಕಿಲ್ಲ. ಸಂಸ್ಕೃತಿ ಮತ್ತು ಜನಾಂಗ : ತೆಮೇನ್‍ಗ್ಲಾಂಗ್‍ನ ಜಿಲ್ಲೆಯಾದ್ಯಂತ ಹೆಚ್ಚಿನ ಜನರು ಒಂದೇ ರೀತಿಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆ ಒಳಗೊಂಡಿರುವುದನ್ನು ಕಾಣುತ್ತೇವೆ. ಎಲ್ಲಿಯೂ ಮನಸ್ಥಿತಿಗಳು ಗೊತ್ತು ಮಾಡಿ ಕೊಡುವುದಿಲ್ಲವಾದರೂ ಅಲ್ಲಲ್ಲಿ ಆಗುವ ಬದಲಾವಣೆಗಳಲ್ಲಿ ಯಾವ ಮೂಲಭೂತ ಭಿನ್ನತೆಯೇನೂ ಕಂಡುಬರುವುದಿಲ್ಲ. ಪ್ರಮೀಳೆಯರ ನಾಡಿನಲ್ಲಿ 122 ಮೂಲತ: "ಝೇಲಿಯಾಂಗ್ರೋಂಗ್ ನಾಗಾ ಬುಡಕಟ್ಟು"ಗಳು ತೆಮೇನ್‍ಗ್ಲಾಂಗ್ ಜಿಲ್ಲೆಯಲ್ಲಿ ಹೆಚ್ಚಿನ ಹಿಡಿತ ಹೊಂದಿವೆ. ಈ ಝೇಲಿಯಾಂಗ್ರೋಂಗ್ ನಾಗಾ ಬುಡಕಟ್ಟು ಮೂಲಬುಡಕಟ್ಟುಗಳಾದ ರೋಂಗಾ ಮೈ, ಲಿಂಗಾ ಮೈ, ಝೀಮೈ ಮತ್ತು ಪುವಾಮೈಗಳ ಸಮ್ಮಿಶ್ರಣ ಎನ್ನುವುದೇ ಸೂಕ್ತ. ಇವೆಲ್ಲದರ ಮೇಲೆ ಆಗಿರುವ ಒಟ್ಟಾರೆ ಪ್ರಭಾವ ಕುಕಿ ಗಳದ್ದು. ಜೊತೆಗೆ ಮಾರ್ಸ್, ಖಾಸಿಸ್ ಹಾಗು ಚಿರುಗಳೂ ಕೂಡಾ ಇದರಲ್ಲಿದ್ದಾರೆ. ಈ ಝೇಲಿಯಾಂಗ್ರೋಂಗ್‍ನ ನಾಗಾಬುಡಕಟ್ಟು ಮೂಲತ: ಟಿಬೇಟ್- ಬರ್ಮನ್ (ಇಂಡೊ–ಮೊಂಗೋಲೈಡ್) ಕುಟುಂಬ ಮೂಲದವರೆಂದು ಗುರುತಿಸಲಾಗುತ್ತಿದೆ. ಚೈನಾದ ಹೂವಾಂಗೋ ಹೋ ನದಿಯ ತೀರ ಪ್ರದೇಶದಿಂದ ಇಲ್ಲಿಗೆ ಅಲೆಮಾರಿಗಳಾಗಿ ಬಂದು ಬೀಡುಬಿಟ್ಟಿರುವ ಮಂಗೋಲಿಯನ್ ಮತ್ತು ಯಾಂಗ್ಟಿಸಿಕಿಯಾಂಗ್ ನದಿಯ ಪ್ರದೇಶದ ನಾಗಾಗಳ ವಲಸೆಯ ಮುಂದಿನ ಪೀಳಿಗೆಗಳಿವು. ಈ ಝೇಲಿಯಾಂಗ್ರೋಂಗ್ ನಾಗಾ ಬುಡಕಟ್ಟುಗಳಲ್ಲಿ ಆರು ಪ್ರಮುಖ ವಿಂಗಡಣೆಗಳಿದ್ದು ಅವುಗಳನ್ನು 1. ಕಮೈ ( ಪಾಮೈ) - ಬುಲ ಬುಲ್ ಹಕ್ಕಿ 2. ಗೊನ್ನಾಮೈ ( ನ್ಯೂ ಮೈ ) - ಹುಲಿ 3. ಗಂಗಮೈ- ಕಪ್ಪೆ 4. ಪೆನ್ನಾ ಮೈ - ಹಕ್ಕಿ 5. ರಿಯೇ ಮೈ 6. ರುಂಗಾ ಮೈ ಹೀಗೆ ಆಯಾ ಪಂಗಡಗಳ ಮತ್ತು ಅನುಕೂಲಕರ ಮಾಹಿತಿಗಾಗಿ ಕೆಲವೊಂದನ್ನು ಪ್ರಾಣಿಸೂಚಕ ಮತ್ತು ಹಕ್ಕಿಸೂಚಕವಾಗಿ ಗುರುತಿಸಿಡಲಾಗಿದೆ. ಆಯಾ ಬುಡಕಟ್ಟುಗಳು ತಮ್ಮ ಈ ವೈಶಿಷ್ಟ್ಯತೆಯನ್ನು ಗುರುತಿಸಿಕೊಳ್ಳುವ, ಅದೇ ಚಿನ್ಹೆಯ ಮೂಲಕ ಗುರುತುಮಾಡುವ ಸಲುವಾಗಿ ಆಯಾ ಪ್ರಾಣಿಯ ದೇಹದಿಂದಲೇ ತಲೆಬಾಗಿಲನ್ನು ಅಲಂಕರಿಸುವ ಸಂಪ್ರದಾಯ ಇದ್ದುದ್ದು 123 ಪ್ರಮೀಳೆಯರ ನಾಡಿನಲ್ಲಿ ಕಾಣಿಸುತ್ತದೆ. ಪ್ರತಿ ಪಂಗಡಗಳು ತನ್ನದೇ ಆದ ಪ್ರಾಣಿಗಳ ಚಿನ್ಹೆಯನ್ನು ಹೊಂದಿದ್ದು ಅವುಗಳನ್ನು ಆರಾಧಿಸುವುದೂ ಇದೆ. ಈ ಮೇಲಿನ ಪಂಗಡ ಅಥವ ಒಳ ಜಾತಿಗಳಲ್ಲಿ ಒಳಗೊಳಗೇ ಮದುವೆಗಳು ನಿಷಿದ್ಧ. ಸಾಮಾಜಿಕವಾಗಿ ಅವುಗಳು ನಿಷಿದ್ಧ ಮತ್ತು ಬಹಿಷ್ಕೃತಕ್ಕೊಳಪಡುತ್ತವೆ. ತುಂಬ ಖುಶಿಯ ಮತ್ತು ಇವತ್ತಿಗೂ ಉತ್ತಮ ಸಾಮಾಜಿಕ ಕಾಳಜಿ ಬದ್ಧತೆಯನ್ನು ವ್ಯಕ್ತಪಡಿಸುವ ಮತ್ತು ದಿನವಹಿ ವ್ಯವಹಾರದಲ್ಲಿ ಸಮಾನತೆಯನ್ನು ಪಾಲಿಸುವ "ಝೇಲಿಯಾಂಗ್ರೋಂಗ್" ನಾಗಾ ಬುಡಕಟ್ಟುಗಳ ಪದ್ಧತಿಯಲ್ಲಿ ಸಾಮಾಜಿಕ ಸಮಾನತೆ ಅತಿ ದೊಡ್ಡ ಗಮನೀಯ ಅಂಶ. ಕುಟುಂಬ ಪದ್ಧತಿಯಲ್ಲಿ ಒಳ ವಿವಾಹಗಳು ಇವೆಯಾದರೂ ಸಮ್ಮತಿಯ ಮದುವೆಗೆ ಹೆಚ್ಚು ಪ್ರಾಶಸ್ತ್ಯ. ಮದುವೆಯನ್ನು ಹೊರತುಪಡಿಸಿದರೆ ಉಳಿದಂತೆ ಇತರೆ ಬುಡಕಟ್ಟಿನ ಸಾಂಪ್ರದಾಯಗಳೂ ಅಲ್ಲಲ್ಲಿ ಇದೆಯಾದರೂ ಕೆಲವು ಪ್ರಮುಖ ಪದ್ಧತಿಗಳು ಅಭ್ಯಾಸ ಯೋಗ್ಯ ಜೀವನಕ್ರಮವಾಗಿವೆ. ಇದರಲ್ಲಿ "ಝೇಲಿಯಾಂಗ್ರೋಂಗ್" ವಿವಾಹ ಪದ್ಧತಿಯನ್ನು ಹೀಗೆ ವಿಂಗಡಿಸಲಾಗಿದೆ. 1. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಹುಡುಗನು ಹುಡುಗಿಯ ಕುಟುಂಬದೊಂದಿಗೆ ಕನಿಷ್ಠ ಮೂರು ವರ್ಷಗಳ ಕಾಲವನ್ನು ಹುಡುಗಿಯ ಮನೆಯಲ್ಲಿ ಕಳೆದು ನಂತರ ಮನೆಗೆ ಹುಡುಗಿಯೊಂದಿಗೆ ಹಿಂದಿರುಗುವುದು ಹೆಚ್ಚಿನ ಬಳಕೆಯಲ್ಲಿರುವ ಪದ್ಧತಿಯಾಗಿದೆ. ಈ ಮೂರರಿಂದ ನಾಲ್ಕು ವರ್ಷಗಳ ಕಾಲ ಹುಡುಗಿಯ ಮನೆಯವರಿಗೆ ತಾವು ಗಂಡ ಹೆಂಡತಿಯರಂತೆ ಬದುಕುತ್ತಿದೇವೆ ಮತ್ತು ಹುಡುಗಿಯನ್ನು ಸಂಪೂರ್ಣ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದೇವೆ ಎನ್ನುವ ಗ್ಯಾರಂಟಿ ತೋರಿಸುವ ಹೊಣೆಗಾರಿಕೆ ಹುಡುಗನದ್ದಾಗಿರುತ್ತದೆ. ನಂತರವೇ ಹುಡುಗನ ಕುಟುಂಬಕ್ಕೆ ಹುಡುಗಿ ಹಿಂದಿರುಗುತ್ತಾಳೆ. 2. ಎರಡನೆಯ ಪದ್ಧತಿಯಲ್ಲಿ ಹುಡುಗಿಯ ಇಚ್ಛೆಗೂ ವಿರುದ್ಧವಾಗಿ ಕುಟುಂಬದ ಒಳಿತಿಗಾಗಿ ಮತ್ತು ಕೆಲವು ನಿಬಂಧನೆಗಳನ್ನು ಎರಡೂ ಪ್ರಮೀಳೆಯರ ನಾಡಿನಲ್ಲಿ 124 ಕುಟುಂಬಗಳು ಮೀರಲಾಗದ ಸಂವೇದನಾತ್ಮಕ/ ಭಾವನಾತ್ಮಕ ಸಂಬಂಧಗಳಿದ್ದಾಗ ಕುಟುಂಬ ಹಿರಿಯರ ಮರ್ಜಿಯ ಮೇರೆಗೆ ನಡೆಯುವ ಮದುವೆ. 3. ಮದುವೆಯ ಬಂಧಕ್ಕಾಗಿ ಮೊದಲ ಮೂರ್‌ನಾಲ್ಕು ವರ್ಷಗಳನ್ನು ಕಳೆಯುವ ಸಂದರ್ಭದಲ್ಲಿ ಅಕಸ್ಮಾತಾಗಿ ಅಪಘಾತ/ಇನ್ಯಾವುದೋ ಆಕಸ್ಮಿಕದಲ್ಲಿ ಹುಡುಗ ತೀರಿ ಹೋದಲ್ಲಿ ಅವಳನ್ನು ಮನೆಯಲ್ಲಿರುವ ಇನ್ನೊಬ್ಬ ಸಹೋದರ ಮದುವೆಯಾಗಬೇಕು ಮತ್ತು ಆಗಲೇ ಮಕ್ಕಳಾಗಿದ್ದರೆ ಅವನ್ನು ಪೋಷಿಸುವ ಹೊಣೆಯನ್ನು ಹೊರಬೇಕು. 4. ಕೆಲವೊಮ್ಮೆ ಕುಟುಂಬದ ಹೊರತಾಗಿ ಜೋಡಿಯು ಮೊದಲೇ ಪ್ರೀತಿಸಿ ನಿರ್ಧರಿಸಿಕೊಂಡಿದ್ದರೆ ಅದನ್ನು ಕುಟುಂಬಗಳೆ ಹುಡುಗನ ಅರ್ಹತೆಯನ್ನು ನಿರ್ಧರಿಸಿ ನಿಂತು ಮದುವೆ ಮಾಡಿಸಬೇಕು ಎನ್ನುವ ಪದ್ಧತಿಯೂ ಚಾಲ್ತಿಯಲ್ಲಿದೆ. ಇಲ್ಲವಾದರೆ ಹುಡುಗನಿಗೆ ಹೊಣೆಗಾರಿಕೆಯನ್ನು ಸಾಬೀತು ಮಾಡುವ ಅವಕಾಶ ನೀಡಲಾಗುತ್ತದೆ. 5. ಕುಟುಂಬದೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಒಳ ಮದುವೆಗಳು ಅಂದರೆ ಸಹೋದರ/ ದೊಡ್ಡಪ್ಪ ಇತರೆ ಸಂಬಂಧಿಯ ಮಕ್ಕಳಲ್ಲಿ ಸಂಬಂಧ ಕುದುರಿಸಿ ಆ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವಿಕೆ. ಹೀಗೆ ಸಾಮಾಜಿಕವಾಗಿ ಹೆಣ್ಣಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಮದುವೆಯ ಬಂಧನದ ಹಲವು ಮಜಲುಗಳಲ್ಲಿ ಈ "ಝೇಲಿಯಾಂಗ್ರೋಂಗ್" ನಾಗಾ ಬುಡಕಟ್ಟುಗಳು, ಮದುವೆಯ ಕಾರ್ಯದಲ್ಲಿ ಸಾಮಾಜಿಕ ಬದ್ಧತೆ, ಕಾಳಜಿಯನ್ನು ಹೊಂದಿದ್ದಾರೆ. ಇವರಲ್ಲಿ ಹಲವು ರೀತಿಯ ಇದೇ ಸಂಪ್ರದಾಯ ಕಟ್ಟುಪಾಡುಗಳಿದ್ದು ಕೆಲವನ್ನು ಮಾತ್ರ ಅದರಲ್ಲೂ ವಿಶೇಷ ಎನ್ನುವಂತಹದ್ದನ್ನು ಮಾತ್ರ ನಾನು ಇಲ್ಲಿ ಚರ್ಚಿಸಿದ್ದೇನೆ. ಉಳಿದವನ್ನು ಅವರೂ ನಿಮಗೆ ಗುಟ್ಟು ಬಿಟ್ಟುಕೊಡಲಾರರು, ಚರ್ಚಿಸಲಾರರೂ ಕೂಡಾ. ಅವೆಲ್ಲ ಹೊರ ವ್ಯಕ್ತಿಗಳಿಗೆ ತಿಳಿಯಲೇಬಾರದು ಎನ್ನುತ್ತಾರೆ. ಅದರಲ್ಲೂ ಹುಡುಗಿ ವಯಸ್ಕಳಾದಾಗ 21 ದಿನ ಬಟ್ಟೆ ಅಥವಾ 125 ಪ್ರಮೀಳೆಯರ ನಾಡಿನಲ್ಲಿ ಇನ್ನಾವುದೇ ವಸ್ತ್ರ ಇಲ್ಲದೆ ತಿರುಗಾಡುವ, ಅದರಲ್ಲಿ ನಿಯಮಿತವಾಗಿ ದಿನಕ್ಕೆ ನಾಲ್ಕು ಗಂಟೆಗೆ ಸೂರ್ಯನ ಬಿಸಿಲಿಗೆ ಮೈ ಒಡ್ಡಬೇಕೆನ್ನುವ ಶಾಸ್ತ್ರಗಳನ್ನು ಈಗಲೂ ಪಾಲಿಸಲಾಗುತ್ತಿದೆ. ಆಗೆಲ್ಲಾ ಹಾಡಿಗಳಿಗೆ ಪ್ರವೇಶ ನಿಷಿದ್ಧ ಮತ್ತು ಮಾಹಿತಿಯನ್ನೂ ಈಚೆಗೆ ಬಿಡಲಾಗುವುದಿಲ್ಲ. ಇಂಥಾ ಅವರದ್ದೇ ಆದ ಪದ್ಧತಿಗಳು ಪ್ರತಿ ಇಪ್ಪತ್ತು ಕಿ.ಮೀ.ಗೆ ಬದಲಾಗುತ್ತಿವೆ. ಮಂಡು : ಎಲಬಿನ ಕಾಣಿಕೆ ಇದನ್ನು ವಧುವಿನ ರಕ್ತ ಸಂಬಂಧಿಗಳು ಕೇಳುವ ಎಲುಬಿನ ಕಾಣಿಕೆ. ಹೆಂಡತಿಯು ಅಕಸ್ಮಾತಾಗಿ ತೀರಿ ಹೋದಾಗ ಆಕೆಯ ತಂದೆಯಾದವನು ಆ ಹುಡುಗನ ಅಥವಾ ಆಕೆಯ ಬದುಕಿರುವ ಗಂಡನಿಂದ ಬಯಸುವ ಎಲುಬಿನ ಕಾಣಿಕೆಗೆ ಮಂಡು ಎಂದು ಕರೆಯಲಾಗುತ್ತದೆ. ಅಕಸ್ಮಾತಾಗಿ ಹುಡುಗನೂ ತೀರಿದರೆ ಅವರ ಅತ್ಯಂತ ಹತ್ತಿರದ ಸಂಬಂಧಿಯು ಆಕೆಯ ಎಲುಬನ್ನು ತಂದು ಒಪ್ಪಿಸುವ ಮೂಲಕ ಪದ್ಧತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಪ್ರವಾಸೋದ್ಯಮ ಅಥವಾ ಪ್ರವಾಸಿ ಸ್ಥಳಗಳು : 1. ಬನ್ನಿಂಗ್ : ಇದೊಂದು ಎತ್ತರದ ಪರ್ವತ ಪ್ರದೇಶದ ಸೈಟ್ ಸೀಯಿಂಗ್ ತುದಿ ಎನ್ನಬಹುದಾಗಿದ್ದು ಕಡಿದಾದ ಪರ್ವತದ ತುದಿಯಿಂದ ವಿಹಂಗಮವಾದ ಕಾಡಿನ ಮತ್ತು ಪರ್ವತದ ಕೆಳಭಾಗದ ಕಣಿವೆಯ ಸೃಷ್ಟಿ ಸೌಂದರ್ಯವನ್ನು ನೋಡಬಹುದಾಗಿದೆ. ತೆಮೇನ್‍ಗ್ಲಾಂಗ್ ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿ. ಆದರೆ ಸುಲಭದಲ್ಲಿ ತಲುಪುವಿಕೆ ಸಾಧ್ಯವಿಲ್ಲ. 2. ಬರಾಕ್ ಜಲಪಾತ : ಬರಾಕ್ ನದಿಯಿಂದ ಉಂಟಾದ ಚೆಂದ ಚೆಂದವಾಗಿ ಕಾಣುವ ಜಲಪಾತ ಇದು. ಸಾಕಷ್ಟು ಎತ್ತರವಾಗಿದ್ದು ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದು. ಆದರೆ ಕೇವಲ ಜನವರಿಯವರೆಗೆ ಮಾತ್ರ ಲಭ.್ಯ ಪ್ರಮೀಳೆಯರ ನಾಡಿನಲ್ಲಿ 126 ನಂತರದಲ್ಲಿ ಸಹಜವಾಗೇ ನೀರು ಕಡಿಮೆಯಾಗುವುದರಿಂದ ಆಕರ್ಷಣೆ ಕಳೆದುಕೊಳ್ಳುತ್ತಿದೆ. ನೇರ ವಾಹನ ಸೌಲಭ್ಯ ಇಲ್ಲವೇ ಇಲ್ಲ. 3. ಖಿ ಷಾ - ಖೌ : ಪರ್ವತಾರೋಹಿಗಳಿಗೆ ಹೇಳಿ ಮಾಡಿಸಿದಂತಹ ಕಡಿದಾದ ಪರ್ವತದ ತುದಿಯನ್ನು "ಖಿ ಷಾ ಖೌ" ಎಂದು ಕರೆಯಲಾಗುತ್ತಿದ್ದು ಚಾರಣಿಗರಿಗೆ ಇದು ಅದ್ಭುತ ಆಕರ್ಷಣೀಯ ಸ್ಥಳ. 1935-40 ರ ಸುಮಾರಿಗೆ ಇಲ್ಲಿನ ರಾಣಿ ಗೈಡಿಂಗ್ಲು ಇಲ್ಲಿಗೆ ಹತ್ತಿ ಪರ್ವತದ ತುದಿ ತಲುಪಿದ ಕಥೆ ಇಲ್ಲಿವರೆಗೂ ಇತಿಹಾಸದಲ್ಲಿ ದಾಖಲಾಗಿ ನೆನಪಿಸಿಕೊಳ್ಳುವ ಘಟನೆ ಈ ಸ್ಠಳದೊಂದಿಗೆ ಸೇರಿಕೊಂಡಿದೆ. ಮತ್ತದೆ ಮೂಲ ಸೌಕರ್ಯದ ಕೊರತೆಯಿಂದ ಚಾರಣಿಗರೂ ಇದನ್ನು ಆಯ್ದುಕೊಳ್ಳುವ ಸಾಧ್ಯತೆ ಕಾಣಿಸಲಿಲ್ಲ. 4. ಝೀಲಾದ್ ಲೇಕ್ : ವಿಷ್ಣುಪುರದಲ್ಲಿ ಲೋಕ್ತಾಕ ಕೆರೆಯ ನಂತರ ಅತ್ಯಂತ ದೊಡ್ಡ ಕೆರೆ ಎಂದು ಹೆಸರು ಮಾಡಿರುವ ಇನ್ನೊಂದು ಸುಂದರ ಕೆರೆ ಈ "ಝಿಲಾದ್ ಲೇಕ್". ಈ ಕೆರೆಯ ದಂಡೆಯಲ್ಲಿಯೇ ಇಲ್ಲಿನ ಪ್ರಸಿದ್ಧ "ಹೈಪು ಝಡಾಂಗ್" ಎನ್ನುವ ಸ್ವಾತಂತ್ರ್ಯ ಹೋರಾಟಗಾರ, ಸ್ಫೂರ್ತಿ ಮತ್ತು ದೇವರ ಆಶೀರ್ವಾದವನ್ನು ಪಡೆದು ಬ್ರಿಟಿಷ್‌ ರ ವಿರುದ್ಧ ಕಾದಾಟಕ್ಕಿಳಿಯುತ್ತಾನೆ ಎನ್ನುವ ಐತಿಹ್ಯವಿದ್ದು ಈಗ ಇಲ್ಲಿ ಬೋಟಿಂಗ್ ಪ್ರಸಿದ್ಧವಾಗಿದೆ. 5. ಥಾರೋನ್ ಕೇವ್ಸ್ : ಇದೊಂದು ಹನ್ನೆರಡು ಗುಹೆಗಳ ಸಮುಚ್ಚಯವಾಗಿದ್ದು ಅಲ್ಲಲ್ಲಿ ಚೆಂದದ ಪರಿಸರ ಈ ಸಾಹಸಿಗಳ ಸ್ಥಳಕ್ಕೆ ಪೂರಕವಾದ ವಾತಾವರಣ ಒದಗಿಸಿದೆ. ಬಾವಲಿಗಳ ಸಮೂಹ ಈ ಗುಹೆಗಳ ಪ್ರವೇಶಕ್ಕೆ ಆಗೀಗ ಅಡ್ಡಿಯನ್ನುಂಟುಮಾಡುತ್ತವೆ. ಹೆಚ್ಚಿನ ಗುಹೆಗಳ ಬಗ್ಗೆ ಈಗಲೂ ಸರಿಯಾದ ಮಾಹಿತಿ ಲಭ್ಯವಿಲ್ಲ. ಪ್ರವಾಸಿಗರು ಸಂದರ್ಶಿಸುತ್ತಾರಾದರೂ ವಿವರಣೆಗಳು ಖಚಿತವಾಗಿ ಲಭ್ಯವಿಲ್ಲ. ಸ್ಥಳೀಯವಾಗಿ ಯಾರೂ ಅಷ್ಟಾಗಿ ಇದರ ಬಗ್ಗೆ ಆಸಕ್ತಿ ಹೊಂದಿಲ್ಲದಿರುವುದೂ ಇದಕ್ಕೆ ಕಾರಣ. ಒಂದೇ 127 ಪ್ರಮೀಳೆಯರ ನಾಡಿನಲ್ಲಿ ದಿನದಲ್ಲಿ ಇಂಫಾಲದಿಂದ ಬಂದು ಸಂದರ್ಶಿಸಿ ಹೋಗಲು ತೀರಾ ಬೆಳಗಿನ ಜಾವ ಹೊರಟು, ಸ್ವತ: ವಾಹನದಲ್ಲಿದ್ದರೆ ಮಾತ್ರ ಸಾಧ್ಯ. ಕಿತ್ತಳೆ ಹಬ್ಬ : ತೆಮೇನ್‍ಗ್ಲಾಂಗ್ ಜಿಲ್ಲೆಯ ಅದ್ಭುತ ಮತ್ತು ಅಪರೂಪದ ಹಬ್ಬ ಹಾಗು ಪ್ರವಾಸಿ ಆಕರ್ಷಣೆಯಾಗಿ ಬೆಳೆದಿರುವುದು ಕಿತ್ತಳೆ ಹಬ್ಬ. "ಆರೇಂಜ್ ಫೆಸ್ಟಿವಲ್" ಎಂದೇ ಇದು ಹೆಸರುವಾಸಿ. ಮಣಿಪುರದ ಕಿತ್ತಳೆಯ ಕಣಜ ಎಂದೇ ತೆಮೇನ್‍ಗ್ಲಾಂಗ್‍ನ್ನು ಕರೆಯಲಾಗುತ್ತಿದ್ದು, ಶೇ. 80 ರಷ್ಟು ಕಿತ್ತಳೆಯ ಬೆಳೆಯನ್ನು ಕೇವಲ ತೆಂಮೇನ್‍ಗ್ಲಾಂಗ್ ಜಿಲ್ಲೆ ಪೂರೈಸುತ್ತಿದೆ. ಕನಿಷ್ಠ ನಾಲ್ಕರಿಂದ ಐದು ಲಕ್ಷ ಕಿತ್ತಳೆ ಗಿಡಗಳನ್ನು ಪ್ರತಿ ವರ್ಷ ಪೋಷಿಸಲಾಗುತ್ತಿದೆ. ಪ್ರತಿ ಮನೆಯ ಅಂಗಳದ ಹಿತ್ತಲಿನಲ್ಲಿ ಕಿತ್ತಳೆಯ ಗಿಡವನ್ನು ನೆಡುವ ಮತ್ತು ಪೋಷಿಸುವ ಜನರು ಪ್ರತಿ ಮನೆಯಲ್ಲೂ ಕನಿಷ್ಟ ಎಡ್ರ್ಮೂರು ಗಿಡಗಳನ್ನು ಸಾಕುತ್ತಿದ್ದಾರೆ.. ಮೊದಲಿಗೆ ಕೇವಲ ಪ್ರಯೋಗಾತ್ಮಕವಾಗಿ ತೆಮೇನ್‍ಗ್ಲಾಂಗ್ ಜಿಲ್ಲೆಯಲ್ಲಿ ಮಾತ್ರ 2011 ರಲ್ಲಿ ಕಿತ್ತಳೆ ಉತ್ಸವ ಆಯೋಜಿಸಲಾಗಿತ್ತು. ಅದ್ಭುತ ಮತ್ತು ಅಪರೂಪದಲ್ಲಿ ಅಪರೂಪದ ತಳಿಗಳಿಂದ ಹಿಡಿದು ಎಲ್ಲಾ ರೀತಿಯ ಕಿತ್ತಳೆಗಳು ಬಣ್ಣ ಕಟ್ಟಿಕೊಂಡು ಇಲ್ಲಿ ಮಾರುಕಟ್ಟೆಗೆ ಬಂದಿಳಿದವು. ಅಷ್ಟೇ, ಮತ್ತೆ ತೆಮೇನ್\ಗ್ಲಾಂಗ್ ಹಿಂದಿರುಗಿ ನೋಡಲಿಲ್ಲ. ಮರುವರ್ಷವೇ ಅದು ರಾಜ್ಯವ್ಯಾಪಿ ಉತ್ಸವವಾಗಿ ಬದಲಾಯಿತು. 2012 ರಿಂದ ಇಲ್ಲಿಯವರೆಗೆ ಅದರ ವ್ಯಾಪ್ತಿ ಯಾವ ಮಟ್ಟದಲ್ಲಿ ಬೆಳೆದಿದೆ ಎಂದರೆ ಈ ಬಾರಿ ಮಣಿಪುರ ಸರಕಾರ ಸ್ವತ: ಅದನ್ನು ವಿದೇಶಿ ಆಕರ್ಷಣೆಯ ಮೇಳವಾಗಿಸಿ ಪ್ರವಾಸೋದ್ಯಮವನ್ನಾಗಿಯೂ ವಿಸ್ತರಿಸಿತು. ಸೂಪರ್ / ಬಂಪರ್ ಎನ್ನುವಂತಹ ಪ್ರವಾಸಿ ಬೆಳೆಯಾಗಿ ವಾಣಿಜ್ಯ ಬೆಳೆಯಾಗಿ ಕಿತ್ತಳೆ ಮಣಿಪುರಿಗಳ ಬದುಕನ್ನೆ ಬದಲಾಯಿಸಿದ್ದಿದೆ. ಪ್ರತಿವರ್ಷ ಒಬ್ಬೊಬ್ಬ ಬೆಳೆಗಾರ ಲಕ್ಷ ರೂಪಾಯಿಯ ಬಹುಮಾನ ಪಡೆಯುತ್ತಿದ್ದಾರೆ. ಪ್ರತಿವರ್ಷ ಲೊಂಗಾಮೈ ಕ್ರೀಡಾಂಗಣದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದ್ದು ಪ್ರವಾಸಿಗಳು ಡಿಸೆಂಬರ್‌ನ ಭಾಗದಲ್ಲಿ ಆ ಕಡೆ ಸಂಚರಿಸುವಂತಿದ್ದರೆ ಇದು ಲಭ್ಯವಾಗುತ್ತದೆ. ಸುಮಾರು ಹದಿನೈದು ದಿನಗಳ ಪ್ರಮೀಳೆಯರ ನಾಡಿನಲ್ಲಿ 128 ಕಾಲ ಉತ್ಸವ ನಡೆಯುತ್ತಿದ್ದು ಈ ಪ್ರಯುಕ್ತ.. ಸೌಂದರ್ಯ ಸ್ಪರ್ಧೆ / ಕ್ರೀಡಾ ಸ್ಪರ್ಧೆ ಹಾಗು ಇನ್ನಿತರ ಮನರಂಜನಾ ಕಾರ್ಯಕ್ರಮಗಳೂ ನಡೆಯುತ್ತಿದ್ದು ಬರುಬರುತ್ತ ಕಿತ್ತಳೆ ಉತ್ಸವ ಹೊಸ ಹೊಸ ರೂಪಗಳನ್ನು ಪಡೆಯುತ್ತಿದೆ. ಒಟ್ಟಾರೆ ಮಣಿಪುರದ ಪ್ರವಾಸಿ ಹಾಗು ಇತರೆ ಸಾಂಸ್ಕೃತಿಕ ನಕ್ಷೆಯಲ್ಲಿ ತೆಮೇನ್/ಗ್ಲಾಂಗ್ ತನ್ನದೇ ಆದ ಛಾಪನ್ನು ಮೂಡಿಸಿದ್ದು ಪ್ರಗತಿ ಪಥದಲ್ಲಿ ಮುನ್ನಡೆಯುವ ಉತ್ಸಾಹ ಕಂಡುಬರುತ್ತಿದೆ. ಪ್ರತಿ ಹಳ್ಳಿಗಳ ಜನರೂ ಮುಖ್ಯ ರಸ್ತೆಗೆ ತಂತಮ್ಮ ಬೆಳೆಯನ್ನು ತಲುಪಿಸಿ ಕೈತೊಳೆದುಕೊಳ್ಳುತ್ತಾರೆ. ಅಲ್ಲಿಂದ ಇಂಫಾಲದ ವ್ಯಾಪಾರಿಗಳು ಆಯ್ದು ತರುತ್ತಾರೆ. ಹಾಗಾಗಿ ಹೊರ ಜಗತ್ತಿಗೆ ಇವರು ತೆರೆದುಕೊಳ್ಳುವುದೂ ಇಲ್ಲ. ಹಾಗೆ ಅವರುಗಳು ತೆರೆದುಕೊಂಡು ತಂತಮ್ಮ ಹೆಚ್ಚಿನ ಲಾಭದ ಪಾಲು ಕಡಿಮೆಯಾಗುವುದೂ ವ್ಯಾಪಾರಿಗಳಿಗೆ ಬೇಡ. ಹಾಗಾಗಿ ಇದೊಂದು ರೀತಿಯಲ್ಲಿ ಯಾರಿಗೂ ಯಾವ ಬೆಳೆಗೆ ಎಲ್ಲಿ ಏನು ಸಿಗುತ್ತಿದೆ ಎನ್ನುವುದು ಅರಿವಾಗದ ಸ್ಥಿತಿ ಇದೆ. ಪರ್ವತ ತಪ್ಪಲಲ್ಲಿ ಅನಾನಸು ಮತ್ತು ಬಟಾಟೆಯ ಭರಾಟೆ ಜೋರು ಇಲ್ಲಿ. ಅದನ್ನು ನೇರ ಹೆದ್ದಾರಿಯ ಪಕ್ಕದಲ್ಲಿ ಗುಂಪಾಗಿ ಸೇರಿಸಿಟ್ಟು ಅಲ್ಲಿಯೇ ಮಲಗಿ ಬಿಡುತ್ತಾರೆ. ಲಾರಿ ಬಂದು ಹಣ ಏಣಿಸಿಕೊಟ್ಟು ಎತ್ತಿಕೊಂಡು ಹೋಗುತ್ತದೆ. ಜೊತೆಗೆ ಬೇಕಾದಷ್ಟು ತಂಬಾಕು ಎಲೆ ಮತ್ತು ಬೀಡಿ ಪೂರೈಕೆಯೂ ಆಗುತ್ತದೆ. ಇನ್ನೇನು ಬೇಕಿದೆ..? ಅಲ್ಲಿಗೆ ಚೆಂದದ ತೆಮೇನ್‍ಗ್ಲಾಂಗ್ ಹೇಗಿದೆಯೋ ಹಾಗೆ ಇದೆ. ಬಹುಶ: ನಾನು ಇನ್ನೊಂದು ದಶಕದ ನಂತರ ಕಾಲಿಟ್ಟರೂ ಹೆಚ್ಚು ಬದಲಾವಣೆ ಬಂದೀತು ಎಂದು ನನಗನ್ನಿಸುವುದಿಲ್ಲ. ಹಾಗಾಗಿ ಹೆಚ್ಚಿನ ಯೋಚನೆಗೆಡೆಕೊಡದೆ ಅವತ್ತಿನ ರಾತ್ರಿಯೂ ಅಲ್ಲೆ ವಸತಿಯಾದೀತು ಎಂದು ನಾನು ಪಕ್ಕದ ಸೇನಾಪತಿ ಜಿಲ್ಲೆಗೆ ಮತ್ತೆ ನುಗ್ಗಿದೆ. ಕಾರಣ ಇಲ್ಲಿಂದ ಇಂಫಾಲ ಹಾಯ್ದು ಮೇಲಕ್ಕೇರುವುದರ ಬದಲಿಗೆ ಅಡ್ಡ ದಾರಿಯಲ್ಲಿ, ಒಂದೆರಡು ಹಾಡಿಗಳ ಬಳಸು ದಾರಿಯಲ್ಲಿ ಕೊಂಚ ಅಪಾಯ ಎದುರಿಸಿ ನುಗ್ಗಿದರೆ ನೇರ ಉಖ್ರುಲ್‍ನ ಹೆಬ್ಬಾಗಿಲಿಗೆ ಸ್ಟ್ಯಾಂಡು ಹಾಕಬಹುದು. 129 ಪ್ರಮೀಳೆಯರ ನಾಡಿನಲ್ಲಿ ದಾರಿ ತೋರಿಸುವ "ಥರೇನ್ ಭಾಯೊಬೊ" ಯಾವ ಮುಲಾಜು ಇಲ್ಲದೆ ಕಾಲೆತ್ತಿ ಕೂತುಬಿಡುತಿದ್ದ. ಮತ್ತೆ ಯೋಚಿಸದೆ ಹಾಗೆ ಮೂರುವರೆ ತಾಸು ಚಲಿಸಿ ಕಾಲಿಟ್ಟಿದ್ದು ಕೊನೆಯ ಆದರೆ ಚೆಂದ ಅನ್ನಿಸುವ ಇದ್ದುದರಲ್ಲಿ ಕೊಂಚ ಸುದಾರಿಸಿದ್ದ ಜಿಲ್ಲೆ ಉಖ್ರುಲ್‍ಗೆ. ಉಕ್ರುಲ್ ಜಿಲ್ಲೆ: ಬ್ರಿಟಿಷ್‌ ಕಾಲಾವಧಿಯಲ್ಲಿ 1919 ರ ಸುಮಾರಿಗೆ ಸಬ್‍ಡಿವಿಶನ್ ಎಂದು ಗುರುತಿಸಿಕೊಂಡಿದ್ದ "ಉಖ್ರುಲ್" ಅಪ್ಪಟ "ಥಾಂಗ್ಖುಲ್ಸ್‌"ಗಳ ಅಡ್ಡೆ ಎಂದರೂ ತಪ್ಪಾಗಲಾರದು. ಸ್ವತಂತ್ರ ಭಾರತದಲ್ಲಿ 1969 ರ ಸುಮಾರಿಗೆ ಜಿಲ್ಲಾ ಕೇಂದ್ರವಾಗಿ ಗುರುತಿಸಲ್ಪಟ್ಟ ಉಖ್ರುಲ್ 5 ಡಿವಿಶನ್‍ಗಳ 8200 ಚ.ಕಿ.ಮೀ. ಗಳ ಇದ್ದುದರಲ್ಲೇ ಕೊಂಚ ಅಗಲವಾದ ನೆಲ ವಿಸ್ತಾರವನ್ನು ಹೊಂದಿರುವ ಜಿಲ್ಲೆ. ಉಖ್ರುಲ್ ಬರೀ.. ಸ್ಥಳೀಯ ಜಿಲ್ಲೆಗಳೊಂದಿಗೆ ಮಾತ್ರವಲ್ಲ ಅಂತಾರಾಷ್ಟ್ರೀಯವಾಗೂ ಗಡಿಯನ್ನು ಹಂಚಿಕೊಂಡಿರುವ ಜಿಲ್ಲೆ ಇದು. ಪೂರ್ವದಲ್ಲಿ ಮ್ಯಾನ್ಮಾರ್ ಅಂದರೆ ಬರ್ಮಾವನ್ನು ಗಡಿಯಾಗಿ ಹೊಂದಿದ್ದು ಇಲ್ಲಿ ಆಸ್ಸಾಂ ರೈಫಲ್ಸ್‌ ಗಡಿ ಕಾವಲಿಗೆ ನಿಂತಿದೆ. ದಕ್ಷಿಣದಲ್ಲಿ ಇನ್ನೊಂದು ಬಣ್ಣದ ಜಿಲ್ಲೆ ಚಾಂಡೆಲ್ ಇದ್ದರೆ, ಇಂಫಾಲ ಪೂರ್ವ ಮತ್ತು ಸೇನಾಪತಿ ಜಿಲ್ಲೆಗಳೂ ಇದನ್ನು ಇತರ ಕಡೆಗಳಿಂದ ಸುತ್ತುವರೆದಿವೆ. ಸಂಪೂರ್ಣ ಪರ್ವತ ಪ್ರದೇಶಗಳಿಂದ ಕೂಡಿರುವ ಉಖ್ರುಲ್ 3000 ಮೀ. ಎತ್ತರದವರೆಗಿನ ಪರ್ವತ ಶ್ರೇಣಿಯನ್ನು ಹೊಂದಿದೆ. ಇಂಫಾಲದೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಪರ್ಕ ಹೊಂದಿರುವ ಉಖ್ರುಲ್ ರಾ.ಹೆ. 150ನ್ನು ಸಂಪರ್ಕಕ್ಕೆ ಮುಖ್ಯರಸ್ತೆಯಾಗಿ ಬಳಸಲಾಗುತ್ತಿದೆ. ಇದ್ದುದರಲ್ಲಿ ಮಣಿಪುರದಲ್ಲೇ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಯಾಗಿ "ಉಖ್ರುಲ್" ಗುರುತಿಸಿಕೊಂಡಿದ್ದು 1700 ಮಿ.ಮಿ. ಮಳೆ ಇಲ್ಲಿ ಸರ್ವೇ ಸಾಮಾನ್ಯ. "ಖಯಾಂಗ್" ಎನ್ನುವ ಅತಿ ಎತ್ತರದ ಪರ್ವತ ಪ್ರದೇಶದ ತುದಿಯನ್ನು ಹೊಂದಿದ್ದು ಇದು 3114 ಮೀ. ಸಮುದ್ರ ಮಟ್ಟದಿಂದ ಎತ್ತರಕ್ಕಿದೆ. ಆದರೆ ಅದಕ್ಕಿಂತಲೂ ಕಡಿಮೆ ಇರುವ 2835 ಮಿ. ಎತ್ತರದ "ಶಿರಾಯಿ ಕಶುಂಗ್ ಪೀಕ್" ತುಂಬಾ ಜನಪ್ರಿಯ ಶಿಖರ ಇಲ್ಲಿ. ಜಿಲ್ಲಾದ್ಯಂತ ಪ್ರವಾಸ ಮಾಡುವ ಪ್ರಮೀಳೆಯರ ನಾಡಿನಲ್ಲಿ 130 ಜನರು ಕೊನೆಯಲ್ಲಿ ಬಂದು ನಿಲ್ಲುವುದು ಈ ಜಿಲ್ಲೆಗೇನೆ.. ಅದರಲ್ಲೂ ಈ ಕೊನೆಯ ಪೀಕ್ ಜಾಗಕ್ಕೇನೆ... ಕಾರಣ ಜಗತ್ಪ್ರಸಿದ್ಧ "ಶಿರಾಯ್ ಲಿಲ್ಲಿ" ಹೂವಿನ ಕಣಿವೆ ಇರುವುದೂ ಕೂಡಾ ಇದೇ ಪೀಕ್‍ನಲ್ಲಿ. ಈ ಹೂವನ್ನು ಮಣಿಪುರ ತನ್ನ ರಾಜ್ಯದ ಅಧಿಕೃತ ಹೂವನ್ನಾಗಿಯೂ ಘೋಷಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹೂವಿನ ಪ್ರಸಿದ್ಧಿ ಈ ಜಿಲ್ಲೆಯ ಶಿರಾಯಿ ಬೆಟ್ಟದೊಂದಿಗೆ ಸೇರಿದೆ. ಇದರೊಂದಿಗೆ ಈ ಬೆಟ್ಟದಲ್ಲಿ ಇರುವ "ಸೊಮ್ರಾ ಮತ್ತು ಶಾಂಗ್ಶಕ್ " ಹೂವುಗಳೂ ಕೂಡಾ ಇಲ್ಲಿನ ಪ್ರವಾಸೋದ್ಯಮಕ್ಕೆ ಅದ್ಭುತ ಕೊಡುಗೆಯನ್ನು ನೀಡುತ್ತಿವೆ. ಆದರೆ ಇದಕ್ಕಿರುವ ಆಕರ್ಷಣೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಮಣಿಪುರ ಪ್ರವಾಸೋದ್ಯಮ ಸಂಪೂರ್ಣ ವಿಫಲವಾಗಿರುವುದನ್ನು ಶಿರಾಯಿ ಲಿಲ್ಲಿ ಖಚಿತ ಪಡಿಸುತ್ತದೆ. ಉಖ್ರುಲ್ ಜಿಲ್ಲೆಯನ್ನು ತಂಪಾಗಿರಿಸಿರುವ ಸಾಲಿಗೆ ಸೇರುವ ಪ್ರಮುಖ ನದಿಗಳೆಂದರೆ "ಮಾಕ್ಲಾಂಗ್ ಮತ್ತು ತುಯಾಂಗ್". ಈ ನದಿಗಳ ಹರಿವು ವಿಸ್ತಾರ ಹಾಗು ಅವುಗಳ ಆಳ ಜಿಲ್ಲೆಯ ಮಟ್ಟಿಗೆ ನೀರಿನ ಸಂಪನ್ಮೂಲಗಳ ಪ್ರಮುಖ ಆಧಾರವಾಗಿವೆ. "ಖಾಸೋನ್ ಖುಲ್ಲೇಮ್" ಮತ್ತು "ಖಾಮ್ ಜೊಂಗ್" ಡಿವಿಶನ್‍ಗಳ ಭಾಗಕ್ಕೆ ಯಥೇಚ್ಚವಾಗಿ ಹರಿಸುವ ಈ ನೀರಿನ ಹರಿವಿನ ಆಧಾರದಿಂದ ನೀರಾವರಿಯನ್ನು ಸರಳಗೊಳಿಸಲಾಗಿದೆ. ಇವೆಲ್ಲಕ್ಕಿಂತಲೂ ಮುಖ್ಯ ಮತ್ತು ಉಖ್ರುಲ್ಲನ್ನು ಬಳಸಿ ಹರಿಯುವ "ಥೌಬಾಲ್" ನದಿ ಅತಿದೊಡ್ಡ ಹಾಗು ಅಗಲವಾದ ನದಿಯಾಗಿದೆ. ಥೌಬಾಲ್‍ನಿಂದ ಆರಂಭವಾಗುವ ಈ ನದಿ ಉಖ್ರುಲ್‍ನ್ನು ಬಳಸಿ ಹರಿಯುತ್ತದೆ. 131 ಪ್ರಮೀಳೆಯರ ನಾಡಿನಲ್ಲಿ ಇದರೊಂದಿಗೆ "ಚಮ್ಮು ಮತ್ತು ಚಿಂಗೈ" ನದಿಗಳು ಕೂಡಾ ಇದರಲ್ಲಿ ಸೇರಿಕೊಳ್ಳುವುದರೊಂದಿಗೆ ವರ್ಷದುದ್ದಕ್ಕೂ ನೀರಾವರಿ ಮತ್ತು ಮೀನುಗಾರಿಕೆಗೆ ಸಾಕಷ್ಟು ಕೊಡುಗೆಯನ್ನು ಕೊಡುತ್ತಿವೆ. ಆದರೆ ಮಳೆಗಾಲದಲ್ಲಿ ಭಯಾನಕವಾಗಿ ತುಂಬಿ ಹರಿಯುವ ಸುತ್ತ ಮುತ್ತಲ ಪ್ರದೇಶವನ್ನು ಆ ಪೋಶನಗೊಳಿಸುವ ಈ ನದಿಗಳು ನಂತರದಲ್ಲಿ, ಅಷ್ಟೇ ವೇಗವಾಗಿ ಹರಿದು ಕಣಿವೆಯಿಂದ ಇಳಿದುಬಿಡುವುದರಿಂದ ನೀರಾವರಿಗಾಗಿ ಹಾಗು ಮೀನುಗಾರಿಕೆಗೆ ಅಗತ್ಯದ ಹರಿವನ್ನು ಉಳಿಸುತ್ತವೆ. ಒಂದು ಹಂತದ ಜನಜೀವನದ ನದಿಯಾಗಿ ಈ ನದಿಗಳು ಉಖ್ರುಲ್‍ನ್ನು ಬಳಸಿಕೊಂಡು ಹರಿಯುತ್ತಿವೆ. ನದಿಗಳ ಮುಖಜ ಭೂಮಿ ಮತ್ತು ಎತ್ತರದ ಪ್ರದೇಶದ ಇಳಿಜಾರು ಮಾರ್ಪಡಿಸಿ ಬೆಳೆ ಬೆಳೆಯುವ ಪ್ರವೃತ್ತಿಯಿಂದಾಗಿ ಜಿಲ್ಲೆಯಾದ್ಯಂತ ಸುಮಾರು 22 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ ಲಭ್ಯವಿದೆ. ಬಟಾಟೆ, ಭತ್ತ ಮತ್ತು ಕ್ಯಾಬೇಜ್ ಹಾಗು ಮೆಣಸಿನಕಾಯಿ, ಶೇಂಗಾ, ಗೆಣಸು ಪ್ರಮುಖ ಆಹಾರ ಬೆಳೆಗಳಾಗಿವೆ. ಈ ನದಿಗಳ ಒದ್ದೆ ಪ್ರವೃತ್ತಿಯಿಂದಾಗಿ "ಉಖ್ರುಲ್ ಜಿಲ್ಲೆ " ಒಂದು ರೀತಿಯಲ್ಲಿ ತೇವಾಂಶ ಭರಿತ ವಾತಾವರಣ ಹೊಂದಿದ್ದು ಯಾವಾಗಲೂ ಒದ್ದೆ ಒದ್ದೆ ಭೂಮಿಯ ಸಂಪರ್ಕ ಜಾಸ್ತಿ. ಪ್ರತಿ ಜಿಲ್ಲೆಯ ಮುಖ್ಯ ಕಛೇರಿ ಮತ್ತು ಇತರೆ ಪ್ರಮುಖ ಅಧಿಕಾರಿಗಳು ಪ್ರತಿ ಪರ್ವತದ ನೆತ್ತಿಯ ಮೇಲೆ ಮನೆ ಅಥವಾ ಕಚೇರಿ ಹೊಂದಿರುವುದು ಇಲ್ಲಿನ ವಿಶೇಷತೆ. ಹಾಗಾಗಿ ಒಂದು ರೀತಿಯಲ್ಲಿ ಇಲ್ಲಿನವರೆಲ್ಲ ಮೋಡದ ಮನೆಯಲ್ಲಿ ವಾಸಿಸುವಂತಹ ಭಾಗ್ಯವಂತರು. ಕಾರಣ ಹೆಚ್ಚಿನಂಶ ಮೋಡಾಚ್ಛಾದಿತ ವಾತಾವರಣವೇ ಇಲ್ಲಿ ಇರುತ್ತದೆ. ಪೂರ್ತಿ ಜಿಲ್ಲೆ ಪರ್ವತ ಪ್ರದೇಶವಾಗಿರುವುದರಿಂದ ಚಳಿಗಾಲದಲ್ಲಿ ಚಳಿ ಶೂನ್ಯಕ್ಕಿಳಿಯುತ್ತದೆ. ಜನವರಿಯವರೆಗೆ ಅದ್ಭುತ ಚಳಿ ಮತ್ತು ಪ್ರವಾಸಿ ಸಮಯ ಇದಾಗಿದ್ದು ಮಣಿಪುರದ ಉಖ್ರುಲ್ ಅದ್ಭುತ ಪ್ರವಾಸಿ ಸ್ಥಾನವಾಗಿ ಪರಿಣಮಿಸುತ್ತದೆ. ಪ್ರಕೃತಿದತ್ತವಾಗಿ ತುಂಬಾ ಚೆಂದ ಎನ್ನಿಸುವ ತಾಣ ಹೌದಾದರೂ ಸಾರಿಗೆ ಮತ್ತು ಪ್ರವಾಸಿ ಸೌಲಭ್ಯಗಳ ಅಲಭ್ಯತೆ ಮತ್ತು ಪ್ರಮೀಳೆಯರ ನಾಡಿನಲ್ಲಿ 132 ಶೌಚದಂತಹ ಅಗತ್ಯತೆಯ ಬಗ್ಗೆ ಲಕ್ಷ್ಯವೇ ಇಲ್ಲದಿರುವುದು ಪ್ರವಾಸಿಗರನ್ನು ದೂರವೇ ಉಳಿಸುತ್ತಿದೆ. ಪ್ರವಾಸಿ ತಾಣಗಳು : ಉಖ್ರುಲ್ ಅತ್ಯುತ್ತಮ ಪ್ರವಾಸಿ ತಾಣವಾಗಿದ್ದು ಬಣ್ಣ ಬಣ್ಣ ಜಿಲ್ಲೆಯಾಗಿ ಗುರುತಿಸಲ್ಪಡುತದೆ. ಸುಂದರ ವಸ್ತ್ರವಿನ್ಯಾಸದ "ಥಾಂಗ್‍ಖುಲ್ಸ್‌" ಬುಡಕಟ್ಟು ಈ ಜಿಲ್ಲೆಗೆ ರಂಗನ್ನು ತುಂಬಿದ್ದಾರೆ ಎಂದರೆ ಅಶ್ಚರ್ಯವಿಲ್ಲ. "ಥಾಂಗ್‍ಖುಲ್ಸ್‌"ಗಳು ಮೂಲತ: ಮಣಿಪುರಿಯ ಬುಡಕಟ್ಟಿನವರಾಗಿದ್ದು ಜಿಲ್ಲೆಯಾದ್ಯಂತ ಇವರ ಪ್ರಾಬಲ್ಯ ಕಂಡುಬರುತ್ತದೆ. ನಾಡಿನ ತುಂಬೆಲ್ಲ ಬಣ್ಣಬಣ್ಣದ ನಾಡೆನ್ನಿಸಲು ಇವರ ವಿಶಿಷ್ಟ ವಸ್ತ್ರವಿನ್ಯಾಸ ಮತ್ತು ದಿರಿಸುಗಳೆ ಕಾರಣ. ಮಹಿಳೆಯರ ಬಣ್ಣದ ಉಡುಪು ಬಹಳ ಆಕರ್ಷಣೀಯ ಹಾಗೆ ಪುರುಷರ ತುಂಡುಬಟ್ಟೆಗಳ ವಿನ್ಯಾಸ ಗಮನಸೆಳೆಯುತ್ತದೆ. ಶಿರಾಯಿ ಲಿಲ್ಲಿ ಪೀಕ್ : ಅತ್ಯಂತ ಜನಪ್ರಿಯ ತಾಣವಾಗಿರುವ "ಶಿರಾಯ್ ಲಿಲ್ಲಿ" ಪೀಕ್ ಎಂಬ ಪರ್ವತದ ತುದಿ ಅದರ ವ್ಯಾಪ್ತಿ ಮತ್ತು ಹೂವುಗಳ ಕಾರಣ ಜನಪ್ರಿಯತೆ ಪಡೆದಿದೆ. ಸಮುದ್ರ ಮಟ್ಟದಿಂದ 28356 ಮಿ. ಎತ್ತರ ಪರ್ವತ ಪ್ರದೇಶದ ತುದಿಯಲ್ಲಿ ಯಾವಾಗಲೂ ಮೋಡ ಭರಿತ. ಇದರ ಕಾಲಾವಧಿ ಮತ್ತು ಸುಂದರ ಸಮಯ ಎಂದರೆ ಮೇ – ಜೂನ್ ಅವಧಿಯಲ್ಲಿ ಬೆಟ್ಟದ ತುಂಬೆಲ್ಲಾ ಶಿರಾಯಿ ಲಿಲ್ಲಿ ಹೂವಿನ ಆವರಣ ಹಾಸಿರುವ ಕಾರಣ ಶಿರಾಯಿ ಬೆಟ್ಟ ಉಖ್ರುಲ್ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಶಿರಾಯಿ ಲಿಲ್ಲಿ ಎನ್ನುವ ಹೆಸರನ್ನು 1948 ರಲ್ಲಿ ಹೂವಿನ ತಜ್ಞ "ರಾಂಕ್ಲಿನ್ ಕಿಂಗಡಮ್" ಹೆಸರಿಸಿದ್ದು ಸ್ಥಳೀಯವಾಗಿ ಇದನ್ನು "ಕಶಾಂಗ್ ಥಿಮರಾವ್" ಎಂದು ಕರೆಯುತ್ತಾರೆ. ಪ್ರತಿ ವರ್ಷದ ಸಿಝನ್‍ನಲ್ಲಿ ಸಾವಿರಾರು ಸಂಶೋಧಕರು ಮತ್ತು ವಿದ್ಯಾರ್ಥಿಗಳು ಈ ಬೆಟ್ಟವೇರುತ್ತಾರೆ. ಅಲ್ಲೇ ಮಲಗುತ್ತಾರೆ. ಹೂವುಗಳೊಂದಿಗೆ ನಲಿಯುತ್ತಾರೆ. ತಿಂಗಳಾನುಗಟ್ಟಲೇ ಅವುಗಳೊಂದಿಗೆ ಉಲಿಯುತ್ತಾರೆ. ಅಲ್ಲೇ ಪವಡಿಸುತ್ತಾರೆ. ಟೆಂಟ್ ಹಾಕಿ ಮಲಗುತ್ತಾರೆ. 133 ಪ್ರಮೀಳೆಯರ ನಾಡಿನಲ್ಲಿ ಹೂವಿನ ಹಾಸಿಗೆಯಲ್ಲಿ ಹೊರಳಾಡುತ್ತಾರೆ. ಆದರೂ ಸಂಶೋಧಕರಿಗೆ ಶಿರಾಯ್ ಲಿಲ್ಲಿಯಲ್ಲಿನ ಆಸಕ್ತಿಯಿನ್ನು ತಣಿದಿಲ್ಲ. ಹಾಗಾಗಿ ಶಿರಾಯಿ ಲಿಲ್ಲಿ ಬೆಟ್ಟ ಆಕರ್ಷಣೀಯ ತಾಣವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಆದರೆ ಸ್ಥಳೀಯರ ಬೆಂಬಲ ಇಲ್ಲದ ಕಾರಣ, ಅಷ್ಟಾಗಿ ಬೆರೆಯದ ಕಾರಣ ಪ್ರವಾಸಿಗರು ಇದನ್ನು ಹೆಸರಿಸದೆ ಹೋಗುವ ಅಪಾಯ ಎದುರಿಸುತ್ತಿದೆ ಶಿರಾಯ್ ಲಿಲ್ಲಿ. ಖಾಂಗ್ ಖುಯಿ ಗುಹೆಗಳು : ಎರಡನೆಯ ಯುದ್ಧದ ಹೊತ್ತಿಗೆ ಪ್ರಮುಖವಾಗಿ ಬಚ್ಚಿಟ್ಟುಕೊಳ್ಳುವ "ಹೈಡ್‍ಔಟ್" ಆಗಿ ಪ್ರಸಿದ್ಧಿಯಾಗಿದ್ದ ಈ ಗುಹೆಗಳು ಈಗ ದೆವ್ವಗಳ ಆಸ್ಥಾನ ಎಂದೇ ಪ್ರಸಿದ್ಧಿ. ಸುಣ್ಣದ ಕಲ್ಲಿನ ಗುಹೆಗಳು ಆಕರ್ಷಣೀಯವಾಗಿದ್ದರೂ ಇದಕ್ಕಿರುವ ಸಾವಿರಾರು ಮೂಢನಂಬಿಕೆಗಳ ಕತೆಗಳಿಂದಾಗಿ ಅಷ್ಟಾಗಿ ಪ್ರಸಿದ್ಧಿಯಾಗಿಲ್ಲ. ಇದರ ಒಳಗೆ ದರ್ಬಾರ್ ಹಾಲ್ / ಕಾರ್ಯಕ್ರಮದ ಕೋಣೆ ಎಂದೆಲ್ಲಾ ಗುರುತಿಸುವಷ್ಟು ದೊಡ್ಡ ವ್ಯಾಪ್ತಿಯ ವಿಸ್ತಾರವಾದ ಇಳಿ ಕೋಣೆಗಳಿದ್ದು "ಖಾಂಗ್ ಖುಯಿ" ಹೊರ ರಾಜ್ಯದ ಪ್ರವಾಸಿಗರಿಗೆ ಅಕರ್ಷಣೀಯ ಸ್ಥಳವಾಗಿದೆ. ಇಲ್ಲಿಗೂ ಪ್ರವಾಸಿಗರು ಬರುವ ಸಾಧ್ಯತೆ ವರ್ಷದಲ್ಲಿ ಬೆರಳೆಣಿಕೆಯಷ್ಟು. ಆದಾಗ್ಯೂ ತಲುಪಲು ಅಗತ್ಯದ ಜಾಗವೇನೋ ಇದೆ. ಮತ್ತದೆ ಸಾರಿಗೆಯ ಸಮಸ್ಯೆ ಭೂತಾಕಾರವಾಗಿ ನಿಲ್ಲುತ್ತದೆ. ರಾಜಧಾನಿ ಇಂಫಾಲದಲ್ಲಿ ವಾಹನಗಳ ಲಭ್ಯತೆ ಇದೆಯಾದರೂ ಯಾವತ್ತಾದರೂ ಒಮ್ಮೆ ಬರುವ ಪ್ರವಾಸಿಗರನ್ನು ಸುಲಿಯಲು ನಿಲ್ಲುವ ಪ್ರವೃತ್ತಿಯಿಂದಾಗಿ ಜನ ಒಳಭಾಗಕ್ಕೆ ತಲುಪದೆ ಹೋಗುತ್ತಾರೆ. ಖಂಗ್ಖುಲ್ ವಿಲೇಜ್ ಅಥವಾ ಖಾಂಗ್ ಖುಲ್ ಹಳ್ಳಿ : ಉಕ್ರುಲ್‍ನಿಂದ ಹದಿನೈದು ಕಿ.ಮೀ ದೂರ ಇರುವ ಈ ಹಳ್ಳಿ ಜೊತೆಗೆ ಇನ್ನೊಂದು ಗುಹೆಗಳ ಗುಂಪನ್ನು ಕೂಡಾ ಹೊಂದಿದೆ. ಸ್ಥಳೀಯ ಭಾಷೆಯಲ್ಲಿ "ಮಾಂಗ್‍ಸೋರ್" ಎಂದು ಕರೆಯುವ ಇದನ್ನು ಸರಣಿ ಗುಹೆಗಳೆಂದೆ ಗುರುತಿಸಲಾಗಿದೆ. ಕಾರಣ ಐದು ಸರಣಿಯಲ್ಲಿರುವ ಗುಹೆಗಳು ಒಂದನ್ನೊಂದು ಸೇರಿಕೊಂಡು ಮುಗಿಯದ ಚೈನ್‍ನಂತೆ ಕಾಣಿಸುತ್ತದೆ. ಇಲ್ಲಿ ಮಂಗ್ಸೋರ್ ಪ್ರಮೀಳೆಯರ ನಾಡಿನಲ್ಲಿ 134 ದೇವತೆ ವಾಸಿಸುತ್ತಿದ್ದು ಸ್ಥಳೀಯ ಅತ್ಯಂತ ಶಕ್ತಿಯುತ ದೇವತೆ ಎಂದು ಗುರುತಿಸಲಾಗುತ್ತಿದೆ. ಕಚೌಪುಂಗ್ ಲೇಕ್ : ಖಯಾಂಗ್ ಜಲಪಾತದಿಂದ ಎಳು ಕಿ.ಮೀ ದೂರದ ಕಚೌಪುಂಗ್ ಸರೋವರ "ಅಚುವಾ" ಪರ್ವತದ ಇಳಿಜಾರಿನಲ್ಲಿದೆ. ಸುಮಾರು 9 ಎಕರೆ ವಿಸ್ತೀರ್ಣ ಪ್ರದೇಶದಲ್ಲಿರುವ "ಕಚೌಪುಂಗ್ ಲೇಕ್" ಸುತ್ತಲೂ ತುಂಬಾ ಸುಂದರ ಬಣ್ಣ ಬಣ್ಣದ ಮರಗಿಡಗಳನ್ನು ಹೊಂದಿದ್ದು ನದಿಯಲ್ಲೂ ಸರೋವರದಲ್ಲೂ ಸುಂದರ ಬಣ್ಣದ ಮೀನುಗಳ ಸಂಖ್ಯೆ ದೊಡ್ಡದಾಗಿದೆ. ಸಾಮಾನ್ಯ ಸಮಯದಲ್ಲಿ ಅಷ್ಟೇನೂ ದೊಡ್ಡದು ಎನ್ನಿಸದ ಸರೋವರ ಮಳೆಗಾಲದ ಅವಧಿಯಲ್ಲಿ ಎರಡರಷ್ಟು ದೊಡ್ಡದಾಗಿ ಬೆಳೆಯುತ್ತದೆ. ಸುತ್ತಲಿನ ಹತ್ತಾರು ಎಕರೆ ವಿಸ್ತರಿಸಿಕೊಳ್ಳುವ ನೀರಿನಿಂದಾಗಿ ಆಕ್ರಮಿಸಿಕೊಳ್ಳುವ ಸರೋವರ ಸುಮಾರು ಆರು ತಿಂಗಳ ಕಾಲ ಹೀಗೆ ಇರುತ್ತದೆ. ನಂತರದಲ್ಲಿ ಕ್ರಮೇಣ ನೀರಿನ ಇಳಿಮುಖ ಆರಂಭವಾಗುತ್ತದೆ. ಆ ನಂತರದಲ್ಲೂ ಸರೋವರದ ಸಹಜತೆಯನ್ನು ಮತ್ತು ಸೌಂದರ್ಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಹತ್ತಿರದ ನೀಲಿ ನದಿಯಿಂದ ಇದಕ್ಕೆ ನೀರನ್ನು ಹರಿಸಲಾಗುತ್ತದೆ. ಕಾರಣ ಪ್ರವಾಸಿ ಆಕರ್ಷಣೆಯ ಸ್ಥಾನವಾಗಿರುವ ಈ ನದಿ ಮೂಲಕ ಸರೋವರದವರೆಗೂ ಕ್ಷೇತ್ರವನ್ನು ಆಕರ್ಷಣೀಯವಾಗಿಸುವ ಯತ್ನದಲ್ಲಿ ಇದಕ್ಕೆ ವರ್ಷದುದ್ದಕ್ಕೂ ನೀರಿರುವಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಜನಜೀವನದಿಂದ ದೂರ ಇರುವ ಕಾರಣ ಉದ್ದೇಶ ಸಫಲವಾಗುತ್ತಿಲ್ಲ. ಆಂಗೋ ಚಿಂಗ್ ಕಾಡು : ಕೇವಲ ಚಾರಣಿಗರು ಮಾತ್ರವೇ ತಲುಪಬಲ್ಲ ಕಠಿಣ ಪರ್ವತ ಪ್ರದೇಶದ ಸೆರಗಿನಲ್ಲಿರುವ ಕಾಡು ರಮ್ಯವಾಗಿದ್ದು ಬಹುಶ: ಇಂಥಾ ದುರ್‌ಗಮವಾಗಿರುವುದರಿಂದಲೇ ಬಹಳಷ್ಟು ಪ್ರವಾಸಿಗರನ್ನು ಇದುವರೆಗೂ ತಲುಪದೆ ಅದೃಶ್ಯವಾಗೇ ಇದೆ. 150 ಚ.ಕಿ.ಮೀ. ವ್ಯಾಪ್ತಿಯ ದಟ್ಟ ಹರಿದ್ವರ್ಣ ಕಾಡು ಮಣಿಪುರದಲ್ಲೇ ಅತ್ಯಂತ ದುರ್‌ಗಮ ಎಂದೇ ಹೆಸರಾಗಿದೆ. ಇದರಿಂದಾಗಿ 135 ಪ್ರಮೀಳೆಯರ ನಾಡಿನಲ್ಲಿ "ಸನ್ಲಾಖ್" ನದಿಯ ಪಾತ್ರದಲ್ಲಿದ್ದರೂ ನದಿಯನ್ನು ಗುಪ್ತವಾಗಿ ಹರಿಯಲು ಬಿಡುವ ಅಗಾಧ ಕಾಡು ಇವತ್ತು ಚಾರಣಿಗರಿಗೆ ಮತ್ತು ಸಾಹಸಿಗಳಿಗೆ ಆಕರ್ಷಣೀಯವಾಗುತ್ತಿದೆ. ಮೂಲತ: ಇಂಥಾ ಕಾಡಿನ ದುರ್‌ಗಮತೆಯಿಂದಾಗೇ ಇವತ್ತು ಅಲ್ಲಿ ಹುಲಿ, ಚಿರತೆ, ಜಿಂಕೆಗಳು, ಬೊಗಳುವ ಜಿಂಕೆಯ ಗುಂಪುಗಳು, ಕಾಡೆಮ್ಮೆ ಮತ್ತು ಕಾಡುಕೋಣಗಳು, ಕಪ್ಪು ಜಿಂಕೆ, ಸಾಂಬಾರ, ಕಾಡು ಬೆಕ್ಕು, ಪುನುಗ ಬೆಕ್ಕುಗಳು ಇತ್ಯಾದಿ ಅಸಂಖ್ಯ ಮಣಿಪುರದ ಶ್ರೀಮಂತ ವನ್ಯಜೀವಿಯ ಸಂತತಿ ಈ ಕಾಡಿನಲ್ಲಿ ನೆಲೆ ಹೂಡಿವೆ. ಅದರಿಂದಾಗಿಯೇ ಅರಣ್ಯ ಇಲಾಖೆ ಕೂಡಾ ಈ ಕಾಡಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದು ಅವ್ಯಾಹತವಾಗಿ ಕಾಡು ಮತ್ತು ವನ್ಯಜೀವಿ ಸಂಕುಲನ ಬೆಳೆಯುತ್ತಿದೆ. ಇದಲ್ಲದೇ ಉಖ್ರುಲ್ ಜಿಲ್ಲೆ ತನ್ನ ಶ್ರೀಮಂತ ಪರಿಸರ ಹಾಗು ಇತರ ಸ್ಥಳಗಳಿಂದಾಗಿ ಇನ್ನು ಹೆಚ್ಚಿನ ಪ್ರವಾಸಿ ಪ್ರದೇಶಗಳನ್ನು ಹೊಂದಿದ್ದು ಪ್ರವಾಸಿಗರಿಗೆ ಜಿಲ್ಲೆ ಒಂದೆರಡು ದಿನಕ್ಕೆ ಸುತ್ತಲು ಸಾಕಾಗಲಿಕ್ಕಿಲ್ಲ. ಅದರಲ್ಲೂ ಪ್ರಮುಖವಾಗಿ 1. ಹುಡುಂಗ ಮಾಂಗ್ವಾ ಗುಹೆಗಳು. 