ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಕಟಣೆ - 190 ವಿಚಾರ ಸಾಹಿತ್ಯಮಾಲೆ - 94 ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಪಾದಕ ಮಂಡಳಿ ಡಾ. ಪ್ರಧಾನ್ ಗುರುದತ್ತ (ಅಧ್ಯಕ್ಷ) ಶ್ರೀ ಎಸ್.ಆರ್. ರಾಮಸ್ವಾಮಿ (ಸದಸ್ಯರು) ಡಾ. ಜಿ.ಬಿ. ಹರೀಶ್ (ಸದಸ್ಯರು) ಶ್ರೀ ವಾದೀರಾಜ್ (ಸದಸ್ಯರು) ಶ್ರೀ ಪಿ.ಎಂ. ರಮೇಶ್ (ಸದಸ್ಯರು) ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪಂ|| ದೀನ್ ದಯಾಳ್ ಉಪಾಧ್ಯಾಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಲಾಗ್ರಾಮ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ ಬೆಂಗಳೂರು - 560 056 DINDAYAL UPADHYAYA AVARA SAMAGRA BAREHAGALU (Samputa 6) (Complete Works of Pandit Deendayal Upadhaya, Vol. 6) Published by Sri P. Narayana Swamy, Registrar, Kuvempu Bhasha Bharathi Pradhikara; Kalagrama, Jnanabharathi, Behind Bangalore University Campus, Mallattahalli, Bangalore - 560 056 ; 2015 ; Pp. viii + 496 ; Price : Rs.125/- © : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಪ್ರಥಮ ಮುದ್ರಣ : 2015 ಪುಟಗಳು : viii + 496 ಬೆಲೆ : ರೂ. 125/- ಪ್ರತಿಗಳು : 1000 ಪ್ರಕಾಶಕರು : ಪಿ. ನಾರಾಯಣಸ್ವಾಮಿ ರಿಜಿಸ್ಟ್‌ರಾರ್ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಲಾಗ್ರಾಮ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ ಮಲ್ಲತ್ತಹಳ್ಳಿ, ಬೆಂಗಳೂರು - 560 056 ಮುಖಪುಟ ವಿನ್ಯಾಸ ಮತ್ತು ಚಿತ್ರ : ಶ್ರೀ ವಿಶ್ವನಾಥ್ ಶೆಟ್ಟಿಗಾರ್ ISBN : 978-93-80415-19-2 ಮುದ್ರಕರು : ರಾಜಾ ಪ್ರಿಂಟರ್ಸ್ ನಂ. 59, 4ನೇ ಅಡ್ಡರಸ್ತೆ, ಲಾಲ್ಬಾಗ್ ರೋಡ್, ಕೆ.ಎಸ್. ಗಾರ್ಡನ್, ಬೆಂಗಳೂರು - 560027. ದೂ : 22234066 v ಪರಿವಿಡಿ ಸಂಪುಟ 6 1. ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 1 ಅನು : ಪ್ರಧಾನ್ ಗುರುದತ್ತ 2. ಯಾರು ದೊಡ್ಡವರು? 32 3. ಪ್ರಜಾಪ್ರಭುತ್ವ ಮತ್ತು ಪ್ರಜಾಭಿಮತ 34 4. ಧರ್ಮರಾಜ್ಯ - ಎಂದರೇನು? ಮತ್ತು ಏಕೆ? 39 5. ನಮ್ಮ ವಿಜಯೋನ್ಮುಖ ಪರಂಪರೆ 45 6. ಕಾಶ್ಮೀರಕ್ಕಾಗಿ ಪ್ರಾಣತೆತ್ತವರನ್ನು ಮರೆಯದಿರೋಣಾ 50 7. ಸಮರ್ಥನಾದ ಅಭ್ಯರ್ಥಿ ಯಾರು? 53 8. ಯಾತ್ರೆಗಿಂತ ಮೊದಲು 59 9. ಪರಾಶರ 63 ಅನು : ಉಮಾದೇವಿ ಆರ್. 10. ಪಂಡಿತ್ ನೆಹರು ತಮ್ಮನ್ನು ಮತ್ತು ದೇಶವನ್ನು ಸಂಕಷ್ಟಕ್ಕೆ ಗುರಿಮಾಡುತ್ತಿದ್ದಾರೆ 71 11. ಜನಸಂಘದ ಚುನಾವಣಾ ಘೋಷಣಾ ಪತ್ರ (4) 73 12. ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 87 13. ದಬ್ಬಾಳಿಕೆಯ ತೆರಿಗೆ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತಿದೆ 109 14. ಹಿಂದಿಯ ಸ್ವರೂಪವನ್ನು ವಿಕೃತಗೊಳಿಸುವ ಪ್ರಯತ್ನವನ್ನು ಆಡಳಿತವು ಕೈಬಿಡಲಿ 112 15. ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಿದೆಯೇ? 117 16. ಹಿಂದೂ ಭಾವನೆ ಯಾವುದೇ ರಾಜಕೀಯವಲ್ಲ 123 17. ಪಾಕಿಸ್ತಾನೀಯರ ಅಕ್ರಮ ಪ್ರವೇಶದ ವಿರುದ್ಧ ಜನಸಂಘವು ದೇಶವ್ಯಾಪಿ ಆಂದೋಲನ ಮಾಡಲಿದೆ 127 ಅನು : ಬಿ. ಗಣೇಶ್ 18. ಕಾಂಗ್ರೆಸಿನ ಆಂತರಿಕ ಸಂಘರ್ಷ ಹಾಗೂ ಅದರ ಭವಿಷ್ಯ 131 19. ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ 137 20. ಅಖಂಡ ಭಾರತ : ಧ್ಯೇಯ ಮತ್ತು ಸಾಧನೆ 149 vi 21. ``ಎಲ್ಲರಿಗೂ ಕೆಲಸ’’ ಎನ್ನುವುದೇ ಭಾರತೀಯ ಆರ್ಥಿಕ ನೀತಿಯ ಏಕೈಕ ಮೂಲಾಧಾರ 153 22. ಆಗಸ್ಟ್ 47 ಮತ್ತು ಆಗಸ್ಟ್ 56 163 23. ಪಂಡಿತ್ ನೆಹರೂ ಚೀನಾದ ಎದುರು ಸಮರ್ಪಣೆ 167 24. ನಮ್ಮ ಆರ್ಥಿಕ ನೀತಿಯ ಮೂಲ ಆಧಾರ 177 25. ಕಾಂಗ್ರೆಸ್ಸಿನ `ಸಮಾಜವಾದದ ಘೋಷಣೆ’ಗಳಿಂದಲೇ 185 ಕಮ್ಯುನಿಸ್ಟ್‌ರು ತಳ ಊರಿದ್ದು 26. ಎಲ್ಲರೂ ಒಂದಾಗೋಣ 188 27. ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 196 ಅನು : ಸುಮಾ ವಿ. ರಾವ್ 28. ಪಂ. ದೀನ್ ದಯಾಳ್‍ರ ಪತ್ರ ಅವರ ಮಾವನ ಮಗನ ಹೆಸರಿನಲ್ಲಿ 209 29. ಜನಸಂಘದಿಂದ ಹಲವಾರು ಸಂತಸದ ಅಚ್ಚರಿಗಳ ಭರವಸೆ 217 30. ನಮ್ಮದು `ಬದಲಾವಣೆಯಾಗಲಾರದ’ ಪಕ್ಷವಲ್ಲ ಉಪಾಧ್ಯಾಯರ ದೃಢೀಕರಣ 223 31. ಧಾರಣೆಯಿಂದ ಧರ್ಮ 225 32. ಕೊನೆಯ ಭಾಷಣ 232 33. ಕೃತಯುಗವನ್ನು ನಿರ್ಮಿಸಿ 239 34. ಶ್ರೀ ಗುರೂಜಿಯವರ ಬಗ್ಗೆ 241 35. ಪಾಶ್ಚಿಮಾತ್ಯ ಸಿದ್ಧಾಂತಗಳಿಂದ ಮುಕ್ತವಾಗಿ ಒಂದು ಹೊಸ ಆರ್ಥಿಕ ದಾರ್ಶನಿಕತೆಯ ಹುಡುಕಾಟದಲ್ಲಿ 247 36. ಹೊಸ ಮಾರ್ಗದ ನಿರ್ಮಾಣ 255 ಅನು : ಸುಧಾ ಕೆ. 37. ಮಧ್ಯಪ್ರದೇಶದ ಪತ್ರ 257 ಅನು : ಹೆಚ್. ಡಿ. ಶಾಂತ 38. ರಾಷ್ಟ್ರ ಚಿಂತನ 373 ಅನು : ಜಿ. ಅಶ್ವತ್ಥನಾರಾಯಣ ಅನು : ಡಿ. ಕೆ. ರಾಜಮ್ಮ vii ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ* ಡಿಸೆಂಬರ್ 1951ರಲ್ಲಿ ಕಾನ್ಪುರದಲ್ಲಿ ನಡೆದ ಭಾರತೀಯ ಜನಸಂಘದ ಮೊದಲ ಅಧಿವೇಶನದಿಂದ ಹಿಡಿದು ಡಿಸೆಂಬರ್ 1967ರಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಹದಿನಾಲ್ಕನೆಯ ಅಧಿವೇಶನದ ವರೆಗೆ ದೀನದಯಾಳರು ಸತತವಾಗಿ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜನಸಂಘದ ಅಧಿವೇಶನಗಳು, ಆಂದೋಳನಗಳು, ತರಬೇತಿ ಶಿಬಿರದ ತರಗತಿಗಳು ಹಾಗೂ ಪ್ರಸ್ತಾವಗಳು ಇವೆಲ್ಲವೂ ದೀನದಯಾಳ್ ಉಪಾಧ್ಯಾಯರ ವ್ಯಕ್ತಿತ್ವದಿಂದ ಆಷ್ಲಾವಿತವಾಗಿದ್ದವು. ದೇಶದಾದ್ಯಂತ ಅವರು ಕೈಗೊಂಡಿದ್ದ ಅವಿರತ ಪ್ರವಾಸಗಳಿಂದಾಗಿ ದೇಶದಾದ್ಯಂತ ಇದ್ದ ಕಾರ್ಯಕರ್ತರಿಗೆ ಅವರು ಸುಲಭವಾಗಿ ಲಭ್ಯವಾಗುತ್ತಿದ್ದರು. ಅಧಿವೇಶನದಲ್ಲಿ ಮಂಡಿಸಲಾಗುತ್ತಿದ್ದ ಪ್ರಧಾನ ಕಾರ್ಯದರ್ಶಿಯವರ ವರದಿಗಳು ಕೇವಲ ಔಪಚಾರಿಕವಾದ ಅಂಕಿ- ಅಂಶಗಳನ್ನೊಳಗೊಂಡಿದ್ದ ವರದಿಗಳಾಗಿರದೆ ಸಂಘಟನೆಯ ಗತಿಶೀಲತೆಯ ಉತ್ಸಾಹಪೂರ್ಣ ಹಾಗೂ ಆತ್ಮಾವಲೋಕನದ ಮಹತ್ವಪೂರ್ಣ ದಾಖಲೆಗಳಾಗಿರುತ್ತಿದ್ದುವು. ಸವಾಲುಗಳನ್ನೊಳಗೊಂಡ ಕರೆಗಳಾಗಿರುತ್ತಿದ್ದುವು. ಪ್ರಧಾನ ಕಾರ್ಯದರ್ಶಿಯ ವರದಿ ಜನಸಂಘದ ವಿಕಾಸ ಯಾತ್ರೆಯ ಸಮಗ್ರ ಚಿತ್ರಣವನ್ನು ಮುಂದಿರಿಸುವ ಸಾಹಿತ್ಯವೇ ಆಗಿರುತ್ತಿತ್ತು. ಪ್ರಧಾನ ಕಾರ್ಯದರ್ಶಿಯ ಈ ವರದಿಗಳು ಜನಸಂಘದ ಕಾರ್ಯಚಟುವಟಿಕೆಗಳ ಆಗುಹೋಗುಗಳ ದಾಖಲೆ ಮಾತ್ರವಾಗಿರದೆ, ಇಡೀ ರಾಷ್ಟ್ರದಲ್ಲಿ ನಡೆಯುತ್ತಿದ್ದ ಘಟನಾವಳಿಗಳ ದಿನಚರಿಯೂ ಆಗಿರುತ್ತಿದ್ದವು. 1957, 1962 ಮತ್ತು 1967ರ ಸಾರ್ವತ್ರಿಕ ಚುನಾವಣೆಗಳ ಬಗೆಗಿನ ಪ್ರಧಾನ ಕಾರ್ಯದರ್ಶಿಯ ವರದಿಗಳು ಯಾವುದೇ ವಿಶ್ವವಿದ್ಯಾನಿಲಯದ ಅನುವಾದ : ಡಾ. ಪ್ರಧಾನ್ ಗುರುದತ್ತ 2 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಶೋಧನ ವಿಭಾಗದ ಉಚ್ಚಸ್ತರದ ಅಕಾಡೆಮಿಕ್ ಅಧ್ಯಯನದ ಮೂಲಕ ಸಾದರ ಪಡಿಸಬಹುದಾಗಿದ್ದಂಥ ಕಿರು ಸಂಶೋಧನಾತ್ಮಕ ಪ್ರಬಂಧಗಳನ್ನು ಸರಿಗಟ್ಟುವಂಥ ಪುಸ್ತಕಗಳೇ ಆಗಿವೆ. ಇವುಗಳಲ್ಲಿ ರಾಜಕೀಯದ ಬಗೆಗಿನ ಟಿಪ್ಪಣಿಗಳು, ಸಮಗ್ರ ಅಂಕಿ-ಅಂಶಗಳು ಹಾಗೂ ರೇಖಾಚಿತ್ರಗಳು (Diagram) ಇವುಗಳನ್ನೆಲ್ಲ ಮಾಹಿತಿಪೂರ್ಣವಾಗಿ ಹಾಗೂ ಜ್ಞಾನವರ್ಧಕ ರೀತಿಯಲ್ಲಿ ಸಂಕಲಿಸಲಾಗಿದೆ. ಯಾವನೇ ಐತಿಹಾಸಿಕ ಸಂಶೋಧಕನಿಗೆ ಈ ದಾಖಲೆಗಳು ಅಮೂಲ್ಯ ನಿಧಿಗಳಾಗಿ ಪರಿಣಮಿಸುತ್ತವೆ. ಈ ವರದಿಗಳು ರಾಜಕೀಯ ಕಾರ್ಯಕರ್ತರಿಗೆ ಅಗತ್ಯವಾಗಿರುವ ಮಾರ್ಗದರ್ಶಕ ಸಿದ್ಧಾಂತಗಳನ್ನೊಳಗೊಂಡಿರುವ ಆಕರ ಗ್ರಂಥಗಳೇ ಆಗಿವೆ. 1952 ರಿಂದ 57ರ ವರೆಗಿನ ಅವಧಿ ಜನಸಂಘದ ಶೈಶವ ಕಾಲ ಮಾತ್ರವಾಗಿರದೆ, ಜೀವಂತವಾಗಿ ಉಳಿದುಕೊಂಡಿರುವ ಬಗೆಗಿನ ಅದರ ಅಂತನಿರ್ಹಿತ ಶಕ್ತಿಯನ್ನು ತೋರಿಸಿಕೊಡುವ ಕಾಲವೂ ಆಗಿತ್ತು. ಡಾ. ಮುಖರ್ಜಿ ಅವರ ಅಕಾಲಿಕ ನಿಧನ, ಹಿಂದೂ ಮಹಾಸಭೆ ಮತ್ತು ರಾಮರಾಜ್ಯ ಪರಿಷತ್ತಗಳೊಂದಿಗೆ ವಿಲೀನಗೊಳ್ಳುವ ಪ್ರಶ್ನೆ, ಜನಸಂಘದ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಂಥ ವ್ಯಕ್ತಿಗಳ ಕೊರತೆ, ಅನುಭವವೇನೂ ಇಲ್ಲದೆ ಇದ್ದಂಥ ತರುಣರು ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟಗಳಲ್ಲಿ ನೇತೃತ್ವ ವಹಿಸಿಕೊಂಡಿದ್ದುದು- ಇವೆಲ್ಲ ಎಂಥ ಸಂಗತಿಗಳಾಗಿದ್ದುವೆಂದರೆ ಜನಸಂಘ ಜೀವಂತವಾಗಿ ಉಳಿದಿರಬಲ್ಲುದೇ ಅಥವಾ ಇಲ್ಲವೇ ಎಂಬ ಅನುಮಾನ ಜನರ ಮನಸ್ಸಿನಲ್ಲಿ ಮೂಡಿನಿಲ್ಲುತ್ತಿತ್ತು: ``ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರು ನಿಧನರಾದ ಬಳಿಕ, ಇನ್ನು ಜನಸಂಘ ಕಾರ್ಯಶೀಲವಾಗಿ ಇರಲಾರದು ಎಂಬ ಭಾವನೆ ರಾಜಕೀಯ ಕ್ಷೇತ್ರಗಳಲ್ಲಿ ಮೂಡಿಬಿಟ್ಟಿತ್ತು. ಕಳೆದ ಐದು ವರ್ಷಗಳನ್ನು ನಾವು ಇದೇ ಭಾವನೆಯೊಂದಿಗೆ ಹೋರಾಡುತ್ತ ಕಳೆದಿದ್ದೇವೆ. ಭಾರತೀಯ ಜನಸಂಘ ಜೀವಂತವಾಗಿ ಉಳಿದಿರುವುದಲ್ಲದೆ ಪ್ರಗತಿಯತ್ತ ಸಾಗುತ್ತಿದೆ ಎಂಬುದನ್ನು ಎರಡನೆಯ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳು ತೋರಿಸಿಕೊಟ್ಟಿವೆ. ಹಾಗಾಗಿರದಿದ್ದರೆ, ನಾವು ನಮ್ಮ ನೇತಾರರ ವಿಷಯದಲ್ಲಿ ಸತ್ಯನಿಷ್ಠರಾಗಿರಲು ಸಾಧ್ಯವೇ ಆಗುತ್ತಿರಲಿಲ್ಲ." ಈ ಐದು ವರ್ಷಗಳಲ್ಲಿ ಮೊದಲನೆಯ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತು ಕಾಶ್ಮೀರ ಆಂದೋಲನದ ವಿಷಯದಲ್ಲಿ ವ್ಯಸ್ತರಾಗಿದ್ದರೂ, ದೀನ್‍ದಯಾಳ್ ಉಪಾಧ್ಯಾಯರ ಮತ್ತು ಅವರ ಸಹಚರರ ದೇಶವ್ಯಾಪಿ ಪ್ರವಾಸಗಳಿಂದಾಗಿ ಈ ಸಂಘಟನೆಯ ಒಂದು ಸ್ವರೂಪವೇ ಎದ್ದು ನಿಲ್ಲುವಂತಾಯಿತು. 1957ರಲ್ಲಿ ಜನಸಂಘದ 243 ಮಂಡಲ ಸಮಿತಿಗಳು ಹಾಗೂ 889 ಸ್ಥಳೀಯ ಸಮಿತಿಗಳು ಮಾತ್ರವೇ ಅಸ್ತಿತ್ವಕ್ಕೆ ಬಂದಿದ್ದುವು. ಸದಸ್ಯರ ಸಂಖ್ಯೆ 74, 863 ಮಾತ್ರವಾಗಿತ್ತು. 1952ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಜನಸಂಘಕ್ಕೆ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 3 ಉತ್ಸಾಹದಾಯಕವಾಗಿಯೇನೂ ಇರಲಿಲ್ಲ. ಲೋಕಸಭೆಗೆ ಡಾ. ಮುಖರ್ಜಿಯವರು ಮತ್ತು ಅವರ ಇನ್ನಿಬ್ಬರು ಗೆಳೆಯರು ಮಾತ್ರವೇ ಚುನಾಯಿತರಾಗಿ ಬಂದಿದ್ದರು. ಚುನಾವಣೆಯ ಫಲಿತಾಂಶಗಳ ದೃಷ್ಟಿಯಿಂದ ನೋಡಿದಾಗ ಜನಸಂಘದ ಸಂಘಟನ ಶಕ್ತಿ ಅಷ್ಟೊಂದು ಪರಿಣಾಮಕಾರಿಯಾಗಿಯೇನೂ ಕಾಣಿಸಿಕೊಂಡಿರಲಿಲ್ಲ. ಆದರೆ ಶೇ. 3.06 ರಷ್ಟು ಮತಗಳನ್ನು ಗಳಿಸಿ ಜನಸಂಘ ರಾಷ್ಟ್ರೀಯ ಪಕ್ಷದ ಸ್ಥಾನ ಮಾನವನ್ನು ಪಡೆದುಕೊಂಡಿತ್ತು. ಜನತಂತ್ರದ ವಿಷಯದಲ್ಲಿ ತಮ್ಮ ಕಾರ್ಯಕರ್ತರ ಶ್ರದ್ಧೆ ಮತ್ತು ಉತ್ಸಾಹಗಳನ್ನು ಉಳಿಸಿಕೊಂಡು ಬರುವ ಸಲುವಾಗಿ, ಉಪಾಧ್ಯಾಯರು ಮುಂಬಯಿಯ ಅಧಿವೇಶನದಲ್ಲಿ (ಜನವರಿ 1954) ಮಂಡಿಸಿದ ತಮ್ಮ ವರದಿಯಲ್ಲಿ ಹೀಗೆಂದು ಹೇಳಿದರು: "ಜನತೆಗೆ ರಾಜಕೀಯ ದೃಷ್ಟಿಯಿಂದ ಶಿಕ್ಷಣವನ್ನು ನೀಡಲು ವಯಸ್ಕರ ಮತದಾನದ ಹಕ್ಕು ಒಂದು ಬಹುದೊಡ್ಡ ಸಾಧನವೇ ಆಗಿದೆ. ಜನತಂತ್ರದ ಯಶಸ್ಸಿಗಾಗಿ ನಾವು ಜನತೆಗೆ ಸೂಕ್ತ ಶಿಕ್ಷಣವನ್ನು ನೀಡಬೇಕಾಗಿದೆ. ಸಾವಿರ ವರ್ಷಗಳ ದಾಸ್ಯ ನಮ್ಮ ದೃಷ್ಟಿಕೋನವನ್ನು ಹಾಳುಮಾಡಿಬಿಟ್ಟಿದೆ. ಸಂಕೀರ್ಣತೆ ಮತ್ತು ಸಂಪ್ರದಾಯವಾದಗಳು ಪ್ರಗತಿಯನ್ನು ತಡೆಹಿಡಿದುಬಿಟ್ಟಿವೆ. ಸ್ಪೃಶ್ಯಾಸ್ಪೃಶ್ಯತೆಯ ಭೇದಭಾವಗಳು ಸಮಾಜದ ಬೇರುಗಳನ್ನೇ ಟೊಳ್ಳುಮಾಡಿಬಿಟ್ಟಿವೆ. ಆಂಗ್ಲ ಶಿಕ್ಷಣ ಸುಳ್ಳು ಜೀವನ ಮೌಲ್ಯಗಳನ್ನು ನಮ್ಮ ಬಾಳಿನಲ್ಲಿ ನೆಲೆಗೊಳಿಸಿಬಿಟ್ಟಿದೆ. ಶಿಸ್ತು ಮತ್ತು ಸಂಯಮಗಳ ಕೊರತೆ ಕಾಣಬರುತ್ತಿದೆ. ಕಾಯಕದ ಹಿರಿಮೆ ಕಡಿಮೆಯಾಗಿಬಿಟ್ಟಿದೆ. ನಾಡಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ನಿಜವಾದ ಜೀವನ ಮೌಲ್ಯಗಳನ್ನು ನೆಲೆಗೊಳಿಸಬೇಕಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಹರಡಿಕೊಂಡಿರುವ ವಿಶಾಲ ರಾಷ್ಟ್ರದಲ್ಲಿ ಏಕಾತ್ಮಕತೆಯ ಅನುಭವವನ್ನು, ಭಾವನೆಯನ್ನು ಮೂಡಿಸಬೇಕಾಗಿದೆ. ಜಾಗರೂಕವಾಗಿರುವ ಜನತೆ ನಾಡಿನ ಉಜ್ವಲ ಭವಿಷ್ಯದ ಬಗ್ಗೆ ಖಾತರಿಯನ್ನು ನೀಡುತ್ತದೆ... ಎಲ್ಲ ಕಡೆಗಳ್ಲಲೂ ಹಣಕಾಸಿನ ಕೊರತೆ ಕಂಡುಬರುತ್ತಿದೆ. ಈ ಕೊರತೆಯನ್ನು ಹೊರಗಿನಿಂದ ತುಂಬಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ವತಿಯಿಂದಲೇ ನಾವು ಅದನ್ನು ಒಂದುಗೂಡಿಸಿಕೊಳ್ಳಬೇಕಾಗಿದೆ. ಮಿತವ್ಯಯದೊಂದಿಗೆ ಖರ್ಚು ಮಾಡಬೇಕಾಗಿದೆ. ನಮ್ಮ ಗುರಿಯತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿ ಆತ್ಮವಿಶ್ವಾಸದೊಂದಿಗೆ ಹಾಗೂ ನಿಷ್ಠೆಯೊಂದಿಗೆ ನಾವು ಮುಂದೆ ಹೆಜ್ಜೆ ಹಾಕೋಣ." ತಮ್ಮ ಕಾರ್ಯಕರ್ತರು ಮತ್ತು ಪ್ರತಿನಿಧಿಗಳ ಮುಂದೆ ದೀನ್‍ದಯಾಳ್ ಉಪಾಧ್ಯಾಯರು ಚುನಾವಣೆಯ ಗೆಲುವಿನ ಯಾವುದೇ ಕಿರುದಾರಿಯನ್ನು ಮುಂದಿಡುವುದಕ್ಕೆ ಬದಲಾಗಿ ಮೂಲಗಾಮೀ ಸಿದ್ಧಾಂತಗಳ ಸುದೀರ್ಘ ಮಾರ್ಗದಲ್ಲಿಯೇ ಮುನ್ನಡೆಯುವಂತೆ ಪ್ರೇರಣೆಯನ್ನು ನೀಡಿದರು. ಯಾವುದೇ ಬಗೆಯ ಆವೇಶವನ್ನು ಮೂಡಿಸುವುದಕ್ಕೆ ಬದಲಾಗಿ, ನಿಷ್ಠೆಯನ್ನು ಮೂಡಿಸುವ 4 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪ್ರಯತ್ನ ಮಾಡಿದರು. ಸಾಂಸ್ಕೃತಿಕ ರಾಷ್ಟ್ರವಾದದ ಯಾವ ಕಲ್ಪನೆಯನ್ನು ಜನಸಂಘ ನಾಡಿನ ಮುಂದೆ ಇರಿಸಿತೋ ಅದರ ಪರಿಣಾಮವಾಗಿ ಭಾರತದ ಮಹತ್ವಪೂರ್ಣ ಸಾಂಸ್ಕೃತಿಕ ಕೇಂದ್ರಗಳು ಮೊದಲ ವರ್ಷದಲ್ಲಿಯೇ ಜನಸಂಘಕ್ಕೆ ಉತ್ಸಾಹವರ್ಧಕ ಸ್ವಾಗತವನ್ನು ನೀಡಿದುವು. ಸ್ಥಳೀಯ ನಗರ ಪಾಲಿಕೆಗೆ ಜನಸಂಘದ ಸದಸ್ಯರೇ ಅಧ್ಯಕ್ಷರಾಗಿ ಚುನಾಯಿತರಾಗಿ ಹೊರಬಂದರು. ಉತ್ತರಪ್ರದೇಶವೇ ಸ್ವತಃ ದೀನ್‍ದಯಾಳ್ ಉಪಾಧ್ಯಾಯರ ಪ್ರಾರಂಭಿಕ ಕಾರ್ಯಕ್ಷೇತ್ರವಾಗಿತ್ತು. ಇದರತ್ತ ಕಾರ್ಯಕರ್ತರನ್ನು ಅವರು ವಿಶೇಷ ರೂಪದಲ್ಲಿ ಪ್ರವೃತ್ತರನ್ನಾಗಿಸಿದ್ದರು. ತಮ್ಮ ವರದಿಯಲ್ಲಿ ಅವರು ಹೀಗೆಂದು ಹೇಳಿದರು : "ದೇವರ ದಯೆಯಿಂದ ಅಯೋಧ್ಯಾ, ಮಥುರಾ, ವೃಂದಾವನ, ಗೋಕುಲ, ಬಲದಾಊ, ಹರಿದ್ವಾರ, ಋಷಿಕೇಶ ಮೊದಲಾದ ಪವಿತ್ರ ಕ್ಷೇತ್ರಗಳ್ಲಲಿ ಜನಸಂಘದವರೇ ಅಧ್ಯಕ್ಷರಾಗಿ ಚುನಾಯಿತರಾಗಿ ಬಂದಿದ್ದಾರೆ. ಅಹಿಂಸೆಯ ಡೋಲನ್ನು ಬಾರಿಸದೆಯೇ, ನಮ್ಮ ಅಧ್ಯಕ್ಷರು ಮಥುರಾದಲ್ಲಿ ಗೋವಧೆಯನ್ನು ಮಾತ್ರವಲ್ಲದೆ, ಪಶುವಧೆಯನ್ನು ನಿಲ್ಲಿಸಿಬಿಟ್ಟಿದ್ದಾರೆ. ಪ್ರಾಂತೀಯ ಸರ್ಕಾರಗಳು ನಮ್ಮ ಹಾದಿಗೆ ಅಡೆತಡೆಗಳನ್ನೊಡ್ಡುವುದಾಗಿ ಘೋಷಣೆಯನ್ನು ಹೊರಡಿಸಿವೆಯಾದರೂ, ಜನತಾ ಜನಾರ್ದನರು ಜನಸಂಘದ ಪ್ರತಿನಿಧಿಗಳಿಗೆ ಸೇವೆಯ ಅವಕಾಶವನ್ನು ಒದಗಿಸಿದ್ದಾರೆ. ಅವರು ದೃಢತೆಯೊಂದಿಗೆ ಸೇವೆಯ ಹಾದಿಯಲ್ಲಿ ಮುನ್ನಡೆಯಲಿದ್ದಾರೆ. ಇಲ್ಲವಾದಲ್ಲಿ, ಅಧಿಕಾರದ ಕುರ್ಚಿಯನ್ನು ಒದ್ದು ಹಾಕಿ ಜನತೆಯ ಭುಜದೊಂದಿಗೆ ಭುಜವನ್ನು ಸೇರಿಸಿ, ನಾಗರಿಕ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಹೋರಾಡಲಿದ್ದಾರೆ''. ಉತ್ತರ ಭಾರತದ ಅನೇಕ ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಸಂಘಕ್ಕೆ ಯಶಸ್ಸು ದೊರೆತಿತ್ತು. ಉತ್ತರ ಪ್ರದೇಶದಲ್ಲಿ ಅತ್ಯಂತ ಗಮನಾರ್ಹವಾದ ಯಶಸ್ಸು ದೊರೆತಿದ್ದು, ಅಲ್ಲಿನ ನಗರ ಪಾಲಿಕೆಗಳಲ್ಲಿ 930 ಮಂದಿ ಉಮೇದುವಾರರಾಗಿ ಸ್ಪರ್ಧಿಸಿದ್ದು ಅವರಲ್ಲಿ 581 ಮಂದಿ ಚುನಾಯಿತರಾಗಿದ್ದರು. ಜನಸಂಘದ ಕಾರ್ಯಕರ್ತರು ಈಚೆಗಷ್ಟೇ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಅವರು ವಿರೋಧ ಪಕ್ಷವಾಗಿ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬೇಕಾಗಿತ್ತು. ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಆಡಳಿತ ಪಕ್ಷದೊಂದಿಗೆ ಹೋರಾಡುವುದು ವಿರೋಧಪಕ್ಷದ ಕರ್ತವ್ಯವಾಗಿರುತ್ತದೆ. ಆಗ ವಿರೋಧ ಪಕ್ಷವಾಗಿ ಸಾಮ್ಯವಾದೀ ಪಕ್ಷ ಪ್ರಭಾವ ಬೀರುತ್ತಿತ್ತು. ಅವರ ಆಂದೋಳನದ ರೀತಿ ಹಾಗೂ ದೃಷ್ಟಿಕೋನ ಉಪಾಧ್ಯಾಯರಿಗೆ ಹಿಡಿಸಿರಲಿಲ್ಲ. ಆದ್ದರಿಂದ ಅವರು ತಮ್ಮ ಕಾರ್ಯಕರ್ತರಿಗೆ ಹೀಗೆಂದು ಒತ್ತಾಯಪೂರ್ವಕವಾಗಿ ಹೇಳಿದರು: "ಸಾಮ್ಯವಾದಿ ಪಕ್ಷ ಮುಂತಾದವುಗಳ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 5 ಕಾರ್ಯಕರ್ತರು ಈ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬುದೇನೋ ನಿಜ. ಆದರೆ ಸಮಸ್ಯೆಯನ್ನು ಬಗೆಹರಿಸುವುದು ಅವರ ಉದ್ದೇಶವಾಗಿರದೆ ಅಸಂತೋಷವನ್ನು, ತಿಕ್ಕಾಟವನ್ನು ಉಂಟುಮಾಡುವುದೇ ಅವರ ಗುರಿಯಾಗಿರುತ್ತದೆ. ಅವರ ಆಂದೋಳನದ ಫಲವಾಗಿ ಜನತೆಗೆ ಸಮಾಧಾನವಂತೂ ಉಂಟಾಗುವುದಿಲ್ಲ. ಅವರ ಮನಸ್ಸಿನಲ್ಲಿ ಮತ್ತಷ್ಟು ಕಹಿಯ ಹಾಗೂ ವೈಫಲ್ಯದ ಭಾವನೆ ತುಂಬಿಕೊಳ್ಳುತ್ತದೆ. ದುಃಖದ ಹೊತ್ತಿನಲ್ಲಿ ಜೊತೆಗೆ ನಿಂತಿರುವಂಥ ವ್ಯಕ್ತಿಯೇ ನಿಜವಾದ ಗೆಳೆಯ ಎನ್ನಿಸಿಕೊಳ್ಳುತ್ತಾನೆ. ಅನ್ಯಾಯ ಮತ್ತು ಅತ್ಯಾಚಾರಗಳಿಂದ ಜನತೆಗೆ ವಿಮುಕ್ತಿಯನ್ನು ತಂದುಕೊಂಡುವಂಥವನೇ ದೇವದೂತ ಎನ್ನಿಸಿಕೊಳ್ಳುತ್ತಾನೆ. ಶಕ್ತಿ ಮತ್ತು ಸಂಘಟನೆಗೆ ಅದೇ ಕೀಲಿಕೈಯಾಗಿರುತ್ತದೆ.'' ಈ ರೀತಿ ದೀನ್ ದಯಾಳ್ ಉಪಾಧ್ಯಾಯರು ಈ ಬಗೆಯ ವರದಿಗಳ ಮುಖಾಂತರ ತಮ್ಮ ಕಾರ್ಯಕರ್ತರ ವಿಷಯದಲ್ಲಿ ಅಧ್ಯಾಪಕರ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಸಂಘಟನೆಯ, ಆಂದೋಳನದ ಮತ್ತು ಚುನಾವಣೆಯ ದೃಷ್ಟಿಗಳಿಂದ ಜನಸಂಘದ ಕಾರ್ಯಕರ್ತರು 1957ರ ವರೆಗೂ ದೇಶದಲ್ಲಿ ತಮ್ಮ ಊರ್ಜಸ್ವತೆಯಿಂದ ಕೂಡಿದ ಅಸ್ತಿತ್ವವನ್ನು ಸಾರಿತೋರಿದರು. ಇದರ ಫಲವಾಗಿ 1957ರ ಎರಡನೆಯ ಸಾರ್ವತ್ರಿಕ ಚುನಾವಣೆಗೆ 123 ಮಂದಿ ಲೋಕಸಭೆಯ ಹಾಗೂ 650 ಮಂದಿ ವಿಧಾನಸಭೆಗಳ ಉಮೇದುವಾರರನ್ನು ನಿಲ್ಲಿಸಲು ಜನಸಂಘಕ್ಕೆ ಸಾಧ್ಯವಾಯಿತು. ಇದರಲ್ಲಿ ಲೋಕಸಭೆಗೆ 4 ಮಂದಿ, ವಿಧಾನಸಭೆಗೆ 51 ಮಂದಿ ಚುನಾಯಿತರಾದರು. ಗಳಿಸಿದ ಮತಗಳ ಶೇಕಡಾವಾರು 6 ಆಗಿದ್ದು, ಇದು 1957ರ ಗಳಿಕೆಯೊಂದಿಗೆ ಹೋಲಿಸಿದರೆ ಇಮ್ಮಡಿಯಾಗಿತ್ತು. 1957ರ ಹೊತ್ತಿಗೆ ಜನಸಂಘ ಉತ್ತರ ಭಾರತದಲ್ಲಿ ತೌಲನಿಕವಾಗಿ ಒಳ್ಳೆಯ ಸಂಘಟನೆಯನ್ನು ಏರ್ಪಡಿಸಿಕೊಂಡಿತು. 1958ರ ಅಧಿವೇಶನದ ಯೋಜನೆಯನ್ನೂ ಉಪಾಧ್ಯಾಯರು ಬೆಂಗಳೂರಿನಲ್ಲಿಯೇ ಸಿದ್ಧಪಡಿಸಿದರು. ಇದು ದಕ್ಷಿಣ ಭಾರತದಲ್ಲಿ ಅದರ ಚಟುವಟಿಕೆಗಳನ್ನು ಹರಡುವ ಪ್ರಯತ್ನವೇ ಆಗಿತ್ತು. ಕಾರ್ಯಕರ್ತರಲ್ಲಿ ಅಖಿಲ ಭಾರತೀಯ ದೃಷ್ಟಿಕೋನ ಮೂಡಿಬರುವಂತಾಗಬೇಕೆಂಬುದೇ ಬೆಂಗಳೂರಿನಲ್ಲಿ ಅಧಿವೇಶನವನ್ನು ನಡೆಸುವುದಕ್ಕೆ ಒಂದು ಕಾರಣವಾಗಿತ್ತು. ಉತ್ತರ ಭಾರತದಲ್ಲಿನ ವಾತಾವರಣದಿಂದಾಗಿ ಜನಸಂಘದ ಕಾರ್ಯಕರ್ತರು ಹಿಂದೀ ಭಾಷೆಯನ್ನು ಅತ್ಯುತ್ಸಾಹದಿಂದ ರಾಷ್ಟ್ರೀಯತೆಯೊಂದಿಗೆ ಮತ್ತು ರಾಷ್ಟ್ರ ಭಾಷೆಯೊಂದಿಗೆ ಒಂದುಗೂಡಿಸುತ್ತಿದ್ದರು. ಬೆಂಗಳೂರಿನಲ್ಲಿಯೇ ಏಕೆ ? ಎಂಬುದಕ್ಕೆ ಉತ್ತರವನ್ನು ನೀಡುತ್ತ ಉಪಾಧ್ಯಾಯರು ಹೀಗೆಂದು ಬರೆದಿದ್ದಾರೆ: ``ಅಧಿವೇಶನದ ಬಳಿಕ ಪಂಜಾಬಿನ ಕೆಲವು ಪ್ರತಿನಿಧಿಗಳು ಹೀಗೆಂದು ಹೇಳಿದರು, ದಕ್ಷಿಣದ ಈ ಪ್ರವಾಸ ಅಖಿಲ ಭಾರತೀಯ ಭಾಷೆಯ ಅಥವಾ ಆಡಳಿತ ಭಾಷೆಯ 6 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರೂಪದಲ್ಲಿ ಹಿಂದಿಯನ್ನು ಜಾರಿಗೆ ಕೊಡುವ ಹುಚ್ಚಾಟಕ್ಕೆ ಅಂಕುಶವನ್ನು ಹಾಕಿರುವಂತೆಯೇ, ದಕ್ಷಿಣಭಾರತದಲ್ಲಿ ಹಿಂದಿಯ ವಿರೋಧದ ಬಗೆಗಿನ ಅತಿರಂಜಿತವಾದ ಸುದ್ದಿಗಳನ್ನು ಕೇಳಿದ್ದರಿಂದ ಉಂಟಾಗಿದ್ದ ಚಿಂತೆಗೂ ಮಂಗವಳನ್ನು ಹಾಡಿಬಿಟ್ಟಿದೆ. ಬೆಂಗಳೂರು ಅಧಿವೇಶನದಲ್ಲಿ ಮಂಡಿಸಿದ ತಮ್ಮ ವರದಿಯಲ್ಲಿ ಉಪಾಧ್ಯಾಯರು ತಮ್ಮ ಪಕ್ಷದ ವಿಕಾಸದ ಪ್ರಕ್ರಿಯೆಗೆ ಅಗತ್ಯವಾದ ವಿಚಾರಗಳನ್ನು ಕ್ರಮವಾಗಿ ಪ್ರತಿಪಾದಿಸಿದ್ದಾರೆ. ಸರ್ವವೇದಿಕೆಯಾದ ಅಥವಾ ರಾಷ್ಟ್ರೀಯ ವಿಚಾರಗಳೊಂದಿಗೆ ಜನಸಂಘದ ಕಾರ್ಯಕರ್ತರಿಗೆ ಸಹಜವಾದ ಭಾವನಾತ್ಮಕ ಒಲವು ಇದ್ದೇ ಇತ್ತು. ಗೋಹತ್ಯೆ ನಿಷೇಧ, ಅಖಂಡ ಭಾರತ, ಕಾಶ್ಮೀರ ಮತ್ತು ಬೇರೂಬಾಡಿ ಮೊದಲಾದ ಪ್ರಶ್ನೆಗಳು ಕಾರ್ಯಕರ್ತರನ್ನು ರಂಜಿಸುತ್ತಿದ್ದುವಲ್ಲದೆ ಉತ್ಸಾಹಿಸುತ್ತಲೂ ಇದ್ದುವು. ಆದರೆ ಸಂಘಟನೆಯನ್ನು ಸ್ಥಳೀಯ ಜನಸಮುದಾಯದಲ್ಲಿ ನೆಲೆಗೊಳಿಸುವ ವಿಚಾರದಲ್ಲಿ ಈ ಸಂಗತಿಗಳಿಗೆ ತಮ್ಮದೇ ಆದ ಸೀಮಿತಗಳಿದ್ದುವು. ಹೀಗಾಗಿ, ಅವರು ಕಾರ್ಯಕರ್ತರಿಗೆ ಈ ರೀತಿ ನಿರ್ದೇಶನ ನೀಡಿದರು: ``ಯಾವುದೇ ರಾಜಕೀಯ ಪಕ್ಷ ರಾಷ್ಟ್ರೀಯ ಪ್ರಜೆಗಳನ್ನು ತನ್ನ ಆಂದೋಳನದ ಪರಿಧಿಯಿಂದ ಹೊರಗೆ ಇರಿಸಲಾರದು. ಆದರೆ ನಾವು ಸ್ಥಳೀಯ ಸಮಸ್ಯೆಗಳತ್ತಲೂ ಹೆಚ್ಚಿನ ಗಮನ ಕೊಡಬೇಕಾಗತ್ತದೆ.'' ಪ್ರಜಾತಂತ್ರದ ಆಂದೋಳನದ ಶಾಸ್ತ್ರವನ್ನು ಮನಗಾಣಿಸುತ್ತಾ ಅವರು ಹೀಗೆಂದಿದ್ದಾರೆ: ಪ್ರಜಾತಂತ್ರದಲ್ಲಿ ಆಯೋಗವನ್ನು ನಡೆಸುವುದೆಂದರೆ ಯುದ್ಧವನ್ನು ಸಾರುವುದಲ್ಲ, ಕ್ರಾಂತಿಯನ್ನು ಸಾರುವುದಲ್ಲ; ಅದು ಜನರ ಭಾವನೆಗಳನ್ನು ಪ್ರಕಟಿಸುವ ವಿಧಾನವಾಗಿರುತ್ತದೆ. ಆಡಳಿತದ ದಮನಕಾರಿ ನೀತಿಯಿಂದಾಗಿ ಜನತೆ ಮತ್ತು ಆಡಳಿತ ವ್ಯವಸ್ಥೆಯ ನಡುವೆ ಏರ್ಪಡುವ ಕಂದಕ ವಿರೋಧ ಪಕ್ಷಗಳಿಗೆ ಕ್ಷಣಿಕ ಲಾಭವನ್ನು ಉಂಟುಮಾಡಬಹುದು. ಆದರೆ, ಅದರಿಂದ ದೇಶಕ್ಕೆ ಒಳತೇನೂ ಉಂಟಾಗುವುದಿಲ್ಲ. ಆಡಳಿತ ವ್ಯವಸ್ಥೆ ಜನರ ಬೇಡಿಕೆಗಳಿಗೆ ಕಿವುಡಾಗಿ ಬಿಟ್ಟರೆ ಜನರು ಬೇಜವಾಬ್ದಾರರಾಗಿ ಬಿಡುತ್ತಾರೆ. ಕೆಲವು ರಾಜಕೀಯ ಪಕ್ಷಗಳು ಜನರಲ್ಲಿ ಈ ಬೇಜವಾಬ್ದಾರಿತನದ ಭಾವನೆಯನ್ನು ಬೆಳೆಸುವ ಕಾರ್ಯಕ್ರಮವನ್ನೇ ಕೈಗೆತ್ತಿಕೊಂಡು ಸಾಗುತ್ತಿವೆ. ನಾವು ಈ ಸಂದರ್ಭದಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಹಾಗೂ ಎಲ್ಲ ಪಕ್ಷಗಳು ಮತ್ತು ಆಡಳಿತ ವ್ಯವಸ್ಥೆ ಪರಂಪರೆಗಳನ್ನು ಹಾಕಿಕೊಡಬೇಕು ಹಾಗೂ ಇತಿಮಿತಿಗಳನ್ನು ಗೊತ್ತುಪಡಿಸಿಕೊಳ್ಳಬೇಕು. "ಒಳ್ಳೆಯ ರಾಜಕೀಯ ಕಾರ್ಯಕರ್ತನಲ್ಲಿ ರಾಜಕೀಯದ ಸಕಾರಾತ್ಮಕ ಸಾಮರ್ಥ್ಯ ಇರುವುದು ಅಗತ್ಯವಾಗುತ್ತದೆ. ವಿಕಾಸೋನ್ಮುಖಿಯಾದ ಯಾವುದೇ ಪಕ್ಷವೂ ಆಡಳಿತದ ಹೊಣೆಗಾರಿಕೆಯನ್ನು ನಿರ್ವಹಿಸಲು ತನ್ನನ್ನು ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 7 ಸನ್ನದ್ಧವಾಗಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಆಡಳಿತ ವಿಷಯಕ ಪ್ರಕ್ರಿಯೆಗಳ ಹಾಗೂ ಕಾನೂನಿನ ಪರಿಜ್ಞಾನ ಪಕ್ಷದ ಕಾರ್ಯಕರ್ತನಿಗೆ ಇರಬೇಕಾಗುತ್ತದೆ. ಆಡಳಿತದ ನೀತಿಗಳು ಜನತೆಯಲ್ಲಿ ಉಂಟುಮಾಡುವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದು ಹಾಗೂ ಅದನ್ನು ಪ್ರತಿನಿಧಿಸುವುದು ಹಾಗೂ ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದು ಅಗತ್ಯವಾಗಿರುವಂತೆಯೇ ಆಡಳಿತ ವ್ಯವಸ್ಥೆಯ ಕ್ಲೇಶಗಳನ್ನು ಅರ್ಥಮಾಡಿಕೊಳ್ಳುವುದು, ಅವುಗಳ ಬಗ್ಗೆ ಸಹಾನುಭೂತಿ ಪರವಾದ ಹಾಗೂ ರಚನಾತ್ಮಕವಾದ ದೃಷ್ಟಿಕೋನವನ್ನು ತಳೆದು ಪರಿಹಾರಗಳನ್ನು ಕಂಡುಕೊಳ್ಳುವುದೂ ಅಗತ್ಯವಾಗುತ್ತದೆ. ಈ ಕಾರಣದಿಂದಾಗಿ ನಾವು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ. ಆಡಳಿತ ವ್ಯವಸ್ಥೆಯ ದೃಷ್ಟಿಕೋನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಾವು ಸತತವಾಗಿ ಪ್ರಯತ್ನಿಸುತ್ತ ಇರಬೇಕಾಗುತ್ತದೆ. ರಾಷ್ಟ್ರೀಯ ಅಖಂಡತೆ ಮತ್ತು ಯುದ್ಧ ಸಂಬಂಧಿ ಸುರಕ್ಷತೆ ಇವು ಜನಸಂಘಕ್ಕೆ ಪ್ರಿಯವಾದ ವಿಷಯಗಳೇ ಆಗಿದ್ದುವು. ಪಾಕಿಸ್ತಾನದ ಬಗ್ಗೆ ಅವರ ದೃಷ್ಟಿಕೋನ ಇತರ ಪಕ್ಷಗಳಿಗಿಂತಲೂ ಭಿನ್ನವಾದುದೇ ಆಗಿತ್ತು. ಅವರು ಹೀಗೆಂದು ಹೇಳಿದ್ದರು: "ಆಕ್ರಮಣವನ್ನೆಸಗುವ ಪಾಕೀಸ್ತಾನದ ಉದ್ದೇಶ ಸ್ಪಷ್ಟವಾಗಿಯೇ ಇದೆ. ಅದು ಭಾರತದ ಗಡಿಯ ಮೇಲೆ ನಡೆಸುವ ಆಕ್ರಮಣ ಭಾರತದ ಪ್ರಭುತ್ವಕ್ಕೆ ಸವಾಲೇ ಆಗಿದೆ ಹಾಗೂ ಗೌರವಕ್ಕೆ ಧಕ್ಕೆ ತರುವಂಥದೂ ಆಗಿದೆ. ಜನಸಂಘವನ್ನು ಬಿಟ್ಟು ಬೇರೆ ಯಾವ ಪಕ್ಷವೂ ಈ ಪ್ರಶ್ನೆಯ ಬಗ್ಗೆ ಬಾಯಿಬಿಡುತ್ತಲೇ ಇಲ್ಲ. ಪಾಕೀಸ್ತಾನದ ಬೆಂಬಲಿಗರಾಗಿರುವ ಮುಸಲ್ಮಾನರು ಚುನಾವಣೆಗಳಲ್ಲಿ ತಮಗೆ ಬೆಂಬಲ ನೀಡದೆ ಹೋಗಬಹುದೆಂದು ಭಯ ಆ ಪಕ್ಷಗಳಿಗೆ ಇದೆ. ಪಾಕೀಸ್ತಾನದ ವಿಷಯದಲ್ಲಿ ಮಾತ್ರವಲ್ಲ, ಮುಸ್ಲಿಮರ ಕೋಮುವಾದೀ, ವಿಸ್ಫೋಟಕ ತತ್ತ್ವಗಳ ಪಂಚಮಸ್ವರೂಪದ ಕಾರ್ಯಚಟುವಟಿಕೆಗಳ ವಿಷಯದಲ್ಲಿಯೂ ಅವು ಮೌನವಾಗಿದ್ದುಬಿಡುತ್ತವೆ. ಇದು ಪಕ್ಷನಿಷ್ಠ ಸ್ವಾರ್ಥಕ್ಕಾಗಿ ರಾಷ್ಟ್ರದ ಹಿತವನ್ನು ಬಲಿಗೊಡುವ ನಿಂದ್ಯವಾದ ಉದಾಹರಣೆಯೇ ಆಗಿದೆ.'' ತಮ್ಮ ವರದಿಗಳ ಮೂಲಕ, ವರ್ಷವಿಡೀ ನಡೆಸುವ ಕಾರ್ಯಕ್ರಮಗಳಲ್ಲಿ ಹೊಸ ಹೊಸ ವಿಚಾರಗಳ ಸಂಘಟನೆಯಲ್ಲಿ ಸೇರಿಕೊಳ್ಳುವಂತೆ ಮಾಡುತ್ತಿದ್ದರು ಎಂಬುದೂ ಉಲ್ಲೇಖನೀಯವಾದ ಸಂಗತಿಯೇ ಆಗಿದೆ. 1957ರ ಚುನಾವಣೆಗಳಲ್ಲಿ ಜನಸಂಘ ಅನೇಕ ಪ್ರದೇಶಗಳ ವಿಧಾನ ಮಂಡಲಗಳಿಗೆ ತನ್ನ ಸದಸ್ಯರನ್ನು ಆಯ್ದು ಕಳುಹಿಸಿತ್ತು. 1962ರ ಚುನಾವಣೆಗಳಲ್ಲಿ ಈ ಸಂಖ್ಯೆ ಹೆಚ್ಚಲಿತ್ತು. ಶಾಸಕರ ನಡೆನುಡಿಗಳು ಪ್ರಜಾತಂತ್ರದ ಹಿರಿಮೆ ಗರಿಮೆಗಳಿಗೆ ಹೊಂದುವಂತೆ ಇರಬೇಕಾಗಿತ್ತು. ಶಾಸಕರಾಗಿ ಸಮರ್ಥ ರೀತಿಯಲ್ಲಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗಿತ್ತು. ಇದಕ್ಕಾಗಿ ಅವರಿಗೆ ತರಬೇತಿಯನ್ನು ನೀಡುವುದು ಹಾಗೂ ನೀತಿ-ಸಂಹಿತೆಯನ್ನು 8 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಗೊತ್ತುಪಡಿಸುವುದು ಅಗತ್ಯವಾಗಿತ್ತು. ಹೀಗಾಗಿ ಜೂನ್ 28 ರಿಂದ ಜುಲೈ 7ರ ವರೆಗೆ ಶಾಸಕರ ಮತ್ತು ಪ್ರತಿನಿಧಿಗಳ ಸಭೆಯ ಒಂದು ಸ್ವಾಧ್ಯಾಯ ಶಿಬಿರವನ್ನು ಪುಣೆಯಲ್ಲಿ ಆಯೋಜಿಸಲಾಯಿತು. ಜನವರಿ 1960ರಲ್ಲಿ ನಾಗಪುರದಲ್ಲಿ ನಡೆಸಲಾದ ಎಂಟನೆಯ ವಾರ್ಷಿಕ ಅಧಿವೇಶದನಲ್ಲಿ ಈ ಶಿಬಿರದ ಬಗೆಗಿನ ವರದಿಯನ್ನು ಮಂಡಿಸುತ್ತ ಉಪಾಧ್ಯಾಯರು ಹೀಗೆಂದು ಹೇಳಿದ್ದರು: "ಜನಸಂಘದ ಸಂಘಟನೆಯ ಮೂಲ ಆಧಾರ ಸೈದ್ಧಾಂತಿಕವಾಗಿರುವುದರಿಂದ ಈ ಬಗೆಯ ಶಿಬಿರಗಳು ಹಾಗೂ ಸ್ವಾಧ್ಯಾಯ ಮಂಡಳಿಗಳು ತುಂಬ ಅಗತ್ಯವಾಗುತ್ತವೆ. ಇದು ಇಲ್ಲವಾದಲ್ಲಿ, ನಾವು ಇತರ ಪಕ್ಷಗಳಿಗಿಂತ ಭಿನ್ನವಾದ ನಮ್ಮ ವೈಶಿಷ್ಟ್ಯವನ್ನು ಮೆರೆಸಲು ಸಾಧ್ಯವಾಗುವುದಿಲ್ಲ." ಪುಣೆಯಲ್ಲಿ ನಿರ್ಧರಿಸಲಾಗಿದ್ದ ಶಾಸಕರ ನೀತಿಸಂಹಿತೆಯ ವಿಷಯಗಳು ಇಂತಿದ್ದುವು: ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ದೃಷ್ಟಿಯಿಂದ ನಡೆಸಲಾಗುವ ಸಭಾತ್ಯಾಗ ಹಾಗೂ ಅರಚಾಟ-ಕಿರುಚಾಟಗಳನ್ನು ಜನಸಂಘ ಸರಿಯೆಂದು ಒಪ್ಪುವುದಿಲ್ಲ. ನಮ್ಮ ಸದಸ್ಯರು ಈ ಪ್ರವೃತ್ತಿಯಿಂದ ದೂರ ಉಳಿದಿರಬೇಕೆಂದೂ, ರಾಜ್ಯಪಾಲರ ಮತ್ತು ರಾಷ್ಟ್ರಪತಿಗಳ ಭಾಷಣದ ಸಂದರ್ಭದಲ್ಲಿ ಈ ಬಗೆಯ ಕಾರ್ಯಚಟುವಟಿಕೆಗಳ ಮೂಲಕ ವಿರೋಧನ್ನು ವ್ಯಕ್ತಪಡಿಸಲು ಹೋಗಬಾರದೆಂದು ನಾವು ನಿರ್ಧರಿಸಿದ್ದೇವೆ. ಪ್ರಜಾತಂತ್ರದ ಬಗೆಗಿನ ನಿಷ್ಠೆ ಎಂದರೆ ಸಂಸದೀಯ ಕಾರ್ಯವಿಧಾನದ ಪರಂಪರೆಗಳನ್ನು ನಿಷ್ಠೆಯೊಂದಿಗೆ ಪಾಲಿಸಿಕೊಂಡು ಬರಬೇಕು ಎಂಬುದೇ ಆಗಿರುತ್ತದೆ. ಈ ಪರಂಪರೆಗಳನ್ನು ಪಾಲಿಸಿಕೊಂಡು ಬರದೇ ಇದ್ದಲ್ಲಿ ಪ್ರಜಾತಂತ್ರ ಮುನ್ನಡೆಯಲಾರದು. ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದೊಂದಿಗೆ ಜನಸಂಘ ಹೋರಾಟವನ್ನು ನಡೆಸಿಕೊಂಡು ಬರುತ್ತಿತ್ತು. ಇದಕ್ಕಿಂತ ಮಿಗಿಲಾಗಿ ಸಾಮ್ಯವಾದೀ ಪಕ್ಷದ ಧ್ಯೇಯ- ಧೋರಣೆಗಳು ನಾಡಿಗೆ ಅಪಾಯಕಾರಿಯಾಗಿವೆ ಎಂದು ಜನಸಂಘ ಭಾವಿಸುತ್ತಿತ್ತು. ಸಾಮ್ಯವಾದಿಗಳ ಪ್ರಭಾವವನ್ನು ಎದುರಿಸಿ ನಿಲ್ಲಬೇಕೆಂದು ಉಪಾಧ್ಯಾಯರು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಅವರ ಸಂಘಟನೆಯ ಬೇರುಗಳನ್ನು ಅಲುಗಾಡಿಸಬೇಕಾದರೆ ನಾವು ಸಮಾಜದೊಳಗೆ ಇಳಿಯಬೇಕಾಗುತ್ತದೆ. ಜಾತಿ, ಪ್ರಾಂತ್ಯ ಮತ್ತು ಹೊಟ್ಟೆ-ಬಟ್ಟೆಯ ವಿಚಾರಗಳನ್ನು ಮಾತ್ರವೇ ಅರ್ಥಮಾಡಿಕೊಳ್ಳಬಲ್ಲಂಥ ಜನರನ್ನು ನಮ್ಮೊಡನೆ ಕರೆದೊಯ್ಯುತ್ತ, ಅವರಿಗೆ ರಾಷ್ಟ್ರ ಮತ್ತು ಧರ್ಮದ ನಿಜವಾದ ಅರ್ಥವೇನೆಂಬುದನ್ನು ತಿಳಿಯ ಹೇಳಬೇಕು. ಇದೇ ವರ್ಷ (1959) ಸ್ವತಂತ್ರ ಪಕ್ಷ ಸ್ಥಾಪನೆಗೊಂಡಿತು. ವಿವಿಧ ಪಕ್ಷಗಳನ್ನು, ರಾಜ-ಮಹಾರಾಜರುಗಳನ್ನು, ಜಮೀನುದಾರರನ್ನು, ಬಂಡವಾಳಶಾಹಿಗಳನ್ನು ಮತ್ತು ಪಕ್ಷಾಂತರ ಪ್ರವೃತ್ತಿಯವರನ್ನು ಸ್ವತಂತ್ರ ಪಕ್ಷ ಸ್ವಾಗತಿಸಿತು. ಇದರ ಪರಿಣಾಮವಾಗಿ ಅದು ಹುಟ್ಟಿನಿಂದಲೇ ಪ್ರಭಾವಶಾಲೀ ವ್ಯಕ್ತಿಗಳನ್ನು ಒಳಗೊಂಡಿರುವ ರಾಜಕೀಯ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 9 ಪಕ್ಷವೆಂಬುದಾಗಿ ತೋರತೊಡಗಿತು. ಈ ಬಗೆಯ ಕಿರುಹಾದಿಯ ಮೂಲಕ ಪ್ರಭಾವ ಬೀರಲು ಯತ್ನಿಸುವಂಥ ರಾಜಕೀಯ ಪ್ರವೃತ್ತಿಯ ಅಪಾಯಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಾ ದೀನ್ ದಯಾಳ್ ಉಪಾಧ್ಯಾಯರು ಹೀಗೆಂದು ಹೇಳಿದ್ದಾರೆ: ``ಒಂದು ಪಕ್ಷವಾಗಿ ನಾವು ಹೆಚ್ಚು ಸಂಘಟಿತವೂ, ಶಿಸ್ತುಬದ್ಧವೂ ಆಗಿರಬೇಕಾಗಿದೆ. ಶಿಸ್ತು-ಉಲ್ಲಂಘನೆಯ ಒಂದೇ ಒಂದು ಪ್ರಸಂಗವೂ ನಮ್ಮ ಸಂಘಟನೆಯನ್ನು ದುರ್ಬಲಗೊಳಿಸಿಬಿಡುತ್ತದೆ. ಜನರ ಮನಸ್ಸಿನಲ್ಲಿ ಜುಗುಪ್ಸೆಯನ್ನು ಉಂಟುಮಾಡಿಬಿಡಬಹುದು. ನಾವು ಸ್ವತಃ ಶಿಸ್ತುಬದ್ಧರಾಗಿದ್ದಲ್ಲಿ ಮಾತ್ರವೇ ಜನರನ್ನು ಶಿಸ್ತುಪ್ರಿಯರನ್ನಾಗಿಸಬಲ್ಲೆವು. ಇಂದು ಸಿದ್ಧಾಂತ ಮತ್ತು ಪಕ್ಷಗಳ ಜೊತೆಗೇ ವ್ಯಕ್ತಿಗಳ ವಿಷಯದಲ್ಲಿಯೂ ಜನರು ನಂಬಿಕೆಯನ್ನು ಇರಿಸಿಕೊಳ್ಳಬೇಕಾಗಿದೆ. ದಿನವೂ ಪಕ್ಷವನ್ನು ಬದಲಿಸುವಂಥ ವ್ಯಕ್ತಿಗಳು ಪ್ರಜಾತಂತ್ರ ವ್ಯವಸ್ಥೆಯ ವಿಷಯದಲ್ಲಿ ಜುಗುಪ್ಸೆಯನ್ನು ಉಂಟುಮಾಡುತ್ತಿದ್ದಾರೆ. ಅವರ ಕಾರ್ಯಚಟುವಟಿಕೆಗಳ ಕೇಂದ್ರ ಬಿಂದು ಸಮಾಜವಾಗಿರದೆ, ಸ್ವಾರ್ಥ ಮಾತ್ರವಾಗಿಬಿಟ್ಟಿದೆ... ಈ ವಿಶ್ವಾಸಘಾತದಿಂದಾಗಿ ಅದಕ್ಕೆ (ಅಂದರೆ ಸಮಾಜಕ್ಕೆ) ಭಾರಿ ಧಕ್ಕೆಯೇ ಉಂಟಾಗಿಬಿಟ್ಟಿದೆ. ಈ ವಿಶ್ವಾಸವನ್ನು ದೃಢಪಡಿಸುವ ಸಲುವಾಗಿ, ನಾವು ತ್ಯಾಗ ಮತ್ತು ಪರಿಶ್ರಮ ಪೂರ್ವಕವಾಗಿ ಸಮಾಜಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ.'' ತಮ್ಮ ವಿಚಾರಧಾರೆಯ ಪ್ರತಿಪಾದನೆಗಾಗಿ ಉಪಾಧ್ಯಾಯರು ಒಂದು ಘೋಷಣ ಮಾಲಿಕೆಯನ್ನೇ ಮುಂದಿರಿಸಿದ್ದರು: ``ನಾಡಿನ ಸೈನಿಕೀಕರಣಕ್ಕಾಗಿ, ಜನತೆಯ ರಾಷ್ಟ್ರೀಯಕರಣಕ್ಕಾಗಿ, ಪ್ರಭುತ್ವದ ಪ್ರಜಾತಾಂತ್ರೀಕರಣಕ್ಕಾಗಿ ಹಾಗೂ ಪ್ರಜಾತಂತ್ರದ ವಿಕೇಂದ್ರೀಕರಣಕ್ಕಾಗಿ ಜನಸಂಘ ಕಾರ್ಯೋನ್ಮುಖವಾಗಬೇಕಾಗಿದೆ. ನಮ್ಮ ಮಾತಿನ ಕಡೆ ಯಾರೂ ಗಮನ ಹರಿಸದಂತೆ ಇರಕೂಡದು ಎನ್ನುವುದಾದರೆ, ನಾವು ನಮ್ಮನ್ನು ಅಷ್ಟರ ಮಟ್ಟಿಗೆ ಪ್ರಭಾವಶಾಲಿಗಳನ್ನಾಗಿಸಿಕೊಳ್ಳಬೇಕು. ಸತ್ಯದ ಜೊತೆಗೆ ಶಕ್ತಿ ಕೂಡಿ ನಡೆಯಬೇಕು.'' ಉಪಾಧ್ಯಾಯರು ತಮ್ಮ ವರದಿಗಳನ್ನು ಸಾಕಷ್ಟು ಭಾವಪೂರ್ಣವೂ, ಪ್ರೇರಕವೂ, ಆಗಿರುವಂಥ ಶಬ್ದಗಳೊಂದಿಗೆ ಸಮಾಪನಗೊಳಿಸುತ್ತಿದ್ದರು. 1962ರಲ್ಲಿ ಮೂರನೆಯ ಸಾರ್ವತ್ರಿಕ ಚುನಾವಣೆ ನಡೆಯಿತು. ಭಾರತದ ರಾಜಕಾರಣದಲ್ಲಿ ಜವಾಹರಲಾಲ್ ನೆಹರೂ ಅವರ ಮಾಂತ್ರಿಕ ಪ್ರಭಾವ ಕ್ರಮೇಣ ಕಮ್ಮಿಯಾಗತೊಡಗಿತ್ತು. ಪಾಕೀಸ್ತಾನ ಮತ್ತು ಚೀನಾದ ವಿಷಯದಲ್ಲಿ ಭಾರತೀಯ ಜನಸಂಘಗಳ ಹಿಂದಿನಿಂದಲೇ ಜನತೆಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿತ್ತು. ಚೀಣೀ ಆಕ್ರಮಣದ ತರುವಾಯ ನಾಡಿನ ಜನರು ಜನಸಂಘದ ಎಚ್ಚರಿಕೆಯ ಮಾತುಗಳನ್ನು ಗಂಭೀರವಾಗಿ ಪರಿಣಗಿಸತೊಡಗಿದರು. ಅತ್ತ ಕಾಂಗ್ರೆಸ್ ಪಕ್ಷದ 10 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮೇಲಿನ ನೆಹರೂ ಅವರ ಹಿಡಿತ ಸಡಿಲಗೊಳ್ಳುತ್ತ ಬಂದಿದ್ದುದರಿಂದ, ಶಿಸ್ತಿನ ಕೊರತೆ ಹಾಗೂ ಗುಂಪುಗಾರಿಕೆ ಹೆಚ್ಚತೊಡಗಿತ್ತು. ವಿರೋಧ ಪಕ್ಷಗಳು ಕಾಂಗ್ರೆಸ್ ಪಕ್ಷ ಒಡೆದು ಛಿದ್ರವಾಗುವುದನ್ನೇ ಎದುರುನೋಡುತ್ತಿದ್ದುವು. ಕಾಂಗ್ರೆಸ್ ಪಕ್ಷ ಒಡೆದು ಹೋಗುವುದು ಹೊರನೋಟಕ್ಕೆ ವಿರೋಧಪಕ್ಷಗಳಿಗೆ ಲಾಭವನ್ನುಂಟುಮಾಡುವಂತೆ ತೋರುತ್ತಿತ್ತು. ಆದರೆ ಇದು ನಾಡಿಗೆ ಹಿತಕಾರಿಯಾಗುವಂಥದಲ್ಲ ಎಂದು ಉಪಾಧ್ಯಾಯರು ಭಾವಿಸಿದರು. ಛಿದ್ರವಾದ ಕಾಂಗ್ರೆಸ್ ಪಕ್ಷವನ್ನು ದೂರಸರಿಸಿ, ಅಧಿಕಾರದ ಗದ್ದುಗೆಯನ್ನೇರುವ ಮನೋಭಾವ ನಕಾರಾತ್ಮಕವಾಗಿರುವಂಥದು. ಪಕ್ಷಗಳ ಆಂತರಿಕ ಛಿದ್ರತೆ ಮತ್ತು ಶಿಸ್ತುಹೀನತೆ, ಅದು ಯಾವುದೇ ಪಕ್ಷದ ವಿಷಯದಲ್ಲಾದರೂ ಸರಿ, ಪ್ರಜಾತಂತ್ರದ ರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುವಂಥದೇ ಆಗಿರುತ್ತದೆ. ತಮ್ಮ ವಿಧಾಯಕ ಪ್ರಯತ್ನಗಳ ಮೂಲಕವೇ ಸಮರ್ಥವೂ, ಸಕ್ಷಮವೂ ಆಗಿರುವಂಥ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಂತಾಗಬೇಕು ಎಂಬುದು ದೀನ್ ದಯಾಳ್ ಉಪಾಧ್ಯಾಯರ ಆಶಯವಾಗಿತ್ತು. ಇದಕ್ಕಾಗಿ ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆಯನ್ನು ನೀಡುತ್ತಾ ಅವರು ಹೀಗೆಂದಿದ್ದರು : "ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ತುಂಬ ಗಂಭೀರವಾಗುತ್ತ ಬರುತ್ತಿದೆ. 1962ರ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರತಿಯೊಂದು ಗುಂಪೂ ತನ್ನದೇ ಆದ ಪಟ್ಟುಗಳನ್ನು ಹಾಕತೊಡಗಿದೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ಟಿಕೆಟ್ ನೀಡಿಕೆಯ ಪ್ರಶ್ನೆಯನ್ನೆತ್ತಿಕೊಂಡು ಬಹಳಷ್ಟು ಜನರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಹೊರಬರಲಿದ್ದಾರೆ ಎಂಬುದು ಖಂಡಿತ. ಕಾಂಗ್ರೆಸ್ ಪಕ್ಷದಿಂದ ಹೊರ ಬಂದ ಈ ಜನಗಳ ನೆರವಿನಿಂದ ತಮ್ಮ ರಾಜಕೀಯ ನೌಕೆಯನ್ನು ದಡಕ್ಕೆ ಕೊಂಡೊಯ್ಯುವ ನೀತಿಯನ್ನು ತಮ್ಮದಾಗಿಸಿಕೊಂಡಿರುವ ಪಕ್ಷಗಳು ಈ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತ ಇವೆ. ಆದರೆ ನಾವು ನಮ್ಮ ಸಂಘಟನೆಯನ್ನು ಬಲಪಡಿಸಿಕೊಂಡು, ಸಮಾಜದೊಂದಿಗೆ ನಿಕಟವಾದ ಸಂಪರ್ಕವನ್ನು ಏರ್ಪಡಿಸಿಕೊಳ್ಳಬೇಕಾಗಿದೆ.'' ಈ ಉದ್ದೇಶದಿಂದ ಉಪಾಧ್ಯಾಯರು ತಮ್ಮ ವರದಿಯಲ್ಲಿ ವ್ಯಾವಹಾರಿಕ ಯೋಜನೆಯನ್ನು ರೂಪಿಸಿಕೊಟ್ಟಿದ್ದರು. ಜನಸಂಘ ರೂಪುದಳೆದದ್ದು 1952ರಲ್ಲಿ. ಅದು ನಾಡಿನ ರಾಜಕೀಯ ಜೀವನದಲ್ಲಿ ತನ್ನ ಅಸ್ಮಿತೆಯನ್ನು ಗಂಭೀರವಾಗಿಯೇ ಉದ್ಘೋಷಿಸಿತು. 1962ರಲ್ಲಿ ಅದು ನಾಡಿನ ಸಮರ್ಥ ರಾಜಕೀಯ ಪಕ್ಷವಾಗಿ ಬೆಳದುನಿಂತಿತು. 1962ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಮಾಡಿ ಸೋಲಿಸುವ ಸಲುವಾಗಿ ಕಾಂಗ್ರೆಸ್ಸೇತರ ಒಕ್ಕೂಟ, ತನ್ನ ದನಿಯನ್ನು ಜೋರಾಗಿಯೇ ಮೊಳಗಿಸತೊಡಗಿತ್ತು. ಉಪಾಧ್ಯಾಯರಿಗೆ ಇದು ಒಪ್ಪಿಗೆಯಾಗಿರಲಿಲ್ಲ. ವಾರಾಣಸಿಯಲ್ಲಿ 1961ರ ನವೆಂಬರ್ 14ರ ನಡೆದ ಭಾರತೀಯ ಪ್ರತಿನಿಧಿ ಸಭೆಯ ಅಧಿವೇಶನದಲ್ಲಿ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 11 ಹಾಗೂ ತನ್ನ ಹಿಂದಿನ ಅಧಿವೇಶನದಲ್ಲಿ ಮೂರನೆಯ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಈ ರೀತಿ ತೀರ್ಮಾನವನ್ನು ಕೈಗೊಂಡಿತ್ತು.... ``ನಾವು ಆದಷ್ಟು ಹೆಚ್ಚು ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸೋಣ. ಇತರ ಪಕ್ಷಗಳೊಂದಿಗೆ ಯಾವುದೇ ಬಗೆಯ ಚುನಾವಣೆ ಒಪ್ಪಂದವನ್ನಾಗಲೀ, ಸಂಯುಕ್ತ ರಂಗವನ್ನಾಗಲೀ ಏರ್ಪಡಿಸಿಕೊಳ್ಳದೆ, ನಮ್ಮ ಕಾರ್ಯಕ್ರಮಗಳ ಮತ್ತು ನೀತಿಗಳ ಆಧಾರದ ಮೇಲೆ ಜನಾಭಿಪ್ರಾಯದ ಬೆಂಬಲವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ....'' ಈ ನೀತಿಗೆ ಅನುಗುಣವಾಗಿ ಜನಸಂಘ ವಿಧಾನ ಸಭೆಗಳ 1162 ಸ್ಥಾನಗಳಿಗೆ ಹಾಗೂ ಲೋಕ ಸಭೆಯ 168 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿತು. ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಜನಸಂಘವೇ ಅತ್ಯಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳಿಗೆ ಸ್ಪರ್ಧಿಗಳನ್ನು ನಿಲ್ಲಿಸಿ ಚುನಾವಣಾ ಹೋರಾಟವನ್ನು ನಡೆಸುವ ಪ್ರಯತ್ನ ಮಾಡಿತು. 1962ರ ಚುನಾವಣೆಗಳ ಬಳಿಕ ಸಲ್ಲಿಸಿದ ತಮ್ಮ ವರದಿಯಲ್ಲಿ ಉಪಾಧ್ಯಾಯರು ಕ್ರಮವಾಗಿ ಪ್ರತಿಯೊಂದು ಪಕ್ಷದ ಸೋಲು-ಗೆಲುವುಗಳನ್ನು ವಿಶ್ಲೇಷಿಸಿದ್ದಾರೆ. ಮೂಡಿಬರುತ್ತಿದ್ದ ಹೊಸ ಪ್ರವೃತ್ತಿಗಳ ವಿಶ್ಲೇಷಣೆಯನ್ನು ಮುಂದಿರಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಜಾತಂತ್ರದ ಹಿರಿಮೆಯನ್ನು ಎತ್ತಿಹಿಡಿಯುವ ತಮ್ಮ ಚಿಂತನೆಯನ್ನು ಮತ್ತು ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತ, ಅವರು ಹೀಗೆಂದು ವರದಿ ಮಾಡಿದ್ದರು: ``ಭಾರತೀಯ ಜನಸಂಘ ರಾಜಕಾರಣಕ್ಕೆ ವಿಧಾಯಕ ಸ್ವರೂಪವನ್ನು ನೀಡಬಯಸುತ್ತದೆ. ಹೀಗಾಗಿ ಅದರ ಪ್ರಚಾರ ಮತ್ತು ಆಂದೋಳನಗಳು ಯಾವತ್ತೂ ವಿಧಾಯಕ ದೃಷ್ಟಿಕೋನದಿಂದಲೇ ನಡೆದು ಬರುತ್ತಿರುತ್ತವೆ. ಈ ಚುನಾವಣೆಗಳಲ್ಲಿಯೂ ನಾವು ನಮ್ಮ ನೆಲೆಯನ್ನು ಕಾಯ್ದುಕೊಂಡು ಬಂದಿದ್ದೇವೆ. ನಮ್ಮ ವಕ್ತಾರರು ಮುಖ್ಯವಾಗಿ ತಮ್ಮ ವಿಚಾರಗಳನ್ನು ಮುಂದಿರಿಸಿದ್ದಾರೆ. ಇತರ ಪಕ್ಷಗಳ ಬಗ್ಗೆ ಅವರು ಮಾಡಿರುವ ಟೀಕೆ-ಟಿಪ್ಪಣಿಗಳು ನಮ್ಮ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಧಾರಪೂರ್ವಕವೂ, ತರ್ಕಪೂರ್ಣವೂ ಆಗಿರುತ್ತಿದ್ದುವು. ಕಾಂಗ್ರೆಸ್ ಪಕ್ಷದೊಂದಿಗೆ ಹಾಗೂ ಅದರಿಂದ ಹೊರಬಂದಿರುವ ಇತರ ಪಕ್ಷಗಳೊಂದಿಗೆ ನಮಗೆ ಮೂಲಭೂತವಾದ ಮತ್ತು ಸೈದ್ಧಾಂತಿಕವಾದ ಭಿನ್ನಾಭಿಪ್ರಾಯ ಇರುವುದರಿಂದಾಗಿ ಹಾಗೂ ನಮ್ಮ ನಾಡಿನ ನೆಲದಲ್ಲಿ ಹಾಗೂ ಸಂಸ್ಕೃತಿಯಲ್ಲಿ ಬೇರುಬಿಟ್ಟಿರುವಂಥ ಪರ್ಯಾಯ ನೀತಿ ಹಾಗೂ ಕಾರ್ಯಕ್ರಮ ನಮ್ಮಲ್ಲಿರುವುದರಿಂದಾಗಿ, ನಮ್ಮ ಟೀಕೆ-ಟಿಪ್ಪಣಿಗಳು ಆಧಾರಪೂರ್ವಕವೂ, ಇತರ ಪಕ್ಷಗಳ ಬೇರುಗಳನ್ನು ಕಿತ್ತೆಸೆಯುವಂಥವೂ ಆಗಿರುತ್ತದೆ. ನಿರ್ಭಯ ಮತ್ತು ನಿಸ್ವಾರ್ಥ ಮನೋವೃತ್ತಿಯಿಂದಾಗಿ ಅದರ ಅಲಗು ಕೆಲವೊಮ್ಮೆ ಹರಿತವಾದುದಾಗಿದ್ದಿರಬಹುದು. ಆದರೆ ಜನಸಂಘ ತನ್ನ ಇಡೀ ವಿಚಾರಧಾರೆಯಲ್ಲಿ ಎಲ್ಲಿಯೂ ವೈಯಕ್ತಿವಾದ ಆಕ್ಷೇಪಗಳಿಗಾಗಲೀ, 12 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕೋಮುವಾದಿ ಹಾಗೂ ಜಾತಿವಾದಿ ಭಾವನೆಗಳಿಗಾಗಲೀ, ಪ್ರಾದೇಶಿಕವಾದ ಅಥವಾ ವರ್ಗನಿಷ್ಠವಾದ ಸಿದ್ಧಾಂತಗಳಿಗಾಗಲೀ ಎಡೆಗೊಟ್ಟಿಲ್ಲ." ದೀನ್ ದಯಾಳ್ ಉಪಾಧ್ಯಾಯ ಅವರ ಈ ಹೇಳಿಕೆ ಕೆಳಹಂತದವರೆಗೆ ಹಾಗೂ ವ್ಯಾವಹಾರಿಕ ಸ್ವರೂಪದಲ್ಲಿ ಎಷ್ಟರಮಟ್ಟಿಗೆ ಸತ್ಯವಾಗಿದ್ದಿರಬಹುದು ಎಂದು ಹೇಳುವುದು ಕಷ್ಟ. ಆದರೆ ಅವರು ತಮ್ಮ ಕಾರ್ಯಕರ್ತರಲ್ಲಿ ಹಾಗೂ ಸಂಘಟನೆಯಲ್ಲಿ ಯಾವ ಬಗೆಯ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು ಎಂಬುದನ್ನು ಮೇಲಿನ ಹೇಳಿಕೆಯ ಆಧಾರದ ಮೇಲೆ ಸಹಜವಾಗಿಯೇ ಕಲ್ಪಿಸಿಕೊಳ್ಳಬಹುದಾಗಿದೆ. ಚುನಾವಣೆಗಳ ಸಂದರ್ಭದಲ್ಲಿ ಜನಸಂಘ, ಕಾಂಗ್ರೆಸ್ ಪಕ್ಷ ಹಾಗೂ ಸಾಮ್ಯವಾದೀ ಪಕ್ಷಗಳ ನಡುವೆ ಪರಸ್ಪರ ಘರ್ಷಣೆಯ ಕೆಲವೊಂದು ಗೌರವಪ್ರಾಯವಲ್ಲದ ಘಟನೆಗಳು ಸಂಭವಿಸಿವೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಉಪಾಧ್ಯಾಯರು ಹೀಗೆಂದು ಹೇಳಿದ್ದರು: ``ವಿವಿಧ ಪಕ್ಷಗಳು ನಡೆಸಿರುವ ಚುನಾವಣಾ ಪ್ರಚಾರದ ಕಾರ್ಯಗಳ ಬಗ್ಗೆ ನಿಷ್ಪಕ್ಷಪಾತಪೂರ್ವಕವಾದ ವಿಚಾರಣೆ ನಡೆಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದು ಇಂದಿನ ತಂಟೆ-ತಕರಾರುಗಳನ್ನು ಕೊನೆಗಾಣಿಸಲು ಮಾತ್ರವಲ್ಲದೆ, ಮುಂದೆ ಚುನಾವಣಾ ಪ್ರಚಾರದ ಗುಣಮಟ್ಟವನ್ನೇ ಎತ್ತರಿಸುವ ದೃಷ್ಟಿಯಿಂದಲೂ ಅಗತ್ಯ.'' ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಪಕ್ಷಗಳ ಹಿನ್ನೆಲೆಯ ಬಗ್ಗೆ ತಮ್ಮ ವಿವೇಚನೆಯನ್ನು ಮುಂದಿರಿಸುತ್ತ, ಉಪಾಧ್ಯಾಯರು ಹೀಗೆಂದು ಹೇಳಿದ್ದಾರೆ: ಕಾಂಗ್ರೆಸ್ ಪಕ್ಷ, ಸಾಮ್ಯವಾದೀ ಪಕ್ಷ ಹಾಗೂ ಪ್ರಜಾ ಸಮಾಜವಾದೀ (ಸೋಷಿಯಲಿಸ್ಟ್) ಪಕ್ಷ- ಈ ಮೂರೂ ಪಕ್ಷಗಳು ಮುಸಲ್ಮಾನರ ಒಟ್ಟಾರೆ ಬೆಂಬಲವನ್ನು ಪಡೆದುಕೊಳ್ಳುವ ಸ್ಪರ್ಧೆಯ ಅಂಗವಾಗಿ, ಮುಸಲ್ಮಾನರಲ್ಲಿ ಪ್ರತ್ಯೇಕತೆಯ ಹಾಗೂ ಕೋಮುವಾದದ ಪ್ರವೃತ್ತಿಗೆ ಸಾಕಷ್ಟು ಉತ್ತೇಜನವನ್ನು ನೀಡುತ್ತಿವೆ.. ಅವರ ಮನಸ್ಸಿನಲ್ಲಿ ಭಯವನ್ನು ಮೂಡಿಸುವ ಸಲುವಾಗಿ ಜನಸಂಘದ ಬೆರ್ಚಪ್ಪನನ್ನು ಎತ್ತಿ ನಿಲ್ಲಿಸಿವೆ ಹಾಗೂ ಜನಸಂಘದ್ದೆಂದು ಹೇಳಲಾಗಿರುವ ಸಂಕಷ್ಟವನ್ನು ಮುಂದೊಡ್ಡುತ್ತ, ಅದರಲ್ಲಿ ರಾಜಕೀಯ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನೇ ಆಧಾರವಾಗಿಸಿಕೊಂಡು ಸ್ವತಂತ್ರ ನಿರ್ಣಯವನ್ನು ಕೈಗೊಂಡು, ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗದಂತೆ ಮಾಡಲು ಪ್ರಯತ್ನಿಸುತ್ತಿವೆ. ಚುನಾವಣೆಯ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ಏರ್ಪಡಿಸಿಕೊಂಡಿರುವ ಒಕ್ಕೂಟಗಳು ಆಶ್ಚರ್ಯವನ್ನುಂಟು ಮಾಡುವಂಥವಾಗಿರುವುದು ಮಾತ್ರವಲ್ಲ, ವಿಷಾದಪೂರ್ಣವೂ, ದುಃಖದಾಯಕವೂ ಆಗಿವೆ. ಅಧಿಕಾರವ್ಯಾಮೋಹದಿಂದಾಗಿ ಅವರು ಎಲ್ಲಿಯತನಕ ಹೋಗಬಲ್ಲರು ಎಂಬುದನ್ನು ಈ ಒಕ್ಕೂಟಗಳ ಸ್ವರೂಪದಿಂದಲೇ ಊಹಿಸಿಕೊಳ್ಳಬಹುದಾಗಿದೆ. ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 13 ``ಜನಸಂಘವನ್ನು ಸೋಲಿಸುವ ಸಲುವಾಗಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಸಾಮ್ಯವಾದೀ ಪಕ್ಷ ತೀರ್ಮಾನಿಸಿಕೊಂಡಿತ್ತು ಹಾಗೂ ಕೇರಳದಲ್ಲಿ ಅದು ಇದೇ ಪ್ರಸ್ತಾಪವನ್ನೇ ಮುಂದಿರಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಅವರು ವಾಮಪಂಥೀಯ ಪಕ್ಷಗಳ ಸಂಯುಕ್ತ ಒಕ್ಕೂಟವನ್ನು ಸ್ಥಾಪಿಸಿಕೊಳ್ಳುವ ತಮ್ಮ ಹಿಂದಿನ ನೀತಿಯನ್ನೇ ಅಂಗೀಕರಿಸಿ, ಪರ್ಯಾಯ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಘೋಷಣೆಗಳನ್ನು ಹಾಕಿತ್ತು. ಈ ಸಲ ಪ್ರಜಾಸಮಾಜವಾದೀ ಪಕ್ಷ ಅದರೊಡನೆ ಸೇರಿಕೊಳ್ಳಲಿಲ್ಲ. ಪಂಜಾಬಿನಲ್ಲಿ ಅಕಾಲಿ ದಳದೊಡನೆ ಹಾಗೂ ಆಂಧ್ರದಲ್ಲಿ ಸ್ವತಂತ್ರ ಪಕ್ಷದೊಡನೆ ಅದು ತೆರೆಮರೆ ಒಪ್ಪಂದಗಳನ್ನು ಮಾಡಿಕೊಂಡಿತ್ತು. ಬಹುಶಃ ಈ ಎರಡೂ ಪಕ್ಷಗಳು ಅಲ್ಲಿಯ ಜಾತಿನಿಷ್ಠ ಪರಿಸ್ಥಿತಿಯಿಂದಾಗಿ ಹಾಗೆ ಮಾಡಿಕೊಂಡಿದ್ದಿರಬೇಕು. ಮಹಾರಾಷ್ಟ್ರದಲ್ಲಿ ಅವರು ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಹೆಸರಿನಲ್ಲಿಯೇ ಹಿಂದೂ ಮಹಾಸಭೆ, ರಿಪಬ್ಲಿಕ್‍ನ ಪಾರ್ಟಿ ಹಾಗೂ ಶೇತ್‍ಕರಿ ಕಾರ್ಮಿಕ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡು. ಚುನಾವಣೆಗೆ ಸ್ಪರ್ಧಿಸಿದರು. ``ಕಾಂಗ್ರೆಸ್ ಪಕ್ಷದೊಂದಿಗೆ ಮಾತ್ರವಲ್ಲದೆ, ಎಲ್ಲ ಪಕ್ಷಗಳೊಂದಿಗೆ- ಇವುಗಳಲ್ಲಿ ಅಕಾಲಿದಳ, ಡ್ರಾವಿಡ ಮುನ್ನೇತ್ರ ಕಳಗಮ್ ಮತ್ತು ಸಾಮ್ಯವಾದೀ ಪಕ್ಷಗಳು ಸೇರಿವೆ- ಸ್ವತಂತ್ರ ಪಕ್ಷ ಒಂದಲ್ಲ ಒಂದು ಬಗೆಯ ಒಡಂಬಡಿಕೆಯನ್ನು ಮಾಡಿಕೊಂಡಿತು. ``ಹಿಂದೂ ಮಹಾಸಭೆ ಮತ್ತು ರಾಮರಾಜ್ಯ ಪರಿಷತ್ತು ಪರಸ್ಪರ ಚುನಾವಣೆ ಒಪ್ಪಂದವನ್ನು ಏರ್ಪಡಿಸಿಕೊಂಡು ಚುನಾವಣೆಗಳಲ್ಲಿ ಪಾಲ್ಗೊಂಡವು. ರಿಪಬ್ಲಿಕ್‍ನ ಪಕ್ಷದ ಎರಡೂ ಬಣಗಳು ಕ್ರಮಶಃ ಪ್ರಜಾಸಮಾಜವಾದೀ ಪಕ್ಷದೊಂದಿಗೆ ಮತ್ತು ವಿದರ್ಭವಾದೀ ಪಕ್ಷದೊಂದಿಗೆ ಹಾಗೂ ಸಾಮ್ಯವಾದೀ ಪಕ್ಷದೊಂದಿಗೆ ಸೇರಿಕೊಂಡು ಚುನಾವಣೆಯನ್ನು ಎದುರಿಸಿದುವು. ಉತ್ತರಪ್ರದೇಶದಲ್ಲಿ ಹಿಂದಿನ ಮುಸ್ಲಿಮ್ ಲೀಕನ್ ತತ್ತ್ವಗಳು ಹಾಗೂ ರಿಪಬ್ಲಿಗ್‍ನ ಪಕ್ಷಗಳ ನಡುವೆ ಒಪ್ಪಂದ ಏರ್ಪಟ್ಟಿತು. ಘೋರ ಕೋಮುವಾದೀ ಪಕ್ಷವಾದ ಮುಸ್ಲಿಮ್ ಲೀಗ್‍ನ ಹುರಿಯಾಳುಗಳು ರಿಪಬ್ಲಿಕ್‍ನ ಪಕ್ಷದ ಹೆಸರಿನಲ್ಲಿ ಚುನಾವಣೆಯ ಕಣಕ್ಕೆ ಇಳಿದರು. ಕಾಂಗ್ರೆಸ್ ಪಕ್ಷ ಝಾರ್ಖಂಡ್ ಪಕ್ಷದೊಂದಿಗೆ ಚುನಾವಣಾ ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ಪ್ರಯತ್ನಿಸಿತ್ತಾದರೂ ಅದರಲ್ಲಿ ಅದು ಯಶಸ್ವಿಯಾಗಲಿಲ್ಲ. ಯಾವುದೇ ಪಕ್ಷದೊಂದಿಗೆ ಒಪ್ಪಂದವನ್ನು ಏರ್ಪಡಿಸಿಕೊಳ್ಳದೆ, ತಮ್ಮ ನೀತಿಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಿದ ಪಕ್ಷಗಳೆಂದರೆ ಭಾರತೀಯ ಜನಸಂಘ ಮತ್ತು ಸಮಾಜವಾದೀ ಪಕ್ಷ ಮಾತ್ರವೇ. ``ಕಾಂಗ್ರೆಸ್ ತೀವ್ರಗತಿಯಲ್ಲಿ ಪತನಾಭಿಮುಖಿಯಾಗುತ್ತಲಿದೆ. ಕಮ್ಯುನಿಸ್ಟರು ತಮ್ಮ ಭದ್ರ ಕೋಟೆಗಳಲ್ಲಿ ಪೆಟ್ಟುತಿಂದರೂ ಇತರ ಕ್ಷೇತ್ರಗಳಲ್ಲಿ ಆ ಕೊರತೆಯನ್ನು ತುಂಬಿಕೊಂಡು ಸಾರ್ವದೇಶಿಕ ನೆಲೆಯಲ್ಲಿ ಸ್ವಲ್ಪಮಟ್ಟಿಗೆ ತನ್ನ ಸ್ಥಿತಿಯನ್ನು 14 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಉತ್ತಮಪಡಿಸಿಕೊಂಡು ನೆಲೆನಿಂತಿದೆ. ಪ್ರಜಾಸಮಾಜವಾದೀ ಪಕ್ಷ ಕೊನೆಯುಸಿರೆಳೆಯುವ ಅಥವಾ ಇಲ್ಲವಾಗಿಬಿಡುವ ಅಧ್ಯಾಯ ಪ್ರಾರಂಭವಾಗಿದೆ.... ಭಾರತೀಯ ಜನಸಂಘ ಸಾಕಷ್ಟು ಮುಂದೆ ಹೆಜ್ಜೆಯನ್ನಿಟ್ಟಿದೆ. ಆದರೆ, ಯಾವ ಐತಿಹಾಸಿಕ ಕಾರ್ಯವನ್ನು ಈಡೇರಿಸುವ ಸಲುವಾಗಿ ಅದು ಜನ್ಮತಾಳಿದೆಯೋ ಆ ಉದ್ದೇಶದ ಈಡೇರಿಕೆಯಲ್ಲಿ ಅದು ಇನ್ನೂ ಬಹಳ ಹಿಂದೆಯೇ ಉಳಿದಿದೆ.'' ಒಳದಾರಿಯ ಮೂಲಕ ಚುನಾವಣೆಗಳನ್ನು ಗೆಲ್ಲುವುದನ್ನು ಹಾಗೂ ಸಮಯ ಸಾಧಕ ಒಕ್ಕೂಟಗಳ ರಾಜಕೀಯವನ್ನು ದೀನ್ ದಯಾಳ್ ಉಪಾಧ್ಯಾಯರು ಸಾಮಾಜಿಕ ದೌರ್ಬಲ್ಯವೆಂದೇ ಭಾವಿಸುತ್ತಿದ್ದರು. ಅವರು ಸಿದ್ಧಾಂತನಿಷ್ಠ ರಾಜಕೀಯದ ಪರವಾಗಿ ಇದ್ದಂಥವರು. ಹೀಗಾಗಿ, ಸೈದ್ಧಾಂತಿಕವಾದ ಹಾಗೂ ಆರೋಗ್ಯಪೂರ್ಣವಾದ ರಾಜಕೀಯ ವ್ಯವಹಾರದ ದೃಷ್ಟಿಯಿಂದ ಈ ಮೂರನೆಯ ಮಹಾ ಚುನಾವಣೆಗೆ ಬೆಲೆಗಟ್ಟುವ ಪ್ರಯತ್ನವನ್ನು ಮಾಡಿದರು: ``ಈ ಚುನಾವಣೆಯ ಫಲಿತಾಂಶಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ರಾಜಕೀಯದ ಸೈದ್ಧಾಂತಿಕ ನಿಲುವಿನ ವಿಷಯದಲ್ಲಿ ಯಾವುದೇ ತೀರ್ಮಾನಕ್ಕೆ ಬರುವುದು ಕಷ್ಟವಾಗುತ್ತದೆ. ಏಕೆಂದರೆ ಮತದಾರನ ತೀರ್ಮಾನ ಅನೇಕ ಸಂಗತಿಗಳಿಂದ ಪ್ರಭಾವಿತವಾಗಿರುತ್ತದೆ. ಅದರಲ್ಲಿ ಸೈದ್ಧಾಂತಿಕ ನಿಲುವು ತೀರ ಕಮ್ಮಿಯಾಗಿರುತ್ತದೆ. ಆದ್ದರಿಂದಲೇ ಬಹುಶಃ ಅನೇಕ ಪಕ್ಷಗಳ ದೊಡ್ಡ ದೊಡ್ಡ ನಾಯಕರುಗಳು ಕೂಡ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮ್ಮ ಸಿದ್ಧಾಂತಗಳನ್ನು ಕುರಿತ ವಿವೇಚನೆಯನ್ನು ಮುಂದಿರಿಸುವುದು ಅಗತ್ಯವೆಂದು ಭಾವಿಸಲಿಲ್ಲ. ತನ್ನದು, ಇತರ ಎಲ್ಲ ಪಕ್ಷಗಳಿಗಿಂತಲೂ ದೊಡ್ಡದಾದ ಪಕ್ಷವಾಗಿರುವುದರಿಂದಲೂ ಇತರ ಯಾವ ಪಕ್ಷಗಳಲ್ಲಿಯೂ ಜವಾಹರಲಾಲ್ ನೆಹರೂ ಅವರಂಥ ಹೆಸರಾಂತ ನಾಯಕರು ಇಲ್ಲದಿರುವುದರಿಂದಲೂ ಜನರ ಮತಗಳನ್ನು ಪಡೆದುಕೊಳ್ಳುವ ಹಕ್ಕು ತನಗೆ ಮಾತ್ರ ಇದೆಯೆಂದೂ ಹೇಳಿಕೊಳ್ಳುತ್ತಾ ಬಂದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಅಥವಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೊಂದಿಗೆ ಹೋಲಿಸಿನೋಡಿದರೆ ಸಮುದಾಯದ ದೃಷ್ಟಿಯಿಂದ ಹಾಗೂ ಪ್ರಾದೇಶಿಕ ಹಿತದೃಷ್ಟಿಯಿಂದ ಉತ್ಕೃಷ್ಟರಾಗಿರುವಂಥ ವ್ಯಕ್ತಿಗಳಿಗೆ ನಾವು ಟಿಕೇಟ್ ನೀಡಿದ್ದೇವೆ ಎಂದು ಉಳಿದ ಪಕ್ಷಗಳು ಹೇಳಿಕೊಳ್ಳುತ್ತ ಇವೆ. ಇದಕ್ಕೆ ಎಷ್ಟರ ಮಟ್ಟಿನ ಯಶಸ್ಸು ದೊರೆಯಿತು ಎಂದು ಹೇಳುವುದು ನನ್ನ ಮಟ್ಟಿಗೆ ಸಾಧ್ಯವಿಲ್ಲ...... ಜನರು ಬೆದರಿಕೆಗೆ ಅಥವಾ ಪ್ರಲೋಭನಗಳಿಗೆ ಬಲಿಯಾಗಿಬಿಟ್ಟಿದ್ದಾರೆ. ಅಥವಾ ಕೋಮುವಾದಿ ಅಥವಾ ಜಾತೀಯ ಭಾವನೆಗಳಲ್ಲಿ ಕೊಚ್ಚಿಹೋಗಿಬಿಟ್ಟಿದ್ದಾರೆ ಎಂದಾದರೆ ತಮ್ಮ ಪ್ರಜಾತಂತ್ರನಿಷ ಅಧಿಕಾರಗಳನ್ನು ಸರಿಯಾದ ಅರ್ಥದಲ್ಲಿ ಬಳಸಿಕೊಳ್ಳುವುದಕ್ಕೆ ನಮ್ಮ ಜನರನ್ನೇ ನಾವು ಸುಸಜ್ಜಿತರನ್ನಾಗಿಸಿಲ್ಲ ಎಂದೇ ಹೇಳಬೇಕಾಗುತ್ತದೆ. ಈ ವಿಷಯದ ಬಗ್ಗೆ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 15 ಅಥವಾ ಇಂಥ ಸಮಸ್ಯೆಯನ್ನು ಇಲ್ಲವಾಗಿಸುವ ದಾರಿಯನ್ನು ಕಂಡುಕೊಳ್ಳುವ ಸಲುವಾಗಿ, ಅವರು ತಮ್ಮ ಪಕ್ಷದಲ್ಲಿ ಒಂದು ಉಪಸಮಿತಿಯನ್ನು ರಚಿಸಿದರು. 1962ರ ಸಾರ್ವತ್ರಿಕ ಚುನಾವಣೆ ಭಾರತೀಯ ರಾಜಕೀಯದಲ್ಲಿ ಜನಸಂಘವನ್ನು ಒಂದು ಉಲ್ಲೇಖನೀಯ ಶಕ್ತಿಯಾಗಿಸಿತು. ಅಂತೆಯೇ ಈ ಸಂಘಟನೆಯ ಹಿಂದೆ ಕಾರ್ಯಶೀಲವಾಗಿದ್ದ ವ್ಯಕ್ತಿತ್ವ ಮತ್ತು ಪ್ರತಿಭೆ ದೀನ್ ದಯಾಳ್ ಉಪಾಧ್ಯಾಯರದೇ ಆಗಿತ್ತು ಎಂಬುದೂ ಮುಂಚೂಣಿಗೆ ಬರತೊಡಗಿತ್ತು. ಹೀಗೆ ಮುಂಚೂಣಿಗೆ ಬರುವುದು ಕಷ್ಟವೇ ಆಗಿತ್ತು. ಏಕೆಂದರೆ ಸಂಘಟನೆಯ ಹೊರಗೆ ವ್ಯಕ್ತಿತ್ವವನ್ನು ಬೆಳಕಿಗೆ ತರುವಂಥ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಂಘ ಮತ್ತು ಜನಸಂಘಗಳು ಮಾತ್ರವೇ ಅವರ ಸಾರ್ವಜನಿಕ ವೇದಿಕೆಗಳಾಗಿದ್ದುವು. ಸಂಘಟನೆಯ ಶಕ್ತಿವರ್ಧನೆ ಒಂದೆಡೆ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಮೂಡಿಸಿದರೆ, ಇನ್ನೊಂದೆಡೆ ಅವರನ್ನು ಅಹಂಕಾರಿಗಳನ್ನಾಗಿಸಿ ಬೇರೆ ದಾರಿಯಲ್ಲಿ ಹೋಗುವಂತೆಯೂ ಮಾಡಿಬಿಡುತ್ತದೆ. ಆಂದೋಳನವನ್ನು ಮತ್ತು ವಿರೋಧ ಪಕ್ಷದ ಕಾರ್ಯಕರ್ತರನ್ನು ನೆಪವಾಗಿಸಿಕೊಂಡು ನಿಯಮಗಳನ್ನು ಉಲ್ಲಂಘಿಸುವುದನ್ನು ತಮ್ಮ ಹಕ್ಕು ಎಂದು ಭಾವಿಸತೊಡಗುತ್ತಾರೆ. ಅನೇಕ ರಾಜಕೀಯ ಪಕ್ಷಗಳು ತಮ್ಮ ಆಂದೋಳನಕಾರಿ ಅಥವಾ ಕ್ರಾಂತಿಕಾರಿ ಸ್ವರೂಪದ ಹಿನ್ನೆಲೆಯಲ್ಲಿ, ತಮ್ಮ ಕಾರ್ಯಕರ್ತರ ಈ ಬಗೆಯ ಮನೋವೃತ್ತಿಗೆ ಪ್ರೋತ್ಸಾಹವನ್ನು ನೀಡುತ್ತವೆ. ಉಪಾಧ್ಯಾಯರು ಈ ವಿಚಾರದಲ್ಲಿ ಯಾವಾಗಲೂ ಎಚ್ಚರದಿಂದ ಇರುತ್ತಿದ್ದರು. ಅವರು ಜನಸಂಘದ ವತಿಯಿಂದ ಆಯೋಜಿಸಲಾಗುತ್ತಿದ್ದ ಹಾಗೂ ಶಿಸ್ತುಬದ್ಧವಾದ ಆಂದೋಳನದ ತಮ್ಮ ರಾಜಕೀಯ ರೀತಿ-ನೀತಿಗಳ ಬಗ್ಗೆ ಅವರು ಹೀಗೆಂದು ತಿಳಿಸಿದ್ದರು: ``ಜುಲೈ 1, 1962 ರಿಂದ ರೈಲು ಪ್ರಯಾಣದ ದರಗಳಲ್ಲಿ ಏರಿಕೆ ಉಂಟಾಗಲಿತ್ತು. ಅಂದು ಈ ಏರಿಕೆಯ ವಿರುದ್ಧವಾಗಿ ಹಾಗೂ ಸಾಮಾನ್ಯವಾಗಿ ಹೊಸ ತೆರಿಗೆಗಳ ವಿರುದ್ಧವಾಗಿ ರೈಲು ನಿಲ್ದಾಣದಲ್ಲಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಬೇಕೆಂದು ತೀರ್ಮಾನಿಸಲಾಯಿತು. ಪ್ರದರ್ಶನ ಶಾಂತಿಯುತವಾಗಿರಬೇಕು ಹಾಗೂ ಪ್ರಯಾಣಿಕರಿಗಾಗಲೀ ರೈಲ್ವೇ ಸಿಬ್ಬಂದಿಗಾಗಲೀ ಯಾವುದೇ ರೀತಿಯಲ್ಲಿ ತೊಂದರೆಯನ್ನುಂಟುಮಾಡಬಾರದೆಂದೂ, ಕಾನೂನನ್ನು ಉಲ್ಲಂಘಿಸಬಾರದೆಂದೂ ತೀರ್ಮಾನಿಸಲಾಯಿತು. ಇದಕ್ಕನುಗುಣವಾಗಿ ಇಡೀ ದೇಶದಲ್ಲಿನ ಸಣ್ಣ-ದೊಡ್ಡ ಎಲ್ಲ ರೈಲು ನಿಲ್ದಾಣಗಳಲ್ಲಿ ಹಾಗೂ ಎಲ್ಲ ರೈಲುಗಳ ಎದುರಿಗೆ ಪ್ರದರ್ಶನ ನಡೆದುವು. ಅಲ್ಲಲ್ಲಿ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚಿ ಈ ತೆರಿಗೆಗಳ ಬಗ್ಗೆ ಅರಿವನ್ನುಂಟುಮಾಡಲಾಯಿತು. ರೈಲ್ವೆ ಸಿಬ್ಬಂದಿ ಪ್ಲಾಟ್‍ಫಾರಂ ಟಿಕೆಟ್ಟುಗಳನ್ನೇ ನೀಡದೆ ಇದ್ದಂಥ ಅಥವಾ ಫ್ಲಾಟ್‍ಫಾರಂ ಟಿಕೆಟ್ಟುಗಳನ್ನು ಪಡೆದಿದ್ದರೂ ಪೊಲೀಸರು 16 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕೆಲವು ಪ್ರದರ್ಶನಕಾರರನ್ನು ಬಂಧಿಸಿದ್ದಂಥ ಒಂದೆರಡು ಸಂದರ್ಭಗಳನ್ನು ಬಿಟ್ಟರೆ, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಉಪಾಧ್ಯಾಯರು ತಮ್ಮ ವರದಿಯಲ್ಲಿ ಈ ಬಗೆಯ ವರ್ಣನೆಗಳನ್ನು ಸಾಮಾನ್ಯವಾಗಿ ಸೇರಿಸುತ್ತಿದ್ದರು. ಇದರಿಂದ ಕೆಳ ಹಂತಗಳಲ್ಲಿ ಇದಕ್ಕೆ ವಿರುದ್ಧವಾದಂಥ ವರ್ತನೆಗಳು ನಡೆಯುತ್ತಿದ್ದಂಥ ಎಡೆಗಳಲ್ಲಿ ತಮ್ಮಿಂದ ತಪ್ಪಾಗಿದೆ ಎಂಬ ಅಂಶದತ್ತ ಅವರ ಗಮನಹರಿಯುತ್ತಿತ್ತು ಹಾಗೂ ಹೊಸ ಕಾರ್ಯಕರ್ತರು ಸಂಘಟನೆಯ ಆಂದೋಳನಾತ್ಮಕ ಸಂಸ್ಕೃತಿಯನ್ನು ಅರಿತುಕೊಂಡು ಜವಾಬ್ದಾರಿಯಿಂದ ಕೂಡಿದ ಹಾಗೂ ಸಕಾರಾತ್ಮಕವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿತ್ತು. ದೀನ್ ದಯಾಳ್ ಉಪಾಧ್ಯಾಯರು ಸಮಯಸಾಧಕ ಒಕ್ಕೂಟಗಳನ್ನು ವಿರೋಧಿಸುತ್ತಿದ್ದಂತೆಯೇ ರಾಜಕೀಯ ಅಸ್ಪೃಶ್ಯತೆಯನ್ನು ಅನಪೇಕ್ಷಣೀಯವೆಂದು ಭಾವಿಸುತ್ತಿದ್ದರು. ವಿವಿಧ ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಎಲ್ಲ ಪಕ್ಷಗಳ ರಾಜಕೀಯ ಕಾರ್ಯಕರ್ತರು ಒಂದುಗೂಡಿ ಕೆಲಸಮಾಡಬೇಕೆಂದು ಅವರು ಬಯಸುತ್ತಿದ್ದರು: ``ಸಾಮ್ಯವಾದೀ ಚೀಣಾದ ಭಾರಿ ಆಕ್ರಮಣದಿಂದಾಗಿ ಹಾಗೂ ರಾಷ್ಟ್ರಪತಿಗಳು ಹೊರಡಿಸಿರುವ ತರ್ತು ಪರಿಸ್ಥಿತಿಯ ಘೋಷಣೆಯಿಂದಾಗಿ ನಾಡಿನ ರಾಜಕೀಯ ಪರಿಸ್ಥಿತಿ ಸಾಮಾನ್ಯವಾಗಿ ಉಳಿದಿಲ್ಲ. ಜನರಲ್ಲಿ ಸುಪ್ತವಾಗಿದ್ದ ರಾಷ್ಟ್ರೀಯ ಭಾವನೆ ಈಗ ಎಚ್ಚರಗೊಂಡಿದೆ. ಏಕತೆಯ ವಾತಾವರಣ ಮೂಡಿದೆ. ವಿವಿಧ ಪಕ್ಷಗಳು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಪರಸ್ಪರರನ್ನು ಅರಿತುಕೊಳ್ಳುವ ಹಾಗೂ ಪೂರ್ವಾಗ್ರಹಗಳಿಂದ ಮುಕ್ತವಾಗುವ ಅವಕಾಶ ದೊರೆತಂತಾಗಿದೆ. ಸಹಕಾರ ಮತ್ತು ಸದ್ಭಾವನೆಗಳ ಈ ವಾತಾವರಣ ಉಳಿದುಕೊಂಡು ಬಂದಿದ್ದೇ ಆದಲ್ಲಿ, ಅದು ಖಂಡಿತವಾಗಿಯೂ ನಾಡಿನ ರಾಜಕೀಯ ಪ್ರಗತಿಗೆ ಆರೋಗ್ಯದಾಯಕವಾದ ಬೆಳವಣಿಗೆಯೇ ಆಗುತ್ತದೆ." ಚೀಣೀಯರ ಆಕ್ರಮಣಕ್ಕೆ ವಿರುದ್ಧವಾಗಿ ಹಾಗೂ ಹಿಂದೀ ಭಾಷೆಯ ಬಗೆಗಿನ ಬೆಂಬಲದ ವಿಷಯದಲ್ಲಿ ನಾಡಿನ ಸಾಮ್ಯವಾದೀತರ ಪಕ್ಷಗಳ ನಡುವೆ- ಅದರಲ್ಲೂ ಭಾರತೀಯ ಜನಸಂಘ ಹಾಗೂ ಡಾ. ಲೋಹಿಯಾ ಅವರ ಸಮಾಜವಾದಿ ಪಕ್ಷಗಳ ನಡುವೆ- ಒಂದು ಬಗೆಯ ನಿಕಟತೆ ಹಾಗೂ ರಾಜಕೀಯ ಸದ್ಭಾವನೆ ಉಂಟಾಗಿತ್ತು. 1963ರಲ್ಲಿ ಉತ್ತರಪ್ರದೇಶದ ಮೂರು ಚುನಾವಣೆ ಕ್ಷೇತ್ರಗಳಲ್ಲಿ ಈ ಪಕ್ಷಗಳು ಒಂದುಗೂಡಿ ಚುನಾವಣಾ ಹೋರಾಟವನ್ನು ನಡೆಸಿದ್ದುವು. ಹೀಗಾಗಿ ಈ ಎರಡೂ ಪಕ್ಷಗಳೂ ಒಂದುಗೂಡಿ ಒಂದು ಸ್ಥಿರವಾದ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳ ಸಮಾನ ವೇದಿಕೆಯನ್ನು ರೂಪಿಸಿಕೊಳ್ಳಬೇಕೆಂಬ ಭಾವನೆ ಬಲಗೊಳ್ಳತೊಡಗಿತು. ಉಪಾಧ್ಯಾಯರಿಗೆ ಈ ಬಗೆಯ ವೇದಿಕೆ ಯಶಸ್ವಿಯಾಗಬಹುದೆಂಬುದಕ್ಕೆ ಯಾವುದೇ ಧೃಢವಾದ ಆಧಾರ ಗೋಚರಿಸುತ್ತಿರಲಿಲ್ಲ. ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 17 ಆದ್ದರಿಂದ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಏಕಾಭಿಪ್ರಾಯವನ್ನಿರಿಸಿಕೊಂಡಿರುವಂಥ ವಿಷಯಗಳ ಬಗ್ಗೆ ಒಂದುಗೂಡಿ ಕೆಲಸ ಮಾಡುತ್ತಲೇ ತಮ್ಮ ತಮ್ಮ ವೇದಿಕೆಗಳಲ್ಲಿ ತಮ್ಮ ತಮ್ಮ ಸಿದ್ಧಾಂತ ಮತ್ತು ನೀತಿಗಳನುಗುಣವಾಗಿ ಪಕ್ಷನಿಷ್ಠ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಇರಬೇಕೆಂದು ಅವರು ಸಲಹೆ ನೀಡಿದರು: ``ಬೇರೆ ಬೇರೆ ಪಕ್ಷಗಳು ತಮ್ಮದೇ ಆದ ದೃಷ್ಟಿಕೋನಗಳನ್ನು ಇರಿಸಿಕೊಂಡಿರುತ್ತವೆ. ಜನರು ಆ ಆದರ್ಶಗಳ ಬಗ್ಗೆ ಚಿಂತನೆ ಮಾಡುವುದಿಲ್ಲ. ಸದ್ಭಾವನೆಯ ನೆಲೆಯಲ್ಲಿ ಒಂದುಗೂಡಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಾರೆ. ಆದರೆ, ವಿವಿಧ ಪಕ್ಷಗಳು ಅವರೂ ಎಲ್ಲ ಪಕ್ಷಗಳು ತಮ್ಮದೇ ಆದ ಕೆಲವೊಂದು ಮೂಲಭೂತ ಸಿದ್ಧಾಂತಗಳನ್ನು ಒಳಗೊಂಡಿರುತ್ತವೆ ಹಾಗೂ ಅವುಗಳ ಆಧಾರದ ಮೇಲೆಯೇ ಅವು ಅಸ್ತಿತ್ವಕ್ಕೆ ಬಂದಿರುತ್ತವೆ. ಇದಕ್ಕೆ ಸದ್ಭಾವನೆ ಮಾತ್ರವೇ ಸಾಕಾಗುವುದಿಲ್ಲ. ಆದ್ದರಿಂದ ಕೇವಲ ಕಲ್ಪನೆಗೆ ಮಾತ್ರವೇ ನಮ್ಮನ್ನು ಸೀಮಿತಗೊಳಿಸಿಕೊಂಡಿರಬಾರದೆಂದೂ, ಸಫಲತೆಯ ಸಾಧ್ಯತೆ ಗೋಚರಿಸದಿರುವಂಥ ಯಾವುದೇ ಕಾರ್ಯವನ್ನು ಕೈಗೊಳ್ಳಕೂಡದೆಂದೂ ನಾವು ತೀರ್ಮಾನಿಸಿದ್ದೇವೆ. ಏಕಾಭಿಪ್ರಾಯ ಇರುವ ವಿಚಾರಗಳಲ್ಲಿ ಒಂದುಗೂಡಿ ಕೆಲಸಮಾಡುವುದು ಹಾಗೂ ಅಂಥ ಏಕಾಭಿಪ್ರಾಯ ಇಲ್ಲದಿರುವ ವಿಚಾರಗಳಲ್ಲಿ ನಮ್ಮ ನಮ್ಮ ವೇದಿಕೆಗಳನ್ನೇ ಆಶ್ರಯಿಸಿಕೊಳ್ಳುವುದು ಇದಕ್ಕಿಂತಲೂ ಉತ್ತಮವಾದ ಕಾರ್ಯವಾಗುತ್ತದೆ. 1963ರಲ್ಲಿ ಜನಸಂಘದ ಹಾಗೂ ನಾಡಿನ ವಿಷಯದಲ್ಲಿ ಎರಡು ಮಹತ್ವಪೂರ್ಣ ಘಟನೆಗಳು ನಡೆದುವು. ಮೊದಲನೆಯದು ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದ್ದ ಮೂರು ಸಂಸದೀಯ ಉಪಚುನಾವಣೆಗಳು ನಡೆದದ್ದು. ಇದಕ್ಕೆ ಎರಡು ಕಾರಣಗಳಿದ್ದುವು: ಒಂದು ಈ ಉಪಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಕಾಂಗ್ರೆಸ್ ಮತ್ತು ಸಾಮ್ಯವಾದೀ ಪಕ್ಷಗಳು ಹಾಗೂ ಕಾಂಗ್ರೆಸ್ಸೇತರ ಮತ್ತು ಸಾಮ್ಯವಾದೀತರ ಪಕ್ಷಗಳು ಎಂಬುದಾಗಿ ಧ್ರುವೀಕರಣಗೊಂಡಿದ್ದುವು ಹಾಗೂ ಮೂರು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳ ವತಿಯಿಂದ ಮೂವರು ಹಿರಿಯ ರಾಷ್ಟ್ರೀಯ ನಾಯಕರು ಹುರಿಯಾಳುಗಳಾಗಿದ್ದರು. ಎಲ್ಲ ವಿರೋಧ ಪಕ್ಷಗಳೂ ಒಂದಾಗಿ ಆಚಾರ್ಯ ಕೃಪಲಾನಿ, ಪಂ|| ದೀನ್ ದಯಾಳ್ ಉಪಾಧ್ಯಾಯ ಮತ್ತು ಡಾ. ರಾಮ್‍ಮನೋಹರ್ ಲೋಹಿಯಾ ಅವರನ್ನು ತಮ್ಮ ಉಮೇದುವಾರರನ್ನಾಗಿಸಿಕೊಂಡಿದ್ದುವು. ಈ ವರ್ಷದ ಎರಡನೆಯ ಮಹತ್ವಪೂರ್ಣ ಘಟನೆ ಎಂದರೆ ಈ ಚುನಾವಣೆಗಳಿಗೆ ಸಂಬಂಧಿಸಿದ ಪ್ರಚಾರಕಾರ್ಯವನ್ನು ನಡೆಸುತ್ತಿದ್ದ ಅವಧಿಯಲ್ಲಿ ಜನಸಂಘದ ರಾಷ್ಟ್ರೀಯ ಅಧ್ಯಕ್ಷರೂ, ಶ್ರೇಷ್ಠ ಭಾಷಾವಿದರೂ ಆಗಿದ್ದ ಡಾ. ರಘುವೀರ್ ಅವರು ಕಾರಿನ ಅಪಘಾತದಲ್ಲಿ ತೀರಿಕೊಂಡಿದ್ದು, 1953ರಲ್ಲಿ ಡಾ. ಮುಖರ್ಜಿಯವರು ತೀರಿಕೊಂಡ ಒಂದು ದಶಕದ ಬಳಿಕ, 18 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜನಸಂಘಕ್ಕೆ ಆಚಾರ್ಯ ರಘುವೀರ್ ಅವರಂಥ ಖ್ಯಾತಿವೆತ್ತ ರಾಷ್ಟ್ರ ಪ್ರಸಿದ್ಧಿಯ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ ದೊರೆತಿದ್ದರು. ಅವರ ಸಾವು ಜನಸಂಘಕ್ಕೆ ಅಪಾರ ನಷ್ಟವನ್ನುಂಟುಮಾಡಿತು. ತಮ್ಮ ವಾರ್ಷಿಕ ವರದಿಯಲ್ಲಿ ಉಪಾಧ್ಯಾಯರು ಆಚಾರ್ಯ ರಘುವೀರ್ ಅವರನ್ನು ಗೌರವದೊಂದಿಗೆ ಹಾಗೂ ಶ್ರದ್ಧಾಪೂರ್ವಕವಾಗಿ ಸ್ಮರಿಸಿದ್ದಾರೆ. ಆದರೆನಲ್ಲಿ ನಾಡಿನಲ್ಲಿ ನಡೆದ ಇಷ್ಟೊಂದು ಮಹತ್ವಪೂರ್ಣ ಉಪಚುನಾವಣೆಗಳ ಬಗೆಗಿನ ಯಾವುದೇ ವಿಶ್ಲೇಷಣೆಯನ್ನು ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ತಾವು ಸಲ್ಲಿಸಿದ ವರದಿಗಳಲ್ಲಿ ಇದೇ ಮೊದಲ ಬಾರಿಗೆ ಅವರು ಕೊಡಲಿಲ್ಲ. ಆ ಚುನಾವಣೆಗೂ ತಮಗೂ ಸಂಬಂಧ ಇದ್ದಿತೆಂಬುದೇ ಬಹುಶಃ ಇದಕ್ಕೆ ಕಾರಣವಾಗಿದ್ದಿರಬೇಕು. ಕಾರಣ ಯಾವುದಾದರೂ ಆಗಿರಲಿ, ಅವರ ವರದಿಯಲ್ಲಿನ ವಿಶ್ಲೇಷಣೆಯ ಈ ಕೊರತೆ ಮನಸ್ಸಿಗೆ ಚುಚ್ಚುತ್ತದೆ. 1964 ಭಾರತೀಯ ಇತಿಹಾಸದಲ್ಲಿನ ಒಂದು ಮೈಲಿಗಲ್ಲು. ಆ ವರ್ಷದಲ್ಲಿ ಪಂ|| ಜವಾಹರ್‍ಲಾಲ್ ನೆಹರೂ ಅವರ ಜೀವನಲೀಲೆ ಕೊನೆಗೊಂಡಿತ್ತು. ಭಾರತೀಯ ಜನಸಂಘದ ಇತಿಹಾಸದಲ್ಲಿ ಈ ವರ್ಷ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಪರೀಕ್ಷೆಯ ವರ್ಷವೇ ಆಗಿತ್ತು. ಆಗಸ್ಟ್ 11 ರಿಂದ ಆಗಸ್ಟ್ 15, 1964ರ ವರೆಗೆ ಗ್ವಾಲಿಯರ್‍ನಲ್ಲಿ ಜನಸಂಘದ ಪ್ರತಿನಿಧಿ ಸಭೆಯ ಐತಿಹಾಸಿಕ ತರಬೇತಿ ಶಿಬಿರ ನಡೆಯಿತು. ಉಪಾಧ್ಯಾಯರು ಸಿದ್ಧಪಡಿಸಿದ್ದ ಸಿದ್ಧಾಂತ ಮತ್ತು ನೀತಿ ಸಂಬಂಧವಾದ ದಸ್ತಾವೇಜಿಗೆ ಈ ಶಿಬಿರದಲ್ಲಿ ಅಂತಿಮ ರೂಪವನ್ನು ನೀಡಲಾಯಿತು. 1952ರಲ್ಲಿ ಸಿದ್ಧಪಡಿಸಲಾಗಿದ್ದ ಸಾಂಸ್ಕೃತಿಕ ಪುನರುತ್ಥಾನದ ಪ್ರಸ್ತಾವದೊಂದಿಗೆ ಜನಸಂಘದ ವಿಚಾರ ಸರಣಿಗೆ ನಾಂದಿಯನ್ನು ಹಾಡಲಾಗಿದೆ. ಸಿದ್ಧಾಂತ ಮತ್ತು ನೀತಿ ಎಂಬ ಈ ದಸ್ತಾವೇಜು ಅದರ ಚರಮ ಪರಿಣತಿಯೇ ಆಗಿದೆ. ಈ ದಸ್ತಾವೇಜೇ `ಏಕಾತ್ಮ ಮಾನವವಾದ'ವನ್ನು ಜನಸಂಘದ ಆಧಿಕಾರಿಕ ವಿಚಾರಧಾರೆಯೆಂದು ಘೋಷಿಸಿತ್ತು. ಇದರ ವ್ಯಾಖ್ಯಾನದ ರೂಪದಲ್ಲಿ ಉಪಾಧ್ಯಾಯರು ಮುಂಬಯಿಯಲ್ಲಿ ನಾಲ್ಕು ಐತಿಹಾಸಿಕ ಉಪನ್ಯಾಸಗಳನ್ನು ನೀಡಿದರು. 1965ರ ಜನವರಿ 23 ಮತ್ತು 24 ರಂದು ವಿಜಯವಾಡಾದಲ್ಲಿ ಜನಸಂಘದ ಅಧಿವೇಶನ ನಡೆಯಿತು. ಇದು ಜನಸಂಘದ ಇತಿಹಾಸದಲ್ಲಿ ಹೊಸ ಯುಗವೊಂದರ ನಾಂದಿಯೇ ಆಗಿತ್ತು. ಬೃಹದ್‍ರೂಪದಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಮೊಟ್ಟಮೊದಲ ಅಧಿವೇಶನ ಇದಾಗಿತ್ತು. ಈ ಅಧಿವೇಶನದಲ್ಲಿಯೇ ಔಪಚಾರಿಕವಾಗಿ ಇದನ್ನು ಜನಸಂಘದ ಸಿದ್ಧಾಂತ ಮತ್ತು ನೀತಿಯ ಆಧಿಕಾರಿಕ ದಸ್ತಾವೇಜು ಎಂದು ಸ್ವೀಕರಿಸಲಾಯಿತು. ಇದರೊಂದಿಗೆ ಜನಸಂಘದ ಅಧ್ಯಕ್ಷರ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 19 ಪರಂಪರೆಯಲ್ಲಿ ಹೊಸದೊಂದು ಅಧ್ಯಾಯವೇ ಆರಂಭಗೊಂಡಿತ್ತು. ಅಲ್ಲಿಯವರೆಗೆ ಯಾರಾದರೊಬ್ಬ ಹೆಸರಾಂತ, ವಯೋವೃದ್ಧ ಗೌರವಾರ್ಹ ಅಥವಾ ಪ್ರಸಿದ್ಧ ನಾಯಕರು ಜನಸಂಘದ ಅಧ್ಯಕ್ಷರಾಗಿರುತ್ತಿದ್ದರು, ಸಂಘದಲ್ಲಿಯೇ ಬೆಳೆದು ಬಂದ ಕಾರ್ಯಕರ್ತರಾಗಿದ್ದ ಬಚ್ಚರಾಜ್ ವ್ಯಾಸ್ ಅವರನ್ನು ಇದೇ ಮೊದಲ ಬಾರಿಗೆ ಅಧ್ಯಕ್ಷರಾಗಿ ಚುನಾಯಿಸಲಾಯಿತು. ವ್ಯಾಸರು ಹೋಲಿಕೆಯಲ್ಲಿ ತರುಣರೂ, ಮೊದಲ ಪೀಳಿಗೆಯ ಕಾರ್ಯಕರ್ತರಲ್ಲಿ ಒಬ್ಬರೂ ಆಗಿದ್ದರು. ಜನಸಂಘವನ್ನು ಕಟ್ಟಿ ಬೆಳೆಸುವ ಸಲುವಾಗಿ ಅವರನ್ನು ಡಾ. ಮುಖರ್ಜಿ ಅವರು ಶ್ರೀ ಗೋಳ್ವಾಳ್‍ಕರ್ ಅವರಿಗೆ ಕೊಡುಗೆಯಾಗಿ ನೀಡಿದ್ದರು. ವ್ಯಾಸರ ಇಡೀ ರಾಜಕೀಯ ಜೀವನ ಜನಸಂಘದ ಮೂಲಕವೇ ವಿಕಾಸಗೊಂಡಿತ್ತು. ಅವರು ಜನಸಂಘದ ಮೊಟ್ಟಮೊದಲ ಕಾರ್ಯಕರ್ತ ಅಧ್ಯಕ್ಷರಾಗಿದ್ದರು. ಉಪಾಧ್ಯಾಯರು ಸಂಘದ ಕಾರ್ಯಕರ್ತರಿಗಾಗಿ ರಾಜಕೀಯ ದೃಷ್ಟಿಯಿಂದ ಯಾವ ನೇತೃತ್ವ ಯಾದಿಯನ್ನು ಸಿದ್ಧಪಡಿಸಿದ್ದರೋ, ಅದೇ ಈಗ ಪೂರ್ಣ ರೂಪದಲ್ಲಿ ಸಂಘಟನೆಯ ಪ್ರಭುತ್ವವನ್ನು ನಿರ್ವಹಿಸತೊಡಗಿತ್ತು. ಅಖಿಲ ಭಾರತೀಯ ಅಧ್ಯಕ್ಷರಾಗಿದ್ದ ಬಚ್ಚರಾಜ್ ವ್ಯಾಸ್, ಸಂಘಟನೆಯ ಕಾರ್ಯದರ್ಶಿಯಾಗಿದ್ದ ಸುಂದರಸಿಂಹ ಭಂಡಾರಿ, ಕಾರ್ಯದರ್ಶಿ ಜಗನ್ನಾಥರಾವ್ ಜೋಶಿ ಹಾಗೂ ಚುನಾವಣಾ ಸಂಚಾಲಕರಾಗಿದ್ದ ನಾನಾಜೀ, ದೇಶ್‍ಮುಖ್ ಇವರೆಲ್ಲರೂ ಜನಸಂಘಕ್ಕೆ ಬಂದಿದ್ದ ಮೊದಲನೆಯ ತಲೆಮಾರಿನ ಸಂಘ ಪ್ರಚಾರಕರಾಗಿದ್ದರು. ಅವರೆಲ್ಲರೂ ಈಗ ಪಕ್ಷದ ಅಖಿಲ ಭಾರತೀಯ ನೇತಾರರ ರೂಪದಲ್ಲಿ ಮೂಡಿಬಂದಿದ್ದರು. ಉಪಾಧ್ಯಾಯರು ತಮ್ಮ ವರದಿಯಲ್ಲಿ ಸಂಘಟನೆಯ ಸ್ತಂಭಗಳೆಂಬುದಾಗಿ ಸಂತೋಷದಿಂದ ಈ ಹೆಸರುಗಳನ್ನು ಉಲ್ಲೇಖಿಸಿದ್ದರು. ಅಟಲ್ ಬಿಹಾರೀ ವಾಜಪೇಯಿ ಅವರೂ ಮಹತ್ವದ ಜನಪ್ರಿಯ ನಾಯಕರಾಗಿ ಹೆಸರುಗಳಿಸಿದ್ದರು. ಇನ್ನೊಬ್ಬ ಮಹತ್ವದ ಲೇಖಕರೆಂದರೆ ಬಲರಾಜ್ ಮಧೋಕ್, ಈ ಇಬ್ಬರೂ ವಿಜಯವಾಡಾದ ಅಧಿವೇಶನಕ್ಕೆ ಹೋಗಿರಲಿಲ್ಲ. ಇವರ ಗೈರುಹಾಜರಿಯೂ ಜನಸಂಘದ ಇತಿಹಾಸದಲ್ಲಿನ ಒಂದು ಹೊಸ ಪ್ರಕರಣವೇ ಆಗಿತ್ತು. ಬಚ್ಚರಾಜ್ ವ್ಯಾಸರನ್ನು ಅಧ್ಯಕ್ಷರನ್ನಾಗಿಸುವುದು ಇವರಿಬ್ಬರಿಗೂ ಒಪ್ಪಿಗೆಯಾಗಿರಲಿಲ್ಲ. ಇಂಗ್ಲಿಷ್ ಅನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಯನ್ನಾಗಿ ಉಳಿಸಿಕೊಳ್ಳುವ ಸಂವಿಧಾನ ದತ್ತವಾದ ವಿನಾಯಿತಿಯ ಅವಧಿ 1965ರ ಜನವರಿ 26 ರಂದು ಕೊನೆಗೊಂಡು, ಹಿಂದಿಗೆ ಆ ಸ್ಥಾನ ದೊರೆಯಬೇಕಾಗಿತ್ತು. ಆ ಹೊತ್ತಿಗೆ ದಕ್ಷಿಣ ಭಾರತದಲ್ಲಿ ಇಂಗ್ಲಿಷ್‌ನ ಪರವಾದ ಹಾಗೂ ಹಿಂದಿಗೆ ವಿರುದ್ಧವಾದ ಗಲಭೆಗಳು ಆರಂಭವಾದುವು. ಪಾಂಡಿಚೆರಿಯಲ್ಲಿ ಶ್ರೀ ಅರವಿಂದ್ ಆಶ್ರಮದ ಹಾಗೂ ತಿರುಪತಿಯಲ್ಲಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರ ಹೆಸರಿನ ಗ್ರಂಥಾಲಯಗಳಿಗೂ 20 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬೆಂಕಿ ಹಚ್ಚಲಾಯಿತು. ತಮಿಳುನಾಡಿನಲ್ಲಿ ಹಿಂಸಾಚಾರ ವ್ಯಾಪಕ ಸ್ವರೂಪವನ್ನು ಪಡೆದುಕೊಂಡಿತು. ಜಾಲಂಧರ್‍ನಲ್ಲಿ ತಮ್ಮ ವರದಿಯನ್ನು ಮಂಡಿಸುತ್ತ ಉಪಾಧ್ಯಾಯರು ಹೀಗೆಂದು ಹೇಳಿದರು: ``ಆಂದೋಳನಕ್ಕೆ ಮೂಲ ಕಾರಣವಾಗಿದ್ದುದು ಭಾಷೆಯ ಸಮಸ್ಯೆಯಲ್ಲ, ರಾಜಕೀಯ. ಚಕ್ರವರ್ತಿ ರಾಜಗೋಪಾಲಾಚಾರ್ಯರು ಮತ್ತು ದ್ರಾವಿಡ ಮುನ್ನೇತ್ರ ಕವಿಗಂನ ನೇತಾರರು ಜನರ ಭಾವನೆಗಳನ್ನು ಬಡಿದೆಬ್ಬಿಸಲು ಸಾಧ್ಯವಿದ್ದ ಎಲ್ಲ ವಿಧಾನಗಳನ್ನು ಆಶ್ರಯಿಸಿದರು. ಕಾಂಗ್ರೆಸ್‍ನಲ್ಲಿದ್ದ ಒಳಗಿನ ಗುಂಪುಗಾರಿಕೆಯೂ ಇದಕ್ಕೆ ನೆರವಾಯಿತು. ಮದ್ರಾಸಿನ ಹಟದ ಸ್ವಭಾವದ ಮುಖ್ಯ ಮಂತ್ರಿಗಳ ಹಾಗೂ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿದ್ದವರ ``ಹಿಂದಿಯ ಕಾಗದಗಳನ್ನು ಕಸದ ಬುಟ್ಟಿಗೆ ಎಸೆಯಿರಿ" ಎಂಬ ಘೋಷಣೆ ಬೆಂಕಿಗೆ ತುಪ್ಪವನ್ನೆರೆಯುವ ಕೆಲಸವನ್ನು ಮಾಡಿತು. ಆಂದೋಳನ ಸೂತ್ರಬದ್ಧವಾಗಿ ಪರಿಣಮಿಸಿದ ಬಳಿಕ ಅದರ ನೇತೃತ್ವ ವಾಮಪಂಥೀಯರಾದ ಸಾಮ್ಯವಾದಿಗಳ ಹಾಗೂ ಹಿಂದಿನ ಮುಸ್ಲಿಮ್ ಲೀಗ್‍ನ ನಾಯಕರ ಕೈಗೆ ವರ್ಗಾವಣೆಗೊಂಡಿತು. ಕೆಲವು ಮಂದಿ ವಿದೇಶದ ಪಾದ್ರಿಗಳೂ ಆ ಆಂದೋಳನಕ್ಕೆ ಪ್ರೋತ್ಸಾಹವನ್ನಿತ್ತರು. ತಮ್ಮ ಈ ಹೇಳಿಕೆಯ ಮೂಲಕ ವಾಸ್ತವವಾಗಿ ತಮಿಳರು ಹಿಂದೀ ವಿರೋಧಿಗಳಲ್ಲ ಎಂಬ ಅಭಿಪ್ರಾಯವನ್ನು ಉಪಾಧ್ಯಾಯರು ತಿಳಿಸಬಯಸಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಪ್ರತ್ಯೇಕತಾವಾದಿಗಳು ಈ ವಿಚಾರವನ್ನು ದುರುಪಯೋಗಪಡಿಸಿಕೊಂಡರು. ಜನಸಂಘದ ಪ್ರತಿನಿಧಿಗಳ ಹಿಂದಿಯ ಬಗೆಗಿನ ನಿಷ್ಠೆಯನ್ನು ಬೆಂಬಲಿಸಲು ಬಹುಶಃ ಉಪಾಧ್ಯಾಯರ ಈ ಹೇಳಿಕೆ ಉಪಯುಕ್ತವಾಗಬಹುದೇನೋ. ಆದರೆ, ಭಾರತದ ಭಾಷಾ ಸಮಸ್ಯೆಯ ವಿಶ್ಲೇಷಣೆ ಇಷ್ಟು ಸರಳವಾದದ್ದೇನೂ ಅಲ್ಲ. ದೀನ್‍ದಯಾಳ್ ಉಪಾಧ್ಯಾಯರು ಸಂಘಟನೆಯ ತಮ್ಮ ದೌರ್ಬಲ್ಯವನ್ನು ಹೊರಹಾಕಿದರು. ``ತಮಿಳುನಾಡಿನಲ್ಲಿ ಜನಸಂಘದ ಕಾರ್ಯ ಹೊಸದೂ, ಅಲ್ಪ ಪ್ರಮಾಣದ್ದೂ ಆಗಿದೆ. ಆದ್ದರಿಂದ ಅಲ್ಲಿ ಪ್ರಭಾವ ಬೀರಲು ನಮಗೆ ಸಾಧ್ಯವಾಗಲಿಲ್ಲ." ಜನಸಂಘವನ್ನು ಗೌರವಪೂರ್ಣ ಹಿರಿಮೆಯಿಂದ ಕೂಡಿದ ಸುಸಂಸ್ಕೃತವಾದ, ಶಿಸ್ತುಬದ್ಧವಾದ ಹಾಗೂ ಪ್ರಜಾತಂತ್ರಾತ್ಮಕ ವರ್ತನೆಯ ಸಂಘಟನೆಯನ್ನಾಗಿಸಲು ಉಪಾಧ್ಯಾಯರು ಶ್ರಮಿಸುತ್ತಿದ್ದರು. ಅವರ ಸಂಘಟನೆಗೆ ಸೇರಿದವರೇ ಆಗಿದ್ದ ಮಧ್ಯ ಪ್ರದೇಶ ವಿಧಾನ ಸಭೆಯ ಸದಸ್ಯರಲ್ಲಿ ಒಬ್ಬರಾಗಿದ್ದ ಫಂಡರೀರಾವ್ ಕೃದಂತ ಎಂಬುವರು ವಿಧಾನ ಸಭೆಯ ಉಪಾಧ್ಯಕ್ಷರತ್ತ ಚಪ್ಪಲಿಯನ್ನು ಎಸೆದಿದ್ದರು. ಉಪಾಧ್ಯಾಯರಿಗೆ ಇದೊಂದು ತುಂಬ ಪೇಚಿನ ಪ್ರಸಂಗವಾಗಿತ್ತು. ಈ ಪ್ರಸಂಗವನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸುತ್ತ ಅವರು ಹೀಗೆಂದಿದ್ದರು : ``ಆವೇಶಕ್ಕೊಳಗಾಗಲು ಅಥವಾ ಕ್ಷೋಭೆಗೆ ಒಳಗಾಗಲು ಎಷ್ಟೇ ಕಾರಣಗಳಿದ್ದರೂ ಈ ನಡವಳಿಕೆ ಸಂಸತ್ತಿನ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 21 ಪರಂಪರೆಗೆ ಹಾಗೂ ಜನಸಂಘ ಅಂಗೀಕರಿಸಿರುವ ಸಂಹಿತೆಗೆ ವಿರುದ್ಧವಾದುದೇ ಆಗಿದೆ. ಹೀಗಾಗಿ ನಮ್ಮ ಕಾರ್ಯಕರ್ತರು, ಯಾರೂ ಹೀಗೆ ವರ್ತಿಸಬಾರದು. ನಾವು ಸಂಯಮವನ್ನು ಕಾಯ್ದುಕೊಳ್ಳಬೇಕು." ಪ್ರಜಾತಂತ್ರಾತ್ಮಕ ಪದ್ಧತಿಯನ್ನು ಅಂಗೀಕರಿಸುವುದರಿಂದ ಮಾತ್ರವೇ ಸಮಾಜದ ಸ್ವಭಾವ ಮತ್ತು ಸಂಸ್ಕಾರಗಳು ಪ್ರಜಾತಂತ್ರಾತ್ಮಕವಾಗಿ ಬಿಡುವುದಿಲ್ಲ. ವಿಶೇಷ ಘಟನೆಗಳಿಂದ ಕೂಡಿದ್ದ 1965-66ರ ಅವಧಿಯಲ್ಲಿ ಆಡಳಿತ ವ್ಯವಸ್ಥೆಯ ಎಲ್ಲ ಅಂಗಗಳೂ ಪ್ರಜಾತಂತ್ರಾತ್ಮಕ ಸ್ವಭಾವಕ್ಕೆ ಬಹುಮಟ್ಟಿಗೆ ಹೊರತಾಗಿವೆ ಎಂಬ ಸಂಗತಿ ಜನರ ಗಮನವನ್ನು ವಿಶೇಷವಾಗಿ ಸೆಳೆಯತೊಡಗಿತ್ತು. ತಮ್ಮ ವರದಿಯಲ್ಲಿ ಆ ಘಟನೆಗಳನ್ನು ಉಲ್ಲೇಖಿಸುತ್ತ ಉಪಾಧ್ಯಾಯರು ಈ ಸಲಹೆಯನ್ನು ಮುಂದಿರಿಸಿದರು: ``ಪ್ರಧಾನ ಮಂತ್ರಿಗಳು ಎಲ್ಲ ಪಕ್ಷಗಳ ಸಭೆಯನ್ನು ಕರೆಯಬೇಕು ಹಾಗೂ ರಾಷ್ಟ್ರೀಯ ಏಕತಾ ಪರಿಷತ್ತಿನಂತಹ ಇನ್ನೊಂದು ಪರಿಷತ್ತನ್ನು ರಚಿಸಿ, ಪ್ರಜಾತಂತ್ರ ಪರಂಪರೆಯನ್ನು ಕಾಯ್ದುಕೊಂಡು ಬರಲು ಹಾಗೂ ಅದು ಗಟ್ಟಿಯಾಗಿ ಬೇರೂರಿ ನಿಲ್ಲುವಂತೆ ಮಾಡಲು ಪ್ರಯತ್ನಿಸಬೇಕು. ಆಡಳಿತ ವ್ಯವಸ್ಥೆ, ರಾಜಕೀಯ ಪಕ್ಷಗಳು ಹಾಗೂ ಪತ್ರಿಕೆಗಳು ಇವೆಲ್ಲಕ್ಕೂ ನೀತಿ ಸಂಹಿತೆಯನ್ನು ರೂಪಿಸಬೇಕು. ಆಡಳಿತ ವ್ಯವಸ್ಥೆಯೂ ಒಂದು ಸಾರ್ವತ್ರಿಕ ಚುನಾವಣೆ ಮತ್ತು ಇನ್ನೊಂದು ಸಾರ್ವತ್ರಿಕ ಚುನಾವಣೆಯ ನಡುವಣ ಅವಧಿಯಲ್ಲಿ ಜನಾಭಿಪ್ರಾಯದ ಬದಲಾವಣೆಯ ಆಧಾರದ ಮೇಲೆ ತನ್ನ ನೀತಿಗಳನ್ನು ಬದಲಾಯಿಸಿಕೊಳ್ಳುವಂಥ ಒಂದು ಪ್ರಕ್ರಿಯೆಯ ಕಟ್ಟುಪಾಡುಗಳನ್ನು ಅಂಗೀಕರಿಸಬೇಕು. ಪ್ರಜಾತಂತ್ರ ಮತ್ತು ಹಠವಾದಿಗಳು ಒಂದುಗೂಡಿ ನಡೆಯಲು ಸಾಧ್ಯವಾಗುವುದಿಲ್ಲ." ಇಂಥ ಯಾವುದಾದದರೂ ಒಂದು ಪರಿಷತ್ತಿನ ರಚನೆಯಾಗಿ ಅದು ಈ ವಿಷಯದ ಬಗ್ಗೆ ಪರ್ಯಾಲೋಚನೆ ಮಾಡಿದರೆ ಒಳಿತಾಗುತ್ತಿತ್ತು. ಜನಾಭಿಪ್ರಾಯ ಬದಲಾದಂತೆ ಆಡಳಿತ ವ್ಯವಸ್ಥೆಯೂ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬುದು ವಿಚಾರ-ವಿಮರ್ಶೆಯ ಒಳ್ಳೆಯ ವಸ್ತುವಾಗಬಲ್ಲದು. ಕಾರ್ಯಪಾಲಿಕೆ ಮತ್ತು ಪಕ್ಷನಿಷ್ಠ ವಾದಗಳಿಂದ ಪೆಟ್ಟು ತಿಂದಿರುವ ವಿಧಾನಪಾಲಿಕೆಯ ಶಕ್ತಿಗೆ ವ್ಯಾವಹಾರಿಕ ಸ್ವರೂಪವನ್ನು ನೀಡುವ ಮಾರ್ಗವನ್ನು ಅರಸುವುದು ಪ್ರಜಾತಂತ್ರಾತ್ಮಕ ಸಮಾಜಗಳು ಇನ್ನೂ ಮಾಡಬೇಕಾಗಿರುವ ಕಾರ್ಯವಾಗಿಯೇ ಉಳಿದಿದೆ. 1967ರ ನಾಲ್ಕನೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜನಸಂಘದ ತರುಣ ಮುಂದಾಳುಗಳು ಸಾಕಷ್ಟು ಒಳ್ಳೆಯ ಸಿದ್ಧತೆಯನ್ನೇ ನಡೆಸಿದ್ದರು.1967ರ ಚುನಾವಣೆಗಳಲ್ಲಿ ಜನಸಂಘವೇ ಕಾಂಗ್ರೆಸ್ ಪಕ್ಷದ ಅನಂತರದ ಒಂದು ದೊಡ್ಡ ಪಕ್ಷವಾಗಿ ಹೊರಬಂದಿತ್ತು. ಈ ಸಾರ್ವತ್ರಿಕ ಚುನಾವಣೆಯ ಬಗೆಗಿನ ವರದಿಯೇ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಉಪಾಧ್ಯಾಯರು 22 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಂಡಿಸಿದ ಕೊನೆಯ ಹಾಗೂ ಅತ್ಯಂತ ಮಹತ್ವಪೂರ್ಣ ದಸ್ತಾವೇಜಾಗಿದೆ. ನಾಲ್ಕನೆಯ ಸಾರ್ವತ್ರಿಕ ಚುನಾವಣೆಯ ಮೂಲಕ ನಮ್ಮ ನಾಡು ಪ್ರಜಾತಂತ್ರದ ಒಂದು ಚರಣವನ್ನು ಪೂರ್ಣಗೊಳಿಸಿಕೊಂಡಿತ್ತು. ಭಾರತದಲ್ಲಿ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಪ್ರವರ್ತಕರಾಗಿದ್ದ ನೆಹರೂ ಅವರ ಅನುಪಸ್ಥಿತಿಯಲ್ಲಿ ನಡೆದ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆ ಇದಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಒಡಕಿನ ಲಕ್ಷಣಗಳು ಗೋಚರಿಸತೊಡಗಿದ್ದುವು. ಕಾಂಗ್ರೆಸ್ಸೇತರ ಸಿದ್ಧಾಂತವಾದಿ ಪಕ್ಷಗಳ ಯುಗ ರೂಪುಗೊಳ್ಳತೊಡಗಿತ್ತು. ದೀನ್ ದಯಾಳ್ ಉಪಾಧ್ಯಾಯರು ಭಾರತದ ಅತ್ಯಂತ ದೊಡ್ಡ ವಿರೋಧ ಪಕ್ಷದ ಗೌರವಾರ್ಹ ನಾಯಕರಾಗಿದ್ದರು. ಡಾ. ರಾಮಮನೋಹರ್ ಲೋಹಿಯಾ ಅವರು ಕಾಂಗ್ರೆಸ್ಸೇತರ ಸಿದ್ಧಾಂತ ಪಕ್ಷವಾದಿಗಳ ಸೂತ್ರಧಾರರಾಗಿ ಹೊರಹೊಮ್ಮಿದ್ದರು. ಭಾರತದಲ್ಲಿ ಏಕಛತ್ರದ ಅಡಿಯಲ್ಲಿನ ಏಕಪಕ್ಷದ ಆಡಳಿತ ರಾಜನೀತಿ ಕೊನೆಗೊಳ್ಳತೊಡಗಿತ್ತು. ``1962 ರಿಂದ 1967ರ ವರೆಗಿನ ಐದು ವರ್ಷಗಳ ಅವಧಿ ಅದೆಷ್ಟು ವಿಶಿಷ್ಟ ಘಟನೆಗಳಿಂದ ಕೂಡಿದ್ದೂ ಆಂದೋಳನಾತ್ಮಕವೂ ಆಗಿದ್ದಿತೆಂದರೆ ನಾಲ್ಕನೆಯ ಸಾರ್ವತ್ರಿಕ ಚುನಾವಣೆಯ ಬಗ್ಗೆ ಜನರ ಮನಸ್ಸಿನಲ್ಲಿ ಅನೇಕ ಅನುಮಾನಗಳು ತುಂಬಿಕೊಂಡಿದ್ದುವು. ಈ ಎಲ್ಲ ಶಂಕೆ- ಅನುಮಾನಗಳು ಬೇರಿಲ್ಲದವುಗಳೆಂಬುದು ದೃಢಪಟ್ಟಿತು. ಅಷ್ಟೇ ಅಲ್ಲ, ಜನರು ತುಂಬ ಉತ್ಸಾದಿಂದ ಹಾಗೂ ವಿವೇಚನೆಯಿಂದ ಮತದಾನದಲ್ಲಿ ಭಾಗವಹಿಸಿದರು. ಇದರಿಂದ ಭಾರತೀಯ ಪ್ರಜಾತಂತ್ರದ ಶಕ್ತಿಯ ಅರಿವು ನಮಗೆ ಉಂಟಾಗುತ್ತದೆ.'' ಈ ಚುನಾವಣೆಗಳಿಗೆ ಮುನ್ನ ಕಾಂಗ್ರೆಸ್ಸೇತರ ರಾಜಕೀಯ ಸಿದ್ಧಾಂತಗಳ ಆಧಾರದ ಮೇಲೆ ವಿರೋಧ ಪಕ್ಷಗಳು ಒಕ್ಕೂಟವನ್ನು ಏರ್ಪಡಿಸಿಕೊಳ್ಳುವ ಪ್ರಯತ್ನ ಮಾಡಿದುವು. ಇದು ಉಪಾಧ್ಯಾಯರಿಗೆ ಒಪ್ಪಿಗೆಯಾಗಿರಲಿಲ್ಲ. ಅವರು ತಮ್ಮ ವರದಿಯಲ್ಲಿ ಹೀಗೆಂದು ಹೇಳಿದ್ದರು. ``... ಕಾಂಗ್ರೆಸ್ ಪಕ್ಷಕ್ಕೆ ಹೊರತಾದ ಇತರ ರಾಜಕೀಯ ಪಕ್ಷಗಳ ದೌರ್ಬಲ್ಯ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಚುನಾವಣೆಗೆ ಮುನ್ನ ಕಾಂಗ್ರೆಸ್ಸೇತರ ಪಕ್ಷಗಳು ಒಂದುಗೂಡಿ, ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅಗತ್ಯ ಎಂಬಂಥ ವಾತಾವರಣ ಸೃಷ್ಟಿಯಾಗಿತ್ತು. ನೇರವಾದ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುವಂತೆ ಮಾಡಬಹುದೆಂಬುದು ಅವುಗಳ ಭಾವನೆಯಾಗಿತ್ತು. ಈ ಬಗೆಯ ಯಾವುದೇ ಒಡಂಬಡಿಕೆ ತಮಗೆ ಪ್ರಯೋಜನಕಾರಿಯಾಗಲಾರದೆಂಬುದು ಭಾರತೀಯ ಜನಸಂಘದ ಅನುಭವವೇ ಆಗಿತ್ತು. ಏಕೆಂದರೆ ನೇರವಾದ ಸ್ಪರ್ಧೆಯಲ್ಲಿ ಇತರ ಕಾಂಗ್ರೆಸ್ಸೇತರ ಪಕ್ಷಗಳು ಜನಸಂಘಕ್ಕೆ ಬೆಂಬಲವಾಗಿ ನಿಲ್ಲುವುದಕ್ಕೆ ಬದಲಾಗಿ ಕಾಂಗ್ರೆಸ್ ಪಕ್ಷದೊಂದಿಗೇ ಕೈಗೂಡಿಸುತ್ತಲಿದ್ದವು. ಈ ಚುನಾವಣೆಗಳೂ ಇದೇ ಅನುಭವವನ್ನು ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 23 ಪುಷ್ಪಿಗೊಳಿಸಿದ್ದುವು." ಪರ್ಯಾಯ ಪಕ್ಷವೊಂದನ್ನು ರೂಪಿಸುವ ವಿಷಯದ ಬಗ್ಗೆ ಅವರ ಅಭಿಪ್ರಾಯ ಹೀಗಿತ್ತು : ``ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಿಷ್ಪ್ರಭಾವಿಯಾಗುವ ಹಾಗೂ ಕ್ರಮೇಣ ದೂರ ಸರಿಯುವ ಪರಿಸ್ಥಿತಿಯಿಂದಾಗಿ ಅದಕ್ಕೆ ಪರ್ಯಾಯವಾಗಿ ಒಂದು ರಾಷ್ಟ್ರೀಯ ಹಾಗೂ ಪ್ರಜಾತಂತ್ರಾತ್ಮಕ ಪಕ್ಷ ಮೂಡಿಬರುವುದು ತುಂಬ ಅಗತ್ಯವಾಗಿದೆ. ಒಡೆದು ಕೂಡಿಸಿ ಮಾಡುವುದರಿಂದ ಈ ಕಾರ್ಯ ಸಾಧ್ಯವಿಲ್ಲ. ಅದಕ್ಕೆ ಸ್ಪಷ್ಟವಾದ ಕಾರ್ಯಕ್ರಮ, ಸುನಿಶ್ಚಿತವಾದ ನೀತಿ, ಸರಿಯಾದ ಸಿದ್ಧಾಂತ ಮತ್ತು ಸುದೃಢವಾದ ಸಂಘಟನೆ ಅಗತ್ಯವಾಗುತ್ತದೆ. ಈ ಚುನಾವಣೆಗಳಲ್ಲಿ ಜನಸಂಘಕ್ಕೆ ಲೋಕಸಭೆಯ 35 ಸ್ಥಾನಗಳಲ್ಲಿ ಗೆಲುವು ಲಭಿಸಿತ್ತು. ಗೆಲುವು ಸಾಧಿಸಲಾಗಿದ್ದ ಈ 35 ಸ್ಥಾನಗಳೇ ಅಲ್ಲದೆ, 75 ಸ್ಥಾನಗಳಲ್ಲಿ ಜನಸಂಘದ ಅಭ್ಯರ್ಥಿಗಳು ಗೆದ್ದ ಉಮೇದುವಾರರಿಗೆ ಪ್ರಬಲ ಸ್ಪರ್ಧೆಯನ್ನು ನೀಡಿದ್ದರು. ಇವುಗಳಲ್ಲಿ 15 ಸ್ಥಾನಗಳಲ್ಲಿ ಜನಸಂಘದ ಹುರಿಯಾಳುಗಳು 200 ರಿಂದ 5000 ಮತಗಳ ಅಂತರದಲ್ಲಿ ಸೋಲನ್ನಪ್ಪಿದ್ದರು. ತಮ್ಮ ಪಕ್ಷದ ಪ್ರಗತಿಯ ವಿಷಯದಲ್ಲಿ ಉಪಾಧ್ಯಾಯರಿಗೆ ಅಸಮಧಾನವೇನೂ ಇರಲಿಲ್ಲ. ಜನಸಂಘವು ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಎಲ್ಲ ಪಕ್ಷಗಳಿಗಿಂತಲೂ ಮುಂದೆ ಇರುವುದು ಮಾತ್ರವಲ್ಲ, ಎರಡು ಸಾಮ್ಯವಾದೀ ಪಕ್ಷಗಳಿಗಿಂತಲೂ ಹಾಗೂ ಸಂಯುಕ್ತ ಸಮಾಜವಾದಿ ಪಕ್ಷ ಹಾಗೂ ಪ್ರಜಾ ಸಮಾಜವಾದಿ ಪಕ್ಷಗಳು ಒಟ್ಟಾರೆಯಾಗಿ ಗಳಿಸಿರುವುದಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ.'' ಈ ವರದಿಯಲ್ಲಿ ಉಪಾಧ್ಯಾಯರು ಸಂಸದೀಯ ಹಾಗೂ ವಿಧಾನ ಮಂಡಳಿಯ ಪಕ್ಷಗಳ ಸ್ಥಿತಿಗತಿಗಳ ಬಗ್ಗೆ ತುಂಬ ವಿಸ್ತಾರವಾದ ವಿವರಣೆಯನ್ನೇ ಮುಂದಿರಿಸಿದ್ದಾರೆ. ಸಾಂಖ್ಯಿಕ ವಿಶ್ಲೇಷಣೆಯ ಬಳಿಕ, ಉಪಾಧ್ಯಾಯರು ಈ ಚುನಾವಣೆಯಿಂದ ಮೂಡಿಬಂದ ರಾಜಕೀಯ ಪ್ರವೃತ್ತಿಗಳ ವಿಶ್ಲೇಷಣೆಯನ್ನು ನೀಡಿದ್ದಾರೆ: ``ಬಹಳಷ್ಟು ಸ್ಥಾನಗಳಲ್ಲಿ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಮತದಾನ ಮಾಡಿದ್ದಾರೆ. ಆದರೆ ಅವರು ಆರ್ಥಿಕ- ರಾಜಕೀಯ ವಿಚಾರಗಳ ಆಧಾರದ ಮೇಲೆ ವಿವಿಧ ಪಕ್ಷಗಳಿಗೆ ಮತ ನೀಡಿದ್ದಾರೆಂದು ಹೇಳುವುದು ಈಗಲೇ ಸರಿಯಾಗಲಾರದು. ಮಜಲಿಸ್-ಏ-ಮುಶವ್ವರಾತ್-ಏ-ಮುಸಲ್‍ಮೀನ್ ಸಂಘಟನೆ ಕೋಮುವಾರು ಆಧಾರದ ಮೇಲೆ ರೂಪಿತವಾಗಿರುವಂಥದು ಹಾಗೂ ಆ ಸಂಘಟನೆಯ ಸೂಚನೆಗೆ ಅನುಗುಣವಾಗಿ ಅವರು ಮತದಾನ ಮಾಡಿದ್ದಾರೆ. ಮುಶವ್ವರಾತ್ ಸಂಘಟನೆಯ ನೇತಾರರು ಖಂಡಿತವಾಗಿಯೂ ತಮ್ಮ ರಾಜಕೀಯ ಫಾಯಿದೆ- ವ್ಯವಹಾರಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಆಂಧ್ರದಲ್ಲಿನ ಇತ್ತೇಹಾದುಲ್ ಮುಸಲ್‍ಮೀನ್ ಸಂಘಟನೆಯೂ ಕೋಮುವಾದೀ ನೆಲೆಯಲ್ಲಿಯೇ ಅಖಾಡಕ್ಕೆ ಇಳಿದಿದೆ... ಕೇರಳ 24 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ಮುಸ್ಲಿಮ್ ಲೀಗ್ ಕೂಡ ಸಂಯುಕ್ತರಂಗದ ಪ್ರಯೋಜನವನ್ನು ಪಡೆದುಕೊಂಡು ತನ್ನ ಪ್ರಭಾವವನ್ನು ಬೆಳೆಸಿಕೊಳ್ಳುತ್ತಿದೆ. ಈ ಸಂಘಟನೆಗಳ ಪ್ರಭಾವ ಮತ್ತು ವಿಸ್ತರಣೆ ಭಾರತೀಯ ಮುಸಲ್ಮಾನರ ರಾಷ್ಟ್ರೀಯ ಏಕೀಕರಣಕ್ಕೆ ಹಾಗೂ ನಾಡಿನ ಆರೋಗ್ಯಪೂರ್ಣ ರಾಜಕೀಯ ಬೆಳವಣಿಗೆಗೆ ಅಡ್ಡಿಯನ್ನುಂಟುಮಾಡುವಂಥವೇ ಆಗಿದೆ." ಈ ವಿಷಯಕ್ಕೆ ಸಂಬಂಧಿಸಿದಂತೆ ದೀನ್ ದಯಾಳ್ ಉಪಾಧ್ಯಾಯರು ಈ ಮಾತುಗಳನ್ನು ಬರೆದಿದ್ದಾರೆ. ``ಚುನಾವಣೆಗಳ ಪರಿಣಾಮವಾಗಿ ಕೆಲವು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನು ಕಳೆದುಕೊಂಡಿದೆ. ಆದರೆ, ದೆಹಲಿ ಮತ್ತು ಮದ್ರಾಸ್ ಪ್ರಾಂತ್ಯಗಳನ್ನು ಬಿಟ್ಟು ಬೇರಾವುದೇ ಕಡೆಯಲ್ಲೂ ಯಾವುದೇ ಒಂದು ಪಕ್ಷಕ್ಕೂ ಬಹುಮತ ಲಭಿಸಿಲ್ಲ. ಇದರ ಪರಿಣಾಮವಾಗಿ ಸಂಯುಕ್ತ ಸರ್ಕಾರಗಳ ಯುಗ ಪ್ರಾರಂಭಗೊಂಡಿದೆ. ಈ ಒಕ್ಕೂಟದ ಸಂಬಂಧ ಆಡಳಿತವನ್ನು ನಡೆಸುವುದಕ್ಕೆ ವಿಧಾನ ಸಭೆಯಲ್ಲಿ ಬಹುಮತವನ್ನು ಕಾಯ್ದುಕೊಂಡು ಬರುವುದಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಈ ಒಕ್ಕೂಟದ ಪರಿಣಾಮವಾಗಿ ಯಾವುದೇ ಪಕ್ಷ ತನ್ನ ವಿಚಾರಧಾರೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವ ಅಗತ್ಯವೂ ಇರುವುದಿಲ್ಲ. ಪಕ್ಷಗಳ ವಿಚಾರಧಾರೆಯನ್ನು ಆಧಾರವಾಗಿಟ್ಟುಕೊಂಡು, ಬಿಡಿಯಾಗಿಯೇ ಒಕ್ಕೂಟಕ್ಕೆ ಸಂಬಂಧಿಸಿದಂತೆ ತೀರ್ಮಾನವನ್ನು ಕೈಗೊಳ್ಳುವುದೂ ಸಾಧ್ಯವಾಗುವುದಿಲ್ಲ. ಇಂದೊಂದು ವ್ಯಾವಹಾರಿಕ ಪ್ರಶ್ನೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರವನ್ನು ರಚಿಸಲು ಅವಕಾಶ ಮಾಡಿಕೊಡುವ ಅಥವಾ ವಿಧಾನಸಭೆಗಳನ್ನು ವಿಸರ್ಜಿಸಿ ರಾಷ್ಟ್ರಪತಿಗಳ ಆಡಳಿತವನ್ನು ಜಾರಿಗೆ ತರುವ ಅವಕಾಶ ಮಾಡಿಕೊಡುವ ಪರ್ಯಾಯಗಳಿಂದ ಪಾರಾಗಿ ಸಂಯುಕ್ತ ಸರ್ಕಾರವನ್ನು ರಚಿಸಿಕೊಳ್ಳುವುದೇ ಉಚಿತವೆಂದು ಕಾಂಗ್ರೆಸ್ಸೇತರ ಸರ್ಕಾರಗಳು ಭಾವಿಸಿದುವು. ಅದರಂತೆ, ಆ ಸರ್ಕಾರಗಳು ರಚಿತವಾಗಿವೆ. ಅವುಗಳ ಅಂಗವಾಗಿರುವ ಪಕ್ಷಗಳು ವ್ಯಾವಹಾರಿಕ ನೆಲೆಯಲ್ಲಿ ಆಡಳಿತವನ್ನು ನಡೆಸಿಕೊಂಡು ಹೋಗುವ ತತ್ಪರತೆಯನ್ನು ತೋರಿಸುತ್ತಿರುವವರೆಗೂ, ಆ ಸರ್ಕಾರಗಳು ನಡೆಯುತ್ತ ಇರುತ್ತವೆ.'' ದೀನ್ ದಯಾಳ್ ಉಪಾಧ್ಯಾಯರು ಸಂಯುಕ್ತ ಆಡಳಿತ ಪಕ್ಷಗಳಿಂದ ರಚಿತವಾದಂಥ ಸರ್ಕಾರಗಳ ವಿಷಯದಲ್ಲಿ ಹೆಚ್ಚಿನ ಉತ್ಸಾಹವನ್ನೇನೋ ತೋರಿರಲಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯಕರ್ತರಿಗೆ ಈ ವಿಚಾರವನ್ನು ಒತ್ತಿ ಹೇಳಿದರು.... ``ನಾಲ್ಕೂ ಕಡೆಗಳಲ್ಲಿ ಸಂಯುಕ್ತ ಸರ್ಕಾರಗಳ ಬಗೆಗಿನ ಕಲ್ಪನೆ ರಾಜಕಾರಣಿಗಳಲ್ಲಿ ಜಾಗೃತಗೊಂಡಿದೆ ಎಲ್ಲ ಕಡೆಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಸರ್ಕಾರಗಳು ಕೊನೆಗೊಳ್ಳಬೇಕೆಂಬುದು ನಮ್ಮ ಇಚ್ಛೆಯಾಗಿದೆ. ಆದರೆ ನಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳುವ ಯತ್ನದಲ್ಲಿ ಆರೋಗ್ಯಪೂರ್ಣ ರಾಜಕೀಯ ಪರಂಪರೆಗಳಿಗೆ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 25 ವಿರುದ್ಧವಾಗಿರುವಂಥ ಯಾವುದೇ ಕ್ರಮವನ್ನು ಕೈಗೊಳ್ಳಬಾರದು.'' ಪ್ರಧಾನ ಕಾರ್ಯದರ್ಶಿಯಾಗಿ ಉಪಾಧ್ಯಾಯರು ತಮ್ಮ ಕಾರ್ಯಕರ್ತರಿಗೆ ಹಾಗೂ ವಿರೋಧ ಪಕ್ಷಗಳಿಗೆ ನೀಡಿದ ಸಂದೇಶ ಇದೇ. ಆದರೆ ಅವರ ಈ ಸಂದೇಶವನ್ನು ಅವರ ಪಕ್ಷವೂ ಕೇಳಿಸಿಕೊಳ್ಳಲಿಲ್ಲ, ಇತರ ವಿರೋಧ ಪಕ್ಷಗಳೂ ಕೇಳಿಸಿಕೊಳ್ಳಲಿಲ್ಲ ಎಂಬುದನ್ನು ಅನಂತರದ ಘಟನೆಗಳು ತೋರಿಸಿಕೊಟ್ಟುವು. ಇದರ ಪರಿಣಾಮವಾಗಿ ಭಾರತದ ರಾಜಕೀಯ ಇತಿಹಾಸದಲ್ಲಿ ನಾಲ್ಕನೆಯ ಸಾರ್ವತ್ರಿಕ ಚುನಾವಣೆಯ ಬಳಿಕ ನಮ್ಮ ನಾಡಿನ ನೇತಾರರು ನಡೆದುಕೊಂಡ ರೀತಿ ಆರೋಗ್ಯಪೂರ್ಣ ರಾಜಕೀಯ ಪರಂಪರೆಗಳಿಗೆ ವಿರುದ್ಧವಾದುದೇ ಆಗಿತ್ತು. ಭಾರತೀಯ ಜನಸಂಘದ ಹದಿನಾಲ್ಕನೆಯ ಅಧಿವೇಶನ ಕಲ್ಲಿಕೋಟೆಯಲ್ಲಿ ನಡೆಯಿತು. ದೀನ್ ದಯಾಳ್ ಉಪಾಧ್ಯಾಯರನ್ನು ಭಾರತೀಯ ಜನಸಂಘದ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. ಉಪಾಧ್ಯಾಯರ ಜಾಗದಲ್ಲಿ ಸುಂದರಸಿಂಹ ಭಂಡಾರಿ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ಚುನಾಯಿತರಾದರು. ಭಾರತೀಯ ಜನಸಂಘದ ಅಧ್ಯಕ್ಷ 1965ರಲ್ಲಿ ನಡೆದ ವಿಜಯವಾಡ ಅಧಿವೇಶನದಲ್ಲಿ ಜನಸಂಘದ ಅಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡುವ ಸಲುವಾಗಿ ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಇದರ ಪರಿಣಾಮವಾಗಿ ಬಚ್ಚರಾಜ್ ವ್ಯಾಸ್ ಅವರು ಜನಸಂಘದ ಅಧ್ಯಕ್ಷರಾದರು. 1966ರಲ್ಲಿ ಬಲರಾಜ್ ಮಧೋಕ್ ಅವರಿಗೆ ಈ ಅವಕಾಶ ದೊರೆಯಿತು. 1967ರಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಐತಿಹಾಸಿಕ ಅಧಿವೇಶನದಲ್ಲಿ ದೀನ್ ದಯಾಳ್ ಉಪಾಧ್ಯಾಯರನ್ನು ಜನಸಂಘದ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. ಈ ಅಧಿವೇಶನದಲ್ಲಿ ದೀನ್ ದಯಾಳ್ ಉಪಾಧ್ಯಾಯರು ಮತ್ತು ಜನಸಂಘ ತಮ್ಮ ಪ್ರತಿಷ್ಠೆ ಹಾಗೂ ಪ್ರಭಾವಗಳ ದೃಷ್ಟಿಯಿಂದ ಅತ್ಯುಚ್ಚ ನೆಲೆಯನ್ನು ತಲುಪಿದ್ದುವು. ಡಿಸೆಂಬರ್ 29, 30 ಮತ್ತು 31 ರಂದು ಜನಸಂಘದ 14ನೆಯ ಅಧಿವೇಶನ ಉಪಾಧ್ಯಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಫೆಬ್ರುವರಿ 10 ರಂದು ಮಧ್ಯ ರಾತ್ರಿಯಲ್ಲಿ ಮುಗಲ್ ಸರಾಯ್ ರೈಲ್ವೆ ನಿಲ್ದಾಣದಲ್ಲಿ ಅವರ ಹತ್ಯೆ ನಡೆಯಿತು. ದೀನ್ ದಯಾಳ್ ಅವರು ಕೇವಲ 43 ದಿನಗಳ ಕಾಲ ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದರು. ಈ 43 ದಿನಗಳಲ್ಲಿ ಅವರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ; ಅದು ಆವರೆಗಿನ ಜನಸಂಘದ ಹಾಗೂ ದೀನ್ ದಯಾಳ್ ಅವರ ಅಲ್ಲಿಯ ವರೆಗಿನ ಚಿಂತನೆಯ ನವನೀತ ಸ್ವರೂಪವೇ ಆಗಿದ್ದಿತೆಂದು ಹೇಳಬಹುದಾಗಿದೆ. ಒಂದು ಕಾಲಘಟ್ಟದ ವಿಶೇಷ ಪರಿಸ್ಥಿತಿಯಲ್ಲಿ ಇಂಥ ಭಾಷಣವನ್ನು ಮಾಡಲಾಗುತ್ತದೆ. 1967ರ ಚುನಾವಣೆಗಳಲ್ಲಿನ ಬದಲಾದ ಪರಿಸ್ಥಿತಿಯೇ ಉಪಾಧ್ಯಾಯರ ಈ 26 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿವೇಚನೆ ಅಥವಾ ಚಿಂತನೆಗೆ ಹಿನ್ನೆಲೆಯಾಗಿದ್ದಿತು. ಸ್ವಾತಂತ್ರ್ಯಾನಂತರ ಏರ್ಪಟ್ಟ ಸಾಮಾಜಿಕ ರಾಜಕೀಯ ಪ್ರಯತ್ನಗಳ ಪರಿಣಾಮವಾಗಿ ``ಜನ ಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಉದಿಸಿರುವದೇ ಈ ಯುಗದ ಬಹುದೊಡ್ಡ ಕಾಣಿಕೆ" ಎಂಬುದಾಗಿ ಉಪಾಧ್ಯಾಯರು ಭಾವಿಸಿದ್ದರು. ``ತಾತ್ಕಾಲಿಕ ರಾಜಕೀಯ ಲಾಭಗಳಿಗಾಗಿ ಅದನ್ನು ಸಾಧನವಾಗಿಸಿಕೊಳ್ಳುವುದು ಒಳ್ಳೆಯದಲ್ಲ'' ಎಂದೂ ಅವರು ಎಚ್ಚರಿಸಿದ್ದರು. ಯುಗ- ಸಂಕ್ರಮಣದತ್ತ ಬೆರಳು ತೋರುತ್ತ ಅವರು ಹೀಗೆಂದಿದ್ದಾರೆ: ``1965ರ ಆಗಸ್ಟ್-ಸೆಪ್ಟೆಂಬರ್ ನಡುವಣ ಅವಧಿಯಲ್ಲಿ...... ಭಾರತದ ವೀರ ಸೈನಿಕ ಪಡೆಗಳು ಪಾಕೀಸ್ತಾನದ ಆಕ್ರಮಣವನ್ನು ಎದುರಿಸಿ ತಮ್ಮ ಪರಾಕ್ರಮ ಮತ್ತು ವಿಜಿಗೀಷತ್ವವನ್ನು ಮೆರೆದಾಗಲೇ ದಂಗೆ ಪರಿವರ್ತನೆಗೆ ನಾಂದಿಯಾಯಿತು. ಯುಗ ಪರಿವರ್ತನೆಯ ಗಳಿಗೆ ಸಂಕ್ರಮಣಕಾಲವನ್ನುಂಟು ಮಾಡುತ್ತದೆ; ಅದು ಸಮಸ್ಯೆಗಳ ಕಾಲವೇ ಆಗಿರುತ್ತದೆ. ಮೊದಲ ಸಮಸ್ಯೆ ಸಂಯುಕ್ತ ಮಂತ್ರಿಮಂಡಲದ ರಚನೆಗೆ ಸಂಬಂಧಿಸಿದ್ದು, ಎರಡನೆಯದು ಸಂವಿಧಾನಾತ್ಮಕ ಚೌಕಟ್ಟಿಗೆ ಸಂಬಂಧಿಸಿದ್ದು, ಮೂರನೆಯದು ಹಣಕಾಸು ವ್ಯವಸ್ಥೆ ಹಾಗೂ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ್ದು'' ಎಂಬುದಾಗಿ ಉಪಾಧ್ಯಾಯರು ತಮ್ಮ ಚಿಂತನೆಯನ್ನು ಮುಂದಿರಿಸಿದ್ದರು. (ಅ) ರಾಜ್ಯಪಾಲರುಗಳ ನೇಮಕ ಸಂಯುಕ್ತ ಮಂತ್ರಿ ಮಂಡಲದ ಅಸ್ಥಿರ ರಾಜಕೀಯ ಪರಿಸ್ಥಿತಿಯಿಂದಾಗಿ ಈ ಅವಧಿಯಲ್ಲಿ ರಾಜ್ಯಪಾಲರ ಹುದ್ದೆ ತುಂಬ ವಿವಾದದ ವಿಷಯವೇ ಆಗಿಬಿಟ್ಟಿತ್ತು. ರಾಜ್ಯಪಾಲರುಗಳು ಪ್ರಜಾತಾಂತ್ರಿಕ ಹಿರಿಮೆಗೆ ಅನುಗುಣವಾಗಿ ನಡೆದುಕೊಳ್ಳದೆ ಇದ್ದ ಹಿನ್ನೆಲೆಯಲ್ಲಿ, ಚುನಾಯಿತರಾಗಿರುವಂಥ ರಾಜ್ಯಪಾಲರುಗಳೇ ಬೇಕೆಂಬ ಬೇಡಿಕೆ ಕೆಲವು ವಲಯಗಳಲ್ಲಿ ಕೇಳಿಬಂದಿತ್ತು. ``ಇದು ಉಪಯುಕ್ತವಾದುದೆಂದು ನಾನು (ಉಪಾಧ್ಯಾಯರು) ಭಾವಿಸಿಲ್ಲ. ಇದು ರೋಗಕ್ಕೆ ಸೂಕ್ತ ಚಿಕಿತ್ಸೆಯೇನೂ ಅಲ್ಲ. ಇದರಿಂದ ಕೇಂದ್ರದಿಂದ ದೂರವಾಗುವ ಪ್ರವೃತ್ತಿ ಹೆಚ್ಚುವ ಸಾಧ್ಯತೆ ಇದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ ರಾಜ್ಯಪಾಲರದು ಸಂವಿಧಾನಾತ್ಮಕವಾದ ಪ್ರಮುಖ ಪಾತ್ರವೇ ಆಗಿದೆ. ಅವರು ಪ್ರಾಂತದ ಮುದ್ರೆಯೂ ಆಗಬಾರದು ಅಥವಾ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯೂ ಆಗಿರಬಾರದು ಎಂದು ಅವರು ಸೂಚಿಸಿದ್ದರು. ಚುನಾವಣೆಗಳಲ್ಲಿ ಸೋತು ಹೋಗಿರುವಂಥ ರಾಜಕಾರಣಿಗಳಿಗೆ ಅಥವಾ ಸರ್ಕಾರೀ ಸೇವೆಯಿಂದ ನಿವೃತ್ತರಾಗಿರುವಂಥ ಅಧಿಕಾರಿಗಳಿಗೆ ಬದಲಾಗಿ ಸರ್ವೋಚ್ಚ ನ್ಯಾಯಾಲಯದ ಸೇವಾ ನಿವೃತ್ತ ನ್ಯಾಯಾಧೀಶರಿಗೆ ಈ ಹುದ್ದೆಯನ್ನು ನೀಡಲಿ" ಎಂಬುದು ಉಪಾಧ್ಯಾಯರು ನೀಡಿದ ಸಲಹೆಯಾಗಿತ್ತು. ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 27 (ಆ) ಸಂಯುಕ್ತ ಮಂತ್ರಿ ಮಂಡಲಗಳು ``ಸಂಯುಕ್ತ ಮಂತ್ರಿಮಂಡಲಗಳು ಕಾಂಗ್ರೆಸ್ ಆಡಳಿತಕ್ಕೆ ಪರ್ಯಾಯ ವ್ಯವಸ್ಥೆಯೊಂದನ್ನೇನೋ ಒದಗಿಸಿದುವು. ಆದರೆ ಕಾಂಗ್ರೆಸ್ ಆಡಳಿತದ ನೀತಿಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಪರ್ಯಾಯವೊಂದನ್ನು ಮುಂದಿರಿಸುವುದು ಅವಕ್ಕೆ ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲ, ಈ ಉದ್ದೇಶವನ್ನು ಈಡೇರಿಸುವ ದೃಷ್ಟಿಯಿಂದ ಅದನ್ನು ರಚಿಸಿಯೂ ಇರಲಿಲ್ಲ.. ಈ ಪ್ರಯೋಗದಿಂದಾಗಿ ಒಂದಿಷ್ಟು ವಾಸ್ತವಿಕ ಪ್ರಜ್ಞೆ , ರಾಜಕೀಯ ವಿಶ್ಲೇಷಣೆ ಹಾಗೂ ವಿವೇಚನೆಯ ಪ್ರವೃತ್ತಿ ಮೂಡಿಬಂದಿದ್ದರೆ, ಅದರಿಂದ ಒಂದಿಷ್ಟು ಲಾಭವಾದರೂ ಆಗುತ್ತಿತ್ತು. ಈ ಮಂತ್ರಿಮಂಡಲಗಳ ರಚನೆಯಿಂದಾಗಿ ರಾಜಕೀಯ ಅಸ್ಪೃಶ್ಯತೆಯ ಹಾಗೂ ಪ್ರತ್ಯೇಕತೆಯ ಮನೋವೃತ್ತಿಯನ್ನು ಇಲ್ಲವಾಗಿಸುವ ದಿಕ್ಕಿನಲ್ಲಿ ಸ್ತುತ್ಯವಾದ ಹೆಜ್ಜೆಯನ್ನು ಇಡಲಾಗಿದೆ..... ಸಂಯುಕ್ತ ಮಂತ್ರಿಮಂಡಲದ ಭವಿಷ್ಯ ಏನಾದರೂ ಆಗಲಿ, ಈ ಸಾಧನೆ ನಮ್ಮ ಕೈಯಿಂದ ನುಣುಚಿಕೊಂಡು ಹೋಗದಿರಲಿ ಎಂಬುದೇ ನನ್ನ ಇಚ್ಛೆಯಾಗಿದೆ. (ಇ) ಹೊಸ ಪರಂಪರೆಗಳ ವಿಕಾಸ ಅಗತ್ಯ ಸಂಯುಕ್ತ ಮಂತ್ರಿಮಂಡಲಗಳ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಉಂಟಾಗಿರುವ ರಾಜಕೀಯ ಅಸ್ಥಿರತೆಯಿಂದಾಗಿ, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಕೈಬಿಟ್ಟು, ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯನ್ನು ಅಂಗೀಕರಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ..... ಬ್ರಿಟನ್ ಮತ್ತು ಅಮೆರಿಕೆಯ ಆಡಳಿತ ವ್ಯವಸ್ಥೆಗಳು ಅಲ್ಲಿಯ ಇತಿಹಾಸದೊಂದಿಗೆ ವಿಕಾಸಗೊಂಡಿವೆ ಎಂಬುದು ವಾಸ್ತವ ಸಂಗತಿ. ನಾವು ಅವುಗಳನ್ನು ಅನುಕರಿಸುವುದಕ್ಕೆ ಬದಲಾಗಿ, ನಮ್ಮ ಸ್ವಭಾವಕ್ಕೆ ಅನುಗುಣವಾದ ಪ್ರಜಾತಂತ್ರ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಕಳೆದ ಐವತ್ತು ವರ್ಷಗಳಿಂದಲೂ ನಾವು ಒಂದಲ್ಲ ಒಂದು ರೂಪದಲ್ಲಿ ಸಂಸದೀಯ ಆಡಳಿತ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುತ್ತಲೇ ಬಂದಿದ್ದೇವೆ. ನಾವು ಇದನ್ನು ಬದಲಾಗುತ್ತಿರುವ ರಾಜಕೀಯ ಸ್ವರೂಪಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಬೇಕು. ಉದಾಹರಣೆಗೆ, ಮಂತ್ರಿಮಂಡಲಕ್ಕೆ ವಿರುದ್ಧವಾಗಿ ವಿಧಾನ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಅಂಗೀಕೃತವಾಗುವವರೆಗೆ ಯಾವುದೇ ಮಂತ್ರಿಮಂಡಲವೂ ರಾಜೀನಾಮೆಯನ್ನು ನೀಡತಕ್ಕುದಲ್ಲ ಎಂಬ ಒಂದು ಪರಂಪರೆಯನ್ನು ರೂಪಿಸಿಕೊಳ್ಳಬಹುದಾಗಿದೆ. ಈ ದೃಷ್ಟಿಯಲ್ಲಿ, ವಿಧಾನ ಸಭೆಯ ಬಹುಸಂಖ್ಯೆಯ ಸದಸ್ಯರು ವಿಧಾನಸಭೆಯ ಅಧಿವೇಶನವನ್ನು ಕರೆಯುವಂತೆ ಅಧ್ಯಕ್ಷರನ್ನು ಒತ್ತಾಯಿಸಬಹುದು ಎಂಬ ಪರಂಪರೆಯನ್ನು ಹಾಕಿಕೊಡಬಹುದು. (ಈ) ಪಕ್ಷಾಂತರ 28 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪಕ್ಷಾಂತರ ಮಾಡುವವರಲ್ಲಿ ಶೇ. 99 ರಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬೇರೊಂದು ಪಕ್ಷಕ್ಕೆ ಬಂದಿರುವವರೇ ಆಗಿದ್ದಾರೆ ಹಾಗೂ ಮತ್ತೆ ಆ ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಿರುವವರೇ ಆಗಿದ್ದಾರೆ ಎಂಬುದು ಉಪಾಧ್ಯಾಯರ ಅಭಿಪ್ರಾಯ. ಈ ವಿಷಯದಲ್ಲಿ ಕಾನೂನಿನ ಆಶ್ರಯವನ್ನು ಪಡೆಯುವ ಬೆದರಿಕೆಗೆ ಬದಲಾಗಿ, ಭಿನ್ನಾಭಿಪ್ರಾಯದ ಒತ್ತಡವನ್ನು ಹೇರುವುದು ಹಾಗೂ ಪರಂಪರೆಯನ್ನು ಪಾಲಿಸಿಕೊಂಡು ಬರುವುದು ಹೆಚ್ಚು ಉಪಯುಕ್ತವಾಗುತ್ತದೆ ಎಂದು ಉಪಾಧ್ಯಾಯರು ಭಾವಿಸಿದ್ದರು. ಅವರು ಈ ವಿಷಯದ ಬಗ್ಗೆ ಹೀಗೆಂದು ಹೇಳಿದ್ದರು: ``ರಾಜಕೀಯ ಪಕ್ಷಗಳು ನೀತಿ ಸಂಹಿತೆಯೊಂದನ್ನು ಅಂಗೀಕರಿಸಬೇಕು. ಹಾಗೆ ಮಾಡಿದರೆ ಈ ಪ್ರವೃತ್ತಿಗೆ ಸಾಕಷ್ಟು ಅಂಕುಶವನ್ನು ಹಾಕಬಹುದು. ವ್ಯಕ್ತಿಯನ್ನು ಆರಿಸುವ ಬ್ರಿಟಿಷ್ ಪದ್ಧತಿಗೆ ಬದಲಾಗಿ ಪಕ್ಷಕ್ಕೆ ಮತದಾನ ಮಾಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇ ಆದರೆ, ಪಕ್ಷಾಂತರದ ಪಿಡುಗಿನಿಂದ ಮಾತ್ರವಲ್ಲದೆ ಇತರ ದೋಷಗಳನ್ನೂ ದೂರಮಾಡಬಹುದು. ಪಶ್ಚಿಮ ಜರ್ಮನಿಯಲ್ಲಿ ಮಾಡಿರುವಂತೆ, ನಾವು ಎರಡೂ ಪದ್ಧತಿಗಳ ಸಮನ್ವಯವನ್ನು ಸಾಧಿಸಬಹುದು. ಆದರೆ ಈ ಸಮಸ್ಯೆಗೆ ಇನ್ನೂ ಹೆಚ್ಚು ನ್ಯಾಯಸಮ್ಮತವಾದ ಪರಿಹಾರವೆಂದರೆ ಇದು: `ಸುನಿಶ್ಚಿತವಾದ ನೀತಿ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಪಕ್ಷಗಳನ್ನು ಕಟ್ಟುತ್ತ ಬಂದದ್ದೇ ಆದಲ್ಲಿ, ಸಂಘಟನೆಯು ದೃಢವಾಗುತ್ತದೆ ಹಾಗೂ ಜನತೆಗೂ ರಾಜಕೀಯ ಶಿಕ್ಷಣ ದೊರೆತಂತಾಗಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಚಿಂತನೆ ಮಾಡಿ ಅದು ತನ್ನ ಮತವನ್ನು ನೀಡತೊಡಗುತ್ತದೆ. ಹಾಗೂ ಈ ಪ್ರವೃತ್ತಿ (ಪಕ್ಷಾಂತರದ) ಕಡಿಮೆಯಾಗಿಬಿಡುತ್ತದೆ.' (ಉ) ಏಕೀಕೃತ ಆಡಳಿತ ನಾಡಿನ ಏಕತೆಗೆ ಅಪಾಯತಟ್ಟಬಾರದು ಎಂಬ ದೃಷ್ಟಿಯಿಂದ ನಾವು ನಮ್ಮ ಸಂವಿಧಾನದ ಸ್ವರೂಪವನ್ನು ಏಕೀಕೃತಗೊಳಿಸುವುದು ಅಗತ್ಯವಾಗುತ್ತದೆ. ಇನ್ನೊಂದು ಕಡೆ ಪ್ರಾಂತ್ಯ ಅಥವಾ ಪ್ರದೇಶಗಳಿಗೆ ಹೊಣೆಗಾರಿಕೆಯಿಂದ ಕೂಡಿದ ಸ್ವಾಯತತ್ತೆಯನ್ನು ನೀಡಿ ಹಣಕಾಸಿನ ಮೂಲಗಳ ಮತ್ತು ಇತರ ಅಧಿಕಾರಗಳ ವಿಕೇಂದ್ರೀಕರಣ ಮಾಡುವುದೂ ಅಗತ್ಯವಾಗುತ್ತದೆ. ಹಣಕಾಸಿನ ದೃಷ್ಟಿಯಿಂದ ಪ್ರಾಂತ್ಯಗಳು ಅತಿಯಾಗಿ ಕೇಂದ್ರವನ್ನೇ ಅವಲಂಬಿಸಿಕೊಂಡಿವೆ. ಅಧಿಕಾರಗಳನ್ನು ಮತ್ತು ಹೊಣೆಗಾರಿಕೆಗಳನ್ನು ಸಂವಿಧಾನದಲ್ಲಿ ಹೇಗೆ ಹಂಚಿಬಿಡಲಾಗಿದೆ ಎಂದರೆ ಜನತೆಯ ಒಳಿತು ಮತ್ತು ಪ್ರಗತಿಯ ಹಾಗೂ ಆಡಳಿತದ ಸಂಪೂರ್ಣ ಹೊಣೆಗಾರಿಕೆಯನ್ನು ಪ್ರಾಂತ್ಯಗಳಿಗೆ ಹೊರಿಸಲಾಗಿದೆ. ಆದರೆ, ಆದಾಯದ ಆಕರ್ಷಕವಾದ ಹಾಗೂ ಫಲವತ್ತಾದ ಮೂಲಗಳೆಲ್ಲ ಕೇಂದ್ರದ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 29 ಅಧೀನದಲ್ಲಿವೆ. ಈ ವಿಷಯದ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿಯನ್ನು ತರುವುದಕ್ಕೆ ಬದಲಾಗಿ, ವ್ಯಾವಹಾರಿಕವಾದ ಮಾರ್ಗವೊಂದನ್ನು ಕಂಡುಕೊಳ್ಳುವುದೇ ಒಳ್ಳೆಯದು ಎಂಬುದು ಉಪಾಧ್ಯಾಯರ ಅಭಿಪ್ರಾಯವಾಗಿತ್ತು. ಹಣಕಾಸು ಆಯೋಗಕ್ಕೆ ಐದು ವರ್ಷಗಳ ಅವಧಿಯನ್ನು ಗೊತ್ತುಪಡಿಸುವುದಕ್ಕೆ ಬದಲಾಗಿ, ಅದಕ್ಕೆ ಸ್ಥಾಯೀರೂಪವನ್ನು ನೀಡಬೇಕು ಎಂಬುದಾಗಿ ಅವರು ಸಲಹೆ ನೀಡಿದ್ದರು. ಪ್ರಾಂತ್ಯಗಳು ಕೇಂದ್ರವನ್ನು ಅವಲಂಬಿಸಿಕೊಂಡು ಇರಬೇಕಾಗಿರುವಂಥ ಈ ಪರಿಸ್ಥಿತಿಯಲ್ಲಿ ಸಂವಿಧಾನಾತ್ಮಕ ಕಾರ್ಯನೀತಿಗಳ ವಿಷಯದಲ್ಲಿ ಕೇಂದ್ರದೊಂದಿಗೆ ಪ್ರಾಂತ್ಯಗಳೂ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕಾಗಿದೆ. ಇದು ಅನುಚಿತವಾದುದೆಂಬುದು ಉಪಾಧ್ಯಾಯರ ಅಭಿಪ್ರಾಯವಾಗಿತ್ತು. ``ಅನೇಕ ಪ್ರಾಂತ್ಯಗಳಲ್ಲಿ ತೆರಿಗೆ-ನೀತಿಗಳನ್ನು ನಿರ್ಧರಿಸುವ ವಿಚಾರದಲ್ಲಿ ರಾಜಕೀಯ ಘೋಷಣೆಗಳ ವಿಚಾರವೇ ಪ್ರಮುಖವಾಗಿದ್ದು, ಆಡಳಿತಾತ್ಮಕ ಹೊಣೆಗಾರಿಕೆಗಳ ವಿಚಾರ ಅಪ್ರಮುಖವಾಗಿರುವಂತೆ ತೋರುತ್ತದೆ. ಭೂ-ಕಂದಾಯ, ಆದಾಯ ತೆರಿಗೆ, ಮಾರಾಟ ತೆರಿಗೆ ಮುಂತಾದವುಗಳ ವಿಷಯದಲ್ಲಿ ಪ್ರಾಂತ್ಯಗಳು ವ್ಯಾವಹಾರಿಕ ರೀತಿಯಲ್ಲಿ ಹಾಗೂ ಹೊಣೆಗಾರಿಕೆಯಿಂದ ಕೂಡಿದ ರೀತಿಯಲ್ಲಿ ವರ್ತಿಸಬೇಕು" ಎಂದು ಅವರು ಭಾವಿಸಿದ್ದರು. ``ಆರ್ಥಿಕ ಪ್ರಗತಿ, ಬಂಡವಾಳ ಸೃಷ್ಟಿ, ಜನಹಿತ, ವೈಷಮ್ಯಗಳನ್ನು ಕಮ್ಮಿ ಮಾಡುವುದು ಮತ್ತು ವಿಕೇಂದ್ರೀಕೃತ ಆಡಳಿತದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಡೀ ತೆರಿಗೆ ಪದ್ಧತಿಗೆ ಹಾಗೂ ವಿವಿಧ ತೆರಿಗೆಗಳಿಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ಸಲ್ಲಿಸಲು ಅನುಕೂಲವಾಗುವಂತೆ ತೆರಿಗೆ ಪರಿಶೀಲಿನಾ ಆಯೋಗವೊಂದನ್ನು ರಚಿಸಬೇಕು'' ಎಂಬುದಾಗಿ ಉಪಾಧ್ಯಾಯರು ಒತ್ತಾಯ ಮಾಡಿದ್ದರು. (ಊ) ಗಮನ ಸೆಳೆಯುವ ಸೂಚನೆ ``ಇಂದು ಹಣಕಾಸಿನ ನೀತಿಗಳ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದು ಅಗತ್ಯವಾಗಿರುವಾಗ, ಕೇಂದ್ರದಲ್ಲಿನ ಕಾಂಗ್ರೆಸ್ ಆಡಳಿತ ಪರಿಶೀಲನ ಯೋಗ್ಯವಾಗಿದ್ದರೂ, ಇಂದಿನ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಮಹತ್ವಪೂರ್ಣವಲ್ಲದಿರುವಂಥ ವಿಷಯಗಳ ಬಗ್ಗೆ ತನ್ನ ಇಡೀ ಸಮಯವನ್ನು ಮತ್ತು ಶಕ್ತಿಯನ್ನು ವಿನಿಯೋಗಿಸುತ್ತಿದೆ. ನಾಡಿನ ಚಿಂತಾಜನಕ ಆಹಾರ ಧಾನ್ಯಗಳ ಸ್ಥಿತಿ, ಇಳಿಮುಖವಾಗುತ್ತಿರುವ ಆಹಾರೋತ್ಪಾದನೆ, ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯಂಥ ವಿಷಯಗಳು ನಮ್ಮನ್ನು ಕಾಡುತ್ತಿರುವಾಗ ರಾಜಧನರದ್ದತಿ ವಿಚಾರ, ಹಜಾರಿ ಆಯೋಗದ ವರದಿಯ ಬಗೆಗಿನ ಚರ್ಚೆ, ಬ್ಯಾಂಕುಗಳ ಮತ್ತು 30 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿಮೆಯ ರಾಷ್ಟ್ರೀಕರಣದ ಪ್ರಸ್ತಾವನೆ ಮೊದಲಾದ ಇಂದಿನ ಬಹುಚರ್ಚಿತ ಹಾಗೂ ಜ್ವಲಂತವೆಂದು ಭಾವಿಸಲಾಗಿರುವ ಪ್ರಶ್ನೆಗಳು ದೂರಗಾಮೀ ಪರಿಣಾಮವನ್ನು ಹೊಂದಿರುವಂಥವಾಗಿ ಖಂಡಿತವಾಗಿಯೂ ತೋರುವುದಿಲ್ಲ. ಈ ವಿಚಾರಗಳ ಬಗ್ಗೆ ಮತ್ತೆ ಮತ್ತೆ ಚರ್ಚೆ ನಡೆಯಲಿ. ಆದರೆ ಇವುಗಳ ಬಗ್ಗೆ ಕಡ್ಡಿ ಮುರಿದಂಥ ನಿರ್ಣಯವನ್ನು ಕೈಗೊಳ್ಳದೆ ಇದ್ದರೆ, ಇಡೀ ಚರ್ಚೆಯ ಉದ್ದೇಶ ಜನರ ಗಮನವನ್ನು ಜ್ವಲಂತ ಸಮಸ್ಯೆಗಳತ್ತಣಿಂದ ಬೇರೆಡೆಸೆಳೆಯುವುದೇ ಆಗಿದೆ ಅಥವಾ ರಾಜಕೀಯ ಒತ್ತಡವನ್ನು ತರುವುದೇ ಆಗಿದೆ ಎಂದು ಅನಿವಾರ್ಯವಾಗಿ ಭಾವಿಸಬೇಕಾಗುತ್ತದೆ." ``ಸಾಧನ-ಸಂಪನ್ಮೂಲಗಳು ಇಲ್ಲವೆಂಬ ರಾಗವನ್ನು ಯಾವಾಗಲೂ ಹಾಡುತ್ತ ಇರುತ್ತೇವೆ. ನಮ್ಮ ನಾಡಿನಲ್ಲಿ ಸಾಧನ-ಸಂಪನ್ಮೂಲಗಳ ಕೊರತೆ ಇದೆಯೆಂದು ನಾವು ನಂಬುವುದಿಲ್ಲ. ನಮ್ಮ ಬಳಿ ಮಾನವ, ಪ್ರಾಕೃತಿಕ ಹಾಗೂ ಹಣಕಾಸಿನ ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿದೆ. ಲಭ್ಯವಿರುವ ಹಾಗೂ ವಿಕಾಸಶೀಲವಾಗಿರುವ ಸಂಪನ್ಮೂಲಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕಾಗಿದೆ.'' (ಋ) ಭಾಷೆಯ ಪ್ರಶ್ನೆ ಭಾಷೆಯು ಎಂಥ ಪ್ರಶ್ನೆಯಾಗಿದೆ ಎಂದರೆ ಕಲ್ಲಿಕೋಟೆಯ ಅಧಿವೇಶನದಲ್ಲಿ ಅಂಗೀಕರಿಸಲಾದ ನಿರ್ಣಯವನ್ನೇ ಆಧಾರವಾಗಿರಿಸಿಕೊಂಡು, ಜನಸಂಘ ಬದಲಾಗಿ ಬಿಟ್ಟಿದೆ ಎಂದು ಜನರು ಹೇಳತೊಡಗಿದ್ದಾರೆ. ಜನಸಂಘ ಹಿಂದಿಯನ್ನು ನಿರ್ದಿಷ್ಟ ರೂಪದಲ್ಲಿ ಇಡೀ ರಾಷ್ಟ್ರದ ವ್ಯಾವಹಾರಿಕ ಭಾಷೆಯನ್ನಾಗಿಸಬೇಕು ಹಾಗೂ ಇಂಗ್ಲಿಷ್ ಭಾಷೆಯನ್ನು ಕೈಬಿಡಬೇಕು ಎಂಬುದಾಗಿ ಪ್ರಬಲವಾದ ಆಂದೋಳನವನ್ನೇ ನಡೆಸಿಕೊಂಡು ಬಂದಿತ್ತು. ಬಹುಶಃ ಇದೇ ಮೊದಲ ಬಾರಿಗೆ ಜನಸಂಘ ದಕ್ಷಿಣ ಭಾರತವನ್ನು ಪ್ರವೇಶಿಸಿದ್ದರಿಂದ ಅದರ ಧ್ವನಿ ಬದಲಾಯಿತು. ಈ ಸನ್ನಿವೇಶದಲ್ಲಿ ದೀನ್ ದಯಾಳ್ ಉಪಾಧ್ಯಾಯರು ಹೇಳಿದ ಮಾತುಗಳು ಉಲ್ಲೇಖನೀಯವಾಗಿವೆ: ``ಹಿಂದೀ ಗೊತ್ತಿಲ್ಲದೆ ಇರುವಂಥವರು ಯಾವುದೇ ಅಧಿಕಾರದಿಂದ ವಂಚಿತರಾಗುವಂತೆ ಮಾಡುವಂಥ ಯಾವುದೇ ಕ್ರಮಕ್ಕೂ ಜನಸಂಘ ಬೆಂಬಲವನ್ನು ನೀಡುವುದಿಲ್ಲ. ಈ ಕಾರಣದಿಂದಾಗಿಯೇ ಜನಸಂಘ ಲೋಕಸೇವಾ ಆಯೋಗದ ಎಲ್ಲಾ ಪರೀಕ್ಷೆಗಳೂ ಪ್ರಾದೇಶಿಕ ಭಾಷೆಗಳ ಮಾಧ್ಯಮದ ಮೂಲಕ ನಡೆಯಬೇಕು ಹಾಗೂ ನೇಮಕಾತಿಗೆ ಯಾವುದೇ ಭಾಷಾ ವಿಶೇಷದ ಅರಿವನ್ನು ಒತ್ತಾಯಿಸುವಂತಿರಬಾರದು ಎಂಬುದಾಗಿ ಜನಸಂಘ ತನ್ನ ಬೇಡಿಕೆಯನ್ನು ಮುಂದಿರಿಸಿದೆ. ಈ ಸ್ಥಿತ್ಯಂತರದ ಅವಧಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಬಯಸುವಂಥವರಿಗೆ ಆ ಸೌಲಭ್ಯವನ್ನು ಒದಗಿಸಿಕೊಡಬೇಕು. ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 31 ಇದೊಂದು ಬಹು ಆಯಾಮದ ಸುದೀರ್ಘ ಭಾಷಣವಾಗಿತ್ತು. ಜನಸಾಮಾನ್ಯರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಆಶಾವಾದದೊಂದಿಗೆ ಅವರು ಈ ಭಾಷಣವನ್ನು ಕೊನೆಗೊಳಿಸಿದ್ದರು. ತಮ್ಮ ಭಾಷಣದ ಮೊದಲಲ್ಲೇ ಅವರು ಈ ಅಂಶವನ್ನು ಉಲ್ಲೇಖಿಸಿದ್ದರು. ``ಪ್ರತಿಯೊಂದು ಆಂದೋಳನದ ಹಿಂದೆಯೂ ಸಾಮ್ಯವಾದಿಗಳ ಕೈವಾಡವನ್ನು ಕಾಣುವಂಥ ಹಾಗೂ ಅದನ್ನು ಮೆಟ್ಟಿಹಾಕಬೇಕೆಂಬ ಸಲಹೆಯನ್ನು ನೀಡುವಂಥ ವ್ಯಕ್ತಿಗಳ ವಿಷಯದಲ್ಲಿ ನಾವು ಎಚ್ಚರಿದಿಂದ ಇರಬೇಕು. ಜನಾಂದೋಳನ ಬದಲಾಗುತ್ತಿರುವ ವ್ಯವಸ್ಥೆಯ ಯುಗದಲ್ಲಿ ಸಹಜವೂ ಹೌದು, ಅಗತ್ಯವೂ ಹೌದು, ವಾಸ್ತವವಾಗಿ ಇದು ಸಮಾಜ ಎಚ್ಚರಗೊಂಡಿರುವುದರ ಪ್ರತೀಕವೇ ಆಗಿರುತ್ತದೆ...... ಹೀಗಾಗಿ, ನಾವು ಅವುಗಳೊಂದಿಗೆ ಹೆಜ್ಜೆ ಹಾಕಬೇಕು; ಅವುಗಳಿಗೆ ನಾಯಕತ್ವವನ್ನೂ ಒದಗಿಸಬೇಕು. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರ ಬಯಸುವಂಥ ವ್ಯಕ್ತಿಗಳು ಈ ಬಗೆಯ ಜಾಗೃತಿಯನ್ನು ಕಂಡು ಬೆದರಿ ನಿರಾಶೆಯ ಹಾಗೂ ಭಯ-ಆತಂಕಗಳ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಅವರೊಂದಿಗೆ ಸಹಕರಿಸಲು ಸಾಧ್ಯವಿಲ್ಲದಿರುವುದಕ್ಕಾಗಿ ನಾವು ವಿಷಾದಿಸುತ್ತೇವೆ. ಅವರು ಕಾಲಚಕ್ರದ ಓಟವನ್ನು ತಡೆದು ನಿಲ್ಲಿಸಬಯಸುತ್ತಾರೆ. ಭಾರತದ ಹಣೆಬರೆಹವನ್ನು ಬದಲಾಯಿಸ ಬಯಸುತ್ತಾರೆ. ಇದು ಸಾಧ್ಯವಾಗುವುದಿಲ್ಲ.'' ``ನಾವು ನಮ್ಮ ಹಿಂದಿನ ಪರಂಪರೆಯ ಬಗೆಗಿನ ಅಭಿಮಾನದಿಂದಲೇ ಉಸಿರಾಡುತ್ತಿದ್ದೇವೆ. ಆದರೆ, ಅದನ್ನೇ ಭಾರತದ ರಾಷ್ಟ್ರಜೀವನದ ಚರಮ ಬಿಂದುವೆಂದು ಒಪ್ಪಲಾರೆವು. ನಾವು ಇಂದಿನ ವಿಷಯದಲ್ಲಿ ಯಥಾರ್ಥವಾದಿಗಳಾಗಿದ್ದೇವೆ. ಆದರೆ ಅದರಿಂದಲೇ ಬಂಧಿತರಾಗಿಲ್ಲ. ನಮ್ಮ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸುಗಳಿವೆ. ಆದರೆ ನಾವು ನಿದ್ರಾಲೀನರಾಗಿಲ್ಲ. ಅದಕ್ಕೆ ಬದಲಾಗಿ ಆ ಕನಸುಗಳನ್ನು ಸಾಕಾರಗೊಳಿಸುವ ಕರ್ಮಯೋಗಿಗಳೇ ಆಗಿದ್ದೇವೆ. ನಾವು ಅನಾದಿಯೂ, ಅತೀತವೂ ಆಗಿರುವ ಅಸ್ಥಿರ-ವರ್ತಮಾನ ಹಾಗೂ ಚಿರಂತನ- ಭವಿಷ್ಯಗಳ ಕಾಲಾತೀತ ಸನಾತನ ಸಂಸ್ಕೃತಿಯ ಆರಾಧಕರೇ ಆಗಿದ್ದೇವೆ..... ವಿಜಯವನ್ನು ಸಾಧಿಸುವ ವಿಶ್ವಾಸ ನಮ್ಮಲ್ಲಿದೆ; ತಪಸ್ಸು ಮಾಡುವ ದೃಢ ನಿರ್ಧಾರದೊಂದಿಗೆ ಮುನ್ನಡೆಯೋಣ. ಭಾರತೀಯ ಜನಸಂಘದ ಅಧ್ಯಕ್ಷರಾಗಿ ಉಪಾಧ್ಯಾಯರು ನಾಡಿನಲ್ಲಿ ಹಾಗೂ ಪಕ್ಷದಲ್ಲಿ ಆಶಾವಾದವನ್ನೂ ಮೂಡಿಸಿದ್ದರು. ಕಲ್ಲಿಕೋಟೆ ಅಧಿವೇಶನದ ಜೀವಂತಿಕೆಯನ್ನು ಎಲ್ಲ ಪತ್ರಿಕೆಗಳೂ ಅಸಂದಿಗ್ಧ ರೂಪದಲ್ಲಿ ಒಪ್ಪಿ ಬಣ್ಣಿಸಿದ್ದುವು. ಉಪಾಧ್ಯಾಯರು ಪಕ್ಷದ ಅಧ್ಯಕ್ಷರಾಗಬಯಸಿರಲಿಲ್ಲ; ಆದರೆ, ಅವರನ್ನು ಅಧ್ಯಕ್ಷ ಪದವಿಗೆ ಒಪ್ಪಿಸಲೇಬೇಕಾದಂಥ ಪರಿಸ್ಥಿತಿ ಉಂಟಾಗಿತ್ತು. ಯಾರು ದೊಡ್ಡವರು? ಅನೇಕ ಬಾರಿ ವಿವಾದಕ್ಕೊಳಗಾಗುವ ವಿಷಯವೇನೆಂದರೆ ರಾಜನೀತಿ ದೊಡ್ಡದೋ ಅಥವಾ ಅರ್ಥನೀತಿ ದೊಡ್ಡದೋ? ಈ ವಿವಾದವನ್ನು ವಿಚಾರಕ್ಕೊಳಗುಪಡಿಸಿದಾಗ ಉಪನಿಷತ್ತಿನ ಒಂದು ಕಥೆ ನೆನಪಾಗುತ್ತದೆ. ಅದೇನೆಂದರೆ ಒಮ್ಮೆ ಶರೀರದ ಎಲ್ಲಾ ಅಂಗಗಳ ನಡುವೆ ಯಾರು ದೊಡ್ಡವರು ? ಎಂದು ಪರಸ್ಪರ ಜಗಳವುಂಟಾಯಿತು. ಪ್ರತಿಯೊಂದು ಅಂಗವೂ ತಾನೇ ದೊಡ್ಡದೆಂದು ಹೇಳಲಾರಂಭಿಸಿತು. ಕಣ್ಣು ನಾನು ದೊಡ್ಡವನೆಂದಿತು, ಮೂಗು ನಾನು ದೊಡ್ಡವನೆಂದಿತು, ಬಾಯಿ ಹೇಳಿತು ನಾನು ದೊಡ್ಡವ, ಮತ್ತು ಕಾಲು ಹೇಳಿತು ಎಲ್ಲರಿಗಿಂತ ನಾನು ದೊಡ್ಡವನೆಂದು, ಕೈಗಳೇಕೆ ಹಿಂದುಳಿಯುವವು ? ಕೈಗಳೆಂದವು ವಾಸ್ತವದಲ್ಲಿ ನಾವು ದೊಡ್ಡವರೆಂದು. ಎಲ್ಲಾ ಅಂಗಗಳು ಈ ವಿವಾದದೊಂದಿಗೆ ಪ್ರಜಾಪತಿ ಬಳಿಗೆ ಬಂದವು ಮತ್ತು ಯಾರು ದೊಡ್ಡವರೆಂದು ನೀವೇ ನಿರ್ಣಯ ನೀಡಿ ಎಂದವು. ಪ್ರಜಾಪತಿಯು ಎಂಥಹ ಸಂಕಟ ಬಂದಿತು ! ಎಂದು ಯೋಚಿಸುತ್ತಾ ಬಹಳ ಚತುರತೆಯಿಂದ ಹೇಳಿದನು- ``ಯಾರೊಬ್ಬರ ಇಲ್ಲದಿರುವಿಕೆಯಿಂದ ಉಳಿದ ಎಲ್ಲರೂ ನಿಷ್ಕ್ರಿಯರಾಗುತ್ತಾರೋ ಅವರೇ ದೊಡ್ಡವರು". ಎಲ್ಲಾ ಅಂಗಗಳು ಬಹಳ ಪ್ರಸನ್ನವಾಗಿದ್ದುವು. ಪ್ರತಿಯೊಂದು ಅಂಗಕ್ಕೂ ನಾನು ಇಲ್ಲದಿದ್ದರೆ ಬೇರೆ ಎಲ್ಲವು ವ್ಯರ್ಥ! ಎಂದೆನಿಸುತ್ತಿತ್ತು. ಎಲ್ಲಾ ಅಹಂಕಾರದಿಂದ ತುಂಬಿಹೋದವು. ಕೊನೆಗೂ ನಿರ್ಣಯವನ್ನು ಕಾರ್ಯಾನ್ವಯಗೊಳಿಸಿ ಯಾರ ಇಲ್ಲದಿರುವಿಕೆಯಿಂದ ಕೆಲಸ ನಡೆಯುವುದಿಲ್ಲವೆಂದು ನಿಶ್ಚಯಿಸಲಾಯಿತು. ಎಲ್ಲಕ್ಕಿಂತ ಮೊದಲು ಕಣ್ಣು ಬೇರೆಯಾಯಿತು. ಒಂದು ವರ್ಷದ ನಂತರ ಅದು ಮತ್ತೆ ಬಂದು ನೋಡಿದಾಗ ಎಲ್ಲಾ ಕೆಲಸಗಳೂ ಸರಿಯಾಗಿಯೇ ನಡೆಯುತ್ತಿದ್ದವು. ನನ್ನ ಇಲ್ಲದಿರುವಿಕೆಯಿಂದ ಯಾವ ಕಷ್ಟವು ಆಗಲಿಲ್ಲ. ನಾನು ಇಲ್ಲದಿದ್ದರೆ ಕೆಲಸ ನಡೆಯುವುದಿಲ್ಲವೆಂದು ನಾನು ತಿಳಿದಿದ್ದೆ. ಆದರೆ ಇಲ್ಲಿ ಕೋಲಿನ ಸಹಾಯದಿಂದ ಕೆಲಸ ನಡೆಯುತ್ತಿದೆ ಎಂದು ಅರಿಯಿತು. ಮತ್ತೆ ಕಿವಿಯು ಬೇರೆಯಾಯಿತು. ಆದರೆ ಕೆಲಸ ನಡೆಯುತ್ತಿತ್ತು. ಅದೇ ರೀತಿ ಕಾಲು ಹೋಯಿತು. ಕೈ ಹೋಯಿತು. ಆದರೆ ಕೆಲಸ ನಡೆಯುತ್ತಲೇ ಇತ್ತು. ಮನಸ್ಸು ಬೇರೆಯಾದಾಗ ಶರೀರಕ್ಕೆ ಮತ್ತಷ್ಟು ಸಂತೋಷವಾಯಿತು. ಉಳಿದ ಅಂಗಗಳು ಮಹಾರಾಜ ! ನೀವು ಇಲ್ಲದಿರುವುದು ಬಹಳ ಚೆನ್ನಾಗಿದೆ ಮತ್ತೆ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ 33 ಬರಬೇಡಿ ಎಂದವು. ಮನವು ಏಕೆ ? ಎಂದು ಪ್ರಶ್ನಿಸಿತು. ಅದಕ್ಕೆ ನಾಲಿಗೆಯು ನಿನ್ನಿಂದ ಈ ಸಿಹಿ ತಿನ್ನು, ಆ ಕಾರ ತಿನ್ನು ಎಂದು ಎಷ್ಟು ತೊಂದರೆಯಾಗುತ್ತಿತ್ತು! ಇವೆಲ್ಲವುಗಳಿಂದ ಮುಕ್ತಿ ಸಿಕ್ಕಿಬಿಟ್ಟಿತು ಎಂದಿತು. ಕಣ್ಣು ಸಹ ತನ್ನ ಒಪ್ಪುಗೆಯನ್ನು ನೀಡಿತು. ಈಗ ಜೀವದ ಸರದಿ ಬಂದಿತು. ಜೀವವು ತನ್ನ ಗಂಟುಮೂಟೆ ಕಟ್ಟಿಕೊಂಡು ಹೊರಡಲು ತಯಾರಾಗುತ್ತಿದ್ದಂತೆಯೇ ಕೋಲಾಹಲವಾಗಿಬಿಟ್ಟಿತು. ಕಣ್ಣು, ಕಿವಿ, ಮೂಗು, ಕೈ-ಕಾಲು ಎಲ್ಲವು ಗಾಬರಿಯಾದವು. ಜೀವವೇ ಹೊರಟುಹೋದರೆ ನಾವೆಲ್ಲ ವ್ಯರ್ಥವೆಂದು ಅವುಗಳಿಗೆ ಬುದ್ಧಿ ಬಂದಿತು. ಎಲ್ಲರೂ ಒಂದಾಗಿ ಮಹಾರಾಜ! ನೀವು ಹೋಗದಿರಿ ನೀವು ಹೋದರೆ ನಾವೆಲ್ಲರೂ ಉಳಿಯುವುದಿಲ್ಲ. ನೀವು ಎಲ್ಲರಿಗಿಂತ ದೊಡ್ಡವರು ಎಂದು ಹೇಳಿದವು. ಇದೇ ಸ್ಥಿತಿ ರಾಷ್ಟ್ರದ್ದೂ ಆಗಿದೆ. ರಾಷ್ಟ್ರವು ಸುರಕ್ಷಿತವಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ರಾಷ್ಟ್ರದ ಎಷ್ಟು ಅಂಗಗಳಿದೆಯೋ, ಎಲ್ಲವೂ ಕಾರ್ಯ ನಿರ್ವಹಿಸುತ್ತವೆ. ರಾಷ್ಟ್ರವಿದ್ದರೆ ಧರ್ಮವೂ ಇರಬಹುದು. ಧನ-ದಾನ್ಯವು ಇರುತ್ತದೆ. ನಮ್ಮ ಮಂತ್ರಿ ರಾಜ, ನಮ್ಮ ವಾಸ್ತುಶಿಲ್ಪಿಗಳು, ನಮ್ಮ ಕೃಷಿಕರು ಎಲ್ಲರೂ ಕಾರ್ಯ ನಿರ್ವಹಿಸುತ್ತಾರೆ. ಆದ್ದರಿಂದ ಪ್ರಾಣದಂತೆಯೇ ರಾಷ್ಟ್ರವೂ ಸುರಕ್ಷಿತ ಹಾಗೂ ಸಮರ್ಥವಾಗಿರಲಿ ಎನ್ನುವುದೇ ನಮ್ಮ ಮೊದಲನೇ ಆಶಯವಾಗಿದೆ. ಪ್ರಜಾಪ್ರಭುತ್ವ ಮತ್ತು ಪ್ರಜಾಭಿಮತ* ರಾಜ್ಯ ಪುನರ್ನಿರ್ಮಾಣದ ಪ್ರಶ್ನೆಯಿಂದ ದೇಶದಲ್ಲಿ ವಿಭಿನ್ನ ಬೇಡಿಕೆಗಳಿಂದ ಜನರ ಭಾವನೆಗಳು ಬಹಳ ಉಗ್ರವಾಗುತ್ತಾ ಹೋಗುತ್ತಿತ್ತು. ಪ್ರಧಾನ ಮಂತ್ರಿ ಪಂಡಿತ್ ಜವಾಹರ್‍ಲಾಲ್ ನೆಹರೂ ಅವರಿಂದ ಒಂದು ನಿಯೋಗ ರಚಿತವಾಯಿತು. ನಿಯೋಗದ ಒಬ್ಬ ಸದಸ್ಯರು ದೆಹಲಿಯಲ್ಲಿ ವಿಧಾನಸಭೆಯನ್ನು ಮುಕ್ತಾಯಗೊಳಿಸುವ ನಿರ್ಣಯದಿಂದ ಜನರು ಬಹಳ ಪ್ರಸನ್ನರಾಗಿದ್ದಾರೆ ಹಾಗೂ ಅವರು ಅದರಿಂದ ಯಾವುದೇ ಪ್ರಕಾರದ ಪರಿವರ್ತನೆಯನ್ನು ಮಾಡದಿರಲಿ ಎಂದು ನೆಹರೂರವರಲ್ಲಿ ಪ್ರಾರ್ಥಿಸಿಕೊಂಡರು. ನೆಹರೂರವರು ಮುಗುಳ್ನಕ್ಕು, ``ಯಾವ ಜನರು ವಿಧಾನಸಭೆಯನ್ನು ಉಳಿಸಿ-ಬೆಳೆಸುವ ಬೇಡಿಕೆಗಳನ್ನು ತರುತ್ತಾರೋ, ಅವರೂ ಸಹ ಜನತೆಯ ಪರವಾಗಿಯೇ ಮಾತನಾಡುತ್ತಾರೆ. ಜನತೆಯ ಇಚ್ಛೆ ಯಾವುದೆಂದು ತಿಳಿಯುವುದು?" ಎಂದರು. ನೆಹರೂರವರು ಯಾವ ಪ್ರಶ್ನೆಯನ್ನು ಪ್ರಸ್ತುತಪಡಿಸಿದ್ದರೋ ಅದು ಪ್ರಜಾರಾಜ್ಯಕ್ಕೆ ಅತ್ಯಂತ ಮಹತ್ವಪೂರ್ಣವಾದ ಕಾರಣ ಪ್ರಜಾಪ್ರಭುತ್ವದಲ್ಲಿ ರಾಜ್ಯವು ಜನತೆಯ ಇಚ್ಛೆಗನುಸಾರವಾಗಿ ನಡೆಯುತ್ತದೆ. ಆದರೆ ಯಾವುದೇ ಇಬ್ಬರು ವ್ಯಕ್ತಿಗಳ ಅಭಿಮತವು ಒಂದೇ ರೀತಿ ಇರಲಾರದು. ಮತ್ತು ಎಲ್ಲಿ ಕೋಟ್ಯಾನುಕೋಟಿ ಮಾನವರ ಪ್ರಶ್ನೆಯಿರುತ್ತದೆಯೋ ಅಲ್ಲಿ ರಾಷ್ಟ್ರದ ಎಲ್ಲಾ ಜನರು ಒಂದೇ ಅಭಿಮತವನ್ನು ನೀಡುವರು ಎಂಬುದು ಸಾಮಾನ್ಯವಾಗಿ ಸಾಧ್ಯವಾದುದಲ್ಲ. ಹೌದು; ಯುದ್ಧ ಮುಂತಾದವುಗಳ ಸಮಯದಲ್ಲಿ ಖಂಡಿತವಾಗಿಯೂ ಎಲ್ಲರ ಇಚ್ಛೆಗಳು ಶತ್ರುವಿನ ಮೇಲೆ ವಿಜಯ ಹೊಂದುವುದಾಗಿರುತ್ತದೆ. ಆದರೆ ಅಲ್ಲಿಯೂ ನೀತಿಯ ಪ್ರಶ್ನೆಗಳನ್ನು ಕುರಿತು ಅನೇಕ ಭಿನ್ನಾಭಿಪ್ರಾಯಗಳು ಇರಬಹುದಾಗಿರುತ್ತವೆ. ಪ್ರಜಾಭಿಮತ ನಿಜವಾಗಿಯೂ ಒಂದು ಭಾವವಾಚಕ ಕಲ್ಪನೆ ಮಾತ್ರವಾಗಿದೆ. ನಿಜವೇನೆಂದರೆ ಪ್ರಜಾಪ್ರಭುತ್ವದಲ್ಲಿ ಯಾರ ಇಚ್ಛೆಯೂ ನಡೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಸಾಮಾನ್ಯ ಇಚ್ಛೆಗನುಗುಣವಾಗಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬೇಕಾಗುತ್ತದೆ. ಒಂದು ವೇಳೆ ಹೀಗಾಗದಿದ್ದಲ್ಲಿ ಹಾಗೂ ಪ್ರತಿಯೊಬ್ಬ ವ್ಯಕ್ತಿ ತನ್ನ ಇಚ್ಛೆಗಳು, ಮಾನ್ಯತೆಗಳು ಮತ್ತು ವಿಶ್ವಾಸಗಳನ್ನು ಸರ್ವಶ್ರೇಷ್ಠ ಎಂದು ಆಕರ : ರಾಷ್ಟ್ರಧರ್ಮ ಪತ್ರಿಕೆಯ ಜನವರಿ 1980ರ ಸಂಚಿಕೆ (-ಸಂ.) ಪ್ರಜಾಪ್ರಭುತ್ವ ಮತ್ತು ಪ್ರಜಾಭಿಮತ 35 ತಿಳಿದು ಅಂಟಿಕೊಂಡಿದ್ದರೆ ಪ್ರಜಾಪ್ರಭುತ್ವವು ನಡೆಯುವುದಿಲ್ಲ. ಅರಾಜಕತೆ, ವಿಘಟನೆ ಮತ್ತು ಅಂತ್ಯದಲ್ಲಿ ಏಕಚ್ಛತ್ರ ನಿರಂಕುಶ ಶಾಸನ ಈ ಸ್ಥಿತಿಗಳ ಅನಿವಾರ್ಯವಾದ ಪರಿಣಾಮವಾಗಿರುತ್ತದೆ. ತನ್ನ ಇಚ್ಛೆಗಳ ದಮನ ಮಾಡುವುದರ ಅರ್ಥವೇ ಬೇರೆಯವರ ಮಾತನ್ನು ಕೇಳುವ ತಯಾರಿ. ವಾದ ವಿವಾದಗಳ ಮೂಲಕ ನಡೆಯುವ ರಾಜ್ಯವೆಂಬುದು ಪ್ರಜಾಪ್ರಭುತ್ವದ ವ್ಯಾಖ್ಯೆಯಾಗಿದೆ. ``ವಾದೇ ವಾದೇ ಜಾಯತೇ ತತ್ವಬೋಧಃ" ಅಂದರೆ ವಾದಗಳಿಂದ ತತ್ವಬೋಧನೆಯ ಹುಟ್ಟುತ್ತದೆ. ಇದು ನಮ್ಮ ಇಲ್ಲಿನ ಹಳೆಯ ಉಕ್ತಿಯಾಗಿದೆ. ಆದರೆ ಈ ತತ್ವ-ಬೋಧನೆಯು ಕಾರ್ಯರೂಪಕ್ಕೆ ಬರುವುದು ಯಾವಾಗ ನಾವು ಬೇರೆಯವರ ಮಾತನ್ನು ಕೇಳುತ್ತೇವೆಯೋ ಮತ್ತು ಅದರಲ್ಲಿರುವ ಸತ್ಯಾಂಶವನ್ನು ಗ್ರಹಿಸುವ ಇಚ್ಛೆಯುಳ್ಳವರಾಗಿರುತ್ತೇವೆಯೋ ಆಗ ಮಾತ್ರ. ಒಂದು ವೇಳೆ ಬೇರೆಯವರ ದೃಷ್ಟಿಕೋನವನ್ನು ತಿಳಿಯಲು ಪ್ರಯತ್ನ ಮಾಡದೆಯೇ ನಾವು ನಮ್ಮ-ನಮ್ಮದೇ ದೃಷ್ಟಿಕೋನವನ್ನು ಆಗ್ರಹಿಸುತ್ತಾ ಹೋದರೆ ``ವಾದೇ ವಾದೇ ಜಾಯತೇ ಕಷ್ಟಶೋಷಃ" ಎಂಬ ಉಕ್ತಿಯೇ ಚರಿತಾರ್ಥವಾಗುತ್ತದೆ. ಅಂದರೆ ವಾದಗಳಿಂದ ಕಷ್ಟ ಶೋಷಣೆಯಾಗುತ್ತದೆ ಎಂದರ್ಥ. ವಾಲ್ಟೇರನು ``ನಾನು ನಿನ್ನ ಮಾತನ್ನು ಸತ್ಯವೆಂದು ಒಪ್ಪುವುದಿಲ್ಲ. ಆದರೆ ನನ್ನ ಮಾತನ್ನು ಹೇಳಲು, ನಿನ್ನ ಅಧಿಕಾರಕ್ಕಾಗಿ ಸಂಪೂರ್ಣ ಶಕ್ತಿಯಿಂದ ಕಾದಾಡುವೆ" ಎಂದು ಹೇಳಿದಾಗ ಅದರಿಂದ ಅವನು ಮನುಷ್ಯನ ಕೇವಲ ಕಷ್ಟಶೋಷದ ಹಕ್ಕನ್ನಷ್ಟೆ ಸ್ವೀಕರಿಸಿದನು. ಭಾರತೀಯ ಸಂಸ್ಕೃತಿಯು ಇದಕ್ಕಿಂತಲೂ ಮುಂದುವರೆದು ವಾದ-ವಿವಾದಗಳನ್ನು `ತತ್ವ ಬೋಧನೆ'ಯ ಸಾಧನದ ರೂಪದಲ್ಲಿ ನೋಡುತ್ತದೆ. ದೃಷ್ಟಿಕೋನದಲ್ಲಿ ಈ ಪರಿವರ್ತನೆಗಾಗಿ ಜೀವನದಲ್ಲಿ ಸಂಯಮವು ಅತ್ಯಂತ ಅವಶ್ಯಕವಾದುದಾಗಿದೆ. ಯಾರು ಸಂಯಮವನ್ನು ಕಳೆದುಕೊಳ್ಳುತ್ತಾರೋ ಅವರು ಎಂದಿಗೂ ತಮ್ಮ ಇಚ್ಛೆಗಳ ಮೇಲೆ ಹಿಡಿತವನ್ನು ಹೊಂದಲಾರರು. ಅವುಗಳ ಪೂರೈಕೆಗಾಗಿ ಅವರು ಬೇರೆ ಜನರ ಬಗ್ಗೆ ಸ್ವಲ್ಪವೂ ಚಿಂತಿಸದೆ ಎಲ್ಲಾ ಪ್ರಕಾರದ ಪ್ರಯತ್ನವನ್ನು ಮಾಡುತ್ತಾರೆ. ಒಂದು ವೇಳೆ ಸಫಲವಾಗಿಬಿಟ್ಟರೆ ಅವರು ತಮ್ಮ ಕ್ಷೇತ್ರದಲ್ಲಿ ಏಕಾಧಿಪತ್ಯವನ್ನು ಪ್ರತಿಷ್ಠಾಪಿಸಿ ಪ್ರಜಾತಂತ್ರದ ಹತ್ಯೆ ಮಾಡಿಬಿಡುತ್ತಾರೆ. ಒಂದು ವೇಳೆ ಅಸಫಲನಾದರೆ ಅವರಿಗೆ ಪ್ರಜಾಪ್ರಭುತ್ವ ರುಚಿಹೀನ ಮತ್ತು ದುಃಖದಾಯಕವಾಗಿಬಿಡುತ್ತದೆ. ಒಂದು ವೇಳೆ ಬಹುಜನ ಸಮಾಜ ಪ್ರಜಾರಾಜ್ಯದಲ್ಲಿ ತನ್ನ ಸುಖವನ್ನು ಅಪೇಕ್ಷಿಸದಿದ್ದಾಗ ಅಲ್ಲಿ ಪ್ರಜಾಪ್ರಭುತ್ವದ ನಿರ್ಜೀವ ದೇಹ ಮಾತ್ರ ನಿಂತಿದೆ, ಆತ್ಮ ಇಲ್ಲವೆಂದೇ ಹೇಳಬೇಕಾಗುತ್ತದೆ. ಬೇರೆಯವರ ಇಚ್ಛೆಗಳ ಮುಂದೆ ಬಾಗುವ ತಯಾರಿಯಲ್ಲಿ ಯಾವಾಗಲೂ ಒಂದು ಅಪಾಯವು ಕಾದಿರುತ್ತದೆ. ಯಾರು ಸಜ್ಜನರು ಮತ್ತು ನೈತಿಕ 36 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜ್ಞಾನವುಳ್ಳವರಾಗಿರುತ್ತಾರೆಯೋ ಅವರು ತಮ್ಮ ಮಾತಿನ ಆಗ್ರಹವನ್ನು ಬಿಟ್ಟು ಬೇರೆಯವರ ಮಾತನ್ನು ಒಪ್ಪಿಕೊಂಡುಬಿಡುತ್ತಾರೆ. ಆದರೆ ಯಾರು ದುರ್ಜನರು ಮತ್ತು ದುರಾಗ್ರಹಿಗಳಾಗಿರುತ್ತಾರೆಯೋ ಅವರು ತಮ್ಮ ಹಠವನ್ನು ಬಿಡುವುದಿಲ್ಲ. ಪರಿಣಾಮ ಸ್ವರೂಪವಾಗಿ ಇಂತಹ ಜನರ ಮಾತುಗಳಿಗೆ ಪ್ರಶ್ನೆ ಇಲ್ಲದೆಯೇ ಓಲೈಸುತ್ತಾರೆ. ಅವರು ತಮ್ಮ ಮಾತನ್ನು ಒಪ್ಪಿಸಿ ಸಮಾಜಕ್ಕೆ ನಾಯಕರಾಗಿಬಿಡುತ್ತಾರೆ. ಹಾಗೂ ನಿಧಾನವಾಗಿ ಪ್ರಜಾಪ್ರಭುತ್ವ ಒಂದು ವಿಕೃತ ರೂಪ ಹೊಂದಿ ಸಮಾಜದ ಪಾಲಿಗೆ ಕಷ್ಟದಾಯಕವಾಗಿಬಿಡುತ್ತದೆ. ಪ್ರಾಯಶಃ ಇದೇ ನೋವನ್ನು ಎದುರಿಸುವ ಕಾರಣದಿಂದಾಗಿ ನಮ್ಮ ಇಲ್ಲಿನ ಶಾಸ್ತ್ರಜ್ಞರು ಪ್ರಜಾಮತದ ಶುದ್ಧೀಕರಣ ವ್ಯವಸ್ಥೆಯನ್ನು ಮಾಡಿದರು. ಯಾವ ಸಮಾಜದಲ್ಲಿ ಈ ಶುದ್ಧೀಕರಣದ ಕೆಲಸವು ನಡೆಯುತ್ತಿರುತ್ತದೆಯೋ ಅಲ್ಲಿ ಸಹಿಷ್ಣು ಹಾಗೂ ಸಂಯಮಶೀಲ ವ್ಯಕ್ತಿಗಳ ಮಂಡಲಿಯು ಏರುತ್ತಾ ಹೋಗುತ್ತದೆ. ಎಲ್ಲಿಯವರೆಗೆಂದರೆ ಈ ಗುಣಗಳಿಂದ ವಂಚಿತರಾದ ವ್ಯಕ್ತಿಗಳು ಶಸ್ತ್ರ ಸಜ್ಜಿತರಾಗಿಯೇ ಲಭ್ಯರಾಗುತ್ತಾರೆ. ಒಂದು ವೇಳೆ ಯಾವುದಾದರೂ ಅಪವಾದವಿದ್ದರೂ ಅವನು ತನ್ನ ಪ್ರಭುತ್ವವನ್ನು ಸ್ಥಾಪಿಸಲಾರನು. ಆದರೆ ಈ ಪ್ರಜಾಮತ ಶುದ್ಧೀಕರಣದ ಕೆಲಸ ಯಾರು ಮಾಡುವುದು ? ರಷ್ಯಾ ಮತ್ತು ಬೇರೆ ಸಾಮ್ಯವಾದಿ ದೇಶಗಳಲ್ಲಿ ಈ ಕೆಲಸ ರಾಜ್ಯದ ಮೂಲಕ ಮಾಡಲಾಗುತ್ತದೆ. ಮಾರ್ಕ್ಸ್‌ನ ಸಿದ್ಧಾಂತದ ಪ್ರಕಾರ ಕಾರ್ಮಿಕ ಕ್ರಾಂತಿಯ ನಂತರ ಮತ್ತೆ ಕ್ರಾಂತಿಯ ಸಾಧ್ಯತೆಗಳಿವೆ, ಅದನ್ನು ತಡೆಯಲು ಕಠೋರ ಉಪಾಯಗಳನ್ನು ಅವಲಂಬಿಸುವ ಅವಶ್ಯಕತೆ ಇದೆ. ಜೊತೆಗೆ ಇಲ್ಲಿಯವರೆಗೆ ಜೀವನದ ಯಾವ ಮೌಲ್ಯಗಳು ಸ್ಥಾಪಿತವಾಗಿವೆಯೋ ಅವು ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಆಧರಿಸಿವೆ. ಅವುಗಳನ್ನು ತೆಗೆದುಹಾಕಿ ಪ್ರಗತಿಪರ ಮೌಲ್ಯಗಳ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಈ ಕಾರ್ಯವನ್ನು ಲೆನಿನ್ `ರಾಜ್ಯ'ಕ್ಕೆ- ಅಂದರೆ ಯಾವುದು ಕಾರ್ಮಿಕ ವರ್ಗದ ಪ್ರತಿನಿಧಿಗಳು ಹಾಗೂ ಕಾರ್ಯದರ್ಶಿ ಮಹಾನುಭಾವರ ಮೂಲಕ ನಡೆಸಲಾಗುತ್ತದೆಯೋ ಅದಕ್ಕೆ ಒಪ್ಪಿಸಿದರು. ಆದರೆ ಅದರ ಪರಿಣಾಮ ಸ್ವರೂಪವಾಗಿ ಪ್ರಜಾಮತ ಶುದ್ಧೀಕರಣದ ಹೆಸರಿನಲ್ಲಿ ವ್ಯಕ್ತಿಯ ಎಲ್ಲಾ ಸ್ವಾತಂತ್ರ್ಯವು ಕೊನೆಗೊಂಡಿತು. ಹಾಗೂ ಕೆಲವು ವ್ಯಕ್ತಿಗಳ ನಿರಂಕುಶ ಪ್ರಭುತ್ವವೇ ಸಂಪೂರ್ಣ ಜನತೆಯ ಇಚ್ಛೆಯ ಹೆಸರಿನಲ್ಲಿ ನಡೆಯುತ್ತಿತ್ತು. ಯಾವ ಔಷಧಿ ನೀಡಲಾಯಿತೋ ಅದರಿಂದ ರೋಗವಂತೂ ಗುಣವಾಗಲಿಲ್ಲ. ಆದರೆ ರೋಗಿ ಅವಶ್ಯಕವಾಗಿ ತೀರಿಕೊಂಡನು. ಅಂದರೆ ಸಮಸ್ಯೆಗಳು ಎರಡೂ ಕಡೆಯಿಂದಿವೆ. ಒಂದೆಡೆ ಅಪರಿಚಿತ ಜನ ಮತ, ಅವರ ದಿಕ್ಕೂ ಕೆಲವೊಮ್ಮೆ ವೈಚಾರಿಕತೆಯಲ್ಲಿ ನಿಶ್ಚಿತವಾಗಿರುವುದಿಲ್ಲ. ಹಾಗೂ ಮತ್ತೊಂದೆಡೆ ವ್ಯಕ್ತಿಯ ಸ್ವಾತಂತ್ರ್ಯದ ಅಂತ್ಯ. ಷೇಕ್ಸ್‌ಪಿಯರ್ ತನ್ನ ನಾಟಕವಾದ `ಜೂಲಿಯಸ್ ಸೀಜರ್'ನಲ್ಲಿ ಪ್ರಥಮ ದೃಶ್ಯವನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಾನೆ. ಪ್ರಜಾಪ್ರಭುತ್ವ ಮತ್ತು ಪ್ರಜಾಭಿಮತ 37 ಯಾವ ಜನತೆ ಬ್ರೂಟಸ್‍ನ ಜೊತೆಗೆ ಜೂಲಿಯಸ್ ಸೀಜರ್‌ನ `ವಧೆ'ಯನ್ನು ಕುರಿತು ಸಂತೋಷಗೊಂಡಿದ್ದರೋ ಅದೇ ಜನತೆ ಸ್ವಲ್ಪ ಸಮಯದ ನಂತರ ಬ್ರೂಟಸ್‍ನ ಹತ್ಯೆ ಮಾಡಲು ತಯಾರಾಗಿಬಿಟ್ಟಿತು. ಮೊಬೊಕ್ರೆಸಿ ಮತ್ತು ಆಟೋಕ್ರೆಸಿಯ ಎರಡು ಒರಳು-ಒನಕೆಯ ನಡುವೆ `ಡೆಮೋಕ್ರೆಸಿ'ಯನ್ನು ಜೀವಂತವಾಗಿರಿಸುವುದು ಒಂದು ಕಠಿಣವಾದ ಸಮಸ್ಯೆಯಾಗಿದೆ. ಭಾರತವು ರಾಜ್ಯದ ಕೈಯಿಂದ ಜನಮತ ನಿರ್ಮಾಣದ ಸಾಧನವನ್ನು ಕಸಿದುಕೊಂಡು ಈ ಸಮಸ್ಯೆಗೆ ಸಮಾಧಾನವನ್ನು ನೀಡಿದೆ. ಪ್ರಜಾಮತ ಶುದ್ಧೀಕರಣದ ಕಾರ್ಯ ವಿರಕ್ತ, ದ್ವಂದ್ವಾತೀತ ಸನ್ಯಾಸಿಗಳದ್ದು; ಪ್ರಜಾಮತದ ಪ್ರಕಾರ ನಡೆಯುವ ಕಾರ್ಯ ರಾಜ್ಯದ್ದು. ಸನ್ಯಾಸಿ ಯಾವಾಗಲೂ ಧರ್ಮದ ತತ್ವಗಳನುಸಾರವಾಗಿ ಜನತೆಯ ಐಹಿಕ ಹಾಗೂ ಆಧ್ಯಾತ್ಮಿಕ ಸಮುತ್ಕರ್ಷದ ಇಚ್ಛೆಯೊಂದಿಗೆ ತಮ್ಮ ವಚನಗಳು ಹಾಗೂ ಮುಗ್ಧ ಆಚರಣೆಗಳಿಂದ ಜನ-ಜೀವನದ ಮೇಲೆ ಸಂಸ್ಕಾರವನ್ನು ವಿಧಿಸುತ್ತಾರೆ. ಅವರಲ್ಲಿ ಧರ್ಮದ ಬಗ್ಗೆ ಗೌರವದ ಜ್ಞಾನವನ್ನು ಮೂಡಿಸುತ್ತಿರುತ್ತಾರೆ. ಅವರ ಮುಂದೆ ಯಾವುದೇ ಮೋಹ ಹಾಗೂ ಲೋಭಗಳಿಲ್ಲದಿರುವ ಕಾರಣ ಅವರು ಸತ್ಯವನ್ನೇ ಉಚ್ಛರಿಸಬಲ್ಲರು. ಶಿಕ್ಷಣ ಹಾಗೂ ಸಂಸ್ಕಾರದಿಂದಲೇ ಸಮಾಜದ ಜೀವನ-ಮೌಲ್ಯ ನಿರ್ಮಾಣವಾಗುವುದು. ಹಾಗೂ ಸದೃಢವಾಗುತ್ತದೆ. ಈ ಮೌಲ್ಯಗಳನ್ನು ಬಂಧಿಸಿಟ್ಟ ನಂತರ ಪ್ರಜಾಭಿಮತದ ನದಿ ಎಂದಿಗೂ ತನ್ನ ದಡಗಳನ್ನು ಅತಿಕ್ರಮಿಸಿ ಸಂಕಟಕ್ಕೆ ಕಾರಣವಾಗುವುದಿಲ್ಲ. ಗೌರವ ಮರ್ಯಾದೆಗಳ ಅಡಿಯಲ್ಲಿರುವ ಕ್ರಿಯೆಯ ಹೆಸರೇ ಸಂಯಮ. ಹಸಿವಿನಿಂದ ಸಾಯವುದು ಸಂಯಮವಲ್ಲ. ಆದರೆ ಶರೀರದ ಅವಶ್ಯಕತೆಗನುಸಾರವಾಗಿ ಗುಣ ಹಾಗೂ ಪರಿಮಾಣದಲ್ಲಿ ಊಟ ಮಾಡುವುದು ಸಂಯಮ. ಸಂಪೂರ್ಣವಾಗಿ ಮಾತನಾಡದೇ ಇರುವುದು, ಅತ್ಯಾಚಾರಿಯ ವಿರುದ್ಧ ದನಿಯೇರಿಸದೇ ಇರುವುದು ಅಥವಾ ಯಾರಿಗಾದರೂ ಸತ್‍ಪರಾಮರ್ಶೆಯನ್ನು ಕೊಡದೇ ಇರುವುದು ಸಂಯಮವಲ್ಲ. ವಾಚಾಳಿ ಮತ್ತು ಮೂಗರ ನಡುವೆ ಇರುವವನು ಸಂಯಮ ಪುರುಷ ಮತ್ತು ಅವಶ್ಯಕತೆ ಬಂದಾಗ ಮಾತನಾಡುತ್ತಾನೆ ಹಾಗೂ ಖಂಡಿತವಾಗಿ ಮಾತನಾಡುತ್ತಾನೆ. ಯಾವಾಗ ವ್ಯಕ್ತಿಗೆ ತನ್ನ ಆದರ್ಶಗಳ ಹುರುಪು ಹಾಗೂ ತನ್ನ ಜವಾಬ್ದಾರಿಯ ಸಮಾನ ಜ್ಞಾನವಿರುತ್ತದೆಯೋ ಆಗ ತನ್ನ ವ್ಯವಹಾರದ ನಿಯಂತ್ರಣವಾಗುತ್ತದೆ. ಸಂಯಮ ಕಳೆದುಕೊಳ್ಳುವುದು ಮತ್ತು ಬೇಜವಾಬ್ದಾರಿ ಇವು ಜೊತೆಯಾಗಿ ಸಾಗುತ್ತವೆ. ಯಾವಾಗ ಒಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿಯುತ್ತಾನೋ ಹಾಗೂ ಅದರ ನಿರ್ವಹಣೆ ಮಾಡಲು ಕ್ರಿಯಾಶೀಲನಾಗಿರುತ್ತಾನೋ ಆಗ ಪ್ರಜಾರಾಜ್ಯವು ಸಫಲವಾಗುತ್ತದೆ. ಸಮಾಜವು ರಾಜ್ಯವನ್ನು ನಡೆಸುವ ಜವಾಬ್ದಾರಿ ತನ್ನದೆಂದು 38 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಷ್ಟು ಅರಿಯುತ್ತಾ ಹೋಗುತ್ತದೋ ಅಷ್ಟೇ ಸಂಯಮಶೀಲವಾಗುತ್ತಾ ಹೋಗುತ್ತದೆ. ಯಾವ ಹೃದಯಕ್ಕೆ ಇಂದಲ್ಲ ನಾಳೆ ತನ್ನ ಭುಜಗಳ ಮೇಲೆ ರಾಜ್ಯ ಸಂಚಾಲನೆಯ ಭಾರ ಬರುತ್ತದೋ ಅದು ಎಂದಿಗೂ ತನ್ನ ವಾಯ್ದೆ ಹಾಗೂ ವ್ಯವಹಾರದಲ್ಲಿ ಬೇಜವಾಬ್ದಾರಿ ಹಾಗೂ ಪ್ರಕ್ಷುಬ್ಧವಾಗಿರುವುದಿಲ್ಲ. ಹಾಗೂ ಜನತೆಯ ಮೇಲೆ ರಾಜ್ಯವನ್ನು ಚಲಾಯಿಸುವ ಜವಾಬ್ದಾರಿ ಯಾವಾಗಲೂ ಇರುತ್ತದೆ. ಎಲ್ಲಾ ಸಮಯದಲ್ಲೂ ಅದು ತನ್ನ ಪ್ರತಿನಿಧಿಯ ರೂಪದಲ್ಲಿ ಭಿನ್ನ ಪಕ್ಷಗಳನ್ನು ಆರಿಸಿಕೊಳ್ಳುತ್ತದೆ. ಅದು ಒಂದು ವೇಳೆ ಜವಾಬ್ದಾರಿಯುತವಾಗಿದ್ದರೆ, ಪಕ್ಷಗಳೂ ಸಹ ಯಾವಾಗಲೂ ಸಂಯಮ ಶೂನ್ಯವಾಗುವುದಿಲ್ಲ. ಈಗ ಎಲ್ಲಕ್ಕಿಂತ ಹೆಚ್ಚು ಮಹತ್ವ ಜನತೆಯನ್ನು ಸುಂಸ್ಕೃತರನ್ನಾಗಿ ಮಾಡುವುದಕ್ಕಿದೆ. ಎಲ್ಲಿಯವರೆಗೂ ಈ ಕಾರ್ಯ ನಿರ್ವಹಿಸುವ ಸಂಘಟನೆ ಹಾಗೂ ಮಹಾಪುರುಷರು ರಾಜ್ಯದ ಮೋಹದಿಂದ ದೂರ ಹಾಗೂ ಭಯ ವಿಮುಕ್ತರಾಗಿರುತ್ತಾರೋ, ಅಲ್ಲಿಯವರೆಗೂ ರಾಜ್ಯವು ಒಳ್ಳೆಯ ದಿಕ್ಕಿನಲ್ಲಿ ನಡೆಯುತ್ತಿರುತ್ತದೆ. ___________ * ಆಕರ : ರಾಷ್ಟ್ರಧರ್ಮ ಪತ್ರಿಕೆ, ಸೆಪ್ಟೆಂಬರ್ 1981ರ ಸಂಚಿಕೆ, `ಲೋಕ್‍ತಂತ್ರ್ ಔರ್ ಲೋಕೇಚ್ಛಾ' ಎಂಬ ಹೆಸರಿನ ಲೇಖನ, (-ಸಂ.) ಧರ್ಮರಾಜ್ಯ - ಎಂದರೇನು ? ಮತ್ತು ಏಕೆ ? ಸಂಸ್ಕೃತಿ ಎಂದರೇನು ? ಭೂಮಿ, ಜನ ಮತ್ತು ಸಂಸ್ಕೃತಿಯ ಮಿಲನದಿಂದ ರಾಷ್ಟ್ರದ ನಿರ್ಮಾಣವಾಗುತ್ತದೆ. ಜನ ಮತ್ತು ಸಂಸ್ಕೃತಿಯ ಕಾರಣದಿಂದಲೇ ಜಡ ಭೂಮಿ ಚೈತನ್ಯಮಯೀ ಆಗುತ್ತದೆ. ಭೂಮಿ ಹಾಗೂ ಸಂಸ್ಕೃತಿಯಿಂದಲೇ ಮರಣಾಸನ್ನ ಜನರು ಅಮರತ್ವವನ್ನು ಪಡೆಯುತ್ತಾರೆ. ನಿತ್ಯ ಹಾಗೂ ಪರಿಭಾಷೆ, ವ್ಯವಹಾರದ ಎಲ್ಲೆಗಳು ಹಾಗೂ ನಿಯಮ ಇವೆರೆಡರ ವಾಸಸ್ಥಾನ. ಜನ ಹಾಗೂ ಭೂಮಿಯ ಪಾರಸ್ಪರಿಕ ಸಂಬಂಧಗಳು, ಕ್ರಿಯೆ-ಪ್ರತಿಕ್ರಿಯೆಗಳ ಪರಿಣಾಮವೇ ಸಂಸ್ಕೃತಿ. ಕೆಲವು ಶಾಸ್ತ್ರಜ್ಞರ ಪ್ರಕಾರ-ಜನ ಒಂದು ಅಮೈಥುನಿಕ ಸೃಷ್ಟಿಯ ರೂಪದಲ್ಲಿ ದೇವರ ಕಡೆಯಿಂದಲೇ ಕೆಲವು ವಿಶೇಷತೆಗಳನ್ನು ಪಡೆದು ಹುಟ್ಟುತ್ತಾರೆ ಹಾಗೂ ಆ ಮೂಲ ತತ್ವಗಳ ವಿಕಸಿತ ಸ್ವರೂಪವೇ ಸಂಸ್ಕೃತಿ. ಅನ್ಯರ ಪ್ರಕಾರ-ಮಾನವ ಮಾನವನ ನಡುವೆಯ ಸ್ವಭಾವ ವ್ಯವಹಾರಕ್ಕೆ ಒಂದು ನಿಶ್ಚಿತವಾದ ಆದರ್ಶೋನ್ಮುಖವಾದ ದಿಕ್ಕು ಸಿಕ್ಕಾಗ, ಆ ವ್ಯವಹಾರಗಳ ಸಂಸ್ಕಾರ ಮನಸ್ಸಿನ ಮೇಲೆ ಹಾಗೂ ಯಾವುದು ಸ್ವತಃ ವ್ಯವಹಾರಗಳ ನಿಯಂತ್ರಕವೂ ಆಗಿರುತ್ತದೆಯೋ ಅದು `ಸಂಸ್ಕೃತಿ' ಎನ್ನಿಸಿಕೊಳ್ಳುತ್ತದೆ. ಸಂಸ್ಕೃತಿಯು ಜನರ ಕರ್ತವ್ಯಗಳ ಕಾರಣ ಹಾಗೂ ಪರಿಣಾಮ ಎರಡೂ ಆಗಿದೆ. ಭೂಮಿಯ ಜೊತೆಗೆ ಜನರ ಯಾವ ಮಮತೆ ಹಾಗೂ ಸಾಧಕ-ಸಾಧನೆ, ಪೋಷ್ಯ-ಪೋಷಕ, ರಕ್ಷಕ-ರಕ್ಷತ ಸಂಬಂಧವಿದೆಯೋ ಅದರಿಂದಲೇ ಸಂಸ್ಕೃತಿಯು ಆಲಂಕಾರಿಕವಾಗಿ ಶೃಂಗಾರಮಯವಾಗಿರುತ್ತದೆ. ತಾತ್ಪರ್ಯವೇನೆಂದರೆ ಭೂಮಿ, ಜನ ಮತ್ತು ಸಂಸ್ಕೃತಿ ಮೂರೂ ಅನ್ಯೋನ್ಯಾಶ್ರಿತವಾದವುಗಳು. ತತ್ವಜ್ಞಾನಿಗಳು ಯಾವುದೇ ಒಂದು ಅಥವಾ ಒಂದಕ್ಕಿಂತ ಅಧಿಕ ವಿಷಯಕ್ಕೆ ವಿಶೇಷವಾದ ಮಹತ್ವ ನೀಡಲಿ. ಆದರೆ ಜೀವ, ಆತ್ಮ ಹಾಗೂ ದೇಹ ಮೂರೂ ಕೂಡ ಸತ್ಯವಾದವುಗಳು. ಅದೇ ರೀತಿ ಭೂಮಿ, ಜನ ಹಾಗೂ ಸಂಸ್ಕೃತಿ ಮೂರರಲ್ಲಿ ಯಾವುದಾದರೂ ಒಂದನ್ನು ನಾವು ಕಡಿಮೆಯೆಂದು ತಿಳಿದು ನಡೆಯಲಾರೆವು. ರಾಷ್ಟ್ರದ ಅಸ್ತಿತ್ವ ಇವುಗಳನ್ನು ಹೊರತುಪಡಿಸಿ ಇರುವುದಿಲ್ಲ. ಈ ಮೂರು ತತ್ವಗಳ ಮಿಲನದಿಂದ ಉಂಟಾದ ರಾಷ್ಟ್ರದ ರಕ್ಷಣೆ, ಅಭಿವೃದ್ಧಿ ಹಾಗೂ ಸಮೃದ್ಧಿ ಯಾವ ವ್ಯವಹಾರಗಳಿಂದ ಆಗುತ್ತವೆಯೋ ಅವುಗಳ ಆಶ್ರಯಸ್ಥಾನ 40 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಧರ್ಮವಾಗಿದೆ. ಧರ್ಮದಿಂದಲೇ ಧಾರಣೆ, ಅದರಿಂದಲೇ ಅಭ್ಯುದಯ ಹಾಗೂ ನಿಶ್ರೇಯಸ್ಸಿನ ಉಪಲಬ್ಧತೆ ಮತ್ತು ವ್ಯಷ್ಟಿ ಹಾಗೂ ಸಮಷ್ಟಿಗಳ ಹಿತದ ಸಾಮಂಜಸ್ಯತೆ ಆಗುತ್ತದೆ. ಹೇಗೆ ಧರ್ಮದ ಪಾಲನೆ ಮಾಡುವ ವ್ಯಕ್ತಿ ದೇಹವನ್ನು ಆರೋಗ್ಯಕರ ಹಾಗೂ ಸದೃಢವನ್ನಾಗಿಸುತ್ತಾ ಆತ್ಮ ಸಾಕ್ಷಾತ್ಕಾರ ಹೊಂದಿ ಜೀವಕ್ಕೆ ಭೌತಿಕ ಹಾಗೂ ಆಧ್ಯಾತ್ಮಿಕ ಎರಡೂ ಪ್ರಕಾರದ ಆನಂದವನ್ನು ಪಡೆದುಕೊಳ್ಳುತ್ತಾನೋ ಹಾಗೆಯೇ ಧರ್ಮಾನುಯಾಯಿ ರಾಷ್ಟ್ರ, ಭೂಮಿ, ಜನ ಹಾಗೂ ಸಂಸ್ಕೃತಿ ಮೂರು ಕಲ್ಯಾಣಕಾರಿಯಾಗುತ್ತವೆ. ಧರ್ಮದ ಈ ಕಲ್ಪನೆಯಿಂದಾಗಿಯೇ ಭೂಮಿಯ ಆರಾಧನೆ, ತೀರ್ಥಯಾತ್ರೆ, ಮಾತೃವಂದನೆ, ಸಮಾಜ ವ್ಯವಸ್ಥೆ, ಯಜ್ಞ-ಯಾಗಾದಿಗಳು ಎಲ್ಲವುಗಳ ಅಂತರ್ಭಾವ ನಮ್ಮ ಧರ್ಮದಲ್ಲಿದೆ. ಈ ಧರ್ಮ ವ್ಯಕ್ತಿ-ವ್ಯಕ್ತಿಯ, ವ್ಯಕ್ತಿ ಹಾಗೂ ಸಮಷ್ಟಿಯ, ಒಂದು ಸಮಷ್ಟಿ ಹಾಗೂ ಮತ್ತೊಂದು ಸಮಷ್ಟಿಯ ಜಡ ಹಾಗೂ ಚೇತನಗಳ ಎಲ್ಲಾ ವ್ಯವಹಾರಗಳ ನಿಯಂತ್ರಕನಾಗಿ ಆ ಸಂಬಂಧಗಳನ್ನು ಪರಸ್ಪರ ಅನುಕೂಲಕಾರಿಯಾಗಿ ಮಾಡುತ್ತದೆ. ಧರ್ಮವೇ ನಮ್ಮ ಸಂಪೂರ್ಣ ಜೀವನವನ್ನು ವ್ಯಾಪಕವಾಗುವಂತೆ ಮಾಡಿದೆ. ಧರ್ಮಕ್ಕೆ ಈ ಸ್ಥಾನವಿರುವುದರಿಂದ ಎಲ್ಲಾ ಸಂಸ್ಥೆಗಳು ಧರ್ಮದ ಅಧಿಷ್ಠಾಪನೆಯಾಗಿವೆ. ರಾಜ್ಯದ ಉದ್ಭವ ಮೂಲತಃ ಹಾಗೂ ಮುಖ್ಯವಾಗಿ ರಾಷ್ಟ್ರದ ಸಂರಕ್ಷಣೆಗಾಗಿ, ಇರುವ ಧರ್ಮದ ಅವಹೇಳನ ಮಾಡುವಂತಿಲ್ಲ. ಅಡುಗೆ ಮಾಡಲು ಬೇಕಾದ ಇಂಧನ ಹಾಗೂ ಅದರ ದಹನದಿಂದ ವಿಮುಖನಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಲಾರನು. ಒಂದು ವೇಳೆ ರಾಜ್ಯವು ಧರ್ಮದ ಧಾರಣೆಯ ಕಡೆ ಉದಾಸೀನವಾಗಿ ನಡೆದರೆ ಅದು ರಾಷ್ಟ್ರದ ರಕ್ಷಣೆ ಮಾಡಲಾರದು ಹಾಗೂ ನಮ್ಮಲ್ಲಿ ರಾಜ್ಯದ ಸ್ವರೂಪ ಧರ್ಮರಾಜ್ಯವೆಂದಾಗಿದೆ. ಅದರ ಬೇರೆ ವಿಧಗಳು ಗೌಣವಾಗಿವೆ. ಒಂದುವೇಳೆ ರಾಜ್ಯವು ಧರ್ಮದಿಂದ ಅಧಿಷ್ಠಾಪಿತವಾದರೆ ಅದು ಪ್ರಜಾಪ್ರಭುತ್ವವಾಗಲಿ ಅಥವಾ ಏಕಚ್ಛತ್ರವಾಗಲೀ, ಎರಡೂ ವ್ಯವಸ್ಥೆಗಳಲ್ಲಿಯೂ ಕಲ್ಯಾಣಕರವೆಂದು ಸಿದ್ಧವಾಗಿರುತ್ತದೆ. ಇದಕ್ಕೆ ವಿರುದ್ಧ ಪ್ರಜಾಪ್ರಭುತ್ವ ಮತ್ತು ಏಕಚ್ಛತ್ರ ಎರಡರ ಪ್ರಕಾರ ದಬ್ಬಾಳಿಕೆಗೊಳಗಾದ ಪ್ರಜೆಗಳ ಉದಾಹರಣೆ ಇತಿಹಾಸದಲ್ಲಿ ಲಭ್ಯವಿದೆ. ಧರ್ಮರಾಜ್ಯದಲ್ಲಿ ಭೂಮಿಯ ಏಕತೆ, ಅಖಂಡತೆ ಹಾಗೂ ಅದರ ಬಗ್ಗೆ ಶ್ರದ್ಧೆ ಮುಖ್ಯ ರೂಪದ ವಿದ್ಯಮಾನವಾಗಿರುತ್ತದೆ. ಧರ್ಮರಾಜ್ಯ ಎಂದಿಗೂ ಸಂಕುಚಿತವಾಗಿ ನಡೆಯಲಾರದು. ಅತಿ ತುಚ್ಛ ವಸ್ತುಗಳನ್ನು ಪೂಜ್ಯವನ್ನಾಗಿಸುವುದು ಧರ್ಮದ ಗುಣ. ಭೂಮಿಯ ಕಡೆಗೆ ಅತ್ಯಂತ ಶ್ರದ್ಧೆ ಹಾಗೂ ಆದರದಿಂದ ನೋಡುವುದು ಇದೇ ಗುಣದ ವಿಶೇಷತೆ. ನಿಸ್ವಾರ್ಥ ದೇಶಭಕ್ತಿ ಧರ್ಮಾತೀತವಾಗಲಾರದು. ಲೋಕಾರಾಧನೆ ಧರ್ಮರಾಜ್ಯದ ಏಕಮಾತ್ರ ಧರ್ಮರಾಜ್ಯ - ಎಂದರೇನು ? ಮತ್ತು ಏಕೆ ? 41 ಉದ್ದೇಶವಾಗಿದೆ. ಒಬ್ಬ ವ್ಯಕ್ತಿಯು ಹಸಿವಿನಿಂದಿದ್ದರೂ ಧರ್ಮಾನುಯಾಯಿ ಶಾಸಕನಿಗೆ ಊಟ ಮಾಡುವ ಅಧಿಕಾರವಿಲ್ಲ. ಲೋಕರಂಜನೆಯ ಕಾರಣದಿಂದಲೇ ``ರಾಜ" ಎಂಬ ನಾಮಪದ ಶಾಸಕನಿಗೆ ಪ್ರಾಪ್ತವಾಗಿದೆ. ಧರ್ಮನೀತಿ ಮೂಲವಾಗಿ ಲೋಕನೀತಿಯೇ ಆಗಿರುತ್ತದೆ. ಧರ್ಮಭಾವ ಜನರನ್ನು ವಿಭಕ್ತರನ್ನಾಗಿ ನೋಡದೆ ಅವರ ಸಂಪೂರ್ಣತೆಯೊಂದಿಗೆ ವಿಚಾರ ಮಾಡುತ್ತದೆ. ದೇಹ ಹಾಗೂ ಅವಯವಗಳಂತೆಯೇ ಲೋಕ ಹಾಗೂ ಲೋಕ ಸಂಸ್ಥೆಗಳು ಹಾಗೂ ವಿಭಿನ್ನ ಆಧಾರಗಳ ಮೇಲೆ ಅವರ ವಿವಿಧ ವರ್ಗಗಳ ಸಂಬಂಧವಿರುತ್ತದೆ. ಅಂಗದ ಮತ್ತು ದೇಹದ ಅವಹೇಳನೆಯನ್ನು ಮಾಡಬಾರದು. ಹೂವಿನ ಅಸ್ತಿತ್ವ ಪಂಖಡಿಯಾದಿಂದ ಆಗಿದೆ. ಪಂಖಡಿಯಾದ ಶೋಭೆ ಹಾಗೂ ಜೀವನದ ಸಾರ್ಥಕತೆ ಹೂವಿನೊಂದಿಗೆ ಅದರ ಸ್ವರೂಪವನ್ನು ನಿರ್ಮಿಸಿ ಶುಭ್ರಗೊಳಿಸುವುದರಲ್ಲಿದೆ. ಪ್ರತ್ಯೇಕವಾದಕ್ಕೆ ಇಲ್ಲಿ ಸ್ಥಳವಿಲ್ಲ. ಸಾಂಸ್ಕೃತಿಕ ದೃಷ್ಟಿಯಿಂದಲೂ ಧರ್ಮ ಏಕಾತ್ಮವಾದಿ. ಜೀವನದ ಏಕಾತ್ಮಕತೆಯ ಭಾವನೆಯೇ ಭಾರತೀಯ ಸಂಸ್ಕೃತಿಯ ವಿಶೇಷತೆ ಹಾಗೂ ಈ ಭಾವನೆಯ ಆಚಾರ ಸಂಹಿತೆಯೇ ಧರ್ಮ. ನಿಶ್ಚಯವಾಗಿಯೂ ಈ ಆಚಾರಸಂಹಿತೆಯ ಗುರಿಯೆಂದರೆ ಸಮಷ್ಟಿಯ ಸಂರಕ್ಷಣೆ ಹಾಗೂ ವ್ಯಕ್ತಿಯ ವಿಕಾಸ. ವ್ಯಕ್ತಿ ಹಾಗೂ ಸಮಾಜದಲ್ಲಿ ಯಾವುದಾದರೂ ಒಂದನ್ನು ಮಾತ್ರ ಗುರಿಯನ್ನಾಗಿಸಿಕೊಂಡು ನಡೆಯುವುದು ಏಕಾಂಗಿತನ. ಭಾರತೀಯ ಸಂಸ್ಕೃತಿ ಎರಡರ ಹಿತವನ್ನು ಸಮಾನ ರೂಪವಾಗಿ ಸಾಧಿಸುತ್ತದೆ. ಪ್ರಜಾಪ್ರಭುತ್ವ ಹಾಗೂ ಸಮಾಜವಾದ ಈ ಒಟ್ಟುಗೂಡುವಿಕೆಯನ್ನು ಉಳಿಸಲಾಗಲಿಲ್ಲ. ಧರ್ಮದಿಂದ ಇದು ಸಹಜ ಸಾಧ್ಯ. ಧರ್ಮರಾಜ್ಯದ ಸ್ವರೂಪ `ಪಂಥರಾಜ್ಯ'ಕ್ಕಿಂತ ಖಂಡಿತವಾಗಿಯೂ ಭಿನ್ನವಾಗಿದೆ. ಇಂಗ್ಲಿಷ್‌ನ `ರಿಲೀಜನ್' ಶಬ್ದದಿಂದ ಧರ್ಮದ ಅನುವಾದ ಮಾಡಿದ್ದರಿಂದ ಈ ಭ್ರಮೆ ಬಂದಿದೆ. ಧರ್ಮ ವ್ಯಾಪಕವಾದುದು. ಉಪಾಸನೆ, ಸಂಪ್ರದಾಯ ಜೀವನದ ಒಂದೇ ಅಂಗದ ವಿಚಾರ ಮಾಡುತ್ತಾರೆ. ನಾಲ್ಕು ಪುರುಷಾರ್ಥಗಳಲ್ಲಿ ಒಂದಿದ್ದರೂ ಉಳಿದ ಎಲ್ಲದರ ಆಧಾರವೇ ಆಗಿದೆ. ಧರ್ಮರಾಜ್ಯವು ಥಿಯೋಕ್ರೆಟಿಕ್ ಸ್ಟೇಟ್ ಆಗುವುದಿಲ್ಲ. ಯಾವಾಗ ರಾಜನೇ ಧರ್ಮಗುರುವಾಗಿ ಬಿಡುತ್ತಾನೋ ಆಗ ಥಿಯೇಕ್ರಿಸೆಯ ಉದಯವಾಗುತ್ತದೆ. ಭಾರತವು ರಾಜನಿಗೆ ಈ ಸ್ಥಾನವನ್ನು ಎಂದಿಗೂ ನೀಡಿಲ್ಲ. ರಾಜ್ಯದಲ್ಲಿ ಸಂಪೂರ್ಣ ಶಕ್ತಿಯು ಕೇಂದ್ರಿತವಾದ ನಂತರ ನಿಜವಾಗಿಯೂ ಥಿಯೋಕ್ರೆಸಿ ಉತ್ಪನ್ನವಾಗುವುದು. ಯಾವುದಾದರೂ ಪಂಥ ವೈಶಿಷ್ಟ್ಯತೆಯೊಂದಿಗೆ ಸಂಬಂಧ ಹೊಂದಿದ್ದರೆ ಅದು ಅದರ ಆಧಾರದ ಮೇಲೆ ಸಂಪೂರ್ಣ ಸಮಾಜದ ಜೀವನವನ್ನು ನಿಯಂತ್ರಿಸುತ್ತದೆ. ಯೂರೋಪಿನಲ್ಲಿ ಕ್ರೈಸ್ತರಲ್ಲದವರಲ್ಲಿ ಹಾಗೂ ಕ್ರೈಸ್ತರಲ್ಲಿಯೂ ಬೈಬಲ್‍ನ ಮಾನ್ಯ 42 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಿದ್ಧಾಂತಗಳ ವಿರುದ್ಧ ಹೇಳುವವರ ವಿರುದ್ಧ ರಾಜ್ಯಶಕ್ತಿ ಇತ್ತು. ಗೆಲಿಲಿಯೋನನ್ನು ಇದೇ ಕಾರಣದಿಂದಾಗಿ ಸೆರೆಮನೆಗೆ ತಳ್ಳಲಾಯಿತು. ಖಿಲಾಫತ್ ಹಾಗೂ ಪೋಪ್‍ಡಮ್ ಇದೇ ದೃಷ್ಟಿಕೋನದಿಂದ ಹುಟ್ಟಿಕೊಂಡದ್ದು. ಇಂದಿಗೂ ರಷ್ಯಾ ಹಾಗೂ ಚೀನಾದಲ್ಲಿ ನಡೆಯುತ್ತಿರುವುದು ಥಿಯೋಕ್ರೆಸಿಗಿಂತ ಭಿನ್ನವಾಗಿದೆ. ಸಾಮ್ಯವಾದಿಗಳ ಧರ್ಮ ಈಶ್ವರವಾದವಲ್ಲ; ಆದರೆ ಮತವಾದದ ಎಲ್ಲಾ ಲಕ್ಷಣಗಳೂ ಅಲ್ಲಿವೆ. ಸಮಾಜವಾದದ ಉದ್ದೇಶದೊಂದಿಗೆ ನಡೆಯುವ ಎಲ್ಲಾ ಜನರು ಒಂದು ವೇಳೆ ಸಫಲವಾದರೆ ಇದೇ ಪ್ರಕಾರದ ಪಂಥ-ರಾಜ್ಯವನ್ನು ಸ್ಥಾಪಿಸುವರು. ಸಮಾಜವಾದವೇ ಅವರ ಪಂಥ. ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಬೌದ್ಧಿಕ ಈ ಎಲ್ಲಾ ಶಕ್ತಿಗಳು ರಾಜ್ಯದ ಅಧೀನವಾಗಿರುತ್ತವೆ. ಧರ್ಮರಾಜ್ಯವು ಶಕ್ತಿಗಳ ವಿಕೇಂದ್ರೀಕರಣ ಅಥವಾ ಸಂಯೋಜನೆಯಲ್ಲಿ ವಿಶ್ವಾಸವಿಡುತ್ತದೆ. `ರಾಜ್ಯ ಮಾಡಿದ್ದೇ ನ್ಯಾಯ’ ಎಂಬ ಸಿದ್ಧಾಂತ ಇಲ್ಲಿ ಮಾನ್ಯವಾಗುವುದಿಲ್ಲ. ಆದರೆ ರಾಜನೇ ನ್ಯಾಯವನ್ನೊದಗಿಸಬೇಕು. `ನ್ಯಾಯ' ಎಂದರೇನು ಎಂಬ ನಿರ್ಣಯವನ್ನು ರಾಜ್ಯವಲ್ಲ ಧರ್ಮ ಮಾಡುತ್ತದೆ. ಇಂದಿನ ಪರಿಭಾಷೆಯಲ್ಲಿ ಇದನ್ನು ಸಾಂವಿಧಾನಿಕ ಶಾಸನ ಎನ್ನಬಹುದು. ಆದರೆ ಅಂತರವಿಷ್ಟೆ: ಇಂದಿನ ಸಂವಿಧಾನ ಸಾಧಾರಣ ಮನುಷ್ಯರಿಂದ ನಿರ್ಮಿಸಲ್ಪಟ್ಟಿದೆ ಅವರ ಕೈಗೊಂಬೆಯಾಗಿಬಿಟ್ಟಿದೆ. ಹಾಗೂ ಅವರು ಅದನ್ನು ಮನಬಂದಂತೆ ಬದಲಾಯಿಸಿರುತ್ತಾರೆ. ಫಲಸ್ವರೂಪವಾಗಿ ಇಂದು ಸಂವಿಧಾನದ ಪ್ರಕಾರ ಶಾಸನ ಎಂಬುದರ ಬದಲಾಗಿ, ಶಾಸನದ ಪ್ರಕಾರ ಸಂವಿಧಾನ ಎಂಬ ಈ ಸ್ಥಿತಿಯೇ ನಿರ್ಮಾಣವಾಗಿಬಿಟ್ಟಿದೆ. ಧರ್ಮದ ಸಿದ್ಧಾಂತಗಳು ದ್ವಂದ್ವಾತೀತ ಮಹಾಪುರುಷರ ಮೂಲಕ ಸೃಷ್ಟಿಯ ಗೂಢ ರಹಸ್ಯಗಳ ಅಂತರ್‍ದೃಷ್ಟಿಯಿಂದ ಸಾಕ್ಷಾತ್ಕಾರವಾದ ನಂತರವೇ ನಿಶ್ಚಿತವಾಗುತ್ತವೆ. ಇಲ್ಲಿ ಲಿಖಿತ ನಿಯಮಗಳಿಗಿಂತ ಅಧಿಕವಾಗಿ ಅಲಿಖಿತ ನಿಯಮಗಳಿಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಸಮಾಜವು ತನ್ನ ವ್ಯವಹಾರದಿಂದ ತನ್ನ ಆತ್ಮದ ಅಭಿವ್ಯಕ್ತಿ ಮಾಡುತ್ತಿರುತ್ತದೆ. ನಿಯಮ ಅಥವಾ ಸ್ಮೃತಿಗಳು ಸಮಾಜದ ಈ ಅಂತರಾಳದ ಗಮನಸೆಳೆಯುವಂತಿರಬೇಕು. ಸಮಾಜ ಸ್ವತಃ ಧರ್ಮಸಮ್ಮತ ಶಿಷ್ಟೆಯಿಂದ ಅನುಮೋದಿತ ಆಚಾರದ ಅನುಯಾಯಿಯಾದ ಕಾರಣ ವ್ಯವಹಾರದಲ್ಲಿ ಎಂದಿಗೂ ವೈರತ್ವ ಅಥವಾ ಸ್ವೇಚ್ಛೆಯನ್ನು ತೋರಿಸುವುದಿಲ್ಲ. ಹೀಗೆ ಧರ್ಮರಾಜ್ಯವು ಮೊಬೊಕ್ರೆಸಿ ಹಾಗೂ ಆಟೊಕ್ರೆಸಿ ಎರಡರ ಕಟ್ಟತನದಿಂದ ರಕ್ಷಿಸಲ್ಪಡುತ್ತದೆ. ಧರ್ಮರಾಜ್ಯವು ಯಾವುದೇ ಗ್ರಂಥವನ್ನು ಆಧರಿಸಿಲ್ಲ. ಅದು ಸ್ಥಾವರವಾಗಿಲ್ಲದೆ ಜಂಗಮವಾಗಿದೆ. ಆದರೆ ಅದು ಗತಿಶೀಲತೆ, ಅಸ್ಥಿರತೆ ಅಥವಾ ಅಚೇತನಕ್ಕೆ ಪರ್ಯಾಯವಾಗಿರುವ ಹೆಸರಲ್ಲ. ದೇಶ ಹಾಗೂ ಕಾಲದ ಪ್ರಕಾರ ಅದು ಬದಲಾಗುತ್ತದೆ ಆದರೂ ಜೀವನದ ನಿಶ್ಚಿತ ಸಿದ್ಧಾಂತಗಳ ವಿಷಯದಲ್ಲಿ ಅದು ಧರ್ಮರಾಜ್ಯ - ಎಂದರೇನು ? ಮತ್ತು ಏಕೆ ? 43 ಪರಿವರ್ತನಶೀಲವಾಗಿರುವುದಿಲ್ಲ. ಇಲ್ಲಿ ಸಮಾಜದ ವಿಧಾಯಕ ಶಕ್ತಿಯು ರಾಜನ ಬಳಿ ಇರದೆ ಧರ್ಮದ ಬಳಿ ಇರುತ್ತದೆ. ವ್ಯವಹಾರದಲ್ಲಿ ವಿಧಾಯಕ ಶಾಸಕರ ಗುಂಪಿಗಿಂತಲೂ ಭಿನ್ನವಾಗಿರುತ್ತದೆ. ಧರ್ಮರಾಜ್ಯವನ್ನು ಸಾಧಾರಣವಾಗಿ ``ರೂಲ್ ಆಫ್ ಲಾ" ಎಂದು ಹೇಳಲಾಗಿದೆ. ಆದರೆ ಎಲ್ಲಿ ವಿಧಿ-ನಿರ್ಮಾಣದ ಅಧಿಕಾರ ಶಾಸಕನ ಕೈಯಲ್ಲಿಯೇ ಇದ್ದು, ಅಲ್ಲಿ ಅದರ ವ್ಯಾವಹಾರಿಕ ಅರ್ಥ Rule of Law to be framed by the ruler ಎಂದಷ್ಟೇ ಆಗೋಗಿದ್ದು ಶಾಸನಕ್ಕೆ ಈ ಅಧಿಕಾರ ಧರ್ಮರಾಜ್ಯಕ್ಕೆ ಅಂತರ್ಗತವೇ ಪ್ರಾಪ್ತವಾಗುತ್ತದೆ. ಧರ್ಮರಾಜ್ಯವು ಇಂದಿನ ಪ್ರಜಾಪ್ರಭುತ್ವಕ್ಕಿಂತಲೂ ಭಿನ್ನವಾಗಿದೆ. ಪ್ರಜಾರಂಜನೆ ರಾಜನ ಕರ್ತವ್ಯವಾದ ಮೇಲೂ ಅವನು ಮೂಲತಃ ಧರ್ಮದಿಂದ ನಿಯಂತ್ರಿಸಲ್ಪಟ್ಟಿರುತ್ತಾನೆ. ಪ್ರಜೆಗಳ ನಿಯಂತ್ರಣವೂ ಧರ್ಮದಿಂದಾಗುತ್ತದೆ. ಹೇಗೆ ಧರ್ಮಾನುಯಾಯಿ ಪ್ರಜೆಗಳಿಗೆ ದಂಡ ನೀಡುವ ಅಥವಾ ತೆಗೆದುಹಾಕುವ ಅಧಿಕಾರ ರಾಜನಿಗಿರುವುದಿಲ್ಲವೋ ಹಾಗೆಯೇ ಧರ್ಮಪಾಲಕ ರಾಜನನ್ನು ತೆಗೆದುಹಾಕುವ ಅಧಿಕಾರ ಪ್ರಜೆಗಳಿಗೂ ಇರುವುದಿಲ್ಲ. ಪ್ರಜಾಪ್ರಭುತ್ವ ರಾಜ ಹಾಗೂ ಪ್ರಜೆಗಳ ಹಿತದಲ್ಲಿ ಸ್ಥಾಯೀ ವಿರೋಧವನ್ನು ವ್ಯಕ್ತಿಪಡಿಸಿ ರಾಜನಿಗೆ ಸಮಾನವಾಗಿ ಪ್ರಜೆಗಳ ನಿಯಂತ್ರಣದಲ್ಲಿಡಲು ವಿರೋಧ ಪಕ್ಷದ ರೂಪದಲ್ಲಿ ಒಂದು ನಿರಂತರವಾಗಿ ನಡೆಯುವ ವಿದ್ರೋಹದ ಕತ್ತಿಯನ್ನು ರಾಜನ ತಲೆಯಮೇಲೆ ಆಡುವಂತೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವದ ಈ ಸ್ವರೂಪ ಮಾನವ ವಿಕಾಸಕ್ಕೆ ಉಪಯುಕ್ತವಾದುದಲ್ಲ. ಹಾಗೂ ಸಂಭವತಃ ಗಾಡ್ ಹಾಗೂ ಸೈತಾನನ ಕ್ರೈಸ್ತರ ದ್ವೈತವಾದಿ ವಿಚಾರಧಾರೆಯಿಂದ ಉದ್ಭವಿಸುದುದು. ಒಂದು ವೇಳೆ ಅವರು ಧರ್ಮದ ವಿರುದ್ಧ ಕೆಲಸ ಮಾಡಿದರೆ ಪ್ರಜೆಗಳು ರಾಜನನ್ನು ತೆಗೆದುಹಾಕಬಹುದು; ರಾಜನನ್ನು ತೆಗೆದುಹಾಕುವುದು ಪ್ರಜೆಗಳ ಧರ್ಮವಲ್ಲ. ಆದರೆ ಧರ್ಮದ ಪಾಲನೆ ಪ್ರಜೆಗಳ ಧರ್ಮ. ಯಾವಾಗ ರಾಜನು ಧರ್ಮಪಾಲನೆಯ ಮಾರ್ಗಕ್ಕೆ ಧಕ್ಕೆಯುಂಟುಮಾಡುತ್ತಾನೋ ಆಗ ಅವನನ್ನು ತೆಗೆದುಹಾಕುವುದು ಧರ್ಮವಾಗಿಬಿಡುತ್ತದೆ. ಧರ್ಮದ ಮಹತ್ವವನ್ನು ಅನೇಕರು ಸ್ವೀಕರಿಸುತ್ತಾರೆ. ಆದರೆ ಅವರು ಧರ್ಮರಾಜ್ಯದ ಘೋಷಣೆಯ ಆವಶ್ಯಕತೆಯನ್ನು ತಿಳಿಯುವುದಿಲ್ಲ. ಒಂದು ವೇಳೆ ಆ ಜನರು ಅಂತರ್ಮುಖಿಗಳಾಗಿ ಯೋಚಿಸಿದರೆ ಅವರ ಈ ನಿರ್ಣಯದ ಹಿಂದೆ ಧರ್ಮಕ್ಕೆ ಸಂಬಂಧಿಸಿದ ಭ್ರಮಾಯುಕ್ತ ಕಲ್ಪನೆಗಳು ಹಾಗೂ ಅದು ಹಿಂದಿನ ಅರ್ಧಶತಮಾನದ ರಾಜನೀತಿಯೇ ಆಗಿದೆ. ಒಂದು ವೇಳೆ ನಾವು ಈ ದಿಶೆಯನ್ನು ಬದಲಾಯಿಸಲಿಚ್ಚಿಸಿದರೆ, ನಾವು ನಮ್ಮ ರಾಜ್ಯದ ಸ್ವರೂಪವನ್ನು ಸ್ಪಷ್ಟ ಶಬ್ದಗಳಲ್ಲಿ ಘೋಷಣೆ ಮಾಡಬೇಕಾಗುತ್ತದೆ. ಸೆಕ್ಯುಲರ್ ಸ್ಟೇಟ್, ವೆಲ್‍ಫೇರ್ ಸ್ಟೇಟ್, ಸೋಷ್ಯಲಿಸ್ಟ್ 44 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸ್ಟೇಟ್ ಮುಂತಾದ ಅನೇಕ ಘೋಷಣೆಗಳನ್ನು ಹಾಕಿದ್ದಾರೆ. ಆದರೆ ಅವು ಮೂಲತಃ ಭಾರತೀಯ ಪರಂಪರೆ ಹಾಗೂ ಪ್ರಕೃತಿಗೆ ವಿರುದ್ಧವಾದ ಕಾರಣ ಜನತೆಯಲ್ಲಿ ಯಾವುದೇ ಚೈತನ್ಯವೂ ನಿರ್ಮಾಣವಾಗಿಲ್ಲ ಹಾಗೂ ಸಮಾಜದಲ್ಲಿ ವ್ಯವಸ್ಥೆಯೂ ನಿರ್ಮಿತವಾಗಿಲ್ಲ. ಧರ್ಮರಾಜ್ಯ ಖಂಡಿತವಾಗಿ ಈ ಜಾದೂ ಮಾಡಬಲ್ಲದು. ನಮ್ಮ ಸುಪ್ತ ಆಕಾಂಕ್ಷೆಗಳನ್ನು ಜಾಗೃತಗೊಳಿಸುವ ಸಾಮರ್ಥ್ಯ ಅದರಲ್ಲಿದೆ. ``ಧರ್ಮರಾಜ್ಯ"ದ ಕಲ್ಪನೆಯ ಸಂಬಂಧವಾಗಿ ಇಂದು ಮತೈಕ್ಯವಿಲ್ಲದಿರಬಹುದು. ``ಧರ್ಮ" ಒಂದು ಸತ್ಯ ಎಂದಾದ ನಂತರವೂ ಅದರ ಸ್ವರೂಪ ದರ್ಶನದಲ್ಲಿ ಯಾವಾಗಲೂ ಭಿನ್ನತೆ ಇದ್ದೇ ಇದೆ. ಇದೇ ರೀತಿ ``ಧರ್ಮರಾಜ್ಯ"ದ ಸಂಬಂಧದಲ್ಲೂ ಆಗಬಹುದು. ಆದರೆ ಈ ದೃಷ್ಟಿಯಿಂದ ಸಮಾಜವಾದ ಮುಂತಾದವುಗಳ ಸ್ಥಿತಿ ಚೆನ್ನಾಗಿರುವುದಿಲ್ಲ. ಅವುಗಳ ಸಂಬಂಧವಾಗಿಯೂ ಎಷ್ಟು ಸಮಾಜವಾದಿಗಳಿದ್ದಾರೋ ಅಷ್ಟೇ ಸಮಾಜವಾದದ ಪ್ರಕಾರಗಳಿವೆ ಎಂದೇ ಹೇಳಬಹುದು. ಆದರೆ ಈ ಎಲ್ಲಾ ಕಲ್ಪನೆಗಳು ಮೂಲತಃ ವಿದೇಶದ್ದು. ಆದ್ದರಿಂದ ಅವುಗಳನ್ನು ಸ್ವೀಕರಿಸುವುದರಿಂದ ನಮ್ಮ ದೃಷ್ಟಿ ಬಹಿರ್ಮುಖವಾಗಿಬಿಡುತ್ತದೆ. ``ಧರ್ಮರಾಜ್ಯ" ಮುಖ್ಯವಾಗಿ ಭಾರತೀಯ ಕಲ್ಪನೆಯಾದ ಕಾರಣ ಮತಭೇದವಿದ್ದರೂ ನಾವು ಅಂತರ್ಮುಖಿಗಳಾಗಿಯೇ ಯೋಚಿಸುತ್ತೇವೆ. ರಾಷ್ಟ್ರದವರಾಗಿ ಯೋಚಿಸಲು ಹಾಗೂ ವ್ಯವಹಾರ ಮಾಡುವವರಿಂದ ದೇಶಕ್ಕೆ ಎಂದಿಗೂ ನಷ್ಟವಾಗುವುದಿಲ್ಲ. ``ವಾದೇ ವಾದೇ ಜಾಯತೇ ತತ್ವಬೋಧಃ" ಎಂಬಂತೆ ನಮಗೂ ಧರ್ಮ ಬೋಧೆಯಾಗುತ್ತದೆ. ________________ * ಆಧಾರ : ರಾಷ್ಟ್ರಧರ್ಮ, ಫೆಬ್ರವರಿ 1982 ರ ಸಂಚಿಕೆ, ಸಂ. ದೀನ್ ದಯಾಳ್‍ರ ಬಲಿದಾನದ ನೆನಪಿನ ಸಂದರ್ಭದಲ್ಲಿ ಪ್ರಕಟವಾದ ಅವರದ್ದೇ ಲೇಖನ. - ಸಂಪಾದಕ. 45 ನಮ್ಮ ವಿಜಯೋನ್ಮುಖ ಪರಂಪರೆ ನಮ್ಮ ಸಮಾಜ ಅತ್ಯಂತ ಪ್ರಾಚೀನ. ಅದಕ್ಕೆ ನಿರಂತರವಾಗಿ ನಡೆಯುತ್ತಿರುವ ಒಂದು ಪರಂಪರೆ ಇದೆ. ನಿಜವಾಗಿಯೂ ನಾವು ನಮ್ಮ ಸಮಾಜ ಜೀವಿತವಾಗಿದೆ ಎಂದು ಹೇಳುವಾಗ, ಅದರ ಅರ್ಥವೇನೆಂದರೆ ನಮ್ಮ ಸಮಾಜದ ಪರಂಪರೆ ಜೀವಿತವಾಗಿದೆಯೆಂದು. `ಸಮಾಜ'ದ ಅರ್ಥ ಮನುಷ್ಯರ `ಸಮೂಹ' ಅಲ್ಲ. ಗ್ರೀಕ್ ಹಾಗೂ ಇರಾಕ್ ಅಳಿಸಿಹೋದವು. ಇದರ ಅರ್ಥ ಅಲ್ಲಿ ಜನರು ಉಳಿದಿಲ್ಲ ಎಂದಲ್ಲ. ಇಂದಿಗೂ ಇದ್ದಾರೆ ಆದರೆ ಅವರ ಪರಂಪರೆ ಅಳಿದು ಹೋಗಿದೆ. ಪರಿವರ್ತನೆ ಪ್ರಕೃತಿಯ ನಿಯಮ ಪರಂಪರೆಯ ಅರ್ಥ ಅಪರಿವರ್ತನೆಯಲ್ಲ. ನಮ್ಮ ಪರಂಪರೆ ಸನಾತನವಾದುದು. ಬದಲಾಗುತ್ತಾ ಬಂದಿರುವ ವಸ್ತುಗಳನ್ನು `ಸನಾತನ' ಎಂದೆನ್ನುತ್ತೇವೆ. ಪರಿವರ್ತನೆ ಪ್ರಕೃತಿಯ ನಿಯಮ. ಅದು ಅವಶ್ಯಕವೂ ಹೌದು. ಪರಿವರ್ತನೆ ವಿಪರೀತವಾಗಿಯೂ ಆಗುತ್ತದೆ. ಶವದಲ್ಲಿಯೂ ಪರಿವರ್ತನೆಯಾಗುತ್ತದೆ, ಅದು ಕೊಳೆಯುತ್ತದೆ. ಜೀವನದ ಪರಿವರ್ತನೆ ವಿಕಾಸದತ್ತ ನಡೆಯುತ್ತದೆ. ಶಿಶುವಿನಲ್ಲಿಯೂ ಪರಿವರ್ತನೆಯಾಗುತ್ತದೆ, ಅದು ದೊಡ್ಡದಾಗುತ್ತದೆ. ಯುವಕನಾಗುತ್ತಾನೆ. ಗಡ್ಡ-ಮೀಸೆ ಬೆಳೆಯುತ್ತದೆ. ಈ ಪರಿವರ್ತನೆಯು ಭಯದ ಕಾರಣವಲ್ಲ. ಸಣ್ಣದಾದ ಅಂಕುರ ವೃಕ್ಷವಾಗುತ್ತದೆ, ಫಲನೀಡುವಂತಾಗುತ್ತದೆ. ಒಂದು ವೇಳೆ ಪರಿವರ್ತನೆಯ ಪರಿಣಾಮ ಹೀಗಾಗದಿದ್ದರೆ, ಅವಶ್ಯಕವಾಗಿ ಯಾವುದೋ ಚಿಂತನೀಯವಾದ ವಿಚಾರವಿದೆಯೆಂದೇ ತಿಳಯಬೇಕಾಗುತ್ತದೆ. ಪರಿವರ್ತನೆಯು ಜೀವಂತ ಸಮಾಜದ ದ್ಯೋತಕ. ಎಲ್ಲಿ ಪರಿವರ್ತನೆ ಇಲ್ಲವೋ ಅಲ್ಲಿ ಸಮಾನತೆ ಇಲ್ಲ. ಆದರೆ ಪರಿವರ್ತನೆಯು ಜಡ-ಮೂಲದೊಂದಿಗೆ, ಪರಂಪರೆಯ ಪ್ರವಾಹದೊಂದಿಗೆ ಸಂಬಂಧಿತವಾಗಿರಬೇಕು. ಜಡವೆಂದರೆ ಚಿಗುರಲಾರದು. ಇತ್ತೀಚೆಗೆ ಕ್ರಾಂತಿಯ ಮಾತುಗಳು ನಡೆಯುತ್ತವೆ. ಕ್ರಾಂತಿಯ ಅರ್ಥ ಪರಿವರ್ತನೆ. ಆದರೆ ಈ ಪರಿವರ್ತನೆ ಆರೋಪಿತವಾದುದು. ಜಡ- ಮೂಲವನ್ನು ಕಿತ್ತುಹಾಕಿ ಕಾಗದ ಅಥವಾ ಬಟ್ಟೆಯ ಹೂವುಗಳನ್ನಿಡುವುದರಿಂದ ಪರಿವರ್ತನೆಯಾಗುವುದಿಲ್ಲ. ಏಕೆಂದರೆ ಪರಿವರ್ತನೆಯು ವಿಕಾಸದ ಪ್ರಕ್ರಿಯೆ. 46 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪರಿವರ್ತನೆಯು ಗುಣ ಹಾಗೂ ಧರ್ಮಕ್ಕೆ ಅನುಕೂಲಕರವಾಗಿರಬೇಕು. ಸಂಗ್ರಹವೆಂದರೆ ರಕ್ಷಣೆಯಲ್ಲ ಯಾವುದೇ ವಸ್ತುವಿನ ಸಂಗ್ರಹಣೆ ಮಾಡುವುದರ ಅರ್ಥ ರಕ್ಷಣೆಯಲ್ಲ. ಒಬ್ಬನು ಹಣವನ್ನು ಕೊಡುತ್ತಾನೆ. ಆದರೆ ಅದು ಉತ್ಕರ್ಷವೆಂದೆನಿಸಿಕೊಳ್ಳಲಾರದು. ಯಾವ ಹಣದ ಸದುಪಯೋಗವಾಗುವುದಿಲ್ಲವೋ ಅದು ರಕ್ಷಣೆಗೆ ಯೋಗ್ಯವಲ್ಲ. ಮರದ ಎಲೆಗಳು ಹಣ್ಣೆಲೆಯಾಗಿ ಉದುರಿದಾಗ ಅದನ್ನು ಮತ್ತೆ ಮರದಲ್ಲಿ ಜೋಡಿಸಿ ಇಡಲಾರೆವು. ಕೆಲವು ಉದುರಿಹೋಗುತ್ತವೆ. ಮತ್ತು ಕೆಲವನ್ನು ಸ್ವತಃ ತೋಟಿ ಕಿತ್ತೆಸೆಯುತ್ತಾನೆ. ಇದು ಅನ್ಯಾಯವಲ್ಲ. ಸದೃಢ ಸಮಾಜಕ್ಕೆ ಇದು ಅವಶ್ಯಕವಾದುದು. ಯಾವ ವಸ್ತುವಿನ ಕೆಲಸ ಮುಗಿಯುತ್ತದೆಯೋ ಅದು ಹೋಗಲೇಬೇಕು. ಹಳೆಯ ಎಲೆಗಳು ಉದುರುವುದು ಮತ್ತು ಹೊಸ ಚಿಗುರು ಬರುವುದೇ ಸನಾತನತೆ. ಹಳಬರು ಪಿಂಚಣಿಯನ್ನು ತೆಗೆದುಕೊಳ್ಳಬೇಕು ಹಾಗೂ ಅವರ ಜಾಗದಲ್ಲಿ ಹೊಸ ಜನರು ಬರಬೇಕು. ಈ ಎಲ್ಲಾ ಪ್ರಕ್ರಿಯೆಗಳು ಜಡತೆಯೊಂದಿಗೆ ಸಂಬಂಧಿತವಾಗಿವೆ. ಮರದ ಒಣಗುವಿಕೆಯೂ ಪರಿವರ್ತನೆಯೇ; ಆದರೆ ಇದು ವಿಕಾಸವಲ್ಲ, ವಿನಾಶದ ದ್ಯೋತಕ. ಮನುಷ್ಯನು ರೋಗಿಯಾಗುವುದು ಪರಿವರ್ತನೆಯೇ. ಮಕ್ಕಳಿಗೆ ಹಲ್ಲು ಹುಟ್ಟುತ್ತವೆ. ಅವುಗಳನ್ನು ಸ್ವಾಗತಿಸಲಾಗುತ್ತದೆ; ಆದರೆ ಕೀವು, ಹುಣ್ಣಿಗೆ ಚಿಕಿತ್ಸೆ ಮಾಡಲಾಗುತ್ತದೆ. ಇದೇ ವಿಕಾಸ, ಇದನ್ನೇ ಸಂಸ್ಕೃತಿ ಎನ್ನುತ್ತೇವೆ. ಯಾವ ಪರಂಪರೆಯಲ್ಲಿ ಈ ಪರಿವರ್ತನೆಯ ಯೋಗ್ಯ ಕ್ಷಮತೆ ಇರುತ್ತದೆಯೋ ಅದಕ್ಕೆ ಮಾತ್ರ ಸಂಸ್ಕೃತಿಯ ಗೌರವಾನ್ವಿತ ದರ್ಜೆಯನ್ನು ನೀಡಲಾಗುತ್ತದೆ. ಪರಿವರ್ತನೆಯು ಸಂಸ್ಕೃತಿಯ ಚಿಹ್ನೆ ಜನರು ಹಿಂದೂ ಸಭ್ಯತೆಯ ಮಾತು ಬರುತ್ತಲೇ `ಪುರಾತನ ಪಂಥ'ವೆಂದು ತಿಳಿಯುತ್ತಾರೆ. ಆದರೆ ಹಾಗೇನಿಲ್ಲ. ಶಂರಕಾಚಾರ್ಯರು ಸಮಾಜವನ್ನು ಒಂದು ಸೂತ್ರದಲ್ಲಿ ಹಿಡಿದಿಡಲು ಒಂದು ಹೊಸ ಪದ್ಧತಿಯನ್ನು ಪ್ರಯೋಗಿಸಿದರು. ಮಠಗಳ ಸ್ಥಾಪನೆ ಮಾಡಿದರು. ಅದ್ವೈತ ದರ್ಶನವನ್ನು ಪ್ರತಿಪಾದಿಸಿದರು. ಪಂಚಾಯತನ ಪೂಜೆಯನ್ನು ಆರಂಭಿಸಿದರು. ನಂತರ ರಮಾನಂದ, ಸಮರ್ಥಗುರು ರಾಮದಾಸ, ಗುರು ನಾನಕದೇವ, ಗುರುಗೋವಿಂದಸಿಂಹ ಎಲ್ಲರೂ ಹೊಸ-ಹೊಸ ಪದ್ಧತಿಗಳನ್ನು ಹೊರಡಿಸಿ ಸಮಯಾನುಕೂಲಕ್ಕೆ ತಕ್ಕಂತೆ ಸಮಾಜಕ್ಕೆ ಒಂದು ದಿಕ್ಕನ್ನು ನೀಡಿದರು. ಅದನ್ನು ಸುಸೂತ್ರ ಹಾಗೂ ಜಾಗೃತವಾಗಿಸಿದರು. ಸ್ವಾಮಿ ದಯಾನಂದರು ಪ್ರಚಲಿತವಾಗಿದ್ದ ಎಲ್ಲಾ ಪದ್ಧತಿಗಳನ್ನು ಬದಲಾಯಿಸಿದರು. ವಿಧವಾ ವಿವಾಹ, ಬಾಲ್ಯ ವಿವಾಹ ನಿಷೇಧ; ಹರಿಜನರನ್ನು ಸ್ವೀಕರಿಸುವುದು ಮುಂತಾದ ನಿಯಮಗಳನ್ನು ನಮ್ಮ ವಿಜಯೋನ್ಮುಖ ಪರಂಪರೆ 47 ತಂದರು. ಅವರಿಗೆ ಸಮಾಜದ ಶುಚಿತ್ವದ ಚಿಂತೆ ಇಲ್ಲ ಎಂದೇನು ಇಲ್ಲ. ನಮ್ಮ ವೇದ, ಉಪನಿಷತ್, ಪುರಾಣ, ಗೀತೆ ಮುಂತಾದ ವಾಙ್ಮಯವೆಲ್ಲ ಈ ಜಾಗೃತ ಪರಿವರ್ತನೆಯ ಸಾಕ್ಷಿಯಾಗಿದೆ. ಇಂತಹ ಪರಿವರ್ತನೆ ಸ್ವಾಭಾವಿಕ. ಅವಶ್ಯಕವೂ ಹಾಗೂ ಬೇಕೇ ಬೇಕು. ರಕ್ಷಣೆಗಾಗಿ ಪ್ರಗತಿಯ ಅವಶ್ಯಕತೆ ಎಲ್ಲಿ ಪರಿವರ್ತನೆಯಾಗುವುದಿಲ್ಲವೋ ಅದನ್ನು ತಾಮಸದ ಲಕ್ಷಣವೆಂದು ತಿಳಿಯಲಾಗಿದೆ. ತಾಮಸ ಅಥವಾ ತಮೋಗುಣದ ಅರ್ಥ ಆಲಸ್ಯ. ಇದರಿಂದ ಸಮಾಜದ ರಕ್ಷಣೆಯಾಗಲಾರದು. ಚೀನಾದ ಸ್ತ್ರೀಯರು ಕಾಲು ಉದ್ದವಾಗದಿರಲೆಂದು ಕಬ್ಬಿಣದ ಚಪ್ಪಲಿಯನ್ನು ಹಾಕಿಕೊಳ್ಳುತ್ತಾರೆ. ಇದು ರಕ್ಷಣೆಯ ದ್ಯೋತಕವಲ್ಲ. ರಕ್ಷಣೆಯ ಅರ್ಥ ಪುರುಷಾರ್ಥ ಯಥಾಸ್ಥಿತಿಯಿಂದ ಸ್ವತಃ ವಿಕಾರವಾಗುತ್ತದೆ. ಹಣವನ್ನು ಭೂಮಿಯಲ್ಲಿ ಹೂತಿಡುವುದರಿಂದ ಅದು ಸುರಕ್ಷಿತವೆಂದು ಹೇಳಲಾಗದು. ವ್ಯವಹಾರದಲ್ಲಿ ಉಪಯೋಗಿಸಿಕೊಂಡು ಹೆಚ್ಚಿಸುವುದೇ ಅದರ ರಕ್ಷಣೆ. ಜೀವನದ ಶ್ರೇಷ್ಠ ದಿಕ್ಕು ರಕ್ಷಣೆಗಾಗಿ ಪರಾಕ್ರಮ, ಪುರುಷಾರ್ಥ ಹಾಗೂ ವಿಜಯೋನ್ಮುಖರಾಗುವ ಪ್ರವೃತ್ತಿಯು ಅವಶ್ಯಕವಾದುದು. ಭೂಮಿಯಲ್ಲಿ ಉಳುವ ಬದಲು ದಾನ ಮಾಡುವುದೇ ಉತ್ತಮ. ಯುದ್ಧದಲ್ಲಿ ಬಹಳ ಜನರು ಮರಣವನ್ನುಪ್ಪುತ್ತಾರೆ. ಸಮಾಜದ ರಕ್ಷಣೆಗಾಗಿ ಮರಣ ಹೊಂದುವುದೂ ಸಹ ವಿಕಾಸವೆ. ಯಾರು ಈ ರೀತಿ ಮಾಡುತ್ತಾರೋ ಅವರು ಅಮರರಾಗುತ್ತಾರೆ. ಅವರಿಗೆ ದೇವತ್ವವು ಪ್ರಾಪ್ತವಾಗುತ್ತದೆ. ಹಾಗೂ ಪೀಳಿಗೆಗಳು ಅವರನ್ನು ನೆನೆಯುತ್ತವೆ. ಇದು ಜೀವನದ ಶ್ರೇಷ್ಠ ಸ್ಥಿತಿ-ಗತಿಯಾಗಿದೆ. ನಮ್ಮ ಸಮಾಜ ಉತ್ಕರ್ಷಶೀಲವಾದುದು. ಆರ್ಯರ ಪರಂಪರೆ ಪುರುಷಾರ್ಥ ಹಾಗೂ ಪರಾಕ್ರಮದ್ದಾಗಿದೆ. ನಾವು ಯಾರ ಗುಲಾಮರಾಗಿಯೂ ಇರುವುದಿಲ್ಲ. `ನ ತ್ವೇವಾರ್ಯಸ್ಯ ದಾಸ್ಯಭಾವಃ', `ಕೃಣ್ವಂತೋ ವಿಶ್ವ ಮಾರ್ಯಮ್' ಸಂಪೂರ್ಣ ವಿಶ್ವವನ್ನು ಆರ್ಯರನ್ನಾಗಿಸಲು ಇದು ನಮ್ಮ ಘೋಷಣೆಯಾಗಿದೆ. ನಮ್ಮದು ಇಂತಹ ವಿಜಯೋನ್ಮುಖ ಪರಂಪರೆಯಾಗಿದೆ. ಶೋಷಿತರಾಗುವುದು, ಕಾಲು ಹಿಡಿಯುವುದು, ಬಗ್ಗುವುದು ಹಾಗೂ ಸಮರ್ಪಿಸಿಕೊಳ್ಳುವುದು ನಮ್ಮ ಪರಂಪರೆಯಲ್ಲ. ಕಾದಾಡುತ್ತಾ ಜಗಳವಾಡುತ್ತಾ ಸತ್ತು ಹೋದರೂ, ಯುದ್ಧದಲ್ಲಿ ವಿಕಲರಾಗಿದ್ದರೂ ನಾವು ತಲೆ ತಗ್ಗಿಸಲಿಲ್ಲ. ಸಾವಿರ ವರ್ಷಗಳವರೆಗೆ ದೀರ್ಘವಾಗಿ ಉತ್ತರದಿಂದ ದಕ್ಷಿಣದವರೆಗೆ ಭಾರತದಲ್ಲಿ ಸಂಗ್ರಾಮ ನಡೆಯುತ್ತಲೇ ಇತ್ತು. ಜಗಳವಾಡುತ್ತಾ ಸಾಯುವವನೇ ಜೀವಂತವಾಗಿರುತ್ತಿದ್ದನು. ಅದರಲ್ಲಿ ಅವನ ಸುರಕ್ಷತೆ ಇದೆ. 48 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮನೆಯಲ್ಲಿಯೇ ಬಚ್ಚಿಟ್ಟುಕೊಳ್ಳುವವನ ಶರೀರ ಹಾಗೂ ಆತ್ಮ ಎರಡೂ ಸತ್ತು ಹೋದಂತೆಯೇ. ಕರ್ಮಣ್ಯತೆಯೇ ವಿಕಾಸದ ಮೆಟ್ಟಿಲು. ಸೋಮಾರಿ ಹಾಗೂ ಸುಸ್ತಾದ ಮಕ್ಕಳಿಗಿಂತ ತುಂಟ ಮಕ್ಕಳೇ ಶ್ರೇಷ್ಠರು, ಉತ್ತಮರೂ ಆಗಿದ್ದಾರೆ. ಸೋಮಾರಿ ಮಗು ರೋಗಿಯಾಗುತ್ತದೆ. ತುಂಟ ಚೈತನ್ಯಯುಕ್ತವಾಗಿರುತ್ತಾನೆ. ಅವನು ಹೊಡೆದಾಟ-ಗುದ್ದಾಟ ಮಾಡುತ್ತಾನೆಂದರೆ ಅದು ಆನಂದದ ವಿಷಯವಲ್ಲ ಆದರೆ ಅವನು ಅಕರ್ಮಣ್ಯನಾಗಿಲ್ಲವೆಂಬುದು ಸತ್ಯ. ಅವನು ಧ್ವಂಸ ಮಾಡುತ್ತಲೂ ನಿರ್ಮಾಣ ಮಾಡುತ್ತಾನೆ. ಹಸಿವಿನಿಂದ ಸಾಯುವ ಬದಲು ಯಾರು ಹಸಿವಿನೊಂದಿಗೆ ಸಂಘರ್ಷ ಮಾಡುತ್ತಾನೋ ಅವನು ನಾಳೆ ಪುರುಷಾರ್ಥಿಯಾಗುವನು. ಯಾರು ಅಕರ್ಮಣ್ಯರೋ ಅವರ ಜೀವನ ವ್ಯರ್ಥವಾಗಿರುತ್ತದೆ. ಅವರ ರಕ್ಷಣೆಯೂ ಆಗಲಾರದು. ಮಗುವಿಗೆ ಪೆನ್ಸಿಲ್ ಕೊಡಿ, ಅದು ಏನಾದರೂ ಮಾಡುತ್ತದೆ. ಒಂದು ವೇಳೆ ನೀವು ಅದಕ್ಕೆ ಚಿತ್ರ ಬರೆಯಲು ಹೇಳಿಕೊಟ್ಟರೆ ಅದು ಕ್ರಮೇಣ ವಿಕಾಸವಾಗುತ್ತದೆ. ತಾಮಸಪೂರ್ಣ ಆಲಸ್ಯವೃತ್ತಿಗಿಂತ ಕರ್ಮಣ್ಯವಾದ ರಾಜಸೀ ವೃತ್ತಿಯೇ ಉತ್ತಮವಾದುದು. ಸಮಾಜದಲ್ಲಿ ಚೈತನ್ಯವಿದ್ದರೆ, ಜಾಗರೂಕತೆಯಿದ್ದರೆ ಅದೇ ರಾಜಸೀ ವೃತ್ತಿ, ಸಾತ್ವಿಕವೂ ಆಗಿಬಿಡುತ್ತದೆ. ಯಾರು ರಾಷ್ಟ್ರ ನಿರ್ಮಾಣ ಮಾಡುವವನೋ ಅವನಿಗೇ ಸಂಸ್ಕೃತಿಯ ಪಾಠವನ್ನು ಕಲಿಸಬೇಕು. ರಾಮ ಎನ್ನುತ್ತಿದ್ದರೂ, ಕೆಲಸ ಮಾಡುತ್ತಿರು.* ಎಲ್ಲಿ ಒಂದು ಕೂದಲಿನ ಜಾಗದಲ್ಲಿ ನೂರು ಕೂದಲನ್ನು ಬೆಳೆಸುವ ಮಹತ್ವಾಕಾಂಕ್ಷೆಯಿದೆಯೋ, ಅಲ್ಲಿ ಯಾರೂ ಹಸಿವಿನಿಂದ ಸಾಯುವುದಿಲ್ಲ. ರಾಮನ ರಾಜ್ಯದಲ್ಲಿ ಧನ-ದಾನ್ಯದಿಂದ ಭೂಮಿಯು ಸಮೃದ್ಧವಾಗಿತ್ತು. ಅಯೋಧ್ಯಾ ನಿವಾಸಿಗಳ ಪುರುಷಾರ್ಥದಿಂದಲೇ ಆ ವೈಭವವಿತ್ತು. ರಾಮ-ನಾಮ ಲೈಸೆನ್ಸ್ ಆಗಿದೆ. ಗಾಡಿ ಇದ್ದರೂ ಓಡಿಸುವುದರಿಂದಲೇ ಓಡುವುದು. ಲೈಸೆನ್ಸ್ ಇದ್ದರೆ ಕಾನೂನು ಬದ್ಧ, ಇಲ್ಲದಿದ್ದರೆ ಬಾಹಿರವಾಗುತ್ತದೆ. ಆದರೆ ಕೇವಲ ಲೈಸೆನ್ಸ್ ತೆಗೆದುಕೊಳ್ಳುವುದರಿಂದಲೇ ಗಾಡಿ ಓಡುವುದಿಲ್ಲ. ದೇವರ ಹೆಸರಂತೂ ಲೈಸೆನ್‍ಯುಕ್ತ ಡ್ರೈವರ್‍ನ ಸಮಾನವಾಗಿರುತ್ತದೆ. ಎಲ್ಲಾ ಕಾರ್ಯಗಳಲ್ಲೂ ಭಗವಂತನ ಪ್ರತಿಷ್ಠಾಪನೆ ಅಥವಾ ಭಗವಂತನ ವಾಸಸ್ಥಾನವಿರಬೇಕು. ಸಮರ್ಥಗುರು ರಾಮದಾಸರೂ ಇದನ್ನೇ ಹೇಳಿದ್ದರು. ನಮ್ಮ ಪೂರ್ವಜರು ಇದನ್ನೇ ಕಲಿಸಿದ್ದಾರೆ. ಏನೇ ಮಾಡಿದರೂ ರಾಷ್ಟ್ರದ, ದೇವರ ಸ್ಮರಣೆ ಮಾಡಿಯೇ ಮಾಡಬೇಕು. ಲಾಭವನ್ನು ಸಂಪಾದಿಸುವ ಪುರಷಾರ್ಥದ * ಬಾಳಿಗೊಂದು ನಂಬಿಕೆ ಗ್ರಂಥದಲ್ಲಿ ಡಾ. ಡಿ.ವಿ. ಗುಂಡಪ್ಪನವರು ಇದನ್ನೇ Pray and Pump ಎಂಬ ಕಥೆಯ ಮೂಲಕ ತಿಳಿಸಿದ್ದಾರೆ. - ಸಂಪಾದಕ. ನಮ್ಮ ವಿಜಯೋನ್ಮುಖ ಪರಂಪರೆ 49 ಅಭಾವವಿದೆ. ವಿಜಯೋನ್ಮುಖದ ಸ್ಥಾನದಲ್ಲಿ ಆಲಸ್ಯವಿದೆ. ಮಾರುಕಟ್ಟೆಯ ದರ ಹೆಚ್ಚಲಿ ಆಗ ಮಾರುವೆನು ಎಂಬ ಈ ಭಾವನೆ ಆಲಸ್ಯದ್ದು ಮತ್ತು ಪರಾಕ್ರಮ ಪುರುಷಾರ್ಥದ ಭಾವನೆ ಹಠವನ್ನು ತೊರೆದಾಗಲೇ ಬರುವುದು ಎಂಬುದು ತಪ್ಪು. ಈ ಭಾವವನ್ನು ದೂರ ಮಾಡಿ ಅಧಿಕ ಉತ್ಪಾದನೆಯ ವಿಚಾರ ಮಾಡಬೇಕು, ಹೆಚ್ಚು ಕೆಲಸಗಳನ್ನು ಮಾಡುವ, ಹೆಚ್ಚು ಪರಿಶ್ರಮ ಹಾಗೂ ಸೇವೆಯ ವೃತ್ತಿಯನ್ನು ಜಾಗೃತಗೊಳಿಸಬೇಕು. ಯಾವಾಗಲೂ ಯಥಾಸ್ಥಿತಿ ಇರುವುದಿಲ್ಲ. ಮುಂದುವರೆಯುವುದು ಅಥವಾ ಹಿಂಜರಿಯುವುದು ಎರಡರಲ್ಲಿ ಒಂದು ಖಂಡಿತವಾಗಿ ಆಗುತ್ತದೆ. ಆದ್ದರಿಂದ ಮುಂದುವರೆಯಬೇಕು. ಸಮಯದೊಂದಿಗೆ ಮುಂದೆ ಸಾಗಬೇಕು, ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಬೇಕು. ಇದಕ್ಕಾಗಿ ಕರ್ತವ್ಯ ಬುದ್ಧಿಯನ್ನು ಜಾಗೃತಗೊಳಿಸಬೇಕಾಗುತ್ತದೆ. ಪುರುಷಾರ್ಥ ಹಾಗೂ ವಿಜಯಗಳಿಸುವ ಭಾವನೆಯನ್ನು ಹುಟ್ಟುಹಾಕಬೇಕು. ಆಗ ಹೃದಯದಲ್ಲಿ ಕೆಲಸ ಮಾಡುವ ಮಹತ್ವಾಕಾಂಕ್ಷೆಯು ಜಾಗೃತವಾಗುತ್ತದೆ. ಎಲ್ಲರಿಗೂ ಸಮಾಧಾನಕರವಾಗುತ್ತದೆ. ಒಂದು ವೇಳೆ ತಮೋಗುಣ, ಆಲಸ್ಯ ಪ್ರಮಾದ ಮತ್ತು ತನ್ನನ್ನು ಬಚಾವು ಮಾಡಿಕೊಳ್ಳುವ ಪ್ರವೃತ್ತಿ ಬಂದರೆ ಪ್ರಗತಿಯು ನಿಂತುಹೋಗುತ್ತದೆ ಮತ್ತು ಹೊರೆಯಾಗುತ್ತದೆ. ರಕ್ಷಣೆಯೂ ಆಗುವುದಿಲ್ಲ. ರಾಷ್ಟ್ರದ ಸೌಭಾಗ್ಯದಿಂದ ಜಾಗರಣದ ಸಮಯದ ಬಂದಿದೆ. ಜನತೆಯು ನಿದ್ರೆಯಿಂದ ಮೈ ಮುರಿದು ಎದ್ದಿದೆ. ರಾಷ್ಟ್ರದಲ್ಲಿ ಚೈತನ್ಯವು ಚಿಮ್ಮಲಾರಂಭಿಸಿದೆ. ಅದನ್ನು ಕೆಲಸದಲ್ಲಿ ಜಾರಿಗೆ ತರುವ, ಸರಿಯಾದ ದಿಶೆಯಲ್ಲಿ ಪ್ರವೃತ್ತರಾಗಲು ಅವಕಾಶವಿದೆ. ರಾಷ್ಟ್ರಭಕ್ತಿ ಹಾಗೂ ಶಿಸ್ತಿನ ಸೂತ್ರ ಅವರಿಗೆ ನೀಡಬೇಕು. ನಮ್ಮ ರಾಷ್ಟ್ರವು ಹೊಸ-ಹೊಸ ದಿಕ್ಕುಗಳಲ್ಲಿ ತನ್ನ ವಿಶಾಲವಾದ ಹೆಜ್ಜೆಯನ್ನಿಟ್ಟು ವಿಶ್ವದಲ್ಲಿಯೇ ಅಗ್ರ ಪಂಕ್ತಿಯಲ್ಲಿ ನಿಲ್ಲುವುದನ್ನು ನಾವು ನೊಡುತ್ತೇವೆ. __________ * ಆಕರ : ರಾಷ್ಟ್ರಧರ್ಮ ಪತ್ರಿಕೆಯ ವಿಜಯದಶಮಿ ವಿಶೇಷಾಂಕ, 1963. ಕಾಶ್ಮೀರಕ್ಕಾಗಿ ಪ್ರಾಣತೆತ್ತವರನ್ನು ಮರೆಯದಿರೋಣಾ ನಾವು ಸಂಪೂರ್ಣ ಭಾರತವರ್ಷವನ್ನು ಒಂದು ದೇಶವೆಂದು ತಿಳಿದಿದ್ದೇವೆ. ನಮ್ಮ ಈ ಸುಂದರ ದೇಶ ಅಟಕ್‍ನಿಂದ ಕಟಕ್‍ವರೆಗೂ ಹಾಗೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಒಂದಾಗಿದೆ ಹಾಗೂ ಅಖಂಡವಾಗಿದೆ. ನಾವು ಇದರ ತುಂಡು-ತುಂಡಾಗುವಿಕೆಯನ್ನು ಸ್ವೀಕರಿಸಲಾರೆವು. ನಮ್ಮ ಏಳು ನದಿಗಳು ಹಾಗೂ ನಾಲ್ಕು ಧಾಮಗಳು ನಮ್ಮ ಏಕತೆಯನ್ನು ಗರ್ವ-ಘೋಷಣೆಯಂತಾಗಿಸಿದೆ. ದೇಶವನ್ನು ಬೇರೆ-ಬೇರೆ ಭಾಗಗಳನ್ನಾಗಿ ಹಂಚುವ ನೀತಿಯನ್ನು ಬಿಟ್ಟು ನಮ್ಮ ದೇಶ ಪುನಃ ಅಖಂಡವಾಗಬೇಕು ಮತ್ತು ನಾವು ಹೆಮ್ಮೆಯಿಂದ ನಮ್ಮ ತಾಯಿಯ ಮುಂದೆ ಸುಪುತ್ರರಾದ ಕಾರಣ ತಲೆಯೆತ್ತಿ ನಡೆಯುವಂತಹ ದಾರಿಯನ್ನು ಹಿಡಿಯಬೇಕು. ನಮ್ಮ ಆಧುನಿಕ ಮುಖಂಡರು (ನಾಯಕರು) ಮಮತೆಯಿಲ್ಲದೆ ಭಾರತದ ವಿಭಜನೆಯನ್ನು ಸುನಿಶ್ಚಿತ ಸತ್ಯವೆಂದು ತಿಳಿಯುತ್ತಾರೆ. ಆದರೆ ಅವರ ಈ ದೃಷ್ಟಿಕೋನ ತಪ್ಪು ಮತ್ತು ಏನೇ ಆದರೂ ಅವರಲ್ಲಿ ತಾಯಿಯ ಬಗ್ಗೆ ಮಮತೆ ಇಲ್ಲ. ಅವರು ಇತಿಹಾಸವನ್ನು ಮರೆಯುತ್ತಾರೆ. ಅಷ್ಟೇ ಅಲ್ಲ ನಿಜವೇನೆಂದರೆ ಅವರು ಇತಿಹಾಸದ ಜ್ಞಾನವನ್ನೇ ಹೊಂದಿರುವುದಿಲ್ಲ. ಮುಸಲ್ಮಾನರ ಕಾಲದಲ್ಲೂ ಈ ದೇಶ ಅನೇಕ ತುಂಡುಗಳಾಗಿತ್ತು. ಆದರೆ ತಾತ್ಕಾಲಿಕ ಮುಖಂಡರು ಆ ತುಂಡುಗಳನ್ನು `ಸುನಿಶ್ಚಿತ ಸತ್ಯ' ವೆಂದು ತಿಳಿಯದೆ ಅಖಂಡತೆಗಾಗಿ ಹೋರಾಡುತ್ತಿದ್ದರು. ಪಾಂಡವರಿಗಾಗಿ ಐದು ಹಳ್ಳಿಗಳನ್ನು ನೀಡುವ ವಿಚಾರವನ್ನು ದುರ್ಯೋಧನನು ಸ್ವೀಕರಿಸಲೇ ಇಲ್ಲ ಮತ್ತು ಅವನು ರಾಜ್ಯವನ್ನು ವಿಭಕ್ತವಾಗುವುದರಿಂದ ತಪ್ಪಿಸಿದನು. ಆದರೆ ನಮ್ಮ ಮುಖಂಡರು ಆ ದುರ್ಯೋಧನನ್ನು ಸೋಲಿಸಿಬಿಟ್ಟರು. ಏಕೆಂದರೆ ಯಾವ ಕೆಲಸವನ್ನು ಅವನು ಮಾಡಿರಲಿಲ್ಲವೋ ಅದನ್ನು ನಮ್ಮ ಅಧಿಕಾರದ ದುರಾಸೆಯಿರುವ ಮುಖಂಡರು ಮಾಡಿ ತೋರಿಸಿದರು. ಇಂದು ಭಾರತ ಒಂದು ರಾಜ್ಯವಲ್ಲ. ಅನೇಕ ರಾಜ್ಯಗಳ ಸಂಘವೆಂದು ತಿಳಿಯಲಾಗಿದೆ. ಇದೆಂತಹ ವಿಡಂಬನೆಯಾಗಿದೆ. ಕಾಶ್ಮೀರದ ವಿಷಯ ಬಂದಾಗ ನಮ್ಮ ದೇಶದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಸಾವಿರಾರು ದೇಶೀಯ ವೈಭವಗಳಿದ್ದವು. ಕಾಶ್ಮೀರ ಹಾಗೂ ಜಮ್ಮುವಿನ ವೈಭವ ಇವುಗಳಲ್ಲಿಯೇ ಒಂದಾಗಿತ್ತು. ಹೇಗೆ ಬೇರೆ ವೈಭವಗಳೊಂದಿಗೆ ಆಯಿತೋ ಕಾಶ್ಮೀರಕ್ಕಾಗಿ ಪ್ರಾಣತೆತ್ತವರನ್ನು ಮರೆಯದಿರೋಣಾ 51 ಹಾಗೆಯೇ ಕಾಶ್ಮೀರದ ವೈಭವದ ಭಾಗ್ಯ-ನಿರ್ಣಯ ಭಾರತದೊಂದಿಗೆಯೇ ಆಗುತ್ತದೆ. ಕಾಶ್ಮೀರ ಭಾರತದ ಅಭಿನ್ನ ಅಂಗವಾಗಿದೆ. ಅದರ ರಕ್ಷಣೆಗಾಗಿ ಭಾರತೀಯ ಸೇನೆಗಳು ತಮ್ಮ ಶೌರ್ಯದ ಪರಿಚಯ ನೀಡಿದ್ದವು. ದೊಡ್ಡ-ದೊಡ್ಡ ಸೇನಾನಿಗಳು ಭಾರತೀಯ ಸೈನಿಕರ ಅಪಾರ ಪರಾಕ್ರಮವನ್ನು ನೋಡಿ ಚಕಿತರಾಗಿದ್ದರು. ಅನ್ಯಾಯದ ಮೇಲೆ ವಿಜಯಗಳಿಸಲು ಹೊರಟಿದ್ದರು. ಅವರ ಹೆಜ್ಜೆಗಳು ಉತ್ಸಾಹದೊಂದಿಗೆ ಅತ್ಯಂತ ವೇಗವಾಗಿ ಮುಂದುವರೆಯುತ್ತಿದ್ದವು. ಶತ್ರು ಬಲ ಅವರ ಮುಂದೆ ನಗಣ್ಯವಾಗಿತ್ತು. ದುಷ್ಟರು ಓಡತೊಡಗಿದರು. ಆದರೆ ನಮ್ಮ ಆಗಿನ ಪ್ರಧಾನಮಂತ್ರಿ ಪಂಡಿತ್ ನೆಹರೂರವರಿಗೆ ಅನ್ಯಾಯದ ದಮನ ಇಷ್ಟವಾಗಲಿಲ್ಲ. ಅವರು ಯುದ್ಧವನ್ನು ನಿಲ್ಲಿಸಿಬಿಟ್ಟರು. ಭಾರತೀಯ ಸೈನಿಕರು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸುಮ್ಮನಾದರು. ಶಿಸ್ತಿನ ಮೇರೆಗೆ ನಡೆದ ಹೆಜ್ಜೆಗಳನ್ನು ಮುಂದಿಡದಂತಾಯಿತು. ಜಮ್ಮು-ಕಾಶ್ಮೀರದಲ್ಲಿ ಅಸಂಖ್ಯಾತ ಭಾರತೀಯ ಸೈನಿಕರ ಬಲಿದಾನವಾಯಿತು. ಧರೆ ರಕ್ತಸಿಕ್ತವಾಯಿತು. ಶರೀರದ ಅಂತಿಮ ರಕ್ತ ಬಿಂದು ಹಾಗೂ ಅಂತಿಮ ಶ್ವಾಸವನ್ನೂ ಅವರು ಮಾತೃಭೂಮಿಗಾಗಿ ಮುಡಿಪಿಟ್ಟರು. ಅನ್ಯಾಯ ಹಾಗೂ ಅತ್ಯಾಚಾರಗಳಿಂದ ಪ್ರತೀಕಾರ ತೆಗೆದುಕೊಳ್ಳಲು ಸ್ವರ್ಗಸ್ಥವಾದ ಆತ್ಮಗಳು ಇಂದು ನಮ್ಮ ನಾಯಕರ ಈ ಬುದ್ಧಿವಂತಿಕೆ (?)ಯ ಮೇಲೆ ಕಣ್ಣೀರಿಡದೆ ಇರಲಾರವು. ರಾಷ್ಟ್ರದಲ್ಲಿ ಅಲ್ಪಮತವು ಇರುವುದಿಲ್ಲ. ಶರೀರದ ರಚನೆಯಲ್ಲಿ ಮೂಗು ಒಂದೇ ಇರುತ್ತದೆ ಮತ್ತು ಕಣ್ಣು ಎರಡು. ಇದರಿಂದ ಶರೀರದಲ್ಲಿ ಮೂಗಿನ ಅಲ್ಪಮತ ಹಾಗೂ ಕಣ್ಣಿನ ಬಹುಮತವೆಂದಾಗುವುದಿಲ್ಲ. ಧಾರಣೆಯನ್ನು ಹೊಂದಿಲ್ಲದಿದ್ದರೆ ಇಂದು ಅದರ ಬಹುಮತವೇ ಆಗಿದ್ದರೂ ಅಲ್ಪ ಸಮಯದಲ್ಲಿಯೇ ಎಲ್ಲವೂ ಅಲ್ಪಮತವಾಗಿಬಿಡುತ್ತವೆ. ಭಾರತವರ್ಷದಲ್ಲಿ ಮುಸಲ್ಮಾನರ ಅಥವಾ ಕ್ರಿಸ್ತರ ಯಾವುದೇ ಭಿನ್ನ ಸಂಸ್ಕೃತಿ ಇಲ್ಲ. ಸಂಸ್ಕೃತಿಯ ಸಂಬಂಧ ಆರಾಧನೆಯೊಂದಿಗಲ್ಲದೆ, ದೇಶದೊಂದಿಗಿರುತ್ತದೆ. ಮುಸಲ್ಮಾನರ ಮುಂದೆ ಕಬೀರ, ಜಾಯಸೀ ಹಾಗೂ ರಸಖಾನರ ಆದರ್ಶವಿದೆ. ಭಾರತದಲ್ಲಿ ಭಾರತೀಯರಾಗಿರುವ ಮುಸಲ್ಮಾನರಿಗೆ ಈ ಮುಸಲ್ಮಾನ ಕವಿಗಳ ಜೀವನ ಅನುಕರಣೀಯವಾದುದು. ಅವರ ಭಾವನೆಗಳಲ್ಲಿ ಹಾಗೂ ಯೋಚಿಸುವ ದೃಷ್ಟಿಕೋನದಲ್ಲಿ ಮೂಲಭೂತ ಪರಿವರ್ತನೆಯ ತೀರ ಅವಶ್ಯಕತೆ ಇದೆ. ಇಂದಂತೂ ರಾಷ್ಟ್ರಭಕ್ತಿಯ ಕೇಂದ್ರವೇ ಭಾರತದಿಂದ ಹೊರಗಿದೆ. ಭಾರತದಲ್ಲಿದ್ದುಕೊಂಡು ಅಪ್ರಾಮಾಣಿಕ ಮೋಸದ ಹಾಡನ್ನು ಹಾಡುವುದನ್ನು ಬಿಡಬೇಕಾಗುತ್ತದೆ. ದೇಶದಲ್ಲಿ ಇಂದು ಯಾವ ವಿಚಾರಧಾರೆಗಳ ಧಾರಣೆಯಿದೆಯೋ ಅವುಗಳಲ್ಲಿ ಕೆಲವು ಪಾಶ್ಚಾತ್ಯ ಸಂಸ್ಕೃತಿಯನ್ನು ಭಾರತದಲ್ಲಿ ತರಲಿಚ್ಛಿಸಿದರೆ, ಕೆಲವು ಕಮ್ಯುನಿಸ್ಟ್ ದೇಶಗಳ ಅಧಿನಾಯಕತ್ವವನ್ನು ಭಾರತದಲ್ಲಿ ಸ್ಥಾಪಿಸುವ ಕನಸನ್ನು ಕಾಣುತ್ತಿದ್ದಾರೆ. 52 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಈ ವಿಚಾರಧಾರೆಗಳಿಂದ ಭಾರತವು ವಿನಾಶವಾಗುವ ಭಯವಿದೆ. ವಿನಾಶವಾಗುವ ಅರ್ಥವೇನೆಂದರೆ ಗಂಗೆ ಅಥವಾ ಹಿಮಾಲಯ ವಿನಾಶಹೊಂದುವುದಲ್ಲ, ಆದರೆ ಅವುಗಳನ್ನು ಪವಿತ್ರವೆಂದು ತಿಳಿಯುವ ಭಾವನೆ ನಮ್ಮ ಅಂತಃಕರಣದಲ್ಲಿ ಇಂದಿಗೂ ಯುಗ-ಯುಗಳಿಂದಲೂ ಇದೆ ಎಂಬ ಭಾವನೆ ಕಳೆದುಹೋಗಿಬಿಡುತ್ತದೆ. _________ * ಆಕರ : `ರಾಷ್ಟ್ರಧರ್ಮ’ ಪತ್ರಿಕೆ, ಮಾರ್ಚಿ 1964, ಫೆಬ್ರವರಿ 22ರ ಉಪಾಧ್ಯಾಯರ ಬಲಿದಾನ ದಿನದ ಸ್ಮರಣಾರ್ಥ. ಸಮರ್ಥನಾದ ಅಭ್ಯರ್ಥಿ ಯಾರು ? ಯಾರಲ್ಲಿ ಸಾಮಾನ್ಯ ಬುದ್ಧಿಯಿರುತ್ತದೆಯೋ, ಯಾರು ತಮ್ಮ ಪಕ್ಷದ ದೃಷ್ಟಿಕೋನವನ್ನು ವಿಧಾನಮಂಡಲದಲ್ಲಿ ಮಂಡಿಸಬಲ್ಲನೋ, ಯಾರು ತನ್ನ ಚುನಾವಣೆ ಕ್ಷೇತ್ರದ ಸೇವೆಯನ್ನು ಮಾಡುವನೋ ಮತ್ತು ಕ್ಷೇತ್ರದ ಜನತೆಯ ಭಾವನೆಗಳನ್ನು ಪ್ರಕಟಗೊಳಿಸುವನೋ ಅವನೇ ನಿಜವಾದ ಅಭ್ಯರ್ಥಿ. ಒಬ್ಬ ವ್ಯಕ್ತಿಯಾದ ಕಾರಣ ಜನತೆಗಾಗಿ ಸಮರ್ಪಿತನಾಗಬೇಕು ಮತ್ತು ಒಂದು ಪಕ್ಷದ ಸದಸ್ಯನಾದ ಕಾರಣ ಆ ಪಕ್ಷದ ಶಿಸ್ತು ಹಾಗೂ ವಿಚಾರಧಾರೆಯ ಬಗ್ಗೆ ಪ್ರತಿಬದ್ಧನಾಗಿರಬೇಕು. ಒಂದುವೇಳೆ ಅವನಲ್ಲಿ ಅನ್ಯ ವಿಶೇಷತೆಗಳಿದ್ದರೆ ಅವನ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ. ಆದರೆ ಈ ಮೌಲ್ಯಯುತ ಗುಣಗಳ ಸ್ಥಾನವನ್ನು ಪಡೆಯಲಾರದು. ಆದರೆ ಭಾರತದಲ್ಲಿ ಬಹುಶಃ ಯಾವುದೇ ಪಕ್ಷ ಈ ಗುಣಗಳ ಕಡೆಗೆ ಗಮನ ನೀಡಿರಲಾರದು. ಕೇವಲ ಯಾರು ಗೆಲ್ಲುವರೆಂಬುದೊಂದೇ ಅವರ ಮಾನದಂಡವಾಗಿರುತ್ತದೆ. ಕುದುರೆಯ ಓಟದಲ್ಲಿ ಯಾವುದೋ ಕುದುರೆಯ ಬಗ್ಗೆ ಕಾಳಜಿ ಇರುವುದಿಲ್ಲ. ಕೇವಲ ಯಾವ ಕುದುರೆ ಗೆಲ್ಲುತ್ತದೆಂಬುದನ್ನೇ ನೋಡಲಾಗುತ್ತದೆ ಮತ್ತು ಅದರ ಮೇಲೆಯೇ ದಾವೆ ಹೂಡುತ್ತಾರೆ. ಅದೇ ಪ್ರಕಾರ ಚುನಾವಣೆಯ ಮೈದಾನದಲ್ಲಿಯೂ ಯಾವ ಅಭ್ಯರ್ಥಿ ಗೆಲ್ಲುತ್ತಾನೋ ಎಂಬುದನ್ನೇ ನೋಡಲಾಗುತ್ತದೆ. ಓಟದ ಮೈದಾನವನ್ನು ಬಿಟ್ಟ ನಂತರ ಕುದುರೆಯೊಂದಿಗಿನ ಸಂಬಂಧ ಮುಗಿದು ಹೋಗುತ್ತದೆಂಬುದನ್ನು ಅವರು ಮರೆತಿರುತ್ತಾರೆ. ಆದರೆ ಚುನಾವಣೆಯಲ್ಲಿ ಹೀಗಾಗುವುದಿಲ್ಲ. ಚುನಾವಣೆಯ ನಂತರ ಪಕ್ಷಗಳು ಅದೇ ಅಭ್ಯರ್ಥಿಯ ಮೂಲಕ ಕ್ಷೇತ್ರ ಅಥವಾ ವಿಧಾನಮಂಡಲದಲ್ಲಿ ಕೆಲಸ ಮಾಡಿಸಲಾಗುತ್ತದೆ. ಇಂದು ಹೆಚ್ಚು ಪಕ್ಷಗಳ ತಳಹದಿಯು ಸಾಧಾರಣ ಜನತೆಯವರೆಗೂ ತಲುಪುವುದಿಲ್ಲ. ಒಂದು ಸಮಯವಿತ್ತು ಅಂದು ಕಾಂಗ್ರೆಸ್ ಜನಸಾಮಾನ್ಯರ ಪಕ್ಷವಾಗಿತ್ತು. ಇಂದು ಆ ಮಾತೇ ಇಲ್ಲ. ಹೊಸ ಪಕ್ಷಗಳು ಜನತೆಯ ಹೃದಯ ತಟ್ಟಲು ಬಹಳ ಶ್ರಮವಹಿಸಬೇಕು. ಈ ಕಾರಣಗಳಿಂದ ಜನತೆಯನ್ನು ಪ್ರಭಾವಿತರನ್ನಾಗಿಸಲು ಅನ್ಯ ಸಾಧನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಜಾತಿ ಹಾಗೂ ಸಂಪ್ರದಾಯವೂ ಅಭ್ಯರ್ಥಿಯ ಚುನಾವಣೆಯಲ್ಲಿ 54 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ಈ ವಿಚಾರದಲ್ಲೂ ಎಲ್ಲಾ ಪಕ್ಷಗಳೂ ಅಪರಾಧಿಗಳೇ, ಆದರೆ ಕಾಂಗ್ರೆಸ್ ಎಲ್ಲಕ್ಕಿಂತ ಹೆಚ್ಚು. ಒಳ್ಳೆಯ ಸಂಘಟನೆಗಳ ಅಭಾವದಿಂದಲೂ ಹೀಗಾಗಿದೆ. ಜಾತೀಯತೆಯನ್ನು ನಿಂದಿಸುವುದರಿಂದ ಪ್ರಯೋಜನವಿಲ್ಲ. ಯಾರು ಬೈಯ್ಯವರೋ ಅವರೇ ಪರೋಕ್ಷವಾಗಿ ಜಾತೀಯತೆಯನ್ನು ಹೆಚ್ಚಿಸುವರು. ಭಾರತದಲ್ಲಿ ಪ್ರತ್ಯೇಕ ವ್ಯಕ್ತಿ ಒಂದಲ್ಲ ಒಂದು ಜಾತಿ ಅಥವಾ ಸಂಪ್ರದಾಯದವನಾಗಿರುತ್ತಾನೆ. ಬೇರೆ ಪಕ್ಷದ ಮೇಲೆ ಜಾತಿವಾದ ಅಥವಾ ಸಂಪ್ರದಾಯವಾದವ ಅಪರಾಧವನ್ನು ಹೇರಿ ಬೇರೆ ಸಂಪ್ರದಾಯ ಅಥವಾ ಜಾತಿಗೆ ಸಂಬಂಧಿಸಿದ ಜನರ ಮೇಲೆ ಒಂದು ರೀತಿ ಇದೇ ಪ್ರಕಾರದ ಭಾವನೆಗಳನ್ನು ಹೆಚ್ಚಿಸುತ್ತಾರೆ. ಒಂದು ವೇಳೆ ಬೇರೆ ಮೌಲ್ಯಯುತ ಗುಣಗಳು ಇದ್ದರೆ ಜಾತಿ ಯಾವುದಾದರೂ ಯಾವುದೇ ಅಂತರವಿರುವುದಿಲ್ಲ. ಭಾರತವರ್ಷದ ಯಾವುದೇ ವ್ಯಕ್ತಿ ಸಂಪೂರ್ಣವಾಗಿ ಜಾತಿ ರಹಿತನಾಗಿರಲಾರನು. ಅಭ್ಯರ್ಥಿಗೆ ಟಿಕೆಟ್ ನೀಡುವ ಸಮಯದಲ್ಲಿ ಅವನ ಆರ್ಥಿಕ ದಕ್ಷತೆಯನ್ನು ನೋಡಲಾಗುತ್ತದೆ. ಕೆಲವು ಜನರನ್ನು ಕೇವಲ ಹಣ ಖರ್ಚುಮಾಡುವರೆಂದೇ ಜನನಾಯಕನನ್ನಾಗಿ ಆರಿಸುತ್ತಾರೆ. ಇವರು ಚುನಾವಣೆಯ ಸಮಯದಲ್ಲಿ ಮುಖ ತೋರಿಸಿ ಮತ್ತೆ ಐದು ವರ್ಷಗಳವರೆಗೂ ನಿದ್ದೆ ಮಾಡುತ್ತಾರೆ. ಅವರು ಮತವನ್ನು ಕೇಳಲಲ್ಲದೆ, ಮತಗಳನ್ನು ಖರೀದಿಸಲು ಹೊರಡುತ್ತಾರೆ. ಅವರು ಒಂದಲ್ಲ ಒಂದು ರೀತಿಯಲ್ಲಿ ಸಭೆಯವರೆಗೂ ಪ್ರವೇಶಿಸಲಿಚ್ಛಿಸುತ್ತಾರೆ. ಅವರಿಗೆ ಇದೊಂದು ರೀತಿಯ ದಂಧೆಯಾಗಿದೆ. ಕಾಂಗ್ರೆಸ್ ಸಹಿತವಾಗಿ ಎಲ್ಲಾ ಪಕ್ಷಗಳೂ ಆರ್ಥಿಕವಾಗಿ ಬಹಳ ದುರ್ಬಲರಾದ ಕಾರಣ ಇಂತಹ ಜನರನ್ನು ಸೇರಿಸಿಕೊಳ್ಳುತ್ತಾರೆ. ಈ ವಿಚಾರಗಳು ದೇಶದ ರಾಜನೀತಿಗೆ ತಪ್ಪು ದಿಕ್ಕನ್ನು ತೋರಿಸಬಲ್ಲವು. ಒಂದು ವೇಳೆ ಈ ಪ್ರವೃತ್ತಿಗಳನ್ನು ನಿಲ್ಲಿಸುವ ಪ್ರಯತ್ನ ಮಾಡದಿದ್ದರೆ ಅನೇಕ ಶಕ್ತಿಶಾಲಿ ಸಭೆಯ ಉಪಸಭೆಗಳು ವಿಧಾನಸಭೆಯಲ್ಲಿ ಹಾಗೂ ಅನ್ಯ ಸ್ಥಳಗಳಲ್ಲಿ ರಾಜಕೀಯ ಒತ್ತಡವನ್ನೊಡ್ಡುವುದು ಮತ್ತು ದೇಶ ಹಾಗೂ ಜನತೆಯ ಹಿತಕ್ಕಾಗಿ ಕಾರ್ಯನಿರ್ವಹಿಸುವ ತಟಸ್ಥ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಕಷ್ಟವಾಗಿಬಿಡುತ್ತದೆ. ಯಾವ ಪಕ್ಷವು ಭವಿಷ್ಯದಲ್ಲಿ ಹೆಚ್ಚಿನ ಶಕ್ತಿಗಳ ರೂಪದಲ್ಲಿ ಉದ್ಧಾರವಾಗಿ ಮುಂಬರಲಿಚ್ಛಿಸುತ್ತದೆಯೋ, ಅದು ಕ್ಷಣಿಕ ಲಾಭಕ್ಕಾಗಿ ಸಿದ್ಧಾಂತಗಳನ್ನು ತ್ಯಾಗ ಮಾಡಬಾರದು. ಜನತೆಯ ಕರ್ತವ್ಯವೆಂದರೆ ಅದು ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿ ತಮ್ಮ ಮತಗಳನ್ನು ಉಪಯೋಗಿಸಿಕೊಳ್ಳಬೇಕು. ಹಾಗೂ ರಾಜ್ಯಕೀಯ ಪಕ್ಷಗಳ ವಿಕೃತ ದೃಷ್ಟಿಕೋನವನ್ನು ಸರಿಪಡಿಸಬೇಕು. ಮತದಾರನು ದೂರು ನೀಡಬಾರದು, ಆದೇಶ ಹೊರಡಿಸಬೇಕು. ಅವನು ಕೇವಲ ಅಪೇಕ್ಷಿಸಬೇಕು, ಕೇಳಬಾರದು. ಅವನು ಸಿದ್ಧಾಂತಕ್ಕಾಗಿ ಮತ ನೀಡಬೇಕು; ಸಮರ್ಥನಾದ ಅಭ್ಯರ್ಥಿ ಯಾರು ? 55 ಪಕ್ಷಕ್ಕಾಗಿಯಲ್ಲ. ಅವನು ಪಕ್ಷಕ್ಕಾಗಿ ಮತ ನೀಡಬೇಕು; ವ್ಯಕ್ತಿಗಾಗಿಯಲ್ಲ, ಹಾಗೂ ಅವನು ವ್ಯಕ್ತಿಗಾಗಿ ಮತ ನೀಡಬೇಕು; ಅವನ ಹಣಕ್ಕಾಗಿಯಲ್ಲ. ಅವನು ಧ್ಯೇಯದ ಕಡೆಗೆ ಗಮನವಹಿಸಬೇಕು, ಜಾತಿಯ ಕಡೆಗಲ್ಲ. ಗುಣವಂತ ಹಾಗೂ ಯೋಗ್ಯವ್ಯಕ್ತಿಯೊಂದಿಗೆ ಅವನು ನಡೆಯಬೇಕು, ಗೆಲ್ಲುವವರೊಂದಿಗಲ್ಲ. ಸರಿಯಾದ ವ್ಯಕ್ತಿಯನ್ನು ಆರಿಸಬೇಕು ಮತ್ತು ಅವನನ್ನೇ ಗೆಲ್ಲಿಸಬೇಕು. ಇದೇ ನಿಮ್ಮ ವಿಜಯವಾಗುವುದು. ಒಂದುವೇಳೆ ಒಬ್ಬ ವ್ಯಕ್ತಿ ನಾನೇ ಗೆಲ್ಲುವೆನೆಂಬ ಭ್ರಮೆಯನ್ನು ಹರಡಿಸಿದ್ದು ನೀವು ಅಂತಹ ವ್ಯಕ್ತಿಯ ಬಾಲಂಗೋಚಿಯಾಗಿದ್ದರೆ ಪರಿಣಾಮವೇನೇ ಆದರೂ ಚುನಾವಣೆಯಲ್ಲಿ ಸೋತಂತೆಯೇ ಎಂದು ತಿಳಿಯಿರಿ. ಮತ ನೀಡುವುದು ಅಂತರಾತ್ಮದ ಸಂತೋಷದ ಪ್ರಶ್ನೆ. ಅದನ್ನು ಮಾರಬೇಡಿ, ನಾಶ ಮಾಡಬೇಡಿ. ಮತನೀಡುವ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಯೋಚಿಸಿ- ವಿಚಾರಿಸಿಕೊಳ್ಳಿ. ಕ್ಷಣಿಕ ಭಾವನೆ ಅಥವಾ ಆವೇಶಕ್ಕೊಳಗಾಗದಿರಿ. ಮತನೀಡುವ ಅಧಿಕಾರ ವೈಯಕ್ತಿಕವಾದಾಗ್ಯೂ, ಇದರ ಉಪಯೋಗ ಸಾಮಾಜಿಕ ಹಿತಕ್ಕಾಗಿಯೇ ಆಗಿರಬೇಕು. ಇದು ನಿಮ್ಮ ಸ್ವಾಧೀನತೆಯ ಪ್ರತೀಕವಾದುದು. ಇದರ ಪ್ರಯೋಗವನ್ನು ಸ್ವತಂತ್ರರೂಪವಾಗಿ ಮಾಡಬೇಕು. ಒಂದು ವೇಳೆ ನೀವು ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಟ್ಟರೆ ಕೇವಲ ನಿಮ್ಮ ಅಂತರಾತ್ಮವನ್ನು ಪರೀಕ್ಷಿಸಿಕೊಳ್ಳಿ, ಬೇರೆ ಯಾರನ್ನೋ ಅಲ್ಲ. ರಾಜಕೀಯ ಪಕ್ಷವು ಕೇವಲ ಜನತೆಗಾಗಿ ಇರುವುದಿಲ್ಲ. ಬದಲಾಗಿ ತನ್ನ ಸಾಮರ್ಥ್ಯದ ಮೇಲೆಯೇ ಬದುಕಿರುತ್ತದೆ. ಯಾರೂ ತಮ್ಮನ್ನು ಬಗ್ಗಿಸಬಾರದೆಂದು ಜನತೆಯು ಇಚ್ಛಿಸಿದರೆ ಅದು ಪಕ್ಷಗಳಿಗೆ ಜನಶಕ್ತಿಯನ್ನು ನೀಡಬೇಕು. ಜನಶಕ್ತಿಯಿಂದಲೇ ರಾಜಕೀಯ ಪಕ್ಷವು ಜೀವಂತವಾಗಿರುತ್ತದೆ. ಹಾಗೂ ಅದರ ಭಾಗ್ಯವು ಅದನ್ನೇ ನಿರ್ಧರಿಸುತ್ತದೆ. ಅದನ್ನು ಕಠಿಣವಾದ ಪರೀಕ್ಷೆಯಲ್ಲಿ ಸಫಲವಾಗಲು ಬಿಡಿ. ಅಭ್ಯರ್ಥಿ, ಪಕ್ಷ ಮತ್ತು ವಿಚಾರಧಾರೆ ಮತದಾನ ಒಂದು ಪ್ರಕ್ರಿಯೆ. ಅದರ ಮೂಲಕ ವಿಭಿನ್ನ ದಾವೆಗಳು ಮತ್ತು ಇಷ್ಟ ಅಥವಾ ಕಷ್ಟಗಳನ್ನು ಸಂಪೂರ್ಣವಾಗಿ ತೃಪ್ತಿಪಡಿಸಲು ಸಾಧ್ಯವಾಗಲಾರದು. ಹಾಗೂ ಅಂತಿಮವಾದ ನಿರ್ಣಯವನ್ನು ತೆಗೆದುಕೊಳ್ಳುವಾಗ ಬಹಳ ಸಾವಕಾಶವಾಗಿರುವುದು ಮತ್ತು ಅನೇಕ ವಿಚಾರಗಳನ್ನು ಸರಿಯಾಗಿ ಪರೀಕ್ಷಿಸುವುದು ಅತ್ಯವಶ್ಯಕ. ಅಭ್ಯರ್ಥಿ, ಪಕ್ಷ ಹಾಗೂ ವಿಚಾರಧಾರೆ-ಎಲ್ಲವುಗಳ ಬಗ್ಗೆ ಗಮನಹರಿಸಬೇಕು. ಒಬ್ಬ ಅಭ್ಯರ್ಥಿ ಇದರಿಂದಲೇ ಒಳ್ಳೆಯವನಾಗುವುದಿಲ್ಲ. ಏಕೆಂದರೆ ಅವನು ಒಳ್ಳೆಯ ಪಕ್ಷಕ್ಕೆ ಸಂಬಂಧಿತನಾಗಿರುತ್ತಾನೆ. ಕೆಟ್ಟತನ ಕೆಟ್ಟದ್ದೇ. ಅದು ಯಾರಿಗೂ ಒಳ್ಳೆಯದನ್ನು ಮಾಡಲಾರದು. ಪಕ್ಷದ ಸರ್ವೋಚ್ಛ ಕೇಂದ್ರೀಯ ನೇತೃತ್ವ, ಉತ್ತಮ 56 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಉದ್ದೇಶಗಳಿದ್ದರೂ ವಿದೇಶಿ ಪದ್ಧತಿಯನ್ನು ಅಳವಡಿಸಿಕೊಳ್ಳಬಲ್ಲ ಅಥವಾ ತಪ್ಪು ಮಾಡಬಲ್ಲನು. ಹೊಣೆಗಾರಿಕೆ ಹೊಂದಿರುವ ಜನತೆಯ ಕರ್ತವ್ಯವೆಂದರೆ ಅದು ಆ ತಪ್ಪುಗಳನ್ನು ಸುಧಾರಿಸುವುದು. ಒಂದು ಕಾಲವಿತ್ತು. ಆಗ ಕಾಂಗ್ರೆಸ್‍ನ ಹೆಸರಿನಲ್ಲಿ ಯಾವುದೇ ವ್ಯಕ್ತಿ ಗೆದ್ದುಬಿಡುತ್ತಿದ್ದ. ಮೊದಲನೇ ಸಾಮಾನ್ಯ ಚುನಾವಣೆಯಲ್ಲಿ ಆಚಾರ್ಯ ಕೃಪಲಾನಿ ಮತ್ತು ಆಚಾರ್ಯ ನರೇಂದ್ರದೇವರಂತಹ ಮಹಾರಥಿಗಳು ಕಾಂಗ್ರೆಸ್‍ನ ದಾರಿ ಹೋಕರಿಂದ ಅಪರಾಜಿತರಾದರು. ಆ ದಿನಗಳು ಮುಗಿದುಹೋದವು. ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿಯೂ ಆಗಬಹುದು. ಕೆಲವು ದಿನಗಳು ಕಳೆದವು. ಒಬ್ಬ ಸಜ್ಜನನು ನಾನು ಯಾವುದಾದರೂ ಕಲ್ಲಿಗೂ ಮತ ನೀಡಬಲ್ಲೆ ಆದರೆ ಕಾಂಗ್ರೆಸ್‍ನ ಅಭ್ಯರ್ಥಿಗಲ್ಲ ಎಂದನು. ನಿಜವಾಗಿಯೂ ಇಬ್ಬರೂ ಅಸ್ವಸ್ಥ ಹಾಗೂ ವಿಕೃತ ಮಾನಸಿಕ ಸ್ಥಿತಿಯ ದ್ಯೋತಕರಾಗಿದ್ದಾರೆ. ಕೆಲವು ದಿನಗಳ ನಂತರ ಕಾಂಗ್ರೆಸ್ ಅಧ್ಯಕ್ಷರು ವಿರೋಧಪಕ್ಷದ ಅತ್ಯುತ್ತಮ ಅಭ್ಯರ್ಥಿಗಿಂತ ನಮ್ಮ ಪಕ್ಷದ ಅತ್ಯಂತ ಕೆಟ್ಟ ಅಭ್ಯರ್ಥಿಯೇ ಉತ್ತಮನೆಂದು ಹೇಳಿದ್ದರು. ಇದರಿಂದ ನನಗೆ ಮೌಲಾನಾ ಶೌಕತ್ ಅಲಿಯ ಹೇಳಿಕೆಯು ನೆನಪಾಯಿತು. ಅದೇನೆಂದರೆ, ``ನನಗೆ ಅತ್ಯಂತ ತುಚ್ಛನಾದ ಮುಸಲ್ಮಾನನೂ ಗಾಂಧೀಜಿಗಿಂತಲೂ ಉತ್ತಮನಾದವನು". ಈ ಮಾತನ್ನು ಯಾರೂ ಒಪ್ಪಿಕೊಳ್ಳಲಾರರು. ಯಾವ ವ್ಯಕ್ತಿ ಪ್ರತಿಕ್ರಿಯೆವಶವಾಗಿ ಮತ ನೀಡುತ್ತಾನೋ, ಅವನೂ ಇದೇ ಶ್ರೇಣಿಯಲ್ಲಿಯೇ ಬರುತ್ತಾನೆ. ಮೈಲಿಗಲ್ಲು ಅಥವಾ ಲೈಟುಕಂಬ ನಿಮ್ಮ ಪ್ರತಿನಿಧಿತ್ವವನ್ನು ಮಾಡಲಾರದು. ಒಂದುವೇಳೆ ಅವು ವಿಧಾನಸಭೆಯಲ್ಲಿ ಬಹಿರಂಗವಾದರೆ ಅದು ನಿಮ್ಮ ವ್ಯಕ್ತಿತ್ವದ ಲಾಂಛನವಾಗುತ್ತದೆ. ಆದ್ದರಿಂದ ನೀವು ನಿಮ್ಮ ಸರಿಯಾದ ಪ್ರತಿನಿಧಿಗಳನ್ನು ಆರಿಸಿರಿ. ನೀವು ಒಳ್ಳೆಯ ವ್ಯಕ್ತಿಯನ್ನು ಬಯಸುತ್ತೀರಿ. ಆದರೆ ಒಳ್ಳೆಯ ವ್ಯಕ್ತಿ ಕೆಟ್ಟ ಪಕ್ಷದಲ್ಲಿ ಏನೂ ಮಾಡಲಾರನು. ರಾಜರ್ಷಿ ಪುರುಷೋತ್ತಮದಾಸ್ ಟಂಡನ್‍ರವರ ಉದಾಹರಣೆ ನಮ್ಮ ಮುಂದಿದೆ. ಪ್ರಶ್ನೆಯೇನೆಂದರೆ ಒಳ್ಳೆಯ ಪಕ್ಷ ಯಾವುದು? ಸ್ಪಷ್ಟವಾಗಿಯೂ ಇದು ವ್ಯಕ್ತಿಗಳ ಸಮೂಹವಲ್ಲ. ಅದರ ಉದ್ದೇಶ ಕೇವಲ ಅಧಿಕಾರವನ್ನು ಚಲಾಯಿಸುವುದಲ್ಲ. ಅದು ಯಾವುದೋ ಉದ್ದೇಶದಿಂದ ಪ್ರೇರೇಪಿತವಾಗಿ ಜನಹಿತಕ್ಕಾಗಿ ಕಾರ್ಯ ಮಾಡುವ ವ್ಯಕ್ತಿಗಳ ಸಮೂಹ, ರಾಜನೀತಿ ಅಧಿಕಾರ ಸಾಧನೆಯಾಗಿದೆ, ಸಾಧ್ಯವಲ್ಲ. ಪಕ್ಷದ ಸಾಧಾರಣ ಸದಸ್ಯರಲ್ಲಿ ದೃಢತೆ ಹಾಗೂ ಸಮರ್ಪಣೆಯ ಭಾವನೆ ಇರಬೇಕು. ಇದರಿಂದಲೇ ಶಿಸ್ತಿನ ನಿರ್ಮಾಣವಾಗುವುದು. ಶಿಸ್ತನ್ನು ಬಾಹ್ಯವಾಗಿ ತರಲಾಗದು. ಇದು ಬಾಹ್ಯರೂಪವಾಗಿ ಕೆಲವು ಕಾರ್ಯಗಳನ್ನು ಮಾಡಲು ಮತ್ತು ಕೆಲವನ್ನು ಮಾಡದಿರಲು ಆದೇಶ ನೀಡುವುದಿಲ್ಲ. ಎಷ್ಟು ನೀವು ಮೇಲಿನಿಂದ ಹೇರುತ್ತೀರೋ, ಸಮರ್ಥನಾದ ಅಭ್ಯರ್ಥಿ ಯಾರು ? 57 ಅಷ್ಟೇ ಆಂತರಿಕ ಶಕ್ತಿ ಕ್ಷೀಣಿಸುತ್ತದೆ. ಎಷ್ಟು ಸಮಾಜದ ಧರ್ಮಕ್ಕೆ ಮಹತ್ವವಿದೆಯೋ ಅಷ್ಟೇ ಮಹತ್ವ ಪಕ್ಷದ ಶಿಸ್ತಿಗಿದೆ. ಒಂದುವೇಳೆ ಸಮರ್ಪಣೆ ಮತ್ತು ಶಿಸ್ತಿದ್ದರೆ ಪಕ್ಷಕ್ಕಾಗಿ ತಂತ್ರಹೂಡಿಕೆ ನಡೆಯುವುದಿಲ್ಲ. ಮಂಡಳಿಯಲ್ಲಿ ಹಂಚಿದ ವ್ಯಕ್ತಿಗಳು ಅಪ್ರಭಾವಿತರಾಗಿಬಿಡುತ್ತಾರೆ. ಒಳ್ಳೆಯ ಪಕ್ಷದ ಮೂರನೇ ವಿಶೇಷತೆಯೆಂದರೆ ಅದರ ಕೆಲವು ಆದರ್ಶಗಳಿರಬೇಕು ಮತ್ತು ಅದರ ನೀತಿಗಳು ಆ ಆದರ್ಶಗಳನ್ನು ಪಡೆದುಕೊಳ್ಳುವಂತೆ ಮಾಡಬೇಕು. ಸಮಯಸಾಧನೆ ವ್ಯವಹಾರಿಕತೆಯ ಪರ್ಯಾಯವಾಗಿರಲಾರದು. ಯದಾರ್ಥವು (ವಾಸ್ತವಿಕತೆ) ಆದರ್ಶವಾದದ ಗುಣವಾಗಿರುತ್ತದೆ. ಇದು ಸಿದ್ಧಾಂತವಾದಿ ಹಾಗೂ ಮಿಶನರಿ ವ್ಯಕ್ತಿಯ ಗುಣವಾಗಿದೆ. ರಾಜನೈತಿಕ ಪಕ್ಷ ಹಾಗೂ ಅದರ ನಾಯಕ ರಾಜನೀತಿಯ ಜೀವನದಲ್ಲಿ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಾನೆ. ಆದ್ದರಿಂದ ಅವನು ಸಾಮಾಜಿಕ ಮೌಲ್ಯಗಳನ್ನು ಅವಮಾನಿಸಬಾರದು. ಲೋಕತಂತ್ರದ ಅರ್ಥ ಕೇವಲ ಚುನಾವಣೆಯಲ್ಲ. ಇದಕ್ಕಾಗಿ ಸುಸಂಘಟಿತ ಪಕ್ಷ ಹಾಗೂ ಸಮಾಜ ಹಾಗೂ ಮಾನ್ಯತೆಗಳ ಅವಶ್ಯಕತೆ ಇದೆ. ಒಳ್ಳೆಯ ಪಕ್ಷ ಮತ್ತು ಉತ್ತಮ ಅಭ್ಯರ್ಥಿಯ ಜೊತೆಗೆ ಎರಡು ಒಳ್ಳೆಯ ಹಾಗೂ ವ್ಯವಹಾರಿಕ ಕಾರ್ಯಕ್ರಮಗಳೂ ಇರಬೇಕಾದದ್ದು ಅವಶ್ಯಕ. ಕೊನೆಯಲ್ಲಿ ಕಾರ್ಯಕ್ರಮವನ್ನು ಸಾರ್ಥಕಗೊಳಿಸುವುದೇ ಉದ್ದೇಶವಾಗಿರುತ್ತದೆ. ಈ ಮೂರೂ ವಿಚಾರಗಳನ್ನು ಸಮನ್ವಯಿಸಿ ಸರಿ ಎಂದು ತಿಳಿಯುವುದರಲ್ಲಿ ಲೋಕತಂತ್ರವನ್ನು ತರಬಹುದು. ಯಾವುದೋ ಒಂದು ವಿಚಾರಕ್ಕಾಗಿ ಆದರ್ಶವನ್ನು ಹುಡುಕುವುದು ಬಹಳ ಕಠಿಣವಾದುದು. ಆದರೆ ಮೂರರ ಅತ್ಯಂತ ಹೆಚ್ಚು ಮಿಶ್ರಣವನ್ನು ಹುಡುಕಬಹುದು. ಕಾರ್ಯಕ್ರಮದ ಕೆಲವು ಅಭಾವಗಳು ಸಂಘಟಿತ, ಶಿಸ್ತಿನೊಂದಿಗೆ ಬಂಧಿಸಲ್ಪಟ್ಟ ಉತ್ತಮ ಉದ್ದೇಶವುಳ್ಳ ಸಜ್ಜನ ವ್ಯಕ್ತಿಗಳ ಮೂಲಕ ಯಾವುದೇ ಎಲ್ಲೆಯವರೆಗೂ ಪೂರ್ಣಗೊಳಿಸಬಹುದು. ಅವು ಎಂದಿಗೂ ಸಂಪೂರ್ಣವಾಗಿ ಅಸ್ವೀಕಾರ್ಯವಾದುದೆಂಬ ಸಿದ್ಧಾಂತ, ದಕ್ಷತೆ ಮತ್ತು ಒಳ್ಳೆಯತನ ಕೆಲಸಕ್ಕೆ ಬಾರದು. ಒಂದು ವೇಳೆ ದಿಕ್ಕು ಸರಿಯಾಗಿದ್ದರೆ, ಅದಕ್ಕೆ ಪರಿಶ್ರಮ ಮತ್ತು ದಕ್ಷತೆಯ ದೆಶೆಯನ್ನು ನೀಡಬಹುದು. _________ * ಆಕರ : `ರಾಷ್ಟ್ರಧರ್ಮ’ ಪತ್ರಿಕೆಯ ಡಿಸೆಂಬರ್ 1964ರ ಸಂಚಿಕೆ, ಪ್ರಸ್ತುತಿ ಜಿತೇಂದ್ರ ಭಟನಾಗರ್, ಲಖ್ನೌ (ಸಂ.) ಯಾತ್ರೆಗಿಂತ ಮೊದಲು (ಪಾಂಚಜನ್ಯ ಪ್ರುಷ್ಠ 9, ಶ್ರಾವಣ ಶುಕ್ಲ 15, ವಿಕ್ರಮ ಸಂವತ್ಸರ 2005, ಜುಲೈ ಆಗಸ್ಟ್ 1948) ಆಗಸ್ಟ್ 15 ಭಾರತೀಯ ಇತಿಹಾಸದಲ್ಲಿ ಮಹತ್ವಪೂರ್ಣವಾದ ದಿನ. ಆ ದಿನ ಸಂಪೂರ್ಣ ಭಾರತದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಾವಿರಾರು ವರ್ಷಗಳ ಕಥೆಯ ಬಂಧನದಿಂದ ಮುಕ್ತಿ ಹೊಂದಿದ ಅನುಭವ ಯಾರಿಗೆ ತಾನೆ ಆನಂದದಾಯಕವಾಗಿರಲಾರದು. ಆದರೆ ಆನಂದದ ಕ್ಷಣಗಳು ಕಡಿಮೆ ಇರುತ್ತವೆ. ಆನಂದೋತ್ಸವದಲ್ಲಿ ಮನುಷ್ಯ ತನ್ನನ್ನು ತಾನೇ ಮರೆತುಬಿಡುತ್ತಾನೆ. ವಾಸ್ತವಿಕತೆಯ ಕಠೋರವಾದ ಈ ಧರೆಯಿಂದೆದ್ದು ಕಲ್ಪನಾಕಾಶದಲ್ಲಿ ಸಹಜವಾಗಿ ಸಂಚರಿಸುತ್ತಾನೆ. ನಾವೂ ಸಹ ಇಂತಹ ಆನಂದವನ್ನು ಆಚರಿಸಿದೆವು ಮತ್ತು ತಮ್ಮ-ತಮ್ಮ ದೃಷ್ಟಿಕೋನಕ್ಕನುಸಾರವಾಗಿ ಅದರ ಭಾವನೆಗಳಿತ್ತು. ಪ್ರತಿಯೊಬ್ಬರಿಗೂ ತನ್ನದೇ ಆದ ಅವಧಿ ಇತ್ತು. ಆದರೆ ಅಂತ್ಯದಲ್ಲಿ ಎಲ್ಲರಿಗೂ ವಾಸ್ತವಿಕತೆಯ ಕಠೋರವಾದ ಪಾತ್ರವನ್ನು ಸ್ಪರ್ಶಿಸಲೇಬೇಕಾಯಿತು. ಇಂದಿಗೂ ಎಷ್ಟೋ ಜನರು ಕಟುವಾದ, ದುಃಖದ ಮತ್ತು ಹೊಣೆಗಾರಿಕೆಯಿಂದಿರುವ ವಾಸ್ತವಿಕತೆಯಲ್ಲಿ ಮುಖ ಮರೆಸಿಕೊಳ್ಳಲಿಚ್ಛಿಸುತ್ತಾರೆ. ಅವರು ಕಲ್ಪನೆಯ ಮಧುಮಯ ಪ್ರಪಂಚದ ಆಸ್ವಾಧನೆಯನ್ನು ತೆಗೆದುಕೊಳ್ಳುವುದರಲ್ಲೇ ಉನ್ಮತ್ತರಾಗಿದ್ದಾರೆ. ಒಂದು ವೇಳೆ ಅವರನ್ನು ಯಾರಾದರೂ ಸತ್ಯ ಪ್ರಪಂಚದಲ್ಲಿ ಎಳೆದು ತರುವ ಪ್ರಯತ್ನ ಮಾಡಿದರೆ ಅವರಿಗೆ ಸಿಟ್ಟು ಬಂದುಬಿಡುತ್ತದೆ. ಒಂದು ವೇಳೆ ವಾಸ್ತವಿಕ ಜಗತ್ತಿನ ಕಷ್ಟಗಳನ್ನು ಅವರ ಮುಂದೆ ಹೇಳಿದರೆ ಅವರು ಸ್ವಾತಂತ್ರ್ಯಾನುಭೂತಿಯ ಮಹತ್ವವನ್ನು ಕಡಿಮೆಗೊಳಿಸುತ್ತಿದ್ದಾರೆ. ಅಥವಾ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಯೋದರ ಮಹತ್ವವನ್ನು ಜನತೆಯ ದೃಷ್ಟಿಯಲ್ಲಿ ಕೆಳಗೆ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿಯುತ್ತಾರೆ. ಇದು ಸತ್ಯವಲ್ಲ. ತಮ್ಮ ವೀರತೆ ಮತ್ತು ಯುದ್ಧ ಕೌಶಲ್ಯಕ್ಕಾಗಿ ಅಪ್ರತಿಮ ಖ್ಯಾತಿಯನ್ನು ಹೊಂದುವ ಶೂರರೂ ಸಹ ಒಂದುವೇಳೆ ಕುಡುಕರಂತೆ ಕರ್ಮಚೇತನಾಹೀನರಾಗಿದ್ದು, ಸೋಮಾರಿಗಳಾಗಿಬಿಟ್ಟರೆ ಯಾರಾದರೂ ಒಬ್ಬ ಯೇಲಿಸಸ್‍ನನ್ನು ಅವರು ಕರ್ಮಮಯವಾದ ಜಗತ್ತಿಗೆ ಎಳೆತರಲೇಬೇಕಾಗುತ್ತದೆ. ದೇಶಸೇವೆಯ ವ್ರತವನ್ನೊಡ್ಡಿ ಯಾತ್ರೆಗಿಂತ ಮೊದಲು 59 ಎಷ್ಟೋ ಜನ ಕಷ್ಟ ಸಹಿಸುವವರು ಮತ್ತು ದೇಶಕ್ಕಾಗಿ ಬಲಿದಾನ ಮಾಡುವ ದೇಶಭಕ್ತರ ಬಗ್ಗೆ ಅವರ ಕರ್ತವ್ಯ ಭಾವನೆಯನ್ನು ಜೀವಂತವಾಗಿರಿಸಲು ಇದಕ್ಕಿಂತಲೂ ಹೆಚ್ಚು ಮತ್ತ್ಯಾವ ಶ್ರದ್ಧಾಂಜಲಿ ಇರಬಲ್ಲದು? ಯಾವ ಪುಸಲಾಯಿಸುವಿಕೆಗೆ ತಮ್ಮ ಜೀವನದಲ್ಲಿ ಸ್ಥಾನವನ್ನು ನೀಡಲಿಲ್ಲವೋ, ಇಂದು ಅವರು ಹೊಸ ಪೀಳಿಗೆಯಿಂದ ಅದನ್ನು ಹೇಗೆ ಅಪೇಕ್ಷಿಸಬಲ್ಲರು? ಹಾಗೂ ಯಾವಾಗ ನಾವು ಭಾರತೀಯ ಜೀವನದ ವಾಸ್ತವಿಕ ಸ್ಥಿತಿಯ ಮಾರ್ಗದರ್ಶನ ನೀಡುತ್ತೇವೋ, ಅದರಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಯುದ್ಧದಲ್ಲಿ ಮರಣ ಹೊಂದಿದ ವೀರರ ತ್ಯಾಗ ಮತ್ತು ಬಲಿದಾನದ ಪರಂಪರೆಯ ಬಗ್ಗೆ, ನಮ್ಮ ಭಾವನೆಗಳ ಬಗ್ಗೆ ಶ್ರದ್ಧೆ ಇದೆ ಮತ್ತು ಅವರ ದೇಶಭಕ್ತಿಯಲ್ಲಿ ವಿಶ್ವಾಸವಿದೆ. ಅವರ ಅನುಭವ - ಪವಿತ್ರ ವಿಚಾರಗಳಿಗೆ ಮೌಲ್ಯವಿದೆ ಮತ್ತು ಅವುಗಳನ್ನು ನಮ್ಮ ಸಹಜವಾದ ದೃಷ್ಟಿಯಿಂದ ಮಾಯವಾಗಲು ಬಿಡುವುದಿಲ್ಲ. ಆದರೆ ಏಳು ವರ್ಷದವರೆಗೂ ನಿರಂತರವಾಗಿ ನೋಡುವ ಅಭ್ಯಾಸವನ್ನು ಮಾಡುತ್ತಾ ಬಂದ ಅನುಭವೀ ಕಣ್ಣುಗಳೂ ಯಾವಾಗ ಕಣ್ಣಿನ ಪೊರೆಯ ಕಾರಣ ಸ್ಪಷ್ಟವಾಗಿ ನೋಡಲಾಗುವುದಿಲ್ಲವೋ, ಆ ಸಮಯದಲ್ಲಿ ಒಳ್ಳೆಯ ದೃಷ್ಟಿ ಇರುವವರೂ ಯಾವುದೇ ಯುವಕನ ಯಥಾಸ್ಥಿತಿಯ ವರ್ಣನೆ ವೃದ್ಧರ ಬಗ್ಗೆ ಇರುವ ಅಶಿಷ್ಟತೆ ಎಂದಲ್ಲ. ಬದಲಾಗಿ ಸೇವೆ ಹಾಗೂ ಆರಾಧನೆಯ ಭಾವನೆಯೇ ಆಗಿದೆ. ಆಗಸ್ಟ್ 15 ರಂದು ಬ್ರಿಟಿಷರು ಭಾರತವನ್ನು ಬಿಟ್ಟುಹೋದರು. ಅವರ ಮತ್ತು ನಮ್ಮ ಸಂಬಂಧ ಎರಡುನೂರು ವರ್ಷಗಳಿಗಿಂತಲೂ ಮುಂಚಿನಿಂದಿತ್ತು. ಈ ನಡುವಿನಲ್ಲಿ ಅವರು ನಮ್ಮಲ್ಲಿ ಅನೇಕ ಸಂಗತಿಗಳನ್ನು ಕಟ್ಟಿ-ಕೆಡುಹಿದ್ದರು. ನಮ್ಮ ರಾಷ್ಟ್ರ ಜೀವನದಲ್ಲಿ ಅನೇಕ ವಿಷ ಬೀಜಗಳನ್ನು ಬಿತ್ತಿದ್ದರು. ಅದರಲ್ಲಿ ಎಷ್ಟೋ ಬೆಳೆದಿವೆ ಮತ್ತು ಹರಡಿವೆ. ಇಂದು ನಮ್ಮ ರಾಷ್ಟ್ರ ಜೀವನ ಅವರಿಂದಾಗಿ ವಿಷಯುಕ್ತವಾಗಿ ಬಿಟ್ಟಿದೆ. ಅವರು ತಮ್ಮ ಅಧಿಕಾರದ ಬೇರನ್ನು ಗಟ್ಟಿಗೊಳಿಸಲು ನಮ್ಮನ್ನು ಸಾಂಸ್ಕೃತಿಕವಾಗಿ, ಶಾರೀರಕವಾಗಿ ಮತ್ತು ಆರ್ಥಿಕವಾಗಿ ನಾಶಗೊಳಿಸಿದ್ದಾರೆ. ನಮ್ಮ ಶರೀರ ಹಾಗೂ ಮನಸ್ಸು ಎರಡನ್ನೂ ಅವರ ಗುಲಾಮರನ್ನಾಗಿಸಿಕೊಳ್ಳಲು ಅನೇಕ ಪ್ರಕಾರದ ಯೋಜನೆಗಳನ್ನು ಮಾಡಿದರು. ಮತ್ತು ಅವನ್ನು ಕಾರ್ಯರೂಪಕ್ಕೂ ತಂದರು. ಇಂದು ಇದ್ದಕ್ಕಿದ್ದಂತೆಯೇ ಅವರು ನಮ್ಮನ್ನು ತೊರೆದು ಹೋಗಿಬಿಟ್ಟಿದ್ದಾರೆ. ನಮ್ಮ ಜೀವನವನ್ನು ಕಟ್ಟುವ ಕೆಡಹುವ ಜವಾಬ್ದಾರಿ ಈಗ ನಮ್ಮ ಮೇಲೆಯೇ ಇದೆ. ಈ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು. ಇಂದು ನಾವೇ ಸ್ವತಃ ನಮ್ಮ ವಿಕಾಸದ ಯೋಜನೆಗಳನ್ನು ನಿರ್ಮಿಸಬೇಕು ಮತ್ತು ಅವುಗಳನ್ನು ಸಂಪೂರ್ಣವಾದ ಶಕ್ತಿಯೊಂದಿಗೆ ಕಾರ್ಯರೂಪಕ್ಕೆ ತರಬೇಕು. ಯೋಜನೆಗಳನ್ನು ನಿರ್ಮಿಸುವುದು ಅತ್ಯಂತ ಸರಳವೆಂದು ತಿಳಿದುಬರುತ್ತದೆ. ಯಾವುದೇ ವ್ಯಕ್ತಿ ತನ್ನ ಅತ್ಯಲ್ಪ ಕಲ್ಪನಾಶಕ್ತಿಯ ಆಧಾರದೊಂದಿಗೆ ಯೋಜನೆಯನ್ನು 60 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಿರ್ಮಿಸಬಲ್ಲ ಇಂತಹ ಎಷ್ಟೋ ಯೋಜನೆಗಳು ನಿರ್ಮಾಣವಾಗಿವೆ ಮತ್ತು ಎರಡು ನಾಲ್ಕು ದಿನಗಳವರೆಗೆ ಸಮಾಚಾರ ಪತ್ರಿಕೆಗಳಲ್ಲಿ ಸ್ಥಾನವನ್ನು ಪಡೆದು ಅವು ವಿಸ್ಮೃತಿಯ ಆಳದಲ್ಲಿ ಬೆರೆತುಹೋಗಿವೆ. ಅನೇಕರಿಗೆ ಅವರ ನಿರ್ಮಾಪಕ ಕೈಯಲ್ಲಿ ಶಕ್ತಿ ಇರುವ ಕಾರಣವಾಗಿ ಕಾರ್ಯರೂಪದಲ್ಲಿ ಸಂಪೂರ್ಣಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಅವರ ಹಿಂದೆ ಜನ ಮತ್ತು ಧನದ ಶಕ್ತಿಯನ್ನಿಡಲಾಗುತ್ತದೆ. ಆದರೆ ಅವರ ಸಫಲತೆಯ ಯಾವುದೇ ಚಿಹ್ನೆಗಳು ಕಂಡು ಬರುವುದಿಲ್ಲ. ಕೋಟಿ- ಕೋಟಿ ಜನರು ಉತ್ಸಾಹ ಮತ್ತು ಹರ್ಷದೊಂದಿಗೆ ಅವರ ವ್ಯವಹಾರದಲ್ಲಿ ಉತ್ಸುಕರಾಗಿರುವಂತೆ ಕಂಡುಬರುವುದಿಲ್ಲ. ಆದ್ದರಿಂದ ಯೋಜನೆಗಳನ್ನು ನಿರ್ಮಿಸುವಾಗ ನಾವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಮ್ಮ ಯೋಜನೆಯ ಹಿಂದೆ ನಾವು ನಮ್ಮ ದೇಶದ ಜನರ ಸಂಪೂರ್ಣ ಕಾರ್ಯಶಕ್ತಿಯ ನಿಲುವನ್ನು ಹೊಂದಬೇಕಾದರೆ ಆ ಯೋಜನೆಯ ಬೇರುಗಳು ಅವರ ಹೃದಯಗಳಲ್ಲಿರಬೇಕು, ಅದರ ಸಂಬಂಧ ಅವರ ಜೀವನದ ಸಾರಗರ್ಭಿತ ತತ್ವಗಳೊಂದಿಗಿರಬೇಕಾದುದು ಅವಶ್ಯಕವಾದುದು. ಅವರಿಗೆ ಅವು ತಮ್ಮ ಸ್ವಂತವೆಂದೆನಿಸಬೇಕು ಮತ್ತು ಕಾರ್ಯಾನ್ವಿತಗೊಳಿಸಲು ಅವರಿಗೆ ಹಿತದಾಯಕವಾಗಿ ಕಂಡುಬರಬೇಕು. ನಮ್ಮ ಇಂದಿನ ಅಧಿಕಾಧಿಕ ಯೋಜನೆಗಳಲ್ಲಿ ಕಲ್ಪನಾಶಕ್ತಿಯಿರುತ್ತದೆ. ಅರ್ಥನೀತಿಯ ಗಾಢವಾದ ಸಿದ್ಧಾಂತಗಳ ಸಮಾವೇಶವಿರುತ್ತದೆ. ಆದರೆ ದುರಾದೃಷ್ಟವಶಾತ್ ಅವುಗಳಲ್ಲಿ ಭಾರತೀಯತೆಯೂ ಇರುವುದಿಲ್ಲ ಮತ್ತು ಇದರಿಂದಲೇ ಅವು ಭಾರತದ ಭೂಮಿಯಲ್ಲಿ, ಭಾರತದ ಕೋಟಿ-ಕೋಟಿ ಜನತೆಯ ಹೃದಯದಲ್ಲಿ ಚಿಗುರಲಾರದು. ಅವು ಕೆಲವು ಪಾಶ್ಚಾತ್ಯ ವಿಭೂಷಿತ ವಿದ್ವಾಂಸರ ಚರ್ಚೆಯ ವಿಷಯ ಮಾತ್ರವಾಗಿದ್ದು ಮುಗಿದುಹೋಗುತ್ತದೆ. ಆದ್ದರಿಂದ ಭಾರತೀಯತೆ ನಮ್ಮ ಯೋಜನೆಗಳ ಎಲ್ಲದ್ದಕ್ಕಿಂತ ಪ್ರಮುಖವಾದ ಗುಣವಾಗಿರಬೇಕು. ಅದರಿಂದಲೇ ಆತ್ಮ ವಿಕಾಸದ ಸಂಭವವಿರುವುದು ಮತ್ತು ಅದರ ಹಿಂದೆಯೇ ಆತ್ಮ ಪ್ರೇರಣೆಯಿಂದ ಸಂಪೂರ್ಣ ದೇಶವು ಎದ್ದು ನಿಲ್ಲಬಹುದಾಗಿದೆ. ನಾವು ಇಂದು ಭಾರತೀಯತೆಯನ್ನು ಆರಾಧಿಸಬೇಕು. ಆದರೆ ಭಾರತೀಯ ಜೀವನವು ಶೂನ್ಯದಲ್ಲಂತೂ ಇಲ್ಲ. ಅದು ಮಾನವ ಜೀವನದ್ದೇ ಒಂದು ಅಂಗವಾಗಿದೆ. ಆದ್ದರಿಂದ ವಿಶ್ವದಲ್ಲಾಗುವ ಘಟನೆಗಳು ಮತ್ತು ವಿಚಾರ ಕ್ರಾಂತಿಗಳಿಂದ ಅದು ತಮ್ಮನ್ನು ತಾನು ದೂರವಿರಿಸಬಲ್ಲದೆ ? ಅವುಗಳ ಪರಿಣಾಮ ಅದರ ಮೇಲೆ ಆಗಿಯೇ ಆಗುತ್ತದೆ. ಆದ್ದರಿಂದ ಭಾರತೀಯ ಜೀವನವನ್ನು ಕುರಿತು ವಿಚಾರ ಮಾಡುವ ಸಂದರ್ಭದಲ್ಲಿ ನಾವು ಪ್ರಪಂಚ ಸಾಗರವನ್ನು ಉಲ್ಲಂಘಿಸುವ ವಿಚಾರ- ವಿಮರ್ಶಕರನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕು, ನಮ್ಮ ಆರ್ದ್ರತೆಯನ್ನು ನಾವು ಸಾಗರದ ಸ್ಥಿತಿಯ ವಿಚಾರವನ್ನು ಮಾಡಿಯೇ ನಿರ್ಮಾಣ ಮಾಡಬೇಕಾಗುತ್ತದೆ. ಯಾತ್ರೆಗಿಂತ ಮೊದಲು 61 ಇಂದಂತೂ ಸಂಚಾರಿ ಸಾಧನಗಳು ಪ್ರಪಂಚದ ದೇಶಗಳನ್ನು ಒಬ್ಬರನ್ನು ಮತ್ತೊಬ್ಬರ ನಿಕಟಕ್ಕೆ ತಂದಿದೆ. ಆದ್ದರಿಂದ ಒಬ್ಬರು ಮತ್ತೊಬ್ಬರ ಮೇಲೆ ಪರಿಣಾಮವಾಗದೇ ಇರಲಾಗದು. ಆದರೆ ಅಂತ್ಯದಲ್ಲೂ ಭಿನ್ನ-ಭಿನ್ನವಾದ ದೇಶಗಳ ಇಂತಹ ಸಂಬಂಧವಿದೆ. ಭಾರತದ ಸಂಬಂಧವೂ ವಿಶ್ವದ ಬೇರೆ ದೇಶಗಳೊಂದಿಗೆ ಬಹಳ ಪುರಾತನ ಕಾಲದಿಂದಲೂ ಇದೆ. ಈ ಸಂಬಂಧವಾಗಿ ಎಲ್ಲಿ ಭೌತಿಕ ಜಗತ್ತಿನ ವಸ್ತುಗಳ ಕೊಡುವ ಕೊಳ್ಳುವಿಕೆಯಿಂದ ವ್ಯಾಪಾರ ವೃದ್ಧಿಯಾಗಿದೆಯೋ ಅಲ್ಲಿ ಬೌದ್ಧಿಕ ಜಗತ್ತಿನಲ್ಲೂ ಕೊಡು-ಕೊಳ್ಳುವಿಕೆಯಾಗಿದೆ. ನಾವು ಜಗತ್ತಿಗೆ ಬಹಳಷ್ಟು ನೀಡಿದ್ದೇವೆ ಮತ್ತು ಅದರಿಂದ ಬಹಳಷ್ಟು ತೆಗೆದುಕೊಂಡಿದ್ದೇವೆ. ಎಲ್ಲಿ ವಿಶ್ವಗುರುವಾದ ಕಾರಣ ನಾವು ಜಗತ್ತಿಗೆ ಶಿಕ್ಷಣವನ್ನು ನೀಡಿದ್ದೇವೋ, ಅಲ್ಲಿ ಒಬ್ಬ ಜಿಜ್ಞಾಸೆಯುಳ್ಳವನಾದ್ದರಿಂದ ನಾವು ಚಿಕ್ಕವರು ದೊಡ್ಡವರು ಯಾರಿಂದಲಾದರೂ ಜ್ಞಾನವನ್ನು ಪಡೆದುಕೊಳ್ಳಲು ಸಂಕೋಚ ವ್ಯಕ್ತಪಡಿಸಿಲ್ಲ. ಹೌದು, ನಾವು ಏನೆಲ್ಲಾ ಕಲಿತೆವೋ ಅದನ್ನು ನಮ್ಮದಾಗಿಸಿಕೊಂಡುಬಿಟ್ಟೆವು. ಈ ಸ್ವಾಭಾವಿಕ ಪರಂಪರೆಯು ನಡೆಯುತ್ತಲೇ ಇತ್ತು, ಇದರಲ್ಲಿ ಭರತವರ್ಷ ಯಾವುದೇ ಪ್ರಕಾರದ ಅಪವಾದವಾಗಿರಲಿಲ್ಲ. ಹಿಂದಿನ ಒಂದುಸಾವಿರ ವರ್ಷದಲ್ಲಿ ನಮ್ಮ ಮತ್ತು ಪ್ರಪಂಚದ ಈ ಸಂಬಂಧದಲ್ಲಿ ವಿಕೃತಿ ಬಂದಿತು. ನಾವು ಗುಲಾಮರಾಗಿಬಿಟ್ಟೆವು. ನಮ್ಮ ಸಂಬಂಧ ಹೊರದೇಶಗಳೊಂದಿಗೆ ಸಮಾನತೆಯಿಂದಿರಲಿಲ್ಲ. ನಮ್ಮ ದೇಶದ ವೃತ್ತಾಂತ ನಮ್ಮ ಶಕ್ತಿಯನ್ನು ಕ್ಷೀಣಗೊಳಿಸಿತು. ಈಗ ಪ್ರಪಂಚದ ಅನ್ಯ ದೇಶಗಳೊಂದಿಗೆ ಗೌರವಯುತವಾದ ಕೊಡು-ಕೊಳ್ಳುವಿಕೆಯು ಇಲ್ಲದಾಗಿದೆ. ಆದರೆ ಅವರು ಅನ್ಯಾಯದಿಂದ ನಮ್ಮನ್ನು ಲೂಟಿ ಹೊಡೆದರು ಮತ್ತು ದಾನಸ್ವರೂಪವಾಗಿ ಎಂಜಲಿನ ಭಿಕ್ಷೆ ನೀಡಿದರು. ನಾವು ಲೂಟಿಯನ್ನು ತಡೆಯಲು ಶಕ್ತಿಮೀರಿ ಪ್ರಯತ್ನಪಟ್ಟೆವು ಮತ್ತು ದಯೆಯ ದಾನವನ್ನು ನಮ್ಮ ಆತ್ಮಗೌರವವು ತಿರಸ್ಕರಿಸಿತು. ಭಿಕ್ಷೆಯಲ್ಲಿಯೂ ಎಷ್ಟೋ ಬಾರಿ ವಿಷವನ್ನೇ ನೀಡಲಾಯಿತು. ಆದ್ದರಿಂದ ಅವಿಶ್ವಾಸವು ನಮ್ಮ ಮನದಲ್ಲಿ ಬೇರೂರಿತು. ನಾವು ಭಾರತೀಯರ ರಕ್ಷಣೆಗಾಗಿ ಎಲ್ಲಾ ಬಾಹ್ಯ ವಿಚಾರಗಳನ್ನು ವಿರೋಧಿಸಿದೆವು. ಆದರೆ ನಮ್ಮ ಸಂಬಂಧವಂತೂ ಹೊರಗಿನ ಅಧಿಕಾರದಿಂದ ಬಂದೇ ಇತ್ತು, ಜಗತ್ತಿನಲ್ಲಾಗುವ ವಿಚಾರ ಕ್ರಾಂತಿಗಳ ಪರಿಣಾಮ ನಮ್ಮ ಮೇಲಾಗಲೇಬೇಕು, ಅದಂತೂ ಆಯಿತು. ಶಾಸನವರ್ಗವೂ ನಮ್ಮ ಅಭಿಮಾನವನ್ನು ನಾಶ ಮಾಡಲು ತನ್ನ ಸಂಸ್ಕೃತಿ ಮತ್ತು ನಾಗರಿಕತೆಯ ಹೊರೆಯನ್ನು ನಮ್ಮ ಮೇಲೆ ಹೇರಿತು ಮತ್ತು ಅದನ್ನು ನಾವು ಇಚ್ಛೆಯಿಲ್ಲದಿದ್ದರೂ ಹೊರಬೇಕಾಯಿತು. ಇದೇ ಒಂದು ಸಾವಿರ ವರ್ಷಗಳ ವಿಕೃತ ಅವಸ್ಥೆಯ ಪರಿಣಾಮವಾಗಿ ಇಂದಿನ ಭಾರತವರ್ಷವಾಗಿದೆ. 62 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಇಂದು ನಾವು ಈ ಭರತವರ್ಷಕ್ಕೆ ರೂಪವನ್ನು ನೀಡಬೇಕು. ಇಂದು ಅದರ ಆತ್ಮಾಭಿಮಾನವನ್ನು ಜಾಗೃತಗೊಳಿಸಬೇಕು. ಯಾವ ವಿಕೃತಿ ಬಂದಿದೆಯೋ ಅದನ್ನು ದೂರ ಕಿತ್ತೆಸೆಯಬೇಕು. ಇಂದು ತನ್ನತನವನ್ನು ಗುರುತಿಸಿ ಜಗತ್ತಿನೊಂದಿಗೆ ಭುಜಕ್ಕೆ ಭುಜ ಸೇರಿಸಿ ಮುಂದೆ ಸಾಗಬೇಕಾಗುತ್ತದೆ. ಎಂದಿನಿಂದ ನಮ್ಮ ಜೀವನದ ಒಡೆಯರು ನಾವಾಗಲಿಲ್ಲವೋ ಅಂದಿನಿಂದ ಜಗತ್ತು ಬಹಳ ವಿಸ್ತಾರವಾಗಿಬಿಟ್ಟಿದೆ. ಇಂದು ನಾವು ನಮ್ಮ ಹಳೆಯ ಸ್ಥಾನದಿಂದ ಯಾತ್ರೆಯನ್ನು ಪ್ರಾರಂಭಿಸಲಾರೆವು. ಮತ್ತು ಇಂದಿನ ವಿಕೃತಿಯ ಅವಸ್ಥೆಯನ್ನು ಸ್ವಾಭಾವಿಕವೆಂದು ತಿಳಿದೂ ನಡೆಯಲಾರೆವು. ನಮ್ಮ ಸೌಭಾಗ್ಯವೆಂದರೆ ನಮ್ಮ ವೃತ್ತಾಂತದ ವಿಸ್ತಾರವಾದ ಅವಧಿಯಲ್ಲಿಯೂ ತಮ್ಮ ಪ್ರಕೃತಿಯನ್ನು ವ್ಯಕ್ತಪಡಿಸುವವರು ಮಹಾಪುರುಷರೇ ಆಗಿದ್ದರು. ಫಲಸ್ವರೂಪವಾಗಿ ಇಂದು ನಮ್ಮ ಜೀವನದಲ್ಲಿ ಎಷ್ಟೋ ವಿಕೃತಿಗಳಾಗಿದ್ದರೂ ನಮ್ಮ ಪ್ರಕೃತಿ ಸಂಪೂರ್ಣವಾಗಿ ಪರಾಭವಗೊಂಡು ಸಾಯಲಿಲ್ಲ. ನಾವು ನಮ್ಮ ಈ ಪ್ರಕೃತಿಯ ಅಖಂಡಧಾರೆಯನ್ನು ಗುರುತಿಸಬೇಕು. ಅದನ್ನು ಶಕ್ತಿಶಾಲಿಯನ್ನಾಗಿ ಮಾಡಿ ವಿಕೃತಿಯ ಅಸ್ವಚ್ಛತೆಯನ್ನು ಪ್ರಕೃತಿಯ ಪ್ರವಾಹ ಜನ್ಯವಾದ ಸ್ವಚ್ಛತೆಯಿಂದ ತೊಳೆದುಹಾಕಬೇಕು ಮತ್ತು ಈ ರೀತಿ ಶಕ್ತಿ ಸಂಪನ್ನವಾದ ಜಗತ್ತಿನೊಂದಿಗೆ ಮುಂದೆ ಸಾಗಬೇಕು. ಇನ್ನೊಂದು ವಿಷಯ. ನಮ್ಮ ಈ ವಿಕಾಸದಲ್ಲಿ ಇಂದಿಗೂ ನಾವು ಪೂರ್ಣ ಸ್ವತಂತ್ರರಲ್ಲ, ಪ್ರಪಂಚದ ಅನೇಕ ದೇಶಗಳ ವಕ್ರದೃಷ್ಟಿ ನಮ್ಮ ಮೇಲೆ ಇದೆ. ನಾವು ನಮ್ಮ ಜರಿತ ಶರೀರವನ್ನು ರೋಗಮುಕ್ತವನ್ನಾಗಿಸಿ ಎಲ್ಲಿಯವರೆಗೂ ಸ್ವಸ್ಥರಾಗಿ ನಿಲ್ಲುತ್ತೇವೊ ಅಲ್ಲಿಯವರೆಗೂ ಮಧ್ಯದಲ್ಲೇ ನಮ್ಮ ಮೇಲೆ ಆಕ್ರಮಣ ಮಾಡಬಾರದು. ಆದ್ದರಿಂದ ನಾವು ತಾಳ್ಮೆಯಿಂದಿರಬೇಕು. ಜೊತೆಗೆ ಜಗತ್ತಿನ ಅನೇಕ ದೇಶಗಳೊಂದಿಗೆ ನಮ್ಮ ಸಂಬಂಧವಿದೆ. ನಾವು ಅನೇಕ ಪುರಾತನ ಅಪ್ರಾಕೃತಕ ಸಂಬಂಧಗಳನ್ನು ಕಡಿದು ಹಾಕಬೇಕಾಗುತ್ತದೆ, ನವೀನವಾಗಿ ನಿರ್ಮಾಣ ಮಾಡಬೇಕಾಗುತ್ತದೆ. ಇದರಲ್ಲಿ ಸಂಬಂಧವನ್ನು ಕಡಿದುಹಾಕಿಕೊಳ್ಳುವಾಗ ನಾವು ಯಾವುದಾದರೂ ಜೀವನತುಂತು ವಿಗೆ ಆಘಾತವನ್ನು ಮಾಡಿಕೊಳ್ಳಬಾರದು ಮತ್ತು ನವೀನ ನಿರ್ಮಾಣ ಮಾಡುವುದರಲ್ಲಿ ಮತ್ತೆ ಬಂಧನದಲ್ಲಿ ಬಂಧಿತರಾಗದಂತೆ ಗಮನವಹಿಸಬೇಕು. ನಾಲ್ಕೂ ಕಡೆಯ ಎತ್ತರವಾದ ತರಂಗಗಳು ಮತ್ತು ಯುದ್ಧ ನೌಕೆಗಳ ನಡುವೆಯಲ್ಲಿ ನಮ್ಮ ಮುರಿದ ನೌಕೆಯ ಮೂಲಕ ಪ್ರಪಂಚದ ಸಾಗರದಿಂದ ಪಾರಾಗಬೇಕು. ಈ ಕಾರ್ಯವು ಬಹಳ ಕಠಿಣವಾದುದು ಆದರೆ ಮಾಡಬೇಕಾಗುತ್ತದೆ. ಇದರ ಸಫಲತೆ, ಯೋಗ್ಯತೆ ಮತ್ತು ನೇತೃತ್ವದ ಬೆಸುಗೆ ಇದೆ ಮತ್ತು ಅದರ ಮೇಲೆಯೇ ಭಾವೀ ಭಾರತದ ಭಾಗ್ಯ ಅವಲಂಬಿತವಾಗಿದೆ. __________ * ಆಕರ : ಪಾಂಚಜನ್ಯ ವಾರಪತ್ರಿಕೆ, ಶ್ರಾವಣ ಶುಕ್ಲ 15, ವಿಕ್ರಮಸಂವತ್ಸರ 2005 ಜುಲೈ-ಆಗಸ್ಟ್ 1948 (-ಸಂ.) ಪರಾಶರ (ಪಾಂಚಜನ್ಯ, ಭಾದ್ರಪದ ಶುಕ್ಲ - ವಿ.ಸಂ. 2005, ಆಗಸ್ಟ್-ಸೆಪ್ಟೆಂಬರ್ 1948) ಬಾಲ್ಯದಲ್ಲಿ ಹಳ್ಳಿಯ ಪಾಠಶಾಲೆಯಲ್ಲಿ ಓದುವಾಗ ರಜೆಯನ್ನು ಹೊಂದಿದ ಮಗ್ಗಿ ಇರುತ್ತಿತ್ತು. ಒಬ್ಬ ವಿದ್ಯಾರ್ಥಿ ಎದ್ದು ನಿಂತು ಮಗ್ಗಿ ಮತ್ತು ಕೋಷ್ಟಕಗಳನ್ನು ಹೇಳುತ್ತಿದ್ದ ಮತ್ತು ಉಳಿದೆಲ್ಲರೂ ಪುನರುಚ್ಛರಿಸುತ್ತಿದ್ದರು. ಆ ಕಾಲದಲ್ಲಿ ನೂರ ಅರವತ್ತೊಂಬತ್ತೇ ಎಲ್ಲಕ್ಕಿಂತ ಇಷ್ಟವಾಗುತ್ತಿತ್ತು. ಹಾಗೂ ಅದನ್ನು ನಾವು ಬಹಳ ಸ್ಪಷ್ಟ ಉಚ್ಛಾರಣೆಯೊಂದಿಗೆ ಹದಿನಾರು, ಒಂಭತ್ತು ಹೋದರೆ ನಲವತ್ನಾಲ್ಕು, ನೂರು ಎಂದು ಹೇಳುತ್ತಿದ್ದೆವು. (ಅಂದರೆ ಹದಿನಾರೊಂಬತ್ತಲಿ ನೂರ ನಲವತ್ನಾಲ್ಕು ಎಂದರ್ಥ.) ಉಳಿದೆಲ್ಲಾ ಸಂಖ್ಯೆಗಳನ್ನು ಅವುಗಳ ಸಾಧಾರಣ ಹೆಸರಿನಿಂದಲೇ ಹೇಳುತ್ತಿದ್ದೆವು. ಏಕೆ ಹೇಳಲಾಗುತ್ತಿತ್ತು ಎಂಬುದರ ರಹಸ್ಯವನ್ನು ತಿಳಿಯಲು ನಾವೆಂದಿಗೂ ಚಿಂತಿಸಲೇ ಇಲ್ಲ. ಆದರೆ ಅದನ್ನು ಪುನರುಚ್ಛರಿಸುವುದರಲ್ಲಿ ಬಹಳ ಆನಂದ ಸಿಗುತ್ತದೆಂಬುದಂತೂ ಸತ್ಯ. ಒಂದು ಕಾರಣವೇನೆಂದರೆ ಇದರಲ್ಲಿ ರಜೆಯ ಆನಂದದ ಕಲ್ಪನೆ ಇರುತ್ತದೆ. ಏಕೆಂದರೆ ಹದಿನಾರು ಒಂಬತ್ತರ ನಂತರವೇ ಹದಿನಾರ ಹತ್ತಲಿ ನೂರ ಅರವತ್ತು ಎಂದು ಹೇಳುತ್ತಲೇ ಮಗ್ಗಿಯು ಮುಗಿದು ಹೋಗುತ್ತಿತ್ತು ಮತ್ತು ನಾವೆಲ್ಲರೂ ಮೊದಲೇ ನಮ್ಮ ನಮ್ಮ ಚೀಲಗಳನ್ನು ತೆಗೆದುಕೊಂಡು ಮನೆಯ ಕಡೆಗೆ ಓಡುತ್ತಿದ್ದೆವು ಮತ್ತು ಶಾಲೆಯಿಂದ ಹೊರಡುತ್ತಲೆ ರಸ್ತೆಯಲ್ಲಿ ಆಡುತ್ತಾ ತಿನ್ನುತ್ತಾ (ಮಾವಿನ-ಮಿಡಿಗಾಯಿ) ರಾತ್ರಿಯಾಗುತ್ತಿದ್ದಂತೆ ಮನೆಗೆ ತೆರಳುತ್ತಿದ್ದೆವು. ``ಹದಿನಾರು, ಒಂಬತ್ತು ಸಲ ಆದರೆ ನಲವತ್ನಾಲ್ಕು ನೂರಕ್ಕೆ" ಎಂದು ನಿಧಾನವಾಗಿ ಮದದಿಂದ ಹೇಳುತ್ತಾ ದಿನಪೂರ್ತಿ ಆಗುತ್ತಿದ್ದ ಸುಸ್ತು ಕೂಡ ಹೊರಟುಹೋಗುತ್ತಿತ್ತು. ಆದರೆ ಇದರಲ್ಲೊಂದು ದೋಷವಿತ್ತೇನೆಂದರೆ, ಇದರ ಉದ್ದ ಹಾಗೂ ಉಳಿದ ಸಂಖ್ಯೆಗಳಿಗಿಂತಲೂ ಭಿನ್ನವಾಗಿದ್ದ ಕಾರಣ ಗುರುಗಳು ನಮ್ಮ ಮಗ್ಗಿಯ ಸಮಯದಲ್ಲಿ ಅವರು ಹೊರಡಲು ತಮ್ಮ ಸಾಮಾನನ್ನು ಕಟ್ಟುತ್ತಿದ್ದರು ಅಥವಾ ಹಳ್ಳಿಯ ಯಾವುದಾರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಾ ಇರುತ್ತಿದ್ದರು. ಆದರೆ ಅವರ ಗಮನವಂತೂ ಖಂಡಿತ ನಮ್ಮನ್ನು ಆಕರ್ಷಿಸುತ್ತಿತ್ತು ಮತ್ತು ಮತ್ತೆಂದಾದರೂ ಮತ್ತೊಮ್ಮೆ ಮಗ್ಗಿಯ ಅಥವಾ ಕೋಷ್ಟಕವನ್ನು ಹೇಳಲು 64 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಜ್ಞೆ ಮಾಡುತ್ತಿದ್ದರು. ಬಹುಶಃ ಇದಕ್ಕಾಗಿಯೇ ಗುರುಗಳು ``ನೂರ ನಲವತ್ತನಾಲ್ಕ"ರ ನಾಮಕರಣ ``ಹೋದರೆ ನಲವತ್ನಾಲ್ಕು ನೂರು" ಎಂದು ಮಾಡಿರಬೇಕು. ಏಕೆಂದರೆ ನಮಗೆ ಈ ಹೆಸರನ್ನು ಗುರುಗಳೇ ಹೇಳಿಕೊಟ್ಟಿದ್ದಾರೆಂದು ನಾವು ಶಪಥ ಮಾಡಿ ಹೇಳಬಲ್ಲೆವು. ಮುಂದೆ ವಿದ್ಯಾರ್ಥಿ ಜೀವನದಲ್ಲಿ ನೂರ ನಲವತ್ನಾಲ್ಕರ ಇನ್ನೂ ಅನೇಕ ಗುಣಗಳು ತಿಳಿಯಿತು. ನೂರ ನಲವತ್ತನಾಲ್ಕು, 188, 246, 364 ಹಾಗೂ 1212 ಎಂದೂ ಆಗುತ್ತಿತ್ತು. ಆದರೆ ಯಾವ ಆಕರ್ಷಣೆ 169 ರಲ್ಲಿದೆಯೋ ಅದು ಇಂದಿನವರೆಗೂ ಯಾವುದರಲ್ಲಿಯೂ ಸಿಗಲಿಲ್ಲ. ಬಾಲ್ಯದಲ್ಲಿ ನೂರ ನಲವತ್ತನಾಲ್ಕು ಯಾವ ಮಹತ್ವವನ್ನು ಪಡೆದುಕೊಂಡಿತ್ತೋ ಅದು ಇಂದಿನವರೆಗೂ ಹಾಗೆಯೇ ಉಳಿದಿದೆ. ಆದರೆ ರುಚಿಹೀನ ಮತ್ತು ವಿಕರ್ಷಣೆಯ ಭಾವವೇ ಆಗಿದೆ. ಅಂಕಗಣಿತ ನೂರನಲವತ್ನಾಲ್ಕು ಸಾಮಾಜಿಕ ಜೀವನದಲ್ಲಿ ಬಹಳ ಬಲಶಾಲಿಯಾಗಿಬಿಟ್ಟಿದೆ. ಇಂದಂತೂ ಭಾರತೀಯ ಜನತೆ ನೂರನಲವತ್ತನಾಲ್ಕರಿಂದ ಬಹಳ ಚೆನ್ನಾಗಿ ಪರಿಚಿತವಾಗಿಬಿಟ್ಟಿದೆ ಹಾಗೂ ಯಾರೊಬ್ಬ ಸಾಮಾಜಿಕ ಕಾರ್ಯಕರ್ತನೂ ಒಂದಲ್ಲ ಒಂದು ಬಾರಿ ನೂರ ನಲವತ್ತ ನಾಲ್ಕರ ಏಟಿಗೆ ಸಿಲುಕದೇ ಇರುವುದಿಲ್ಲ. ಅಥವಾ ಬರ-ಬರುತ್ತಾ ತಪ್ಪಿಸಿಕೊಂಡಿರಲೂ ಸಾಧ್ಯವಿಲ್ಲ. ಒಂದು ವೇಳೆ ನೀವು ಇಲ್ಲಿಯವರೆಗೆ ತಿಳಿದುಕೊಂಡಿಲ್ಲವೆಂದರೆ, ಇದು ``ಭಾರತೀಯ ದಂಡ ಪದ್ಧತಿಯ ಅಧಿನಿಯಮದ ಸೆಕ್ಷನ್-144". ಭರತವರ್ಷದ ಪ್ರಥಮ ಕಾನೂನು ಸದಸ್ಯನಾದ ಮೆಕಾಲೆಯ ಬುದ್ಧಿಯಿಂದ ಹುಟ್ಟಿಕೊಂಡ ಸೆಕ್ಷನ್ -144 ನೋಡಲು ಬಹಳ ಸೀದಾ-ಸಾದಾ ಹಾಗೂ ಶಬ್ದಗಳಲ್ಲಿಯೂ ಹೆಚ್ಚು ಮಧುರವಾಗಿದೆ. ಹೌದು, ಆ ಮಧುರ ಶಬ್ದ ರಸಗುಲ್ಲದಂತೆ ದುಂಡು-ದುಂಡಾಗಿದ್ದರೆ ಆಶ್ಚರ್ಯವೇನು ? ಏಕೆಂದರೆ ಆಂಗ್ಲರ ಸಂಪೂರ್ಣ ಕಾನೂನೇ ದುಂಡು-ದುಂಡಾಗಿರುತ್ತದೆ. ಇದರಲ್ಲಿ ತನ್ನ ಇಚ್ಛಾನುಸಾರ ಎಳೆದಾಡುವ ಸ್ವಾತಂತ್ರ್ಯವಿರುತ್ತದೆ. ಸೆಕ್ಷನ್-144 ನಿಮ್ಮ ಮೂಲಭೂತ ಸ್ವಾತಂತ್ರ್ಯದ ಮೇಲೆ ಬಂಧನ ಹೇರಲು ಹುಟ್ಟಿದೆ. ಆದಾಗ್ಯೂ ಈ ಬಂಧನ ಜನಹಿತ ಮತ್ತು ಜನತೆಯ ಶಾಂತಿಗಾಗಿ ಅಥವಾ ಅದರ ಹೆಸರಿನಲ್ಲಿಯೇ ಹೇಳಲಾಗುತ್ತದೆ. ಆದರೆ ಜನತೆಯ ಹಿತದ ನಿರ್ಣಯ ಯಾರಾದರೂ ನ್ಯಾಯಾಧೀಶ, ಪಂಚಾಯಿತಿ ಅಥವಾ ವಿಧಾನಸಭೆಯು ಮಾಡುವುದಿಲ್ಲ. ಬದಲಾಗಿ ಜಿಲ್ಲಾ ನ್ಯಾಯಾಧೀಶ ಅಥವಾ ಪೊಲೀಸ್ ಕಮೀಷನರ್‌ರವರೇ ಮಾಡುತ್ತಾರೆ. ಕಿಂವದಂತಿಯೆಂದರೆ ಶಾಸನಕ್ಕಾಗಿ ಇಷ್ಟು ಉಪಯೋಗಿ ಹಾಗೂ ಅಮೂಲ್ಯ ಸಭೆಯ ಜ್ಞಾನ ಶಾಸಕ ವರ್ಗಕ್ಕೆ ಬಹಳ ದಿನಗಳವರೆಗೂ ಇರಲಿಲ್ಲ. (ಮೆಕಾಲೆಯ ಆತ್ಮ ಖಂಡಿತವಾಗಿಯೂ ತನ್ನ ಅನುಯಾಯಿಗಳನ್ನು ನಿಂದಿಸುತ್ತದೇನೋ) ಪರಾಶರ 65 1921ರಲ್ಲಿ ಯಾವಾಗ ಸತ್ಯಾಗ್ರಹ -ಸಂಗ್ರಾಮ ಶುರುವಾಯಿತೋ ಆಗ ಕಾನೂನು ಸಮಸ್ಯೆ ಹುಟ್ಟಿಕೊಂಡಿಂತೇನೆಂದರೆ ಇದನ್ನು ಹೇಗೆ ನಿಲ್ಲಿಸುವುದು ಎಂಬುದು. ಪರಮಾಜ್ಞೆ ಹೊರಡಿಸಬಹುದಿತ್ತು ಮತ್ತು ಹೊರಡಿಸಲಾಯಿತು. ಆದರೆ ಸ್ಥಾಯೀ ಕಾನೂನು ಸಭೆಯ ಅವಶ್ಯಕತೆ ಇತ್ತು. ಈ ಸಮಯದಲ್ಲಿ ತತ್ಕಾಲಿನ `ಲಾ' ಸದಸ್ಯ ಸರ್. ತೇಜ್‍ಬಹಾದೂರ್ ಸಪ್ರೂ ಸರ್ಕಾರಕ್ಕೆ ಸೆಕ್ಷನ್-144ರ ಉಪಯೋಗವಾಗಬಹುದೆಂದು ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಎಷ್ಟರ ಮಟ್ಟಿಗೆ ಸತ್ಯ? ಶಾಸಕ ವರ್ಗದ ಸ್ವೇಚ್ಛೆ ಆಗಿಹೋಯಿತು. ಪ್ರತಿಯೊಬ್ಬ ನ್ಯಾಯಾಧೀಶನಿಗೂ ಅವನು ಯಾವುದೇ ಕಾರ್ಯಕ್ಕೆ ಸೆಕ್ಷನ್-144ರ ಪ್ರಕಾರ ತಡೆಯುವುದು ಅಥವಾ ಗೈರು ಕಾನೂನನ್ನು ಘೋಷಿಸುವ ಅಧಿಕಾರವಿರುತ್ತದೆ. ಅಂದಿನಿಂದ ಯಾವ (ಭಾಗ) ಸೆಕ್ಷನ್ ಕೇವಲ ಕಾನೂನಿನ ಪುಸ್ತಕಗಳ ಶೋಭೆಯನ್ನು ಹೆಚ್ಚಿಸುತ್ತಿತ್ತೋ ಅದು ನಾಲ್ಕಾರು ಕಡೆ ಉಪಯೋಗಕ್ಕೆ ಬರತೊಡಗಿತು. ಆಂಗ್ಲರು ಹೊರಟು ಹೋದರು ಆದರೆ ಅವರ ಕಾನೂನು ಉಳಿದುಬಿಟ್ಟಿತು. ಮತ್ತು ಅದರ ಜೊತೆಗೆ ಸೆಕ್ಷನ್ -144 ಸಹ ಬಾಕಿ ಇದೆ. ಇಷ್ಟೇ ಅಲ್ಲ ಇಂದಂತೂ ಸೆಕ್ಷನ್-144 ಕಡಿಮೆಯಾದರೂ ದೊಡ್ಡ ನಗರಗಳ ಜೀವನದ ಅಂಗವಾಗಿಬಿಟ್ಟಿದೆ. ಮುಂಬರುವ ದಿನಗಳಲ್ಲಿ ಸಮಾಚಾರ ಪತ್ರಗಳಲ್ಲಿ ಒಂದಲ್ಲ ಒಂದು ಕಡೆ ಸೆಕ್ಷನ್- 144ನ್ನು ಕಾರ್ಯರೂಪಕ್ಕೆ ತರುವ ಘೋಷಣೆಯನ್ನು ಓದಬಹುದು. ಒಂದು ಅವಧಿ ಸಮಾಪ್ತವಾಗುತ್ತಿದ್ದಂತೆ ಮತ್ತೊಂದು ಶುರುವಾಗುತ್ತದೆ ಮತ್ತು ಅದರ ನಂತರ ಮೂರನೆಯದು. ಕೆಲವು ಸ್ಥಳಗಳಲ್ಲಂತೂ ಅಧಿಕಾರಿಗಳು ಈ ನಿಯಮವನ್ನೇ ಕಾರ್ಯಾನ್ವಯಗೊಳಿಸಿದ್ದಾರೆ. ಅದು ಏನೆಂದರೆ ಸೆಕ್ಷನ್-144 ಕಾರ್ಯ ರೂಪದಲ್ಲಿದೆಯೋ ಅಥವಾ ಇಲ್ಲವೋ? ಎಂಬುದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ ಅವರು ಕಾರ್ಯರೂಪಕ್ಕೆ ಬಂದೇ ಬರುತ್ತದೆಂದು ತಿಳಿಯುತ್ತಾರೆ. ಸಮಾಚಾರ ಪತ್ರಗಳಲ್ಲಿ ಮುದ್ರಿಸುವ ಮತ್ತು ಡಂಗೂರ ಹೊಡೆದು ಸಾರುವ ಅವಶ್ಯಕತೆ ಇದ್ದಾಗಲೂ ಈ ಸೆಕ್ಷನ್ ಯಾವುದೇ ಉಪದ್ರವವಿಲ್ಲದೆ ವಿಶೇಷವಾದ ಸಂಕಟ ಅಥವಾ ಅಶಾಂತಿಯ ಸ್ಥಿತಿಯೆಂದೆನ್ನುತ್ತಾ ಜಿಲ್ಲಾ ನ್ಯಾಯಾಧೀಶನ ಕಾರ್ಯಾಲಯದಲ್ಲಿಯೂ ಜಾರಿಗೆ ತರಲಾಗುತ್ತದೆ. ಇಂದಿನ ಪ್ರಭುತ್ವದಲ್ಲಿ ಇದು ಎಂತಹ ಅಂಗವಾಗಿದೆ ಎಂಬುದಕ್ಕೆ ಒಂದು ಘಟನೆ ಹೇಳುತ್ತೇನೆ. ಒಂದು ಸ್ಥಳದಲ್ಲಿ ಸಾರ್ವಜನಿಕ ಸಭೆ ನಡೆಯುತ್ತಿತ್ತು. ಅಕಸ್ಮಾತ್ತಾಗಿ ಅಲ್ಲಿನ ನ್ಯಾಯಾಧೀಶರು ಆ ಕಡೆ ಹೊರಟರು. ಅಲ್ಲಿ ಸಭೆಯು ನಡೆಯುತ್ತಿರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು ಮತ್ತು ಅದರ ಆಯೋಜಕರನ್ನು ಕರೆದು ಸೆಕ್ಷನ್-144 ಜಾರಿಗೆ ಬಂದ ಮೇಲೂ ಸಭೆ ಯಾರ ಆಜ್ಞೆಯಿಂದ ನಡೆಯುತ್ತಿದೆ ಎಂದು ಕೇಳಿದರು. ಒಮ್ಮೆಲೆ ಆಯೋಜಕರೂ ಸಹ ದಂಗಾದರು, ಆದರೆ ಅವರು 66 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಮ್ರತೆಯಿಂದ ಸೆಕ್ಷನ್-144ರ ಅವಧಿಯಂತೂ ಎರಡು ದಿನಗಳ ಮುಂಚೆಯೇ ಮುಗಿದುಹೋಗಿತ್ತು ಹಾಗೂ ಅದರ ಪುನರಾವೃತ್ತಿಯ ಜ್ಞಾನವೇ ಅವರಿಗಿಲ್ಲ ಎಂದು ಹೇಳಿದರು. ಆಗ ನ್ಯಾಯಾಧೀಶರಿಗೆ ತಿಳಿಯಿತು, ನಿಜವಾಗಲೂ ಎರಡು ದಿನಗಳ ಹಿಂದೆಯೇ ಸೆಕ್ಷನ್-144 ರ ಅವಧಿ ಮುಗಿದುಹೋಗಿತ್ತು ಹಾಗೂ ಅವರು ಮತ್ತೊಮ್ಮೆ ಘೋಷಣೆ ಹೊರಡಿಸುವುದನ್ನು ಮರೆತು ಹೋಗಿದ್ದರು. ನ್ಯಾಯಾಧೀಶರು ಕಾರ್ಯಾಲಯಕ್ಕೆ ಹೋಗಿ ಮಾಡಿದ ಮೊದಲನೇ ಕೆಲಸವೇ ಸೆಕ್ಷನ್-144ರ ಘೋಷಣೆ. ಅವರು ಬಯಸಿದ್ದರೆ ಆ ಸಮಯದಲ್ಲಿಯೇ ಸೆಕ್ಷನ್- 144ರ ಘೋಷಣೆಯನ್ನು ಹೊರಡಿಸಿ ಸಭೆಯನ್ನು ಮುಗಿಸುತ್ತಿದ್ದರು ಆದರೆ ಹಾಗೆ ಮಾಡುವುದು ಅವರಿಗೆ ಉಚಿತವೆನಿಸಲಿಲ್ಲ. ಇತ್ತೀಚೆಗೆ ಸೆಕ್ಷನ್-144ಕ್ಕೆ ಕೇವಲ ಸ್ಥಾಯಿತ್ವವಷ್ಟೇ ಸಿಗಲಿಲ್ಲ, ಬದಲಾಗಿ ಕ್ಷೇತ್ರ-ವಿಸ್ತಾರವೂ ಹೆಚ್ಚಾಗಿದೆ. ಒಂದು ವೇಳೆ ಅದನ್ನು ಸರ್ವಶಕ್ತಿಯುಳ್ಳವನ ಮತ್ತೊಂದು ಸ್ವರೂಪವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಸಾಧಾರಣವಾಗಿ ಸೆಕ್ಷನ್- 144ರಲ್ಲಿ ನಾಲ್ಕು ವ್ಯಕ್ತಿಗಳಿಗಿಂತಲೂ ಅಧಿಕ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಇರುವುದನ್ನು ತಡೆಯಲಾಗುತ್ತಿತ್ತು. ಆದರೆ ಈಗಂತೂ ಎಲ್ಲಾ ಪ್ರಕಾರದ ಆಜ್ಞೆಗಳು ಸೆಕ್ಷನ್-144ರ ಅಡಿಯಲ್ಲಿಯೇ ಹೊರಡಿಸಲಾಗಿದೆ. ಯಾವ ರೀತಿ ಪ್ರಜಾ-ಸುರಕ್ಷೆಯಡಿಯಲ್ಲಿ ಯಾರನ್ನು ಬೇಕಾದರೂ ಹಿಡಿಯಬಹುದೋ ಅದೇ ರೀತಿ ಸೆಕ್ಷನ್-144ರ ಅಡಿಯಲ್ಲಿ ಯಾವುದೇ ಕಾರ್ಯ ನಿರ್ವಹಣೆಯಲ್ಲಿ ಜನರನ್ನು ತಡೆಯಬಹುದು. ಸಭೆಯನ್ನು ಮಾಡದಿರುವುದು, ಭಾಷಣ ಕೊಡದೇ ಇರುವುದು ಹಾಗೂ ಧ್ವನಿವರ್ಧಕ ಯಂತ್ರಗಳನ್ನು ಉಪಯೋಗಿಸದೇ ಇರುವುದು, ಲಾಠಿ ಮುಂತಾದ ಅಸ್ತ್ರಗಳೊಂದಿಗೆ ನಡೆದಾಡಬಾರದೆಂಬ ಆಜ್ಞೆಗಳಂತೂ ಸೆಕ್ಷನ್-144ರ ಅಡಿಯಲ್ಲಿ ಸಾಧಾರಣವಾದವುಗಳಾಗಿವೆ. ಇದರ ಮೂಲಕ ನೀವು ಯಾವುದೇ ವ್ಯಕ್ತಿಯ ಬರುವಿಕೆ ಹೋಗುವಿಕೆಯನ್ನು ತಡೆಯಬಹುದು. ಪಾಕಿಸ್ತಾನದಿಂದ ಬರುವವರು ಮತ್ತು ಪಾಕಿಸ್ತಾನಕ್ಕೆ ಹೋಗುವವರು ಹೈದರಾಬಾದ್‍ಗೆ ಬರುವ ಹೋಗುವವರನ್ನು ಸೆಕ್ಷನ್-144 ತಡೆಯುತ್ತದೆ. ಸೆಕ್ಷನ್-144 ರ ಅಡಿಯಲ್ಲಿಯೇ ಬರುವುದರಿಂದ ಅವರು ಪೊಲೀಸರಿಗೆ ತಿಳಿಸಬೇಕಾಗುತ್ತದೆ. ಆ ಸೆಕ್ಷನ್‍ನ ಅಡಿಯಲ್ಲಿ ನೀವು ಇಟ್ಟಿಗೆ ಕಲ್ಲುಗಳನ್ನು ಸಂಗ್ರಹಿಸಲಾರಿರಿ ಮತ್ತು ನಿಮ್ಮ ಮನೆಯ ಮಹಡಿಯ ಮೇಲೆ ಜೋರು-ಜೋರಾಗಿ ಮಾತನಾಡಲಾಗದು. ನಿಮಗೆ ಪತಂಗವಾಗಬೇಕೆಂಬ ಆಸೆಯಿದ್ದರೆ, ಸೆಕ್ಷನ್-144ರ ಬಗ್ಗೆ ಎಚ್ಚರವಾಗಿರಿ. ಏಕೆಂದರೆ ಯಾವಾಗ ಬೇಕಾದರೂ ಸೆಕ್ಷನ್-144 ನಿಮ್ಮನ್ನು ಕತ್ತರಿಸುವುದಷ್ಟೇ ಅಲ್ಲ, ಬದಲಾಗಿ ಕಾರಾಗೃಹದ ಗಾಳಿಯನ್ನು ಕುಡಿಸಿಬಿಡುತ್ತದೆ. ನಿಮ್ಮ ಜೀಪಿನ ಗೇರ್ ಮತ್ತು ಇಂಜಿನ್ ಎಷ್ಟೇ ಚೆನ್ನಾಗಿದ್ದರೂ ಸೆಕ್ಷನ್-144ರ ಪ್ರವಾಹದಲ್ಲಿ ಅವುಗಳೂ ಸಹ ಬಾಳಿಕೆಗೆ ಬರಲಾರವು. ಸರ‍್ದಾರ್‌ಗೆ ಪರಾಶರ 67 ಅವರ ಖಡ್ಗದ ಮೇಲೆ ಎಷ್ಟೇ ಅಭಿಮಾನವಿರಲಿ ಆದರೆ ಸೆಕ್ಷನ್-144ರಲ್ಲಿ ಅದರ ಉದ್ದ ಕಡಿಮೆ ಮಾಡಬೇಕಾಗುತ್ತದೆ. ನೀವು ಸ್ಥಾನೀಯ ಸ್ವರಾಜ್ಯದ ರಕ್ಷಣೆಗಾಗಿ ಘೋಷಿಸುತ್ತಿರುವ ಮುನ್ಸಿಪಾಲಿಟಿಯ ಸದಸ್ಯನಾದರೇನು, ನಿಮ್ಮ ಮೇಲೆಯೂ ಸೆಕ್ಷನ್ 144ರ ಅಂಕುಶವಿರುತ್ತದೆ ಹಾಗೂ ನೀವು ಯಾವುದೇ ಗೊತ್ತುವಳಿಯನ್ನು ಪ್ರಸ್ತುತಪಡಿಸುವುದರಿಂದ ತಡೆಯಲಾಗುತ್ತದೆ. ಯಾವುದೇ ದಾರಿಯಲ್ಲಿ ನಡೆದಾಡುವ ಸ್ತ್ರೀಯನ್ನು ರೇಗಿಸುವುದು ನೈತಿಕ ಅಥವಾ ಅನ್ಯ ಕಾನೂನಿನ ದೃಷ್ಟಿಯಲ್ಲಿ ನಿಷೇಧವಾಗಿರಲಿ ಅಥವಾ ಇಲ್ಲದಿರಲಿ ಆದರೆ ಸೆಕ್ಷನ್-144 ನಿಮ್ಮನ್ನು ಈ ಅಶೋಭನೀಯ ಕಾರ್ಯದಿಂದ ಅವಶ್ಯಕವಾಗಿ ತಡೆಯುತ್ತದೆ. ಆಶಯವೇನೆಂದರೆ ಹೇಗೆ ಮನುಷ್ಯನಲ್ಲಿ ಕವಿಯ ಸಾಮರ್ಥ್ಯ ಎಲ್ಲಾ ಸ್ಥಾನಗಳಲ್ಲಿಯೂ ಸ್ವೀಕರಿಸಲಾಗಿದೆಯೋ, ಹಾಗೂ `ರವಿ ಕಾಣದ್ದನ್ನು ಕವಿ ಕಂಡ’ ಎಂಬಂತೆ ಇದೇಯೋ ಹಾಗೆಯೇ ಯಾವುದೇ ಕಾರ್ಯವನ್ನು ಸಾರ್ವಜನಿಕವಾಗಿ ತಡೆಯುವುದಕ್ಕಾಗಿ ಸೆಕ್ಷನ್-144ನ್ನು ಅಳವಡಿಸಬಹುದು ಹಾಗೂ ಯಾರನ್ನು ಬೇಕಾದರೂ ಬಂಧಿಸಲು ಅಳವಡಿಸಬಹುದು. ಯಾರನ್ನು ಬೇಕಾದರೂ ಬಂಧಿಸಲು ಪ್ರಜಾ-ಸುರಕ್ಷ ಕಾನೂನಿನ ಸೆಕ್ಷನ್-ಮೂರರ ನಿರ್ಮಾಣವಾಗಿದೆ. (144ರಲ್ಲಿ ಅಂಕಗಳನ್ನು ಜೋಡಿಸಿ ವರ್ಗಮೂಲವನ್ನು ತೆಗೆಯಿರಿ). ಸೆಕ್ಷನ್-144ಕ್ಕೆ ಪ್ರಾಂತೀಯ ಸರ್ಕಾರದ ಆಜ್ಞೆಯ ಅವಶ್ಯಕತೆಯಾಗಲಿ ಮತ್ತು ಅದರ ಸಂಕಟದ ಸ್ಥಿತಿಯ ಘೋಷಣೆಯ ಅವಶ್ಯಕತೆಯಾಗಲೀ ಇಲ್ಲ. ಇದು ಕೇವಲ ನ್ಯಾಯಾಧೀಶನ ದಾಸಿಯಾಗಿದ್ದು ಮತ್ತು ಅವನ ಡೊಂಕುನೆಲದ ಮೇಲೆ ನರ್ತಿಸುತ್ತಿರುತ್ತದೆ. ಪ್ರಜಾಸುರಕ್ಷಾ ಯೋಜನೆಯ ವಿರುದ್ಧ ಜನಮತವಾಗಬಹುದು. ಅದನ್ನು ಕಪ್ಪು ಕಾನೂನು ಎಂದು ಅದರ ವಿರುದ್ಧ ದನಿಯೇರಿಸಬಹುದು. ಆದರೆ ಸೆಕ್ಷನ್-144ರ ವಿರುದ್ಧ ಈ ದೋಷಾರೋಪಣೆಯನ್ನು ಮಾಡಲಾಗದು. ಏಕೆಂದರೆ ಸೆಕ್ಷನ್-144ನ್ನು ವಿಘ್ನಗೊಳಿಸುವುದರಿಂದ ಅದು ತನ್ನ ಉಳಿದ 44 ಜೊತೆಗಾರರನ್ನು ಕರೆದು ದಂಡ ವಿಧಾನದ ಸೆಕ್ಷನ್ 188ರ ಅಡಿಯಲ್ಲಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದು ತರಬಹುದು. ನೀವು ನಡೆದಾಡುವಾಗ ಲಾಠಿ ಹಿಡಿದು ಅದರ ಮಾನಭಂಗ ಮಾಡಿರಬಹುದು ಅಥವಾ ವರ್ಷಪೂರ್ತಿ ನಿಮ್ಮ ಮೊಕದ್ದಮೆ ಮುಂದಿಡದಿರಬಹುದು ಮತ್ತು ಖೈದಿಯಾಗಿ ಜೈಲಿನ ಆತಿಥ್ಯವನ್ನು ಸ್ವೀಕರಿಸುತ್ತಿರಲಿ ಅದು ಬೇರೆ ಮಾತು. ಪ್ರಜಾ-ಸುರಕ್ಷಾ ಯೋಜನೆ (Public Safety act)ಯನ್ನು ವಿರೋಧಿಸಬಹುದು; ಏಕೆಂದರೆ ಅದು ಹೊಸದು. ಆದರೆ ಸೆಕ್ಷನ್-144 ಕ್ಕೆ ವಿರುದ್ಧವಾಗಿ ಯಾರು ದನಿಯೇರಿಸಬಲ್ಲರು? ಅದಂತೂ ಮೆಕಾಲೆಯ ವರದಾನವನ್ನು ಪಡೆದು ಜಗತ್ತಿನಲ್ಲಿ ಉದ್ಭವಿಸಿದೆ. ನಮ್ಮ ಸಾರ್ವಜನಿಕ ಜೀವನಧಾರೆಯನ್ನು ಸುತ್ತುವರೆದಿರುವ ಸೆಕ್ಷನ್- 68 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 144 ನಿಧಾನವಾಗಿ ಜನತೆಯನ್ನು ದಾಟಿ ಖಾಸಗೀ ಕ್ಷೇತ್ರಗಳಲ್ಲಿಯೂ ಪ್ರವೇಶ ಮಾಡುತ್ತಿದೆ. ಮಾಯಾಂಗನೆಯು ಅವಕಾಶ ಸಿಕ್ಕಾಗ ಅನೇಕ ರೂಪಗಳನ್ನು ಧರಿಸುತ್ತಾಳೆ. ಸ್ವಾತಂತ್ರ್ಯದ ಈ ಯುಗದಲ್ಲಿ ಜನ-ಸಮಾಜ ಭಾಷಣ, ಸ್ವಾತಂತ್ರ್ಯ ಮುಂತಾದವುಗಳಿಗಾಗಿ ಉತ್ಸುಕರಾಗಿದ್ದಾರೆಯೇ? ಲೇಖನ-ಸ್ವಾತಂತ್ರ್ಯ ಮುಂತಾದವುಗಳಿಗಾಗಿ ಉತ್ಸುಕರಾಗಿದ್ದಾರೆಯೇ? ಈ ಸರ್ವಗ್ರಾಹಿಣಿ ಸೆಕ್ಷನ್‍ನ ಕೆಲವು ಸ್ವರೂಪಗಳು ನಿಶ್ಚಿತವಾಗಿವೆಯೇ? ಆಂಗ್ಲರ ಜೊತೆ-ಜೊತೆಗೆ ನಾವು ಈ ಸೆಕ್ಷನ್ ಅನ್ನು ಮೆಕಾಲೆಯ ದೇಶಕ್ಕೆ ಕಳುಹಿಸಲಾರೆವೆ ? ಅನುವಾದ : ಶ್ರೀಮತಿ ಉಮಾದೇವಿ * * * * ____________ * ಆಕರ : ಪಾಂಚಜನ್ಯ ವಾರಪತ್ರಿಕೆ, ಭಾದ್ರಪದ ಶುಕ್ಲ ಸಪ್ತಮೀ, ವಿಕ್ರಮಸಂವತ್ಸರ 2005 ಆಗಸ್ಟ್-ಸೆಪ್ಟೆಂಬರ್ 1948 (-ಸಂ.) ** `ಪರಾಶರ' ಎಂಬುದು ಪಂಡಿತ ದೀನ್ ದಯಾಳರ ಕಾವ್ಯನಾಮವಾಗಿತ್ತು. ಇದನ್ನು ಅವರ ಬಗ್ಗೆ ಸಂಶೋಧನೆ ಮಾಡಿ ಪಿ.ಎಚ್.ಡಿ. ಪಡೆದಿರುವ ದೆಹಲಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ|| ಮಹೇಶ್ ಚಂದ್ರ ಅವರ ಬಳಿ ಖಚಿತಪಡಿಸಿಕೊಳ್ಳಲಾಗಿದೆ. (-ಸಂ.) ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾಷಣಗಳು ಡಾ. ಬಿ. ಗಣೇಶ್ ಬೆಂಗಳೂರು ಪಂಡಿತ್ ನೆಹರು ತಮ್ಮನ್ನು ಮತ್ತು ದೇಶವನ್ನು ಸಂಕಷ್ಟಕ್ಕೆ ಗುರಿಮಾಡುತ್ತಿದ್ದಾರೆ [ಮಾತುಕತೆಯನ್ನು ಜಾರಿಯಲ್ಲಿಟ್ಟು ಚೀನಾ ತನ್ನ ಸ್ಥಿತಿಯನ್ನು ಬಲಪಡಿಸಿಕೊಳ್ಳುತ್ತಿದೆ. ದೆಹಲಿ ಪ್ರದೇಶ ಜನಸಂಘದ ವಾರ್ಷಿಕ ಅಧಿವೇಶನದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಶ್ರೀ ಬಲರಾಜ್ ಮಧೋಕ್ ರವರಿಂದ ಎಚ್ಚರಿಕೆಯ ಮಾತುಗಳು]. ಶ್ರೀ ಚಾಲು-ಎನ್ ಲೈರವರ ಜೊತೆ ನಡೆಸಿದ ಮಾತುಕತೆಯ ವಿಷಯವಾಗಿ ಪಂಡಿತ್ ನೆಹರೂರವರು ಜನತೆ ಮತ್ತು ಸಂಸತ್ ಸದಸ್ಯರನ್ನು ಕಡೆಗಣಿಸಿದ್ದು ದುರ್ಭಾಗ್ಯದ ಸಂಗತಿಯಾಗಿದೆ. ಪಂಡಿತ್ ನೆಹರು ಮತ್ತು ಶ್ರೀ ಚಾಲು ಹಾಗೂ ಶ್ರೀ ಕೃಷ್ಣಮೆನನ್ ಮತ್ತು ಶ್ರೀ ಚಾಲು ಮಧ್ಯೆ ನಡೆದ ಮಾತುಕತೆಯ ಅಧಿಕಾಂಶ ವೈಯಕ್ತಿಕವಾಗಿತ್ತೇ ಹೊರತು ಸರ್ಕಾರಕ್ಕೆ ಸಂಬಂಧಿಸಿರಲಿಲ್ಲ. ಮಾತುಕತೆಯ ಪೂರ್ಣ ವಿವರಣೆ ಜನತೆಯ ಮುಂದೆ ಬರಬೇಕಾಗಿದೆ ಮತ್ತು ವಾಸ್ತವಿಕವಾಗಿ ನಮ್ಮ ಸರ್ಕಾರ ಯಾವ ಸ್ಥಾನದಲ್ಲಿದೆ ಎಂದು ತಿಳಿಯಬೇಕಾಗಿದೆ. ಅಖಿಲ ಭಾರತ ಜನಸಂಘದ ಮಹಾಮಂತ್ರಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರವರು ದೆಹಲಿ ಪ್ರದೇಶದ 8ನೇ ವಾರ್ಷಿಕ ಅಧಿವೇಶನದ ಸಂದರ್ಭದಲ್ಲಿ ನೆಹರು ಮತ್ತು ಚಾಲುರವರ ಮಾತುಕತೆಯ ವಿಷಯವಾಗಿ ಜನತೆಯ ಮನಸ್ಸಿನಲ್ಲಿದ್ದ ಸಂದೇಹವನ್ನು ಈ ರೀತಿಯಾಗಿ ವ್ಯಕ್ತಪಡಿಸಿದರು. ಜನತೆಯ ಭಾರೀ ಒತ್ತಾಯದಿಂದ ಅಕ್ಸಾಯಿ ಚೀನ ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿಲ್ಲವಾದರೂ ಮುಂಬರುವ ದಿನಗಳಲ್ಲಿ ಜನತೆಯ ದೇಶಪ್ರೇಮ ಕಡಿಮೆಯಾದಾಗ ಚೀನಾಕ್ಕೆ ರಹಸ್ಯವಾಗಿ ನೀಡುವುದಿಲ್ಲವೆಂಬುದೇನು ಖಾತ್ರಿ ಎಂದು ನುಡಿದರು. ಅಸಂದಿಗ್ಧವಾದ ಮಾತುಗಳಲ್ಲಿ ಚೀನಾವನ್ನು ಆಕ್ರಮಣಕಾರಿ ಎಂದು ಘೋಷಿಸಿ ಅದರ ಜೊತೆ ಅದೇ ರೀತಿಯ ವ್ಯವಹಾರ ಮಾಡಿದಾಗ ಭಾರತ ಸರ್ಕಾರದ ದೃಢತೆಯ ಬಗ್ಗೆ ಭರವಸೆ ವ್ಯಕ್ತಪಡಿಸಬಹುದಾಗಿದೆ. ಸರ್ಕಾರಿ ಅಧಿಕಾರಿಗಳನ್ನು ಪೀಕಿಂಗ್ ಕಳುಹಿಸುವ ಅಗತ್ಯವೇನಿಲ್ಲ. ಆಕ್ರಮಣಕಾರಿಗಳ ಜೊತೆ ನಿರಂತರವಾಗಿ ಮಾತುಕತೆ ನಡೆಸಿ ಪ್ರಧಾನಮಂತ್ರಿಗಳು ಸ್ವತಃ ತಮ್ಮ ಹಾಗೂ ಸಮಸ್ತ ದೇಶದ ಅಪಮಾನಕ್ಕೆ ಕಾರಣರಾಗಿದ್ದಾರೆ. ಅದರ ಜೊತೆಜೊತೆಗೆ ಜನತೆಯೂ ಕೂಡ ಜಾಗರೂಕವಾಗಿರಬೇಕಾಗಿದೆ. ಚೀನಾ ದೇಶವನ್ನು 72 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತೃಪ್ತಿಪಡಿಸಬೇಕೆಂಬ ಸರ್ಕಾರಿ ನೀತಿಯಿಂದ ಉತ್ಪನ್ನವಾಗುವ ಯಾವುದೇ ರಾಷ್ಟ್ರ ವಿರೋಧಿ ಯೋಜನೆಗಳನ್ನು ಸಾಕಾರಗೊಳಿಸಲು ಬಿಡುವುದಿಲ್ಲವೆಂಬುದೇ ಭಾರತೀಯ ಜನಸಂಘದ ದೃಢ ನಿಶ್ಚಯವಾಗಿದೆ. ಶ್ರೀ ಮೆನನ್‍ರವರನ್ನು ದೂರ ಮಾಡಬೇಕಾಗಿದೆ ಶ್ರೀ ಕೃಷ್ಣಮೆನನ್‍ರವರ ಬಗ್ಗೆ ಜನತೆಯಲ್ಲಿ ವಿಶ್ವಾಸ ನಂಬಿಕೆಗಳಿಲ್ಲದಿದ್ದರೂ ಪ್ರಧಾನ ಮಂತ್ರಿಯವರು ಅವರನ್ನೇ ರಕ್ಷಣಾಮಂತ್ರಿಯಾಗಿ ಮುಂದುವರಿಸುವ ಹಟವನ್ನು ನೋಡಿದರೆ ಪ್ರಧಾನ ಮಂತ್ರಿಯವರಿಗೆ ಜನತೆಯ ಭಾವನೆಗಳನ್ನು ಗೌರವಿಸಲು ಬರುವುದಿಲ್ಲವೆಂದೂ ಮತ್ತು ದೇಶದ ಸುರಕ್ಷೆಯ ಬಗ್ಗೆ ಗಮನವಿಲ್ಲವೆಂಬುದು ತಿಳಿದುಬರುತ್ತದೆ. ಈಗ ನಿಮಗೆ ನಿಷ್ಪಕ್ಷವಾದ ಹಾಗೂ ದೇಶಭಕ್ತಿಯ ಬಗ್ಗೆ ಸಂದೇಹವಿರದ ರಕ್ಷಣಾಮಂತ್ರಿಯ ಅವಶ್ಯಕತೆಯಿದೆ. ಶ್ರೀ ಕೃಷ್ಣಮೆನನ್‍ರವರು ಬುದ್ಧಿವಂತರಾಗಿದ್ದರೂ ಸಹ ಇಂದಿನ ದೇಶದ ಸ್ಥಿತಿಯನ್ನು ನೋಡಿದಾಗ ರಕ್ಷಣಾಮಂತ್ರಿಯಾಗಿ ಸೇವೆ ಸಲ್ಲಿಸಲು ಅಯೋಗ್ಯರೆನ್ನಬಹುದಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತಿನ ಜನತೆ ತಮ್ಮ ಇಚ್ಛೆಯು ಪೂರ್ಣಗೊಳ್ಳುತ್ತಿರುವುದನ್ನು ನೋಡಿ ಆನಂದಿಸುತ್ತಿದ್ದಾರೆ. ಇದೇ ಸಮಯದಲ್ಲಿ ವಿದರ್ಭದ ಜನತೆ ಜೊತೆ ಯಾವುದೇ ಮನುಷ್ಯನು ಸಮರ್ಥಿಸದ ವ್ಯವಹಾರ ಮಾಡುವುದು ವಿಷಾದದ ಸಂಗತಿಯಾಗಿದೆ. ನಾಗ್ಪುರದ ಲೂಟಿ, ಅಗ್ನಿಕಾಂಡ ಮತ್ತು ಹಿಂಸೆ ಖಂಡಿಸಲು ಯೋಗ್ಯವಾಗಿವೆ. ಈ ವಿಷಯವಾಗಿ ವಿದರ್ಭದ ಜನರು ತಮ್ಮ ಉದ್ದೇಶವನ್ನೇ ಕೈಬಿಡಬೇಕಾಗಿದೆ. ___________ * ಆಕರ : ಪಾಂಚಜನ್ಯ ವಾರಪತ್ರಿಕೆ, 06-05-1961 ಪಂಡಿತ್ ದೀನ್ ದಯಾಳ್‍ರು ವ್ಯಕ್ತಿಗಳನ್ನು ಶ್ರೀ ಎಂದಿರುವ ಕಡೆ ಹಾಗೆ ಉಳಿಸಿಕೊಳ್ಳಲಾಗಿದೆ. (-ಸಂ.) ಜನಸಂಘದ ಚುನಾವಣಾ ಘೋಷಣಾ ಪತ್ರ (4) ಸಾಮಾಜಿಕ ರಕ್ಷಣೆ, ವಾಸ ಮತ್ತು ಶಿಕ್ಷಣಕ್ಕಾಗಿ ಜನಸಂಘದ ಯೋಜನೆಗಳು ಇದು ಜನಸಂಘದ ಘೋಷಣಾ ಪತ್ರದ ಅಂತಿಮ ಅಂಶವಾಗಿದೆ. ಇದರಲ್ಲಿ ಸಮಾಜದ ವಿಭಿನ್ನ ಸಮಸ್ಯೆಗಳ ಬಗ್ಗೆ ಜನಸಂಘದ ವಿಚಾರಗಳನ್ನು ಪ್ರಸ್ತುತಪಡಿಸಲಾಗಿದೆ ಹಾಗೂ ಅದರ ಪರಿಹಾರಕ್ಕೆ ಸಂಘದ ಯೋಜನೆಗಳನ್ನು ನೀಡಲಾಗಿದೆ. - ಪಾಂಚಜನ್ಯ ಸಂಪಾದಕರು ಉದ್ಯೋಗಗಳ ಪ್ರಗತಿಗಾಗಿ ಹಣಸಂಗ್ರಹಣೆ ಅವಶ್ಯಕ. ಆದರೆ ಇದಕ್ಕಾಗಿ ಉಳಿತಾಯದ ಜೊತೆ ಹಣದ ಸರಿಯಾದ ವಿನಿಯೋಗವು ಮುಖ್ಯವಾಗಿದೆ. ಹಾಗಾಗಿ ಜನಸಂಘವು ಶ್ರೀಸಾಮಾನ್ಯನ ಜೀವನ ಮಟ್ಟವನ್ನು ಸುಧಾರಿಸುವುದರ ಜೊತೆಗೆ ಆಡಳಿತದಲ್ಲಿ ಉಳಿತಾಯ ಮಾಡಲು ಬಯಸುತ್ತದೆ. ಸರ್ಕಾರದ `ರಾಜಕರ' ಮತ್ತು ಧನನೀತಿಯ ಮೂಲ ಉದ್ದೇಶ ಅಧಿಕವಾಗಿ ಆರ್ಥಿಕ ವಿನಿಯೋಗವೇ ಆಗಿದೆ. ಈ ಉದ್ದೇಶ ಪೂರ್ತಿಗಾಗಿ ಜನಸಂಘ 2000 ರೂ. ಮಾಸಿಕ ವೇತನ ನಿರ್ಧರಿಸಿದೆ. ಕನಿಷ್ಠ ಜೀವನ ಮಟ್ಟದ ಭರವಸೆ ಭಾರತೀಯ ಜನಸಂಘ ಪ್ರತಿಯೊಬ್ಬ ನಾಕರಿಕನಿಗೂ ಕನಿಷ್ಟ ಜೀವನ ಮಟ್ಟದ ಭರವಸೆಯನ್ನು ನೀಡಿದೆ. ಜನಸಂಘದ ಮೊಟ್ಟಮೊದಲ ಉದ್ದೇಶವೇನೆಂದರೆ ಪ್ರತಿಯೊಬ್ಬ ನಾಗರಿಕನಿಗೂ ಅವನ ಮೂಲಭೂತ ಅವಶ್ಯಕತೆಗಳಾದ ಭೋಜನ, ವಸ್ತ್ರ ಮತ್ತು ವಾಸಿಸಲು ಸ್ಥಳವನ್ನು ದೊರಕಿಸಿಕೊಡುವುದು, ವರ್ತಮಾನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ನೌಕರನಿಗೂ ಕನಿಷ್ಟ ಸಂಬಳ ರೂ. 125/- ನ್ನು ಕೊಡಿಸುವುದು. ತೆರಿಗೆ ಸುಧಾರಣೆ ಭಾರತೀಯ ಜನಸಂಘ ವರ್ತಮಾನದಲ್ಲಿ ಪ್ರಚಲಿತವಿರುವ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತರಲು ಇಚ್ಛಿಸುತ್ತದೆ. ಇದರಿಂದ ಜನತೆಗೆ ತೆರಿಗೆ ಪದ್ಧತಿಯಿಂದ ಅಲ್ಪಮಟ್ಟಿಗೆ ನೆಮ್ಮದಿ ಸಿಗುತ್ತದೆ. ಜೀವನದ ಅತ್ಯವಶ್ಯಕ ವಸ್ತುಗಳನ್ನು ಪರೋಕ್ಷ ತೆರಿಗೆಯಿಂದ ಮುಕ್ತವನ್ನಾಗಿಸುವುದು. ಯಾರಿಗೆ ಕನಿಷ್ಟ ವೇತನ ಸಿಗುತ್ತದೆಯೋ ಅವರನ್ನು ಎಲ್ಲಾ ಪ್ರಕಾರದ ಪ್ರತ್ಯಕ್ಷ ತೆರಿಗೆಯಿಂದ ಹೊರಗಿಡುವುದು. 74 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತೆರಿಗೆ ಸಂಗ್ರಹದ ಮಾರ್ಗವನ್ನು ಸರಳೀಕರಣಗೊಳಿಸುವುದು, ಎಲ್ಲಾ ತರಹದ ಕ್ಷೇತ್ರೀಯ ಕೇಂದ್ರೀಯ ತೆರಿಗೆಯನ್ನು ಸಂಗ್ರಹಿಸಲು ಒಂದು ಸಮಿತಿಯನ್ನು ರಚಿಸಲಾಗುವುದು. ಇದರಿಂದ ತೆರಿಗೆ ಸಂಗ್ರಹಣೆ ಮಾಡುವ ಹಣದ ಖರ್ಚನ್ನು ಉಳಿಸುವುದರ ಜೊತೆಗೆ ಅಧಿಕಾರಿಗಳನ್ನು ಹೋಗಿ ಭೇಟಿಮಾಡುವ ನಾಗರಿಕರ ಶ್ರಮದ ಉಳಿತಾಯವನ್ನೂ ಮಾಡಬಹುದು. ತೆರಿಗೆ ಸಂಗ್ರಹಣೆಯ ಕಾರ್ಯಸ್ವರೂಪವನ್ನು ಸ್ವತಂತ್ರಗೊಳಿಸಿ ಅವರವರ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ವಿಭಿನ್ನ ಕಾರ್ಮಿಕರಿಗೆ ತಿಳಿಸಲಾಗಿದೆ. ಕ್ಷೇತ್ರೀಯ ಸಂಸ್ಥೆಗಳು ರಾಜ್ಯ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಅನುದಾನವನ್ನು ಅಪೇಕ್ಷಿಸುವ ಈ ಸ್ಥಿತಿಯನ್ನು ಸಮಾಪ್ತಗೊಳಿಸಬೇಕಾಗಿದೆ. ಸ್ವದೇಶಿಯ ಪುನರುತ್ಥಾನ ಉದ್ಯೋಗ ದಂಧೆಯ ಉನ್ನತಿ ಮತ್ತು ವಿದೇಶಿ ಹಣದ ಉಳಿತಾಯದ ಜೊತೆಗೆ ಸ್ವದೇಶಿ ಪುನರುತ್ಥಾನದ ಅವಶ್ಯಕತೆಯಿದೆ. ಉಪಯೋಗಿಸುವ ವಸ್ತುಗಳು ವಿಶೇಷವಾಗಿ ಶೃಂಗಾರ ಮತ್ತು ಅಲಂಕಾರಿಕ ಸಾಧನಗಳು ಮತ್ತು ಅದರ ಆಮದಿನ ಮೇಲೆ ನಿಯಂತ್ರಣ ತರಬೇಕಾಗಿದೆ. ವಿದೇಶಿ ಉದ್ಯೋಗಗಳ ಸ್ಪರ್ಧೆಯಿಂದ ರಾಷ್ಟ್ರೀಯ ಉದ್ಯೋಗಗಳ ಸಂರಕ್ಷಣೆಯಾಗಬೇಕಾಗಿದೆ. ಆಡಳಿತದಲ್ಲಿ ಸ್ವದೇಶಿ ವ್ಯವಹಾರ ಅನಿವಾರ್ಯವಾಗಬೇಕಾಗಿದೆ. ರಫ್ತು ಆಮದಿನ ನೀತಿ ಭಾರತೀಯ ಜನಸಂಘ ವ್ಯಾಪಾರ ವ್ಯವಸ್ಥೆಯನ್ನು ಸಮಾನವಾಗಿ ನಿರ್ವಹಿಸಲು ಕೆಲವೊಂದು ಉಪಾಯಗಳನ್ನು ಜಾರಿಗೆ ತರಲಿದೆ. ಜನಸಂಘದ ಪ್ರಕಾರ ಹಣನೀತಿಯ ಮೇಲೆ ಆಮದಿನ ಪರಿಣಾಮ ತುಂಬಾ ಕಡಿಮೆಯಾಗಲಿದೆ. ಏಕೆಂದರೆ ವಿದೇಶಿ ಆಮದಿನ ವಸ್ತುಗಳ ಮೇಲೆ ಆಧಾರಿತವಾಗದಿರುವ ಉದ್ಯೋಗಗಳಿಗೆ ಮೊದಲ ಅವಕಾಶ ನೀಡಲಾಗುವುದು. ಜನಸಂಘ ರಫ್ತುಮಾಡಲಿಕ್ಕೆ ಹೊಸ-ಹೊಸ ಮಾರುಕಟ್ಟೆಗಳನ್ನು ನಿರ್ಮಿಸಿ ಅದರಿಂದ ಪ್ರಗತಿಯ ಬಗ್ಗೆ ಯೋಚಿಸಲಾಗುವುದು. ಶ್ರಮ ನೀತಿ ಕಾರ್ಮಿಕರಲ್ಲಿ ಕರ್ತವ್ಯ ನಿಷ್ಠೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಜನಸಂಘ ಕಾರ್ಮಿಕ ವ್ಯಾಪಾರ ಸಂಘದ ಹಕ್ಕುಗಳನ್ನು ರಕ್ಷಿಸಲಿದೆ ಮತ್ತು ಪ್ರತಿಯೊಬ್ಬ ಕಾರ್ಮಿಕನೂ ಒಂದಲ್ಲ ಒಂದು ವ್ಯಾಪಾರ ಸಂಘದ ಸದಸ್ಯನಾಗುವುದನ್ನು ಪ್ರೋತ್ಸಾಹಿಸಲಿದೆ. ಜನಸಂಘವು ದಿನಗೂಲಿಯ ಜೊತೆ ಜನಸಂಘದ ಚುನಾವಣಾ ಘೋಷಣಾ ಪತ್ರ (4) 75 ಜೊತೆಗೆ ಸಂಘ ಸಮೂಹದ ಹಕ್ಕುಗಳ ಬಗ್ಗೆಯೂ ನಿಶ್ಚಯಿಸಲಿದೆ. ಕಾರ್ಮಿಕ ಸಂಘದ ಪಂಚಾಯ್ತಿಯಾದ ನಂತರವೇ ಅದಕ್ಕೆ ಮಾನ್ಯತೆ ಸಿಗಲಿದೆ. ಶ್ರಮದ ವ್ಯವಸ್ಥೆ ಹಾಗೂ ಲಾಭದಲ್ಲಿ ಸಹಭಾಗಿತ್ವ ಭಾರತೀಯ ಜನಸಂಘ ಕಾರ್ಮಿಕರನ್ನು ಉದ್ಯೋಗ ವ್ಯವಸ್ಥೆ ಮತ್ತು ಲಾಭದಲ್ಲಿ ಸಹಭಾಗೀದಾರರನ್ನಾಗಿ ಮಾಡಲಿದೆ. ಈ ದೃಷ್ಟಿಯಿಂದ ಕಾರ್ಮಿಕರಿಗೆ ಕಾರ್ಯಸಂಸ್ಥೆಗಳಲ್ಲಿ ಪ್ರತನಿಧಿತ್ವವನ್ನು ಕೊಡಲಾಗುತ್ತದೆ. ಸ್ಥಾಯೀ ವೇತನ ಆಯೋಗದ ನಿರ್ಮಾಣ ದೇಶದ ವಿಭಿನ್ನ ಶ್ರಮಿಕ ಹಾಗೂ ಕಾರ್ಮಿಕರ ವೇತನವನ್ನು ನಿರ್ಧರಿಸಲು ಒಂದು ಸ್ಥಾಯೀ ವೇತನ ಆಯೋಗದ ನಿರ್ಮಾಣವಾಗಲಿದೆ. ಜೀವನ ಶೈಲಿಯನ್ನು ಗುರ್ತಿಸಿ ಸಮಯಕ್ಕೆ ಅನುಸಾರವಾಗಿ ಕನಿಷ್ಟ ಆದಾಯವನ್ನು ಗಮನದಲ್ಲಿಟ್ಟುಕೊಂಡು ವೇತನವನ್ನು ನಿಶ್ಚಯಿಸಲಾಗುತ್ತದೆ. ಯಾವುದೇ ಕಾರ್ಮಿಕನ ಕನಿಷ್ಟ ವೇತನ ಇಂದಿನ ಸಂದರ್ಭದಲ್ಲಿ ರೂ. 125 ಪ್ರತಿ ತಿಂಗಳಿಗಿಂತ ಕಡಿಮೆ ಇರಬಾರದು. ಸಾಮಾಜಿಕ ರಕ್ಷಣೆ ಕಾರ್ಮಿಕರ ಸಾಮಾಜಿಕ ರಕ್ಷಣೆಯ ಜವಾಬ್ದಾರಿ ರಾಜ್ಯದ್ದಾಗಿರುತ್ತದೆ. ಕಾರ್ಮಿಕರಿಗೆ ಬೇರೆ ಕೆಲಸದ ವ್ಯವಸ್ಥೆ ಆಗುವವರಿಗೆ ಅವರನ್ನು ಕೆಲಸದಿಂದ ಬೇರ್ಪಡಿಸುವ ಹಾಗಿಲ್ಲ. ಅಪಾಯದ ಕೆಲಸ ಮಾಡುವ ಕಾರ್ಮಿಕರಿಗೆ ವೇತನವಿಲ್ಲದೆ ಹೆಚ್ಚುವರಿ ಭತ್ಯೆ ನೀಡಲಾಗುವುದು. ಕಾರ್ಮಿಕ ರಾಜ್ಯ ವಿಮಾ ಯೋಜನೆಯಲ್ಲಿ ಕಾರ್ಮಿಕರಿಂದ ಯಾವುದೇ ರೀತಿಯ ಚಂದಾ ವಸೂಲು ಮಾಡಲಾಗದು. ರೋಗ ಮತ್ತು ವೃದ್ಧಾಪ್ಯಕ್ಕಾಗಿ ಪೂರ್ಣ ವ್ಯವಸ್ಥೆ ಮಾಡಲಾಗುವುದು. ಒಂದೇ ರೀತಿಯ ಕೆಲಸ ಮಾಡುವ ಕಾರ್ಮಿಕರಿಗೆ ಒಂದೇ ತರಹದ ವೇತನ ನೀಡಲಾಗುವುದು. ಮಹಿಳೆಯರ ಜೊತೆ ಯಾವುದೇ ಭೇದಭಾವ ಮಾಡುವ ಹಾಗಿಲ್ಲ. ಗರ್ಭಿಣಿ ಹೆಣ್ಣು ಕಾರ್ಮಿಕರಿಗೆ 3 ತಿಂಗಳು ವೇತನ ಸಮೇತವಾಗಿ ರಜೆಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಸೇವಾ ನಿವೃತ್ತ ಕಾರ್ಮಿಕರ ಪಿಂಚಣಿ ದರದಲ್ಲಿ ವೃದ್ಧಿ ಮಾಡಲಾಗುವುದು ಮತ್ತು ಕಾರ್ಯನಿಮಿತ್ತ ಆಗುವ ವಿಳಂಬ ಮತ್ತು ತೊಂದರೆಗಳ ನಿರಾಕರಣೆ ಮಾಡಲಾಗುವುದು. ಸಂಪರ್ಕ ಜನಸಂಘ ರಸ್ತೆ, ರೈಲು, ಜನ ಹಾಗೂ ವಾಯು ಸಂಪರ್ಕದ ವಿಸ್ತಾರ 76 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮತ್ತು ವಿಕಾಸದ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು. ಜನಸಂಘ ರಸ್ತೆ ಸಾರಿಗೆ ಸಂಪರ್ಕದ ರಾಷ್ಟ್ರೀಕರಣದ ವಿರೋಧಿಯಾಗಿದೆ. ಯಾವ ಯಾವ ಪ್ರದೇಶಗಳಲ್ಲಿ ರಾಷ್ಟ್ರೀಕರಣವಾಗಿದೆಯೋ ಅಲ್ಲಿ ಸ್ವಂತ ವಾಹನಗಳಿಗೆ ಅನುಮತಿ ನೀಡಿ ಸರ್ಕಾರಿ ಸೇವೆಯ ಜೊತೆ ಪ್ರತಿಸ್ಪರ್ಧೆಯಿಂದ ಸೌಕರ್ಯದಲ್ಲಿ ಸುಧಾರಣೆ ತರಲಿದೆ. ಜನತಾ ಗಾಡಿಗಳನ್ನು ನಡೆಸಲು, ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಶುಲ್ಕವಿಲ್ಲದೆ ನಿದ್ರಾವ್ಯವಸ್ಥೆ ಮಾಡುವ ಹಾಗೂ ಸಾಮಾನು ಸಾಗಿಸಲು ಹೆಚ್ಚು ಡಬ್ಬಿಗಳನ್ನು ಸೇರಿಸುವ ಪ್ರಯತ್ನ ಮಾಡಲಿದೆ. ಇಲ್ಲಿಯವರಗೆ ಕಡೆಗಣಿಸಿರುವ ಕ್ಷೇತ್ರಗಳಿಗೆ ರೈಲ್ವೆ ಪರಿಚಯ ಮಾಡಿಸಲಾಗುವುದು. ರೈಲ್ವೆ ಕಾರ್ಮಿಕರಿಗೆ ರೈಲ್ವೆ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು. ಚಿಕ್ಕ-ಪುಟ್ಟ ನಿಲ್ದಾಣದ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು ಅವರ ಮಕ್ಕಳ ಶಿಕ್ಷಣ, ಚಿಕಿತ್ಸೆ ಮುಂತಾದ ಉಚಿತ ಸೌಲಭ್ಯಗಳನ್ನು ಜನಸಂಘ ಮಾಡಿಕೊಡಲಿದೆ. ರೈಲ್ವೆಯ ಜವಾಬ್ದಾರಿಯನ್ನು ಕಡಿಮೆ ಮಾಡಲು ಜನಸಂಘ ರಸ್ತೆ, ಜಲ ಹಾಗೂ ವಾಯು ಸಂಪರ್ಕದ ವಿಸ್ತಾರ ಮಾಡಲಾಗುವುದು. ಪ್ರತಿಯೊಂದು ಗ್ರಾಮವನ್ನು ರಸ್ತೆಯ ಜೊತೆ ಜೋಡಿಸುವ ಹಾಗೆಯೇ ಪ್ರತಿಯೊಂದು ನಗರವನ್ನು ವಾಯು ಸಂಪರ್ಕದ ಜೊತೆ ಜೋಡಿಸುವ ಉದ್ಯೋಗ ಪ್ರಾರಂಭಿಸಲಾಗುವುದು. ಮೋಟಾರು ವಾಹನಗಳ ತೆರಿಗೆಯನ್ನು ಕಡಿಮೆ ಮಾಡುವ ಮತ್ತು ಸಂಪೂರ್ಣ ದೇಶದಲ್ಲಿ ದರ ಮತ್ತು ನಿಯಮವನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದು ಅಂತರರಾಜ್ಯ ರಸ್ತೆಗಳ ಸೌಲಭ್ಯವನ್ನೂ ಒದಗಿಸಲಾಗುವುದು. ಪಾಟ್ನಾದಿಂದ ಕಲ್ಕತ್ತದವರೆಗೆ ಗಂಗಾ ನದಿಯನ್ನು ದೋಣಿ ಸೇವೆಗಾಗಿ ಉಪಯೋಗಿಸುವ ಯೋಜನೆಯನ್ನು ತಯಾರಿಸಲಾಗುವುದು. ನದಿ ಘಟ್ಟಗಳ ವ್ಯವಸ್ಥೆಯಲ್ಲಿ ಮಾಲೀಕತ್ವವನ್ನು ಕೊನೆಗೊಳಿಸಲಾಗುವುದು ಮತ್ತು ಅದನ್ನು ನಾವಿಕರ ಸಹಾಯದಿಂದ ನಡೆಸಲಾಗುವುದು. ಜಲಮಾರ್ಗದ ವಿಕಾಸಕ್ಕಾಗಿ ವಿಶೇಷವಾದ ವ್ಯವಸ್ಥೆಯನ್ನು ಮಾಡಲಾಗುವುದು. ಅದರಿಂದ ದೇಶವು ಭವಿಷ್ಯದಲ್ಲಿ ವಿದೇಶಿ ವ್ಯಾಪಾರದ ನಿರ್ವಹಣೆಯಲ್ಲಿ ಸ್ವ ಆಧಾರಿತವಾಗಬೇಕಾಗಿದೆ. ಹಾಗೂ ತೀರದ ದೋಣಿ ಸವಾರಿ ಮತ್ತು ವಸ್ತುಗಳ ದರಗಳಲ್ಲಿ ಯಾವುದೇ ರೀತಿಯ ವೃದ್ಧಿಯಾಗಲು ಬಿಡುವುದಿಲ್ಲ. ವಿದೇಶಿ ಕಾರ್ಮಿಕ ಮತ್ತು ನಾವಿಕರ ಸ್ಥಾನದಲ್ಲಿ ಭಾರತೀಯರಿಗೆ ಅವಕಾಶ ಮಾಡಿಕೊಡಲಾಗುವುದು. ವಾಸಸ್ಥಾನ ಹಿಂದಿನ ವರ್ಷಗಳಲ್ಲಿ ವಿಭಿನ್ನ ಕಾರ್ಯಗಳಿಗಾಗಿ ದೊಡ್ಡ ದೊಡ್ಡ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಸಾಮಾನ್ಯ ಜನರ ವಾಸದ ಬಗ್ಗೆ ನಿರ್ಲಕ್ಷಿಸಲಾಗಿದೆ. ಜನಸಂಘದ ಚುನಾವಣಾ ಘೋಷಣಾ ಪತ್ರ (4) 77 ಭಾರತೀಯ ಜನಸಂಘ ಪ್ರತಿಯೊಂದು ಪರಿವಾರಕ್ಕೂ ಒಂದು ಸುಂದರ ಸ್ವಚ್ಛವಾದ ಮನೆಯ ಅವಶ್ಯಕತೆಯಿದೆ ಎಂಬುದನ್ನು ಒಪ್ಪುತ್ತದೆ. ಹಾಗೂ ಒಂದು ವಿಶಾಲವಾದ ವಾಸಸ್ಥಾನದ ನಿರ್ಮಾಣದ ಕಾರ್ಯಕ್ರಮ ಆರಂಭಿಸಿ ನಗರ, ಹಳ್ಳಿ ಹಾಗೂ ಎಲ್ಲಾ ಸ್ಥಳಗಳಲ್ಲಿಯೂ ಅಲ್ಪದರದಲ್ಲಿ ಮನೆಗಳ ವ್ಯವಸ್ಥೆ ಮಾಡಲಾಗುವುದು. ಕೊಳಚೆ ಪ್ರದೇಶಗಳ ಸಮಾಪ್ತಿ ಹಾಗೂ ಅಲ್ಲಿ ವಾಸಿಸುವ ನಿವಾಸಿಗಳಿಗೆ ಪುನರ್‍ನಿವಾಸದ ಬಗ್ಗೆ ಪ್ರಥಮ ಆದ್ಯತೆ ನೀಡಲಾಗುವುದು. ಶುಲ್ಕರಹಿತ ಮಾಧ್ಯಮಿಕ ಶಿಕ್ಷಣ ಕಾಂಗ್ರೆಸ್ ಆಡಳಿತವು ರಾಷ್ಟ್ರ ನಿರ್ಮಾಣದಲ್ಲಿ, ಶಿಕ್ಷಣದ ಮಹತ್ವವನ್ನು ಗುರ್ತಿಸುವುದರಲ್ಲಿ ಅಸಫಲವಾಗಿದೆ. ಪ್ರಸ್ತುತ ಶಿಕ್ಷಣ ಪದ್ಧತಿ ಇಂಗ್ಲಿಷರ ಕೊಡುಗೆಯಾಗಿದ್ದು ವಿದೇಶಿಯರ ಯೋಜನೆಗಳನ್ನು ಪೂರ್ಣಗೊಳಿಸಲು ಜಾರಿಗೊಳಿಸಲಾಗಿತ್ತು. ಸ್ವತಂತ್ರ ದೇಶದ ಅವಶ್ಯಕತೆಗಳನ್ನಲ್ಲ, ಭಾರತೀಯ ಜನಸಂಘವು ಒಂದು ನವೀನ ಶಿಕ್ಷಣ ಪದ್ಧತಿಯನ್ನು ನಿರ್ಮಿಸಲಿದೆ ಹಾಗೂ ಅದರಲ್ಲಿ ಗುರುಕುಲದ ಪ್ರಾಚೀನ ಪದ್ಧತಿಯ ಜೊತೆಗೆ ವೈಜ್ಞಾನಿಕ, ತಾಂತ್ರಿಕ ಹಾಗೂ ವ್ಯಾವಹಾರಿಕ ವಿಷಯಗಳ ಆಧುನಿಕ ಪದ್ಧತಿಯ ಸಮನ್ವಯವಿರುತ್ತದೆ. ಭಾರತೀಯ ಜನಸಂಘವು ಪ್ರತಿಯೊಬ್ಬ ಬಾಲಕ-ಬಾಲಕಿಯರಿಗೆ ಮಾಧ್ಯಮಿಕ ಶಿಕ್ಷಣದವರೆಗೆ ಶುಲ್ಕರಹಿತ ಹಾಗೂ ಕಡ್ಡಾಯ ಶಿಕ್ಷಣದ ವ್ಯವಸ್ಥೆ ಮಾಡಲಿದೆ. ಎಲ್ಲಿಯವರೆಗೆ ಸರ್ಕಾರ ವಿದ್ಯಾರ್ಥಿಗಳಿಗೆ ಬೇರೆ ಯಾವುದಾದರೂ ಪರ್ಯಾಯ ಶಿಕ್ಷಣದ ವ್ಯವಸ್ಥೆ ಮಾಡುವುದಿಲ್ಲವೋ ಅಲ್ಲಿಯವರೆಗೆ ವಿಶ್ವವಿದ್ಯಾನಿಲಯದ ಪ್ರವೇಶದಲ್ಲಿ ಯಾವುದೇ ರೀತಿಯ ನಿಬಂಧನೆಗಳನ್ನು ಮಾಡಲಾಗದು. ಪ್ರತಿಭಾವಂತ ಹಾಗೂ ಪರಿಶ್ರಮಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದವರೆಗೆ ನಿಶುಲ್ಕ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು, ಸಂಶೋಧನೆಯ ಪ್ರವೃತ್ತಿಯನ್ನು ಪ್ರೋತ್ಸಾಹಿಸಲಾಗುವುದು ಮತ್ತು ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲಾಗುವುದು. ವಯಸ್ಕರನ್ನು ಶಿಕ್ಷತರನ್ನಾಗಿ ಮಾಡಲು ಒಂದು ರಾಷ್ಟ್ರವ್ಯಾಪಿ ಆಂದೋಲನ ನಡೆಸಲಾಗುವುದು. ಭಾರತೀಯ ಜನಸಂಘವು ಅಧ್ಯಾಪಕರ ಗುಣಮಟ್ಟವನ್ನು ಸುಧಾರಿಸಲು ವಿಶೇಷ ಪ್ರಯತ್ನ ಮಾಡಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಅಧ್ಯಾಪಕರ ವೇತನ ಮತ್ತು ಸೌಲಭ್ಯಗಳನ್ನು ಸರ್ಕಾರಿ ಅಧ್ಯಾಪಕರ ಸಮಕ್ಕೆ ತರಲಾಗುವುದು. ಶಾಶ್ವತವಾಗಿ ತಿರಸ್ಕೃತಗೊಳ್ಳಲ್ಪಟ್ಟಿರುವ ಪ್ರಾಥಮಿಕ ಶಿಕ್ಷಣ ಮತ್ತು ಶಿಕ್ಷಕರ ಮಟ್ಟವನ್ನು ಸುಧಾರಿಸಲು ಜನಸಂಘ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಿದೆ. 78 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಲ್ಲರಿಗೂ ಶುಲ್ಕರಹಿತ ಚಿಕಿತ್ಸೆಯ ವ್ಯವಸ್ಥೆ. ಜನಸಂಘವು ಎಲ್ಲರಿಗೂ ನಿಶುಲ್ಕ ಚಿಕಿತ್ಸೆಯ ವ್ಯವಸ್ಥೆ ಮಾಡಲಿದೆ. ಅಲೋಪತಿ, ಹೋಮಿಯೋಪತಿ, ಯುನಾನಿ ಹಾಗೂ ಪ್ರಕೃತಿ ಚಿಕಿತ್ಸೆಯ ಪದ್ಧತಿಗಳಿಗೆ ಮಾನ್ಯತೆಯನ್ನು ಕೊಡುವುದರೊಂದಿಗೆ ಆಯುರ್ವೇದವನ್ನು ರಾಷ್ಟ್ರೀಯ ಚಿಕಿತ್ಸಾ ಪದ್ಧತಿಯ ರೂಪದಲ್ಲಿ ವಿಕಾಸ ಮಾಡಲಾಗುವುದು. ಆಯುರ್ವೇದವನ್ನು ಆರೋಗ್ಯ ಸಂವರ್ಧನೆಯ ಒಂದು ಮಾಧ್ಯಮವನ್ನಾಗಿ ಮಾಡಲಾಗುವುದು. ಪ್ರತಿಯೊಂದು ಹಳ್ಳಿಯಲ್ಲಿಯೂ ಚಿಕಿತ್ಸಾಲಯದ ಸ್ಥಾಪನೆ ಜನಸಂಘದ ಗುರಿಯಾಗಲಿದೆ. ಹಾಗೂ ಇದರ ನಿರ್ಮಾಣವಾಗುವವರೆಗೆ ದೂರದ ಹಳ್ಳಿಗಳಲ್ಲಿ ಚಿಕಿತ್ಸೆಯ ಸೌಲಭ್ಯಗಳನ್ನು ತಲುಪಿಸಲು ಸಂಚಾರಿ ಚಿಕಿತ್ಸಾಲಯಗಳ ವ್ಯವಸ್ಥೆ ಮಾಡಲಾಗುವುದು. ಆಯುರ್ವೇದ ಔಷಧಿಗಳನ್ನು ಕುರಿತ ಸಂಶೋಧನೆ ಹಾಗೂ ತಯಾರಿಕೆಗಾಗಿ ದೇಶದ ವಿಭಿನ್ನ ಭಾಗಗಳಲ್ಲಿ ಸಂಶೋಧನಾ ಸ್ಥಾನಗಳನ್ನು ಸ್ಥಾಪಿಸಲಾಗುವುದು. ವಿಭಿನ್ನ ಪ್ರಕಾರದ ಔಷಧಿಗಳ ತಯಾರಿಕೆಯನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಸ್ವಾವಲಂಬಿಯನಾಗಿ ಮಾಡಲಾಗುವುದು. ಸರ್ಕಾರಿ ಚಿಕಿತ್ಸಾಲಯ ಹಾಗೂ ದವಾಖಾನೆಗಳ ಗುಣಮಟ್ಟವನ್ನು ಸುಧಾರಿಸಲಾಗುವುದು. ಜನರ ಆರೋಗ್ಯ ರಕ್ಷಣೆಗಾಗಿ ಜನಸಂಘ ಪ್ರತಿಯೊಂದು ಆಹಾರ ಪದಾರ್ಥ ಮತ್ತು ಅವಶ್ಯಕ ವಸ್ತುಗಳನ್ನು ಕಲಬೆರಕೆ ಇಲ್ಲದೆ ಶುದ್ಧವಾಗಿ ಸಿಗುವ ಹಾಗೆ ಮಾಡಲಾಗುವುದು. ಜನಸಂಘ ಖಾದ್ಯ ಪದಾರ್ಥಗಳಲ್ಲಿ ಕಲಬೆರಕೆ ಮಾಡುವವರ ವಿರುದ್ಧ ಕಠೋರ ಶಿಕ್ಷೆಯನ್ನು ಜರುಗಿಸಲಾಗುವುದು. ಹಿಂದುಳಿದ ಜಾತಿಯವರಿಗೆ ವಿಶೇಷ ಸೌಲಭ್ಯಗಳು ಸಾಮಾಜಿಕ ದೃಷ್ಟಿಯಿಂದ ಶಾಪಗ್ರಸ್ತವಾಗಿರುವ, ಆರ್ಥಿಕ ದೃಷ್ಟಿಯಿಂದ ಪೀಡನೆಗೊಳಗಾಗಿರುವ ಮತ್ತು ಅಭಾವಗ್ರಸ್ತ ಹಿಂದುಳಿದ ವರ್ಗಗಳಿಗೆ ಸಮಾಜದಲ್ಲಿ ಸಮಾನತೆಯ ಸ್ಥಾನ ದೊರಕಿಸಿಕೊಡಲು ಜನಸಂಘ ವಿಶೇಷ ಪ್ರಯತ್ನ ನಡೆಸಲಿದೆ. ಮನುಷ್ಯ-ಮನುಷ್ಯರ ಮಧ್ಯದಲ್ಲಿರುವ ಉಚ್ಛ-ನೀಚ ಜಾತಿ ಹಾಗೂ ಸ್ಪೃಶ್ಯ-ಅಸ್ಪೃಶ್ಯ ರೂಪದ ಗೋಡೆಯನ್ನು ಒಡೆದು ಸಾರ್ವಜನಿಕವಾದ ದೇವಾಲಯ ಮತ್ತು ಉಪಾಸನಾ ಕೇಂದ್ರಗಳಲ್ಲಿ ಎಲ್ಲರಿಗೂ ಯಾವುದೇ ಭೇದಭಾವವಿಲ್ಲದೆ ದರ್ಶನ ಮಾಡಲಿಕ್ಕೆ ಸಮಾನ ಅಧಿಕಾರ ದೊರಕಿಸಲಾಗುವುದು. ಹಿಂದುಳಿದ ವರ್ಗ ಹಾಗೂ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಅವರಿಗೆ ಭೂಮಿ ವಿತರಣೆಯಲ್ಲಿ ಪ್ರಥಮ ಆದ್ಯತೆ ಕೊಡಲಾಗುವುದು. ಪರಂಪರಾಗತವಾಗಿ ಬಂದಿರುವ ಅವರ ದಂದೆ ಮತ್ತು ಕರಕುಶಲ ಕೈಗಾರಿಕೆಗಳನ್ನು ಹೆಚ್ಚು ಸುಧಾರಿಸಲಾಗುವುದು. ಅವರಿಗೆ ಮನೆಯ ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಜನಸಂಘದ ಚುನಾವಣಾ ಘೋಷಣಾ ಪತ್ರ (4) 79 ಮಾಡಲಾಗುವುದು. ಶಿಕ್ಷಣದ ವಿಶೇಷ ಸೌಲಭ್ಯ ನೀಡಲಾಗುವುದು. ಹಳ್ಳಿಗಳನ್ನು ನಗರಗಳ ಜೊತೆ ಜೋಡಣೆಗಾಗಿ ಸಂಪರ್ಕ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು. ಮಹಿಳೆಯರ ಪ್ರಗತಿಗಾಗಿ ಪೂರ್ಣ ಅವಕಾಶ. ಜನಸಂಘ ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕೊರತೆಯನ್ನು ದೂರಮಾಡಲು ವಿಶೇಷವಾದ ಉದ್ಯೋಗದ ನಿರ್ಮಾಣ ಮಾಡಲಿದೆ. ಅದರಿಂದ ಅವರಿಗೆ ಮನೆ, ಸಮಾಜ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗುತ್ತದೆ. ಜನ-ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನವಾದ ಅವಕಾಶ ದೊರೆಯಲಿದೆ. ಸಮಾಜ ನಿರ್ಮಾಣದ ವೈಜ್ಞಾನಿಕ ಹಾಗೂ ಅನುಭವಗಮ್ಯ ಆಧಾರಗಳನ್ನು ಗಮನದಲ್ಲಿಟ್ಟುಕೊಂಡು ಜನಸಂಘ ಮಹಿಳೆಯರ ಸ್ಥಿತಿಯನ್ನು ಸುಧಾರಿಸುವ ಕೆಲಸ ಮಾಡಲಿದೆ. ವಿದೇಶಿ ನೀತಿ ವಿದೇಶಿ ನೀತಿಯ ಸಫಲತೆಯ ಪರೀಕ್ಷೆಯು ರಾಷ್ಟ್ರದ ಉನ್ನತ ಮೌಲ್ಯಗಳ ರಕ್ಷಣೆ ಹಾಗೂ ಸಂವರ್ಧನೆ ಮಾಡುವ ಯೋಗ್ಯತೆಯನ್ನು ಹೊಂದಿದೆ. ಈ ಪ್ರಯತ್ನದಲ್ಲಿ ಕಾಂಗ್ರೆಸ್ ಆಡಳಿತದ ವಿದೇಶಿ ನೀತಿ ಪೂರ್ಣವಾಗಿ ಅಸಫಲವಾಗಿದೆ. ಅದರಿಂದ ಭಾರತದ ಬಗ್ಗೆ ಪಾಕಿಸ್ತಾನದ ಶತ್ರುತ್ವದ ನಿಲುವನ್ನು ಬದಲಾಯಿಸುವುದಾಗಲಿ, ಕಮ್ಯುನಿಸ್ಟ್ ಚೀನವನ್ನು ಭಾರತದ....................... ರಾಷ್ಟ್ರೋತ್ಥಾನಕ್ಕಾಗಿ ಜನಸಂಘದ ನಾಲ್ಕು ಸೂತ್ರಗಳ ಕಾರ್ಯಕ್ರಮ ಜನಸಂಘದ ಚುನಾವಣಾ ಘೋಷಣಾಪತ್ರದಲ್ಲಿ ರಾಷ್ಟ್ರದ ಸಮಗ್ರ ಪ್ರಗತಿಗಾಗಿ ಹೋರಾಟ ಮಾಡುವ ಸಂಕಲ್ಪ. * ರಾಷ್ಟ್ರದ ಸುರಕ್ಷೆ ಹಾಗೂ ಏಕತೆ * ಆಡಳಿತ ವ್ಯವಸ್ಥೆಯ ಶುಚಿತ್ವ ಹಾಗೂ ದಕ್ಷತೆ * ಮೌಲ್ಯಗಳ ಸ್ಥಿರೀಕರಣ ಹಾಗೂ ನಿರುದ್ಯೋಗದ ನಿವಾರಣೆ * ಶಿಕ್ಷಣ ಪದ್ಧತಿ ಪುನರ್‌ನಿರ್ಮಾಣ. 1962ರಲ್ಲಿ ಭಾರತೀಯ ಜನತೆಗೆ ವರ್ತಮಾನದ ಆಡಳಿತ ವ್ಯವಸ್ಥೆಯನ್ನು ಬದಲಿಸುವ ಮತ್ತು ಹೊಸ ನೇತೃತ್ವಕ್ಕೆ ರಾಷ್ಟ್ರ ನೌಕೆಯ ಸೂತ್ರವನ್ನು ಅರ್ಪಿಸುವ ಮಹಾನ್ ಅವಕಾಶ ಪುನಃ ಒದಗಿಬಂದಿತು. ಆಡಳಿತ ವ್ಯವಸ್ಥೆಯು ಮನುಷ್ಯನ ಕನಿಷ್ಟ ಅವಶ್ಯಕತೆಗಳಾದ ಆಹಾರ, ವಸ್ತ್ರ ಮತ್ತು ಆವಾಸದ ಪೂರ್ತಿ ಬಾಹ್ಯ ಆಕ್ರಮಣ ಹಾಗೂ ಆಂತರಿಕ ಒಡಕನ್ನು ತಡೆಯುವಂತಹ ಪ್ರಾಥಮಿಕ ಕರ್ತವ್ಯವನ್ನು 80 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪಾಲನೆ ಮಾಡಲಾಗಲಿಲ್ಲ. ಆ ಪಕ್ಷಕ್ಕೆ ಅಧಿಕಾರದಲ್ಲಿರುವಂತಹ ಯಾವುದೇ ಅವಕಾಶಗಳಿರುವುದಿಲ್ಲ. ಯಾವ ಪಕ್ಷವು ತನ್ನ ಉಚ್ಛ ಆದರ್ಶಗಳಿಂದ ಕುಸಿದು ಕೇವಲ ಅಧಿಕಾರ ಪ್ರಾಪ್ತಿಗಾಗಿ ಸ್ವಾರ್ಥಿಯಾಗಿದ್ದು ಮತ್ತು ಅಧಿಕಾರದಲ್ಲಿ ಮುಂದುವರಿಯಲು ರಾಷ್ಟ್ರದ್ರೋಹಿ ಹಾಗೂ ವಿಭಕ್ತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ, ಅವಕಾಶವಾದಿ ಹಾಗೂ ಅಶಿಸ್ತಿನ ವ್ಯಕ್ತಿಗಳಿಗೆ ವೇದಿಕೆಯಾಗಿದೆ, ಅದು ಭಾರತೀಯ ಜನತೆಯನ್ನು ಆಕಸ್ಮಿಕವಾಗಿ ಬರುವ ಸಂಕಟಗಳಿಂದ ನಿವಾರಣೆ ಮಾಡಲು ಮತ್ತು ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಆದರ್ಶ ಹಾಗೂ ಸಾಹಸಪೂರ್ಣ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸುವುದಿಲ್ಲ. ಈಗ ಸಮಾಜನಿಷ್ಠ ಹಾಗೂ ಕರ್ತವ್ಯ ದಕ್ಷ ನೇತೃತ್ವದ ಅವಶ್ಯಕತೆ ಇದೆ. ಸಂಘಟಿತ ಹಾಗೂ ಶಿಸ್ತಿನಿಂದಿರುವ ಪಕ್ಷದ ಅವಶ್ಯಕತೆ ಇದೆ. ವಾಸ್ತವಿಕವಾಗಿರುವ ಮತ್ತು ರಾಷ್ಟ್ರದ ಪ್ರತಿಭೆ, ಪರಂಪರೆ, ಸಂಸ್ಕೃತಿಯ ಆಧಾರಿತವಾಗಿರುವ ಕಾರ್ಯಕ್ರಮದ ಅವಶ್ಯಕತೆ ಇದೆ. ಪ್ರತಿಯೊಂದು ಸಮಸ್ಯೆಯ ಸಮಾಧಾನವೂ ಇದೇ ಆಗಿದೆ. ಭಾರತೀಯ ಸಂಸ್ಕೃತಿ ಮತ್ತು ಗೌರವ ಆದರಗಳನ್ನು ಆಧಾರವನ್ನಾಗಿ ಮಾಡಿಕೊಂಡು ದೇಶದ ಪ್ರಗತಿ ಮತ್ತು ವಿಧಿನಿಯಮಗಳನ್ನು ಬಲಪಡಿಸಲು ಭಾರತೀಯ ಜನಸಂಘ ಪ್ರಚಾರಾತ್ಮಕ, ರಚನಾತ್ಮಕ ಹಾಗೂ ಅವಶ್ಯಕತೆಗನುಸಾರವಾಗಿ ಆಂದೋಲನಗಳ ಮೂಲಕ ಜನಮತ ಸಂಗ್ರಹಣೆ ಮತ್ತು ಅದರ ಪ್ರಕಟಣೆಯಲ್ಲಿ ಪ್ರಯತ್ನಶೀಲವಾಗಿದೆ. ಸ್ಥಳೀಯ ಹಾಗೂ ಪ್ರಾದೇಶಿಕ ವಿಷಯಗಳ ಹೊರತಾಗಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಜೊತೆ ಏಕೀಕರಣಗೊಳಿಸಲು, ಗೋವಾದ ಮುಕ್ತಿ, ಚೀನಾದ ಆಕ್ರಮಣ, ಪಾಕಿಸ್ತಾನದ ಜೊತೆ ಸಂತುಷ್ಟಿಯ ನೀತಿ, ಹಣದುಬ್ಬರ, ನಿರುದ್ಯೋಗ, ಕರವೃದ್ಧಿ, ರಾಜಕೀಯ ವ್ಯಾಪಾರ ಹಾಗೂ ಸಹಕಾರಿ ಭಾವನೆ ಮುಂತಾದ ಸಾರ್ವದೇಶಿಕ ಮಹತ್ವಪೂರ್ಣ ವಿಷಯಗಳ ಬಗ್ಗೆ ಜನಸಂಘವು ಜನತೆಯ ಭಾವನೆಗಳನ್ನು ಪ್ರಭಾವಪೂರ್ಣವಾಗಿ ವ್ಯಕ್ತಗೊಳಿಸಿದೆ. ವಿಭಿನ್ನ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರೂಢಿವಾದ, ಜಾತಿವಾದ ಹಾಗೂ ಪ್ರಾಂತೀಯತೆಯಂತಹ ಭಾವನೆಗಳನ್ನು ಪ್ರಚೋದಿಸುತ್ತಿದೆ. ಭಾರತೀಯ ಜನಸಂಘವು ಈ ಸಮಸ್ಯೆಗಳ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಿದೆ ಮತ್ತು ಸಂಘವು ಯಾವಾಗಲೂ ರಾಷ್ಟ್ರಹಿತಕ್ಕೆ ಮೊದಲ ಆದ್ಯತೆಯನ್ನು ನೀಡಿದೆ. ಭಾರತೀಯ ಜನಸಂಘದ ಬಗ್ಗೆ ಜನತೆಯಲ್ಲಿ ಬೆಳೆಯುತ್ತಿರುವ ನಂಬಿಕೆ ಹಾಗೂ ವಿಶ್ವಾಸದ ಸಮರ್ಥನೆಯು ನಮ್ಮನ್ನು ಪ್ರೋತ್ಸಾಹಿಸುತ್ತಿದೆ. ಹಾಗೂ ಅವರ ಅಪೇಕ್ಷೆಯನ್ನು ಪೂರ್ಣಗೊಳಿಸಲು ಪೂರ್ಣಶಕ್ತಿಯಿಂದ ಪ್ರಯತ್ನಿಸುತ್ತೇವೆ. ಭಾಗ್ಯ ನಿರ್ಣಯದ ಈ ಸಂದರ್ಭದಲ್ಲಿ ಜನತೆಯು ತನ್ನ ಗಂಭೀರವಾದ ಜವಾಬ್ದಾರಿಯನ್ನು ಜನಸಂಘದ ಚುನಾವಣಾ ಘೋಷಣಾ ಪತ್ರ (4) 81 ಅರಿತುಕೊಂಡು ಭಯ ಅಥವಾ ಲೋಭಕ್ಕೆ ಒಳಗಾಗದೆ ತನ್ನ ಅಧಿಕಾರದ ಉಪಯೋಗವನ್ನು ಮಾಡಿಕೊಳ್ಳಲಿದೆ. ಇಂದಿನ ಸ್ಥಿತಿಯಲ್ಲಿ ಕೆಳಕಂಡ ಸಮಸ್ಯೆಗಳಿಗೆ ವಿಳಂಬವಿಲ್ಲದೆ ಗಮನ ಹರಿಸಬೇಕಾಗಿದೆ ಮತ್ತು ಅದನ್ನು ಪರಿಹರಿಸದೆ ಸ್ವತಂತ್ರದ ಸಂರಕ್ಷಣೆಯಾಗಲಿ ಹಾಗೂ ದೇಶದ ಆರ್ಥಿಕ ವಿಕಾಸವಾಗಲಿ ಸಂಭವವಾಗುವುದಿಲ್ಲ. (1) ರಾಷ್ಟ್ರದ ಸುರಕ್ಷೆ ಹಾಗೂ ಏಕತೆ (2) ಆಡಳಿತ ವ್ಯವಸ್ಥೆಯಲ್ಲಿ ಶುಚಿತ್ವ ಹಾಗೂ ದಕ್ಷತೆ (3) ಮೌಲ್ಯಗಳ ಸ್ಥಿರೀಕರಣ ಹಾಗೂ ನಿರುದ್ಯೋಗದ ನಿವಾರಣೆ (4) ಶಿಕ್ಷಣ ಪದ್ಧತಿಯ ಪುನರ್‌ನಿರ್ಮಾಣ. ಭಾರತೀಯ ಜನಸಂಘ ಮುಂದಿನ 5 ವರ್ಷಗಳಲ್ಲಿ ಈ ಸಮಸ್ಯೆಗಳ ನಿವಾರಣೆಗಾಗಿ ಸಂಕಲ್ಪ ಮಾಡಲಿದೆ. ಭಾರತದ ಗಡಿ ರೇಖೆಯು ಇಂದು ಆಕ್ರಮಣಕ್ಕೆ ತುತ್ತಾಗಿದೆ. ಒಂದು ಕಡೆ ಪಾಕಿಸ್ತಾನ ಹಾಗೂ ಮತ್ತೊಂದು ಕಡೆ ಚೀನಾ ದೇಶಗಳು ಈ ವಿಶಾಲ ಭೂ ಭಾಗದ ಮೇಲೆ ಬಲಾತ್ಕಾರವಾಗಿ ತನ್ನ ಅಧಿಕಾರ ನಡೆಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ಆಕ್ರಮಣಕಾರಿಗಳನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದರೂ ಕಾಂಗ್ರೆಸ್ ಸರ್ಕಾರವು ಯಾವ ತೃಪ್ತೀಕರಣದ ನೀತಿಯನ್ನು ಪಾಲಿಸುತ್ತಿದೆಯೋ ಅದರಿಂದ ಶತ್ರುಗಳಿಗೆ ತಮ್ಮ ಹಿಡಿತವನ್ನು ಬಲಗೊಳಿಸುವ ಅವಕಾಶ ಸಿಕ್ಕಿದೆ ಹಾಗೂ ಜನತೆಯ ಮನೋಬಲ ಕ್ಷೀಣಿಸುತ್ತಿದೆ. ಭಾರತೀಯ ಜನಸಂಘ ಸ್ವತಂತ್ರ ಹಾಗೂ ಪ್ರಭುತ್ವದ ಈ ಸಮಸ್ಯೆಯನ್ನು ಸಾಧ್ಯವಿರುವ ಎಲ್ಲಾ ಉಪಾಯಗಳಿಂದ ಎದುರಿಸಲಿದೆ ಹಾಗೂ ಭಾರತದ ಸಮಸ್ತ ಭೂಮಿಯನ್ನು ಮುಕ್ತವನ್ನಾಗಿಸಲಿದೆ. ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಂದು ಸಾಂಕ್ರಾಮಿಕ ರೋಗದ ರೂಪವನ್ನು ಪಡೆದಿದೆ. ಇದಕ್ಕಾಗಿ ಆಡಳಿತದ ನೀತಿ, ನಿಯಮ ಹಾಗೂ ಉನ್ನತ ಹಂತದ ಶಾಸಕರ ವ್ಯವಹಾರವೇ ಕಾರಣವಾಗಿದೆ. ಭಾರತೀಯ ಜನಸಂಘವು ಎಲ್ಲಿ ಭ್ರಷ್ಟ ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ವಿರುದ್ಧ ಕಠೋರ ದಂಡ ವ್ಯವಸ್ಥೆ ಮಾಡಲಿದೆಯೋ ಅಲ್ಲಿ ಕರ್ತವ್ಯ ದಕ್ಷ ಹಾಗೂ ಪ್ರಾಮಾಣಿಕ ಜನ ಸೇವಕರ ಉನ್ನತಿ ಆಗಲಿದೆ. ಜನಸಂಘವು ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಕೇಂದ್ರೀಕರಣದ ವೃತ್ತಿಯನ್ನು ದೂರ ಮಾಡಿ ಕೆಳಗಿನ ಕೆಲಸಗಾರರಿಗೆ ಅಧಿಕಾಧಿಕ ಜವಾಬ್ದಾರಿ ಹಾಗೂ ಸ್ವವಿವೇಕದಿಂದ ಕೆಲಸ ಮಾಡುವ ಅವಕಾಶವನ್ನು ಕೊಡಲಿದೆ. ಹಣದ ಏರು-ಪೇರಿನಿಂದ ದೇಶದ ಆರ್ಥಿಕ ವ್ಯವಸ್ಥೆ ಸಮತೋಲನದಲ್ಲಿಲ್ಲ. ಇದರ ಪರಿಣಾಮ ಉತ್ಪಾದಕ ಹಾಗೂ ಗ್ರಾಹಕ ಇಬ್ಬರ ಮೇಲೂ ಆಗುತ್ತಿದೆ. 82 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಭಾರತೀಯ ಜನಸಂಘ ಅರ್ಥ ವ್ಯವಸ್ಥೆಯ ಸಂತುಲಿತ ವಿಕಾಸಕ್ಕಾಗಿ ಕೃಷಿ ಮತ್ತು ಉದ್ಯೋಗದ ಉತ್ಪಾದನೆ, ವೇತನ ಮತ್ತು ದಿನಗೂಲಿ, ಸಾಲ ಮತ್ತು ಲಾಭ ಇವುಗಳ ಮಧ್ಯೆ ಹೊಂದಾಣಿಕೆ ಅವಶ್ಯಕವೆಂದು ತಿಳಿಯುತ್ತದೆ. ಭಾರತೀಯ ಜನಸಂಘ ಪಂಚವಾರ್ಷಿಕ ಯೋಜನೆ ಮತ್ತು ಶಾಸನದ ವಿತ್ತೀಯ ನೀತಿಯನ್ನು ರಾಷ್ಟ್ರದ ಆದಾಯ ವೃದ್ಧಿಯಲ್ಲಿ ದೇಶದ ಎಲ್ಲಾ ವರ್ಗದವರಿಗೆ ಸಮಾನರೂಪದಲ್ಲಿ ಪಾಲುದಾರರಾಗುವಂತಹ ನಿರ್ಧಾರವನ್ನು ಮಾಡಲಿದೆ ಹಾಗೂ ಅರ್ಥವ್ಯವಸ್ಥೆಯಲ್ಲಿ ಕಚ್ಚಾಟ ಉಂಟಾಗಿ ದೇಶದ ವಿಕಾಸದ ಮಾರ್ಗದಲ್ಲಿ ಯಾವುದೇ ತೊಂದರೆ ಉತ್ಪನ್ನವಾಗಬಾರದೆಂದು ಆಶಿಸುತ್ತದೆ. ಜೀವನದ ಅಧಿಕಾರವನ್ನು ಭಾರತೀಯ ಜನಸಂಘ ವ್ಯಕ್ತಿಯ ಮೌಲಿಕ ಅಧಿಕಾರವೆಂದು ತಿಳಿಯುತ್ತದೆ. ಕೆಲಸವಿಲ್ಲದ (ಉದ್ಯೋಗ) ವ್ಯಕ್ತಿ ತನ್ನ ಜೀವನವನ್ನು ಸಾರ್ಥಕವನ್ನಾಗಲಿ, ರಾಷ್ಟ್ರ ನಿರ್ಮಾಣದಲ್ಲಿ ತನ್ನ ಕೊಡುಗೆಯನ್ನಾಗಲಿ ಕೊಡಲು ಸಾಧ್ಯವಿಲ್ಲ. ಜೀವನ-ನಿರ್ವಹಣೆಯ ಜೊತೆ ಶಿಕ್ಷಣದ ಆತ್ಮೀಯ ಸಂಬಂಧವಿದೆ. ಇಂದು ಶಿಕ್ಷಣದ ಪುನರ್‍ನಿರ್ಮಾಣವಾಗಲಿ ಅಥವಾ ಪ್ರತ್ಯೇಕ ಬಾಲಕ-ಬಾಲಕಿಯರಿಗೆ ಶಿಕ್ಷಣದ ಉಚಿತ ವ್ಯವಸ್ಥೆಯನ್ನಾಗಲಿ ಮಾಡಲಾಗಿಲ್ಲ. ಶಿಕ್ಷಣದಿಂದ ವ್ಯಕ್ತಿಯು ತನ್ನ ವ್ಯಕ್ತಿತ್ವದ ವಿಕಾಸ ಮಾಡಿಕೊಳ್ಳುತ್ತಾ ಸಮಾಜಕ್ಕೆ ತನ್ನ ಕೊಡುಗೆ ನೀಡುತ್ತಾ ತನ್ನ ಜೀವನ-ನಿರ್ವಹಣೆ ಮಾಡುವುದರಲ್ಲಿ ಸಮರ್ಥನಾಗುತ್ತಾನೆ. ಭಾರತೀಯ ಜನಸಂಘವು ಮುಂದಿನ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಯುವಕನಿಗೆ ಶುಲ್ಕರಹಿತ ಮಾಧ್ಯಮಿಕ ಶಿಕ್ಷಣ ಮತ್ತು ಉದ್ಯೋಗದ ವ್ಯವಸ್ಥೆ ಮಾಡಲಿದೆ. ಭವಿಷ್ಯದಲ್ಲಿ ವಿಶೇಷವಾಗಿ ಮೇಲಿನ ಗುರಿಯನ್ನು ಸಾಧಿಸುವುದಕ್ಕಾಗಿ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಆಧರಿಸಿದ ರಾಜಕೀಯ, ಆರ್ಥಿಕ, ಸಾಮಾಜಿಕ ಆಡಳಿತ ವ್ಯವಸ್ಥೆಯ ಸ್ಥಾಪನೆ ಹಾಗೂ ಅದನ್ನು ಬಲಯುಕ್ತ ಮತ್ತು ಸುಸಂಪನ್ನವಾಗಿ ಮಾಡುತ್ತಾ ಒಂದು ಆಧುನಿಕ ಮತ್ತು ಜಾಗೃತ ರಾಷ್ಟ್ರ ನಿರ್ಮಾಣದ ಸಿದ್ಧಿಗಾಗಿ ಭಾರತೀಯ ಜನಸಂಘ ನೀತಿಯನ್ನಾಧರಿಸಿದ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ರಾಷ್ಟ್ರೀಯ ರಕ್ಷಣೆ ಚೀನಾ ಮತ್ತು ಪಾಕಿಸ್ತಾನ ಇಬ್ಬರ ಆಕ್ರಮಣದ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಭಾರತದ ರಕ್ಷಣಾ ಶಕ್ತಿಯನ್ನು ವೃದ್ಧಿಸುವುದು ಹಾಗೂ ಅತ್ಯಾಧುನಿಕ ಶಸ್ತ್ರಗಳಿಂದ ಅದನ್ನು ತಯಾರುಗೊಳಿಸುವುದು. ಹಾರಿಸಲಾಗುವ ಜನಸಂಘದ ಚುನಾವಣಾ ಘೋಷಣಾ ಪತ್ರ (4) 83 ಅಸ್ತ್ರಗಳು, ನೀರಿನಲ್ಲಿ ಚಲಿಸುವ ನೌಕೆಗಳು ಹಾಗೂ ಯುದ್ಧ ವಿಮಾನಗಳನ್ನು ದೇಶದಲ್ಲಿ ನಿರ್ಮಿಸಲಾಗುವುದು ಅಥವಾ ಅದನ್ನು ಪಡೆಯುವ ವ್ಯವಸ್ಥೆಯನ್ನು ಮಾಡಲಾಗುವುದು. ಆದರೆ ಭಾರತ ಯಾವುದೇ ಅನ್ಯ ಸೈನ್ಯ ಸಂಘಟನೆಯಲ್ಲಿ ಸೇರುವುದಿಲ್ಲ. ಒಂದು ರಾಷ್ಟ್ರೀಯ ರಕ್ಷಣಾ ನೀತಿಯ ನಿರ್ಧಾರ ಹಾಗೂ ಅದರ ವಿಕಾಸಕ್ಕಾಗಿ ರಾಷ್ಟ್ರೀಯ ರಕ್ಷಣಾ ಪರಿಷತ್‍ನ ನಿರ್ಮಾಣವಾಗಲಿದೆ. ಅದರಲ್ಲಿ ದೇಶದ ಎಲ್ಲಾ ರಾಷ್ಟ್ರೀಯ ಶಕ್ತಿಯ ಸಂಗಮವಿರುತ್ತದೆ. ಎನ್.ಸಿ.ಸಿ.ಯನ್ನು ವಿಸ್ತರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅದರಲ್ಲಿ ಸೇರಿಸಿಕೊಳ್ಳಲಾಗುವುದು. ಪ್ರಾದೇಶಿಕ ಸೇನೆಯ ಆಧಾರವಾಗಿ ಸಂಘಟನೆ ಮಾಡಲಾಗುವುದು. ಹೊಸ ರಕ್ಷಣಾ ಹುದ್ದೆಗಳ ಸ್ಥಾಪನೆ ಹಾಗೂ ಹಳೆಯ ವ್ಯವಸ್ಥೆಯಲ್ಲಿ ವೃದ್ಧಿ ಮಾಡಲಾಗುವುದು. ಸೈನಿಕರ ವೇತನ ಹಾಗೂ ಅನ್ಯ ಸೌಲಭ್ಯಗಳಲ್ಲಿ ವೃದ್ಧಿಮಾಡಲಾಗುವುದು. ರಕ್ಷಣಾ ವಿಭಾಗದಿಂದ ಗಡಿಪ್ರಾಂತ್ಯದ ವಿಕಾಸಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗುವುದು. ಸಾಧನ ಮತ್ತು ಸಂಪರ್ಕ ವ್ಯವಸ್ಥೆಯ ವಿಸ್ತಾರದ ಜೊತೆಗೆ ಆ ಕ್ಷೇತ್ರದ ಆರ್ಥಿಕ ವಿಕಾಸದ ಬಗ್ಗೆಯೂ ಗಮನ ನೀಡಲಾಗುವುದು. ಗಡಿಯ ಮೇಲ್ವಿಚಾರಣೆಗಾಗಿ ಒಂದು ವಿಶೇಷ ಆರಕ್ಷಕ ದಳದ ನಿರ್ಮಾಣವಾಗಲಿದೆ ಮತ್ತು ಅದರ ವ್ಯವಸ್ಥೆಯನ್ನು ಕೇಂದ್ರ ಮಾಡಲಿದೆ. ಗಡಿ ಪ್ರವೇಶ ಹಾಗೂ ಅಕ್ರಮ ವ್ಯಾಪಾರಗಳನ್ನು ತಡೆಯಲು ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು. ಗುಪ್ತಚರ ವಿಭಾಗವನ್ನು ಅಧಿಕ ದಕ್ಷ ಹಾಗೂ ಸಕ್ರಿಯವನ್ನಾಗಿ ಮಾಡಲಾಗುವುದು ಇದರಿಂದ ವಿದೇಶಿ ಗುಪ್ತಚರರು ಹಾಗೂ `ಪಂಚಮಾಂಗಿ’ಯರ ಮೇಲೆ ತೀವ್ರ ನಿಗಾ ಇಡಬಹುದು ಮತ್ತು ಅವರ ಷಡ್ಯಂತ್ರಗಳನ್ನು ಜಾರಿಗೆ ಬರುವ ಮೊದಲೇ ಭೇದಿಸಬಹುದು. ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಬಂದಿರುವ ಪಾಕಿಸ್ತಾನೀಯರನ್ನು ಹೊರಹಾಕಲು ತೀವ್ರಕ್ರಮ ಕೈಗೊಳ್ಳಲಾಗುವುದು. ಗಡಿಯಲ್ಲಿ ಅತಿಕ್ರಮಣ ಪ್ರವೇಶವಾದರೆ ಭಾರತೀಯ ಜನಸಂಘದ ನೀತಿ ವಿರೋಧ ಪತ್ರದಿಂದ ಸಂತೋಷಪಡದೆ ಉತ್ತರಕೊಡುವ ಕೆಲಸವನ್ನು ಮಾಡಬೇಕಾಗಿದೆ. ರಾಷ್ಟ್ರೀಯ ಏಕತೆ ವಿಘಟನೆ ಮತ್ತು ವಿಚ್ಛೇದ ಪ್ರವೃತ್ತಿಗಳು ರಾಷ್ಟ್ರೀಯ ನಿಷ್ಟೆಯನ್ನು ಪ್ರಬಲ ಮಾಡುವ ಭಾವನಾತ್ಮಕ ಕಾರ್ಯ ನಡೆದಿಲ್ಲವೆಂಬುದರ ದ್ಯೋತಕವಾಗಿದೆ. ಉಪಾಸನೆಯ ಪದ್ಧತಿಗೆ ಪೂರ್ಣಸ್ವತಂತ್ರ ಕೊಡುತ್ತಾ ಭಾರತೀಯ ಜನಸಂಘ ಧರ್ಮವನ್ನು ರಾಜಕೀಯದ ಜೊತೆ ಸೇರಿಸುವ ಅಥವಾ ಸಾಂಪ್ರದಾಯಿಕತೆಯ 84 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಧಾರದಲ್ಲಿ ವಿಶೇಷ ಅಧಿಕಾರಿಗಳನ್ನು ಕರೆಯಿಸುವ ಪ್ರವೃತ್ತಿ, ಅ ಸಾಂಪ್ರಾದಾಯಿಕ ರಾಜ್ಯದ ಸಿದ್ಧಾಂತಗಳ ವಿರೋಧ ಹಾಗೂ ರಾಷ್ಟ್ರೀಯ ಏಕಾತ್ಮತೆಯ ನಿರ್ಮಾಣಕ್ಕೆ ಇವುಗಳೆಲ್ಲಾ ಬಾಧಕಗಳಾಗಿವೆ. ವಿರೋಧಿಯಾಗಿರುವವರಿಗೆ ಯಾವುದೇ ಪ್ರಕಾರದ ಆಶ್ರಯಕೊಡಲು ಬಿಡುವುದಿಲ್ಲ. ಧರ್ಮದ ಆಧಾರದಲ್ಲಿ ಭಾರತೀಯ ಜನತೆಯನ್ನು ಬಹುಸಂಖ್ಯರು ಮತ್ತು ಅಲ್ಪಸಂಖ್ಯರು ಎಂಬ ವರ್ಗಗಳಲ್ಲಿ ವಿಭಜಿಸುವುದು ತರ್ಕಸಂಗತವಲ್ಲದ ವಿಷಯ ಮತ್ತು ಇದು ರಾಷ್ಟ್ರೀಯತೆಯ ಕಲ್ಪನೆಯಲ್ಲಿ ಅಜ್ಞಾನದ ಪರಿಚಯವನ್ನು ಮಾಡಿಕೊಡುತ್ತದೆ. ರಾಜಕೀಯ ಆಡಳಿತದಲ್ಲಿ ಈ ತರಹದ ತಪ್ಪು ಧಾರಣೆಯ ಮೇಲೆ ಆಧಾರಿತವಾದ ವರ್ಗೀಕರಣಕ್ಕೆ ಯಾವುದೇ ಸ್ಥಾನವಿರುವುದಿಲ್ಲ. ಎಲ್ಲಾ ನಾಗರಿಕರಿಗೂ ಭಾರತೀಯ ಸಂಸ್ಕೃತಿಯ ಬಗ್ಗೆ ನಿಷ್ಠೆಯನ್ನು ಬರಿಸಿ ರಾಷ್ಟ್ರೀಯ ಏಕತೆಯನ್ನು ಬಲಯುತವಾಗಿ ಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಮಾಜದಲ್ಲಿ ಉಚ್ಛ-ನೀಚ, ಸ್ಪೃಶ್ಯ-ಅಸ್ಪೃಶ್ಯ ಮುಂತಾದ ಭೇದ ಭಾವವನ್ನು ದೂರಮಾಡಿ ಒಂದೇ ನಿಷ್ಠೆಯನ್ನು ತರುವ ಸಲುವಾಗಿ ಹಿಂದುಳಿದ ಜಾತಿಯವರಿಗೆ ಆರ್ಥಿಕ ಹಾಗೂ ಶೈಕ್ಷಣಿಕ ಸಹಾಯದ ವ್ಯವಸ್ಥೆಯನ್ನು ಮಾಡಲಾಗುವುದು. ಭಾರತದಲ್ಲಿರುವಂತಹ ಪ್ರತ್ಯೇಕ ವಿದೇಶಿ ಮಿಶನರಿಗಳ ಕಾರ್ಯ ಮತ್ತು ವ್ಯವಹಾರಗಳನ್ನು ತನಿಖೆ ಮಾಡಲಾಗುವುದು ಮತ್ತು ಯಾವ ಮಿಶನರಿಗಳು ಆಪತ್ತಿನ ರೂಪದಲ್ಲಿ ಪರಿವರ್ತನೆ ಮಾಡುತ್ತಿದೆಯೋ ಅಥವಾ ರಾಜಕೀಯದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆಯೋ ಅವನ್ನು ಭಾರತದಿಂದ ಹೊರ ಹಾಕಲಾಗುವುದು. ನಿಯೋಗದ ಸಮಿತಿ ಹಾಗೂ ರೇಗೆ ಸಮಿತಿಯ ಶಿಫಾರಸ್ಸನ್ನು ಕಾರ್ಯಾನ್ವಯಗೊಳಿಸಲಾಗುವುದು. ಸಾಮಾನ್ಯವಾಗಿ ವನವಾಸಿ ಹಾಗೂ ಗಡಿ ಪ್ರಾಂತ್ಯಗಳಲ್ಲಿ ವಿದೇಶಿ ಮಿಶನರಿಗಳ ಪ್ರವೇಶವನ್ನು ರದ್ದುಪಡಿಸಲಾಗುವುದು. ರಾಷ್ಟ್ರೀಯ ಏಕತೆಯ ಮಾರ್ಗದಲ್ಲಿ ವರ್ತಮಾನ ಸಂವಿಧಾನವು ಒಂದು ಬಾಧಕವಾಗಿದೆ. ಯಾಕೆಂದರೆ ಅದರಲ್ಲಿ ಸಂಘಾತ್ಮಕವಾದ ಆಡಳಿತ ವ್ಯವಸ್ಥೆ ಮಾಡಲಾಗಿದೆ ಮತ್ತು ಭಾರತವನ್ನು ಭಾರತೀಯ ಸಂಘ ಹಾಗೂ ಪ್ರಾಂತ್ಯಗಳನ್ನು ರಾಜ್ಯದ ಹೆಸರು ನೀಡಿ ಅದರ ಬೇರ್ಪಡಿಕೆ ಮತ್ತು ಪ್ರಭುತ್ವವನ್ನು ಮಾನ್ಯ ಮಾಡಲಾಗಿದೆ. ಜನಸಂಘವು ಸಂವಿಧಾನದಲ್ಲಿ ಸಂಶೋಧನೆಯನ್ನು ನಡೆಸಿ ಭಾರತವನ್ನು `ಏಕರಾಜ್ಯ’ವೆಂದು ಘೋಷಿಸಲಿದೆ. ಅದರಲ್ಲಿ ಕೆಳಮಟ್ಟದ ತನಕ ವಿಕೇಂದ್ರೀಕರಣದ ವ್ಯವಸ್ಥೆ ಮಾಡಲಾಗುವುದು. ಜನಸಂಘದ ಚುನಾವಣಾ ಘೋಷಣಾ ಪತ್ರ (4) 85 ಕಾಶ್ಮೀರ ಭಾರತೀಯ ಜನಸಂಘವು ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅಭಿನ್ನ ಅಂಗವೆಂದು ತಿಳಿದಿದೆ. ಜನಸಂಘವು ಅದನ್ನು ಭಾರತದ ಅನ್ಯ ರಾಜ್ಯಗಳ ಮಟ್ಟಕ್ಕೆ ತರಲು ಭಾರತೀಯ ಸಂವಿಧಾನದಲ್ಲಿ ಅನುಚ್ಛೇದ ಸಂಖ್ಯೆ 370ನ್ನು ಸಮಾಪ್ತಗೊಳಿಸಿ ಆ ಪ್ರದೇಶದಲ್ಲಿ ಸಂಪೂರ್ಣವಾಗಿ ಜಾರಿಗೆ ತರಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತೀಯ ನಾಗರಿಕರು ಹಾಗೂ ಅನ್ಯ ನಾಗರಿಕರ ಮಧ್ಯೆ ಭೇದಭಾವವನ್ನು ಸೃಷ್ಟಿಸುವ ವಿಷಯಗಳನ್ನು ನಾಶ ಮಾಡಲಾಗುವುದು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಾಗರಿಕರಿಗೆ ಲೋಕಸಭೆ ಚುನಾವಣೆಯ ಮತಾಧಿಕಾರವನ್ನು ನೀಡಲಾಗುವುದು. ರಾಜ್ಯದಲ್ಲಿರುವ ನಿರ್ವಾಸಿತ ನಾಗರೀಕತೆ ಮತ್ತು ಮತದಾನದ ಅಧಿಕಾರದ ಅವಕಾಶ ಮಾಡಿಕೊಡಲಾಗುವುದು. ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರ್ವಾಸಿತ ಕುಟುಂಬಗಳಿಗೆ ವಾಸಿಸಲು ಮತ್ತು ಆಗಿರುವ ನಷ್ಟ ತುಂಬಿಕೊಡುವ ಸೌಲಭ್ಯಗಳನ್ನು ನೀಡಲಾಗುವುದು ಮತ್ತು ಇದೇ ವ್ಯವಸ್ಥೆ ಅನ್ಯರಿಗೂ ಮಾಡಲಾಗಿದೆ. ಭಾರತೀಯ ಜನಸಂಘವು ಕಾಶ್ಮೀರದ ಮೇಲೆ ಆದ ಆಕ್ರಮಣವನ್ನು ಭಾರತದ ಮೇಲೆ ಆದ ಆಕ್ರಮಣವೆಂದು ತಿಳಿಯುತ್ತದೆ. ಮತ್ತು ಎಲ್ಲಾ ಸಾಧ್ಯವಿರುವ ಉಪಾಯಗಳಿಂದ ಆಕ್ರಮಿತ ಭೂಭಾಗವನ್ನು ಮುಕ್ತವನ್ನಾಗಿಸಲಿದೆ. __________ * ಆಕರ : ಪಾಂಚಜನ್ಯ ವಾರಪತ್ರಿಕೆ, 6-10-1961ರ ಸಂಚಿಕೆ (ಸಂ.) ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು ಭಾರತೀಯ ಜನರ ಮೇಲೆ ಸಮಾಜವಾದಿ ಪಕ್ಷದ ಮೋಡಿ ಸಮಾಪ್ತಿ. (ಜನಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಮಕ್ಷಮದಲ್ಲಿ ಶ್ರೀ ಉಪಾಧ್ಯಾಯರ ನಿವೇದನೆ) ಕೋಟ(ರಾಜಸ್ತಾನ) ದಲ್ಲಿ ದಿನಾಂಕ 24-5-1962 ರಂದು ಭಾರತೀಯ ಜನಸಂಘದ ಕೇಂದ್ರೀಯ ಕಾರ್ಯಸಮಿತಿಯ ಕಾರ್ಯಕ್ರಮದಲ್ಲಿ ಮಹಾಮಂತ್ರಿ ಪ.ದೀನ್‍ದಯಾಳ್ ಉಪಾಧ್ಯಾಯರು ನಿವೇದನೆ ಮಾಡುತ್ತಾ ಹೀಗೆಂದರು : ಭಾರತೀಯ ಪ್ರತಿನಿಧಿ ಸಭೆಯು ದಿನಾಂಕ 12-14 ನವೆಂಬರ್ 1961 ರಂದು ವಾರಣಾಸಿಯಲ್ಲಿ ನಡೆದ ತಮ್ಮ ಹಿಂದಿನ ಅಧಿವೇಶದನಲ್ಲಿ ತೃತೀಯ ಚುನಾವಣೆಗಾಗಿ ಜನಸಂಘದ ನೀತಿ ನಿಯಮಗಳನ್ನು ನಿರ್ಧರಿಸಿತ್ತು ಹಾಗೂ ಚುನಾವಣಾ ಘೋಷಣಾ ಪತ್ರವನ್ನು ಸ್ವೀಕರಿಸಿತ್ತು. ಆ ಸಮಯದಲ್ಲಿ ನಾವು ಅಧಿಕ ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೆವು. ಹಾಗೂ ಬೇರೆ ಪಕ್ಷಗಳ ಜೊತೆ ಯಾವುದೇ ರೀತಿಯ ಚುನಾವಣಾ ಮೈತ್ರಿಯಾಗಲಿ ಅಥವಾ ಸಂಯುಕ್ತ ನಿರ್ಧಾರವಾಗಲಿ ಕೈಗೊಳ್ಳದೆ ತಮ್ಮದೇ ಕಾರ್ಯಕ್ರಮ ಮತ್ತು ನೀತಿಯ ಆಧಾರವಾಗಿ ಜನಮತ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು. ಸ್ಥಾನೀಯ ಅವಶ್ಯಕತೆಗಳಿನುಸಾರವಾಗಿ ವಿನಾಯಿತಿ ಸಹ ನೀಡಿದ್ದೆವು. ನಿಂದಾರ್ಹ ವ್ಯಕ್ತಿಗಳು ಅಥವಾ `ಕಮ್ಯುನಿಸ್ಟ್', `ಮುಸ್ಲಿಂ ಲೀಗ್', `ದ್ರವಿಡ ಮುನೇತ್ರ ಕಳಗಂ' ಮತ್ತು `ಅಕಾಲಿ ದಳ’ ಪಕ್ಷಗಳನ್ನು ಬಿಟ್ಟು ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಆ ಕ್ಷೇತ್ರಗಳಲ್ಲಿ ನಮ್ಮ ಉಮೇದುವಾರರು ನಿಲ್ಲಬಾರದೆಂಬ ನಿಯಮದ ಹೊರತಾಗಿ ನಮ್ಮೆಲ್ಲರ ಮೇಲೆ ಮತ್ತಾವುದೇ ಒತ್ತಾಯ ಇರಲಿಲ್ಲ. ನಮ್ಮ ಚುನಾವಣಾ ತಯಾರಿ ಮೇಲ್ಕಂಡ ನೀತಿಗನುಸಾರವಾಗಿ ಜನಸಂಘವು ವಿಧಾನಸಭೆಗೆ 1162 ಹಾಗೂ ಲೋಕಸಭೆಗೆ 198 ಸ್ಪರ್ಧಿಸುವ ಸದಸ್ಯರನ್ನು ನಿಲ್ಲಿಸಿತು. ಕಾಂಗ್ರೆಸೇತರ ಪಕ್ಷಗಳಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಜನಸಂಘ ನಿಶ್ಚಯಿಸಿತು. ಬೇರೆ ಚುನಾವಣೆಗಳ ಹೋಲಿಕೆಯಲ್ಲಿ ಇದು ಒಂದು ದೊಡ್ಡ ಪ್ರಯತ್ನವಾಗಿತ್ತು ಏಕೆಂದರೆ ಆ ಸಮಯದಲ್ಲಿ ವಿಧಾನಸಭೆ ಮತ್ತು ಲೋಕಸಭೆಯ ಪ್ರತಿಸ್ಪರ್ಧಿಗಳ ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 87 ಸಂಖ್ಯೆ ಕ್ರಮಶಃ 578 ಮತ್ತು 130 ಇತ್ತು. ಹಿಂದಿನ ಸಲ ನಾವು ಅಸ್ಸಾಂ, ಒರಿಸ್ಸಾ, ಮದ್ರಾಸು ಮತ್ತು ಕೇರಳಗಳ ಚುನಾವಣೆಯಲ್ಲಿ ಸ್ಪರ್ಧಿಸಲಿರಲಿಲ್ಲ. ಹಾಗೂ ಆಂಧ್ರದಲ್ಲಿ ಕೇವಲ 2 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಆದರೆ ಈ ಸಲ ಒರಿಸ್ಸಾ ಹೊರತುಪಡಿಸಿ ಬಾಕಿ ಎಲ್ಲಾ ಸ್ಥಾನಗಳಲ್ಲೂ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಉಲ್ಲೇಖಿಸಬೇಕಾದ ಮಹತ್ವಪೂರ್ಣ ಸಂಗತಿ ಎಂದರೆ ಕೆಲವು ಪ್ರತಿಸ್ಪರ್ಧಿಗಳನ್ನು ಬಿಟ್ಟು ಮಿಕ್ಕ ಎಲ್ಲಾ ಪ್ರತಿಸ್ಪರ್ಧಿಗಳ ಆಯ್ಕೆ ಬಹಳ ನಿಧಾನವಾಗಿ ಮಾಡಲಾಯಿತು. ಹಾಗೂ ಕೆಲವೊಂದು ಕ್ಷೇತ್ರಗಳಲ್ಲಿ ಅಂತಿಮ ಸಮಯದಲ್ಲಿ ಪ್ರತಿಸ್ಪರ್ಧಿಗಳನ್ನು ಬದಲಾಯಿಸಬೇಕಾಯಿತು. ಇದಕ್ಕೆ ಬಹಳ ಮಹತ್ವಪೂರ್ಣವಾದ ಕಾರಣ ಇದೆ ಎಂದು ಒಪ್ಪಿದರೂ ನಿಶ್ಚಯವಾಗಿ ಇದರ ಪ್ರಭಾವ ಚುನಾವಣಾ ಫಲಿತಾಂಶದ ಮೇಲೆ ಆಯಿತು. ಎಲ್ಲರಿಗೂ ಶಿಕ್ಷಣ, ಜನಸಂಘದ ಸಿದ್ಧಾಂತ ಮತ್ತು ಕಾರ್ಯಕ್ರಮದ ಪ್ರಚಾರ ಹಾಗೂ ಸಂಘಟನೆಯ ವಿಸ್ತಾರದ ದೃಷ್ಟಿಯಿಂದ ಈ ಪ್ರಯತ್ನ ನಿಶ್ಚಿತವಾಗಿ ಲಾಭಕಾರಿಯಾಗಲಿದೆ. ಅನ್ಯ ಪಕ್ಷಗಳ ಜೊತೆ ಸಂದೇಹದ ಪ್ರಶ್ನೆಯು ಜನಸಂಘದ ನೀತಿಗನುಸಾರವಾಗಿ ಉತ್ಪನ್ನವಾಗುತ್ತಿರಲಿಲ್ಲ. ಆದರೆ ಸಾಮಂಜಸ್ಯದ ಲಕ್ಷಣಗಳು ಅಕ್ಕ-ಪಕ್ಕದ ಪಕ್ಷಕ್ಕೆ ಸಂಬಂಧಪಡದ ವ್ಯಕ್ತಿಗಳಿಂದ ಕಂಡುಬಂತು. ರಾಜಸ್ತಾನದಲ್ಲಿ ಸ್ವತಂತ್ರ ಪಾರ್ಟಿಯ ನಾಯಕರ ಜೊತೆ ಪ್ರಾಂತ್ಯದ ಸಾಮಂಜಸ್ಯದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ ಅದು ಸಫಲವಾಗಲಿಲ್ಲ. ಆ ಪಕ್ಷದ ನಾಯಕರು ಸಾಮಂಜಸ್ಯದ ನಿರ್ಣಯವನ್ನು ವ್ಯವಹಾರದ ಮೂಲಕ ತಮ್ಮ ಪಕ್ಷದ ಅನುಯಾಯಿಗಳಿಗೆ ಒಪ್ಪಿಸುವಂತಹ ಸ್ಥಿತಿಯಲ್ಲಿರಲಿಲ್ಲ. ಸಾಮಂಜಸ್ಯದ ಪರಿಣಾಮವಾಗಿ ನಾವು ಪಕ್ಷದಲ್ಲಿರದ ವ್ಯಕ್ತಿಗಳಾದ, ಪೂಲ್‍ಪುರದ ಡಾ|| ರಾಮ್‍ಮನೋಹರ್ ಲೋಹಿಯಾ, ಉತ್ತರ ಬೊಂಬಾಯಿಯ ಆಚಾರ್ಯ ಕೃಪಲಾನಿ, ಫತೇಪುರದ ಶ್ರೀ ಗೌರಿಶಂಕರ ಕಕ್ಕಡ್ ಹಾಗೂ ನರಸಿಂಹಗಢದ ಶ್ರೀ ಭಾನುಪ್ರತಾಪ ಸಿಂಹರನ್ನು ಸಮರ್ಥಿಸಿದೆವು. ಇವರಲ್ಲಿ ಶ್ರೀ ಕಕ್ಕಡ್ ಹಾಗೂ ಶ್ರೀ ಭಾನುಪ್ರತಾಪ್‍ಸಿಂಹರು ವಿಜಯಿಗಳಾದರು. ಇದೇ ತರಹ ನಾವು ಶ್ರೀ ರಾಮೇಶ್ವರಾನಂದ (ಕರ್ನಾಲ್) ಹಾಗೂ ಲಾಲಾ ಹರದೇವ್‍ಸಹಾಯ್ (ಅಮರೋಹ)ರವರನ್ನು ಸಮರ್ಥಿಸಲಾಗಿತ್ತು ಹಾಗೂ ಅವರು ನಮ್ಮ ಚಿಹ್ನೆಯನ್ನಿಟ್ಟುಕೊಂಡು ಕಣಕ್ಕಿಳಿದಿದ್ದರು. ಸ್ವಾಮೀ ರಾಮೇಶ್ವರಾನಂದರು ಗೆದ್ದ ನಂತರ ಜನ ಸಂಘದ ಜೊತೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ವಿಭಿನ್ನ ಪಕ್ಷಗಳ ಚುನಾವಣಾ ಪ್ರಚಾರದ ಪರೀಕ್ಷೆ ಅವಶ್ಯಕ ಭಾರತೀಯ ಜನಸಂಘ ರಾಜಕೀಯಕ್ಕೆ ಒಂದು ಹೊಸ ಸ್ವರೂಪವನ್ನು ಕೊಡಲಿಚ್ಛಿಸುತ್ತದೆ. ಹಾಗಾಗಿ ಅದರ ಪ್ರಚಾರ ಮತ್ತು ಆಂದೋಲನ ಯಾವಾಗಲೂ 88 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಹೊಸ ದೃಷ್ಟಿಕೋನವನ್ನು ಇಟ್ಟುಕೊಂಡು ನಡೆದಿದೆ. ಈ ಚುನಾವಣೆಗಳಲ್ಲೂ ನಾವು ನಮ್ಮ ಮಟ್ಟವನ್ನು ಕಾಯ್ದುಕೊಂಡಿದ್ದೆವು. ನಮ್ಮ ನಾಯಕರು ಪ್ರಮುಖ ರೂಪವಾಗಿ ತಮ್ಮ ವಿಷಯಗಳನ್ನು ಜನರ ಮುಂದಿಟ್ಟರು ಹಾಗೂ ಅನ್ಯ ಪಕ್ಷದವರ ವಿಶ್ಲೇಷಣೆಯನ್ನು ಕಾರ್ಯಕ್ರಮದಲ್ಲಿ ತರ್ಕ ಮತ್ತು ಆಧಾರಸಹಿತವಾಗಿ ಮಾಡಿದರು. ಕಾಂಗ್ರೆಸ್ ಮತ್ತು ಅದರಿಂದ ಹೊರಟಿರುವ ಅನ್ಯ ಪಕ್ಷಗಳ ನಡುವೆ ಮೌಲಿಕ ಮತ್ತು ಸೈದ್ಧಾಂತಿಕ ಭೇದಭಾವ ಇರುವ ಕಾರಣ ಹಾಗೂ ದೇಶದ ಸಂಸ್ಕೃತಿ ಮತ್ತು ದೇಶಭಕ್ತಿಗೆ ಸಂಬಂಧಿಸಿದ ಪರ್ಯಾಯ ನೀತಿ ಮತ್ತು ಕಾರ್ಯಕ್ರಮ ನಮ್ಮ ಹತ್ತಿರ ಇರುವುದರಿಂದ ನಮ್ಮ ವಿಶ್ಲೇಷಣೆಗಳು ಆಧಾರಸಹಿತ ಹಾಗೂ ಅನ್ಯಪಕ್ಷಗಳ ಸತ್ಯಾಂಶಗಳನ್ನು ಹೊರಗೆಳೆಯುವುದಾಗಿತ್ತು. ನಿರ್ಭಯತೆ ಹಾಗೂ ನಿಸ್ವಾರ್ಥ ವೃತ್ತಿಯ ಕಾರಣದಿಂದ ಅವರ ವಿಧಾನವು ಕೆಲವು ಕಡೆ ಸಂಕೀರ್ಣವಾಗಿ ಹೋಗಿತ್ತು. ಆದರೆ ಜನಸಂಘ ತನ್ನ ಸಂಪೂರ್ಣ ಪ್ರಚಾರದಲ್ಲಿ ಎಲ್ಲಿಯೂ ವ್ಯಕ್ತಿಗತವಾದ ಆಕ್ಷೇಪ, ಸಾಂಪ್ರದಾಯಿಕ ಹಾಗೂ ಜಾತಿ-ಧರ್ಮ ಭಾವನೆಗಳನ್ನು ಹಾಗೂ ಪ್ರಾಂತೀಯ, ಸೀಮಿತ ಜಾತಿಯ ಲಕ್ಷಣಗಳನ್ನು ಆಶ್ರಯಿಸಲಿಲ್ಲ. ವಿಭಿನ್ನ ಪ್ರದೇಶಗಳಲ್ಲಿ ಯಾವ ಆಚಾರ-ಸಂಹಿತೆಗಳನ್ನು ಸ್ವೀಕರಿಸಲಾಗಿತ್ತೋ ಅದನ್ನೇ ಪೂರ್ಣವಾಗಿ ನಾವು ಪಾಲಿಸಿದೆವು. ಚುನಾವಣೆಯ ನಂತರ ಕೆಲವು ಕಮ್ಯುನಿಸ್ಟ್ ಹಾಗೂ ಅದರ ಸಮರ್ಥಕ ಪತ್ರಿಕೆಗಳು ಜನಸಂಘದ ಚುನಾವಣಾ ಅಪಪ್ರಚಾರ ಅಥವಾ ಪೋಸ್ಟರ್ ಹೊರಡಿಸುವ ವಿಷಯದಲ್ಲಿ ತಪ್ಪು ಆರೋಪ ಮಾಡಿದವು. ಅವರು ಪ್ರಧಾನಮಂತ್ರಿಯವರನ್ನು ಎಳೆಯುವ ಪ್ರಯತ್ನ ಮಾಡಿದ್ದಾರೆ. ಪ್ರಧಾನ ಮಂತ್ರಿಯವರು ಶ್ರೀ ಬಲರಾಜ್ ಮಧೋಕ್‍ರವರಿಗೆ ಬರೆದಿರುವ ಪತ್ರದಲ್ಲಿ ಈ ಷಡ್ಯಂತ್ರದಿಂದ ನಾನು ಈಗ ದೂರವಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಕಮ್ಯುನಿಸ್ಟ್‌ರ ಅನ್ಯ ಜೊತೆಗಾರರು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇವೆಲ್ಲಾ ಮುಂದಿನ ರಾಜಕೀಯವನ್ನು ಪ್ರಭಾವಿತಗೊಳಿಸಲು, ಭಾರತೀಯ ಜನಸಂಘದ ಭಯವನ್ನು ಹುಟ್ಟಿಸಿ ಜನರ ಗಮನವನ್ನು ಸೆಳೆಯಲು ಮಾಡುವ ಕಾರ್ಯವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದರಿಂದ ಭಾರತ ವಿರೋಧಿ ಕಾರ್ಯಗಳನ್ನು ನಡೆಸುತ್ತಿರುಬಹುದು. ಹಾಗೂ ಚುನಾವಣೆಯ ಸಮಯದಲ್ಲಿ ಮಾಡಿದ ಪಾಪಾಕಾರ್ಯಗಳನ್ನು ಮುಚ್ಚಿಡಲು ಮಾಡುವ ನಾಟಕವಾಗಿದೆ. ನಾನು (ಉಪಾಧ್ಯಾಯ) ಸರ್ಕಾರಕ್ಕೆ ಮಾಡಿಕೊಳ್ಳುವ ಪ್ರಾರ್ಥನೆ ಏನೆಂದರೆ ವಿಭಿನ್ನ ಪಕ್ಷಗಳ ಮೂಲಕ ನಡೆದಿರುವ ಚುನಾವಣಾ ಪ್ರಚಾರದ ತನಿಖೆ ನಿಷ್ಕಳಂಕವಾಗಿ ನಡೆಯಬೇಕು. ಇದು ಇಂದಿನ ಸಮಸ್ಯೆಗಳನ್ನು ಸಮಾಪ್ತಗೊಳಿಸುವುದಲ್ಲದೆ ಭವಿಷ್ಯದ ಚುನಾವಣಾ ಪ್ರಚಾರದ ಮಟ್ಟವನ್ನು ಮೇಲೇರಿಸುವುದರಲ್ಲಿ ಅವಶ್ಯಕವಾಗಿದೆ. ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 89 ಕಮ್ಯುನಿಸ್ಟ್‌ರ ಹಿಂಸೆಯ ಕೃತ್ಯ. ಚುನಾವಣೆಯಲ್ಲಿ ಕೀಳುಮಟ್ಟದ ಪ್ರಚಾರದ ಜೊತೆ ಜೊತೆಗೆ ಕಮ್ಯುನಿಸ್ಟ್ ರಿಂದ ಹಲವಾರು ಸ್ಥಾನಗಳಲ್ಲಿ ಹಿಂಸೆ ಮತ್ತು ಬಲಪ್ರಯೋಗವನ್ನು ನಡೆಸಲಾಯಿತು. ಆದರೆ ಅವರು ಈ ಘಟನೆಯನ್ನು ಅದೇ ಸ್ಥಾನದಲ್ಲಿ ನಡೆಸಿದರು. ಈ ಹಿಂದೆ ಈ ಸ್ಥಳದಲ್ಲಿ ಜನಸಂಘದ ವಿರುದ್ಧ ಕಾಂಗ್ರೆಸ್‍ನ್ನು ಸಮರ್ಥಿಸುತ್ತಾ ಭಾಷಣ ನೀಡಿದ ಸ್ಥಳದಲ್ಲಿಯೇ ಈ ಘಟನೆಯನ್ನು ನಡೆಸಿದರು. ಈ ನೀತಿ ಕಾಂಗ್ರೆಸ್ಸಿನ ಪಕ್ಷದಲ್ಲಿದ್ದು ತನ್ನ ತಿರಸ್ಕೃತ ಸಂಕಲ್ಪವನ್ನು ಪೂರ್ಣಗೊಳಿಸಲು ಸ್ವೀಕರಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ. ಲೋಮಾಪಉ ಮತ್ತು ಬಲರಾಂಪುರದ ಘಟನೆಗಳು ಈ ದೃಷ್ಟಿಯಲ್ಲಿ ಉಲ್ಲೇಖಿಸಬಹುದಾಗಿದೆ. ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿರುವ ಕಾರಣ ನಾನು ಈ ವಿಷಯದಲ್ಲಿ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಆದರೆ ಯಾರು ಪ್ರಜಾಪ್ರಭುತ್ವದ ಸಫಲತೆಯನ್ನು ಬಯಸುತ್ತಾರೋ ಅವರು ಯಾವಾಗಲೂ ಜಾಗರೂಕರಾಗಿರಬೇಕಾಗಿದೆ ಹಾಗೂ ಪಕ್ಷದ ಕ್ಷಣಿಕ ಲಾಭಕ್ಕಾಗಿ ಈ ರೀತಿ ಹಿಂಸಾತ್ಮಕ ಶಕ್ತಿಗಳೊಡಗೂಡಿ ಆಟವಾಡಬಾರದಾಗಿದೆ. ಮುಸ್ಲಿಂ ರೂಢಿವಾದಕ್ಕೆ ಪ್ರೋತ್ಸಾಹ. ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಪ್ರಜಾಸಮಾಜವಾದಿ ಪಕ್ಷಗಳು ಮುಸಲ್ಮಾನರ ಸಮರ್ಥನೆಯನ್ನು ಪಡೆಯುವ ಸ್ಪರ್ಧೆಯಲ್ಲಿ ಅವರಲ್ಲಿರುವ ಭಿನ್ನತೆ ಮತ್ತು ಸಾಂಪ್ರದಾಯಿಕತೆಯ ಪ್ರವೃತ್ತಿಯನ್ನು ಉತ್ತೇಜಿತಗೊಳಿಸಲು ಪ್ರಯತ್ನಿಸಿದರು. ಟಿಕೇಟ್ ಕೊಡುವ ಸಮಯದಲ್ಲಿ ಅವರ ಸಂಪ್ರದಾಯದ ಬಗ್ಗೆ ವಿಚಾರ ಮಾಡುವುದಾಗಲಿ ಅಲ್ಲದೆ ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಸಮರ್ಥನೆಯನ್ನು ಗಳಿಸಲು ಅವರನ್ನು ಧರ್ಮದ ಆಧಾರವಾಗಿ ಸಂಬೋಧಿಸಲಾಯಿತು. ಮುಸಲ್ಮಾನರ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸಲು ಜನಸಂಘದ ಭಯವನ್ನು ತೋರಿಸಲಾಯಿತು. ಹಾಗೂ ಜನಸಂಘದ ಬಗ್ಗೆ ಹೇಳಲ್ಪಟ್ಟಿರುವ ಸಂಕಟದ ಕಾರಣ ಅದು ರಾಜಕೀಯ ಅಥವಾ ಆರ್ಥಿಕ ಕಾರ್ಯಕ್ರಮದ ಆಧಾರದಿಂದ ಸ್ವತಂತ್ರ ನಿರ್ಣಯ ತೆಗೆದುಕೊಂಡು ಮತದಾನ ಮಾಡಲಾಗುವುದಿಲ್ಲ. ಜನಸಂಘದ ವಿರುದ್ಧ ಸುಳ್ಳು ಆರೋಪ. ಇದೇ ತರಹದ ಅಪಪ್ರಚಾರವನ್ನು ಸಿಖ್ಖ ಮತ್ತು ಹರಿಜನರಲ್ಲೂ ಮಾಡಲಾಯಿತು. ಕ್ಷೇತ್ರೀಯ ಆಧಾರದಲ್ಲೂ ಜನರಲ್ಲಿ ಜನಸಂಘದ ಬಗ್ಗೆ ಭ್ರಮೆ ಉಂಟುಮಾಡಲಾಯಿತು. ಪರಿಣಾಮವಾಗಿ ಕೆಲವೆಡೆ ಜನಸಂಘವನ್ನು ಮುಸಲ್ಮಾನರ ಶತ್ರು ಎಂದು ಘೋಷಿಸಲಾಯಿತು. ಮತ್ತೆ ಕೆಲವೆಡೆ ಜನಸಂಘ ಅಧಿಕಾರಕ್ಕೆ ಬಂದರೆ 90 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸವರ್ಣೀಯರ ಅಧಿಕಾರವಾಗಿ ಹರಿಜನರಿಗೆ ಅನ್ಯಾಯವಾಗಲಿದೆ ಎಂದು ಬಿಂಬಿಸಲಾಯಿತು. ಶ್ರೀ ಕೇಶವದೇವ ಮಾಳವೀಯರು ಸ್ವತಃ ಬ್ರಾಹ್ಮಣರಾಗಿದ್ದರೂ ಜನಸಂಘದ ಬ್ರಾಹ್ಮಣ ಮತ್ತು ಠಾಕೂರರ ಸಮರ್ಥಕರೆಂದು ಆರೋಪಿಸಲಾಯಿತು. ಶ್ರೀ ಲಾಲ್ ಬಹದೂರ್ ಶಾಸ್ತ್ರಿಯವರು ಜನಸಂಘವನ್ನು ಮಹಾರಾಷ್ಟ್ರದ ಪಕ್ಷ ಎಂದರಲ್ಲದೆ ರಾಯಪುರದಲ್ಲಿ ಕ್ಷೇತ್ರೀಯ ದ್ವೇಷ ಹುಟ್ಟುವುದಕ್ಕೆ ಕಾರಣರಾದರು. ಮತ್ತೊಂದು ಕಡೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿನ ನಾಯಕರು ಜನಸಂಘವನ್ನು ಮರಾಠಾ ವಿರೋಧಿ ಪಕ್ಷವೆಂದು ಹೇಳಿದ್ದಲ್ಲದೆ ಜಾತೀಯ ಭಾವನೆಗಳನ್ನು ಆಶ್ರಯಿಸಿದರು. ಕೇರಳದಲ್ಲಿ ಸ್ವಯಂ ಪ್ರಧಾನ ಮಂತ್ರಿಯವರು ಜನಸಂಘವನ್ನು ಉತ್ತರ ಭಾರತದ ಪಕ್ಷ ಎಂದರಲ್ಲದೆ ಉತ್ತರ ಮತ್ತು ದಕ್ಷಿಣದ ಮಧ್ಯೆ ಕೃತ್ರಿಮ ಅಂತರವನ್ನು ನಿರ್ಮಿಸಿ ಜನತೆಯ ವಿಭಜನೆಯನ್ನು ಮಾಡುವ ಪ್ರಯತ್ನಕ್ಕೆ ಕೈ ಹಾಕಿದರು. ಗಾಂಧೀಜಿಯವರ ಹತ್ಯೆಯ ಜೊತೆ ಜನಸಂಘದ ಸಂಬಂಧವನ್ನು ಜೋಡಿಸಿ ಮಸಿ ಬಳಿಯುವ ಕಾರ್ಯವನ್ನು ಯೋಜನಾಬದ್ಧವಾಗಿ ಮಾಡಲಾಯಿತು. ಗಾಂಧೀಜಿಯವರ ಶಿಷ್ಯರೆಂದು ಹೇಳಲ್ಪಟ್ಟಿರುವ ಕೆಲವರು ಇದರಿಂದ ದೇಶದ ಹಾಗೂ ಗಾಂಧೀಜಿಯವರ ಆದರ ಗೌರವ ಕಡಿಮೆಯಾಗುತ್ತದೆ ಎಂಬುದನ್ನು ಯೋಚಿಸಲಿಲ್ಲ. ಯಾವುದಾದರೂ ಒಬ್ಬ ಉನ್ಮತ್ತ ವ್ಯಕ್ತಿಯಿಂದ ಯಾವುದಾದರೂ ಪಾಪದ ಕೆಲಸವಾದರೆ ಸರಿಯಲ್ಲ. ಆದರೆ ಒಂದು ದೊಡ್ಡ ಸಂಘಟನೆ ಮತ್ತು ಆ ಸಂಘಟನೆಯ ಜೊತೆ ತುಂಬಾ ಜನಗಳ ಸಂಬಂಧವಿದ್ದೂ ಆ ಸಂಘಟನೆ ಈ ತರಹದ ಕೆಲಸ ಮಾಡಿದರೆ ಅದರ ಪರಿಣಾಮವೇ ಬೇರೆಯಾಗುತ್ತದೆ. ಗಾಂಧೀಜಿಯವರ ರಾಜಕೀಯ ಸ್ವಾರ್ಥದ ಪೂರ್ಣತೆಗಾಗಿ ತುಂಬಾ ಉಪಯೋಗವಾಗಿದೆ. ಈ ಜನರು ಆ ಅನ್ಯಾಯದಿಂದ ನಿರಾಸೆಗೊಂಡಿದ್ದಾರೆ. ಆ ಪ್ರಕಾರದ ಸುಳ್ಳು ಮತ್ತು ದ್ವೇಷದಿಂದ ಕೂಡಿದ ಪ್ರಚಾರದ ಪರಿಣಾಮ ಜನತೆಯ ಮೇಲೆ ಅಳೆಯಲು ಆಗದಷ್ಟಾಗಿದೆ. ಆದರೆ ಎಲ್ಲೆಲ್ಲಿ ನಮ್ಮ ಕಾರ್ಯಕರ್ತರು ಸ್ಥಿರವಾಗಿ ಕಾರ್ಯನಿರ್ವಹಿಸಿದ್ದಾರೋ ಅಲ್ಲೆಲ್ಲಾ ಜನತೆಯ ಎಲ್ಲಾ ವರ್ಗದಿಂದ ಪೂರ್ಣವಾದ ಸಹಾಯ ದೊರಕಿದೆ. ಈ ಅಪವಿತ್ರ ಮೈತ್ರಿ ಚುನಾವಣೆಯಲ್ಲಿ ವಿಭಿನ್ನ ಪಕ್ಷಗಳು ಯಾವ ಮೈತ್ರಿಯನ್ನು ಮಾಡಿಕೊಂಡವೋ ಅದು ಆಶ್ಚರ್ಯವೇ ಅಲ್ಲದೆ ದುಃಖಕಾರಿಯೂ ಆಗಿದೆ. ಇದರಿಂದ ರಾಜ್ಯ(ಆಡಳಿತ)ದ ವ್ಯಾಮೋಹಕ್ಕೆ ಏನು ಬೇಕಾದರೂ ಮಾಡುತ್ತಾರೆಂಬ ಸಂದೇಹ ಉಂಟಾಗುತ್ತದೆ. ಜನಸಂಘವನ್ನು ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸುವ ನಿರ್ಧಾರ ಕಮ್ಯುನಿಸ್ಟ್ ಪಕ್ಷದಾಗಿತ್ತು. ಹಾಗೂ ಅವರು ಈ ಪ್ರಸ್ತಾವವನ್ನು ಕೇರಳ ರಾಜ್ಯದಲ್ಲಿ ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 91 ಮಾತ್ರ ಕೈಗೊಂಡರು. ಪಶ್ಚಿಮ ಬಂಗಾಳದಲ್ಲಿ ಅವರು ಎಡಪಕ್ಷವಾದ ಸಂಯುಕ್ತ ಮೋರ್ಚಾದ ನೀತಿಯನ್ನು ಅನುಸರಿಸಿ ಪರ್ಯಾಯ ಸರ್ಕಾರ ರಚನೆಯ ಘೋಷಣೆ ಮಾಡಿದರು. ಈ ಭಾರಿ ಪ್ರಜಾವಾದಿ ಸಮಾಜ ಪಕ್ಷ ಅದರ ಜೊತೆ ಕೈಗೂಡಿಸಲಿಲ್ಲ. ಆದರೆ ಅನ್ಯ ಎಡರಂಗದ ಪಕ್ಷಗಳೆಲ್ಲಾ ಕೈ ಜೋಡಿಸಿದವು. ಪಂಜಾಬಿನಲ್ಲಿ `ಅಕಾಲಿದಳ’ದ ಜೊತೆ ಹಾಗೂ ಆಂಧ್ರದಲ್ಲಿ ಸ್ವತಂತ್ರ ಪಕ್ಷದ ಜೊತೆ ಪರೋಕ್ಷವಾದ ಒಪ್ಪಂದ ಮಾಡಿಕೊಂಡರು. ಅಲ್ಲಿಯ ಜಾತೀಯ ಸ್ಥಿತಿಯಿಂದ ಹೀಗೆ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಹೆಸರಿನಲ್ಲಿ ಹಿಂದೂ ಮಹಾಸಭೆ ರಿಪಬ್ಲಿಕ್ ಪಕ್ಷ ಹಾಗೂ ಶೇ. ಕಾ. ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದರು. ಸ್ವತಂತ್ರ ಪಕ್ಷವು ಕಾಂಗ್ರೆಸ್‍ನ ಹೊರತಾಗಿ ಪ್ರಾಯಶಃ ಎಲ್ಲಾ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತು. ಆ ಪಕ್ಷಗಳಲ್ಲಿ ಅಕಾಲಿದಳ ದ್ರವಿಡ ಮುನೇತ್ರ ಕಳಗಂ ಮತ್ತು ಕಮ್ಯುನಿಸ್ಟ್ ಪಕ್ಷವೂ ಒಳಗೊಂಡಿತ್ತು. ಹಿಂದೂ ಮಹಾಸಭೆ ಹಾಗೂ ರಾಮರಾಜ್ಯ ಪರಿಷತ್ ಪರಸ್ಪರ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸಿದರು. ರಿಪಬ್ಲಿಕ್ ಪಕ್ಷದ ಸಹಪಕ್ಷಗಳಾದ ಪ್ರಜಾ ಸಮಾಜವಾದಿ ಪಕ್ಷ, ವಿದರ್ಭವಾದಿ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಜೊತೆ ಸೇರಿ ಚುನಾವಣೆಯಲ್ಲಿ ಪಾಲ್ಗೊಂಡರು. ಉತ್ತರಪ್ರದೇಶದಲ್ಲಿ ಮುಸ್ಲಿಂಲೀಗ್ ಹಾಗೂ ರಿಪಬ್ಲಿಕ್‍ನ ಪಕ್ಷದ ಮಧ್ಯೆ ಒಪ್ಪಂದ ಏರ್ಪಟ್ಟಿತು. ಹಾಗೂ ಘೋರ ಸಾಂಪ್ರದಾಯಿಕ ಮುಸ್ಲಿಂ ಲೀಗ್‍ನ ಸದಸ್ಯರೆಲ್ಲಾ ರಿಪಬ್ಲಿಕ್‍ನ ಪಕ್ಷದ ಹೆಸರಿನಲ್ಲಿ ಕಣಕ್ಕಿಳಿದರು. ಕಾಂಗ್ರೆಸ್ ಝಾರ್ಖಂಡ್ ಪಕ್ಷದ ಜೊತೆ ಚುನಾವಣಾ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿತು ಆದರೆ ಸಫಲವಾಗಲಿಲ್ಲ. ಕೇವಲ ಭಾರತೀಯ ಜನಸಂಘ ಮತ್ತು ಸಮಾಜವಾದಿ ಪಕ್ಷಗಳು ತಮ್ಮ ಚುನಾವಣಾ ನೀತಿಯನ್ನು ಆಧಾರವಾಗಿಟ್ಟುಕೊಂಡು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ ಚುನಾವಣೆಯನ್ನು ಎದುರಿಸಿದವು. ಕಾಂಗ್ರೆಸ್‍ನ ಪತನದಲ್ಲಿ ಶೀಘ್ರತೆ ಚುನಾವಣೆಯ ಫಲಿತಾಂಶದ ಪ್ರಕಾರವಾಗಿ ವಿಭಿನ್ನ ಪಕ್ಷಗಳ ಸ್ಥಿತಿಯಲ್ಲಿ ಯಾವುದೇ ವಿಶೇಷವಾದ ಪರಿವರ್ತನೆಯಾಗಲಿಲ್ಲ. ಆದರೆ ಕಾಂಗ್ರೆಸ್‍ನ ಪತನ ಶೀಘ್ರವಾಗಿ ಆಗಲಿದೆ ಎನ್ನುವುದು ಸ್ಪಷ್ಟವಾಗಿದೆ. ಕಮ್ಯುನಿಸ್ಟ್ ಪಕ್ಷದವರು ತಮ್ಮ ಸ್ಥಾನಗಳಲ್ಲಿ ನಷ್ಟ ಅನುಭವಿಸಿ ಬೇರೆ ಕ್ಷೇತ್ರಗಳಲ್ಲಿ ಕೊರತೆಯನ್ನು ನೀಗಿಸಿಕೊಂಡು ತಮ್ಮ ಸ್ಥಿತಿಯಲ್ಲಿ ಅಲ್ಪ ವೃದ್ಧಿಯನ್ನು ಕಂಡುಕೊಂಡರು. ಪ್ರಜಾ ಸಮಾಜವಾದಿ ಪಕ್ಷದ ಸಮಾಪ್ತಿಯ ಅಧ್ಯಾಯ ಶುರುವಾಗಿದೆ. ಸ್ವತಂತ್ರ ಪಕ್ಷವು ಒಳ್ಳೆಯ ಸಫಲತೆಯನ್ನು ಪಡೆದಿದ್ದರೂ ಜನತೆಯ ಮನಸ್ಸಿನಲ್ಲಿ ಯಾವ ಅಪೇಕ್ಷೆಯನ್ನು ಸೃಷ್ಟಿಸಿದ್ದರೋ ಅದರ ಹೋಲಿಕೆಯಲ್ಲಿ ಆ ಪಕ್ಷವು ಪರ್ಯಾಪ್ತವಾಗಿಲ್ಲ. ಬಾಕಿ ಉಳಿದ ಚಿಕ್ಕ ಮತ್ತು 92 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕ್ಷೇತ್ರೀಯ ಪಕ್ಷಗಳಲ್ಲಿ ದ್ರವಿಡ ಮುನೇತ್ರ ಕಳಗಂ ಪಕ್ಷವನ್ನು ಬಿಟ್ಟು ಮಿಕ್ಕ ಪಕ್ಷಗಳು ಹಿಂದೆ ಸರಿದಿವೆ. ಹಾಗೂ ಅಖಿಲ ಭಾರತೀಯ ರಾಜಕೀಯದ ಸಂದರ್ಭದಲ್ಲಿ ಮಹತ್ವವನ್ನು ಕಳೆದುಕೊಂಡಿವೆ. ಭಾರತೀಯ ಜನಸಂಘವು ಮುಂದೆ ಹೆಜ್ಜೆ ಇಟ್ಟಿದೆ. ಆದರೆ ಯಾವ ಐತಿಹಾಸಿಕ ಕಾರ್ಯಪೂರ್ತಿಗಾಗಿ ಅದರ ಜನ್ಮವಾಗಿದೆಯೋ ಅದರಲ್ಲಿ ಸಂಘ ಇನ್ನೂ ಹಿಂದುಳಿದಿದೆ. ಶೇಕಡಾವಾರು ಮತದಾನ ಹೆಚ್ಚಿದೆ ಹಿಂದಿನ ಚುನಾವಣೆಯ ಹೋಲಿಕೆಯಲ್ಲಿ ಈ ಸಲ ಮತದಾರರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಮಹತ್ವಪೂರ್ಣ ಸಂಗತಿಯಾಗಿದೆ. ಹಾಗೂ ಅನುಪಾತ (ಸರಾಸರಿ)ದಲ್ಲಿ ಮತದಾನವಾಗಿದೆ. ಮತದಾನದ ಶೇಕಡವಾರು ಸಂಖ್ಯೆ ಹಿಂದಿನ ಮೂರು ಚುನಾವಣೆಗಳಿಂದ ಹೆಚ್ಚುತ್ತಿದೆ. 1952ರಲ್ಲಿ 45.7 ಶೇ ಜನರು ಅಧಿಕೃತವಾಗಿ ಮತದಾನ ಮಾಡಿದ್ದರು. 1957ರಲ್ಲಿ ಅದು 46.6 ಶೇ ಹಾಗೂ 1962ರಲ್ಲಿ 53.71 ಶೇ ವಾಗಿದೆ. ದೇಶದ ಪ್ರತಿಯೊಂದು ಪ್ರದೇಶದಲ್ಲಿ ಮತದಾನ ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿದೆ; ಹೆಚ್ಚದಿರುವ ಕ್ಷೇತ್ರಗಳಿಲ್ಲವೆಂದು ಹೇಳಬಹುದು. ಬಿಹಾರ ಮತ್ತು ಮಧ್ಯಪ್ರದೇಶಗಳನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳಲ್ಲೂ 50 ಶೇ. ಅಧಿಕ ಮತದಾನವಾಗಿದೆ. ಮದ್ರಾಸಿನಲ್ಲಿ 70.35 ಶೇ ಇದೆ. ದೆಹಲಿಯಲ್ಲಿ ಮತದಾನ 57.29 ಶೇ ದಿಂದ 66.54ರಷ್ಟು ಹೆಚ್ಚಿದೆ. ಚುನಾವಣೆಯ ಮತದಾನದ ಅನುಪಾತದಲ್ಲಿ ಈ ಭಾರೀ ವೃದ್ಧಿಯ ಊಹೆ ಇರದಿದ್ದ ಕಾರಣ ಕೆಲವು ಸ್ಥಾನಗಳಲ್ಲಿ ಪರಿಣಾಮ ಕಲ್ಪನೆಗೂ ಮೀರಿದೆ. ದೆಹಲಿ ಇದಕ್ಕೆ ಸರಿಯಾದ ಉದಾಹರಣೆಯಾಗಿದೆ. ಈ ಸಲ ಅಕ್ರಮ ಮತ ಸಂಖ್ಯೆಯಲ್ಲೂ ವೃದ್ಧಿಯಾಗಿದೆ. 1957ರ ಲೋಕಸಭೆಗಾಗಿ ನಡೆದ ಚುನಾವಣೆಯಲ್ಲಿ ಪೂರ್ಣಮತದಾನದ 1.71 ಶೇ ಮತವು ಅಕ್ರಮವಾಗಿತ್ತು. 1962ರಲ್ಲಿ ಈ ಸಂಖ್ಯೆ 4.01 ಶೇ ದಷ್ಟು ಹೆಚ್ಚಿದೆ. ವಿಧಾನ ಸಭೆಯ ಅಕ್ರಮ ಮತವು 1.87 ಶೇ ದಿಂದ 5.21 ರಷ್ಟು ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಿನ ಅಕ್ರಮ ಮತವು ಮಧ್ಯಪ್ರದೇಶದಲ್ಲಾಗಿದೆ. ಅಲ್ಲಿ ಪೂರ್ಣಮತದಾನದ 7.2 ಶೇ ಮತವು ಅಕ್ರಮವಾಗಿದೆ. ಮತದಾನದ ಹೊಸ ಪದ್ಧತಿ ಹಾಗೂ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆ ಒಂದೇ ಸಮಯದಲ್ಲಿ ಆಗಿದ್ದು ಈ ಗೊಂದಲಕ್ಕೆ ಕಾರಣವಾಗಿದೆ. ಮತದಾತರು ಲೋಕಸಭೆಗೆ ಒಬ್ಬ ಉಮೇದುವಾರ ಹಾಗೂ ವಿಧಾನಸಭೆಗೆ ಬೇರೆ ಪಕ್ಷದ ಉಮೇದುವಾರರನ್ನು ಆರಿಸುವ ಪ್ರಯತ್ನ ಮಾಡಿರುವುದರಿಂದ ಅಕ್ರಮ ಮತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಬಲರಾಂಪುರದ ಕ್ಷೇತ್ರದಲ್ಲಿ ವಿಧಾನಸಭೆಯಲ್ಲಿ ಜನಸಂಘ ವಿಜಯಿಯಾದರೂ ಶ್ರೀ ಅಟಲ್‍ಬಿಹಾರಿ ವಾಜಪೇಯಿಯವರ ಸೋಲಿಗೆ ಈ ಗೊಂದಲ ಮತ್ತು ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 93 ಅಕ್ರಮ ಮತದ ಭಾರೀ ಸಂಖ್ಯೆಯೇ ಕಾರಣವಾಗಿದೆ. ಈ ಸ್ಥಿತಿಯ ಸುಧಾರಣೆಯ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಪದ್ಧತಿಯ ಪರಿಚಯ ಮಾಡಿಕೊಡಲು ಪ್ರಯತ್ನಶೀಲರಾಗಬೇಕಾಗಿದೆ. ಚುನಾವಣಾ ಆಯೋಗವು ಸಂಪೂರ್ಣ ಪದ್ಧತಿಯನ್ನು ಸರಳ ಮಾಡುವ ರೀತಿಯನ್ನು ಯೋಚಿಸಬೇಕಾಗಿದೆ. ಸ್ಥಾನ ಹಾಗೂ ಮತದಾನದ ದೃಷ್ಟಿಯಿಂದ ವಿಭಿನ್ನ ಪಕ್ಷಗಳ ಸ್ಥಿತಿಯಲ್ಲಿ 1959ರ ತುಲನೆಯಲ್ಲಿ 1962ರಲ್ಲಿ ಕೆಳಕಂಡ ಪರಿವರ್ತನೆಗಳಾಗಿವೆ. ಕಾಂಗ್ರೆಸ್‍ನ ಶಕ್ತಿ ಕಡಿಮೆಯಾಗಿದೆ 1957ರ ಚುನಾವಣೆಯಲ್ಲಿ ಕಾಂಗ್ರೆಸ್ 371 ಸ್ಥಾನವನ್ನು ಗೆದ್ದಿತ್ತು. ಹಾಗೂ 47.78 ಶೇ ಸರಿಯಾದ ಮತವನ್ನು ಪಡೆದಿತ್ತು. ವಿಭಿನ್ನ ಉಪಚುನಾವಣೆಗಳು ಹಾಗೂ ಪಕ್ಷದ ಪರಿವರ್ತನೆಯ ನಂತರ ಲೋಕಸಭೆ ವಿಸರ್ಜನೆಯಾದಾಗ ಕಾಂಗ್ರೆಸ್ ಸದಸ್ಯರ ಸಂಖ್ಯೆ 375 ಇತ್ತು. 1962 ಈ ಸಂಖ್ಯೆ 360ಕ್ಕೆ ಇಳಿಯಿತು. ಮತದ ಶೇ. 44.70 ಆಯಿತು. ಮದ್ರಾಸ್, ದೆಹಲಿ, ಮಣಿಪುರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಲೋಕಸಭಾ ಸದಸ್ಯರ ಸಂಖ್ಯೆಯಲ್ಲಿ ಯಾವುದೇ ಪರಿವರ್ತನೆಯಾಗಲಿಲ್ಲ. ಮಹಾರಾಷ್ಟ್ರ, ಮೈಸೂರು ಮತ್ತು ಒರಿಸ್ಸಾದಲ್ಲಿ ಹೆಚ್ಚಿತು ಆದರೆ ಅನ್ಯ ಕ್ಷೇತ್ರದ ಸದಸ್ಯರ ಸಂಖ್ಯೆ ಕಡಿಮೆಯಾಯಿತು. ಲೋಕಸಭೆ ಮತದಾನ ಶೇ. 55.52 ರಿಂದ ಕುಸಿದು ಶೇ. 52.74ಕ್ಕೆ ಇಳಿಯಿತು. ಮಧ್ಯಪ್ರದೇಶ ರಾಜಸ್ತಾನ ಪಂಜಾಬ್ ಮತ್ತು ಉತ್ತರ ಪ್ರದೇಶದ ಲೋಕಸಭಾ ಸದಸ್ಯರ ಸಂಖ್ಯೆ ಗಣನೀಯವಾಗಿ ಕುಸಿಯಿತು. ಮಧ್ಯ ಪ್ರದೇಶದಲ್ಲಿ 1957ರ ಚುನಾವಣೆಯಲ್ಲಿ 35 ಸ್ಥಾನದ ತುಲನೆಯಲ್ಲಿ ಈ ಸಲ ಕೇವಲ 24 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಹಿಂದಿನ ಒಟ್ಟು 372 ಸ್ಥಾನಗಳಲ್ಲಿ ಕೇವಲ 285 ಸ್ಥಾನಗಳಲ್ಲಿ ಅದರ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ 75 ಸ್ಥಾನಗಳಲ್ಲಿ 1957ರ ಚುನಾವಣೆಯಲ್ಲಿ ಸೋತಿತ್ತು ಆದರೆ ಈ ಸ್ಥಾನಗಳು ಈ ಬಾರಿಯ ಚುನಾವಣೆಯಲ್ಲಿ ಒಲಿದು ಬಂದಿವೆ. ಪ್ರಜಾ ಸಮಾಜವಾದಿ ಪಕ್ಷದಿಂದ ಅದು 14 ಸ್ಥಾನಗಳನ್ನು ಗೆದ್ದು ಹಾಗೂ 9 ಸ್ಥಾನಗಳನ್ನು ಸೋತಿದೆ. ಕಮ್ಯುನಿಸ್ಟ್‍ನಿಂದ 13 ಸ್ಥಾನಗಳನ್ನು ಪಡೆದು 12 ಸ್ಥಾನಗಳನ್ನು ಕಳೆದುಕೊಂಡಿದೆ. ಜನಸಂಘದಿಂದ ಅದು 5 ಸ್ಥಾನವನ್ನು ಗಳಿಸಿ 14 ಸ್ಥಾನಗಳನ್ನು ಕಳೆದುಕೊಂಡಿದೆ. ವಿಧಾನಸಭೆಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸದಸ್ಯರ ಸಂಖ್ಯೆ ಮತ್ತು ಮತ ಎರಡೂ ಇಳಿಮುಖವಾಗಿವೆ. 1957ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 1914 ಸ್ಥಾನಗಳು ಸಿಕ್ಕಿದ್ದವು. ಆದರೆ 1962 ರಲ್ಲಿ ಅದು ಕೇವಲ 1772 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆ ರೀತಿ ಆ ಪಕ್ಷಕ್ಕೆ 142 ಸ್ಥಾನಗಳು ಕಡಿಮೆ ಆಯಿತು. ಮತಗಳ ಶೇಕಡವೂ 45.56 ರಿಂದ 94 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 44.33ಕ್ಕೆ ಇಳಿದಿದೆ. ಅಸ್ಸಾಂ (4.05), ಬಿಹಾರ್ (0.59), ಮಧ್ಯಪ್ರದೇಶ (11.28), ಮೈಸೂರು (2.90), ಪಂಜಾಬ್ (3.7), ಗುಜರಾತ್ (6.3), ರಾಜಸ್ತಾನ (5.21), ಮತ್ತು ಉತ್ತರಪ್ರದೇಶಗಳಲ್ಲಿ (7.49)ರಷ್ಟು ಶೇಕಡ ಕಡಿಮೆಯಾಗಿವೆ. ಆಂಧ್ರದಲ್ಲಿ 7.49 ಮದ್ರಾಸಿನಲ್ಲಿ 0.79 ಪಶ್ಚಿಮ ಬಂಗಾಳದಲ್ಲಿ 1.05 ಮತ್ತು ಮಹಾರಾಷ್ಟ್ರದಲ್ಲಿ 6.88 ರಷ್ಟು ಶೇಕಡ ಮತಗಳು ಹೆಚ್ಚಿವೆ. ಮಹಾರಾಷ್ಟ್ರ ಕ್ಷೇತ್ರದಲ್ಲಿ 1957ರಲ್ಲಿ ಅದಕ್ಕೆ 137 ಹಾಗೂ ಪ್ರತಿಪಕ್ಷಕ್ಕೆ 127 ಸ್ಥಾನಗಳು ಸಿಕ್ಕಿದ್ದವು ಆದರೆ ಈ ಸಲ ಕಾಂಗ್ರೆಸ್ಸಿನ 215 ಹಾಗೂ ಪ್ರತಿಪಕ್ಷಗಳಿಗೆ ಕೇವಲ 49 ಸ್ಥಾನಗಳು ದಕ್ಕಿವೆ. ಗುಜರಾತಿನಲ್ಲಿ ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆ 97 ರಿಂದ 113ಕ್ಕೆ ಹೆಚ್ಚಿದೆ. ಆದರೆ ಅನ್ಯ ಪಕ್ಷಗಳು ಕೇವಲ 35 ರಿಂದ ಹೆಚ್ಚಿ 41 ಸ್ಥಾನಗಳನ್ನು ಗೆದ್ದವು. (1957ರಲ್ಲಿ ಗುಜರಾತ್ ಕ್ಷೇತ್ರದಲ್ಲಿ 132 ಸ್ಥಾನಗಳಿದ್ದವು ಆದರೆ 1962ರಲ್ಲಿ ಅದು 154 ಆಯಿತು.) ಅಸ್ಸಾಂನಲ್ಲಿ ಅದರ ಸದಸ್ಯರ ಸಂಖ್ಯೆ 71 ರಿಂದ ಹೆಚ್ಚಿದ್ದು 79 ಆಗಿದೆ ಆದರೆ ಹಿಂದಿನ ಚುನಾವಣೆಗಿಂತ ಕಡಿಮೆ ಮತಗಳು ಸಿಕ್ಕಿವೆ. 1957ರಲ್ಲಿ ಅದಕ್ಕೆ 52.35ಶೇ ಮತಗಳು ಸಿಕ್ಕಿದ್ದವು ಈ ಬಾರಿ 1962ರಲ್ಲಿ ಕೇವಲ 48.25 ಮತದಾನವು ಆ ಪಕ್ಷಕ್ಕೆ ಸೇರ್ಪಡೆಯಾದವು. ಮದ್ರಾಸು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕ ಮತದಾನವಾಗಿವೆ. ಆದರೂ ಅದರ ಗೆದ್ದ ಸ್ಥಾನಗಳ ಸಂಖ್ಯೆ 151 ರಿಂದ ಕುಸಿದು 139ಕ್ಕೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಹಿಂದಿನ ಸಂಖ್ಯೆಗಿಂತ 5 ಹೆಚ್ಚು ಸ್ಥಾನಗಳನ್ನು ಪಡೆದಿದೆ. ಅನ್ಯ ಪ್ರದೇಶಗಳಲ್ಲಿ ಮತ ಸಂಖ್ಯೆ ಮತ್ತು ಅದರ ಸ್ಥಾನಗಳಲ್ಲಿ ಕಡಿಮೆಯಾಗಿದೆ. ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಬಹುಮತವನ್ನು ಪಡೆಯಲೂ ಸಾಧ್ಯವಾಗಲಿಲ್ಲ. ಕೆಲವು ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಕಾಂಗ್ರೆಸ್ ತನ್ನ ಮಂತ್ರಿಮಂಡಲವನ್ನು ರಚಿಸಿತು. ಪಂಜಾಬ್‍ನಲ್ಲಿಯೂ ಅದರ ಸದಸ್ಯರ ಸಂಖ್ಯೆ 120 ರಿಂದ ಕುಸಿದು 90 ಆಗಿದೆ. ಪ್ರಜಾ ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ಈ ಚುನಾವಣೆಯಲ್ಲಿ ಯಾವುದಾದರೂ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆಯೆಂದರೆ ಅದು ಪ್ರಜಾಸಮಾಜವಾದಿ ಪಕ್ಷವಾಗಿದೆ. ಇದರ ಮತ ಮತ್ತು ಸದಸ್ಯರ ಸಂಖ್ಯೆ ಎರಡೂ ಇಳಿಮುಖವಾಗಿದೆ. ಲೋಕಸಭೆಗಾಗಿ 1957ರಲ್ಲಿ ಅದಕ್ಕೆ 10.41 ಶೇ ಮತಗಳು ಸಿಕ್ಕಿದ್ದವು. ಆದರೆ 1962ರಲ್ಲಿ ಅದು ಕೇವಲ 6.75 ಶೇ ಮತವನ್ನು ಪಡೆಯಲು ಸಾಧ್ಯವಾಯಿತು. ವಿಧಾನ ಸಭೆಯಲ್ಲೂ ಶೇ. 10.07 ರಿಂದ ಕುಸಿದು 7.00 ರಷ್ಟಾಯಿತು. ಸದಸ್ಯರ ಸಂಖ್ಯೆಯ ದೃಷ್ಟಿಯಿಂದ ಲೋಕಸಭೆಯಲ್ಲಿ 19 ರಷ್ಟಿದ್ದ ಸ್ಥಾನ 12 ಹಾಗೂ ವಿಧಾನಸಭೆಯಲ್ಲಿ 195ರ ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 95 ಬದಲಾಗಿ 149 ಕ್ಷೇತ್ರಗಳಲ್ಲಿ ಮಾತ್ರ ವಿಜಯ ಪಡೆದರು. 1957ರ ಚುನಾವಣೆಯ ನಂತರ ಅಸ್ಸಾಂ, ಬಿಹಾರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮೈಸೂರು ಮತ್ತು ಉತ್ತರಪ್ರದೇಶಗಳಲ್ಲಿ ಕಾಂಗ್ರೆಸ್ಸಿನ ನಂತರ ಪ್ರಜಾ ಸಮಾಜವಾದಿ ಪಕ್ಷದ ಸದಸ್ಯರ ಸಂಖ್ಯೆಯೇ ಅತ್ಯಧಿಕವಾಗಿತ್ತು. ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ಪ್ರತಿಪಕ್ಷವೆಂಬ ಮಾನ್ಯತೆಯೂ ಸಿಕ್ಕಿತ್ತು. ಆದರೆ 1962ರಲ್ಲಿ ಮೈಸೂರನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರದೇಶದಲ್ಲಿಯೂ ತನ್ನ ಸ್ಥಾನವನ್ನು ಸ್ಥಿರಪಡಿಸಿಕೊಳ್ಳಲಾಗಲಿಲ್ಲ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಜನಸಂಘ, ಬಿಹಾರ್‍ನಲ್ಲಿ ಸ್ವತಂತ್ರಪಕ್ಷ ಹಾಗೂ ಮಹಾರಾಷ್ಟ್ರದಲ್ಲಿ ಕ್ಷೇತ್ರೀಯ ಪಕ್ಷಗಳು ಅದನ್ನು ಹಿಂದಟ್ಟಿದವು. ಮತಗಳ ದೃಷ್ಟಿಯಿಂದ ನೋಡಿದರೆ ಗುಜರಾತ್ ಹೊರತುಪಡಿಸಿ ಅನ್ಯ ಪ್ರದೇಶಗಳಲ್ಲಿ 1957ರ ಫಲಿತಾಂಶಕ್ಕಿಂತ ಕಡಿಮೆ ಮತಗಳು ದೊರತಿವೆ. ಗುಜರಾತ್‍ನಲ್ಲಿ 6.88 ಶೇಕಡಕ್ಕಿಂತ ಹೆಚ್ಚಾಗಿ ಈ ಸಲ 7.86 ಶೇ. ಮತಗಳು ದೊರತಿವೆ. ಸಮಾಜವಾದಿ ಪಕ್ಷ ದುರ್ಬಲವಾಯಿತು. 1952ರ ಚುನಾವಣೆಯ ನಂತರ ಸಮಾಜವಾದಿ ಪಕ್ಷ ಮತ್ತು ಕಿಸಾನ್ ಮಜ್ದೂರ್ ಪ್ರಜಾಪಕ್ಷಗಳು ಸೇರಿ ಪ್ರಜಾ ಸಮಾಜವಾದಿ ಪಕ್ಷದ ರೂಪದಲ್ಲಿ ಹೊರಹೊಮ್ಮಿತು ಎಂಬ ವಿಷಯ ನಮಗೆ ತಿಳಿದಿದೆ. ಆದರೆ ಕೆಲವು ದಿನಗಳ ನಂತರ ಕೆಲವರು ಡಾ|| ಲೋಹಿಯಾರವರ ನೇತೃತ್ವದಲ್ಲಿ ಸಮಾಜವಾದಿ ಪಕ್ಷದ ಹೆಸರಿನಲ್ಲಿ ಬೇರೆ ಆದರು. ಎರಡೂ ಪಕ್ಷಗಳ 1952, 1957 ಹಾಗೂ 1962ರ ಫಲಿತಾಂಶವನ್ನು ನೋಡಿದಾಗ ಕ್ರಮಶಃ ಮತದಾನವು ಕಡಿಮೆಯಾಗಿರುವ ವಿಷಯ ಸ್ಪಷ್ಟವಾಗುತ್ತದೆ. 1952ರಲ್ಲಿ ಆ ಪಕ್ಷಗಳಿಗೆ 1 ಕೋಟಿ 60 ಲಕ್ಷ ಮತಗಳು ಸಿಕ್ಕಿತ್ತು. 1957ರಲ್ಲಿ ಅದು ಕುಸಿದು 1 ಕೋಟಿ 25 ಲಕ್ಷವಾಯಿತು. ಹಾಗೂ ಈಗ 1962ರಲ್ಲಿ ಕೇವಲ 1 ಕೋಟಿ ಮತಗಳು ಸಿಕ್ಕಿವೆ. ಕಾಂಗ್ರೆಸ್ ಸಮಾಜವಾದವನ್ನು ಸ್ವೀಕರಿಸಿದ ನಂತರ ಅನ್ಯ ಸಮಾಜವಾದಿ ಪಕ್ಷಗಳಿಗೆ ಯಾವುದೇ ಸೌಲಭ್ಯಗಳು ಉಳಿದಿಲ್ಲ. ಯಾವ ಕ್ಷೇತ್ರಗಳಲ್ಲಿ ಕಮ್ಯುನಿಸ್ಟ್‌ರ ನಾಯಕವಾದದ ಸಂಕಟ ಹೆಚ್ಚುತ್ತಿರುವ ಹಾಗೆ ಕಾಣಿಸುತ್ತದೆ. ಒಂದೇ ವಿಚಾರಧಾರೆಯ ಅನೇಕ ಪಕ್ಷಗಳನ್ನು ಜನತೆ ಒಪ್ಪಲು ತಯಾರಿರುವುದಿಲ್ಲ. ಹಾಗಾಗಿ ಪ್ರ.ಸ.ಪ. ಮತ್ತು ಸ.ಪ. ಎರಡೂ ಈ ಕ್ಷೇತ್ರದಿಂದ ಶೀಘ್ರವಾಗಿ ತೊಳೆದುಹೋಗುತ್ತಿವೆ. ಸಮಾಜವಾದಿ ಪಕ್ಷದ 59 ಸ್ಥಾನಗಳಲ್ಲಿ 45 ಸ್ಥಾನಗಳು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ್‌ನಲ್ಲಿವೆ. ಅದೇ ತರಹ ಈ ಪ್ರದೇಶಗಳಲ್ಲಿ ಪ್ರಜಾ ಸಮಾಜವಾದಿ ಪಕ್ಷಕ್ಕೆ 149 ಸ್ಥಾನಗಳಲ್ಲಿ 100 ಸ್ಥಾನಗಳು ಪ್ರಾಪ್ತವಾಗಿವೆ. 96 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರಾಜ-ಮಹಾರಾಜರ ಸ್ವತಂತ್ರ ಪಕ್ಷ ಚುನಾವಣೆಗೆ ಮುಂಚೆಯೇ ಸ್ವತಂತ್ರ ಪಕ್ಷಗಳ ನಿರ್ಮಾಣವಾಗಿತ್ತು. ಎಲ್ಲಾ ಸೇರಿಸಿ ಅದು ಲೋಕಸಭೆಯಲ್ಲಿ 7.89 ಶೇ ಮತವನ್ನು ಹಾಗೂ 18 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ ಅದನ್ನು ವಿಭಿನ್ನ ಕ್ಷೇತ್ರೀಯ ಪಕ್ಷಗಳ ಸಂಘ ಎಂದು ಕರೆಯುವುದು ಸೂಕ್ತವಾಗಿದೆ. ಚುನಾವಣೆಯ ನಂತರ ಗಣತಂತ್ರ ಪರಿಷತ್‍ನ ವಿಲೀನವಾದ ಕಾರಣದಿಂದ ಅದರ ಸದಸ್ಯರ ಸಂಖ್ಯೆ 22 ಆಗಿದೆ. ವಿಧಾನ ಸಭೆಯಲ್ಲಿ ಅದಕ್ಕೆ 166 ಸ್ಥಾನಗಳು ಹಾಗೂ ಶೇ. 7.42 ಮತಗಳು ಸಿಕ್ಕಿವೆ. ಇದು ಬಿಹಾರದಲ್ಲಿ ಮುಂಚೆ ಜನತಾ ಪಾರ್ಟಿಯ ರೂಪದಲ್ಲಿ ಪ್ರಸ್ತುತವಿತ್ತು ಹಾಗೂ ರಾಜಸ್ತಾನ ಮತ್ತು ಗುಜರಾತ್‍ನಲ್ಲಿ ಸಿಕ್ಕ ಜಯ ಮಹತ್ವಪೂರ್ಣವಾದುದು. ಈ ಮೂರು ಪ್ರದೇಶಗಳಲ್ಲಿ ಪ್ರತಿಪಕ್ಷದ ರೂಪದಲ್ಲಿ ಅದಕ್ಕೆ ಮಾನ್ಯತೆ ಸಿಕ್ಕಿದೆ. ಬೇರೆ ಬೇರೆ ಸ್ಥಾನಗಳಲ್ಲಿ ರಾಜ-ಮಹಾರಾಜರ ಆಶ್ರಯದಲ್ಲಿ ವಿಕಸಿತಗೊಂಡ ಕಾರಣ ಈ ವಿಜಯದ ಕಾರಣ ವರ್ತಮಾನ ಸಂಘಟನೆ ಹಾಗೂ ಅದರ ಭವಿಷ್ಯ ಯೋಜನೆಗಳು ಎಷ್ಟರ ಮಟ್ಟಿಗೆ ಅದರಲ್ಲಿ ಒಳಗೊಂಡಿವೆ ಎಂಬುದನ್ನು ಊಹಿಸುವುದು ಕಠಿಣವಾಗಿದೆ. ಕಮ್ಯುನಿಸ್ಟ್ ವೃದ್ಧಿಯ ವರ್ಣನೆ ಅನಗತ್ಯ. ಕಮ್ಯುನಿಸ್ಟ್ ಪಕ್ಷಕ್ಕೆ 1957ರ ಚುನಾವಣೆಯಲ್ಲಿ 27 ಸ್ಥಾನಗಳು ಸಿಕ್ಕಿತ್ತು. ಅದರ ಇಬ್ಬರು ಸದಸ್ಯರು ತೆಲಂಗಾಣ ಕ್ಷೇತ್ರದ `ಪೀಪಲ್ಸ್ ಡೆಮೋಕ್ರೆಟಿಕ್ ಫ್ರೆಂಟ್'ನ ಹೆಸರಿನಲ್ಲಿ ಬಂದಿದ್ದರು. ಆನಂತರ ಪಕ್ಷದ ಪರಿವರ್ತನೆಗಳ ಕಾರಣ ಲೋಕಸಭೆಯ ವಿಸರ್ಜನೆಯ ನಂತರ ಅದರ ಸದಸ್ಯರ ಸಂಖ್ಯೆ 30 ರಷ್ಟು ಇತ್ತು. 1962ರ ಚುನಾವಣೆಯಲ್ಲಿ ಅದರ ಸದಸ್ಯರು 29 ಸ್ಥಾನಗಳಲ್ಲಿ ವಿಜಯಿಯಾದರು. 1957ರಲ್ಲಿ ಅದಕ್ಕೆ ಶೇ 8.92 ರಷ್ಟು ಮತ ದೊರಕಿತ್ತು. ಆದರೆ 1962ರಲ್ಲಿ ಅದು 9.96 ಶೇ ಮತವನ್ನು ಪಡೆಯಿತು. ವಿಧಾನಸಭೆಯಲ್ಲಿ ಈ ಬಾರಿ ಅದರ ವಿಜಯೀ ಸದಸ್ಯರ ಸಂಖ್ಯೆ 153 ಆಗಿದೆ. ಆದರೆ 1957 ರಲ್ಲಿ 161 ಸದಸ್ಯರು ಸ್ಥಾನವನ್ನು ಗೆದ್ದಿದ್ದರು. ಆದರೆ ಒರಿಸ್ಸಾ ಮತ್ತು ಕೇರಳದಲ್ಲಿ ಈ ಸಲ ಚುನಾವಣೆ ನಡೆಯಲಿಲ್ಲ ಹಾಗೂ 1957ರಲ್ಲಿ ಆಂಧ್ರದ ತೆಲಂಗಾಣ ಭಾಗದಲ್ಲಿ ಮಾತ್ರ ಚುನಾವಣೆ ನಡೆಯಲ್ಪಟ್ಟಿತು. ಅದರಲ್ಲಿ ಕಮ್ಯುನಿಸ್ಟ್ ಪಕ್ಷವು ಪೀಪಲ್ಸ್ ಡೆಮೋಕ್ರೆಟಿಕ್ ಫ್ರೆಂಟ್‍ನ ಹೆಸರಿನಲ್ಲಿ ಭಾಗವಹಿಸಿತ್ತು. ಒರಿಸ್ಸಾ ಮತ್ತು ಕೇರಳದ ಉಪಚುನಾವಣೆಯ ಫಲಿತಾಂಶವನ್ನು ಸೇರಿಸಿದರೆ ಈ ಸಲ ಆ ಪಕ್ಷದ ವಿಜಯೀ ಸದಸ್ಯರ ಸಂಖ್ಯೆ 181 ಆಗುತ್ತದೆ. 1957ರಲ್ಲಿ `ಪೀಪಲ್ಸ್ ಡೆಮೋಕ್ರೆಟಿಕ್ ಫ್ರೆಂಟ್' ಪಕ್ಷದ 22 ಸ್ಪರ್ಧಿಗಳು ಗೆದ್ದಿದ್ದರು. ಕಮ್ಯೂನಿಸ್ಟ್ ಪಕ್ಷದ ಒಟ್ಟು ಸಂಖ್ಯೆ ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 97 1957ರಲ್ಲಿ 183 ಆಯಿತು. ವಿಧಾನಸಭೆಗಾಗಿ ಅದು 1957ರಲ್ಲಿ 7.70 ಶೇಕಡದ ಹೋಲಿಕೆಯಲ್ಲಿ 1962ರಲ್ಲಿ ಶೇ. 8.58 ಮತಗಳು ಪ್ರಾಪ್ತವಾಗಿದ್ದವು. ಬಂಗಾಳ ಮತ್ತು ಆಂಧ್ರಗಳಲ್ಲಿ ಕಮ್ಯುನಿಸ್ಟ್ ಪಕ್ಷವು ತನ್ನ ಕಾರ್ಯವನ್ನು ಕೇಂದ್ರೀಕರಿಸಿತ್ತು ಹಾಗೂ ಬಹಳ ಅಪೇಕ್ಷೆಗಳನ್ನು ಹೊತ್ತಿತ್ತು. ಅದರ ಸದಸ್ಯರ ಸಂಖ್ಯೆ ಕ್ರಮವಾಗಿ 37 ರಿಂದ 51 ಹಾಗೂ 46 ರಿಂದ 50 ರಷ್ಟಾಯಿತು. ಅಸ್ಸಾಂನಲ್ಲಿ ಅದರ 4 ಸದಸ್ಯರು ಹಿಂದಿನ ವಿಧಾನ ಸಭೆಯಲ್ಲಿದ್ದರು. ಆದರೆ ಈ ಸಲ ಅವರಿಗೆ ಒಂದು ಸ್ಥಾನವೂ ದೊರೆಯಲಿಲ್ಲ. ಮಧ್ಯ ಪ್ರದೇಶ ಮತ್ತು ಮದ್ರಾಸ್‍ನಲ್ಲೂ ಅದರ ಸದಸ್ಯರ ಸಂಖ್ಯೆ ಇಳಿದಿದೆ. ಆದರೆ ಅನ್ಯ ಪ್ರಾಂತ್ಯಗಳಲ್ಲಿ ಅವರು ತನ್ನ ಸದಸ್ಯ ಸಂಖ್ಯೆಯನ್ನು ಏರಿಸಿಕೊಂಡಿದ್ದಾರೆ. ರಾಜಸ್ತಾನದಲ್ಲಿ ಮುಂಚೆ ಇದರ ಸದಸ್ಯರ ಸಂಖ್ಯೆ 1 ಕ್ಕಿಂತ ಹೆಚ್ಚಿರಲಿಲ್ಲ. ಆದರೆ ಈಗ 5 ಸದಸ್ಯರು ಸ್ಥಾನ ಗೆದ್ದು ಬಂದಿದ್ದಾರೆ. ಆಂಧ್ರದಲ್ಲಿ ಅದರ ಸದಸ್ಯರ ಸಂಖ್ಯೆ 38 ರಿಂದ 51ಕ್ಕೆ ಹೆಚ್ಚಿದೆ. ಆದರೆ ಮತದಾನದ ಶೇ. 29.05 ರಿಂದ ಕುಸಿದು 19.54ರಷ್ಟಾಗಿದೆ. ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ಭಾರೀ ಹಾನಿಯುಂಟಾಗಿದೆ. 1957ರಲ್ಲಿ ಮಹಾರಾಷ್ಟ್ರದಲ್ಲಿ ಅದರ ಸದಸ್ಯರ ಸಂಖ್ಯೆ 18 ಆಗಿತ್ತು. ಪಶ್ಚಿಮ ಬಂಗಾಳದಲ್ಲಿ, ಕಲ್ಕತ್ತದಲ್ಲಿ ಇಲ್ಲಿಯವರೆಗೆ ಕಮ್ಯುನಿಸ್ಟ್‌ರ ಸ್ಥಾನವೆಂದೇ ಗುರ್ತಿಸಲಾಗುತ್ತಿತ್ತು. ಅವರು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಹಳ್ಳಿಪ್ರದೇಶಗಳಲ್ಲಿ ಮೊದಲಬಾರಿಗೆ ಸ್ಥಾನ ಗೆದ್ದಿದೆ. ಅಖಿಲ ಭಾರತದ ಮಟ್ಟದಲ್ಲಿ ಲೋಕಸಭೆಗೆ `ಪೀಪಲ್ಸ್ ಡೆಮೋಕ್ರೆಟಿಕ್ ಫ್ರೆಂಟ್' ಪಕ್ಷಕ್ಕೆ ದೊರೆತ 10,440,32 ಮತಗಳನ್ನು 1957ರ ಕಮ್ಯುನಿಸ್ಟ್ ಮತಗಳ ಜೊತೆ ಸೇರಿಸಿದರೆ 1957ರ ಅದರ ಒಟ್ಟು ಮತ 1,17,98,107 ಆಗುತ್ತದೆ. ಶೇಕಡ ದೊರೆತಿದೆ ಅರ್ಥಾತ್ ಅದರ ಮತಗಳ ವಾಸ್ತಾವಿಕ ವೃದ್ಧಿ 0.25 ಶೇಕಡದಷ್ಟಾಗಿದೆ. ಪ್ರಗತಿ ಪಥದಲ್ಲಿ ಜನಸಂಘ 1962ರ ಲೋಕಸಭಾ ಚುನಾವಣೆಯಲ್ಲಿ ಜನಸಂಘ 14 ಸ್ಥಾನಗಳನ್ನು ಗಳಿಸಿತ್ತು. 1957ರಲ್ಲಿ ಅದಕ್ಕೆ 4 ಸ್ಥಾನಗಳು ದೊರೆತಿದ್ದವು. ಹಾಗೂ ಲೋಕಸಭೆಯ ವಿಸರ್ಜನೆಯಾದ ಸಮಯದಲ್ಲಿ ಅದರ ಸದಸ್ಯರ ಸಂಖ್ಯೆ 6 ಆಗಿತ್ತು. 1957ರಲ್ಲಿ ಅದಕ್ಕೆ 5.93 ಮತಗಳು ಸಿಕ್ಕಿದ್ದವು. ಅದು ಈಗ 6.47 ರ ಮಟ್ಟಕ್ಕೆ ಹೆಚ್ಚಿದೆ. ವಿಧಾನ ಸಭೆಯಲ್ಲಿ ಜನಸಂಘದ ಸದಸ್ಯರ ಸಂಖ್ಯೆ 1957ರಲ್ಲಿ 51 ರಿಂದ 1962ರಲ್ಲಿ 119 ಕ್ಕೆ ಹೆಚ್ಚಿದೆ. ಮತವು ಶೇ. 4.03 ರಿಂದ ಹೆಚ್ಚಿದ್ದು ಶೇ. 6.21 ಆಗಿದೆ. ಈ ರೀತಿ ವಿಧಾನಸಭೆಯಲ್ಲಿ ಜನಸಂಘದ ಪ್ರಗತಿ ಮಹತ್ವಪೂರ್ಣವಾಗಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಅದಕ್ಕೆ ಕ್ರಮವಾಗಿ 47 ಮತ್ತು 41 ಸ್ಥಾನಗಳು ದೊರೆತಿದ್ದವು ಹಾಗೂ ಪ್ರತಿಪಕ್ಷದ ರೂಪದಲ್ಲಿ ಅದಕ್ಕೆ 98 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಾನ್ಯತೆ ಸಿಕ್ಕಿತ್ತು. ಬಿಹಾರದಲ್ಲಿ ಮೊಟ್ಟ ಮೊದಲ ಬಾರಿಗೆ ಜನಸಂಘಕ್ಕೆ ಸ್ಥಾನಗಳಲ್ಲಿ ವಿಜಯ ಒಲಿಯಿತು. ರಾಜಸ್ತಾನದಲ್ಲಿ 1957ರಲ್ಲಿ 6ರ ಹೋಲಿಕೆಯಲ್ಲಿ 15 ಸ್ಥಾನಗಳು ಹಾಗೂ ಪಂಜಾಬ್‍ನಲ್ಲಿ 8 ಸ್ಥಾನಗಳಲ್ಲಿ ಜಯ ಸಿಕ್ಕಿತು. ಅನ್ಯ ಪ್ರದೇಶಗಳಲ್ಲಿ ಜಯ ಸಿಕ್ಕದಿದ್ದರೂ ಬಂಗಾಳದ ಮಿದನಾಪುರವನ್ನು ಹೊರತುಪಡಿಸಿ ಮತದಾನದ ಶೇಕಡ ಹೆಚ್ಚಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯ ಸೋಲು ಅಪೇಕ್ಷಿತವಲ್ಲದ್ದು. ಮಹಾರಾಷ್ಟ್ರದಲ್ಲಿ ಸಂಯುಕ್ತ ಮಹಾರಾಷ್ಟ್ರದ ನಿರ್ಮಾಣದ ನಂತರ ಜನಗಳ ಒಲವು ಕಾಂಗ್ರೆಸ್ ಪಕ್ಷದ ಮೇಲೆ ಆದ ಪರಿಣಾಮ ಎಲ್ಲಾ ಪ್ರತಿಪಕ್ಷಗಳಿಗೂ ಹೊಡೆತ ಬಿತ್ತು. ಜನಸಂಘವೂ ಈ ಬಿರುಗಾಳಿಗೆ ಬಲಿಯಾಯಿತು. ದೆಹಲಿಯಲ್ಲಿ ಜನಸಂಘದ ಮತವು 19.72 ರಿಂದ ಹೆಚ್ಚಿ 32.66 ಆಯಿತು. ಆದರೆ ಯಾವುದೇ ಸ್ಥಾನ ದಕ್ಕಲಿಲ್ಲ. ಎಲ್ಲಾ ವಿರೋಧಿ ಪಕ್ಷಗಳ ಸಹಾಯದಿಂದ ಜನಸಂಘದ ವಿರುದ್ಧ ಆಂದೋಲನ ನಡೆಸಿ ಕಾಂಗ್ರೆಸ್ಸಿಗೆ ಸಹಾಯ ಮಾಡುವುದು ಹಾಗೂ ಹಠಾತ್ತನೇ ಮತದಾನದಲ್ಲಿ ವೃದ್ಧಿಯಾಗಿದ್ದೇ ಇದಕ್ಕೆ ಮುಖ್ಯ ಕಾರಣವಾಯಿತು. ___________ * ಆಕರ : ಪಾಂಚಜನ್ಯ ವಾರ ಪತ್ರಿಕೆ, 04-06-1962ರ ಸಂಚಿಕೆ (ಸಂ.) ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 99 ಯಾವ ಪಕ್ಷಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರಂತಹ ದೂರದರ್ಶಿ ಮಾರ್ಗದರ್ಶಕ ಮತ್ತು ನಿರಂತರವಾಗಿ ಕಾರ್ಯ ನಿರ್ವಹಿಸುವ ಸಾವಿರಾರು ದೇಶಭಕ್ತರ ಆಶ್ರಯವಿದೆಯೋ ಆ ಪಕ್ಷ ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ವಿರೋಧಿಗಳನ್ನು ಹತಪ್ರಭರನ್ನಾಗಿಸಿ ಮುಂದುವರಿದರೆ ಆಶ್ಚರ್ಯವೇನು ? ಸಿಕ್ಕಿರುವ ಮತಗಳ ಆಧಾರದ ಮೇಲೆ ನಾವು ಮುಂದುವರಿದಿದ್ದೇವೆ. ನಮ್ಮ ಸಂಘಟನೆ ಮುಂದುವರಿದಿದೆ ಮತ್ತು ಚುನಾವಣಾ ಸ್ಪರ್ಧೆಯಲ್ಲಿ ನಾವು ಒಂದು ಮಹತ್ವಪೂರ್ಣ ಸ್ಥಾನವನ್ನು ಪಡೆದಿದ್ದೇವೆಂದು ನಿಶ್ಚಿತವಾಗಿ ಹೇಳಬಹುದಾಗಿದೆ. ಅದರ ಜೊತೆಯಲ್ಲೇ ಕಾರ್ಯಕರ್ತರನ್ನುದ್ದೇಶಿಸಿ ಉಪಾಧ್ಯಾಯರು ನಾವಿನ್ನೂ ನಮ್ಮ ಗುರಿಯಿಂದ ದೂರ ಉಳಿದಿದ್ದೇವೆ. ನಾವು ರಾಜಕೀಯದಲ್ಲಿ ದ್ವಿತೀಯ ದರ್ಜೆಯ ಪಕ್ಷವಾಗಲು ಕೆಲಸ ಮಾಡುತ್ತಿಲ್ಲ. ನಾವು ನಮ್ಮ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಆಧರಿಸಿರುವ ರಾಜಕೀಯಕ್ಕೆ ಒಂದು ಹೊಸ ಆಯಾಮ ನೀಡಿ ನಮ್ಮ ಪಕ್ಷವನ್ನು ಅಗ್ರ ಪಂಕ್ತಿಯಲ್ಲಿ ನಿಲ್ಲಿಸಬೇಕಾಗಿದೆ ಎಂದು ನುಡಿದರು. ವಿಜಯದ ಸಂಭ್ರಮದಲ್ಲಿ ನಾವು ಇದನ್ನು ಮರೆತರೆ ನಮ್ಮ ಇಂದಿನ ಗೆಲುವು ಭವಿಷ್ಯದ ಸೋಲಾಗಬಹುದು. ಗಂಭೀರವಾದ ಚಿಂತನೆ ಸಮ್ಮೇಳನವು ಪಾಕ್ ಮತ್ತು ಚೀನಾದ ಭಾರತ ವಿರೋಧಿ ವ್ಯವಹಾರಗಳ ಮೇಲೆ ಗಂಭೀರ ಚಿಂತನೆ ನಡೆಸಿ ಭಾರತ ಸರ್ಕಾರಕ್ಕೆ ಎರಡು ಉಪಯುಕ್ತವಾದ ಸಲಹೆ ನೀಡಿದೆ. ಮೊಟ್ಟ ಮೊದಲನೆಯದಾಗಿ ಭಾರತ ಅಲ್ಪಸಂಖ್ಯ ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಲು ಅಸಫಲವಾಗಿರುವ ಪಾಕ್ ಸರ್ಕಾರದಿಂದ ಹೊರದೂಡಲ್ಪಟ್ಟಿರುವ ಹಿಂದೂಗಳ ವಾಸಕ್ಕಾಗಿ ಭೂಮಿಯನ್ನು ಕೇಳಲಿ ಮತ್ತು ಎರಡನೆಯದಾಗಿ ಚೀನಾ ಜೊತೆ ಕಠೋರ ನೀತಿಯನ್ನು ಅನುಸರಿಸಲಿ, ಅದರ ಜೊತೆ ಇರುವ ದೂತ ಸಂಬಂಧವನ್ನು ಕಡಿದುಕೊಳ್ಳಲಿ. ಇದಲ್ಲದೆ ಭಾರತ ಸರ್ಕಾರದ ತೆರಿಗೆ ನೀತಿಯ ಬಗ್ಗೆ ವಿಶ್ಲೇಷಣೆ ಮಾಡುತ್ತಾ ತೆರಿಗೆದಾರರಿಗೆ ಆರಾಮ ನೀಡುವ ಸಲುವಾಗಿ ವ್ಯಾಪಕ ಆಂದೋಲನದ ಯೋಜನೆಗಳು ಈ ಸಮ್ಮೇಳನದ ಪ್ರಮುಖ ಚರ್ಚಾ ವಿಷಯಗಳಾಗಿದ್ದವು. ಚರ್ಚಾ ವಿಷಯದ ಮಟ್ಟ ತುಂಬಾ ಉನ್ನತವಾಗಿತ್ತು. ಸರ್ಕಾರದ ವಿಶ್ಲೇಷಣೆ ಮಾಡುವ ಬದಲು ಭಾರತದ ಗೌರವ-ಅಗೌರವಗಳಿಗೆ ಉಂಟಾಗುವ ಧಕ್ಕೆಯ ನೋವು ಎಲ್ಲರ ಮಾತಿನಲ್ಲಿ ಕಂಡುಬರುತ್ತಿತ್ತು. ಬಂಗಾಳದ ಪ್ರತಿನಿಧಿ ಶ್ರೀ ಭಾಉರಾವ್ ಜುಗಾದೆಯವರು ಪೂರ್ವ ಪಾಕ್‍ನಲ್ಲಿ ಹಿಂದೂಗಳ ಮೇಲೆ ನಡೆದ ಬರ್ಭರವಾದ ಆಕ್ರಮಣದ ಘಟನೆಯನ್ನು ಹೇಳಿದಾಗ ಪ್ರತಿಯೊಬ್ಬ ಪ್ರತಿನಿಧಿಯ ಮುಖದ ಮೇಲೂ ಇದ್ದಂತಹ ರೋಷದ ಭಾವನೆ ಯಾರಿಂದಲೂ ಮುಚ್ಚಿಡಲಾಗಲಿಲ್ಲ. 100 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಡಾ|| ರಘುವೀರ್ ಸಮ್ಮೇಳನದ ಸಫಲತೆಯಲ್ಲಿ ವಿಶೇಷವಾಗಿ ಆಹ್ವಾನಿತರಾಗಿದ್ದ ಡಾ|| ರಘುವೀರ್‍ರ ಮೂಕ ಕೊಡುಗೆ ನೋಡಲರ್ಹವಾಗಿತ್ತು. ಬಿಡುವಿನ ಸಮಯದಲ್ಲಿ ಪ್ರತಿನಿಧಿಗಳು ಅವರ ಜೊತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ಪಡೆಯುತ್ತಿದ್ದರು. ಕಠೋರ ಬಿಸಿಲಿನಲ್ಲಿಯೂ ಡಾ|| ರಘುವೀರ್‍ರವರು ಪ್ರತಿಯೊಂದು ಕಾರ್ಯಕ್ರಮದಲ್ಲೂ ಹಾಜರಿದ್ದು ಎಲ್ಲಾ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದರು. ಅವರ ಸರಳ ಹಾಗೂ ವಿನೋದಪ್ರಿಯತೆ ಎಲ್ಲಾ ಪ್ರತಿನಿಧಿಗಳನ್ನು ಎರಡೇ ದಿನಗಳಲ್ಲಿ ತಮ್ಮವರನ್ನಾಗಿಸಿತ್ತು. ಪ್ರಧಾನ ಕಾರ್ಯದರ್ಶಿಯವರ ಮಾರ್ಗದರ್ಶನ ಜನಸಂಘವನ್ನು ಯಾರು ತುಂಬಾ ಹತ್ತಿರದಿಂದ ನೋಡಿದ್ದಾರೋ ಅವರು ಮಹಾಮಂತ್ರಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸಂಘಟನೆಯಲ್ಲಿ ತನ್ನದೇ ಆದ ಒಂದು ವಿಶಿಷ್ಟ ಸ್ಥಾನವಿದೆ ಎಂದು ತಿಳಿದಿದ್ದಾರೆ. ಕಾರ್ಯಕರ್ತರಿಗೆ ಅವರು ಒಂದು ಅಖಂಡ ಪ್ರೇರಣೆಯ ಮೂಲವಿದ್ದ ಹಾಗೆ. ಅವರ ಅಮೂಲ್ಯವಾದ ವಿಶ್ಲೇಷಣೆ ಮತ್ತು ಅವಿರತ ಮಾರ್ಗದರ್ಶನವೇ ಜನಸಂಘದ ಸಫಲತೆಯ ಆಧಾರವಾಗಿದೆ. ತಮ್ಮ ಮುಕ್ತಾಯ ಭಾಷಣದಲ್ಲಿ ಕಾರ್ಯಕರ್ತರಿಗೆ ಪುನಃ ಈ ಮಾತುಗಳನ್ನು ನೆನಪಿಸುತ್ತಾ `ಜನಸಂಘ ಕೇವಲ ಅಧಿಕಾರ ಪ್ರಾಪ್ತಿಗಾಗಿ ರಾಜಕೀಯಕ್ಕೆ ಬರಲಿಲ್ಲ. ಅದು ಒಂದು ಧ್ಯೇಯನಿಷ್ಠ ಸಂಘಟನೆಯಾಗಿದೆ. ಕಾಂಗ್ರೆಸ್ ಚುನಾವಣೆಯನ್ನು ಗೆಲ್ಲಲು ಯಾವ ಅನ್ಯಾಯಗಳ ಪ್ರಯೋಗ ಮಾಡುತ್ತದೆಯೋ ಜನಸಂಘ ಅದನ್ನು ಮಾಡುವುದಿಲ್ಲ. ಯಾವಾಗ ನಮ್ಮ ದೌರ್ಭಾಗ್ಯದಿಂದ ಹಾಗೆ ಆಗುತ್ತದೆಯೋ ಆಗ ಜನಸಂಘದ ಮಂತ್ರಿಮಂಡಲ ರಚನೆಯಾದರೂ ಜನಸಂಘ ಸೋಲುತ್ತದೆ ಎಂದು ನುಡಿದರು. ಯಾವ ಪಕ್ಷಕ್ಕೆ ಇಂತಹ ದೂರದರ್ಶಿ ಮಾರ್ಗದರ್ಶಕ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುವ ಸಾವಿರಾರು ದೇಶಭಕ್ತರ ಆಶ್ರಯವಿದೆಯೋ ಆ ಪಕ್ಷ ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ವಿರೋಧಿಗಳನ್ನು ಹತಪ್ರಭರನ್ನಾಗಿಸಿ ಮುಂದುವರಿದರೆ ಆಶ್ಚರ್ಯವೇನು ? ________ * ಆಕರ : ಪಾಂಚಜನ್ಯ ವಾರಪತ್ರಿಕೆ, 04-06-1962ರ ಸಂಚಿಕೆ (ಸಂ.) ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 101 ಚುನಾವಣೆಯಲ್ಲಿ ನಮಗೆ ಸಿಕ್ಕ ವಿಜಯದಿಂದ ಸಂತೋಷಪಟ್ಟು ನಾವು ಕುಳಿತು ಕೊಳ್ಳಲಾಗುವುದಿಲ್ಲ. (ಹಿಂದಿನ ವಾರದಿಂದ ಮುಂದುವರಿದುದು) ಕಾಂಗ್ರೆಸ್‍ನ ನಾಯಕರು ತಮ್ಮ ಭಾಷಣದಲ್ಲಿ ಎಲ್ಲಿಯೂ ತೆರಿಗೆಯ ಪ್ರಸ್ತಾಪ ಮಾಡಿಲಿಲ್ಲ. ಜಂಟಿ ವ್ಯವಸಾಯದ ಬಗ್ಗೆ ನೆಹರುರವರು ಅವಶ್ಯವಾಗಿ ಕೆಲವು ಕಡೆ ಹೇಳಿದ್ದಾರೆ. ಆದರೆ ಕಾಂಗ್ರೆಸ್‍ನ ಕಾರ್ಯಕರ್ತರು ಹಳ್ಳಿಗಳಿಗೆ ಹೋಗಿ ಕಾಂಗ್ರೆಸ್ ಯಾವಾಗಲೂ ಆ ರೀತಿ ತಪ್ಪು ಮಾಡುವುದಿಲ್ಲವೆಂದು ಹೇಳಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್, ಪ್ರಜಾ ಸಮಾಜವಾದಿ ಪಕ್ಷದವರೆಲ್ಲಾ ಗೋರಕ್ಷಕರಾಗಿ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತರು. ಚುನಾವಣಾ ಪ್ರಚಾರದ ಸಮಯದಲ್ಲಿ ದೇಶದಲ್ಲೆಲ್ಲೂ ಗೋ ಹತ್ಯೆ ಆಗುವುದಿಲ್ಲವೆಂದು ಸುಳ್ಳು ಪ್ರಚಾರ ಮಾಡಿದರು. ದೇಶದ ರಕ್ಷಣೆಯ ವಿಷಯದಲ್ಲಿ ಈ ಪಕ್ಷಗಳು ತಮ್ಮ ಸತ್ಯಾಂಶವನ್ನು ಮುಚ್ಚಿಟ್ಟು, ಎಲ್ಲಾ ಪಕ್ಷಗಳಿಗಿಂತ ತಮ್ಮ ಪಕ್ಷ ದೇಶದ ರಕ್ಷಣೆಯ ಬಗ್ಗೆ ಕಾಳಜಿ ಕೊಡುವ ಪಕ್ಷವೆಂದು ಸಾಬೀತು ಮಾಡಲು ಪ್ರಯತ್ನಿಸಿದರು. ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಮುಂದೆ ಶ್ರೀ ದೀನ್ ದಯಾಳ್ ಉಪಾಧ್ಯಾಯರು ಈ ನಾಯಕರಿಂದ ನಮಗೆ ಪ್ರಾಮಾಣಿಕತೆಯ ಅವಶ್ಯಕತೆಯಿದೆ. ಯಾವ ವಿಷಯಗಳನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಬಹಿರಂಗವಾಗಿ ಹೇಳುತ್ತಿರಲಿಲ್ಲವೋ ಅವುಗಳನ್ನು ತಮ್ಮ ಘೋಷಣಾಪತ್ರದಿಂದ ತೆಗೆದುಹಾಕಿ ಮತ್ತು ಅದರ ಹಾಗೆ ತಮ್ಮ ನೀತಿ ನಿಯಮಗಳನ್ನು ಬೆಳೆಸಿಕೊಳ್ಳಲಿ ಎಂದು ನುಡಿದರು. ಕೆಲವು ಪ್ರಮುಖ ಪಕ್ಷಗಳ ಹೊರತಾಗಿ ಪ್ರಾದೇಶಿಕ ಪಕ್ಷಗಳೂ ಇವೆ. ಇವುಗಳಲ್ಲಿ ರಾಮರಾಜ್ಯ ಪರಿಷದ್ ಮತ್ತು ಹಿಂದೂ ಮಹಾಸಭೆ ಎರಡೂ ಪಕ್ಷಗಳು ಜನಮತದಿಂದ ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುತ್ತಿವೆ. ಮಧ್ಯಪ್ರದೇಶದಲ್ಲಿ ಹಿಂದೂ ಮಹಾಸಭೆಗೆ 6 ಹಾಗೂ ಉತ್ತರ ಪ್ರದೇಶದಲ್ಲಿ 2 ಸ್ಥಾನಗಳು ಲಭಿಸಿವೆ. ರಾಮರಾಜ್ಯ ಪರಿಷದ್‍ಗೆ ಮಧ್ಯಪ್ರದೇಶದಲ್ಲಿ 10 ಹಾಗೂ ರಾಜಸ್ತಾನದ 3 ಸ್ಥಾನಗಳಲ್ಲಿ ವಿಜಯದಕ್ಕಿದೆ. ಪಂಜಾಬ್‍ನಲ್ಲಿ `ಅಕಾಲಿದಳ' ಪಕ್ಷವನ್ನು ಒಂದು ಬಲಯುಕ್ತವಾದ ಸಾಂಪ್ರದಾಯಿಕ ಪಕ್ಷವೆಂದು ಕರೆಯಲಾಗುತ್ತಿದೆ. ಅದಕ್ಕೆ ಕೇವಲ 19 ಸ್ಥಾನಗಳು ಹಾಗೂ 1.92 ಶೇಕಡ ಮತವು ಪ್ರಾಪ್ತವಾಗಿದೆ. ಲೋಕಸಭೆಯಲ್ಲಿಯೂ ಅದು ಕೇವಲ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 1957ರಲ್ಲಿ ಅದು ಕಾಂಗ್ರೆಸ್ ಜೊತೆ ವಿಲೀನವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಹಾಗಾಗಿ ತುಲನಾತ್ಮಕ ವಿವೇಚನೆ ಸಾಧ್ಯವಿಲ್ಲ. ಆದರೆ ಚುನಾವಣಾ ಅಧಿಕಾರಿಗಳ ಸಹಕಾರ ಸಿಗಲಿಲ್ಲವೆಂಬುದಂತೂ ಸ್ಪಷ್ಟ. ರಿಪಬ್ಲಿಕ್ ಪಕ್ಷದ ದ್ಯೋತಕ ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್‍ನಿಂದ ರಿಪಬ್ಲಿಕನ್ ಪಕ್ಷ ಅಧಿಕಾರ ವಹಿಸಿಕೊಂಡ 102 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಂತರ ಅದು ಮೊದಲನೇ ಚುನಾವಣೆಯನ್ನು ಎದುರಿಸಿತು. ಪಕ್ಷದ ಸಾಮಾನ್ಯ ನೀತಿಯು ಯಾವುದಾದರೂ ಅನ್ಯ ಪಕ್ಷ ಅಥವಾ ವರ್ಗದ ಜೊತೆ ಮೈತ್ರಿಮಾಡಿಕೊಂಡು ಚುನಾವಣೆಯನ್ನು ಎದುರಿಸುವುದಾಗಿತ್ತು. ಕೆಲವು ಪ್ರದೇಶಗಳಲ್ಲಿ ಆ ಪಕ್ಷದಲ್ಲಿರುವ ಎರಡೂ ದಳಗಳೂ ಬೇರೆ-ಬೇರೆ ಪಕ್ಷಗಳ ಜೊತೆ ಒಪ್ಪಂದ ಮಾಡಿಕೊಂಡು ಚುನಾವಣೆಯನ್ನು ಎದುರಿಸಿತು. ಒಂದು ದಳ (ಸಮೂಹ) ಸಂಯುಕ್ತ ಮಹಾರಾಷ್ಟ್ರ ಸಮಿತಿಯಲ್ಲಿದ್ದು ಕಮ್ಯುನಿಸ್ಟರ ಜೊತೆಯಲ್ಲಿ ಸಾಗುತ್ತಿದೆ. ಎರಡನೇ ದಳ(ಸಮೂಹ) ಪ್ರಜಾ ಸಮಾಜವಾದಿ ಪಕ್ಷ ಹಾಗೂ ನಾಗ ವಿದರ್ಭ ಆಂದೋಲನ ಸಮಿತಿಯ ಜೊತೆ ಮೈತ್ರಿ ಮಾಡಿಕೊಂಡು ತನ್ನ ರಾಜಕೀಯ ಅಸ್ತಿತ್ವ ಖಾಯಂ ಮಾಡಿಕೊಂಡಿದೆ. ಈ ಪಕ್ಷದ ಭಯಾನಕ ರೂಪ ಉತ್ತರಪ್ರದೇಶದಲ್ಲಿ ಪ್ರಕಟವಾಯಿತು. ಇಲ್ಲಿ ಅದು ಮುಸ್ಲಿಂ ಸಾಂಪ್ರದಾಯಿಕ ತತ್ವಗಳೊಂದಿಗೆ ಒಪ್ಪಂದ ಮಾಡಿಕೊಂಡು ದಲಿತವರ್ಗ ಮತ್ತು ಮುಸಲ್ಮಾನರ ಸಂಯುಕ್ತ ಮೋರ್ಚಾವನ್ನು ತಯಾರು ಮಾಡಿ ಹಿಂದೂ ವಿರೋಧಿ ಭಾವನೆಗಳನ್ನು ಕದಡಲು ಪ್ರಯತ್ನಿಸಿತು. ಕೆಲವು ಸ್ಥಾನಗಳಲ್ಲಿ ಅದಕ್ಕೆ ಸಫಲತೆಯೂ ಸಿಕ್ಕಿತು ಎಂಬುದು ಚಿಂತೆಯ ವಿಷಯವಾಗಿದೆ. ಮಹಾರಾಷ್ಟ್ರ ರಿಪಬ್ಲಿಕನ್ ಪಕ್ಷದ ಕೇಂದ್ರವಾಗಿದ್ದರೂ ಅಲ್ಲಿ ಕೇವಲ 3 ಸದಸ್ಯರು ಗೆದ್ದಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ 8 ಸದಸ್ಯರು ಗೆದ್ದು ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ. ಲೋಕಸಭೆಯಲ್ಲಿ ಅವರ ಸಂಖ್ಯೆ 8 ರಿಂದ ಕುಸಿದು 3ಕ್ಕೆ ತಲುಪಿದೆ. ಈ ಮೂವರೂ ಉತ್ತರ ಪ್ರದೇಶದವರೇ ಆಗಿದ್ದರು. ಝಾರ್ಖಂಡ್ ಪಕ್ಷವು ವನವಾಸಿಯರಲ್ಲಿ ಬೇರ್ಪಡೆಯ ಭಾವನೆಯನ್ನು ಸೃಷ್ಟಿಸಿ, ಚಿಕ್ಕ ನಾಗ್ಪುರ ಮತ್ತು ಅಕ್ಕಪಕ್ಕದ ಕ್ಷೇತ್ರಗಳನ್ನು ಸೇರಿಸಿ `ಝಾರ್ಖಂಡ್ ರಾಜ್ಯ’ ನಿರ್ಮಿಸುವ ಘೋಷಣೆಯನ್ನಿಟ್ಟುಕೊಂಡು ತುಂಬಾ ದಿನಗಳಿಂದ ಕೆಲಸ ಮಾಡುತ್ತಿದೆ. ವನವಾಸಿಯಲ್ಲಿ ಅದರ ಪ್ರಭಾವ ಎಷ್ಟರ ಮಟ್ಟಿಗೆ ಇತ್ತೆಂದರೆ ಬಿಹಾರದಲ್ಲಿ ಕಾಂಗ್ರೆಸ್ ಕೂಡ ಇದರ ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿತು. ಆದರೆ ಈ ಬಾರಿ ಇದರ ವಿಜಯೀ ಸದಸ್ಯರ ಸಂಖ್ಯೆ ಕುಸಿದು ವಿಧಾನಸಭೆಯಲ್ಲಿ 30 ರಿಂದ 20 ಹಾಗೂ ಲೋಕಸಭೆಯಲ್ಲಿ 6 ರಿಂದ 3 ಕ್ಕೆ ತಲುಪಿದೆ. ಶೇ. ಕಾ. ಪಕ್ಷದ ಶಕ್ತಿಯ ಕುಸಿತ ಮಹಾರಾಷ್ಟ್ರದ ಶೇತಕರೀ ಕಾಮಕರೀ ಪಕ್ಷವು ಒಂದು ಪ್ರಾದೇಶಿಕ ಹಾಗೂ ಜಾತಿವಾದಿ ಪಕ್ಷದ ರೂಪದಲ್ಲಿ ಕೆಲಸ ಮಾಡುತ್ತಿದೆ. ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಭಾಗವೆಂದು ಹಿಂದಿನ ಸಲ ಒಳ್ಳೆಯ ಸಫಲತೆ ಸಿಕ್ಕಿತ್ತು. ಆದರೆ ಈ ಸಲ ಕಾಂಗ್ರೆಸ್ ಪಕ್ಷದಿಂದಲೇ ಮಹಾರಾಷ್ಟ್ರದಲ್ಲಿ ಜಾತಿವಾದವನ್ನು ಆಹ್ವಾನಿಸಿದ ಕಾರಣ ಶೇ. ಕಾ. ಪಕ್ಷದ ಪ್ರಭಾವ ಇಳಿಯಿತು. ಅದರ ಸದಸ್ಯರ ಸಂಖ್ಯೆ 31 ರಿಂದ ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 103 ಇಳಿದು 15ಕ್ಕೆ ತಲುಪಿತು. ಫಾರ್ವರ್ಡ್ ಬ್ಲಾಕ್ ಬಂಗಾಳ ಮತ್ತು ಮದ್ರಾಸಿಗೆ ಸೀಮಿತವಾಗಿದೆ. ಈ ಸಲ ವಿಧಾನಸಭೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 13 ಹಾಗೂ ಮದ್ರಾಸ್‍ನಲ್ಲಿ 4 ಸದಸ್ಯರು ಗೆದ್ದಿದ್ದಾರೆ. ಲೋಕಸಭೆಯಲ್ಲಿ ಎರಡೂ ರಾಜ್ಯಗಳಿಂದ ಒಬ್ಬೊಬ್ಬ ಸದಸ್ಯರು ಆಯ್ಕೆಯಾಗಿದ್ದಾರೆ. ದ್ರವಿಡ ಮುನೇತ್ರ ಕಳಗಂ ಮತ್ತು ಮುಸ್ಲಿಂ ಲೀಗ್ `ಭಾರತದಿಂದ ಸ್ವತಂತ್ರ' ಎಂಬ ಘೋಷಣೆಯನ್ನು ಹೊಂದಿದ ದ್ರವಿಡ ಮುನೇತ್ರ ಕಳಗಂ ಈ ಬಾರಿ ಮದ್ರಾಸಿನಲ್ಲಿ ಒಳ್ಳೆಯ ಸಫಲತೆಯನ್ನು ಪಡೆದಿದೆ. ಅದರ 50 ಸದಸ್ಯರು ವಿಧಾನಸಭೆಯಲ್ಲಿ ಹಾಗೂ 7 ಲೋಕಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಅವರ ಜಯದ ಹಿಂದೆ ಕಾಂಗ್ರೆಸ್‍ನ ವಿರೋಧ ಅಧಿಕವಾಗಿತ್ತೋ ಅಥವಾ ಪಕ್ಷದ ಸಿದ್ಧಾಂತಗಳನ್ನು ಮತದಾರರು ಇಷ್ಟಪಟ್ಟರೋ ಎನ್ನುವುದು ಕಠಿಣ. ಆದರೆ ರಾಜಾಜಿಯವರ ಆಶೀರ್ವಾದದ ಪೂರ್ಣಲಾಭವನ್ನು ಪಡೆದರು ಎನ್ನುವುದಂತೂ ನಿಶ್ಚಿತ ಸತ್ಯ. ಅಸ್ಸಾಂನ ಪರ್ವತಕ್ಷೇತ್ರಗಳಲ್ಲಿ `ಅನ್ಯಪರ್ವತ ರಾಜ್ಯ'ವೆಂಬ ಬೇಡಿಕೆ ಇಟ್ಟ ಪಕ್ಷಗಳಿಗೆ ಪ್ರಾಯಶಃ ಎಲ್ಲಾ ಸ್ಥಾನಗಳು ದೊರಕಿತು. ಅನ್ಯ ಪಕ್ಷಗಳು ಆ ರಾಜ್ಯದಲ್ಲಿ ರಾಜಕೀಯದ ದೃಷ್ಟಿಯಿಂದ ನಿಪ್ಕ್ರಿಯ ಎನ್ನುವುದು ಸ್ಪಷ್ಟವಾಗಿದೆ. ಇದೇ ತರಹ ಸಾಲಾಬಾರ್ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್‍ನ ಪ್ರಭಾವ ಹಾಗೆಯೇ ಇದೆ. ಆ ಪಕ್ಷಕ್ಕೆ ಅಲ್ಲಿಂದ 2 ಲೋಕಸಭಾ ಸ್ಥಾನಗಳು ದೊರಕಿವೆ. ಕಾಶ್ಮೀರದ ಕಥೆಯೇ ಬೇರೆ ಚುನಾವಣೆಗೆ ಕಾಶ್ಮೀರದ್ದು ತನ್ನದೇ ಆದ ಒಂದು ಕಥೆಯಾಗಿದೆ. ಭಾರತದ ಚುನಾವಣಾ ಆಯೋಗದ ಸಮಕ್ಷಮದಲ್ಲಿ ನಡೆದರೂ ಅಲ್ಲಿಯ ಕಾನೂನು ಭಾರತದಿಂದ ಭಿನ್ನವಾದುದು. ಅಲ್ಲಿ ಚುನಾವಣೆಯನ್ನು ಎರಡು ಭಾಗಗಳಲ್ಲಿ ಮಾಡಲಾಯಿತು. ಫೆಬ್ರವರಿ 24 ರಂದು ಭಾರತದ ಅನ್ಯ ಭಾಗಗಳ ಜೊತೆ ಜಮ್ಮು ಪ್ರಾಂತ್ಯದ ಚುನಾವಣೆ ನಡೆಸಲಾಯಿತು. ಅನಂತರ ಕಾಶ್ಮೀರ ಮತ್ತು ಲಡಾಖ್‍ನಲ್ಲಿ ಚುನಾವಣೆ ನಡೆಸಲಾಯಿತು. ಮತದಾನದ ಸಮಯದಲ್ಲಿ ಚಿಹ್ನೆ ಹಾಕುವ ಪದ್ದತಿಯನ್ನು ಜಾರಿಗೊಳಿಸಲಾಗಲಿಲ್ಲ. ಚುನಾವಣೆಯ ಸಮಯದಲ್ಲಿ ಅನೇಕ ದಾಂಧಲೆಗಳ ಮಾಹಿತಿ ಸಿಕ್ಕಿತು. ಪ್ರಜಾ ಪರಿಷತ್ತಿನ ಕಾರ್ಯಕರ್ತರು ಮೊಹರನ್ನು ತೆಗೆಯದೇ ಪೆಟ್ಟಿಗೆ ಒಡೆಯುವ ಪ್ರದರ್ಶನ ಒಂದು ಕುತೂಹಲವನ್ನೇ ಸೃಷ್ಟಿಸಿತು. ಚುನಾವಣಾ ಆಯೋಗವು ಪೆಟ್ಟಿಗೆಗಳನ್ನು ಚೀಲದಲ್ಲಿ ತುಂಬುವ ಆದೇಶವನ್ನೇನೋ ಹೊರಡಿಸಿತು. ಆದರೆ ಆದೇಶದ ಪಾಲನೆಯಾಗಲಿಲ್ಲ. ತುಂಬಾ ದೊಡ್ಡ ಸಂಖ್ಯೆಯಲ್ಲಿ ಸೂಚನಾಪತ್ರ, ನಾಮಪತ್ರಗಳನ್ನು ಬಿಟ್ಟು ಹೋಗಬೇಕಾಯಿತು. 104 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜನತೆಗೆ ಚುನಾವಣೆಯ ಮೇಲೆ ನಿಷ್ಪಕ್ಷಪಾತವಾದ ನಂಬಿಕೆ ಬರಲು ಚುನಾವಣಾ ಆಯೋಗ ಯಾವುದಾದರೂ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ಅವಶ್ಯಕವಾಗಿದೆ. ಭಾರತದ ಚುನಾವಣಾ ನಿಯಮಗಳು ಅಲ್ಲಿಯೂ ಪಾಲಿಸಬೇಕಾಗಿದೆ. ಪ್ರಜಾಪರಿಷತ್ 25 ಸ್ಥಾನಗಳಲ್ಲಿ ಚುನಾವಣೆಯನ್ನು ಎದುರಿಸಿತು. ಅದಕ್ಕೆ 3ರಲ್ಲಿ ವಿಜಯ ಹಾಗೂ 17.69 ಶೇಕಡ ಮತವು ಪ್ರಾಪ್ತವಾಯಿತು. ಅನ್ಯ ವಿರೋಧಿ ಪಕ್ಷಗಳು ಯಾವುದೇ ಸ್ಥಾನ ಪಡೆಯಲಾಗಲಿಲ್ಲ. ಅವಕ್ಕೆ ಸಿಕ್ಕ ಮತಗಳು ನಗಣ್ಯವಾಗಿದ್ದವು. ರಾಜ್ಯಸಭೆ ಹಾಗೂ ವಿಧಾನ ಪರಿಷತ್ತು. ರಾಜ್ಯಸಭೆಯ ದ್ವಿವಾರ್ಷಿಕ ಚುನಾವಣೆಯಲ್ಲಿ ನಮಗೆ 2 ಸ್ಥಾನ; ಒಂದು ಉತ್ತರ ಪ್ರದೇಶ ಹಾಗೂ ಮತ್ತೊಂದು ಮಧ್ಯಪ್ರದೇಶದಿಂದ ದೊರತಿತು. ಉತ್ತರಪ್ರದೇಶದಲ್ಲಿ ವಿಧಾನಸಭೆಗೆ ಶ್ರೀ ಪೀತಾಂಬರ್ ದಾಸ್‍ರವರು ಪುನರಾಯ್ಕೆಯಾದರು. ರಾಜ್ಯಸಭೆಯಲ್ಲಿ ನಾವು ಉತ್ತರಪ್ರದೇಶದಲ್ಲಿ ಶ್ರೀ ಸೀತಾರಾಂ ಜಯಪುರಿಯಾ (ಸ್ವತಂತ್ರ) ರವರನ್ನು ಹಾಗೂ ಶ್ರೀ ಮುರಹಾರಿಗೌಡ (ಸಮಾಜವಾದಿ)ರನ್ನು, ರಾಜಸ್ತಾನದಲ್ಲಿ ಮಹಾರಾಜ ಮಾನ್‍ಸಿಂಹ (ಸ್ವತಂತ್ರ)ರನ್ನು ಹಾಗೂ ಬಿಹಾರದಲ್ಲಿ ಶ್ರೀ ಗಂಗಾಶರಣ ಸಿಂಹ(ಪ್ರಜಾ ಸಮಾಜವಾದಿ ಪಕ್ಷ)ರನ್ನು ಅನುಮೋದಿಸಿದೆವು. ಅವರೆಲ್ಲರೂ ಗೆದ್ದು ಬಂದರು. ಉತ್ತರ ಪ್ರದೇಶದಿಂದ ಕಮ್ಯುನಿಸ್ಟ್ ಸದಸ್ಯ ಶ್ರೀ ಜೆ.ಎ. ಅಹಮದ್‍ರವರ ಸ್ಥಾನ ಖಾಲಿಯಾದ ನಂತರ ಅವರು ತಮ್ಮ ಸದಸ್ಯರನ್ನು ಆರಿಸಿ ಆ ಸ್ಥಾನವನ್ನು ಭರ್ತಿಮಾಡಲಿಲ್ಲ. ಉತ್ತರ ಪ್ರದೇಶ ವಿಧಾನಪರಿಷತ್‍ನಲ್ಲಿ ನಾವು ಸ್ವತಂತ್ರ ಮತ್ತು ಸಮಾಜವಾದಿ ಸದಸ್ಯರಿಗೆ ನಮ್ಮ ಉಳಿದ ಮತವನ್ನು ಮುಂದಿನ ಶ್ರೇಷ್ಠತೆಯನ್ನು ಕೊಟ್ಟೆವು. ಅವರೂ ವಿಜಯಿಗಳಾದರು. ಅಲ್ಲಿಯೂ ಕಮ್ಯುನಿಸ್ಟ್ ಉಮೇದುವಾರ ಸೋಲನುಭವಿಸಬೇಕಾಯಿತು. ಸ್ನಾತಕ ಹಾಗೂ ಸ್ಥಾನೀಯ ಸದಸ್ಯರ ಸಮೂಹವು ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ವಿಧಾನಪರಿಷತ್‍ನ ಚುನಾವಣೆಯನ್ನು ಎದುರಿಸಿದವು. ಆದರೆ ಸಫಲತೆ ಸಿಗಲಿಲ್ಲ. ಜಿಲ್ಲಾ ಪರಿಷತ್‍ನಲ್ಲಿ ಆರಿಸಿರುವ ಸರ್ಕಾರಿ ನೌಕರರ ಸಂಖ್ಯೆಯ ಕಾರಣ ಯಾವುದೇ ವಿರೋಧ ಪಕ್ಷಕ್ಕೂ ಈ ಚುನಾವಣಾ ಕ್ಷೇತ್ರಗಳಲ್ಲಿ ಗೆಲ್ಲುವುದು ಕಠಿಣವಾಗಿದೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯ ಪದವಿಗೆ ನಾವು ಡಾ|| ರಾಧಾಕೃಷ್ಣನ್ ಹಾಗೂ ಡಾ|| ಜಾಕಿರ್ ಹುಸೇನ್‍ರನ್ನು ಅನುಮೋದಿಸಿದೆವು. ಚುನಾವಣಾ ಪ್ರಚಾರದಲ್ಲಿ ಸೈದ್ಧಾಂತಿಕತೆಯ ಅಭಾವ ಚುನಾವಣಯ ಫಲಿತಾಂಶದಿಂದ ಭಾರತದ ರಾಜಕೀಯ ಸೈದ್ಧಾಂತಿಕ ಪಕ್ಷದ ವಿಷಯದಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವುದು ಕಠಿಣವಾಗಿದೆ ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 105 ಯಾಕೆಂದರೆ ಮತದಾರನ ನಿರ್ಣಯ ಅನೇಕ ಕಾರಣಗಳಿಂದ ಮಹತ್ವಪೂರ್ಣವಾದದು. ಅದರಲ್ಲಿ ಸೈದ್ಧಾಂತಿಕ ಪಕ್ಷ ತುಂಬಾ ಕಡಿಮೆ ಇರುತ್ತದೆ. ಪ್ರಾಯಶಃ ಇದೇ ಕಾರಣದಿಂದ ಅನೇಕ ಪಕ್ಷಗಳ ಹಿರಿಯ ನಾಯಕರೂ ಕೂಡ ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಸಿದ್ಧಾಂತಗಳ ವಿವೇಚನೆಯ ಅವಶ್ಯಕತೆಯಿಲ್ಲವೆಂದುಕೊಂಡರು. ಅನ್ಯ ಪಕ್ಷಗಳಿಗಿಂತ ದೊಡ್ಡದಾಗಿರುವ ಹಾಗೂ ಮತ್ಯಾವ ಪಕ್ಷದಲ್ಲಿಯೂ ಪಂಡಿತ್ ನೆಹರೂರಂತಹ ಪ್ರಸಿದ್ಧ ವ್ಯಕ್ತಿ ಇಲ್ಲದ ಕಾರಣ ಕಾಂಗ್ರೆಸ್ ಮತದ ಅಧಿಕಾರವನ್ನು ಪದೇ ಪದೇ ಹೇಳುತ್ತಿತ್ತು. ಅನ್ಯ ಪಕ್ಷಗಳು ಇದರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಅಸಫಲವಾಗಿದೆ. ಅಥವಾ ತನ್ನ ಪ್ರತಿಸ್ಪರ್ಧಿಯ ಹೋಲಿಕೆಯಲ್ಲಿ ಜಾತಿವಾದಿಯಾಗಿರುವ ಕ್ಷೇತ್ರೀಯ ದೃಷ್ಟಿಯಿಂದ ನಿಷ್ಠೆಗೆ ಹಕ್ಕುದಾರನಲ್ಲದ ವ್ಯಕ್ತಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಎಂದು ಪ್ರಚಾರ ಮಾಡತೊಡಗಿದವು. ಭಾರತೀಯ ಜನಸಂಘ ಇದರಿಂದ ದೂರ ಉಳಿಯುವ ಪ್ರಯತ್ನ ಮಾಡಿತು. ಆದರೆ ಎಷ್ಟರ ಮಟ್ಟಿಗೆ ಸಫಲವಾಯಿತು ಎಂಬುದನ್ನು ಹೇಳುವುದು ಅಸಂಭವದ ಮಾತು. ಇದೇ ತರಹ ಶಾಸಕ ಪಕ್ಷದಿಂದ ಭ್ರಷ್ಟಾಚಾರಿಗಳ ಮಾಹಿತಿಯೂ ಸಿಕ್ಕಿದೆ. ಅದರ ಪ್ರಭಾವ ಶಾಸಕ ಪಕ್ಷದ ಮೇಲೆ ಆಗಬಹುದು. ಅನಿಶ್ಚಿತತೆಯ ಕೆಲವು ಉದಾಹರಣೆಗಳ ಹೊರತಾಗಿ ಚುನಾವಣೆಯ ಫಲಿತಾಂಶ ಜನತೆಯ ಮನಸ್ಸಿನ ಪ್ರತಿಬಿಂಬವೆಂದು ಸ್ವೀಕರಿಸಬೇಕಾಗಿದೆ. ಯಾರಾದರೂ ಭಯ ಅಥವಾ ಲೋಭಕ್ಕೆ ಒಳಪಟ್ಟು ಅಥವಾ ಸಾಂಪ್ರದಾಯಿಕತೆ ಅಥವಾ ಜಾತೀವಾದದ ಭಾವನೆಗಳಲ್ಲಿ ಕೊಚ್ಚಿ ಹೋಗಿದ್ದರೆ ಅನ್ಯ ಪಕ್ಷಗಳು ಅವರನ್ನು ಪ್ರಜಾಪ್ರಭುತ್ವದ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ತಯಾರು ಮಾಡಲಾಗಿಲ್ಲ ಎನ್ನಬಹುದಾಗಿದೆ. ಈ ಅನಿಶ್ಚಿತತೆಯ ವ್ಯಾಪಕತೆ ಎಷ್ಟಿತ್ತು ಮತ್ತು ಅವರಿಂದ ಚುನಾವಣೆಯ ಮೇಲೆ ಯಾವ ಪರಿಣಾಮವಾಯಿತು ಹಾಗೂ ಅದನ್ನು ಹೇಗೆ ತಡೆಯಬಹುದು ಎನ್ನುವುದರ ಬಗ್ಗೆ ವಿಚಾರಣೆ ಮಾಡಲು ಕಾರ್ಯಸಮಿತಿಯು ಒಂದು ಉಪಸಮಿತಿಯನ್ನು ರಚಿಸಿದೆ ಮತ್ತು ಅದರ ಪೂರ್ಣ ವಿವರಣೆ ನಮಗೆ ದೊರಕಲಿದೆ. ಕಾಂಗ್ರೆಸ್‍ನ ಟಿಕೆಟ್ ಈಗ ವಿಜಯದ ಟಿಕೆಟ್ ಆಗಿ ಉಳಿದಿಲ್ಲ. ಚುನಾವಣೆಯ ಫಲಿತಾಂಶದ ಬಗ್ಗೆಯೇ ಅಲ್ಲದೆ ಸಂಪೂರ್ಣ ಚುನಾವಣೆ ಆಂದೋಲನದ ವಿಶ್ಲೇಷಣೆ ದೊರಕಿರುವ ವಿಷಯಗಳಿಂದ ಒಂದು ನಿರ್ಧಾರಕ್ಕೆ ಬರಬಹುದಾಗಿದೆ. ಮೊದಲಿಗೆ ಕಾಂಗ್ರೆಸ್ ಅತಿವೇಗವಾಗಿ ಜನಗಳ ಮನಸ್ಸಿನಿಂದ ಅಪ್ರಿಯವಾಗುತ್ತಿದೆ ಎಂದು ನಿರ್ವಿವಾದವಾಗಿ ಹೇಳಬಹುದಾಗಿದೆ. ಚುನಾವಣೆಯ ಸಮಯದಲ್ಲಿ ಜನತೆಯು ಬೇರೆ ಪಕ್ಷಗಳ ಮಾತನ್ನು ಬಹಳ ಜಿಜ್ಞಾಸೆಯಿಂದ 106 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕೇಳಿತು. ಅದರ ಜೊತೆ ಕೈಜೋಡಿಸಿತು. ಎಲ್ಲಿ ವಿರೋಧ ಪಕ್ಷದ ಶಕ್ತಿಯು ಕಂಡುಬಂದಿತೋ ಆ ಪಕ್ಷವನ್ನು ಜಯಿಸುವ ಹಾಗೆ ಮಾಡಿತು. ಇದೆಲ್ಲಾ ನೋಡಿದರೆ ಜನತೆ ಪರಿವರ್ತನೆ ಬಯಸುತ್ತದೆ. ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಅದರ ಬಹುಮತ ಕಡಿಮೆಯಾಗಿದೆ ಹಾಗೂ ಮತ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಭಾರಿ ಬಹುಮತದಿಂದ ಕಾಂಗ್ರೆಸ್ಸಿನ ಸ್ಪರ್ಧಿಗಳು ಗೆಲ್ಲುತ್ತಿದ್ದರೋ ಅದು ಒಂದು ಭೂತಕಾಲದ ಸಂಗತಿಯಾಗಿ ಹೋಗಿದೆ. ಕಾಂಗ್ರೆಸ್‍ನ ಟಿಕೇಟ್ ಈಗ ವಿಜಯದ ಟಿಕೇಟ್ ಆಗಿ ಉಳಿದಿಲ್ಲ. ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಕೂದಲೆಳೆಯಿಂದ ಪಾರಾಗಿದೆ. ಇಂದು ಕಾಂಗ್ರೆಸ್ಸಿನ ಗೆಲುವು ಜನತೆಯ ಸಮರ್ಥನೆ ಆಗಿರುವುದಲ್ಲದೆ ಅನ್ಯ ಪಕ್ಷಗಳಲ್ಲಿರುವ ಸಂಘಟನಾತ್ಮಕ ಕೊರತೆಯಿಂದ ಆಗಿದೆ. ಚುನಾವಣೆಯ ಅನುಭವ, ಜ್ಞಾನ ಹಾಗೂ ತಾಂತ್ರಿಕ ಪ್ರಶಿಕ್ಷಣದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ದಿನ ದೂರವಿಲ್ಲವೆಂದು ಆಶಿಸಬಹುದಾಗಿದೆ. ಕಮ್ಯುನಿಸ್ಟ್ ಸಮಸ್ಯೆಯ ಬಗ್ಗೆ ಜನತೆ ಜಾಗರೂಕವಾಗಿರಬೇಕು. ಪಶ್ಚಿಮಬಂಗಾಳ, ಆಂಧ್ರ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ನ ಶಕ್ತಿವೃದ್ಧಿ ಹಾಗೂ ಉಳಿದ ನಾಲ್ಕೂ ಕಡೆ ಸಾಮಾನ್ಯವಾಗಿ ಕುಸಿತ ಈ ರಾಜ್ಯಗಳಲ್ಲಿ ಕಮ್ಯುನಿಸ್ಟ್ ಪಕ್ಷವಲ್ಲದವರಿಗೆ ಸಮರ್ಥನೆ ಕೊರತೆ ಹಾಗೂ ಗೈರು-ಸಮಾಜವಾದಿ ಪಕ್ಷಗಳ ವಿಜಯಗಳಿಂದ ತಿಳಿದು ಬರುವ ವಿಷಯವೇನೆಂದರೆ ಜನತೆ ಕಮ್ಯುನಿಸ್ಟ್ ಸಮಸ್ಯೆಯ ಬಗ್ಗೆ ಜಾಗರೂಕವಾಗಿರಬೇಕಾಗಿದೆ. ಹಾಗೂ ಕಾಂಗ್ರೆಸ್ ಈ ಭಾವನೆಯ ಸಫಲತಾಪೂರ್ವಕ ಲಾಭ ಪಡೆಯಲಿದೆ. ಕಮ್ಯುನಿಸ್ಟ್‌ರು ಸಾರ್ವಕಾಲದ ಆಧಾರವಾಗಿ ಸ್ವಲ್ಪ ಪ್ರಗತಿಯನ್ನು ಅವಶ್ಯವಾಗಿ ಪಡೆದಿದ್ದಾರೆ. ಕಮ್ಯುನಿಸ್ಟರ ವರ್ಚಸ್ಸು ಪ್ರತಿಷ್ಠಾಪನೆಯಾಗುವಂತಹ ಯಾವುದೇ ಪರಿಸ್ಥಿತಿಯನ್ನು ಜನತೆ ಸಹಿಸುವುದಿಲ್ಲ ಎಂಬುದನ್ನು ವಿಶ್ವಾಸ ನಂಬಿಕೆಗಳಿಂದ ಹೇಳಬಹುದಾಗಿದೆ. ಕಮ್ಯುನಿಸ್ಟ್‌ರೂ ಸಹ ಇದನ್ನು ತಿಳಿದಿದ್ದಾರೆ ಮತ್ತು ಇದರಿಂದಲೇ ಅನ್ಯ ಪಕ್ಷಗಳನ್ನು ಜೊತೆ ಸೇರಿಸಿಕೊಂಡು ಸಂಯುಕ್ತ ಮೋರ್ಚಾ ನಿರ್ಮಾಣ ಮಾಡುವ ಹಾಗೂ ಕಾಂಗ್ರೆಸ್ ಜೊತೆ ಸೇರಿ ಅದರ ನೀತಿಯಂತೆ ನಡೆಯಲು ತಯಾರಾಗಿದೆ. ಅದಕ್ಕೆ ತನ್ನ ಪಕ್ಷದ ವ್ಯಾಪಕ ವಿಜಯದ ಬಗ್ಗೆ ಆಸೆಯಿರುವುದಿಲ್ಲ. ಯಾವ ಸಮಸ್ಯೆಯನ್ನು ಜನತೆ ಗುರ್ತಿಸುತ್ತದೆಯೋ ಅದರ ಬಗ್ಗೆ ಕಾಂಗ್ರೆಸ್ ಜಾಗರೂಕವಾಗಿಲ್ಲವೆಂದು ಅನಿಸುತ್ತದೆ. ಗೈರು(ಅನ್ಯ) ಸಮಾಜವಾದಿಯನ್ನು ಗಮನಿಸಿ... ಗೈರು ಸಮಾಜವಾದಿ ಶಕ್ತಿಗಳು ನಿಶ್ಚಿತವಾಗಿ ಜನತೆಯ ಮೇಲೆ ತನ್ನದೇ ಆದ ಛಾಪನ್ನು ಒತ್ತಿವೆ. ಅವುಗಳ ವಿಜಯ ಮಹತ್ವಪೂರ್ಣವಾದುದು. ಆದರೆ ಅವು ಜನಹಿತದ ಬಗ್ಗೆ ಯೋಚಿಸಬೇಕಾಗಿದೆ. ಇದರಿಂದ ಸ್ವಾರ್ಥಿ ಎಂಬ ಹಣೆಪಟ್ಟಿ ಅವಕ್ಕಿರುವುದಿಲ್ಲ. ತೃತೀಯ ಚುನಾವಣೆಯಿಂದ ಜನಸಂಘದ ಶಕ್ತಿ ಹೆಚ್ಚಿತು 107 ಕೆಟ್ಟತನಗಳು ಸಮಾಪ್ತವಾಗಿಲ್ಲ ಸಾಂಪ್ರದಾಯಿಕ ಮತ್ತು ಕ್ಷೇತ್ರೀಯ ಪಕ್ಷಗಳು ಹಿಂದೆ ಸರಿದಿವೆ ಆದರೆ ಕೆಟ್ಟತನಗಳು ಸಮಾಪ್ತವಾಗಿವೆ ಎಂದು ತಿಳಿಯುವುದು ದೊಡ್ಡ ತಪ್ಪಾಗುತ್ತದೆ. ವಾಸ್ತವವಾಗಿ ಕಾಂಗ್ರೆಸ್ ಹಾಗೂ ಅನ್ಯ ಪಕ್ಷಗಳಿಂದ ತುಷ್ಟೀಕರಣದ ನೀತಿ (ಪ್ರಸನ್ನಗೊಳಿಸುವುದು)ಯಿಂದ ಅದಕ್ಕೆ ಹೊಸ ಜೀವನ ಪ್ರಾಪ್ತವಾಗಿದೆ. ದ್ರವಿಡ ಮುನೇತ್ರ ಕಳಗಂನ ಸಫಲತೆ ನಮ್ಮ ಚಿಂತೆಯ ವಿಷಯವಾಗಿರಲಿಲ್ಲ. ಆದರೆ ರಾಜಾಜಿಯವರಿಂದ ಅದರ ಸಮರ್ಥನೆ ಹಾಗೂ ಮದ್ರಾಸ್ ದ್ರವಿಡ ಕಳಗಂನ ಜೊತೆ ಕಾಂಗ್ರೆಸ್‍ನ ಗುಪ್ತಮೈತ್ರಿ ಒಂದು ಭಯಾನಕ ಘಟನೆಯಾಗಿತ್ತು. ಮುಸ್ಲಿಂ ಲೀಗ್ ಇಡೀ ದೇಶದಲ್ಲಿ ತನ್ನ ಜಾಲವನ್ನು ಹರಡದೇ ಇರಬಹುದು. ಆದರೆ ಮುಸ್ಲಿಂ ಸಂಪ್ರದಾಯವಾದಿಗಳ ಮತ್ತು ರಿಪಬ್ಲಿಕನ್ ಪಕ್ಷದ ಮೈತ್ರಿ, ಕಾಂಗ್ರೆಸ್‍ನಿಂದ ಪಾಕ್‍ನ ಪ್ರಭಾವಿತ ವ್ಯಕ್ತಿಗಳಿಗೆ ಟಿಕೇಟ್ ಕೊಡುವುದು, ಬೇರ್ಪಡಿಕೆಗೆ ಆಗ್ರಹಿಸುವ ಮುಸ್ಲಿಂರನ್ನು ಕಾಂಗ್ರೆಸ್ ಪಕ್ಷ ಪ್ರಶಂಸಿಸುವುದು ಹಾಗೂ ವಿಘಟನಾವಾದಿ ಸಾಂಪ್ರದಾಯಿ ಹಾಗೂ ಕಮ್ಯುನಿಸ್ಟ್ ತತ್ವಗಳೊಂದಿಗೆ ಒಪ್ಪಂದದಂತಹ ವಿಷಯಗಳು ದೇಶದ ಏಕತೆ ಮತ್ತು ರಕ್ಷಣೆಗೆ ಘಾತಕ ಸಂಕಲ್ಪಗಳಾಗಲಿವೆ. ಜನತೆ ಸಾಮಾನ್ಯವಾಗಿ ರಾಷ್ಟ್ರಭಕ್ತರನ್ನೊಳಗೊಂಡಿದ್ದು ಏಕತೆಯಲ್ಲಿ ನಿಷ್ಠೆಯನ್ನೊಳಗೊಂಡಿದೆ. ಆದರೆ ಅವರನ್ನು ಜಾಗೃತ ಮತ್ತು ಸಂಘಟಿತರನ್ನಾಗಿಸಬೇಕಾಗಿದೆ. ಇದರಿಂದ ಅವರು ಈ ತರಹದ ಪದಾಕಾಂಕ್ಷ ಶಕ್ತಿಗಳ ಅಧಿಕಾರಕ್ಕೆ ಒಳಪಡುವುದಿಲ್ಲ. ಅವಕಾಶವಾದಿತ್ವ ಕಾಂಗ್ರೆಸ್ ಸರ್ಕಾರದ ತೆರಿಗೆ ನೀತಿಯನ್ನು ಜನತೆ ವ್ಯಾಪಕವಾಗಿ ವಿರೋಧಿಸಿದೆ. ಜಂಟಿ ವ್ಯವಸಾಯ ನೀತಿಯನ್ನು ರೈತರು ತಿರಸ್ಕರಿಸಿದ್ದಾರೆ ಹಾಗೂ ಕಾಂಗ್ರೆಸ್ಸಿನ ಗೋವು ಮತ್ತು ದೇಶದ ರಕ್ಷಣೆಯ ವಿಷಯದಲ್ಲಿ ಕೈಗೊಂಡಿರುವ ನೀತಿಯ ಬಗ್ಗೆ ಜನತೆ ಅಸಂತೋಷ ವ್ಯಕ್ತಿಪಡಿಸಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸಹಿತ ಅನ್ಯ ಪಕ್ಷಗಳೂ ಒಂದೇ ವಿಚಾರವನ್ನು ಹೊಂದಿದ್ದವು ಎಂದು ನಿರ್ಧರಿಸಬಹುದು. ಕಾಂಗ್ರೆಸ್ಸಿನ ನಾಯಕರು ತಮ್ಮ ಭಾಷಣದಲ್ಲಿ ಎಲ್ಲಿಯೂ ತೆರಿಗೆಯ ಬಗ್ಗೆ ಮಾತನಾಡಲಿಲ್ಲ. ಜಂಟಿ ವ್ಯವಸಾಯದ ಬಗ್ಗೆ ನೆಹರೂರವರು ಅವಶ್ಯವಾಗಿ ಮಾತಾಡಿದರು. ಆದರೆ ಕಾಂಗ್ರೆಸ್ಸಿನ ಕಾರ್ಯಕರ್ತರು ಹಳ್ಳಿಗಳಿಗೆ ಹೋಗಿ ಕಾಂಗ್ರೆಸ್ ಯಾವಾಗಲೂ ಆ ತರಹದ ತಪ್ಪು ಮಾಡುವುದಿಲ್ಲ ಎಂದು ವಾದಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್, ಪ್ರಜಾಸಮಾಜವಾದಿ ಎಲ್ಲರೂ ಗೋರಕ್ಷಕರಾಗಿ ತಮ್ಮ ಕ್ಷೇತ್ರದಲ್ಲಿ ನಿಂತರು. ಅವರು ದೇಶದಲ್ಲೆಲ್ಲೂ ಗೋ ಹತ್ಯೆ ಆಗುವುದಿಲ್ಲವೆಂಬ ಸುಳ್ಳು ಪ್ರಚಾರ ಮಾಡಿದರು. ದೇಶದ ರಕ್ಷಣೆಯ ವಿಷಯದಲ್ಲಿ 108 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಈ ಪಕ್ಷಗಳು ತಮ್ಮ ವಾಸ್ತವಿಕತೆಯನ್ನು ಮುಚ್ಚಿಟ್ಟು ಎಲ್ಲರಿಗಿಂತ ಹೆಚ್ಚಿನ ರಕ್ಷಣೆ ಮಾಡುವ ಪಕ್ಷ ತಮ್ಮದೆಂದು ಸಾಬೀತುಪಡಿಸಲು ಪ್ರಯತ್ನಿಸಿದರು. ಯಾವ ವಿಷಯಗಳನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಬಹಿಂಗವಾಗಿ ಹೇಳುತ್ತಿರಲಿಲ್ಲವೋ ಅವನ್ನು ತಮ್ಮ ಘೋಷಣಾ ಪತ್ರದಿಂದಲೇ ಕಿತ್ತೆಸೆಯಲಿ ಹಾಗೂ ಅವರಿಗನುಸಾರವಾಗಿ ನೀತಿಯನ್ನು ಕೈಗೊಳ್ಳಲಿ ಎಂಬ ಪ್ರಾಮಾಣಿಕತೆಯ ಬೇಡಿಕೆ ಅವರ ಮುಂದಿತ್ತು. ಜನಸಂಘದ ಮತ್ತೊಂದು ಮುಂದಿನ ಹೆಜ್ಜೆ. 1957ರ ಚುನಾವಣೆಯಲ್ಲಿ ಭಾರತೀಯ ಜನಸಂಘ ಒಂದು ಸೀಮಿತ ಸಮಯದ ಪಕ್ಷವಾಗಿರದೆ ಭಾರತದ ರಾಜಕೀಯದಲ್ಲಿ ಸ್ಥಿರವಾಗಲಿದೆ ಎಂಬುದನ್ನು ಸಾಬೀತುಪಡಿಸಿತ್ತು. 1962ರ ಚುನಾವಣೆಯಲ್ಲಿ ಅದರ ವಿಕಾಸದ ಸಾಧ್ಯತೆಗಳನ್ನು ಪ್ರಕಟಗೊಳಿಸಲಾಗಿತ್ತು. ಕೆಲವೊಂದು ಬಹು ಚರ್ಚಿತ ಹಾಗೂ ಬಹುವೀಕ್ಷಿತ ಕ್ಷೇತ್ರಗಳ ಫಲಿತಾಂಶಗಳು ಅದರ ಸಾಮಾನ್ಯ ಬೆಳವಣಿಗೆಯ ಮೇಲೆ ತೆರೆ ಎಳೆದಿರಬಹುದು. ಆದರೆ ಯಾವುದೇ ರಾಜಕೀಯದ ವಿದ್ಯಾರ್ಥಿ ಜನಸಂಘದ ಏಳಿಗೆಯಾಗಿದೆ ಎಂದು ಒಪ್ಪದೇ ಇರುವುದಿಲ್ಲ. ಆದರೆ ನಾವು ಇದರಿಂದ ಸಂತೋಷಗೊಂಡು ಕುಳಿತುಕೊಳ್ಳಬಾರದು. ನಮಗೆ ಸಿಕ್ಕಿರುವ ವಿಜಯದಿಂದ ನಮ್ಮ ಆತ್ಮವಿಶ್ವಾಸ ಬೆಳೆದಿದೆ. ಆದರೆ ನಮ್ಮ ಅಸಫಲತೆಯ ಬಗ್ಗೆ ತನಿಖೆ ಮಾಡಬೇಕಾಗಿದೆ ಹಾಗೂ ಅದನ್ನು ದೂರ ಮಾಡಲು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಚುನಾವಣೆಯಲ್ಲಿ ನಮಗೆ ಜನತೆಯ ಅಪಾರ ಪ್ರೀತಿ ಮತ್ತು ಇದರಿಂದಲೇ ಜನತೆ ನಮ್ಮಿಂದ ಅಪೇಕ್ಷಿಸುವ ಬಗ್ಗೆ ಪರಿಚಯವಾಯಿತು. ನಮಗೆ ಅದೇ ಮೂಲಧನವಿದ್ದ ಹಾಗೆ. ನಾವು ನಮ್ಮ ಧ್ಯೇಯವನ್ನು ಸ್ಮರಿಸುತ್ತಾ ಸೇವಾಭಾವನೆ ಮತ್ತು ನಿಸ್ವಾರ್ಥ ವೃತ್ತಿಯಿಂದ ನಮ್ಮ ಗುರಿಯನ್ನು ಪೂರ್ಣಗೊಳಿಸಲು ಒಂದಾಗಬೇಕಾಗಿದೆ ಹಾಗೂ ನಮ್ಮನ್ನು ನಾವು ಬಲಶಾಲಿ ಮತ್ತು ದಕ್ಷರನ್ನಾಗಿಸಬೇಕಾಗಿದೆ. ಯಾಕೆಂದರೆ ನಾವು ದೇಶದ ಆಸೆ ಮತ್ತು ಆಕಾಂಕ್ಷೆಗಳನ್ನು ಪೂರ್ಣಗೊಳಿಸಬೇಕಾಗಿದೆ. ___________ * ಆಕರ : ಪಾಂಚಜನ್ಯ ವಾರ ಪತ್ರಿಕೆ, 11-06-1962ರ ಸಂಚಿಕೆ (ಸಂ.) ದಬ್ಬಾಳಿಕೆಯ ತೆರಿಗೆ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತಿದೆ ಒಂದೇ ವಸ್ತುವಿನ ಮೇಲೆ ಅನೇಕ ಪ್ರಕಾರದ ತೆರಿಗೆ ಹಾಕುವುದು ಪೂರ್ಣವಾಗಿ ಅನುಚಿತವಾದದ್ದು. ಸರ್ಕಾರದ ತೆರಿಗೆ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತಾ ನೀಡಿದ ಉಪಾಧ್ಯಾಯರ ಭಾಷಣ ಕಳೆದ ಜುಲೈ 1 ರಂದು ದೇಶವ್ಯಾಪಿ ಕಾಂಗ್ರೆಸ್ ಸರ್ಕಾರದ ತೆರಿಗೆ ವೃದ್ಧಿನೀತಿಯನ್ನು ವಿರೋಧಿಸಲು ಭಾರತೀಯ ಜನಸಂಘ ಪ್ರದರ್ಶನ ಮತ್ತು ಸಭೆಗಳನ್ನು ಆಯೋಜಿಸಿತ್ತು. ಈ ಸ್ಥಳದಲ್ಲಿ ದೆಹಲಿಯ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಮಹಾಮಂತ್ರಿ ಶ್ರೀ ಉಪಾಧ್ಯಾಯರ ಭಾಷಣವನ್ನು ಕೊಡಲಾಗಿದೆ. ಕೇಂದ್ರ ಮತ್ತು ಪ್ರಾಂತ ಸರ್ಕಾರಗಳು ದಿನನಿತ್ಯ ಹೊಸ ಬಗೆಯ ತೆರಿಗೆಗಳನ್ನು ಜನತೆಯ ಮೇಲೆ ಹೊರಿಸುತ್ತಿದೆ ಎಂಬುದು ಅತ್ಯಂತ ದುಃಖಕರವಾದ ವಿಷಯವಾಗಿದೆ. ಆ ಸರ್ಕಾರಗಳು ಇದರಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಎಂತಹ ಪರಿಣಾಮವಾಗಲಿದೆ ಎಂಬುದನ್ನು ಸಹ ಯೋಚಿಸಿಲ್ಲ. ಹಾಗೂ ಇದರಿಂದ ಸಾಮಾನ್ಯ ಜನರು ಕಷ್ಟ ಅನುಭವಿಸಬೇಕಾಗುತ್ತದೆ. ಈ ತೆರಿಗೆಯನ್ನು 3ನೇ ಯೋಜನೆಯ ಹೆಸರಿನಲ್ಲಿ ಹೊರಿಸಲಾಗುತ್ತಿದೆ. ಆದರೆ ಯಾವ ವಿಷಯಗಳ ಆಧಾರದ ಮೇಲೆ 3ನೇ ಯೋಜನೆಯನ್ನು ನಿರ್ಮಿಸಲಾಗಿತ್ತೋ ಅದು ನಿರಾಧಾರವೆಂದು ಸಾಬೀತಾಗಿದೆ. ಒಂದೇ ವರ್ಷದಲ್ಲಿ ಸ್ಥಿತಿ ಎಷ್ಟು ಬದಲಾಗಿದೆಯೆಂದರೆ ಈಗ 3ನೇ ಯೋಜನೆಯ ನಿಷ್ಕರ್ಷವು ಸರಿಯಾಗಿಲ್ಲ. ಇಂತಹ ಸ್ಥಿತಿಯಲ್ಲಿ ಪರಿವರ್ತಿತವಾಗಿರುವ ವ್ಯವಸ್ಥೆಯ ಅನುಸಾರವಾಗಿ ಯೋಜನೆಯಲ್ಲಿ ಬದಲಾವಣೆ ಮಾಡಿ ಅರ್ಥವ್ಯವಸ್ಥೆಯನ್ನು ಸಂತುಲಿತವನ್ನಾಗಿ ಮಾಡಬೇಕಾಗಿದೆ. ಆದರೆ ಸರ್ಕಾರ ಹಿಂದಿನ ಕಾಲದವರ ಹಾಗೆ ಯೋಜನೆಯನ್ನು ಅಕ್ಷರದ ಜೊತೆ ಬೆಸೆಯುತ್ತಾ ಹೊಸ ಬಗೆಯ ತೆರಿಗೆಗಳನ್ನು ವಿಧಿಸುತ್ತಿದೆ. ಇದರ ಪರಿಣಾಮವಾಗಿ ಒಂದು ಕಡೆ ತೆರಿಗೆಯ ಹೊರೆ ಹೆಚ್ಚಾಗುತ್ತಿದೆ, ಮತ್ತೊಂದು ಕಡೆ ವಸ್ತುಗಳ ಬೆಲೆ. ವಿದೇಶಿ ಹಣ ಹಾಗೂ ಆಧಾರ ಭೂತ ಮತ್ತು ಅವಶ್ಯಕ ವಸ್ತುಗಳ ಅಭಾವವು ಈ ಸ್ಥಿತಿಯನ್ನು ಮತ್ತಷ್ಟು ವಿಷಮವನ್ನಾಗಿಸಿದೆ. ಇವೆಲ್ಲದರ ಜೊತೆ ಹೆಚ್ಚುತ್ತಿರುವ ನಿರುದ್ಯೋಗವು ಪ್ರಾಣಘಾತಕವೆಂಬಂತೆ ಸಾಬೀತಾಗುತ್ತಿದೆ. ಮೇಲ್ಕಂಡ ವಿಷಯಗಳನ್ನು ಭಾರತೀಯ ಜನಸಂಘದ ಅಖಿಲ ಭಾರತದ ಮಹಾಮಂತ್ರಿ ಶ್ರೀ 110 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ದೀನ್ ದಯಾಳ್ ಉಪಾಧ್ಯಾಯರು ಕಳೆದ ಜುಲೈ 1 ರಂದು ದೆಹಲಿಯ ಗಾಂಧೀ ಮೈದಾನದಲ್ಲಿ ಆಯೋಜಿಸಿದ್ದ ತೆರಿಗೆ ವೃದ್ಧಿ ವಿರೋಧಿ ಸಭೆಯಲ್ಲಿ ಹೇಳಿದರು. ಬಡವರ ಮೇಲೆ ಹೊರೆ ಸರ್ಕಾರವು ಯಾವ ಹೊಸ ತೆರಿಗೆಯನ್ನು ವಿಧಿಸಿದೆಯೋ, ರೈಲು ಮತ್ತು ಅನ್ಯ ಸಂಪರ್ಕ ಸಾಧನಗಳ ಬಾಡಿಗೆ ಹಾಗೂ ಸರ್ಕಾರಿ ಕಾರ್ಖಾನೆಗಳ ಉತ್ಪಾದನೆಯ ದರದಲ್ಲಿ ವೃದ್ಧಿ ಮಾಡಿದೆಯೋ ಇದರಿಂದ ಸುಮಾರು 250 ಕೋಟಿ ರೂಪಾಯಿಗಳ ರಾಷ್ಟ್ರೀಯ ಆದಾಯ ಬಂದು ಸೇರಲಿದೆ. ಒಂದು ವರ್ಷದಲ್ಲಿ ಈ ಹೊರೆ ತುಂಬಾ ಅಧಿಕವಾಗಲಿದೆ. ಇದರ ಅಧಿಕಾಂಶ ಭಾಗ ಭಾರತದ ಬಡವ ಮತ್ತು ಮಧ್ಯಮ ವರ್ಗದ ಜನಗಳ ಮೇಲೆ ಆಗಲಿದೆ ಎಂಬ ವಿಷಯ ತಿಳಿದಾಗ ಇದರ ಭಯಂಕರ ರೂಪ ಕಣ್ಮುಂದೆ ಬರಲಿದೆ. ಇಂದು 100ರಲ್ಲಿ 95 ವ್ಯಕ್ತಿಗಳ ಆದಾಯ ಜೀವನ ನಿರ್ವಹಣಾ ಮಟ್ಟಕ್ಕಿಂತ ಕೆಳಗಿದೆ. ಆದರೆ ಸರ್ಕಾರ ಅವರನ್ನು ಬಿಡುವುದಕ್ಕೆ ತಯಾರಿಲ್ಲ. ತನಿಖಾ ಆಯೋಗದ ರಚನೆಯಾಗಲಿ ಇಂದು ಕೇಂದ್ರ ಮತ್ತು ಪ್ರಾಂತಗಳು ಪಾಲಿಸುತ್ತಿರುವ ತೆರಿಗೆ ನೀತಿಯಲ್ಲಿ ಯಾವುದೇ ಸಾಮಂಜಸ್ಯವಿರುವುದಿಲ್ಲ. ಒಂದೇ ವಸ್ತುವಿನ ಮೇಲೆ ಉತ್ಪಾದನಾ ಶುಲ್ಕ, ಮಾರಾಟತೆರಿಗೆ ಮತ್ತು ಕಂದಾಯಗಳನ್ನು ಹಾಕಲಾಗುತ್ತಿದೆ. ಇದರ ನಿರ್ಧಾರ ಸದುದ್ದೇಶ ನೀತಿಯಿಂದ ಆಗದೆ ಬೇಕಾಬಿಟ್ಟಿಯಾಗಿ ರಾಜಕೀಯ ಕಾರಣಗಳಿಂದ ಆಗಲಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಒಂದು ತನಿಖಾ ಆಯೋಗ ರಚನೆಯಾಗಬೇಕಾಗಿದೆ. ಇದರಿಂದ ಯಾವ ವರ್ಗ ಯಾವ ಮಟ್ಟದಲ್ಲಿ ಎಷ್ಟು ಹೊರೆಯನ್ನು ಹೊರಬಲ್ಲದು ಎಂಬುದು ತಿಳಿಯುತ್ತದೆ ಹಾಗೂ ವಿಭಿನ್ನ ಸ್ಥಾನಗಳಲ್ಲಿ ತೆರಿಗೆ ನೀತಿಯ ಸಂಯೋಜನೆ ಹೇಗಿದೆ ಎಂಬುದು ತಿಳಿಯುತ್ತದೆ. ವಿರೋಧದ ಬೀಜ ಪಂಜಾಬ್ ಸರ್ಕಾರವು ತನ್ನ ತೆರಿಗೆ ನೀತಿಯಿಂದ ವಿರೋಧದ ಬೀಜವನ್ನೇ ಬಿತ್ತಿದೆ. ಹರಿಜನರ ಉದ್ಧಾರ ಅವಶ್ಯಕವಾಗಿದೆ ಹಾಗೂ ಅದಕ್ಕಾಗಿ ದೇಶ ವ್ಯಾಪ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಸಂವಿಧಾನದಲ್ಲಿಯೂ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಪಂಜಾಬ್ ಸರ್ಕಾರದ ವ್ಯವಹಾರ ಹರಿಜನರಿಗೆ ಉದ್ಧಾರವನ್ನುಂಟುಮಾಡದೆ ಅನ್ಯಾಯ ಮಾಡುವುದಾಗಿದೆ. ಸರ್ದಾರ್ ದಬ್ಬಾಳಿಕೆಯ ತೆರಿಗೆ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತಿದೆ 111 ಪ್ರತಾಪಸಿಂಹರು ಭಾವನಾತ್ಮಕ ಏಕತೆಯನ್ನು ಸೃಷ್ಟಿಸಲು ತೋರಿಸಿದ ಮಾರ್ಗ ಇದೇನಾ? ಆಹ್ವಾನವನ್ನು ಎದುರಿಸಲಿ. ಅನುಸರಿಸಲು ಕಷ್ಟ ಸಾಧ್ಯವಾದ ಈ ತೆರಿಗೆಯ ವಿರುದ್ಧ ಜನತೆ ಎಷ್ಟು ವ್ಯಾಪಕ ಮತ್ತು ಸಂಘಟಿತವಾಗುತ್ತಿದೆಯೋ ಅಷ್ಟೇ ವಿಭಿನ್ನ ಪ್ರಾಂತೀಯ ಸರ್ಕಾರಗಳ ಕ್ರೋಧಕ್ಕೆ ತುತ್ತಾಗುತ್ತಿದೆ. ಶ್ರೀಚಂದ್ರಭಾನುಗುಪ್ತ ಮತ್ತು ಸರ್ದಾರ್ ಕೈರೋರವರು ಒಂದು ಕಡೆ ಬೇಧ ನೀತಿಯನ್ನು ಅನುಸರಿಸಿ ವಿರೋಧಿ ಪಕ್ಷಗಳನ್ನು ವಿಭಾಜಿಸುವ ಪ್ರಯತ್ನ ಮಾಡಿದ್ದಾರೆ. ಮತ್ತೊಂದು ಕಡೆ ದಂಡನೀತಿಯ ಮೂಲಕ ಜನತೆಯನ್ನು ತುಳಿಯುವ ಬೆದರಿಕೆಯನ್ನು ನೀಡಿದೆ. ದಬ್ಬಾಳಿಕೆಯ ತೆರಿಗೆ ಮತ್ತು ಸರ್ವಾಧಿಕಾರದ ಶಾಸನವೇ ಇಂದಿನ ಸಮಾಜವಾದಿ ಸರ್ಕಾರವು. ಸಮಾಜವಾದದ ಮೊದಲನೆಯ ಕಂತಿನ ರೂಪದಲ್ಲಿ ನೀಡುತ್ತಿದೆಯಾದರೆ ಆ ಜನರು ಇವರನ್ನು ಗುಲಾಮಿ ಸಂಸ್ಕೃತಿಯ ವೈಚಾರಿಕ ದಾನವರೆಂದೂ ಸ್ವತಂತ್ರ ಮತ್ತು ಜನಹಿತದ ಶತ್ರುಗಳೆಂದು ಅವರನ್ನು ವಿರೋಧಿಸುವ ನೀತಿ ಸರಿಯಾಗಿತ್ತು. ನಾವು ಶಾಂತಿಯಿಂದ ನಮ್ಮ ವಿರೋಧವನ್ನು ಪ್ರಕಟಿಸುತ್ತೇವೆ. ಆದರೆ ಸರ್ಕಾರ ಸಂಕಟವನ್ನು ಸೃಷ್ಟಿಸುವ ಯೋಚನೆಯಲ್ಲಿದೆ. ಜನತೆ ಒಂದು ಕಡೆ ತಮ್ಮ ಹಿತ ಮತ್ತು ಅಧಿಕಾರಗಳ ಮೇಲೆ ಆಗುತ್ತಿರುವ ಆಘಾತಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಹ್ವಾನವನ್ನು ಸ್ವೀಕರಿಸಲು ತಯಾರಾಗಿರಬೇಕಾಗಿದೆ. ಅಂತಹ ಸಮಯದಲ್ಲಿ ಬುದ್ಧಿವಂತಿಕೆಯಿಂದ ಸರ್ಕಾರದ ಷಡ್ಯಂತ್ರದಿಂದ ಪಾರಾಗಿ ಅದರ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ತಮ್ಮನ್ನು ತಾವು ನಿಯಂತ್ರಿಸಬೇಕಾಗಿದೆ. _________ * ಆಕರ : ಪಾಂಚಜನ್ಯ ವಾರಪತ್ರಿಕೆ, 6-07-1962ರ ಸಂಚಿಕೆ (ಸಂ.) ಹಿಂದಿಯ ಸ್ವರೂಪವನ್ನು ವಿಕೃತಗೊಳಿಸುವ ಪ್ರಯತ್ನವನ್ನು ಆಡಳಿತವು ಕೈಬಿಡಲಿ ಆಕಾಶವಾಣಿಯಲ್ಲಿ ಪ್ರಸಾರವಾದ ಸಮಾಚಾರದ ಭಾಷೆಯ ಬಗ್ಗೆ ಹಿಂದಿನ ಬಹಳ ದಿನಗಳಿಂದ ವಿವಾದವೇರ್ಪಟ್ಟಿದೆ. ನಿಧಾನವಾಗಿ ಈ ಪ್ರಶ್ನೆ ವ್ಯಾಪಕವಾಗುತ್ತಾ ಜನತೆಯ ದುಃಖಕ್ಕೆ ಕಾರಣವಾಗುತ್ತಿದೆ. ವಿಷಾದದ ಸಂಗತಿಯೇನೆಂದರೆ ಭಾಷೆಯ ವಿಷಯವಾಗಿ ದೇಶದ ರಾಜಕೀಯದಲ್ಲಿ ಹಿಂದಿನ ಸ್ವಲ್ಪ ದಿನಗಳಿಂದ ಅನಾವಶ್ಯಕವಾದ ಏರುಪೇರುಗಳ ನಂತರವೂ, ಹಿಂದಿನ ಅನುಭವಗಳಿಂದ ಪಾಠ ಕಲಿಯದೆ ಆಡಳಿತವು ಯಾವುದೇ ಕಾರಣವಿಲ್ಲದೆ ಜೇನುಗೂಡಿನಲ್ಲಿ ಕೈಯಿಟ್ಟಿದೆ. ಸ್ಪಷ್ಟವಾಗಿ ಇದರಲ್ಲಿ ನೀತಿವಂತಿಕೆಯ ಅಭಾವ ಪ್ರಕಟವಾಗುತ್ತದೆ. ಹಿಂದಿಯನ್ನು ರಾಜಭಾಷೆಯನ್ನಾಗಿ ಮಾಡಲು ಹಾಗೂ ಆನಂತರ ಸ್ಥಿತಿಯ ಬಗ್ಗೆ ಸಂವಿಧಾನದಲ್ಲಿ ಅಸಂದಿಗ್ಧ ವಾತಾವರಣ ನಿರ್ಮಾಣವಾದರೂ ಸಹ ಆಡಳಿತ ಯಾವ ನೀತಿ ನಿಯಮವನ್ನು ಪಾಲಿಸುತ್ತಿದೆಯೋ ಅದು ಸಂವಿಧಾನದ ವಿರುದ್ಧವಾಗಿದೆ. ಸರಳ ಹಿಂದಿಯ ಹೆಸರಿನಲ್ಲಿ ಯಾವ ಸೀಮಿತ ಭಾಷೆಯನ್ನು ಮೇಲೆ ಹೊರಿಸುವ ಪ್ರಯತ್ನ ಮಾಡಲಾಗುತ್ತಿದೆಯೋ ಅದನ್ನು ಸಂವಿಧಾನ ಸಭೆಯು ಮೊದಲೇ ತಿರಸ್ಕರಿಸಿತ್ತು. ದೆಹಲಿ ಮತ್ತು ಅಕ್ಕಪಕ್ಕದ ಉರ್ದು ತಿಳಿದಿರುವ ಜನಗಳ ಭಾಷೆ ಹಿಂದಿಯಾಗಿರುವುದಿಲ್ಲ ಮತ್ತು ದೇಶದಲ್ಲಿ ವ್ಯಾಪಕ ರೂಪವಾಗಿ ಈ ಭಾಷೆಯನ್ನು ಅರ್ಥಮಾಡಿಕೊಳ್ಳುವವರೂ ಇರುವುದಿಲ್ಲ. ಸಂವಿಧಾನದಲ್ಲಿ ಹಿಂದಿ ಹಾಗೂ ಅನ್ಯ ಭಾರತೀಯ ಭಾಷೆಗಳ ವ್ಯವಹಾರಕ್ಕಾಗಿ 15 ವರ್ಷಗಳ ಗಡುವು ನೀಡಲಾಗಿತ್ತು. ಈ ದೃಷ್ಟಿಯಲ್ಲಿ ಆಡಳಿತವು ಯಾವುದೇ ಪ್ರಯತ್ನ ಮಾಡಲಿಲ್ಲ. ಪ್ರಥಮ ರಾಜಭಾಷಾ ಆಯೋಗದ ಶಿಫಾರಸ್ಸನ್ನು ಕಸದ ಬುಟ್ಟಿಯಲ್ಲಿ ಹಾಕಲಾಗಿದೆ ಹಾಗೂ ಸಂಸದೀಯ ಸಮಿತಿಯ ನಿವೇದನೆಯ ನಂತರ ರಾಷ್ಟ್ರಪತಿ ನೀಡಿದ ಆದೇಶದ ಪಾಲನೆ ಮಾಡಲಾಗುತ್ತಿಲ್ಲ. ಸಂವಿಧಾನದ ನಿಯಮದಂತೆ ಹತ್ತು ವರ್ಷಗಳ ನಂತರ ಎರಡನೇ ರಾಜಭಾಷಾ ಆಯೋಗದ ನಿರ್ಮಾಣವಾಗಲಿದೆ. ಆಡಳಿತವು ಆ ನಿಯಮದ ಉಲ್ಲಂಘನೆ ಮಾಡಿದೆ ಮತ್ತು ಇಂದು ನಿರ್ಲಕ್ಷವಾಗಿ ಕೆಲಸ ಮಾಡುತ್ತಿದೆ. ದ್ವಿತೀಯ ಆಯೋಗದ ನಿರ್ಮಾಣ ಮತ್ತು ಅದರ ನಿವೇದನೆ ಬಿಟ್ಟು ಸರ್ಕಾರಕ್ಕೆ ಭಾಷೆಯ ಸಂಬಂಧವಾಗಿ ಯಾವುದೇ ನಿರ್ಣಯ ಹಿಂದಿಯ ಸ್ವರೂಪವನ್ನು ವಿಕೃತಗೊಳಿಸುವ ಪ್ರಯತ್ನವನ್ನು ಆಡಳಿತವು ಕೈಬಿಡಲಿ 113 ತೆಗೆದುಕೊಳ್ಳುವಂತಹ ಅಧಿಕಾರವಿರುವುದಿಲ್ಲ. ಭಾಷೆಯ ಈ ಪ್ರಶ್ನೆ ಪಕ್ಷದ ರಾಜಕೀಯದಿಂದ ಬೇರೆಯಾಗಿದ್ದು ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದೆ. ಪರಿಣಾಮವಾಗಿ ಎಲ್ಲಾ ಪಕ್ಷಗಳ ಅಧಿಕಾಂಶ (ಹೆಚ್ಚು) ವ್ಯಕ್ತಿಗಳು ಆಡಳಿತದ ಈ ನೀತಿಯನ್ನು ವಿರೋಧಿಸುತ್ತಿದ್ದಾರೆ. ಭಾರತೀಯ ಜನಸಂಘದ ಅನುಭವದ ಪ್ರಕಾರ ಆಡಳಿತವನ್ನು ಈ ಆತ್ಮಘಾತಕವಾದ ಪ್ರಯತ್ನಗಳಿಂದ ತಡೆಯದಿದ್ದರೆ ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆಗೆ ದೊಡ್ಡ ಸಂಕಟ ಉತ್ಪನ್ನವಾಗಬಹುದು. ಜನಸಂಘ ತನ್ನ ಸಂಪೂರ್ಣ ಶಕ್ತಿಯಿಂದ ಈ ನೀತಿಯನ್ನು ವಿರೋಧಿಸಲಿದೆ. ಜನಸಂಘದ ಎಲ್ಲಾ ಶಾಖೆಗಳು ಈ ಸಂಬಂಧವಾಗಿ ಜನಮತದ ಸಂಘಟನೆ ಹಾಗೂ ಸಕ್ರಿಯವಾಗಿ ವಿರೋಧ ಪ್ರದರ್ಶನದ ತಯಾರಿಯನ್ನು ನಡೆಸಲಿ. ಆಡಳಿತ ಮತ್ತು ಸೂಚನಾ ಮಂತ್ರಿಗೆ ನನ್ನ ಪ್ರಾರ್ಥನೆ (ಅಪೀಲು) ಏನೆಂದರೆ ಸಮಯಕ್ಕನುಸಾರವಾಗಿ ಜಾಗೃತರಾಗಿ, ಹಾಗೂ ಹಿಂದಿಯ ಸ್ವರೂಪವನ್ನು ಹಾಳುಮಾಡುವ ಪ್ರಯತ್ನವನ್ನು ಕೈಬಿಟ್ಟು, ಭಾರತೀಯ ಭಾಷೆಗಳನ್ನು ಸ್ವಾಭಾವಿಕ ಅಧಿಕಾರದಿಂದ ವಂಚಿತಗೊಳಿಸದೆ ಇಂಗ್ಲಿಷ್ ಭಾಷೆಯನ್ನು ಜಾರಿಗೊಳಿಸುವ ದುಸ್ಸಾಹಸವನ್ನು ಮಾಡದಿರುವುದು ಒಳ್ಳೆಯದು.* ಚೀನಾ ಸಾಮ್ರಾಜ್ಯದ ಪ್ರತೀಕಾರಕ್ಕಾಗಿ ಸಂಘಟಿತರಾಗಿ ಕಳೆದ ಆಗಸ್ಟ್ ತಿಂಗಳಿನ ಅಂತಿಮ ವಾರದಲ್ಲಿ ಕಲ್ಕತ್ತದ ಹಿಂದೂಸ್ತಾನ್ ಕ್ಲಬ್‍ನಲ್ಲಿ ಶ್ರೀ ಘನಶ್ಯಾಂ ಬೇರೀವಾಲ್‍ರವರಿಂದ ಭಾರತೀಯ ಜನಸಂಘದ ಮಹಾಮಂತ್ರಿ ಪ. ದೀನ್ ದಯಾಳ್ ಉಪಾಧ್ಯಾಯರ ಗೌರವಾರ್ಥವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ಸಂಕ್ಷಿಪ್ತ ಮತ್ತು ಸಾರಗರ್ಭಿತವಾದ ಭಾಷಣದಲ್ಲಿ ಪ. ಉಪಾಧ್ಯಾಯರು ದೇಶದ ಮುಂದೆ ಇರುವ ಎರಡು ಪ್ರಮುಖ ಸಮಸ್ಯೆಗಳ ಬಗ್ಗೆ ತಿಳಿಸುತ್ತಾ ನೆರೆದಿದ್ದ ಜನರ ಗಮನ ಸೆಳೆದರು. ಜನತೆ ಸಂಘಟಿತವಾಗಬೇಕು ಚೀನಾದ ಆಕ್ರಮಣದಿಂದ ಉತ್ಪನ್ನವಾಗಿರುವ ಗಂಭೀರ ಸ್ಥಿತಿಯ ಬಗ್ಗೆ ಉಲ್ಲೇಖಿಸುತ್ತಾ ಹೇಳಿದರು. ದೇಶಕ್ಕೆ ಗೌರವಯುತವಾಗಿ ಆ ಸಮಸ್ಯೆಯ ಸಮಾಧಾನವನ್ನು ಕಂಡುಹಿಡಿಯಲು ಆಗುತ್ತಿಲ್ಲ. ಚೀನಾದ ಪ್ರಧಾನ ಮಂತ್ರಿ ಶ್ರೀ ಚಾಉ ಎನ್ ಲಾಯಿಯವರು ಹಿಂದಿನ ಸಲ ಭಾರತಕ್ಕೆ ಬಂದಿದ್ದಾಗ ಶ್ರೀ ನೆಹರುರವರು..................... ________ * ಆಕರ : ಪಾಂಚಜನ್ಯ ವಾರಪತ್ರಿಕೆ, 06-08-1962 (ಸಂ.) 114 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಸತ್ತು ಸರ್ವೋಚ್ಛವಾದುದು ದೇಶಕ್ಕೆ ನಷ್ಟವಾಗುವಂತಹ ಯಾವುದೇ ಮಾತನ್ನು ಆಡುವುದಿಲ್ಲವೆಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ ಮತ್ತು ಇದರಿಂದ ಚೀನಾದ ಜೊತೆ ಒಪ್ಪಂದದ ವಿಷಯದಲ್ಲಿ ಅವರನ್ನು ಬಿಟ್ಟುಬಿಡಬೇಕು. ಆದರೆ ಇದು ಪ್ರಜಾಪ್ರಭುತ್ವದ ದೇಶವಾಗಿದೆ. ಇಲ್ಲಿಯ ಜನತೆ ಇಲ್ಲಿಯ ಸಂಸತ್‍ನ ಪೂರ್ಣ ಸಮ್ಮತಿ ಸಿಗುವ ತನಕ ಯಾವುದೇ ಕಾರ್ಯ ಮಾಡುವ ಅಧಿಕಾರ ಪ್ರಧಾನಮಂತ್ರಿಯವರಿಗಿರುವುದಿಲ್ಲ. ಹಾಗಾಗಿ ಅವರ ಬೇಡಿಕೆ ಕೇವಲ ಪ್ರಜಾಪ್ರಭುತ್ವದ ವಿರುದ್ಧವಾಗಿರುವುದೇ ಅಲ್ಲದೆ ಸ್ವಚ್ಛಂದ ಪ್ರವೃತ್ತಿ ಮತ್ತು ಸರ್ವಾಧಿಕಾರದ ಪರಿಚಯವಾಗಿದೆ. ಚೀನಾ ದೇಶವು ಪದೇ-ಪದೇ ನಮಗೆ ದ್ರೋಹ ಬಗೆದಿದೆ. ಪಂಚಶೀಲ ಸಿದ್ಧಾಂತದ ಒಪ್ಪಂದದ ಜೊತೆ ಜೊತೆಗೆ ಅದು ನಮ್ಮ ದೇಶದ ಮೇಲೆ ಆಕ್ರಮಣ ಶುರುಮಾಡಿದೆ. ಹಾಗಾಗಿ ಈ ಸಮಸ್ಯೆಯ ನಿವಾರಣೆ ಈ ರೀತಿ ಆಗುವುದಿಲ್ಲ. ನಾವು ಎಷ್ಟು ನಮ್ಮ ದೌರ್ಬಲ್ಯವನ್ನು ತೋರಿಸುತ್ತೇವೆಯೋ ಅಷ್ಟು ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಪರಿಸ್ಥಿತಿಯ ಸರಿಯಾದ ವಿಶ್ಲೇಷಣೆ ನಡೆಸಿ, ಸರ್ಕಾರವು ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳದೆ ಇದಕ್ಕಾಗಿ ಪ್ರಬಲವಾದ ಜನಮತ ಸಂಗ್ರಹಿಸುವುದು ಅವಶ್ಯಕವಾಗಿದೆ. ಇಂಗ್ಲಿಷ್ ಭಾಷೆಯ ಗುಲಾಮಗಿರಿ ಅಸಹ್ಯವಾದುದು ಶ್ರೀ ಉಪಾಧ್ಯಾಯರು ತಮ್ಮ ಭಾಷಣದಲ್ಲಿ ಎರಡನೇ ಸಮಸ್ಯೆಯ ಬಗ್ಗೆ ಜನಗಳ ಗಮನವನ್ನು ಆಕರ್ಷಿಸುತ್ತಾ ಹೇಳಿದರು. `ದೇಶದ ಭಾಷಾ-ನೀತಿಯ ಸಂಬಂಧವಾಗಿ ಇಂಗ್ಲಿಷ್ ಭಾಷೆಯನ್ನು `ಸಖಿ ರಾಜಭಾಷೆ' ಮಾಡಲು ಆಡಳಿತದ ಕಡೆಯಿಂದ ನಿಯಮ ಪ್ರಸ್ತುತ ಮಾಡುವ ಮಾತುಗಳು ಕೇಳಿಬರುತ್ತಿವೆ. ಈ ವಿಷಯ ದೇಶಕ್ಕೆ ಅತ್ಯಂತ ಘಾತಕವಾದ ವಿಷಯವಾಗಿದೆ. ಸರ್ಕಾರಿ ವ್ಯವಹಾರಗಳಲ್ಲಿ ಇಂಗ್ಲಿಷ್ ಭಾಷೆಯು ಸಹಾಯಕ ಭಾಷೆ ಆಗುವುದಿಲ್ಲ ಎಂಬುದು ಸ್ಪಷ್ಟವಾದ ವಿಚಾರವಾಗಿದೆ. ಈ ವಿಷಯವನ್ನು ಏನಾದರೂ ನಾವು ಶಾಸನ ಕಾರ್ಯದಲ್ಲಿ ಸೇರ್ಪಡಿಸಿದರೆ ಇದರ ದೂರದ ಪ್ರಭಾವ ಮತ್ತು ಘಾತಕ ನಿರ್ಣಯ ಉಂಟಾಗುವುದು. ರಾಜಕೀಯ ವ್ಯವಹಾರ ದೇಶದ ಭಾಷೆಯಲ್ಲಿಯೇ ನಡೆಯುತ್ತದೆ. ವಿಶೇಷವಾಗಿ ಒಂದು ಸ್ವತಂತ್ರ ಸಾರ್ವಭೌಮ ಪ್ರಜಾಪ್ರಭುತ್ವದ ದೇಶದಲ್ಲಿ. ಹಾಗಾಗಿ ಇಲ್ಲಿಯ ಭಾಷೆ ಇಂಗ್ಲಿಷ್ ಆಗಲು ಸಾಧ್ಯವಿಲ್ಲ. ಯಾವುದೇ ರೀತಿಯಲ್ಲಿ ಇದು ದೇಶಕ್ಕೆ ಗೌರವ ಮತ್ತು ಲಾಭಕಾರಿಯಾದ ಸಂಗತಿಯಾಗಿರುವುದಿಲ್ಲ. ಆದರೆ ಈ ವಿಷಯದಲ್ಲಿ ಜನಮತವನ್ನು ಜಾಗ್ರತಗೊಳಿಸುವುದು ಅವಶ್ಯಕವಾಗಿದೆ. ಯಾಕೆಂದರೆ ಅದರ ಹೊರತು ಸರ್ಕಾರ ಬಗ್ಗುವ ಹಾಗಿಲ್ಲ. ಹಿಂದಿಯ ಸ್ವರೂಪವನ್ನು ವಿಕೃತಗೊಳಿಸುವ ಪ್ರಯತ್ನವನ್ನು ಆಡಳಿತವು ಕೈಬಿಡಲಿ 115 ಹಿಂದೂ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ವಿರೋಧವಿಲ್ಲ ಪಂಡಿತ್ ಉಪಾಧ್ಯಾಯರ ಪ್ರಕಾರ ಹಿಂದಿಯ ಕಾರಣದಿಂದ ವಿರೋಧ ಉಂಟಾಗಲಿದೆ ಎಂಬ ಸಂದೇಹ ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ಆ ಸಂದೇಹ ನಿರಾಧಾರವಾದದ್ದು. ಪ್ರತಿಯೊಂದು ಪ್ರದೇಶದಲ್ಲಿ, ಪ್ರದೇಶದ ತನ್ನದೇ ಆದ ಭಾಷೆಯಲ್ಲಿ ವ್ಯವಹಾರ ನಡೆಯುತ್ತದೆ. ಕೇವಲ ಕೆಲವೊಂದು ರಾಜಕೀಯ ಕಾರ್ಯಗಳಲ್ಲಿ ಹಿಂದಿ ಭಾಷೆಯ ವ್ಯವಹಾರ ನಡೆಯುತ್ತದೆ. ಕೇಂದ್ರದಲ್ಲಿ ಇಂಗ್ಲಿಷ್ ಮತ್ತು ಆಯಾ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಯ ವ್ಯವಹಾರ ನಡೆಸುವ ಪ್ರಯತ್ನ ನಡೆಯಿತು. ಆದರೆ ಅಲ್ಲಿ ಈ ಪ್ರಯತ್ನ ಸಫಲಕಾರಿಯಾಗಲಿಲ್ಲ. ರಾಜಭಾಷಾ ಆಯೋಗವು ತನ್ನ ನಿವೇದನೆಯಲ್ಲಿ ಹೇಳಿರುವ ಪ್ರಕಾರ ಮದ್ರಾಸು ಮತ್ತು ಬಂಗಾಳದ ವಿಧಾನ ಸಭೆಗಳಲ್ಲಿ ಪ್ರಾದೇಶಿಕ ಭಾಷೆಯ ಬದಲಾಗಿ ಇಂಗ್ಲಿಷ್ ಭಾಷೆಯ ಅತ್ಯಧಿಕ ಪ್ರಯೋಗವಾಗಿದೆ. ಇದೇ ಎರಡು ಪ್ರದೇಶಗಳಲ್ಲಿ, ಸ್ಕೂಲಿನಲ್ಲಿ ಹಿಂದಿ ಭಾಷೆಯನ್ನು ಅವಶ್ಯಕ ವಿಷಯವಾಗಿ ಪ್ರಯೋಗಿಸಲಾಗಿಲ್ಲ. ಭಾರತದ ಅನ್ಯ ಪ್ರದೇಶಗಳಲ್ಲಿ ಹಿಂದಿ ಭಾಷೆಯನ್ನು ಬಳಸಲಾಗುತ್ತಿದೆ. ವಾಸ್ತವವಾಗಿ ಭಾರತದ ಎಲ್ಲಾ ಭಾಷೆಗಳು ಒಂದೇ ಪರಿವಾರದ ಸದಸ್ಯರಾಗಿವೆ. ಆದ್ದರಿಂದ ಆ ಭಾಷೆಗಳ ಪರಸ್ಪರ ಹೊಂದಾಣಿಕೆ ಎಷ್ಟರ ಮಟ್ಟಿಗೆ ಆಗುತ್ತದೆಯೋ ಅಷ್ಟರ ಮಟ್ಟಿಗೆ ಆ ಹೊಂದಾಣಿಕೆ ಇಂಗ್ಲಿಷ್ ಭಾಷೆಯ ಜೊತೆ ಆಗುವುದಿಲ್ಲ. ನಮ್ಮ ರಾಜ್ಯ ಎಲ್ಲಿದೆ ? ಹಾಗಿದ್ದರೂ ನಮ್ಮ ಹಠದ ಕಾರಣ ಇಂಗ್ಲಿಷ್ ಭಾಷೆಯನ್ನು ಮುಂದುವರಿಸುವ ಪ್ರಯತ್ನ ಆಡಳಿತ (ಸರ್ಕಾರ) ಹಾಗೂ ಕೆಲವರಿಂದ ನಡೆಯುತ್ತಿದೆ. ಅದು ನಮ್ಮೆಲ್ಲರ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುವ ವಿಷಯವಾಗಿದೆ. ಆದರೆ 1965ರಲ್ಲಿ ಹಿಂದಿಯ ಪ್ರಯೋಗ ವ್ಯಾವಹಾರಿಕವಾಗದಿದ್ದರೆ ಅನಂತರ ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ. ಪ್ರಧಾನಮಂತ್ರಿಯವರು ಹೇಳಿರುವ ಪ್ರಕಾರ ಎಲ್ಲಿಯವರೆಗೆ ಹಿಂದಿಯಲ್ಲದೆ ಅನ್ಯ ಭಾಷೀಯರು ನಿರ್ಣಯ ಮಾಡುವುದಿಲ್ಲವೋ ಅಲ್ಲಿಯವರೆಗೆ ಹಿಂದಿಯ ಪೂರ್ಣ ವ್ಯವಹಾರವಾಗುವುದಿಲ್ಲ. ಈ ರೀತಿ ಅಸಮಂಜಸ ಭಾಷಣಗಳು ಮತ್ತು ದೂರದೃಷ್ಟಿ ಇಲ್ಲದ ವಿಚಾರಗಳ ಮೂಲಕ ನಮ್ಮ ನಾಯಕರು ಒಂದು ಹೊಸ ವಿಭಾಜನೆ ಮತ್ತು ದ್ವೇಷದ ಬೀಜವನ್ನು ದೇಶದಲ್ಲಿ ಬಿತ್ತುತ್ತಿದ್ದಾರೆ. ಸಂವಿಧಾನ ನಿರ್ಮಾಣದ ಸಮಯದಲ್ಲಿ ಅದರ ನಿರ್ಮಾತೃಗಳು ಭಾರತದ ಎಲ್ಲಾ ಭಾಷಿಗರು ಆಗಿದ್ದರು. ಮತ್ತು ಸಂವಿಧಾನದ ಮೂಲಕ ಭಾಷಾ ನೀತಿ ಸ್ವೀಕರಿಸಲ್ಪಟ್ಟಿದೆ. ಮತ್ತೆ ಈ ಹೊಸ ವಿಷಯ ಏಕೆ ಹೇಳಲ್ಪಡುತ್ತಿದೆ ? ಮಾಳವೀಯರು ಹೇಳಿರುವ ಪ್ರಕಾರ `ನಮ್ಮ ದೇಶ ನಮ್ಮ ಆಡಳಿತ' ಇಲ್ಲಿ ಇಂಗ್ಲಿಷ್ ಭಾಷೆಯಲ್ಲಿ ವ್ಯವಹಾರ ನಡೆದರೆ ಅದು ನಮ್ಮ ಆಡಳಿತ ಹೇಗಾಗುತ್ತದೆ ? 116 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ದೃಢವಾದ ಸಲಹೆ ಶ್ರೀ ಉಪಾಧ್ಯಾಯರು ದೇಶದ ಮುಂದೆ ಒಂದು ದೃಢವಾದ ಸಲಹೆಯನ್ನು ನೀಡುತ್ತಾ ಹೇಳಿದರು. ಹಿಂದಿಯ ಬಗ್ಗೆ ವಿಚಾರ ಮಾಡದೆ ನೀವು ನಿಮ್ಮ ಪ್ರದೇಶದಿಂದ ಇಂಗ್ಲಿಷ್ ಭಾಷೆಯನ್ನು ಕಿತ್ತೆಸೆಯಿರಿ. ಪ್ರಾದೇಶಿಕ ಭಾಷೆಯಿಂದ ವ್ಯವಹಾರ ಮತ್ತು ಎಲ್ಲಾ ಕಾರ್ಯಗಳನ್ನು ಮಾಡಿರಿ. ನಂತರ ಹಿಂದಿ ಭಾಷೆ ಎಷ್ಟು ಅವಶ್ಯಕವಾಗಲಿದೆಯೋ ಅಷ್ಟು ಸ್ಥಾನ ಪಡೆಯಲಿದೆ. ___________ * ಕೋಲ್ಕತ್ತದಲ್ಲಿ ನೀಡಲಾದ ಸ್ವಾಗತಕ್ಕೆ ನೀಡಿದ ಉತ್ತರ. ಪಾಂಚಜನ್ಯ ವಾರಪತ್ರಿಕೆ, 10-09-1962ರ ಸಂಚಿಕೆ (ಸಂ.) ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಿದೆಯೇ ? (ಅಮೇರಿಕಾದ ಮಿಥ್ಯ ಪ್ರಚಾರಕ್ಕೆ ಪಾಕಿಸ್ತಾನ ಬಲಿ. ಲಖ್ನೋ ವಿಶ್ವವಿದ್ಯಾಲಯದ ಯೂನಿಯನ್‍ನಲ್ಲಿ ದೀನ್‍ದಯಾಳ್ ಉಪಾಧ್ಯಾಯರಿಂದ ರಹಸ್ಯೋದ್ಘಾಟನೆ.) ಲಖ್ನೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್‍ನ ಕಡೆಯಿಂದ ಆಯೋಜಿತವಾಗಿದ್ದ ವಿಶ್ವವಿದ್ಯಾಲಯ ಪದವಿಪ್ರದಾನ ಸಮಾರಂಭದಲ್ಲಿ ಭಾಷಣ ಮಾಡುತ್ತಾ ಯುರೋಪ್, ಅಮೇರಿಕಾ ಹಾಗೂ ಆಫ್ರಿಕಾ ದೇಶಗಳನ್ನು ಸುತ್ತಿ ಬಂದಿರುವ ಅಖಿಲ ಭಾರತೀಯ ಜನಸಂಘದ ಮಹಾಮಂತ್ರಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಹೇಳಿದರು ``ಅಮೇರಿಕಾ ಹಾಗೂ ಯುರೋಪ್‍ನಲ್ಲಿ ಭಾರತದ ವಿಷಯಗಳು ಬಹಳ ಕಡಿಮೆ ಪ್ರಕಾಶಿತಗೊಳ್ಳುತ್ತವೆ. ಈ ಕಾರಣದಿಂದ ಇಲ್ಲಿಯ ವಿಷಯಗಳು ಅಲ್ಲಿ ತಿಳಿಯುವುದಿಲ್ಲ. ವಿದ್ಯಾರ್ಥಿ ಮತ್ತು ನಾಯಕರನ್ನು ಜೈಲಿಗೆ ಹಾಕಿದ ವಿಷಯ ಇಲ್ಲಿಗೆ ಬಂದ ಮೇಲೆ ತಿಳಿಯಿತು. ಅಲ್ಲಿ ಕೇವಲ ವಿದ್ಯಾರ್ಥಿ ಆಂದೋಲನದ ವಿಷಯವಾಗಿ ಸಂಕ್ಷಿಪ್ತ ವಿಚಾರ ತಿಳಿದಿತ್ತು. ಆದರೆ ಆ ವಿಷಯವಾಗಿ ಯಾವುದೇ ವಿಶೇಷ ವಿವರಣೆ ಸಿಕ್ಕಿರಲಿಲ್ಲ. ಪಾಕ್ ಮತ್ತು ಚೀನಾ ಬಗ್ಗೆಯೇ ಚರ್ಚೆ ಅಮೇರಿಕಾ ಪ್ರವಾಸದ ಸಮಯದಲ್ಲಿ ನಾನು ಅನೇಕ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದೆ ಹಾಗೂ ಅಲ್ಲಿಯ ವಿದ್ಯಾರ್ಥಿ ಮತ್ತು ಅಧ್ಯಾಪಕರೊಂದಿಗೆ ಚರ್ಚಿಸಿದೆ ಎಂದು ಶ್ರೀ ಉಪಾಧ್ಯಾಯರು ತಿಳಿಸಿದರು. ಹೆಚ್ಚು ವಿದ್ಯಾರ್ಥಿಗಳು ರಾಜನೀತಿ ಹಾಗೂ ಅಂತರ್‍ರಾಷ್ಟ್ರೀಯ ಅಧ್ಯಯನ ವಿಭಾಗದವರಾಗಿದ್ದರು. ಚರ್ಚೆಯ ಮುಖ್ಯ ವಿಷಯ ಚೀನಾ ಮತ್ತು ಪಾಕಿಸ್ತಾನವಾಗಿತ್ತು. ಅಮೇರಿಕಾದ ಜನಗಳಲ್ಲಿರುವ ಭ್ರಮೆ ಅಮೇರಿಕಾದ ಜನರು ಚೀನಾದಿಂದ ಭಾರತದ ಮೇಲೆ ಆದ ಆಕ್ರಮಣದ 118 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬಗ್ಗೆ ತಿಳಿದಿದ್ದಾರೆ. ಹಾಗೂ ಅದರ ವಿರುದ್ಧವಾಗಿ ಭಾರತಕ್ಕೆ ಸಹಾಯ ಮಾಡಲು ತತ್ಪರರಾಗಿದ್ದಾರೆ. ಆದರೆ ಪಾಕಿಸ್ತಾನದಿಂದಲೂ ಸಂಕಟವಿದೆ ಎಂಬ ವಿಷಯ ತಿಳಿದಿಲ್ಲ. ಅವರು ಭಾರತದಿಂದ ಪಾಕಿಸ್ತಾನಕ್ಕೆ ಸಂಕಟವಿದೆ ಎಂದು ನಂಬುತ್ತಾರೆ, ಆದರೆ ಪಾಕಿಸ್ತಾನದಿಂದ ಭಾರತಕ್ಕೆ ಸಂಕಟವಿಲ್ಲವೆಂದೇ ತಿಳಿದಿದ್ದಾರೆ. ಪ್ರಪಂಚದಲ್ಲಿರುವ ಕೆಲವರು ಒಂದು ಸಮಯದಲ್ಲಿ ಒಂದು ಸಂಕಟವನ್ನೇ ನೋಡುತ್ತಾರೆಯೆ ಹೊರತು ಎರಡನೇ ಸಂಕಟವನ್ನಲ್ಲ. ಭಾರತದಲ್ಲಿಯೂ ಕೆಲವು ಮನುಷ್ಯರಿದ್ದಾರೆ; ಅವರು ಚೀನಾ ಮತ್ತು ಪಾಕಿಸ್ತಾನವೆಂಬ ಎರಡು ಆಕ್ರಮಣದ ಸಂಕಟಗಳಲ್ಲಿ ಕೇವಲ ಒಂದನ್ನು ನೋಡಬಲ್ಲರು ಮತ್ತೊಂದನ್ನು ಅಲ್ಲ ಅಥವಾ ಎರಡನ್ನೂ ಅಲ್ಲ. ಶ್ರೀ ಉಪಾಧ್ಯಾಯರು ಹೇಳಿದರು: ಅಲ್ಲಿಯ ಒಬ್ಬ ಸಜ್ಜನರು ಪಾಕಿಸ್ತಾನ ಭಾರತಕ್ಕೆ ಹೆದರುತ್ತದೆ ಎಂದು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ದೂರದರ್ಶನದಲ್ಲಿ ನಡೆದ ಒಂದು ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನದ ಶ್ರೀ ಅಯೂಬ್‍ಖಾನ್‍ರವರು ಹಿಂದೂಸ್ತಾನ್ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಿದೆ ಎಂದು ಹೇಳಿದರು. ಆದರೆ ಈ ಮಾತುಗಳು ಸತ್ಯದಿಂದ ದೂರವಾದದ್ದು. ಭಾರತದಿಂದ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾಕೆಂದರೆ ಪಾಕಿಸ್ತಾನದಿಂದ ಅಧಿಕೃತವಾಗಿ ಕಾಶ್ಮೀರವನ್ನು ವಾಪಸ್ ಪಡೆಯಲು ನಾವು ಇನ್ನೂ ತಯಾರಾಗಿರುವುದಿಲ್ಲ. ಪಾಕಿಸ್ತಾನ, ನಾಜಿ ನಾಯಕ ಹಿಟ್ಲರ್ ಮತ್ತು ಗೋಬಲ್ಸ್‍ರವರನ್ನು ಅನುಸರಿಸುತ್ತಾ ಈ ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುತ್ತದೆಯೆಂದು ಮಿಥ್ಯ ಪ್ರಚಾರವನ್ನು ಮಾಡುತ್ತಿದೆ. ಅಮೇರಿಕಾದ ಜನರು ಪಾಕಿಸ್ತಾನವನ್ನು ಆಕ್ರಮಣಕಾರಿ ದೇಶವೆಂದು ತಿಳಿಯದೇ ಭಾರತವನ್ನು ಆಕ್ರಮಣಕಾರಿ ಎನ್ನಲು ಈ ಪ್ರಚಾರವೇ ಕಾರಣವಾಗಿದೆ. ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವುದಿಲ್ಲ ಶ್ರೀ ಉಪಾಧ್ಯಾಯರು ಅಮೇರಿಕಾದ ಜನರಿಗೆ ಪಾಕಿಸ್ತಾನವು ಭಾರತಕ್ಕೆ ಹೆದರಲು ಯಾವುದೇ ಕಾರಣಗಳಿಲ್ಲವೆಂದು ತಿಳಿಸಿದರು. ಯಾಕೆಂದರೆ ಭಾರತದ ತಾತ್ಕಾಲಿಕ ನಾಯಕರ ಸ್ವೀಕೃತಿಯಿಂದಲೇ ಪಾಕಿಸ್ತಾನದ ನಿರ್ಮಾಣವಾಗಿದೆ. ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವ ಹಾಗಿದ್ದರೆ ತುಂಬಾ ಹಿಂದೆಯೇ ಮಾಡಬಹುದಾಗಿತ್ತು. 1947ರಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನದಿಂದ ಆಕ್ರಮಣ ನಡೆದಾಗ ಭಾರತವು ತನ್ನ ಸೇನೆಯನ್ನು ಕೇವಲ ಕಾಶ್ಮೀರ ಪ್ರದೇಶಕ್ಕೆ ಕಳಿಸಿತ್ತು. ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಕ್ಕೆ ಕಳುಹಿಸಿರಲಿಲ್ಲ. 1950ರಲ್ಲಿ ಭಾರತ ಇಷ್ಟಪಟ್ಟಿದ್ದರೆ ಪೂರ್ವ ಬಂಗಾಳದಲ್ಲಿ ನಡೆದ ಉಪದ್ರವಗಳ ಸಮಯದಲ್ಲಿ ತನ್ನ ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಿದೆಯೇ ? 119 ಸೇನೆಯನ್ನು ಢಾಕಾಗೆ ಕಳುಹಿಸಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಪಾಕಿಸ್ತಾನ ಆಕ್ರಮಣ ಮಾಡದಿರುವ ಷರತ್ತಿನ ಒಪ್ಪಂದವನ್ನು ಸ್ವೀಕರಿಸಲಿ. ಪಾಕಿಸ್ತಾನಕ್ಕೆ ಭಾರತದಿಂದ ಹೆದರಿಕೆ ಇದ್ದಲ್ಲಿ ಆ ಹೆದರಿಕೆಯನ್ನು ದೂರಮಾಡುವ ಒಂದು ಮಾರ್ಗವಿದೆ. ಭಾರತದ ಪ್ರಧಾನಮಂತ್ರಿಯವರಿಂದ ಪ್ರಸ್ತಾಪಿಸಲ್ಪಟ್ಟಿರುವ ಭಾರತ-ಪಾಕಿಸ್ಥಾನ ಅನಾಕ್ರಮಣದ ಷರತ್ತನ್ನು ಸ್ವೀಕರಿಸಲಿ ಎಂದು ಜನಸಂಘದ ನಾಯಕರು ತಿಳಿಸಿದರು. ಪಾಕಿಸ್ತಾನಕ್ಕೆ ಭಾರತೀಯ ನಾಯಕರ ಮೇಲೆ ನಂಬಿಕೆ ಇಲ್ಲದಿದ್ದಲ್ಲಿ ಭಾರತ ಮತ್ತು ಅಮೇರಿಕಾದ ಪರಸ್ಪರ ಒಪ್ಪಂದದ ಷರತ್ತನ್ನು ನಂಬಲೇಬೇಕಾಗಿದೆ. ಯಾಕೆಂದರೆ ಈ ಒಪ್ಪಂದದಲ್ಲಿ ಭಾರತ, ಅಮೇರಿಕಾದಿಂದ ಪಡೆದಿರುವ ಸೈನಿಕ ಸಹಾಯವನ್ನು ಪಾಕಿಸ್ತಾನ ವಿರುದ್ಧದ ಆಕ್ರಮಣದಲ್ಲಿ ಮಾಡುವುದಿಲ್ಲವೆಂದು ಹೇಳಲಾಗಿದೆ. ಅಮೇರಿಕಾದ ಜನರ ಜೊತೆ ಮಾತುಕತೆಯ ಸಂದರ್ಭದಲ್ಲಿ ನಾನು ಅವರಿಗೆ ಇಷ್ಟೆಲ್ಲಾ ಆದರೂ ಅವರು ಭಾರತದಿಂದ ಪಾಕಿಸ್ತಾನಕ್ಕೆ ತೊಂದರೆಯಾಗಲಿದೆ ಎಂದು ನಂಬುವುದಾದರೆ ಅವರು ಪಾಕಿಸ್ತಾನದ ಅಪಪ್ರಚಾರದಲ್ಲಿ ಸಹಾಯಕರೆಂದೂ ಅಥವಾ ಆ ಪ್ರಚಾರದಿಂದ ಪ್ರಭಾವಿತರೆಂದೂ ಅಥವಾ ಪಾಕಿಸ್ತಾನದ ಶಕ್ತಿಯಲ್ಲಿ ಮತ್ತು ತಮ್ಮ-ತಮ್ಮ ಶಕ್ತಿಯಲ್ಲಿ ನಂಬಿಕೆ ಇಲ್ಲದವರೆಂದು ತಿಳಿಸಿದೆ. ಜನರು ಪಾಕಿಸ್ತಾನದ ಜೊತೆ ಒಪ್ಪಂದದ ವಿಷಯವಾಗಿ ಮಾತನಾಡುತ್ತಾರೆ. ಭಾರತ ಈ ಒಪ್ಪಂದಕ್ಕೆ ಯಾವಾಗಲು ತಯಾರಾಗಿದೆ. ಆದರೆ ನಾವು ಭಾರತದ ಹಿತವನ್ನು ತ್ಯಾಗಮಾಡಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಆಶ್ಚರ್ಯಚಕಿತರಾದ ವಿಶ್ವವಿದ್ಯಾಲಯದ ಡೀನ್ ಅಮೇರಿಕಾದ ಮತ್ತೊಂದು ಆಶ್ಚರ್ಯಕರವಾದ ಪ್ರಚಾರದ ವರ್ಣನೆ ಮಾಡುತ್ತಾ ಅಮೇರಿಕಾದ ಜನರಲ್ಲಿ ಹಿಂದೂ-ಮುಸಲ್ಮಾನರ ಸಹಾಯದಿಂದ ಪಾಕಿಸ್ತಾನದ ನಿರ್ಮಾಣವಾಯಿತು ಎಂಬ ಭ್ರಮೆ ಇದೆ ಎಂದು ಶ್ರೀ ಉಪಾಧ್ಯಾಯರು ತಿಳಿಸಿದರು. ಅಲ್ಲಿಯ ಜನರು ಕೇವಲ ಕಾಶ್ಮೀರದಲ್ಲಿ ಕೆಲವು ಮುಸಲ್ಮಾನರು ಇದ್ದಾರೆ ಭಾರತದ ಉಳಿದ ಭಾಗಗಳಲ್ಲಿ ಇಲ್ಲ ಎಂದು ನಂಬಿದ್ದಾರೆ. ಈ ವಿಷಯದ ಒಂದು ಹಾಸ್ಯಾಸ್ಪದ ಉದಾಹರಣೆ ಕೊಡುತ್ತಾ ಕ್ಯಾಲಿರ್ಫೋನಿಯಾ ವಿಶ್ವವಿದ್ಯಾಲಯದ ಡೀನ್‍ರ ಜೊತೆ ಮಾತುಕತೆ ನಡೆಸುತ್ತಾ ಇರುವಾಗ ಡೀನ್‍ರವರು ವಿದೇಶ ವಿದ್ಯಾರ್ಥಿಗಳ ನಿವಾಸದ ವಿಷಯದಲ್ಲಿ ಒಬ್ಬ ಯಹೂದಿ ವಿದ್ಯಾರ್ಥಿ ಅರಬ್ ವಿದ್ಯಾರ್ಥಿಯ ಜೊತೆ ಅಥವಾ ಅರಬ್ ವಿದ್ಯಾರ್ಥಿ ಯಹೂದಿ ವಿದ್ಯಾರ್ಥಿಯ ಜೊತೆ ಇರಲು ಒಪ್ಪದಿದ್ದಾಗ ತುಂಬಾ ಕಷ್ಟವಾಗುತ್ತದೆ. 120 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯಹೂದಿ ಅರಬ್ ಹಾಗೂ ಕ್ರಿಶ್ಚಿಯನ್ ವಿದ್ಯಾರ್ಥಿ ಒಬ್ಬರು ಇನ್ನೊಬ್ಬರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಆದರೆ ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳ ವಿಷಯದಲ್ಲಿ ಆ ಸಮಸ್ಯೆ ಉದ್ಭವಿಸುವುದಿಲ್ಲ. ಆ ದೇಶಗಳ ವಿದ್ಯಾರ್ಥಿಗಳು ಹೊಂದಿಕೊಂಡು ಇರುತ್ತಾರೆ. ನಾವು ಕೇವಲ ಅವರ ಹೆಸರು ಕೇಳಿ ಅವರು ಭಾರತೀಯರೋ, ಪಾಕಿಸ್ತಾನದವರೋ ಎಂದು ನಿರ್ಧರಿಸುತ್ತೇವೆ. ಈ ವಿಷಯ ಕೇಳಿ ನನಗೆ ತುಂಬ ಆಶ್ಚರ್ಯವಾಯಿತು. ಮತ್ತು ನಾನು ಅವರನ್ನು ನೀವು ಹೇಗೆ ವಿದ್ಯಾರ್ಥಿ ಭಾರತೀಯನೋ ಅಥವಾ ಪಾಕಿಸ್ತಾನದವನೋ ಎಂದು ನಿರ್ಧರಿಸುತ್ತೀರೆಂದು ಕೇಳಿದಾಗ ಅವರು ಅದು ಬಹಳ ಸರಳ ಎಂದರು. ಯಾವ ವಿದ್ಯಾರ್ಥಿಯ ಹೆಸರು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದೋ ಅವರು ಭಾರತೀಯರೆಂದು ಹೇಳಿದರು. ನಂತರ ನಾನು ಹಿಂದೂಸ್ತಾನದಲ್ಲೂ ಮುಸಲ್ಮಾನರು ವಾಸಿಸುತ್ತಾರೆಂದು ತಿಳಿಸಿದೆ. ಇದು ಹೇಗೆ ಸಾಧ್ಯ ? ವೆಂದು ಕೇಳಿದರು. ಆಗ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳ ಪಟ್ಟಿಯನ್ನು ತರಿಸಲಾಯಿತು. ಮತ್ತು ಅದರಲ್ಲಿ ಹತ್ತು ಮುಸಲ್ಮಾನ ವಿದ್ಯಾರ್ಥಿಗಳ ಹೆಸರು ನೋಡಿ ಅವರು ಆಶ್ಚರ್ಯಚಕಿತರಾದರು. ಈ ರೀತಿ ಪಾಕಿಸ್ತಾನ ಮಾಡುತ್ತಿರುವ ಅಪಪ್ರಚಾರ ವಿದೇಶಗಳಲ್ಲಿ ಪಾಕಿಸ್ತಾನದ ನಿರ್ಧಾರವನ್ನು ಬಲಗೊಳಿಸುತ್ತಿದೆ. ತುಷ್ಟೀಕರಣದಿಂದ ಪರಿವರ್ತನೆ ಅಸಂಭವ ಜನರು ಹೇಳುವ ಪ್ರಕಾರ ನಾವು ಚೀನಾವನ್ನು ಎದುರಿಸಬೇಕಾದರೆ ಪಾಕಿಸ್ತಾನದ ಜೊತೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಶ್ರೀ ಉಪಾಧ್ಯಾಯರು ತಿಳಿಸಿದರು. ಆದರೆ ಪಾಕಿಸ್ತಾನದ ಜೊತೆ ವ್ಯಾಪಾರ ಮಾಡಿ ಚೀನಾವನ್ನು ಮತ್ತು ಅದರ ಆಕ್ರಮಣವನ್ನು ಎದುರಿಸುವ ಭಾರತಕ್ಕೆ ನಿಜವಾಗಿ ಚೀನಾದ ಆಕ್ರಮಣವನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ನಾವು ಒಬ್ಬ ಆಕ್ರಮಣಕಾರಿಯ ಮುಂದೆ ತಲೆತಗ್ಗಿಸಿ ಮತ್ತೊಬ್ಬ ಆಕ್ರಮಣಕಾರಿಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಭಾರತಕ್ಕೆ ಎರಡೂ ಆಕ್ರಮಣವನ್ನು ಸ್ವೀಕರಿಸಿ ಅದನ್ನು ದೃಢತೆಯಿಂದ ಎದುರಿಸಬೇಕಾಗಿದೆ. ಭಾರತದ ವಿರೋಧದಿಂದಲೇ ಪಾಕಿಸ್ತಾನದ ನಿರ್ಮಾಣವಾಗಿದೆ. ಅಲ್ಲಿ ಅನೇಕ ಸರ್ಕಾರಗಳು ಬಿದ್ದುಹೋಗಿವೆ. ಆದರೆ ಭಾರತದ ವಿರುದ್ಧ `ಜಿಹಾದ್' ಎಂಬ ಘೋಷಣೆ ನಿರಂತರವಾಗಿ ಕೇಳಿಬರುತ್ತಿದೆ ಮತ್ತು ಮುಂದೂ ಕೇಳಿ ಬರಲಿದೆ. ಅದರ ಜೊತೆ ಒಪ್ಪಂದ ಆಗುವುದಿಲ್ಲ. ನಹರಿ ಜಲ ಒಪ್ಪಂದ ಸರಿ ಹೋಗಲಿಲ್ಲ ಮತ್ತು ಅನೇಕ ಅನ್ಯ ಒಪ್ಪಂದಗಳು ಪಾಕಿಸ್ತಾನದ ಭಾರತೀಯ ವಿರೋಧಿ ಪ್ರವೃತ್ತಿಯನ್ನು ಬದಲಿಸಲಾಗಲಿಲ್ಲ. ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಿದೆಯೇ ? 121 ಪಾಕಿಸ್ತಾನದಲ್ಲಿ ಪರಿವರ್ತನೆಯಾಗಲಿದೆ ಎಂದು ನಂಬಿದರೂ ಚೀನಾ ದೇಶವನ್ನು ಎದುರಿಸಲು ಸೈನಿಕ ಸಾಮರ್ಥ್ಯ, ರಾಷ್ಟ್ರೀಯ ಏಕತೆ ಹಾಗೂ ದೃಢ ಸಂಕಲ್ಪದ ಅವಶ್ಯಕತೆಯಿದೆ. ಒಂದರ ಅಭಾವವಿದ್ದರೂ ಬಾಕಿ ವ್ಯರ್ಥವಾಗುತ್ತದೆ. ಯಾವುದಾದರೂ ಒಂದರ ಜೊತೆ ಒಪ್ಪಂದ ಮಾಡಿಕೊಂಡರೂ ರಾಷ್ಟ್ರೀಯತೆ ಮತ್ತು ಸಂಕಲ್ಪದಲ್ಲಿ ಕೊರತೆ ಎದ್ದು ಕಾಣುತ್ತದೆ. ಪಾಕಿಸ್ತಾನದ ಜೊತೆ ಒಪ್ಪಂದ ಮಾಡಿಕೊಂಡು ಚೀನಾ ದೇಶವನ್ನು ಎದುರಿಸುವುದು ಅಸಾಧ್ಯ. ಜರ್ಮನಿಯಲ್ಲಿ ಏಕೀಕರಣದ ತೀವ್ರ ಭಾವನೆ. ಜರ್ಮನಿಯ ಒಂದು ಅನುಭವದ ಬಗ್ಗೆ ಚರ್ಚೆ ಮಾಡುತ್ತಾ ಶ್ರೀ ಉಪಾಧ್ಯಾಯರು ಈ ರೀತಿ ಹೇಳಿದರು: ಅಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಯಲ್ಲಿ ಈಗಲೂ ಏಕತೆಯ ಭಾವನೆಯಿದೆ. ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದಾಗಲಿದೆ ಎಂಬ ಭಾರತ ವಿಭಾಜನೆಯ ಈ ವಿಚಾರವನ್ನು ನಾವು ಮರೆಯುತ್ತಿದ್ದೇವೆ. ಆದರೆ ಜರ್ಮನಿಯಲ್ಲಿ ಏಕತೆಯ ಆಶಾಭಾವನೆಯಿದೆ. ಅವರ ಸಂಕಲ್ಪದಂತೆ ಜರ್ಮನಿ ಒಂದಾಗಲಿದೆ. ಅಗಾಧ ಪರಿಶ್ರಮವೇ ಪ್ರಗತಿಯ ರಹಸ್ಯ. ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಜೊತೆ ತಮ್ಮ ಭೇಟಿಯ ವರ್ಣನೆ ಮಾಡುತ್ತಾ ಶ್ರೀ ಉಪಾಧ್ಯಾಯರು ಈ ರೀತಿ ಹೇಳಿದರು: `ಅಲ್ಲಿನ ಜನಗಳ ದೂರಿನ ಪ್ರಕಾರ ಅವರಿಗೆ ಪ್ರತಿದಿನ 16 ಗಂಟೆಗಳಿಗೂ ಅಧಿಕ ಪರಿಶ್ರಮ ಮಾಡಬೇಕಾಗಿದೆ. ಇದು ನನಗೆ ಸಂಪೂರ್ಣ ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಆಫ್ರಿಕಾದಲ್ಲಿ ಕಂಡುಬಂದಿತು. ಈ ದೇಶಗಳ ಸಫಲತೆಯ ರಹಸ್ಯವೂ ಕಠಿಣ ಪರಿಶ್ರಮವೇ ಆಗಿದೆ. ಅಲ್ಲಿಯ ಪ್ರತ್ಯೇಕ ವ್ಯಕ್ತಿ ವಿದ್ಯಾರ್ಥಿ, ಅಧ್ಯಾಪಕ, ರೈತ, ಶ್ರಮಿಕ, ಅಭಿಯಂತ, ವ್ಯಾಪಾರಿ, ವೈದ್ಯ, ವಿಜ್ಞಾನಿ ಮುಂತಾದವರೆಲ್ಲರೂ ಘೋರ ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ನಾವು ಆಫ್ರಿಕಾ ದೇಶವನ್ನು `ಕಗ್ಗತ್ತಲು ರಾಷ್ಟ್ರ' ಎನ್ನುತ್ತೇವೆ. ಆದರೆ ಅವರು ಭಾರತಕ್ಕಿಂತ ಕ್ರಿಯಾಶೀಲರಾಗಿದ್ದಾರೆ. ನಾವು ವಿಶ್ವದ ಎಲ್ಲರಿಗಿಂತ ಮುಂದೆ ಇರಬೇಕು ಎಂಬ ಭಾವನೆ ಅಮೇರಿಕಾದ ಜನರಲ್ಲಿದೆ. ಬೇರೊಂದು ದೇಶಕ್ಕಿಂತ ತಮ್ಮನ್ನು ಮುಂದೆ ಗುರ್ತಿಸಿಕೊಂಡು ಕೆಲಸ ಮಾಡುತ್ತಾರೆ. ಯಾವುದೇ ದೇಶವನ್ನು ಕೀಳು ಮಾಡುವುದರಿಂದಲ್ಲ. ರಷ್ಯಾದೇಶವು ಅಮೇರಿಕಾದಿಂದ ಗೋಧಿ ಪಡೆದಿದ್ದರಿಂದ ಅಮೇರಿಕಾ ಜನರು ಆನಂದ ತುಂದಿಲರಾದರು. ನಾವು ರಷ್ಯಾ ಜನರ ಹೊಟ್ಟೆ ತುಂಬಿಸುತ್ತೇವೆ ಎಂದು ಗರ್ವಪಟ್ಟರು. ಕೆಲವರು ಅಮೇರಿಕಾ ಜನರಿಗೆ ರಷ್ಯಾದವರಿಗೆ ಗೋಧಿ 122 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನೀಡಬೇಡಿ, ಇದರಿಂದ ಅಲ್ಲಿಯ ಜನರು ಹಸಿವಿನಿಂದ ಸಾಯುತ್ತಾರೆ ಹಾಗೂ ಅಲ್ಲಿ ಕ್ರಾಂತಿ ಅಗಲಿದೆ' ಎಂದು ಸಲಹೆ ನೀಡಿದರು. ಕ್ರಾಂತಿ ಆದರೆ ಖ್ರುಷ್ಚೆವ್‍ರವರ ಸರ್ಕಾರ ಬೀಳಲಿದೆ ಮತ್ತು ಸಮತಾವಾದ ಕೊನೆಗೊಳ್ಳಲಿದೆ. ಆದರೆ ಅಮೇರಿಕಾ ಜನರು ನಾವು ಸಮತಾವಾದವನ್ನು ಈ ರೀತಿ ಕೊನೆಗೊಳ್ಳಲು ಬಿಡುವುದಿಲ್ಲವೆಂದರು. ಕ್ಯೂಬಾದ ಭೂಕಂಪದ ಸಮಯದಲ್ಲಿ ಹಾಗೂ ಭಾರತದ ಮೇಲೆ ಚೀನಾದ ಆಕ್ರಮಣದ ಸಮಯದಲ್ಲಿ ಅವರು (ಅಮೇರಿಕಾದವರು) ವಿಶ್ವಕ್ಕೆ ತಾವು ಎಷ್ಟು ಉನ್ನತ ಮಟ್ಟದವರೆಂದು ತೋರಿಸಲು ಸಹಾಯ ಮಾಡಿದರು. ಆದರೆ ಉನ್ನತಿ ಮತ್ತು ಪ್ರಗತಿಯ ರಹಸ್ಯ ಘೋರ ಪರಿಶ್ರಮವೇ ಆಗಿದೆ. ಅಲ್ಲಿಯ ಪ್ರತೀ ನಾಗರಿಕ 16 ಗಂಟೆ ಅಥವಾ ಅದಕ್ಕಿಂತ ಅಧಿಕ ಸಮಯ ಕೆಲಸ ಮಾಡುತ್ತಾನೆ. ಇದೇ ಕಾರ್ಯದ ಫಲಸ್ವರೂಪವಾಗಿ ಅವರ ಸಮೃದ್ಧಿ ಮತ್ತು ಪ್ರಗತಿಯ ನಿರ್ಮಾಣವಾಗಿದೆ. _________ * ಆಕರ : ಪಾಂಚಜನ್ಯ, 30-12-1963ರ ಸಂಚಿಕೆ (ಸಂ.) ಹಿಂದೂ ಭಾವನೆ ಯಾವುದೇ ರಾಜಕೀಯವಲ್ಲ (ಇದು ದೈವೀಗುಣಗಳ ಉನ್ನತಿಯ ಮಾಧ್ಯಮವಾಗಿದೆ. ಭಾರತೀಯ ಸ್ವಯಂ ಸೇವಕ ಸಂಘದ ನೈರೋಬಿ ಶಾಖೆಯಲ್ಲಿ ಪಂಡಿತ್ ದೀನ್ ದಯಾಳ್‍ರವರ ಭಾಷಣ.) ಅಖಿಲ ಭಾರತೀಯ ಜನಸಂಘದ ಮಹಾಮಂತ್ರಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರು ತಮ್ಮ ಅಮೇರಿಕಾ ಯಾತ್ರೆಯ ನಂತರ ನವೆಂಬರ್ 16ನೇ ದಿನಾಂಕದಂದು ಪೂರ್ವ ಆಫ್ರಿಕಾ ತಲುಪಿದರು. ನೈರೋಬಿ ವಿಮಾನನಿಲ್ದಾಣದಲ್ಲಿ ಅಲ್ಲಿಯೇ ವಾಸಿಸುವ ಭಾರತೀಯ ಜನ ಪ್ರತಿನಿಧಿಗಳು ಹಾರ್ಧಿಕ ಅಭಿನಂದನೆಗಳನ್ನು ಸಲ್ಲಿಸಿ ಸ್ವಾಗತಿಸಿದರು. ನಿಲ್ದಾಣದಿಂದ ಹೊರಬರುವ ತನಕ ನೀಲಕಾಯವಾಗಿರುವ ಸೂಟುಬೂಟು ಧರಿಸಿರುವ ಪ್ರಯಾಣಿಕರ ಮಧ್ಯೆ ಅವರ ಸರಳವಾದ ವಾಮನರೂಪ ಕಾಣುತ್ತಿರಲಿಲ್ಲ. ಕುತೂಹಲದಿಂದ ಅವರನ್ನು ನೋಡಲು ಅನೇಕ ಬಂಧು-ಮಿತ್ರರು ನಿಂತ ಜಾಗದಿಂದಲೇ ಮೇಲೇರಿ ನೋಡುವ ಪ್ರಯತ್ನ ಮಾಡುತ್ತಿದ್ದರು. ಕೆನಿಯಾ ಇಂಡಿಯನ್ ಕಾಂಗ್ರೆಸ್, ಆರ್ಯ ಸಮಾಜ, ಸನಾತನ ಧರ್ಮಸಭೆ, ಭಾರತೀಯ ಸ್ವಯಂಸೇವಕ ಸಂಘದ ಪ್ರಮುಖರಿಂದ ಹೂಮಾಲೆಯ ಸ್ವಾಗತದ ನಂತರ ಮೋಟಾರು ವಾಹನದ ಮೆರವಣಿಗೆಯಲ್ಲಿ ನೈರೋಬಿ ನಗರದ ಕಡೆ ಹೊರಟರು. ಸರಳತೆಯಿಂದ ಎಲ್ಲರೂ ಮುಗ್ಧ ಆರ್ಯ ಸಮಾಜದ ಕಾಲೇಜಿನಲ್ಲಿ ಅವರ ಸನ್ಮಾನ ಪ್ರಯುಕ್ತ ಪ್ರತಿಷ್ಠಿತ ನಾಗರಿಕರೊಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಆ ಸಮಾರಂಭದಲ್ಲಿ ನೈರೋಬಿಯ ಗಣ್ಯ ಪ್ರಭಾವೀ ಹಿಂದೂ ಸಹೋದರರೊಂದಿಗೆ ಪರಿಚಯವಾಯಿತು. ಅವರ ಸರಳತೆ ಎಲ್ಲರನ್ನು ಮುಗ್ಧಗೊಳಿಸಿತು. ಸಾಯಂಕಾಲ ಭಾರತೀಯ ಸ್ವಯಂಸೇವಕ ಸಂಘದ ಪ್ರತಿನಿಧಿಗಳ ವಿಶೇಷ ಸಭೆ ಏರ್ಪಡಿಸಲಾಗಿತ್ತು. ರಾತ್ರಿ ಭೋಜನದ ನಂತರ ಕೆನಿಯಾದ ಇಂದಿನ ಪರಿಸ್ಥಿತಿ ಮತ್ತು ಮುಖ್ಯ ಸಮಸ್ಯೆಯಾದ ``ಕೆನಿಯಾದ ಸ್ವಾತಂತ್ರ್ಯದ ನಂತರ ಇಲ್ಲಿರುವ ಭಾರತೀಯ ಪ್ರಜೆಗಳು ಇಲ್ಲಿಯ ಪೌರತ್ವವನ್ನು ಹೊಂದಬೇಕೋ ಅಥವಾ ಬೇಡವೋ" ಎನ್ನುವ ವಿಷಯಗಳ ಬಗ್ಗೆ 124 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬಹಳ ಹೊತ್ತಿನ ತನಕ ಮಾತುಕತೆ ನಡೆಯುತ್ತಿತ್ತು. ಭಾನುವಾರ ನವೆಂಬರ್ 17ರಂದು ಭಾರತೀಯ ಸ್ವಯಂಸೇವಕ ಸಂಘ, ನೈರೋಬಿ ಶಾಖೆಯ ವಾರ್ಷಿಕೋತ್ಸವದ ಕಾರ್ಯಕ್ರಮವಿತ್ತು. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ದಿನವಾದರೂ, ಕಾರ್ಯಕ್ರಮದ ತಯಾರಿ ಬಹಳ ಹರ್ಷ-ಉತ್ಸಾಹಿಗಳಿಂದ ನಡೆಯುತ್ತಿತ್ತು. ಪಂಡಿತ್ ಜೀ ಸ್ಥಳೀಯ ಪರಿಸ್ಥಿತಿಯನ್ನು ಅರಿಯಲು ಕೆನಿಯಾ ಇಂಡಿಯನ್ ಕಾಂಗ್ರೆಸ್‍ನ ಮುಖ್ಯಸ್ಥರಾದ ಶ್ರೀ ಶಿವಾಭಾಯಿ ಅಮೀನ್ ಮತ್ತು ಪ್ರಧಾನಮಂತ್ರಿ ಜಾಮೋ ಕೆನ್ಯಾತಾರ ಸಂಸದ ಸಚಿವರಾದ ಶ್ರೀ ಚಾನನ್‍ಸಿಂಗ್‍ರವರ ಮನೆಗಳಿಗೆ ಭೇಟಿಕೊಟ್ಟು ಅವರೊಂದಿಗೆ ಮಾತುಕತೆ ನಡೆಸಿದರು. ಸಾಯಂಕಾಲ 4:15 ಗಂಟೆಯಿಂದಲೇ ಎಲ್ಲಾ ಸ್ವಯಂ ಸೇವಕರು ತಮ್ಮ ಗಣವೇಷದಲ್ಲಿ ಹಾಜರಿದ್ದರು. 5:15 ಘಂಟೆಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷರ ಪ್ರಣಾಮ ಮತ್ತು ಧ್ವಜಾರೋಹಣದ ನಂತರ ಸ್ವಯಂ ಸೇವಕರಿಂದ ಬಗೆ-ಬಗೆಯ ಕವಾಯತು ಮತ್ತು ಆಟಗಳು ಪ್ರದರ್ಶಿತಗೊಂಡವು. ತದನಂತರ ಸಂಘ ಪ್ರಮುಖರಾದ ಶ್ರೀ ಜಗದೀಶ್ ಮಿತ್ರ ಅವರಿಂದ ಅತಿಥಿಯ ಪರಿಚಯವಾಯಿತು. ಈ ಸಂದರ್ಭದಲ್ಲಿ ಪಂಡಿತ್ ದೀನ್ ದಯಾಳ್‍ರವರು ತಮ್ಮ ವಿಚಾರೋತ್ತೇಜಕ ಭಾಷಣದಲ್ಲಿ ಹೇಳಿದರು- ``ನಾನು ಭಾರತದ ಒಂದು ರಾಜಕೀಯ ಪಕ್ಷದ ಜೊತೆ ಸಂಬಂಧ ಹೊಂದಿದ್ದರೂ ಇಲ್ಲಿಯ ರಾಜಕೀಯದ ಬಗ್ಗೆ ಮಾತನಾಡಲು ಬಂದಿಲ್ಲ. ಇಷ್ಟಾದರೂ ಭಾರತದ ಹೊರಗೆ ವಾಸಿಸುವ ಭಾರತೀಯ ಸಹೋದರರ ಸುಖ-ದುಃಖದ ವಿಷಯದಲ್ಲಿ ಭಾರತೀಯರು ಉದಾಸೀನರಾಗಿಲ್ಲರೆಂಬುದು ನಿಶ್ಚಿತವಾದ ವಿಷಯವಾಗಿದೆ. ಸ್ವಲ್ಪ ದಿನಗಳಲ್ಲಿಯೇ ಈ ದೇಶ (ನೈರೋಬಿ) ಸ್ವತಂತ್ರವಾಗಲಿದೆಯೆಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ತಮ್ಮ ದೇಶದಿಂದ ಸಾವಿರಾರು ಮೈಲಿ ಹೊರಗೆ ಬಂದು ಯಾವ ದೇಶವನ್ನು ಕರ್ಮಭೂಮಿಯನ್ನಾಗಿಸಿದ್ದೀರೋ ಮತ್ತು ತಮ್ಮ ಪುರುಷಾರ್ಥಗಳ ಪರಿಚಯ ನೀಡಿ ಸಮೃದ್ಧರನ್ನಾಗಿ ಮಾಡಿದ್ದೀರೋ ಆ ದೇಶದ ಸ್ವತಂತ್ರದ ಈ ಶುಭ ಸಂದರ್ಭದಲ್ಲಿ ನಾನು ತಮಗೆಲ್ಲರಿಗೂ ಶುಭ ಹಾರೈಸುತ್ತೇನೆ. `ಹಿಂದೂ' ಪದ ರಾಜಕಿಯದ ಪ್ರತೀಕವಲ್ಲ ನಾವೆಲ್ಲರೂ ಭಾರತವನ್ನು ಒಂದು ದೇಶದ ರೂಪದಲ್ಲಿ ನೋಡುತ್ತೇವೆ. ಭೌಗೋಳಿಕ ದೃಷ್ಟಿಯಿಂದ ನೋಡಿದರೂ ಭಾರತ ಕೇವಲ ನದಿ, ಪರ್ವತ, ಮಣ್ಣು ಮತ್ತು ಅರಣ್ಯಗಳೇ ಅಲ್ಲ. ಅದು ಒಂದು ವಿಶೇಷ ಧರ್ಮವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ನಾವು ಭಾರತೀಯರು ಎಂದಾಗ ಇದು ಕೇವಲ ರಾಜಕೀಯದ ಹಿಂದೂ ಭಾವನೆ ಯಾವುದೇ ರಾಜಕೀಯವಲ್ಲ 125 ಸಂಬಂಧವನ್ನು ಪ್ರದರ್ಶಿಸುವುದಿಲ್ಲ. ಆಗಸ್ಟ್ 15, 1947ರ ನಂತರ ಲಾಹೋರ್, ರಾವಲ್ಪಿಂಡಿ, ಢಾಕಾ, ಚಟಗಾಂವ್‍ನಲ್ಲಿ ವಾಸಿಸುವ ಹಿಂದುಗಳ ರಾಜಕೀಯ ಸಂಬಂಧ ನಮ್ಮೆಲ್ಲರಿಂದ ಬೇರೆಯಾಗಿದ್ದರೂ ನಾವು ಅವರನ್ನು ನಮ್ಮವರೆಂದೇ ಭಾವಿಸುತ್ತೇವೆ. ಈ ವಿಷಯದಿಂದ ಹಿಂದೂ ಭಾವನೆ ಯಾವುದೇ ರಾಜಕೀಯ ಭಾಗವಲ್ಲವೆಂದು ತಿಳಿಯಲ್ಪಡುತ್ತದೆ. ಭಗವಾಧ್ವಜ ಸಮನ್ವಯದ ಸಂಕೇತ ವಿಶ್ವದಲ್ಲಿ ದೇವರು, ದೇಶ, ಸಮಾಜ, ಪರಿವಾರ ಮತ್ತು ಶರೀರದ ವಿಷಯಗಳಲ್ಲಿ ಸಂಘರ್ಷ ನಡೆಯುತ್ತಿರುವುದು ಕಂಡುಬರುತ್ತಿದೆ. ಕೆಲವರು ಒಂದನ್ನು ಸಮರ್ಥಿಸಿದರೆ ಮತ್ತೆ ಕೆಲವರು ಮತ್ತೊಂದನ್ನು. ಆದರೆ ನಮ್ಮ ಸಂಸ್ಕೃತಿ ಈ ಎಲ್ಲಾ ವಿಷಯಗಳನ್ನು ಹೇಗೆ ಸಮನ್ವಯಗೊಳಿಸಿದೆ ಎಂದರೆ ನಮಗೆ ಈ ವಿಷಯಗಳಾವುದೂ ಒಂದಕ್ಕೊಂದು ವಿರೋಧಿ ಎನಿಸುವುದಿಲ್ಲ. ನಾವು ಜಾತಿವಾದಿಗಳ ಹಾಗೆ ತಿರಸ್ಕಾರ ಮತ್ತು ಹೋರಾಟವನ್ನು ಜೀವನದ ಆಧಾರವನ್ನಾಗಿ ಮಾಡಿಕೊಂಡಿಲ್ಲ. ಬದಲಾಗಿ ಏಕತೆ ಮತ್ತು ಸಮನ್ವಯತೆಯನ್ನು ಜೀವನದ ಆಧಾರವೆಂದು ತಿಳಿದಿದ್ದೇವೆ. ತಮ್ಮ ಮುಂದಿರುವ ಈ ಭಗವಾಧ್ವಜ ಅದೇ ಏಕತೆ, ಆತ್ಮೀಯತೆ ಮತ್ತು ಸಮನ್ವಯದ ಪ್ರತೀಕವಾಗಿದೆ. ಕಮ್ಯುನಿಸಂ ಅಲ್ಲ ಕುಟುಂಬದ ಭಾವನೆ ಎಲ್ಲರಿಗೂ ಸಮಾನವಾಗಿ ನಾಲ್ಕು ರೋಟಿ ಸಿಗಬೇಕು ಎಂಬ ಸಮಾನತೆಯ ಘೋಷಣೆಗಳನ್ನು ಎಲ್ಲರೂ ಎಲ್ಲಾ ಕಡೆಗಳಲ್ಲಿಯೂ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಯಾವಾಗಲೂ ಸಮಾನತೆಯ ಸಿದ್ಧಾಂತ(ಘೋಷಣೆ)ವನ್ನು ಹೇಳುವುದಿಲ್ಲ, ಬದಲಾಗಿ ಆತ್ಮೀಯತೆಯ ಸಿದ್ಧಾಂತವನ್ನು ಹೇಳುತ್ತದೆ. ಅರ್ಥಾತ್ ಒಂದೇ ಕುಟುಂಬದ ಹಾಗೆ ಎಲ್ಲರಿಗೂ ಅವರವರ ಅವಶ್ಯಕತೆಗನುಸಾರವಾಗಿ ಸಿಗಬೇಕೆಂಬುದೇ ಆಗಿದೆ. ಶಕ್ತಿ ನಿರ್ಮಾಣದ ವಿಷಯ ಇಂದು ನಮ್ಮನ್ನು ನಾವು ದುರ್ಬಲರೆಂದು ಪರಿಗಣಿಸಿ ಬೇರೆಯವರ ಜೊತೆಗೂಡಿ ಶಕ್ತಿವೃದ್ಧಿಯ ಮಾತುಗಳು ಕೇಳಬರುತ್ತಿವೆ. ಆದರೆ ನಮ್ಮ ಸಂಸ್ಕೃತಿಯ ಪ್ರಕಾರ ಮೂಲದಲ್ಲಿ ನಾವು ದುರ್ಬಲರೆಂಬ ಭಾವನೆಯಿದ್ದರೆ ನಾವು ಸರಿಯಾದ ರೀತಿಯಲ್ಲಿ ಶಕ್ತಿ ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಗುರುಗೋವಿಂದ ಸಿಂಹರು ತಮ್ಮನ್ನು ತಾವು ದುರ್ಬಲರೆಂದು ತಿಳಿದು ಸಂಘದ ನಿರ್ಮಾಣ ಮಾಡಲಿಲ್ಲ. ಹಾಗಿದ್ದರೆ ಅವರು ಮತ್ತೊಬ್ಬರಲ್ಲಿ ಧೈರ್ಯವನ್ನು ತುಂಬಲು ಸಾಧ್ಯವಾಗುತ್ತಿರಲಿಲ್ಲ. ದುರ್ಬಲತೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಶತ್ರುವಾಗಿದೆ. ಪ್ರತಿವರ್ಷ 126 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಾವು ಆಚರಿಸುವ ವಿಜಯದಶಮಿಯ ಉತ್ಸವ ನಮ್ಮಲ್ಲಿ ಶಕ್ತಿ, ಪರಾಕ್ರಮಗಳನ್ನು ತುಂಬುವ ಸಂಕೇತವೇ ಆಗಿದೆ. ಈ ಪರಾಕ್ರಮ ಕೇವಲ ಶತ್ರುಗಳನ್ನು ಮರ್ಧಿಸುವುದರಲ್ಲಿಯೇ ಅಲ್ಲದೇ ದೈವೀಗುಣಗಳ ಉನ್ನತಿಗೂ ಸಹಾಯಕವಾಗಿದೆ. ನಾವು ನಿರುಪಯೋಗಿಯಾದರೆ ಭಗವಂತನೂ ನಮ್ಮನ್ನು ನಾಶಗೊಳಿಸುತ್ತಾನೆ. ಭಗವಂತನು ಯಾವುದೋ ಉದ್ದೇಶಪೂರ್ತಿಗಾಗಿ ನಮಗೆ ಜನ್ಮ ಕೊಟ್ಟಿದ್ದಾನೆ ಮತ್ತು ಒಂದು ವಿಶೇಷ ಪರಂಪರೆಯ ವಾರಸುದಾರರನ್ನಾಗಿ ಮಾಡಿದ್ದಾನೆ. ಈ ಸತ್ಯದ ಅರ್ಥವನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಭೌತಿಕತೆಯೂ ಆಧ್ಯಾತ್ಮಿಕತೆಯೂ ಪಶ್ಚಿಮವನ್ನು ನಾವು ಭೌತಿಕವಾದಿ ಎಂದು ಕರೆಯುತ್ತೇವೆ. ಇದರಿಂದ ಭಾರತ ಕೇವಲ ಆಧ್ಯಾತ್ಮಿಕವಾಗಿದೆ ಮತ್ತು ಅಲ್ಲಿಯ ಜನರು ಕೇವಲ ರಾಮನಾಮವನ್ನು ಜಪಿಸುತ್ತಿರುತ್ತಾರೆ ಎಂದು ತಪ್ಪು ಅರ್ಥ ಮಾಡಲಾಗಿದೆ. ಈ ವಿಚಾರ ಸತ್ಯಕ್ಕೆ ದೂರವಾದದ್ದು. ಈ ತಪ್ಪು ಕಲ್ಪನೆಯನ್ನು ನಾವು ಜನರಿಂದ ದೂರ ಮಾಡಬೇಕಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಭೌತಿಕತೆ ಮತ್ತು ಆಧ್ಯಾತ್ಮಿಕತೆಯ ಸಮ್ಮಿಲನವಾಗಿದೆ. ಹೇಗೆ ಪುತ್ರನು ತನ್ನ ತಾಯಿ ಮತ್ತು ತಂದೆ ಇಬ್ಬರನ್ನೂ ಪ್ರೀತಿಸುತ್ತಾನೋ ಇಬ್ಬರ ಸೇವೆಯನ್ನು ಮಾಡುತ್ತಾನೋ ಅದೇ ರೀತಿ ಭಾರತೀಯ ಆದರ್ಶವು ಶರೀರ ಮತ್ತು ಆತ್ಮ ಎರಡನ್ನೂ ಸುಸಂಸ್ಕೃತ, ಶುಚಿರ್ಭೂತಗೊಳಿಸುತ್ತದೆ. ಈ ಸಮಗ್ರ ದೃಷ್ಟಿಯನ್ನು ಎಲ್ಲರಿಗೂ ತಲುಪಿಸುವುದೇ ಭಾರತೀಯತೆಯಾಗಿದೆ. ಜಿಪುಣರಾಗಿ ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಸರ್ಪವಾಗಿ (ನಿಧಿಯನ್ನು ರಕ್ಷಿಸುವ) ರಲು ನಾವು ಇಷ್ಟಪಡುವುದಿಲ್ಲ. _________ * ಆಕರ : ಪಾಂಚಜನ್ಯ ವಾರಪತ್ರಿಕೆ ಪಾಕಿಸ್ತಾನೀಯರ ಅಕ್ರಮ ಪ್ರವೇಶದ ವಿರುದ್ಧ ಜನಸಂಘವು ದೇಶವ್ಯಾಪಿ ಆಂದೋಲನ ಮಾಡಲಿದೆ (ಅಹಮದಾಬಾದ್ ಅಧಿವೇಶನದಲ್ಲಿ ಶ್ರೀ ಉಪಾಧ್ಯಾಯರ ಘೋಷಣೆ) (ಅಹಮದಾಬಾದ್‍ನಲ್ಲಿ ನಡೆಯುವ ಅಖಿಲ ಭಾರತೀಯ ಜನಸಂಘದ 11ನೇ ವಾರ್ಷಿಕ ಅಧಿವೇಶನದಲ್ಲಿ ಪ್ರತಿನಿಧಿ ಸಮ್ಮೇಳನದ ಕಾರ್ಯವನ್ನು ಆರಂಭಿಸುತ್ತಾ ಮಹಾಮಂತ್ರಿ ಪ. ದೀನ್ ದಯಾಳ್ ಉಪಾಧ್ಯಾಯರವರು ಹಿಂದಿನ ವರ್ಷದ ದೇಶದ ರಾಜಕೀಯ ಪರಿಸ್ಥಿತಿಗಳು ಹಾಗೂ ಅದರ ಆಗುಹೋಗುಗಳನ್ನು ಉಲ್ಲೇಖಿಸುತ್ತಾ ದೇಶದ ವರ್ತಮಾನ ಸಮಸ್ಯೆಗಳು, ಪರಿಸ್ಥಿತಿಗಳು ಹಾಗೂ ಜನ ಸಂಘದ ಕಾರ್ಯಕಲಾಪಗಳ ಬಗ್ಗೆ ಬೆಳಕು ಚೆಲ್ಲಿದರು.) ಈಗ ದೇಶದ ಎಲ್ಲಾ ಪ್ರದೇಶಗಳಲ್ಲೂ ವಿಧಿವತ್ತಾಗಿ ಜನಸಂಘದ ಸ್ಥಾಪನೆಯಾಗಿದೆ ಎಂದು ನುಡಿದರು. ಒರಿಸ್ಸಾ ಹಾಗೂ ಅಸ್ಸಾಂನಂತಹ ಪ್ರದೇಶಗಳಲ್ಲಿ ಜನಸಂಘದ ಕಾರ್ಯವಿರಲಿಲ್ಲ. ಪ್ರಾದೇಶಿಕ ಸಮ್ಮೇಳನ ನಡೆದು, ಪ್ರಾದೇಶಿಕ ಭಾಗಗಳು ವಿಧಿವತ್ತಾಗಿ ಕಾರ್ಯನಿರ್ವಹಿಸುತ್ತಿವೆ. ದೇಶದ ಆಪತ್ಕಾಲದ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಯ ವಿಷಯವಾಗಿ ದೇಶದ್ರೋಹಿಗಳಾದ ಕಮ್ಯುನಿಸ್ಟ್‌ಗಳನ್ನು ಹೊರತುಪಡಿಸಿ ಅನ್ಯ ವಿರೋಧಿ ಪಕ್ಷಗಳ ಪರಸ್ಪರ ಸಹಕಾರದ ಬಗ್ಗೆ ಹೇಳಿದರು. ಆಪತ್ಕಾಲದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಭಾಷಾ ನಿಯಮವನ್ನು ಸ್ಥಗಿತಗೊಳಿಸಿದ್ದರೂ ವಿರೋಧಿ ಪಕ್ಷಗಳ ಏಕತೆಯನ್ನು ಮುರಿಯಲು ಸಂಸತ್‍ನಲ್ಲಿ ಅದನ್ನು ಪ್ರಸ್ತುತಪಡಿಸಲಾಯಿತು. ಮತ್ತು ದೇಶದ ಸ್ವಾತಂತ್ರ ಅಥವಾ ದೇಶಭಕ್ತಿಯನ್ನು ಕಾಪಾಡಲು ನಾವು ಇಂಗ್ಲೀಷ್ ಭಾಷೆಯನ್ನು ಜನಗಳ ಮೇಲೆ ಹೊರಿಸುವ ಪ್ರಯತ್ನವನ್ನು ವಿರೋಧಿಸಿದೆವು. ರಾಷ್ಟ್ರವಾದಿ ಪಕ್ಷಗಳ ಏಕತೆ ಅವಶ್ಯಕ. ಅವರು ಕಳೆದ ಉಪಚುನಾವಣೆಯಲ್ಲಿ ರಾಷ್ಟ್ರವಾದಿ ಪ್ರಜಾತಾಂತ್ರಿಕ ವಿರೋಧಿ ಪಕ್ಷಗಳ ಏಕತೆಯ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಹೇಳಿದರು. ಯಾವ ವಿಷಯಗಳಲ್ಲಿ ವಿರೋಧಿ ಪಕ್ಷವು ಒಪ್ಪಿಗೆ ಸೂಚಿಸಿರುವುದೋ ನಾವೂ ಸಹ ಅದನ್ನು ಸಮರ್ಥಿಸೋಣ ಮತ್ತು ಅದಕ್ಕಾಗಿ ಭವಿಷ್ಯದಲ್ಲೂ ಪ್ರಯತ್ನಿಸೋಣ. ಪಾಕಿಸ್ತಾನಿಯರ ಅಕ್ರಮ ಪ್ರವೇಶ ಒಂದು ಗಂಭೀರ ಸಮಸ್ಯೆ. ಪಾಕಿಸ್ತಾನದಿಂದ 128 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅಕ್ರಮವಾಗಿ ಅಸ್ಸಾಂ, ತ್ರಿಪುರ ಮತ್ತು ಬಂಗಾಳದಲ್ಲಿ ಬಂದು ನೆಲಸಿರುವ. ಪಾಕಿಸ್ತಾನೀಯರ ಕಾರಣದಿಂದ ಉತ್ಪನ್ನವಾಗುವ ಗಂಭೀರ ಸಮಸ್ಯೆಗಳ ಬಗ್ಗೆ ಉಲ್ಲೇಖಿಸುತ್ತಾ ಜನಸಂಘದ ನಾಯಕ ಹೀಗೆಂದರು: ಈ ಸಮಸ್ಯೆ ತುಂಬಾ ಗಂಭೀರವಾದ ಸ್ವರೂಪವನ್ನು ಪಡೆದಿದೆ. ಅನ್ಯ ಪಕ್ಷಗಳೂ ಈ ಗಂಭೀರ ಸಮಸ್ಯೆಯ ಅನುಭವವನ್ನು ಪಡೆಯುತ್ತಿವೆ. ಹೀಗಾಗಿ ಆಡಳಿತದ ಗಮನವನ್ನು ಈ ಕಡೆ ಸೆಳೆಯಲು ನಾವು ದೇಶವ್ಯಾಪಿ ಆಂದೋಲನವನ್ನು ಆರಂಭಿಸುವ ವಿಚಾರ ಮಾಡುತ್ತಿದ್ದೇವೆ. ಹಿಂದೂ ಸಭೆ ಮತ್ತು ರಾಮರಾಜ್ಯ ಪರಿಷದ್‍ನ ಅನೇಕ ನಾಯಕರು ಜನಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಹೇಳಿದರು. ಈ ಹೆಜ್ಜೆ ದೇಶದ ರಾಷ್ಟ್ರೀಯ ಶಕ್ತಿಯನ್ನು ಹೆಚ್ಚಿಸಲಿದೆ ಮತ್ತು ಜನಸಂಘ ಜನತೆಯ ಪ್ರಭಾವಕಾರಿ ಪ್ರತಿನಿಧಿತ್ವವನ್ನು ಸಫಲವಾಗಿ ನಿರ್ವಹಿಸಲಿದೆ. ಆಚಾರ್ಯ ರಘುವೀರ್‌ರವರ ಮೃತ್ಯು ವಜ್ರಾಘಾತ 'ಅ' ಪ್ರತಿಯ ಕೊನೆಯಲ್ಲಿ ಆಚಾರ್ಯ ಡಾ|| ರಘುವೀರ್‍ರವರ ಆಕಸ್ಮಿಕ ಮೃತ್ಯುವಿನ ಬಗ್ಗೆ ಉಲ್ಲೇಖಿಸುತ್ತಾ ಅವರು ಹೇಳಿದರು: `ಅವರ ಸಾವು ಜನಸಂಘದ ಮೇಲಿನ ವಜ್ರಾಘಾತವಾಗಿದೆ'. ಡಾ|| ರಘುವೀರ್‍ರವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ದೇಶವ್ಯಾಪಿ ಸಂಚಾರ ಮಾಡಿದರು ಮತ್ತು ಭಾರತೀಯ ಭಾಷೆಗಳ ರಕ್ಷಣೆ ಮತ್ತು ದೇಶದ ಮೇಲೆ ಇಂಗ್ಲಿಷ್ ಭಾಷೆಯನ್ನು ಹೇರುವುದರ ವಿರುದ್ಧ ಪ್ರಬಲವಾಗಿ ಜನಮತ ತಯಾರಿಸುವ ಪ್ರಯತ್ನ ಮಾಡಿದರು. (ಶ್ರೀ ಉಪಾಧ್ಯಾಯರು ಹೊಸದಾಗಿ ಆರಿಸಲ್ಪಟ್ಟಿರುವ ಅಧ್ಯಕ್ಷ ಆಚಾರ್ಯ ಘೋಷ್ರವರನ್ನು ಸ್ವಾಗತಿಸುತ್ತಾ ಅವರ ಮೇಲೆ ಭರವಸೆ ವ್ಯಕ್ತಪಡಿಸುತ್ತಾ ಹೇಳಿದರು. `ಅವರ ಸುಯೋಗ ನೇತೃತ್ವದಲ್ಲಿ ಜನಸಂಘ ನಿರಂತರವಾಗಿ ಪ್ರಗತಿ ಹೊಂದಲಿದೆ' ಎಂದು ನುಡಿದರು. * * * * ________ * ಆಕರ : ಪಾಂಚಜನ್ಯ ವಾರಪತ್ರಿಕೆ, 06-01-1964ರ ಸಂಚಿಕೆ (ಸಂ.) ಕಾಂಗ್ರೆಸಿನ ಆಂತರಿಕ ಸಂಘರ್ಷ ಹಾಗೂ ಅದರ ಭವಿಷ್ಯ BLANK PAGE ಕಾಂಗ್ರೆಸಿನ ಆಂತರಿಕ ಸಂಘರ್ಷ ಹಾಗೂ ಅದರ ಭವಿಷ್ಯ ಆಕರ : ರಾಷ್ಟ್ರಧರ್ಮ, ಸೆಪ್ಟೆಂಬರ್ 1951ರ ಸಂಚಿಕೆ (ಸಂ.) [``ಸ್ವಾತಂತ್ರ್ಯ ದೊರಕಿದ ನಂತರ ಕಾಂಗ್ರೆಸಿನ ಗುರಿಯು ಮುಗಿದುಹೋಯಿತು. ಪರಿಣಾಮವಾಗಿ, ಪ್ರತ್ಯೇಕ ವರ್ಗವು ತಮ್ಮ ತಮ್ಮ ವಿಚಾರಧಾರೆಯಿಂದ ಅದನ್ನು ತಮ್ಮ ಅನಿಸಿಕೆಯ ಅನುಗುಣವಾಗಿ ರೂಪಿಸಲು ಇಚ್ಛಿಸಿದವು. ಕಾಂಗ್ರೆಸ್ ಸ್ವಾತಂತ್ರ್ಯ ಸಂಗ್ರಾಮದ ಆಂದೋಳನದಿಂದ ಬೇರ್ಪಡೆದು ಒಂದು ಶುದ್ಧ ರಾಜನೈತಿಕ ಪಕ್ಷವಾಗಿ ರೂಪುಗೊಳ್ಳುತ್ತಿದೆ. ಇವತ್ತಿನ ಘರ್ಷಣೆಯು ಈ ರೂಪಾಂತರದ ಫಲ ಸ್ವರೂಪವಾಗಿದೆ. ಕಾಂಗ್ರೆಸ್ಸಿನ ಈ ಘರ್ಷಣೆಯು ಭಾವೀ ಸಮಾಜವಾದ ಸಾಮ್ಯವಾದ ಮತ್ತು ರಾಷ್ಟ್ರವಾದ ಘರ್ಷಣೆಗಳಿಗೆ ಜನ್ಮ ಕೊಡುತ್ತದೆ''.] ನಾಸಿಕ್ ಕಾಂಗ್ರೆಸಿಗೆ ಮುನ್ನ ಜನ ಸಾಮಾನ್ಯರದ್ದೇ ಅಲ್ಲ, ದೇಶದ ದೊಡ್ಡದೊಡ್ಡ ರಾಜಕಾರಣಿಗಳ ಆಕಾಂಕ್ಷೆಯೂ ಸಹ ಈ ಅಧಿವೇಶನವು ಕಾಂಗ್ರೆಸ್ಸಿಗೆ ನಿರ್ಣಯಾತ್ಮಕವಾದಂತಹ ಅಧಿವೇಶನವಾಗುತ್ತದೆ ಎಂಬಂತಾಗಿತ್ತು. ಅಧಿವೇಶನದ ಮುನ್ನ ಅಧ್ಯಕ್ಷರ ಪಟ್ಟಕ್ಕೆ ಚುನಾವಣೆಗಾಗಿ ಎಷ್ಟರ ಮಟ್ಟಿಗೆ ಒಂದು ಹುರುಪು ಇತ್ತೆಂದರೆ ಬಹುಶಃ ಎಂದೂ ಇದ್ದಿರಲಿಕ್ಕಿಲ್ಲ. ಚುನಾವಣೆಯ ನಂತರವೂ ಎರಡೂ ಕಡೆಯಿಂದ ಸಾಕಷ್ಟು ಆಂದೋಳನಗಳು ಇದ್ದವು. ಪ್ರಧಾನಮಂತ್ರಿ ಪಂಡಿತ್ ಜವಾಹರ್‌ಲಾಲ್ ನೆಹರೂರವರು ತಮ್ಮ ಭಾಷಣವನ್ನು ಸರಿಸಿ ಕಾಂಗ್ರೇಸ್ಸಿನ ಸ್ವರೂಪವನ್ನು ನಿರ್ಧಾರಗೊಳಿಸಲಿಕ್ಕೆ ಪ್ರಯತ್ನಿಸಿದರು. ಮತ್ತೊಂದು ಕಡೆಯಿಂದ ಭಾಷಣವನ್ನು ತೆಗೆಯದೇ ಇದ್ದರೂ ರಾಜರ್ಷಿ ಟಂಡನ್‍ರವರು ಝಾಂಸಿಯಲ್ಲಿ ಭಾಷಣ ನೀಡುತ್ತಿರುವಾಗ ಈ ಅಧಿವೇಶನವು ಖಂಡಿತವಾಗಿಯೂ ನಿರ್ಣಯಾತ್ಮಕವಾಗಿರುತ್ತದೆಯೆಂದು ಹೇಳಿದರು. ಟಂಡನ್‍ಜೀಯವರ ವಿಚಾರದೊಂದಿಗೆ ಎಲ್ಲರೂ ಸಮ್ಮತವನ್ನು ವ್ಯಕ್ತಪಡಿಸಿದರು. ಆದ್ದರಿಂದ ಅವರಿಂದ ಯಾವ ಭಾಷಣವನ್ನೂ ಅಪೇಕ್ಷಿಸಲಿಲ್ಲ. ನಂತರ ಅಧ್ಯಕ್ಷರ ಭಾಷಣವಂತು ಇದ್ದೇ ಇತ್ತು. ಎರಡೂ ಪಕ್ಷವು ಸಾಜು-ಸಜ್ಜಿತರಾಗಿದ್ದರೂ ಅವರ ಮಧ್ಯೆ ಯಾವುದೇ ತರಹದ ಘರ್ಷಣೆಯು ಆಗಲಿಲ್ಲ. ಟಂಡನ್‍ಜೀಯವರು ಅದ್ಭುತವಾದ ಕೌಶಲ್ಯತೆ ಹಾಗೂ ಸಂಯಮದ ಪರಿಚಯ ನೀಡಿದರು. ಪಂಡಿತ್ ನೆಹರೂರವರ ಪ್ರತಿಯೊಂದು ಪ್ರಸ್ತಾಪವನ್ನು ಒಪ್ಪಿಕೊಳ್ಳಲಾಗಿತ್ತು. ಅವರ ಆಸೆಯಂತೆಯೇ ಎಲ್ಲಾ ನೆರವೇರಿತು. 132 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪರಿಣಾಮ ಸ್ವರೂಪವಾಗಿ ತಮ್ಮ ಮಾತೇ ನಡೀಬೇಕು ಅಂತ ಹೇಳೋ ಅವಕಾಶ ಬರಲೇ ಇಲ್ಲ; ಅಥವಾ ಹೇಳಬೇಕಾದರೇ, ಅವರು ಯಾವ ಮಾತಿನ ಹಠ ಹಿಡಿದಿದ್ದರೋ ಆ ಮಾತುಗಳನ್ನು ಪ್ರತಿನಿಧಿಗಳು ಮುಂಚೆಯೇ ಸ್ವೀಕರಿಸಿಬಿಟ್ಟಿದ್ದರು. ಯಾರು ಬಿಸಿ ಬಿಸಿ ಸುದ್ದಿಗಳನ್ನು ಮತ್ತು ಪರಸ್ಪರ ನೀನು-ತಾನು ಆಗುವ ಆಸೆಯನ್ನು ಹೊಂದಿದ್ದರೋ, ಅಂತಹವರಿಗೆ ಸಾಕಷ್ಟು ನಿರಾಸೆಯಾಯಿತು. ಎರಡೂ ಪಕ್ಷದವರು ಇದರಿಂದ ಏನು ಲಾಭವನ್ನು ಪಡೆಯಬೇಕೆಂದು ಯೋಚಿಸುತ್ತಿದ್ದರೋ ಅವರ ಆಸೆಗಳಿಗೆ ತಣ್ಣೀರು ಎರಚಿದಂತಾಯಿತು. ಪಂಡಿತ್ ನೆಹರೂರವರ ಏಕತಂತ್ರ ಶಾಸನ ಪ್ರವೃತ್ತಿ ಸ್ಪಷ್ಟವಾಯಿತು. ಟಂಡನ್‍ಜೀಯವರು ಸ್ವಲ್ಪ ತಗ್ಗಿದರೆಂದು ಜನಗಳಿಗೆ ಅನಿಸತೊಡಗಿತು. ಪಂಡಿತ್ ನೆಹರೂರವರು ತಮ್ಮ ಈ ವಿಜಯದ್ಘೋಷದಿಂದ ಅತ್ಯಂತ ಹರ್ಷಚಿತ್ತರಾಗಿದ್ದರು. ತಮ್ಮ ಈ ಹರ್ಷಾತಿರೇಕವನ್ನು ತಡೆಯಲಾಗದೆ, ಅಧಿವೇಶನದ ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಭಾಷಣ ನೀಡುತ್ತಿರುವಾಗ ಕಾಂಗ್ರೆಸ್ ಪಕ್ಷವನ್ನು ತುಂಬು ಹೃದಯದಿಂದ ಪ್ರಶಂಸಿದರು. ಎಷ್ಟರ ಮಟ್ಟಿಗೆ ಹೇಳಿದರೆಂದರೆ, ಕಾಂಗ್ರೆಸ್ ತಪ್ಪುಗಳನ್ನು ಮಾಡಿದರೂ ಸಹ ಒಂದು ಮಹತ್ತರವಾದ ಮತ್ತು ಯೋಗ್ಯ ಸಂಸ್ಥೆಯೆಂದು ಅನಿಸಿಕೊಂಡಿದೆ; ಅದರ ಒಂದು ಪ್ರತಿಸ್ಪರ್ಧಿಯೂ ಇಲ್ಲ ಮತ್ತೆ ಮುಂದೆಂದಿಗೂ ಇರುವುದಿಲ್ಲ. ಅಧಿವೇಶನದ ಸಮಾಪ್ತಿಯಲ್ಲಿ ಶ್ರೀ ರಾಜಗೋಪಾಲಚಾರ್ಯರವರು ಸಂತೋಷವನ್ನು ವ್ಯಕ್ತಪಡಿಸುತ್ತ ಈಗ ಪಂಡಿತ್ ನೆಹರೂರವರಿಗೆ ಇನ್ಮುಂದೆ ತಮ್ಮ ಮಾರ್ಗದಲ್ಲಿ ಏನೂ ಅಡೆತಡೆ ಇರುವುದಿಲ್ಲವೆಂದು ಆಶಿಸಿದರು. ಕಾಂಗ್ರೆಸ್ಸಿನ ಸಂಘರ್ಷವು ತೊರೆದುಹೋಯಿತು. ಆದರೆ ಅದು ಶಾಶ್ವತವಾಗೋ ಅಥವಾ ಸ್ವಲ್ಪ ಸಮಯದವರೆಗೋ ತಿಳಿಯದು. ಉತ್ತರ ಖಂಡಿತವಾಗಿಯೂ ನಕಾರಾತ್ಮಕವಾಗಿರುತ್ತದೆ. ಯಾಕೆಂದರೆ ಕಿದಂಬಯಿ-ಕೃಪಾಲಾನಿಯವರು ಹೊಸ ಪಕ್ಷದ ರೂಪದಲ್ಲಿ ಅವತರಿಸುವ ಸಮಾಚಾರ ಬೇರೆ ಬರ್ತಿದ್ದವು. ಕಾಂಗ್ರೆಸ್ ಮೇಲೆ ಅಧಿಕಾರ ಚಲಾಯಿಸಲಾಗುತ್ತದೆ ಅಥವಾ ಅದನ್ನು ಮುರಿದುಹಾಕಲಾಗುತ್ತದೆಯೆಂದು ನಿಶ್ಚಯಿಸುತ್ತಾರೆಯೆಂದು ತಿಳಿದು ಬಂದಿದೆ. ಕಾಂಗ್ರೆಸ್ ಏನು ಮುರಿದುಹೋಗುತ್ತ? ಹೌದೆಂದಾದರೆ, ಅದರ ಭಾವೀ ರೂಪ ಏನಾಗುತ್ತದೆ? ಅದರಲ್ಲಿ ಅಷ್ಟೊಂದು ಬಿರುಕು ಯಾವ ಕಾರಣಕ್ಕಾಗಿ ಬಂದಿದೆ?... ಮುಂತಾದ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಕಾಂಗ್ರೆಸ್ಸಿನ ಸ್ಥಾಪನೆ ಒಂದು ರಾಜಭಕ್ತ ಸಂಸ್ಥೆಯ ರೂಪದಲ್ಲಿ ಆಗಿತ್ತು. ಇದರ ಜನ್ಮದ ಧ್ಯೇಯವೇನೆಂದರೆ, ಭಾರತೀಯ ಜೀವನದ ಅಂತರಾಳದಲ್ಲಿ ಹೊಗೆಯಾಡುವ ಅಸಮಾಧಾನ ಪೂರಿತ ಕ್ರಾಂತಿಯ ಜ್ವಾಲೆಯನ್ನು ಶಬ್ದಗಳ ಹಾಗೂ ಪ್ರಸ್ತಾವನೆಗಳ ಮೂಲಕ ಹೊರತಂದು ಪುರುಷಾರ್ಥ ಸ್ವಾವಲಂಬಿ ಹಾಗೂ ಕಾಂಗ್ರೆಸಿನ ಆಂತರಿಕ ಸಂಘರ್ಷ ಹಾಗೂ ಅದರ ಭವಿಷ್ಯ 133 ಘರ್ಷಣೆಯ ಸ್ಥಾನದಲ್ಲಿ ಪ್ರಾರ್ಥನೆ, ಬೇಡಿಕೆ ಮತ್ತು ಒಪ್ಪಂದದ ವೃತ್ತಿಯನ್ನು ಅಥವಾ ಸ್ವಭಾವವನ್ನು ಮೂಡಿಸುವುದಾಗಿತ್ತು. ಆಂಗ್ಲರ ರಕ್ಷಣೆಯಲ್ಲಿ ಈ ಕಾಂಗ್ರೆಸ್ ಅತ್ಯಂತ ಪುಷ್ಟಿಕರವಾಗಿ ಬೆಳೆಯಿತು. ಇದು ಖಾಸಗಿ ಸಂಸ್ಥೆಯಾದರೂ ಸಹ ಸರ್ಕಾರದ ಮನ್ನಣೆಯು ಈ ಮೊದಲೇ ಇದಕ್ಕೆ ದೊರಕಿತ್ತು. ಜನತೆ ಹಾಗೂ ಸರ್ಕಾರದ ನಡುವೆ ಕಾಂಗ್ರೆಸ್ ನಿಂತಿತ್ತು. ಆದ್ದರಿಂದಲೇ ಇದ್ದ ಎಲ್ಲ ದೇಶಭಕ್ತರು ಜನಹಿತವನ್ನು ಬಯಸಿ, ಇದಕ್ಕಾಗಿ ಸರ್ಕಾರಕ್ಕೆ ಬೇಡಿಕೆ ನೀಡಿದ್ದವರೆಲ್ಲಾ ಕಾಂಗ್ರೆಸ್ ಕಡೆ ಬಾಗಿದರು. ಇವರ ಸಂಗಡ ಕೆಲವು ಎಂತಹ ವ್ಯಕ್ತಿಗಳು ಹೋದರೆಂದರೇ, ಯಾರು ಸರ್ಕಾರದ ಮೂಲಕ ಮಾನ್ಯತೆ ಪಡೆದ ಜನರ ಪ್ರತಿನಿಧಿಯಾದಂತಹ ಕಾಂಗ್ರೆಸ್‍ನ್ನು ತಮ್ಮ ಅಧಿಕಾರದಲ್ಲಿ ತೊಗೊಂಡು ಜನತೆಯ ನಿಜವಾದ ಭಾವನೆಗಳನ್ನು ವ್ಯಕ್ತಗೊಳಿಸುತ್ತಾ ಘರ್ಷಣೆಯ ಒಂದು ಸಾಧನವಾಗಿ ಅಳವಡಿಸಿಕೊಳ್ಳಲು ಆಶಿಸಿದರೋ, ಅವರಿಗೆ ಆ ವಿಚಾರದಲ್ಲಿ ಪೂರ್ಣ ಯಶಸ್ಸು ಸಿಗಲಿಲ್ಲ. ದೇಶದ ಸಹಾನುಭೂತಿ ಮತ್ತು ಸದ್ಭಾವನೆ ಅವರ ಜೊತೆ ಇದ್ದರೂ ಸಹ ಅವರು ಕಾಂಗ್ರೆಸ್ಸನ್ನು ತಮ್ಮ ಒಡನಾಟದಲ್ಲಿ ತೆಗೆದುಕೊಳ್ಳಲು ಆಗಲಿಲ್ಲ. ಶಾಸನಾಭಿಮುಖ ಮತ್ತು ಜನಾಭಿಮುಖವೆಂಬ ಈ ಎರಡು ಶಕ್ತಿಗಳ ಪ್ರಥಮ ಸಂಘರ್ಷ 1906ರ ಇಸವಿಯಲ್ಲಿ ಕಲ್ಕತ್ತಾ ಕಾಂಗ್ರೆಸ್‍ನಲ್ಲಿ ನಡೆಯಿತು. ಆದರೆ ದಾದಾಬಾಯೀ ನೌರೋಜಿಯವರು ಸಂಘರ್ಷವನ್ನು ರಕ್ಷಿಸಿದರು. ತಮ್ಮ ಪ್ರಗತಿಶೀಲ ವಿಚಾರಗಳ ಚಿಂತನೆಯ ಬಲದಿಂದ ಸ್ವರಾಜ್ಯದ ಬೇಡಿಕೆಗಳನ್ನು ಇಟ್ಟು ತೀವ್ರಗಾಮಿಯರನ್ನು ಮತ್ತು ತಮ್ಮ ಸ್ವಾಭಾವಿಕ ಉದಾರ ನೀತಿಯಿಂದ ಮಂದಗಾಮಿಗಳನ್ನು ತಮ್ಮ ಜೊತೆ ಸೇರಿಸಿಕೊಂಡರು. ಆದರೆ ಸಂಘರ್ಷ ಅಳಿಯಲಿಲ್ಲ. ಅದು ಸ್ವಲ್ಪ ಮಾತ್ರ ಸರಿಯಿತು. ಮತ್ತೆ 1907ರ ಇಸವಿಯಲ್ಲಿ ಸೂರತ್ ಕಾಂಗ್ರೆಸ್‍ನಲ್ಲಿ ಭಯಂಕರ ಯುದ್ಧ ನಡೆಯಿತು. ಕಾಂಗ್ರೆಸ್ ಶಾಸನವು ಶಕ್ತಿಯುಳ್ಳ ಕೈಗಳಲ್ಲಿಯೇ ಉಳಿಯಿತು ಮತ್ತು ಲೋಕಮಾನ್ಯರ ಪಕ್ಷವು ಅದರಿಂದ ಹೊರಗೆ ಬಂತು. 1916ರಲ್ಲಿ ಲೋಕಮಾನ್ಯರು ಮರಳಿ ಕಾಂಗ್ರೆಸ್‍ಗೆ ಬಂದರು. ಆದರೆ ಲಖ್ನೋ ಪ್ಯಾಕ್ಟ್ ಮಾಡಲಿಕ್ಕೆ ಮತ್ತು 1917ರಲ್ಲಿ ಬ್ರಿಟಿಷರಿಂದ ದೊರಕಿದ ಸಾಧಾರಣ ಸಲಹೆಗಳನ್ನು ಕಾರ್ಯಾಚರಣೆಗೆ ತರುವಂತಹ ಸಲಹೆಗಾಗಿ ಖಂಡಿತವಾಗಿಯೂ ಅಲ್ಲ. 1923ರಲ್ಲೂ ಇದೇ ತರಹದ ಒಂದು ಸಂಘರ್ಷ ಬಂದು ಅಸಹಯೋಗ ಆಂದೋಳನವು ಕಾಂಗ್ರೆಸ್‍ನ್ನು ಜನಾಭಿಮುಖ ಮಾಡಿತು. ಆದರೆ ಎರಡೇ ವರ್ಷದಲ್ಲಿ ಶಾಸನಾಭಿಮುಖ ಶಕ್ತಿಗಳು ಮತ್ತೆ ಹೊರಹೊಮ್ಮಿದವು. ಹಾಗೂ ಪಂಡಿತ್ ಮೋತಿಲಾಲ್ ನೆಹರೂ ಮತ್ತಿತರ ರಾಜಕಾರಣಿಗಳು ವಿಧಾನಸಭೆಯ ಪ್ರವೇಶಕ್ಕಾಗಿ ಒತ್ತಾಯ ಮಾಡಿದರು. ನಂತರ ವ್ಯಕ್ತಿಗತ ಪ್ರವೇಶದ ರೂಪದಲ್ಲಿ ಇವರ ಮಾತುಗಳನ್ನು ಒಪ್ಪಿಕೊಳ್ಳಲಾಯಿತು. 1928ರಲ್ಲಿ ಪೂರ್ಣ ಸ್ವರಾಜ್ಯದ ಪ್ರಶ್ನೆಗಳನ್ನು ಕುರಿತು ಸಂಘರ್ಷ ನಡೆಯಿತು. ಮತ್ತು ಅಲ್ಟಿಮೇಟಮ್ 134 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರೂಪದಲ್ಲಿ ಒಪ್ಪಂದದ ಮಾರ್ಗ ಜಾರಿಗೆ ಬಂದಿತು. 1929ರಲ್ಲಿ ಪೂರ್ಣಸ್ವರಾಜ್ಯದ ಘೋಷಣೆ ನಂತರದ ಸವಿನಯ ಅವಜ್ಞ ಆಂದೋಳನಗಳು ಅವಶ್ಯವಾಗಿ ನಡೆಯಿತು. ಆದರೆ ದುಂಡುಮೇಜಿನ ಸಮ್ಮೇಳನ ಮುಂತಾದವುಗಳಲ್ಲಿ ಶಾಸನದ ಜೊತೆ ಕೈಗೂಡಿಸುವ ಉತ್ಸಾಹ ಖಂಡಿತವಾಗಿಯೂ ತಡೆ ತಂದಿತ್ತು. 1934ರಲ್ಲಂತೂ ಪಟ್ನಾ ಕಾಂಗ್ರೆಸ್ಸ್‍ನಲ್ಲಿ 1935ರ ವಿಧಾನದ ಪ್ರಕಾರ ಚುನಾವಣೆ ನಡೆಯುತ್ತದೆ ಮತ್ತು ಅದರ ಫಲವಾಗಿ ಕಾಂಗ್ರೆಸ್ ಜನತಾಭಿಮುಖದಿಂದ ಶಾಸನಾಭಿಮುಖವಾಗುತ್ತದೆಯೆಂದು ನಿರ್ಧರಿಸಲಾಗಿತ್ತು. 1939ರಲ್ಲಿ ಮತ್ತೆ ಇದೇ ವಿಷಯವಾಗಿ ಸಂಘರ್ಷ ನಡೆಯಿತು. ಸುಭಾಷ್ ಬಾಬು ಏನು ಅಪೇಕ್ಷೆ ಪಡುತ್ತಿದ್ದರೆಂದರೆ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ವಿರೋಧಿಸಲಿ ಮತ್ತು ಅವರಿಗೆ ಭಯವೇನಿತ್ತೆಂದರೆ ಅದು ಪ್ರಾಂತೀಯ ಸ್ವಶಾಸನದ ತರಹ 1935ರ ಸಂಘದ ಶಾಸನದ ಭಾಗವನ್ನು ಸ್ವೀಕರಿಸಬಿಟ್ಟರೇ ಎಂದು. ಪರಿಣಾಮ ಸ್ವರೂಪವಾಗಿ ಸಂಘರ್ಷವು ನಡೆಯಿತು. ಕಾಂಗ್ರೆಸ್ ಪ್ರತಿನಿಧಿಗಳು ಸುಭಾಷರನ್ನು ನೇಮಿಸಿದರು. ಆದರೆ ಅಧಿವೇಶನವು ಅವರನ್ನು ವಿಕರಲರನ್ನಾಗಿ ಮಾಡಿತು. ಅವರು ಕಾಂಗ್ರೆಸ್ಸ್‍ನಿಂದ ಬೇರ್ಪಡೆಯಾಗಬೇಕಾಯಿತು. 1950ರ ಟಂಡನ್‍ಜೀರವರ ಚುನಾವಣೆಯು ಇದೇ ಒಂದು ರೀತಿಯ ಚುನಾವಣೆಯಾಗಿತ್ತು. ಕಾಂಗ್ರೆಸ್‍ನ ಶಾಸನಾರೂಢ ಮತ್ತು ಅಧಿನಾಯಕವಾದದ ಶಕ್ತಿಗಳ ವಿರುದ್ಧವಾಗಿ ಇದು ಕಾಂಗ್ರೆಸ್ಸಿನ ಜನಶಕ್ತಿಯ ಆಯ್ಕೆಯಾಗಿತ್ತು. ಚುನಾವಣೆಯಲ್ಲಿ ಟಂಡನ್‍ರವರು ಗೆದ್ದರು, ಆದರೆ ಕೆಲವರ ಹೇಳಿಕೆಯೇನೆಂದರೆ ಅವರು ನಾಸಿಕ್‍ನಲ್ಲಿ ಸೋಲನ್ನೆದುರಿಸಿದರೆಂದು. ಶಾಸನದ ಪರವಾಗಿ ಜನ-ವಿರೋಧವನ್ನು ಪ್ರತಿನಿಧಿಸುವುದರ ಕಾರಣದಿಂದಾಗಿ ಕಾಂಗ್ರೆಸ್ಸಿನ ಹೊರಗೆ ಇರುವ ಎಲ್ಲಾ ವರ್ಗಗಗಳ ಸದ್ಭಾವನೆ ಟಂಡನ್‍ಜೀರವರಿಗೆ ದೊರಕಿತ್ತು. ನಾಸಿಕ್ ಅಧಿವೇಶನವು ಟಂಡನ್-ಅಧಿವೇಶನವಾಗದೆ ನೆಹರೂ ಅಧಿವೇಶನವಾಗಿತ್ತು. ಮತ್ತೆ ಮತ್ತೊಮ್ಮೆ ಕಾಂಗ್ರೆಸ್ ಜನತೆಯ ಭಾವನೆಗಳನ್ನು ಅವಹೇಳನ ಮಾಡಿತು, ಆದರೆ ಈ ಸಲದ ಸಂಘರ್ಷ ಮತ್ತಿತರ ಸಂಘರ್ಷಗಳಿಗೆ ಭಿನ್ನವಾಗಿತ್ತು. ಇದಕ್ಕೆ ಮೊದಲು ಸಂಘರ್ಷಗಳಲ್ಲಿ ಇವತ್ತಿನಷ್ಟು ನಿಜಾಂಶವಿರಲಿಲ್ಲ. 1947ರ ನಂತರದ ಪರಿವರ್ತನೆಯ ಸ್ಥಿತಿ ಇದರ ಕಾರಣವಾಗಿತ್ತು. 1947ರ ಮೊದಲು ಕಾಂಗ್ರೆಸ್ ಯಾವುದೇ ರೂಪದಲ್ಲಿದ್ದರೂ, ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರತಿನಿಧಿಸುತ್ತಿತ್ತು. ಪರಿಣಾಮ ಸ್ವರೂಪವಾಗಿ ಆ ಸಂಗ್ರಾಮದ ಎಲ್ಲಾ ಶಾಂತ ಸೇನಾನಿಗಳು ಕಾಂಗ್ರೆಸ್ಸಿನ ಬಾವುಟದ ಕೆಳಗೆ ನಿಲ್ಲುತ್ತಿದ್ದರು. ಎಲ್ಲರು ತಮ್ಮ-ತಮ್ಮ ವಿಚಾರಧಾರೆಗಳನ್ನು ಅದುಮಿಟ್ಟುಕೊಂಡಿದ್ದರು. ಆದರೆ ಸ್ವಾತಂತ್ರ್ಯ ದೊರಕಿದ ನಂತರ ಕಾಂಗ್ರೆಸ್ಸಿನ ಧ್ಯೇಯ ಮುಕ್ತಾಯಗೊಂಡಿತು. ಆದ್ದರಿಂದ ಪ್ರತ್ಯೇಕ ವರ್ಗವು ತಮ್ಮ-ತಮ್ಮ ವಿಚಾರಧಾರೆಯನ್ನು ತಮ್ಮಗನುಗುಣವಾಗಿ ಕಾಂಗ್ರೆಸಿನ ಆಂತರಿಕ ಸಂಘರ್ಷ ಹಾಗೂ ಅದರ ಭವಿಷ್ಯ 135 ರೂಪಿಸಬೇಕೆಂದುಕೊಂಡರು. ಕಾಂಗ್ರೆಸ್ ಸ್ವಾತಂತ್ರ್ಯ ಸಂಗ್ರಾಮದ ದಂಗೆಗಳಿಂದ ದೂರ ಸರಿದು ಒಂದು ವಿಶುದ್ಧ ರಾಜನೈತಿಕ ಪಕ್ಷದ ರೂಪದಲ್ಲಿ ಹೊರಹೊಮ್ಮಿತು. ಇವತ್ತಿನ ಸಂಘರ್ಷವು ಇದೇ ರೂಪಾಂತರದ ಪರಿಣಾಮವಾಗಿದೆ. 1936ರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ವಿಜಯಗಳಿಸಿತು. ಮತ್ತು ಸ್ವಾತಂತ್ರ್ಯದ ಯುದ್ಧ ಸ್ವಲ್ಪ ಹಿಂದುಳಿದುಬಿಟ್ಟಿತ್ತು. ಆದ್ದರಿಂದಲೇ ಕಾಂಗ್ರೆಸ್ಸಿನಲ್ಲೇ ಸಮಾಜವಾದ ಮತ್ತು ಸಮತಾವಾದ ಪಕ್ಷಗಳ ನಿರ್ಮಾಣವಾಗಿತ್ತು. ಮುಂದಿನ ಸಂಗ್ರಾಮಗಳು ಈ ಪಕ್ಷಗಳಿಗೆ ವಿಶೇಷ ಪ್ರಾಮುಖ್ಯತೆಯೇನು ಕೊಡಲಿಲ್ಲ. ಆದರೆ 1947ರ ನಂತರ ಈ ಪ್ರಶ್ನೆ ಪುನಃ ಮುಂದೆ ಬಂತು, ನಂತರ ವಿಭಿನ್ನ ವಿಚಾರಧಾರೆಗಳು ಒಂದಾಗಿರಲಾಗಲಿಲ್ಲ. ಪರಿಣಾಮವಾಗಿ ಮೊಟ್ಟಮೊದಲನೆಯದಾಗಿ ಸಮಾಜವಾದಿಗಳು ಕಾಂಗ್ರೆಸ್ಸಿನಿಂದ ದೂರಸರಿದರು. ಆದರೆ ವಾಮ ಪಕ್ಷದವರು ಕಾಂಗ್ರೆಸ್ಸಿನಲ್ಲೇ ಉಳಿದುಕೊಂಡರು. ಈಗ ಕಾಲಕ್ರಮೇಣ ಯಾವ ಇತರ ಪಕ್ಷದವರು ಕಾಂಗ್ರೆಸ್ಸಿನಿಂದ ಹೊರಬರುತ್ತಿದ್ದಾರೋ ಅವರು ತಮ್ಮ ವೈಯಕ್ತಿಕ ಸ್ವಾರ್ಥ ಹಾಗೂ ಹುದ್ದೆಯ ಆಸೆಯಿಂದಾಗಿ ಹೋಗಬಹುದು ಆದರೆ ಯಾವ ವಿಚಾರಧಾರೆಯನ್ನು ಅವರು ಮುಂದಿಡುತ್ತಾರೋ ಅದು ವಾಮ ಪಕ್ಷದ್ದೇ ಆಗಿರುತ್ತದೆ. ಮಹಾರಾಷ್ಟ್ರದ ಶೇತಕರಿ ಕಾಮಗಾರಿ ಪಕ್ಷ, ಉತ್ತರ ಪ್ರದೇಶದ ಜನ-ಕಾಂಗ್ರೆಸ್ ಮುಂತಾದ ಎಲ್ಲಾ ಪಕ್ಷಗಳು ಹೊರಗೆ ಬಂದು ಸಮಾಜವಾದ ವಿಚಾರಧಾರೆಯನ್ನು ಹಿಡಿದು ನಿಲ್ಲುತ್ತಿದ್ದಾರೆ. ಪಂಡಿತ್ ನೆಹರುರವರು ತಮ್ಮ ಭಾಷಣದಲ್ಲಿ ಅನೇಕ ಪ್ರಶ್ನೆಗಳ ಜೊತೆ ಲೋಕಹಿತೈಷಿರಾಜ್ಯಗಳ ಆದರ್ಶಗಳ ಜೊತೆ ಭವಿಷ್ಯದಲ್ಲಿ ಹೊರಬರಬೇಕಾದರೆ ಯಾವ ವಿಚಾರಗಳನ್ನು ಮುಂದಿಡಬೇಕು ಎಂಬ ದೃಷ್ಟಿಯಿಂದಲೇ ಭಾಷಣವನ್ನು ನೀಡಿದರು. ಕೃಪಲಾನಿ ಮತ್ತು ಕಿದಂಬಯಿಗುಟ್ ಜನತಂತ್ರ ಮತ್ತು ಸಮಾಜವಾದದ ಹೆಸರಿನಲ್ಲಿ ಮತ್ತೊಂದು ಚಿತ್ರಾನ್ನ ತಯಾರಿಸುವ ಪ್ರಯತ್ನದಲ್ಲಿದ್ದಾರೆ. ಪರಿಣಾಮವಾಗಿ ಕಾಂಗ್ರೆಸ್ಸಿನ ಈ ಸಂಘರ್ಷ ಭಾವೀ ಸಮಾಜವಾದ, ಸಾಮ್ಯವಾದ ಮತ್ತು ರಾಷ್ಟ್ರವಾದ ಸಂಘರ್ಷಕ್ಕೆ ಜನ್ಮ ಕೊಡುತ್ತದೆ. ಇದರಲ್ಲಿ ಯಾವ ವರ್ಗ ಕಾಂಗ್ರೆಸ್ಸಿನ ಮೇಲೆ ಅಧಿಕಾರ ಚಲಾಯಿಸುತ್ತದೆಯೆಂದು ಈ ಕ್ಷಣ ಹೇಳುವುದು ಕಷ್ಟ. ಆದರೆ ರಾಷ್ಟ್ರವಾದಿ ಪಕ್ಷವೇ ಅಧಿಕಾರದಲ್ಲಿರುತ್ತದೆ ಎಂದೆನಿಸುತ್ತದೆ. ಕಾಂಗ್ರೆಸ್ಸಿನ ಆಂತರಿಕ ಸಂಘರ್ಷ ಸಂಪೂರ್ಣ ಸಮಾಜದ ಜೀವನವನ್ನು ಕಲುಷಿತ ಮಾಡಿದೆ. ಇದನ್ನು ಅದುಮಿಡುವುದಾಗಲಿ, ಇದನ್ನು ಮುಚ್ಚಿಹಾಕುವುದಾಗಲಿ ಅಥವಾ ಒಪ್ಪಂದ ಮಾಡುವ ಪ್ರಯತ್ನಗಳಾಗಲಿ ಸ್ವಾಭಾವಿಕ ಪ್ರವಾಹವನ್ನು ತಡೆಗಟ್ಟಿ ಈ ಕಲುಷಿತ ಮನೋವೃತ್ತಿಯನ್ನು ಭಿನ್ನ-ಭಿನ್ನ ತಂತ್ರಗಳಾಗಿ ಒಡೆದು ಹೋಗಲಿಕ್ಕೆ ಪ್ರೇರೇಪಿಸುತ್ತದೆ. ಎಲ್ಲಾ ಕ್ಷೇತ್ರಗಳು ಹೊಲಸುಗೊಂಡಿರುವುದೇ ಇದರ ಸುಫಲ. 136 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿಚಾರಧಾರೆಗಳ ಈ ಸಂಘರ್ಷವನ್ನು ಗುರುತಿಸಿಕೊಂಡು ಐಕ್ಯತೆಯ ಅಸ್ವಾಭಾವಿಕ ಪ್ರಯತ್ನಗಳನ್ನು ಮಾಡದೆ ಎರಡೂ ಪಕ್ಷದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಬಹಳಷ್ಟು ಕೊಳಕು ಹೊರಹೋಗುತ್ತದೆ. ಕಾಂಗ್ರೆಸ್ ನಡುವಿನ ಪರಸ್ಪರ ಸಂಬಂಧ ಕಟುವಾಗಿರುವಷ್ಟು ಸಮಾಜವಾದಿಗಳು ಮತ್ತೆ ಕಾಂಗ್ರೆಸಿಗಳ ಮಧ್ಯೆಯಿಲ್ಲ. ಈ ಕಾರ್ಯವು ಕಾಂಗ್ರೆಸ್ಸ್‍ನ ಭಂಗ ಮಾಡಿ ವಿಚಾರಧಾರೆಗಳ ಆಧಾರದ ಮೇಲೆ ಹೊಸ-ಹೊಸ ರಾಜನೈತಿಕ ಪಕ್ಷಗಳನ್ನು ನಿರ್ಮಾಣ ಮಾಡಿ ನಡೆಸಬಹುದಿತ್ತು ಅಥವಾ ಒಂದು ವಿಚಾರಧಾರೆಯನ್ನು ಕಾಂಗ್ರೆಸಿನ ಮೇಲೆ ಪ್ರಭುತ್ವ ಸ್ಥಾಪಿಸಿ, ಅನ್ಯರನ್ನು ಹೊರಗೋಡಿಸಿ, ಕಾಂಗ್ರೆಸ್ ಮತ್ತೆ ಅನ್ಯ ರಾಜನೈತಿಕ ಪಕ್ಷದ ಸ್ಥಾಪನೆಯಿಂದಾಗಬಹುದು. ಪ್ರಥಮ ಮಾರ್ಗವನ್ನು ಗಾಂಧೀಜಿಯವರು ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ಸಿನ ನಾಯಕರುಗಳಿಗೆ ಅದು ಒಪ್ಪಿಗೆಯಾಗಲಿಲ್ಲ. ಪರಿಣಾಮವಾಗಿ, ಎರಡನೆ ಮಾರ್ಗ ಕಾರ್ಯಗತವಾಗುತ್ತಿದೆ ಮತ್ತು ಪ್ರತ್ಯೇಕ ಪಕ್ಷವು ಕಾಂಗ್ರೆಸಿನ ಮೇಲೆ ಅಧಿಕಾರ ಚಲಾಯಿಸಿ ಅದರ ಲಾಭವನ್ನು ಅನುಭವಿಸುವ ಸಲುವಾಗಿ ಕಾಂಗ್ರೆಸ್ಸಿನ ಮೇಲೆ ಅಧಿಕಾರ ಚಲಾಯಿಸಲು ಕಾತುರರಾಗಿದ್ದಾರೆ. ಇವೆರಡರಲ್ಲಿ ಯಾವುದೇ ಪಕ್ಷವು ಕಾಂಗ್ರೆಸಿನ ಮೇಲೆ ಅಧಿಕಾರ ಚಲಾಯಿಸಿದರೂ ಸಹ ಎರಡೂ ಪಾರ್ಟಿಗಳ ನಡುವೆ ಜನಸಾಮಾನ್ಯರು ಖಂಡಿತವಾಗಿಯೂ ರುಬ್ಬಲಾಗುತ್ತಾರೆಯೆಂಬುದು ಸ್ಪಷ್ಟವಾಗಿದೆ. ಇವರಿಬ್ಬರೂ ಮುಕ್ತಾಯ ನೀಡಿ ಅಥವಾ ಮಂಗಳವನ್ನಾಡಿ ತಮ್ಮ ಸ್ವಂತ ಸಂಘಟನೆ ಸ್ಥಾಪಿಸುವವರೆಗೂ ಈ ಸಂಘರ್ಷ ಖಂಡಿತ. ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ ಬೇರೆ ಚಿಹ್ನೆ ಮತ್ತು ಬೇರೆ ಪ್ರಧಾನಿಯ ನಿರ್ಮಾಣ ಮಾಡಿ ಜಮ್ಮು ಮತ್ತೆ ಕಾಶ್ಮೀರದ ನಾಯಕರು ತಮ್ಮ ಪ್ರತ್ಯೇಕತಾವಾದಿ ಮನೋವೃತ್ತಿಯನ್ನು ಮೊದಲೇ ಪರಿಚಯಿಸಿದರು. ಆದರೆ ಈ ರಾಜ್ಯಕ್ಕೆ ಅವರು ಯಾವ ಬೇರೆ ವಿಧಾನವನ್ನು ಅಳವಡಿಸುವ ಪ್ರಸ್ತಾಪನೆ ಇಟ್ಟರೋ ಅದು ಈ ಮನೋವೃತ್ತಿಯನ್ನು ವ್ಯಾಪಕವಾಗಿ ಸ್ಪಷ್ಟೀಕರಿಸುತ್ತದೆ. ನಿಜವಾಗಲೂ ಭಾರತಕ್ಕೆ ಯಾವ ತರಹ ಜಮ್ಮು ಮತ್ತು ಕಾಶ್ಮೀರವು ಸಮ್ಮಿಲಿತವಾಗಿದೆಯೋ ಅದೇ ತರಹ ಭಾರತವನ್ನು ಬಿಡುವ ಮುನ್ನ ಬ್ರಿಟಿಷರು ಸ್ವತಂತ್ರವಾಗಿ ಬಿಟ್ಟ ಉಳಿದ ಐನೂರ ಐವತ್ತನಾಲ್ಕು ರಿಯಾಸತ್‍ಗಳಾಗಿವೆ. ಒಂದು ವಿಧಾನ ನಿರ್ಮಾಣವಾಗಿದೆ. ಈ ವಿಧಾನವು ಎಲ್ಲರ ಮೇಲೆ ಲಗತ್ತಿಸಲಾಗುತ್ತದೆ. ಮತ್ತೆ ಇದೇ ವಿಧಾನವು ಜಮ್ಮು ಮತ್ತೆ ಕಾಶ್ಮೀರದ ಮೇಲೆ ಲಗತ್ತಿಸಲಾಗುತ್ತದೆ ಎಂಬ ಭರವಸೆಯಿದೆ. ಆದರೆ ಯಾವ ಘಳಿಗೆಯಲ್ಲಿ ನಮ್ಮ ಪ್ರಧಾನ ಮಂತ್ರಿ ಪಂಡಿತ್ ನೆಹರೂರವರ ಬಾಯಿಂದ ಜನಮತ ಸಂಗ್ರಹಿಸುವ ಮಾತು ಹೊರ ಬಂತೋ ಆ ಹೊತ್ತಿನಿಂದ ಶೇಖ್ ಅಬ್ದುಲ್ಲ ಮತ್ತು ಅವರ ಜೊತೆಯವರು ಈ ಮಾತುಗಳನ್ನೇ ಆಧಾರವಾಗಿಟ್ಟುಕೊಂಡು ಸ್ವತಂತ್ರ ಕಾಶ್ಮೀರದ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಕಾಶ್ಮೀರದಲ್ಲಿ ವೈಮನಸ್ಯದ ಸ್ಥಿತಿ ಇರುವ ಕಾರಣ ಆ ರಿಯಾಸತ್, ಭಾರತದ ಜೊತೆ ಅನ್ಯ ರಿಯಾಸತ್ ತರಹ ಪೂರ್ಣರೂಪವಾಗಿ ಐಕ್ಯವಾಗಲಿಲ್ಲ. ಆದ್ದರಿಂದ ಸಂವಿಧಾನದಲ್ಲಿ ಸೆಕ್ಷನ್ 370 ಅಳವಡಿಸಿ ಭಾರತ ಕಾಶ್ಮೀರದ ಹಿಂದಿನ ಸಂಬಂಧಗಳ ದಿಗ್ದರ್ಶನ ಮಾಡಿಸಲಾಯಿತು ಮತ್ತು ಭವಿಷ್ಯದ ದಿಕ್ಕು ನಿರ್ಧರಿಸಲಾಗಿತ್ತು. ಅಸ್ಥಾಯಿ ಮತ್ತು ಮಧ್ಯದ ಪ್ರಾವಿಧಾನಗಳಲ್ಲಿ ಭಾಗ 370 ರಲ್ಲಿ ಭಾರತ ಮತ್ತು ಕಾಶ್ಮೀರದ ಸಂಬಂಧ ಮೂರು ವಿಚಾರಗಳಿಗೆ ಸೀಮಿತವಾಗಿರುತ್ತದೆಯೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ ಅದೇ ಕಲಮು ಮೂರನೇ ಭಾಗದಲ್ಲಿ ಏನು ಹೇಳಿರುತ್ತಾರೆಯೆಂದರೆ, ಕಾಶ್ಮೀರದ ಸಂವಿಧಾನ ಸಭೆಯ ಮೇಲೆ ಭಾರತದ ಪ್ರಧಾನರು 370ನೇ ಕಲಮು ಸಂಪೂರ್ಣವಾಗಿ ಮುಗಿದಿದೆ ಅಥವಾ ಅದರಲ್ಲಿ ಏನೋ ಪರಿವರ್ತನೆ ಮಾಡಿಕೊಳ್ಳಲಾಗಿದೆಯೆಂದು ಘೋಷಿಸಬಹುದು. ವಿಧಾನವನ್ನು 138 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಿರ್ಮಿಸುವವರ ಅಪೇಕ್ಷೆ ಏನಿತ್ತೆಂದರೆ ಆ ಸಮಯದಲ್ಲಿ ಕಾಶ್ಮೀರವನ್ನು ಅನ್ಯ `ಖ' ಶ್ರೇಣಿಯ ರಾಜ್ಯಗಳ ಸಮಕಕ್ಷದಲ್ಲಿ ಇಟ್ಟಿರಲಾರದೆ, ಅನುಚ್ಛೇದ 370 ಯಾವಾಗ ಮುಗಿದು ಹೋಗಿ ಕಾಶ್ಮೀರವು ಸಂಪೂರ್ಣವಾಗಿ `ಖ' ಶ್ರೇಣಿಯ ರಾಜ್ಯವಾಗಿ ಭಾರತದ ಜೊತೆ ಒಂದು ದಿನ ಅವಶ್ಯವಾಗಿ ಸೇರಿಕೊಳ್ಳುತ್ತದೆ ಎಂದು ತಿಳಿದುಬರುತ್ತದೆ. ಸ್ವರ್ಗಸ್ಥರಾದ ಶ್ರೀಯುತ ಗೋಪಾಲಸ್ವಾಮಿ ಅಯ್ಯಂಗಾರ್‍ರವರು ಯಾರು ಅನು. 370ರ ಪ್ರಸ್ತಾಪ ಮಾಡಿದ್ದರೋ, ಸಂವಿಧಾನದ ಸಭೆಯಲ್ಲಿ ಈ ಒಂದು ಆಸೆಯನ್ನು ವ್ಯಕ್ತಪಡಿಸಿದ್ದರೂ ಸಹ ಈ ಆಸೆಯು ನಿರಾಶೆಯಾಗಿಯೇ ಉಳಿಯಿತು. ಶೇಖ್ ಅಬ್ದುಲ್ಲಾ ಮತ್ತು ಅವರ ಸಂಗಡಿಗರು, ಭಾರತೀಯರೆಂದು ನಾವು ತಿಳಿದಿದ್ದೆವು. ಆದರೆ ಅವರು ಭಾರತೀಯರಾಗಿರಲಿಲ್ಲ. ಅವರು ತಮ್ಮನ್ನು ಕಾಶ್ಮೀರದವರೆಂದೇ ತಿಳಿದಿದ್ದರು ಮತ್ತು ಅದರಿಂದ ಮೇಲ್ಬರಲೂ ಸಹ ತಯಾರಿರಲಿಲ್ಲ. ಕಾಲ-ಕ್ರಮೇಣ ಶೇಖ್-ಅಬ್ದುಲ್ಲಾರವರು ಕಾಶ್ಮೀರವನ್ನು ಭಾರತದ ಜೊತೆ ಸಂಪೂರ್ಣವಾಗಿ ಸೇರಿಸಲು ಆಸಕ್ತಿಯಿಲ್ಲವೆಂದು ಗೊತ್ತಾಗತೊಡಗಿದಾಗ ಭಾರತದಲ್ಲಿ ಅವರ ವಿರುದ್ಧ ಜನಮತ ತೀವ್ರಗೊಂಡಿತು. ಎಲ್ಲಿಯವರೆಗೆಂದರೆ ರಣವೀರ್ ಸಿಂಗ್‍ಪುರಾನಲ್ಲಿ ಸ್ವತಂತ್ರ ಭಾರತದ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದಾಗ, ಪಂಡಿತ್ ನೆಹರೂರವರು ಸಹ ಇದರ ನಿಂದನೆ ಮಾಡಿದರು. ಅವರ ಒಳ ಮರ್ಮವು ಈ ತರಹ ಸಂಪೂರ್ಣವಾಗಿ ಪ್ರಕಟಗೊಂಡ ಮೇಲೆ ಭಾರತ ಸರ್ಕಾರವು ಅವರನ್ನು ಕರೆದು ಅವರು ಕೊನೆಯದಾಗಿ ಕಾಶ್ಮೀರದ ಯಾವ ಸ್ವರೂಪವನ್ನು ಮುಂದಿಡುತ್ತಾರೆಯೆಂದು ತಿಳಿಯಬೇಕಾಯಿತು. ಸಣ್ಣ-ಸಣ್ಣ ವಿಷಯಗಳಲ್ಲಿ ಕಾಶ್ಮೀರದ ಭಿನ್ನವಾದಂತಹ ಶಾಸನವಿದ್ದಿರಬಹುದು, ಆದರೆ ಭಾರತೀಯ ಸಂವಿಧಾನದ ಕೆಲವು ಭಾಗಗಳೆಂದರೆ ನಾಗರಿಕತೆ, ಮೌಲಿಕ ಅಧಿಕಾರಗಳು, ಸರ್ವೋಚ್ಛ ನ್ಯಾಯಾಲಯ, ವಿತ್ತೀಯ ಏಕೀಕರಣ, ಚುನಾವಣೆ, ಮುಖ್ಯಸ್ಥರ ಸಂಕಟ ಸಮಯದ ಅಧಿಕಾರ ಮುಂತಾದವು ಎಲ್ಲಾ ಸ್ಥಳಗಳಲ್ಲಿ ಸಮಾನ ರೂಪದಲ್ಲಿ ಜಾರಿಗೆ ತರಬೇಕಾಗಿದೆ. ಪರಿಣಾಮವಾಗಿ ಜುಲೈ 1942ರಲ್ಲಿ ನೆಹರೂ ಜೀ ಮತ್ತು ಅಬ್ದುಲ್ಲಾರ ನಡುವೆ ಮಾತುಕತೆ ನಡೆದು ಅದರ ಪ್ರಕಾರ ಮೇಲ್ಕಂಡ ಎಲ್ಲಾ ವಿಷಯಗಳನ್ನು ಯಾವುದಾದರೂ ಅಂಶದಲ್ಲಿ/ಭಾಗದಲ್ಲಿ ಕಾಶ್ಮೀರದ ಮೇಲೆ ಚಲಾಯಿಸುವ ನಿರ್ಧಾರವಾಯಿತು. ಈ ಜುಲೈ ಒಪ್ಪಂದವನ್ನು ಆ ಸಮಯದಲ್ಲಿ ನೆಹರೂರವರು ಬಹಳ ಸಂತೋಷ ಜನಕವಾಗಿದೆಯೆಂದು ಹೇಳಿದ್ದರು. ಏಕೆಂದರೆ ಈ ರೀತಿಯಲ್ಲಾದರೂ ಭಾರತದ ಸಂವಿಧಾನವು ಸಂಪೂರ್ಣವಾಗಿ ಇಲ್ಲದಿದ್ದರೂ ಸ್ವಲ್ಪ ಅಂಶಗಳಲ್ಲಾದರೂ ಕಾಶ್ಮೀರದ ಮೇಲೆ ಅವಶ್ಯವಾಗಿ ಲಗತ್ತಿಸಲಾಗುತ್ತದೆಯೆಂದು ಅವರು ವಿಚಾರ ಮಾಡಿದ್ದರು. ಆದರೆ ರಾಜನೈತಿಕ ದೃಷ್ಟಿಯಲ್ಲಿ ಈ ಒಪ್ಪಂದ ಬಹಳ ದೊಡ್ಡ ತಪ್ಪಾಯಿತು. ಏಕೆಂದರೆ ಕಾಶ್ಮೀರದ ಒಂದು ಸ್ವತಂತ್ರ ಅಸ್ತಿತ್ವವನ್ನು ಯಾವುದಾದರೊಂದು ರೂಪದಲ್ಲಿ ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ 139 ಒಪ್ಪಿಕೊಳ್ಳಲಾಗಿತ್ತು ಮತ್ತು ಇದರ ಲಾಭವನ್ನು ಶೇಖ್ ಅಬ್ದುಲ್ಲಾರವರು `ಬೆರಳುಗಳ ನಂತರ ಹಿಡಿಯಲು ಹೋದವ’ಯೆಂಬ ನೀತಿಯಂತೆ ಪಡೆದರು. ಅಬ್ದುಲ್ಲಾರವರ ಈ ನೀತಿಯನ್ನು ತಿಳಿಯುವ ಮೊದಲು ನಾವು ಕಾಶ್ಮೀರ ರಾಜ್ಯಕ್ಕಾಗಿಯೇ ಅಲ್ಲಿನ ಸಂವಿಧಾನ ಸಮಿತಿಯಿಂದ ತಯಾರಾದ ಸಂವಿಧಾನದ ಪ್ರಾರೂಪದ ಸ್ವಲ್ಪ ದಿಗ್ದರ್ಶನ ಮಾಡಬೇಕಾಗುತ್ತದೆ. 1. ಪ್ರಾರೂಪದ ಪ್ರಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಒಂದು ಸ್ವಾಯತ್ತ, ಸ್ವತಂತ್ರ ಸಂಬದ್ಧ ಅಂಶ ಆಗಿತ್ತೇನೋ ಮತ್ತು ಅದು ಸರ್ವಪ್ರಭುತ್ವವುಳ್ಳ ಸಂಪನ್ನ ರಾಜ್ಯವಾಗಿರುತ್ತದೆ. ಅದರ ಪ್ರಕಾರಗಳು, ಪ್ರಶಾಸನಿಕ ಮತ್ತು ನ್ಯಾಯಬದ್ಧ ಶಕ್ತಿಗಳ ಮೂಲವೂ ಭಾರತದ ಜನತೆ ಅಥವಾ ಸಂವಿದಾನವು ಅಲ್ಲ, ಅದರ ಬದಲಾಗಿ ಅದು ಕಾಶ್ಮೀರದ ಜನತೆ ಮತ್ತು ಅದರದ್ದೇ ಆದ ಸಂವಿಧಾನವಾಗಿರುತ್ತದೆ. 2. ಪ್ರಾರೂಪದ ಭಾಗ 2 ನಾಗರಿಕತೆಗೆ ಸಂಬಂಧಪಟ್ಟಿರುತ್ತದೆ. ಅದರ ಪ್ರಕಾರ `ಸ್ಥಾಯಿ ನಿವಾಸ'ದ ಪಟ್ಟಕೊಟ್ಟು ಕಾಶ್ಮೀರ ವಾಸಿಗಳಿಗೆ ಭಾರತದ ನಾಗರಿಕರಿಗೆ ಭಿನ್ನವಾದ ಪೌರತ್ವವನ್ನು ನೀಡಲಾಗಿದೆ. 3. ಭಾಗ 3 ಮೂಲಭೂತವಾಗಿ ಅಧಿಕಾರಿಗಳಿಗೆ ಸಂಬಂಧಿಸಿದೆ. ಅದರಲ್ಲಿ ಭಾರತೀಯ ಸಂವಿಧಾನದ ಭಾಗ 3ರ ಮೂಲಭೂತ ಅಧಿಕಾರಗಳನ್ನು ಜೋಡಿಸಿಕೊಳ್ಳಲಾಗಿದೆ. ಆದರೆ ಭೂಮಿ ಸುಧಾರಣೆಗಾಗಿ ವಸೂಲೀ ಮುಂತಾದವುಗಳಿಂದ ಉಳಿಸುವ ಒಂದು ಉಪಾಯವನ್ನು ಕಂಡುಹಿಡಿಯಲಾಗಿದೆ. ಕಾಶ್ಮೀರದಲ್ಲಿ ಸ್ಥಾಯಿ ಸಂಪತ್ತನ್ನು ಖರೀದಿಸಬೇಕಾದರೆ ಅಥವಾ ಕಾರ್ಯಾಲಯಗಳಲ್ಲಿ ಒಳ್ಳೆಯ ಉನ್ನತ ಹುದ್ದೆಯನ್ನು ಪಡೆಯುವ ಅಧಿಕಾರವನ್ನು ಕೇವಲ ಕಾಶ್ಮೀರದ `ಸ್ಥಾಯಿ-ನಿವಾಸಿಗಳಿಗೆ' ಮಾತ್ರ ಕೊಡಲಾಗಿದೆ. ಮೌಲಿಕ ಅಧಿಕಾರಿಗಳ ಜೊತೆ ಭಾರತೀಯ ಸಂವಿಧಾನಕ್ಕೆ ಭಿನ್ನವಾಗಿ ಮತ್ತು ಯಾವುದೇ ಸಂವಿಧಾನದ ದೃಷ್ಟಿಯಲ್ಲಿ ನಾಗರಿಕರ ಮೌಲಿಕ ಕರ್ತವ್ಯಗಳ ಸಮಾವೇಶ ಮಾಡಲಾಗಿದೆ. ಇದರ ಪ್ರಕಾರ ಒಂದು ಸೆಕ್ಯುಲರ್ ಪ್ರಜಾತಂತ್ರ ರಾಜ್ಯದ ನಿರ್ಮಾಣ ಮಾಡಬೇಕಿದ್ದರೆ ಪ್ರತ್ಯೇಕ ನಾಗರಿಕನ ಕರ್ತವ್ಯ ಹೀಗಿರುತ್ತದೆ. ಅ. ಅವನು ಜಾತೀಯ ಮತ್ತು ಸಾಂಪ್ರದಾಯಿಕ ಐಕ್ಯತೆಯನ್ನು ಸ್ಥಾಪಿಸುತ್ತಾನೆಂದು. ಆ. ಎಲ್ಲಾ ಸಾರ್ವಜನಿಕ ಕಾರ್ಯಗಳಲ್ಲಿ ಪ್ರಾಮಾಣಿಕತೆಯ ಪರಿಚಯ ನೀಡಬೇಕೆಂದು. ಇ. ತನ್ನ ವ್ಯವಹಾರದಲ್ಲಿ ಗೌರವ, ಶಾಲೀನತೆ ಮತ್ತು ಜವಾಬ್ದಾರಿಯನ್ನು ಪ್ರಕಟಿಸುವುದು. 140 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಈ. ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ವಿಚಾರ ಮಾಡಿ ಮತ್ತು ಪ್ರಾಮಾಣಿಕವಾಗಿ ಮತ ನೀಡಬೇಕು. ಉ. ಸಾಂಪ್ರದಾಯಿಕ ದ್ವೇಷಗಳ ಪ್ರಚಾರ ಮಾಡಕೂಡದು. ಊ. ಕಳ್ಳತನ ಮತ್ತು ಲಾಭಗಳಿಸುವ ಅಥವಾ ಯಾವುದೇ ತರಹದ ಸಮಾಜಕ್ಕೆ ವಿರುದ್ಧವಾದ ಕೆಲಸವನ್ನು ಮಾಡಬಾರದು. ಈ ಮೇಲ್ಕಂಡ ಕರ್ತವ್ಯಗಳನ್ನು ಯಾರು ಪರಿಪಾಲಿದುವುದಿಲ್ಲವೋ ಅವನನ್ನು ಮತದಾನ ಮಾಡುವ ಅಧಿಕಾರದಿಂದ ವಂಚಿಸಲಾಗುತ್ತದೆ. 4.ಭಾಗ 4 ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರಮುಖ ಕರ್ತವ್ಯಾದಿಗಳನ್ನು ವರ್ಣಿಸುತ್ತದೆ. ಕೇವಲ ಸ್ಥಾಯಿ ನಾಗರಿಕರು ಮಾತ್ರ ಸದರಿ ರಿಯಾಸತ್‍ರಾಗಿ ಆಯ್ಕೆಯಾಗುತ್ತಾರೆ. ಸದರಿ ರಿಯಾಸತ್‍ಗೆ `ಖುದಾ'ರ ಹೆಸರಿನಿಂದ, ಅವನು ನಾಸ್ತಿಕನಾಗಿದ್ದರೂ ಸಹ, ಶಪಥವನ್ನು ತೆಗೆದುಕೊಳ್ಳಬೇಕಾಗುತ್ತದೆ. ಸದರಿ ರಿಯಾಸತ್ ಭಾರತದ ರಾಷ್ಟ್ರಪತಿಯವರಿಂದ ನೇಮಕ ಮಾಡಲಾಗುತ್ತದೆ ಮತ್ತು ಅವರ ಪ್ರಸಾದಾವಧಿಯವರೆಗೂ ಅದೇ ಹುದ್ದೆಯಲ್ಲಿ ಇರುತ್ತಾನೆ. ಆದರೆ ಅವನನ್ನು ನೇಮಕಗೊಳಿಸುವುದು ಕಾಶ್ಮೀರದ ರಾಷ್ಟ್ರೀಯ ಸಭೆಯು. ದೋಷಾರೋಪಣ ಮಾಡಿದರೆ ಅವನನ್ನು ಆ ಹುದ್ದೆಯಿಂದ ತೆಗೆದು ಹಾಕಲುಬಹುದು. ಭಾರತದ ರಾಷ್ಟ್ರಪತಿಯವರಿಗೆ ರಾಷ್ಟ್ರೀಯ ಸಭೆಯ ಎಲ್ಲಾ ನಿರ್ಣಯಗಳ ಮೇಲೆ ಒಂದು ಮೊಹರ್ ಒತ್ತುವ ಅಧಿಕಾರ ಮಾತ್ರವಿರುತ್ತದೆ. ಮೊಹರ್ ಹಾಕಲಿಲ್ಲವೆಂದರೆ ಭವಿಷ್ಯದಲ್ಲಿ ಅದರ ಪರಿಣಾಮ ಏನಾಗುತ್ತದೆಯೆಂದು ನೋಡುವ ಎಂದು ಬಿಡಲಾಗುತ್ತದೆ. 