2. ಡಿಲ್ಲಿ ವಾಟರ್ ಫಾಲ್ಸ್‌ ( ಖಯಾಂಗ್ ಫುಟಾಂಘ್ ಹತ್ತಿರ ) 3. ಅಝೋಹಾ ಜೇನಾಫಿಹು ಲೇಕ್ 4. ಸಲೈನ್ ಸ್ಪ್ರಿಂಗ್ 5. ಖಲ್ಲಾಂಗ್ 6. ಲೊಂಗ್ಪಿ ಪೊಟ್ಟರಿ - ಕೆರೆ 7. ಚಿಂಗ್ಝುಯಿ ಪೊಟ್ಟೆರಿ 8. ಫಂಗ್ರೇಯಿ ಪಿಕ್ನಿಕ್ ಸ್ಪಾಟ್ 9. ನಿಲೈ ಟೀ ಎಸ್ಟೆಟ್ ಪ್ರಮೀಳೆಯರ ನಾಡಿನಲ್ಲಿ 136 ಇತ್ಯಾದಿಗಳು ಈಗಲೂ ಆಕರ್ಷಣೀಯ ಸ್ಥಳಗಳಾಗಿದ್ದು ಉಖ್ರುಲ್‍ನ್ನು ಅಪರಿಮಿತ ಪ್ರವಾಸಿ ಸ್ಥಳವನ್ನಾಗಿ ಬೆಳೆಸುವಲ್ಲಿ ಕೊಡುಗೆಯನ್ನು ನೀಡುತ್ತಿವೆ. ಆದರೆ ನಮ್ಮ ಪ್ರವಾಸಿ ದೃಷ್ಟಿಯಿಂದ ತುಂಬಾ ದೊಡ್ಡ ಮಟ್ಟದಲ್ಲಿ ಬೆಳೆಯದಿರುವ ಕಾರಣ ಹಳ್ಳಿಗಳು ಹಲವು ಹಂತದಲ್ಲಿ ಕಳೆದುಹೋಗಿವೆ. ಉಖ್ರುಲ್‍ನ ಥಾಂಗ್ಖುಲ್ಸ್‌ಗಳು : ಥಾಂಗ್ಖುಲ್ಸ್‌ಗಳು ಅತೀವ ಸಾಂಸ್ಕೃತಿಕ ಮತ್ತು ಮಡಿವಂತಿಕೆಗೆ ಹೆಸರಾದ, ಸಾಂಪ್ರದಾಯಿಕ ಅಷ್ಟೇ ನಿ ಷೆ್ಠಯಿಂದ ಅದನ್ನು ಪಾಲಿಸಿಕೊಂಡು ಬರುತ್ತಿರುವ ಜನಾಂಗವಾಗಿದ್ದು ಉಖ್ರುಲ್ ಜಿಲ್ಲೆಯಲ್ಲಿ ಇವರದ್ದೇ ಪ್ರಾಬಲ್ಯವಿದೆ. ಇವರಿಗೆ ಉಖ್ರುಲ್ಸ್‌ ಎಂದು ನಾಮಕರಣ ಮಾಡಿದವರೇ ಮೂಲ ಮಿಥೀಸ್‍ಗಳು. ಆದರೆ ಇವರಲ್ಲೇ ಉತ್ತರ ಥಾಂಖುಲ್ಸ್‌ಗಳನ್ನು "ಲುಹುಪಾಸ್" ಎಂದು ಕರೆಯಲಾಗುತ್ತಿದ್ದು ಅವರ ಪದ್ಧತಿ ಮತ್ತು ದಿನಚರಿಗಳೆ ಭಿನ್ನಾತಿಭಿನ್ನ. ಇವರನ್ನು ಗುರುತಿಸುವುದು ತುಂಬಾ ಸುಲಭ. ಕಾರಣ ಪೂರ್ತಿ ಮಣಿಪುರಿಗಳಲ್ಲೇ ಇವರಷ್ಟು ಪೀಯರ್ಸಿಂಗ್‍ನ್ನು ಉಪಯೋಗಿಸುವ ಇನ್ನೊಂದು ಜನಾಂಗ ನಿಮಗೆ ಕಾಣಸಿಗಲಿಕ್ಕಿಲ್ಲ. ಕಾರಣ ಪ್ರತಿ ಥಾಂಖುಲ್ಸ್‌ಗಳೂ ಹೀಗೆ ಚುಚ್ಚಿಸಿಕೊಳ್ಳುವ ಆಭರಣದ ಪ್ರಿಯರು. ಹಾಗಾಗಿ ಅತೀವ ಚುಚ್ಚು ಆಭರಣಗಳು ಇವರನ್ನು ಸುಲಭವಾಗಿ ವಿಭಿನ್ನ ಚಹರೆಯ ಮೂಲಕ ಗುರುತಿಸಲು ಸಾಧ್ಯವಾಗುತ್ತಿದೆ. ಮಂಗೋಲಿಯನ್‍ರ ಸ್ಪಷ್ಟ ಚಹರೆ ಮತ್ತು ಹೋಲಿಕೆ ಇವರ ಗುಂಪನ್ನು ಭಿನ್ನವಾಗಿ ನಿಲ್ಲಿಸುತ್ತಿದೆ. ಯಾಂಗ್‍ಟಿಸಿಕಿಯಂಗ್ ಮತ್ತು ಹೋವಾಂಗ್ ಹೋ ನದಿ ಪಾತ್ರದಿಂದ ಇವರ ಮೂಲ ನಿವಾಸಿಗಳು ವಲಸೆ ಬಂದು ಇಲ್ಲಿ ನೆಲೆಸಿ ಈ ಜನಾಂಗವನ್ನು ಬೆಳೆಸಿದ್ದು, ಈಗ ಮಣಿಪುರದ ಮೂಲ ನಿವಾಸಿಗಳಾಗಿದ್ದಾರೆ. ಕ್ರಿ.ಪೂ. 1000 ರಿಂದ 8000 ಮಧ್ಯಭಾಗದಲ್ಲಿ ಅತೀವ ಕ್ಷಾಮ ಮತ್ತು ಬರಗಾಲದಿಂದ ಬೇಸತ್ತು ಇತ್ತ ಬಂದ ಕಾರಣ ಇಲ್ಲಿಯೇ ನೆಲೆಸಿದ ಥಾಂಖುಲ್ಸ್‌ಗಳು ಇವತ್ತಿಗೂ ತಮ್ಮದೇ ವೈವಿಧ್ಯತೆ ಕಾಯ್ದುಕೊಂಡಿದ್ದರೂ ಅಪ್ಪಟ ಮಂಗೊಲಿಯನ್ ಚಹರೆ ಮತ್ತು ಇನ್ನಿತರ ಕಾರಣಗಳಿಂದಾಗಿ ಪ್ರತ್ಯೇಕವಾಗೇ ಗುರುತಿಸಲ್ಪಡುತ್ತಾರೆ. ಇವರಲ್ಲದೇ ಇದೇ ಚಹರೆಯ ನಾಗಾಗಳೂ ಮತ್ತು 137 ಪ್ರಮೀಳೆಯರ ನಾಡಿನಲ್ಲಿ ಬರ್ಮೀಯರೂ ಇಲ್ಲಿದ್ದು ಅವರೆಲ್ಲರೂ ಹೆಚ್ಚು ಕಡಿಮೆ ಇವರದ್ದೇ ಪದ್ಧತಿಗಳನ್ನು ಬಳಸುತ್ತಿದ್ದಾರೆ. ಮಯೊಸ್, ಪುವೈಮೈಸ್, ಮರಂ ಮತ್ತು ಥಾಂಖುಲ್ಸ್‌ಗಳು ಈಗೀಗ ಒಂದೇ ರೀತಿಯಲ್ಲಿ ಪರಿಗಣಿಸಲ್ಪಡುತ್ತಿದ್ದು ದೂರದ ಬರ್ಮಾದಿಂದ ಪಕ್ಕದ ಆಸ್ಸಾಂ ನಾಗಾಲ್ಯಾಂಡ್‍ವರೆಗೆ ಅಲ್ಲಲ್ಲಿ ಕಾಣಸಿಗುತ್ತಾರೆ. ಅದರಲ್ಲೂ ಇಲ್ಲಿ ಬಿಟ್ಟರೆ ಸೇನಾಪತಿ ಜಿಲ್ಲೆ "ಮಾಯೋ" ನಗರದಲ್ಲಿ ಇವರ ವಸಾಹತುಗಳು ಈಗಲೂ ಸ್ಪಷ್ಟವಾಗಿವೆ. ಹೆಚ್ಚಿನ ಇವರ ಚುಚ್ಚು ಆಭರಣಗಳ ಹೊರತಾಗಿ ಉಳಿದೆಲ್ಲ ಆಭರಣಗಳು ಸಮುದ್ರ ಉತ್ಪನ್ನಗಳದ್ದೇ ಆಗಿದ್ದು ವಿಶೇಷ. ಈ ಥಾಂಖುಲ್ಸ್‌ಗಳ ಮನೆಯಲ್ಲಿಂದ ಯಾವುದೇ ತಯಾರಿಯಲ್ಲಿನ ಆಭರಣಗಳ ಸಜ್ಜಿಕೆಗಳಲ್ಲಿ ಸಮುದ್ರ ಉತ್ಪನ್ನದ ಆಭರಣಗಳಿಗೆ ಬೇಡಿಕೆ ಮತ್ತು ಅದರದ್ದೇ ತಯಾರಿ ಕೂಡಾ. ಕಾರಣ ಶಂಖ ಚಿಪ್ಪುಗಳಿಂದ ಹಿಡಿದು ಯಾವ್ಯಾವುದೋ ಸಮುದ್ರ ಪ್ರಾಣಿಗಳ ಕವಚಗಳನ್ನು ಕಲಾತ್ಮಕವಾಗಿ ಬಳಸುವ ಅವರ ಶೈಲಿ ಮತ್ತು ನಿಲುವುಗಳನ್ನು ನೋಡಿಯೇ ಅರಿಯಬೇಕು. ಥಾಂಖುಲ್ಸ್‌ಗಳು ಮನೆ ಮಾತಾಗಿ "ಸಿನ್ನೊ – ಟಿಬೇಟಿಯನ್" ಭಾಷೆಯನ್ನು ಬಳಸುತ್ತಿದ್ದು ಇವರಲ್ಲಿ ಮಿಥೀಸ್‍ಗಳ ಭಾಷೆ ಕಮ್ಮಿ. ಸಿನ್ನೊ ಸುಲಭವಾಗಿ ಇವರಲ್ಲಿ ನಂಬಿಕೆ ಮೂಡಿಸುವ ಭಾಷೆ ಕೂಡಾ. ಕಾರಣ ಬೇರೆ ಭಾಷೆಯ ಜನರ ಬಗ್ಗೆ ಅಷ್ಟಾಗಿ ಅವರಿಗೆ ಒಲವೂ ಕೂಡ ಇಲ್ಲದ್ದು ಪ್ರಮೀಳೆಯರ ನಾಡಿನಲ್ಲಿ 138 ಕಂಡುಬರುತ್ತದೆ. ಹಾಗಾಗಿ ಈ ಜಿಲ್ಲೆಗೆ ಇವರನ್ನು ನಂಬಿಕೊಂಡು ಬರುವ ಪ್ರವಾಸಿಗರು ಕಮ್ಮಿ. ಬರುವ ಚಾರಣಿಗರು ಪ್ರವಾಸಿಗರು ಹತ್ತಿರದ ಇಂಫಾಲ ಅಥವಾ ಸೇನಾಪತಿ ಜಿಲ್ಲೆಯಲ್ಲಿದ್ದು ಇಲ್ಲಿಗೆ ಭೇಟಿ ಕೊಡುತ್ತಾರೆ. ಉಖ್ರುಲ್ ಜಿಲ್ಲೆಯ ಮೂಲ ನಿವಾಸಿಗಳಂತೆ ಬದುಕುತ್ತಿರುವ ಮತ್ತು ಇವತ್ತಿಗೂ ತಮ್ಮದೆ ಜೀವನ ಶೈಲಿ ಮತ್ತು ವಿಧಾನ ಹೊಂದಿರುವ ಥಾಂಖುಲ್ಸ್‌ಗಳು ಮಣಿಪುರ ರಾಜ್ಯದಲ್ಲೇ ವಿಭಿನ್ನ ಚಹರೆ, ನಿಲುವು ಸಂಸ್ಕೃತಿ, ಜನಜೀವನ ವೈವಿಧ್ಯತೆ ಹಾಗು ಅಷ್ಟೇ ರೋಚಕ ವಿಭಿನ್ನ ಇತಿಹಾಸವನ್ನು ಹೊಂದಿದ್ದಾರೆ. ಎರಡನೆಯ ಶತಮಾನದ ಹೊತ್ತಿಗೆ ಬರ್ಮಾದ "ಶ್ಯಾಂಸೋಕ್"ನಲ್ಲಿ ವಾಸಿಸುತ್ತಿದ್ದ ದಾಖಲೆಗಳು ಲಭ್ಯವಿದೆ. ಟಾಲೆಮಿ ಎನ್ನುವ ಗ್ರೀಕ್ ಜಿಯೋಗ್ರಾಫರ್ ತನ್ನ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಿದ್ದು, ಕ್ರಿ.ಶ 140ರ ಸುಮಾರಿಗೆ ಥಾಂಖುಲ್ಸ್‌ಗಳು ನಾಗಗಳು ಸಾಮೂಹಿಕ ವಸತಿ ಜನಜೀವನ ರೂಢಿಸಿಕೊಂಡಿದ್ದ ಬಗ್ಗೆ ದಾಖಲೆಗಳು ದೊರೆಯುತ್ತವೆ. ಆದರೆ ಇಲ್ಲಿಂದ ಸುಮಾರು ಎಂಟನೆಯ ಶತಮಾನದ ಆರಂಭದವರೆಗೂ ಥಾಂಖುಲ್ಸ್‌ಗಳ ವಿಶೇಷ ಪ್ರಸ್ತಾಪ ಎಲ್ಲೂ ಕಂಡುಬರುವುದಿಲ್ಲವಾದರೂ, ನಂತರದಲ್ಲಿ ಅಲ್ಲಿಂದ ಪಶ್ಚಿಮ ಬರ್ಮಾದತ್ತ ಈ ತಂಡ ಸರಿದು ಒಂಭತ್ತನೆಯ ಶತಮಾನದ ಆದಿಯಲ್ಲಿ ಅಲ್ಲಿ ಬೀಡು ಬಿಟ್ಟಿದ್ದು ಸ್ಪಷ್ಟವಾಗಿ ನಮೂದಿಸಲಾಗಿದೆ. ಇಷ್ಟೊತ್ತಿಗಾಗಲೇ ಇವರನ್ನೂ ನಾಗಾ ಬುಡಕಟ್ಟುಗಳ ಇನ್ನೊಂದು ಸಮೂಹ ಎನ್ನುವಂತೆ ಗುರುತಿಸಲು ಆರಂಭವಾಗಿದ್ದು ಯಾವಾಗಲೋ ನಾಗಗಳ ಒಂದು ಗುಂಪೇ ಥಾಂಖುಲ್ಸಗಳಾಗಿ ಬದಲಾಗಿದೆ ಎನ್ನುವ ಸರಳೀಕೃತ ವಾದಕ್ಕೂ ಬೆಲೆ ಬರತೊಡಗಿತ್ತು. ಇಲ್ಲಿಂದ ಸಂಪೂರ್ಣವಾಗಿ ಹೊರಬಂದ ಹನ್ನೆರಡನೆಯ ಶತಮಾನದ ನಾಗಾಗಳು ಪೂರ್ತಿ ಥಾಂಖುಲ್ಸ್‌ಗಳ ಈಗಿನ ಉಖ್ರುಲ್ ಪ್ರದೇಶವನ್ನು ಸೇರಿಕೊಳ್ಳುತ್ತಾರೆ. ಅಲ್ಲಿಗೆ ಸತತ ಹನ್ನೆರಡು ಶತಮಾನಗಳ ನಿರಂತರ ಪ್ರವಾಹೋಪಾದಿಯ ಚಲನೆ ಮಣಿಪುರದ ಉಖ್ರುಲ್‍ನಲ್ಲಿ ಕೊನೆಗೊಳ್ಳುತ್ತದೆ. 139 ಪ್ರಮೀಳೆಯರ ನಾಡಿನಲ್ಲಿ ಹಾಗಾಗಿ ಪ್ರತಿ ಉಖ್ರುಲ್‍ನ ಥಾಂಖುಲ್ಸ್‌ಗಳ ಹಳ್ಳಿಯೂ ಗ್ರೀಕ್ ಶೈಲಿಯ ಚೈನಾ ಮಾದರಿಯ ಮಾರುಕಟ್ಟೆಯನ್ನು ನೆನಪಿಸುವ ಚಿಕ್ಕ ಚಿಕ್ಕ ವಸಾಹತುಗಳಾಗೇ ಇದ್ದವು. ಪ್ರತಿ ವಸಾಹತೂ ಕೂಡಾ ತನ್ನದೇ ಆದ ಸ್ವತಂತ್ರ ಮತ್ತು ವೈವಿಧ್ಯಮಯ ಕೆಲವೊಮ್ಮೆ ಅಪಾಯಕಾರಿ ಕಾನೂನನ್ನು ಹೊಂದಿದ್ದವು. ಪ್ರತಿ ವಸಾಹತುಗಳು ಕುಟುಂಬ ರಾಜ್ಯಾಡಳಿತ ಪದ್ಧತಿಯನ್ನು ಹೊಂದಿದ್ದವು. ಅದರಲ್ಲೊಬ್ಬ ಮುಖ್ಯಸ್ಥನಾಗಿದ್ದರೆ ಇನ್ನೊಬ್ಬ ಮುಖ್ಯ ನ್ಯಾಯಾಧೀಶನಾಗಿ ನೇಮಕಗೊಳ್ಳುತ್ತಿದ್ದರು. ಕ್ರಮೇಣ ಮಣಿಪುರಿ ಅರಸರ ಕೈಗೆ ಸಿಕ್ಕಿದ ಈ ವಸಾಹುತುಗಳು ನಾಮಾವಶೇಷವಾದವು. ಸಂಪೂರ್ಣ ಮಿಥೀಸ್‍ಗಳ ಅಧಿಕಾರಾವಧಿಯಲ್ಲಿ ಈ ಪದ್ಧತಿ ನಶಿಸಿಹೋಗಿ ಥಾಂಖುಲ್ಸ್‌ಗಳು ಮಿಥೀಸ್ ಆಳ್ವಿಕೆಯಡಿಯಲ್ಲಿ ಜೀವನ ಮುಂದುವರೆಸಿದರು. ಅದರಲ್ಲೂ ಹದಿಮೂರನೆಯ ಶತಮಾನದ ಆದಿಯಲ್ಲಿ ಮಿಥೀಸ್‍ಗಳ ರಾಜವಂಶಸ್ಥನಾದ "ನಿಂಗ್ಥೌಜಾ" ಇವರನ್ನೆಲ್ಲಾ ಒಂದು ಆಳ್ವಿಕೆಯಡಿಗೆ ಸೇರಿಸುತ್ತಾನೆ. ಅಲ್ಲಿಂದ ಮುಂದೆ ನಿರಂತರ ಆಳ್ವಿಕೆಯಡಿಯಲ್ಲಿ ನಲುಗಿ ಹಲವು ಬಾರಿ ದಾಳಿ ಇತ್ಯಾದಿಗಳಿಗೂ ಒಳಗಾಗುವ ಉಖ್ರುಲ್ ಕೊನೆಯಲ್ಲಿ ಉಳಿದ "ಥವಂಥಬಾ" ಎನ್ನುವ ಈ ವಸಾಹತು ಸಂಪೂರ್ಣ ಉಖ್ರುಲ್ ಆಗಿ ಬದಲಾಗುತ್ತದೆ. ಈಗಲೂ ಮಣಿಪುರಿಗಳ ಹಲವು ರೀತಿ ನೀತಿಗಳು ಹೆಸರು ಬದಲಾವಣೆಯಾಗಿವೆ ವಿನ: ಥಾಂಖುಲ್ಸ್‌ಗಳ ಯಾವುದೇ ಪದ್ಧತಿ ತೀರಾ ಏನೂ ಮಿಥೀಸ್‍ಗಳಿಂದ ಭಿನ್ನವಾಗಿಲ್ಲ. ಇಲ್ಲಿನ ಶ್ರೀಮಂತ ಸಂಸ್ಕೃತಿಯಲ್ಲಿ ಪ್ರಮುಖವಾಗಿ ಗುರುತಿಸಲ್ಪಡುತ್ತಿರುವುದು ನಮ್ಮಲ್ಲಿನ ಮೃದಂಗದಂತಹ ವಾದ್ಯದ ನುಡಿತ ಮತ್ತು ನೃತ್ಯ. ಪುಂಗಾ ಚೋಲೇಮ್ ಪುಂಗಾ ಎಂದರೆ ಮಣಿಪುರಿ ಡ್ರಮ್ ಅಥವಾ ಮೃದಂಗ ಎನ್ನಬಹುದಾಗಿದೆ. ಕ್ರಿ.ಶ. 154 ರಿಂದ264 ರವರೆಗೆ ಮಣಿಪುರವನ್ನು ಆಳಿದ ರಾಜ "ಖ್ಯೂಯೋಯಿ ಥೊಂ ಪೋಕ್" ಇದನ್ನು ಮೊದಲ ಬಾರಿಗೆ ಆವಿಷ್ಕರಿಸಿದ ಎನ್ನುವ ಇತಿಹಾಸ ದಾಖಲಿಸಲಾಗಿದ್ದು, ನಂತರದಲ್ಲಿ ಅದೇ ಅಧಿಕೃತ ಪ್ರಮೀಳೆಯರ ನಾಡಿನಲ್ಲಿ 140 ಮಿಥೀಸ್‍ಗಳ ಮೃದಂಗವಾಗಿ ಗುರುತಿಸಲ್ಪಟ್ಟಿತು. ನಂತರದಲ್ಲಿ ಹಲವು ಬಗೆಯ ಬೆಳವಣಿಗೆ ಮತ್ತು ನೃತ್ಯಗತಿಯಲ್ಲಿ ಆಯಾಮಗಳನ್ನು ಮೈಗೂಡಿಸ್ಕೊಂಡು "ಪುಂಗಾ ಚೋಲೆಮ್" ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಿಸುವ ಕಲೆಯಾಗಿ, ದೃಶ್ಯ ಕಾವ್ಯವಾಗಿ ಬೆಳೆದಿದೆ. ನಟ ಸಂಕೀರ್ತನ ಕಾವ್ಯ ಪ್ರದರ್ಶನದ ಮೂಲ ಭಾಗವಾಗಿ ಗುರುತಿಸಲ್ಪಡುವುದರೊಂದಿಗೆ ಅದರೊಂದಿಗೆ ಬೆಳೆಯುತ್ತಿರುವ "ಪುಂಗಾ ಚೋಲೆಮ್" ಇವತ್ತು ಆಕರ್ಷಣೀಯ ಮಣಿಪುರಿಯ ಕಲಾ ಪ್ರಕಾರವಾಗಿ ಬೆಳೆದಿದೆ. ಇಂಫಾಲದ ಸುತ್ತ ಮುತ್ತಲಲ್ಲಿ ಇದರ ಬಳಕೆ ಮತ್ತು ಪ್ರದರ್ಶನ ನಿರಂತರ ಮತ್ತು ನೋಡಲು ಲಭ್ಯ ಕೂಡಾ. ಖೋಂಗ್‍ಜೋಮ್ ಪರ್ವಾ ಇದೊಂದು ಯುದ್ಧದ ಸಂಪೂರ್ಣ ವಿವರಣೆಯನ್ನು ಕೊಡುವಂತಹ ಜಾನಪದೀಯ ಕಥಾನಕವಾಗಿದ್ದು, ಮಣಿಪುರಿ ರಾಜ ಕ್ರಿ.ಶ. 1891ರಲ್ಲಿ "ಖೊಂಗ್ಜೋಮ್" ಬ್ರಿಟಿಷರ ವಿರುದ್ಧ ಹೋರಾಡಿದ ಕಥೆಯನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. "ಧೋಭಿ ಲೈನು" ಎಂಬಾತ ಮೊದಲಿಗೆ ಚಪ್ಪಾಳೆ ಮತ್ತು ಹಲವು ಬಗೆಯ ಕರತಾಡನಗಳಲ್ಲಿ ಶಬ್ದಗಳನ್ನು ಹೊರಡಿಸುವ ಮೂಲಕ ಇದನ್ನು ಆರಂಭಿಸಿದ. ನಂತರದಲ್ಲಿ ಇದರೊಂದಿಗೆ "ಖುಂಗ್ಜೊ" ಜೊತೆಯಲ್ಲಿ ಬಲಿಯಾದ ಮತ್ತು ಯುದ್ಧದ ವೀರ ಕಥಾನಕವನ್ನು ಸೇರಿಸಲಾಯಿತು. "ಖಂಬಾ ಮತ್ತು ಥೋಯ್ಬಿ" ಕಥೆಗಳಲ್ಲೂ ಇದನ್ನು ಹಾಡಲಾಗುತ್ತಿದ್ದು, ಮಂದ ತಾಳಗತಿಯಲ್ಲಿ ಇದನ್ನು ಹಾಡುತ್ತಿದ್ದರೆ ಮನರಂಜನೆಯ ಮಜಲು ಬದಲಾಗುವುದು ಖಚಿತ. ಈಗೀಗ ಚಪ್ಪಾಳೆ ಮತ್ತು ಇತರ ಆಂಗಿಕ ಧ್ವನಿಗಳೊಂದಿಗೆ ಧೋಲಕ್ ಕೂಡಾ ಉಪಯೋಗಿಸಲಾಗುತ್ತಿದೆ. ವಾರಿ ಲಾಬಾ ಅಥವಾ "ಖುಲ್ಲಂಗ್ ಇಶಾಯಿ" ಇದೂ ಕೂಡಾ ಮಹಾಭಾರತದ ಕಥೆಯನ್ನು ಹೇಳುವ 17ನೆಯ ಶತಮಾನದ ಜನಪದೀಯ ಶೈಲಿಯ ಹಾಡುಗಾರಿಕೆ ಕೆಲವೊಮ್ಮೆ ಕಥಾನಕವಾಗಿದ್ದು, ಇದನ್ನು "ಖುಲ್ಲಂಗ್ ಇಶಾಯಿ’’ ಎಂದೂ ಕರೆಯಲಾಗುತ್ತಿದೆ. 141 ಪ್ರಮೀಳೆಯರ ನಾಡಿನಲ್ಲಿ ಪ್ರಮುಖವಾಗಿ ಕಣಿವೆ ಪ್ರದೇಶದಲ್ಲಿ ಬಳಕೆಯಾಗುತ್ತಿದೆ. ಇವೆಲ್ಲವೂ ಇಂಫಾಲದುದ್ದಕ್ಕೂ ಶ್ರೀಮಂತ ಸಾಂಸ್ಕೃತಿಕ ವ್ಯವಸ್ಥೆಯನ್ನು ಬಿಂಬಿಸುವ ತಾಣವಾಗಿದ್ದು ಅಲಲ್ಲಿ ಪ್ರವಾಸಿಗರನ್ನು ವಿಭಿನ್ನ ಅನುಭವಕ್ಕೀಡುಮಾಡುತ್ತದೆ. ಇದೇ ರೀತಿ ಹತ್ತು ಹಲವು ಆಯಾ ಸಾಮಾಜಿಕ ಮತ್ತು ನಿರ್ದಿಷ್ಟ ಕಾಲಚಕ್ರದ ಮಿತಿಯಲ್ಲಿ ಪ್ರಾಂತ್ಯವಾರು ಕಲೆಗಳು ಬೆಳೆಯುತ್ತಾ ಬಂದಿರುವುದಲ್ಲದೆ, ಈಗಲೂ ಪ್ರತಿ ಬುಡಕಟ್ಟು ಮತ್ತು ಸಮುದಾಯಗಳು ಆಧುನಿಕತೆಯ ಭರಾಟೆಯಲ್ಲೂ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದಾರೆ ಎನ್ನುವುದೇ ವಿಶೇಷ. ಇತರೆ ಜಿಲ್ಲೆಗಳೂ ಕೂಡಾ ಇದರಿಂದಾಗಿ ವಿಭಿನ್ನ ಮತ್ತು ಅಪರೂಪದ ಕಲಾತ್ಮಕ ಪರಿಸರ ಜೀವ ವೈವಿಧ್ಯತೆಯ ಜನಜೀವನದ ಅನುಭವವನ್ನು ಪ್ರವಾಸಿಗರಿಗೆ ನೀಡುತ್ತಿದೆ. ಆದರೆ ಇವೆಲ್ಲದಕ್ಕಿಂತಲೂ ಭಿನ್ನವಾಗಿಯೂ ಮಣಿಪುರವನ್ನು ಕೊಂಚ ಸಹ್ಯವಾಗಿಯೂ ಮಾಡುವುದೆಂದರೆ ಇಂಫಾಲ ಮಾತ್ರವೇ, ಕಾರಣ ಇದ್ದುದರಲ್ಲಿ ಎಲ್ಲ ರೀತಿಯಲ್ಲೂ ಸುಧಾರಿತ ಸ್ಥಳಾವಕಾಶದಲ್ಲಿರುವ ಇಂಫಾಲ ಕೊಂಚ ಮುದ ನೀಡುವುದು ಸುಳ್ಳಲ್ಲ. ಇಂಫಾಲ: ತೀರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಹೊನ್ನಾವರ ಸೇರಿಸಿ ಮಧ್ಯದಲ್ಲಿ ಬಿಟ್ಟರೆ ಹೇಗಿರುತ್ತೋ ಹಾಗಿದೆ ಇಂಫಾಲ ಎಂಬ ಕಣಿವೆಯ ಸುಂದರಿಯರ ನಾಡು. ಯಾವ ದೊಡ್ಡ ಮಟ್ಟದ ಸುಧಾರಣೆಗೆ ಈಡಾಗದ, ಆದರೆ ಎಲ್ಲೂ ಪಿಝಾ, ತಂದೂರ್‌ಗಳನ್ನೂ ಅಷ್ಟಾಗಿ ಸೇರಿಸಿಕೊಳ್ಳದ, ಎಲ್ಲೂ ಸರಕಾರಿ ಕುಡಿಯುವ ನೀರು ಎನ್ನುವ ಸರಬರಾಜನ್ನೇ ಕಾಣದ ನೀರಿಗಿಂತಲೂ ಹಾಲು ಅಗ್ಗವಾಗಿರುವ, ಅದಕ್ಕಿಂತಲೂ ಸ್ಥಳೀಯ ವೈನ್ (ಖಾಸಗಿಯಾಗಿ) ಅಗ್ಗವಾಗಿರುವ ಇಂಫಾಲ ಇಷ್ಟವಾಗುವುದು ಎರಡು ಕಾರಣಗಳಿಗೆ. ಮೊದಲನೆಯದು ಎಲ್ಲೆಲ್ಲೂ ಚೆಂದದ ದಿರುಸಿನ ಮಣಿಪುರಿ ಸುಂದರಿಯರ ನಗುಮೊಗದ ಸೇವೆಗೆ, ಬಹುಶ: ಎಲ್ಲಾ ಸುಂದರಿಯರನ್ನು ದೇವರು ಇಲ್ಲೇ ಸೃಷ್ಟಿ ಮಾಡಿದನಾ..? ಪ್ರಮೀಳೆಯರ ನಾಡಿನಲ್ಲಿ 142 ಎರಡನೆಯದು ಎಲ್ಲೂ ಕಿರಿಕಿರಿ ಇಲ್ಲದ ಸರ್ವ ಸರಂಜಾಮು ಮತ್ತು ಸೇವೆಯ ಲಭ್ಯತೆ. ಕಾಲಿಟ್ಟಲ್ಲಿ ಕಥೆ ಹೇಳುವ "ನಂಬುಲಾ" ಮತ್ತು "ಇಂಫಾಲ"ದ ನೀರಿನಂಚಿನಲ್ಲಿ ಇರುವ ನಗರದುದ್ದಕ್ಕೂ ಜನರ ಖುಷಿಯ ಜೊತೆಗೆ ನಿಸರ್‌ಗದ ಕೊಳಚೆಯೂ ಕಣ್ಣಿನೊಂದಿಗೆ ಮೂಗಿಗೂ ಢಾಳಾಗೇ ರಾಚುತ್ತದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಏಳನೆಯ ರಾಜ್ಯವಾಗಿರುವ ಮಿಥೀಸ್‍ಗಳ ಮಣಿಪುರ ಭಾರತದ ಹಾರದಲ್ಲಿನ ಪ್ರಮುಖ ಮಣಿಯೆಂದೇ ಪ್ರಸಿದ್ಧಿ. ಹಾಗಾಗೇ 21ನೆಯ ಶತಮಾನದ ಪ್ರಮುಖ ಪ್ರವಾಸಿ ನಗರವಾಗಿ ಬೆಳೆಯುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವ ಮಣಿಪುರ ಸದ್ಯಕ್ಕೆ ಕಣಿವೆಯ ನಗರಿ ಎಂದೂ ಖ್ಯಾತಿ. ಸುತ್ತಲೂ ಹಸಿರು ಮತ್ತು ನೀಲವರ್ಣದ ಪರ್ವತಾಗ್ರಗಳಿಂದ ಸುತ್ತುವರೆದಿರುವ ಮಣಿಪುರಕ್ಕೆ ಭಾರತದ ಸ್ವಿಟ್ಜರ್‌ಲ್ಯಾಂಡ್ ಎನ್ನುವ ಖ್ಯಾತಿಯೂ ಇದೆ. ಕಾರಣ ಎಲ್ಲೆಂದರಲ್ಲಿ ಹರಿವ ನದಿಗಳು, ಸುತ್ತುವರೆದಿರುವ ಪರ್ವತ ಶಿಖರಗಳು, ಹಸಿರು ಕಣಿವೆ (ಎಲ್ಲವೂ ಆಯಾ ಹವಾಮಾನ ಮತ್ತು ಪ್ರಕೃತಿಯ ಸಂಯೋಜನೆಯ ಮೇಲೆ ಅವಲಂಬಿತ) ಮತ್ತು ಅದ್ಭುತ ಹೂ ಕಣಿವೆಯ ಖ್ಯಾತಿ ಜೊತೆಗೆ ಸರೋವರಗಳ ನಗರಿಯಾದ ಮಣಿಪುರಕ್ಕೆ ಕಿರೀಟವಿಟ್ಟಂತೆ ಬುಡುಕಟ್ಟು ಜನಾಂಗದ ರಂಗು ರಂಗಿನ ರಮಣೀಯತೆ ಮತ್ತು ಸಂಸ್ಕೃತಿ ಅದ್ಭುತ ಕೊಡುಗೆ ನೀಡುತ್ತಿದೆ. ಸರಿ ಸುಮಾರು 352 ಕಿ.ಮೀ. ಉದ್ದದ ಅಂತಾರಾಷ್ಟ್ರೀಯ ಸರಹದ್ದನ್ನು ಹೊಂದಿರುವ ಮಣಿಪುರ ಇತ್ತ ಬರ್ಮಾ(ಆಗ್ನೇಯದಲ್ಲಿ), ಅತ್ತ ನಾಗಲ್ಯಾಂಡ್, ಅಸ್ಸಾಂ ಮತ್ತು ಮಿಝೊರಾಂಗಳ ಜೊತೆಗೆ ಗಡಿಯನ್ನು ಗುರುತಿಸಿಕೊಂಡಿದೆ. ಇದರಿಂದಾಗಿ ಎತ್ತ ಕಡೆಯಿಂದ ನಾನು ಬೆಳ್ಳಂಬೆಳಗ್ಗೆ ಪ್ರವಾಸ ಆರಂಭಿಸಿದರೂ ಮಧ್ಯಾಹ್ನದೊಳಗಾಗಿ ಯಾವುದಾದರೊಂದು ಪರ ರಾಜ್ಯಕ್ಕೋ, ಇಲ್ಲ ಪಕ್ಕದ ಅಂತಾರಾಷ್ಟ್ರೀಯ ಗಡಿಗೋ ಕಾಲಿಟ್ಟುಬಿಡುತ್ತಿದ್ದೆ. ಮತ್ತೆ ಅಲ್ಲಿಂದ ಇನ್ನೊಂದು ದಿಕ್ಕಿಗೆ ಮುಖ ಮಾಡಿ ಚಲಿಸಲಾರಂಭಿಸುತ್ತಿದ್ದೆ. ಹೀಗಾಗಿ ಹೆಚ್ಚು ಕಡಿಮೆ ಎಲ್ಲಾ ಗಡಿಗಳಲ್ಲೂ ಪರ ರಾಜ್ಯಕ್ಕೆ ಕಾಲಿಡುವ ಅನಿವಾರ್ಯತೆ ಎದುರಾಗಿಬಿಡುತ್ತಿತ್ತು ಅದರಲ್ಲೂ ಬರ್ಮಾ ಗಡಿಯಂತೂ 143 ಪ್ರಮೀಳೆಯರ ನಾಡಿನಲ್ಲಿ ಭಾರತ ಸ್ನೇಹಿ. ಹೆಚ್ಚಿನ ವ್ಯಾಪಾರಸ್ಥರು ಸಾಮಾನು ಸರಂಜಾಮು ತರುವುದೇ ಅಲ್ಲಿಂದ ಹಾಗಾಗಿ ಅಲ್ಲಂತೂ ಯಾವ ಗಡಿಯಲ್ಲಿದ್ದೇವೆ. ಯಾವ ದೇಶ ಎನ್ನುವುದೂ ಮರೆತುಹೋಗುತ್ತದೆ. ಆಚೆಗೆ ನಿಂತರೆ ಭಾರತ ಆಚೆಗೆ ನಿಂತು ಕೈಚಾಚಿ ಚಹದ ಕಪ್ಪನ್ನು ಪಡೆಯುವಷ್ಟು ಪಕ್ಕದಲ್ಲಿ ಬರ್ಮೀಯರ ಗೂಡಂಗಡಿಯ ಸಾಲುಗಳು ಇಲ್ಲಿವೆ. ಭಾರತದಲ್ಲಿದ್ದೇ ಬರ್ಮೀಯರ ವೆಜ್ ಫ್ರೈಡ್‍ರೈಸ್ ತಿನ್ನಬಹುದು. ಹಾಗಾಗಿ ಮಣಿಪುರದ ಇದರ ಭೌಗೋಳಿಕತೆಗನುಗುಣವಾಗಿ ಇದನ್ನು ಎರಡು ರೀತಿಯಲ್ಲಿ ವಿಭಾಗಿಸಬಹುದಾಗಿದೆ. ಒಂದು ಪರ್ವತ ಪ್ರದೇಶವಾಗಿದ್ದರೆ, ಇನ್ನೊಂದು ಕಣಿವೆ ರಾಜ್ಯವಾಗಿದೆ. ಮಣಿಪುರದ ಮಧ್ಯದ ಭಾಗ ಕಣಿವೆಯಾಗಿದ್ದರೆ ಅದನ್ನು ಪರ್ವತ ಪ್ರದೇಶಗಳು ಸುತ್ತುವರೆದಿದ್ದು ಒಟ್ಟಾರೆ ರಾಜ್ಯ ಪೂರ್ತಿ ಒಂದು ದೊಡ್ಡ ಗುಂಡಿಯಲ್ಲಿದ್ದಂತೆ ಭಾಸವಾಗುತ್ತದೆ. ಎಲ್ಲ ಕಡೆಯಿಂದಲೂ ಪರ್ವತ ಪ್ರದೇಶದ ಇಳಿಜಾರಿನಲ್ಲಿ ಜಾರಿ ಬಂದು ಬೀಳುವ ಅನುಭವ ಮಣಿಪುರದ ಇಂಫಾಲಕ್ಕಿದೆ. ಹಾಗಾಗಿ ನಾನು ಯಾವುದೇ ಕಡೆಯಲ್ಲಿ ಚಲಿಸಿದರೂ ಒಂದೋ ರಸ್ತೆಯಲ್ಲಿ ಮೇಲ್ಮುಖವಾಗಿ ಏರುತ್ತಿದ್ದೆ, ಇಲ್ಲಾ ಚಾರಣಿಗರಂತೆ ತಿರುವುಗಳನ್ನು ಸುತ್ತುತ್ತಾ ಕೆಳಕ್ಕೆ ಇಳಿಯುತ್ತಿದ್ದೆ. ಒಟ್ಟಾರೆ ಇದ್ದಷ್ಟು ದಿನವೂ ನಾನು ಸ್ಥಳೀಯ ಹುಡುಗರಾದ "ಚಾಸ್ರ್ಲೋ" ಮತ್ತು "ಮೊವ್ವಾನ್"ನನ್ನು ಕಟ್ಟಿಕೊಂಡು ಪರ್ವತದ ಸೆರಗಿನಲ್ಲೆ ಕಾಲ ಸವೆಸುತ್ತಿದ್ದುದು ಗೊತ್ತಾಗುತ್ತಿತ್ತು. ಹೆಚ್ಚಿನಂಶ ನಮ್ಮ ಅಪ್ಪಟ ಮಲೆನಾಡಿನ ಪ್ರತಿಕೃತಿ. ಆದರೆ ಇಲ್ಲಿದ್ದ ದಟ್ಟತೆ ಮತ್ತು ಸ್ವಚ್ಛತೆ ಅಲ್ಲಿಲ್ಲ. ಅಷ್ಟೇ ವ್ಯತ್ಯಾಸ. ಸಮುದ್ರ ಮಟ್ಟದಿಂದ 790 ಮೀ. ಎತ್ತರದಲ್ಲಿ ಮೈದೆರೆದಿರುವ ಪುಟ್ಟ ರಾಜ್ಯಕ್ಕೆ 1800 ಮೀ. ಎತ್ತರ ದೊಡ್ಡ ಪರ್ವತ ಎತ್ತಲಿಂದ ನೋಡಿದರೂ ತಡೆಗೋಡೆಯಂತೆ ಕೆಲಸ ನಿರ್ವಹಿಸುತ್ತಿದೆ. ಮೂಲವಾಗಿ ಮಿಥೈಲ್‍ಪಾಕ್ ಅಥವಾ ಕಂಗೌಪಾಕ್ ಅಥವಾ ಮೈತ್ರಾಭಾಕ್ ಎಂದೆಲ್ಲಾ ಗುರುತಿಸಲ್ಪಟ್ಟಿರುವ ಮಿಥೀಸ್‍ಗಳ ನಾಡು ಭೌಗೋಳಿಕವಾಗಿ 93.2 / 94.47 ರೇಖಾಂಶದಲ್ಲೂ 23.5/25.41 ಅಕ್ಷಾಂಶದಲ್ಲೂ ಗುರುತಿಸಲಾಗಿದೆ. ಪ್ರಮೀಳೆಯರ ನಾಡಿನಲ್ಲಿ 144 ಸರಾಸರಿ 22 ಸಾವಿರ ಚ.ಕಿ. ವಿಸ್ತೀರ್ಣ ಹೊಂದಿರುವ ಈ ಕಣಿವೆ ನಗರಿ, 27 ಲಕ್ಷದಷ್ಟು ಜನ ಸಾಂದ್ರತೆಯಲ್ಲಿ ಹಂಚಿಹೋಗಿದೆ. ಆದರೆ ಶೇ. 63 ಇಲ್ಲಿನ ಸಾಕ್ಷರತೆ ಅದರಲ್ಲೂ ಹೆಣ್ಣುಮಕ್ಕಳದ್ದು ಹೆಚ್ಚಿನ ಸಾಕ್ಷರತೆ ಎನ್ನುವುದು ಗಮನೀಯ. ಅಸಲಿಗೆ ರಾಜ್ಯದ ತುಂಬೆಲ್ಲ ಎಲ್ಲಾ ಕಡೆಯಲ್ಲೂ ಟೊಮ್ಯಾಟೋ ಗಲ್ಲದ ಚೆಂದ ಚೆಂದದ ಹುಡುಗಿಯರು ದಿನಾಲು ಬೆಳಗ್ಗೆದ್ದು ಅಪ್ಪಟ ಮಣಿಪುರಿ ಶೈಲಿಯ ದಿರಿಸಿನಲ್ಲಿ ಶಾಲೆಗೆ ಹೋಗುವ ಕಾಲೇಜುಗಳಿಗೆ ವಾಹನ ಹಿಡಿಯುವ ದೃಶ್ಯ ಸರ್ವೇ ಸಾಮಾನ್ಯ. ಅಪ್ಪಟ ಮೈತುಂಬಾ ಬಟ್ಟೆಯ ಹುಡುಗಿಯರು ಪಿಳಿ ಪಿಳಿ ಕಣ್ಣು ಬಿಡುತ್ತಾ ಆರಕ್ಕೆದ್ದು ಶಾಲೆಯ ರಸ್ತೆಯಲ್ಲಿ ಕಾಣಸಿಗುವುದು ಮತ್ತು ಅಷ್ಟೇ ಬೆಳಗ್ಗೆ ದೂರದ ಅಥವಾ ಅಲ್ಲೆಲ್ಲಿಂದಲೋ ಬರುವ ಟ್ಯಾಂಕರ್‌ಗಳಿಂದ ಸಾಲಾಗಿ ನಿಂತು ನೀರನ್ನು (ಕುಡಿಯುವ) ತುಂಬಿಸಿಕೊಳ್ಳುವುದು ಬಹುಪಾಲು ಬೆಳಗ್ಗಿನ ಕಾಯಕವೇ. ಪೂರ್ವ ಮ್ಯಾನ್ಮಾರ್ ಗಡಿ ಹೊರತುಪಡಿಸಿದರೆ, ಇದರ ಸರಹದ್ದಿಗೆ ಬರುವ ಪ್ರಮುಖ ನಾಲ್ಕೈದು ಜಿಲ್ಲೆಗಳನ್ನು ಪರ್ವತ ಪ್ರದೇಶ ಎಂದು ಗುರುತಿಸಿದರೆ (ಸೇನಾಪತಿ, ತೆಮೆನ್‍ಗ್ಲೊಂಗ್, ಚುರ್ಚಾಂಡ್‍ಪುರ್, ಚಾಂಡೆಲ್ ಮತ್ತು ಉಖ್ರೇಲ್) ಉಳಿದ ನಾಲ್ಕು ಜಿಲ್ಲೆಗಳನ್ನು ಕಣಿವೆ ಜಿಲ್ಲೆಗಳನ್ನಾಗಿ ಗುರುತಿಸಲಾಗಿದೆ. ಪೂರ್ವ ಇಂಫಾಲ, ಪಶ್ಚಿಮ ಇಂಫಾಲ್, ಥೌಬಾಲ್ ಮತ್ತು ವಿಷ್ಣು (ಬಿಷ್ಣು)ಪುರ್ ಜಿಲ್ಲೆಗಳಾಗಿದ್ದು ಮೂಲತ: ಪರ್ವತ ಪ್ರದೇಶವೇ ಶೇ. 85 ರಷ್ಟು ರಾಜ್ಯವನ್ನು ಆಕ್ರಮಿಸಿದೆ. ಸುಮಾರು 2238 ಚ.ಕೀ.ಮೀ. ಮಾತ್ರ ಕಣಿವೆಯ ಪ್ರದೇಶವಾಗಿದ್ದು ಒಟ್ಟು ವಿಸ್ತೀರ್ಣದಲ್ಲಿ 20089 ಚ.ಕಿ.ಮೀ. ನಷ್ಟು ಪರ್ವತ ಪ್ರದೇಶವೇ ಆಗಿದೆ. ಇದೇ ವ್ಯಾಲಿಯಲ್ಲಿ ಹರಿಯುವ ಪ್ರಮುಖ ನದಿಯಾಗಿರುವ ಮಣಿಪುರ್ ನದಿ (ಇಂಫಾಲ್ ನದಿ) ಮತ್ತು ಇನ್ನೊಂದು ಪ್ರಮುಖ ನದಿಯಾದ "ಬರಾಕ್" ಇಲ್ಲಿನ ನೀರಿನ ಅವಶ್ಯಕತೆಯ ಹೆಚ್ಚಿನ ಭಾಗವನ್ನು ಪೂರೈಸುತ್ತದೆ. ಇಂಫಾಲ್ ನದಿ "ಉತ್ತರ ಕರೊಂಗ್"ನಲ್ಲಿ ಜನಿಸಿ "ದಕ್ಷಿಣ ಇಂಫಾಲ" ದತ್ತ ಹರಿಯುತ್ತದೆ. ಇದರೊಂದಿಗೆ ಕಣಿವೆಯ ಹಳ್ಳ ಕೊಳ್ಳಗಳನ್ನು ಸೇರಿಸಿಕೊಂಡು ಹರಿಯುವ ನದಿ. 145 ಪ್ರಮೀಳೆಯರ ನಾಡಿನಲ್ಲಿ ಜೊತೆಗೆ ನೀರಿನವಶ್ಯಕತೆಗೆ ತಮ್ಮದೆ ಕೊಡುಗೆಯನ್ನು ನೀಡಿರುವ ಇತರ ನದಿಗಳೆಂದರೆ "ಇರಿಲ್" ಮತ್ತು "ಥೌಬಾಲ್" ನದಿಗಳು. ಪ್ರಮುಖವಾಗಿ ಭತ್ತದ ಬೆಳೆಗೆ ಸಾಕಷ್ಟು ಕೊಡುಗೆಯನ್ನು ನೀಡುವ ಈ ನದಿಗಳು, ರಾಜ್ಯದ ಬಹುಪಾಲು ಕಣಿವೆಯಲ್ಲಿ ಹರಿದು ಹರಿದೆ ಬರಿದಾಗುತ್ತವೆ. ದಕ್ಷಿಣ ಇಂಫಾಲದ ಪ್ರಮುಖ ಭಾಗದಲ್ಲಿ ಹರಿಯುವ ನದಿಗಳು ಸುಮಾರು 430 ಚ.ಕಿ.ಮೀ. ನಷ್ಟು ನೀರಾವರಿ ಜಮೀನನ್ನು ಶ್ರೀಮಂತವಾಗಿಸಿದೆ. ಇದರೊಂದಿಗೆ ಪಶ್ಚಿಮ ಇಂಫಾಲದಲ್ಲಿ ಹರಿಯುವ ಖುಗಾ-ಮಣಿಪುರ್ ನದಿಯೊಂದಿಗೆ ಸೇರುವುದಲ್ಲದೆ ಇದರಲ್ಲಿನ ಪ್ರಮುಖ ಭಾಗವಾದ " ಕೋರ್‍ಝೋನ್ " ಎನ್ನುವ ಭಾಗದಿಂದಾಗಿ, ನದಿಯ ಸಹಜ ಹರಿವಿಗೆ ಯಾವುದೇ ಅಡೆ ತಡೆ ಇಲ್ಲದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲಾಗಿದ್ದು ಇದು ಇತರ ರಾಜ್ಯಗಳಿಗೂ ಮಾದರಿಯಾಗಬೇಕಿದೆ. ತುಂಬಾ ಮುತುವರ್ಜಿಯಿಂದ ಇಲ್ಲಿನ ನದಿಯ ಭಾಗವನ್ನು ವಾಣಿಜ್ಯಾತ್ಮಕ ಉದ್ದೇಶದಿಂದ ದೂರವಿರಿಸಿ ರಕ್ಷಿಸಲು ಪ್ರಯತ್ನಿಸುತ್ತಿದ್ದುದನ್ನು ಸ್ಪಷ್ಟವಾಗಿ ಗಮನಿಸಿದ್ದೇನಲ್ಲದೆ, ಎಲ್ಲೂ ನದಿಯ ತಿರುವನ್ನು ಅಸ್ವಾಭಾವಿಕವಾಗಿ ತಿರುಗಿಸಿದ್ದು ನಾನು ಕಂಡಿಲ್ಲ. ಆದರೆ ನದಿಯ ಹೂಳು ಮತ್ತು ನಗರದ ಗಲೀಜು ಇತರೆ ಕೊಳೆ ಸೇರುವುದನ್ನು ಇವರು ಪ್ರತಿಬಂಧಿಸದೇ ಇಲ್ಲಿಯವರೆಗೂ ಉಳಿದುಬಿಟ್ಟಿರುವುದು ಸ್ಪಷ್ಟವಾಗೇ ಕಾಣಿಸುತ್ತಿದೆ. ನದಿಯ ಎರಡೂ ಪಾತ್ರಗಳು ಊರು ಬಂತೆಂದರೆ ಕೊಳಚೆಯ ಅಡ್ಡೆಯಾಗಿರುವ ಅನಾಹುತಗಳು ಇಂಫಾಲ ಸೇರಿದಂತೆ ಚಾಂಡೆಲ್, ಚುರ್ಚಾಂಡ್ಪುರ್ ಹಾಗು ಸೇನಾಪತಿಯ ಜಿಲೆಯಲ್ಲಿ ಸ್ಪಷ್ಟವಾಗೇ ಕಾಣಿಸುತ್ತದೆ. ಇದಕ್ಕೆ ಹೊರತಾಗಿ ಹೊರವಲಯದಲ್ಲಿ ಯಾವ ರೀತಿಯ ಮುತುವರ್ಜಿ ಇಲ್ಲದಿದ್ದರೂ ಊರಿನ ಮತ್ತು ಗ್ರಾಮೀಣ ಭಾಗದಲ್ಲಿ ನದಿಗಳ ಭಾಗಗಳು ಅಪ್ಪಟ ಕೊಳಚೆ ಮೋರಿಗಳೆ ಆಗಿರುವುದನ್ನು ಪ್ರತಿ ನದಿಯ ಭಾಗದಲ್ಲೂ ನಾನು ಗಮನಿಸಿದ್ದೇನೆ. ಬಹುಶ: ಈ ಕಾರಣದಿಂದಲೇ ಪ್ರತಿ ನದಿಯ ಇಂತಿಷ್ಟು ಭಾಗವನ್ನು " ಕೋರ್ ಝೋನ್ " ಎಂದು ಗುರುತಿಸುವ ಮತ್ತು ಅದನ್ನು ಸುರಕ್ಷತೆಯಿಂದ ಪ್ರಮೀಳೆಯರ ನಾಡಿನಲ್ಲಿ 146 ಯಾವುದೇ ಯೋಜನೆಯ ಪಾಲಾಗದ ರೀತಿಯಲ್ಲೂ ಕಾಯುವ ಕೆಲಸವನ್ನು ವ್ಯವಸ್ಥಿತವಾಗೇ ಮಾಡಲಾಗುತ್ತಿದೆ. ಇದರ ಸುತ್ತಲೂ ಆವರಿಸಿಕೊಂಡಿರುವ ಸುಮಾರು 14 ಪರ್ವತ ಶಿಖರಗಳು ಈ ಕೆಲಸಕ್ಕೂ ಸಹಾಯಕಾರಿಯಾಗಿದ್ದು ನಿಸರ್‌ಗದತ್ತ ಕೊಡುಗೆಯನ್ನು ನೀಡುತ್ತಿವೆ. ಹೆಸರಿಸಲಾಗದ ಸಣ್ಣ ಪುಟ್ಟ ಬೆಟ್ಟಗಳ ನಗರಿಯಾದ ಮಣಿಪುರವನ್ನು ಹೆಚ್ಚಿನಂಶ ಗುಡ್ಡಗಳು ಒತ್ತುವರಿ ಮಾಡಿಕೊಂಡಿದ್ದರಿಂದ ಕಣಿವೆಯ ಪ್ರದೇಶದ ಜಿಲ್ಲೆಗಳಲ್ಲಿ ಜೀವಜಾಲ ಹೆಚ್ಚಿನ ಮತ್ತು ವ್ಯಾಪಕ ಬೆಳವಣಿಗೆ ಕಾಣಿಸುತ್ತಿದೆ. ಕಾರಣ ಪ್ರತಿಯೊಂದು ಪರ್ವತಾಗ್ರಗಳಿಂದ ಇಳಿದು ಜೀವನಾವಶ್ಯಕಗಳನ್ನು ಪೂರೈಸಿಕೊಳ್ಳುವ ಹಳೆಯ ತಲೆಮಾರಿನ ಮುಂದುವರೆಸುವಿಕೆ, ಇತ್ತೀಚಿನ ಪೀಳಿಗೆಯಲ್ಲಿ ಕಾಣದಿರುವುದು, ಪರ್ವತಗಳು ಕ್ರಮೇಣ ರಾಜ್ಯದ ಪ್ರಮುಖ ಪ್ರದೇಶಗಳಿಂದ ದೂರ ಸರಿಯುತ್ತಿವೆ. ದಕ್ಷಿಣ ಮಣಿಪುರದ ನಡುಗಡ್ಡೆಯಂತಹ ಆಕರ್ಷಕ ತಾಣಗಳಾಗಿರುವ ಸೆಂಡ್ರಾ, ಇಥಿಂಗ್, ಕಂಗ್ರಾ ಮತ್ತು ಥಂಗಾಗಳು ಪ್ರಮುಖವಾಗಿ ಜನಾಕರ್ಷಣೆಯನ್ನು ಗಳಿಸುತ್ತಿವೆ. ಇಲ್ಲಿನ ಸರೋವರಗಳನ್ನು ಪ್ರಮುಖವಾಗಿ ಜನಾಕರ್ಷಣೆ ಹಾಗು ಭೌಗೋಳಿಕ ಪರಿಸ್ಥಿಗನುಗುಣವಾಗಿ ವಿಭಾಗಿಸಲಾಗಿದ್ದು ಉತ್ತರ ಮತ್ತು ದಕ್ಷಿಣ ಹೊರತುಪಡಿಸಿದರೆ ಕೇಂದ್ರ ಮಣಿಪುರದ ಸರೋವರಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಉತ್ತರ ಭಾಗ ನಂಬುಲಾ ನದಿಯನ್ನು ಸೇರಿಸಿದಂತೆ, ಪ್ರಮುಖವಾಗಿ ಮಣಿಪುರ್, ನಂಬೋಲಾ, ಥೊಂಗಜಾರೋಕ್ ಮತ್ತು ನಿಂಗೌಥ್ಕಾಂಗ್ ನದಿಗಳು ಈ ಸರೋವರಗಳಿಗೆ ನೀರುಣಿಸುತ್ತಿವೆ. ಕೇಂದ್ರೀಯ ವಿಭಾಗದಲ್ಲಿ ಪಶ್ಚಿಮ ನಂಬೋಲಾ ನದಿಯ ಭಾಗ (ಇಲ್ಲಿ ನಂಬೋಲಾ ಮತ್ತು ನಂಬುಲಾ ಬೇರೆ ಬೇರೆ ನದಿಗಳು ನೆನಪಿರಲಿ) ಅವಾಂಗ್ ಲೈಸೋಯಿ ಮತ್ತು ಲಫು ಭಾಗಗಳಲ್ಲಿ (ಖೋರ್ಡಾಕ್ ಕಾಲುವೆ ಮತ್ತು ಇಂಫಾಲ ನದಿ ಮಧ್ಯ ಭಾಗ) ನದಿ ಬಳಸುವಿಕೆಯಿಂದ ಉಂಟಾದ ನಡುಗಡ್ಡೆಗಳು ಹಲವು. ಅವುಗಳಲ್ಲಿ ಪ್ರಮುಖವಾದ ಥಂಗಾ, ಕರಂಗ ಮತ್ತು ಇಥಿಂಗ್ ಮೂಲಕ ಹರಿಯುವ ನದಿಯ ನೀರು, ಇಲ್ಲಿನ ಪ್ರಸಿದ್ಧ ಸರೋವರಗಳಿಗೆ ಮೂಲ ಸರಕು 147 ಪ್ರಮೀಳೆಯರ ನಾಡಿನಲ್ಲಿ ಎಂದರೂ ತಪ್ಪಿಲ್ಲ. ಈ ನೀರನ್ನು ಬಳಸಿಕೊಂಡು ಮತ್ತು ಕೆಳಭಾಗದತ್ತ ಹರಿಯುವ ಒಳ ಹರಿವಿನ ನೀರಿನ ಲಾಭ ಪಡೆಯುವ ಒಳನಾಡು ಸಾರಿಗೆ ನಡೆಸಲಾಗುತ್ತಿದ್ದು, ಇಲ್ಲೆಲ್ಲ ಕೃತಕ ಪುಟ್ಟ ಪುಟ್ಟ ಸರೋವರಗಳನ್ನು ನಿರ್ಮಿಸಿದ್ದು ಅದನ್ನು ಮೀನುಗಾರಿಕೆಗಾಗಿ ಬಳಸಲಾಗುತ್ತಿದೆ. ಇಲ್ಲೊಂದು ವಿಷಯವನ್ನು ಹೇಳಬೇಕು. ಮೀನುಗಾರಿಕೆ ಮತ್ತು ಅದರ ನಿರ್ವಹಣೆ ಹಾಗು ಆಹಾರದಲ್ಲಿ ಮೀನು ಇಲ್ಲಿನ ಪ್ರಮುಖ ಸರಕಾಗಿದ್ದರೂ ಅದರ ಸ್ವಚ್ಛತೆಗೆ ಯಾವ ಗಮನವನ್ನೂ ನೀಡಲಾಗಿಲ್ಲ. ಎಲ್ಲಾ ಮನೆಗಳ ಎದುರಿಗೆ ಒಂದೊಂದು ಕನಿಷ್ಠ ಸೈಜಿನ ಗುಂಡಿಯನ್ನು ಹೊಂದಿರುವ ಸ್ಥಳೀಯರು ಅಲ್ಲೆಲ್ಲಾ ಹ್ಯಾಚರಿ ಪದ್ಧತಿಯಲ್ಲಿ ಮೀನು ಬೆಳೆಯುತ್ತಿದ್ದಾರೆ. ಇದರಲ್ಲೇ ದಿನನಿತ್ಯದ ನೀರಿನ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳುವ ಹೆಚ್ಚಿನ ಮನೆಗಳವರು ಅದರಲ್ಲಿ ಒಂದಷ್ಟು ಮೀನು ಮರಿಗಳನ್ನು ತಂದು ಬಿಟ್ಟುಕೊಂಡಿರುತ್ತಾರೆ. ಈ ನೀರು ಹೆಚ್ಚಿನ ಅಂಶ ಪಕ್ಕದ ಯಾವುದಾದರೊಂದು ಕೊಳಚೆಯಾಗಿರುವ ನದಿಯ ಹರಿವಿನ ಮೂಲದಿಂದಲೇ ಬಂದ ಹರಿವಾಗಿರುತ್ತದೆ ಮತ್ತು ಆ ನದಿಯಲ್ಲಿ ಹೆಚ್ಚಿನ ಪಾಲು ಊರಿನ ಎಲ್ಲಾ ತ್ಯಾಜ್ಯವನ್ನು ವ್ಯವಸ್ಥಿತವಾಗಿ ಯಾವ ಹಂಗೂ ಇಲ್ಲದೇ ಸುರಿಯಲಾಗುತ್ತದೆ. ಈ ನೀರಿನಲ್ಲಿ ಬೆಳೆಯುವ ಮೀನು ಅದಿನ್ನೆಂಥಾ ಶುದ್ಧವಾಗಿರುತ್ತದೋ ನೀವೆ ಊಹಿಸಿ. ಸಾವಿರಾರು ಸಂಖ್ಯೆಯಲ್ಲಿ ಮೀನುಗಾರರು ಈ ನೀರಿನ ಹರಿವನ್ನೇ ನಂಬಿಕೊಂಡಿದ್ದು ಕೇಂದ್ರ ಜಲಭಾಗದಲ್ಲಿ ಹೆಚ್ಚಿನಂಶ ಮೀನುಗಾರಿಕೆಗೆ ನದಿಗಳ ಕೊಡುಗೆ ಅದ್ಭುತವಾಗಿದೆ. ಅದೇ ರೀತಿಯಲ್ಲಿ ದಕ್ಷಿಣ ಒಳನಾಡು ಜಲವಿಭಾಗದಲ್ಲೂ ನೀರಿನ ಹರಿವಿನ ಆವರಣದಲ್ಲಿ ಬರುವ ನ್ಯಾಶನಲ್ ಪಾರ್ಕ್ ಮಣಿಪುರದ ಪ್ರವಾಸೋದ್ಯಮಕ್ಕೂ ಹೆಸರು ತಂದುಕೊಟ್ಟಿದೆ. "ಉಂಗಾಮೇಲ್" ಮತ್ತು "ಖಂಗಾ ಕಾಲುವೆ" ಯ ಸಂಪರ್ಕದಲ್ಲಿ ಉಂಟಾಗುವ ಸರೋವರದ ಹತ್ತಿರವೇ "ಕೈಬುಲ್ ಲಮ್ಜಾವೋ" ರಾಷ್ಟ್ರೀಯ ಉದ್ಯಾನವನಕ್ಕೆ ಇಂಫಾಲ ನದಿಯ ಹರಿವು ಸೇರಿಕೊಳ್ಳುವುದು ಅದ್ಭುತ ನಿಸರ್‌ಗದ ಕೊಡುಗೆ. ಪ್ರಮೀಳೆಯರ ನಾಡಿನಲ್ಲಿ 148 (ಈ "ಕೈಬುಲ್ ಲಮ್ಜಾವೋ ನ್ಯಾಶನಲ್ ಪಾರ್ಕ್" ಕಾಡು ಮತ್ತು ಶಾಂಘೈ ಜಿಂಕೆಗಳಿಗಾಗಿ ಪ್ರಸಿದ್ಧಿ ಹೊಂದಿದೆಯಾದರೂ ತಯಾರಿ ಇಲ್ಲದೆ ಭೇಟಿಕೊಟ್ಟಲ್ಲಿ ಬರೀ ನಾಲ್ಕು ಮರಗಳನ್ನು ಮಾತ್ರ ನೋಡಿ ಬರುವುದೇ ಆಗುತ್ತದೆ. ಇದನ್ನು ಮುಂದೆ ವಿವರಿಸುತ್ತೇನೆ - ಲೇಖಕ) ಈ ರೀತಿಯ ಕೃತಕ ಸರೋವರ ಅಥವಾ ಕೆರೆಗಳನ್ನು ಮಣಿಪುರಿದಲ್ಲಿ "ಫುಂಡೀಸ್ ಅಥವಾ ಪುಮ್ಡೀಸ್" ಎಂದು ಕರೆಯಲಾಗುತ್ತಿದ್ದು ಜನಜೀವನದಲ್ಲಿ ಇವುಗಳ ಪಾತ್ರ ಹಿರಿದಾಗಿದೆ. ಕಾರಣ ಹೆಚ್ಚಿನ ಮಣಿಪುರಿಗಳು ಆಹಾರದಲ್ಲಿ ನಮ್ಮ ಕರಾವಳಿಯವರಂತೆ ಮೀನಿನ ಸಾರಿಗೆ, ಒಣ ಮೀನಿನ ಸಂಡಿಗೆಗೆ, ಕೊನೆಗೆ ಬರೀ ಮೀನು ಫ್ರೈ ಆದರೂ ಸರಿ ಎನ್ನುವ ಜಾಯಮಾನದವರು. ಮಾಂಸಾಹಾರದಲ್ಲಿ ಹೆಚ್ಚಿನ ಪಾಲು ಇಲ್ಲಿ ಮೀನಿಗೇ ಸಲ್ಲುತ್ತದೆ. ಅದಕ್ಕಾಗೇ ಕಣಿವೆ ರಾಜ್ಯದಲ್ಲಿ ಮೀನಿನ ಊಟ ಮತ್ತು ಖಾದ್ಯ ಇಲ್ಲದ ಹೋಟೆಲ್‍ಗಳು ಲಭ್ಯವಾಗೋದು ಕಮ್ಮಿ. ಸಿಕ್ಕಿದರೆ ನಿಮ್ಮ ಪುಣ್ಯ. ಹಾಗಾಗೇ ಪ್ರತಿದಿನ ಬೆಳ್ಳಂಬೆಳಗ್ಗೆ ಎದ್ದು, ಅಂದರೆ ನಸುಕಿನ ಐದು ಗಂಟೆಗೆ ಮುಕ್ತವಾಗಿ ಜನಜೀವನ ದಿನನಿತ್ಯದ ವ್ಯವಹಾರಗಳಿಗೆ ಇಲ್ಲಿ ತೆರೆದುಕೊಳ್ಳುತ್ತದಲ್ಲ, ಹಾಗಾಗಿ ನಾನೂ ಎದ್ದು ಕೂತು ಚಹಕ್ಕಾಗಿ ತಡಕಾಡುತ್ತಿದ್ದೆ. ಆದರೆ ರಸ್ತೆ ಬದಿಯಲ್ಲಿ ಎಲ್ಲಿಯಾದರೂ ಚಹದ ಚಿಕ್ಕ ಗೂಡಂಗಡಿ ಸಿಕ್ಕಿದರೆ ಮಾತ್ರ. ಅಲ್ಲೆಲ್ಲ ಪಕ್ಕ ಪಕ್ಕದಲ್ಲೇ ಉಗುಳುತ್ತಾ, ಆಗಲೇ ಬೀಡಿ ಎಳೆಯುತ್ತಾ ರಸ್ತೆ ಬದಿಗೆ ಕೊಳೆಯುವ ಕೊಚ್ಚೆಯ ವಾಸನೆ ಮುದಗೊಳ್ಳುತ್ತಾ ಬಿಸಿ ಬಿಸಿ ಚಹಕ್ಕಾಗಿ ತವಕಿಸುತ್ತಾ ನಿಲ್ಲುತ್ತಿದ್ದ ಜನರನ್ನು ನೋಡುತ್ತಿದ್ದರೆ ನನ್ನ ಉಮೇದಿ ಹೊರಟು ಹೋಗಿರುತ್ತಿತ್ತು. ನಾನು ಇನ್ಯಾವುದಾದರೂ ಇದ್ದುದರಲ್ಲೇ ಚೆನ್ನಾಗಿರುವುದು ಇದೆಯಾ ಎಂದು ಬೆಳ್‍ಬೆಳಗ್ಗೆ ವಾಕಿಂಗ್ ತರಹ ರಸ್ತೆ ರಸ್ತೆ ಅಲೆಯುತ್ತಾ ಹೊರಡುತ್ತಿದ್ದೆ. (ಇಂಥಾ ಮುಂಜಾನೆ ಒಂದು ಹೊತ್ತಲ್ಲಿ ತೀರ ಕಿ.ಮೀ. ಉದ್ದಕ್ಕೆ ಅಲ್ಲಿ ಸಾಲುಗಟ್ಟಿ ನಿಂತಿದ್ದ ಹೆಂಗಸರನ್ನು ಕಂಡು ಅವಾಕ್ಕಾಗಿದ್ದೆ. ಕಾರಣ ಅದು ಇನ್ನೇನೋ ಕಾರಣಕ್ಕಲ್ಲ, ಶಾಲೆಯ ಆಡ್ಮಿಶನ್ ಪ್ರಕ್ರಿಯೆ ಅಲ್ಲಿ ಜಾರಿಯಾಗುವುದರಲ್ಲಿತ್ತು. ಹಾಗಾಗಿ ಬೆಳಗ್ಗೆ ನಾಲ್ಕೂವರೆಗೆಲ್ಲಾ ಸಾಲು ಸಾಲು 149 ಪ್ರಮೀಳೆಯರ ನಾಡಿನಲ್ಲಿ ಹೆಂಗಸರು ನಿಂತಿರುವುದನ್ನು ಕಂಡು, ಎಲ್ಲಾ ಇವರೇ ಮಾಡುತ್ತಿದ್ದರೆ, ಇಲ್ಲಿ ಗಂಡಸರೇನು ಮಾಡುತ್ತಿದ್ದಾರೆ ಎನ್ನಿಸುತ್ತಿತ್ತು. ಈ ಬಗ್ಗೆ ವಿವರಣೆ ಮುಂದೆ ಇದೆ - ಲೇ). ಇಲ್ಲಿ ಹೆಚ್ಚಿನಂಶ ಭೂಮಿ, ಅಲ್ಲಿ ಕಾಯಿಪಲ್ಯೆ ಬೆಳೆಯುವುದಕ್ಕೂ ಯೋಗ್ಯವಿಲ್ಲ ಕಾರಣ ಪರ್ವತಾಗ್ರಹಗಳಿಂದ ಕೆಳ ಇಳಿಜಾರಿನ ಭೂಮಿಯವರೆಗೂ ಹಬ್ಬಿರುವ ಶಿಲಾ ಪದರುಗಳು ಭೂಮಿಯನ್ನು ಯಥೇಚ್ಛ ಮಣ್ಣಿನ ಆವರಣದಿಂದ ಹೊರಗಿರಿಸಿದೆ. ಇದರಿಂದಾಗಿ ಹೆಚ್ಚಿನ ಭೂಮಿಯ ಆವರಣ ಇರುವುದು ಸುಣ್ಣದ ಕಲ್ಲು ಮತ್ತು ಅಗ್ನಿ ಶಿಲೆಯ ಖನಿಜ ಭೂಮಿಯಾಗಿದ್ದು ಉಳಿದಿರುವ ಅಗಲ ಮತ್ತು ಸಮತಟ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಅಲ್ಲಲ್ಲಿ ನಡೆಸಲಾಗುತ್ತಿದೆ. ಸರಿ ಸುಮಾರು 1500 ಟನ್ ಪ್ರತಿವರ್ಷದ ಮೀನಿನ ಸರಾಸರಿ. ಹೀಗಾಗಿ ಇಲ್ಲಿನ ಕೃಷಿಗಾರಿಕೆ ಜೊತೆಗೆ ಮೀನು ಒಂದು ಕೈಗಾರಿಕೆ ಹಾಗು ಚಟುವಟಿಕೆಯ ಭಾಗವೂ ಆಗಿದೆ. ಮೀನಿನ ಕೃಷಿಗಾಗಿ ಹ್ಯಾಚರೀಸ್‍ಗಳು ಕಾರ್ಯ ನಿರ್ವಹಿಸುತ್ತಿದ್ದು ಮೀನನ್ನು ನಂಬಿಕೊಂಡ ಕುಟುಂಬಗಳೆ ಹೆಚ್ಚು. ಸರಿ ಸುಮಾರು ಒಂದು ಕೋಟಿಗೂ ಮಿಗಿಲಾದ ಮೀನು ಮರಿ ಉತ್ಪಾದನೆ ಮಾಡಿ ಲೋಕ್ತಾಕ್ ಜಲಾಶಯಕ್ಕೆ ಬಿಡಲಾಗುತ್ತಿದ್ದು ಹೆಚ್ಚಿನ ಮೀನು ಸಾಕಣೆಯನ್ನು ಹ್ಯಾಚರಿಗಳ ಮೂಲಕವೂ ನಿರ್ವಹಿಸಲಾಗುತ್ತಿದೆ. ಇವೆಲ್ಲದರೊಂದಿಗೆ ಸ್ಥಳೀಯ ಅಪ್ಪಟ ಮಣಿಪುರಿ ಮೀನು ತಳಿಗಳೆಂದು ಗುರುತಿಸಲ್ಪಡುವ ನಗ್ಮು, ಉಕಾಬಿ, ನಗ್ರೈಲ್, ಪಾಂಗ್ಬಾ, ಥರ್ಕಾ ಮತ್ತು ನಾಗ್ಶಾಪ್‍ಗಳು ಹೆಚ್ಚಿನ ಬೇಡಿಕೆ ಜೊತೆಗೆ ಕಣ್ಮೆರೆಯಾಗುತ್ತಿರುವ ಪ್ರಮುಖ ಮೀನು ಜಾತಿಗಳೆಂದು ಗುರುತಿಸಲಾಗಿದೆ. ಮೀನು ಕೃಷಿಗಾರಿಕೆ ಮತ್ತು ರಫ್ತಿನ ಪರಿಣಾಮ ಕನಿಷ್ಠ ಎರಡೂವರೆ ಲಕ್ಷ ಕುಟುಂಬಗಳು ಜೀವನವನ್ನು ನೆಮ್ಮದಿಯಿಂದ ನಡೆಸುತ್ತಿವೆ. ಪರೋಕ್ಷವಾಗಿ ಐದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಹೆಚ್ಚಿನ ಮಣಿಪುರದ ಕ್ಯಾಚ್‍ಮೆಂಟ್ ಕ್ಷೇತ್ರ ಪೂರ್ತಿ ಕಲ್ಲಿನ ಹೊದಿಕೆಗಳ ಹೊರಾವರಣ ಹೊಂದಿದ ಭೂಮಿಯಾಗಿದ್ದು ಇದರಿಂದಾಗಿ ಅಲ್ಲಲ್ಲಿ ಮಹಾ ಪರ್ವತಗಳೆಡೆಯಲ್ಲಿ ಸಹಜ ಗುಹೆಗಳ ಆವರಣ ಆಕರ್ಷಕ ತಾಣಗಳೂ ಆಗಿವೆ. ಪ್ರಮೀಳೆಯರ ನಾಡಿನಲ್ಲಿ 150 ಕ್ರೋಮೈಟ್, ಸುಣ್ಣದ ಕಲ್ಲಿನ ಖನಿಜ, ಕಾಂತಶಿಲೆಗಳ ಕ್ವಾರಿಗಳು ಇಲ್ಲಿನ ಪ್ರಮುಖ ಶಿಲಾ ಪದರದಲ್ಲಿನ ಖನಿಜಗಳಾಗಿದ್ದು ಗಣಿಗಾರಿಕೆಗೂ ಅಷ್ಟಾಗಿ ಪೊ್ರೀತ್ಸಾಹವಿಲ್ಲ. ಕಲ್ಲಿನ ಗಣಿಗಾರಿಕೆ ನಡೆಸಿದರೂ ಒತ್ತುಒತ್ತಾಗಿರುವ ಪರ್ವತ ಪ್ರದೇಶ ಮತ್ತು ಅಪಾರ ಆಳದ ಕಣಿವೆಯ ದಾರಿಯಲ್ಲಿ ಸಾಗಾಟದ ಅಪಾಯವೇ ಹೆಚ್ಚು ಅದರೊಂದಿಗೆ ಗಣಿಗಾರಿಕೆಗೆ ಅಗತ್ಯದ ಸ್ಫೋಟಗಳಿಂದ ಪರ್ವತ ಪ್ರದೇಶಗಳು ಅದುರಿ ಅತೀವ ಅಪಾಯಕಾರಿಯಾಗಿ ಜರಿಯುವ ಸಂದರ್ಭಗಳೂ ಹೆಚ್ಚು. ಇಲ್ಲಿ ಒಂದು ವಿಷಯ ಹೇಳಬೇಕು. ಎಲ್ಲಾ ದಾರಿಗಳೂ, ರಸ್ತೆಗಳೂ ಪರ್ವತದ ನಡುಭಾಗದಲ್ಲಿ ಗೆರೆ ಕೊರೆದಂತೆ ನಿರ್ಮಿಸಲಾಗಿದೆ. ಇಲ್ಲಿ ಹೆದ್ದಾರಿಗಳೂ ಮತ್ತು ಸಂಪರ್ಕದ ರಸ್ತೆಗಳನ್ನೂ ಕೂಡಾ ಹೆಚ್ಚಿನ ಗುಡ್ಡದ ಸೆರಗಿನಲ್ಲೇ ನಿರ್ಮಿಸುವ ಅನಿವಾರ್ಯತೆ ಇರುವುದರಿಂದ ಹಾಗೆಯೆ ನಿರ್ಮಿಸಲಾಗಿದೆ. ಹೀಗಾಗಿ ಯಾವ ದಾರಿಯೂ ಸುರಕ್ಷತೆ ದೃಷ್ಟಿಯಿಂದ ಸುಲಭದ ಚಾಲನೆಗೆ ಯೋಗ್ಯವಾಗಿಲ್ಲ. (110 ಕಿ.ಮೀ. ಮರ್ರಂ - ಪರೇನ್ ಎನ್ನುವ ಮಾರ್‌ಗದಲ್ಲಿ ಸುಲಭಕ್ಕೆ ನಾವು ಒಬ್ಬಂಟಿಯಾಗಿ ತಿರುಗುವ ಮಾತೇ ಇಲ್ಲ. 110 ಕಿ.ಮೀ. ಉದ್ದ ರಸ್ತೆಯಲ್ಲಿ ಅಪಹರಣ, ದರೋಡೆ ಮತ್ತು ಹಲ್ಲೆ ತುಂಬಾ ಸಹಜ ಮಾತು. ಅಂದ ಹಾಗೆ ಈ ರಸ್ತೆಯಲ್ಲೇ ಪ್ರಮುಖ ಹಳ್ಳಿ "ಯಾಂಖುಲ್ಲೇನ್" ಮತ್ತು "ವಿಲ್ಲೊಂಗ್ ಖುಲ್ಲೇನ್" ಇರುವುದೂ ಕೂಡಾ). ತೀರ ರಾಷ್ಟ್ರೀಯ ಹೆದ್ದಾರಿಗಳೇ ಇಲ್ಲಿ ನಮ್ಮ ಕರ್ನಾಟಕದ ಒಳದಾರಿಗಳಂತಿವೆ. ಹಾಗಿದ್ದರೆ, ಇನ್ನು ಒಳದಾರಿಗಳು ಹೇಗಿರಬಹುದು ಊಹಿಸಿ. ಎಲ್ಲೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾದಂತಹ ವ್ಯವಸ್ಥೆಗಳು ಸೂಕ್ತವಾಗಿ ತಲುಪಿಯೇ ಇಲ್ಲ. ಧೂಳು ಮತ್ತು ಮಣ್ಣಿನ ರಸ್ತೆಗಳು ಸರ್ವೆ ಸಾಮಾನ್ಯ. ಅಕಸ್ಮಾತ್ ರಸ್ತೆ ನಿರ್ಮಾಣ ನಡೆದಿದ್ದರೂ ಬರುವ ಮಳೆಗಾಲದಲ್ಲಿ ಮಣ್ಣು ಕುಸಿತ, ಪರ್ವತದ ಕುಸಿತ ಸಂಭವಿಸಿದಾಗ ಆಗುವ ಅನಾಹುತಕ್ಕೆ ಮತ್ತದೆ ಗದ್ದೆಯಂಥಾ ರಸ್ತೆ ನಿರ್ಮಾಣ ಆಗುತ್ತದೆ. ಅಲ್ಲಿಗೆ ಆ ರಸ್ತೆಯ ನಿರ್ವಹಣೆಯ ಕಥೆ ಮುಗಿಯುತ್ತದೆ. ಹೀಗಾಗಿ ರಸ್ತೆಯ ಬಗ್ಗೆ ಮಾತಾಡುವುದಾದರೆ ಕರ್ನಾಟಕದ ಮೂವತ್ತು ವರ್ಷಗಳ ಹಿಂದಿನ ದು:ಸ್ಥಿತಿ ಇವತ್ತು ಮಣಿಪುರದಲ್ಲಿನ ವ್ಯವಸ್ಥಿತ ರಸ್ತೆಗಳಾಗಿವೆ 151 ಪ್ರಮೀಳೆಯರ ನಾಡಿನಲ್ಲಿ ಎನ್ನಬಹುದೇನೋ. ಬಹುಶ: ಈಗಲೂ ಮಾನವ ಚಾಲಿತ ಸೈಕಲ್ಲು ರಿಕ್ಷಾ ಚಲಿಸುವ ಅಂತಾರಾಷ್ಟ್ರೀಯ ಹೆದ್ದಾರಿ ಬಹುಶ: ಮಣಿಪುರ ಬಿಟ್ಟರೆ ಇನ್ನಾವುದೇ ದೇಶ/ರಾಜ್ಯದಲ್ಲೂ ಇರಲಿಕ್ಕಿಲ್ಲ. ಹೀಗಾಗಿ ಪರ್ವತದ ಸೆರಗಿನಲ್ಲಿ ಮತ್ತು ಅಕ್ಕಪಕ್ಕದ ಹಳ್ಳಿಗಳ ಜನಜೀವನ ದುಸ್ತರವಾಗುವುದಲ್ಲಿ, ದುರ್‌ಗಮ ರಸ್ತೆಗಳಲ್ಲಿ ಪರಿಹಾರ ಕಾರ್ಯಚರಣೆ ಸುಲಭ ಸಾಧ್ಯವಿಲ್ಲ. ಹಾಗಾಗಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಪರ್ವತ ಪ್ರದೇಶದಲ್ಲಿ ಪ್ರಯೋಗಾತ್ಮಕ / ಯೋಜನೆಗಳ ಕಾರ್ಯಗಳು ನಡೆಯುವುದು ಕಡಿಮೆಯೇ. ಈ ಮಧ್ಯೆ ಮಣಿಪುರ್ ಅಥವಾ ಇಂಫಾಲ್ ನದಿಗೆ ಕಟ್ಟಲಾಗಿರುವ ಲೋಕ್ತಾಕ ಅಣೆಕಟ್ಟೆ ಅಥವಾ ಲೋಕ್ತಾಕ ಹೈಡ್ರೊ ವಿದ್ಯುದಾಗಾರದ ಬಗ್ಗೆ ಹೇಳದಿದ್ದರೆ ಮಣಿಪುರದ ಕಥೆ ಅಪೂರ್ಣವೇ. ಕಾರಣ 1983 ರಲ್ಲಿ ಆರಂಭಿಸಲಾದ ಲೋಕ್ತಾಕ್ ವಿದ್ಯುತ್ ಉತ್ಪಾದನಾ ಕೇಂದ್ರ 105 ಮೆ.ವ್ಯಾ ಶಕ್ತಿ ಉತ್ಪಾದಿಸುವ ಮೂರು ಕೇಂದ್ರಗಳನ್ನು ಹೊಂದಿದ್ದು ಇದು ಕೇವಲ ಮಣಿಪುರ ಮಾತ್ರವಲ್ಲದೆ ಪಕ್ಕದ ಅಸ್ಸಾಂ, ನಾಗಲ್ಯಾಂಡ್ ಹಾಗು ಮಿಝೋರಾಂ ಸೇರಿದಂತೆ ಅರುಣಾಚಲ ಪ್ರದೇಶಕ್ಕೂ ತಕ್ಕಮಟ್ಟಿಗೆ ವಿದ್ಯುತ್ ಪೂರೈಸುತ್ತದೆ. ಇದಕ್ಕೆ ಬೆಂಬಲವಾಗಿ ಕಟ್ಟಲಾಗಿರುವ "ಇಥೈ ಬ್ಯಾರೇಜು" ಇದಕ್ಕೆ ನೀರಿನ ಅಗತ್ಯವನ್ನು ಪೂರೈಸುತ್ತಿದೆಯಾದರೂ ಲೋಕ್ತಾಕ ಮಲ್ಟಿ ಪರ್ಪಸ್ ಡ್ಯಾಂ ವಿದ್ಯುತ್ ಮಾತ್ರವಲ್ಲ ನೀರಾವರಿಯ ಜರೂರತ್ತನ್ನು ಪೂರೈಸುತ್ತಿದೆ. ಇದಲ್ಲದೆ ಸಿಂಗ್ಡಾ, ಥೌಬಾಲ್ ಮತ್ತು ಖುಗಾ ಡ್ಯಾಂಗಳು ನೀರಾವರಿಯ ಜರೂರತ್ತನ್ನು ಪೂರೈಸಲು ಮಾಡಿಕೊಳ್ಳಲಾದ ಯೋಜನೆಗಳು. ಆದರೆ ಲೋಕ್ತಾಕ್ ಮಾತ್ರ ವಿದ್ಯುತ್ ಸೇರಿದಂತೆ ಇತರೆ ಜರೂರತ್ತನ್ನು ಪೂರೈಸುತ್ತಿದ್ದರೆ ಉಳಿದ ಬ್ಯಾರೇಜುಗಳು ಕುಡಿಯುವ ನೀರು ಮತ್ತು ನೀರಾವರಿಗಾಗಿಯೇ ನಿರ್ಮಿಸಲಾದಂಥವು. ಈ ಲೋಕ್ತಾಕ್ ನೀರನ್ನು ಬಳಸಿಕೊಂಡು ಮುಂದೆ ಇನ್ನೂ 90 ಮೆ.ವ್ಯಾ. ಸಾಮರ್ಥ್ಯದ ಕೇಂದ್ರವನ್ನು ಸ್ಥಾಪಿಸುವ ಪ್ರಯತ್ನ ನಡೆದಿದೆಯಾದರೂ ಅದರಿಂದ ಲೋಕ್ತಾಕ್ ಮೇಲೆ ಬೀಳುವ ಒತ್ತಡ ಹಾಗು ಅದರ ಹಿನ್ನೀರ ಮೇಲೆ ಪ್ರಮೀಳೆಯರ ನಾಡಿನಲ್ಲಿ 152 ಅವಲಂಬಿತರಾಗಿರುವ 50400 ಮೀನುಗಾರರ ಜೀವನ ಅವಶ್ಯಕತೆ ಹೊಸ ಯೋಜನೆಯಿಂದ ಆತಂಕಕಾರಿಯಾಗಿದೆ ಎನ್ನುವುದೂ ಚರ್ಚಿಸಲ್ಪಡುತ್ತಿರುವ ಸಂಗತಿ. ಇದನ್ನು ಸಮರ್ಥವಾಗಿ ನಿಭಾಯಿಸಲು "ಲೋಕ್ತಾಕ್ ಡೆವಲಪ್‍ಮೆಂಟ್ ಅಥಾರಿಟಿ"ಯನ್ನು ಮಣಿಪುರಿ ಸರಕಾರ ಸ್ಥಾಪಿಸಿದ್ದು ಅದಕ್ಕಾಗಿ "ವಿಶೇಷ ಪ್ರಾಧಿಕಾರದ ಅಧಿಕಾರ" ನೀಡಲಾಗಿದೆ. ಮಣಿಪುರ್ ಕಾಯಿದೆ 2006 ಅನ್ವಯ ವಿಶೇ ಷಾ ಧಿಕಾರವನ್ನು ನೀಡಲಾಗಿದ್ದು ಪ್ರಾಧಿಕಾರ ಮಣಿಪುರಿಗಳ ಹಿತ ಕಾಪಾಡುವಲ್ಲಿ ಅಭಿವೃದ್ಧಿಯನ್ನೂ ಸಾಧಿಸಲು ಶ್ರಮಿಸುತ್ತಿದೆ. ಈ ಲೋಕ್ತಾಕ್ ಬಗ್ಗೆ ನಾನು ವಿಶೇಷವಾಗಿ ಇಲ್ಲಿ ಹೇಳಲೇಬೇಕಾಗುತ್ತದೆ. ತುಂಬಾ ಆಸ್ಥೆಯಿಂದ ಲೋಕ್ತಾಕ ಪ್ರವಾಸವನ್ನು ನಾನು ಆರಂಭಿಸಿದ್ದೇನಾದರೂ, ಅಂದುಕೊಂಡಷ್ಟು ಮುದ ನೀಡದೆ ಇರುವುದು ಸ್ಥಳೀಯರ ಅನಾದರ, ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥೆಯಲ್ಲಿನ ಲೋಪ ಮತ್ತು ಮಣಿಪುರ ಅಭಿವೃದ್ಧಿಯಲ್ಲಿ ಅತಿ ದೊಡ್ಡ ತೊಡಕಾಗಿರುವ ಸಾರ್ವಜನಿಕ ಸಾರಿಗೆ ಸೇವೆ ಇಲ್ಲದಿರುವುದು ನನ್ನ ಲೋಕ್ತಾಕ ಪ್ರವಾಸವನ್ನು ಕೊಂಚ ಮಂಕಾಗಿಸಿದ್ದು ನಿಜ. ಲೋಕ್ತಾಕ್ ಸರೋವರ್ : ಇತಿಹಾಸದ ಒಂದು ಭಾಗವಾಗಿರುವ ಲೋಕ್ತಾಕ ನೇರಾನೇರ ನೆತ್ತರಿನ ಕಲಹಗಳಿಗೆ ಸಾಕ್ಷಿಯಾಗಿದೆ. ಸಾವಿರಾರು ವರ್ಷಗಳಿಂದ ಪೂರ್ತಿ ಮಣಿಪುರದಲ್ಲಿ ಏಕೈಕ ಸರೋವರವಾಗಿ ಉಳಿದಿರುವ ಲೋಕ್ತಾಕ ಅಕ್ಷರಶ: ಭೂಮಿಯ ಮುಖದಿಂದ ಜನಿಸಿದ ಪುರಾತನ ನೀರಿನ ಸಂಗಮದ ಸ್ಥಳ. ಇದೊಂದು ಪ್ರಮುಖ ಪ್ರವಾಸಿ ಸ್ಥಳವಾಗಿ ಗುರುತಿಸಲಾಗಿದ್ದು ಇಂಫಾಲದಿಂದ ಕೇವಲ 45 ಕಿ.ಮೀ. ದೂರದಲ್ಲಿದ್ದು ಅಗತ್ಯದ ಸೌಕರ್ಯವನ್ನು ಕೈಗೊಂಡಿದ್ದರೆ, ಮೂಲ ಸೌಲಭ್ಯವನ್ನು ಅಭಿವೃದ್ಧಿಪಡಿಸಿದರೆ ಬಹುಶ: ಅರ್ಧದಷ್ಟು ಲಾಭವನ್ನು ಇದೊಂದೇ ಸರೋವರ ತಂದುಕೊಡುತ್ತಿತ್ತೇನೊ. ದುರದೃಷ್ಟ ಎಂದಿನಂತೆ ಇದೂ ಕೂಡಾ ಕೇವಲ "ಬೋಟಿಂಗ್ ಲೇಕ್" ಆಗಿ ಪರಿವರ್ತನೆ ಆಗಿಬಿಟ್ಟಿದೆ. 153 ಪ್ರಮೀಳೆಯರ ನಾಡಿನಲ್ಲಿ ವಿಷ್ಣುಪುರ್ ಜಿಲ್ಲೆಯ ಮೈರಾಂಗ್‍ನಿಂದ ಕೇವಲ 7-8 ಕೀ.ಮೀ. ದೂರ ಇರುವ ಲೋಕ್ತಾಕ್ ಬಗ್ಗೆ ಸರಿಯಾದ ಮಾಹಿತಿ ಎಲ್ಲೂ ದಕ್ಕುವುದೇ ಇಲ್ಲ. ಇದು ವಿದೇಶದಲ್ಲಿದ್ದರೆ ಬಹುಶ: ವಿಶ್ವ ವಿಖ್ಯಾತಿಯನ್ನು ಪಡೆಯುತ್ತಿತ್ತೇನೊ ಆದರೆ ಆ ಭಾಗ್ಯ ಲೋಕ್ತಾಕ್‍ಗೆ ಲಭ್ಯವಾಗಿಲ್ಲ. ವರ್ಷವಿಡೀ ಕಡಿಮೆಯಾಗದ ನೀರು ಮತ್ತು ಅದ್ಭುತವಾದ ನಿಸರ್‌ಗ ಸಿರಿ ಇದಕ್ಕಿದೆ. ಚೂರದಿಂದ ಬರುವ ನಂಬುಲಾ ಮತ್ತು ಮೊದಲೇ ತಿಳಿಸಿದ ಮಣಿಪುರ್, ನಂಬೋಲಾ, ಥೊಂಗಜಾರೋಕ್ ಮತ್ತು ನಿಂಗೌಥ್ಕಾಂಗ್ ನದಿಗಳು ಈ ಸರೋವರಕ್ಕೆ ನೀರುಣಿಸುತ್ತಿವೆ. ಆದರೆ ಸುತ್ತಲೂ ಅಡರಿಕೊಂಡಿರುವ ಕೊಳೆ ಮತ್ತು ಅದರ ಹತ್ತಿರ ಹೋಗುತ್ತಿದ್ದಂತೆ ದುರ್‌ಗಂಧದಿಂದ ಕೂಡಿದ ಸರೋವರ ಯಾಕಾದರೂ ಪ್ರವಾಸಿಗರು ಬಂದೆವೋ ಎನ್ನಿಸುವಂತೆ ಮಾಡುತ್ತದೆ. ಬಹುಶ: ಜಗತ್ತಿನಲ್ಲಿ ಇದೊಂದೇ ತೇಲುವ ಸರೋವರ ಎಂಬ ಖ್ಯಾತಿ ಇದಕ್ಕಿದ್ದರೂ ಯಾವತ್ತೂ ಅದನ್ನೊಂದು ಜಗದ್ವಿಖ್ಯಾತ ಸ್ಥಳವನ್ನಾಗಿ ಪರಿವರ್ತಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ತೋರಿಸಿಯೇ ಇಲ್ಲ ಎನ್ನುವುದು ಎದ್ದು ಕಾಣುವ ಅಂಶ. ಪ್ರಮೀಳೆಯರ ನಾಡಿನಲ್ಲಿ 154 ನಾಲ್ಕು ಕಡೆಯಿಂದ ಲೋಕ್ತಾಕನ್ನು ಪ್ರವೇಶಿಸಲು ಬೋಟಿಂಗ್ ವ್ಯವಸ್ಥೆಯಿದ್ದು ಅರಿವಿಲ್ಲದೇ ಹೋಗುವ ಪ್ರವಾಸಿಗರನ್ನು ಮೊದಲ ಹಂತದಲ್ಲೇ ಇದೇ ಲೋಕ್ತಾಕ ಎನ್ನುವ ವಿವರಣೆಯ ಮೂಲಕ ವ್ಯಾಪಾರಿ ದೃಷ್ಟಿಯಿಂದ ಪ್ರವಾಸಿಗರನ್ನು ತಡೆದುಬಿಡುವ ಮತ್ತು ಆ ಮೂಲಕ ನೈಜ ಲೋಕ್ತಾಕನ್ನು ತೋರಿಸಿದೆ ಉಳಿಸಿಬಿಡುವ ಸ್ಥಳೀಯರ ಮತ್ತು ಬೋಟಿಂಗ್ ಲಾಬಿಯಿಂದಾಗಿ ಮಣಿಪುರದ ಲೋಕ್ತಾಕ ಅಸಾಮಾನ್ಯ ಲಾಭವನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ಪ್ರವಾಸಿಗರೆಂದರೆ ಹಣ ಸುರಿಯಲು ಬಂದಿರುವರೇಂದೆ ಸುಲಿಯಲು ನಿಂತುಬಿಡುವ ಸೇವಾ ಪೂರೈಕೆದಾರರ ನಡವಳಿಕೆ ಮಣಿಪುರ ಪ್ರವಾಸೋದ್ಯಮಕ್ಕೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ ಲೋಕ್ತಾಕ್‍ನ್ನು "ಮೈರಾಂಗ್"ನಿಂದ ನೋಡಿದ ನಂತರವೂ ಎರಡು ಮೂರು ಭಾಗದಲ್ಲಿ ಪ್ರವೇಶಿಸುವ ಸ್ಥಳಗಳನ್ನು ಪ್ರವಾಸಿಗರು ಸಂದರ್ಶಿಸದಿದ್ದಲ್ಲಿ ತೇಲುವ ಸರೋವರದ ಅಪೂರ್ವ ಅನುಭವ ಸಿಗದೇ ಹೋಗಬಹುದು. ಲೋಕ್ತಾಕ ತಲುಪಲು ಇಂಫಾಲದಿಂದ ಹೊರಡುವ "ಕಾಶಂ ಪೇಟ್" ಮಾರ್‌ಗದಲ್ಲಿ ಕೇವಲ 30 ರೂಪಾಯಿಗೆ "ಮೈರಾಂಗ್" ಮತ್ತು ಅಲ್ಲಿಂದ ಹೊರಡುವ ರನ್ನಿಂಗ್ ರಿಕ್ಷಾಗಳಲ್ಲಿ ಹತ್ತೇ ರೂಪಾಯಿಗೆ ಇದರ ಬುಡಕ್ಕೆ ತಲುಪಬಹುದಾಗಿದೆ. ಇಲ್ಲಿಂದಲೂ ಹತ್ತೇ ರೂಪಾಯಿಯಲ್ಲಿ ತೇಲುವ ಸರೋವರ ಮತ್ತು ಕಂಗ್ರಾ ಅಥವಾ ಸೇಂಡ್ರಾ ದ್ವೀಪವನ್ನು ಸೇರುವ ಸಾಮಾನ್ಯ 155 ಪ್ರಮೀಳೆಯರ ನಾಡಿನಲ್ಲಿ ಜಲ ಸಾರಿಗೆಯ ಕೂಟ ವ್ಯವಸ್ಥೆ ಇದ್ದು ಪ್ರವಾಸಿಗರಿಂದ ಇದನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆ. ಇದರಿಂದಾಗಿ ಲೋಕ್ತಾಕ ಹೆಚ್ಚಿನ ಅಂಶ ಪ್ರವಾಸಿಗರಿಂದ ವಂಚಿತವಾಗುತ್ತಿದೆ. ಇನ್ನು ಎರಡನೆಯ ಹಂತದಲ್ಲಿನ ಸರೋವರ ಪ್ರವೇಶದಲ್ಲಿಯೇ ತೇಲುವ ಸರೋವರದ ಮಾದರಿ ಲಭ್ಯವಾಗುತ್ತದೆ. ಇಲ್ಲಿನ ಜೊಂಡು ಮತ್ತು ಕಳೆಗಳ ಅಪಾರ ಕ್ಷೇತ್ರವನ್ನು ಸೇರಿಸಿ, ನೀರಿನ ಮೇಲೆ ತೇಲಲು ಬಿಟ್ಟು ಬೆಳೆಸಲಾಗಿದೆ. ಅದರ ಮೇಲೆ ಮತ್ತೊಂದು ಲೇಯರ್ ಇದೇ ಜೊಂಡಿನ ಕಳೆಯನ್ನು ಬೆಳೆಸಿ ಅದರ ದಪ್ಪವನ್ನು ಹೆಚ್ಚಿಸುವುದರ ಮೂಲಕ ಸುಮಾರು ನೂರು ಅಥವಾ ಅದಕ್ಕೂ ಹೆಚ್ಚಿನ ವಿಸ್ತಾರ ಅಗಲದ ಚಿಕ್ಕ ತೇಲುವ ದ್ವೀಪವನ್ನು ನಿರ್ಮಿಸುವ ಯೋಜನೆ ಕಾರ್ಯಗತ ಗೊಳಿಸಲಾಗಿದೆ. ಹೀಗೆ ಬೆಳೆಸಿದ ಜೊಂಡಿನ ಮೇಲೆ ಕನಿಷ್ಠ ತೂಕ ಹೊರುವ ಸಾಮರ್ಥ್ಯವನ್ನು ಅನುಗಣಿಸಿ ಅದರ ಮೇಲೆ ಚಿಕ್ಕ ಚಿಕ್ಕ ಗುಡಿಸಲಿನಂತಹ ಮನೆಯನ್ನು ಕಟ್ಟಲಾಗಿದೆ. ಹೀಗೆ ನೇರ ನೀರ ಮೇಲೆ ತೇಲುವ ಈ ಜೊಂಡಿನ ಪದರಗಳನ್ನು ಒಂದರ ಮೇಲೆ ಒಂದು ಸೇರಿಸಿದಾಗ ಆಗುವ ನೆಲಹಾಸಿನಂತಹ ಮೆತ್ತೆಯ ಮೇಲೆ ನಾವು ಕಾಲಿಟ್ಟಾಗ ಹೊಯ್ದಾಡುವ ಸ್ಪಂಜಿನ ಮೇಲೆ ಇಳಿದ ಅನುಭವ ಆಗುತ್ತದೆ. ಅರ್ಧ ಅಡಿಗೂ ಮಿಗಿಲು ಮೇಲೆ ಕೆಳಗೆ ತೂಗಾಡಿಸುವ ಇದರ ಮೇಲೆ ಇಳಿದು ಓಡಾಡಬಹುದಾಗಿದ್ದು ನಿಜಕ್ಕೂ ತೇಲುವ ಸರೋವರದ ಅನುಭವಕ್ಕೆ ಉಂಟುಮಾಡುತ್ತದೆ. ಇದು ನೀರಿನಲ್ಲಿ ತೇಲಿ ಹೋಗದಿರಲೆಂದು ಇದನ್ನು ಕೆಳಭಾಗದಲ್ಲಿ ನೀರಿನಲ್ಲಿ ಗೂಟಗಳನ್ನು ಹುಗಿದು ಅಲ್ಲಲ್ಲಿ ಬಿಗಿಯಲಾಗಿದೆ. ಹೀಗಾಗಿ ಅಲ್ಲಲ್ಲಿ ಇಂಥ ತೇಲು ತೆಪ್ಪದಂತಹ ಜೊಂಡಿನ ಸ್ಥಳಗಳ ಮೇಲೆ ಕಟ್ಟಲಾಗಿರುವ ಮನೆಗಳಿಗೆ ಆಕರ್ಷಕ ಬಣ್ಣಗಳಿಂದ ಸಿಂಗರಿಸಲಾಗಿದ್ದು ನೀರಿನ ಹಿನ್ನೆಲೆಯಲ್ಲಿ ಕಾಣುವ ದೃಶ್ಯಾವಳಿಗಳು ಅದ್ಭುತ. ಆದರೆ ಇಲ್ಲೆಲ್ಲೂ ಸಹಜವಾಗಿ ಪ್ರವಾಸಿಗರನ್ನು ಸೆಳೆಯುವ ಯಾವುದೇ ಯೋಜನೆ ಪ್ರವಾಸೋದ್ಯಮ ಇಲಾಖೆ ಕೈಗೊಂಡಿಲ್ಲದಿರುವುದು ಪ್ರವಾಸಿಗರನ್ನು ಮೊದಲ ಹಂತದಲ್ಲೇ ಇದು ನಿರಾಸೆಗೆ ತಳ್ಳುತ್ತದೆ. ಪ್ರಮೀಳೆಯರ ನಾಡಿನಲ್ಲಿ 156 ಇನ್ನು ಇಲ್ಲಿಂದ ಒಳಹಂತದಲ್ಲಿರುವ ಬುಡಕಟ್ಟು ಜನಾಂಗಗಳಾದ "ಜಿಂಗಾಮೈ" ಮತ್ತು "ಕುಕೀಸ್"ಗಳು ಅಲ್ಲಲ್ಲಿ ದ್ವೀಪ ಸಮೂಹದಲ್ಲಿ ಚಿಕ್ಕ ಚಿಕ್ಕ ವಸಾಹುತುವಿನ ತರಹ ತಮ್ಮ ಹಾಡಿಗಳನ್ನು ನಿರ್ಮಿಸಿಕೊಂಡಿರುವ ಕಾರಣ ಸುಮಾರು ಒಂದೂವರೆ ತಾಸುಗಳ ದೋಣಿ ಯಾನದ ನಂತರ ತಲುಪಬಹುದಾಗಿದ್ದು ಅಲ್ಲಿಗೆ ಬೋಟ್‍ಸೇವೆ ಲಭ್ಯವಿದೆ. ಆದರೆ ಯಾವುದೇ ಛಾಯಚಿತ್ರಕ್ಕೆ ಸ್ಥಳೀಯರು ಅವಕಾಶ ಕೊಡದೆ ಇರುವುದೂ ನಮ್ಮನ್ನು ನಿರಾಸೆಗೆ ತಳ್ಳುತ್ತದೆ. ಕಂಗ್ರಾ ಮತ್ತು ಸೆಂಡ್ರಾ ಅಂತಹ ಪ್ರಮುಖ ದ್ವೀಪಗಳಾಗಿದ್ದೂ ಈಗಲೂ ಅಲ್ಲಲ್ಲಿ ಇರುವ ಈ ಬುಡಕಟ್ಟು ಸಮುದಾಯ ಜೇನು ಮತ್ತು ಕೃಷಿಯೊಂದಿಗೆ ಜೀವನ ಸಾಗಿಸುತ್ತಿದೆ. ಆದರೆ ಇದು ಕೇವಲ ಮೇಲ್ನೋಟಕ್ಕೆ ಲಭ್ಯವಾಗುವ ಬುಡಕಟ್ಟುಗಳ ಜನಜೀವನವಾದರೆ, ಹೀಗೆ ಅಲ್ಲಲ್ಲಿ ದ್ವೀಪ ಸಮೂಹದಲ್ಲಿದ್ದು ಈಚೆಗೆ ಬರದೇನೆ ಜೀವನ ನಡೆಸುತ್ತಿರುವ ಸಮುದಾಯಗಳು ಈ ಸರೋವರದ ಮಧ್ಯದಲ್ಲಿ ಈಗಲೂ ಇವೆ. ಲೋಕ್ತಾಕ್‍ನ ಮೊದಲ ಹಂತದಲ್ಲಿ ಒಂದು ಅಸ್ಸಾಂ ರೈಫ್‍ಲ್ಸ್‌ ವಶದಲ್ಲಿರುವ ಚಿಕ್ಕ ಗುಡ್ಡವೊಂದು ಎದುರಿಗಿದ್ದು ಅಲ್ಲಿಂದ ಲೋಕ್ತಾಕನ ಅದ್ಭುತ ವಿಹಂಗಮ ದೃಶ್ಯ ಕಣ್ಣಿಗೆ ಲಭ್ಯವಾಗುತ್ತದೆ. ಇಲ್ಲಿ ಇದ್ದುದರಲ್ಲೇ ಉತ್ತಮ ದರ್ಜೆಯ ಹೋಟೆಲ್ ಒಂದು ಕಾರ್ಯನಿರ್ವಹಿಸುತ್ತಿದ್ದು ಬಹುಶ: ಇಂಫಾಲದ ಹೋಟೆಲ್ ಇಂಫಾಲ್ ಬಿಟ್ಟರೆ ಇದೇ ಉತ್ತಮ ದರ್ಜೆಯದ್ದು ಎನ್ನಬಹುದಾಗಿದೆ. ಲೋಕ್ತಾಕ ಲೇಕ್ ಅಥವಾ ತೇಲುವ ಸರೋವರ್ ಎಂದೇ ಖ್ಯಾತಿ ಪಡೆದಿರುವ ಈ ಸರೋವರದ ಅಥವಾ ಕೆರೆಯ ವಿಸ್ತೀರ್ಣವೇ ಅನಾಮತ್ತು 312 ಚ.ಕಿ.ಮೀ. ಜಿಲ್ಲೆಯ ಹೆಚ್ಚಿನ ಭಾಗವನ್ನು ಈ ಸರೋವರದ ನೀರೆ ಸುತ್ತುವರೆದಿದ್ದು ಜಿಲ್ಲೆಯನ್ನು ಒಂದು ರೀತಿಯಲ್ಲಿ ನೀರಾವರಿ ಅಥವಾ ಮೀನುಗಾರಿಕೆಯ ಜಿಲ್ಲೆಯನ್ನಾಗಿಸಿದೆ ಎಂದರೂ ಅಡ್ಡಿಯಿಲ್ಲ. ಇಂಫಾಲದಿಂದ 48 ಕಿ.ಮೀ. ದೂರ ಇರುವ ಲೋಕ್ತಾಕವನ್ನು ಸೆಂಡ್ರಾ ದ್ವೀಪದ ಮೂಲಕ ಗಮನಿಸುವಾಗ ಇದನ್ನು ತೇಲುವ ಸರೋವರ ಎಂದೇ ಕರೆಯಲಾಗುತ್ತಿದೆ. 157 ಪ್ರಮೀಳೆಯರ ನಾಡಿನಲ್ಲಿ ನೂರಾರು ಬೋಟ್ ಉದ್ದಿಮೆದಾರರು ಇಲ್ಲಿ ಪ್ರವಾಸಿಗರಿಗೆ ಬೋಟಿಂಗ್ ಸೇವೆ ಪೂರೈಸುವುದರ ಮೂಲಕ ಜೀವನವನ್ನು ನಡೆಸುತ್ತಿದ್ದರೆ ಲೋಕ್ತಾಕ ಪ್ರವಾಸೋದ್ಯಮಕ್ಕೂ ಅತಿ ದೊಡ್ಡ ಕೊಡುಗೆಯಾಗಿದೆ. ಇದರ ಮಧ್ಯದಲ್ಲಿರುವ ಸೆಂಡ್ರಾ ದ್ವೀಪ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವುದಲ್ಲದೇ, ಅಲ್ಲೇ ಇರುವ ಕೆಫೆಟೇರಿಯಾ ಪ್ರವಾಸಿಗರಿಗೆ ಮುದ ನೀಡುವುದು ಸುಳ್ಳಲ್ಲ. ಸುತ್ತ ಮುತ್ತಲೂ ಇರುವ ಹಲವು ಬಣ್ಣದ ಮರಗಿಡಗಳು ಮತ್ತು ಪಕ್ಷಿಗಳ ಹಿಮ್ಮೇಳ ಸರೋವರಕ್ಕೆ ಅದ್ಭುತ ಮೇರಗು ನೀಡುತ್ತಿದೆ. (ಇಲ್ಲೊಂದು ವಿಷಯವನ್ನು ನಾನು ಸ್ಪಷ್ಟಪಡಿಸಬೇಕು. ಎಲ್ಲೂ ಯಾವ ಊರಿನಲ್ಲೂ ಬೇರೆ ಊರು ಮತ್ತು ಜಿಲ್ಲೆಗಳ ಬಗ್ಗೆ ನಿಮಗೆ ವಿವರ ಮಾಹಿತಿ ಹಾಗು ಬೇಕಾದ ಸಹಾಯ ದೊರಕುವುದು ಕಡಿಮೆಯೇ. ಕಾರಣ ಬೇರೆ ಜಿಲ್ಲೆ ಅಲ್ಲಿನ ಒಳ ಊರುಗಳ ಸಾಮಾನ್ಯ ಮಾಹಿತಿ ಕೂಡಾ ಇಲ್ಲಿನ ಜನರಿಗೆ ಇಲ್ಲ. ತೀರ ಮಣಿಪುರ ವೆಬ್‍ಸೈಟಿನಲ್ಲಿ ಪ್ರಕಟಿಸಿರುವ ಮಾಹಿತಿಗಳೂ ಕೂಡಾ ಇಲ್ಲಿ ಅಪೂಟು ಅಪರಿಚಿತವೇ. ಕಾರಣ ಯಾವ ಹಳ್ಳಿ ಅಥವಾ ಪ್ರವಾಸಿ ಸ್ಥಳಗಳ ಬಗ್ಗೆ ಮಣಿಪುರ ಪ್ರವಾಸೋದ್ಯಮ ಮಾಹಿತಿ ಪ್ರಕಟಿಸಿದೆಯೋ ಅದರಲ್ಲಿಯೂ ಹೆಚ್ಚಿನಂಶ ಅರ್ಧ ಮಾಹಿತಿ ಮಾತ್ರವೇ ಅದನ್ನು ನಂಬಿಕೊಂಡು ಪ್ರಯಾಣಿಸುವ ಪ್ರವಾಸಿಗ ತೀರ ಆವತ್ತಿನ ಮಟ್ಟಿಗೆ ದರವೇಸಿಯೇ ಆಗುತ್ತಾನೆ. ಕಾರಣ ಯಾವ ಊರಿನಲ್ಲೂ ಇಂಫಾಲ ಹೊರತು ಪಡಿಸಿದರೆ ಪ್ರವಾಸಿಗರು ತಂಗುವ ಹೋಟೆಲ್ ಅಥವಾ ಸರಿಯಾದ ಅತಿಥಿ ಗೃಹದ ಸೌಕರ್ಯಗಳು ಇಲ್ಲವೇ ಇಲ್ಲ. ಕೇವಲ ಪ್ರಮೀಳೆಯರ ನಾಡಿನಲ್ಲಿ 158 ಅಲ್ಲೊಂದು ಇಲ್ಲೊಂದು ಹೋಟೆಲುಗಳು ಈಗ ಇಂಫಾಲದಲ್ಲಿ ಕಣ್ಣು ಬಿಡುತ್ತಿವೆ. ಹಾಗಾಗಿ ಇಂಫಾಲ ಹೊರತುಪಡಿಸಿದರೆ ಬೇರಾವುದೇ ಜಿಲ್ಲಾ ಕೇಂದ್ರಗಳನ್ನು ನಂಬಿಕೊಂಡು ಅಲ್ಲಿಗೆ ಪ್ರವಾಸಿ ಮೂಡಿನಲ್ಲಿ ಪಯಣಿಸಿದ್ದೇ ಆದರೆ ನೀವು ಸಿಕ್ಕಿಕೊಂಡಿರಿ ಎಂದೇ ಅರ್ಥ. ತೀರ ಜಿಲ್ಲಾ ಕೇಂದ್ರಗಳ ಬಸ್‍ಸ್ಟ್ಯಾಂಡಿನಲ್ಲೇ ಕಲ್ಲಿದ್ದಲು ಮಾರಾಟ ಮಾಡುವ ಮತ್ತು ಅಪ್ಪಟ ದೇಶಿ ಶೈಲಿಯ ಕ್ಷೌರಿಕರ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ. ಬೀದಿ ಹಸು ನಾಯಿಗಳು ಧಾರಾಳವಾಗಿ ಮಲಗಿದ್ದು, ಸಂಸಾರ ನಡೆಸುತ್ತಿರುತ್ತವೆ. ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿದರೆ ಒಳನಾಡಿನ ಯಾವುದೇ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿವೆ ಎಂದು ನಂಬಿಕೊಂಡು ಹೋಗುವ ಸಾಧ್ಯತೆ ಬೇಡವೇ ಬೇಡ. ಎಲ್ಲೂ ಮಣಿಪುರ ಪ್ರವಾಸೋದ್ಯಮ ಇಲಾಖೆ ಪ್ರಚುರಪಡಿಸುತ್ತಿರುವ ಹಾಗೆ ಮಾಹಿತಿಗಳು ಮತ್ತು ವಿವರಗಳ ಪ್ರಕಾರ ಭೌಗೋಳಿಕವಾಗಿ ಸುಲಭ ಎನ್ನಿಸುವ ಸಾಧ್ಯತೆ ಇಲ್ಲವೇ ಇಲ್ಲ. ಕಾರಣ ಮೊದಲೇ ಹೇಳಿದಂತೆ ಇದು ಪರ್ವತ ಮತ್ತು ಕಣಿವೆಗಳಿಂದ ಸುತ್ತುವರೆದ ನಾಡು. ವಿಭಿನ್ನ ಮತ್ತು ಹಲವು ಸಮುದಾಯ ಬುಡಕಟ್ಟುಗಳು ಅವರದ್ದೇ ಆದ ಸಂಭಾವ್ಯತೆಯಲ್ಲಿ ಬದುಕುತ್ತಿವೆ. ಇದು ಹೊರಗಿನಿಂದ ಹೋದ ಪ್ರವಾಸಿಗರಿಗೆ ಅರಗಿಸಿಕೊಳ್ಳುವುದು ಕಷ್ಟ. ಇನ್ನು ಆಹಾರ ಮತ್ತು ಇನ್ನಿತರ ಸ್ಥಳೀಯ ಆಗುಹೋಗುಗಳ ದೃಷ್ಟಿಯಿಂದಲೂ ಮಣಿಪುರ ಪ್ರವಾಸ ಯೋಗ್ಯವಾಗಿ ಉಳಿದಿಲ್ಲ. ಕೇವಲ ಇಂಫಾಲ ಮಾತ್ರ ಪ್ರವಾಸಿಗರಿಗೆ ಅತಿಹೆಚ್ಚು ಎಂದರೆ ಎರಡು ದಿನದ ಮಜ ಕೊಡಬಲ್ಲದು. ಅದರ ಹೊರತಾಗಿ ಹೊರ ಜಿಲ್ಲೆ ಮತ್ತು ಸ್ಥಳಗಳು ಎಲ್ಲಾ ದೃಷ್ಟಿಯಿಂದಲೂ ಸ್ವಲ್ಪ ಯೋಚಿಸುವಂತೆ ಮಾಡುತ್ತವೆ ಮತ್ತು ಮಾಡಬೇಕಾದದ್ದೇ - ಲೇಖಕ ) ದಿನಾಲು ಬೆಳಗ್ಗೆದ್ದು ತಿಂಡಿಯ ಸಮಸ್ಯೆ ನನ್ನ ಕಾಡುತ್ತಿತ್ತು. ಕಾರಣ ಎಲ್ಲೆಡೆ ಉತ್ತರ ಭಾರತದಂತೆ ಇಲ್ಲೂ ಪರಾಠ ಮತ್ತು ದಾಲ್ ವ್ಯವಸ್ಥೆ ರಸ್ತೆ ಬದಿಯಲ್ಲಿ ಹಾಗು ಇನ್ನಿತರ ಅಂಗಡಿಗಳಲ್ಲಿ ಕಾಣಿಸುತ್ತಿತ್ತಾದರೂ ಅಲ್ಲೆಲ್ಲ 159 ಪ್ರಮೀಳೆಯರ ನಾಡಿನಲ್ಲಿ ತಿನ್ನಬಹುದಾದ ಮತ್ತು ತಿಂದು ಏನೂ ಆಗದ ಹಾಗೆ ಜೀರ್ಣಿಸಿಕೊಳ್ಳಬಹುದಾದ ನಂಬಿಕೆ ನನಗಲ್ಲ, ಯಾವ ಪ್ರವಾಸಿಗನಿಗೂ ಬರಲಾರದು. ಕಾರಣ ಎದುರಿಗೆ ಕಾಣುವ ಕೊಚ್ಚೆ. ನಿನ್ನೆಯ ದಿನದ ತೆಗೆಯದೆ ಬಿಟ್ಟ ಗಲೀಜು.. ಆಚೆ ಕಡೆಯ ಮೀನು ಮಾರ್ಕೆಟ್ಟಿನ ಪ್ಲೇವರ್ರು ... ಅತೀವ ವಾಸನೆ ಎದುರೆದುರೇ ಕೈಯ್ಯಲ್ಲಿ ನಾದುತ್ತಿರುವ ಹಿಟ್ಟಿನ ಆ ಪರಾಟೆಯ ಭರಾಟೆ ನೋಡಿದರೆ ಉಳಿದವರಿಗೆ ಆದೀತೇನೋ ನನ್ನಂಥವನಿಗೆ ಅರಗಿಸಿಕೊಳ್ಳುವುದು ಆಚೆಗಿರಲಿ, ಗಂಟಲಲ್ಲಿ ಇಳಿಸಿಕೊಳ್ಳುವುದೂ ಭಾರಿ ಕಷ್ಟದ ಕೆಲಸ. ಹಾಗಾಗಿ ನಾನು ಬ್ರಾಂಡೆಡ್ ಬಿಸ್ಕೆಟ್ಟು ಮತ್ತು ಕೇಕುಗಳನ್ನು ಎದುರಿಗಿಟ್ಟುಕೊಂಡು ದೊಡ್ಡ ಕಪ್ಪಿನ ತುಂಬಾ ಬಿಸಿ ಹಬೆಯಾಡುವ ಚಹ ತುಂಬಿಕೊಂಡು ಕೂರುತ್ತಿದ್ದೆ. ಆಚೀಚೆ ಟೇಬಲ್ಲಿನ ಗ್ರಾಹಕರು, ಸ್ಥಳೀಯರು ನನ್ನನ್ನು ಒಂದು ವಿಚಿತ್ರ ಪ್ರಾಣಿ ಎಂಬಂತೆ ನೋಡುತ್ತಿದ್ದು ನನಗೆ ಗೊತ್ತಾಗುತ್ತಲೇ ಇರುತ್ತಿತ್ತು. ಆದ್ರೆ ಯಾವ ವಿಧದ ರಿಸ್ಕೂ ನಾನು ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಎಲ್ಲದಕ್ಕೂ ಮಿಗಿಲು ದೇಶದೆಲ್ಲೆಡೆ ಹಂದಿ ಜ್ವರದ ಭರಾಟೆ ಸದ್ದು ಮಾಡುವಾಗ ಅದ್ಯಾವನಿಗೆ ಈ ಪರಾಠ ತಿನ್ನುವ ಧೈರ್ಯ ಬಂದೀತು. ನನ್ನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈ ಅವಕಾಶವನ್ನೇ ಉಪಯೋಗಿಸಿಕೊಂಡು ಬೆಳಬೆಳಗ್ಗೆ ರಿಕ್ಷಾದಲ್ಲಿ ಹತ್ತಿಸಿಕೊಳ್ಳಲು ಬರುತ್ತಿದ್ದ "ಗೋಬ್ಸಿ" ತನ್ನೊಂದಿಗೆ ಸ್ಥಳೀಯ "ಮೊವ್ವಾನ್" ನನ್ನೂ ಸೇರಿಸಿಕೊಂಡು ನನ್ನ ಗೋಳು ಹೊಯ್ದುಕೊಳ್ಳುತ್ತಿದ್ದರು. "ಅದೆಂಗೆ ಬರೀ ಹುಲ್ಲು ತಿಂದಂಗೆ ಯಾವಾಗಲೂ ಬ್ರೆಡ್ ಮತ್ತು ತರಕಾರಿ ತಿಂತಿಯಾ.." ಎಂದು ನನ್ನ ತರಕಾರಿ ಊಟದ ಬಗ್ಗೆ ಗೋಮ್ಸಿ ಛೇಡಿಸುತ್ತಿದ್ದರೆ ನಾನು, "ಏನು ಮಾಡಲಿ ನಿಮ್ಮಂತೆ ಮಾಂಸ ಜಗಿಯೋದು ಕಲಿತಿಲ್ಲ. ಆ ಗಬ್ಬು ಮೀನೂಟ ತಿಂದು ತಿಂದೇ ನಿಮ್ಮ ಹಲ್ಲು ಬಾಯಿ ಹಿಂಗೆ ಗಲೀಜು ಆಗಿ ಹಾಳಾಗಿರೋದು.." ಎಂದು ನಾನು ಛೇಡಿಸುತ್ತಿದ್ದೆ. ಅದಕ್ಕೆ ಪುಷ್ಟಿ ಎಂಬಂತೆ ಯಾವ ಮುಲಾಜು ಇಲ್ಲದೆ ಆಕೆ ಅಷ್ಟೇ ಸಶಬ್ದವಾಗಿ ಬಾಯ್ತೆರೆದು ಇನ್ನಷ್ಟು ರೇಗಿಸುತ್ತಿದ್ದಳು. ಕಾರಣ ಮಾಂಸಾಹಾರ ಪ್ರಮೀಳೆಯರ ನಾಡಿನಲ್ಲಿ 160 ಎನ್ನುವುದು ಮಣಿಪುರಿಗಳ ಅಥವಾ ಮಿಥೀಸ್‍ಗಳ ಒಂದು ಜೀವನ ಭಾಗವೇ ಆಗಿದೆ. ಅಲ್ಲೆಲ್ಲಾ ಅವರಿಗೆ ತಮ್ಮ ಪಾನು ಜಗಿಯುವುದರ ಬಗೆಗಾಗಲಿ ಅಥವಾ ಮೀನಿನಿಂದ ಊರೆಲ್ಲಾ ಗಬ್ಬು ನಾರುವುದರ ಬಗೆಗಾಗಲಿ ಯಾವ ಕೀಳರಿಮೆಯೂ ಇರಲಿಲ್ಲ. ಕಾರಣ ಊರಿಗೆ ಊರೇ ಅದಕ್ಕೆ ಹೊಂದಿಕೊಂಡುಬಿಟ್ಟಿದೆ. ಇನ್ನು ವಾಸನೆ ಅನ್ನಿಸುವುದಾದರೂ ಹೇಗೆ..? ಅಷ್ಟಕ್ಕೂ ಬೇಕಿದ್ದರೆ ಆಪರೇಶನ್ ಥಿಯೇಟರ್‌ನಲ್ಲಿ ಹಾಕಿಕೊಳ್ಳುವ ಮಾಸ್ಕ್ ಹಾಕಿಕೊಂಡು ಓಡಾಡುವುದು ಇಲ್ಲಿ ಸ್ಥಳೀಯರಾದಿಯಾಗಿ ತುಂಬಾ ಸಾಮಾನ್ಯ. ಅದೂ ಕೂಡಾ ದಿನವಹಿ ದಿರಿಸಿನ ಭಾಗವೇ ಎನ್ನುವಷ್ಟು ಮಾಸ್ಕ್ ಇಲ್ಲಿ ಸಹಜ. ಮಣಿಪುರಿಗಳ ಉಟದ ವಿಷಯದಲ್ಲೂ ಅದ್ಭುತವಾದ ಪದ್ಧತಿ ಮತ್ತು ಭಿನ್ನತೆ ಈಗಲೂ ಇದೆ. ಇಲ್ಲಿ ಬೆಳಗ್ಗೆದ್ದು ತಿಂಡಿ ಎನ್ನುವ ಸಾಧ್ಯತೆ ತುಂಬಾ ಕಡಿಮೆ. ಒಮ್ಮೆಲೆ ಒಂಬತ್ತು ಗಂಟೆಯ ಹೊತ್ತಿಗೆ ಹೊಟ್ಟೆ ತುಂಬ ತಿಂದು ಹೊರಟು ಬಿಟ್ಟರೆ, ಮತ್ತೆ ಸಂಜೆ ಮನೆ ಸೇರುವವರೆಗೆ ಏನಿದ್ದರೂ ಚಹ ಮತ್ತು ಬೀಡಿ, ಪಾನು ತೀರ ಹಸಿವಾದರೆ ದರಿ ಮೇಲೆ ಸಮೋಸ ಮತ್ತು ಚೋಲೆ. ಆದರೆ ಮನೆಯಲ್ಲಿ ಅಪ್ಪಟ ಮೀನಿನ ಖಾದ್ಯ ಇದ್ದೇ ಇರುತ್ತದೆ. ಅಪ್ಪಟ ಬಾಳೆಯ ಎಲೆಯಲ್ಲಿ ಮೀನು ಮತ್ತು ಒಂದಿಷ್ಟು ಅನ್ನ ಇಲ್ಲಿನ ಸಾದಾ ಸೀದಾ ಮತ್ತು ಹೆಚ್ಚಿನ ಜನ ಇಷ್ಟಪಡುವ ಆಹಾರದ ಭಾಗವಾಗಿದೆ. ಹೆಚ್ಚಿನಂಶ ಮಾಂಸಾಹಾರ ಇಲ್ಲಿ ಊಟದ ಅವಿಭಾಜ್ಯ ಅಂಗವಾಗಿದೆ. ಸಿಗುವ ಎಲ್ಲ ತರಹದ ಕಾಯಿ ಪಲ್ಯೆಗಳನ್ನು ಹಾಕಿ ತಯರಿಸುವ "ಕೋಬಾಕ್" ಎನ್ನುವ ಪದಾರ್ಥ ಅನ್ನದ ಜೊತೆಗೆ ಮೀನುಗಳನ್ನು ಸೇರಿಸಿ ತಯಾರಿಸುವ ಖಾದ್ಯ ಜನಪ್ರಿಯ. ನಾನು ಕಾಯಿಪಲ್ಲೆ ಇರುವ ಕೋಬಾಕ್ ಕೊಡು ಎಂದರೆ ಮೀನು ಎತ್ತಿಟ್ಟು "ತೋಗೊ ವೆಜಿಟೇಬಲ್ ಕೋಬಾಕ್" ಎನ್ನಬೇಕೆ...? ಒಂದು ರೀತಿಯಲ್ಲಿ ನಮ್ಮಲ್ಲಿ ಎಲ್ಲಾ ಕಾಯಿಪಲ್ಯೆ ಸೇರಿಸಿ ಒಗ್ಗರಣೆ ಹಾಕಿದಂತೆ. ಆದರೆ ನಮ್ಮಂತೆ ನೀಟಾಗಿ ಅರಶಿಣ, ಸಾಸಿವೆಯದ್ದಲ್ಲ. ಏನಿದ್ದರೂ ನೇರಾ ನೇರ ಟೊಮ್ಯಾಟೊ ಸಾಸ್ ಮತ್ತು ಚಿಲ್ಲಿ ಸಾಸ್ ಹಾಕಿ ಹುರಿಯುವುದ ಷ್ಟೆ. ಅದಕ್ಕಿಷ್ಟು ಹಸಿ ಮೆಣಸಿನ ಖಾರ ಸುರಿದು ಕೊಟ್ಟುಬಿಡುವುದನ್ನು ತಿಂದರೆ ನಾವು 161 ಪ್ರಮೀಳೆಯರ ನಾಡಿನಲ್ಲಿ ಎರಡೂ ಕೈಯಿಂದ ಬುಡ ಹಿಡಿದುಕೊಳ್ಳುವುದ ಷ್ಟೆ ಬಾಕಿ. ಕಾರಣ ಇವರ ತಿನಿಸಿನಲ್ಲಿ ಹಸಿ ಹುಣಿಸೆ ಮತ್ತು ಹಸಿ ಮೆಣಸಿನಕಾಯಿಗೆ ಅಗ್ರ ಪಂಕ್ತಿ ಸಲ್ಲುತ್ತದೆ. ಅಲ್ಲಿಗೆ ಪ್ರತಿ ದಿನದಂತೆ ನನ್ನ ಊಟ ನೇರ ಡೈನಿಂಗ್ ಹಾಲ್ ಬಿಟ್ಟು, ಅವರ ಅಡುಗೆ ಮನೆ ಹೊಕ್ಕು ಮೂಗನ್ನು ಹಿಡಿದುಕೊಂಡು, ಒಂದೆರಡು ಐಟಮ್ ಹಿಡಿದುಕೊಂಡು ಬಂದು ಜಾಮ್ ಅಥವಾ ಚಹದೊಂದಿಗೆ ಮುಗಿಯುತ್ತಿತ್ತು. ಹಾಗೆಲ್ಲ ನಾನು ಕೈಗೆ ಸಿಕ್ಕಿದ ಸೌತೆಕಾಯಿ ಟೊಮೆಟೊ ಪಿಜಾ ಬಾಟಮ್ಮು ಸೇರಿಸಿಕೊಂಡು ಜಗಿಯುತ್ತಿದ್ದರೆ ಅಲ್ಲಿ ಕುಳಿತು ಮೀನಿನ ಬೆನ್ನು ಸವರಿ ಬೆರಳಿನಿಂದ ಮುಳ್ಳು ಎತ್ತುತ್ತ ನನ್ನನ್ನೂ ಒಂದು ಚಪ್ಪಟೆ ಮೀನಿನಂತೆ ಜನರೆಲ್ಲಾ ವಿಚಿತ್ರವಾಗಿ ಹಲ್ಕಿರಿಯುತ್ತಾ ತಂತಮ್ಮ ಭಾಷೆಯಲ್ಲಿ ಆಡಿಕೊಂಡು ನೋಡುತ್ತಾ ಇರುತ್ತಿದ್ದರು. ಎಲ್ಲಿ ನನ್ನನ್ನೂ ಮೀನಿನಂತೆ ಎತ್ತುತ್ತಾರೋ ಎನ್ನಿಸಿ ಕಣ್ಣಿಗೆ ಕಣ್ಣು ಸೇರಿಸದೆ ತಲೆ ತಗ್ಗಿಸಿ ಸೊರ ಸೊರ ಚಹ ಹೀರಿ ಹೊರಬರುತ್ತಿದ್ದೆ. ಕೆಲವೊಮ್ಮೆ ಮಾತ್ರ ಅವರ ಅಡುಗೆ ಮನೆಯಲ್ಲಿ ಬೇಯಿಸಿದ ಬಟಾಟೆ ಮತ್ತು ಹಸಿ ಕೊತಂಬ್ರಿಯ ಜೊತೆಗೆ ಹಸಿರು ದ್ರವದಲ್ಲಿ ಮಾಡಿದ ದಾಲ್ ಸಿಗುತ್ತಿತ್ತು. ಇನ್ನು ಮಿಕ್ಸ್ ಮಾಡಿರದ ಬಿಸಿ ಬಿಳಿ ಅನ್ನವನ್ನು ಅದೆಲ್ಲದಕ್ಕೂ ಹಾಕಿಕೊಂಡು ನಾನು ಈಚೆಗೆ ಬಂದು ತಿನ್ನುತ್ತಿದ್ದೆ. ನನ್ನ ಈ ವಿಚಿತ್ರ ಅವತಾರವನ್ನು ಇತರೇ ಟೇಬಲ್ ಗ್ರಾಹಕರೊಂದಿಗೆ ನೋಡುತ್ತಿದ್ದ, ಹೋಟೆಲ್ ಗಲ್ಲೆಯ ಮೇಲೆ ಕೂತಿರುತ್ತಿದ್ದ "ಹಣ್ಬಾ" ("ಅವಾಂಗ್ ಲೈಜೇಲ್" ಗ್ರಾಮದಲ್ಲಿನ ಹೋಟೆಲಿನ ಮಾಲಕಿ ಕಮ್ ಸರ್ವರ್ ಕಮ್ ಮ್ಯಾನೇಜರ್) ದುಡ್ಡೂ ಕೂಡಾ ತೆಗೆದುಕೊಳ್ಳದೆ ಕಳಿಸುತ್ತಿದ್ದಳು. ಕಾರಣ ಆಕೆಯ ದೃಷ್ಟಿಯಲ್ಲಿ ಇದೆಂಥಾ ಊಟ. ಬರೀ ಒಂದು ಹಿಡಿ ಅನ್ನ, ಎರಡ್ಮೂರು ಬಟಾಟೆ ಮತ್ತು ದಾಲ್ ಅರ್ಧ ಕಪ್ಪು. ನಾನು ಹಲ್ಕಿರಿಯುತ್ತಾ.. ಬರುತ್ತಿದ್ದೆ. ಕೆಲವೊಮ್ಮೆ ಆಗ ಷ್ಟೆ ಬೇಯಿಸಿಟ್ಟ ಕಳಲೆಯ ತುಂಡಿಗೆ ಉಪ್ಪು ಸವರಿಕೊಂಡು ತೆಗೆದುಕೊಳ್ಳುತ್ತಿದ್ದೆ. "ಈರೋಂಬಾ" ಎನ್ನುವ ಇನ್ನೊಂದು ಆಹಾರ ಮಣಿಪುರಿಗಳು ದಿನಪ್ರತಿ ಖುಶಿಯಿಂದ ಅನುಭವಿಸುವ ಆಹಾರವಾಗಿದೆ. ಇದೂ ಕೂಡಾ ಮೀನು ಮಾಂಸದ ಆಧಾರಿತ ಊಟವಾಗಿದ್ದರೆ ಇದರ ಜೊತೆಗೆ ಬಿದಿರಿನ ಕಳಲೆಯ ಕೋಲುಗಳನ್ನು ಬೇಯಿಸಿ ಕೆಲವೊಮ್ಮೆ ಉದ್ದನೆಯ ತುಂಡಿನಾಕಾರದಲ್ಲಿ ಬೇಯಿಸಿ ಬಳಸುವುದು ಸಾಮಾನ್ಯ. ಪ್ರಮೀಳೆಯರ ನಾಡಿನಲ್ಲಿ 162 ಮೀನು ಮತ್ತು ಈ ಕಳಲೆಯ ಕೋಲಿನ ಆಹಾರಕ್ಕೆ ಅದ್ಯಾವ ಪರಿಯಲ್ಲಿ ಬೇಡಿಕೆಯಿದೆಯೆಂದರೆ ಇದನ್ನು ತುಂಬಾ ಚೆಂದವಾಗಿ ನಿರ್ವಹಿಸುವ ಮನೆಯೊಡತಿಗೆ ವಿಶೇಷ ಪ್ರಾಧಾನ್ಯತೆ ಮಣಿಪುರಿಗಳಲ್ಲಿ. ನಾನು ಈ ಕಳಲೆಗಳನ್ನು ಮೀನಿನ ಬುಟ್ಟಿಗೆ ಸೇರಿಸುವ ಮೊದಲೆ ಕೈಗೆ ಎತ್ತಿಕೊಂಡು ಅದಕ್ಕೆ ಮಸಾಲೆ ಸೇರಿಸಿ ಪಲ್ಯ ಮಾಡಿಕೊಳ್ಳುತ್ತಿದ್ದರೆ ಸಸ್ಯಾಹಾರಿ ಪ್ರಾಣಿ ಎನ್ನುವಂತೆ ಆಕೆ ನೋಡುತ್ತಿದ್ದಳು. ಆದರೆ ಅಲ್ಲಿನ ಕಳಲೆಯ ರುಚಿ ಮತ್ತು ಅದರ ಸವಿಯೇ ಬೇರೆ. ಹೆಚ್ಚಿನ ಮಣಿಪುರಿಗಳು ಮಾಂಸಾಹಾರಿಗಳಾದರೂ ಇವರಲ್ಲಿ ಇರುವ ಬ್ರಾಹ್ಮಣ ಸಮುದಾಯ ಅಪ್ಪಟ ಸಸ್ಯಾಹಾರಿಗಳೇ. ಮುಸ್ಲಿಂ ಜನಾಂಗವನ್ನು "ಪಂಗಾನ್ಸ್" ಅಥವಾ "ಪಂಗಾಳ " ಎಂದು ಗುರುತಿಸುವ ಮಣಿಪುರಿಗಳಲ್ಲಿ ಸರ್ವ ರೀತಿಯ ಮಾಂಸಭಕ್ಷಕರೂ ಇದ್ದಾರೆ. ಅವರ ಆಹಾರ ಪದ್ಧತಿಯೂ ಬಹುಶ: ಅವರನ್ನು ಹೀಗೆ ಪ್ರತ್ಯೇಕ ಸಂಸ್ಕೃತಿಯ ಭಾಗವಾಗಿ ಗುರುತಿಸಲು ಕಾರಣವಾಗಿದ್ದು ಸುಳ್ಳಲ್ಲ. ಅವರ ಕಲೆ ಮತ್ತು ಸಂಗೀತವನ್ನು ಅವರು ಹಾಸುಹೊಕ್ಕಾಗಿ ಬಳಸಿರುವಷ್ಟು ಬಹುಶ: ಯಾವ ಮೂಲೆಯಲ್ಲೂ ಜೀವನ ಶೈಲಿಯಲ್ಲಿ ಬಳಸಿಕೊಂಡಿರಲಿಕ್ಕಿಲ್ಲ. ಹಾಗಾಗೇ ಅವರ ಶೈಲಿ ಮತ್ತು ಭಾಷೆ, ಮಣಿಪುರಿಗಳನ್ನು ಹಿಡಿದಿಟ್ಟಿರುವ ಪ್ರಮುಖ ಅಂಶವಾಗಿ ಗೋಚರಿಸುತ್ತದೆ. ಆದರೆ ಒಳಗೊಳಗೆ ಇರುವ ಹಲವು ಸಮುದಾಯ ಮತ್ತು ಸಂಪ್ರದಾಯದ ಪಂಗಡಗಳು ಆಚರಣೆಗಳು ತಂಡದಿಂದ ತಂಡಕ್ಕೆ ಭಿನ್ನವಾಗಿದ್ದು ಪ್ರತಿ ಬುಡಕಟ್ಟು ಮತ್ತು ಸಮುದಾಯ ತನ್ನದೇ ಆದ ಭಿನ್ನ ಭಿನ್ನ ಆಚರಣೆಗಳನ್ನು ಹೊಂದಿದ್ದು ಅತಿಥಿಗಳನ್ನು ಸತ್ಕರಿಸುವುದರಲ್ಲಿಯೂ ವಿಭಿನ್ನತೆಯನ್ನು ಹೊಂದಿದೆ. ಕೆಲವು ಬುಡಕಟ್ಟಿಗೆ ಅತಿಥಿ ದೇವರ ಸಮಾನವಾದರೆ, ಕೆಲವು ಸಮುದಾಯದಲ್ಲಿ ಅತಿಥಿಯನ್ನು ಸತ್ಕರಿಸುವ ಬದಲಿಗೆ, ಬಂದವರು ಸ್ವತ: ಅಡುಗೆ ಊಟ ಮಾಡಿಕೊಳ್ಳುವಂತೆ ಹೇಳುವಷ್ಟು ಓಲೈಸಲಾಗುತ್ತದೆ. ಇನ್ನು ಕೆಲವರು ಅತಿಥಿಗಳನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಏನಿದ್ದರೂ ಮನೆಯಾಚೆಯ ಚಿಕ್ಕ ಜಗುಲಿಯಂಥಹ ಕಟ್ಟೆ ಮತ್ತು ಅದರ ಕೋಣೆಯಲ್ಲೇ ಅತಿಥಿ ವಾಸಿಸಬೇಕು. 163 ಪ್ರಮೀಳೆಯರ ನಾಡಿನಲ್ಲಿ ಕಾರಣ ಅತಿಥಿ ಎಂದರೆ ಹೊರಗಿನಿಂದ ಬಂದವರು ಯಾವ ಮನಸ್ಸಿನ ಯಾವ ರೂಪದಲ್ಲಿ ಒಳಿತೋ ಕೆಡಕೋ ಗೊತ್ತಿಲ್ಲದಿರುವುದರಿಂದ ಅವರನ್ನು ಒಳಕ್ಕೆ ಸೇರಿಸುವುದಿಲ್ಲ ಎನ್ನುವುದೂ ಇದೆ. ರಿಸ್ಕ್ ಯಾಕೆ ಅಂತಾ ಇರಬಹುದಾ..? ಇನ್ನು ಕೆಲವು ಬುಡಕಟ್ಟಿನ ಸಂಪ್ರದಾಯದಲ್ಲಿ ಗೌರವ ಪೂರ್ವಕವಾಗಿ ಹೊದಿಸುವ ಶಾಲನ್ನು, ಚಳಿಗೆ ರಕ್ಷಣಾತ್ಮಕವಾಗಿ ಬಳಸಿದ ಕಾರಣ ಆ ದಿನದ ಮಟ್ಟಿಗೆ ಪೂರ್ತಿ ಊರಲ್ಲೆ ನನಗೆ ಊಟಕ್ಕೆ ನೀಡಲಿಲ್ಲ. ರಾತ್ರೋರಾತ್ರಿ ನಾನು ಗಾಡಿಯೇರಿ ಪಕ್ಕದೂರಿಗೆ ದೌಡಾಯಿಸಿದ್ದೆ (ಅಲ್ಲಿಂದ ಹದಿನೈದು ಕಿ.