5.ಕಾಶ್ಮೀರದ ಶಾಸನ ಕಾರ್ಯವು ಒಂದು ಮಂತ್ರಿ ಪರಿಷದ್ ಮೂಲಕವಾಗುತ್ತದೆ ಮತ್ತು ಅದು ಸಾಮೂಹಿಕ ರೂಪದಲ್ಲಿ ರಾಷ್ಟ್ರೀಯ ಸಭೆಯನ್ನು ಕುರಿತು ಜವಾಬ್ದಾರಿ ಹೊಂದಿರುತ್ತದೆ. ಪ್ರಧಾನಮಂತ್ರಿಯವರ ಮತ್ತು ಮಂತ್ರಿ ಪರಿಷದ್‍ರ ಇಚ್ಛೆಯ ಅನುಗುಣವಾಗಿ ಸದರಿ ರಿಯಾಸತ್ ನಿಯುಕ್ತವಾಗುತ್ತದೆ. ಆಮೇಲೆ ಅದರ ಇಚ್ಛೆಯ ಅನುಸಾರವಾಗಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಂತ್ರಿಗಳನ್ನು ತೆಗೆದುಹಾಕಬಹುದು. 6. ರಾಷ್ಟ್ರೀಯ ಮಹಾಸಭೆಯು ಕಾಶ್ಮೀರದ ವಿಧಾನ ಪರಿಷದ್ ಆಗುತ್ತದೆ. ಮತ್ತೆ ಅದು ಪ್ರತಿ ನಲ್ವತ್ತು ಸಾವಿರ ನಿವಾಸಿಗಳ ಮೇಲೆ ಒಂದು ಸದಸ್ಯದ ಆಧಾರದಂತೆ ಆಯ್ಕೆ ಮಾಡಲಾಗುತ್ತದೆ. ಕೇವಲ ಜಮ್ಮು ಪ್ರಾಂತದಲ್ಲಿ ಹರಿ ಜನರಿಗೆ ಐದು ವರ್ಷಗಳಿಗೆ ನಾಲ್ಕು ಸ್ಥಾನವು ಸುರಕ್ಷಿತವಾಗಿರುತ್ತದೆ. ಕಾಶ್ಮೀರದ ನಾಗರಿಕರು ಭಾರತದ ನಾಗರಿಕರಿಗಿಂತ ಅತಿ ಜಾಣರು. ಆದ್ದರಿಂದ ಅವರಿಗೆ ಹದಿನೆಂಟು ವರ್ಷವಯಸ್ಸಿನಲ್ಲೇ ಮತ ನೀಡುವ ಅಧಿಕಾರ ದೊರಕುತ್ತದೆ. ಮತದಾತರಿಗೆ ತಮ್ಮ ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ 141 ಪ್ರತಿನಿಧಿಗಳನ್ನು ವಾಪಸ್ಸು ಕರೆಯುವ ಅಧಿಕಾರ ಕೊಟ್ಟಿರಲಾಗುತ್ತದೆ. ಮಹಾಸಭೆಯ ಎಲ್ಲಾ ಕಾರ್ಯವು ಉರ್ದು ಭಾಷೆಯಲ್ಲಿರುತ್ತದೆ. ಅಧ್ಯಕ್ಷನಿಗೆ ಸರಿಯೆನಿಸಿದರೆ ಯಾವುದೇ ಸದಸ್ಯನಿಗೆ ಆಂಗ್ಲ ಭಾಷೆಯಲ್ಲಿ ಅಥವಾ ಅವನು ಆಂಗ್ಲ ಭಾಷೆಯನ್ನು ಮಾತನಾಡದವನಾದರೆ ತನ್ನ ಮಾತೃಭಾಷೆಯಲ್ಲಿ ಮಾತನಾಡಬಹುದೆಂದು ಅನುಮತಿ ಕೊಡಬಹುದು. 7. ಭಾಗ 6 ನ್ಯಾಯ ವಿಧಾನಕ್ಕೆ ಸಂಬಂಧಪಟ್ಟಿರುತ್ತದೆ. ಇದರ ಪ್ರಕಾರ ಕಾಶ್ಮೀರ ರಾಜ್ಯದ ಅಂತಿಮ ಮತ್ತು ಸರ್ವೋಚ್ಛ ನ್ಯಾಯಾಲಯವು ದೀವಾನಿ, ಫೌಜ್‌ದಾರಿ ಮುಂತಾದ ಎಲ್ಲಾ ವಿಷಯಗಳಿಗೆ ಒಂದು ನ್ಯಾಯ ಮಂಡಲವಿರುತ್ತದೆ. ಈ ನ್ಯಾಯ ಮಂಡಲವು ಸದರಿ ರಿಯಾಸತ್ ಮೂಲಕ ಪ್ರಧಾನಮಂತ್ರಿಯವರ ಒಪ್ಪುಗೆ ಮೇರೆಗೆ ನಿಯುಕ್ತ ಮಾಡಲಾಗುತ್ತದೆ. ನ್ಯಾಯ ಮಂಡಲದ ಜೊತೆ ಒಂದು ಹಾಯಿಕೋರ್ಟ್ ಸಹ ಇರುತ್ತದೆ. ಇದರ ಸಭೆ ಜಮ್ಮು ಮತ್ತು ಶ್ರೀನಗರದಲ್ಲಿ ಏರ್ಪಡಿಸಲಾಗುತ್ತದೆ. ಮೂಲಭೂತ ಅಧಿಕಾರಗಳು ಸಂಬಂಧಿಸಿದಂತೆ ಆದೇಶ ಕೊಡುವ ಅಧಿಕಾರ ಎರಡೂ ನ್ಯಾಯಾಲಯಗಳಿಗೆ ಇರುತ್ತದೆ. ಮೌಲಿಕ ಅಧಿಕಾರಗಳು ಸಂಬಂಧಿಸಿದಂತೆ ಯಾವುದೇ ನಾಗರಿಕ ಭಾರತದ ಸುಪ್ರಿಮ್ ಕೋರ್ಟ್‍ನಲ್ಲಿ ಕಾಶ್ಮೀರದ ಇನ್ನಾವ ವಿಷಯವನ್ನು ಕುರಿತು ಅಪೀಲ್ ಮಾಡಲಾಗುವುದಿಲ್ಲ. 8. ಭಾಗ 7 ಪ್ರಧಾನಾಕೇಕ್ಷಕನ ನಿಯುಕ್ತಿಗೆ ಸಂಬಂಧಪಟ್ಟಿರುತ್ತದೆ. ಭಾರತದ ಪ್ರಧಾನಕೇಕ್ಷಕನಿಗೆ ಕಾಶ್ಮೀರದಲ್ಲಿ ಏನೂ ಅಧಿಕಾರವಿರುವುದಿಲ್ಲ. 9. ಭಾಗ 8 ಭಾರತ ಮತ್ತು ಕಾಶ್ಮೀರದ ನಡುವೆ ಇರುವ ಸಂಬಂಧಗಳ ವಿವೇಚನೆ ಮಾಡುತ್ತದೆ. ಈ ಸಂಬಂಧಗಳನ್ನು ಮೂರು ಅನುಸೂಚಿಗಳಲ್ಲಿ ವರ್ಣಿಸಲಾಗಿದೆ. ಅದರಲ್ಲಿ ಪ್ರಥಮ ಅನುಸೂಚಿಯಲ್ಲಿ ರಕ್ಷಾ, ವಿದೇಶ ನೀತಿ ಮತ್ತು ಸಾರಿಗೆಗೆ ಸಂಬಂಧಪಟ್ಟಿರುತ್ತದೆ. ಈ ವಿಷಯಗಳನ್ನು ಕುರಿತು ವಿಧಾನ ತಯಾರಿಸುವ ಅಧಿಕಾರ ಭಾರತದ ಸಂಸದ್‍ಗೆ ಮಾತ್ರ ಇರುತ್ತದೆ. ಇದರ ಜೊತೆ ಮತ್ತೊಂದು ಹೆಸರು ಪಟ್ಟಿಕೊಟ್ಟಿರುತ್ತದೆ. ಅದರಲ್ಲಿ ಯಾವ ವಿಷಯಗಳು ಸಮ್ಮಿಲಿತವಾಗಿರುತ್ತದೆಯೆಂದರೆ ಭಾರತೀಯ ಸಂಸದ್‍ನ ಅಧಿಕಾರಿಗಳು ಅವೇ ಇರುತ್ತವೆ, ಆದರೆ ಇದರಲ್ಲಿ ಕೆಲವು ಪರಿವರ್ತನೆಗಳನ್ನು ಮಾಡುವ ಬೇಡಿಕೆಗಳು ಇವೆ. ಇದರಲ್ಲಿ ಕೆಲವು ಸೂಕ್ಷ್ಮತೆಗಳನ್ನು ಗಮನಿಸತಕ್ಕದ್ದು: ಅ. ಭಾರತೀಯ ಸಂಸದ್‍ನಲ್ಲಿ ಕಾಶ್ಮೀರದ ಪ್ರತಿನಿಧಿಗಳು ಜನತೆಯ ಮೂಲಕ ಆಯ್ಕೆ ಆಗುವುದಿಲ್ಲ. ಅಲ್ಲಿನ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರಿಂದ ಆಯ್ಕೆಯಾಗುತ್ತಾರೆ. ಆ. ಭಾರತದ ವಿದೇಶಮಂತ್ರಿ ಬೇರೆ ದೇಶಗಳ ಜೊತೇನೇ ಸಂಧಿ ಸಲ್ಲಿಸಿದರು. ಅದರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಯಾವುದೇ 142 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರೀತಿಯ ಸಂಬಂಧ ಬಂದರೆ ಅದು ಕಾಶ್ಮೀರ ಸರ್ಕಾರದ ಅನುಮತಿಯಿಲ್ಲದಿದ್ದರೆ ಪೂರ್ಣಗೊಳ್ಳುವುದಿಲ್ಲ ಮತ್ತು ಭಾರತೀಯ ಸಂಸದ್ ಆ ಸಂಧಿಯನ್ನು ವ್ಯಾವಹಾರಿಕ ರೂಪವನ್ನು ಕೊಡಬೇಕಾದರೆ ಯಾವುದೇ ಕಾನೂನು ತಯಾರಿಸುವ ಅಧಿಕಾರವಿರುವುದಿಲ್ಲ. ಇ. ಭಾರತೀಯ ಸಂಸದ್‍ನ ಅಧ್ಯಕ್ಷರು ಕಾಶ್ಮೀರದ ಯಾವುದೇ ಸಂಸದ್‍ನ ಸದಸ್ಯರಿಗೆ ತನ್ನ ಮಾತೃಭಾಷೆಯಲ್ಲಿ ಭಾಷಣವನ್ನು ಕೊಡುವ ಅನುಮತಿ ಕೊಡಲಾಗುವುದಿಲ್ಲ. ಭಾಷಣವು ಅಲ್ಲಿನ ಅಧಿಕೃತ ಭಾಷೆಯಲ್ಲಿ ಅಥವಾ ಉರ್ದುವಿನಲ್ಲಿ ಮಾತ್ರಕೊಡತಕ್ಕದ್ದು. ಈ. ಭಾರತದ ಸುಪ್ರೀಮ್ ಕೋರ್ಟಿನ ವಿಭಿನ್ನ ರಾಜ್ಯಗಳು ಮತ್ತು ರಾಜ್ಯ, ಸಂಘ ಸರ್ಕಾರದ ನಡುವೆ ಉತ್ಪನ್ನವಾಗದಂತಹ ಎಲ್ಲಾ ವಿವಾದಗಳಿಗೆ ಮೂಲ ನ್ಯಾಯವಾದ ಅಧಿಕಾರಗಳು ಲಭ್ಯವಿದೆ. ಆದರೆ ಅದು ಕಾಶ್ಮೀರದ ಸಂವಿಧಾನಕ್ಕೆ ಸಂಬಂಧಪಟ್ಟಂತಿಲ್ಲ ಮತ್ತೆ ಯಾರಿಗೆ ಭಾರತೀಯ ಸಂಸದ್‍ಗೆ ಕಾಶ್ಮೀರಿಗೆ ಕಾನೂನು ತಯಾರಿಸುವ ಅಧಿಕಾರವಿಲ್ಲವೋ, ತನ್ನ ಅಧಿಕಾರಿಗಳನ್ನು ಉಪಯೋಗಕ್ಕೆ ತರಬಹುದು ಎಂಬ ವಿಷಯಕ್ಕೆ ಸಂಬಂಧಿಸಿದ ವಿಚಾರವೂ ಅಲ್ಲ. ಉ. ಅಕಸ್ಮಾತ್ ಯಾವುದೇ ವಿಷಯವನ್ನು ಕುರಿತು ಭಾರತ ಮತ್ತು ಕಾಶ್ಮೀರ ಇಬ್ಬರೂ ಸೇರಿ ನಿಯಮಗಳನ್ನು ಮಾಡಿದ್ದರೆ, ಆದರೆ ಅದು ಪರಸ್ಪರ ವಿರೋಧಿಸಿದರೆ, ಆವಾಗ ಎಲ್ಲಿ ಅನ್ಯರಾಜ್ಯಗಳಲ್ಲಿ ರಾಜ್ಯದ ನಿಯಮಗಳ ಮೇಲೆ ಸಂಘದ ನಿಯಮಗಳಿಗೆ ಮನ್ನಣೆ ಸಿಗುತ್ತದೋ, ಅಲ್ಲಿ ಕಾಶ್ಮೀರದಲ್ಲಿ ರಾಜ್ಯದ ತನ್ನದೇ ಆದ ನಿಯಮಗಳಿಗೆ ಮನ್ನಣೆ ಇರುತ್ತದೆ. ಊ. ಭಾರತಕ್ಕೆ ಸಾರಿಗೆಯ ಸಕಲ ಅಧಿಕಾರಗಳು ದೊರಕಿದ್ದರೂ ಸಹ ಭಾರತದ ರಾಷ್ಟ್ರಪತಿಯವರು ಯಾವುದೇ ಮಾರ್ಗವನ್ನು ಕಾಶ್ಮೀರ ಸರ್ಕಾರದ ಸಮ್ಮತಿಯಿಲ್ಲದೆ ರಾಷ್ಟ್ರೀಯ ಅಥವಾ ಸೇನೆಯ ಮಹತ್ವವನ್ನು ಘೋಷಿಸಬಾರದು. ಋ. ಕಾಶ್ಮೀರ ರಾಜ್ಯವು ಬೇಕಾದರೆ ರಾಜ್ಯದ ಹಳೇ ಸೇನೆಯನ್ನು ಕಾಪಾಡಿ ಹೆಚ್ಚಿಸಿಕೊಳ್ಳಬಹುದು. ಅಕಸ್ಮಾತ್ ಅವರನ್ನು ಭಾರತದ ಸೇನೆಯ ಜೊತೆ ಏಕೀಕರಣ ಮಾಡಿಸಿದರೆ ಆವಾಗ ಕಾಶ್ಮೀರ ಸರ್ಕಾರದ ಸಮ್ಮತಿಯಿಂದಲೇ ಮಾಡತಕ್ಕದ್ದು. ಭಾರತೀಯ ಸೇನೆಯೂ ಕೂಡ ಯಾವುದೇ ಸೇನೆಯ ಭಾಗವು ಇವತ್ತಿನವರೆಗು ಹೊಂದಿಕೊಂಡಿಲ್ಲದಿದ್ದರೆ, ಭಾರತದ ಸೇನೆಯ ಅಂಗವೆಂದು ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ 143 ತಿಳಿದುಕೊಳ್ಳಲಾಗುವುದಿಲ್ಲ ಮತ್ತೆ ಅವರ ಮೇಲೆ ರಾಜ್ಯದ ಅಧಿಕಾರವೇ ಇರುತ್ತದೆ. ಎ. ಭಾರತವು ನಾಗರಿಕತೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಮಾಡಿದರೂ ಅದು ಕಾಶ್ಮೀರದ ವಿಧಾನಸಭೆಯ ಒಪ್ಪಿಗೆಯಿಲ್ಲದೆ ಆ ರಾಜ್ಯದಲ್ಲಿ ಲಗತ್ತಿಸಲಾಗದು. ಇದೇ ರೀತಿಯಾಗಿ ಯಾವ ಜನರು ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ 1947ನೇ ಇಸವಿಯ ಗಲಾಟೆಗಳಿಂದ ಪಾಕಿಸ್ತಾನಕ್ಕೆ ಹೊರಟುಹೋದರೋ ಅವರು ಹಿಂದಿರುಗಿ ಬಂದರೆ ನಾಗರಿಕರೆಂದು ಸ್ವೀಕರಿಸಲಾಗುತ್ತದೆ. ಏ. ಭಾರತವು ರಾಜ್ಯ ಕರ್ಮಚಾರಿಗಳಿಗೆ ಯಾವುದಾದರೂ ಸಂಯುಕ್ತ ಜನಸೇವ ಆಯೋಗ ಮಾಡಬೇಕೆಂದು ಆಶಿಸಿದರೆ, ಕಾಶ್ಮೀರ ಸರ್ಕಾರದ ಪೂರ್ವಸಮ್ಮತಿ ಪಡೆಯುವುದು ಅತಿ ಅವಶ್ಯಕ. ಒ. ಭಾರತದ ರಾಷ್ಟ್ರಪತಿಯವರಿಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯದಲ್ಲಿ ಆಂತರಿಕ ದುವ್ರ್ಯವಸ್ಥೆ ಆದಾಗ ಅಲ್ಲಿನ ಸರ್ಕಾರವು ಪ್ರಾರ್ಥಿಸುವವರೆಗೂ ಸಂಕಟಕಾಲದ ಸ್ಥಿತಿಯನ್ನು ಘೋಷಿಸುವ ಅಧಿಕಾರ ಇರುವುದಿಲ್ಲ. ಯುದ್ಧದಿಂದ ಜನಿತವಾದ ಸಂಕಟಕಾಲದ ಸ್ಥಿತಿಯನ್ನು ಘೋಷಿಸಿದರೂ ಸಹ, ಸಂಘ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಪಶಾಸನೆಯ ವಿಷಯಗಳು ಯಾವುದೇ ತರಹದ ಅಡೆತಡೆಯಾಗದಂತಹ ಸೂಚನೆಯನ್ನು ಕೊಡತಕ್ಕದ್ದು. ಇದೇ ರೀತಿಯಲ್ಲಿ ಭಾರತದ ಸಂಸದ್ ಇಂತಹ ಸಮಯದಲ್ಲಿ ಕೂಡ ಕಾಶ್ಮೀರದ ವಿಧಾನ ಸಭೆಯ ಅಥವಾ ಅಲ್ಲಿನ ಸರ್ಕಾರದ ಸಹಮತಿಯಿಲ್ಲದೆ ಯಾವುದೇ ಕಾನೂನು ಮಾಡಲಾಗದು. ಕಾಶ್ಮೀರ ಸರ್ಕಾರವು ತಮ್ಮ ವ್ಯಾಪಾರದ ಪ್ರತಿನಿಧಿಯನ್ನು ದೇಶ-ವಿದೇಶಗಳಲ್ಲಿ ಇಟ್ಟು ಮತ್ತೆ ಯಾವುದೇ ಪ್ರಕಾರದ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ, ಎಲ್ಲಿ ವ್ಯಾಪಾರಕ್ಕೆ ಸಂಬಂಧಪಟ್ಟಂತಹ ಮಾತು-ಕತೆ ಇರುತ್ತವೋ, ಅದರಲ್ಲಿ ಭಾಗವಹಿಸುವ ಅಧಿಕಾರವನ್ನು ಸುರಕ್ಷಿತವಾಗಿ ಇಟ್ಟುಕೊಂಡಿದೆ. ಭಾರತದ ಸುರಕ್ಷೆಗಾಗಿ ತಯಾರುಮಾಡುವ ಮತ್ತೆ ಅದಕ್ಕೆ ಸಂಬಂಧಪಟ್ಟಂತಹ ನಿಯಮಗಳನ್ನು ರಚಿಸುವ ಅಧಿಕಾರವು ಸಂಘವು ಅನುಸೂಚಿಯ ಪ್ರಥಮ ಸೂಚಿಯಂತೆ ಆ ಅಧಿಕಾರ ಸ್ವತಃ ಭಾರತಕ್ಕೆ ದೊರಕಿದೆ, ಆದರೆ ಕಾಶ್ಮೀರದಲ್ಲಿ ಅದಕ್ಕೆ ಕಾಶ್ಮೀರ ವಿಧಾನಸಭೆಯ ಸ್ವೀಕೃತಿಯ ಅವಶ್ಯಕತೆ ಇದೆ. ಸಂಘದ ಸೂಚಿಯಿಂದ ವಿಷಯ ಕ್ರಮಾಂಕ 7 (ಸಂಸದ್‍ನಿಂದ ಸುರಕ್ಷೆ ಅಥವಾ ಯುದ್ಧಕ್ಕಾಗಿ ಬೇಕಾಗಿರುವ ಘೋಷಿತ ಉದ್ಯೋಗ). ಕ್ರಮಾಂಕ 9 (ಸುರಕ್ಷೆ, ವಿದೇಶಕ್ಕೆ ಸಂಬಂಧಪಟ್ಟಂತಹ 144 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿರೋಧ ಅಧಿನಿಯಮ)ವನ್ನು ಕಾಶ್ಮೀರ ರಾಜ್ಯವು ಭಾರತದ ಸಂಸದ್‍ನ ಅಧಿಕಾರ ಕ್ಷೇತ್ರದಿಂದ ತೆಗೆದುಹಾಕಲಾಗಿದೆ. ರೈಲುದಾರಿ ಸಂಘದ ವಿಷಯವಾದರೂ ಕೂಡ ಕಾಶ್ಮೀರ ಸರ್ಕಾರದ ರಾಜ್ಯದಲ್ಲಿ ಯಾರಾದರೂ ರೈಲು ತಯಾರಿಸಿದರೆ ಅಥವಾ ಯಾವುದಾದರೂ ಕಂಪನಿಯ ಮೂಲಕ ತಯಾರಿಸಿದರೆ ಅದು ಕೇಂದ್ರ ಅಧಿಕಾರ ಕ್ಷೇತ್ರದಿಂದ ದೂರವಾಗುತ್ತದೆ. ಮುದ್ರಣ, ಬ್ಯಾಂಕಿಂಗ್, ಪೋಸ್ಟ್ ಆಫೀಸ್ ಮುಂತಾದವುಗಳಲ್ಲಿ ಕೇಂದ್ರ ಕಛೇರಿಗೆ ಯಾವ ಅಧಿಕಾರವೂ ಇರುವುದಿಲ್ಲ. ಜನರ ಗಣನೆಗೆ ಕಾಶ್ಮೀರ ರಾಜ್ಯ, ಭಾರತದ ಜನರ ಗಣನೆಯ ಜೊತೆ ಸಂಬಂಧವಿಟ್ಟುಕೊಳ್ಳುವುದಿಲ್ಲ. ಮತ್ತೆ ಸರ್ವೇಕ್ಷಣ ವಿಭಾಗದ ಜೊತೆ ಯಾವುದೇ ತರಹದ ಸಂಬಂಧವಿರುವುದಿಲ್ಲ. ಚುನಾವಣೆ ಆಯೋಗದ ಅಧಿಕಾರ ಕ್ಷೇತ್ರ ಕೇವಲ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯ ನಿರ್ವಾಚನದವರಿಗೆ ಮಾತ್ರ ಸೀಮಿತವಾಗಿರುತ್ತದೆ. ಭಾರತವು ಕಾಶ್ಮೀರದ ಜೊತೆ ಯಾವುದೇ ತರಹದ ವಿತ್ತೀಯ ಏಕೀಕರಣ ಇಟ್ಟುಕೊಳ್ಳುವುದಿಲ್ಲ. ಅಲ್ಲಿ ಭಾರತವು ಯಾವುದೇ ದರ ಹಾಕುವ ಸಾಧ್ಯತೆಯಿಲ್ಲ. ಭಾಗ 9 ರ ಪ್ರಕಾರ ಪ್ರಧಾನಮಂತ್ರಿಯವರ ಸಲಹೆಯಂತೆ ಸದರಿ ರಿಯಾಸತ್ ಒಂದು ಜನಸೇವಾ ಆಯೋಗವನ್ನು ಸ್ಥಾಪಿಸುತ್ತದೆ. ಚುನಾವಣೆ ಕಮೀಷನ್ ಸದರಿ ರಿಯಾಸತ್ ಮೂಲಕ ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ಸ್ಥಾಪಿಸಲಾಗುತ್ತದೆ. ಭಾಗ 11 ಉರ್ದುವನ್ನು ರಾಜಭಾಷೆಯೆಂದು ಸ್ವೀಕರಿಸುತ್ತದೆ. ಆರಂಭಿಕ ಶಿಕ್ಷೆಗೆ ಯಾವುದೇ ಜಿಲ್ ಕೌಂಸಿಲ್ ಯಾವುದೇ ಅನುಸೂಚಿತ ಭಾಷೆಯನ್ನು ಸ್ವೀಕರಿಸಬಹುದು. ಭಾಗ 12ರಲ್ಲಿ ವಿವಿಧ ಅವಕಾಶಗಳು ಪ್ರಾವಿಧಾನಗಳನ್ನು ಕೊಟ್ಟಿರಲಾಗುತ್ತದೆ. ಅದರಲ್ಲಿ ಸಂಕಟಗ್ರಸ್ತ ಸ್ಥಿತಿಯಲ್ಲಿ ಪ್ರಧಾನಮಂತ್ರಿಯವರ ಸಲಹೆಯ ಪ್ರಕಾರ ಸದರಿ ರಿಯಾಸತ್ ಯಾವುದೇ ನ್ಯಾಯಾಲಯಕ್ಕೆ ಮೌಲಿಕ ಅಧಿಕಾರಗಳಿಗೆ ಸಂಬಂಧಿಸಿದಂತಹ ವಿಷಯಗಳ ಕುರಿತು ವಿಚಾರ ಮಾಡುವ ಅಧಿಕಾರ ಇರುವುದಿಲ್ಲವೆಂದು ಘೋಷಿಸಬಹುದು. ರಾಜ್ಯದ ಬಾವುಟವು ನಿಂತಿರುವ ಮೂರು ಬಿಳಿ ಚಕ್ರಗಳು ಮತ್ತು ನೇಗಿಲಿನ ಜೊತೆ ಕೆಂಪು ಬಣ್ಣದ್ದಾಗಿರುತ್ತದೆ. ಭಾಗ 13 ಪ್ರಕಾರ ಕಾಶ್ಮೀರವು ಒಂದು ಸಂಘರಾಜ್ಯವೆಂದು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಐದು ಅಂಗಗಳಿರುತ್ತದೆ :- ಅ. ಕಾಶ್ಮೀರ- ಅನಂತನಾಗ, ಶ್ರೀನಗರ, ಬಾರಾಮೂಲಾ ಜಿಲ್ಲೆಗಳ ಸಹಿತ. ಆ. ಪೂಂಛ್- ಮೀರ್‍ಪುರ್, ಪೂಂಛ್, ರಜೌರಿ ಮತ್ತು ಮುಜಾಫರ್‌ಪುರ್ ಜಿಲ್ಲೆಗಳ ಸಹಿತ. ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ 145 ಇ. ಜಮ್ಮು-ಜಮ್ಮು, ಕಠುಯಾ, ಉಧಮ್‍ಪುರ್ ಮತ್ತು ಡೋಡಾ ಜಿಲ್ಲೆಗಳ ಸಹಿತ. ಈ. ಲದಾಖ್- ಲೇಹ್, ಕಾರ್‍ಗಿಲ್ ಮತ್ತು ಅರಕಾರದೂ ಸಹಿತ. ಉ. ಗಿಲ್‍ಗಿತ- ಗಿಲ್‍ಗಿತ ತಹಸೀಲ್(ತಾಲ್ಲೂಕು) ಮತ್ತು ದುಂಜಿ ಸಹಿತ. ಕಾಶ್ಮೀರ, ಪೂಂಛ್ ಮತ್ತು ಜಮ್ಮು ಪ್ರಾಂತದ ಶಾಸನವು ಒಂದು ಚೀಫ್ ಕಮೀಷನರ್ ಕೆಳಗೆ ಇರುತ್ತದೆ. ಇದರ ಆಯ್ಕೆ ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ಸದರಿ ರಿಯಾಸತ್ ಮಾಡುತ್ತದೆ. ಚೀಫ್ ಕಮೀಷನರ್ ಪ್ರಾಂತದ ಪ್ರಶಾಸನೆಯಲ್ಲಿ ಪ್ರಮುಖರಾಗಿರುತ್ತಾರೆ. ಮತ್ತೆ ಅವರು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿರುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಪ್ರತ್ಯೇಕ ಚೀಫ್‍ಕಮೀಷನರ್‍ರ ಅಧೀನಸ್ಥರಾಗಿ ಮಂತ್ರಿ ಪರಿಷದ್ ಇರುತ್ತದೆ. ಅದು ಪ್ರಾಂತದ ಅನುಸೂಚಿಯಲ್ಲಿ ತಿಳಿಸಿರುವ ವಿಷಯಗಳ ಸಂಬಂಧವಾಗಿ ಸಲಹೆ ನೀಡುತ್ತದೆ. ಮಂತ್ರಿ ಪರಿಷದ್ ಪ್ರಾಂತೀಯ ವಿಧಾನಸಭೆಯ ನಿರ್ವಚನೆ 60 ಸಾವಿರ ನಿವಾಸಿಗಳಲ್ಲಿ ಕನಿಷ್ಠ ಒಬ್ಬ ಸದಸ್ಯನ ಲೆಕ್ಕದಲ್ಲಿ ಇರುತ್ತದೆ. ಮತ ನೀಡುವವರು ತಮ್ಮ ಪ್ರತಿನಿಧಿಗಳನ್ನು ವಾಪಸ್ಸು ಕರೆಸಿಕೊಳ್ಳುವ ಅಧಿಕಾರವಿರುತ್ತದೆ. ಪ್ರಾಂತದ ವಿಧಾನ ಸಭೆಗೆ ಪ್ರಾಂತದ ಬಜೆಟ್ ಸ್ವೀಕರಿಸುವ ಅಧಿಕಾರವು ಇರುತ್ತದೆ. ಅದು ನಂತರ ರಾಜ್ಯದ ಬಜೆಟ್ ಜೊತೆ ಸೇರಿಸಿಕೊಳ್ಳಲಾಗುತ್ತದೆ. ಲದಾಖ್ ಮತ್ತು ಗಿಲ್‍ಗಿತ್ ಪ್ರದೇಶಗಳಿಗೆ ಒಬ್ಬ ಪ್ರಾದೇಶಿಕ ಕಮಿಷನರ್ ಆಯ್ಕೆಯಾಗುತ್ತಾನೆ. ಅವರಿಗೆ ಸಲಹೆ ನೀಡುವ ಸಲುವಾಗಿ ಪ್ರತಿ 10 ಸಾವಿರ ನಿವಾಸಿಗಳಿಗೆ ತಲಾ ಒಬ್ಬ ಸದಸ್ಯನಂತೆ ಒಂದು ಪ್ರಾದೇಶಿಕ ಸಮಿತಿ ನಿರ್ವಚನೆ ಇರುತ್ತದೆ. ಈ ಸಮಿತಿಯು ಸಲಹಾಕಾರ ಸಮಿತಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಕಾಶ್ಮೀರ, ಪೂಂಛ್ ಮತ್ತು ಜಮ್ಮು ಪ್ರಾಂತಗಳ ಪ್ರತ್ಯೇಕ ಜಿಲ್ಲೆಗೆ ಒಂದು ಜಿಲ್ಲಾ ಸಮಿತಿ ಇರುತ್ತದೆ. ಮತ್ತೆ ಅದರ ನಿರ್ವಚನೆ ಕನಿಷ್ಠ 20 ಸಾವಿರ ನಿವಾಸಿಗಳಲ್ಲಿ ಒಬ್ಬ ಸದಸ್ಯನಂತೆ ಇರುತ್ತದೆ. ಜಿಲ್ಲಾ ಸಮಿತಿಯು ಡೆಪ್ಯೂಟಿ ಕಮೀಷನರ್‍ರ ಸಲಹಾಕಾರ ಸಮಿತಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಮತ್ತೆ ಯಾವ ಪ್ರಸ್ತಾಪ ಅದು ಬಯಸುತ್ತದೆಯೋ ಅದನ್ನು ಮಂಜೂರು ಮಾಡಿ ರಾಜ್ಯ ಅಥವಾ ಪ್ರಾಂತೀಯ ಸರ್ಕಾರಕ್ಕೆ ಸಿಫಾರಿಶ್‍ಗಾಗಿ ಕಳಿಸಿ ಕೊಡಬಹುದು. ರಾಜ್ಯ ವಿಧಾನಸಭೆಯು ಹೊಸ ಜಿಲ್ಲಾ ಅಥವಾ ಒಂದು ಪ್ರಾಂತವನ್ನು ರೂಪಿಸಬಹುದು. 146 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅದನ್ನು ಚಿಕ್ಕದ್ದೂ ಅಥವಾ ದೊಡ್ಡದಾಗಿಸಲೂಬಹುದು. ಅದರ ಅಳತೆಗಳಲ್ಲಿ ವ್ಯತ್ಯಾಸಬರಬಹುದು. ಗಿಲ್‍ಗಿತ್ ಮತ್ತು ಮೀರ್‍ಪುರ್, ಮುಜಫರ್‍ಬಾದ್, ಕಾಶ್ಮೀರ ಜೊತೆ ಸೇರಿಸಿಕೊಳ್ಳುವ ತನಕ ರಾಜ್ಯ ಸಂಘಕ್ಕೆ ಕೇವಲ ಮೂರು ಭಾಗಗಳು ಇರುತ್ತವೆ. ಕಾಶ್ಮೀರ ಮತ್ತು ಜಮ್ಮು ಪ್ರಾಂತ ಹಾಗೂ ಲದಾಖ್ ಜಿಲ್ಲೆ ಅಲ್ಲಿಯವರೆಗೂ ಎಲ್ಲಾ ಜಿಲ್ಲಾ ಕೌಂಸಿಲ್‍ನಲ್ಲಿ ಮೂರಾ ಒಂದು ಭಾಗ ಸದಸ್ಯತ್ವ ಸರ್ಕಾರದ ಮೂಲಕ ನೇಮಿಸಲಾಗುತ್ತದೆ. ಪ್ರತ್ಯೇಕ ಜಿಲ್ಲಾ ಕೌಂಸಿಲ್ ತನ್ನ ಕಾರ್ಯಪಾಲಿಕಾ ನಿರ್ವಚನ ಮಾಡುತ್ತದೆ ಮತ್ತು ಅದು ಸಲಹಾಕಾರ ಸಮಿತಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಯಾವುದೇ ಜಿಲ್ಲೆಯು ಒಂದು ಪ್ರಸ್ತಾಪದಿಂದ 3 ವರುಷಗಳ ನಂತರ ಅದು ಒಂದು ಪ್ರಾಂತದಿಂದ ಮತ್ತೊಂದು ಪ್ರಾಂತಕ್ಕೆ ಹೋಗುತ್ತದೋ ಅಥವಾ ನೇರವಾಗಿ ರಾಜ್ಯ ಸರ್ಕಾರದ ವತಿಯಿಂದ ಪ್ರಾಶಸಿತಗೊಳ್ಳುತ್ತದೋ ಎಂದು ನಿರ್ಣಯ ತೆಗೆದುಕೊಳ್ಳಬಹುದು. ರಾಜ್ಯ ಸರ್ಕಾರವು ಕೂಡ ಒಂದು ಆಯೋಗದ ರಿಪೋರ್ಟ್ ನಂತರ ಯಾವುದೇ ಜಿಲ್ಲಾ ಅಥವಾ ಪ್ರಾಂತದ ಲೆಕ್ಕಾಚಾರವನ್ನು ಬದಲಿಸಬಹುದು. 14. ಭಾಗ 16ರ ಪ್ರಕಾರ ರಾಷ್ಟ್ರೀಯ ಮಹಾಸಭೆಯ 2/3 ರಷ್ಟು ಬಹುಮತದ ಮೇರೆಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ಆದರೆ ಪ್ರಾಂತೀಯ ವಿಧಾನಸಭೆಗಳ ಅಧಿಕಾರ ಮತ್ತು ಕಾರ್ಯಗಳಿಗೆ ಸಂಬಂಧಿಸಿದಂತಹ ಸಂಶೋಧನೆಗಳು ಆ ವಿಧಾನಸಭೆಗಳ 2/3 ಅಂಶದ ಸದಸ್ಯರಿಂದ ಒಪ್ಪುಗೆಯಾದ ಮೇಲೆಯೇ ಸ್ವೀಕೃತವಾಗುತ್ತದೆ. ಈ ಒಂದು ವಿಧಾನವು ಭಾರತೀಯ ಸಂವಿಧಾನಕ್ಕೆ ಬೇರೆಯೇ ಆದ ಕಾರಣದಿಂದ ಭಾರತದ ಮೌಲಿಕ ಐಕ್ಯತೆಗೆ ತೊಡರಾದರೂ ಸಹ, ಸ್ವಂತವಾಗಿಯೂ ಅನೇಕ ರೀತಿಗಳಲ್ಲಿ ಆಪತ್ತು ಜನಕವಾಗಿದೆ. ಭಾರತೀಯ ಸಂವಿಧಾನದ ಮೌಲಿಕ ಅಧಿಕಾರಗಳನ್ನು ಕಾಶ್ಮೀರದ ಮೇಲೆ ಚಲಾಯಿಸುವ ಬದಲು ಕಾಶ್ಮೀರದ ಸಂವಿಧಾನದಲ್ಲೇ ಮೌಲಿಕ ಅಧಿಕಾರಗಳ ಭಾಗವನ್ನು ಜೋಡಿಸುವುದನ್ನು ಏನೆಂದು ತೋರಿಸುತ್ತದೆಯೆಂದರೆ ಕಾಶ್ಮೀರ ರಾಜ್ಯ ಭಾರತದ ಒಂದು ಅವಿಭಾಜ್ಯ ಅಂಗವಲ್ಲ. ಆದರೆ ಅದು ಒಂದು ಹೊಸ ಪಾಕಿಸ್ತಾನದ ರೂಪದಲ್ಲಿ ನಿರ್ಮಾಣವಾಗಿದೆ. ವ್ಯತ್ಯಾಸವೇನೆಂದರೆ ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿರುತ್ತದೆ. ಮತ್ತು ಶೇಖ್ ಅಬ್ದುಲ್ಲ ಲಿಯಾಕತ್ ಅಲೀ ಅವರ ಹಾಗೆ ಭಾರತಕ್ಕೆ ಮುಷ್ಠಿಯನ್ನು ತೋರಿಸದೆ ಮುಹಮ್ಮದ್ ಅಲೀ ಅವರ ಹಾಗೆ ನೆಹರೂಜಿಯವರನ್ನು ಅಣ್ಣನೆಂದು ತಿಳಿದುಕೊಳ್ಳುತ್ತಾರೆ. ಬೇಕಾದರೆ ಭಾರತೀಯ ಸಂವಿಧಾನದ ಎಲ್ಲಾ ಭಾಗಗಳು ಅಬ್ದುಲ್ಲಾರವರಿಂದ ಜುಲೈ ಒಪ್ಪಂದದ ಉಲ್ಲಂಘನೆ ಸ್ವತಂತ್ರ ಕಾಶ್ಮೀರದ ರೂಪರೇಷೆ ಸಿದ್ಧ 147 ಅಂದರೆ ಅವು ಜುಲೈ 1942ರಲ್ಲಿ ವಿಚಾರಣೆಗೆ ಒಳಗೊಂಡಿತ್ತು. ಅವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮೇಲೆ ಲಗತ್ತಿಸಲಾಗುತ್ತಿತ್ತು. ಮತ್ತೆ ಆ ರಾಜ್ಯಕ್ಕೆ ಏನಾದರೂ ವಿಶೇಷ ಏರ್ಪಾಡು ಮಾಡಬೇಕಾಗಿದ್ದ ಪರಿಸ್ಥಿತಿ ಬಂದರೆ ಭಾರತೀಯ ಸಂಸದ್‍ನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸಂವೈಧಾನಿಕ ಸಂಶೋಧನೆ ಪೂರ್ಣಗೊಳಿಸಲಾಗುತ್ತಿತ್ತು. ಆದರೆ ಶೇಖ್ ಸಾಹೇಬರು ಜುಲೈ ಒಪ್ಪಂದವನ್ನು ಸಹ ನಿರಾಕರಿಸಿದರು. ಹೌದು, ಈ ಪ್ರಾರೂಪದ ಮೂಲಕ ಜಮ್ಮು ಪ್ರಜಾ ಪರಿಷದ್‍ನ ಬೇಡಿಕೆಗಳನ್ನು ಸ್ವೀಕರಿಸುವಂತೆ ಮೇಲ್ನೋಟಕ್ಕೆ ತೋರಿಸಲಾಗಿದೆ. ಏಕೆಂದರೆ - ಅ. ಜಮ್ಮುನಿಗೆ ಪ್ರಾಂತ ಸೊತ್ತಿನ ಅಧಿಕಾರ ಕೊಡಲಾಗಿದೆ, ಆದರೆ ಆ ಅಧಿಕಾರ ಕ್ಷೇತ್ರ ಭಾರತದ ನಗರಪಾಲಿಕೆಗಿಂತ ಕಳಪೆಯಾಗಿರುತ್ತದೆ. ಆ. ಡೋಡಾ ಜಿಲ್ಲೆಯನ್ನು ಜಮ್ಮುವಿನಿಂದ ಬೇರ್ಪಡಿಸಲಾಗಲಿಲ್ಲ, ಆದರೆ ಭವಿಷ್ಯದಲ್ಲಿ ಅದನ್ನು ಬೇರ್ಪಡಿಸಲಿಕ್ಕೆ ಬೀಜವನ್ನು ಅವಶ್ಯವಾಗಿ ಬಿತ್ತಲಾಗಿತ್ತು. ನಲವತ್ತು ಲಕ್ಷ ಜನರ ಒಂದು ಚಿಕ್ಕ ರಾಜ್ಯದ ಸಂಘ ವಿಧಾನ ನಿರ್ಮಿಸುವುದು ಮತ್ತು ಅದನ್ನ ಭಾರತ ಸಂಘದ ಜೊತೆ ಕೇವಲ ಮೂರು ವಿಷಯಗಳ ಜೊತೆ ಸಂಬಂಧ ಬೆಳೆಸುವುದು ಎಂಥ ಪ್ರಯೋಗವೆಂದರೆ ಅದು ಪ್ರಪಂಚದ ಇತರ ಯಾವುದೇ ಭಾಗದಲ್ಲಿ ನೋಡಲು ಸಿಗುವುದಿಲ್ಲವೆಂದು ನಾವು ತಿಳಿದುಕೊಳ್ಳುತ್ತೇವೆ. ಭಾರತದ ಆತ್ಮವು ಐಕ್ಯತೆಯನ್ನು ಬಯಸುತ್ತದೆ ಆದ್ದರಿಂದಲೇ ಆಂಗ್ಲರ ಸಕಲ ಪ್ರಯತ್ನಗಳ ನಂತರವೂ ಭಾಗವನ್ನು ಸ್ವೀಕರಿಸಲಿಲ್ಲ ಮತ್ತು ಸ್ವತಂತ್ರರಾದ ಮೇಲೂ ಸಹ ಯಾವ ವಿಧಾನವನ್ನು ನಿರ್ಮಿಸಿದರೋ ಅದರ ಮೇಲೆ ಫೆಡರೇಷನ್‍ರ ಒಂದು ಗುರುತು ಇತ್ತು. ನಾವು ಸಹ ಅದಕ್ಕೆ ಏಕತ್ವದ ಬಟ್ಟೆ ಹೊದಿಸುವ ಪ್ರಯತ್ನ ಮಾಡಿ ಭಾರತವನ್ನು ಒಂದು `ಫೆಡರೇಷನ್ ಆಫ್ ಸ್ಟೇಟ್ಸ್' ಮಾಡಿದೆವು. ನಮ್ಮ ಸಂವಿಧಾನದ ಪ್ರಕಾರ ನಮ್ಮ ಸಂಪೂರ್ಣ ಜನತೆಯ ಶಕ್ತಿ ನಮ್ಮ ಕೇಂದ್ರದಲ್ಲಿ ಅಡಗಿದೆ. ಪ್ರಾಂತಗಳಿಗೆ ಕೇಂದ್ರದಿಂದಲೇ ಶಕ್ತಿ ದೊರೆಯುತ್ತದೆ ಮತ್ತು ಉಳಿದದ್ದು ಕೇಂದ್ರಕ್ಕೆ ಲಭ್ಯವಾಗಿದೆ. ಆದರೆ ಕಾಶ್ಮೀರದಲ್ಲಿ ಚಕ್ರ ತಿರುಗ ಮುರುಗ ನಡೆಯುತ್ತಿದೆ. ಇದಾದ ನಂತರವೂ ಶೇಖ್ ಅಬ್ದುಲ್ಲಾರವರೇ ರಾಷ್ಟ್ರವಾದಿ ಮನೋವೃತ್ತಿಯ ಪರಿಚಯವನ್ನು ಮಾಡಿಸಿದ್ದಾರೆ ಎಂದು ನಾವು ತಿಳಿಯಬೇಕು. ನಿಜಾಂಶವೇನೆಂದರೆ ಕಬ್ಬಿಣದ ಮನುಷ್ಯ ಸರದಾರ್ ಪಟೇಲರ ನಿಧನ, ನೆಹರೂಜಿಯವರ ಸಂತುಷ್ಟಿಕರಣದ ನೀತಿ ಮತ್ತು ಸಂಯುಕ್ತ ರಾಷ್ಟ್ರಸಂಘದಲ್ಲಿ ಕಾಶ್ಮೀರದ ಪ್ರಶ್ನೆಯ ಉಪಸ್ಥಿತಿಯಿಂದ ಹುಟ್ಟುವ ಪರಿಸ್ಥಿತಿಯ ಅನುಚಿತ ಲಾಭ ಪಡೆದು 148 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯಾವ ರಾಷ್ಟ್ರವು ಎಂದಿಗೂ ಭಕ್ತಿಪೂರ್ಣವಾಗಲಾರದೋ, ಅಲ್ಲಿ ಶೇಖ್‍ಅಬ್ದುಲ್ಲರವರು ಮೂರನೆಯ ರಾಷ್ಟ್ರನಿರ್ಮಾಣ ಮಾಡುತ್ತಿದ್ದಾರೆ. ಸತ್ಯವು ಪ್ರಕಟಗೊಂಡಿದೆ, ಈಗ ಭಾರತೀಯ ಜನತೆಯು ಅಸತ್ಯವನ್ನು ಎದುರಿಸುತ್ತದೆಯೋ ಅಥವಾ ಕಣ್ಣು ಮುಚ್ಚಿಕೊಂಡು ಸತ್ಯವನ್ನು ನೋಡಲು ನಿರಾಕರಿಸುತ್ತದೆಯೋ ಎಂದು ನಿರ್ಧರಿಸಬೇಕು. ________ * ಆಕರ : ಪಾಂಚಜನ್ಯ ವಾರಪತ್ರಿಕೆ, 11-05-1953ರ ಸಂಚಿಕೆಯಿಂದ (ಸಂ.) ಅಖಂಡ ಭಾರತ : ಧ್ಯೇಯ ಮತ್ತು ಸಾಧನೆ ಭಾರತೀಯ ಜನಸಂಘವು ತನ್ನ ಮುಂದೆ ಅಖಂಡ ಭಾರತದ ಧ್ಯೇಯವನ್ನು ಇಟ್ಟಿದೆ. ಅಖಂಡ ಭಾರತ ದೇಶದ ಭೌಗೋಳಿಕ ಐಕ್ಯತೆಯ ಪರಿಚಯ ಮಾತ್ರವಲ್ಲ ಅನೇಕತೆಯಲ್ಲಿ ಐಕ್ಯತೆಯ ದರ್ಶನ ಮಾಡಿಸುವ ಭಾರತೀಯ ಜೀವನದ ದೃಷ್ಟಿಕೋನವಾಗಿದೆ. ಅಖಂಡ ಭಾರತ ರಾಜಕೀಯ ಘೋಷಣೆಯೂ ಅಲ್ಲ ಹಾಗೂ ಪರಿಸ್ಥಿತಿಯ ವಿಶೇಷತೆಯಿಂದಾಗಿ ಜನಪ್ರಿಯವಾಗಿರುವುದರಿಂದ ಸ್ವೀಕಾರ ಮಾಡಿರುವುದೂ ಅಲ್ಲ. ಇದು ನಮ್ಮ ಸಂಪೂರ್ಣ ದರ್ಶನದ ಮೂಲಾಧಾರವಾಗಿದೆ. 15 ಆಗಸ್ಟ್ 1947ರಂದು ಭಾರತದ ಐಕ್ಯತೆಯು ಭಂಗವಾಯಿತಲ್ಲದೆ ಜನ ಮತ್ತು ಧನ ಸಂಪತ್ತಿನ ಅಪಾರ ಹಾನಿಯಾಗಿದ್ದ ಕಾರಣದಿಂದ ಜನಗಳಿಗೆ ಅಖಂಡತೆಯ ಅಭಾವ ಪ್ರಕಟವಾಗಿದ್ದರ ಪರಿಣಾಮವನ್ನು ನೋಡಬೇಕಾಗಿ ಬಂತು. ಆದ್ದರಿಂದ ಇಂದು ಭಾರತವನ್ನು ಪುನಃ ಒಂದುಗೂಡಿಸಲು ಹಸಿವು ಪ್ರಬಲವಾಯಿತು. ಆದರೆ ಒಂದು ವೇಳೆ ನಾವು ಯುಗ ಯುಗಗಳಿಂದ ನಡೆದುಕೊಂಡು ಬಂದಿರುವಂತಹ ನಮ್ಮ ಜೀವನ ಧಾರೆಯ ಅಥಃ ಪ್ರವಾಸವನ್ನು ಗಮನಿಸುವ ಪ್ರಯತ್ನವನ್ನು ಮಾಡಿದರೆ ನಮ್ಮ ರಾಷ್ಟ್ರೀಯ ಚೇತನ ಯಾವಾಗಲೂ ಭಾರತದ ಅಖಂಡತೆಗೋಸ್ಕರ ಪ್ರಯತ್ನಶೀಲವಾಗಿರುತ್ತದೆಯಲ್ಲದೆ ಈ ಪ್ರಯತ್ನದಲ್ಲಿ ನಾವು ಸಾಕಷ್ಟು ಸಾಫಲ್ಯತೆಯನ್ನು ಸಹ ಹೊಂದಿದ್ದೇವೆ ಎನ್ನುವುದು ತಿಳಿಯುತ್ತೆ. ಉತ್ತರದ ಸಮುದ್ರದಿಂದ ದಕ್ಷಿಣದ ಹಿಮಾಲಯದವರೆಗೂ ಇರುವ ನಾಡನ್ನು ಭಾರತ ಎಂಬ ಹೆಸರಿನಿಂದ ಕರೆಯಲಾಗಿತ್ತು. ಇಲ್ಲಿ ವಾಸಿಸುವವರೆಲ್ಲಾ ಭಾರತೀಯ ಸಂತತಿ ಎಂಬುದಾಗಿ ನಮ್ಮ ಪುರಾಣ ಪುಣ್ಯ ಪುರುಷರು ವ್ಯಾಖ್ಯಾನ ಮಾಡಿರುವುದು. ಅದು ಕೇವಲ ಭೂಭಾಗದಿಂದ ಕೂಡಿರುವುದಷ್ಟೇ ಅಲ್ಲದೆ ಜನಗಳು ಮತ್ತು ಸಂಸ್ಕೃತಿಯ ಪ್ರತೀಕವಾಗಿತ್ತು. ನಾವು ಭೂಮಿ, ಜನ ಮತ್ತು ಸಂಸ್ಕೃತಿಯನ್ನು ಬೇರೆ ಬೇರೆ ಎಂದು ಭಾವಿಸಿಲ್ಲ. ಅವುಗಳ ಐಕ್ಯತೆಯ ಅನುಭೂತಿಯ ಮೂಲಕ ರಾಷ್ಟ್ರದ ಸಾಕ್ಷಾತ್ಕಾರ ಮಾಡಿದ್ದೇವೆ. ಅಖಂಡ ಭಾರತ ಈ ರಾಷ್ಟ್ರೀಯ ಐಕ್ಯತೆಯ ಪರ್ಯಾಯವಾಗಿದೆ. ಒಂದು ದೇಶ, ಒಂದು ರಾಷ್ಟ್ರ, ಒಂದೇ ಸಂಸ್ಕೃತಿ ಎನ್ನುವ ಯಾವ ಆಧಾರಭೂತ ಮಾನ್ಯತೆಗಳನ್ನು ಜನಸಂಘವು ಸ್ವೀಕಾರ ಮಾಡಿತೋ ಅವುಗಳ ಸಮಾವೇಶ ಅಖಂಡ ಭಾರತ ಪದದಲ್ಲಿ ಲೀನವಾಗಿದೆ. ಅಟಕ್‍ನಿಂದ 150 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕಟಕ್, ಕಚ್‍ನಿಂದ ಕಾಮರೂಪ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಇರುವ ಸಂಪೂರ್ಣ ಭೂಮಿಯು, ಪುಣ್ಯ ಮತ್ತು ಪವಿತ್ರ ಅಷ್ಟೆ ಅಲ್ಲ, ಅದು ಆತ್ಮೀಯ ಎಂಬುದಾಗಿ ಸ್ವೀಕಾರ ಮಾಡುವ ಭಾವನೆ ಅಖಂಡ ಭಾರತದಲ್ಲಿ ಅಭಿಪ್ರೇರಿತವಾಗಿದೆ. ಈ ಪುಣ್ಯಭೂಮಿಯಲ್ಲಿ ಅನಾದಿಕಾಲದಿಂದ ಯಾವ ಪದ್ಧತಿಗಳು ಉತ್ಪನ್ನವಾಗಿದ್ದವೋ ಅದು ಮಾತ್ರವಲ್ಲ, ಯಾವು ಇಂದಿಗೂ ಆಚರಣೆಯಲ್ಲಿವೆಯೋ ಅವುಗಳಲ್ಲಿ ಸ್ಥಾನ ಮತ್ತು ಕಾಲದ ಕ್ರಮದಲ್ಲಿ ಮೇಲ್ನೋಟಕ್ಕೆ ಎಷ್ಟೇ ಭಿನ್ನತೆಗಳಿದ್ದರೂ ಅವರ ಸಂಪೂರ್ಣ ಜೀವನದಲ್ಲಿ ಮೂಲಭೂತ ಐಕ್ಯತೆಯ ದರ್ಶನವನ್ನು ಅಖಂಡ ಭಾರತದ ಪ್ರತ್ಯೇಕ ಭಕ್ತನು ಮಾಡುತ್ತಾನೆ. ಹಾಗಾಗಿ ಎಲ್ಲ ರಾಷ್ಟ್ರನಿವಾಸಿಗಳ ಸಂಬಂಧದಲ್ಲಿ, ಅವನ ಮನಸ್ಸಿನಲ್ಲಿ ಆತ್ಮೀಯತೆ ಮತ್ತು ಅದರಿಂದ ಉಂಟಾಗುವ ಪರಸ್ಪರ ಶ್ರದ್ಧೆ ಮತ್ತು ವಿಶ್ವಾಸಗಳ ಭಾವನೆ ಮೂಡುತ್ತದೆ. ಅವನು ಅವರ ಸುಖ ದುಃಖಗಳಲ್ಲಿ ಸಹಭಾಗಿಯಾಗುತ್ತಾನೆ. ಈ ಅಖಂಡ ಭಾರತ ಮಾತೆಯ ಗರ್ಭದಲ್ಲಿ ಜನಿಸಿದ ಸುಪುತ್ರರು ತಮ್ಮ ಕ್ರಿಯಾ ಕಲಾಪಗಳಿಂದ ವಿವಿಧ ಕ್ಷೇತ್ರಗಳಲ್ಲಿ ಏನು ನಿರ್ಮಾಣ ಮಾಡಿದರೋ ಅದರಲ್ಲಿಯೂ ಕೂಡ ಐಕ್ಯತೆಯ ಸೂತ್ರ ಅಡಗಿದೆ. ನಮ್ಮ ಧರ್ಮ ನೀತಿ, ನಮ್ಮ ಸಾಹಿತ್ಯ, ಕಲೆ ಹಾಗೂ ದರ್ಶನ, ನಮ್ಮ ಇತಿಹಾಸ, ಪುರಾಣ, ನಮ್ಮ ಆಶಯ, ನಮ್ಮ ಸ್ಮೃತಿಗಳ ವಿಧಾನ ಹಾಗೂ ದೇವರನ್ನು ಪೂಜಿಸುವ ವಿಧಾನದಲ್ಲಿ ವಿಭಿನ್ನತೆ ಇದ್ದರೂ ಭಕ್ತಿಯ ಭಾವನೆ ಒಂದೇ ಆಗಿದೆ. ನಮ್ಮ ಸಂಸ್ಕೃತಿಯ ಐಕ್ಯತೆಯು ಅಖಂಡ ಭಾರತದ ವಿಮರ್ಶಕರಿಗೆ ಅವಶ್ಯಕವಾಗಿದೆ. ಸಂಪೂರ್ಣ ಜೀವನದ ಐಕ್ಯತೆಯ ಅನುಭೂತಿಯಲ್ಲಿ ಮತ್ತು ಆ ಅನುಭೂತಿಯ ಮಾರ್ಗದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ದೂರ ಮಾಡುವ ರಚನಾತ್ಮಕ ಪ್ರಯತ್ನದ ಹೆಸರೇ ಇತಿಹಾಸವಾಗಿದೆ. ನಮ್ಮ ಏಕಾತ್ಮಾನುಭೂತಿಯ ದೊಡ್ಡ ತೊಂದರೆಯೆಂದರೆ ಗುಲಾಮಗಿರಿ. ಅದರಿಂದಾಗಿ ಅದರ ವಿರುದ್ಧ ನಾವು ಹೋರಾಡಿದೆವು. ಸ್ವರಾಜ್ಯದ ಪ್ರಾಪ್ತಿ ಆ ಅನುಭೂತಿಯಲ್ಲಿ ಸಹಾಯಕವಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಆದ್ದರಿಂದ ನಾವು ಖಿನ್ನರಾಗಿದ್ದೇವೆ. ಇಂದು ನಮ್ಮ ಜೀವನದಲ್ಲಿ ವಿರೋಧಿ ಭಾವನೆಗಳ ಸಂಘರ್ಷ ನಡೀತಾ ಇದೆ. ನಮ್ಮ ರಾಷ್ಟ್ರದ ಪ್ರಕೃತಿ ಅಖಂಡ ಭಾರತ, ಭಿನ್ನವಾದ ಭಾರತ ವಿಕೃತಿ. ಇಂದು ನಾವು ವಿಕೃತ ಆನಂದಾನುಭೂತಿಯ ಮೋಸವನ್ನೇ ಇಷ್ಟಪಡುತ್ತಾ ಇದ್ದೀವಿ. ಆದರೆ ಆನಂದ ಸಿಗುತ್ತಾಯಿಲ್ಲ. ಒಂದು ವೇಳೆ ನಾವು ಸತ್ಯವನ್ನು ಸ್ವೀಕಾರ ಮಾಡಿದರೆ ನಮ್ಮ ಆಂತರಿಕ ಸಂಘರ್ಷ ದೂರವಾಗಿ ನಮ್ಮ ಪ್ರಯತ್ನದಲ್ಲಿ ಏಕತೆ ಮತ್ತು ಬಲ ಬರಬಹುದು. ಅಖಂಡ ಭಾರತ ಸಿದ್ಧಿಸುವುದೋ ಇಲ್ಲವೋ ಎಂಬುದಾಗಿ ಅನೇಕ ಜನಗಳ ಮನದಲ್ಲಿ ಶಂಕೆ/ಸಂದೇಹ ಮೂಡಬಹುದು. ಅವರ ಸಂದೇಹ ಸೋಲಿನ ಮನೋವೃತ್ತಿಯ ಪರಿಣಾಮವಾಗಿದೆ. ಹಿಂದಿನ 50 ವರ್ಷಗಳ ಇತಿಹಾಸ ಹಾಗು ಅಖಂಡ ಭಾರತ : ಧ್ಯೇಯ ಮತ್ತು ಸಾಧನೆ 151 ನಮ್ಮ ಪ್ರಯತ್ನಗಳ ಅಸಫಲತೆಯಿಂದಾಗಿ ಎಷ್ಟೊಂದು ಕುಗ್ಗಿಹೋಗಿದ್ದಾರೆ ಎಂದರೆ, ಚೇತರಿಸಿಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಅವರು 1947ನೇ ಇಸವಿಯಲ್ಲಿ ತಮ್ಮ ಐಕ್ಯತೆಯ ಪ್ರಯತ್ನಗಳ ಪರಾಜಯ ಹಾಗೂ ವಿಭಜನೆಯ ನೀತಿಗೆ ವಿಜಯವಾಗಿದ್ದನ್ನು ನೋಡಿದ್ದಾರೆ. ಆಗ ಅವರ ಬಲ ಕುಸಿದು, ಮತ್ತೀಗ ಆ ಪರಾಜಯವನ್ನೇ ಶಾಶ್ವತ ಮಾಡುವುದಕ್ಕೆ ಅಪೇಕ್ಷೆ ಪಡುತ್ತಿದ್ದಾರೆ. ಆದರೆ ಇದು ಸಾಧ್ಯವಾಗುವುದಿಲ್ಲ. ಅವರು ರಾಷ್ಟ್ರದ ಪ್ರಕೃತಿಯ ಪ್ರತಿಕೂಲ/ವಿರುದ್ಧವಾಗಿ ಸಾಗುತ್ತಿಲ್ಲ. ಪ್ರತಿಕೂಲವಾಗಿ ಹೋಗುವುದರ ಪರಿಣಾಮ ಆತ್ಮವಂಚನೆಯಾಗುತ್ತದೆ. ಕಳೆದ 6 ವರ್ಷಗಳ ಪರಂಪರೆಗೆ ಇದೇ ಕಾರಣವಾಗಿದೆ. 1947ರ ಪರಾಜಯ ಭಾರತೀಯ ಏಕತಾನುಭೂತಿಯ ಪರಾಜಯವಲ್ಲ. ಆದರೆ ಆ ಪ್ರಯತ್ನಗಳ ಪರಾಜಯವಾಗಿದೆ. ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ ಆದಂತಹ ಪರಾಜಯ. ನಾವು ಅಸಫಲರಾಗಲು ಕಾರಣ ನಮ್ಮ ಧ್ಯೇಯ ತಪ್ಪಾಗಿದ್ದರಿಂದಲ್ಲ, ನಾವು ಆರಿಸಿಕೊಂಡಂತಹ ಮಾರ್ಗ ತಪ್ಪಾಗಿದ್ದರಿಂದ. ದೋಷಗಳಿಂದ ಕೂಡಿದ ಸಾಧನೆಯಿಂದಾಗಿ ಧ್ಯೇಯ ಸಿದ್ಧಿಯಾಗದೇ ಇರಲು, ಧ್ಯೇಯವನ್ನೇ ಬಿಡಬೇಕು ಅನ್ನುವುದಲ್ಲ ಮತ್ತು ಅದು ಅವ್ಯವಹಾರವೂ ಅಲ್ಲ, ಯಾರು ದೋಷಗಳಿಂದ ಕೂಡಿದ ಸಾಧನೆಗಳನ್ನು ಹೊಂದಿದ್ದರೋ ಇವತ್ತು ಅವುಗಳನ್ನು ಬಿಡುವುದಕ್ಕೆ ಇಷ್ಟಪಡುವುದಿಲ್ಲವೋ ಅವರಿಗೆ ಇಂದಿಗೂ ಸಹ ಅಖಂಡ ಭಾರತದ ವ್ಯವಹಾರದಲ್ಲಿ ಸಂದೇಹ ಮೂಡುತ್ತಲಿದೆ. ಅಖಂಡ ಭಾರತದ ಮಾರ್ಗದಲ್ಲಿ ದೊಡ್ಡ ತೊಂದರೆಯೆಂದರೆ ಮುಸ್ಲಿಂ ಸಂಪ್ರದಾಯದ ವಿಭಜನೆಯ ನೀತಿ ಹಾಗೂ ಪಾಕಿಸ್ತಾನದ ಸೃಷ್ಟಿ ಅರಾಷ್ಟ್ರೀಯ ಮನೋವೃತ್ತಿಯಾಗಿದೆ ಮತ್ತು ಮನೋವೃತ್ತಿಯ ವಿಜಯವಾಗಿದೆ. ಅಖಂಡ ಭಾರತದ ಸಂಬಂಧದಲ್ಲಿ ಮುಸಲ್ಮಾನರು ತಮ್ಮ ನೀತಿಯಲ್ಲಿ ಪರಿವರ್ತನೆ ಮಾಡುವುದಿಲ್ಲ ಎಂಬುದಾಗಿ ಶಂಕೆಯಿಂದ ಕೂಡಿದವರು ನಂಬಿ ನಡೀತಾ ಇದ್ದಾರೆ. ಒಂದು ವೇಳೆ ಅವರ ಮನೋಭಾವ ಸತ್ಯವಾದರೆ ಮತ್ತು ಭಾರತದಲ್ಲಿ 4 ಕೋಟಿ ಮುಸಲ್ಮಾನರನ್ನ ವಾಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದು ರಾಷ್ಟ್ರದ ಹಿತದಿಂದಾಗಿ ದೊಡ್ಡ ಸಂಕಟವಾಗಿದೆ. ಮುಸಲ್ಮಾನರನ್ನು ಭಾರತದಿಂದ ಹೊರದೂಡಿ ಎಂಬುದಾಗಿ ಯಾವ ಕಾಂಗ್ರೆಸ್ಸಿನವ ಹೇಳುತ್ತಾನೇನು? ಒಂದು ವೇಳೆ ಇಲ್ಲ ಎನ್ನುವುದಾದರೆ ಭಾರತೀಯರ ಜೀವನದಲ್ಲಿ ಅವರು ಸಮರಸದಿಂದ ನಡೆದುಕೊಳ್ಳಬೇಕಾಗಿತ್ತು. ಒಂದು ವೇಳೆ ಭೌಗೋಳಿಕ ವಿಭಜಿತ ದೃಷ್ಟಿಯಿಂದ ಭಾರತದಲ್ಲಿ ಈ ಅನುಭೂತಿ ಸಾಧ್ಯವಾಗುವುದಾದರೆ ಉಳಿದ ಭೂ ಭಾಗದಲ್ಲಿ ಈ ರೀತಿಯಾಗುವುದು ತಡವಾಗುವುದಿಲ್ಲಾ. ಐಕ್ಯತೆಯ ಅನುಭೂತಿಯ ಅಭಾವದಿಂದಾಗಿ ದೇಶ ವಿಭಜಿತವಾಗಿದ್ದರೆ, ಅದರ ಭಾವದಿಂದಾಗಿ ಈಗ ಅಖಂಡವಾಗುತ್ತೆ. ನಾವು ಆ 152 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ದಿಸೆಯಲ್ಲಿ ಪ್ರಯತ್ನ ಪಡಬೇಕಾಗಿದೆ. ಆದರೆ ಮುಸಲ್ಮಾನರನ್ನು ಭಾರತೀಯರನ್ನಾಗಿ ಮಾಡುವುದಲ್ಲದೆ ನಾವು ನಮ್ಮ 30 ವರ್ಷಗಳ ಹಳೆ ನೀತಿಯನ್ನು ಬದಲಾಯಿಸಬೇಕಾಗಿದೆ. ಕಾಂಗ್ರೆಸ್ ಹಿಂದೂ ಮುಸಲ್ಮಾನರ ಐಕ್ಯತೆಯನ್ನು ತಪ್ಪು ಆಧಾರದಿಂದ ಮಾಡಿತು. ಅದು ರಾಷ್ಟ್ರದ ಮತ್ತು ಸಂಸ್ಕೃತಿಯ ನಿಜವಾದ ಮತ್ತು ಅನಾದಿಕಾಲದಿಂದ ನಡೆದುಕೊಂಡು ಬಂದ ಐಕ್ಯತೆಯ ಸಾಕ್ಷಾತ್ಕಾರ ಮಾಡಿತು. ಅಲ್ಲದೆ ಅನೇಕರನ್ನು ಕೃತ್ರಿಮವಾಗಿ ಹಾಗೂ ರಾಜನೀತಿಯ ವ್ಯಾಪಾರೀ ಮನೋಭಾವದ ಆಧಾರದಲ್ಲಿ ಒಂದು ಮಾಡುವ ಪ್ರಯತ್ನ ಮಾಡಿತು. ಭಾಷೆ, ನಡೆ-ನುಡಿ, ರೀತಿ-ನೀತಿಗಳು ಮುಂತಾದ ಎಲ್ಲವನ್ನು ಕೃತ್ರಿಮ ರೀತಿಯಲ್ಲಿ ರಚನೆ ಮಾಡಿತು. ಈ ಯತ್ನ ಯಾವಾಗಲೂ ಸಫಲವಾಗುತ್ತಾ ಇರಲಿಲ್ಲ. ರಾಷ್ಟ್ರೀಯತೆ ಮತ್ತು ಅರಾಷ್ಟ್ರೀಯತೆಯ ಸಮನ್ವಯ ಸಾಧ್ಯವಾಗೋದೇ ಇಲ್ಲ. ಒಂದು ವೇಳೆ ನಾವು ಐಕ್ಯತೆಯನ್ನು ಬಯಸೋದಾದರೆ, ಭಾರತೀಯ ರಾಷ್ಟ್ರೀಯತೆ ಯಾವ ಹಿಂದೂ ರಾಷ್ಟ್ರೀಯತೆಯಾಗಿದೆಯೋ, ಭಾರತೀಯ ಸಂಸ್ಕೃತಿ ಯಾವ ಹಿಂದೂ ಸಂಸ್ಕೃತಿಯಾಗಿದೆಯೋ ಅದರ ದರ್ಶನ ಮಾಡಬೇಕಾಗುತ್ತೆ, ಅದನ್ನ ಮಾನದಂಡ ಮಾಡಿಕೊಂಡು ನಡೀಬೇಕಾಗುತ್ತೆ. ಭಾಗೀರಥಿಯ ಪುಣ್ಯ ಧಾರೆಗಳಲ್ಲಿ ಎಲ್ಲಾ ಪ್ರವಾಹಗಳ ಸಂಗಮವಾಗಲಿ, ಯಮುನೆಯೂ ಕೂಡುತ್ತಾಳೆ ಮತ್ತು ತನ್ನೆಲ್ಲಾ ಅಪವಿತ್ರತೆಯನ್ನು ತೊರೆದು ಗಂಗೆಯ ಪವಿತ್ರ ಧಾರೆಯಲ್ಲಿ ಲೀನವಾಗುತ್ತಾಳೆ. ಆದರೆ ಇದಕ್ಕೂ ಕೂಡ ಭಗೀರಥ ಪ್ರಯತ್ನಗಳೊಂದಿಗೆ ನಿಷ್ಠೆ ಮತ್ತು ಒಳ್ಳೆಯ ಅಭಿಪ್ರಾಯದೊಂದಿಗೆ ಬಹಳಷ್ಟು ಸುದ್ದಿಗಳ ಮಾನ್ಯತೆಯನ್ನು ಪಡೆದು ನಾವು ಸಂಸ್ಕೃತಿ ಮತ್ತು ರಾಷ್ಟ್ರದ ಐಕ್ಯತೆಯ ಅನುಭವ ಗಳಿಸಿದ್ದೇವೆ. ಸಾವಿರಾರು ವರ್ಷಗಳ ಅಸಫಲತೆ ಅಧಿಕವಾಗಿದೆ. ಹಾಗಾಗಿ ನಾವು ಧೈರ್ಯ ಕಳೆದುಕೊಳ್ಳುವ ಅವಶ್ಯಕತೆಯಿಲ್ಲ. ಒಂದು ವೇಳೆ ಹಳೆ ಸಿಪಾಯಿಗಳು ದಣಿದಿದ್ದರೆ ಹೊಸಬರು ಮುಂದೆ ಬರುತ್ತಾರೆ. ಹಳಬರು ತಮ್ಮ ದಣಿವನ್ನು ಧೈರ್ಯದಿಂದ ಸ್ವೀಕಾರಮಾಡಬೇಕಾಗಿದೆ. ನಾವು ನಮ್ಮ ಬಲಹೀನತೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಯುದ್ಧ ಗೆಲ್ಲೋದೇ ಇಲ್ಲ ಅಂತ ಹೇಳೋದು ಸರಿಯಾದದ್ದಲ್ಲ. ಇದು ನಮ್ಮ ಮರ್ಯಾದೆ ಮತ್ತು ಘನತೆಗೆ ವಿರುದ್ಧವಾಗಿದೆ. ರಾಷ್ಟ್ರದ ಪ್ರಕೃತಿ ಮತ್ತು ಪರಂಪರೆಗೆ ಪ್ರತಿಕೂಲವಾಗಿದೆ. __________ * ಆಕರ : ಪಾಂಚಜನ್ಯ ವಾರಪತ್ರಿಕೆಯ 24-08-1953ರ ಸಂಚಿಕೆ (ಸಂ.) ``ಎಲ್ಲರಿಗೂ ಕೆಲಸ'' ಎನ್ನುವುದೇ ಭಾರತೀಯ ಆರ್ಥಿಕ ನೀತಿಯ ಏಕೈಕ ಮೂಲಾಧಾರ ನಿರುದ್ಯೋಗದ ಸಮಸ್ಯೆ ಇಂದು ತನ್ನ ಭೀಷಣತೆಯ ಕಾರಣದಿಂದಾಗಿ ಶಾಪವಾಗಿ ನಮ್ಮ ಮುಂದೆ ನಿಂತಿದೆ. ಆದರೆ ಅದರ ಮೂಲ ನಮ್ಮ ಇಂದಿನ ಸಮಾಜದ ಆರ್ಥಿಕ ಮತ್ತು ನೀತಿಯ ವ್ಯವಸ್ಥೆಯಲ್ಲಿ ಅಡಗಿದೆ. ವಾಸ್ತವವಾಗಿ ಯಾರು ಹುಟ್ಟುತ್ತಾರೋ ಮತ್ತು ಪ್ರಕೃತಿಯನ್ನು ಅಶಕ್ತಳನ್ನಾಗಿ ಮಾಡಿಲ್ಲವೋ ಅವರೆಲ್ಲಾ ಕೆಲಸ ಪಡೆಯೋ ಅಧಿಕಾರ ಹೊಂದಿದ್ದಾರೆ. ಅದೇ ನಿರ್ಧಾರದೊಂದಿಗೆ ನಡೆದ ಪ್ರತಿಯೊಬ್ಬರಿಗೂ ಕೆಲಸದ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಯವರೆಗೂ ಈ ಆಶಯದೊಂದಿಗೆ ಯಾರೊಬ್ಬರೂ ನಿರುದ್ಯೋಗಿಯಾಗಿದ್ದು ಕೇವಲ ಭೋಗದ ಪ್ರವೃತ್ತರಾಗದಿರಲೆಂದು ಅವರು ಭಾರತಭೂಮಿಯನ್ನು ಕರ್ಮಭೂಮಿ ಎಂಬ ನಿರ್ಧಾರದಲ್ಲಿ ಪ್ರಚಾರ ಮಾಡಿದರು. ಸ್ವರ್ಗದ ದೇವತೆಗಳು ಕೂಡ ತಮ್ಮ ಕರ್ಮಫಲ ಕ್ಷೀಣಿಸಿದರೆ ಭಾರತದಲ್ಲಿ ಜನ್ಮ ಪಡೆಯಬೇಕೆನ್ನುವ ಇಚ್ಛೆ ಹೊಂದುತ್ತಾರೆ ಮತ್ತು ಪುನಃ ಸೃಕೃತಗಳನ್ನು ಪಡೆಯುತ್ತಾರೆ. ಇದರ ತಾತ್ಪರ್ಯ ನಾವು ಯಾವುದೇ ವೃತ್ತಿಯ ಸಂಬಂಧದಲ್ಲಿ ನಿರುದ್ಯೋಗ ಅಥವಾ ಸೋಮಾರಿತನದ ಕಲ್ಪನೆ ಮಾಡಿಲ್ಲ. ಹಾಗಾಗಿ ಭಾರತೀಯ ಅರ್ಥನೀತಿಯ ಆಧಾರ `ಎಲ್ಲರಿಗೂ ಕೆಲಸ’ ಎನ್ನುವುದಾಗಿದೆ. ನಿರುದ್ಯೋಗ ಭಾರತೀಯರಿಗಲ್ಲ. ಭಾರತೀಯ ಶಾಸಕಾಂಗದ ಕರ್ತವ್ಯ ಈ ಆಧಾರದ ಪಾಲನೆ ಮಾಡುವುದು. ನಿರುದ್ಯೋಗದ ಕಾರಣ ಜನಗಳಿಗೆ ಕೆಲಸ ಸಿಗದೆ ಇರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಯಾವ ರೀತಿಯ ವ್ಯಕ್ತಿಗಳು ಆ ಕೆಲಸಕ್ಕೆ ಅವಶ್ಯಕತೆ ಎನ್ನುವುದು ಹಾಗೂ ಅವರಲ್ಲಿ ಆ ಯೋಗ್ಯತೆಯಿಲ್ಲದೆ ಇರುವುದು. ಎರಡನೆಯದು ಕೆಲಸ ಮಾಡುವವರ ಸಂಖ್ಯೆ ಬಹಳವಿದ್ದು, ಉದ್ಯೋಗದ ಕೆಲಸ, ವ್ಯಾಪಾರ ಮತ್ತು ಸಾರ್ವಜನಿಕ ಸೇವೆಗಳ ವರ್ತಮಾನ ಸ್ಥಿತಿ ಅವರಿಗೆ ಇಷ್ಟವಾಗದೆ ಇರೋದು. ನಿರುದ್ಯೋಗದ ಇತರೆ ಕಾರಣಗಳು ಇವೆ. ಆದರೆ ಅವು ತಾತ್ಕಾಲಿಕ ಮತ್ತು ಅಶಾಶ್ವತವಾದವು. ಭಾರತದಲ್ಲಿ ಇಂದು ಈ ಎರಡು ಕಾರಣಗಳು ಬಳಕೆಯಲ್ಲಿವೆ. ಹಾಗಾಗಿ ನಿರುದ್ಯೋಗದ 154 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಮಸ್ಯೆ ನಿವಾರಿಸಲು ನಾವು ಇವುಗಳ ಸಂಬಂಧದಲ್ಲಿ ಗಂಭೀರವಾಗಿ ವಿಚಾರ ಮಾಡಬೇಕಾಗಿದೆ. ಶಿಕ್ಷಣದ ಪದ್ಧತಿ ಮತ್ತು ಉದ್ಯೋಗದ ಕೆಲಸಗಳ ವಿಕಾಸದ ಸಂಬಂಧದಲ್ಲಿ ನಮ್ಮ ನೀತಿ ನಿಶ್ಚಯ ಮಾಡಬೇಕಾಗಿದೆ. ಈ ನೀತಿಯ ಜೊತೆಗೆ ನಿರುದ್ಯೋಗವನ್ನು ದೂರಮಾಡತಕ್ಕಂತಹ ಪ್ರಶ್ನೆ ಮಾತ್ರವಲ್ಲ ದೇಶದ ಸಮೃದ್ಧಿಯ ಪ್ರಶ್ನೆ ಕೂಡ ಅಡಗಿದೆ. ಆರ್ಥಿಕ ನೀತಿಯ ಆಧಾರ ಭಾರತದ ಜನಸಂಖ್ಯೆ, ಅದರ 7 ಲಕ್ಷ ಹಳ್ಳಿಗಳು, ಅದರ ವಿಸ್ತಾರ, ಭಾರತದ ಜನಗಳ ಸ್ವಭಾವ, ನಮ್ಮ ಸಮಾಜ ವ್ಯವಸ್ಥೆ, ಯುಗಗಳಿಂದ ನಡೆದುಕೊಂಡು ಬಂದಿರುವ ನಮ್ಮ ಆರ್ಥಿಕ ನೀತಿಯ ಪರಂಪರೆ ಮುಂತಾದವುಗಳ ವಿಚಾರ ಮಾಡಿ ಎಲ್ಲ ಅರ್ಥಶಾಸ್ತ್ರಜ್ಞರು ಒಮ್ಮತ ವ್ಯಕ್ತಪಡಿಸಿರುವುದೇನೆಂದರೆ- ಭಾರತೀಯ ಸಮೃದ್ಧಿಯು ಅದರ ಆಧಾರವಾದ ನಮ್ಮ ಗುಡಿ ಕೈಗಾರಿಕೆಗಳು ಹಾಗೂ ಗ್ರಾಮೋದ್ಯೋಗಗಳಿಂದಲೇ ಸಾಧ್ಯ ಎಂಬುದು ನಿಜ. ಐರೋಪ್ಯ ಅಥವಾ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಮರ್ಥಕರು. ಕೆಲವು ಅಪವಾದ ಸ್ವರೂಪದ ವ್ಯಕ್ತಿಗಳು ಹೀಗೂ ಸಿಗುತ್ತಾರೆ. ಅವರು ಈ ಉದ್ಯೋಗಗಳಲ್ಲಿ ಮಧ್ಯಯುಗದ ಸಂಸ್ಕೃತಿಯನ್ನು ಗುರುತಿಸುತ್ತಾರೆ. ಅಲ್ಲದೆ ಇವುಗಳನ್ನು ಅಪ್ರಗತಿಶೀಲವೆಂದು ಭಾವಿಸಿ ಇಂಗ್ಲೆಂಡ್ ಮತ್ತು ಅಮೆರಿಕಾ ಪದ್ಧತಿಯಲ್ಲಿ ದೊಡ್ಡ ದೊಡ್ಡ ಯಂತ್ರ ಕಾರ್ಖಾನೆಗಳನ್ನು ತೆರೆಯಲು ಸಲಹೆ ನೀಡುತ್ತಾರೆ. ಈ ಮಾತು ಸತ್ಯ. ಏನೆಂದರೆ ಯಾವುದೇ ದಿಶೆಯಲ್ಲಿ ಅತಿರೇಕ ಮಾಡಿ ಅಂತಿಮ ಉನ್ನತ ವಿಚಾರವನ್ನು ಪ್ರಸ್ತುತಗೊಳಿಸುವುದು ಬುದ್ಧಿವಂತಿಕೆಯಲ್ಲ. ಆದರೂ ನಾವು ನಮ್ಮ ಅರ್ಥವ್ಯವಸ್ಥೆಯ ಒಂದು ಕೇಂದ್ರವನ್ನು ಅವಶ್ಯವಾಗಿ ನಿಶ್ಚಯಮಾಡಿಕೊಳ್ಳಬೇಕು. ಅದರ ಸುತ್ತಲೂ ಮತ್ತು ಅದರ ಹಿತ-ಸಂವರ್ಧನೆಗಾಗಿ ದೊಡ್ಡ ಪ್ರಮಾಣದ ಉದ್ಯೋಗಗಳನ್ನು ನಾವು ನಮ್ಮ ಕೇಂದ್ರ ಮಾಡಿಕೊಂಡರೆ ? ಇಂದು ಈ ದೃಷ್ಟಿಯಲ್ಲಿ ನಮ್ಮ ಸ್ಥಿತಿ ಬಹಳ ಕುಸಿದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ದೊಡ್ಡ ಉದ್ಯೋಗಗಳಲ್ಲಿ ನಾವು ಬಹಳ ಹಿಂದಿದ್ದೇವೆ. ಈ ದೃಷ್ಟಿಯಿಂದ ನಾವು ಏನಾದರೂ ಮಾಡಬೇಕು ಅಂತ ಅಪೇಕ್ಷೆ ಪಟ್ಟರೆ ನಮಗೆ ಯಂತ್ರಗಳು ಮತ್ತು ತಂತ್ರ-ವಿಶಾರದರ ಕೊರತೆ ಮಾತ್ರವಲ್ಲದೆ ಬಂಡವಾಳಕ್ಕೂ ಸಹ ಬೇರೆ ದೇಶಗಳ ಮೊರೆ ಹೋಗಬೇಕಾಗಿದೆ. ಹಿಂದಿನ 6 ವರ್ಷಗಳಿಂದ ನಾವು ಇದನ್ನೇ ಮಾಡುತ್ತಾ ಬಂದಿದ್ದೇವೆ ಮತ್ತು ಕೋಟ್ಯಾಂತರ ರೂಪಾಯಿಗಳನ್ನು ನೀರಿನ ಹಾಗೆ ಖರ್ಚು ಮಾಡಿದ್ದೇವೆ. ನಾವು ಜನ-ಶಕ್ತಿಯ ದೃಷ್ಟಿಯಿಂದ ಕೂಡ ವಿಚಾರ ಮಾಡಬೇಕಾಗಿದೆ. ಈ ದೊಡ್ಡ ಕಾರ್ಖಾನೆಗಳಲ್ಲಿ ಒಂದು ಕಡೆ ಸಾವಿರಾರು ಜನರಿಗೆ ಕೆಲಸ ಸಿಕ್ಕಿದರೆ "ಎಲ್ಲರಿಗೂ ಕೆಲಸ'' ಎನ್ನುವುದೇ ಭಾರತೀಯ ಆರ್ಥಿಕ ನೀತಿಯ ಏಕೈಕ ಮೂಲಾಧಾರ 155 ಮತ್ತೊಂದು ಕಡೆ ಲಕ್ಷಾಂತರ ಜನ ನಿರುದ್ಯೋಗಿಗಳಾಗುತ್ತಾರೆ. ಸಂಪೂರ್ಣ ಭಾರತದಲ್ಲಿ ದೊಡ್ಡ ಪ್ರಮಾಣದ ಔದ್ಯೋಗಿಕರಣದಿಂದಾಗಿ ಕಲ್ಪನೆ ಮಾಡಿದರೂ ಅಲ್ಲಿಯವರೆಗೆ ನಾವು ಸಂಪೂರ್ಣವಾಗಿ ನಾಶವಾಗಿಬಿಟ್ಟಿರುತ್ತೇವೆ. ಈ ಪರಿವರ್ತನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿ ಬಿಡುತ್ತೆ. ಅಲ್ಲದೆ ನಾವು ನಮ್ಮ ಗುರಿ ತಲುಪುವ/ಮುಟ್ಟುವ ಮುನ್ನ ಜನಕ್ಷೋಭೆಯ ಜ್ವಾಲೆಯಲ್ಲಿ ಭಸ್ಮವಾಗಿ ಬಿಡಬಹುದು. ನಮ್ಮ ಕೇಂದ್ರ ಸ್ಥಾನ ಇರಲೇಬೇಕು. ಮನುಷ್ಯ ಮನುಷ್ಯರಿಗೂ ಕೆಲಸ ಸಿಗಬೇಕು ಮತ್ತು ಅವರು ಸುಖವಾಗಿರಬೇಕು. ಇದೇ ನಮ್ಮ ಉದ್ದೇಶವಾಗಬೇಕು. ಯಂತ್ರಗಳು ಮನುಷ್ಯನ ಅನುಕೂಲಕ್ಕಾಗಿಯೇ ಹೊರತು ಅವನ ಸ್ಥಾನವನ್ನು ಪಡೆಯುವುದಕ್ಕಾಗಿ ಅಲ್ಲ. ಮನುಷ್ಯ ಯಂತ್ರಗಳನ್ನು ನಿರ್ಮಿಸುತ್ತಾನೆ. ಅವುಗಳ ಯಜಮಾನ ಮತ್ತು ಅವನು, ಅವುಗಳ ಗುಲಾಮರಲ್ಲ. ಉತ್ಪಾದನೆಯ ಸಾಧನೆಯ ದೃಷ್ಟಿಯಿಂದ ಅವುಗಳ ಉಪಯೋಗ ಅವಶ್ಯವಾಗಿದೆ. ಆದರೆ ಅವು ಮನುಷ್ಯನನ್ನು ತಿಂದಿಲ್ಲ, ಮನುಷ್ಯನಿಗೆ ತಿನ್ನಿಸಬೇಕಾಗಿದೆ. ಈ ದೃಷ್ಟಿಯಿಂದ ಮನುಷ್ಯನ ಶ್ರಮ ಮತ್ತು ಯಂತ್ರಗಳಲ್ಲಿ ಒಂದು ಸಾಮರಸ್ಯತೆ ಇರಬೇಕು. ಈ ದಿಶೆಯಲ್ಲಿ ಪ್ರತ್ಯೇಕ ಸಮಾಜವು ನಿಧಾನವಾದ ಗತಿಯಲ್ಲಿ ಕೆಲಸ ಮಾಡುತ್ತಾ ಹೋಗುತ್ತದೆ. ಹೇಗೆ ಉದ್ಯೋಗಗಳ ಅವಸ್ಥೆಯಲ್ಲಿ ಉನ್ನತಿಯಾಗುತ್ತಾ ಇದೆಯೋ, ಹಾಗೆಯೇ ಅವುಗಳಿಗೆ ಮಾರುಕಟ್ಟೆ ಸಿಗುತ್ತಾ ಹೋಗುತ್ತದೆ. ಮನುಷ್ಯ ಸ್ವತಃ ಯಂತ್ರಗಳ ಸಹಾಯ ಪಡೆಯುತ್ತಾನೆ. ಆದರೆ ಯಾವಾಗ ಇದು ಅ ಸ್ವಾಭಾವಿಕವಾಗಿ ನಡೆಯಿತೋ ಆಗ ಹಾನಿಯಾಗುತ್ತದೆ. ಹಾಗಾಗಿ ಕುಟೀರ ಮತ್ತು ಗ್ರಾಮೋದ್ಯೋಗಗಳೇ ನಮ್ಮ ಕೇಂದ್ರವಾಗಬೇಕಾಗಿದೆ. ದೊಡ್ಡ ದೊಡ್ಡ ಉದ್ಯೋಗ ಈ ಉದ್ಯೋಗಗಳ ಹಿತದಲ್ಲಿ ಎಲ್ಲಿ ನಡೆಸಲು ಅವಶ್ಯಕತೆ ಇದೆಯೋ ಅಲ್ಲಿ ನಡೆಯುವಂತಾಗಬೇಕು. ಆದರೆ ಇವುಗಳ ಬಗ್ಗೆ ಸ್ವಾರ್ಥಿಯಾಗಲ್ಲ. ಔದ್ಯೋಗೀಕರಣ ಹೇಗೆ ? ವೇಗವಾಗಿ ಔದ್ಯೋಗೀಕರಣದ ಕಾರ್ಯಕ್ರಮವನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದೆ. ಇದಕ್ಕಾಗಿ ಗುಡಿ ಮತ್ತು ಗ್ರಾಮೋದ್ಯೋಗಗಳನ್ನು ಆಧಾರವಾಗಿಟ್ಟುಕೊಂಡು ದೊಡ್ಡ ಉದ್ಯೋಗಗಳನ್ನು ಅವುಗಳ ಜೊತೆ ಸಮನ್ವಯ ಮಾಡಬೇಕಾಗಿದೆ. ಆದರೆ ಅವು ಒಂದು ಇನ್ನೊಂದರ ಪ್ರತಿಸ್ಪರ್ಧೆ ನಡೆಸದ ಹಾಗೆ ಗಮನವಿಡಬೇಕು. ಈ ದೃಷ್ಟಿಯಿಂದ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ. 1. ಕೇಂದ್ರ ಮತ್ತು ಪ್ರಾಂತಗಳಲ್ಲಿ ಆ ಉದ್ಯೋಗಗಳ ರಕ್ಷಣೆ ಮತ್ತು ವಿಕಾಸಕ್ಕಾಗಿ ಆಯೋಗಗಳ ಸ್ಥಾಪನೆಯಾಗಬೇಕು. 2. ಚಿಕ್ಕ ಉದ್ಯೋಗಗಳಿಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವ ಪೂರ್ಣ 156 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವ್ಯವಸ್ಥೆಯಾಗಬೇಕು. ಸಹಕಾರಿ ಸಂಸ್ಥೆಗಳ ಸ್ಥಾಪನೆ ಮಾಡಬೇಕು ಅಥವಾ ಹಳೇ ದಲ್ಲಾಳಿ ಪದ್ಧತಿ ಪ್ರಚಾರ ಮಾಡಿ ಈ ವ್ಯವಸ್ಥೆ ಮಾಡಬೇಕಾಗಿದೆ. ಸರಕಾರ ತನ್ನ ಪರವಾಗಿ ಗೋದಾಮುಗಳನ್ನು ತೆರೆಯಬೇಕು. 3. ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾಲ ಸಿಗುವ ವ್ಯವಸ್ಥೆಯಾಗಬೇಕು. 4. ಅವರಿಗೆ ವಿದ್ಯುತ್ತಿನಿಂದ ಚಲಿಸುವ ಸಣ್ಣ ಸಣ್ಣ ಯಂತ್ರಗಳು ದೊರೆಯುವಂತಾಗಬೇಕು ಮತ್ತು ಅವುಗಳಿಗೆ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆಯಾಗಬೇಕು. 5. ಯಂತ್ರ ಮತ್ತು ಕಚ್ಚಾ ಸಾಮಗ್ರಿ ಮುಂಗಡ ದೊರೆಯಬೇಕು ಹಾಗೂ ಅವುಗಳ ಹಣ ಸಂದಾಯ ತಯಾರಿಸಿದ ಸಾಮಗ್ರಿಗಳಿಂದ ಅಥವಾ ಕಂತುಗಳಲ್ಲಿ ನೀಡುವಂತಿರಬೇಕು. 6. ತಯಾರಾದ ಸಾಮಗ್ರಿಗಳ ಮಾರಾಟಕ್ಕಾಗಿ ಉಚಿತ ವ್ಯವಸ್ಥೆ ಮಾಡಬೇಕು. ಸಹಕಾರಿ ಸಂಸ್ಥೆಗಳ ಮೂಲಕ ಅಥವಾ ಸಹಕಾರಿ ಮಾರಾಟ ಉಗ್ರಾಣಗಳ ಮೂಲಕ ಈ ವ್ಯವಸ್ಥೆಯಾಗಬೇಕು. ಕಾರ್ಮಿಕರಿಂದ ತಯಾರಿಸಿದ ಸಾಮಗ್ರಿ ಒಂದು ವೇಳೆ ಮಾರುಕಟ್ಟೆಯಲ್ಲಿ ಮಾರಾಟವಾಗದಿದ್ದರೆ ಸರಕಾರವೇ ಸೂಕ್ತ ಬೆಲೆಯನ್ನು ನೀಡಿ ಅವುಗಳನ್ನು ಖರೀದಿಸಬೇಕು. 7. ಸ್ಥಾನ ಸ್ಥಾನಗಳಲ್ಲಿ ಈ ಉದ್ಯೋಗಗಳ ದೃಷ್ಟಿಯಿಂದ ಪರಿಶೋಧನ ಕೇಂದ್ರಗಳನ್ನು ತೆರೆಯಬೇಕು. 8. ರೈಲ್ವೆ ಬಾಡಿಗೆಯ ದರಗಳಲ್ಲಿ ಗುಡಿ ಉದ್ಯೋಗಗಳ ಸಾಮಗ್ರಿಗೆ ಅನುಗುಣವಾಗಿ ಪರಿವರ್ತನೆ ಮಾಡಬೇಕು. 9. ಯಾವ ವಸ್ತುಗಳ ವಿಕೇಂದ್ರಕರಣ ಸಾಧ್ಯವಿಲ್ಲವೋ ಅಂತಹ ವಸ್ತುಗಳಿಗಾಗಿ ಕಾರ್ಖಾನೆಗಳನ್ನು ತೆರೆಯಬೇಕು. ಇವುಗಳ ಉತ್ಪಾದನೆಯ ಕ್ಷೇತ್ರವನ್ನು ನಿಶ್ಚಯಮಾಡಬೇಕು. 10. ವಿದೇಶಿ ಸಾಮಗ್ರಿಗಳ ಮೇಲೆ ನಿಯಂತ್ರಣ ಮಾಡಿ ಸ್ವದೇಶಿ ಸಾಮಗ್ರಿಗಳಿಗೆ ಪ್ರೋತ್ಸಾಹ ನೀಡಬೇಕು. 11. ಸರ್ಕಾರವು ತಮ್ಮ ಅವಶ್ಯಕತೆಗಳ ಪೂರೈಕೆಗಾಗಿ ಗುಡಿ ಉದ್ಯೋಗಗಳ ಸಾಮಗ್ರಿಗಳನ್ನು ಅವಲಂಬಿಸಬೇಕು. 12. ಕಾರ್ಮಿಕರಿಗೆ ಶಿಕ್ಷಣ ನೀಡುವುದಕ್ಕಾಗಿ ಉದ್ಯೋಗ ಶಿಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು,. 13. ಗುಡಿ ಉದ್ಯೋಗಗಳಿಂದ ತಯಾರಿಸಿದ ಸಾಮಗ್ರಿಗಳಿಗೆ ಮಾರಾಟ "ಎಲ್ಲರಿಗೂ ಕೆಲಸ'' ಎನ್ನುವುದೇ ಭಾರತೀಯ ಆರ್ಥಿಕ ನೀತಿಯ ಏಕೈಕ ಮೂಲಾಧಾರ 157 ತೆರಿಗೆ ಮುಂತಾದ ತೆರಿಗೆಗಳಿಂದ ಮುಕ್ತಿಗೊಳಿಸಬೇಕು. 14. ರಾಯಭಾರಿ ಕಛೇರಿಗಳಲ್ಲಿ ಕೇವಲ ಸ್ವದೇಶಿ ಹಾಗೂ ವಿಶೇಷವಾಗಿ ಗುಡಿ ಕೈಗಾರಿಕೆಗಳಲ್ಲಿ ನಿರ್ಮಿಸಿದ ವಸ್ತುಗಳನ್ನೇ ಉಪಯೋಗಿಸಬೇಕು. ನಿರುದ್ಯೋಗವನ್ನು ತಡೆಯಲು ಮತ್ತು ಉದ್ಯೋಗ ಕೆಲಸಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಸರ್ವಸಾಧಾರಣವಾದ ಮಾರಾಟ ಶಕ್ತಿಯನ್ನು ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ಆದಾಯದ ವಿಷಮತೆಯನ್ನು ದೂರಮಾಡಿ ಅದರಲ್ಲಿ ಸಮಾನತೆಯನ್ನು ಸ್ಥಾಪನೆ ಮಾಡಬೇಕಾಗಿದೆ. ಶಾಸನದ ತೆರಿಗೆ ನೀತಿ ಈ ಗುರಿ ಮುಟ್ಟಲು ದೂರದವರೆಗೂ ಕೊಂಡೊಯ್ಯುವುದಿಲ್ಲ. ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ತೆರಿಗೆ ಮುಕ್ತ ಮಾಡಿ ಮೇಲ್ವರ್ಗದ ಜನರಿಗೆ ತೆರಿಗೆಯ ಭಾರ ಹೆಚ್ಚಿಸಬೇಕಾಗಿದೆ. ದೊಡ್ಡ ದೊಡ್ಡ ಜನಗಳು ಬಂಡವಾಳ ಮುಳುಗಿದ್ದಕ್ಕೆ ಗಲಾಟೆ ಮಾಡಿ ತೆರಿಗೆಯ ಭಾರದಿಂದ ಬಚಾವಾಗುತ್ತಿದ್ದಾರೆ. ಇದು ಸರಿಯಾದದ್ದಲ್ಲ. ಒಂದು ವೇಳೆ ಆರ್ಥಿಕ ವಿಷಮತೆಯ ಪರಿಸ್ಥಿತಿಯಿದ್ದು ಹಾಗೂ ಕೆಳವರ್ಗದ ಜನಗಳ ಮಾರಾಟ ಶಕ್ತಿ ಹೆಚ್ಚದಿದ್ದರೆ ಬಂಡವಾಳ ಹಿಂತೆಗೆದುಕೊಂಡರೂ ಯಾವ ಲಾಭವೂ ಇಲ್ಲ. ವಾಸ್ತವವಾಗಿ ಯಾವ ವಸ್ತು ಉತ್ಪಾದನೆಯಾಗುತ್ತೋ ಅದನ್ನು ಖರೀದಿಸುವವರು ಸಿಗುತ್ತಾ ಇದ್ದರೆ, ಉದ್ಯೋಗವು ಬೆಳೆಯುತ್ತಾ ಇರುತ್ತದೆ. ಆದ್ದರಿಂದ ಉತ್ಪಾದನೆ ಮಾಡಿದಂತಹ ವಸ್ತುಗಳಿಗೆ ಬೇಡಿಕೆಯನ್ನು ಹೆಚ್ಚಿಸಿ ಉದ್ಯೋಗಗಳನ್ನು ಹೆಚ್ಚಿಸಲು ಅವಶ್ಯಕವಾಗಿದೆ. ಬೇಡಿಕೆಯು ಕಮ್ಮಿಯಾಗುತ್ತ ಹೋಗಿರುವ ಕಾರಣದಿಂದಲೇ ನಿರುದ್ಯೋಗವು ಹುಟ್ಟಿ ಹೆಚ್ಚುತ್ತಾ ಹೋಗುತ್ತಿದೆ. ಔದ್ಯೋಗಿಕ ವಿದ್ಯೆ ಅಕ್ಷರ ಮತ್ತು ಸಾಹಿತ್ಯ ಜ್ಞಾನದ ಜೊತೆ ಜೊತೆಗೆ ಒಬ್ಬ ವಿದ್ಯಾರ್ಥಿಗೆ ಯಾವುದಾದರೊಂದು ರೀತಿಯ ಔದ್ಯೋಗಿಕ ವಿದ್ಯೆ ಕೂಡ ನೀಡಬೇಕು ಎಂಬುದು ಅವಶ್ಯಕವಾಗಿದೆ. ಔದ್ಯೋಗಿಕ ವಿದ್ಯೆಯ ದೃಷ್ಟಿಯಿಂದ ಈ ಒಂದು ವಿಚಾರ ಬಹಳ ದಿನಗಳಿಂದ ನಡೆಯುತ್ತಿದೆ. ಆದರೆ ಇಲ್ಲಿಯವರೆಗು ಕೆಲವು ಔದ್ಯೋಗಿಕ ವಿದ್ಯಾಕೇಂದ್ರಗಳನ್ನು ತೆರೆಯುವುದರಿಂದ ಸಾಧಾರಣ ವಿದ್ಯೆ ಹಾಗೂ ಔದ್ಯೋಗಿಕ ವಿದ್ಯೆಯ ನಡುವೆ ಹೊಂದಾಣಿಕೆ ಕೂಡಿಸಿಲ್ಲ. ತಾಂತ್ರಿಕ ಮತ್ತು ಸಾಂದರ್ಭಿಕ ವಿದ್ಯಾಕೇಂದ್ರಗಳಲ್ಲಿ ವಿದ್ಯೆ ಪಡೆದ ನವಯುವಕರು ತಮ್ಮದೇ ಆದ ವ್ಯವಸಾಯವನ್ನು ಶುರು/ಪ್ರಾರಂಭ ಮಾಡುವಷ್ಟು ಸಮರ್ಥರಾಗಿರುವುದಿಲ್ಲ. ಅವರೂ ಸಹ ಕೆಲಸಕ್ಕಾಗಿ ಹುಡುಕುತ್ತಾ ತಿರುಗುತ್ತಾರೆ. ಇದರ ಕಾರಣವೇನೆಂದರೆ ಅವರಿಗೆ ಯಾವ ರೀತಿಯ ವಿದ್ಯೆ ನೀಡಲಾಗುತ್ತೋ, ಅದು ಅವರನ್ನು ತಮ್ಮ ಕಾಲ ಮೇಲೆ ತಾವು ನಿಲ್ಲದಂತೆ 158 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಾಡಿಬಿಡುತ್ತೆ. ಆದ್ದರಿಂದ ಹಳ್ಳಿಗಳ ಉದ್ಯೋಗ/ಕಸುಬು, ವ್ಯವಸಾಯ (ಕೃಷಿ) ಮತ್ತು ವ್ಯಾಪಾರದ ಜೊತೆ ನಾವು ಹೊಂದಾಣಿಕೆ ತರಬೇಕಾಗಿದೆ. ಮೊದಲನೆಯದಾಗಿ ವಿದ್ಯೆಯ ಆರಂಭಿಕ ಮತ್ತು ಮಧ್ಯಮ ಸ್ಥಿತಿಯಲ್ಲಿ ಅವನ ಮನೆ ಕಸುಬು/ಕುಲಕಸುಬಿನ ವಾತಾವರಣದಿಂದ ಬೇರ್ಪಡಿಸಬೇಕಾಗಿಲ್ಲ. ಬದಲಾಗಿ ಅವನು ಅದೇ ವಾತಾವರಣದಲ್ಲಿ ಹೆಚ್ಚಾಗಿ ಇದ್ದು ಅಪರೋಕ್ಷವಾಗಿ ಕಸಬುನ್ನು ಕಲಿತುಕೊಳ್ಳುವಂತೆ ನಾವು ವ್ಯವಸ್ಥೆ/ಏರ್ಪಾಡು ಮಾಡಬೇಕು. ನಿಧಾನವಾಗಿ/ಮೆಲ್ಲನೆ ನಾವು ಅವರನ್ನು ತಮ್ಮ ಸಹೋದ್ಯೋಗಿಯರೊಡನೆ ಸಹಕರಿಸುವಂತವರಾಗಬೇಕೆಂದು ಪ್ರಯತ್ನಿಸಬೇಕು. ಮಾಧ್ಯಮಿಕ ವಿದ್ಯೆ/ಶಿಕ್ಷಣ ಮುಗಿಯುವ ಹೊತ್ತಿಗೆ ನವಯುವಕರಿಗೆ ತಮ್ಮ ಕಸುಬು ಬಂದಿರಬೇಕು. ಬಹುಶಃ ಆ ಕಸಬುಗಳ ತರಬೇತಿಯ/ಶಿಕ್ಷಣದ ಪ್ರಮಾಣಪತ್ರವು ದೊರಕುವಂತೆ ಏನಾದರು ವ್ಯವಸ್ಥೆ ಮಾಡಬೇಕಾಗಬಹುದು. ಮಾಧ್ಯಮಿಕ ಶಿಕ್ಷಣದವರೆಗು ಕುಶಾಗ್ರ ಬುದ್ಧಿಯುಳ್ಳ ಯುವಕರಿಗೆ ಮುಂದಿನ ಶಿಕ್ಷಣದ ವ್ಯವಸ್ಥೆ ಅವರ ಆಯ್ಕೆಯಾಗಿರಬೇಕು. ಜನಸಂಖ್ಯೆ, ಅದರ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ವ್ಯವಸ್ಥೆ, ಇವರ ಪರಸ್ಪರ/ಪಾರಸ್ಪರಿಕ ಸಮತೋಲದಲ್ಲಿ ಎಡವಟ್ಟು ಆದ ಪಕ್ಷದಲ್ಲಿ/ಸಮಯದಲ್ಲಿ ಆರ್ಥಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇಂದು ದೇಶದ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇದಕ್ಕನುಗುಣವಾಗಿ ಉತ್ಪಾದನೆಯು ಹೆಚ್ಚುತ್ತಿಲ್ಲ. ಆದ್ದರಿಂದಲೇ ನಮ್ಮ ಬೇಡಿಕೆಗಳು/ಅವಶ್ಯಕತೆಗಳು ಪೂರ್ಣಗೊಳ್ಳುತ್ತಿಲ್ಲ. ಆದುದರಿಂದ ನಮ್ಮ ಜೀವನ ಬಹಳ ಕೆಳಮಟ್ಟದ್ದಾಗಿದೆ. ಇದಕ್ಕೆ ಪರಿಹಾರವೇನೆಂದರೆ ನಾವು ಉತ್ಪಾದನೆಯನ್ನು ಹೆಚ್ಚಿಸಲು ಬೇಕಾಗುವ ವಸ್ತುಗಳ ಉತ್ಪಾದನೆಯನ್ನೇ ಮಾಡುವುದು. ಇದರಿಂದ ಸ್ವಾಭಾವಿಕವಾಗಿ ನಮ್ಮ ದೃಷ್ಟಿ ಪಶ್ಚಿಮದ ದೊಡ್ಡ-ದೊಡ್ಡ ಕಾರಖಾನೆಗಳ ಉತ್ಪಾದನೆಯತ್ತ ಹೋಗುತ್ತದೆ. ನಾವು ಸಹ ಸುಮಾರು ಆರು ವರ್ಷಗಳಿಂದ ಇದಕ್ಕಾಗಿ ಪ್ರಯತ್ನಶೀಲರಾಗಿದ್ದೇವೆ. ಆದರೆ ಇಂತಹ ವ್ಯವಸ್ಥೆಯಿಂದ ನಾವು ನಮ್ಮ ದೇಶದಲ್ಲಿ ಎಲ್ಲರಿಗೂ ನೌಕರಿ ಕೊಡಬಹುದೇ ಎಂಬ ಪ್ರಶ್ನೆ ಹುಟ್ಟುತ್ತದೆ. ಕೊಡಲಾಗದಿದ್ದಲ್ಲಿ ವ್ಯವಸ್ಥೆಯ ಮಾಲೀಕ ಮತ್ತು ಅದರಲ್ಲಿ ಕೆಲಸ ಮಾಡುವವರ ಒಂದು ಸಣ್ಣ-ಪುಟ್ಟ ವರ್ಗವಾಗಿ ಉಳಿದುಹೋಗುತ್ತದೆ. ಪರಿಣಾಮವಾಗಿ ಉತ್ಪಾದನೆಯಾದಂತಹ ವಸ್ತುಗಳು ಸಮಾನ ರೂಪದಲ್ಲಿ ವಿತರಣೆಯಾಗಲಾರದು. ಉಳಿದ ಜನರನ್ನು ಜನಸೇವೆಗಾಗಿ ಮೀಸಲಾಗಿಡಬೇಕಾಗಬಹುದು. ಅಥವಾ ನಮ್ಮ ಅವಶ್ಯಕತೆಗಳು ಎಷ್ಟರ ಮಟ್ಟಿಗೆ ವಿಭಿನ್ನವಾಗಿರಬಹುದು ಎಂದರೆ ಅದರ ಪೂರ್ತಿಗಾಗಿ ವ್ಯವಸ್ಥೆಯನ್ನು ಹೊಂದಿಸಬೇಕಾಗಬಹುದು. ನಾಲ್ಕು ಜನರಿಂದ ಕೆಲಸವಾಗುವ ಕಡೆಗೆ ಹತ್ತು ಜರನ್ನು ತೆಗೆದುಕೊಳ್ಳುವಂತೆ ಒಂದು ನಿಯಮ ತರುವಂತೆ ಸಲಹೆ ನೀಡಲೂಬಹುದು. ಆದರೆ ಇದು ಪ್ರಜಾತಾಂತ್ರಿಕ "ಎಲ್ಲರಿಗೂ ಕೆಲಸ'' ಎನ್ನುವುದೇ ಭಾರತೀಯ ಆರ್ಥಿಕ ನೀತಿಯ ಏಕೈಕ ಮೂಲಾಧಾರ 159 ದೇಶಗಳಲ್ಲಿ ವ್ಯಾಪಕ ರೂಪದಲ್ಲಿ ಅಳವಡಿಸುವಂತಿಲ್ಲ. ಇಂದು ನಮಗೆ ದೊಡ್ಡದೊಡ್ಡ ಉದ್ಯಮಗಳನ್ನು ಸ್ಥಾಪಿಸಲು ಕಷ್ಟವಾಗುತ್ತಿದೆ ಮತ್ತು ಅದರ ಪರಿಣಾಮ ಸ್ವರೂಪವಾಗಿ ನಾವು ಸಣ್ಣ ಉದ್ಯೋಗಗಳನ್ನು ನಾಶ ಮಾಡುತ್ತಿದ್ದೇವೆ. ಇಂದು ನಿರುದ್ಯೋಗ ಮುಖ್ಯವಾಗಿ ಯಾಂತ್ರಿಕವಾಗಿಬಿಟ್ಟಿದೆ. ಯಂತ್ರಗಳು ಮಾನವನ ಸ್ಥಾನವನ್ನು ಆಕ್ರಮಿಸಿ ಮಾನವನನ್ನೇ ನಿರುದ್ಯೋಗದ ದಿಕ್ಕಿನಲ್ಲಿ ತಳ್ಳುತ್ತಿವೆ. ಯಂತ್ರದ ಅರ್ಥ ಪ್ರಗತಿಯ ಚಿಹ್ನೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ನಮ್ಮ ಪ್ರಗತಿವಾದ ಮನೋವೃತ್ತಿಯನ್ನು ಯಂತ್ರೀಕರಣದಿಂದ ಸರಿಸಲಾಗುತ್ತಿಲ್ಲ. ನಾವು ಇದಕ್ಕೆ ಸಂಬಂಧಪಟ್ಟಂತೆ ಸಮನ್ವಯವಾದ ರೀತಿಯಲ್ಲಿ ಕೆಲಸ ಮಾಡತಕ್ಕದ್ದು. ಪ್ರತಿಯೊಬ್ಬರಿಗೂ ಕೆಲಸ/ಕಾಯಕ ನಮ್ಮ ನೀತಿಯ ಆಧಾರವಾಗಿರಬೇಕು. ಕೆಲಸ ಸಿಗುವುದು ಪ್ರತಿಯೊಬ್ಬ ನಾಗರಿಕನ/ಪ್ರಜೆಯ ಅಧಿಕಾರವಾಗಿದೆ. ಕೆಲಸ ಸಿಗಲಾರದ್ದರಿಂದ ಅವನ ವ್ಯಕ್ತಿಗತ ಜೀವನದ ಆಸರೆಯು ಹೊರಟುಹೋಗುವ ಜೊತೆಗೆ ರಾಷ್ಟ್ರದ ಸಂಪತ್ತಿಗೆ ತಮ್ಮ ಕೊಡುಗೆ ನೀಡಿ ಸಹಾಯ ಮಾಡುವುದರಿಂದಲೂ ವಂಚಿತರಾಗುತ್ತಾರೆ. ``ಸರ್ವರಿಗೂ/ಪ್ರತಿಯೊಬ್ಬರಿಗೂ ಕಾಯಕ/ಕೆಲಸ’’ ವೆಂಬ ಸಿದ್ಧಾಂತ ಸ್ವೀಕೃತವಾದ ಪಕ್ಷದಲ್ಲಿ `ಸಮವಿತರಣ’ದ ದಿಕ್ಕಿನಲ್ಲಿ ನಿಶ್ಚಿತವಾಗಿಬಿಡುತ್ತದೆ. ಹೆಚ್ಚು ಕೇಂದ್ರೀಕರಣದ ಸ್ಥಾನದಲ್ಲಿ ನಾವು ವಿಕೇಂದ್ರಿಕರಣದ ದಿಕ್ಕು/ನಿಟ್ಟಿನಲ್ಲಿ ಮುಂದುವರೆಯುತ್ತ ಹೋಗುತ್ತೇವೆ. ಜಙಕಙಯ = ಇ "ಸರ್ವರಿಗೂ ಕೆಲಸ" ವೆಂಬ ಸಿದ್ಧಾಂತವು ಸ್ವೀಕೃತವಾದ ಮೇಲೆ ಮತ್ತಿತರ ವಿಷಯಗಳನ್ನು ನಿರ್ಧರಿಸಬಹುದು. ಗಣಿತದ ಸಣ್ಣ/ಚಿಕ್ಕ ಸೂತ್ರದ ರೂಪದಲ್ಲಿ ನಾವು ಅರ್ಥಶಾಸ್ತ್ರದ ಈ ಸಿದ್ಧಾಂತವನ್ನು ಮುಂದಿಡಬಹುದು. ಜಙಕಙಯ = ಇ ಇಲ್ಲಿ 'ಇ' ಸಮಾಜದ ಅತಿ ಹೆಚ್ಚು ಸ್ವೀಕರಿಸಲಾದ ಆಕಾಂಕ್ಷೆಗಳ ಒಂದು ಪ್ರತೀಕ. ಇದರ ಪೂರ್ಣತೆಯ ಶಕ್ತಿ ಅದರಲ್ಲಿ ಇದೆ. 'ಜ' ಸಮಾಜದ ಕಾರ್ಯಗಳನ್ನು ಮಾಡುವ ಯೋಗ್ಯತೆ ಇರುವ ವ್ಯಕ್ತಿಗಳನ್ನು ಪ್ರತಿರೂಪಿಸುತ್ತದೆ. 'ಕ' ಕೆಲಸ ಮಾಡುವವರ ಪರಿಸ್ಥಿತಿ ಮತ್ತು ವ್ಯವಸ್ಥೆಯನ್ನು ಪ್ರತಿರೂಪಿಸುತ್ತದೆ. 'ಯ' ಯಂತ್ರದ ಪ್ರತಿರೂಪವಾಗಿದೆ. ಈ ಸೂತ್ರದಲ್ಲಿ ನಾವು 'ಜ'ವನ್ನು ನಿಶ್ಚಿತವಾಗಿಟ್ಟುಕೊಂಡು 'ಇ'ಯ ಪ್ರಮಾಣದಲ್ಲಿ 'ಕ' ಮತ್ತು 'ಯ'ವನ್ನು ಬದಲಿಸಬಹುದು. ಹೇಗೆ-ಹೇಗೆ ನಮ್ಮ ಬೇಡಿಕೆ ಹೆಚ್ಚುತ್ತಾ ಹೋಗುತ್ತೋ ನಾವು ಎಂತಹ ಯಂತ್ರಗಳನ್ನು ಉಪಯೋಗಿಸಬೇಕೆಂದರೆ ಅದರ ಸಹಾಯದಿಂದ ನಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕು. ಇಂದು ಆಳಿಕೆ ಯಾವ 160 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನೀತಿಯನ್ನು ಅವಳವಡಿಸುತ್ತಿದೆಯೋ ಅದರಲ್ಲಿ 'ಯ' ಎಲ್ಲವನ್ನು ನಿಯಂತ್ರಿಸುತ್ತಿದೆ. ವಾಸ್ತವಿಕವಾಗಿ 'ಇ' ದರ ಬೇಡಿಕೆ ಹೆಚ್ಚಾದರೇನೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ 'ಇ' ಸಹಜವಾಗಿ ಹೆಚ್ಚುವುದಿಲ್ಲ. ಏಕೆಂದರೆ ಇದು ನಮ್ಮ ಕ್ರಮ ಶಕ್ತಿಯ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ ಆಳಿಕೆಗೆ ದೇಶದ ಕ್ರಮ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಬೇಕು. ಏನು ಮಾಡಬೇಕಾಗಿದೆ ? ನಿರುದ್ಯೋಗದ ಈ ಕಾರಣಗಳನ್ನು ದೂರ ಸರಿಸಿ ಸಮಸ್ಯೆಗಳನ್ನು ಮೂಲ ರೂಪದಲ್ಲೇ ಪರಿಹಾರ ಮಾಡುವುದರ ಜೊತೆಗೆ ಇಂದು ಯಾರು ನಿರುದ್ಯೋಗಿಯಾಗಿದ್ದಾರೋ ಅಥವಾ ಆಗುವುದರಲ್ಲಿದ್ದಾರೋ ಅವರಿಗೆಲ್ಲಾ ಮತ್ತೊಮ್ಮೆ ಕೆಲಸ ಕೊಡುವುದು ಮತ್ತು ಎಲ್ಲಿಯವರೆಗೆ ಕೆಲಸ ಸಿಗುವುದಿಲ್ಲವೋ ಅಲ್ಲಿಯವರೆಗೂ ಅವರಿಗೆ ಒಂದು ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿ ಕೂಡ ಸರ್ಕಾರದ್ದೇ ಆಗಿರುತ್ತದೆ. ಇಂದಿನ ನಿರುದ್ಯೋಗಿಗಳಲ್ಲಿ ಹೆಚ್ಚು ಸಂಖ್ಯೆ ಓದು- ಬರಹ ಬರುವವರಾಗಿರುತ್ತಾರೆ. ಅವರನ್ನು ಸಾರ್ಥಕವಾಗಿ ಬಳಸಿಕೊಳ್ಳುವ ಸಲುವಾಗಿ ವಿದ್ಯಾಲಯಗಳನ್ನು ತೆರೆಯುವ ನಿಟ್ಟಿನಲ್ಲಿ ಸರ್ಕಾರವು ಮುಂದೆ ಹೆಜ್ಜೆ ಇಟ್ಟಿದೆ. ಈ ನೀತಿಯನ್ನು ಮತ್ತಷ್ಟು ವ್ಯಾಪಕಗೊಳಿಸಬೇಕು. ಶಾಲಾ ಕಾಲೇಜುಗಳಲ್ಲಿ ಒಡನೆಯೇ ಔದ್ಯೋಗಿಕ ಮತ್ತು ವ್ಯಾವಸಾಯಿಕ ವಿದ್ಯೆಗಾಗಿ ಅನುಕೂಲ ಮಾಡಬೇಕಾಗುತ್ತದೆ. 'ಅಂತಿಮ ಪರೀಕ್ಷೆಯನ್ನು' ಪಾಸ್ ಮಾಡಿಕೊಂಡು ಹೊರಗೆ ಬರುವವರಿಗೆ ಒಂದು ವರ್ಷಗಳ ಕಾಲ ಔದ್ಯೋಗಿಕ ವಿದ್ಯೆಯನ್ನು ಅನಿವಾರ್ಯ ಮಾಡಿಬಿಡಬೇಕು. ಇದರಿಂದ ವಿದ್ಯಾವಂತರ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮತ್ತೆ ಪ್ರಾಯಶಃ ಒಂದು ವರ್ಷದ ಔದ್ಯೋಗಿಕ ವಿದ್ಯೆ ಪಡೆದ ನವ ಯುವಕರಲ್ಲಿ ಅನೇಕರು ಬೇರೆಯವರಿಗೆ ಸಲಾಮು ಹೊಡೆಯದೆ, ಗುಲಾಮಗಿರಿ ಮಾಡದೇ, ತಮ್ಮ ಕೈಯಿಂದ ದುಡಿದು ತಿನ್ನುತ್ತಾರೆ. ಯುದ್ಧಕಾಲದಲ್ಲಿ ಕಾರಖಾನೆ ಚಾಲಕರಿಗೆ ಭಾರೀ ಲಾಭ ದೊರಕಿತ್ತು, ಇತ್ತೀಚೆಗೆ ಅದು ಸಂಭವವಿಲ್ಲ. ಆದ್ದರಿಂದ ಇಂದು ಕುಂಠಿತವಾಗಿರುವ ಲಾಭವನ್ನು ನಷ್ಟದ ಭಯದಿಂದ/ಆಶಂಕೆಯಿಂದ ಉಳಿತಾಯದ ಯೋಜನೆಗಳು ಆರಂಭವಾಗಿಬಿಟ್ಟಿದೆ. ಮತ್ತು ಕಾರ್ಮಿಕರ ಮೇಲೂ ಸಹ ಇದರ ಪರಿಣಾಮ ಬೀರುತ್ತಿದೆ. ಅವರನ್ನೆಲ್ಲಾ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಸರ್ಕಾರವೂ ಸಹ ತಮ್ಮ ವಿಭಿನ್ನ ವಿಭಾಗಗಳಲ್ಲಿ ಜನರನ್ನು ತೆಗೆದು ಹಾಕುತ್ತಿದೆ. ಹಲವು ವಿಭಾಗಗಳು ಅಂದರೆ ಆಹಾರ ಸಾಮಗ್ರಿ ಪೂರೈಕೆ ವಿಭಾಗವು ಮತ್ತು ಯುದ್ಧದ ಸಮಯದ ಅನೇಕ ವಿಭಾಗಗಳ ಕೆಲಸಗಳು ಈಗ ಪೂರ್ಣಗೊಂಡಿವೆ. ಅದರ/ಆವಿಭಾಗದ ಅಧಿಕಾರಿಗಳನ್ನು ತೆಗೆಯುವುದು "ಎಲ್ಲರಿಗೂ ಕೆಲಸ'' ಎನ್ನುವುದೇ ಭಾರತೀಯ ಆರ್ಥಿಕ ನೀತಿಯ ಏಕೈಕ ಮೂಲಾಧಾರ 161 ಅನಿವಾರ್ಯವೆನಿಸುತ್ತಿದೆ. ಇದು ನಿರುದ್ಯೋಗದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂತಹ ವ್ಯಕ್ತಿಗಳಿಗೆ ಬೇರೊಂದು ಉದ್ಯೋಗ ಸಿಗುವವರೆಗೆ ಅವರ ಪೋಷಣೆಗೆ ವ್ಯವಸ್ಥೆ ಮಾಡುವುದು ಅತಿ ಅವಶ್ಯಕ. ಯೂರೋಪಿನ ಹಲವು ದೇಶಗಳಲ್ಲಿ ನಿರುದ್ಯೋಗ ವಿಮೆ ಯೋಜನೆಯು ಶುರು ಆಗಿದೆ. ಇಚ್ಛೆಯ ವಿರುದ್ಧವಾಗಿ ನಿರುದ್ಯೋಗಿಗಳಾಗುವ ಕಾರ್ಮಿಕರಿಗೆ ಈ ಯೋಜನೆಯಿಂದ ಬಹಳಷ್ಟು ಸಹಾಯವಾಗುತ್ತದೆ. ಭಾರತ ಸರ್ಕಾರದ ಕಾರ್ಮಿಕ ಮಂತ್ರಿಗಳಾದ ಶ್ರೀ ಗಿರಿಯವರು ಮಾಲೀಕ, ಕಾರ್ಮಿಕ ಹಾಗೂ ಪ್ರಭುತ್ವದ ಆಡಳಿತವರ್ಗಗಳ ನಡುವೆ ಒಂದು ಒಪ್ಪಂದ ಮಾಡಿಸಿದರು. ಅದರ ಪ್ರಕಾರ ಯಾವುದೇ ವ್ಯಕ್ತಿಯನ್ನು ಅವನ ಇಚ್ಛೆಯ ವಿರುದ್ಧವಾಗಿ ಕೆಲಸದಿಂದ ತೆಗೆದುಹಾಕಿದ್ದರೆ ಅವನಿಗೆ 45 ದಿನಗಳವರೆಗೆ ತನ್ನ ಸಂಬಳ ಮತ್ತು ತುಟ್ಟಿ ಭತ್ಯೆಯ ಅರ್ಧ ಅಂಶ ಸಿಗಬೇಕು/ಸಿಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ವಿಚಾರ/ವಿಧಿ/ಅನುಷ್ಠಾನವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವ ಒಂದು ಆಶೆಯಿದೆ. ಸರಿಯಾದ ಮಾರ್ಗ/ದಿಸೆಯೆಡೆಗೆ ಮುಂದ್ಹೆಜ್ಜೆ ಇಡಲಾಗಿದೆ. ಆದರೆ ಮಾಲೀಕರ ಮೇಲೆ ಈ ಭಾರವನ್ನು ಹಾಕದೆ ಪ್ರಭುತ್ವವು ಇದಕ್ಕೆ ಒಂದು ಬೇರೆಯ ವ್ಯವಸ್ಥೆಯನ್ನು ಮಾಡಬೇಕು ಮತ್ತು ಮಾಲೀಕರಿಂದ ಈ ವಿಮೆ ಯೋಜನೆಗಾಗಿ ಚಂದಾ ತೆಗೆದುಕೊಳ್ಳಬೇಕು. ಇದರ ಜೊತೆಗೆ 45 ದಿನಗಳ ಒಂದು ನಿಶ್ಚಿತ ಅವಧಿ/ಸಮಯ ಇಡದೆ, ಮತ್ತೊಂದು ಕೆಲಸ ಸಿಗುವವರೆಗಿನ ಅವಧಿಯನ್ನು ಮುಂದೆಳೆಯಬೇಕು. ಓದಿರುವವರಿಗೆ ಔದ್ಯೋಗಿಕ ಶಿಕ್ಷಣ ಕೇಂದ್ರಗಳನ್ನು ತೆರೆದು ಅಲ್ಲಿ ಶಿಕ್ಷಣದ ಜೊತೆಗೆ ಕೆಲಸವನ್ನು ಮಾಡಬಹುದು. ಇದು ಕೇಂದ್ರ ಸರ್ಕಾರದ ಮೂಲಕ ದೊಡ್ಡ ಪ್ರಮಾಣದಲ್ಲಿ ತೆರೆಯಬೇಕು. ಹಳ್ಳಿಗಳಲ್ಲಿರುವ ನಿರುದ್ಯೋಗದ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಸಹಾಯಕ ಕಾರ್ಯಗಳನ್ನು ಪ್ರಾರಂಭ ಮಾಡತಕ್ಕದ್ದು. ರಸ್ತೆಗಳು, ಸೌಧಗಳು/ಕಟ್ಟಡಗಳು, ಅಣೆಕಟ್ಟು, ಬಾವಿಗಳು ಮತ್ತು ಸರೋವರ ಮುಂತಾದವುಗಳ ಅನೇಕ ಯೋಜನೆಗಳನ್ನು ಆರಂಭ ಮಾಡಬಹುದು. ಪಂಚವರ್ಷದ ಯೋಜನೆಗಳಲ್ಲಿ ಯಾವ ಯೋಜನೆಗಳು ಇವೆಯೋ ಅದರಲ್ಲಿ ಜನಶಕ್ತಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳಬೇಕು. ಈಗಂತು ಅಲ್ಲಿಯೂ ಸಹ ಕೂಲಿಯನ್ನು ಉಳಿಸುವ ದೊಡ್ಡ ಯಂತ್ರಗಳನ್ನು ಉಪಯೋಗಿಸಲಾಗಿದೆ. ಆರ್ಥಿಕ ನೀತಿಯನ್ನು ನಿರ್ಧರಿಸುವುದರಲ್ಲಿ ಪ್ರಭುತ್ವದ ಪ್ರಮುಖ ಕೈವಾಡವಿರುವುದರಿಂದ ಅದರ ನೀತಿಗಳಿಂದ ಉತ್ಪನ್ನವಾಗುವ ಸಮಸ್ಯೆಗಳನ್ನು ದೂರ ಮಾಡುವ ಜವಾಬ್ದಾರಿ ಮತ್ತು ಸಾಮರ್ಥ್ಯದ ಹಲವು ಅಂಶಗಳು ಅದರದ್ದಾಗಿರುತ್ತೆ. ಆದರೂ ಜನತೆ ಮತ್ತು ರಾಜನೈತಿಕ ದಳಗಳು ಈ ದೃಷ್ಟಿಯಿಂದ ತಮ್ಮ ಸೀಮಿತ ಕ್ಷೇತ್ರದಲ್ಲಿ ಬಹಳ ಕೆಲಸಗಳನ್ನು ಮಾಡಬಹುದು. ಪ್ರಭುತ್ವಕ್ಕೆ/ವ್ಯವಸ್ಥೆಗೆ ಸಮಸ್ಯೆಯ ಆಳದ ಅರಿವು ಮೂಡಿಸಬೇಕಾದರೆ ಅವರು 162 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಂದೋಳನ ಮಾತ್ರವಲ್ಲದೆ ತಮ್ಮಕಡೆಯಿಂದ ರಚನಾತ್ಮಕ ಸಹಯೋಗ ಕೊಡಬಹುದು. ತಮ್ಮ ಕ್ಷೇತ್ರದ ಸಣ್ಣ-ಸಣ್ಣ ಉದ್ಯೋಗಗಳ ಒಂದು ಅನುಕ್ರಮಣಿಕೆ/ಸೂಚಿಪತ್ರ ಮಾಡಿ ಅದರಲ್ಲಿ ವಿದ್ಯಾರ್ಥಿಗಳ ರೂಪದಲ್ಲಿ ಒಬ್ಬರು ಅಥವಾ ಇಬ್ಬರನ್ನು ಇಡಬಹುದು. ಇಂದು ಬಹಳಷ್ಟು ಉದ್ಯೋಗಗಳು ಹೇಗಿದೆಯೆಂದರೆ ಅದನ್ನೇ ಜೀವನ ನಿರ್ವಾಹದ ಸಾಧನೆಯಾಗಿಸಿಕೊಳ್ಳಬಹುದು. ಆದರೆ ಕಲಿತ ವ್ಯಕ್ತಿಗಳು ಅತಿ ವಿರಳ. ಸಣ್ಣ ಉದ್ಯೋಗಗಳನ್ನು ಸಹ/ಕೂಡ ಸಹಕಾರದ ಆಧಾರದ ಮೇಲೆ ನಡೆಸಬಹುದು. ಸ್ವದೇಶಿ ಭಾವನೆಗಳು ಮತ್ತು ಪಾರಸ್ಪರಿಕ ಸಂಬಂಧಗಳ ಸಹಾಯದಿಂದ ಅವರಿಗೆ ಮಾರುಕಟ್ಟೆ ಕೂಡ ದೊರಕಬಹುದು. ಇದರ ಆಚೆಗೆ ಮತ್ತೂ ರಚನಾತ್ಮಕ ಕಾರ್ಯಗಳನ್ನು ಕೈಯಲ್ಲಿ ತೆಗೆದುಕೊಳ್ಳಬಹುದು. __________ * ಆಕರ : ಪಾಂಚಜನ್ಯ ವಾರಪತ್ರಿಕೆಯ 31-08-1953ರ ಸಂಚಿಕೆಯಿಂದ(ಸಂ.) ಆಗಸ್ಟ್ 47 ಮತ್ತು ಆಗಸ್ಟ್ 56 (ಭಾರತೀಯ ಜನಸಂಘದ ಕಾರ್ಯದರ್ಶಿಗಳು ಲೇಖನದಲ್ಲಿ 1947 ಮತ್ತು ಇಂದಿನ ಪರಿಸ್ಥಿತಿಗಳ ಒಂದು ತುಲನಾತ್ಮಕವಾದ ಅಧ್ಯಯನ ಮಾಡಲಾಗಿದೆ/ ಮಾಡಿರುತ್ತಾರೆ.) ನಮ್ಮ ರಾಷ್ಟ್ರ ಮಾನಸದಲ್ಲಿ 1947ರ ಗುರುತು/ನೆನಪು ಬಲವಾಗಿ ಇದೆ. ಮನೋವೈದ್ಯ ಏನೇ ಹೇಳಿದರು, ನೆನ್ನೆಯ ರೇಖೆಗಳು ಹೊಳೆ ನೀರಿನ ಮೇಲೆ ಎಳೆದ ಗೆರೆಯಂತೆ ಅಳಿಸಿಹೋಗುತ್ತ ಇರುತ್ತವೆ, ಆದರೆ ಯಾವಾಗಾದರೂ ನೀರು ಕೂಡ ಕಲ್ಲಾಗುವ ಸಂಭವವಿದೆ. ಆದರೆ ಕಾಲದ ಗೆರೆಗಳನ್ನು ಅಳಿಸಲಿಕ್ಕೆ ಆಗುವುದಿಲ್ಲ. ವೇದನೆ/ದುಃಖ ಜಾಸ್ತಿಯಾದರೆ, ಹೃದಯ ಕರಗಿ ಕಣ್ಣೀರಿನಂತೆ ಹರಿದರೂ ಈ ರೇಖೆಯನ್ನು ಅಳಿಸಲಿಕ್ಕಾಗುವುದಿಲ್ಲ. 1947ರ ಇಸವಿ ನಮಗೆ ಇಂತಹುದೇ ಆದ ಒಂದು ಸಮಯ. ಅನೇಕ ಆಗಸ್ಟ್‍ಗಳು ಬಂದು ಹೋದವು. ಕಂಪನಿ ಶಾಸನದ ಕೊನೆ ಮತ್ತು ಬ್ರಿಟಿಷ್ ರಾಜ್ಯವನ್ನು ಘೋಷಿಸುವವರೆಗು 15 ಆಗಸ್ಟ್ 1947ರ ಕಾಲವನ್ನು ಆಂಗ್ಲರಿಗೆ ವಿದಾಯ ಹೇಳುವವರೆಗೂ ಸಮಸ್ತ ಮಹಾನ್ ಘಟನೆಗಳು ಮತ್ತು ಮುಖ್ಯವಾದ ರಾಜನೈತಿಕ ಘೋಷಣೆಗಳು ಆಗಸ್ಟ್ ತಿಂಗಳಲ್ಲೇ ನಡೆಯಿತು. ನಾವು ಅವನ್ನು ಮರೆತಿದ್ದೇವೆ. ಐತಿಹಾಸಿಕ ತಜ್ಞರನ್ನು ಬಿಟ್ಟರೆ ಇಂದು ಯಾರಿಗೂ ಇದರ ಜ್ಞಾನವೂ ಇಲ್ಲ, ನೆನಪೂ ಇಲ್ಲ. ಆದರೆ ನಾವು ಆಗಸ್ಟ್ 15, 1947 ದಿವಸವನ್ನು ಮರೆಯುವ ಸಮಯ ಬರುತ್ತದೆಯಾ ? ಅಕಸ್ಮಾತ್ ಯೌವನಾವಸ್ಥೆಯಲ್ಲಿರುವ ಒಬ್ಬ ಯುವಕ ಮೃತಪಟ್ಟರೆ ಅದನ್ನು ಮರೆಯಲು ಪ್ರಯತ್ನಿಸಿದರು ಮರೆಯುವುದು ಕಷ್ಟ. ಇದರ ಜೊತೆ ಅವನೇನಾದರೂ ವಿಧವೆಯನ್ನು ಬಿಟ್ಟು ಹೋದರೆ, ಮನೆಯಲ್ಲಿ ಕುಳಿತು ಅವಳು ಅವನ ತಂದೆ-ತಾಯಿಗಳಿಗೆ ತಮ್ಮ ಮಗನ ನೆನಪು ಮರಳಿ ಮರಳಿ ಕಳಿಸುತ್ತಿರುತ್ತದೆ. ನಮ್ಮ ಸ್ಥಿತಿಯೂ ಸ್ವಲ್ಪ ಮಟ್ಟಿಗೆ ಇದೇ ತರಹ ಇದೆ. ನಮ್ಮ ಲಕ್ಷಾಂತರ ಮಡಿದ ಅಣ್ಣ-ತಮ್ಮಂದಿರು, 9 ವರ್ಷದ ಹಿಂದೆ ನಡೆದ ನರಮೇಧ ಮತ್ತು ವಿಭಜನೆಯ ನೆನಪು ಮಾಡಿಕೊಡುತ್ತಾರೆ. ನಮ್ಮ ಸರ್ಕಾರವು ಸುಧಾರವಾದಿಯದ್ದಾಗಿದೆ. ವಿಧವೆಯ ಪುನಃ ವಿವಾಹ ನಡೆಯಲಾರಂಭಿಸಿದೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಎದುರಾಳಿಯಾಗಿ 164 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಿಲ್ಲಲಿಕ್ಕೆ ತಯಾರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಆಗದಿದ್ದದ್ದು ಈಗ ಆಗುತ್ತದೆಯಾ? 1947ರ ಆಗಸ್ಟ್ ಹೋದರೆ ಹೋಗಲಿ ಬಿಡಿ. ಇಂದು ನನಗೇನೆನಿಸುತ್ತದೆಯೆಂದರೆ 1947 ಆಗಸ್ಟ್‌ನಲ್ಲಿ ಏನು ನಡೆಯಲಿಲ್ಲವೋ, ಅದು ಆಗಸ್ಟ್ 1956ರಲ್ಲಿ ಆಗಲಿದೆ. ಭಾರತದ ಸಾರ್ವಭೌಮ ಅಧಿಕಾರ ಸಂಪನ್ನ ಗಣತಂತ್ರ ಭಾರತದ ಸರ್ವೋಚ್ಛ ಸಂಸ್ಥೆ ಸಂಸದ್ ಭಾರತದ ಪುನಃ ನಿರ್ಮಿಸುವ ವಿಚಾರ ಮಾಡುತ್ತಿದೆ. ಆದರೆ ಇಂತಹ ಒಂದು ಮಹತ್ವಪೂರ್ಣವಾದ ವಿಷಯವನ್ನು ಕುರಿತು ವಿವಾದ ಮಾಡಲಿಕ್ಕೆ ಆಗಸ್ಟ್ ತಿಂಗಳನ್ನೇ ಏಕೆ ಆಯ್ಕೆ ಮಾಡಿದರೋ ಗೊತ್ತಿಲ್ಲ. ಇದನ್ನ ವಿಧಿಯ ಒಂದು ರೀತಿಯೆನ್ನಬೇಕೋ ಅಥವಾ ಆಧುನಿಕ ವಿಧಿಯನ್ನು ತಿಳಿಸುವವರ ಒಂದು ನಿರ್ಮಾಣವೇ? ನಾನು ಜ್ಯೋತಿಷಿಯ ಬಗ್ಗೆ ಅಷ್ಟೊಂದು ಶ್ರದ್ಧೆ ಇಡುವುದಿಲ್ಲ. ಅದರ/ಅವರ ಮಾತಿನಲ್ಲಿರುವ ಸತ್ಯ ಅಥವಾ ಅಸತ್ಯದ ಅಂಶವನ್ನು ಚರ್ಚಿಸುವ ಅರ್ಹತೆ ನನಗಿಲ್ಲ, ಆಸೆ ಆಕಾಂಕ್ಷೆಗಳೂ ಇಲ್ಲ ಮತ್ತು ಅವಶ್ಯಕತೆಯೂ ಇಲ್ಲ. ಆದರೂ ಯಾಕೋ ಏನೋ, ಭಾರತಕ್ಕೆ ಆಗಸ್ಟ್ ತಿಂಗಳು ಸರಿ ಹೊಂದುವುದಿಲ್ಲವೇನೋ ಅಂತ ನನಗೆ ಅನಿಸುತ್ತದೆ. ಹೋದ ವರ್ಷ ಸಹ ಯಾವ ಕೆಲಸ ಜುಲೈ ತಿಂಗಳಲ್ಲಿ ಮಾಡಲಾಯಿತೋ ಅದು ಆಗಸ್ಟ್ ತಿಂಗಳಲ್ಲಿ ಆಗಲಿಲ್ಲ. 22 ಜುಲೈ, 1954ರಲ್ಲಿ ಕೆಲವು ರಾಷ್ಟ್ರವಾದಿಗಳು ದಾದರಾ ಮತ್ತು ನಗರ-ಹವೇಲಿ ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ 15 ಆಗಸ್ಟ್ 1955ರಲ್ಲಿ ನಾವು ಸಹಸ್ರಾರು ಸಂಖ್ಯೆಯಲ್ಲಿ ಗೋವಾಗೆ ಹೋಗಿ ಅಲ್ಲಿ ಅವರ ಕೈಯಲ್ಲಿ ಚೆನ್ನಾಗಿ ಹುರಿಸಿಕೊಂಡು ಬಂದೆವು. ಹೌದು, ಆಗಸ್ಟ್ 1956ರಲ್ಲಿ ಭಾರತದ ರಾಜನೈತಿಕ ಮಾನಚತ್ರದ ಒಂದು ನಿರ್ಧಾರ ನಡೆಯುತ್ತಿದೆ, ಆದರೆ ಅದು ಆಗಸ್ಟ್ 1947ನ್ನು ಮರೆತು ಅಥವಾ ಅದು ಕಡೆಗಾಣಿಸುವ ಸಲುವಾಗಿ ಇರಬಹುದು. ನಮ್ಮ ರಾಜಕಾರಣಿಗಳು ಇತಿಹಾಸದಿಂದ ಏನೂ ಶಿಕ್ಷಣವನ್ನು ಪಡೆಯಬಾರದು ಎಂದು ಶಪಥ/ಪ್ರಮಾಣ ಮಾಡಿದಂತಿದೆ. ಇಂದು ಆಂಗ್ಲರು ಇಲ್ಲ, ಆದರೆ ನಾವು ಅವರು ಹೇಳಿ ಕೊಟ್ಟಿರುವ ಪಾಠವನ್ನು ಮರೆತುಬಿಡುವಷ್ಟು ದ್ರೋಹಿಗಳು ಅಲ್ಲ! ನಮ್ಮ ಭಾರತದಲ್ಲಿ ಅನೇಕ ಭಾಷೆಗಳು ಮೊದಲಿನಿಂದಲೂ ಬಂದಿವೆ, ಆದರೆ ಭಾಷಾವಾದ ಮತ್ತು ಅದರ ಆಧಾರದ ಮೇಲೆ ಭೇದಭಾವದ ಭಾವನೆಗಳು ಮತ್ತು ಭ್ರಮಜನಿತ ರಾಜನೀತಿ ದೇಶದಲ್ಲಿ ಯಾವತ್ತೂ ಇರಲಿಲ್ಲ. ಭಾಷೆಯ ಭೂತವು ತೆಲೆಯಲ್ಲಿ ಎಷ್ಟರ ಮಟ್ಟಿಗೆ ಹೊಕ್ಕಿದೆಯೆಂದರೆ, ಒಳ್ಳೆಯದು-ಕೆಟ್ಟದ್ದು ನಮ್ಮವರು ತಮ್ಮವರು ಬೇರೆಯವರು ಎಂಬ ಯಾವುದೇ ತರಹದ ಜ್ಞಾನವಿಲ್ಲವಾಗಿದೆ. ಆಂಗ್ಲರು ಯಾವ ಬೀಜವನ್ನು ಬಿತ್ತಿದರೋ ಅವರ ಪ್ರತಿಫಲ ಇಂದು ಕಾಣುತ್ತಿದೆ. ಇಂದು ಓರ್ವ ಗುಜರಾತಿಯವನಿಗೆ ಮರಾಠಿಯವನಿಂದ, ಆಗಸ್ಟ್ 47 ಮತ್ತು ಆಗಸ್ಟ್ 56 165 ಬಂಗಾಳದವನಿಗೆ ಬಿಹಾರಿನವನಿಂದ, ಮಳಯಾಳದವನಿಗೆ ಕನಾರಿಯವನಿಂದ ಭಯ ಉಂಟಾಗುತ್ತಿದೆ. ನಮ್ಮವರೇ ಎನಿಸಿಕೊಂಡವರು ನಮ್ಮನ್ನೇ ಭಕ್ಷಿಸಲು ಧಾವಿಸುತ್ತಿದ್ದಾರೆ. ನಾವು ನಮ್ಮ ನೆರಳಿನಿಂದಲೇ ಭಯಪಟ್ಟು ಓಡುತ್ತಿದ್ದೇವೆ. ನೆಹರೂ ಅವರು ತಮ್ಮನ್ನು ಕ್ರಾಂತಿಕಾರಿಯೆಂಬುದನ್ನು ಬಹಳ ಅಧಿಕಾರದಿಂದ ಹೇಳಿಕೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ಅವರು ಕ್ರಾಂತಿಕಾರವಾದ ಹೆಜ್ಜೇಯೇನು ಮುಂದಿಡುತ್ತಿಲ್ಲ. ಆದರೆ ಹೌದು, ನಿಜ, ಅವರು ಆತಂಕಕಾರಿ ಹೆಜ್ಜೆಯನ್ನಂತು ಖಂಡಿತವಾಗಿಯೂ ತೆಗೆದುಕೊಳ್ಳುತ್ತಾರೆ. ಭಾರತದ ಐಕ್ಯತೆ ಎಲ್ಲಾ ಕ್ರಾಂತಿಗಳ ಆಧಾರವಾಗಬಹುದು, ಆದರೆ ಇಂದು ನಾವು ವೈವಿಧ್ಯತೆಯನ್ನು ಆರಾಧಿಸುತ್ತೇವೆ. ಐಕ್ಯತೆಯನ್ನು ಕುರಿತು ಜಪ ಮಾಡ್ತೇವೆ ಆದರೆ ಕೆಲಸ ಮಾಡುವುದಂತೂ ವಿಭಾಜನೆಯದು. ಕಳೆದು ಹೋದ ಯುಗಗಳಲ್ಲಿ ಭಾರತವು ಒಳ ಐಕ್ಯತೆಯನ್ನು ಆರಾಧಿಸಿತು ಮತ್ತು ಹೊರ ವೈವಿಧ್ಯಗಳು ಇದ್ದರೂ ಅದರ ರಕ್ಷಣೆ ಮಾಡಿದರು. ಇಂದು ನಾವು ಇದರ ಮೇಲೆ, ಐಕ್ಯತೆಯ ಪರದೆಯನ್ನು ಹೊದ್ದಿಸಿ, ಬಣ್ಣ ಹಚ್ಚುತ್ತೇವೆ, ಆದರೆ ಒಳಗಿನಿಂದ ವಿಚ್ಛೇಧಿಸುವ ಪ್ರವೃತ್ತಿಯನ್ನು ಬಳಸಿಕೊಳ್ಳುತ್ತಿದ್ದೇವೆ. ಕಾಶ್ಮೀರ ಮತ್ತು ಪಂಜಾಬ್ ಕಾಶ್ಮೀರ ತನ್ನದೇ ಆದ ಸಂವಿಧಾನ, ಅದರ ವಿಶೇಷ ಅಧಿಕಾರಗಳು ನಮ್ಮ ಹೊರ ವಿವಿಧತೆಯನ್ನು ತೋರಿಸುತ್ತದೆಯಾದರೂ, ಮೌಲಿಕವಾದ ವಿಘಟನೆಯ ಪ್ರತೀಕವಾಗಿದೆ. ನೆಹರೂ ಅವರು ಅಸಂಪ್ರದಾಯಕತೆಯ ಮಾತನ್ನು ಆಡುತ್ತಾರೆ. ಆದರೆ ಅವರಿಗೆ ಮುಸಲ್ಮಾನರ ಬಗ್ಗೆ ವಿಶ್ವಾಸವಿಲ್ಲ. ಅವರ ದೇಶಭಕ್ತಿಯನ್ನು ಕುರಿತು ನಂಬಿಕೆಯಿಲ್ಲ. ಅವರಂತೂ ಅದನ್ನು ಕೊಳ್ಳುವ ಇಚ್ಛೆ ಇಡುತ್ತಾರೆ. ಏನಾದರೂ ಒಂದು ಅಧಿಕಾರ ಕೊಟ್ಟು ಅವರ ಬಾಯಿಯನ್ನು ಮುಚ್ಚಿಸುವ ಪ್ರಯತ್ನ ಮಾಡುತ್ತಾರೆ. ಪರಿಣಾಮಸ್ವರೂಪವಾಗಿ ಓರ್ವ ಸತ್ಯವಂತ/ಪ್ರಾಮಾಣಿಕ ಮತ್ತು ದೇಶಭಕ್ತ ಮುಸಲ್ಮಾನನು ಹಿಂದುಳಿಯುತ್ತಾನೆ ಮತ್ತು ಅಧಿಕಾರದ ದಾಹ ಇರುವವನು ಮುಂದೆ ಬರುತ್ತಿದ್ದಾನೆ. ಬಕ್ಷಿ ಮತ್ತು ಅಬ್ದುಲ್ಲಾ ಇಬ್ಬರೂ ಈ ಒಂದು ಪ್ರವೃತ್ತಿಯ ದೃಷ್ಟಾಂತ ಪರಿಸ್ಥಿತಿ ಮತ್ತು ವೃತ್ತಿಯಿಂದ ಇಬ್ಬರಲ್ಲೂ ಡಿಗ್ರಿಯ ವ್ಯತ್ಯಾಸವಿರಬಹುದು. ಆದರೆ ಜಾತಿಯಿಂದಲ್ಲ. ನೆಹರೂ ಅವರು ಕಾಶ್ಮೀರದಲ್ಲಿಯೇನು ಮಾಡಿದರೋ ಅದನ್ನೇ ಪಂಜಾಬಿನಲ್ಲಿ ಮಾಡುತ್ತಿದ್ದಾರೆ. ಸಿಖ್ಖರೂ ಹಿಂದೂ ಸಮಾಜದ ರಕ್ಷಕರು ಹಾಗೂ ಪೇಶವಾ ಆಗಿದ್ದರು. ತಮ್ಮ ತಲೆಯನ್ನು/ಪ್ರಾಣವನ್ನು ಕೊಟ್ಟು ಸಹ ಗುರುಗಳು ಹಿಂದೂ ಧರ್ಮವನ್ನು ರಕ್ಷಿಸಿದರು. ಆದರೆ ಆಂಗ್ಲರು ಹೇಳುತ್ತಾರೆ ಸಿಖ್ಖರೂ ಹಿಂದುಗಿಂದ ಭಿನ್ನರು. ಅಕಾಲರು ಇದನ್ನೇ ಸಮರ್ಥಿಸಿದರು. ಈಗ ಕಾಂಗ್ರೆಸ್ ಶಾಸನವು ಸಿಖ್ಖರೂ ಹಿಂದುಗಳಿಂದ ಭಿನ್ನರು ಎಂದೇ ಹೇಳುತ್ತಾರೆ, "ಬೂದ ಕನ್ನಡಿಯಿಂದ ನೋಡಿದರೆ, ಚಿಕ್ಕ ವಸ್ತು ಕೂಡ ದೊಡ್ಡದಾಗಿ ಕಾಣುತ್ತದೆ". ನೆಹರೂ 166 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅವರು ಅಕಾಲರ ಮುಂದೆ ಬಗ್ಗಿದರು. ಪಂಜಾಬಿನಲ್ಲಿ ಪಂತ್ ಅವರು ರೀಜಿನಲ್ ಫಾರ್ಮುಲಾ ಕಂಡುಕೊಂಡರು. ಪಂಜಾಬಿನಲ್ಲೇ ಈ ಫಾರ್ಮುಲಾ ಏಕೆ ಬಂತು? ಅಲ್ಲಿನ ವಿಶೇಷತೆ ಏನು? ಹಿಂದೂ ಮತ್ತು ಸಿಖ್ಖರು ಒಂದೇ ಆಗಿದ್ದರೆ ಅವರ ಜೊತೆ ಈ ತರಹದ ರಾಜನೈತಿಕ ಪಕ್ಷಪಾತ ಯಾತಕ್ಕಾಗಿ ? ಆದರೆ ನೆಹರೂ ಅವರದ್ದು ನುಡಿ ಮತ್ತೆ ನಡತೆಯಲ್ಲಿ ಅಂತರವಿದೆ. ಅವರು ಸಿಖ್ಖರನ್ನು ಹಿಂದುಗಳಿಂದ ಬೇರ್ಪಡಿಸುವುದರಲ್ಲಿ ನಿರತರಾಗಿದ್ದಾರೆ. ಮುಂಬಯಿಯನ್ನು ಕೇಂದ್ರ ಶಾಸಿತವಾಗಿಡಲು ಪ್ರಯತ್ನ ನಡೆಯುತ್ತಿತ್ತು. ಯಾಕೆ ? ಗುಜರಾತಿಗಳನ್ನು ರಕ್ಷಿಸುವ ಸಲುವಾಗಿಯೇನು ? ನಗು ಬರುತ್ತದೆ ! ಸಹೋದರನನ್ನು ಸಹೋದರನಿಂದ ರಕ್ಷಿಸುವುದಕ್ಕೆ ರಾಜಕಾರಣಿ ಯಾಕೆ ಮೂಗು ತೂರಿಸಬೇಕು? ಯಾವ ಗುಜರಾತಿನಲ್ಲಿ ಮಹರ್ಷಿ ದಯಾನಂದರು, ಮಹಾತ್ಮಾ ಗಾಂಧೀ ಮತ್ತು ಸರದಾರ ಪಟೇಲರಂತಹವರು ಜನಿಸಿದರೋ, ಅದರ ರಕ್ಷಣೆ ಮುಂಬಯಿಯನ್ನು ಕೇಂದ್ರ ಶಾಸಿತವಾಗಿ ಇಟ್ಟುಕೊಂಡು ಮಾಡಲಾಗುವುದಿಲ್ಲ. ಯಾರಾದರು ನನ್ನ ರಕ್ಷಕರೆಂದು ಸಾರಿ ಹೇಳುವ ಪ್ರಯತ್ನ ಮಾಡ್ತಾರೋ, ಆವಾಗ ನನಗೆ ಬಹಳ ಅವಮಾನವಾದಂತೆ ಭಾಸವಾಗಿ ನನ್ನ ಮನಸ್ಸು/ನನ್ನ ಆತ್ಮ ವಿದ್ರೋಹ ಮಾಡುವಂತಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರವನ್ನು ವಿಭಜಿಸುವ ಅವಶ್ಯಕತೆಯೇನಿತ್ತು. ? ಇಂದು ಏನು, ಯಾವ ವಿಧಾನವು ಬಳಕೆಯಲ್ಲಿ ಬರ್ತಿದೆಯೋ, ಅದರ ವ್ಯವಸ್ಥೆ ಮತ್ತು ಧಾರೆಗಳನ್ನು ಗಮನಿಸಿದಾಗ ಯಾವ ಒಂದು ಅಭ್ಯಾಸ ಮನೆ ಮಾಡಿಕೊಳ್ಳುತ್ತಾ ಇವೆಯೋ, ಅದು ಸ್ವಲ್ಪ ಚಿಂತೆಗೆ ಕಾರಣವಾಗುತ್ತಿದೆ. ಏಕಾತ್ಮಕ ಮತ್ತು ಸಂಘಾತ್ಮಕ ಸಂವಿಧಾನ ಸೈದ್ಧಾಂತಿಕವಾಗಿ ಚರ್ಚೆಯ ವಿಷಯ ಆಗಬಹುದು. ಸಂಘಾತ್ಮಕ ಸಂವಿಧಾನ ಇಟ್ಟುಕೊಂಡೇ ನಾವು ಏಕಾತ್ಮಕತೆಯ ಪರಿಚಯವನ್ನು ನೀಡಬಹುದು ಮತ್ತು ಏಕಾತ್ಮಕ ವಿಧಾನದಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇಂದು ವಿಷದ ಬೀಜಗಳು ಬಿತ್ತಲಾಗುತ್ತಿದೆ. ದುಃಖದ ವಿಷಯವೇನೆಂದರೆ ಪ್ರಪಂಚದ ಪ್ರತಿಯೊಂದು ಸಮಸ್ಯೆಯ ಸುಳಿವು ನೆಹರೂ ಅವರಿಗೆ ತಿಳಿಯುತ್ತೆ ಎನ್ನುವವರಿಗೆ ತಮ್ಮ ಕಣ್ಣಿನ ಕೆಳಗಿನ ಭಾಗ ಕಾಣೋದಿಲ್ಲವಲ್ಲ. ಇದು ಆಗಸ್ಟ್ ತಿಂಗಳಿನ ಪ್ರಭಾವವಲ್ಲ ತಾನೆ ? ಆಗಸ್ಟ್ 1947 ಮತ್ತು ಆಗಸ್ಟ್ 1956ರ ಯುದ್ಧದಲ್ಲಿ ಯಾರು ವಿಜಯೀ ಆಗುತ್ತಾರೋ ಎನ್ನುವುದು ಭವಿಷ್ಯ ಹೇಳುತ್ತದೆ ? _____________ * ಆಕರ : ಪಾಂಚಜನ್ಯ ವಾರಪತ್ರಿಕೆಯು 1956ರಲ್ಲಿ ಪ್ರಕಟಿಸಿದ 1947ರ ಸಂಚಿಕೆ ಎಂಬ ವಿಶೇಷಾಂಕದಿಂದ (ಸಂ.) ಪಂಡಿತ್ ನೆಹರೂ ಚೀನಾದ ಎದುರು ಸಮರ್ಪಣೆ ಭಾರತದ ಚೀನಿ-ನೀತಿಯನ್ನು ನಿರ್ಧರಿಸುವವರು ಪಂ.ನೆಹರೂ ಅಥವಾ ಶ್ರೀ ಮೆನನ್ ಅವರೆ ? ಪ್ರಧಾನ ಮಂತ್ರಿ ಪಂ. ನೆಹರೂ ಅವರು ಚೀನಾದ ಪ್ರಧಾನಮಂತ್ರಿಯವರಿಗೆ ಬರೆದ ಕೊನೆಯ ಪತ್ರ, ಸಾಕಷ್ಟು ಕುಂದು-ಕೊರತೆಗಳಿದ್ದರೂ ಸಹ, ಹಿಂದಿನ ಎಲ್ಲಾ ಪತ್ರಗಳಿಗಿಂತ ಉತ್ತಮವಾದದ್ದೆಂದು ಹೇಳಬಹುದಾಗಿದೆ. ಆದರ ಮೂಲಸ್ವರ ದೃಢವಾಗಿತ್ತು ಮತ್ತು ಭೌಗೋಳಿಕ ಕಥೆ, ಐತಿಹಾಸಿಕ ರೆಕಾರ್ಡ್ ಮತ್ತು ಪರಂಪರೆಗಳ ಮೇಲೆ ಆಧರಿಸಿತ್ತು. ಇದರ ಮೂಲಕ ಚೀನಾ ದೇಶದವರಿಗೆ ನಿಃಸಂಕೋಚವಾದ ಭಾಷೆಯಲ್ಲಿ, ಎಲ್ಲಿಯವರೆಗೆ ಅವರು ಪೂರ್ವ ಲಢಾಕ್ ಮತ್ತು ನೇಫಾದ ಲಾಂಗ್‍ಜೂ ಮತ್ತು ಭಾರತದ ಅನ್ಯ ಚೌಕಿಗಳ ಮೇಲೆ ಅನ್ಯಾಯದಿಂದ ಅಧಿಕಾರ ಜಮಾಯಿಸಿಕೊಂಡು ಇರುತ್ತಾರೋ, ಅಲ್ಲಿಯವರೆಗೂ ಗಡಿ-ವಿವಾದವನ್ನು ಕುರಿತು ಯಾವುದೇ ತರಹದ ಒಪ್ಪಂದದ ಮಾತು ಪ್ರಾರಂಭಮಾಡಲಾಗುವುದಿಲ್ಲವೆಂದು ಹೇಳಲಾಗಿತ್ತು. ಆ ಪತ್ರವನ್ನು ತಯಾರು ಮಾಡುತ್ತಿರುವಾಗ ಸ್ವಲ್ಪ ಅಧಿಕ ಕಷ್ಟ ಮತ್ತು ಜಾಗರೂಕತೆಯನ್ನು ವಹಿಸಿದ್ದಿದ್ದರೆ ಬಹುಶಃ ಆ ಪತ್ರದ ಭಾಷೆ ಮತ್ತು "ಅನ್ಯ ಸ್ಥಾನಗಳು" ಎಲ್ಲಿ ಚೀನಾದವರು ನುಗ್ಗಿ ಬಂದಿದ್ದಾರೋ, ಅದನ್ನು ಕುರಿತು ಯಾವ ಸ್ವಲ್ಪ ಮಟ್ಟಿಗೆ ಇರುವ ಅಸ್ಪಷ್ಟತೆ ಮತ್ತು ಸಡಿಲ ಉಳಿದು ಹೋಗಿದೆಯೋ ಅದು ದೂರವಾಗುತ್ತಿತ್ತು. ಚೀನಿಯರವರು ರಸ್ತೆಯನ್ನು ನಿರ್ಮಿಸಿರುವ ಅಕ್ಸಾಚಿನ್ ಕ್ಷೇತ್ರದಿಂದ ಚೀನಿ ಅಧಿಕಾರವನ್ನು ತೆಗೆಸುವ ಬೇಡಿಕೆಯ ಉಲ್ಲೇಖವನ್ನು ಬೇಕೆಂತಲೆ ಬಿಡಲಾಗಿದೆ. ಇದರಿಂದ ಯಾರಾದರೂ ಒಂದು ನಿಷ್ಕರ್ಷಕ್ಕೆ ಬರಲು ಬಾಧ್ಯರಾಗುತ್ತಾರೆ. ಏನೆಂದರೆ ಭಾರತ ಸರ್ಕಾರವು ಈ ಕ್ಷೇತ್ರದ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುವ ಆಸೆ ಆಕಾಂಕ್ಷೆಗಳನ್ನೇನೂ ಇಟ್ಟುಕೊಂಡಿಲ್ಲ. ಇದು ಖಂಡಿತವಾಗಿಯೂ ತಲೆಕೆಡಿಸುವ ಮಾತು 'ಉತ್ತರದಾಯಿತ್ವ' ಮತ್ತು 'ಸಮರ್ಪಣೆ' ಆದರೆ ಪ್ರಧಾನ ಮಂತ್ರಿಯವರ ಹೊಸದಾದ ಘೋಷಣೆಯು, ಭಾರತವು ಚೀನಿಯರಿಂದ ಇಲ್ಲಿಯವರೆಗು ಅಧಿಕೃತ ಭೂಮಿಯನ್ನು ಮುಕ್ತ/ಸ್ವತಂತ್ರಗೊಳಿಸುವುದಕ್ಕೆ 168 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತನ್ನ ಶಕ್ತಿಯ ಪ್ರಯೋಗವನ್ನು ಮಾಡುವುದಿಲ್ಲ ಎಂಬ ಪತ್ರದ ಸಂಪೂರ್ಣ ಒಳ್ಳೆ ಪ್ರಭಾವವನ್ನು ಮುಗಿಸಿದ್ದಾರೆ. ಪಂ. ನೆಹರು ಅವರು ಯಾವ ಸಮಯದಲ್ಲಿ ಸಮಸ್ಯೆಗೆ ಒಂದು ರಾಜನೈತಿಕ ಸಮಾಧಾನ ಹುಡುಕಲಾಗುತ್ತಿದೆಯೋ, ಆ ಸಮಯದಲ್ಲಿ 'ಸೈನಿಕ' ಹೆಜ್ಜೆಯನ್ನು ಮುಂದಿಡುವುದು ಸರಿಯಿರಲಾರದು ಎಂದು ತಿಳಿದಿದ್ದರು. ಆದರೆ 'ಅನುತ್ತರ ದಾಯಿತ್ವ' ಪದವು 'ನಿಷ್ಕ್ರಿಯತೆ ಮತ್ತು ಸಮರ್ಪಣೆ' ಯ ಸಮಾನಾರ್ಥ ಪದವಾಗಿದ್ದರೆ ಆಗ ಪಂ. ನೆಹರೂರವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದಾಗಿತ್ತು. ಆದರೆ ವಾಸ್ತವಿಕವಾಗಿ ದಾಳಿ ಮಾಡಿದವರನ್ನು ಬಲಪೂರ್ವಕವಾಗಿ ಹಿಂದೂಡುವುದೇ ಉತ್ತರದಾಯಿ ವ್ಯವಹಾರ, ಅನುತ್ತರದಾಯಿ ಅಲ್ಲ. ಚೀನಾದವರೇನು ಮೋಸದಿಂದ ನಮ್ಮ ಗಡಿ ಲಾಂಗ್ ಚೂ ಮೇಲೆ ಅಧಿಕಾರವೇನು ಪಡೆದಿಲ್ಲ. ನಿಜವೇನೆಂದರೆ ಅವರು ನಮ್ಮ ಅಧಿಕಾರಿಗಳನ್ನು ಬಲಪೂರ್ವಕವಾಗಿ ಅದುಮಿ ತಮ್ಮ ಅಧಿಕಾರವನ್ನು ಪಡೆದುಕೊಂಡರು. ಪಂ. ನೆಹರೂ ಅವರು ನಮ್ಮ ಪ್ರಯತ್ನಗಳಿಂದ ಅದನ್ನು ವಾಪಸ್ಸು ತೆಗೆದುಕೊಳ್ಳುವುದಕ್ಕೆ ಕಟ್ಟುಬಿದ್ದಿರಲಿಲ್ಲವೋ ಅವಾಗ ಅವರು ಚೈನಾದವರಿಗೆ ಎಚ್ಚರಿಕೆ ಕೊಡುವುದು ನಿಜವಾಗಿಯೂ ನಿರರ್ಥಕ, ಅದೂ ಮುಂಬರಲಿರುವ ದಾಳಿ ಮಾಡುವವರನ್ನು ಪ್ರತಿರೋಧಿಸುವುದಿಲ್ಲವೆಂದು ಬೇರೆ ಹೇಳಿಕೆ! ಅವರ ಮಾತುಗಳ ಸಮಸ್ತ ಬಲ, ಯಾವತ್ತು ಅವರು ಮುಂಚೇನೆ ದಾಳಿಯಲ್ಲಿ ಸಿಕ್ಕ ಕ್ಷೇತ್ರದ ರಕ್ಷಣೆಗೆ ಬಲಪ್ರಯೋಗದ ವಿಚಾರವನ್ನು ತ್ಯಜಿಸುವಂತೆ ಘೋಷಣೆ ಮಾಡಿಬಿಟ್ಟರೋ ಅಂದೇ ಕಸಿದು ಬಿತ್ತು. ಈ ರೀತಿ ಮಾಡುವುದಾದರೆ ಯುದ್ಧ ಪ್ರಾರಂಭವಾಗಬಹುದು. ವಿಶ್ವದಲ್ಲೆಲ್ಲಾ 'ಸಮರ್ಪಣೆ ಮತ್ತು ತಗ್ಗಿ ಬಗ್ಗುವಿಕೆ' ಎಂಬ ಉದಾಹರಣೆಗಳ ವಿರುದ್ಧ ತರ್ಕ ನಡೆಯುತ್ತಿದೆ. ಅಕಸ್ಮಾತ್ ನಾಳೆ ಚೈನಾ ಧಾಳಿ ಮುಂದುವರೆದರೆ ಪಂ. ನೆಹರೂರವರು ತಮ್ಮ ಬೆದರಿಕೆಯ ಪ್ರಕಾರ ಮೇಲ್ಕಂಡ ಸವಾಲುಗಳನ್ನು ಎದುರಿಸಲು ಭಾರತದ ಸೈನ್ಯ ಪಡೆಯ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತಾರೆಯೇ? ಇದರಿಂದಲೂ ಯುದ್ಧ ಶುರುವಾಗಬಹುದು. 'ರಾಜನೈತಿಕ' ಮತ್ತು 'ಸೈನಿಕ' ಒಪ್ಪಂದ ಪಂ. ನೆಹರೂರವರು 'ರಾಜನೈತಿಕ' ಮತ್ತು 'ಸೈನಿಕ' ಒಪ್ಪಂದ ಅಂತಹ ಪದಗಳನ್ನು ಪರಸ್ಪರ ಸಂಬಂಧವೇ ಇಲ್ಲವೇನೋ ಎಂಬಂತೆ ಬಳಸಿದ್ದಾರೆ. ಅನೇಕ ಬಾರಿ ಸೈನಿಕ ದಳವೇ ರಾಜನೈತಿಕ ಒಪ್ಪಂದದ ಮಾರ್ಗವನ್ನು ಪ್ರಶಸ್ತಗೊಳಿಸುತ್ತದೆ. ಇದೇನಾದರೂ ಕಾನೂನಿಗೆ ಸಂಬಂಧಪಟ್ಟಂತಹ ಒಪ್ಪಂದವಾಗಿದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ನಾವು ಯಾವುದೇ ಕಾನೂನು ಕಛೇರಿಯಲ್ಲಿ ದೂರು ಹೇಳಿಲ್ಲ. ಈ ಸ್ಥಿತಿಯಲ್ಲಿ ವಿಷಯ ಕಛೇರಿಯ ಅಧೀನದಲ್ಲಿರುವುದರಿಂದ ನಮ್ಮ ಪಂಡಿತ್ ನೆಹರೂ ಚೀನಾದ ಎದುರು ಸಮರ್ಪಣೆ 169 ಕಡೆಯಿಂದ ಯಾವುದೇ ಹೆಜ್ಜೆಯನ್ನು ಮುಂದಿಡುವುದು ತಪ್ಪು ಎಂದೆನೆಸಿಕೊಳ್ಳುತ್ತದೆ. ಬಹುಶಃ ನಾವು ರಾಷ್ಟ್ರ ಮಟ್ಟದ ಕಾನೂನನ್ನು, ಅಂತರರಾಷ್ಟ್ರೀಯ ಮಟ್ಟದ ಸಮಸ್ಯೆಗಳಿಗೆ ಸಮಾಧಾನ ಹುಡುಕುವ ಸಮಯವನ್ನು ಸಹ ಸೀಮಿತಗೊಳಿಸುತ್ತಿದ್ದೇವೆ. ನಾವು ನಮ್ಮ ಉತ್ತರದಿಕ್ಕಿನ ಗಡಿಯಲ್ಲಿ ನಮ್ಮ ಸೈನ್ಯದ ನಿಯುಕ್ತಿಯನ್ನು ಅದರ ಉಪಸ್ಥಿತಿಯ ಪ್ರಭಾವ ಚೈನಾದ ದುಸ್ಸಾಹಸವನ್ನು ತಡೆಯುವದಕ್ಕೆ ಅನುಕೂಲವಾಗುತ್ತದೆಯೆಂದೇ ತಿಳಿದು ಮಾಡಲಾಗಿತ್ತು. ಲಾಂಗ್ ಚೂ ಮೇಲೆ ಪುನಃ ಅಧಿಕಾರವನ್ನು ಪ್ರಯೋಗಿಸಿ ನಾವು ನಮ್ಮ ಗಡಿಯ ರಕ್ಷಣೆಯನ್ನು ಕುರಿತು ಬಹಳ ಗಂಭೀರವಾಗಿ ಯೋಚಿಸುತ್ತಿದ್ದೇವೆಂದು ನೇರವಾಗಿ ಪ್ರದರ್ಶಿಸುತಿದ್ದೆವು. ಮಾರ್ಗದರ್ಶಕರು ಯಾರು? ಪ್ರಧಾನಮಂತ್ರಿಯವರಿಗೆ ಈ ವಿಷಯವನ್ನು ಕುರಿತು ಘೋಷಣೆಯನ್ನು ಮಾಡುವ ಸದ್ಭುದ್ಧಿ ಎಲ್ಲಿಂದ ಬಂತು ಎಂದು ತಿಳಿಯುವುದು ಬಹಳ ಕಷ್ಟ. ವಾಸ್ತವವಾಗಿ ಈ ವಿಷಯದಲ್ಲಿ ಶ್ರೀ ವಿ.ಕೆ. ಕೃಷ್ಣಮೆನನ್‍ರವರು ಪ್ರಧಾನಮಂತ್ರಿಯವರ ಮೊದಲೇ ಈ ನಿಟ್ಟಿನಲ್ಲಿ ಮುಂದುಹೆಜ್ಜೆ ಹಾಕಿದ್ದರು. ಪ್ರಧಾನಮಂತ್ರಿಯವರಿಂದ ಪ್ರೆಸ್ ಕಾನ್‍ಫೆರೆನ್ಸ್‍ನಲ್ಲಿ ಈ ವಿಚಾರ ಪ್ರಕಟಿಸುವ ಮೊದಲೇ ಅವರು ಅಮೆರಿಕಾದಲ್ಲಿ ಇದನ್ನು ಘೋಷಿಸಿಬಿಟ್ಟಿದ್ದರು. ಶ್ರೀ ಮೆನನ್‍ರವರು ತಮ್ಮ ಸ್ವಂತ ಯೋಜನೆಯ ಪ್ರಕಾರ ಪ್ರಧಾನಮಂತ್ರಿಯವರ ದೃಢ ಸ್ವರವನ್ನು ಮುಂದೆ ಬಾರದಿರುವಂತೆ ತಮ್ಮ ಮರ್ಯಾದೆಯನ್ನು ಮೀರುತ್ತ ಇಂತಹ ಘೋಷಣೆಯನ್ನು ಇಷ್ಟು ಅವಸರವಾಗಿ ಮಾಡಿದರೇ? ಭಾರತ ಸರ್ಕಾರದ ನೀತಿಗಳನ್ನು ನಿರ್ಧರಿಸುವವರು ಯಾರು? ಪ್ರಧಾನ ಮಂತ್ರಿಯವರೋ ಅಥವಾ ಶ್ರೀ ವಿ.ಕೆ. ಮೆನನ್‍ರವರೋ? ಈ ವಿಷಯದಲ್ಲಿ ಶ್ರೀ ಮೆನನ್‍ರವರು ನಮ್ಮ ಚೈನಾದ ನೀತಿಯನ್ನು ಕೇವಲ ದುರ್ಬಲಗೊಳಿಸಿದರು ಮತ್ತು ಭಾಷಣದಿಂದ ಚೈನಾದವರಿಗೆ, ಭಾರತದಿಂದ ಎಂತಹ ಕಠಿಣವಾದ ಪತ್ರ ಬಂದರೂ ಗಾಬರಿ ಪಡುವುದು ಬೇಕಿಲ್ಲವೆಂದು ಆಶ್ವಾಸನೆ ಕೊಟ್ಟುಬಿಟ್ಟಿದ್ದರು. ಚೈನಾದ ಐದೂ ಬೆರಳುಗಳು ತುಪ್ಪದಲ್ಲಿ ಮೇಲ್ಕಂಡ ಪತ್ರ ಹಾಗೂ ನಮ್ಮ ಮುಂಬಂದ ಘೋಷಣೆಗಳಲ್ಲಿ ಪರಸ್ಪರ ವಿರೋಧಿಸುವ ಸ್ಥಿತಿಯನ್ನು ಜಾರಿಗೊಳಿಸಲಾಗಿದೆ. ನಾವು ಗಡಿವಿವಾದದ ಶಾಂತಿಪೂರ್ಣ ಪರಿಹಾರ ಬಯಸುತ್ತೇವೆ. ಇದರ ಅರ್ಥವೇನೆಂದರೆ ನಾವು ಕೇವಲ ಚಿಕ್ಕ-ಪುಟ್ಟ ಬದಲಾವಣೆಗಳನ್ನು ತರಲು ಸಿದ್ಧರಿದ್ದೇವೆ. ಏಕೆಂದರೆ ಭಾರತದ ಭೂಮಿಯು ವಿಶಾಲ ಭಾಗಗಳಲ್ಲಿ ಚೀನಿಯರ ಬೇಡಿಕೆಗಳನ್ನು ಅನುಚಿತವೆಂದೇ 170 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಾವು ತಿರಸ್ಕರಿಸಿದ್ವೆವು. ಯಾವುದೇ ತರಹದ ಒಪ್ಪಂದಕ್ಕೆ ಉತ್ಸಾಹವನ್ನು ತೋರಿಸುವ ಅವಶ್ಯಕತೆ ಚೈನಾಗೆ ಇಲ್ಲ. ಏಕೆಂದರೆ ಅದು ಮೊದಲೇ ಇಂತಹ ಕ್ಷೇತ್ರಗಳ ಮೇಲೆ ಅಧಿಕಾರವನ್ನು ಪಡೆದುಕೊಂಡಿದೆ. ಗಡಿಯನ್ನು ಕುರಿತು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಏನಾದರೂ ವೈಜ್ಞಾನಿಕ ಪ್ರಯಾಸವನ್ನು ಮಾಡಿದರೆ, ಅದನ್ನು ಬಿಡಬೇಕಾಗುತ್ತದೆ. ಯಾವುದನ್ನು ಅದು ಮೊದಲೇ ತನ್ನ ಅಧಿಕಾರದಲ್ಲಿ ಪಡೆದುಕೊಂಡಿದೆಯೋ ಅದನ್ನು ಯಾಕೆ ಕಳೆದುಕೊಳ್ಳುತ್ತದೆ, ವಿಶೇಷವಾಗಿ ಇಂತಹ ಅಧಿಕಾರದಿಂದ ಅದನ್ನು ವಂಚಿತಗೊಳಿಸಲಿಕ್ಕೆ ಯಾವುದೇ ತರಹದ ಶಕ್ತಿಯ ಪ್ರಯೋಗವನ್ನು ಮಾಡಲಾಗುವುದಿಲ್ಲ ಎಂದು ತಿಳಿದೂ ಸಹ ! ನಮಗೆ ತಿಳಿದಿರುವಂತೆ ನಾವು ಮೊದಲೇ ತಾಮ್‍ದೀನ್‍ನನ್ನು ಅವರಿಗೆ ಕೊಟ್ಟದ್ದಾಗಿದೆ. ಯಾಕೆಂದರೆ ಪಂ. ನೆಹರೂರವರ ಹೇಳಿಕೆಯಂತೆ ಇದು ಮೈಕ್‍ಮೋಹನದ ರೇಖೆಯ ಇನ್ನೊಂದು ಪಕ್ಕಕ್ಕೆ ಇದೆ. ಆದ್ದರಿಂದ ಚೈನಾಗೆ ಒಪ್ಪಂದದ ಮಾತುಗಳಿಂದ ಏನೂ ಹೆಚ್ಚು ದೊರೆಯುವುದಿಲ್ಲ. ಮತ್ತು ಒಪ್ಪಂದ ಆಗದೆ ಇರುವ ಪಕ್ಷದಲ್ಲಿ ಏನೂ ಕಸಿದುಕೊಂಡಂತಿಲ್ಲ. ನಾವು ಸಂಯುಕ್ತ ರಾಷ್ಟ್ರ ಸಂಘದಲ್ಲಿ ಅದರ ವಕಾಲತ್ತನ್ನು ಮಾಡೇ ಮಾಡುತ್ತಲೇ ಇದ್ದೇವೆ. ಟಿಬೆಟಿನ ಜೊತೆ ನಿರಂತರ ದ್ರೋಹ ಬಗೆದು ನಾವು ಚೈನಾ ದಳದ ಅನುಕರಣೆ ಮಾಡುತ್ತಲೇ ಇದ್ದೇವೆ. ಒಳ ವಿಷಯದಲ್ಲೂ ಕೂಡ ನಾವು ಚೀನಿ-ಸಮರ್ಥಕ ಹಾಗೂ ರಾಷ್ಟ್ರದ್ರೋಹಿ ತತ್ವಗಳನ್ನು, ಪೂರ್ಣ ಸ್ವಾತಂತ್ರ್ಯ ಕೊಟ್ಟಿರುವುದನ್ನು, ಮೈಕ್ ಮೋಹನ್ ರೇಖಾಗೆ ಮಾನ್ಯತೆ ಕೊಡುವುದಕ್ಕೆ ಮತ್ತು ಚೈನಾವನ್ನು ಧಾಳಿ ಮಾಡುವವರು ಎಂದು ಹೇಳಲು/ಕರೆಯಲು ನಿರಾಕರಿಸುವುದು, ಇವು ಭಾರತ-ಚೈನಾ ನಡುವೆ ಇರುವ ಮೈತ್ರಿಯ ಹೆಸರಿನಲ್ಲಿ ನಮ್ಮ ನ್ಯಾಯ ಸಮ್ಮತ ರಾಷ್ಟ್ರೀಯ ಹಿತವನ್ನು ಬಲಿಕೊಟ್ಟು ಮತ್ತು ನಮ್ಮ ಭೂಮಿಯ ವಿಶಾಲ ಖಂಡಗಳನ್ನು ಚೈನಾಗೆ ಸಮರ್ಪಿಸುವ ವಕಾಲತ್ತು ನಡೆಸುತ್ತಿರುವವರು. ಇದು ಜನತೆಯನ್ನು ದಿಗ್ಭ್ರಮೆಗೊಳಿಸುತ್ತಿದೆ ಮತ್ತು ಅರಾಜಕತೆಯ ಸ್ಥಿತಿಯನ್ನು ನಿರ್ಮಾಣ ಮಾಡಿ ರಾಷ್ಟ್ರೀಯ ಐಕ್ಯತೆಯನ್ನು ಬಲಹೀನ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಚೈನಾದ ಕಮ್ಯುನಿಸ್ಟ್ ಸರಕಾರಕ್ಕೆ ನಮ್ಮೊಡನೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಮತ್ತು ನಮ್ಮ ಕ್ಷೇತ್ರಗಳ ಮೇಲಿರುವ ಅಧಿಕಾರವನ್ನು ತೆಗೆಯುವುದಕ್ಕೆ ಬಲವಂತ ಮಾಡಿದರೇ? ಭವಿಷ್ಯದಲ್ಲಿ ನಮ್ಮ ಗಡಿ ಪ್ರದೇಶದಲ್ಲಿ ಮತ್ತಷ್ಟೂ ಅತಿಕ್ರಮಣ ಮಾಡಲಾರರು ಎಂಬುದಿರಬಹುದು. ಸರಿಯಾದ ಸಮಯದ ನಿರೀಕ್ಷೆಯಲ್ಲಿದ್ದು ದಾಳಿ ಮಾಡಲೂ ಇರಬಹುದು. ಶೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳುವುದು ಅವಶ್ಯಕ. "ಚೈನಾ ಮತ್ತು ಭಾರತದ ನಡುವೆ ಗಡಿ-ವಿವಾದವನ್ನು ಪರಿಹರಿಸಲು ಸಾಕಷ್ಟು ಸಮಯದ ಅವಶ್ಯಕತೆ ಇರಬಹುದು" ಎಂದು ಪಂ.ನೆಹರೂರವರು ಪಂಡಿತ್ ನೆಹರೂ ಚೀನಾದ ಎದುರು ಸಮರ್ಪಣೆ 171 ಹೇಳಿದ್ದಾರೆ. ಸಹಜವಾಗಿ ಈ ಪೂರ್ಣ ಅವಧಿಯಲ್ಲಿ ಒತ್ತಡ ಇದ್ದೇ ಇರುತ್ತದೆ ಮತ್ತು ನಮ್ಮ ಸೇನಾಪಡೆಯು ಉತ್ತರ ಗಡಿಯ ರಕ್ಷಣೆಯಲ್ಲಿ ಬಹಳ ಸಕ್ರಿಯರಾಗಿರಬೇಕು. ಈ ಸತತ ಒತ್ತಡ ಖಂಡಿತವಾಗಿಯೂ ಶಾಂತಿತರುವ ಪ್ರಯಾಸಗಳಲ್ಲಿ ಬಾಧೆ ಉಂಟುಮಾಡಬಹುದು. ಸಂಪೂರ್ಣ ಉತ್ತರದ ಗಡಿಯಲ್ಲಿ ಸೈನ್ಯೆಯ ನಿಯುಕ್ತಿಯು ಸ್ಥಾಯಿ ವ್ಯಯದ ಅರ್ಥದಲ್ಲಿ ಇರುತ್ತದೆ. ಈ ಸಮಸ್ಯೆಯ ಪರಿಹಾರ ಅತಿ ಶೀಘ್ರವಾಗಿ ಮಾಡುವುದು ನಮ್ಮ ಹಿತಕ್ಕೆ ಅತ್ಯಾವಶ್ಯಕ. ಈ ವಿಷಯವನ್ನು ಕುರಿತು ಪರಿಹಾರವನ್ನು ಬೇರೊಂದು ದಿವಸಕ್ಕೆ ಮುಂದೂಡಲಾಗದು. ನಾವು ಚೈನಾ ಮೇಲೆ ಸ್ವಲ್ಪ ದಬ್ಬಾಳಿಕೆ ಮಾಡಿ ಅದನ್ನು ಕಾನೂನಿಗೆ ವಿರುದ್ಧವಾದಂತಹ ಅಧಿಕಾರದ ಕ್ಷೇತ್ರಗಳಿಂದ ಸರಿಯಲು ವಿವಶಪಡಿಸಿದರೆ ಬಹುಶಃ ಇದು ಸ್ಪಷ್ಟ ರೂಪದಲ್ಲಿ ಸಂಭವಿಸಬಹುದು. ವಿರೋಧ ಪತ್ರವು ಮತ್ತು ಪತ್ರವು ಪುರ್ತಗಾಲರನ್ನು ಗೋವ ಬಿಟ್ಟು ಹೋಗುವಂತೆ ಒತ್ತಾಯ ಮಾಡಲಾಗಲಿಲ್ಲ ಮತ್ತು ಪಾಕಿಸ್ತಾನ್‍ರವರಿಗೆ ತುಕೇರ್‍ಗ್ರಾಮ ಖಾಲಿ ಮಾಡಲಾಗದಂತೆ ಭಾರತ ಸರ್ಕಾರವು ತನ್ನ ವಿರೋಧದಿಂದ ನಮ್ಮ ಭೂಮಿಯ ಮೇಲೆ ಚೈನಾ ಅಧಿಕಾರದ ತಥ್ಯಗಳಿಗೆ ಮಾನ್ಯತೆ ಕೊಟ್ಟಿದ್ದಾರೆ. ಅದರ ಔಪಚಾರಿಕ ವಿರೋಧ ಪತ್ರಗಳಿಂದ ಯಾವುದೇ ಭಾವೀ ಸರ್ಕಾರಕ್ಕೆ ಈ ಕ್ಷೇತ್ರಗಳ ಪುನಃಪ್ರಾಪ್ತಿಯ ದೃಷ್ಟಿಯಿಂದ ಸಹಾಯ ಸಿಗಬಹುದು. ವರ್ತಮಾನ ಸರ್ಕಾರದ ವಿಚಾರ ಬಂದಾಗ ಅದನ್ನು ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಭಾರತದ ಭೂಪಟದಿಂದಲೇ ತೆಗೆದು ಹಾಕಬೇಕು. ಪ್ರಧಾನಮಂತ್ರಿಯವರ ಬಿಸಿ- ಬಿಸಿ ಭಾಷಣ ಮತ್ತು ಜೋರಾದ ಶಬ್ದಗಳ ಉದ್ದೇಶ ಜನತೆಯನ್ನು ಹಾದಿ ತಪ್ಪಿಸುವ ಮತ್ತು ಅವರಿಗೆ ಅದರ ನಷ್ಟವನ್ನು ಸ್ಮರಣೆಗೆ ತರುವುದೇ ಒಂದು ಗುರಿ. ಕೆಲವರ ಕಲ್ಪನೆಯು ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಚೈನಾ ಆಕ್ರಮಣಕ್ಕೆ ಸಂಬಂಧಿಸಿದಂತೆ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಬಿರುಕು ಮತ್ತು 'ಟೀಟೋವಾದ್'ನ ಜಾಗತಿಕರಣದ ಚಿಹ್ನೆಗಳು ಕಾಣಿಸಿಕೊಳ್ಳತೊಡಗಿವೆ. ಆದರೆ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಕಾರ್ಯಾಲಯದಿಂದ ಪ್ರಸಾರವಾದ ಶ್ರೀ ಎಸ್.ಎ. ಡಾಂಗೆಯವರ ಭಾಷಣವನ್ನು ಓದಿ ಅವರಿಗೆ ತಮ್ಮ ತಪ್ಪನ್ನು ತಿದ್ದುಕೊಳ್ಳುವಂತೆ ಪ್ರೇರಣೆಯಾಗಿರಬೇಕು. ಈ ಭಾಷಣದ ಪ್ರಕಾರ ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಪ್ರಸ್ತಾವನೆ ಪ್ರಧಾನಮಂತ್ರಿಯವರಲ್ಲಿ ನಿಷ್ಠೆ ವ್ಯಕ್ತಪಡಿಸುವುದು ಮತ್ತು ಕೊಂಚ ಒಳ್ಳೆ ಅನಿಸಿಕೆಗಳನ್ನು ವ್ಯಕ್ತಿಪಡಿಸುವುದಲ್ಲದೇ ಕಮ್ಯುನಿಸ್ಟ್ ನೀತಿಗಳಿಂದ ಬೇರೆ ಅನಿಸಿಕೆಯನ್ನು ಪ್ರಕಟಗೊಳಿಸುವುದಿಲ್ಲ. ಅದು ಚೈನಾವನ್ನು ದಾಳಿ ಮಾಡುವ ದೇಶವೆಂದು ಘೋಷಿಸುವುದಿಲ್ಲ. ಕಮ್ಯುನಿಸ್ಟ್ ದೇಶವಾಸಿಗಳಿಂದ ಭಿನ್ನ ಮತ್ತು ಚೈನಾ ಸಮರ್ಥಕ ನೀತಿಯನ್ನು ಅನುಸರಿಸುವುದು ಇದೇ ಸ್ಥಳದಲ್ಲಿ ಸಂಪೂರ್ಣ ಭಾರತವು ದಾಳಿಯಾಗಿದೆಯೆಂದು ಭಾವಿಸಿದರೆ, ಕಮ್ಯುನಿಸ್ಟ್ ಹಾಗೆ ಅನುಭವಿಸುವುದಿಲ್ಲ. 172 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಇತರ ಪಕ್ಷಗಳು ಯೋಚನೆ ಮಾಡತಕ್ಕದ್ದು ಈಗ ಬೊಂಬಾಯಿ ರಾಜ್ಯದ ಪುನಃ ವಿಭಾಜನೆಯಾಗುವ ಸ್ಥಿತಿ ಬಂದಿರುವಾಗ, ಕಮ್ಯುನಿಸ್ಟ್ ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಲೋಕಪ್ರಿಯತೆ ಲಾಭವನ್ನು ಪಡೆಯಬೇಕೆನ್ನುತ್ತಾರೆ. ಆದ್ದರಿಂದ ಅವರು ತಮ್ಮ ಮೂಲಭೂತ ನೀತಿಯಲ್ಲಿ ಯಾವುದೇ ಪರಿವರ್ತನೆ ಮಾಡದೆಯೇ ನೀತಿವಕ್ಷಳ ಸಮಿತಿಯ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆ. ಇದು ಸಮಿತಿಯ ಬೇರೆ ಅಂಗಗಳ ಕಾರ್ಯವೇನೆಂದರೆ ಅವರು ತಮ್ಮ ಶೋಷಣೆಯನ್ನು ಕಮ್ಯುನಿಸ್ಟ್‌ರಿಂದ ಮಾಡಿಸಿಕೊಳ್ಳುತ್ತಾರೆಯೋ ಇಲ್ಲವೋ ಎಂದು ನಿರ್ಣಯಿಸುವುದು/ನಿರ್ಧರಿಸುವುದು. ಇವರು ಕಮ್ಯುನಿಸ್ಟ್‌ರಲ್ಲಿ ಪರಿವರ್ತನೆಯನ್ನು ತರುವುದಕ್ಕೆ ಸಫಲರಾಗಿಲ್ಲ. ಇವರು ಅವರು ಮುಂಚೆ/ ಹಿಂದಿನಂತೆಯೇ ಇಂದೂ ರಾಷ್ಟ್ರದ್ರೋಹಿಗಳು. ಸಮಿತಿಯ ಪ್ರಸ್ತಾಪ ಜನತೆಯ ಮೆದುಳಿನಲ್ಲಿ ಸ್ವಲ್ಪ ಭ್ರಮೆ ಹುಟ್ಟಿಸುತ್ತದೆ. ಪ್ರಜಾಸಮಾಜವಾದಿ ದಳವು ಮತ್ತು ಅನ್ಯ ದಳಗಳು ಮತ್ತು ಕಮ್ಯುನಿಸ್ಟ್‌ರಗಳ ಮಧ್ಯದಲ್ಲಿ ಮತ್ತಷ್ಟೂ ಮಂಜು ಮುಸುಕಿ ಹೋಗಿದೆ. ಪ್ರಸ್ತಾಪನೆ ಇಡುವವರ ಉದ್ದೇಶ ಜನತೆಯ ಎದುರು ಮತ್ತಷ್ಟು ಸ್ಪಷ್ಟವಾಗಿ ಈ ವಿಷಯವನ್ನು ಕುರಿತು ಇವೆರಡು ಪಕ್ಷಗಳ ನಡುವೆ ಇರುವ ಅಂತರವನ್ನು ಪ್ರಕಟಿಸಬೇಕಿತ್ತು. ಸಮಿತಿಯ ತಾತ್ಕಲಿಕ ಸ್ವರೂಪವನ್ನು ಭಂಗಗೊಳಿಸುವ ಸಮಯ ಬಂದಿದೆ. ರಾಷ್ಟ್ರೀಯ ಶಕ್ತಿಗಳ ಐಕ್ಯತೆಯನ್ನು ಸ್ಥಾಪಿಸುವ ಉದ್ದೇಶ ಪಡೆದುಕೊಳ್ಳುವ ಸಲುವಾಗಿ ಮಾಡಲಾಗುತ್ತಿದೆ. ಮಹಾರಾಷ್ಟ್ರವನ್ನು ಭಾರತದ ಸ್ವಾತಂತ್ರ್ಯ ಮತ್ತು ಐಕ್ಯತೆಯ ವಿರುದ್ಧ ಕಮ್ಯುನಿಸ್ಟ್‌ರ ಆಧಾರವಾಗಲು ಬಿಡಬಾರದು. ಭಾರತೀಯ ಸಂಸ್ಕೃತಿ ಮತ್ತು ಅರ್ಥವ್ಯವಸ್ಥೆ ಭಾರತೀಯರು ಲಕ್ಷ್ಮಿಯನ್ನು ದೇವೀ ಸ್ವರೂಪವೆಂದು ತಿಳಿದಿದ್ದಾರೆ. ಅದರಲ್ಲಿ ದೈವತ್ವವನ್ನು ಸ್ಥಾಪಿಸಿದ್ದಾರೆ. ಆದ್ದರಿಂದಲೇ ನಾವು ಅವಳನ್ನು ಕಾಮ ಅಥವಾ ಭೋಗ ಭಾವದಿಂದ ನೋಡದೆ ಪೂಜ್ಯ ಮತ್ತು ಶ್ರದ್ಧಾಭಾವದಿಂದ ನೋಡುತ್ತೇವೆ. ರಾಜಕೀಯ ಸ್ವಾತಂತ್ರ್ಯ ಪಡೆದ ನಂತರ ಇಂದು ನಮ್ಮ ಮುಂದೆ ಅರ್ಥ ವ್ಯವಸ್ಥೆಯನ್ನು ಕುರಿತು ಬಹಳ ದೊಡ್ಡ ಪ್ರಶ್ನೆ ಬಂದು ನಿಂತಿದೆ. ಸಮಾಜದ ವಿಕಾಸಕ್ಕೆ ನಾವು ಅದರ ಆರ್ಥಿಕ ಮೌಲ್ಯಗಳೇನು ಮತ್ತು ಜೀವನದ ಯಾವ ಮೌಲ್ಯಗಳ ಆಧಾರದ ಮೇಲೆ ನಾವು ಸಮಾಜವನ್ನು ಸುಖ, ಶ್ರೀ ಮತ್ತು ಸಮೃದ್ಧಿಯಿಂದ ಸಂಪನ್ನಗೊಳಿಸಬಹುದು- ಇಂತಹ ಪ್ರಶ್ನೆಗಳನ್ನು ಕುರಿತು ವಿಚಾರ ಮಾಡುವುದು ಅವಶ್ಯಕ. ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಆರ್ಥಿಕ ಮತ್ತು ಭೌತಿಕ ಜೀವನದ ಸಂಸ್ಕೃತಿಯಂತೂ ಕೇವಲ ಆಧ್ಯಾತ್ಮದ ಮೇಲೆಯೇ ಬಲಕೊಡುತ್ತದೆ ಮತ್ತು ಭೌತಿಕ ವಿಕಾಸಕ್ಕೆ ಅದರಲ್ಲಿ ಏನೂ ಸ್ಥಾನವಿಲ್ಲ, ಅವರ ಇಂತಹ ಧೋರಣೆಗಳು ಪಂಡಿತ್ ನೆಹರೂ ಚೀನಾದ ಎದುರು ಸಮರ್ಪಣೆ 173 ಖಂಡಿತವಾಗಿಯೂ ಮೂಲವಿಲ್ಲದ್ದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ವಿಕಾಸಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಭೌತಿಕ ವಿಕಾಸಕ್ಕೂ ಇದೆ. ನಮಗೆ ನಮ್ಮ ಆರ್ಥಿಕ ಮೌಲ್ಯಗಳಿವೆ; ನಮ್ಮದೇ ಅರ್ಥ-ವ್ಯವಸ್ಥೆ ಇದೆ. ಈ ಅರ್ಥ-ವ್ಯವಸ್ಥೆಯದ್ದು ದೇಶ ಮತ್ತು ಕಾಲ ಎರಡಕ್ಕೂ ಸಂಬಂಧವಿದೆ. ಆದ್ದರಿಂದಲೇ ಇಲ್ಲಿ ನಮ್ಮಲ್ಲಿ ಯುಗಧರ್ಮ ಮತ್ತು ರಾಷ್ಟ್ರಧರ್ಮ ಎರಡರ ವಿಷಯವನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾಷ್ಟ್ರಧರ್ಮ ಇಂದು ಯುಗದ ದೃಷ್ಟಿಯಲ್ಲಿ ನಾವು ಸಾಕಷ್ಟು ಮುಂದುವರೆದಿದ್ದೇವೆ. ನಮ್ಮ ಭೌತಿಕ ಸಾಧನಗಳ ವಿಕಾಸವೂ ಆಗಿದೆ. ನಾವು ಅಂತಾರಾಷ್ಟ್ರೀಯ ಸಮಾನತೆಯ ಮಾತನ್ನು ಆಡುತ್ತೇವೆ. ಆದರೆ ತಥ್ಯ ಬೇರೆಯೇನೋ ಆಗಿದೆ. ಪ್ರತಿಯೊಂದು ರಾಷ್ಟ್ರದ್ದು ಎರಡು ಬೇರೆ ಬೇರೆ ಮಟ್ಟ ಇವೆ. ಅವು ತಮ್ಮ ರಾಷ್ಟ್ರೀಯ ಹಿತದ ದೃಷ್ಟಿಯಲ್ಲೇ ವಿಚಾರ ಮಾಡುತ್ತವೆ. ಪ್ರತಿಯೊಂದು ರಾಷ್ಟ್ರದ ಆರ್ಥಿಕ ಮತ್ತು ಭೌತಿಕ ಸಾಧನವೆರಡು ಭಿನ್ನವಾಗಿವೆ. ಆದ್ದರಿಂದಲೇ ನಮ್ಮ ಅಂತರರಾಷ್ಟ್ರೀಯ ಸಮಾನತೆಯ ಆಧಾರದ ಮೇಲೆ ಯುಗಧರ್ಮದ ಮಾತು ಹೇಳಿ ರಾಷ್ಟ್ರದ ಧರ್ಮವನ್ನು ಮರೆಯಲಾಗದು. ಮಾನಸಿಕ ವೃತ್ತಿಗಳು ಮತ್ತು ಆರ್ಥಿಕ ಪ್ರಯತ್ನ ಮತ್ತೊಂದು ಮಾತು! ಆರ್ಥಿಕ ಪಕ್ಷವನ್ನು ವಿಚಾರ ಮಾಡುತ್ತಿರುವ ಸಮರದಲ್ಲಿ ಜನರು ಮಾನಸಿಕ ಪ್ರವೃತ್ತಿಗಳನ್ನು ವಿಚಾರ ಮಾಡುವುದಿಲ್ಲ. ನಮ್ಮ ಆರ್ಥಿಕ ಪ್ರಯತ್ನಗಳ ಮೇಲೆ ಮಾನಸಿಕ ಪ್ರವೃತ್ತಿಗಳು ವಿಶೇಷವಾದ ಪ್ರಭಾವ ಬೀರುತ್ತವೆ. ಮಾನಸಿಕ ಪ್ರವೃತ್ತಿಗಳು ಸಾಂಸ್ಕೃತಿಕ ಜೀವನದಲ್ಲೂ ಪ್ರಭಾವ ಬೀರುತ್ತವೆ. ಆದ್ದರಿಂದಲೇ ನಮ್ಮ ಆರ್ಥಿಕ ಪ್ರಯತ್ನಗಳ ಮೇಲೂ ಸಂಸ್ಕೃತಿಯ ಸ್ಪಷ್ಟ ಪ್ರಭಾವ ತಿಳಿದುಬರುತ್ತದೆ. ನಮ್ಮ ಸಂಸ್ಕೃತಿಯಲ್ಲೂ ನಮ್ಮ ಆರ್ಥಿಕ ಪ್ರಯತ್ನಗಳು ಯಾವ ಆಧಾರದ ಮೇಲೆ ನಡೀಬೇಕು ಎಂಬ ವಿಷಯವನ್ನು ಕುರಿತು ಸ್ಪಷ್ಟ ವ್ಯವಸ್ಥೆ ಇದೆ; ಭೌತಿಕ ವಿಕಾಸಕ್ಕೆ ಅದರಲ್ಲಿ ಸರಿಹೊಂದುವಂತಹ ಸ್ಥಾನವಿದೆ. ಆರ್ಥಿಕ ವಿಕಾಸಕ್ಕೆ ಸ್ಥಾನ ನಮ್ಮ ಧರ್ಮದಲ್ಲಿ ಎರಡನೇ ಚರಣದಲ್ಲಿ ಇಹಲೋಕ ಮತ್ತು ಪರಲೋಕವನ್ನು ಸಾಧಿಸುವ ಮಾತು ಹೇಳಲಾಗಿದೆ. ಆದ್ದರಿಂದಲೇ ನಾವು ಲಕ್ಷ್ಮಿಯನ್ನು ದೇವೀ ಸ್ವರೂಪ ಅಂತ ತಿಳೀತೀವಿ, ಅವಳಲ್ಲಿ ದೇವತ್ವದ ಸ್ಥಾಪನೆಯನ್ನು ಮಾಡಲಾಗಿದೆ. ಆದ್ದರಿಂದಲೇ ನಾವು ಅವಳನ್ನು ಕಾಮ ಮತ್ತು ಭೋಗ ಭಾವದಿಂದ ನೋಡದೆ 174 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪೂಜ್ಯ ಮತ್ತು ಶ್ರದ್ಧಾ ಭಾವದಿಂದ ನೋಡುತ್ತೇವೆ. 'ವಂದೇಮಾತರಂ'ನಲ್ಲಿ ನಾವು ಭಾರತ ಮಾತೆಯನ್ನು ವಂದಿಸುವಾಗ, ಪ್ರಪ್ರಥಮವಾಗಿ ನಮ್ಮ ಮುಂದೆ 'ಸುಜಲಾಂ, ಸುಫಲಾಂ, ಮಲಯಜ ಶೀತಲಾಂ' ಅನ್ನುವ ರೂಪವೇ ನಮ್ಮ ಮುಂದೆ ಬರುತ್ತದೆ, ಅಂದರೆ ಮೊದಲನೆಯದಾಗಿ ನಾವು ಅವಳ ಭೌತಿಕ ಶ್ರೀ ಸಮೃದ್ಧಿಯನ್ನೇ ವಿಚಾರ ಮಾಡುತ್ತೇವೆ, ಅವಳ ಅನ್ಯ ರೂಪಗಳ ಕಲ್ಪನೆಯನ್ನು ನಂತರ ಮಾಡುತ್ತೇವೆ. ಆದ್ದರಿಂದ ಭಾರತೀಯ ಸಂಸ್ಕೃತಿಯ ಮೂಲಮಂತ್ರ 'ಬ್ರಹ್ಮ ಸತ್ಯಮ್ ಜಗನ್ನ್ಮಥ್ಯಾ' ಅನ್ನುವ ಮಾತು ಹೇಳಿ ಈ ಸಂಸ್ಕೃತಿಯಲ್ಲಿ ಕೇವಲ ಆಧ್ಯಾತ್ಮ ಮತ್ತು ಬ್ರಹ್ಮನನ್ನು ಕುರಿತು ವಿಚಾರ ಮಾಡಲಾಗುತ್ತದೆ ಮತ್ತು ಭೌತಿಕ ವಿಕಾಸವನ್ನು ಸಂಪೂರ್ಣವಾಗಿ ಉಪೇಕ್ಷೆಮಾಡಲಾಗುತ್ತದೆ ಅಂತ ನಾವು ಹೇಳಲಿಕ್ಕೆ ಆಗೋದೇಯಿಲ್ಲ. ಇಂದು ಭೌತಿಕ ವಿಕಾಸದ ಮಾತು ನಮ್ಮ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ ಮತ್ತು ಇದಕ್ಕೆ ಒಳ್ಳೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಒಂದು ಆರ್ಥಿಕ ದರ್ಶನವಿದೆ, ಅದರ ಆಧಾರದ ಮೇಲೆ ನಮ್ಮ ಮನೀಷೀಗಳು ಆರ್ಥಿಕ ವ್ಯವಸ್ಥೆಗಳ ನಿರ್ಮಾಣ ಮಾಡಿದ್ದಾರೆ. ಈ ವ್ಯವಸ್ಥೆಗಳಲ್ಲಿ ವಿಭಿನ್ನತೆ ಸಿಗುತ್ತದೆ. ಏಕೆಂದರೆ ಮನು ಮಹಾರಾಜನು ಯಾವುದೇ ನವೀಕರಣದ ಬಹಿಷ್ಕಾರ ಮಾಡಿರುವನು, ಕೌಟಿಲ್ಯನು ಅದರ ಪ್ರತಿಪಾದನೆ ಮಾಡಿದ್ದರೂ ಇಬ್ಬರ ದರ್ಶನವು ಒಂದೇ ಆಗಿದೆ. ಆದ್ದರಿಂದ ನಾವು ಅದರ ವ್ಯಾವಹಾರಿಕ ಪಕ್ಷವನ್ನು ವಿಚಾರಮಾಡದೆ ದಾರ್ಶನಿಕ ಪಕ್ಷವನ್ನೇ ವಿಚಾರಮಾಡಬೇಕು. ಈ ಮಾತನ್ನೇ/ವಿಷಯವನ್ನೇ ಸ್ಪಷ್ಟ ಮಾಡುವ ಸಲುವಾಗಿ, ಯುಗ ಮತ್ತು ದೇಶದ ಪರಿಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ನಮ್ಮಲ್ಲಿ ಯುಗಧರ್ಮ ಮತ್ತು ರಾಷ್ಟ್ರಧರ್ಮ ಎರಡರದೂ ಭಿನ್ನ ಅಭಿಪ್ರಾಯವನ್ನು ಮುಂಚೇನೇ ಹೇಳಲಾಗಿದೆ. ಆಸ್ತಿಯ ಮೇಲಿನ ಹಕ್ಕು ಸಂಪತ್ತಿನ ಅಧಿಕಾರ ಈಗ ನಮ್ಮ ಎದುರು ಮತ್ತೊಂದು ಪ್ರಶ್ನೆಯೇನೆಂದರೆ, ಸಮಾಜದಲ್ಲಿ ಸಂಪತ್ತಿನ ಮೇಲೆ ಯಾರ ಅಧಿಕಾರ ಇರಬೇಕು ಅಂತ. ಕೆಲವರು `ದುಡಿಯುವವನು ತಿನ್ನುತ್ತಾನೆ’ಯೆಂದು ಘೋಷಣೆ ಮಾಡುತ್ತಾರೆ. ಒಂದು ಪಕ್ಷದಲ್ಲಿ ನೋಡಿದರೆ ಇದು ಸರೀನೇ. ಏಕೆಂದರೆ ಇದು ಮನುಷ್ಯನ ಸ್ವಭಾವ. ಅರ್ಥಶಾಸ್ತ್ರ ಇದನ್ನೇ ಪ್ರತಿಪಾದಿಸುತ್ತದೆ. ಆದರೆ ಮಾನವ ಮತ್ತು ಸಮಾಜ ಕಲ್ಯಾಣಕ್ಕಾಗಿ ಬರೀ ಇಷ್ಟೇ ಸಾಕಾಗುವುದಿಲ್ಲ, ಅದಕ್ಕೆ ಸ್ವಯಂ ಕಾಯಕ ಮಾಡಿ ಅದರ ಫಲವನ್ನು ತನ್ನ ಇಚ್ಛೆಯಂತೆ ಬೇರೆಯವರಿಗೆ ಸಮರ್ಪಣೆ ಮಾಡುವ ಒಂದು ಮನೋಭಾವನೆಯ ಆದರ್ಶವು ಬಲು ಅವಶ್ಯಕ. ಇದೇ ನಿಜವಾದ ಸಂಸ್ಕೃತಿ. ಆದರೆ ಈ ತರಹದ ಒಂದು ಸಂಸ್ಕೃತಿ ಇಂದು ವ್ಯವಹಾರದಲ್ಲಿ ಎಲ್ಲೂ ದೃಷ್ಟಿಗೋಚರವಾಗುವುದಿಲ್ಲ. ಪಂಡಿತ್ ನೆಹರೂ ಚೀನಾದ ಎದುರು ಸಮರ್ಪಣೆ 175 ಪ್ರಕೃತಿಯನ್ನು ಕುರಿತು ಬರೀ ಘೋಷಣೆ ಮಾಡಲಾಗುತ್ತದೆ. ವ್ಯವಹಾರದಲ್ಲಿ ಇವೆರಡಕ್ಕಿಂತ ಭಿನ್ನವಾದ ಮೂರನೆ ವಿಷಯ ನಮ್ಮ ಮುಂದೆ ಇದೆ. ವಿಕೃತಿ ಅಂದರೆ- ಕಾಯಕ ಮಾಡುವುದು ಯಾರೋ, ಸಂಪಾದಿಸುವುದು ಯಾರೋ, ತಿನ್ನುವುದು ಮತ್ತಿನ್ಯಾರೋ ! ಈ ವಿಚಾರ ನಾಲ್ಕು ಕಡೆ ಗೋಚರವಾಗುತ್ತದೆ, ಇದೇ ವಿಕೃತಿ. ಆದರೆ ಭಾರತೀಯ ಸಂಸ್ಕೃತಿ ಪ್ರಕೃತಿಗಿಂತ ಮೇಲ್ಪಟ್ಟಂತಹ ಆ ಪರಮ ಆದರ್ಶಗಳ ಮೇಲೆ ಬಲಕೊಡುತ್ತದೆ. ಇದನ್ನು ಭಗವದ್ಗೀತೆಯ ಕರ್ಮ ಸಿದ್ಧಾಂತದಲ್ಲಿ ವ್ಯಕ್ತಪಡಿಸಿದ್ದಾರೆ. ಅಂದರೆ ಫಲ ಅಪೇಕ್ಷೆ ಇಲ್ಲದೆ ದೊರಕಿದ ಫಲವನ್ನು ಭಗವಂತನಿಗೆ ಅರ್ಪಣೆ ಮಾಡುವುದು. ಭಗವಂತ ಅಂದರೆ ಸಮಾಜ ಭಗವಂತನ ಪ್ರತ್ಯಕ್ಷ ಮತ್ತು ವಿರಾಟ ಸ್ವರೂಪ ಇಂದು ಸಮಾಜವೇ ಆಗಿದೆ. ನಾವು ಇದನ್ನೇ ವಿರಾಟ ಪುರುಷನೆಂದು ತಿಳಿದು ಮುನ್ನಡೆಯೋಣ ಮತ್ತು ನಮ್ಮ ಸಂಪೂರ್ಣ ಕರ್ಮಫಲವನ್ನು ಸಮಾಜಕ್ಕೆ ಅರ್ಪಣೆ ಮಾಡಿಬಿಡೋಣ. ನಮ್ಮ ಸಮಾಜದ ಕಲ್ಪನೆ ಸಮಾಜದ ವಿಷಯ ಬಂದರೆ ಅದನ್ನು ಕುರಿತು ನಮಗೆ ಒಂದು ಸ್ಪಷ್ಟ ಕಲ್ಪನೆ ತಂದುಕೊಳ್ಳುವುದು ಅವಶ್ಯಕ. ಭಾರತೀಯ ಸಂಸ್ಕೃತಿಯ ಪ್ರಕಾರ ಸಮಾಜದ ಅನೇಕ ರೂಪಗಳಿವೆ. ರಷ್ಯಾದ ವಿಚಾರದ ಪ್ರಕಾರ ಅದರ `ಸ್ಟೇಟ್’ ರೂಪದಲ್ಲಿ ಯಾವತ್ತೂ ಬಳಕೆಯಾಗುವುದಿಲ್ಲ ಮತ್ತು ಅದರಲ್ಲಿ ರಷ್ಯಾದ ವಿಚಾರಧಾರೆಯ ಪ್ರಕಾರ ರಾಷ್ಟ್ರೀಕರಣಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಭಾರತೀಯ ಸಮಾಜ ರಚನೆಯಲ್ಲಿ ವ್ಯಕ್ತಿ ಅಂದರೆ ವ್ಯಷ್ಟಿಗೆ ಪ್ರಮುಖ ಸ್ಥಾನ ಕೊಡಲಾಗಿದೆ. ವ್ಯಷ್ಟಿಯಿಂದಲೇ ಸಮಷ್ಟಿಯ ನಿರ್ಮಾಣವಾಗುತ್ತದೆ. ನಾವು ಸಮಾಜದಲ್ಲಿ ವ್ಯಕ್ತಿ, ಪರಿವಾರದಿಂದ- ಗ್ರಾಮ, ರಾಷ್ಟ್ರ ಮತ್ತು ಸಮಸ್ತ ವಿಶ್ವದವರೆಗಿನ ಕಲ್ಪನೆ ಮಾಡುತ್ತೇವೆ. ಆದ್ದರಿಂದ ನಾವು ಏನೆಲ್ಲಾ ಪಡಿತೀವೋ ಅದನ್ನೇ ಸಂಪೂರ್ಣ ರಾಷ್ಟ್ರದ ಹಿತಕ್ಕಾಗಿ ಖರ್ಚು ಮಾಡಬೇಕು. ರಾಷ್ಟ್ರವೇ ನಮ್ಮ ಪ್ರೇರಣೆಯ ಸ್ತೋತ್ರವಾಗಿದೆ. ಇದೇ ಭಾವನೆ ಭಾರತೀಯ ಸಂಸ್ಕೃತಿಯ ಆರ್ಥಿಕ ರೂಪದ ಮೂಲ ಆಧಾರವಾಗಿದೆ. ಈ ಆಧಾರದ ಮೇಲೆ ನಾವು ಸಮಾಜವನ್ನು ಸುಖ, ಶ್ರೀ ಮತ್ತು ಸಮೃದ್ಧಿಯಿಂದ ಸಂಪನ್ನಗೊಳಿಸಬಹುದು. ನಾವು ನಮ್ಮ ಭಾರತವರ್ಷವನ್ನು ಭೋಗಭೂಮಿಯಲ್ಲ, ಕರ್ಮಭೂಮಿಯೆಂದು ತಿಳಿದು ಮುನ್ನಡೆದರೆ ಮಾತ್ರ ಇದು ಸಂಭವವಾಗುತ್ತದೆ. ಎಲ್ಲಿ ಭೋಗಭಾವನೆ ಬಂದುಬಿಡುತ್ತೋ ಅಲ್ಲಿ ಪರಿಶ್ರಮ ಮತ್ತು ಕಾಯಕ ಮಾಡಿದರೂ, ಒಂದು ಬಂಡವಾಳಶಾಹೀ ವ್ಯವಸ್ಥೆಯ ನಿರ್ಮಾಣವಾಗಿಬಿಡುತ್ತದೆ. ಅದನ್ನು ನಾವು ಒಪ್ಪಲ್ಲ. ಏಕೆಂದರೆ 'ಪ್ರಕೃತಿ' ಇದ್ದರೂ ಅಲ್ಲಿ 'ಕಾಡಿನ ಕಾನೂನು' ಇರುತ್ತದೆ. ಇಲ್ಲಿ ವೈಯಕ್ತಿಕ ಸ್ವಾರ್ಥವೇ ಪ್ರಧಾನವಾಗಿರುತ್ತದೆ ಮತ್ತು ಸಮಾಜ ಹಾಗೂ ರಾಷ್ಟ್ರದ 176 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಾಮೂಹಿಕ ಹಿತವು ಗೌಣವಾಗುತ್ತದೆ. ಅಲ್ಲಿ ಮತ್ತೆ ಸರಿಯಾದ ವಿತರಣೆಯಾಗುವುದಿಲ್ಲ ಮತ್ತು ಸಮಾಜದ ಸಾಮೂಹಿಕ ವಿಕಾಸದ ಮಾರ್ಗವು ಮುದುರಿಕೊಂಡು ಕೆಲವರ ಹಿಡಿತಕ್ಕೆ ಸಿಕ್ಕಿಕೊಳ್ಳುತ್ತದೆ. ಆದ್ದರಿಂದ ನಾವು ರಾಷ್ಟ್ರದ ಚಿಂತನೆಯನ್ನು ಮುಖ್ಯವೆಂದು ತಿಳಿದು ನಮ್ಮ 'ಪ್ರಕೃತ' ಸ್ಥಿತಿಯಿಂದ ಮೇಲೆದ್ದು 'ಸಂಸ್ಕೃತಿ' ಸ್ಥಿತಿಯನ್ನು ಪಡೆಯಬೇಕು. ಇಲ್ಲಿ ತ್ಯಾಗವೇ ಎಲ್ಲವೂ ಆಗಿದ್ದು ಮತ್ತು ಅದರಲ್ಲೇ ಪರಮಾನಂದವನ್ನು ಪಡೆಯಬೇಕು. ವ್ಯಾವಹಾರಿಕ ರೂಪದಲ್ಲಿ ನಾವು ಕಡಿಮೆ ವೇತನದ ಕಲ್ಪನೆ ಹೊತ್ತು ನಡೆದರೆ, ಕಾಯಕದ ಫಲವನ್ನು ಸಮಾಜಕ್ಕೆ ಧಾರೆಯೆರೆದರೆ ನಮ್ಮ ಬಗ್ಗೆ ಚಿಂತಿಸುವವರು ಯಾರು ಎಂಬ ಚಿಂತೆ ನಮಗೆ ಇರಲಾರದು. ಆವಾಗ ಸಮಾಜವು ನಮ್ಮ ಬಗ್ಗೆ ಚಿಂತಿಸುತ್ತದೆ. ಏಕೆಂದರೆ ನಾವು ಸಮಾಜದ ಒಂದು ಅಂಗ. ಸಮಾಜದ ಸಾಮೂಹಿಕ ವಿಕಾಸದಿಂದ ನಮ್ಮ ವಿಕಾಸವೂ ಖಂಡಿತವಾಗಿ ಆಗುತ್ತದೆ. ___________ * ಆಕರ : ಪಾಂಚಜನ್ಯದ 16-10-1956ರ ಸಂಚಿಕೆ (ಸಂ.) ನಮ್ಮ ಆರ್ಥಿಕ ನೀತಿಯ ಮೂಲ ಆಧಾರ ವಿಕಾಸೋನ್ಮುಖ ಭಾರತೀಯ ಆರ್ಥಿಕ ನೀತಿಯ ನಿಟ್ಟಿನೆಡೆಗೆ ಅನೇಕ ಬಾರಿ ಸಂಕೇತಿಸಲಾಗಿದೆ. ಬಹಳ ಕಾಲದಿಂದ ಪ್ರಗತಿಯ ಕಡೆ ನಡೆಯುವ ವ್ಯವಸ್ಥೆಯನ್ನು ಪ್ರಗತಿ ದೆಸೆಯಲ್ಲಿ ಬದಲಾಯಿಸುವ ಪ್ರಯತ್ನಗಳು ನಡೆಯಬೇಕಾಗುತ್ತದೆ ಎನ್ನುವುದು ನಿಶ್ಚಿತ. ಸ್ವತಃ ಅದೇನೇ ಹ್ವ್ರಾಸದಿಂದ ವಿಕಾಸದೆಡೆಗೆ ಉದಯೋನ್ಮುಖವಾಗುವುದಿಲ್ಲ. ವಾಸ್ತವವಾಗಿ ಒಂದು ವ್ಯವಸ್ಥೆ ಯಾವಾಗ ಶಿಥಿಲಗೊಳ್ಳುತ್ತದೋ ಆವಾಗ ಅದರ ಸುಧಾರಣೆಯ ಸಾಮರ್ಥ್ಯವು ಕುಗ್ಗಿಹೋಗುತ್ತದೆ. ವಿಕಾಸದ ಶಕ್ತಿಗಳ ಪ್ರಾದುರ್ಭಾಕ್ಕೆ ಮತ್ತು ಒಂದು ದಿಕ್ಕು ಕೊಡುವ ಸಲುವಾಗಿ ಯೋಜನಾಪೂರ್ವಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸ್ವತಂತ್ರ ದೇಶದ ಶಾಸನದ ಮೇಲೆ ಸ್ವಾಭಾವಿಕ ರೂಪದಲ್ಲಿ ಈ ಜವಾಬ್ದಾರಿ ಬರುತ್ತದೆ. ತಮ್ಮ ಈ ಜವಾಬ್ದಾರಿಯ ನಿರ್ವಹಣೆ ಮಾಡಲಿಕ್ಕಾಗಿ ಯೋಜನೆಗಳು ಮತ್ತು ನೀತಿಗಳ ನಿರ್ಧಾರಣೆಯ ಅವಶ್ಯಕತೆ ಇರುತ್ತದೆ. ಆದರೆ ಶಾಸನವು ಅನೇಕ ಬಾರಿ ತಪ್ಪು ಮಾಡುತ್ತದೆ. ಅದು ಆರ್ಥಿಕ ವ್ಯವಸ್ಥೆಗೆ ಒಂದು ದಿಕ್ಕು ಕೊಡುವ ಜಾಗದಲ್ಲಿ ತಾನೇ ಸ್ವಂತವಾಗಿ ಒಂದು ಅಂಗವಾಗಿ ನಿಂತುಬಿಡುತ್ತದೆ. ಈ ಪ್ರಯತ್ನದಲ್ಲಿ ಅದಕ್ಕೆ ಆ ಲಕ್ಷ್ಯಗಳು ಮತ್ತು ಉದ್ದೇಶಗಳ ಸ್ಮರಣೆಯಾಗುತ್ತದೆ ಮತ್ತೆ ಈ ಲಕ್ಷ್ಯಗಳನ್ನು ತಗೊಂಡೆ ಅವು ತನ್ನ ಪ್ರಯತ್ನವನ್ನು ಪ್ರಾರಂಭಿಸಿತ್ತು. ಆರ್ಥಿಕ ವ್ಯವಸ್ಥೆಯಲ್ಲಿ ಕ್ರಾಂತಿಯುತ ಪರಿವರ್ತನೆ ಸಂಪೂರ್ಣ ಜನತೆಯ ಹೆಸರಿನಲ್ಲಿ 'ಪೀಪಲ್ಸ್ ಡೆಮೋಕ್ರೆಸಿ'ಯ ಹೆಸರಿನಲ್ಲಿ ತಾನಾಶಾಹಿ ನಡೆಸಲಿ ಮತ್ತು ಅದು ಬೇಕಾದರೆ ನಿಜ ಅರ್ಥದಲ್ಲಿ ಪ್ರತಿನಿಧಿ ಶಾಸನ ಇರಬಹುದು, ಜನತೆಯ ಸ್ಥಾನವನ್ನು ತುಂಬಲಾರರು. ಅದು ಜನತೆಯ ಮಾರ್ಗದರ್ಶನ ಮಾಡಬಲ್ಲದು, ಸಹಾಯ ಮಾಡಬಹುದು, ಅದನ್ನು ನಿಯಂತ್ರಿಸಬಹುದು, ಆದೇಶವನ್ನು ನೀಡಬಹುದು, ಅದನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಇವೆಲ್ಲದರಲ್ಲಿ ಅದು ಯಾವ ರೀತಿಯಲ್ಲಿ ವ್ಯವಹಾರ ಮಾಡಬೇಕೆಂದು ಇದರ ಯೋಜನೆಗಳು ಮರ್ಯಾದೆಗಳು ಮತ್ತು ಸ್ವರೂಪದ ಮೇಲೆ ಆಧರಿಸಿರುತ್ತದೆ. ನಿಯೋಜನೆಯ ಸ್ವರೂಪ 'ನಿಯೋಜನ' ಶಬ್ದವು ಮೊಟ್ಟಮೊದಲಿಗೆ ರಷ್ಯಾ ಮೂಲಕ ವ್ಯವಹಾರಕ್ಕೆ 178 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬಂದಕಾರಣ ಅದು ಸಾಮ್ಯವಾದಿ ಆರ್ಥಿಕ ವ್ಯವಸ್ಥೆಯ ಅವಶ್ಯಕ/ಅನಿವಾರ್ಯ ಅಂಗವೇ ಅಲ್ಲ, ನಿಯೋಜಿತ ಆರ್ಥಿಕ ನೀತಿಯ ಅಪರಿಹಾರ್ಯ ಪರಿಣಾಮವೂ ಸಾಮ್ಯವಾದ ಅಂತ ಕರೆಸಿಕೊಳ್ಳುತ್ತದೆ. ಆದರೆ ಇಂದು ಈ ನಿಯೋಜನ ಸಾಮ್ಯವಾದಿಗಳಿಗೆ ಸೀಮಿತವಾಗಿಲ್ಲ. ಅಮೆರಿಕ ಮತ್ತು ಬ್ರಿಟನ್ ಕೂಡ ಈ ನಿಯೋಜನದ ಬಗ್ಗೆ ವಿಶ್ವಾಸವಿಟ್ಟಿರುತ್ತಾರೆ. ಆದರೆ ರಷ್ಯಾ ಮತ್ತು ಇಂತಹ ದೇಶಗಳ ನಿಯೋಜನದ ಕಲ್ಪನೆಗಳು ಭಿನ್ನ-ಭಿನ್ನವಾಗಿರುತ್ತದೆ. ಯಾಕೆಂದರೆ ಸಾಮ್ಯವಾದಿ ದೇಶಗಳು ಅತ್ಯಂತ ಸುಸೂತ್ರವಾದಂತಹ ಯೋಜನೆಗಳನ್ನು ತಯಾರಿಸಿ ಮತ್ತು ಸಂಪೂರ್ಣ ಆರ್ಥಿಕ ಗತಿವಿಧಿಗಳನ್ನು, ಉತ್ಪಾದನೆ, ವಿತರಣೆ ಮತ್ತು ಉಪಭೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾಗುತ್ತದೆ. ಇದಕ್ಕೆ ವಿಪರೀತವಾಗಿ ಪ್ರಜಾತಂತ್ರವಾದಿಗಳು ತಮ್ಮ ವಿಶೇಷ ದೃಷ್ಟಿಕೋನದಿಂದಾಗಿ ಬಹಳ ನಿಯಂತ್ರಿತವಾದ ಯೋಜನೆಯನ್ನು ಅದು ಆರ್ಥಿಕ ಕಾರಣದಿಂದ ಸಂಭವವಾದರು, ಅದನ್ನ ಒಪ್ಪಿಕೊಳ್ಳುವುದಿಲ್ಲ. ಇದೇ ಆಧಾರದ ಮೇಲೆ 1948ರಲ್ಲಿ ಬ್ರಿಟನ್ನಿನ ಚತುರ್ವರ್ಷಿಯ ಯೋಜನೆಯಲ್ಲಿ ಬರೆದಂತಹ ಯುನಾಯಿಟೆಡ್ ಕಿಂಗ್‍ಡಮ್‍ನ ಆರ್ಥಿಕ ನಿಯೋಜನೆಯು ಈ ಮೂಲಭೂತ ತಥ್ಯಗಳ ಮೇಲೆ ಆಧಾರಿತವಾಗಿದೆ. ಆರ್ಥಿಕ ತಥ್ಯ ಅಂದರೆ ಯು.ಕೆ.ಯ ಆರ್ಥಿಕ ವ್ಯವಸ್ಥೆ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಅತ್ಯಂತವಾಗಿ ಆಧಾರಿತವಾಗಿದೆ. ರಾಜನೈತಿಕ ತಥ್ಯವೆಂದರೆ ಅದು (ಯು.ಕೆ.) ಒಂದು ಪ್ರಜಾತಂತ್ರವಾಗಿರುತ್ತದೆ. ಪ್ರಶಾಸನಿಕ ತಥ್ಯವೆಂದರೆ ಯಾವುದೇ ನಿಯೋಜಕ ಭಾವೀ ಆರ್ಥಿಕ ವಿಕಾಸದ ಸಾಮಾನ್ಯ ಪ್ರವೃತ್ತಿಗಳಿಗಿಂತ ಅಧಿಕ ಜ್ಞಾನ ಪಡೆದಿರುವುದಿಲ್ಲ. ನಿಯೋಜನ ಮತ್ತು ಪ್ರಜಾತಂತ್ರ ಆರ್ಥಿಕ ನಿಯೋಜನದಲ್ಲಿ ಈ ಅಂತಿಮ ತಥ್ಯವು ಅತ್ಯಂತ ಮಹತ್ವಪೂರ್ಣವಾದದ್ದು. ಯಾವಾಗ ಒಬ್ಬ ಮನುಷ್ಯ ಯಾವುದಾದರೂ ಜೀವನಮಾನ ಮತ್ತು ವಿಕಾಸಶೀಲ ಆರ್ಥಿಕ ವ್ಯವಸ್ಥೆಯ ಭಾವೀ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭವಿಷ್ಯವಾಣಿ ನುಡಿದರೆ ಅದು ಕೇವಲ ತಮ್ಮ ಅನುಭವವಗಳು ಮತ್ತು ಕಲ್ಪನೆಗಳ ಆಧಾರದ ಮೇಲೆ ಅನುಮಾನ ಪಡುತ್ತಾನೆ. ಆದರೆ ಅವನು ಹೇಳುವುದು ಸಂಪೂರ್ಣ ಸತ್ಯವೆಂದು ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಆದ್ದರಿಂದಲೇ ಇದರಲ್ಲಿ ಎಂದಿಗೂ ಪರಿವರ್ತನೆಗೆ ಸಿದ್ಧರಾಗಿರಬೇಕು. ಆದರೆ ತಾನಾಶಾಹಿ (ಸರ್ವಾಧಿಕಾರ) ಶಾಸನದ ಪರಿವರ್ತನೆ ಸ್ವೀಕಾರ ಮಾಡುವ ಬದಲಾಗಿ ಅರ್ಥದ ಗತಿಯನ್ನು ತಮ್ಮ ಭವಿಷ್ಯವಾಣಿಯ ಪ್ರಕಾರ/ಅನುಸಾರವಾಗಿ ಪರಿವರ್ತಿಸುವಂತೆ ಆಗ್ರಹಿಸುತ್ತಾರೆ. ಇದರಲ್ಲಿ ಕೆಲವು ಕಷ್ಟಗಳು ಉಂಟಾಗುತ್ತವೆ. ಇದೇ ತರಹ ಒಬ್ಬ ನಿಯೋಜಕ ಯೋಜನೆಗೆ ಸಂಬಂಧಿಸಿದಂತಹ ಅಂಗಗಳಲ್ಲಿ ಸಂಭಾವ್ಯ ಪರಿವರ್ತನೆಗಳಿಗೆ ಜಾಗ ಬಿಟ್ಟು ನಮ್ಮ ಆರ್ಥಿಕ ನೀತಿಯ ಮೂಲ ಆಧಾರ 179 ನಡೆಯುದಿಲ್ಲವೋ ಆವಾಗ ವಿಭಿನ್ನ ರೀತಿಯ ತೊಂದರೆಗಳು ಹುಟ್ಟುಕೊಳ್ಳುತ್ತವೆ. ಈ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕಾದರೆ ಶಾಸನವು ಅಧಿಕಾಧಿಕ ಶಕ್ತಿಯನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳುತ್ತದೆ. ರಷ್ಯಾ ಮುಂತಾದ ಸಾಮ್ಯವಾದಿ ದೇಶಗಳಲ್ಲಿ ಮೊದಲನೆಯ ಪ್ರಕಾರ ಕಾಣಿಸಿಕೊಂಡರೆ, ಭಾರತದಲ್ಲಿ ಎರಡನೆಯ ಥರ ಕಾಣಿಸಿಕೊಳ್ಳುತ್ತದೆ. ಒಂದರಲ್ಲಿ ಸರ್ವಾಧಿಕಾರವೇ ಆರ್ಥಿಕ ನೀತಿಯ ನಿಯಂತ್ರಣ ಮಾಡುತ್ತದೆಯಾದರೆ ಇನ್ನೊಂದು ಕಡೆ ಆರ್ಥಿಕ ನೀತಿಯ ತೊಂದರೆಗಳು ಸರ್ವಾಧಿಕಾರಕ್ಕೆ ಜನ್ಮಕೊಡುತ್ತದೆ. ನಾವು ಇವೆರಡರಿಂದಲೂ ಬಚಾವಾಗಬೇಕು. ಮಾನವ ಜ್ಞಾನದ ಈ ಸೀಮೆಯಲ್ಲದೆಯೂ ನಿಯೋಜನದ ಮರ್ಯಾದೆಗಳು ಜೀವನದ ಇನ್ನಿತರ ಮೂಲ್ಯಗಳ ಆಧಾರದ ಮೇಲೆ ನಿಶ್ಚಿಯ ಮಾಡಬೇಕಾಗುತ್ತದೆ. ಎಲ್ಲಿ ಶಾಸನವೇ ಸಂಪೂರ್ಣ ಅರ್ಥೋತ್ಪಾದನೆ ಮಾಡಿ ಅಲ್ಲಿ ಯೋಜನೆಗಳನ್ನು ಮಾಡಿ ಅದನ್ನು ಕಾರ್ಯಾಚರಣೆಗೆ ತರುವುದು ಅತಿಸರಳ. ಆರ್ಥಿಕ ಕ್ಷೇತ್ರದಲ್ಲಿ ಜನಗಳಿಗೆ ಎಲ್ಲಿ ಸ್ವಾತಂತ್ರ್ಯವಿದೆಯೋ ಅಲ್ಲಿ ಅಷ್ಟೊಂದು ಕಷ್ಟವಾಗುವುದಿಲ್ಲ. ಆದರೆ ಎಲ್ಲಿ ಮಿಶ್ರಿತ ಅರ್ಥವ್ಯವಸ್ಥೆಯಿರುತ್ತದೆಯೋ ಅಲ್ಲಿ ನಿಯೋಜನೆಯು ಒಂದು ದುಷ್ಕರ ಕಾರ್ಯವೆನಿಸುತ್ತದೆ. ಉದಾಹರಣೆಗಾಗಿ ಎಲ್ಲಿ ಕೇವಲ ಸೈನ್ಯ ಸಂಚಾಲನೆಯ ಕಾರ್ಯ ಮಾಡಬೇಕಾಗುತ್ತದೆ ಅದು ಸುಲಭವಾಗಿ ಮಾಡಬಹುದಾಗಿದೆ. ನೀತಿ ಮತ್ತು ನಿಯೋಜನೆ ಪ್ರಜಾತಾಂತ್ರಿಕ ದೇಶಗಳಲ್ಲಿ ಶಾಸನವು ಮೌದ್ರಿಕ ಮತ್ತು ಆರ್ಥಿಕ ನೀತಿಗಳು, ಅಂತರರಾಷ್ಟ್ರೀಯ ವ್ಯಾಪಾರದ ನಿಯಂತ್ರಣ ಮುಂತಾದವುಗಳಿಂದ ಅರ್ಥವ್ಯವಸ್ಥೆಯ ಗತಿವಿಧಿಗಳನ್ನು ಸರಿಪಡಿಸಲಾಗುತ್ತದೆ. ಅದರ ನಿಯೋಜನೆಯು ನೀತಿ ನಿರ್ಧಾರಣೆ, ಬಜಟ್ ಮುಂತಾದವುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅವರು ಒಂದೊಂದು ಕ್ಷೇತ್ರ ಮತ್ತು ಒಂದೊಂದು ಮೂಲಮಾನಗಳ ಗತಿವಿಧಿಯ ಚಿಂತನೆ ಮಾಡುವುದಿಲ್ಲ. ಇದನ್ನ ನಾವು ಬೃಹತ್ ಆರ್ಥಿಕ ನಿಯೋಜನೆ ಎನ್ನಬಹುದು. ಇದರ ವಿಪರೀತವಾಗಿ ಎಲ್ಲಿ ಚಿಕ್ಕ-ಚಿಕ್ಕ ಗುರಿಗಳ ನಿರ್ಧಾರಣೆ ಮತ್ತು ಸೂಕ್ಷ್ಮಾತಿಸೂಕ್ಷ್ಮ ಆರ್ಥಿಕ ಗತಿವಿಧಿಗಳ ನಿಯೋಜನೆ ಮಾಡತಕ್ಕದ್ದು, ಇದನ್ನು ಅಣು ಆರ್ಥಿಕ ನಿಯೋಜನೆ ಅನ್ನುತ್ತಾರೆ. ರಷ್ಯಾ ಎರಡನೆ ಪದ್ಧತಿಯನ್ನು ಪರಿಪಾಲಿಸುತ್ತದೆಯಾದರೆ, ಅಮೆರಿಕಾ ಮತ್ತು ಬ್ರಿಟನ್ ಮೊದಲನೆಯದು, ನಾವು ಎರಡನ್ನೂ ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಪೂರ್ಣ ಸಮಾಜವಾದವಿಲ್ಲದಿರುವ ಕಾರಣ ಎರಡನೆಯದು ಸಫಲಗೊಳ್ಳುವುದಿಲ್ಲ. ಸಾರ್ವಜನಿಕ ಕ್ಷೇತ್ರವು ಅತ್ಯಧಿಕ ವಿಸ್ತಾರಗೊಳ್ಳುವುದರಿಂದ ಮೊದಲನೆಯದು ಪ್ರಭಾವಕಾರಿಯಾಗುವುದಿಲ್ಲ. ಶಾಸನವು ಸ್ವಲ್ಪ ಮಟ್ಟಿಗೆ ಅಪರಿಹಾರ ಉದ್ಯೋಗವನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮತ್ತು ಉಳಿದದ್ದನ್ನು 180 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಿಯಂತ್ರಣದ ಮೂಲಕ ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ. ದ್ವಿತೀಯ ಪಂಚವಾರ್ಷಿಕ ಯೋಜನೆ ಭಾರತದಲ್ಲಿ ಇದುವರೆಗು ಎರಡು ಯೋಜನೆಗಳು ಬಂದಿವೆ. ಮೊದಲನೆಯದು ಕೇವಲ ಕೆಲವು ಯೋಜನೆಗಳ ಸಂಕಲನ ಮಾತ್ರವಾಗಿತ್ತು. ಆದರೆ ಎರಡನೆಯದು ದೇಶದ ಆರ್ಥಿಕ ಸ್ವರೂಪದಲ್ಲಿ ಮೂಲಭೂತವಾದ ಪರಿವರ್ತನೆಗಳನ್ನು ಮಾಡದಿರುವ ಯೋಜನೆಗಳು ಮಾಡಲಾಗಿತ್ತು. ರಾಷ್ಟ್ರದ ಆದಾಯದಲ್ಲಿ 25% ವೃದ್ಧಿ, ಭೇದಭಾವಗಳನ್ನು ಕಮ್ಮಿಮಾಡುವುದು, ಮೂಲ ಮತ್ತು ಭಾರಿ ಉದ್ಯೋಗಗಳಲ್ಲಿ ವಿಕಾಸಕ್ಕಾಗಿ ಬಲವನ್ನೀಡುವ ದೇಶವನ್ನು ಬಹಳ ವೇಗದಲ್ಲಿ ಉದ್ಯೋಗ ಮತ್ತು ವ್ಯವಸಾಯದ ಅಧಿಕ ವಿಸ್ತರಣೆ, ಇವೆಲ್ಲ ಲಕ್ಷ್ಯಗಳಿಗೆ ಈ ಯೋಜನೆಯ ಸಮ್ಮುಖದಲ್ಲಿ ಇಡಲಾಗಿತ್ತು. ಇವನ್ನೆಲ್ಲ ಪಡೆದುಕೊಳ್ಳುವುದಕ್ಕೆ ನಾಲ್ಕುಸಾವಿರದ ಎಂಟು ಕೋಟಿ ರೂಪಾಯಿಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಸಮಾಜವಾದದ ಉದ್ದೇಶದ ಅನುರೂಪವಾಗಿ ಮೂರು ಸಾವಿರದ ಎಂಟುಕೋಟಿ ರೂಪಾಯಿಗಳು ಮತ್ತು ಸ್ವಂತ ಕ್ಷೇತ್ರದಲ್ಲಿ ಒಂದು ಸಾವಿರದ ನಾನ್ನೂರು ಕೋಟಿ ರೂಪಾಯಿಗಳ ಬಂಡವಾಳ ನಿಯೋಜನೆಯ ವ್ಯವಸ್ಥೆಯಿತ್ತು. ಆದಾಯ ಬರುವ ಸಾಧನದ ದೃಷ್ಟಿಯಿಂದ ಏನು ಅಂದಾಜು ಮಾಡಲಾಗುತ್ತದೆಯೆಂದರೆ ಎಂಟುನೂರು ಕೋಟಿ ರೂ.ಗಳು ತೆರಿಗೆಯಿಂದ ಒಂದು ಸಾವಿರ ಇನ್ನೂರು ಕೋಟಿ ರೂ.ಗಳು ಸಾಲಗಳಿಂದ ಎಂಟನೂರು ಕೋಟಿ ರೂ.ಗಳು ವಿದೇಶಗಳಿಂದ ನಾನ್ನೂರು ಕೋಟಿ ರೂ.ಗಳು ಬಜೆಟಿನ ಬೇರೆ ಮೂಲಗಳಿಂದ, ಒಂದು ಸಾವಿರ ಇನ್ನೂರು ಕೋಟಿ ರೂ.ಗಳು ನಷ್ಟದ ಆರ್ಥಿಕ ವ್ಯವಸ್ಥೆಯಿಂದ ದೊರೆಯುತ್ತದೆ. ಮಿಕ್ಕ ನಾನ್ನೂರು ಕೋಟಿ ರೂ.ಗಳ ಹಣವನ್ನು ಹೇಗೆ ಪೂರ್ತಿಗೊಳಿಸಬೇಕೆಂಬುದಕ್ಕೆ ಯಾವ ವಿಧಾನವು ಸೂಚಿಸಲಾಗಿರಲಿಲ್ಲ. ಯಾವಾಗ ಇಂತಹ ಯೋಜನೆಗಳನ್ನು ರೂಪಿಸಲಾಗಿತ್ತೋ ಅವಾಗ ಇದನ್ನ ಅತ್ಯಂತ ಮಹತ್ವಾಕಾಂಕ್ಷೀ ಮತ್ತು ದೊರಕಿರುವ ಸಾಧನೆರಹಿತವಾಗಿದೆಯೆಂದು ಹೇಳಲಾಗಿತ್ತು. ಇದರ ಜೊತೆ ವ್ಯವಸಾಯವನ್ನು ಅಲ್ಲಗಳೆದು ಕಾರಖಾನೆಗಳ ಮೇಲೆ ಅದರಲ್ಲೂ ಭಾರಿ ಕಾರಖಾನೆಗಳ ಮೇಲೆ ಬಲ ಕೊಡುವುದು/ ಪ್ರೋತ್ಸಾಹಿಸುವುದು ಬಹಳ ತಪ್ಪಾಗಿತ್ತು. ದೇಶದಲ್ಲಿರುವ ನಿರುದ್ಯೋಗದ ನಿರ್ಮೂಲನೆಗಾಗಿ ಇದರಲ್ಲಿ ಯಾವುದೇ ತರಹದ ವ್ಯವಸ್ಥೆ ಮಾಡಿರಲಿಲ್ಲ. ಈ ಯೋಜನೆಯನ್ನು ತಯಾರಿಸಿದಾಗ ಇದನ್ನು ಅತ್ಯಂತ ಮಹತ್ವಾಕಾಂಕ್ಷೀ ಮತ್ತು ದೊರೆತಿರುವ ಸಾಧನಗಳಿಂದ ಬಹಳ ಬೇರೆಯಾಗಿ ಇರುವಂತೆ ಹೇಳಲಾಗಿತ್ತು. ಜೊತೆಗೆ ಕೃಷಿಯನ್ನು ಉಪೇಕ್ಷಿಸಿ ಔದ್ಯೋಗೀಕರಣದ, ಅದರಲ್ಲೂ ಭಾರೀ ನಮ್ಮ ಆರ್ಥಿಕ ನೀತಿಯ ಮೂಲ ಆಧಾರ 181 ಉದ್ಯೋಗಗಳ ಮೇಲೆ ಜೋರು ಒತ್ತುಕೊಡುವುದು ಬಹಳ ತಪ್ಪಾಗಿತ್ತು. ದೇಶದ ನಿರುದ್ಯೋಗದ ನಿರ್ಮೂಲನೆಗಾಗಿ ಇದರಲ್ಲಿ ಏನೂ ವ್ಯವಸ್ಥೆ ಮಾಡಲಾಗಿರಲಿಲ್ಲ. ಪ್ರಭುತ್ವವು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಾದ ಭಾರವನ್ನು ತನ್ನ ಮೇಲೆ ತೆಗೆದುಕೊಂಡಿತ್ತು. ತೆರಿಗೆಯ ಭಾರ ಹೊರಲಿಕ್ಕಾಗುತ್ತದೆಯೋ ಮುಂತಾದ ಹಿಂದಿನ ಎರಡೂವರೆ ವರ್ಷದ ಅನುಭವವಗಳು ಈ ಆಲೋಚನೆಗಳನ್ನು ಸತ್ಯವೆಂದು ಸಿದ್ಧಗೊಳಿಸಿತು. ಯೋಜನಾ ಆಯೋಗವು ಮೇ 1948ರಲ್ಲಿ ಯೋಜನೆಗಳ ಕಾರ್ಯಕಲಾಪಗಳ ಸಿಂಹಾವಲೋಕನ ಮಾಡಿದಾಗ ಅದರ ಪ್ರಕಾರ ಮೇಲ್ಕಂಡ ಸಂಖ್ಯೆಗಳು ಮತ್ತು ಎಣಿಕೆ ಅನುಮಾನಗಳು ಬದಲಾಗಿಬಿಟ್ಟಿವೆ. ಇಂದು ರಾಜಧನ ರಾಜಕರದ ಗಳಿಕೆ/ಪ್ರಾಪ್ತಿಯಿಂದ ಉಳಿತಾಯ ಸುಮಾರು ಏಳುನೂರು ಐವತ್ತೊಂದು ಕೋಟಿ ರೂ., ರೈಲುಗಳಿಂದ ಇನ್ನೂರು ಐವತ್ತು ರೂ., ಋಣದಿಂದ/ಸಾಲದಿಂದ ಒಂಬೈನೂರು ನಲ್ವತ್ತೊಂಬತ್ತು ಕೋಟಿ ರೂ., ಬೇರೆ ಮೂಲಗಳಿಂದ ಮೂವತ್ತೊಂಬತ್ತು ಕೋಟಿ ರೂ. ನಷ್ಟದ್ದು, ಅರ್ಥವ್ಯವಸ್ಥೆಯಿಂದ ಸಾವಿರದ ಇನ್ನೂರು ಕೋಟಿ ರೂ.ಗಳು ಎಂದು ಅಂದಾಜು ಹಾಕಲಾಗಿದೆ. ಇದರ ಪ್ರಕಾರ ಒಟ್ಟು ಬರುವಿಕೆ/ಗಳಿಕೆ ಸುಮಾರು ನಾಲ್ಕುಸಾವಿರದ ಇನ್ನೂರ ಅರವತ್ತು ಕೋಟಿ ರೂ. ಆಗಬಹುದು. ಆದ್ದರಿಂದ ಯೋಜನೆಯನ್ನು ಕತ್ತರಿಸಿ/ತುಂಡರಿಸಿ ನಾಲ್ಕು ಸಾವಿರದ ಐನೂರು ಕೋಟಿ ರೂ.ಗಳು ಅಂತ ಮಾಡಬೇಕು ಎಂಬ ಒಂದು ಸಲಹೆ ನೀಡಲಾಗಿತ್ತು. ನವೆಂಬರ್ 1948ರ ಆಯೋಗದ ಒಂದು ಸೂಚನೆ ಪ್ರಕಾರ ನಾಲ್ಕು ಸಾವಿರದ ಐನೂರು ಕೋಟಿ ರೂ.ಗಳನ್ನು ಹೊಂದಿಸುವುದು ಸಂಭವವಾಗುವುದಿಲ್ಲ. ಆದ್ದರಿಂದ ನಾಲ್ಕು ಸಾವಿರದ ಇನ್ನೂರು ನಲ್ವತ್ತು ಕೋಟಿ ರೂ.ಗಳನ್ನಾಗಿ ಮಾಡಬೇಕೆಂದು ಒಂದು ಸಲಹೆ ನೀಡಲಾಗಿತ್ತು. ಹಂಚಿಕೆಗಳಲ್ಲೂ ಅನೇಕ ಬದಲಾವಣೆಗಳು ಮಾಡಲಾಗಿತ್ತು. ರಾಷ್ಟ್ರೀಯ ವಿಕಾಸ ಪರಿಷತ್ತು ಅದರ ಸಲಹೆಗಳನ್ನು ಒಪ್ಪಿಲ್ಲ. ಯೋಜನೆಗಳ ಗುರಿ ಮತ್ತು ಲೆಕ್ಕಾಚಾರ ತಪ್ಪಾಗಿವೆ. ಅದರ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸಿದ್ದಿದ್ದರೆ ಅದರಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ತರಬಹುದಾಗಿತ್ತು. ಆದರೆ ನಮ್ಮ ದೇಶದ ಸಂಖ್ಯೆಗಳ ಏಕತ್ರೀಕರಣ ಮತ್ತು ತರ್ಕದ ಒಂದು ಒಳ್ಳೆ ನಂಬಿಕಸ್ಥ ಮತ್ತು ತಡವಾಗಲಾರದ ವ್ಯವಸ್ಥೆಯಿಲ್ಲ, ಮತ್ತೆ ಆಡಳಿತದ ಕೆಂಪು ಪಟ್ಟಿಯಲ್ಲಿ ಅದು ಸಂಭವವಾಗುವುದಿಲ್ಲ. ಮಹತ್ವಪೂರ್ಣವಾದ ಪ್ರಶ್ನೆಯೇನೆಂದರೆ ಅಕಸ್ಮಾತ್ ಲೆಕ್ಕಾಚಾರ ಸರಿಯಾಗಿಬಿಟ್ಟರೆ ಈ ಒಂದು ಯೋಜನೆಗಳಿಂದ ಭಾರತದ ಸಮಸ್ಯೆಗಳನ್ನು ಪರಿಹರಿಸುವ ಯೋಚನೆ ಒಂದು ಕಡೆ ಇದ್ದರೆ, ಅದನ್ನು ಪಡೆದುಕೊಳ್ಳುವ ದಿಕ್ಕಿನೆಡೆಗೆ ನಡೆಯುವ ಸಾಮರ್ಥ್ಯ ಕೂಡ ಇರದು. 182 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯೋಜನೆಯ ಮೂಲ/ಮೌಲಿಕ ತಪ್ಪುಗಳು ಯೋಜನೆಯ ದೊಡ್ಡ ತಪ್ಪೇನೆಂದರೆ ಅದರ ಮೂಲಕ ಭಾರತದ ಪರಿಸ್ಥಿತಿಗಳನ್ನು ಕುರಿತು ವಿಚಾರ ಮಾಡದಿರುವುದು. ಯೋಜನೆಗಳು ಭಾರತದ ಸಾಧನೆಗಳನ್ನು ಕುರಿತು ಮತ್ತು ಅದರ ಅವಶ್ಯಕತೆಗಳನ್ನು ವಿಚಾರಮಾಡಲಿಲ್ಲ. ಇದು ರಷ್ಯಾ ಮತ್ತು ಯೂರೋಪಿನ ಔದ್ಯೋಗಿಕರಣದ ಅನುಕರಣೆಯ ಒಂದು ಚಿಕ್ಕ ಪ್ರಯತ್ನ ಮಾತ್ರ. ಅದರಲ್ಲೂ ಈ ದೇಶಗಳ ಸಮ್ಮುಖದಲ್ಲಿ ಕಾಲದಲ್ಲಿ ಅದರ ಪರಿಣಾಮ ಸ್ವರೂಪವಾಗಿ ಯಾವ ಸಮಸ್ಯೆಗಳು ಹುಟ್ಟಿಕೊಂಡವೋ ಅದನ್ನು ಕುರಿತು ವಿಚಾರ ಮಾಡಿರಲಿಲ್ಲ. ಬೇರೆ ಬೇರೆ ಪರಿಯೋಜನೆ ಮತ್ತು ಕ್ಷೇತ್ರಗಳ ನಡುವೆ ಯಾವುದೇ ತರಹದ ಸಮನ್ವಯ ಅಥವಾ ಸಮತೋಲನ ಕೂಡಿಸಿರಲಿಲ್ಲ. ಯಾವುದೇ ಯೋಜನೆಯ ಪರಿಪೂರ್ಣತೆಗೆ ಧನ ಮಾತ್ರವಲ್ಲದೆ, ಭೌತಿಕ ಮತ್ತು ಮಾನವೀಯ ಸಾಧನಗಳ ಅವಶ್ಯಕತೆಯಿರುತ್ತದೆ. ನಮ್ಮ ಸಂಪೂರ್ಣ ಧ್ಯೇಯ ಧನವನ್ನು ಗಳಿಸುವ ಸ್ರೋತ ಹುಡುಕುವುದು ಮತ್ತು ಖರ್ಚಿನ ವಿಚಾರದ ಪ್ರಕಾರ ಕನಿಷ್ಠ ವೆಚ್ಚದಿಂದ ಅಧಿಕ ಲಾಭವನ್ನು ಪಡೆಯುವ ವಿಚಾರವನ್ನೇ ಅವರು ಮರೆತಿದ್ದರು. ನಾವು ಎಲ್ಲಿ ಮಾನವೀಯ ವಿಕಾಸದ ಕಡೆ ಗಮನ ಕೊಡಬೇಕಿತ್ತೋ, ಅಲ್ಲಿ ನಾವು ಭೌತಿಕ ಮತ್ತು ಹಣಕಾಸು ಗಳಿಸುವುದನ್ನೇ ಲಕ್ಷ್ಯವಾಗಿಟ್ಟುಕೊಂಡಿದದ್ದೀವಿ. ಮೂರನೆಯ ಯೋಜನೆ ಇಂದು ಮೂರನೆಯ ಯೋಜನೆಯನ್ನು ಕುರಿತು ಚರ್ಚೆ ಪ್ರಾರಂಭವಾಗಿದೆ. ಯೋಜನೆಯ ಆಧಾರ ಭಾರತದ ಕೃಷಿ ಇರಬಹುದು ಮತ್ತು ಅದರದೇ ಆದ ಕೆಲವು ಅಂಗಗಳ ರೂಪದಲ್ಲಿ ನಿಂತ ಅನ್ಯ ವಿಕೇಂದ್ರಿತ ಉದ್ಯೋಗವಿರಬಹುದು, ಇಂತಹ ವಿಕೇಂದ್ರಿತ ಕೃಷಿ ಔದ್ಯೋಗಿಕ ಗ್ರಾಮೀಣ ಸಮಾಜವೇ ನಮ್ಮ ರಾಷ್ಟ್ರದ ಬೆನ್ನೆಲುಬಾಗಬಹುದು. ಅದನ್ನು ವಿಕಸಿತಗೊಳಿಸಲಿಕ್ಕೆ ಸಂಸ್ಥೆಗೆ ಸಂಬಂಧಪಟ್ಟಂತಹ ವ್ಯವಸ್ಥೆಗಳನ್ನು ನಿರ್ಮಾಣ ಮಾಡುವುದು, ಇದೇ ಶಾಸನದ ಯೋಜನೆಗಳ ಕೆಲಸ/ ಕಾರ್ಯವಾಗಬಹುದು. ದೇಶದ ಆರ್ಥಿಕ ವ್ಯವಸ್ಥೆಯ ಕ್ರಾಂತಿಯುತ ವಿಕಾಸದ ಕಾರ್ಯಕ್ರಮ ನಿಯೋಜಿಸುವಾಗ, ಮೂರನೆಯ ಯೋಜನೆಯು ಎರಡನೆ ಯೋಜನೆಗೆ ಸಂಬಂಧಿಸಿದಂತೆ ಇರಬೇಕೆಂಬುದು ನಾವು ಗಮನಿಸಬೇಕಾದ ವಿಷಯ. ಗಡಿಯಾರದ ಷೆಂಡ್ಯುಲಮ್‍ನಂತೆ ನಾವು ಪರಿಸ್ಥಿತಿಯ ಹೊಡೆತದಿಂದ ತೂಗುತ್ತಾ ಇದ್ದರೆ ಸಮಯ/ ವೇಳೆ, ಶಕ್ತಿ ಮತ್ತು ಸಲಕರಣೆಗಳ ಅಪವ್ಯಯವಾಗುತ್ತದೆ. ದೊಡ್ಡ ಖರ್ಚು ಮಾಡಿ ಎರಡನೆ ಯೋಜನೆಯ ಸಮಯದಲ್ಲಿ ದೊರೆತ/ಸಿಕ್ಕ ಸಾಧನಗಳನ್ನು ಯಾವ ನಮ್ಮ ಆರ್ಥಿಕ ನೀತಿಯ ಮೂಲ ಆಧಾರ 183 ರೀತಿಯಲ್ಲಿ ಉಪಯೋಗಿಸಬೇಕೆಂದರೆ, ಅವು ವ್ಯರ್ಥವಾಗಬಾರದು ಮತ್ತು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ನಾವು ಏನು ಏರುಪೇರು ತಂದುಕೊಂಡಿದ್ದೆವೋ ಅದನ್ನು ಸರಿಪಡಿಸುತ್ತಾ ಮುಂದಿನ ವಿಕಾಸದ ವ್ಯವಸ್ಥೆ ಮಾಡತಕ್ಕದ್ದು. __________ * ಆಕರ : ಪಾಂಚಜನ್ಯ 5-01-1949 ಕಾಂಗ್ರೆಸ್ಸಿನ 'ಸಮಾಜವಾದದ ಘೋಷಣೆ' ಗಳಿಂದಲೇ ಕಮ್ಯುನಿಸ್ಟ್‌ರು ತಳ ಊರಿದ್ದು ನಾನು ದೆಹಲಿಯ ಜನಸಂಘದ ಕಾರ್ಯಕರ್ತರಿಗೆಲ್ಲಾ ನಿಧಿ-ಸಂಗ್ರಹಕ್ಕೆ ಸಂಬಂಧಿಸಿದಂತೆ ಅವರ ಸಂಕಲ್ಪದ ಸಾಫಲ್ಯತೆಗೆ ಅಭಿನಂದಿಸುತ್ತೇನೆ. ಸಾಮಾನ್ಯ ಜನತೆಯಿಂದ ಸಂಗ್ರಹಿಸಿದ ಈ ನಿಧಿಯು ದೆಹಲಿಯ ಜನತೆಯ ಹೃದಯದಲ್ಲಿ ಜನಸಂಘದ ಬಗ್ಗೆ ಹೆಚ್ಚುತ್ತಿರುವ ಪ್ರೀತಿಯನ್ನು ಪರಿಚಯಿಸುತ್ತದೆ. ಅದರ ಬಗ್ಗೆ ಕೃತಜ್ಞತೆಯ ಒಂದು ಭಾವನೆ ನಮ್ಮೆಲ್ಲರ ಮನಸ್ಸಿನಲ್ಲಿ ಸಹಜವಾಗಿಯೇ ಉತ್ಪನ್ನವಾಗುತ್ತದೆ. ದೆಹಲಿಯ ನಿವಾಸಿಗಳು ಜನಸಂಘದ ಎಲ್ಲಾ ಕಾರ್ಯಕ್ರಮದಲ್ಲೂ ಎಲ್ಲಾ ರೀತಿಯ ಸಹಕಾರ ನೀಡಿರುತ್ತಾರೆ. ಅವರ ಈ ಒಂದು ಸಹಕಾರದಿಂದಲೇ ಜನಸಂಘವು ಭಾರತದ ರಾಜನೀತಿಯಲ್ಲಿ ತನ್ನದೇ ಆದ ಒಂದು ಮಹತ್ವಪೂರ್ಣವಾದ ಸ್ಥಾನವನ್ನು ದೊರಕಿಸಿಕೊಂಡಿದೆ. ಆದರೆ ನಾವು ಮತ್ತೂ ಹೆಚ್ಚು ಕೆಲಸವನ್ನು ಮಾಡಬೇಕು. ಆದ್ದರಿಂದ ಜನಸಂಘದ ಬಗ್ಗೆ ಆತ್ಮೀಯ ಭಾವನೆಯನ್ನು ಇಟ್ಟಿರುವವರು ಹೆಚ್ಚು ಭಾರವನ್ನು ಹೊರುವುದಕ್ಕೆ ತಯಾರಿರಬೇಕಾಗಿದೆ. ರಾಜಕೀಯ ಅಸ್ಥಿರತೆ ಭಾರತದ ರಾಜನೀತಿ ದಿನೇ ದಿನೇ ಅಸ್ಥಿರವಾಗುತ್ತಲಿದೆ. ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ವಿಧಾನ ಮಂಡಲಗಳಿಂದ ಸ್ಪಷ್ಟ ಬಹುಮತ ದೊರಕಿದೆಯೋ ಅಲ್ಲಿ ಒಂದು ಆಂತರಿಕ ಗುಂಪುಗೂಡುವಿಕೆ ಮತ್ತು ಸಂಘರ್ಷಕ್ಕೆ ಸಿಲುಕಿಕೊಂಡಿದೆ. ಬೇರೆಡೆಗೆ ಅವು ಸಿದ್ಧಾಂತಗಳಿಲ್ಲದೆ/ಮೌಲ್ಯಗಳಿಲ್ಲದೆ ಒಪ್ಪಂದ ಮತ್ತು ಇತರ ಸಿಕ್ಕುಗಳಲ್ಲಿ ನಿಂತು ಅದನ್ನು ಅವಲಂಬಿಸುತ್ತಿದ್ದಾರೆ. ಯಾವುದೋ ಒಂದು ದಳದ ಸ್ಪಷ್ಟ ಬಹುಮತದ ಅಭಾವದಿಂದ ಒಂದು ನಿಶ್ಚಿತ ಕಾರ್ಯಕ್ರಮದ ಆಧಾರದ ಮೇಲೆ ವಿಭಿನ್ನ ದಳಗಳ ಮಿಶ್ರಿತ ಸರಕಾರಗಳ ಸ್ಥಾಪನೆಯೆಂಬುದು ಪಶ್ಚಿಮ ಜನತಂತ್ರದ ಸರ್ವರಿಂದಲೂ ಮನ್ನಣೆಗೊಂಡಂತಹ ಕಲ್ಪನೆಯಾಗಿದೆ. ಆದರೆ ಕಾಂಗ್ರೆಸ್ಸಿನವರಂತು ಶಾಸಕರ ಮನೋವೃತ್ತಿಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಬೇರೆ ದಳಗಳ ಜೊತೆ ಸಮಾನತೆಯ ಸಲುವಾಗಿ ಮಾತನಾಡಿ ವ್ಯವಹಾರ ಮಾಡುವುದು ತಮ್ಮ ಘನತೆಗೆ ಧಕ್ಕೆಯೆನಿಸುತ್ತದೆ. ಅವರು ತಮ್ಮ ಮನೋವೃತ್ತಿಯನ್ನು ಬದಲಿಸಿಕೊಳ್ಳಬೇಕು. ಇದರ ಕಾಂಗ್ರೆಸ್ಸಿನ 'ಸಮಾಜವಾದದ ಘೋಷಣೆ' ಗಳಿಂದಲೇ ಕಮ್ಯುನಿಸ್ಟ್‌ರು ತಳ ಊರಿದ್ದು 185 ಜೊತೆಗೆ ನಾನು ತಿಳಿದುಕೊಳ್ಳುವುದು ಏನೆಂದರೆ ಮುಂಬರುವ ಅನೇಕ ವರ್ಷಗಳವರೆಗು ನಮ್ಮ ದೇಶದಲ್ಲಿ ದ್ವಿ-ದಳೀಯ ಸಂಸದದ ಪ್ರಣಾಲಿಕೆಗಳು ವಿಕಸಿತಗೊಳ್ಳುವುದು ಸಂಭವವಾಗುವುದಿಲ್ಲ. ನಾವು ಅನೇಕ ದಳಗಳ ಅಸ್ತಿತ್ವವನ್ನು ಅರಿತುಕೊಂಡು ಬಹುದಳೀಯ ಪ್ರಣಾಳಿಯ ಸ್ವಸ್ಥವಾದ ಪರಂಪರೆಗಳ ಸ್ವತಂತ್ರ ವಿಕಾಸ ಮಾಡಬೇಕಾಗಿದೆ. ಕೇರಳದ ಆಂದೋಲನ ನನ್ನ ದೃಷ್ಟಿಯಲ್ಲಿ ಕೇರಳದಲ್ಲಿ ನಡೆಯುತ್ತಿರುವ ಆಂದೋಳನವು ರಹಸ್ಯಮಯವಾದ ರೀತಿಯದ್ದು ಅನಿಸುತ್ತದೆ. ಮತ್ತು ಅದನ್ನು ಸಮರ್ಥಿಸುವುದಕ್ಕೆ ಬಹಳ ಸಂಕೋಚವೆನಿಸುತ್ತದೆ. ಕೇರಳದ ಸಾಮ್ಯವಾದಿ ಸರ್ಕಾರ ಜನತೆಯ ವಿಶ್ವಾಸವನ್ನು ಗಳಿಸಲಾಗಲಿಲ್ಲ ಅನ್ನುವ ಮಾತು ಸ್ಪಷ್ಟವಾಗಿದೆ. ಯಾವುದೇ ದಳದ ಸ್ಫೂರ್ತಿ ಮತ್ತು ನಿಷ್ಠೆ ರಾಷ್ಟ್ರದ ಹೊರಗಡೆ ಕೇಂದ್ರೀಕರಿಸಿರುತ್ತದೋ, ಅದು ಜನತೆಯ ಹಿತಾಹಿತಕ್ಕೆ ಅನುರೂಪವಾಗಿ ಇರುವುದು ಕಷ್ಟಸಾಧ್ಯ ಕೆಲಸ. ಜನತೆಯ ಹೆಚ್ಚುತ್ತಿರುವ ಕಷ್ಟಗಳಿಂದ ಅದರ ಧೈರ್ಯದ ಪ್ರತಿಬಂಧನೆ ಒಡೆಯುವುದು ಅತ್ಯಂತ ಸ್ವಾಭಾವಿಕವಾದುದು. ಈ ಪರಿಸ್ಥಿತಿಯಲ್ಲಿ ಜನಸಂಘವು ಜನತೆಯ ಈ ಜನ್ಮಸಿದ್ಧ ಅಧಿಕಾರಗಳಿಗೆ ಮನ್ನಣೆ ಕೊಟ್ಟು ಏನು ಹೇಳುತ್ತದೆಯೆಂದರೆ ಅದು ಭ್ರಷ್ಟ ಮತ್ತು ಜನಹಿತ ವಿರೋಧಿ ಶಾಸನದ ವಿರುದ್ಧ ಆಂದೋಳನ ಮಾಡಬಹುದೆಂದು. ಇದರ ಬಗ್ಗೆಯು ಕೂಡ ಒಪ್ಪಬೇಕಾದ ವಿಷಯವೇನೆಂದರೆ ಕಮ್ಯುನಿಸ್ಟರ ಸಾರ್ವಜನಿಕ ಮತ್ತು ಜನತಾಂತ್ರಿಕ ಉಪಾಯಗಳ ಮೇಲೆ ಯಾವುದೇ ತರಹದ ನಂಬಿಕೆಯಿಲ್ಲ ಮತ್ತು ಅವು ಅದರ ದುರುಪಯೋಗವನ್ನು ಹತ್ತಿರದ ಭವಿಷ್ಯದಲ್ಲಿ ಜನತಂತ್ರದ ಕೊಲೆ ಮಾಡುವ ಸಲುವಾಗಿ ಬಳಸಬಹುದು. ಆದರೆ ಸತ್ಯವೇನೆಂದರೆ ಕಾಂಗ್ರೆಸ್ ಮತ್ತು ಅನ್ಯ ದಳಗಳು ಇಂದು ಕೇರಳದಲ್ಲಿ ಈ ಆಂದೋಳನವನ್ನು ಪ್ರಾರಂಭಮಾಡಿ ನೀತಿವಂತಿಕೆಯ ಪರಿಚಯವನ್ನೇನು ಕೊಟ್ಟಿಲ್ಲ. ಕಮ್ಯುನಿಜಮ್ ಮತ್ತು ಕಾಂಗ್ರೆಸ್ ಪಂಡಿತ್ ನೆಹರೂ ಮತ್ತು ಕಾಂಗ್ರೆಸ್ ಸೂತ್ರಧಾರರು ಸಾಮ್ಯವಾದಿ ದಳದ ಅರಾಷ್ಟ್ರೀಯ ವೃತ್ತಿ ಮತ್ತು ಅದರ ಭಯಾನಕ ಸಂಭಾವನೆಗಳ ಒಳ್ಳೆ ಜ್ಞಾನ ಆಗಿದೆ ಎಂದೆ ನಾವು ಆಂದೋಳನದ ಕಾರಣವೆಂದು ತಿಳಿದುಕೊಳ್ಳಬಹುದು. ಕೇರಳದ ಆಂದೋಳನದ ಪ್ರತೀತಿಯೇ ಇದರ ಪರಿಣಾಮವೇ? ವಿಷಯವೇನಾದರು ಇದೇಯೆಂದಾದರೆ ನಾವು ಕೇವಲ ಕೇರಳವಲ್ಲದೆ ಸಂಪೂರ್ಣ ಭಾರತದ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಹಾಗಾಗಿದ್ದಿದ್ದರೆ ಈ ಕಮ್ಯುನಿಸ್ಟ್ ವಿರೋಧಿ ಆಂದೋಳನವನ್ನು ಕೇವಲ ಕೇರಳದವರೆಗೆ ಸೀಮಿತವಾಗಿಡದೆ ಸಂಪೂರ್ಣ 186 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಭಾರತದಲ್ಲಿ ಹರಡಬೇಕಾಗಿದೆ. ಕಾಂಗ್ರೆಸ್ಸಿನ ಇದುವರೆಗಿನ ನೀತಿಗಳು ಮತ್ತು ವ್ಯವಹಾರದಿಂದ ಏನು ಅನಿಸುತ್ತದೆಯೆಂದರೆ ಅದು ಕೇವಲ ದಳಗಳ ಹಿತಕ್ಕೆ ಧಕ್ಕೆ ಉಂಟಾದರೆ ಕೇರಳದ ಬಗ್ಗೆ ವಿಶೇಷವಾಗಿ ವಿಚಾರ ಮಾಡುತ್ತಿದೆ, ಇಲ್ಲದಿದ್ದ ಪಕ್ಷದಲ್ಲಿ ಅದು ಕಮ್ಯುನಿಸ್ಟ್‌ರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಕೊಡುತ್ತಾ ಬಂದಿದೆ ಮತ್ತು ಕೊಡುತ್ತಾ ಇದೆ. ರಾಜಾಜೀ ಅವರ ಪಕ್ಷ ಉಪಾಧ್ಯಾಯರವರು ಹೇಳುತ್ತಾರೆ/ಹೇಳಿದರು, `ಕಾಂಗ್ರೆಸ್‍ನವರ ಸಮಾಜವಾದಿ ಜಯಕಾರವು ಕಮ್ಯುನಿಸ್ಟ್‍ಗೆ ಅಧಿಕ ಪ್ರತಿಷ್ಠೆ ನೀಡಿದೆ ಎನ್ನುವುದು ಅಕ್ಷರಶಃ ಸತ್ಯ. ದೇಶದ ಸಮಾಜವಾದಿಯ ದುರ್ಬುದ್ಧಿಯುಳ್ಳ ವಿಚಾರಧಾರೆಯನ್ನು ಯಾವತ್ತೂ ಸ್ವೀಕರಿಸಲಿಲ್ಲ, ಇದು ದೇವರ ಕೃಪೆಯೇ ಸರಿ. ಜನಸಂಘವಂತು ಯಾವತ್ತೂ ಇದನ್ನು ವಿರೋಧಿಸುತ್ತಲೇ ಇದೆ. ಸಂತೋಷದ ವಿಷಯವೇನೆಂದರೆ ರಾಜಗೋಪಾಲಚಾರಿಯಂತಹ ವಯೋವೃದ್ಧ ಕಾಂಗ್ರೆಸ್ ಅನುಯಾಯಿಯೂ ಸಹ `ಸ್ವತಂತ್ರ ದಳದ' ಹೆಸರಿನಲ್ಲಿ ಹೊಸ ಪಾರ್ಟಿಯನ್ನು ನಿರ್ಮಿಸಿ ಸಮಾಜವಾದ ವಿರೋಧಿ ಪಕ್ಷವನ್ನೇ ಅನುಸರಿಸಿದ್ದಾರೆ. ಈ ದಳದ ಭವಿಷ್ಯ ಮತ್ತು ಅದರ ಸಂಪೂರ್ಣ ಸ್ವರೂಪವಂತು ಈಗ ಅನಿಶ್ಚಿತವಾಗಿದೆ. ಆದರೆ ಹೊಸ ದಳದ ನಿರ್ಮಾಣವು ಸಿದ್ಧಪಡಿಸಿದೆಯೇನೆಂದರೆ ಈಗ ಸಮಾಜವಾದದ ವಿರುದ್ಧವಾಗಿ ಜನಸಂಘದ ಸ್ವರ ಒಂದೇ ಆಗಿಲ್ಲ ಎನ್ನುವುದಂತು ಸ್ಪಷ್ಟ ಮತ್ತು ಖಂಡಿತ. ದೇಶದ ಅನ್ಯ ಮಹತ್ವಪೂರ್ಣವಾದ ತತ್ವವು ನಮ್ಮೊಂದಿಗೆ ಇದೆ. ನಾವು ನಮ್ಮ ಹೊಸ ಜೊತೆಗಾರರನ್ನು ಸ್ವಾಗತಿಸುತ್ತೇವೆ ಆದರೆ ನಾವು ನೆನಪಿಡಬೇಕಾದದ್ದು ಏನೆಂದರೆ ನಿಜವಾದ ಕ್ರಾಂತಿಯನ್ನು ನಾವುಗಳೇ ನೋಡಿಕೊಳ್ಳಬೇಕು. ಜನಸಂಘದ ಕನಸು ಅವರು ಏನೆನ್ನುತ್ತಾರೆಯೆಂದರೆ, `ಜನಸಂಘದ ಸಮಾಜವಾದ ವಿರೋಧ' ಮೂಲಭೂತವು ಮತ್ತು ಪರಿವರ್ತನೆ ಇಲ್ಲವಾದದ್ದು ಆಗಿದೆ. ಏಕೆಂದರೆ ಅದರ ದೃಷ್ಟಿಯಲ್ಲಿ ಸಮಾಜವಾದವು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳಿಗೆ ಸಂಪೂರ್ಣವಾಗಿ ವಿದೇಶದ್ದಾಗಿದೆ. ಸಮಾಜವಾದವು ಭಾರತೀಯ ಜನತೆಗೆ ಪ್ರೇರಣೆ ನೀಡುವುದರಲ್ಲಿ ಅಸಮರ್ಥವಾಗಿದೆಯೆಂದು ನಾವು ಇತರ ದೇಶಗಳ `ವಚನಗಳನ್ನು' ಎದುರಿಸಲು ಯಾವುದೇ ಬೇರೆ ದೇಶದ `ವಾಯಿದೆ'ಗಳನ್ನು ಆಧಾರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಜನಸಂಘವು ಪಾಶ್ಚಾತ್ಯ ರಾಜನೀತಿಯ ತಳಪಾಯದ ಮೇಲೆ ನಿಂತು ಏನೂ ವಿರೋಧಿಸುವುದಿಲ್ಲ. ಸತ್ಯವೇನೆಂದರೆ ಸಮಾಜವಾದ ಮತ್ತು ಬಂಡವಾಳಶಾಹಿ ಎರಡೂ ಹೊರ ದೇಶದ ಕಲ್ಪನೆಗಳೇ. ಅವು ಭಾರತದ ಕಾಂಗ್ರೆಸ್ಸಿನ `ಸಮಾಜವಾದದ ಘೋಷಣೆ'ಗಳಿಂದಲೇ ಕಮ್ಯುನಿಸ್ಟ್‌ರು ತಳ ಊರಿದ್ದು 187 ಪ್ರಕೃತಿ ಮತ್ತು ಪರಂಪರೆ ಜೊತೆಯೇನೂ ಸರಿ ಹೊಂದುವುದಿಲ್ಲ. ಆದ್ದರಿಂದ ಜನಸಂಘವು ಭಾರತದ ಸಂಸ್ಕೃತಿ ಯ ಮರ್ಯಾದೆಯ ಆಧಾರದ ಮೇಲೆ ಒಂದು ವಿಕೇಂದ್ರಿತ ಸಮಾಜ ರಚನೆಯ ಸ್ವರೂಪ. ಇದರಲ್ಲಿ ರಾಷ್ಟ್ರ ಮತ್ತು ವ್ಯಕ್ತಿ ಇಬ್ಬರ ನಡುವೆ ಒಂದು ಸಾಮರಸ್ಯ ಸ್ಥಾಪಿತವಾಗಲಿ ಮತ್ತು ಅದು ವ್ಯಕ್ತಿಯನ್ನು ವಿಕಾಸ/ ಪ್ರಗತಿಯ ಪೂರ್ಣ ಸ್ವಾತಂತ್ರ್ಯ ಕೊಡುತ್ತ ರಾಷ್ಟ್ರವನ್ನು ಸಫಲತೆ ಮತ್ತು ಸಮೃದ್ಧಿಯಾಗಿ ಮಾಡುವುದರಲ್ಲಿ ಸಾಫಲ್ಯತೆ ದೊರಕಲಿ. ಕೇರಳ ಮತ್ತು ಜನಸಂಘ ಕಮ್ಯುನಿಸ್ಟ್ ಸರ್ಕಾರ ತ್ಯಾಗಪತ್ರ ಕೊಡಲಿ : ರಾಷ್ಟ್ರಪತಿಯ ಶಾಸನವು ಕ್ಯಾಲಿಕಟ್‍ನಲ್ಲಿ ಚಾಲನೆಗೆ ಬರಲಿ, ಕೇರಳ ಜನಸಂಘದ ಪ್ರದೇಶ ಕಾರ್ಯಕಾರಿಣಿಯು ಕೆಳಕಂಡ ಪ್ರಸ್ತಾವವನ್ನು ನಮೂದಿಸಿ ಕೇರಳದ ಕಮ್ಯುನಿಸ್ಟ್ ಶಾಸನದ ವಿರುದ್ಧ ಜನ ಆಂದೋಳನವನ್ನು ಸ್ವಾಗತಿಸಿ ಮತ್ತು ಅದಕ್ಕೆ ತಮ್ಮ ಸಮ್ಮತಿಯನ್ನು ನೀಡಿದೆ. ವಿಧಿವತ್ತಾದ ಉಪಾಯಗಳಿಂದ ಆಯ್ಕೆಯಾದ ಸರ್ಕಾರವು ಆಂದೋಳನದ ಸಹಾಯದಿಂದ ಸರಿಯಬಾರದು. ಏಕೆಂದರೆ ಈ ಮಾರ್ಗವು ಪ್ರಜಾತಾಂತ್ರಿಕವಾಗುವುದಿಲ್ಲ ಅನ್ನುವ ತರ್ಕ ವರ್ತಮಾನ ಪರಿಸ್ಥಿತಿಯಲ್ಲಿ ಸರಿ ಹೊಂದುವುದಿಲ್ಲ. ಮುಖ್ಯವಾಗಿ ಕಮ್ಯುನಿಸ್ಟ್ ಪಾರ್ಟಿಯ ವಿಷಯದಲ್ಲಂತೂ ಈ ಒಂದು ನಿರ್ಧಾರ ವ್ಯರ್ಥವೆನಿಸುತ್ತದೆ. ಕಮ್ಯುನಿಸ್ಟ್‌ರು ಜನತಂತ್ರದಲ್ಲಿ ವಿಶ್ವಾಸ ತೋರಿಸುವುದು ಒಂದು ತರಹದ ಬೂಟಾಟಿಕೆ ಮತ್ತು ಕ್ಷಣಿಕ ನೀತಿಗಳು ಮಾತ್ರವೆನಿಸುತ್ತದೆ. ಅವರ ಇತಿಹಾಸವನ್ನು ನೋಡಿದರೆ, ಅವರು ತಮ್ಮ ಉದ್ದೇಶಗಳ ಪೂರ್ತಿಗಾಗಿ ಯಾವುದೇ ತರಹದ ಉಪಾಯಗಳನ್ನು ಅವಲಂಬಿಸಲು ಹಿಂಜರಿಯುವುದಿಲ್ಲ/ಸಂಕೋಚಪಡುವುದಿಲ್ಲವೆಂದು ಸಿದ್ಧಪಡಿಸುತ್ತದೆ. ತಿಬ್ಬತ್ತಿನ ಪಕ್ಷಕ್ಕೆ ಅವರ ನೀತಿಗಳು ಸ್ಪಷ್ಟವಾಗಿ ಏನು ಹೇಳಿದೆಯೆಂದರೆ ಅವರು ರಾಷ್ಟ್ರದ ವ್ಯಾಪಕ ಹಿತಕ್ಕಿಂತ ತಮ್ಮ ದಳದ/ಪಕ್ಷದ ಹಿತವನ್ನೇ ಬಯಸುತ್ತವೆ. ಆದ್ದರಿಂದ ನಾವು ಜನತಂತ್ರ ಮತ್ತು ರಾಷ್ಟ್ರೀಯತೆಯ ಸಂದರ್ಭದಲ್ಲಿ ಕಮ್ಯುನಿಸ್ಟ್‌ರಿಗೆ ಬೇರೆ ರಾಷ್ಟ್ರೀಯ ರಾಜನೈತಿಕ ದಳಗಳ ಮುಂದೆ ಖಂಡಿತವಾಗಿಯೂ ಭಿನ್ನವಾದ ದೃಷ್ಟಿಕೋನದಲ್ಲಿ ನೋಡಬೇಕು, ಕೇರಳ ಜನಸಂಘವು ಏನು ತಿಳಿಯುತ್ತೆಯೆಂದರೆ, ಕಮ್ಯುನಿಸ್ಟ್‌ರು ಅಧಿಕಾರರೂಢರಾಗಿರೋದು ಒಂದು ದೊಡ್ಡ ರಾಷ್ಟ್ರೀಯ ದುರ್ಘಟನೆ ಮತ್ತು ಅವರನ್ನು ಸಮಯ ಸಿಕ್ಕಿದ ತಕ್ಷಣ ಕುರ್ಚಿಯಿಂದ ತಳ್ಳಿಹಾಕುವುದು ಎಲ್ಲಾ ರಾಷ್ಟ್ರಭಕ್ತರ/ದೇಶಭಕ್ತರ ಪರಮ ಕರ್ತವ್ಯವಾಗಿದೆ. __________ * ಆಕರ : ಪಾಂಚಜನ್ಯ, 22 ಜೂನ್ 1949 ಎಲ್ಲರೂ ಒಂದಾಗೋಣ ಇದರ ಜೊತೆ ಜನಸಂಘ ವಿಭಿನ್ನ ಜಾತಿಗಳ ನಡುವೆ, ಯಾವ ಪರಿಸ್ಥಿತಿಯ ವಶದಿಂದ ಒಟ್ಟಾಗಿ ಬರಲು ಸಿಕ್ಕಿಹಾಕಿಕೊಂಡಿವೆ. ಅವು ಚಿಕ್ಕ-ಚಿಕ್ಕ ಪಕ್ಷಗಳಂತಹ ಹಿಂದುಳಿದ ಜಾತಿಗಳ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಕಲಹ ಮತ್ತು ಅಸಹನೀಯತೆಯನ್ನು ನೋಡಿ ತುಂಬಾ ನೋವು ಉಂಟಾಗಿದೆ. ಶತ್ರು ರಾಷ್ಟ್ರವು ಸಹ ಪರಸ್ಪರ ಕೊಟ್ಟು ತೆಗೆದುಕೊಳ್ಳುವ ನೀತಿಯನ್ನು ಅವಲಂಬಿಸುತ್ತವೆ. ದುರ್ಭಾಗ್ಯ ಮತ್ತು ದುಃಖದ ವಿಷಯ ಏನೆಂದರೆ ಕೇರಳದ ಸೋದರ ಜಾತಿಗಳು ಒಬ್ಬರಿಗೊಬ್ಬರು ಅನುಕೂಲಗಳನ್ನು ಕೊಡದೆ ಜಗಳವಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ. ಜನಸಂಘವು ಜನತೆಯ ಎಲ್ಲಾ ವರ್ಗಗಳು, ವಿಶೇಷವಾಗಿ ವಿಕಾಸಗೊಂಡಿರುವ ಜಾತಿಯರಿಗೆ ತಮ್ಮ-ತಮ್ಮ ಪರಸ್ಪರ ಸಂಘರ್ಷ ಮತ್ತು ದ್ವೇಷವನ್ನು ಬಿಟ್ಟು ಸೌಹಾರ್ದತೆ ಮತ್ತು ಆಂತರಿಕ ವಿಶಾಲ ಮನೋಭಾವವನ್ನು ಪರಿಚಯ ಕೊಡುವುದಕ್ಕೆ ಅಪೀಲ್ ಮಾಡುತ್ತದೆ. ಅವರ ಒಂದು ಪದ ಅಥವಾ ಕಾರ್ಯ ಬೇರೊಬ್ಬರ ಜಾತಿಯ ಭಾವನೆಗಳಿಗೆ ಧಕ್ಕೆ ಬಾರದಂತೆ ಅವರು ಗಮನಿಸಬೇಕು. ರಾಜ್ಯದಲ್ಲಿ ಕಮ್ಯುನಿಸ್ಟ್ ಏಕಾಧಿಪತ್ಯ ದಿನನಿತ್ಯವೂ ಬೆಳೆಯುತ್ತಿರುವ ಅಧಿನಾಯವವಾದದ ಅಪಾಯವನ್ನು ನೇರವಾಗಿ ಎದುರಿಸುವ ಸಮಯ/ಕ್ಷಣದಲ್ಲಿ ಸುಸಂಘಟಿತವಾದ ವಿರೋಧದ ನಿರ್ಮಾಣದ ಅವಶ್ಯಕತೆ ಪ್ರಪ್ರಥಮವಾಗಿದೆ. ಜನಸಂಘದ ಆರ್ಥಿಕ ಕಾರ್ಯಕ್ರಮದ ದಾರ್ಶನಿಕ ಆಧಾರಶಿಲೆ ಪಶ್ಚಿಮ ವಾದಗಳ `ವ್ಯಾವಹಾರಿಕ ಮನುಷ್ಯ'ನಲ್ಲ `ಸಂಪೂರ್ಣ ಮಾನವ'. ಭಾರತೀಯ ಜನಸಂಘದ ಬಳಿ ಒಂದು ಸ್ಪಷ್ಟವಾದ ಆರ್ಥಿಕ (ಹಣಕಾಸಿನ) ಕಾರ್ಯಕ್ರಮವಿದೆ. ಆದರೆ ಅದರ ಸಂಪೂರ್ಣ ಕಾರ್ಯಕ್ರಮದಲ್ಲಿ ಅದರ ಸ್ಥಾನವು ಭಾರತೀಯ ಸಂಸ್ಕೃತಿಯಲ್ಲಿ `ಅರ್ಥ'ದ ಸ್ಥಾನವೆಷ್ಟಿದೆಯೋ ಅಷ್ಟೇ ಇದೆ. ಪಾಶ್ಚಾತ್ಯ _________ ಆಕರ : ಪಾಂಚಜನ್ಯ 11-6-1949ರ ಸಂಚಿಕೆ (ಸಂ.) ಎಲ್ಲರೂ ಒಂದಾಗೋಣ 189 ಸಂಸ್ಕೃತಿಯು ಭೌತಿಕವಾದಿಯಾದ ಕಾರಣ ಅರ್ಥ ಪ್ರಧಾನವಾಗಿದೆ. ನಾವು ಭೌತಿಕವಾದ ಹಾಗೂ ಆಧ್ಯಾತ್ಮವಾದ ಎರಡನ್ನೂ ಸಮನ್ವಯಗೊಳಿಸುತ್ತಾ ನಡೆಯಲಿಚ್ಛಿಸುತ್ತೇವೆ. ಆದ್ದರಿಂದ ಇದು ನಿಶ್ಚಿತವಾದುದೇನೆಂದರೆ ಜನಸಂಘವು ಅರ್ಥಶಾಸ್ತ್ರಜ್ಞರುಗಳಿಂದ ಹಾಗೂ ಪಕ್ಷಗಳಿಂದ ಯಾರು ಪ್ರತ್ಯೇಕ ಮೌಲ್ಯಗಳನ್ನು ನಿರ್ಲಕ್ಷಿಸಿ ನಡೆಯಲಿಚ್ಛಿಸುವರೋ ಅವರು ಈ ವಿಷಯದಲ್ಲಿ ಎಂದೆಂದಿಗೂ ಹಿಂದುಳಿಯುವರು. ಜನಸಂಘ ಹೃದಯ, ಮೆದುಳು ಮತ್ತು ಶರೀರ ಮೂರರ ವಿಚಾರ ಮಾಡುತ್ತದೆ. ಇದೇ ಕಾರಣದಿಂದಾಗಿ ಕೆಲವು ಜನರು ಜನಸಂಘವು ಆಧ್ಯಾತ್ಮಿಕತೆಯನ್ನು ನಿರ್ಲಕ್ಷಿಸುತ್ತದೆ, ಮಹರ್ಷಿ ಅರವಿಂದ ಮುಂತಾದ ಆಧ್ಯಾತ್ಮಿಕ ಮಹಾಪುರುಷರ ಭಾಷೆಯನ್ನು ಹೇಳಲಾರದು ಎಂದು ಜನಸಂಘವನ್ನು ಆರೋಪಿಸುತ್ತೇವೆ ಮತ್ತು ಯಾವ `ಅರ್ಥ' ಸಮಾಜಧಾರಣೆಗಾಗಿ ಅವಶ್ಯಕವಾಗಿದೆಯೋ, ಅದರಿಂದಷ್ಟೇ ವ್ಯಕ್ತಿಯು ತನ್ನ ಉದರ ಪೋಷಣೆಗಾಗಿ ಅನ್ಯ ಶ್ರೇಷ್ಠ ಮೌಲ್ಯಗಳ ಪ್ರಾಪ್ತಿಗಾಗಿ ಪ್ರಯತ್ನಿಸಲಿ, ನಮಗೇ ನಾವು ನಮ್ಮ ಕಾರ್ಯಕ್ರಮದಲ್ಲಿ ಸ್ಥಾನವನ್ನು ನೀಡಿದ್ದೇವೆ ಎಂದಷ್ಟೇ ಹೇಳಲಿಚ್ಛಿಸುತ್ತೇವೆ. ಯಾವ ಜನರು ಪಶ್ಚಿಮದ ವಿಚಾರಧಾರೆಗಳಿಂದ ಬೆಳೆದು ಬಂದಿದ್ದಾರೋ ಮತ್ತು ಆ ವಿಚಾರಧಾರೆಗಳಲ್ಲಿರುವ ಶಬ್ದ ಭಂಡಾರದ ಆಧಾರದ ಮೇಲೆಯೇ ಪ್ರಪಂಚದ ಎಲ್ಲಾ ವಸ್ತು ವಿಷಯಗಳನ್ನು ಗ್ರಹಿಸಬಲ್ಲರು. ಅವರ ಹೇಳಿಕೆಯೇನೆಂದರೆ ಭಾರತದಲ್ಲಿಯೂ ಬಂಡವಾಳಶಾಹಿ ಮತ್ತು ಸಮಾಜವಾದದ ಸಂಘರ್ಷವು ನಡೆಯುತ್ತಲೇ ಇದೆ. ನಿಜವಾಗಿಯೂ ಇದು ವಿಶ್ವದ ವೈಚಾರಿಕ ಸಂಘರ್ಷದಲ್ಲಿ ಪ್ರತಿಬಿಂಬವಷ್ಟೇ ಆಗಿದೆ. ಅದರ ಅಸ್ತಿತ್ವವು ನಮ್ಮಲ್ಲಿಲ್ಲ. ನಾವು ಹೇಳುವುದೇನೆಂದರೆ ವೈಯಕ್ತಿಕ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರಗಳ ಸಂಘರ್ಷದ ಬಗ್ಗೆ ಚರ್ಚೆ ಮಾಡುವುದು ನಿರರ್ಥಕ ಹಾಗೂ ನಿರಾಧಾರವಾದುದು. ನಾವು ಅದರಿಂದ ಮೇಲೆದ್ದು ಸಮಸ್ಯೆಗಳನ್ನು ನೋಡಬೇಕಾಗಿದೆ. ವ್ಯವಸ್ಥೆಗಿಂತ ಮೊದಲು ಮನುಷ್ಯ ಒಂದು ವೇಳೆ ನಾವು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಕಂಡುಬರುವುದೇನೆಂದರೆ ಎರಡೂ ದೋಷಗಳ ಮೂಲ ಕಾರಣ ಒಂದೇ ಆಗಿರುವುದು. ಅವುಗಳ ಬೇರುಗಳು ಬೇರೆ ಬೇರೆಯಿಲ್ಲ. ಆದ್ದರಿಂದ ನಾವು ಕೆಟ್ಟದ್ದೆಲ್ಲಿದೆಯೆಂದು ಹುಡುಕಬೇಕು. ಕೆಟ್ಟದ್ದು ಎಂಬುದರ ನಿಜವಾದ ಕಾರಣ ವ್ಯವಸ್ಥೆಯಲ್ಲ, ಮನುಷ್ಯನೇ ಆಗಿದ್ದಾನೆ. ಮನುಷ್ಯನೇ ಮೊದಲಾಗುತ್ತಾನೆ. ಕೆಟ್ಟ ವ್ಯಕ್ತಿಯು ಉತ್ತಮಕ್ಕಿಂತಲೂ ಉತ್ತಮವಾದ ವ್ಯವಸ್ಥೆಯೊಳಗೆ ನುಗ್ಗಿ ಕೆಟ್ಟದ್ದನ್ನು ಹಬ್ಬಿಸಿಬಿಡುತ್ತಾನೆ. ಸಮಾಜದ ಪ್ರತ್ಯೇಕ ಪರಂಪರೆ ಮತ್ತು ವ್ಯವಸ್ಥೆಯು ಯಾರಾದರೊಬ್ಬ ಒಳ್ಳೆ ವ್ಯಕ್ತಿಯ ಮೂಲಕವೇ ಪ್ರಾರಂಭಿಸಲಾಗಿತ್ತು. ಆದರೆ, ಅದೇ 190 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಒಳ್ಳೆಯ ಪರಂಪರೆಯಲ್ಲಿ ಯಾವಾಗ ಕೆಟ್ಟ ವ್ಯಕ್ತಿಯು ಬಂದು ಕುಳಿತನೋ ಆಗ ಅಲ್ಲಿ ಕೆಟ್ಟದ್ದೇ ಬಂದುಬಿಟ್ಟಿತು. ರಾಜ್ಯ ಸಂಸ್ಥೆಯನ್ನೇ ತೆಗೆದುಕೊಳ್ಳೋಣ. ರಾಮಚಂದ್ರನು ರಾಜನಾಗಿರಲಿಲ್ಲವೇ? ಎಲ್ಲಿ ಅವರು ತಮ್ಮ ಶ್ರೇಷ್ಠ ಜೀವನಕ್ಕಿಂತಲೂ ರಾಜ್ಯ ಸಂಸ್ಥೆಯ ಗೌರವಕ್ಕಾಗಿ ವೃದ್ಧಿಯನ್ನು ತಂದರೋ ಅಲ್ಲಿ ಅನೇಕರು ತಮ್ಮ ದೋಷಗಳಿಂದ ರಾಮಚಂದ್ರನನ್ನೇ ಅಪವಿತ್ರನೆಂದರು. ಎಷ್ಟೋ ಬಾರಿ ರಾಜ್ಯ ಸಂಸ್ಥೆಯ ಹೆಸರನ್ನೇಳುವುದರಿಂದಲೇ ಸಿಟ್ಟಾಗುತ್ತಾರೆ. ಇದೇ ದೃಷ್ಟಿಯಿಂದ ವೈಯಕ್ತಿಕ ಹಾಗೂ ಸಾರ್ವಜನಿಕ ಕ್ಷೇತ್ರದ ಸಂಘರ್ಷದ ಕಡೆಗೆ ನೋಡಿರಿ. ಒಂದು ವೇಳೆ ಯಾರೋ ವ್ಯಕ್ತಿ ವೈಯಕ್ತಿಕ ಕ್ಷೇತ್ರದಲ್ಲಿ ಸ್ವತಂತ್ರನಾಗಿದ್ದುಕೊಂಡು ಕೆಟ್ಟದ್ದು ಮಾಡುತ್ತಾನೆಂದಾಗ ಅವನ ಸ್ಥಾನದಲ್ಲಿ ರಾಜ್ಯದ ವ್ಯಕ್ತಿಯನ್ನು ಕೂರಿಸಿದಾಗ ಕೆಟ್ಟದ್ದು ಹಬ್ಬುವುದಿಲ್ಲವೆಂದೇನು ಗ್ಯಾರಂಟಿ? ಆದ್ದರಿಂದ ನಮ್ಮ ಗಮನವು ವ್ಯಕ್ತಿಯ ಕರ್ತವ್ಯ ಭಾವನೆಯನ್ನು ಜಾಗೃತಗೊಳಿಸುವುದರಲ್ಲಿ ಕೇಂದ್ರಿತವಾಗಿರಬೇಕಿತ್ತು. ``ಆರ್ಥಿಕ ಮನೋಭಾವವುಳ್ಳ ಮನುಷ್ಯನ" ಭ್ರಮೆಯುಕ್ತ ಕಲ್ಪನೆ ಆದರೆ ಆದದ್ದೇನು? ವ್ಯಕ್ತಿಯ ಕಡೆ ನಿರ್ಲಕ್ಷತೆ ಹಾಗೂ ಬಾಹ್ಯ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ನಿರ್ಜೀವವಾದ ವ್ಯವಸ್ಥೆಯ ಮುಂದೆ ಚೈತನ್ಯಯುಕ್ತ ಮನುಷ್ಯನನ್ನು ನಗಣ್ಯನೆಂದೇ ತಿಳಿಯಲಾಗಿದೆ. ವ್ಯಕ್ತಿಯೊಳಗೆ ವಿದ್ಯಮಾನವಾಗಿರುವ ಸದ್ಗುಣಗಳ ವಿಕಾಸ ಮಾಡುವ ಬದಲಾಗಿ ಅದರ ನಾಶ ಮಾಡುವ ಉಪಾಯಗಳನ್ನೇ ಅವಲಂಬಿಸಲಾಯಿತು. ರಾಷ್ಟ್ರ ನಿರ್ಮಾಣದ ಯೋಜನೆಗಳನ್ನು ನಿರ್ಮಿಸುವವರು ಪ್ರಯತ್ನ ಮಾಡುವುದರಿಂದ ಮಾನವನು ಮನುಷ್ಯನಿಂದ ದೇವರಾಗಬಲ್ಲನೆಂಬ ವಾಸ್ತವಾಂಶವನ್ನು ಎಂದೆಂದಿಗೂ ಮರೆತುಬಿಡುವಂತೆ ಮಾಡಿಬಿಟ್ಟಿದ್ದಾರೆ. ಅವರು ಬಂಡವಾಳಶಾಹಿಯ ಆಧಾರದ ಮೇಲೆ ಎಂಥಹ ಮನುಷ್ಯನ ಕಲ್ಪನೆ ಮಾಡುವರೆಂದರೆ ಅವನು ವಿಶುದ್ಧ (ಆರ್ಥಿಕ ಮನೋಭಾವವುಳ್ಳ) ``ವ್ಯಾವಹಾರಿಕ ಮನೋಭಾವವುಳ್ಳ ಮನುಷ್ಯನಾಗಿರುತ್ತಾನೆ. ಇದು ಕೇವಲ ಕಲ್ಪನೆಯಷ್ಟೇ. ಇಂತಹ ಒಬ್ಬ ವ್ಯಕ್ತಿ ಎಂದೂ ಹುಟ್ಟಿರಲಿಲ್ಲ ಮತ್ತು ಹುಟ್ಟುವುದೂ ಇಲ್ಲ. ಮನುಷ್ಯ ಬಂಡವಾಳಶಾಹಿ ಅಥವಾ ಕಾರ್ಮಿಕನೇ ಆಗಿರಲಿ, ಪ್ರತ್ಯೇಕ ಕಾರ್ಯವು ``ಅರ್ಥ"ದ ದೃಷ್ಟಿಯಿಂದಲೇ ಆಗುತ್ತದೆಂದು ಎಂದಿಗೂ ತಿಳಿಯಲಾಗದು. ಆದರೆ ಅದರ ಕಾರ್ಯದ ಪ್ರೇರಣೆ `ಅರ್ಥ'ವೇ ಆಗಿರಲಾರದು. ಅರ್ಥಶಾಸ್ತ್ರದ ನಿಯಮಗಳೊಂದಿಗೆ ಮಾನವೀಯ ವ್ಯವಹಾರವನ್ನು ಒರೆಹಚ್ಚಿ ನೋಡಿದಾಗ ನಿಮಗೂ ಸಹ ಆ ವ್ಯಾವಹಾರಿಕ ಮನುಷ್ಯನ ದರ್ಶನವಾಗುವುದಿಲ್ಲ. ಬದಲಾಗಿ ಅದಕ್ಕಿಂತಲೂ ಹೆಚ್ಚು ವಿಶಾಲವಾದ ಸಂಪೂರ್ಣ ಮಾನವನ ಅಸ್ಥಿತ್ವವು ಕಂಡುಬರುತ್ತದೆ. ಬಂಡವಾಳಶಾಹಿಯ ಆಧಾರ ಒಂದು ವೇಳೆ ವ್ಯಾವಹಾರಿಕ ಮನೋಭಾವವುಳ್ಳ ಎಲ್ಲರೂ ಒಂದಾಗೋಣ 191 ಮನುಷ್ಯನೆಂದೇ ತಿಳಿದರೆ ಅದರ ಪ್ರತಿಕ್ರಿಯೆ ಅಥವಾ ಸ್ವರೂಪವಾದ ಸಮಾಜವಾದವು ಸಾಮೂಹಿಕ ಮನುಷ್ಯನೆಂದು ಕಲ್ಪಿಸಿಕೊಂಡಿದೆ. ಇದನ್ನು ಮನುಷ್ಯನ ಒಂದು ಪ್ರಕಾರವೆಂದು ತಿಳಿಯಲಾಯಿತು. ಆ ಸಾಮೂಹಿಕ ಮನುಷ್ಯನ ಆರ್ಥಿಕ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ಮುಂದಿಟ್ಟಿದೆ. ಅವರ ಜೀವನದ ಅನ್ಯ ಅವಶ್ಯಕತೆಗಳನ್ನು ಪೂರ್ಣಗೊಳಿಸುವುದರ ಬಗ್ಗೆ ನಿರ್ಲಕ್ಷ್ಯವಹಿಸಲಾಯಿತು. ಎರಡೂ ವ್ಯವಸ್ಥೆಗಳಲ್ಲೂ ಮನುಷ್ಯತ್ವದ ವಿಚಾರವೇ ಇಲ್ಲವಾಗಿದೆ. ಮನುಷ್ಯನು ಬಿಡಿ ಭಾಗ ಮಾತ್ರವಾಗಿದ್ದಾನೆ ಮನುಷ್ಯತ್ವದ ವ್ಯಾಖ್ಯೆ ನೀಡುವುದು ಕಠಿಣ, ಅನೇಕ ಮಾತುಗಳು ಸಮಾನವಾಗಿದ್ದರೂ ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ವಿಶಿಷ್ಟತೆಯಿರುತ್ತದೆ. ಅವರ ವಿಶಿಷ್ಟತೆಯ ವಿಚಾರವಂತೂ ಖಂಡಿತವಾಗಿಯೂ ಇದೆ. ಭಾರತೀಯ ಸಂಸ್ಕೃತಿಯು ಒಂದು ವಿಚಾರ ಮಾಡಿತೇನೆಂದರೆ ಮನುಷ್ಯ ಈ ವಿವಿಧತೆಗಳ ಸ್ವಾಭಾವಿಕ ವಿಕಾಸ ಹೊಂದುತ್ತಲೂ ಆಂತರಿಕ ಏಕಾತ್ಮಕತೆಯ ಅನುಭೂತಿಯನ್ನು ಪಡೆಯುತ್ತಾ ನಡೆಯಲಿ. ವ್ಯಕ್ತಿಯ ಸ್ವಾತಂತ್ರ್ಯ ಸರ್ವಪ್ರಥಮವಾದುದು. ಯಾವಾಗ ಟಾಟಾ, ಬಿರ್ಲಾ ವ್ಯಕ್ತಿ ಸ್ವಾತಂತ್ರ್ಯ ಅಥವಾ ಮುಕ್ತ ಪ್ರೇರಣೆಯ ಬಗ್ಗೆ ಮಾತನಾಡುತ್ತಾರೋ ಆಗ ಅವರ ಅಭಿಪ್ರಾಯವೇನಾಗಿರುತ್ತದೆಂದರೆ, ಅದು ಅವರ ಸ್ವಾತಂತ್ರ್ಯವಾಗಿರುತ್ತದೆ. ಅವರ ಕಾರ್ಖಾನೆಯಲ್ಲಿ ಗುಲಾಮರಾಗಿರುವ ಲಕ್ಷ-ಕೋಟಿ ಕಾರ್ಮಿಕರ ಸ್ವಾತಂತ್ರ್ಯವಲ್ಲ. ನಾವು ಲಕ್ಷ-ಕೋಟಿ ಜನರ ಸ್ವಾತಂತ್ರ್ಯದ ಬಗ್ಗೆ ಯೋಚಿಸಬೇಕಾಗಿದೆ. ಶಕ್ತಿಯು ರಾಜನೈತಿಕವಾಗಿರಲಿ ಅಥವಾ ಆರ್ಥಿಕವಾಗಿರಲಿ ವಿಕೇಂದ್ರೀಕರಣದಿಂದ ವ್ಯಕ್ತಿ ಸ್ವಾತಂತ್ರ್ಯವು ಮುಗಿದುಹೋಗುತ್ತದೆ. ಬಂಡವಾಳಶಾಹಿ ಹಾಗೂ ಸಮಾಜವಾದ ಎರಡೂ ಕೇಂದ್ರೀಕರಣಕ್ಕೆ ಸಹಾಯಕವಾಗುತ್ತದೆ. ಬಂಡವಾಳಶಾಹಿ ಪ್ರಭುತ್ವದಲ್ಲಿ ನಿಧಾನವಾಗಿ ಮುಕ್ತ ಪ್ರತಿದ್ವಂದ್ವವು (ಮುಗಿದುಹೋಗಿದ್ದು) ಅಂತ್ಯಗೊಂಡಿದ್ದು ಆರ್ಥಿಕ ಶಕ್ತಿಯಿಂದ ಕೆಲವು ವ್ಯಕ್ತಿಗಳ ಏಕಸ್ವಾಮ್ಯ ಸ್ಥಾಪಿತವಾಗಿ ಬಿಡುತ್ತದೆ. ಅಮೇರಿಕಾ ಮುಂತಾದ ಬಂಡವಾಳಶಾಹೀ ದೇಶಗಳಲ್ಲಿ ಯಾವ ದೊಡ್ಡ-ದೊಡ್ಡ ಔದ್ಯೋಗಿಕ ಸಾಮ್ರಾಜ್ಯಗಳು ನೆಲೆಸಿವೆಯೋ, ಅವುಗಳ ಸ್ಥಿತಿಯೇನು ? ಇಂದು ಅಮೇರಿಕಾದಲ್ಲಿ ಎಷ್ಟು ನಿರ್ಮಾಣ ಮಾಡಲು ಇವೆಯೋ ಅಷ್ಟು ಬೇರೆಲ್ಲೂ ಇಲ್ಲ. ಅಲ್ಲಿ ವ್ಯವಹಾರ ವ್ಯಕ್ತಿಗಳೊಂದಿಗಲ್ಲ, ದಾಖಲೆಗಳೊಂದಿಗಾಗುತ್ತದೆ. ಆರ್ಥಿಕ ಶಕ್ತಿಯನ್ನು ರಾಜ್ಯದ ಕೈಗೊಪ್ಪಿಸುವ ಸಮಾಜವಾದದಲ್ಲಿಯೂ ಹೀಗೆಯೇ ಆಗುತ್ತದೆ. ರಾಜ್ಯದ ನೌಕರರೂ ಇದನ್ನೇ ಮಾಡುತ್ತಾರೆ. ಪರಿಣಾಮದಿಂದಾಗಿ ಜೀವನವು ಯಂತ್ರದಂತಾಗುತ್ತಾ ಹೋಗುತ್ತದೆ. ಮನುಷ್ಯರ ಸ್ಥಾನ ಫೈಲ್‍ಗಳು ತೆಗೆದುಕೊಂಡಿವೆ. ಎರಡೂ ವ್ಯವಸ್ಥೆಗಳಲ್ಲಿ ಮನುಷ್ಯನ 192 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿಚಾರವು ಪರಿಣಾಮಾತ್ಮಕ ಆಧಾರದ ಮೇಲೆಯೂ ಇಲ್ಲ ಗುಣಾತ್ಮಕ ಆಧಾರದ ಮೇಲೆಯೂ ಇಲ್ಲ. ಮಾನವವಾದ ಬೇಕಾಗಿದೆ ಎಲ್ಲಿಯವರೆಗೆ ಒಬ್ಬೊಬ್ಬ ವ್ಯಕ್ತಿಯ ವಿಶಿಷ್ಟತೆ- ವಿವಿಧತೆಯನ್ನು ಗಮನದಲ್ಲಿಟ್ಟುಕೊಂಡು ಅದರ ವಿಕಾಸದ ಚಿಂತೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಮಾನವತೆಯ ನಿಜವಾದ ಸೇವೆಯಾಗುವುದಿಲ್ಲ. ಸಮಾಜವಾದ ಮತ್ತು ಬಂಡವಾಳಶಾಹಿಯು ಮನುಷ್ಯನನ್ನು ವ್ಯವಸ್ಥೆಯ ನಿರ್ಜೀವ ಯಂತ್ರದ ಒಂದು ತುಣುಕನ್ನಾಗಿ ಮಾಡಿಬಿಟ್ಟಿದೆ. ಒಬ್ಬ ಸ್ವತಂತ್ರ ನೇಕಾರನನ್ನು ಮುಗಿಸಿ ಅವನ ವಿಶಾಲ ಕಾರ್ಖಾನೆಯನ್ನು ಕೂಲಿಯನ್ನಾಗಿ ಮಾಡಲಾಯಿತು. ಬಜಾಜ್‍ನ ಸ್ಥಾನದಲ್ಲಿ ಒಂದು ವಿಭಾಗೀಯ ಸ್ಟೋರನ್ನು ನಿರ್ಮಿಸಲಾಯಿತು. ಒಬ್ಬ ಹೊಲಿಯುವವನ ಸ್ಥಾನದಲ್ಲಿ ರೆಡಿಮೇಡ್ ಬಟ್ಟೆಗಳನ್ನು ತಂದಿರಿಸಲಾಯಿತು. ಮನುಷ್ಯ ಅಂದರೆ ಒಂದು ಜಂತು, 8 ಗಂಟೆ ಕೂಲಿ ಮಾಡಿ ಮತ್ತು 16 ಗಂಟೆ ತಿನ್ನುವುದು, ಕೆಲಸ ಹಾಗೂ ಜೀವನದ ನಡುವೆ ಒಂದು ಗೋಡೆಯನ್ನು ನಿರ್ಮಿಸಲಾಯಿತು. ಪಶ್ಚಿಮದ ಹಲವಾರು ದೇಶಗಳಲ್ಲಿ 5 ದಿನದ ಕೆಲಸ ಮತ್ತು 2 ದಿನ ರಜೆ ಎಂದು ಹೇಳಲಾಗಿದೆ. ಆ 2 ದಿನಗಳಲ್ಲಿ ಕೇವಲ ಹರಟೆ, ಕೇವಲ ತಿನ್ನು-ಕುಡಿ ಮತ್ತು ಮಜಾ, ಕೆಲಸದ ಮಾತೇ ಇಲ್ಲ. ಅಂದರೆ ಆ 5 ದಿನಗಳು ಸಂಪಾದಿಸುತ್ತಾ ಮತ್ತು 2 ದಿನ ಜೀವಂತವಾಗಿರುತ್ತಾರೆ. ಆದ್ದರಿಂದ ನಾವು ಮನುಷ್ಯ ಮನುಷ್ಯರಲ್ಲಿ ಸಂಪಾದನೆಯ ಸಾಧನಗಳನ್ನು ಅವರ ಕಾರ್ಯ ಮತ್ತು ವಾಸ್ತವಿಕ ಜೀವನದ ನಡುವೆ ಯಾವುದೇ ಅಂತರ ಇರದಂತೆ ನಿರ್ಧರಿಸಬೇಕು. ಮೂಳೆ ಮುರಿಸದ ಮನುಷ್ಯ, ಅವನ ಬಿಳಿ ಹೃದಯ, ಮೆದುಳು ಮತ್ತು ಶರೀರ ಮೂರರ ಹಸಿವೂ ಇದೆ. ಇದರ ಬಗ್ಗೆ ಯೋಚಿಸಬೇಕಾಗಿದೆ. ಇಲ್ಲದಿದ್ದಲ್ಲಿ ಕೆಲಸದ 8 ಘಂಟೆಗಳಲ್ಲಿ ಅಮಾನವೀಯವಾದ ಪ್ರಭಾವ ಬೀರುತ್ತದೆ. ಅದನ್ನು ಮುಗಿಸುವುದರಲ್ಲಿಯೇ ಅವನ ಉಳಿದ 16 ಘಂಟೆಗಳು ಕಳೆದುಹೋಗುತ್ತವೆ. ಅದು ಮುಗಿಯುತ್ತಲೇ ಅವನು ಪುನಃ 8 ಗಂಟೆಗಳ ಚಕ್ರದಲ್ಲಿ ಸಿಲುಕಿಹಾಕಿಕೊಳ್ಳುತ್ತಾನೆ. ವಿಜ್ಞಾನ ಹಾಗೂ ಮಾನವತೆ ಆದ್ದರಿಂದ ನಮ್ಮ ಬಂಡವಾಳಶಾಹಿ ಮತ್ತು ಸಮಾಜವಾದದ ಚಕ್ರವ್ಯೂಹದಿಂದ ಮುಕ್ತಿಪಡೆದು ``ಮಾನವವಾದ"ದ ಬಗ್ಗೆ ಯೋಚನೆ ಮಾಡೋಣ. ಮಾನವ ಜೀವನದ ಸಮಸ್ತ ತಿರುವುಗಳ ಬಗ್ಗೆ ಯೋಚಿಸಿ ಆರ್ಥಿಕ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ ಎಲ್ಲರೂ ಒಂದಾಗೋಣ 193 ಮತ್ತು ಅನುಭೋಗದ ವ್ಯವಸ್ಥೆಯನ್ನು ಮಾಡಲಿ. ಮತ್ತು ಅದಕ್ಕಾಗಿ ನಾವು ವಿಜ್ಞಾನದ ಹಳೆಯ ಪ್ರಯೋಗಗಳನ್ನು ಇದ್ದ ಹಾಗೆಯೇ ಸ್ವೀಕರಿಸುವ ಅವಶ್ಯಕತೆಯಿಲ್ಲ. ಇಂದು ಈ ಪಶ್ಚಿಮದ ತಂತ್ರಜ್ಞಾನವನ್ನು ಕಣ್ಣುಮುಚ್ಚಿಕೊಂಡು ನಕಲಿ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು ಮತ್ತು ತಂತ್ರಜ್ಞಾನದ ಪ್ರಯೋಗ ಮಾನವತೆಯ ವಿಕಾಸಕ್ಕಾಗಿ ಮಾಡಬೇಕಾಗಿದೆ. ವಿಕೇಂದ್ರಿತ ಅರ್ಥವ್ಯವಸ್ಥೆ ಇದಕ್ಕಾಗಿ ವಿಕೇಂದ್ರಿತ ಅರ್ಥವ್ಯವಸ್ಥೆ ಬೇಕಾಗುತ್ತದೆ. ಸ್ವಯಂಸೇವಾ ಕ್ಷೇತ್ರದಲ್ಲಿ ತಲೆಯೆತ್ತುವಂತೆ ಮಾಡಬೇಕು. ಈ ಕ್ಷೇತ್ರವು ಎಷ್ಟು ದೊಡ್ಡದಾಗಿರುತ್ತದೆಯೋ ಅಷ್ಟೇ ಮನುಷ್ಯನು ಮುಂದುವರೆಯಬಲ್ಲ, ಮನುಷ್ಯತ್ವದ ವಿಕಾಸವಾಗುತ್ತದೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ವಿಚಾರ ಮಾಡಬಲ್ಲ, ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕ ಅವಶ್ಯಕತೆಗಳು ಮತ್ತು ವಿಶೇಷತೆಗಳ ವಿಚಾರವನ್ನು ಮಾಡಿ ಅವರಿಗೆ ಕೆಲಸ ನೀಡುವುದರಿಂದ ಅವರ ಗುಣಗಳ ವಿಕಾಸವಾಗಬಲ್ಲದು. ಭಾರತವೇ ಈ ವಿಕೇಂದ್ರಿತ ಅರ್ಥವ್ಯವಸ್ಥೆಯನ್ನು ವಿಶ್ವಕ್ಕೆ ನೀಡಬಲ್ಲದ್ದಾಗಿದೆ. ನಾವು ಹೊಸ ರೀತಿಯಲ್ಲಿ ಆರ್ಥಿಕ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸುತ್ತಿದ್ದೇವೆ. ಆದ್ದರಿಂದ ಬಹುಶಃ ವಿಶ್ವವು ಈ ವಿಚಾರವನ್ನು ಸುಲಭವಾಗಿ ಮಾಡಲಾರದು. ಆದರೆ ನಮಗೆ ವಿಕೇಂದ್ರಿತ ಅರ್ಥವ್ಯವಸ್ಥೆಯನ್ನು ಸ್ಥಾಪಿಸುವುದರಲ್ಲಿ ಸಹಾಯಕವಾಗುತ್ತದೆ. ಒಂದು ವೇಳೆ ಒಮ್ಮೆಗೆ ದೊಡ್ಡ ಕಾರ್ಖಾನೆಯ ನಿರ್ಮಾಣವಾಗಿಬಿಟ್ಟಿದ್ದು ಅದನ್ನು ಸಂಪೂರ್ಣಗೊಳಿಸುವುದರ ಬಗ್ಗೆ ಯೋಚಿಸುವುದರಿಂದ ಅನೇಕ ವ್ಯಾವಹಾರಿಕ ಕಠಿಣತೆಗಳು ಉಂಟಾಗುತ್ತವೆ. ಅದಕ್ಕಾಗಿ ಬಹಳ ಸಾಹಸವನ್ನು ಮಾಡಬೇಕಾಗುತ್ತದೆ. ಹೆಚ್ಚು ತಿರುವು-ಮುರುವುಗಳಾಗಿ ತಯಾರಾಗಬೇಕಾಗುತ್ತದೆ. ಆದ್ದರಿಂದ ರಾಷ್ಟ್ರದ ಆರ್ಥಿಕ ನಿರ್ಮಾಣದ ಪ್ರಾರಂಭಿಕ ಸಮಯದಲ್ಲಿ ನಮ್ಮ ಹೆಜ್ಜೆಯನ್ನು ಮುಂದಿಡುವಾಗ ನಾವು ಚೆನ್ನಾಗಿ ಯೋಚಿಸಬೇಕು. ಒಂದು ವೇಳೆ ಇದೇ ವಿಷಯವನ್ನು ವ್ಯವಸಾಯದ ಕ್ಷೇತ್ರದಲ್ಲಿಟ್ಟು ನೋಡಿದಾಗ ಸಹಕಾರಿ ವ್ಯವಸಾಯದ ಅಂತಿಮ ಚಿತ್ರ ``ಗ್ರಾಮ ವ್ಯವಸ್ಥೆ"ಯಾಗಿರುತ್ತದೆ. ಅದರಲ್ಲಿ ರೈತನ ಸ್ವತಂತ್ರ ಅಸ್ಥಿತ್ವವು ಮುಗಿದು ಹೋಗಿರುತ್ತದೆ. ಈಗ ನಾನು ಉತ್ಪಾದನೆಯ ಪ್ರಶ್ನೆಯನ್ನು ತೆಗೆಯುವುದಿಲ್ಲ. ಅದು ಬೇರೆ ನಂಬರ್‍ನಲ್ಲಿದೆ. ಮೊದಲನೆ ವಿಚಾರವೇನೆಂದರೆ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡ ಕಾರಣ ಸುಖದ ಸ್ಥಾನದಲ್ಲಿ ದುಃಖ ಬರುತ್ತಾ ಹೋಗುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಸ್ವಾತಂತ್ರ್ಯವು ಮುಗಿದುಹೋದರೆ ರಾಜನೈತಿಕ ಕ್ಷೇತ್ರದಲ್ಲಿಯೂ ಮುಗಿದುಹೋಗುತ್ತದೆ. ಸಮಾಜವಾದ ಮತ್ತು ಪ್ರಜಾಪ್ರಭುತ್ವ ಜೊತೆ-ಜೊತೆಯಾಗಿ ನಡೆಯಲಾರವು. ನಿಜವಾದ ಪ್ರಜಾಪ್ರಭುತ್ವದ 194 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಧಾರ ಆರ್ಥಿಕ ವಿಕೇಂದ್ರೀಕರಣವೇ ಆಗಬಲ್ಲದು. ಆದ್ದರಿಂದ ಸಿದ್ಧಾಂತಃ ಸಣ್ಣ- ಪುಟ್ಟ ಉದ್ಯೋಗಗಳನ್ನೇ ನಮ್ಮದಾಗಿಸಿಕೊಳ್ಳಬೇಕು. ನಿರುದ್ಯೋಗದ ಪ್ರಶ್ನೆ ಈಗ ವ್ಯಾವಹಾರಿಕ ದೃಷ್ಟಿಯಿಂದ ನೋಡೊಣ. ನಮ್ಮ ಯೋಜನೆಗಳು ಶ್ರಮಪ್ರಧಾನವಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಸಿಗಬೇಕು. ಇಂದಿನ ಯೋಜನೆಗಳಲ್ಲಿ ಎಲ್ಲಕ್ಕಿಂತ ದೊಡ್ಡ ನ್ಯೂನತೆಯೆಂದರೆ ದೇಶದ ಸ್ಥಿತಿ ಮತ್ತು ಅವಶ್ಯಕತೆಗಳನ್ನು ಕುರಿತು ವಿಚಾರ ಮಾಡಲಾಗಲಿಲ್ಲ. ಪಶ್ಚಿಮ ನಮಗೆ ದೊಡ್ಡದೊಡ್ಡ ಯಂತ್ರಗಳನ್ನು ನೀಡುತ್ತಿದೆ ನಾವೂ ತೆಗೆದುಕೊಳ್ಳುತ್ತಲೇ ಇದ್ದೇವೆ. ಎಂಥಹ ಅರ್ಥವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆಂದರೆ ಅದರಿಂದಾಗಿ ನಿರುದ್ಯೋಗ ಹೆಚ್ಚಾಗುತ್ತಿದೆ. ಒಂದು ವೇಳೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಇದ್ದರೆ ದೇಶದ ಪ್ರಗತಿಯ ಆಧಾರವೇನು? ನಿರುದ್ಯೋಗವು ಒಂದೇ ಬಾರಿಗೆ ದೂರವಾಗಲಾರದು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಯೋಜನೆಗಳನ್ನು ನಿರ್ಮಿಸುವ ಮೊದಲು ``ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ" ಎಂಬ ಸಿದ್ಧಾಂತಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಒಂದುವೇಳೆ ಇದನ್ನು ಒಪ್ಪಿಕೊಂಡಲ್ಲಿ ನಿರುದ್ಯೋಗವು ನಿಧಾನವಾಗಿ ದೂರವಾದರೂ ಸಹ ಯೋಜನೆಗಳ ದಿಕ್ಕು ಹಾಗೂ ಅದರ ಸ್ವರೂಪ ಬದಲಾಗುತ್ತದೆ. ರಾಷ್ಟ್ರೀಯ ಆದಾಯ ಇತ್ತೀಚೆಗೆ ರಾಷ್ಟ್ರೀಯ ಆದಾಯದ ವಿಚಾರ ``ಸರಾಸರಿಯ ಸಿದ್ಧಾಂತ"ದ ಆಧಾರದ ಮೇಲೆ ಮಾಡಲಾಗುತ್ತದೆ. ಆದರೆ ಇದು ಬಹುದೊಡ್ಡ ಕೆಲಸವಾಗಿದೆ. ರಾಷ್ಟ್ರೀಯ ಆದಾಯವು ಹೆಚ್ಚುತ್ತಾ ಹೋದಂತೆ ದೇಶದಲ್ಲಿ ಬಡತನವೂ ಹೆಚ್ಚುತ್ತಲಿದೆ. ಹೀಗೇಕೆ? ರಾಷ್ಟ್ರೀಯ ಆದಾಯದ ಹೆಚ್ಚಳದ ಆರ್ಥವೆಂದರೆ ಪ್ರತಿಯೊಬ್ಬ ವ್ಯಕ್ತಿಯ ಆದಾಯವು ಹೆಚ್ಚಾಗಬೇಕೆಂದು. ಪ್ರತಿಯೊಬ್ಬರಿಗೂ ಕೆಲಸ ನೀಡಿದಾಗ ಬಡತನವು ಕಡಿಮೆಯಾಗುತ್ತದೆ. ಪ್ರತಿಯೊಬ್ಬರ ಆದಾಯದಲ್ಲಿ ವೃದ್ಧಿಯಾಗುತ್ತದೆ. ಕಡಿಮೆ ಮನುಷ್ಯರ ಬಳಕೆ ಮಾಡುವ ದೊಡ್ಡ ಯಂತ್ರಗಳ ಮೂಲಕ ಉತ್ಪಾದನೆ ಹೆಚ್ಚಾಗುತ್ತದೆ. ಇದು ನಿಜವೇ, ಆದರೆ ಅದು ನಮ್ಮ ದೇಶಕ್ಕಾಗಿ ಉಪಯುಕ್ತವಾದುದಲ್ಲ. ಗಾಂಧೀಜಿ ಹೇಳುತ್ತಿದ್ದರು ನಾನು ವಿಶಾಲವಾದ ಉತ್ಪಾದನೆಯನ್ನು ಬಯಸುತ್ತೇನೆ. ಆದರೆ ಅದು ವಿಶಾಲ ಜನಸಮೂಹದ ಮೂಲಕ ವಿಶಾಲ ಉತ್ಪಾದನೆಯಾಗಬೇಕು. (I want mass Production by mass as well) ಎಲ್ಲರೂ ಒಂದಾಗೋಣ 195 ಉತ್ಪಾದನೆ ಸರಿಯಾದ ರೀತಿ ಈಗ ದೊಡ್ಡ ಯಂತ್ರಗಳ ಆಧಾರದ ಮೇಲೆ ಯಾವ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತದೆಯೋ ಅದರಿಂದ ದೇಶದಲ್ಲಿ ಬಡತನವಂತೂ ಹೆಚ್ಚಾಗುತ್ತಲೇ ಇದೆ, ವಿದೇಶಿ ಸಾಲವು ಹೆಚ್ಚಾಗುತ್ತಾ ಇದೆ. ಇಂದು ನಮ್ಮ ರಾಷ್ಟ್ರದ ಪೂರ್ತಿ ಆದಾಯದ 55 ನಮ್ಮ ಮೇಲೆ ಸಾಲವಿದೆ. ಹೆಚ್ಚಾಗುತ್ತಿರುವ ವಿದೇಶೀ ಸಾಲದ ಕಾರಣದಿಂದಾಗಿ ವಿದೇಶಿ (ಮುದ್ರೆಗಳ) ನಾಣ್ಯಗಳ ವಿನಿಮಯದ ಸಮಸ್ಯೆಯೂ ತಲೆಯೆತ್ತಿದೆ. ಆದ್ದರಿಂದ ಅವರ ಕಾರಣದಿಂದಲೇ ನಮ್ಮ ಘೋಷಣೆ ``ಉತ್ಪಾದನೆ ಮಾಡು ಅಥವಾ ಸತ್ತು ಹೋಗಿ" ಎಂಬುದರ ಸ್ಥಾನದಲ್ಲಿ ಚಿಂತನೆಮಾಡಿ ಅಥವಾ ಸತ್ತುಹೋಗಿ ಎಂದಾಗಿಬಿಟ್ಟಿದೆ. ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು ಲಘು ಉದ್ಯೋಗಗಳಿಗೆ ಪ್ರಾಮುಖ್ಯತೆ ನೀಡುವುದು ಶ್ರೇಯಸ್ಕರ ಯಾವಾಗ ಸಂಸದ್‍ನ ವಾರ್ಷಿಕ ಅಧಿವೇಶನ ಸೋಮವಾರ 7 ಆಗಸ್ಟ್‌ರಂದು ಪುನಃ ಪ್ರಾರಂಭವಾಯಿತೋ ಆಗ ಮೂರನೇ ಪಂಚವಾರ್ಷಿಕ ಯೋಜನೆಯನ್ನು ಸದನದ ಮುಂದೆ ಪ್ರಸ್ತುತಪಡಿಸಲಾಯಿತು. ಯೋಜನೆಯ ಮುಖ್ಯ ರೂಪುರೇಷೆ ಭಿನ್ನವಾಗಿಲ್ಲ, ಕೆಲವು ಕಾರ್ಯಕ್ರಮಗಳಲ್ಲಿ ಅಧಿಕವಾಗಿ ವಿಸ್ತಂತಗೊಳಿಸಲಾಯಿತು. ಆದರೆ ಉದ್ಯೋಗ ಮತ್ತು ಮೌಲ್ಯ-ನೀತಿಯಂತಹ ವಿಚಾರಗಳು, ಅಂತಿಮ ಯೋಜನೆಯಲ್ಲಿ ವಿಶೇಷ ರೂಪವಾಗಿ ಬದಲಾದುದಾಗಿದೆ. ಅದನ್ನು ಸ್ಪಷ್ಟವಾಗಿಸುವಲ್ಲಿ ಯೋಜನೆಯನ್ನು ನಿರ್ಮಿಸುವವರು ಅಸಫಲರಾಗಿದ್ದಾರೆ. ಉದ್ದೇಶ ಪ್ರಾಮುಖ್ಯತೆ ಮತ್ತು ವ್ಯೂಹ ರಚನೆ ಯಾವುದೇ ಪ್ರಕಾರವಾಗಿಯೂ ಮೂರನೇ ಯೋಜನೆ ಹಾಗೂ ದ್ವಿತೀಯ ಯೋಜನೆಗಿಂತ ಭಿನ್ನವಾಗಿಲ್ಲ. ಹೌದು, ಕೇವಲ ಆಹಾರದಲ್ಲಿ ಆತ್ಮಾವಲಂಬನೆ ಮತ್ತು ಕೃಷಿ ಉತ್ಪಾದನೆಯಲ್ಲಿ ವೃದ್ಧಿ ಹೊಂದುವ ವಿಚಾರವನ್ನೇ ಪಟ್ಟಿಯಲ್ಲಿ ಮತ್ತೊಮ್ಮೆ ಜೋಡಿಸಲಾಯಿತು. ಯೋಜನೆಯನ್ನು ನಿರ್ಮಿಸಿದವರು ದ್ವಿತೀಯ ಪಂಚವಾರ್ಷಿಕ ಯೋಜನೆಯಿಂದ ಒಂದುವೇಳೆ ಶಿಕ್ಷಣವನ್ನು ಪಡೆದಿದ್ದರೆ ಅದು ಅವರು ದೇಶದ ಆರ್ಥಿಕ ಉನ್ನತಿಯಲ್ಲಿ ಕೃಷಿಯ ಮಹತ್ವವನ್ನು ತಿಳಿದುಕೊಂಡಿದ್ದಾರೆಂದೇ ಅರ್ಥ. ಆದರೂ ಆಮೇಲೆ ನಾವು ನೋಡಿದಾಗ ಈ ವಿಚಾರ ಯೋಜನೆಯಡಿಯ ಕಾರ್ಯಕ್ರಮದಲ್ಲಿ ಉದ್ದೇಶ ಮತ್ತು ಪ್ರಾಮುಖ್ಯತೆ ಸ್ಥಾನವನ್ನು ನೀಡಲಾಗಿಲ್ಲವೆಂಬುದರಿಂದ ಈ ವಿಚಾರವು ದುರ್ಭಾಗ್ಯಪೂರ್ಣವಾದುದಾಗಿದೆ. ಯೋಜನೆಯಿಂದ ನಿರಾಶೆಯೇ ಉಂಟಾಗಲಿದೆ ಯೋಜನೆಯಡಿಯಲ್ಲಿ ತೆಗೆದುಕೊಳ್ಳಲಾದ ಭೌತಿಕ ಕಾರ್ಯಕ್ರಮಗಳ ಮೇಲೆ ಸಾರ್ವಜನಿಕ ಕ್ಷೇತ್ರದಲ್ಲಿ ಸು. 8000 ಕೋಟಿ ರೂ. ಮತ್ತು ವೈಯಕ್ತಿಕ ಕ್ಷೇತ್ರದಲ್ಲಿ 4100 ಕೋಟಿ ರೂ. ವ್ಯಯ ಮಾಡಬೇಕಾಗಿದೆ. ಆದರೆ ಈ ಸಮಯದಲ್ಲಿ ಸಾರ್ವಜನಿಕ ಕ್ಷೇತ್ರಕ್ಕಾಗಿ ಆರ್ಥಿಕ ಸಾಧನೆಯ ರೂಪದಲ್ಲಿ 7500 ಕೋಟಿ ರೂ. ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 197 ಅಷ್ಟನ್ನೇ ಇಡಲಾಗಿದೆ. ಈ ರೀತಿ ಯೋಜನೆಯಲ್ಲಿ ಭೌತಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ 500 ಕೋಟಿ ರೂಪಾಯಿಯ ಅಂತರವಿದೆ ಮತ್ತು ಒಂದು ವೇಳೆ ಭತ್ಯೆಯನ್ನು ಕಡಿಮೆ ಅಂದಾಜಿಸಲಾಗಿದ್ದಲ್ಲಿ ಅದು ಸಾಧಾರಣವಾಗಿ ಯೋಜನೆಗಳಲ್ಲಿಯೇ ಆಗುತ್ತದಾದ್ದರಿಂದ ಈ ಅಂತರ ಮತ್ತಷ್ಟು ಹೆಚ್ಚಾಗುತ್ತದೆ. ಚುನಾವಣೆಯ ಸ್ವಲ್ಪ ಸಮಯದ ಹಿಂದೆ ರಾಜನೈತಿಕ ಉದ್ದೇಶಗಳ ಪೂರ್ತಿಗಾಗಿ ನವೀನ ಯೋಜನೆಗಳ ಅವಿರ್ಭಾವದ ಅವಶ್ಯಕತೆಯಿರುತ್ತದೆ ಮತ್ತು ಅವನ್ನು ಮುಕ್ತಾಯಗೊಳಿಸಲಾಗುತ್ತದೆ. ಇದರಿಂದ ಯಾವುದೇ ರೀತಿ ಪೂರ್ಣವಾಗದ ಸುಳ್ಳು ಆಕಾಂಕ್ಷೆಗಳು ಉಂಟಾಗುತ್ತವೆ. ಅದರಿಂದ ವ್ಯಕ್ತಿಗಳಲ್ಲಿ ನಿರಾಶೆಯೇ ಉಂಟಾಗುತ್ತದೆ. 13 ಸಾವಿರ ಕೋಟಿ ರೂಪಾಯಿಗಳ ಭಾರ 7500 ಕೋಟಿ ರೂ.ಗಳ ವ್ಯಯದ ಕೇವಲ ಆ ಭಾಗವನ್ನು ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳ ಮೂಲಕ ತೀರಿಸಲಾಗುತ್ತದೆ. ಇದನ್ನು ಬಿಟ್ಟು ಸ್ಥಾನೀಯ ಸಂಸ್ಥೆಗಳಡಿಯಲ್ಲಿ ನಗರಪಾಲಿಕೆಗಳು ಮತ್ತು ಜಿಲ್ಲಾ ಪರಿಷತ್ತುಗಳ ಅಧಿಕಾರ ವಿಕೇಂದ್ರಿಕರಣದ ಹೆಸರಿನಲ್ಲಿ ನಿಕಟವರ್ತಿಯಾಗಿ ಸ್ಥಾಪಿಸಲಾಗುತ್ತಿದೆ. ಇದರಿಂದ ಆಶಿಸುವುದೇನೆಂದರೆ ಅದು ತನ್ನ ಸಾಧನೆಗಳನ್ನು ತೀರಿಸುತ್ತಾ ಸಮಾನ ಅನುದಾನಗಳನ್ನು ಪರಿಪೂರ್ಣಗೊಳಿಸುತ್ತಾ ಕಾರ್ಯಾನ್ವಯಗೊಳಿಸಬೆಕು. ಎಂದಾಗಿದೆ. ಇದಕ್ಕಾಗಿ ದ್ವಿತೀಯ ಪಂಚವಾರ್ಷಿಕ ಯೋಜನೆಯ ಅಂತ್ಯದವರೆಗೆ ವಿಕಾಸ ಸೇವೆಗಳು ಹಾಗೂ ಸಂಸ್ಥೆಗಳ ಸ್ಥಾಪನೆಯ ವ್ಯಯವು ಸುಮಾರು 3000 ಕೋಟಿ ರೂ. 5 ವರ್ಷಗಳಿಗಾಗಿ ಎಂದು ಅಂದಾಜಿಸಲಾಗಿದೆ. ಈ ರೀತಿ ಜನತೆಗೆ ವರ್ತಮಾನ ಸರ್ಕಾರಿ ವ್ಯಯದ ಜೊತೆಗೆ ಬಹುವೇಗವಾಗಿ ಹೆಚ್ಚುತ್ತಿದೆ, 11000 ಕೋಟಿ ರೂ.ಗಿಂತ ಅಧಿಕ ಯೋಜನೆಯ ಸಾರ್ವಜನಿಕ ಕ್ಷೇತ್ರಕ್ಕಾಗಿ ತೀರಿಸಬೇಕಾಗುತ್ತದೆ. ಅದರ ನಂತರ ಸರ್ಕಾರದ ಅವಶ್ಯಕತೆಗಳು ಪೂರ್ತಿಯಾದ ನಂತರ ಜನತೆಗೆ ಯೋಜನೆಯ ವೈಯಕ್ತಿಕ ಕ್ಷೇತ್ರದ ಪೂರ್ತಿಗಾಗಿ 4100 ಕೋಟಿ ರೂ. ಮತ್ತು ವಿಭಿನ್ನ ಸಾಧನೆಗಳಿಂದ ಸಂಗ್ರಹಣೆ ಮಾಡಬೇಕಾಗುತ್ತದೆ. ಈ ರೀತಿಯಾಗಿ 2200 ಕೋಟಿ ರೂಪಾಯಿ ವಿದೇಶೀ ಆಮದು ಬಂಡವಾಳದ ಅಂದಾಜೇನಾಗಿದೆಯೆಂದರೆ ಘಟನೆಯ ನಂತರ ಜನತೆಯ ಮೇಲೆ 12900 ಕೋಟಿ ರೂ.ಗಳ ಭಾರ ಯೋಜನೆಗಾಗಿ ಬೀಳುತ್ತದೆ. ಜನತೆಯ ಅವಶ್ಯಕತೆಗಳ ಕಡೆಗೆ ದುರ್ಲಕ್ಷೆ ಪ್ರಥಮ ಹಾಗೂ ದ್ವಿತೀಯ ಯೋಜನೆಗಳಲ್ಲಿ ಒಟ್ಟು ವ್ಯಯ ಕ್ರಮಶಃ 3760 ಕೋಟಿ ಮತ್ತು 7700 ಕೋಟಿ ರೂ.ಗಳದ್ದಾಗಿತ್ತು. ಈ ಒಟ್ಟು ವ್ಯಯದ 198 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮೊತ್ತದಲ್ಲಿ ವೈಯಕ್ತಿಕ ಕ್ಷೇತ್ರವು 4900 ಕೋಟಿ ರೂ.ಗಳ ಸಹಾಯವನ್ನು ನೀಡಿತು. ಈ ರೀತಿ ಸಾರ್ವಜನಿಕ ಕ್ಷೇತ್ರದಲ್ಲಿ ಎರಡೂ ಯೋಜನೆಗಳ ಕಾಲದಲ್ಲಿ 6560 ಕೋಟಿ ರೂ.ಗಳ ವ್ಯಯವಾಯಿತು. ಈ ರೀತಿಯಾಗಿ 10 ವರ್ಷಗಳಲ್ಲಿ 6560 ಕೋಟಿ. ರೂ. ಮತ್ತು ಮುಂಬರುವ 5 ವರ್ಷಗಳಲ್ಲಿ 12000 ಕೋಟಿ ರೂ.ಗಳನ್ನು ವ್ಯಯ ಮಾಡುವ ಯೋಜನೆ ಒಂದು ಉನ್ನತ ಏರಿಕೆಯಾಗಿದೆ. ಒಂದು ವೇಳೆ ಭಾರೀ ಪ್ರತಿರಕ್ಷೆ ಮತ್ತು ರಾಷ್ಟ್ರದ ಮೂಲಕ ಮಾಡಲಾದ ಅನ್ಯ ವಾಯಿದೆಗಳು, ಅಭಿಮತಗಳ ಕಡೆ ನೋಡಿದಾಗ ಯಾವುದೇ ವಿಚಾರಶೀಲ ವ್ಯಕ್ತಿ ನಮ್ಮ ಈ ಭಾರತವನ್ನು ಮೇಲೆತ್ತುವ ಶಕ್ತಿಯ ಮೇಲೆ ಸಂದೇಹಿಸುತ್ತಾನೆ ಅಥವಾ ಆರ್ಥಿಕ ಸ್ಥಿರತೆಯು ನಷ್ಟವಾಗುವ ಅಶಂಕೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಈ ಸಮಯದಲ್ಲಿ ನಮ್ಮ ಯೋಜನೆಯನ್ನು ನಿರ್ಮಿಸಿದವರು ಕೇವಲ ಒಂದೇ ತರ್ಕವನ್ನು ನಮ್ಮ ಮುಂದಿಡುತ್ತಾರೇನೆಂದರೆ ಯೋಜನೆ ಜನತೆಯ ಅನಂತ ಅವಶ್ಯಕತೆಕಗಳ ಸೆಣೆಸಾಟ, ಬಹಳ ಚಿಕ್ಕದಾಗಿದೆ. ಆದರೆ ಯಾವಾಗ ಅದು ವೈಯಕ್ತಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳ ನಿರ್ಧಾರಣೆ ಮಾಡುವಾಗ ಯೋಜನೆಗಳಲ್ಲಿ ಪ್ರಮುಖತೆಯನ್ನು ನಿಶ್ಚಿತಗೊಳಿಸುತ್ತದೆಯೋ ಆಗ ಅದು ತನ್ನ ತರ್ಕವನ್ನು ಸುಲಭವಾಗಿ ಮರೆತು ಹೋಗುತ್ತದೆ. ಮೂಲಭೂತ ಮತ್ತು ದೊಡ್ಡ ಉದ್ಯೋಗಗಳ ಮೇಲೆ ಅನಾವಶ್ಯಕ ಒತ್ತು ನೀಡಿ ಮತ್ತು ರಫ್ತಿನ ಹೆಸರಿನಲ್ಲಿ ಅನುಭೋಗಿಯು ವಸ್ತುಗಳ ಮೇಲೆ ಕಂದಾಯ ಹಾಕಿ ಆ ವಸ್ತುಗಳ ಸರ್ವೇಸಾಧಾರಣವಾದ ದೈನಂದಿನ ಜೀವನಕ್ಕಾಗಿ ಅವಶ್ಯಕವಾಗಿರುತ್ತವೆ. ಯೋಜನೆಯ ನಿರ್ಮಾಪಕರು ಜನತೆಯ ಅವಶ್ಯಕತೆಗಳ ಕಡೆಗೆ ದುರ್ಲಕ್ಷ್ಯ ವಹಿಸುತ್ತಿದೆಯೆಂದೇ ನಾವು ಹೇಳಬೇಕಾಗುತ್ತದೆ. ನಿಜವಾಗಿಯೂ ಇಂದು ನಮಗೆ ವಿಕಾಸದ ದೀರ್ಘಕಾಲಿನ ಅವಶ್ಯಕತೆ ಮತ್ತು ವ್ಯಕ್ತಿಗಳ ನಡವಳಿಕೆಯ ಒಳ್ಳೆಯ ಸ್ತರದ ಅಕಾಂಕ್ಷೆ ಅಲ್ಪಕಾಲೀನ ಅವಶ್ಯಕತೆಗಳ ಮೂಲಕ ಸಂಭವವಾದುದಾಗಿದೆ. ಅದನ್ನು ಸಮೃದ್ಧಿಗೊಳಿಸಬೇಕು. ನಾವು ಯೋಜನೆಯ ರೀತಿಯನ್ನು ರಷ್ಯಾದ ರೀತಿಯಲ್ಲಿ ನಕಲು ಮಾಡಿ ಯೋಜನೆಯನ್ನು ಪಡೆದಿದ್ದೇವೆ. ಈ ಸಮೃದ್ಧಿಯನ್ನು ಹೊರತರುವಲ್ಲಿ ಅಸಫಲರೆಂದು ಸಿದ್ಧವಾಗಿದ್ದೇವೆ. ತೃತೀಯ ಯೋಜನೆ ಕೇವಲ ಭಾರವನ್ನು ಮತ್ತಷ್ಟು ಹೆಚ್ಚು ಭಾರವಾಗಿಸುತ್ತಿದೆ. ಭಾರತೀಯ ಅರ್ಥವ್ಯವಸ್ಥೆಯು ಹಿಂದಿನ ವರ್ಷಗಳಲ್ಲಿ ಅನುಭವಿಸುತ್ತಲೇ ಇತ್ತು. ಸಮತೋಲನದ ಕೊರತೆ ಕೃಷಿಗೆ ತೃತೀಯ ಯೋಜನೆಯಲ್ಲಿ ಪ್ರಾಮುಖ್ಯತೆ ನೀಡುವ ಅನುಮಾನವಿದೆ. ಕೃಷಿಯ ಉತ್ಪಾದನೆಯ ಕಾರ್ಯಕ್ರಮದ ಮೇಲೆ, ಚಿಕ್ಕ ಹಾಗೂ ದೊಡ್ಡ ಸಿಂಚನ ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 199 ಯೋಜನೆಯಲ್ಲಿ ಮಣ್ಣು-ಸರಂಕ್ಷಣೆ ಮತ್ತು ಸಹಕಾರಿ ಯೋಜನೆಯ ಸಮ್ಮಿಲನವೂ ಇದೆ, ತೃತೀಯ ಯೋಜನೆಯಲ್ಲಿ 1200 ಕೋಟಿ ರೂಪಾಯಿ ವ್ಯಯ ಮಾಡಬೇಕು. ದ್ವಿತೀಯ ಯೋಜನೆಯಲ್ಲಿ 667 ಕೋಟಿ ರೂಪಾಯಿ ಇತ್ತು. ಆದರೆ ಒಂದು ವೇಳೆ ನಮ್ಮ ಔದ್ಯೋಗಿಕ ಮಿಶ್ರಣದ ಒಟ್ಟು ಮೊತ್ತವನ್ನು ನೋಡಿದಾಗ ವಿನಿಯೋಗ ಮಾಡಲು (ಪ್ರಸ್ತಾಪಿಸಲ್ಪಟ್ಟಿದೆ) ಪ್ರಸ್ತಾಪಿಸಲಾಯಿತು. ಆಗ ಈ ಆಮದು ರಫ್ತು ಮತ್ತು ಸಾರಿಗೆ-ಸಂಪರ್ಕದ ಮೇಲಾಗುವ 1486 ಕೋಟಿ ರೂಪಾಯಿಯಾಗಿಬಿಡುತ್ತದೆ. ನಿಜವಾಗಿಯೂ, ಕೃಷಿಗಾಗಿ ನಿಶ್ಚಿತಗೊಳಿಸಲಾದ ವ್ಯಯದಿಂದ 226 ಕೋಟಿ ರೂಪಾಯಿ ಉತ್ಪಾದನೆಯ ಕಾರ್ಯಕ್ರಮದ ಮೇಲೆ ವ್ಯಯ ಮಾಡಲಾಗುತ್ತದೆ. ವ್ಯಯದ ಅಧಿಕ ಭಾಗ ಪ್ರಮುಖ ಹಾಗೂ ಮಾಧ್ಯವಿಕ ಸಿಂಚನ ಮತ್ತು ಕೊಳವೆ ಬಾವಿ ಮುಂತಾದವುಗಳ ಮೇಲೆ, ಅಂದರೆ ಇವುಗಳನ್ನು ಔದ್ಯೋಗಿಕ ಮಿಶ್ರಣ ಎನ್ನುತ್ತೇವೆ. ಇವುಗಳ ಮೇಲೆ ವ್ಯಯ ಮಾಡಲಾಗುತ್ತದೆ. ಈ ರೀತಿ 450 ಕೋಟಿ ರೂಪಾಯಿಗಿಂಗಲೂ ಅಧಿಕ ಉದ್ಯೋಗಗಳ ಮೇಲೆ ವಿನಿಯೋಗ ಮಾಡಲಾಗುತ್ತದೆ. ಆದರೆ ಒಂದು ವೇಳೆ ನಾವು ಸಹಕಾರಿ ಯೋಜನೆಯನ್ನು ಸೇರಿಸಿಕೊಳ್ಳುವ ಹಣವನ್ನು ತೆಗೆದುಕೊಂಡರೆ ಆಗ ಕೃಷಿಯ ಮೇಲೆ ಕೇವಲ 500 ಕೋಟಿ ರೂಪಾಯಿ ವಿನಿಯೋಗವಾಗುತ್ತದೆ. ಉದ್ಯೋಗಗಳಿಗೆ ಬಂಡವಾಳದ ಮತ್ತಷ್ಟು ಅಧಿಕ ಅವಶ್ಯಕತೆ ಬಂದಾಗ ಮಹಾನ್ ಅಂತರ ದ್ವಿತೀಯ ಯೋಜನೆಯ ಕಾಲದಲ್ಲಿ ಹುಟ್ಟುವ (ಅಸಮೃದ್ಧಿಯ) ಸಮೃದ್ಧಿ ಹೀನತೆಯನ್ನು ದೂರ ಮಾಡಲಾಗದು. ಸಹಕಾರಿ ವ್ಯವಸಾಯ ಬಾಧಕ ಕೃಷಿ ವಿಭಾಗ, ಸಾಮುದಾಯಿಕ ವಿಕಾಸದ ಕಾರ್ಯಕರ್ತರು ಮತ್ತು ಸಹಕಾರಿಯೇ ಒಂದು ಮಾಧ್ಯಮವಾಗಿದ್ದು ಅದರ ಮೂಲಕ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತದೆ. ಆದರೆ ಈ ಕಾರ್ಯವನ್ನು ಪೂರ್ಣಗೊಳಿಸುವುದರಲ್ಲಿ ಉಪಯುಕ್ತವಾಗಿದೆಯೆಂದು ಸಿದ್ಧವಾಗಿಲ್ಲ. ರೈತರಲ್ಲಿ ಇಂದು ಉತ್ಸಾಹಿವಿಲ್ಲ, ವಿಶ್ವಾಸವೂ ಇಲ್ಲ. ಯಾವ ರೀತಿ ಭೂಮಿಯ ಸುಧಾರಣೆ ಮಾಡಲಾಗುತ್ತಿದೆಯೋ ಆ ಕೃಷಿ ಅರ್ಥ-ವ್ಯವಸ್ಥೆಯಲ್ಲಿ ಬಾಧಕವಾಗಿದೆ. ಅನಿಶ್ಚಿತ ಪರಿವರ್ತನೆಯ ಸ್ಥಿತಿಯ ಅಂತ್ಯವಾಗುತ್ತಿರುವುದು ಕಂಡುಬರುತ್ತಿಲ್ಲ. ಸಹಕಾರಿ ವ್ಯವಸಾಯ ತಪ್ಪು ಶಂಕಿತ ಯೋಜನೆಯೂ ಕೃಷಿ ಉತ್ಪಾದನೆಯನ್ನು ಅಸ್ತ- ವ್ಯಸ್ತಗೊಳಿಸುವುದರಲ್ಲಿ ಸಹಾಯಕವಾಗಿದೆ. ರೈತನಿಗೆ ಸಾಲ ಪಡೆಯುವ ವ್ಯವಸ್ಥೆ ಇಲ್ಲ. ಸಾಧಾರಣವಾಗಿ ವ್ಯವಸಾಯದ ಬಂಡವಾಳದ ವಿಷಯದಲ್ಲಿ ಅವಶ್ಯಕತೆಗಳನ್ನು ನಿರ್ಲಕ್ಷ ಮಾಡಲಾಗುತ್ತಿದೆ. ರಿಜರ್ವ್ ಬ್ಯಾಂಕ್‍ನ ಮೂಲಕ ಸ್ಥಾಪಿಸಲಾದ ಗ್ರಾಮೀಣ 200 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸರ್ವೇಕ್ಷಣಿಯ ಗ್ರಾಮೀಣರ ಬಡ್ಡಿಗೆ ಸಂಬಂಧಿಸಿದ ಅವಶ್ಯಕತೆಗಳ ಸಹಕಾರಿ ಸಮಿತಿಗಳು ಮತ್ತು ಅನ್ಯ ಹೊಸ ಸಂಸ್ಥೆಗಳ ಮೂಲಕ ಸಂತುಷ್ಟರನ್ನಾಗಿಸಲಾಗದ ಅಕ್ಷಮತೆಯ ಕಡೆಗೇ ಸಂಕೇತ ಮಾಡಿದೆ. ಹಳೆಯ ವ್ಯವಸ್ಥೆಯು ಮುಗಿಯುತ್ತಾ ಹೋಗುತ್ತದೆ ಮತ್ತು ಅವುಗಳ ಸ್ಥಾನವನ್ನು ಹೊಸ ವ್ಯವಸ್ಥೆಯು ಪಡೆದುಕೊಳ್ಳಲಾಗುತ್ತಿಲ್ಲ. ಕೃಷಿಯ ಅಧಿಕಾರ ಮತ್ತು ಭೂಮಿಯ ಪ್ರಭುತ್ವಕ್ಕೆ (ಉಳುವ ಅಧಿಕಾರ) ಸಂಬಂಧಿಸಿದ ಪ್ರತಿಯೊಂದು ಸುಧಾರಣೆ ಗ್ರಾಮ್ಯ ವ್ಯವಸ್ಥೆಯನ್ನು ತಿರುವಿಹಾಕಿದೆ. ಉದ್ಯೋಗಗಳು ಮತ್ತು ವ್ಯಾಪಾರದಲ್ಲಿ ತೊಡಗಿರುವವರೆಗೆ ಹೆಚ್ಚಿನ ಬಡ್ಡಿಯ ಸವಲತ್ತುಗಳನ್ನು ವೃದ್ಧಿಗೊಳಿಸಲಾಗುತ್ತಿದೆ, ಗ್ರಾಮೀಣರನ್ನು ಅದರಿಂದ ಬರುತ್ತಿರುವ ಬಡ್ಡಿಯನ್ನು ಪಡೆಯುವುದರಿಂದ ವಂಚಿತಗೊಳಿಸಿದ್ದಾರೆ ಮತ್ತು ಒಂದು ವೇಳೆ ಸಿಂಚನ ಹಾಗೂ ಅನ್ಯ ಸವಲತ್ತುಗಳು ದೊರೆತರೂ ಆಗಲೂ ಗ್ರಾಮೀಣ ಜನತೆಯು ಕೃಷಿಯಲ್ಲಿ ವಿನಿಯೋಗಕ್ಕಾಗಿ ಹಣದ (ಧನದ) ಅಭಾವದಿಂದ ಅದರ ಪ್ರಯೋಗ ಮಾಡಲಾಗುತ್ತಿಲ್ಲ. ಒಂದು ವೇಳೆ ಸರ್ಕಾರ ನಿಜವಾಗಿಯೂ ಕೃಷಿಯನ್ನು ಉನ್ನತಗೊಳಿಸಲಿಚ್ಚಿಸಿದಲ್ಲಿ ಆಗ ಅದಕ್ಕೆ ಬಡ್ಡಿಯ ಸವಲತ್ತುಗಳು ಮತ್ತು ಮಾರುಕಟ್ಟೆಯಂತಹ ಸಂಸ್ಥೆಗಳಲ್ಲಿ ಹಣದ ಒಂದು ದೊಡ್ಡ ಭಾಗವನ್ನು ವಿನಿಯೋಜನೆ ಮಾಡಬೇಕಾಗುತ್ತದೆ. ಸಹಕಾರಿ ಸಮಿತಿಗಳು ಒಂದು ಆದರ್ಶವಾದಿ ಆಧಾರದಿಂದ ವಂಚಿತವಾಗಿದೆ. ಆದರೆ ಅವರನ್ನು ಬದುಕಲು ಯೋಗ್ಯ ಮತ್ತು (ಕುಶಲರಾಗಿಸಲು) ಸೌಖ್ಯವಾಗಿರಲು ಬಿಡಬೇಕು. ಔದ್ಯೋಗಿಕ ಕಾರ್ಯಕ್ರಮದ ಪ್ರಾಮುಖ್ಯತೆಯಲ್ಲಿ ಸಂಶೋಧನೆಯ ಅವಶ್ಯಕತೆಯಿದೆ. ಮೂರನೇ ಯೋಜನೆ ಈ ಕೆಳಕಂಡ ಪ್ರಾಮುಖ್ಯತೆಗಳನ್ನು ಪ್ರಸ್ತುತಪಡಿಸುತ್ತದೆ. (1) ದ್ವಿತೀಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ ವಿಚಾರಕ್ಕೊಳಗಾದ ಯೋಜನೆಗಳ ಪೂರ್ತಿಯ ಬಗ್ಗೆ ಏನು ಮಾತುಕತೆ ನಡೆಯುತ್ತಿದೆಯೋ ಅದನ್ನು ವಿದೇಶೀ ವಿನಿಮಯದ ಕಠಿಣತೆಗಳ ಕಾರಣದಿಂದಾಗಿ 1957-58 ರಲ್ಲಿ ಸ್ಥಗಿತಗೊಳಿಸಲಾಯಿತು. (2) ಭಾರೀ ಯಾಂತ್ರಿಕ ವ್ಯಾಪಾರ ಮತ್ತು ಯಂತ್ರ ನಿರ್ಮಾಣದ ಉದ್ಯೋಗಗಳು, ಮಣ್ಣಿನ ಮೂಲಕ ಧಾತುವನ್ನು ಕರಗಿಸುವುದು, ಕಡಿಮೆ ಮೌಲ್ಯದ ಧಾತುಗಳ ಮಿಶ್ರಣ, ಸಲಕರಣೆ ಮತ್ತು ವಿಶೇಷವಾದ ಸರಿಯಾದ ಲೋಹದ ಸಲಾಕಿ ಮತ್ತು ಗಟ್ಟಿಯಾದ ಲೋಹ ಮತ್ತು ಕಡಿಮೆ ಮೌಲ್ಯದ ಧಾತುಗಳಿಂದ ಮಿಶ್ರಣವಾಗಿರುವ ಲೋಹ ಮತ್ತು ಗೊಬ್ಬರ ಹಾಗೂ ಮಣ್ಣಿನಿಂದ ಎಣ್ಣೆಯ ಉತ್ಪಾದನೆಯ (ವಿಸ್ತಾರ) ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 201 ವಿಸ್ತರಣೆ. (3) ಮುಖ್ಯವಾದ ಪ್ರಾರಂಭಿಕ ಅಸ್ಥಾಯೀ ಉದ್ಯೋಗಗಳು ಮತ್ತು ಅಲ್ಯೂಮಿನಿಯಂ, ಧಾತು ಎಣ್ಣೆ, ಕುಸುರಿಯನ್ನು ಸಮಾಪ್ತಗೊಳಿಸುವ, ಪ್ರಾರಂಭಿಕ ಚೇತನ ಹಾಗೂ ಅಚೇತನ ರಸಾಯನ ಮತ್ತು ರಾಸಾಯನಿಕ ಬಂಡೆಗಲ್ಲಿನಿಂದ ಉತ್ಪನ್ನವಾದ ಪದಾರ್ಥಗಳ ಮಾಧ್ಯಮದಿಂದ ಸೇರಿಸಿರುವಂತೆ ಉತ್ಪಾದಕ ವಸ್ತುಗಳ ಉತ್ಪಾದನೆಯಲ್ಲಿ ವೃದ್ಧಿ. (4) ಗೃಹ ಉದ್ಯೋಗಗಳಿಗೆ ಬೇಕಾದ ಅವಶ್ಯಕತೆಗಳಿಂದ, ಔಷಧಿ, ಕಾಗದ, ಬಟ್ಟೆ, ಸಕ್ಕರೆ, ವನಸ್ಪತಿ ಎಣ್ಣೆ ಮತ್ತು ಉರಿಯುವ ವಸ್ತುಗಳನ್ನು ಪೂರ್ಣಗೊಳಿಸಲು ಬೇಕಾಗಿರುವ ಅವಶ್ಯಕವಾದ ವಸ್ತುಗಳ ಉತ್ಪಾದನೆಯಲ್ಲಿ ವೃದ್ಧಿ. ಖಾದಿ ಹಾಗೂ ಚರಕಕ್ಕೆ ಮಹತ್ವ ನೀಡುವುದು ಸಾರ್ವಜನಿಕ ಹಣದ ದುರುಪಯೋಗವಾಗಿದೆ. ಲಘು ಉದ್ಯೋಗಳಿಗೆ ಪ್ರೋತ್ಸಾಹ ಪ್ರಮಾಣದ ರೂಪದಲ್ಲಿ ಪ್ರಾಮುಖ್ಯತೆಗಳನ್ನು ಹೆಚ್ಚು ವಿಸ್ತರಿಸುವ ಸಮಯದಲ್ಲಿ ದೇಶದಲ್ಲಿ ಮೌಲ್ಯ-ವೃದ್ಧಿ ಮತ್ತು ನಿರುದ್ಯೋಗ ಹೆಚ್ಚುತ್ತಿರುವುದರ ಕಡೆಗೆ ಯಾವುದೇ ರೀತಿಯ ಲಕ್ಷ್ಯವಹಿಸುವುದಿಲ್ಲವೆಂದು ಹೇಳಬಹುದಾಗಿದೆ. ದೇಶದ ದೀರ್ಘ ಕಾಲದಲ್ಲಿ ತನ್ನ ಎಲ್ಲ ಅವಶ್ಯಕತೆಗಳನ್ನು ಗಮನದಲ್ಲಿಡುತ್ತಾ ಆತ್ಮಾವಲಂಬಿತವಾಗಿರಬೇಕು. ಆದರೆ ನಾವು ಮೌಲ್ಯಗಳ ಸ್ಥಿರತೆಗಾಗಿ ಅಧಿಕ ಸಮಯದವರೆಗೂ ಅನುಭೋಗಿ ವಸ್ತುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾರೆವು, ಇದಂತೂ ಸತ್ಯ. ಒಂದು ವೇಳೆ ಸರ್ಕಾರ ಅಧಿಕ ಆಹಾರ ಉತ್ಪಾದನೆಯನ್ನು ಒಂಟಿಯಾಗಿ ಬೆಲೆಗಳನ್ನು (ಕೆಳಗಿಳಿಸಿಬಿಟ್ಟಿದೆ) ಕಡಿಮೆ ಮಾಡಿಬಿಟ್ಟರೆ ಸರ್ಕಾರವು ತಪ್ಪು ಹಾದಿಯಲ್ಲಿ ನಡೆದುಹೋಗುತ್ತದೆ. ಜನರ ಅನುಭೋಗದ ಸ್ತರವು ವೇಗವಾಗಿ ಬದಲಾಗುತ್ತಿದೆ ಮತ್ತು ಅದರ ಬೇಡಿಕೆಗಳಿಗೆ ಬಹಳಷ್ಟು ವಸ್ತುಗಳ ಮೂಲಕ ತೃಪ್ತಿಗೊಳಿಸಬೇಕಾಗುತ್ತದೆ. ಇದೇ ರೀತಿ ಒಂದುವೇಳೆ ನಿರುದ್ಯೋಗವನ್ನು ಬೇರು ಸಮೇತವಾಗಿ ಕಿತ್ತು ಹಾಕಬೇಕಾದರೆ ಇದನ್ನು ಅತ್ಯಧಿಕ- ಬಂಡವಾಳ ಉದ್ಯೋಗಗಳ ಮೇಲೆರುವ ಒತ್ತರಿಕೆಯನ್ನು ನಿಲ್ಲಿಸಿ ಶ್ರಮಿಕ ಉದ್ಯೋಗಗಳಿಗೆ ಒತ್ತು ನೀಡಬೇಕಾಗುತ್ತದೆ. ನಿಬಿಡವಾದ ಹಾಗೂ ಜನಭರಿತವಾದ ಪ್ರದೇಶಗಳಲ್ಲಿ ನಿರುದ್ಯೋಗವನ್ನು (ದೂರ ಮಾಡಲು) ನಿರ್ಮೂಲನ ಮಾಡಲು ತೃತೀಯ ಯೋಜನೆಯಲ್ಲಿ ಪ್ರಸ್ತಾಪಿಸಿದ ಕಾರ್ಯಕ್ರಮವು ಸಮಸ್ಯೆಯ ಬೇರಿನ ಮೇಲೆ (ಮೂಲದ ಮೇಲೆ) ಯಾವುದೇ ಪ್ರಭಾವ ಬೀರುವುದಿಲ್ಲ. 202 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಖಾದಿ ಮತ್ತು ಉಣ್ಣೆ ಚರಕಕ್ಕೆ ಸರ್ಕಾರದ ಮೂಲಕ ಪ್ರಾಮುಖ್ಯತೆ ನೀಡುತ್ತಿರುವ ಸಹಾಯವು ಸಾರ್ವಜನಿಕ (ಧನದ) ಹಣದ ದುರುಪಯೋಗವಾಗಿದೆ. ಅವಶ್ಯಕತೆಯಿರುವ ಸಮಯದಲ್ಲಿ ಶ್ರಮದಾನವು ಅವಶ್ಯಕವಾಗಿರಬಹುದು. ಆದರೆ ಇದು ಒಂದು ಸಾಧಾರಣ ನಿಯಮಿತ ಕಾರ್ಯಕ್ರಮದಂತೆ ಆಗಿರಬಾರದು. ಒಂದು ವೇಳೆ ಜನತೆಗೆ ಲಾಭದಾಯಕವಾದ ವ್ಯಾಪಾರವನ್ನು ನೀಡಬೇಕಾದರೆ ಯೋಜನೆಯನ್ನು, ತನ್ನ ಔದ್ಯೋಗಿಕ ಕಾರ್ಯಕ್ರಮವನ್ನು ಬದಲಾಯಿಸಬೇಕಾಗುತ್ತದೆ. ಲಘು ಸ್ತರೀಯ ಯಾಂತ್ರಿಕ ಉದ್ಯೋಗಕ್ಕೆ ಕೇವಲ 84 ಕೋಟಿ ರೂಪಾಯಿಯನ್ನು ನೀಡಲಾಗಿದೆ. ಅದನ್ನು ನಮ್ಮ ಔದ್ಯೋಗಿಕೀಕರಣದ ಕಾರ್ಯಕ್ರಮದ ಆಧಾರದ ಮೇಲೆ ಹೆಚ್ಚಿಸಬೇಕು. ಔದ್ಯೋಗಿಕ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರಲು ವಿದೇಶೀ ಸಾಧನಗಳ ಮೇಲೆ ಅತ್ಯಧಿಕವಾಗಿ ಅವಲಂಬಿಸಲಾಗಿದೆ. ಉದ್ಯೋಗಗಳು ಹಾಗೂ ಖನಿಜ ಉನ್ನತಿಯಲ್ಲಿ ಆಗುವ ಒಟ್ಟು 2993 ಕೋಟಿ ರೂಪಾಯಿಯಲ್ಲಿ 1338 ರೂಪಾಯಿಗಳಂತೂ ವಿದೇಶೀ ವಿನಿಯಮದ ಮೂಲಕವೇ ಪ್ರಾಪ್ತವಾಗುತ್ತದೆ. ಈ ರೀತಿಯಾಗಿ ಇದನ್ನು ಸಹ ಕಡಿಮೆ ಅಂದಾಜಿಸಲಾಗಿದೆ. ಏಕೆಂದರೆ ತೃತೀಯ ಯೋಜನೆಯಲ್ಲಿ ಹೇಳಿರುವುದೇನೆಂದರೆ ``ವಿದೇಶೀ ವಿನಿಮಯದ ಅವಶ್ಯಕತೆಗಳ ಅಂದಾಜು ಸಂದಾಯ ಹೂಡಿಕೆಯು ನಗದಾಗಿರಬೇಕು ಮತ್ತು ಮುಖ್ಯವಾಗಿ ಯಂತ್ರ ಮತ್ತು ಸಾಮಾಗ್ರಿ ಅಗ್ಗವಾದ ಸಾಧನಗಳಿಂದ ಪ್ರಾಪ್ತವಾಗುತ್ತದೆಂಬ ಮಾನ್ಯತೆಗಳನ್ನು ಆಧರಿಸಿದೆ. ಆದರೆ ನಾವು ತಿಳಿದ ಹಾಗೆ ಬಹುಶಃ ಈ ಮಾನ್ಯತೆಗಳು ಸತ್ಯವಲ್ಲವೆಂದಿರಬಹುದು. ನೆನಪಿರಲಿ, ದ್ವಿತೀಯ ಯೋಜನೆಗಳಲ್ಲಿ ನಮ್ಮ (ಎಲ್ಲಾ) ಸಮಸ್ತ ಅಂದಾಜು ತಪ್ಪಾಗಿಬಿಟ್ಟಿತು. ಜನತೆಯ ಮೇಲೆ ಹೆಚ್ಚಿನ ಹೊರೆ ವಿದೇಶೀ ಸಾಧನಗಳ ಮೇಲೆ ಇಷ್ಟು ಅಧಿಕ ಅವಲಂಬನೆ ಯೋಜನೆಯ ಮೇಲೆ ಇದರ ಸಮಸ್ತ ಉತ್ಪಾದನೆ ಕಾರ್ಯಕ್ರಮಗಳನ್ನು ರಫ್ತಿನ ಮೂಲಕ ಹಣದ ಗಳಿಕೆಯನ್ನು ಹೆಚ್ಚಿಸಲು ಒತ್ತು ನೀಡುತ್ತದೆ. ಈ ಕಾರ್ಯಕ್ರಮದ ಸಮಸ್ತ ಅವಶ್ಯಕತೆಗಳು ಆಂತರಿಕ ಮಾರುಕಟ್ಟೆಯ ವಿಕಾಸದ ಅವಶ್ಯಕತೆ, ಮೌಲ್ಯಗಳಲ್ಲಿ ಸ್ಥಿರತೆ, ಉದ್ಯೋಗಗಳ ವಿಸ್ತರಣೆ ಮತ್ತು ಉತ್ಪಾದನೆಯಲ್ಲಿ ಶ್ರಮವನ್ನು ಪ್ರಮುಖತೆಯ ನಿಟ್ಟಿನಲ್ಲಿಡಲು ಹೇಳಲಾಗುತ್ತದೆ. ಅವು ಜನತೆಯ ಮೇಲೆ ಅಧಿಕ ಭಾರವನ್ನು ಹೇರುತ್ತವೆ. ಜನತೆಯ ಸಮಸ್ಯೆಗಳು ಹಿಂದಿನಂತೆಯೇ ಉಳಿದಿದೆ. ಈ ರೀತಿ ನಮ್ಮನ್ನು ನಾವೇ ಒಂದು ವಿಚಿತ್ರವಾದ ಬೇಲಿಯ ಬಂಧನದಲ್ಲಿ ಸಿಕ್ಕಿಸಿಕೊಳ್ಳುತ್ತೇವೆ. ತೃತೀಯ ಯೋಜನೆ ಇದನ್ನು ಕಡಿದುಹಾಕಲು ಯಾವುದೇ ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 203 ಸಾಧನವನ್ನು ತನ್ನದಾಗಿಸಿಕೊಳ್ಳುವುದಿಲ್ಲ. ಯೋಜನೆಯ ನಿರ್ಮಾಪಕರುಗಳಲ್ಲಿ ಮಾತುಗಳನ್ನು ಬಿಟ್ಟರೆ ಈ ಸಂಕಟದಿಂದ ಹೊರಬರಲು ಯೋಗ್ಯ ಅವಶ್ಯಕ ಸಾಹಸದ ಅಭಾವ ಕಂಡುಬರುತ್ತದೆ. ಬಹುಶಃ ಅವರು ತಮ್ಮ ಸತ್ಯ ಸ್ವರೂಪದಲ್ಲಿ ವಸ್ತುಗಳನ್ನು ನೋಡಲೂ ಆಗದಂತೆ ಬಹಳ ಸೂಕ್ಷ್ಮವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಪ್ರತಿಯೊಂದು ದೇಶದ ಔದ್ಯೋಗಿಕ ಉನ್ನತಿ ಆ ದೇಶದ ತನ್ನ ಪರಿಸ್ಥಿತಿಗಳ ಹಿಂದಿನ ವಿಚಾರಗಳ ಆಧಾರದ ಮೇಲೆಯೇ ಆಗುತ್ತದೆ ಎಂಬುದರ ಅನುಭವ ಹೊಂದುವುದರಲ್ಲಿ ಅಸಫಲರಾಗಿದ್ದಾರೆ. ಅತ್ಯಧಿಕವಾದ ಉತ್ಪಾದನೆ ವಿಭಿನ್ನ ಉತ್ಪಾದನೆಗಳ ಸಾಧನೆಗಳ ಪ್ರಯಾಣದ ವಿಭಿನ್ನ ಉಪಯೋಗದ ಮೂಲಕವೇ ಸಂಭವವಾದುದಾಗಿದೆ. ಪ್ರತಿಯೊಂದು ದೇಶದ ಆದರ್ಶ ಆ ದೇಶದ ಈ ಸಾಧನೆಗಳ ಸೀಮಿತ ಉಪಯೋಗದ ಮೇಲೆ ಅವಲಂಬಿಸಿರುತ್ತದೆ. ಯೋಜನೆಯ ನಿರ್ಮಾಪಕರ ವಿಚಾರಹೀನತೆಯೊಂದಿಗೆ ಪಶ್ಚಿಮದ ರೀತಿ-ನೀತಿಗಳನ್ನು ಅನುಸರಿಸುತ್ತಿರುವುದರಿಂದ ಇಷ್ಟು ವೆಚ್ಚ ಮಾಡಿದ ನಂತರವೂ ಇಲ್ಲಿ ಜನತೆಯ ಸಮಸ್ಯೆಗಳಲ್ಲಿ ಯಾವುದೇ ಸುಧಾರಣೆಯು ಕಂಡುಬಂದಿಲ್ಲ. ಸಮಾಜವಾದಿ ಘೋಷಣೆಗಳ ದುಷ್ಪಪರಿಣಾಮ ಪಶ್ಚಿಮದ ಅನುಸರಣೆಗಳನ್ನು ಬಿಟ್ಟು ಯೋಜನೆ-ನಿರ್ಮಾಪಕರುಗಳು ಸಮಾಜವಾದದ ಯುಗದಲ್ಲಿ ಪ್ರವೇಶ ಮಾಡುವ ವಿಚಾರದಿಂದಲೂ ಪೀಡಿತರಾಗಿದ್ದಾರೆ. ಸಮಾಜವಾದದ ಅಂತಿಮ ಉದ್ದೇಶ ಅಂದರೆ ಪ್ರತಿಯೊಬ್ಬ ನಾಗರಿಕ ಮತ್ತು ಅವನ ಕಾರ್ಯಗಳನ್ನು ವೈಯಕ್ತಿಕ ಲಾಭದ ವಿರುದ್ಧ ಸಾಮಾಜಿಕ ಕಾರಣಗಳಿಂದ ಪ್ರಭಾವಿತರನ್ನಾಗಿಸಲು ಆರ್ಥಿಕ ಅಸಮಾನತೆಯಲ್ಲಿ ಕುಂದು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯದ ಸ್ವೀಕೃತಿಯಲ್ಲಿ ಕಠಿಣತೆಗಳಿಂದಲೆ ಏನಾದರೂ ಭೇದವಿರುವುದು. ಆದರೆ ಸಮಾಜವಾದದ ದೇಶಗಳ ಮೂಲಕ ಈ ಉದ್ದೇಶಗಳನ್ನು ಪಡೆಯಲು ಅನುಸರಿಸಿರುವ ಸಾಧನ ಕಠಿಣತೆಯಿಂದಲೇ ಇದಕ್ಕಾಗಿ ಉಪಯುಕ್ತವಾಗಬಹುದು. ರಾಜ್ಯವು ಸಮಸ್ತ ಉತ್ಪಾದನೆಯ ಸಾಧನಗಳನ್ನು ಪಡೆಯಲು ಮುಂದೆ ಬರಬೇಕಾಗುತ್ತದೆ. ಮತ್ತು ನಾಗರಿಕರು ಅಧಿಕವಾಗಿ ಅಥವಾ ಕಡಿಮೆಯಾಗಿ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಾರೆ. ಈ ರೂಢಿವಾದ ರೀತಿ-ನೀತಿಗಳನ್ನು ಅನುಸರಿಸುತ್ತಾ ಭಾರತವೂ ಸಹ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದೆ. ಇದು ಕೇವಲ ಸಾರ್ವಜನಿಕ ಕ್ಷೇತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಮತ್ತು ಅನ್ಯ ಸಮಸ್ತ ಕ್ಷೇತ್ರಗಳಿಗೆ ಗೌಣ ಸ್ವರೂಪವನ್ನು ನೀಡಲಾಗುತ್ತಿದೆ ಎಂಬ ಆಧಾರದ ಮೇಲೆಯೇ ಇದೆ. ತೃತೀಯ ಯೋಜನೆಯೂ ಈ ಸಮಾಜವಾದದ ದಿಕ್ಕಿನಲ್ಲಿ ಮುಂದೆ ಒಂದು ದೊಡ್ಡ ನೆಗೆತವನ್ನು ಹಾಕಲು ಪ್ರಯತ್ನವಾಗಿದೆ. 204 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕ್ಷೇತ್ರಗಳ ಕೃತ್ರಿಮ ವಿಭಾಜನೆ ಒಂದು ನಿಯುಕ್ತವಾದ ಅರ್ಥ-ವ್ಯವಸ್ಥೆಯಲ್ಲಿ ಸರ್ಕಾರದ ಕ್ರಿಯಾಕಲಾಪಗಳ ಒಂದು ನಿರ್ದಿಷ್ಟವಾದ ಕ್ಷೇತ್ರವಿರುತ್ತದೆ. ಆದರೆ ರಾಷ್ಟ್ರದ ಉತ್ಪಾದನಾ ಶಕ್ತಿಯನ್ನು ತೃತೀಯ ವಿಭಾಜನೆಯಲ್ಲಿ ಕಟ್ಟಿಹಾಕುವ ಚೇಷ್ಟೆ ಪರಸ್ಪರ ವಿರೋಧವಾಗಿರಬೇಕು ಎಂಬುದು ಸಿದ್ಧಾಂತಃ ಸರಿಯಾದುದಲ್ಲ. ನಿಜವಾಗಿಯೂ ಪ್ರತಿಯೊಂದು ಶಕ್ತಿಯೂ ರಾಷ್ಟ್ರದ ವಿಕಾಸದಲ್ಲಿ ಉತ್ತಮ ಕೊಡುಗೆ ನೀಡುವ ಸಮ್ಮತಿ ಇರಬೇಕು. ಕಳೆದ 10 ವರ್ಷಗಳ ಇತಿಹಾಸವು ವೈಯಕ್ತಿಕ ಕ್ಷೇತ್ರವು ಹಣದ ವಿನಿಯೋಗ ಹಾಗೂ ಅಧಿಕ ಉತ್ಪಾದನೆ ಮಾಡುವ ತನ್ನ ಕ್ಷಮತೆಯನ್ನು ತೋರುತ್ತಿದೆ ಎಂಬುದನ್ನು ತಿಳಿಸುತ್ತದೆ. ಮತ್ತೇಕೆ ಈ ಸೇವೆಗಳ ಉಪಯೋಗ ಮಾಡಲಾಗುತ್ತಿದೆ? ಒಂದು ವೇಳೆ ನಾವು ಬಿರ್ಲಾ ಮತ್ತು ಟಾಟಾರವರನ್ನು ಸಹಿಸಿಕೊಳ್ಳುತ್ತೇವೆ ಮತ್ತೊಬ್ಬರನ್ನು ಸಹಿಸಿಕೊಳ್ಳುವುದರಲ್ಲೇನು ಹಾನಿ? ಸಾಮಾಜಿಕ ನ್ಯಾಯದ ಅವಶ್ಯಕತೆಯು ವೈಯಕ್ತಿಕ ಸಾಧನಗಳ ಮೂಲಕವೇ ಪ್ರಾಪ್ತವಾಗಬಲ್ಲದು. ತೃತೀಯ ಯೋಜನೆಯು ಬೆಲೆಗಳ ಸ್ಥಿರತೆಗಾಗಿ ವೈಯಕ್ತಿಕ ಕ್ಷೇತ್ರಗಳನ್ನು ಒಗ್ಗೂಡಿಸುವ ಕಡೆಗೆ ಹೆಚ್ಚು ಗಮನವಹಿಸಿಬೇಕಾಗುತ್ತದೆ. ಒಂದು ವೇಳೆ ಅವರು ತಮ್ಮ ಉತ್ಪಾದನೆಯ ಬೆಲೆಗಳಲ್ಲಿ ಯಾವುದೇ ರೀತಿಯ (ಕರ) ಕಂದಾಯವಿಲ್ಲದೆ ಕುಶಲತೆಯಿಂದ ಲಾಭವನ್ನು ಪಡೆಯಲಿಚ್ಛಿಸಿದರೆ ಅವರಿಗೆ ಕುಶಲ ವ್ಯಕ್ತಿಗಳ ಮೂಲಕ ಪುನಃ ಸಂಘಟಿತವಾದ ಮತ್ತು ಕಾರ್ಯಾನ್ವಿತ ಮಾಡಬೇಕಾಗುತ್ತದೆ. ತೃತೀಯ ಯೋಜನೆಯಲ್ಲಿ ಈ ಪ್ರಶ್ನೆಯ ಮೇಲೆ ಒಂದು ಅಧ್ಯಾಯವನ್ನು ಕೊಡಲಾಗಿದೆ. ಆದರೆ ಯಾರೂ ಈ ದಿಕ್ಕಿನಲ್ಲಿ ನಿಶ್ಚಿತ ಕಾರ್ಯಕ್ರಮವನ್ನು ನೀಡಲಿಲ್ಲ. ವಿಭಿನ್ನ ಸರ್ಕಾರಿ ಮಂತ್ರಾಲಯ ಮತ್ತು ಕಾರ್ಯಾಲಯಗಳಲ್ಲಿ ಸಮನ್ವಯದ ಸಮಸ್ಯೆಗಳೂ ಇವೆ. ಸಾಕಷ್ಟು ಪ್ರಬಂಧ ಸಂಬಂಧಿ ಹಾಗೂ ಯಾಂತ್ರಿಕ ಗುಣಗಳ ವಿಕಾಸವಾಗಬೇಕು. ಕುಶಲ ಸರ್ಕಾರಿ ಕರ್ಮಚಾರಿಗಳು ಕಠಿಣತೆಯಿಂದಲೇ ಔದ್ಯೋಗಿಕ ವಿಕಾಸ ಕಾರ್ಯಕ್ರಮದ ಅವಶ್ಯಕತೆಗಳನ್ನು ಪೂರ್ತಿ ಮಾಡಬಹುದು ಎಂಬುದು ಸತ್ಯ. ದ್ವಿತೀಯ ಯೋಜನೆಯ ಬಹಳಷ್ಟು ಸಮಸ್ಯೆಗಳು ಕೇವಲ ಉಪಯುಕ್ತ ಕಾರ್ಯಕರ್ತರುಗಳ ಅಭಾವದ ಕಾರಣವೇ ಆಗಿತ್ತು. ಆದ್ದರಿಂದ ಪುನಃ ಈ ತಪ್ಪನ್ನು ಮಾಡುವುದು ಬುದ್ಧಿಹೀನತೆಯೆಂದೇ ಆಗುತ್ತದೆ. ಸುರಕ್ಷೆಯ ಬಗ್ಗೆ ಗಮನ ಅವಶ್ಯಕ ಯೋಜನೆಯ ಎಲ್ಲಕ್ಕಿಂತ ದೊಡ್ಡ ದೋಷ ನೀತಿಗಳು ಹಾಗೂ ಕಾರ್ಯಕ್ರಮದ ನಿರ್ಮಾಣದಲ್ಲಿದೆ ಮತ್ತು ಅದರ ಸಾಧನೆಗಳ ಅಂದಾಜಿನಲ್ಲಾಗಲಿ ಇರಲಿಲ್ಲ. ಬದಲಾಗಿ ಇದು ದೇಶದ ರಕ್ಷಣೆಯ ನಿತ್ಯ ನವೀನ ಅವಶ್ಯಕತೆಗಳ ಕಡೆಗೆ ಸಂಕೇತ ಮಾಡಿದೆ. ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 205 ಒಂದು ಕಾಲದಲ್ಲಿ ದೇಶದಲ್ಲಿ ಸಂಭವಿಸಿದ ರಕ್ಷಣೆಯಲ್ಲಿ ಅನಿವಾರ್ಯ ವಿಭಿನ್ನ ವೃದ್ಧಿಯ ಅವಶ್ಯಕತೆಯಿದೆ. ಆ ಸಮಯದಲ್ಲಿ ದಿಕ್ಕುಗಳಲ್ಲಿ ಮಹತ್ವಾಕಾಂಕ್ಷೆಯ ಸ್ತರದ ಯೋಜನೆಯ ನಿರ್ಮಾಣ ಮಾಡುವುದು ಬುದ್ಧಿಹೀನತೆಯೇ ಆಗುತ್ತದೆ. ಯೋಜನೆಯ ಅವಿಭಾಜ್ಯತೆ ಮತ್ತು ವಿಭಿನ್ನ ಯೋಜನೆಗಳ ಭೌತಿಕ ಅವಶ್ಯಕತೆಗಳ ಪರಿಪೂರಕ ವಿನಿಯೋಗಗಳ ಅವಶ್ಯಕತೆ ಇದೆ. ಆದ್ದರಿಂದ ಇದರ ಮಹತ್ವ ಸ್ಪಷ್ಟವಾಗಿಬಿಡುತ್ತದೆ. ಮನುಷ್ಯ ಮತ್ತು ಮುದ್ರೆಯಲ್ಲಿ ಎಲ್ಲಾ ಪ್ರಕಾರದ ಅಭಾವವು ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸುವುದು ಅವಶ್ಯಕವಾಗಿರುತ್ತದೆ. ಮೊದಲಿನಿಂದಲೂ ಚಾಲ್ತೀ ಯೋಜನೆಗಳ ಮೇಲೆ ವಿಪರೀತ ಪ್ರಭಾವ ಬೀರಬಹುದಾಗಿದೆ. ಆದ್ದರಿಂದ ಇಂತಹ ಸ್ತರದ ಮೇಲೆ ಒಂದು ಆಂತರಿಕ ಯೋಜನೆಯ ನಿರ್ಮಾಣ, ಸಾಧನಗಳ ಅಂದಾಜು, ಸಮಯದಲ್ಲಿ ವಿಳಂಬ ಮತ್ತು ವೀರತೆಯ ಕಾರ್ಯಗಳ ಬಗ್ಗೆ ಗಮನವಿಡುತ್ತಾ ನಿರ್ಧರಿಸುವುದು ಅವಶ್ಯಕವಾಗಿದೆ. ಯೋಜನೆಗಳನ್ನು ಒಂದುವೇಳೆ ಅಜ್ಞಾತ ಭಯದ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಲಿಲ್ಲವಾದರೆ ಆಗ ನಾವು ಅವಶ್ಯವಾಗಿ ಯೋಜನೆಯನ್ನು ಯಾವುದೇ ಅದೃಷ್ಟ ಅವಶ್ಯಕತೆಯು ನಮ್ಮನ್ನು ನಮ್ಮ ಗುರಿಯಿಂದ ದೂರ ಎಸೆಯದಿರುವ ರೀತಿಯಲ್ಲಿ ನಿರ್ಮಿಸಬೇಕು. ಸಂಕ್ಷೇಪವಾಗಿ ತೃತೀಯ ಪಂಚವಾರ್ಷಿಕ ಯೋಜನೆಯ ಬಗ್ಗೆ ಅವಾಸ್ತವಿಕ, ಅವ್ಯವಹಾರಿಕ ಹಾಗೂ ಕಲ್ಪನಾರಹಿತವಾದ ದೃಷ್ಟಿಕೋನ, ಸಾಧನಗಳ ಸಂಬಂಧದಲ್ಲಿ ಆಸೆಗಿಂತಲೂ ಅಧಿಕ ಅಂದಾಜು, ಯೋಜನೆಗೆ ಸಂಬಂಧಿಸಿದಂತೆ ಮಾನವೀಯ ಶಕ್ತಿಯ ನಿರ್ಲಕ್ಷ್ಯ, ರೈತ, ಕಾರ್ಮಿಕ, ವ್ಯಾಪಾರಿ ಹಾಗೂ ಉದ್ಯೋಗಪರಿ ಎಲ್ಲರ ಬಗ್ಗೆ ಅವಿಶ್ವಾಸ, ಸರ್ಕಾರೀ ಕ್ಷೇತ್ರ ಹಾಗೂ ಸರ್ಕಾರಿ ಏಜೆನ್ಸಿಗಳ ಮೇಲೆ ಆಸೆಗಿಂತಲೂ ಅಧಿಕ ಅವಲಂಬನೆ ಹಾಗೂ ಅನಾವಶ್ಯಕ, ಅವಾಂಚನೀಯ ವಿಶ್ವಾಸ, ಸಾಧಾರಣ ಜನತೆಯ ಮೂಲಭೂತ ಅವಶ್ಯಕತೆಗಳ ಪೂರ್ತಿಯ ನಿರಂತರ ಅವಹೇಳನ, ವಿದೇಶಿ ವ್ಯಾಪಾರದ ಸಮೃದ್ಧಿ ಹಾಗೂ ಮೌಲ್ಯಗಳ ಸ್ಥಿರತೆಗೆ ಸಂಬಂಧಿಸಿ ನಿಶ್ಚಿತವಾದ ಹಾಗೂ ಪ್ರಭಾವಯುತ ನೀತಿ ನಿರ್ಧಾರಣೆಯಲ್ಲಿ ಅಸಫಲತೆ, ಸರ್ಕಾರಿ ಉದ್ಯೋಗಗಳ ಕಠಿಣತೆಗಳನ್ನು ದೂರ ಮಾಡುವ ಮತ್ತು ಅವರ ವೃದ್ಧಿ ಹೊಂದುವಲ್ಲಿ ಸಫಲತೆಯ ಉಚ್ಛಾಟನೆ ಹಾಗೂ ವಿದೇಶಿ ಗುಪ್ತಚರರ ಹಾಗೂ ಪಂಚಮಾಂಗಗಳ ಕಾರ್ಯಗಳನ್ನು ಪೂರ್ಣವಾಗಿ (ತುಳಿದು ಹಾಕುವ) ಹೊಸಕಿ ಹಾಕುವ ಸಪ್ತ-ಸೂತ್ರ ಕಾರ್ಯಕ್ರಮವನ್ನು ಸೇರಿಸಲಾಗಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಹೆಸರುಗಳು ಭ್ರಾಮಕವಾದವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಘೋಷಣೆ ಪತ್ರದಲ್ಲಿ ಧರ್ಮದ ಹೆಸರಿನಲ್ಲಿ 206 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ದೇಶದಲ್ಲಿ ಬಹುಸಂಖ್ಯಾತ ಮತ್ತು ಅಭಾವ, ಎಲ್ಲಾ ಸ್ವಾಸ್ಥ ವ್ಯಕ್ತಿಗಳಿಂದ ಕೆಲಸ ಕೊಡಿಸುವ ದೃಷ್ಟಿಕೋನದಿಂದ ಸಂಪೂರ್ಣ ಔದ್ಯೋಗಿಕ ಕಾರ್ಯಕ್ರಮದ ಪುನರ್‍ನವೀಕರಣ ಹಾಗೂ ಕಾರ್ಯಕ್ರಮದಲ್ಲಿ ಪರಿವರ್ತನೆಯ ಅವಶ್ಯಕತೆಯ ಬಗ್ಗೆ ಘೋರವಾದ ನಿರ್ಲಕ್ಷ್ಯ. ಅನಪೇಕ್ಷಿತವಾದುದು ಹಾಗೂ ಅನುಚಿತ ರೂಪದಲ್ಲಿ ವಿದೇಶೀಯರ ಸಹಾಯದ ಮೇಲೆ ಅವಲಂಬನೆ, ತೃತೀಯ ಯೋಜನೆಯ ಕೆಲವು ಪ್ರಮುಖ (ಕೆಡುಕುಗಳು) ನ್ಯೂನತೆಗಳಿವೆ. ಒಂದು ವೇಳೆ ಪ್ರಜಾಪ್ರಭುತ್ವದಲ್ಲಿ ಯೋಜನೆಯ ಸಂಬಂಧವಾಗಿ ಜನತೆಯ ವಿಶ್ವಾಸವನ್ನು ಖಾಯಂಗೊಳಿಸಬೇಕು ಮತ್ತು ಒಬ್ಬರು ಮತ್ತೊಬ್ಬರ ಬಗ್ಗೆ ಮಾಡುವ (ನಿರ್ಲಕ್ಷ್ಯವನ್ನು) ಉದಾಸೀನವನ್ನು ದೂರ ಮಾಡಬೇಕಾದರೆ ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ತದನುರೂಪ ಪರಿವರ್ತನೆ ಮಾಡುವುದು ಅನಿವಾರ್ಯವಾಗಿದೆ. ಅಲ್ಪಸಂಖ್ಯಾತರಲ್ಲಿ ಅಂತರವನ್ನು (ಕಾಣುವಂತೆ ಮಾಡುವುದು) ಕಂಡುಬರುವಂತೆ ಮಾಡುವುದು ನಮ್ಮ (ಅಸಾಂಪ್ರದಾಯಿಕ) ಕೋಮುರಹಿತ ರಾಜ್ಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಅತಿಶೀಘ್ರವಾಗಿ ಅಂತ್ಯಗೊಳಿಸಿ ವಿಶುದ್ಧ ಭಾರತೀಯತೆಯ ಆಧಾರದ ಮೇಲೆಯೇ ನಾವು ಪ್ರತಿಯೊಂದು ಸಮಸ್ಯೆಯ ಮೇಲೆ ವಿಚಾರ ಮಾಡಬೇಕಾಗಿದೆ. ಕ್ರೈಸ್ತ ಮಿಶನರಿಯ ಹಿಂಸ್ರಕ ಪರಿಸ್ಥಿತಿಗಳ ಚರ್ಚೆ ಮಾಡುತ್ತಾ ಅವುಗಳ ಕ್ರಿಯಾಕಲಾಪಗಳನ್ನು ಪರಿಶೀಲಿಸಿ ಅವುಗಳನ್ನು ದೇಶದಿಂದ ಹೊರಗಟ್ಟುವ ಬೇಡಿಕೆಯನ್ನಿಡಲಾಯಿತು. ಕ್ರೈಸ್ತ ಮಿಷನರಿಗಳನ್ನು ಆದಿವಾಸಿ ಮತ್ತು ಸೀಮಾವಾರು ಕ್ಷೇತ್ರಗಳಲ್ಲಿ ನುಗ್ಗಲು ಬಿಡಬಾರದು ಮತ್ತು ದ್ಯೆಚಿÉ್ಯ iÉರಿÉÉ ್ಕಟÉಠಿÉ್ಘಚಿÉ್ಘ ಸಮಿತಿಗಳ ಶಿಫಾರಸುಗಳನ್ನು ಬಹುಬೇಗ ಕಾರ್ಯರೂಪಕ್ಕೆ ತರಬೇಕು ಎಂಬುದು ಸುರಕ್ಷತೆಯ ದೃಷ್ಟಿಯಲ್ಲಿ ಸರಿಯೇ ಆಗಿದೆ. ಏಕಸ್ವಾಮ್ಯ ರಾಜ್ಯ ಘೋಷಣೆಯ ಬೇಡಿಕೆ ಭಾರತದ ವರ್ತಮಾನ ರಾಜನೈತಿಕ ರೂಪುರೇಷೆಯಲ್ಲಿ ಪ್ರಾಂತ್ಯಕ್ಕೆ `ರಾಜ್ಯ’ ಹಾಗೂ ಕೇಂದ್ರಕ್ಕೆ `ಯುನಿಯನ್’ನ ಹೆಸರು ನೀಡಲಾಗಿದೆ. ಇದನ್ನು ವಿರೋಧಿಸಲಾಯಿತು. ಏಕೆಂದರೆ ಇದರಿಂದ ದೇಶದಲ್ಲಿ ವಿಭೇದಕಾರಿ ಶಕ್ತಿಗಳಿಗೆ ಬಲ ದೊರಕುತ್ತಾ ಇದೆ. ಕಾರ್ಯಸಮಿತಿಯು ಶಾಸನದ ನ್ಯೂನ್ಯತೆಯ ಭಾಗಕ್ಕೆ ಅಧಿಕಾರವನ್ನು ನೀಡುತ್ತಾ ವಿಕೇಂದ್ರೀಕರಣದ ಆಧಾರದ ಮೇಲೆ ದೇಶದಲ್ಲಿ ಏಕಸ್ವಾಮ್ಯ ಅಧಿಕಾರದ ಸ್ಥಾಪನೆ ಮಾಡುವ ಘೋಷಣೆಯನ್ನು ಹೊರಡಿಸಲಾಯಿತು. ಕಾಶ್ಮೀರದ ಪ್ರಶ್ನೆ ಬಂದಾಗ ಹೀಗೆ ಹೇಳಲಾಯಿತು: ಈಗ ಸಮಯ ಬಂದುಬಿಟ್ಟಿದೆ ಭಾರತೀಯ ಸಂವಿಧಾನದ ಸೆಕ್ಷನ್ 370 ನ್ನು ಪೂರ್ಣವಾಗಿ ತೃತೀಯ ಯೋಜನೆಯ ಭಾರೀ ಘನವಾದ ಕೊರತೆ ಆಯ-ವ್ಯಯ ಸ್ವರೂಪ ಅನಪೇಕ್ಷಿತವಾದುದು 207 ತೆಗೆದುಹಾಕಬೇಕು ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿಯೇ ಕಾಶ್ಮೀರ ರಾಜ್ಯವು ಸಂಪೂರ್ಣ ಅಧಿಕಾರ ನಡೆಸಲಿ, ಅದರಿಂದ ರಾಜ್ಯದ ಉಳಿದ ಜನತೆಯು ಭಾರತದೊಂದಿಗೆ ಭಾವನಾತ್ಮಕ ಸಂಬಂಧವನ್ನು ಸ್ಥಾಪಿಸಬಲ್ಲದು. ಸಮಿತಿಯು ಕಾಶ್ಮೀರದ ಮೇಲಾದ ಪಾಕಿಸ್ತಾನ ಮತ್ತು ಚೀನಾದ ಆಕ್ರಮಣವನ್ನು ಭಾರತದ ಮೇಲಿನ ಆಕ್ರಮಣವೆಂದು ತಿಳಿದಿದೆ. ಆದ್ದರಿಂದ ಅದನ್ನು ದೃಢತೆಯೊಂದಿಗೆ ಸೇಡು ತೀರಿಸಿಕೊಳ್ಳುವುದು ಅವಶ್ಯಕವಾಗಿದೆ. ಪಾಕ್-ಅಧಿಕೃತ ಕಾಶ್ಮೀರದಿಂದ ಬರುವ ಶರಣಾರ್ಥಿಗಳಿಗೆ ಬೇರೆ ಸ್ಥಾಪನೆಗಳಿಗೆ ಸವಲತ್ತುಗಳನ್ನು ನೀಡುವುದೆಂದು ಮಾತು ಕೊಟ್ಟಿದೆ. ತಟಸ್ಥ ವಿದೇಶಾಂಗ ನೀತಿ ತಟಸ್ಥ ವಿದೇಶಿ ನೀತಿಯ ಸಮರ್ಥನೆ ಮಾಡುತ್ತಾ ಹೇಳಲಾಗಿದೆಯೇನೆಂದರೆ ಕಾಂಗ್ರೆಸ್ ಸರ್ಕಾರ ತಟಸ್ಥತೆಯ ಹೆಸರಿನಲ್ಲಿ ಒಂದು ವಿಶೇಷವಾದ ಸಮರ್ಥನೆ ಮಾಡುತ್ತಲಿದೆ. ಅದು ದೇಶದ ಸುರಕ್ಷೆಗೆ ಘಾತಕವಾಗಿದೆ. ಘೋಷಣೆಯ ಪತ್ರದಲ್ಲಿ ಚೀನಾದ ಆಕ್ರಮಣದ ಬಗ್ಗೆ ಒಪ್ಪಿಕೊಂಡಿದ್ದ ಭಾರತ ಸರ್ಕಾರದ ನೀತಿಯನ್ನು ಕಠೋರವಾಗಿ ನಿಂದಿಸಲಾಯಿತು. ಮತ್ತು ಚೀನಾದ ಪ್ರಭುತ್ವವನ್ನು ಸರ್ಕಾರದ ಮೂಲಕ ಸ್ವೀರಿಸಲು ರಾಜನೈತಿಕ ದಿವಾಳಿತನದ ಹೆಸರು ನೀಡುತ್ತಾ ದೃಢವಾದ ಹೆಜ್ಜೆಯಿಡುವ ಘೋಷಣೆ ಮಾಡಲಾಗಿದೆ. ಇದೇ ರೀತಿ ಸರ್ಕಾರದ ತಪ್ಪು ನೀತಿಯಿಂದ ನೇಪಾಳದಲ್ಲಿ ಭಾರತದ ವಿರುದ್ಧವಾಗಿ ಪ್ರಚಾರಕ್ಕೆ ಬಿಲ ಸಿಕ್ಕಿತು ಮತ್ತು ಆಫ್ರಿಕಾದ ಭಾರತೀಯ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು. ಅಂತ್ಯದಲ್ಲಿ ಗೋವಾ, ಡಾಮನ್, ಡಿಯುವನ್ನು ಭಾರತದ ಅವಿಭಾಜ್ಯ ಅಂಗವೆಂದು ತಿಳಿಯುತ್ತಾ ಅದರ ಮುಕ್ತಿಯ ಸಮರ್ಥನೆ ಮಾಡಲಾಯಿತು. ಸಹಕಾರಿ ಕೃಷಿಯು ಘಾತಕವಾಗಿದೆ ಕಾರ್ಯಸಮಿತಿಯು ಸಹಕಾರಿ ವ್ಯವಸಾಯದ ವಿರೋಧದ ನಿಶ್ಚಯ ಮಾಡುತ್ತಾ ಸಹಕಾರಿ ಸೇವಾ ಸಂಸ್ಥೆಗಳ ಸ್ಥಾಪನೆ ಮಾಡಲು ಸಮರ್ಥಿಸಲಾಯಿತು. ಘೋಷಣೆಯ ಪತ್ರದಲ್ಲಿ ರೈತರಿಗೆ ಭೂಮಿಯ ಮಾಲೀಕರೆಂದು ತಿಳಿಯಲಾಯಿತು ಮತ್ತು ಯಾರ ಭೂಮಿಯನ್ನು ಕಸಿದುಕೊಳ್ಳಲಾಗಿತ್ತೋ ಅವರಿಗೆ ಪುನಃ ಭೂಮಿಯನ್ನು ನೀಡುವ ಆಶ್ವಾಸನೆಯನ್ನು ನೀಡಲಾಯಿತು. ಕಾರ್ಯ ಸಮಿತಿಯು ಆಹಾರದ ಉತ್ಪಾದನೆಯನ್ನು ಹೆಚ್ಚಿಸುವ ಸಂಬಂಧವಾಗಿ ಉತ್ತಮವಾದ ಕೃಷಿಯನ್ನು ಇದರ ಏಕಮಾತ್ರ ಉಪಾಯವೆಂದು ತಿಳಿಸಲಾಯಿತು ಮತ್ತು ಭೂಮಿಯ ಉಳುವಿಕೆಯನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲಿಲ್ಲವೆಂದು ನಿಂದಿಸಲಾಯಿತು. ಸಮಿತಿಯು ಬೀಜ ಬಿತ್ತುವ 208 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಮಯದಲ್ಲಿ ಮೌಲ್ಯ ನಿರ್ಧಾರಣೆ ಮಾಡಲು ಬೇಡಿಕೆ ಇಡಲಾಯಿತು. ಸಮಿತಿಯು ಟೀ, ಕಾಫೀ ಮತ್ತು ರಬ್ಬರ್‍ನ ಉದ್ಯೋಗಗಳು ಈ ಸಮಯದಲ್ಲಿ ವಿದೇಶೀಯರ ಕೈಯಲ್ಲಿದೆ, ಅದರ ಸ್ವದೇಶೀ ಕಾರಣದ ನಿಶ್ಚಯತೆ ವ್ಯಕ್ತವಾಗಿದೆ. ಸಮಿತಿಯು ಶ್ರಮಿಕ ಕ್ಷೇತ್ರದಲ್ಲಿ ನ್ಯೂನ್ಯತೆಯ ಕೂಲಿಯನ್ನು ಪ್ರತಿ ತಿಂಗಳಿಗೆ 125 ರೂ. ಎಂದು ನಿರ್ಧರಿಸಿ ನಿಶ್ಚಯಿಸಲಾಯಿತು. __________ * ಆಕರ : ಪಾಂಚಜನ್ಯ, 4-09-1961ರ ಸಂಚಿಕೆ (ಸಂ.) ಪಂ. ದೀನ್ ದಯಾಳ್‍ರ ಪತ್ರ ಅವರ ಮಾವನ ಮಗನ ಹೆಸರಿನಲ್ಲಿ ಪ್ರಿಯ ಬನವಾರಿ ಇಂದು ತುಂಬಾ ವ್ಯಥೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಬಹುಶಃ ಈ ರೀತಿಯಾಗಿ ನನ್ನ ಜೀವನದಲ್ಲಿ ಹಿಂದೆಂದೂ ಬರೆದಿರಲಿಲ್ಲ. ಈ ದುಃಖ ಕೇವಲ ನನ್ನ ಹೃದಯಕ್ಕೆ ಮಾತ್ರ ಸೀಮಿತವಾಗಿರಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಆದರೆ ಇಲ್ಲಿನವರೆಗಿನ ನನ್ನ ಅನುಭವ ಹೇಳುತ್ತದೆ, ಕಾರ್ಯವು ಅತ್ಯಂತ ವೇದನೆ ಮತ್ತು ವ್ಯಥೆಯನ್ನು ಉಂಟುಮಾಡುವುದಾಗಿದೆ ಎಂದು. ನೀನು ಒಬ್ಬ ವಿಚಾರವಂತ, ಸಂವೇದನಾತ್ಮಕವಾಗಿ ಯೋಚಿಸುವ ಶಕ್ತಿ ನಿನ್ನಲ್ಲಿದೆಯಾದ್ದರಿಂದ ನಿನಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 8ನೇ ತಾರೀಖಿನಿಂದಲೇ ಅವರು ಮತ್ತು ನಾನು ನಿನ್ನ ನಿರೀಕ್ಷೆಯಲ್ಲಿದ್ದೆವು. ನೀನು ಬರುವುದಿಲ್ಲವೆಂದು ನನಗೆ ಗೊತ್ತಿತ್ತು, ಆದರೂ ಇಂಥದ್ದೊಂದು ಆಸೆ ನನ್ನಲ್ಲಿ ಮನೆಮಾಡಿತ್ತು. ನೀನು, ನನ್ನ ಕೆಲಸದ ಮಹತ್ವವನ್ನು ಅರಿತು ಬಂದುಬಿಡುಬಹುದೆಂಬ ಆಸೆ ನನ್ನಲ್ಲಿತ್ತು. ಆದರೆ ನಾನು ಹೋಗುವುದು ನನಗೆಷ್ಟು ಮಹತ್ವಪೂರ್ಣವಾಗಿತ್ತು ಎಂಬುದನ್ನು ಬಹುಶಃ ನೀನು ಅರಿಯಲಿಲ್ಲ. ಒಬ್ಬ ಸ್ವಯಂಸೇವಕನ ಬದುಕಿನಲ್ಲಿ ಸಂಘದ ಕೆಲಸ ಎಷ್ಟು ಮಹತ್ವಪೂರ್ಣವಾದದ್ದು ಎಂಬುದನ್ನು ನೀನು ಅರಿತಿದ್ದರೆ? ಸಾಧಾರಣವಾಗಿ ಜೀವನ ಸಾಗಿಸಲು ಅನುಗುಣವಾದ ಯೋಗ್ಯತೆ ಮತ್ತು ಅವಕಾಶಗಳಿದ್ದರೂ ಕೂಡ ನಾನು ಇದಕ್ಕೆ ಭಿನ್ನವಾದ ಬೇರೆ ಮಾರ್ಗವನ್ನು ಆಯ್ದುಕೊಂಡಿದ್ದೇನೆ ಎಂಬುದು ನಿನಗೆ ತಿಳಿದೇ ಇದೆ. ನಾನು ಕೂಡ ಸುಖ ನೆಮ್ಮದಿಯಿಂದಿರಲು ಬಯಸುತ್ತೇನೆ. ಈ ರೀತಿಯ ಕೆಲಸಮಾಡುವುದರಿಂದ ಕುಟುಂಬದ ಯಾವುದೇ ಸದಸ್ಯ, ವಿಶೇಷವಾಗಿ ಮಾವನವರಿಗೆ ಸಂತೋಷವಾಗಿರಲಿಕ್ಕಿಲ್ಲ ಎಂಬುದನ್ನು ನಾನು ಅರಿತಿದ್ದೇನೆ. ಮಾವನವರು ನನಗೆ ಓದು-ಬರಹ ಕಲಿಸಿ ಯೋಗ್ಯನನ್ನಾಗಿಸಿದರು. ಆದರೆ ನಾನು ಅವರ ಇಚ್ಛೆಗೆ ವಿರುದ್ಧವಾದ ಕೆಲಸಮಾಡಿ ಅವರ ಹೃದಯಕ್ಕೆ ದುಃಖ ಕೊಡುವಂತಹ ಕೆಲಸ ಮಾಡಿದ್ದೇನೆ. ಅವರ ಆಸೆಗಳಿಗೆ ಧಕ್ಕೆ ತರುವಂತಹ ಉಪಕಾರಗೇಡಿತನದ ಮತ್ತು ವಂಚಿಸುವಂತಹ ಪಾತಕ ಕೃತ್ಯವನ್ನು ಮಾಡಿದ್ದೇನೆ. ಇದರ ಬಗ್ಗೆ ಸಂಪೂರ್ಣ ವಿಚಾರ ಮಾಡಿದ್ದೇನೆ ಮತ್ತು ಕೆಟ್ಟವನೆಂಬ ಹಣೆಪಟ್ಟಿಯನ್ನು 210 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕಟ್ಟಿಕೊಂಡಿದ್ದೇನೆ. ಹೀಗೆ ಒಳಿತು-ಕೆಡುಕುಗಳ ಬಗ್ಗೆ ವಿಚಾರ ಮಾಡಿಯೂ ನಾನು ಆರಿಸಿಕೊಂಡ ಮಾರ್ಗವೂ ಕೂಡ ಕಲ್ಲು-ಮುಳ್ಳಿಂದ ತುಂಬಿದುದಾಗಿದೆ. ಯಾವಾಗಲೂ ಅಲ್ಲಿ-ಇಲ್ಲಿ ಅಲೆಮಾರಿಯಂತೆ ಸುತ್ತಾಡುವುದು, ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ, ಊಟದ ವ್ಯವಸ್ಥೆಯೂ ಇಲ್ಲ, ಯಾರಾದರೂ ಹೇಳಿದರೆ ಅಲ್ಲಿ ಉಳಿದುಕೊಳ್ಳುವುದು, ಹೇಳಿದ ಕಡೆ ಊಟಮಾಡುವುದು, ಜಾಗ ಸಿಕ್ಕಲ್ಲಿ ಇರುವುದು. ಇಂತಹ ಅನೇಕ ಸಮಸ್ಯೆಗಳನ್ನು ಮೊದಲು ಮತ್ತು ನಂತರವೂ ಅನುಭವಿಸಿದರೂ ಸಂಘದ ಕಾರ್ಯಕ್ಕಾಗಿ ನನ್ನ ಸಂಪೂರ್ಣ ಜೀವನವನ್ನು ಕಳೆಯುವ ವಿಚಾರ ನನಗೆ ಬಹಳ ಮಹತ್ವದ್ದಾಗಿದೆ. ನಾನು ಮಾವನವರನ್ನು ಇದೇ ರೀತಿ ಬಿಟ್ಟುಹೋಗಿದ್ದರೆ ಬಹುಶಃ ಆಗ ನೀನು ಈ ವಿಷಯವನ್ನು ಅರಿಯುತ್ತಿದ್ದೆ. ನನಗೆ ಗೊತ್ತು, ಒಂದು ವೇಳೆ ನಾನು ಎಲ್ಲಾದರೂ ಹತ್ತು ರೂಪಾಯಿ ಸಂಬಳದ ನೌಕರನಾಗಿದ್ದರೂ ಕೂಡ, ಆ ತರಹದ ಕೆಲಸ ಮಾಡಲು ಎಲ್ಲರೂ ಸಲಹೆ ನೀಡುತ್ತಿದ್ದರು. ಆದರೆ ಕೆಲಸವನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವಂತೆ ಯಾರೂ ಹೇಳುತ್ತಿರಲಿಲ್ಲ. ಬಹುಶಃ ಮಾವನವರಿಗೆ, ನಿನಗೆ ಅಲ್ಲದೆ ಎಲ್ಲರಿಗೂ ಕೂಡ, ನಾನು ಒಂದು ದಿನದ ರಜೆ ತೆಗೆದುಕೊಂದು ಬಂದಿದ್ದರೆ ಸರಿಯಾದ ಸಮಯಕ್ಕೆ ಮರಳಲಿ ಎಂಬ ಚಿಂತೆಯೂ ಇದ್ದೇ ಇರುತ್ತಿತ್ತು. ಇದನ್ನೇ ನಾನು ನಿನ್ನ ಹಾಗೂ ಅಣ್ಣನವರ ವಿಷಯದಲ್ಲಿ ನಿರೀಕ್ಷಿಸುತ್ತೇನೆ. ನಿಮ್ಮನ್ನು ಅವರು ಹೆಚ್ಚಾಗಿ ಪ್ರೀತಿಸುವುದಿಲ್ಲವೆಂದಲ್ಲ, ಆದರೆ ನೀವು ನೌಕರರೆಂಬುದಕ್ಕಾಗಿ ಮಾತ್ರ. ಹಾಗಾದರೆ ಸಮಾಜದ ಕೆಲಸವು ಒಂದು ನೌಕರಿಯ ಮಹತ್ವವನ್ನು ಹೊಂದಿಲ್ಲವೇ? ನಾನು ಅಂದುಕೊಳ್ಳುತ್ತೇನೆ- ಒಂದು ವೇಳೆ ನಾನು ಎಲ್ಲಾದರು ಸೇವಕ (ನೌಕರ) ನಾಗಿದ್ದರೆ, ಇಂದು ಕೆಲಸವನ್ನು ಬಿಟ್ಟು ನಾನು ಖುಷಿಯಿಂದ ಸಂತೋಷದಿಂದ ಇಲ್ಲಿಗೆ ಬಂದುಬಿಡುತ್ತಿದ್ದೆ. ಅದರಲ್ಲೇ ನನಗೆ ನೆಮ್ಮದಿ ದೊರೆಯುತ್ತಿತ್ತು. ನನ್ನ ಜೀವನದಲ್ಲಿ ಮಾವನವರಿಗಾಗಿ ವಿಶೇಷ ಸ್ಥಾನವಿದೆ ಮತ್ತು ಅವರಿಗಾಗಿ ಹೀಗೆ ಕೆಲಸವನ್ನು ಬಿಡುವುದು ನನಗೆ ಯಾವುದೇ ರೀತಿಯಲ್ಲಿ ನೋವುಂಟುಮಾಡುವುದಿಲ್ಲ. ಅಕ್ಕನ ಅನಾರೋಗ್ಯದಲ್ಲಿ ನಾನು ನನ್ನ ಓದನ್ನು ಬಿಟ್ಟೆ, ವಿದ್ಯಾರ್ಥಿ ವೇತನವನ್ನು ಬಿಟ್ಟೆ. ಇದು ಕೇವಲ ಅಕ್ಕನ ಆರೋಗ್ಯ ಸುಧಾರಿಸುವುದರಿಂದ ಮಾವನವರು ನೆಮ್ಮದಿಯಾಗಿರುತ್ತಾರೆ ಎನ್ನುವುದಕ್ಕಾಗಿ ಮಾತ್ರ. ಆದರೆ ಇಂದು ನನ್ನ ನೆಮ್ಮದಿ ಹಾಳಾಗಿದೆ. ನಾನು ಮರಳಿ ಹೋಗಲೇಬೇಕೆಂದು ಕರ್ತವ್ಯ ನನ್ನನ್ನು ಪದೇ-ಪದೇ ಕರೆಯುತ್ತಿದೆ. ರಾತ್ರಿ-ಹಗಲು ನನ್ನ ಮನಸ್ಸಿನಲ್ಲಿ ಈ ವಿಚಾರಗಳೇ ಏಳುತ್ತಿವೆ ಮತ್ತು ಮಾನಸಿಕ ಸಂಘರ್ಷ ಹಾಗೂ ತಳಮಳದ ಪರಿಣಾಮದಿಂದಲೇ ಇಂದು ನಾನು ಚಿಕ್ಕ-ಚಿಕ್ಕ ವಿಷಯಗಳನ್ನು ಮರೆತುಬಿಡುತ್ತೇನೆ. ಮಾವನವರಿಗೆ ಸಮಯಕ್ಕೆ ಸರಿಯಾಗಿ ಔಷಧಿಯನ್ನು ಕೊಡುವ ನೆನಪೂ ಕೂಡ ಪಂ. ದೀನ್ ದಯಾಳ್‍ರ ಪತ್ರ ಅವರ ಮಾವನ ಮಗನ ಹೆಸರಿನಲ್ಲಿ 211 ನನಗಿರುವುದಿಲ್ಲ. ಶುಶ್ರೂಷೆಗಾಗಿ ಎಷ್ಟು ಎಚ್ಚರಿಕೆಯಿಂದಿರಬೇಕೋ, ಮನಸ್ಸಿದ್ದರೂ ಅಷ್ಟು ಎಚ್ಚರಿಕೆಯಿಂದಿರಲು ಆಗುತ್ತಿಲ್ಲ. ನನ್ನ ಅಂತರಂಗ (ಆತ್ಮ) ನನ್ನ ಬಲಹೀನತೆಗಾಗಿ, ಯಾವಾಗಲೂ ನನ್ನನ್ನು ಧಿಕ್ಕರಿಸುತ್ತಿರುತ್ತದೆ. ರಾತ್ರಿಯಲ್ಲಿ ಯಾವಾಗ ಕಣ್ಣು ತೆರೆದರೂ, ನಿಶ್ಶಬ್ಧವಾದ ವಾತಾವರಣದಲ್ಲಿ ಆತ್ಮದ ಗದರಿಕೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಆದರೆ ಹೃದಯದ ಅಸಹಾಯಕತೆ(ದುರ್ಬಲತೆ) ನನ್ನನ್ನು ಬಲಹೀನನನ್ನಾಗಿ ಮಾಡಿಬಿಡುತ್ತದೆ. ನನ್ನ ಕರ್ತವ್ಯ ಪ್ರಜ್ಞೆ ನನ್ನನ್ನು ಕರ್ತವ್ಯದೆಡೆಗೆ ಹೋಗುವಂತೆ ಪ್ರೇರೇಪಿಸುತ್ತಿದೆ. ಬುದ್ಧಿ ಹಾಗೂ ಹೃದಯದ (ಮನಸ್ಸಿನ) ಈ ಘರ್ಷಣೆ ಸದಾಕಾಲ ನಡೆಯುತ್ತಿರುತ್ತದೆ. ಎಂದು ನನ್ನ ಕರ್ತವ್ಯ ನನ್ನ ಬಲಹೀನತೆಯನ್ನು ನಾಶಮಾಡಿಬಿಡುತ್ತದೊ ಮತ್ತು ಆ ದಿನ ಪ್ರಾಯಃ ಎಲ್ಲರೂ ನನ್ನನ್ನು ಶಪಿಸಿ, ಕೃತಘ್ನ, ವಂಚಕ ಮುಂತಾದ ಅನೇಕ ವಿಶೇಷಣಗಳಿಂದ ಕರೆಯುತ್ತಾರೆ. ಆದರೇನಾಯ್ತು ಒಬ್ಬ ಸ್ವಯಂಸೇವಕ, ಸಂಘದ ಕಾರ್ಯಕ್ಕಾಗಿ ಪ್ರತಿಯೊಂದು ಕಳಂಕವನ್ನು ಸಹಿಸಿಕೊಳ್ಳುತ್ತಾನೆ. ಒಂದು ವೇಳೆ ಸಂಘದ ಕಾರ್ಯಕ್ಕಾಗಿ ಪಾಪಕರ್ಮಗಳಲ್ಲಿ ತಲ್ಲೀನನಾಗಬೇಕಾಗಿ, ಇದರಿಂದ ಅವನಿಗೆ ನರಕ ಯಾತನೆಯನ್ನು ಅನುಭವಿಸಬೇಕಾಗಿ ಬಂದರೂ ಸಂತೋಷದಿಂದ ಸ್ವೀಕರಿಸುತ್ತಾನೆ. ಸಮಾಜದ ಕಾರ್ಯವೇ ಅವನ ಏಕೈಕ ಕಾರ್ಯವಾಗಿದೆ. ನೀನು ಹೇಳಬಹುದು `ಆಡುವುದು ದೊಡ್ಡ ಮಾತು, ಮಾಡುವುದು ಚಿಕ್ಕ ಕೆಲಸ' ಎಂದು, ಆದರೂ ನಾನೂ ಇದನ್ನೇ ಹೇಳುತ್ತೇನೆ. ಇದು ನನ್ನ ಮನಸ್ಸಿನ (ಹೃದಯದ) ದುರ್ಬಲತೆ, ಅದೂ ಕೇವಲ ಮಾವನರಿಗಾಗಿ. ಆದರೆ ಹೃದಯದ ದುರ್ಬಲತೆಯು ಹೆಚ್ಚು ದಿನ ಇರಲಾರದು ಎಂಬುದು ನನಗೆ ಗೊತ್ತು, ನನ್ನ ವತಿಯಿಂದ ಆಗುವ ಪ್ರಯತ್ನವಿಷ್ಟೆ, ಕಡೆಪಕ್ಷ ಮಾವನವರ ಅನಾರೋಗ್ಯದವರೆಗಾದರೂ ನನ್ನ ಕರ್ತವ್ಯ ನನಗೆ ಹೊರೆಯಾಗದಿರಲಿ, ಅದಕ್ಕಾಗಿಯೇ ಭಗವದ್ಗೀತೆ, ಯಾವುದು ನನಗೆ ಪ್ರಿಯವಾದ ಪುಸ್ತಕವಾಗಿದೆಯೋ, ಯಾವುದರ ಒಂದು ಅಧ್ಯಾಯವನ್ನು ನಾನು ನಿತ್ಯವೂ ಪಠಿಸುತ್ತಿದ್ದೇನೋ ಅದೇ ಭಗದ್ಗೀತೆಯನ್ನು ನೀನು ಓದಲು ಹೇಳಿದರೂ ಮಾವನವರೇ ಬಯಸಿದರೂ ಓದಿ ಹೇಳದೆ, ಯಾವುದೋ ನೆಪದಿಂದ ತಳ್ಳಿಹಾಕುತ್ತೇನೆ. ಏಕೆಂದರೆ ಮಾವನವರಿಗೆ ಭಗದ್ಗೀತೆಯನ್ನು ಓದಿ ಹೇಳಿದಾಗಲೆಲ್ಲ ನಾನು ಅನುಭವಿಸಿದ್ದೇ ಅದರ ಒಂದೊಂದು ಶ್ಲೋಕವು ನನಗೆ ಕರ್ತವ್ಯಗಳನ್ನು ನೆನಪಿಸುತ್ತವೆ. ಇದರ ಫಲವಾಗಿ ಗೀತೆಯ ಪಠಣೆಯ ನಂತರ ಯಾವಾಗಲೂ ಪಶ್ಚಾತ್ತಾಪ ಮತ್ತು ದುಃಖವು ನನ್ನನ್ನು ಆವರಿಸುತ್ತವೆ. ಆದರೆ ನನ್ನ ಪ್ರಯತ್ನಗಳ ನಂತರವು ಆತ್ಮದ ಟೀಕೆಯಂತೂ ಹಗಲು ರಾತ್ರಿ ಇದ್ದೇ ಇರುತ್ತದೆ. ಹೀಗೆ ಭೂಮಿಯಲ್ಲಿ ಹನಿ-ಹನಿ ನೀರು ತೊಟ್ಟಿಕ್ಕುತ್ತದೊ ಮತ್ತು ಅದೇ ನೀರು ಬೃಹತ್ ಜ್ವಾಲಾಮುಖಿಯ ರೂಪದಲ್ಲಿ 212 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಹೊರಹೊಮ್ಮುತ್ತದೋ ತೊಟ್ಟಿಕ್ಕುವ ನೀರನ್ನು ಯಾರೂ ತಡೆಯಲಾರರು. ಅದೇ ರೀತಿ ಜ್ವಾಲಾಮುಖಿಯ ಎತ್ತರವನ್ನೂ ಕೂಡ ಇದರಂತೆಯೇ ನಾನು ಬಯಸಿದರೂ ಕೂಡ, ಕರ್ತವ್ಯದ ಬಗ್ಗೆ ಹೆಚ್ಚುತ್ತಿರುವ ನನ್ನ ಆಕರ್ಷಣೆಯನ್ನು ನಾನು ತಡೆಯಲಾರೆ. ಅದಕ್ಕಾಗಿಯೇ ನಾನು ಬಯಸುವುದೇನೆಂದರೆ ಕರ್ತವ್ಯದ ಬಗ್ಗೆ ನಾನು ಎಷ್ಟು ದೊಡ್ಡ ಉದಾಸೀನವನ್ನು ಮಾಡಿದ್ದೇನೋ ಅದಕ್ಕಾಗಿ ಒಂದಿಷ್ಟಾದರೂ ನೆಮ್ಮದಿ ಸಿಗುವ ಕೆಲಸವನ್ನು ಮಾಡಲೇಬೇಕು. ನಿನ್ನ ಪತ್ರವು ನನಗೆ 11.00 ಗಂಟೆಗೆ ಫೀಲ್‍ಭಿತ್‍ನಲ್ಲಿ ದೊರೆಯಿತು. ಎಂಬುದನ್ನು ನೀನು ಅರಿತಿದ್ದಿಯಾ ಮತ್ತು ಮೂರು ಘಂಟೆಯ ರೈಲಿಗೆ ನಾನು ಹೊರಟುಬಿಟ್ಟೆ. ಯಾರಿಗೂ ತಿಳಿಸಲೂ ಆಗಲಿಲ್ಲ. ಯಾರನ್ನಾದರೂ ಕೇಳಲು ಆಗಲಿಲ್ಲ ಮತ್ತು ಶಾಖೆಯ ವ್ಯವಸ್ಥೆಯನ್ನೂ ಮಾಡಲಾಗಲಿಲ್ಲ. ಈ ನನ್ನ ಮೂರ್ಖತನದ ಅರಿವು ನನಗಾಗಿದೆ. ಆದರೆ ಈ ರೀತಿಯಾಗಿ ಅನಿರ್ಧಿಷ್ಟ ಕಾಲದವರೆಗೂ ಇಲ್ಲಿ ಉಳಿಯುತ್ತೇನೆ ಎಂಬುದನ್ನು ನಾನು ತಿಳಿದಿರಲಿಲ್ಲ. ನಾನಂತೂ ಹೆಚ್ಚೆಂದರೆ 15-20 ದಿನಗಳ ಕಾಲ ಉಳಿಯುವ ವಿಚಾರದಿಂದ ಬಂದಿದ್ದೆ. ಹೀಗಿರುವಾಗ ನೀನೇ ಯೋಚಿಸು ಒಂದು ವೇಳೆ ಈ ರೀತಿ ದಿಢೀರನೆ ನೀನೆ ಹೊರಟುಬಂದಿದ್ದರೆ ಆಗ ನಿನೇನು ಮಾಡುತ್ತಿದ್ದೆ? ನನಗೆ ಗೊತ್ತು. ಮೊದಲನೆಯದಾಗಿ ನೀನು ಈ ರೀತಿ ದಿಢೀರನೆ ಹೊರುಡುವುದೇ ಇಲ್ಲ, ಹೊರಟು ಬಂದರೂ ಕೂಡ ಆದಷ್ಟು ಬೇಗನೆ ಮರಳುವ ಪ್ರಯತ್ನ ಮಾಡುತ್ತೀಯಾ. ಹೌದು, ಸರಿಯಾದ ವ್ಯವಸ್ಥೆ ಇರುವುದಾದರೆ, ಮತ್ತು ಉಚ್ಚ ಅಧಿಕಾರಿಗಳ ಅನುಮತಿ ದೊರೆತಲ್ಲಿ ಬಹುಶಃ ಮತ್ತೆ ನಿರ್ದಿಷ್ಟ ಅವಧಿಯವರೆಗೂ ಇರುತ್ತಿದ್ದೆ. ನಾನೇಕೆ ಈ ರೀತಿಯಾಗಿ ಓಡಿಬಂದೆನೋ ನನಗೆ ಗೊತ್ತಿಲ್ಲ. ಒಬ್ಬ ದೇಶ ಸೇವಕನಾಗಿದ್ದರಿಂದ ಪರಿವಾರದ ಬಗ್ಗೆ ಈ ರೀತಿಯ ಮೋಹ ನನ್ನಲ್ಲಿ ಇರಬಾರದಾಗಿತ್ತು. ಆದರೆ ನನ್ನ ಹೃದಯವೇ ನನ್ನನ್ನು ಈ ರೀತಿಯಾಗಿ ಎಳೆದುಕೊಂಡು ಬಂದಿತು. `ಭಾವನೆಗಳಿಗಿಂತ ಕರ್ತವ್ಯವೇ ದೊಡ್ಡದು' ಎಂಬುದು ನಿನಗೆ ತಿಳಿದೇ ಇದೆ. ನಾನು ಕೇವಲ ಇದಕ್ಕಾಗಿಯೇ ಫೀಲಭೀತ್ ಮತ್ತು ಲಖೀಮಪುರ್‍ಗೆ ಹೋಗಬಯಸಿದ್ದೆ. ಏಕೆಂದರೆ ಇಲ್ಲಿಯವರೆಗೂ ಸಂಘದ ವ್ಯವಸ್ಥೆ ಹೇಗೋ ಆಯಿತು. ಆದರೆ ಈಗ ಅಲ್ಲಿ ಯಾವುದಾದರೂ ಖಾಯಂ ವ್ಯವಸ್ಥೆಯನ್ನು ಮಾಡುತ್ತೇನೆ ಮತ್ತು ಈ ರೀತಿಯಲ್ಲಾದ ಕರ್ತವ್ಯ ಲೋಪವನ್ನು ತುಂಬಿಕೊಟ್ಟೆ ಮುಂದೆ ಎಷ್ಟು ದಿನವಿರುತ್ತೇನೋ ಅಷ್ಟು ದಿನ ನೆಮ್ಮದಿಯಿಂದ ಇರಬಹುದು. ಆದ್ದರಿಂದಲೇ ನಾನು ನಿನ್ನಲ್ಲಿ ಪ್ರಾರ್ಥಿಸಿದ್ದೆ, ನಿನ್ನಲ್ಲಿ ಯಾಚಿಸಿದ್ದೆ. ಆದರೆ ನೀನು ಅದನ್ನು ತಿರಸ್ಕರಿಸಿದೆ ಮತ್ತು ಈಗ ನನ್ನ ಹೃದಯ ಅಳುತ್ತಿದೆ. ಇನ್ನು ಮುಂದೆ ನಿನ್ನ ತಡೆಯಿಂದ ಈ ರೀತಿ ನಿರಾಶನಾಗಿ ಹೃದಯದ ಭಾವನೆಗಳನ್ನು ಒಂದು ಕಡೆ ತಿರುಗಿಸಿಕೊಂಡು ನನ್ನ ಕರ್ತವ್ಯದೆಡೆಗೆ ಮರಳಿಬಿಡಲೆಂದೆನಿಸುತ್ತದೆ. ಆದರೆ ಈಗಂತೂ ಪಂ. ದೀನ್ ದಯಾಳ್‍ರ ಪತ್ರ ಅವರ ಮಾವನ ಮಗನ ಹೆಸರಿನಲ್ಲಿ 213 ನಾನು ಅಸಹಾಯಕನಾಗಿದ್ದೇನೆ. ಸಮಾಜದ ದೃಷ್ಟಿಯಲ್ಲಿ ನಾನು ಅತ್ಯಂತ ನೀಚ ಕೆಲಸವನ್ನು ಮಾಡಿದ್ದೇನೆ ಎಂಬುದನ್ನು ನಾನು ಅನುಭವಿಸಿದ್ದೇನೆ ಅದಕ್ಕಾಗಿ ನಾನು ಪಾಶ್ಚಾತ್ತಾಪದಿಂದ ದಗ್ಧನಾಗಬೇಕಾಗುತ್ತದೆ. ರಾಷ್ಟ್ರಕಾರ್ಯವು ವ್ಯಕ್ತಿಗತ ಸ್ವಾರ್ಥಕ್ಕಿಂತಲೂ ದೊಡ್ಡದು ಬಹುಶಃ ನೀನು ಅಂದುಕೊಂಡಿರಬಹುದು, ನನ್ನ ಮೇಲೆ ಇಷ್ಟೆಲ್ಲ ಆಪತ್ತುಗಳು ಬಂದಿವೆ. ಇಂತಹ ಸಂದರ್ಭದಲ್ಲಿ ದೀನ್‍ದಯಾಳ್ ಸಹಾಯ ಮಾಡುವ ಬದಲು ಅಡ್ಡಿ ಮಾಡುತ್ತಿದ್ದಾನಲ್ಲ ಎಂದು. ಆದರೆ ನಿನ್ನಲ್ಲಿ ನನ್ನದೊಂದು ಪ್ರಾರ್ಥನೆ. ನೀನು ಸ್ವಲ್ಪ ಗಂಭೀರವಾಗಿ ಯೋಚಿಸು ನನ್ನ ಈ ಸಂಘದ ಕೆಲಸಗಳಿಗೆ ಇಷ್ಟಾದರೂ ಮಹತ್ವವನ್ನು ಕೊಡು, ಎಷ್ಟು ನಿನ್ನ ನೌಕರಿಗೆ ಕೊಡುತ್ತಿದ್ದೆ. ನನಗೆ ನೆನಪಿದೆ, ಅಕ್ಕನವರು ಅನಾರೋಗ್ಯದಿಂದಿದ್ದಾಗ ಭಾವನವರು ರಜೆ ತೆಗೆದುಕೊಂಡು ಸತತವಾಗಿ ಅವರ ಜೊತೆಯಲ್ಲೇ ಇದ್ದರು. ಆದರೆ ಬೇಸಿಗೆ ರಜೆ ಆರಂಭವಾಗುವ ಮುನ್ನ ಎರಡು ದಿನಗಳ ಮಟ್ಟಿಗೆ ಶಾಲೆಗೆ ಹಾಜರಾಗಲು ಅವರೂ ಕೂಡ ಹೊರಟು ಹೋಗಿದ್ದರು. ಅದೂ ಕೂಡ ಹೀಗೆ ಮಾಡದಿದ್ದಲ್ಲಿ ಬೇಸಿಗೆ ರಜೆಯನ್ನು ಇವರ ವೈಯಕ್ತಿಕ ರಜೆಯಲ್ಲೇ ಸೇರಿಸಿಕೊಳ್ಳಲಾಗುವುದು ಮತ್ತು ಈ ರಜೆಯ ಸಂಬಳವೂ ದೊರೆಯುವುದಿಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿ. ಸಾವಿನ ದವಡೆಯಲ್ಲಿದ್ದ ರೋಗಿಯನ್ನು ಬಿಟ್ಟು ಒಬ್ಬ ವ್ಯಕ್ತಿ ಇಷ್ಟು ಚಿಕ್ಕ ವಿಷಯಕ್ಕಾಗಿ ಹೊರಟು ಹೋಗುವುದು ಮತ್ತು ನೀವೆಲ್ಲ ಇದನ್ನು ಸರಿ ಎಂದು ತಿಳಿದದ್ದು. ಆದರೆ ಇಲ್ಲಿ ಒಂದು ಶಾಖೆಯೇ ಬಿದ್ದುಹೋಗುತ್ತಿದೆ. ಹಿಂದೆ ಮಾಡಿದ ಎಲ್ಲಾ ಕೆಲಸಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿವೆ. ಆದರೂ ನೀವು ಅವುಗಳು ವ್ಯವಸ್ಥೆಗಾಗಿ ಎರಡು ದಿನಗಳ ಕಾಲ ಅಲ್ಲಿ ತೆರಳುವುದಕ್ಕಾಗಿ ಬಿಡುವು ಕೊಡುತ್ತಿಲ್ಲ. ನಿನಗೆ ನಿನ್ನ ಅರಿಯರ್ಸ್ ಚಿಂತೆ, ಸಿ.ಎಲ್ ಮತ್ತು ಈ.ಎಲ್‍ನ ಚಿಂತೆ ಸಂತೋಷ ಅಸಂತೋಷದ ಚಿಂತೆ, ನಿನ್ನ ಇನ್‍ಕ್ರೀಮೆಂಟ್‍ನ ಚಿಂತೆ, ಮುಂತಾದ ನೂರೆಂಟು ವಿಷಯಗಳ ಚಿಂತೆ ನಿನಗಿದೆ. ಆದರೆ ದೇಶದ ಈ ಕೆಲಸದ ಬಗ್ಗೆ ಸ್ವಲ್ಪವೂ ಯೋಚನೆ ಇಲ್ಲ. ನನ್ನ ದುಃಖವನ್ನು ನೀನು ಅರಿಯಲೂ ಇಲ್ಲ ಮತ್ತು ಅದರ ಬಗ್ಗೆ ಯೋಚನೆಯೂ ನಿನಗಿಲ್ಲ. ನಿನ್ನ ವಿಪತ್ತುಗಳನ್ನು ಹೆಚ್ಚಿಸುವ ಆಸೆ ನನಗಿಲ್ಲ. ನನ್ನ ಹೃದಯವು ನನ್ನ ಹಾಗೂ ನಿನ್ನ ಸಹಾಯಕನಾಗಲೆಂದೇ ಬಯಸುತ್ತದೆ. (ಆದರೆ ನನ್ನ ಕರ್ತವ್ಯಗಳು ಮಾತ್ರ ಬೇರೆಯಡೆ ಎಂಬುದಂತು ನಿಶ್ಚಿತ) ಆದರೆ ಈ ರೀತಿಯಾಗಿ ಸಹಾಯಕನಾಗಿರುವುದರಿಂದ ನನ್ನ ಜೀವನದ ಗುರಿಯ ಹಾದಿಯಲ್ಲಿ ಎಷ್ಟು ಹೆಜ್ಜೆ ಹಾಕಿದ್ದೇನೋ ಅವನ್ನೆಲ್ಲಾ ಮರಳಿ ಹಿಂದಕ್ಕೆ ತರಲು ನನಗೆ ಇಷ್ಟವಿಲ್ಲ. 214 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನನ್ನ ಧ್ಯೇಯವೆಂಬ ಮಂದಿರವನ್ನು ನಾನು ಈಗಲೇ ನಿರ್ಮಿಸುವುದು ಸಾಧ್ಯವಿಲ್ಲದಿರಬಹುದು. ಆದರೆ ಸ್ವಲ್ಪ ಕಾಲದ ನಂತರ ಇದನ್ನು ಪೂರ್ತಿಗೊಳಿಸಬಹುದಾಗಿದೆ. ಇದರಿಂದಾಗಿ ಅಂತರಂಗದ ವ್ಯಥೆಯನ್ನು ಸಹಿಸಬಹುದಾಗಿದೆ. ಆದರೆ ಈ ಭವನವನ್ನು ಎಷ್ಟು ಕಟ್ಟಿದ್ದೇನೋ ಅಷ್ಟೂ ಬೀಳಿಸುವುದನ್ನು ನಾನೆಂದಿಗೂ ಸಹಿಸಲಾರೆ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ನಾನು ಇಷ್ಟನ್ನು ಮಾತ್ರ ಖಂಡಿತವಾಗಲೂ ಮನಗಂಡಿದ್ದೇನೆ, ಅದೇನೆಂದರೆ ನಾನು ಕೇವಲ ನಾಲ್ಕೈದು ದಿನಗಳಿಗಾಗಿ ಹೋಗಿ ನನ್ನ ಕೆಲಸ ಕಾರ್ಯಗಳ ವ್ಯವಸ್ಥೆಯನ್ನು ಮಾಡಿಬರುವಂತಹ ಅಧಿಕಾರದಿಂದ ನೀನು ನನ್ನನ್ನು ವಂಚಿತನನ್ನಾಗಿಮಾಡಲು ಸಾಧ್ಯವಿಲ್ಲ. ನೀನು ನೌಕರಿಯಲ್ಲಿದ್ದೀಯಾ (ಸೇವೆಯಲ್ಲಿದ್ದೀಯಾ) ನಿನಗೆ ಸಿಗುವ ರಜೆಗಳಿಗಿಂತಲೂ ಹೆಚ್ಚು ದಿನ ಇರಲು ನೀನು ಅಸಹಾಯಕನಾಗುತ್ತೀಯಾ. ಅಣ್ಣನವರದು ಇದೇ ಸ್ಥಿತಿ ಹಾಗೂ ನನ್ನದೂ ಕೂಡ ಹೀಗೆ ಆಗುತ್ತಿತ್ತು. ಒಂದು ವೇಳೆ ನಾನು ಸೇವಕನಾಗಿದ್ದರೆ, ಆಗ ಇಲ್ಲಿ ಯಾರು ಇರುತ್ತಿದ್ದರೂ ನಾನು ಖಂಡಿತವಾಗಿಯೂ ಹೇಳಬಲ್ಲೆ, ನೀನು ಅಥವಾ ನೀನಲ್ಲವೇ ಬೇರೆ ಯಾರೇ ಆದರು ನಮ್ಮಲ್ಲಿ ಯಾರಾದರೂ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೆವು ಎಂದು ಹೇಳಿಬಿಡಬಹುದು. ಹಾಗೂ ಮಾವನವರಿಗೂ ಈ ವಿಷಯ ಇಷ್ಟವಾಗುತ್ತಿರಲಿಲ್ಲ. ದುಡ್ಡಿನ ಬಂಧನವೇ ಎಲ್ಲಾ ಎಂದುಕೊಂಡಿದ್ದೀಯಾ? ನಿಯಮದ ಬಂಧನವೂ ಇದೆ. ಆತ್ಮದ ಬಂಧನವೂ ಇದೆ. ಇಂದು ಪ್ರತಿಯೊಬ್ಬರಿಗೂ ತಮ್ಮತ ಮ್ಮ ಕೆಲಸದ ಚಿಂತೆ ಇದೆ. ಆದರೆ ನಾನು ಮಾತ್ರ ನನ್ನೆಲ್ಲ ಕೆಲಸ-ಕಾರ್ಯಗಳನ್ನು ಸಂಪೂರ್ಣವಾಗಿ ಮರೆತು ಅದಕ್ಕಾಗಿ ಸ್ವಲ್ಪ ವ್ಯವಸ್ಥೆಯಲ್ಲೇ ಇದ್ದುಬಿಡಲಿ ಎಂದು ಎಲ್ಲರೂ ಭಾವಿಸಿಬಿಡುತ್ತಾರೆ. ಇದು ಯಾವ ನ್ಯಾಯ ಎಂಬುದೆ ನನಗೆ ಅರ್ಥವಾಗುತ್ತಿಲ್ಲ. ಇರಲಿ ಪತ್ರವು ತುಂಬಾ ದೊಡ್ಡದಾಗಿದೆ ಈಗ ನನ್ನ ವ್ಯಾಕುಲ ಹೃದಯದಲ್ಲಿ ಎಷ್ಟು ಭಾವನೆಗಳು ತುಂಬಿಕೊಂಡಿವೆ ಎಂದರೆ ಎಷ್ಟು ಬರೆದರೂ ಕೊನೆಯಾಗಲಾರವು. ಆದರೆ ಇಷ್ಟಂತೂ ನಿಜ, ಈ ಪತ್ರದ ಒಂದೊಂದು ಶಬ್ದವು ನನ್ನ ಅಂತರಾಳದಿಂದ ಬಂದಿರುವಂತಹವು, ಉದ್ವೇಗಗೊಂಡು ಬರೆದಿದ್ದಲ್ಲ. ಮತ್ತು ನಾನು ಸಂಪೂರ್ಣವಾಗಿ ಯೋಚಿಸಿಯೇ ಬರೆದಿದ್ದೇನೆ. ಸುಮ್ಮನೆ ಉತ್ಸಾಹದಲ್ಲಿ ಬರೆದಿಲ್ಲ ಇದರ ಪ್ರತಿಯೊಂದು ಶಬ್ದವು ಅರ್ಥಪೂರ್ಣವಾಗಿವೆ ಹಾಗೂ ಅವುಗಳಲ್ಲಿ ನನ್ನ ವಿಚಾರ ಹಾಗು ಕಾರ್ಯಶಕ್ತಿಯ ಸಾಮರ್ಥ್ಯವು ತುಂಬಿಕೊಂಡಿವೆ. ಇಂದು ಮಾವನವರೂ ಕೂಡ ನಿನ್ನ ಪ್ರತೀಕ್ಷೆ ಮಾಡಿದ್ದರು. ನೀನು ಅಥವಾ ನಿನ್ನ ಯಾವುದೇ ಪತ್ರವು ಬರದುದ್ದಕ್ಕಾಗಿ ಅವರು ತುಂಬಾ ಚಿಂತೆಗೀಡಾದರು. ಇದರ ಫಲದಿಂದಾಗಿ ಅವರ ಜ್ವರ 100.6 ರವರೆಗೂ ಏರಿತ್ತು. ನಿನ್ನೆ 100 ರವರೆಗೆ ಮಾತ್ರವಿತ್ತು. ನೀನು ವಾರಕ್ಕೆ ಒಂದರಂತೆ ಪತ್ರವನ್ನು ಪಂ. ದೀನ್ ದಯಾಳ್ರ ಪತ್ರ ಅವರ ಮಾವನ ಮಗನ ಹೆಸರಿನಲ್ಲಿ 215 ಬರೆಯುತ್ತಿದ್ದರೆ ಇದರಿಂದಾಗಿ ಅವರಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಮತ್ತೆ ನೀನು ಭಾನುವಾರದಂದು ಕೆಲ-ನಿಮಿಷಗಳಿಗಾಗಿ ಊರಿಗೆ ಬಂದಿದ್ದೆ. ಊರಿಗೆ ಬರಲು ಸಾಧ್ಯವಾಗದೇ ಇದ್ದುದ್ದಕ್ಕಾಗಿ ಕಾರಣವನ್ನು ಹೇಳಿದೆ. ಅದನ್ನು ನಂಬದಿರಲು ನನಗೆ ಯಾವುದೇ ಸರಿಯಾದ ಕಾರಣ ಕಾಣಿಸುತ್ತಿಲ್ಲ. ಆದರೆ ನೀನು ಹೋದ ನಂತರ ಹಣೆಬರಹದ ನಿಷ್ಠುರವಾದ ಕೊಡಲಿಪೆಟ್ಟಿನಿಂದ ನನ್ನ ಹೃದಯ ಬಹಳ ರೋಧಿಸಿತು. ಬಹುಶಃ ನೀನು ನಂಬಲಿಕ್ಕಿಲ್ಲ, ನನ್ನ ಪ್ರೀತಿಯ ಬಂಧುಗಳ ಮರಣದಿಂದಲೂ ಯಾವ ಕಣ್ಣಲ್ಲಿ ಒಂದು ತೊಟ್ಟು ನೀರು ಬರಲಿಲ್ಲವೋ ಅವೇ ಕಣ್ಣಲ್ಲಿ ನೀರುತುಂಬಿಕೊಂಡಿತ್ತು. ಏಪ್ರಿಲ್‍ನಲ್ಲಿ ರಜೆ ತೆಗೆದುಕೊಳ್ಳುತ್ತೇನೆಂದು ನೀನು ಹೇಳಿದ್ದೆ. ಆಗ ಆವೇಶದಿಂದಾಗಿ ನಾನು ನಿನಗೆ ಹೇಳಲು ಸಾಧ್ಯವಾಗಲಿಲ್ಲ. ಆದರೆ ಏಪ್ರಿಲ್ ರಜೆ ನನಗೆ ಯಾವ ಉಪಯೋಗಕ್ಕಾಗಿ ಬೆಳೆ ಒಣಗಿಹೋದ ನಂತರ ಮಳೆ ಬಂದರೇನು ಪ್ರಯೋಜನ ಎಂದು ನೀನು ತಿಳಿಯುತ್ತಿರಬಹುದು. ಹೋಳಿಹಬ್ಬದ ರಜೆಯಲ್ಲಿ ಆಕಸ್ಮಾತಾಗಿಯೇ ನಾನು ಹೊರಡಲು ಯೋಚಿಸಿದ್ದೆನೋ ಅಥವಾ ಹೇಗಿದ್ದರೂ ನಿನಗೆ ರಜೆ ಇದ್ದೇ ಇರುತ್ತದೆ ಹೊರಟೇಬಿಡೋಣ ಎಂಬುದಕ್ಕಾಗಿ ಮಾತ್ರವೋ ಗೊತ್ತಿಲ್ಲ. 5ನೇ ತಾರೀಖಿನಂದು ಪ್ರಾಂತೀಯ ಪ್ರಚಾರಕರು ಗುಂಪಲ್ಲಿ ಬಂದಿದ್ದರು. ಅವರ ಆಗಮನ ಮತ್ತು ಆಜ್ಞೆಯನ್ನು ಮೊದಲೆ ಮನಗಂಡೇ ನಾನು ಈ ದಿನಗಳನ್ನು ಗೊತ್ತುಪಡಿಸಿದ್ದೆ. ಆದರೆ ನೀನೀಗ ಹೇಳುತ್ತಿಯಾ ಏಪ್ರಿಲ್‍ನವರೆಗೂ ನಾನೇನು ತಲೆ ಒಡೆದುಕೊಳ್ಳುತ್ತೇನೆಯೇ ಎಂದು ಮತ್ತು ಈಗಲೇ ನಾನು ಹೇಳಬಹುದು. ನಿನಗೆ ರಜೆ ಸಿಗುವುದಿಲ್ಲವೆಂದು ಅಂತರಾತ್ಮದ ಘರ್ಷಣೆಯೇ ನನ್ನ ಹಣೆಯಲ್ಲಿ ಬರೆದಿರಲಿ. ಅದು ಯಾವುದಾದರೂ ಒಂದು ನಿರ್ಧಾರವನ್ನು ತೆಗೆದುಕೊಳ್ಳುವವರೆಗೂ ನಾನೂ ಈ ಘರ್ಷಣೆಯನ್ನು ಅನುಭವಿಸುತ್ತೇನೆ. ಒಂದು ಮಾತಂತೂ ಸತ್ಯ. ಅದನ್ನು ನಾನು ಅಣ್ಣನವರಿಗೂ ಹೇಳಿದ್ದೇನೆ. 1 ಮೇ 15 ರಿಂದ ನಮ್ಮ ಓ.ಟಿ.ಸಿ. ಕ್ಯಾಂಪ್ ಇರುತ್ತದೆ. ಆದ್ದರಿಂದ ಮೇ 15ರ ನಂತರ ಯಾವುದೇ ಕಾರಣದಿಂದಲೂ ನಾನಿಲ್ಲಿರುವುದು ಸಾಧ್ಯವಿಲ್ಲ ಹಾಗೂ ನನ್ನ ವಿಚಾರದಲ್ಲಿ ಅಲ್ಲಿಯವರೆಗೂ ದೇವರ ಕೃಪೆಯಿಂದ ಮಾವನವರು ಕೆಲಸಗಾರನೊಂದಿಗೆ ಒಬ್ಬರೇ ಇರುವಷ್ಟು ಸುಧಾರಿಸುತ್ತಾರೆ. ಆದರೆ ಆಗಲೂ ಹಣೆಬರಹ ಕೈ ಕೊಟ್ಟರೆ, ನಾನಂತೂ ಖಂಡಿತ ಹಣೆಬರಹದ ಕೈಗೊಂಬೆಯಾಗುವುದಿಲ್ಲ. ನಾನು ಹೋಗಲೇಬೇಕಾಗುತ್ತದೆ, ಯೋಚಿಸಿನೋಡು. ಹಾಂ! ಇದರೊಂದಿಗೆ ಇನ್ನೊಂದು ಪತ್ರವನ್ನು ನಾನಿಡುತ್ತಿದ್ದೇನೆ. ಮತ್ತು ಒಂದು ಕಡೆಯಿಂದ (ಧ್ವನಿ) ಕರೆ ಬರುತ್ತಿದೆ. ಇದರ ಬಗ್ಗೆ ನೀನೇನು ಹೇಳುವೆ? ಅದೇ ತಿರಸ್ಕಾರ ಅಲ್ಲವೆ? ಆದರೆ ಇದು ಸರಿಯೇ? ಸ್ವಲ್ಪ ನಿಧಾನವಾಗಿ ಯೋಚಿಸು, ಆಗಲಿ, ಮಾವನವರ ಆರೋಗ್ಯ ಹಾಗೆಯೇ ಇದೆ. ಆ ದಿನ ಅವಸರದಲ್ಲಿ ತುಪ್ಪ 216 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತರಲು ನಿನಗೆ ಹೇಳುವುದನ್ನು ಮರೆತುಹೋದೆ. ತುಪ್ಪವೂ ಮುಗಿದು ಹೋಗಿದೆ. ಇಲ್ಲಿ ಬೆಟ್ಟದ (ಗುಡ್ಡಗಾಡಿನ) ತುಪ್ಪ ನಾಲ್ಕುವರೆ ರೂಪಾಯಿಗೆ ತೌಲು ಪಾವಿನಂತೆ ದೊರೆಯುತ್ತದೆ. ಮತ್ತು ದೇಸಿ(ನಾಡಿ) ತುಪ್ಪ ಮೂರುವರೆ ರೂ.ಗೆ ಚಟಾಕಿನಂತೆ. ಅದಕ್ಕಾಗಿ ಹೇಗಾದರೂ ಮಾಡಿ ಅಲ್ಲೇ ಐದು-ಆರು ರೂಪಾಯಿಯ ಅಥವಾ ಅದಕ್ಕಿಂತಲೂ ಹೆಚ್ಚಿನ ತುಪ್ಪವನ್ನು ಕಳುಹಿಸಿಕೊಡು ನಿನ್ನ ಪಾತ್ರೆಯೂ ಖಾಲಿ ಇದೆ ಕಳುಹಿಸುತ್ತೇನೆ. ಹಣ್ಣುಗಳಲ್ಲಿ ಸೇಬು ಮತ್ತು ದಾಳಿಂಬೆಯನ್ನು ಕಳುಹಿಸುವ ಅವಶ್ಯಕತೆ ಇಲ್ಲ. ಡಾ. ಶರ್ಮಾ ಅವರು ರಜೆಯಲ್ಲಿದ್ದಾರೆ, ಒಂದೆರಡು ದಿನಗಳಲ್ಲಿ ಬಂದುಬಿಡುತ್ತಾರೆ. ಡಾ. ಶ್ರೀಖಂಡೆ ಅವರು ಆಗ್ರಾದಲ್ಲಿದ್ದಾರೆ ಇನ್ನೂ ರಾವುಂಡ್ಸ್‌ಗೆ ಬಂದಿಲ್ಲ ಪ್ರಹ್ಲಾದ ಅಣ್ಣನವರ ಪತ್ರ ಬಂದಿದ್ದರೆ ತಿಳಿಸು, ಇಲ್ಲಿಗೆ ಯಾವ ಪತ್ರವು ಬಂದಿಲ್ಲ. ಪತ್ರ ಬರೆ ದೀನ್ ದಯಾಳ್ ಉಪಾಧ್ಯಾಯ. ________ * ಆಕರ : ಪಾಂಚಜನ್ಯ, 19-4-1968, ವಾರಪತ್ರಿಕೆ (ಹಿಂದಿ) ಜನಸಂಘದಿಂದ ಹಲವಾರು ಸಂತಸದ ಅಚ್ಚರಿಗಳ ಭರವಸೆ ಜನಸಂಘವು ಕೆಲವೊಂದು ಪ್ರಶ್ನೆಗಳಿಗೆ ಯಾವ ಉತ್ತರವನ್ನು ಪದೇ-ಪದೇ ಮಂಡಿಸುತ್ತದೆ ಎಂಬುವುದರ ಬಗ್ಗೆ ಇಲ್ಲಿ ಪಕ್ಷದ ಕಾರ್ಯದರ್ಶಿಯಾದ ಶ್ರೀ ದೀನ್‍ದಯಾಳ್ ಉಪಾಧ್ಯಾಯರ ಕೆಲವು ಉತ್ತರಗಳು ಇಂತಿವೆ.- ಪ್ರಶ್ನೆ : ಉತ್ತರ ಭಾರತದಲ್ಲಿ ಜನಸಂಘದ ಪ್ರಭಾವ ಹೆಚ್ಚಾಗಿದೆ. ಹಾಗಾದರೆ ಇದು ಉತ್ತರಭಾರತದ ಪಕ್ಷವೇ? ಉತ್ತರ : ಜನಸಂಘದಲ್ಲಿ ನಾವು ಇಡೀ ಭಾರತವು ಒಂದು ಅಖಂಡವಾದ ರಾಷ್ಟ್ರವೆಂದು ಭಾವಿಸುತ್ತೇವೆ. ಪ್ರಾದೇಶಿಕತೆಯ ಬಗ್ಗೆ ಚಿಂತಿಸಿಲ್ಲ. ಪ್ರದೇಶಗಳನ್ನು ಕುರಿತು ಹೇಳುವುದಾದರೆ, ಕೇವಲ ಉತ್ತರ ದಕ್ಷಿಣವಷ್ಟೇಯಲ್ಲ; ಪೂರ್ವ ಮತ್ತು ಪಶ್ಚಿಮ ಹಾಗೂ ಪೂರ್ವೋತ್ತರ ಪಶ್ಚಿಮೋತ್ತರವಷ್ಟೇ ಏಕೆ ಮಧ್ಯ ಪ್ರದೇಶವೂ ಕೂಡ ಇವೆ. ಪ್ರಶ್ನೆ : ಜನಸಂಘವು ಉತ್ತರದಲ್ಲಿ ಬಲಿಷ್ಠವಾದಷ್ಟು ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಆಗಿಲ್ಲ ಎಂದು ನಾವು ಹೇಳಬಹುದೇ ? ಉತ್ತರ : ಬೇರೆ ಪಕ್ಷಗಳಂತೆಯೇ ಜನಸಂಘವು ಎಲ್ಲಾ ರಾಜ್ಯಗಳಲ್ಲಲ್ಲದೇ ಕೆಲವೊಂದು ರಾಜ್ಯಗಳಲ್ಲಿ ಬಲಿಷ್ಟವಾಗಿದೆ. ಆದರೆ ಭೌಗೋಳಿಕವಾಗಿ ನೋಡಿದಾಗ ಈ ಶಕ್ತಿ ನಮಗೆ ಸಾಲದು. ಆದ್ದರಿಂದಲೇ ಎಲ್ಲಾ ರಾಜ್ಯದಲ್ಲಿಯೂ ನೊಂದಣಿಯನ್ನು ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕ ಆಶ್ಚರ್ಯಗಳು ಕಂಡುಬರಲಿವೆ. ಪ್ರಶ್ನೆ : ಜನಸಂಘವು ಒಂದು ಹಿಂದಿ ಪಕ್ಷವೆಂದು ಹೇಳುವುದು ಸರಿಯೇ? ಉತ್ತರ : ಜನಸಂಘ ಕೇವಲ ಹಿಂದಿ ಪಕ್ಷ ಮಾತ್ರವಲ್ಲ, ಇದು ಬಂಗಾಳಿ ಮರಾಠಿ, ತಮಿಳು ಮತ್ತು ಭಾರತದ ಇತರ ಎಲ್ಲಾ ಭಾಷೆಗಳ ಪಕ್ಷವೂ ಹೌದು. ಭಾರತೀಯ ಭಾಷೆಗಳು ಉನ್ನತಿ ಹೊಂದದೆ ಭಾರತದ ಸ್ವಾತಂತ್ರ್ಯ ಮತ್ತು ಭಾರತದ ಪ್ರಜಾಪ್ರಭುತ್ವವು 218 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪೂರ್ಣಗೊಳ್ಳಲು ಸಾಧ್ಯವಿಲ್ಲ. ವಿದೇಶಿ ಮಾಧ್ಯಮ ಹೇಗೆ ಮುಂದೆ ಸಾಗಿದೆಯೋ ಆ ಹಾದಿಯಲ್ಲಿ ಶಿಕ್ಷಣ ಮತ್ತು ತಾಂತ್ರಿಕತೆ ಒಟ್ಟಾಗಿ ಮುಂದೆ ಸಾಗುವುದಿಲ್ಲ. ಶಿಕ್ಷಣದ ಪ್ರಚಾರದಲ್ಲಿ ಆಂಗ್ಲ ಭಾಷೆಯು ಕೇವಲ ಅಂಗವಿಕಲ ಅಲ್ಲ. ಇದು ಆರ್ಥಿಕ ಬೆಳವಣಿಗೆಯಲ್ಲೂ ಅಡೆತಡೆ ಮಾಡುವಂತದ್ದಾಗಿದೆ. ಇದು ಭಾರತೀಯ ಮೆದುಳನ್ನು ಆಂಗ್ಲೋ ಅಮೆರಿಕರಾಗಿ ಪರಿವರ್ತಿಸುತ್ತದೆ. ಇಂಗ್ಲಿಷ್ ಶಿಕ್ಷಣವು ನಮ್ಮ ವಸ್ತು, ನೈತಿಕತೆ ಮತ್ತು ಮಾನವ ಸಂಪನ್ಮೂಲಗಳನ್ನು ಭಯಂಕರವಾಗಿ ನಾಶಮಾಡುವುದೆಂದು ನಾನು ಎಚ್ಚರಿಸುತ್ತೇನೆ. ಯಾವುದೇ ವಿದೇಶಿ ಭಾಷೆಯು ಕಡ್ಡಾಯವಾಗಬಾರದು ಎಂಬ ಬಗಗೆ ಜನಸಂಘವು ನಿಖರವಾಗಿ ನಿಲುವನ್ನು ಹೊಂದಿದೆ. ಅವುಗಳಲ್ಲೂ ಬಹುಮುಖ್ಯವಾದ ವಿದೇಶಿ ಭಾಷೆಗಳು ಮಹಾವಿದ್ಯಾಲಯದ ಮಟ್ಟದಲ್ಲಿ ಐಚ್ಛಿಕ ವಿಷಯಗಳಾಗಿರಬೇಕು. ಪ್ರಶ್ನೆ : ಜನಸಂಘವು ಯಾವುದೇ ಆರ್ಥಿಕ ಕಾರ್ಯಕ್ರಮವನ್ನು ಹೊಂದಿಲ್ಲ ಎಂದು ಕೆಲ ಜನರು ವಾದಿಸುತ್ತಾರಲ್ಲ ? ಉತ್ತರ : ನಾನು ಹೇಳುತ್ತೇನೆ. ಜನಸಂಘವು ಏನನ್ನು ಹೊಂದಿಲ್ಲ ಅಥವಾ ಏನನ್ನು ಪಡೆದಿಲ್ಲ ಎಂದು ಯೋಚಿಸುವ ಮೊದಲು ಜನರು ಜನಸಂಘದ ಧ್ಯೇಯೋದ್ದೇಶಗಳ ಘೋಷಣೆಯನ್ನು ಮೊದಲು ಅರಿಯಬೇಕು. ಜನಸಂಘವು ಕೇವಲ ಆರ್ಥಿಕ ಕಾರ್ಯಕ್ರಮವನ್ನಷ್ಟೇ ಅಲ್ಲ, ಇದು ತುಂಬಾ ಪ್ರಾಯೋಗಿಕವಾದ, ಜೊತೆಗೆ ಒಂದು ಮಾದರಿಯಾದ ಆರ್ಥಿಕ ಕಾರ್ಯಕ್ರಮವನ್ನು ಹೊಂದಿದೆ. ಈ ಕಾರ್ಯಕ್ರಮವು ವಿಶಾಲವಾದ ಮಾನವ-ಸಂಪನ್ಮೂಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತ್ತು ಇದು ಆಹಾರ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಇದು ಸ್ವದೇಶಿ ಕಾರ್ಯನೀತಿಯ ಮೂಲಕ ರಾಷ್ಟ್ರದಲ್ಲಿ ಕೈಗಾರಿಕೋದ್ಯಮವನ್ನು ಬೆಳೆಸುತ್ತದೆ. ಮತ್ತು ಇದು ಸಾಮಾಜಿಕ ನ್ಯಾಯ ಮತ್ತು ಆರ್ಥಿಕತೆಯ ಸಮತೋಲನಕ್ಕಾಗಿ ಆದಾಯ ಅಸಮಾನತೆಯನ್ನು ಕಡಿಮೆ ಮಾಡುವುದು, ತೆರಿಗೆ ಭಾರವನ್ನು ಹೆಚ್ಚಿಸದೇ ಆದಾಯ ಮೂಲಗಳಲ್ಲಿ ತೆರಿಗೆ ಸಂಗ್ರಹಿಸಲಾಗುವುದು. ಜನಸಂಘದಿಂದ ಹಲವಾರು ಸಂತಸದ ಅಚ್ಚರಿಗಳ ಭರವಸೆ 219 ಪ್ರಶ್ನೆ : ಜನಸಂಘವು ಏಕೆ ಬಾಂಬ್ ತಯಾರಿಸಬೇಕೆಂದಿದೆ? ಮತ್ತು ಇದಕ್ಕಾಗಿ ಹೇಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡಬೇಕೆಂದಿದೆ? ಉತ್ತರ : ಮೊದಲು ನಾನು ನಿಮ್ಮ ವಿರೋಧಾಭಾಸದ ಪ್ರಶ್ನೆಗೆ ಉತ್ತರಿಸುವೆನು. ಬಹಳಷ್ಟು ದೇಶಗಳು ಏಕೆ ಬಾಂಬ್‍ಗಳನ್ನು ತಯಾರಿಸುತ್ತವೆ? ಬಾಂಬಿನಿಂದ ಯಾವುದೇ ಪ್ರಯೋಜನವಿಲ್ಲ ಎಂಬುದುನ್ನು ನಾವು ಅರಿತಿದ್ದೇವೆ. ಆದರೆ ಖಂಡಿತವಾಗಿಯೂ ಬಾಂಬ್ ಇತ್ತೀಚಿನ ಆಯುಧ ಎಂಬುದು ನಮಗೆ ಸಂಪೂರ್ಣವಾಗಿ ಅರ್ಥವಾಗಿದೆ ಮತ್ತು ಯಾವುದೇ ದೇಶವು ಬಾಂಬ್‍ಗಳನ್ನು ಹೊಂದದೆ ಆಯುಧದಲ್ಲಿ ಪೂರ್ಣತೆಯನ್ನು ಹೊಂದುವುದಿಲ್ಲ. ಇದನ್ನು ನಾವು ಎರಡನೇ ವಿಶ್ವಯುದ್ಧದ ಸಮಯದಲ್ಲಿ ಕಂಡಿದ್ದೇವೆ. ಆದ್ದರಿಂದ ನಾವು ಮತ್ತೇ ಅದೇ ತಪ್ಪನ್ನು ಮಾಡಬಾರದು. ಇನ್ನು ಬಾಂಬ್ ತಯಾರಿಕೆಯ ವೆಚ್ಚದ ಬಗ್ಗೆ ಹೇಳುವುದಾದರೆ, ನಾವು ಬಾಂಬ್ ತಯಾರಿಸಬಾರದು ಎಂದು ಅಭಿಪ್ರಾಯವನ್ನು ಹೊಂದಿರುವವರೆಂದರೆ ಯಾರು ಅದಕ್ಕೆ ಮಹತ್ವ ಕೊಟ್ಟಿದ್ದಾರೋ ಅಂಥವರು. ಬಹಳಷ್ಟು ಸ್ವತಂತ್ರ ತಜ್ಞರ ಅಭಿಪ್ರಾಯದಲ್ಲಿ ಪರಮಾಣು ರಕ್ಷಣೆಗಿಂತ ಸಾಂಪ್ರದಾಯಿಕ ರಕ್ಷಣೆಯು ಹೆಚ್ಚು ವೆಚ್ಚದ್ದಾಗಿದೆ. ಇದು ಇನ್ನು ಕಡಿಮೆ ವೆಚ್ಚವನ್ನು ಹೊಂದಿದೆ. ಏನೇ ಆಗಲಿ ಇದು ಹೆಚ್ಚು ವೆಚ್ಚದ್ದಾದರೂ ಕೂಡ ಇದನ್ನು ನಾವು ಹೊಂದಲೇಬೇಕು. ಏಕೆಂದರೆ ನಮ್ಮ ಸ್ವಾತಂತ್ರ್ಯ ನಮ್ಮ ರಕ್ಷಣೆ, ವಿಶ್ವದಲ್ಲಿ ನಮ್ಮ ಸ್ಥಾನ ಮುಂತಾದ ಸಂಗತಿಗಳು ಇದನ್ನೇ ಅವಲಂಬಿಸಿವೆ. ಭಾರತವು ತನ್ನ ಗಾತ್ರ, ಜನಸಂಖ್ಯೆ, ಸಂಪನ್ಮೂಲಗಳು ಮತ್ತು ಸಂಸ್ಕೃತಿಯ ಗುಣದಿಂದಾಗಿ ಪ್ರಪಂಚದ ದೊಡ್ಡ ಶಕ್ತಿಯಾಗಲೇಬೇಕು. ಅಣುಶಕ್ತಿಯನ್ನು ಹೊಂದದೆ ಇದು ಸಾಧ್ಯವಿಲ್ಲ. ಅಭಿವೃದ್ಧಿಶೀಲ ರಾಷ್ಟ್ರವಾಗಿರುವುದಕ್ಕಿಂತಲೂ, ಇದು ಶಕ್ತಿಶಾಲಿರಾಷ್ಟ್ರವಾಗದೇ ಇರುವುದು ಹೆಚ್ಚಿನ ಸಮಸ್ಯೆಗೆ ಕಾರಣವಾಗಿದೆ. ಭಾರತವು ತನ್ನ ಆರ್ಥಿಕತೆಯನ್ನು ಚುರುಕುಗೊಳಿಸುವುದಕ್ಕಾಗಿ ಹೆಚ್ಚು-ಹೆಚ್ಚು ಶಕ್ತಿಯನ್ನು ಹೊಂದಲೇಬೇಕಾಗಿದೆ. ಫ್ರಾನ್ಸ್ ಮತ್ತು ಚೀನಾದೇಶಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದದೇಯಿದ್ದರೂ ಬಾಂಬ್ 220 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತಯಾರಿಕೆಯಲ್ಲಿ ತೊಡಗಿರುವಾಗ ಭಾರತವೇಕೆ ಇದನ್ನು ಮಾಡಬಾರದು? ಪ್ರಶ್ನೆ : ಜನಸಂಘವಿರುವುದು ಅಣು ಬಾಂಬ್‍ಗಾಗಿ ಮತ್ತು ಪವಿತ್ರ ಹಸುವಿಗಾಗಿ. ಇವುಗಳಲ್ಲಿ ಒಂದು ಅತಿಗಾಮಿ ಆಧುನಿಕವಾದರೆ, ಇನ್ನೊಂದು ಅತಿಗಾಮಿ ಪ್ರಾಚೀನವಾದದ್ದು. ತಮ್ಮ ಗುರಿಗಳಲ್ಲಿ ಇದು ಅಸಂಗತವಲ್ಲವೆ? ಉತ್ತರ : ನಾವುಗಳು ಎಲ್ಲದರಲ್ಲೂ ಅತಿ ಒಳ್ಳೆಯದನ್ನೇ ಪಡೆಯಲಿದ್ದೇವೆ. ಅದು ಪ್ರಾಚೀನಕಾಲದ್ದೇ ಆಗಿರಬಹುದು ಅಥವಾ ಆಧುನಿಕದ್ದಾಗಿಯೇ. ಇವುಗಳ ಉತ್ತಮವಾದ ಏಕತೆಯಲ್ಲಿ ಯಾವುದೇ ವಿರೋಧಾಭಾಸವಿಲ್ಲ. ಇದು ಮಾಡಲು ಒಳ್ಳೆಯ ಕೆಲಸವೇ ಆಗಿದೆ. ನಮ್ಮ ಆರೋಗ್ಯ ಮತ್ತು ಕೃಷಿಗಾಗಿ ನಮಗೆ ಹಸು ಅವಶ್ಯಕವಾಗಿದೆ. ಜೊತೆಗೆ ನಮ್ಮ ಸ್ವಾತಂತ್ರ್ಯ ಮತ್ತು ನಮ್ಮ ದೇಶದ ಒಗ್ಗಟ್ಟಿಗಾಗಿ ಹಾಗೂ ನಮ್ಮ ಜನಗಳಿಗಾಗಿ ಬಾಂಬ್ (ಪರಮಾಣು) ಅವಶ್ಯಕವಾಗಿದೆ. ಪ್ರಶ್ನೆ : ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಜನರ ಆಹಾರ-ಕ್ರಮವನ್ನು ಶಾಸನಗೊಳಿಸಿದಂತಾಗುವುದಿಲ್ಲವೇ ? ಉತ್ತರ : ಕೋಟ್ಯಾಂತರ ಜನರ ಕುಡಿತದ ಹವ್ಯಾಸವನ್ನು ನೀವು ಶಾನಸಗೊಳಿಸುವುದಾದರೆ ಆ ಕೋಟ್ಯಾಂತರ ಜನರ ಒಂದು ಭಾಗದ ಆಹಾರ ಕ್ರಮವನ್ನು ಶಾಸನಗೊಳಿಸುವುದರಲ್ಲಿ ತಪ್ಪೇನಿದೆ. ಭಾರತದಲ್ಲಿ ಅದೆಷ್ಟು ಜನ ಗೋಮಾಂಸವನ್ನು ತಿನ್ನಲು ಇಚ್ಛಿಸುತ್ತಾರೆ? ಸಾವಿರಾರು ಜನ ಹಸುವಿನ ಹಾಲಿಗಾಗಿ ಪರದಾಡುತ್ತಿರುವಾಗ ನಾವು ಕೇವಲ ಗೋಮಾಂಸಕ್ಕಾಗಿ ಹಸುವನ್ನು ಹತ್ಯೆಮಾಡುವ ಜನರನ್ನು ಒಪ್ಪುವುದಿಲ್ಲ. ಇದು ಅಕ್ಷರಶಃ ಚಿನ್ನದ ಮೊಟ್ಟೆ ಎಂದು ಕೋಳಿಯನ್ನೇ ಕೊಯ್ದಂತಾಗುತ್ತದೆ. ಕೇವಲ ತೊಗಲು ಮತ್ತು ಮಾಂಸಕ್ಕಾಗಿ ಸಂಹರಿಸಲಾಗುವ ಹಸು ಒಳ್ಳೆಯ ಆರೋಗ್ಯವುಳ್ಳದ್ದಾಗಿರುತ್ತದೆ ಎನ್ನುವುದು ಮಾತ್ರ ಚೆನ್ನಾಗಿ ನೆನಪಿರಲಿ. ಆದರೆ ವಯಸ್ಸಾದ ಹಸುವು ಕೂಡ ಇದಕ್ಕಿಂತಲೂ ಹೆಚ್ಚಿಗೆ ಬೆಲೆಯುಳ್ಳದ್ದಾಗಿರುತ್ತದೆ. ಏಕೆಂದರೆ ಹಸುವಿನ ಮೂತ್ರ ಮತ್ತು ಸಗಣಿಯು ಒಳ್ಳೆಯ ಗೊಬ್ಬರವಾಗಿದೆ. ಪ್ರಶ್ನೆ : ಮುಂಬರುವ ಚುನಾವಣೆಯಲ್ಲಿ ಜನಸಂಘವು ಹೊಂದಿರುವ ಜನಸಂಘದಿಂದ ಹಲವಾರು ಸಂತಸದ ಅಚ್ಚರಿಗಳ ಭರವಸೆ 221 ದೂರದೃಷ್ಟಿಯ ಬಗ್ಗೆ ಹೇಳಲು ತಾವೇನಾದರೂ ಇಷ್ಟಪಡುತ್ತೀರಾ? ಉತ್ತರ : ಜನಸಂಘವು ಈ ಪ್ರದೇಶದಲ್ಲಿ ಎರಡನೆಯ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಎಂಬ ಆತ್ಮವಿಶ್ವಾಸದಿಂದ ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಪಕ್ಷವು ಸಂಸತ್‍ನಲ್ಲಿ ವಿರೋಧಪಕ್ಷವಾಗಲಿ ಎನ್ನುವುದು ನಮ್ಮ ಬಯಕೆ ಮತ್ತು ಕಾಂಗ್ರೆಸ್ಸನ್ನು ಕೆಲ ರಾಜ್ಯಗಳಿಂದ ಹೊರಹಾಕುವ ನಿರೀಕ್ಷೆಯಲ್ಲಿದ್ದೇವೆ. ನಮ್ಮದು 'ಬದಲಾವಣೆಯಾಗಲಾರದ' ಪಕ್ಷವಲ್ಲ. ಉಪಾಧ್ಯಾಯರ ದೃಢೀಕರಣ ವಾರಣಾಸಿ ನವೆಂಬರ್ 15, ವಾರಾಣಾಸಿಯಲ್ಲಿ ನಡೆದ ಭಾರತೀಯ ಜನಸಂಘದ ಪ್ರತಿನಿಧಿಗಳ ಸಭೆ (ಸಾಮಾನ್ಯ ಸಭೆ) ಯ ನಾಲ್ಕನೇ ದಿನದ ಅಧಿವೇಶನ. ಯಾವ ಅಧಿವೇಶನದಲ್ಲಿ ಚುನಾವಣೆಯ ಬಗ್ಗೆ ಸಂಪೂರ್ಣ ಚರ್ಚೆಯನ್ನು ಮಾಡಿ ಸಂಘದ ಕಾರ್ಯಕಾರಿಣಿ ಮಂಡಳಿಯು ಘೋಷಣಾ ಪತ್ರವನ್ನು ಹೊರತಂದಿತೋ, ಅಲ್ಲಿ ಒರಿಸ್ಸಾ ಹೊರತುಪಡಿಸಿ ಭಾರತದ ಎಲ್ಲಾ ಪ್ರಾಂತ್ಯಗಳಿಂದ ಸುಮಾರು 500 ಕ್ಕೂ ಹೆಚ್ಚು ಪ್ರತಿನಿಧಿಗಳು ಜಯಕಾರವನ್ನು ಹಾಕುತ್ತಾ ಪಾಲ್ಗೊಂಡರು. ಪ್ರತಿನಿಧಿ ಸಭೆಯ ಚರ್ಚೆಯು ಸೋಮವಾರದಂದು ಬೆಳಿಗ್ಗೆ ವಂದೇ- ಮಾತರಂ ಗೀತಗಾಯನದೊಂದಿಗೆ ಆರಂಭಗೊಂಡಿತು. ಸಂಘದ ಕಾರ್ಯದರ್ಶಿಯಾದ ಪಂಡಿತ ದೀನ್‍ದಯಾಳ್‍ರ ಮಾರ್ಗದರ್ಶನದಲ್ಲಿ ಚಿಕ್ಕದಾದರೂ ಚೊಕ್ಕದಾದ ಸ್ಪಷ್ಟೀಕರಣದೊಂದಿಗೆ ಸಂಘದ ಧ್ಯೇಯೋದ್ದೇಶಗಳ ಘೋಷಣಾ ಪತ್ರವನ್ನು ಮಂಡಿಸುವುದು ಮತ್ತು ಈ ಘೋಷಣಾಪತ್ರದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯ ಬಗ್ಗೆ ತೆಗೆದುಕೊಂಡ ನಿರ್ಧಾರದ ತಿದ್ದುಪಡಿಯ ಕೋರಿಕೆ ಈ ಎರಡು ವಿಷಯಗಳು ಬೆಳಗಿನ ಅಧಿವೇಶನದ ಪ್ರಮುಖ ಅಂಶಗಳಾಗಿದ್ದವು. ಭಾ.ಜ. ಸಂಘದ ಚುನಾವಣೆ ಘೋಷಣಾಪತ್ರ ಕಾರ್ಯಕಾರಿಣಿ ಸಭೆಯಿಂದ ಅನುಮೋದಿಸಲಾದ ಮತ್ತು ಪ್ರತಿನಿಧಿ ಸಭೆಯಿಂದ ಪರಿಶೀಲಿಸಲಾದ ಸಂಘದ ಘೋಷಣಾ ಪತ್ರದ ಕರಡು ಪ್ರತಿಯನ್ನು ಮಂಡಿಸುತ್ತಾ ಪಂಡಿತ್ ದೀನದಯಾಳ್‍ರವರು ಹೇಳಿದರು:- ಭಾರತೀಯ ಜನಸಂಘವು ದೇಶದ ರಾಜಕೀಯ ಜೀವನದಲ್ಲಿ ಕೆಲವು ನಿಶ್ಚಿತವಾದ ಮೌಲ್ಯ ಮತ್ತು ಆದರ್ಶಗಳನ್ನು ಬೆಳೆಸುವ ನಿಟ್ಟಿನಲ್ಲಿ ವಚನ ಬದ್ಧವಾಗಿದೆ ಮತ್ತು ಅದರ ಘೋಷಣಾ ಪತ್ರವನ್ನು ಪ್ರಸ್ತಾಪಿಸುವಾಗ, ಜನರಿಗೆ ರುಚಿಕರವಾದ ಅಥವಾ ಮೋಹಗೊಳಿಸುವಂತಹ ಯಾವುದೇ ವಿಷಯವನ್ನು ಗಣನೆಗೆ ತೆಗೆದುಕೊಳ್ಳದೆ ದೇಶದ ಜೀವನಕ್ಕೆ (ರಾಷ್ಟ್ರ-ಜೀವನಕ್ಕೆ) ಯಾವುದು ಹಿತಕರವೊ ಅದನ್ನು ಮಾತ್ರ ನಮ್ಮದು 'ಬದಲಾವಣೆಯಾಗಲಾರದ' ಪಕ್ಷವಲ್ಲ. ಉಪಾಧ್ಯಾಯರ ದೃಢೀಕರಣ 223 ಪರಿಗಣಿಸಲಾಗಿದೆ. ಇದನ್ನು ಜನರೂ ಕೂಡ ಒಪ್ಪಿಕೊಳ್ಳುವಂತೆ ಮಾಡುವುದು ಎಂಬುವ ವಿಚಾರವನ್ನು ಮಾಡಿ, ತೀರ್ಮಾನಿಸಿದಾಗ ಮಾತ್ರ. ಶ್ರೀ ಉಪಾಧ್ಯಾಯರು ಹೇಳಿದರು: ಸಂದೇಹವಿಲ್ಲ, ನಮ್ಮದೊಂದು ವಿರೋಧಪಕ್ಷವಾದ್ದರಿಂದ ಯಾವ ಅಭಿರುಚಿಯನ್ನು ನಾವು ವಿರೋಧಿಸಬೇಕೆಂದು ಅನುಭವಿಸಿದ್ದೇವೋ ಆ ಅಭಿರುಚಿಯನ್ನು ಸರ್ಕಾರವು ಕೈಗೊಳ್ಳುವ ಯಾವುದೇ ಕ್ರಮದ ವಿರುದ್ಧ ಜನರಲ್ಲಿ ಕಾಪಾಡಲೇಬೇಕಾಗುತ್ತದೆ. ಆದರೆ ಸರ್ಕಾರವು ಪರಿಚಯಿಸಬೇಕೆಂದಿರುವ ಎಲ್ಲ ಅಥವಾ ಯಾವುದೇ ರೀತಿಯ ಬದಲಾವಣೆಗಳನ್ನು ನಾವು ವಿರೋಧಿಸುತ್ತೇವೆ ಎನ್ನುವುದಕ್ಕೆ ನಾವು `ಬದಲಾವಣೆಯಾಗದೆ ಇರುವವರು' ಅಲ್ಲ ಎಂಬುವುದರ ಪ್ರಜ್ಞೆ ನಮಗಿರಬೇಕು. ಕೇವಲ ಸ್ಥಾನ ಮಾನಗಳಿಗಾಗಿ ನಾವು ಧರ್ಮ ಪ್ರತಿಪಾದಕರಾಗುವುದಿಲ್ಲ. ಬದಲಾಗಿ ಬ್ರಿಟೀಷರ ಕಾಲದಿಂದಲೂ ನಮ್ಮೊಂದಿಗಿರುವ ತುಂಬಾ ವಿಷಯಗಳ ಬಗ್ಗೆ ನಿಜವಾಗಲೂ ನಾವು ಜಾಗೃತರಾಗಿರಬೇಕಾಗಿದೆ. ತಪ್ಪದೇ ಇಂತಹ ವಿಷಯಗಳನ್ನು ಶೀಘ್ರವಾಗಿ ಸರಿಪಡಿಸಬೇಕಾಗಿದೆ. ಎಂಥ ವಿಷಯಗಳಲ್ಲಿ ಕಾಂಗ್ರೆಸ್ ಸರ್ಕಾರವು ಅತ್ಯಂತ ನಿರಾಶಾದಾಯಕವಾಗಿ ವ್ಯವಹರಿಸಿದೆಯೋ ಅದೇ ಜನಸಂಘವು ಇಂತಹ ಹಲವಾರು ವಿಷಯಗಳಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ವ್ಯವಹರಿಸಬಯಸುತ್ತದೆ. ಸ್ವತಂತ್ರ ಪಕ್ಷವು ತನ್ನ ಘೋಷಣಾಪತ್ರದ ಅಂಶಗಳನ್ನು ವಿವರಿಸಲಿ ಎಂದು ನುಡಿದ ಶ್ರೀ ಉಪಾಧ್ಯಾಯರು ಹೇಳಿದರು. ಕಾಂಗ್ರೆಸ್ ಸರ್ಕಾರವು ಸಂವಿಧಾನದಲ್ಲಿ ಮಾಡಿದ ತಿದ್ದುಪಡಿಯನ್ನು ತೆಗೆದುಹಾಕುವ ಆಶ್ವಾಸನೆಯನ್ನು ಆ ಸಂಘವು ಮಾಡಿತು. ಅದೇ ಜನಸಂಘವು ಸಂವಿಧಾನದಲ್ಲಿ ಅತಿ ಸೂಕ್ಷ್ಮವಾದ ಬದಲಾವಣೆಯ ಬಗ್ಗೆಯೂ ವಿಚಾರಣೆ ಮಾಡುತ್ತದೆ. ಶ್ರೀ ಉಪಾಧ್ಯಾಯರು ಹೇಳಿದರು: ಇದು ಖಂಡಿತವಾಗಿಯೂ ಬದಲಾಗುತ್ತಿರುವ ವಸ್ತು-ಸ್ಥಿತಿಯ ಬೇಡಿಕೆಯನ್ನು ನಿರಾಕರಿಸಿದೆ ಮತ್ತು 1951ರಲ್ಲಿ ದೇಶವು ಯಾವ ಮಟ್ಟಕ್ಕೆ ಬೆಳೆಯಬೇಕಿತ್ತೊ ಆ ಮಟ್ಟಕ್ಕೆ ಕೊಂಡೊಯ್ಯುವ ಜಿದ್ದನ್ನು ಸ್ವತಂತ್ರಪಕ್ಷ ಮಾಡಿದೆ ಎಂದು ಉಪಾಧ್ಯಾಯರು ನುಡಿದರು. ಶ್ರೀ ಉಪಾಧ್ಯಾಯರು, ಘೋಷಣಾಪತ್ರವು ಅಖಂಡ ಭಾರತದ ಬಗ್ಗೆ ಪ್ರಸ್ತಾಪವನ್ನು ಒಳಗೊಂಡಿಲ್ಲ ಮತ್ತು ಈ ಟೀಕಾಕಾರರು ಒಂದು ಚುನಾವಣಾ ಘೋಷಣಾ ಪತ್ರದ ದಾಖಲೆಗೆ ಇರಬೇಕಾದ ಸ್ವಭಾವವನ್ನು ಮರೆತಂತಿದೆ ಎಂದು ಹೇಳುತ್ತಾ ಇದನ್ನು ವಿಶ್ಲೇಷಿಸುವಂತೆ ಕೆಲವು ತ್ರೈಮಾಸಿಕಗಳನ್ನು ನಿರ್ದೇಶಿಸಿದರು. ಸಾರಭೂತವಾಗಿ ಅವರು ಹೇಳಿದರು: ಒಂದು ಪಕ್ಷದ ಚುನಾವಣಾ ಘೋಷಣಾಪತ್ರವು ಐದು ವರ್ಷಗಳ ಕಾರ್ಯಕ್ರಮದಂತೆ ಆಶ್ವಾಸನೆಯನ್ನು ನೀಡುತ್ತದೆ ಅಥವಾ ಒಂದು ವೇಳೆ ಅಧಿಕಾರಕ್ಕೆ ಬಂದರೆ ಮಾತ್ರ. ಇಂತಹ ಯಾವುದೇ ವಿಸ್ತರಣೆಗಳನ್ನು ಪಕ್ಷದ ಮೂಲಭೂತ ಸಿದ್ಧಾಂತಗಳನ್ನು 224 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಚುನಾವಣಾ ಘೋಷಣೆಯಲ್ಲಿ ನಿರೀಕ್ಷಿಸಿಲ್ಲ. ಆದರೂ ಕೂಡ ಶ್ರೀ ಉಪಾಧ್ಯಾಯರು ಹೇಳಿದರು- ಒಂದು ಪಕ್ಷದ ಘೋಷಣಾ ಪತ್ರವು ಪಕ್ಷದ ನಿಲುವಿನ ಬಾಹ್ಯ ಮುಖ್ಯಾಂಶಗಳನ್ನು ಮಾತ್ರ ಹೇಳಬೇಕು ಮತ್ತು ಇದರ ಕ್ರಿಯಾನ್ವಯದ ಬಗ್ಗೆ ಕೂಲಂಕುಶ ವಿವರಣೆಯನ್ನು ನಿರೀಕ್ಷಿಸಬಾರದು ಎಂದು ಹೇಳಿದರು. ಭಾರತೀಯ ಜನಸಂಘದ ಮುಖ್ಯಸ್ಥರು ದೃಢೀಕರಿಸಿದರು- ಘೋಷಣಾ ಪತ್ರದ ಪ್ರತಿಯೊಂದು ಅಂಶವು ಕಾರ್ಯಸಾಧ್ಯವಾಗಿದ್ದವು. ಆದರೆ ಈ ದಾಖಲೆಯನ್ನು ಸಂಪೂರ್ಣ ಸಮಗ್ರವಾಗಿ ನೋಡುವುದು ಅಗತ್ಯವಾಗಿತ್ತು ಮತ್ತು ಭಾರತೀಯ ಜನಸಂಘದ ಮುಖ್ಯಸ್ಥರು ದೃಢೀಕರಿಸಿದರು ಇದು ಭಾರತೀಯ ಜನಸಂಘದ ವಿಶಾಲವಾದ ದೃಷ್ಟಿಯನ್ನು ಆಧಾರವಾಗಿರಿಸಿಕೊಳ್ಳದೆ ಅದರ ಆಶ್ವಾಸನೆಗಳನ್ನು ನೋಡಬಾರದು ಎಂದು ಹೇಳಿದರು. ಧಾರಣೆಯಿಂದ ಧರ್ಮ ಧರ್ಮವೇಂದರೇನು? ಈ ಪ್ರಶ್ನೆಯ ಬಗ್ಗೆ ಉಪಾಧ್ಯಾಯರ ಆಲೋಚನೆಗಳು ಇಲ್ಲಿವೆ ಮತ್ತು ಇಂದಿನವರೆಗೂ ಇವು ಪ್ರಕಟವಾಗದೆ ಉಳಿದಿವೆ. ಅವರು ಈ ವಿಚಾರಗಳನ್ನು ಅಲಿಗಢದಲ್ಲಿ ಜರುಗಿದ ಸಂಘ ಶಿಕ್ಷಾ ವರ್ಗದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ವ್ಯಕ್ತಪಡಿಸಿದ್ದರು. - ರಾಷ್ಟ್ರಧರ್ಮದ ಸಂಪಾದಕರು ನಿಜವಾಗಿ ಹೇಳುವುದಾದರೆ ಸಮಾಜವು ಧರ್ಮದ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತದೆ. ಈ ರೀತಿ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸುವುದರಿಂದ ಏನು ದೊರೆಯುತ್ತದೆಯೋ ಅದೇ ಉನ್ನತಿಯಾಗಿದೆ. ಇದು ಅತ್ಯಂತ ವೈಭವಯುತವಾದದ್ದು. ಯಾವ ರೀತಿಯಾಗಿ ಇವೆರಡರ ಮಿಲನವಾಗುವುದೋ, ಉದಾಹರಣೆಗೆ ದೇಹ ಮತ್ತು ಆತ್ಮದ ಮಿಲನವಾದ ಮೇಲೆ ದೇಹವು ಆತ್ಮಕ್ಕನುಗುಣವಾಗಿ, ಆತ್ಮಕ್ಕೆ ಮೌಲ್ಯವನ್ನು ಕೊಡುತ್ತಾ ಆತ್ಮದ ಆಶಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಿದರೆ, ಇದರಿಂದಲೇ ಅದರ ಉನ್ನತಿಯಾಗುವುದು. ಆಗ ಅಲ್ಲಿ ಯಾವ ಅಡೆತಡೆಗಳೂ ಇರುವುದಿಲ್ಲ. ಆತ್ಮ ಮತ್ತು ದೇಹದ ನಡುವೆ ಯಾವುದಾದರೂ ಭೇದ ತಲೆದೋರಿದಾಗಲೇ ಅಡೆತಡೆಗ ಳು ಉಂಟಾಗುತ್ತವೆ. ಆತ್ಮ ಮತ್ತು ದೇಹವು ಒಂದಾದಾಗ ಹಾಗೂ ಇವುಗಳಲ್ಲಿ ಹೊಂದಾಣಿಕೆ ಇದ್ದಾಗ ಆಗುವ ಕೆಲಸಗಳೆಲ್ಲವೂ ಸರಿಯಾಗಿಯೇ ಇರುತ್ತವೆ. ಅದರಲ್ಲಿ ಎಂದೂ ಅಡೆ-ತಡೆಗಳು ಬರುವುದಿಲ್ಲ. ಸಾಧಾರಣವಾಗಿ ಉನ್ನತಿ ಎಂದರೇನು? ಎಂಬುದನ್ನು ತಿಳಿಯಬೇಕಾದರೆ ಇದರಿಂದಲೇ ತಿಳಿಯುವುದು ಇದೇ ಉನ್ನತಿ ಎಂದು. ಒಂದು ವೇಳೆ ಇವೆರಡರಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಅರ್ಥಾತ್ ಆತ್ಮವನ್ನು ವಿರೋಧಿಸುತ್ತಾ ಶರೀರವು ಕೆಲಸ ಮಾಡಲಾರಂಭಿಸಿದರೆ, ಆಗ ಆ ಎಲ್ಲಾ ಕೆಸಲಗಳೂ ಉನ್ನತಿಯೆಡೆಗೆ ಸಾಗುವ ಕೆಲಸಗಳಾಗುವುದಿಲ್ಲ; ಅವು ಕೆಡುಕಿನಡೆಗೆ ಕರೆದೊಯ್ಯುವ ಕೆಲಸಗಳಾಗುತ್ತವೆ. ಇವೆಲ್ಲವುಗಳ ಹೊಂದಾಣಿಕೆ ಮಾಡಿ ಕೆಲಸ ಮಾಡಿದರೆ ಆಗ ಆ ಕೆಲಸವು ಸರಿಯಾದ ಕೆಲಸವಾಗುತ್ತದೆ. ಅದೇ ರೀತಿ ಸಮಾಜವು ಕೂಡ. ಸಮಾಜದ ಆಧಾರವೇ ಧರ್ಮ. ನಾನು `ಧರ್ಮ' ಪದವನ್ನು ಮತ್ತೆ ಮತ್ತೆ ಬಳಸಿದ್ದೇನೆ. ಇದರಲ್ಲಿ ಧರ್ಮವೇನು 226 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಂಬುದನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಇದರ ಕಲ್ಪನೆ ಸ್ವಲ್ಪ ನಿಮಗೂ ಇರಬೇಕು. ಈ ಶಬ್ದವೇ ಹಾಗಿದೆ. ಇದು ಹೆಚ್ಚು -ಹೆಚ್ಚು ಬಳಸಲ್ಪಡುತ್ತದೆ. ಎಷ್ಟೆಂದರೆ `ಧರ್ಮ' ಪದದ ಅರ್ಥವು ಅನೇಕ ಸಂದರ್ಭಗಳಲ್ಲಿ ಅಪಾರ್ಥವಾಗಿಬಿಡುತ್ತದೆ. ಹಲವು ಸಂದರ್ಭಗಳಲ್ಲಿ ಧರ್ಮದಲ್ಲಿ ಯಾವ ವಿಷಯಗಳು ಬರುವುದಿಲ್ಲವೋ ಅವೆಲ್ಲವುಗಳನ್ನು ಕೂಡ ಧರ್ಮದ ಹೆಸರಿಗೆ ಅನ್ವಯಿಸಲಾಗುತ್ತದೆ. ಧರ್ಮವು ಒಂದು ವ್ಯಾಪಕವಾದ ಶಬ್ದವಾದರೂ ಚಿಕ್ಕ ಚಿಕ್ಕ ವಿಷಯಗಳೆಲ್ಲವೂ ಇದರ ಚಿಕ್ಕ-ಚಿಕ್ಕ ಅಂಗಗಳಾಗಿವೆ. ಇವುಗಳನ್ನೆ ಧರ್ಮವೆಂದು ತಿಳಿಯಲಾಗುತ್ತದೆ. ಆದರೆ ನಾವು ಈ ರೀತಿಯಾಗಿ ತಿಳಿಯಬೇಕಾಗಿಲ್ಲ. ಏಕೆಂದರೆ ತುಂಬಾ ಸಂದರ್ಭಗಳಲ್ಲಿ ಜನರು ದೇವಸ್ಥಾನ, ಮಸೀದಿ, ಕ್ರಿಸ್ತಮಂದಿರಗಳು- ಇಷ್ಟೇ ಧರ್ಮದ ಅರ್ಥವೆಂದುಕೊಂಡಿದ್ದಾರೆ. ಇವುಗಳಂತೆಯೇ ಬೇರೆ ಧರ್ಮಗಳೂ ಇವೆ. ಮಂದಿರಕ್ಕೆ ಹೋಗುವವನು ದೊಡ್ಡ ಧರ್ಮಾತೃವಾಗಿರುತ್ತಾನೆ. ಮಂದಿರಕ್ಕೆ ಹೋಗುವುದೇನೋ ಸರಿ. ಆದರೆ ಇದು ಧರ್ಮದ ಒಂದು ಅಂಗವಾಗಿದೆಯೇ ವಿನಃ ಮಂದಿರಕ್ಕೆ ಹೋಗುವುದೇ ಧರ್ಮವಲ್ಲ. ವಾಸ್ತವಾಗಿ ಧರ್ಮದಲ್ಲಿ ಏನಿದೆ? ಎಂಬುದನ್ನು ಸ್ವಲ್ಪ ತಿಳಿಯುವ ಅವಶ್ಯಕತೆ ನಮಗಿದೆ. ಧರ್ಮದ ಹೆಸರಿನಲ್ಲಿ ಇಂಥಹ ಅನೇಕ ವಿಷಯಗಳು ನಡೆಯುತ್ತಿವೆ ಅವುಗಳ ವಾಸ್ತವವೇನು ಎಂಬುದನ್ನು ತಿಳಿಯುವ ಅವಶ್ಯಕತೆ ನಮಗಿದೆ. ಯಾವ ಕಾರ್ಯಗಳು ಧರ್ಮವಲ್ಲವೇ ಅಲ್ಲವೋ ಅಂತಹ ಅನೇಕ ವಿಷಯಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿವೆ. ಕೆಲವು ವೇಳೆ ತುಂಬಾ ಜನರು ನಿಮ್ಮ ಎದುರು ನಿಂತುಕೊಂಡು ಇದೇ ಧರ್ಮವೆಂದು ಹೇಳುತ್ತಾರೆ. ಬೇರೆ ದೇಶದ ಜನರು ಬಂದರು. ಆಂಗ್ಲದ ಒಂದು ಪದವಿದೆ ರಿಲಿಜನ್, ಇದೇ ಬಹುದೊಡ್ಡ ತಪ್ಪನ್ನು ಮಾಡಿಬಿಟ್ಟಿದೆ. ಏಕೆಂದರೆ ಆಂಗ್ಲರು ಇಲ್ಲಿ ಬಂದಾಗ `ಧರ್ಮ' ಎಂಬ ಪದವನ್ನು ಆಲಿಸಿ ಅದನ್ನು ಭಾಷಾಂತರಿಸುವ ಪ್ರಯತ್ನವನ್ನು ಮಾಡಿದರು. ಪಾಪ, `ಧರ್ಮ’ದ ಅನುವಾದ ಹೇಗೆ ಮಾಡುವುದು ಎಂಬ ಸಮಸ್ಯೆ ಅವರಿಗೆ ಎದುರಾಯಿತು. ಏಕೆಂದರೆ ಧರ್ಮದಂತಹ ವ್ಯಾಪಕವಾದ ಪದ, ಧರ್ಮದಂತಹ ಕಲ್ಪನೆ ಆಂಗ್ಲರಲ್ಲಿ ಇರಲಿಲ್ಲ. ಇದು ಯಾವಾಗ ಅವರಿಗೆ ಅರ್ಥವಾಗಲಿಲ್ಲವೋ ಆಗ ಅವರು `ಧರ್ಮ' ಪದವನ್ನು `ರಿಲಿಜನ್' ಪದಕ್ಕೆ ಭಾಷಾಂತರಿಸಿದರು. ತಪ್ಪು ಅನುವಾದದ ಕಾರಣದಿಂದಲೇ ಇಂಥಹ ಬಹಳ ತಪ್ಪುಗಳಾಗಿಬಿಡುತ್ತವೆ. ಅಮ್ಮನ ತಾಯಿಯೇ ಆಗಿರಬಹುದು, ಅಪ್ಪನ ತಾಯಿಯೇ ಆಗಿರಬಹುದು ಆಂಗ್ಲ ಭಾಷೆಯಲ್ಲಿ `ಗ್ರ್ಯಾಂಡ್- ಮದರ್' ಎಂದೇ ಕರೆಯುವರು. ನಮ್ಮಲ್ಲಿ ಅಮ್ಮನ ತಾಯಿಗೂ ಹಾಗೂ ಅಪ್ಪನ ತಾಯಿಗೂ ಅಜ-ಗಜಾಂತರವಿದೆ. ಆದರೆ ಅಲ್ಲಿ ಅಜ್ಜಿ ಮತ್ತು ಅಮ್ಮಮ್ಮ ಇವೆರಡಕ್ಕೂ ಒಂದೇ ಪದವಿದೆ. ಅಲ್ಲಿ ನಮ್ಮ ಅತ್ತಿಗೆಯೇ ಆಗಬಹುದು, ಅಥವಾ ನಾದಿನಿಯಾಗಬಹುದು ಎಲ್ಲರಿಗೂ ಸಿಸ್ಟರ್ ಇನ್ ಲಾ ಎಂಬ ಒಂದೇ ಪದದ ಧಾರಣೆಯಿಂದ ಧರ್ಮ 227 ಬಳಕೆಯಿದೆ. ಆಂಗ್ಲಭಾಷೆಯಲ್ಲಿ ಇಂಥಹ ಬಹಳಷ್ಟು ಪದಗಳಿವೆ. ಇವುಗಳಿಂದಲೂ ಗೊಂದಲ ಉಂಟಾಗುತ್ತದೆ. ಅಂತೆಯೇ ಬ್ರಿಟೀಷರು ಇಲ್ಲಿಗೆ ಬಂದಾಗ `ಧರ್ಮ' ಪದವನ್ನು `ರಿಲಿಜನ್' ಎಂದು ಭಾಷಾಂತರಿಸಿದರು. `ರಿಲಿಜನ್' ಎಂದರೆ ಪಂಥ ಅರ್ಥಾತ್ ಸಂಪ್ರದಾಯ. ಅವರು ಭಾಷಾಂತರಿಸಿದಾಗಿನಿಂದ ನಾವೂ ಕೂಡ ಇದನ್ನೇ ಬಳಸಲಾರಂಭಿಸಿದೆವು. ಇದನ್ನೇ `ಧರ್ಮ' ವೆಂದು ಹೇಳಲಾರಂಭಿಸಿದೆವು. ಆದರೆ ನಾವು `ಧರ್ಮ' ಪದದ ಸರಿಯಾದ ಅರ್ಥವನ್ನು ಅರಿಯಬೇಕಾಗಿದೆ. ನಾವು ಹಿಂದು ಧರ್ಮದ ರಕ್ಷಣೆಗಾಗಿ ಮಾತನಾಡುತ್ತೇವಲ್ಲ ಅದು ಯಾವ ಧರ್ಮವೂ ಅಲ್ಲ. ಆದರೆ ತುಂಬಾ ಸಾರಿ ಜನರು ಹಿಂದೂ ಧರ್ಮದ ಅನುವಾದವನ್ನು ರಿಲಿಜನ್ ಎಂದೇ ಮಾಡಿಬಿಡುತ್ತಾರೆ. ಆದರೆ ರಿಲಿಜನ್ ಎಂಬಂತೆ ಯಾವುದು ನಮ್ಮಲಿಲ್ಲ. ಇಲ್ಲಿ ವೈಷ್ಣವ ರಿಲಿಜಿಯನ್ ಇದೆ. ಸಿಖ್ ರಿಲಿಜನ್ ಇದೆ, ಜೈನ್, ಶೈವ, ಲಿಂಗಾಯತ ರಿಲಿಜಿಯನ್‍ಗಳಿವೆ. ನಿಜ ಹೇಳುವುದಾದರೆ ಹಿಂದೂ ಧರ್ಮದಲ್ಲಿ ಅನೇಕ ರಿಲಿಜಿಯನ್‍ಗಳಿವೆ, ಅನೇಕ ಮತಗಳಿವೆ, ಅನೇಕ ಸಂಪ್ರದಾಯಗಳಿವೆ. ಪ್ರಾರ್ಥನೆಗೆ ಅನೇಕ ಪದ್ಧತಿಗಳಿವೆ. ಹೀಗೆ ಇವನ್ನೆಲ್ಲಾ ಒಟ್ಟುಗೂಡಿಸಿದಾಗ ಹಿಂದೂ ಧರ್ಮವಾಗುತ್ತದೆ. ಆದರೂ ಇವನ್ನೆಲ್ಲಾ ಒಂದುಗೂಡಿಸಿದ ನಂತರವೂ ಯಾವುದನ್ನು ನಾವು ಧರ್ಮವೆನ್ನುತ್ತೇವೆಯೋ ಅದು ಒಂದೇ ಆಗಿದೆ. ಅಂದರೆ ಜೈನ, ಶೈವ, ವೈಷ್ಣವ, ಲಿಂಗಾಯತ ಇವೆಲ್ಲವುಗಳ ಧರ್ಮ ಬೇರೆಯಲ್ಲ. ಮತ ಬೇರೆಯಾಗಿದೆ, ಪಂಥಗಳು ಬೇರೆಯಾಗಿವೆ, ಧರ್ಮಮಾತ್ರ ಒಂದೇಯಾಗಿದೆ. ಯಾವುದು ಎಲ್ಲರಿಗೂ ಲಾಭದಾಯಕವಾಗಿದೆಯೋ ಅದೇ ಧರ್ಮವಾಗಿದೆ. ಮೋಕ್ಷದ ಮಾರ್ಗವು ಇದರಿಂದ ಪ್ರಶಸ್ತವಾಗುವುದು. ಧರ್ಮಕ್ಕೆ ಸಾಮಾನ್ಯವಾದ ಯಾವ ವ್ಯಾಖ್ಯೆಯನ್ನು ನೀಡಲಾಗಿದೆಯೋ ಅದು ಇಂತಿದೆ- `ಧಾರಣಸ್ಯ ಧರ್ಮ ವಿಜ್ಞಾತಿ'. ದೃಢ ವಿಚಾರದಂತೆಯೇ ಧರ್ಮವು. ಅಂದರೆ ಯಾವ ವಸ್ತುವಿನಿಂದ, ಯಾವ ಶಕ್ತಿಯ ಕಾರಣದಿಂದ, ಯಾವ ಭಾವನೆಗಳಿಂದ, ಯಾವ ನಿಯಮಗಳಿಂದಾಗಿ, ಯಾವ ವ್ಯವಸ್ಥೆಯ ಕಾರಣದಿಂದಾಗಿ ಯಾವುದಾದರೊಂದು ವಸ್ತುವು ದೃಢವಾಗಿರುತ್ತದೆಯೋ ಅದೇ ಧರ್ಮವಾಗಿದೆ. ಅದಕ್ಕಾಗಿಯೇ ಎಲ್ಲ ನಾಗರಿಕರು ಅವರ ಮನೋಭಾವನೆಗಳೂ. ಇವುಗಳಿಂದ ಮುಂದೆ ಸಾಗಿ ನೋಡಿದರೆ ಸೃಷ್ಟಿ. ಇದರ ಧರ್ಮವು ದೃಢವಿಚಾರದಿಂದಲೇ ಇದೆ. ಯಾವುದರಿಂದ ಇದು ಸ್ಥಿರವಾಗಿರುತ್ತದೆಯೋ, ಅದೇ ಧರ್ಮವು. ಇಲ್ಲದೆಯಿದ್ದರೆ ಆ ವಸ್ತು (ವಿಷಯ) ಅಂತ್ಯವಾಗುವುದು ಅದಕ್ಕಾಗಿಯೇ ನಮ್ಮಲ್ಲಿ ಎತ್ತನ್ನು ಧರ್ಮದ ಸಂಕೇತವೆಂದಿದ್ದಾರೆ. ಮತ್ತು ಧರ್ಮಕ್ಕೆ ನಾಲ್ಕು ಚರಣಗಳೆಂದಿದ್ದಾರೆ. ಎತ್ತು ಈ ನಾಲ್ಕು ಕಾಲುಗಳ ಆಧಾರದ ಮೇಲೆಯೇ ನಿಲ್ಲುತ್ತದೆ. ಈ ನಾಲ್ಕು ಕಾಲುಗಳ ಆಧಾರದ ಮೇಲೆ ಅದು ಸ್ಥಿರವಾಗಿರುತ್ತದೆ, ಊಹಿಸಿನೋಡಿ, ಎತ್ತಿನ ಯಾವುದೋ ಒಂದು ಕಾಲು 228 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮುರಿದುಹೋದರೆ ಅದು ಹೇಗೆ ನಡೆಯಬಹುದು. ಅದಕ್ಕೆ ನಿಂತುಕೊಳ್ಳಲು ತೊಂದರೆ, ನಡೆಯಲು ತೊಂದರೆ. ಇನ್ನು ಎರಡು ಕಾಲುಗಳು ಮುರಿದುಹೋದರೆ ಇನ್ನೂ ತೊಂದರೆ, ಮತ್ತೊಂದು ಮುರಿದುಹೋದರೆ, ಖಂಡಿತವಾಗಿಯೂ ಅದು ಬಿದ್ದೇಬಿಡುತ್ತದೆ. ಎತ್ತು ಹೇಗೆ ಸರಿಯಾಗಿ ನಿಲ್ಲುತ್ತದೆಯೋ, ನಡೆಯುತ್ತದೆಯೋ ಇದಕ್ಕಾಗಿ ಹೇಗೆ ಅದಕ್ಕೆ ನಾಲ್ಕುಕಾಲುಗಳ ಅವಶ್ಯಕತೆಇದೆಯೋ ಅದೇ ರೀತಿಯಾಗಿ ಧರ್ಮಕ್ಕೂ ಕೂಡ ನಾಲ್ಕು ಕಾಲುಗಳ ಅವಶ್ಯಕತೆಯಿದೆ. ಈ ಮಾತಿನ ಮುಖ್ಯ ಆಶಯವೇನೆಂದರೆ ಇದು ಸ್ಥಿರವಾಗಿರಬೇಕು. ದೃಢತೆಯೇ ಧರ್ಮದ ನಿಜವಾದ ಅರ್ಥವಾಗಿದೆ. ದೇಹದ ಅನುಗುಣವಾಗಿ ಅದಕ್ಕಾಗಿ ಬೇರೆ ಬೇರೆ ಸ್ಥಿತಿಯಲ್ಲಿ ಬೇರೆ ಬೇರೆ ಧರ್ಮವಿದೆ. ಎಲ್ಲವೂ ಒಂದೇ ಕಾಲಕ್ಕೆ ಅನ್ವಯಿಸುವುದಿಲ್ಲ. ಒಂದು ಸಾರಿ ನನ್ನ ಗೆಳೆಯನೊಬ್ಬ ಬೇಸಿಗೆ ದಿನಗಳಲ್ಲಿ ಲಖನೌಗೆ ಹೋಗಿದ್ದ. ಅಲ್ಲಿ ಲಖನೌವಿನ ಹಳೆಯ ನವಾಬರಿದ್ದರು. ಅವರು ತಮ್ಮ ಮಖಮಲ್ ಬಟ್ಟೆಯ ಉದ್ದನೆಯ ಅಂಗಿಯನ್ನು ಧರಿಸಿ, ಟೋಪಿ ಹಾಕಿಕೊಂಡು ಸಾಯಂಕಾಲದಲ್ಲಿ ಅತ್ತರ್ ಹಾಕಿಕೊಂಡು ಹಾಯಾಗಿ ಸುತ್ತಾಡುತ್ತಿದ್ದರು. ಅವರು ನೀನೊಂಥರಾ ಹಳ್ಳಿ ಮುಕ್ಕನಂತೆ ಕಾಣುತ್ತೀಯಾ ಎಂದು ಇವನಿಗೆ ಹೇಳಿದರು. ಇದನ್ನು ಕೇಳಿ ಅವನೂ ಕೂಡ ಉದ್ದನೆಯ ಅಂಗಿಯನ್ನು ಹೊಲಿಸಿಕೊಂಡು ಇವರಂತೆಯೇ ಸುತ್ತಾಡತೊಡಗಿದ. ಕೆಲ ತಿಂಗಳುಗಳು ಕಳೆದು ಚಳಿಗಾಲ ಆರಂಭವಾಯಿತು ಮತ್ತು ಅವನು ಹಳ್ಳಿಗೆ ಹೊರಟುಹೋದ. ಹಳ್ಳಿಯ ಜನರು ಈ ರೀತಿಯ ಉಡುಗೆಯನ್ನು ಅರಿಯರು ಎಂದುಕೊಂಡು ಅವನು ಸಾಯಂಕಾಲ ಐದು ಗಂಟೆಯ ಸುಮಾರಿಗೆ ತನ್ನ ಉದ್ದನೆಯ ಅಂಗಿಯನ್ನು ಧರಿಸಿ, ಸುಗಂಧದ್ರವ್ಯವನ್ನು ಹಾಕಿಕೊಂಡು ಸುತ್ತಾಡಲಾರಭಿಸಿದ. ಉಣ್ಣೆಯ ಶಾಲನ್ನು ಹೊದ್ದುಕೊಂಡು ಮಲಗಿದ್ದ ಒಬ್ಬ ವೃದ್ಧನು ಕೇಳಿದ - `ಮಗನೇ, ಎಲ್ಲಿಗೆ ಹೋಗುತ್ತಿದ್ದಿಯಾ?' ಇವನು ಹೇಳಿದ `ಸುತ್ತಾಡಲು ಹೊರಟಿದ್ದೇನೆ' ಎಂದು. ಅವನು ಹೇಳಿದ `ನೀನು ಈ ಉಡುಗೆಯಲ್ಲಿ ಹೋದರೆ ಅಸ್ವಸ್ಥನಾಗುತ್ತೀಯಾ', ಇವನ್ಹೇಳಿದಾ `ವ್ಹಾ ! ಅದು ಹೇಗೆ ಅಸ್ವಸ್ಥನಾಗಿಬಿಡುತ್ತೇನೆ?' ಕೊನೆಯಲ್ಲಿ ಇವನಿಗೆ ನಿಮೋನಿಯಾ ಆಯಿತು ಮತ್ತು ಅವನಿಗೆ ಶಾಲನ್ನು ಹೊದ್ದಿಸಿ ಮಲಗಿಸಲಾಯಿತು. ಇವನ ಎಲ್ಲಾ ಸಮಸ್ಯೆಗಳನ್ನು ಊರಿನವರೆಲ್ಲ ಸಹಿಸಿಕೊಳ್ಳಬೇಕಾಯಿತು. ಇವನಿಗೆ ಈ ಸ್ಥಿತಿ ಬಂದದ್ದೇಕೆಂದರೆ ಅವನು ಸಮಯಕ್ಕನುಗುಣವಾಗಿ ಯೋಚಿಸಿರಲಿಲ್ಲ. ಎಂತಹ ಸಮಯದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎಂಬುವ ವಿಚಾರವನ್ನು ಮಾಡಬೇಕಾಗುತ್ತದೆ. ಈ ರೀತಿಯ ಬದಲಾವಣೆಯನ್ನು ಜೀವನದಲ್ಲಿ ಮಾಡಬೇಕಾಗುತ್ತದೆ. ಧರ್ಮವೆಂದರೆ ದೇಹದ ದೃಢ ವಿಚಾರ ಮತ್ತು ಆ ದೃಢವಿಚಾರಗಳು ನಿಯಮವಾಗಿದೆ. ಇವು ಬದಲಾಗುತ್ತಾಹೋಗುತ್ತವೆ. ಇವುಗಳು ಧಾರಣೆಯಿಂದ ಧರ್ಮ 229 ಸಮಯಕ್ಕನುಸಾರವಾಗಿ, ಸ್ಥಿತಿಗನುಸಾರವಾಗಿ ಬದಲಾಗುತ್ತವೆ. ಮನಸ್ಸಿನ ಅನೇಕ ವಿಚಾರಗಳಂತೆಯೂ ಬದಲಾಗುತ್ತವೆ. ಇವು ಋತುವಿಗನುಸಾರವಾಗಿಯೂ ಬದಲಾಗುತ್ತವೆ. ಇವುಗಳಲ್ಲಿ ಯಾವ ಸ್ಥಿರತೆಯೂ ಇಲ್ಲ. ಆದರೆ ದೇಹದ ಜೊತೆಗೆ ಬುದ್ಧಿಯೂ ಇದೆ, ಮನಸ್ಸೂ ಇದೆ. ಇವುಗಳಲ್ಲಿ ವಿಶ್ವಾಸವಿರಬೇಕು ಹಾಗೂ ಹೊಂದಾಣಿಕೆಯೂ ಇರಬೇಕು. ವಾಸ್ತವವಾಗಿ ಧರ್ಮದ ಕೆಲಸವೇನು? ದೃಢವಾಗಿರಬೇಕು ಮತ್ತು ದೃಢತೆಯಿಂದಾಗಿ ಈ ಶರೀರ, ಮನಸ್ಸು, ಬುದ್ಧಿ ಈ ಎಲ್ಲವುಗಳ ನಡುವೆ ಹೊಂದಾಣಿಕೆ ಮತ್ತು ಅನುಕೂಲತೆಯನ್ನುಂಟು ಮಾಡಬೇಕು. ಈ ಅನುಕೂಲತೆಯನ್ನು ಎರಡು ರೀತಿಯಾಗಿ ಮಾಡಬಹುದಾಗಿದೆ. ಇದರಲ್ಲಿ ಮೊದಲನೆಯ ಕೆಲವು ಅನುಕೂಲತೆಯನ್ನು ಮಾಡಲು ಕೆಲವು ನಿಯಮಗಳನ್ನು ಮಾಡಲಾಗುತ್ತದೆ ಮತ್ತು ಕೆಲವೊಂದನ್ನು ಹೀಗೆ ಮಾಡಲಾಗುತ್ತದೆ. ಇದಕ್ಕಾಗಿ ಎಷ್ಟೇ ನಿಯಮಗಳನ್ನು ಮಾಡಿದರು ಕೂಡ ಪರಿಣಾಮಕಾರಿಯಾಗುವುದಿಲ್ಲ. ಎಷ್ಟೇ ನಿಯಮಗಳನ್ನು ಮಾಡಿದರು, ಈ ಎಲ್ಲಾ ನಿಯಮಗಳು ಬದುಕಿನ ಎಲ್ಲ ವಿಷಯಗಳನ್ನೊಳಗೊಂಡು ಮುಂದೆ ಸಾಗಲು ಸಾಧ್ಯವಿಲ್ಲ. ನಿಯಮಗಳೇ ಇಲ್ಲದ ಅನೇಕ ಪರಿಸ್ಥಿತಿಗಳು ನಿಮಗೆ ಎದುರಾಗಬಹುದು. ಅಂತೆಯೇ ನಮ್ಮಲ್ಲಿ ಸ್ಮೃತಿ, ಶಾಸ್ತ್ರ, ಕೃತಿ ಎಲ್ಲವೂ ಇವೆ. ಆದರೂ ಕೂಡ ಇಂತಹ ಸ್ಥಿತಿ ಎದುರಾದರೆ ಏನು ಮಾಡುತ್ತೀರಾ? ಇದನ್ನು ನೀವು ನಿಮ್ಮ ಮನಸ್ಸಿಗೆ ಕೇಳಿ. ಮನಸ್ಸೆ ನಿಮಗೆ ಸಾಕ್ಷಿ ಹೇಳುತ್ತದೆ. ವೇದಗಳಲ್ಲಿ ಹೇಳಿದ್ದಾರೆ- `ಮನಃ ಪೂತಮ್ ಸಮಾಚರೆತ್' ತಾವು ಇದರಂತೆ ನಡೆದುಕೊಳ್ಳಿ. ಆದರೆ ಪ್ರತಿಯೊಬ್ಬರ ಮನಸ್ಸು ಹೀಗೆ ಮಾಡಲಾರದು. ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವಂತೆ ಯಾರ ಮನಸ್ಸು ತಯಾರಾಗುತ್ತದೆಯೋ ಅವರೇ ಇವನ್ನು ಮಾಡಲು ಸಾಧ್ಯ. ದೇಹದಲ್ಲಿ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಲೆಕ್ಕಾಚಾರ ಹಾಕಲಾಗಿದೆ. ಒಂದು ವೇಳೆ ಪ್ರಕೃತಿಯೊಂದಿಗೆ ಇವೆಲ್ಲವುಗಳ ಹೊಂದಾಣಿಕೆಯನ್ನು ಮಾಡುವ ಪ್ರಯತ್ನವನ್ನು ಮಾಡದಿದ್ದರೂ ತೊಂದರೆಯುಂಟಾಗುವುದು. ನಾವು ಪ್ರಕೃತಿಯ ಬಗ್ಗೆ ಯೋಚಿಸಲೇಬೇಕು ಎಂಬುದನ್ನು ನಾನು ಈ ಮೊದಲೇ ಹೇಳಿದ್ದೇನೆ. ನಾವು ದೇಶ ಮತ್ತು ಕಾಲದ ವಿಚಾರವನ್ನು ಹೇಗೆ ಮಾಡುತ್ತೇವೊ ಹಾಗೆಯೇ ಸಮಗ್ರ ಪ್ರಕೃತಿಯೊಡನೆಯೂ ಹೊಂದಾಣಿಕೆಯನ್ನು ಮಾಡಬೇಕು. ಪ್ರಕೃತಿಯ ಪರಿಸ್ಥಿತಿಗನುಗುಣವಾಗಿ ಮನಸ್ಸು, ಬುದ್ಧಿ ಮತ್ತು ಶರೀರದ ಸಾಮಂಜಸ್ಯವಾದರೆ, ಈ ಬಗ್ಗೆ ಚಿಂತಿಸಬಹುದು. ಅದರಂತೆಯೇ ಒಬ್ಬ ಮತ್ತು ಹಲವು ವ್ಯಕ್ತಿಗಳ ವಿಚಾರಗಳು ಕೂಡ. ಹಲವರೊಂದಿಗೆ ವ್ಯಕ್ತಿಯ ಬಾಂಧವ್ಯವಿರುತ್ತದೆ. ಅಣ್ಣ- ತಮ್ಮಂದಿರಲ್ಲಿಯೂ ಹೊಂದಾಣಿಕೆ ಇರಬೇಕು. ಇವರಲ್ಲಿ ಹೊಂದಾಣಿಕೆ ಇರುವಂತೆ 230 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಾಡಲೂ ಯಾರಾದರೂ ಇರಬೇಕು. ಯಾವುದಾದರೂ ಇಚ್ಛೆಯಿರಬೇಕು, ಗುಣವಿರಬೇಕು. ವಾಸ್ತವವಾಗಿ ಈ ಹೊಂದಾಣಿಕೆಯನ್ನು ಮಾಡುವ ಕಾರ್ಯವು ಕೂಡ ಧರ್ಮವೆನಿಸುತ್ತದೆ. ಇದರಿಂದಲೇ ಅಣ್ಣ-ತಮ್ಮಂದಿರ ನಡುವೆ ಜಗಳವಾಗುವುದಿಲ್ಲ. ಒಬ್ಬ ಸಹೋದರ ಇನ್ನೊಬ್ಬ ಸಹೋದರನ ಕತ್ತು ಹಿಸುಕಿ ಸಾಯಿಸುವುದಿಲ್ಲ. ಹೊರತಾಗಿ ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ಕಲಿಯುತ್ತಾರೆ. ಇದರಂತೆಯೇ ಪತಿ ಮತ್ತು ಪತ್ನಿಯ ನಡುವೆ ಯಾವುದರಿಂದ ಹೊಂದಾಣಿಕೆಯಾಗುತ್ತದೋ ತಂದೆ ಮತ್ತು ಮಗನ ನಡುವೆ ಯಾವುದರಿಂದಾಗಿ ಹೊಂದಾಣಿಕೆಯಾಗುತ್ತದೋ ಅಲ್ಲಿ ಅವರ ಮಧ್ಯ ಯಾವ-ಯಾವ ಕಾರಣದಿಂದಾಗಿ ಹೊಂದಾಣಿಕೆಯಾಗುವುದೋ, ಒಂದಾಗಿ ಕೆಲಸ ಮಾಡಲು ಸಾಧ್ಯವಾಗುವುದೋ ಅದರಿಂದಾಗಿ ಅವರ ನಡುವಿನ ವಿರೋಧವು ಮುಗಿದುಹೋಗುತ್ತದೆ. ಅವರಲ್ಲಿಯ ವಿರೋಧ ಭಾವನೆಯೂ ಕಡಿಮೆಯಾಗುವುದು ಮತ್ತು ಯಾರು ಒಬ್ಬರನ್ನೊಬ್ಬರು ಇಷ್ಟಪಡುತ್ತಾ ಕೆಲಸಮಾಡಲು ಸಾಧ್ಯವೋ ಆ ಎಲ್ಲಾ ವಿಷಯಗಳೂ ಧರ್ಮವೇ ಆಗಿವೆ. ಅಂತೆಯೇ ತಂದೆ-ಮಗನಲ್ಲಿ ಬಾಲ್ಯದಲ್ಲಿ ಮಗನ ಲಾಲನೆ ಪಾಲನೆ ಮಾಡುವುದು ತಂದೆಯ ಧರ್ಮವಾದರೆ ದೊಡ್ಡವನಾದ ಮೇಲೆ ತಂದೆಯ ಮಾತನ್ನು ಪಾಲಿಸುತ್ತಾ ಸರಿಯಾದ ಸೇವೆ ಮಾಡುವುದು ಮಗನ ಕರ್ತವ್ಯವಾಗಿದೆ. ಹೀಗೆ ಇಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸಿದರೆ ತಂದೆ ಮತ್ತು ಮಗನ ನಡುವಿನ ಮನಸ್ತಾಪ ಕೊನೆಗೊಳ್ಳುತ್ತದೆ. ಅರ್ಥಾತ್ ವಿರೋಧವು ದೂರವಾಗಿ ಇಬ್ಬರೂ ಒಂದಾಗಿ, ಜೀವನದಲ್ಲಿ ಮುಂದೆ ಸಾಗುತ್ತಾರೆ. ಹೀಗೆ ಯಾವುದರಿಂದಾಗಿ ಪತಿ-ಪತ್ನಿಯ ಮಧ್ಯ ಸಾಮಂಜಸ್ಯವಿರುವುದೋ ಅದು ಕೂಡ ವಾಸ್ತವದಲ್ಲಿ ಧರ್ಮವೇ ಆಗಿದೆ. ಹಾಗೆಯೇ ಒಬ್ಬ ವ್ಯಕ್ತಿ ಮತ್ತು ರಾಷ್ಟ್ರದ ನಡುವೆ ಯಾವ ವಿಷಯದಿಂದಾಗಿ ಹೊಂದಾಣಿಕೆಯಾಗುವುದೋ ಅದು ವ್ಯಕ್ತಿ ಮತ್ತು ರಾಷ್ಟ್ರದ ನಡುವಿನ ಧರ್ಮವಾಗಿದೆ. ನಮ್ಮ ರಾಷ್ಟ್ರದ ಜೊತೆ ಜೊತೆಗೆ ಸಂಪೂರ್ಣ ಮಾನವ ಸಮಾಜವೂ ಇದೆ. ಈ ಮಾನವ ಸಮಾದಲ್ಲಿಯೂ ಸಾಮಂಜಸ್ಯವಿರಬೇಕು. ಆದರೆ ಬೇರೆಲ್ಲ ಸಮಾಜವು ನಶಿಸಿಬಿಡಲಿ, ಬೇರೆಲ್ಲ ಜನ ಸಮಾಜವೂ ಸಂಪೂರ್ಣವಾಗಿ ಹಾನಿಗೊಳಗಾಗಲಿ ಮತ್ತು ನಮ್ಮ ರಾಷ್ಟ್ರವು ಉನ್ನತ ಮಟ್ಟಕ್ಕೇರಲಿ ಎಂಬುವುದು ನಮ್ಮ ಅಭಿಲಾಷೆಯಲ್ಲ. ಎಲ್ಲಿ ಈ ರೀತಿಯಾಗಿ ಕೇವಲ ತಮ್ಮದೇ ಚಿಂತೆ, ತಮ್ಮ ರಾಷ್ಟ್ರಕ್ಕಾಗಿ ಸ್ವಾರ್ಥ. ಮಾನವ ಸಮಾಜದ ಯೋಚನೆ ಇರುವುದಿಲ್ಲವೋ (ಹೇಗೆ ಪಶ್ಚಿಮ ರಾಷ್ಟ್ರಗಳಲ್ಲಿ ನಡೆಯುತ್ತಿದೆಯೋ ಹಾಗೆ) ಅಲ್ಲಿ ರಾಷ್ಟ್ರ ಮತ್ತು ಮಾನವನ ನಡುವೆ ದೊಡ್ಡದೊಂದು ಬಿರುಕು ಮೂಡಿಬಿಡುತ್ತದೆ. ನಾವು ಜಗತ್ತಿನ ಪ್ರತಿಯೊಂದು ಜೀವಿಗಳ ಬಗ್ಗೆಯೂ ಚಿಂತಿಸಬೇಕಾಗಿದೆ. ಇಲ್ಲಿ ನಾಯಿಗಳೂ ಇರುತ್ತವೆ. ಅಂದಹಾಗೆ ನಾಯಿಗಳ ಬಗ್ಗೆಯೂ ನಾವು ಚಿಂತಿಸಬೇಕಾಗುತ್ತದೆ. ನಮ್ಮ ಮತ್ತು ಅವುಗಳ ನಡುವೆ ಯಾವುದಾದರೂ ಧಾರಣೆಯಿಂದ ಧರ್ಮ 231 ಹೊಂದಾಣಿಕೆಯಾಗಲು ಸಾಧ್ಯವೇ? ಇಬ್ಬರ ನಡುವಿನ ಮನಸ್ತಾಪವನ್ನು ದೂರಮಾಡಲು ಸಾಧ್ಯವೇ? ಈ ಬಗ್ಗೆಯೂ ನಾವು ಚಿಂತಿಸಬೇಕಾಗಿದೆ. ಹಾಗೆಯೇ ಹಸುಗಳು ಇವೆ, ಎತ್ತುಗಳಿವೆ, ಪಶು-ಪಕ್ಷಿಗಳಿವೆ. ಹೀಗೆ ಎಷ್ಟೊಂದು ಅಣುಜೀವಿಗಳು ಒಂದಕ್ಕೊಂದು ಹೊಂದಿಕೊಂಡಿವೆ. ಈ ಎಲ್ಲವುಗಳ ನಡುವಿನ ಘರ್ಷಣೆಯ ಮುನ್ನುಡಿಯನ್ನು ಕೊನೆಗೊಳಿಸಿ ಯಾವುದಾರೊಂದು ಅನುಕೂಲತೆಯ ಮುನ್ನುಡಿಯನ್ನು ಹುಟ್ಟುಹಾಕುವುದರಿಂದಲೇ ಸೃಷ್ಟಿ ಮುಂದುವರೆಯುವುದು. ಹಾಗೆಯೇ ಪಶು-ಪಕ್ಷಿಗಳು ಮತ್ತು ನಮಗೆ ಗೋಚರಿಸುವ ಅಸ್ಥಿರ-ಜಗತ್ತು ಕೂಡ. ಇಷ್ಟೇ ಅಲ್ಲ ಇನ್ನೂ ಇದೆ. ಪರಿಸರವಿದೆ, ಗಿಡ-ಮರಗಳಿವೆ, ಇವುಗಳ ನಡುವೆಯೂ ಕೂಡ ಸಾಮಂಜಸ್ಯವನ್ನು ಸ್ಥಾಪಿಸಬೇಕಾಗಿದೆ. ಕೊನೆಗೆ ಇವುಗಳಿಂದಲೇ ಅಲ್ಲವೆ ನಮಗೆ ಆಹಾರ ಸಿಗುವುದು. ಇಲ್ಲಿ ಮಾವಿನ ಹಣ್ಣು ಇದೆ. ಒಂದು ವೇಳೆ ಮಾವಿನ ಹಣ್ಣನ್ನು ನಾವು ಪಡೆಯಬೇಕಾದರೆ ಮಾವು, ಮಾವಿನ ಮರ, ಮರದ ಯಜಮಾನ ಇವುಗಳೆಲ್ಲವುಗಳ ನಡುವೆ ಸಾಮಂಜಸ್ಯವನ್ನು ತರಲೇಬೇಕಾಗುತ್ತದೆ. ಪ್ರಕೃತಿಯಲ್ಲಿಯೂ ಹೇಗಾದರೂ ಸಾಮಂಜಸ್ಯ ಇರುವಂತೆ ಮಾಡುವುದು ಅವಶ್ಯಕವಾಗಿದೆ. ಇದರಲ್ಲಿರುವ ಆನಂದ ನಮ್ಮ ಜೀವನದಲ್ಲಿಯೂ ಬೆಳೆಯುವ ರೀತಿಯಲ್ಲಿ ಈ ಸಂಬಂಧವನ್ನು ಬೆಸೆಯಬೇಕು. ವಾಸ್ತವದಲ್ಲಿ (ಒಬ್ಬ ವ್ಯಕ್ತಿಯಲ್ಲಿ) ಮನುಷ್ಯನಲ್ಲಿ ಅವರ ದೇಹದ ಆಶಯದಿಂದ ಹಿಡಿದು ಸಂಪೂರ್ಣ ಸೃಷ್ಟಿಯವರೆಗೆ ಎಷ್ಟೆಲ್ಲಾ ಬೇರೆಬೇರೆ ಸಂಬಂಧಗಳು ಬರುತ್ತವೆಯೋ ಅವೆಲ್ಲವುಗಳ ನಡುವೆ ಅನುಕೂಲತೆಯನ್ನು ಮೂಡಿಸುವ ಕೆಲಸ, ಹೊಂದಾಣಿಕೆಯನ್ನು ಮೂಡಿಸುವ ಕಾರ್ಯ. ಈ ಕಾರ್ಯ ಧರ್ಮದ್ದಾಗಿದೆ. ನಮ್ಮಲ್ಲಿ ಧರ್ಮದ ಬಗ್ಗೆ ಯಾವ ವರ್ಣನೆಯನ್ನು ಮಾಡಲಾಗಿದೆಯೋ ಅದರಲ್ಲಿ ಹತ್ತು ಲಕ್ಷಣಗಳನ್ನು ವಿವರಿಸಲಾಗಿದೆ. ಕ್ಷಮೆ, ಕಳ್ಳತನ ಮಾಡದಿರುವುದು, ಶೌಚ, ಇಂದ್ರಿಯ ನಿಗ್ರಹ, ಸತ್ಯ ಬುದ್ಧಿ, ವಿದ್ಯೆ ಮುಂತಾದವುಗಳು ಧರ್ಮದ ಲಕ್ಷಣಗಳಾಗಿವೆ. ಇವುಗಳಿಂದಲೇ ನಮ್ಮ ಧರ್ಮವು ಮುಂದುವರೆಯುತ್ತದೆ. ಈಗ ಇವುಗಳ ಆಧಾರದ ಮೇಲೆಯೇ ಉಳಿದೆಲ್ಲಾ ಕಾಲ- ಕಾಲದ ನಿಯಮಗಳ ವ್ಯವಸ್ಥೆಯಾಗುತ್ತಾ ಹೋಗುತ್ತದೆ. ಇವು ಸ್ಥಾನ ಮತ್ತು ಸಮಯಕ್ಕನುಗುಣವಾಗಿ ಉಂಟಾಗುತ್ತದೆ. ____________ * ಆಕರ : ರಾಷ್ಟ್ರಧರ್ಮ ಹಿಂದಿ ಮಾಸ ಪತ್ರಿಕೆ, 1968ರ ಜುಲೈ (-ಸಂ.) ಕೊನೆಯ ಭಾಷಣ [ಇದು ಉಪಾಧ್ಯಾಯರ ಕೊನೆಯ ಭಾಷಣವಾಗಿದೆ. ಇದನ್ನು ಬರೇಲಿಯಲ್ಲಿ ಸಂಘಪರಿವಾರದ ಸ್ವಯಂಸೇವಕರಿಗೆ ಈ ಭಾಷಣವನ್ನು ಕೇಳುವ ಸೌಭಾಗ್ಯ ದೊರೆತಿತ್ತು. ಮನುಷ್ಯ ತನಗಾಗಿ ಬಾಳದೆ ದೇಶಕ್ಕಾಗಿ ಬಾಳ ಬೇಕು ಎಂಬುವುದೇ ಈ ಭಾಷಣದ ಮೂಲ ಆಶಯವಾಗಿದೆ.] -ರಾಷ್ಟ್ರಧರ್ಮದ ಸಂಪಾದಕರು] ಪ್ರತಿಯೊಂದು ರಾಷ್ಟ್ರವು ತನ್ನ ವೈಭವದ ಅಭಿಲಾಷೆಯಿಂದಲೇ ಪ್ರಗತಿ ಹೊಂದುತ್ತದೆ, ವೈಭವದ ಈ ಬಯಕೆ ಅತ್ಯಂತ ಸ್ವಾಭಾವಿಕವಾಗಿದೆ. ಯಾರಲ್ಲಿ ಈ ಆಸೆ ಇಲ್ಲವೊ, ಆಕಾಂಕ್ಷೆ ಇಲ್ಲವೋ, ಅವನನ್ನು ಮನುಷ್ಯ ಎನ್ನುವುದು ಯೋಗ್ಯವಾಗುವುದಿಲ್ಲ. ಪ್ರತಿಯೊಬ್ಬನು ಎತ್ತರಕ್ಕೇರಲು ಬಯಸುತ್ತಾನೆ. ಮುಂದೆ ಬರಲು ಬಯಸುತ್ತಾನೆ. ಸುಖವಾಗಿರಲು ಬಯಸುತ್ತಾನೆ. ಆದರೆ ಚಿಂತನೆಯ ಪ್ರಶ್ನೆಯಾವುದೆಂದರೆ ಈ ಸುಖ, ಈ ವೈಭವ, ಈ ಏಳಿಗೆ ಇವುಗಳು ರೂಪ ಯಾವುದು? ನಾವು ಎತ್ತರಕ್ಕೆ ಏರುತ್ತಿದ್ದೇವೆ ಎಂಬುವುದರ ಅರ್ಥವೇನು? ಬಹಳಷ್ಟು ಸಾರಿ ಜನರು ತಿಳಿಯುವುದೇನೆಂದರೆ ವೈಯಕ್ತಿಕವಾಗಿ ನಮ್ಮ ಗೌರವ ಹೆಚ್ಚಿದರೆ ನಾವು ದೊಡ್ಡವರಾಗುತ್ತೇವೆಂದು. ಆದರೆ ಸ್ವಲ್ಪ ಆಳವಾಗಿ ಯೋಚಿಸಿದಾಗ ಸ್ಪಷ್ಟವಾಗುವುದೇನೆಂದರೆ ನಾವು ಯಾವ ಸಮಾಜದಲ್ಲಿ ಜನಿಸಿದ್ದೇವೋ, ನಾವು ಯಾವ ರಾಷ್ಟ್ರದ ಭಾಗವಾಗಿದ್ದೇವೋ ಅದರಿಂದ ಬೇರೆಯಾಗಿ ಈ ವೈಯಕ್ತಿಕ ಆಕಾಂಕ್ಷೆ ಪೂರ್ಣಗೊಳ್ಳುವುದಿಲ್ಲ, ಒಂದು ವೇಳೆ ಆದರೂ ಅದೂ ಅಪೂರ್ಣವಾಗಿಯೇ ಇರುತ್ತದೆ. ಒಬ್ಬನಿಂದಲೇ ಸರ್ವತೋಮುಖ ಅಭಿವೃದ್ಧಿಯಾಗುವುದು ಸಾಧ್ಯವಿಲ್ಲ. ಆದ ಕಾರಣ ವ್ಯಕ್ತಿಗತ ಜೀವನ ಎಂಬುವುದು ಇಲ್ಲವೇ ಇಲ್ಲ. ಇದು ಬಹುಶಃ ದೇಹದ ಬಂಧನವಾಗಿದೆ. ಇದರಿಂದಾಗಿ `ನಾನು' ಇರುವೆನು ಎಂಬುವ ಅನುಭವವಾಗುವುದು. ಆದರೆ ಯಾವಾಗ ನಾವು `ನಾನು' ಎಂಬ ಚಿಂತೆ ಮಾಡುತ್ತೇವೋ ಆಗ ನಮ್ಮಲ್ಲಿ ಪ್ರತಿಯೊಬ್ಬನು `ಈ ನಾನು' ಎಂದರೇನು? ಎಂಬುದನ್ನು ಚಿಂತಿಸುತ್ತಾನೆ. ನನ್ನ ಹೆಸರನ್ನೇ ತೆಗೆದುಕೊಳ್ಳಿ ಈ ದೀನದಯಾಳ್‍ನ ಜೊತೆಗೆ `ನಾನು' ಎಂದು ಅಂಟಿಕೊಂಡಿದೆ. ಇದರೊಂದಿಗೆ ಬಹಳ ಮಮಕಾರವೂ ಇದೆ. ಕೊನೆಯ ಭಾಷಣ 233 ಅದರ ಮತ್ತು ನನ್ನ ಸಂಬಂಧ ಎಷ್ಟು ಬೆಸೆದುಕೊಂಡಿದೆ ಎಂದರೆ ನಿದ್ರೆಯಲ್ಲಿಯೂ ಕೂಡ ಯಾರಾದರೂ ನನ್ನ ಹೆಸರು ಕೂಗಿದರೆ ಈ ನನ್ನ `ನಾನು' ಒಮ್ಮಿಂದೊಮ್ಮೆಗೆ ಎಚ್ಚರಗೊಳ್ಳುತ್ತದೆ. ಏಕೆಂದರೆ ಅದರ ಜೊತೆಗೆ `ನಾನು' ಅಂಟಿಕೊಂಡಿದೆ. ಆದರೆ ? ಒಂದು ವೇಳೆ ಈ ಹೆಸರು ಎಲ್ಲಿಂದ ಬಂತು ಎಂಬುದನ್ನು ಗಂಭೀರವಾಗಿ ಕೇಳಿದರೆ ಆಗ ತಿಳಿಯುವುದು ಸಮಾಜದಲ್ಲಿ ಈ ಹೆಸರು ಚಾಲ್ತಿಯಲ್ಲಿದೆ ಎಂದು. ಈ ಹೆಸರು ಸಮಾಜದಿಂದಲೇ ದೊರೆತಿದೆ, ಈ ಹೆಸರು ಕೇವಲ ನನ್ನದಲ್ಲ ಹಾಗೂ ಅದಕ್ಕಾಗಿಯೇ ಯಾರು ಯಾವ ಸಮಾಜದಲ್ಲಿ ಹೋಗುತ್ತಾರೊ ಅದಕ್ಕನುಗುಣವಾಗಿ ಅವರಿಗೆ ಹೆಸರು ಲಭಿಸುತ್ತದೆ. ಸಮಾಜದೊಂದಿಗೆ ನಮ್ಮ ಸಂಬಂಧ ಹೆಸರಿನೊಂದಿಗೆ ಉಂಟಾಗುತ್ತದೆ. ತಂದೆ-ತಾಯಿಯ ಸಂಬಂಧ ಹುಟ್ಟಿನಿಂದ. ಆದರೆ ಹೆಸರಿನ ಸಂಬಂಧ ಒಮ್ಮಿಂದೊಮ್ಮಿಗೆ ಸಮಾಜದೊಂದಿಗೆ ಸೇರಿಕೊಂಡಿದೆ. ನೀವು ಯಾವ ಸಮಾಜದವರು, ಯಾವ ಭಾಷೆಯನ್ನು ಮಾತನಾಡುತ್ತೀರಾ ಇದು ಕೂಡು ತಿಳಿದುಬಿಡುತ್ತದೆ. ಯಾವ ಭಾಷೆಯನ್ನು ನಾನು ಬಳಸುತ್ತಿದ್ದೇನೆಯೋ ಅದು ನನ್ನದಲ್ಲ, ಯಾರೋ ನನಗೆ ಕೊಟ್ಟಿದ್ದಾರೆ. ಇದನ್ನು ಮಾತೃಭಾಷೆ (ತಾಯ್ನುಡಿ) ಎನ್ನುತ್ತಾರೆ. ಏಕೆಂದರೆ ಮೊಟ್ಟಮೊದಲಿಗೆ ತಾಯಿಯೇ ಭಾಷೆಯನ್ನು ಕಲಿಸುತ್ತಾಳೆ. ಆದರೆ ತಾಯಿ ಮಾತ್ರವಲ್ಲ ಸಮಾಜವೂ ಕೂಡ ಇದೆ. ಈ ಭಾಷೆಯೂ ಸಮಾಜದಿಂದಲೇ ಬಂದಿದೆ. ಒಳ್ಳೆಯದು, ಕೆಟ್ಟದ್ದೇನು ಇದು ಸಮಾಜದಿಂದಲೇ ಬಂದಿದೆ. ಯಾವುದರಿಂದ ನನ್ನ ಮನಸ್ಸಿಗೆ ಸಮಾಧಾನ (ನೆಮ್ಮದಿ) ಉಂಟಾಗುವುದೋ ಅದೂ ಕೂಡ ಸಮಾಜದಿಂದಲೇ ಬರುತ್ತದೆ. ಸಮಾಜದ ಪ್ರಶಂಸೆ ಮನುಷ್ಯನಿಗೆ ತುಂಬಾ ದೊಡ್ಡದೆನಿಸುತ್ತದೆ. ವೈಯಕ್ತಿಕ ಸನ್ಮಾನ ಸತ್ಕಾರಗಳಿಗಾಗಿ ಜನರು ಹಸಿದಿದ್ದಾರೆ. ಇಂದಿನ ದಿನಗಳಲ್ಲಿ ಬೇರೆನಿದೆ! ಪದ್ಮಶ್ರೀ, ಪದ್ಮಭೂಷಣಗಳ ಹಸಿವು, ಯಾವುದರ ಹಸಿವಿದೆ? ಪದ್ಮಶ್ರೀಯಲ್ಲಿ ಪದ್ಮವೂ ಇಲ್ಲ, ಶ್ರೀಯೂ ಇಲ್ಲ, ಆದರೂ ಜನರಿಗೆ ಸಮಾಜವು ಸತ್ಕರಿಸಿದೆ ಎಂದೆನಿಸುತ್ತದೆ. ಸಮಾಜವು ಯಾರಿಗಾದರೂ ಕೆಟ್ಟ ಮಾತನ್ನಾಡಿದರೆ ಅಪ್ರಿಯವೆನಿಸುವುದು. ರಾಮ, ಕೃಷ್ಣ, ಶಿವಾಜಿಯ ಬಗ್ಗೆ ಯಾರಾದರು ಕೆಟ್ಟ ಮಾತನ್ನಾಡಿದರೆ ನಮ್ಮ ರಕ್ತ ಕುದಿಯಲಾರಂಭಿಸುತ್ತದೆ. ``ನಾನು"ವಿನ ಸಂಬಂಧ ಕೇವಲ ಶರೀರದಿಂದ ಮಾತ್ರವಾದದ್ದೆ. ಆದರೆ ನಿಮ್ಮ ಶರೀರದಲ್ಲಿ ರಾಮನು ಕುಳಿತಿರುವನೇ? ಆದರೂ ಅನಿಸುವುದು ಒಂದಿಲ್ಲಾ ಒಂದು ಕಡೆಗೆ ಕುಳಿತಿರುವನೆಂದು. ಅದಕ್ಕಾಗಿಯೇ ಬೇಸರವಾಗುತ್ತದೆ. ನನ್ನ ಪೂರ್ವಜರು ನನ್ನ ಬುದ್ಧಿ, ನನ್ನ ಭಾವನೆಗಳ ಅಂಶವಾಗಿ ಕುಳಿತಿರುವರು ಎಂದೆನಿಸುತ್ತದೆ ಮತ್ತು ಅವರೊಂದಿಗೆ ನನ್ನ ರಾಷ್ಟ್ರವೇ ಕುಳಿತಿದೆ ಎಂದು. ಅಂತೆಯೇ ನಮ್ಮೆಲ್ಲರ ಸುಖವಿದ್ದರೇನೆ ಸಾಮೂಹಿಕ ಸುಖವಿದೆ ಮತ್ತು 234 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ದುಃಖವೂ ಸಾಮೂಹಿಕ ದುಃಖವಾಗಿದೆ. ದೇಶದ ಗೌರವವೇ ನಮ್ಮ ಗೌರವವಾಗಿದೆ ಆದರೆ ಮನುಷ್ಯನು ಈ ಸಾಮೂಹಿಕ ಭಾವನೆಯನ್ನು ಮರೆತು ಬೇರೆ-ಬೇರೆಯಾಗಿ ವೈಯಕ್ತಿಕ ಆಧಾರದ ಮೇಲೆ ಯೋಚಿಸಿದಾಗ ಇದರಿಂದ ಹಾನಿಯುಂಟಾಗುತ್ತದೆ. ಸಾಮೂಹಿಕವಾಗಿ ಯಾವಾಗ ನಾವು ನಮ್ಮ ನಮ್ಮ ಕೆಲಸಗಳನ್ನು ಮಾಡಿ ರಾಷ್ಟ್ರದ ಬಗ್ಗೆ ಚಿಂತನೆ (ಯೋಚನೆ) ಮಾಡುತ್ತೇವೋ ಆಗ ಎಲ್ಲದರ ವ್ಯವಸ್ಥೆಯಾಗುತ್ತದೆ. ಇದರ ಮೂಲಭೂತ ವಿಷಯವೆಂದರೆ ನಾವು ಸಾಮೂಹಿಕವಾಗಿ ಚಿಂತನೆ ಮಾಡುವುದು, ವ್ಯಕ್ತಿಗತವಾಗಿ ಅಲ್ಲ. ಇದರ ವಿರುದ್ಧವಾಗಿ ಯಾವುದೇ ಕೆಲಸ ಮಾಡಿದರೂ, ಅದು ಸಮಾಜಘಾತಕವಾಗುತ್ತದೆ. ಸದಾ ಸಮಾಜದ ಬಗ್ಗೆ ಚಿಂತಿಸಿ ಕಾರ್ಯನಿರ್ವಹಿಸಬೇಕು. ನಮ್ಮ ಆರ್ಥಿಕ, ರಾಜನೈತಿಕ, ಆಧ್ಯಾತ್ಮಿಕ ಮತ್ತು ನೈತಿಕ ವಿಕಾಸ, ಎಲ್ಲವು ಸಮಾಜದೊಂದಿಗೆ ಹೊಂದಿಕೊಂಡಿವೆ. ಹಿಮಾಲಯದ ಗುಹೆಯಲ್ಲಿ ಯೋಗಾಭ್ಯಾಸ ಮಾಡಿದರೆ ಮೋಕ್ಷ ಸಿಗುವುದು ಸಾಧ್ಯವಿಲ್ಲ, ಯೋಗಾಭ್ಯಾಸವೆಂದರೆ ಆಗಬಹುದು. ಮೋಕ್ಷವು ಕೂಡ ವೈಯಕ್ತಿಕವಾದದ್ದಲ್ಲ ಸಾಮಾಜಿಕವಾದದ್ದು, ಸಮಷ್ಠಿಗತವಾದದ್ದು. ಯಾವಾಗ ಸಮಾಜವು ಮುಕ್ತಿಹೊಂದುವುದೋ, ಉನ್ನತಿಹೊಂದುವುದೋ, ಆಗ ವ್ಯಕ್ತಿಯೂ ಕೂಡ. ದೇವರು ಅವತರಿಸಿದ್ದು ಧರ್ಮದ ರಕ್ಷಣೆಗಾಗಿ ಮಾತ್ರ. ಇದುವರೆಗೂ ಯಾವ ಅವತಾರವೂ ಗುಹೆಯಲ್ಲಿ ಕುಳಿತು ಯೋಗಾಭ್ಯಾಸಮಾಡುವುದಕ್ಕಾಗಿ ಪಡೆದದ್ದಾಗಿಲ್ಲ. ಭಗವಾನ್ ಕೃಷ್ಣನಂತೂ ಜೀವನ ಪೂರ್ತಿ ಕಾರ್ಯ ನಿರ್ವಹಿಸುತ್ತಲಿದ್ದನು. ಅವರು ಸಂಪೂರ್ಣ ಸಮಾಜವನ್ನು ತಮ್ಮ ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಿದರು. ಇದರ ನಿಷ್ಕರ್ಷವೇನೆಂದರೆ ಸಮಾಜಕ್ಕಾಗಿ ಮಾಡುವ ಕೆಲಸ ದೇವರ ಕೆಲಸವಾಗಿದೆ. ಹಾಗೂ ತನಗಾಗಿ ಮಾಡಿದ ಕೆಲಸ ದೆವ್ವದ ಕೆಲಸವಾಗಿದೆ. ರಾಷ್ಟ್ರದ ಭಕ್ತಿಯೇ ಸಮಾಜದ ಭಕ್ತಿಯಾಗಿದೆ, ಇದೇ ವಾಸ್ತವದಲ್ಲಿ ದೇವರ ಭಕ್ತಿಯಾಗಿದೆ. ಮಹಾಭಾರತದ ಯುದ್ಧವನ್ನು ನೋಡಿದಾಗ ಅದರಲ್ಲಿ ಒಂದು ಹಾಸ್ಯಪೂರ್ಣ ವಿಷಯವೊಂದು ಬರುತ್ತದೆ. ಅದರಲ್ಲಿ ಹೇಳಿದ್ದಾರೆ. `ಯತೋ ಧರ್ಮಃ ತತೋ ಜಯಃ' ಪಾಂಡವರಿಗೆ ಜಯವು ಧರ್ಮದ ಕಾರಣದಿಂದಲೇ ಲಭಿಸಿತು. ಆದರೆ ಪ್ರಶ್ನೆ ಏನೆಂದರೆ, ಯುದ್ಧದಲ್ಲಿ ಕೌರವರ ಎಲ್ಲ ಸೇನಾಧಿಪತಿಗಳು ಕಪಟದಿಂದಲೇ ಸಾಯಿಸಲ್ಪಟ್ಟರು. ಶಿಖಂಡಿಯನ್ನು ಮುಂದೆ ನಿಲ್ಲಿಸಿ ಹಿಂದಿನಿಂದ ಅರ್ಜುನನು ಭೀಷ್ಮನನ್ನು ವಧಿಸಿದನು. ದ್ರೋಣಚಾರ್ಯ, ಕರ್ಣ, ದುರ್ಯೋಧನ ಮುಂತಾದವರೆಲ್ಲ ಕಪಟದಿಂದಲೇ ಸಾಯಿಸಲ್ಪಟ್ಟರು. ಈ ಎಲ್ಲಾ ಕಪಟವನ್ನು ಪಾಂಡವರೇ ಮಾಡಿದರು. ಯುಧಿಷ್ಠರನು ಸುಳ್ಳು ಹೇಳಿದ್ದು ಧರ್ಮವೇನು? ಕೃಷ್ಣನ ಮೋಸದಿಂದಾದ ಜಯದ್ರಥನ ಸಾವು ಧರ್ಮವೆ? ಇದೆಲ್ಲ ಅಧರ್ಮವೆಂದೇ ಎನಿಸುತ್ತದೆ. ಆದರೆ ಇದು ಅಧರ್ಮವಾಗಿದ್ದರೂ ಸಹ ನಾವು, `ಎಲ್ಲಿ ಧರ್ಮವೋ ಅಲ್ಲಿ ಜಯವು' ಎನ್ನುತ್ತೇವೆ. ಕೊನೆಯ ಭಾಷಣ 235 ಇದನ್ನೆಲ್ಲಾ ನೋಡಿದರೆ ಮಹಾಭಾರತಕಾರನೂ ಮೋಸ ಮಾಡಿದ್ದಾನೆಂದೆನಿಸುತ್ತದೆ. ಧರ್ಮದ ಹೆಸರಿನಲ್ಲಿ ಅಧರ್ಮದ ಪ್ರಚಾರವನ್ನು ಮಾಡಿದ್ದಾರೆ ಅಥವಾ ಈ ಉಕ್ತಿಯೇ ತಪ್ಪಾಗಿದೆ. ಆದರೆ ಯೋಚಿಸಿದಾಗ ತಿಳಿಯುವುದು, ಕೌರವರ ಪಕ್ಷ ಮತ್ತು ಪಾಂಡವರ ಪಕ್ಷದಲ್ಲಿ ಯಾವುದಾದರೂ ಅಂತರವಿದ್ದಿದ್ದೇನೆಂದರೆ ಅದು ಕೌರವ ಪಕ್ಷದ ಪ್ರತಿಯೊಬ್ಬರು ವ್ಯಕ್ತಿವಾದಿಗಳಾಗಿದ್ದರು, ಸಮಷ್ಟಿವಾದಿಗಳಾಗಿರಲಿಲ್ಲ. ಸಮಾಜದ ಬಗ್ಗೆ ಚಿಂತಿಸಲು ಯಾರು ಸಿದ್ಧವಿರಲಿಲ್ಲ. ಭೀಷ್ಮಪಿತ ಎಷ್ಟೊಂದು ದೊಡ್ಡವರಾಗಿದ್ದರೂ ನಾನು ಶಿಖಂಡಿಯೊಂದಿಗೆ ಯುದ್ಧ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೇನೆ ಎಂಬ ಭಾವನೆ ಹೊಂದಿದ್ದರು. ಸೇನಾಪತಿಯ ಜೀವನದಲ್ಲಿ ವೈಯಕ್ತಿಕ ಪ್ರತಿಜ್ಞೆಗಳ ಮಹತ್ವವೆಲ್ಲಿದೆ? ಅಲ್ಲಂತೂ ಸೇನಾಪತಿಯ ಕರ್ತವ್ಯಕ್ಕೆ ಮಹತ್ವವಿದೆ. ಅರ್ಜುನನು ಕೂಡ ಹೇಳಬಹುದಾಗಿತ್ತಲ್ಲ. ಶಿಖಂಡಿಯ ಬೆನ್ನು ಹಿಂದೆಯಿಂದ ಬಾಣಗಳನ್ನು ಬಿಡುವುದು ಅವನಿಗೆ ಯೋಗ್ಯವಲ್ಲ. ಜಗತ್ತಿನ ಜನರು ನನ್ನ ಬಗ್ಗೆ ಏನೆಂದುಕೊಳ್ಳುವರು? ಇದರಿಂದ ಅರ್ಜುನನ ಹೆಸರಿಗೆ ಕಳಂಕವಾಗುವುದು. ಆದರೆ ಅರ್ಜುನನು ಸಮಾಜದ ಸಮಷ್ಟಿಯ, ತನ್ನ ಪಕ್ಷಕ್ಕಾಗಿ ಯೋಚಿಸಿದ. ಆದರೆ ಭೀಷ್ಮಪಿತಾಮಹನು `ನಾನು' ವಿನ ವಿಚಾರ ಮಾಡಿದರು. ಅವರ ಎದುರು ಒಬ್ಬ ಸೇನಾಪತಿಯ ಜವಾಬ್ದಾರಿಯಲ್ಲದೇ ಭೀಷ್ಮಪಿತನ ಪ್ರತಿಜ್ಞೆಯೇ ಮಹತ್ವದ್ದಾಗಿತ್ತು. ದ್ರೋಣಾಚಾರ್ಯರಿಗೆ ಪುತ್ರನ ಮಮಕಾರವಿತ್ತು. ಸೇನಾಪತಿಯು ಮಗನ ಮಮಕಾರವನ್ನು ಮುಂದಿಟ್ಟುಕೊಂಡು ಹೊರಟರೆ, ಅವನು ಯುದ್ಧ ಮಾಡಲು ಸಾಧ್ಯವಿಲ್ಲ. ಮಗನ ಸಾವಿನ ವಿಷಯವನ್ನು ತಿಳಿಯುತ್ತಿದ್ದಂತೆಯೇ ಅವರು ಶಸ್ತ್ರಗಳನ್ನು ತ್ಯಜಿಸಿಬಿಟ್ಟರು. ಇನ್ನೊಂದೆಡೆ ತನ್ನ ಜೀವನದಲ್ಲಿ ಎಂದೂ ಸುಳ್ಳು ನುಡಿಯದ ಯುಧಿಷ್ಠರ ಅಂದು ಸುಳ್ಳು ನುಡಿದನು. ಜಗತ್ತು ಅವರ ಬಗ್ಗೆ ಏನೆಂದುಕೊಳ್ಳುವುದು? ಎಂಬ ಚಿಂತೆ ಅವನು ಮಾಡಲಿಲ್ಲ. ಸಮಷ್ಠಿಯ ಬೇಡಿಕೆ. ಭಗವಾನ್ ಕೃಷ್ಣನ ಆದೇಶಕ್ಕಾಗಿ ಅವನು ವೈಯಕ್ತಿಕ ಕೀರ್ತಿಯ ಬಗ್ಗೆ ಚಿಂತಿಸಲಿಲ್ಲ. ಕರ್ಣನು ಇದಕ್ಕೆ ಹೊರತಾಗಿಲ್ಲ. ಅವನಲ್ಲಿ ಎಂತಹ ಕವಚ ಕುಂಡಲಗಳಿದ್ದವೆಂದರೆ ಅವುಗಳಿರುವಾಗ ಅವನನ್ನು ಯಾರೂ ಏನೂ ಮಾಡಲು ಸಾಧ್ಯವಿರಲಿಲ್ಲ. ಸೂರ್ಯನು ಇವುಗಳನ್ನು ಅವನಿಗೆ ಕೊಟ್ಟಿದ್ದನು. ಇವುಗಳನ್ನು ಪಡೆಯುವುದಕ್ಕಾಗಿ ಇಂದ್ರನು, ಬ್ರಾಹ್ಮಣನ ವೇಷದಲ್ಲಿ ಕರ್ಣನೆಡೆಗೆ ಬಂದನು. ಸೂರ್ಯ ಕರ್ಣನಿಗೆ ಇಂದ್ರನ ಈ ಕಪಟದ ಬಗ್ಗೆ ಮೊದಲೇ ಎಚ್ಚರಿಸಿದ್ದನು. ಆದರೆ ಕರ್ಣನು ಕವಚ ಮತ್ತು ಕುಂಡಲಗಳನ್ನು ವೇಷಧಾರಿಯಾದ ಇಂದ್ರನಿಗೆ ಕೊಟ್ಟುಬಿಟ್ಟನು. ಏಕೆಂದರೆ ಕರ್ಣನು, ನಾನು ದಾನಶೂರ ನನಗೆ ಯಾರಾದರೂ ಏನನ್ನಾದರೂ ಕೇಳುವುದು, ನಾನು ಕೊಡದೇ ಹೋಗುವುದು ನಾಚಿಕೆಯ 236 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿಷಯವೆಂದು ತಿಳಿದನು. ಹೀಗೆ ಅವನು ದಾನವೀರನಂತು ಆಗಿಹೋದನು. ಆದರೆ ಯಾವ ಪಕ್ಷದ ಪರವಾಗಿ ತಾನು ನಿಂತಿದ್ದನೋ ಆ ಪಕ್ಷದವನಾಗಲಿಲ್ಲ. ಆದರೆ ದೇವತೆಗಳ ರಾಜ ಇಂದ್ರನು ಬ್ರಾಹ್ಮಣನ ವೇಷದಲ್ಲಿ ಭಿಕ್ಷೆ ಬೇಡಿದನು. ಅವರು ಧರ್ಮದ ಕಾರ್ಯಕ್ಕಾಗಿ ವ್ಯಕ್ತಿಗತ ಲೋಕಾಪವಾದದ (ಲೋಕನಿಂದೆ) ಬಗ್ಗೆ ಚಿಂತಿಸಲಿಲ್ಲ. ಕುಂತಿಯು ಕರ್ಣನನ್ನು ತನ್ನ ಬಾಲ್ಯದ (ಕೌಮಾರ್ಯ) ಮಗನೆಂದು ಹೇಳಿ ಅಪವಾದವನ್ನು ಹೊತ್ತುಕೊಂಡಳು. ಅವಳು ಹೇಳದೇ ಇದ್ದಿದ್ದರೆ, ಕರ್ಣನು ಕುಂತಿಯ ಮಗನೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಸಮಾಜವೇ ಅವಳ ಉದ್ದೇಶವಾಗಿತ್ತು. ಅವಳು ಕರ್ಣನಿಂದ ಅರ್ಜುನನ ಹೊರತಾಗಿ ಉಳಿದ ಎಲ್ಲ ಪುತ್ರರಿಗೂ ಅಭಯವನ್ನು ತಂದಳು. ದೇವರು ಕೂಡ ಶಸ್ತ್ರಗಳನ್ನು ಹಿಡಿಯವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಆದರೆ ಭೀಷ್ಮನ ವಿರುದ್ಧ ಶಸ್ತ್ರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ಬಂದಾಗ ಅವರು ತಮ್ಮ ಪ್ರತಿಜ್ಞೆಯ ಚಿಂತೆ ಮಾಡಲಿಲ್ಲ. ಕೌರವರ ಪಕ್ಷದಲ್ಲಿ ಒಬ್ಬರಿಗಿಂತ ಒಬ್ಬರು ಮಹಾರಥಿಗಳಿದ್ದರು. ಆದರೆ ಅವರಲ್ಲಿದ್ದ ನ್ಯೂನ್ಯತೆ ಏನೆಂದರೆ ಅವರು ಎಲ್ಲರೂ ಸೇರಿ ಸಮೂಹವಾಗಿರಲಿಲ್ಲ, ಸಮಾಜವಿರಲಿಲ್ಲ, ಅವರಲ್ಲಿ ಸಾಮ್ಯತೆಯ (ಏಕತೆಯ) ಭಾವನೆ ಇರಲಿಲ್ಲ. ಎಲ್ಲರೂ ಬೇರೆ-ಬೇರೆಯಾಗಿದ್ದರು. ಪ್ರತಿಯೊಬ್ಬರಿಗೂ ತಮ್ಮ ಹೆಸರಿನ ಚಿಂತೆಯಿತ್ತು. ಪಾಂಡವರಲ್ಲಿ ಎಲ್ಲರೂ ಒಂದಾಗಿದ್ದರು, ಭಗವಾನ್ ಕೃಷ್ಣನನ್ನೇ ಎಲ್ಲರೂ ತಮ್ಮ ನಾಯಕನನ್ನಾಗಿಸಿದರು. ಅವರ ಆದೇಶವೆನಿತ್ತೋ ಅದರಂತೆಯೇ ನಡೆದುಕೊಂಡರು. ಯಾರೂ ತಮ್ಮ ಹೆಸರಿನ ಚಿಂತೆಯನ್ನು ಮಾಡಲಿಲ್ಲ, ಕೃಷ್ಣ ಭಗವಾನನು ಏನು ಹೇಳಿದನೋ ಅದನ್ನು ಎಲ್ಲರೂ ಪಾಲಿಸಿದರು. ಒಬ್ಬರು ಸುಳ್ಳು ಹೇಳಿದರು, ಇನ್ನೊಬ್ಬರು ಯುದ್ಧದ ನಿಯಮಗಳನ್ನು ಉಲ್ಲಂಘಿಸಿದರು. ಒಬ್ಬರು ಕರ್ಣನಿಂದ ಭಿಕ್ಷೆ ಬೇಡಿದರೆ, ಇನ್ನೊಬ್ಬರು ಭೀಷ್ಮನಿಂದ ಆತನ ಮೃತ್ಯುವಿನ ರಹಸ್ಯವನ್ನು ಅರಿತರು. ಅಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವವರಾಗಿದ್ದರು. ಅವರೆಲ್ಲರೂ ಸಮಷ್ಠಿವಾದಿಗಳಾಗಿದ್ದರು. ವಾಸ್ತವವಾಗಿ ಸಮಷ್ಠಿವಾದವು ಧರ್ಮವಾಗಿದೆ. ರಾಷ್ಟ್ರೀಯವಾದವು ಧರ್ಮವಾಗಿದೆ. ವ್ಯಕ್ತಿಗಾಗಿಯೇ ವ್ಯಕ್ತಿಯ ಬಗ್ಗೆ ಚಿಂತಿಸಿ ಮಾಡಿದ ಕೆಲಸವು ಅಧರ್ಮವಾಗಿದೆ. ರಾಷ್ಟ್ರದ ವಿಚಾರದಿಂದ ಏನೆಲ್ಲಾ ಮಾಡಲಾಗುತ್ತದೆಯೋ ಅದೇ ಧರ್ಮವಾಗುತ್ತದೆ. ಸೈನಿಕನು ಅನೇಕ ನರಹತ್ಯೆಯನ್ನು ಮಾಡುತ್ತಾನೆ. ಆದರೂ ಅವನಿಗೆ ಪರಮವೀರ ಚಕ್ರ ದೊರೆಯುತ್ತದೆ. ಬೇರೆಯವನು ಇದನ್ನು ಮಾಡಿದರೆ ಅವನಿಗೆ ಸಿಗುವುದು ಗಲ್ಲು ಶಿಕ್ಷೆ. ಇಬ್ಬರಲ್ಲಿಯೂ ಅಂತರವಿದೆ. ಅವನು ರಾಷ್ಟ್ರಕ್ಕಾಗಿ ಹಿಂಸೆಯನ್ನು ಮಾಡುತ್ತಾನೆ. ಅದಕ್ಕಾಗಿಯೇ ಅವನು ಹೆಸರನ್ನು ಗಳಿಸುತ್ತಾನೆ. ಸಂಘಟಿತ ಕಾರ್ಯಶಕ್ತಿಯು ನಿಶ್ಚಯವಾಗಲೂ ವಿಜಯಶಾಲಿಯಾಗುತ್ತದೆ. ಇದನ್ನು ಅರಿತು ನಾವು ಮುಂದೆ ಸಾಗಬೇಕು. ಸಂಪೂರ್ಣ ಸಮಾಜದಲ್ಲಿ ಈ ಕೊನೆಯ ಭಾಷಣ 237 ಒಂದೇ ಭಾವನೆಯನ್ನೇ ಹುಟ್ಟುಹಾಕಬೇಕು. ಇದರ ಆಧಾರದ ಮೇಲೆ ಉಳಿದೆಲ್ಲ ವಿಷಯಗಳು ಸರಿಯಾಗಬಲ್ಲವು. ಒಂದು ವೇಳೆ ಈ ಒಂದು ಭಾವನೆಯೇ ಇಲ್ಲವಾದರೆ, ಉಳಿದೆಲ್ಲ ವಿಚಾರಗಳು ಅನುಪಯುಕ್ತವಾಗುವವು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಪ್ರತಿಯೊಬ್ಬ ವಯಸ್ಕನಿಗೂ ಮತ ಚಲಾಯಿಸುವ ಅಧಿಕಾರವಿದೆ. ಆದರೆ ಮತದ ಉಪಯೋಗವನ್ನು ಆತ ಹೇಗೆ ಮಾಡುವನು ಎಂಬುವುದರ ಬಗ್ಗೆ ಚಿಂತಿಸಬೇಕಾಗಿದೆ. ಮತದ ಉಪಯೋಗ ಅವನು ದೇಶದ ವಿರುದ್ಧವೂ ಮಾಡಬಹುದಾಗಿದೆ. ಅವನಿಗೆ ಮತ ಚಲಾಯಿಸುವ ಅಧಿಕಾರವನ್ನು ಕೊಡಲಾಗಿದೆ. ಆದರೆ ಒಂದು ವೇಳೆ ಈ ವಿಶ್ವಾಸವನ್ನು ಉಳಿಸಿಕೊಳ್ಳುವ ವ್ಯವಸ್ಥೆಯು ಇಲ್ಲದಿದ್ದರೆ ಇದರ ವಿರುದ್ಧವು (ವಿಪರೀತ) ನಡೆಯಬಹುದಾಗಿದೆ. ಅಂದರೆ ರಾಷ್ಟ್ರೀಯತೆಯ ನಂತರ (ಬಳಿಕ) ಪ್ರಜಾತಂತ್ರವು ಬರುತ್ತದೆ. ರಾಷ್ಟ್ರೀಯತೆಯ ನಂತರವೇ ಪ್ರತಿಯೊಂದು ತಂತ್ರವು ಬರುತ್ತದೆ. ಒಂದುವೇಳೆ ರಾಷ್ಟ್ರೀಯತೆಯೇ ಬಲಹೀನವಾದರೆ, ಪ್ರಜಾತಂತ್ರವು ನಡೆಯಲು ಸಾಧ್ಯವಿಲ್ಲ. ರಾಷ್ಟ್ರೀಯತೆ ಸರಿಯಾಗಿದ್ದರೆ ನಡೆಯುತ್ತದೆ. ಪ್ರಜಾತಂತ್ರವು ನಡೆಯಬಹುದು ಸಮಾಜವಾದವು ನಡೆಯಬಲ್ಲದು, ಬಂಡವಾಳಶಾಹಿಯೂ ನಡೆಯಬಲ್ಲದು, ಇಂಗ್ಲೇಂಡಿನಲ್ಲಿ ಸಮಾಜವಾದವಾಗಿರಲಿ, ಬಂಡವಾಳಶಾಹಿ ಇತ್ತು. ಆದರೂ ಕೂಡ ಸಫಲ (ಸಾರ್ಥಕ) ವಾಯಿತು. ಏಕೆಂದರೆ ರಾಷ್ಟ್ರೀಯತೆಯ ಭಾವನೆ(ಆಶಯ) ಅದರಲ್ಲಿತ್ತು. ಈಸ್ಟ್ ಇಂಡಿಯಾ ಕಂಪನಿ ಸರಕಾರಿಯಲ್ಲ ಖಾಸಗಿ ಕಂಪನಿಯಾಗಿತ್ತು. ಆದರೆ ಅದು ಭಾರತದ ಮೇಲೆ ಅಧಿಕಾರವನ್ನು ಸ್ಥಾಪಿಸಿ ಆಂಗ್ಲ-ಸರಕಾರಕ್ಕೆ ಕೊಟ್ಟಿತ್ತು. ಆಂಗ್ಲ ವೈದ್ಯನು ಮೊಗಲ ಚಕ್ರವರ್ತಿಯಿಂದ ಬಳುವಳಿಯನ್ನು ಪಡೆಯದೆ ರಾಷ್ಟ್ರದ ಬಗ್ಗೆ ಯೋಚಿಸಿದ, ಹಾಗೂ ತೆರಿಗೆ ರಹಿತ ವಹಿವಾಟಿಗೆ (ವ್ಯಾಪಾರಕ್ಕಾಗಿ) ಅನುಮತಿ ಕೇಳಿದ ರಷ್ಯಾ ಬೆಳದದ್ದು ಸಮಾಜವಾದದಿಂದಲ್ಲ, ರಾಷ್ಟ್ರೀಯ ಪ್ರಜ್ಞೆಯಿಂದ ವಿಕಸಿಸಿತು. ಯುದ್ಧ ಕಾಲದಲ್ಲಿ ಅದೂ ಕೂಡ ತನ್ನ ಹಳೆಯ ದೇಶದ (ರಾಷ್ಟ್ರದ) ಘೋಷಣೆಯನ್ನು ಕೂಗಿತು. ಎಲ್ಲಾ ಅವ್ಯವಸ್ಥೆಯೂ ರಾಷ್ಟ್ರೀಯ ಭಾವನೆಯ ಅಭಾವದಿಂದಲೇ ಆಗುತ್ತಿವೆ. ರಾಷ್ಟ್ರೀಯ ಭಾವನೆ ಇದ್ದರೆ ಬಂಡವಾಳ ಶಾಹಿಯೂ ದೇಶದ ಹಿತಕ್ಕಾಗಿ ನಿರ್ಣಯವನ್ನು ತೆಗೆದುಕೊಳ್ಳುವನು. ಈ ದೇಶದ ಜನರು ಈ ಮೂಲ ವಿಷಯದ ಬಗ್ಗೆ ಚಿಂತಿಸುವುದಿಲ್ಲ ಎನ್ನುವುದು ದುರಾದೃಷ್ಟದ ಸಂಗತಿಯಾಗಿದೆ. ನಮಗೆ ವೈಭವ ಬೇಕಾದರೆ ಇದು ನಮ್ಮ ದೇಶ, ಇದಕ್ಕಾಗಿ ನಾವು ಯೋಚಿಸಬೇಕು ಎಂಬುದನ್ನು ಅರಿತುಕೋ. ಇದೇ ಸಂಸ್ಕಾರವನ್ನು ನಮ್ಮ ಮನದಲ್ಲಿ ಬೆಳೆಸಿಕೊಳ್ಳಬೇಕಾಗಿದೆ. ರಾಷ್ಟ್ರಕ್ಕಾಗಿ ಯಾವ ಕೆಲಸವಾದರೂ ಸರಿ, ಅವನ್ನೆಲ್ಲ ನಾವು ಮಾಡಬೇಕಾಗಿದೆ. ಇದರಲ್ಲಿ ಯಾವುದೇ ತರಹದ ಭೇದ-ಭಾವ ಉಂಟಾಗಬಾರದು. ಏಕೆಂದರೆ 238 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪ್ರಕೃತಿಯು ಯಾವುದೇ ತೆರನಾದ ಭೇದಭಾವವನ್ನು ಉಂಟುಮಾಡುವುದಿಲ್ಲ. ನಮ್ಮ ಪ್ರಾಚೀನ ಕಾಲದ ವರ್ಣವ್ಯವಸ್ಥೆಯಿಂದಲೇ ಜಾತಿವ್ಯವಸ್ಥೆ ಬಂದದ್ದೆಂದು ಹೇಳುತ್ತಾರೆ. ಒಬ್ಬರೊಂದು ಕಸುಬನ್ನು ಮಾಡಿದರೆ, ಇನ್ನೊಬ್ಬರು ಮತ್ತೊಂದು ಉದ್ಯೋಗವನ್ನು ಮಾಡುತ್ತಿದ್ದರು. ಎಣ್ಣೆ ತೆಗೆಯುವವರು ಗಾಣಿಗರಾದರು, ಚರ್ಮದ ಕೆಲಸಮಾಡುವವರು ಚಮ್ಮಾರರಾದರು. ಮರದ ಕೆಲಸ ಮಾಡುವವರು ಬಡಿಗರಾದರು. ತರಕಾರಿ ಅಂಗಡಿಯವರು ತರಕಾರಿ ಮಾರುವವರಾದರು, ಓದು-ಬರಹ ಕಲಿಸುವವರು ಬ್ರಾಹ್ಮಣರಾದರು, ತಲೆತಲಾಂತರದಿಂದ ತಮ್ಮ ವ್ಯವಸಾಯ ಮುಂದುವರಿಯುತ್ತಾ ಬಂದಿದ್ದರಿಂದ ಜಾತಿ ಜನ್ಮಗತವಾಗಿ ಹೋಯಿತು. ಆದರೆ ಈಗ ಇದೇ ಕಾರಣದಿಂದ ಇವುಗಳಲ್ಲಿ ಭೇದಗಳಾಗಿವೆ. ಆದರೆ ಈ ಭೇದದಿಂದಾಗಿ ಎಲ್ಲರೂ ಒಬ್ಬರಿಂದೊಬ್ಬರು ಬೇರೆಯಾಗಿಲ್ಲ. ಎಲ್ಲರೂ ಸೇರಿಕೊಂಡು ಉದ್ಯೋಗವನ್ನು ಮಾಡುವರು. ದುರಾದೃಷ್ಟದಿಂದ ಇಂದು ಈ ಪರಸ್ಪರ ಅವಲಂಬಿಕೆ ಕೊನೆಗೊಳ್ಳುತ್ತಾ ಬಂದಿದೆ. ಪ್ರತಿಯೊಬ್ಬನು ತನ್ನ ರಾಜ್ಯ, ಜಾತಿಗಾಗಿ ಎದ್ದುನಿಲ್ಲುತ್ತಾನೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಕಂಡುಬರುತ್ತಿವೆ. ರಾಷ್ಟ್ರವನ್ನು ಮರೆತುಬಿಡುತ್ತಾರೆ. ರಾಷ್ಟ್ರವನ್ನು ಮರೆತುಬಿಟ್ಟರೆ ರಾಜನೀತಿಯ ದಳಗಳು ನಡೆಯುವುದಿಲ್ಲ. ರಾಷ್ಟ್ರವನ್ನು ಮರೆತರೆ ವ್ಯಾಪಾರ ಮುಂದುವರೆಯಲು ಸಾಧ್ಯವಿಲ್ಲ. ರಾಜನೀತಿಯು ರಾಷ್ಟ್ರಕ್ಕಾಗಿಯೇ ಇದೆ. ರಾಷ್ಟ್ರವನ್ನು ಮರೆತರೆ ವಿದ್ಯಾ-ಬುದ್ಧಿ ಯಾವುದಕ್ಕೂ ಬೆಲೆ ಇರುವುದಿಲ್ಲ. ರಾಷ್ಟ್ರದ ಸ್ಮರಣೆಯಿಂದ ಎಲ್ಲದರ ಮೌಲ್ಯ ಹೆಚ್ಚುತ್ತದೆ. ರಾಷ್ಟ್ರಕ್ಕಾಗಿ ಎದ್ದುನಿಂತಾಗ ವ್ಯಕ್ತಿಯ ಮೌಲ್ಯವು ಹೆಚ್ಚುತ್ತದೆ. ಇದರಿಂದಾಗಿಯೇ ರಾಷ್ಟ್ರಪತಿಗಳಿಗೆ ಮಹತ್ವವಿರುತ್ತದೆ. ನಮ್ಮ ದೇಶದಲ್ಲಿ ಬಹಳಷ್ಟು ಜನರು ಸಿಗುತ್ತಾರೆ. ಇವರು ದೇಶಕ್ಕಾಗಿಯೇ ಎಲ್ಲಾ ಎಂದು ಹೇಳುತ್ತಾರೆ. ಆದರೆ ದೇಶಕ್ಕಾಗಿ ದುಡಿಯುವ ಸದಾವಕಾಶ ಬಂದಾಗ ಹೇಳುತ್ತಾರೆ ನಮ್ಮ ಪ್ರಾಣವನ್ನೇ ಕೊಡುತ್ತೇವೆ ಪ್ರಾಣ ತೆಗೆದುಕೊಳ್ಳಿ, ಮಿಕ್ಕಿದ್ದೆಲ್ಲ (ಬೇರೆಲ್ಲ) ಬಿಟ್ಟುಬಿಡಿ. ಸತ್ಯವೇನೆಂದರೆ ನಾವು ದೇಶಕ್ಕಾಗಿ ಏನನ್ನಾದರೂ ಮಾಡಲು ಸದಾಕಾಲ ಸಿದ್ಧವಾಗುವುದು ಸರಳ ಸಾಧ್ಯವಲ್ಲ. ಇದಕ್ಕಾಗಿ ಮನಸ್ಸಿನ ಮೇಲೆ ಸತತವಾಗಿ ಸಂಸ್ಕಾರಗಳು ಪ್ರಭಾವ ಬೀರುವ ಅವಶ್ಯಕತೆ ಇದೆ. ನಾಲ್ಕು ಜನರು ಸೇರಿ ಒಂದೇ ನಿರ್ಧಾರದಿಂದ (ನಿರ್ಣಯದಿಂದ) ಕೆಲಸಮಾಡುವುದು ಕೂಡ ಸರಳವಲ್ಲ. ಇದಕ್ಕಾಗಿ ಸಂಸ್ಕಾರಗಳು, ಶಿಕ್ಷಣ ಮತ್ತು ಹವ್ಯಾಸಗಳ ಅವಶ್ಯಕತೆ ಇರುತ್ತದೆ. ಒಂದು ವೇಳೆ ರಾಷ್ಟ್ರೀಯ ಭಾವನೆ ನಮ್ಮಲ್ಲಿದ್ದರೆ ನಾವೆಲ್ಲರೂ ಸೇರಿ ಕಾರ್ಯನಿರ್ವಹಿಸಬಹುದು. * ಆಕರ : ರಾಷ್ಟ್ರಧರ್ಮ- ಹಿಂದಿ ಮಾಸಪತ್ರಿಕೆ, 1968ರ ಜುಲೈ ಸಂಚಿಕೆ, ಮೂಲ ಪುಟದ ಸಂಖ್ಯೆ : 116-117 ಮತ್ತು 123. (ಸಂ.) ಕೃತಯುಗವನ್ನು ನಿರ್ಮಿಸಿ ಇಂದಿನ ರಾಜಕೀಯವು ಎರಡು ಯುಗಗಳ ಸಂಧಿಕಾಲದ ರಾಜಕೀಯವಾಗಿದೆ. ಇದು ಸಂಕ್ರಮಣದ ತಕ್ಕಮಟ್ಟಿನ ವ್ಯವಸ್ಥೆಯಾಗಿದ್ದು, ಇದನ್ನು ಬಾಳಿಕೆಯುಳ್ಳದ್ದೆಂದು ತಿಳಿಯುವ ತಪ್ಪನ್ನು ಮಾಡದಿರಿ ಹಾಗೂ ಇದು ಭಾವೀ ರಾಜಕೀಯದ ಉದಾಹರಣೆ ಎಂದೂ ತಿಳಿಯದಿರಿ. ಕಳೆದು ಹೋದ ಸಮಯವು ವಾಸ್ತವವಾಗಿದೆ. ವರ್ತಮಾನವು ಅಸ್ಥಿರವಾದರೆ, ಭವಿಷ್ಯವು ಅಜ್ಞಾತವಾಗಿದೆ. ಅಜ್ಞಾತದಿಂದ ಕೆಲ ಜನರಿಗೆ ಆತಂಕ ಉಂಟಾಗುತ್ತದೆ. ಆದ್ದರಿಂದಲೇ ಅವರು ವರ್ತಮಾನಕ್ಕೆ ಅಂಟಿಕೊಂಡಿರಬಯಸುತ್ತಾರೆ ಅಥವಾ ಕಳೆದದ್ದನ್ನು ಮರಳಿ ಪಡೆಯಬಯಸುತ್ತಾರೆ. ಸೃಷ್ಟಿಯ ನಿಯಮ ಹಾಗೂ ಸಮಯದ ವಿರುದ್ಧವಾಗಿ ಕೆಲಸ ಮಾಡುವವರು ಸಫಲರಾಗಲು ಸಾಧ್ಯವಿಲ್ಲ. ಭವಿಷ್ಯಕ್ಕೆ ಅಂಜದಿರಿ, ಬದಲಾಗಿ ಅದರ ನಿರ್ಮಾಣದಲ್ಲಿ ಆಸಕ್ತಿಯನ್ನು ಹೊಂದಿರಿ. ಕಟ್ಟಿದ ಕನಸುಗಳನ್ನು ಶೃಂಗರಿಸಿ, ಕಲ್ಪನೆಯನ್ನು ಕಾರ್ಯದಿಂದ ಕಟ್ಟಿ ಮತ್ತು ಯೋಜನೆಗಳನ್ನು ಯುಕ್ತಿಯಿಂದ ಪೂರ್ಣಗೊಳಿಸಿ. ಕೃತಯುಗದ ನಿರ್ಮಾಣವನ್ನು ಮಾಡುವುದಾದರೆ ಈ ಶ್ಲೋಕವನ್ನು ಮರೆಯದಿರಿ- ಕಲಿಃ ಶಯಾನೋ ಭವತಿ ಸಂಜಿಹಾನಸ್ತುದ್ವಾಪರಃ ಉತ್ತಿಷ್ಠಸ್ತ್ರೇತಾಮಾಪ್ನೋತಿ ಕೃತಂ ಸಂಪದ್ಯತೇ ಚರನ್ || ಚರೈವೇತಿ, ಚರೈವೇತಿ || ವಾದಗಳ ವಿವಾದಗಳಲ್ಲಿ ಸಿಲುಕುವ ಅವಶ್ಯಕತೆ ಇಲ್ಲ. ನಿಮ್ಮ ಅಂತಃಕರಣದ ಪ್ರವಾಹವನ್ನೇ ಸಾಕ್ಷಿಯಾಗಿಸಿ ನಡೆಯಿರಿ, ಇದೇ ಧರ್ಮವಾಗಿದೆ. ಅದರಿಂದಲೇ ತಪಸ್ಸಿನ ಸ್ಪೂರ್ತಿ ದೊರೆಯುವುದು ಮತ್ತು ಕಾರ್ಯಕ್ಕೆ ಮಾರ್ಗ ದೊರೆಯುವುದು. ಯಾವ ವ್ಯವಸ್ಥೆ ಮತ್ತು ಪ್ರವಾಹ, ಯಾವ ರಾಜಕೀಯ ಮತ್ತು ಅರ್ಥನೀತಿ, ಯಾವ ಸಾಮಾಜಿಕ ನಿಯಮ ಮತ್ತು ಶಿಕ್ಷಣ ಪದ್ಧತಿ ನಮ್ಮನ್ನು ಕರ್ಮ ವಿಹೀನ, ಸೋಂಬೇರಿ, ಮತ್ತು ನಿದ್ರೆಯ ಸ್ವಭಾವದವರನ್ನಾಗಿ ಮಾಡುವುದೋ ಅದೇ ಕಲಿಯುಗವಾಗಿದೆ. ಅದರ ಪರಿವರ್ತನೆ ಅತ್ಯಗತ್ಯ. ಕೃತಯುಗದ ಉದ್ಘೋಷವಿಂತಿದೆ- ಚರೈವೇತಿ. ಆದುದರಿಂದ ರಾಜ ಮತ್ತು ಪ್ರಜೆ, ಬಂಡವಾಳಗಾರ ಮತ್ತು ಕಾರ್ಮಿಕ, 240 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬಡವ ಮತ್ತು ಬಲ್ಲಿದರೆಲ್ಲರಿಗೂ ಪರಿಶ್ರಮವೆಂಬ ಆರಾಧನೆಯಲ್ಲಿ ತೊಡಗಿಸಬೇಕಾಗಿದೆ. ಪರಿಶ್ರಮದಿಂದಲೇ ಅನ್ಯರ ವಶವಾದ ರಾಜನೈತಿಕ, ಆರ್ಥಿಕ ಮತ್ತು ಸಾಮಾಜಿಕ ಸಂರಕ್ಷಣೆಯನ್ನು ಅಂತ್ಯಗೊಳಿಸಬೇಕಾಗುವುದು. ಪರಿಶ್ರಮಕ್ಕಾಗಿ ಹಂಬಲಿಸುತ್ತಿರುವ ಭುಜಗಳಿಗೆ ಕೆಲಸವನ್ನು ಕೊಡಲೇಬೇಕು. ಯಾವ ರಾಷ್ಟ್ರದಲ್ಲಿ ಯಥೇಚ್ಛವಾಗಿ ಕೆಲಸಗಳಿವೆಯೋ ಅಲ್ಲಿ ಬಡತನ ಮತ್ತು ಅಸಮಾನತೆ ಉಳಿಯಲು ಸಾಧ್ಯವಿಲ್ಲ. ಎಲ್ಲಿ ಸಮಾನತೆ ಹಾಗೂ ಸಿರಿವಂತಿಕೆ ಇದೆಯೋ ಅಲ್ಲಿ ಸತ್ಯವಿದೆ ಮತ್ತು ಅಲ್ಲೆ ಶಿವನಿದ್ದಾನೆ, ಅದೇ ಸುಂದರವಾಗಿದೆ. ಹೊಸ ಯುಗವು ಶ್ರಮದ ಯುಗವಾಗಲಿದೆ. ಆಗಲೇ ಕೃತ ಯುಗವು ಆರಂಭವಾಗುವುದು. ನಮ್ಮಲ್ಲಿ ಪ್ರತಿಯೊಬ್ಬರು ಈ ಯುಗದ ನಿರ್ಮಾಣದಲ್ಲಿ ನಿರತವಾಗಲಿ ಎನ್ನುವುದೇ ಅಭಿಲಾಷೆಯಾಗಿದೆ. ವ್ಯಾಮೋಹದ ಯುಗ ಮುಗಿಯಿತು. ಮೋಹ-ನಿದ್ರೆಯನ್ನು ಕೊನೆಗೊಳಿಸಿ ಜಾಗ್ರತೆಯ ವ್ಯಾಕುಲವಾಗುತ್ತಿದೆ. ಇಂದಿನ ತಳಮಳವೇ ಇದರ ಸಂಕೇತವಾಗಿದೆ. ಕೆಲವರು ಇದರ ಬೆನ್ನನ್ನು ತಟ್ಟಿ ಅಥವಾ ಮಾದಕ ದ್ರವ್ಯವನ್ನು ಕುಡಿಸಿ ಮತ್ತೆ ಮಲಗಿಸಿಬಿಡಬೇಕೆಂದಿದ್ದಾರೆ. ಇವರಿಂದ ಎಚ್ಚರವಾಗಿರಿ. ಈಗ ನಾವು ಕಣ್ಣನ್ನು ತೆರೆದು ಎದ್ದುನಿಲ್ಲಬೇಕಾಗಿದೆ ಮತ್ತು ಮುಂದುವರಿಯುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಯಾರು ಮಾರ್ಗದ ಭಯವನ್ನುಂಟುಮಾಡಿ ಮುಂದುವರೆಯದಿರುವಂತೆ ಸಲಹೆ ನೀಡುತ್ತಾರೋ ಅವರ ಮಾತನ್ನು ಕೇಳದಿರಿ. ತಪ್ಪುದಾರಿಯಲ್ಲಿ ಮುನ್ನಡೆದರೂ ಕೂಡ ಏನೂ ಹಾನಿಯುಂಟಾಗದು, ಆದರೆ ನಡೆಯುವ ಶಕ್ತಿ ಹೊರಟುಹೋದರೆ ಒಣಗಿ ಹೋಗುತ್ತೀರಾ. ನಮ್ಮ ದಾರಿಯನ್ನು ನಾವೇ ನೋಡಿಕೊಳ್ಳಬೇಕು. ಯಾವ ಕಡೆಗೆ ನಾವು ಸಾಗುತ್ತೇವೋ ಅದೇ ದಾರಿಯಾಗುತ್ತದೆ. ___________ * ಆಕರ : ಪಾಂಚಜನ್ಯ, ಡಿಸೆಂಬರ್ 29, 1969 (ಸಂ.) ಶ್ರೀ ಗುರೂಜಿಯವರ ಬಗ್ಗೆ ``ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾಗಿಯಲ್ಲ, ಶ್ರೀ ಮಾಧವರಾವ ಗೋಲವಲಕರರಿಗಾಗಿ. ಶ್ರೀ ಗುರೂಜಿಯವರ ವ್ಯಕ್ತಿತ್ವದ ಬಗ್ಗೆ ನನಗೆ ಶ್ರದ್ಧೆ ಇದೆ. ಹೀಗೆ ಒಂದು ಸಾರಿ ಸಂಘ ವಿರೋಧಿ ಸತ್ಪುರುಷನೊಬ್ಬ ಹೇಳಿದ್ದನು. ಇದೇ ರೀತಿ ಒಂದು ಸಮಯವಿತ್ತು. ಆಗ ದೊಡ್ಡ ದೊಡ್ಡವರೆಲ್ಲಾ ಹೇಳುತ್ತಿದ್ದರು, ``ಸಂಘ ಮತ್ತು ಸಂಘದ ಸ್ವಯಂಸೇವಕರಂತು ಒಳ್ಳೆಯವರೇ, ಆದರೆ ಅವರ ನಾಯಕ ಅವರನ್ನು ತಪ್ಪುದಾರಿಗೆ ಕರೆದೊಯ್ಯುತ್ತಿದ್ದಾನೆ". ಈ ಇಬ್ಬರ ಭಾವನೆಗಳಲ್ಲಿ ವ್ಯತ್ಯಾಸವಿರಬಹುದು, ಆದರೆ ಇಬ್ಬರ ವಿಚಾರ ಮಂಡನೆಯೂ ಒಂದೇ ಆಗಿದೆ. ಅರ್ಥಾತ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮತ್ತು ಶ್ರೀಮಾಧವರಾವ ಗೋಲವಲ್‍ಕರ್ ಎರಡು ವ್ಯಕ್ತಿಗಳಾಗಿದ್ದಾರೆ. ನನ್ನ ಅಭಿಪ್ರಾಯದ ಪ್ರಕಾರ ಇಂತಹ ಸತ್ಪುರುಷರು ಸಂಘವನ್ನು ಅರ್ಥಮಾಡಿಕೊಂಡು ಮತ್ತು ಶ್ರೀಗುರೂಜಿಯನ್ನೂ ತಿಳಿದುಕೊಂಡಿಲ್ಲ. ಸಂಘದ ಸರಸಂಘಚಾಲಕತ್ವದ ಹೊರತಾಗಿ ಶ್ರೀ ಗುರೂಜಿಯವರ ಬೇರೆ ವ್ಯಕ್ತಿತ್ವವಿಲ್ಲ ಎಂದು ನಾನು ಹೇಳುವಾಗ, ಅವರಲ್ಲಿ ದೊಡ್ಡತನದ ಅಭಾವವಿದೆ ಎಂಬುದು ನನ್ನ ಅಭಿಪ್ರಾಯವಲ್ಲ. ಸರಸಂಘಚಾಲಕನಾದಾಗ ಅವರು ಹೇಳಿದ್ದರು. ``ಇದು ವಿಕ್ರಮಾದಿತ್ಯನ ಸಿಂಹಾಸನವಾಗಿದೆ. ಇಲ್ಲಿ ಕುಳಿತು ಒಬ್ಬ ಕುರುಬನ ಮಗನೂ ಕೂಡ ನ್ಯಾಯಬದ್ಧವಾಗಿ ತೀರ್ಪನ್ನು ಕೊಡಬಲ್ಲ". ವಿನಯದಿಂದಾಗಿ ಅವರು ತಮ್ಮನ್ನು ಒಬ್ಬ ಕುರುಬನ ಹುಡುಗನಿಗೆ ಹೋಲಿಸಿಕೊಂಡರು. ಆದರೆ ಇಲ್ಲಿ ಅವರ ಅದ್ವಿತೀಯವಾದ ಮಹತ್ವ ಸಿಂಹಾಸನದಿಂದಾಗಿರದೆ ಅವರ ಸ್ವಸಾಮರ್ಥ್ಯದಿಂದ ಎಂದು ತಿಳಿಯುವ ತಪ್ಪನ್ನು ಯಾರೂ ಮಾಡಬಾರದು. ಹೌದು, ಅವರು ತಮ್ಮ ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯವನ್ನು ಸಂಘಕ್ಕೆ ಸಮರ್ಪಿಸಿದ್ದರು. ಇದೇ ಅವರ ಬದುಕಿನ ಗುರಿ ಮತ್ತು ದೊಡ್ಡತನದ ರಹಸ್ಯ. 1938ನೇ ಇಸ್ವಿಯಲ್ಲಿ ನಡೆದ ಶಾರೀರಕ ಶಿಕ್ಷಣದ ಶಿಬಿರದಲ್ಲಿ ಆದ್ಯ ಸರಸಂಘಚಾಲಕ ಪರಮಪೂಜ್ಯ ಡಾ. ಹೆಡಗವಾರರವರ ಸೇವೆಯಲ್ಲಿ ಗೌರವ ಕಾಣಿಕೆ ಕೊಡಲಾಗುತ್ತಿತ್ತು. ಪ್ರತಿಯೊಬ್ಬರು ತಮ್ಮ ತಮ್ಮ ಶ್ರದ್ಧೆಗನುಗುಣವಾಗಿ ಏನನ್ನಾದರು ಕಾಣಿಕೆಯ ರೂಪದಲ್ಲಿ ಕೊಟ್ಟರು. ಆದರೆ ಯಾರು ಏನನ್ನು ಕೊಟ್ಟರು 242 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಂಬುವುದು ಯಾರಿಗೂ ತಿಳಿಯಲಿಲ್ಲ. ಒಬ್ಬ ಸ್ವಯಂಸೇವಕ ಬೇರೆ ಏನನ್ನೂ ಕೊಡದೇ ತನ್ನ ಶ್ರದ್ಧೆಯಂತೆ ಕೈಗಡಿಯಾರದ ಚಿನ್ನದ ಚೈನನ್ನೇ ಡಾ. ಹೆ. ಅವರ ಸೇವೆಯಲ್ಲಿ ಇಟ್ಟುಬಿಟ್ಟ, ಅಷ್ಟೆ. ಚೈನನ್ನು ಉಡುಗೊರೆಯಾಗಿ ಕೊಟ್ಟ ಸ್ವಯಂಸೇವಕ ನಮ್ಮೆಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಲ್ಲದೆ ಆ ದಿನದ ಹಿರೋ ಆಗಿಬಿಟ್ಟ. ಸರ್ವಾಧಿಕಾರಿಯಾದುದ್ದರಿಂದ ಸಮಾರೋಪ ಭಾಷಣ ಮಾಡುತ್ತಾ ಶ್ರೀ ಗುರೂಜಿಯವರು ಪ್ರಸ್ತುತ ಚೈನನ್ನು ವರ್ಣಿಸುತ್ತಾ ಹೇಳಿದರು: ``ಚೈನನ್ನು ಉಡುಗೊರೆಯನ್ನಾಗಿ ನೀಡುವ ಸ್ವಯಂಸೇವಕನ ಮನಸ್ಸಿನಲ್ಲಿ ಡಾ. ಹೆ. ಅವರ ಬಗ್ಗೆ ಅತ್ಯಂತ ಪ್ರೀತಿ, ಶ್ರದ್ಧೆ ಮತ್ತು ಗೌರವವಿದೆ ಎಂಬುದನ್ನು ನಾನು ಅರಿತಿದ್ದೇನೆ. ಆದರೂ ಅವನು ಸಂಪೂರ್ಣವಾಗಿ ಸ್ವಯಂಸೇವಕನಾಗಿಲ್ಲ. ಎಲ್ಲೋ ಒಂದು ಕಡೆಗೆ ಅವನಲ್ಲಿ ಅಹಂ ಭಾವ ಅಡಗಿದೆ. ಯಾವ ಉಡುಗೊರೆ ಅವನಿಂದ ಕೊಡಲಾಗಿದೆಯೋ ಅದರಿಂದ ಅವನ ಸ್ವಭಾವವು ಹೊರತಾಗಿಲ್ಲ. ಎಲ್ಲರೂ ಕೊಟ್ಟಂತಹ ಕಾಣಿಕೆಯೊಂದಿಗೆ ಕೈಜೋಡಿಸದೆ ಬೇರೆಯದನ್ನು ಕೊಡುವ ಸ್ವಭಾವದಲ್ಲಿಯೇ ಸ್ವವ್ಯಕ್ತಿತ್ವ, ಭಿನ್ನತೆ ಮತ್ತು ಅಹಂಕಾರ ಅಡಗಿಕೊಂಡಿದೆ.'' ಶ್ರೀ ಗುರೂಜಿಯವರ ಈ ಮಾತುಗಳನ್ನು ಆಲಿಸಿದ ತಕ್ಷಣವೇ ನಮ್ಮೆಲ್ಲರಿಗೂ ಅತಿದೊಡ್ಡ ಆಘಾತವಾಯಿತು. ಆದರೆ ಸಂಘದ ಸ್ವಯಂಸೇವಕನಾಗಲು ನಮ್ಮತನವನ್ನು ಎಷ್ಟರಮಟ್ಟಿಗೆ ಅದರಲ್ಲೇ ಸೇರಿಸಿಬಿಡಬೇಕು ಎಂಬುವುದರ ಬಗ್ಗೆ ಎಂತಹ ಪಾಠವನ್ನು ನಾವು ಕಲಿತೆವೆಂದರೇ ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಸಂಪೂರ್ಣ ಬದುಕನ್ನೇ ಸಂಘದೊಂದಿಗೆ ಒಂದುಗೂಡಿಸುವಂತಹ ಆದರ್ಶವೆಲ್ಲಾದರೂ ಸಿಗುವುದಾದರೆ, ಅದು ಪ.