ಮೀ. ದೂರದ "ಕೌಲಿಂಗ್" ಗೆ ಬಂದು ವಾಸ್ತವ್ಯ ಹೂಡಿದ್ದೆ.) ಮಣಿಪುರಿಗಳ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಇನ್ನಾಪಿಗಳೆಂದು (ಅಪ್ಪಟ ಸಾಂಪ್ರದಾಯಿಕ ಶೈಲಿಯ ಮಹಿಳೆ) ಕರೆದರೆ ಆಕೆ ಅಪ್ಪಟ ಮಣಿಪುರಿ ಶೈಲಿಯಲ್ಲೇ ಇದ್ದಾಳೆಂದು ತಿಳಿಯಬಹುದು. ಮೂಲತ: ಹೀಗೆ ಗುರುತಿಸಲ್ಪಡುವ ಮಹಿಳೆಯರು ಸ್ಕರ್ಟ್, ಮೇಲ್ಗಡೆ ತಮ್ಮದೇ ಹೆಣಿಗೆಯ ಅಪ್ಪಟ ಮಣಿಪುರಿ ಶಾಲು ಹೊದೆದು ಇರುವ ಉಡಿಗೆ ತೊಡಿಗೆಯನ್ನು ಬಳಸುತ್ತಾರೆ. ಇದರಲ್ಲಿ ಕೆಂಪು ಬಣ್ಣಕ್ಕೆ ಹೆಚ್ಚಿನ ಪಾಲು ಸಲ್ಲುತ್ತದೆ. ಇದರಿಂದ ಅಪ್ಪಟ ಮಿಥೀಸ್‍ಗಳ ಡ್ರೆಸ್‍ಕೋಡ್ ಕಾಣಿಸುವುದರಿಂದ ಅವರಿಗೆ ಇನ್ನಾದೆಳೆಂದು ಕರೆಯುತ್ತಾರೆ. ಸಾಕಷ್ಟು ಬುಡಕಟ್ಟುಗಳಿದ್ದರೂ ಒಳಗೊಳಗೇ ದ್ವೇಷ ಸಾಧನೆ ಅಥವಾ ವೈಮನಸ್ಸು ಅಷ್ಟಾಗಿ ಇಲ್ಲ. ಆದರೂ ಒಬ್ಬರನ್ನೊಬ್ಬರು ಸೇರಿಸುವುದೂ ಇಲ್ಲ. ಹೊರಗಿನವರೊಂದಿಗೆ ವಿರುದ್ಧವಾಗುವಾಗ ಮಾತ್ರ ಅಪ್ಪಟ ಒಗ್ಗಟ್ಟು ಕಾಣಿಸುವುದು ಸಹಜ. ಒಳಗೆ ಭಿನ್ನಾಭಿಪ್ರಾಯ ಇದ್ದರೂ ಅಷ್ಟಾಗಿ ಬಹಿರಂಗವಾಗಿ ತೋರ್ಪಡಿಸುವುದೂ ಕಡಿಮೆಯೇ. ಆಚರಣೆ ಭಿನ್ನಭಿನ್ನವಾಗಿದ್ದರೂ ಒಬ್ಬರನ್ನೊಬ್ಬರು ದ್ವೇಷಿಸುವ ಮನೋಭಾವನೆ ಕಂಡುಬರುವುದಿಲ್ಲ. ಪರ್ವತ ಪ್ರದೇಶದಲ್ಲಿ ವಾಸಿಸುವ ಮಿಥೀಸ್ ಮತ್ತು ಥಾಂಖುಲ್ಸ್‌ ಹೆಚ್ಚು ಕಡಿಮೆ ಒಂದೇ ರೀತಿಯ ಆಚರಣೆಯಲ್ಲಿ ಕಾಣಿಸುತ್ತಾರೆ. ಈ ಎರಡೂ ಪಂಗಡಗಳು ಸಾಮಾನ್ಯವಾಗಿ ಹೆಚ್ಚು ಸ್ನೇಹಮಯಿಯಾಗಿಯೂ ಅತಿಥಿಗಳನ್ನು ಪ್ರೀತಿಯಿಂದ ಸತ್ಕರಿಸುವಲ್ಲಿ ಸಮ ಸಮವಾಗಿದ್ದಾರೆ. ಪ್ರಮೀಳೆಯರ ನಾಡಿನಲ್ಲಿ 164 ಈ ಎರಡೂ ಪಂಗಡ ಅಥವಾ ಬುಡಕಟ್ಟುಗಳು ಸ್ವಭಾವತ: ಸಾಹಸಜನ್ಯ ಗುಣಗಳನ್ನು ಹೊಂದಿದ್ದು ತರಹೇವಾರಿ ಸ್ಪರ್ಧಾತ್ಮಕ ಕ್ರಿಡೆಗಳಲ್ಲಿ ಭಾಗವಹಿಸಲೆತ್ನಿಸುತ್ತಾರೆ. ಪೊಲೊ ಕ್ರೀಡೆ ಇವರ ಪ್ರಿಯ ಆಟವಾಗಿದ್ದು ಈ ಎಲ್ಲಾ ಸಮುದಾಯದಲ್ಲಿ ಮಹಿಳೆಗೆ ಹೆಚ್ಚಿನ ಪ್ರಾಶಸ್ತ್ಯ ಮತ್ತು ಪ್ರಾಧಾನ್ಯತೆ ಕಂಡು ಬರುತ್ತದೆ. ಸುಂದರ ಬಣ್ಣದ ಕೊಂಚ ಕುಳ್ಳಗಿನ ಮಹಿಳೆಯರು ಆಕರ್ಷಣೀಯ ವ್ಯಕ್ತಿತ್ವದವರು ಆದರೆ ಪುರುಷರು ಬಲಶಾಲಿಗಳು, ಸಾಕಷ್ಟು ದೈಹಿಕವಾಗಿ ಗುರುತರ ಕಾಯದವರಾಗಿದ್ದಾರೆ. ಪರ್ವತ ಪ್ರದೇಶದಲ್ಲಿ ಕಠಿಣವಾದ ಬದುಕಿಗೆ ಒಡ್ಡಿಕೊಳ್ಳಬೇಕಾಗುವುದರಿಂದ ಸಹಜವಾಗೇ ಪುರುಷರು ಇಂಥಾ ದೈಹಿಕ ಕಾಯಕ್ಕೆ ಪಕ್ಕಾಗುತ್ತಾರೆ. ಇದು ಇಲ್ಲಿನ ಬುಡಕಟ್ಟುಗಳ ಸಹಜ ದೇಹಾಕೃತಿಯಾಗಿದ್ದು, ಮೊಂಗಾಲ್‍ಗಳೂ ಕೂಡಾ ಇದೇ ರೀತಿಯ ದೈಹಿಕ ಕ್ಷಮತೆ ಹೊಂದಿದ್ದಾರೆ (ಬಹುಶ: ಮಂಗೊಲಿಯನ್ ಬುಡಕಟ್ಟು ಮತ್ತು ಅವರ ಪ್ರಭಾವ ಮುಂದಿನ ಜನಾಂಗದ ಮೇಲೂ ಸಂಸ್ಕೃತಿಯ ಮೇಲೂ ಪ್ರಭಾವ ಬೀರಿರಬೇಕು). ಸುಂದರ ಮತ್ತು ಸಹಜ ಸೌಂದರ್ಯ ಮಣಿಪುರಿ ಮಹಿಳೆಯರ ಸೊತ್ತು. ಕೆಂಪು ಕೆಂಪಗಿನ ಸ್ತ್ರೀಯರ ಬಣ್ಣ ಮತ್ತು ದೇಹಾಕೃತಿ ಅವರನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ. ಅದರ ಜೊತೆಗೆ ಮಣಿಪುರಿ ಶೈಲಿಯ ಮಹಿಳೆಯರ ಆಭರಣ ಅವರನ್ನು ಪ್ರತ್ಯೇಕವಾಗಿಸುತ್ತದೆ. ಪ್ರತಿಯೊಬ್ಬ ಮಹಿಳೆಯೂ ಆಭರಣದ ಜೊತೆಗೆ ಸಾಕಷ್ಟು ಸಾಂಪ್ರದಾಯಿಕ ಉಡುಪಿನತ್ತಲೇ ಗಮನಹರಿಸುವ ಆಕರ್ಷಣೆ ಬೆರಗನ್ನುಂಟು ಮಾಡುತ್ತದೆ. ಇವೆಲ್ಲ ಸಾಮಾನ್ಯ ಮಣಿಪುರಿಗಳಾದರೆ, ಮೀಥೀಸ್‍ಗಳಾದರೆ, ನಾಗಾಲ್ಯಾಂಡ್‍ನಿಂದ ವಲಸೆ ಬಂದು ಮಣಿಪುರಿಗಳಾಗಿರುವ ಒಂದು ಬುಡಕಟ್ಟು "ಕುಕಿ" ಗಳದ್ದು. ಥಾಂಖುಲ್ಸ್‌ ಮತ್ತು ಕುಕಿಗಳು ಹೆಚ್ಚಾಗಿ "ಉಖ್ರುಲ್" ಜಿಲ್ಲೆಯನ್ನು ಆಕ್ರಮಿಸಿಕೊಂಡಿದ್ದು ಅಲ್ಲಿ ಅವರದೇ ಅಧಿಪತ್ಯ ನಡೆಯುತ್ತಿದೆ. ಸ್ಥಳೀಯವಾಗಿ ಇವರನ್ನು "ಹಾಯೋ" ಎಂದು ಕರೆಯಲಾಗುತ್ತಿದೆ. 165 ಪ್ರಮೀಳೆಯರ ನಾಡಿನಲ್ಲಿ ಇವರುಗಳಲ್ಲಿ ಹೆಚ್ಚಿನವರು ಕೈಗಾರಿಕೀಕರಣದತ್ತ ಒಲವನ್ನು ತೋರುತ್ತಿದ್ದು, ಮಕ್ಕಳಲ್ಲಿ ಹೆಚ್ಚಿನವರು ಇಂಗ್ಲಿಷು ಮತ್ತು ಇತರೆ ಭಾಷೆಗಳಲ್ಲಿ ಪ್ರಾವೀಣ್ಯತೆ ಸಾಧಿಸುತ್ತಿದ್ದಾರೆ. ಹೆಚ್ಚಿನಂಶ ಎಲ್ಲಾ "ಥಾಂಗ್ಖುಲ್ಸ್‌"ಗಳು ವಿದ್ಯಾರ್ಜನೆಯತ್ತ ಆಸಕ್ತಿ ತೋರಿದ್ದು ಇವರಲ್ಲಿ ಸಾಕ್ಷರತೆಯ ಪ್ರಮಾಣ ಶೇ. 96ರಷ್ಟಿದೆ. ಈಶಾನ್ಯ ಭಾರತದಲ್ಲಿ ಈ ಬುಡಕಟ್ಟು ತುಂಬಾ ಚೆಂದದ ಜೀವನ ಶೈಲಿಗೆ ಹೆಸರಾಗಿದ್ದು ಸಾಕಷ್ಟು ಕೃಷಿ ಪ್ರಧಾನ ಜೀವನವನ್ನು ನಡೆಸುತ್ತಿದ್ದಾರೆ. ಕಂಡಲ್ಲಿ ಗದ್ದೆಗಳ ತೋಟದ ಪಕ್ಕದಲ್ಲಿ ಕ್ಯಾಮೆರಾ ಹಿಡಿದು ಇವರ ಚಿತ್ರಗಳಿಗೆ ನಿಲ್ಲುತ್ತಿದ್ದ ನನ್ನನ್ನು ಮೊದಮೊದಲು ಪುಟ್ಟ ಪುಟ್ಟ ಹುಬ್ಬೇರಿಸಿಕೊಂಡು ದುರುದುರುನೆ ದಿಟ್ಟಿಸುತ್ತಾ ಬರುತ್ತಿದ್ದವರು ನನ್ನ ಚಹರೆಯಿಂದಾಗಿ ಇವ ಹೊರಗಿನ ಪ್ರಾಣಿ ಎಂದು ಹಲ್ಕಿರಿದು ಪೋಸು ಕೊಡುತ್ತಿದ್ದರು. ನಾನು ಟೈಮರ್ ಇಟ್ಟು ನಿಶ್ಚಿಂತೆಯಿಂದ ಹೋಗಿ ನಿಲ್ಲುತ್ತಿದ್ದೆ. ಕಾರಣ ಸ್ವತ: ಸ್ಥಳೀಯನಾದರೆ ಹಲವು ಪ್ರಶ್ನೆಗಳಿಗೆ ಈಡುಮಾಡುವ ಜನರು ಹೊರಗಿನವನಾದ ನನ್ನ ಮೇಲೆ ಅಷ್ಟಾಗಿ ಸಂದೇಹಿಸುತ್ತಿರಲಿಲ್ಲ. ಇದು ಇಲ್ಲಿನ ಸ್ಥಳೀಯ ಮಣಿಪುರಿ ಪೊಲೀಸ್ ಮತ್ತು ಅಸ್ಸಾಂ ರೈಫಲ್ಸ್‌ಗಳಲ್ಲೂ ಕಾಣಿಸುತ್ತಿದ್ದ ಸಾಮಾನ್ಯ ಸಂಗತಿ. ಕಾರಣ ಎಲ್ಲೆಲ್ಲೊ ಇರುವ ಅಸ್ಸಾಂ ರೈಫಲ್ಸ್‌ ಅಷ್ಟಾಗಿ ಹೊರಗಿನಿಂದ ಬಂದವರ ಮೇಲೆ ಸಂದೇಹಿಸಿದ್ದು ಕಾಣಿಸಲಿಲ್ಲ. ಮೈಬಾ ಅಥವಾ ಮೈಬಾಯಿಸಂ : ಮೈಬಾ ಅಥವಾ ಮೈಬಾಯಿಸಂ ಎಂದು ಕರೆಯಲ್ಪಡುವ ಪುರೋಹಿತ ವೃತ್ತಿ ಮಣಿಪುರಗಳಲ್ಲಿ ತುಂಬಾ ವಿಶಿಷ್ಟ ಜೀವನ ಶೈಲಿ ಮತ್ತು ಪಂಗಡವಾಗಿದೆ. ಮೈಬಾಗಳೆಂದರೆ ಪಂಡಿತರು ಅಥವಾ ಶಾಸ್ತ್ರೋಕ್ತ ಸಂಪನ್ನರು. ಹೆಚ್ಚಿನಂಶ ಎಲ್ಲರೂ ಪೌರೋಹಿತ್ಯ ಮಾಡಿಕೊಳ್ಳುವವರೇ ಇದ್ದು ಮೈಬಾಗಳಲ್ಲಿ ಎರಡು ಪಂಗಡಗಳಿವೆ. ಮೊದಲನೆಯವರನ್ನು ಪಂಡಿತರ ಮೂಲಕ ಗುರುತಿಸಿದರೆ ಎರಡನೆಯ ಪಂಗಡವನ್ನು "ವೈದಾ" ಎಂದು ಕರೆಯುತ್ತಾರೆ. ಸಾಮಾಜಿಕವಾಗಿ ಈ ಎರಡೂ ಪಂಗಡಗಳಿಗೆ ಉನ್ನತ ಸ್ಥಾನ ಲಭ್ಯವಿದ್ದು ಪ್ರತಿ ಬುಡಕಟ್ಟಿನಲ್ಲೂ ಕೆಲವೊಮ್ಮೆ ನಿರ್ದಿಷ್ಟ ಬುಡಕಟ್ಟಿನ ಜನರು ಇನ್ಯಾವುದೋ ಮೈಬಾಗಳನ್ನೇ ಆದರಿಸುವುದೂ ಇದೆ. ಪ್ರಮೀಳೆಯರ ನಾಡಿನಲ್ಲಿ 166 ಇವರಲ್ಲಿ ಒಂದು ಪಂಗಡ ಕೇವಲ ಶಾಸ್ತ್ರೋಕ್ತ ಮಂತ್ರ ಪಠಣ ಮತ್ತು ವಿಧಿ ವಿಧಾನದ ಹಾದಿಯಲ್ಲಿ ಸಾಗುತ್ತಿದ್ದರೆ ಇನ್ನೊಂದು ಪಂಗಡ ಕೇವಲ ಕರ್ಮ ಮತ್ತು ಕ್ರಿಯೆಗಳಂತಹ ಕಾಯಕದಲ್ಲಿ ಸಿದ್ಧಹಸ್ತರು. ಹೀಗಾಗಿ ಮೈಬಾಗಳಲ್ಲಿ ಎರಡೂ ಪಂಗಡಗಳಿಗೆ ಸಾಕಷ್ಟು ಶ್ರೇಯಸ್ಸೂ ಮತ್ತು ಆದರಣೆಯನ್ನೂ ಪ್ರತಿ ಸಮುದಾಯದವರು ಸಲ್ಲಿಸುತ್ತಾರೆ. ಮೈಬಾ ಸಮುದಾಯ ಅಥವಾ ಪಾಲಿಸುತ್ತಿರುವ ಪಂಗಡಗಳು ಅಚ್ಚಬಿಳಿ ಮತ್ತು ಕೇಸರಿಯ ಬಟ್ಟೆಯನ್ನ ಷ್ಟೆ ತೊಡುತ್ತಿದ್ದು ಯಾವುದೇ ಆಧುನಿಕತೆಯ ತೊಡುಗೆಗಳಿಗೆ ಇವತ್ತಿಗೂ ಮಾರುಹೋಗಿಲ್ಲ. ತಲೆಗೆ ಅಚ್ಚ ಬಿಳಿಯ ಮುಗುಟ ಅಥವಾ ಅಪ್ಪಟ ಕೇಸರಿ ತೊಡುವ ಮೈಬಾಗಳಿಗೆ, ಮಣಿಪುರಿ ಶಾಲನ್ನು ಬಿಟ್ಟರೆ ಬೇರೆ ಯಾವುದೇ ಉಡುಗೆಗೆ ಮಾರುಹೋಗದ ಮೈಬಾಗಳ ಪುರೋಹಿತ್ಯಕ್ಕೆ ಸಂಬಂಧಿಸಿದಂತೆ ಇವತ್ತಿಗೂ ಯಾವುದೇ ತಕರಾರು ಕಾಣಿಸಿದ್ದಿಲ್ಲ. ಹಾಗಾಗಿ ಮೈಬಾಗಳು ಕೂಡಾ ಅಷ್ಟೇ ನಿಷ್ಠರಾಗಿ ತಂತಮ್ಮ ಸಮುದಾಯ ಪಂಗಡಗಳ ಅಗತ್ಯಬಿದ್ದಾಗ ಇನ್ನಾವುದೇ ಮಣಿಪುರಿ ಅಥವಾ ಮಿಥೀಸ್‍ಗಳ ಪಂಗಡಕ್ಕೆ ಸಲ್ಲುವಂತೆ ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮಿಥೀಸ್‍ಗಳೂ ಕೂಡಾ ಈ ಮೈಬಾಗಳಿಂದ ಬಹಳಷ್ಟು ನಿರೀಕ್ಷೆಯನ್ನಿರಿಸುತ್ತಾರೆ. ಅವರ ಪ್ರಕಾರ ಹೊಸದಾಗಿ ಮಗು ಹುಟ್ಟಿದ ಮನೆಗೆ ಮೈಬಾಗಳು ಹೋಗುವುದಾಗಲಿ ಅಲ್ಲಿ ತಿಂಡಿ ತೀರ್ಥ ಸೇವಿಸುವುದಾಗಲಿ ಮಾಡುವಂತಿಲ್ಲ. ನಿ ಷಾ ್ಠವಂತ ಮೈಬಾಗಳು ಇದೆಲ್ಲಕ್ಕೂ ಪಕ್ಕಾಗಿರುವುದು ಕಾಣಿಸುತ್ತದೆ. ನಾನೇ ನೋಡಿದಂತೆ ಫೆಬ್ರವರಿ ತಿಂಗಳ ಆಚರಣೆಯಲ್ಲಿ ಮೈಬಾಗಳ ಪ್ರಮುಖ ಪಾತ್ರದ ಬಗ್ಗೆ ಇದ್ದ ಅವರ ಶ್ರದ್ಧೆ ಬಹುಶ: ಇವತ್ತು ಅವರನ್ನು ಮಿಥೀಸ್‍ಗಳು ಆ ಮಟ್ಟದ ಭಕ್ತಿಯಿಂದ ಆದರಿಸಲು ಕಾರಣವಾಗಿರಬಹುದು. ಊರಲ್ಲೆಲ್ಲ ಅದರಲ್ಲೂ ಹಳ್ಳಿಗಳ ಕಡೆಯಲ್ಲಿ ನಡೆಯುತ್ತಿದ್ದ ಅವರ "ಚೋಲಾ ರುಸಂ" ಹಬ್ಬದ ಪ್ರಕಾರ ಊರ ಕೆಲವು ಹೆಂಗಸರು ಮತ್ತು ಗಂಡಸರು ಉಡಿ ತುಂಬುವ ಸಾಮಾನಿನಂತೆ ನಿಗೆ ಸೊಪ್ಪಿನ ಉಡಿಯನ್ನು ಮಾಡಿಕೊಂಡು, ರಸ್ತೆಯ ಮೇಲೆ ದೇವರನ್ನು ಆದರಿಸಿ ಬಾಗಿನ ಕೊಟ್ಟಂತೆ ಮಾಡುವ ಸಂಪ್ರದಾಯದಲ್ಲಿ ಮೈಬಾಗಳು ಪ್ರಮುಖ ಸ್ಥಾನವನ್ನು ಅಲಂಕರಿಸುತ್ತಾರೆ. 167 ಪ್ರಮೀಳೆಯರ ನಾಡಿನಲ್ಲಿ ನಿಗದಿತ ದಿನ ಮತ್ತು ಸ್ಥಳ ಆಯ್ಕೆ ಮಾಡಿ, ಬೆಳಗ್ಗೆ ಸ್ನಾನ ಮುಗಿಸಿ, ಉಪವಾಸ ಇದ್ದು ಅಲ್ಲಿಗೆ ಬಂದು ದೇವರಿಗೆ ಅರ್ಪಿಸುವ ಉಡಿಯನ್ನು ಸ್ವೀಕರಿಸುವ ಮೂಲಕ ಕುಟುಂಬಗಳ ಶ್ರೇಯಸ್ಸಿಗೆ ಹಾರೈಸುತ್ತಾರೆ. ಅಲ್ಲದೇ ಶುದ್ಧ ಮನಸ್ಸಿನಿಂದ ಮೈಬಾಗಳು ಮಾಡುವ ಕಾಯಕದಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಅವರ ನಂಬಿಕೆಯೂ ಹಾಗೆಯೇ ನಡೆದದ್ದದ್ದಿದೆ. (ಹೆಚ್ಚಿನ ಊರುಗಳಲ್ಲಿ ಇಲ್ಲಿನ ಪದ್ಧತಿಗೆ ಯಾರಿಗೂ ವಿನಾಯಿತಿ ದೊರೆಯುವುದಿಲ್ಲವಾದರೂ, ಮೈಬಾಗಳಿಗೆ ಇದರಿಂದ ವಿನಾಯಿತಿ ಇದೆ. ಉದಾ. ಹಳ್ಳಿಯೊಂದರಲ್ಲಿ ಆ ಊರಿನ ಮುಖ್ಯಸ್ಥ ಆವತ್ತು ಊರ ಜನರಿಗೆಲ್ಲಾ ಪದ್ಧತಿಯ ಪ್ರಕಾರ ಮಾಂಸದಡುಗೆಯ ವ್ಯವಸ್ಥೆ ಇದೆ ಎಂದಾದಲ್ಲಿ ಯಾರೂ ಅದನ್ನು ಪ್ರಶ್ನಿಸದೆ, ಯಾವ ಮಾಂಸ ಎಂದೂ ಕೇಳದೇ ಅನುಸರಿಸುತ್ತಾರೆ. ನಡು ಮಧ್ಯಾಹ್ನ ಉಂಡೆದ್ದು ಬರುತ್ತಾರೆ. ಆದರೆ ಮೈಬಾಗಳು ಇದಕ್ಕೆ ಹೊರತಾಗಿರುತ್ತಾರೆ. ಇದರ ಸಂಪೂರ್ಣ ವಿವರಣೆ ಹಳ್ಳಿಯೊಂದರ ಬಗ್ಗೆ ಮುಂದಕ್ಕೆ ಬರುತ್ತದೆ. ಅದು "ನಾಂದ್ರೆಥೋಪಾಲ್" ಎನ್ನುವ ಹಳ್ಳಿ. ತೆಮೇನ್‍ಗ್ಲಾಂಗ್ ಜಿಲ್ಲೆಯಲ್ಲಿದೆ. ಇಲ್ಲಿಗೆ ಹೆಚ್ಚಿನಂಶ ಇಲ್ಲಿಯವರೆಗೂ ಬೆರಳೆಣಿಕೆಯಷ್ಟು ಜನ ಮಾತ್ರವೇ ಭೇಟಿಕೊಟ್ಟಿದ್ದಾರೆ. ಸರಕಾರಿ ವ್ಯವಹಾರಗಳಿಗೂ ಇಲ್ಲಿಗೂ ಸಂಬಂಧ ಇಲ್ಲವೇ ಇಲ್ಲ - ಲೇಖಕ). ಅಷ್ಟಲ್ಲದೆ ಮದುವೆಯಾದ ಹುಡುಗಿ ಮೈಬಾಗಳಲ್ಲಿ ಯಾವತ್ತೂ ಗಂಡನ ಎಡ ಮಗ್ಗುಲಿಗೆ ಮಲುಗುತ್ತಾಳೆ. ಸಾವಿನ ನಂತರದ ದಿನದಲ್ಲಿ ಈ ಮೈಬಾಗಳು ಪ್ರವೇಶಿಸಿದರೇನೆ ಆ ಮನೆಯ ಮೈಲಿಗೆ ಕಳೆಯುತ್ತದೆ. ಅದಕ್ಕಾಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಅವರೇ ಮಾಡಬೇಕು. ಹೀಗೆ ಹಲವು ನಂಬಿಕೆ ಮತ್ತು ಆಚರಣೆಗಳು ಮಿಥೀಸ್‍ಗಳ ಜೀವನದಲ್ಲಿ ಮೈಬಾಗಳೊಂದಿಗೆ ತಳುಕು ಹಾಕಿಕೊಂಡಿದೆ. ಮಣಿಪುರ್ ಅಥವಾ ಮಿಥೀಸ್‍ಗಳ ಯಾವುದೇ ಪೂಜೆ, ಪುನಸ್ಕಾರ ಅಥವಾ ಧಾರ್ಮಿಕ ಕಾರ್ಯಾಚರಣೆ ಇತ್ಯಾದಿಗಳು ಮೈಬಾಗಳಿಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಅವರಿಲ್ಲದೆ ನೇರವೇರಿಸುವ ಯಾವುದೇ ಧಾರ್ಮಿಕ ಕಾರ್ಯದ ಪುಣ್ಯ ತಮಗೆ ಸಿಕ್ಕುವುದಿಲ್ಲ ಎಂದೆ ಮೈಬಾಗಳ ಬಗ್ಗೆ ಭಕ್ತಿ ಶ್ರದ್ಧೆ ಇರಿಸಿಕೊಂಡಿರುವವರ ನಂಬಿಕೆ, ಭಕ್ತಿ ಕೂಡಾ. ಕಾರಣ ಮೈಬಾಗಳು ನಡೆಸುವ ಪ್ರಮೀಳೆಯರ ನಾಡಿನಲ್ಲಿ 168 ಧಾರ್ಮಿಕ ಕಾರ್ಯಚರಣೆಯಿಂದ ಸಮುದಾಯದ ಅಥವಾ ಬುಡಕಟ್ಟಿನ ಸಂಪೂರ್ಣ ಅಭಿವೃದ್ಧಿಗೆ ಪೂರಕ ಮತ್ತು ಯಾವುದೇ ಕೆಟ್ಟ ದೃಷ್ಟಿ ಅಥವಾ ಮಾರಕ ಶಕ್ತಿಗಳ ಪರಿಣಾಮ ತಮ್ಮ ಮೇಲಾಗುವುದಿಲ್ಲ ಎನ್ನುವುದನ್ನು ಸಮುದಾಯಗಳು ನಂಬುತ್ತವೆ. ಮುಖ್ಯವಾಗಿ ಕುಕಿ ಮತ್ತು ಮಿಥೀಸ್‍ಗಳ ಒಳ ಸಮುದಾಯಗಳು. ಹೆಚ್ಚಿನ ಆಂತರಿಕ ಒಳನಾಡು ಪ್ರದೇಶಗಳಲ್ಲಿ ಆಧುನಿಕತೆಯ ಸೋಂಕಿಲ್ಲದ, ವೈದ್ಯಕೀಯ ಮತ್ತು ಇತರೆ ಸೇವೆಗಳು ಸುಲಭಕ್ಕೆ ಲಭ್ಯವಾಗದ ಸಂಪ್ರದಾಯ ಬದ್ಧ ಕುಕಿ ಮತ್ತು ನಾಗಾ ಬುಡಕಟ್ಟುಗಳಿಗೆ ಮೈಬಾಗಳೆಂದರೆ ಪ್ರತ್ಯಕ್ಷ ದೇವರಿದ್ದಂತೆ. ಕಾರಣ ಈ ಮೈಬಾಗಳು ಕೇವಲ ದೇವರ ಅರ್ಚನೆ ಮತ್ತು ಶಾಸ್ತ್ರೋಕ್ತ ಪೂಜೆಯಲ್ಲದೆ ಅಗತ್ಯಕ್ಕೆ ತಕ್ಕಷ್ಟು ನಾರುಬೇರಿನ ಔಷಧವನ್ನೂ ಬಲ್ಲವರಿದ್ದು ಅಗತ್ಯಬಿದ್ದಾಗ ಸ್ವತ: ಔಷಧಿಯ ಸೇವೆಯನ್ನೂ ನೀಡುತ್ತಾರೆ. ಈಗೀಗ ಇದರಲ್ಲಿ ಓದಿದವರೂ ಕೂಡಾ ಕುಟುಂಬ ಪದ್ಧತಿಯನ್ನು ಮುಂದುವರೆಸುತ್ತಿದ್ದವರು ಸಾಕಷ್ಟು ಇಂಗ್ಲಿ ಷ ಔಷಧಿಯನ್ನೂ ಬಳಸುತ್ತಿದ್ದಾರೆ. ಹಾಗಾಗಿ ಮೈಬಾಗಳು ಹೋಗುವಾಗ ಸಾಮಾನ್ಯವಾಗಿ ಬೇರು-ನಾರುಗಳ ಗಂಟೊಂದನ್ನು, ಒಂದಿಷ್ಟು ಔಷಧಿಯ ಸಾಮಗ್ರಿಗಳನ್ನೂ ತಮ್ಮೊಂದಿಗೆ ಒಯ್ಯುವುದು ಸಾಮಾನ್ಯ. ಹಾಗಾಗೇ ಈ ಮೈಬಾಗಳನ್ನು ಬುಡಕಟ್ಟುಗಳು ತಮ್ಮ ಪ್ರಾಣ ಕೊಟ್ಟಾದರೂ ರಕ್ಷಣೆ ಮತ್ತು ಸೇವೆಗೆ ಬದ್ಧರಾಗಿರುವುದು ಮಿಥಿಸ್‍ಗಳ ಇತಿಹಾಸ ಮತ್ತು ವಾಸ್ತವದಲ್ಲೂ ಕಂಡು ಬರುವ ಸತ್ಯ. ಕಾರಣ ಹೆಚ್ಚಿನ ಪಂಡಿತರಿಗೆ ಈ ಸಮುದಾಯದವರೇ ಶ್ರೀರಕ್ಷೆ. ಯಾವುದೇ ನೈಸರ್‌ಗಿಕ ಮತ್ತು ಇತರೆ ಆಪತ್ತುಗಳಿರಲಿ ತಮ್ಮ ಜೀವದ ಹಂಗು ತೊರೆದು ಇವರ ರಕ್ಷಣೆಗೆ ಧಾವಿಸುವ ಸಮುದಾಯದ ಜನರೊಂದಿಗೆ, ಇವರೂ ಒಳ್ಳೆಯ ಸಂಬಂಧವನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಇಂಥಾ ಒಳನಾಡುಗಳಲ್ಲಿ ಈ ಅವಲಂಬನೆ ಮತ್ತು ಸಂಬಂಧ ಅನಿವಾರ್ಯ ಕೂಡಾ. ಹಾಗೆ ನೋಡಿದರೆ ಹಿಂದೂ ಸಂಸ್ಕೃತಿಯ ಪ್ರಭಾವ ಅಥವಾ ಹಣದಾಸೆಗಾಗಿ ಇತರೆ ಧರ್ಮಕ್ಕೆ ವಲಸೆ ಹೋಗುವುದಾಗಲಿ, ಮತಾಂತರ ಹೊಂದುವುದಾಗಲಿ ಮಾಡಿದ್ದು ಅಷ್ಟಾಗಿ ಮಿಥೀಸ್‍ಗಳಲ್ಲಿ ಕಂಡುಬರುವುದಿಲ್ಲ. 169 ಪ್ರಮೀಳೆಯರ ನಾಡಿನಲ್ಲಿ ಹಾಗಾಗಿ ಸಂಪೂರ್ಣ ರಾಜ್ಯ ಅಪ್ಪಟ ಮಣಿಪುರಿ ಸಂಸ್ಕೃತಿಗೆ ಈಡಾಗಿದ್ದು ಕಾಣಿಸುತ್ತದೆ. ಇತಿಹಾಸವನ್ನು ಗಮನಿಸಿದಾಗ ಹಿಂದೂ ಸಂಸ್ಕೃತಿಯ ವಲಸೆ ಇಲ್ಲಿಗೆ ತಲುಪಿದ್ದೇ ತಡವಾಗಿ ಎನ್ನಿಸುತ್ತಿದೆ. ಕಾರಣ ಭೌಗೋಳಿಕವಾಗಿಯೂ ಮಣಿಪುರ ಕೊಂಚ ದೂರವೇ ಇದ್ದುದರಿಂದಲೂ ಇದಾಗಿರಬೇಕೆಂದು ತರ್ಕಿಸುತ್ತಾರೆ. ಆದರೆ ಒಮ್ಮೆ ಬಂದ ಹಿಂದೂ ಧರ್ಮ ನಂತರದಲ್ಲಿ ತನ್ನ ಹಿಡಿತವನ್ನು ಸಾಧಿಸಿದ್ದು ಕಾಣಿಸುತ್ತದೆ. ಹಾಗಾಗಿ 15ನೆಯ ಶತಮಾನದ ಆರಂಭದಲ್ಲಿ ಇಲ್ಲಿನ ರಾಜ "ಚರೈರಂಗೋಬಾ"ನ ಕಾಲದಲ್ಲಿ ಹಿಂದೂ ಸಂಸ್ಕೃತಿ ಇಲ್ಲಿಗೆ ಪರಿಚಯಿಸಲ್ಪಟ್ಟಿದ್ದು ತದನಂತರದಲ್ಲಿ ಸಾಕಷ್ಟು ಮಣಿಪುರಿ ಸಂಸ್ಕೃತಿಯೊಂದಿಗೆ ಅದು ಮೇಳೈಸಿದ್ದು ಕಾಣಿಸುತ್ತದೆ. ಆ ನಂತರದಲ್ಲಿ ಗುರು "ಅರಿಬೋಮ್" ಇದನ್ನು ಅನಾಮತ್ತಾಗಿ ಆವಾಹಿಸಿಕೊಂಡದ್ದನ್ನು ಇತಿಹಾಸ ಪುಷ್ಠೀಕರಿಸುತ್ತದೆ. ಇದರಿಂದಾಗಿ ಹಿಂದೂ ಸಂಸ್ಕೃತಿಯ ಸಾಕಷ್ಟು ಅಚರಣೆಗಳು ಮಿಥೀಸ್‍ಗಳ ಜೀವನ ಭಾಗದಲ್ಲಿ ಸೇರಿಹೋದವು (ನಮ್ಮಲ್ಲಿ ಹೆಣ್ಣು ಮಕ್ಕಳು ಮನೆಗೆ ಬರುವ ನಾಗರ ಪಂಚಮಿ ಮತ್ತು ದೀಪಾವಳಿ ಹಬ್ಬದ ಮಿಶ್ರಣ ಅಲ್ಲಿ "ನಿಂಗೋಲ ಚಾಕೌಬ್" ಎಂದಾಗಿದೆ). ಇದಾದ ನಂತರದಲ್ಲಿ 18ನೇ ಶತಮಾನದಲ್ಲಿ ವೈಷ್ಣವರ ಧಾರ್ಮಿಕ ಸಮ್ಮೀಳಿತನ ನಡೆದದ್ದು ಆಗ "ಗರೀಬ್ ನವಾಝ್" ಇಲ್ಲಿ ರಾಜಾಳ್ವಿಕೆ ಮಾಡುತ್ತಿದ್ದ. ವೈಷ್ಣವರ ಆಗುಹೋಗು ಮತ್ತು ಸಂಸ್ಕಾರಗಳು ಸಾಕಷ್ಟು ಇಲ್ಲಿನ ಮಿಥೀಸ್‍ಗಳ ಸಹಜೀವನದಲ್ಲಿ ಬೆರೆತುಹೋದವು. ಇದಕ್ಕಾಗಿ ಗುರು ಗೋಪಾಲದಾಸರು ಇಲ್ಲಿ ನೆಲೆ ನಿಂತು ಧರ್ಮ ಪ್ರಚಾರ ಮಾಡುತ್ತಾರೆ. ಆಗಲೇ ಇಲ್ಲಿ ಭಗವದ್ ಗೀತೆಯ ಪ್ರಭಾವ ಮತ್ತು ಅಭ್ಯಾಸ ಕೂಡಾ ಆರಂಭವಾಗುತ್ತದೆ. ಇವರ ಜೊತೆಗೆ ಗರೀಬ್‍ರ ನಂತರ ಪಟ್ಟಕ್ಕೇರಿದ "ಜೈ ಸಿಂಘ್" ಮಣಿಪುರದಲ್ಲಿ "ಹಿಂದೂಯಿಸಂ" ಬೇರೂರಲು ಸಾಕಷ್ಟು ಕೊಡುಗೆ ನೀಡುತ್ತಾನೆ. ಚೈತನ್ಯ ಶಾಲೆ ಆರಂಭಿಸಿದ ಜೈ ಸಿಂಘನ ಕಾಲದಲ್ಲಿ ಇಲ್ಲಿಗೆ ರಾಮಾಯಣ ಮಹಾಭಾರತ ಸೇರಿದಂತೆ ಮಣಿಪುರಿಗಳ ಜೀವನದಲ್ಲಿ ದೀಪಾವಳಿ, ದುರ್‌ಗಾಪೂಜೆ, ರಾಸ್-ಲೀಲಾ ಮತ್ತು ರಥಯಾತ್ರೆಯ ಪರ್ವ ಪ್ರಮೀಳೆಯರ ನಾಡಿನಲ್ಲಿ 170 ಆರಂಭಗೊಂಡಿತು. ಅಲ್ಲಿಂದ ಇತ್ತಿಚೆಗೆ ಮಣಿಪುರಿಗಳು ಹಿಂದೂ ಭಾಗವೇ ಎನ್ನುವಷ್ಟರ ಮಟ್ಟಿಗೆ ಅಲ್ಲಿ ವೈಷ್ಣವರ ಪ್ರಭಾವ ಬೀರಿದ್ದು ಈಗಲೂ ಹೆಚ್ಚಿನಂಶ ಸಸ್ಯಾಹಾರಿಗಳು ಮತ್ತು ಅಪ್ಪಟ ಹಿಂದೂ ಧರ್ಮದ ಪಾಲನೆ ಮಾಡುತ್ತಿದ್ದಾರೆ. ಇದಲ್ಲದೆ ಸುಮಾರು 5 ಲಕ್ಷದಷ್ಟಿರುವ "ಸನಾಮಾಹಿ" ಎನ್ನುವ ಧರ್ಮವೂ ಇಲ್ಲಿದ್ದು ಸಾಕಷ್ಟು ಇವರ ಪಂಗಡದವರು ಬರ್ಮಾದ ಹಲವು ಭಾಗದಲ್ಲೂ ಹಂಚಿ ಹೋಗಿದ್ದಾರೆ. ಆದರೆ ಅವರೆಲ್ಲರನ್ನೂ ಅಷ್ಟೇ ಆದರಪೂರ್ವಕವಾಗಿ ಗಮನಿಸಿರುವ ಮಣಿಪುರ ಸರ್ಕಾರ ಅವರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ಇಲ್ಲಿ ಧರ್ಮ ಎನ್ನುವುದು ಮಿಥೀಸ್‍ಗಳ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ. ಹೆಚ್ಚಿನಂಶ ಎಲ್ಲ ಬುಡಕಟ್ಟುಗಳಿಗೆ ಸೇರಿದವರಾಗಿದ್ದರೂ ಮಿಥೀಸ್ ಜೀವನ ಶೈಲಿಯ ಪ್ರಭಾವ ಜಾತಿಯನ್ನು ಮೀರಿ ಪ್ರಭಾವ ಬೀರಿದ್ದು ಸ್ಪಷ್ಟ. ಹಾಗಾಗೇ ಪೂರ್ತಿ ರಾಜ್ಯದುದ್ದಕ್ಕೂ ಮಿಥೇಲಿಯನ್ ಭಾಷೆ ಮತ್ತು ಸಂಪ್ರದಾಯವನ್ನು ಸುಲಭಕ್ಕೆ ಜನ ಅನುಸರಿಸುತ್ತಿದ್ದಾರೆ. ಇದರೊಂದಿಗೆ ಮಣಿಪುರಿ ಹೊರತುಪಡಿಸಿದರೆ "ಬಿಷ್ಣುಪ್ರಿಯಾ ಮಣಿಪುರಿ" ಎನ್ನುವ ಇನ್ನೊಂದು ಭಾಷೆ ಇಲ್ಲಿ ಹಾಸುಹೊಕ್ಕಾಗಿದೆ. ಉಳಿದಂತೆ ಪ್ರವಾಸಿಗರಿಗೆ ಅನುಕೂಲವಾಗುವಷ್ಟು ಕೂಡಾ ಹಿಂದಿ ಅಥವಾ ಇಂಗ್ಲಿಷು ಇಲ್ಲಿ ಬೆಳೆದಿಲ್ಲ. ಹಾಗಾಗಿ ಕೊಂಚ ನಗರ ಪ್ರದೇಶದಿಂದ ಒಳಸಂಚಾರ ಆರಂಭಿಸಿದರೂ ಮೂಕ ಭಾಷೆಯೇ ಅನುಕೂಲಕರ. ಮಿಥೀಸ್‍ನ ಏಳು ಪ್ರಮುಖ ಕುಲಗಳು ವಿವಿಧ ಹೆಸರಿನಲ್ಲಿ ಸಂಸ್ಥಾನವನ್ನು ನಡೆಸಿದ್ದು ಆಯಾ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳು ಕಂಡುಬಂದಿವೆ. ಕೊನೆಯಲ್ಲಿ ಈ ಏಳೂ ಕುಲಗಳನ್ನು ಒಂದುಗೂಡಿಸಿ "ನಿಂಗ್ ಥೌಜ್ ರಾಜ ಪಕಾಂಬ್ಗಾ" ಮಿಥೀಸ್ ಸಾಮ್ರಾಜ್ಯ ಸಂಸ್ಥಾಪನೆ ಮಾಡುತ್ತಾನೆ. ಆಗ ಸರಿ ಸುಮಾರು ಕ್ರಿ.ಪೂ. 33 ರ ಸಮಯವದು. ಆಗ ಮತ್ತೆ ಸಾಮಾಜಿಕವಾಗಿ ಸಮಾಜ ಪದ್ಧತಿಗನುಗುಣವಾಗಿ ನಾಲ್ಕು ನಿರ್ದಿಷ್ಟ ಪಂಗಡಗಳಾಗಿ ಸಮಾಜ ಒಡೆದುಕೊಂಡಿದ್ದನ್ನು ಇತಿಹಾಸ ಸ್ಪಷ್ಟಪಡಿಸುತ್ತದೆ. 171 ಪ್ರಮೀಳೆಯರ ನಾಡಿನಲ್ಲಿ 1. ಮಿಥೀಸ್ ಮರುಪ್ಪು : ಈ ಪಂಗಡ ಮಿಥೀಸ್ ಸಂಸ್ಕೃತಿ ಮತ್ತು ಮಿಥೀಸ್ ದೇವರನ್ನು ಆರಾಧಿಸುತ್ತದೆ ಮತ್ತು ನಂಬುತ್ತದೆ. 2. ಮಿಥೀಸ್ ಗೌರಾ : ಮಿಥೀಸ್ ಮತ್ತು ಹಿಂದೂತ್ವ ಎರಡನ್ನೂ ಅಪ್ಪಿಕೊಂಡಿರುವ ಪಂಗಡಗಳಿವು. 3. ಮಿಥೀಸ್ ಬ್ರಾಹ್ಮಣ : ಇವರನ್ನು ಮಿಥೀಸ್ ಬೊಮನ್ ಎಂದು ಕರೆಯಲಾಗುತ್ತಿದ್ದು ಒಳಗೊಳಗೇ ಇದರಲ್ಲೂ ಎರಡು ಉಪ ಪಂಗಡಗಳಿವೆ. 4. ಮಿಥೀಸ್ ಮುಸ್ಲಿಂ : ಇವರನ್ನು ಪಂಗಾಳ್ಸ್ ಅಥವಾ ಪಂಗಾಳ ಎಂದು ಕರೆಯಲಾಗುತ್ತಿದ್ದು, ಸಾರ್ವತ್ರಿಕವಾಗಿ ಈ ಎಲ್ಲ ಪಂಗಡ ಉಪಪಂಗಡ ಏನೇ ಇದ್ದರೂ ಎಲ್ಲರನ್ನೂ ಹಿಡಿದಿಟ್ಟಿರುವುದು ಮಾತ್ರ ಮಿಥಿಲಿಯನ್ ಎಂಬ ಸಾಮಾನ್ಯ ಮತ್ತು ಮಣಿಪುರಿಗಳ ಮೂಲ ಭಾಷೆ. ಜಾತಿ ಧರ್ಮ ನಂಬಿಕೆಗಳ ಹೊರತಾಗಿ ಎಲ್ಲರೂ ಬಳಸುವುದು ಮಾತ್ರ ಮಿಥಿಲಿಯನ್ ಭಾಷೆ ಮಾತ್ರ. ಈ ಎಲ್ಲಾ ಪಂಗಡ ಅಥವಾ ಉಪಪಂಗಡ ಇನ್ನಾವುದೇ ಧರ್ಮ ಮತ್ತು ನಂಬಿಕೆಗಳಿರಲಿ ಮಹಿಳೆಯರ ಉಡುಪಿನಲ್ಲಿ ಮಾತ್ರ ಸಾಮಾನ್ಯತೆ ಎದ್ದು ಕಾಣುತ್ತದೆ. "ಸಾರೋಂಗ್" ಎನ್ನುವ ಲಂಗ ಮತ್ತು ಇತರ ದಿರಿಸಿಗೆ "ಫಾನೆಕ್" ಎಂದು ಕರೆಯಲ್ಪಡುತ್ತದೆ. ಇದು ಸಂಪೂರ್ಣ ದೇಹವನ್ನು ಆವರಿಸುವ ಒಂದು ವಿನ್ಯಾಸವಾಗಿದ್ದು ಇದೊಂದನ್ನೆ ಧರಿಸುವ ಸ್ತ್ರೀಯರು ಸಾಕಷ್ಟು ವಿಭಿನ್ನ ನಿಲುವಿನವರಾಗಿ ಗೋಚರಿಸುತ್ತಾರೆ. ಇದೇ ರೀತಿ ಸಂಪ್ರದಾಯಬದ್ಧ ಉಡುಪಿನಲ್ಲಿ ಪುರುಷರು "ಖುಡಾಯಿ" ಧರಿಸುತ್ತಾರೆ. ಇದು ಮೊಳಕಾಲಿನವರೆಗೆ ಮುಚ್ಚುವ ಉಡುಪಾಗಿದ್ದು ಸೊಂಟದ ಬಳಿಯಲ್ಲಿ ಹಲವು ಮಡಿಕೆಗಳಲ್ಲಿ ವಿನ್ಯಾಸಗೊಳಿಸಿರಲಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಪ್ರದಾಯವನ್ನೂ ಬಿಡದೆ ಇದನ್ನೂ ಬಿಡದೆ ಗಂಡಸರು ಪೈಜಾಮದಂತಹದ್ದನ್ನು ತೊಡುವುದು ಸಾಮಾನ್ಯವಾಗಿದೆ. ಕಾರಣ ಹೊರ ಪ್ರದೇಶ ಹೊರತುಪಡಿಸಿ ಒಳಾವರಣದತ್ತ ಕಾಲಾಡಿಸಿದರೆ ಕೇವಲ ನಾಗಾಗಳು, ಪ್ರಮೀಳೆಯರ ನಾಡಿನಲ್ಲಿ 172 ಕುಕಿಗಳು, ಮಿಥೀಸ್ ಪಂಗಾಲ್ ಮತ್ತು ಇನ್ನು ಕೆಲವು ಅದ್ಭುತ ಸಾಂಸ್ಕೃತಿಕ ಬುಡಕಟ್ಟುಗಳು ಅವರವರದ್ದೇ ಜೀವನ ಶೈಲಿಯನ್ನು ಅನುಭವಿಸುತ್ತಿದ್ದಾರೆ. ಹೊರವಾಹಿನಿಯಿಂದ ಕೊಂಚವೇ ದೂರದ ಬುಡಕಟ್ಟುಗಳು ಈಗಲೂ ತಮ್ಮದೆ ಶೈಲಿ ಮತ್ತು ಕಾನೂನುಗಳಿಗೆ ಬದ್ಧರು. ಇಲ್ಲೆಲ್ಲಾ ಯಾವ ಸರಕಾರಿ ಕಾನೂನು ಕಾಯಿದೆಗಳು ಈಗಲೂ ಅಷ್ಟಾಗಿ ಬಾಧಿಸುತ್ತಿಲ್ಲ ಎನ್ನುವುದು ಎದ್ದು ಕಾಣುತ್ತದೆ. ಕಾರಣ ಒಳಾವರಣದ ನಾಡಿನಲ್ಲಿ ಠಾಡೊಸ್, ಸಿಮ್ಪಿಸ್, ವೈಪೀಸ್, ರಾಲ್ಫೇಸ್ ಮತ್ತು ಗಾಂಗ್ಟೆಸ್ ಹಾಗು ಪೇತ್ಸ್ ಮುಖ್ಯವಾದವು. (ನನ್ನ ನಿರಂತರ ಓಡಾಟದಲ್ಲಿ ಅಧಿಕೃತ ಭೇಟಿಗಳಿಗಿಂತಲೂ ಹೆಚ್ಚಿನ ವಲಯಗಳಿಗೆ ಅನಧಿಕೃತ ಮತ್ತು ವೈಯಕ್ತಿಕ ಸಂಬಂಧದ ನೆಲೆಯಲ್ಲಿ ಸಂದರ್ಶನ ದೊರಕಿದ್ದು ಇದಕ್ಕೆ ಸಾಕ್ಷಿ. ಇಲ್ಲವಾದಲ್ಲಿ ಸ್ಥಳೀಯರ ಸಹಕಾರ ಇಲ್ಲದೆ ನಿಮಗೆ ಒಳ ನಾಡಿನಲ್ಲಿ ಕಾಲು ಹರಿಸುವುದು ಸಾಧ್ಯವೇ ಇಲ್ಲ. ತೀರ ಇವತ್ತಿಗೂ ನಿಮ್ಮದು ನಿಮಗೆ, ನಮ್ಮದು ನಮಗೆ ಎನ್ನುವ ತತ್ವ ಇಲ್ಲಿ ರಾಜ್ಯವಾಳುತ್ತಿದೆ. ಕೆಲವೊಂದು ಸಮುದಾಯದ ಸ್ಥಳಗಳಿಗೆ ನಡೆದು ತಲುಪಲು ಆರು ತಾಸು ಬೇಕಾದರೆ ಅಲ್ಲಿಂದ ಹಿಂದಿರುಗುವ ಧೈರ್ಯ ಇದ್ದಲ್ಲಿ ಮಾತ್ರ ಅವತ್ತಿಗೇ ವಾಪಸ್ಸು ಬಂದೀರಿ. ಇಲ್ಲವಾದಲ್ಲಿ ಈವತ್ತು ಹೋಗಿ ನಾಳೆ ಬರುವುದೇ ಆಗುತ್ತದೆ - ಲೇಖಕ.) ಮಿಥೀಸ್‍ಗಳಿಗೆ ಯಾವುದೇ ಸರಕಾರಿ ಸವಲತ್ತು ಎನ್ನುವುದರ ಕಡೆಗಿಲ್ಲದ ಗಮನ ಇದರಿಂದ ಸರಾಗವಾಗಿ ಅವರವರದ್ದೇ ಸಂಸ್ಕೃತಿಯನ್ನು ಬೆಳೆಸಲು ಅನುಕೂಲವಾಗುತ್ತಿದೆ ಮತ್ತು ಮಣಿಪುರಿಗಳ ಬೇಡಿಕೆಗಳು ಕಡಿಮೆಯೇ. ಹಾಗಾಗಿ ಹೊರ ಜಗತ್ತಿಗೆ ಅತೀವವಾಗಿ ತೆರೆದುಕೊಳ್ಳುವ ಅಗತ್ಯತೆಯಾಗಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೀಡಾಗಿ ತೀವ್ರ ಬದಲಾವಣೆಯ ಭಾಗವಾಗಲಿ ಇವರಲ್ಲಿ ಕಂಡು ಬರುವುದಿಲ್ಲ. ನಾಟ್ಯ, ನೃತ್ಯ, ಸಂಗೀತ, ಸ್ಥಳೀಯ ವೈನು, ಮೀನು, ಮಾಂಸಾಹಾರ ಅಲ್ಲಲ್ಲಿ ಗುಂಪು ಕುಣಿತ ದಿನಕ್ಕಿಷ್ಟು ದುಡಿತ, ಅಪ್ಪಟ ಮಣಿಪುರಿ ಅಕ್ಕಿಯ ಸೋಮರಸ ಇದರ ಹೊರತಾಗಿ ಮಿಥೀಸ್‍ಗಳಿಗೆ ಬೇರೇ ಜಗತ್ತು ಇಲ್ಲವೇ ಇಲ್ಲ, ಮತ್ತವರಿಗೆ ಬೇರೆ ಮನರಂಜನೆಯೂ ಬೇಕಾಗಿಲ್ಲ. ಅವರು ಅಲ್ಪ ತೃಪ್ತರು 173 ಪ್ರಮೀಳೆಯರ ನಾಡಿನಲ್ಲಿ ಎನ್ನುವುದಕ್ಕಿಂತಲೂ ಬದಲಾಗಲು ಬೇಕಾಗುವ ತಮ್ಮದೆ ಜೀವನ ಶೈಲಿಯನ್ನು ಅವರು ಬಿಡಲು ಸಿದ್ಧರಿರದಿರುವುದೇ ಈಗಲೂ ಶ್ರೀಮಂತ ಸಂಸ್ಕೃತಿಯ ಭಾಗವಾಗೇ ಉಳಿದಿದ್ದಾರೆ. ಇವರನ್ನು ಒಂದಾಗಿ ಹಿಡಿದಿಟ್ಟಿರುವುದೂ ಈಗಲೂ ಭಾಷೆಯೇ ಹೊರತಾಗಿ ಬೇರೇನಲ್ಲ. ಶ್ರೀಮಂತ ಮತ್ತು ಸಮೃದ್ಧವಾಗಿ ಮಣಿಪುರಿ ಅಥವಾ ವಿಷ್ಣುಪ್ರಿಯಾ ಮಣಿಪುರಿಯನ್ನು ಬಳಸುವ ಕಾರಣ ಎಲ್ಲಿಯೂ ಈ ಪ್ರಮೀಳೆಯರ ನಾಡಿನಲ್ಲಿ ಬದಲಾವಣೆ ಬಂದಿದೆ ಎನ್ನಿಸುವುದೇ ಇಲ್ಲ. ಬಹುಶ: ಭಾಷೆಯಷ್ಟು ಬಿಗಿಯಾದ ಬಂಧ ಇನ್ನಾವುದೂ ಇಲ್ಲ ಎನ್ನುವುದಕ್ಕೆ ಮಣಿಪುರವೇ ಸಾಕ್ಷಿ. ಅದರಿಂದಾಗೇ ಅಲ್ಲಿನ ಶ್ರೀಮಂತ ಸಂಸ್ಕೃತಿ, ಮನರಂಜನೆ, ಆಚರಣೆ, ನೃತ್ಯ, ವಿಶಿಷ್ಟ ಉಡುಗೆ-ತೊಡುಗೆಗಳು, ಬದಲಾಗದ ಹಳ್ಳಿಗಳ ಆಚರಣೆಗಳು, ದಿನವಹಿ ಅನುಸರಿಸುವ ಜೀವನ ವಿಧಾನ ಹೀಗೆ ಎಲ್ಲದರ ಮೇಲೂ ನಿರ್ದಿಷ್ಠ ಮತ್ತು ನಿಕಟ ಹಿಡಿತ ಸಾಧಿಸಿದ್ದು ಭಾಷೆ. ಬಹುಶ: ಭಾಷೆಯ ಬದಲಾವಣೆಗೆ ತೆಗೆದುಕೊಳ್ಳದ ಮಣಿಪುರಿಗಳ ನಿಲುವೇ ಅವರನ್ನು ಇವತ್ತಿಗೂ ಶ್ರೀಮಂತವಾಗಿರಿಸಿದೆ ಎಂದರೆ ತಪ್ಪಿಲ್ಲ. ಆದರೆ ಹದಿನೆಂಟನೆಯ ಶತಮಾನದಿಂದೀಚೆಗೆ ಕ್ರಿಶ್ಚಿಯಾನಿಟಿ ಅತ್ಯಂತ ಜನಪ್ರಿಯ ಧರ್ಮವಾಗುತ್ತಿದ್ದು ಅತ್ಯಂತ ಪ್ರಭಾವಶಾಲಿ ಆಗಿಯೂ ಕಾಣಿಸಿಕೊಳ್ಳುತ್ತಿದೆ. ಹಲವು ಜಿಲ್ಲೆಗಳಲ್ಲಿ ಅತ್ಯಂತ ಬಿಗಿಯಾದ ಹಿಡಿತ ಸಾಧಿಸಿರುವ ಕ್ರಿಶ್ಚಿಯನ್ನರು ಅದಕ್ಕಿಂತಲೂ ಹೆಚ್ಚಾಗಿ ಪರಿವರ್ತಿತ ಸಮುದಾಯದ ಕೊಡುಗೆ ಇದರಲ್ಲಿ ದೊಡ್ಡದು. ನೀರು, ಔಷಧ ಮತ್ತು ಅಗತ್ಯ ವಸ್ತುಗಳ ಜೊತೆಯಲ್ಲಿ ಶಾಲೆ ಮತ್ತು ಮಾಧ್ಯಮಗಳು ತಲುಪದಿರುವಲ್ಲಿ ಕೂಡಾ ಅದ್ಭುತವಾದ ಕಟ್ಟಡಗಳನ್ನು ಹೊಂದಿರುವ ಚರ್ಚುಗಳು ಅಮೂರ್ತ ಚಿತ್ರದಂತೆ ಹಳ್ಳಿಗಳನ್ನು ತೆರೆದಿಡುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸದೆ ಮಣಿಪುರಿಯಾಗಿದ್ದೇ ಕ್ರಿಶ್ಚಿಯಾನಿಟಿಯಲ್ಲಿ ತೊಡಗುವ ಹಾಡಿಗಳು ಈಗೀಗ ತುಂಬ ಕಾಣಿಸಿಕೊಳ್ಳುತ್ತಿವೆ. ಕಟ್ಟುನಿಟ್ಟಾಗಿ ಇಡೀ ಮಣಿಪುರವೇ ವರ್ಷಕ್ಕೆ ಹತ್ತಾರು ಹಬ್ಬಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅಚರಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಡೊಲ್ ಜಾತ್ರಾ, ರಥ ಜಾತ್ರಾ, ಲೈ ಹರೋಬಾ, ರಂಜಾನ್, ಕುಟ್, ಗಂಗ್-ನಗೈ, ಪ್ರಮೀಳೆಯರ ನಾಡಿನಲ್ಲಿ 174 ಚುಂಫಾ, ಕ್ರಿಸಮಸ್, ಚೇರಿಯೋಬಾ, ಹೈಕ್ರು ಹಿಡೋಂಗ್ಬಾ ಮತ್ತು ನಿಂಗೋಲಾ ಚಾಕೋಬಾ ಪ್ರಮುಖವಾದವು. ಬಿಲ್ವಿದ್ಯೆ ಮತ್ತು ಸಮರ ಕಲೆ : ಬಹುಶ: ಮಣಿಪುರಿಗಳನ್ನು ಹೊರತುಪಡಿಸಿದರೆ ಇಷ್ಟೊಂದು ಬಿಲ್ವಿದ್ಯೆಗೆ ಆತುಕೊಂಡಿರುವ ಇನ್ನೊಂದು ರಾಜ್ಯ ಭಾರತದಲ್ಲಿ ಇರಲಿಕ್ಕಿಲ್ಲ. ಕಾರಣ ಸರಿ ಸುಮಾರು ಐದುನೂರು ವರ್ಷಗಳ ಸಮೃದ್ಧ ಇತಿಹಾಸವನ್ನು ಬಿಲ್ಲುಗಾರಿಕೆ ಹಿರಿಮೆ ಹೊಂದಿರುವ ಈ ನಾಡಿನದ್ದು. ಅಬಾಲ ವೃದ್ಧರಾದಿಯಾಗಿ ಯಾವ ಲಿಂಗ ಭೇದವಿಲ್ಲದೆ ಆಡುವ ಆಟವೆಂದರೆ ಬಿಲ್ಲುಗಾರಿಕೆಯದು. ಅವರ ನಿಪುಣತೆಗೆ ಒಂದು ಉದಾಹರಣೆ ಎಂದರೆ ಕೆಲವೇ ನಿಮಿಷದಲ್ಲಿ 500 ರಷ್ಟು ಬಾಣಗಳನ್ನು ಹೂಡುವ ಸಾಮರ್ಥ್ಯ ಹಲವು ಬಿಲ್ಲುಗಾರರಲ್ಲಿ ಕಾಣಬಹುದಾಗಿದೆ. ಶರವೇಗ ಎನ್ನುವ ಶಬ್ದಕ್ಕೆ ಅನ್ವರ್ಥವಾದ ಬಿಲ್ಲುಗಾರರು ಇಲ್ಲಿ ಪ್ರತಿ ಹಾಡಿಯಲ್ಲೂ ಕಾಣಿಸುತ್ತಾರೆ. ಬಿಲ್ವಿದ್ಯೆಯನ್ನು ಹೊರತುಪಡಿಸಿದರೆ ಸಮರ ಕಲೆಯಲ್ಲಿ ಮಿಥೀಸ್‍ಗಳ ಕೈ ಇತರರಿಗಿಂತ ಮೇಲೆ ಎಂದರೆ ತಪ್ಪೇನಿಲ್ಲ. ಕಾರಣ ಬರಿಗೈ ಹೊಡೆದಾಟ ಮತ್ತು ಸಶಸ್ತ್ರ ಹೊಡೆದಾಟ ಎರಡರಲ್ಲೂ ಸಕಲ ಸಮರ ಕಲೆಗಳನ್ನು ಸರ್ವ ಋತುವಿನಲ್ಲೂ ಅಭ್ಯಸಿಸುವ ಮನರಂಜಿಸುವ ಆದ್ಯತೆಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಎರಡು ರೀತಿಯಲ್ಲಿ ವಿಭಜಿಸಲಾಗಿದ್ದು "ಸರಿತ್-ಸರಕ್" ಮತ್ತು "ಥಾಂಗ್-ಥೈ" ಹೆಸರಿಸಲಾಗಿದೆ. "ಸರಿತ್-ಸರಕ್" : ಈ ವಿಭಾಗದಲ್ಲಿ ಜನಸಾಮಾನ್ಯರ ಬಹುಮುಖ್ಯ ಸಮರ ಕಲೆಯಾಗಿದ್ದು ಇದರಲ್ಲಿ ಶತ್ರುವಿನ ದಾಳಿ ಮತ್ತು ಎದುರಾಳಿಯನ್ನು ಎದುರಿಸುವಲ್ಲಿ ಬರಿಗೈ ಹೊಡೆದಾಟಕ್ಕೆ ಹೆಸರುವಾಸಿ. ಶಾಲಾ ಕಾಲೇಜು ಮಟ್ಟದಲ್ಲೆ ಇದನ್ನು ಹೇಳಿ ಕೊಡಲಾಗುತ್ತಿದೆ. ಮಾರಣಾಂತಿಕ ಆಘಾತಗಳನ್ನೂ ಸೃಷ್ಟಿಸಬಲ್ಲ ಕಲೆ ಇದಾಗಿದ್ದು ಅಲ್ಲಲ್ಲಿ ಶಾಸ್ತ್ರೀಯವಾಗಿಯೂ ಕಲಿಸುವ ಕೇಂದ್ರಗಳು ಇವೆ. 175 ಪ್ರಮೀಳೆಯರ ನಾಡಿನಲ್ಲಿ "ಥಾಂಗ್-ಥೈ" : ಅತ್ಯಂತ ಹೆಸರುವಾಸಿ ಸಮರ ಕ್ರೀಡೆ ಅಥವಾ ಸಮರ ಕಲೆ ಎಂದೇ ಗುರುತಿಸಲ್ಪಟ್ಟಿದ್ದು ಈಟಿ, ಕತ್ತಿ, ಕೊಡಲಿ ಮುಂತಾದವುಗಳನ್ನು ಹೊಂದಿದೆ. ಈ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಹೋರಾಡುವ ಮತ್ತು ಶತ್ರುಗಳನ್ನು ಎದುರಿಸುವ ಜೊತೆಗೆ ಪ್ರದರ್ಶನ ಕಲೆಯಲ್ಲೂ ಇದನ್ನು ಬಳಸಲಾಗುತ್ತಿದೆ. ಈ ಕಲೆಗಳು ಸಾಮಾನ್ಯವಾಗಿ 17ನೇ ಶತಮಾನದಿಂದ ಆರಂಭವಾಗಿದ್ದು ಅಲ್ಲಿಂದೀಚೆಗೆ ಅಭಿವೃದ್ಧಿಪಡಿಸಲಾಯಿತು. ಅದಕ್ಕೂ ಮೊದಲಿನ ಇದರ ಬೆಳೆವಣಿಗೆಯ ಬಗ್ಗೆ ನಿಶ್ಚಿತ ಮಾಹಿತಿ ಇಲ್ಲವಾದರೂ ಇತ್ತೀಚಿನ ದಿನದಲ್ಲಿ ಸಾಕಷ್ಟು ಸಮರ ಕಲೆ ಅಭಿವೃದ್ಧಿ ಹೊಂದಿರುವುದು ಸ್ಪಷ್ಟ. ಬ್ರಿಟಿಷ್‌ ಮತ್ತು ಬರ್ಮಿಯನ್ನರ ವಿರುದ್ಧ ಹೋರಾಟದಲ್ಲಿ ಈ ಎರಡೂ ಸಮರಕಲೆಯನ್ನು ವ್ಯವಸ್ಥಿತವಾಗಿ ಬಳಸಿದ್ದು ಶತಮಾನಗಳ ಇತಿಹಾಸ ಈ ಕಲೆಗಳಿಗಿದೆ ಮತ್ತು ರಾಜಾಳ್ವಿಕೆಯ ಕಾಲದಲ್ಲಿರುವ ಕಥೆಗಳೊಂದಿಗೆ ಥಳಕು ಹಾಕಿಕೊಂಡಿದೆ. 18ನೆಯ ಶತಮಾನದಲ್ಲಿ ಬ್ರಿಟಿಷರು ಸಂಪೂರ್ಣ ಹಿಡಿತ ಸಾಧಿಸಿದ ಮೇಲೆ ಈ ಕಲೆಯನ್ನು ನಿ ಷೆೀಧಿಸಲಾಯಿತಾದರೂ ಭಾರತ ಸ್ವಾತಂತ್ರ ನಂತರದಲ್ಲಿ ಕಲೆಯ ಪುನರುತ್ಥಾನ ಆರಂಭವಾಯಿತು. ಈಗ ಇದನ್ನು ಪ್ರದರ್ಶನ ಕಲೆಯನ್ನಾಗಿಯೂ ಬಳಸುತ್ತಿದ್ದು ದೇಶ ವಿದೇಶಗಳಲ್ಲೂ ಮಣಿಪುರಿ ಸಮರಕಲೆ ಎಂದೇ ಪ್ರಸಿದ್ಧಿಗೊಂಡಿದೆ. ಇದಕ್ಕೊಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಡ್ರಾಗನ್ ರಾಜ "ಲೈನಿಂಗ್ ಶಾಕಾಂಗ್ಬಾ", ರಾಕ್ಷಸ ಮೋಯ್ಡಾನನ್ನು ಕೊಲ್ಲಲು ಈಟಿ ಮತ್ತು ಕತ್ತಿಯನ್ನು ಬಳಸಿ ಸಂಹಾರ ಮಾಡಿದ್ದು ಇತಿಹಾಸ. ಈ ಯುದ್ಧದಲ್ಲಿ "ಮುಗೈಂಬ್" ರಾಜನು ಈ ಯುದ್ಧಾಸ್ತ್ರಗಳನ್ನು ಬಳಸಿದ್ದರಿಂದಲೇ ಮತ್ತು ಈ ಅಸ್ತ್ರಗಳಿಗೆ ದೇವರ ಆಶೀರ್ವಾದ ಇದೆ ಎನ್ನುವ ಕಾರಣಕ್ಕೆ ಈ ಎರಡೂ ಅಸ್ತ್ರಗಳನ್ನು ಸಮರಕಲೆಯಲ್ಲಿ ಪ್ರಧಾನವಾಗಿ ಬಳಸಲಾಗಿದೆ. ಈಗೀಗ ಇದರೊಂದಿಗೆ ನೃತ್ಯಕಲೆಯನ್ನೂ ಸೇರಿಸಿ ಆಕರ್ಷಣೀಯ ವೇದಿಕೆಯ ಮೇಲೆ ಪ್ರದರ್ಶಿಸಲಾಗುತ್ತಿದ್ದು ವಿದೇಶಗಳಲ್ಲೂ ಪ್ರಸಿದ್ಧಿಯಾಗಿದೆ. ಪ್ರಮೀಳೆಯರ ನಾಡಿನಲ್ಲಿ 176 ಈ ಎಲ್ಲಾ ಸಮರ ಕಲೆ ಇಂಫಾಲ ಮತ್ತು ಅಸ್ತ್ರಗಳ ಸರ್ವ ರೀತಿಯ ದರ್ಶನ ಹಾಗು ಸಂಗ್ರಹ ಇಲ್ಲಿನ ಇಂಫಾಲದ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದ್ದು ಅಲ್ಲಿ ಈಗಲೂ ಮೂಲ ಅಸ್ತ್ರ ಮತ್ತು ಶಸ್ತ್ರಗಳು ನೋಡಲು ಲಭ್ಯವಿದೆ. ಪ್ರತಿ ಮಣಿಪುರಿಗಳ ಮೂಲ ವಿನ್ಯಾಸದ ಉಡುಗೆಯಿಂದ ಹಿಡಿದು ಇತರೆ ಮಾಹಿತಿಯವರೆಗೂ ಇಲ್ಲಿದ್ದರೂ ಆದರೆ ಅದರ ಕೊಡುಗೆ ಪ್ರವಾಸೋದ್ಯಮಕ್ಕೆ ಮಾತ್ರ ಸೊನ್ನೆ ಎನ್ನುವುದು ದಾರುಣ. ಇದರ ಬಗ್ಗೆ ಮುಂದೆ ಮಾಹಿತಿ ಇದೆ. ಪ್ರಮುಖ ಆಟೋಟಗಳು : ಇತಿಹಾಸದ ಪ್ರಕಾರ " ಪೋಲೋ" (ಕುದುರೆ ಪೋಲೋ) ಆಟವನ್ನು ಪರಿಚಯಿಸಿದ್ದೇ ಮಿಥೀಸ್‍ಗಳು ಎನ್ನುವ, ಅದಕ್ಕಿಂತಲೂ ಮೊದಲೆ ಬುಡಕಟ್ಟುಗಳು ಇಲ್ಲಿ ಕುದುರೆಯನ್ನು ಬಳಸಿ ಅಲ್ಲಲ್ಲಿ ಮೈದಾನದಂತಹ ಪ್ರದೇಶದಲ್ಲಿ ಇದನ್ನು ಆಟವಾಗಿ ಆರಂಭಿಸಿದ್ದರು ಎನ್ನುವ ಜಿಜ್ಞಾಸೆ ಕೂಡಾ ಇಲ್ಲದಿಲ್ಲ. ಅಷ್ಟರ ಮಟ್ಟಿಗೆ ಮಣಿಪುರಿಗಳ ಜೀವನದಲ್ಲಿ ಪೋಲೊ ಆಟ ಹಾಸುಹೊಕ್ಕಾಗಿದೆ. ಈ ಆಟ ಈಶಾನ್ಯ ಭಾರತದ ಈ ಕಣಿವೆ ರಾಜ್ಯದಲ್ಲಿ ಸಾವಿರ ವರ್ಷಕ್ಕೂ ಮೊದಲೇ ಚಾಲ್ತಿಯಲ್ಲಿತ್ತು ಎನ್ನುವುದನ್ನು ಗುರುತಿಸಲಾಗಿದ್ದು ಪ್ರಸ್ತುತ ಐತಿಹಾಸಿಕ ಕ್ರೀಡೆಯಾಗಿ ಪರಿಗಣಿಸಲ್ಪಟ್ಟಿದೆ ಕೂಡಾ. "ಪುಯಾಸ್" ನ ಪೌರಾಣಿಕ ಯುಗದಲ್ಲಿ ಇದರ ಪ್ರಸ್ತುತತೆಯನ್ನು ಗುರುತಿಸಲಾಗಿದ್ದು ಆಟದಲ್ಲಿ ಕುದುರೆಗಳಿಗೆ ಮನುಷ್ಯರಿಗಿಂತ ಹೆಚ್ಚಿನ ರಕ್ಷಣೆ ಒದಗಿಸಲಾಗುತ್ತಿತ್ತು. ಅದಕ್ಕಾಗಿ ಮನುಷ್ಯರ ಷ್ಟೇ ಕುದುರೆಗಳಿಗೂ ಸರ್ವ ರೀತಿಯ ಶಿರಸ್ತ್ರಾಣವನ್ನು ಪೂರೈಸಲಾಗುತ್ತಿತ್ತು. ಪ್ರತಿ ತಂಡದಲ್ಲೂ ಆರೇಳು ಅಶ್ವಾರೋಹಿಗಳ ಮೂಲಕ ಆಡಿಸಲಾಗುತ್ತಿದ್ದ ಆಟದಲ್ಲಿ "ಪಾಣಾ" ಎಂಬ ಹೆಸರಿನ ಕ್ರೀಡೆ ಮೂಲತ: ಆರಂಭವಾಗಿದ್ದು ಅದೇ ಕ್ರಮೇಣ ಪೋಲೋ ಆಗಿ ಪರಿವರ್ತಿತವಾಯಿತು. ಇದಕ್ಕೆ ಪಾಣಾ ಎನ್ನಲು ಇದನ್ನು ಮೊದಲು ಹೀಗೆ ಸಾಹಸ ಭರಿತ ಕ್ರೀಡೆಯಾಗಿ ಆರಂಭಿಸಿದವರೇ ಪಾಣಾ ಸಮುದಾಯವರು. ಆದರೆ ಬ್ರಿಟಿಷರು ಇದನ್ನು ಸುಧಾರಿತ ರೂಪಕ್ಕೆ ಪರಿವರ್ತಿಸಿದರು ಎಂದರೂ ತಪ್ಪಿಲ್ಲ. 177 ಪ್ರಮೀಳೆಯರ ನಾಡಿನಲ್ಲಿ ಆದರೆ ಮಿಥೀಸ್‍ಗಳ ಭಾಷೆಯಲ್ಲಿ "ಸಾಗೋಯಿಲ್ ಕಾಂಜೈ" ಎಂದು ಕರೆಯಲಾಗುತ್ತಿದ್ದು "ಕುದುರೆಯ ದಂಡಿನಾಟ" ಅಥವಾ "ಚೆಂಡಿನಾಟ" ಎನ್ನಬಹುದಾಗಿದೆ. ಕುದುರೆಯ ಗಾಲ್ಫ್ ಅತ್ಯಂತ ಜನಪ್ರಿಯ ಕಣಿವೆಯ ಜನರ ಆಟವಾಗಿದೆ. ಅದರಂತೆ "ಮುಖ್ನಾ ಕಂಜೈ" ಎನ್ನುವ ಕುಸ್ತಿ ಆಟ ಕೂಡಾ " ಪಾಣಾ " ಸಮುದಾಯದ ದೊಡ್ಡ ಆಟವಾಗಿದ್ದು ಗುಂಪು ಆಟಗಳಲ್ಲಿ ಜನಪ್ರಿಯದ್ದಾಗಿದೆ. ರಾಜಪ್ರಭುತ್ವವಿದ್ದಾಗ ರಾಜರೆದುರಿನಲ್ಲಿ ಕುಸ್ತಿಯ ಪ್ರತಿರೂಪದಂತೆ ಈ ಆಟವನ್ನು ಆಡಲಾಗುತ್ತಿತ್ತು. ಇದೇ ಆಟದ ಮುಂದುವರೆದ ಭಾಗದಂತಿರುವುದೇ "ಕಂಗ್-ಕಾಂಜೈ" ದಂಡಿನ ಆಟದ ಜೊತೆಯಲ್ಲಿ ನಡೆಯುತ್ತಿದ್ದ ಬಲಾಬಲ ಪ್ರದರ್ಶನ ಕೊನೆಯಲ್ಲಿ ದೈಹಿಕವಾಗಿ ನೇರ ಹೊಡೆದಾಟಕ್ಕಿಳಿಯುವ ಆಟ ಕೌಶಲ್ಯ ಮತ್ತು ಬಲ ಪರೀಕ್ಷೆಯ ಮಾದರಿಯಲ್ಲಿತ್ತು. ಪ್ರಸ್ತುತ ಈ ಆಟದ ಜನಪ್ರಿಯತೆ ಅಷ್ಟಾಗಿ ಇಲ್ಲ. ಹಿಯಾಂಗ್ ತನಾಬಾ : ಇದೊಂದು ನೀರಿನ ಆಟವಾಗಿದ್ದು ನೇರವಾಗಿ ದೋಣಿ ಸ್ಪರ್ಧೆ ಎಂದು ಕರೆಯಬಹುದಾಗಿದೆ. "ತನ್ನಾಬಾ" ಎಂದರೆ ದೋಣಿ ಎಂದರ್ಥ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು ಮೊದಲಿನ ಕಾಲದಲ್ಲಿ ಇದಕ್ಕೆ ಭಾರಿ ರಾಜಾಶ್ರಯ ಇತ್ತು. ರಾಜಪ್ರಭುತ್ವವಿದ್ದಾಗ ಇದಕ್ಕೆ ಮನ್ನಣೆ ದೊರಕುತ್ತಿದ್ದ ಪ್ರಮೀಳೆಯರ ನಾಡಿನಲ್ಲಿ 178 ರೀತಿಗೆ ಹೆಚ್ಚಿನ ಯುವ ಜನರನ್ನು ಈ ಆಟಕ್ಕೆ ಸೆಳೆಯುತ್ತಿದ್ದ ಪ್ರತೀತಿಗಳಿವೆ. "ಚಿಂಗಾಲೈ" ಸೂಚಕಗಳನ್ನು ಹೊಂದಿರುವ ದೋಣಿಗಳಲ್ಲಿ ಕೆಲವೊಮ್ಮೆ ರಾಜರೂ ಕುಳಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಒಂದೇ ದೋಣಿಯಲ್ಲಿ ನೂರಾರು ಸ್ಪರ್ಧಿಗಳು ಏಕಪ್ರಕಾರವಾಗಿ ಚಲಿಸುತ್ತಾ ವೇಗದಲ್ಲಿ ದೋಣಿ ಚಾಲನೆ ಮಾಡುವ ವ್ಯವಸ್ಥಿತ ಯೋಜನಾತ್ಮಕ ಆಟವನ್ನು ಆಯೋಜಿಸಲಾಗುತ್ತಿತ್ತು. ಈಗಲೂ ಹೆಚ್ಚಿನ ರಾಜರುಗಳ ಮತ್ತು ಹಳೆಯ ಸಂಗ್ರಹಗಳಲ್ಲಿ ಆಗಿನ ಕಾಲದ ಈ ಮಾದರಿ ಉದ್ದ ಮೂತಿಯ ದೋಣಿಗಳನ್ನು ಸಂಗ್ರಹಿಸಿಡಲಾಗಿದೆ. ಒಂದು ದೋಣಿಯಲ್ಲಿ ಸಾಲಾಗಿ ಹತ್ತಿಪ್ಪತ್ತು ಜನರು ಕುಳಿತುಕೊಂಡು ಹುಟ್ಟುಗಳನ್ನು ಎಳೆಯುತ್ತಾ ಹೋರಾಡುವ ಪದ್ಧತಿಯಲ್ಲಿ ಆಟ ಮತ್ತು ಯುದ್ಧ ಎರಡಕ್ಕೂ ಬಳಕೆಯಾಗುತ್ತಿತ್ತು. ಹೀಗೆ ಯುದ್ಧದಲ್ಲಿ ಬಳಕೆಯಾಗುವ ದೋಣಿಯ ಹಿಂಭಾಗದ ಅಂಚಿಗೆ ಎದುರಾಳಿಯ ರುಂಡವನ್ನು ಕಟ್ಟಿಹಾಕುತ್ತ ಸಾಗುತ್ತಿದ್ದರು. ಹೀಗೆ ಹೊರಡುವ ದೋಣಿಗಳ ತುದಿಗೆ ಬರುವ ಹೊತ್ತಿಗೆ ಕೆಲವೊಮ್ಮೆ ರುಂಡಗಳ ಸರವೇ ತೂಗಾಡುತ್ತಿತ್ತು ಎನ್ನುತ್ತದೆ ಇತಿಹಾಸ. ಇದೇ ರೀತಿಯ ಚಿತ್ರ ದೊರೆಯುವ ಈ ದೋಣಿಗಳ ಯಥಾವತ್ ನಕಲು ಈಗಲೂ ಕಂಗ್ಲಾ ಅರಮನೆಯ ಆವರಣದಲ್ಲೂ ಮತ್ತು ಇಂಫಾಲದ ಮ್ಯೂಸಿಯಂನಲ್ಲೂ ಇಡಲಾಗಿದೆ (ಈಗೀನ ಕಯಾಕಿಂಗ್). ಇದಲ್ಲದೆ ಲಾಂಜೇಲ್, ಮಾಂನ್ಜಂಗ್ ಇತ್ಯಾದಿ ಆಟಗಳು ಪುರುಷ ಪ್ರಧಾನವಾಗಿದ್ದು ಮಾನ್ಯತೆಯನ್ನು ಪಡೆದಿದ್ದವು. ಪ್ರಸ್ತುತ ಈಗಲೂ ಇವೆಲ್ಲಾ ಆಟೋಟಗಳು ಮಣಿಪುರಿಗಳ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಯ್ಯೊಬಿಕ್ ಲಕ್ಬಿ : ಮಾಮೂಲಿನ ರಗ್ಬಿ ಆಟದಂತಹ "ಯ್ಯೊಬಿಕ್ ಲಕ್ಬಿ" ಇನ್ನೊಂದು ಆಟ. ಎಣ್ಣೆ ಸವರಿದ ಬೋಡು ತೆಂಗಿನ ಕಾಯಿಯನ್ನು ಸವರಿಕೊಂಡು ಎದುರಾಳಿ ಅಂಗಣದಲ್ಲಿ ದಾಟುವ ಸಾಹಸಭರಿತ ರೋಮಾಂಚಕ ಆಟ ಇದು. ಲಕ್ಭಿ ಎಂದರೆ ಕಸಿಯುವುದು ಎಂದರ್ಥ ಕೂಡಾ. ಅರಮನೆಯ ಸುಂದರ ಹುಲ್ಲು 179 ಪ್ರಮೀಳೆಯರ ನಾಡಿನಲ್ಲಿ ಹಾಸಿನ ಮೇಲೆ ನಡೆಯುತ್ತಿದ್ದ ಕ್ರೀಡೆಗಳು ಈಗ ದೇವಸ್ಥಾನದ ದೊಡ್ಡ ಆವರಣದಲ್ಲಿ ನಡೆಯುತ್ತಿವೆ. ಎರಡೂ ಕಡೆಯ ತಂಡಗಳು ಎಣ್ಣೆ ಸವರಿದ ಬೋಡು ತೆಂಗಿನ ಕಾಯಿಯನ್ನು ಎದುರಾಳಿ ಜಾಗದಲ್ಲಿ ಕುಳಿತಿರುವ ಮುಖ್ಯಸ್ಥನಿಗೊಪ್ಪಿಸುವ ರಗ್ಬಿಯ ತದ್ರೂಪಿ ಆಟ ಇದು. ಆದಾಗ್ಯೂ ಇಲ್ಲಿನ ಹೆಣ್ಣು ಮಕ್ಕಳು ನೋಡುವ ಆಟಕ್ಕೆ ಹುಮ್ಮುಸ್ಸು ಏರುವುದರಿಂದ ರೋಚಕ ಹಣಾಹಣಿ ಇಲ್ಲಿ ಲಭ್ಯ. ಮಖ್ನಾ : ಇದು ಸಹಜ ಕುಸ್ತಿಯ ಸ್ಪರ್ಧೆಯಾಗಿದ್ದು ಇಬ್ಬರೂ ಸಮ ಬಲರ ಮಧ್ಯೆ ಆಟವನ್ನು ಏರ್ಪಡಿಸುವ ಕ್ರೀಡೆಯಾಗಿದ್ದು ಇದು ನಮ್ಮಲ್ಲಿಯೂ ನಡೆಯುವ ಕುಸ್ತಿಯ ತದ್ರೂಪವಾಗಿದೆ. ಆದರೆ ಇದನ್ನು ಯಾವಾಗೆಂದರೆ ಆಗ ಆಟವಾಡದೆ, ನಮ್ಮಲ್ಲಿ ಮೈಸೂರು ಉತ್ಸವದಲ್ಲಿ ನಡೆಸುವ ಕುಸ್ತಿಯಂತೆ ಇಲ್ಲಿ ನಿಯಮಾನುಸಾರ "ಲೈ ಹಾರೋಬ" ಉತ್ಸವದ ಕೊನೆಯ ದಿನದಲ್ಲಿ ಬಿಡದೆ ಆಚರಿಸುತ್ತಾರೆ. ಇದಕ್ಕಾಗಿ ಸಾಕಷ್ಟು ತಯಾರಿ ಮತ್ತು ಸಾಮು ನಡೆಸುವ ಪೈಲ್ವಾನರು ವರ್ಷದುದ್ದಕ್ಕೂ ಈ ಹಬ್ಬಕ್ಕಾಗಿ ಕಾಯುತ್ತಾರೆ. ಕಾರಣ ಸಾರ್ವಜನಿಕವಾಗಿ ಅದ್ಭುತ ಕುಸ್ತಿಯ ಮನರಂಜನೆ ಕೇವಲ ಈ ಹಬ್ಬದ ಕೊನೆಯಲ್ಲಿ ಮಾತ್ರ ಪ್ರದರ್ಶಿಸಲು ಅವಕಾಶವಿದೆ. ಖುಂಗ್ : ಅರಮನೆಯ ಆವರಣದಲ್ಲಿ ನೆಲದ ಮೇಲೆ ಗುರಿಯನ್ನು ಹೊಡೆಯುವ ಆಟ(ನಮ್ಮಲ್ಲಿ ಲಗೋರಿಯ ಅಟದ ಹೋಲಿಕೆ ಇದೆ)ದಂತಹ ಅಥವಾ ಲೋಹದ ಆಯತಾಕಾರದ ವಸ್ತುವನ್ನು ದೂರದಿಂದ ಗುರಿ ಹೊಡೆಯುವ ಆಟ ಇದು. ನಿರ್ದಿಷ್ಠ ದೂರದಿಂದ ಏಕವ್ಯಕ್ತಿ ಪ್ರದರ್ಶಿತ ಆಟ ಇದಾಗಿದ್ದು ಗುರಿಕಾರನ ಚಾಕಚಕ್ಯತೆ ಈ ಆಟದ ಬಂಡವಾಳ. ಇದು ಸಾಮಾನ್ಯವಾಗಿ ಮಣಿಪುರಿಯ ಆರಂಭದ ದಿನದಲ್ಲಿ "ಚೈರೋಂಗ್ಬಾ" ಅವಧಿಯಲ್ಲಿ ಆಡುವ ಆಟವಾಗಿದ್ದು ರಥೋತ್ಸವದ ಪ್ರಮುಖ ಆಕರ್ಷಣೆ ಕೂಡಾ ಇದಾಗಿದೆ. ಇದೊಂದು ಕಾಲಮಿತಿಯಲ್ಲಿ ಆಡುವ ಆಟವಾಗಿದ್ದು ಧಾರ್ಮಿಕ ರಥೋತ್ಸವದ ಕಾಲದಲ್ಲಿ ಮಾತ್ರ ಆಡಲಾಗುತ್ತಿದೆ. ಉಳಿದ ಕಾಲಾವಧಿಯಲ್ಲಿ ಈ ಆಟ ನಿಷಿದ್ಧವಾಗಿದೆ. ಪ್ರಮೀಳೆಯರ ನಾಡಿನಲ್ಲಿ 180 ಇತಿಹಾಸ : ಮಹಾಭಾರತದ ಕಾಲದಲ್ಲಿ ಮಣಿಪುರ ರಾಜ್ಯವಾಗಿ ಉದಯಿಸಿದ ಆರಂಭದಿಂದಲೇ ಮಹಿಳೆಯ ಪ್ರಾಬಲ್ಯಕ್ಕೆ ಒಳಗಾಗಿತ್ತು ಎನ್ನುವುದನ್ನು ಅಲ್ಲಲ್ಲಿ ಕೇಳಿದ್ದು ಮತ್ತು ದಾಖಲಾಗಿದ್ದು ಬಿಟ್ಟರೆ ಬೇರೆಲ್ಲೂ, ಅದಕ್ಕೂ ಮೊದಲು ಮಣಿಪುರ ಕಂಡುಬರುವುದಿಲ್ಲ. ಕಾರಣ ಮಹಾಭಾರತದಲ್ಲಿ ಅರ್ಜುನ ತೀರ್ಥಯಾತ್ರೆಗೆ ಹೋದವನು ಅಲ್ಲಿಂದ ಈಶಾನ್ಯ ರಾಜ್ಯವಾದ ಮಣಿಪುರಕ್ಕೆ ಬಂದು ಅಲ್ಲಿ ಚಿತ್ರಾಂಗದೆಯನ್ನು ವರಿಸುವ ಕಥೆ ಸ್ಪಷ್ಟವಾಗಿದೆ. ಹಾಗೆ ಚಿತ್ರಾಂಗದೆಯನ್ನು ವರಿಸಿ ಅಲ್ಲಿಂದ ಹೋಗುವ ಅರ್ಜುನ ಮರಳಿ ಮಣಿಪುರಕ್ಕೆ ಬಂದಾಗ ಅವನೊಂದಿಗೆ ಅಶ್ವಮೇಧದ ಕುದುರೆಯನ್ನು ತಂದಿರುತ್ತಾನೆ. ಆಗ ಅವನ ಮಗನಾಗಿದ್ದ ಚಿತ್ರಾಂಗದೆಯ ಗರ್ಭದಲ್ಲಿ ಜನಿಸಿದ್ದ ಬಬ್ರುವಾಹನ ಅದನ್ನು ಕಟ್ಟಿಹಾಕಿ ಅರ್ಜುನನಿಗೆ ಸವಾಲೆಸೆಯುತ್ತಾನೆ. ಉಳಿದ ಕಥೆ ಮಾಮೂಲಿನದ್ದಾದರೂ ಮಹಾಭಾರತದ ಕಾಲದಲ್ಲೇ ಮಣಿಪುರದ ಅಸ್ತಿತ್ವದ ಐತಿಹ್ಯ ಅದರ ಪುರಾತನ ಕಾಲದ ಇತಿಹಾಸಕ್ಕೆ ಕೈ ಗನ್ನಡಿಯಾಗುತ್ತದೆ. ಅದರಲ್ಲಿ ಕಥೆಯ ಷ್ಟೆ ಇರಬಹುದಾದರೂ ಕೂಡಾ ಮಣಿಪುರದ ಅಸ್ತಿತ್ವದ ಬಗ್ಗೆ ಒಂದು ದಾಖಲೆಯಾಗುವುದಂತೂ ಹೌದು. ಹಾಗಾಗಿ ಆ ಕಾಲದ ಇರುವಿಕೆಯ ಬಗ್ಗೆ ಯಾವುದೇ ಕುರುಹುಗಳು ಲಭ್ಯವಾಗುವುದಿಲ್ಲವಾದರೂ ಒಂದು ಇತಿಹಾಸಕ್ಕೂ ಮೊದಲೇ ಪುರಾಣ ಕಾಲದಲ್ಲೂ ಮಣಿಪುರ ತನ್ನ ಪ್ರಾಮುಖ್ಯತೆಯನ್ನು ಮೆರೆದಿತ್ತು ಎನ್ನುವುದು ಸಾಬೀತಾಗುತ್ತದೆ. ಆದರೆ ಕ್ರಿ.ಪೂ. ಮತ್ತು ಕ್ರಿ.ಶ. ಇತಿಹಾಸದಲ್ಲಿ ಕಣ್ಣಾಡಿಸಿದಾಗ ನಿರಂತರವಾಗಿ ರಾಜ್ಯಾಡಳಿತ, ಪಾಳೆಯಗಾರಿಕೆ, ವಸಾಹತು ಶಾಹಿ ಮತ್ತು ವಂಶಾಡಳಿತಗಳಿಗೆ ಸಿಲುಕುವ ಮಣಿಪುರ ನಾಲ್ಕು ಹಂತದಲ್ಲಿ ತನ್ನ ಇತಿಹಾಸದ ಅವಧಿಯನ್ನು ಗುರುತಿಸಿಕೊಳ್ಳುತ್ತದೆ. ಮಣಿಪುರಕ್ಕೆ ಕಾಲಿಡುವ ಮೊದಲೆ ಇದರ ಇತಿಹಾಸವನ್ನು ಓದಿಕೊಂಡಿದ್ದ ನನಗೆ ಅಲ್ಲಿನ ಪರಿಸರ ಮತ್ತು ಕಣಿವೆಯ ರಾಜ್ಯವನ್ನು ನೋಡಿದ ಮೇಲೆ ಹಾಗೂ ಈಗಲೂ ಅಲ್ಲಿ ಜೀವಂತವಿರುವ ಸಂಪ್ರದಾಯ ಪದ್ಧತಿಗಳ ಆಚರಣೆಯ ಗಟ್ಟಿತನ ಇಂಥ ರಾಜ್ಯವನ್ನು ಖಂಡಿತಕ್ಕೂ ರಾಜ್ಯಾಡಳಿತಕ್ಕೊಳಪಡಿಸಿ ಆಳಿದ್ದು ಎನ್ನುವುದಕ್ಕಿಂತಲೂ ಅಲ್ಲಲ್ಲೇ ಪಾಳೆಗಾರಿಕೆಗೆ ಒತ್ತುಕೊಟ್ಟಿದ್ದು ಸುಳ್ಳಿರಲಿಕ್ಕಿಲ್ಲ ಎನ್ನಿಸಿದ್ದು ಸಹಜ. 181 ಪ್ರಮೀಳೆಯರ ನಾಡಿನಲ್ಲಿ ಕಾರಣ ಯಾವ ರಾಜನಿಗೂ ಆಗಿನ ಕಾಲದಲ್ಲಿ ಅಚಾನಕ್ ಅಗಿ ಪರ್ವತ ಗುಡ್ಡಗಾಡು ಮತ್ತು ಇನ್ನಿತರ ಕಣಿವೆಯನ್ನು ಸೋಸಿಕೊಂಡು ಇನ್ನೊಬ್ಬನ ಮೇಲೆ ಇದ್ದಕ್ಕಿದ್ದಂತೆ ದಂಡೆತ್ತಿ ಹೋಗಿ ಸಾಮ್ರಾಜ್ಯ ಸ್ಥಾಪಿಸುವ ಸಾಧ್ಯತೆ ಇಲ್ಲವೇ ಇಲ್ಲವಾಗಿದ್ದರಿಂದ ಬಹುಶ: ಎಲ್ಲೆಂದರಲ್ಲಿ ಅಷ್ಟಿಷ್ಟು ಬಲದಿಂದ ರಾಜ್ಯಗಳು ಸ್ಥಾಪನೆಯಾಗಿದ್ದಿರಲೂಬಹುದು. ಹಾಗಾಗೇ ಈಗಲೂ ಆಗಿನ ಪದ್ಧತಿಯ ಮುಂದುವರಿದ ಭಾಗವೋ ಅಥವಾ ಬದಲಾಗಲು ಇಷ್ಟ ಪಡದ ಸಂಪ್ರದಾಯಬದ್ಧ ಮನಸ್ಥಿತಿಯೋ, ಬುಡಕಟ್ಟುಗಳ ಆಚರಣೆಯೋ ಒಟ್ಟಾರೆ ಪ್ರತಿ ಗುಂಪಿಗೂ ಒಬ್ಬೊಬ್ಬ ಸಾಮಂತ ಅವನಿಗೊಬ್ಬ ರಾಜ ಹೀಗೆ ಹಲವು ರೀತಿಯಲ್ಲಿ ಮಣಿಪುರಿಗಳ ರಾಜ್ಯದ ಇತಿಹಾಸದಲ್ಲಿ ರಾಜಕೀಯ ಕಥಾನಕ ವಿಚಿತ್ರವಾಗಿ ಬೆಳೆದುಬಂದಿದೆ. ಕಾರಣ ಒಂದು ಸಮಾಜ ಅಥವಾ ಪಂಗಡ ಅಥವಾ ಸಮುದಾಯವನ್ನು ಆದರ ಸಂಪ್ರದಾಯ ಮತ್ತು ಪದ್ಧತಿಗಳ ಆಧಾರದ ಮೇಲೆ ವಿಂಗಡಿಸಿ ಮತ್ತು ಎತ್ತಿ ಕಟ್ಟಿ ಗುರುತಿಸುವಿಕೆಗೊಳಪಡಿಸಿದಾಗ ಅವನ್ನು ಒಂದು ಧ್ವಜದಡಿಯಲ್ಲಿ ತರುವುದು ಸುಲಭ. ಅದರಲ್ಲೂ ಕಟ್ಟರ್ ಸಂಪ್ರದಾಯಸ್ಥ ಮತ್ತು ಕಠೋರ ಜಾತಿ ಪದ್ಧತಿಗಳನ್ನು ಅನುಸರಿಸುವ ಬುಡಕಟ್ಟುಗಳನ್ನು ಈ ವಿಷಯದ ಆಧಾರದ ಮೇಲೆ ಪಳಗಿಸುವುದು ಇನ್ನು ಸುಲಭ. ಹಾಗಾಗಿ ಇಲ್ಲಿನ ನಾಲ್ಕು ಹಂತದಲ್ಲಿ ಗಮನಿಸಲ್ಪಡುವ ಇತಿಹಾಸವನ್ನು ಗಮನಿಸಿದಾಗ ಇಲ್ಲಿ 108 ಜನ ರಾಜರು ಇದನ್ನು ಆಳಿದ್ದು ಸುಲಭ ಜೊತೆಗೆ ಸಾಧ್ಯತೆಯೂ ನಿಚ್ಚಳವಾಗೇ ತೋರುತ್ತದೆ. ಬಹುಶ: ತೀರ ಭೌಗೋಳಿಕ ಪರಿಸ್ಥಿತಿಯ ಸವಾಲು ಮತ್ತು ಜನರನ್ನು ಸಂಪ್ರದಾಯ ಮಿತಿಯ ಆಚೆಗೆ ತಂದು ಸಂಘಟಿಸುವುದು ಸಾಧ್ಯವಿದ್ದಿದ್ದರೆ ಕಟ್ಟರ್ ಮನಸ್ಥಿತಿಯಿಂದಾಗಿ ಮಣಿಪುರ ಬಲಾಢ್ಯ ಹಾಗು ಭಾರತದಲ್ಲಿ ವಿಭಿನ್ನ ಇತಿಹಾಸ ಹೊಂದಿರುತ್ತಿತ್ತೋ ಏನೋ ಗೊತ್ತಿಲ್ಲ. ಆದರೆ ಅಲ್ಲಲ್ಲಿ ಪಳೆಯುಳಿಕೆಗಳಂತೆ ಉಳಿದಲ್ಲೇ ಬೆಳೆದ ರಾಜ್ಯಾಧಿಕಾರದ ಪದ್ಧತಿ ಸಾವಿರಾರು ಗುಂಪುಗಾರಿಕೆ ದಾರಿ ಮಾಡಿಕೊಟ್ಟಿತೆನ್ನುವುದು ನಿಜ. ಕಣಿವೆ ಪರ್ವತ ಇತ್ಯಾದಿಗಳ ದುರ್‌ಗಮ ಪ್ರದೇಶದಲ್ಲಿ ಯಾವ ರಾಜನೂ ಕನಿಷ್ಠ ಜೀವಮಾನದಲ್ಲಿ ಒಮ್ಮೆಯಾದರೂ ತನ್ನ ಪೂರ್ತಿ ರಾಜ್ಯವನ್ನು ಸುತ್ತುವ ಪ್ರಮೀಳೆಯರ ನಾಡಿನಲ್ಲಿ 182 ಧೈರ್ಯ ಮಾಡಿರಲಿಕ್ಕಿಲ್ಲ. ಹಾಗಾಗಿ ರಾಜನ ಹೆಸರಿದ್ದು ರಾಜ್ಯಾಡಳಿತ ಇದ್ದರೂ ಅಲ್ಲಲ್ಲೇ ಹೊಸ ರಾಜ್ಯ ಮತ್ತು ರಾಜರುಗಳ ಉದಯ ಮತ್ತು ಹೊಸ ಕುಟುಂಬಗಳ ಆಡಳಿತವೂ ಸರ್ವೇ ಸಾಮಾನ್ಯವಾಗಿದ್ದೀತು. ಆದರೂ ನಿರಂತರವಾಗಿ ಹಲವು ಬುಡಕಟ್ಟುಗಳು ಮತ್ತು ಪಂಗಡಗಳು ಇಲ್ಲಿನ ಆಡಳಿತ ಪದ್ಧತಿಯಲ್ಲಿ ಭಾಗಿಯಾಗಿದ್ದು ಸರಿ ಸುಮಾರು ಕ್ರಿ.ಪೂ. 3000 ವರ್ಷಗಳಿಗೂ ಮೊದಲೇ ಇಲ್ಲಿನ ನೆಲದಲ್ಲಿ ಆಡಳಿತ ಪದ್ಧತಿಯ ವೈಭವವನ್ನು ಕಂಡ ನಾಡು ಮಣಿಪುರ. ಶಿಲಾಯುಗದಿಂದಲೂ ಇಲ್ಲಿ ಇತಿಹಾಸ ಸ್ಪಷ್ಟವಾಗಿದೆ. ಕೆಲವೊಮ್ಮೆ ಅದು ಬಾಯಿಂದ ಬಾಯಿಗೆ ಬಂದಿರುವ ಜನಪದೀಯ ಶೈಲಿಯಲ್ಲಿದ್ದರೂ ಮಣಿಪುರ ಇತಿಹಾಸ ಕ್ರಮಬದ್ಧವಾಗಿಯೂ ಸಾಕಷ್ಟು ನಿಚ್ಚಳವಾಗಿಯೂ ಇರುವುದು ಸೋಜಿಗ ಕೂಡಾ ಮತ್ತು ಕೆಲವೊಮ್ಮೆ ನನ್ನ ಅಚ್ಚರಿಗೆ ಕಾರಣವಾಗಿದ್ದಿದೆ. ಕಾರಣ ತೀರ ಶಿಲಾಯುಗದ ಕಾಲದಿಂದ ಅಂದರೆ ಸುಮಾರು ಕ್ರಿ.ಪೂ.3300 ರ ಕಾಲಾವಧಿಯ ಕಥೆಗಳೂ ಹೇಗೆ ಜೀವಂತವಾಗಿವೆ ಮತ್ತು ದಾಖಲಾಗಿವೆ ಇದು ಬಾಯಿಂದ ಬಾಯಿಗೆ ಬಂದಿರುವ ಸಾಧ್ಯತೆಯಾ ಅಥವಾ ಪ್ರತಿ ಬುಡಕಟ್ಟು ತಮ್ಮ ತಮ್ಮ ಆದಿಕಾಲದ ಕಥೆಗಳ ಅಭಿಮಾನದಿಂದ ಜೀವಂತವಾಗಿ ಇಟ್ಟಿವೆಯಾ ಎನ್ನುವುದು ನನ್ನನ್ನು ಇವತ್ತಿಗೂ ಅಚ್ಚರಿಗೆ ತಳ್ಳಿದ ಕಾರಣಗಳು. ಕ್ರಿಶ. 33 ರಿಂದ ಕ್ರಿ.ಪೂ. 154 ರವರೆಗಿನ ಮಿಥೀಸ್‍ಗಳ ಅರಸು "ನಿಂಗ್ ಥೋಝಾ" ಏಳು ಬುಡಕಟ್ಟುಗಳನ್ನು ಒಂದೆಡೆಗೆ ಸೇರಿಸಿ ಅವರನ್ನೆಲ್ಲ ಒಂದೇ ಚಕ್ರಾಧಿಪತ್ಯದಡಿಗೆ ತರುವ ಮಹತ್ವವಾದ ಕಾರ್ಯದೊಂದಿಗೆ ಅದ್ಬುತ ಇತಿಹಾಸದ ಹೊಸ ಹರವು ಮಣಿಪುರದ ಹಳೆಯ ಕಥಾನಕಕ್ಕೆ ಹೊಸ ಹುರುಪಿನ ರಂಗು ತುಂಬಿಕೊಳ್ಳುತ್ತದೆ (ಇವತ್ತಿಗೂ ಅಲ್ಲಿನ ಹೆಚ್ಚಿನ ಹೆಸರುಗಳು ಈ ನಿಂಗ್‍ಥೌಝಾ ಹೆಸರಿನಿಂದಲೇ ಗುರುತಿಸಿಕೊಳ್ಳುವಷ್ಟು ಪ್ರಭಾಶಾಲಿಯಾಗಿದ್ದ ಈ ಅರಸು). ಅದಕ್ಕೂ ಮೊದಲಿಗೆ ಮಣಿಪುರದ ಇತಿಹಾಸದಲ್ಲಿ ಇಷ್ಟೊಂದು ಅಪರೂಪದ ನಿರಂತರತೆಯ ರಾಜ್ಯಾಡಳಿತ ಮತ್ತು ರಾಜರುಗಳ ಪ್ರಭುತ್ವ 183 ಪ್ರಮೀಳೆಯರ ನಾಡಿನಲ್ಲಿ ಮೇರೆಯಲು ಕಾರಣವಾದ ಪಂಗಡಗಳ ಬಗ್ಗೆಯೂ ಇಲ್ಲಿ ಉಲ್ಲೇಖ ಮುಖ್ಯವಾಗುತ್ತದೆ. ಕಾರಣ ಪ್ರಥಮ ಅವಧಿಯ ದಾಖಲೆಗೆ ಲಭ್ಯವಾಗುವ ಇತಿಹಾಸದ ಅವಧಿಯಲ್ಲೆ ಮಣಿಪುರ ತನ್ನಲ್ಲಿ ಬ್ರಾಹ್ಮಣರಿಂದ ಹಿಡಿದು ಸರ್ವ ರೀತಿಯ ಪಂಗಡ ಸಮುದಾಯಗಳನ್ನು ಹೊಂದಿತ್ತಲ್ಲದೆ ಇವರೆಲ್ಲಾ ಕಣಿವೆ ಪ್ರದೇಶಗಳಲ್ಲಿ ವಾಸವಾಗಿದ್ದರೆ, ಪರ್ವತ ಪ್ರದೇಶದಲ್ಲಿ ಬುಡಕಟ್ಟುಗಳು ಹಿಡಿತವನ್ನು ಹೊಂದಿದ್ದರು. ಅದರಲ್ಲೂ ಈ ಮಿಥೀಸ್ ಮತ್ತು ಇತರೆ ಪಂಗಡಗಳನ್ನು ಗಮನಿಸುವುದಾದರೆ ಅದ್ಭುತವಾದ ಸಾಮರಸ್ಯಕ್ಕಿಂತಲೂ ನಿರಂತರತೆಯಲ್ಲೂ ತಮ್ಮದೇ ಜೀವ ವೈವಿಧ್ಯತೆಯ ಜನಜೀವನ ರೂಪಿಸಿಕೊಂಡಿದ್ದರು. ಶಿಲಾಯುಗದಿಂದಲೂ ಇದನ್ನೆಲ್ಲಾ ನಿರಂತರವಾಗಿ ಪೋಷಿಸಿಕೊಂಡು ಬಂದಿರುವ ಪರಿ ನನ್ನನ್ನು ಅಚ್ಚರಿಗೀಡುಮಾಡಿದ್ದು. ಯಾವ ಕಾಲದಲ್ಲಿ ಬಟ್ಟೆಯ ಆವಿಷ್ಕಾರವಾಯಿತೋ ಆಗಲೇ ನಿರ್ದಿಷ್ಟ ದಿರಿಸಿನ ಶೈಲಿಗೆ ಹೊಂದಿಕೊಂಡ ಇಲ್ಲಿನ ಹೆಚ್ಚಿನ ಸಮುದಾಯ ಇವತ್ತಿಗೂ ಅದರಲ್ಲಿ ರಾಜಿಯಾಗದೆ ತಮ್ಮತನ ಉಳಿಸಿಕೊಂಡದ್ದು ಬಹುಶ: ಭಾರತದ ಇನ್ನಾವುದೇ ರಾಜ್ಯದಲ್ಲೂ ನನಗೆ ಕಾಣಿಸದ ಅದ್ಭುತಗಳಲ್ಲಿ ಒಂದು. ಸತತವಾಗಿ ಭಾರತದ ಎಲ್ಲಾ ರಾಜ್ಯಗಳನ್ನೂ ಅಲ್ಲಿನ ಜನಜೀವನವನ್ನೂ ಹತ್ತಿರದಿಂದ ನೋಡಿರುವ ನನಗೆ ಮಣಿಪುರಿಗಳ ಈ ಶೈಲಿ ಮತ್ತು ಸಂಪ್ರದಾಯಬದ್ಧ ಬದ್ಧತೆಗೆ ಕಾರಣವಾದರೂ ಏನು ಎನ್ನುವುದು ತಕ್ಷಣಕ್ಕೆ ಅರಿವಾಗದಿದ್ದರೂ, ಕ್ರಮೇಣ ಇಲ್ಲಿ ಒಡನಾಡುತ್ತಿದ್ದಂತೆ ಒಂದಂತೂ ಗೊತ್ತಾದದ್ದು ನಿಜ. ಈಗಲೂ ಉಳಿಸಿಕೊಂಡು ಬಂದಿರುವ ಕುಟುಂಬ ಪದ್ಧತಿ ಮತ್ತು ಭಾಷೆ ಇಲ್ಲಿನ ಸ್ವಂತಿಕೆಯ ಜೀವಾಳ ಎನ್ನುವುದು ಸತ್ಯ. ಅದೇ ನಿಜ ಕೂಡಾ. ಪ್ರಮುಖ ಮಿಥೀಸ್‍ಗಳಲ್ಲದೇ ಪಂಗಾಳ(ಪಂಗಾಲ್ಸ್‌)ಗಳೂ ಸೇರಿದಂತೆ ಈ ಇತಿಹಾಸದ ಭಾಗವಾದವರ ಗುಂಪನ್ನು ನೋಡಿದರೆ ಎಂಥವರೂ ಒಮ್ಮೆ ಯೋಚಿಸುತ್ತಾರೆ. ಹೇಗೆ ಇಷ್ಟೆಲ್ಲಾ ಸಮುದಾಯವನ್ನು ಈ ಜನ ಪಾಲಿಸಿದರು ಎಂದು. ಹಾಗಾಗೇ ವಿಷಯದ ಅಭ್ಯಾಸ ಹೆಚ್ಚಾದಂತೆ ನನ್ನ ಕೈಗೆ ಸಿಕ್ಕ ಗುಂಪುಗಳಿವು. ಇತಿಹಾಸವನ್ನು ಜಾಲಾಡುತ್ತಿದ್ದಂತೆ ನನ್ನ ಬಲೆಗೆ ಬಿದ್ದ ಪ್ರಮೀಳೆಯರ ನಾಡಿನಲ್ಲಿ 184 ಹಲವಾರು ಸಮುದಾಯ ಬುಡಕಟ್ಟುಗಳ ಹೆಸರನ್ನು ರೂಢಿಗೊಳಿಸಿಕೊಳ್ಳಲು ನನಗೆ ಕೆಲ ಸಮಯ ಹಿಡಿದದ್ದು ಹೌದು. ಈಗಲೂ ಪೂರ್ತಿ ಮಣಿಪುರದಲ್ಲಿ ಹೊಸ ಹೆಸರುಗಳ ಹಾವಳಿ ಕಡಿಮೆಯೇ. ಏನಿದ್ದರೂ ಓದಿ ಮುಂದೆ ಬರುತ್ತಿದ್ದಂತೆ ಅವರ ಮಕ್ಕಳಿಗೆ ಕರೆಯುವಾಗ ಹೊಸ ಹೆಸರು ಮತ್ತು ಚಿಕ್ಕ ಹೆಸರಿನ ಬದಲಾವಣೆ ಮುಂದುವರೆಯುತ್ತಿದೆಯಾದರೂ ಮಣಿಪುರದ ಬದ್ಧತೆ ಆ ಸಂಪ್ರದಾಯಕತೆ ಈಗಲೂ ಮಿಥೀಸ್‍ಗಳ ರಕ್ತದಲ್ಲಿ ಹರಿಯುತ್ತಿರುವುದು ಸ್ಪಷ್ಟ. ಹಾಗಾಗೆ ನನಗೆ ವಿಮಾನ ನಿಲ್ದಾಣದ ಹೊರಗೆ ಸಿಕ್ಕ ಮೊದಲ ಮಹಿಳೆ ಕೂಡಾ "ಗೋಬ್ಸಿ" ಅಚ್ಚರಿಗೀಡು ಮಾಡಿದ್ದು ಸಹಜವೇ ಆಗಿತ್ತು. ಅಸಲಿಗೆ ಸ್ವತಂತ್ರ ಪೂರ್ವ ಮತ್ತು ತೀರ ಹಳೆಯ ಕಾಲದಿಂದಲೂ ರಾಜ ಪ್ರಭುತ್ವಕ್ಕೇನೆ ಮಹತ್ವಕೊಟ್ಟ ನಾಡು ಮಣಿಪುರ. ಹಾಗಾಗಿ ಅಲ್ಲಿನ ರಾಜ ಕುಟುಂಬಕ್ಕೆ ಮರ್ಯಾದೆ ಮತ್ತು ನಿ ಷೆ್ಠ ಎರಡೂ ಜಾಸ್ತಿನೇ. ಯಾವ್ಯಾವ ರಾಜ ಪರಿವಾರಗಳು ರಾಜ್ಯವನ್ನು ಮುನ್ನಡೆಸಿದವೋ ಅದೇ ಹೆಸರಿನಲ್ಲೂ ಕೆಲವೊಮ್ಮೆ ಪ್ರಾಬಲ್ಯದ ಸಮುದಾಯದ ಹೆಸರಿನಲ್ಲೂ ಇಲ್ಲೆಲ್ಲಾ ಬುಡಕಟ್ಟು ಮತ್ತು ಸಮುದಾಯದವರು ಬೆಳೆದುನಿಂತಿದ್ದು ಇತಿಹಾಸದ ವಿಶೇಷ ಅಧ್ಯಯನದ ಕಾಲದಲ್ಲಿ ನನ್ನನ್ನು ಹುಬ್ಬೇರಿಸುವಂತೆ ಮಾಡಿದ್ದು ಹೌದು. ಇಲ್ಲಿ ಕೆಲವು ಅಂಥಾ ಕುಟುಂಬದ ಸಮುದಾಯ ಮತ್ತು ಬುಡಕಟ್ಟುಗಳ ಹೆಸರುಗಳಿವೆ. ಖಂಡಿತಾ ಇದು ಸುಲಭದಲ್ಲಿ ನೆನಪಿಡಲು ಅಸಾಧ್ಯವಾದ ಭಾಷೆ ಮತ್ತು ಶಬ್ದಗಳಾದರೂ ಅಲ್ಲಿನ ಜನರಿಗೆ ಅದೆಷ್ಟು ಸುಲಭವಿತ್ತೆಂದರೆ ಮಾತಿನ ಮಧ್ಯೆ ನಾನು ಉಚ್ಛರಿಸುವ ಮೊದಲೇ ಅಲ್ಲೆಲ್ಲ ಇವುಗಳ ಬಗ್ಗೆ ಸರಸರನೇ ಮಾತುಗಳು ಹೊರಡುತ್ತಿದ್ದವು. ಮಾತೃಭಾಷೆ ಪರಿಣಾಮ ಎನ್ನುವುದು ಇದಕ್ಕೇನಾ..? ನನ್ನಲ್ಲೊಮ್ಮೆ ಮಾತೃಭಾಷೆಯ ಬಗೆಗಿನ ಜಿಜ್ಞಾಸೆ ಸುಳಿದು ಹೋದುದು ಸುಳ್ಳಲ್ಲ. ಕಾರಣ ಅಷ್ಟರಮಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಹೆಸರು ಮತ್ತು ಅಲ್ಲಿನ ಶಬ್ದಗಳು ಸ್ಪಷ್ಟವಾಗಿ ಚಾಲ್ತಿಯಲ್ಲಿರುವುದು. ಥಾಂಖುಲ್ಸ್‌, ಥೌಡು, ಝೀಮೈ, ಲಿಂಗಮೈ, ರುಂಗ ಮೈ, ಝೀಲಿಂಗ್ ರಾಂಗ್, ಮಾಯೊ, ಮಾರಂ, ಪೂವಾ ಮೈ, ಪೈಟಿ, ಹಮ್ರಾ, ಮಾರಿಂಗ್, 185 ಪ್ರಮೀಳೆಯರ ನಾಡಿನಲ್ಲಿ ಅನಲ್, ಐಮೋಲ್, ಅಂಗಾಮೈ, ಚಿರು, ಘೋಥೆ, ಗಂಗ್ಟೆಯೀ, ಮಾನಸೋಂಗ್, ಮಾಯೋನ್, ಕೋಮ್, ಪುರುಂ, ರಾಲ್ಟೆ, ಸೇಮಾ, ಸಿಮ್ಟೆ, ಸಾಲ್ಟೆ, ವೈಫೇಯಿ, ಲಾಮಾಂಗ್, ಹೌಯೂ ಹೀಗೆ ಇತಿಹಾಸ ಬಗೆಯುವಾಗ ನನ್ನ ಕೈಗೆ ಸಿಕ್ಕಿದ ಸಮುದಾಯಗಳಿವು. ಇವುಗಳನ್ನೆಲ್ಲ ಪಳಗಿಸಿ ನಿರಂತರವಾಗಿ ರಾಜ್ಯಭಾರವನ್ನು ಪ್ರಭುತ್ವದಡಿಯಲ್ಲಿ ನಡೆಸಿದ್ದಾರಲ್ಲ ಅಂಥಾ ಇತಿಹಾಸ ನಿಜಕ್ಕೂ ನನ್ನಲ್ಲಿ ಇನ್ನಷ್ಟು ಕೌತುಕಕ್ಕೆ ಕಾರಣವಾಗಿದ್ದು ಸಹಜವೇ. ಕಾರಣ ಈ ಮೇಲಿನ ಪ್ರತಿಯೊಂದು ಪಂಗಡಗಳೂ ವಿಭಿನ್ನ ಮತ್ತು ತಮ್ಮದೇ ಆದ ಶೈಲಿಯ ಭಾಷೆ ಆಚರಣೆ ಇತ್ಯಾದಿಗಳ ವೈಶಿಷ್ಟ್ಯತೆಯನ್ನು ಹೊಂದಿದ್ದಾರೆ. ಹಾಗೆಯೆ ಅದಕ್ಕೆ ಪ್ರತಿಯೊಬ್ಬರೂ ನಿಷ್ಠರಾಗಿದ್ದಾರೆ ಕೂಡಾ. ನಿರಂತರವಾಗಿ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಈ ಮೇಲಿನ ಪಂಗಡಗಳು ಮತ್ತು ಬುಡಕಟ್ಟುಗಳು ತಂತಮ್ಮ ಆಚಾರ ವಿಚಾರವನ್ನು ಬದಲಿಸಲು ಕಾಲನ ಕೈಗೆ ಅಧಿಕಾರವನ್ನು ಕೊಡಲಿಲ್ಲ ಎನ್ನುವುದೇ ಇವತ್ತಿಗೂ ಮಣಿಪುರದ ಇತಿಹಾಸವನ್ನು ಓದುವ ಪ್ರತಿಯೊಬ್ಬನಿಗೂ ಸೋಜಿಗವನ್ನುಂಟು ಮಾಡುತ್ತದೆ. ಹಾಗಾಗೇ ಇವತ್ತಿಗೂ ಮಣಿಪುರ ಹೊರಗಿನವರಿಗೆ ತೆರೆದುಕೊಳ್ಳುವುದೇ ಆದಲ್ಲಿ ಏನಿದ್ದರೂ ರಸ್ತೆ ಪಕ್ಕದಲ್ಲಿ ತಯಾರಿ ಮಾಡಿಟ್ಟ ಕೆಲವು ಸ್ಥಳಗಳಿಗೆ ಭೇಟಿ ಕೊಡುವುದಕ್ಕಷ್ಟೆ ಪ್ರವಾಸ ಸೀಮಿತವಾಗಿ ಉಳಿದಿದೆ. ಇವತ್ತಿಗೂ ಶೇ. 90 ರಷ್ಟು ಜನರಿಗೆ ಮತ್ತು ಅಲ್ಲಿನ ಅಧಿಕಾರಿಗಳಿಗೂ ಪಕ್ಕದ ಜಿಲ್ಲೆಯಲ್ಲೇನಾಗುತ್ತಿದೆ, ಅಲ್ಲಿ ಏನೇನಿದೆ ಕೇಳಿ ನೋಡಿ..? ಉಹೂಂ .. ನಾಲ್ಕಕ್ಷರವೂ ಅವರ ಬಾಯಿಂದ ಬರಲಾರದು. ಕಾರಣ ಯಾವ ಇತರೆ ಆಗು ಹೋಗುಗಳಿಗೆ ಇಲ್ಲಿನ ಜನ ಸ್ಪಂದಿಸಲಾರರು, ಅದಕ್ಕೆ ಮತ್ತದೆ ಸಂಪ್ರದಾಯ ಶೈಲಿಯ ಬುಡಕಟ್ಟುಗಳ ರಿವಾಜು ಹಾಗು ಭಾಷೆ ಮತ್ತು ಅದು ಅವರವರ ಮನೆ ವ್ಯವಹಾರ ನಮಗ್ಯಾಕೇ ಎನ್ನುವ ತಗುಲಿಕೊಳ್ಳದ ಮನಸ್ಥಿತಿ. ಆದರೆ ತಂತಮ್ಮ ನಿಜಾಯಿತಿಗಳನ್ನು ಪಾಲಿಸುವ ವಿಷಯದಲ್ಲಿ ಮಾತ್ರ ಜೀವದ ಹಂಗು ತೊರೆದು ಪ್ರತಿಭಟನೆಗಿಳಿಯುವಾಗ ಎಲ್ಲರೂ ಒಂದಾಗಿಬಿಡುವ ಎಂದಿನ ಒಗಟ್ಟು ಈಗಲೂ ಆಗೀಗ ಕಂಡುಬರುತ್ತಲೇ ಇದೆ. ಪ್ರಮೀಳೆಯರ ನಾಡಿನಲ್ಲಿ 186 ಮಿಥೀಸ್‍ಗಳ ಲಿಪಿಯಲ್ಲಿ ಬರೆಯಲಾದ ಕೆಲವು ಇತಿಹಾಸ ಮತ್ತು ಥಾಯಿ ಭಾಷೆಯಲ್ಲೂ ಲಭ್ಯವಾಗಿರುವ ಇತಿಹಾಸದ ಪ್ರಕಾರ ಹೆಚ್ಚಿನಂಶ ಇತಿಹಾಸದ ಕಥೆ "ನಿಂಗಾ ಥೌ ಕಂಗ್ಬಾಲೋನ್, ಚೈಥಾರೋಲ್ ಕುಂಬಾಬಾ, ನಿಂಗಥೌ ಲಂಬುಬಾ ಹಾಗು ಕುಂಥ್ಕೊಕ್ಪಾ " ಇವರು ನಾಲ್ಕು ಜನರ ಸುತ್ತಲೇ ಸುತ್ತುತ್ತದೆ. ಅದರಲ್ಲೂ ಇವರುಗಳ ಕಾಲದಲ್ಲಿ ಅವರವರ ಆಡಳಿತ ಮತ್ತು ಇಚ್ಛೆಗೆ ತಕ್ಕಂತೆ ಇದೇ ಮಣಿಪುರವನ್ನು ಟಿಲ್ಲಿ ಕೊಖ್‍ಟೊಂಗ್, ಪೋಯಿರೈ- ಲಾಮ, ಸನ್ನ-ಲೈಪಾಕ್, ಮೀಠಿ-ಲೈ ಪಾಕ್, ಮೈತ್ರಾಬಾಕ್ ಎಂಬಿತ್ಯಾದಿ ಹೆಸರುಗಳಿಗೆ ಈಡು ಮಾಡಿದ್ದೂ ಇದೆ. ಇ ಅಷ್ಟಾಗಿಯೂ ಇದು ಕೊನೆಯವರೆಗೂ ಅಲ್ಲಲ್ಲಿ ಹೆಸರಿಗೀಡಾದಂತೆ ಅದೇ ಮಣಿಪುರ ಆಗಿಯೇ ಉಳಿದದ್ದು ಇವತ್ತಿಗೂ ಅಚ್ಚರಿ. ಅದೇ ರೀತಿ ಇದರ ರಾಜಧಾನಿ ಮೊದಲು "ಕಂಗ್ಲಾ" ಕ್ರಮೇಣ "ಯುಂಫಾಲ" ಆಗಿದ್ದಿದ್ದು ಈಗ "ಇಂಫಾಲ" ಆಗಿದೆ. ಈ ಎಲ್ಲಾ ಇತಿಹಾಸದಲ್ಲೂ ವಿಜೃಂಭಿಸಿದ್ದು 15ನೆಯ ಶತಮಾನದ "ನಿಂಗಥೌ ಪಕಾಂಗ್ಬಾ" ಎಂಬಾತ. 1891ರಲ್ಲಿ ಬ್ರಿಟಿಷರು ಈ ರಾಜರುಗಳ ಅಡಳಿತವನ್ನು ಕೊನೆಗಾಣಿಸಿದ ಮೇಲೆ ಬ್ರಿಟಿಷ್‌ ಆಡಳಿತ ಆರಂಭವಾಗಿದ್ದು ಭಾರತ ಸ್ವತಂತ್ರವಾದರೂ ಇದು ಸ್ವತಂತ್ರ ರಾಜ್ಯವಾಗಿದ್ದು 1972 ರಲ್ಲಿ. ಅಲ್ಲಿಯವರೆಗೂ ಕೇಂದ್ರಾಡಳಿತ ಪ್ರದೇಶವಾಗಿ ಉಳಿದಿದ್ದ ಮಣಿಪುರ ಇವತ್ತು ಭಾರತದ ಆಭರಣ ಎಂದು ಬಣ್ಣಿಸುವ ಹಂತದಲ್ಲಿದೆ. ಆದರೆ ಹಾಗೆ ಬಣ್ಣಿಸುವಾಗ ಅದನ್ನು ಹೆಸರಿಸಿದ್ದವರು ಪೂರ್ತಿ ಮಣಿಪುರವನ್ನು ಸಂದರ್ಶಿಸದೇ ಉಳಿದದ್ದು ಮತ್ತು ಆಭರಣಕ್ಕಾಗಿ ಕೇವಲ ಇಂಫಾಲವನ್ನು ಮಾನದಂಡವನ್ನಾಗಿಸಿಕೊಂಡಿದ್ದರಿಂದ ಈಗಿನ ಪ್ರವಾಸಿಗರಿಗೆ ಇದು ಭ್ರಮನಿರಸನವನ್ನು ಉಂಟುಮಾಡುತ್ತದೆ. ಅತ್ಯಂತ ಎಚ್ಚರಿಕೆಯಿಂದ ಇತಿಹಾಸವನ್ನು ಅಭ್ಯಸಿಸುವ ಇತಿಹಾಸಕಾರ ಮಾತ್ರ ಮಣಿಪುರದ ಹಂತಗಳನ್ನು ಸರಿಯಾಗಿ ಅರಿಯಬಲ್ಲ. "ಸರ್ ವಿಲ್ಲಿಯಂ ಜೋನ್ಸ್ 1786" ರಲ್ಲಿ ಇದನ್ನು ಅದೆಷ್ಟು ನಿಖರವಾಗಿ ದಾಖಲಿಸಲು ಯತ್ನಿಸಿದ್ದಾನೆಂದರೆ ಪ್ರತಿ ಹಂತದಲ್ಲೂ ಹೆಜ್ಜೆಯಲ್ಲೂ ಎಲ್ಲೂ ಕೊಂಡಿಗಳು ತಪ್ಪಿಹೋಗದಂತೆ ಇದರ ಮೆಟ್ಟಿಲುಗಳ ಬಗ್ಗೆ ವಿಶೇಷ ಕಾಳಜಿ 187 ಪ್ರಮೀಳೆಯರ ನಾಡಿನಲ್ಲಿ ವಹಿಸುತ್ತಾನೆ. ಆತನ ಅವಧಿಯಲ್ಲಿ ನಡೆದ ಹುಡುಕಾಟದಲ್ಲಿ ಇಲ್ಲಿನ ಭಾಷೆಗೂ ಗ್ರೀಕ್ ಮತ್ತು ಲ್ಯಾಟಿನ್‍ಗೂ ಇರುವ ಸಂಬಂಧ ಬಗ್ಗೆ ಮೊದಲ ಬಾರಿಗೆ ಹೊರಹಾಕಲಾಗಿದೆ. ಇವೆಲ್ಲದರೊಂದಿಗೆ ಸಂಸ್ಕೃತಕ್ಕೂ ಕೂಡಾ ನೇರ ಸಂಬಂದ ಇದೆ ಎನ್ನುವುದನ್ನು ಅವನ ಅಭ್ಯಾಸ ತಿಳಿಸುತ್ತದೆ. ಹಿಂದಿಯ ಮಾತಾ, ಇಂಗ್ಲೀ ಷ ನ ಮದರ್, ಗ್ರೀಕ್ / ಲ್ಯಾಟಿನ್‍ಗಳ ಮತರ್ ಹಾಗು ಸಂಸ್ಕೃತದ ಮತರ್‌ಗಳನ್ನು ಹೋಲಿಸುವ ವಿಲಿಯಂ ಹೀಗೆ ಸಾವಿರಾರು ಪದಗಳ ಸಂಬಂಧವನ್ನು ಉದಾಹರಿಸಿ ಅಭ್ಯಸಿಸಿದ್ದಾನೆ. (ಇಲ್ಲಿ ಒಂದು ವಿಷಯವನ್ನು ಓದುಗರಿಗೆ ನಾನು ಹೇಳಬೇಕು. ಸುಮಾರು 200 ವರ್ಷಗಳ ಭಾಷೆಗಳ ಅಧ್ಯಯನದ ನಂತರ ನಿರಂತರವಾದ ಜನರ ವಲಸೆಯಿಂದಾಗಿ ಜಗತ್ತಿನೆಲ್ಲೆಡೆಯಿಂದ ಇಂಡೊ – ಯುರೋಪಿಯನ್ನರ ಸಾಮಾನ್ಯ ಸಂಪನ್ಮೂಲ ಕೂಡಾ ಇತರ ಭಾಷೆಗಳ ಮೇಲೆ ಪ್ರಭಾವ ಬೀರಿದ್ದು ಸ್ಪಷ್ಟ. ಹಾಗಾಗೇ ಕ್ರಿ.ಪೂ. 3400-2500 ವರೆಗೂ ಕೇಂದ್ರ ಯೂರೋಪ ಅಥವಾ ಮಧ್ಯ ಯುರೋಪನಿಂದ ಪಶ್ಚಿಮ ಮತ್ತು ಪೂರ್ವದ ಕಡೆಯಲ್ಲಿ ಜನರ ಅಗಾಧ ವಲಸೆ ಕಂಡುಬರುತ್ತದೆ. ಭಾಷೆಗಳ ತುಲನಾತ್ಮಕ ಅಧ್ಯಯನ ಇದರ ಮೇಲೆ ಸ್ಪಷ್ಟವಾದ ಬೆಳಕು ಚೆಲ್ಲುತ್ತಿದ್ದು ಇವೆಲ್ಲಾ ಭಾಷೆಗಳ ಮಧ್ಯೆ ನಿಖರ ಸಂಬಂಧ ಕಂಡುಬರುತ್ತಿದೆ. ಈ ಮೂಲಕ ಮಣಿಪುರ ಮಾತ್ರವಲ್ಲ ನಮ್ಮೆಲ್ಲ ಭಾಷೆಗಳೂ ಹೀಗೆ ಆ ಕಾಲದಿಂದಲೇ ಸಂಸ್ಕೃತದೊಂದಿಗೆ ತಳಕು ಹಾಕಿಕೊಂಡಿದ್ದು ಇತಿಹಾಸದ ಅಧ್ಯಯನ ಸ್ಪಷ್ಟಪಡಿಸುತ್ತದೆ. ದೇಶದ ಯಾವುದೇ ರಾಜ್ಯದ ಇತಿಹಾಸದಲ್ಲೂ ಭಾಷೆ ಪಡೆದಿರುವ ಪ್ರಾಮುಖ್ಯತೆ ಹಾಗು ಅದಕ್ಕೆ ಸಲ್ಲಿರುವ ಪ್ರಾಮುಖ್ಯತೆ ನಿಜಕ್ಕೂ ಮತ್ತೊಮ್ಮೆ ಅಧ್ಯಯನಕ್ಕೀಡುಮಾಡಬೇಕಾದ ವಿಷಯ. ಕಾರಣ ಭಾಷೆಯ ತಳಹದಿಯ ಮೇಲೆಯೆ ಈ ಎಲ್ಲ ಸಮುದಾಯ ಮತ್ತು ಸಂಪ್ರದಾಯಗಳು ಎದ್ದು ನಿಲ್ಲುತ್ತಿವೆ. ಈಗಲೂ ಯಾವುದೇ ಸನ್ನಿವೇಶಕ್ಕೂ ಭಾಷೆಯ ತಂತ್ರಜ್ಞಾನಕ್ಕೂ ತಮ್ಮನ್ನು ಒಡ್ಡಿಕೊಳ್ಳಲು ಸಿದ್ಧರಿವೆ ಎನ್ನುವುದು ಗಮನೀಯ - ಲೇಖಕ.) ಪ್ರಮೀಳೆಯರ ನಾಡಿನಲ್ಲಿ 188 ಸುಲಭ ಅಧ್ಯಯನಕ್ಕಾಗಿ ಮಣಿಪುರದ ಇತಿಹಾಸವನ್ನು ಆಧುನಿಕ ಸಮಾಜದ ಕೊಂಡಿಯಾಗುವವರೆಗಿನ ಕಾಲಾವಧಿಯನ್ನು ನಾಲ್ಕು ಭಾಗವಾಗಿ ವಿಂಗಡಿಸಲ್ಪಡುತ್ತದೆ. 1. ಪುರಾತನ (ಶಿಲಾಯುಗ) ಕಾಲಾವಧಿ ( ಕ್ರಿ. ಪೂ. ಭಾಗ) 2. ಆರಂಭದ ಕಾಲಾವಧಿ (ಕ್ರಿ.ಶ 1 ರಿಂದ 3 ನೇ ಭಾಗದ ಕಾಲಾವಧಿ) 3. ಮಧ್ಯಮ ಕಾಲಾವಧಿ (ಕ್ರಿ.ಶ 13 ರಿಂದ 18 ನೇ ಕಾಲಾವಧಿ) 4. ನವಯುಗದ ಅಥವಾ ಆಧುನಿಕ ಕಾಲಾವಧಿ (19 ಮತ್ತು 20 ನೇ ಶತಮಾನದ ಭಾಗ) ಅನುಬಂಧ : 1 – ಇದರಲ್ಲಿ ಸಂಪೂರ್ಣ ರಾಜರು ಮತ್ತು ಅವರ ಕಾಲಾವಧಿಯ ವಿವರಣೆ ಕೊಡಲಾಗಿದೆ. ಮಣಿಪುರದ ಶಿಲಾಯುಗ : (ಪುರಾತನ ಕಾಲಾವಧಿ (ಕ್ರಿ.ಪೂ. ಕಾಲಾವಧಿ) ಥಂಗ್‍ರ ಕಾಲಾವಧಿಯನ್ನು ಇಲ್ಲಿ ಉಲ್ಲೇಖಿಸಲಾಗುವ ಪುರಾತನ ಕಾಲಾವಧಿಯಲ್ಲಿ ಪ್ರಮುಖವಾಗಿ "ಕ್ವಿ" ಎನ್ನುವಂಥಾ ಬುಡಕಟ್ಟು ತನ್ನ ಪಾರಮ್ಯ ಮೆರೆದಿದ್ದು ದಾಖಲಾಗಿದೆ. ಈ "ಕ್ವಿ" ಜನಾಂಗ ಈಗಿನ ಚೀನಾದ ಮಧ್ಯಭಾಗದಿಂದ ಇಲ್ಲಿಗೆ ಬಂದವರೆಂದು ಗುರುತಿಸಲಾಗಿದ್ದು ಇವರನ್ನು ಥಂಗ್-ಶಾಂಗ್ ವಂಶದವರೆಂದು ನಮೂದಿಸಲಾಗಿದೆ. ಇವರ ಕಾಲಾವಧಿಯಲ್ಲಿ ಶಂಗ್ ಆಡಳಿತದ ರಾಜ "ಥಾಂಜೆ-ಲೀಲಾ-ಪಖಾಂಗ್ಬಾ" ಮತ್ತು ಅವನ ಮೊಮ್ಮಗ "ಕಾಂಗ್ಬಾ" ಈ ಪ್ರದೇಶವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದರು. ಹಾಗಾಗೇ ಇವತ್ತಿಗೂ ಮಣಿಪುರದ ಗಲ್ಲಿಗಳಿಂದ ಯಾವುದೇ ಊರಿನ ಬುಡಕ್ಕೆ ನೀವು ಕಾಲಿಟ್ಟರೂ ಚಿಕ್ಕ ಚಿಕ್ಕ ಕಣ್ಣುಗಳ ನೇರ ಮೂಗಿನ ಗಿಡ್ಡಗಿನ ಆಕೃತಿಯ ಮಿಥೇಯಿಗಳು ನಮ್ಮ ಚಹರೆಗೂ ಹೊರತಾದ ವ್ಯಕ್ತಿಯಾಗಿ ಸ್ಪಷ್ಟವಾಗೇ ನನಗೆ ಗೋಚರವಾಗುತ್ತಿದ್ದರು. ಮುಖ್ಯ ಕ್ರಿ.ಪೂ. 1405 ರಿಂದ ಕ್ರಿ.ಪೂ.1395ರ ಅವಧಿಯಲ್ಲಿ ಚೇರೊಬಾ (ಕ್ಯಾಲೆಂಡರ್ ಪದ್ಧತಿಯ)ನ್ನು ಜಾರಿಗೆ ತರಲಾಗಿದ್ದು ಮಣಿಪುರ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಇವನ ನಂತರ "ಕೊಯಿ-ಕೊಯಿ" ಎನ್ನುವವ 189 ಪ್ರಮೀಳೆಯರ ನಾಡಿನಲ್ಲಿ ರಾಜ್ಯದ ಅಧಿಕಾರ ವಹಿಸಿಕೊಂಡಿದ್ದು ಈ ಕ್ಯಾಲೆಂಡರ್ ಗೆ "ಮಾರಿ-ಫಾಮ್" ಎಂದು ಕರೆಯುತ್ತಿದ್ದರು. ಆದರೆ ಇತಿಹಾಸದಲ್ಲೇ ಒಂದು ಪ್ರಮುಖ ಅಂತರವೂ ಕಂಡುಬರುತ್ತದೆ. ಅದೆಂದರೆ ಕ್ರಿ.ಪೂ. 34 ರಿಂದ ಕ್ರಿ.ಪೂ. 18ವರೆಗಿನ ಕಾಲಾವಧಿಯಲ್ಲಿ ಕ್ರಿ.ಪೂ. 934 ರವರೆಗೆ ಯಾವ ಘಟನೆಗಳೂ ದಾಖಲಾಗುವುದಿಲ್ಲ. ಯಾವ ಮಾಹಿತಿಯು ಈ ಮಧ್ಯದ ಕಾಲಾವಧಿಗೆ ಸಿಕ್ಕುವುದಿಲ್ಲ. ಸುಮಾರು ಈ 700 ವರ್ಷಗಳ ಅವಧಿಯನ್ನು ಮೊದಲು ಆಳಿದ ಇಬ್ಬರ ಮಾಹಿತಿಯ ಹೊರತಾಗಿ ನಿಗೂಢವಾಗೇ ಉಳಿದುಬಿಟ್ಟಿದೆ. ಬಹುಶ: ಈ ದೀರ್ಘಾವಧಿಯ ಅಂತರದಲ್ಲಿ ಮಣಿಪುರದ ಅಡಳಿತ ಎನ್ನುವುದಕ್ಕಿಂತಲೂ ಪ್ರಾಕೃತಿಕವಾಗಿಯೋ ಅಥವಾ ದಾಳಿಗಳ ಹೊಡೆತಕ್ಕೋ ನಲುಗಿ ಮೊದಲಿನ ಸಮೃದ್ಧ ನಿಯಮಬದ್ಧ ಇತಿಹಾಸ ದಾಖಲೆಗೀಡಾಗದೆ ಅಂತರ ಉಂಟಾಗಿದ್ದು ಕಂಡುಬರುತ್ತದೆ. ಹಾಗಾಗೇ ಅದರ ಮೊದಲಿನ ತಲೆಮಾರಿನಿಂದ ದಾಖಲಾದ ಮುಂದಿನ ಸಂತತಿಗಳು ಇಷ್ಟೊಂದು ಅಪ್ಪಟ ಜೀವನ ಶೈಲಿಗೆ, ತಮ್ಮ ನೆಲೆ ಮತ್ತು ಕುಲಗಳ ಉಳಿಕೆಗೆ ಬದ್ಧರಾಗಿಬಿಟ್ಟರಾ..? ನನ್ನನ್ನು ಈಗಲೂ ಕಾಡುವ ಅಂಶಗಳಲ್ಲಿ ಒಂದು. ಕಾರಣ ಮೊದಲಿನ ಮತ್ತು ಶಿಲಾಕಾಲದ ನಂತರದ ಕಾಲಾವಧಿಯಲ್ಲಿ ಉಳಿದಿದ್ದ ಮೀಥೀಸ್‍ಗಳ ಹಾಗು ಅವರ ಇತರೆ ಬುಡಕಟ್ಟುಗಳ ಪದ್ಧತಿ ಮತ್ತು ಜೀವನ ಶೈಲಿ ಈಗಲೂ ಹಾಗೆ ಮುಂದುವರೆದುಕೊಂಡು ಬಂದಿದೆಯಾದರೆ ಈ ಮಧ್ಯಂತರದ ಕಾಲಾವಧಿಯಲ್ಲಿ ಲೆಕ್ಕಕ್ಕೇ ಸಿಗದೆ ಉಳಿದುಹೋದ ಮಣಿಪುರಿಗಳು ಅಷ್ಟು ವ್ಯವಸ್ಥಿತವಾಗಿ ಹೇಗೆ ಈಗಿನ ತಲೆಮಾರಿಗೆ ತಮ್ಮೆಲ್ಲಾ ಮೂಲವನ್ನು ದಾಟಿಸಿದರು. ಈಗಿನ ಅತೀವ ವೇಗದಲ್ಲೂ ಹೇಗೆ ಅವರು ಈ ಬದ್ಧತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ..? ಅಷ್ಟು ಪ್ರಖರ ಸರ್ವ ಹಂತದ ಜೀವನ ಶೈಲಿ ಮತ್ತು ಸಂಪ್ರದಾಯ ಮಣಿಪುರಿಗಳು ಹೇಗೆ ಸಾವಿರಾರು ವರ್ಷಗಳಿಂದಲೂ ಕಾಯ್ದುಕೊಳ್ಳಲು ಸಾಧ್ಯವಾಯಿತು..? ಎಲ್ಲದಕ್ಕೂ ತೌಲನಿಕ ಅಧ್ಯಯನ ಬೇಕು ಎನ್ನುವ ಮುಂಚೆ ಕೊನೆಯಲ್ಲೂ ಉಳಿಯುವ ಸಮಾಧಾನಕಾರ ಅಂಶವೆಂದರೆ ಮಾತೃಭಾಷೆ ಪ್ರಮೀಳೆಯರ ನಾಡಿನಲ್ಲಿ 190 ಎನ್ನುವ ಬಿಗಿಯಾದ ಬಂಧ ಇದೆಲ್ಲದರ ಹಿಂದೆ ಕೆಲಸ ಮಾಡಿದೆ ಎಂದರೆ ಅದರ ಮಹತ್ವ ನಮಗರಿವಾದೀತು. ಬಹುಶ: ಇದ್ದುದೆಲ್ಲವನ್ನು ಉಳಿಸಿಕೊಂಡು ಜೀವ ಉಳಿಸಿಕೊಳ್ಳಲು ಎಲ್ಲಾ ಬುಡಕಟ್ಟು ಮತ್ತು ಇತರೆ ಸಮುದಾಯಗಳು ಇದ್ದಲ್ಲೇ ತಲೆ ಮರೆಸಿಕೊಂಡು ಜೀವನ ಮುಂದುವರೆಸಿರಬೇಕೆನ್ನುವ ವಾದವೂ ಇದೆ. ಕಾರಣ ಇಂಥಾ ಅಗಾಧ ಅಂತರದ ದಾಖಲೆಯಿಲ್ಲದ ದೀರ್ಘ ಕಾಲಾವಧಿಯ ನಂತರವೂ ಅದೇ ಮಣಿಪುರಿಗಳ ಸಾಂಪ್ರದಾಯಿಕತೆ ಉಳಿದದ್ದು ಸೋಜಿಗ ಮತ್ತದನ್ನು ಉಳಿಸಿಕೊಂಡು ಬಂದು ಮುಂದಿನ ತಲೆಮಾರುಗಳಿಗೆ ದಾಟಿಸುವ ಕೆಲಸ ನಿರ್ವಹಿಸಿದವರಿಗೆ ನಿಜಕ್ಕೂ ಈ ಕೀರ್ತಿ ಸಲ್ಲಲೇಬೇಕು. ಕೋಯಿ ಜನಾಂಗದ "ನೊಂಗಡ್ರೆನ್ ಪಖಾಂಗ್ಬಾ" ಕ್ರಿ.ಪೂ.934 ರಲ್ಲಿ ಆಳ್ವಿಕೆ ನಡೆಸಿದ್ದ ದಾಖಲೆ ಲಭ್ಯವಾಗುತ್ತದೆ. ಹಾಗೆಯೇ ಕ್ರಿ.ಪೂ. 