ಪೂ.ಗುರೂಜಿಯವರ ಜೀವನದಲ್ಲಿ ಮಾತ್ರ. ಯಾವುದಾದರೂ ಗುರಿ ಮತ್ತು ಕಾರ್ಯದೊಂದಿಗೆ ಹೊಂದಾಣಿಕೆ ಮಾಡುವುದು ಸರಳವಲ್ಲ. ಅದು ವಿಶೇಷವಾಗಿ ಆ ವ್ಯಕ್ತಿಗೆ ಯಾರು ಆ ಸಂಘದ ಪ್ರಮುಖ ನಾಯಕನಾಗಿದ್ದಾನೆ, ಒಂದು ವೇಳೆ ಬೇರೊಬ್ಬ ವ್ಯಕ್ತಿಯೆದುರು ವ್ಯಷ್ಟಿ ಮತ್ತು ಸಮಷ್ಟಿಯ ಮಧ್ಯದಲ್ಲಿ ಸಂಘರ್ಷವುಂಟಾದಾಗ ಅಥವಾ ಮಾರ್ಗದ ಆಯ್ಕೆಯಲ್ಲಿ ಗೊಂದಲವುಂಟಾದಾಗ ಅವನು ಸಮಷ್ಟಿಯ ಭಾವನೆಗಳನ್ನು, ಆಸೆ ಆಕಾಂಕ್ಷೆಗಳ ಪ್ರತೀಕವಾದ ತನ್ನ ನಾಯಕನ ಆದೇಶವನ್ನು ಸಂಪೂರ್ಣವಾಗಿ ಪರಿಪಾಲಿಸುತ್ತಾನೆ. ಅವನ ದಾರಿ ಸರಳವಾಗಿದೆ. ಆದರೆ ಯಾವ ವ್ಯಕ್ತಿಯ ಮೇಲೆ ಸಂಪೂರ್ಣ ಕಾರ್ಯದ ನೇತೃತ್ವದ ಜವಾಬ್ದಾರಿ ಇದೆಯೋ ಅವನು ತನ್ನ ಅಂತರಾತ್ಮದ ಸ್ಫೂರ್ತಿಯನ್ನು ಬಿಟ್ಟು ಬೇರೆ ಯಾರಿಂದ ತಾನೇ ಪ್ರೇರಣೆಯನ್ನು ಪಡೆಯುತ್ತಾನೆ? ಪ್ರಜಾಪ್ರಭುತ್ವದ ಪ್ರಚಲಿತ ಪದ್ಧತಿಗಳು ಅಲ್ಲಿ ಅನುಪಯುಕ್ತವಾಗಿ ಬಿಡುವವು. ಅವರ ಸಮಷ್ಟಿಯ ಭಾವನೆ ಮತ್ತು ಅವರ ಹಿತಾಸಕ್ತಿಯ ಬಗ್ಗೆ ಪರಿಚಯವಾಗುವುದಿಲ್ಲ. ಸತ್ಯವು ಅನೇಕ ಅಸತ್ಯಗಳ ಅಥವಾ ಅರ್ಧಸತ್ಯಗಳ ಸರಾಸರಿಯಲ್ಲ ಮತ್ತು ಅವುಗಳ ಶ್ರೀ ಗುರೂಜಿಯವರ ಬಗ್ಗೆ 243 ಕೂಡಿಕೆಯೂ ಅಲ್ಲ. ಅಷ್ಟಕ್ಕೂ ರಾಷ್ಟ್ರೀಯ ಸ್ವಯಂಸೇವಕರ ಸಂಘವೂ ಸಂಪೂರ್ಣ ಸಮಷ್ಟಿಯಲ್ಲವಲ್ಲ. ಅದು ಸಮಷ್ಟಿಯ ಒಂದು ಅಂಶ ಮಾತ್ರವಾಗಿದೆ. ಅವರಿಗೂ ಸಂಪೂರ್ಣ ಸಮಾಜದ ಬಗ್ಗೆ ಚಿಂತೆ ಇರುತ್ತದೆ. ಪ.ಪೂ. ಗುರೂಜಿಯು ಸಮಷ್ಟಿಯ ಹಿತವನ್ನು ತಮ್ಮ ಮುಂದಿಟ್ಟುಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಡೆಸಿದ್ದಾರೆ. ತುಂಬಾ ಸಾರಿ ಇಂತಹ ಜನರು ಯಾರು ಅವರನ್ನು ಅರ್ಥೈಸಿಕೊಂಡಿಲ್ಲವೋ ಅಥವಾ ಸಮೂಹ ಹಿತದ ಬಯಕೆಯ ಬದಲಾಗಿ ಯಾವುದೋ ಒಂದು ಚಿಕ್ಕ ಹಿತವನ್ನು ಮುಂದಿಟ್ಟುಕೊಂಡು ಸಂಘದ ಕೆಲಸ ಕಾರ್ಯಗಳ ವ್ಯವಸ್ಥೆಯನ್ನು ಬಯಸುತ್ತಾರೋ ಅವರು ಶ್ರೀ ಗುರೂಜಿಯವರ ದೃಢತೆ ಮತ್ತು ಸಿದ್ಧಾಂತಗಳ ಬಗ್ಗೆ ಒತ್ತಾಯವನ್ನು ನೋಡಿ ಅವರನ್ನು ಅಧಿನಾಯಕವಾದಿ ಎಂದು ಬಿಡುತ್ತಾರೆ. ಆದರೆ ಅವರು ಈ ತರಹದ ಮನೋಭಾವನೆಯವರಲ್ಲ. ಅವರಿಗೆ ಅವರದಾದ ಅಭಿಪ್ರಾಯವೇನು ಇಲ್ಲ. ಸಂಘದ ಅಭಿಪ್ರಾಯವೇ ಅವರ ಅಭಿಪ್ರಾಯವಾಗಿದೆ ಮತ್ತು ಅವರ ಅಭಿಪ್ರಾಯವೇ ಸಂಘದ ಅಭಿಪ್ರಾಯವಾಗಿದೆ. ಏಕೆಂದರೆ ಅವರು ಸಂಪೂರ್ಣ ಹೊಂದಾಣಿಕೆಯ ಅನುಭವವನ್ನು ಪಡೆದಿದ್ದಾರೆ. ಇಂತಹ ಅನೇಕ ಸಂದರ್ಭಗಳು ದೊರೆತಿವೆ. ಯಾವುದರಲ್ಲೂ ವ್ಯಕ್ತಿ ಮತ್ತು ಸಂಸ್ಥೆಯ ಪ್ರತಿಷ್ಠೆಯ ಯೋಚನೆಯನ್ನು ಮಾಡದೆ ಅವರು ರಾಷ್ಟ್ರದ ಒಳಿತಿಗೆ ಎಲ್ಲಕ್ಕಿಂತ ಮಿಗಿಲಾದ ಮಹತ್ವವನ್ನು ಕೊಟ್ಟಿದ್ದಾರೆ. 1948ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ತಡೆ ಆಜ್ಞೆಯನ್ನು ಹೇರಲಾದಾಗ, ಆ ಸಮಯದಲ್ಲಿ ಒಂದು ವೇಳೆ ಅವರು ಬಯಸಿದ್ದರೆ ಸರ್ಕಾರದ ಆಜ್ಞೆಯನ್ನು ತಿರಸ್ಕರಿಸಿ ತಮ್ಮ ಶಕ್ತಿ ಸಾಮರ್ಥ್ಯದ ಪರಿಚಯವನ್ನು ನೀಡಬಹುದಾಗಿತ್ತು. ಆದರೆ ಅವರು ಸಂಘದ ಕೆಲಸಗಳನ್ನು ತ್ಯಜಿಸಿ ಮತ್ತು ದೇಶ ಪ್ರೇಮದ ಪರಿಚಯವನ್ನು ನೀಡಿದರು. ಸರ್ಕಾರ ತಡೆ ಆಜ್ಞೆಯನ್ನು ತೆಗೆದುಹಾಕಿದ ನಂತರ ಎಲ್ಲೆಡೆ ಅವರಿಗೆ ಭವ್ಯ ಸ್ವಾಗತವನ್ನು ಮಾಡಲಾಯಿತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯ ಆದಿ ಮತ್ತು ಅಂತ್ಯವು ತೋರುತ್ತಿರಲಿಲ್ಲ. ದೊಡ್ಡ ದೊಡ್ಡ ಸಂತರ ಅಹಂಕಾರವನ್ನು ಜಾಗೃತಗೊಳಿಸಲು ಆ ದೃಶ್ಯ ಪರ್ಯಾಪ್ತವಾಗಿತ್ತು. ಗುರೂಜಿಯವರು ಭಾಷಣ ಮಾಡಲು ಎದ್ದುನಿಂತಾಗ ಅವರು ಹೇಳಿದರು: ``ಒಂದು ವೇಳೆ ನಮ್ಮ ಹಲ್ಲುಗಳು ನಾಲಿಗೆಯನ್ನು ಕಚ್ಚಿದರೆ, ಅವನ್ನು ಮುಷ್ಠಿಯಿಂದ ಗುದ್ದಿ ತೆಗೆಯಲಾಗುವುದಿಲ್ಲ. ಜನರು ಆಶ್ಚರ್ಯ ಚಕಿತರಾದರು, ಏಕೆಂದರೆ ಅವರು ತಿಳಿದಿದ್ದರು: ಗುರೂಜಿ ಸರ್ಕಾರ ಮತ್ತು ಅನ್ಯಾಯಗಳನ್ನು ನಿಂದಿಸಿ ಕಟುಮಾತುಗಳನ್ನಾಡುವರು ಎಂದು. ಆದರೆ ಆ ಮಹಾಪುರುಷನ ಅಂತರಾಳವನ್ನು ಜನರಿಗೆ ಅಳೆಯಲಾಗಲಿಲ್ಲ. ಅಲ್ಲಂತೂ 244 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಲ್ಲರಿಗಾಗಿ ಆತ್ಮೀಯತೆ ಮಾತ್ರವಿತ್ತು. ಆ ಆತ್ಮೀಯತೆಯೇ ಅವರ ದೊಡ್ಡತನ ಮತ್ತು ಅವರ ಬಗ್ಗೆ ಅಪಾರವಾದ ಶ್ರದ್ಧೆಗೆ ಕಾರಣವಾಗಿದೆ. ಮತ್ತು ಅವರಲ್ಲಿ ದೊಡ್ಡತನವಿರುವುದರಿಂದಲೇ ಅವರು ಈ ಆತ್ಮೀಯತೆಯಿಂದಲೇ ಮುನ್ನಡೆಯುತ್ತಿರುವುದು. ಒಂದು ಸಾರಿ `ಧರ್ಮಯುಗ' ವಾರಪತ್ರಿಕೆಯು ಭಾರತದ ಅನೇಕ ಮಹಾಪುರುಷರ ಬದುಕಿನ ಧ್ಯೇಯ ನುಡಿಗಳನ್ನು ಪ್ರಕಟಿಸಿತ್ತು. ಪ.ಪೂ. ಗುರೂಜಿಯವರ ಧ್ಯೇಯ ನುಡಿಯು ಎಲ್ಲಕ್ಕಿಂತಲೂ ಚಿಕ್ಕದು, ಆದರೆ ಅರ್ಥಪೂರ್ಣವಾಗಿತ್ತು. ನಾನಲ್ಲ, ನೀನೆ ಈ ಮೂರು ಪದಗಳಲ್ಲಿ ಗುರೂಜಿಯವರ ಸಂಪೂರ್ಣ ಜೀವನವೇ ತುಂಬಿಕೊಂಡಿದೆ. ಈ `ನೀನು' ಯಾರು? ಸಂಘ, ಸಮಾಜ, ದೇವರು, ಅವರು ಈ ಮೂರನ್ನು ಒಗ್ಗೂಡಿಸಿ ಸಾಗುತ್ತಾರೆ. ಮೂವರ ಸೇವೆಯಲ್ಲಿ ಹಗೆತನವೂ ಇಲ್ಲ, ಅಸಮಾನತೆಯೂ ಇಲ್ಲ. `ಒಂದನ್ನು ಮಾಡಿದರೆ, ಎಲ್ಲವೂ ಆದಂತೆ' ಯ ಅನುಗುಣವಾಗಿ ಸಂಘದ ಆರಾಧನೆಯನ್ನು ಮಾಡುತ್ತ ಎಲ್ಲರ ಆರಾಧನೆಯಲ್ಲಿ ತೊಡಗಿದ್ದಾರೆ. ಹೀಗೆ ಅವರ ಬದುಕೇ ಒಂದು ಅರಾಧನೆಯಾಗಿ ಹೋಗಿದೆ. ಒಂದು ಸಾರಿ ನಾವು ದಿನಪತ್ರಿಕೆಯನ್ನು ಓದುತ್ತಿದ್ದೆವು. ಆರಂಭದಿಂದ ಅಂತ್ಯದವರೆಗೂ ಹೆಚ್ಚು ಕಡಿಮೆ ಎಲ್ಲವನ್ನು ಓದಿ ಮುಗಿಸಿದೆವು. ಅಷ್ಟರಲ್ಲೇ ಪ.ಪೂ. ಗುರೂಜಿಯವರು ಕೋಣೆಯೊಳಗೆ ಪ್ರವೇಶಿಸಿ ಸಹಜವಾಗಿಯೇ ದಿನಪತ್ರಿಕೆಯನ್ನೆತ್ತಿಕೊಂಡು ಅಲ್ಲಿ-ಇಲ್ಲಿ ಕಣ್ಣುಹಾಯಿಸಿದರು, ಮುಖ್ಯಾಂಶಗಳನ್ನು ನೋಡಿದರು, ಪುಟ ತಿರುವಿದರು ಮತ್ತು ಪತ್ರಿಕೆಯನ್ನು ಇಟ್ಟುಬಿಟ್ಟರು. ಸಂಭಾಷಣೆ ಆರಂಭವಾಯಿತು. ಈ ನಡುವೆ ಅದೇ ದಿನಪತ್ರಿಕೆಯಲ್ಲಿ ಪ್ರಕಟವಾದ ಸಂಘಕ್ಕೆ ಸಂಬಂಧಿಸಿದ ಒಂದು ಸುದ್ಧಿಯ ಬಗ್ಗೆ ಚರ್ಚೆ ನಡೆಯಿತು. ಆದರೆ ಆ ಸುದ್ದಿ ಇರುವುದಾದರೂ ಎಲ್ಲಿ? ನಾನು ಕೇಳಿದೆ. `ಇದೇ ದಿನಪತ್ರಿಕೆಯಲ್ಲೇ ಇದೆಯಲ್ಲ' ಪೂಜ್ಯರಾದ ಗುರೂಜಿ ಹೇಳಿದರು. ನಾನು ಪೂರ್ತಿ ಪತ್ರಿಕೆಯನ್ನೇ ಓದಿದ್ದೆ, ಆದರೆ ನನಗೆ ಆ ಸುದ್ಧಿ ಎಲ್ಲೂ ಕಾಣಿಸಲೇ ಇಲ್ಲ. ಮತ್ತೆ ಪತ್ರಿಕೆ ತೆಗೆದು ಪುಟ ತಿರುವಿದೆ, ಆದರೂ ಅಲ್ಲೆಲ್ಲೂ ಸಂಘದ ಹೆಸರೂ ಸಹ ಕಾಣಿಸಲಿಲ್ಲ. ನನ್ನ ಈ ವ್ಯಾಕುಲತೆಯನ್ನು ಅರಿತು ದಿನಪತ್ರಿಕೆಯನ್ನು ತೆಗೆದು ಅವರೇ ತೋರಿಸಿ ಇದೇ `ಆ ಸಮಾಚಾರ' ಎಂದರು. ಮಾರುಕಟ್ಟೆ ಧಾರಣೆಯ ಪುಟದಲ್ಲಿ ಒಂದು ಕಡೆಗೆ ಚಿಕ್ಕದಾಗಿ ಸುದ್ದಿ (ಲೇಖನ) ಪ್ರಕಟವಾಗಿತ್ತು. ಎಂತಹ ಕಡೆಯಲ್ಲಿ ಪ್ರಕಟಿಸಿದ್ದಾರೆ. ಈ ಪುಟದಲ್ಲಿ ಕಣ್ಣುಹಾಯಿಸಲು ನಾವೇನು ವ್ಯಾಪಾರಸ್ಥರೇ ಎಂದು ನಾನು ಮನಸ್ಸಲ್ಲೇ ಯೋಚಿಸಿದೆ, ಮರುಕ್ಷಣವೇ ನನ್ನ ಮನಸ್ಸಿನಲ್ಲಿ ವಿಚಾರ ಮೂಡಿತು. ಪ.ಪೂ. ಗುರುಜೀಯವರೂ ಸಹ ವ್ಯಾಪಾರಿಯಲ್ಲವಲ್ಲ ಮತ್ತು ವ್ಯಾಪಾರದ ಲಾಭ-ನಷ್ಟ, ಇಳಿಕೆ-ಏರಿಕೆಯಿಂದ ಎಷ್ಟೋ ದೂರವಿದ್ದಾರೆ. ಅವರ ಕಣ್ಣು ಇದರ ಶ್ರೀ ಗುರೂಜಿಯವರ ಬಗ್ಗೆ 245 ಮೇಲೆ ಹೇಗೆ ಹೋಯಿತು? ಅಷ್ಟಕ್ಕೂ ಅವರು ದಿನಪತ್ರಿಕೆಯನ್ನು ನನ್ನ ಹಾಗೆ ಆರಂಭದಿಂದ ಅಂತ್ಯದವರೆಗೇನು ಪೂರ್ತಿಯಾಗಿ ಓದಿದವರಲ್ಲ. ಲಕ್ಷಣಗಳೇ ಅಂಥದ್ದಾಗಿದ್ದವು. ಎಷ್ಟು ಹೊತ್ತು ಆ ಪತ್ರಿಕೆ ಅವರ ಕೈಯಲ್ಲಿತ್ತೋ ಅಷ್ಟು ಸಮಯದಲ್ಲಿ ಪೂರ್ತಿಯಾಗಿ ಓದಲು ಸಾಧ್ಯವಿರಲಿಲ್ಲ. ನಾನು ನನ್ನ ಸಂಶಯವನ್ನು ಅವರ ಮುಂದಿನ್ನೂ ಇಟ್ಟಿರಲೇ ಇಲ್ಲ, ಆದರೆ ಬಹುಶಃ ಅವರು ಅರಿತುಕೊಂಡು ಸಹಜವಾಗಿಯೇ ಹೇಳಿದರು - ``ಜನರ ಗುಂಪಲ್ಲೂ ತಾಯಿಗೆ ತನ್ನ ಮಗು ಕಾಣಿಸಿಕೊಳ್ಳುತ್ತದೆ. ಕೋಲಾಹಲ (ರಾದ್ಧಾಂತ)ದಲ್ಲೂ ಆತ್ಮೀಯರ ಧ್ವನಿ ಸ್ಫುಟವಾಗಿ ಕೇಳಿಬರುತ್ತದೆ." ನನಗೆ ಅರ್ಥವಾಯಿತು, ಅವರ ಆತ್ಮೀಯತೆಯ ಕಾರಣದಿಂದಲೇ ಅವರು ಈ ಸುದ್ಧಿಯನ್ನು ನೋಡಿದರು. ಮತ್ತು ದೇಶದ ಇಂತಹ ಎಷ್ಟೊಂದು ಸುದ್ಧಿ- ಸಮಾಚಾರಗಳು ಅವರಿಗೆ ಗೋಚರವಾಗುತ್ತವೆ. ಅದೇ ನಾವು ಅಂತಿಂತಹ ರಾಜಕಾರಣಿಗಳು ಭಾಷಣವನ್ನು ಓದಿ-ಓದಿ ಸಮಾಚಾರ, ಪತ್ರಿಕೆಯನ್ನೇ ಅರೆದು ಕುಡಿಯುವ ಪ್ರಯತ್ನವನ್ನು ಮಾಡುತ್ತೇವೆ. ಇದರಲ್ಲಿ ಮುಖ್ಯವಾದ ಅನೇಕ ಸುದ್ಧಿಗಳನ್ನೇ ಬಿಟ್ಟುಬಿಡುತ್ತೇವೆ. ಅವರು ಯಾವಾಗಲೂ ಹೇಳುತ್ತಿರುತ್ತಾರೆ, ``ನಾನಂತೂ ದಿನಪತ್ರಿಕೆಗಳನ್ನು ಓದುವುದಿಲ್ಲ" ವೆಂದು. ಆದರೆ ನಾನು ಹೇಳುತ್ತೇನೆ, ಅವರೇ ನಿಜವಾಗಲೂ ದಿನ-ಪತ್ರಿಕೆಗಳನ್ನು ಓದುತ್ತಾರೆ. ನಾವಂತೂ ಅವರನ್ನು ನೋಡುತ್ತೇವೆ ಮತ್ತು ನೋಡುತ್ತಲೇ ಇರುತ್ತೇವೆ. ಒಂದು ಸಾರಿ ಅವರು ಇತ್ತೀಚಿಗಷ್ಟೆ ಪ್ರಕಟವಾದ ಒಂದು ಪುಸ್ತಕವನ್ನು ತೋರಿಸಿದರು. ಅವರು ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡರು ಮತ್ತು ಅಲ್ಲಿ ಇಲ್ಲಿ ನೋಡುತ್ತಾ ಸಹಜವಾಗಿಯೇ ಒಂದು ಕಡೆಯಿಂದ ಪುಟ ತೆರೆದು ಹೇಳಿದರು. ಇದೇನು ಬರೆದಿದ್ದಾರೆ? ಅಲ್ಲಿ ತಪ್ಪಿತ್ತು. ನಾನು ಅದನ್ನು ಒಪ್ಪಿಕೊಂಡೆ ಅವರು ಮತ್ತೆ ಪುಸ್ತಕವನ್ನು ತಿರುವಿದರು, ಅಲ್ಲೂ ಕೂಡ ಇದೇ ತರಹದ ಇನ್ನೊಂದು ತಪ್ಪು ಕಾಣಿಸಿಕೊಂಡಿತು. ಆಗ ನಾನು ಪುಸ್ತಕವನ್ನು ತೆಗೆದುಕೊಂಡು ಗಮನವಿಟ್ಟಾಗ ಆರಂಭದಿಂದ ಅಂತ್ಯದವರೆಗೂ ನೋಡಿದೆ, ಆದರೆ ಆ ಎರಡೇ ತಪ್ಪುಗಳು ಮಾತ್ರವಿದ್ದವು. ಪ.ಪೂ. ಗುರೂಜಿಯವರ ದೃಷ್ಟಿ ಪ್ರಯತ್ನವಿಲ್ಲದೇ ಆ ತಪ್ಪುಗಳ ಮೇಲೆ ಹೇಗೆ ಹರಿಯಿತು? ಅವರಿಗೆ ಯಾವ ವರವೂ ಸಿಕ್ಕಿಲ್ಲ ಹಾಗೂ ಅದು ಹೋಗಿ ತಪ್ಪುಗಳಲ್ಲಿ ಚುಚ್ಚಿಕೊಳ್ಳುವುದಕ್ಕೆ ಅವರ ದೃಷ್ಟಿ ಕೊನೆಯಿಲ್ಲದ ಬಾಣವು ಆಗಿರಲಿಲ್ಲ. ಇಂತಹ ಹಲವು ಅನುಭವಗಳು ಆಗಿವೆ. ಇಷ್ಟೇ ಹೇಳಬಹುದು, ಇದು ಅವರ ಕಾರ್ಯಗಳ ತಲ್ಲೀನತೆ ಮತ್ತು ಏಕಾಗ್ರತೆಯೇ ಅವರಿಗೆ ಆ ಗುರಿತಪ್ಪದ ದೃಷ್ಟಿಯನ್ನು ಕೊಟ್ಟಿದೆ. ಅದೇ ದೃಷ್ಟಿಯಿಂದಾಗಿಯೇ ಅವರು ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಸತ್ಯದ ದರ್ಶನವನ್ನು ಮಾಡುತ್ತಾರೆ. ಮತ್ತು ಭವಿಷ್ಯದ ಗರ್ಭದಲ್ಲಿ 246 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಏನು ಅಡಗಿದೆ ಎಂಬುವುದರ ಜ್ಞಾನವನ್ನು ಪಡೆಯುತ್ತಾರೆ. ಭವಿಷ್ಯದ ವಿಷಯವಾಗಿದ್ದರಿಂದ ಗಂಭೀರವಾಗಿ ಯೋಚಿಸದೇ ಹೋದರೆ ಈ ಮಾತುಗಳು ತುಂಬಾ ವಿಲಕ್ಷಣವೆನಿಸುತ್ತವೆ. ಆದರೆ ಕೆಲವೇ ದಿನಗಳಲ್ಲಿ ಅವುಗಳ ನಿಜಾಂಶವು ಸಾಬೀತಾಗುತ್ತದೆ. 1947ರಲ್ಲಿ ಅವರು ಭಾವನಾತ್ಮಕ ರಾಷ್ಟ್ರೀಯತೆಯ ಬಗ್ಗೆ ಒತ್ತುಕೊಟ್ಟರು, ಏಕಾಗ್ರತೆಯ ಮಾತನ್ನು ಹೇಳಿದರು. ರಾಷ್ಟ್ರೀಯ ಚಾರಿತ್ರ್ಯದ ಅವಶ್ಯಕತೆಯನ್ನು ತಿಳಿಸಿದರು. ರಾಜಕೀಯದ ಗಡಿಯನ್ನು ವರ್ಣಿಸುತ್ತಾ ಸಾಂಸ್ಕೃತಿಕ ಆಸೆಯ ಆಧಾರದ ಮೇಲೆ ಸಮಾಜ ಸಂಘಟನೆಯ ಸಂದೇಶವನ್ನು ಸಾರಿದರು. ಕಳೆದ ಏಳೆಂಟು ವರ್ಷಗಳು ಅವರ ಪ್ರತಿಯೊಂದು ಹೇಳಿಕೆಗಳನ್ನು ಸತ್ಯವನ್ನಾಗಿ ನಿರೂಪಿಸಿವೆ ಹಾಗೂ ಪ್ರತಿಯೊಂದು ಹೊಸ ಘಟನೆಯು ಅದನ್ನು ಮಿಗಿಲಾಗಿ ಸಮರ್ಥಿಸುತ್ತಾ ಬಂದಿವೆ. ನಾನಂತೂ ನಿಸ್ಸಂಕೋಚವಾಗಿ ಹೇಳಬಲ್ಲೆ. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಬಹಳಷ್ಟು ಮಾರ್ಗದರ್ಶಕರಿರಬಹುದು, ಆದರೆ ತಮ್ಮ ಸಂಪೂರ್ಣ ಜೀವನದ ಪರಿಪೂರ್ಣತೆಯನ್ನು ಕಂಡಿದ್ದಾರೋ, ಮೋಹ ಅಥವಾ ಆತಂಕವಿಲ್ಲದೆ ಧೈರ್ಯವಾಗಿ ಯಾರು ಸತ್ಯಮಾತುಗಳನ್ನಾಡಬಲ್ಲನೋ, ಇಂತಹ ಒಬ್ಬನೇ ಒಬ್ಬ ವ್ಯಕ್ತಿ ಇದ್ದಾನೆ. ಅವರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಶ್ರೀ ಮಾಧವರಾವ್ ಗೋಲವಲ್‍ಕರ್. ಪಾಶ್ಚಿಮಾತ್ಯ ಸಿದ್ಧಾಂತಗಳಿಂದ ಮುಕ್ತವಾಗಿ ಒಂದು ಹೊಸ ಆರ್ಥಿಕ ದಾರ್ಶನಿಕತೆಯ ಹುಡುಕಾಟದಲ್ಲಿ ದೇಶದ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಆಗಸ್ಟ್ 14, 1947ರವರೆಗೆ ಹಲವಾರು ಬಗೆಯ ಆಂದೋಲನಗಳು ಹಾಗೂ ಪ್ರಯತ್ನಗಳು ನಡೆದವು. ಸ್ವದೇಶೀ ಆಂದೋಲನ, ಖಾದಿ ಮತ್ತು ಗ್ರಾಮೋದ್ಯೋಗ, ಉಪ್ಪಿನ ಸತ್ಯಾಗ್ರಹ, ಕಾಡಿನ ಸತ್ಯಾಗ್ರಹ, ತೆರಿಗೆ ವಿರೋಧಿ, ಭೂ ಕಂದಾಯ ವಿರೋಧಿಯಂಥಹ ಆಂದೋಲನಗಳು. ತಿಲಕ್ ಕೋಟಿ ಫಂಡ್ ಹಣಕಾಸು ಫಂಡ್‍ಗಳಂಥವುಗಳ ಆಧಾರದ ಮೇಲೆ ಸ್ಥಾಪಿತವಾದ ಉದ್ಯೋಗಗಳು, ಬಟ್ಟೆ, ಸಕ್ಕರೆ ಕಾರ್ಖಾನೆಗಳ ಸ್ಥಾಪನೆ ಮತ್ತು ಅವುಗಳ ಸಂರಕ್ಷಣೆ ಅಪಮೌಲ್ಯದಂತಹ ಪ್ರಶ್ನೆಗಳನ್ನು ನಾವು ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿದ್ದೇವೆ ಹೊರತು ಆರ್ಥಿಕ ದೃಷ್ಟಿಕೋನದಿಂದಲ್ಲ. ಈ ಆಧಾರದ ಮೇಲೆ ನಾವು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಲ ನೀಡಿದೆವು. ಆದರೆ ಸ್ವಾತಂತ್ರ್ಯಾ ನಂತರ ನಮ್ಮ ಯೋಚನಾ ಲಹರಿಯೇ ಬದಲಾಗಿದೆ. ಪ್ರತಿಯೊಂದನ್ನು ಆರ್ಥಿಕ ನೆಲೆಗಟ್ಟಿನಲ್ಲಿಯೇ ಯೋಚಿಸುತ್ತಿದ್ದೇವೆ. ದೇಶದ ಆರ್ಥಿಕ ಪ್ರಗತಿಯೇ ನಮ್ಮ ಪ್ರಮುಖ ಗುರಿಯಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು ಹಾಗೂ ಆಡಳಿತ ಯೋಜನೆಗಳು ಈ ಉದ್ದೇಶದಿಂದಲೇ ರೂಪಿಸಲ್ಪಡುತ್ತಿವೆ. ಮಾರ್ಕ್ಸ್‌ - ಮಾರ್ಷಲ್‍ನ ಅತಿಯಾದ ಪ್ರಭಾವ ಭಿನ್ನವಾದ ಜೀವನ ಮೌಲ್ಯಗಳು ದೇಶ ಕಾಲಗಳ ವಿಭಿನ್ನ ಪರಿಸ್ಥಿತಿಗಳ ಕಾರಣ ಭಾರತದ ಆರ್ಥಿಕ ವಿಕಾಸದ ರೀತಿಯೂ ಪಾಶ್ಚಿಮಾತ್ಯ ಆರ್ಥಿಕ ವಿಕಾಸದ ರೀತಿಗಿಂತ ಭಿನ್ನವಾಗಿರಲೇಬೇಕು. ಆದರೆ ನಾವು ಮಾರ್ಷಲ್ ಹಾಗೂ ಮಾರ್ಕ್ಸ್‌ನ ಚಿಂತನೆಗಳಿಂದ ಅತಿಯಾಗಿ ಪ್ರಭಾವಿತರಾದಂತೆ ಕಾಣುತ್ತಿದೆ. ಅರ್ಥಶಾಸ್ತ್ರದ ಬಗ್ಗೆ ಅವರು ನೀಡಿದ ವ್ಯಾಖ್ಯೆಯೇ ಅಂತಿಮವೆಂದೂ ತಿಳಿಯುತ್ತಿದ್ದೇವೆ. ಆದರೆ ನಿಜಸಂಗತಿಯೆಂದರೆ ಮಾಕ್ರ್ಸ್‍ವಾದ ಅಥವಾ ಮಾರ್ಷಲ್‍ನ ಸಿದ್ಧಾಂತವೂ ಅಲ್ಲಿನ ವ್ಯವಸ್ಥೆಯ ಪರಿಧಿಯ ಹೊರಗೆ ಗಮನ ಹರಿಸುತ್ತಿಲ್ಲ. ಪಾಶ್ಚಿಮಾತ್ಯ ಆರ್ಥಿಕ ಸಮೃದ್ಧಿ ಅದರ ಅರ್ಥೋತ್ಪಾದನೆ ನಿಸ್ಸಂಶಯವಾಗಿ ನಮ್ಮ ಮನಸ್ಸಿನಲ್ಲಿ ಶ್ರದ್ಧೆಯನ್ನು ಉಂಟುಮಾಡಿದೆ. ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರಲ್ಲಿ ನೀಡಿದ ವಿವೇಚನಾತ್ಮಕ ಸಾಹಿತ್ಯದ 248 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಗರಿಮೆಯು ಸಹಜವಾಗಿಯೇ ಅವರ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಈ ರೀತಿಯ ಅತಿ ಶ್ರೇಷ್ಠತೆಯ ಭಾವನೆಯಿಂದ ಹೊರಬರುವುದು ನಿಜವಾಗಿಯೂ ಕಷ್ಟಸಾಧ್ಯವಾಗಿದೆ. ಅಂತರ್ಗತ ಸ್ವಾರ್ಥದ ಕೋಟೆ ಭಾರತದಲ್ಲಿರುವ ಪಾಶ್ಚಾತ್ಯ ಅರ್ಥಶಾಸ್ತ್ರದ ಭಾರತೀಯ ವಿದ್ವಾಂಸರು ಹಾಗೂ ಇನ್ನಿತರ ಕೆಲವೇ ಕೆಲವು ವ್ಯಕ್ತಿಗಳ ಹಿತವೂ ಪಾಶ್ಚಾತ್ಯ ಅರ್ಥವ್ಯವಸ್ಥೆ ಮತ್ತು ಉತ್ಪಾದನಾ ಪ್ರಣಾಳಿಕೆಯನ್ನು ಅವಲಂಬಿಸಿದೆ. ಹೀಗಾಗಿ ಅವರು ಈ ವ್ಯವಸ್ಥೆಯನ್ನೇ ಸಮರ್ಥಿಸುತ್ತಿದ್ದಾರೆ. ಕಳೆದ ಒಂದು ಶತಮಾನದಲ್ಲಿ ವಿಕಸಿತವಾದ ಭಾರತದ ಅರ್ಥವ್ಯವಸ್ಥೆಯಿಂದಾಗಿ ಭಾರತ ಮತ್ತು ಪಾಶ್ಚಾತ್ಯ ದೇಶಗಳ ಔದ್ಯೋಗಿಕ ವ್ಯವಸ್ಥೆಯಲ್ಲಿ ಪರಸ್ಪರ ಪೂರಕವಾಗಿದೆ. ಆದರೆ ಈ ರೀತಿಯ ವ್ಯವಸ್ಥೆಯು ಭಾರತದ ಪರವಾಗಿರದೆ, ಶೋಷಣೆಗೆ ಎಡೆಮಾಡಿಕೊಟ್ಟಿದೆ. ಈ ಶೋಷಣಾ ಕ್ರಿಯೆಯಲ್ಲಿ ಪಾಶ್ಚಾತ್ಯ ಆರ್ಥಿಕ ಹಿತವು ಕೆಲವೊಂದು ಭಾರತೀಯ ವರ್ಗವನ್ನು ತಮ್ಮ ಏಜೆಂಟರ ರೂಪದಲ್ಲಿ ಪಾಲುದಾರರನ್ನಾಗಿ ಮಾಡಿದೆ. ಪ್ರಾರಂಭದಲ್ಲಿ ವ್ಯಾಪಾರಿಗಳು ಮತ್ತು ಕಮೀಷನ್ ಏಜೆಂಟರುಗಳ ರೂಪದಲ್ಲಿ ನಂತರ ಉದ್ಯೋಗ ಪತಿಗಳಾಗಿ, ಸ್ವತಂತ್ರವಾಗಿ ಅಥವಾ ಪಾಲುದಾರರ ರೂಪದಲ್ಲಿ ಇವರ ಹಿತಸಂಬಂಧಗಳು ವಿದೇಶೀ ಆರ್ಥಿಕ ಹಿತಗಳ ಜೊತೆ ಒಗ್ಗೂಡಿದೆ. ಈ ವರ್ಗವು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. ಸಂಖ್ಯೆಯಲ್ಲಿ ಮತ್ತು ದೇಶದ ರಾಷ್ಟ್ರೀಯ ವರಮಾನದಲ್ಲಿ ಇವರ ಪಾತ್ರ ಚಿಕ್ಕದಾಗಿದ್ದರೂ ಕೂಡ ಸಮಾಜ ಮತ್ತು ದೇಶದ ಆರ್ಥಿಕ ಜೀವನದಲ್ಲಿ ಅಗಾಧವಾದ ಪ್ರಭಾವ ಬೀರುತ್ತಾರೆ. ಈ ವರ್ಗದ ಆಕಾಂಕ್ಷೆಗಳು ನಿಶ್ಚಿತವಾಗಿದೆ. ಅಧಿಕಾಧಿಕವಾಗಿ ಅವರು ನಮ್ಮ ವಿದೇಶೀ ಪ್ರತಿನಿಧಿಗಳ ಸ್ಥಾನಗ್ರಹಣ ಮಾಡಲು ಬಯಸುತ್ತಿದ್ದಾರೆ. ಸಮಾಜದ ಸರ್ವಸಾಧಾರಣ ಜನರ ಜೀವನದಲ್ಲಿ ಇದರಿಂದಾಗಿ ಏನು ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಅವರೂ ಚಿಂತಿಸುವುದಿಲ್ಲ. ಪಾಶ್ಚಾತ್ಯ ಅರ್ಥಶಾಸ್ತ್ರಕ್ಕೆ ಮನ್ನಣೆ ನೀಡುವ ಭಾರತೀಯ ವಿದ್ವಾಂಸರೊಂದಿಗೆ ಸಹಜವಾಗಿಯೇ ಅವರು ಸಾಮ್ಯತೆಯನ್ನು ಹೊಂದಿದ್ದಾರೆ. ಭಾರತದ ಎಲ್ಲಾ ಸಮಾಚಾರ ಪತ್ರಗಳು ಪ್ರಮುಖವಾಗಿ ಆಂಗ್ಲ ಪತ್ರಿಕೆಗಳು ಇದರ ಪ್ರಭಾವಕ್ಕೊಳಗಾಗಿದೆ. ಎಲ್ಲವೂ ಸೇರಿ ಅರಿತೋ ಅಥವಾ ಅರಿಯದೆಯೋ ಮಾಯಾಜಾಲವನ್ನೇ ಸೃಷ್ಟಿಸಿದೆ. ಸಾಧಾರಣ ಜನತೆ ಈ ಮಾಯಾಜಾಲದಲ್ಲಿ ಸಿಲುಕಿಕೊಂಡಿದೆ. ಸಮಾಜವಾದ ಮತ್ತು ಬಂಡವಾಳ ಶಾಹಿ ವ್ಯವಸ್ಥೆ ವರ್ತಮಾನ ಯುಗದಲ್ಲಿ ಆರ್ಥಿಕ ಸಮಸ್ಯೆಯು ಅತ್ಯಂತ ವಿಷಮ ಸಮಸ್ಯೆಯಾಗಿದೆ. ಇದರ ನಿವಾರಣೆಗಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅನೇಕ ಪಾಶ್ಚಿಮಾತ್ಯ ಸಿದ್ಧಾಂತಗಳಿಂದ ಮುಕ್ತವಾಗಿ ಒಂದು ಹೊಸ ಆರ್ಥಿಕ ದಾರ್ಶನಿಕತೆಯ ಹುಡುಕಾಟದಲ್ಲಿ 249 ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಆದರೆ ಈ ಯೋಜನೆಗಳು ಏಕಪಕ್ಷೀಯ ದೃಷ್ಟಿಕೋನವನ್ನು ಒಳಗೊಂಡಿದೆ. ಉತ್ಪಾದನೆಗೆ ಹೆಚ್ಚು ಒತ್ತು ನೀಡಿದುದರ ಪರಿಣಾಮವಾಗಿ ಅಮೇರಿಕಾದಂತಹ ದೇಶದಲ್ಲಿ ಬಂಡವಾಳದ ರಚನೆಯಾಯಿತು. ಉತ್ಪಾದನೆಯಲ್ಲಾದ ಹೆಚ್ಚಳವೂ ಆಧುನಿಕ ಯಂತ್ರಗಳ ಹುಟ್ಟಿಗೆ ಕಾರಣವಾಯಿತು. ಹಾಗೂ ಇಂಥಹ ಆಧುನಿಕ ಯಂತ್ರಗಳ ಮಾಲೀಕರೇ ಉತ್ಪಾದನೆಯ ಪ್ರಭುಗಳಾದರು. ಬಂದಂತಹ ಲಾಭದಲ್ಲಿ ಶ್ರಮಿಕರಿಗೆ ಪಾಲುಸಿಗದಿದ್ದಾಗ ಅವರು ಪ್ರತಿಕ್ರಿಯಿಸಿದರು. ಇದು ಸಮಾಜವಾದ ಅಥವಾ ಸಾಮ್ಯವಾದದ ಹುಟ್ಟಿಗೆ ಕಾರಣವಾಯಿತು. ಈ ಪ್ರಣಾಳಿಕೆಯಲ್ಲಿ ವಿತರಣೆಗೆ ಹೆಚ್ಚು ಒತ್ತು ನೀಡಲಾಯಿತು ಇದರಿಂದಾಗಿ ಹಲವರು ಅಧಿಕಾರದ ಮೂಲಕ ತುಳಿಯಲ್ಪಟ್ಟರು. ಉಪಭೋಗದ ಬಗ್ಗೆ ಪಾಶ್ಚಿಮಾತ್ಯ ವಿದ್ವಾಂಸರು ಗಮನ ಹರಿಸದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಉಪಭೋಗವು ಉತ್ಪಾದನೆ ಮತ್ತು ವಿತರಣೆಗಳೆರಡರ ಮೂಲವಾಗಿದೆ. ಪಾಶ್ಚಿಮಾತ್ಯರು ಉಪಭೋಗಕ್ಕೆ ಸಂಬಂಧಪಟ್ಟಂತಹ ತಮ್ಮ ಪುರಾತನ ಸಿದ್ಧಾಂತವನ್ನೇ ಹರಿಯಬಿಟ್ಟರು. ಅಲ್ಲದೆ ಅದರಲ್ಲಿ ಯಾವ ರೀತಿಯ ಸಂಶೋಧನೆ ಮಾಡುವ ಅಗತ್ಯವನ್ನು ಮನಗಾಣಲಿಲ್ಲ. ವಾಸ್ತವಿಕವಾಗಿ ಅಧಿಕಾಧಿಕ ಉಪಭೋಗದ ಸಿದ್ಧಾಂತವೇ ಮನುಷ್ಯನ ದುಃಖಕ್ಕೆ ಕಾರಣ. ಉಪಭೋಗವು ನಿರಂತರವಾಗಿ ಮುಂದುವರೆಯುತ್ತದೆ. ಇದು ವರ್ಗಸಂಘರ್ಷಕ್ಕೆ ಕಾರಣವಾಗುತ್ತದೆ. ಮತ್ತು ವರ್ಗಸಂಘರ್ಷವನ್ನು ಖಂಡಿಸುತ್ತದೆ. ಹಾಗಾಗಿ ಅದು ಉಪಭೋಗದ ನಿಯಂತ್ರಣಕ್ಕೆ ಅಧಿಕ ಒತ್ತು ನೀಡುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಮನುಷ್ಯನ ಪ್ರಾಕೃತಿಕ ಭಾವನೆಗಳಿಗೆ ಕಡಿವಾಣ ಹಾಕಿ ಅಧಿಕಾಧಿಕ ಉತ್ಪಾದನೆ, ಸಮಾನ ವಿತರಣೆ ಮತ್ತು ಸಂಯಮಿತ ಉಪಭೋಗದ ಪ್ರವೃತ್ತಿಯನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಸಂಸ್ಕೃತಿಯು ಮಾಡುತ್ತದೆ. ವಿಫಲವಾದ ಪಾಶ್ಚಿಮಾತ್ಯ ಔದ್ಯೋಗಿಕ ಪರಿಕಲ್ಪನೆ ಭಾರತದಲ್ಲಿ ದೊಡ್ಡ ಪ್ರಮಾಣದ ಪಾಶ್ಚಿಮಾತ್ಯ ಔದ್ಯೋಗಿಕ ಮತ್ತು ವಿಕೇಂದ್ರಿಕರಣದ ಕಲ್ಪನೆಯನ್ನು ಏಕಕಾಲದಲ್ಲಿ ಸಾಕಾರಗೊಳಿಸುವುದು ಅಸಾಧ್ಯ. ಹಲವರ ಪ್ರಕಾರ ವಿಕೇಂದ್ರಿಕರಣವು ಪ್ರಾದೇಶಿಕತೆಯ ಸೀಮಿತ ಅರ್ಥವನ್ನು ಒಳಗೊಂಡಿದೆ. ಅವರ ಪ್ರಕಾರ ವಿಕೇಂದ್ರೀಕರಣವೆಂದರೆ ಮುಂಬಯಿ, ಅಹಮದಾಬಾದ್‍ನಲ್ಲಿರುವಂತೆ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಹಳ್ಳಿಗಳಲ್ಲಿ ನಿರ್ಮಾಣ ಮಾಡುವುದಾಗಿದೆ. ಸಮಾಜವಾದವು ರಾಜನೈತಿಕ ಶಕ್ತಿಗಳ ಬಟವಾಡೆ ಮಾಡಿ ತೃಪ್ತಿಪಟ್ಟುಕೊಳ್ಳಬಹುದು ಹಾಗೂ ಅದರ ಬೆಳವಣಿಗೆಯನ್ನು ಹಳ್ಳಿ, ಜಿಲ್ಲೆ, ಪ್ರಾಂತ್ಯ ಮತ್ತು ಕೇಂದ್ರ ಎಂಬ ಹೆಸರಿನ ನಾಲ್ಕುಸ್ತರದ ವ್ಯವಸ್ಥೆಯ ರೂಪದಲ್ಲಿ 250 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಲೆಕ್ಕಹಾಕಬಹುದು. ಆದರೆ ಪ್ರತಿ ಸ್ತರದಲ್ಲಿ ಆಗುವಂತಹ ಉತ್ಪಾದನೆಯು ಪಾಶ್ಚಾತ್ಯ ಮಾದರಿಯದ್ದೇ ಆಗಿರುತ್ತದೆ. ಅದರ ಒಡೆತನವು ಬಟವಾಡೆಯದ್ದೇ ಹೊರತು ಮೌಲಿಕವಾದುದ್ದಲ್ಲ. ಯಾಂತ್ರಿಕ ಗುಲಾಮಗಿರಿಯ ನಿರ್ಮೂಲನೆಯ ಅವಶ್ಯಕತೆ ಸಮಾಜವಾದಿ ಮತ್ತು ಲೋಕ ತಂತ್ರಗಳೆರಡೂ ಮಾನವನ ಭೌತಿಕ ಸ್ವರೂಪ ಮತ್ತು ಅವಶ್ಯಕತೆಗಳ ಮೇಲೆಯೇ ತನ್ನ ದೃಷ್ಟಿಯನ್ನು ನೆಟ್ಟಿದೆ. ಎರಡೂ ಆಧುನಿಕ ವಿಜ್ಞಾನ ಮತ್ತು ಯಾಂತ್ರಿಕ ಉನ್ನತಿಯ ಮೇಲೆ ಶ್ರದ್ಧೆಯನ್ನು ಹೊಂದಿದೆ. ಅತ್ಯಾಧುನಿಕ ಆವಿಷ್ಕಾರದ ಅತಿಯಾದ ಅವಲಂಬನೆಯು ಇವೆರಡರ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿದೆ. ಉತ್ಪಾದನಾ ಸಾಧನಗಳ ನಿರ್ಧಾರಣೆಯಲ್ಲಿ ಮಾನವ ಕಲ್ಯಾಣ ಮತ್ತು ಅದರ ಅವಶ್ಯಕತೆಗಳಿಗನುಗುಣವಾಗಿರದೆ, ಯಂತ್ರಗಳಿಗನುಗುಣವಾಗಿ ಮಾಡಬೇಕಾಗುತ್ತದೆ. ಉತ್ಪಾದನೆಯ ಕೇಂದ್ರಿತ ವ್ಯವಸ್ಥೆಯಲ್ಲಿ ನಿಯಂತ್ರಣವು ವ್ಯಕ್ತಿ ಮೂಲಕವಾಗಿರಲಿ ಅಥವಾ ರಾಜ್ಯದ ಮೂಲಕ ಮಾನವನ ಸ್ವತಂತ್ರ ವ್ಯಕ್ತಿತ್ವದ ಲೋಪವಾಗುತ್ತಿದೆ. ಈ ವ್ಯವಸ್ಥೆಯಲ್ಲಿ ವ್ಯಕ್ತಿಯ ಸ್ಥಾನವು ಯಂತ್ರದ ಒಂದು ಬಿಡಿಭಾಗದ ಹೊರತಾಗಿ ಬೇರೇನು ಇರುವುದಿಲ್ಲ. ಒಂದು ವೇಳೆ ಮನುಷ್ಯತ್ವದ ರಕ್ಷಣೆ ಮಾಡಬೇಕೆಂದಿದ್ದಲ್ಲಿ ಪ್ರಥಮವಾಗಿ ಅವನನ್ನು ಯಂತ್ರದ ಗುಲಾಮಗಿರಿಯಿಂದ ಪಾರುಮಾಡಲೇಬೇಕು. ಇಂದು ವ್ಯಕ್ತಿಯು ಯಂತ್ರದ ಮೇಲೆ ಪ್ರಭುತ್ವ ಸಾಧಿಸಿದ್ದಕ್ಕಿಂತ ಹೆಚ್ಚಾಗಿ ಯಂತ್ರವೇ ವ್ಯಕ್ತಿಯ ಮೇಲೆ ಪ್ರಭುತ್ವವನ್ನು ಸಾಧಿಸಿದೆ. ಈ ಯಂತ್ರ ಪ್ರೇಮದ ಮೂಲದಲ್ಲಿ ಮನುಷ್ಯನ ಭೌತಿಕ ಅವಶ್ಯಕತೆಗಳನ್ನು ಅಧಿಕಾಧಿಕವಾಗಿ ತೃಪ್ತಗೊಳಿಸುವ ಭಾವನೆ ಅಡಕವಾಗಿದೆ. ಆದರೆ ಕೇವಲ ಭೌತಿಕ ಪ್ರಗತಿಯಿಂದ ಮಾತ್ರ ವ್ಯಕ್ತಿ ಸುಖಿಯಾಗಿರಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಲೇಬೇಕು. ಭೌತಿಕ ಸಾಧನಗಳಿಂದ ಸಮೃದ್ಧವಾದ ಹಲವು ದೇಶಗಳ ಸಮಸ್ಯೆಗಳು ಇಂದು ನಮ್ಮ ಕಣ್ಣಮುಂದೆಯೇ ಇದೆ. ಮಾನವನ ಸಂಪೂರ್ಣ ಜೀವನದಲ್ಲಿ ಉತ್ಪಾದನೆ, ವಿತರಣೆ ಮತ್ತು ಉಪಭೋಗವನ್ನು ಒಂದು ಬಿಂದುವಿನ ರೂಪದಲ್ಲಿ ತೆಗೆದುಕೊಳ್ಳಬೇಕು. ಮಾನವನ ಸಾರ್ಥಕ ಜೀವನದ ಪರಿಕಲ್ಪನೆಯನ್ನು ಗಮನದಲ್ಲಿರಿಸಿಕೊಂಡು, ಉತ್ಪಾದನೆ ಮತ್ತು ಉಪಭೋಗಕ್ಕೆ ಸಂಬಂಧಪಟ್ಟಂತಹ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಮನುಷ್ಯ ಜೀವನ ಕೇವಲ ಭೌತಿಕ ಅವಶ್ಯಕತೆಗಳ ಆಗರವಲ್ಲ, ಆಧ್ಯಾತ್ಮಿಕ ಅವಶ್ಯಕತೆಗಳು ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಆಧ್ಯಾತ್ಮಿಕ ಪಕ್ಷವನ್ನು ಉಪೇಕ್ಷಿಸುವ ಜೀವನ ವ್ಯವಸ್ಥೆಯು ಎಂದೂ ಪರಿಪೂರ್ಣವಾಗಿರದು. ಗಮನಹರಿಸಲೇಬೇಕಾದ ವಿಷಯವೆಂದರೆ ಭೌತಿಕ ಪಾಶ್ಚಿಮಾತ್ಯ ಸಿದ್ಧಾಂತಗಳಿಂದ ಮುಕ್ತವಾಗಿ ಒಂದು ಹೊಸ ಆರ್ಥಿಕ ದಾರ್ಶನಿಕತೆಯ ಹುಡುಕಾಟದಲ್ಲಿ 251 ಉನ್ನತಿಯ ಜೊತೆ ಆಧ್ಯಾತ್ಮಿಕ ಪ್ರಗತಿಯ ಕಲ್ಪನೆ ಕೇವಲ ಟೊಳ್ಳುಮಾತಾಗಿಲ್ಲ. ವ್ಯಕ್ತಿಯು ತನ್ನ ಪ್ರತಿಷ್ಠೆಯ ರಕ್ಷಣೆ ಮಾಡಿಕೊಂಡು ಸಮಾಜದ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಉತ್ತರದಾಯಿತ್ವವನ್ನು ಕೂಡ ನಿಭಾಯಸಲೇಬೇಕು. ಆದರೆ ಸಮಾಜವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೆರಡೂ ಏಕಾಂಗಿ ಮಾರ್ಗವನ್ನು ಅನುಸರಿಸಿದೆ. ಮನುಷ್ಯನ ಭಿನ್ನ ಪ್ರವೃತ್ತಿಗಳ ಸಾಮಂಜಸ್ಯದಿಂದ ಅವರ ವ್ಯಕ್ತಿತ್ವ ವಿಕಸನ ಮಾಡುವುದರ ಬದಲಾಗಿ ಒಂದು ಭ್ರಮಾಪೂರ್ಣ ಸ್ಥಿತಿಯನ್ನು ಹುಟ್ಟುಹಾಕಿ ಸಮಾಜವನ್ನು ವಿಭಿನ್ನ ಶಕ್ತಿಗಳ ರಣರಂಗವನ್ನಾಗಿ ಮಾಡಿದೆ. ಎರಡೂ ವ್ಯಕ್ತಿ ಸ್ವಾತಂತ್ರ್ಯದ ಶತ್ರುಗಳೇ ಆಗಿವೆ ವರ್ತಮಾನ ಸಂದರ್ಭದಲ್ಲಿ ಸಾಮ್ಯವಾದ ಮತ್ತು ಬಂಡವಾಳವಾದ ಎರಡರಲ್ಲೂ ಅಧಿಕಾರ ಸ್ವರೂಪದ ಅಂತರವನ್ನು ಹೊರತುಪಡಿಸಿದರೆ ಬೇರೆ ಯಾವ ಬದಲಾವಣೆಯೂ ಇಲ್ಲ. ಎರಡರಲ್ಲೂ ವ್ಯಕ್ತಿ ವಿಕಸನಕ್ಕೆ ಯಾವ ರೀತಿಯ ವ್ಯವಸ್ಥೆಯೂ ಇಲ್ಲ. ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯವು ಹೆಸರಿಗೆ ಮಾತ್ರ ಇರುವ ಹಾಗಿದೆ. ಸಾಮ್ಯವಾದ ಕುರಿತು ರಾಜಕುಮಾರ ಕೋಪಾಟರೆನ್ 1904ರಲ್ಲೇ ಈ ರೀತಿ ಹೇಳಿದ್ದಾರೆ: ``ಅವರು ಈ ಶತಮಾನದ ಪ್ರಭಾವಿ ಪ್ರವೃತ್ತಿಗಳಾದ ವಿಕೇಂದ್ರೀಕರಣ ಸ್ವರಾಜ್ಯ ಮತ್ತು ಸ್ವತಂತ್ರ ಹೊಂದಾಣಿಕೆಯ ಅನುಸರಣೆ ಮಾಡುತ್ತಾರೋ ಅಥವಾ ಇದಕ್ಕೆ ವಿರುದ್ಧವಾಗಿ ನಶಿಸಿ ಹೋದ ವ್ಯವಸ್ಥೆಯ ಪುನರ್ ಪ್ರತಿಷ್ಠಾಪನೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ." ರಾಜಕುಮಾರ ಕೋಪಾಟರೆನ್‍ರವರಲ್ಲಿ ಮಾಡಿದ ಬಂಡವಾಳವಾದದ ಕಲ್ಪನೆಯೇ ನಿಜವಾದ ಬಂಡವಾಳವೇ ಅಥವಾ ಅದು ಪ್ರಸ್ತುತ ರಷ್ಯಾದಲ್ಲಿ ಪ್ರಚಲಿತದಲ್ಲಿರುವ ವ್ಯವಸ್ಥೆಯೇ ಎಂಬುದನ್ನು ದೃಢಪಡಿಸುವುದೇ ಕಷ್ಟಕರವಾಗಿದೆ. ಆದರೆ ಸಮಾಜವಾದವು ಸರಕಾರೀಕರಣದ ಇನ್ನೊಂದು ಹೆಸರು ಎನ್ನುವುದೂ ಕೂಡ ಅಷ್ಟೇ ಸತ್ಯ. ಹಾಗೆಯೇ ಈ ವ್ಯವಸ್ಥೆಯಲ್ಲಿ ಅಧಿಕಾರ ಮತ್ತು ಆರ್ಥಿಕ ವಿಕೇಂದ್ರೀಕರಣದ ಆಕಾಂಕ್ಷೆ ಇಟ್ಟುಕೊಳ್ಳುವುದು ವ್ಯರ್ಥ. ಮೌಲಿಕ ನಿರ್ಮಾಣದ ಅಗತ್ಯ ಇಂದಿನ ಅವಶ್ಯಕತೆಯೆಂದರೆ ನಾವು ನಮ್ಮ ಜೀವನ ದರ್ಶನದ ಬಗ್ಗೆ ಚಿಂತಿಸಿ ಭಾರತೀಯ ಅರ್ಥವ್ಯವಸ್ಥೆಯ ನಿಜವಾದ ನಿರೂಪಣೆಯನ್ನು ಮಾಡುವುದು ಹಾಗೂ ಇಂದಿನ ಸಮಸ್ಯೆಗಳನ್ನು ತಕ್ಕದಾದ ಏರುಪೇರಾದ ಆದರೆ ಗಟ್ಟಿಯಾದ ಭೂಮಿಯ ಮೇಲೆ ಎದ್ದುನಿಂತು ಬಗೆಹರಿಸೋಣ. ಭಾರತದ ಸ್ವ ಎಂಬ ಪದದ ಸಾಕ್ಷಾತ್ಕಾರವಾಗದೆ ನಾವು ನಮ್ಮ ಸಮಸ್ಯೆಗಳನ್ನು 252 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬಗೆಹರಿಸಿಕೊಳ್ಳಲಾಗುವುದಿಲ್ಲ. ಒಂದು ವೇಳೆ ಯಾವುದಾದರೊಂದು ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ಜಯ ದೊರಕಿದರೂ ಕೂಡ ಅದು ನಮಗೆ ಹಿತಕರವಾಗುವುದಿಲ್ಲ. ನಾವು ಪುರಾಣಾನುಕರಣೆಯಲ್ಲಿ ಹೆಚ್ಚು ತೊಡಗುತ್ತೇವೆ. ನಮ್ಮ ನಮ್ಮ ಸತ್ವ ಮತ್ತು ಸಾಮರ್ಥ್ಯದ ಬದಲಾಗಿ ಪರಾವಲಂಬನೆಯು ನಮ್ಮಲ್ಲಿ ಮನೆಮಾಡುವುದು, ಆತ್ಮ ಹೀನತೆಯ ಈ ಭಾವನೆಯು ಗೆದ್ದಲಿನಂತೆ ದೇಶದ ಬೇರುಗಳನ್ನು ಟೊಳ್ಳುಗೊಳಿಸುವುದು. ಈ ರೀತಿ ಟೊಳ್ಳಾದ ಬೇರುಗಳ ದೇಶ ಬಿರುಗಾಳಿಯಲ್ಲಿ ಎಂದಿಗೂ ಎದ್ದು ನಿಲ್ಲಲಾಗುವುದಿಲ್ಲ. ಹಿಂದೂ ಜೀವನ ದರ್ಶನವೇ ಪೂರ್ಣವಾದದ್ದು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥವನ್ನು ಆಧರಿಸಿದ ಹಿಂದೂ ಜೀವನ ದರ್ಶನವೇ ನಮ್ಮನ್ನು ಈ ಸಂಕಟದಿಂದ ಮುಕ್ತಗೊಳಿಸಬಲ್ಲದು. ಜಗತ್ತಿನ ಸಮಸ್ಯೆಗಳಿಗೆ ಉತ್ತರ ಸಮಾಜವಾದವಲ್ಲ, ಹಿಂದೂ ಸತ್ವವಾದವಾಗಿದೆ. ಇದೊಂದು ಮಾತ್ರ ಆ ಜೀವನ ದರ್ಶನವಾಗಿದೆ. ಯಾವುದು ಜೀವನದ ಬಗ್ಗೆ ಚಿಂತಿಸುವಾಗ ಅದನ್ನು ಛಿದ್ರಗೊಳಿಸುವುದಿಲ್ಲ. ಹೊರತಾಗಿ, ಸಂಪೂರ್ಣ ಜೀವನವನ್ನು ಒಂದು ಘಟಕವೆಂದು ಅದರ ಬಗ್ಗೆ ಚಿಂತಿಸುತ್ತದೆ. ಇಲ್ಲಿ ನಾವು ಹಿಂದೂ ಜೀವನಾದರ್ಶಗಳ ಚಿಂತನೆಯ ವೇಳೆಯಲ್ಲಿ ನಿರ್ಜೀವವಾದ ಕರ್ಮಕಾಂಡದೊಂದಿಗೆ ಅಥವಾ ಹಿಂದೂ ಸಮಾಜದಲ್ಲಿ ಹರಡಿದ ಅನೇಕ ಅಹಿಂದೂ ವ್ಯವಹಾರಗಳ ಸಂಬಂಧವನ್ನು ಜೋಡಿಸಬಾರದು. ಜೊತೆಗೆ ಹಿಂದುತ್ವವು ವರ್ತಮಾನ ಕಾಲದ ವೈಜ್ಞಾನಿಕ ಉನ್ನತಿಯ ವಿರೋಧಿ ಎಂದು ತಿಳಿಯುವುದು ಅತಿದೊಡ್ಡ ತಪ್ಪಾಗುವುದು. ವಿಜ್ಞಾನ ಮತ್ತು ಯಂತ್ರಗಳ ಉಪಯೋಗ ಹೇಗಿರಬೇಕೆಂದರೆ ಅವುಗಳು ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಪದ್ಧತಿಯ ಅನುಗುಣವಾಗಿರಬೇಕು. ಉಪಯೋಗ ಪ್ರಧಾನವಾದ ಅರ್ಥ :- ಜನರ ಪಾಲನೆ ಪೋಷಣೆಗಾಗಿ ಜೀವನದ ವ್ಯವಸ್ಥೆ ವಿಕಾಸಕ್ಕಾಗಿ ಮತ್ತು ರಾಷ್ಟ್ರದ ವಿಚಾರ ಹಾಗೂ ವಿಕಾಸಕ್ಕಾಗಿ ಉಪಯುಕ್ತವಾದ ಯಾವ ಸಲಕರಣೆಗಳ ಅವಶ್ಯಕತೆಯಿದೆಯೋ ಅವುಗಳ ಉತ್ಪಾದನೆಯೇ ಅರ್ಥವ್ಯವಸ್ಥೆಯ ಗುರಿಯಾಗಿರಬೇಕು. ಅತ್ಯಂತ ಕಡಿಮೆ ಅವಶ್ಯಕತೆಯ ನಂತರ ಹೆಚ್ಚಿನ ಸಮೃದ್ಧಿ ಮತ್ತು ಸುಖಕ್ಕಾಗಿ ಅರ್ಥೋತ್ಪಾದನೆಯನ್ನು ಮಾಡಬೇಕೋ ಅಥವಾ ಬೇಡವೋ ಎಂಬ ಸ್ವಾಭಾವಿಕವಾದ ಪ್ರಶ್ನೆ ಹುಟ್ಟುತ್ತದೆ. ಪಶ್ಚಿಮದ ಅರ್ಥಶಾಸ್ತ್ರವು ಸರಿಸಮವಾಗಿ ಆಸೆಗಳನ್ನು ಹೆಚ್ಚಿಸುವುದು ಮತ್ತು ಅವುಗಳ ಅವಶ್ಯಕತೆಯನ್ನು ನಿರಂತರವಾಗಿ ಪೂರೈಸುತ್ತಿರುವುದು ತನ್ನ ಬಯಕೆ ಎಂದುಕೊಂಡಿದೆ. ಈ ವಿಷಯದಲ್ಲಿ ಅದರದ್ದು ಹೆಚ್ಚಿನ ಮಹತ್ವವೇನು ಇಲ್ಲ. ಸಾಮಾನ್ಯವಾಗಿ ಮೊದಲು ಆಸೆ ಹುಟ್ಟುವುದು ಪಾಶ್ಚಿಮಾತ್ಯ ಸಿದ್ಧಾಂತಗಳಿಂದ ಮುಕ್ತವಾಗಿ ಒಂದು ಹೊಸ ಆರ್ಥಿಕ ದಾರ್ಶನಿಕತೆಯ ಹುಡುಕಾಟದಲ್ಲಿ 253 ನಂತರ ಅದರ ಪೂರ್ತಿಗಾಗಿ ಸಲಕರಣೆಗಳನ್ನು ಹೊಂಚಲಾಗುತ್ತದೆ. ಆದರೆ ಈಗ ಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ, ಅದೇನೆಂದರೆ ಏನೆಲ್ಲಾ ವಸ್ತುಗಳನ್ನು ನಿರ್ಮಿಸಲಾಗುತ್ತದೆಯೋ ಅವುಗಳ ಉಪಯೋಗವಾಗಲಿ ಎಂದು ಜನರಲ್ಲಿ ಆಸೆ ಹುಟ್ಟಿಸಲಾಗುತ್ತದೆ. ಮಾರುಕಟ್ಟೆಗಳಿಗಾಗಿ ವಸ್ತುವನ್ನು ತಯಾರಿಸುವ ಬದಲಾಗಿ ತಯಾರಿಸಲಾದ ಸರಕಿಗಾಗಿ ಮಾರುಕಟ್ಟೆಯನ್ನು ಹುಡುಕುವುದು ಸಿಗದೆ ಇದ್ದಲ್ಲಿ ಸ್ವಯಂ ಮಾರುಕಟ್ಟೆಯನ್ನು ನಿರ್ಮಿಸುವುದು ಇಂದಿನ ಅರ್ಥನೀತಿಯ ಪ್ರಮುಖ ಅಂಗವಾಗಿದೆ. ಆರಂಭದಲ್ಲಿ ಉತ್ಪಾದನೆಯು ಉಪಯೋಗವನ್ನು ಅನುಸರಿಸುತ್ತಿತ್ತು, ಈಗ ಉಪಯೋಗವು ಉತ್ಪಾದನೆಯ ಸೇವಕನಾಗಿದೆ. ಕ್ರಮತಪ್ಪಿದ ಪ್ರಕೃತಿಯ ಶೋಷಣೆ :- ಆದರೆ ಪ್ರಕೃತಿಯೊಂದಿಗೂ ಉತ್ಪಾದನೆ ಸಂಬಂಧವಿದೆ. ಒಂದು ವೇಳೆ ವಿವೇಚನೆಯಿಲ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತಾ ಹೋದರೆ ಈ ನೈಸರ್ಗಿಕ ಸಾಧನಗಳು ಎಲ್ಲಿಯವರೆಗೂ ನಮ್ಮೊಂದಿಗಿರಲು ಸಾಧ್ಯ? ಒಂದು ತರಹದ ಸಾಧನಗಳು ಅವನತಿ ಹೊಂದಿದರೆ ಇನ್ನೊಂದು ರೀತಿಯ ವಸ್ತುಗಳನ್ನು ಕಂಡುಹಿಡಿಯಲಾಗುವುದೆಂದು ಕೆಲ ಜನರು ಸಮಾಧಾನಪಟ್ಟುಕೊಳ್ಳುತ್ತಾರೆ. ಹೊಸ ಸಬ್ಸ್‍ಟ್ಯೂಟ್‍ಗಳನ್ನು ಕಂಡುಹಿಡಿಯಲಾಗುವುದು. ಅವರ ಈ ವಾದದಲ್ಲಿ ಅಡಗಿದ ಅಂಶವನ್ನು ಸ್ವೀಕರಿಸಿದರೂ ನಾವು ಹೇಳಲೇಬೇಕಾಗುವುದೇನೆಂದರೆ ಪ್ರಕೃತಿಯ ಐಶ್ವರ್ಯ ಅಪಾರವಾಗಿದೆ, ಆದರೂ ಅದಕ್ಕೊಂದು ಗಡಿ ಇದೆ. ಒಂದು ವೇಳೆ ಹೀಗೇ ತೀವ್ರಗತಿಯಲ್ಲಿ ಮತ್ತು ಅನಾವಶ್ಯಕವಾಗಿ ನಾವು ಅದನ್ನು ಬಳಸುತ್ತಾ ಹೋದರೆ ಒಂದು ದಿನ ಪಶ್ಚಾತಾಪಪಡಬೇಕಾಗುತ್ತದೆ. ಪ್ರಕೃತಿ ಸಿರಿಯ ಸೀಮೆಯ ಬಗ್ಗೆ ಚಿಂತಿಸದಿದ್ದರೂ ಕೂಡ ಸ್ವಲ್ಪವಾದರೂ ನಾವು ಒಪ್ಪಿಕೊಳ್ಳಲೇಬೇಕಾಗುವುದೇನೆಂದರೆ ಪ್ರಕೃತಿಯಲ್ಲಿ ಬಗೆ-ಬಗೆಯ ವಸ್ತುಗಳ ನಡುವೆ ಒಂದು ಪರಸ್ಪರಾವಲಂಬನೆಯ ಸಂಬಂಧವಿದೆ. ಒಂದನ್ನೊಂದು ಆಧರಿಸಿದ ಮೂರು ಕಟ್ಟಿಗೆಗಳಲ್ಲಿ ಒಂದರ ಸ್ಥಿತಿಯನ್ನು ಬದಲಿಸಿದಾಗ ಉಳಿದ ಇನ್ನೆರಡು ತಾನಾಗಿಯೇ ಬಿದ್ದು ಹೋಗುತ್ತದೆ. ಇಂದಿನ ಅರ್ಥವ್ಯವಸ್ಥೆ ಮತ್ತು ಉತ್ಪಾದನೆಯ ಪದ್ಧತಿಯೂ ಈ ಸಾಮಂಜಸ್ಯವನ್ನು ಅತ್ಯಂತ ತೀವ್ರವಾಗಿ ಹದಗೆಡಿಸುತ್ತಿದೆ. ಪರಿಣಾಮ ಹೊಸ ಹೊಸ ಆಸೆಗಳನ್ನು ಪೂರೈಸುವುದಕ್ಕಾಗಿ ನಾವೆಲ್ಲಿ ಹೊಸ ಹೊಸ ಸಾಧನಗಳನ್ನು ಹುಡುಕುತ್ತಿದ್ದೇವೆಯೋ ಅದೆ ಇನ್ನೊಂದೆಡೆ ಹೊಸ ಹೊಸ ಪ್ರಶ್ನೆಗಳು ನಮ್ಮ ಸಂಪೂರ್ಣ ಸಭ್ಯತೆ ಮತ್ತು ಮಾನವತೆಯ ಅವನತಿಗಾಗಿ ಹುಟ್ಟಿಕೊಳ್ಳುತ್ತಿವೆ. ಪ್ರಕೃತಿಯ ದುರ್ಬಳಕೆ ಬೇಡ, ಸದ್ಬಳಕೆಯಾಗಲಿ ನಾವು ಪ್ರಕೃತಿಯಿಂದ ಎಷ್ಟು ಮತ್ತು ಯಾವ ರೀತಿಯಾಗಿ ಪಡೆಯಬೇಕೆಂದರೆ ನಾವು ಪಡೆದಿದ್ದನ್ನು ನಾವು ಮರಳಿ ಕೊಡುವಂತಿರಬೇಕು. ಮರದಿಂದ ಫಲ 254 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 (ಹಣ್ಣನ್ನು) ಪಡೆಯುವುದರಿಂದ ಅದಕ್ಕೆ ಯಾವ ಹಾನಿಯೂ ಆಗುವುದಿಲ್ಲ. ಬದಲಾಗಿ ಲಾಭವೇ ಆಗುತ್ತದೆ. ಆದರೆ ಭೂಮಿಯಿಂದ ಅತ್ಯಧಿಕ ಬೆಳೆಯನ್ನು ಪಡೆಯುವುದಕ್ಕಾಗಿ ನಾವು ಎಂತಹ ಫಲವತ್ತತೆಗಳನ್ನು ಬಳಸುತ್ತಿದ್ದೇವೆಂದರೆ ಕೆಲವೇ ದಿನಗಳಲ್ಲಿ ಅವುಗಳಿಂದಾಗಿ ಉತ್ಪಾದನೆಯ ಶಕ್ತಿಯೇ ಕೊನೆಗೊಳ್ಳುತ್ತದೆ. ಇಂದು ಅಮೆರಿಕಾದಲ್ಲಿ ಸಾವಿರಾರು ಎಕರೆ ಭೂಮಿ ಈ ರೀತಿಯ ಕೃಷಿಯಿಂದಾಗಿ ಬಂಜರಾಗಿ ಹೋಗಿವೆ. ಈ ವಿನಾಶ ಲೀಲೆ ಎಲ್ಲಿಯವರೆಗೂ ನಡೆಯುತ್ತದೆ ಹೇಳಿ ? ಕಾರ್ಖಾನೆಗಳನ್ನು ಹೊಂದಿದವನು ಯಂತ್ರ ಮುಂತಾದ ಸವೆತಕ್ಕಾಗಿ ಸವೆತ ನಿಧಿಯ ವ್ಯವಸ್ಥೆಯನ್ನು ಮಾಡುತ್ತಾನೆ. ಆದರೆ ಪ್ರಕೃತಿ ಎಂಬ ಈ ಕಾರ್ಖಾನೆಗೆ ಸವೆತ ನೀತಿ ಎಂಬ ಯಾವುದೇ ವ್ಯವಸ್ಥೆಯ ಬಗ್ಗೆ ನಾವು ಚಿಂತಿಸಬಾರದೆಂದರೆ ಹೇಗೆ? ಈ ಬಗ್ಗೆ ವಿಚಾರಮಾಡಿದಾಗ ನಾವು ಹೇಳುವುದೆಂದರೆ ನಮ್ಮ ಅರ್ಥವ್ಯವಸ್ಥೆಯ ಗುರಿ ಮಿತಿಮೀರಿದ ಉತ್ಪಾದನೆಯಲ್ಲ, ಹೊರತಾಗಿ ನಿಯಂತ್ರಿತ ಉಪಯೋಗವಾಗಬೇಕು. ಸದುದ್ದೇಶ ಸುಖಿ, ವಿಕಾಸಶೀಲ ಜೀವನಕ್ಕಾಗಿ ಯಾವ ಭೌತಿಕ ಸಾಧನಗಳ ಅವಶ್ಯಕತೆ ಇದೆಯೋ ಖಂಡಿತವಾಗಿಯೂ ಅವೆಲ್ಲವೂ ದೊರೆಯಬೇಕು. ದೇವರ ಈ ಸೃಷ್ಟಿಯ ಅಧ್ಯಯನವನ್ನು ಮಾಡಿದಾಗ ತಿಳಿಯುವುದು, ಅಷ್ಟು ವ್ಯವಸ್ಥೆಯನ್ನು ಅವನು ಮಾಡಿದ್ದಾನೆಂದು. ಆದರೆ ಭಗವಂತನು ಕೇವಲ ಉಪಯೋಗ ಪ್ರವೀಣ ಪ್ರಾಣಿಯ ಮನುಷ್ಯನನ್ನಾಗಿ ಮಾಡಿದ್ದಾನೆ ಮತ್ತು ಅದಕ್ಕಾಗಿ ವಿವೇಚನೆಯಿಲ್ಲದ ಉಪಯೋಗಕ್ಕಾಗಿಯೇ ನಮ್ಮ ಸಂಪೂರ್ಣ ಶಕ್ತಿಯನ್ನು ವ್ಯಯಮಾಡುವುದು ಸರಿಯಲ್ಲ. ಇಂಜೀನನ್ನು ನಡೆಸುವುದಕ್ಕಾಗಿ ಇದ್ದಿಲು ಬೇಕು. ಆದರೆ ಇದ್ದಿಲನ್ನು ಬಳಸುವುದಕ್ಕಾಗಿ ಇಂಜೀನನ್ನು ತಯಾರು ಮಾಡಿಲ್ಲ. ಆದರೆ ಕಡಿಮೆ ಇಂಧನದಿಂದ ಸದಾ ಅಧಿಕ ಶಕ್ತಿಯನ್ನು ಹೇಗೆ ಉತ್ಪಾದಿಸುವುದು ಎಂಬುವುದೇ ನಮ್ಮ ಪ್ರಯತ್ನವಾಗಿರುತ್ತದೆ. ಇದು ಉಳಿತಾಯದ ದೃಷ್ಟಿಯಾಗಿದೆ. ಮಾನವ ಜೀವನದ ಉದ್ದೇಶದ ಬಗ್ಗೆ ಚಿಂತಿಸಿ ನಾವು ಎಂತಹ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದರೆ ಅತಿ ಕಡಿಮೆ ಇಂಧನದಿಂದ ಅತ್ಯಧಿಕ ಚಲನೆಯೊಂದಿಗೆ ನಮ್ಮ ಗುರಿಯೆಡೆಗೆ ಸಾಗಲು ಸಾಧ್ಯವಾಗಬೇಕು. ಇದು ಮಾನವನ ಒಂದು ಪಾಶ್ರ್ವದ ಬಗ್ಗೆ ಚಿಂತಿಸದೆ ಅವನ ಸಂಪೂರ್ಣ ಜೀವನ ಹಾಗೂ ಅಂತಿಮ ಉದ್ದೇಶದ ವಿಚಾರ ಮಾಡುವುದು. ಇದು ಸಂಹಾರಾತ್ಮಕವಾಗಿರದೆ, ಸೃಜನಾತ್ಮಕವಾಗುವುದು. ಇದು ಪ್ರಕೃತಿಯ ಶೋಷಣೆಯನ್ನು ಆಧರಿಸದೆ ಅದರ ಪೋಷಣೆಯನ್ನು ಅವಲಂಬಿಸುವುದು ಶೋಷಣೆಯಲ್ಲದೆ ರಕ್ಷಣೆಯು ನಮ್ಮ ಆಧಾರವಾಗಬೇಕು ಅಥವಾ ಪ್ರಕೃತಿಯ ಮಡಿಲು ನಮಗೆ ಜೀವದಾನ ಮಾಡುವಂಥದ್ದಾಗಿರಬೇಕು. ಈ ವ್ಯವಸ್ಥೆಯನ್ನೇ ನಾವು ಮಾಡಬೇಕಾಗಿದೆ. ಹೊಸ ಮಾರ್ಗದ ನಿರ್ಮಾಣ ಇಂದಿನ ರಾಜಕೀಯವು ಎರಡು ಯುಗಗಳ ಸಂಧಿಕಾಲದ ರಾಜಕೀಯವಾಗಿದೆ. ಸಂಕ್ರಮಣದ ತಕ್ಕಮಟ್ಟಿಗಿನ ವ್ಯವಸ್ಥೆಯಾಗಿದೆ. ಇದನ್ನು ಬಾಳಿಕೆಯುಳ್ಳಂತಹುದೆಂದು ತಿಳಿಯುವ ತಪ್ಪನ್ನು ಮಾಡದಿರಿ ಹಾಗೂ ಬಾವಿ ರಾಜಕೀಯದ ಉದಾಹರಣೆಗೆ ಎಂದೂ ತಿಳಿಯದಿರಿ. ಕಳೆದುಹೋದ ಕಾಲ ವಾಸ್ತವವಾಗಿದೆ. ವರ್ತಮಾನವು ಸ್ಥಿರವಲ್ಲದ್ದು ಮತ್ತು ಭವಿಷ್ಯವು ತಿಳಿಯದ ವಿಷಯವಾಗಿದೆ. ತಿಳಿಯದುದ್ದರಿಂದ ಕೆಲ ಜನರಿಗೆ ಆತಂಕ ಉಂಟಾಗುತ್ತದೆ. ಅದಕ್ಕಾಗಿಯೇ ಅವರು ವರ್ತಮಾನದೊಂದಿಗೆ ಅಂಟಿಕೊಂಡಿರುತ್ತಾರೆ. ಅಥವಾ ಕಳೆದದ್ದನ್ನು ಮರಳಿ ಪಡೆಯಲು ಬಯಸುತ್ತಾರೆ. ಸೃಷ್ಟಿಯ ನಿಯಮ ಹಾಗೂ ಸಮಯದ ವಿರುದ್ಧವಾಗಿ ಕೆಲಸ ಮಾಡುವವರು ಸಫಲರಾಗಲು ಸಾಧ್ಯವಿಲ್ಲ. ಭವಿಷ್ಯದ ಬಗ್ಗೆ ಅಂಜದಿರಿ, ಬದಲಾಗಿ ಅದರ ನಿರ್ಮಾಣದಲ್ಲಿ ಆಸಕ್ತಿಹೊಂದಿ, ಕಂಡ ಕನಸುಗಳನ್ನು ಶೃಂಗರಿಸಿ, ಕಲ್ಪನೆಯನ್ನು ಕಾರ್ಯದಿಂದ ಕಟ್ಟಿ ಮತ್ತು ಯೋಜನೆಗಳನ್ನು ಉಪಾಯದಿಂದ ಪೂರ್ಣಗೊಳಿಸಿ, ವಾದಗಳು ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ತಮ್ಮ ಅಂತರಾತ್ಮದ ಹರಿವನ್ನು ಸಾಕ್ಷಿಯನ್ನಾಗಿಸಿ ಮುಂದೆ ಸಾಗಿರಿ. ಅದೇ ಧರ್ಮವಾಗಿದೆ. ಅದರಿಂದಲೇ ಸಾಧನೆಯ ಪ್ರೇರಣೆ ದೊರೆಯುವುದು ಮತ್ತು (ಕರ್ಮದ) ಕಾರ್ಯಕ್ಕೆ ದಿಕ್ಕು ದೊರೆಯುವುದು. ಯಾವ ಒಲವು ಮತ್ತು ವ್ಯವಸ್ಥೆ, ಯಾವ ರಾಜಕೀಯ ಮತ್ತು ಅರ್ಥನೀತಿ ಯಾವ ಸಾಮಾಜಿಕ ನಿಯಮ ಮತ್ತು ಶಿಕ್ಷಣ ಪದ್ಧತಿಯು ನಮ್ಮನ್ನು ಕಾರ್ಯ ವಿಹೀನ ಸೋಮಾರಿ ಮತ್ತು ನಿದ್ರೆಯ ಸ್ವಭಾವದವನನ್ನಾಗಿಸುವುದೋ ಅದೇ ಕಲಿಯುಗ ಇದರ ಪರಿವರ್ತನೆ ಅತ್ಯಗತ್ಯ. ಚರೈವೇತಿ (ಮುನ್ನುಗ್ಗಿ) ಇದು ಕೃತಯುಗದ ಘೋಷಣೆಯಾಗಿದೆ ಆದುದರಿಂದ ರಾಜ ಮತ್ತು ಪ್ರಜೆ, ಬಂಡವಾಳಗಾರ ಮತ್ತು ಕಾರ್ಮಿಕ ಬಡವ ಮತ್ತು ಬಲ್ಲಿದರೆಲ್ಲರಿಗೂ ಪರಿಶ್ರಮವೆಂಬ ಆರಾಧನೆಯಲ್ಲಿ ತೊಡಗಿಸಬೇಕಾಗಿದೆ. ಪರಿಶ್ರಮದಿಂದಲೇ ಅನ್ಯರ ವಶವಾದ ರಾಜನೈತಿಕ, ಆರ್ಥಿಕ ಮತ್ತು ಸಾಮಾಜಿಕ ಸಂರಕ್ಷಣೆಯನ್ನು ಅಂತ್ಯಗೊಳಿಸಬೇಕಾಗುವುದು. ಪರಿಶ್ರಮಕ್ಕಾಗಿ ಹಂಬಲಿಸುತ್ತಿರುವ 256 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಭುಜಗಳಿಗೆ ಕೆಲಸ ಕೊಡಲೇಬೇಕು. ಯಾವ ರಾಷ್ಟ್ರದಲ್ಲಿ ಯಥೇಚ್ಛವಾಗಿ ಕೆಲಸವಿದೆಯೋ ಅಲ್ಲಿ ಬಡತನ ಮತ್ತು ಅಸಮಾನತೆ ಉಳಿಯಲು ಸಾಧ್ಯವಿಲ್ಲ. ಎಲ್ಲಿ ಸಮಾನತೆ ಹಾಗೂ ಸಂಪನ್ನತೆ ಇದೆಯೋ ಅಲ್ಲಿ ಸತ್ಯವಿದೆ ಮತ್ತು ಅಲ್ಲೇ ಶಿವ ಮತ್ತು ಸುಂದರತೆಯಿದೆ. ಹೊಸ ಯುಗವು ಪರಿಶ್ರಮದ ಯುಗವಾದಾಗಲೇ ಕೃತಯುಗವು ಆರಂಭವಾಗುವುದು. ವ್ಯಾಮೋಹದ ಯುಗ ಮುಗಿದುಹೋಗಿದೆ. ಮೋಹ ನಿದ್ರೆಯನ್ನು ಕೊನೆಗೊಳಿಸಿ ಜಾಗೃತಿಯು ವ್ಯಾಕುಲವಾಗುತ್ತಿದೆ. ಇಂದಿನ ತಳಮಳವೇ ಇದರ ಸಂಕೇತವಾಗಿದೆ. ಕೆಲವರು ಅದನ್ನು ಬೆನ್ನುತಟ್ಟಿ ಅಥವಾ ಮಾದಕ ದ್ರವ್ಯವನ್ನು ಕುಡಿಸಿ ಮತ್ತೇ ಮಲಗಿಸಬೇಕೆಂದಿದ್ದಾರೆ. ಇಂತಹವರಿಂದ ಎಚ್ಚರವಾಗಿರಿ ಈಗ ನಾವು ಕಣ್ಣು ತೆರೆದು ಎದ್ದು ನಿಲ್ಲಬೇಕಾಗಿದೆ ಮತ್ತು ಮುಂದುವರೆಯುವ ವ್ಯವಸ್ಥೆಯನ್ನು ಮಾಡಬೇಕು. ಯಾರು ಮಾರ್ಗದ ಭಯವನ್ನುಂಟುಮಾಡಿ ಮುಂದೆವರೆಯದಿರುವಂತೆ ಸಲಹೆ ನೀಡುತ್ತಾರೋ ಅವರ ಮಾತನ್ನು ಕೇಳಬೇಡಿ. ತಪ್ಪುದಾರಿಯಲ್ಲಿ ಮುನ್ನಡೆದರೂ ಕೂಡ ಏನೂ ನಷ್ಟವುಂಟಾಗುವುದಿಲ್ಲ, ಆದರೆ ಶಕ್ತಿಯ ದುರ್ಬಳಕೆಯಾಗಿ ಚಕ್ಕೆಯಾಗುತ್ತೀರಾ ಮತ್ತು ನಮ್ಮ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು. ಯಾವ ಕಡೆಗೆ ನಾವು ಮುಂದೆ ಸಾಗುತ್ತೇವೋ ಅದೇ ದಾರಿಯಾಗುವುದು. ___________ * ಆಕರ : ರಾಷ್ಟ್ರಧರ್ಮ ಮಾಸಪತ್ರಿಕೆ, 1974ರ ಫೆಬ್ರವರಿ ಸಂಚಿಕೆ ಮಧ್ಯಪ್ರದೇಶದ ಪತ್ರ ಕಾಂಗ್ರೆಸ್‍ನ ಮೂಲಕ ಹೊಸ ರಕ್ತದ ಉಪೇಕ್ಷೆ, ಮಧ್ಯಪ್ರದೇಶದ ವಿಧಾನಪರಿಷತ್ತಿನ ರಚನೆ ಆಗುವುದೇ? ಚಾರಿತ್ರ್ಯಹೀನ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್- ಪ್ರದೇಶ ಕಾಂಗ್ರೆಸ್‍ನ ಉಪಾಧ್ಯಕ್ಷರು ಟಿಕೆಟ್ ಹಿಂದಿರುಗಿಸಿದರು- ಜನಸಂಘದ ಚುನಾವಣೆ ಅಭಿಯಾನದಲ್ಲಿ ಚುರುಕು- ಖಂಡ್ವಾದಲ್ಲಿ ಅನೇಕ ಸಂಸ್ಥೆಗಳ ವತಿಯಿಂದ ಪಂಡಿತ ದೀನದಯಾಳ್ ಉಪಾಧ್ಯಾಯರಿಗೆ ಭವ್ಯಸ್ವಾಗತ. ಕಮ್ಯುನಿಸ್ಟ್‌ರ ನೌಕೆ ಮುಳುಗುವ ಲಕ್ಷಣ. -ಮೂಲ ಸಂಪಾದಕರು, ಪಾಂಚಜನ್ಯ ಕಾಂಗ್ರೆಸ್‍ನ ಚುನಾವಣಾ ಸಮಿತಿಯು ಮಧ್ಯಪ್ರದೇಶದ ಅಭ್ಯರ್ಥಿಗಳ ಪಟ್ಟಿಯನ್ನೇನೋ ಘೋಷಿಸಿತು. ಆದರೆ ಪಟ್ಟಿಯು ಸಂಪೂರ್ಣ ಪ್ರದೇಶದಲ್ಲಿ ಕೋಲಾಹಲನ್ನು ಎಬ್ಬಿಸಿತು. ಅನೇಕ ಕಾರಣಗಳಿಂದ ಪ್ರದೇಶದ ಕಾಂಗ್ರೆಸ್ ಜನರಲ್ಲಿ ವ್ಯಾಪಿಸಿದ ಕ್ಷೋಭೆ ಇದರ ಕಾರಣವಾಗಿತ್ತು. ಯಾವ ಚುನಾವಣಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆಯೋ ಅಲ್ಲಿಯ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧವಾಗಿರುವರೆಂಬ ಕಾರಣದಿಂದ ಅನೇಕ ಅಭ್ಯರ್ಥಿಗಳು ಸಹ ಭಯಭೀತರಾಗಿದ್ದರು. ಪಟ್ಟಿಯಲ್ಲಿ ಹೊಸರಕ್ತವನ್ನು ಸಂಪೂರ್ಣವಾಗಿ ಉದಾಸೀನ ಮಾಡಲಾಗಿದೆ. ಹಳೆಯ ಶಾಸಕರಿಗೆ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ಕೊಡಲಾಗಿದೆ. ಅಸಂತೋಷದ ಭಯದಿಂದ ಕಾರ್ಯಕರ್ತರ ಬಾಯಿಮುಚ್ಚಿಸುವುದಕ್ಕೆ ಮಧ್ಯಪ್ರದೇಶದ ವಿಧಾನಪರಿಷತ್ತಿನ ಸಂಘಟನೆಯನ್ನು ಮಾಡಲಾಗುವುದೆಂಬ ಆಸೆಯನ್ನು ಹುಟ್ಟಿಸಲಾಗಿದೆ. ಮುಖ್ಯಮಂತ್ರಿ ಕಾಟ್ಜೂ ಅವರಿಗೆ ಬಹುಮತ ಸಿಕ್ಕಿದೆಯಾದರೂ, ಅವರ ಮಂತ್ರಿ ಮಹಾಮಂಡಲವೆಂದು ಹೇಳಲಾದ ಗುಂಪು ಇಬ್ಭಾಗವಾಗಿದೆ. ಅನೇಕ ಪ್ರಮುಖ ವ್ಯಕ್ತಿಗಳು ತಕ್ಷಣ ಹೋದುದರಿಂದ ಪಕ್ಷದಲ್ಲಿ ಬಹಳ ಹೆಚ್ಚಿನ ಕ್ಷೋಭೆ ಇದೆ. ಮಧ್ಯ ಪ್ರದೇಶದ ಭೂತಪೂರ್ವ ಮುಖ್ಯಮಂತ್ರಿ ಪಂಡಿತ್ ದ್ವಾರಕಾ ಪ್ರಸಾದ ಮಿಶ್ರ ಅವರಿಗೆ ಟಿಕೆಟನ್ನೇ ಕೊಡಲಾಗಿಲ್ಲ. ಮತ್ತೊಂದು ಕಡೆ ಪ್ರದೇಶ ಕಾಂಗ್ರೆಸ್ ಗುಂಪಿನ ಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಅದರಲ್ಲಿಯೂ ಅನೇಕ ಪ್ರಮುಖ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ 258 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅದರ ಶಕ್ತಿ ಹೆಚ್ಚಿದೆ. ಹೀಗೆ ಈಗ ಮುಖ್ಯಮಂತ್ರಿ ಕಾಟ್ಜೂ ಅವರ ನೇತೃತ್ವವು ಬಹಳ ದೊಡ್ಡ ಸವಾಲನ್ನು ಎದುರಿಸಬೇಕಾಗುವುದು. ಟಿಕೆಟ್‍ಗಳ ನಿರ್ಧಾರಗಳ ಬಗ್ಗೆ ಅನೇಕ ಸ್ಥಳಗಳಲ್ಲಿ ಪ್ರಬಲ ಪ್ರತಿಕ್ರಿಯೆಗಳಾದುವು. ಪ್ರದೇಶ ಕಾಂಗ್ರೆಸ್‍ನ ಅಧ್ಯಕ್ಷರಾದ ಶ್ರೀ ದೇಶಲಿಹಡಾ ಅವರು ಪರಾಜಯದ ಸಾಧ್ಯತೆಗಳು ಹೆಚ್ಚುತ್ತಿರುವುದನ್ನು ನೋಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ನಂತರ ಅದನ್ನು ನಾಟಕೀಯ ರೀತಿಯಿಂದ ಪುನಃ ಹಿಂದಕ್ಕೆ ಪಡೆಯಲಾಯಿತು. ಇಂದೋರ್ ಜಿಲ್ಲಾ ಕಾಂಗ್ರೆಸ್ ಪಕ್ಷವು ಕಾರ್ಮಿಕ ಮಂತ್ರಿ ದ್ರಾವಿಡ್ ಮತ್ತು ಇಂಟುಕ ನಾಯಕರಾದ ಶ್ರೀರಾಮಸಿಂಹ ಅವರಿಗೆ ಟಿಕೆಟ್ ಕೊಡಲಾಗಿರುವ ಬಗ್ಗೆ ತೀವ್ರ ಕ್ಷೋಭೆಯನ್ನು ವ್ಯಕ್ತಪಡಿಸಿತು. ಈ ರೀತಿ ಇಂಟುಕ್ ಮತ್ತು ಕಾಂಗ್ರೆಸ್ ನಡುವೆ ಆಳವಾದ ಬಿರುಕು ಹುಟ್ಟಿಕೊಂಡಿದೆ. ಇಂದೋರಿನ ಶ್ರೀ ಖಾದೀವಾಲಾರನ್ನು ಖರಗೋನ್ ಮೇಲೆ ಹೇರಿದ್ದಕ್ಕೆ ಅಲ್ಲಿ ಅಸಂತೋಷ ಇದ್ದೇ ಇದೆ. ಸ್ವಯಂ ಖಾದೀವಾಲಾ ಸಹ ಕ್ಷುಬ್ಧರಾಗಿದ್ದಾರೆ. ಇದೇ ರೀತಿ ಮೆಂದಸೌರ್, ವಿಲಾಸಪುರ್, ರಾಯಪುರ್, ಜಬ್ಬಲ್‍ಪುರ, ಹೊಶಂಗಾಬಾದ್, ಸೀಹೋರ್, ದೇವಾಸ್, ರಾಯಸೆನ್, ಸಾಮರ್, ದಮೋಹ, ರೀವಾ ಮುಂತಾದ ಅನೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಜನರಲ್ಲಿ ತೀವ್ರ ಅಶಾಂತಿ ಇದೆ; ವಿದ್ರೋಹದ ಅಪಾಯವಿದೆ. ಎಂದು ಅಭ್ಯರ್ಥಿಗಳು ಪ್ರದೇಶ ಕಾಂಗ್ರೆಸ್‍ಗೆ ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣೆಗಾಗಿ 25 ಲಕ್ಷ ಕೊಡಿಸುವ ನಿರ್ಧಾರ ಮಾಡಿತು. ಇದರಲ್ಲಿ 15 ಲಕ್ಷ ರೂಪಾಯಿಗಳ ಜೀಪುಗಳನ್ನು ಕೊಂಡುಕೊಳ್ಳಲಾಗುವುದು. ಮಧ್ಯಪ್ರದೇಶದಂತಹ ಹಿಂದುಳಿದ ಪ್ರದೇಶದಲ್ಲಿ ಇಷ್ಟುದೊಡ್ಡ ಮೊತ್ತ ಎಲ್ಲಿಂದ ಬಂತು, ಹೇಗೆ ಬರುವುದು ಇದು ಒಂದು ಪ್ರಶ್ನೆ. ಕಂಟ್ರಾಕ್ಟರುಗಳು, ಮಿಲ್ ಮಾಲೀಕರು, ಭಾರೀ ವ್ಯಾಪಾರಿಗಳ ಮೇಲೆ ಒತ್ತಾಯ ಹೇರಿ ``ಬ್ಲ್ಯಾಕ್‍ಮೇಲೆ" ತಯಾರಿ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ. ಟಿಕೆಟ್‍ನ ವಿಷಯದಲ್ಲಿ ವಿಶೇಷ ಉಲ್ಲೇಖನೀಯ ಸಂಗತಿ ಎಂದರೆ ಯಾವ ಅಭ್ಯರ್ಥಿಗಳ ವಿರುದ್ಧ ಅನೈತಿಕತೆ, ಭ್ರಷ್ಟಾಚಾರ, ಲಂಚಗುಳಿತನ, ಸಾಂಪ್ರದಾಯಿಕ ದ್ವೇಷವನ್ನು ಹರಡುವುದಕ್ಕೆ ಪದವಿಯ ದುರುಪಯೋಗ, ಚರಿತ್ರಹೀನತೆ ಮುಂತಾದ ಗಂಭೀರ ಆರೋಪಗಳಿದ್ದುವೋ ಅವರಿಗೂ ಸಹ ಟಿಕೆಟ್ ಸಿಕ್ಕಿದೆ. ಸುಮಾರು ಐದು ವರ್ಷಗಳಲ್ಲಿ, ವಿಧಾನ ಸಭೆಯಲ್ಲಿ ಬಾಯಿ ಸಹ ತೆರೆಯಲಿಲ್ಲವೋ ಅವರಿಗೂ ಸಹ ಟಿಕೆಟ್ ಸಿಕ್ಕಿದೆ. ಅನೇಕ ಸಕ್ರಿಯ ಕಾರ್ಯಕರ್ತರನ್ನು ಪೂರ್ತಿಯಾಗಿ ಉಪೇಕ್ಷಿಸಲಾಗಿದೆ. ಆದ್ದರಿಂದ ಕಾರ್ಯಕರ್ತರಲ್ಲಿ ಬಹಳ ಹೆಚ್ಚಿನ ಕ್ಷೋಭೆ ವ್ಯಾಪಿಸಿದೆ. ಚುನಾವಣೆಗೆ ಇನ್ನೂ ಒಂದೂವರೆ ತಿಂಗಳು ಉಳಿದಿದೆ. ಆದರೆ ಈಗಲೇ ಮಧ್ಯಪ್ರದೇಶದ ಪತ್ರ 259 ಅಧಿಕಾರದಲ್ಲಿರುವ ಪಕ್ಷವು ಅನೈತಿಕ ಷಡ್ಯಂತ್ರಗಳ ಪ್ರಯೋಗಗಳಿಗೆ ಇಳಿದಿದೆ. ಡಿಸೆಂಬರ್ ಹೊತ್ತಿಗೆ ಪ್ರದೇಶದ ಮಂತ್ರಿಗಣವು ಸರ್ಕಾರೀ ಖರ್ಚಿನಲ್ಲಿ ತಮ್ಮ ಚುನಾವಣಾ ಕ್ಷೇತ್ರಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ಜನ ಸಂಪರ್ಕಕ್ಕಾಗಿ ಪ್ರವಾಸ ಮಾಡುತ್ತಿದ್ದರು. ಇಂದಿಗೂ ಸರ್ಕಾರದ ಖರ್ಚಿನಲ್ಲಿ ದೊಡ್ಡ ದೊಡ್ಡ ಸಮಾರಂಭಗಳು ಆಗುತ್ತಿವೆ. ಉದ್ಘಾಟನೆಗಳು ಮತ್ತು ಶಿಲಾನ್ಯಾಸಗಳ ಮಾರುಕಟ್ಟೆಯನ್ನು ಚುರುಕುಗೊಳಿಸಿ ಜನರನ್ನು ಪ್ರಭಾವಿತರನ್ನಾಗಿ ಮಾಡುವ ತಾಂತ್ರಿಕ ಪಿತೂರಿ ನಡೆಯುತ್ತಿದೆ. ಬೇರೆ ಪ್ರದೇಶಗಳ ತರಹ ಮಧ್ಯಪ್ರದೇಶ ಕಾಂಗ್ರೆಸ್‍ನಲ್ಲಿಯೂ ಸಮಾನತೆಯ ಸ್ತರದಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯದ ಆಧಾರದ ಮೇಲೆ ವಿರೋಧಿ ಪಕ್ಷವನ್ನು ಎದುರಿಸುವ ನೈತಿಕ ಸಾಹಸ ಉಳಿದಿಲ್ಲ. ಇವೆಲ್ಲದರ ಹೊರತಾಗಿಯೂ ಮಧ್ಯಪ್ರದೇಶದಲ್ಲಿ ಇಂದು ಇರುವ ಸ್ಥಿತಿಯನ್ನು ನೋಡಿದರೆ ಇಷ್ಟು ಮಾತ್ರ ಖಂಡಿತ, ಯಾವುದೆಂದರೆ ವಿರೋಧಪಕ್ಷದ ಶಕ್ತಿ ಸಾಕಷ್ಟು ಹೆಚ್ಚುವುದು. ಮತ್ತೆ ಕಾಂಗ್ರೆಸ್‍ನ ಅನೇಕ ದಿಗ್ಗಜರು ವಿಧಾನಸಭೆಯ ಪ್ರವೇಶದ ಸೌಭಾಗ್ಯದಿಂದ ವಂಚಿತರಾಗುತ್ತಾರೆ. ಮಧ್ಯಪ್ರದೇಶದ ವಿಧಾನಸಭೆಯ ಉಪಾಧ್ಯಕ್ಷ ಶ್ರೀ ಪಟವರ್ಧನ್ (ಕಾಂಗ್ರೆಸ್) ಅವರಿಗೋ ತಮ್ಮ ಸ್ಥಾನದ ಪರಾಜಯ ನಿಶ್ಚಿತ ಎಂದು ಎಷ್ಟು ಗೊತ್ತಾಯಿತೆಂದರೆ ಅವರು ತಮ್ಮ ಟಿಕೆಟ್ ಅನ್ನು ಹಿಂದಿರುಗಿಸಿದರು. ಶ್ರೀ ಪಟವರ್ಧನ್ ಅಂತಹ ಪ್ರಮುಖ ಮುಖಂಡರು ಭಯಭೀತರಾದುದರಿಂದ ಈ ಕ್ಷೇತ್ರದ ಸುತ್ತುಮುತ್ತಿನ ಕಾಂಗ್ರೆಸ್ ಮುಖಂಡರ ನೈತಿಕ ಸಾಹಸಕ್ಕೆ ಬಲವಾದ ಏಟು ಬಿತ್ತು. ಭಾರತೀಯ ಜನಸಂಘದ ಚುನಾವಣಾ ಅಭಿಯಾನದಲ್ಲಿ ಸಾಕಷ್ಟು ಚುರುಕು ಬಂದಿದೆ. ದಕ್ಷಿಣಾಂಚಲದ ಮಂತ್ರಿ ಜಗನ್ನಾಥರಾವ್ ಜೋಷಿಯವರ ಪ್ರದೇಶದ ಪ್ರವಾಸ ಪೂರ್ತಿಯಾಗಿದೆ. ಜಬ್ಬಲ್‍ಪುರ, ಇಂದೋರ್, ಇಟಾಸಿ, ಬಿಲಾಸ್‍ಪುರ, ನಾಗೋಡ್, ಬಾಜಾಪಾರಾ ಮುಂತಾದ ಸ್ಥಳಗಳಲ್ಲಿ ಅವರ ಭಾಷಣವನ್ನು ಕೇಳುವುದಕ್ಕೋಸ್ಕರ ವಿಶಾಲ ಜನಸಮುದಾಯವು ನೆರೆದಿತ್ತು. ಜನಸಂಘದ ಮಹಾಮಂತ್ರಿ ಶ್ರೀ ದೀನ್‍ದಯಾಳ್ ಉಪಾಧ್ಯಾಯ ಅವರು ಖಂಡವಾ ಮತ್ತು ರತ್ಲಾಂನಲ್ಲಿ ಬೃಹತ್ ಜನಸಭೆಗಳಲ್ಲಿ ಭಾಷಣ ಮಾಡಿದರು. ಮತ್ತು ಜನಸಂಘದ ಸಿದ್ಧಾಂತಗಳನ್ನು ಜನತೆಯ ಮುಂದೆ ಇಟ್ಟರು. ಖಂಡವಾದಲ್ಲಿ ಶ್ರೀ ಉಪಾಧ್ಯಾಯರ ಭಾಷಣವನ್ನು ಕೇಳುವುದಕ್ಕೆ ಬಹಳ ಚಳಿ ಇದ್ದರೂ ಜನರು ಕುಳಿತಿದ್ದರು. ಸಭೆ ಪ್ರಾರಂಭವಾದ ಮೇಲೆ ಅನೇಕ ಸಂಸ್ಥೆಗಳು, ದಿನಸಿ ಮರ್ಚೆಂಟ್ ಅಸೋಸಿಯೇಷನ್, ಜನರಲ್ ಮರ್ಚ್‍ಂಟ್ ಅಸೋಸಿಯೇಷನ್, ಮಹೇಶ್ವರೀ ನವಯವಕ ಮಂಡಲಿ, ಸಿಂಧೀ ಪಂಚಾಯತ್ ಹಿಂದೀ ಸಾಹಿತ್ಯಸಮಿತಿ, ಅರಾ ಮಜ್ದೂರ್ ಸಂಘ, (ಪಾತ್ರೆ) ವ್ಯಾಪಾರಿಗಳ 260 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅಸೋಸಿಯೇಷನ್, ಬುಧವಾರ ಮಂಡಿ, ಮಹಿಳಾ ಜನಸಂಘ, ರಾಠೋರ್ ಮಂಡಳಿ ಮುಂತಾದವುಗಳ ವತಿಯಿಂದ ಜನಸಂಘ ಮಹಾಮಂತ್ರಿಯನ್ನು ಸ್ವಾಗತಿಸುತ್ತಾ ಹಾರಗಳನ್ನು ಅರ್ಪಿಸಲಾಯಿತು. ಈ ರೀತಿಯ ಭವ್ಯ ಸ್ವಾಗತ ಖಂಡವಾದಲ್ಲಿ ಇಲ್ಲಿಯವರೆಗೆ ಯಾವ ರಾಜಕೀಯ ಪಕ್ಷದ ಮುಖಂಡನಿಗೂ ಸಿಕ್ಕಿರಲಿಲ್ಲ. ಸಭೆಯಲ್ಲಿ ದೀನ್‍ದಯಾಳ್ ಉಪಾಧ್ಯಾಯರಿಗೆ ಒಂದು ಸಣ್ಣ ಚೀಲವನ್ನು ಅರ್ಪಿಸಲಾಯಿತು. ಶ್ರೀ ಉಪಾಧ್ಯಾಯರು ತಮ್ಮ ಭಾಷಣದಲ್ಲಿ ಏನು ಹೇಳಿದರೆಂದರೆ ಇಂದು ವಿದೇಶೀಯರಿಂದ ಸಾಲ ತೆಗೆದುಕೊಂಡದ್ದರಿಂದ ದೇಶದ ಗೌರವ ಹೊರಗೆ ಸಾಕಷ್ಟು ಹೆಚ್ಚಿದೆ ಎಂದು ನಮ್ಮ ನಾಯಕರು ತಿಳಿಯುತ್ತಾರೆ. ಆದರೆ ಇದರ ಪರಿಣಾಮ ಏನಾಗಿದೆ ಎಂದರೆ ನಮ್ಮ ಎಲ್ಲ ಆರ್ಥಿಕ ರೂಪುರೇಷೆಗಳು ವಿದೇಶೀಯರ ಪ್ರಭಾವದಿಂದ ಪ್ರಭಾವಿತವಾಗಿದೆ. ಯೋಜನೆಗಳ ಹೆಸರಿನಲ್ಲಿ ತುಟ್ಟಿ ಹೆಚ್ಚಾಗುತ್ತಲೇ ಇದೆ. ತೆರಿಗೆಯ ಮೇಲೆ ತೆರಿಗೆ ಹಾಕಲಾಗುತ್ತಿದೆ. ತಿನ್ನುವ ಅನ್ನವನ್ನು ಹೊರಗಿನಿಂದ ಬೇಡಿ ತೆಗೆದುಕೊಂಡರೂ ಸಹ ಜನರಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿಲ್ಲ. ನಾವು ಸಹಕಾರೀ ವ್ಯವಸಾಯ ಮತ್ತು ರಾಷ್ಟ್ರೀಕರಣದ ಸರ್ಕಾರೀ ನೀತಿಯನ್ನು ವಿರೋಧಿಸಿದೆವು. ಪ್ರದೇಶದಲ್ಲಿ ಜನಸಂಘದ ನೂರಕ್ಕೂ ಹೆಚ್ಚಿನ ಸ್ಥಾನಗಳನ್ನು ಘೋಷಿಸಲಾಗಿದೆ. ಉಳಿದವುಗಳು ಬೇಗ ಆಗುತ್ತದೆ. (ರಾಷ್ಟ್ರದ್ರೋಹ ಮತ್ತು ಚೀನಾ ಪರವಾದ ಕಳಂಕದಿಂದ ಉಳಿಯುವುದಕ್ಕೆ) ನೆನಪಿರಲಿ ವಿಧಾನಸಭೆಯ 288 ಸೀಟುಗಳಲ್ಲಿ 180 ಸ್ಥಾನಗಳಿಗಾಗಿ ಜನಸಂಘವು ಚುನಾವಣೆಯಲ್ಲಿ ಹೋರಾಡುತ್ತಿದೆ. ಪಶ್ಚಿಮಾಂಚಲದ ಮಂತ್ರಿ ಶ್ರೀ ಸುಂದರ ಸಿಂಹ ಭಂಡಾರಿಯೂ ಸಹ ಸದ್ಯದಲ್ಲಿ ಪ್ರದೇಶದ ಎರಡು ದಿನಗಳ ಪ್ರವಾಸವನ್ನು ಮುಗಿಸಿದ್ದಾರೆ. ಪ್ರದೇಶದಲ್ಲಿ ಕಮ್ಯುನಿಸ್ಟರದು ಅತ್ಯಂತ ಶೋಚನೀಯ ಸ್ಥಿತಿಯಾಗಿದೆ. ಜಬ್ಬಲ್‍ಪುರದಲ್ಲಿ ಅವರು ಜನಸಂಘದ ವಿರುದ್ಧ ವಿಷವನ್ನು ಉಗುಳುತ್ತಾರೆ ಮತ್ತು ಇಂದೋರಿನಲ್ಲಿ ಅವರ ಮುಂದೆ ಚುನಾವಣಾ ಒಪ್ಪಂದದ ಭಿಕ್ಷೆಗಾಗಿ ಜೋಳಿಗೆ ಚಾಚುತ್ತಾರೆ. ಭೂಪಾಲ್, ಜಬ್ಬಲ್‍ಪುರ ಹಾಗೂ ಬುರ್ಹಾನಪುರದಲ್ಲಿ ಅವರು ಮುಸ್ಲಿಂ ಸಾಂಪ್ರದಾಯಿಕತೆಯನ್ನು ರೊಚ್ಚಿಗೆಬ್ಬಿಸಿ ಮುಸ್ಲಿಂಲೀಗ್‍ನೊಂದಿಗೆ ಕೈಜೋಡಿಸಿದರು. ಮತ್ತು ಪ್ರದೇಶದ ಬೇರೆ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕತೆಯನ್ನು ಇಲ್ಲವಾಗಿಸುವ ಘೋಷಣೆ ಹಾಕುತ್ತಿದ್ದಾರೆ. __________ * 22 ಜನವರಿ 1962 ಮಧ್ಯಪ್ರದೇಶದ ಪತ್ರ 261 ಈ ಎರಡು ಬಣ್ಣದ ನೀತಿಯ ಪರಿಣಾಮ ಸ್ವರೂಪವಾಗಿ ಮೇಲೆ ಹೇಳಿದ ಪಕ್ಷಕ್ಕೆ ತಮ್ಮ ಸದ್ಯದ ಮೂರುಸ್ಥಾನಗಳನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ. ರಾಷ್ಟ್ರದ್ರೋಹ ಕಳಂಕದಿಂದ ಉಳಿಯುವುದಕ್ಕಾಗಿ ಮೇಲೆ ಹೇಳಿದ ಪಕ್ಷವು ತನ್ನ ಅಭ್ಯರ್ಥಿಗಳನ್ನು ಸ್ವತಂತ್ರವಾಗಿ ನಿಲ್ಲಿಸುವ ನೀತಿಯನ್ನು ಪಾಲಿಸಿತು. ಏಕೆಂದರೆ ಸಂಯುಕ್ತರಂಗವನ್ನು ಮಾಡಬೇಕೆಂಬ ಅದರ ಬೇಡಿಕೆಯನ್ನು ಪ್ರಮುಖ ರಾಷ್ಟ್ರವಾದೀ ವಿರೋಧ ಪಕ್ಷಗಳು ಸಾರಾಸಗಟಾಗಿ ನಿರಾಕರಿಸಿದುವು. ರಾಷ್ಟ್ರದ ರಕ್ಷಣೆಯ ಪ್ರಶ್ನೆಗೆ ಸರ್ವಾಧಿಕ ಮಹತ್ವ ಕೊಡಬೇಕು. ಇಂದು ದೇಶಕ್ಕೆ ಸ್ವಾಭಿಮಾನೀ ಯೋಧರ ಅವಶ್ಯಕತೆ ಇದೆ. ವಿರೋಧ ಪತ್ರಗಳನ್ನು ಕಳುಹಿಸುವವರದಲ್ಲ. ಶ್ರೀ ದೀನ್ ದಯಾಳ್ ಉಪಾಧ್ಯಾಯರಿಂದ ವಿಭಿನ್ನ ದಳಗಳ ನೀತಿಗಳ ಶವಪರೀಕ್ಷೆ. ಬಾಹ್ಯ ಆಕ್ರಮಣ ಅಥವಾ ಯಾವುದಾದರೂ ಆಂತರಿಕ ಕಷ್ಟ ಯಾವುದೇ ರಾಷ್ಟ್ರದ ಏಕತೆ, ಅಖಂಡತೆಗೆ ಸಂಕಟದ ಕಾರಣವಾಗಬಹುದು. ಇದೇ ರೀತಿ ಯಾವುದಾದರೂ ದೇಶ ಆಂತರಿಕ ದೃಷ್ಟಿಯಿಂದ ಜರ್ಝರಿತವಾದರೆ ಅದು ಬೇಗನೆ ಹೊರಗಿನ ಆಕ್ರಮಣಗಳಿಗೆ ಬಲಿಯಾಗಿಬಿಡುತ್ತದೆ. ಆದರೆ ಹೊರಗಿನ ಆಕ್ರಮಣಗಳ ಫಲಸ್ವರೂಪವಾಗಿ ಅನೇಕ ವೇಳೆ ರಾಷ್ಟ್ರದಲ್ಲಿ ರಾಷ್ಟ್ರೀಯ ಏಕತೆಯ ಉಗ್ರಭಾವನೆಯೂ ಜಾಗೃತವಾಗಿದೆ. ಆದ್ದರಿಂದ ಅದನ್ನು ಸಂಕಟದ ಸಮಯದ ವರದಾನ ಎಂದು ಹೇಳಲಾಗುತ್ತದೆ. ಇಂಗ್ಲಿಷಿನ ಒಂದು ಗಾದೆಯ ಮಾತಿನಂತೆ ಇಂಥ ರಾಷ್ಟ್ರದ ವಿಷಯದಲ್ಲಿ ಹೀಗೆ ಹೇಳಲಾಗುತ್ತದೆ: ಇದು ಯುದ್ಧ ಕಾಲದಲ್ಲಿ ಜೀವಂತವಾಗಿರುತ್ತದೆ; ಶಾಂತಿಯ ಸಮಯ ಅದಕ್ಕೆ ಸಾವಿನ ಬಾಗಿಲು. ಆದರೂ ಸಹ ಈ ತರ್ಕದ ಆಧಾರದ ಮೇಲೆ ಯಾರಾದರೂ ಯುದ್ಧದ ಕಲ್ಪನೆ ಅಥವಾ ಯೋಜನೆ ಮಾಡಲಾರೆ, ಆದರೆ ಪ್ರತ್ಯೇಕ ರಾಷ್ಟ್ರದ ಆತ್ಮರಕ್ಷಣೆಗಾಗಿ ಸೈನಿಕ ಹಾಗೂ ಮಾನಸಿಕ ದೃಷ್ಟಿಯಿಂದ ಸದಾ ಸಿದ್ಧವಾಗಿರುವುದು ಅವಶ್ಯಕ. ಏಕೆಂದರೆ ಇದರ ಹೊರತು ಯಾವುದೇ ರಾಷ್ಟ್ರ ಪ್ರಪಂಚದಲ್ಲಿ ತನ್ನ ಸ್ವಾತಂತ್ರ್ಯವನ್ನು ಬಹಳ ದಿನಗಳವರೆಗೆ ದೃಢವಾಗಿ ಕಾಪಾಡಿಕೊಳ್ಳಲಾರದು. ಇಷ್ಟೇ ಅಲ್ಲ ಒಂದು ರಾಷ್ಟ್ರವು ಬಾಹ್ಯ ಆಕ್ರಮಣಗಳಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳುವ ಸಿದ್ಧತೆಯೂ ಅಲ್ಲದೆ ದೇಶದಲ್ಲಿರುವ ವಿಚ್ಛಿದ್ರಕಾರಿ ಮತ್ತು ಓ ದಿಲ್ಲಿಯ ಪಹರೆದಾರರೇ ! ಬೆಳಕಲ್ಲಿ ಇರುವ ನಿಮಗೆ ಕತ್ತಲ ಅರಿವಿಲ್ಲ ಓ ದಿಲ್ಲಿಯ ಪಹರೆದಾರರೇ, ದಿಲ್ಲಿ ಹಿಂದೂಸ್ತಾನವಲ್ಲ ಕತ್ತಲೆ ಕಳೆದು, ಕಪ್ಪುಸರಿದಿದೆ, ಆದರಿನ್ನೂ 262 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸೂರ್ಯನುದಿಸಿ ಬರಲಾಗಲಿಲ್ಲ. ಮಾನಸ ಸರೋವರದ ವಾಸಿಗಳಾಗಿ ಮುತ್ತು ಹೆಕ್ಕಲಾರೆವೇ ನಿರಾಶೆ ಕವಿದಿದೆ ನಾಲ್ಕೂ ಕಡೆ, ಸಂಕಟ, ಉಸಿರುಕಟ್ಟಿದೆ, ಹಸಿವು, ನಿರುದ್ಯೋಗ ಹರಡಿದೆ ಎಲ್ಲೆಲ್ಲೂ ಆದರೂ ಮನರಂಜನೆಗೆ ಹೇಳುತ್ತೀರಾ, ಬಂದಿದೆ ನವಯುಗವೆಂದು ಸಮಯವಿದೆ ಇನ್ನೂ ನಾವೆಲ್ಲ ಕೂಡಿ ತಿದ್ದಿಕೊಳ್ಳೋಣ ನಮ್ಮ ತಪ್ಪ ಜನಗಣಮನದ ಹೇ ಭಾಗ್ಯವಿಧಾತಾ ಅನುಸಂಧಾನವಲ್ಲ ಜೀವನ ಬೆಳಗಿನಲ್ಲಿ ಬನಾರಸ್, ಸಂಜೆಯ ಲಕ್ನೋದಲ್ಲಿ ಗಾಯಗೊಂಡು, ಏಟು ಬೀಳುವ ಗಲಾಟೆಯ ನೋಡಬೇಡ ನೋಡದಿರು ಕೋಲಾಹಲವ ಕಲ್ಕತ್ತಾ, ಮುಂಬೈ ಮತ್ತು ದಿಲ್ಲಿಯಲ್ಲಿ ನೋಡಬಲ್ಲೆಯಾದರೆ ನೋಡು ಹಳ್ಳಿಗಳ ಹಾಳು-ಬೀಳು ಗುಡಿಸಲನ್ನು ನೋಡು ತಮ್ಮ ಬರಿಯ ತಾಜ್‍ಮಹಾಲನ್ನಲ್ಲ ಸೋತು ಹೋದೆವು, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹಗಳ ಅಭಿಶಾಪಗಳಿಂದ. ಮಾನವನ ಗೆಳತಿ ಪ್ರಕೃತಿಯೂ ಈಗ ಅವನಿಗೆ ವರದಾನವಲ್ಲ. ಒಂದು ತಿರುವು ಮುಗಿಸಿದುವಷ್ಟೆ ಸಾಗುವ ಹಾದಿ ಇದೆ ಇನ್ನೂ ದೀರ್ಘ ನಮ್ಮ ಸಹಯಾತ್ರಿಗಳಲ್ಲಿ ಇಣುಕುತಿದೆ ಅಸಹಾಯಕತೆ ಸರಹದ್ದಿನ ಗೋಡೆಗಳಲ್ಲಿ ತಮ್ಮ ಹಗಲೇ ಬೀಳುತ್ತಿದೆ ಕನ್ನ ಮತ್ತೂ ಅಪಾಯವಿದೆ ಜೀವಕ್ಕೆ, ವಿನಾಶದ ಭಯವಿದೆ ಇನ್ನೂ ಯಾರ ವಾಣಿಯಲ್ಲಿ ಅಮೃತ ಒಸರುವುದೋ ಅವರ ಮನದಲ್ಲಿ ಘೋರ ಹಾಲಾಹಲ ! ಆಪ್ತರೆಂದು ಆಲಿಂಗಿಸಿಕೊಳ್ಳುವವರಿಗಿಲ್ಲ ನಿಷ್ಠೆ. ಹೇಳುವೆವು ನಾವು ಸ್ವತಂತ್ರರೆಂದು, ನಮಗಿದೆ ನಮ್ಮ ಅಧಿಕಾರ ಆದರೆ ದಿಲ್ಲಿಯ ಪಹರೇದಾರರೇ ನೆನಪಿರಲಿ ಇಷ್ಟು ಮಾತ್ರ ಹೂವುಗಳ ಹಾಸಿಗೆಯಲ್ಲವಿದು ಮುಳ್ಳುಗಳ ಸಿಂಹಾಸನ ತಟದ ಸೀಮಾರೇಖೆಯೊಳು ಬಂದು ಅಡದಿರು ನೀ ನಡುನೀರ ಮಾತ ಬರಿ ಆದರ್ಶಗಳ ನೆರಳಲ್ಲಿ, ನಿಜದ ಹೆಸರಿಲ್ಲ, ಗುರುತಿಲ್ಲ ಮಧ್ಯಪ್ರದೇಶದ ಪತ್ರ 263 ಜನತೆಯ ಮೇಲೆ ಎಂದು ನಡೆವುದೋ ಈ ಸಂಮ್ಮೋಹನ ಮಂತ್ರ ಸತ್ಯ ಅಹಿಂಸೆ, ಹೇಡಿತನಗಳಿಂದ ನಡೆವುದೇ ಅಧಿಕಾರ ತಂತ್ರ ಇಂದು ಸಿಂಹಾಸನಕ್ಕೆ ಗುಂಡಿಕ್ಕಿದವರು ಸೈತಾನರು ಹಾರಾಡುತಿರಲು ಮಹಾಯುದ್ಧ ತಲೆಯ ಮೇಲೆ ನಡೆವುದು ಜನತಂತ್ರ ಹೇಗೆ ನಾಗಾಸಾಕಿ ಕಿರುಚುತಿದೆ ಹೇ ವಿಶ್ವಶಾಂತಿಯ ದಲ್ಲಾಳಿಗಳೇ, ಅಣುಬಾಂಬಿನ ನೆರಳಲ್ಲಿ ಆಗಲಾರದು ಭೂಮಿಯು ಸ್ವರ್ಗಸಮಾನ _ ಶ್ರೀ ವಿಶ್ವಂಬರ `ಅಕೇಲಾ' ಪೃಥಕತಾವಾದೀ ಸಿದ್ಧಾಂತಗಳನ್ನು ಎದುರಿಸುವುದಕ್ಕೆ ಸಹ ಸಿದ್ಧವಾಗಿರಬೇಕು ಮತ್ತು ದೇಶದಲ್ಲಿ ರಾಷ್ಟ್ರದ ಏಕತೆ ಮತ್ತು ಅಖಂಡತೆಯ ವಿಷಯದಲ್ಲಿ ಉದಾಸೀನತೆಯಿಂದ ಇರುವ ಯಾವುದಾದರೂ ರಾಜನೈತಿಕ ಪಕ್ಷವಿದ್ದರೆ ಅವರ ಮೂಲ ವಿಚ್ಛಿದ್ರಕಾರೀ ಸಿದ್ಧಾಂತಗಳನ್ನು ಎದುರಿಸುವುದೂ ಸಾಧ್ಯವಿಲ್ಲ. ಮತ್ತು ಅದು ಶತ್ರುಗಳ ಪ್ರತೀಕಾರವನ್ನು ಮಾಡಲಾರದು. ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ನಿಜವಾಗಿ ಅಂಥ ಪಕ್ಷ ಈ ರೀತಿ ಉದಾಸೀನತೆಯಿಂದ ಇದ್ದರೆ, ರಾಷ್ಟ್ರದ ಅಸ್ತಿತ್ವವನ್ನು ಕಾಪಾಡುವುದರಲ್ಲಿ ಅದು ಸಫಲವಾಗರಲಾರದು. ಇಂದಿನ ಸ್ಥಿತಿ ಬಹಳ ಹೆಚ್ಚಿನ ಸಿದ್ಧತೆಯನ್ನು ಬಯಸುತ್ತದೆ. ಆದ್ದರಿಂದ ನಮ್ಮ ಘೋಷಣೆ `ರಾಷ್ಟ್ರದ ಸೈನಿಕೀಕರಣ' ಮತ್ತು `ಸೇನೆಯ ಆಧುನಿಕೀಕರಣವನ್ನು ಮಾಡು' ಎಂದು ಇರಬೇಕು. ಇದೇ ರೀತಿ ಗಡಿ ಪ್ರದೇಶಗಳ ವಿಚಾರದಲ್ಲಿ ನಮ್ಮ ನೀತಿ, ಅದರ ರಕ್ಷಣೆಗಾಗಿ ಇರಬೇಕು, ಮಾತುಕತೆ ಮತ್ತು ಚರ್ಚೆಗಾಗಿ ಅಲ್ಲ. ಆಕ್ರಮಣಮಾಡಿದುದೇ ಆದರೆ ಆಕ್ರಮಣಕಾರರನ್ನು ಬಲಪೂರ್ವಕವಾಗಿ ಓಡಿಸಬೇಕು. ಅವರ ಬಗ್ಗೆ ಸಮರ್ಥಿಸುವ ನೀತಿಯನ್ನು ಪಾಲಿಸಬಾರದು. ಈಗ ನಮಗೆ ಸೈನಿಕರು ಬೇಕು; ಕೇವಲ ವಿರೋಧ ಮಾಡುವವರಲ್ಲ. ಸುಮ್ಮನೆ ಕುಳಿತು ಲೆಕ್ಕಹಾಕುವವರಿಂದ ಮತ್ತು ಯಾರಲ್ಲಿ ಸಾಹಸ ಮತ್ತು ಶಕ್ತಿಯೊಂದಿಗೆ ಪರಿಸ್ಥಿತಿಯನ್ನು ಎದುರಿಸುವ ಯೋಗ್ಯತೆ ಇಲ್ಲವೋ ಅವರಿಂದ ದೇಶದ ಅಖಂಡತೆ ಸುರಕ್ಷಿತವಾಗಿರಲಾರದು. ಯಾರಲ್ಲಿ ದೇಶದ ಬಗ್ಗೆ ಶ್ರದ್ಧೆ ಮತ್ತು ಆತ್ಮ ಗೌರವದ ಭಾವನೆ ಇದೆಯೋ ಮತ್ತು ಯಾರು ಮಾತೃಭೂಮಿಗಾಗಿ ಸರ್ವಸ್ವವನ್ನು ಬಲಿದಾನವಾಗಿ ಅರ್ಪಿಸುವ ಸಂಕಲ್ಪ ಮಾಡುತ್ತಾರೋ ಅವರೇ ಅದರ ರಕ್ಷಣೆಯನ್ನು ಮಾಡಬಲ್ಲರು. 264 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜನಸಂಘವು ಹೇಳಿದ್ದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಯಾವಾಗ ಕಮ್ಯುನಿಸ್ಟ್ ಚೀನಾ ಭಾರತದ ವಿಸ್ತಾರವಾದ ಭೂಭಾಗವನ್ನು ಅನುಚಿತವಾಗಿ ವಶಕ್ಕೆ ತೆಗೆದುಕೊಳ್ಳುವ ವಿಷಯ ಬೆಳಕಿಗೆ ಬಂದಿರಲಿಲ್ಲವೊ ಜನಸಂಘವನ್ನು ಬಿಟ್ಟು ದೇಶದ ಪ್ರತ್ಯೇಕ ರಾಜನೈತಿಕ ಪಕ್ಷಗಳು ರಾಷ್ಟ್ರದ ರಕ್ಷಣೆಯ ವಿಷಯದಲ್ಲಿ ಉದಾಸೀನತೆಯಿಂದ ಇದ್ದವು. ಮತ್ತು ಪಾಕಿಸ್ತಾನದ ಬೆದರಿಕೆಗಳನ್ನು ಈ ಪಕ್ಷಗಳು ಸಾಂಪ್ರದಾಯಿಕ ಬುದ್ಧಿಯ ಪ್ರಲಾಪವೆಂದು ಹೇಳಿ ಸುಮ್ಮನಾಗುತ್ತಿದ್ದರು ಅಥವಾ ಪಾಕಿಸ್ತಾನಕ್ಕೆ ತನ್ನ ಸರ್ಕಾರದ ಮೂಲಕ ವಿರೋಧಪತ್ರವನ್ನು ಕಳುಹಿಸುವುದು ಸಾಕೆಂದು ತಿಳಿದು ಆ ವಿಷಯದಲ್ಲಿ ಸಂತೃಪ್ತಿಯ ನೀತಿಯನ್ನು ಅನುಸರಿಸುವುದರಲ್ಲೇ ಸಮರ್ಥಕರಾಗಿದ್ದರು. ಚೀನಾದ ಕಡೆಯಿಂದ ಯಾವುದೇ ಕ್ಷಣದಲ್ಲಿ ಸಂಕಟಗಳು ಎದುರಾಗಬಹುದು. ಎಂಬ ಕಲ್ಪನೆಯನ್ನು ಈ ರಾಜನೈತಿಕ ದಳಗಳು ಮಾಡಿರಲಿಲ್ಲ. ಮತ್ತು ಪಂಚಶೀಲದ ಭಾವೋನ್ಮೇಷದಲ್ಲಿ ಇವರು ಈ ಕಡೆಯಿಂದ ಉದಾಸೀನರಾಗಿದ್ದರು. ಚೀನಾದ ವಕಾಲತ್ತು ಈ ಕಾರಣದಿಂದಲೇ 1957ರ ಚುನಾವಣೆಯ ಸಮಯದಲ್ಲಿ ಪ್ರ.ಸ. ಮತ್ತು ಸಮಾಜವಾದೀ ಪಕ್ಷ ಎಲ್ಲಿ ತಮ್ಮ ಘೋಷಣಾ ಪತ್ರದಲ್ಲಿ ಟಿಬೆಟ್ಟನ್ನು ಚೀನಾ ವಶಕ್ಕೆ ತೆಗೆದುಕೊಂಡ ವಿಷಯದಲ್ಲಿ ಮತ್ತು ದಕ್ಷಿಣ ಪೂರ್ವೀ ಏಶಿಯಾದಲ್ಲಿ, ಅದರ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಮೌನವಾಗಿತ್ತೋ, ಅಲ್ಲಿ ಕಾಂಗ್ರೆಸ್ ಪಕ್ಷವು ಭಾರತ-ಚೀನಾದ ಮೈತ್ರಿಯ ರಾಗವನ್ನು ಆಲಾಪಿಸಿ ದೇಶಕ್ಕೆ ಬಹಳ ದೊಡ್ಡ ಕೆಡುಕನ್ನು ಮಾಡಿತ್ತು. ಸನ್ 57ರ ಕಾಂಗ್ರೆಸ್ ಚುನಾವಣೆಯ ಘೋಷಣಾ ಪತ್ರದಲ್ಲಿ ಏನು ಹೇಳಲಾಗಿತ್ತು ಎಂದರೆ ``ಕಳೆದ ಅನೇಕ ವರ್ಷಗಳಿಂದ ಚೀನಾ ಒಂದು ಜನವಾದಿ ಗಣತಂತ್ರವನ್ನು ಸ್ಥಾಪಿಸಿ ತನ್ನನ್ನು ಒಂದು ಶಕ್ತಿಯುತ ರಾಷ್ಟ್ರದ ರೂಪದಲ್ಲಿ ತೋರಿಸಿಕೊಂಡಿದೆ. ಅದು ನಿರಂತರ ಪ್ರಗತಿಯತ್ತ ಸಾಗಿದೆ. ಭಾರತ ಮತ್ತು ಚೀನಾದ ರಾಜನೈತಿಕ ಮತ್ತು ಆರ್ಥಿಕ ರೂಪುರೇಷೆಗಳಲ್ಲಿ ಸಾಕಷ್ಟು ಭಿನ್ನತೆ ಇದ್ದರೂ ಸಹ ಚೀನಾ ಭಾರತದ ಒಂದು ಮಹಾನ್ ನೆರೆಯ ಮಿತ್ರರಾಷ್ಟ್ರ. ಚೀನಾಗೆ ರಾಷ್ಟ್ರ ಸಂಘದಲ್ಲಿ ಜಾಗ ಕೊಡಿಸುವುದಕ್ಕೆ ಭಾರತ ಸದಾಕಾಲವು ಪ್ರಯತ್ನವನ್ನು ಮಾಡುತ್ತಿದೆ. ನಮಗೆ ದುಃಖವಾದದ್ದು ಏಕೆಂದರೆ ಪ್ರಪಂಚದ ಅನೇಕ ರಾಷ್ಟ್ರಗಳು ಇದನ್ನು ವಿರೋಧಿಸಿದುವು. ಆದರೆ ಪ್ರಪಂಚದ ನಾಲ್ಕನೆಯ ಒಂದು ಭಾಗದ ಜನಸಂಖ್ಯೆಯ ಈ ದೇಶಕ್ಕೆ ಎಲ್ಲಿಯವರೆಗೆ ರಾಷ್ಟ್ರ ಸಂಘದಲ್ಲಿ ಜಾಗಕೊಡಲಾಗುವುದಿಲ್ಲವೋ ಅದು ನಿಜವಾದ ಅರ್ಥದಲ್ಲಿ ಒಂದು ವಿಶ್ವ ಸಂಘಟನೆ ಆಗಲಾರದು ಮತ್ತು ದಕ್ಷಿಣ ಪೂರ್ವೀ ಏಷ್ಯಾದ ಸಮಸ್ಯೆಗಳನ್ನು ಚೀನಾದ ಸಹಯೋಗವಿಲ್ಲದೆ ಬಿಡಿಸಲಾಗುವುದಿಲ್ಲ. ಮಧ್ಯಪ್ರದೇಶದ ಪತ್ರ 265 ಇದು ದೇಶದ್ರೋಹ ಅಲ್ಲವೆ ? ಆದರೆ ಯಾವಾಗ ಈ ಘೋಷಣಾ ಪತ್ರವನ್ನು ಸಿದ್ಧಪಡಿಸಲಾಗಿತ್ತೋ ಅಷ್ಟುಹೊತ್ತಿಗೆ ಚೀನಾ (ಚೀನಾ ಆಕ್ರಮಣದ ಪ್ರಶ್ನೆಯ ಬಗ್ಗೆ ಕಮ್ಯುನಿಸ್ಟ್‌ರು ಏಕೆ ಮೌನವಾಗಿದ್ದಾರೇ?) ಲದಾಖ್ ಕ್ಷೇತ್ರದ ಮೇಲೆ ತನ್ನ ಅಧಿಕಾರ ಜಮಾಯಿಸಿ ಭಾರತದ ಭೂಭಾಗದ ಒಳಗೆ ತನ್ನ ಒಂದು ರಸ್ತೆಯನ್ನು ಮಾಡಿಕೊಂಡಿತ್ತು. ಭಾರತ ಸರ್ಕಾರವು ವೇಕಿಂಗ್‍ಗೆ ಈ ಸಂಬಂಧವಾಗಿ ವಿರೋಧಪತ್ರವನ್ನು ಕಳುಹಿಸಿತ್ತು. ಕಾಂಗ್ರೆಸ್ ಮುಖಂಡರಿಗೆ ಇದೆಲ್ಲವೂ ಗೊತ್ತಿದ್ದರೂ ಸಹ ಭಾರತದ ಜನತೆಗೆ ಇದರ ಸೂಚನೆಯನ್ನು ಕೊಡಲಾಗಲಿಲ್ಲ. ಕಡೆಯ ಪಕ್ಷ ಮೇಲೆ ಹೇಳಿದ ಕಾಂಗ್ರೆಸ್‍ನ ಘೋಷಣಾ ಪತ್ರವನ್ನು ಸಿದ್ಧಪಡಿಸಿದ ಪಂಡಿತ್ ನೆಹರೂ ಅವರಿಗೆ ಈ ವಿಷಯ ಚೆನ್ನಾಗಿ ಗೊತ್ತಿತ್ತು. ಈ ಸ್ಥಿತಿಯಲ್ಲಿ ಶತ್ರುವಿಗೆ ಎಚ್ಚರಿಕೆಯನ್ನು ಕೊಡದೆ, ಭಾರತದ ಜನತೆಯನ್ನು ಆಹ್ವಾನಿಸದೇ, ಕಾಂಗ್ರೆಸ್ಸಿನ ಘೋಷಣಾ ಪತ್ರವನ್ನು ಚೀನಾದ ಮಹಾನತೆ ಮತ್ತು ಅದರ ಆರ್ಥಿಕ ಪ್ರಗತಿಯ ಪತ್ರವನ್ನು ಕಾಂಗ್ರೆಸ್ ದೇಶದ ಮುಂದೆ ಇಡುತ್ತಿತ್ತು. ಇದಕ್ಕೆ ದೇಶದ್ರೋಹಿ ಎಂಬ ಹೆಸರನ್ನು ಪ್ರಯೋಗಿಸಬಹುದು. ನಾವು ಎಚ್ಚರಿಕೆಯನ್ನು ಕೊಟ್ಟಿದ್ದೆವು. ಈ ಎಲ್ಲ ಪಕ್ಷಗಳಿಗಿಂತ ಭಿನ್ನವಾದ ಭಾರತೀಯ ಜನಸಂಘವೇ ಚೀನಾದ ಬಗ್ಗೆ ಸಂಶಯದಿಂದ ಇದ್ದ ಏಕಮಾತ್ರ ಪಕ್ಷವಾಗಿತ್ತು ಮತ್ತು ಪಾಕಿಸ್ತಾನದ ಶತ್ರುತಾ ಪೂರ್ಣ ಕಾರ್ಯಗಳ ಉಲ್ಲೇಖ ಮಾಡಿದ ಮೇಲೆ 1947ರ ತಮ್ಮ ಚುನಾವಣಾ ಘೋಷಣಾಪತ್ರದಲ್ಲಿ ಬರೆದದ್ದೇನೆಂದರೆ ``ಭಾರತದ ಉತ್ತರದ ಗಡಿ ಪ್ರದೇಶವು ಸುರಕ್ಷಿತವಲ್ಲ. ಭಾರತದ ಶಾಂತಿಪೂರ್ಣ ದೃಷ್ಟಿಕೋನವನ್ನು ಉಪೇಕ್ಷಿಸುತ್ತಾ ಚೀನಾ ಟಿಬೆಟ್‍ನ ಸ್ವಾತಂತ್ರ್ಯವನ್ನು ನಾಶಮಾಡಿ ಅದನ್ನು ಗುಲಾಮನನ್ನಾಗಿ ಮಾಡಿದೆ. ಇದು ಸಹ ಅಸ್ತಿತ್ವದ ನೀತಿಗೆ ವಿರುದ್ಧ. ನೇಪಾಳದೊಂದಿಗೆ ಸಂಧಿಯನ್ನು ಮಾಡುವಾಗಲೂ ಚೀನಾ ಭಾರತದ ವಿಶೇಷ ಸ್ಥಿತಿಯನ್ನು ಗಮನದಲ್ಲಿಡಲಿಲ್ಲ. ಇದೇ ರೀತಿ ಚೀನೀ ನಕ್ಷೆಗಳಲ್ಲಿ ಭಾರತೀಯ ಭೂಭಾಗವನ್ನು ತೋರಿಸಲಾಗಿರುವುದನ್ನು ತಪ್ಪಿನಿಂದಾಗಿ ತೋರಿಸಲಾಗಿದೆ ಎಂದು ಹೇಳಲಾಯಿತು" ಬ್ರಹ್ಮದಲ್ಲಿ ಚೀನೀ ಸೈನ್ಯಗಳ ಪ್ರವೇಶ (ಇದರ ಕಾರಣ ತಪ್ಪುತಿಳುವಳಿಕೆ ಎಂದು ಹೇಳಲಾಯಿತು.) ಮತ್ತು ದಕ್ಷಿಣಪೂರ್ವೀ ಏಷ್ಯಾದಲ್ಲಿ ಸಣ್ಣ ಸಣ್ಣ ದೇಶಗಳಲ್ಲಿ ನಡೆಸುತ್ತಿದ್ದ ಚೀನಾದ ವ್ಯವಹಾರದ ಬಗ್ಗೆಯೂ ಭಾರತ ಎಚ್ಚರದಿಂದ ಇರಬೇಕು. ಇದರಿಂದ ಸ್ಪಷ್ಟವಾಗುವುದೆಂದರೆ ಜನಸಂಘವು ಚೀನೀಯರನ್ನು ತಿಳಿದುಕೊಳ್ಳುವುದರಲ್ಲಿ ಆ ಸಮಯದಲ್ಲಿ ಯಾವ ತಪ್ಪನ್ನು ಮಾಡಿಲ್ಲ. 266 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸರ್ಕಾರವು ಮೊದಲೇ ಎಚ್ಚೆತ್ತಿದ್ದರೆ 1947ರಲ್ಲಿ ಜನಸಂಘವನ್ನು ಹೊರತುಪಡಿಸಿ ಬೇರೆ ಬೇರೆ ರಾಜನೈತಿಕ ದಳಗಳು ದೇಶದ ರಕ್ಷಣೆಯ ಬಗ್ಗೆ ಉದಾಸೀನದಿಂದ ಇದ್ದವು. ಮತ್ತು ರಾಜನೈತಿಕ ಆರ್ಥಿಕ ಕಾರ್ಯಕ್ರಮಗಳಿಗೆ ಮಹತ್ವ ಕೊಡುತ್ತಿದ್ದರು. ಆದರೆ ಜನಸಂಘವು ಆ ಸಮಯದಲ್ಲಿ ಸುರಕ್ಷತೆಯ ಪ್ರಶ್ನೆಯನ್ನು ಎಲ್ಲಕ್ಕಿಂತ ಹೆಚ್ಚಿನ ಮಹತ್ವದ ಪ್ರಶ್ನೆ ಎಂದು ಹೇಳಿತ್ತು ಮತ್ತು ಅದಕ್ಕಾಗಿ ತನ್ನ ಸಲಹೆಯನ್ನು ಕೊಡುತ್ತಾ ದೇಶದ ಸೈನ್ಯಗಳನ್ನು ಹೆಚ್ಚಿಸಿ, ವಿಕಸನಗೊಳಿಸುತ್ತಾ, ರಾಷ್ಟ್ರೀಯ ಭಾವನೆಗಳನ್ನು ಹುಟ್ಟುಹಾಕುವುದರ ಜೊತೆಗೆ ಅದನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸಬೇಕು. ಪುರುಷರಿಗೆ ಅನಿವಾರ್ಯ ಸೈನಿಕ ಶಿಕ್ಷಣವನ್ನು ಕೊಡಲಾಗುವುದರ ಬಗ್ಗೆಯೂ ಸಲಹೆಗಳನ್ನು ಕೊಟ್ಟಿದ್ದೆವು. ತಮ್ಮ ಸಣ್ಣಪುಟ್ಟ ಸಾಧನಗಳ ಮೂಲಕ ರಾಜ್ಯ ಸರ್ಕಾರವು ದೇಶದ ಗಡಿ ಪ್ರದೇಶಗಳ ಸರಿಯಾದ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುವುದಿಲ್ಲ ಎಂಬ ವಿಚಾರವನ್ನು ಒಪ್ಪಿಕೊಳ್ಳುತ್ತಾ ಕೇಂದ್ರಕ್ಕೆ ಅಧೀನವಾಗಿರುವ ಗಡಿ ಪ್ರದೇಶಗಳಲ್ಲಿ ಪೊಲೀಸ್ ಇನ್‍ಸ್ಟಾಲ್‍ಮೆಂಟ್ (ಪಂಚವಾರ್ಷಿಕ ಯೋಜನೆಗಳ ಅಂತರ್ಗತ ಸುರಕ್ಷಾ ಯೋಜನೆಗಳಾಗಲಿ) ಅನ್ನು ಸ್ಥಾಪಿಸುವ ವಿಷಯದಲ್ಲಿ ಜನಸಂಘವು ಸಲಹೆಯನ್ನು ನೀಡಿತು. ಗಡಿ ಪ್ರದೇಶಗಳ ನಿರೀಕ್ಷಣೆ ಮತ್ತು ರಕ್ಷಣೆಯ ಕಾರ್ಯವನ್ನು ಕೇಂದ್ರವು ಮೊದಲೇ ತನ್ನ ಕೈಗೆ ಎತ್ತಿಕೊಂಡಿದ್ದಿದ್ದರೆ ಅಕ್ಸ್‍ಸಾಯಿಚಿನ್‍ಗೆ ಚೀನಿಯರು ನುಗ್ಗುವ ಸಮಾಚಾರದ ಅರಿವು ಸರ್ಕಾರಕ್ಕೆ ಸಾಕಷ್ಟು ದಿನಗಳ ಮೊದಲೇ ಸಿಗುತ್ತಿತ್ತು. ಯಾವಾಗ ನಮ್ಮ ದೇಶದ ಗಡಿ ಪ್ರದೇಶಕ್ಕೆ ರಕ್ಷಣೆ ಇಲ್ಲವೋ ಮತ್ತು ಆಕ್ರಮಣ ನಡೆದಿರುವ ಈ ಸಮಯದಲ್ಲಿ ರಾಷ್ಟ್ರದ ರಕ್ಷಣೆಯ ಪ್ರಶ್ನೆಯ ಬಗ್ಗೆ ಯಾರೂ ಮೌನವಾಗಿರುವುದಿಲ್ಲ. ದುಃಖದ ವಿಷಯವೆಂದರೆ ಬೇರೆ ಬೇರೆ ರಾಜನೈತಿಕ ದಳಗಳು ಈ ಪ್ರಶ್ನೆಗೆ ತಮ್ಮ ಚುನಾವಣಾ ಘೋಷಣಾ ಪತ್ರದಲ್ಲಿ ಹೆಚ್ಚಿನ ಮಹತ್ವಕೊಡಲಿಲ್ಲ. ಮೂರು ಮುಖ್ಯವಾದ ವಿಷಯಗಳು ರಾಷ್ಟ್ರದ ರಕ್ಷಣೆಯ ದೃಷ್ಟಿಯಿಂದ ನಾವು ಮೂರು ವಿಷಯಗಳನ್ನು ಗಮನದಲ್ಲಿ ಇಡುವುದು ಅವಶ್ಯಕ. ನಮ್ಮ ಗಡಿ ಪ್ರದೇಶದ ರಕ್ಷಣೆಯನ್ನು ಮಾಡುವುದರೊಂದಿಗೆ ಅಲ್ಲಿ ಪಂಚಮಾಂಗೀ ಸಿದ್ಧಾಂತಗಳು ಇರಕೂಡದು ಎಂಬುದನ್ನು ನೋಡಬೇಕು ಮತ್ತು ಯಾವ ಅನಧಿಕೃತ ವ್ಯಕ್ತಿಯೂ ಮೇಲೆ ಹೇಳಿದ ಕ್ಷೇತ್ರಗಳಿಗೆ ಪ್ರವೇಶಿಸಕೂಡದು. ಮತ್ತೊಂದು ವಿಷಯವೆಂದರೆ ನಾವು ನಮ್ಮ ಭೂಭಾಗಗಳನ್ನು ಬಿಡಿಸಿಕೊಳ್ಳಬೇಕು ಮತ್ತು ಮೂರನೆಯದು ದೇಶದ ರಕ್ಷಣಾ ವ್ಯವಸ್ಥೆಯನ್ನು ವೃದ್ಧಿಗೊಳಿಸಿ ಸೈನ್ಯದ ಎಲ್ಲ ಅನಾನುಕೂಲತೆಗಳ ಪರಿಹಾರವನ್ನು ಬಹಳ ಬೇಗ ಹುಡುಕಿ ತೆಗೆಯಬೇಕು. ಮಧ್ಯಪ್ರದೇಶದ ಪತ್ರ 267 ಜನಸಂಘದ ಸಲಹೆಗಳು ಗಡಿಪ್ರದೇಶಗಳ ರಕ್ಷಣೆ ಮತ್ತು ನುಗ್ಗುವಿಕೆಯನ್ನು ತಡೆಯುವುದಕ್ಕೋಸ್ಕರವೂ ಜನಸಂಘವನ್ನು ಹೊರತುಪಡಿಸಿ ಯಾವ ಪಕ್ಷವೂ ಸಹ ತನ್ನ ಸಲಹೆಗಳನ್ನು ಕೊಟ್ಟಿಲ್ಲ. ಜನಸಂಘವು ಹೇಳುವುದೇನೆಂದರೆ ಕೇಂದ್ರ ಗಡಿಪ್ರದೇಶಗಳ ರಕ್ಷಣೆಗಾಗಿ ಒಂದು ವಿಶೇಷ ಪೊಲೀಸ್ ದಳವನ್ನು ನೇಮಿಸುವುದರ ಜೊತೆಗೆ ಕಳ್ಳ ವ್ಯಾಪಾರವನ್ನು ತಡೆಯುವುದಕ್ಕಾಗಿ ಮತ್ತು ನುಗ್ಗುವುದನ್ನು ತಡೆಯುವ ವ್ಯವಸ್ಥೆ ಮಾಡಬೇಕು. ಭಾರತದ ಗುಪ್ತಚರ ವಿಭಾಗದ ಆಧುನೀಕರಣವನ್ನು ಮಾಡುತ್ತಾ ವಿದೇಶೀ ಗುಪ್ತಚರರು ಮತ್ತು ಪಂಚಮಾಂಗಿಗಳ ಪಿತೂರಿ ಕಾರ್ಯಗಳು ಮತ್ತು ಕುಚೇಷ್ಟೆಗಳು ಹೆಚ್ಚುವ ಮೊದಲೇ ತಡೆಯುವ ಉಪಾಯವನ್ನು ಮಾಡಬೇಕು. ಇದೇ ರೀತಿ ಜನಸಂಘದ ಅಭಿಪ್ರಾಯವೇನೆಂದರೆ ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಅನಧಿಕೃತವಾಗಿ ಬಂದಿರುವ ಪಾಕಿಸ್ತಾನಿಗಳನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು. ಗಡಿ ಪ್ರದೇಶಗಳ ವಿಕಾಸಕ್ಕಾಗಿ ವಿಶೇಷ ಪ್ರಯತ್ನ ಗಡಿ ಪ್ರದೇಶಗಳ ವಿಕಾಸಕ್ಕೆ ಒತ್ತುಕೊಡುತ್ತಾ ಜನಸಂಘವು ತನ್ನ ಘೋಷಣಾ ಪತ್ರದಲ್ಲಿ ಹೇಳಿರುವುದು ಏನೆಂದರೆ ಗಡಿ ಪ್ರದೇಶಗಳ ವಿಕಾಸಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಲಾಗುವುದು. ಈ ದೃಷ್ಟಿಯಿಂದ ಯೋಜನೆಗಳನ್ನು ತಯಾರಿಸಿ ಅವಶ್ಯಕ ಹಣವನ್ನು ಅದಕ್ಕೆ ಕೊಡಲಾಗುವುದು ಮತ್ತು ಎಲ್ಲಿ ಅವಶ್ಯಕವೋ ಅಲ್ಲಿ ರಕ್ಷಣಾ ವಿಭಾಗದ ಕಡೆಯಿಂದ ಅನುಷ್ಠಾನಕ್ಕೆ ತರಲಾಗುವುದು. ಪ್ರಯಾಣ ಸಂಪರ್ಕ ಸಾಧನಗಳನ್ನು ಹೆಚ್ಚಿಸುವುದರೊಂದಿಗೆ ಈ ಕ್ಷೇತ್ರದ ಆರ್ಥಿಕ ಪ್ರಗತಿಗಾಗಿಯೂ ಅವಶ್ಯಕ ವ್ಯವಸ್ಥೆ ಮಾಡಲಾಗುವುದು. ``ಪ್ರಜಾ ಸಮಾಜವಾದಿ'' ಪಕ್ಷವೂ ಸಹ ಇದೇ ರೀತಿ ಗಡಿ ಪ್ರದೇಶಗಳಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುವ ಮಾತುಗಳನ್ನು ಪುನರುಚ್ಛರಿಸಿದೆ. ವಿದೇಶೀಯರ ಮುಷ್ಟಿಯಲ್ಲಿರುವ ಭಾರತದ ಭೂಭಾಗಗಳನ್ನು ಬಿಡಿಸಿಕೊಳ್ಳುವ ಪ್ರಶ್ನೆಯ ಬಗ್ಗೆ ಮಾತ್ರ ಎಲ್ಲ ಪಕ್ಷಗಳು ಅದನ್ನು ಅವಶ್ಯಕ ಎಂದು ಹೇಳುತ್ತಾರೆ. ಆದರೆ ಆಕ್ರಮಣವನ್ನು ಅಂತ್ಯಗೊಳಿಸುವುದಕ್ಕೆ ಹೇಳಲಾದ ಅವರ ಉಪಾಯಗಳಲ್ಲಿ ಪರಸ್ಪರ ಬಹಳ ಭಿನ್ನತೆ ಇದೆ. ಇದಕ್ಕೆ ಕಾರಣ ಪ್ರತ್ಯೇಕ ಪಕ್ಷದ ತನ್ನ ವಿದೇಶಾಂಗ ನೀತಿ ಮತ್ತು ಪ್ರಪಂಚದ ಶಕ್ತಿ ಬಣಗಳತ್ತ ನೋಡುವ ಅವರ ತಮ್ಮದೇ ಆದ ದೃಷ್ಟಿಕೋನ. ಚೀನಾ ಮತ್ತು ಪಾಕಿಸ್ತಾನದ ಯುದ್ಧ ಚಟುವಟಿಕೆಗಳು ಪಾಕಿಸ್ತಾನ ಮತ್ತು ಚೀನಾ ಈಗ ಭಾರತದ ಭೂಭಾಗಗಳನ್ನು ಆಕ್ರಮಿಸಿಕೊಂಡಿವೆ. 268 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯುದ್ಧ ವಿರಾಮ ರೇಖೆಯ ರಾಜಿಗಾಗಿ ಕಾಶ್ಮೀರದ ಮೂರನೆಯ ಒಂದು ಭಾಗದಷ್ಟು ಭೂಭಾಗವು ಪಾಕಿಸ್ತಾನದ ವಶದಲ್ಲಿದೆ. ಚೀನಾ ಭಾರತೀಯ ಭೂಭಾಗದ ವಿಶಾಲ ಕ್ಷೇತ್ರದ ಮೇಲೆ ತನ್ನ ಹಕ್ಕನ್ನು ಹೇಳಿಕೊಳ್ಳುತ್ತಾ ಅದರ ಕೆಲವು ಭಾಗಗಳನ್ನು ಕಬಳಿಸಿದೆ ಮತ್ತು ಎಲ್ಲ ರಾಜಿ ಸೂತ್ರಗಳನ್ನು ಮುರಿಯುತ್ತಾ ಅದು ತನ್ನ ಹಠವನ್ನೇ ಪಟ್ಟುಹಿಡಿದಿದೆ. ಭಾರತ ಸರ್ಕಾರವೂ ಸಹ ಮೇಲೆ ಹೇಳಿದ ಭೂಭಾಗವನ್ನು ಬಿಡಿಸಿಕೊಳ್ಳುವ ದೃಷ್ಟಿಯಿಂದ ಯಾವ ಹೆಜ್ಜೆಯನ್ನು ಇಟ್ಟಿಲ್ಲ. ಎಲ್ಲಿಯವರೆಗೆ ಪಾಕಿಸ್ತಾನದ ಸಂಬಂಧ ಇದೆಯೋ ಅದು ಯುದ್ಧ ವಿರಾಮರೇಖೆಯನ್ನು ಉಲ್ಲಂಘಿಸಿಲ್ಲ. ಆದರೂ ಸಹ ಆಗಾಗ ಮೇಲೆ ಹೇಳಿದ ರೇಖೆಯನ್ನು ಪಾಕಿಸ್ತಾನವು ಗಡಿ ದಾಟಿ ಭಾರತದ ಗ್ರಾಮಗಳನ್ನು ಲೂಟಿ ಮಾಡುವುದು ಮತ್ತು `ಜಿಹಾದ್' ಬೆದರಿಕೆಯನ್ನು ಪಾಕಿಸ್ತಾನ ಹಾಕುತ್ತಲೇ ಇರುತ್ತದೆ. ಪೂರ್ವದ ಗಡಿಯ ಮೇಲೂ ತುಕೇರಗ್ರಾಮ, ಪಥರಿಯಾ ಅರಣ್ಯ ಪ್ರದೇಶದಲ್ಲಿ ಫೈರಿಂಗ್ ಮೂಲಕ ಘಟನೆಗಳು ನಡೆದುವು. ಮತ್ತು ಪಾಕಿಸ್ತಾನವು ತನ್ನ ಅನುಚಿತ ಅಧಿಕಾರವನ್ನು ಅಲ್ಲಿ ಜಮಾಯಿಸಿತ್ತು. ಆದರೆ ಚೀನಾ ಮತ್ತೆ ಮತ್ತೆ ಬೆದರಿಕೆಗಳನ್ನು ಒಡ್ಡುವುದರ ಜೊತೆಗೆ ಮುಂದೆ ಮುಂದೆ ಬರುತ್ತಲೂ ಇತ್ತು. ಭಾರತದ ವಿರೋಧ ಪತ್ರಗಳಿಗೆ ಅದು ಎಂದೂ ಮಾನ್ಯತೆ ಕೊಡಲಿಲ್ಲ. ಕಮ್ಯುನಿಸ್ಟ್‌ರು ಮಾತಿನಲ್ಲೇ ಮೋಸಗೊಳಿಸುವ ಆಶ್ರಯಕ್ಕೆ ಮೊರೆಹೋದರು ಸ್ವತಂತ್ರ ಪಾರ್ಟಿಯು ಪಾಕ್ ಆಡಳಿತದಲ್ಲಿರುವ ಕಾಶ್ಮೀರದ ಭೂಭಾಗವನ್ನು ಬಿಡಿಸಿಕೊಳ್ಳುವ ವಿಷಯದಲ್ಲಿ ಮೌನದಿಂದ ಇದೆ. ಪ್ರ.ಸ. ಪಕ್ಷವು ತನ್ನ ವಿದೇಶಾಂಗ ನೀತಿಯ ವಿವೇಚನೆಯನ್ನು ಮಾಡುತ್ತಾ ಹೇಳಿರುವುದು ಏನೆಂದರೆ ಪಾಕಿಸ್ತಾನ ಮತ್ತು ಚೀನಾ ಈ ಪ್ರದೇಶದ ಮೇಲೆ ಆಕ್ರಮಣ ಮಾಡಿರುವಾಗ ಈ ಪ್ರದೇಶಗಳನ್ನು ಬಿಡಿಸಿಕೊಳ್ಳುವುದು ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ವಿಭಾಗಗಳ ಪ್ರಾಥಮಿಕ ಕರ್ತವ್ಯ. ಪಶ್ಚಿಮ ಕ್ಷೇತ್ರಗಳಲ್ಲಿ ಭಾರತದ ಗಡಿಪ್ರದೇಶಗಳ ಚರ್ಚೆ ಮಾಡುತ್ತಾ ಕಮ್ಯುನಿಸ್ಟ್ ಪಾರ್ಟಿ ಹೇಳಿರುವುದು ಏನೆಂದರೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ, ಪಾಕಿಸ್ಥಾನವು ವಶಕ್ಕೆ ತೆಗೆದುಕೊಂಡಿರುವ ಭೂಭಾಗವೂ ಸೇರಿ ಭಾರತದ ಭೂಭಾಗವಾಗಿದೆ. ಇದಲ್ಲದೆ ಚೀನೀ ಆಕ್ರಮಣ ವಿಷಯದಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯುವುದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿಯು ಪಾಕಿಸ್ತಾನದ ಕಪ್ಪು ಕೃತ್ಯಗಳ ವಿಷಯ ಹೇಳುತ್ತಿದೆ. ಆದರೆ ತನ್ನ ಘೋಷಣಾ ಪತ್ರಗಳಲ್ಲಿ ಅದು ಅವಶ್ಯಕತೆಗಿಂತ ಹೆಚ್ಚು ನಮ್ರ ಮತ್ತು ಶಾಂತವಾಗಿದೆ. ಕಾರಣವೇನೆಂದರೆ ಪಾಕಿಸ್ತಾನದ ವಿರುದ್ಧ ಉಗ್ರಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬೇಡಿಕೆಯನ್ನು ಮುಂದಿಡುವುದಕ್ಕೆ ಅವರಿಗೆ ಹೆದರಿಕೆ. ಏಕೆಂದರೆ ಚೀನಾದ ವಿರುದ್ಧವೂ ಪ್ರತೀಕಾರವನ್ನು ತೆಗೆದುಕೊಳ್ಳುವ ಮಧ್ಯಪ್ರದೇಶದ ಪತ್ರ 269 ಭಾವನೆ ಸಮಾಜದಲ್ಲಿ ಎಲ್ಲಿ ಹುಟ್ಟಿಬಿಡುವುದೋ ಎಂದು. ಆದ್ದರಿಂದಲೇ ಅವರು ಶಬ್ದಾಡಂಬರವನ್ನು ಮಾಡುತ್ತಾ ಮಾತಿನಲ್ಲಿಯೇ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ ಘೋಷಣಾ ಪತ್ರದಲ್ಲಿ ಪಾಕಿಸ್ತಾನ ಮತ್ತು ಚೀನಾ ತಮ್ಮ ವಶಕ್ಕೆ ತೆಗೆದುಕೊಂಡಿರುವ ಭೂಭಾಗಗಳಿಗಾಗಿ ಒಂದು ಪ್ಯಾರಾಗ್ರಾಫ್ ಕೊಟ್ಟಿದ್ದಾರೆ. ಮತ್ತು ಈ ಪ್ರದೇಶಗಳನ್ನು ಮುಕ್ತಗೊಳಿಸುತ್ತಾರೆಂಬ ಆಸೆಯನ್ನು ಪ್ರಕಟಗೊಳಿಸಿದ್ದಾರೆ ಹಾಗೂ ತಮ್ಮ ಆಸೆಯನ್ನು ಪುನರುಚ್ಚರಿಸಿದ್ದಾರೆ. ``ಇನ್ನು ಮುಂದೆ ನಾವು ಆಕ್ರಮಣವನ್ನು ಸಹಿಸುವುದಿಲ್ಲ. ಆದರೆ ಆಕ್ರಮಣವನ್ನು ಅಂತ್ಯಗೊಳಿಸುವುದಕ್ಕಾಗಿ ಬಲ ಪ್ರಯೋಗ ಮಾಡುವ ವಿಷಯದಲ್ಲಿ ಹೀಗೆ ಹೇಳಬಹುದು". ಪ್ರಶ್ನೆಗಳ ವಿಷಯದಲ್ಲಿ ಇದುವರೆಗೆ ಇರುವ ರೀತಿಯಲ್ಲಿಯೇ ನಡೆದುಕೊಳ್ಳುತ್ತದೆ. ಸ್ವತಂತ್ರ ಪಾರ್ಟಿಯ ಬೇಡಿಕೆ ಸ್ವತಂತ್ರ ಪಾರ್ಟಿಯು ಚೀನಾದಿಂದ ಆಗುವ ಅಪಾಯವನ್ನು ಅನುಭವಿಸಿದೆ ಮತ್ತು ಭಯಾನಕವೆಂದು ತಿಳಿದಿದೆ. ಆದ್ದರಿಂದಲೇ ಅದು ಪಾಕಿಸ್ತಾನದೊಂದಿಗೆ ಸಂಯುಕ್ತ ಸುರಕ್ಷಾ ಸಂಧಿಯ ಮಾತನ್ನು ಆಡಿತ್ತು. ಬಹುಶಃ ಅವರ ಅಭಿಪ್ರಾಯವೂ ಇದೇ. ಕಮ್ಯುನಿಸ್ಟ್ ಚೀನಾದ ಸವಾಲಿನ ಕಾರಣದಿಂದ ನಾವು ನಮ್ಮ ತಟಸ್ಥ ನೀತಿಯನ್ನು ತ್ಯಜಿಸಿ ಪಶ್ಚಿಮದ ಗುಂಪಿನಲ್ಲಿ ಸೇರಿಕೊಳ್ಳಬೇಕು. ಆದರೂ ಸಹ ಚೀನಾದ ವಿರುದ್ಧ ಸೈನಿಕ ಬಲವನ್ನು ಪ್ರಯೋಗಿಸುವುದರ ವಿರುದ್ಧವಾಗಿದ್ದರೂ ಮತ್ತು ಅವರ ಆಗ್ರಾ ಅಧಿವೇಶನದಲ್ಲಿ, ಈ ಅಭಿಪ್ರಾಯದ ಸಂಶೋಧನೆಗೆ ಜವಾಬ್ದಾರಿಯಾಗಿದ್ದ ಅಧಿಕಾರಿಗಳು ಇದನ್ನು ವಿರೋಧಿಸಿದ್ದರು ಹಾಗೂ ಅದು ಅಸ್ವೀಕೃತವಾಗಿತ್ತು. ಕಮ್ಯುನಿಸ್ಟ್‌ರು ಚೀನಾವನ್ನು ಆಕ್ರಮಣಕಾರಿ ಎಂದು ಒಪ್ಪುವುದಿಲ್ಲ ಚೀನೀ ಆಕ್ರಮಣದ ಪ್ರಶ್ನೆಯ ಬಗ್ಗೆ ಕಮ್ಯುನಿಸ್ಟ್‌ರು ವಿಚಿತ್ರ ಸಂಕಟದಲ್ಲಿ ಬಿದ್ದಿದ್ದಾರೆ. ಕಮ್ಯುನಿಸ್ಟ್‍ಪಾರ್ಟಿಯು ಮೆಕ್‍ಮೋಹನ್ ರೇಖೆ ಮತ್ತು ಪರಂಪರೆಯಿಂದ ಬಂದಿರುವ ಗಡಿರೇಖೆಗಳನ್ನು ಒಪ್ಪಿಕೊಳ್ಳುವುದಕ್ಕೆ ಭಾದ್ಯರಾಗಬೇಕಾಯಿತಾದರೂ ಅವರ ಮಹಾಮಂತ್ರಿ ಅಜಯ್‍ಘೋಷ್ ಹೀಗೆ ಹೇಳಿದ್ದಾರೆ. ಏನೆಂದರೆ ಒಂದು ವೇಳೆ ಚೀನಿಯರು ಮೆಕ್‍ಮೋಹನ್ ರೇಖೆಯನ್ನು ದಾಟಿದರೆ ಆ ಸ್ಥಿತಿಯಲ್ಲಿ ಭಾರತ ಸರ್ಕಾರವು ಏನೇ ನಿರ್ಧಾರವನ್ನು ತೆಗೆದುಕೊಂಡರು ಅವರು ಅದನ್ನು ಸಮರ್ಥಿಸುತ್ತಾರೆ. ಆದರೆ ಚೀನಿಯರು ಹಾಗೆ ಮಾಡುವವರಲ್ಲವೆಂದು ಅವರಿಗೆ ಗೊತ್ತು. ಆದ್ದರಿಂದ ಹಾಗೂ ವಿಶೇಷವಾಗಿ ಈ ಚುನಾವಣಾ ಕಾಲದಲ್ಲಿ ಈ ಮೇಲಿನ ಹೇಳಿಕೆಯನ್ನು ಕೊಟ್ಟು ಭಾರತ ಸರ್ಕಾರವನ್ನು ನಂಬಿಸಬಲ್ಲದು. ಆದರೆ 270 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕಮ್ಯುನಿಸ್ಟ್ ಪಾರ್ಟಿ ಚೀನಾವನ್ನು ಆಕ್ರಮಣಕಾರಿ ಎಂದು ಹೇಳಲು ಸಿದ್ಧವಿಲ್ಲ. 18 ಡಿಸೆಂಬರ್ 1961ರ ಸ್ಟೇಟ್ಸ್‌ಮನ್‍ನ ಅನುಸಾರ ಜಲ್‍ಪೈಗುರಿಯ ಒಂದು ಸಭೆಯಲ್ಲಿ ಭಾಷಣ ಮಾಡುತ್ತಾ ಸಂಸತ್ ಸದಸ್ಯೆ ಶ್ರೀ ರೇಣುಚಕ್ರವರ್ತಿ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ ಮತ್ತು ಈ ತಪ್ಪುತಿಳುವಳಿಕೆಯನ್ನು ಮಾತುಕತೆಯ ಮೂಲಕ ದೂರಮಾಡಬಹುದು. ಇಷ್ಟೇ ಅಲ್ಲ ಮಾತುಕತೆಯ ವೈಫಲ್ಯಕ್ಕೂ ಅದು ಭಾರತವನ್ನು ತಪ್ಪಿತಸ್ಥ ಎಂದು ಹೇಳಿದೆ. ಆದರೆ ಇದು ಅವರ ಸ್ವಂತ ಅಭಿಪ್ರಾಯವಲ್ಲದೆ ಪಾರ್ಟಿಯ ಅಭಿಪ್ರಾಯವಾಗಿದೆ. ಅವರ ಘೋಷಣಾ ಪತ್ರದಲ್ಲಿ ಹೀಗೆ ಹೇಳಲಾಗಿದೆ: ``ನಾವು ಸದಾಕಾಲವೂ ಹೇಳುತ್ತಾ ಬಂದಿರುವುದು ಏನೆಂದರೆ ಭಾರತ ಮತ್ತು ಚೀನಾದ ಈ `ವಿವಾದ' (ಆಕ್ರಮಣ ಅಲ್ಲ) ಸಮಾಧಾನ ಪೂರ್ವಕ ಶಾಂತಿಪೂರ್ಣ ಮಾತುಗಳಿಂದ ಆಗಬೇಕು. ಈ ವಿಷಯ ರಾಷ್ಟ್ರಗಳ ಮಧ್ಯದ ವಿವಾದದ ಸಂಬಂಧದಲ್ಲಿ ಭಾರತದ ದೃಷ್ಟಿಕೋನದೊಂದಿಗೆ ಪೂರ್ತಿಯಾಗಿ ಹೊಂದಿಕೊಳ್ಳುತ್ತದೆ. ಭಾರತ ಮತ್ತು ಚೀನಾದ ನಡುವೆ ಇಂದು ಎದ್ದಿರುವ ಸಮಸ್ಯೆಗಳ ಸಮಾಧಾನಕ್ಕಾಗಿ ಭಾರತದ ಏಕಮಾತ್ರ ಸರಿಯಾದ ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ನಮ್ಮ ರಾಷ್ಟ್ರದ ಮಹಾನತೆಯ ಪ್ರತೀಕ ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮ ಪಾರ್ಟಿಯ ನಂಬಿಕೆ ಎಂದರೆ ಚೀನಾದೊಂದಿಗೆ ಶಾಂತಿಪೂರ್ಣ ಮಾತುಕತೆಯ ರಾಜನೈತಿಕ ಆಧಾರದ ಮೇಲೆ ಮುಂದುವರಿಯುವ ಅವಶ್ಯಕತೆ ಇದೆ ಮತ್ತು ಯಾವ ಮಾತುಕತೆಯಲ್ಲಿ ದೇಶದ ಭೂಮಿಗೆ ಸಂಬಂಧಿಸಿದ ಅಖಂಡತೆ ಮತ್ತು ಎರಡೂ ದೇಶಗಳ ಮಧ್ಯದ ಸ್ನೇಹಕ್ಕೆ ಸ್ವಭಾವತಃ ಸರ್ವೋಚ್ಛ ಮಹತ್ವ ಕೊಡಲಾಗುವುದೋ ಆಗ ಅದು ಸಫಲವಾಗುವುದು ಮತ್ತು ಈಗಿನ ದುಃಖಮಯ ಅಧ್ಯಾಯ ಮುಗಿಯುವುದು. ಚೀನಾ ಮತ್ತು ಪಾಕಿಸ್ತಾನ ಎರಡೂ ಆಕ್ರಮಣಕಾರಿಗಳು ಭಾರತೀಯ ಜನಸಂಘದ ಅಭಿಪ್ರಾಯ ಈ ವಿಷಯದಲ್ಲಿ ಪೂರ್ಣವಾಗಿ ಸ್ಪಷ್ಟವಾಗಿದೆ. ಅವರು ಹೇಳುವುದೇನೆಂದರೆ ಚೀನಾ ಮತ್ತು ಪಾಕಿಸ್ತಾನ ಎರಡರ ಆಕ್ರಮಣವು ಅಂತ್ಯವಾಗಿರಬೇಕು. ಅವರು ಗಡಿಪ್ರದೇಶದ ರಕ್ಷಣೆಗೆ ಅತ್ಯಂತ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಅದು ಭಾರತದ ಪ್ರತಿಯೊಂದು ಅಂಗುಲ ಭೂಭಾಗವೂ ಅಕ್ಷರಶಃ ಬಿಡುಗಡೆಯಾಗಬೇಕು ಎನ್ನುವುದರ ಸಮರ್ಥಕ. ಅದರ ಘೋಷಣಾ ಪತ್ರದಲ್ಲಿ ಹೀಗೆ ಹೇಳಿದೆ: ಭಾರತದ ಗಡಿಪ್ರದೇಶದ ಅತಿಕ್ರಮಣವಾಗಿದೆ. ಒಂದು ಕಡೆ ಪಾಕಿಸ್ತಾನ ಮತ್ತೊಂದು ಕಡೆ ಚೀನಾ ನಮ್ಮ ದೇಶದ ಸಾಕಷ್ಟು ಭೂಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ರಾಷ್ಟ್ರದ ಮೂಲಕ ಆಕ್ರಮಣದ ಸಫಲ ಪ್ರತೀಕಾರವನ್ನು ಮಾಡುವ ಮಧ್ಯಪ್ರದೇಶದ ಪತ್ರ 271 ಯೋಗ್ಯತೆ ಇದ್ದರೂ ಸಹ ತೃಪ್ತಿಯಿಂದಿರುವ ಸ್ವಭಾವ ಮತ್ತು ಸಡಿಲ ನೀತಿಯ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರವು ದೇಶದ ಮನೋಬಲವನ್ನು ದುರ್ಬಲಗೊಳಿಸಿದೆ ಮತ್ತು ಶತ್ರುವಿಗೆ ತನ್ನ ಸ್ಥಿತಿಯನ್ನು ಬಲವತ್ತರಗೊಳಿಸಿಕೊಳ್ಳುವ ಅವಕಾಶವನ್ನು ಕೊಟ್ಟಿದೆ. ಭಾರತೀಯ ಜನಸಂಘವು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕೆ ಒಡ್ಡಿರುವ ಸವಾಲನ್ನು ಎದುರಿಸುವುದಕ್ಕೆ ಪ್ರತಿಯೊಂದು ಕ್ರಮವನ್ನು ಕೈಗೊಳ್ಳುವುದು ಮತ್ತು ಭಾರತದ ಪ್ರತಿಯೊಂದು ಅಂಗುಲ ಭೂಭಾಗವನ್ನು ಬಿಡಿಸಿಕೊಳ್ಳುವುದು. ರಾಷ್ಟ್ರೀಯ ಸುರಕ್ಷಾ ಪರಿಷತ್‍ನ ರಚನೆ ಆಗಲಿ ಎಲ್ಲಿಯವರೆಗೆ ಸೈನ್ಯ ಸೇವೆಗಳ ಸಂಘಟನೆಗಳ ಪ್ರಶ್ನೆ ಇದೆಯೋ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪೂರಾ ಮೌನವಾಗಿದ್ದಾರೆ. ಜನಸಂಘ ಮತ್ತು ಪ್ರ.ಸ.ಪಕ್ಷವು `ರಾಷ್ಟ್ರೀಯ ಸುರಕ್ಷಾ ಪರಿಷತ್' (National Defence Council) ನ ಸ್ಥಾಪನೆಯ ಸಮರ್ಥಕರು ಮತ್ತು ಸ್ವತಂತ್ರಪಾರ್ಟಿಯ ಅಭಿಪ್ರಾಯವೇನೆಂದರೆ ಸೈನ್ಯದಲ್ಲಿ ನುಗ್ಗಿರುವ ರಾಜನೈತಿಕ ಪ್ರಭಾವದಿಂದ ಸೈನ್ಯದಲ್ಲಿ ದೌರ್ಬಲ್ಯ ಬರುತ್ತದೆ. ಇದನ್ನು ಅಂತ್ಯಗೊಳಿಸಬೇಕು (ಈ ನಿರ್ದೇಶನ ಕೃಷ್ಣಮೆನನ್ ಕಡೆಯಿಂದ ಬಂದ ಸಂಭವ ಇರಬೇಕು) ಮತ್ತು ಸೈನ್ಯಗಳನ್ನು ಯೋಗ್ಯ ರೀತಿಯಲ್ಲಿ ಸುಸಜ್ಜಿತಗೊಳಿಸಿ ಸೇನೆಯ ಹಳೆಯ ನೌಕರರ ಕಷ್ಟಗಳನ್ನು ಪರಿಹರಿಸಬೇಕಾಗುವುದು. ಸುರಕ್ಷಾ ಯೋಜನೆ ಪಂಚವಾರ್ಷಿಕ ಯೋಜನೆಯ ಅಂಗವಾಗಬೇಕು ಜನಸಂಘ ಮತ್ತು ಪ.ಸ. ಪಕ್ಷಗಳು ಪ್ರಾದೇಶಿಕ ಸೈನ್ಯ ಮತ್ತು ಎನ್.ಸಿ.ಸಿ.ಯನ್ನು ವಿಸ್ತರಿಸಬೇಕೆನ್ನುವುದರ ಸಮರ್ಥಕರು. ಆದರೆ ಜನಸಂಘ ಪಂಚವರ್ಷೀಯ ಯೋಜನೆಯ ಅಂಗವಾಗಿ ಒಂದು ಸುರಕ್ಷಾ ಯೋಜನೆಯ ಅವಶ್ಯಕತೆಯನ್ನು ಅನುಭವಿಸುತ್ತದೆ. ಏಕೆಂದರೆ ಯಾವುದೇ ರಾಷ್ಟ್ರದ ಆರ್ಥಿಕ ಪ್ರಗತಿ ಆ ದೇಶದ ರಕ್ಷಣೆ ಸಮತೆಯೊಂದಿಗೆ ಬೆಸೆದುಕೊಂಡಿದೆ. ನಾವು ಇದನ್ನು ಬೇರೆಯಾಗಿ ನೋಡಲು ಸಾಧ್ಯವಿಲ್ಲ. ಸೈನ್ಯದ ವಿಷಯದಲ್ಲಿ ನಾವು ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸುವುದಕ್ಕೆ ಸಮತೋಲನೆಯನ್ನು ಸ್ಥಾಪಿಸಲು ಬಯಸುತ್ತೇವೆ. ಘೋಷಣಾ ಪತ್ರದಲ್ಲಿ ಹೇಳಿರುವುದು ಏನೆಂದರೆ, ಚೀನಾ ಮತ್ತು ಪಾಕಿಸ್ತಾನ ಎರಡರ ಆಕ್ರಮಣಕಾರಿ ಹಾಗೂ ದೂಷಿತ ವಿಚಾರಗಳನ್ನು ನೋಡಿದರೆ ದೇಶದ ರಕ್ಷಣಾವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡುವುದು ಅವಶ್ಯಕ. ಸೈನ್ಯಗಳನ್ನು ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವನ್ನಾಗಿ ಮಾಡುವುದು, ಕ್ಷೇಪಾಸ್ತ್ರಗಳು, ಸಬ್‍ಮೆರೀನ್‍ಗಳು, ಯುದ್ಧವಿಮಾನಗಳ ನಿರ್ಮಾಣ ಮತ್ತು ಅವುಗಳನ್ನು 272 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯಾವುದಾದರೂ ಶಕ್ತಿ ಬಣದಲ್ಲಿ ಸೇರಿಕೊಳ್ಳದೆಯೇ ಅವರಿಂದ ಪಡೆದುಕೊಳ್ಳುವುದು ನಮ್ಮ ಅಪೇಕ್ಷೆ. ಸಿದ್ಧತೆ ಬೇಕು ಇಂದಿನ ಸ್ಥಿತಿ ಅತ್ಯಂತ ಹೆಚ್ಚಿನ ಸಿದ್ಧತೆಯನ್ನು ಬಯಸುತ್ತದೆ. ಆದ್ದರಿಂದ `ರಾಷ್ಟ್ರದ ಸೈನಿಕೀರಕಣ' ಮತ್ತು ``ಸೈನ್ಯದ ಆಧುನಿಕೀಕರಣ ಮಾಡು" ಇವು ನಮ್ಮ ಘೋಷಣೆಗಳಾಗಬೇಕು. ಇದೇ ರೀತಿ ಗಡಿಪ್ರದೇಶಗಳ ವಿಷಯದಲ್ಲಿ ನಮ್ಮ ನೀತಿ ಅವರ ರಕ್ಷಣೆಯದಾಗಿರಬೇಕು, ಮಾತುಕತೆ ಮತ್ತು ಚರ್ಚೆಯದಲ್ಲ ಮತ್ತು ಆಕ್ರಮಣ ಮಾಡಿದ್ದೇ ಆದರೆ ಆಕ್ರಮಣಕಾರರನ್ನು ಹಿಂದಕ್ಕೆ ತಳ್ಳಬೇಕು. ಅವರ ವಿಷಯದಲ್ಲಿ ಸಮಾಧಾನದಿಂದಿರುವ ನೀತಿಯನ್ನು ಅನುಸರಿಸಬಾರದು. ಈ ದಿನ ನಮಗೆ ಸೈನಿಕರು ಬೇಕು; ಕೇವಲ ಕುಳಿತು ಲೆಕ್ಕ ಹಾಕುವವರಿಂದ ಮತ್ತು ಯಾರಲ್ಲಿ ಸಾಹಸ ಹಾಗೂ ಶಕ್ತಿಯೊಂದಿಗೆ ಪರಿಸ್ಥಿತಿಯನ್ನು ಎದುರಿಸುವ ಯೋಗ್ಯತೆ ಇರುವುದಿಲ್ಲವೋ ಅವರಿಂದ ದೇಶದ ಅಖಂಡತೆಯ ರಕ್ಷಣೆ ಆಗುವುದಿಲ್ಲ. ದೇಶದ ವಿಷಯದಲ್ಲಿ ಯಾರಿಗೆ ಶ್ರದ್ಧೆ ಮತ್ತು ಆತ್ಮಗೌರವದ ಭಾವನೆ ಇದೆಯೋ ಮತ್ತು ಯಾರು ಪವಿತ್ರ ಮಾತೃಭೂಮಿಗಾಗಿ ಬಲಿಯನ್ನು ಅರ್ಪಿಸುವ ಸಂಕಲ್ಪವನ್ನು ಇಟ್ಟುಕೊಂಡಿದ್ದಾರೋ ಅವರೇ ಅದರ ರಕ್ಷಣೆಯನ್ನು ಮಾಡಬಲ್ಲರು. ಜನಸಂಘದ ಕಾರ್ಯಕರ್ತರಿಗೆ ಪರೀಕ್ಷೆ ಸಮಯ, ಮಹಾಮಂತ್ರಿ ದೀನ್‍ದಯಾಳ್ ಉಪಾಧ್ಯಾಯರಿಂದ ಕಾರ್ಯಕರ್ತರಿಗೆ ಆಹ್ವಾನ ಸಾಮಾನ್ಯ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ, ನಾಮಕರಣ ಮುಂತಾದ ಕೆಲಸಗಳು ಮುಗಿದಿವೆ. ಈ ಕಾರ್ಯದಲ್ಲಿ ಆಯಾ ಜಾಗದ ಕಾರ್ಯಕರ್ತರು ಸಂಘಟನೆಯ ನೀತಿಗೆ ಅನುಸಾರವಾಗಿ ಅತ್ಯಂತ ಪರಿಶ್ರಮ ಮತ್ತು ಕುಶಲತೆಯಿಂದ ಕೆಲಸ ಮಾಡಿದ್ದಾರೆ. ನಿಮ್ಮ ಈ ಕೆಲಸಕ್ಕೆ ನಾನು ಅಭಿನಂದಿಸುತ್ತೇನೆ. ಜನಸಂಘದ ಯಾವ ಅಭ್ಯರ್ಥಿಗಳನ್ನು ನೀವು ನಿಲ್ಲಿಸಿದ್ದೀರೋ ಅವರನ್ನು ಗೆಲ್ಲಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಗೆಲುವು ಜನಸಂಘದ ಗೆಲುವು ಮತ್ತು ಜನಸಂಘದ ಗೆಲುವು ನಿಮ್ಮ ಗೆಲುವು. ನಿಮ್ಮ ಸಿದ್ಧಾಂತದ ಗೆಲುವು. ಇಂದು ದೇಶದ ಮೇಲೆ ಶತ್ರುಗಳ ಆಕ್ರಮಣವಾಗಿದೆ. ಸರ್ಕಾರವು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ. ಅದನ್ನು ದೂರಮಾಡುವುದು ನಮ್ಮ ರಾಷ್ಟ್ರೀಯ ಕರ್ತವ್ಯ. ದೇಶದ ಏಕತೆಯನ್ನು ಛಿದ್ರಗೊಳಿಸುವವರು ಮತ್ತು ಪಂಚಮಾಂಗಿಗಳಿಗೆ ಎಲ್ಲ ಪಕ್ಷಗಳೂ ಆಶ್ರಯಕೊಡುತ್ತಿವೆ. ನಾವು ನಮ್ಮ ರಾಷ್ಟ್ರೀಯ ಏಕಾತ್ಮಕತೆಯಲ್ಲಿ ಮಧ್ಯಪ್ರದೇಶದ ಪತ್ರ 273 ನಿಷ್ಠೆಯನ್ನಿಟ್ಟು ಇವೆಲ್ಲವನ್ನು ಧೈರ್ಯದಿಂದ ಎದುರಿಸಬೇಕು. ಯೋಜನೆಗಳ ಹೆಸರಿನಲ್ಲಿ ದೇಶವನ್ನು ಪರಾವಲಂಬಿ ಪರಾನುಕರಣಶೀಲವನ್ನಾಗಿ ಮಾಡಲಾಗುತ್ತಿದೆ. ನಿರುದ್ಯೋಗ, ವಸ್ತುಗಳ ತುಟ್ಟಿಯಾಗುವಿಕೆ, ಹಸಿವಿನಿಂದ ತೊಳಲಾಟ ಮತ್ತು ತೆರಿಗೆಯ ಭಾರ ಹೆಚ್ಚುತ್ತಿದೆ. ಸಮಾಜವಾದ ಘೋಷಣೆಯನ್ನು ಕೂಗಿ ಜನರ ಸ್ವಾತಂತ್ರ್ಯವನ್ನು ಸೀಮಿತಗೊಳಿಸಲಾಗುತ್ತಿದೆ. ಉದ್ಯೋಗ ಮತ್ತು ವ್ಯಾಪಾರವೇ ಅಲ್ಲ, ಈಗ ಸರ್ಕಾರಿ ಕೃಷಿಯ ಹೆಸರಿನಲ್ಲಿ ರೈತನ ಭೂಮಿ ಮತ್ತು ಸ್ವಾತಂತ್ರ್ಯವನ್ನು ಸಹ ಕಿತ್ತುಕೊಳ್ಳಲಾಗುವುದು. ದೇಶದ ರಾಜನೀತಿ ಇಂದು ತಿರುವು ಪಡೆಯತ್ತಿದೆ. ಪ್ರಜಾತಂತ್ರ ಮತ್ತು ರಾಷ್ಟ್ರವಾದದ ಆಧಾರದ ಮೇಲೆ ಮುಂದುವರಿಯುವುದೋ ಅಥವಾ ಕಮ್ಯುನಿಸ್ಟ್ ಮತ್ತು ಸರ್ವಾಧಿಕಾರವಾದಕ್ಕೆ ಬಲಿಯಾಗುವುದೇ ಎನ್ನುವುದನ್ನು ಮೂರನೆಯ ಸಾಮಾನ್ಯ ಚುನಾವಣೆ ನಿಶ್ಚಯಿಸುತ್ತದೆ. ಕಾಂಗ್ರೆಸ್‍ನಲ್ಲಿ ಇಂದು ಸಾಮ್ಯವಾದೀ ತತ್ವಗಳು ಹೆಚ್ಚುತ್ತಿವೆ. ಜನತೆಯನ್ನು ಸಂಘಟಿಸುವುದಕ್ಕೆ ಸುವರ್ಣಾವಕಾಶ, ಹಳ್ಳಿಗಳು ಮತ್ತು ಕಾಡುಗಳಲ್ಲಿ ದೂರ ದೂರದಲ್ಲಿರುವ ಭಾರತ ಮಾತೆಯ ಪ್ರೀತಿ ಪಾತ್ರರು ನಮ್ಮ ದಾರಿ ನೋಡುತ್ತಿದ್ದಾರೆ. ಅವರ ಹತ್ತಿರ ಹೋಗಿ ಭಾರತಮಾತೆಯ ಸಾಕ್ಷಾತ್ಕಾರ ಮಾಡಿಸುವ ಕಾರ್ಯಕರ್ತರಿರುವಂತಹ ಪಕ್ಷ ಯಾವುದಿದೆ? ಅವರಲ್ಲಿ ಸುಪ್ತವಾಗಿರುವ ಭಾರತೀಯತೆ ಮತ್ತು ಪೌರುಷವನ್ನು ಜಾಗೃತಗೊಳಿಸಬಲ್ಲೆವು ಹಾಗೂ ನಮ್ಮ ರಾಷ್ಟ್ರೀಯ ಹಾಗೂ ವ್ಯಕ್ತಿಗತ ಸ್ವಾತಂತ್ರ್ಯದ ರಕ್ಷಣೆಗಾಗಿ ಸರ್ವಸ್ವವನ್ನು ಪಣಕ್ಕಿಡುವ ಸಂಕಲ್ಪವನ್ನು ಹುಟ್ಟುಹಾಕಬಲ್ಲೆವು. ಈ ಜವಾಬ್ದಾರಿ ನಿಮ್ಮ ಮೇಲಿದೆ ಇದನ್ನು ನಿಭಾಯಿಸಲೇಬೇಕು. ನಮ್ಮ ಸಾಧನಗಳು ಸೀಮಿತ, ಆದರೆ ಸಂಕಲ್ಪ ಶಕ್ತಿ ದೊಡ್ಡದು. ಸಾಧನಗಳ ಕೊರತೆಯನ್ನು ಪರಿಶ್ರಮದಿಂದ ಪೂರೈಸೋಣ. ಮನಸ್ಸಿನಲ್ಲಿ ಅಸಹಾಯಕತೆ ಮತ್ತು ದುರ್ಬಲ ಭಾವನೆಯನ್ನು ಬರಗೊಡಬಾರದು. ಇದು ಭಾರತದ ಪರಂಪರೆ ಅಲ್ಲ, ಜನಸಂಘದ ಕಾರ್ಯಕರ್ತರು ಈ ರೀತಿ ಪ್ರಸಿದ್ಧಿ ಪಡೆದಿಲ್ಲ. ಜನಸಂಘವು ತಮ್ಮ ಆಸಕ್ತಿ, ತ್ಯಾಗಭಾವನೆ, ಅಧ್ಯವಸಾಯ, ತಿಳುವಳಿಕೆಗೆ ಪ್ರಸಿದ್ಧರು. ನಮ್ಮ ಗುಣಗಳನ್ನು ಸಾಕಾರಗೊಳಿಸುವ ಅವಕಾಶ ಇಂದು ನಮಗೆ ಸಿಕ್ಕಿದೆ. ಪರಿಸ್ಥಿತಿ ಅನುಕೂಲವಾಗಿದೆ. ಮಂತ್ರ (ಜನಸಂಘದ ಸಿದ್ಧಾಂತ) ನಮ್ಮ ಬಳಿ ಇದೆ. ತಂತ್ರದ ವ್ಯವಸ್ಥೆ ಮಾಡೋಣ. ದಿನ ಮತ್ತು ರಾತ್ರಿಗಳನ್ನು ಒಂದು ಮಾಡುವ ಅವಶ್ಯಕತೆ ಇದೆ. ಕಡಲೆ ತಿಂದು ಹೊಡೆದಾಡುವವರನ್ನು ಎದುರಿಸುವುದು. ಕಬ್ಬಿಣದ ಕಡಲೆ ಅಗಿಯುವುದು ಎಂಬುದು ಮತ್ತೊಂದು ಬಾರಿ ದೇಶಕ್ಕೆ ಗೊತ್ತಾಗಲಿ ಬಿಡಿ. ನಮ್ಮ ಧ್ಯೇಯದ ಸಾಕ್ಷಾತ್ಕಾರ ಮಾಡಿ, ಭಾರತಮಾತೆಯ ಸತ್ಯರೂಪವನ್ನು ಧ್ಯಾನದಲ್ಲಿರಿಸಿಕೊಂಡು ಕಾರ್ಯದಲ್ಲಿ ಮಗ್ನರಾಗೋಣ. ಭಗವಂತನು ನಮಗೆ 274 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅದಮ್ಯ ಸಾಮರ್ಥ್ಯವನ್ನು ಕೊಟ್ಟಿದ್ದಾನೆ ಅದರ ಆವಿಷ್ಕಾರ ಮಾಡೋಣ ಮತ್ತು ಅದರ ಯೋಜನೆಯನ್ನು ಪೂರ್ತಿಮಾಡುವುದಕ್ಕೆ ಮುಂದುವರಿಯೋಣ. ಸಾಮ್ಯವಾದವು ರಷ್ಯಾ ರಾಷ್ಟ್ರವಾದದ ಆಯುಧ ಮಾತ್ರ. ಅದರ ಆಧಾರದ ಮೇಲೆ ಭಾರತದ ನವನಿರ್ಮಾಣದ ಕನಸು ಕಾಣುವವರಿಗೆ ನಿರಾಶೆಯೇ ಕೈಗೆ ಸಿಗುವುದು. ಜನಸಂಘ ಸ್ವಾಧ್ಯಾಯ ಶಿಬಿರದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾಷಣ. 3-9-1962 ಪಾಂಚಜನ್ಯ ಭಾರತೀಯ ಸಂಸ್ಕೃತಿ ಮತ್ತು ಗೌರವವನ್ನು ಬಿಟ್ಟು ಒಂದು ವೇಳೆ ನಮ್ಮ ಜೀವನ ಅಥವಾ ಇಲ್ಲಿಯ ರಾಜಕೀಯ ಮುಂದುವರೆದರೆ ನಮಗೆ ಒಳ್ಳೆಯದಾಗುವುದಿಲ್ಲ. ಇದರಿಂದ ಹಿತಸಾಧನೆಯೂ ಆಗುವುದಿಲ್ಲ. ಈ ಮಾತುಗಳಲ್ಲಿ ದೀನ್ ದಯಾಳ್ ಉಪಾಧ್ಯಾಯ ಅವರು ಅಜಮೇರದಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸ್ವಾಧ್ಯಾಯ ಶಿಬಿರದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಗೌರವದ ಮೇಲೆ ಭಾರತೀಯ ರಾಜನೀತಿಯನ್ನು ಅಧಿಷ್ಟಿತಗೊಳಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದರು. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಇಂದು ದೇಶದಲ್ಲಿ ಭ್ರಮೆ ಮತ್ತು ಅಜ್ಞಾನ ವ್ಯಾಪಿಸಿದೆ ಎಂದು ಅವರು ಹೇಳಿದರು. ಸಂಸ್ಕೃತಿ ಶಬ್ದದ ವ್ಯಾಖ್ಯೆ ಮಾಡುವುದು ಕಠಿಣವಾದ ಕೆಲಸವೇನೋ ಸರಿ. ಈ ದೃಷ್ಟಿಯಲ್ಲಿ ನಮ್ಮ ದೇಶದಲ್ಲಿ ಹಾಗೂ ಹೊರಗೆ ಸಹ ಪ್ರಯತ್ನಗಳಾಗಿವೆ. ಆದರ ಪೂರ್ಣ ಸಫಲತೆ ಪ್ರಾಪ್ತವಾಗುವ ಹಾಗೆ ಕಾಣಿಸುತ್ತಿಲ್ಲ. ಸಂಸ್ಕೃತಿಯ ವ್ಯಾಖ್ಯೆ ಆತ್ಮದ ವ್ಯಾಖ್ಯೆಯ ಅನುರೂಪದಂತೆಯೇ ಕಠಿಣಕಾರ್ಯ. ಈ ಕಠಣತೆಯ ಕಾರಣದಿಂದಲೇ ಅನೇಕ ಚಿಂತಕರು `ಆತ್ಮ' ಎಂಬ ಯಾವ ವಸ್ತುವೂ ಇಲ್ಲ ಎಂದು ಅನುಭವಿಸಿದ್ದಾರೆ. ಇದೇ ಮಾತು ಸಂಸ್ಕೃತಿಯ ಸಂಬಂಧದಲ್ಲಿ ಸಹ ಅನ್ವಯಿಸುತ್ತದೆ. ಭೌಗೋಳಿಕ ಮತ್ತು ಐತಿಹಾಸಿಕ ಕಾರಣಗಳಿಂದ ಕೆಲವು ಭಿನ್ನತೆಗಳು ಹೇಗಿವೆ ಎಂದರೆ ಮಾನವ ಸಮಾಜದ ಒಂದು ಅಂಗದಲ್ಲಿ ಕಾಣಿಸುತ್ತವೆ. ಕೆಲವರ ಅಭಿಪ್ರಾಯದ ಪ್ರಕಾರ ಭೌಗೋಳಿಕ ದೂರ ಕಡಿಮೆಯಾಗುತ್ತಿದೆ. ಹಾಗೂ ಸಂಪೂರ್ಣ ಮಾನವ ಸಮಾಜವು ಪರಸ್ಪರ ಹೆಚ್ಚು ಹತ್ತಿರ ಬರುತ್ತಿದೆ. ಇದರಿಂದ ಭಿನ್ನ ಭಿನ್ನ ಸಂಸ್ಕೃತಿ ಎಂಬ ಯಾವ ವಸ್ತುವೂ ಇರದೆ ಕೇವಲ ಮಾನವ ಸಂಸ್ಕೃತಿ ಇರುತ್ತದೆ. ಈ ಸ್ಥಿತಿಯ ವಿವೇಚನೆಯೂ ಸಹ ಒಂದು ಕಠಿಣ ಕಾರ್ಯ ಇಂದು ರಾಷ್ಟ್ರಗಳ ಮಧ್ಯೆ ___________ * ಆಕರ : 19-2-1962 ಪಾಂಚಜನ್ಯ ಮಧ್ಯಪ್ರದೇಶದ ಪತ್ರ 275 ಎಂಥ ದೂರಗಾಮಿ ಆಳವಾದ ಅಂತರವಿದೆ ಎಂದರೆ, ಅದರ ಸಂಬಂಧ ಜೀವನದ ಸಂಪೂರ್ಣ ದೃಷ್ಟಿಕೋನದ ಬಗ್ಗೆ ಇದೆ. ಮುಂದೆ ಈ ಸ್ಥಿತಿ ಬದಲಾಗುವ ಹಾಗೆ ಕಾಣಿಸುವುದೂ ಇಲ್ಲ. ಕಮ್ಯುನಿಸಂ ರಾಷ್ಟ್ರವಾದವನ್ನು ಒಪ್ಪುವುದಿಲ್ಲ. ಶೋಷಕ ಮತ್ತು ಶೋಷಿತರ ಆಧಾರದ ಮೇಲೆ ಅದು ಸಮಾಜದ ವರ್ಗೀಕರಣವನ್ನು ಮಾಡಲು ಆಶಿಸಿತು. ಆದರೆ ಅದು ನಡೆಯಲಿಲ್ಲ. ಸ್ವಯಂ ಲೆನಿನ್‍ಗೆ ಮಾಕ್ರ್ಸ್ ಸಿದ್ಧಾಂತದ ವ್ಯಾಖ್ಯೆಯನ್ನು ತನ್ನ ದೇಶಕ್ಕಾಗಿ ತನಗೆ ಅನುರೂಪವಾಗಿ ಮಾಡಬೇಕಾಯಿತು. ಇಂದು ಕಮ್ಯುನಿಜûಂ ರಷ್ಯಾ ರಾಷ್ಟ್ರವಾದದ ಆಯುಧವಾಗಿದೆ. ಅದು ಬೇರೆ ದೇಶಗಳ ರಾಷ್ಟ್ರವಾದದೊಂದಿಗೆ ಸಂಘರ್ಷಿಸುತ್ತದೆ. ಚೀನಾ ಹಾಗೂ ರಷ್ಯಾದ ಮನಸ್ತಾಪದ ಕಾರಣ ರಾಷ್ಟ್ರವಾದ ಯುಗೋಸ್ಲೇವಿಯಾದ ಪೃಥಕೀರಣ ಹಂಗರಿ ಮತ್ತು ಪೋಲಂಡ್‍ನ ವಿದ್ರೋಹ ಬೇರೆಯೇ ರಾಷ್ಟ್ರವಾದದ ಪ್ರತಿಬಿಂಬವಾಗಿದೆ. ರಾಷ್ಟ್ರವಾದವನ್ನು ಯಾವ ವಾದವೂ ನಾಶಗೊಳಿಸಲಾಗಲಿಲ್ಲ. ಸಂಪೂರ್ಣ ಮಾನವ ಸಮಾಜವನ್ನು ಒಂದು ಆಧಾರದ ಮೇಲೆ ನಿಲ್ಲಿಸುವ ಪ್ರಯತ್ನಗಳು ಆಗಿವೆ. ಆದರೆ ರಾಷ್ಟ್ರವಾದದ ಗೋಡೆಗೆ ಢಿಕ್ಕಿ ಹೊಡೆದು ಅವು ಅಸಫಲವೆಂದು ಸಿದ್ಧವಾಗಿವೆ. ಕ್ರೈಸ್ತಮತಾಲವಂಬಿಗಳ ಪ್ರಯತ್ನವೂ ಸಹ ಇಂಥದ್ದೇ ಪ್ರಯತ್ನವಾಗಿತ್ತು. ಅದು ರಾಷ್ಟ್ರವನ್ನು ಒಪ್ಪಿಕೊಳ್ಳುವುದಿಲ್ಲ. ಸಂಪೂರ್ಣ ಮಾನವನನ್ನು ಕ್ರೈಸ್ತಧರ್ಮದ ಆಧಾರದ ಮೇಲೆ ಒಂದುಗೂಡಿಸಲು ಬಯಸುತ್ತದೆ. ಆದರೆ ರಾಷ್ಟ್ರವಾದದ ಸಂಘರ್ಷದಲ್ಲಿ ಕ್ರೈಸ್ತ ಧರ್ಮವು ಹಿಂದೆ ಬಿತ್ತು. ಒಂದೇ ಮತಾವಲಂಬಿಗಳಾದ ಮೇಲೆಯೂ ಇಂದು ಯುರೋಪಿನಲ್ಲಿ ಭಿನ್ನ ರಾಷ್ಟ್ರಗಳು ನಿಂತಿವೆ. ರಾಷ್ಟ್ರೀಯ ಹಿತ ಸಾಧನೆಯ ಪ್ರಶ್ನೆ ಎದ್ದಾಗಲೆಲ್ಲ ಕ್ರೈಸ್ತ ಧರ್ಮವು ಗೌಣವಾಯಿತು. ಮುಸಲ್ಮಾನರ ಪ್ರಯತ್ನವೂ ಸ್ವಲ್ಪ ಹಾಗೆಯೇ ಆಯಿತು. ಇಸ್ಲಾಂ `ರಾಷ್ಟ್ರ'ವನ್ನು ಒಪ್ಪುವುದಿಲ್ಲ. ಪ್ರಪಂಚದ ಜನರನ್ನು ಇಸ್ಲಾಂನ ಆಧಾರದ ಮೇಲೆ ಒಂದುಗೂಡಿಸುವ ಪ್ರಯತ್ನಗಳು ನಡೆದಿವೆ. ಮುಸಲ್ಮಾನರು ಮತ್ತೇ ಮುಸಲ್ಮಾನರಲ್ಲದವರು ಇದನ್ನೇ ಒಂದು ವ್ಯತ್ಯಾಸವೆಂದು ತಿಳಿಯಲಾಯಿತು. ಆದರೆ ಈ ತರ್ಕವು ವ್ಯವಹಾರದಲ್ಲಿ ನಡೆಯಲಿಲ್ಲ. ಪಶ್ಚಿಮ ಏಷ್ಯಾದ ಅರಬ್ ದೇಶಗಳಲ್ಲಿ ರಾಷ್ಟ್ರವಾದ ಈಗ ಪ್ರಮುಖವಾಗಿದೆ. ಮುಸಲ್ಮಾನ ಶಾಸಕರು ಮೊದಲು `ಖಲೀಫಾ' ಎಂಬ ಹೆಸರಿನಲ್ಲಿ ಆಡಳಿತ ನಡೆಸುತ್ತಿದ್ದರು. ಆದರೆ ಸ್ವಯಂ ತುರ್ಕರು ತಮ್ಮಲ್ಲಿಂದ ಖಲೀಫಾರನ್ನು ತೆಗೆದು ಹೊರಹಾಕಿದರು. ಇರಾನ್, ಆಫ್ಘಾನೀಸ್ತಾನ, ಈಜಿಪ್ಟ್, ಸಿರಿಯಾ ಮುಂತಾದುವುಗಳಲ್ಲಿ ಈಗ ರಾಷ್ಟ್ರವಾದವೇ ಪ್ರಮುಖವಾಗಿದೆ. ಇಸ್ರೇಲ್ ಒಂದು ಯಹೂದೀ ರಾಷ್ಟ್ರ. ಅರಬ್ ದೇಶದವರೊಂದಿಗೆ ಪರಂಪರೆಯಿಂದ ಬಂದಿರುವ 276 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಧಾರ್ಮಿಕ ಜಗಳವಿದೆ. ಆದರೂ ಸಹ ತುರ್ಕರು ಇದಕ್ಕೆ ರಾಜನೈತಿಕ ಮಾನ್ಯತೆಯನ್ನು ಕೊಟ್ಟರು. ರಾಜಕೀಯದಲ್ಲಿ ಅವರು ಧರ್ಮವನ್ನು ಹಿಂದೆ ಬಿಟ್ಟುಬಿಟ್ಟರು. ಅನೇಕ ದೇಶಗಳಲ್ಲಿ ಜೀವನ ರಚನೆ, ವಿಕಾಸ, ಸಾಮಾಜಿಕ ಸಂಬಂಧ, ಸಾಹಿತ್ಯ, ರಾಜನೀತಿ ಮುಂತಾದವುಗಳ ಮೇಲೆ ಇಸ್ಲಾಂ ಪ್ರಭಾವ ಬೀಳದೆ ಅವರ ಪರಂಪರೆಯದು ಬಿದ್ದಿದೆ. ಇಂಡೋನೇಶಿಯಾದಲ್ಲಿ ಇಸ್ಲಾಂನ ಪ್ರಭಾವವಿದ್ದರೂ ಸಹ ಅಲ್ಲಿಯ ಪರಂಪರೆ ಮತ್ತು ಸಂಸ್ಕೃತಿ ಪೂರಾ ಭಿನ್ನವಾಗಿದೆ. ಪಾಕಿಸ್ತಾನದ ಜೀವನ ರಚನೆಯಲ್ಲಿ ಇಸ್ಲಾಂನ ಘೋಷಣೆಯೇ ಹೆಚ್ಚಾಗಿದ್ದರೂ ಅಲ್ಲಿಯ ಪರಂಪರೆಯ ಪ್ರಭಾವ ಬಿದ್ದಿದೆ. ಕಟ್ಟಾಮುಲ್ಲಾಗಳನ್ನು ಬಿಟ್ಟಿದ್ದೇ ಆದರೆ ಸಾಮಾನ್ಯ ಸಮಾಜವು ಒಂದು ಮಟ್ಟಕ್ಕೆ ಬರುತ್ತದೆ. ಪ್ರಾಚೀನ ಕಾಲದಲ್ಲಿ ಮಹಮದ್ ಗಜ್ವಿ ಒಬ್ಬ ಪಕ್ಕಾ ಮುಸಲ್ಮಾನ ಎಂದು ತಿಳಿಯಲಾಗುತ್ತಿತ್ತು. ಅವನು ಮೂರ್ತಿ ಭಂಜಕನಾಗಿದ್ದ. ಸೋಮನಾಥದ ಪ್ರಸಿದ್ಧ ಮಂದಿರವನ್ನು ಅವನೇ ನಾಶಮಾಡಿದ್ದು. ಆದರೆ ಅವನು ಫಿರ್ದೌಸಿಯಿಂದ ತನ್ನ ಇತಿಹಾಸ ಬರೆದಾಗ ಆ ಇತಿಹಾಸ ಇಸ್ಲಾಂದಾಗಿರಲಿಲ್ಲ. ಮುಸಲ್ಮಾನರಲ್ಲದ ರುಸ್ತುಂ ಮತ್ತು ಸೊಹ್ರಾಂರ ಗೀತೆಯನ್ನು ಹಾಡಿಸಿದನು. ಪಾಕಿಸ್ತಾನದ ಸರ್ಕಾರವೂ ಸಹ ಪಾಕಿಸ್ತಾನದ 5,000 ವರ್ಷ ಎಂಬ ಹೆಸರಿನ ಒಂದು ಪುಸ್ತಕವನ್ನು ಮುದ್ರಿಸಿದರು. ಅದರಲ್ಲಿ ಮೊಹೆಂಜೊದಾರೋ ಮತ್ತು ಹರಪ್ಪಾದ ಇತಿಹಾಸವನ್ನು ಬರೆಯಲಾಗಿದೆ. ರಾಜಾದಾಹಿರ್‍ನ ಶೌರ್ಯದ ಗುಣಗಾನವನ್ನು ಹಾಡಲಾಗಿದೆ. ರಾಜಾಪುರುವಿನ ಪರಾಕ್ರಮದ ವರ್ಣನೆ ಸಹ ಇದೆ. ವಿದೇಶಿಯರ ಆಕ್ರಮಣದ ಚಿತ್ರಣವೂ ಇದೆ. ಇದರಲ್ಲಿ ಭಾಷಾ ಪ್ರಯೋಗದ ವಿಷಯದಲ್ಲಿ ಅಂತರವಿರಬಹುದು. ಆದರೆ ಭಾವ ಪರಂಪರಾಗತವಾಗಿದೆ. ಪಾಕಿಸ್ತಾನ ಆಗುವ ಮುಂದೆ ಬಂಗಾಳದಲ್ಲಿ ಉರ್ದುಭಾಷೆಗಾಗಿ ಆಂದೋಳನ ಮಾಡಲಾಯಿತು. ಆದರೆ ಕೊನೆಯಲ್ಲಿ ಅವರು ತಮ್ಮ ಬಾಂಗ್ಲ ಭಾಷೆಯನ್ನೇ ಸ್ವೀಕರಿಸಿದರು. ಪುರಾತನ ಪರಂಪರೆ ಪ್ರಮುಖವಲ್ಲ ಎಂದು ಯೋಚಿಸುವುದು ಅಸ್ವಾಭಾವಿಕ ಆಗುತ್ತದೆ. ಕಮ್ಯುನಿಸ್ಟ್ ರಷ್ಯಾ ರಾಷ್ಟ್ರವಾದದ ಘೋಷಣೆ. ಈ ದಿನಗಳಲ್ಲಿ ಸಾಮ್ಯವಾದದ ಹೆಸರಿನಲ್ಲಿ ಎಂಥ ಪ್ರಯತ್ನ ನಡೆದಿದೆ ಎಂದರೆ, ನಿಜವಾಗಿ ಹೇಳುವುದಾದರೆ ಈ ವ್ಯವಸ್ಥೆಗೆ ಸಾಮ್ಯವಾದದ ಹೆಸರು ಕೊಡುವುದೇ ಸರಿಯಲ್ಲ. ಕಮ್ಯುನಿಜಂ ರಾಷ್ಟ್ರವಾದವನ್ನು ಒಪ್ಪುವುದಿಲ್ಲ. ಶೋಷಕ ಮತ್ತು ಶೋಷಿತರೆಂಬ ಆಧಾರದ ಮೇಲೆ ಅವರು ಸಮಾಜದ ವರ್ಗೀಕರಣವನ್ನು ಮಾಡಲು ಇಷ್ಟಪಟ್ಟರು. ಆದರೆ ಅದು ನಡೆಯಲಿಲ್ಲ. ಸ್ವಯಂ ಲೆನಿನ್‍ಗೆ ತನ್ನ ದೇಶಕ್ಕಾಗಿ ಮಾಕ್ರ್ಸ್ ಸಿದ್ಧಾಂತದ ವ್ಯಾಖ್ಯೆಯನ್ನು ತನಗೆ ಅನುರೂಪವಾಗಿ ಮಾಡಬೇಕಾಯಿತು. ಇಂದು ಕಮ್ಯುನಿಸಂ ರಷ್ಯಾ ರಾಷ್ಟ್ರವಾದದ ಆಯುಧವಾಗಿದೆ. ಮಧ್ಯಪ್ರದೇಶದ ಪತ್ರ 277 ಅದು ಬೇರೆ ದೇಶ ರಾಷ್ಟ್ರವಾದದೊಂದಿಗೆ ಸಂಘರ್ಷಿಸಿದೆ. ಚೀನಾ ಹಾಗೂ ರಷ್ಯಾದ ಮನಸ್ತಾಪದ ಕಾರಣ `ರಾಷ್ಟ್ರವಾದ'ವೇ. ಯುಗೋಸ್ಲೇವಿಯಾ ಬೇರೆಯಾದದ್ದು, ಹಂಗರಿ, ಪೋಲಂಡ್‍ನ ವಿದ್ರೋಹ, ಬೇರೆ ರಾಷ್ಟ್ರವಾದದ ನೋಟಗಳು ಅಧೀನತೆಯೇ ಇಂದಿನ ಹೊಂದಾಣಿಕೆಗೆ ಕಾರಣವಾಗಿದೆ. ಸಂಸ್ಕೃತಿ ಜೀವನದ ಒಂದು ದಾರ್ಶನಿಕ ದೃಷ್ಟಿಕೋನ. ರಾಷ್ಟ್ರವಾದವು ಒಂದು ಶಕ್ತಿ. ಕಣ್ಣು ಮುಚ್ಚಿಕೊಂಡು ಅದನ್ನು ಒಪ್ಪದಿರುವುದು ಸರಿಯಲ್ಲ. ಅದನ್ನು ಆಧರಿಸಿರುವುದು ಸಂಸ್ಕೃತಿ. ಜೀವನದ ದೃಷ್ಟಿಕೋನ ಅದರ ಮೂಲದಲ್ಲಿ ನಿರಂತರ ದರ್ಶನವಿರುತ್ತದೆ. ನಮ್ಮಲ್ಲಿ ಇದರ ಬಗ್ಗೆ ಗಂಭೀರವಾಗಿ ವಿಚಾರಮಾಡಲಾಗಿದೆ. `ಸತ್ಯ' ಎಂದರೇನು, ಇದರ ಹುಡುಕಾಟದಲ್ಲಿ ನಮ್ಮ ಜನತೊಡಗಿದ್ದಾರೆ. ನಾವು ಜೀವನದಲ್ಲಿ ಸ್ಥೂಲವಾಗಿ ನಾಲ್ಕು ಸ್ಥಿತಿಗಳನ್ನು ಒಪ್ಪಿದ್ದೇವೆ. 1. ವ್ಯಷ್ಟಿ (ಪ್ರಾಣಿ), 2. ಸೃಷ್ಟಿ (ಪ್ರಕೃತಿ), 3. ಸಮಷ್ಟಿ (ಸಮಾಜ), 4. ಪರಮೇಷ್ಟಿ(ಈಶ್ವರಬ್ರಹ್ಮ) ನಾಲ್ಕನೆಯ ಸ್ಥಿತಿಯ ಪ್ರಶ್ನೆಯ ಬಗ್ಗೆ ಮತಭೇದವಿದೆ. ಕೆಲವರು ಒಪ್ಪುತ್ತಾರೆ, ಕೆಲವರು ಒಪ್ಪುವುದಿಲ್ಲ. ಸಮಷ್ಟಿಯ ಅರ್ಥ, ಸಮಾಜ ಹೆಚ್ಚು ಸರಳ ಎಂದು ಸಮಾಜದ ಅರ್ಥವನ್ನು ಸಹ ಈಗ ಅನೇಕ ರೂಪಗಳಲ್ಲಿ ಗ್ರಹಿಸಲಾಗುತ್ತಿದೆ. ಹತ್ತು ಜನರು ಎಲ್ಲಿ ಒಟ್ಟುಗೂಡುತ್ತಾರೋ ಅದನ್ನು ಸಹ ಸಮಾಜ ಎನ್ನುತ್ತಾರೆ ಹಾಗೂ ಸಂಪೂರ್ಣ ಸಮಾಜಕ್ಕೆ ಸಹ `ಸಮಾಜ' ಎಂಬ ಹೆಸರನ್ನು ಕೊಡಲಾಗುವುದು. ಮಾನವನ ಉತ್ಪತ್ತಿಯ ಸಂಬಂಧದಲ್ಲಿಯೂ ಚಿಂತನೆಯಾಗಿದೆ. ಕೋತಿಯ ಸುಧಾರಣೆಯಾಗುತ್ತಾ ಮಾನವ ಸೃಷ್ಟಿಯಾದ ಎಂಬ ಡಾರ್ವಿನ್ನನ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ. ಎಲ್ಲಕ್ಕಿಂತ ಮೊದಲು ಆ್ಯಡಂ ಮತ್ತು ಈವ್ ಹುಟ್ಟಿದರು. ಅವರ ಸಂತಾನವೇ ಮನುಷ್ಯ ಎಂದು ನಾವು ಒಪ್ಪುವುದಿಲ್ಲ. ಮನುಷ್ಯನದು ಅಮೈಥುನಿಕ ಸೃಷ್ಟಿ. ಮನುಷ್ಯನು ಸಮಾಜ ರೂಪದಲ್ಲಿ ಒಂದೇ ಬಾರಿ ಅನೇಕ ಸ್ಥಳಗಳಲ್ಲಿ ಹುಟ್ಟಿದ. ಪ್ರತ್ಯೇಕ ಸಮಾಜವು ತನ್ನ ಸ್ವಲ್ಪ ಮೂಲ ಪ್ರಕೃತಿಯನ್ನು ತೆಗೆದುಕೊಂಡು ಹುಟ್ಟಿತು. ವನಸ್ಪತಿಯದೂ ಒಂದು ಮೂಲ ಪ್ರಕೃತಿ ಇದೆ. ಬೀಜ, ಗೊಬ್ಬರ, ವಾಯು ಮತ್ತು ನೀರಿನ ಕಾರಣದಿಂದ ವ್ಯತ್ಯಾಸವು ಬರುತ್ತಿರುತ್ತದೆ. ಆದರೆ ಮೂಲವು ಒಂದೇ ಆಗಿರುತ್ತದೆ. ಸಮಾಜಕ್ಕೆ ಸಹ ಒಂದು ಮೂಲ ಪ್ರಕೃತಿ ಇದೆ. ಈ ಪ್ರಕೃತಿಗೆ ಚೇತನ ಎನ್ನುತ್ತಾರೆ. ನಾವೆಲ್ಲರೂ ಒಂದೇ ಎಂದು ಏಕೆ ಅನ್ನಿಸುತ್ತದೆ ಎಂದರೆ ನಮ್ಮ ಚೇತನ ಒಂದು ಚೇತನವೇ ಸಂಸ್ಕಾರಯುಕ್ತವಾಗಿ ಸಂಸ್ಕೃತಿಯಾಗುತ್ತದೆ. ಇಂದು ಯಾವ ಸಾಂಸ್ಕೃತಿಕ ಭಿನ್ನತೆ ತೋರುತ್ತಿದೆಯೋ ಅದಕ್ಕೆ ಕಾರಣವೆಂದರೆ ಮೂಲ ಸಮಾಜದ ಚೇತನ, ಪ್ರಕೃತಿ ಭಿನ್ನವಾಗಿತ್ತು. ಯಾವಾಗ ಪರಮಾನಂದ ಪರಮವೈಭವದ ಅನುಭೂತಿಯ 278 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಧಾರವಿರುವಿದೋ, ಪ್ರೇಮ ಹಾಗೂ ಶ್ರೇಯಸ್ಸಿನ ವಿವೇಚನೆ ಮಾಡಲಾಗುತ್ತದೋ, ಜೀವನದ ಪರಮ ಸುಖ ಎಲ್ಲಿ ಸಿಗುವುದೋ ಅದು ಸಮಾಜದ ಚೇತನವಾಗಿದೆ. ಸತೀತ್ವದ ಸಂಬಂಧದಲ್ಲಿ ನಮ್ಮ ಅಭಿಪ್ರಾಯ ಒಂದಿದೆ. ಪಶುಗಳ ರೀತಿ ಜೀವನ ನಡೆಸುವುದನ್ನು ಎಲ್ಲಿಯೂ ಸರಿ ಎಂದು ಹೇಳಿಲ್ಲ. ರಷ್ಯಾದಲ್ಲಿ ಈ ಸಂಬಂಧವಾಗಿ ಒಂದು ಹೊಸ ಪ್ರಯೋಗವನ್ನು ಮಾಡಲಾಯಿತು. ಪತಿ ಪತ್ನಿಯ ಸ್ಥಾಯಿ ಸಂಬಂಧದ ಕಾರಣದಿಂದ ಕುಟುಂಬವು ಆಗುವುದು. ಕುಟುಂಬದಿಂದ ತನ್ನ ಸಂಪತ್ತಿನ ಭಾವನೆ ರೂಪ ತಳೆಯುತ್ತದೆ. ಆದ್ದರಿಂದ ಈ ಜನರು ಸತೀತ್ವದ ಭಾವನೆ ಮತ್ತು ವಿವಾಹದ ಕೌಟುಂಬಿಕ ಭಾವನೆಗಳನ್ನೇ ಹೇಯವೆಂದು ತಿಳಿಯತೊಡಗಿದರು. ಆದರೆ ಲೆನಿನ್‍ಗೆ ಸಹ ಈ ಸಿದ್ಧಾಂತವನ್ನು ನಡೆಸಲಾಗಲಿಲ್ಲ. ಆತ್ಮದ ಸಂಬಂಧದಲ್ಲಿಯೂ ಎಲ್ಲ ಕಡೆಯೂ ಹುಡುಕಾಟ ಮತ್ತು ಚಿಂತನೆ ನಡೆದಿದೆ. ಆದರೆ ನಮ್ಮ ಜೀವನದಲ್ಲಿ ಎಷ್ಟು ಸ್ಥಾನ ಇದಕ್ಕೆ ಇದೆಯೋ ಅದು ಬೇರೆ ಎಲ್ಲಿಯೂ ಇಲ್ಲ. ನೀತಿ, ಅಧಿಕಾರ, ಸಂಯಮ, ನೈತಿಕತೆ, ಅಪರಿಗ್ರಹ ಮುಂತಾದುವುಗಳು ಕೇವಲ ನಮ್ಮಲ್ಲಿ ಮಾತ್ರ ಇದೆ ಎಂದು ಅರ್ಥೈಸುವುದು ತಪ್ಪಾಗುತ್ತವೆ. ಬೇರೆ ದೇಶಗಳು ಸಹ ಹೀಗೆ ಮಾಡುತ್ತವೆ. ಆದರೆ ಎಲ್ಲರಿಗಿಂತ ಹೆಚ್ಚು ಚಿಂತನೆ ಮಾಡಿರುವುದು ನಾವೇ. ನಾವು ಹಿಂಸೆ ಮಾಡುತ್ತಿದ್ದರೂ ಸಹ ಹಿಂಸೆಯನ್ನು ಕೆಟ್ಟದ್ದೆಂದು ತಿಳಿದಿದ್ದೇವೆ. ಧರ್ಮಕ್ಕಾಗಿ ಯುದ್ಧ ಮಾಡಿದ್ದೇವೆ. ಧರ್ಮದ ವ್ಯವಸ್ಥೆಗಾಗಿಯೇ ಮಹಾಭಾರತ ಯುದ್ಧವಾಗಿತ್ತು. ಚೇತನದ ಕಾರಣದಿಂದಲೇ ಜೀವನದ ವಿಶೇಷತೆ ಇರುವುದು, ದೃಷ್ಟಿಕೋನ ರೂಪಿಸಲ್ಪಟ್ಟಿರುವುದು. ಈ ಚೇತನವೇ ಪ್ರತ್ಯೇಕ ಸಂಸ್ಕೃತಿಯನ್ನು ಬೇರೆ ಬೇರೆಯಾಗಿ ಮಾಡುತ್ತದೆ. ಎಲ್ಲಿ ಚೇತನ ಇದೆಯೋ ಅಲ್ಲಿ ಸಂಸ್ಕೃತಿ ಬೆಳೆಯುತ್ತದೆ. ಕತ್ತರಿಸಿದ ಕೈ ಎಂದೂ ಮನುಷ್ಯ ಎಂದು ಕರೆಸಿಕೊಳ್ಳುವುದಿಲ್ಲ. ಹಾಗೆಯೇ ಕೆಲವರ ಸಂಘಟನೆ ಮಾತ್ರದಿಂದ ಸಮಾಜವಾಗುವುದಿಲ್ಲ. ಭಿನ್ನ ಭಿನ್ನ ಚೇತನದ ಜನರಿಂದಲೂ ಸಹ ಸಮಾಜವನ್ನು ನಿರ್ಮಿಸಲಾಗುವುದಿಲ್ಲ. ಸಂಸ್ಕೃತಿ ಮತ್ತು ವಿಕೃತಿ ರಾಷ್ಟ್ರದ ನಿರ್ಮಾಣವೂ ಸಹ ಸಂಸ್ಕೃತಿಯ ಆಧಾರದ ಮೇಲೆ ಆಗುತ್ತದೆ. ಒಂದು ರಾಷ್ಟ್ರದ ಜನರು ಬೇರೆ ಸಂಸ್ಕೃತಿಯನ್ನು ಒಪ್ಪಿಕೊಂಡರೆ ಅವರು ಒಂದು ರಾಷ್ಟ್ರದ ಅಂಗವಾಗುವುದಿಲ್ಲ. ಜಿನ್ನಾ ಯಾವಾಗ ಮುಸಲ್ಮಾನರ ಭಿನ್ನ ಸಂಸ್ಕೃತಿಯ ಮಾತನ್ನು ಪ್ರಾರಂಭಿಸಿದರೋ, ಅದರ ಅಂತ್ಯವು ಬೇರೆ ರಾಷ್ಟ್ರದ ರೂಪದಲ್ಲಿ ಆಯಿತು. ದ್ರಾವಿಡ ಮುನ್ನೇತ್ರ ಕಳಗಂ ಸಹ ಇಂದು ತನ್ನದೇ ಆದ ಬೇರೆ ಸಂಸ್ಕೃತಿಯನ್ನು ಒಪ್ಪಿಕೊಂಡು ಒಂದು ಬೇರೆ ರಾಷ್ಟ್ರ ಕಟ್ಟುವ ಯೋಜನೆ ಮಾಡುತ್ತಿದೆ. ಮಧ್ಯಪ್ರದೇಶದ ಪತ್ರ 279 ಎಲ್ಲಿಯವರೆಗೆ ಒಂದು ಸಂಸ್ಕೃತಿಯ ಭಾವ ಇರುವುದಿಲ್ಲವೋ ಅಲ್ಲಿಯವರೆಗೆ ಏಕತೆ ಇರಲು ಸಾಧ್ಯವಿಲ್ಲ. ಸಮಾಜದ ಮೂಲ ಪ್ರಕೃತಿಗೆ ಅನುಸಾರವಾಗಿ ಒಂದು ವೇಳೆ ಸಂಸ್ಕಾರ ಒದಗಿದರೆ ಅದು ಸಂಸ್ಕೃತಿ ಆಗುತ್ತದೆ. ಒಂದು ವೇಳೆ ಸಂಸ್ಕಾರ ಪ್ರತಿಕೂಲವಾದರೆ ಅದು ವಿಕೃತಿ ಆಗುತ್ತದೆ. ಕೆಲವರು ಬದಲಾವಣೆಯನ್ನು ಸಂಸ್ಕೃತಿ ಎಂದು ಒಪ್ಪುತ್ತಾರೆ. ಆದರೆ ಬದಲಾವಣೆಯು ನಮ್ಮ ಏಕತೆಯನ್ನು ಕಾಪಾಡಿದರೆ ಮಾತ್ರ, ಇಲ್ಲದಿದ್ದರೆ ನಿರರ್ಥಕ. ಹಾಸ್ಯ ಮಾಡುವುದು ಗೆಳೆತನದ ಪರಿಚಾಯಕವೂ ಹೌದು; ಆಂತರಿಕ ವೈಮನಸ್ಯದ್ದೂ ಸಹ. ಸಮಾಜದ ಏಕಾತ್ಮತೆಗೆ ಯಾವುದರ ವಿರೋಧವಾದರೂ ಇದ್ದರೆ ಆ ಪರಿವರ್ತನೆಯನ್ನು ನಾವು ಸ್ವೀಕರಿಸುವುದಿಲ್ಲ. ಸಾವಿರಾರು ವರ್ಷಗಳಿಂದ ನಡೆದು ಬರುತ್ತಿರುವ ಸಮಾಜದ ಅಭಿಪ್ರಾಯಗಳಲ್ಲಿ ಭೇದ ಬಂದದ್ದೇ ಆದರೆ ಅದು ವಿಕೃತಿ ಆಗುತ್ತದೆ. ಅಲ್ಲಿ ತನ್ನದು ಪರರದು ಎಂಬ ಭೇದ ಬರುತ್ತಲೇ ಕಷ್ಟ ಹಾಜರಿರುತ್ತದೆ. ನಾವು ರಾವಣನನ್ನು ಕೆಟ್ಟವನೆಂದು ತಿಳಿದರೂ ಹೊರಗಿನವನೆಂದು ಎಂದೂ ಹೇಳಲಿಲ್ಲ. ಇದೇ ಮಾತು ದುರ್ಯೋಧನ ಹಾಗೂ ಜಯಚಂದ್ರನ ವಿಷಯದಲ್ಲಿಯೂ ಅನ್ವಯಿಸುತ್ತದೆ. ಇಂದು ದ್ರಾವಿಡ ಮುನ್ನೇತ್ರ ಕಳಗಂ ಶ್ರೀರಾಮಚಂದ್ರನನ್ನು ಅವರು ಉತ್ತರದಿಂದ ಬಂದವರೆಂದು ಇದೇ ಆಧಾರದ ಮೇಲೆ ವಿರೋಧಿಸುತ್ತದೆ ಮತ್ತು ರಾವಣ ರಾಕ್ಷಸನಾಗಿದ್ದರೂ ಸಹ ಅವನನ್ನು ತನ್ನವನೆಂದು ತಿಳಿಯುತ್ತದೆ. ಇದು ವಿಕೃತಿಯ ಲಕ್ಷಣ. ಯಾವಾಗ ಮುಸಲ್ಮಾನರು ತಮ್ಮವರು, ಬೇರೆಯವರು ಎಂದು ಭೇದ ಮಾಡುವರೋ ಅವರಲ್ಲಿ ವಿಕೃತಿ ಬಂತು. ಮಸೀದಿಗೆ ಹೋಗುವುದು ವಿಕೃತಿ ಅಲ್ಲ; ಯಾವುದು ಈ ದೇಶದ್ದೋ ಅದು ನನ್ನದಲ್ಲ. ಇದು ವಿಕೃತಿ ನಾವು ಸಂಪೂರ್ಣ ದೇಶವನ್ನು ಪುಣ್ಯ ಭೂಮಿ ಎಂದಿದ್ದೇವೆ. ಆದರೆ ಕೆಲವು ಭಾಗವನ್ನು ಪಾಕಿಸ್ತಾನ ಹಾಗೂ ಉಳಿದಿದ್ದನ್ನು ಪಾಕಿಸ್ತಾನ ಅಲ್ಲವೆಂದು ಹೇಳುವುದು ವಿಕೃತಿ. ವಿಕೃತಿ ಮತ್ತು ಸಂಸ್ಕೃತಿಯ ಸಂಗಮ ಅಸಂಭವ ಕೆಲವರು ವಿಕೃತಿ ಹಾಗೂ ಸಂಸ್ಕೃತಿಯ ಹೊಂದಾಣಿಕೆಯ ಮಾತನಾಡುತ್ತಾರೆ. ಆದರೆ ಇದು ಆಗುವುದಿಲ್ಲ. ಹಿಂದೂ ಮತ್ತು ಮುಸಲ್ಮಾನರ ಹೊಂದಾಣಿಕೆಯಲ್ಲಿ ಕಾಂಗ್ರೆಸ್ ದೇಶಕ್ಕೆ ಅದೇ ದುರ್ಗತಿಯನ್ನು ತಂದಿದೆ. ಮುಸಲ್ಮಾನರಿಗೆ ಒಂದು ವೇಳೆ ರಾಣಾಪ್ರತಾಪ್ ಹಾಗೂ ಶಿವಾಜಿಯ ಮಾತುಗಳು ಇಷ್ಟವಾಗದಿದ್ದರೆ ಕಾಂಗ್ರೆಸ್ ಅವರ ವಿಷಯವನ್ನು ಛೇಡಿವುದೇ ಶ್ರೇಯಸ್ಕರವೆಂದು ತಿಳಿದರು. ಔರಂಗಜೇಬನ ಬಗ್ಗೆ ಹಿಂದೂಗಳ ತೀವ್ರ ಪ್ರತಿಕ್ರಿಯೆಯನ್ನು ನೋಡಿ ಅಕ್ಬರನನ್ನು ರಾಷ್ಟ್ರೀಯ ಪುರುಷನ ರೂಪದಲ್ಲಿ ನಿಲ್ಲಿಸಲಾಯಿತು. ಈ ರೀತಿಯ ಪ್ರಯತ್ನಗಳಿಂದ ರಾಷ್ಟ್ರೀಯ 280 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಏಕತೆ ಉತ್ಪನ್ನವಾಗುವುದಿಲ್ಲ. ಸಂಸ್ಕೃತಿಯ ಆಧಾರವಿಲ್ಲದೆ ರಾಷ್ಟ್ರೀಯ ಏಕತೆ ಸಾಧ್ಯವಿಲ್ಲ. ಈ ಸಂಸ್ಕೃತಿಯೇ ನಮ್ಮನ್ನು ಸಾವಿರಾರು ವರ್ಷಗಳವರೆಗೆ ಒಟ್ಟುಗೂಡಿಸಿದೆ. ಭಿನ್ನತೆಯಲ್ಲಿ ಏಕತೆ ಸಾಧ್ಯ. ವಿಚಾರ ಭಿನ್ನತೆಯಂತೂ ಪ್ರಕೃತಿಯಿಂದ ಬಂದಿದೆ. ನಮ್ಮಲ್ಲಿ ಭೇದವಿದೆ; ಆದರೆ ಪೃಥಕತೆ ಇಲ್ಲ. ಸಂಪೂರ್ಣ ಸೃಷ್ಟಿಯಲ್ಲಿ ವೈವಿಧ್ಯವಿದೆ, ಆದರೆ ಸಮಾನತೆ ಇಲ್ಲ. ಆದರೆ ಈ ವಿವಿಧತೆಯಲ್ಲಿಯೇ ಏಕತೆ ಸನ್ನಿಹಿತವಾಗಿದೆ. ಒಬ್ಬ ತಾಯಿಯ ನಾಲ್ಕು ಮಕ್ಕಳ ಸಂಸ್ಕಾರ ಮತ್ತು ಕಾರ್ಯಗಳಲ್ಲಿ ಭಿನ್ನತೆ ಇದ್ದರೂ, ಅವರ ರಕ್ತ ಒಂದೇ ಆಗಿರುವ ಹಾಗೆ, ಸಮಷ್ಟಿಯಲ್ಲಿ ಏಕತೆ ಇರುವುದು. ಪ್ರಕೃತಿಯಲ್ಲಿ ಯಾವ ಭೇದವಿದೆಯೋ ಅದೇ ಮನುಷ್ಯನಲ್ಲಿಯೂ ಇದೆ. ಈ ಕಾರಣದಿಂದ ನಾವು ಮಾನವ ಮಾತ್ರರನ್ನು ಒಂದೇ ಅಚ್ಚಿನಲ್ಲಿ ಎಕರಹೊಯ್ಯುವ ಪ್ರಯತ್ನ ಮಾಡಲಿಲ್ಲ. ಆದರೆ ವಿವಿಧತೆ ಮತ್ತು ವಿಕೃತಿ ಭಿನ್ನ ವಸ್ತುಗಳು. ನಾವು ವಿವಿಧತೆಯನ್ನು ಸ್ವೀಕಾರಮಾಡಿದ್ದೇವೆ. ನಾವು ಎಲ್ಲರಲ್ಲಿ ಏಕತೆ ಕಾಣುವ ಮಟ್ಟಕ್ಕೆ ಹೋಗಿದ್ದೇವೆ. `ಏಕ್ ಸತ್ ವಿಪ್ರಾ ಬಹುಥಾ ವದಂತಿ' ಇಲ್ಲಿ ಮತೀಯ ಪೂಜೆಮಾಡುವವರು, ಭಗವಂತನ ಅಸ್ತಿತ್ವವನ್ನು ಒಪ್ಪುವವರು, ಒಪ್ಪದಿರುವವರು ಎಲ್ಲರಿಗೂ ಸಮಾಜದಲ್ಲಿ ಪೂರ್ಣಸ್ಥಾನ ಸಿಗುತ್ತದೆ. ಆದರೆ ರಾಷ್ಟ್ರದ ಏಕಾತ್ಮಕತೆಯ ರೂಪಕ್ಕೆ ಭಾಧಕವಾಗುವ ರೂಪದಲ್ಲಿ ಯಾವ ವಸ್ತುವಾದರೂ ಬಂದಾಗ ದೇಶ ಅದನ್ನು ವಿರೋಧಿಸಿದೆ. ಬೌದ್ಧ ಹಾಗೂ ಜೈನ ಎರಡೂ ನಿರೀಶ್ವರವಾದೀ ಮತಗಳು. ತಮ್ಮ ದೇಶದ ಮೇಲೆ ಆಕ್ರಮಣ ಮಾಡಿದಾಗ ಬೌದ್ಧಮತಾವಲಂಬಿಗಳು ತಮ್ಮ ಧರ್ಮಾವಲಂಬೀ ವಿದೇಶಿಯರ ಜತೆಗೂಡಿದರೆ ಅದರಲ್ಲಿ ವಿಕೃತಿ ಬರುತ್ತದೆ ಮತ್ತು ದೇಶವು ಅದರ ಪ್ರತೀಕಾರ ಮಾಡುತ್ತದೆ. ಇಂದು ಬೌದ್ಧಮತ ದೇಶದಲ್ಲಿ ಒಂದು ರೀತಿಯಲ್ಲಿ ಅಂತ್ಯಕಂಡಿದೆ. ಇದಕ್ಕೆ ವಿರುದ್ಧವಾಗಿ ದೇಶದಲ್ಲಿ ಜೈನಮತ ಅದೇ ರೂಪದಲ್ಲಿ ಪ್ರಚಲಿತವಿದೆ. ನಮ್ಮ ಜೀವನದ ಆಧಾರ ದರ್ಶನ. ನಾವು ಬಂಡವಾಳಗಾರರೂ ಅಲ್ಲ. ಸಮಾಜವಾದಿಗಳು ಅಲ್ಲ; ನಾವು ವ್ಯಕ್ತಿವಾದಿಗಳೂ ಅಲ್ಲ, ಸಮಷ್ಟಿ ವಾದಿಗಳು ಅಲ್ಲ. ಇವರನ್ನು ನಾವು ಸ್ವೀಕರಿಸಿಲ್ಲ. ನಾವು ಏಕಾತ್ಮವಾದೀ, ಸಮನ್ವಯವಾದೀ ಹಾಗೂ ಒಳ್ಳೆಯ ವಿಷಯಗಳಿಗೆ ಪೂರಕತಾವಾದಿಗಳು. ಇದೇ ಆಧಾರದ ಮೇಲೆ ನಮ್ಮ ಸಂಸ್ಕೃತಿ ನಿಂತಿದೆ. ಅಧ್ಯಕ್ಷರ ಚುನಾವಣೆಯನ್ನು ವಿರೋಧವಿಲ್ಲದೆ ಪೂರೈಸುವ ರೀತಿಯನ್ನು ಪಾಲಿಸಬೇಕು. ಸಂಸತ್ತಿನ ಹಿಂದಿನ ಸಭೆಯಲ್ಲಿ ಸಮಾಜವಾದೀ ಪಕ್ಷದ ಮೂವರು ಸದಸ್ಯರನ್ನು ಮಧ್ಯಪ್ರದೇಶದ ಪತ್ರ 281 ಅಮಾನತ್ತುಗೊಳಿಸಲಾಯಿತು. ಲೋಕಸಭೆಯಲ್ಲಿ ಮಾತ್ರವಲ್ಲ ರಾಜ್ಯಸಭೆಯ್ಲಲಿಯೂ ಈ ಘಟನೆ ನಡೆಯಿತು. ರಾಜ್ಯ ವಿಧಾನ ಸಭೆಯಲ್ಲಿಯಂತೂ ಇದಕ್ಕೆ ಮುಂಚೆಯೂ ಆಗಾಗ ಸಮಾಜವಾದೀ ಪಕ್ಷದ ಸದಸ್ಯರನ್ನು ಅಧ್ಯಕ್ಷರ ಆಜ್ಞೆಯ ಅವಹೇಳನ ಮಾಡಿದುದಕ್ಕೆ ಸದನದಿಂದ ಹೊರದೂಡುವ ಮತ್ತು ಅಮಾನತ್ತುಗೊಳಿಸುವ ಅವಕಾಶಗಳು ಬಂದಿವೆ. ಆದರೆ ನನಗೆ ನೆನಪಿರುವ ಹಾಗೆ ಯಾವುದಾದರೂ ಸದಸ್ಯರ ನಾಮನಿರ್ದೇಶನ ಮಾಡಿರುವುದು ಸಂಸತ್ತಿನಲ್ಲಿ ಇದು ಮೊದಲನೆಯ ಸಲ. ಸಂಸದೀಯ ಪ್ರಜಾತಂತ್ರದಲ್ಲಿ ಇವು ಅಸಾಧಾರಣ ಘಟನೆಗಳು ಮತ್ತು ನಿಶ್ಚಯವಾಗಿಯೂ ಯಾವುದೇ ವಿಕೃತಿ ಹಾಗೂ ರೋಗ ಸೂಚಕ. ಒಂದು ವೇಳೆ ಈ ಘಟನೆಯ ಪಾತ್ರಗಳು ಯಾವುದಾದರೂ ನಿರ್ದಲೀಯ ಸದಸ್ಯರಾಗಿದ್ದರೆ ಅಥವಾ ಅವು ಆಕಸ್ಮಿಕ ಘಟನೆಗಳಾಗಿದ್ದರೆ ಅವುಗಳನ್ನು ಮಾನವ ಸಮಾಜದ ದೌರ್ಬಲ್ಯಗಳೆಂದು ತಡೆಯಬಹುದಾಗಿತ್ತು. ಆದರೆ ವಸ್ತುಸ್ಥಿತಿ ಆ ತರಹವಲ್ಲ. ಸಮಾಜವಾದೀ ಪಕ್ಷ ಅದನ್ನು ಕಾರ್ಯಕ್ರಮದ ರೂಪದಲ್ಲಿ ಸ್ವೀಕರಿಸಿದೆ. ಫಲಸ್ವರೂಪವಾಗಿ ಎಲ್ಲ ವಿಧಾನಮಂಡಲಗಳಲ್ಲಿ ಅದರ ಸದಸ್ಯರು ಯಾವುದಾದರೂ ಅವಕಾಶವನ್ನು ಹುಡುಕಿ ತಮ್ಮ ಉದ್ದೇಶವನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಮಾಜವಾದೀ ಪಕ್ಷದ ಅಧ್ಯಕ್ಷರಾದ ಶ್ರೀ ರಾಜನಾರಾಯಣ ಸಿಂಹ ಅವರು ಅದನ್ನು ಸಮರ್ಥಿಸಿದ್ದಾರೆ. ಮತ್ತು ಇಂದಿನ ಸಮಯದಲ್ಲಿ ಸಂಸದೀಯ ಪ್ರಜಾತಂತ್ರದ ಸಫಲತೆಗಾಗಿ ಅವರ ಈ ಹೆಜ್ಜೆ ಅವಶ್ಯಕವೆಂದು ಹೇಳಿದ್ದಾರೆ. ಗಂಭೀರವಾಗಿ ಯೋಚಿಸೋಣ. ಸಮಾಜವಾದೀ ಪಕ್ಷವಲ್ಲದೆ ದೇಶದ ಬೇರೆ ಜನರೂ ಈ ಪ್ರವೃತ್ತಿಯ ಬಗ್ಗೆ ಚಿಂತೆಯನ್ನು ಪ್ರಕಟಿಸಿದ್ದಾರೆ. ಸ್ವಯಂ ಡಾ. ರಾದಾಕೃಷ್ಣ ಅವರು ಈ ರೀತಿಯ ಶಿಸ್ತು ಹೀನತೆಯ ಬಗ್ಗೆ ಚಿಂತೆಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಪಂಡಿತ ನೆಹರೂ ಅವರು ಸಲಹೆಕೊಟ್ಟಿರುವುದು ಏನೆಂದರೆ ಈ ಕೆಟ್ಟ ಪ್ರವೃತ್ತಿಯೊಂದಿಗೆ ಹೋರಾಡುವುದಕ್ಕೆ ಅವರನ್ನು ಕೂರಿಸಬೇಕು. ಆದರೆ ವಿಭಿನ್ನ ಪಕ್ಷಗಳ ವ್ಯಕ್ತಿಗಳೊಂದಿಗೆ ಮಾತನಾಡಿದ ಮೇಲೆ ಈ ರೋಗಕ್ಕೆ ಯಾವುದೂ ಸರಿಯಾದ ಮತ್ತು ಪ್ರಭಾವಶಾಲಿ ಚಿಕಿತ್ಸೆ ಇಲ್ಲವೆಂದು ತಿಳಿದುಬಂತು. ಈ ಸಂಬಂಧದಲ್ಲಿ ನಾವು ಗಂಭೀರವಾಗಿ ವಿಚಾರಮಾಡಬೇಕಾಗುವುದು. ವಿಚಿತ್ರ ಸಮಸ್ಯೆ ಇಂದು ಭಾರತದಲ್ಲೂ ಪ್ರಜಾತಂತ್ರದ ಜಾಗದಲ್ಲಿ ಪಕ್ಷದ ಸರ್ವಾಧಿಕಾರೀ ವಾದವಿದೆ. ಆದ್ದರಿಂದ ಅದನ್ನು ವಿರೋಧಿಸುವುದಕ್ಕೆ ಸದಸ್ಯರು ಈ ರೀತಿಯ ಕ್ರಮ ತೆಗೆದುಕೊಳ್ಳಬೇಕಾಗುವುದೆಂದು ಶ್ರೀ ರಾಜನಾರಾಯಣ ಸಿಂಹ ಅವರು ಹೇಳಿದರು. 