34 ರಿಂದ 18ರವರೆಗೆ "ಚಿಂಗ್-ಕೊಂಗ್- ಪೊಯಿರಿಷನ್" ಆಳ್ವಿಕೆ ನಡೆಸಿದ ದಾಖಲೆಯ ನಂತರ ಯಾವ ಮಾಹಿತಿಗಳು ಲಭ್ಯವಾಗುವುದಿಲ್ಲ. ಹಾಗಾಗಿ ಈ ಖಾಲಿ ಉಳಿದ ಅವಧಿಯನ್ನು ಇತಿಹಾಸದಲ್ಲಿ "ಥೈ-ಪಾಂಗ್-ಪಾನ್" ಎಂದೇ ಗುರುತಿಸಿಡಲಾಗಿದೆ. ಆದರೂ ಕ್ರಮವಾಗಿ ಆಳ್ವಿಕೆ ಮತ್ತು ಆಡಳಿತಾವಧಿಯ ಒಂದಷ್ಟು ನಿಖರ ಮಾಹಿತಿಯ ಆಧಾರದ ಮೇಲೆ "ಕ್ವಿ" ವಂಶದ ಆಡಳಿತ "ಶಾಂಘ್" ಎಂದು ಗುರುತಿಸಲ್ಪಟ್ಟಿದ್ದು ಕಂಡು ಬರುತ್ತದೆ (ಕ್ರಿ.ಪೂ.1523 ರಿಂದ ಕ್ರಿ.ಪೂ1027) ಈ ಕಾಲಾವಧಿ ಸಂಪೂರ್ಣ ಶಾಂಘ್ ಆಡಳಿತದ ಕಾಲಾವಧಿ (ಇದಕ್ಕೂ ಮೊದಲು ಒಂದಷ್ಟು ಕಾಲ " ಪೊಯಿರಿಷನ್" ಪಾಳೆಗಾರಿಕೆ ನಡೆಸಿದ ದಾಖಲೆಗಳಿವೆ). ಥಂಗ್-ಶಾಂಘ್ ಒಂದರ್ಥದಲ್ಲಿ ಪುರಾತನ ಮಿಥೀಸ್‍ಗಳೇ ಆಗಿದ್ದಾರೆ ಎನ್ನುವುದು ನನ್ನ ಅನುಮಾನ ಕೂಡಾ. ಇದಕ್ಕೆ ಪುಷ್ಟಿ ಕೊಡುವಂತೆ ಆವತ್ತಿನ ಮತ್ತು ಇವತ್ತಿನ ಮಿಥೀಸ್‍ಗಳಿಗೂ ಆಚರಣೆಯಿಂದ ಜೀವ ವೈವಿಧ್ಯದಲ್ಲಿ ಯಾವುದೇ ವ್ಯತ್ಯಾಸವೇ ಇಲ್ಲ. ಪ್ರತಿಯೊಂದರಲ್ಲೂ ಹೊಂದಾಣಿಕೆ ಇರುವ ಎರಡೂ ಜನಾಂಗ ಸುಮ್ಮನೆ ಬೇರೆಯಾದದ್ದು ಎನ್ನಿಸುವುದು ಸಹಜ ಇತಿಹಾಸಕಾರನಿಗೆ. 191 ಪ್ರಮೀಳೆಯರ ನಾಡಿನಲ್ಲಿ ಈ ಕಾಲಾವಧಿಯಲ್ಲಿ ಕುದುರೆಯ ಸಾಗಾಣಿಕೆಯ ಮಹತ್ವ, ಸಮಾಜದಲ್ಲಿ ಜಾತಿ ವ್ಯವಸ್ಥೆ, ಕೃಷಿಗೆ ತೆರಿಗೆ ಇತ್ಯಾದಿ ಚೀನಾದಿಂದ ಪ್ರೇರೇಪಿತ ಅಧಿಕಾರ ನಡೆಸುವ ಪದ್ಧತಿಗಳು ಅಸ್ತಿತ್ವದಲ್ಲಿದ್ದವು. "ಯಂಗ್ ಟಿಸಿಕಿಯಾಂಗ್" ಮತ್ತು "ಹೂವಾಂಗ್ ಹೋ.." ನದಿಯ ತೀರದಿಂದ ಹೊರಟ ಈ ವಲಸೆ ಇಲ್ಲಿಗೆ "ನಿಂಗ್ಥಿ" ಮೂಲಕ ಹರಿದು ಬಂದಿರುವುದು ಸ್ಪಷ್ಟವಾಗುತ್ತದೆ (ಈಗಿನ "ಚಿಂಡ್ ವಿನ್" ನದಿ - ಇದು ಈಗಿನ ಮ್ಯಾನ್ಮಾರ್‌ನಲ್ಲಿದೆ). ನಂತರದಲ್ಲಿ ಅದು ಈಗಿನ "ಇರೀಲ್" ನದಿಯಾಗಿ ಒಂದು ಶಾಖೆ ಹರಿಯುತ್ತಿದೆ. ಈ "ಥಂಗ್-ಶಾಂಘ್" ಬುಡಕಟ್ಟು ಕ್ರಮೇಣ "ಲೈ-ಹುಯಿ" ಸಮುದಾಯದೊಡನೆ ಸೇರಿ ಜೀವನ ನಡೆಸುತ್ತಾರೆ. ಅದೂ ಅಪ್ಪಟ "ಟಿಬೇಟೊ - ಬರ್ಮನ್" ಗುಂಪಾಗಿರುವುದರಿಂದ ಹಾಗೇಯೆ ಗುರುತಿಸಲಾಗಿದೆ (ಒಂದು ರೀತಿಯಲ್ಲಿ ಇಂಡೊಟಿಬೇಟಿಯನ್ ತರಹ). ಶಾಂಘ್‍ರ ಪ್ರಮುಖ ಮತ್ತು ನಾಯಕ, ಲೈ-ಹುಯಿ ಪಂಗಡದ ಪ್ರಮುಖನ ಮಗಳನ್ನು ಮದುವೆಯಾಗಿ ಎರಡೂ ಸಮುದಾಯದ ಬೆಸುಗೆಗೆ ಕಾರಣವಾಗುತ್ತಾನೆ. ಕ್ರಿ.ಪೂ. 1445 ರಲ್ಲಿ ನಡೆಯುವ ಘಟನೆ ಮಣಿಪುರ ಇತಿಹಾಸದಲ್ಲಿ ಪ್ರಮುಖ ಹಂತವಾಗಿ ದಾಖಲಾಗುತ್ತದೆ. ಕಾರಣ ಅವನೇ ಮುಂದೆ ಥಾಂಗ್‍ಜಾ (ಮೂಲ ಥಾಂಗ್ ಶಾಂಗ್‍ನ ಶಾರ್ಟ್ ಹೆಸರು), ಲೀಲಾ (ಇರ್ರಿಲ್ ನದಿಯನ್ನು ಹಿಂಬಾಲಿಸಿದವನು) ಪ (ಹಳೆಯ ತಲೆಮಾರಿನ ಗುರುತಿನವ), ಖಂಗ್ಬಾ (ಪ್ರಸ್ತುತ ಸಂತತಿಯವ) ಎಂದು ಗುರುತಿಸಲ್ಪಡುತ್ತಾನೆ. "ಥಂಗ್ಜಾ-ಲೀಲಾ-ಪಕಂಗ್ಬಾ" ಎನ್ನುವುದಕ್ಕೆ ಇಷ್ಟೆಲ್ಲಾ ಐತಿಹಾಸಿಕ ಕಾರಣವೂ ಇರುವುದರಿಂದ ಪ್ರತಿ ಹೆಸರೂ ಇಲ್ಲಿ ಒಂದೊಂದು ಕಥೆಯನ್ನು ಹೊಂದಿದೆ. ಈ ಪಕಂಗ್ಬಾ ಹೆಸರು ಈಗಲೂ ಹಲವು ಅಂಗಡಿ, ಮನೆ, ದೊಡ್ಡ ಮಾಲ್ ಇತ್ಯಾದಿಗಳಿಂದ ಮೀನು ಮಾರುವ ಅಂಗಡಿಯ ಬೋರ್ಡಿನಲ್ಲೂ ರಾರಾಜಿಸುತ್ತದೆ. ಅಷ್ಟು ಪ್ರಭಾವಶಾಲಿ ಇತಿಹಾಸದ ಪಕಾಂಗ್ಬಾನ ಚಿತ್ರ ಮಾತ್ರ ಎಲ್ಲೂ ಅಧಿಕೃತವಾಗಿ ಲಭ್ಯವಿಲ್ಲ. ಜನಪದೀಯ ಶೈಲಿಯಲ್ಲಿ ಚಿತ್ರಿಸಿರಬಹುದಾದ ಸಾಧ್ಯತೆಯ ಮುಖ ಮಾತ್ರ ಈಗ ಲಭ್ಯ. ಮುಂದೆ ಈ "ಥಂಗ್ಜಾ ಲೀಲಾ ಪಕಂಗ್ಬಾ"ನ ಮಗ "ಕಾಂಗ್ಬಾನೇ ಟಿಲ್ಲಿ" ಈಗಿನ ಮಣಿಪುರವನ್ನು ಆಗ "ಕೋಕ್‍ಟಾಂಗ್" ಎಂದು ಮರು ಪ್ರಮೀಳೆಯರ ನಾಡಿನಲ್ಲಿ 192 ನಾಮಕರಣಕ್ಕೊಳಪಡಿಸಿದ ಪಾಳೆಯಗಾರ. ಇವನ ಕಾಲದಲ್ಲೆ "ಲೈ-ಯಮ್" ದೇವಸ್ಥಾನ ನಿರ್ಮಾಣದಂತಹ ಕಾರ್ಯವನ್ನು "ಸನಾ-ಮಾಯಿ" ದೇವತೆಗಾಗಿ ಕೈಗೊಳ್ಳಲಾಗುತ್ತದೆ. ನಿರಂತರ 46 ವರ್ಷಗಳ ಕಾಲ "ಕಾಂಗ್ಬಾ" ರಾಜ್ಯವನ್ನಾಳುತ್ತಾನೆ. ಪ್ರಸ್ತುತ ಇಂಫಾಲ ಎನ್ನಿಸಿಕೊಂಡಿರುವ ಪೂರ್ವದ ಪರ್ವತ ಪ್ರದೇಶವನ್ನಾಳಿಕೊಂಡಿದ್ದ "ನೊಂಗ್ಫಾ ನಿಂಗ್ಥು"ವಿನ ಮಗಳು "ಲೈಮಾ ತರಿತ್ನು" ಇವನೊಂದಿಗೆ ರಾಜ್ಯವಿಸ್ತಾರದಲ್ಲಿ ಪಾಲ್ಗೊಳ್ಳುತ್ತಾಳೆ. ಈ ಸಂಬಂಧದಿಂದ ಪೂರ್ವ ಮತ್ತು ಪಶ್ಚಿಮ ಈಶಾನ್ಯದಲ್ಲಿ ಸಂಪರ್ಕವೇರ್ಪಡಲು ಕಾರಣವಾಗುತ್ತದೆ. ಈ ಕಾರಣದಿಂದ ಬೆಳೆದ ನಾಡಿನ ಪೂರ್ವ ಪಶ್ಚಿಮದ ಈ ಪ್ರದೇಶವನ್ನು ಕಾಂಗ್ಬಾ "ಲೋಕ್ತಾಕ" ಎಂದು ಹೆಸರಿಡುತ್ತಾನೆ. ಇವರಿಬ್ಬರ ಮುಂದಿನ ಸಂತತಿಯೇ "ಕೊಯಿ-ಕೊಯಿ" ಎಂಬ ಮಗ ಮತ್ತು ಮುಂದಿನ ಪೀಳಿಗೆಯ ಅರಸು. ಇವನ ಹುಟ್ಟಿದ ಪ್ರಯುಕ್ತ ಕಾಂಗ್ಬಾ ಹೊಸ ಕುದುರೆಯ ಪೋಲೊ ಆಟದ ಮಾದರಿಯನ್ನು ಅನ್ವೇಷಿಸಿ ಪ್ರಸಿದ್ಧಿಗೆ ತರುತ್ತಾನೆ. ಇದು ಜಗತ್ತಿನ ಮೊಟ್ಟ ಮೊದಲ ಆಟ ಆರಂಭಿಸಿದ ಖ್ಯಾತಿ ಹಾಗು ಆ ಕ್ರೀಡಾಂಗಣವನ್ನು ನಿರ್ಮಿಸಿದ ಖ್ಯಾತಿಗೂ ಈತ ಸಲ್ಲುತ್ತಾನೆ. ಇವತ್ತಿಗೂ ಜಗತ್ತಿನ ಅತ್ಯಂತ ಪುರಾತನ ಪೊಲೋ– ಕುದುರೆಯಾಟದ ಕ್ರೀಡಾಂಗಣ ಮತ್ತು ಆಟ ಹಾಗೆಯೇ ಆಡಲಾಗುತ್ತಿದೆ ಮತ್ತು ಆ ಸಂಪ್ರದಾಯ ಬದ್ಧ ಶೈಲಿ ಹಾಗು ಅದರ ಶ್ರೀಮಂತಿಕೆಯನ್ನು ಉಳಿಸಿಕೊಂಡು ಬರಲಾಗಿದೆ. ಹಾಗಾಗಿ ಇಲ್ಲಿನ ಹುಡುಗರಿಗೆ ಮತ್ತು ಕುದುರೆಗಳಿಗೆ ಈ ಪೋಲೋ ದೆಸೆಯಿಂದಾಗಿ ಚೆಂಡಿನ ಗತಿ ಮತ್ತು ನಿಯಂತ್ರಣ ಸಾಮಾನ್ಯವಾಗಿ ಬಂದು ಬಿಟ್ಟಿದೆ. ಮಣಿಪುರದ ಹೃದಯ ಭಾಗದಲ್ಲಿ ಇರುವ ಈ ಕ್ರೀಡಾಂಗಣ ಯಾವುದೇ ದೃಷ್ಟಿಯಿಂದಲೂ ಜಗತ್ತಿನ ಅತ್ಯಂತ ಪುರಾತನ ಮೈದಾನ ಎಂದು ದಾಖಲಾಗಿದೆ. ಇಲ್ಲಿ ಈಗಲೂ ಅದೇ ಮಾದರಿಯ ಆಟ ಮತ್ತು ಅದರ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಾಗುತ್ತಿದೆ. ಒಮ್ಮೆ ಈ ಆಟವನ್ನು ಜಾರಿಗೆ ತಂದ ನಂತರ ಹಾಗೆಯೆ ಬೆಳೆದು ಇದನ್ನು ಬ್ರಿಟಿಷರು ಇನ್ನಷ್ಟು ಪ್ರಚುರಪಡಿಸಿದರು. ಅವರ ಕಾಲದಲ್ಲೇ ಇದಕ್ಕೆ ಕಾರ್ಕ್ ಬಾಲ್‍ನ ಆವಿಷ್ಕಾರವೂ ಆಯಿತು. ಕುದುರೆಗಳಿಗೆ ಇನ್ನಷ್ಟು ರಕ್ಷಣೆಯ 193 ಪ್ರಮೀಳೆಯರ ನಾಡಿನಲ್ಲಿ ವ್ಯವಸ್ಥೆ ಆಯಿತು. ಅದಕ್ಕೊಂದು ಕ್ರೀಡೆಯ ಸ್ವರೂಪದ ಜೊತೆಗೆ ವಾಣಿಜ್ಯಾತ್ಮಕ ರೂಪವನ್ನು ಕೊಟ್ಟ ಹಿರಿಮೆ ಅವರದ್ದು. ಹೀಗಾಗಿ ಮಣಿಪುರದ ಇತಿಹಾಸ ಹಾಗು ಅವರ ಕಾಲಾವಧಿಯನ್ನು ಅಭ್ಯಸಿಸುವಾಗ ವಿಶೇಷ ಗಮನ ಸೆಳೆಯುವ ವಂಶಸ್ಥನೆಂದರೆ "ಕಾಂಗ್ಬಾನೇ ಟಿಲ್ಲಿ". ಬಹುಶ: ಅವನ ಈ ಅವಿಷ್ಕಾರ ಆಗ ಕುದುರೆ ಮತ್ತು ಈ ಚೆಂಡಿನ ಆಟಕ್ಕೆ ಜಾಗತಿಕ ಮಹತ್ವ ಹಾಗು ಅದರೊಂದಿಗೆ ಮಣಿಪುರಕ್ಕೂ ಮಹತ್ವ ಬರುತ್ತದೆಂದು ಗೊತ್ತಿತ್ತಾ..? ಅವನ ಲೆಕ್ಕಾಚಾರಗಳೇನೇ ಇರಲಿ ಕುದುರೆಯ ಆಟದ ಈ ಮೋಜು ಮತ್ತು ಕ್ರೀಡೆಯಲ್ಲಿ ಮಣಿಪುರಿಗಳು ಮೈದುಂಬಿ ರಂಗಕ್ಕಿಳಿಯುತ್ತಾರೆ. ಇದು ನಾನು ಕಂಡ ಸತ್ಯ. ಈ ಆಟದ ಮಹತ್ವದಿಂದಾಗೇ ಬ್ರಿಟಿಷರು ನಾವಿವತ್ತಿಗೂ ಕಾಲಿಡಲು ಆಗದ ಜಾಗದಲ್ಲೂ ತಮ್ಮ ಕುದುರೆಯನ್ನು ಏರಿಸಿದ್ದರು. ಕಾಲ್ದಾರಿ ಗುರುತಿಸಿದ್ದರು. ಪ್ರಮುಖ ಜಾಗಗಳನ್ನು ಮತ್ತು ಬರ್ಮಾಕ್ಕೆ ವ್ಯವಸ್ಥಿತ ಹೆದ್ದಾರಿ ನಿರ್ಮಾಣಕ್ಕೂ ಕಾರಣರಾದರು ಎನ್ನುವುದು ಸತ್ಯ. ಹಾಗಾಗಿ ಮಣಿಪುರದ ಇತಿಹಾಸದಲ್ಲಿ ಪೊಲೋ ಕಾಲಾವಧಿ ಹೊಸ ಬಗೆಯ ಬದಲಾವಣೆಗೆ ನಾಂದಿ ಹಾಡಿದ ಪ್ರಮುಖ ಘಟ್ಟವಾಗಿ ಗುರುತಿಸಲಾಗುತ್ತದೆ. ಈ ಕಾಲಾವಧಿಯನ್ನು ಬಹುಶ: ಆಗಿನ ವರ್ಷದ ಲೆಕ್ಕಾಚಾರದಲ್ಲಿ ಮೇ ತಿಂಗಳ 3 ನೇ ತಾ. ಇರಬಹುದು ಎಂದು ಗುರುತಿಸಲಾಗಿದೆ. ಇವರ ಮುಂದಿನ ಪೀಳಿಗೆಯ "ನೊಂಗ್ಡಾ-ಲೈರೇನ್-ಪಖಾಂಗ್ಬಾ" ಬಂಗಾಲದ ಭಾಷೆಯನ್ನು ಬಳಸುವಲ್ಲಿ ಕೊಂಚ ಆಸಕ್ತಿ ತೋರಿದ್ದು ಕಾಣಿಸುತ್ತದೆ. ಈ "ಕೋಯಿ ಕೊಯಿ" ಮಿಥೀಸ್ ಕ್ಯಾಲೆಂಡರ್‌ನ್ನು ಜಾರಿಗೊಳಿಸುವಲ್ಲಿ ತೋರಿದ ಆಸಕ್ತಿಯಿಂದಾಗಿ ಕ್ರಿ.ಪೂ. 1359 ಇದರ ಜಾರಿಯಾಯಿತೆಂದು ಗುರುತಿಸಲಾಗಿದೆ. ನಂತರದಲ್ಲಿ ಈ ಆದಿಯುಗದ ಅರಸು ಮನೆತನವಾಗಿ "ಉರುಂ ಖೌ" ಮತ್ತು "ಚೊಂಬಿ" ಜೋಡಿಯಾಗಿ ಮೆರೆದಿದ್ದು ಸ್ಪಷ್ಟ. ಇವರೆಲ್ಲರ ಕಾಲಾವಧಿ ಕ್ರಿ.ಪೂ. ಸರಿ ಸುಮಾರು 900 ರ ಆಸುಪಾಸು ಎನ್ನಲಾಗಿದೆ. ಆದರೆ ಕ್ರಿ.ಪೂ. 934 ರಲ್ಲಿ ಮತ್ತೆ ನಿಖರ ದಾಖಲೆಯ ಮೂಲಕ ಆಡಳಿತಕ್ಕೆ ಬಂದಿದ್ದನೆನ್ನಲಾದ "ಖೌರೌ-ನೊಂಗಡ್ರೆನ್-ಪಕಾಂಗ್ಬಾ" ಹಳೆಯ ಪ್ರಮೀಳೆಯರ ನಾಡಿನಲ್ಲಿ 194 ದಾಖಲೆಗಳನ್ನು ಸಂಗ್ರಹಿಸಿಡುವ ಕೆಲಸಕ್ಕೆ ಕೈ ಹಾಕಿದ್ದರಿಂದಲೇ ಇವತ್ತು ಸಾಕಷ್ಟು ಮಾಹಿತಿಗಳು ಲಭ್ಯವಾಗಿವೆ. ಇವನ ಕಾಲಾವಧಿಯಲ್ಲಿ ಈಶಾನ್ಯ ರಾಜ್ಯದಲ್ಲಿ ಪೂರ್ವದಿಂದ ಪಶ್ಚಿಮದವರೆಗೂ ಅತ್ಯುತ್ತಮ ಮತ್ತು ಸಂಪದ್ಭರಿತವಾದ ತಾಣವಾಗಿ ಜನಸಾಮಾನ್ಯರ ಬದುಕು ತುಂಬ ಖುಶಿಯಿಂದ ಕಳೆಯುತ್ತಿತ್ತೆನ್ನುವುದು ಕಂಡು ಬರುತ್ತದೆ. ಇವನಿಗೆ ಇಬ್ಬರು ಮಕ್ಕಳಿದ್ದು "ಕುಪ್ಟ್ರಾಂಗ್" ಮತ್ತು "ಸೆಂಟ್ರಾಂಗ್" (ಈಗಲೂ ತೆಮೇನ್‍ಗ್ಲಾಂಗ್ ಮತ್ತು ಉಕ್ರುಲ್ ಜಿಲೆಗಳಲ್ಲಿ ಈ ಹೆಸರಿನ ಊರುಗಳಿದ್ದು ಅವರ ಹೆಸರಿಗಾಗೇ ಇವನ್ನು ನಿರ್ಮಿಸಲಾಯಿತೆನ್ನುವುದು ಇತಿಹಾಸ). ಮೊದಲನೆಯವ ಉತ್ತಮ ಆಧಿಕಾರದ ಆಡಳಿತವನ್ನು ನಿರ್ವಹಿಸುವ ಕೆಲಸದಲ್ಲಿ ನಿಷ್ಣಾತನಾಗಿದ್ದರೆ, ಎರಡನೆಯ ಸೆಂಟ್ರಾಂಗ್ ಅಪ್ಪನಂತೆ ರಾಜ್ಯಾಧಿಕಾರದಲ್ಲಿ ಪಳಗಿದ್ದ. ಹಾಗಾಗಿ ಇವರಿಬ್ಬರೂ ಸೇರಿಯೇ ಅಧಿಕಾರಾವಧಿಯನ್ನು ದಕ್ಷವಾಗಿ ನಿರ್ವಹಿಸುತ್ತಾರೆ. ಇವರ ಕಾಲಾವಧಿಯವರೆಗೆ ನಿಖರವಾದ ದಾಖಲೆ ಮಣಿಪುರದ ಪುರಾತನ ಯುಗದ ಬಗ್ಗೆ ಲಭ್ಯವಾಗುತ್ತಾದರೂ ಕೊನೆಯಲ್ಲಿ ಒಮ್ಮೆಲೆ ಮಧ್ಯಾವಧಿಯ ಭಾಗ ಎಲ್ಲೂ ದೊರಕುವುದಿಲ್ಲ. ಹಾಗಾಗಿ ಇಲ್ಲಿಂದ ಕ್ರಿ.ಪೂ. 34 ವರೆಗಿನ ಕಾಲಾವಧಿಯಲ್ಲಿ ಇತಿಹಾಸ ನಮ್ಮ ಕೈಗೆಟುಕುವುದೇ ಇಲ್ಲ. ಚಿಕಾಂಗ್ ಪೊಯಿರೇಟನ್ ( ಕ್ರಿ.ಪೂ. 34-18 ) ಕಾಲಾವಧಿ : ಒಮ್ಮೆಲೆ ಈ ಅವಧಿಯಲ್ಲಿ ಬೆಳಕಿಗೆ ಬಂದ "ಚಿಕಾಂಗ್ ಪೊಯಿರೇಟನ್" ತನ್ನ ನೆಲೆಯನ್ನು ರಾಜಧಾನಿಯನ್ನಾಗಿ ಬರ್ಮಾವನ್ನು ಆರಿಸಿಕೊಂಡಿದ್ದು ಅಲ್ಲಿಂದಲೇ ಈಶಾನ್ಯ ರಾಜ್ಯವನ್ನು ನಿಯಂತ್ರಿಸುತ್ತಿದ್ದ ಮತ್ತು ಸಮರ್ಥವಾಗಿ ಆಳುತ್ತಿದ್ದುದು ಗೊತ್ತಾಗುತ್ತದೆ. ಈ ಬರ್ಮಾದಿಂದ ಭಾರತ ತುದಿಯವರೆಗಿನ ಪ್ರದೇಶವನ್ನೆಲ್ಲಾ ಆಗ "ಖಾಮ್ – ನುಂಗ್" ಎಂದೇ ಕರೆಯಲಾಗುತ್ತಿತ್ತು. ಈ ಪ್ರದೇಶವನ್ನೆಲ್ಲ "ಫೊಯಿರೇಟನ್" ಆಳುತ್ತಿದ್ದ. ಈ ಮಧ್ಯೆ ಅಕಾಲವಾಗಿ ಹೋಗಿದ್ದ ಅಖಂಡ 700 ವರ್ಷಗಳ ಕಾಲ ಯಾರ ನೆಲೆಯಿಲ್ಲದೇ ಉಳಿದಿದ್ದ "ತೈ-ಪಂಗ್-ಪಾನ್" ಪ್ರದೇಶವನ್ನೂ ನೋಡಿಕೊಳ್ಳುವಂತೆ ಈ ಪೊಯಿರೇಟನ್ ಜನಪ್ರತಿನಿಧಿಗಳು ದುಂಬಾಲು ಬಿದ್ದಾಗ 195 ಪ್ರಮೀಳೆಯರ ನಾಡಿನಲ್ಲಿ ಅವನು ತನ್ನ ಸಹೋದರರನ್ನೇ ಇದಕ್ಕೆ ಬಳಸಿಕೊಳ್ಳುತ್ತಾನೆ. ಅಲ್ಲಿಂದ ಇರ್ರಿಲ್ ನದಿಯ ಮುಖಜ ಭೂಮಿಯವರೆಗೂ ರಾಜ್ಯ ವಿಸ್ತಾರ ಮಾಡುತ್ತಾ ಉತ್ತರದಲ್ಲಿ "ಕೌಬ್ರು ಪರ್ವತ" ಪ್ರದೇಶದವರೆಗೂ ಹಿಡಿತ ಸಾಧಿಸುತ್ತಾನೆ. ಈ ಪೊಯಿರೇಟನ್ "ಖಾಮ್"ನಿಂದ ಹಿಡಿದು ಪೂರ್ತಿ ಚೈನಾ ಪ್ರಾಂತ್ಯದವರೆಗೂ ಆಡಳಿತ ನಡೆಸುತ್ತಾನೆ. ಅತಿ ಪ್ರಮುಖವಾದ ಸಂಗತಿಯೆಂದರೆ ಪ್ರಮುಖ ಪಂಗಡಗಳಾದ ಚಕ್ಪಾ, ನುಂಗಾ, ಖಾಮ್, ಮೊನ್, ಖು, ನಾಗಾ, ಇವರಲ್ಲರನ್ನೂ ಒಂದೆಡೆಯಲ್ಲೇ ಕೂಡಿ ಬಾಳುವಂತೆಯೂ ಈ ಪಂಗಡಗಳ ಮಧ್ಯೆ ಮದುವೆ ಮುಂತಾದ ಸಂಬಂಧ ಏರ್ಪಡುವಂತೆಯೂ ನೋಡಿಕೊಂಡ ಪರಿಣಾಮ ಸೀಮೆಯ ವಿಸ್ತಾರ ಲೆಕ್ಕಕ್ಕೆ ಸಿಗದಂತೆ ಬೆಳೆಯುತ್ತದೆ. (ಹೀಗೆ ಮಾಡುವ ಮೂಲಕ ಅಸೀಮ ರಾಜಕೀಯ ಮೆರೆದದ್ದು ನಮ್ಮ ಗಮನಕ್ಕೆ ಬರುತ್ತದೆ. ಕಾರಣ ಆಂತರಿಕ ಸಂಬಂಧಗಳಿಲ್ಲದೆ ಬಾಂಧವ್ಯವಿಲ್ಲದೆ ಯಾರೂ ಹತ್ತಿರವಾಗಲಾರರು ಎನ್ನುವುದನ್ನು ಅಭ್ಯಸಿಸಿದ್ದ ಮತ್ತು ಮನಗಂಡಿದ್ದ ಪೋಯಿರೇಟನ್ ಅದಕ್ಕೆ ಮಹತ್ವ ನೀಡಿ ಆ ಮೂಲಕ ತನ್ನ ರಾಜ್ಯ ಮತ್ತು ಸಾಮಾಜಿಕ ವ್ಯವಸ್ಥೆಯ ಸುಭದ್ರತೆಯನ್ನು ಕಾಯ್ದುಕೊಳ್ಳುವುದನ್ನು ನೋಡುವಾಗ ಮದುವೆ ಎನ್ನುವ ಸಂಬಂಧದಲ್ಲಿ ಅದೆಂತಹ ಬಲವಾದ ಬಂಧನ ಇದೆ ಎನ್ನುವುದನ್ನು ಕ್ರಿ.ಪೂ.ದಲ್ಲೇ ನಮ್ಮ ಇತಿಹಾಸದಲ್ಲಿ ದಾಖಲಾಗಿದೆಯಲ್ಲ ಎನ್ನುವುದು ನನ್ನನ್ನು ಕಾಡಿದ ಅಂಶ. ಕಾರಣ ಅದರ ನಂತರದಲ್ಲಿ ಯಾವುದೇ ಇತಿಹಾಸ ಅಭ್ಯಸಿಸಿದರೂ ಅಲ್ಲೆಲ್ಲ ಮದುವೆ ಮೂಲಕವೇ ಒಂದು ರಾಜ್ಯ ಇನ್ನೊಂದು ರಾಜ್ಯದ ಸಖ್ಯ ಬೆಳೆಸುತ್ತಿದ್ದುದು ಮತ್ತು ತನ್ನ ರಾಜ್ಯ ರಾಜಕೀಯ ಸಾಮಾಜಿಕ ಹಾಗು ಸರಹದ್ದುಗಳ ಸದೃಢತೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದುದು ಎದ್ದು ಕಾಣುವ ಅಂಶ. ಅಲ್ಲಿಗೆ ಹೆಣ್ಣಿನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಮಣಿಪುರಿಗಳು ಅದನ್ನು ಹೀಗೂ ಬಳಸಿದ್ದು ಗಮನಾರ್ಹ. ಅದೂ ಆ ಕಾಲದಲ್ಲಿ - ಲೇಖಕ). ಕೊನೆ ಕೊನೆಗೆ ಬೌದ್ಧಿಸಂ ಕ್ವೀ ಕೂಡಾ ತನ್ನ ವಲಯದೊಳಕ್ಕೆ ಸೇರಿಸಿಕೊಳ್ಳುವ ಪೊಯಿರೇಟನ್ ಅಖಂಡ ಈಶಾನ್ಯವನ್ನು ಆಳುತ್ತಾನೆ. ಹಾಗಾಗೇ ಇವನ ನಂತರದ ಕಾಲಾವಧಿಯನ್ನು " ಪೊಯಿರೈ-ಲಾಮ" ಎಂದು ಕರೆಯುತ್ತಾರೆ. ಪ್ರಮೀಳೆಯರ ನಾಡಿನಲ್ಲಿ 196 ಹೀಗೆ ಪುರಾತನ ಯುಗದ ಅದ್ಭುತ ಮತ್ತು ರಮಣೀಯ ಇತಿಹಾಸವನ್ನು ಹೊಂದಿರುವ ಮಣಿಪುರ ಕೊನೆ ಕೊನೆಗೆ ಈಶಾನ್ಯದಲ್ಲಿ ತುಂಬಾ ಸಮೃದ್ಧಿ ಮತ್ತು ಸುಖ ಸಂತೋಷದಿಂದ ಬೆಳೆದು ಪ್ರವರ್ಧಮಾನಕ್ಕೆ ಬಂದಿರುವುದನ್ನು ದಾಖಲಿಸಲಾಗಿದೆ. ಆರಂಭದ ಕಾಲಾವಧಿ : ಕ್ರಿ.ಶ. 33 ರಿಂದ 153, 1400-1600 ವರೆಗಿನ ಭಾಗ : ಈ ಅವಧಿಯಲ್ಲಿ ಮಣಿಪುರದಲ್ಲಿ ಹೊಸ ಹೊಸ ರಾಜ ಪರಿವಾರಗಳ ಆಡಳಿತಗಳು ಚಾಲನೆಯಲ್ಲಿದ್ದವು ಅದರಲ್ಲೂ ಮುಖ್ಯವಾಗಿ "ನಾಂಗ್ಡಾ ಲೈರೇನ್ ಪಖಂಗ್ಬಾ" ಎನ್ನುವ "ಲೈನಿಂಗ್ ಯೆಬಿರ್ಕೋ"ನ ಮಗ ಮೊದಲನೆ ಶತಮಾನದ ಆದಿಯಲ್ಲಿ ಕಾಣಿಸಿಕೊಂಡ ಪ್ರಮುಖ ಹೆಸರು. ಇವನು ಪೊಯಿರೇಟನ್ ರಾಜನ ಮಗಳಾದ ಲೈಸ್ರಾಳನ್ನು ಮದುವೆಯಾಗಿ ರಾಜ ಪರಿವಾರದ ಸಂಬಂಧಗಳನ್ನು ಬೆಳೆಸುತ್ತಾನೆ. "ಓಗ್ರಿ" ಎನ್ನುವ ಹಾಡಿನ ಮೂಲಕ ಆಗ ದೇವತೆಗಳನ್ನು ಸ್ತುತಿಸಿ ಮದುವೆಯನ್ನು ನಿರ್ವಹಿಸುವ ಪದ್ಧತಿಯನ್ನು ಈತ ಶುರು ಮಾಡಿದ್ದು ದಾಖಲಿಸಲಾಗಿದೆ. ಇದನ್ನು "ಹಿಸ್ಟರಿ ಆಫ್ ಮಣಿಪುರ" ಪುಸ್ತಕ ಬರೆದ "ಡಬ್ಲ್ಯೂ ಇಭೊಹಾಲ್ ಸಿಂಗ್" ದಾಖಲಿಸಿದ ಪುಸ್ತಕದಲ್ಲಿ ಇಂಥಾ ಮೂಲ ಮಾಹಿತಿಗಳನ್ನು ನೋಡಬಹುದಾಗಿದೆ. ಈ ಪಖಾಂಗ್ಬಾ ತನ್ನ ರಾಜ್ಯವನ್ನು ಈಶಾನ್ಯದ ಮೇಲ್ಮುಖದಿಂದ ಆರಂಭಿಸಿ "ಚಿಂಗ್-ನುಂಗ್-ಹಟ್". ದಕ್ಷಿಣದಲ್ಲಿದ್ದ ಪ್ರಾಂತ್ಯ - ಇದು ಮೂಲತ: "ಮಾಂಗಾಂಗ್" ಅವರ ಗುಂಪಿನ ಹಿಡಿತದಲ್ಲಿದ್ದ ವಸಾಹತುವಾಗಿತ್ತು. ಮೂಲಕ ಈಶಾನ್ಯ ಪೂರ್ತಿ ತನ್ನ ಆಳ್ವಿಕೆಯಡಿಯಲ್ಲಿ ತಂದುಕೊಳ್ಳುತ್ತಾನೆ. ಈತ ಪ್ರಮುಖ ಈಶಾನ್ಯ ಬುಡಕಟ್ಟುಗಳ ದೇವತೆಯಾಗಿದ್ದ ಲೈ-ನಿಂಗಾಥೌ" ಹೆಸರಿನ ಮೂಲಕವೂ ಗಣಿಸಲ್ಪಟ್ಟಿದ್ದ. "ಸನಾ-ಮಾಯಿ"ಯ ಪ್ರಮುಖ ಹಾಗು ನಂಬಿಗಸ್ಥನಾಗಿದ್ದ. (ಇಲ್ಲಿ ಹಳೆಯ ದಾಖಲಾತಿಗಳು ಏನೇ ಇದ್ದರೂ ಈ ಪಖಾಂಗ್ಬಾ ಮತ್ತು ಸನಾಮಾಯಿ ಎನ್ನುವ ಧರ್ಮ / ದೇವತೆ / ದೇವರು ಏನೆ ಇರಲಿ ಅವುಗಳ ಶಕ್ತಿ ಅಥವಾ ನಂಬಿಕೆಗಳ ಬಗ್ಗೆ ಅವರದ್ದೇ ಆದ ಹಲವು ಆಯಾಮಗಳು ಮತು 197 ಪ್ರಮೀಳೆಯರ ನಾಡಿನಲ್ಲಿ ಕಥೆಗಳು ಈಗಲೂ ಮಣಿಪುರದಾದ್ಯಂತ ಚಾಲ್ತಿಯಲ್ಲಿವೆ. ಹಲವು ಪುಸ್ತಕ ಮತ್ತು ದಾಖಲೆಗಳಲ್ಲಿ ಈ ಪಖಾಂಗ್ಬಾ ಮತ್ತು ಸಾನ-ಮಾಯಿ ಬಗ್ಗೆ ಇದ್ದರೂ ನಿಜವಾಗಲೂ ಪುರಾತನ ಇತಿಹಾಸ ಮತ್ತು ಸಂಗತಿಗಳಲ್ಲಿನ ಉಲ್ಲೇಖದ ಹೊರತಾಗಿ ನಂಬುವಂತಹ ಯಾವುದೇ ಮಾಹಿತಿಯು ಲಭ್ಯವಿಲ್ಲ. ಅಸಲಿಗೆ ಇವು ಏನು ಎನ್ನುವುದೂ ಕೂಡಾ ಸಾಕಷ್ಟು ಸಂದೇಹಗಳು ಈಗಲೂ ಮಣಿಪುರಿಗಳಲ್ಲೇ ಇದೆ. ಎಲ್ಲವನ್ನೂ ಒಮ್ಮೆ ಈ ಫಕಾಂಗ್ಬಾ ಮತ್ತು ಸನಾ-ಮಾಯಿ ಅಣ್ಣ–ತಮ್ಮಂದಿರಾಗಿಯೂ/ ಸಹೋದರರಾಗಿಯೂ, ಕೆಲವೊಮ್ಮೆ ದೇವತೆಗಳಾಗಿಯೂ, ಕೆಲವೊಮ್ಮೆ ಇನ್ನೇನೊ ಶಕ್ತಿ ಕೇಂದ್ರವಾಗಿಯೂ ಗೋಚರಿಸುವಾಗ, ಇವೆಲ್ಲವನ್ನೂ ಕಥೆಯಾಗಿಯೂ, ಕೆಲವೊಮ್ಮೆ ಇತಿಹಾಸವಾಗಿಯೂ ವಿವರಿಸಿದ್ದರೂ ಜನಪದೀಯ ಅನ್ನಿಸುತ್ತವೇ ವಿನ: ದಾಖಲಿಸಬಲ್ಲ ಪೂರಕ ಇತಿಹಾಸವಾಗಿ ನನಗೆ ಕಾಣಿಸುತ್ತಿಲ್ಲ. ಕಾರಣ ಎಲ್ಲೊ ಒಮ್ಮೆ ಈ ಸನಾ-ಮಾಯಿ ಭೂಮಿಯ ಮೇಲಿನ ಅಗತ್ಯತೆಗಳನ್ನು ಸೃಷ್ಟಿಸಿದ್ದರಿಂದಲೇ ಏನೆಲ್ಲಾ ಲಭ್ಯವಾದ ಬಳಿಕ ಇವನ್ನೆಲ್ಲ ನೋಡಿಕೊಳ್ಳಲೆಂದೇ ಇವೆಲ್ಲದರ ಪಿತಾಮಹನಾದ "ಅತಿಯಾ-ಕುರು-ಸಿಡಾಬಾ" ಎನ್ನುವ ನಾಯಕನೊಬ್ಬನ ಉಗಮವಾಗುತ್ತದೆ ಎನ್ನುವ ಉಪಕಥೆಯೂ ಇದೆ. ಹಾಗಾಗಿ ಈ "ಅತಿಯಾ ಪಖಾಂಗ್ಬಾ" ಎನ್ನುವನನ್ನು ಭೂಮಿಗೆ ಕಳುಹಿಸಿದ್ದೇ ಇದನ್ನೆಲ್ಲಾ ನಿರ್ವಹಿಸಲು ಎಂದೇ ಈ ಪುರಾಣ/ಇತಿಹಾಸ ಕಥೆ ಹೇಳುತ್ತದೆ. ಹಾಗಿದ್ದಾಗ ಇವುಗಳ ನಂಬಿಕೆ ಮತ್ತು ನೈಜತೆಯ ಬಗ್ಗೆ ಬರಹಗಾರನಾಗಿ ವಸ್ತುನಿಷ್ಠ ವಿಶ್ಲೇಷಣೆ ಬೇಕೆಬೇಕೆನ್ನುವ ನಿಲುವು ನನಗೀಗಲೂ ಇದ್ದೇ ಇದೆ. ಕಾರಣ ಈಗಲೂ ನಮ್ಮ ಮಹಾಕಾವ್ಯಗಳನ್ನು ನಡೆದಿದ್ದೋ, ವ್ಯಾಸ ಬರೆದಿದ್ದೋ ಎನ್ನುವಲ್ಲಿಗೆ ಯಾವುದೇ ಚರ್ಚೆ ಬಂದು ನಿಲ್ಲುವಂತೆ ಈ ಮೇಲಿನ ವಿಷಯದಲ್ಲೂ ಸಾಕಷ್ಟು ಚರ್ಚೆ ಅಲ್ಲಿಗೇ ಬಂದು ನಿಲ್ಲುತ್ತದೆ. ಆದರೆ ಈಗಲೂ ಈ ಎಲ್ಲದರ ಮೇಲಿನ ಅವರ ನಂಬಿಕೆ ಮಾತ್ರ ಅದ್ಭುತ - ಲೇಖಕ ) ಈ ಹಂತದಲ್ಲಿ ಈಶಾನ್ಯ ರಾಜ್ಯದಲ್ಲಿ ಪ್ರಭಾವಕ್ಕೊಳಗಾದ ಧರ್ಮಗಳಲ್ಲಿ ಹಿಂದೂ ಧರ್ಮದ ಪ್ರಭಾವ ತುಂಬಾ ಹೆಚ್ಚಿನದು. 17ನೆ ಶತಮಾನದ ಆರಂಭದಲ್ಲಿ ಸಾಕಷ್ಟು ವಸಾಹತುಗಳು ಇಲ್ಲಿ ಹಿಂದೂ ಧರ್ಮಕ್ಕೊಳಪಟ್ಟಿದ್ದವು. ಪ್ರಮೀಳೆಯರ ನಾಡಿನಲ್ಲಿ 198 ಸಂಪೂರ್ಣ ಪೂಜೆ ಪುನಸ್ಕಾರ ಸೇರಿದಂತೆ ಬಟ್ಟೆ ಬರೆಯಾದಿಯಾಗಿ ಹೆಚ್ಚಿನ ಬುಡಕಟ್ಟುಗಳು ತಂತಮ್ಮ ಆಚಾರ ವಿಚಾರಗಳೊಂದಿಗೆ ಹಿಂದೂ ಧರ್ಮದ ಕಡೆಗೆ ವಾಲಿದ್ದ ಸಮುದಾಯಗಳು ಹದಿನೆಂಟನೆಯ ಶತಮಾನದ ಆರಂಭದಲ್ಲಿ ಸಂಸ್ಕೃತವೂ ಸೇರಿದಂತೆ ಹಲವು ಭಾಷೆಗಳು ಈಶಾನ್ಯ ರಾಜ್ಯದಲ್ಲಿ ಪ್ರಭಾವ ಬೀರುವುದರೊಂದಿಗೆ ಇದನ್ನು ಸಂಸ್ಕೃತ ಕಾಲಾವಧಿಯಾಗಿಯೂ ಗೋಚರಿಸಲಾಗಿದೆ. ಮಿಥೀಸ್‍ಗಳ ಸಂಸ್ಕೃತ ಪ್ರಭಾವದಿಂದಾಗಿ ರಾಜವಂಶಗಳೂ ಹಿಂದೂ ಸಂಸ್ಕೃತಿಗೆ ಮಾರುಹೋಗಿದ್ದು, ಅವರಲ್ಲಾದ ಬದಲಾವಣೆ ಮತ್ತು ಒಪ್ಪಿತ ಪರಂಪರೆ ಕೂಡಾ ಕ್ರಮೇಣ ಗೋಚರಿಸುವಷ್ಟು ಬದಲಾಗಿದ್ದು ಸತ್ಯ. ಅಲ್ಲಲ್ಲಿ ಮಿಥೀಸ್‍ಗಳ ದೇವಾನುದೇವತೆಗಳೂ ಹಿಂದೂ ದೇವತೆಗಳ ರೂಪ/ಅಭ್ಯಾಸ ಎಲ್ಲಾ ಮೈಗೂಡಿಸಿಕೊಂಡವು. ಅನಂತ ಪದ್ಮನಾಭನೂ ನಿಧಾನಕ್ಕೆ ಗುಡ್ಡಗಾಡಿನಲ್ಲಿ ಕಾಲೂರಿದ. ದುರ್‌ಗೆ ಸಂಪತ್ತಿನ ಅಧಿದೇವತೆಯಾಗಿ ಕಂಗೊಳಿಸಿದಳು (ಈ ಜಾಗದಲ್ಲಿ ಮೊದಲಿಗೆ ಪಂಥೋಯಿಬಿ ದೇವರಿದ್ದ). ಬುಡಕಟ್ಟುಗಳ ಪ್ರಮುಖ ಮತ್ತು ಪ್ರಾಣದೇವರಾಗಿದ್ದ "ಥಾಂಗ್‍ಝಿಂಗ್" ಹೋಗಿ ನಿಧಾನಕ್ಕೆ ಆ ಜಾಗವನ್ನು "ವಿಷ್ಣು" ಆಕ್ರಮಿಸಿಕೊಂಡ. "ನೊಂಗ್- ಫೋಕ್-ನಿಂಗಾಥೌ" ಎನ್ನುವ ಮಳೆಗಾಲದ ಅಧಿದೇವತೆ "ವರುಣ ಅಥವಾ ವರುಣಿ"ಯಾಗಿ ಮಳೆ ಸುರಿಸತೊಡಗಿದ. "ಕುರು ಹೋಗಿ ಗುರು"ವಾದ. ಹಾಗೆಯೇ 1890 ರಿಂದ 1930 ರವರೆಗಿನ ಈ ಬದಲಾವಣೆಯ ಕಾಲಾವಧಿಯಲ್ಲಿ ಮಿಥೀಸ್‍ಗಳು ಹೆಚ್ಚಿನ ಹಿಂದೂವಾಗಿ ಬದಲಾದರು ಅಥವಾ ಹಿಂದೂ ಧರ್ಮದ ಸಾರವನ್ನು ಸಂಪೂರ್ಣವಾಗಿ ಅಪ್ಪಿಕೊಂಡರು ಎನ್ನುವುದು ಗಮನಕ್ಕೆ ಬರುತ್ತದೆ. ಇಲ್ಲಿ ಒಬ್ಬ ಲೇಖಕನಾಗಿ ಇತಿಹಾಸ ಗಮನಿಸುವಾಗ ಮಣಿಪುರಿಗಳು ಹಿಂದೂ ಧರ್ಮವನ್ನೇನೊ ಅಪ್ಪಿಕೊಂಡರು ಎನ್ನುವುದನ್ನು ನಾನು ಓದುತ್ತೇನಾದರೂ ಹಿಂದೂ ಧರ್ಮದಡಿಯಲ್ಲೂ ಅವರು ಅದೇ ಅಪ್ಪಟ ಮಿಥೀಸ್‍ಗಳಾಗೇ ಉಳಿದಿರುವ ಬಗ್ಗೆ, ತಮ್ಮನ್ನು ಉಳಿಸಿಕೊಂಡಿರುವ ನನಗೆ ಕೌತುಕವಿದೆ. ಸಂಪೂರ್ಣ ಬದಲಾವಣೆಗೆ ತೆರೆದುಕೊಂಡರೂ ಅದರಲ್ಲೂ 199 ಪ್ರಮೀಳೆಯರ ನಾಡಿನಲ್ಲಿ ತಮ್ಮತನವನ್ನು ಉಳಿಸಿಕೊಂಡ ಸಮುದಾಯಗಳು ಹಿಂದೂವಾಗಿಯೂ ವಿಭಿನ್ನವಾಗಿರುವುದನ್ನು ಕಾಣುತ್ತಿದ್ದೇನೆ. ಇಲ್ಲಿ 1900ರ ಕಾಲಾವಧಿಯ "ಸಾನಾ – ಮಾಯಿ" ಹಿಂಬಾಲಕರು ವೈಷ್ಣವ ಧರ್ಮದ ಮೂಲವನ್ನು ಆವಿಷ್ಕರಿಸಿ ಅದರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡರು. ಹಾಗೆ ನೊಡಿದರೆ ಇದಕ್ಕೆ ಕಾರಣನಾದ ವಿಷ್ಣುವಿನ ಆರಾಧನೆ 15ನೆಯ ಶತಮಾನದಲ್ಲಿಯೇ ಆರಂಭಗೊಂಡಿದ್ದು ಕಂಡುಬರುತ್ತದೆ. ಹಾಗಾಗಿ 1467 ರಿಂದ 1508 ರ ಮಧ್ಯಾವಧಿಯಲ್ಲಿ ವಿಷ್ಣು ಮತ್ತು ಇನ್ನಿತರ ದೇವಾನುದೇವತೆಗಳ ಪ್ರಭಾವ ಹಾಗು ಅದಕ್ಕೆ ಸಂಬಂಧಿಸಿದ ಧರ್ಮದ ಪ್ರಭಾವಕ್ಕೊಳಗಾಗಿ ಬದಲಾವಣೆಯ ಪರ್ವ ಸ್ಪಷ್ಟವಾಗುತ್ತದೆ. ಈ ಹೊತ್ತಿನಲ್ಲಿ ಆಗಿನ ರಾಜನಾದ "ಸಾವ್ಬಾ ಖೇಕೊಂಬಾ" ಗರುಡನ ಮೇಲೆ ಕೂತಿದ್ದ ವಿಷ್ಣುವಿನ ಚಿತ್ರಗಳನ್ನು ಪುತ್ಥಳಿಗಳನ್ನು ಮಾಡಿಸಿದ್ದ ಕುರುಹುಗಳಿದ್ದು ದಾಖಲಾಗಿವೆ. ಆದರೆ 1697-1709 ರವರೆಗೂ ಆಡಳಿತದಲ್ಲಿದ್ದ ರಾಜಾ "ಚೆರೈ-ರೊಂಗ್ಬಾ" ಮಾತ್ರ ಹಿಂದೂವಿಗೆ ತನ್ನ ಧರ್ಮವನ್ನು ಬದಲಿಸಿರಲಿಲ್ಲ. ಆದರೆ ಪ್ರಜೆಗಳಿಗೆ ಅವರವರ ಧರ್ಮಕ್ಕೆ ತಕ್ಕಂತೆ ಅಥವಾ ಆಯ್ಕೆಗೆ ಅನುಕೂಲ ಒದಗಿಸಲಾಗಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಡಾ. ಈ. ಕಾಬೂಯಿ ಇತಿಹಾಸ ಪ್ರಾಧ್ಯಾಪಕ, ಬರೆದ ಪುಸ್ತಕ ಇಂಫಾಲ. 1826 – 1946 - ಪುಸ್ತಕ "ಹಿಸ್ಟರಿ ಆಫ್ ಮಣಿಪುರ". ಇದು ಈ ಮೂಲಗಳಿಗೆ ಪುಷ್ಟಿ ನೀಡುತ್ತದೆ ಮತ್ತು ಇದೇ ಪುಸ್ತಕ 88-89 ಹಾಗು 99 ರಲ್ಲಿ ಮರುಮುದ್ರಣಗೊಂಡಿದ್ದು ಈಗಲೂ ಇತಿಹಾಸದ ಮೇಲೆ ಹೆಚ್ಚಿನ ಬೆಳಕು ಚೆಲ್ಲುವಲ್ಲಿ ಸಹಾಯವಾಗಿದೆ. ಮಧ್ಯಮ ಕಾಲಾವಧಿ : ಮಧ್ಯಂತರ ಕಾಲಾವಧಿಯಲ್ಲಿ ಇತಿಹಾಸದ ದಾಖಲಾತಿ ಬದಲಾವಣೆಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು "ಮೇಡಿಂಗು ಸೇಣ್ಬಿ ಕಿಯಾಂಬ್" (ಕ್ರಿ.ಶ. 1467– 1507) ಇವನ ಕಾಲಾವಧಿಯ ಮೂಲಕವಲ್ಲದೆ ನಿಖರ ದಾಖಲಾತಿಯ ಲಭ್ಯತೆಯ ಆಧಾರದ ಮೇಲೆ ಮಧ್ಯ ಯುಗದ ಇವನ ಆಡಳಿತ ಹಾಗು ಈಶಾನ್ಯ ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲಲಾಗಿದೆ. ಪ್ರಮೀಳೆಯರ ನಾಡಿನಲ್ಲಿ 200 "ನಿಂಗಾಥೌ ಖೊಂಬಾ" ಮತ್ತು "ಲೈಮಾ ಲಿಂಥೋಯಿ ಗಾಂಬಿ"ಯ ಮಗನಾದ ಈ ರಾಜ ತನ್ನ 24 ವರ್ಷಕ್ಕೇನೆ ಪಟ್ಟಕ್ಕೇರುತ್ತಾನೆ. ಅಪರೂಪದ ಬುದ್ಧಿವಂತಿಕೆ ಮತ್ತು ಅಸಾಧಾರಣ ಶೌರ್ಯವನ್ನು ಹೊಂದಿದ್ದ ಈತ ಅಖಂಡ ಈಶಾನ್ಯಕ್ಕೆ ಒಡೆಯನಾಗುವ "ಮೇಡಿಂಗು ಕಿಯಾಂಬ್ ಶಾನ್" ರಾಜ್ಯದ ಅಧಿಪತಿ " ಪೊಂಗ್"ನೊಂದಿಗೆ ಅತ್ಯುತ್ತಮ ಸಂಬಂಧವನ್ನು ಬೆಳೆಸಿದ್ದ. ಈ ಕಾಲದಲ್ಲಿ ದೇವರನ್ನು ಅಷ್ಟಾಗಿ ಆರಾಧಿಸುವ ಮತ್ತು ಅರ್ಚಿಸುವ ಕೈಂಕರ್ಯ ಇನ್ನು ಬೇರೂರಿರಲಿಲ್ಲ. ಕಿಯಾಂಬ್ ತನ್ನ ಗೆಳೆಯ ನೀಡಿದ ರಾಯಭಾರದ ದ್ಯೋತಕವಾದ ಬಂಗಾರ ಮತ್ತು ವಜ್ರಾಭರಣಗಳ ಪೆಟ್ಟಿಗೆಯ ಬದಲಾಗಿ ಅವನ ನೆನಪಿಗೆ 1475 ರಲ್ಲಿ "ಲಂಮ್ಗಾಡೊಂಗ್ಬಾ" ಎನ್ನುವಲ್ಲಿ ( ಈಗಿನ ಇಂಫಾಲದಿಂದ 27 ಕಿ.ಮೀ. ದೂರದಲ್ಲಿದೆ) ದೇವಸ್ಥಾನವೊಂದನ್ನು ನಿರ್ಮಿಸುತ್ತಾನೆ. ಇದು ಬಹುಶ: ಈಶಾನ್ಯ ರಾಜ ಪರಂಪರೆಯಲ್ಲಿ ಮೊದಲನೆಯ ದೇವಸ್ಥಾನ ಎನ್ನಿಸಿಕೊಂಡಿದೆ. ಈ ಕಿಯಾಂಬ್‍ನ ಕಾಲದಲ್ಲಿಯೇ ದೇವಸ್ಥಾನವನ್ನು ನೋಡಿಕೊಳ್ಳಲು ಬ್ರಾಹ್ಮಣರನ್ನು ನಿಯಮಿಸುವ ಮತ್ತು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಕಲ್ಪಿಸುವ ಪರಿಪಾಠ ಬೆಳೆದುಬಂದಿತು. ಈ ಬ್ರಾಹ್ಮಣರೆ ಮುಂದೆ ಬೆಳೆದು "ಬಿಷ್ಣುಪ್ರಿಯಾ" ಎಂಬ ಜನಾಂಗದಲ್ಲಿ ಮುಂದುವರೆದರು. ಅದರ ಮುಂದುವರಿಕೆಯ ಭಾಗವಾಗಿಯೇ ಇವತ್ತು "ವಿಷ್ಣುಪುರ್" ಎನ್ನುವ ಜಿಲ್ಲೆಯೂ ಮಣಿಪುರದಲ್ಲಿದೆ. ಇವರನ್ನು ನೋಡಿದರೆ ಥಟ್ಟನೇ ಎಂಥವನೂ "ವಿಷ್ಣುವಿನ ಆರಾಧಕರೆಂದು" ಹೇಳಿ ಬಿಡುವಷ್ಟು ಗಾಢವಾದ ಬದಲಾವಣೆ ಮತ್ತು ಆಚರಣೆ ಅವರಲ್ಲಿ ಇದೆ. ಅದರಲ್ಲೂ ಸ್ತ್ರೀಯರು ಮೂಗಿನ ಮೇಲೆ ಚಂದನದಿಂದ ಎಳೆದುಕೊಳ್ಳುವ ನಾಮ, ಕೆಂಪಾದ ಕುಂಕುಮ ಮತ್ತು ಕಣ್ಣ ಕೊನೆಯ ಕಾಡಿಗೆಯ ಕೊಸರು ಹಾಗು ದಿರಿಸಿನಲ್ಲಿ ಕಾಣಿಸುವ ಉಡಿಗೆ ತೊಡಿಗೆ ಅಪ್ಪಟ ವಿಷ್ಣುವನ್ನು ನೆನಪಿಸುವ ಸೋಜಿಗ ಈಗಲೂ ಚಾಲ್ತಿಯಲ್ಲಿದೆ. ಇದು ಅವರ ಎಂಥಾ ಹೊತ್ತಿನಲ್ಲೂ ಕಂಡುಬರುವ ಸಹಜ ದಿರಿಸಾಗೇ ಒಪ್ಪಿತವಾಗಿದೆ. ಹಾಗಾಗಿ ಈ ಜನಾಂಗ ಹಿಂದೂ ವಿಷ್ಣುಪ್ರಿಯಾ ಜನಾಂಗವಾಗಿದ್ದು ಆಗಿನಿಂದಲೂ ಬೆಳೆದುಕೊಂಡು ಬಂದಿದ್ದು ಕಾಣಿಸುತ್ತದೆ. 201 ಪ್ರಮೀಳೆಯರ ನಾಡಿನಲ್ಲಿ "ಮೇಡಿಂಗು ಪಾಂಹೈಬಾ" (ಕ್ರಿ.ಶ. 1708 – 1747) : ನಂತರದ ತಲೆಮಾರಿನಲ್ಲಿ ಮಣಿಪುರದ ಇತಿಹಾಸದಲ್ಲಿ ದಾಖಲಾರ್ಹ ಮತ್ತು ಗಮನಾರ್ಹ ಸಾಧನೆಯನ್ನು ತೋರಿರುವವನೆಂದರೆ "ಪಾಂಹೈಬಾ". 1690 ರ ಡಿಸೆಂಬರ್ 22 ಇವನ ಜನನ ಕಾಲಾವಧಿ ಎಂದು ದಾಖಾಲಿಸಲಾಗಿದೆ. ಇವನ ಕಾಲಾವಧಿಯಲ್ಲಿ ಎಂಟು ಜನ ರಾಣಿಯರನ್ನು ಹೊಂದಿದ್ದ ಈತ ಸಾಕಷ್ಟು ಮಕ್ಕಳನ್ನು ಪಡೆದಿದ್ದ. ತನ್ನ 39ನೆಯ ವಯಸ್ಸಿನಲ್ಲಿ ಈತ ರಾಜ್ಯವನ್ನ್ "ಕಬೌ" ವ್ಯಾಲಿಯವರೆಗೂ ವಿಸ್ತರಿಸಿದ. ಈ "ಕಬೌ ವ್ಯಾಲಿ" ಮಣಿಪುರದ ಇತಿಹಾಸದಲ್ಲಿ ಹಲವು ಕಾರಣಗಳಿಗೆ ಮುಖ್ಯವಾಗುತ್ತದೆಯಲ್ಲದೆ ಕೊನೆಗೆ ಬ್ರಿಟಿಷ್‌ ಆಡಳಿತಾವಧಿಯಲ್ಲಿ ಒಪ್ಪಂದಕ್ಕೂ ಇದೇ ವ್ಯಾಲಿ ಕಾರಣವಾಗುತ್ತದೆ. ಅಲ್ಲಿಂದ ಪಶ್ಚಿಮದ "ನೊಂಗ್ನಾಗ" (ಈಗಿನ ಕಚೇರ್) ತಕ್ಖೇಲ್ (ತ್ರಿಪುರಾ) ವರೆಗೂ ಬೆಳೆಸಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ. ಆಗಿನ ಕಾಲದಲ್ಲಿ ಇದನ್ನು "ಚಿತ್ತಗಾಂಗ ಪರ್ವತ ಪ್ರದೇಶ" ಎಂದು ಕರೆಯಲಾಗುತ್ತಿತ್ತು. ಇಲ್ಲಿನ "ತಖೇಲ್ ಮತ್ತು ಕಚೇರ"ನ ಸಾವಿರಕ್ಕೂ ಮಿಗಿಲು ಜನರನ್ನು ಈತ ತನ್ನ ರಾಜ್ಯಕ್ಕೆ ಕರೆತಂದು ನೆಲೆ ನಿಲ್ಲಿಸಿದ. ಇವರೆಲ್ಲ ಸ್ಥಳೀಯ ಮಿಥೀಸ್‍ಗಳೊಂದಿಗೆ ಸಂಬಂಧ ಬೆಳೆಸಿ ಸಮುದಾಯ ಬೆಳವಣಿಗೆಗೂ ಕಾರಣರಾದರು. ಪಾಹೈಂಬಾ ಅದಕ್ಕಾಗಿ ಮಣಿಪುರದ ಪ್ರಮುಖ ರಾಜನಾಗಿ ಗುರುತಿಸಲ್ಪಡುತ್ತಾನೆ. ಇವನು ತನ್ನ ರಾಜ್ಯದ ಎಲ್ಲೆಗಳನ್ನು ಹಿಂದೆಂದೂ ಕಾಣದ ಮಟ್ಟಿಗೆ ವಿಸ್ತರಿಸುತ್ತಾನಲ್ಲದೇ, ಸನಾ–ಮಾಯಿ ಅಥವಾ ಪಾಖಾಂಗ್ಬಾಗಳ ಸುದ್ದಿಗೂ ಹೋಗದೆ ಬರೀ ರಾಜ್ಯಭಾರ ಮತ್ತು ಆಡಳಿತ ಕಡೆಗೆ ಗಮನ ಹರಿಸಿದ. ಹೀಗಾಗಿ ಅವರ ಪ್ರಮುಖ ದೇವತೆಗಳ ಪಂಥಗಳು ಸದ್ದಿಲ್ಲದೆ ಕೊಂಚ ಹಿನ್ನಡೆ ಅನುಭವಿಸಿದವು ಇವನ ಕಾಲದಲ್ಲಿ. ಕಾರಣ ಅಭಿವೃದ್ಧಿ ಮತ್ತು ಸಾಮಾಜಿಕ ಬೆಳವಣಿಗೆಗೆ ಜಾತಿ ಮತ್ತು ಧರ್ಮ ಅಥವಾ ಸಮುದಾಯಗಳು ಯಾವತ್ತೂ ಸಹಕಾರಿಯಾಗಲಾರವು ಎನ್ನುವುದನ್ನು ದೃಢವಾಗಿ ನಂಬಿದ್ದ ಈ ರಾಜ ಅದರ ಸುದ್ದಿಗೇ ಹೋಗದೆ ಕೇವಲ ಆರ್ಥಿಕ ಸುಧಾರಣೆಗಳ ಮೂಲಕ ಜನರನ್ನು ಒಗ್ಗಟ್ಟಾಗಿಯೂ, ಪ್ರಮೀಳೆಯರ ನಾಡಿನಲ್ಲಿ 202 ಸ್ವಾವಲಂಬಿಯಾಗಿಯೂ ಮಾಡಿದನಲ್ಲದೇ ಆವತ್ತಿನ ಅವನ ರಾಜಕೀಯ ನಡೆ ಈಗಲೂ ಪ್ರಸ್ತುತ ಎನ್ನುವುದನ್ನು ಗಮನಿಸಬೇಕಾಗುತ್ತದೆ. ದಶಕಗಳ ಆಡಳಿತದಲ್ಲಿ ಎಲ್ಲಿಯೂ ಈತ ಇಂತದ್ದೇ ಸಮುದಾಯ ಹೀಗೇ ಇರಬೇಕೆನ್ನುವ ಕರಾರಿಗೆ ಮಾನ್ಯತೆಯನ್ನೇ ಕೊಡಲಿಲ್ಲ. ಬದಲಿಗೆ ಎಲ್ಲಾ ಸಮುದಾಯದ ಮಧ್ಯೆ ಸಂಬಂಧ ಹಾಗು ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಎಲ್ಲವನ್ನೂ ಮುಖ್ಯವಾಹಿನಿಗೆ ತರುವ ಕಾರ್ಯಕ್ಕೆ ಇಳಿದ. ಹಾಗಾಗಿ ರಾಜ್ಯ ಸುಭಿಕ್ಷವೂ ಅವನ ನೇರ ನಿಯಂತ್ರಣದಲ್ಲೂ ಇತ್ತು. ಆದರೆ ಕೊನೆ ಕೊನೆಯಲ್ಲಿ ಪಾಂಹೈಂಬಾ ಸ್ವತ: ತನ್ನ ಮೂಲದಿಂದ ಹಿಂದೆಸರಿದು ಪ್ರಜೆಗಳಿಗೂ ಅವರವರ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದನಲ್ಲದೇ, ಸ್ವತ: ಹಿಂದೂ ಧರ್ಮದ ಕಡೆಗೆ ಸ್ಪಷ್ಟವಾಗೇ ಆಕರ್ಷಿತನಾದ. ಹಾಗಾಗಿ ಇವನ ಕಾಲಾವಧಿಯಲ್ಲೇ ಹಿಂದೂ ಧರ್ಮ ಸಂಪೂರ್ಣವಾಗಿ ಮತ್ತು ಸದೃಢವಾಗಿ ಇಲ್ಲೆಲ್ಲ ತಳ ಊರಲು ಕಾರಣವಾಗಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ. ಇದಕ್ಕೆ ಇತಿಹಾಸ ಸ್ಪಷ್ಟವಾಗಿ ದಾಖಲೆಗಳನ್ನು ನೀಡುತ್ತದೆ ಕೂಡಾ. 1724ರ ಸುಮಾರಿಗೆ ಎಲ್ಲಾ ಮಿಥೀಸ್‍ಗಳಿಗೆ ಸಂಬಂಧಿಸಿದ ವಸ್ತುಗಳನ್ನು ಅವುಗಳ ಕುರುಹಗಳ ಸಮೇತ ನಾಶಪಡಿಸುವ "ಪಾಹೈಂಬಾ" ಅಂತಿಮವಾಗಿ ಸನಾ-ಮಾಹಿಗೆ ಸಂಬಂಧಿಸಿದ ಎಲ್ಲವನ್ನೂ 1724 ಮೇ ಹೊತ್ತಿಗೆ ಸಂಪೂರ್ಣ ನಾಶ ಮಾಡುತ್ತಾನೆ. ಅದ್ಯಾಕೆ ಅವನಿಗೆ ಈ ದ್ವೇಷ ಇತ್ತೋ ಗೊತ್ತಿಲ್ಲ. ಮೊದಲಿನ ಅವನ ಆಡಳಿತಾವಧಿಗೂ ಇದಕ್ಕೂ ತದ್ವಿರುದ್ಧ ದಾಖಲೆಗಳನ್ನು ಇತಿಹಾಸ ನೀಡುತ್ತದೆ. ಕೊನೆಗೆ 1732 - 37ರ ಕಾಲಾವಧಿಯಲ್ಲಿ ವೈಷ್ಣವ ಧರ್ಮವನ್ನು ಸ್ವೀಕಾರ ಮಾಡುತ್ತಾನೆ. ಇದಕ್ಕಾಗಿ "ಶಾಂತಿದಾಸ ಗೋಸಾಯಿ" ಎನ್ನುವ ಸ್ವಾಮಿಗಳ ಮೂಲಕ ಧರ್ಮ ಸ್ವೀಕಾರ ಮಾಡಿ "ರಮಾನಂದಿ" ಯಾಗುತ್ತಾನೆ. ಪ್ರಸ್ತುತ ಇದರ ಪಳೆಯುಳಿಕೆಗಳು ಈಗಿನ ಬಾಂಗ್ಲಾ ದೇಶದಲ್ಲಿವೆ. ಈ ತನ್ನ ನಿರ್ಧಾರವನ್ನು ಬೆಂಬಲಿಸದ ಯಾವ ಸಮುದಾಯವನ್ನು ಅವನು ರಾಜ್ಯದಲ್ಲಿ ಉಳಿಸಿಕೊಳ್ಳದೇ ಹೊರಹಾಕಿದ. 203 ಪ್ರಮೀಳೆಯರ ನಾಡಿನಲ್ಲಿ ನಂತರದಲ್ಲಿ ತನ್ನ "ಮೇಡಿಂಗು ಪಾಂಹೈಬಾ" ಎನ್ನುವ ಹೆಸರಿನ ಮೂಲಕ ಪ್ರಾಪ್ತವಾಗಿದ್ದ ಪಟ್ಟವನ್ನು ಹೊಸದಾಗಿ ಬದಲಾಯಿಸಿಕೊಂಡು "ಮಹಾರಾಜ" ಎಂದು ಘೋಷಿಸಿಕೊಂಡ. ಹಾಗಾಗಿ ಇವನ ನಂತರದ ತಲೆಮಾರುಗಳೆಲ್ಲಾ ಮಹಾರಾಜ ಸಂತತಿಯ ಮತ್ತು ವೈಷ್ಣವ ಧರ್ಮದ ಮುಂದುವರಿಕೆಯ ಭಾಗವಾಗೇ ನಡೆಯುತ್ತವೆ. ಇಲ್ಲಿಗೆ ಮಣಿಪುರಿಗಳ ಹೆಸರುಗಳ ವಿಚಿತ್ರತೆಯೂ ಕಡಿಮೆಯಾಗುತ್ತದೆ. ಅದಕ್ಕೊಂದು ಸ್ಪಷ್ಟತೆಯೂ ದೊರಕುತ್ತದೆ. ಮಹಾರಾಜ ಭಿಗ್ಯಾ ಚಂದ್ರ ನಿಂಘಾಥೌ ಚಿಂಗ್ – ಥಾಂಗ್ ಖೊಂಬಾ 1763 ರಿಂದ 1798 : ಮಧ್ಯಯುಗದ ಕೊನೆಯ ಮತ್ತು ಮುಖ್ಯ ಕೊಂಡಿಯಾಗಿರುವ ಮಹಾರಾಜ ಸಂತತಿಯ ಅರಸು ಈ "ಭಿಗ್ಯಾ ಅಥವಾ ಚಿಂಗ್-ಥಂಗ್ ಖೊಂಬಾ." ಈತ ಈ ಮೊದಲೇ ವೈಷ್ಣವ ದೀಕ್ಷೆ ಪಡೆದಿದ್ದ ಪಾಂಹೈಬಾನ ಮೊದಲನೆಯ ಮಗ. "ಚಿಟ್ಸಾಯಿ" ಎನ್ನುವ ಇನ್ನೊಬ್ಬ ಮಗ ತಕ್ಖೇಲ್ (ಈಗಿನ ತ್ರಿಪುರಾ)ವನ್ನು ಅಕ್ರಮಿಸಿಕೊಂಡು ರಾಜ್ಯಭಾರ ಮಾಡುತ್ತಾನೆ. ನಂತರದಲ್ಲಿ ಚಿತ್ತಗಾಂಗನ್ನು ಅದರೊಂದಿಗೆ ಸೇರಿಸಿಕೊಳ್ಳಲಾಗುತ್ತದೆ. ಕಣಿವೆರಾಜ್ಯದಲ್ಲಿ ಅಸೀಮ ಸಾಹಸ ಮೆರೆದು ಈತ ರಾಜ್ಯ ಬೆಳೆಸುತ್ತಾನೆ. 1751ರಲ್ಲಿ ಹೆಚ್ಚಿನ ರಾಜ್ಯಾಕಾಂಕ್ಷೆಯಿಂದ ಬ್ರಿಟಿಷ್‌ ರನ್ನು ಸಂಪರ್ಕಿಸುವ ಚಿಟ್ಸಾಯಿ ಮೊದಲ ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪೆನಿಯ ಸಂಪರ್ಕಕ್ಕೆ ಕಾರಣನಾಗುತ್ತಾನೆ. ಆದರೆ ಆ ಕ್ಷಣಕ್ಕೆ ಬೆಂಬಲ ನೀಡದ ಬ್ರಿಟಿಷ್‌ ಕಂಪೆನಿ ಅಲ್ಲಿಂದ ಹಲವು ಹಂತದಲ್ಲಿ ಈಶಾನ್ಯ ರಾಜ್ಯದ ಮೇಲೆ ನಿಯಂತ್ರಣಕ್ಕೆ ಪ್ರಯತ್ನಿಸಿ ಕೊನೆಗೆ 1762 ರಲ್ಲಿ ಬ್ರಿಟಿಷ್‌ –ಮಣಿಪುರ್ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಅದಕ್ಕೆ ಆಗಿನ ಮಣಿಪುರದ ಮುಖ್ಯಸ್ಥ "ಗೌರಿಸಿಯಾಂ" ಮತ್ತು “ವೆನೋಸಿಟ್ರಾತ್’’ ಗರ್ವರ್‌ನರ್ ಅಫ್ ಬೆಂಗಾಲ್" ಸಹಿ ಹಾಕಿ ಒಪ್ಪಂದಕ್ಕೆ ಬರುತ್ತಾರೆ. ಇದರ ಪ್ರಕಾರ ಬ್ರಿಟಿಷರ ವ್ಯಾಪಾರಕ್ಕೆ ಗೌರಿಸಿಯಾಮ್ ಬೆಂಬಲ ಮತ್ತು ಸಹಾಯ ನೀಡಬೇಕು ಹಾಗು ಇದಕ್ಕೆ ಬದಲಾಗಿ ಬ್ರಿಟಿಷರು ತಮ್ಮ ಸೈನಿಕ ಬಲವನ್ನು ರಾಜ್ಯ ಕಾಪಾಡಲು ನೀಡುತ್ತಾರೆ ಎನ್ನುವುದನ್ನು ದಾಖಲಿಸುತ್ತಾನೆ. ಪ್ರಮೀಳೆಯರ ನಾಡಿನಲ್ಲಿ 204 ಇವನ ಕೊನೆಯಾದ ನಂತರ 1763 ರಲ್ಲಿ "ಚಿಂಗ್-ಥಮ್-ಕೋಂಬಾ" ಸಂತತಿ ಮುಂದುವರೆಯುವ ಮೊದಲೇ ಬರ್ಮಿಯನ್ನರ ದಾಳಿಗೆ ರಾಜ್ಯ ತುತ್ತಾಗುತ್ತದೆ. ಇದು ಮಣಿಪುರದ ಇತಿಹಾಸದಲ್ಲಿ ಅಲ್ಲೆಲ್ಲ ನಾಶಕಾರಕ ಭಾಗವಾಗೇ ಗುರುತಿಸಲಾಗುತ್ತದೆ. ಈ ದಾಳಿಯ ಭಾಗವಾಗಿ 1769 ರಲ್ಲಿ "ಕಚೇರ್" ಪ್ರದೇಶ ಅವನ ಕೈಬಿಡುವುದರೊಂದಿಗೆ ಮೊದಲ ಬಾರಿಗೆ ದೀರ್ಘಾವಧಿಯ ನಂತರ ಈಶಾನ್ಯ ರಾಜ್ಯ ತುಂಡಾಗುತ್ತದೆ. ಆದರೆ ಮತ್ತೆ 1773ರಲ್ಲಿ ಸಂಪೂರ್ಣ ಮಣಿಪುರವನ್ನು ಹಿಂದಕ್ಕೆ ಪಡೆದು ವಸಾಹತು ಸ್ಥಾಪನೆಗೆ ಕಾರಣನಾಗುತ್ತಾನೆ "ಗೌರಿಸಿಯಂನ" ವಾರಸುದಾರ. ಅವನು ವಿಷ್ಣುಪುರವನ್ನು 1775 ರಲ್ಲಿ ರಾಜಧಾನಿಯನ್ನಾಗಿಸಿ ಮಣಿಪುರವನ್ನು ಆಳುತ್ತಾನೆ. ನಂತರ ಬಂದ ಬಂಗಾಲದ ಗವರ್‌ನರ್ ವಾರನ್ ಹೆಸ್ಟಿಂಗ್ಸ್ ಮತ್ತು ಮಿ.ರೆಂಡಾಲ್ ಸೇರಿ ಮಣಿಪುರ ಎನ್ನುವ ಹೆಸರನ್ನು ಖಾಯಂ ಆಗಿ ನಿಗದಿಗೊಳಿಸುತ್ತಾರೆ. ಹೀಗೆ ಬ್ರಿಟೀಷ ಭಾರತದೊಳಕ್ಕೆ ಬರುವ ಹೊತ್ತಿಗೆ ಮಣಿಪುರ ಒಂದು ಹಂತಕ್ಕೆ ಬಂದು ನಿಂತಿದ್ದು ಅನಂತರ ಆಧುನಿಕ ಯುಗದತ್ತ ಕಾಲಿಟ್ಟಿದ್ದು ಸ್ಪಷ್ಟ. ಆಧುನಿಕ ಯುಗ ಕ್ರಿ ಶ. 1810 -1941 : (1810 ನಂತರದಿಂದ ಇಲ್ಲಿನವರೆಗೂ ಅಥವಾ ಸ್ವತಂತ್ರ ಲಭ್ಯವಾಗುವವರೆಗೂ ಇದನ್ನು ಆಧುನಿಕ ಅಥವಾ ನವಯುಗ ಎಂದೇ ಮಣಿಪುರ ಇತಿಹಾಸಕಾರರು ಬಣ್ಣಿಸಿದ್ದಾರೆ) 18ನೆಯ ಶತಮಾನದ ಆದಿಯಲ್ಲಿ ರಾಜಾ ಮರ್ಜೀತ್ ಮಣಿಪುರವನ್ನು ಆಳಿದ್ದಾನೆ. ಇವನ ಆರಂಭದ ನಂತರ ಬರ್ಮಿಯರ ದಾಳಿಗೆ ತುತ್ತಾಗುವ ಮಣಿಪುರ ಮರ್ಜೀತನನ್ನು ಪತನಗೊಳಿಸಿ "ಚಾಹಿ-ತರೇಟ್ ಕುಂಟಕ್ಪಾ" ರಾಜನಾಗುತ್ತಾನೆ. ಆದರೆ ಅವನ ಮೇಲೆ ಮುಗಿಬಿದ್ದ ಬರ್ಮೀಯರ ಸೈನ್ಯ ಅಕ್ಷರಶ: ಮಣಿಪುರವನ್ನು ನೆಲಸಮಗೊಳಿಸಿದ ಹೊಡೆತಕ್ಕೆ, ಸೋತುಹೋಗುವ ಮರ್ಜೀತ್ ಅಲ್ಲಿಂದ ಕಾಲ್ತೆಗೆದು ಅವನ ಸಹೋದರರಾದ ಚೌರ್‍ಜಿತ್ ಮತ್ತು ಗಂಭೀರಸಿಂಗ್ ಇರುವಲ್ಲಿಗೆ ತೆರಳುತ್ತಾನೆ. 205 ಪ್ರಮೀಳೆಯರ ನಾಡಿನಲ್ಲಿ 1825 ರಲ್ಲಿ ಅವರ ಮೇಲೆ ಹಿಂದಿರುಗಿ ದಾಳಿ ಮಾಡಿ ಬರ್ಮೀಯರನ್ನು ಹೀನಾಯವಾಗಿ ಸೋಲಿಸಿ ಅವರನ್ನು ನಿಂಗಾಥೌನ (ಈಗಿನ ಚಾಂಡೆಲ್ ಜಿಲ್ಲೆಯ ಸರಹದ್ದು) ಆಚೆಗೆ ತಳ್ಳುತ್ತಾನೆ. ಇದರಿಂದಾಗಿ ಮತ್ತೆ ಚಕ್ರವರ್ತಿಯಾಗಿ ಘೋಷಿಸಿಕೊಳ್ಳುತ್ತಾನೆ. ಆಗ ವಿಷ್ಣುಪುರ್ ಪರ್ವತದ ತುದಿಯಲ್ಲಿ ಅರಮನೆಯನ್ನು ನಿರ್ಮಿಸಿ 1826ರಲ್ಲಿ ರಾಜಧಾನಿಯನ್ನೇ "ಚಾಂಚಿಪುರ್" ಎನ್ನುವಲ್ಲಿಗೆ ವರ್‌ಗಾಯಿಸುತ್ತಾನೆ. ಅವನ ಸಹೋದರ ಗಂಭೀರ ಸಿಂಗ "ಖಾಸಿ ಹಿಲ್ಸ್‌" (ಈಗಿನ ಗೌಹಾತಿಯ ಆ ಕಡೆಗಿದೆ. ಜಗತ್ತಿನ ಅತ್ಯಂತ ಮಳೆಯಾಗುವ "ಒದ್ದೆ ಮರೂಭೂಮಿ" ಎಂದೇ ಖ್ಯಾತಿ ಪಡೆದಿರುವ "ಮೌಸನ್ ರ್ಯಾಮ್" ಇಲ್ಲಿಯೇ ಇದೆ) ಪ್ರದೇಶಕ್ಕೆ ಸೇರಿಕೊಳ್ಳುತ್ತಾನೆ. ಕಾರಣ ಬ್ರಿಟೀ ಷ ರು ಸೇರಿದಂತೆ ಯಾರೂ ಈ ಖಾಸಿ ಹಿಲ್ಸ್‌ ಪ್ರದೇಶವನ್ನು ಏರಿ ಬಂದು ಯುದ್ಧ ಮಾಡಲಾರರು ಎನ್ನುವುದನ್ನು ಅರಿಯಲಾಗಿತ್ತು. ಮಹಾರಾಜ ಚಂದ್ರಕೀರ್ತಿ (1834 – 1844) : ಮಹಾರಾಜ ಗಂಭೀರಸಿಂಗನ ಮಗನಾದ ಚಂದ್ರಕೀರ್ತಿ, ಮಹಾರಾಜ ಗಂಭೀರಸಿಂಗ್ ಅಕಾಲ ಮರಣಕ್ಕೀಡಾದಾಗ ಅವನನ್ನು ಅವನ ಚಿಕ್ಕಪ್ಪನಾದ "ನಾರಸಿಂಗ್" ಬೆಳೆಸುತ್ತಾನೆ. ಅದಕ್ಕೂ ಮೊದಲೇ ಗಂಭೀರಸಿಂಗ ಬ್ರಿಟಿಷ್‌ ಸರಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ವರ್ಷಕ್ಕೆ 6000 ಸಾವಿರ ರೂಪಾಯಿಗಳ ಗುತ್ತಿಗೆಗೆ "ಕೌಬಾಯ್" ವ್ಯಾಲಿಯನ್ನು ಕೃಷಿ ಮತ್ತು ಇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಬರ್ಮೀಯರಿಗೆ ಬಿಟ್ಟುಕೊಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು (ಇದನ್ನು ಮಿಥೀಸ್‍ಗಳ "ಚೈಥಾರೋಲ್ ಖಬಾಂಬಾ"ದಲ್ಲಿ ಉಲ್ಲೇಖಿಸಲಾಗಿದೆ). ಆದರೆ ಅಸಲಿಗೆ ಬರ್ಮಿಯನ್ನರನ್ನು ಸೆಳೆದುಕೊಳ್ಳಲು ಬ್ರಿಟಿಷರು ಈ ವ್ಯಾಲಿಯನ್ನು ಗುತ್ತಿಗೆ ಆಧಾರದ ಮೇಲೆ ಬರೆಸಿಕೊಂಡು ಅದನ್ನು ಅವರಿಗೆ ಬಿಟ್ಟುಕೊಡುವುದರೊಂದಿಗೆ ಕೌಬಾಯ್ ವ್ಯಾಲಿಯ ಮೇಲೆ ತಮ್ಮ ಅಧಿಕಾರಕ್ಕೆ ಅಗತ್ಯದ ತಯಾರಿಯನ್ನು ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಪ್ರಮೀಳೆಯರ ನಾಡಿನಲ್ಲಿ 206 ಈ ಒಪ್ಪಂದ ಬ್ರಿಟಿಷ್‌ ಸರಕಾರದ ಪರವಾಗಿ ಕ್ಯಾಜಾರ್ಜ್ ಗೋರ್ಡಾನ್ ಮತ್ತು ಕ್ಯಾ. ಪೆಂಪಾರ್ಟನ್ ಇವರೊಂದಿಗೆ ವಹಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಬ್ರಿಟಿಷ್‌ ಸರಕಾರ ಮೊದಲ ಬಾರಿಗೆ ಇಂಗ್ಲೆಂಡಿನಿಂದ ತಂದಿದ್ದ ದೊಡ್ಡ ಕನ್ನಡಿ ಹಾಗು ಗಡಿಯಾರದ ಕೊಡುಗೆಯನ್ನು ರಾಜನಿಗೆ ಕೊಡಲಾಗಿತ್ತು. 1850 ರವರೆಗೂ ನಾರಸಿಂಗ್ ಇಲ್ಲಿನ ವ್ಯವಹಾರವನ್ನು ನಿಯಂತ್ರಿಸುತ್ತಾ ತಾನೆ ರಾಜನಂತೆ ಮೆರೆದ. 1850ರಲ್ಲಿ ಆತನ ಅವಸಾನದ ನಂತರ ಚಂದ್ರಕೀರ್ತಿ ಕಚರ್‌ನಿಂದ ಹಿಂದಿರುಗಿ ಮತ್ತೆ ಮಣಿಪುರವನ್ನು ವಹಿಸಿಕೊಂಡು ರಾಜ್ಯಭಾರಕ್ಕಿಳಿಯುತ್ತಾನೆ. ಆಗಿನ್ನು ಚಂದ್ರಕೀರ್ತಿಗೆ 19 ವರ್ಷ ವಯಸ್ಸು. ಅಲ್ಲಿಂದ ಆಡಳಿತ ಆರಂಭಿಸಿದ ಚಂದ್ರಕೀರ್ತಿ 1857 ರಲ್ಲಿ ಸಿಪಾಯಿ ದಂಗೆಯ ಬಿಸಿಯನ್ನು ಅನುಭವಿಸಬೇಕಾಯಿತು. ಅನಾವಶ್ಯಕವಾಗಿ ತನ್ನ 600 ಜನ ಮಿಥೀಸ್ ಸಿಪಾಯಿಗಳನ್ನು ಮೋಸಕ್ಕೀಡುಮಾಡಿ ಬ್ರಿಟಿಷ್‌ ಕೈಗೆ ಒಪ್ಪಿಸಿದ ಘಟನೆ ಕೂಡಾ ನಡೆಯಿತು. ಹಾಗಾಗಿ ಆ ಸೈನಿಕರನ್ನು ಕಳೆದುಕೊಂಡ ಘಟನೆಯ ಬದಲಿಗೆ ಮತ್ತೆ ಸೈನ್ಯ ಜಮಾವಣೆ ಮಾಡುವ ಚಂದ್ರಕೀರ್ತಿ ತನ್ನ ರಾಜ್ಯವನ್ನು ಸುಭದ್ರಗೊಳಿಸುತ್ತಾನೆ. ಮಣಿಪುರದಲ್ಲಿ ಈ ಹೊತ್ತಿನಲ್ಲಿ ಮೊದಲ ಬಾರಿಗೆ 1858 ರಲ್ಲಿ "ಫೊಟೊಗ್ರಾಫಿ" ಎಂಬ ಶಬ್ದ ಹಾಗು ಕ್ಯಾಮೆರಾದ ಬಳಕೆಯಾಗುತ್ತದೆ. 1873 ಡಿಸೆಂಬರ್ 13 ರಂದು ಬ್ರಿಟಿಷ್‌ ಡಾ. ಬ್ರೌನ್ ಮೂಲಕ ಮಣಿಪುರದ ನಕಾಶೆಗಳನ್ನು ಹಾಗು ಅದರ ನಿಖರ ಎಲ್ಲೆ / ಸರಹದ್ದುಗಳನ್ನು ಗುರುತಿಸಿ ಸ್ಪಷ್ಟ ಮಣಿಪುರ ರಾಜ್ಯದ ರಚನೆಯ ಪ್ರಸ್ತಾಪಕ್ಕೆ ಕಾರಣವಾದ ಚಂದ್ರಕೀರ್ತಿ ಅದಕ್ಕಾಗಿ ಮಣಿಪುರಕ್ಕೆ ಬೇಕಾಗುವ ಶಿಕ್ಷಣ ಸಾಹಿತ್ಯ ಇತ್ಯಾದಿಗಳಿಗೂ ವಿದೇಶಿ ನೆರವನ್ನು ಪಡೆಯುತ್ತಾನೆ. 1877 ರಲ್ಲಿ ಮಿಥೀಸ್‍ಗಳ ಮೊದಲ ಲಿಪಿಯನ್ನು ಡಾ. ಬ್ರೌನ್ ಪ್ರಕಟಪಡಿಸುತ್ತಾನೆ. ಇದು ಅಲ್ಲಿನ ಮೊದಲ ಮುದ್ರಣವಾಗುತ್ತದೆ. ಆಗ "ಅಸ್ತೇಟಿಕ್ ಸೊಸೈಟಿ ಆಫ್ ಬೆಂಗಾಲ" ತನ್ನ ಬೆಂಗಾಲ ಲಿಪಿಯೊಂದಿಗೆ ಇಲ್ಲಿಗೆ ಪ್ರವೇಶಿಸಿ ಸಂಪೂರ್ಣ 207 ಪ್ರಮೀಳೆಯರ ನಾಡಿನಲ್ಲಿ ಲಿಪಿಯ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಿದನಲ್ಲದೆ, ಅಲ್ಲಿ ಬೆಂಗಾಲಿ ಲಿಪಿಗೆ ಹೆಚ್ಚಿನ ಮಾನ್ಯತೆ ಪಡೆಯುವಂತೆ ಮಾಡುತ್ತದೆ. ಹೀಗಾಗಿ ಆಗ ಷ್ಟೆ ಕಣ್ಣುಬಿಡುತ್ತಿದ್ದ ಮಿಥೀಸ್‍ಗಳ "ಲಿಪಿ" ಮತ್ತೆ ಹಿಂದೆ ಸರಿಯುತ್ತದೆ. ಬ್ರಿಟಿಷರೊಂದಿಗೆ ಸಾಮರಸ್ಯದಿಂದಲೂ ಅಗತ್ಯಬಿದ್ದಾಗ ತನ್ನ ತೋಳ್ಬಲದಿಂದಲೂ ರಾಜ್ಯಭಾರ ನಡೆಸಿದ ಚಂದ್ರಕೀರ್ತಿ ಬ್ರಿಟಿಷ್‌ ಸರಕಾರದಿಂದ ಕೆ.ಸಿ.ಎಸ್.ಐ. ಪದವಿಗೆ ಪಾತ್ರನಾಗುತ್ತಾನೆ. ಮಣಿಪುರಿ ಪೋಲೊವನ್ನು ಬ್ರಿಟಿಷ್‌ ರಿಗೆ ಕಲಿಸುತ್ತಾನೆ. ಅಲ್ಲಿಯವರೆಗೂ ಅಲ್ಲಲ್ಲೇ ಉಳಿದಿದ್ದ ಪೋಲೊಗೆ ಜಾಗತಿಕ ಮಾನ್ಯತೆಯನ್ನು ತಂದುಕೊಡುತ್ತಾನೆ. ಈಗಿರುವ ಅತ್ಯಂತ ಪುರಾತನ ಕ್ರೀಡಾಂಗಣದ ಉಳಿವಿಗೂ ಕಾರಣನಾಗುತ್ತಾನೆ. ಕೊನೆಗೆ 1886 ರಲ್ಲಿ ಯುಂಫಾಲ (ಈಗಿನ ಇಂಫಾಲ)ದಲ್ಲಿ ಕೊನೆಯುಸಿರೆಳೆಯುತ್ತಾನೆ. ಮಹಾರಾಜ ಸುರ್‍ಚಂದ್‍ಸಿಂಘ್ (ಕ್ರಿ.ಶ.1886 – 1890) : ಈ ಮಧ್ಯೆ ನಾಲ್ಕು ವರ್ಷಗಳ ಕಾಲ ಮಹಾರಾಜ "ಸುರಚಂದಸಿಂಗ್" ಕಾಲಾವಧಿಯೂ ಬಂದು ಹೋಗುತ್ತದೆ. ಆದರೆ ಈ ಕಾಲಾವಧಿಯಲ್ಲಿ ಆಮೂಲಾಗ್ರ ಬದಲಾವಣೆ ಮಣಿಪುರದ ಹೊಸ ದಿಕ್ಕಿಗೆ ಕಾರಣವಾಗಿದ್ದೂ ಹೌದು. ಕಾರಣ ಸುರಚಂದ ಸಿಂಗ್‍ನನ್ನು ಪದಚ್ಯುತ ಗೊಳಿಸುವ "ಜುಬ್ರಾಜ ಟೀಕೇಂದ್ರಜಿತ್" (ಈಗಲೂ ಇವನ "ಟೀಕೇಂದ್ರಜಿತ್" ಹೆಸರಿನ ಒಂದು ಪಾರ್ಕು ಮತ್ತು ನೆನಪಿನ ಸ್ಥಂಭ ಇಂಫಾಲ ಹೃದಯದ ಭಾಗದಲ್ಲಿದೆ. ಅದಕ್ಕೆ ತಾಗಿಕೊಂಡೆ ಪೋಲೊ ಮೈದಾನ ಇದೆ) ಮತ್ತು "ಕುಲ್ಲಾ ಚಂದ್ರ" ರಾಜ್ಯವನ್ನು ಆಕ್ರಮಿಸಿಕೊಂಡಾಗ ಸುರ್‍ಚಂದ ಸಿಂಘ ಗಡಿ ಪಾರಾಗಿ, ಬಂಗಾಲಕ್ಕೆ ಹೋಗಿ ತನ್ನ ಸಾಮ್ರಾಜ್ಯ ಮರಳಿ ಪಡೆಯಲು ಸಹಾಯ ಮಾಡುವಂತೆಯೂ ಬ್ರಿಟೀಷರ ನೆರವನ್ನು ಕೋರುತ್ತಾನೆ. ಇದಕ್ಕೆ ಸ್ಪಂದಿಸಿದ ಆಗಿನ ಭಾರತದ ವೈಸ್‍ರಾಯ್ ಲಾರ್ಡ ಲಂಡ್ಸ್‍ಡೌನ್ ಮತ್ತು ಆಗಿನ ಅಸ್ಸಾಂ ಗವರ್‌ನರ್ ಮಿ.ಜೆ.ಡಬ್ಲ್ಯೂ ಕ್ವಿಂಟನ್‍ಗೆ ನಿರ್ದೇಶಿಸಿ "ಟಿಕೇಂದ್ರಜಿತ್" ನನ್ನು ಬಿಟ್ಟು "ಕುಳ್ಳಚಂದ"್ರ ನನ್ನು ಬಂಧಿಸುವಂತೆ ಅದೇಶಿಸುತ್ತಾನೆ. ಅದಕ್ಕಾಗಿ ಕ್ವಿಂಟನ್ ತನ್ನ ಸೇನಾಪಡೆಯೊಂದಿಗೆ ಯಾವುದೇ ಪ್ರಮೀಳೆಯರ ನಾಡಿನಲ್ಲಿ 208 ಮುನ್ಸೂಚನೆ ಕೊಡದೆ ಕುಳ್ಳಚಂದ್ರನ ಮೇಲೆ ದಾಳಿ ಮಾಡುತ್ತಾನೆ. ಆಗ ಕುಳ್ಳಚಂದ್ರನನ್ನು ಬಂಧಿಸಲಾಗುವುದಿಲ್ಲ. ಆದರೆ ಅದರ ಮುಂದಿನ ಭಾಗವಾಗಿ ಬ್ರಿಟಿಷ್‌ ಸರಕಾರದ ಕ್ವಿಂಟನ್ ಸೇರಿದಂತೆ, ಗ್ರೀಮುಡ್ ಮತ್ತಿತರ ಐವರು ಅಧಿಕಾರಿಗಳೆ ಕೊಲೆಯಾಗುತ್ತಾರೆ. ಇದೊಂದು ಮಣಿಪುರದ ಆಧುನಿಕ ಯುಗದತ್ತ ತೆವಳುತ್ತಿದ್ದ ಇತಿಹಾಸದಲ್ಲಿ ಅತಿ ದೊಡ್ಡ ಘಟನೆಯಾಗಿ ದಾಖಲಾಗುತ್ತದೆ. ಈಗಲೂ ಮಣಿಪುರ ಮ್ಯೂಸಿಯಂನಲ್ಲಿ ಈ ಬಗ್ಗೆ ದಾಖಲೆಗಳಿವೆ. ಇದರಿಂದ ಕುಪಿತಗೊಂಡ ಬ್ರಿಟಿಷ್‌ ವೈಸ್‍ರಾಯ್ ದೊಡ್ಡಮಟ್ಟದ ತಯಾರಿಯೊಂದಿಗೆ ಸಂಚುಮಾಡುತ್ತಾರೆ. ಮೂರು ಭಾಗವಾಗಿ ಇಂಫಾಲದ ಮೇಲೆ ದಾಳಿಗೆ ಸೂಚನೆ ದೊರೆಯುತ್ತದೆ. ಅದರಂತೆ "ತಾಮು" ಎಂಬ ದಕ್ಷಿಣ ಭಾಗದಲ್ಲಿ, (ಈಗಿನ ಬರ್ಮಾದಲ್ಲಿದ್ದು ಭಾರತದ ಅಂಚಿನಲ್ಲಿ ಕೇವಲ ಐದು ಕಿ.ಮೀ.ದೂರದಲ್ಲಿದೆ) "ಕೊಹಿಮಾ" ಎಂಬ ನಾಗಾಲ್ಯಾಂಡ್ ಉತ್ತರದಲ್ಲಿ ಮತ್ತು ಕಚೇರ್ (ಆಸಾಂ) ಪಶ್ಚಿಮ ಹೀಗೆ ಮೂರು ದಿಕ್ಕಿನಿಂದ ಮಣಿಪುರವನ್ನು ಆಕ್ರಮಿಸುವ ತಯಾರಿಯಲ್ಲಿ ಭಾರಿ ಸಂಖ್ಯೆಯ ಸೈನ್ಯ ಅಲ್ಲಿಗೆ ತೆರಳುತ್ತದೆ. ಈ ಆಂಗ್ಲೊ- ಮಣಿಪುರ ಯುದ್ಧದಲ್ಲಿ ತೀವ್ರ ಕಾದಾಟವೇ ಜರಗುತ್ತದೆ. ಆದರೆ ಎರಡು ಕಡೆಯಲ್ಲಿ ಸಾಕಷ್ಟು ಹಾನಿಗೀಡಾಗಿಯೂ ಬ್ರಿಟಿಷ್‌ ಸೈನ್ಯ ಜಯಶಾಲಿಯಾಗುತ್ತದಾದರೂ ಇಂಫಾಲದಿಂದ 40 ಕಿ.ಮೀ ದೂರದಲ್ಲಿ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ. ಅಲ್ಲಿ "ಪಾವೋನಾ ಬ್ರಜ್ಭಾಶಿ" ( ಇವನದೇ ಹೆಸರಿನ ಮುಖ್ಯರಸ್ತೆ ಇವತ್ತು ಇಂಫಾಲದಲ್ಲಿದ್ದು ಪ್ರಮುಖ ವಾಣಿಜ್ಯಾತ್ಮಕ ರಸ್ತೆಯಾಗಿದೆ. ಪಾವೋಣಾ ಬಝಾರ್ - ಲೇ) ಮತ್ತವನ ದಂಡು ಇನ್ನಿಲ್ಲದಂತೆ ಬ್ರಿಟಿಷ್‌ ಸೈನ್ಯವನ್ನು ಹಣಿಯುತ್ತದೆ. 1891 ರ ಎಪ್ರಿಲ್ 27ರವರೆಗೂ ಈ ಕಾದಾಟವನ್ನು ಜೀವಂತವಾಗಿಡುವ "ಪಾವೋನಾ ಬ್ರಿಜ್ ಭಾಶಿ" ಕೊನೆಯಲ್ಲಿ ರಣರಂಗದಲ್ಲಿ ಕೊಲೆಯಾಗುವುದರೊಂದಿಗೆ ಮಣಿಪುರ ತನ್ನ ಸಂಪೂರ್ಣ ಸ್ವತಂತ್ರ ಕಂಡುಕೊಳ್ಳುತ್ತದೆ. 209 ಪ್ರಮೀಳೆಯರ ನಾಡಿನಲ್ಲಿ ಬ್ರಿಟಿಷ್‌ ರು ತನ್ನ ರಾಜಕೀಯ ಪ್ರತಿನಿಧಿಯಾಗಿ ಇದೇ ಸುರ್‍ಚಂದನನ್ನು ನಿಯಮಿಸುತ್ತಾರೆ. ಇದಕ್ಕೆಲ್ಲಾ ಕಾರಣರಾದ "ಜುಬರಾಜ್ ಟಿಕೇಂದ್ರಜೀತ್" ಮತ್ತು "ಥಂಘಾಲ ಜನರಲ್" ನನ್ನು ಪೋಲೊ ಮೈದಾನದಲ್ಲಿ ಆಗಸ್ಟ್ 13. 1891 ರಂದು ನೇಣಿಗೇರಿಸಲಾಗುತ್ತದೆ. ಆದರೆ ಈ ಹೋರಾಟದಲ್ಲಿ ಬ್ರಿಟಿಷ್‌ ಸೈನ್ಯ ನೇರಾನೇರ ಮತ್ತು ದೊಡ್ಡ ಪ್ರಮಾಣದಲ್ಲಿ ಯುದ್ಧಕ್ಕಿಳಿಯುವುದರೊಂದಿಗೆ ಸಂಪೂರ್ಣ ಮಣಿಪುರ ಚಿತ್ರಣವೇ ಬದಲಾಗುತ್ತದೆ. ಈಶಾನ್ಯ ರಾಜ್ಯದ ತ್ರಿಪುರಾ.. ಚಿತ್ತಗಾಂಗ್ ಮತ್ತು ಇತರ ಭಾಗಗಳು ಬದಲಾಗುತ್ತವೆ. ಬ್ರಿಟಿಷ್‌ ಸೈನ್ಯ ಹಲವು ಯುದ್ಧಾನಂತರ ಆಲ್ಲಿನ ಆಡಳಿತದೊಂದಿಗೆ ಒಪ್ಪಂದಕ್ಕೆ ಬರುವುದರೊಂದಿಗೆ ಈಶಾನ್ಯ ರಾಜ್ಯದ ಮುಕುಟ ಮಣಿಪುರ ಮತ್ತೆ ರಾಜ್ಯಾಡಳಿತಕ್ಕೆ ಮರಳುತ್ತದೆ. ಅದರೆ ಅದರ ಅಧಿಕಾರದ ಸೂತ್ರ ಮಾತ್ರ ಬ್ರಿಟಿಷ್‌ ಕೈಗೆ ಸೇರಿರುತ್ತದೆ. ಮಹಾರಾಜ್ ಚುರಚಾಂಡ ಸಿಂಗ (1891-1941) : ಮಣಿಪುರ ಇತಿಹಾಸದಲ್ಲೇ ಅದರಲ್ಲೂ ಆಧುನಿಕ ಕಾಲದಲ್ಲಿ ಅತ್ಯಂತ ದೀರ್ಘಕಾಲ ಚಕ್ರಾಧಿಪತ್ಯ ನಡೆಸಿದ ರಾಜಾ ಚುರಚಾಂಡಸಿಂಗ್ ಮಣಿಪುರವನ್ನು ದಕ್ಷವಾಗಿ ನಿಭಾಯಿಸುತ್ತಾನೆ. ಇವನ ಕಾಲದಲ್ಲಿ ಇಂಫಾಲದಲ್ಲಿ ಹೊಸ ಅರಮನೆಯನ್ನು ಮತ್ತೆ ನಿರ್ಮಿಸಲಾಯಿತು. ಮಣಿಪುರ ಮತ್ತೆ ತನ್ನ ಗತ ವೈಭವವನ್ನೇನೋ ಪಡೆಯಿತು. ಆದರೆ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಹ "ನುಪಿಲಾನ್" (ಮಹಿಳಾ ಯುದ್ಧ 1904 – 1) ಮತ್ತು ನುಪಿಲಾನ್ – 2 (1939) ಎರಡು ಬಾರಿ ಭಾರಿ ಮಹಿಳಾ ಅಂತರ್‍ಯುದ್ಧವನ್ನು ಎದುರಿಸಬೇಕಾಗಿ ಬಂತು. ಒತ್ತಾಯದ ಕೂಲಿಗಾಗಿ ಈ ಎರಡು ಯುದ್ಧಗಳನ್ನು ಈ ರಾಜ ಎದುರಿಸಬೇಕಾಗಿ ಬರುತ್ತದೆ. ಇದನ್ನು ಬ್ರಿಟಿಷ್‌ ರ ವಿರುದ್ಧ ಮಹಿಳೆಯರು ಮಣಿಪುರದಲ್ಲಿ ಎದ್ದ ದಂಗೆಯ ಅಪರೂಪದ ಘಟನೆಯನ್ನಾಗಿ ಗುರುತಿಸುತ್ತಾರೆ (ಈಗಲೂ ರಾಜಭವನದ ಪಕ್ಕದಲ್ಲಿ ನೂಪಿ-ಭವನವನ್ನು ಇದರ ಸ್ಮರಣಾರ್ಥ ರ್ಮಿಸಲಾಗಿದೆ. ಒಂದು ಸಭಾಭವನ ಇನ್ನಿತರ ವ್ಯವಸ್ಥೆ ಅಲ್ಲಿದೆ). ಆದರೆ ಪ್ರಮೀಳೆಯರ ನಾಡಿನಲ್ಲಿ 210 ಇವೆರಡನ್ನು ಹೊರತುಪಡಿಸಿದರೆ ಮಣಿಪುರ ನಿಜಕ್ಕೂ ತುಂಬಾ ಕಾಲ ಸುವರ್ಣಯುಗವನ್ನು ಕಾಣುತ್ತದೆ. ಮಹಾರಾಜ್ ಬುಧ ಚಂದ್ರಸಿಂಗ್ 1941 – 1955 : ಚುರಚಾಂಡ್ ನಂತರ ಮಹಾರಾಜ ಬುಧ ಚಂದ್ರಸಿಂಗ್ ರಾಜ್ಯಾಡಳಿತಕ್ಕೆ ಬರುತ್ತಾನೆ. ಇವನ ಕಾಲಾವಧಿಯಲ್ಲಿ ಹೆಚ್ಚಿನ ಬದಲಾವಣೆ ಬಾರದಿದ್ದರೂ ಜಗತ್ತು ಕಂಡ ಎರಡನೆಯ ಮಹಾಯುದ್ಧದ ಕರಿನೆರಳಲ್ಲಿ ಮಣಿಪುರ ಸಂಪೂರ್ಣ ನಲುಗಿಹೋಯಿತು. ಎಪ್ರಿಲ್ 1942 ರಿಂದ ಜನವರಿ 1945 ರ ಕಾಲಾವಧಿಯ ಮಣಿಪುರ ಮತ್ತೊಮ್ಮೆ ಧ್ವಂಸವಾಗುತ್ತೆ. ನಿರಂತರ ಹೊಡೆತಕ್ಕೆ ಸಿಲುಕುವ "ಭಾರತದ ಆಭರಣ" ಸಂಪೂರ್ಣ ಹಾಳಾಗಿ ಹೋಗುತ್ತದೆ. ಯಾವ ರೀತಿಯ ಬೆಳವಣಿಗೆಗೂ ಅವಕಾಶ ಇಲ್ಲದ ಈ ವ್ಯವಸ್ಥೆಯಲ್ಲಿ ಸಂಪೂರ್ಣ ಕಾಲಗತಿ ಮಣಿಪುರದ ಪಾಲಿಗೆ ನಿಂತು ಹೋಗಿತ್ತು. 1945 ರ ಮಧ್ಯ ರಾತ್ರಿ 28 ರ ದಿನಾಂಕ ಮಣಿಪುರವನ್ನು ಮಹಾರಾಜ ಬುಧಚಂದ್ರನಿಗೆ ಬ್ರಿಟಿಷ್‌ ರು ಮತ್ತೆ ಹಿಂದಿರುಗಿಸುವುದರೊಂದಿಗೆ ಮಣಿಪುರ ನವಯುಗದಲ್ಲಿ ತನ್ನ ಕೊನೆಯ ಘರ್ಷಣೆಯನ್ನು ಪೂರ್ತಿಗೊಳಿಸಿದ್ದು ಈಗ ಇತಿಹಾಸ. ಅಂತಿಮವಾಗಿ ಸ್ವತಂತ್ರ ಭಾರತದಲ್ಲಿ ಈ ಎಲ್ಲಾ ರಾಜ್ಯಾಡಳಿತಗಳೂ ವಿಲೀನವಾಗುತ್ತವೆ. ಅಲ್ಲಿಂದ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದ ಮಣಿಪುರ 1972 ರಲ್ಲಿ ಸ್ವತಂತ್ರ ರಾಜ್ಯವಾಗಿ ಘೋಷಣೆಯಾಗುತದೆ. 21 ಜನೇವರಿ 1972 ರಲ್ಲಿ ಇದರ ಆಸ್ತಿತ್ವಕ್ಕೆ ಹೊಸ ಭಾಷೆ ಬರೆಯಲಾಯಿತು. ಮಣಿಪುರ "ಭಾರತದ ಆಭರಣ" ಎನ್ನುವುದಕ್ಕೂ ಕಾರಣವಾಯಿತು. 1992ರಲ್ಲಿ ಮೀಥಿಲಾನ್ ಎನ್ನುವ ಭಾಷೆಯನ್ನು ಭಾರತೀಯ ಭಾಷೆಯ ಪರಿಚ್ಛೇಧದಲ್ಲಿ ಸೇರಿಸಲಾಗುತ್ತದೆ. ಭಾರತೀಯ ಹದಿನೆಂಟು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಮಣಿಪುರಿ ಗುರುತಿಸಿಕೊಂಡಿತು. ಹಲವು ಶತಮಾನಗಳ ಇತಿಹಾಸ ಮತ್ತು ಅಪರೂಪದ ಸಾಹಿತ್ಯ ಹಾಗು ಸಂಸ್ಕೃತಿಗಳ ಸಮುದಾಯದ ನೆನಪಿನ ಭಾರದಿಂದ ಈಚೆಗೆ ಬರುವುದರೊಳಗೆ ಕತ್ತಲು ಅಡರುತ್ತಿತ್ತು. ಒಂದು ರಾಜ್ಯದ ಅಥವಾ ಅರಸೊತ್ತಿಗೆಯ ಇತಿಹಾಸದಲ್ಲಿ ಕಳೆದುಹೋದಲ್ಲಿ ಅದಕ್ಕಿಂತಲೂ ಚೆಂದದ ಅನುಭೂತಿ ಇನ್ನೊಂದಿರಲಾರದು. 211 ಪ್ರಮೀಳೆಯರ ನಾಡಿನಲ್ಲಿ ಹಾಗಿತ್ತು ಮಣಿಪುರದ ಇತಿಹಾಸ. ಬಹುಶ: ಭಾರತ ಕಂಡ ಕೆಲವೇ ರಾಜ್ಯಗಳ ವರ್ಣರಂಜಿತ ಇತಿಹಾಸದಲ್ಲಿ ಮಣಿಪುರಕ್ಕೂ ಒಂದು ಸ್ಥಾನ ಮೀಸಲಿಡಬೇಕಾದದ್ದೇ. ಇಲ್ಲವಾದಲ್ಲಿ ಬಹುಶ: ಅಷ್ಟೇೂಂದು ವರ್ಣರಂಜಿತ ಇತಿಹಾಸ ಮತ್ತು ಸಮುದಾಯವುಳ್ಳ ಚರಿತ್ರೆ ಇನ್ನೊಂದನ್ನು ನಾವು ಹುಡಕಬೇಕಾದೀತು. ಕಾರಣ ಚದುರಂಗವನ್ನು ಬಿಟ್ಟರೆ ಅದ್ಭುತ ಎನ್ನುವಂತಹ ಕ್ರೀಡಾ ಸ್ಫೂರ್ತಿ ಹಾಗು ರೋಚಕತೆಯನ್ನು ಉಳ್ಳ ಇನ್ನೊಂದೇ ಒಂದು ಆಟ ಬೇರಾವುದೇ ಸಾಮ್ರಾಜ್ಯ ಶಾಹಿಗಳು ಈ ದೇಶಕ್ಕೆ ಕೊಟ್ಟ ಉದಾಹರಣೆಗಳಿಲ್ಲ. ಆದರೆ ಖಂಡಿತಕ್ಕೂ ಇಂತಹದ್ದೊಂದು ಅಶ್ವಾರೋಹಿಗಳ ಆಟ ಮತ್ತು ತುಂಬಾ ಶಿಸ್ತಿನ ವರ್ಣರಂಜಿತ ಇತಿಹಾಸ ಮತ್ತು ಬದುಕಿನ ಶೈಲಿಯನ್ನು ಜಗತ್ತಿಗೆ ಪರಿಚಯಿಸಿದ ಮೀಥೀಸ್‍ಗಳೆ. ಅಷ್ಟು ಮಾತ್ರದ ಮಣಿಪುರದ ಇತಿಹಾಸಕ್ಕೆ ನಾವು ಈಗಿನವರು ಕೃತಜ್ಞರಾಗಿರದೇ ಇದ್ದಲ್ಲಿ ಬಹುಶ: ನಮಗೆ ಇತಿಹಾಸವನ್ನು ಗ್ರಹಿಸುವ ಅಂದಾಜಿಲ್ಲವೇನೋ ಎನ್ನಬೇಕಾದೀತು. ಇದೋ ನಿಮಗೆ ನಮಸ್ಕಾರ..! "ಹೊಯ್.. ಎಲ್ಲಿ ತಿರುಗಾಡುತ್ತಿದ್ದಿ. ಇಲ್ಲಿ ರಾತ್ರಿ ಇಷ್ಟು ಹೊತ್ತಾಗುವ ಹೊತ್ತಿಗೆ ಮನೆ ಸೇರಿಕೊಳ್ತಾರೆ ಏನು ಮಾಡ್ತಿದ್ದಿ..? " ಮೊಬೈಲಿನಲ್ಲಿ ನಾನು ಹೋಟೆಲಿನಲ್ಲಿ ಇಲ್ಲವೆನ್ನುತ್ತಲೇ ಕಾಳಜಿಯಿಂದ ಕರೆ ಮಾಡಿದ ಗೋಬ್ಸಿ ಝಾಡಿಸುತ್ತಿದ್ದಳು. ಆಕೆಗೇನು ಗೊತ್ತು ನನ್ನ ಹಗಲು ಶುರುವಾಗುವುದೇ ಅಪರಾತ್ರಿಯಲ್ಲಿ ಎಂದು.. "ಇಗೋ ಹೊರಟೆ.." ಎನ್ನುತ್ತಾ ಕರೆ ಕತ್ತರಿಸಿ ನೆಂಬುಲಾದ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಕಪ್ಪಡರುತ್ತಿದ್ದ ನಂಬುಲಾದ ಕರಿ ನೀರಿನಲ್ಲಿ ಆಚೆಬದಿಯ ಅಲ್ಲೊಂದು ಇಲ್ಲೊಂದು ಓಡಾಡುತ್ತಿದ ರಿಕ್ಷಾಗಳ ಬೆಳಕುಗಳು ಕದಲುತ್ತಿದ್ದವು. ಇನ್ನು ಏಳು ಗಂಟೆಯೂ ಆಗಿರಲಿಲ್ಲ. ಆಗಲೇ ಸಂಪೂರ್ಣ ನಗರ ಮಲಗಲು ತಯಾರಿ ನಡೆಸತೊಡಗಿತ್ತು. ಮರುದಿನದ ತಯಾರಿಯ ಯೋಜನೆಯನ್ನು ರೂಪಿಸುತ್ತಾ ನಾನು ಕಾಲು ಸರಿಸಿದೆ. ಪ್ರಮೀಳೆಯರ ನಾಡಿನಲ್ಲಿ 212 ಪಕ್ಕದ ಮಾವೋ ಮಾರ್ಕೆಟ್ಟು ಮತ್ತದರ "ಇಮಾ"ಗಳು ಖಾಲಿಯಾಗುತ್ತಿದ್ದರು. ಸಾಮಾನು ಸರಂಜಾಮು ಕಟ್ಟಿಡಲಾಗಿತ್ತು. ಹೆಚ್ಚಿನ ರಸ್ತೆಗಳು ಆಗಲೇ ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಪ್ರತಿ ಮೂಲೆಗೂ ಅಸ್ಸಾಂ ರೈಫಲ್ಸ್‌ ಮತ್ತು ಆರ್ಮಿ ಬಿಟ್ಟರೆ ರಿಕ್ಷಾ ತುಳಿಯುತ್ತಿದ್ದ, ಬೀಡಿ ಎಳೆಯುವ ಜನ ಮಾತ್ರ ಕಾಣಿಸುತ್ತಿದ್ದರೆ ಸಂಜೆಗಿಂತಲೂ ಹೆಚ್ಚಿನ ವಾಸನೆಯನ್ನು ಬೀರುತ್ತಾ ಇಂಫಾಲ ಮಲಗುವ ತಯಾರಿಯಲ್ಲಿ ಇತ್ತು. ಅಲ್ಲಿಂದ ಎರಡು ಕಿ.ಮೀ ಕಾಲು ಸರಿಸಿ ಶುದ್ಧ ಸಸ್ಯಾಹಾರಿ ರೆಸ್ಟೋರಾಂಟ್‍ಗೆ ಬಂದರೆ ಆತ ಬಾಗಿಲಿನ ಕೊನೆಯ ಹಲಿಗೆ ಜೋಡಿಸುತ್ತಿದ್ದ. ಊಟ ಹೋಗಲಿ ಏನೂ ಇರಲಿಲ್ಲ. ಆದರೂ ನನ್ನ ಪರಿಸ್ಥಿತಿ ನೋಡಲಾಗದೆ ಇದ್ದ ಬಿಸ್ಕೆಟ್ಸು ಮತ್ತು ಚಹ ಮಾಡಿಕೊಡಲು ಮತ್ತೆ ಒಲೆ ಉರಿಸಿದ " ಓವಾನ್ ಥಾಯ್ " ಯಾವ ಮುಲಾಜು ಇಲ್ಲದೆ ಒಂದೂವರೆ ಪಟ್ಟು ರೇಟು ಹಾಕಿದ್ದ. ಸುಖಾ ಸುಮ್ಮನೆ ಥ್ಯಾಂಕ್ಸ್ ವೇಸ್ಟ್ ಮಾಡಲಾರೆನೆಂಬಂತೆ ಬಂದಿದ್ದೆ, ವಗರು ವಗರಾಗಿದ್ದ ಚಹ ಕುಡಿದು. ಆದರೆ ನಾಳೆಗಳು ಇನ್ನೂ ಘೋರವಾಗಲಿವೆ ಎಂದು ಆ ಕ್ಷಣಕ್ಕೆ ನನಗೆ ಅನ್ನಿಸಿರಲಿಲ್ಲ. ಜೀವಮಾನದಲ್ಲೆಂದೂ ಒಂಬತ್ತು ಗಂಟೆಗೆ ಮಲಗದ ನಾನು ನಿದ್ರೆಗೆ ಪ್ರಯತ್ನಿಸುತ್ತಿದ್ದೆ. ಕಾರಣ ಸಮಯ ಹರಿಸಲು ಅಲ್ಲಿ ಯಾವ ಹಿಂದಿ ಚಿತ್ರ ಪ್ರದರ್ಶಿಸುವ ಸಿನೇಮಾ ಮಂದಿರಗಳು ಇಲ್ಲ. ಯಾವ ಶಾರುಖ್ ಖಾನ್ ಅಥವಾ ಹೃತಿಕ್ ರೋಶನ್‍ಗಳೂ ಇಲ್ಲಿ ಹೀರೋಗಳಾಗುವುದು ಸಾಧ್ಯವೇ ಇಲ್ಲ. ಅದೆಲ್ಲಾ ಇಲ್ಲಿ ನಿಷಿದ್ಧ. ಜೊತೆಗೆ ಇಂಗ್ಲಿ ಷ ಅಂತೂ ಮೊದಲೇ ಕೇಳುವುದೇ ಬೇಡ. ಟಿ.ವಿ.ಯಲ್ಲಿ ಜೊತೆಗೆ ಇದ್ದ ಒಂದೆರಡು ಹಿಂದಿ ಚಾನೆಲ್ಲು ಮೊದಲು ಚಿತ್ರ ಬಂದು ನಂತರ ಶಬ್ದ ಬರುತಿತ್ತು. ಇದ್ದುದೆಲ್ಲಾ ಶುದ್ಧ ಮಿಥೀಲೆಯನ್ ಭಾಷೆ. ಅದರಲ್ಲಿ ಏನೇ ಜಪ್ಪಯ್ಯ ಎಂದರೂ ಒಂದೂ ಶಬ್ದ ಅರ್ಥವಾಗಲಿಲ್ಲ. ಅನುಬಂಧ : 2 ನೋಡಿ. ಇದರಲ್ಲಿ ಬರ್ಮಾ ಮತ್ತು ಮಣಿಪುರಿಗಳ ಇತಿಹಾಸದ ಅದರಲ್ಲಿ ಬ್ರಿಟಿಷರ ಸಂಪರ್ಕ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಮಣಿಪುರ ಸಾಹಿತ್ಯ 1947ರಲ್ಲಿ ಭಾರತಕ್ಕೆ ಮಣಿಪುರ ವಿಲೀನವಾದ ಕಾರಣಕ್ಕೆ ಭಾರತೀಯನಾದರೂ ನಾನೀಗಲೂ ಮಣಿಪುರಿಯೇ ಎನ್ನುತ್ತಾನೆ – "ಇಮ್ಲೇ ಬಾಮ್ ಇಬೋಚಾ...". ಈತ ಪ್ರಸ್ತುತ ಮಣಿಪುರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತ. "ಸಮನ್ವಯ" ಎನ್ನುವ ಭಾರತೀಯ ಭಾಷೆಗಳ ಹಬ್ಬದಲ್ಲಿ ಹೀಗೆ ಫರ್ಮಾನು ಹೊರಡಿಸಿದ ಈತನ ದಿಟ್ಟ ನುಡಿಗಳಿವು. ಕಾರಣ ಮಣಿಪುರಿ ಅಥವಾ ನಾಗಾ ಅಥವಾ ಇನ್ನಾವುದೇ ಝಿಮೈನ ಸಂಸ್ಕೃತಿಯೇ ಇರಲಿ ಅಂತಿಮವಾಗಿ ಮಣಿಪುರಿಯೇ ಆಗಿರಬೇಕೆನ್ನುವ ಅಂತರಾಳದ ಬೇರಿನ ಒಲವು ಇವರ ಕಣ ಕಣದಲ್ಲೂ ತುಂಬಿದೆ. ಅದಕ್ಕಾಗೇ ಇವತ್ತಿಗೂ ಮಣಿಪುರಿ ಭಾಷೆ ಹಲವು ಸಾಹಿತ್ಯಿಕ ಕೃತಿಗಳಲ್ಲಿ ಜಾನಪದ ಮತ್ತು ಐತಿಹಾಸಿಕ ಜೊತೆಗೆ ಸ್ಥಳಿಯ ಸಂಕ್ರಮಣತೆಗೆ ಒತ್ತು ಕೊಡಲಾಗಿದೆಯೇ ವಿನ: ಯಾವುದೇ ಭಾರತೀಯ ಪ್ರಮುಖ ಭಾಷೆಯ ಮೇಲೆ ಒಲವಾಗಲಿ ಆಸಕ್ತಿಯಾಗಲಿ ಇಲ್ಲಿನ ಬರಹಗಾರರು ತೋರಿಸಿದ್ದು ಕಾಣುತ್ತಿಲ್ಲ. ಮುಂದುವರೆದು ಹೇಳುವ ಇಮ್ಲೇಬಾಮ್ ಇಬೋಚಾ " ಅಸಾಮಿ ಅಥವಾ ಬೆಂಗಾಲಿ ನಮ್ಮ ಲಿಪಿಯಲ್ಲವೇ ಅಲ್ಲ. ಏನಿದ್ದರೂ 17ನೆಯ ಶತಮಾನಕ್ಕೂ ಮೊದಲಿನ ಮಿಥೀಸ್‍ನ ಸಾಂಪ್ರದಾಯಿಕ ಬಳಕೆಯನ್ನು ಶಾಲಾ ಕಾಲೇಜುಗಳಲ್ಲಿ ಹಾಗು ಮುಖ್ಯ ಭಾಷೆಯಾಗಿ 1980 ರ ಬೆಳವಣಿಗೆಯಲ್ಲಿ ಸೇರಿಸಲಾಯಿತು. ಈಗ ಮತ್ತೆ ನಾವು ಸಮೃದ್ಧರಾಗಿದ್ದೇವೆ, ಆಗುತ್ತಿದ್ದೇವೆ. ಆದರೆ ಎಲ್ಲಿಯವರೆಗೆ ಮಿಥೀಸ್ ಸಮಾನ ಭಾಷೆಯಾಗಿ ಮುಂದುವರೆಯುವುದಿಲ್ಲವೋ ಅಲ್ಲಿಯವರೆಗೆ ಈ ಅಸಮಾನತೆ ಇದ್ದೇ ಇರುತ್ತದೆ." ಐತಿಹಾಸಿಕವಾಗಿ ಮಣಿಪುರಿಗಳ ಸಾಹಿತ್ಯ ಶುರುವಾಗುವುದೇ ಸುಮಾರು 6 ಮತ್ತು 7ನೆಯ ಶತಮಾನದಲ್ಲಿ. ಅದಕ್ಕೂ ಮೊದಲಿಗೆ ಮಿಥೀಸ್ ಮಯೇಕ್ (ಮಣಿಪುರಿ ಲಿಪಿ) ಬಳಸಿ ಸಾಹಿತ್ಯ ಅರಂಭಿಸಿದ "ಮೈಡಿಂಗು ಲೋಯಾಂಬಾ" (1074 – 1122) ನಿಂದ ಆರಂಭಿಸಿ (1467-1508)ರ ಕಾಲಾವಧಿಯಲ್ಲಿ ಬರಹಕ್ಕೆ ಮನ್ನಣೆ ನೀಡಿದ "ಥಂಗಾವೈ ನಿಂಗಾಥೌಭಾ" ಮತ್ತು ಕ್ರಿ.ಪೂ. ಕಾಲಾವಧಿಯಲ್ಲಿನ ಬರಹದ ಮೂಲವಾದ ಮಾರಿಯಾ ಫಾಂಬ್ಲಾ ಕಾಲಾವಧಿ ಪ್ರಮೀಳೆಯರ ನಾಡಿನಲ್ಲಿ 214 ದಾಖಲಾತಿಗೆ ಲಭ್ಯವಾಗುವಂತಹವು. ಅದರಲ್ಲೂ ಕೆಳಗಿನ ಮಾಹಿತಿಯ ಪ್ರಕಾರ ಆಯಾ ಕಾಲಾವಧಿಯಲ್ಲೂ ಮಣಿಪುರಿ ಸಾಹಿತ್ಯ ಸಮೃದ್ಧವಾಗಿದ್ದುದು ಕಂಡುಬರುತ್ತದೆ. (Panthoibi Khongul (prehistory), Nongshaba Laihui (prehistory), Sakok Lairamlen (prehistory), Poireiton Khunthokpa (3rd century), Kangla Haoba (5th century), Loyamba Shinyen (11th century) [3], Naothingkhong Phambal Kaba (16th century), Khagemba Yumlep (16th century), Cheitharon Kumbaba. Royal Maichou (Scholar) Meidingu Khagemba (1597–1652): Konok Thengra, Apoimacha, Salam Sana, Yumnam Tomba, Khaidem Temba, and Langgol Lukhoi. ಅದರಲ್ಲೂ 6 ಮತ್ತು 7ನೆಯ ಶತಮಾನದ ಕಾಲಾವಧಿಯ ನುಮಿತ್ ಕಪ್ಪಾ, ಓಗ್ರಿ, ಕೆಂಚೋ, ಸನಾ ಮಾಮೌಕ್, 11ನೆಯ ಶತಮಾನದ ಅಹೋಂಗ್ಲಾನ್ 12ನೆಯ ಶತಮಾನದ ಅದಿ ಭಾಗದ ಖೋಜಿ ಮಮೋಕ್ ಮತ್ತು 17ನೆಯ ಶತಮಾನದ ಹಿಜಿನ್ ಹಿರಾವೋ ಮತ್ತು ನಿಂಗಾಥೊರೇನ್ ಪ್ರಮುಖವಾದ ಹೆಸರಿಸಬಲ್ಲ ದಾಖಲೆಗಳು. ಇತಿಹಾಸವನ್ನು ಹೊರತುಪಡಿಸಿ 1891 ರ ಏಪ್ರಿಲ್ 27 ರ ಆಂಗ್ಲೋ – ಮಣಿಪುರಿ ಯುದ್ಧಾನಂತರದ ಸಾಹಿತ್ಯಕ ಕ್ಷೇತ್ರವನ್ನು ಗಮನಿಸುವಾಗ ಆಗ ಆರಂಭಿಸಿದ ಇಂಗ್ಲೀ ಷ ಶಾಲೆಯಂತಹ ಬದಲಾವಣೆಗಳು ಸಾಹಿತ್ಯಕ ಬದಲಾವಣೆಗೆ ಇಂಬು ನೀಡಿದ್ದು ಕಾಣಿಸುತ್ತದೆ. ಆಗಲೇ "ಮೈತ್ರಿ ಬಾಕ್"ದ ಕಾಲಾವಧಿಯ ಮುಕ್ತಾಯವೂ, ಬೆಂಗಾಲಿಗಳ ಲಿಪಿ ಉಪಯೋಗದ ಬದಲಾವಣೆ ಆರಂಭವಾಗಿದ್ದು. 1920-30 ಆಧುನಿಕ ಸಾಹಿತ್ಯದ ಆರಂಭ ಮಾತ್ರವಲ್ಲ ಮಿಥೀಸ್‍ಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಜೊತೆಗೆ ಅವರದ್ದೇ ಭಾಷೆಯ ಮೇಲಿನ ವಿಚಾರಗಳ ಬದಲಾವಣೆಯ ಕಾಲಾವಧಿಯೂ ಹೌದು. ಇಲ್ಲಿ ಅದಕ್ಕೆ 215 ಪ್ರಮೀಳೆಯರ ನಾಡಿನಲ್ಲಿ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ನಾವು ನೋಡಬಹುದು. ಆದರೆ ನೇರ ಅಥವಾ ಕನ್ನಡದ ಅನುವಾದ ಅದರ ಮಾಹಿತಿಯ ಸಾರಾಂಶಕ್ಕೆ ತೊಡಕಾಗಬಹುದೆನ್ನುವ ಕಾರಣ ಆಂಗ್ಲ ಭಾಷೆಯನ್ನೇ ಉಪಯೋಗಿಸಲಾಗಿದೆ. ಈ ಕೆಳಗಿನ ಆಯಾ ಕಾಲಾವಧಿಯಲ್ಲಿ ಮಣಿಪುರಿ ಸಾಹಿತ್ಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದರು. Laininghan Naoria Phulo (1888–1941) Yumlai Lairon (1930) Apokpa Mapugee Tungnapham (1931) Tengbanba Amashung Lainingthou Laibao (1933) Athoiba Sheireng (1935) Meetei Yelhou Mayek (1931) Meetei Haobam Wari (1934) Aigee Wareng (1940) Hijam Irabot ಮೊಟ್ಟ ಮೊದಲಿಗೆ ಮಿಥೀಸ್ ನಿಯತಕಾಲಿಕೆ ಹೊರತಂದಿದ್ದು ದಾಖಲೆ. (Meetei Chanu, in 1922) ಹಾಗೆ ಮೂರು ವರ್ಷದ ನಂತರ ಹೊರಬಂದ ಇನ್ನೊಂದು ಪತ್ರಿಕೆ. ಅದರ ನಂತರದ ದಶಕದಲ್ಲಿ ಎರಡು ಪ್ರಮುಖ ಪತ್ರಿಕೆಗಳು ಮಣಿಪುರದ ಪತ್ರಿಕಾ ರಂಗವನ್ನು ಆಳಿದವು. ಅವೆಂದರೆ Deinik Manipur Patrika ಮತ್ತು Manipur Matam.. ಅನಂತರದಲ್ಲಿ 20ನೆಯ ಶತಮಾನದ ಕಾಲಾವಧಿಯಲ್ಲಿ ಗುರುತರವಾದ ಬದಲಾವಣೆಯೊಂದಿಗೆ ಮಣಿಪುರಿ ಬರಹಗಾರರು ಬೆಳಕಿಗೆ ಬಂದರು. ಅದರಲ್ಲಿ ಪ್ರಮುಖವಾಗಿ ಈ ಕೆಳಗಿನವರನ್ನು ಹೆಸರಿಸಬಹುದು. 1.Manipur Matam. (1892–1943) - ಇತನ "39900" ಸಾಲುಗಳ ಮಹಾ ಬರಹವನ್ನು ಮಣಿಪುರಿಗಳ ಮಹಾಕಾವ್ಯವಾಗಿ ಗುರುತಿಸಲಾಗಿದೆ. "ಕಂಭಾ ಥೋಯ್ಬಿ" ಹೆಸರುವಾಸಿ ಕೃತಿಯಾಗಿದೆ. (1940) ಪ್ರಮೀಳೆಯರ ನಾಡಿನಲ್ಲಿ 216 2. Khwairakpam Chaoba Singh (1895–1950) – ಈತನ ಐತಿಹಾಸಿಕ ಕಾದಂಬರಿ "ಲವಾಂಗಲತಾ" Lavangalata ಮಣಿಪುರಿ ಸಾಹಿತ್ಯದ ಮೇರು ಕೃತಿಯಾಗಿ ಗುರುತಿಸಲಾಗಿದೆ. ಇದಲ್ಲದೆ ಹೆಸರಿಸಬಹುದಾದ ಪ್ರಸಿದ್ಧ ಕೃತಿಗಳೆಂದರೆ Wakhalgi Icel, Wakhal, Phidam, Kannaba Wa and Chhatramacha. 