282 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆದರೆ ಸಮಾಜವಾದೀ ಸದಸ್ಯರು ಇದುವರೆಗೆ ಪ್ರದರ್ಶಿಸಿದ ಹಠ ಶಾಸಕ ಪಕ್ಷದ ವಿರುದ್ಧವಲ್ಲ. ಆದರೆ ಅಧ್ಯಕ್ಷರ ವಿರುದ್ಧ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಅಧ್ಯಕ್ಷರ ಆದೇಶದ ಅವಹೇಳನೆಯನ್ನು ಶಾಸಕ ಪಕ್ಷದ ವಿರೋಧ ಎಂದು ತಿಳಿದರೆ ಒಂದು ವಿಚಿತ್ರ ಸಮಸ್ಯೆ ಎದ್ದು ನಿಲ್ಲುತ್ತದೆ. ಇದರ ಸಮಾಧಾನ ಸಹಜವಲ್ಲ. ನಾವು ಇಬ್ಬರನ್ನೂ ಬೇರೆಯಾಗಿ ನೋಡಿಯೇ ಮುಂದುವರಿಯಬೇಕು. ಹೊಸ ಪದ್ಧತಿ ಈ ಅಪ್ರಿಯ ಘಟನೆಗಳು ಅಧಿಕಾಂಶ ರೂಪದಲ್ಲಿ `ಕೆಲಸವನ್ನು ತಡೆಯಿರಿ' ಪ್ರಸ್ತಾಪದೊಂದಿಗೆ ಆಗುತ್ತವೆ. ಸಾಮಾನ್ಯವಾಗಿ ಸದಸ್ಯರು ಈ ಪ್ರಸ್ತಾಪಗಳ ಉಪಯೋಗವನ್ನು ಯಾವುದೇ ಮಹತ್ವದ ಘಟನೆಯ ಬಗ್ಗೆ ಮತ್ತು ಸಂಸತ್ ಹಾಗೂ ಅದರ ಮೂಲಕ ದೇಶದ ಗಮನವನ್ನು ಆಕರ್ಷಿಸುವುದಕ್ಕೆ ಮಾಡುತ್ತಾರೆ. ಆದರೆ ಆಡಳಿತ ವಿರೋಧೀ ಪಕ್ಷಗಳ ಮೂಲಕ ಮಾಡಲಾದ ಈ ಪ್ರಸ್ತಾಪಗಳನ್ನು ತನಗೆ ನಿಂದಾಜನಕವೆಂದು ತಿಳಿಯುತ್ತದೆ. ಆದ್ದರಿಂದ ಅದನ್ನು ವಿರೋಧಿಸುತ್ತದೆ. ಸರ್ಕಾರದ ಈ ಅಭಿಪ್ರಾಯ ಪೂರ್ತಿಯಾಗಿ ಸರಿಯಲ್ಲ. ಆದರೆ ಈ ಪ್ರಶ್ನೆ ಯಾವ ದೊಡ್ಡ ಮಹತ್ವದ್ದೂ ಅಲ್ಲ. ಸಮಸ್ಯೆ ಯಾವಾಗ ಎದುರಾಗುತ್ತದೆ ಎಂದರೆ ಅಧ್ಯಕ್ಷರು ತಮ್ಮ ವಿವೇಕವನ್ನು ಉಪಯೋಗಿಸಿ ಈ ರೀತಿಯ ಪ್ರಸ್ತಾಪಗಳಿಗೆ ಅನುಮತಿ ಕೊಡದೇ ಇರುವ ಪಕ್ಷದಲ್ಲಿ. ಪ್ರಾರಂಭದಲ್ಲಿ ಈ ಪ್ರಕ್ರಿಯೆಯಿಂದಲೂ ಬಹಳಷ್ಟು ಕೆಲಸಗಳು ನಡೆಯುತ್ತಿದ್ದುವು. ಏಕೆಂದರೆ ಅಧ್ಯಕ್ಷ ಮಹೋದಯರು ಸದನಕ್ಕೆ ಬಂದು ನಿರ್ದಿಷ್ಟ ಸದಸ್ಯರು ಈ ವಿಷಯಗಳ ಬಗ್ಗೆ ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಕಳುಹಿಸಿದ್ದಾರೆ. ಆದರೆ ಈ ಕಾರಣಗಳಿಂದ ಅವುಗಳನ್ನು ಅಸ್ವೀಕಾರ ಮಾಡಲಾಗಿದೆ. ಎಂದು ಹೇಳುತ್ತಿದ್ದರು. ಸದಸ್ಯರುಗಳಿಗೆ ಯಾವಾಗಲಾದರೂ ಏನಾದರೂ ಮಾತನಾಡುವ ಅವಕಾಶ ಸಿಗುತ್ತಿತ್ತು. ಅವರಿಗೆ ಅಷ್ಟರಿಂದಲೇ ಸಮಾಧಾನ ಸಿಗುತ್ತಿತ್ತು. ಏಕೆಂದರೆ ಮಹತ್ವಪೂರ್ಣ ಘಟನೆಗಳ ಬಗ್ಗೆ ಸಂಸತ್ತಿನ ಸದಸ್ಯರು ಜಾಗರೂಕರಾಗಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದರು. ಇಷ್ಟರಲ್ಲಿಯೇ ಈ ಪ್ರಕ್ರಿಯೆಯನ್ನು ಬದಲಾಯಿಸಲಾಗುತ್ತಿದೆ. ಈಗ ಲೋಕಸಭೆಯ ಅಧ್ಯಕ್ಷರು ತಮ್ಮ ಛೇಂಬರಿನಲ್ಲಿಯೇ ಅದರ ಸಂಬಂಧವಾಗಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಹಾಗೂ ಅಸ್ವೀಕೃತವಾದರೆ ಅದರ ಸೂಚನೆಯನ್ನು ಸದಸ್ಯರ ಹತ್ತಿರ ಕಳುಹಿಸಿಕೊಡುತ್ತಾರೆ. ಸದಸ್ಯರಿಗೆ ಸಂಸತ್ತಿನಲ್ಲಿ ಆ ಪ್ರಶ್ನೆಯನ್ನು ಎತ್ತುವ ಅವಕಾಶ ಸಿಗುವುದಿಲ್ಲ. ಮತ್ತೆ ಈ ಸಂಬಂಧದಲ್ಲಿ ಏನಾಗಿದೆ ಎನ್ನುವುದು ಸಂಸತ್ತಿಗೆ ಗೊತ್ತಿರುವುದಿಲ್ಲ. ಪರಿಣಾಮವೆಂದರೆ ಅನೇಕ ಪ್ರಶ್ನೆಗಳು ತಡೆಹಿಡಿಯಲ್ಪಡುತ್ತವೆ. ಬಹುಶಃ ಅವರ ಪ್ರತಿನಿಧಿಗಳು ಈ ವಿಷಯದಲ್ಲಿ ಮೌನವಾಗಿದ್ದಾರೆ ಎಂದು ಮಧ್ಯಪ್ರದೇಶದ ಪತ್ರ 283 ದೇಶದ ಜನತೆ ಯೋಚಿಸುತ್ತದೆ. ಹಗ್ಗ ಜಗ್ಗಾಟ ಮತ್ತು ಅಮಾನತ್ತು ಅಧ್ಯಾಯ ಕೆಲವು ಸದಸ್ಯರು ಈ ಪದ್ಧತಿಯನ್ನು ಅಸಫಲಗೊಳಿಸುವುದಕ್ಕೆ ದಾರಿಯನ್ನು ಹುಡುಕಿ ತೆಗೆದಿದ್ದಾರೆ. ಅದು ಯಾವುದೆಂದರೆ ಪೂರ್ವ ಸೂಚನೆ ಇದ್ದರೂ ಸಹ, ತಮ್ಮ ಸ್ಥಗಿತಗೊಳಿಸುವ ಪ್ರಸ್ತಾಪದ ಸಂಬಂಧದಲ್ಲಿ ಅಧ್ಯಕ್ಷ ಮಹೋದಯರೊಂದಿಗೆ ಏನನ್ನಾದರೂ ನಿವೇದಿಸುವ ಹಾಗೂ ಅದನ್ನು ಸ್ವೀಕರಿಸುವುದಕ್ಕಾಗಿ ಚರ್ಚೆ ಮಾಡತೊಡಗಿದರು. ಅಧ್ಯಕ್ಷರಿಂದ ಬೈಗುಳ ತಿಂದ ಮೇಲೆಯೂ ಆ ಸದಸ್ಯರು ಈ ವಿಷಯದ ಬಗ್ಗೆ ಪ್ರಸ್ತಾಪವನ್ನು ಇಟ್ಟಿದ್ದಾರೆ ಮತ್ತು ಅದು ಯಾವುದೋ ಒಂದು ರೀತಿಯಲ್ಲಿ ಪ್ರಕಟವಾಗುವುದೆಂದು ಸಮಾಚಾರ ಪತ್ರದ ಪ್ರತಿನಿಧಿಗಳಿಗೆ ತಿಳಿಯತೊಡಗಿತು. ಸದಸ್ಯರು ಮತ್ತು ಅಧ್ಯಕ್ಷರ ಈ ಹಗ್ಗ ಜಗ್ಗಾಟ ಹೇಗೆ ಹೇಗೆ ಹೆಚ್ಚುತ್ತಾ ಹೋಯಿತೋ ಹಾಗೆಯೇ ಅದರಿಂದ ಅಮಾನತ್ತುಗೊಳಿಸುವ ಅಪ್ರಿಯ ಅಧ್ಯಾಯ ಪ್ರಾರಂಭವಾಗತೊಡಗಿತು. ರಾಷ್ಟ್ರಪತಿಗಳು ಮುಂದುವರಿದರು ತಮ್ಮ ಬಾಯಿಗೆ ಒಂದಲ್ಲ ಒಂದು ರೀತಿ ಬೀಗಹಾಕಲಾಗುತ್ತಿದೆ ಎಂಬ ಸದಸ್ಯರ ಭಾವನೆ ಈ ಘಟನೆಗಳ ಮೂಲದಲ್ಲಿದೆ ಎಂಬುದು ಸ್ಪಷ್ಟ. ಸಂಸತ್ತಿನಲ್ಲಿ ಯಾವುದೇ ರೀತಿಯಲ್ಲಿ ಸದಸ್ಯರು ಮಾತನಾಡುವ ಸ್ವಾತಂತ್ರ್ಯದ ಮೇಲೆ ಪ್ರತಿಬಂಧವನ್ನು ಹೇರುವುದು ಬೇಡವಾದ ವಿಷಯ ಎಂಬುದನ್ನು ಎಲ್ಲಿ ಒಂದು ಕಡೆ ಒಪ್ಪಬೇಕಾಗುತ್ತದೆಯೋ ಅಲ್ಲಿ ಮತ್ತೊಂದು ಕಡೆ ವ್ಯಾವಹಾರಿಕ ದೃಷ್ಟಿಯಿಂದ ಸಂಸದೀಯ ಪ್ರಕ್ರಿಯೆಯ ಕೆಲವು ವ್ಯವಸ್ಥೆಗಳನ್ನು ಸಹ ಒಪ್ಪಬೇಕಾಗುವುದು. ಸಂಸದೀಯ ಪ್ರಜಾತಂತ್ರದ ವರ್ಣನೆ ವಾದವಿವಾದಗಳ ಮೂಲಕ ಇಂಥ ಶಾಸನವನ್ನು ಮಾಡಲಾಗಿದೆ. ವಿವಾದಕ್ಕೋಸ್ಕರ ಹೆಚ್ಚು ಹೆಚ್ಚು ಅವಕಾಶವನ್ನು ಕೊಡುವುದರಲ್ಲಿಯೇ ನಿಶ್ಚಯವಾಗಿಯೂ ಅದರ ಸಫಲತೆ ಇದೆ. ವಿಶೇಷವಾಗಿ ಇಂದು ಯಾವಾಗ ಆಡಳಿತ ಪಕ್ಷದ ಭಾರಿ ಬಹುಮತವಿದೆಯೋ, ಒಂದು ವೇಳೆ ಬೇರೆ ಸದಸ್ಯರಿಗೆ ತಮ್ಮ ಭಾವನೆಗಳನ್ನು ಪ್ರಕಟಿಸುವುದಕ್ಕೆ ಅವಕಾಶ ಸಿಗದಿದ್ದರೆ ಅವರಲ್ಲಿ ವಿಫಲತೆಯ ಭಾವನೆ ಮನೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಇದೇ ಭಾವನೆ ಈ ಅಪ್ರಿಯ ಘಟನೆಗಳ ರೂಪದಲ್ಲಿ ಪ್ರಕಟವಾಗುತ್ತದೆ. ಅವರನ್ನು ಬೇರೆ ಮಾಡುವುದು ಅಥವಾ ಬಹಿಷ್ಕಾರದ ನೀತಿಯಿಂದ ಅದನ್ನು ತಡೆಯುವುದರಿಂದ ಸಾಧ್ಯವಿಲ್ಲ. ಸಂಸತ್ ಒಂದು ಭಾವಾತ್ಮಕ ರೂಪ ತಳೆಯುವ ವಿಷಯದಲ್ಲಿ ನಾವು ಪ್ರಯತ್ನಿಸಬೇಕಾಗುವುದು. ಸಂಸತ್ತಿನಲ್ಲಿ ಕೇವಲ ಎಲ್ಲ ಮಹತ್ವದ ಪ್ರಶ್ನೆಗಳನ್ನು ಎತ್ತುವ ಸ್ವಾತಂತ್ರ್ಯವಷ್ಟೆ ಅಲ್ಲ, 284 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆದರೆ ಅವರ ಮಾತುಗಳಿಗೂ ಬೆಲೆ ಸಿಗುತ್ತದೆ ಎಂದು ಸದಸ್ಯರಿಗೆ ಅನ್ನಿಸಬೇಕು. ಈ ಭಾವನೆ ಹೆಚ್ಚೆಂದರೆ ಅವರ ಆಲೋಚನೆಯೂ ಹೆಚ್ಚು ಹೆಚ್ಚಾಗಿ ಸಂಯಮಿತವಾಗುತ್ತದೆ ಮತ್ತು ರಚನಾತ್ಮಕವಾಗುತ್ತಾ ಹೋಗುತ್ತದೆ. ರಾಷ್ಟ್ರಪತಿಗಳು ಎಲ್ಲ ಪಕ್ಷಗಳ ಪ್ರತಿನಿಧಿಗಳು ಮತ್ತು ಅಧ್ಯಕ್ಷರುಗಳ ಒಂದು ಅನೌಪಚಾರಿಕ ಸಭೆಯನ್ನು ವ್ಯವಸ್ಥೆ ಮಾಡಿ ಈ ಒತ್ತಡವನ್ನು ಕಡಿಮೆಮಾಡುವುದು ಈ ದೃಷ್ಟಿಯಿಂದ ಉಪಯೋಗವಾಗುವುದು. ಪಕ್ಷಗತ ರಾಜನೀತಿ ಮತ್ತು ಅಧ್ಯಕ್ಷರು ಈ ಪ್ರವೃತ್ತಿಯನ್ನು ತಡೆಯುವುದಕ್ಕೆ ಅಧ್ಯಕ್ಷರ ಚುನಾವಣೆ ಮತ್ತು ಅದರ ಪರಂಪರೆಯ ಸಂಬಂಧದಲ್ಲಿ ಸಹ ಕೆಲವು ವಿಚಾರಗಳನ್ನು ಮಾಡಬೇಕು. ಬ್ರಿಟನ್ನಿನಲ್ಲಿ ಹೌಸ್ ಆಫ್ ಕಾಮನ್ಸ್‍ನ ಅಧ್ಯಕ್ಷ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದವನಾಗಿರುತ್ತಾನೆ. (ನಿರ್ದಲೀಯ) ಆದರೆ ಭಾರತದಲ್ಲಿ ಎಲ್ಲ ಅಧ್ಯಕ್ಷ ಶಾಸಕರೂ ಅವರ ಪ್ರತಿನಿಧಿ ಮಾತ್ರವಲ್ಲ ಅದರ ಸದಸ್ಯನು ಸಹ ಆಗಿರುತ್ತಾನೆ. 1925ರ ವಿಧಾನದ ಪ್ರಕಾರ ಭಾರತದಲ್ಲಿ ವಿಧಾನಸಭೆ ಆದಾಗ ಹೌಸ್ ಆಫ್ ಕಾಮನ್ಸ್‍ನ ಪರಂಪರೆಯ ಅವಹೇಳನ ಮಾಡಿ ಕಾಂಗ್ರೆಸ್‍ನ ಸದಸ್ಯತ್ವವನ್ನು ಮುಂದುವರಿಸಿದವರಲ್ಲಿ ಟಂಡನ್‍ಜಿ ಮೊದಲ ವ್ಯಕ್ತಿ ಆಗಿದ್ದರು. ಆದರೆ ಅವರು ಹೀಗೂ ಸಹ ಘೋಷಣೆ ಮಾಡಿದ್ದರು: ಏನೆಂದರೆ ಯಾವ ದಿನ ವಿರೋಧೀ ಪಕ್ಷದ ಇಬ್ಬರು ಸದಸ್ಯರು ಅವರ ನಿಷ್ಪಕ್ಷತೆಗೆ ಸವಾಲು ಒಡ್ಡುತ್ತಾರೋ ಅಂದೇ ಪದತ್ಯಾಗ ಮಾಡುತ್ತೇನೆ ಎಂದು. ಅವರದು ಮಹಾನ್ ವ್ಯಕ್ತಿತ್ವ. ಅವರು ಈ ಅಸಿಧಾರಾವ್ರತವನ್ನು ನಿಭಾಯಿಸಿದರು. ಆದರೆ ಎಲ್ಲರಿಂದಲೂ ಈ ಭರವಸೆಯನ್ನು ಇಟ್ಟುಕೊಳ್ಳಲಾಗುವುದಿಲ್ಲ. ಇದಕ್ಕಾಗಿ ಅವಶ್ಯಕವೆಂದರೆ ಅಧ್ಯಕ್ಷರನ್ನು ಆಡಳಿತ ಪಕ್ಷದ ಪ್ರಭಾವದಿಂದ ಮುಕ್ತರನ್ನಾಗಿ ಮಾಡುವುದು ಈ ಕಾರಣದಿಂದ ಭಾರತೀಯ ಜನಸಂಘವು ಅಧ್ಯಕ್ಷರ ಚುನಾವಣೆಯು ನಿರ್ವಿರೋಧವಾಗಿ ಆಗಬೇಕೆಂಬ ಪರಂಪರೆಯು ಪ್ರಾರಂಭವಾಗಬೇಕೆಂಬ ಸಲಹೆಯನ್ನು ಇಟ್ಟಿತ್ತು. ಆದರೆ ಇಲ್ಲಿಯವರೆಗೆ ಅದು ಸಾಧ್ಯವಾಗಿಲ್ಲ. ಅಧ್ಯಕ್ಷಗಣವು ಪಕ್ಷಗತ ರಾಜಕೀಯದಿಂದ ಎಷ್ಟುದೂರ ಹಾಗೂ ಸ್ವತಂತ್ರವಾಗಿರುವುದೋ ಅದರ ಆದೇಶ ಮತ್ತು ಶಬ್ದಗಳಲ್ಲಿ ಅಷ್ಟೇ ಶಕ್ತಿ ಹೆಚ್ಚುತ್ತಾ ಹೋಗುವುದು. ಈ ಸ್ಥಾನದ ಮಹತ್ವವನ್ನು ಕಾಂಗ್ರೆಸ್ ಬಹಳ ಕಡಿಮೆಗೊಳಿಸಿದೆ. ಇದು ಪಕ್ಷಗತ ಮಾತ್ರವಲ್ಲ, ಗುಂಪುಗಾರಿಕೆ ರಾಜನೀತಿಗೆ ಬಲಿಯಾಗಿದೆ. ಅದನ್ನು ಈ ಕೆಸರಿನಿಂದ ತೆಗೆಯದ ಹೊರತು ಸಂಸದೀಯ ಪ್ರಜಾತಂತ್ರವು ನಡೆಯಲಾರದು. ಬಾಪೂ ಅಳುತ್ತಾ ಕಾಣಿಸಿದರು ಮಧ್ಯಪ್ರದೇಶದ ಪತ್ರ 285 ಡಾ. ಗೋಪಿನಾಥ ತಿವಾರಿ ಯಾವ ಮಹಾಪುರುಷರ ಕಾರ್ಯಗಳು ಶೀಘ್ರವಾಗಿ ವಿಸ್ತರಿಸುತ್ತವೋ, ಯಾರ ಅನುಸರಣೆ ಮಾಡುವವರು ಅವರ ವಿರುದ್ಧ ಹೋಗುತ್ತಾರೋ ಅವರದು ದುರ್ಭಾಗ್ಯವೇ ಸರಿ. ಬೌದ್ಧಧರ್ಮ ಭಾರತದಿಂದ ಹಾರಿಹೋಯಿತು. ಏಕೆಂದರೆ ಬುದ್ಧನ ಅನುಯಾಯಿಗಳು ಬುದ್ಧನ ಉಪದೇಶಗಳ ವಿರುದ್ಧ ಹೋದರು. ಕಬೀರ ಪಂಥ ತ್ವರಿತವಾಗಿ ಗಾಳಿಯಲ್ಲಿ ಹಾರಿಹೋಯಿತು. ಏಕೆಂದರೆ ಕಬೀರ ಪಂಥದವರು ಕಬೀರನ ಉಪದೇಶಗಳನ್ನು ಅರೆದು ಕುಡಿದರು. ಎಲ್ಲಕ್ಕಿಂತ ದುರ್ಭಾಗ್ಯವೆಂದರೆ ನಾವು ಬಾಪೂಜಿಯವರ ಕಾರ್ಯ ಮತ್ತು ಉಪದೇಶಗಳನ್ನು ಎಷ್ಟು ಬೇಗ ಮರೆತುಬಿಟ್ಟಿದ್ದೇವೆ. ನಮ್ಮ ದೇಶದಲ್ಲಿ ಇಂದು ಸತ್ಯ ಮತ್ತು ಅಹಿಂಸೆಗಳ ಸ್ಥಾನದಲ್ಲಿ ಸುಳ್ಳು ಕುಟಿಲನೀತಿ ಮತ್ತು ಅನ್ಯಾಯಗಳಿಗೆ ಗೌರವವಿದೆ. ಬಾಪೂಜಿಯವರು ಇಂಗ್ಲಿಷರನ್ನು ವಿರೋಧಿಸಲಿಲ್ಲ. ಆದರೆ ಆಂಗ್ಲಭಾಷೆ ಮತ್ತು ಆಂಗ್ಲತ್ವವನ್ನು ದೃಢವಾಗಿ ವಿರೋಧಿಸಿದರು. ಅವರು ಹೇಳಿದ್ದು ಹೀಗೆ ``ನನ್ನ ದೇಶದಲ್ಲಿ ಇಂಗ್ಲಿಷರು ಇರಬಹುದು, ಗೌರವದಿಂದ ಇರಬಹುದು, ಕಾಶೀ ವಿಶ್ವವಿದ್ಯಾಲಯದ ಹೆಬ್ಬಾಗಿಲಿನಲ್ಲಿ ಆಂಗ್ಲಭಾಷೆಯಲ್ಲಿ ತೂಗುತ್ತಿದ್ದ Welcome (ಸುಸ್ವಾಗತ)ವನ್ನು ಓದಿ ಅವರು ಮುಂದೆ ಇಡುತ್ತಿದ್ದ ಹೆಜ್ಜೆಯನ್ನು ತಡೆದರು. ಮತ್ತು ಹೇಳಿಬಿಟ್ಟರು. - ``ಮಾಲವೀಯಜೀ, ಯಾವಾಗ ಆ ಆಂಗ್ರೇಜಿ `ವೆಲ್‍ಕಮ್' ಅನ್ನು ತೆಗೆಯಲಾಗುವುದೋ ಆಗಲೇ ನಾನು ಒಳಗೆ ಬರಬಲ್ಲೆ. ಯಾವಾಗ ದುಂಡು ಮೇಜಿನ ಪರಿಷತ್ತಿನಲ್ಲಿ ಇಂಗ್ಲಿಷರ ಬಟ್ಟೆಯನ್ನು ಹಾಕಿಕೊಳ್ಳವ ಪ್ರಶ್ನೆ ಎದ್ದುನಿಂತಿತ್ತೋ ನಾನು ಹೋಗುವುದಿಲ್ಲ ಎಂದು ಹೇಳಿಬಿಟ್ಟರು. ಆಂಗ್ರೇಜೀ ಬಟ್ಟೆಯನ್ನು ಧರಿಸಿ ಬ್ರಿಟಿಷ್ ರಾಜನನ್ನು ಭೇಟಿಮಾಡುವುದನ್ನು ನಾನು ಸಹಿಸುವುದಿಲ್ಲ. ಆಂಗ್ರೇಜಿಗಳ ವಿರುದ್ಧ ಅವರು ಎಲ್ಲ ಕಡೆಯೂ ದನಿ ಎತ್ತಿದರು. ಅವರ ದೃಢವಾದ ಅಭಿಪ್ರಾಯ ಹೀಗಿತ್ತು. ``ನಾವು ಆ ಬ್ರಿಟಿಷರನ್ನು ಸಹಿಸುವುದಿಲ್ಲ. ಇದು ದಾಸ್ಯದ ಎಲ್ಲಕ್ಕಿಂತಾ ದೊಡ್ಡ ಪ್ರತೀಕ.'' ಆದರೆ ಇಂದು ಅವರು ಸ್ವರ್ಗದ ಕುಶಾಸನದ ಮೇಲೆ ಕುಳಿತು ಪ್ರತಿದಿನ ಕಣ್ಣೀರು ಸುರಿಸುತ್ತಾರೆ ಮತ್ತು ಹೇಳುತ್ತಾರೆ: ``ನಾನು ಯೋಚಿಸಿದ ಭಾರತ ಇದೇ ಏನು?" ಎಲ್ಲ ಕಡೆ ನನ್ನ ಹೆಸರೆತ್ತಿ ನನ್ನನ್ನು ಬೀಳಿಸಲಾಗುತ್ತಿದೆ, ನನ್ನ ಚಿತ್ರವನ್ನು ತೂಗುಹಾಕಲಾಗುತ್ತಿದೆ ಮತ್ತು ನನ್ನ ಚಿತ್ರಕ್ಕೆ ಹೂವುಗಳನ್ನು ಮುಡಿಸಲಾಗುತ್ತಿದೆ. ನನ್ನ ಸಮಾಧಿಗೆ ಹೂವುಗಳನ್ನು ಅರ್ಪಿಸಲಾಗುತ್ತಿದೆ. ಆದರೆ ನಾನು ಹೇಳಿದ ಹಾಗೆ ಆಚರಣೆ ಮಾಡುತ್ತಿಲ್ಲ. ನನ್ನ ದೇಶವಾಸಿಗಳ ಕಂಠದಲ್ಲಿ ವಿದೇಶಿಭಾಷೆಯನ್ನು ಬಲವಂತವಾಗಿ ಇಳಿಸಲಾಗುತ್ತಿದೆ. ಅವರ ಕತ್ತಿಗೆ ಆಂಗ್ಲತೆಯ ಕಬ್ಬಿಣದ ಸರಪಳಿಗಳನ್ನು ತೊಡಿಸಲಾಗುತ್ತಿದೆ. ನನ್ನ ಶಿಷ್ಯರು ನನ್ನ ಕೆಲಸಗಳನ್ನು ಮರೆತಿದ್ದಾರೆ. ನನ್ನ ಮಾತುಗಳನ್ನು 286 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಸೆದು ಆನಂದದಿಂದ ಇದ್ದಾರೆ. ಹೆಜ್ಜೆ ಹೆಜ್ಜೆಗೂ ಸತ್ಯದ ಜಾಗದಲ್ಲಿ ಅಸತ್ಯಕ್ಕೆ ಗೌರವ ಕೊಡಲಾಗುತ್ತಿದೆ. ಅಧಿಕಾರದ ಒಂದೊಂದು ಇಟ್ಟಿಗೆಯನ್ನು ಮರಳು ಮಿಶ್ರಿತಗಾರೆಯಿಂದ ಕೂಡಿಸಲಾಗುತ್ತಿದೆ. ಅಹಿಂಸೆಯಂತೂ ಅಳುತ್ತಾ ನನ್ನ ಬಳಿ ಬಂದಿದೆ. ಮತ್ತು ರಾಷ್ಟ್ರ ಭಾಷೆಗಾಗಿ ನಾನು ಮಾಡಿದ ಪ್ರಯತ್ನ ಶವದೋಪಾದಿಯಲ್ಲಿ ಆಗಿ ನಾನು ಅಳುವಂತೆ ಮಾಡಿದೆ. ನನ್ನ ದೇಶವು ಏನಾಗುವುದು? ನಾನು ಯೋಚಿಸಿದ ಸ್ವರಾಜ್ಯವೇನಾಗುವುದು? ನಿರ್ವಿರೋಧ ಚುನಾವಣೆಗೆ ಮತ್ತೊಂದು ಮಗ್ಗುಲಿದೆ. ತಲೆನೋವನ್ನು ದೂರಮಾಡುವುದಕ್ಕಾಗಿ ತಲೆಯನ್ನೇ ಒಡೆಯುವುದು ಸರಿಯೇ? - ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಉದ್ಘಾಟನಾ ಪದ್ಧತಿಯ ಉದ್ಘಾಟನೆಯನ್ನು ಎಂದು, ಎಲ್ಲಿ, ಯಾರು ಮಾಡಿದರು. ಇದನ್ನು ಹೇಳುವುದೇನೋ ಕಷ್ಟ. ಆದರೆ ಯಾವುದೇ ವಿರೋಧದ ಭಯವಿಲ್ಲದೆ ಹೀಗೆ ಹೇಳಬಹುದು. ಆಡಳಿತ ಮತ್ತು ಸಮಾಜದ ಬೇರೆ ಕಾರ್ಯಗಳತ್ತ ಸಮಯವೇ ಇಲ್ಲದಷ್ಟು ಉದ್ಘಾಟನೆಗಳ ನೇಣಿನಲ್ಲಿ ಸಿಕ್ಕಿಹಾಕಿಕೊಂಡಿರುವ ಈಗಿನ ಮಂತ್ರಿಗಳು ಮತ್ತು ರಾಜನೈತಿಕ ಮುಖಂಡರು ಇದರ ಪ್ರಾರಂಭವನ್ನು ಮಾಡಲಿಲ್ಲ. ನಿಜವೆಂದರೆ ಸಂಪೂರ್ಣ ಪದ್ಧತಿಯ ಮೂಲದಲ್ಲಿ ಯಾವ ಭಾವನೆ ಕೆಲಸಮಾಡುತ್ತದೆಯೋ ಅದು ಇಂದಿನ `ಸೆಕ್ಯುಲರ್' ಮತ್ತು ತರ್ಕಪ್ರಧಾನ ಭೌತಿಕವಾದೀ ಅಭಿಪ್ರಾಯಗಳನ್ನು ಒಪ್ಪುವುದರ ಜೊತೆ, ಮತವಾದದ ಜೊತೆ ಅಸಂಗತವಾಗಿದೆ. ಉದ್ಘಾಟನೆಯ ಭಾವನೆಯ ಸಂಬಂಧವು ಮನುಷ್ಯನ ಧರ್ಮಪರಾಯಣತೆ ಹಾಗೂ ಅದೃಶ್ಯದ ವಿಷಯದಲ್ಲಿ ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಇದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಬಾರದಿರುವ ಅನಿಷ್ಟವನ್ನು ತಡೆಯುವ ಹಾಗೂ ಇಷ್ಟವಾದುದನ್ನು ಆವಾಹಿಸುವ ಆಸೆಯಿಂದಲೇ ಉದ್ಘಾಟನಾ ಸಮಾರೋಹದ ಆಯೋಜನೆಯನ್ನು ಮಾಡಲಾಗುತ್ತಿದೆ. ಪರಿಣಾಮ ಸ್ವರೂಪವಾಗಿ ಈ ವ್ಯವಸ್ಥೆಗಳೊಂದಿಗೆ ಕರ್ಮಕಾಂಡವು ಅವಶ್ಯಕವಾಗಿದೆ. ಇಂದಿಗೂ ಸಹ ಎಂದಾದರೂ, ಎಲ್ಲಿಯಾದರೂ ಉದ್ಘಾಟನಾ ಸಮಾರೋಹ ಮಾಡಬೇಕಾಗಿದ್ದರೆ ಏನಾದರೂ ಕರ್ಮಕಾಂಡ ಅನಿವಾರ್ಯವಾಗುತ್ತದೆ. ಒಂದು ಕಡೆ ನಮ್ಮ ಪ್ರಾಚೀನ ಪದ್ಧತಿಯ ಅನುಸಾರವಾಗಿ ಯಜ್ಞ, ಪೂಜೆಗಳಾದರೆ ಇನ್ನೆಲ್ಲಿಯೋ ತೆಂಗಿನಕಾಯಿ ಒಡೆಯಲಾಗುತ್ತದೆ. ಕೆಲವರು ಪಶ್ಚಿಮದ ನಕಲು ಮಾಡಿ ದಾರ ಕತ್ತರಿಸುತ್ತಾರೆ ಅಥವಾ ಅವರ ಬೇರೆ ಯಾವುದೋ ಪದ್ಧತಿಯ ಅಭಿನಯ ಮಾಡುತ್ತಾರೆ. ಯಾರು ತೆಂಗಿನಕಾಯಿ ಒಡೆಯವುದಕ್ಕೆ ಆಕ್ಷೇಪಣೆ ಎತ್ತುತ್ತಾರೋ ಅವರಿಗೆ ದಾರ ಕತ್ತರಿಸುವುದು ಅಸಂಬದ್ಧ ಎನ್ನಿಸುವುದಿಲ್ಲ. ಕಾರ್ಯಕ್ರಮಗಳು ಯಾವುದೇ ಆಗಿರಲಿ, ವ್ಯಕ್ತಿ ಈ ಕಾರ್ಯಕರ್ತರುಗಳ ಮೂಲಕ ಆಧಿದೈವಿಕ ಶಕ್ತಿಗಳ ವಿಷಯದಲ್ಲಿ ಕೃತಜ್ಞತೆ ಮಧ್ಯಪ್ರದೇಶದ ಪತ್ರ 287 ಪ್ರಕಟಿಸುತ್ತಾರೆ. ಉದ್ಘಾಟನೆಯ ಹಿಂದೆ ಕೃತಜ್ಞತೆ ಅಥವಾ ಸಮರ್ಪಣಾ ಭಾವ ಇಂದು ಕಾಣಿಸುವುದಿಲ್ಲ. ಆದರೂ ಸಹ ಪ್ರತ್ಯೇಕ ಕಾರ್ಯಕ್ಕೆ ಉದ್ಘಾಟನೆ ಅನಿವಾರ್ಯ ಅಂಗವಾಗಿದೆ. ಹಿಂದಿನ ಸಲ ವಿಂಧ್ಯ ಪ್ರದೇಶದ ಪ್ರವಾಸ ಮಾಡುತ್ತಿದ್ದಾಗ ಒಂದು ನದಿಯ ಮೇಲೆ ಸೇತುವೆ ಇದ್ದರೂ ನಾವು ಕೆಳಗಿನ ಜಾರು ಹಾದಿಯಲ್ಲಿ ಅದನ್ನು ದಾಟಬೇಕಾಯಿತು. ಕೇಳಿದಾಗ, ಇನ್ನೂ ಸೇತುವೆಯ ಉದ್ಘಾಟನೆ ಆಗಿಲ್ಲವೆಂದು ಗೊತ್ತಾಯಿತು. ಇದೇ ರೀತಿ ಒಂದು ಸ್ಥಳದಲ್ಲಿ ಅಣೆಕಟ್ಟು ಕಟ್ಟಲಾಗಿತ್ತು ಮತ್ತು ಅದರಲ್ಲಿ ನೀರು ಸಹ ಇತ್ತು. ಆದರೆ ಉದ್ಘಾಟನೆ ಆಗದಿದ್ದ ಕಾರಣ, ಆ ವರ್ಷ ಬರಗಾಲದ ಕಾರಣದಿಂದ ಫಸಲು ನಾಶವಾದರೂ ರೈತರು ಆ ನೀರನ್ನು ನೀರಾವರಿಗಾಗಿ ಉಪಯೋಗಿಸಲಾಗಲಿಲ್ಲ. ಉದ್ಘಾಟನೆಯ ಕೆಲಸದಲ್ಲಿ ಒಂದೇ ಸಮನೆ ತೊಡಗಿಸಿಕೊಂಡಿದ್ದರೂ ಮಂತ್ರಿಗಳಿಗೆ ಅನೇಕ ವಿಷಯಗಳ ಉದ್ಘಾಟನೆ ಮಾಡುವುದಕ್ಕೆ ಸಮಯ ಸಿಗುವುದಿಲ್ಲ. ಮೊದಲು ಈ ಸಮಸ್ಯೆ ಇರಲಿಲ್ಲ. ಏಕೆಂದರೆ ಆಗ ಉದ್ಘಾಟನೆಗಾಗಿ ಸ್ಥಾನೀಯ ಪುರೋಹಿತರು ಹಾಗೂ ಅಧಿಕಾರಿಗಳಿಂದ ಕೆಲಸವಾಗಿಬಿಡುತ್ತಿತ್ತು. ಆ ಸಮಾರೋಹಗಳಲ್ಲಿ ಮಹತ್ವವಿರುವುದು ಉದ್ಘಾಟನ ಕರ್ತೃಗಳದ್ದಲ್ಲ, ಆದರೆ ಉದ್ಘಾಟನೆ ಕ್ರಿಯೆಯದು. ಈಗ ಹೊಸ ಪುರೋಹಿತರು ಬಂದರು, ಹಳಬರು ಹಿಂದೆ ಉಳಿದರು. ಹೊಸವಸ್ತುಗಳ ಬೇಡಿಕೆ ಮತ್ತು ಫ್ಯಾಷನ್ನಿನ ಕಾರಣದಿಂದ ಹೇಗೆ ನಾವು ಎಲ್ಲ ಕ್ಷೇತ್ರಗಳಲ್ಲಿ ಅಭಾವ ಗ್ರಸ್ತರೋ ಅದೇ ಸ್ಥಿತಿ ಉದ್ಘಾಟನೆಯ ಕ್ಷೇತ್ರದಲ್ಲಿಯೂ ಇದೆ. ಅಭಾವದ ಈ ಸ್ಥಿತಿಯಲ್ಲಿ ``ನಿರಸ್ತ ಪಾದಪೇ ದೇಶೇ ಎರಂಡೋಪಿ ದ್ರುಯಾಯತೇ" ನ್ಯಾಯದ ಅನುಸಾರವಾಗಿ ನಾನು ಈ ವಾರ ಆಗ್ರಾ ವಿದ್ಯಾರ್ಥಿ ಸಂಘದ ಉದ್ಘಾಟನೆಯ ನಿಮಿತ್ತ ಹೋಗಬೇಕಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೋದಯರು ನನ್ನ ಬಳಿ ಬಂದಾಗ ನನ್ನ ಬದಲು ಯಾರಾದರೂ ಶಿಕ್ಷಣದ ತಜ್ಞರನ್ನು ಕರೆದುಕೊಂಡು ಹೋಗುವುದು ಹೆಚ್ಚು ಯೋಗ್ಯವೆಂದು ನಾನು ಅವರಿಗೆ ಸಲಹೆ ಕೊಟ್ಟೆ. ಆದರೆ ಈ ನಡುವೆ ಅತ್ಯಧಿಕ ರಾಜಕೀಯದ ಅತ್ಯಧಿಕ ಪ್ರಭಾವ ಇದ್ದ ಕಾರಣ ಅಥವಾ ಶಿಕ್ಷಣ ತಜ್ಞರ ಮಧ್ಯೆ ಸದಾಕಾಲವೂ ಇರುವ ಕಾರಣದಿಂದ ಸ್ವಲ್ಪ ಬದಲಾವಣೆಯ ಆಸೆಯಿಂದ ಅವರು ನನಗೇ ಹೊರಡಲು ಆಗ್ರಹ ಮಾಡಿದರು. ಉದ್ಘಾಟನೆಯ ಸಮಾರೋಹಗಳ ಉದ್ಘಾಟನೆ ನನ್ನ ಜೀವನದಲ್ಲಿ ಅನೇಕ ವರ್ಷಗಳ ಹಿಂದೆಯೇ ಆಗಿಹೋದ ಕಾರಣ ಅದರತ್ತ ವಿಶೇಷ ಆಸಕ್ತಿ ಇರಲಿಲ್ಲ. ನಂತರ ಉತ್ತರ ಪ್ರದೇಶ ಜನಸಂಘ ಈ ಸಮಯದಲ್ಲಿ ಹೊಸ ಟ್ಯಾಕ್ಸ್‌ಗಳ ವಿರುದ್ಧ ಆಂದೋಳನದ ತಯಾರಿ ಮಾಡುತ್ತಿವೆ. ``ಕತ್ತಲ ರಾಜ್ಯದ ಪೆದ್ದರಾಜನ" ರೀತಿ ಹೇಗೆ ಗೋಡೆ ಬಿದ್ದುದಕ್ಕೆ ಸನ್ಯಾಸಿಯನ್ನು ತಪ್ಪಿತಸ್ಥ ಎಂದು ದೂರಿದನೋ 288 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಹಾಗೆಯೇ ಇಂದಿನ ಮತ್ಸರದಿಂದ ಪೀಡಿತನಾದ, ಸಂದೇಹಗ್ರಸ್ತ ಹಾಗೂ ಪದವಿಗಳಲ್ಲಿ ಆಸಕ್ತರಾದ, ಆದ್ದರಿಂದ ಭಯದಿಂದ ನಡುಗುತ್ತಿರುವ ಸರ್ಕಾರವು, ದೂರಾನ್ವಯದಿಂದ ಆ ಕಾಲೇಜಿನೊಂದಿಗೆ ನನ್ನ ಸಂಬಂಧವನ್ನು ಜೋಡಿಸಿ ಅನ್ಯಾಯಮಾಡದಿರಲಿ ಎಂಬ ಸಾಧ್ಯತೆಯನ್ನು ತಡೆಯಲು ಇಷ್ಟಪಡುತ್ತಿದ್ದೆ. ಆದರೂ ಸಹ ನನ್ನದೇನೂ ನಡೆಯಲಿಲ್ಲ ಮತ್ತು ನಾನು ಉದ್ಘಾಟನೆಯ ನಿಮಿತ್ತ ಹೋದೆ. ಸುಮಾರು ಒಂದು ತಿಂಗಳ ಹಿಂದೆ ವಿದ್ಯಾರ್ಥಿ ಸಂಘದ ಚುನಾವಣೆ ಆಗಿತ್ತು. ಆದರೆ ಉದ್ಘಾಟನೆ ಆಗದಿದ್ದುರಿಂದ ಬಡಪಾಯಿ ಪದಾಧಿಕಾರಿಗಳು ಕೆಲಸಮಾಡಲು ಆಗುತ್ತಿರಲಿಲ್ಲ. ಒಂದು ವೇಳೆ ಈ ಅವಕಾಶ ತಡೆದಿದ್ದೇ ಆದರೆ ನಂತರ ದಸರೆಯ ರಜೆ ಇತ್ತು ಮತ್ತು ಅರ್ಧವರ್ಷ ಹೀಗೆಯೇ ಕಳೆದುಹೋಗುತ್ತಿತ್ತು. ದೇಶದ ಬಹಳ ಹಳೆಯ ಕಾಲೇಜುಗಳಲ್ಲಿ ಆಗ್ರಾ ಕಾಲೇಜು ಒಂದು. ಅದು ಈಗ ಇರುವ ಜಾಗದಲ್ಲಿ ಯಾವುದೋ ಸಮಯದಲ್ಲಿ ಪೇಶ್ವೆಗಳ ಕಛೇರಿ ಇತ್ತು. ನಂತರ ಶ್ರೀ ಗಂಗಾಧರ ಪಂಡಿತರು ತನ್ನ ಪೂರಾ ಜಾಗೀರನ್ನು ಅದರೊಂದಿಗೆ ಸೇರಿಸಿ ಸುಮಾರು 1823ರಲ್ಲಿ ಈ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿದರು. ಒಂದು ವೇಳೆ ಆಗ್ರಾ ಕಾಲೇಜು ಮತ್ತು ಸೆಂಟ್‍ಜಾನ್ ಕಾಲೇಜಿನ ತತ್ಕಾಲೀನ ಇಂಗ್ಲಿಷ್ ಪ್ರಿನ್ಸಿಪಾಲರುಗಳಲ್ಲಿ ಎಳೆದಾಟ ಇಲ್ಲದಿದ್ದಲ್ಲಿ ಅಹ್ಮದಾಬಾದಿಗೆ ಬದಲು ಆಗ್ರಾ ಉತ್ತರ ಪ್ರದೇಶದಲ್ಲಿ ಮೊದಲ ವಿಶ್ವವಿದ್ಯಾಲಯವಾಗುತ್ತಿತ್ತು. ಇಂದಿಗೂ ಸಹ ಆಗ್ರಾ, ಪ್ರದೇಶದ ಪ್ರಮುಖ ಕಾಲೇಜುಗಳಲ್ಲಿ ಒಂದು. ಹಾಗೂ ಅದರ ಪ್ರಧಾನ ಆಚಾರ್ಯರ ಅಭಿಪ್ರಾಯವೇನೆಂದರೆ ಯಾವುದೇ ವಿಶ್ವವಿದ್ಯಾಲಯದೊಂದಿಗೆ ಸ್ಪರ್ಧಿಸಬಲ್ಲುದು. ಆದರೆ ಸರ್ಕಾರವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರಾಚಾರ್ಯರುಗಳ ಹಾಗೂ ಪ್ರಾಧ್ಯಾಪಕರ ವೇತನ ಕ್ರಮದಲ್ಲಿ ಯಾವ ಭೇದವನ್ನು ಇಟ್ಟಿದ್ದಾರೋ ಆ ಕಾರಣದಿಂದ ಈ ಕಾಲೇಜಿಗೆ ಕಷ್ಟವಾಗುತ್ತಿದೆ. ವಿಶ್ವವಿದ್ಯಾಲಯಗಳ ಆಯೋಗವು ಸ್ವಲ್ಪ ಗಮನ ಹರಿಸಿದರೆ ಈ ಶಿಕ್ಷಣ ಕೇಂದ್ರವು ತನ್ನ ಸ್ಥಾನಮಾನವನ್ನು ಕಾಯ್ದುಕೊಳ್ಳಬಹುದು. ನಾನು ಆಗ್ರಾ ಕಾಲೇಜಿನ ವಿದ್ಯಾರ್ಥಿ ಅಲ್ಲದಿದ್ದರೂ ನನಗೆ ಅಲ್ಲಿ ಓದುವ ಅವಕಾಶ ಸಿಕ್ಕಿದೆ. ಸೆಂಟ್‍ಜಾನ್ಸ್ ಮತ್ತು ಆಗ್ರಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಾರದಲ್ಲಿ ಮೂರು ದಿನಗಳು ಇಂಗ್ಲಿಷ್ ಮತ್ತು ಇತಿಹಾಸದ ಸ್ನಾತಕೋತ್ತರ ತರಗತಿಗಳು ನಡೆಯುತ್ತಿದ್ದುವು. ಆದ್ದರಿಂದ ಒಂದು ಕಾಲೇಜಿನಲ್ಲಿ ಹೆಸರು ಬರೆಸಿದ ಮೇಲೆಯೂ ಆ ಸಮಯದಲ್ಲಿ ಎರಡು ಕಾಲೇಜುಗಳ ಪ್ರಾಚಾರ್ಯರುಗಳಿಂದಲೂ ಶಿಕ್ಷಣವನ್ನು ಪಡೆಯುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಶಿಸ್ತುಹೀನತೆಯನ್ನು ದೂರುವ ಇಂದಿನ ದಿನಗಳಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ಈ ದೃಷ್ಟಿಯಿಂದ ಖ್ಯಾತಿ ಪಡೆದ ಆಗ್ರಾ ಕಾಲೇಜು ಈಗ ಇನ್ನೂ ಆಕಾಶಕ್ಕೆ ಏರಿರಬೇಕು ಅನ್ನಿಸುತ್ತದೆ. ಆದರೆ ಮಧ್ಯಪ್ರದೇಶದ ಪತ್ರ 289 ನಾನು ನನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಯಿತು. ಸಾಕಷ್ಟು ಶಿಸ್ತುಬದ್ಧ ಮತ್ತು ಶಿಷ್ಟತಾಪೂರ್ಣ ವಿದ್ಯಾರ್ಥಿಗಳನ್ನು ನಾನು ನೋಡಿದೆ. ಹೊಸ ಪೀಳಿಗೆಯನ್ನು ಬಯ್ಯುವುದನ್ನು ನಾವು ನಿಲ್ಲಿಸಬೇಕು ಎಂದು ನನಗೆ ಅನ್ನಿಸುತ್ತದೆ. ಆಗ್ರಾ ಕಾಲೇಜಿನ ವಿದ್ಯಾರ್ಥಿ ಸಂಘದ ಈ ವರ್ಷದ ಚುನಾವಣೆಯ ವಿಶೇಷತೆ ಏನೆಂದರೆ ಪ್ರಮುಖ ಸ್ಥಾನಗಳ ಚುನಾವಣೆಯೂ ನಿರ್ವಿರೋಧವಾಗಿ ಆಯಿತು. ಅಭ್ಯರ್ಥಿಗಳು ಕುಳಿತು ತಮ್ಮಲ್ಲೇ ಚೀಟಿಗಳನ್ನು ಹಾಕಿದರು ಮತ್ತು ಈ ರೀತಿ ಮತದಾನದ ಜಂಜಾಟವನ್ನು ತಡೆದರು. ಈ ಸಂಬಂಧವಾಗಿ ಅವರಿಗೆ ಎಲ್ಲ ಕಡೆಯಿಂದ ಆಭಿನಂದನೆಗಳು. ಅವರು ಯಾವ ಸ್ಥಾನಕ್ಕಾಗಿ ಅಭ್ಯರ್ಥಿಗಳಾಗಿದ್ದರೋ ಅದರ ವಿಷಯವಾಗಿ ನಿರಾಸಕ್ತಿಯನ್ನು ತೋರ್ಪಡಿಸಿಕೊಂಡರು. ಚುನಾವಣೆಯ ಅನೇಕ ಕೆಟ್ಟ ವ್ಯವಹಾರಗಳು ಆಸಕ್ತಿಯಿಂದಲೇ ಹುಟ್ಟುತ್ತವೆ. ಆದರೆ ಈ ಪ್ರಶ್ನೆಯ ಮತ್ತೊಂದು ಪಾಶ್ರ್ವವೂ ಇದೆ. ಪ್ರಜಾತಂತ್ರದಲ್ಲಿ ಚುನಾವಣೆಯು ಯಾವುದೇ ಸ್ಥಾನಕ್ಕಾಗಿ ಸ್ಪರ್ಧಿಸುವ ಉಪಯುಕ್ತ ವ್ಯಕ್ತಿಯ ಚುನಾವಣಾ ಪದ್ಧತಿ ಮಾತ್ರವಲ್ಲ ಆದರೆ ಲೋಕಶಿಕ್ಷಣ ಮತ್ತು ಲೋಕಸಂಸ್ಕಾರದ ಸಾಧನವೂ ಹೌದು. ಇಂದು ಚುನಾವಣೆಗಳಲ್ಲಿ ಆಗುತ್ತಿರುವ ಕೆಟ್ಟ ವ್ಯವಹಾರಗಳನ್ನು ನೋಡಿ ಈ ಪದ್ಧತಿಯನ್ನು ನಿಲ್ಲಿಸಿ ಬಿಡುವುದನ್ನು ಅನೇಕ ಜನರು ಇಷ್ಟಪಡುತ್ತಾರೆ. ಆದರೆ ಈ ಉಪಾಯ ಎಂಥದು ಎಂದರೆ ತಲೆನೋವಿದ್ದಾಗ ತಲೆಯನ್ನು ಒಡೆದು ಹಾಕುವ ತರಹ. ಚುನಾವಣೆಗಳನ್ನು ಮುಗಿಸಿಬಿಡುವ ಎಲ್ಲಕ್ಕಿಂತ ಪ್ರಭಾವಶಾಲಿ ಸಾಧನವೆಂದರೆ ಜಾಗರೂಕನಾಗಿರುವ ಮತದಾರ. ಚುನಾವಣೆ ಮಾಡಿಸದೆ ಮತದಾರ ಎಚ್ಚೆತ್ತುಕೊಳ್ಳುವುದಿಲ್ಲ. ಈಗ ಚುನಾವಣೆಯೇ ಚುನಾವಣೆಯ ದೋಷಗಳನ್ನು ದೂರ ಮಾಡುವುದು. ಇಂದು ಕೆಟ್ಟವ್ಯವಹಾರಗಳು ಪ್ರಕಟವಾಗುತ್ತಿದ್ದರೆ ಅದಕ್ಕೆ ಹೆದರಬಾರದು. ಅದನ್ನು ಎದುರಿಸಬೇಕು ಮತ್ತು ಸಾಮೂಹಿಕ ರೂಪದಲ್ಲಿ ಅದನ್ನು ನಿರಾಕರಿಸಲು ಪ್ರಯತ್ನಿಸಬೇಕು. ಚುನಾವಣೆಯು ಸಹಜವಾಗಿಯೇ ಈ ಸಾಮೂಹಿಕ ಪ್ರಯತ್ನದ ಅವಕಾಶಗಳನ್ನು ಕೊಡುತ್ತವೆ. ಇಂದು ಚುನಾವಣಾ ಪದ್ಧತಿಯನ್ನು ದೋಷರಹಿತವಾಗಿ ಮಾಡುವುದಕ್ಕೆ ತಲೆಕೆಡಿಸಿಕೊಂಡು ಅದರ ಹಿಂದೆ ಬಿದ್ದಿರುವವರಿಗೆ ನನ್ನ ಸಲಹೆ ಎಂದರೆ ಅವರು ಮತದಾರರನ್ನು ಸಂಘಟಿತರನ್ನಾಗಿ ಮತ್ತು ವಿದ್ಯಾವಂತರನ್ನಾಗಿ ಮಾಡುವುದಕ್ಕೆ ತಮ್ಮ ಶಕ್ತಿಯನ್ನು ಉಪಯೋಗಿಸಬೇಕು. ಕಳೆದ ಶತಮಾನದಲ್ಲಿ ಇಂಗ್ಲೆಂಡ್‍ನಲ್ಲಿ ಅಲ್ಲಿಯ ರಾಜಕೀಯ ಪಾರ್ಟಿಗಳು ತಮ್ಮ ನಾಯಕರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಘೋಷಣೆ ಹಾಕಿದ್ದರು. ಅಕ್ಷರ ಜ್ಞಾನವು ಅವರ ತಾತ್ಪರ್ಯವಾಗಿತ್ತು. ರಾಜನೈತಿಕ ಶಿಕ್ಷಣದ ಧ್ಯೇಯವನ್ನಿಟ್ಟುಕೊಂಡು ನಾವು ಈ ಕೆಲಸವನ್ನು ಮಾಡಬೇಕಾಗುವುದು. ಹೇಗೆ ಹೇಗೆ ವಿಭಿನ್ನ ಪಕ್ಷಗಳ ಬೇರುಗಳು ಸಮಾಜದಲ್ಲಿ 290 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಳವಾಗಿ ಮತ್ತು ವ್ಯಾಪಕವಾಗಿ ಬೇರೂರುತ್ತವೆಯೋ ಹಾಗೆಯೇ ಚುನಾವಣೆಯಲ್ಲಿ ಕಾಣಿಸುವ ಎಲ್ಲ ಕೆಟ್ಟ ವ್ಯವಹಾರಗಳೂ ಮುಗಿದುಹೋಗುವುವು. ಯಾರು ನಿರ್ದಿಷ್ಟ ಸಮಯದಲ್ಲಿ ಚುನಾವಣಾ ಮೈದಾನದಲ್ಲಿ ಧುಮುಕಿ ಹಾಗು ತಮ್ಮ ತಮ್ಮ ಯೋಗ್ಯತೆಗಳಿಗಿಂತ ಬೇರೆಯೇ ಆದ, ತದ್ಯ, ಊಹೆ, ಹಾಗೂ ಅಹಂಕಾರಗಳೊಂದಿಗೆ ನಡೆದುಕೊಳ್ಳುತ್ತಾರೋ ಅವರು ತಮ್ಮ ಅಸಫಲತೆಗಾಗಿ ಒಂದಲ್ಲ ಒಂದು ಕಾರಣಗಳನ್ನು ಹುಡುಕುತ್ತಿರುತ್ತಾರೆ. `ಕುಣಿಯಲು ಬರುವುದಿಲ್ಲ. ಅಂಗಳವಕ್ರ' ಗಾದೆಯನ್ನು ನಿಜವಾಗಿಸುವ ಜಂಜಾಟದಲ್ಲಿ ಸಿಕ್ಕಿಕೊಳ್ಳಬಾರದು. ಯಾವ ಮತದಾರ ಇಂದು ಕೆಟ್ಟದ್ದಕ್ಕೆ ಬಲಿಯಾಗಿದ್ದಾನೋ ಅವನೇ ಸಮರ್ಥನಾದ ಮೇಲೆ ಅದರ ನಿರಾಕರಣೆ ಮಾಡಬಲ್ಲ. ಘೋರ ಅರ್ಥವಾದೀ ದೃಷ್ಟಿಕೋನದಿಂದಲೇ ವಿಕೃತಿಗಳು ಬೆಳೆಯುತ್ತವೆ, ರಾಷ್ಟ್ರಜೀವನದ ಪ್ರಕೃತಿಯನ್ನು ಗುರುತಿಸಿ ನಾವು ರಾಷ್ಟ್ರದಲ್ಲಿ ಏಕತೆಯನ್ನು ಸ್ಥಾಪಿಸಬೇಕು. - ಶ್ರೀ ದೀನ್ ದಯಾಳ್ ಉಪಾಧ್ಯಾಯ ನಮ್ಮ ರಾಷ್ಟ್ರ ಜೀವನದ ಪ್ರಕೃತಿ, ವಿಕೃತಿ ಮತ್ತು ಸಂಸ್ಕೃತಿಗಳ ವಿಚಾರ ಮಾಡುವುದಕ್ಕೆ ಮೊದಲು ಈ ಮೂರೂ ಶಬ್ದಗಳ ಅರ್ಥವನ್ನು ತಿಳಿದುಕೊಳ್ಳುವುದು ಅವಶ್ಯಕ. ಪ್ರಕೃತಿಯ ವಿಚಾರ ಮಾಡೋಣ. ಪ್ರಕೃತಿ ಎಂಬ ಗುಣವನ್ನು ಪಡೆದು, ಯಾವುದೇ ಜೀವವಿರುವ ವಸ್ತು ಹುಟ್ಟುವುದು. ನಿರ್ಜೀವ ವಸ್ತುಗಳಿಗೂ ಪ್ರಕೃತಿ ಎನ್ನುವುದು ಇರುತ್ತದೆ. ಆದರೆ ಅದರ ವಿಚಾರ ಮಾಡುವುದು ಇಲ್ಲಿ ನಮ್ಮ ಉದ್ದೇಶವಲ್ಲ. ನಾವು ಪೂರ್ವಜನ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಜನ್ಮದಲ್ಲಿ ನಮಗೆ ಯಾವ ಪ್ರಕೃತಿ ಸಿಗುತ್ತದೋ ಅದು ನಮ್ಮ ಪೂರ್ವಜನ್ಮದ ಸಂಚಿತ ಕರ್ಮಗಳ ಪರಿಣಾಮ. ಇದು ನಮ್ಮ ಮೂಲ ಪ್ರಕೃತಿ. ಇದರಲ್ಲಿ ಬದಲಾವಣೆ ಆಗುವುದಿಲ್ಲ. ಹೊರಗಿನ ವಾತಾವರಣ ಹಾಗೂ ಸಮಾಜದ ಪರಿಸ್ಥಿತಿಗಳು ಪ್ರಕೃತಿಯನ್ನು ಅವಶ್ಯಕವಾಗಿ ಪ್ರಭಾವಿತಗೊಳಿಸುತ್ತವೆ. ಆದರೆ ಆಮೂಲ ಬದಲಾವಣೆ ಮಾಡಲಾರವು. ವಿಕೃತಿಯ ಮೂಲ ಎಲ್ಲಿ? ಪ್ರತ್ಯೇಕ ವ್ಯಕ್ತಿಗೆ ತನ್ನ ಸ್ವತಂತ್ರ ಪ್ರಕೃತಿ ಇರುತ್ತದೆ. ಅವನು ತನ್ನ ಪ್ರಕೃತಿಗೆ ಅನುರೂಪವಾಗಿ ವಿಕಸಿಸಿಯೇ ಜೀವನದಲ್ಲಿ ಉನ್ನತಿ ಪಡೆಯುತ್ತಾನೆ. ಒಂದು ವೇಳೆ ಯಾವ ವ್ಯಕ್ತಿಯಲ್ಲಾದರೂ ಸಾಹಿತ್ಯಿಕ ಪ್ರತಿಭೆ ಇದ್ದರೆ ಅವನು ಒಬ್ಬ ಸಫಲ ಕವಿ ಅಥವಾ ಸಾಹಿತ್ಯಕಾರನೇ ಆಗುತ್ತಾನೆ. ಇಂಜಿನಿಯರ್ ಅಥವಾ ವಿಜ್ಞಾನಿ ಅಲ್ಲ. ಇದೇ ರೀತಿ ಶಿಲ್ಪ ಅಥವಾ ವಿಜ್ಞಾನದಲ್ಲಿ ಅಭಿರುಚಿ ಇಟ್ಟುಕೊಂಡಿರುವವನು ಸಫಲ ಮಧ್ಯಪ್ರದೇಶದ ಪತ್ರ 291 ಸಾಹಿತಿ ಆಗುವುದಿಲ್ಲ. ಆದ್ದರಿಂದ ಕವಿ ಜನ್ಮದಿಂದಲೇ ಕವಿಯಾಗಿರುತ್ತಾನೆ, ಕವಿಯನ್ನು ನಿರ್ಮಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಒಂದು ವೇಳೆ ಯಾವ ವ್ಯಕ್ತಿಯಾದರೂ ತನ್ನ ಸ್ವಾಭಾವಿಕ ಪ್ರವೃತ್ತಿಗೆ ವಿರುದ್ಧ ದಿಕ್ಕಿನಲ್ಲಿ ಮುಂದುವರಿಯಲು ಪ್ರಯತ್ನಿಸಿದರೆ ಅದರಿಂದ ವಿಕೃತಿಯ ಜನ್ಮವಾಗುತ್ತದೆ. ಭಾರತದ ಆಧ್ಯಾತ್ಮಿಕ ಪ್ರವೃತ್ತಿ ಪ್ರತ್ಯೇಕ ವ್ಯಕ್ತಿಯ ಪ್ರಕೃತಿ ಹೇಗೆ ಭಿನ್ನವಾಗಿರುತ್ತದೋ ಹಾಗೆಯೇ ಪ್ರತ್ಯೇಕ ರಾಷ್ಟ್ರದ ಪ್ರಕೃತಿಯೂ ಭಿನ್ನವಾಗಿರುತ್ತದೆ. ಭಾರತಕ್ಕೂ ತನ್ನದೇ ಆದ ಒಂದು ಪ್ರಕೃತಿ ಇದೆ. ನಮ್ಮ ಇತಿಹಾಸದ ಅಧ್ಯಯನ ಮಾಡಿದರೆ, ರಾಜಮಹಾರಾಜರು ಅಥವಾ ಲಕ್ಷ್ಮಿಪುತ್ರರಿಗೆ ಹೋಲಿಸಿದರೆ ಋಷಿಮುನಿಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ದೊಡ್ಡ ದೊಡ್ಡ ರಾಜರುಗಳೂ ಸಹ ಮಹರ್ಷಿಗಳ ಮುಂದೆ ನತಮಸ್ತಕರಾಗುತ್ತಾರೆ. ನಮ್ಮ ರಾಷ್ಟ್ರದ ಭೂಮಿ ಪ್ರಕೃತಿ ಆಧ್ಯಾತ್ಮ ಪ್ರಧಾನವಾಗಿದೆ. ನಾವು ಭೌತಿಕ ಸಮೃದ್ಧಿಯ ಆಕರ್ಷಕ ಘೋಷಣೆಯ ಮರೆಯಲ್ಲಿ ಇದನ್ನು ಬದಲಾಯಿಸುವುದಿಲ್ಲ. ಒಂದು ವೇಳೆ ನಾವು ನಮ್ಮ ಮೂಲಪ್ರಕೃತಿಯ ಅವಹೇಳನವನ್ನು ಮಾಡಿ ಮುಂದುವರೆಯುವ ಪ್ರಯತ್ನ ಮಾಡಿದರೆ ನಮ್ಮ ರಾಷ್ಟ್ರ ಜೀವನದಲ್ಲಿ ಅನೇಕ ಪ್ರಕಾರದ ವಿಕೃತಿಗಳು ಹುಟ್ಟುತ್ತವೆ. ನಾವು ಭೌತಿಕತೆಯ ವಿಚಾರ ಮಾಡಲಿಲ್ಲ ಎಂದು ಹೇಳುತ್ತಿಲ್ಲ. ಕಳೆದು ಹೋದ ದಿನಗಳಲ್ಲಿ ನಮ್ಮಲ್ಲಿ ಅನಂತ ಭೌತಿಕ ಸಮೃದ್ಧಿ ಇತ್ತು. ಇದೇ ಸಮೃದ್ಧಿಯಿಂದ ಆಕರ್ಷಿತರಾಗಿ ವಿದೇಶೀ ಆಕ್ರಮಣಕಾರಿಗಳು ಇಲ್ಲಿಗೆ ಬಂದರು. ಅವರು ಮನಸ್ಸಿಗೆ ಬಂದಂತೆ ಆವುಗಳನ್ನು ಲೂಟಿಮಾಡಿದರು. ನಾವು ಭೌತಿಕತೆಯನ್ನು ದುರ್ಲಕ್ಷಿಸಲಿಲ್ಲ. ಆದರೆ ನಮ್ಮ ಮನೋವೃತ್ತಿಗಳು ಧರ್ಮ, ಆಧ್ಯಾತ್ಮಿಕತೆ ಅಥವಾ ದೇಶ ಚಿಂತನೆಯಲ್ಲಿ ಹೆಚ್ಚಾಗಿ ರಮಿಸಿದವು. ದುರ್ಭಾಗ್ಯದಿಂದ ನಮ್ಮ ರಾಷ್ಟ್ರಜೀವನ ತಮ್ಮ ಮೂಲ ಪ್ರಕೃತಿಯಿಂದ ದೂರ ಸರಿಯುತ್ತಿದೆ. ನಮ್ಮ ಏಕಾಂಗಿ ಭೌತಿಕ ಪ್ರಗತಿಯ ಓಟದಲ್ಲಿ ಮುಖಂಡತ್ವವನ್ನು ಪಡೆಯುವುದಕ್ಕೆ ವ್ಯಗ್ರರಾಗಿರುವಂತೆ ಕಂಡುಬರುತ್ತದೆ. ಪರಿಣಾಮ ಸ್ವರೂಪವಾಗಿ, ಸಂಕೀರ್ಣ ಪ್ರಾದೇಶಿಕತೆ, ಅಸಭ್ಯತೆ, ಭಾಷಾವಾದ ಮುಂತಾದುವು ಅನೇಕ ರೂಪಗಳಲ್ಲಿ ವಿಕೃತಿಗಳು ನಮ್ಮ ರಾಷ್ಟ್ರ ಜೀವನದಲ್ಲಿ ಬಂದಿವೆ. ನಮ್ಮ ರಾಷ್ಟ್ರದ ಇತಿಹಾಸ ಋಷಿಮುನಿಗಳ ಸಾಧನೆಯ ತಪಶ್ಚರ್ಯೆಯ ಹಾಗೂ ತ್ಯಾಗಮಯ ಜೀವನದ ಇತಿಹಾಸ. ವಿಶ್ವವಿಜಯ ಆಸೆಯನ್ನು ಹೊತ್ತು ಬರುವ ಸಿಕಂದರನ ಸೋಲಿನ ಇತಿವೃತ್ತ ನಮ್ಮ ಪುರಾಣಗಳಲ್ಲಿ ಎಲ್ಲಿಯೂ ಸಿಗುವುದಿಲ್ಲ. ರಾಜಾ ಜನಕ, ಹರಿಶ್ಚಂದ್ರ, ಶಿಬಿ ಅಥವಾ ಯುಧಿಷ್ಠಿರನಂತಹ ಆದರ್ಶ ರಾಜರುಗಳ ವರ್ಣನೆಗಳು ಪ್ರಾಪ್ತವಾಗಿವೆ. 292 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಇಂದು ದೇಶದಲ್ಲಿ ರಾಷ್ಟ್ರೀಯ ಏಕತೆಯನ್ನು ಪ್ರತಿಷ್ಠಾಪಿಸುವ ಸಂಭ್ರಮ ಕಾಣಿಸುತ್ತಿದೆ. ಆದರೆ ಮೇಲೆ ಮೇಲೆ ಸಾರಣೆ ಮಾಡಿ ದೈನಂದಿನದ ಮೂಲಕಾರಣವನ್ನು ಉಪೇಕ್ಷಿಸಿದರೆ ರಾಷ್ಟ್ರೀಯ ಏಕತೆ ಹುಟ್ಟುವ ಜಾಗದಲ್ಲಿ ಭೇದಭಾವದ ಕಂದಕವೇ ಹೆಚ್ಚಾಗುತ್ತದೆ ಮತ್ತು ನಮ್ಮ ಮುಖಂಡರು ಏನು ಮಾಡಬೇಕೆಂದು ತಿಳಿಯದಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತೀಯ ರಾಷ್ಟ್ರದ ಪ್ರಕೃತಿ ಸಂಸ್ಕೃತಿಯ ವಿಚಾರ ಮಾಡುವುದರೊಂದಿಗೆ ರಾಷ್ಟ್ರದಲ್ಲಿ ವಿಕೃತಿ ಹುಟ್ಟುವ ಕಾರಣಗಳ ಸಮ್ಯಕ್ ವಿಶ್ಲೇಷಣೆಯನ್ನು ವಿದ್ವಾನ್ ಲೇಖಕರ ಮೂಲಕ ಮಾಡಲಾಗಿದೆ. ಇದರಿಂದ ಉಪಯೋಗವಾಗುತ್ತದೆಂದು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ರಾಷ್ಟ್ರದ ಬಗ್ಗೆ ಅಚಲ ಶ್ರದ್ಧೆ ನಮ್ಮ ರಾಷ್ಟ್ರಜೀವನದ ವಿಚಾರ ಮಾಡುವುದಕ್ಕಿಂತ ಮುಂಚೆ `ರಾಷ್ಟ್ರ' ಶಬ್ದದ ಬಗ್ಗೆ ಸ್ವಲ್ಪ ವಿಚಾರಮಾಡುವುದು ಸರಿಯಾದ ವಿಚಾರ. ಚೀನ ರಾಷ್ಟ್ರ ಶಬ್ದದ ಶಾಸ್ತ್ರೀಯ ವ್ಯಾಖ್ಯೆಯನ್ನು ಮಾಡುವುದಕ್ಕೆ ತೊಡಗದಿದ್ದರೂ ಇಷ್ಟರಮಟ್ಟಿಗೆ ಒಪ್ಪಬೇಕಾಗುತ್ತದೆ. ಯಾವುದೆಂದರೆ ರಾಷ್ಟ್ರವಾಗುವುದಕ್ಕೆ ಒಂದು ಭೂಮಿ ವಿಶೇಷದಲ್ಲಿ ವಾಸವಿರುವ ಜನರ ಹೃದಯಲ್ಲಿ ಅದರ ವಿಷಯದಲ್ಲಿ ಅವಿಚಲ ಶ್ರದ್ಧೆಯ ಭಾವನೆ ಇರುವುದು ಅವಶ್ಯಕ. ರಾಷ್ಟ್ರ ಕೇವಲ ನದಿಗಳು, ಬೆಟ್ಟಗಳು, ಮೈದಾನಗಳು ಅಥವಾ ಕಲ್ಲುಗಳ ರಾಶಿಗಳಿಂದ ಆಗುವುದಿಲ್ಲ. ಇದು ಕೇವಲ ಭೌತಿಕ ಅಸ್ತಿತ್ವವಲ್ಲ. ಇದಕ್ಕಾಗಿ ದೇಶದಲ್ಲಿರುವ ಜನರ ಹೃದಯಗಳಲ್ಲಿ ಅದರ ಬಗ್ಗೆ ಅಸೀಮ ಶ್ರದ್ಧೆಯ ಅನುಭೂತಿ ಇರುವುದು ಪ್ರಥಮ ಅವಶ್ಯಕತೆ. ಇದೇ ಶ್ರದ್ಧೆಯ ಭಾವನೆಯ ಕಾರಣದಿಂದ ನಾವು ನಮ್ಮ ದೇಶವನ್ನು ಮಾತೃಭೂಮಿ ಎನ್ನುತ್ತೇವೆ. ಶ್ರದ್ಧೆಯ ಆಧಾರ ಏನು ? ಮಾತೃಭೂಮಿಯ ಬಗ್ಗೆ ಶ್ರದ್ಧೆಯ ಕೆಲವು ಆಧಾರಗಳಿವೆ. ಅನೇಕ ವರ್ಷಗಳವರೆಗೆ ಒಂದು ದೇಶದಲ್ಲಿ ಇರುವ ಕಾರಣದಿಂದ ಒಂದು ಸಹಚರ್ಯ ಹಾಗೂ ಆತ್ಮೀಯತೆಯ ಭಾವನೆ ಹುಟ್ಟುತ್ತದೆ. ನಿಧಾನವಾಗಿ ರಾಷ್ಟ್ರದ ಒಂದು ಇತಿಹಾಸವಾಗುತ್ತದೆ. ಕೆಲವು ವಿಷಯಗಳು ರಾಷ್ಟ್ರೀಯ ಗೌರವದ ವಿಷಯಗಳಾದರೆ, ಮತ್ತೆ ಕೆಲವು ನಾಚಿಕೆಗೆ ಕಾರಣವಾಗುತ್ತವೆ. ಮಹಮದ್‍ಗೋರಿ ಅಥವಾ ಮಹಮದ್ ಗಜ್ನಿ ಭಾರತದ ಮೇಲೆ ಆಕ್ರಮಣ ಮಾಡಿದರು. ಈ ಘಟನೆಯ ಬಗ್ಗೆ ನಾವು ವಿಚಾರ ಮಾಡಿದ್ದೇ ಆದರೆ ಸ್ವಭಾವತಃ ನಮ್ಮ ಮನಸ್ಸಿನಲ್ಲಿ ಆಕ್ರೋಶ ಹುಟ್ಟುತ್ತದೆ. ನಮ್ಮ ಆತ್ಮೀಯತೆ ಪೃಥ್ವಿರಾಜ್ ಹಾಗೂ ಈ ದೇಶದ ಬೇರೆ ಶಾಸಕರ ವಿಷಯದಲ್ಲಿ ಇರುತ್ತದೆ. ಒಂದು ವೇಳೆ ಯಾರಿಗಾದರೂ ಆತ್ಮೀಯತೆ ನಮ್ಮ ದೇಶಬಾಂಧವರ ಮಧ್ಯಪ್ರದೇಶದ ಪತ್ರ 293 ಬಗ್ಗೆ ಅಲ್ಲದೆ ಬೇರೆ ಆಕ್ರಮಣಕಾರಿಗಳ ಬಗ್ಗೆ ಇದ್ದರೆ ಆ ವ್ಯಕ್ತಿಯಲ್ಲಿ ಆತ್ಮೀಯತೆಯ ಭಾವನೆ ಇಲ್ಲ ಎಂದು ಒಪ್ಪಬೇಕಾಗುತ್ತದೆ. ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ, ಅಥವಾ ಗುರುಗೋವಿಂದ ಸಿಂಹರನ್ನು ಎಂದು ನಾವು ಸ್ಮರಿಸುತ್ತೀವೋ ನಮ್ಮ ಮನಸ್ಸು ಅವರ ವಿಷಯದಲ್ಲಿ ಗೌರವ ಶ್ರದ್ಧೆಗಳಿಂದ ಬಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಾವು ಜೌರಂಗಜೇಬ ಅಲ್ಲಾವುದ್ದೀನ್, ಕ್ಲೈವ್ ಅಥವಾ ಡಾಲ್‍ಹೌಸಿ ಹೆಸರುಗಳನ್ನು ಜ್ಞಾಪಿಸಿಕೊಂಡರೆ ಅವರ ವಿಷಯದಲ್ಲಿ ವಿದೇಶೀ ಆಕ್ರಮಣಕಾರಿಗಳ ಬಗ್ಗೆ ಯಾವ ಭಾವನೆಗಳು ಹುಟ್ಟುತ್ತವೆಯೋ ಅವೇ ಭಾವನೆಗಳು ಹುಟ್ಟುತ್ತವೆ. ಈ ರೀತಿ ಒಂದು ಪ್ರದೇಶ ವಿಶೇಷದಲ್ಲಿರುವಾಗ ಯಾರ ಹೃದಯದಲ್ಲಿ ಮಾತೃಭೂಮಿಯ ವಿಷಯದಲ್ಲಿ ಅಸಂಧಿಗ್ಧತ ಭಾವನೆ ಇರುವುದೋ ಯಾರ ಜೀವನಾದರ್ಶಗಳಲ್ಲಿ ಸಾಮ್ಯ ಇರುತ್ತದೆಯೋ, ಜೀವನದ ವಿಷಯದಲ್ಲಿ ಒಂದು ವಿಶಿಷ್ಟ ದೃಷ್ಟಿ ಇರುವುದೋ ಶತ್ರುಮಿತ್ರರು ಸಮಾನರೋ, ಐತಿಹಾಸಿಕ ಪುರುಷರು ಒಂದೇ ಆಗಿರುತ್ತಾರೋ ಅವರಿಂದ ರಾಷ್ಟ್ರದ ನಿರ್ಮಾಣವಾಗುತ್ತದೆ. ಮೂಲ ಧಾರೆಯಿಂದ ಬೇರೆಯಾದರೆ ವಿಕೃತಿ ಹುಟ್ಟೀತು ನಮ್ಮ ರಾಷ್ಟ್ರಜೀವನದ ಪ್ರವಾಹ ಸಾವಿರಾರು ವರ್ಷಗಳಿಂದ ಹರಿಯುತ್ತಿದೆ. ಇದರಲ್ಲಿ ಅನೇಕ ಪ್ರಕಾರದ ವಿವಿಧತೆಯ ಧಾರೆಗಳು ಬಂದು ಸೇರಿವೆ. ಹೇಗೆ ಗಂಗೆಯಲ್ಲಿ ಅನೇಕ ಸಣ್ಣಪುಟ್ಟ ಧಾರೆಗಳು ಬಂದು ಸೇರುತ್ತವೆಯೋ, ಆದರೆ ಅವು ಬಂದ ಸೇರಿದ ಮೇಲೆ ಗಂಗೆಯ ಅಖಂಡ ಪ್ರವಾಹದಲ್ಲಿ ಐಕ್ಯವಾಗುತ್ತವೆಯೋ ಅದೇ ರೀತಿ ನಮ್ಮ ರಾಷ್ಟ್ರಜೀವನದ ಪ್ರವಾಹದಲ್ಲಿ ಸಹ ಶಕ, ಹೂಣ ಮುಂತಾದ ಅನೇಕ ಜಾತಿಗಳು ಬಂದು ಸೇರಿವೆ ಮತ್ತು ಐಕ್ಯವಾಗಿವೆ. ಒಂದು ವೇಳೆ ಯಾವುದಾದರೂ ಚೌತಿ ಈ ಮೂಲಜೀವನ ಪ್ರವಾಹದಿಂದ ಬೇರೆಯಾಗುವ ಪ್ರಯತ್ನ ಮಾಡಿದರೆ ಅದರಿಂದ ವಿಕೃತಿಯ ಜನ್ಮವಾಗುತ್ತದೆ. ವಿವಿಧತೆಯಲ್ಲಿ ಏಕತೆ ನಮ್ಮ ರಾಷ್ಟ್ರ ಜೀವನ ಒಂದು ವಿಸ್ತೃತ ಭೂಪ್ರದೇಶದಲ್ಲಿ ವ್ಯಾಪಿಸಿದೆ. ಇದರಲ್ಲಿ ಅನೇಕ ರೀತಿಯ ವಿವಿಧತೆಗಳಿವೆ, ಈ ವಿವಿಧತೆ ಸ್ವಾಭಾವಿಕ. ಇದರಿಂದ ನಮ್ಮ ಜೀವನದಲ್ಲಿ ಸೌಂದರ್ಯದ ಭಾವನೆ ಬಲಗೊಳ್ಳುತ್ತದೆ. ಹೇಗೆ ವಿವಿಧ ರೀತಿಯ ಹೂವುಗಳಿಂದಲೂ ಒಂದು ಸುಂದರ ಮಾಲೆಯನ್ನು ಹೆಣೆಯಬಹುದೋ ಹಾಗೆಯೇ ವಿವಿಧತೆಗಳ ಒಂದು ವಿಶಿಷ್ಟ ಮಾಧ್ಯಮಗಳ ಮೂಲಕ ಸಮನ್ವಯವನ್ನು ಸ್ಥಾಪಿಸಬಹುದು. ಜೀವನದ ಬಗ್ಗೆ ಆಧ್ಯಾತ್ಮಿಕ ದೃಷ್ಟಿಯೇ ಆ ಸಮನ್ವಯದ ಮಾಧ್ಯಮ. ಆದರೆ ಆ ಸಮನ್ವಯ ಸಮಾನ ಪ್ರಕೃತಿಯ ವಸ್ತುಗಳಲ್ಲಿ ಮಾತ್ರ ಆಗಬಲ್ಲುದು. 294 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆದರೆ ಅದರಲ್ಲಿ ಕಲ್ಲು ಸೇರಿಸಿದರೆ ವಿಕೃತಿ ಹುಟ್ಟುತ್ತದೆ. ಶರೀರದಲ್ಲಿ ಹುಣ್ಣು ಎದ್ದರೆ ಅದರ ಆಪರೇಷನ್ ಮಾಡಬೇಕಾಗುವುದು. ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರ ಅರ್ಥ ನಮ್ಮನ್ನು ನಾವೇ ವಿಕಾರವಶರೂ ಅಥವಾ ಅಸ್ವಸ್ಥರನ್ನಾಗಿ ಮಾಡಿಕೊಳ್ಳುವುದು. ರಾಷ್ಟ್ರದ ಜೀವನದಲ್ಲಿಯೂ ಈ ಸಿದ್ಧಾಂತವೇ ಅನ್ವಯಿಸುತ್ತದೆ. ನಮ್ಮ ಭಾಷೆಗಳು ಭಿನ್ನವಾಗಿರಬಹುದು. ಉಪಾಸನಾ ಪದ್ಧತಿ ಭಿನ್ನವಾಗಿರಬಹುದು. ವೇಷಭೂಷಣಗಳಲ್ಲಿ ವ್ಯತ್ಯಾಸ ಇರಬಹುದು, ತಿಂಡಿತೀರ್ಥಗಳಲ್ಲಿ ಭಿನ್ನತೆ ಇರಬಹುದು, ಇರಸರಿಕೆ ವಿಧಾನಗಳಲ್ಲಿ ಅಂತರ ಇರಬಹುದು, ಪದ್ಧತಿ ಪರಂಪರೆಗಳು ಬೇರೆ ಇರಬಹುದು ಈ ಎಲ್ಲ ರೀತಿಯ ವಿವಿಧತೆಗಳಲ್ಲಿಯೂ ಸಮನ್ವಯವನ್ನು ಸಾಧಿಸಬಹುದಾಗಿದೆ. ಒಂದು ವೇಳೆ ನಮ್ಮ ಅಂತಃಕರಣದಲ್ಲಿ ಮಾತೃಭೂಮಿಯ ವಿಷಯದಲ್ಲಿ ಅಚಲ ಶ್ರದ್ಧೆ ಇದ್ದರೆ, ನಮ್ಮ ಹೃದಯದ ತಂತಿಗಳು, ಸಮಾನ ಆದರ್ಶಗಳು ಹಾಗೂ ಜೀವನಮೌಲ್ಯಗಳಿಂದ ಝೇಂಕೃತವಾಗುವುದೇ ಆದರೆ ಸಮನ್ವಯವನ್ನು ಸಾಧಿಸುವುದು ಕಠಿಣವಾದ ಕೆಲಸವಲ್ಲ. ಶ್ರದ್ಧೆಯ ಈ ಭಾವನೆ ಇಲ್ಲದಿದ್ದರೆ ಎಲ್ಲ ಭಿನ್ನತೆಗಳು ವಿಚ್ಛೇದನೆಗೆ ಜನ್ಮಕೊಡುತ್ತವೆ. ಸಮನ್ವಯದ ಕಾರಣದಿಂದಲೇ ಸಂಘರ್ಷವಿಲ್ಲ ಸಮನ್ವಯದ ಭಾವನೆಯನ್ನು ಬಲಗೊಳಿಸುವುದಕ್ಕೆ ಸಹಿಷ್ಣುತೆ ಇರುವುದು ಅವಶ್ಯಕ. ಸಹಿಷ್ಣುತೆ ಭಾರತೀಯ ಸಂಸ್ಕೃತಿಯ ಬಹಳ ದೊಡ್ಡ ವಿಶೇಷತೆ. ಈ ವಿಶೇಷತೆಯ ಕಾರಣದಿಂದಲೇ ಇಲ್ಲಿ ಅನೇಕ ಸಂಪ್ರದಾಯಗಳು ನಡೆದುವು. ಯಾರಾದರೂ ಶಿವನ ಉಪಾಸನೆ ಮಾಡಲು ಅಥವಾ ವಿಷ್ಣುವಿನ ಶಕ್ತಿಯ ಆರಾಧನೆ ಮಾಡಲು ಅಥವಾ ಗಣಪತಿಯನ್ನು ಪೂಜಿಸಲು ಯಾವ ಸಂಘರ್ಷವೂ ಆಗಲಿಲ್ಲ. ನಮ್ಮ ಆದರ್ಶ ಯುರೋಪಿನ ದೇಶಗಳಲ್ಲಿ ಧರ್ಮದ ಹೆಸರಿನಲ್ಲಿ ಯಾವ ರಕ್ತಪಾತ ಸಂಘರ್ಷ ನಡೆಯಿತೋ ಆ ರೀತಿಯ ಸಂಘರ್ಷ ಇಲ್ಲಿ ಆಗಲಿಲ್ಲ. ಈ ಪೈಗಂಬರ್ ಅಥವಾ ಈ ಪುಸ್ತಕವನ್ನು ಒಪ್ಪಿಕೊಂಡರೆ ಸ್ವರ್ಗ ಸಿಗುತ್ತದೆ ಮತ್ತು ಒಪ್ಪಿಕೊಳ್ಳದಿದ್ದರೆ ನರಕ ಎಂದು ನಾವು ಹೇಳುವುದಿಲ್ಲ. ಈ ಧಾರ್ಮಿಕ ಅಸಹಿಷ್ಣುತೆ ಭಾರತದ ಪ್ರಕೃತಿ ಅಲ್ಲ. ಯಾರ ಧರ್ಮವನ್ನಾದರೂ ಬಲವಂತವಾಗಿ ಬದಲಾಯಿಸುವುದು ನಮ್ಮ ಪರಂಪರೆ ಅಲ್ಲ. ಎಲ್ಲರೂ ತಮ್ಮ ತಮ್ಮ ಸ್ವಭಾವದಿಂದ ಪಡೆದುಕೊಂಡ ಧರ್ಮವನ್ನು ಆಚರಿಸಿ ಸಿದ್ಧಿಯನ್ನು ಪಡೆದುಕೊಳ್ಳಬೇಕು. ನಮ್ಮ ದೃಷ್ಟಿಕೋನವು ಇದೇ ಆಗಿತ್ತು. ನಾವು ಸಾಧಕನ ಮನಃಸ್ಥಿತಿ, ಯೋಗ್ಯತೆ ಮತ್ತು ಪರಿಸ್ಥಿತಿಯ ವಿಚಾರಮಾಡಿ ಅದರ ಸಲುವಾಗಿ ಸಿದ್ಧಿಮಾರ್ಗವನ್ನು ನಿಶ್ಚಯಿಸಿದೆವು. ಯಾವುದರಲ್ಲಿ ಜ್ಞಾನದ ಪ್ರಖರತೆ ಮಧ್ಯಪ್ರದೇಶದ ಪತ್ರ 295 ಇದೆಯೋ, ಆ ಜ್ಞಾನಮಾರ್ಗವನ್ನು ಅವಲಂಬಿಸಿ ಗುರಿಯನ್ನು ಸಾಧಿಸೋಣ. ಜ್ಞಾನಕ್ಕೆ ಸಮನಾದ ಪವಿತ್ರ ಗುರಿ ಬೇರೊಂದಿಲ್ಲ. ಹೀಗೆ ಹೇಳಿ ಈ ಮಾರ್ಗದ ಪ್ರತಿಪಾದನೆಯನ್ನು ಮಾಡಲಾಯಿತು. ಭಾವುಕ ಹೃದಯಗಳಿಗೆ, ಭಕ್ತಮಾರ್ಗದ ಅನುಸರಣೆ ಮಾಡುವುದು ಸರಿ ಎಂದು ಹೇಳಲಾಯಿತು. ಭಕ್ತನು ತರ್ಕದಿಂದ ಅಲ್ಲ ಶ್ರದ್ಧೆಯಿಂದ ಭಗವಂತನನ್ನು ಪಡೆಯಬಲ್ಲ. ಯಾರಲ್ಲಿ ಕರ್ಮದ ಪ್ರಾಬಲ್ಯವಿದೆಯೋ ಅವನು ನಿಷ್ಕಾಮ ಭಾವದಿಂದ ಕರ್ಮಯೋಗಿ ಆಗಲಿ. ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗದಲ್ಲಿ ಇರುವವರಿಂದಲೂ ಕರ್ಮಮಾರ್ಗದ ವಿಶಿಷ್ಟತೆಯನ್ನು ಸ್ವೀಕರಿಸಲಾಯಿತು. ಜ್ಞಾನ, ಭಕ್ತಿ ಹಾಗೂ ಕರ್ಮದ ಸರಿಯಾದ ಸಮನ್ವಯದ ಆದರ್ಶವನ್ನು ಪ್ರಸ್ತಾಪಿಸಲಾಯಿತು. ಜ್ಞಾನರಹಿತ ಭಕ್ತಿ ತೋರಿಕೆ, ಕರ್ಮ ರಹಿತ ಜ್ಞಾನವ್ಯರ್ಥ, ಭಕ್ತಿರಹಿತ ಕರ್ಮ ನೀರಸವಾಗುತ್ತದೆ ಮತ್ತು ಜ್ಞಾನರಹಿತ ಕರ್ಮ ಕುರುಡಾಗಿರುತ್ತದೆ. ಈ ರೀತಿ ಭಕ್ತಿ ಸಮನ್ವಿತ, ಜ್ಞಾನಯುಕ್ತ, ನಿಷ್ಕಾಮ ಕರ್ಮವೇ ನಮ್ಮ ಆದರ್ಶವಾಗಿದೆ. ವಿವೇಕಾನಂದರ ಉದಾಹರಣೆ ಕೆಲವರು ಎಲ್ಲಕ್ಕಿಂತ ಮೊದಲು ಮಾನವತೆಯ ವಿಚಾರ ಮಾಡುವ ಮಾತನಾಡುತ್ತಾರೆ. ಅವರ ದೃಷ್ಟಿಯಲ್ಲಿ ಒಂದು ದೇಶ ಅಥವಾ ರಾಷ್ಟ್ರದ ವಿಚಾರಮಾಡುವುದು ಸಂಕೀರ್ಣತೆ. ಆದರೆ ಈ ದೃಷ್ಟಿಕೋನ ಶುದ್ಧವಾಗಿಲ್ಲ. ದೇಶಭಕ್ತಿ ಮತ್ತು ಮಾನವತೆಯ ಸೇವೆಯಲ್ಲಿ ಎಲ್ಲಿಯೂ ಯಾವ ವಿರೋಧವೂ ಇಲ್ಲ. ಮಾನವತೆಯ ಸೇವೆ ಮಾಡುವುದಕ್ಕೆ ದೇಶಭಕ್ತಿ ಪ್ರಥಮ ಮೆಟ್ಟಿಲು. ಯಾರಿಗೆ ತನ್ನ ಜನನಿ ಮತ್ತು ಜನ್ಮಭೂಮಿಯ ವಿಷಯದಲ್ಲಿ ಪ್ರೀತಿ ಇಲ್ಲವೋ ಅವನು ಮಾನವತೆಗೆ ಏನು ಸೇವೆ ಮಾಡುತ್ತಾನೆ? ಯಾವ ವ್ಯಕ್ತಿ ಸ್ತ್ರೀ ಮಾತ್ರಳನ್ನು ತಾಯಿ ಎಂದು ತಿಳಿದು ಎಲ್ಲರ ಸೇವೆ ಮಾಡುವ ಪ್ರಯತ್ನ ಮಾಡುತ್ತಾ, ತನ್ನ ತಾಯಿಯ ಸೇವೆಯನ್ನು ಸಂಕೀರ್ಣತೆ ಎಂದು ಹೇಳಿದರೆ ಅದಕ್ಕೆ ಏನು ಹೇಳಬೇಕು? ಎಲ್ಲರ ಸೇವೆ ಮಾಡುತ್ತಾ ಇದ್ದರೂ ತನ್ನ ತಾಯಿಯಂತೂ ತನ್ನ ತಾಯಿಯೇ ಆಗಿರುತ್ತಾಳೆ. ತಾಯಿಯ ಯಾವ ಸ್ವಾಭಾವಿಕ ಸ್ನೇಹ ತನ್ನ ಕಡೆಯಿಂದ ಮಕ್ಕಳ ವಿಷಯದಲ್ಲಿ ಇರುವುದೋ ಅದೇ ರೀತಿ ಬೇರೆ ಯಾವುದೇ ಸ್ತ್ರೀಯ ಮಕ್ಕಳ ವಿಷಯದಲ್ಲಿ ಇರಲು ಸಾಧ್ಯವಿಲ್ಲ. ಯಶೋಧೆಯಂತಹ ತಾಯಿ ಈ ದೃಷ್ಟಿಯಿಂದ ಅಪವಾದವಾಗುತ್ತಾಳೆ. ಆದರೆ ಸಾಮಾನ್ಯ ಜಗತ್ತಿನಲ್ಲಿ ಇಂಥ ತಾಯಿ ದುರ್ಲಭವಾಗಿರುತ್ತಾಳೆ. ಯಾವ ವ್ಯಕ್ತಿ ತನ್ನ ತಾಯಿಯನ್ನು ಸಂಕಟದ ಸ್ಥಿತಿಯಲ್ಲಿ ನೋಡಿಯೂ ಬೇರೆಯ ತಾಯಂದಿರ ಸೇವೆ ಮಾಡುತ್ತಾ ತಿರುಗಾಡುತ್ತಾನೋ ಅವನು ಎಷ್ಟೇ ವಾದ ಸಂವಾದದಿಂದ ಅನುಪ್ರೇರಿತನಾಗಿದ್ದರೂ ವ್ಯಾವಹಾರಿಕತೆಗೆ 296 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪ್ರತಿಕೂಲವೆಂದೇ ತಿಳಿಯಲಾಗುತ್ತದೆ. ತನ್ನ ತಾಯಿ ಕುರೂಪಿಯೋ ಅಥವಾ ಸುಂದರಿಯೋ ಇದರ ವಿಚಾರ ಮಾಡಲಾಗುವುದಿಲ್ಲ. ಇವಳು ನನ್ನ ತಾಯಿ ಎಂಬ ಸಂಬಂಧದಿಂದಲೇ ವಂದನೀಯಳು, ಆದರಣೀಯಳು ಮತ್ತು ಅಭಿನಂದನೀಯಳು. ಒಂದು ವೇಳೆ ತಾಯಿಯ ಸ್ವಾಭಿಮಾನಕ್ಕೆ ಏಟು ಬಿದ್ದರೆ ಅವಳ ಮಗ ತಾಯಿಯ ಯಾವುದೋ ಅಂಗದ ಉಪಯುಕ್ತತೆಯ ವಿಚಾರ ಮಾಡಿ ಅವಳ ಸ್ವಾಭಿಮಾನಕ್ಕೆ ಏಟು ಬೀಳಿಸುವ ನಿಮಿತ್ತವನ್ನು ದೂರಮಾಡುವುದಿಲ್ಲ. ತಾಯಿಯ ಅಂಗಗಳ ಉಪಯುಕ್ತತೆ ಮತ್ತು ಅನುಪಯುಕ್ತತೆ ವಿಚಾರವೇ ಮಾತೃಭಕ್ತಿಯ ಭಾವನೆಗೆ ವಿರೋಧವಾಗಿದೆ. ನಮ್ಮ ಪ್ರಧಾನಮಂತ್ರಿಗಳು ಹೇಳುವುದೇನೆಂದರೆ ಚೀನಾ ಯಾವ ಭೂಮಿಯ ಮೇಲೆ ಅಧಿಕಾರ ಜಮಾಯಿಸಿತೋ ಅದು ಬಂಜರು, ಜನಶೂನ್ಯ, ಅಲ್ಲಿ ಹುಲ್ಲು ಹುಟ್ಟುವುದಿಲ್ಲ. ಆದ್ದರಿಂದ ಅದಕ್ಕಾಗಿ ಯುದ್ಧ ಮಾಡುವುದಕ್ಕೆ ಆಗುವುದಿಲ್ಲ. ಇದು ಮಾತೃಭಕ್ತಿಯ ಭಾವನೆಗೆ ವಿರೋಧವಾಗಿದೆ. ನಾವು ಭಾರತವನ್ನು ತಾಯಿಯ ರೂಪದಲ್ಲಿ ಒಪ್ಪಿಕೊಂಡಿದ್ದೇವೆ. ಇದರ ಕಣಕಣವೂ ನಮಗೆ ಪವಿತ್ರ. ಇದರ ಕಣಕಣದಲ್ಲಿ ಪಾವಿತ್ರ್ಯತೆಯ ಮಹಾನ್ ಶಕ್ತಿ ಅಡಗಿದೆ. ಸ್ವಾಮಿ ವಿವೇಕಾನಂದರು ಯಾವಾಗ ಇಡೀ ಪ್ರಪಂಚದಲ್ಲಿ ಭಾರತೀಯ ಧರ್ಮ, ಸಂಸ್ಕೃತಿ ಹಾಗೂ ದರ್ಶನದ ವಿಜಯ ವೈಜಯಂತಿಯನ್ನು ಹಾರಿಸಿ ಭಾರತಕ್ಕೆ ಹಿಂದಿರುಗಿದರೋ, ಅವರು ಮದರಾಸಿಗೆ ಬಂದು ಭಾರತದ ಮಣ್ಣನ್ನು ಉಜ್ಜಿಕೊಂಡು ಸ್ನಾನ ಮಾಡಿದರು. ನಂತರ ಅಲ್ಲಿ ಸೇರಿದ್ದ ಜನತೆಯ ಆಶ್ಚರ್ಯವನ್ನು ಶಮನಗೊಳಿಸುವುದಕ್ಕಾಗಿ ಅವರು ಹೇಳಿದರು: ``ನಾನು ಸಾಕಷ್ಟು ಸಮಯದಿಂದ ವಿದೇಶ ಪ್ರವಾಸದಲ್ಲಿದ್ದೆ. ಈ ಅವಧಿಯಲ್ಲಿ ಅನೇಕ ರೀತಿಯ ಜನರ ಸಂಸರ್ಗಕ್ಕೆ ಬಂದೆ. ಅನೇಕ ದೇಶಗಳಲ್ಲಿ ತಿರುಗಿದೆ, ಇದರಿಂದ ನನ್ನ ಶರೀರದಲ್ಲಿ ಸ್ವಲ್ಪ ವಿಕೃತಿ ಬಂದಿರುವ ಸಾಧ್ಯತೆ ಇದೆ. ನಾನು ಈ ಎಲ್ಲ ವಿಕೃತಿಗಳನ್ನು ದೂರಮಾಡುತ್ತಿದ್ದೇನೆ. ಬ್ರಿಟಿಷನು ಏನು ಹೇಳುತ್ತಾನೆ ? ಭಾರತದ ವಿಷಯದಲ್ಲಿ ಅವರ ಹೃದಯದಲ್ಲಿ ಎಂಥ ಶ್ರದ್ಧೆ ಇತ್ತು. ನಾವು ಸ್ವಲ್ಪ ಇಂಗ್ಲೆಂಡ್‍ನ ಉದಾಹರಣೆಯನ್ನು ತೆಗೆದುಕೊಳ್ಳೋಣ. ಇಲ್ಲಿ ಸೂರ್ಯನ ದರ್ಶನವೂ ಸಹ ವರ್ಷದಲ್ಲಿ 10-20 ಸಲಕ್ಕೆ ಹೆಚ್ಚಾಗಿ ಆಗುವುದಿಲ್ಲ. ಜನರು ಚಳಿಯ ಕಾರಣದಿಂದ ನಡುಗುತ್ತಾರೆ. ಅವರ ಹೊಟ್ಟೆ ತುಂಬುವಷ್ಟು ಆಹಾರವೂ ಸಹ ಬೆಳೆಯುವುದಿಲ್ಲ. ಅವರ ಅನ್ನಕ್ಕಾಗಿ ವಿದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಆದರೂ ಸಹ ಯಾವ ಇಂಗ್ಲಿಷ್ನವನ್ನು ಕೇಳಿದರೂ, ಅವನು ಅಡೆ ತಡೆಯಿಲ್ಲದೆ ಉತ್ತರ ಕೊಡುತ್ತಾನೆ. ಇಂಗ್ಲೆಂಡ್ ನನಗೆ ಅತ್ಯಂತ ಪ್ರಿಯ. ಒಬ್ಬ ಇಂಗ್ಲಿಷ್ ಕವಿ “England with all the fallats I Love Hree”-"ಇಂಗ್ಲೆಂಡ್ ಏನೆಲ್ಲ ತಪ್ಪುಗಳಿದ್ದರೂ ಮಧ್ಯಪ್ರದೇಶದ ಪತ್ರ 297 ನಾ ನಿನ್ನ ಪ್ರೀತಿಸುವೆ" ಎಂದು ಹೇಳಿದಾಗ ಇದೇ ಭಾವನೆಯನ್ನು ಪ್ರಕಟಿಸಿದ. ಮಾತೃಭಾಷೆಯ ಅಭಾವದ ದುಷ್ಪರಿಣಾಮ ನಮ್ಮ ರಾಷ್ಟ್ರಜೀವನದಲ್ಲಿ ದುರ್ಭಾಗ್ಯದಿಂದ ಮಾತೃಭಕ್ತಿಯ ಅಭಾವದ ಕಾರಣದಿಂದ ಅನೇಕ ವಿಕೃತಿಗಳು ಬಂದಿವೆ. ಪಾಕಿಸ್ತಾನದ ನಿರ್ಮಾಣವು ರಾಷ್ಟ್ರ ಜೀವನದ ವಿಕೃತಿಯ ಜ್ವಲಂತ ಉದಾಹರಣೆ. ನಮ್ಮ ರಾಜ್ಯ ಎಲ್ಲಿದೆಯೋ ಆ ಭೂಮಿಯೇ ಪವಿತ್ರ ಮತ್ತು ಉಳಿದವುಗಳು ಅಪವಿತ್ರ ಎಂಬ ಮುಸಲ್ಮಾನರ ದೃಷ್ಟಿಕೋನವು ವಿಕೃತಿ ಮೂಲಕವಾಗಿದೆ. ಸಂಪೂರ್ಣ ದೇಶ ನಮಗೆ ಪವಿತ್ರ. ಇಂಥ ಭಾವನೆ ಅವರ ಮನಸ್ಸಿನಲ್ಲಿ ಹುಟ್ಟಲಿಲ್ಲ. ಆದ್ದರಿಂದಲೇ ಭಾರತ ಮಾತೆಯ ಅಂಗವನ್ನು ಕತ್ತರಿಸಿ ಪಾಕಿಸ್ತಾನವನ್ನು ಮಾಡಲಾಯಿತು. ಬೇರೆ ನಾಗಾಲ್ಯಾಂಡಿನ ಬೇಡಿಕೆಯ ಮೂಲದಲ್ಲಿ ಸಹ ಈ ಭಾರತ ಭೂಮಿಯ ವಿಷಯದಲ್ಲಿ ಅಭಕ್ತಿಯ ಭಾವನೆ ಇದೆ. ಈ ದೇಶದ ದುರ್ಭಾಗ್ಯವೆಂದರೆ ಅವರ ಪ್ರಧಾನಮಂತ್ರಿ ಮತ್ತು ಅವರಿಗೆ ಜೀ ಹುಜೂರ್ ಅನ್ನುವವರು `ಶಾಂತಿಪೂರ್ಣ ಸಮಾಧಾನದ ವಿಷಯವಾಗಿ ಸಂತೋಷವನ್ನು ವ್ಯಕ್ತಿಪಡಿಸಲಿ ಮತ್ತು ಇದಕ್ಕೆ ಮೊದಲು ಅವರು ನಮ್ಮ ಸಹಭಾಗಿಗಳಲ್ಲವೇನೋ ಎಂಬ ಹಾಗೆ ನಾವು ನಾಗಾಗಳನ್ನು ಭಾರತೀಯ ಸಂಘದ ಸಹಭಾಗಿಗಳನ್ನಾಗಿ ಮಾಡಿಕೊಂಡಿದ್ದೇವೆ'' ಎಂದು ಹೇಳಿದರು. ನಾಗಲ್ಯಾಂಡಿನ ಸಂಸತ್ತಿನ ಸ್ವೀಕೃತಿ ಸಿಕ್ಕಿತು. ಅದರ ಮಸಿ ಇನ್ನೂ ಆರಿಯೂ ಇರಲಿಲ್ಲ. ಅಸ್ಸಾಂ ಪರ್ವತ ಪ್ರದೇಶಗಳಲ್ಲಿರುವ ಬೇರೆಯ ಜನರು ಬೇರೆಯ ಮಿಜೋಲ್ಯಾಂಡಿನ ಬೇಡಿಕೆಯನ್ನು ಇಟ್ಟಿದ್ದಾರೆ. ಚೀನಾ ನಮ್ಮ 14,000 ವರ್ಗ ಮೈಲು ಭೂಮಿಯ ಮೇಲೆ ಅಧಿಕಾರ ಜಮಾಯಿಸಿತು. ಈ ತಥ್ಯವನ್ನು ದುರ್ಲಕ್ಷಿಸಿ ಕೆಲವರು ಚೀನಾ ಆಕ್ರಮಣ ಮಾಡಿತೋ ಇಲ್ಲವೋ ಎಂಬ ವಿಷಯದ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಸ್ಥಿರಗೊಳಿಸಿಕೊಳ್ಳದಾದರು. ಈ ಎಲ್ಲ ಪರಿಸ್ಥಿತಿ ಮಾತೃಭೂಮಿಯ ಅಭಾವದ ಕಾರಣದಿಂದಲೇ ಹುಟ್ಟಿಕೊಂಡಿದೆ. ಎಲ್ಲಿ ಸಂಪೂರ್ಣ ದೇಶದ ಮಮತೆ ಹಾಗೂ ಆತ್ಮೀಯತೆಯ ಭಾವನೆ ಇರುವುದಿಲ್ಲವೊ ಅಲ್ಲಿ ಇಂಥದೇ ಅನೇಕ ವಿಕೃತಿಗಳು ಉತ್ಪನ್ನವಾಗುತ್ತವೆ. ಸೇವೆಯ ಹೆಸರಿನಲ್ಲಿ ಅಧಿಕಾರ ಈ ವಿಕೃತಿಗಳನ್ನು ದೂರಮಾಡುವ ಉಪಾಯ ನಮ್ಮ ಸಂಸ್ಕೃತಿಯ ಬಳಿ ಇದೆ. ನಮ್ಮ ಸಂಸ್ಕೃತಿಯ ಆಧಾರ ಭೋಗವಲ್ಲ; ತ್ಯಾಗ. ತ್ಯಾಗದಿಂದ ಅಮರತ್ವವು ಸಿಗುತ್ತದೆ. ಭಗವಂತ ರಾಮನು ಲಂಕೆಯನ್ನು ಗೆದ್ದು ಅವನ ರಾಜ್ಯವನ್ನು ವಿಭೀಷಣನಿಗೆ ಕೊಟ್ಟನು. ಆ ಸ್ವರ್ಣಮಯವಾದ ಲಂಕೆಯನ್ನು ತನ್ನ ಮಾತೃಭೂಮಿ ಅಯೋಧ್ಯಾಗೆ 298 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಹೋಲಿಸಿದಾಗ ಅವನಿಗೆ ಅಯೋಧ್ಯಾ ಹೆಚ್ಚು ಇಷ್ಟವಾಯಿತು. ಏಕೆಂದರೆ ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಹೆಚ್ಚಿನದು. ಛತ್ರಪತಿ ಶಿವಾಜಿ ಜಯ ಸಿಂಹನಿಗೆ ಹೀಗೆ ಬರೆದ - ``ನೀನು ಮೊಗಲರ ಸಂಗವನ್ನು ಬಿಟ್ಟುಬಿಡು. ಆಮೇಲೆ ಇಡೀ ರಾಜ್ಯವನ್ನು ನೀನೇ ತೆಗೆದುಕೋ ನನಗೆ ರಾಜ್ಯದ ಹಸಿವಿಲ್ಲ.'' ಭರತನು ಭಗವಾನ್ ರಾಮನ ಪಾದುಕೆಗಳನ್ನು ರಾಜ್ಯ ಸಿಂಹಾಸನದ ಮೇಲೆ ವಿರಾಜಮಾನವಾಗಿಸಿ, ತಾನು ನಂದಿಗ್ರಾಮದಲ್ಲಿ ತಪಸ್ವಿಯ ರೂಪದಲ್ಲಿ ಜೀವನವನ್ನು ಕಳೆಯುತ್ತಾ ರಾಜಕಾರ್ಯವನ್ನು ನಿರ್ವಹಿಸಿದ. ಚಾಣಕ್ಯನು ಚಂದ್ರಗುಪ್ತನಿಗಾಗಿ ಒಂದು ವಿಶಾಲ ಸಾಮ್ರಾಜ್ಯವನ್ನು ಕಟ್ಟಿದ. ಆದರೆ ಸ್ವಯಂ ನಿಸ್ಪೃಹ ಕರ್ಮಯೋಗಿಯ ತರಹ ರಾಜ್ಯದ ಬಗ್ಗೆ ನಿರಾಸಕ್ತಿಯಿಂದ ಇದ್ದ. ಇಂದು ನಮ್ಮ ರಾಜನೈತಿಕ ಜೀವನದಲ್ಲಿ ಯಾವ ವಿಕೃತಿಗಳು ಕಾಣಿಸುತ್ತವೆಯೋ ಅವು ಇದೇ ಆಸಕ್ತಿಯ ಕಾರಣದಿಂದ ಉತ್ಪನ್ನವಾಗಿವೆ. ಸೇವೆಯ ಸ್ಥಾನವನ್ನು ಅಧಿಕಾರವು ತೆಗೆದುಕೊಂಡಿದೆ. ಏಕಮೇವ ಮಾರ್ಗ (ಒಂದೇ ದಾರಿ) ಜೀವನದ ವಿಷಯದಲ್ಲಿ ಅತಿಶಯವಾಗಿ ಆರ್ಥಿಕ ದೃಷ್ಟಿಕೋನದ ಕಾರಣದಿಂದಲೂ ಅನೇಕ ವಿಕೃತಿಗಳು ಉತ್ಪನ್ನವಾಗಿವೆ. ನಾವು ದುಡ್ಡನ್ನೇ ದೊಡ್ಡಪ್ಪ ಎಂದುಕೊಂಡಿದ್ದೇವೆ. ಮಾನವೀಯ ಭಾವನೆಗಳು ಹಾಗೂ ಜೀವನ ಮೌಲ್ಯಗಳು ನಮಗೆ ಯಾವ ಮಹತ್ವದ್ದೂ ಅಲ್ಲ. ವ್ಯಕ್ತಿಯ ಗೌರವ ಪ್ರತಿಷ್ಠೆಗಳ ಆಧಾರ ಇಂದು ಅವನ ಸ್ವಭಾವ ಅಲ್ಲ, ಅವನ ಯೋಗ್ಯತೆ ಅಲ್ಲ, ಅವನು ಗುಣವಲ್ಲ. ಹಣವೇ ಅವನ ಪ್ರತಿಷ್ಠೆಯ ಆಧಾರವಾಗಿದೆ. ಈ ಸ್ಥಿತಿ ವಿಕೃತಿಯ ಮೂಲ. ಹಣವು ನಮ್ಮ ಭೌತಿಕ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಸಾಧನಮಾತ್ರ, ಸಾಧ್ಯವಲ್ಲ ಎಂಬುದನ್ನು ನಾವು ತಿಳಿದುಕೊಂಡು, ನಡೆದುಕೊಳ್ಳಬೇಕು. ಜೀವನದ ಬಗ್ಗೆ ದೃಷ್ಟಿಕೋನವನ್ನು ಬದಲಾಯಿಸಬೇಕು. ದೃಷ್ಟಿಕೋನದ ಈ ಬದಲಾವಣೆ ಭಾರತೀಯ ಸಂಸ್ಕೃತಿಯ ಆದರ್ಶದ ಆಧಾರದ ಮೇಲೆಯೇ ಆಗಬಲ್ಲುದು. ಈ ಗೌರವಾನ್ವಿತ ಸಂಸ್ಕೃತಿಯ ಪುನಃ ಪ್ರತಿಷ್ಠಾಪನೆಯಿಂದಲೇ ರಾಷ್ಟ್ರಜೀವನದಲ್ಲಿ ನಾಲ್ಕು ದಿಕ್ಕುಗಳಲ್ಲಿ ಪರಿವ್ಯಾಪ್ತವಾಗಿರುವ ವಿಕೃತಿಗಳ ಶಮನ ಮತ್ತು ನಿರಾಕರಣೆ ಆಗುತ್ತದೆ. -ಅಭಿಭಾಷಣದ ಆಧಾರದಿಂದ ಪಾಕಿಸ್ತಾನ ನಾಯಕರ ಮನಸ್ಸಿನಲ್ಲಿ ಪ್ರಾಮಾಣಿಕತೆ ಇದ್ದರೆ ಭಾರತದ ಯುದ್ಧ ನಿಷೇಧ ಪ್ರಸ್ತಾಪವನ್ನು ಸ್ವೀಕರಿಸಲಿ -ಪಂಡಿತ ದೀನ್ ದಯಾಳ್ ಉಪಾಧ್ಯಾಯ ``ಕಮ್ಯುನಿಸ್ಟ್ ಚೀನಾದ ಆಕ್ರಮಣ ಕೇವಲ ಭಾರತದ ಸ್ವಾತಂತ್ರ್ಯ ಮತ್ತು ಮಧ್ಯಪ್ರದೇಶದ ಪತ್ರ 299 ಅಖಂಡತೆಗೆ ಸವಾಲು ಅಲ್ಲ. ಆದರೆ ನಮ್ಮ ಶಾಶ್ವತ ಜೀವನ ನಿಷ್ಠೆಯ ಮೇಲೂ ಪ್ರಹಾರವಾಗಿದೆ. ಇದರ ರಕ್ಷಣೆಗಾಗಿ ನಾವು ಸತತವಾಗಿ ಸಂಘರ್ಷ ಮಾಡಿದ್ದೇವೆ. ಇದು ಎರಡು ದೇಶಗಳದ್ದು ಮಾತ್ರವಲ್ಲ; ಎರಡು ವಿಚಾರಧಾರೆಗಳ ಸಂಘರ್ಷ ಬದ್ಧವಾಗಿದೆ. ಭಾರತದ ಸಂಸ್ಕೃತಿ ಮತ್ತು ಅಹಂಕಾರದ ಬಗ್ಗೆ ಚೀನಾ ಸೆಡ್ಡು ಹೊಡೆದಿದೆ. ನಮ್ಮ ರಾಷ್ಟ್ರ ಧರ್ಮದ ರಕ್ಷಣೆಗಾಗಿ ಪ್ರತ್ಯೇಕ ಭಾರತವಾಸಿ ``ಹತೋ ವಾ ಪ್ರಾಪ್ಯಸಿ ಸ್ವರ್ಗ ಜಿತ್ವಾವಾಮೋಕ್ಷ್ಯಸೇ ಮಹೀಂ" ಎಂಬ ಭಗವಂತನ ವಾಣಿಯನ್ನು ಸ್ಮರಿಸಿ ಯುದ್ಧವನ್ನು ನಿಶ್ಚಯಿಸಿ ನಿಲ್ಲಬೇಕೆನ್ನುವುದು ಇಂದಿನ ಅವಶ್ಯಕತೆ ಆಗಿದೆ. ಈ ಶಬ್ದಗಳಲ್ಲಿ ಭಾರತೀಯ ಜನಸಂಘದ ಮಹಾಮಂತ್ರಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಒಂದು ಭಾಷಣದಲ್ಲಿ ಚೀನಾದ ಸವಾಲನ್ನು ಸ್ವೀಕರಿಸುವುದಕ್ಕೆ ಜನತೆಯನ್ನು ಆಹ್ವಾನಿಸಿದರು. ಭಾರತ-ಪಾಕ್ ಮಾತುಕತೆಗೆ ಸಮಯ ಅನುಪಯುಕ್ತ ಭಾರತ ಪಾಕ್ ಸಂಧಿ ಮಾತುಕತೆಯ ಸಂಬಂಧದಲ್ಲಿ ಅವರು ಏನು ಹೇಳಿದರು ಎಂದರೆ ``ಕಾಶ್ಮೀರದ ಸಂಬಂಧದಲ್ಲಿ ಭಾರತದ ದೃಷ್ಟಿಕೋನವು ಪ್ರಧಾನಮಂತ್ರಿಗಳ ಮೂಲಕ ವಿಶದ ವಿವೇಚನೆ ಮಾಡಿದ ಮೇಲೆಯೂ ಜನಸಂಘವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಸ್ತಾಪಿತವಾದ ಮಾತುಕತೆಯಿಂದ ಈ ವಿಷಯದಲ್ಲಿ ಆತಂಕಕ್ಕೆ ಒಳಗಾಗಿದೆ. ನಾವು ಯಾವ ಶರತ್ತೂ ಇಲ್ಲದೆ ಮಾತುಕತೆಯಲ್ಲಿ ಭಾಗವಹಿಸುತ್ತೇವೆ ಎಂಬ ಪ್ರಧಾನಮಂತ್ರಿಗಳ ಸ್ಪಷ್ಟೀಕರಣವು ಅವರ ಮೊದಲ ಭಾಷಣವನ್ನು ನಿರರ್ಥಕ ಮತ್ತು ಇತಿಹಾಸದ ವಸ್ತುವನ್ನಾಗಿ ಮಾಡಿದೆ. ನಿಜವಾಗಿ ಹೇಳುವುದಾದರೆ ಕಾಶ್ಮೀರದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ದೃಷ್ಟಿಕೋನದಲ್ಲಿ ಎಷ್ಟು ಮೌಲಿಕ ಮತ್ತು ಭಾರಿ ವ್ಯತ್ಯಾಸವಿದೆ ಎಂದರೆ ಎರಡರ ಹೊಂದಾಣಿಕೆ ಆಗುವುದು ಕಷ್ಟ. ಭಾರತ ತನ್ನ ಆಹಾರವನ್ನು ಬಿಟ್ಟರೆ ಅದರ ಪರಿಣಾಮ ಬಹಳ ಗಂಭೀರ ಮತ್ತು ವ್ಯಾಪಕವಾಗಿ ಆಗುತ್ತದೆ. ಪಾಕಿಸ್ತಾನ ಮುಖಂಡರು ಅಲ್ಲಿಯ ಜನತೆಯಲ್ಲಿ ಎಂಥ ಧಾರ್ಮಿಕ ಮತ್ತು ಅತ್ಯುತ್ಸಾಹವನ್ನು ಹುಚ್ಚೆಬ್ಬಿಸಿದ್ದಾರೆ ಎಂದರೆ ಅದಕ್ಕಾಗಿ ಭಾರತದ ನ್ಯಾಯ ಸಂಗತ ಸಹಕಾರವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಮಾತುಕತೆಯಿಂದ ಒಂದು ಗೌರವಯುತ ಪರಿಹಾರ ಹುಡುಕುವುದಿರಲಿ, ಅಂತ್ಯದಲ್ಲಿ ಮನಸ್ತಾಪ ಮತ್ತೂ ಹೆಚ್ಚಬಹುದು. ನಿಜವಾಗಿ ಹೇಳಬೇಕೆಂದರೆ ಮಾತುಕತೆಗೆ ಸದ್ಯದ ಸಮಯ ಅನುಪಯುಕ್ತ. ಇಂದಿನ ಸಂಕಟದ ಸಮಯದಲ್ಲಿ ಶಾಂತಿಪೂರ್ವಕ ______ * ಆಕರ : 10-12-1962 ಪಾಂಚಜನ್ಯ 300 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಹಾಗೂ ತದ್ಯಾತ್ಮಕ ವಿಶ್ಲೇಷಣೆ ಆಗಲಾರದು. ಒಂದು ವೇಳೆ ಭಾರತದ ಮೇಲೆ ಯಾವುದಾದರೂ ರಾಜಿಯನ್ನು ಬಲವಂತವಾಗಿ ಹೇರಿದರೆ ಅದು ಅದನ್ನು ಒಪ್ಪುವುದಿಲ್ಲ. ಒಂದು ವೇಳೆ ಒಪ್ಪಿಕೊಂಡರೂ ಚೀನಾವನ್ನು ಎದುರಿಸುವುದಕ್ಕೆ ಯಾವ ಉದ್ದೇಶದಿಂದ ಇವೆಲ್ಲವನ್ನೂ ಮಾಡಲಾಗುತ್ತದೆಯೋ ಅದು ದುರ್ಬಲವಾಗಿ ಬಿಡುತ್ತದೆ. ಇದರಿಂದ ಪಾಕಿಸ್ತಾನದ ಹಸಿವು ಮತ್ತೂ ಹೆಚ್ಚುವುದು ಹಾಗೂ ನಾಳೆ ಅದರ ಕಡೆಯಿಂದ ಮತ್ತೂ ಹೆಚ್ಚಿನ ಬೇಡಿಕೆಗಳನ್ನು ಇಡಲಾಗುವುದು. ಪಂ. ನೆಹರೂ ಅವರ ಯುದ್ಧನಿಷೇಧ ಪ್ರಸ್ತಾಪವನ್ನು ಒಪ್ಪಲಿ ``ಭಾರತೀಯ ಜನಸಂಘದ ಅಭಿಪ್ರಾಯವೆಂದರೆ ಈಗಿನ ಪ್ರಕ್ರಿಯೆ ಕ್ರಮ ವಿರುದ್ಧವಾಗಿದೆ. ಪಾಕಿಸ್ತಾನವು ಒಂದುವೇಳೆ ಭಾರತದ ಸಮಾನವೇ ಕಮ್ಯುನಿಸ್ಟ್ ಚೀನಾದ ಸಂಕಟವನ್ನು ಎದುರಿಸಿದ್ದೇ ಆದರೆ ನಾವಿಬ್ಬರೂ ಸೇರಿ ಅದನ್ನು ಎದುರಿಸೋಣ ಮತ್ತು ಅಲ್ಲಿಯವರೆಗೆ ಪರಸ್ಪರರ ಸಮಸ್ಯೆಗಳನ್ನು ಒಂದು ಕಡೆ ಇಡೋಣ. ಒಟ್ಟಿಗೇ ಕೆಲಸ ಮಾಡುವುದರಿಂದ ಪರಸ್ಪರ ಸದ್ಭಾವನೆ ಮತ್ತು ಸಹಯೋಗದ ವಾತಾವರಣ ಏರ್ಪಡುವುದು, ಇವು ನಮ್ಮ ಪ್ರಶ್ನೆಗಳನ್ನು ಬಿಡುವುದಕ್ಕೆ ಸಹಾಯಕವಾಗಬಲ್ಲುದು. ಈ ವಿಷಯದಲ್ಲಿ ಅದು ಅಮೆರಿಕಾ ಮತ್ತು ಗ್ರೇಟ್ ಬ್ರಿಟನ್‍ನ ಉದಾಹರಣೆಯ ಅನುಕರಣೆಯನ್ನು ಮಾಡಬೇಕು. ಒಂದು ವೇಳೆ ಪಾಕಿಸ್ತಾನ ಭಾರತದೊಂದಿಗೆ ನಿಜವಾದ ಶಾಂತಿಯನ್ನು ಬಯಸಿದರೆ ಅದು ಪ್ರಧಾನಮಂತ್ರಿ ಶ್ರೀ ನೆಹರೂ ಅವರ ಯುದ್ಧ ನಿಷೇಧ ಪ್ರಸ್ತಾಪವನ್ನು ಒಪ್ಪಬೇಕು. ಎಲ್ಲ ಸಮಸ್ಯೆಗಳ ಬಗ್ಗೆ ಮಾತುಕತೆಯಾಗಲಿ ಒಂದು ವೇಳೆ ಪಾಕಿಸ್ತಾನದೊಂದಿಗೆ ಮಾತುಕತೆ ಆಗಬೇಕಾಗಿದ್ದರೆ ಭಾರತವು ಈ ವಿಷಯವನ್ನು ಗಮನದಲ್ಲಿಡಬೇಕು. ಏನೆಂದರೆ ಎರಡೂ ದೇಶಗಳ ಮಧ್ಯದ ಎಲ್ಲ ಸಮಸ್ಯೆಗಳ ಬಗ್ಗೆ ಒಟ್ಟಿಗೆ ಚರ್ಚೆ ಆಗಲಿ. ಇದುವರೆಗೆ ಪಾಕಿಸ್ತಾನವು ತನಗೆ ಆಸಕ್ತಿ ಇದ್ದ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತಿತ್ತು. ಹಾಗೂ ಬೇರೆ ಪ್ರಶ್ನೆಗಳನ್ನು ಮುಂದೂಡುತ್ತಿದೆ. ಒಂದು ಕಡೆ ನಾವು ಪ್ರತಿಸಲವೂ ಪಾಕಿಸ್ತಾನೀ ಮೈತ್ರಿಯ ಹೆಸರಿನಲ್ಲಿ ಒಂದೊಂದಾಗಿ ನಮ್ಮ ಹಿತಗಳ ಬಲಿದಾನ ಮಾಡುತ್ತಿದ್ದೇವೆ. ಈಗ ಯಾವುದಾದರೂ ಬೇರೆ ಪ್ರಶ್ನೆಗಳನ್ನು ತೆಗೆದುಕೊಳ್ಳುವ ಮೊದಲು ನಾವು ವಿಭಜನೆಯ ಪೂರ್ವದ ಋಣ ಹಾಗೂ ನಿಷ್ಕಾಂತ ಸಂಪತ್ತಿನ ಪ್ರಶ್ನೆಗಳನ್ನು ತೆಗೆದುಕೊಳ್ಳಬೇಕು. ಪಾಕಿಸ್ತಾನದ ಮನಸ್ಸಿನಲ್ಲಿ ಎಷ್ಟು ಪ್ರಾಮಾಣಿಕತೆ ಇದೆ ಎನ್ನುವುದು ಇದರಿಂದ ತಿಳಿಯುತ್ತದೆ. ಮಧ್ಯಪ್ರದೇಶದ ಪತ್ರ 301 ಈ ಮೋಸದಿಂದ ತಪ್ಪಿಸಿಕೊಳ್ಳೋಣ ಚೀನೀ ಆಕ್ರಮಣದ ಸಫಲ ಪ್ರತೀಕಾರಕ್ಕಾಗಿ ಸಲಹೆ ಕೊಡುತ್ತಾ ಅವರು ಏನು ಹೇಳಿದರೆಂದರೆ, ಚೀನಾದ ಪ್ರಸ್ತಾಪದಲ್ಲಿ ಭಾರತದ ದೊಡ್ಡ ಭೂಭಾಗವನ್ನು ಅಪಹರಿಸುವ ಉಪಾಯ ಮಾತ್ರ ಇದೆ ಎಂದು ಭಾರತ ಸರ್ಕಾರವು ನಿರ್ಧರಿಸಿದ ಮೇಲೆ ನಾವು ದೀರ್ಘವಾದ ಪತ್ರ ವ್ಯವಹಾರದ ಬಲೆಯಿಂದ ಉಳಿದುಕೊಳ್ಳಬೇಕು. ಚೀನಾ ದೇಶಕ್ಕೆ ತನ್ನ ಸ್ಥಿತಿಯನ್ನು ಬಲಪಡಿಸಿಕೊಳ್ಳುವುದಕ್ಕೆ ಹಾಗೂ ಆಹಾರ ಒಯ್ಯುವ ಮಾರ್ಗವನ್ನು ಪೂರ್ತಿಗೊಳಿಸುವುದಕ್ಕೆ ಹೆಚ್ಚು ಸಮಯಕೊಡುವುದು ಸರಿಯಾಗುವುದಿಲ್ಲ. ಚೀನಾದ ಸೈನ್ಯ ಹಿಂದಕ್ಕೆ ಸರಿದ ಮೇಲೆ ಆ ಕ್ಷೇತ್ರದಲ್ಲಿ ಕೇವಲ ನಾಗರಿಕ ಅಧಿಕಾರಿಗಳನ್ನು ಕಳುಹಿಸುವ ನೀತಿಯ ಬಗ್ಗೆ ಸರ್ಕಾರದ ಘೋಷಣೆ ಸರಿಯಲ್ಲ. ನಾವು ನಮ್ಮದೇ ಆದ ಭೂಮಿಯ ಮೇಲೆ ನಮ್ಮ ಸೈನಿಕರ ಪ್ರವೇಶವನ್ನು ಹೇಗೆ ತಡೆಹಿಡಿಯಬಲ್ಲೆವು? ಆಕ್ರಮಣದ ಸ್ವರೂಪವನ್ನು ತಿಳಿಯೋಣ ಚೀನಾದ ಆಕ್ರಮಣವನ್ನು ಸಫಲತಾಪೂರ್ವಕವಾಗಿ ಎದುರಿಸಬೇಕಾದರೆ ನಾವು ಅದರ ಸಂಪೂರ್ಣ ಮತ್ತು ಸರಿಯಾದ ರೂಪವನ್ನು ತಿಳೀದುಕೊಳ್ಳಬೇಕಾಗುವುದು. ಈ ಆಕ್ರಮಣ ಕೇವಲ ಗಡಿಪ್ರದೇಶಗಳ ಮೇಲೆ ಅಧಿಕಾರ ಮಾಡುವುದಕ್ಕೆ ಅಲ್ಲ. ಆದರೆ ಸಂಪೂರ್ಣ ಏಷಿಯಾವನ್ನು ಚೀನಾದ ನೇತೃತ್ವದಲ್ಲಿ ಕಮ್ಯುನಿಸ್ಟ್ ಮಾಡುವ ಉದ್ದೇಶದಿಂದ ಆಗಿದೆ. ಶಾಂತಿ ಮತ್ತು ಯುದ್ಧ ನೀತಿಗಳ ಅದರ ನಿರ್ಧಾರ ಈ ನಿರ್ಧಾರದ ಮೇಲೆಯೇ ಆಗುವುದು. ನಾವು ಸಹ ಅದಕ್ಕೆ ಅನುಸಾರವಾಗಿ ನಮ್ಮ ಯುದ್ಧದ ಗುರಿಗಳನ್ನು ನಿರ್ಧರಿಸಿ, ಅದನ್ನು ಪಡೆಯುವುದಕ್ಕಾಗಿ ನಮ್ಮ ಬೇರೆ ನೀತಿಗಳನ್ನು ಪುನಃ ರಚಿಸಬೇಕಾಗುವುದು. ಎಲ್ಲಿಯವರೆಗೆ ಚೀನಾ ಭಾರತ ಭೂಮಿಯಿಂದ ಹೊರಗೆ ಹೋಗುವುದಿಲ್ಲವೋ ಹಾಗೂ ಟಿಬೆಟ್ ಸ್ವತಂತ್ರವಾಗುವುದಿಲ್ಲವೋ ಆವರೆಗೂ ನಾವು ಮಾತುಕತೆಯ ವಿಚಾರವನ್ನು ಬಿಟ್ಟುಬಿಡಬೇಕು. ಟಿಬೆಟ್‍ನ ಸ್ವಾತಂತ್ರ್ಯ ಭಾರತದ ಗಡಿಪ್ರದೇಶಗಳ ರಕ್ಷಣೆ ಹಾಗೂ ಏಶಿಯಾದ ಶಾಂತಿಗೆ ಅನಿವಾರ್ಯವಾಗಿದೆ. ಆಕರ : 10 ಡಿಸೆಂಬರ್ 1962 ಪಾಂಚಜನ್ಯ ರಾಷ್ಟ್ರಮಂಡಲದ ಸದಸ್ಯತ್ವ ನಮ್ಮ ಪ್ರಜಾಸತ್ತೆಯ ವ್ಯಂಗ್ಯ ಪಂ. ದೀನ್ ದಯಾಳ್ ಉಪಾಧ್ಯಾಯ ಇಂಗ್ಲೆಂಡ್‍ನ ಮಹಾರಾಣಿ ಎರಡನೇ ಎಲಿಜಬೆತ್ ತನ್ನ ಪತಿ ಎಡಿನ್ ಬರೋದ ಡೂಕ್ ಫಿಲಿಪ್ಸ್ ಜೊತೆ ಭಾರತ, ಪಾಕಿಸ್ತಾನ, ಮತ್ತು ನೇಪಾಳದ 302 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯಾತ್ರೆಗಾಗಿ ಜನವರಿ 20 ರಂದು ಲಂಡನ್‍ನಿಂದ ಹೊರಟು 21 ಜನವರಿಯಂದು ಹೊಸದಿಲ್ಲಿ (ನಯೀದಿಲ್ಲಿ) ತಲುಪಿದಳು. ನವದೆಹಲಿಯಲ್ಲಿ ಅವರನ್ನು ರಾಜಮರ್ಯಾದೆಯೊಂದಿಗೆ ಸ್ವಾಗತಿಸಲಾಯಿತು. ಸರ್ಕಾರವು ಸ್ವಾಗತದ ಸಿದ್ಧತೆಯನ್ನು ಅನೇಕ ವಾರಗಳ ಮುಂಚೆ ಆರಂಭಿಸಿತ್ತು, ಜನತೆಯೂ ಸಹಕರಿಸಿತು. ಹಿಂದೂಸ್ತಾನ್ ಟೈಮ್ಸ್‌ನ ಅನುಸಾರ 15 ಲಕ್ಷ ಮತ್ತು ಆಕಾಶವಾಣಿಯ ಅನುಸಾರ 10 ಲಕ್ಷ ಜನ ಈ ಸಮಯದಲ್ಲಿ ಒಟ್ಟುಗೂಡಿದ್ದರು. ಆಕರ 30-12-1961 ಪಾಂಚಜನ್ಯ ನವದೆಹಲಿಗೆ ವಿದೇಶಿ ರಾಜಪ್ರಮುಖರ ಸ್ವಾಗತ ಹೊಸದಲ್ಲ. ಇಂಗ್ಲೆಂಡ್ ಮಹಾರಾಣಿಗೆ ಮೊದಲು ಬೇರೆ ದೇಶಗಳ ನಾಯಕರು, ರಾಷ್ಟ್ರಪತಿ ಮತ್ತು ಮಹಾರಾಜರು ಭಾರತಕ್ಕೆ ಬಂದಿದ್ದರು. ಅಮೆರಿಕಾದ ರಾಷ್ಟ್ರಪತಿ ಐಸೆನ್‍ಹೋವರ್ ಹಾಗೂ ರಷ್ಯಾದ ಪ್ರಧಾನಮಂತ್ರಿ ಕ್ರುಶ್ಚೇವ್ ಬುಲ್ಲಾನಿನ್ ಸಹ ತಮ್ಮ ಸೇವೆಯ ಅವಧಿಯಲ್ಲಿ ಭಾರತ ಯಾತ್ರೆ ಮಾಡಿದ್ದಾರೆ. ಅವರ ಸ್ವಾಗತವನ್ನು ಸಹ ಬಹಳ ಉತ್ಸಾಹ ಮತ್ತು ಸಿದ್ಧತೆಯೊಂದಿಗೆ ಮಾಡಲಾಗಿತ್ತು. ಆ ಸಮಯದಲ್ಲಿ ಅದನ್ನು ಬಹಳ ಅಭೂತಪೂರ್ವವೆಂದೇ ತಿಳಿಯಲಾಗಿತ್ತು. ಮಹಾರಾಣಿಯ ಸ್ವಾಗತವನ್ನು ಮತ್ತೆ ಎರಡು ಹೆಜ್ಜೆ ಮುಂದಿಟ್ಟು ಮಾಡಲಾಗುತ್ತಿದೆ. ಅದರ ಹಿಂದೆ ಹಳೆಯ ಅನುಭವವಗಳ ಲಾಭ ಹಾಗೂ ಪ್ರತಿಯೊಂದು ಕೆಲಸವನ್ನೂ ಮೊದಲಿಗಿಂತ ಚೆನ್ನಾಗಿ ಮಾಡಿ ತೋರಿಸುವ ಭಾವನೆ ಕೆಲಸ ಮಾಡುತ್ತಿದ್ದರೆ ನಾವು ಅದರ ಪ್ರಶಂಸೆಯನ್ನೇ ಮಾಡುತ್ತೇವೆ ಅದರೊಂದಿಗೆ ಅವರು ಒಂದು ದೇಶದ ಪ್ರಮುಖರು ಮಾತ್ರವಲ್ಲ, ಮಹಾರಾಣಿ ಎಂಬುದನ್ನು ನಮ್ಮಿಂದ ಮರೆಯಲಾಗುವುದಿಲ್ಲ. ವಿಶ್ವಸಂಸ್ಥೆಯ ಸಂಬಂಧ ಸಮಾನತೆಯದಲ್ಲ; ಅಧೀನತೆಯದು. ಈ ಸಂಬಂಧವು ನಮ್ಮ ಗಣರಾಜ್ಯದ ಸ್ಥಿತಿಯೊಂದಿಗೆ ಹೊಂದಾಣಿಕೆ ಆಗುವುದಿಲ್ಲ. ನಾವು ಇದರಲ್ಲಿ ಬದಲಾವಣೆ ಮಾಡಬೇಕು. ಭಾರತದ ಜನತೆಗೆ ತನ್ನ ಅತಿಥಿಯ ಬಗ್ಗೆ ಗೌರವವಿದೆ. ಆದರೆ ಭಾರತ ಸರ್ಕಾರ ಯಾವ ರಾಜನೈತಿಕ ಶಿಷ್ಟಾಚಾರದ ಪಾಲನೆ ಮಾಡುತ್ತಿದೆಯೋ ಅದು ಜನತೆಯ ಭಾವನೆಗಳ ಅವಮಾನ, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಗಳನ್ನು ಅವಮಾನಿಸುವುದಾಗಿದೆ. ಅವರು ಸರಳತನವನ್ನು ಇಷ್ಟಪಡುವವರು ಎಂದು ಹೇಳಿದರೂ, ತಿಳಿದುಕೊಂಡರೂ, ರಾಜನೈತಿಕ ದೃಷ್ಟಿಯಿಂದ ಅನ್ಯದೇಶ ವಿಶೇಷವಾಗಿ ಗಣರಾಜ್ಯಗಳ ಪ್ರಮುಖರಿಗಿಂತ ಹೆಚ್ಚು ವೈಭವ ಶೃಂಗಾರಗಳ ಅಭ್ಯಾಸವಾಗಿದೆ. ಆದ್ದರಿಂದ ಅವರ ಸ್ವಾಗತವನ್ನು ಆ ಮಟ್ಟದಲ್ಲಿಯೇ ಮಾಡಬೇಕು ಮತ್ತು ಮಹಿಳೆಯಾದ ಕಾರಣ ಮಧ್ಯಪ್ರದೇಶದ ಪತ್ರ 303 ಎಲ್ಲರ ಸ್ವಾಭಾವಿಕ ಅಪೇಕ್ಷೆ ಎಂದರೆ ಅವರ ಸ್ವಾಗತ ಮತ್ತು ಮರ್ಯಾದೆಯ ಬಗ್ಗೆ ಹೆಚ್ಚು ಎಚ್ಚರವಹಿಸಿ ವ್ಯವಹರಿಸುವುದು. ಆದರೆ ಸರ್ಕಾರವು ಮಹಾರಾಣಿಯ ಬಗ್ಗೆ ವ್ಯವಹರಿಸುವಾಗ ಇದಕ್ಕಿಂತ ಸ್ವಲ್ಪ ಹೆಚ್ಚಿನ ಮತ್ತು ಭಿನ್ನ ಭಾವನೆಗಳು ಕೆಲಸಮಾಡುವಂತೆ ತೋರುತ್ತಿದೆ. ಮಹಾರಾಣಿ ಎಲಿಜಬೆತ್ ಕೇವಲ ಇಂಗ್ಲೆಂಡಿನ ಮಹಾರಾಣಿಯೇ ಅಲ್ಲ, ವಿಶ್ವಸಂಸ್ಥೆಯ ಅಧ್ಯಕ್ಷೆಯೂ ಹೌದು. ಭಾರತ ರಾಷ್ಟ್ರಮಂಡಲದ ಸದಸ್ಯ ರಾಷ್ಟ್ರ. ಆದ್ದರಿಂದ ತನ್ನ ಅಧ್ಯಕ್ಷಳ ಯಥೋಚಿತ ಸತ್ಕಾರ ಮಾಡುವುದು ಅದಕ್ಕೆ ಅವಶ್ಯಕ. ಆದರೆ ಮಹತ್ವದ ಪ್ರಶ್ನೆ ಎಂದರೆ ರಾಷ್ಟ್ರಮಂಡಲ ಸದಸ್ಯರಾಗಿ ಭಾರತ ಮತ್ತು ಗ್ರೇಟ್‍ಬ್ರಿಟನ್‍ನ ಪಾರಸ್ಪರಿಕ ಸಂಬಂಧವೇನು ಎಂಬುದು. ಏಕೆಂದರೆ ಅದರ ಆಧಾರದ ಮೇಲೆಯೇ `ನಮ್ಮ' ಯಥೋಚಿತ ಸತ್ಕಾರಕ್ಕೆ ಯಾವ ಗೌರವವಿದೆ, ಇತಿಮಿತಿಗಳಿವೆ ಎಂಬ ವಿಷಯದ ನಿರ್ಣಯವಾಗಬಲ್ಲುದು. ಎಲ್ಲಿಯವರೆಗೆ ಜನತೆಯ ಭಾರಿ ಗುಂಪು, ಸಮಾಚಾರ ಪತ್ರಗಳ ಉತ್ಸುಕತೆ ಮತ್ತು ಸರ್ಕಾರದ ಉತ್ಸಾಹದ ಸಂಬಂಧವಿದೆಯೋ ಅವು ಈ ಪ್ರಶ್ನೆಗೆ ಉತ್ತರವನ್ನು ಕೊಡಲಾರವು. ಬೇರೆ ಬೇರೆ ಕಾರಣಗಳಿಂದ ಇದರಲ್ಲಿ ಅತಿರೇಕವಾಗಬಹುದು. ಆದರೆ ಭಾರತೀಯ ಸ್ವರಾಜ್ಯದೊಂದಿಗೆ ಇಂಗ್ಲೆಂಡ್ ಮಹಾರಾಣಿಯ ಸಂಬಂಧವೇನು ಇದರ ನಿರ್ಧಾರವಾಗಬೇಕು. ಏಕೆಂದರೆ ರಾಜನೈತಿಕ ಶಿಷ್ಟಾಚಾರ ಈ ವಿಷಯದ ಮೇಲೆಯೇ ಆಧರಿಸಲ್ಪಟ್ಟಿದೆ. ಮಹಾರಾಣಿಯ ಬಗ್ಗೆ ಭಕ್ತಿಯ ಪರಿಣಾಮ ರಾಷ್ಟ್ರಮಂಡಲದ ಬಗ್ಗೆ ಕಟ್ಟುನಿಟ್ಟಾದ ನಿಶ್ಚಯವಾದ ವ್ಯಾಖ್ಯೆಯನ್ನು ಎಲ್ಲಿಯೂ ಹೇಳಲಾಗಿಲ್ಲ. ಆದ್ದರಿಂದ ವೈಧಾನಿಕ ದೃಷ್ಟಿಯಿಂದ ಅದು ಒಂದು ಅಸ್ಪಷ್ಟವಾದ ಕಲ್ಪನೆ. ಭಾರತವು ಗಣರಾಜ್ಯವಾಗಿರುವ ಹಾಗೂ ರಾಷ್ಟ್ರಮಂಡಲದ ಸದಸ್ಯತ್ವವನ್ನು ಸ್ವೀಕರಿಸುವುದಕ್ಕೆ ಮೊದಲು ಅದರ ಸ್ವರೂಪ ಕಲ್ಪನೆಗೆ ಯಾವ ಮಾನ್ಯತೆ ಇತ್ತೋ ಅದು 1926ರ ಬಾಲ್‍ಫೋಕ್ ಘೋಷಣೆಯ ಅನುಸಾರವಾಗಿ ಕೆಳಗೆ ಕಾಣಿಸಿರುವಂತೆ ಬರೆಯಲಾಗಿದೆ. ಈ ರಾಷ್ಟ್ರಮಂಡಲದ ಸದಸ್ಯರು ಬ್ರಿಟಿಷ್ ಸಾಮ್ರಾಜ್ಯದ ಅಂತರ್ಗತ ಸ್ವಾಯತ್ತ ರಾಷ್ಟ್ರಗಳು ಸ್ಥಾನಮಾನಗಳಲ್ಲಿ ಸಮಾನ ಹಾಗೂ ತಮ್ಮ ಆಂತರಿಕ ವಿಷಯಗಳು ಅಥವಾ ವಿದೇಶೀ ಸಂಬಂಧಗಳಲ್ಲಿ ಯಾವುದೇ ರೀತಿಯಲ್ಲಿ ಒಬ್ಬರು ಇನ್ನೊಬ್ಬರ ಅಧೀನರಲ್ಲ. ಬ್ರಿಟಿಷ್ ರಾಜಮುಕುಟದ ವಿಷಯದಲ್ಲಿ ಸಮಾನ ನಿಷ್ಠೆಯಿಂದ ಬಂಧಿತರಾಗಿದ್ದರೂ ಬ್ರಿಟಿಷ್ ರಾಷ್ಟ್ರಮಂಡಲದ ಸದಸ್ಯರಾಗಿ ಸ್ವತಂತ್ರತಾ ಪೂರ್ವಕವಾಗಿ ಸಂಬದ್ಧರು. 304 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆದರೆ ರಾವೀ ದಡದಲ್ಲಿ ಕಾಂಗ್ರೆಸ್ ಪೂರ್ಣಸ್ವಾತಂತ್ರ್ಯದ ಪ್ರಸ್ತಾವನೆಯನ್ನು ಸ್ವೀಕರಿಸಿದಾಗ ಅದನ್ನು ಇದು ಒಪ್ಪಲಿಲ್ಲ. ಇದರಲ್ಲಿ ಸಮಾನತೆ ಅಲ್ಲ, ಆದರೆ ಅಧೀನತೆ ಇತ್ತು. ಈಗಿನ ರಾಷ್ಟ್ರಮಂಡಲ ನಿಶ್ಚಯವಾಗಿಯೂ ಇದಕ್ಕಿಂತ ಭಿನ್ನ. ಮೇಲಿನ ಘೋಷಣೆಯಲ್ಲಿ ಈಗ `ಆಟಾನಮಸ್ (ಸ್ವಾಯತ್ತ) ಎಲಿಗೆನ್ಸ್ (ನಿಷ್ಠೆ) ಹಾಗೂ ಬ್ರಿಟಿಷ್ ಶಬ್ದಗಳನ್ನು ತೆಗೆದು ಹಾಕಲಾಗಿದೆ. ಈಗ ಬ್ರಿಟಿಷ್ ರಾಷ್ಟ್ರಮಂಡಲದ ಸ್ಥಾನದಲ್ಲಿ ಕೇವಲ `ರಾಷ್ಟ್ರಮಂಡಲ' ಶಬ್ದವಿದೆ. ಹಾಗೂ ರಾಜಸಿಂಹಾಸನದ ವಿಷಯದಲ್ಲಿ ನಿಷ್ಠೆಯ ಜಾಗದಲ್ಲಿ ಅದಕ್ಕೆ ಸಮಾನ ಸಂಬಂಧಗಳ ಪ್ರತೀಕದ ವಿಷಯವಾಗಿ `ರಾಷ್ಟ್ರಮಂಡಲದ ಅಧ್ಯಕ್ಷ' ಎಂದು ಸ್ವೀಕರಿಸಲಾಗಿದೆ. ಸ್ವಾಯತ್ತತೆಯ ಸ್ಥಾನವನ್ನು ಸ್ವಾತಂತ್ರ್ಯ ತೆಗೆದುಕೊಂಡಿದೆ. ಡಾಕ್ಟರ್ ರಾಧಾಕೃಷ್ಣನ್ ಅವರು `ರಾಷ್ಟ್ರ ಮಂಡಲ'ದ ವ್ಯಾಖ್ಯೆಯನ್ನು ನಿಮ್ನಲಿಖಿತ ಶಬ್ದಗಳಲ್ಲಿ ಮಾಡಿದ್ದಾರೆ. ರಾಷ್ಟ್ರಮಂಡಲದ ಅರ್ಥಪೂರ್ಣ ಸ್ವಾತಂತ್ರ್ಯ, ಹಾಗೂ ಅನೌಪಚಾರಿಕ ಸಂಬಂಧ ಆದರ್ಶಗಳದ್ದು, ಅಧೀನತೆಯದಲ್ಲ; ಉದ್ದೇಶಗಳದ್ದು ನಿಷ್ಠೆಗಳ ಪಾಲುದಾರಿಕೆಯಲ್ಲಿ ನಮ್ಮ ಸಮಸ್ಯೆಗಳ ಅಧಿಕ ಹಾಗೂ ಒಳ್ಳೆಯ ಸಂಗ್ರಹವಿರುವ ಸಹವಿಚಾರಗಳದ್ದು, ರಾಷ್ಟ್ರ ಸದಸ್ಯರ ಸ್ವಾತಂತ್ರ್ಯವನ್ನು ಮಿತಿಗೊಳಿಸುವ ಬಂಧನಕಾರಿ ನಿರ್ಣಯಗಳನ್ನು ಉದ್ಧೃತ ಮಾಡುವುದಲ್ಲ. ಈ ಎರಡು ಕಲ್ಪನೆಗಳಲ್ಲಿ ನಿಶ್ಚಯವಾಗಿಯೂ ಅಂತರವಿದೆ. ಮತ್ತು ಸಂಭವತಃ ಅದೇ ಆಧಾರದ ಮೇಲೆ ಭಾರತವು ರಾಷ್ಟ್ರಮಂಡಲದಲ್ಲಿರುವುದನ್ನು ಸ್ವೀಕಾರಮಾಡಿತು. ಆದರೆ ಮಹಾರಾಣಿಯ ಆಗಮನ ಹಾಗೂ ಭಾರತ ಸರ್ಕಾರದ ಮೂಲಕ ಪ್ರಯುಕ್ತ ರಾಜನೈತಿಕ ಶಿಷ್ಟಾಚಾರವು ನಾವು ಇದನ್ನು ನಿರುಪಾಯರಾಗಿ ಯೋಚಿಸುವಂತೆ ಮಾಡಿದೆ. ಅದು ಏನೆಂದರೆ ಈ ಸಂಬಂಧವು 1926ರ ಘೊಷಣೆಗಿಂತ ಮೂಲತಃ ಭಿನ್ನವೋ ಅಲ್ಲವೋ? ನಿರ್ಣಯದ ಅಧಿಕಾರವನ್ನು ನಮಗೇ ಒಪ್ಪಿಸಿಕೊಟ್ಟಿರಬಹುದು. ಆದರೆ ನಾವು ಕೊನೆಯಲ್ಲಿ ಬಂಧನಕ್ಕೊಳಗಾಗುವುದು ಶತಸಿದ್ಧವಾಗಿರುವಂತಹ ನಿರ್ಣಯವನ್ನೇ ತೆಗೆದುಕೊಂಡೆವು ಡಾ. ರಾಜೇಂದ್ರ ಪ್ರಸಾದ್ ಅವರು ಪಾಲಂ ವಿಮಾನ ನಿಲ್ದಾಣದಲ್ಲಿ ಮಹಾರಾಣಿಯವರನ್ನು ಸ್ವಾಗತಿಸುತ್ತಾ ಭಾರತ ಮತ್ತು ಬ್ರಿಟನ್ನಿನ ಇನ್ನೂರು ವರ್ಷಗಳ ಸಂಬಂಧ ಹಾಗೂ ಭಾರತದ ಜೀವನ ಮತ್ತು ಸಂಘಟನೆಗಳ ಮೇಲೆ ಬ್ರಿಟಿಷ್ ವಿಚಾರಗಳ ಪ್ರಭಾವವನ್ನು ಉಲ್ಲೇಖಿಸಿದ್ದಾರೆ. ಇಂಗ್ಲಿಷ್‌ನ್ನು ಸ್ವೀಕಾರ ಮಾಡುವುದಕ್ಕೆ ಅಥವಾ ತನ್ನ ರಾಜನೀತಿಯನ್ನು ಇಂಗ್ಲೆಂಡಿನ ಪರಂಪರೆಗಳಿಗೆ ಅನುಸಾರವಾಗಿ ನಡೆಸುವುದಕ್ಕೆ ಸ್ವತಂತ್ರ ಭಾರತಕ್ಕೆ ಯಾವ ಬಂಧನವೂ ಇಲ್ಲ ಎನ್ನುವುದೇನೋ ಸರಿ. ಆದರೆ ನಾವು ಸ್ವೇಚ್ಛೆಯಿಂದಲೇ (ಒಂದು ವೇಳೆ ಬಂಧನವಿದ್ದರೆ ಅದು ತಿಳಿದಿಲ್ಲ.) ಮಹಾರಾಣಿಗೆ ಭಕ್ತಿ ತೋರಿಸುವುದಕ್ಕೆ ಸಿದ್ಧರಾದೆವು. ಆದರೆ ಅದರ ಪರಿಣಾಮ ನಮಗೆ ಬಂಧನಕಾರಿಯೇ ಆಗುವುದು. ಮಧ್ಯಪ್ರದೇಶದ ಪತ್ರ 305 ಇಂದಿನ ಅವಶ್ಯಕತೆ ಆರ್ಥಿಕ ನೀತಿಯ ಪುನರ್ಮೂಲ್ಯಾಂಕನವಾಗಲಿ -ಪಂ. ದೀನ್‍ದಯಾಳ್ ಉಪಾಧ್ಯಾಯ ಮಹಾಕವಿ ಬಿಹಾಂ ತನ್ನ ಒಂದು `ದೋಹಾ' (ಪದ್ಯ)ದಲ್ಲಿ ಹೇಳಿದ್ದಾನೆ. ``ಕನಕ ಕನಕತೆ ಸೌ ಗುನೋ, ಮಾದಕತಾ ಅಧಿಕಾಯ್ | ಯಾ ಪಾಯೇ ಚೌರಾತ ಹೈ, ವಾ ಖಾಯೇ ಚೌರಾಯ" (`ಕನಕ' ಶಬ್ದಕ್ಕೆ ಎರಡು ಅರ್ಥವಿದೆ (1) ದತ್ತೂರಿಬೀಜ (2) ಬಂಗಾರ, ಹೇ ಕನಕವೇ ಅಂದರೆ ದತ್ತೂರಿಬೀಜವೇ ನಿನ್ನ ಮಾದಕತೆ ಬಹಳ. ನಿನ್ನ ಸೇವಿಸಿದರೆ ಮತ್ತು ಬರುವುದು ಆ ಕನಕವನ್ನು ಮುಟ್ಟಿದರೆ ಸಾಕು ಮತ್ತು ಬರುತ್ತೆ) ಬಿಹಾರಿಯಿಂದ ಪ್ರೇರಣೆಯನ್ನು ಪಡೆದೇ ಮುರಾರ್ಜಿಯವರಿಗೆ ದೇಶದ ನಶೆಯನ್ನು ಇಳಿಸುವ ನಶೆ ಹತ್ತಿದ ಸಾಧ್ಯತೆ ಇದೆ. ಹಳೆಯ ಮುಂಬೈನ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಹೆಂಡ ನಿಷೇಧವನ್ನು ಎಷ್ಟು ಕಠೋರತೆಯಿಂದ ಅನ್ವಯಿಸಿದರೆಂದರೆ ಒಂದು ಸಲವಂತೂ ಭಾರಿ ಹೆಂಡಕುಡುಕರೇ ಪಶ್ಚಾತ್ತಾಪಪಡಬೇಕಾಯಿತು. ಹೆಂಡ ಕುಡಿಯುವವರ ಅಸ್ತವ್ಯಸ್ತವಾಗಿದ್ದ ಉಸಿರು ಮತ್ತು ಅಬಕಾರಿ ವಿಭಾಗದ ತಣ್ಣಗಾದ ಉಸಿರು ಎರಡೂ ಭಟ್ಟಿ ಇಳಿಸುವವರ ಕಾರಣದಿಂದ ಹಿಂದಕ್ಕೆ ಬಂತು. ಅವರಿಗೆ ಒಳ್ಳೆಯದಾಗಲಿ. ಸರ್ಕಾರವು ನೀರಾ ಕೇಂದ್ರವನ್ನು ತೆರೆಯಿತು. ಆದರೆ ಮನೆಮನೆಯಲ್ಲಿ ಮಧುಶಾಲೆಯ ಅನುಕೂಲವಿರುವಾಗ ನೀರಸ `ನೀರಾ' ಹಿಂದೆ ಓಡುವ ಕಷ್ಟವನ್ನು ಯಾರು ತೆಗೆದುಕೊಳ್ಳುತ್ತಾರೆ? ಸರ್ಕಾರಿ ಕಾಗದಗಳಲ್ಲಿ `ಹೆಂಡ ನಿಷೇಧ' ನಡೆಯುತ್ತಿತ್ತು. ತೆರಿಗೆಯ ಹಾನಿ ಮತ್ತು ಹೆಂಡ ನಿಷೇಧ ವಿಭಾಗದ ಖರ್ಚು ಎರಡರ ಹೊಡೆತವೂ ಹೆಚ್ಚುತ್ತಿತ್ತು. ಮತ್ತೊಂದು ಕಡೆ ವ್ಯವಹಾರದಲ್ಲಿ `ಕುಡಿ ಮತ್ತು ಕುಡಿಸು' ಘೋಷಣೆಯೂ ಮುಂಬೈನ ಗಲ್ಲಿಗಳು ಮತ್ತು ಪ್ರವಾಸಗಳಲ್ಲಿ ಕೆಲಸಮಾಡುತ್ತಿತ್ತು. ಮಹಾಕವಿ ಚೌಕ್‍ನ ಅನುಸಾರ ``ರಾತ್ರಿ ಕುಡಿದುಬಿಟ್ಟೆ, ಬೆಳಿಗ್ಗೆ ಪಶ್ಚಾತ್ತಾಪ ಪಟ್ಟೆ. ಸ್ವಚ್ಛಂದವಾಗಿದ್ದುದ್ದೂ ಅಲ್ಲದೆ ಕೈಯಿಂದ ಸ್ವರ್ಗ ತಪ್ಪಿಹೋಗಲಿಲ್ಲ." ಸರ್ಕಾರದ ರೀತಿಯನ್ನು ಒಪ್ಪುವವರು 11-2-193 ಪಾಂಚಜನ್ಯ 306 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಈ ಯೋಜನೆಯನ್ನು ಭಾರಿ ಪ್ರಶಂಸೆ ಮಾಡಿದರು. ಈ ಮೋಸದ ನಡವಳಿಕೆಗಳು ಹಿಂದಿನ ಇಪ್ಪತ್ತು ವರ್ಷಗಳಿಂದ ಮುಂಬೈ ಮಾತ್ರವಲ್ಲ ದೇಶದ ಅನೇಕ ಭಾಗಗಳಲ್ಲಿ ನಡೆಯುತ್ತಿದೆ. ಪಂಚಮಹಾಪಾತಕಗಳಲ್ಲಿ ಮದ್ಯಪಾನವನ್ನು ಎಣಿಸುತ್ತಾರೆ. ಆದ್ದರಿಂದ ಈ ಯೋಜನೆಯ ಸದುದ್ದೇಶವನ್ನು ಒಪ್ಪಿದುದರಿಂದ ಜನರು ಅದನ್ನು ವಿರೋಧಿಸಲಿಲ್ಲ ಮತ್ತು ಯಾರಾದರೂ ಯಾವಾಗಲಾದರೂ ಬಾಯಿ ತೆರೆದರೆ ಅದನ್ನು ಪಾಪಿ ಎಂದು ಪರಿಗಣಿಸಲಾಯಿತು. ತೆರಿಗೆಯ ಚಿಂತೆ ಚೀನಿ ಆಕ್ರಮಣಕಾರರು ಯಾವಾಗ ಕಮ್ಯುನಿಸಂನ ನಶೆಯಲ್ಲಿ ಮತ್ತರಾಗಿ ಭಾರತದ ಮೇಲೆ ಆಕ್ರಮಣವನ್ನು ಘೋಷಿಸಿದರೋ ಆಗ ಇಲ್ಲಿಯೂ ಕೆಲವರ ತೂಕಡಿಕೆ ನಿಂತಿತು. ಅವರಿಗೆ ವಾಸ್ತವಿಕತೆಯ ದರ್ಶನವಾಯಿತು. ಈ ಯೋಜನೆಯ ಕೆಲವು ಅಂಶಗಳನ್ನು ಬದಲಾಯಿಸಬೇಕೆಂದು ಅವರು ಯೋಚಿಸಿದರು. ಅವರಿಗೆ ಜನರಿಗೆ ಕುಡಿಯುವ, ಕುಡಿಸುವ ಯಾವ ಚಿಂತೆಯೂ ಇರಲಿಲ್ಲ. ಆದರೆ ತೆರಿಗೆಯ ಚಿಂತೆ ಹಚ್ಚಿತು. ಆದರೆ ಒಂದೆರಡು ಹಗುರವಾದ ಹೊಡೆತಕ್ಕೆ ಮಾಯವಾಗುವುದಕ್ಕೆ ಇದು ಯಾವುದಾದರೂ ನಶೆಯೇ? ಈ ಯೋಜನೆಗೆ ತಿಲಾಂಜಲಿ ಕೊಡಬಾರದೆಂದು ಶ್ರೀ ಮುರಾರ್ಜಿಯವರಿಗೆ ಸಲಹೆಕೊಟ್ಟರು. ಅವರಿಗೆ ಹಣದ ಅವಶ್ಯಕತೆ ಇದ್ದರೆ ಅದಕ್ಕಾಗಿ ಹೊಸ ಉಪಾಯ ಹುಡುಕಲಿ. ಕೇಂದ್ರವೂ ಸ್ವಲ್ಪ ಸಹಾಯ ಮಾಡುವುದು ದೇಶದ ಜನತೆ ಎಲ್ಲಿಯವರೆಗೆ ಸುಸ್ಥಿರವಾಗಿರುವರೋ ಅವರ ಮೇಲೆ ಹೊಸ ಹೊಸ ತೆರಿಗೆಗಳನ್ನು ವಿಧಿಸುವುದಕ್ಕೆ ಬರುತ್ತದೆ. ಸ್ವರ್ಣ ನಿಯಂತ್ರಣದ ಅವ್ಯವಹಾರಿಕ ಯೋಜನೆ ಶ್ರೀ ಮೊರಾರ್ಜಿ ದೇಸಾಯಿ ಅವರ ಅತ್ಯಂತ ಪ್ರಿಯ ಯೋಜನೆಯ ಭವಿಷ್ಯವು ಸುಳಿಯಲ್ಲಿದ್ದಂಥ ಸಮಯದಲ್ಲಿಯೇ ಅವರು ಸ್ವರ್ಣನಿಯಂತ್ರಣದ ಮತ್ತೊಂದು ಯೋಜನೆಯನ್ನು ತೆಗೆದುಕೊಂಡು ಮೈದಾನದಲ್ಲಿ ಧುಮುಕಿದರು. ಮೊದಲ ಯೋಜನೆಯಂತೆ ಎರಡನೆಯ ಯೋಜನೆಯೂ ಒಳ್ಳೆಯ ಉದ್ದೇಶದ್ದೇ ಆಗಿತ್ತು, ಆದರೆ ಅವ್ಯವಹಾರಿಕವಾಗಿತ್ತು ಎಂದು ಹೇಳಿದರೆ ಸುಳ್ಳಾಗುವುದಿಲ್ಲ. ಆರ್ಥಿಕ ದೃಷ್ಟಿಯಿಂದ ವರ್ತಮಾನ ಯುಗದಲ್ಲಿ ಚಿನ್ನದಲ್ಲಿ ಹಣಹೂಡಿಕೆ ವಿಶೇಷ ಮಹತ್ವವನ್ನು ಉಳಿಸಿಕೊಂಡಿಲ್ಲ. ಬದಲಾಗಿ ಕೆಲವು ಅಂಶಗಳಲ್ಲಿ ಅದು ಹಾನಿಕಾರಕವೇ. ಯಾವ ಭಾರಿ ಪ್ರಮಾಣದಲ್ಲಿ ಚಿನ್ನದ ಕಳ್ಳವ್ಯಾಪಾರ ಹಿಂದಿನ ವರ್ಷಗಳಲ್ಲಿ ನಡೆಯುತ್ತಾ ಬಂದಿದೆಯೋ ಅದರಿಂದ ದೇಶದ ವಿದೇಶೀ ಹಣದ ಖಜಾನೆಯ ಮೇಲೆ ವಿರುದ್ಧ ಪರಿಣಾಮವಾಯಿತು. ಒಂದು ವೇಳೆ ಜನರು ಚಿನ್ನವನ್ನು ಖರೀದಿಸುವ ಜಾಗದಲ್ಲಿ ಮಧ್ಯಪ್ರದೇಶದ ಪತ್ರ 307 ಹಣವನ್ನು ಬೇರೆ ವ್ಯಾಪಾರದಲ್ಲಿ ತೊಡಗಿಸಿದರೆ ಹೆಚ್ಚು ಲಾಭವಾಗುವುದು. ಈ ಕಾರಣಗಳಿಂದ ಒಂದು ವೇಳೆ ಜನರ `ಕನಕ'ದ ಮತ್ತು ಕಡಿಮೆಯಾದರೆ ಉತ್ತಮವಾಗುವುದು. ಆದರೆ ಅದು ಆಗುವದು ಹೇಗೆ? ಸಫಲತೆ ಸಂದೇಹಾಸ್ಪದ ಕೇಂದ್ರೀಯ ಹಣಕಾಸು ಮಂತ್ರಿ ಜನಜೀವನದಲ್ಲಿ ಈ ಮಾನಸಿಕ ಕ್ರಾಂತಿಯನ್ನು ಕಾನೂನಿನ ಸಹಾಯದಿಂದ ಮಾಡಬಯಸುತ್ತಾರೆ. ಈ ಕಾರಣದಿಂದ ಅವರು ಸ್ವರ್ಣನಿಯಂತ್ರಣ ನಿಯಮವನ್ನು ಅನ್ವಯಿಸಿದ್ದಾರೆ. ಅವರು ಎಲ್ಲಿಯವರೆಗೆ ಸಫಲರಾಗುತ್ತಾರೋ, ಇದನ್ನು ಭವಿಷ್ಯವೇ ಹೇಳಬೇಕು. ಆದರೆ ಇಷ್ಟನ್ನಂತೂ ಸ್ಪಷ್ಟವಾಗಿ ಹೇಳಬಹುದು. ಅದು ಯಾವುದೆಂದರೆ ಈ ಯೋಜನೆಯನ್ನು ಜಾರಿಗೊಳಿಸುವ ಸಮಯದಲ್ಲಿ ಅವರು ಅದರ ಮಾನವೀಯ ದೃಷ್ಟಿಕೋನ ಹಾಗೂ ಆರ್ಥಿಕ ಕಾರಣಗಳ ವಿಶ್ಲೇಷಣೆಯನ್ನು ಪೂರ್ತಿಯಾಗಿ ಮಾಡಲಿಲ್ಲ. ಭಾರತದ ಚಿನ್ನದ ಬಗೆಗಿನ ಹಸಿವಿಗೆ ಮೂರು ಮುಖ್ಯ ಆರ್ಥಿಕ ಕಾರಣಗಳಿವೆ. (1) ರೂಪಾಯಿಯ ಮೌಲ್ಯದ ಕುಸಿತ, (2) ಹಣಕಾಸಿನ ವ್ಯವಹಾರ ವ್ಯವಸ್ಥೆಯಲ್ಲಿ ಕೊರತೆ (3) ವಿನಿಯೋಜನೆಯ ಮಾರ್ಗದಲ್ಲಿ ಕಠಿಣತೆ. ಇದಲ್ಲದೆ ಸಂಭಾವತಃ ತೆರಿಗೆ ವ್ಯವಸ್ಥೆಯ ತೊಡಕುಗಳು ಹಾಗೂ ಅವ್ಯವಹಾರಿಕತೆ ಮತ್ತು ತೆರಿಗೆಯ ಆಧಿಕ್ಯವೂ ಕೆಲವು ಅಂಶಗಳಲ್ಲಿ ಚಿನ್ನದ ಬೇಡಿಕೆಗೆ ಜವಾಬ್ದಾರಿಯಾಗಿದೆ. ಸರ್ಕಾರವು ಈ ಬೇಡಿಕೆಗಳನ್ನು ದೂರಮಾಡದೆ ಚಿನ್ನದ ಬೇಡಿಕೆಯ ಮೇಲೆ ನಿಯಂತ್ರಣ ಮಾಡಬಯಸುತ್ತದೆ. ಅದರಲ್ಲಿ ಸಫಲತೆ ಸಂದೇಹಾಸ್ಪದ ಎನ್ನುವುದು ನಿಶ್ಚಿತ. ಅದು ಎರಡೂ ಕಡೆಗಳಿಂದ ಮುಂದುವರಿಯುವುದು ಒಳ್ಳೆಯದು. ಆರ್ಥಿಕ ನೀತಿಗಳಲ್ಲಿ ಮೌಲಿಕ ಪರಿವರ್ತನೆ ಅಗತ್ಯ. ಸ್ವರ್ಣ ನಿಯಂತ್ರಣದ ನಿಯಮಗಳಲ್ಲಿ ಚಿನ್ನ ಮತ್ತು ಚಿನ್ನದ ಒಡವೆಗಳಲ್ಲಿ ಭೇದ ಮಾಡಿ, ಒಂದು ಕಡೆಯಾದರೋ ಚಿನ್ನವನ್ನು ಮುಚ್ಚಿಡುವ ಮಾರ್ಗವನ್ನು ತೆರೆದಿದ್ದಾರೆ. ಮತ್ತೊಂದು ಕಡೆ 14 ಕ್ಯಾರೆಟ್‍ನ ನಿಯಮವನ್ನು ಮಾಡಿ ದೇಶದ ಲಕ್ಷಾಂತರ ಅಕ್ಕಸಾಲಿಗರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಸರ್ಕಾರವು 50 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳುವುದಕ್ಕೆ ರಿಯಾಯಿತಿ ಕೊಟ್ಟಿರುವಾಗ ಒಡವೆಯ ರೂಪದಲ್ಲಿ ಚಿನ್ನವನ್ನು ಇಟ್ಟುಕೊಳ್ಳುವ ಬೇರೆಯೇ ರಿಯಾಯಿತಿ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ. ಒಂದು ವೇಳೆ 50ಗ್ರಾಂನ ಜಾಗದಲ್ಲಿ ಈ ರಿಯಾಯಿತಿಯನ್ನು ಹೆಚ್ಚಿಸಿ 100 ಅಥವಾ 150 ಗ್ರಾಂಗಳವರೆಗೆ ಮಾಡಿದ್ದರೆ ಮತ್ತು ಅದರಲ್ಲಿ ಒಡವೆಗಳನ್ನು ಸೇರಿಸಿದ್ದಿದ್ದರೆ ಕಷ್ಟಪೂರ್ತಿಯಾಗಿ ದೂರವಾಗುತ್ತಿತ್ತು. 308 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಂತರ ಜನರು ಒಂದು ನಿಶ್ಚಿತ ಇತಿಮಿತಿಯ ಒಳಗೆ ತಮ್ಮ ಮರ್ಜಿಯ ಶುದ್ಧತೆಯ ಒಡವೆಗಳನ್ನು ಮಾಡಿಸಿಕೊಳ್ಳಬಲ್ಲರು. ಇಂದು ಯಾವ ಭಾರಿ ಪ್ರಮಾಣದಲ್ಲಿ ಅಕ್ಕಸಾಲಿಗರು ನಿರುದ್ಯೋಗಿಗಳಾಗಿದ್ದಾರೆಂದರೆ ಅವರಿಗೆ ಬೇರೆ ಕೆಲಸವನ್ನು ಕೊಡಿಸುವುದು ಅಥವಾ ಅವರಿಗೆ ಪ್ರಶಿಕ್ಷಣದ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಜೊತೆಯಲ್ಲಿಯೇ 14 ಕ್ಯಾರೆಟ್‍ನ ಶುದ್ಧತೆಯ ಒಡವೆಯನ್ನು ಕೇವಲ ಮೆಶೀನಿಂದಲೇ ಮಾಡಬಹುದು ಮತ್ತು ಅದರ ಪರಿಣಾಮವೇನಾಗುವುದು ಎಂದರೆ ಒಂದು ವಿಕೇಂದ್ರಿತ ಉದ್ಯೋಗ ಕೆಲವು ಕೈಗಳಲ್ಲಿ ಕೇಂದ್ರಿತವಾಗುವುದು. ಮೊರಾರ್ಜಿ ಅಣ್ಣನವರು ಹೇಳುವ ಹಾಗೆ ತಾಮ್ರದ ಜಾಗದಲ್ಲಿ ಬೆಳ್ಳಿಯನ್ನು ಮಿಶ್ರಮಾಡಿದರೆ 14 ಕ್ಯಾರೆಟ್‍ನ ಒಡವೆಯನ್ನು ಎಲ್ಲ ಕಡೆಯೂ ಮಾಡಬಹುದು ಎನ್ನುವುದ ಸರಿಯಲ್ಲ. ಒಡವೆಯನ್ನು ಮಾಡುವವರ ಅಭಿಪ್ರಾಯದಲ್ಲಿ ಅದರ ಪರಿಣಾಮ ಚಿನ್ನದ ಬಣ್ಣದ ಮೇಲೆ ಬೀಳುವುದು. ಒಡವೆಗಳ ಜೊತೆಜೊತೆಗೆ ಚಿನ್ನದ ಉಪಯೋಗ ಔದ್ಯೋಗಿಕ ಹಾಗೂ ಔಷಧಿಗಳ ನಿರ್ಮಾಣ ಕ್ಷೇತ್ರದಲ್ಲಿಯೂ ಆಗುತ್ತದೆ. ಇದರ ವಿಷಯದಲ್ಲಿಯೂ ಪೂರ್ಣ ಚಿಂತನೆಗಳಾಗಿಲ್ಲ. ಲೈಸನ್ಸ್ ಫೀಸನ್ನು ಎಷ್ಟು ಹೆಚ್ಚು ಇಟ್ಟಿದ್ದಾರೆಂದರೆ ಸಣ್ಣಪುಟ್ಟ ಜನರಿಗೆ ದುರ್ಭರವಾಗುವುದು. ಈ ವಿಚಾರದ ಬಗ್ಗೆ ಪುನರ್ವಿಚಾರ ಮಾಡುವ ಅವಶ್ಯಕತೆ ಇದೆ. ಜೊತೆಯಲ್ಲಿಯೇ ಚಿನ್ನದ ಬೇಡಿಕೆಗಾಗಿ ಜವಾಬ್ದಾರಿಯಾಗಿರುವ ಕಾರಣಗಳನ್ನು ದೂರಮಾಡುವುದಕ್ಕೆ ದೇಶದ ಆರ್ಥಿಕ ನೀತಿಯಲ್ಲಿ ಸಹ ಮೌಲಿಕ ಬದಲಾವಣೆ ಮಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಸಂಪೂರ್ಣ ಸ್ವರ್ಣ ಯೋಜನೆ ಸತ್ವಹೀನವೆಂದು ಸಿದ್ಧವಾಗುವುದು. ಏನು ಮತದಾರರು ಸಮಯದ ಸವಾಲಿನ ಉತ್ತರ ಕೊಡುವರೇ ? ಶ್ರೀ ದೀನ್ ದಯಾಳ್ ಉಪಾಧ್ಯಾಯ, ಮಹಾಮಂತ್ರಿ ಭಾರತೀಯ ಜನಸಂಘ ಈಗ ಇಬ್ಬರು ಸದಸ್ಯರ ಚುನಾವಣಾ ಕ್ಷೇತ್ರವನ್ನು ಬೇರ್ಪಡಿಸುವುದರಿಂದ ಪ್ರತ್ಯೇಕ ವ್ಯಕ್ತಿಗೆ ಲೋಕಸಭೆ ಮತ್ತು ವಿಧಾನಸಭೆಗೆ ಒಂದು ಮತವನ್ನು ಕೊಡುವ ಅಧಿಕಾರವಿರುತ್ತದೆ. ಅವನು ಅನೇಕ ಅಭ್ಯರ್ಥಿಗಳ ಪೈಕಿ ಒಬ್ಬರನ್ನೇ ಆರಿಸಬೇಕಾಗುವುದು. ಆದ್ದರಿಂದ ಈಗ ಒಂದು ಓಟಿನ ಮೂಲಕ ನೀವು ವಿಭಿನ್ನ ಪ್ರತಿದ್ವಂದ್ವಿಗಳನ್ನು ಸಂತೋಷಪಡಿಸಲಾರಿರಿ. ಆದ್ದರಿಂದ ಮತದಾನ ಮಾಡುವಾಗ ನೀವು ಅಭ್ಯರ್ಥಿ, ಅವನ ಸಂಬಂಧಿತ ಪಕ್ಷ ಮತ್ತು ಅವನ ಆದರ್ಶಗಳ ವಿಚಾರಮಾಡಬೇಕಾಗುವುದು. ಒಬ್ಬ ಅಯೋಗ್ಯ ಒಂದು ಒಳ್ಳೆಯ ಪಕ್ಷದೊಂದಿಗೆ 11 ಜನವರಿ 1963 ಪಾಂಚಜನ್ಯ ಮಧ್ಯಪ್ರದೇಶದ ಪತ್ರ 309 ಅವನ ಸಂಬಂಧವಿದೆ ಎಂಬ ಆಧಾರದ ಮೇಲೆ ನಮ್ಮ ಮತವನ್ನು ಪಡೆದುಕೊಳ್ಳುವ ಅಧಿಕಾರಿಯಲ್ಲ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುವುದು. ಕೆಟ್ಟವನು ಯಾವಾಗಲೂ ಕೆಟ್ಟವನೇ ಆಗಿರುತ್ತಾನೆ. ಆದ್ದರಿಂದ ಅಯೋಗ್ಯ ವ್ಯಕ್ತಿಗೆ ನಮ್ಮ ಟಿಕೇಟ್ ಅನ್ನು ಕೊಡುವಾಗ ಆ ಪಕ್ಷವು ಸಂಸ್ಥೆಯ ಲಾಭದಿಂದ ಪ್ರಭಾವಿತವಾಗಿ, ಅಂಥ ನಿರ್ಣಯವನ್ನು ತೆಗೆದುಕೊಂಡಿದೆಯೋ ಅಥವಾ ಅಂಥ ಆಸೆ ಇಲ್ಲದಿರುವಾಗಲೂ ಅವರ ನಿರ್ಣಯ ತಪ್ಪಾಗಿರುವ ಸಾಧ್ಯತೆ ಇದೆ. ಆದ್ದರಿಂದ ತನ್ನ ಜಾಗರೂಕತೆಯ ಪರಿಚಯವನ್ನು ಕೊಟ್ಟು ಮೇಲೆ ಹೇಳಿದ ತಪ್ಪನ್ನು ಸರಿಮಾಡುವುದು ಜವಾಬ್ದಾರಿ ಮತದಾರನ ಕರ್ತವ್ಯವಾಗಿದೆ. ವಿದ್ಯುಚ್ಛಕ್ತಿಯ ಕಂಬದ ಯುಗ ಮುಗಿದುಹೋಯಿತು ಒಂದು ಕಾಲವಿತ್ತು. ಜನರು ಕಾಂಗ್ರೆಸ್‍ನ ಚಿಹ್ನೆ ಇರುವ ವಿದ್ಯುಚ್ಛಕ್ತಿಯ ಕಂಬಕ್ಕೆ ಸಹ ಓಟು ಕೊಡುವುದಕ್ಕೆ ಸಿದ್ಧರಾಗಿ ಕಾಣಿಸುತ್ತಿದ್ದರು. ಆದ್ದರಿಂದ ಈ ಕಾರಣದಿಂದಲೇ ಪ್ರಥಮ ಸಾಮಾನ್ಯ ಚುನಾವಣೆಯಲ್ಲಿ ಆಚಾರ್ಯ ನರೇಂದ್ರ ದೇವ ಮತ್ತು ಆಚಾರ್ಯ ಕೃಪಲಾನಿಯಂಥ ಮಹಾನ್ ವ್ಯಕ್ತಿತ್ವಗಳೂ ಸಹ ಕಾಂಗ್ರೆಸ್‍ನ ಚಿಕ್ಕಪುಟ್ಟವರ ಎದುರು ಸೋತುಹೋದರು. ಈಗ ವಿದ್ಯುಚ್ಛಕ್ತಿಯ ಕಂಬದ ಯುಗ ಮುಗಿದುಹೋಗಿದೆ. ಆದರೆ ಗಡಿಯಾರದ ಪೆಂಡ್ಯುಲಮ್ ಬೇರೊಂದು ತುದಿಯವರೆಗೆ ತಲುಪಿದೆ. ಆದ್ದರಿಂದಲೇ ಒಬ್ಬ ಸಜ್ಜನರು ಸ್ವಲ್ಪ ದಿನಗಳ ಹಿಂದ ಏನು ಹೇಳಿದರೆಂದರೆ, ಒಂದು ಮೈಲಿಗಲ್ಲಿಗೆ ನಮ್ಮ ಓಟು ಕೊಡಬಹುದೇ ಹೊರತು ಕಾಂಗ್ರೆಸ್‍ಗೆ ಅಲ್ಲ. ಆದರೆ ನೀವು ಕಾಂಗ್ರೆಸ್ಸಿನ ವಿದ್ಯುತ್ ಕಂಬಕ್ಕೆ ನಿಮ್ಮ ಮತ ಕೊಡಿ ಅಥವಾ ಕಾಂಗ್ರೆಸ್‍ನ ಬಗ್ಗೆ ಅತ್ಯಧಿಕ ಅಸಂತುಷ್ಟರಾಗಿರುವ ಕಾರಣ ಮೈಲಿಗಲ್ಲಿಗೋ. ಈ ಎರಡು ಸ್ಥಿತಿಗಳೂ ತಪ್ಪು ಮತ್ತು ಇದು ವ್ಯಕ್ತಿಯ ತಿಳುವಳಿಕೆ ಮತ್ತು ತರ್ಕ ಶಕ್ತಿಯೊಂದಿಗೆ ಹೊಂದಾಣಿಕೆ ಆಗುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷರ ದರ್ಪದ ಹೇಳಿಕೆ ಸಮಾಚಾರ ಪತ್ರಗಳ ಅನುಸಾರ ಕೆಲವು ದಿನಗಳ ಹಿಂದೆ ಕಾಂಗ್ರೆಸ್‍ನ ಅಧ್ಯಕ್ಷರು ಒಂದು ಜಾಗದಲ್ಲಿ ಏನು ಹೇಳಿದ್ದಾರೆ ಎಂದರೆ ಕಾಂಗ್ರೆಸ್‍ನ ಅತ್ಯಂತ ಕೆಟ್ಟ ವ್ಯಕ್ತಿ ಮತ್ತು ಅಯೋಗ್ಯ ವ್ಯಕ್ತಿಯೂ ವಿರೋಧಿ ದಳದ ಶ್ರೇಷ್ಠತಮ ವ್ಯಕ್ತಿಗಿಂತಾ ಒಳ್ಳೆಯವನು. ಇದನ್ನು ಓದಿ ನನಗೆ ಮೌಲಾನಾಶೌಕರ್ ಅಲಿಯ ಈ ವಾಕ್ಯವು ನೆನಪಿಗೆ ಬಂತು. ಏನೆಂದರೆ ``ನನ್ನ ದೃಷ್ಟಿಯಲ್ಲಿ ನಿಕೃಷ್ಠತಮ ಮುಸಲ್ಮಾನನೂ ಸಹ ಮಹಾತ್ಮಗಾಂಧಿಯಂತಹ ವ್ಯಕ್ತಿಗಿಂತ ಶ್ರೇಷ್ಠ". ಆದರೆ ಈ ಭಾವೋನ್ಮಾದವನ್ನು ಸರಿ ಎಂದು ಹೇಳಲಾಗುವುದೇ? ನನ್ನ 310 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅಭಿಪ್ರಾಯವೆಂದರೆ ಯಾವ ಮತದಾರನು ಈ ರೀತಿ ಪ್ರತಿಕ್ರಿಯಾವಾದದಿಂದ ಪ್ರಭಾವಿತನಾಗಿ ಹೀಗೆ ಯೋಚಿಸುತ್ತಾನೋ ಅವನನ್ನು ಮೇಲೆ ಹೇಳಿದ ಶ್ರೇಣಿಯಲ್ಲಿಯೇ ಪರಿಗಣಿಸಬೇಕಾಗುವುದು ಮತ್ತು ಅವನು ಘೋರ ಪ್ರತಿಕ್ರಿಯವಾದದಿಂದ ಪ್ರಭಾವಿತನಾಗಿದ್ದಾನೆಂದು ತಿಳಿಯಲಾಗುವುದು. ಆದ್ದರಿಂದ ನೀವು ವಿದ್ಯುಚ್ಛಕ್ತಿಯ ಕಂಬಗಳು, ಮೈಲಿಗಲ್ಲುಗಳನ್ನು ಚುನಾಯಿಸಬೇಡಿ. ಏಕೆಂದರೆ ಅವುಗಳು ನಮ್ಮ ಪ್ರತಿನಿಧಿಗಳಲ್ಲ. ಆದರೂ ಸಹ ಅವರು ಗೆದ್ದರೆ ಔಚಿತ್ಯ, ಅನೌಚಿತ್ಯಗಳ ವಿಚಾರಮಾಡಿ ನಿರ್ಣಯ ತೆಗೆದುಕೊಳ್ಳುವ ವಿವೇಕ ನಿಮ್ಮಲ್ಲಿ ಇಲ್ಲವೆಂದು ಹೇಳಲಾಗುವುದು. ಆದ್ದರಿಂದ ತಾವು ವಾಸ್ತವಿಕ ಅರ್ಥದಲ್ಲಿ ನಿಮ್ಮ ಪ್ರತಿನಿಧಿಯಾಗಿರುವಂತಹ ವ್ಯಕ್ತಿಯನ್ನು ನೀವು ವಿಜಯಿಗಳನ್ನಾಗಿ ಮಾಡಿರಿ. ಸೈದ್ಧಾಂತಿಕ ಆಧಾರದ ಮೇಲೆ ಜನಸಂಘ ಮತ್ತು ಕಮ್ಯುನಿಸ್ಟ್ ಆ ಒಂದು ಆಧಾರ ಭೂತ ಭೂಮಿಕೆಯನ್ನು ಅವಶ್ಯಕವಾಗಿ ಕೊಡುತ್ತದೆ. ಇದರಿಂದ ನಾಲ್ಕೂ ಕಡೆ ಕ್ರಮಶಃ ರಾಷ್ಟ್ರವಾದೀ ಮತ್ತು ವಿದೇಶಗಳಿಂದ ಪ್ರೇರಣೆಯನ್ನು ತೆಗೆದುಕೊಳ್ಳುವ ತತ್ವ ಏಕತ್ರಿತವಾಗಬಲ್ಲುದು. ಪಕ್ಷಗಳ ಸಂಘಟನೆಯ ಪ್ರಭಾವದ ದೃಷ್ಟಿಯಿಂದಲೂ ಮೇಲೆ ಹೇಳಿದ ಪಕ್ಷಗಳಲ್ಲದೆ ಬೇರೆ ಯಾವ ಪಕ್ಷವು ಇದರ ಅಧಿಕಾರಿ ಅಲ್ಲ. ಆದ್ದರಿಂದ ಈಗ ಮತದಾರನ ಕರ್ತವ್ಯವೇನೆಂದರೆ ತಮ್ಮ ಮತ ಮತ್ತು ಶಕ್ತಿಯನ್ನು ನಷ್ಟಗೊಳಿಸದೆ ಇದೇ ಆಧಾರದ ಮೇಲೆ ಹೇಳಿದ ಪಕ್ಷಗಳಿಗೆ ತಮ್ಮ ಸಮರ್ಥನೆಯನ್ನು ನೀಡಿ ಸಮಾನ ವಿಚಾರಧಾರೆಯ ಪಕ್ಷಗಳಿಗೆ ಒಟ್ಟಾಗುವ ಮತ್ತು ಪಕ್ಷಗಳ ಸಂಖ್ಯೆಯನ್ನು ಕಡಿಮೆಮಾಡುವುದಕ್ಕೆ ಬಾಧ್ಯರನ್ನಾಗಿ ಮಾಡುವುದು. ಗಮನದಲ್ಲಿಡಬೇಕು ಆದರೆ ಶ್ರೇಷ್ಠವ್ಯಕ್ತಿಯನ್ನು ಹುಡುಕುವ ಸಮಯದಲ್ಲಿ ಮೇಲೆ ಹೇಳಲಾದ ವ್ಯಕ್ತಿಯ ಸಂಬಂಧ ಬೇಕಾಗಿಯೇ ಇಲ್ಲ ಮತ್ತು ಕೆಟ್ಟ ಪಕ್ಷದೊಂದಿಗೆ ಇರಬಾರದು ಎಂಬ ವಿಷಯವನ್ನು ನೀವು ಗಮನದಲ್ಲಿಡಬೇಕು. ಏಕೆಂದರೆ ಒಬ್ಬ ಮಹಾಪರಾಕ್ರಮಿ ಮತ್ತು ಶೂರವೀರ ವ್ಯಕ್ತಿಯೂ ಸಹ ಯುದ್ಧ ಭೂಮಿಯಲ್ಲಿ ಮುರಿದ ಕತ್ತಿಯನ್ನು ಎತ್ತಿಕೊಂಡು ಅಥವಾ ನಿಶಸ್ತ್ರ್ಯನಾಗಿಯೇ ವಿಜಯಶ್ರೀಯನ್ನು ವರಿಸಲಾರ. ಈ ಸಂಬಂಧದಲ್ಲಿ ರಾಜರ್ಷಿ ಪುರುಷೊೀತ್ತಮದಾಸ್ ಟಂಡನ್ ಅವರ ಹೆಸರನ್ನು ಉಲ್ಲೇಖಿಸುವುದು ಸಾಕಾಗುತ್ತದೆ. ಶ್ರೇಷ್ಠ ಪಕ್ಷದ ಲಕ್ಷಣಗಳು ಈಗ ಒಳ್ಳೆಯ ಪಕ್ಷ ಎಂದು ಯಾವುದಕ್ಕೆ ಹೇಳಬಹುದು ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ನಾನು ತಿಳಿದುಕೊಂಡಿರುವುದೆಂದರೆ, ಒಂದು ಒಳ್ಳೆಯ ಪಕ್ಷ ಎಂದರೆ ರಾಜ್ಯದ ಮೇಲೆ ಅಧಿಕಾರವನ್ನು ಪಡೆಯಲು ಇಚ್ಛಿಸುವ ವ್ಯಕ್ತಿಗಳ ಒಂದು ಮಧ್ಯಪ್ರದೇಶದ ಪತ್ರ 311 ಸಮೂಹವಾಗಿರಕೂಡದು. ಕೇವಲ ಅಧಿಕಾರವನ್ನು ಪಡೆದುಕೊಳ್ಳುವುದೇ ಅಲ್ಲದೆ ತನ್ನ ಬೇರೆಯೇ ವೈಶಿಷ್ಟ್ಯವಿರುವಂಥ ಜೀವಂತ ಸಂಘಟನೆ ಆಗಿರಬೇಕು. ಇಂಥ ಪಕ್ಷದ ದೃಷ್ಟಿಯಿಂದ ರಾಜ್ಯದ ಮೇಲೆ ಅಧಿಕಾರ ಮಾಡುವುದು ಅದರ ಉದ್ದೇಶವಾಗದೇ ತನ್ನ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದಕ್ಕೆ ಒಂದು ಸಾಧನವಾಗುತ್ತದೆ ಮತ್ತು ಇದಕ್ಕಾಗಿ ಆ ಪಕ್ಷದ ಸರ್ವೋಚ್ಛ ಪದಾಧಿಕಾರಿಗಳಿಂದ ಹಿಡಿದು ಸಾಧಾರಣರಲ್ಲಿ ಸಾಧಾರಣ ಸದಸ್ಯರವರೆಗೆ ತಮ್ಮ ಈ ಆದರ್ಶವಾದದ ವಿಷಯದಲ್ಲಿ ಒಂದು ನಿಷ್ಠೆ ಇರುತ್ತದೆ. ಈ ನಿಷ್ಠೆಯೇ ಶಿಸ್ತು ಮತ್ತು ಆತ್ಮಸಮರ್ಪಣೆಯ ಭಾವನೆಯನ್ನು ಹುಟ್ಟುಹಾಕುತ್ತದೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕು. ಕೇವಲ ವಿಧಿ ನಿಷೇಧದ ಸಮುಚ್ಚಯ ಅಥವಾ ಅದನ್ನು ಮಾಡು, ಇದನ್ನು ಮಾಡಬೇಡ ಎನ್ನುವುದ್ಕಕೆ ಶಿಸ್ತು ಎಂಬ ಹೆಸರನ್ನು ಕೊಡಲಾಗುವುದಿಲ್ಲ. ಮತ್ತು `ಶಿಸ್ತನ್ನು' ಮೇಲಿನಿಂದ ಹೊರಿಸಿದ್ದೇ ಆದರೆ ಅದು ಪಕ್ಷದ ಶಕ್ತಿಹೀನತೆಯನ್ನು ಪ್ರಕಟಪಡಿಸುತ್ತದೆ. ನೆನಪಿಡಿ ಸಮಾಜಕ್ಕೆ ಅವಶ್ಯಕ ತತ್ವವಾದ ಧರ್ಮದ ರೀತಿಯಲ್ಲಿಯೇ ಶಿಸ್ತು ಯಾವುದೇ ಪಕ್ಷಕ್ಕೆ ಅವಶ್ಯಕವಾಗಿರುವುದು. ಇಂದು ಕಾಂಗ್ರೆಸ್ ಅನ್ನು ಹೊರತುಪಡಿಸಿ, ಒಟ್ಟುಗೂಡಿಸಿ ಐಕ್ಯತೆ ಕಾಪಾಡಬಲ್ಲ ಯಾವ ಶಕ್ತಿಯೂ ರಾಜ್ಯದಲ್ಲಿ ಇಲ್ಲ. ಅನುಶಾಸನದ ಮಹತ್ವ ಪಕ್ಷದ ಘಟಕಗಳಲ್ಲಿ ನಿಷ್ಠೆ ಮತ್ತು ಶಿಸ್ತು ಇದ್ದರೆ, ಅಲ್ಲಿ ಗುಂಪುಗುಳಿತನ ಮತ್ತು ಪಕ್ಷದೊಳಗಣ ಪಿತೂರಿ ಇರಲು ಸಾಧ್ಯವಿಲ್ಲ. ಯಾವಾಗ ವ್ಯಕ್ತಿಗತ ಸ್ವಾರ್ಥಕ್ಕಾಗಿ ಪಕ್ಷದ ಹಿತದ ಬಲಿದಾನ ಕೊಡಲಾಗುತ್ತದೆಯೋ, ಆಗಲೇ ಗುಂಪುಗುಳಿತನ ಮತ್ತು ಪಕ್ಷದೊಳಗಣ ಪಿತೂರಿಗೆ ಪ್ರೋತ್ಸಾಹ ಸಿಗುತ್ತದೆ. ಇದನ್ನಾದರೋ ವ್ಯಕ್ತಿಗತ ಸ್ವಾರ್ಥ ಮತ್ತು ಅದನ್ನು ಪಡೆಯುವುದಕ್ಕಾಗಿ ಪ್ರಯತ್ನಿಸುವ ಸ್ವಭಾವದ ಸಾಮಾಜಿಕ ಪ್ರಕಟೀಕರಣ ಎಂದೇ ಹೇಳಲಾಗುವುದು ಈ ರೀತಿ ಪಕ್ಷೋಪಪಕ್ಷಗಳಾಗಿ ವಿಭಜಿತ ಪಾರ್ಟಿ ಪ್ರಭಾವ ಹೀನವಾಗುವುದು. ಮತ್ತು ಅದಕ್ಕೆ ಒಂದು ಶ್ರೇಷ್ಠ ಹಾಗೂ ಉತ್ತಮ ಪಕ್ಷವೆಂಬ ಹೆಸರನ್ನು ಕೊಡಲಾಗುವುದಿಲ್ಲ. ಸಿದ್ಧಾಂತಗಳ ಆಧಾರದ ಮೇಲೆ ಪಕ್ಷಗಳ ರಚನೆಯಾಗಲಿ ಯಾವುದೇ ಒಳ್ಳೆಯ ಪಕ್ಷದ ಮೂರನೆಯ ಅವಶ್ಯಕಗುಣವೆಂದರೆ ಅವುಗಳಿಗೆ ಕೆಲವು ನಿಶ್ಚಿತ ಆದರ್ಶಗಳಿರಬೇಕು ಮತ್ತು ಅವುಗಳ ಎಲ್ಲ ನೀತಿಗಳೂ ಮೇಲೆ ಹೇಳಿದ ಆದರ್ಶಗಳನ್ನು ಪೂರ್ತಿಮಾಡುವುದಕ್ಕೆ ಸಹಾಯಕವಾಗುವಂತೆ ಇರಬೇಕು. ಆಡಳಿತದ ಶ್ರೇಷ್ಠ ಯಥಾರ್ಥವಾದೀ ಸ್ವರೂಪದ ನಿರೂಪಣೆಯು ಇಂದಿನ ಪರಿಸ್ಥಿತಿಗಳನ್ನು ಕೇವಲ ಸೈದ್ಧಾಂತಿಕ ಆಧಾರದ ಮೇಲೆ ವಿಶ್ಲೇಷಣೆ ಮಾಡುವುದರಿಂದ 312 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಾತ್ರವೇ ಆಗುವುದಿಲ್ಲ ಎಂಬುದು ನಿಜ. ಆದರೆ ಯಥಾರ್ಥವಾದದ ಹೆಸರಿನಲ್ಲಿ ಅವಕಾಶ ವಾದಿಗಳಿಗೆ ಆಶ್ರಯಕೊಡುವುದೂ ಸಹ ಸರಿಯಲ್ಲ. ಕಾಲಕಾಲಕ್ಕೇ ತನ್ನ ಅಭಿಪ್ರಾಯ ಬದಲಾಯಿಸುವ ಸ್ವಾರ್ಥಿ ಮತ್ತು ಅವಕಾಶವಾದಿ ವ್ಯಕ್ತಿ ಯಥಾರ್ಥವಾದಿ ಆಗುವುದಿಲ್ಲ. ಯಥಾರ್ಥವಾದಿಯು ಒಬ್ಬ ಮಿಶನರಿ, ಸಿದ್ಧಾಂತವಾದಿ ಮತ್ತು ಆದರ್ಶವಾದಿ ವ್ಯಕ್ತಿಯೇ ಆಗಿರುವುದಕ್ಕೆ ಸಾಧ್ಯ. ರಾಜನೈತಿಕ ಪಕ್ಷ ಮತ್ತು ಅದರ ಮುಖಂಡರು ತಮ್ಮ ವ್ಯವಹಾರದ ಮೂಲಕ ರಾಜನೈತಿಕ ಜೀವನದ ಇತಿಮಿತಿಯನ್ನು ನಿರ್ಧರಿಸುತ್ತಾರೆ ಮತ್ತು ಶ್ರೇಷ್ಠ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಾರೆ. ತಮ್ಮ ವ್ಯವಹಾರಗಳ ಮೂಲಕ ಅವರು ಇತಿಮಿತಿಯ ಮತ್ತು ಮಾನದಂಡದ ಉಲ್ಲಂಘನೆ ಮಾಡಬಾರದು. ಪ್ರಜಾಪ್ರಭುತ್ವದ ಅರ್ಥ ಕೇವಲ ಚುನಾವಣೆ ಅಲ್ಲ ಅದಕ್ಕಾಗಿ ಒಂದು ಸಂಘಟಿತ ಸಮಾಜ, ಸುವ್ಯವಸ್ಥಿತ ರಾಜನೈತಿಕ ಪಕ್ಷ ಮತ್ತು ರಾಜನೈತಿಕ ಜೀವನದಲ್ಲಿ ವ್ಯವಹರಿಸಲ್ಪಡುವ ಕೆಲವು ಸರ್ವಮಾನ್ಯ ಪರಂಪರೆಗಳ ಅವಶ್ಯಕತೆ ಇದೆ ಎಂಬ ವಿಷಯವನ್ನು ನಾವು ಒಂದು ಬಾರಿ ಪುನಃ ಗಮನದಲ್ಲಿಡಬೇಕು. ಕಾರ್ಯಕ್ರಮವು ವ್ಯಾವಹಾರಿಕವಾಗಿರಬೇಕು ಒಂದು ಒಳ್ಳೆಯ ಪಕ್ಷವು ಶ್ರೇಷ್ಠ ಅಭ್ಯರ್ಥಿಗಳನ್ನು ಹೊಂದಿರುವುದರೊಂದಿಗೆ ಅದರ ಕಾರ್ಯಕ್ರಮ ವ್ಯಾವಹಾರಿಕವೂ ಆಗಿರುವುದು ಅವಶ್ಯಕ. ಏಕೆಂದರೆ ಯಾವುದೇ ರಾಜನೈತಿಕ ಪಕ್ಷವು ಅಧಿಕಾರಕ್ಕೆ ಬಂದ ನಂತರ ತನ್ನ ಕಾರ್ಯಕ್ರಮವನ್ನೇ ಅನುಷ್ಠಾನಗೊಳಿಸುವುದು ಇರುತ್ತದೆ ಮತ್ತು ಯಾವುದೇ ಪಕ್ಷ, ಆ ಪಕ್ಷದ ವ್ಯಕ್ತಿ ಎಷ್ಟೇ ಶ್ರೇಷ್ಠನಾದರೂ ಸಹ, ತಪ್ಪಾದ ಮತ್ತು ಅವ್ಯವಹಾರಿಕ ಕಾರ್ಯಕ್ರಮಗಳನ್ನು ಆಧರಿಸಿ ಜನರ ಕಷ್ಟಗಳನ್ನು ಮತ್ತು ಸಮಾಜದ ಸಮಸ್ಯೆಗಳನ್ನು ಬಿಡಿಸಲಾರವು. ಮೇಲೆ ಹೇಳಿದ ಕಾರ್ಯಕ್ರಮಗಳ ಅಭಾವದಲ್ಲಿ ಸಮಸ್ಯೆಗಳು ಮತ್ತಷ್ಟು ವೃದ್ಧಿಯಾಗುವುದನ್ನೇ ನೋಡಬಹುದಾಗಿದೆ. ಓರೆಗಲ್ಲು ಆದ್ದರಿಂದ ಈ ಮೂರು ಗುಣಗಳನ್ನೂ ಒಂದು ಸೂತ್ರದಲ್ಲಿ ಪೋಣಿಸಿಯೇ ನಾವು ನಮ್ಮ ನಿರ್ಣಯವನ್ನು ಮಾಡಬೇಕು. ಈ ಮೂರು ಗುಣಗಳೂ ಯಾವುದೋ ಒಂದು ಜಾಗದಲ್ಲಿ ಸೇರದಿರುವ ಸಾಧ್ಯತೆ ಉಂಟಾದರೂ ಅವರ ಬಹಳ ಅಂಶಗಳನ್ನು ಹುಡುಕಬಹುದು. ನಮ್ಮ ಅಭಿಪ್ರಾಯವೆಂದರೆ ಉಚ್ಚ ಆದರ್ಶಗಳಿಂದ ಪ್ರಭಾವಿತರಾಗಿ ಶಿಸ್ತುಬದ್ಧ ಮತ್ತು ನಿಃಸ್ವಾರ್ಥಿ ಕಾರ್ಯಕರ್ತರ ಸಮೂಹದಿಂದ ಕೂಡಿದ ರಾಜನೈತಿಕ ಪಕ್ಷವು ತಾನು ಬಹಳ ಆಶಿಸಿರುವ ಕಾರ್ಯಕ್ರಮದ ಕೊರತೆಯನ್ನು ಯಾವ ಪರಿಧಿಯವರೆಗೆ ದೂರಮಾಡಬಹುದು ಎಂದರೆ, ಅದರ ಕಾರ್ಯಕ್ರಮಗಳು ನೀವು ಮಧ್ಯಪ್ರದೇಶದ ಪತ್ರ 313 ಪೂರ್ಣವಾಗಿ ಮಾನ್ಯ ಮಾಡದಿರುವ ಸಿದ್ಧಾಂತಗಳ ಮೇಲೆ ಆಧಾರಿತವಾಗಿರಕೂಡದು. ಆದರೆ ಒಂದು ವೇಳೆ ಮೂಲಾಧಾರವೇ ಭಿನ್ನವಾದರೆ ಮತ್ತು ತಪ್ಪುದಿಕ್ಕಿನಲ್ಲಿ ಹೋಗುತ್ತಿದ್ದರೆ ಶ್ರೇಷ್ಠತಮ ವ್ಯಕ್ತಿಗಳ ಸಮೂಹವೂ ಸಹ ಅದನ್ನು ಸರಿಯಾದ ಮಾರ್ಗದಲ್ಲಿ ತರುವುದರಲ್ಲಿ ಸಹಾಯಕವಾಗಲಾರದು. ಆದರೆ ಒಂದು ವೇಳೆ ಕಾರ್ಯಕ್ರಮದ ಮೂಲಾಧಾರದ ದಿಕ್ಕನ್ನು ಬೇರೆಯಾಗಿಯೇ ಮಾನ್ಯಮಾಡಿ ನಿರ್ಧರಿಸಿದ್ದರೆ ಅದನ್ನು ಪಡೆದುಕೊಳ್ಳುವುದಕ್ಕೆ ಶ್ರೇಷ್ಠ ವ್ಯಕ್ತಿಗಳ ಆಶ್ರಯದಿಂದ ಅದರ ಗತಿಯನ್ನು ವೃದ್ಧಿಸಲಾಗುವುದು. ಕಾಂಗ್ರೆಸಿನ ಬಾಹ್ಯಾಡಂಬರ ಎಲ್ಲಿಯರವರೆಗೆ ಅಭ್ಯರ್ಥಿಗಳ ಸಂಬಂಧವಿದೆಯೋ ಪ್ರತಿಯೊಬ್ಬ ಅಭ್ಯರ್ಥಿಯ ಗುಣದೋಷಗಳ ವಿವೇಚನೆ ಇಲ್ಲಿ ಸಾಧ್ಯವಿಲ್ಲ. ಇದಲ್ಲದೆ ಮತದಾರರಿಗೆ ಅವರು ಚೆನ್ನಾಗಿ ಗೊತ್ತಿರುತ್ತಾರೆ. ಆದರೆ ರಾಜನೈತಿಕ ಪಕ್ಷಗಳ ವಿಷಯದಲ್ಲಿ ವಿಚಾರಮಾಡುವ ಸಮಯದಲ್ಲಿ ರಾಜನೈತಿಕ ಪಕ್ಷದ ಪರಿಭಾಷೆಯ ಅನುಸಾರವಾಗಿ ಭಾರತದಲ್ಲಿ ರಾಜನೈತಿಕ ಪಕ್ಷಗಳು ಬಹಳ ಕಡಿಮೆ ಎಂದು ಸುಲಭವಾಗಿ ಹೇಳಬಹುದು. ಇಂದು ಕಾಂಗ್ರೆಸ್ ದೇಶದ ಬಹಳ ದೊಡ್ಡ ಸಂಸ್ಥೆ. ಇದನ್ನು ಭದ್ರವಾಗಿ ಒಂದುಗೂಡಿಸುವುದಕ್ಕೆ ಅಧಿಕಾರವಲ್ಲದೆ ಬೇರೆ ಶಕ್ತಿ ಇಲ್ಲ. ಅದನ್ನು ಮಾಡಬೇಡ ಇದನ್ನು ಮಾಡಬೇಡ ಎಂಬ ದೀರ್ಘ ಪಟ್ಟಿಯ ಬಾಹ್ಯಾಡಂಬರ ಈ ಪಕ್ಷದಲ್ಲಿದೆ. ಈ ಸದಸ್ಯರುಗಳಲ್ಲಿ ಶಿಸ್ತಿನ ಯಾವ ಭಾಷೆಯೂ ಇಲ್ಲ; ಸಮರ್ಪಣೆಯದೂ ಇಲ್ಲ. ಆದರೂ ಯಾವುದೋ ರೀತಿಯಲ್ಲಿ ಮೇಲೆ ಹೇರಲಾದ ಶಿಸ್ತನ್ನು ಅದು ಇಲ್ಲಿಯವರೆಗೆ ಕಾಪಾಡಿಕೊಂಡಿದೆ. ಆದರೆ ಈಗ ಕೃತ್ರಿಮ ಶಿಸ್ತು ಸಹ ನಡೆಯಲಾರದು ಎಂಬ ರೀತಿಯಲ್ಲಿ ಕಾಣಿಸುತ್ತದೆ. ಎರಡು ಎತ್ತುಗಳು ಅಥವಾ ಎರಡು ಗುಂಪುಗಳು ಕಾಂಗ್ರೆಸ್‍ನ ತಮ್ಮೊಳಗಿನ ಗುಂಪುಗಳಿತನದ ವಿಷಯದಲ್ಲಿ ಏನಾದರೂ ಹೇಳುವುದು ವ್ಯರ್ಥವೇ. ಏಕೆಂದರೆ ಅದರ ಚುನಾವಣೆಯ ಚಿಹ್ನೆಯಾದ ಎರಡು ಎತ್ತುಗಳು ಬಹುಶಃ ಇದೇ ವಿಷಯದ ಪ್ರತೀಕ. ಕಾಂಗ್ರೆಸ್‍ನಲ್ಲಿ ಪ್ರತ್ಯೇಕ ಸ್ತರಗಳಲ್ಲಿ ಎರಡು ಗುಂಪುಗಳು ಇವೆ ಮತ್ತು ಕೇಂದ್ರೀಯ ಸಂಸದೀಯ ಪಕ್ಷದ ಉಪನಾಯಕರ ಚುನಾವಣೆ ಆಗದಿರುವುದು. ಈ ರೋಗ ಕೇಂದ್ರದವರೆಗೆ ವ್ಯಾಪಿಸಿರುವುದರ ಜ್ವಲಂತ ಸಾಕ್ಷಿ. ಈ ಜನ ಕಾಂಗ್ರೆಸ್‍ನಿಂದ ಹೊರಬಂದರು ಕೆಲವು ರಾಜನೈತಿಕ ಪಕ್ಷಗಳು ಹಳೆಯ ಕಾಂಗ್ರೆಸ್ ಜನಗಳಿಂದಲೂ ಆಗಿದೆ 314 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮತ್ತು ಕಾಂಗ್ರೆಸ್‍ನಿಂದ ಹೊರಬಂದ ವ್ಯಕ್ತಿಗಳನ್ನು ಸೇರಿಸಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಅದನ್ನು ನಿರಾಶರಾದ ಮತ್ತು ಅಸಂತುಷ್ಟ ವ್ಯಕ್ತಿಗಳ ಆಶ್ರಯ ಸ್ಥಳ ಎಂದು ಹೇಳುವುದು ಉಪಯುಕ್ತವಾಗಿದೆ. ಆದ್ದರಿಂದ ಯಾವುದೇ ರೀತಿಯ ಶಿಸ್ತಿನ ಪ್ರಶ್ನೆಯೇ ಅವರಿಗೆ ಏಳುವುದಿಲ್ಲ. ಕಮ್ಯುನಿಸ್ಟ್ ಪಾರ್ಟಿ ವಿದೇಶಿ ಕಮ್ಯುನಿಸ್ಟ್ ಪಾರ್ಟಿಗೆ ನಿಸ್ಸಂದೇಹವಾಗಿ ಒಂದು ಹೆಸರನ್ನು ಕೊಡಲಾಗುವುದು. ಅದಕ್ಕೆ ಅದರದ್ದೇ ಆದ ಒಂದು ಕಾರ್ಯಕ್ರಮ ಸಹ ಇದೆ. ಆದರೆ ಭಾರತದ ಬಗ್ಗೆ ಪ್ರಾಮಾಣಿಕತೆ ಇಲ್ಲದೆ ವಿದೇಶಿಯರಿಂದ ಪ್ರೇರಣೆ ತೆಗೆದುಕೊಳ್ಳುವ, ಮೇಲೆ ಹೇಳಿದ ಸಂಘಟಿತ ಪಾರ್ಟಿಯವರೋ ದೇಶಕ್ಕೆ ಬಹಳ ಅಪಾಯಕಾರಿ. ಆದ್ದರಿಂದ ಅದರ ಸಮರ್ಥನೆಯನ್ನು ಮಾಡದೆ, ಅವಶ್ಯಕವಾಗಿರುವುದು ಏನೆಂದರೆ ಅದರ ಪ್ರಭಾವ ಪೂರ್ತಿಯಾಗಿ ಹೊರಟುಹೋಗುವಂತೆ ಅದರ ರಾಷ್ಟ್ರಘಾತಕ ನೀತಿಯನ್ನು ಬಯಲಿಗೆ ಎಳೆಯುವುದು. ಶಿಸ್ತುಬದ್ಧ ಮತ್ತು ಸಿದ್ಧಾಂತವಾದಿ ಜನಸಂಘ. ಜನಸಂಘದ ವಿಷಯದಲ್ಲಿ ನಾವು ನಮ್ಮನ್ನು ಒಂದು ಶಿಸ್ತು ಬದ್ಧ, ನಿಷ್ಠಾವಂತ ಮತ್ತು ಸಂಘಟಿತ ಪಾರ್ಟಿಯ ರೂಪದಲ್ಲಿ ವಿಕಸಿತ ಮಾಡುವ ಪ್ರಯತ್ನ ಮಾಡುತ್ತಿರುತ್ತೇವೆ ಎಂದು ಹೇಳಬಲ್ಲೆ ಮತ್ತು ಈ ಕಾಲಾವಧಿಯಲ್ಲಿ ನಮ್ಮ ಆ ಸಿದ್ಧಾಂತಗಳು ಮತ್ತು ವ್ಯಕ್ತಿಗಳ ಮೂಲಕ ಪ್ರ.ಸ. ಪಕ್ಷದ ರೀತಿ, ಶಿಸ್ತು ಸಂಘಟನೆಗಳ ಏಕರೂಪತೆಯ ವಿಚಾರಮಾಡದೇ ವಿಕಾಸಗೊಳಿಸಲು ಇಷ್ಟಪಡುವವರ ವಿಮರ್ಶೆಯನ್ನು ಮಾಡಲಾಯಿತು. ಬಲಶಾಲಿ, ಶಿಸ್ತುಬದ್ಧ ಮತ್ತು ದೃಢವಾಗಿಸುವ ಪ್ರಯತ್ನವನ್ನು ಮಾಡುತ್ತಾ ಜನಹಿತಕ್ಕೋಸ್ಕರ ಕೆಲಸಮಾಡುವ ಪ್ರಯತ್ನ ಮಾಡಿದೆ. ನಮ್ಮ ನಿಶ್ಚಿತ ಅಭಿಪ್ರಾಯವೆಂದರೆ ಎಲ್ಲ ರೀತಿಯ ಅವಕಾಶವಾದೀ ತತ್ವಗಳನ್ನು ಯಾವುದೋ ರೀತಿಯಲ್ಲಿ ಒಟ್ಟುಗೂಡಿಸುವ ಜಾಗದಲ್ಲಿ ಕಠೋರತೆ ಮತ್ತು ಶಿಸ್ತುಪಾಲನೆ ಮಾಡುತ್ತಾ ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡುವ ಅವಶ್ಯಕತೆ ಹೆಚ್ಚಾಗಿ ಇದೆ ಮತ್ತು ಅದರಿಂದ ಲಾಭವೂ ಸಹ ಹೆಚ್ಚಾಗಿ ಆಗುತ್ತದೆ. ಸಂಯುಕ್ತ ಕದನದ ಚರ್ಚೆ ಪಕ್ಷಗಳು ಹೆಚ್ಚಾಗಿರುವ ಕಾರಣ ಚುನಾವಣೆಯ ಸಮಯದಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ ರಾಜಿ ಮತ್ತು ಸಂಯುಕ್ತ ಸಂಘರ್ಷಗಳನ್ನು ಮಾಡುವ ಆಧಾರಗಳು ಇವೇ ಆಗಿವೆ. ಅದೇನೆಂದರೆ ಬೇರೆ ಬೇರೆ ರಾಜನೈತಿಕ ಪಕ್ಷಗಳು ಬೇರೆ ಬೇರೆ ಮಧ್ಯಪ್ರದೇಶದ ಪತ್ರ 315 ರೂಪದಲ್ಲಿ ಸಂಘರ್ಷ ಮಾಡಿ ಆಡಳಿತಾರೂಢ ಪಕ್ಷವನ್ನು ಸೋಲಿಸಲಾರವು. ಆದ್ದರಿಂದಲೇ ಎಲ್ಲರೂ ಕೂಡಿ ಕಾಂಗ್ರೆಸ್‍ನ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಬೇಕು. ಇದರ ನಿಸ್ಸಾರತೆ ಇಂದು ವಿಧಾನಮಂಡಲದಲ್ಲಿ ಆಡಳಿತಾರೂಢ ಪಕ್ಷದ ರಾಕ್ಷಸೀ ಬಹುಮತ ಇರುವ ಕಾರಣದಿಂದ ಕಾಂಗ್ರೆಸ್ ಯಾವಾಗ ವಿರೋಧ ಪಕ್ಷದ ಧ್ವನಿ ಕೇಳಿಸದಂತೆ ಮಾಡುತ್ತಾ ಅನೇಕ ಸಲ ನಿರಂಕುಶ ವೃತ್ತಿಯ ಪರಿಚಯವನ್ನು ಕೊಟ್ಟಿದೆ. ಎಂದರೆ, ಕಾಂಗ್ರೆಸ್‍ನ ವಿರುದ್ಧ ಈ ರೀತಿಯ ಸಂಯುಕ್ತ ಸಂಘರ್ಷವನ್ನು ಮಾಡುವುದು ಅವಶ್ಯಕ ಮಾತ್ರವಲ್ಲ, ಸರಿಯೂ ಹೌದು ಎಂದು ಎಷ್ಟೋ ವ್ಯಕ್ತಿಗಳು ಯೋಚಿಸುತ್ತಾ ತೊಡಗುತ್ತಾರೆ. ಆದರೆ ಕಾಂಗ್ರೆಸ್ಸೇತರ ಪಕ್ಷಗಳ ಆದರ್ಶ ಮತ್ತು ಕಾರ್ಯಕ್ರಮಗಳಲ್ಲಿ ಪರಸ್ಪರ ಎಷ್ಟು ಭಿನ್ನತೆ ಇದೆ ಎಂದರೆ ಕೇವಲ `ವಿರೋಧಿ ಪಕ್ಷ ಸಂಘಟಿತವಾಗಲಿ" ಎಂಬ ಹೆಸರಿನಲ್ಲಿ ಅವರು ಸಂಯುಕ್ತ ಸಂಘರ್ಷ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ಅವರು ಮರೆತುಬಿಡುತ್ತಾರೆ. ನಾವು ಈ ದಳಗಳ ಸಿದ್ಧಾಂತಗಳು ಮತ್ತು ಕಾರ್ಯಕ್ರಮಗಳನ್ನು ವಿಮರ್ಶಿಸಿದರೆ, ಇವುಗಳು ಅನೇಕ ವಿಷಯಗಳಲ್ಲಿ ಕಾಂಗ್ರೆಸ್‍ಗೆ ಹೋಲಿಸಿ ನೋಡಿದರೆ ಅದಕ್ಕಿಂತಲೂ ಹೆಚ್ಚಾಗಿ ಪಾರಸ್ಪರಿಕ ಭಿನ್ನತೆ ಇದೆ ಎಂದು ನಮಗೆ ತಿಳಿದುಬರುತ್ತದೆ. ಆದ್ದರಿಂದಲೇ ಜನಸಂಘವು ಯಾವುದೇ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್‌ರ ಗೆಲುವನ್ನು ಸಹಿಸುವುದ್ಕಕೆ ಸಿದ್ಧರಾಗಿಲ್ಲ. ಕಮ್ಯುನಿಸ್ಟರು ಸಹ ಜನಸಂಘದ ವಿಷಯದಲ್ಲಿ ಈ ಭಾವನೆಗಳನ್ನೇ ವ್ಯಕ್ತಪಡಿಸಿದೆ. ಮತ್ತೆ ಎಲ್ಲಿ ಅಕಾಲಿದಳ ಮತ್ತು ಮುಸ್ಲಿಂಲೀಗ್ ರೀತಿಯ ಪಕ್ಷಗಳೂ ಸಹ ಒಂದುಗೂಡತೊಡಗಿದಾಗ ಅಲ್ಲಿ ಸಂಯುಕ್ತ ಸಂಘರ್ಷ ಪ್ರಸ್ತಾಪಿತವಾಗಬಲ್ಲುದು? ಆದ್ದರಿಂದಲೇ ಈ ಸಂಯುಕ್ತ ಸಂಘರ್ಷಗಳು ಎಷ್ಟು ನಿರರ್ಥಕವಾಗುತ್ತವೆ ಎಂದರೆ ಅದರ ಲೇಶಮಾತ್ರ ಔಚಿತ್ಯವನ್ನು ಸಿದ್ಧಮಾಡಲಾಗುವುದಿಲ್ಲ. ಕಾಂಗ್ರೆಸ್ ಕೇರಳದಲ್ಲಿ ಮುಸ್ಲಿಂಲೀಗ್‍ನ ಜೊತೆ ಸೇರಿಕೊಂಡು ಇಂಥದೇ ಭಯಂಕರ ತಪ್ಪು ಮಾಡಿತ್ತು. ಎಂದರೆ ಇದರ ಪರಿಣಾಮ ದೇಶದಲ್ಲಿ ಮುಸ್ಲಿಂ ಸಾಂಪ್ರದಾಯಕತಾವಾದದ ಉನ್ಮಾದಕ್ಕೆ ಪುನಃ ಪ್ರೋತ್ಸಾಹನೆ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ವಿಧಿ ನಿಷೇಧ ಈ ರಾಜಿಗಳು ಮತ್ತು ಸಂಯುಕ್ತ ಕದನಗಳು ಜನತೆಯಲ್ಲಿ ನಿಷೇಧಾತ್ಮಕ ವೃತ್ತಿಯನ್ನು ಹುಟ್ಟುಹಾಕುತ್ತವೆ. ಇದು ಯಾವಾಗಲೂ ಸರಿಯಲ್ಲ. ಹೀಗೆ ರಾಜಿಮಾಡುವ ತತ್ವಗಳು ಸಂಯುಕ್ತ ಸಂಘರ್ಷ ಮಾಡುವ ಸಮಯದಲ್ಲಿ ಸಿದ್ಧಾಂತಗಳಲ್ಲಿಯೂ 316 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವ್ಯಾಪಾರ ಮಾಡುತ್ತವೆ. ಇದರಿಂದ ದೇಶದಲ್ಲಿ ಅವಕಾಶವಾದೀ ತತ್ವಗಳಿಗೆ ಆಶ್ರಯ ಸಿಗುತ್ತದೆ. ಆದ್ದರಿಂದ ಇವುಗಳಿಂದ ಪ್ರಭಾವಿತರಾಗಕೂಡದು. ಅಧಿಕಾರಪ್ರಾಪ್ತಿಯ ಸ್ಪರ್ಧೆಯಲ್ಲಿ ಪ್ರಜಾಪ್ರಭುತ್ವವೂ ಕೆಲವು ಬಂಧನಗಳನ್ನು ನಮಗೆ ಅನ್ವಯಿಸುತ್ತದೆ. ಪ್ರಜಾತಾಂತ್ರಿಕ ವ್ಯವಸ್ಥೆ ಎಲ್ಲಿ ಹಿಂಸೆ ಮತ್ತು ಗುಂಡಿನ ನಿಷೇಧ ಮಾಡುತ್ತದೋ ಅಲ್ಲಿಯೇ ಮತದಾನದ ಈ ಯುದ್ಧದಲ್ಲಿ ಉಚಿತಾನುಚಿತ ವಿಚಾರಮಾಡದೆ ಯಾವುದೇ ವಿಷಯವನ್ನು ಯಾವಾಗಲೂ ಸರಿ ಎಂದು ನಿಶ್ಚಯಿಸುವುದಕ್ಕಾಗುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕು. ಹಿಂದಿನ ಅನುಭವ ವಿಭಿನ್ನ ರಾಜನೈತಿಕ ಪಕ್ಷಗಳ ಸಂಯುಕ್ತ ರಂಗವು ಕಾಂಗ್ರೆಸ್ ಅನ್ನು ಚುನಾವಣೆಯಲ್ಲಿ ಸೋಲಿಸುತ್ತದೆ ಎಂದು ಯೋಚಿಸುವುದು ಸಹ ತಪ್ಪಾಗುತ್ತದೆ. ಹಿಂದಿನ ಚುನಾವಣೆಗಳ ವಿಶ್ಲೇಷಣೆ ನಮ್ಮ ಈ ಹೇಳಿಕೆಯನ್ನು ಪುಷ್ಟಿಗೊಳಿಸುತ್ತದೆ. ಎಲ್ಲಿ ಕಾಂಗ್ರೆಸ್‍ನ ವಿರುದ್ಧ ಜನಪ್ರವಾಹವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ತೇಜಿಸುವುದಕ್ಕೆ ಆಯಿತೋ, ಕೇವಲ ಆ ಚುನಾವಣ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನೊಂದಿಗೆ ನೇರ ಚುನಾವಣಾ ಸಂಘರ್ಷದಲ್ಲಿಯೂ ವಿರೋಧಿ ಅಭ್ಯರ್ಥಿಗಳಿಗೆ ಬಹಳ ಸಲ ಸೋಲೇ ಆಯಿತು. ಆದ್ದರಿಂದ ಇಂದು ನಮಗೆ ಕಾಂಗ್ರೆಸ್ ಅನ್ನು ಪದಚ್ಯುತಿಗೊಳಿಸುವುದಕ್ಕೆ ಸಂಯುಕ್ತ ರಂಗದಲ್ಲಿ ಕೆಲಸ ಗಟ್ಟಿಯಾಗಿ ಮಾಡುವಂತಹ ಒಂದು ಪಕ್ಷದ ಅವಶ್ಯಕತೆ ಇದೆ. ಚುನಾವಣೆಯಲ್ಲಿ ಅಲ್ಪಮತ ತೆಗೆದುಕೊಂಡು ಕಾಂಗ್ರೆಸ್ ಗೆಲ್ಲುವುದೇ ಆದರೆ ಉಳಿದ ಪಕ್ಷಗಳ ವಿಷಯದಲ್ಲಿಯೂ ಇದೇ ಸ್ಥಿತಿ ಇರಬೇಕು. ಕಳೆದ ಸನ್ 57ರ ಚುನಾವಣೆಯಲ್ಲಿ ಸಂಯುಕ್ತರಂಗ ಮಾಡದೆಯೇ ಕಮ್ಯುನಿಸ್ಟ್‌ರು ಕೇರಳದಲ್ಲಿ ಕಾಂಗ್ರೆಸ್ ಅನ್ನು ಪದಚ್ಯುತರನ್ನಾಗಿ ಮಾಡಿತು. ಮತದಾರರು ಕರ್ತವ್ಯವನ್ನು ಗುರುತಿಸಬೇಕು ಪಕ್ಷಗಳ ಸಂಖ್ಯೆಯಲ್ಲಿ ಕೊರತೆ ಇರುವ ಮತ್ತು ಸಮಾನ ವಿಚಾರಧಾರೆಗಳ ಪಕ್ಷಗಳು ಒಟ್ಟಾಗಿ ಬರುವ ಅವಶ್ಯಕತೆಯು ಅವಶ್ಯಕ ಎಂದು ಅನ್ನಿಸುತ್ತದೆ. ಆದರೆ ಇಷ್ಟಕ್ಕೂ ಸಹ ಕೆಲವು ಆಧಾರಭೂತ ವಿಷಯಗಳ ಅವಶ್ಯಕತೆ ಇದೆ. ಈ ವಿಷಯದಲ್ಲಿ ಯಾವ ಪಕ್ಷವೂ ಹಕ್ಕು ಚಲಾಯಿಸಲಾರದು. ಆದರೂ ಸಹ ಈ ದೃಷ್ಟಿಯಿಂದ ಸೈದ್ಧಾಂತಿಕ ಆಧಾರದ ಮೇಲೆ ಜನಸಂಘ ಮತ್ತು ಕಮ್ಯುನಿಸ್ಟ್ ಒಂದು ಆಧಾರಭೂತ ಭೂಮಿಕೆಯನ್ನು ಅವಶ್ಯಕವಾಗಿ ಕೊಡುತ್ತದೆ. ಇದರ ನಾಲ್ಕು ಕಡೆ ಕ್ರಮಶಃ ರಾಷ್ಟ್ರವಾದಿ ಮತ್ತು ವಿದೇಶಗಳಿಂದ ಪ್ರೇರಣೆಯನ್ನು ತೆಗೆದುಕೊಳ್ಳುವ ತತ್ವಗಳು ಒಗ್ಗೂಡುತ್ತವೆ. ಪಕ್ಷಗಳ ಸಂಘಟನೆಯ ಪ್ರಭಾವದ ದೃಷ್ಟಿಯಿಂದಲೂ, ಮೇಲೆ ಹೇಳಿದ ಎರಡು ಪಕ್ಷಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಇದಕ್ಕೆ ಅಧಿಕಾರಿ ಅಲ್ಲ. ಮಧ್ಯಪ್ರದೇಶದ ಪತ್ರ 317 ಆದ್ದರಿಂದ ಈಗ ಈ ಮತದಾರರ ಕರ್ತವ್ಯವೆಂದರೆ ನಮ್ಮ ಮತಗಳು ಮತ್ತು ಶಕ್ತಿಯನ್ನು ನಷ್ಟಮಾಡಿಕೊಳ್ಳದೆ ಈ ಆಧಾರದ ಮೇಲೆ ಹೇಳಿದ ಪಕ್ಷಗಳಿಗೆ ತಮ್ಮ ಸಮರ್ಥನೆಯನ್ನು ಕೊಡುತ್ತಾ ಸಮಾನ ವಿಚಾರಧಾರೆಯ ಪಕ್ಷಗಳಿಗೆ ಒಟ್ಟಾಗುವ ಮತ್ತು ಪಕ್ಷಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಾಧ್ಯರನ್ನಾಗಿ ಮಾಡಬೇಕು. ಔನಪುರದಿಂದ ಲೋಕಸಭೆಗೆ ಜನಸಂಘದ ಅಭ್ಯರ್ಥಿ ಕುಶಲ ಸಂಘಟಕ, ಓಜಸ್ವೀ ಭಾಷಣಕಾರ, ಉತ್ತಮ ಲೇಖಕ ಹಾಗೂ ಪ್ರಸಿದ್ಧಿ ಪರಾಙ್ಮುಖ ಪ್ರಧಾನ ಕಾರ್ಯದರ್ಶಿ ಪಂಡಿತ ದೀನ್‍ದಯಾಳ್ ಉಪಾಧ್ಯಾಯ. ಅಖಿಲ ಭಾರತೀಯ ಜನಸಂಘದ ಮಹಾಮಂತ್ರಿ ದೀನ್‍ದಯಾಳ್ ಉಪಾಧ್ಯಾಯ ಹೆಜ್ಜೆಹೆಜ್ಜೆಗೂ ಪರಿಸ್ಥಿತಿಯೊಂದಿಗೆ ಹೊಡೆದಾಡಬೇಕಾಗಿ ಬಂದ ಜನರಲ್ಲಿ ಇದ್ದವರು ಮತ್ತು ತಮ್ಮ ಪ್ರಯತ್ನಗಳ ಬಲದಿಂದಲೇ ತಮ್ಮ ನಿರ್ಮಾಣ ಮಾಡಬಲ್ಲವರಾದರು. ಭಗವಾನ್ ಕೃಷ್ಣನ ಪಾವನ ಜನ್ಮಭೂಮಿ ಮಥುರಾದಲ್ಲಿ 46 ವರ್ಷ ಪೂರ್ವದಲ್ಲಿ ಜನ್ಮತಾಳಿದರು. ಏಳನೆಯ ವರ್ಷದ ಕೋಮಲ ವಯಸ್ಸಿನಲ್ಲಿ ಬಾಲಕ ದೀನ್ ದಯಾಳ್‍ರನ್ನು ತಾಯಿಯ ಮಮತೆ ಮತ್ತು ತಂದೆಯ ರಕ್ಷಣೆಯಿಂದ ವಂಚಿತನನ್ನಾಗಿ ಮಾಡಿತು. ಪರಿಸ್ಥಿತಿಗಳ ಹೊಡೆತಕ್ಕಿ ತುತ್ತಾದ ಈ ಬಾಲಕ ಯಾವುದೋ ಒಂದು ದಿನ ಭಾರತದ ಒಬ್ಬ ಶ್ರೇಷ್ಠ ರಾಜನೀತಿಜ್ಞನಾಗುವನೆಂಬ ಕಲ್ಪನೆಯನ್ನು ಆ ಸಮಯದಲ್ಲಿ ಯಾರಾದರೂ ಮಾಡಬಲ್ಲವರಾಗಿದ್ದರೆ ? ಮೇಧಾವಿ ವಿದ್ಯಾರ್ಥಿ ಹೈಸ್ಕೂಲ್ ಮತ್ತು ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕಾನ್ಪುರ ಕಾಲೇಜಿಗೆ ಅವರು ಪ್ರವೇಶಿಸಿದರು. ಅಲ್ಲಿಂದಲೇ ಬಿ.ಎ. ಹಾಗೂ ಪ್ರಯಾಗದಿಂದ ಎಲ್.ಟಿ.ಯ ಪದವಿ ಪಡೆದರು. ಗಣಿತ ಅವರ ಪ್ರಿಯ ವಿಷಯವಾಗಿತ್ತು. ಪ್ರಾರಂಭದಲ್ಲಿಯೇ ಒಬ್ಬ ಮೇಧಾವಿ ವಿದ್ಯಾರ್ಥಿಯಾದ ಕಾರಣ ಅವರು ತಮ್ಮ ಪರೀಕ್ಷೆಗಳಲ್ಲಿ ಶ್ರೇಷ್ಠಸ್ಥಾನ ಮತ್ತು ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದರು. ವಿಶೇಷ ಯೋಗ್ಯತೆಗಾಗಿ ಅವರಿಗೆ ಅನೇಕ ಸ್ವರ್ಣ ಪದಕಗಳನ್ನು ಕೊಡಲಾಯಿತು. ವಿದ್ಯಾರ್ಥಿ ಮುಖಂಡ ಬುದ್ಧಿಯ ಪ್ರಖರತೆಯಿಂದಲೇ ಶರೀರದ ಬಾಗು ಬಳುಕುವಿಕೆಯು ಒಬ್ಬ ಒಳ್ಳೆಯ ಆಟಗಾರನಾಗುವುದಕ್ಕೆ ಅವಕಾಶವನ್ನು ಕಲ್ಪಿಸಿತು. ಹೀಗೆ ಪ್ರತಿಭಾವಂತನಾದ ಕಾರಣ ಕಾಲೇಜು ಜೀವನದಲ್ಲಿ ವಿದ್ಯಾರ್ಥಿವರ್ಗದ ನೇತೃತ್ವ ಸಹಜವಾಗಿ ಅವರಿಗೆ ಸಿಕ್ಕಿತು. ವಿದ್ಯಾರ್ಥಿ ಜೀವನದಲ್ಲಿಯೇ ದೇಶದ ದುರ್ದೆಶೆ ಮತ್ತು ಬಡತನ ಅವರ 318 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮನಸ್ಸು ಮತ್ತು ಬುದ್ಧಿಯನ್ನು ಬೇರು ಸಮೇತ ಅಲುಗಾಡಿಸಿತು. ಅಧ್ಯಯನದ ಜೊತೆಯಲ್ಲಿಯೇ ದೇಶದ ಅವಮಾನಕ್ಕೆ ಕಾರಣವಾದ ಚಿತ್ರವನ್ನು ಬದಲಾಯಿಸುವ ಉತ್ಕಂಠತೆ ಅವರಲ್ಲಿ ತೀವ್ರತರವಾಯಿತು. ದೃಢಸಂಕಲ್ಪದಿಂದ ಈ ಯುವಕನು ವಿದ್ಯಾರ್ಥಿ ಜೀವನವನ್ನು ಮುಗಿಸಿದ ಮೇಲೆ ತನ್ನ ವ್ಯಕ್ತಿಗತ ಸುಖಸಂತೋಷಗಳ ಚಿಂತೆಯನ್ನು ಸ್ವಲ್ಪವೂ ಮಾಡದೆ ರಾಷ್ಟ್ರಸೇವೆಗೆ ತನ್ನ ಜೀವನವನ್ನು ಸಮರ್ಪಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಸ್ವಾರ್ಥ ದೇಶ ಸೇವೆ ಮಾಡುವ ಕಾರ್ಯಕರ್ತರ ಪರಿಚಯ ಅವರಿಗೆ ಆಯಿತು ಮತ್ತು ಸಂಘದ ಕಾರ್ಯಗಳು ಅವರನ್ನು ಪ್ರಭಾವಿತಗೊಳಿಸಿತು. ಸಂಘದ ಕಾರ್ಯವನ್ನೇ ದೇಶಸೇವೆಯ ಸರ್ವೋತ್ತಮ ಮಾರ್ಗವೆಂದು ತಿಳಿದು ಅವರು ತಮ್ಮ ಸಂಪೂರ್ಣ ಸಮಯವನ್ನು ಜನಜಾಗೃತಿಯಲ್ಲಿ ಕಳೆಯತೊಡಗಿದರು. ಅತ್ಯಂತ ಮೃದುಭಾಷಿ, ಜನರೊಂದಿಗೆ ಬೆರೆಯುವ ಸ್ವಭಾವದ ನಿರಭಿಮಾನಿ ಆದ ಕಾರಣದಿಂದಲೇ ಸಂಘವು ಅವರನ್ನು 1945ರಲ್ಲಿ ಉತ್ತರ ಪ್ರದೇಶದ ಸಹಪ್ರಾಂತ ಪ್ರಚಾರಕನ್ನಾಗಿ ಮಾಡಿ ಪ್ರದೇಶದ ಸಂಘಟನೆಯ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದರು. ಜವಾಬ್ದಾರಿ ಹೆಚ್ಚುತ್ತಿದ್ದ ಹಾಗೆಯೇ ಅವರ ವ್ಯಕ್ತಿತ್ವವೂ ಉಜ್ವಲವಾಗುತ್ತಾ ಹೋಯಿತು. ಕುಶಲ ಸಂಘಟಕ ಮತ್ತು ಲೇಖಕ ಹಗಲು ಇರುಳು ಸಂಘಟನೆಯ ಕಾರ್ಯದಲ್ಲಿ ಇದ್ದರೂ ಅವರು ಅನೇಕ ವಿಷಯಗಳ ಚಿಂತನೆಮಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರ ಆಳವಾದ ಅಧ್ಯಯನ ಮತ್ತು ಅಧ್ಯವಸಾಯದ ಊಹೆಯನ್ನು ಈ ವಿಷಯದಿಂದಲೇ ಮಾಡಬಹುದು. ಅದು ಯಾವುದೆಂದರೆ ಅವರು ಒಂದೇ ದಿನದಲ್ಲಿ `ಸಾಮ್ರಾಟ್ ಚಂದ್ರಗುಪ್ತ' ಹೆಸರಿನ ಪೂರಾ ಪುಸ್ತಕವನ್ನೇ ಬರೆದುಬಿಟ್ಟರು. 1947ರಲ್ಲಿ ಅವರು ಸತ್ ಸಾಹಿತ್ಯದ ಮೂಲಕ ಜನಜಾಗೃತಿಯ ಉದ್ದೇಶದಿಂದ ರಾಷ್ಟ್ರಧರ್ಮ ಪ್ರಕಾಶನಕ್ಕೆ ಅಡಿಪಾಯ ಹಾಕಿದರು. ಇದೇ ಪ್ರಕಾಶನದಿಂದ `ರಾಷ್ಟ್ರಧರ್ಮ' ಹೆಸರಿನ ಅತ್ಯಂತ ಲೋಕಪ್ರಿಯ ಮಾಸಪತ್ರಿಕೆಯ ಪ್ರಕಾಶನವನ್ನು ಪ್ರಾರಂಭಿಸಿದರು. ಕಾಲಕಳೆದ ಹಾಗೆ ಆರ್ಥಿಕ ಕಷ್ಟಗಳಿಂದಾಗಿ ಅವರು ಮಾಸಪತ್ರಿಕೆಯನ್ನು ಮುಚ್ಚಬೇಕಾಯಿತು. ಆದರೆ ತಮ್ಮ ಪ್ರಯತ್ನಗಳಲ್ಲಿ ಅವರು ಸೋಲನ್ನು ಒಪ್ಪಲಿಲ್ಲ. `ಪಾಂಚಜನ್ಯ' ಮತ್ತು `ಸ್ವದೇಶ' ಪತ್ರಿಕೆಗಳಿಗೆ ಜನ್ಮ ಇದೇ ಪ್ರಕಾಶನದಲ್ಲಿ `ಪಾಂಚಜನ್ಯ'ದ ಸಾಪ್ತಾಹಿಕದ ಪ್ರಕಾಶನವನ್ನು ಆಕರ : 13-5-1963 ಪಾಂಚಜನ್ಯ ಮಧ್ಯಪ್ರದೇಶದ ಪತ್ರ 319 ಪ್ರಾರಂಭಿಸಿದರು. ಅವರ ವಿಚಾರಗಳನ್ನು ಓದುವ ರುಚಿ ಸಮಾಜದಲ್ಲಿ ಹೆಚ್ಚತೊಡಗಿತು. ಸ್ವಲ್ಪ ಸಮಯದ ನಂತರ ಅವರು `ದೈನಿಕ ಸ್ವದೇಶ' ಪತ್ರಿಕೆಗಳನ್ನು ಪ್ರಾರಂಭಿಸಿದರು. ಅವರು ಜಗದ್ಗುರು ಶಂಕರಾಚಾರ್ಯರ ಜೀವನವನ್ನು ಬರೆದಿದ್ದಾರೆ. ಅದು ಇಡೀ ಭಾರತದಲ್ಲಿ ಲೋಕಪ್ರಿಯವಾಗಿ ಭಾರತದ ಹೆಚ್ಚು ಭಾಷೆಗಳಲ್ಲಿ ಅನುವಾದಿತವಾಗಿದೆ. ಉತ್ತರ ಪ್ರದೇಶದ ಜನಸಂಘದ ಆದಿಸ್ತಂಭ ಡಾಕ್ಟರ್ ಮುಖರ್ಜಿಯವರ ಪ್ರೇರಣೆಯಿಂದ ಯಾವಾಗ ದೇಶದಲ್ಲಿ ಜನಸಂಘದ ನಿರ್ಮಾಣದ ವಿಚಾರ ಮಾಡಲಾಯಿತೋ ಆಗ ಸಮಯದ ಅವಶ್ಯಕತೆಯನ್ನು ನೋಡಿ ಪಂಡಿತ್ ದೀನ್‍ದಯಾಳ್ ಅವರು ಈ ಹೊಸ ಕಾರ್ಯಕ್ಷೇತ್ರದಲ್ಲಿ ಮುಂದುವರೆದರು. 21 ಸೆಪ್ಟೆಂಬರ್ 19 ರಲ್ಲಿ ಅವರು ಲಕ್ನೋದಲ್ಲಿ ಉತ್ತರಪ್ರದೇಶ ಜನಸಂಘವನ್ನು ಸ್ಥಾಪಿಸಿದರು. ಜನಸಂಘವು ಯಾವಾಗ ಅಖಿಲ ಭಾರತೀಯ ರೂಪ ತಳೆಯಿತೋ ಆಗ ಪಂಡಿತ್ ದೀನ್ ದಯಾಳ್‍ಜಿಯವರ ಪ್ರತಿಭೆ, ಸಂಘಟನಾ ಕೌಶಲ್ಯ ಮತ್ತು ದಾರ್ಶನಿಕ ತಿಳುವಳಿಕೆಯನ್ನು ನೋಡಿ ಡಾಕ್ಟರ್ ಶ್ಯಾಮ ಪ್ರಸಾದ್ ಮುಖರ್ಜಿ ಅವರು ದೀನ್‍ದಯಾಳ್‍ರನ್ನು ಜನಸಂಘದ ಮಹಾಮಂತ್ರಿಯಾಗಿ ನೇಮಿಸಿದರು. ಮುಖಂಡನಿಗೆ ಜತೆಗಾರ ಸಿಕ್ಕಿದನು. ಸ್ವಲ್ಪ ಸಮಯದ ನಂತರ ಶೇಖ್ ಅಬ್ದುಲ್ಲಾನ ಷಡ್ಯಂತ್ರದ ವಿರುದ್ಧ ಯಾವಾಗ ಜನಸಂಘವು ಒಂದು ದೇಶದಲ್ಲಿ ಒಬ್ಬ ಪ್ರಧಾನ ಮುಖಂಡ, ಒಂದು ವಿಧಾನ ಮತ್ತು ಒಂದು `ಗುರಿ'ಯ ಧ್ಯೇಯವನ್ನು ಇಟ್ಟುಕೊಂಡು ಕಾಶ್ಮೀರ ಸತ್ಯಾಗ್ರಹವನ್ನು ಪ್ರಾರಂಭಿಸಿತೋ ಆ ಸತ್ಯಾಗ್ರಹದ ಸಂಪೂರ್ಣ ಭಾರವನ್ನು ಪಂ. ದೀನ್ ದಯಾಳ್‍ರಿಗೆ ಒಪ್ಪಿಸಿ ಡಾ. ಮುಖರ್ಜಿ ಸ್ವಯಂ ಸತ್ಯಾಗ್ರಹದಲ್ಲಿ ಧುಮುಕಿದರು. ಪಂ. ದೀನ್ ದಯಾಳ್ ಬಗ್ಗೆ ಡಾ. ಮುಖರ್ಜಿ ಪ್ರಾಯಶಃ ಹೇಳುತ್ತಿದ್ದರು. ``ನಾನು ಇಷ್ಟಪಟ್ಟಂಥ ಜೊತೆಗಾರನೇ ನೆನಗೆ ಸಿಕ್ಕಿದರು." 13-5-1963 ಪಾಂಚಜನ್ಯ ಕುಶಲ ನೇತೃತ್ವ ಡಾ. ಮುಖರ್ಜಿಯವರ ದುಃಖದಾಯಕ ಸಾವಿನ ನಂತರ ರಾಜನೈತಿಕ ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿತ್ತು, ಏನೆಂದರೆ ಈಗ ಜನಸಂಘವು ನೇತೃತ್ವದ ಅಭಾವದಿಂದ ಅಂತ್ಯ ಕಾಣುವುದು. ಆದರೆ ದೀನ್ ದಯಾಳ್‍ಜಿಯವರ ಪ್ರತಿಭೆ, ಸಂಘಟನಾ 320 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕೌಶಲ ಮತ್ತು ಕಷ್ಟದ ಸಮಯದಲ್ಲಿಯೂ ಧೈರ್ಯದಿಂದ ಕೆಲಸಮಾಡುವ ಕ್ಷಮತೆ ಜನಸಂಘಕ್ಕೆ ಬಲವನ್ನು ಕೊಡುತ್ತಿತ್ತು. ಅವರ ನೇತೃತ್ವದಲ್ಲಿ ಜನಸಂಘವು ಹೆಚ್ಚು ಹೆಚ್ಚು ವ್ಯಾಪಕವಾಗುತ್ತಾ ಹೋಯಿತು. ಮುಖಂಡ ಮತ್ತು ಭಾಷಣ ಕರ್ತೃ ಇವರು ಜನಸಂಘದ ಕೇವಲ ಮುಖಂಡರು ಮಾತ್ರವಲ್ಲ, ಮುಖಂಡರು ಮತ್ತು ಭಾಷಣ ಕರ್ತೃಗಳೂ ಸಹ. ಸಂಘಟನೆಯನ್ನು ಗಟ್ಟಿಯಾದ ಸೈದ್ಧಾಂತಿಕ ತಳಪಾಯದ ಮೇಲೆ ಪ್ರತಿಷ್ಠಾಪಿಸುವುದರಲ್ಲಿ ಅವರ ಗಂಭೀರ ಅಧ್ಯಯನ, ಚಿಂತನೆ ಮತ್ತು ಲೇಖನಗಳ ಗಂಭೀರವಾದ ಕೊಡುಗೆ ಇದೆ. ರಾಜನೀತಿಯಲ್ಲದೆ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೂ ಅವರು ಗಂಭೀರ ಮತ್ತು ಪ್ರೇರಣಾದಾಯಕ ಲೇಖನಗಳನ್ನು ಬರೆದಿದ್ದಾರೆ. ಶ್ರೇಷ್ಠ ಲೇಖಕ ``ರಾಷ್ಟ್ರಜೀವನದ ಸಮಸ್ಯೆಗಳು" ಎಂಬ ಪುಸ್ತಕವು ಭಾರತದ ಸುಮಾರು ಎಲ್ಲ ಭಾಷೆಗಳಲ್ಲಿ ಅನುವಾದಿತವಾಗಿದೆ. ಪಂ. ದೀನ್ ದಯಾಳ್ ಅವರ ಗಂಭೀರ ಚಿಂತನದ ಪ್ರತ್ಯಕ್ಷ ಉದಾಹರಣೆ ಎಂದರೆ, ಅವರಿಂದ ಬರೆಯಲಾಗಿರುವ ಪಂಚವರ್ಷೀಯ ಯೋಜನೆಗಳ ಮೇಲಿನ `ದಿ ಟೂ ಪ್ಲಾನ್ ಪ್ರಾಮಿಸಸ್ ಪರ್‍ಪಾರ್ಮಂನ್ಸ್ ಎಂಡ್ ಪ್ರಾಸ್‍ಪೆಕ್ಟಸ್' ಮತ್ತು ``ಭಾರತದ ಅರ್ಥನೀತಿ ವಿಕಾಸದ ಒಂದು ದಿಕ್ಕು" ಎಂಬ ಪುಸ್ತಕಗಳು ಬಹಳ ಲೋಕಪ್ರಿಯವಾದುವು. ಇದೂ ಸಹ ಭಾರತದ ಎಲ್ಲ ಭಾಷೆಗಳಲ್ಲಿಯೂ ಅನುವಾದಿತವಾಗಿವೆ. ಇದಲ್ಲದೆ `ನಮ್ಮ ಕಾಶ್ಮೀರ', `ಮಹಾನ್ ವಿಶ್ವಾಸಘಾತ', `ಅಖಂಡ ಭಾರತ', `ಟ್ಯಾಕ್ಸ್‍ಯೂ ಲೂಟ್' ಮುಂತಾದ ಅನೇಕ ಪುಸ್ತಕಗಳನ್ನು ಬರೆದು ಸಾಮಾಜಿಕ, ಆರ್ಥಿಕ ಮತ್ತು ರಾಜನೈತಿಕ ಸಾಹಿತ್ಯದಲ್ಲಿ ಅವರು ಅಮೂಲ್ಯ ಸಾಮಗ್ರಿಯನ್ನು ಪ್ರಸ್ತುತಪಡಿಸಿದರು. ಪ್ರಸಿದ್ಧ ಪರಾಙ್ಮುಖ ವ್ಯಕ್ತಿತ್ವ ಭಾಷೆಯ ಪ್ರಶ್ನೆಯ ಮೇಲೂ ಅವರದು ಆಳವಾದ ಅಧ್ಯಯನ. ಅವರು ಭಾರತದ ಅನೇಕ ಭಾಷೆಗಳನ್ನು ಬಲ್ಲರು. ಅವರು ಹಿಂದಿಯ ಕೇವಲ ಅನನ್ಯ ಭಕ್ತರು ಮಾತ್ರವಲ್ಲ, ಒಬ್ಬ ಶ್ರೇಷ್ಠ ವಿದ್ವಾಂಸರೂ ಸಹ. ಧೋತಿ ಅಥವಾ ಕುರ್ತಾದ ಸಾಧಾರಣ ವೇಷದಲ್ಲಿ ಸಾಧಾರಣವಾಗಿ ಕಾಣಿಸುವ ಈ ಮೂರ್ತಿ ಇಷ್ಟೊಂದು ಗುಣಸಂಪನ್ನರಾಗಿದ್ದಾರೆಂದು ಕಲ್ಪನೆ ಮಾಡಿಕೊಳ್ಳುವುದೂ ಸಹ ಕಷ್ಟ. ಆದರೂ ಸಹ ಜನಸಂಘದ ಈ ಪ್ರಸಿದ್ಧ ಪರಾಙ್ಮುಖ ಮುಖಂಡನ ಸಂಪರ್ಕದಲ್ಲಿ ಬರುವ ಮಧ್ಯಪ್ರದೇಶದ ಪತ್ರ 321 ಪ್ರತ್ಯೇಕ ವ್ಯಕ್ತಿ ಈ ಅಸಾಧಾರಣ ಪ್ರತಿಭೆಯಿಂದ ಪ್ರಭಾವಿತರಾಗದೇ ಇರುವುದಿಲ್ಲ. 13-5-1963 ಪಾಂಚಜನ್ಯ ಸಮಾಜದ ರಕ್ಷಣೆಯ ವ್ರತವೇ ರಕ್ಷಾಬಂಧನದ ಸಂದೇಶ ``ರಕ್ಷಾ ಬಂಧನದ ಹಬ್ಬ ನಮಗೆ ನಮ್ಮ ರಾಷ್ಟ್ರ ಜೀವನದ ಆ ಗೌರವಬಿಂದುವಿನ ನೆನಪನ್ನು ತರುತ್ತದೆ. ಇದರ ರಕ್ಷಣೆಯಲ್ಲಿಯೇ ನಮ್ಮ ರಕ್ಷಣೆ ಇದೆ. ಯಾವ ವ್ಯಕ್ತಿ ತನ್ನ ರಕ್ಷಣೆಯ ಪ್ರಯತ್ನವನ್ನು ಮಾಡುವುದಿಲ್ಲವೋ ಅವರು ಮಾನವರಲ್ಲ; ಪಶುಗಳೂ ಅಲ್ಲ; ಪ್ರಾಣಿಗಳೂ ಅಲ್ಲ; ಆತ್ಮರಕ್ಷಣೆ ಜೀವನದ ಲಕ್ಷಣ. ಹೊಡೆತಕ್ಕೆ ಪ್ರತಿ ಹೊಡೆತ ಇರಲೇಬೇಕು. ಆದರೆ ದುರ್ಭಾಗ್ಯವೆಂದರೆ ಇಂದು ನಮ್ಮ ಸಮಾಜ ನಮ್ಮ ಈ ಕರ್ತವ್ಯ ಅಂದರೆ ಆತ್ಮರಕ್ಷಣೆಯ ವಿಷಯದಲ್ಲಿಯೂ ಉದಾಸೀನವಾಗಿದೆ. ಆತ್ಮಹತ್ಯೆಯ ವಿಷಯದಲ್ಲಿಯೂ ಈ ರೀತಿ ಮುಂದುವರಿಯುತ್ತಿರುವ ಸಮಾಜದ ರಕ್ಷಣೆಯ ವ್ರತವೇ ರಕ್ಷಾಬಂಧನದ ನಿಜವಾದ ಸಂದೇಶ. ಸಂಘದ ಪ್ರತಿಯೊಬ್ಬ ಸ್ವಯಂ ಸೇವಕನೂ ಈ ವ್ರತವನ್ನೇ ಆಚರಿಸುತ್ತಾ ಸಮಾಜವನ್ನು ಭಾವಭೂಮಿಕೆಯ ಬಗ್ಗೆ ಜಾಗೃತನನ್ನಾಗಿ ಮಾಡಬೇಕು". ಈ ಮಾತುಗಳನ್ನು ದೀನ್ ದಯಾಳ್ ಉಪಾಧ್ಯಾಯರು ಸಂಘದ ಲಖನೌ ಶಾಖೆಯ ಸ್ವಯಂ ಸೇವಕರ ಮಧ್ಯೆ ಹೇಳಿದರು. ಕಾರ್ಯಕ್ರಮವು ಆ ಸ್ಥಳದ ಶ್ರೀಗಂಗಾ ಪ್ರಸಾದ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಿತು. ಇದರಲ್ಲಿ ಲಖನೌ ನಗರದ ಒಂದೂವರೆ ಸಾವಿರಕ್ಕೂ ಹೆಚ್ಚಿನ ಸ್ವಯಂ ಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಖನೌ ಶಾಖೆಯ ಸಂಘದ ನಾಯಕರಾದ ಶ್ರೀರಾಜಕುಮಾರ ಎಡ್‍ವೊಕೇಟ್ ವಹಿಸಿದ್ದರು. ಕೇವಲ ರೂಢಿಯ ಆಚರಣೆ ಆಗಬಾರದು ಅವರು ಮುಂದುವರಿಸುತ್ತಾ ಹೇಳಿದರು: ``ಇಂದಿನ ಈ ಹಬ್ಬನ್ನು ಹಿಂದೂ ಸಮಾಜ ಎಷ್ಟು ದಿನಗಳಿಂದ ಆಚರಿಸುತ್ತಾ ಬಂದಿದೆಯೋ ಗೊತ್ತಿಲ್ಲ ಮತ್ತು ಈಗಲೂ ಮನೆಯಂಗಳದಲ್ಲಿ ಈ ಹಬ್ಬನ್ನು ಆಚರಿಸಲಾಗುತ್ತಿದೆ. ಅಕ್ಕತಂಗಿಯರು ತಮ್ಮ ಅಣ್ಣ ತಮ್ಮಂದಿರಿಗೆ ಹಾಗೂ ಬ್ರಾಹ್ಮಣರು ಇತರ ಸಮಾಜದ ಜನರಿಗೆ ಇಂದು ರಾಖಿ ಕಟ್ಟುತ್ತಾರೆ. ಈ ರೀತಿ ಅವರು ಸಾವಿರಾರು ವರ್ಷಗಳಿಂದ ನಡೆದು ಬರುತ್ತಿರುವ ಪರಂಪರೆಯನ್ನು ರೂಢಿಯ ರೂಪದಲ್ಲಿ ಪಾಲಿಸುತ್ತಾರೆ. ಆದರೆ ಇದರ ಹಿಂದಿನ ಭಾವನೆಯನ್ನು ಮರೆತುಬಿಡುವ ಕಾರಣದಿಂದ ಇದು ಕೇವಲ ರೂಢಿಯಲ್ಲಿರುವ ಆಚರಣೆ ಆಗಿದೆ. ಅವಶ್ಯಕವಾಗಿ ಆಗುವ ಲಾಭವೆಂದರೆ 322 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸದಾಕಾಲವೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಮತ್ತು ಇದರಿಂದಲೇ ಸಮುಚಿತ ಲಾಭವನ್ನು ಪಡೆಯುವುದಿಲ್ಲ. ಮಮತೆಯೇ ರಕ್ಷಣೆಗೆ ಪ್ರೇರಕ ಇಂದು ದೇಶದ ದುಃಸ್ಥಿತಿಯ ಚರ್ಚೆ ಆಗುವಾಗ ಜನ ಈ ಸ್ಥಿತಿಯ ಜವಾಬ್ದಾರಿಯನ್ನು ಯಾರಾದರೂ ಬೇರೆಯ ವ್ಯಕ್ತಿಯ ಮೇಲೆ ಹೊರಿಸಿಬಿಡುತ್ತಾರೆ. ಈ ರೀತಿ ಕೇವಲ ಬೇರೆಯವರ ಮೇಲೆಯೇ ಜವಾಬ್ದಾರಿ ಹಾಕುವ ಕೆಲಸ ಮಾತೃಭೂಮಿಯ ಮೇಲೆ ಅವರಿಗೆ ಯಾವ ಮಮತೆಯೂ ಇಲ್ಲವೇನೋ ಎಂಬ ವಿಷಯವನ್ನು ಪ್ರಕಟಿಸುತ್ತದೆ. ಮೊಹಲ್ಲಾದಲ್ಲಿ ಯಾರಾದರೂ ಕೆಟ್ಟ ಮಗನಿರುವ, ನೆರೆಹೊರೆಯವ ತನ್ನ ತಾಯಿಯ ಸೇವೆ ಮಾಡದಿದ್ದರೆ ಜನ ಇಂಥ ಕೆಟ್ಟ ಮಗನನ್ನು ನಿಂದಿಸಿ ಸಮಾಧಾನ ಮಾಡಿಕೊಳ್ಳುವುದನ್ನು ಒಮ್ಮೆ ಒಪ್ಪಬಹುದು. ಆದರೆ ಮಾತೃಭೂಮಿಯ ವಿಷಯದಲ್ಲಿ ಈ ರೀತಿಯ ಮಾತು ಎಂದಿಗೂ ಶೋಭಿಸುವುದಿಲ್ಲ. ಮಮತೆಯೇ ರಕ್ಷಣೆಗೆ ಪ್ರೇರಕವಾಗಿದ್ದರೆ ಮಾತೃಭೂಮಿಯ ಸಂಬಂಧದಲ್ಲಿಯೂ ವಿಷಯ ಹೀಗೆಯೇ ಇದೆ. ಬೇರೆಯವರು ಮಾಡುತ್ತಾರೋ ಇಲ್ಲವೋ ಇದು ನಮಗೆ ಸಂಬಂಧಿಸಿದ ವಿಚಾರವಲ್ಲ. ನಾವು ಮಾಡುತ್ತೇವೆ, ಏಕೆಂದರೆ ಮಾತೃಭೂಮಿ ನಮ್ಮದು. ಚಿತ್ತೋರಿನ ವಿಷಯದಲ್ಲಿ ಅತಿ ಮಮತೆಯ ಭಾವನೆಯೇ ರಾಣಾಪ್ರತಾಪನಿಗೆ ಸಹಿಸುವುದಕ್ಕೆ ಅಸಾಧ್ಯವಾದ ದುಃಖವನ್ನು ಸಹಿಸಲು ಪ್ರೇರಣೆ ನೀಡಿತು. ಯಾರೂ ಮಾಡದುದನ್ನು ಎಲ್ಲರೂ ಮಾಡುತ್ತಿದ್ದಾರೆ ಶ್ರೀ ಉಪಾಧ್ಯಾಯರು ಮುಂದೆ ಹೇಳುವುದೇನಂದರೆ ರಾಷ್ಟ್ರೀಯ ಸ್ವಂ.ಸೇ.ಸಂಸ್ಥೆ ಯಾವುದೋ ಕಥೆಯ `ಲಖಟಕಿಯಾರಾಜಾ'ನ ತರಹ. ಅವನ ರಾಷ್ಟ್ರವನ್ನು ಕಿತ್ತುಕೊಂಡ ಮೇಲೆ, ಬೇರೆ ರಾಜನ ಬಳಿ ಹೋದ. ಯಾವ ಕೆಲಸವನ್ನು ಯಾರೂ ಮಾಡುವುದಿಲ್ಲವೋ ಆ ಕೆಲಸವನ್ನು ಅವನು ಮಾಡಬೇಕು ಎಂಬ ಶರತ್ತಿನ ಮೇಲೆ ನೌಕರನನ್ನಾಗಿ ಇಡಲಾಗಿತ್ತು. ಯಾರೂ ಮಾಡಲಾಗದ ಸಾಹಸೀ ಕೆಲಸಗಳನ್ನು ಮಾಡಿದ ಎಂಬುವುದರ ವರ್ಣನೆಯೂ ಆ ಕತೆಯಲ್ಲಿ ಬರುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದಲ್ಲಿ ಶುದ್ಧಭಾವದ ಮೇಲೆ ಆಧಾರವಾಗಿರುವ ಒಂದು ಸಾಮರ್ಥ್ಯಶಾಲಿ ಸಂಘಟನೆಯನ್ನು ನಿರ್ಮಾಣ ಮಾಡುತ್ತಿದೆ. ಇಂದು ದೇಶದಲ್ಲಿ ಈ ರೀತಿ ಕೇವಲ ಸಂಘಟನೆಯ ಕಾರ್ಯವನ್ನು ಮಾಡುತ್ತಿರುವ ಯಾವ ಸಂಸ್ಥೆಯೂ ಇಲ್ಲ. ನಿಜವಾಗಿಯೂ ಯಾರಲ್ಲಿಯೂ ಇದನ್ನು ಮಾಡುವ ಸಾಮರ್ಥ್ಯ ಇಲ್ಲ. ಕೇವಲ ಸಂಘ ಈ ಕಷ್ಟದ ಕೆಲಸವನ್ನು ಮಾಡುತ್ತಿದೆ. ಕೆಲವರು ಬಹಳ ತರಾತುರಿಯಲ್ಲಿ ಸಂಘಟನೆಯನ್ನು ಬಲಗೊಳಿಸುವುದಕ್ಕೆ ಮಧ್ಯಪ್ರದೇಶದ ಪತ್ರ 323 ಬೇರೆ ಮಾರ್ಗಗಳ ಅನುಸರಣೆಯ ಮಾತನಾಡುತ್ತಾರೆ. ಸಂಘಟನೆಯ ಕಾರ್ಯದ ಈ ಪದ್ಧತಿ ಸಂಘದ ಮೂಲಕ ಅನುಭೂತವಾಗಿದೆ ಎಂಬುದನ್ನು ಮರೆಯಬಾರದು. ಯಾವ ಪದ್ಧತಿಯನ್ನು ತನ್ನದಾಗಿಸಿಕೊಂಡು ಸಂಘವು ಸಮಗ್ರ ರಾಷ್ಟ್ರವನ್ನು ಸಂಘಟನೆಯ ಸೂತ್ರದಲ್ಲಿ ಕಟ್ಟಿದೆಯೋ ಅದರಲ್ಲಿ ಬದಲಾವಣೆಯನ್ನು ತರುವ ಯಾವ ಅವಶ್ಯಕತೆಯೂ ಇರುವುದಿಲ್ಲ. ಈಗ ದೊಡ್ಡ ಸಂಕಟ ಎದುರಾಗಿದೆ ಎಂಬುದೇನೋ ನಿಜ. ನಾವು ನಮ್ಮ ಸಂಘಟನೆಯನ್ನು ದೃಢಪಡಿಸುವುದಕ್ಕೆ ತ್ವರಿತಗತಿಯಿಂದ ಪ್ರವೃತ್ತರಾಗಬೇಕು. ಆದರೆ ತ್ವರಿತಗತಿಯ ಅಭಿಪ್ರಾಯವೆಂದರೆ ನಮ್ಮ ಪದ್ಧತಿ ಯಾವುದಿದೆಯೋ ಅದನ್ನು ಬಿಟ್ಟುಬಿಡಬೇಕು ಎಂಬ ಅರ್ಥವಲ್ಲ. ಹೀಗೆ ಯೋಚಿಸುವುದು ಅಥವಾ ಮಾಡುವುದು ಹೀಗೆಯೇ ಆಗುವುದು. ಹೇಗೆಂದರೆ ಯಾವ ವ್ಯಕ್ತಿಯಾದರೂ ಗಾಡಿ ಹಿಡಿಯುವುದಕ್ಕೆ ತಮ್ಮ ಗತಿಯನ್ನು ತೀವ್ರವಾಗಿಸುವುದರ ಬದಲು ಗಾಡಿ ಹೇಗೆ ಸಿಗುವುದು, ಇದನ್ನೇ ಜಪಿಸುತ್ತಿರುತ್ತಾರೆ. ಎದುರಿಗೆ ಒಂದು ವೇಳೆ ಹಚ್ಚಿನ ಕಷ್ಟವಿದ್ದು, ಕಡಿಮೆ ಸಮಯವಿದ್ದರೆ, ನಾವು ನಮ್ಮ ಕೆಲಸದಲ್ಲಿ ಚುರುಕುತನವನ್ನು ತರಬೇಕಾಗುವುದು. ಚುರುಕಾಗಿ ಕೆಲಸಮಾಡುವುದರಿಂದ ಸಮಯದ ಕೊರತೆಯನ್ನು ನೀಗಿಸಬಹುದು. ಬೇರೆ ಯಾವ ಮಾರ್ಗವೂ ಇಲ್ಲ. ಭವಿಷ್ಯದ ಭರವಸೆ - ಸಂಘ ಇಂದು ಯಾವಾಗ ಎಲ್ಲ ಸಮಾಜವು ತನ್ನ ಮೋಹ ನಿದ್ರೆಯ ವಶವಾಗಿದ್ದಾಗ, ಅಥವಾ ಬೇರೆಯ ಜಾಗೃತ ಜನರು ತಮ್ಮ ಸ್ವಾರ್ಥಕ್ಕಾಗಿ ಹೊಡೆದಾಡುವುದನ್ನು ನೋಡಿದಾಗ ಇಂಥ ಸ್ಥಿತಿಯಲ್ಲಿ ದೇಶದ ಭವಿಷ್ಯದ ಜವಾಬ್ದಾರಿ ಯಾರು ಆಗುತ್ತಾರೆ? ಯಾರು ಈ ಸಮಯದಲ್ಲಿ ಈ ದೇಶದ ವಿಷಯದಲ್ಲಿ ಕರ್ತವ್ಯಕೋಸ್ಕರ ಜಾಗೃತರಾಗಿರುತ್ತಾರೋ ಕೇವಲ ಆ ಸಂಘದ ಸ್ವಯಂ ಸೇವಕರು, ಸ್ವತಃ ಹೆಚ್ಚು ಜಾಗರೂಕತೆ ಮತ್ತು ಜವಾಬ್ದಾರಿಯೊಂದಿಗೆ ಸಮಾಜವನ್ನು ಎಚ್ಚರಿಸಬೇಕು. ಸಂಘ ಎಚ್ಚರಗೊಂಡರೆ ಸಮಾಜ ಜಾಗೃತವಾಗುತ್ತದೆ. ಮೊಹಲ್ಲಾ, ಮೊಹಲ್ಲಾದಲ್ಲಿರುವ ಶಾಖೆಗಳು ಆದರೆ ನಾನಾ ವಿಧವಾದ ಉತ್ಸಾಹಪೂರ್ಣ ಕಾರ್ಯಕ್ರಮಗಳನ್ನು ನೋಡಿ ಸಮಾಜದ ಮನೋಬಲ ಹೆಚ್ಚುತ್ತದೆ ಮತ್ತು ಸಮಾಜವೂ ಎದ್ದು ನಿಲ್ಲುತ್ತದೆ. ಮೊಹಲ್ಲಾ ಮೊಹಲ್ಲಾಗಳಲ್ಲಿ ಪಹರೇದಾರನ ರೀತಿ ಎಚ್ಚರಗೊಳ್ಳುವ ಶಾಖೆಗಳೇ ಸಮಾಜ ಜಾಗೃತವಾಗುತ್ತಿದೆ ಎಂಬ ವಿಷಯಕ್ಕೆ ಪ್ರಮಾಣ. ಈ ರೀತಿ ಜಾಗೃತ ಸಮಾಜದತ್ತ ಕೆಟ್ಟದೃಷ್ಟಿ ಬೀರುವ ಸಾಹಸ ನಂತರ ಯಾರಿಗೂ ಆಗುವುದಿಲ್ಲ. ನಿರಾಶೆ ಆಸೆಯಲ್ಲಿ ಬದಲಾಗುತ್ತದೆ. ನಾವು ವಿಜಯಿಗಳಾಗುತ್ತೇವೆ. 12 ಆಗಸ್ಟ್ 1968ನೇ ಇಸವಿ ಪಾಂಚಜನ್ಯ 324 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಕಟಕಾಲದಲ್ಲಿ ರಾಷ್ಟ್ರವಾದೀ ಶಕ್ತಿಗಳ ಹೊಣೆ ಕಮ್ಯುನಿಸ್ಟ್ ಚೀನಾದ ಆಕ್ರಮಣದಿಂದ ನಿರ್ಮಾಣವಾದ ಸ್ಥಿತಿಯನ್ನು ಸಂಕಟಕಾಲೀನ ಸ್ಥಿತಿ ಎಂದು ರಾಷ್ಟ್ರಪತಿಯವರು ಘೋಷಿಸಿದ ಮೇಲೆ ಸಮಾಜದಲ್ಲಿ ಎಲ್ಲ ನೀತಿಗಳ ಪುನರ್ನಿರೀಕ್ಷಣೆ ಮಾಡುವ ಮತ್ತು ಯುದ್ಧ ನಿಲ್ಲಿಸಿದ ಘೋಷಣೆಯ ನಂತರ ಪುನಃ ಇಬ್ಬಗೆಯ ಉದಾಸೀನತೆಯ ಭಾವನೆಗಳು ಹುಟ್ಟಿಕೊಂಡುವು. ಆ ಆಧಾರ ಭೂಮಿಕೆಯಲ್ಲಿ ದೂರದೃಷ್ಟಿಯನ್ನು ಹರಿಸಿ ವಿಚಾರಮಾಡಿದಾಗ ಗೊತ್ತಾಗುವುದೇನೆಂದರೆ ಕೇವಲ ಚೀನಾದತ್ತ ನೋಡುವುದರಿಂದ ಪಾಕಿಸ್ತಾನವನ್ನು ದುರ್ಲಕ್ಷ್ಯ ಮಾಡಿದ್ದೇವೆ ಎಂದು ಸ್ಪಷ್ಟವಾಗುತ್ತದೆ. ಕೆಲವರು ಏನಾದರೂ ಕೊಟ್ಟು ತೆಗೆದುಕೊಂಡು ಪಾಕಿಸ್ತಾನದೊಂದಿಗೆ ಸ್ನೇಹ ಮಾಡುವವರೆಗೂ ಮಾತನಾಡುತ್ತಾರೆ. ಆದರೆ ಹಾಗೆ ಮಾಡುವುದು ಖಂಡಿತವಾಗಿ ತಪ್ಪಾಗುತ್ತದೆ. ಎಲ್ಲ ಸ್ಥಿತಿಗಳ ಸರಿಯಾದ ಮೂಲ್ಯಾಂಕನ ಅವಶ್ಯಕ. ದೇಶದ ಸರ್ವಾಂಗೀಣ ಸುರಕ್ಷತೆಯ ದೃಷ್ಟಿಯಿಂದ ವಿಚಾರಮಾಡುವಾಗ ಎಲ್ಲ ಕ್ಷೇತ್ರಗಳು ತಮ್ಮ ನಿಜವಾದ ಶಕ್ತಿಯನ್ನು ಯಥೋಚಿತವಾಗಿ ಒಟ್ಟುಗೂಡಿಸುವುದು ಅವಶ್ಯಕತೆ ಇದೆ. ಕ್ಷಣಿಕ ಸಂಕಟದಿಂದ ದೂರ ಭವಿಷ್ಯದ ಪರಿಣಾಮವನ್ನು ಕುರಿತು ಚಿಂತಿಸಬಾರದು. ಕೇವಲ ಹೊರಗಿನ ಕಷ್ಟಗಳ ಬಗ್ಗೆ ಮಾತ್ರವಲ್ಲ. ಆಂತರಿಕ ಕಷ್ಟಗಳ ಬಗ್ಗೆಯೂ ಸಮ್ಯಕ್ ರೂಪದಲ್ಲಿ ವಿಚಾರಮಾಡುವುದು ಹಾಗೂ ಆಂತರಿಕ ಮತ್ತು ಹೊರಗಿನ ಶತ್ರುಗಳ ಯಥೋಚಿತ ವಿಚಾರ ಮಾಡುವುದೂ ಸಹ ಈ ದೃಷ್ಟಿಯಿಂದ ಅನಿವಾರ್ಯವಾಗಿದೆ. ಇಂದು ಸಮಸ್ತ ದೇಶದ ಜನತೆ ನಿಷ್ಠೆಯ ಆಧಾರದ ಮೇಲೆ ಯಾವುದೇ ನಿಶ್ಚಿತ ವಿಚಾರದ ಬಗ್ಗೆ ಸಂಘಟಿತರಾಗಿಲ್ಲ. ಆದ್ದರಿಂದ ಇಂಥ ಸ್ಥಿತಿಯಲ್ಲಿ ರಾಜನೈತಿಕ ಅಥವಾ ವೈಚಾರಿಕ ಸ್ವಾತಂತ್ರ್ಯ, ವ್ಯಾವಹಾರಿಕತೆ ಹಾಗೂ ಭೌಗೋಳಿಕ ದೃಷ್ಟಿಯಿಂದ ವಿಚಾರ ಮಾಡುತ್ತಾ ನೆರೆಯ ರಾಷ್ಟ್ರಗಳ ನಿರ್ಮಾಣದ ನಿಜವಾದ ಆಧಾರ ಪೀಠಿಕೆಯನ್ನು ಯಥಾರ್ಥ ರೂಪದಲ್ಲಿ ತಿಳಿದುಕೊಳ್ಳುವುದು ಅವಶ್ಯಕ. ಪಾಕಿಸ್ತಾನ ನಮ್ಮ ಶತ್ರು ಎಲ್ಲಿಯವರೆಗೆ ರಾಜನೈತಿಕ ದೃಷ್ಟಿಕೋನದ ಸಂಬಂಧವಿದೆಯೋ ನಮ್ಮ ದೇಶದ ಮೇಲೆ ಚೀನಾ ಆಕ್ರಮಣ ಮಾಡಿತು. ಇದನ್ನು ದೇಶದ ಒಬ್ಬೊಬ್ಬ ವ್ಯಕ್ತಿಯೂ ಚೆನ್ನಾಗಿ ತಿಳಿದಿದ್ದಾನೆ. ಆದರೆ ಪಾಕಿಸ್ತಾನದ ಕಡೆಯಿಂದಲೂ ನಮ್ಮ ದೇಶದ ಮೇಲೆ ಸಂಕಟದ ಮೋಡಗಳು ಆವರಿಸುತ್ತಿವೆ. ಇದನ್ನು ಮರೆಯುವುದು ಅಥವಾ ಈ ವಿಷಯವನ್ನು ಉಪೇಕ್ಷಿಸುವುದು ಸರ್ವಥಾ ಅನುಚಿತವೇ ಆಗುತ್ತದೆ. ಪಾಕಿಸ್ತಾನವು ಮಧ್ಯಪ್ರದೇಶದ ಪತ್ರ 325 ಕೇವಲ ಕಾಶ್ಮೀರವನ್ನು ಮಾತ್ರ ಅಪಹರಿಸಲು ಇಷ್ಟಪಡುವುದಿಲ್ಲ. ಆದರೆ ಇದನ್ನು ಹೊರತುಪಡಿಸಿ ಅದಕ್ಕೆ ಅದರದೇ ಆದ ವಿಚಾರಗಳಿವೆ. ಉಪಯುಕ್ತ ಅವಕಾಶ ಸಿಕ್ಕಿದಾಗ ಪೂರ್ತಿ ಮಾಡುವ ಪ್ರಯತ್ನ ಮಾಡುತ್ತೇನೆ. ವೈಚಾರಿಕ ದೃಷ್ಟಿಯಿಂದಲೂ ಚೀನಾ ಮತ್ತು ಪಾಕಿಸ್ತಾನ ನಮ್ಮ ಶತ್ರುಗಳು. ನೆರೆಯ ರಾಷ್ಟ್ರಗಳು ಪ್ರಕೃತ ಶತ್ರುಗಳಾಗಿರುತ್ತಾರೆ. ಇದಕ್ಕೆ ಕಾರಣ ಅವರ ವ್ಯಕ್ತಿಗತ ಹಿತಗಳಲ್ಲಿ ಪರಸ್ಪರ ಸಂಘರ್ಷವಾಗುತ್ತಿರುತ್ತದೆ. ನೆರೆಹೊರೆಯವರೊಂದಿಗೆ ಜಾಗರೂಕರಾಗಿರುವುದು ಒಂದು ಸಾಮಾನ್ಯ ನಿಯಮ. ನಮಗೆ ಸಹಾಯಕ ಮಿತ್ರರು ಇರುವುದರ, ಇಲ್ಲದಿರುವುದರ ಪ್ರಶ್ನೆ ಎಲ್ಲಿಯವರೆಗೆ ಇದೆಯೋ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿಯೂ ಸ್ವಲ್ಪ ಸಮಯದಲ್ಲಿಯೇ ನಾವು ಇಬ್ಬರು ಮೂವರು ಮಿತ್ರರನ್ನು ಸೇರಿಸಬಲ್ಲೆವು. ಆದರೆ ಇಂಥ ಜಾಗದಲ್ಲಿ ನಾವು ಗಂಭೀರವಾಗಿ ವಿಚಾರ ಮಾಡಬೇಕು ಆ ಜನರು ಮೈತ್ರಿಯ ಕೈ ಚಾಚಿ ನಮ್ಮ ರಾಷ್ಟ್ರದ ಹತ್ತಿರ ಬರಬಲ್ಲರು. ಆದರೆ ನಮ್ಮ ರಾಷ್ಟ್ರದ ವ್ಯವಹಾರ ನಿಜವಾದ ಗೆಳೆತನ ಕೆಡುವ ಹಾಗೆ ಆಗಬಾರದು. ನಮ್ಮ ಹತ್ತಿರ ಬರುವವರನ್ನು ನಾವು ನಮ್ಮ ಕೆಟ್ಟ ನಡವಳಿಕೆಯಿಂದ ದೂರ ಮಾಡಬಾರದು ಇದನ್ನು ಗಮನದಲ್ಲಿಡುವುದು ಅವಶ್ಯಕ. ವಿಚಾರ ಪೂರ್ವಕವಾಗಿ ಅನುಕೂಲ ವಾತಾವರಣದ ಲಾಭವನ್ನು ತೆಗೆದುಕೊಳ್ಳುವ ಭಯಂಕರ ತಪ್ಪನ್ನು ನಾವು ಮಾಡಬಾರದು. ಇದೇ ದೃಷ್ಟಿಯಿಂದ ಮುಂದೆ ಬರುವ ಎಲ್ಲ ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಎಲ್ಲಾ ರಾಷ್ಟ್ರವಾದಿಗಳೂ ಕಟೀ ಬದ್ಧರಾಗಿರಬೇಕು. ಯಾರ ಮೇಲೆ ನಂಬಿಕೆ ಇಡಬೇಕು ? ವ್ಯಾವಹಾರಿಕ ದೃಷ್ಟಿಯಿಂದ ಪ್ರಾಮಾಣಿಕ ವ್ಯಕ್ತಿಗಳ ಬಗ್ಗೆಯೂ ಜಾಗೃತರಾಗಿರಬೇಕು. ಎಲ್ಲಿಯವರೆಗೆ ಇವರು ಪ್ರಾಮಾಣಿಕರೆಂದು ಸಿದ್ಧವಾಗುವುದಿಲ್ಲವೋ ಅವರ ಮೇಲೆ ನಂಬಿಕೆಯನ್ನು ಇಡಲು ಆಗುವುದಿಲ್ಲ. ಈ ದೃಷ್ಟಿಯಿಂದ ಮೊದಲಿನಿಂದಲೇ ತಡೆಹಾಕಬೇಕು. ಹಾಗೂ ಘಟನೆ ಆಗಿಹೋದ ಮೇಲೆ ಎಚ್ಚರಿಕೆ ವಹಿಸುವುದು ಅವಶ್ಯಕ. ಚೀನಾ ಮತ್ತು ಪಾಕಿಸ್ತಾನ ಎರಡೂ ನೆರೆ ರಾಷ್ಟ್ರಗಳ ಸ್ವಭಾವವೇ ಶತ್ರುತಾಪೂರ್ಣವಾಗಿದೆ. ಅವರೊಂದಿಗೆ ಸಾಮಾನ್ಯರೂಪದಲ್ಲಿ ಗೆಳೆತನವನ್ನು ನಿಭಾಯಿಸುವುದಕ್ಕೆ ಆಗುವುದಿಲ್ಲ. ಶತ್ರುತ್ವವನ್ನು ಕಟ್ಟಿಕೊಂಡು ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನು ನಿರ್ಮಿಸಿದಾಗಲೇ ಮಿತ್ರರಾಗುವುದೂ ಸಾಧ್ಯ. ಸಶಸ್ತ್ರ ಪ್ರತಿರೋಧ ಬೇಕು ಭೌಗೋಳಿಕ ದೃಷ್ಟಿಯಿಂದಲೂ ಪಾಕಿಸ್ತಾನದ ನಿರ್ಮಾಣಕ್ಕೆ ಯಾವ ಸುದೃಢ 326 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆಧಾರವೂ ಇಲ್ಲ. ಗಡಿಗಳ ನಿರ್ಧಾರ ಮತ್ತು ಸುರಕ್ಷತೆಯ ದೃಷ್ಟಿಕೋನದ ಭೌಗೋಳಿಕ ದೃಷ್ಟಿಯಿಂದ ಯಾವ ಸರಿಯಾದ ಆಧಾರವನ್ನು ತಮ್ಮದನ್ನಾಗಿ ಮಾಡಿಕೊಂಡಿಲ್ಲ. ನಿಜವೆಂದರೆ ನೆರೆಯ ರಾಷ್ಟ್ರ ಪಾಕಿಸ್ತಾನದ ನಿರ್ಮಾಣವೇ ಭಾರತದ ವಿರೋಧದ ಆಧಾರದ ಮೇಲೆ ಆಗಿದೆ. ಭಾರತದ ಮಾನ್ಯತೆಗಳು ನಿಷ್ಠೆಗಳು ಪ್ರಣಾಲಿಕೆಗಳು, ಎಲ್ಲದರ ಘೋರ ವಿರೋಧವನ್ನು ಮಾಡಿ `ಇಸ್ಲಾಂರಾಜ್ಯ'ವನ್ನು ಸ್ಥಾಪಿಸೋಣ. ಈ ಆಕಾಂಕ್ಷೆಯಿಂದಲೇ ಪಾಕಿಸ್ತಾನ ನಿರ್ಮಾಣವಾಯಿತು. ಹಿಂದೂಗಳೊಂದಿಗೆ ಒಟ್ಟುಗೂಡಿ ಇರಲಾಗುವುದಿಲ್ಲ ಈ ಆಕಾಂಕ್ಷೆಯಿಂದ ಪಾಕಿಸ್ತಾನದ ಬೇಡಿಕೆಯನ್ನು ಇಡುತ್ತಾರೆ. ಭಾರತೀಯ ಪರಂಪರೆಯನ್ನು ವಿರೋಧಿಸುವ ಪ್ರವೃತ್ತಿ ಸದಾ ಇರುತ್ತದೆ. ಅವರ ಕಣ್ಣುಗಳಲ್ಲಿಯಾದರೋ ಯಾವುದೋ ಸಮಯ ಅವರು ಇಲ್ಲಿ ರಾಜ್ಯವಾಳಿದುದರ ಚಿತ್ರವೇ ಇರುತ್ತಿತ್ತು ಮತ್ತು ಪುನಃ ಅದು ಸ್ಥಾಪಿತವಾಗಲಿ- ಮನಸ್ಸಿನ ಈ ಆಕಾಂಕ್ಷೆಯ ಪೂರ್ತಿಯ ಮೊದಲ ಚರಣವೇ ಪಾಕಿಸ್ತಾನದ ನಿರ್ಮಾಣ. `ನಗುತ್ತಾ ಪಾಕಿಸ್ತಾನವನ್ನು ತೆಗೆದುಕೊಂಡೆವು, ಯುದ್ಧಮಾಡಿ ಹಿಂದೂಸ್ತಾನವನ್ನು ತೆಗೆದುಕೊಳ್ಳೋಣ'. ಈ ಘೋಷಣೆ ಅವರ ಎಲ್ಲ ಭಾವನೆಗಳ ದ್ಯೋತಕ ಈ ಆಕಾಂಕ್ಷೆಯ ಪೂರ್ತಿಗಾಗಿಯೇ ಕಾಲಕಾಲಕ್ಕೆ ಹೆದರಿಸಿ ಬೆದರಿಸಿ, ಪ್ರಪಂಚದ ತುಂಬ ಕೂಗಿ ಕೂಗಿ ಅಸ್ಸಾಂನಲ್ಲಿ ನುಗ್ಗುವುದು, ಕಾಶ್ಮೀರದಲ್ಲಿ ಆಕ್ರಮಣ ಮಾಡುವುದು ಇತ್ಯಾದಿ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರ ಹಸಿವು ಏನಾದರೂ ಕೊಡುವುದರಿಂದ ತಣಿಯಲಾರದು. ಅವರ ಈ ಆಕಾಂಕ್ಷೆಯನ್ನು ಮಣ್ಣುಗೂಡಿಸುವ ಜನ ಸುಸಂಘಟಿತರಾದಾಗಲೇ ಅವರ ಈ ಸ್ವಭಾವ ನಾಶವಾಗುವುದು, ಪ್ರಬಲ ಶಕ್ತಿಶಾಲಿ ಸ್ವರೂಪವನ್ನು ಪ್ರಕಟಿಸೋಣ. ಹಿಂದಿನ ಹದಿನಾರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಅನೇಕ ಸರ್ಕಾರಗಳು ಬದಲಾದರೂ ಭಾರತದ ವಿಷಯದಲ್ಲಿ ಅವರ ವ್ಯವಹಾರ ಎಳ್ಳಷ್ಟೂ ಬದಲಾಗಲಿಲ್ಲ. ಭಾರತ ವೈಚಾರಿಕ ಕ್ರಾಂತಿಯ ಔನ್ನತ್ಯದ ಮೇಲೆ ನಿಂತಿದೆ, ರಷ್ಯಾ ಮತ್ತು ಚೀನಾದ ಗುರಿ ಒಂದು ಆದರೆ ಸಾಧನೆಗಳು ಭಿನ್ನ ಚೀನಾದ ಸ್ಥಿತಿಯೂ ಸಹ ಪಾಕಿಸ್ತಾನದ ತರಹವೇ ಇದೆ. ಸಾಮ್ಯವಾದದಲ್ಲಿ ಸಹ ಅಸ್ತಿತ್ವ ಇರಲಿಲ್ಲ. ಅವರೂ ತಮಗೆ ಬೇಕೆಂದಾಗ ತಮ್ಮ ಸ್ವಾರ್ಥಕ್ಕಾಗಿ ಅದನ್ನು ಉಪಯೋಗಿಸಬಹುದು. ಅದು ಸಾಮ್ಯವಾದ ಮತ್ತು ಸಾಮ್ಯವಾದಿಗಳ ಹೊರತು ಯಾರನ್ನೂ ಇರಗೊಡಿಸಲು ಬಯಸುವುದಿಲ್ಲ. ಯಾವ ವ್ಯತ್ಯಾಸವೂ ಇಲ್ಲ. ಇದರಲ್ಲಿ ವ್ಯತ್ಯಾಸ ಕೇವಲ ಸಾಧನಗಳದ್ದು, ಗುರಿಗಳದಲ್ಲ. ಏಕೆಂದರೆ ರಷ್ಯಾ ಮತ್ತು ಚೀನಾದ ಪರಿಸ್ಥಿತಿಗಳಲ್ಲಿ ರಷ್ಯಾ ಒಂದು ವೇಳೆ ಯುದ್ಧ, ಹೊಡೆದಾಟ ಮತ್ತು ಬರ್ಬರತೆಯ ಸಾಧನಗಳನ್ನು ತನ್ನದಾಗಿಸಿಕೊಂಡರೆ ಇಡೀ ಯುರೋಪು ಮತ್ತು ಅಮೆರಿಕಾದೊಂದಿಗೆ ಮಧ್ಯಪ್ರದೇಶದ ಪತ್ರ 327 ಯುದ್ಧ ಮಾಡಬೇಕಾಗುವುದು. ಆದ್ದರಿಂದಲೇ ಉಗ್ರಕದನವನ್ನು ತಡೆಯವುದಕ್ಕಾಗಿ ಅದು ನಿರಂತರ ಶೀತಲಸಮರನ್ನು ಮಾಡುತ್ತಿದೆ ಮತ್ತು ಪ್ರತ್ಯಕ್ಷ ಯುದ್ಧವನ್ನು ತಡೆಯುತ್ತಿದೆ. ಅಮೆರಿಕಾದ ವಿರುದ್ಧ ಯುದ್ಧ ಮಾಡುವುದು ರಷ್ಯಾಗೆ ಈಗಲೂ ಇಷ್ಟವಿಲ್ಲ. ಆದರೆ ಚೀನಾದ ಪರಿಸ್ಥಿತಿ ರಷ್ಯಾದಿಂದ ಸರ್ವಥಾ ಭಿನ್ನವಾಗಿದೆ. ಬಹಳ ದೊಡ್ಡ ಯುದ್ಧ ಮಾಡುವುದಕ್ಕೆ ಚೀನಾ ಹಿಂಜರಿಯುತ್ತದೆ. ಆದರೆ ಎಲ್ಲಿ ಸಾಕಷ್ಟು ದೊಡ್ಡ ಯುದ್ಧವನ್ನು ಮಾಡುವುದಕ್ಕೇ ಆಗುವುದಿಲ್ಲವೋ ಅಲ್ಲಿ ಅದು ಸ್ವಲ್ಪ ಸ್ವಲ್ಪವೇ ಮುಂದುವರಿಯುತ್ತಾ ಹೋಗುತ್ತದೆ. ಸಣ್ಣಪುಟ್ಟ ಯುದ್ಧಗಳನ್ನು ಮಾಡುತ್ತದೆ. ತಾನು ಒಂಟಿಯಾಗಿರಬೇಕೆಂದು ಚೀನಾ ಬಯಸುವುದಿಲ್ಲ. ಮತ್ತೊಂದು ಕಡೆ ಎಲ್ಲ ಸಾಮ್ಯವಾದ ವಿರೋಧಿ ದೇಶಗಳು. ಈ ರೀತಿ ಉಗ್ರ ಕದನವನ್ನು ರಷ್ಯಾ ಮತ್ತು ಚೀನಾ ಎರಡೂ ತಡೆಯಬಯಸುತ್ತದೆ. ಆದರೆ ಅದರ ಡಿಗ್ರಿಯಲ್ಲಿ ವ್ಯತ್ಯಾಸವಿದೆ. ಭಾರತದೊಂದಿಗೆ ಸಶಸ್ತ್ರ ಯುದ್ಧ ಮಾಡಿದರೂ ಸಹ ಯಾವ ದೊಡ್ಡ ಯುದ್ಧವೂ ಆಗುವುದಿಲ್ಲವೆಂದು ಚೀನಾಗೆ ಗೊತ್ತಿದೆ. ಇದೇ ಮನೋಭೂಮಿಕೆಯನ್ನು ಇಟ್ಟುಕೊಂಡೇ ಅದು ಭಾರತದ ಮೇಲೆ ಆಕ್ರಮಣ ಮಾಡಿದೆ. ಆದರೆ ಯಾವಾಗ ಯುದ್ಧವು ಹೆಚ್ಚುವ ಅಪಾಯವಿದೆ ಎಂದು ಅನ್ನಿಸತೊಡಗಿತೋ ಆಗ ಅದು ನಿಂತುಬಿಟ್ಟಿತು. ನಿರಂತರ ಯುದ್ಧವನ್ನು ಮಾಡುತ್ತಲೇ ಇರುವುದರಿಂದ ಚೀನಾ ಅಪಾಯವನ್ನು ಅನುಭವಿಸುತ್ತದೆ. ಅದರ ಪ್ರವೃತ್ತಿಯಿಂದ ಇದು ಸ್ಪಷ್ಟವಾಗುತ್ತದೆ. ಪಂಚಮಾಂಗಿ ಅಂದರೆ ಪಾಕಿಸ್ತಾನೀ ಆಂತರಿಕ ಶಕ್ತಿಗಳ ವಿಚಾರ ಮಾಡುವ ಸಮಯದಲ್ಲಿ ಪ್ರಖರ ರಾಷ್ಟ್ರವಾದಿಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವೆಂದರೆ ಪಾಕಿಸ್ತಾನೀ ಸಿದ್ಧಾಂತಗಳು ಪಂಚಮಾಂಗಿಯ ರೂಪದಲ್ಲಿ ಕೆಲಸಮಾಡುತ್ತಿವೆ. ಇವರ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ. ಇಂದು ಯಾರು ಏನು ಮಾಡುತ್ತಿದ್ದಾರೆ. ಕೇವಲ ಇಷ್ಟೇ ಅಲ್ಲ ಆದರೆ ನಾಳೆ ಏನು ಮಾಡುತ್ತಾರೆ ಇದರ ವಿಚಾರವೂ ಆಗಬೇಕು. ಎಲ್ಲ ಪಾಕಿಸ್ತಾನೀ ಸಿದ್ಧಾಂತಗಳು ಈ ದೃಷ್ಟಿಯಿಂದ ಪಂಚಮಾಂಗಿಗಳು ಸಮಾಜದ ಕಡೆ ನೋಡುವುದರಿಂದ ಸ್ಪಷ್ಟವಾಗುವುದೇನೆಂದರೆ ಆ ವರ್ಗವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕಾಂಗ್ರೆಸ್‍ನ ಮೂಲಕ ಎಲ್ಲ ಅನುಕೂಲತೆಗಳನ್ನು ಕೊಟ್ಟ ಮೇಲೆಯೂ ಸಹ ಅವರು ಕಾಂಗ್ರೆಸ್‍ನೊಂದಿಗೆ ತಮ್ಮನ್ನು ಸೇರಿಸಿಕೊಳ್ಳಲಿಲ್ಲ. ಪಾರ್ಟಿಗಳೊಂದಿಗೆ ವ್ಯಾಪಾರ ವ್ಯವಹಾರ ಮಾಡುತ್ತಲೇ ಇರುತ್ತದೆ. 