3. Lamabam Kamal Singh (1899–1935). ಮಾಧವಿ 1930ರಲ್ಲಿ ಬಂದ ಕೃತಿ. ಮಣಿಪುರಿಗಳ ಮೊದಲ ಆಧುನಿಕ ಸಂವೇದನೆಯುಳ್ಳ ಕೃತಿ ಎಂದೇ ಗುರುತಿಸಲಾಗಿದೆ. ಅದರ ಹಿಂದೆ ಪ್ರಕಟವಾದ Lai Pareng (1931) ಕೃತಿ ಕೂಡಾ ಹೆಸರುವಾಸಿ. ನಾಟಕ ನಾಟಕ ವಿಭಾಗದಲ್ಲೂ ಸಾಹಿತ್ಯದಂತೆ ಗಮನಾರ್ಹ ದಾಖಲೆಗಳನ್ನು ಮಣಿಪುರಿ ಸಾಹಿತ್ಯ ಹೊಂದಿದ್ದು ಹೆಸರಾಂತ ನಾಟಕಕಾರರು ಮತ್ತು ಅವರ ನಾಟಕವನ್ನು ಅದು ಹೆಸರಿಸುತ್ತಿದೆ. ಈ ಕೆಳಗಿನವು ಅದರಲ್ಲಿ ಪ್ರಮುಖವಾದವು. ನಮ್ಮಲ್ಲಿನಂತೆ ಇವೂ ಕೂಡಾ ಪೌರಾಣಿಕ ಮತ್ತು ಐತಿಹಾಸಿಕ ಯುಗದ ಕಥೆಯನ್ನು ಹೊಂದಿರುವ ಆಕರ್ಷಕ ಕಥಾನಕಗಳೆ ಆಗಿವೆ. Sati Khongnag and Areppa Marup of Lalit, Nara Singh of Lairenmayum Ibungahal, Moirang Thoibi of Dorendrajit,Bir Tikendrajit of Bira Singh, Chingu Khongnag Thaba of Birmangol, Mainu Pemcha of Shymsunda ಮತ್ತು Kege Lanja of Bormani ಇತ್ಯಾದಿ. ಕಾಂಟೆಂಪರರಿ ನಾಟಕದ ವಿಭಾಗದಲ್ಲಿ ಮುಖ್ಯವಾಗಿ Netrajit, M. K. BinodiniDevi, Ramcharan, Kanhailal, A.Sumorendro, Tomchou and Sanajaoba ಇತ್ಯಾದಿಯವರನ್ನು ಹೆಸರಿಸಬಹುದಾದ ಸಾಧನೆ ಮಾಡಿದವರು ಎನ್ನಲಾಗುತ್ತಿದೆ. ಇನ್ನು 217 ಪ್ರಮೀಳೆಯರ ನಾಡಿನಲ್ಲಿ ನಾಟಕಕ್ಕಾಗೇ ಇರುವ ಕೆಲವು ಸಂಘಟನೆ ಮತ್ತು ರಂಗಕರ್ಮಿ ತಂಡಗಳು ಮಣಿಪುರಿ ನಾಟಕಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ ಅದರಲ್ಲಿ ಪ್ರಮುಖವಾದವು: Chorus Repertory Theatre', Manipur Dramatic Union, Rupmahal, Arayan Theatre ಮತ್ತು Society Theatre. ಕಾದಂಬರಿ ಮತ್ತು ದೊಡ್ಡ ಗ್ರಂಥಗಳ ಬರಹದಲ್ಲೂ ಮಣಿಪುರಿ ಭಾಷೆ ಸಾಕಷ್ಟು ಹೊಸ ಹಳೆಯ ಸಂಗಮದಲ್ಲಿ ಸಮೃದ್ಧವಾಗಿದ್ದು ಪ್ರಮುಖವಾಗಿ Dr.Kamal, Chaoba, Anganghal ಎದ್ದು ಕಾಣುತ್ತಾರೆ. ಅವರ ಕಾದಂಬರಿ Madhabi ಇವತ್ತಿಗೂ ಮಾನವ ಸಹಜ ಸ್ವಭಾವದತ್ತ ಹರಿದಾಡುತ್ತಿರುವ ಹಲವು ನೈಜ ವಿಷಯದ ಮೇಲೆ ಚರ್ಚಿಸುವಷ್ಟು ಪ್ರಸಿದ್ಧಿ ಪಡೆದಿದೆ. R.K. Shitaljit, H. Guno, Thoibi Devi, R.K. Elangbam, RamSingh,Ibohal, Dr.Bhagya, Nodiachand,Ibom cha, Chitreshwar, M.K. inodini and Pachaಇತ್ಯಾದಿ ಲೇಖಕರು ಕಾದಂಬರಿಕಾರರಾಗಿ ಪ್ರಸಿದ್ಧಿ ಹೊಂದಿದ್ದು ಇವರೆಲ್ಲಾ ಮಣಿಪುರಿ ಕಾದಂಬರಿ ಲೋಕವನ್ನು ಶ್ರೀಮಂತಗೊಳಿಸಿದವರು. ಇವರೊಂದಿಗೆ ಕಾಂಟೆಂಪರರಿ ಬರಹಗಾರರಾಗಿSurchand Sarma, Shymsundar, Raghumani Sarma and Nishan Singh ಇತ್ಯಾದಿಗಳೆಲ್ಲ ಬಂಗಾಲಿ ಲೇಖಕರಾದ ಬಂಕಿಮ ಚಂದ್ರ, ಶರತ್ ಚಂದ್ರ ಮತ್ತು ರವಿಂದ್ರರ ಬರಹಗಳೊಂದಿಗೆ ಪ್ರೇಮ ಚಂದ, ಭಾಗವತಿ, ಚರಣ್ ವರ್ಮಾರ ಬರಹಗಳನ್ನು ಮಣಿಪುರಿಗೆ ಅನುವಾದಿಸಿದವರು. ಸಣ್ಣಕಥೆಗಳು : ಸಾಕಷ್ಟು ಸಣ್ಣಕಥೆಗಳು ಮಣಿಪುರದಲ್ಲಿ ಚಾಲ್ತಿಯಲ್ಲಿದ್ದು ಅಲ್ಲಲ್ಲಿ ಆಗೀಗ ಬೇರೆ ಭಾಷೆಗೂ ಅನುವಾದವಾಗುವಷ್ಟು ಸಮರ್ಥ ಬರಹಗಳಾಗಿ ಪ್ರಮೀಳೆಯರ ನಾಡಿನಲ್ಲಿ 218 ಹೊರಹೊಮ್ಮಿದ್ದೂ ಇದೆ. ಅದರಲ್ಲೂ ಪ್ರಮುಖವಾಗಿ R.K. Shitaljit's ತುಂಬಾ ಸಂಕೀರ್ಣ ಮನಸ್ಥಿತಿಗಳ ಮತ್ತು ಸಹಜ ಸ್ವಾಭಾವಿಕ ಜನಜೀವನದಲ್ಲೂ ಅಡಕವಾಗಿರುವ ನವಿರು ಸೆಲೆಯನ್ನು ಪ್ರಕಟಪಡಿಸುವ ಲೇಖಕ. ಇವರ ಹೊರತಾಗಿಯೂ ಕೆಲವು ಪುರಾವೆ ಸಹಿತ ಬರೆಯಬಲ್ಲ ಗಟ್ಟಿ ಮನಸ್ಸಿನ ಲೇಖಕರು ಇಲ್ಲಿದ್ದಾರೆ. ಅವರಲ್ಲಿ ಪ್ರಮುಖವಾಗಿ Nilbir Sharma H. Gonu Shri Biren, M.K. Binodini, E. Dinamani, Biramani, Tolstoygee Wari Nachom, Rabindranath Thakurgi Wari ಮತ್ತು Thambal Taret ಇತ್ಯಾದಿ. ತೀರ ಇತ್ತೀಚಿನ ದಿನಗಳ ಬರಹದಲ್ಲಿ ಕಳೆದ ಮೂರ್‌ನಾಲ್ಕು ದಶಕದಿಂದ ಸದ್ದು ಮಾಡುತ್ತಿರುವವರಲ್ಲಿ ಈ ಕೆಳಗಿನ ಪ್ರಮುಖರು ಇದ್ದಾರೆ. G.C. Tongbra, Elangbam Nilakanta Singh, Ningthonbam Kunjamohan, Ashangbam Minaketan, M.K. Binodini Devi, Boro Saheb Ongbi Sanatombi, Ningthoukhonjam Khelchandra, R.K. Shitaljit, Lamabam Viramani Singh, Chekla Paikhrabada, Keisham Priyokumar ಮತ್ತು Arambam Memchoubi, ಸಾಹಿತ್ಯ ಮತ್ತು ಸಂಗೀತದ ಜೊತೆಗೆ ನೃತ್ಯವನ್ನೂ ಸೇರಿಸಿಕೊಂಡು ಬೆಳೆದ ಕೆಲವು ಪ್ರಖ್ಯಾತರಲ್ಲಿ ಮೊದಲ ಹೆಸರು "ರಾಜಕುಮಾರ್ ಸಿಂಗ್‍ಜೀತ್ ಸಿಂಘ್‍ದು" ಪ್ರಮುಖವಾಗಿ ಕೇಳಿಬರುತ್ತದೆ. ಪ್ರಮುಖ ಪ್ರಶಸ್ತಿಗಳಿಗೂ ಇವರು ಭಾಜನರು. Ratan Thiyam -ನಾಟಕ ಮತ್ತು ರಂಗಭೂಮಿಯಲ್ಲಿ ಮಣಿಪುರದಲ್ಲೇ ಅತೀ ಹೆಚ್ಚು ಪ್ರಸಿದ್ಧಿ ಹೊಂದಿದ ಹೆಸರು. ಇವರಿಗೆ ಸಂದಿರುವ ಪ್ರಶಸ್ತಿಗಳೇ ಇವರ ಕೆಲಸವನ್ನು ಸಾರಬಲ್ಲದು. 1984: Indo-Greek Friendship Award, 1984 (Greece) 1987: Sangeet Natak Akademi Award 219 ಪ್ರಮೀಳೆಯರ ನಾಡಿನಲ್ಲಿ 1987:Fringe Firsts Award, from Edinburgh International Festival 1989: Padma Shri 1990: Diploma of Cervantino International Festival, (Mexico) 2005: Kalidas Samman 2008: John D. Rockefeller Award 2011: Bharat Muni Samman 2012: Sangeet Natak Akademi Fellowship (Akademi Ratna) ಮತ್ತು 2013: Bhupen Hazarika Foundation Award ಹೀಗೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಥಿಯಾಂ ಹಲವು ಮಣಿಪುರಿಗಳಿಗೆ ಸಾಹಿತ್ಯಕವಾಗಿ ಮತ್ತು ರಂಗಭೂಮಿಯಲ್ಲಿ ನೆಲೆ ಒದಗಿಸಿದವರು. ಮಿಥೀ (ಮಣಿಪುರದ ಅಧಿಕೃತ ಭಾಷೆ) ಕೇವಲ ಮಣಿಪುರದಲ್ಲ ಷ್ಟೆ ಅಲ್ಲ ಅರ್ಧ ಅಸ್ಸಾಂ ಮತ್ತು ಪಕ್ಕದ ಇನ್ನೊಂದು ದೇಶವಾದ ಮ್ಯಾನ್‍ಮಾರ್ (ಬರ್ಮಾ)ದ ಕಾಲುಭಾಗವನ್ನು ಸುಲಭವಾಗಿ ಆವರಿಸಿಕೊಂಡು ಅರಳುತ್ತಿದೆ. ಇತ್ತಿಚೆಗೆ ಬಂಗಾಲದ ಬುಡಕ್ಕೂ ಕೈ ಚಾಚಿದೆ. ಅದಕ್ಕಾಗೆ ಈ ಭಾಷೆಯ ಬಗೆಗಿನ ಮೋಹ ಇಲ್ಲಿ ನಿರೀಕ್ಷಿತ. ಕಾರಣ 12 ಮತ್ತು 15ನೆಯ ಶತಮಾನದ ಒಳಗೆ ಅಗಾಧವಾಗಿ ಬೆಳೆದಿದ್ದ ಮಣಿಪುರಿ ಸಾಹಿತ್ಯ ನಂತರದಲ್ಲಿ ಹಲವಾರು ಪ್ರಾಕೃತಿಕ ಮತ್ತು ರಾಜಕೀಯ ವೈಪರೀತ್ಯಗಳಿಗೆ ಈಡಾಯಿತಾದರೂ ಬೆಳವಣಿಗೆ ಫಲ ಇವತ್ತು ಎದುರಿಗಿದೆ. ಆದರೆ ಯಾವಾಗ 18ನೆಯ ಶತಮಾನದ ನಂತರ ಹಿಂದೂಗಳ ಪ್ರಭಾವ ದಟ್ಟವಾಯಿತೋ ಮಣಿಪುರಿ ಸಾಹಿತ್ಯದ ಬೆಳವಣಿಗೆಯ ಜೊತೆಗೆ ಮಣಿಪುರಿಯ ಪ್ರಮೀಳೆಯರ ನಾಡಿನಲ್ಲಿ 220 ಮೇಲಾಗುತ್ತಿರುವ ಹಿಂದೂಸ್ತಾನಿ ಸಂಸ್ಕೃತಿಯ ಪ್ರಭಾವವನ್ನು ಒಳಗೊಳಗೆ ಸಹಿಸದ ಪ್ರವೃತ್ತಿಯೂ ಕಂಡು ಬಂತು. ಕಾರಣ ಏನೇ ಭಾರತದಲ್ಲಿದ್ದೇವೆ ಎಂದರೂ ಮಣಿಪುರಿಗಳು ಅಕ್ಷರಶ: ಕಾಡುವಾಸಿಗಳೇ. ತೀರ ಹದಿನೆಂಟನೆಯ ಶತಮಾನದ ಮಧ್ಯಭಾಗದವರೆಗೂ ತಮ್ಮ ಪಾಡಿಗೆ ತಾವಿದ್ದ ಸಂಸ್ಕೃತಿಯ ಮಣಿಪುರಿಗಳು ಹಿಂದೂಯಿಸಂನ ಪ್ರಭಾವಕ್ಕೊಳಗಾದಾಗ ಗೊಂದಲಕ್ಕೊಳಗಾಗಿದ್ದು ಸಾಹಿತ್ಯದಲ್ಲೂ ಕಂಡುಬರುತ್ತದೆ. ಹಲವಾರು ಲೇಖಕರು ಇದರ ಬಗ್ಗೆ ತಕರಾರು ತೆಗೆಯುತ್ತಾರಾದರೂ ಎಲ್ಲೂ ಹಿಂದೂಸ್ಥಾನದ ಬಗ್ಗೆ ವಿರೋಧ ಇಲ್ಲದ ಮನಸ್ಥಿತಿಯಲ್ಲಿ ಒಂದೇ ರಾಗ ಅವರದ್ದು ನಮ್ಮ ಪಾಡು ನಮ್ಮದು.. ಮೈಥೇಯಿ/ಮಿಥಿ ಬೆಳೆಯಲಿ ಬಿಡಿ. ಆದರೆ ನವ್ಯ ಮತ್ತು ನವ್ಯೋತ್ತರ ಸಾಹಿತ್ಯದಲ್ಲಿ ಇದರ ಬೆಳವಣಿಗೆಯನ್ನು ಗಮನಿಸುವಾಗ ಮಣಿಪುರಿ ಹಿಂದೂ ಸಂಸ್ಕೃತಿಯ ಹಲವಾರು ಮಜಲನ್ನು ಆವಾಹಿಸಿಕೊಳ್ಳುತ್ತಲೆ ಬೆಳೆಯುವುದು ಕಂಡು ಬರುತ್ತದೆ. ಆದರೂ ತನ್ನದೆ ಸುತ್ತಲೂ ಹಾಕಿಕೊಂಡ ಬೇಲಿಯಾಚೆ ದಾಟುವುದನ್ನು ಮಣಿಪುರಿ ಸಾಹಿತ್ಯ ಬೆಳೆಸಿಕೊಳ್ಳಲಿಲ್ಲ ಎನ್ನುವುದೂ ಸತ್ಯವೆ. ಹಾಗಾಗಿ ಭಾರತದುದ್ದಕ್ಕೂ ಇತರ ಭಾಷೆಗಳು ಪಕ್ಕದ ಭಾಷೆಯ ಮೇಲೆ ಪ್ರಭಾವ ಬೀರಿದಂತೆ ಮೈಥೇಯಿ ಅಥವಾ ಮಣಿಪುರಿ ಪ್ರಭಾವ ಬೀರದಿದ್ದುದು ಎದ್ದು ಕಾಣುತ್ತದೆ. ಪ್ರಮುಖವಾಗಿ ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಪತ್ರಿಕೆಗಳಲ್ಲಿ ಸ್ಥಳೀಯ ಭಾಷೆಯ ಪತ್ರಿಕೆಗಳಿಗೆ ಮಹತ್ವವಿದ್ದು ಅದರಲ್ಲಿ ಪ್ರಮುಖವಾದವುಗಳೆಂದರೆ 1. ಮಣಿಪುರ್ ಮೇಯಿಲ್ 2. ನಾಗಾಲ್ಯಾಂಡ್ ಪೋಸ್ಟ್ 3. ನಾಗಾ ಬ್ಯಾನರ್ 4. ಸುಂಖೋನ್ 5. ದಿ ಅಸ್ಸಾಂ ಟ್ರಿಬ್ಯೂನ್. 6. ದಿ ಪಯೋನಿಯರ್ 221 ಪ್ರಮೀಳೆಯರ ನಾಡಿನಲ್ಲಿ ಇಲ್ಲಿ ಸಾಹಿತ್ಯ ಅಕಾಡೆಮಿ ಆರಂಭಿಸಿದ ನಂತರ ಪ್ರತಿ ವರ್ಷ ಸಾಹಿತ್ಯಕ್ಕಾಗಿ ಅಕಾಡೆಮಿ ಅವಾರ್ಡು ಪಡೆದ ಮತ್ತು ಮಣಿಪುರಿ ಸಾಹಿತ್ಯದಲ್ಲಿ ಪ್ರಮುಖ ಹೆಸರು ಮಾಡಿರುವ ಸಾಹಿತಿಗಳು. ಇದನ್ನು ಕನ್ನಡೀಕರಿಸಿದರೆ ಮೂಲ ಹೆಸರು ಮತ್ತು ಅದರ ಉಚ್ಛಾರದಲ್ಲಿ ಆಗುವ ವ್ಯತ್ಯಾಸದಿಂದ ಮೂಲ ಆಶಯಕ್ಕೆ ಧಕ್ಕೆಬರುವ ಕಾರಣ ಇದ್ದುದರಲ್ಲಿ ಸುಲಭವಾಗುವ ಆಂಗ್ಲ ಭಾಷೆಯ ನೆರವನ್ನು ಪಡೆಯಲಾಗಿದೆ. (ಅಂತರ್ಜಾಲದಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ) ಕ್ರ.ಸಂ ಲೇಖಕರ ಹೆಸರು ಪ್ರಶಸ್ತಿ ಪಡೆದ ಕೃತಿಯ ಹೆಸರು ವಿಭಾಗ 2013 Makhonmani Mongsaba Chinglon Amadagi Amada Travelogue 2012 Jodha C Sanasam Mathou Kanba DNA Novel 2011 Kshetri Bira Nangbu Ngaibada Novel 2010 Moirangthem Borkanya Leikangla Novel 2009 Raghu Leishangthem Kunggang gee chithi Poetry 2008 arambam memchoubi idu ningthou poetry 2007 B. M. Maisnamba Imasi Nurabee Novel 2006 Saratchand Thiyam Nungshibi Greece Travelogue 2005 M. Nabakishore Singh Pangal Shonbi Eishe Adomgeeni Short Stories ಪ್ರಮೀಳೆಯರ ನಾಡಿನಲ್ಲಿ 222 ಕ್ರ.ಸಂ ಲೇಖಕರ ಹೆಸರು ಪ್ರಶಸ್ತಿ ಪಡೆದ ಕೃತಿಯ ಹೆಸರು ವಿಭಾಗ 2004 Birendrajit Naorem Lanthengnariba Lanmee Poetry 2003 Sudhir Naoroibam Leiyee Khara Punsi Khara Short Stories 2002 Rajkumar Bhubonsana Mei Mamgera Budhi Mamgera Poems 2001 Ningombam Sunita Khongji Makhol Short stories 2000 Laitonjam Premchand Singh Eemagi Phanek Machet Short stories 1999 Sagolsem Lanchenba Meetei Hi Nangbu Hondeda Poetry 1998 Keisham Priyokumar Nongdi Tarak-Khidare Short stories 1997 Thangjam Ibopishak Singh Bhut Amasung Maikhum Poetry 1996 R. K. Madhubir Praloigi Meiriraktagi Poetry 1995 Arambam Somorendra Singh Leipkalei Play 1994 Rajkumar Mani Singh Mayai Karaba Shamu Short stories 1993 Arambam Biren Singh Punshigi Marudyan Novel 223 ಪ್ರಮೀಳೆಯರ ನಾಡಿನಲ್ಲಿ ಕ್ರ.ಸಂ ಲೇಖಕರ ಹೆಸರು ಪ್ರಶಸ್ತಿ ಪಡೆದ ಕೃತಿಯ ಹೆಸರು ವಿಭಾಗ 1992 A. Chitreshwar Sharma Tharoshangbi Novel 1991 Yumlemban Ibomcha Singh Numitti Asum Thengjillakali Short stories 1990 Nongthombam Biren Singh Mapal Naidabasida Ei Poetry 1989 Nilabir Sharma Shastri Tatkhrabha Punshi Leipul Short stories 1988 E. Sonamani Singh Mamangthong Lollabadi Short stories Maninghthongda Lakaudana 1987 E. Nilakanta Singh Tirtha Yatra Poetry 1986 Khumanthem Prakash Singh Mangi Isei Short stories 1985 H. Guno Singh Vir Tikendrajit Road Novel 1984 Lamabam Viramani Singh Chekla Paikhrabada stories 1983 N. Ibobi Singh Karnagi Mama Play Amasung Karnagi Aroiba Yahip 1982 E. Dinamani Singh Pistal Ama Kundallei Ama Short stories ಪ್ರಮೀಳೆಯರ ನಾಡಿನಲ್ಲಿ 224 ಕ್ರ.ಸಂ ಲೇಖಕರ ಹೆಸರು ಪ್ರಶಸ್ತಿ ಪಡೆದ ಕೃತಿಯ ಹೆಸರು ವಿಭಾಗ 1981 E. Rajanikanta Singh Kalenthagi Leipaklei Short stories 1979 M.K. Binodini Devi Boro Saheb Ongbi Sanatombi Novel 1978 G.C. Tongbra Ngabongkhao Play 1977 Ashangbam Minaketan Singh Aseibagi Nitaipod Poetry 1976 L. Samarendra Singh Mamang Leikai Thambal Shatley Poetry 1974 N. Kunjamohan Singh Ilisa Amagi Mahao Short stories 1973 Pacha Meetei Imphal Amasung Magi Nungshiki Novel Phibam Ishing ಶರ್ಮಿಳಾ ಚಾನು (ಇದೊಂದು ವಿಶೇಷ ಅಧ್ಯಾಯ ) ಪ್ರಸ್ತುತ ಮಣಿಪುರದ ಬಗ್ಗೆ ಮಾತಾಡುವಾಗ ಮತ್ತು ಬರೆಯುವಾಗ ಈ ಶರ್ಮಿಳಾ ಚಾನುವಿನ ಪ್ರಸ್ತಾಪ ಇಲ್ಲದೆ ಯಾವುದೇ ಇತಿಹಾಸ ಮತ್ತು ವಾಸ್ತವದ ಬರಹಗಳು ಪೂರ್ತಿಯಾಗಲಾರವು. ಮೂಲತ: ಕವಿಯಾಗಿ ನೂರಾರು ಕವನಗಳನ್ನು ಬರೆದಿದ್ದ ಚೆಂದದ ಗುಂಡಗಿನ ಕೆನ್ನೆಯ ಹೆಣ್ಣು ಮಗಳು ಶರ್ಮಿಳಾ. ಮನೆತನದ ಹೆಸರು ಚಾನು ನಾಗಾ ಬುಡಕಟ್ಟಿನ ಒಳ ಪಂಗಡಕ್ಕೆ ಸೇರಿದ್ದ ಈಕೆಯ ಕುಟುಂಬದಲ್ಲಿದ್ದುದು ಈರೋಮ ನಂದಾ ಸಿಂಗ್ ಮತ್ತು ತಾಯಿ ಸಖೀ ಸಿಂಗ್ ಜೊತೆಗೆ ತಣ್ಣಗೆ ಪ್ರೀತಿಸುವ ವೈಜಯಂತಿ ಎಂಬ ಅಕ್ಕ ಮತ್ತು ಈಗಲೂ ನೆರಳಿಗೆ ನಿಂತಿರುವ ಅಣ್ಣ ಸಿಂಗ್ ಜಿತ್ ಚಾನು. ಈ ಬಗ್ಗೆ ಮೊದಲೇ ಸಾಕಷ್ಟು ಮಾಹಿತಿ ಇದ್ದುದರಿಂದ ನಾನು ಇಂಫಾಲ ಕಾಲಿಡುವ ಮೊದಲೇ ನನ್ನನ್ನು ಸಂಪರ್ಕಿಸಿದ್ದು ಶರ್ಮಿಳಾ ಚಾನು ಎಂಬ ದೇಶದ ಹೆಣ್ಣುಮಕ್ಕಳ ಅಸ್ತಿತ್ವವನ್ನೇ ಪ್ರತಿನಿಧಿಸುತ್ತಿರುವ ಹೆಣ್ಣು ಮಗಳೊಬ್ಬಳ ಸಹೋದರ ಶ್ರೀಜೀತಸಿಂಗ್ ಚಾನು. ಅಕ್ಷರಶ: ಪಕ್ಕದ ಮನೆಯ ಚಿಕ್ಕಪ್ಪನಂತೆ ಕಾಣುವ ಶ್ರೀಜೀತಸಿಂಗನನ್ನು "ಸಿಂಗ್‍ಜೀತ್" ಎಂದೇ ಕರೆಯುತ್ತಾರೆ. ಅವರೊಂದಿಗೆ ಹರಟಿದ್ದು ಮುಂದೆಲ್ಲಾ ಚಾ ಚಾ ಎಂದೇ.. ದಪ್ಪ ಕನ್ನಡಕ ಮತ್ತು ಮೃದುವಾದ ಮಾತಿನ ಎತ್ತರದ ಪ್ರಮೀಳೆಯರ ನಾಡಿನಲ್ಲಿ 226 ನಿಲುವಿನ ಚಾರ್ಮಿ ಬುಡಕಟ್ಟಿನ ಚಾನು ಕುಟುಂಬದ ಮಧ್ಯಮ ಯುಗದ ಕೊಂಡಿ ಈ ಸಿಂಗ್‍ಜೀತ್ ಚಾನು. ಸದ್ಯ ಮತ್ತು ಪ್ರಸ್ತುತ ಮಣಿಪುರದಲ್ಲಿ ಈ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿದೆಯಾದರೂ ನಿರಂತರವಾಗಿ ಕೆಲವು ಎನ್.ಜಿ.ಓ. ಮತ್ತು ಇತರೆ ಸಮಾಜ ಸೇವಾ ಸಂಘಟನೆ ಹಾಗು ಮಣಿಪುರ ಮಹಿಳಾ ಅಲೈಯನ್ಸ್‍ನಂತಹ ಸಂಘಟನೆಗಳು ಮಾತ್ರ ದಿನವಹಿ ಸಕ್ರಿಯವಾಗಿದ್ದು ಚಾನು ಹೋರಾಟಕ್ಕೆ ಕೈ ಜೋಡಿಸಿ ನಿಂತಿವೆ. ಇದರೊಂದಿಗೆ ಶರ್ಮಿಳಾ ಚಾನು ಫೌಂಡೇಶನ್ ಕೂಡಾ ಸಕ್ರಿಯವಾಗಿ ಕಾರ್ಯನಿರತವಾಗಿದೆ. ಪೂರ್ತಿ ಕುಟುಂಬ ಈಕೆಯ ಹೋರಾಟಕ್ಕೆ ಸಿಕ್ಕು ಹಡಾಲೆದ್ದು ಹೋಗಿದ್ದರೂ ಈ ಅಣ್ಣ ಮಾತ್ರ ಅಮ್ಮನೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಅಮ್ಮನಂತೂ ಇದ್ದಷ್ಟು ದಿನವೂ ಸೇವೆಗೆ ಮೀಸಲಾಗಿದ್ದಾಳೆ. ಆದರೆ ಕಳೆದ ಒಂದು ದಶಕದಿಂದ ಮಾನವ ಹಕ್ಕು ಹೋರಾಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಲೇ ಇರುವ ಶರ್ಮಿಳಾ ಚಾನುನ ಅಮ್ಮನಿಗೆ ಒಂದು ದಶಕದಿಂದ ಆಕೆಯ ಮುಖ ಕೂಡಾ ನೋಡಲು ಸಿಕ್ಕಿಲ್ಲ. ಅಷ್ಟಕ್ಕೂ ಅವಳೇನು ಹುಡ್ಗರಂತೆ ಹೆಂಗೋ ಇರಲು ಆಗುತ್ತಾ..? ಆಯಾ ಕಾಲಕಾಲಕ್ಕೆ ಆಗುವ ವೈಪರೀತ್ಯಗಳಿಗೆಲ್ಲಾ ಈ ಹಸಿವಿನ ಹಗರಣದಲ್ಲಿ ಆ ತಾಯಿ ಅದಿನ್ನೆಂಥಾ ಸೇವೆ ಮಾಡಿದ್ದಾಳು..? ಊಹಿಸಿ. ಮಣಿಪುರ ರಾಜ್ಯದಲ್ಲಿ ವಿಶೇಷ ಅಧಿಕಾರ ಬಳಸಿ ಮಿಲಿಟರಿ (ಅಸ್ಸಾಂ ರೈಫಲ್ಸ್‌) ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಶುರುವಾದ ಹೋರಾಟದ ಹಾದಿಯಲ್ಲಿ ಹಾಗು ಮಣಿಪುರದ ಇತಿಹಾಸದ ಭಾಗವಾಗುವ ಹಾದಿಯಲ್ಲಿ ಸುಂದರ ಮತ್ತು ಅಷ್ಟೇ ಕವಿ ಮನಸ್ಸಿನ ಐರೋಮ ಶರ್ಮಿಳಾ ಚಾನು ಏರು ಯೌವನವನ್ನು ಇತರರಂತೆ ಕುಟುಂಬಕ್ಕೂ ಸ್ವಂತ: ಸುಖಕ್ಕೂ ಮೀಸಲಿಡದೆ ನೇರವಾಗಿ ಸಮಾಜಮುಖಿಯಾಗಿ ನಿಂತು ಗಾಂಧಿಗಿರಿ ಹಿಡಿದವಳು. ಅಸ್ಸಾಂ ರೈಫಲ್ಸ್‌ ಎದುರಿಗೆ ಸಶಸ್ತ್ರ ಅಥವಾ ನೇರ ಶಕ್ತಿ ಯುದ್ಧಕ್ಕೆ ಪ್ರಚೋದನೆ ನೀಡುವುದಾಗಲಿ, ವಿರೋಧಿಸಿ ರಸ್ತೆಗಿಳಿಯುವುದಾಗಲಿ ಸಾಧ್ಯವಿಲ್ಲ ಎಂದಾಗ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ದಾರಿ ಹಿಡಿದವಳು. 2000 ನೇ ನವಂಬರ್ 4 ರಂದು ಈಕೆ ಉಪವಾಸ ಸತ್ಯಾಗ್ರಹ ಕುಳಿತಾಗ 227 ಪ್ರಮೀಳೆಯರ ನಾಡಿನಲ್ಲಿ ಇದೂ ಕೂಡಾ ಉಳಿದ ಸತ್ಯಾಗ್ರಹದಂತೆ ಒಂದು ವಾರದಲ್ಲಿ ಮುಗಿಯುವ ಕಾವು ಎಂದುಕೊಂಡವರೆ ಜಾಸ್ತಿ. ಆದರೆ ಆಗಿದ್ದೇ ಬೇರೆ ಇವತ್ತಿಗೆ ಅಕ್ಷರಶ: ಹದಿನೈದು ವರ್ಷಗಳಾದವು. ಯಾವ ಮುಲಾಜೂ ಇಲ್ಲದೆ ಸಾವಿಗೂ ಅಂಜದೆ ಉಪವಾಸ ಬಿದ್ದಿರುವ ಚಾನು ಇದಕ್ಕಾಗಿ ಸತತವಾಗಿ ಅರೆಸ್ಟ್ ಆಗುತ್ತಲೇ ಇದ್ದಾಳೆ. ಅವಳ ಜೀವವನ್ನು ಬಲಿಕೊಡಲು ಸಿದ್ಧವಿಲ್ಲದ ಸರಕಾರ ಬಲವಂತವಾಗಿ ಪ್ರತಿಬಾರಿ ಬಂಧಿಸಿ ಬದುಕಿಸುತ್ತಿದೆ. ಹಾಗಾಗಿ ಬದುಕಿನುದ್ದಕ್ಕೂ ಈಕೆಗೆ ನಳಿಕೆ ಮೂಲಕ ಶಕ್ತಿಯನ್ನು ಕೊಡುತ್ತಿದ್ದು ಪ್ರಸಕ್ತ ಇಂಫಾಲದ ಜವಾಹರ ಲಾಲ ನೆಹರು ಆಸ್ಪತ್ರೆಯಲ್ಲಿ ಬಂಧಿಯಾಗೇ ಇದ್ದಾಳೆ. ಪ್ರತಿ ವಾರ ಮೂರು ದಿನ ಮಾತ್ರ ಅವಳ ಭೇಟಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು ಆಗ ಮನೆಯವರೂ ಸೇರಿದಂತೆ ಸಮಾಜದ ಇತರರು ಆಕೆಯನ್ನು ಭೇಟಿಯಾಗುತ್ತಾರೆ. ಅದೂ ಕೇವಲ ಇಪ್ಪತ್ತು ನಿಮಿಷ ಆಕೆಯ ಭೇಟಿಗೆ ಸಂದರ್ಶಕರಿಗೆ ಅವಕಾಶ ನೀಡಲಾಗುತ್ತಿದೆ. ಅಷ್ಟಕ್ಕೂ ಹೀಗೆ ಪೂರ್ತಿ ಜಗತ್ತನ್ನೇ ಆವರಿಸುವಂತೆ ಸರಕಾರಗಳನ್ನೇ ಅಲುಗಾಡಿಸುವ ಮಟ್ಟಕ್ಕೆ ಐರೋಮ ಶರ್ಮಿಳಾ ಚಾನು ಬೆಳೆದದ್ದಾದರೂ ಹೇಗೆ ಮತ್ತು ಕಾರಣವಾದರೂ ಏನು..? ಅದೊಂದು ಅದ್ಭುತ ಕಥೆ ಹಾಗು ಪ್ರಸ್ತುತ ಮಣಿಪುರ ವಿದ್ಯಮಾನಕ್ಕೆ ಹಿಡಿಯುವ ಕನ್ನಡಿಯೂ ಆಗಲಿದೆ. 2002 ರಲ್ಲಿ "ಮಾಲೋಮ್" ಎನ್ನುವ ಬಸ್‍ಸ್ಟ್ಯಾಂಡಿನಲ್ಲಿ ನಿಂತಿದ್ದ ಹನ್ನೆರಡು ಜನರ ಮೇಲೆ ಅಸ್ಸಾಂ ರೈಫಲ್ಸ್‌ ಗುಂಡಿನ ಮಳೆಗರೆಯಿತು. ಅದಕ್ಕೆ ಕಾರಣ ಕೊಡುವ ಅಸ್ಸಾಂ ರೈಫಲ್ಸ್‌ ಅವರಲ್ಲಿ ತಮ್ಮ ವಿರುದ್ಧ ದಾಳಿ ನಡೆಸುವ ಸಂಚು ನಡೆಸಿತ್ತು ಮತ್ತು ಅವರಲ್ಲಿ ಉಗ್ರವಾದಿಗಳಿಗೆ ಬೆಂಬಲಿಸುವ ಜನರಿದ್ದರು. ತಾವು ಶರಣಾಗುವಂತೆ ಸೂಚಿಸಿದರೂ ಅವರು ತಿರುಗಿ ದಾಳಿ ನಡೆಸಿದ್ದರಿಂದ ಅಸ್ಸಾಂ ರೈಫಲ್ಸ್‌ ವಿಶೇಷ ಅಧಿಕಾರ ಬಳಸಿ ಅವರನ್ನು ಕೊಲ್ಲಲಾಯಿತು ಎಂದು. ಏನಿದು ವಿಶೇಷ ಅಧಿಕಾರ. ..? ಈ ಅಸ್ಸಾಂ ರೈಫಲ್ಸ್‌ ಪಡೆಗೆ ಯಾರನ್ನೂ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ನಿಲ್ಲಿಸಿ ಪ್ರಶ್ನಿಸುವ ಮತ್ತು ತಪಾಸಣೆ ನಡೆಸುವ ಪ್ರಮೀಳೆಯರ ನಾಡಿನಲ್ಲಿ 228 ವಿಶೇ ಷಾ ಧಿಕಾರವನ್ನು ಕೊಡಲಾಗಿದೆ. ಇದರ ಮೂಲಕ ಮಣಿಪುರದಲ್ಲಿ ನಡೆಯುತ್ತಿರುವ ಬಂಡುಕೋರ ಸಂಘಟನೆಗಳನ್ನು ಹತ್ತಿಕ್ಕುವುದು ಅದರ ಉದ್ದೇಶವಾಗಿದೆ. ಈ "ಸವಿಕಾ" ಎಂಬ "ಸಶಸ್ತ್ರ ವಿಶೇ ಷಾ ಧಿಕಾರ ಕಾಯ್ದೆ" ಯನ್ನು ಸರಕಾರ 1958 ರಲ್ಲೇ ರೂಪಿಸಿದೆ. ಆದರೆ ಇಲ್ಲಿಗೆ ಅದನ್ನು ಅಳವಡಿಸುವ ಅಗತ್ಯ ಈಗಿಲ್ಲ ಎನ್ನುವುದು ಆಕೆಯ ವಾದ. ಇದೇನು ಹೊಸ ಕಾಯಿದೆಯಲ್ಲ. ಆದರೆ ಇದರ ಅಡಿಯಲ್ಲಿ ಮತ್ತು ಈಗಾಗಲೇ ಇಲ್ಲಿ ನಡೆದ ಗಲಭೆಗಳಲ್ಲಿ ಸುಮಾರು 22000 ಸಾವಿರ ಜನರು ತೀರಿಕೊಂಡಿದ್ದಾರೆ. ಈ "ಸವಿಕಾ" ಅಡಿಯಲ್ಲಿ ಅಪರಾಧ ಚಟುವಟಿಕೆ ನಡೆಸಿದ ಅಥವಾ ನಡೆಸಲು ಹೊಂಚು ಹಾಕಿದ ವ್ಯಕ್ತಿಯನ್ನು ಯಾವುದೇ ವಾರಂಟ್ ಅಥವಾ ಇನ್ನಾವುದೇ ಅಧಿಕಾರ, ಪ್ರಾಧಿಕಾರದ ಅನುಮತಿ ಇಲ್ಲದೆ ಬಂಧಿಸಲು ಸೇನೆಗೆ ಅಧಿಕಾರ ಇದೆ. ಯಾವುದೇ ಪ್ರದೇಶ ಕಚೇರಿ ಅಥವಾ ಇನ್ನಾವುದೇ ಖಾಸಗಿ ಪ್ರದೇಶಗಳಿಗೂ ತೆರಳುವ ಅವಕಾಶ ಅಧಿಕಾರ ಎರಡೂ ಇದೆ. ಸಮಾಜದಲ್ಲಿ ಸುವ್ಯವಸ್ಥೆಯನ್ನು ಕಾಯುವ ನಿಟ್ಟಿನಲ್ಲಿ ಅವರು ಈ ಕಾಯ್ದೆಯಡಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪನ್ನು ಸಾಯಿಸುವ, ಗುಂಡಿಡುವ ಯಾವುದೇ ರೀತಿಯ ಅಧಿಕಾರವನ್ನು ಬಳಸಬಹುದಾಗಿದೆ. ಅನುಮಾನವಿದ್ದರೆ ಯಾವುದೇ ಕಟ್ಟಡ ಅಥವಾ ಕಛೇರಿಯನ್ನೂ ಧ್ವಂಸಮಾಡುವ ಹಕ್ಕು ಈ ಪಡೆಗಳಿಗೆ ನೀಡಲಾಗಿದೆ. ಈ ಸಂಬಂಧ ಯಾವುದಾದರೂ ಸರಕಾರದ ವಿರುದ್ಧ ನಾಗರಿಕರಿಂದ ತಕರಾರಿದ್ದಲ್ಲಿ ಈ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣವನ್ನು ಕ್ರಮಕ್ಕೊಳಪಡಿಸಲು ಕೇಂದ್ರದ ವಿಶೇಷ ಅನುಮತಿ ಬೇಕಾಗುತ್ತದೆ. ಈ ಕಾಯ್ದೆಯ ಅಧಿಕೃತ ಜಾರಿಯಾದದ್ದು 1980 ರಲ್ಲಿ. ಅದರಲ್ಲಿ ಬಲಿಯಾದವರ ಸಂಖ್ಯೆ ಸುಮಾರು 22000. ಅದರಲ್ಲಿ 12000 ಜನರು ಮಾತ್ರ ಬಂಡುಕೋರರು ಎಂದು ಗುರುತಿಸಲಾಗಿದೆ. 1980 ರಲ್ಲಿ ಈ ಸವಿಕಾ ಕಾಯ್ದೆ AFSP (Armed Forces Special Powers Act) ಜಾರಿಯಾದಾಗ ಅಧಿಕೃತವಾಗಿ ಇಲ್ಲಿದ್ದ ಬಂಡುಕೋರ ಸಂಘಟನೆಯನ್ನು ನಿಯಂತ್ರಿಸಲೆಂದೆ ಇದನ್ನು ಜಾರಿ ತರಲಾಗಿತ್ತು. ಅದಾಗಿ 28 ವರ್ಷವಾದರೂ ಬಂಡುಕೋರರ ಗಲಭೆ ಇಲ್ಲಿ ನಿಂತಿಲ್ಲ. 229 ಪ್ರಮೀಳೆಯರ ನಾಡಿನಲ್ಲಿ ಮೊದಲಿಗೆ ಇಲ್ಲಿ ಬಂಡುಕೋರ ಸಂಘಟನೆಯನ್ನು ರೂಪಿಸಿದ್ದು 1964 ರಲ್ಲಿ ಮಿಠಿ ಸಮುದಾಯದ ಜನರು. ಅವರಲ್ಲೇ ಒಡಕುಂಟಾದಾಗ ಆದ ಬೆಳವಣಿಗೆಯಲ್ಲಿ ಇವತ್ತು ಸುಮಾರು 20 ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗೆ ಹಲವು ರಾಜಕೀಯ ಆಯಾಮದಲ್ಲಿ ಸಿಕ್ಕಿರುವ ಮಣಿಪುರದ ರಾಜಕೀಯದಲ್ಲಿ ಈ ಶರ್ಮಿಳಾ ಚಾನು ಇದ್ದಕ್ಕಿದ್ದಂತೆ ಉಲ್ಕೆಯಂತೆ ಉದುರಿ ಬಿದ್ದವಳು. ಇಂಫಾಲದಿಂದ 15 ಕಿ.ಮೀ. ದೂರದ "ಮಾಲೋಮ್"ನಲ್ಲಿ ನಡೆದ ಮಾರಣ ಹೋಮದಿಂದಾಗಿ ತಾಯಿ ಐರೋಮ್ ಸಖೀ ಚಾನುವಿನ ಆಶೀರ್ವಾದದೊಂದಿಗೆ ಗಾಂಧಿಗಿರಿಯ ದಾರಿ ಹಿಡಿದವಳು. 2000ದ ನವಂಬರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದವಳು. "ಸವಿಕಾ" ಕಾಯ್ದೆಯಿಂದ ಮಣಿಪುರವನ್ನು ಮುಕ್ತಗೊಳಿಸಿ ಎನ್ನುವ ಒಂದೇ ಉದ್ದೇಶಕ್ಕೆ ಹಿಡಿದ ಹೋರಾಟ ಈಗ ಜಾಗತಿಕ ಪ್ರಸಿದ್ಧಿ ಪಡೆದಿದೆ. ಆಕೆ ಆರಂಭಿಸಿದ ಈ ಸತ್ಯಾಗ್ರಹ ಹೆಚ್ಚು ಕಾಲ ನಡೆಯುವುದಿಲ್ಲ ಎಂದೇ ಭಾವಿಸಿದ್ದರು. ಆದರೆ ದಿನಗಳೆದಂತೆ ಅದು ಸುಳ್ಳಾಯಿತು. ಸರಕಾರ ಅತ್ಮಹತ್ಯೆಯ ನೆಪದಲ್ಲಿ ಬಂಧಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸಿದೆ. ಆಕೆ ಯಾವುದೇ ಕಾನೂನು ಸಲಹೆ ಅಥವಾ ನೆರವನ್ನು ಪಡೆಯದೆ ಅಲ್ಲೂ ಉಪವಾಸ ಉಳಿಯುವ ಮೂಲಕ ನ್ಯಾಯಾಂಗಕ್ಕೆ ಸವಾಲೊಡ್ಡಿದಳು. ಅಷ್ಟೇ ಆಕೆಗೆ ವರ್ಷದ ಮೇಲೆ ವರ್ಷದ ಶಿಕ್ಷೆ ಜಾರಿಯಾಗುತ್ತಲೇ ನಡೆದಿದೆ. ಪ್ರಮೀಳೆಯರ ನಾಡಿನಲ್ಲಿ 230 ಸರಿಯಾಗಿ ಹದಿನೈದು ವರ್ಷದಿಂದ ಉಪವಾಸ ಇರುವ ಆಕೆಗೆ ಸರಕಾರದಿಂದ ಜೀವರಕ್ಷಕ ಆಹಾರವನ್ನು ಔಷಧಿಯ ರೂಪದಲ್ಲಿ ನಳಿಕೆಯ ಮೂಲಕ ಪೂರೈಸಲಾಗುತ್ತಿದೆ. ಅದಕ್ಕಾಗಿ ಶಾಶ್ವತವಾಗಿ ಮೂಗಿನ ಮೂಲಕ ಆಕೆಗೆ ನಳಿಕೆಯೊಂದನ್ನು ಜೋಡಿಸಿಡಲಾಗಿದೆ. ಈ ಮಧ್ಯೆ ಮನೋರಮಾ ಎಂಬಾಕೆಯ ಮೇಲೆ ಈ ಪಡೆಗಳು ದೌರ್ಜನ್ಯ ನಡೆಸಿ ಕೊಂದು ಹಾಕಿದವು ಎಂಬ ಆರೋಪ ಮತ್ತು ನಡೆದ ಘಟನೆಯಿಂದಾಗಿ ಸರಕಾರ ಜೀವನ ರೆಡ್ಡಿ ಆಯೋಗ ನಿಯಮಿಸಿದೆ. 17 ನೇ ಬೆಟಾಲಿಯನ್ ಮಾತ್ರ ಹಿಂದಕ್ಕೆ ಪಡೆಯಿತು. ಆದರೆ ಆಯೋಗದ ಎದುರಿಗೆ ಪಡೆಗಳು ಬೆಂಬಲಿಸಲು ನಿರಾಕರಿಸಿದವು ಎನ್ನುವ ವಾದ ಇದೆ. ಇಲ್ಲಿ ಅಸ್ಸಾಂ ರೈಫಲ್ಸ್‌ ಆಯೋಗವೇ ಅಸಿಂಧು ಎಂದು ವಾದಿಸಿಬಿಟ್ಟಿತು. ಹೀಗಾಗಿ ಶರ್ಮಿಳಾ ಚಾನು ಹಿಂಪಡೆಯದ ಹೋರಾಟಕ್ಕೇ ಅಲ್ಲಿನ ಎಲ್ಲಾ ತಾಯಂದಿರೂ ಇಳಿದು ಹೋರಾಟ ಆರಂಭಿಸಿದರು. ಅದಕ್ಕಾಗಿ ಈ ಹೋರಾಟ ಈಗ "ಮದರ್ಸ್ ಫ್ರಂಟ್" ಎಂದು ಹೆಸರಿಗೆ ಬಂದುನಿಂತಿದೆ. ತುಂಬಾ ಚೆಂದದ ಹೆಣ್ಣು ಮಗಳು ಶರ್ಮಿಳಾ ಬೇಕಿದ್ದರೆ ಎಲ್ಲರಂತೆ ಸುಖವಾಗಿ ಜೀವನ ಮಾಡಿಕೊಂಡು ಇರಬಹುದಿತ್ತು. ಆದರೆ ಬದುಕನ್ನು ಸಮಾಜಕ್ಕೆ ಮೀಸಲಾಗಿಟ್ಟಳು. ಚೆಂದದ ಕವಿತೆ ಬರೆಯುವ ಆಕೆ ನೂರಾರು ಕವನ ಬರೆದಿದ್ದಾಳೆ. ಒಂದು ಕವನ ಸಂಕಲನ ಕೂಡಾ ಹೊರ, ತಂದಿದ್ದಾಳೆ. ಈಗ ಆಕೆ ಬರೀ ಶರ್ಮಿಳಾ ಚಾನು ಅಲ್ಲ ಪೂರ್ತಿ ದೇಶಕ್ಕೆ ಗುಬ್ಬಚ್ಚಿಯಂತಿರುವ ದೇಹದ ಆದರೆ ಉಕ್ಕಿನ ಮಹಿಳೆ. 2005ರಲ್ಲಿ ಆಕೆಯ ಹೆಸರನ್ನು ನೊಬಲ್ ಪ್ರಶಸ್ತಿಗಾಗಿಯೂ ಹೆಸರಿಸಲಾಗಿತ್ತು. ಆದರೆ ಅದೆಲ್ಲವನ್ನೂ ನಯವಾಗೇ ತಿರಸ್ಕರಿಸಿರುವ ಶರ್ಮಿಳಾ ಎದುರಿಗೆ ಜೈಲಿನಿಂದಲೇ ಸ್ಪರ್ಧಿಸಲು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಂದಲೂ ಬೇಡಿಕೆ ಬಂದಿತ್ತು. ಉಹೂ ಯಾವ ವಿಷಯಕ್ಕೂ/ಆಮಿಷಕ್ಕೂ ಬಗ್ಗದ ಶರ್ಮಿಳಾ "ಸವಿಕಾ" ಒಂದೇ ವಿಷಯಕ್ಕೆ ಬದ್ಧಳು. ಸಣ್ಣನೆಯ ಗುಬ್ಬಚ್ಚಿ ದೇಹದಲ್ಲಿ ಆಸ್ಪತ್ರೆಯ ಮಂಚದ ಮೇಲೆ ಕೂತಿರುವ ಶರ್ಮಿಳಾ ಎದುರಿಗೆ ಇವತ್ತು ಜಗತ್ತಿನ ಘಟಾನುಘಟಿಗಳಿಂದ ಪತ್ರಗಳು 231 ಪ್ರಮೀಳೆಯರ ನಾಡಿನಲ್ಲಿ ಶುಭಾಶಯಗಳು, ಸಹಾಯದ ಭರವಸೆ, ಏನು ಬೇಕು ನಿನಗೆ ಎಂದು ಕಾನ್ಫಿಡೆಂಟಾಗಿ ಕೇಳುವ ಅಸಂಖ್ಯ ಜನರ ಆಶಯಗಳ ಮಹಾಪೂರವೇ ಹರಿದುಬರುತ್ತಿದೆ. ದಿನನಿತ್ಯ ಆಕೆಯ ಎದುರಿಗೆ ಕಾಗದ ಗುಡ್ಡೆ ಬಂದು ಬೀಳುತ್ತಿದೆ. ಆದರೆ ಯಾವ ಆಶಯ ಮತ್ತು ಇನ್ನಾವುದೇ ಆಮಿಷಕ್ಕೂ ಜಗ್ಗದ ಶರ್ಮಿಳಾ ಹೆಚ್ಚು ಕಡಿಮೆ ಜೀವ ಕೊಡುವ ಹಂತದಲ್ಲಿದ್ದಾಳೆ. ಇಷ್ಟು ವರ್ಷ ಯಾವುದೇ ಆಶಯಕ್ಕೆ ತುತ್ತಾಗದ ನಾನು ಈಗ್ಯಾಕೆ ಬೆದರಲಿ ಎನ್ನುವ ತಣ್ಣನೆಯ ಮುಖದಲ್ಲಿ ಇದ್ದ ಹೋರಾಟದ ಕಳೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಬದುಕು ಆಕೆಗೆ ಹೆದರಿ ಹದಿನೈದು ವರ್ಷದಿಂದ ಕಾಯುತ್ತಿದೆ. ಶರ್ಮಿಳಾ ಮಾತ್ರ ಅದೇ ಆತ್ಮವಿಶ್ವಾಸದಲ್ಲಿ ವರ್ಷಗಳನ್ನೇ ಸೋಲಿಸುತ್ತಿದ್ದಾಳೆ. ಮಣಿಪುರದ ನನ್ನ ಪ್ರವಾಸದಲ್ಲಿ ಆಕೆ ನಿಜಕ್ಕೂ ಅದ್ಭುತ ಭೇಟಿಯಲ್ಲದೆ ಆಕೆಯ ಎದುರಿಗೆ ಅತ್ಯಂತ ಕುಬ್ಜನಾದ ಕ್ಷಣಗಳವು. ಅದಕ್ಕಿಂತ ಅದ್ಭುತವಾಗಿ ಒಂದು ಗುರಿಗೆ ಅಂಟಿಕೊಂಡು ಬದುಕುವುದು ಅದೂ ವಿಶ್ವಾಸ ಕಳೆದುಕೊಳ್ಳದೆ..? ಬಹುಶ: ಅದು ಶರ್ಮಿಳಾಳಿಂದ ಮಾತ್ರ ಸಾಧ್ಯ. .. ಶರ್ಮಿಳಾ ಹ್ಯಾಟ್ಸ್ ಅಫ್.. ಅನುಬಂಧ : 1 ಕಳೆದ ಇತಿಹಾಸದಲ್ಲಿ ಮಣಿಪುರವನ್ನು ಆಳಿದ ರಾಜ ವಂಶಸ್ಥರು ಮತ್ತು ಅವರ ರಾಜಾಳ್ವಿಕೆಯ ಕಾಲದ ಮಾಹಿತಿ. ಇದನ್ನು ಕನ್ನಡೀಕರಿಸಿದರೆ ಮೂಲ ಹೆಸರು ಮತ್ತು ಅದರ ಉಚ್ಛಾರದಲ್ಲಿ ಆಗುವ ವ್ಯತ್ಯಾಸದಿಂದ ಮೂಲ ಆಶಯಕ್ಕೆ ಧಕ್ಕೆ ಬರುವ ಕಾರಣ ಇದ್ದುದರಲ್ಲಿ ಸುಲಭವಾಗುವ ಆಂಗ್ಲ ಭಾಷೆಯ ನೆರವನ್ನು ನೇರವಾಗಿ ಬಳಸಲಾಗಿದೆ. (ಅಂತರ್ಜಾಲದಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ) Sl. No Names of Kings Period of reign A.D. Number of years 1. Nongda Lairen Pakhangba 33-154 121 2. Khuiyoi Tompok 154-264 110 3. Taothingmang 264-364 100 4. Khui Ningonba 364-379 15 5. Pengsiba 379-394 15 6. Kaokhangba 394-411 17 7. Naokhamba 411-428 17 8. Naophangba 428-518 90 9. Sameirang 518-568 50 10. Urakonthouba 568-658 90 11. Naothingkhong 663-763 100 12. Khongtekcha 763-773 10 13. Keirencha 784-799 15 14. Yaraba 799-821 22 15. Ayangba 821-910 89 16. Ningthoucheng 910-949 39 233 ಪ್ರಮೀಳೆಯರ ನಾಡಿನಲ್ಲಿ Sl. No Names of Kings Period of reign A.D. Number of years 17. Chenglie-Ipan-Lanthaba 949-969 20 18. Keiphaba Yanglon 969-984 15 19. Irengba 984-1074 90 20. Loiumba 1074-1112 48 21. Loitongba 1122-1150 28 22. Atom Yoiremba 1150-1163 13 23. Iyanthaba 1163-1195 32 24. Thayanthaba 1195-1231 36 25. Chingthang Lanthaba 1231-1242 11 26. Thingbai Shelhongba 1242-1247 5 27. Puranthaba 1247-1263 16 28. Khumomba 1263-1278 15 29. Moiramba 1278-1302 24 30. Thangbi Lanthaba 1302-1324 22 31. Kongyamba 1324-1335 11 32. Telheiba 1335-1355 20 33. Tonaba 1355-1359 4 34. Tabungba 1339-1394 35 35. Lairenba 1394-1399 5 36. Punsiba 1404-1432 28 37. Ningthoukhomba 1432-1467 35 38. Kyamba 1467-1508 41 39. Koiremba 1508-1512 4 ಪ್ರಮೀಳೆಯರ ನಾಡಿನಲ್ಲಿ 234 Sl. No Names of Kings Period of reign A.D. Number of years 40. Lamkhyamba 1512-1523 11 41. Nonginphaba 1523-1524 1 42. Kabomba 1524-1542 18 43. Tangjamba 1542-1545 3 44. Chalamba 1545-1562 17 45. Mugyamba 1562-1597 35 46. Khagemba 1597-1652 55 47. Khunjaoba 1652-1666 14 48. Paikhomba 1666-1697 31 49. Charairongba 1697-1709 12 50. Garibniwaj 1709-1748 39 51. Chitshai 1748-1752 4 52. Bharatsai 1752-1753 1 53. Maramba 1753-1759 6 54. Chingthangkhomba 1759-1762 3 55. Maramba 1762-1763 1 56. Chingthangkhomba 1763-1798 35 57. Labanyachandra 1798-1801 3 58. Madhuchandra 1801-1803 2 59. Chourjit 1803-1813 10 60. Marjit 1813-1819 6 61. Takuningthou (Herachandra) 1819 1 62. Yumjaotaba 1820 1 235 ಪ್ರಮೀಳೆಯರ ನಾಡಿನಲ್ಲಿ Sl. No Names of Kings Period of reign A.D. Number of years 63. Gambhir Singh 1821 6 months 64. Jai Singh 1822 1 65. Jadu Singh (Nongpok Chinslenkhomba) 1823 1 66. Raghab Singh 1823-1824 1 67. Nongchup Lamgaingamba (Bhadrasing) 1824 1 68. Gambhir Singh (Chinglen Nongdrenkhomba) 1825-1834 9 69. Chandrakirti (Ningthempishak) 1834-1844 10 70. Nara Singh 1844-1850 6 71. Debendra Singh 1850- 3 months 72. Chandrakirti (K.C.S.I.) 1850-1886 36 73. Shurchandra 1886-1890 4 74. Kulachandra 1890-1891 1 75. Churachand Singh 1891-1941 50 76. Bodhchandra Singh 1941-1955 14 ಆಕರ ಗ್ರಂಥಗಳು 1. ಅಂತರ್ಜಾಲ. 2. ವಿಕಿಪೀಡಿಯಾ ಮಾಹಿತಿ. 3. ಹಿಸ್ಟರಿ ಆಫ್ ಮಣಿಪುರ್. 4. ಮಣಿಪುರ್ ಸ್ಥಳೀಯ ಇಲಾಖಾ ದಸ್ತಾವೇಜುಗಳು. 5. ಮಣಿಪುರ ಪ್ರವಾಸೋದ್ಯಮ ವೆಬ್‍ಸೈಟ್. * * * *