1906ರಿಂದ 1947ರ ವರೆಗೆ ಯಾರು ಮುಸ್ಲಿಂ ಲೀಗ್ ತರಹ ಹೆಜ್ಜೆ ಇಟ್ಟಿದ್ದರೋ ಅವುಗಳನ್ನೇ ಪುನರುಚ್ಚರಿಸುತ್ತಾ ಅವರೊಂದಿಗೆ ಒಟ್ಟುಗೂಡಿದ್ದರೋ ಅವರು ಇಂದು ಧಾರ್ಮಿಕ ಮಾತ್ರವಲ್ಲ ಸಾಮಾಜಿಕ ಮತ್ತು ರಾಜನೈತಿಕ ಅಸ್ತಿತ್ವವನ್ನು ಸಹ ಕಾಪಾಡಿಕೊಳ್ಳಲು 328 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪ್ರಯತ್ನಿಸುತ್ತಾರೆ. ಅವರು ಯಾವುದೇ ಪಕ್ಷದಲ್ಲಿರಲಿ ಅವರ ಈ ಪ್ರಯತ್ನ ಎಲ್ಲ ಸ್ಥಳಗಳಲ್ಲಿ ಆಗುತ್ತಾ ಇರುತ್ತದೆ. ಕಾಶ್ಮೀರದಲ್ಲಿ ಅವರ ಸಂಖ್ಯೆ ಹೆಚ್ಚಾಗಿ ಇರುವುದಕ್ಕೆ ಕಾರಣ ಅವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ವೇಷಧರಿಸಿ ಮೋಸಮಾಡುವ ಕಮ್ಯುನಿಸ್ಟರ ನಗ್ನ ಸ್ವರೂಪ ಚೀನಾದೊಂದಿಗೆ ಕಮ್ಯುನಿಸ್ಟ್ ಪಾರ್ಟಿಯೂ ಸಹ ಸ್ವತಂತ್ರ ರೂಪದಲ್ಲಿ ಭಾರತದಲ್ಲಿ ತಮ್ಮ ವೈಚಾರಿಕ ಮನೋಭೂಮಿಕೆಗಳನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ. ಇದರ ಮೂಲಕ ತನ್ನ ಪ್ರಗತಿಯ ಸುಳ್ಳು ಪ್ರಚಾರವನ್ನು ಹೆಚ್ಚಾಗಿ ಮಾಡುತ್ತಿದೆ. ಇತಿಹಾಸವನ್ನು ನೋಡುವುದರಿಂದ ಗೊತ್ತಾಗುವುದೇನೆಂದರೆ ಕಮ್ಯುನಿಸ್ಟ್ ಪಾರ್ಟಿಯು ಸದಾಕಾಲವೂ ದೇಶಕ್ಕೆ ಆಘಾತ ಒಡ್ಡುವ ಕಾರ್ಯಗಳನ್ನು ಮಾಡುತ್ತಿರುತ್ತದೆ. ಉಕ್ಕಿನ ಮನುಷ್ಯ ಸರ್ದಾರ್ ಪಟೇಲರು ತಮ್ಮ ಸಫಲ ಪ್ರಯತ್ನಗಳ ಮೂಲಕ ಹತ್ತಿಕ್ಕಿದ ತೆಲಂಗಾಣ ಷಡ್ಯಂತ್ರವು ದೇಶಕ್ಕೆ ಆಘಾತವನ್ನು ಒಡ್ಡಿದ ಕಮ್ಯುನಿಸ್ಟ್‌ರ ಪ್ರವೃತ್ತಿಯ ಜ್ವಲಂತ ಪ್ರಮಾಣವಾಗಿದೆ. ಯಾವಾಗಿನಿಂದ ಟಿಬೆಟ್ಟಿನ ಮೇಲೆ ಚೀನಾದ ಆಕ್ರಮಣವಾಯಿತೋ ಆ ಸಮಯದಿಂದ ಕೆಲವರು ಅದರ ಸರಿಯಾದ ಸ್ಥಿತಿಯನ್ನು ಅರ್ಥಮಾಡಿಕೊಂಡರು. ಆದರೆ ಅವರ ಪ್ರಯತ್ನ ಕಡಿಮೆಯಾಗುತ್ತಿತ್ತು. ಕಮ್ಯುನಿಸ್ಟ್‌ರು ಆ ಸಮಯದಲ್ಲಿ ಸಹ ದೇಶದ ಜನತೆಯಲ್ಲಿ ವಿಭಿನ್ನ ಪ್ರಕಾರದ ಭೇದಭಾವಗಳನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದರು. ಸಾಂಪ್ರದಾಯಿಕ ದಂಗೆಗಳನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಅಲ್ಲಲ್ಲಿ ಪಾಕಿಸ್ತಾನೀ ಸಿದ್ಧಾಂತಗಳೊಂದಿಗೆ ಸೇರಿ ಅವರ ಜಗಳಗಳಿಗೆ ಪ್ರೋತ್ಸಾಹ ಕೊಟ್ಟರು. ದೇಶದ ಈ ಸಂಕಟಕಾಲದಲ್ಲಿ ರಾಜನೈತಿಕ ವಿಚಾರ ಮಾಡುವ ಜನರಿಗೆ ಈ ಕಮ್ಯುನಿಸ್ಟ್ ಮತ್ತು ಪಾಕಿಸ್ತಾನೀ ಸಿದ್ಧಾಂತಗಳು ಆಗಿಂದಾಗ್ಗೆ ತಮ್ಮತಮ್ಮಲ್ಲೇ ಒಟ್ಟುಗೂಡಿ ದೇಶಕ್ಕೇ ಆಘಾತವನ್ನು ಒಡ್ಡುವ ಷಡ್ಯಂತ್ರವನ್ನು ಮಾಡುತ್ತಿರುತ್ತಾರೆ ಎಂಬ ವಿಷಯ ಏಕೆ ಗೊತ್ತಾಗಲಿಲ್ಲವೋ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಬೇಡಿಕೆಯನ್ನು ಕಮ್ಯುನಿಸ್ಟ್‌ರ ಮೂಲಕ ಸಮರ್ಥನೆ ಮಾಡುವುದೂ ಸಹ ಇದರ ಸ್ಪಷ್ಟ ಪ್ರಮಾಣವಾಗಿದೆ. ಪ್ರಾರಂಭದಲ್ಲಿಯೇ ಅವರು ಕಾಶ್ಮೀರದ ವಿಭಜನೆ ಮತ್ತು ಶೇಖ್ ಅಬ್ದುಲ್ಲಾರ ಪೂರ್ಣ ಸಮರ್ಥನೆಯನ್ನು ಮಾಡಿದರು. ಇದೇ ರೀತಿ ಕಮ್ಯುನಿಸ್ಟ್‌ರು ಮತ್ತು ಈ ಪಾಕಿಸ್ತಾನೀ ಸಿದ್ಧಾಂತಗಳ ಮಧ್ಯೆ ಒಂದು ಗುಪ್ತ ದುರಭಿ ಸಂಧಿಯ ಅತಿಸ್ಪಷ್ಟ ಅಭಾಸವಾಗುತ್ತದೆ. ಪಾಕಿಸ್ತಾನದಿಂದ ಬಂದು ಅಸ್ಸಾಂನಲ್ಲಿ ನೆಲೆಸಿರುವ ಪಾಕಿಸ್ತಾನಿಗಳನ್ನು ಭಾರತದಿಂದ ಹೊರದೂಡಿದುದನ್ನು ಕಮ್ಯುನಿಸ್ಟ್‌ರು ವಿರೋಧಿಸಿದ್ದು ಅವರ ಈ ಮನೋವೃತ್ತಿಯನ್ನು ಪರಿಚಯಿಸುತ್ತದೆ. ಭಾರತದಲ್ಲಿ ಎಷ್ಟು ಗಲಾಟೆಗಳನ್ನು ಎಬ್ಬಿಸಬಹುದು ಎಂಬ ವಿಷಯದ ಬಗ್ಗೆ ಇಬ್ಬರದೂ ಸಹಮತವಿದೆ. ಆದ್ದರಿಂದ ಈ ಸಾಧ್ಯತೆಯೂ ಇದೆ. ಮಧ್ಯಪ್ರದೇಶದ ಪತ್ರ 329 ಏನೆಂದರೆ ಚೀನಾ ಪಾಕಿಸ್ತಾನದ ಈ ಸ್ನೇಹ ಅವರದೇ ಪಿತೂರಿಯ ಯೋಜನಾಬದ್ಧ ಸ್ವರೂಪದ್ದೇ ಒಂದು ಅಂಗವಾಗಿರಬಹುದು. ಚೀನಾ ದೇಶವು ಟಿಬೆಟ್ಟನ್ನು ತನ್ನ ವಶಕ್ಕೆ ತೆಗೆದುಕೊಂಡ ಮೇಲೆ ಸಾಮ್ಯವಾದದ ಘೋರ ವಿರೋಧದ ಭಾವ ಇಡೀ ದೇಶದಲ್ಲಿ ಹೆಚ್ಚಿತು. ಎಲ್ಲ ಪಕ್ಷಗಳೂ ಒಟ್ಟಿಗೇ ಪ್ರಯತ್ನಿಸತೊಡಗಿದವು. ದಲೈಲಾಮಾನ ವಿಷಯದಲ್ಲಿ ಎಲ್ಲ ಪಕ್ಷಗಳೂ ಸಹಾನುಭೂತಿಯನ್ನು ಪ್ರಕಟಿಸಿದುವು. ದಲೈಲಾಮಾನ ಮೂಲಕವೇ ಎಲ್ಲರಿಗೂ ಗೊತ್ತಾಯಿತೇನೆಂದರೆ ಚೀನಾ ಟಿಬೆಟ್ಟಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಸಹ ನಷ್ಟ ಭ್ರಷ್ಟಮಾಡುವುದಕ್ಕೆ ಪಟ್ಟು ಹಿಡಿದಿದೆ. ಕಮ್ಯುನಿಸ್ಟ್ ಜನರು ಬೇರೆ ಬೇರೆ ಜಾಗಗಳಲ್ಲಿ ಕಮ್ಯುನಿಸ್ಟ್‍ನ ಪ್ರಚಾರದ ಕಾರಣದಿಂದ ಕಮ್ಯುನಿಸ್ಟ್ ಸಮಸ್ಯೆಯನ್ನು ನಿಲ್ಲಿಸದೆ ಸಾಂಪ್ರದಾಯಿಕ ಜಗಳವನ್ನು ಹುಟ್ಟುಹಾಕುತ್ತವೆ. ಚೀನೀ ಆಕ್ರಮಣವಾದ ಮೇಲೆ ಅದು Isolate ಆಯಿತು. ಇದನ್ನು ಮುಗಿಸುವುದಕ್ಕಾಗಿಯೇ ಅದು ಪುನಃ ಯಾವುದಾದರೂ ಸಮಸ್ಯೆಯನ್ನು ತಂದರೂ ತರಬಹುದು. ಸಾಂಪ್ರದಾಯಿಕತೆಯ ಸಮಸ್ಯೆಯನ್ನು ತರಬಹುದು ಮತ್ತು ಅದರಲ್ಲಿ ಮುಸಲ್ಮಾನರು ಸಹಾಯಕರಾಗಿರಬಹುದು. ಇದಕ್ಕೇ ಸಂಘ, ಜನಸಂಘ, ಹಿಂದೂ ಮಹಾಸಭಾ ಹೆಸರುಗಳನ್ನು ಕೊಡಬಹುದು. Isolate ಮಾಡುವುದಕ್ಕೆ ಇದು ಹಗ್ಗ ಜಗ್ಗಾಟವಾಗಿದೆ. ಕಾಂಗ್ರೆಸ್ ಇದರ ಮುಂದೆ ಬಾಗುತ್ತದೆ ಸಾಮ್ಯವಾದೀ ಮತ್ತು ಪಾಕಿಸ್ತಾನೀ ಸಿದ್ಧಾಂತಗಳೆರಡೂ ಭಾರತದ ರಾಷ್ಟ್ರೀಯ ನಿಷ್ಠೆಯ ವಿರೋಧಿಗಳು. ಕಾಂಗ್ರೆಸ್ ಮತ್ತು ಪಿ.ಎಸ್.ಪಿ. ಕಮ್ಯುನಿಸ್ಟ್ ಅಥವಾ ಮುಸಲ್ಮಾನರೊಂದಿಗೆ ಪ್ರತ್ಯೇಕ ರೂಪದಲ್ಲಿ ನಿಲ್ಲಿಸಲಾಗದಿದ್ದರೂ ಇವುಗಳಲ್ಲಿ ಯಾವ ವಿಷಯಗಳಿಗೆ ಮಾನ್ಯತೆ ಕೊಡುತ್ತಾರೋ ಆ ಮಾತುಗಳನ್ನು ನಿರ್ಭೀತತೆಯಿಂದ ಹೇಳುವ ಧೈರ್ಯ ಇವರಲ್ಲಿ ಯಾರಿಗೂ ಇಲ್ಲ. ರಾಜನೈತಿಕ ಕಾರಣಗಳಿಂದ ಅವು ಬಾಗಿಬಿಡುತ್ತವೆ. ಅವುಗಳು ಹಿಂದೆ ಸರಿಯುತ್ತವೆ. ಉಪೇಕ್ಷೆ ಮಾಡಕೂಡದು ಈ ಪಕ್ಷಗಳು ಅವರ ಜೊತೆಗೆ ಇವೆ, ಆದ್ದರಿಂದ ಅವುಗಳನ್ನು ಬಿಡಬೇಕು. ಇದು ಸರಿಯಲ್ಲ. ಕಾಂಗ್ರೆಸ್, ಸೋಪಾ, ಪ್ರಸೋಪಾ ಮತ್ತು ಕಮ್ಯುನಿಸ್ಟ್ ಒಂದೇ ಅಲ್ಲ. ಅವುಗಳಲ್ಲಿ ಸಾಮ್ಯವಾದಿ ಮತ್ತು ರಾಷ್ಟ್ರವಾದಿ ಎರಡೂ ಇವೆ. ಆದರೆ ಮಧ್ಯದ ಜನ ಎಲ್ಲಿ ನಿಂತಿರಬಹುದು. ಇದು ಮಹತ್ವಪೂರ್ಣವಾದುದು. ಅವರು ಒಂದು ವೇಳೆ ಅವರ ಜೊತೆ ನಿಂತಿದ್ದರೆ ಅವರ ಶಕ್ತಿ ಹೆಚ್ಚುತ್ತದೆ. ಈ ದೃಷ್ಟಿಯಿಂದ 330 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನೋಡಿದರೆ ವರ್ತಮಾನಕಾಲ ಒಳ್ಳೆಯಕಾಲ. ಏಕೆಂದರೆ ಮಧ್ಯದ ಜನರನ್ನು ರಾಷ್ಟ್ರವಾದಿ ಮಾಡಬಹುದು. ಏಕೆಂದರೆ ಚೀನಾದ ಆಕ್ರಮಣದ ಕಾರಣದಿಂದ ಈ ವರ್ಗ ನಿಶ್ಚೇಷ್ಟಿತವಾಗಿ ನಿಂತಿದೆ. ಅದಕ್ಕೇ ರಾಷ್ಟ್ರವಾದಿಗಳ ಬೆಲೆ ಗೊತ್ತಿದೆ. ಎಲ್ಲ ಕಡೆ ಪರಿವರ್ತನೆಗಳಾಗುತ್ತಿದೆ ರೇಡಿಯೋ ಮತ್ತು ಸಮಾಚಾರ ಪತ್ರಿಕೆಗಳನ್ನು ಅವಲೋಕಿಸಿದರೆ ತಿಳಿಯಪಡುವುದೇನೆಂದರೆ ಯಾರನ್ನು ಪ್ರತಿಗಾಮಿ ಎಂದು ಹೇಳಲಾಗುತ್ತಿತ್ತೋ ಅವರಿಂದಲೇ ಪ್ರೇರಣೆಯನ್ನು ಪಡೆಯಲಾಗುತ್ತಿದೆ. ಈ ವಾತಾವರಣ ಈ ಹವೆಯ ಕಾರಣದಿಂದಲೇ ಆಗಿದೆ. ಇದನ್ನು ಜನರು ಸ್ವಾಭಾವಿಕ ರೂಪದಲ್ಲಿ ಗ್ರಹಿಸಿದ್ದಾರೆ. ಪ್ರತಾಪ ಸಿಂಹ ಕೈತೋ ಅವರು ಹೇಳುವುದೇನೆಂದರೆ ``ನಾವು ಹತ್ತು ವರ್ಷಗಳವರೆಗೆ ಅಹಿಂಸಾ ಶಬ್ದವನ್ನು ಶಬ್ದಕೋಶದಿಂದ ತೆಗೆದುಹಾಕಬೇಕು" ಈ ವೈಚಾರಿಕ ದೃಷ್ಟಿಯಿಂದ ಆಗುವ ಬದಲಾವಣೆಯನ್ನು ಅವಶ್ಯಕವಾಗಿ ಆಳವಾಗಿ ನೋಡಬೇಕು. ಇದಲ್ಲದೆ ಲೋಕಸಭೆಯಲ್ಲಿ ಸುಭದ್ರಾ ಜೋಶಿಯವರು ಕಮ್ಯುನಿಸ್ಟ್‌ರನ್ನು ಸಮರ್ಥಿಸಿ ಭಾಷಣ ಮಾಡಿದಾಗ ಅವರು ಬಹಳ ದುರ್ಗತಿಗೆ ಈಡಾದರು ಮತ್ತು ಎಂಥ ಘೋರ ವಿರೋಧವಾಯಿತೆಂದರೆ ಅವರು ಭಾಷಣವನ್ನು ಮಾಡಲಾರದೇ ಹೋದರು. ಈಗ ಈ ಮಾತಿನ ಪ್ರತೀಕವೆಂದರೆ ಇಂದಿನ ಸಮಾಜದಲ್ಲಿ ವೈಚಾರಿಕ ಕ್ರಾಂತಿ ಬರುವುದು ಹೋಗುವುದು ಆಗುತ್ತಲೇ ಇದೆ. ಇದಕ್ಕೆ ಕಾರಣವೆಂದರೆ ಜನರು ಕಳೆದ ಹದಿನಾರು ವರ್ಷಗಳ ಇತಿಹಾಸ ಮತ್ತು ಭವಿಷ್ಯದ ಸಂಬಂಧದಲ್ಲಿ ವಿಚಾರ ಮಾಡತೊಡಗಿದ್ದಾರೆ. ಶ್ರೀ ದಿನಕರ ಅವರಂತೂ ಚೀನಾದ ಆಕ್ರಮಣದ ವಿಚಾರವಾಗಿ ನಮ್ಮ ದೇಶವಾಸಿಗಳ ವೈಚಾರಿಕ ಭೂಮಿಕೆ ಮತ್ತು ತಪ್ಪುಗಳನ್ನೇ ದೋಷಪೂರಿತ ಎಂದು ನಿರ್ಧರಿಸಿದ್ದಾರೆ. ಆದ್ದರಿಂದ ಸಂಕಟಗಳನ್ನು ಕುರಿತು ಮಾತನಾಡುವಾಗ ಈ ಸ್ಥಿತಿಯ ವಿಚಾರವನ್ನು ಮಾಡಬೇಕು. ಅಂತಾರಾಷ್ಟ್ರೀಯ ಮಿತ್ರರು ಒಂದುಗೂಡುತ್ತಾರೆ ನಮಗೆ ಸಹಾಯಕ ಮಿತ್ರರು ಇರುವುದು ಅಥವಾ ಇರದಿರುವುದರ ಪ್ರಶ್ನೆಯ ಮಟ್ಟಿಗೆ ಹೇಳುವುದಾದರೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿಯೂ ಸ್ವಲ್ಪ ಸಮಯದಲ್ಲಿಯೇ ನಾವು ಇಬ್ಬರು ಮೂವರು ಮಿತ್ರರನ್ನು ಕಲೆಹಾಕಬಹುದು. ಆದರೆ ಇಂಥ ಜಾಗಗಳಲ್ಲಿ ನಾವು ಗಂಭೀರವಾಗಿ ವಿಚಾರಮಾಡಬೇಕು. ಆ ಜನರು ಸ್ನೇಹದ ಕೈಚಾಚಿ ನಮ್ಮ ರಾಷ್ಟ್ರದ ಹತ್ತಿರ ಬರಬಲ್ಲರು. ಆದರೆ ನಮ್ಮ ರಾಷ್ಟ್ರದ ವ್ಯವಹಾರವು ನಿಜವಾದ ಸ್ನೇಹ ಭಗ್ನವಾಗುವಂತೆ ಆಗಬಾರದು. ಹತ್ತಿರಕ್ಕೆ ಬರುವವರನ್ನು ನಾವು ನಮ್ಮ ದುರ್ವ್ಯವಹಾರದಿಂದ ದೂರಮಾಡಬಾರದು. ಇದನ್ನು ಗಮನದಲ್ಲಿಡುವುದು ಅವಶ್ಯಕ. ಮಧ್ಯಪ್ರದೇಶದ ಪತ್ರ 331 ಅನುಕೂಲ ವಾತಾವರಣದ ಲಾಭವನ್ನು ತೆಗೆದುಕೊಳ್ಳದಿರುವ ಭಯಂಕರ ತಪ್ಪನ್ನೂ ನಾವು ಮಾಡಬಾರದು. ಇದೇ ದೃಷಿಯಿಂದ ಮುಂದೆ ಬರುವ ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಎಲ್ಲ ರಾಷ್ಟ್ರವಾದಿಗಳೂ ಕಟಿಬದ್ಧರಾಗಬೇಕು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ರ ಸ್ಥಿತಿ ಈ ಎಲ್ಲ ವೈಚಾರಿಕ ಕ್ರಾಂತಿಗಳು ನಡೆದರೂ ಕಮ್ಯುನಿಸ್ಟ್‌ರ ಸಂಘಟನೆ ದುರ್ಬಲವಾಯಿತೆಂದು ರಾಷ್ಟ್ರವಾದಿಗಳು ಯೋಚಿಸಬಾರದು. ಕಮ್ಯುನಿಸ್ಟ್‌ರು ಮತ್ತು ಜನತೆಯ ವಿಚಾರಗಳ ಮಧ್ಯೆ ಬಿರುಕು ಸಾಕಷ್ಟು ಹೆಚ್ಚಿದೆ ಎನ್ನುವುದು ಸರಿ. ಆದರೆ ಸಮಾಜದಲ್ಲಿ ಅವರಿಗೆ ಯಾವ ಸ್ಥಾನವಿತ್ತೋ ಅದರಲ್ಲಿಯೂ ಸಾಕಷ್ಟು ಬದಲಾವಣೆ ಬಂದಿದೆ ಎಂಬ ಮಾತು ಸಹ ಕಡಿಮೆ ಮಹತ್ವದ್ದಲ್ಲ. ಪ್ರಖರ ರಾಷ್ಟ್ರವಾದಿ ವಿಚಾರಗಳ ವಿಷಯದಲ್ಲಿಯೂ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಬದಲಾವಣೆಗಳ ವಿಷಯದಲ್ಲಿ ನಾವು ಆಳವಾಗಿ ಯೋಚಿಸಬೇಕಾಗುವುದು. ನೆಹರೂ ಅವರು ಹೇಳಿದ್ದೇ ಆಗುವುದು ಎಂಬ ಸ್ಥಿತಿ ಈಗ ಕಾಂಗ್ರೆಸ್ಸಿನಲ್ಲಿಯೂ ಸಹ ಇಲ್ಲ. ನೆಹರೂ ಅವರಿಗೆ ಇಷ್ಟವಿಲ್ಲದಿದ್ದರೂ ಕೃಷ್ಣಮೆನನ್ ಮತ್ತು ಮಾಳವೀಯ ಅವರನ್ನು ತೆಗೆದುಹಾಕಿದ್ದು ಈ ಮಾತಿಗೆ ಜ್ವಲಂತ ಸಾಕ್ಷಿಯಾಗಿದೆ. ಸಮಾಚಾರ ಪತ್ರಿಕೆಗಳ ಕ್ಷೇತ್ರದಲ್ಲಿಯೂ ಸಹ ಕಮ್ಯುನಿಸ್ಟ್‌ರ ಸ್ಥಿತಿ ಬಿದ್ದು ಹೋಗಿದೆ ಮತ್ತು ಶ್ರಮಜೀವಿಗಳ ಕ್ಷೇತ್ರದಲ್ಲಿಯೂ ಸಹ. ಈ ರೀತಿ ಸಾಮ್ಯವಾದವನ್ನು ವಿರೋಧಿಸುವ ಕಾರ್ಯ ಮತ್ತು ಶಕ್ತಿಗಳು ಬಲಗೊಳ್ಳುವುದನ್ನು ನಾವು ನೋಡಿದ್ದೇವೆ. ಕಮ್ಯುನಿಸ್ಟ್ ಮತ್ತು ಕೇಂದ್ರಿಯ ಸಂಘಟಿತ ಶಕ್ತಿಯನ್ನು ನಿರ್ಮೂಲಗೊಳಿಸುವ ಪ್ರಶ್ನೆ ಈಗ ಉಳಿಯಿತು. ಇಂದು ದೇಶವ್ಯಾಪೀ ರಾಷ್ಟ್ರವಾದಿಗಳ ಸಂಘಟಿತ ಶಕ್ತಿಯ ಮೂಲಕ ಎಷ್ಟು ಕೆಲಸಗಳಾಗುತ್ತಿವೆಯೋ, ನಾವು ಎಷ್ಟು ಪ್ರಯತ್ನ ಮಾಡುತ್ತಿದ್ದೇವೋ, ಈ ವಿಷಯದ ಮೇಲೆ ನಿರ್ಭರವಾಗಿದೆ. ಸಂಪೂರ್ಣ ಶಕ್ತಿಯೊಂದಿಗೆ ಒಂದಾಗೋಣ. ಮಳೆ ಬಿದ್ದಮೇಲೆ ಹೇಗೆ ರೈತನಾದವನು ಮನೆಯಲ್ಲಿ ಕುಳಿತಿರುವುದಕ್ಕೇ ಇಷ್ಟಪಡುವುದಿಲ್ಲವೋ ಹಾಗೆಯೇ ಬದಲಾವಣೆಯ ಕಾರಣದಿಂದ ರಾಷ್ಟ್ರವಾದಿಗಳು ಅನುಕೂಲ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವುದಾದರೆ ನಿಸ್ಸಂದೇಹವಾಗಿ ದೇಶದಲ್ಲಿ ರಾಷ್ಟ್ರೀಯತೆ ಭಾವವನ್ನು ಪ್ರಖರವಾಗಿ ಉದ್ದೀಪಗೊಳಿಸಬಹುದು. ದೇಶದಲ್ಲಿ ಕವಿದಿರುವ ಕಷ್ಟಗಳ ಮತ್ತು ಕಷ್ಟಕಾಲಗಳ ಬಗ್ಗೆ ಹೇಳುವುದಾದರೆ ಕಷ್ಟಗಳು ಇನ್ನೂ ಮುಗಿದಿಲ್ಲ ಎನ್ನುವುದೇ ವಾಸ್ತವತೆ. ಕಷ್ಟಗಳನ್ನು ಎದುರಿಸುವುದಕ್ಕೆ ಎಲ್ಲ ರಾಷ್ಟ್ರವಾದೀ ಶಕ್ತಿಗಳು ಸತತವಾಗಿ ಪ್ರಯತ್ನಶೀಲರಾಗಬೇಕು. ರಾಷ್ಟ್ರವಾದಿಗಳಿಂದ 332 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ದೇಶ ಮತ್ತು ಸಮಾಜಕ್ಕೆ ಬಹಳ ಅಪೇಕ್ಷೆಗಳಿವೆ. ಈ ಅಪೇಕ್ಷೆಗಳನ್ನು ಹೊಂದಿರುವವರನ್ನು ಸಹ ಅವರು ತಮ್ಮೊಂದಿಗೆ ಎಳೆದು ನಿಲ್ಲಿಸಿಕೊಳ್ಳಬೇಕು ಮತ್ತು ಈ ದೃಷ್ಟಿಯಿಂದ ರಾಷ್ಟ್ರವಾದೀ ಸಿದ್ಧಾಂತಗಳು ತಮ್ಮ ಆತ್ಮವಾಲೋಕವನ್ನು ಮಾಡಿಕೊಳ್ಳಬೇಕು. 13 ಸೆಪ್ಟೆಂಬರ್ 1963 ಪಾಂಚಜನ್ಯ ನಮ್ಮ ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಥವಾ ರಾಜನೈತಿಕ ವ್ಯವಸ್ಥೆಗಳ ಓರೆಗಲ್ಲು ಏನಾಗಿರಬೇಕು? ಇಂದಿನ ಪ್ರಪಂಚದಲ್ಲಿ ನಾವು ನಮ್ಮ ಹಳೆಯ ಪದ್ಧತಿಗಳಿಗೆ ಸಿಕ್ಕಿಹಾಕಿಕೊಂಡು ಇರಲಾಗುವುದಿಲ್ಲ. ನಾವು ಹೊಸ ತಿಳುವಳಿಕೆಯ ಪರಿಚಯವನ್ನು ಮಾಡಿಕೊಡಬೇಕು. ಆದರೆ ಜೊತೆಯಲ್ಲಿಯೇ ಎರವಲು ಬುದ್ಧಿಯಿಂದ ಕೆಲಸ ನಡೆಸಲು ಆಗುವುದಿಲ್ಲ. ತಿಳುವಳಿಕೆ ನಮ್ಮದಿರಬೇಕು, ಅನುಭವ ನಮ್ಮದಿರಬೇಕು. ಕಾರಣ ಮತ್ತು ಚಿಕಿತ್ಸೆಯೂ ನಮ್ಮದಿರಬೇಕು ಈ ದೃಷ್ಟಿಯಿಂದ ಈ ಲೇಖನಕ್ಕೆ ಅದ್ವಿತೀಯ ಮಹತ್ವವಿದೆ. ನಮ್ಮ ಹಣೆಯ ಬರಹ ಭಾರತೀಯ ತತ್ವಚಿಂತನೆಯ ಸಂಜೀವನಶಕ್ತಿ. ದೀನ್ ದಯಾಳ್ ಉಪಾಧ್ಯಾಯ ಸ್ವರಾಜ್ಯವು ಜೀವಂತ ರಾಷ್ಟ್ರದ ಸಾಧಾರಣ ಲಕ್ಷಣ. ಸ್ವರಾಜ್ಯದೊಂದಿಗೆ ರಾಷ್ಟ್ರವು ತನ್ನ ಹಿತ ಸಾಧನೆಯನ್ನು ಮಾಡಿಕೊಳ್ಳಲಾರದು ಮತ್ತು ತನ್ನ ಅಭಿವ್ಯಕ್ತಿಯನ್ನು ಸಹ ಮಾಡಲಾರದು. ಆದ್ದರಿಂದ ಪ್ರಾಣಿ ಮಾತ್ರದಲ್ಲಿ ಜೀವದ ಬಗ್ಗೆ ಪ್ರೀತಿ ಹೇಗೆ ಸ್ವಾಭಾವಿಕವೋ ಹಾಗೆಯೇ ಸ್ವಾತಂತ್ರ್ಯದ ಆಸೆ ಅದರ ಜೀವನದ ಅನಿವಾರ್ಯ ಅವಶ್ಯಕತೆ ಆಗಿದೆ. ಈ ಹಸಿವಿಲ್ಲದೆ ಯಾವ ಮಾನವ ಸಮೂಹವೂ `ರಾಷ್ಟ್ರ' ಎಂಬ ಹೆಸರನ್ನು ಪಡೆಯಲಾರದು. ಆದ್ದರಿಂದ ರಾಷ್ಟ್ರದ ಇತಿಹಾಸದಲ್ಲಿ ಸ್ವರಾಜ್ಯಪ್ರಾಪ್ತಿ, ಸಂರಕ್ಷಣೆ ಮತ್ತು ಅಭಿವೃದ್ಧಿಯ ಪ್ರಯತ್ನಗಳದೇ ಬಹಳ ದೊಡ್ಡ ಭಾಗವಿದೆ. ಆದರೆ ಯಾವ ರೀತಿ ಪ್ರಾಣಿಗಳ ಸ್ಪಂದನೆಯೇ ಜೀವನವಲ್ಲವೋ ಹಾಗೆಯೇ ಸ್ವರಾಜ್ಯವೇ ರಾಷ್ಟ್ರದ ಪೂರ್ಣರೂಪವಲ್ಲ. ವಿಕಾಸದ ಏಣಿಯ ಮೇಲೆ ಹೇಗೆ ಸಾಮಾನ್ಯ `ಜೀವ' ಮೇಲೆ ಮೇಲೆ ಹೋಯಿತೋ, ಅದರ ಜೀವನ ಆಹಾರ, ನಿದ್ರಾ, ಮೈಥುನದಂತಹ ಪ್ರಾಕೃತಿಕ ಕ್ರಿಯೆಗಳಲ್ಲದೆ ನಿಶ್ಚಿತ ಧ್ಯೇಯ ಕೇಂದ್ರಿತ ಕ್ರಿಯಾಕಲಾಪಗಳ ಸಾಧನವಾಗುತ್ತದೆ. `ಧ್ಯೇಯವೇ ಜೀವನ' ಎಂಬ ವಾಕ್ಯ ನಿಜವಾಗುತ್ತದೆ. ರಾಷ್ಟ್ರ ಜೀವನದಲ್ಲಿಯೂ ಸ್ವರಾಜ್ಯ ಒಂದು ಸಾಧನ, ಸಮಾಜದ ಒಂದು ಸ್ಥಿತಿ, ಇದರಲ್ಲಿ ಅದು ಅಡ್ಡಿ ಇಲ್ಲದೆ ತನ್ನ ವಿವೇಕದ ಅನುಸಾರವಾಗಿ ನಿಶ್ಚಿತ ಮಧ್ಯಪ್ರದೇಶದ ಪತ್ರ 333 ಧ್ಯೇಯದತ್ತ ಸಾಗುತ್ತಾ ಹೋಗುತ್ತದೆ. 15 ಆಗಸ್ಟ್ 1947ರಲ್ಲಿ ಬಿಟ್ರಿಷರು ಭಾರತವನ್ನು ಬಿಟ್ಟ ಮೇಲೆ ನಮಗೆ ರಾಜನೈತಿಕ ಸ್ವಾತಂತ್ರ್ಯ ಸಿಕ್ಕಿತು. ರಾಷ್ಟ್ರಜೀವನದ ಅಭಿವ್ಯಕ್ತಿ ಮತ್ತು ಪುರುಷಾರ್ಥವನ್ನು ಪ್ರಕಟಪಡಿಸುವ ಅವಕಾಶ ಸಿಕ್ಕಿತು. ಆದರೆ ಈ ಅವಕಾಶವೂ ಪೂರ್ಣ ಮತ್ತು ಸ್ಪಷ್ಟವಾಗಿರಲಿಲ್ಲ. ನಮ್ಮ ರಾಜನೈತಿಕ ಅಧಿಕಾರವೂ ಸಾಕಷ್ಟು ಅಂಶಗಳಲ್ಲಿ ಸೀಮಿತವಾಗಿತ್ತು. ದೇಶೀ ರಾಜ್ಯಗಳ ವಿಲೀನೀಕರಣ, ಗೋವಾ, ಪಾಂಡಿಚೇರಿ ಮುಂತಾದುವುಗಳ ಬಿಡುಗಡೆಯಿಂದ ನಾವು ಆ ಕೊರತೆಯನ್ನು ಕೆಲವು ಅಂಶಗಳಲ್ಲಿ ಪೂರ್ತಿಮಾಡಿಕೊಂಡಿದ್ದೇವೆ. ಆದರೆ ಭಾರತದ ರಾಜನೈತಿಕ ಸ್ವಾತಂತ್ರ್ಯವು ಪಾಕಿಸ್ತಾನದ ಅಸ್ತಿತ್ವವನ್ನು ಒಡೆದಿದೆ. ಪಾಕಿಸ್ತಾನವನ್ನು ಸ್ವತಂತ್ರ ರಾಜ್ಯವೆಂದು ತಿಳಿಯುವುದು ತಪ್ಪಾಗುತ್ತದೆ. ಅದು ಭಾರತದ ಹೆಮ್ಮೆಯನ್ನು ಆ ಮನೋವೃತ್ತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತದೆ. (ಭಾರತೀಯ ತತ್ವ ಚಿಂತನೆ) (ರಾಷ್ಟ್ರಧರ್ಮ) ಜನವರಿ 1966 ಇಂಗ್ಲೀಷರು ಹೋದಮೇಲೆ ಗಾಂಧೀಜಿಯವರು ಬಹಳ ದಿನಗಳು ಬದುಕಲಾರದೇ ಹೋದರು. ಹಾಗೂ ರಾಜ್ಯದ ಆಡಳಿತ ಯಾರ ಕೈಗೆ ಬಂತೋ ಅವರು ಭಾರತದ ಭಾಷೆ ಮತ್ತು ಭಾವನೆಗಳನ್ನು ತಿಳಿದುಕೊಳ್ಳಲಾರದೇ ಹೋದರು. ಮತ್ತು ಅವರ ಮುಂದೆ ತಮ್ಮದೆನ್ನುವ ಕನಸನ್ನು ಸಹ ಇಡಲಾರದೇ ಹೋದರು. ಅಂಗ್ರೆಜಿóಗಳೊಂದಿಗೆ ಹೋರಾಡುವಾಗ ಎಷ್ಟೋ ಸ್ವದೇಶಿ ಘೋಷಣೆಗಳನ್ನು ಹಾಕಿರಬಹುದು. ಆದರೆ ಅವರು ಹೋದಮೇಲೆ ನಾವು ನಮ್ಮ ಸಂಪೂರ್ಣ ಜೀವನ ಹಾಗೂ ಸಮಸ್ಯೆಗಳನ್ನು ಅವರ ಕನ್ನಡಕದಲ್ಲಿಯೇ ನೋಡಿದೆವು. ಪರಿಣಾಮ ನಮ್ಮ ರಾಜನೀತಿ, ಅರ್ಥನೀತಿ, ಸಮಾಜ ವ್ಯವಸ್ಥೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಅಂಗ್ರೇಜಿಗಳ ಚೇತನದ ಆಳವಾದ ಮುದ್ರೆ ಅಚ್ಚೊತ್ತಿದೆ. ಒಂದು ವೇಳೆ ಭಾರತೀಯತೆ ಎಲ್ಲಿಯಾದರೂ ಕಾಣಿಸಿದರೆ ಅದು ಮೇಲೆ ಮೇಲೆ ಮಾತ್ರ. ನಮ್ಮ ಮೌಲಿಕ ಅಭಿಪ್ರಾಯಗಳು ವಿದೇಶೀ, ನಮ್ಮ ಸಂವಿಧಾನ ಮುಖ್ಯವಾಗಿ 1935ರ ಇಂಡಿಯಾ ಆ್ಯಕ್ಟ್‌ನದೇ ಪರಿಷ್ಕೃತಗೊಂಡ ಅಲಂಕೃತರೂಪ. ಮೌಲಿಕ ಅಧಿಕಾರಗಳು ಹಾಗೂ ಬೇರೆ ಇದೇ ರೀತಿಯ ವಿಷಯಗಳ ಸಂಬಂಧದಲ್ಲಿ ನಾವು ಅದರಲ್ಲಿ ಸೇರಿಸಿರುವುದೆಲ್ಲವೂ ಹೊರಗಿನ ಸಂವಿಧಾನದಿಂದ ಸಾಲ ತೆಗೆದುಕೊಂಡಿರುವುದು ಹಾಗೂ ಅದರ ಮೇಲೆ ಯುರೋಪ್ ಮತ್ತು ಇಂಗ್ಲೇಂಡ್‍ನ ರಾಜನೈತಿಕ ಮುದ್ರೆ ಇದೆ. ವಿಭಿನ್ನ ರಾಜನೈತಿಕ ಪಕ್ಷಗಳು ಅವು ಸಮಾಜವಾದಿಯಾಗಿರಲಿ ಅಥವಾ 334 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಮಾಜವಾದಿ ಪಕ್ಷಗಳು ಅಲ್ಲದೇ ಇರಲಿ ಯೂರೋಪಿನ ವಿಚಾರಧಾರೆಗಳಿಂದಲೇ ಪ್ರಭಾವಿತವಾಗಿವೆ ಹಾಗೂ ಅವು ಭಾರತವನ್ನು ಒಂದಲ್ಲ ಒಂದು ದೇಶವನ್ನು ಅನುಕೃತಿಯನ್ನಾಗಿ ಮಾಡಲು ಬಯಸುತ್ತವೆ. ಪಂಡಿತ್ ಜವಹರ್‍ಲಾಲ್ ನೆಹರೂ ಅವರ `ಸಮಾಜವಾದ' ಬ್ರಿಟನ್ನಿನ ಮಜದೂರ್ ಪಾರ್ಟಿಯ ಸಮಾಜವಾದದಿಂದ ಭಿನ್ನವಲ್ಲ. ಅವರು ಪ್ರಜಾತಂತ್ರ ಮತ್ತು ಸಮಾಜವಾದ ಎರಡನ್ನೂ ಹೊಂದಾಣಿಕೆ ಮಾಡಬಯಸುತ್ತಾರೆ. ಇದರಿಂದ ಪ್ರಜಾತಂತ್ರದ ಸಮರ್ಥಕರ ಮನಸ್ಸಿನಲ್ಲಿ ಸಂದೇಹಗಳು ಹುಟ್ಟಿದುವು, ಮತ್ತೊಂದು ಕಡೆ ಸಮಾಜವಾದದ ಪುರಸ್ಕಾರ ಮಾಡುವವರಿಗೆ ಸಂತೋಷವಾಗಲಿಲ್ಲ. ಪ್ರಜಾತಂತ್ರ ಮತ್ತು ಸಮಾಜವಾದ ಯುರೋಪಿನ ಎರಡು ಭಿನ್ನ ಭಿನ್ನ ಕ್ರಾಂತಿಗಳ ಕಾಣಿಕೆ. ಕಾಲಕ್ರಮದಿಂದ ಸಮಾಜವಾದ ಹೊಸದು. ಔದ್ಯೋಗಿಕರಣ ಪ್ರಮುಖವಾಗಿರುವ ಪ್ರಜಾತಂತ್ರೀಯ ಯೂರೋಪಿನಲ್ಲಿ ಹುಟ್ಟಿದ ಸಮಸ್ಯೆಗಳ ಕಾರಣ ಮತ್ತು ಅದರ ಸಮಾಧಾನದ ಪ್ರಯತ್ನ ಮಾಡಿತು. ಆದರೆ ಪ್ರಯತ್ನದಲ್ಲಿ ಪ್ರಜಾತಂತ್ರೀಯ ಮೌಲ್ಯಗಳನ್ನು ಬಲಿಕೊಡಬೇಕಾಯಿತು. ಯಾರಿಗೆ ಪ್ರಜಾತಂತ್ರದಲ್ಲಿ ವಿಶೇಷ ಆಸ್ಥೆ ಇರಲಿಲ್ಲವೊ ಅವರು ಇದರ ಬಗ್ಗೆ ಚಿಂತೆ ಮಾಡಲಿಲ್ಲ. ಆದರೆ ಉಳಿದವರು ಸಮಾಜವಾದದ ವಿಷಯದಲ್ಲಿ ಸಂದೇಹಗಳಿಂದ ಪೀಡಿತರಾದರು. ಅವರಲ್ಲಿ ಕೆಲವರಂತೂ ಸಮಾಜವಾದವನ್ನು ತ್ಯಾಜ್ಯವೆಂದು ತಿಳಿದು ಬಿಟ್ಟುಬಿಟ್ಟರು. ಕೆಲವರು ಸಮಾಜವಾದ ಮತ್ತು ಪ್ರಜಾತಂತ್ರ ಎರಡರ ಸಮನ್ವಯ ಮಾಡುವ ಪ್ರಯತ್ನ ಮಾಡಿದರು. ಆದರೆ ಇದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದು ಸಾಧ್ಯವಿಲ್ಲವೆಂದು ಕೆಲವರು ತಿಳಿಯುತ್ತಾರೆ. ಭಾರತವೂ ಸಹ ಪಂಡಿತ್ ಜವಹರ್‍ಲಾಲ್ ನೆಹರೂ ಅವರ ಕಾಲದಲ್ಲಿ ಪ್ರಜಾತಂತ್ರೀಯ ಸಮಾಜವಾದದ ಘೋಷಣೆ ಹಾಕಿತು. ನಮಗೆ ಇದರಲ್ಲಿ ಸಫಲತೆ ಸಿಗಲಿಲ್ಲ. ಏಕೆಂದರೆ ಇನ್ನೂ ನಾವು ಪ್ರಜಾತಂತ್ರ ಮತ್ತು ಸಮಾಜವಾದ ಎರಡರ ಸ್ವರೂಪ ಮತ್ತು ವಿವೇಚನೆಯ ಆಧಾರದ ಮೇಲೆಯೇ ಪ್ರಯತ್ನಿಸುತ್ತಿದ್ದೇವೆ. ಇದು ಮೂಲತಃ ವಿದೇಶಿ ಮತ್ತು ಅಪೂರ್ಣ. ಗಂಭೀರವಾಗಿ ವಿಚಾರಮಾಡಿದರೆ ಈ ಎರಡು ವಿಚಾರ ಧಾರೆಗಳು ಜೀವನದ ಒಂದೊಂದು ಪಾಶ್ರ್ವ ಮತ್ತು ಅದಕ್ಕೆ ಸಂಬಂಧಿಸಿದ ಸತ್ಯಗಳ ಅಭಿವ್ಯಕ್ತಿ ಮಾಡುತ್ತವೆ. ಅವುಗಳ ಸಮನ್ವಯ ಸಾಧ್ಯ, ಆದರೆ ಯಾವಾಗ ನಮ್ಮ ದೃಷ್ಟಿಕೋನ ಸುಶ್ಲೇಷಣಾತ್ಮಕವಾಗಿರುತ್ತದೋ ಆಗಲೇ ಅದು ಆಗುತ್ತದೆ. ಪಶ್ಚಿಮದಲ್ಲಿ ವಿಕಸಿತವಾದ ಪ್ರಜಾತಂತ್ರೀಯ ಸಂಸ್ಥೆಗಳು ಹಾಗೂ ಪರಂಪರೆಗಳು ಕಾರ್ಲ್‍ಮಾರ್ಕ್ಸ್‌ನ ಮೂಲಕ ಪ್ರಕಲ್ಪಿತವಾದ ಹಾಗೂ ಲೆನಿನ್ ಸ್ಟಾಲಿನ್ ಪ್ರಭೃತಿಗಳ ಮೂಲಕ ರಷ್ಯಾದಲ್ಲಿ ಪ್ರಯುಕ್ತವಾದ ಸಮಾಜವಾದದ ಸಿದ್ಧಪಡಿಸಿದ ಅಚ್ಚಿನಲ್ಲಿ ಸಂಪೂರ್ಣ ಜೀವನವನ್ನು ಕಟ್ಟಿಹಾಕುವುದು ಸರಿಯಲ್ಲ. ಭಾರತದ ಜೀವನ ಮಧ್ಯಪ್ರದೇಶದ ಪತ್ರ 335 ಈ ಎರಡೂ ಕಲ್ಪನೆಗಳಿಗಿಂತ ದೊಡ್ಡದು. ಆದ್ದರಿಂದ ಈ ಪ್ರಯತ್ನದಲ್ಲಿ ನಾವು ಮಾಡುವ ಎಳೆದಾಟಗಳಿಂದ ನಮಗೆ ತೊಂದರೆ ಆಗುತ್ತದೆ. ಭಾರತದ ಮೇಲೆ ಪಶ್ಚಿಮದ ರಾಜನೀತಿಯ ಅವಲಂಬನೆ, ಪೂರಕತೆ, ಸಹಯೋಗದ ಆಧಾರದ ಮೇಲೆಯೇ ಸಮಗ್ರ ಕ್ರಿಯಾಕಲಾಪದ ವಿವೇಚನೆ ಮತ್ತು ಭಾವಾತ್ಮಕ ದಿಕ್ಕಿನ ನಿರ್ಧಾರವಾಗಬೇಕು. ವ್ಯಕ್ತಿ ಮತ್ತು ಸಮಾಜದ ಮಧ್ಯೆ ಯಾವ ಸಂಘರ್ಷವೂ ಇಲ್ಲ. ಒಂದು ವೇಳೆ ಎಲ್ಲಿಯಾದರೂ ಇದ್ದರೆ ಅದು ವಿಕೃತಿಯ ಲಕ್ಷಣ. ಸಮಷ್ಟಿ ಹಿತಕ್ಕಾಗಿ ವ್ಯಕ್ತಿಯ ಸ್ವಾತಂತ್ರ್ಯವನ್ನು ಪ್ರತಿಬಂಧಿಸುವ ಅವಶ್ಯಕತೆ ಇಲ್ಲ. ನಿಜಹೇಳುವುದಾದರೆ ಸ್ವೇಚ್ಛಾಚಾರದಲ್ಲಿ ವ್ಯಕ್ತಿಯ ವಿಕಾಸವಲ್ಲ ವಿನಾಶವಿದೆ. ಸಮಷ್ಟಿಯಲ್ಲಿ ಏಕಾತ್ಮತೆಯೇ ವ್ಯಕ್ತಿಯ ಸಂಪೂರ್ಣವಿಕಸಿತ ಅವಸ್ಥೆ. ವ್ಯಕ್ತಿಯೇ ಸಮಷ್ಟಿಯ ಪೂರ್ಣತೆಯ ಮಾಧ್ಯಮ ಮತ್ತು ಮಾನದಂಡ. ವ್ಯಕ್ತಿ ಸ್ವಾತಂತ್ರ್ಯವು ಸಮಷ್ಟಿ ಮತ್ತು ಸಮಾಜಹಿತದ ವಿರೋಧಿಯಲ್ಲ. ಪ್ರಜಾಪ್ರಭುತ್ವವು ಸಮಾಜದ ಕರ್ತವ್ಯ ನಿರ್ವಹಣೆಯ ಒಂದು ಸಾಧನಮಾತ್ರ. ಸಾಧನದ ಪ್ರಭಾವ ಕ್ಷಮತೆ. ಲೋಕಜೀವನದಲ್ಲಿ ರಾಷ್ಟ್ರದ ಬಗ್ಗೆ ಏಕಾತ್ಮತೆ ನಮ್ಮ ಜವಾಬ್ದಾರಿಯ ಗೌರವ ಹಾಗೂ ಶಿಸ್ತಿನ ಮೇಲೆ ನಿರ್ಧರವಾಗಿದೆ. ಒಂದುವೇಳೆ ನಾಗರಿಕನಲ್ಲಿ ಈ ಸಂಸ್ಕಾರವಿರದಿದ್ದರೆ ವ್ಯಕ್ತಿ ವರ್ಗ ಹಾಗೂ ಪಕ್ಷಗಳಲ್ಲಿ ಇರುವ ಸ್ವಾರ್ಥಗಳ ರಕ್ಷಣೆ ಮತ್ತು ಅದನ್ನು ಮತ್ತೂ ಹೆಚ್ಚಿಸುವ ಸಾಧನವಾಗಿ ಪ್ರಜಾತಂತ್ರದ ವಿಕೃತವಾಗುತ್ತದೆ. ಸಂಪತ್ತಿಗೆ ಸಂಬಂಧಿಸಿದಂತೆ ಅಥವಾ ಬೇರೆ ಮೂಲಾಧಿಕಾರವು ಶಾಶ್ವತವಲ್ಲ. ಅವುಗಳೆಲ್ಲವೂ ಸಮಾಜಹಿತ ಸಾಪೇಕ್ಷ. ವಾಸ್ತವದಲ್ಲಿ ಈ ಅಧಿಕಾರವನ್ನು ವ್ಯಕ್ತಿಗೆ ಕೊಡಲಾಗುವುದು ಏಕೆಂದರೆ ಅವುಗಳ ಮೂಲಕ ತಮ್ಮ ಸಾಮಾಜಿಕ ಕರ್ತವ್ಯಗಳ ನಿರ್ವಹಣೆ ಆಗಲಿ ಎಂದು, ಸಮಾಜವನ್ನು ರಕ್ಷಿಸಲಿ ಎಂದು. ಸಿಪಾಯಿಗೆ ಶಸ್ತ್ರವನ್ನು ಕೊಡಲಾಗುವುದು. ಅವನು ಒಂದು ವೇಳೆ ತನ್ನ ಕರ್ತವ್ಯವನ್ನು ಮಾಡದಿದ್ದರೆ ಅವನು ಆಯುಧವನ್ನು ಧರಿಸುವುದಕ್ಕೆ ಅಧಿಕಾರಿ ಆಗಿರುವುದಿಲ್ಲ. ಕಳ್ಳ ಮತ್ತು ದರೋಡೆಕೋರನ ಬಳಿ ಶಸ್ತ್ರಗಳನ್ನು ಇಟ್ಟುಕೊಳ್ಳುವುದಕ್ಕೆ ಬಿಡಲಾಗುವುದಿಲ್ಲ. ಇದೇ ರೀತಿ ಸಂಪತ್ತಿನ ಸಂಬಂಧದಲ್ಲಿ ಅಧಿಕಾರವು ಸಿಕ್ಕಿರುವುದು. ಏಕೆಂದರೆ ಅವನು ಪ್ರಪಂಚದಲ್ಲಿ ತನ್ನ ಕರ್ತವ್ಯಗಳ ಪಾಲನೆ ಮಾಡಲಿ ಎಂದು ಈ ಕಾರ್ಯದಲ್ಲಿ ಕಾಲಕಾಲಕ್ಕೆ ಈ ಅಧಿಕಾರಗಳ ವ್ಯಾಖ್ಯೆ ಮತ್ತು ಇತಿಮಿತಿಯಲ್ಲಿ ಬದಲಾವಣೆ ಅವಶ್ಯಕವಾಗುತ್ತದೆ. ಸಂಪತ್ತಿನ ಯಾವ ಅಧಿಕಾರವೂ ಸಮಾಜ ನಿರಪೇಕ್ಷವಲ್ಲ. ಭಾರತೀಯ ಸಂಸ್ಕೃತಿಯ ಏಕಾತ್ಮವಾದೀ ಸಮನ್ವಯಪ್ರಧಾನ ಹಾಗೂ 336 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕರ್ತವ್ಯ ಮೂಲಕ ದೃಷ್ಟಿಕೋನದಿಂದ ವಿಚಾರಮಾಡಿದರೆ ಪ್ರಜಾತಂತ್ರ ಮತ್ತು ಸಮಾಜವಾದ ಪರಸ್ಪರ ವಿರೋಧಿಗಳಾಗದೆ ಸಮನ್ವಿತವಾಗಬಲ್ಲುವು. ಆದರೆ ಈ ಸಮಾಜವಾದ ರಾಜ್ಯಾಧಿಷ್ಟಿತ ಅಥವಾ ಆಡಳಿತ ಕೇಂದ್ರಿತವಾಗಿರುವುದಿಲ್ಲ. ರಾಜ್ಯವನ್ನು ಸಮಾಜದ ಏಕಮೇವ ಪ್ರತಿನಿಧಿ ಸಂಸ್ಥೆ ಎಂದು ತಿಳಿಯುವುದು ತಪ್ಪು. ಇದೇ ರಾಜ್ಯಕ್ಕೆ ಇತಿಶ್ರೀ ಹಾಡುವ ವಚನ ಕೊಟ್ಟ ಮೇಲೂ ಕಮ್ಯುನಿಸ್ಟ್ ರಾಜ್ಯವು ಎಲ್ಲವನ್ನೂ ಕಬಳಿಸುವಂತೆ ಮಾಡಿತು. ಇದೇ ಸಮಾಜ ತನ್ನ ಹಿತಕ್ಕಾಗಿ ಕುಟುಂಬದಿಂದ ಹಿಡಿದು ರಾಜ್ಯವರೆಗೆ ಹಾಗೂ ವಿವಾಹದಿಂದ ಹಿಡಿದು ಸನ್ಯಾಸದವರೆಗೆ ಅನೇಕ ಸಂಸ್ಥೆಗಳನ್ನು ನಿರ್ಮಾಣ ಮಾಡುತ್ತದೆ. ವ್ಯಕ್ತಿಯು ಸಮಾಜದ ಪ್ರತಿನಿಧಿ. ವ್ಯಕ್ತಿ ಸಮಾಜನಿಷ್ಠನಾಗಿರದಿದ್ದರೆ ಕೇವಲ ಸಂಸ್ಥೆಗೆ ಸಂಬಂಧಿಸಿದ ಬದಲಾವಣೆಗಳಿಂದ ಕೆಲಸವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಸಮಾಜವಾದದ ಉದ್ದೇಶದಿಂದ ರಾಜ್ಯವು ಅಧಿಕಾಧಿಕ ಜೀವನದ ಒಡೆಯ, ಹಣೆಬರಹ ಬರೆಯುವವನಾಗುತ್ತಾ ಹೋದರೆ ರಾಜ್ಯ ಕರ್ಮಚಾರಿಗಳ ಭ್ರಷ್ಟಾಚಾರದಿಂದ ಸಮಾಜಹಿತ ಹೆಚ್ಚು ಹೆಚ್ಚಾಗಿ ಲೋಪವಾಗುವುದು ಹಾಗೂ ಯಾವ ಬಂಡವಾಳಶಾಹೀ ವ್ಯವಸ್ಥೆಯ ದುಷ್ಟತನವನ್ನು ದೂರಮಾಡುವುದಕ್ಕೆ ಈ ಸಂಸ್ಥೆಗೆ ಸಂಬಂಧಿಸಿದ ಬದಲಾವಣೆಗಳಾಗುತ್ತಾ ಹೋಗುವುವೋ ಅವು ಮತ್ತೂ ಹೆಚ್ಚುತ್ತಾ ಹೋಗುವುವು. ಆದ್ದರಿಂದ ಸಮಾಜವಾದ ಮತ್ತು ಪ್ರಜಾತಂತ್ರ ಇವೆರಡರ ಸಫಲತೆಯು ಸರ್ಕಾರೇತರ ಹಾಗೂ ರಾಜನೀತಿ ನಿರಪೇಕ್ಷ ಆಂದೋಳನಗಳು ಹಾಗೂ ಶಿಕ್ಷಣದ ಮೇಲೆ ನಿರ್ಭರವಾಗಿದೆ. ಲೋಖಸಂಸ್ಕಾರದ್ದೇ ಸರ್ವಾಧಿಕ ಮಹತ್ವವಿದೆ. ದಯಾನಂದ, ಗಾಂಧೀ, ಹೆಡ್ಗೆ ವಾರ್ ಯಾವ ರೀತಿ ಪ್ರೇರಣೆಗೆ ಜನ್ಮಕೊಟ್ಟರೋ ಅದರತ್ತ ದೇಶದ ಗಮನಹೋದರೆ ಸಮಾಜದ ಧಾರಣಾಶಕ್ತಿ ಶಕ್ತಿಯುತವಾಗುವುದು. ಇದರಿಂದಲೇ ರಾಷ್ಟ್ರದ ಚೇತನ ಜಾಗೃತವಾಗಿ ಅದರ `ವಿರಾಟ್' ಶಕ್ತಿಯುತವಾಗುವುದು. ಭಾರತೀಯ ತತ್ವ ಚಿಂತನೆ ರಾಷ್ಟ್ರಧರ್ಮ 1966 ಪುಣ್ಯ ಪ್ರವಾಹ (ಬುದ್ಧನಿಂದ ಶಂಕರಾಚಾರ್ಯರವರೆಗೆ) ದೀನ್ ದಯಾಳ್ ಉಪಾಧ್ಯಾಯ ನಮ್ಮ ರಾಷ್ಟ್ರಜೀವನದ ಭಾಗೀರಥಿ ಪ್ರವಾಹವು ಆದಿಕಾಲದಿಂದ ಹರಿದುಬರುತ್ತಿದೆ. ಹಾಗೂ ಹೇಳುವುದಾದರೆ ಪುಣ್ಯ ಸಲಿಲಾ ಗಂಗೆಯದೇನೋ. ಒಂದೊಂದು ಕಣವೂ ಪವಿತ್ರ ಹಾಗೂ ಅದರಲ್ಲಿ ಯಾವುದೇ ಸ್ನಾನದ ಅವಗಾಹನೆ ಮುಕ್ತಿದಾಯಕ. ಆದರೂ ಸಹ ಕೆಲವು ಸ್ಥಾನಗಳಿಗೆ ವಿಶೇಷ ಮಹತ್ವ ಸಿಕ್ಕಿದೆ. ಮಧ್ಯಪ್ರದೇಶದ ಪತ್ರ 337 ಹಿಮಾಲಯದ ಮಡಿಲನ್ನು ಬಿಟ್ಟು ಭಾರತ ಭೂಮಿಯ ಮೇಲೆ ಕುಣಿಯುತ್ತಾ ನಲಿಯುತ್ತಾ ಬರುವ ಗಂಗೆ ಹರಿದ್ವಾರದಲ್ಲಿ ತನ್ನ ಅಪೂರ್ವ ಮಹತ್ವವನ್ನು ಪಡೆದಿದ್ದಾಳೆ. ಯಮುನಾ ಯಾವಾಗ ಕಪ್ಪು ಕಾಲಕೂಟವನ್ನು ತಂದು ಶಿವಸ್ವಾಮಿನಿಗೆ ಕೊಡುತ್ತಾಳೊ ಅವಳು ಶಿವನ ರೀತಿಯೇ ಆನಂದದಿಂದ ಅದನ್ನು ಕುಡಿದು ಬಿಡುತ್ತಾಳೆ. ಆ ಪ್ರಯಾಗವಾದರೋ ತೀರ್ಥರಾಜನೇ ಆಯಿತು. ಯಾವುದೇ ಜಾಗ ಅಥವಾ ಕಾಲದ ವಿಚಾರ ಮನಸ್ಸನ್ನು ನಿರ್ಮಲಗೊಳಿಸಿ ರಾಷ್ಟ್ರಭಕ್ತಿಯಿಂದ ಪರಿಪೂರ್ಣವಾಗಿ ಮಾಡುತ್ತದೆ. ಆದರೆ ಯಾವ ಕಾಲದಲ್ಲಿ ತೀರ್ಥ ಸ್ವರೂಪ ಮಹಾಪುರುಷರ ಅವಿರ್ಭಾವವಾಯಿತೋ ಅದರ ಪ್ರಭಾವ ನಮ್ಮ ಜಾತೀಯ ಜೀವನದಲ್ಲಿ ಇನ್ನೂ ಹೆಚ್ಚಿನದ್ದಾಗಿದೆ. ತೀರ್ಥದ ಮಹತ್ವ ಗಂಗಾನದಿಯ ಮೇಲೆ ಇರುವ ಕಾರಣದಿಂದಲೇ ಆಗಿರಲಿ, ಆದರೆ ಅಲ್ಲಿಯ ಯಾತ್ರೆ ಪ್ರತಿಯೊಬ್ಬ ಭಕ್ತನ ಜೀವನದ ಅಭಿಲಾಷೆಯಾಗಿದೆ. ಮಹಾಪುರುಷರ ಜೀವನದ ಮತ್ತು ಯಶಸ್ಸಿನ ಸ್ಮೃತಿ ಜನಸಾಧಾರಣರ ಮೇಲೆ ಅದರ ಪ್ರಭಾವ ಮತ್ತು ರಾಷ್ಟ್ರೀಯ ಚರಿತ್ರೆಯನ್ನು ರೂಪಿಸುವುದರಲ್ಲಿ ಅದರ ಮೂಲಕ ಪ್ರವರ್ತಿತವಾದ ಆದರ್ಶಗಳ ಅನುಪಾಲನೆ ರಾಷ್ಟ್ರಕ್ಕೆ ಅಮೂಲ್ಯ ಸಂಪತ್ತು ಮತ್ತು ಶಕ್ತಿಯ ತೊರೆ. ಅವರ ಚಿಂತನೆ, ವಿಚಾರ ಮತ್ತು ಆಲೋಚನೆ ಜಾತಿಯಲ್ಲಿ ನವೀನ ಉದ್ದೀಪನೆ ಮತ್ತು ಸಜೀವತೆಯನ್ನು ಹುಟ್ಟುಹಾಕುತ್ತದೆ. ಈ ಪುಣ್ಯಸ್ಥಳಗಳಲ್ಲಿ ಜೀವನದಾಯಿನೀ ಜಾತೀಯ ಜಾಹ್ನವಿಯಲ್ಲಿ ಅವಗಾಹನೆಯನ್ನು ಯಾರ ಮನಸ್ಸು ತಾನೆ ಇಷ್ಟಪಡುವುದಿಲ್ಲ? ಆದರೂ ಸಹ ಶ್ರೀಮದ್ ಶಂಕರಾಚಾರ್ಯರ ಸ್ಥಿತಿಯಂತೂ ತೀರ್ಥ ರಾಜ ಪ್ರಯಾಗದ ಸಮಾನ ಅಲ್ಲಿ ಭಕ್ತರ ಜನಜಂಗುಳಿ ನೆರೆದದ್ದೇ ಆದರೆ ಯಾವ ಆಶ್ಚರ್ಯ ? ನಮ್ಮ ರಾಷ್ಟ್ರ ನಿರ್ಮಾತೃಗಳಲ್ಲಿ ಶಂಕರಾಚಾರ್ಯರ ಸ್ಥಾನ ಬಹಳ ಉನ್ನತವಾದುದು. ಅನೇಕ ವಿದ್ವಾಂಸರು ಅವರನ್ನು ಆಧುನಿಕ ಹಿಂದೂ ಧರ್ಮದ ಜನಕರೆಂದೇ ಹೇಳಿದ್ದಾರೆ. ಮಂದಿರದಲ್ಲಿ ಮೂರ್ತಿಯ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠೆ ಮಾಡುವ ಆಚಾರ್ಯರನ್ನೇ ಎಷ್ಟೋ ಸಲ ಮಂದಿರದ ನಿರ್ಮಾರ್ತೃಗಳೆಂದು ಹೇಳಲಾಗುವುದಾದರೂ, ಕಲ್ಲುಗಳನ್ನು ಕೊರೆಯುವ ಯಂತ್ರ ಮತ್ತು ಸುತ್ತಿಗೆಯ ಒಂದೊಂದು ಏಟಿಗೆ ಸ್ವರೂಪ ಕೊಡುವ ಶಿಲ್ಪಿ ಹಾಗೂ ಮಂದಿರವನ್ನು ನಿರ್ಮಿಸುವ ಅನೇಕಾನೇಕ ರಾಜರು ಮತ್ತು ಕೆಲಸಗಾರರನ್ನು ಸಹ ಮರೆಯಲಾಗುವುದಿಲ್ಲ. ಆ ಸಂಪೂರ್ಣ ಜನಸಮುದಾಯದ ಪರಿಶ್ರಮವನ್ನು ಮರೆಯುವುದು ಕೃತಘ್ನತೆ ಮಾತ್ರವಲ್ಲ, ಸಾಮಾಜಿಕ ಜೀವನದ ವಿಧಾಯಕ ನಿಯಮಗಳ ಅನಭಿಜ್ಞತೆಯನ್ನು ಪ್ರಕಟಪಡಿಸುತ್ತವೆ. ರಾಷ್ಟ್ರದ ಜೀವನ ಒಂದು ದಿನದಲ್ಲಿ ಅಥವಾ ಎರಡು ಮೂರು ವರ್ಷಗಳಲ್ಲಿ ನಿರ್ಮಾಣವಾಗುವುದು ಅಥವಾ ಹಾಳಾಗುವುದು ಆಗುವುದಿಲ್ಲ. ಅಥವಾ 338 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯಾರಾದರೂ ಮಹಾಪುರುಷನು ರಾಷ್ಟ್ರ ಜೀವನದ ಸಂಸ್ಕಾರದ ಬಗ್ಗೆ ಪೂರ್ತಿಯಾಗಿ, ನಿರ್ಲಿಪ್ತನಾಗಿ ತನ್ನ ಮಾನಸಿಕ ಅಥವಾ ಆಧ್ಯಾತ್ಮಿಕ ಶಾರೀರಿಕ ಶಕ್ತಿಗಳ ವಿಕಸನ ಮಾಡಿ ರಾಷ್ಟ್ರ ಜೀವನವನ್ನು ನಿರ್ಮಾಣ ಮಾಡಲಾರ. ಮಹಾಪುರುಷನಾದರೋ ಜಾತೀಯ ಸಾಧನೆಯ ವಿಗ್ರಹ ಪುರುಷ. ಅವರು ಸಮಾಜದಲ್ಲಿ ವರ್ಷಗಳಿಂದ ನಡೆಯುತ್ತಿರುವ ವಿಚಾರಕ್ರಾಂತಿಯ ಕಣ್ಣಿಗೆ ಕಾಣಿಸುವ ಫಲಗಳಾಗಿರುತ್ತಾರೆ. ಅವರ ಅಲೌಕಿಕಶಕ್ತಿ, ಐಶ್ವರ್ಯ ಮತ್ತು ಸರ್ವತೋಮುಖ ಪ್ರತಿಭೆ, ಅಖಂಡ ಕರ್ಮಮಯ ಜೀವನ ಎಲ್ಲ ಕಡೆ ವ್ಯಾಪಿಸಿರುವ ಪ್ರಭಾವವನ್ನು ನೋಡಿ ನಮ್ಮ ಕಣ್ಣುಗಳು ಹೇಗೆ ಕೋರೈಸಿಹೋಗುತ್ತವೆ ಎಂದರೆ ಆ ಮಹಾಪುರುಷನಿಗೆ ಜನ್ಮಕೊಟ್ಟ ಜೀವನಧಾರೆಯನ್ನು ಮರೆತೇಬಿಡುತ್ತೇವೆ. ಯಾವ ಸಮೂಹದಲ್ಲಿ ಆತನು ಹುಟ್ಟುತ್ತಾನೋ ಅವರ ವಿಚಾರವನ್ನು ನಾವು ಸ್ವಲ್ಪವೂ ಮಾಡುವುದಿಲ್ಲ. ಜ್ವಾಲಾಮುಖಿಯ ವಿಸ್ಫೋಟವನ್ನು ನೋಡಿ ಮೆಲ್ಲ ಮೆಲ್ಲಗೆ ಜಿನುಗುತ್ತಿರುವ ನೀರಿನತ್ತ ಗಮನ ಹೋಗುವುದಿಲ್ಲ. ಅರಳಿರುವ ಪುಷ್ಪದ ಸುಗಂಧದಲ್ಲಿ ಮರವನ್ನು ಮರೆತು ಬಿಡುತ್ತೇವೆ. ಈ ಸ್ವಭಾವದ ಮರೆಯಲ್ಲಿ ಬಹುಶಃ ನಮ್ಮ ವ್ಯಕ್ತಿಗತ ಸ್ವಾರ್ಥವೇ ಅಡಗಿದೆ. ಏಕೆಂದರೆ ಯಾರಾದರೂ ಮಹಾಪುರುಷನನ್ನು ಸಮಾಜವನ್ನು ಪೂರ್ಣವಾಗಿ ನಿರ್ಮಿಸುವ, ನಾಶಮಾಡುವವ ಎಂದು ತಿಳಿದು ಸಮಾಜದ ಕಾರ್ಯಗಳ ಜವಾಬ್ದಾರಿಯಿಂದ ಸ್ವಯಂ ಮುಕ್ತರಾಗುತ್ತೇವೆ. ವಾಸ್ತವದಲ್ಲಿ ಮಹಾಪುರುಷನ ವ್ಯಕ್ತಿಗತ ಜೀವನವನ್ನು ಅನುಘ್ರಾಣಿತಗೊಳಿಸುತ್ತಾ, ಕಾರ್ಯಕ್ಕೆ ಯಾವ ಶಕ್ತಿ ಮತ್ತು ಪ್ರೇರಣೆಯನ್ನು ಕೊಡುತ್ತಾನೋ ಅವನನ್ನು ಸ್ವಯಂ ಸಮಾಜದ ಸಾಮೂಹಿಕ ಪ್ರಯತ್ನಗಳು ಮೊದಲೇ ಗ್ರಹಿಸಿರುತ್ತವೆ. ಜಾತೀಯ ಪ್ರಾಣಗಳ ಇದೇ ಆಭ್ಯಂತರಿಕ ಬದುಕಿನ ಸಾಧನೆಯ ಧಾರೆಯ ಸ್ವರೂಪ ಭಿನ್ನ ಭಿನ್ನ ಯುಗಗಳಲ್ಲಿ ವಿಶೇಷ ಮಹಾಪುರುಷರ ಸಾಧನೆ ಮತ್ತು ಸಿದ್ಧಿಯ ಮೂಲಕ ಯುಗಕ್ಕೆ ಯೋಗ್ಯವಾದ ಆಕಾರ ಮತ್ತು ವೇಷ ಭೂಷಣಗಳಿಂದ ಸುಸಜ್ಜಿತವಾಗಿ ಪ್ರಕಟವಾಗುತ್ತದೆ. ಆದ್ದರಿಂದ ಯಾವುದೇ ಮಹಾಪುರುಷನನ್ನು ತಿಳಿಯುವ ಮೊದಲು ಜಾತೀಯ ಜೀವನದ ಈ ಸಾಧನೆಯ ಸ್ವರೂಪವನ್ನು ತಿಳಿಯುವುದು ಅವಶ್ಯಕ. ಈ ಯುಗದ ಪ್ರವೃತ್ತಿಗಳನ್ನು ತಿಳಿದುಕೊಂಡೇ ಯುಗಪುರುಷ ಶಂಕರಾಚಾರ್ಯರ ಮಹತ್ವವನ್ನು ತಿಳಿಯಲು ಸಾಧ್ಯ. ಜನಸಾಧಾರಣರು ಸ್ವಾಮಿ ಶಂಕರಾಚಾರ್ಯರನ್ನು ಬೌದ್ಧಧರ್ಮದ ವಿನಾಶಕ ಹಾಗೂ ಹಿಂದೂ ಧರ್ಮದ ಸಂಸ್ಥಾಪಕರ ರೂಪದಲ್ಲಿ ನೋಡಿದರೆ ಅನೇಕ ವಿದ್ವಾಂಸರಿಗೆ ಅವರಲ್ಲಿ `ಪ್ರಚ್ಛನ್ನ ಬೌದ್ಧ' ದೃಷ್ಟಿಗೋಚರವಾಗುತ್ತಾರೆ. ಈ ಎರಡೂ ಚಿತ್ರಗಳ ಹಿಂದೆ ಸತ್ಯಾಂಶವಿದೆ. ಏಕೆಂದರೆ ಅವರ ಯುಗದ ಸಂಪೂರ್ಣ ಸಹಸ್ರಾಬ್ಧಯ ಇತಿಹಾಸ ಕೇಂದ್ರಕ್ಕೆ ವಿರುದ್ಧ ದಿಕ್ಕಿನಲ್ಲಿರುವ ಬೌದ್ಧ ಧರ್ಮ ಹಾಗೂ ಕೇಂದ್ರಾಭಿಮುಖವಾಗಿರುವ ಹಿಂದೂಧರ್ಮದ ಪಾರಂಪರಿಕ ಸಂಘರ್ಷ ಹಾಗೂ ಮಧ್ಯಪ್ರದೇಶದ ಪತ್ರ 339 ಸಮನ್ವಯದ ಇತಿಹಾಸವಾಗಿದೆ. ಆದ್ದರಿಂದ ಬೌದ್ಧ ಧರ್ಮದ ಜನ್ಮದಿಂದ ಹಿಡಿದು ಸ್ವಾಮಿ ಶಂಕರಾಚಾರ್ಯರ ಕಾಲದವರೆಗೆ ಬೌದ್ಧಧರ್ಮದ ವಿಕಾಸ ಮತ್ತು ಪ್ರವೃತ್ತಿಗಳ ಹಾಗೂ ಹಿಂದೂಧರ್ಮದ ಭಿನ್ನಭಿನ್ನ ಪ್ರವೃತ್ತಿಗಳ ಸಿಂಹಾವಲೋಕವನ್ನು ಮಾಡಬೇಕಾಗುವುದು. ಯಾವ ಸಮಯದಲ್ಲಿ ಮಹಾತ್ಮ ಬುದ್ಧನ ಜನ್ಮವಾಯಿತೋ ಆಗ ವೈದಿಕ ಕರ್ಮಕಾಂಡದ ವಿರುದ್ಧ ವಿದ್ರೋಹದ ಸೂತ್ರಪಾತವಾಗಿತ್ತು. ಕರ್ಮಕಾಂಡವು ಎಷ್ಟು ಹೆಚ್ಚಿತ್ತೆಂದರೆ ಜನರು ತಮ್ಮ ಹೃದಯದ ಸದ್‍ವೃತ್ತಿಗಳ ವಿಕಾಸದ ಜಾಗದಲ್ಲಿ ಕೇವಲ ಯಜ್ಞಯಾಗಾದಿಗಳಿಗೆ ಮಹತ್ವ ಕೊಡುತ್ತಿದ್ದರು. ಆತ್ಮದ ಉನ್ನತಿಯ ಜಾಗದಲ್ಲಿ ಬಾಹ್ಯೋಪಚಾರಗಳು ಹಾಗೂ ಕರ್ಮಕಾಂಡಗಳತ್ತ ಗಮನವಿತ್ತು. ಇದರ ಆಶ್ರಯದಿಂದಲೇ ನಮಗೆ ಸ್ವರ್ಗಸಿಗುತ್ತದೆಂಬ ನಂಬಿಕೆ ಇತ್ತು. ಪರಿಣಾಮ ಸ್ವರೂಪ ಚಿನ್ನದ ಪಾತ್ರೆಯಲ್ಲಿ ವಿಷವನ್ನು ತುಂಬುವುದಕ್ಕೆ ಪ್ರಾರಂಭವಾಯಿತು. ಧಾರ್ಮಿಕ ಪಂಡಿತರ ಮನಸ್ಸಿನಲ್ಲಿಯೂ ಜುಗುಪ್ಸೆ ಹುಟ್ಟಿಸುವ ಹೀನ ವೃತ್ತಿಗಳು ಸೇರಿಕೊಂಡುವು. ದಯೆ, ಶಾಂತಿ ಮತ್ತು ಅಹಿಂಸೆಯ ಸ್ಥಾನವನ್ನು ಕ್ರೌರ್ಯ, ಕ್ರೋಧ ಮತ್ತು ಹಿಂಸೆಗಳು ತೆಗೆದುಕೊಂಡುವು. ಕ್ಷಮೆಯನ್ನು ಹೇಡಿತನದ ಚಿಹ್ನೆ ಎಂದು ತಿಳಿಯಲಾಯಿತು. ಸಾಮಾಜಿಕ ಭೇದಗಳು ಹೆಚ್ಚಿದುವು. ಒಂದು ವರ್ಣವು ಇನ್ನೊಂದು ವರ್ಣವನ್ನು ದ್ವೇಷಿಸತೊಡಗಿದುವು. ತ್ಯಾಗಹೀನ, ವೃತ್ತಿಹೀನ ಹಾಗೂ ಪತಿತ ವಿಚಾರಗಳಿಂದ ತುಂಬಿದ ಬ್ರಾಹ್ಮಣರು ತಮ್ಮ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಿದ್ದರು. ಸಮಾಜದ ನೇತೃತ್ವವನ್ನು ತಮ್ಮ ತಂದೆಯಿಂದ ಬಂದ ಆಸ್ತಿ ಎಂದು ತಿಳಿಯುತ್ತಿದ್ದರು. ಆತ್ತ ಕ್ಷತ್ತಿಯರು ಇದರಲ್ಲೇನೋ ಸ್ವಾರ್ಥವಿದೆ ಎಂದು ತಿಳಿದು ಅವರ ಉಚ್ಚಸ್ವರವನ್ನು ಕೇಳಿ ಅವರ ಅಧಿಕಾರವನ್ನು ಸ್ವೀಕರಿಸುವುದಕ್ಕೆ ಸಿದ್ಧರಿರಲಿಲ್ಲ. ಪರಿಣಾಮ ನಾಲ್ಕೂ ಕಡೆ ದ್ವೇಷ ಮತ್ತು ವೈರತ್ವದ ಸಾಮ್ರಾಜ್ಯವಿತ್ತು. ಎಲ್ಲರ ಮೇಲೆ ಆತ್ಮವಂಚನೆಯು ಎಲ್ಲರ ಮನಸ್ಸುಗಳನ್ನು ಆಳುತ್ತಿತ್ತು. ಯಾವಾಗ ಸಮಾಜದ ಸ್ಥಿತಿ ಹೀಗೆ ಇರುತ್ತದೋ ಆಗ ಅದರ ಶಕ್ತಿ ಕ್ಷೀಣವಾಗತೊಡಗುತ್ತದೆ. ಇಂಥ ಸಮಯದಲ್ಲಿ ಶರೀರದ ಬೊಜ್ಜನ್ನು ದೂರಮಾಡಿ ಅದರ ಚೇತನ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ. ಮಹಾತ್ಮಾ ಬುದ್ಧನಿಗಿಂತ ಮೊದಲೇ ಈ ವಿಚಾರಗಳ ಕ್ಷೋಭೆ ಹುಟ್ಟಿತ್ತು. ಉಪನಿಷತ್‍ನಲ್ಲಿ ವಿದ್ರೋಹದ ಕ್ಷೀಣಸ್ವರ ಕೇಳಿಸುತ್ತದೆ. ಆದರೆ ಭಾಗವತ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಮತದ ರೂಪದಲ್ಲಿ ಈ ವಿದ್ರೋಹ ನಮಗೆ ನಿಶ್ಚಿತ ರೂಪಧರಿಸಿರುವುದು ಕಾಣಸಿಗುತ್ತದೆ. ಭಾಗವತ ಧರ್ಮದ ವಿದ್ರೋಹ ಕ್ಷೀಣವಾಗಿತ್ತು. ಅದು ವಿದ್ರೋಹದ ಅಲೆಯಲ್ಲಿ ಹಾಗೂ ಭಾವನೆಯ ಆವೇಶಕ್ಕೆ ಒಳಗಾಗಿ ಎದುರಿಗೆ ಬಂದದ್ದನ್ನು ನಾಶಮಾಡುವ ಪ್ರಯತ್ನ ಮಾಡಲಿಲ್ಲ. ರೋಗದ ಜೊತೆ ರೋಗಿಯ ಪ್ರಾಣವನ್ನು ತೆಗೆದುಕೊಳ್ಳುವುದಕ್ಕೂ ಸಿದ್ಧವಾಗಲಿಲ್ಲ. ಅದು ಕರ್ಮಕಾಂಡವನ್ನು ವಿರೋಧಿಸಿತು. ಸಮಾಜ ವ್ಯವಸ್ಥೆಯಲ್ಲಿ 340 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರೂಢಿವಾದವನ್ನು ವಿರೋಧಿಸಿದರು. ಆದರೆ ತಮ್ಮ ಪೂರ್ವ ಇಹ ಪರಗಳು ಧರ್ಮಗ್ರಂಥಗಳು ಹಾಗೂ ಸಮಾಜ ವ್ಯವಸ್ಥೆಯ ಆಧಾರಕ್ಕೆ ಯಾವುದೇ ರೀತಿಯ ಪೆಟ್ಟುಕೊಡಲಿಲ್ಲ. ಭಾಗವತ ಧರ್ಮದವನಾದ ಭಗವಾನ್ ಕೃಷ್ಣನು ಎಲ್ಲ ವೈದಿಕ ಇಂದ್ರ, ಅದಿದೇವತೆಗಳ ಪೂಜಾರ್ಚನೆಯನ್ನು ನಿಲ್ಲಿಸಿ ಗೋವರ್ಧನ ಪರ್ವತ ಪೂಜೆಯ ಪದ್ಧತಿಯನ್ನು ಪ್ರಾರಂಭಿಸಿದನೋ ಅಲ್ಲಿ ವೇದ ಮತ್ತು ವೈದಿಕ ವ್ಯವಸ್ಥೆಗಳ ವಿಷಯದಲ್ಲಿ ಪೂರ್ಣಗೌರವದ ಭಾವನೆ ಕಾಣಿಸುತ್ತದೆ. ಜೀವನದಲ್ಲಿ ಯಜ್ಞಯಾಗಾದಿಗಳನ್ನು ವಿರೋಧಿಸಿದರೂ ಯುಧಿಷ್ಠರನನ್ನು ರಾಜಸೂಯ ಯಜ್ಞವನ್ನು ಮಾಡಲು ಪ್ರೇರೆಪಿಸಿದನು ಹಾಗೂ ಸ್ವಯಂ ಅದರಲ್ಲಿ ಪ್ರಮುಖ ಸ್ಥಾನವನ್ನು ವಹಿಸಿದನು. ಭಾಗವತ ಧರ್ಮದ ವಿರೋಧ ಕೆಟ್ಟವರೊಂದಿಗೂ ಇರಲಿಲ್ಲ. ಸಂಪೂರ್ಣ ವ್ಯವಸ್ಥೆಯೊಂದಿಗೂ ಇರಲಿಲ್ಲ. ಆದರೆ ಬೌದ್ಧ ಧರ್ಮದ ವಿರೋಧ ಇಲ್ಲಿಯವರೆಗೆ ಸೀಮಿತವಾಗಿರಲಿಲ್ಲ. ಗೋಧಿಯಲ್ಲಿ ಸ್ವಲ್ಪ ಕಲ್ಲು ಸಿಕ್ಕಿದಾಗ ಅವರು ಇಡೀ ಧಾನ್ಯವನ್ನೇ ಎಸೆದು ಬಿಟ್ಟರು. ಕರ್ಮಕಾಂಡದಲ್ಲಿ ಹಿಂಸೆಯನ್ನು ನೋಡಿ ಅವರು ಕೇವಲ ಕರ್ಮಕಾಂಡದ ವಿರೋಧವನ್ನು ಮಾಡಲಿಲ್ಲ. ಆದರೆ ವೇದ ಮತ್ತು ಬ್ರಾಹ್ಮಣರನ್ನೇ ಎಲ್ಲ ಪಾಪಗಳ ಬೇರು ಎಂದು ತಿಳಿದು ಅವರ ಅಧಿಕಾರವನ್ನೇ ನಿರ್ಮೂಲ ಮಾಡಿದರು. ಪ್ರಾಚೀನ ಕಾಲದಿಂದ ನಡೆದು ಬರುತ್ತಿರುವ ಪದ್ಧತಿಗಳನ್ನು ಪೂರ್ತಿಯಾಗಿ ತ್ಯಾಗಮಾಡಿದರು. ಅವರು ತಮ್ಮ ಪ್ರಚಾರವನ್ನು ಸಂಸ್ಕೃತವನ್ನು ಬಿಟ್ಟು ಪಾಲಿಯಲ್ಲಿ ಮಾಡಿದರು. ವರ್ಣವ್ಯವಸ್ಥೆಯನ್ನು ತಿರಸ್ಕರಿಸಿದರು. ಹಾಗೂ ಈ ರೀತಿ ವೈದಿಕ ಪರಂಪರೆ ಮತ್ತು ವ್ಯವಸ್ಥೆಯೊಂದಿಗೆ ತಮ್ಮ ಸಂಬಂಧವನ್ನು ಪೂರ್ತಿಯಾಗಿ ಕತ್ತರಿಸಿದರು. ವೈದಿಕ ಧರ್ಮದ ಬದಲಾವಣೆಯಂತೂ ಯಾವಾಗಲೂ ಆಗುತ್ತಲೇ ಇರುತ್ತದೆ. ಧರ್ಮ ಗತಿಶೀಲ, ಗಂಗೆಯ ಸಮಾನ ಚೈತನ್ಯಯುಕ್ತವಾದುದು. ಕೆರೆಯ ನೀರಿನ ಹಾಗೆ ಸ್ಥಿರ, ಜಡ ಮತ್ತು ಮೃತವಲ್ಲ. ಧರ್ಮದಲ್ಲಿ ಸದಾಕಾಲವೂ ಹೊಸ ವಿಚಾರಗಳ ಆಗಮನ ಆಗುತ್ತಿರುತ್ತದೆ. ಆದರೆ ಪ್ರತ್ಯೇಕ ಹೊಸ ಬದಲಾವಣೆ ಪ್ರಾಚೀನದೊಂದಿಗೆ ಸಂಬಂಧ ಹೊಂದಿದೆ. ಪ್ರತ್ಯೇಕ ಹೊಸ ಆಂದೋಳನಕಾರನೂ ತನ್ನ ಪೂರ್ವಜರ ಬಗ್ಗೆ ಶ್ರದ್ಧೆಯ ಭಾವನೆಯನ್ನು ಇಟ್ಟುಕೊಂಡಿದ್ದಾನೆ. ಪ್ರತ್ಯೇಕ ಹೊಸ ಸುಧಾರಕ ತನ್ನ ಪ್ರಾಚೀನ ಪರಂಪರೆಯನ್ನು ಒಪ್ಪುವವನಾಗಿದ್ದ. ತನ್ನ ಪೂರ್ವಜರ ಹಾಗೂ ಅವರ ಕೃತಿಗಳನ್ನು ಗೌರವಿಸುತ್ತಿದ್ದ ಹಾಗೂ ಸಮಯದೊಂದಿಗೆ ಹೊಸ ವಿಚಾರಗಳ ಪ್ರವರ್ತಕನೂ ಆಗಿದ್ದ. ಮೂಲದೊಂದಿಗೆ ಸಂಬಂಧವಿದ್ದ ಕಾರಣ ಅವರ ಹೊಸ ವಿಚಾರಗಳಿಂದ ರಾಷ್ಟ್ರಜೀವನಕ್ಕೆ ಯಾವುದೇ ರೀತಿಯ ಏಟು ಬೀಳಲಿಲ್ಲ. ಹೌದು, ಅವರಲ್ಲಿ ಅವಶ್ಯಕವಾಗಿ ವಿಕಸನವಾಯಿತು. ಅನಾದಿಕಾಲದಿಂದ ನಡೆದು ಬರುತ್ತಿರುವ ರಾಷ್ಟ್ರೀಯ ಪರಂಪರೆಯನ್ನು ಒಡೆಯುವ ಪ್ರಯತ್ನ ಇದುವರೆಗೆ ಯಾರೂ ಮಾಡಲಿಲ್ಲ. ಮಧ್ಯಪ್ರದೇಶದ ಪತ್ರ 341 ಆದರೆ ಮಹಾತ್ಮ ಬುದ್ಧ ಮತ್ತು ಅವನಿಗಿಂತಲೂ ಹೆಚ್ಚಾಗಿ ಅವನ ಅನುಯಾಯಿಗಳು ತಮ್ಮ ಪ್ರಾಚೀನ ಪರಂಪರೆಯೊಂದಿಗೆ ಸಂಬಂಧವನ್ನು ಪೂರಾ ಕತ್ತರಿಸಿಯೇ ಹಾಕಿದರು. ಅನಂತ ಜ್ಞಾನದ ಮೂಲವಾದ ವೇದಗಳಿಂದ ತಮ್ಮ ಮತಗಳನ್ನು ಬಲಗೊಳಿಸುವ ಜಾಗದಲ್ಲಿ ಅವರು ವೇದಗಳಿಗೆ ತಮ್ಮ ಧಾರ್ಮಿಕ ವ್ಯವಸ್ಥೆಯಲ್ಲಿ ಯಾವ ಸ್ಥಾನವನ್ನು ಕೊಡಲಿಲ್ಲ. ದೇವರು ಹಾಗೂ ವೇದಗಳ ವಿಷಯದಲ್ಲಿ ಮಹಾತ್ಮ ಬುದ್ಧನ ಈ ಉದಾಸೀನತೆಯ ಭಾವನೆ ಅವರ ಅನುಯಾಯಿಗಳಲ್ಲಿ ವಿರೋಧದ ರೂಪದಲ್ಲಿ ಪರಿವರ್ತಿತವಾಯಿತು. ಎಲ್ಲಿಯವರೆಗೆ ಅಂದರೆ ಹಿಂದೂ ಧರ್ಮ ಮತ್ತು ಬೌದ್ಧಧರ್ಮಗಳು ಪರಸ್ಪರ ವಿರೋಧಿಗಳಾದುವು. ಬುದ್ಧನ ಕಾಲದವರೆಗೆ ನಮ್ಮ ಧಾಮಿಕ ವಿಚಾರ ಮೆಲ್ಲಮಲ್ಲನೆ ಯಾವ ಬದಲಾವಣೆಯೂ ಇಲ್ಲದೆ ಹೇಗೆ ವಿಕಸಿತವಾಗುತ್ತಾ ಬಂತು ಎಂದರೆ ಹೊಸದಾಗಿ ಬಂದ ವಿಚಾರಗಳ ನವೀನತೆಯ ಬಗ್ಗೆ ದೇಶದ ಗಮನ ಹೋಗಲಿಲ್ಲ. ನಮ್ಮ ಧಾರ್ಮಿಕ ಚಿಗುರು ಮೆಲ್ಲ ಮೆಲ್ಲನೆ ಮುಂದುವರಿಯುತ್ತಾ ಹೇಗೆ ಆಕಾಶವನ್ನು ಅವಲಂಬಿಸಿರುವ ಮರವಾಯಿತು ಎಂಬುದನ್ನು ಯಾರೂ ನೋಡಲಾರದವರಾದರು. ಮಹಾತ್ಮ ಬುದ್ಧ ಅದರ ವಕ್ರಕೊಂಬೆಗಳು ಮತ್ತು ಚಿಗುರುಗಳನ್ನು ಎಷ್ಟು ಶೀಘ್ರವಾಗಿ ಕತ್ತರಿಸಿದನೋ ಮತ್ತು ಧಾರ್ಮಿಕ ಪ್ರಪಂಚದಲ್ಲಿ ಎಂಥ ದೊಡ್ಡ ಗೊಂದಲವನ್ನು ಎಬ್ಬಿಸಿದ ಅಂದರೆ ಮಾಯಾವೀ ವಿದ್ಯೆಯಿಂದ ಮತ್ತೊಂದು ಮರವನ್ನು ನಿಲ್ಲಿಸಿದನೇನೋ ಎಂಬಂತೆ ಇತ್ತು. ಇಂಥ ಪರಿಸ್ಥಿತಿಯಲ್ಲಿ ಇವರ ವ್ಯಕ್ತಿತ್ವದ ಪ್ರಭಾವ ಬೀಳುವುದು ಸ್ವಾಭಾವಿಕವಾಗಿತ್ತು ಮತ್ತು ಆಗಿದ್ದೂ ಹಾಗೆಯೇ. ಆದ್ದರಿಂದ ಧರ್ಮವೂ ವ್ಯಕ್ತಿತ್ವ ಪ್ರಧಾನವಾಯಿತು. ಭೂಮಿಯ ಮೇಲೆ ಮರವನ್ನು ಹಾಕಿ ಅದರ ಒಳಗಿನಿಂದ ಪೋಷಕ ತತ್ವವನ್ನು ತೆಗೆದುಕೊಂಡು ಮರಗಳು ಬೆಳೆದುವು. ಇದರ ಜಾಗದಲ್ಲಿ ಅವರು ಹೂಕುಂಡದಲ್ಲಿ ಬೇರೆಯ ಸಸಿಯನ್ನು ಹಾಕಿದರು. ಹೃದಯದಲ್ಲಿ ಹಾಕಿದ ಸಸ್ಯವಾದುದರಿಂದ, ದೇಶಾಂತರ ತೆಗೆದುಕೊಂಡು ಹೋಗುವ ಅನುಕೂಲತೆ ಇದ್ದುದರಿಂದ, ದೇಶಾಂತರ ಎಲ್ಲಿ ಹೋದರೂ ಸಹ ಎಲ್ಲಿ ತೆಗೆದುಕೊಂಡು ಹೋಗುತ್ತಿರೋ ಅಲ್ಲಿ ಅದು ಬೆಳೆಯುವುದು ನಿಂತಿತು. ಹುಲ್ಲಿನ ಹಾಗೆ ವ್ಯಾಪಿಸಿದರೂ ಅದು ವಟವೃಕ್ಷದ ರೀತಿ ವಿಶಾಲವಾಗಲು ಆಗಲಿಲ್ಲ. ಭಾರತದ ಸಂಪೂರ್ಣ ಪರಂಪರೆಗಳು ಹಾಗೂ ಬೌದ್ಧ ಧರ್ಮ ಮತ್ತು ಭಾಗವತ ಧರ್ಮದ ಸಂಬಂಧ ಭಾರತದ ಭೂಮಿ, ಪರ್ವತ, ನದಿ, ವನ ಮುಂತಾದುವುಗಳೊಂದಿಗೆ ಮುರಿಯದೆ ಗಟ್ಟಿಯಾಗಿ ಬೆಸೆದುಕೊಂಡಿದೆ. ಎಲ್ಲಿ ಬೌದ್ಧಧರ್ಮವು ಪ್ರಾಚೀನ ಪರಂಪರೆಗಳನ್ನು ನಾಶಮಾಡಿತೋ ಅಲ್ಲಿ ಈ ಪರಂಪರೆಗಳ ಆಧಾರಭೂಮಿ ಹಾಗೂ ಆ ಪರಂಪರೆಗಳನ್ನು ಒಪ್ಪುವ ಪೂರ್ವಜರೊಂದಿಗೆ ಸಹ ತನ್ನ ಸಂಬಂಧವನ್ನು 342 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮುರಿದು ಹಾಕಿತು. ಅವರ ಹಿಂದಿನ ಮಹರ್ಷಿಗಳು, ರಾಮ ಮತ್ತು ಕೃಷ್ಣರೊಂದಿಗೆ ಅವರ ಜೀವನದಲ್ಲಿ ಯಾವ ಮಹತ್ವವೂ ಇರಲಿಲ್ಲ. ತಮ್ಮ ಪೂರ್ವಜರ ಸಂಬಂಧದಲ್ಲಿ ಯಾರ ಮನಸ್ಸಿನಲ್ಲಿ ಅಶ್ರದ್ಧೆಯ ಭಾವನೆ ಹುಟ್ಟಿದೆಯೋ ಹಾಗೂ ನಮ್ಮ ಭೂಮಿ ಸಂಬಂಧದಲ್ಲಿ ಯಾವ ಮಹತ್ವವೂ ಇರುವುದಿಲ್ಲವೋ ಅಲ್ಲಿ ರಾಷ್ಟ್ರೀಯ ಭಾವನೆಗಳು ಹುಟ್ಟುವುದು ಸ್ವಾಭಾವಿಕವೇ. ತನ್ನತನದ ಈ ಅಭಾವವನ್ನು ತೆಗೆದುಕೊಂಡು ಯಾವಾಗ ಬೌದ್ಧಧರ್ಮ ದೇಶಾಂತರ ಹೋಯಿತೋ, ಆಗ ಎಲ್ಲೊ ಒಂದು ಕಡೆ ಅವನು ಅವರಿಗೆ ಜ್ಞಾನದ ಶಿಕ್ಷಣವನ್ನು ಕೊಟ್ಟನೋ ಅಲ್ಲಿ ಅವನು ಬಹಳ ವಿಷಯಗಳನ್ನು ತನ್ನದಾಗಿಸಿಕೊಂಡನು. * ಬುದ್ಧನ ಕಾಲದವರೆಗೆ ನಮ್ಮ ಧಾರ್ಮಿಕ ವಿಚಾರ ಮೆಲ್ಲಮೆಲ್ಲನೆ ಯಾವ ಬದಲಾವಣೆಯೂ ಇಲ್ಲದೆ ಹೀಗೆ ವಿಕಸಿತವಾಗುತ್ತಾ ಬಂತು ಎಂದರೆ ಹೊಸದಾಗಿ ಬಂದ ವಿಚಾರಗಳ ನವೀನತೆಯ ಬಗ್ಗೆ ದೇಶದ ಗಮನ ಹೋಗಲಿಲ್ಲ. ನಮ್ಮ ಧಾರ್ಮಿಕ ಚಿಗುರು ಮೆಲ್ಲ ಮೆಲ್ಲನೆ ಮುಂದುವರಿಯುತ್ತಾ ಹೇಗೆ ಆಕಾಶವನ್ನು ಅವಲಂಬಿಸಿರುವ ಮರವಾಯಿತು ಎಂಬುದನ್ನು ಯಾರೂ ನೋಡಲಾರದವರಾದರು. ಮಹಾತ್ಮಾ ಬುದ್ಧ ಅದರ ವಕ್ರಕೊಂಬೆಗಳು ಮತ್ತು ಚಿಗುರುಗಳನ್ನು ಎಷ್ಟು ಶೀಘ್ರವಾಗಿ ಕತ್ತರಿಸಿದನೋ ಮತ್ತು ಧಾರ್ಮಿಕ ಪ್ರಪಂಚದಲ್ಲಿ ಎಂಥ ದೊಡ್ಡ ಗೊಂದಲವನ್ನು ಎಬ್ಬಿಸಿದ ಅಂದರೆ ಮಾಯಾವೀ ವಿದ್ಯೆಯಿಂದ ಮತ್ತೊಂದು ಮರವನ್ನು ನಿಲ್ಲಿಸಿದನೋ ಎಂಬಂತೆ ಇತ್ತು. ಇಂಥ ಪರಿಸ್ಥಿತಿಯಲ್ಲಿ ಇವರ ವ್ಯಕ್ತಿತ್ವದ ಪ್ರಭಾವ ಬೀಳುವುದು ಸ್ವಾಭಾವಿಕವಾಗಿತ್ತು ಮತ್ತು ಆಗಿದ್ದೂ ಹಾಗೆಯೇ ಆದ್ದರಿಂದ ಈ ಧರ್ಮವೂ ವ್ಯಕ್ತಿತ್ವ ಪ್ರಧಾನವಾಯಿತು. ಹಾಗೂ ಬೌದ್ಧರೂ ಸಹ ದೇಶದ ಸ್ವಾತಂತ್ರ್ಯವನ್ನು ಅಪಹರಿಸುವ ಈ ಧರ್ಮ ಬಂಧುಗಳನ್ನು ತಮ್ಮವರನ್ನಾಗಿಸಿಕೊಂಡರು. ಆ ದಿನಗಳಲ್ಲಿ ಬೌದ್ಧಧರ್ಮವು ಒಂದು ಅತ್ಯಾಚಾರೀ ವರ್ಗದ ಸಾಕಿದ ಮಗನಂತೆ ಇತ್ತು. ಯಾವಾಗ ಅತ್ಯಾಚಾರ ನಿರ್ಮೂಲನೆ ಆಯಿತೋ ಆಗ ಅವಶ್ಯಕವಾಗಿ ಅದರೊಂದಿಗೆ ಆ ಧರ್ಮದ ಪತನವೂ ಆಯಿತು. ಆ ಸಮಯದಲ್ಲಿ ಬೌದ್ಧಧರ್ಮವು ರಾಷ್ಟ್ರೀಯತೆಯ ಉಚ್ಛಸ್ತರದಿಂದ ಪತಿತವಾಗಿತ್ತು ಮತ್ತು ಅದು ಅಹಿಂದು ಸ್ವರೂಪ ಧಾರಣೆ ಮಾಡಿತ್ತು. ಇಂಥ ಸ್ಥಿತಿಯಲ್ಲಿ ಬೌದ್ಧ ಧರ್ಮದ ಉನ್ಮೂಲನೆ ಒಂದು ರಾಷ್ಟ್ರೀಯ ಕರ್ತವ್ಯವಾಗಿತ್ತು. ಒಬ್ಬರಾದ ಮೇಲೆ ಒಬ್ಬರು ಮಹಾಪುರುಷರು ಹುಟ್ಟಿದರು ಮತ್ತು ಭಾರತದಿಂದ ಈ ಅರಾಷ್ಟ್ರೀಯ ಪ್ರಕೃತಿಯನ್ನು ನಾಶಮಾಡುವುದಕ್ಕೆ ಒಟ್ಟಾದರು. ಇವರಲ್ಲಿ ಕುಮಾರಿಲಭಟ್ಟ ಶಂಕರರ ಹೆಸರುಗಳನ್ನು ಎಲ್ಲರೂ ಬಲ್ಲರು. ಆದರೆ ಇವರನ್ನು ಬಿಟ್ಟು ಸಹ ಈ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸುವ ಅನೇಕ ಸಂತ ಮಹಂತರು, ಋಷಿಮುನಿಗಳು ಆಗಿಹೋದರು. ಈಗ ನಮಗೆ ಆ ಹೆಸರುಗಳು ಮಧ್ಯಪ್ರದೇಶದ ಪತ್ರ 343 ಗೊತ್ತಿಲ್ಲದೇ ಇರಬಹುದು. ಅವರ ಗುಣಗಾನ ಮಾಡದಿರಬಹುದು. ಆದರೆ ನಮ್ಮ ಹೃದಯದಲ್ಲಿ ರಾಷ್ಟ್ರಭಕ್ತಿಯ ಭಾವನೆ ಗೊತ್ತಿಲ್ಲದೆಯೇ ಮೌನವಾಗಿ ಶ್ರದ್ಧೆಯ ಎರಡು ಹೂವುಗಳನ್ನು ಏರಿಸುತ್ತದೆ. ಬೇರು ಸಮೇತ ಕಿತ್ತೊಗೆಯುವ ಈ ಪ್ರಯತ್ನದಲ್ಲಿ ನಮ್ಮದೂ ಸಹ ವಿಶೇಷತೆ ಎಂದರೆ ಭಾವಾತ್ಮಕ ಕಲ್ಪನೆ ಮತ್ತು ರಚನಾತ್ಮಕ ಕಾರ್ಯಕ್ರಮದ ಯೋಜನೆ. ನಮ್ಮ ಮಹಾಪುರುಷರು ಪ್ರತಿಕ್ರಿಯಾತ್ಮಕ ಅಥವಾ ವಿರೋಧಾತ್ಮಕ ಹಾಗೂ ವಿನಾಶಾತ್ಮಕ ದೃಷ್ಟಿಕೋನದಿಂದ ಬೌದ್ಧಧರ್ಮವನ್ನು ಕಡಿದು ಹಾಕಲಿಲ್ಲ. ಒಂದು ವೇಳೆ ಹಾಗೆ ಮಾಡಿದ್ದಿದ್ದರೆ ಸಫಲತೆಯೂ ಸಿಗುತ್ತಿರಲಿಲ್ಲ. ಭಾರತಕ್ಕೆ ಬೇಕಾದ ಜೀವನದ ಸೃಷ್ಟಿಯೂ ಆಗುತ್ತಿರಲಿಲ್ಲ. ವಿನಾಶ ಮಾಡುವುದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕೆಲಸಮಾಡುವುದರಿಂದ ರಾಷ್ಟ್ರದ ಗತಿಮಯ ಜೀವನದಲ್ಲಿ ಸ್ತಬ್ಧತೆ ಹಾಗೂ ಅಭಾವದ ಸೃಷ್ಟಿ ಆಗುವುದು. ಜೀವನದಲ್ಲಿ ಸಾವಿನ ತಾಯಿ ಆಗಿರುವ ಒಂದು ಶೂನ್ಯತೆಯ ಆವಿರ್ಭಾವವಾಗುತ್ತಿತ್ತು. ಇದರ ಸ್ಥಾನದಲ್ಲಿ ತನ್ನ ರಚನಾತ್ಮಕ ಕಾರ್ಯಕ್ರಮಗಳ ಕಾರಣದಿಂದ ಅವರು ಅರಾಷ್ಟ್ರೀಯ ಭಾವನೆಗಳ ವಿನಾಶ ಮಾತ್ರ ಮಾಡಲಿಲ್ಲ. ಆದರೆ ಅದರ ಸ್ಥಾನವನ್ನು ರಾಷ್ಟ್ರೀಯ ಪ್ರವೃತ್ತಿಗಳು ತೆಗೆದುಕೊಂಡುವು. ಆದ್ದರಿಂದ ಈ ಯುಗದಲ್ಲಿ ನಮ್ಮ ಪರಂಪರೆಯಿಂದ ಸಿಕ್ಕಿರುವ ರಾಷ್ಟ್ರೀಯ ವೈದಿಕ ಧರ್ಮವನ್ನು ಬಲಗೊಳಿಸಲು ಮತ್ತು ವ್ಯಾಪಕವನ್ನಾಗಿ ಮಾಡಲು ಎಷ್ಟು ಪ್ರಯತ್ನಗಳು ಕಾಣಸಿಗುತ್ತವೋ ಅಷ್ಟು ಪ್ರಯತ್ನಗಳು ನಮಗೆ ಬೌದ್ಧಧರ್ಮವನ್ನು ನಾಶಗೊಳಿಸುವುದಕ್ಕೆ ಮಾಡಿರುವುದು ಕಾಣಸಿಗುವುದಿಲ್ಲ. ರಾಷ್ಟ್ರೀಯತೆಯ ಪ್ರಖರ ಪ್ರಕಾಶವನ್ನು ನಾಲ್ಕೂ ದಿಕ್ಕುಗಳಲ್ಲಿ ಪ್ರಸರಿಸುವ ಪ್ರಯತ್ನಗಳು ಆದುವು. ಅಷ್ಟೇ. ಆ ರಾಷ್ಟ್ರ ವೃತ್ತಿಯ ಕತ್ತಲೆ ತಾನೇತಾನಾಗಿ ವಿಲೀನವಾಯಿತು. ಜ್ವಾಲೆಯ ಪ್ರಕಾಶವನ್ನು ಪ್ರಖರತಮವಾಗಿ ಮಾಡಲು ಸಾಧು ಸನ್ಯಾಸಿ, ಕಲಾಕಾರರು, ಪುರಾಣ ಕರ್ತೃಗಳು, ಸೂತ್ರ ಮತ್ತು ಸ್ಮೃತಿಕಾರರು, ಮುನಿಗಳು, ದರ್ಶನಗಳ ಜನ್ಮದಾತರು, ಋಷಿಮಹರ್ಷಿಗಳು ಮತ್ತು ಭಕ್ತಿಯ ಸೌಂದರ್ಯಮಯೀ ಸರಸಧಾರೆಯನ್ನು ಪ್ರವಹಿಸುವಂತೆ ಮಾಡುತ್ತಿರುವ ಸಂತ ಮಹಂತರು, ಪುನಃ ಅಶ್ವಮೇಧವನ್ನು ಮಾಡಿ ಭಾರತದಲ್ಲಿ ಸೀಮಾತೀತ ಸಾಮ್ರಾಜ್ಯವನ್ನು ನಿರ್ಮಾಣ ಮಾಡುವ ದಿಗ್ವಿಜಯೀ ಸಾಮ್ರಾಟರು ಮತ್ತು ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಏಕತೆಯನ್ನು ರಾಜನೀತಿಯ ದೇಹವನ್ನು ಪುಷ್ಟಿಗೊಳಿಸುವ ರಾಜನೀತಿಜ್ಞ ನೀತಿಕಾರರು, ಶಿಲ್ಪ ಹಾಗೂ ವಾಣಿಜ್ಯ ವೃತ್ತಿಯಲ್ಲಿರುವವರು ಎಲ್ಲರಲ್ಲಿ ಒಂದು ಸ್ಪರ್ಧೆಯೋ ಎಂಬಂತೆ ನಡೆಯುತ್ತಿದೆ. ಎಲ್ಲರೂ ಅಹಂಕಾರದ ಸ್ವಭಾವದಿಂದ ಓಡುತ್ತಿದ್ದಾರೆ ಮತ್ತು ರಾಷ್ಟ್ರದ ವೃದ್ಧಿಯಾಗುತ್ತಿರುವ ಶಕ್ತಿಗೆ ಜೀವನ ಸರ್ವಸ್ವವನ್ನು ಅರ್ಪಿಸುವುದಕ್ಕೆ ಉತ್ಸಾಹಿತರಾಗಿ ಕಾಣಿಸುತ್ತಿದ್ದಾರೆ. ಈ ರಾಷ್ಟ್ರೀಯತೆಯ ಭಾವನೆ ಕೇವಲ ಕೆಲವರು ತತ್ವಜ್ಞರು ಹಾಗೂ ವಿಚಾರಶೀಲ ಜನರವರೆಗೆ ಮಾತ್ರ ಸೀಮಿತವಾಗಿರಲಿಲ್ಲ. ಆದರೆ 344 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಪೂರ್ಣ ಸಾಮಾನ್ಯ ಜನತೆ ಈ ಭಾವನೆಯಿಂದ ಓತಪ್ರೋತರಾಗಿದ್ದಂತೆ ಕಾಣಿಸುತ್ತಿತ್ತು. ಆದ್ದರಿಂದ ಈ ಯುಗದಲ್ಲಿ ನಮಗೆ ಒಂದು ಅಪೂರ್ವ ಕರ್ಮಚೇತನ ದೃಷ್ಟಿಗೋಚರವಾಗುತ್ತಿದೆ. ಈ ವ್ಯಾಪಕ ಕರ್ಮಚೇತನವನ್ನು ಮಹಾತ್ಮಬುದ್ಧನಿಂದ ಹಿಡಿದು ಸ್ವಾಮಿ ಶಂಕರಾಚಾರ್ಯರ ಸಂಪೂರ್ಣಯುಗದಲ್ಲಿ ನೋಡಬಹುದು. ಒಂದು ಕಡೆಯಾದರೋ ಮಹಾತ್ಮಾಬುದ್ಧನು ಮಲಗಿದ್ದ ಜನತೆಯನ್ನು ಎಬ್ಬಿಸಿ, ಯಾವ ಅಸಾಧಾರಣ ವಿಚಾರಕ್ರಾಂತಿಗೆ ಜನ್ಮಕೊಟ್ಟನೋ ಅದರ ಪರಿಣಾಮ ಸ್ವರೂಪವಾಗಿ ಮತ್ತೊಂದು ಕಡೆ ವೈದಿಕ ಧರ್ಮದ ಸಂಘರ್ಷ ಮತ್ತು ಸಮನ್ವಯದ ಪರಿಣಾಮ ಸ್ವರೂಪವಾಗಿ ಈ ಯುಗದಲ್ಲಿ ಯಾವ ಕರ್ಮಚೇತನ ಜಾಗೃತವಾಯಿತೋ ಅಂಥ ವ್ಯಾಪಕ ಪ್ರಭಾವವನ್ನು ಉಂಟುಮಾಡುವ ಕರ್ಮಚೇತನ ರಾಷ್ಟ್ರಗಳ ಜೀವನದಲ್ಲಿ ಅಪರೂಪವಾಗಿ ಸಿಗುತ್ತದೆ. ಈ ಯುಗದ ಜೀವನ ಸ್ಥಿರ ಹಾಗೂ ಗತಿಹೀನವಲ್ಲ. ಆದರೆ ಅದು ಸತತ ಗತಿಶೀಲವಾಗಿದೆ. ಅದರಲ್ಲಿ ಜೀವನದ ಪ್ರೇರಕ ಶಕ್ತಿ ಕೆಲಸಮಾಡುತ್ತಿರುವಂತೆ ತೋರುತ್ತದೆ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಬಾಗಿಲು ತೆರೆದಿತ್ತು. ಕಾರ್ಯಕ್ಷೇತ್ರ ಎದುರಿಗೆ ನಿಂತಿತ್ತು. ಅಣೆಕಟ್ಟು ಒಡೆದ ಮೇಲೆ ಹೇಗೆ ನೀರು ಸುತ್ತಲೂ ಹರಿಯುತ್ತದೋ ಹಾಗೆಯೇ ಭಾರತೀಯರು ನಾಲ್ಕೂ ಕಡೆ ಹೆಚ್ಚತೊಡಗಿದರು. ಪ್ರತ್ಯೇಕ ಕ್ಷೇತ್ರದಲ್ಲಿ ವಿಕಾಸದ ಚರಮಸೀಮೆಯನ್ನು ಚುಂಬಿಸುವ ಮಹತ್ವಾಕಾಂಕ್ಷೆ ಜಾಗೃತವಾಯಿತು. ವರ್ಷಗಳಿಂದ ಬಾಯಾರಿದ ಭೂಮಿ ಮಳೆಯಾಗುತ್ತಲೇ ನಾಲ್ಕೂ ಕಡೆ ಹಸಿರು ಹಸಿರಾಗಿ ಕಾಣಿಸುವ ಹಾಗೆ ಜನ ಸಮಾಜದ ಅತೃಪ್ತ ಆತ್ಮ ಸಹ ತೃಪ್ತವಾಗಿ ಅನೇಕ ಧಾರೆಗಳಲ್ಲಿ ಹರಿಯತೊಡಗಿತು. ಧಾರ್ಮಿಕ, ರಾಜನೈತಿಕ, ಸಾಮಾಜಿಕ, ಆರ್ಥಿಕ ಎಲ್ಲಕ್ಷೇತ್ರಗಳಲ್ಲಿ ನಾವು ಮುಂದುವರೆದುವು. ಸಾಹಿತ್ಯ ಮತ್ತು ಕಲೆ ಎರಡರಲ್ಲಿಯೂ ಆ ಧಾರೆ ಸಂಪೂರ್ಣ ಭಾರತವನ್ನು ಅಪ್ಲಾವಿತ ಮಾಡುವಂತೆ ಹರಿಯಿತು. ಆ ಕಾಲದಲ್ಲಿಯೇ ಮನುಷ್ಯಮಾತ್ರರನ್ನು ದುಃಖಗಳಿಂದ ನಿವೃತ್ತರನ್ನಾಗಿ ಮಾಡುವ, ಸತ್ಯ ಮಾರ್ಗವನ್ನು ಹೇಳುವ ಅದಮ್ಯ ಆಸೆಯೊಂದಿಗೆ ನಮ್ಮ ಧರ್ಮ ಪ್ರಚಾರಕರು ದೇಶವಿದೇಶಗಳಲ್ಲಿ ಹರಡಿದರು. ಹಾಗೂ ಪ್ರಪಂಚದ ದೂರ ದೂರದ ಮೂಲೆಗಳಲ್ಲಿ ಸಹ ಭಾರತದ ವಿಜಯ ಪತಾಕೆಯನ್ನು ಹಾರಿಸಿದರು. ಜಾವಾ, ಸುಮಾತ್ರಾ, ಬಾಲಿ, ಸ್ಯಾಮ, ಹಿಂದ್‍ಚೀನ, ಚೀನಾ, ಜಪಾನ್, ಬಲಖ್, ಬುಬಾರಾ ಈಜಿಪ್ಟ್, ಗೀಸ್ ಮತ್ತು ರೋಮ್ ನಾಲ್ಕು ಕಡೆ ಜ್ಞಾನದೀಪವನ್ನು ತೆಗೆದುಕೊಂಡು ಅಜ್ಞಾನವೆಂಬ ಕತ್ತಲೆಯನ್ನು ನಾಶಮಾಡುತ್ತಾ ಮನುಷ್ಯನ ಹೃದಯಲ್ಲಿ ಆಸೆಯ ಜ್ಯೋತಿಯನ್ನು ಹೊತ್ತಿಸಿದರು. ಒಂದು ಕಡೆ ಸಾಂಸ್ಕೃತಿಕ ಸಾಮ್ರಾಜ್ಯ ವಿಸ್ತೀರ್ಣವಾಗುತ್ತಿದ್ದರೆ ಮತ್ತೊಂದು ಕಡೆ ನಮ್ಮ ದಿಗ್ವಿಜಯೀ ಸಾಮ್ರಾಟರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಮಧ್ಯಪ್ರದೇಶದ ಪತ್ರ 345 ಸಮುದ್ರವನ್ನು ದಾಟಿಹೋಗಿ ತಮ್ಮ ತಮ್ಮ ಉಪನಿವೇಶನಗಳನ್ನು ಸ್ಥಾಪಿಸಿದರು ಹಾಗೂ ಬೃಹತ್ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಲ್ಪನೆಗೆ ಸ್ಥೂಲ ಅಧಿಭೌತಿಕ ರೂಪವನ್ನು ಕೊಟ್ಟರು. ನಮ್ಮ ವ್ಯಾಪಾರಿಗಳು ದೂರ ದೂರ ದೇಶಗಳಲ್ಲಿ ವ್ಯಾಪಾರಮಾಡಿ ಭಾರತವನ್ನು ಚಿನ್ನದಿಂದ ತುಂಬಿದರು. ಭಾರತಕ್ಕೆ ಸಂಪತ್ತು ಮತ್ತು ವೈಭವದ ಸುಖಶಾಂತಿಯ ಯುಗ ಅದಾಗಿತ್ತು. ಇತಿಹಾಸಕಾರರು ಈ ಯುಗವನ್ನು `ಭಾರತದ ಸುವರ್ಣಯುಗ' ಎಂದು ಹೇಳುತ್ತಾರೆ. ಈ ಕಾಲವನ್ನು ನಾವು ಭಾರತದ ಸ್ವರ್ಣಯುಗ ಎಂದು ಆ ಕಾಲದ ದೊಡ್ಡ ದೊಡ್ಡ ಸಾಮ್ರಾಜ್ಯಗಳು ಅಪಾರ ಧನರಾಶಿ, ಅತುಲ ವೈಭವ ಮನೋರಮ ಕಲೆ ಹಾಗೂ ಶ್ರೇಷ್ಠ ಸಾಹಿತ್ಯದ ಕಾರಣದಿಂದ ಹೇಳುವುದಿಲ್ಲ. ಈಗ ಅವುಗಳಲ್ಲಿ ಸ್ವಲ್ಪವೂ, ನಮ್ಮ ಬಳಿ ಇಲ್ಲ, ದೊಡ್ಡ ದೊಡ್ಡ ಸಾಮ್ರಾಜ್ಯಗಳು ಹಾಳಾದುವು. ಅಪಾರ ಧನರಾಶಿ ಹೊತ್ತುಹೋಯಿತು. ವೈಭವವಿಲೀನವಾಯಿತು ಮತ್ತು ಕಲೆ, ಸಾಹಿತ್ಯವು ಕೆಲವು ವಿದ್ವಾಂಸರ ಸಂಶೋಧನೆ ಮತ್ತು ಮನರಂಜನೆಯ ಸಾಮಗ್ರಿ ಮಾತ್ರವಾಗಿ ಉಳಿದಿದೆ. ಆ ಯುಗದ ಅಕ್ಷಯ ಕೊಡುಗೆ ಎಂದರೆ ನಮ್ಮ ಏಕರಾಷ್ಟ್ರೀಯತೆಯ ಭಾವನೆ ಭಾರತದ ಏಕತ್ವ ಅಥವಾ ಅಖಂಡತ್ವದ ಕಲ್ಪನೆ ಹಾಗೂ ಆ ಭಾವನೆಗೆ ಮೂರ್ತರೂಪ ಕೊಡುವ ಸಂಸ್ಥೆಗಳ ಸ್ಥಾಪನೆ ಮತ್ತು ಅದನ್ನು ಚಿರಂತನವಾಗಿ ಕಾಪಾಡಿಕೊಂಡು ಬರುವ ಸಂಸ್ಕಾರಗಳ ಯೋಜನೆ. ಹಾಗೆ ನೋಡಿದರೆ ನಮ್ಮ ರಾಷ್ಟ್ರದ ಕಲ್ಪನೆ ವೈದಿಕ ಕಾಲದಿಂದ ನಡೆದುಬರುತ್ತಿದೆ ಮತ್ತು ಯಾವಾಗ ಅಂಥಹ ಪ್ರಕೃತಿಯು ಬಾಹ್ಯ ಪ್ರಕೃತಿಯ ಮೇಲೆ ಪ್ರಕ್ಷೇಪ ಮಾಡುತ್ತದೋ, ತಮ್ಮ ಹೃದಯದ ಅವ್ಯಕ್ತ ಶ್ರದ್ಧೆಯನ್ನು ವ್ಯಕ್ತಪಡಿಸುತ್ತಾ ಖುಷಿಗಳು ಹಾಡುತ್ತಾರೆ. ``ಇಮೇ ಮೇ ಗಂಗೇ ಯಮುನೇ ಸರಸ್ವತೀ, ಶುತುದ್ರಿ ಸ್ತೋಮಮ್ ರಾಚತಾ ಪರುಣ್ಯಾ ಅಸಿಕನ್ಯಾ ಮರುದ್‍ವೃಧೇ ವಿತಸ್ತಾಯಾ ರ್ಜೀಕೀಯೆ ಶ್ರುಣುಹ್ಯಾ ಸುಷೋಮಯಾ || ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿ ಕುರು || ಆಗ ಈ ರಾಷ್ಟ್ರಭಕ್ತಿಯ ಕಲ್ಪನೆಗೆ ಒಂದು ಸ್ಥೂಲರೂಪ ಸಿಗುತ್ತದೆ. ರಾಷ್ಟ್ರದ ಆತ್ಮದ ಆಧಾರ ಸ್ವರೂಪವಾದ ಮಾತೃಭೂಮಿಯ ಚಿತ್ರ ಕಣ್ಣುಗಳ ಮುಂದೆ ಬರುತ್ತದೆ. ಬೌದ್ಧಧರ್ಮದ ಪ್ರಸಾರದಿಂದ ಈ ರಾಷ್ಟ್ರದ ಕಲ್ಪನೆಗೆ ಒಂದು ಏಟು ಬಿತ್ತು. ಹಿಂದೂಧರ್ಮ ಅಥವಾ ಹಿಂದೂರಾಷ್ಟ್ರ ನಾಶವಾಗಿ ಹೋಗುತ್ತಿದೆ ಎಂದು ಅನ್ನಿಸಿತು. ಆದರೆ ಪಾತಾಳದವರೆಗೆ ಬೇರುಗಳು ತಲುಪಿದ ಕಾರಣ ವೈದಿಕ ಧರ್ಮದ 346 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಟವೃಕ್ಷವು ಮತ್ತೆ ಮತ್ತೆ ಕಡಿದು ಹಾಕಿದರೂ ಹಸಿರಾಗುವ ಹಾಗೆ ವೈದಿಕ ಧರ್ಮದ ವಟವೃಕ್ಷವನ್ನು ಅನೇಕ ಬಾರಿ ಕತ್ತರಿಸಿ ಎಸೆಯಲಾಯಿತು. ಆದರೆ ಅದು ಪುನಃ ಹಸಿರಾಯಿತು. ಏಕೆಂದರೆ ಅದರ ಬೇರುಗಳು ಭಾರತ ದೇಶದ ಭೂಮಿಯಲ್ಲಿ ಆಳವಾಗಿ ಬೇರೂರಿದೆ. ಆಳ ಎಷ್ಟೆಂದು ಇದುವರೆಗೆ ಯಾರೂ ಕಂಡುಹಿಡಿದಿಲ್ಲ. ಮಧ್ಯದಲ್ಲಿ ಅಣೆಕಟ್ಟು ಹಾಕುವುದರಿಂದ ಗಂಗಾಪ್ರವಾಹ ನಿಲ್ಲಲಾರದು. ಏಕೆಂದರೆ ಗಂಗೋತ್ರಿಯಿಂದ ನಿರಂತರ ಧಾರೆ ಹರಿಯುತ್ತಲೇ ಇರುತ್ತದೆ. ಅತ್ಯಂತ ದೊಡ್ಡ ಅಣೆಕಟ್ಟು ಕಟ್ಟಿದಾಗ ಪುಣ್ಯ ಸಲಿಲಾ ಭಾಗೀರಥಿಯನ್ನು ತಡೆಯಲಾಗಿದೆ ಎಂದು ಗೊತ್ತಾಗುತ್ತದೆ. ಈಗ ಅದು ಸಮುದ್ರವನ್ನು ತಲುಪಲಾರದು. ಆದರೆ ಸ್ವಲ್ಪವೇ ದಿನಗಳಲ್ಲಿ ತಪ್ಪು ಗೊತ್ತಾಗುತ್ತದೆ. ಅನಂತ ಸ್ರೋತಸ್ವಿನೀ ಜಾಹ್ನವಿ ಅಣೆಕಟ್ಟನ್ನು ನಷ್ಟಭ್ರಷ್ಟ ಮಾಡುತ್ತಾ ಮುಂದುವರಿಯುತ್ತಾ ಹೋಗುತ್ತಾಳೆ. ಗಂಗೆಯ ಸ್ರೋತ ಎಷ್ಟು ಮತ್ತು ಎಲ್ಲಿದೆ ಇದನ್ನು ಯಾರೂ ಇಲ್ಲಿಯವರೆಗೆ ಕಂಡುಹಿಡಿದಿಲ್ಲ. ಇದೇ ರೀತಿ ಹಿಂದೂಧರ್ಮ ಮತ್ತು ಹಿಂದೂ ರಾಷ್ಟ್ರದ ಪ್ರಗತಿಯನ್ನು ಅನೇಕ ಬಾರಿ ತಡೆಯಲು ಪ್ರಯತ್ನಿಸಲಾಯಿತು. ಆದರೆ ಪ್ರತಿಸಲವೂ ಇದನ್ನು ತಡೆಯುವವರನ್ನು ಜೊತೆ ಕರೆದುಕೊಂಡೇ ಮುಂದುವರಿದಿದೆ. ಅಣೆಕಟ್ಟನ್ನು ನಾಶಮಾಡಿಯೂ ಹೇಗೆ ಗಂಗೆ ತನ್ನ ಮಡಿಲಿನಲ್ಲಿ ಆಶ್ರಯ ಕೊಡುತ್ತದೋ ಅದರ ಬಹಳ ಕಲ್ಲುಗಳೂ ಸಹ ಸ್ವಲ್ಪ ದಿನಗಳಲ್ಲಿ ಪಾಪನಾಶಿನಿಯ ನೀರಿನ ಕಣಗಳೊಂದಿಗೆ ಘರ್ಷಿಸುತ್ತಾ ಘರ್ಷಿಸುತ್ತಾ ತನ್ನ ಚೂಪುತನವನ್ನು ಕಳೆದುಕೊಂಡು ಸಾಲಿಗ್ರಾಮದ ರೂಪದಲ್ಲಿ ಪೂಜೆಗೆ ಅರ್ಹವಾಗುತ್ತದೋ ಅದೇ ರೀತಿ ಹಿಂದೂ ಧರ್ಮವೂ ಸಹ ಇದರ ಮಾರ್ಗವನ್ನು ತಡೆಯುವವರನ್ನು ಮಡಿಲಿನಲ್ಲಿ ಎತ್ತಿಕೊಂಡು, ತೊಡೆಯಮೇಲಿಟ್ಟುಕೊಂಡು ಮುಂದುವರಿಯಿತು. ಹೀಗೆ ಮಾಡಲು ಏಕೆ ಸಾಧ್ಯವಾಯಿತೆಂದರೆ ಇದರಲ್ಲಿ ಆ ಸಮಯ ಎಷ್ಟು ಶಕ್ತಿ ಇತ್ತೆಂದರೆ ಆ ಕಾರಣದಿಂದಲೇ ತನ್ನದು ಮಾತ್ರವಲ್ಲ ಬೇರೆಯವರನ್ನು ಸಹ ತನ್ನೊಂದಿಗೆ ಕರೆದುಕೊಂಡು ಹೋಗುವುದಕ್ಕೆ ಸಮರ್ಥವಾಯಿತು. ಜೊತೆಯಲ್ಲಿ ಹೋಗುವವರೂ ಸಹ ಇದರ ಶಕ್ತಿ, ಉದಾರತೆ ಮತ್ತು ಸ್ನೇಹವನ್ನು ನೋಡಿ ತಮ್ಮ ಹಠವನ್ನು ಬಿಟ್ಟರು ಮತ್ತು ವೈರವನ್ನು ತ್ಯಾಗಮಾಡಿದರು. ಹಾಗೂ ಇವಳ ಸ್ನೇಹಕ್ಕೆ ಪಾತ್ರವಾಗುವುದರಿಂದಲೇ ತಮಗೆ ಒಳ್ಳೆಯದಾಗುತ್ತದೆ ಎಂದು ತಿಳಿದರು. ಇವಳೂ ಸಹ ಅವರನ್ನು ಆಲಿಂಗಿಸಿಕೊಂಡಳು. ಎಷ್ಟೆಂದರೆ ಅವರು ಇವರ ಅಂಗವೇ ಆಗಿಬಿಟ್ಟರು. ಇವಳ ಹೃದಯ ಸಿಂಹಾಸನದಲ್ಲಿ ಸಹ ಒಂದು ಕಡೆ ಜಾಗವನ್ನು ಪಡೆಯಬಲ್ಲರಾದರು. ಸ್ವಾಮಿ ಶಂಕರಾಚಾರ್ಯರು ಹಿಂದೂ ಧರ್ಮದ ಇದೇ ಸಮನ್ವಯಾತ್ಮಕ ವ್ಯಕ್ತಿಯ ಜ್ವಲಂತ ಉದಾಹರಣೆ? ಸಾವಿರಾರು ವರ್ಷಗಳು ಕಳೆದುವು. ಆದರೆ ಅದೇ ಸಮಯದಿಂದ ಸತತವಾಗಿ ಬೆಳೆಯುತ್ತಿರುವ ವೈದಿಕ ಧರ್ಮರೂಪೀ ಅಕ್ಷಯ ವೃಕ್ಷದ ಪುಣ್ಯಫಲ. ಬುದ್ಧ ಮಧ್ಯಪ್ರದೇಶದ ಪತ್ರ 347 ಭಗವಾನನು ಯಾವಾಗ ವೈದಿಕ ಧರ್ಮದ ವಿಷಯವಾಗಿ ವಿದ್ರೋಹವನ್ನು ಪ್ರಾರಂಭಿಸಿದನೋ ಆಗ ವೈದಿಕಧರ್ಮಕ್ಕೆ ಶಾಂತ ಚಿತ್ತದಿಂದ ಕುಳಿತುಕೊಳ್ಳಲು ಆಗಲಿಲ್ಲ. ಅವರು ಸಮಯದ ಗತಿಯನ್ನು ಗುರುತು ಹಿಡಿದರು ಮತ್ತು ಜೊತೆಗೇ ಈ ವಿದ್ರೋಹದಿಂದ ದೇಶಕ್ಕೆ ಆಗುವ ಹಾನಿಗಳನ್ನು ಸಹ ಗುರುತುಹಿಡಿದರು. ಆದ್ದರಿಂದ ವೈದಿಕ ಮಹಾ ವಿದ್ವಾಂಸರ ಮುಂದೆ ಇದ್ದ ಪ್ರಶ್ನೆ ಎಂದರೆ ವೈದಿಕ ಧರ್ಮವನ್ನು ಎಲ್ಲ ರೀತಿಯಿಂದ ಸುದೃಢ ಮತ್ತು ಯುಗಾನುಕೂಲವಾಗಿ ಮಾಡುವುದು. ಅವರು ವಿದ್ರೋಹದ ಕಾರಣಗಳನ್ನು ತಿಳಿದರು ಹಾಗೂ ಅದನ್ನು ದೂರಮಾಡಿದರು. ಇಷ್ಟೇ ಅಲ್ಲ ಬೌದ್ಧ ಧರ್ಮದ ಎಲ್ಲ ಒಳ್ಳೆಯದನ್ನು ಅವರು ತಮ್ಮದನ್ನಾಗಿಸಿಕೊಂಡರು. ಎಲ್ಲಿಯವರೆಗೆ ಎಂದರೆ ಸ್ವಾಮಿ ಶಂಕರಾಚಾರ್ಯರು ಭಗವಾನ್ ಬುದ್ಧರನ್ನು ವಿಷ್ಣುವಿನ ಅವತಾರವೆಂದೇ ಘೋಷಿಸಿದರು. ಹಿಂದೂ ಧರ್ಮವು ಈಗ ಕೇವಲ ಕೆಲವೇ ಎಣಿಕೆಗೆ ಸಿಗುವಷ್ಟು ಕರ್ಮಕಾಂಡೀ ವಿದ್ವಾಂಸರ ವಸ್ತುವಾಗಿ ಇರಲಿಲ್ಲ. ಆದರೆ ಅದೂ ಸಹ ಜನಸಾಧಾರಣದ ತಮ್ಮ ವಸ್ತುವೇ ಆಗಿಬಿಟ್ಟಿತ್ತು. ಈ ಎಲ್ಲ ಬದಲಾವಣೆಯ ಕಾರಣದಿಂದ ಬೌದ್ಧ ಧರ್ಮವು ಭಾರತದಲ್ಲಿ ಅನಾವಶ್ಯಕವಾಯಿತು. ಯಾವ ಭಕ್ತಿ ಭಾವ ಮತ್ತು ನೈತಿಕತೆ ಜನರಿಗೆ ಬೌದ್ಧಧರ್ಮದಿಂದ ಸಿಗುತ್ತಿತ್ತೋ ಅವೆಲ್ಲವೂ ಈಗ ಹಿಂದೂಧರ್ಮದಲ್ಲಿತ್ತು. ಆದರೆ ಇಲ್ಲಿ ಅದಕ್ಕಿಂತಲೂ ಅಧಿಕವಾಗಿತ್ತು. ಇಲ್ಲಿಯೂ ತಮ್ಮ ಪೂರ್ವಜರ ವಿಷಯದಲ್ಲಿ ಶ್ರದ್ಧೆ, ತಮ್ಮ ಮಾತೃಭೂಮಿಯ ಬಗ್ಗೆ ಮಮತೆ, ತಮ್ಮ ಸ್ವಾಭಿಮಾನ ಭಾವನೆ ಹಾಗೂ ತಮ್ಮ ರಾಷ್ಟ್ರೀಯ ಜೀವನವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆ. ಸ್ವಾಮಿಶಂಕರಾಚಾರ್ಯರ ಕಾಲದ ಹೊತ್ತಿಗೆ ಬೌದ್ಧಧರ್ಮ ಮತ್ತು ಹಿಂದೂಧರ್ಮ ಎಷ್ಟು ಹತ್ತಿರಕ್ಕೆ ಬಂದಿದ್ದುವು ಎಂದರೆ ಅವರು ಭಗವಾನ್ ಬುದ್ಧನನ್ನು ಅವತಾರ ಎಂದು ತಿಳಿಯುವುದಕ್ಕೆ ಹಾಗೂ ವೇದಾಂತ ಸ್ಥಾಪನೆ ಮಾಡಿದಾಗ ಬೌದ್ಧರಿಗೆ ಅದು ತಮ್ಮ ಶೂನ್ಯವಾದದೊಂದಿಗೆ ಬಹಳ ಹೋಲಿಕೆ ಇರುವಂತೆ ಕಂಡುಬಂತು. ಬೌದ್ಧಧರ್ಮದ ಅಸ್ತಿತ್ವ ಅನಾವಾಶ್ಯಕವಾಯಿತು ಮತ್ತು ಅದು ಹಿಂದೂಧರ್ಮದೊಂದಿಗೆ ಸೇರಿಕೊಂಡಿತು. ಈ ಐಕ್ಯತೆ, ಅದರ ಕಾರಣಗಳು, ಹಾಗೂ ಪ್ರಯತ್ನಗಳ ಇತಿಹಾಸದ ವಿವೇಚನೆ ನಮ್ಮ ರಾಷ್ಟ್ರೀಯ ಜೀವನದ ವಿಶೇಷತೆಗಳನ್ನು ಸ್ಪಷ್ಟಪಡಿಸುತ್ತದೆ. ಜೀವನ ತತ್ವಗಳ ಸಂಬಂಧವಾಗಿ ಸದಾ ನಮ್ಮ ಆಗ್ರಹವಿರುತ್ತದೆ ಮತ್ತು ಆ ಜೀವನವನ್ನು ಪೂರ್ತಿ ಮಾಡುವ ಸಾಧನೆಗಳಿಗೆ ನಾವು ಯುಗದ ವಸ್ತುವನ್ನು ತೊಡಿಸುವುದರಲ್ಲಿ ಹಿಂಜರಿದಿಲ್ಲ. ವೈದಿಕ ಧರ್ಮದ ಮೇಲೆ ಪ್ರಹಾರಮಾಡಿದಾಗ ಎಲ್ಲಕ್ಕಿಂತ ಮೊದಲು ತಮ್ಮ ಎಲ್ಲ ಅಸ್ತ್ರ-ಶಸ್ತ್ರಗಳನ್ನು ಜಾಗ್ರತೆಯಿಂದ ಸಂಭಾಳಿಸಿಕೊಳ್ಳಲಾಯಿತು ಮತ್ತು ಕೋಟೆ ನಾಲ್ಕೂ ಕಡೆ ಯುದ್ಧಕ್ಕೆ ಸಿದ್ಧವಾದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಇದರ ಅರ್ಥ ತಮ್ಮ ಧರ್ಮವನ್ನು ತರ್ಕದ ಸುದೃಢ ನೆಲೆಗಟ್ಟಿನ ಮೇಲೆ 348 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸ್ಥಾಪಿಸುವುದಕ್ಕಾಗಿ ಷಟ್‍ದರ್ಶನಗಳ ನಿರ್ಮಾಣವಾಯಿತು. ಪ್ರತ್ಯೇಕ ದರ್ಶನವೂ ತಮ್ಮ ತಮ್ಮ ಪದ್ಧತಿಯಲ್ಲಿ ವೈದಿಕ ಆದರ್ಶಗಳನ್ನು ಅತ್ಯಂತ ತರ್ಕಶುದ್ಧ ಪ್ರಣಾಲಿಯಿಂದ ಪ್ರತಿಪಾದನೆ ಮಾಡಿದರು. ನಂತರ ನಾವು ಈ ಆರು ದರ್ಶನಗಳಲ್ಲಿಯೂ ಸಹ ಒಂದು ಅದ್ಭುತ ಸಮನ್ವಯ ಮತ್ತು ಸಾಮಂಜಸ್ಯವನ್ನು ನೋಡುತ್ತೇವೆ. ಜನಸಾಧಾಣರನ್ನು ಆಕರ್ಷಿಸುವುದಕ್ಕೆ ದೊಡ್ಡ ದೊಡ್ಡ ದೇವಾಲಯಗಳು ಮತ್ತು ಮಠಗಳನ್ನು ಸ್ಥಾಪಿಸಲಾಯಿತು. ಪುರಾಣ ಮತ್ತು ಆಗಮಗಳನ್ನು ರಚಿಸಲಾಯಿತು. ಕಥೆಗಳ ಮೂಲಕ ನಮ್ಮ ಧರ್ಮದ ಗೂಢ ಸಿದ್ಧಾಂತವನ್ನು ಜನ ಸಾಮಾನ್ಯರ ಎದುರಿಗೆ ಇಡಲಾಯಿತು. ಹಾಗೂ ಭಕ್ತಿಯ ಯಾವ ಅಲೆಗಳು ಎದ್ದುವೋ ಅವು ಸಂಪೂರ್ಣ ಜನತೆಯನ್ನು ಆವರಿಸಿಕೊಂಡವು. ವೇದಗಳ ಪ್ರಾಚೀನತಮ ಆದರ್ಶ ಮತ್ತು ಉಪದೇಶಗಳನ್ನು ಹೊಸ ಮತ್ತು ಆಕರ್ಷ ರೀತಿಯಲ್ಲಿ ಇಡುವುದಕ್ಕೆ ಪುರಾಣಗಳ ಸೃಷ್ಟಿ ಆಯಿತು. ಈ ಪುರಾಣಗಳು ನಾವು ನೋಡಿದ ಹಾಗೆ ಹಳೆಯದರ ರಕ್ಷಣೆಯನ್ನು ಮಾಡುತ್ತಾ ಹೊಸದನ್ನು ಗ್ರಹಿಸಿತು. ಹಾಗೂ ಈ ರೀತಿ ವಿದ್ರೋಹವನ್ನು ಶಮನ ಮಾಡಿದರೂ ಸಹ ರಾಷ್ಟ್ರದ ಆತ್ಮವನ್ನು ಜೀವಂತವಾಗಿ ಇಟ್ಟಿತು. ಹಳೆಯ ಗಾರ್ಹಸ್ಥ್ಯ ಸೂತ್ರಗಳ ಸ್ಥಾನವನ್ನು ಸ್ಮೃತಿಗಳು ತೆಗೆದುಕೊಂಡುವು. ಯಜ್ಞ ಯಾಗಾದಿಗಳ ಸ್ಥಾನವನ್ನು ದೇವಾಲಯ ಮತ್ತು ಪೂಜಾರ್ಚನೆಗಳು ತೆಗೆದುಕೊಂಡುವು. ಹಿಂದೂ ಧರ್ಮದ ಸ್ವರೂಪ ಬದಲಾಯಿತು. ಆದರೆ ಅದರ ಆತ್ಮ ಅದೇ ಆಗಿತ್ತು. ಈಗಲೂ ಸಹ ಪ್ರಾಚೀನದ ವಿಷಯದಲ್ಲಿ ಅದೇ ಶ್ರದ್ಧೆ ಮತ್ತು ಗೌರವದ ಭಾವನೆ ಇದೆ. ಅದೇ ಪ್ರಾಚೀನ ಆದರ್ಶ ಮತ್ತು ಜೀವನದ ದೃಷ್ಟಿ ಸಮಾಜದ ಮುಂದೆ ಇತ್ತು. ಹೌದು ಅದರ ಸಾಧನಗಳು ಬದಲಾಯಿಸಿದ್ದುವು. ರಾಷ್ಟ್ರದ ವಿಕಾಸದಲ್ಲಿ ಸ್ವದೇಶದ ಮಹತ್ವ ಎಲ್ಲಕ್ಕಿಂತ ಹೆಚ್ಚಿನದು. ಆದ್ದರಿಂದ ಈ ಯುಗದಲ್ಲಿ ಸ್ವತಃ ನಮ್ಮ ಸಂಪೂರ್ಣ ಮಾತೃಭೂಮಿಯ ದರ್ಶನದ ಪ್ರಯತ್ನವನ್ನು ಮಾಡಲಾಯಿತು. ಯಾವುದೇ ಮತ ಅಥವಾ ಸಂಪ್ರದಾಯವನ್ನು ಒಪ್ಪುವವರಾದರೂ ಅವರ ಮುಂದೆ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಸಮುದ್ರದಿಂದ ಸಮುದ್ರದವರೆಗೆ, ಭಾರತದ ಚಿತ್ರ ಇರುತ್ತಿತ್ತು. ಪ್ರತ್ಯೇಕ ಸಂಪ್ರದಾಯದ ಆಚಾರ್ಯರು, ತಮ್ಮ ಸಂಪ್ರದಾಯದ ಜನರು ಇಡೀ ಭಾರತವನ್ನು ಪವಿತ್ರವೆಂದು ತಿಳಿಯುವ ಪ್ರಯತ್ನ ಮಾಡಿದರು. ಇಷ್ಟು ಮಾತ್ರವಲ್ಲ ಭಾರತದ ಏಕತೆಯ ಪ್ರತ್ಯಕ್ಷ ಜ್ಞಾನ ಇರಲೆಂದು ಇದಕ್ಕಾಗಿ ಪ್ರತ್ಯೇಕ ಸಂಪ್ರದಾಯದಲ್ಲಿ ತೀರ್ಥಯಾತ್ರೆಯ ಪದ್ದತಿಯನ್ನು ಪ್ರಚಲಿತಗೊಳಿಸಿದರು. ಸಂಪೂರ್ಣ ಭಾರತದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತೀರ್ಥಕ್ಷೇತ್ರಗಳು ಹರಡಿಕೊಂಡಿವೆ. ಸೂರ್ಯನ ಹನ್ನೆರಡು ಮಂದಿರಗಳು, ಗಾಣಪತ್ಯರ ಹನ್ನೆರಡು ವಿನಾಯಕ, ಶೈವರ ಹನ್ನೆರಡು ಜ್ಯೋತಿರ್ಲಿಂಗಗಳು, ಶಾಕ್ತರ ಐವತ್ತೆರಡು ಶಿವಕ್ಷೇತ್ರ ಹಾಗೂ ವೈಷ್ಣವರ ಲೆಕ್ಕವಿಲ್ಲದಷ್ಟು ಮಧ್ಯಪ್ರದೇಶದ ಪತ್ರ 349 ತೀರ್ಥಕ್ಷೇತ್ರಗಳು ಇಡೀ ಭಾರತದಲ್ಲಿ ಹರಿಡಿಕೊಂಡಿವೆ. ಈ ವಿಸ್ತಾರವಾದ ಪುಣ್ಯಕ್ಷೇತ್ರಗಳು ಇರುವಾಗ ಪ್ರಾಂತೀಯತೆಯ ಸಂಕುಚಿತ ಭಾವನೆಯ ಪ್ರವೇಶ ಅಸಂಭವವಾಗಿತ್ತು. ಮರ್ಯಾದಾ ಪುರುಷೊೀತ್ತಮ ರಾಮನ ದಕ್ಷಿಣ ಯಾತ್ರೆಯು ಉತ್ತರ ದಕ್ಷಿಣದ ಯಾವ ಐಕ್ಯತೆಯನ್ನು ಸಾಧಿಸಿತೋ ಅದು ಜನಸಾಧಾರಣರ ಆಚಾರ ವಿಚಾರ ಭಾವನೆಗಳಲ್ಲಿ ಗಟ್ಟಿಯಾಯಿತು. ಮಹಾಭಾರತಕಾರನು ಇದೇ ಏಕತೆಯನ್ನು ತೋರಿಸುವುದಕ್ಕೆ ಒಂದು ಸಲ ಅಲ್ಲ, ಎರಡೆರಡು ಸಲ, ಮೂರು ಮೂರು ಸಲ ಭಾರತದ ಒಂದು ತುದಿಯಿಂದ ಹಿಡಿದು ಮತ್ತೊಂದು ತುದಿಯವರೆಗೆ ಅತ್ಯಂತ ಭಾವುಕತಾಪೂರ್ಣ ವರ್ಣನೆಯನ್ನು ಮಾಡಿದ್ದಾನೆ. ಪುರಾಣಕಾರರು ಭಾರತದ ಭೂಮಿಯ ಕಣಕಣದ ಪವಿತ್ರತೆಯ ಗುಣಗಾನ ಮಾಡಿದ್ದಾರೆ. ಪ್ರತ್ಯೇಕ ಮತ ಮತ್ತು ಸಂಪ್ರದಾಯದ ಮುಂದೆ ಸಂಪೂರ್ಣ ಭಾರತದ ಚಿತ್ರವೇನೋ ಇತ್ತು ಹಾಗೂ ಅದರಲ್ಲಿ ಪ್ರತ್ಯೇಕ ವೈದಿಕ ಧರ್ಮದ ಪರಂಪರೆ ರಕ್ಷಣೆಯನ್ನು ಮಾಡುತ್ತಾ ಭಾರತ ಭೂಮಿಯ ಯಶಸ್ಸಿನ ವೃದ್ಧಿಯ ಪ್ರಯತ್ನ ಮಾಡುತ್ತಿದ್ದರು. ಆದರೆ ಈ ರೀತಿ ಒಂದೇ ಧ್ಯೇಯವನ್ನು ತೆಗೆದುಕೊಂಡು ಕೆಲಸ ಮಾಡುವವರಲ್ಲಿ ಪರಸ್ಪರ ಸಹ ಯೋಗವಿತ್ತು. ಏಕತೆಯೂ ಸಹ ಅವಶ್ಯಕವಾಗಿತ್ತು. ಆದ್ದರಿಂದ ರಾಷ್ಟ್ರೀಯ ಭಾವನೆಯನ್ನು ಮತ್ತೂ ಬಲಗೊಳಿಸಿವೆ. ಭಿನ್ನ ಭಿನ್ನ ಮತ ಮತ್ತು ಸಂಪ್ರದಾಯಗಳಲ್ಲಿ ಸಮನ್ವಯ ವೃತ್ತಿಯ ವಿಕಾಸವೂ ಸಹ ಈ ಯುಗದಲ್ಲಿ ಆಯಿತು. ಈ ಸಮನ್ವಯದ ಬಹಳಷ್ಟು ಶ್ರೇಯಸ್ಸು ಶ್ರೀ ಸ್ವಾಮಿಶಂಕರಾಚಾರ್ಯರದು. ಈ ಸಮನ್ವಯಾತ್ಮಕ ಕಾರ್ಯದಲ್ಲಿ ಸಹ ಭಾರತದ ಏಕತೆ ಮತ್ತು ಅಖಂಡತೆಯ ಬಗ್ಗೆ ಗಮನವಿಡಲಾಗಿದೆ. ಈ ರೀತಿ ಮೇಲೆ ಕೆಳಗೆ ಎಡಬಲ ನಾಲ್ಕೂ ಕಡೆ ಏಕತೆಯದ್ದೇ ಪ್ರಸಾರವಾಯಿತು. ಹಾಸು ಹೊಕ್ಕಿನ ರೀತಿ ಒಂದು ಭಾವಸೂತ್ರವನ್ನು ಹರಡಿ ಒಂದು ವಸ್ತ್ರ ನಿರ್ಮಾಣ ಮಾಡಿದರೋ ಎಂಬ ಹಾಗಿದೆ. ಭಿನ್ನ ಭಿನ್ನ ಸಂಪ್ರದಾಯಗಳ ನಾಲ್ಕು ತೀರ್ಥಕ್ಷೇತ್ರಗಳನ್ನು ಆರಿಸಿ ಅವುಗಳನ್ನು ಎಲ್ಲ ಸಂಪ್ರದಾಯಗಳ ಗೌರವ ಮತ್ತು ಶ್ರದ್ಧೆಯ ಸ್ಥಾನಗಳನ್ನು ಮಾಡಲಾಯಿತು. ಹಿಮಾಲಯದ ಹಿಮಾಚ್ಛಾದಿತ ಶಿಖರದ ಮೇಲಿರುವ ಬದ್ರಿನಾಥನ ಯಾತ್ರೆ ಎಲ್ಲ ಪ್ರಾಂತಗಳ ಮತ್ತು ಎಲ್ಲ ಸಂಪ್ರದಾಯಗಳ ಜನರ ಜೀವನದ ಆಸೆಯಾಗಿದೆ. ಮಹಾಸಾಗರ ಹಾಗೂ ರತ್ನಾಕರ ಎರಡೂ ಎಲ್ಲಿ ಮಾತೆಯ ಚರಣಗಳನ್ನು ತೊಳೆಯುತ್ತವೆಯೋ ಅಲ್ಲಿ ಶ್ರೀ ರಾಮೇಶ್ವರನ ದರ್ಶನ ಮಾಡುವುದಕ್ಕೆ ಎಷ್ಟು ಶ್ರದ್ಧೆಯಿಂದ ಶೈವರು ಹೋಗುತ್ತಾರೋ ಅದಕ್ಕಿಂತಲೂ ಹೆಚ್ಚಿನ ಶ್ರದ್ಧೆಯಿಂದ ವೈಷ್ಣವರು ಗಂಗೋತ್ರಿಯ ನೀರನ್ನು ತಂದು ಶಿವಲಿಂಗದ ಅಭಿಷೇಕ ಮಾಡುತ್ತಾರೆ. ``ಜಗನ್ನಾಥ್ ಕಾಭಾತ್, ಪೂಛೋ ಜಾತನಪಾಂತ್" ಎನ್ನುತ್ತಾ ಯಾವ ಪ್ರೀತಿ ಮತ್ತು ಶ್ರದ್ಧೆಯಿಂದ ಶ್ರೀ ಜಗನ್ನಾಥಜೀಯವರ ಪ್ರಸಾದವನ್ನು 350 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪಡೆಯುತ್ತಾರೋ ಅದು ರಾಷ್ಟ್ರೀಯ ಸಂಘಟನೆಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಭಾರಿ ಶಾಕ್ತರೂ ಸಹ ದ್ವಾರಕಾಪುರಿಗೆ ಹೋಗಿ ತಮ್ಮ ಶ್ರದ್ಧೆಯ ರಕ್ತಕಣವನ್ನು ಭಗವಾನ್ ವಾಸುದೇವ ಕೃಷ್ಣನ ಚರಣಗಳಲ್ಲಿ ಅರ್ಪಿಸಿ ತಮ್ಮನ್ನು ಧನ್ಯರೆಂದುಕೊಳ್ಳುತ್ತಾರೆ. ಇದೇ ರೀತಿ ಪುರಾಣ ಕರ್ತೃಗಳು ಯಾವಾಗ ಹೀಗೆ ಹೇಳಿದರೋ ``ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾ" ಆಗ ಅವರು ಸಾಂಪ್ರದಾಯಿಕ ಭಾವನೆಯಿಂದ ಬಹಳ ಮೇಲೆ ಎದ್ದು ರಾಷ್ಟ್ರೀಯ ಧರಾತಲದಿಂದ ವಿಚಾರಮಾಡಿದರು. ಈ ಏಳು ನಗರಗಳು ಭಾರತ ರಾಷ್ಟ್ರದ ಮರ್ಮಸ್ಥಳಗಳ ಹಾಗೆ ಇವೆ. ಅದರ ಸಭ್ಯತೆ ಮತ್ತು ಸಂಸ್ಕೃತಿಯ ಕೇಂದ್ರಗಳ ಹಾಗೆ ಇವೆ. ಒಂದೊಂದರ ಜೊತೆಯೂ ಅತೀತದ ಎಷ್ಟೊಂದು ಘಟನೆಗಳ ಸಂಬಂಧವಿದೆ. ಎಂದರೆ ಅವುಗಳ ನೆನಪಿನ ಮಾತ್ರದಿಂದ ನಮ್ಮ ಸಂಪೂರ್ಣ ಇತಿಹಾಸ ಚಲನಚಿತ್ರದ ಹಾಗೆ ಕಣ್ಣುಗಳ ಮುಂದೆ ಸುಳಿಯುತ್ತದೆ. ಇಷ್ಟೇ ಅಲ್ಲ ಭಾರತ ಭೂಮಿಯಲ್ಲಿ ಎಲ್ಲಿಯಾದರೂ ಯಾವುದೇ ಜಾಗದಲ್ಲಿ ಅದರ ಪ್ರಾಕೃತಿಕ ಸೌಂದರ್ಯ ನಮ್ಮ ಹೃತ್‍ತಂತಿಯ ಎಳೆಗಳನ್ನು ಝಂಕೃತಗೊಳಿಸಿ ನಮ್ಮ ಅಂತಃಕರಣದಲ್ಲಿ ಕೋಮಲ ಉಚ್ಚ ಭಾವನೆಗಳ ಸೃಷ್ಟಿ ಮಾಡುತ್ತವೆಯೋ ಅಥವಾ ಯಾವ ಜಾಗದ ಸಂಬಂಧ ನಮ್ಮ ಪೂರ್ವಪುರುಷರೊಂದಿಗೆ ಇದೆಯೋ, ಇವರೊಂದಿಗೆ ನಮ್ಮ ರಾಷ್ಟ್ರೀಯ ಇತಿಹಾಸದ ಘಟನಾಚಕ್ರ ನಮ್ಮ ಕಣ್ಣುಗಳ ಮುಂದೆ ಕಾಣಿಸಿದರೆ ಅಷ್ಟು ಸಾಕು, ಆ ಜಾಗಕ್ಕೆ ತೀರ್ಥಕ್ಷೇತ್ರದ ಸ್ವರೂಪ ಸಿಕ್ಕಿತು. ಅಲ್ಲಿ ಯಾತ್ರೆಗಳು ಪ್ರಾರಂಭವಾದುವು, ಜಾತ್ರೆಗಳು ನಮ್ಮ ಜೀವನದ ಅಂಗಗಳಾದುವು. ಹೃದಯದ ಯಾವ ಶ್ರದ್ಧೆ ಲಕ್ಷಗಟ್ಟಲೆ, ಕೋಟಿ ಕೋಟಿ ಯಾತ್ರಿಗಳಿಗೆ ಎಲ್ಲ ಪ್ರಕಾರದ ಕಷ್ಟಗಳನ್ನು ಅನುಭವಿಸಿ ಮಾಘಮಾಸದ ನಡುಗುತ್ತಿರುವ ಚಳಿಯಲ್ಲಿ ಕುಂಭಮೇಳದಲ್ಲಿ ಸ್ನಾನಮಾಡುವುದಕ್ಕೆ ಪ್ರೇರಿಸುತ್ತದೋ ಅದರ ಸ್ತೋತ್ರ ಬಹಳ ಆಳವಾಗಿದೆ. ಈ ಶ್ರದ್ಧೆಯನ್ನು ನಿರ್ಮಾಣ ಮಾಡಿದ, ಸಂಸ್ಕಾರಗಳ ಅಡಿಪಾಯ ಹಾಕಿದ ಮಹಾತ್ಮನಿಗೆ ರಾಷ್ಟ್ರ ಎಷ್ಟು ಅಭಾರಿಯಾಗಿರುವುದೋ ಈ ಕುಂಭಮೇಳ. ಅಂದರೆ, ಸುತ್ತಾಡುವ ರಾಷ್ಟ್ರೀಯ ವಿದ್ಯಾಲಯವೇ ಅಲ್ಲಿರುವ ಹಾಗಿದೆ. ರಾಷ್ಟ್ರೀಯ ಸಮ್ಮೇಳನವು ಭಾರತದ ನಾಲ್ಕು ಪ್ರಮುಖ ಸ್ಥಾನಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕದಲ್ಲಿ ಪ್ರತಿ ಮೂರುವರ್ಷಗಳಿಗೆ ಒಮ್ಮೆ ನಡೆಯುತ್ತಿರುತ್ತದೆ. ಲಕ್ಷಗಟ್ಟಲೆ ಸಾಧು ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ ಮತ್ತು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಜನರು ಏಕತ್ರಿತರಾಗಿ ಅವರ ದರ್ಶನ ಮತ್ತು ಉಪದೇಶದಿಂದ ತಮ್ಮ ಹೃದಯ ಮಧ್ಯಪ್ರದೇಶದ ಪತ್ರ 351 ಕಲ್ಮಶವನ್ನು ತೊಳೆದು ಜೀವನದ ಪವಿತ್ರತೆಯನ್ನು ಅನುಭವಿಸುತ್ತಾರೆ. ಎಲ್ಲಿ ಎಲ್ಲ ಸಂಪ್ರದಾಯಗಳ ಜನರೂ ಸಹ ಪ್ರತಿ ಮೂರು ವರ್ಷಕ್ಕೇ ಒಮ್ಮೆ ಒಟ್ಟುಗೂಡುತ್ತಾರೋ ಅಲ್ಲಿ ಭಾರತದ ಸಮನ್ವಯಾತ್ಮಕ ಜಲ ವಾಯುವಿನಲ್ಲಿ ಏಕಾತ್ಮಕತೆಯ ನಿರ್ಮಾಣವಾಗದೆ ಇರುವುದೇ ಇಲ್ಲ. ನಮ್ಮ ದೈನಂದಿನ ವ್ಯವಹಾರಗಳಲ್ಲಿ ಸಹ ಈ ರಾಷ್ಟ್ರೀಯತೆಯ ಭಾವನೆ ಬಲಗೊಳ್ಳುತ್ತಲೇ ಇದೆ. ಇದಕ್ಕಾಗಿ ದಿನನಿತ್ಯದ ಆಚರಣೆಯಲ್ಲಿ ಸಹ ರಾಷ್ಟ್ರಭಾವನೆಯನ್ನು ಪೋಷಿಸುವ ಸಂಸ್ಕಾರಗಳ ಸಮಾವೇಶ ಮಾಡಲಾಗಿದೆ. ಪ್ರಾತಃಕಾಲ ಏಳುತ್ತಲೇ ಭೂಮಿಯ ಮೇಲೆ ಕಾಲಿಡುತ್ತಲೇ ಅತ್ಯಂತ ವಿನೀತ ಭಾವದಿಂದ ಹಿಂದೂ ಮಾತೆಗೆ ನಮಸ್ಕರಿಸುತ್ತಾ ಹೇಳುತ್ತಾರೆ. ``ಸಮುದ್ರ ವಸಸೇ ದೇವೀ ಪರ್ವತಸ್ತನ ಮಂಡಲೇ ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವಮೇ" ಅದೇ ಸಂಪೂರ್ಣ ಭಾರತದ ಚಿತ್ರ ಮತ್ತು ಅದರ ಮುಂದೆ ಹೃದಯದ ಸಂಪೂರ್ಣ ಶ್ರದ್ಧೆಯೇ ತುಳುಕುತ್ತಿದೆಯೋ ಎನ್ನಬೇಕು ಮತ್ತು ಯಾರು ಪ್ರಾತಃಕಾಲ ಸ್ಮರಣೆ ಮಾಡುತ್ತಾರೋ ಅವರು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ಪೂರ್ವಜರನ್ನು ಸ್ಮರಿಸುತ್ತಾ ಅವರ ಸಮಾನ ಆಗುವ ಅಭಿಲಾಷೆಯನ್ನು ಮನಸ್ಸಿನಲ್ಲಿ ಸಂಕಲ್ಪಸಿಕೊಳ್ಳುತ್ತಾರೆ. ಆ ಪ್ರಾತಃಸ್ಮರಣೆಯಲ್ಲಿ ಪ್ರಾಂತ ಮತ್ತು ಸಂಕುಚಿತ ಭಾವನೆಗೆ ಎಡೆ ಇಲ್ಲ. ಅಲ್ಲಿಯಾದರೋ ನೂರಕ್ಕೆ ನೂರರಷ್ಟು ವಿಶುದ್ಧ ರಾಷ್ಟ್ರೀಯತೆಯ ಭಾವನೆಯೇ ಇದೆ. ಸ್ನಾನ ಮತ್ತು ಸಾಯಂಕಾಲದಲ್ಲಿ ಸಹ ರಾಷ್ಟ್ರೀಯತೆಯ ಸಂಸ್ಕಾರಗಳ ಸಮಾವೇಶ ಮಾಡಲಾಗಿದೆ. ಸ್ನಾನ ಮಾಡುವಾಗ ಅಥವಾ ಸಂಕಲ್ಪಕ್ಕಾಗಿ ನೀರನ್ನು ತೆಗೆದುಕೊಂಡು ನಾವು ಹೇಳುವಾಗ- ``ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಕುರು" ಭಾರತದ ಸಮಗ್ರ ನದಿಗಳ ಆವಾಹನೆ ಮಾಡಿಕೊಳ್ಳುತ್ತೇವೆ. ಸಂಪೂರ್ಣ ಭಾರತದಲ್ಲಿ ಹರಡಿರುವ ಈ ನದಿಗಳ ಸಮಾನವೇ ಏಳುವನಗಳು, ಏಳು ಪರ್ವತಗಳು, ಏಳು ಸರೋವರಗಳಿಗೆ ನಾವು ನಮ್ಮ ಜೀವನದಲ್ಲಿ ಮಹತ್ವದ ಸ್ಥಾನವನ್ನು ಕೊಟ್ಟಿದ್ದೇವೆ. ಎಲ್ಲ ಸಂಪ್ರದಾಯ ಜನರಲ್ಲಿ ಏಕತೆಯನ್ನು ಸ್ಥಾಪಿಸುವುದಕ್ಕೆಂದೇ ನಮ್ಮಲ್ಲಿ ತ್ರಿಮೂರ್ತಿಯ ಕಲ್ಪನೆಯನ್ನು ಮಾಡಲಾಯಿತು. ಇದರ ಅನುಸಾರವಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಒಬ್ಬನೇ ಪರಬ್ರಹ್ಮನ ಭಿನ್ನ ಸ್ವರೂಪಗಳು ಶೈವ ಮತ್ತು ವೈಷ್ಣವರಲ್ಲಿ ಯಾವ ರೀತಿಯ ವಿರೋಧವು ಇರದಿರಲಿ ಎಂದೇ ಪುರಾಣ ಕರ್ತೃಗಳು ಶಿವ ಮತ್ತು ವಿಷ್ಣುವನ್ನು ಪರಸ್ಪರ ಭಕ್ತರನ್ನಾಗಿ ಮಾಡಿದರು. ಶಿವ ವಿಷ್ಣುವಿನ ಚರಣ ಕಮಲದಿಂದ ಹೊರಬಂದ ಗಂಗೆಯನ್ನು ಧರಿಸಿದ್ದರೆ, ವಿಷ್ಣುವಿನ ಅವತಾರ ರಾಮನೂ 352 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಹ ಶಿವನ ಆರಾಧನೆ ಮಾಡದೇ ತನ್ನ ವಿಜಯ ಯಾತ್ರೆಯಲ್ಲಿ ಮುಂದುವರಿಯುವುದಿಲ್ಲ. ತಾನು ಕೊಟ್ಟ ವರಗಳ ಕಾರಣದಿಂದಲೇ ಶಿವನು ಬಾಣಾಸುರ ಮತ್ತು ರಾವಣನಂಥ ರಾಕ್ಷಸರಿಂದ ಪೀಡಿಸಲ್ಪಟ್ಟಾಗ ಭಗವಾನ್ ವಿಷ್ಣುವೇ ಅವರ ಸಹಾಯಕ್ಕಾಗಿ ಓಡುತ್ತಾನೆ. ಭಗವಾನ್ ಶಿವನೊಂದಿಗೆ ಗಣಪತಿ ಮತ್ತು ಶಕ್ತಿಯ ಕೌಟುಂಬಿಕ ಸಂಬಂಧವನ್ನೇ ಜೋಡಿಸಲಾಗಿದೆ. ಈ ರೀತಿ ಎಲ್ಲ ಸಂಪ್ರದಾಯಗಳ ಆರಾಧ್ಯ ದೈವರನ್ನು ಒಬ್ಬರಿಂದ ಇನ್ನೊಬ್ಬರಿಗೆ ಸಂಬಂಧ ಜೋಡಿಸಿ ಪುರಾಣಕಾರರು ಪರಸ್ಪರ ಪ್ರೇಮ ಮತ್ತು ಸೌಜನ್ಯತೆಯ ಬೀಜವನ್ನು ಬಿತ್ತಿದ್ದಾರೆ. ಶ್ರೀ ಶಂಕರಾಚಾರ್ಯರಾದರೋ ಪಂಚಾಯತನದ ಪದ್ಧತಿಯನ್ನು ನಡೆಸಿ ಸಂಬಂಧವನ್ನು ಮತ್ತೂ ಸದೃಢಗೊಳಿಸಿದ್ದಾರೆ. ಇದರ ಅನುಸಾರವಾಗಿ ಪ್ರತ್ಯೇಕ ಐದು ದೇವತೆಗಳು ವಿಷ್ಣು, ಶಿವ, ಶಕ್ತಿ, ಗಣಪತಿಯ ಪೂಜೆ ಮಾಡುತ್ತಾರೆ. ಈ ಯುಗದ ಈ ಸಮನ್ವಯಾತ್ಮಕ ಪ್ರವೃತ್ತಿ ಮತ್ತು ಸಹಿಷ್ಣುತೆಯ ವೃತ್ತಿಯ ಪರಿಣಾಮವೇನೆಂದರೆ ಭಾರತೀಯರು ಸದಾಕಾಲವೂ ಪ್ರೇಮ ಮತ್ತು ಸೌಹಾರ್ದತೆಯಿಂದ ಇರುತ್ತಾರೆ. ಕರ್ಮ, ಭಕ್ತಿ, ಜ್ಞಾನ ಈ ಮೂರು ಧಾರೆಗಳ ಸಂಬಂಧವನ್ನು ನಾವು ಈ ಯುಗದಲ್ಲಿ ನೋಡುತ್ತೇವೆ. ಭಗವಾನ್ ಶ್ರೀ ಕೃಷ್ಣನು ಗೀತೆಯಲ್ಲಿ ಸ್ವಯಂ ಈ ಮೂರರ ಸಮನ್ವಯವನ್ನು ಮಾಡಿದ್ದಾನೆ ಮತ್ತು ಈ ಯುಗದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಾನವನ್ನು ಗೀತೆ ಪಡೆದಿದೆ. ಸ್ವಯಂ ಶಂಕರಾಚಾರ್ಯರು ತಮ್ಮ ಜೀವನದಲ್ಲಿ ಜ್ಞಾನ, ಕರ್ಮ ಮತ್ತು ಭಕ್ತಿಯ ಸುಂದರ ಸಮನ್ವಯವನ್ನು ಮಾಡಿದರು. ಅವರ ಪ್ರಯತ್ನಗಳ ಕಾರಣದಿಂದಲೇ ಪ್ರಸ್ಥಾನತ್ರಯಗಳಿಗೆ ಮಾನ್ಯತೆ ಸಿಕ್ಕಿದೆ. ಪ್ರಸ್ಥಾನ ತ್ರಯಗಳಿಗೆ ಮಹತ್ವಕೊಟ್ಟು ಒಂದು ಕಡೆ ಅವರು ಬೌದ್ಧರ ವೇದವಿರೋಧಿ ದುರಾಗ್ರಹದಿಂದ ಮುಕ್ತಿ ಪಡೆದಿದ್ದರೆ ಮತ್ತೊಂದು ಕಡೆ ಉಪನಿಷತ್, ಬ್ರಹ್ಮಸೂತ್ರ ಮತ್ತು ಗೀತಾ ಜ್ಞಾನದ ಮೂಲಕ ವೇದಗಳ ಆತ್ಮವನ್ನು ಜೀವಂತವಾಗಿಟ್ಟರು. ಭಾರತದ ಈ ಅಖಂಡತೆ ಮತ್ತು ಏಕತೆಗೆ ಸ್ಥೂಲ ಸ್ವರೂಪ ಕೊಡುವುದಕ್ಕೆ ಒಬ್ಬರಾದ ಮೇಲೆ ಒಬ್ಬರು ಸಾಮ್ರಾಟರು ಆಗಿ ಹೋದರು. ಅವರು ಏಕಚ್ಛತ್ರ ಸೀಮಾತೀತ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಸಾಮ್ರಾಟ್ ಚಂದ್ರಗುಪ್ತನಿಂದ ಹಿಡಿದು ಹರ್ಷ ಮತ್ತು ಪುಲಿಕೇಶಿಯವರೆಗೆ ಅನೇಕಾನೇಕ ಸಾಮ್ರಾಟರು ಭಾರತದ ಏಕಸೂತ್ರತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದರು. ಇಷ್ಟೇ ಅಲ್ಲ ಭಾರತದ ಏಕಜೀವನವನ್ನು ಪ್ರಪಂಚಕ್ಕೆ ತಿಳಿಯಪಡಿಸಲೋ ಎಂಬಂತೆ ಉತ್ತರದಲ್ಲಿ ವಿದೇಶೀಯರ ಆಘಾತವಾದಾಗಲೆಲ್ಲ ಕೇವಲ ಉತ್ತರ ಮಾತ್ರವಲ್ಲ ದಕ್ಷಿಣಕ್ಕೂ ಮರ್ಮಾಂತಕ ಸಂಕಟವನ್ನು ಕೊಟ್ಟರು. ತಲೆಗೆ ಏಟು ಬಿದ್ದ ತಕ್ಷಣ ಹೇಗೆ ಪೂರಾ ಶರೀರದ ಶಕ್ತಿಗಳು ಪ್ರತೀಕಾರ ತೆಗೆದುಕೊಳ್ಳುವುದಕ್ಕೆ ಸಿದ್ಧವಾಗುತ್ತವೋ ಅದೇ ಮಧ್ಯಪ್ರದೇಶದ ಪತ್ರ 353 ರೀತಿ ಉತ್ತರದಲ್ಲಿ ಶಕ ಮತ್ತು ಹೂಣರ ಆಕ್ರಮಣದ ಪ್ರತಿರೋಧವನ್ನು ದಕ್ಷಿಣದ ಶಕಾರಿ ವಿಕ್ರಮಾದಿತ್ಯ ಮತ್ತು ಯಶೋ-ಧರ್ಮನ್‍ನ ಶಕ್ತಿಗಳು ಮಾಡಿದುವು. ಇದೇ ರೀತಿ, ಸುಖ ಮತ್ತು ದುಃಖದಲ್ಲಿ ಸೋಲು ಮತ್ತು ಗೆಲುವಿನಲ್ಲಿ ಮತ್ತು ವೈಭವ, ಪರಾಭವಗಳಲ್ಲಿ ಯಾವ ಏಕತೆ ಮತ್ತು ಅಭಿನ್ನತೆ ಪ್ರಕಟವಾಗಿದೆಯೋ ಅದು ನಮ್ಮ ರಾಷ್ಟ್ರವನ್ನು ಒಂದು ಜೀವನಸೂತ್ರದಲ್ಲಿ ಸಂಘಟಿತರನ್ನಾಗಿ ಮಾಡಿತು. ನಮ್ಮ ಸಾಹಿತ್ಯಕಾರರೂ ಸಹ ರಾಷ್ಟ್ರದ ಈ ಏಕಾತ್ಮಗೆ ವಾಣಿಯ ವಸ್ತುವನ್ನು ತೊಡಿಸಿ ಜನ ಸಮಾಜದ ಮುಂದೆ ಇಟ್ಟರು. ರಾಮಾಯಣ ಮತ್ತು ಮಹಾಭಾರತ ನಮ್ಮ ರಾಷ್ಟ್ರ ಸಾಹಿತ್ಯದ ಅಮೂಲ್ಯ ಸಂಪತ್ತಾಯಿತು. ಭಗವಾನ್ ರಾಮ ಮತ್ತು ಕೃಷ್ಣನ ಚಾರಿತ್ರ್ಯದ ಆದರ್ಶರೂಪದಲ್ಲಿ ರಾಷ್ಟ್ರದ ಮುಂದೆ ಉಪಸ್ಥಿತವಾದುವು. ಇವರ ಜೀವನದಲ್ಲಿ ಹಿಂದೂ ಸಮಾಜವೂ ತನ್ನ ಹೃದಯದ ಭಾವನೆಗಳ ವ್ಯಕ್ತೀಕರಣವನ್ನು ಪಡೆಯಿತು. ನಮ್ಮ ಸಾಹಿತ್ಯಕಾರರೂ ಸಹ ರಾಷ್ಟ್ರದ ಶ್ರದ್ಧೆಯ ಈ ಕೇಂದ್ರಗಳ ವಿಷಯದಲ್ಲಿ ತಮ್ಮ ಶ್ರದ್ಧೆಯ ಎರಡು ಹೂವುಗಳನ್ನು ಏರಿಸಿ ಆತ್ಮಸುಖವನ್ನು ಅನುಭವಿಸಿದರು ಮತ್ತು ಜನತೆಯ ಈ ಶ್ರದ್ಧೆಯನ್ನು ಅಮರವಾಗಿಸಿದರು. ಈ ಯುಗದಲ್ಲಿ ರಾಮ ಮತ್ತು ಕೃಷ್ಣನ ಬಗ್ಗೆ ಕಾವ್ಯವನ್ನು ಬರೆಯದಿರುವಂತಹ ತಮ್ಮ ಕಾವ್ಯದ ವಿಷಯವನ್ನು ರಾಮಾಯಣ ಮತ್ತು ಮಹಾ ಭಾರತದಿಂದ ಆರಿಸದಿರುವಂತಹ ಯಾವ ಕವಿಯೂ ಕಾಣುವುದಿಲ್ಲ. ಇಷ್ಟೇ ಅಲ್ಲ ಈ ಸಾಹಿತ್ಯಕಾರರೇ ಈ ಯುಗದ ಜೀವನದ ಸಂಬಂಧವನ್ನು ಪ್ರಾಚೀನದೊಂದಿಗೆ ಜೋಡಿಸಿದರು. ಸಾಹಿತ್ಯವು ತನ್ನ ಸಮಯದ ಕನ್ನಡಿಯಾಗಿದೆ ಎಂದು ಹೇಳಿರುವಂತೆ ಅದರಲ್ಲಿ ಸಮಾಜದ ಮನೋಭಾವನೆಗಳ ಪ್ರತಿಬಿಂಬವೇ ಕಾಣಿಸುತ್ತದೆ. ಈಗ ಒಂದು ವೇಳೆ ಸಾಹಿತ್ಯಕಾರನು ತನ್ನ ಪಾತ್ರಗಳನ್ನು ಆ ಯುಗದಿಂದ ಆರಿಸಿಕೊಳ್ಳದೇ ಪ್ರಾಚೀನದಿಂದ ಆರಿಸಿಕೊಂಡರೆ ಪ್ರಾಚೀನ ಮತ್ತು ನವೀನದ ಒಂದು ಅದ್ಭುತ ಹಾಗೂ ಜೀವನಪ್ರದ ಸಮ್ಮಿಶ್ರಣ ಅದರ ಸಾಹಿತ್ಯದಲ್ಲಿ ಸಿಗುತ್ತದೆ. ಪ್ರಾಚೀನ ಮಹಾಪುರುಷರ ಭಾವನೆಗಳೊಂದಿಗೆ ತನ್ನ ಭಾವನೆಗಳ ಸಾಮಂಜಸ್ಯದ ಅನುಭವ ಪಡೆದು ಜನತೆ ಒಂದು ಸುಖ ಸಮಾಧಾನ ಮತ್ತು ಶಕ್ತಿಯನ್ನು ಅನುಭವಿಸುತ್ತದೆ. ಯಾವಾಗ ಕವಿಯು ಸಮುದ್ರಗುಪ್ತನ ದಿಗ್ವಿಜಯದ ವರ್ಣನೆಯನ್ನು ರಘುವಿನ ದಿಗ್ವಿಜಯದ ರೂಪದಲ್ಲಿ ಮಾಡಿದನೋ ಭಾರತದ ಅಖಂಡತೆಯನ್ನು ಒಂದು ಸೂತ್ರದಲ್ಲಿ ಗ್ರಥಿತ ಮಾಡುವ ಪರಂಪರೆಗೆ ಎಂಥ ಶಕ್ತಿ ಸಿಕ್ಕಿರಬೇಕು. ಈ ಸಾಹಿತ್ಯಕಾರರ ಪ್ರಯತ್ನಗಳ ಪರಿಣಾಮದ ಸ್ವರೂಪವೇ ಸಂಪೂರ್ಣ ದೇಶದಲ್ಲಿ ವೇದವಾಣಿ ಸಂಸ್ಕೃತ ದೇವಿ ಭಾರತಿಯನ್ನು ಸಮಾನ ರೂಪದಲ್ಲಿ ಆದರಿಸತೊಡಗಿದರು. ಭಾರತದ ಪ್ರಾಂತೀಯ ಪ್ರಾಕೃತ ಭಾಷೆಗಳಿದ್ದರೂ ಸಂಸ್ಕೃತ ನಮ್ಮ ರಾಷ್ಟ್ರಭಾಷೆಯಾಗಿ ನಮ್ಮ ವಿಚಾರ ವಿನಿಮಯ, ಭಾವನಾ ಪ್ರದರ್ಶನ, ಪವಿತ್ರ ಸಂಸ್ಕಾರ ಹಾಗೂ ಜ್ಞಾನ 354 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವಿಜ್ಞಾನ ಪ್ರಕಾರಗಳ ಸಾಧನವಾಯಿತು. ಎಲ್ಲರೂ ಇವಳ ಸೌಂದರ್ಯವನ್ನು ಸಮಾನ ರೂಪದಲ್ಲಿ ಹೆಚ್ಚಿಸಿದರು. ನಮ್ಮ ನೀತಿಕಾರರು ಮತ್ತು ಸ್ಮೃತಿಕಾರರು ಸಹ ನಮ್ಮ ಈ ಏಕತೆಯ ಭಾವನೆಯನ್ನು ಹೆಚ್ಚಿಸುವುದರಲ್ಲಿ ಬಹಳ ಸಹಾಯ ಮಾಡಿದರು. ಮಹರ್ಷಿ ಚಾಣಕ್ಯನು ಒಂದು ಕಡೆ ``ಪೃಥಿವೈ ಸಮುದ್ರ ಪರ್ಯಾತಾಯಾ ಏಕರಾಟೌ'ನ ಪ್ರಾಚೀನ ಆದರ್ಶವನ್ನು ಸತ್ಯದೃಷ್ಟಿಯಾಗಿ ಪರಿಣತಗೊಳಿಸುವುದಕ್ಕೆ ಸಾಮ್ರಾಟ್ ಚಂದ್ರಗುಪ್ತವನ್ನು ಪ್ರೇರಿಸಿದನೋ ಅಲ್ಲಿ ಮತ್ತೊಂದು ಕಡೆ ರಾಜನೀತಿ ಮತ್ತು ಅರ್ಥಶಾಸ್ತ್ರದ ಸೂಕ್ಷ್ಮತಮ ನಿಯಮಗಳ ರಚನೆ ಮಾಡಿ ರಾಷ್ಟ್ರದ ಏಕಸೂತ್ರತೆಯನ್ನು ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿದನು. ಯಾರು ನಮ್ಮವರು ಯಾರು ಹೊರಗಿನವರು ಇದರ ಸರಿಯಾದ ಜ್ಞಾನವೂ ರಾಷ್ಟ್ರತ್ವದ ಭಾವನೆಗೆ ಪೋಷಕವಾಗುತ್ತದೆ ಮತ್ತು ಬೇರೆಯವರಿಂದ ಗೆಲ್ಲಲ್ಪಡಬಾರದು ಎಂಬ ಭಾವನೆ ಹಾಗೂ ತಮ್ಮ ಜೀವನವನ್ನು ಕಾಪಾಡಿಕೊಳ್ಳುವ ಆಗ್ರಹವು ಈ ಭಾವನೆಯನ್ನು ಮತ್ತು ಪುಷ್ಪಿಗೊಳಿಸುತ್ತದೆ. ನಮ್ಮ ನೀತಿ ಸಾಹಿತ್ಯದಲ್ಲಿ ನಾವು ಈ ಭಾವನೆಯನ್ನು ಸರ್ವತ್ರ ಪಡೆಯುತ್ತೇವೆ. ಯಾವಾಗ ಮಹರ್ಷಿ ಚಾಣಕ್ಯನು `ನ ತ್ವೇವಾರ್ಯಸ್ಯ ದಾಸ್ಯಾಭಾವ" ಎಂದು ಘೋಷಿಸಿದನೋ ಆಗ ರಾಷ್ಟ್ರದ ಸ್ವಾಭಿಮಾನವೇ ಕರೆದಂತಾಯಿತು. ದಾಸ್ಯತ್ವದ ಕಲ್ಪನೆಯ ಹಿಂದೆ ರಾಷ್ಟ್ರದ ಅಸ್ತಿತ್ವದ ಜ್ಞಾನ ಹಾಗೂ ದಾಸ್ಯತ್ವದ ದ್ವೇಷದಲ್ಲಿ ರಾಷ್ಟ್ರದ ಸ್ವಾಭಿಮಾನ ಅಂತರ್ನಿಹಿತವಾಗಿದೆ. ನಾವು ಸ್ವಯಂ ನಮ್ಮ ಒಡೆಯರಾಗಿರಬೇಕೆಂಬ ಭಾವನೆ ನಿರಂತರವಾಗಿ ಮಿಡಿಯುತ್ತಿತ್ತು. ಭಗವಂತನಿಂದ ಅನುಗ್ರಹಿಸಲ್ಪಟ್ಟ ಆರ್ಯವರ್ತದಲ್ಲಿ ನಾವು ಸ್ವತಂತ್ರತಾಪೂರ್ವಕವಾಗಿ ಇರೋಣ. ಇದು ರಾಜನೈತಿಕವೂ ಮತ್ತು ಭೌಗೋಳಿಕವೂ ಆಗಿರುವಂತಹ ಭಾವನೆ. ಇದರ ಅನುಸಾರವಾಗಿ ಆರ್ಯವರ್ತದಲ್ಲಿ ಹಿಂದೂಗಳ ರಾಜ್ಯವೇ ಇರಬೇಕು ಎಂದು ಜನರು ಮೊದಲಿನಿಂದಲೇ ತಿಳಿದಿದ್ದಾರೆ. ಇದರ ಉಲ್ಲೇಖ ಮಾನವ ಧರ್ಮಶಾಸ್ತ್ರ (21, 22, 23) ದಲ್ಲಿ ಸಹ ಇದೆ. ಮತ್ತೂ ಈ ಭಾವನೆ ಪತಂಜಲಿಯ ಸಮಯದಿಂದ ಮೇಘಾತಿಥಿ (ಅಕ್ರಮ್ಯಾಕ್ರಮ್ಯ ನ ಚಿರಂ ತತ್ರ ಸ್ವೇಚ್ಛಾ ಸ್ತಾತಾರೋ ಭವಂತಿ") ಮತ್ತು ಬೀಸಲ ದೇವತನಕ ನಿರಂತರವಾಗಿ ಜನರ ಮನಸ್ಸಿನಲ್ಲಿ ಜೀವಂತವಾಗಿತ್ತು. (ಆರ್ಯಾವರ್ತಯ ಯಾಥಾರ್ಥ ಪುನರಪಿ ಕೃತವಾನ್ ಮ್ಲೇಚ್ಛ ವಿಚ್ಛೇದ ನಾಭಿಃ) ಈ ಭಾವನೆಯನ್ನು ಈ ಯುಗದ ತತ್ವಜ್ಞರು ಅತ್ಯಂತ ಬಲಗೊಳಿಸಿದ್ದಾರೆ. ಮನುಸ್ಮೃತಿಯಂತೂ ಸಂಪೂರ್ಣ ಭಾರತ ವರ್ಷದ ವರ್ಣನೆಯನ್ನು ಮಾಡಿ ಇದನ್ನು ಪುಣ್ಯಭೂಮಿ ಎಂಬ ಹೆಸರಿನಿಂದ ಕರೆದಿದ್ದಾನೆ. ಹಾಗೂ ಉಳಿದ ಎಲ್ಲ ದೇಶಗಳನ್ನು ಮ್ಲೇಚ್ಛರೆಂದು ಹೇಳಿದ್ದಾನೆ ``ಭಾರತಂ ನಾಮ ತದ್ವರ್ಥ ಭಾರತೀ ಯತ್ರ ಸಂತತಿ". ಈ ರೀತಿಯ ವಾಕ್ಯಗಳು ಭಾರತ ದೇಶ ಮತ್ತು ಮಧ್ಯಪ್ರದೇಶದ ಪತ್ರ 355 ಅದರ ಜನ ಸಮೂಹದ ಆತ್ಮದ ದಿಗ್ದರ್ಶನವನ್ನು ಮೂಡಿಸುತ್ತದೆ. ಇದೇ ಸಂತತಿಯ ವರ್ಣನೆಯನ್ನು ಮಾಡುತ್ತಾ ಮನು ಹೇಳಿದ್ದಾನೆ ``ಏತದ್ದೇಶ ಪ್ರಸೂತಸ್ಯ ಸಕಾಖಾಗ್ರಜ ಸ್ವಂ ಸ್ವಂ ಚರಿತಮ್ ಶಿಕ್ಷೇರನ್, ಪೃಥಿವ್ಯಾಂ ಸರ್ಪಮಾನವಾಃ" ಮತ್ತು ಈ ಗುರುಸ್ಥಾನದ ಯೋಗ್ಯ ಚರಿತ್ರದ ಮಹತ್ವವನ್ನು ಪಡೆಯುವ ಸಲುವಾಗಿ ಯಾವಾಗ ತನ್ನ ನಿಯಮಗಳನ್ನು ರಚಿಸಿದನೋ ಸಂಪೂರ್ಣ ದೇಶವು ತನ್ನ ಮನಸ್ಸಿನಲ್ಲಿದ್ದ ಮಹತ್ವಾಕಾಂಕ್ಷೆಯೊಂದಿಗೆ ಆ ನಿಯಮಗಳನ್ನು ಒಂದೇ ರೀತಿ ಪಾಲಿಸಿತು. ಭಾರತದ ಸಂಪೂರ್ಣ ಜನತೆಯು ತಮ್ಮ ಆಚಾರ ವಿಚಾರಗಳನ್ನು ಸ್ಮೃತಿಕಾರರ ಅಳತೆಗೋಲಿನಿಂದ ಅಳೆಯಿತು ಮತ್ತು ಏಕತೆಯ ಅಚ್ಚಿನಲ್ಲಿ ಎರಕಹೊಯ್ದು ಈ ಸಂಸ್ಕಾರಗಳಿಗೆ ತಮ್ಮ ಜೀವನದಲ್ಲಿ ಸ್ಥಾನಕೊಟ್ಟರು. ಪರಿಣಾಮ ಸ್ವರೂಪ ಸಂಪೂರ್ಣ ಭಾರತದಲ್ಲಿ ಒಂದು ರೀತಿನೀತಿ, ಒಂದು ನಿಯಮ, ಉಪನಿಯಮ ಮತ್ತು ವ್ಯವಹಾರದ ಸೃಷ್ಟಿ ಆಯಿತು. ಈ ನೀತಿಕಾರರೇ ನಮ್ಮ ಗ್ರಾಮ ಪಂಚಾಯ್ತಿಗಳಿಗೆ ಜನ್ಮ ಕೊಟ್ಟರು. ಇದರ ಸ್ವರೂಪ ಸಂಪೂರ್ಣ ಭಾರತದಲ್ಲಿ ಒಂದೇ ಆಗಿತ್ತು. ಹಾಗೂ ಇವುಗಳು ಮೇಲಿನ ಆಡಳಿತದಲ್ಲಿ ಬದಲಾದರೂ ಸಹ ಭಾರತೀಯ ಆತ್ಮದ ಸ್ವಾತಂತ್ರ್ಯ ಮತ್ತು ಏಕಾತ್ಮವನ್ನು ಕಾಪಾಡಿತು. ಈ ರೀತಿ ಪ್ರತ್ಯೇಕ ಕ್ಷೇತ್ರದಲ್ಲಿ ರಾಷ್ಟ್ರದ ಆತ್ಮದ ಸರ್ವಾಂಗೀಣ ವಿಕಾಸವಾಯಿತು ಮತ್ತು ಅತ್ಯಂತ ಬಲವತ್ತರವಾಯಿತು. ಭರತ ಖಂಡದಲ್ಲಿ ಒಂದು ತುದಿಯಿಂದ ಹಿಡಿದು ಮತ್ತೊಂದು ತುದಿಯವರೆಗೆ ಹರಡಿರುವ ಸಂಪೂರ್ಣ ಹಿಂದೂ ಸಮಾಜ ಸಮಾನ ವಿಚಾರಧಾರೆ ಹಾಗೂ ಸಮಾನ ಕರ್ತೃತ್ವದಿಂದ ಸಮನ್ವಿತವಾಗಿ ಜೀವನದ ಏಕರಸತೆಯೊಂದಿಗೆ ಪರಿಪೂರ್ಣವಾಗಿ ಒಂದು ಸಂಸ್ಕೃತಿಯ ಆಧಾರದ ಮೇಲೆ ಅಖಂಡ ರಾಷ್ಟ್ರೀಯತೆಯ ಭಾವನೆಯಲ್ಲಿ ಮಿಳಿತವಾಯಿತು. ಈ ಯುಗದ ಪ್ರಯತ್ನಗಳ ಪರಿಣಾಮ ಸ್ವರೂಪವಾಗಿಯೇ ದೇಶದ ಯಾವ ರಾಷ್ಟ್ರೀಯತೆ ಪರಿಪಕ್ವ ರೂಪದಲ್ಲಿ ಪ್ರಾಪ್ತವಾಯಿತೋ ಅದು ನಂತರದ ರಾಜನೈತಿಕ ಪರಾಜಯದ ಕಾಲದಲ್ಲಿಯೂ ಸಹ ಅಕ್ಷುಣ್ಣವಾಗಿಯೇ ಇತ್ತು. ಕ್ರಿ.ಶ. ಎಂಟನೇ ಶತಮಾನದ ಪ್ರಾರಂಭದಿಂದ ಅರಬ್ ದೇಶಗಳಲ್ಲಿ ಎದ್ದ ಬಿರುಗಾಳಿಯು ಗ್ರೀಸ್, ಈಜಿಪ್ಟ್, ಸ್ಪೇನ್ ಮತ್ತು ಪರ್ಷಿಯಾ ಮುಂತಾದ ದೊಡ್ಡ ದೊಡ್ಡ ರಾಷ್ಟ್ರಗಳನ್ನು ಶಾಶ್ವತವಾಗಿ ಮಾಯವಾಗಿಸಿತು. ಆದರೆ ಭಾರತ ದೇಶಕ್ಕೆ ಬಂದು ಅದು ಸಮುದ್ರ ತಟದ ಒಂದು ಮೂಲೆಗೆ ಢಿಕ್ಕಿ ಹೊಡೆದು ಹಿಂದಿರುಗಿತು. ಇದರ ನಂತರ ಆಕ್ರಮಣಕಾರಿಗಳನ್ನು ಇಡೀ ಸಮಾಜವು ಒಂದೇ ಅಭಿಪ್ರಾಯದಿಂದ ತಮ್ಮ ಶತ್ರುವೆಂದು ತಿಳಿದರು ಮತ್ತು ಅವರಿಂದ ದೇಶವನ್ನು ಮುಕ್ತಗೊಳಿಸುವ ಪ್ರಯತ್ನ ಅಲ್ಲಲ್ಲಿ ಆಗುತ್ತಲೇ ಇತ್ತು. ಇಷ್ಟೇ ಅಲ್ಲ ಇಂದಿನ ______________ * ಕಾಶೀಪ್ರಸಾದ್ ಜಯಸ್ವಾಲ್ - ಅಂಧಯುಗ್. ಪೃ. 140 356 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಯುಗದಲ್ಲಿಯೂ ಅದೇ ಸಂಸ್ಕೃತಿ ನಮ್ಮ ಹೃದಯಲ್ಲಿ ಎಚ್ಚರವಾಗಿದೆ. `ಹಿಂದೂ' ಶಬ್ದದ ಉಚ್ಛಾರಣೆ ಮಾಡುವುದರೊಂದಿಗೆ ಒಬ್ಬ ಹಿಂದೂವಿನ ಮತ್ತೊಬ್ಬ ಹಿಂದೂವಿನ ರಕ್ತದ ಒಂದು ಬಿಂದುವಿನೊಂದಿಗೆ ತಾದ್ಯಾತ್ಮವೇ ಆದಂತೆ ಆಗುತ್ತದೆ. ಅದೇ ಅಖಂಡ ರಾಷ್ಟ್ರೀಯತೆಯನ್ನು ಇಂದು ನಾವು ಪುನಃ ಆಹ್ವಾನಿಸಬೇಕು. ಸಿಂಧೂವಿನಿಂದ ಬ್ರಹ್ಮಪುತ್ರದವರೆಗೆ ಹಾಗೂ ಸೇತುಬಂಧದಿಂದ ಹಿಮಾಚಲದ ಎಲ್ಲ ಉಪಾಂಗಗಳವರೆಗೆ ವಿಸ್ತಾರವಾದ ಮಾತೃಭೂಮಿಗೆ ಗೌರವ ಹಾಗೂ ಸ್ವಾಭಿಮಾನವನ್ನು ಪಡೆದುಕೊಳ್ಳುವಂತೆ ಮಾಡುವುದಕ್ಕಾಗಿ ನಮ್ಮ ತ್ಯಾಗ ಪೂರ್ಣ ಹಾಗೂ ಕರ್ಮರಪೂರ್ವಜರ ಪ್ರಯತ್ನಗಳ ಪರಂಪರೆಯನ್ನು ನಮ್ಮದಾಗಿಸಿಕೊಳ್ಳಬೇಕು. ಸ್ವಯಂ ಸೇವಕ ಉಪಾಧ್ಯಾಯಜೀ ನೈರೋಬಿ(ಆಫ್ರಿಕಾ)ಗೆ ಹೋಗಿದ್ದಾಗ ಪ್ರವಾಸೀ ಭಾರತೀಯರ ಮಧ್ಯೆ `ಭಾರತೀಯ ಸ್ವಯಂ ಸೇವಕ ಸಂಘ' ಹೆಸರಿನ ಸಾಂಸ್ಕೃತಿಕ ಸಂಘಟನೆಯ ಕೆಲಸ ನಡೆಯುತ್ತದೆ. ಉಪಾಧ್ಯಾಯಜೀಯವರು ಅದರ ಸ್ವಯಂ ಸೇವಕರ ಎದುರು `ಸ್ವಯಂಸೇವಕರೆಂದು ಯಾರಿಗೆ ಹೇಳುತ್ತಾರೆ" ಈ ಸಂದರ್ಭದಲ್ಲಿ ಯಾವ ವಿಚಾರಗಳನ್ನು ವ್ಯಕ್ತಪಡಿಸಿದ್ದರೋ ಅವು ಇಂದಿಗೂ ಅಪ್ರಕಾಶಿತವಾಗಿಯೇ ಇವೆ. ಪಾಠಕರಿಗೆ ತಿಳಿಸುವ ಉದ್ದೇಶದಿಂದ ಇಲ್ಲಿ ಪ್ರಸ್ತುತಪಡಿಸಲಾಗಿದೆ. ಮೂಲ ಸಂಪಾಕದರು ನಾವೆಲ್ಲರೂ ನಮ್ಮನ್ನು ಸ್ವಯಂ ಸೇವಕರು ಎಂದು ಹೇಳಿಕೊಳ್ಳುತ್ತೇವೆ. ಈ ಶಬ್ದದ ಅರ್ಥವನ್ನು ನಾವು ಸರಿಯಾಗಿ ತಿಳಿದುಕೊಂಡಿದ್ದೇವೆಂದು ನಾನು ತಿಳಿಯುತ್ತೇನೆ. ಸ್ವಯಂ ಸೇವಕರೆಂದರೆ ಸಾಮಾನ್ಯವಾಗಿ `ಕಾಸಿಗಾಗಿ ಕೆಲಸ ಮಾಡದ ಕೂಲಿಯವ' ಎಂದು ತಿಳಿಯುತ್ತಾರೆ. ಹಣಕೊಡದೆಯೇ ಸ್ವಯಂ ಸೇವಕನಿಂದ ಕೆಲಸ ತೆಗೆದುಕೊಳ್ಳಬಹುದೆಂದು ತಿಳಿಯಲಾಗುತ್ತದೆ. ಕೆಲವು ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳ ಪೂರ್ತಿಗಾಗಿಯೂ ಕೆಲವು ಸ್ವಯಂ ಸೇವಕರನ್ನು ನೇಮಿಸುತ್ತದೆ ಮತ್ತು ಕಾರ್ಯಕ್ರಮ ಮುಗಿದ ಮೇಲೆ ಸ್ವಯಂ ಸೇವಕರ ಸ್ವಯಂಸೇವಕತ್ವವೂ ಮುಗಿದುಹೋಗುತ್ತದೆ. ಆದರೆ ನಾವು ನಮಗಾಗಿ `ಯಾವ' ಸ್ವಯಂ ಸೇವಕ ಶಬ್ದವನ್ನು ಉಪಯೋಗಿಸುತ್ತೇವೋ ಅದು ಸ್ವಲ್ಪ ಸಮಯಕ್ಕಾಗಿ ಅಲ್ಲ, ಹಣ ತೆಗೆದುಕೊಳ್ಳದೇ ಕೆಲಸ ಮಾಡುವುದಕ್ಕಲ್ಲ ಮತ್ತು ಅನುಮತಿ ತೆಗೆದುಕೊಳ್ಳದೇ ಎಲ್ಲಿಯಾದರೂ ನುಗ್ಗಿ ಬಿಡುವುದಕ್ಕೂ ಅಲ್ಲ. ಇವೆಲ್ಲವೂ ಸ್ವಯಂ ಸೇವಕನಿಗಾಗಿ ಮಾಡಿರುವ ಚಿಕ್ಕ ವ್ಯವಸ್ಥೆಯಾಗಿದೆ. ನಾವಾದರೋ ಭಾರಿ ವ್ಯವಸ್ಥೆ ಮಾಡುವುದಕ್ಕೋಸ್ಕರ ಸ್ವಯಂ ಸೇವಕರಾಗಿದ್ದೇವೆ. ಭಾರಿ ಭಾರಿ ವ್ಯವಸ್ಥೆ ಮಾಡುವುದು ಬಹಳ ದೊಡ್ಡ ಕೆಲಸ. ಮಧ್ಯಪ್ರದೇಶದ ಪತ್ರ 357 ಅದನ್ನು ಕಾರ್ಯಗತಗೊಳಿಸಲೆಂದೇ ನಾವು ಸ್ವಯಂ ಸೇವಕರಾಗಿದ್ದೇವೆ. ನಾವು ನಮ್ಮ ಸಮಾಜದ ಸಂಘಟನೆಯನ್ನು ಮಾಡಬೇಕು. ನಮ್ಮ ಸಮಾಜ ಯಾವ ವಸ್ತುವಿನಿಂದ ಜನ್ಮತಾಳಿದೆಯೋ ಅದೇ ಧ್ಯೇಯವನ್ನು. ಅದೇ ಸಿದ್ಧಾಂತವನ್ನು ನಾವು ಸಂಪೂರ್ಣ ಮಾನವ ಜಾತಿಯವರೆಗೆ ತಲುಪಿಸಬೇಕು. ನಾವು ನಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತೇವೆ. `ಹಿಂದು' ವಿನ ಅರ್ಥವೇನು? ಯಾರು ಮುಸಲ್ಮಾನನಲ್ಲವೋ ಅವನು ಹಿಂದು ಅಥವಾ ಯಾರು ಕ್ರಿಶ್ಚಿಯನ್ ಅಲ್ಲವೋ ಅವನು ಹಿಂದು ಎಂದು ಕೆಲವರು ಹೇಳುತ್ತಾರೆ. ಆದರೆ ಈ ವ್ಯವಸ್ಥೆ ಸರಿಯಲ್ಲ. `ಹಿಂದೂ' ಜೀವನದ ಒಂದು ಭಾವನೆಯೊಂದಿಗೆ ಬದುಕುತ್ತಾನೆ. ಸಂಪೂರ್ಣ ಸಮಾಜ ಯಾವಾಗ ಒಂದೇ ಭಾವನೆಯೊಂದಿಗೆ ನಡೆಯುತ್ತದೋ ಆಗ ಅದಕ್ಕೆ ಒಂದು ಹೆಸರು ಪ್ರಾಪ್ತವಾಗುತ್ತದೆ. ಅದಕ್ಕೋಸ್ಕರ ನಾವು ಸರ್ವಸ್ವವನ್ನು ಬಲಿದಾನವಾಗಿ ಕೊಡಲು ಸಿದ್ಧರಾಗಿರುತ್ತೇವೆ. ಜೀವನವನ್ನು ಅವನೇ ಕೊಡಬಲ್ಲ ನಮ್ಮ ಜೀವನ ಮಹಾನ್ ಧ್ಯೇಯ, ಮಹಾನ್ ಗುರಿ ಮುಟ್ಟುವುದ್ಕಕಾಗಿ ನಾವು ಪ್ರಯತ್ನಶೀಲರಾಗುವುದಾದರೆ ನಾವು ಶ್ರೇಷ್ಠರು. ಇದೇ ನಮ್ಮ ನಿಜವಾದ ``ಸ್ವಯಂ ಸೇವಕತ್ವ." ನಮ್ಮ ಎದುರಲ್ಲಿ ಆದರ್ಶಕ್ಕೋಸ್ಕರ ನಿಂತಿರುವವರು ಪರಮಪೂಜ್ಯ ಡಾ. ಕೇಶವ ವಲೀರಾಮ ಹೆಗ್ಗಡೆವಾರ. ಅವರು ಸಭಾಸಂಸ್ಥೆಗಳ ತಾತ್ಕಾಲಿಕ ಸ್ವಯಂ ಸೇವಕರನ್ನು ಒಂದು ಕಡೆ ಒತ್ತರಿಸಿ ನಮಗೆ ಸ್ಥಾಯೀ ಸ್ವಯಂ ಸೇವಕತ್ವವನ್ನು ಪ್ರದಾನ ಮಾಡಿದರು. ಅವರು ದೇಶಕ್ಕಾಗಿ ಜೀವತೆರುವ ಜನರು ಶ್ರೇಷ್ಠರು, ಆದರೆ ಸಮಾಜಕ್ಕಾಗಿ ಬದುಕುವವರು ಇನ್ನೂ ಶ್ರೇಷ್ಠರು ಎಂದು ಹೇಳಿದರು. ಯಾರು ಧರ್ಮ ಹಾಗೂ ಸಮಾಜಕ್ಕೋಸ್ಕರ ಬದುಕುತ್ತಾರೋ ನಿಜವಾಗಿ ಅವರೇ ಧರ್ಮ ಮತ್ತು ಸಮಾಜಕ್ಕಾಗಿ ಸಾಯುತ್ತಾರೆ. ಯಾರು ತಮ್ಮ ಸಂಪೂರ್ಣ ಜೀವನವನ್ನು ಧರ್ಮಮಯವಾಗಿ ಕಳೆದಿರುತ್ತಾರೋ ಅವರೇ ಕಡೆಯ ತನಕ ಸಮಾಜಕ್ಕಾಗಿ ಜೀವಕೊಡುತ್ತಾರೆ. ಅವರೊಳಗೆ ಒಂದು ಧ್ಯೇಯವಾದ, ಒಂದು ನಿಸ್ವಾರ್ಥ ಸೇವೆಯ ಭಾವ ಮತ್ತು ಕರ್ತವ್ಯಪರಾಯಣತೆ ಇರುತ್ತದೆ. ನಮ್ಮ ಹಿಂದೂತ್ವವೇ ನಮ್ಮ ಸ್ವಯಂಸೇವಕತ್ವ. ನಾವು ಶಾಖೆಯ ಒಳಗೆ ಮಾತ್ರ ಸ್ವಯಂ ಸೇವಕರಲ್ಲ, ಶಾಖೆಯ ಹೊರಗೂ ಸಹ. ಎಲ್ಲಿ ಹಿಂದೂಗಳು ಒಟ್ಟುಗೂಡುತ್ತಾರೋ ಅಲ್ಲಿ ಮಾತ್ರ ನಾವು ಹಿಂದೂಗಳು ಎಂದು ಹೇಳಲಿಕ್ಕೆ ಬಾರದು. ಹಿಂದೂಗಳಲ್ಲದವರ ಮಧ್ಯೆಯೂ ನಾವು ಹಿಂದೂಗಳು. ನಮ್ಮ ವ್ಯವಹಾರ ಹೇಗಿರಬೇಕೆಂದರೆ ಹಿಂದೂ ಹೀಗೆ ತೇಜಸ್ವಿಯಾಗಿರುತ್ತಾನೆ ಎಂದು ಅವರಿಗೆ ಅನ್ನಿಸಬೇಕು. ಹಿಂದೂ ಸಂಸ್ಕೃತಿ, ಹಿಂದೂ ಪರಂಪರೆ, ಹಿಂದೂ ಧರ್ಮ, ಹಿಂದೂ 358 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜೀವನಧಾರೆ ಮತ್ತು ಹಿಂದೂ ವ್ಯವಹಾರ ನಾವು ಇವೆಲ್ಲದರ ಪ್ರತಿನಿಧಿಗಳು ಎಂದು ತಿಳಿದು ನಡೆದುಕೊಳ್ಳುತ್ತಿದ್ದೇವೆ. ಈ ಸಂಬಂಧದಲ್ಲಿ ನಮ್ಮ ಈ ಸ್ವಯಂ ಸೇವಕತ್ವವು ಹೆಚ್ಚು ಹೆಚ್ಚು ತೇಜಸ್ವಿಯಾಗಲಿ ಮತ್ತು ಹೆಚ್ಚು ಜನರನ್ನು ಒಟ್ಟುಗೂಡಿಸಿ ಒಗ್ಗಟ್ಟಾಗಿ ನಿಲ್ಲಿಸಬಲ್ಲೆವು ಈ ಭಾವನೆ, ಈ ವಿಚಾರ, ಈ ಧ್ಯೇಯವನ್ನು ನಮ್ಮ ಮನಸ್ಸಿನಲ್ಲಿ ನಿರಂತರವಾಗಿ ಜಾಗೃತಗೊಳಿಸುತ್ತಾ ನಾವು ಈ ಕಾರ್ಯವನ್ನು ಮಾಡಬೇಕು. ಪಕ್ಷ ಪರಿವರ್ತನೆ ಉಪಾಧ್ಯಾಯರ ಅಭಿಪ್ರಾಯದಲ್ಲಿ ಪಕ್ಷ ಪರಿವರ್ತನೆ ಒಂದು ಕೆಟ್ಟಗುಣ. ಇದಕ್ಕೆ ಅಂಕುಶವನ್ನು ಹಾಕಬೇಕು. ಈ ಸಂದರ್ಭದಲ್ಲಿ ಇಲ್ಲಿ ಉಪಾಧ್ಯಾಯಜಿಯವರ ಒಂದು ಮಹತ್ವಪೂರ್ಣ ಲೇಖನ ಪ್ರಸ್ತುತವಿದೆ. ಈ ಲೇಖನವನ್ನು ಅವರು ಹತ್ಯಾಕಾಂಡಕ್ಕೆ ಸ್ವಲ್ಪ ಮೊದಲು ಇಂಗ್ಲಿಷಿನಲ್ಲಿ ಬರೆದಿದ್ದರು. ಒಂದು ಸಂಸ್ಥೆ ವ್ಯಾವಹಾರಿಕ ರಾಜನೀತಿಯ ಪಕ್ಷ ಬದಲಾಯಿಸುವ ಪಕ್ಷದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿತ್ತು. ಉಪಾಧ್ಯಾಯಜೀಯವರ ಲೇಖನಿಯಿಂದ ಉಗಮಿಸಿದ ಈ ಲೇಖನದ ಹಿಂದೀ ಅನುವಾದ. ಇದು ಮತ್ತು ಇಂದಿನವರೆಗೂ ಅಪ್ರಕಾಶಿತ ಸಹ -ಮೂಲ ಸಂಪಾದಕರು ಯಾವುದೋ ಶಾಸಕನಿಂದ ಪಕ್ಷ ಬದಲಾವಣೆ ಸಾಧಾರಣ ಮಾತಲ್ಲ. ಅದರ ಪ್ರಶಂಸೆಯನ್ನು ಮಾಡಲು ಆಗುವುದಿಲ್ಲ ಮತ್ತು ಅದನ್ನು ಪ್ರೋತ್ಸಾಹಿಸಲುಬಾರದು. ಆದರೆ ಪ್ರಜಾಪ್ರಭುತ್ವದಲ್ಲಿ ಅದರ ಮೇಲೆ ಪೂರ್ತಿಯಾಗಿ ನಿಷೇಧವನ್ನು ಹೇರಲಾಗುವುದಿಲ್ಲ ಮತ್ತು ಅದನ್ನು ಒಪ್ಪದೆ ಇರಲೂ ಆಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ವಿವಾಹ ವಿಚ್ಛೇದನೆ ಮತ್ತು ಒಟ್ಟು ಕುಟುಂಬದ ವಿಭಜನೆಯ ಸರಿಸಮಾನವಾಗಿ ಅದನ್ನು ಸಹಿಸಬೇಕಾಗುವುದು ಮತ್ತು ಅದನ್ನು ಕಡಿಮೆ ಹಾನಿಕಾರಕ ಮತ್ತು ಕಡಿಮೆ ಅವ್ಯವಸ್ಥೆ ನಿರ್ಮಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಬೇಕಾಗುವುದು. ಎಲ್ಲಿಯವರೆಗೆ ಸಂವಿಧಾನ ಸ್ವಯಂ ರಾಜನೈತಿಕ ಪಕ್ಷಗಳಿಗೆ ಮಾನ್ಯತೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನ ಮೂಲಕವೂ ಅದರ ನಿಯಂತ್ರಣ ಸಾಧ್ಯವಿಲ್ಲ. ಇದು ಒಂದು ಆರೋಗ್ಯಕರ ಪರಂಪರೆಯನ್ನು ಬೆಳೆಸುವ ಪ್ರಶ್ನೆ. ಇದರಿಂದ ಎಲ್ಲ ರಾಜನೈತಿಕ ಪಕ್ಷಗಳಿಗೆ ಲಾಭವೇ ಆಗುವುದು. ಭಾರತೀಯ ರಾಜಕೀಯದಲ್ಲಿ ಪಕ್ಷ ಬದಲಾವಣೆ ಯಾವ ಹೊಸಮಾತೂ ಅಲ್ಲ. ಸಾಮ್ಯವಾದೀ ಪಕ್ಷ ಮತ್ತು ಭಾರತೀಯ ಜನಸಂಘವನ್ನು ಹೊರತುಪಡಿಸಿ ರಾಜನೈತಿಕ ಪಕ್ಷಗಳ ಜನ್ಮ, ಜನರು ಕಾಂಗ್ರೆಸ್ ಪಕ್ಷವನ್ನು ಬಿಟ್ಟ ಕಾರಣದಿಂದ ಮಧ್ಯಪ್ರದೇಶದ ಪತ್ರ 359 ಆಯಿತು. 1947ರ ವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ರಾಜನೈತಿಕ ಪಕ್ಷವಾಗಿರಲಿಲ್ಲ, ಆದರೆ ಒಂದು ರಾಷ್ಟ್ರೀಯ ಆಂದೋಳನವಾಗಿತ್ತು. ಆದ್ದರಿಂದ ಎಲ್ಲಿಯವರೆಗೆ ಕಾಂಗ್ರೆಸ್ ಬಂದು ಸುವ್ಯವಸ್ಥಿತ ರಾಜನೈತಿಕ ಪಕ್ಷವಾಗುವುದಿಲ್ಲವೋ ಅಥವಾ ಪೂರ್ತಿಯಾಗಿ ಒಡೆದುಹೋಗುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಪಕ್ಷ ಪರಿವರ್ತನೆ ಆಗುತ್ತಿರುತ್ತದೆ. ನಾಲ್ಕನೆಯ ಸಾಮಾನ್ಯ ಚುನಾವಣೆಯ ಹೊತ್ತಿಗೆ ಚುನಾವಣೆಗೆ ಮೊದಲು ಒಂದೋ ಜನ ಕಾಂಗ್ರೆಸ್‍ನಿಂದ ಹೊರಗೆ ಹೋಗುತ್ತಿದ್ದರು ಮತ್ತು ಚುನಾವಣೆಗಳಾದ ಮೇಲೆ ಅದರಲ್ಲಿ ಸೇರಿಕೊಳ್ಳುತ್ತಿದ್ದರು. ಆದರೆ ಈಗ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತುಹೋಗಿದೆ. ಏಕೆಂದರೆ ಕಾಂಗ್ರೆಸ್ಸೇತರ ಪಕ್ಷಗಳು ಸಂಯುಕ್ತರಂಗ ಮಾಡಿದುದರಿಂದಲೇ ಜನರು ಚುನಾವಣೆ ಆದಮೇಲೂ ಕಾಂಗ್ರೆಸ್‍ನಿಂದ ಹೊರಬಂದು ಪಕ್ಷ ಬದಲಾವಣೆ ಮಾಡಿದ್ದಾರೆ. ಏಕೆಂದರೆ ಇದರ ಕಾರಣ ಉತ್ತರಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಯಿತು. ಆದ್ದರಿಂದಲೇ ಈ ಪಕ್ಷ ಬದಲಾವಣೆ ಮಹತ್ವಪೂರ್ಣವಾಗಿದೆ. ಆದರೆ ಇದಕ್ಕೆ ಹಿಂದಿನ ವರ್ಷಗಳಲ್ಲಿ ಕಾಂಗ್ರೆಸ್ಸೇತರ ಸದಸ್ಯರು ಪಕ್ಷ ಬದಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದೂ ಕಡಿಮೆ ಮಹತ್ವಪೂರ್ಣ ವಿಷಯವಾಗಿರಲಿಲ್ಲ. ಎಲ್ಲಿಯವರೆಗೆ ಸಂಸ್ಥೆಗಳ ಪ್ರಶ್ನೆ ಇದೆಯೋ ನಾಲ್ಕನೆಯ ಸಾಮಾನ್ಯ ಚುನಾವಣೆ ಆದ ಮೇಲೆ ಪಕ್ಷ ಬದಲಾವಣೆಯಲ್ಲಿ ಯಾವ ಅಸಾಧಾರಣ ವೃದ್ಧಿಯೂ ಆಗಲಿಲ್ಲ. ಆದ್ದರಿಂದ ಹೆದರುವ ಅಥವಾ ಸಂಸದೀಯ ಜನತಂತ್ರ ಅಸಫಲವಾಯಿತು ಎಂಬ ನಿರ್ಣಯಕ್ಕೆ ಬರುವ ಯಾವ ಅವಶ್ಯಕತೆಯೂ ಇರಲಿಲ್ಲ. ಇದರಿಂದ ಯಾವುದೇ ಸ್ತರದಲ್ಲಿ ಅಧ್ಯಕ್ಷಾತ್ಮಕ ಪದ್ಧತಿಯನ್ನು ನಮ್ಮದಾಗಿಸಿಕೊಳ್ಳುವ ಯಾವ ಔಚಿತ್ಯವೂ ಸಿದ್ಧವಾಗುವುದಿಲ್ಲ. ರಾಜ್ಯ ಮಟ್ಟದಲ್ಲಿ ಈ ರೀತಿಯ ಬದಲಾವಣೆಯ ಸಲಹೆ ರಾಜನೈತಿಕ ಕಾರಣಗಳಿಂದ ಪ್ರೇರಿತವಾಯಿತೆಂದು ತಿಳಿಯುತ್ತದೆ. ಈಗಿನ ಸ್ಥಿತಿ ಸಂಕ್ರಮಣ ಕಾಲೀನ ಸ್ಥಿತಿ. ಆದ್ದರಿಂದ ನಾವು ನಿಷ್ಕರ್ಷೆಯನ್ನು ತಲುಪುವುದಕ್ಕೆ ಆತುರ ಮಾಡಬಾರದು. ಸಂಸದೀಯ ಪದ್ಧತಿ ಯಾವುದೆಂದರೆ ಎಲ್ಲಿ ಮಂತ್ರಿಮಂಡಲವು ಸಂಸತ್ತಿನ ವಿಷಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದೋ ಹಾಗೂ ರಾಜ್ಯದ ಪ್ರಮುಖರು ತಮ್ಮ ಇಚ್ಛೆಯಿಂದ ಮಂತ್ರಿಮಂಡಲದಲ್ಲಿ ಬದಲಾವಣೆ ಮಾಡಲಾಗುವುದಿಲ್ಲ. ಈ ಪದ್ಧತಿಯ ಸರ್ವಶ್ರೇಷ್ಠ ಉದಾಹರಣೆ ಗ್ರೇಟ್‍ಬ್ರಿಟನ್ ಅಧ್ಯಕ್ಷೀಯ ಪದ್ಧತಿಯ ಉದಾಹರಣೆ ಅಮೆರಿಕಾ. ಅಲ್ಲಿ ಮಂತ್ರಿಮಂಡಲದ ಮೇಲೆ ಸಂಸತ್ತಿನ ಯಾವ ಅಧಿಕಾರವೂ ಇಲ್ಲ ಹಾಗೂ ಅಧ್ಯಕ್ಷರು ಅಲ್ಲಿ ಇಷ್ಟ ಬಂದದ್ದನ್ನು ಮಾಡಬಹುದು. 360 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪಕ್ಷವು ಒಂದುವೇಳೆ ವಿಚಾರಧಾರೆಯ ಅನುಸಾರವಾಗಿ ಕೆಲಸಮಾಡುತ್ತಿದ್ದರೆ ಅಥವಾ ಕಾರ್ಯಕ್ರಮ ಆಧಾರಿತವಾಗಿದ್ದರೆ ಪಕ್ಷ ಬದಲಾವಣೆ ಬಹಳ ಕಡಿಮೆ ಆಗುವುದಕ್ಕೆ ಸಾಧ್ಯ. ಚುನಾವಣಾ ಕ್ಷೇತ್ರ, ಪ್ರಾಂತ ಅಥವಾ ದೇಶದಲ್ಲಿ ಪಕ್ಷದ ಸಂಘಟನೆ ಮತ್ತು ಅದರ ಶಕ್ತಿಯೂ ಮಹತ್ವಪೂರ್ಣ ವಿಚಾರಗಳು. ಅನೇಕ ಸ್ಥಳಗಳಲ್ಲಿ ಪಕ್ಷದ ಕಾರ್ಯಕ್ರಮ ಅವರ ಹೆಸರಿನ ಜಾಗದಲ್ಲಿ ಮತದಾರರಿಗೆ ಅಭ್ಯರ್ಥಿಗಳ ವ್ಯಕ್ತಿತ್ವವು ಪ್ರಭಾವಿತಗೊಳಿಸುತ್ತದೆ. ಎಲ್ಲಿಯವರೆಗೆ ಈ ಪರಿಸ್ಥಿತಿ ಇರುತ್ತದೆಯೋ ಯಾವ ಕಾನೂನು ಅಥವಾ ಪರಂಪರೆಯೂ ಪಕ್ಷ ಬದಲಾವಣೆಯನ್ನು ತಡೆಯಲಾರದು. ಅಭ್ಯರ್ಥಿಗಳ ಮೂಲಕ ಪಕ್ಷವನ್ನು ತೂಗಾಡಿಸುವುದು ಸಾಧ್ಯವಾಗುವ ಸಂಭವವು ಇರಬಾರದು. ಒಂದು ವೇಳೆ ಪಕ್ಷದ ನೇತೃತ್ವ ವರ್ಗವು ತಮ್ಮ ಆಂತರಿಕ ಸ್ಥಿತಿಯನ್ನು ಸಂಭಾಳಿಸಿಕೊಳ್ಳುವುದರಲ್ಲಿ ಸಮರ್ಥರಾದಾಗಲೂ ಸಹ ಪಕ್ಷ ಬದಲಾವಣೆಗಳಿಂದ ಉಳಿಯುವುದು ಸಾಧ್ಯ. ಪಕ್ಷ ಬದಲಾವಣೆ ಪಕ್ಷದ ಆಂತರಿಕ ದುರ್ಬಲತೆಯ ಪರಿಣಾಮ ಎಂದು ತಿಳಿಯಬೇಕು. ಮತ್ತು ಯಾವುದೇ ಹೊರಗಿನ ಸಹಾಯ ಈ ರೋಗವನ್ನು ದೂರಮಾಡುವುದರಲ್ಲಿ ಸಮರ್ಥವಾಗಲಾರದು. ಕಾನೂನಿನ ಸಹಾಯವನ್ನು ತೆಗೆದುಕೊಳ್ಳುವುದೇ ಆದರೆ ಇದರಿಂದ ಸ್ವಯಂ ಪಕ್ಷದ ಒಳಗೆ ಹೆಚ್ಚು ಸಮಸ್ಯೆಗಳು ಎದ್ದುನಿಲ್ಲುತ್ತವೆ. ಈ ಕಾರಣದಿಂದ ಪಕ್ಷದ ನೇತೃತ್ವ ವರ್ಗದ ಕೈಯಲ್ಲಿ ಸರ್ಕಾರವನ್ನು ಒಪ್ಪಿಸುವ ಅವಶ್ಯಕತೆ ಹುಟ್ಟಿಕೊಳ್ಳಲೂಬಹುದು. ಇವುಗಳೆಲ್ಲದರಿಂದ ಜನತಂತ್ರ ಮತ್ತು ರಾಷ್ಟ್ರದ ರಾಜನೈತಿಕ ಸ್ವಾಸ್ಥ್ಯವು ದುರ್ಬಲಗೊಳ್ಳುತ್ತದೆ. ಒಂದು ಘಟನೆ ದುಃಖ ಸುಖ ಮತ್ತು ಶಕ್ತಿಯ ಸಂದರ್ಭದಲ್ಲಿ ನಾವು ಒಂಟಿಯಾಗಿ ಏನನ್ನೂ ಮಾಡಲಾರೆವು. ನಮ್ಮ ಮನಸ್ಸಿನ ಬಗ್ಗೆ ಹೇಳುವುದಾರೆ, ಒಂದುವೇಳೆ ಸುಖ ಬಯಸಿದರೆ ಅದೂ ಒಂಟಿಯಾಗಿ ಬರುವುದಿಲ್ಲ. ನೀವು ಒಂಟಿಯಾಗಿ ಕುಳಿತಿದ್ದರೆ ಹೆದರಿಕೆ ಆಗುತ್ತದೆ. ಏಕೆಂದರೆ ಮನುಷ್ಯ ಒಂಟಿಯಾದಾಗ ಹೆದರುತ್ತಾನೆ. ಇದಕ್ಕೆ ವಿರುದ್ಧವಾಗಿ ಒಂದು ಮತ್ತು ಒಂದು ಹನ್ನೆರಡಾಗುತ್ತದೆ. ಒಳ್ಳೆಯ ಜೊತೆಗಾರನೊಂದಿಗೆ ನಡೆದಾಗ, ಒಳ್ಳೆಯದಾಯಿತು ನಡಿ ಈಗ ಯಾವ ಭಯವೂ ಇಲ್ಲ, ಹೇಗೂ ನಾವು ಇಬ್ಬರು ಹೋಗುತ್ತಿದ್ದೇವೆ. ಗಾದೆಯ ಮಾತೂ ಇದೆ, ಇಬ್ಬರಿದ್ದರೆ ಮಣ್ಣಿನಿಂದ ಮಾಡಲಾಗಿದ್ದರೂ ಅದರೊಳಗೆ ಬಲ ಬರುತ್ತದೆ. ಈ ಬಲ ಎಲ್ಲಿಂದ ಬರುತ್ತದೆ? ಮನುಷ್ಯ ಒಂಟಿಯಾಗಿದ್ದಾಗ ಮಧ್ಯಪ್ರದೇಶದ ಪತ್ರ 361 ಅವನ ಮನಸ್ಸು ಸ್ವಲ್ಪ ದುರ್ಬಲವಾಗುತ್ತದೆ. ಈ ರೀತಿ ಮೂರು ಬಂದರೆ, ನಾಲ್ಕು ಬಂದರೆ, ಹತ್ತು ಬಂದರೆ, ಇಪ್ಪತ್ತು ಬಂದರೆ, ಎಲ್ಲಿಯತನಕ ಎಂದರೆ ಬಹಳ ಜನಗಳಾದರೂ, ದೊಡ್ಡ ದೊಡ್ಡ ಕಷ್ಟಗಳು ಎದುರಿಗೆ ಬಂದರೂ ಅವರಿಗೆ ಧೈರ್ಯ ಬರುತ್ತದೆ.ನನಗೆ ಒಂದು ಘಟನೆ ನೆನಪಿಗೆ ಬರುತ್ತದೆ. ಇದು ಯುದ್ಧ ಕಾಲದ ಮಾತು. ಆ ಕಾಲದಲ್ಲಿ ರೈಲಿನಲ್ಲಿ ಜನಜಂಗುಳಿ ಬಹಳ ಇರುತ್ತಿತ್ತು. ಆಗ ಟಿಕೆಟ್ ಕೊಡುವುದನ್ನು ನಿಲ್ಲಿಸಲಾಗುತ್ತಿತ್ತು. ಗಾಡಿಯ ಒಳಗೆ ಜಾಗವಿಲ್ಲವೆಂದು ಟಿಕೆಟ್ ಕೊಡಕೂಡದೆಂದು ತಂತಿ ಬರುತ್ತಿತ್ತು. ಆದ್ದರಿಂದ ಟಿಕೆಟ್ ಬಾಬು ಟಿಕೆಟ್ ಕೊಡುತ್ತಿರಲಿಲ್ಲ. ಆದರೆ ಯಾರೂ ಹೋಗಬೇಕಾಗಿತ್ತೋ ಬಡಪಾಯಿಗಳು ಏನು ಮಾಡಬೇಕು? ಆಗ ಹೇಗೋ ಒಂದು ರೀತಿ ನುಗ್ಗುತ್ತಿದ್ದರು. ಇಂಥದೇ ಒಂದು ಸಂದರ್ಭದಲ್ಲಿ ನಾನು ರೈಲು ಬೋಗಿಯಲ್ಲಿ ಕುಳಿತಿದ್ದೆ. ಒಬ್ಬ ಬಡಪಾಯಿ ಹಳ್ಳಿಯ ಮನುಷ್ಯ ಬಹಳ ಹಿಂಜರಿಯುತ್ತಾ ಬೋಗಿಯಲ್ಲಿ ಕುಳಿತು ಹೇಳತೊಡಗಿದ ``ಬಾಬೂಜಿ ಏನಾಗುವುದು, ಟಿಕೆಟ್ ಅಂತೂ ಸಿಗಲಿಲ್ಲ. ಬಹಳ ಚಿಂತೆಯಲ್ಲಿದ್ದ". ನಾನು ಹೇಳಿದೆ - ``ಚಿಂತೆ ಮಾಡಬೇಡ, ಟಿಕೆಟ್ ಸಿಗದಿದ್ದರೆ ಪರವಾಗಿಲ್ಲ, ನೀನು ಸ್ಟೇಷನ್ನಿನಲ್ಲಿ ಇಳಿಯುತ್ತೀಯ. ಆ ಬಾಬುವಿಗೆ ನಿನ್ನ ಟಿಕೆಟಿನ ದುಡ್ಡು ಎಷ್ಟಾಗುವುದೋ ಕೊಟ್ಟ ಬಿಡು. ನೀನು ಎಲ್ಲಿಂದ ಬರುತ್ತಿದ್ದೀಯ?". ಅವನು ಹೇಳಿದ ``ಆರಾಣೆ ಆಗುತ್ತೆ". ನಾನು ಹೇಳಿದೆ ``ಟಿಕೇಟ್ ಬಾಬುವಿಗೆ ಆರಾಣೆ ಕೊಟ್ಟುಬಿಡು". ಆ ಕಾಲದಲ್ಲಿ ಈ ಪದ್ಧತಿ ನಡೆಯುತ್ತಿತ್ತು. ಟಿಕೆಟ್ ಅಂತೂ ಸಿಗಲಿಲ್ಲ. ಆದರೆ ಬಾಬುವಿಗೆ ಆರಾಣೆ ಕೊಟ್ಟು ಬಿಟ್ಟರೆ ಕೆಲಸ ನಡೆದು ಹೋಗುತ್ತಿತ್ತು. ಅವನು ಹೇಳಿದ ``ಒಳ್ಳೆಯದು" ಇಷ್ಟರಲ್ಲಿ ಯಾರೋ ಮತ್ತೊಬ್ಬ ಅವನಿಗೆ ಹೇಳತೊಡಗಿದ ``ಅಯ್ಯ ಏಕೆ ಚಿಂತೆ ಮಾಡ್ತೀಯಾ? ನನ್ನ ಬಳಿಯೂ ಟಿಕೆಟ್ ಇಲ್ಲ. ಎರಡನೆಯವ ಹೀಗೆ ಹೇಳುತ್ತಿದ್ದಾಗ ಪಕ್ಕದಲ್ಲಿ ಮತ್ತೊಬ್ಬ ಕುಳಿತಿದ್ದ ಅವನು ಸಹ ಹೇಳಿದ `ಅಣ್ಣಾ ನನ್ನ ಹತ್ತಿರವೂ ಟಿಕೆಟ್ ಇಲ್ಲ. ಹೀಗೆಯೇ ಮಾಡುತ್ತಾ ಆ ಭೋಗಿಯ ಒಳಗೆ ಎಂಟು, ಒಂಭತ್ತು ಜನ ಬಂದರು. ಯಾರ ಬಳಿಯೂ ಟಿಕೆಟ್ ಇರಲಿಲ್ಲ. ಆಗ ಆ ಹಳ್ಳಿಯ ಮನುಷ್ಯನೊಬ್ಬ ಬಹಳ ಧೈರ್ಯದಿಂದ ಹೇಳುತ್ತಾನೆ. `ಹಾಗಾದರೆ ಹೆದರುವ ಕಾರಣ ಇಲ್ಲ' `ಯಾಕೆ? ಈಗ ಏನಾಯಿತು?' ಈ ಒಂದೇ ಮಾತು ಅಷ್ಟೇ. ವಿಷಯವೆಂದರೆ ಎಂಟು, ಒಂಭತ್ತು ಜನ ಜೊತೆಯಲ್ಲಿದ್ದಾರೆ. ಇವರೆಲ್ಲರೂ ಟಿಕೇಟ್ ಇಲ್ಲದವರೇ, ಆಮೇಲೆ ನಾವು ಹೆದರುವ ಕಾರಣ ಏನು? ನಿರ್ಧಾರವೇನೆಂದರೆ ಯಾವಾಗ ಅನೇಕ ಜನರು ಒಟ್ಟಾಗುತ್ತಾರೋ ಆಗ ಭಯ ಹೊರಟುಹೋಗುತ್ತೆ. ಸಮಾಜದೊಂದಿಗೆ ನಮ್ಮ ಸುಖ ಸೇರಿಕೊಂಡಿದೆ. ಮನಸ್ಸಿನ ಧೈರ್ಯವೂ ಅದರೊಂದಿಗೆ ಸೇರಿಕೊಂಡಿದೆ. ನಾವು ಒಬ್ಬರೇ ಹೀಗೆ ಯೋಚಿಸಿದರೆ ನಮಗೆ ಸುಖಸಿಗಲಿ, ಉಳಿದ ನಾಲ್ಕು ಜನರು ದುಃಖಿಗಳಾದರೆ ಆಗಲಿ ಆಗ ನಾವು 362 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸುಖಿಗಳಾಗುವುದಿಲ್ಲ. ಒಮ್ಮೆ ನಾನು ಗಾಡಿಯಲ್ಲಿ ಕುಳಿತಿದ್ದೆ, ಊಟ ಮಾಡುತ್ತಿದ್ದೆ. ಊಟ ಮಾಡುತ್ತಿದ್ದಾಗ ಏನಾಯಿತೆಂದರೆ ಅಸ್ಥಿಪಂಜರದಂತಹ ಒಬ್ಬ ಮನುಷ್ಯ ಎದುರಿಗೆ ಬಂದ. ಭಿಕ್ಷೆ ಬೇಡುವವನು ಮತ್ತು ಅವನು ಸರಿಯಾಗಿ ಎದುರಿಗೆ ನಿಂತು ಬೇಡತೊಡಗಿದ. ನಾನು ಊಟ ಮಾಡುತ್ತಿದ್ದೆ. ನನ್ನ ಬಳಿ ಎಲ್ಲ ಪದಾರ್ಥಗಳು ಇದ್ದುವು. ಆದರೆ ಅವನು ಯಾವ ವೇಷದಲ್ಲಿ ಬಂದು ನಿಂತಿದ್ದನೋ ಹಸಿವಿನಿಂದ ನಿಂತಿದ್ದ. ನಾನು ಹೇಗೆ ತಿನ್ನುತ್ತಾ ಇರಲಿ? ಪರಿಣಾಮವೆಂದರೆ ಎಲ್ಲವೂ ಇದ್ದರೂ ಸಹ ಮನಸ್ಸಿಗೆ ಸುಖವಿರಲಿಲ್ಲ. ಎಲ್ಲಿಯವರೆಗೆ ರೊಟ್ಟಿಯನ್ನು ತೆಗೆದು ಅವನಿಗೆ ಕೊಡಲಿಲ್ಲವೋ ಅಲ್ಲಿಯವರೆಗೆ ಮನಸ್ಸಿಗೆ ಸಂತೋಷವಾಗಲಿಲ್ಲ. ಅವನೂ ಬಹುಶಃ ಇದಕ್ಕೆಂದೇ ಬಂದಿದ್ದ ನಡಿ, ಇವರು ಕೊಡುತ್ತಾರೆ. ಈ ರೀತಿ ಯಾರಾದರೂ ದುಃಖಿಯಾದರೆ ನಾವು ನಮ್ಮನ್ನು ಸುಖ ಎಂದು ಯೋಚಿಸಿಕೊಂಡರೆ ನಾವು ಸುಖಿಗಳಾಗುವುದಿಲ್ಲ. ಮನಸ್ಸಿನ ಸುಖ ಅವರೊಂದಿಗೆ ಬೆಸೆದುಕೊಂಡಿದೆ ಮತ್ತು ಇದೇ ರೀತಿ ಸುಖದುಃಖದ ಸಂಬಂಧ ಪೂರಾ ಸಮಾಜದೊಂದಿಗೆ ಬೆಸೆದುಕೊಂಡಿದೆ. * ಆಕರ : ಸಂಘಶಿಕ್ಷಣ ವರ್ಗದ ಒಂದು ಪ್ರಕಟವಾಗಿರುವ ಭಾಷಣದಿಂದ. ಅವರ ಭವಿಷ್ಯವಾಣಿ ನಿಜವಾಯಿತು ಪಾಕಿಸ್ತಾನವು ಕೇವಲ ಕಾಶ್ಮೀರವನ್ನು ಮಾತ್ರ ದೋಚಿಕೊಳ್ಳಲು ಇಷ್ಟಪಟ್ಟಿಲ್ಲ. ಆದರೆ ಇದನ್ನು ಬಿಟ್ಟು ಅದರ ಬಳಿ ಮತ್ತೂ ವಿಚಾರಗಳಿವೆ. ಅವುಗಳನ್ನು ಉಪಯುಕ್ತ ಅವಕಾಶ ಸಿಕ್ಕಿದಾಗ ಪೂರ್ತಿಮಾಡುವ ಪ್ರಯತ್ನ ಮಾಡುತ್ತೇವೆ. ಭೌಗೋಳಿಕ ದೃಷ್ಟಿಯಿಂದಲೂ ಪಾಕಿಸ್ತಾನದ ನಿರ್ಮಾಣಕ್ಕೆ ಯಾವ ದೃಢವಾದ ಆಧಾರವೂ ಇಲ್ಲ. ಗಡಿಗಳ ನಿರ್ಧಾರ ಮತ್ತು ಸುರಕ್ಷತೆಯ ದೃಷ್ಟಿಯ ಬಗ್ಗೆ ಭೌಗೋಳಿಕ ದೃಷ್ಟಿಯಿಂದ ಯಾವುದೇ ಸರಿಯಾದ ಆಧಾರವನ್ನು ತನ್ನದಾಗಿಸಿಕೊಂಡಿಲ್ಲ. ನಿಜವೆಂದರೆ ಪಾಕಿಸ್ತಾನ ನಿರ್ಮಾಣವು ಭಾರತದ ವಿರೋದದ ಆಧಾರದ ಮೇಲೆ ಆಗಿದೆ. ಭಾರತದ ಮಾನ್ಯತೆಗಳು ನಿಷ್ಠೆಗಳು ಪ್ರಣಾಲಿಗಳು ಇವುಗಳೆಲ್ಲದರ ಘೋರ ವಿರೋಧ ಮಾಡಿ ಇಸ್ಲಾಂ ರಾಜ್ಯವನ್ನು ಸ್ಥಾಪಿಸೋಣ. ಈ ಆಕಾಂಕ್ಷೆಯಿಂದಲೇ ಪಾಕಿಸ್ತಾನ ನಿರ್ಮಾಣವಾಯಿತು. ಹಿಂದೂಗಳೊಂದಿಗೆ ಹೊಂದಿಕೊಂಡು ಇರಲಾಗುವುದಿಲ್ಲ. ಈ ಆಕಾಂಕ್ಷೆಯಿಂದ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿರುವವರೆಗೆ ಪ್ರವೃತ್ತಿಯೆಂದರೆ ಸದಾಕಾಲವೂ ಭಾರತೀಯ ಪರಂಪರೆಯನ್ನು ವಿರೋಧಿಸುವುದು. ಅವರ ಕಣ್ಣುಗಳ ಮುಂದೆ ಇದೇ ಚಿತ್ರವಿರುತ್ತದೆ. ಯಾವುದೆಂದರೆ ಮಧ್ಯಪ್ರದೇಶದ ಪತ್ರ 363 ಯಾವುದೋ ಸಮಯದಲ್ಲಿ ಅವರು ಇಲ್ಲಿ ಆಡಳಿತ ನಡೆಸಿದ್ದರು. ಮತ್ತೆ ಅದು ಪುನಃ ಸ್ಥಾಪಿತವಾಗಬೇಕು. ಮನಸ್ಸಿನ ಈ ಆಕಾಂಕ್ಷೆಯ ಮೊದಲಚರಣ ಪಾಕಿಸ್ತಾನದ ನಿರ್ಮಾಣ. ``ನಗುತ್ತಾ ಪಾಕಿಸ್ತಾನವನ್ನು ತೆಗೆದುಕೊಂಡೆವು. ಹೊಡೆದಾಡಿ ಹಿಂದೂಸ್ತಾನವನ್ನು ತೆಗೆದುಕೊಳ್ಳೋಣ" ಈ ಘೋಷಣೆ ಅವರ ಎಲ್ಲ ಭಾವನೆಗಳ ದ್ಯೋತಕವಾಗಿದೆ. ಈ ಆಕಾಂಕ್ಷೆಯ ಪೂರ್ತಿಗಾಗಿಯೇ ಕಾಲಕಾಲಕ್ಕೆ ಹೆದರಿಸಿ ಬೆದರಿಸಿ, ಇಡೀ ಪ್ರಪಂಚದಲ್ಲಿ ಕೂಗೆಬ್ಬಿಸಿ, ಅಸ್ಸಾಂನಲ್ಲಿ ನುಗ್ಗುವುದು, ಕಾಶ್ಮೀರದ ಮೇಲೆ ಆಕ್ರಮಣ ಮಾಡುವುದು, ಮುಂತಾದ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ. ಏನಾದರೂ ಸ್ವಲ್ಪ ಕೊಡುವುದರಿಂದ ಅವರ ಹಸಿವು ಕಡಿಮೆ ಆಗುವುದಿಲ್ಲ. ಅವರ ಈ ಆಕಾಂಕ್ಷೆಯನ್ನು ಮಣ್ಣುಗೂಡಿಸುವ ಜನರು ಸುಸಂಘಟಿತರಾದಾಗಲೇ ಅವರ ಈ ಸ್ವಭಾವ ನಾಶವಾಗುವುದು. - ದೀನ್ ದಯಾಳ್ ಉಪಾಧ್ಯಾಯ 23- ಡಿಸೆಂಬರ್ 1963 ಆಹಾರ ಏಕೆ ? ಮತ್ತು ಎಷ್ಟು ? ಆಹಾರ ಶರೀರ ಧಾರಣೆಗಾಗಿ ಅವಶ್ಯಕ ಸಾಧನಗಳ ಪ್ರತೀಕವಾಗಿದೆ. ಪ್ರತಿಯೊಬ್ಬ ಪ್ರಾಣಿಗೂ ಅದರ ಅಪಹರಿಹಾರ್ಯತೆ ಚರ್ಚಾತೀತ. ಪ್ರಾಣದ ಆಸೆಯೇ ಆಹಾರದ ಆಸೆಯ ಮೂಲವಾಗಿದೆ. ಆದರೆ ಪ್ರತ್ಯೇಕ ಇಚ್ಛೆಯ ದುರ್ಗುಣವೆಂದರೆ ಅದು ಇತಿ ಮಿತಿ ಇಲ್ಲದೆ ಹೆಚ್ಚುತ್ತಲೇ ಹೋಗುವುದೂ ಅಲ್ಲದೆ ಸಾಧನದ ಜಾಗದಲ್ಲಿ ಸಾಧ್ಯ(ಗುರಿ)ವಾಗಿ ಬಿಡುತ್ತದೆ. ಆದ್ದರಿಂದ ಸಂಯಮ ಮತ್ತು ವಿವೇಕದ ಲಗಾಮು ಅವಶ್ಯಕ. ಆದರ ಜೊತೆ ಇಲ್ಲದಿದ್ದರೆ ಆಹಾರದಿಂದ ಯಾವ ವಿಕಾರ ಹುಟ್ಟುತ್ತದೋ, ಆ ಕಾರಣಗಳಿಂದಲೇ ಅನೇಕ ಸಾಧುಗಳು ಮತ್ತು ತತ್ವಜ್ಞಾನಿಗಳು ಆಹಾರದ ತಿರಸ್ಕಾರ ಮಾಡಿದ್ದಾರೆ. ಆದರೆ ಇದು `ಸಾಧನೆ' ಯನ್ನು ಅವಮಾನಿಸುವುದು. ಇದರಿಂದ `ಅಸಂಯಮ' ಮತ್ತು `ಅವಿವೇಕ' ಕಳಂಕವಿಲ್ಲದೆ ಉಳಿದುಕೊಳ್ಳುತ್ತದೆ. ಬೇರೆ ವಿಕಾರಗಳಿಗೆ ಜನ್ಮಕೊಡುವ ಮತ್ತೊಂದು ಬಲಿಯನ್ನು ಹುಡುಕುತ್ತವೆ. ಶರೀರಧಾರಣೆಗೆ ಆಹಾರದ ರೀತಿ ಮತ್ತು ಪ್ರಮಾಣದ ವಿಚಾರವು ಅವಶ್ಯಕ. ಯಾವುದರಿಂದ ಶರೀರದ ಧಾರಣೆ ಆಗದೆ ನಾಶವಾಗುತ್ತಾ ಹೋಗುತ್ತದೋ ಆ ಭೌತಿಕ ಸಾಧನಗಳು ಆಹಾರವಲ್ಲ, ವಿಷ ಎನ್ನಿಸಿಕೊಳ್ಳುತ್ತದೆ. ತಿನ್ನಲು ಯೋಗ್ಯವಾದವುಗಳು ಅಯೋಗ್ಯವಾದುವುಗಳು, ಅರ್ಥ ಅನರ್ಥಗಳ ವಿಚಾರವನ್ನು ಇದರ ಆಧಾರದ ಮೇಲೆ ಮಾಡಬೇಕಾಗುವುದು. ಶರೀರ ಸಾಧ್ಯವಲ್ಲ, `ಸಾಧನ' ``ಶರೀರ ಮಾದ್ಯಂ ಖಲು ಧರ್ಮಸಾಧನಮ್" 364 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆದ್ದರಿಂದ ಯಾವ ಆಹಾರದಿಂದ `ಶರೀರ'ದ ಸಾಧನೆಯ ಕೊರತೆ ಇದ್ದರೆ ಅದನ್ನು ಸಹ ಆಹಾರ ಎಂದು ಹೇಳಲು ಆಗುವುದಿಲ್ಲ. ಆಹಾರದ ಅಭಾವ ಮತ್ತು ಪ್ರಭಾವ ಎರಡೂ ಈ ಸಾಧನೆಯಲ್ಲಿ ಬಾಧಕಗಳು. ಆದ್ದರಿಂದಲೇ ರಹೀಮ ಈ ಬಗ್ಗೆ ತುಂಬಿದ ವಾಣಿಯಲ್ಲಿ ಹೇಳಿದ್ದಾನೆ.- ``ರಹಿಮನ ಪೇಟೇ ಸೋ ಕಹತ ಕ್ಯೋ ನಭಯೌ ತೂ ಪೀಠ್ ರೀತೆ ಮಾನ ಬಿಗಾರಇ, ಭರೇ ನಿಗಾರಹಿದೀರೀ" (ರಹೀಮನು ಹೊಟ್ಟೆಯನ್ನು ಕೇಳುತ್ತಾನೆ. ನೀನು ಬೆನ್ನು ಯಾಕೆ ಆಗಲಿಲ್ಲ? ಹಸಿದ ಹೊಟ್ಟೆ ಮರ್ಯಾದೆ ಕಳೆಯುತ್ತದೆ. ತುಂಬಿದ ಹೊಟ್ಟೆಯ ಮೇಲೆ ಎಲ್ಲರ ದೃಷ್ಟಿ ಬೀಳುತ್ತದೆ. (ತುಂಬಿದ ಹೊಟ್ಟೆ ಐಶ್ವರ್ಯವಂತ) ಆದ್ದರಿಂದ ಯಾವುದರಿಂದ `ಮರ್ಯಾದೆ' ಮತ್ತು `ದೃಷ್ಟಿ ಕಾಪಾಡಲ್ಪಡುತ್ತದೋ ಅದೇ `ಆಹಾರ' ಮತ್ತು ಅಷ್ಟೇ `ಆಹಾರವು' ಇಷ್ಟವಾಗತಕ್ಕದು. `ಜೀವೋ ಜೀವಸ್ಯ ಜೀವನಮ್ ಇದು ಪ್ರಕೃತಿಯ ತಥ್ಯ. ಇದನ್ನು ಆಧಾರವಾಗಿಸಿಕೊಂಡು ಯಾವ ವಿಚಾರಧಾರೆಗಳು ಇದ್ದುವೋ ಅವು ಸಂಘರ್ಷದ ಪ್ರೇರಣೆಯನ್ನು ಕೊಟ್ಟುವು. ಇದರಿಂದ ಸಬಲ ಮತ್ತು ಸಕ್ಷಮವು ನಿರ್ಬಲ ಮತ್ತು ಅಕ್ಷಮವನ್ನು ಇಲ್ಲವಾಗಿಸಿ ಪ್ರಭಾವಯುತವಾದುವು. ಅದರ ಪ್ರಭಾವ ಮತ್ತು ಗೆಲುವನ್ನು ನೋಡಿದರೆ ಅದರ ರೀತಿಯೇ ಸರಿ ಮತ್ತು ಉಚಿತ ಅನ್ನಿಸುತ್ತದೆ. ಆದರೆ ಈ ದಾರಿಯಲ್ಲಿ ನಡೆಯುವ ಪ್ರಾಣಿ, ಪ್ರಕೃತಿಯ ಈ ತಥ್ಯವನ್ನು ಅನೇಕ ಬಾರಿ ಆಕ್ರಮಣ ಮಾಡುತ್ತಾನೆ. ಜೀವದ ಜೀವನ ಯಾವ ಜೀವ ಮತ್ತು ಯಾವ ಅವಸ್ಥೆಯ್ಲಲಿದೆ ಇದನ್ನು ಮಾನವೇತರ ಪ್ರಾಣಿ ಬಹಳಷ್ಟು ಸಹಜ ಜ್ಞಾನದಿಂದ ತಿಳಿಯುತ್ತಾನೆ. ಆದರೆ ಮಾನವ ಬುದ್ಧಿಯ ಆಶ್ರಯದಿಂದ ಈ ಸಹಜ ಬುದ್ಧಿಯ ಅವಹೇಳನೆ ಮಾಡತೊಡಗುತ್ತಾನೆ. ಕಾಲಾಂತರದಲ್ಲಿ ಅವನು ಬುದ್ಧಿಯ ಜಾಗದಲ್ಲಿ ಸಂಸ್ಕಾರದಿಂದ ಕೆಲಸ ಸೂತ್ರವಾಗುವ ಹಾಗೆ ನೋಡಿಕೊಳ್ಳುತ್ತಾನೆ. ಒಂದು ವೇಳೆ ಬುದ್ಧಿಯ ವಿಪರ್ಯಾಸವಾದರೆ ಮತ್ತು ಸಂಸ್ಕಾರ ಕೆಟ್ಟರೆ ಮಾನವ ಸ್ವಭಾವದ ಈ ನಿಯಮದ ಪಾಲನೆ ಮಾಡದೆ ವಿನಾಕಾರಣ ಜೀವದ ವಿನಾಶಮಾಡುತ್ತಾನೆ. ಈ ವಿನಾಶ ಲೀಲೆಯಿಂದ ಪ್ರಕೃತಿಯ ಸಂತುಲನೆ ಕೆಟ್ಟು ವ್ಯಷ್ಟಿ ಸಮಷ್ಟಿಯಲ್ಲಿ ಅನೇಕ ವಿನಾಶಗಳಾಗುತ್ತವೆ. ಆದ್ದರಿಂದ ಪ್ರಕೃತಿಯ ಈ ನಿಯಮ ಸಂಸ್ಕೃತಿಯ ಜನಕವಾಗಿರದೆ ವಿಕೃತಿಯ ಪ್ರೇರಕವೆಂದು ಸಿದ್ಧವಾಯಿತು. `ಜೀವೋ ಜೀವಸ್ಯ ಜೀವನಮ್'ನ ವಿಚಾರವು ಪರಸ್ಪರ ಶತ್ರುತ್ವ ಭಯ ಈಷೆ್ರ್ಯಗಳಿಗೆ ಜನ್ಮಕೊಟ್ಟಿತು. ಇದೇ ಭಾವನೆ ರಕ್ಷಣೆಗಾಗಿ ಸಬಲರ ಆಶ್ರಯಕ್ಕೆ ಹೋಗುವ ಅಥವಾ ಸಂಘ ಬದ್ಧವಾಗಿ ಸಬಲರಾಗುವ ಪ್ರೇರಣೆಗೆ ಜನ್ಮಕೊಟ್ಟಿತು. ರಾಷ್ಟ್ರ, ಜಾತಿ ಮತ್ತು ಸಮಾಜದ ಈ ಕಲ್ಪನೆಗಳು ಸಮಾನ ಸ್ವಾರ್ಥ ಮತ್ತು ತಮ್ಮ ಮಧ್ಯಪ್ರದೇಶದ ಪತ್ರ 365 ಅಶಕ್ತತೆಯ ಭಾವನೆಯ ಮೇಲೆ ಆಧಾರಿತವಾಗುವುದರಿಂದ ಇವು ಮಾನವನ ಉನ್ನತಿಗಾಗಿ ಮತ್ತು ಅದರ ಅಭಿವ್ಯಕ್ತಿಯನ್ನು ಜಾಗೃತಗೊಳಿಸುವುದರಲ್ಲಿ ಅಸಮರ್ಥವಾಗಿವೆ. ಪರಸ್ಪರ ಸಂಘರ್ಷದಿಂದ ಬೇಸತ್ತು ಮಾನವನು ಬದುಕು ಮತ್ತು ಬದುಕಲುಬಿಡು ಈ ವಿಚಾರವನ್ನು ತನ್ನದಾಗಿಸಿಕೊಂಡ. ಇದು ಯುದ್ಧವಿರಾಮದ ಭೂಮಿಕೆ. ಆದರೆ ಇದರಲ್ಲಿ ಯುದ್ಧ ವಿರತಿಯ ಭಾವನೆ ಇಲ್ಲ, ಮುಂದೆ ಬರುವ ಭಯದ ನಿರ್ಮೂಲನೆ ಇಲ್ಲ. ಉದಾಸೀನತೆ ಅಥವಾ ಖಿನ್ನತೆಯ ಮನಃಸ್ಥಿತಿಯದೇ ದ್ಯೋತಕ. ನಾವು ಏಕೆ ಬದುಕಬೇಕು ಮತ್ತು ಬೇರೆಯವರವನ್ನು ಬದುಕಲು ಬಿಡಬೇಕು ಇದಕ್ಕೆ ಉತ್ತರ ಎಲ್ಲಿವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಈ ವಿಚಾರ ಅಪೂರ್ಣವಾಗಿದೆ. ಬೇರೆಯವರಿಗಾಗಿ ಬದುಕು ಇದು ಮುಂದಿನ ಮೆಟ್ಟಿಲು. ಇದರಲ್ಲಿ ಪರೋಪಕಾರದ ಪ್ರೇರಣೆ ಇದೆ. ತ್ಯಾಗ ಮತ್ತು ತಪಸ್ಸಿಗೆ ಇದು ಆಧಾರ. ಆದರೆ ಎಲ್ಲಿಯವರೆಗೆ ಬೇರೆಯವರ ಜೀವನ ಮತ್ತು ಅದರ ಶ್ರೇಯಸ್ಸಿನ ಸರಿಯಾದ ತಿಳುವಳಿಕೆ ಸಿಗುವುದಿಲ್ಲವೋ ಅಲ್ಲಿಯವರೆಗೆ ನಾವು ಬೇರೆಯವರಿಗಾಗಿ ಸರಿಯಾದ ರೂಪದಲ್ಲಿ ಬದುಕುವುದಕ್ಕೆ ಆಗುವುದಿಲ್ಲ. ಸಾಧು ಮತ್ತು ಸಾಧು ಅಲ್ಲದವರ ಪ್ರಾಣ ರಕ್ಷಣೆ ಒಟ್ಟಿಗೆ ಹೇಗೆ ಸಾಧ್ಯ? ಎಂದು ನಮಗೆ ರತ್ನಾಕರ ಡಕಾಯಿತನನ್ನು ವಾಲ್ಮೀಕಿ ಮಾಡುವ ಅಥವಾ ಅಂಗುಲಿ ಮಾಲನಿಗೆ ಆತ್ಮಜ್ಞಾನ ನೀಡುವ ಸಾಮರ್ಥ್ಯ ಬರುವುದೋ ಆಗ ಇದನ್ನು ಮಾಡಬಹುದು. ಯಾರಿಗೆ ಸೃಷ್ಟಿಯ ಸತ್ಯದ ಜ್ಞಾನವಿದೆಯೋ ಅವನಿಗೆ ಮಾತ್ರ ಇದು ಸಾಧ್ಯ. ಇವನ ಮಾರ್ಗವೇ ಧರ್ಮಮಾರ್ಗ. ಆದ್ದರಿಂದ `ಧರ್ಮಕ್ಕಾಗಿ ಬದುಕು' ಇದೇ ಅಂತಿಮ ಸತ್ಯ. ಭೌತಿಕತೆ ಮತ್ತು ಆಧ್ಯಾತ್ಮಿಕತೆಯ ಸಮನ್ವಯ ಧರ್ಮದಿಂದಲೇ ಆಗುತ್ತದೆ. ಧರ್ಮವೇ ರಾಮ ಮತ್ತು ಆಹಾರದ ಮಧ್ಯದ ಜೀವಂತಕೊಂಡಿ ಯಾವ ಆಹಾರ ರಾಮನಿಂದ ವಿಮುಖನನ್ನಾಗಿ ಮಾಡುತ್ತದೋ ಅದರಲ್ಲಿ ಯಾವ ರಾಮನೂ ಇಲ್ಲ ಮತ್ತು ರಾಮನ ಉಪಾಸನೆ ಆಹಾರದ ಹೊರತು ಆಗುವುದೇ ಇಲ್ಲ. ``ಭೂಬೇ ಭಜನನೆ ಹೊಇಗೋಪಾಲಾ ಲೇ ಲೆವು ಅಪನೀ ಕಂಠೀಮಾಲಾ" ಆಹಾರ ಅವಶ್ಯಕವಾಗಿರಬೇಕು, ಆದರೆ ಹೇಗೆ ಸರಿಯಾಗಿ ಸುಡದಿರುವ ರೊಟ್ಟಿ ಹೊಟ್ಟೆನೋವು ಬರಿಸುವುದೋ ಹಾಗೆಯೇ ಪಾಪದ ಆಹಾರ ಮನಸ್ಸನ್ನು ಕೆಡಿಸುತ್ತದೆ. ಸರಿಯಾಗಿ ಸುಟ್ಟಿರುವ ಪುಣ್ಯಮಯವಾಗಿರುವುದೇ ರೊಟ್ಟಿ. ಇಲ್ಲದಿದ್ದರೆ ಹಿಟ್ಟಿನ ತುಂಡನ್ನು ರೊಟ್ಟಿ ಅನ್ನುವದು ಸರಿಯಲ್ಲ. 366 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಭಾರತೀಯ ಸಂಸ್ಕೃತಿಯು ಆಹಾರವನ್ನು ಯಜ್ಞ ಶೇಷದ ರೂಪದಲ್ಲಿ ಸ್ವೀಕಾರ ಮಾಡಿದೆ. ಯಜ್ಞಶೇಷದ ಬೋಕ್ತಾ ಸ್ವತಃ ಅಮೃತವನ್ನು ಪಡೆಯುತ್ತಾನೆ. ಯಜ್ಞವಿಲ್ಲದೆ ಯಜ್ಞಶೇಷ ಸಿಗುವುದಿಲ್ಲ. ಸೃಷ್ಟಿ ಚಕ್ರವು ತಿರುಗುವುದಕ್ಕೆ ಸಹಾಯಕವಾಗುವುದೇ ಯಜ್ಞ. ತ್ಯಾಗದಿಂದ ಯಜ್ಞ ಮತ್ತು ಯಜ್ಞದಿಂದ ಭೋಗ ಇದೇ ಜೀವನಕ್ರಮ. ಬೀಜ, ವಪನ ಮತ್ತು ಭೋಜನ ಇದೇ ಜೀವನಕ್ರಮ ಈ ಮೂರನ್ನು ಧರ್ಮಾನುಸಾರ ಹಾಗೂ ಬ್ರಹ್ಮ ಕರ್ಮ ಎಂದು ತಿಳಿದು ಮಾಡುವುದೇ ಭಗವಂತನ ಪೂಜೆ. ಆದ್ದರಿಂದ ಆಹಾರದ ಅವಹೇಳನ ಭಗವಂತನ ಅವಹೇಳನೆ ಮತ್ತು ಅದರ ವಿಧಾನದ ಉಲ್ಲಂಘನೆ. ಆಹಾರದಲ್ಲಿ ಆಸಕ್ತಿ ಎಂದರೆ ಸಾಧನದಲ್ಲಿ ಆಸಕ್ತಿ. ಅದರ ವಿಧಿಪೂರ್ವಕ ವಿನಿಯೋಗವೇ ಶ್ರೇಯಸ್ಸು ಮತ್ತು ಪ್ರೇಯಸ್ಸಿಗೆ ಅಭಿಷ್ಟವಾಗಿದೆ. ಮಾಮನ ಹೆಸರಿಗೆ ಹುತಾತ್ಮ ಪಂ. ದೀನ್‍ದಯಾಳ್‍ಜೀ ಅವರ ಪತ್ರ ಪಾಂಚಜನ್ಯ 29 ಏಪ್ರಿಲ್ 1967 ನೀವು ನಿಮ್ಮ ಮಗನನ್ನು ಸಮಾಜಕ್ಕೆ ಕೊಡುವುದಕ್ಕೆ ಆಗುವುದಿಲ್ಲವೇ? ಲಖೀಮ್ ಪುರ, ಖೀರೀ ದಿನಾಂಕ 21 ಜುಲೈ 1942 ಶ್ರೀಮಾನ್ ಮಾಮಾಜಿ, ಆದರಪೂರ್ವಕ ಪ್ರಣಾಮಗಳು, ನಿಮ್ಮ ಪತ್ರ ಸಿಕ್ಕಿತು, ದೇವಿಯವರ ಖಾಯಿಲೆಯ ಸ್ಥಿತಿಯನ್ನು ತಿಳಿದು ದುಃಖವಾಯಿತು. ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಬರೆದಿದ್ದೀರಿ. ಇದಕ್ಕೆ ಏನು ಉತ್ತರ ಕೊಡಲಿ? ಇದು ನನಗೆ ತಿಳಿಯುವುದಿಲ್ಲ. ಮೊನ್ನೆ ನಿಮ್ಮ ಪತ್ರ ಸಿಕ್ಕಿತು. ಅಂದಿನಿಂದ ವಿಚಾರಗಳ ಹಾಗೂ ಕರ್ತವ್ಯಗಳ ತುಮುಲ ಯುದ್ಧ ನಡೆಯುತ್ತಿದೆ. ಒಂದು ಕಡೆ ಭಾವನೆ ಮತ್ತು ಮೋಹ ಎಳೆಯುತ್ತಿದೆ. ಮತ್ತೊಂದು ಕಡೆ ಪ್ರಾಚೀನ ಋಷಿಗಳ, ಹುತಾತ್ಮರ, ಪುಣ್ಯಪುರುಷರ ಅತೃಪ್ತ ಆತ್ಮಗಳು ಕರೆಯುತ್ತಿವೆ. ನೀವು ಬರೆದ ಹಾಗೆಯೇ ಮೊದಲು ನನ್ನದೂ ಇದೇ ವಿಚಾರಗಳಿತ್ತು. ಏನೆಂದರೆ ನಾನು ಯಾವುದಾದರೂ ಶಾಲೆಯಲ್ಲಿ ನೌಕರಿ ಮಾಡುವುದು ಹಾಗೂ ಅಲ್ಲಿಯ ಸಂಘದ ಕಾರ್ಯವನ್ನು ಮಾಡುತ್ತಿರುತ್ತೇನೆ. ಇದೇ ವಿಚಾರದಿಂದ ನಾನು ಲಖನೌಗೆ ಬಂದಿದ್ದೆ. ಹಾಗೂ ಲಖನೌದಲ್ಲಿ ಇಂದಿನ ಪರಿಸ್ಥಿತಿ ಹಾಗೂ ಮುಂದಿನ ಕೆಲಸಗಳ ಅಸೀಮ ಕ್ಷೇತ್ರವನ್ನು ನೋಡಿ ನನಗೆ ಆಜ್ಞೆ ಸಿಕ್ಕಿತು. ಏನೆಂದರೆ ಒಂದು ನಗರದಲ್ಲಿ ಕೆಲಸ ಮಾಡುವ ಬದಲು ಒಂದು ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುವುದು. ಈ ರೀತಿ ಮಲಗಿರುವ ಹಿಂದೂ ಸಮಾಜದಿಂದ ಸಿಗುವ ಕಾರ್ಯಕರ್ತರ ಕೊರತೆಯನ್ನು ಪೂರೈಸಬೇಕಾಗುವುದು. ಇಡೀ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಮಧ್ಯಪ್ರದೇಶದ ಪತ್ರ 367 ಒಂದು ಜಾಗದಲ್ಲಿ ಎರಡು ಮೂರು ದಿನಗಳಿಗಿಂತ ಹೆಚ್ಚಾಗಿ ಇರುವುದು ಸಾಧ್ಯವಿಲ್ಲ. ಈ ಸಂಘದ ಸ್ವಯಂ ಸೇವಕನು ಮೊದಲ ಸ್ಥಾನವನ್ನು ಸಮಾಜ ಮತ್ತು ದೇಶಕ್ಕಾಗಿಯೇ ಕೊಡುತ್ತಾನೆ. ನಂತರ ತನ್ನ ವ್ಯಕ್ತಿಗತ ಕಾರ್ಯಗಳಿಗಾಗಿ. ಆದ್ದರಿಂದ ನನಗೆ ನನ್ನ ಸಮಾಜ ಕಾರ್ಯಗಳಿಗೋಸ್ಕರ ಯಾವ ಆಜ್ಞೆ ಸಿಕ್ಕಿತೋ ಅದನ್ನು ಪಾಲಿಸಬೇಕಾಯಿತು. ನನ್ನ ಕಾರ್ಯದಿಂದ ನಿಮಗೆ ಕಷ್ಟವಾಗಿರಬಹುದು ಎಂದು ನಾನು ಒಪ್ಪುತ್ತೇನೆ. ಆದರೆ ತಮ್ಮಂತಹ ವಿಚಾರಶೀಲ ಹಾಗೂ ಗಂಭೀರಪುರುಷರೂ ಸಮಾಜಕಾರ್ಯದಲ್ಲಿ ಮಗ್ನವಾಗಿರುವುದು ನೋಡಿ ಕಷ್ಟವಾಗುವುದಾದರೆ ಸಮಾಜಕಾರ್ಯಕ್ಕೆ ಯಾರು ಮುಂದೆ ಹೋಗುತ್ತಾರೆ. ಬಹುಶಃ ಸಂಘದ ವಿಚಾರವಾಗಿ ನಿಮಗೆ ಹೆಚ್ಚು ಗೊತ್ತಿಲ್ಲದ ಕಾರಣ ನೀವು ಹೆದರಿಬಿಟ್ಟಿದ್ದೀರಿ. ಕಾಂಗೆಸ್‍ನೊಂದಿಗೆ ಇದರ ಯಾವ ಪ್ರಕಾರದ ಸಂಬಂಧವೂ ಇಲ್ಲ ಮತ್ತು ಯಾವುದೇ ರಾಜನೈತಿಕ ಸಂಸ್ಥೆಯೊಂದಿಗೂ ಇಲ್ಲ. ಈ ದಿನಗಳಲ್ಲಿ ಇದು ಯಾವ ರಾಜಕೀಯದಲ್ಲಿ ಭಾಗವಹಿಸುವುದೂ ಇಲ್ಲ. ಇದು ಸತ್ಯಾಗ್ರಹವನ್ನು ಮಾಡುವುದಿಲ್ಲ ಮತ್ತು ಜೈಲಿಗೆ ಹೋಗುವುದರಲ್ಲಿ ನಂಬಿಕೆಯನ್ನು ಇಡುವುದಿಲ್ಲ. ಇದು ಹಿಂಸಾವಾದಿಯೂ ಅಲ್ಲ; ಅಹಿಂಸಾವಾದಿಯೂ ಅಲ್ಲ. ಇದರ ಏಕಮಾತ್ರ ಕಾರ್ಯ ಹಿಂದೂಗಳನ್ನು ಸಂಘಟಿಸುವುದು. ಇದೇ ಕೆಲಸವನ್ನು ಇದು ಹದಿನೇಳು ವರ್ಷಗಳಿಂದ ಒಂದೇ ಸಮನೆ ಮಾಡುತ್ತಾ ಬಂದಿದೆ. ಇಡೀ ಭಾರತ ದೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಶಾಖೆಗಳು ಹಾಗೂ ಎರಡು ಲಕ್ಷಕ್ಕೂ ಅಧಿಕ ಹೆಚ್ಚಿನ ಸ್ವಯಂಸೇವಕರು ಇದ್ದಾರೆ, ನಾನು ಒಬ್ಬನೇ ಅಲ್ಲ. ಆದರೆ ಇದೇ ರೀತಿ ಮುನ್ನೂರಕ್ಕೂ ಹೆಚ್ಚಿನ ಕಾರ್ಯಕರ್ತರು ಸಂಘದ ಕಾರ್ಯ ಒಂದನ್ನೇ ಮಾಡುತ್ತಾರೆ. ಎಲ್ಲರೂ ವಿದ್ಯಾವಂತರು ಒಳ್ಳೆಯ ಮನೆಯವರು ಬಹಳಷ್ಟು ಜನ ಬಿ.ಎ.ಎಮ್.ಎ. ಮತ್ತು ಎಲ್.ಎಲ್.ಬಿ. ಪಾಸಾಗಿರುವವರು. ಹೈಸ್ಕೂಲಿನಿಂದ ಬರದೇ ಇರುವಂತಹವರು ಬಹುಶಃ ಇಲ್ಲ ಮತ್ತು ಅವರ ಸಂಖ್ಯೆಯೂ ಬೆರಳಿನಲ್ಲಿ ಎಣಿಸುವಷ್ಟು ಇದೆ. ಇಷ್ಟೊಂದು ಜನರು ತಮ್ಮ ಜೀವನವನ್ನು ಕೇವಲ ಸಮಾಜ ಕಾರ್ಯಗಳಿಗಾಗಿ ಏಕೆ ಕೊಟ್ಟಿದ್ದಾರೆ? ಇದರ ಏಕಮಾತ್ರ ಕಾರಣವೆಂದರೆ ಸಮಾಜದ ಉನ್ನತಿಯಾಗದೇ ವ್ಯಕ್ತಿಯ ಉನ್ನತಿ ಆಗಲು ಸಾಧ್ಯವಿಲ್ಲ. ವ್ಯಕ್ತಿ ಎಷ್ಟೇ ಮುಂದುವರಿದರೂ ಸಮಾಜದ ಉನ್ನತಿ ಆಗದೆ ಯಾವ ಅರ್ಥವೂ ಇಲ್ಲ. ನಮ್ಮ ದೇಶದ ದೊಡ್ಡ ದೊಡ್ಡ ಮುಖಂಡರು ಬೇರೆ ದೇಶಗಳಿಗೆ ಹೋದಾಗ ಅಪಮಾನವಾಗುವುದಕ್ಕೆ ಇದೇ ಕಾರಣ. ಇಲ್ಲಿಯ ಬಹಳ ದೊಡ್ಡ ಮನುಷ್ಯರಾದ ಸಿಂಹ ಗೌಡಜೀಯವರು ಇಂಗ್ಲೆಂಡ್‍ನ ಒಂದು ಹೋಟೆಲಿಗೆ ಹೋದಾಗ ಅವರು ಭಾರತೀಯರೆಂಬ ಕಾರಣಕ್ಕಾಗಿ ಇರುವುದಕ್ಕೆ ಜಾಗಕೊಡಲಿಲ್ಲ. ಹಿಂದೂಸ್ಥಾನದಲ್ಲಿಯೇ ನೀವು ನಿಮ್ಮ ದೊಡ್ಡ ದೊಡ್ಡ ಮನುಷ್ಯರನ್ನೂ ತೆಗೆದುಕೊಳ್ಳಿ ನಿಜವಾಗಿ ಅವರ ಉನ್ನತಿ ಆಗಿದೆಯೇ? ಮುಸಲ್ಮಾನ ಗೂಂಡಾಗಳು ದೊಡ್ಡ ದೊಡ್ಡ ಮನುಷ್ಯರ ಮರ್ಯಾದೆಯನ್ನು ಕ್ಷಣಮಾತ್ರದಲ್ಲಿ ಮಣ್ಣುಗೂಡಿಸಿಬಿಡುತ್ತಾರೆ. 368 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಏಕೆಂದರೆ ಅವರು ಸ್ವಯಂ ದೊಡ್ಡವರಾಗಿರುತ್ತಾರೆ. ಆದರೆ ಅವರು ಯಾವ ಸಮಾಜದ ಅಂಗವೋ ಅದು ದುರ್ಬಲ, ಅರ್ಥಪತಿತ, ಶಕ್ತಿಹೀನ ಮತ್ತು ಸ್ವಾರ್ಥಿ. ನಮ್ಮಲ್ಲಿ ಪ್ರತಿಯೊಬ್ಬರೂ ವ್ಯಕ್ತಿಗತ ಸಾರ್ಥದಲ್ಲಿ ಲೀನರಾಗಿರುತ್ತಾರೆ. ಹಾಗೂ ತಮ್ಮದೇ ತಾವು ಯೋಚಿಸಿರುತ್ತಾರೆ. ದೋಣಿಯಲ್ಲಿ ತೂತಾದರೆ ನಿಮ್ಮ ವಸ್ತ್ರವನ್ನು ನೀವು ಎಷ್ಟೇ ಎತ್ತರಕ್ಕೆ ಕೈ ಎತ್ತಿದರೂ ಅದು ನಿಮ್ಮ ಜೊತೆಯಲ್ಲಿಯೇ ಮುಳುಗುವುದು. ಈ ದಿನ ಹಿಂದೂ ಸಮಾಜದ ಸ್ಥಿತಿ ಹೀಗೆಯೇ ಆಗಿದೆ. ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆದರೆ ಪ್ರತಿಯೊಬ್ಬನೂ ತನ್ನ ಮನೆಯ ಚಿಂತೆಯನ್ನೇ ಮಾಡುತ್ತಾನೆ. ಆ ಬೆಂಕಿಯನ್ನು ಆರಿಸುವ ವಿಚಾರ ಯಾರಿಗೂ ಇಲ್ಲ. ನೀವು ನಿಮ್ಮ ಸ್ಥಿತಿಯನ್ನು ಸುರಕ್ಷಿತವೆಂದು ತಿಳಿಯುತ್ತೀರೇನು? ಸಮಯ ಬಿದ್ದರೆ ಸಮಾಜವು ನಿಮ್ಮೊಂದಿಗೆ ಇರುವುದರಲ್ಲಿ ನಿಮಗೆ ನಂಬಿಕೆ ಇದೆಯೇ? ಇಲ್ಲ. ಏಕೆ ಇಲ್ಲವೆಂದರೆ ನಮ್ಮ ಸಮಾಜ ಸಂಘಟಿತವಾಗಿಲ್ಲ. ನಾವು ದುರ್ಬಲರು ಅದಕ್ಕೆಂದೇ ನಮ್ಮ ಆರತಿ ಮತ್ತು ವಾದ್ಯಗಳ ಮೇಲೆ ಯುದ್ಧಗಳು ಆಗುತ್ತವೆ. ಆದ್ದರಿಂದಲೇ ನಮ್ಮ ತಾಯಿ ಮತ್ತು ಅಕ್ಕ-ತಂಗಿಯರನ್ನು ಮುಸಲ್ಮಾನರು ಭಯವಿಲ್ಲದೆ ಓಡಿಸಿಕೊಂಡು ಹೋಗುತ್ತಾರೆ. ಇಂಗ್ಲೀಷರ ಸಿಪಾಯಿಗಳು ಅವರ ಮೇಲೆ ನಿರ್ಭಯವಾಗಿ ಅತ್ಯಾಚಾರ ಮಾಡುತ್ತಾರೆ. ಬಹಳ ಗೌರವಾನ್ವಿತವೆಂದು ಮೆರೆದಾಡುವ ನಮ್ಮ ಸಮಾಜದಲ್ಲಿ ದೊಡ್ಡ ಮನುಷ್ಯರೆಂಬ ಹೆಮ್ಮೆಯಿಂದ ಬೀಗುವವರು ಕಣ್ಣೆತ್ತಿಯೂ ನೋಡುವುದಿಲ್ಲ. ನಾವು ಅದರ ಪ್ರತೀಕಾರ ಮಾಡಲಾರೆವು. ಹೆಚ್ಚೆಂದರೆ ಗದ್ದಲವೆಬ್ಬಿಸುವ ಈ ವಿಷಯವನ್ನು ಸಮಾಚಾರ ಪತ್ರಿಕೆಗಳಿಗೆ ಕೊಟ್ಟರು. ಅಥವಾ ಮಹಾತ್ಮಾಜೀ `ಹರಿಜನ'ದಲ್ಲಿ ಒಂದು ಲೇಖನ ಬರೆದರು. ಯಾಕೆ? ಹಿಂದೂಗಳಲ್ಲಿ ಆ ದುಷ್ಟರನ್ನು ಎದುರಿಸುವಂತಹ ಶಕ್ತಿಯುತ ವ್ಯಕ್ತಿಗಳ ಕೊರತೆಯೇ? ಇಲ್ಲ. ಕೊರತೆ ಇರುವುದು ಈ ವಿಚಾರದಲ್ಲಿ. ಏನೆಂದರೆ ಅವರು ಏನಾದರೂ ಮಾಡಿದರೆ ಸಮಾಜ ಅವರ ನೆರವಿಗೆ ಬರುತ್ತದೆ ಎಂಬ ಮಾತಿನಲ್ಲಿ ಯಾರಿಗೂ ನಂಬಿಕೆ ಇಲ್ಲ. ನಿಜವೇನೆಂದರೆ ಈ ಎಲ್ಲ ಪ್ರಕರಣಗಳನ್ನು ನೋಡಿಯೂ ಯಾರ ಹೃದಯದಲ್ಲಿಯೂ ನೋವು ಉಂಟಾಗುವುದಿಲ್ಲ. ಎಂದಾದರೂ ಯಾವ ವ್ಯಕ್ತಿಗಾದರೂ ಯಾವುದಾದರೂ ಅಂಗಕ್ಕೆ ಪಾಶ್ರ್ವವಾಯು ಹೊಡೆದಿದ್ದೇ ಆದರೆ ಅವನು ಚೈತನ್ಯಶೂನ್ಯನಾಗಿ ಬಿಡುತ್ತಾನೆ. ಇದೇ ರೀತಿ ನಮ್ಮ ಸಮಾಜಕ್ಕೆ ಪಾಶ್ರ್ವವಾಯು ಹೊಡೆದಿದೆ. ಅದಕ್ಕೆ ಯಾರು ಎಷ್ಟು ಕಷ್ಟ ಕೊಟ್ಟರೂ ಅದು ಸಂವೇದನೆ ಅನುಭವಿಸುವುದಿಲ್ಲ. ಯಾವಾಗ ಏಟು ತನ್ನ ತಲೆಯ ಮೇಲೆ ಬೀಳುತ್ತದೋ ಆಗಲೇ ನೋವು ಅನುಭವಕ್ಕೆ ಬರುವುದು. ಇಂದು ಸಿಂಧ್‍ನಲ್ಲಿ ಮುಸಲ್ಮಾನರು ಆಕ್ರಮಣ ಮಾಡಿದ್ದಾರೆ. ನಮಗೆ ಅದರ ಚಿಂತೆ ಇಲ್ಲ. ಆದರೆ ಅದೇ ರೀತಿ ನಮ್ಮ ಮನೆಯಲ್ಲಿ ನಡೆದರೆ ಆಗ ಕೋಲಾಹಲ ಉಂಟಾಗುತ್ತದೆ. ನಮ್ಮ ಹೆಣ್ಣುಮಕ್ಕಳನ್ನು ಸೊಸೆಯಂದಿರನ್ನು ಯಾರಾದರೂ ಹೊತ್ತುಕೊಂಡು ಹೋದಾಗ ಎಚ್ಚತ್ತುಕೊಳ್ಳುತ್ತೇವೆ. ಮಧ್ಯಪ್ರದೇಶದ ಪತ್ರ 369 ನಂತರ ವ್ಯಕ್ತಿಗತ ರೂಪದಲ್ಲಿ ಯಾರಾದರೂ ದೊಡ್ಡವನಾದರೂ ಸಹ ಅವನ ಮಹತ್ವವೇನು? ಅದು ಹಾನಿಕರವೇ ಆಗುತ್ತದೆ. ನಮ್ಮ ಇಡೀ ಶರೀರವೇ ಸ್ಥೂಲವಾಗುವುದೇನೋ ಸರಿ, ಆದರೆ ಕಾಲು ಮಾತ್ರವೇ ಊದಿಕೊಂಡು, ಹಂಡೆಯಾಗಿ ಉಳಿದ ಶರೀರ ಹಾಗೆಯೇ ಇದ್ದರೆ ಅದು ಆನೆ ಕಾಲು ರೋಗವಾಗುವುದು. ಇಷ್ಟೊಂದು ಕಾರ್ಯಕರ್ತರು ವ್ಯಕ್ತಿಗತ ಆಕಾಂಕ್ಷೆಗಳನ್ನು ಬಿಟ್ಟು ತಮ್ಮನ್ನು ತಾವೇ ಸಮಾಜದ ಉನ್ನತಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಇದೇ ಕಾರಣ. ಉಳಿದ ಕೆಟ್ಟಗುಣಗಳು, ಅವಿದ್ಯೆ ಮುಂತಾದುವುಗಳು ಪತಿತ ಅವಸ್ಥೆಯ ಲಕ್ಷಣ ಮಾತ್ರ. ಆದ್ದರಿಂದ ಸಂಘಟನೆ ಮಾಡುವುದೇ ಸಂಘದ ಧ್ಯೇಯ. ಇದನ್ನು ಬಿಟ್ಟು ಇವನು ಏನನ್ನು ಮಾಡಲೂ ಇಷ್ಟಪಡುವುದಿಲ್ಲ. ನೀವು ಎಂದಾದರೂ ಆಗ್ರಾಗೆ ಬಂದರೆ ಸಂಘದ ವ್ಯವಹಾರಿಕ ರೂಪವೇನು ಎಂಬುದನ್ನು ನೋಡಬಹುದು. ನನ್ನ ವಿಚಾರವೆಂದರೆ ಒಮ್ಮೆ ಸಂಘದ ರೂಪವನ್ನು ನೋಡಿ ಅದರ ಉಪಯೋಗತೆಯನ್ನು ತಿಳಿದುಕೊಂಡ ಮೇಲೆ ನಿಮ್ಮ ಒಬ್ಬ ಪುತ್ರನೂ ಇದೇ ಕಾರ್ಯವನ್ನು ತನ್ನ ಜೀವನಕಾರ್ಯವನ್ನಾಗಿ ಮಾಡಿಕೊಂಡಿರುವುದಕ್ಕೆ ನಿಮಗೆ ಸಂತೋಷವೇ ಆಗುವುದು. ದೇವರು ನಮ್ಮೆಲ್ಲರನ್ನು ಎಲ್ಲ ರೀತಿಯಲ್ಲಿಯೂ ಸಮರ್ಥರನ್ನಾಗಿ ಮಾಡಿದ್ದಾನೆ. ನಾವು ನಮ್ಮಲ್ಲಿ ಒಬ್ಬನನ್ನು ಕೂಡ ದೇಶಕ್ಕೆ ಕೊಡಲಾರೆವೆ? ಯಾವುದರಲ್ಲಿ ಸಾಯುವ ಪ್ರಶ್ನೆಯೇ ಇಲ್ಲವೋ, ಜೈಲಿನ ಯಾತನೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲವೋ, ಹಸಿವಿನಿಂದ ಸಾಯುವುದಿಲ್ಲವೋ ಮತ್ತು ಅನ್ನ ಬಟ್ಟೆಯ ಬರ ಇರುವುದಿಲ್ಲವೋ ಈ ಕಾರ್ಯಕ್ಕಾಗಿ ಪ್ರಶ್ನೆ ಎಂದರೆ ಕೇವಲ ಸ್ವಲ್ಪ ಹಣವನ್ನು ಸಂಪಾದಿಸದೇ ಇರುವುದು. ಆ ಹಣ ಸ್ವಂತಕ್ಕೆ ಸ್ವಲ್ಪ ಖರ್ಚಾದ ನಂತರ ಬಹುಶಃ ಸ್ವಲ್ಪ ಉಳಿಯಬಹುದು. ಇನ್ನೂ ವ್ಯಕ್ತಿಗತ ಹೆಸರು ಮತ್ತು ಕೀರ್ತಿಯ ಮಾತು ಅದು ನಿಮಗೆ ಗೊತ್ತಿರುವ ಮಾತೇ. ಗುಲಾಮರದು ಎಂಥ ಹೆಸರು, ಎಂತ ಕೀರ್ತಿ. ನಂತರ ಉಪಾಧ್ಯಾಯರುಗಳ ಮರ್ಯಾದೆಯಾದರೂ ಏನು? ನೀವು ನನಗೆ ಶಿಕ್ಷಣವನ್ನು ದಯಪಾಲಿಸಿ ಎಲ್ಲ ರೀತಿಯಲ್ಲಿ ಯೋಗ್ಯನನ್ನಾಗಿ ಮಾಡಿದಿರಿ. ಈಗ ನೀವು ನನ್ನನ್ನು ಸಮಾಜಕ್ಕಾಗಿ ಕೊಡುವುದಕ್ಕೆ ಆಗುವುದಿಲ್ಲವೇ? ಸಮಾಜಕ್ಕಾಗಿ ನಾವು ಅಷ್ಟೇ ಋಣಿಗಳಾಗಿದ್ದೇವೆ. ಇದು ಒಂದು ರೀತಿಯಲ್ಲಿ ತ್ಯಾಗವೂ ಅಲ್ಲ, ವಿನಿಯೋಗ. ಸಮಾಜರೂಪಿ ಭೂಮಿಗೆ ಗೊಬ್ಬರ ಹಾಕಬೇಕು. ಇಂದು ನಮಗೆ ಕೇವಲ ಬೆಳೆಯನ್ನು ಕತ್ತರಿಸುವುದು ಗೊತ್ತು. ಆದರೆ ಹೊಲಕ್ಕೆ ಗೊಬ್ಬರ ಹಾಕುವುದನ್ನು ಮರೆತು ಬಿಟ್ಟಿದ್ದೇವೆ. ಆದ್ದರಿಂದ ಹೊಲಗಳು ಬಹಳ ಬೇಗ ಬರಡಾಗುತ್ತವೆ. ಯಾವ ಸಮಾಜದ ರಕ್ಷಣೆಗಾಗಿ ರಾಮನು ವನವಾಸವನ್ನು ಸಹಿಸಿದನೋ, ಕೃಷ್ಣನು ಅನೇಕ ಕಷ್ಟಗಳನ್ನು ಅನುಭವಿಸಿದನೋ, ರಾಣಾಪ್ರತಾಪ್ ಕಾಡು ಮೇಡುಗಳಲ್ಲಿ ಅಲೆದಾಡಿದನೋ, ಶಿವಾಜಿ ಸರ್ವಸ್ವವನ್ನು ಅರ್ಪಿಸಿದನೋ 370 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಗುರುಗೋವಿಂದ ಸಿಂಹನ ಸಣ್ಣ ಸಣ್ಣ ಮಕ್ಕಳು ಜೀವಂತವಾಗಿ ಕೋಟೆಯ ಗೋಡೆಗಳಲ್ಲಿ ಹತರಾದರೋ ಅವರಿಗೋಸ್ಕರ ನಾವು ನಮ್ಮ ಜೀವನದ ಆಕಾಂಕ್ಷೆಗಳನ್ನು, ಸುಳ್ಳು ಆಕಾಂಕ್ಷೆಗಳ ತ್ಯಾಗವನ್ನು ಸಹ ಮಾಡಲಾರೆವೇನು? ಇಂದು ಸಮಾಜ ಕೈ ನೀಡಿ ಭಿಕ್ಷೆ ಬೇಡುತ್ತಿದೆ ಮತ್ತು ನಾವು ಸಮಾಜದತ್ತ ಹೀಗೆಯೇ ಉದಾಸೀನತೆಯಿಂದ ಇದ್ದರೆ ನಾವು ಯಾವ ವಸ್ತುಗಳನ್ನು ಪ್ರೀತಿಸುತ್ತೇವೋ ಅವುಗಳನ್ನು ಬಲವಂತವಾಗಿ ಬಿಡುವಂತಹ ಒಂದು ದಿನವೂ ಬರಬಹುದು. ನನಗೆ ಪೂರಾನಂಬಿಕೆ ಇದೆ. ಏನೆಂದರೆ ಸಂಘದ ಕಾರ್ಯಪ್ರಣಾಲಿಯೊಂದಿಗೆ ನೀವು ಮೊದಲಿನಿಂದಲೂ ಪರಿಚಿತರಾಗಿದ್ದರೆ ನಿಮ್ಮ ಹೃದಯದಲ್ಲಿ ಯಾವುದೇ ಪ್ರಕಾರದ ಭಯ ಹುಟ್ಟುವುದಿಲ್ಲ. ನೀವು ನಂಬಿಕೆ ಇಡಿ, ಏನೆಂದರೆ ಯಾರೂ ಬೆರಳು ಮಾಡಿ ತೋರಿಸುವಂತಹಾ ಯಾವ ಕೆಲಸವನ್ನು ಮಾಡುವುದಿಲ್ಲ ಎಂದು. ಇದಕ್ಕೆ ವಿರುದ್ಧವಾಗಿ ನಿಮ್ಮ ದೇಶ ಮತ್ತು ಸಮಾಜಕ್ಕಾಗಿ ನೀವು ಒಬ್ಬ ಮಗನನ್ನು ಕೊಟ್ಟುಬಿಟ್ಟಿರಿ ಎಂಬುದರ ಬಗ್ಗೆ ನಿಮಗೆ ಹೆಮ್ಮೆ ಎನಿಸುವುದು. ಯಾವ ಒತ್ತಡವೂ ಇಲ್ಲದೆ ಕೇವಲ ಕರ್ತವ್ಯದ ವಿಚಾರದಿಂದ ನೀವು ನನ್ನ ಲಾಲನೆ ಪಾಲನೆ ಮಾಡಿದಿರಿ. ಈಗ ಕೊನೆಯಲ್ಲಿ ಭಾವನೆ ಕರ್ತವ್ಯವನ್ನು ನಾಶಮಾಡುವುದೇ? ಇದುವರೆಗೆ ನಿಮ್ಮ ಕರ್ತವ್ಯ ನಿಮ್ಮ ಕುಟುಂಬದವರೆಗೆ ಸೀಮಿತವಾಗಿತ್ತು. ಈಗ ಅದೇ ಕರ್ತವ್ಯ ಇಡೀ ಹಿಂದೂ ಸಮಾಜದ ಬಗೆಗೆ ಇದೆ. ಇದು ಕೇವಲ ಸಮಯದ ಓಟದೊಂದಿಗೆ ನಿಮ್ಮ ಕರ್ತವ್ಯದ ವಿಕಾಸಮಾತ್ರವೇ ಹೌದು. ಭಾವನೆಯ ಕರ್ತವ್ಯ ಯಾವಾಗಲೂ ಉನ್ನತವಾಗಿರುತ್ತದೆ. ಜನರು ತಮ್ಮ ಏಕಮಾತ್ರ ಪುತ್ರನನ್ನು ಸಂತೋಷದಿಂದ ಒಪ್ಪಿಸಿದ್ದಾರೆ. ಹಾಗೂ ನಿಮ್ಮ ಬಳಿ ಮೂವರು ಪುತ್ರರಿದ್ದಾರೆ. ಅವರಲ್ಲಿ ಒಬ್ಬರನ್ನು ಸಹ ತಾವು ಸಮಾಜಕ್ಕಾಗಿ ಕೊಡುವುದಕ್ಕಾಗುವುದಿಲ್ಲವೇ? ನೀವು `ಇಲ್ಲ' ಎಂದು ಹೇಳುವುದಿಲ್ಲ ಎಂದು ನನಗೆ ಗೊತ್ತಿದೆ. ಇದೇನು ಉಪದೇಶ ಬರೆದಿದ್ದಾನೆಂದು ನಿಮಗೆ ಅನ್ನಿಸಬಹುದು. ಅದು ನನ್ನ ಆಸೆಯೂ ಅಲ್ಲ, ಉದ್ದೇಶವೂ ಅಲ್ಲ. ನೀವು ಸಂಘಕ್ಕೆ ಚೆನ್ನಾಗಿ ಪರಿಚಿತರಾಗುತ್ತೀರೆಂಬ ಉದ್ದೇಶದಿಂದ ಇವೆಲ್ಲವನ್ನು ಬರೆಯಬೇಕಾಯಿತು. ಯಾವುದೇ ಕಾರ್ಯದ ಒಳ್ಳೆಯದು ಕೆಟ್ಟದ್ದರ ನಿರ್ಣಯವನ್ನು ಅದರ ಪರಿಸ್ಥಿತಿಗಳು ಮತ್ತು ಉದ್ದೇಶಗಳನ್ನು ನೋಡಿಯೇ ತಿಳಿದುಕೊಳ್ಳಬೇಕಾಗುವುದು. ಪಂಡಿತ ಶ್ಯಾಮನಾರಾಯಣ ಮಿತ್ರರು ಇಲ್ಲಿಯ ಪ್ರಸಿದ್ಧ ಅಡ್ವೋಕೇಟ್‍ರು. ಅವರ ಮನೆಯಲ್ಲಿಯೇ ನಾನು ಇಳಿದುಕೊಂಡಿರುವುದು. ಬಹಳ ಸನ್ಮಾನ್ಯರು (ಜೈಲಿಗೆ ಹೋದವರಲ್ಲ) ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಲ್ಲಿ ಒಬ್ಬರು. ಅವರ ರಕ್ಷಣೆಯಲ್ಲಿರುತ್ತಾ ನಾನು ಯಾವುದೇ ಬೇಜವಾಬ್ದಾರಿಯುತ ಕೆಲಸಗಳನ್ನು ಮಾಡಲು ಹೇಗೆ ಸಾಧ್ಯ. ? ಬೇರೆ ಎಲ್ಲ ಕ್ಷೇಮ. ಕೃಪೆ ಇಟ್ಟು ಪತ್ರಕೊಡುವುದು. ನನ್ನ ವಿಚಾರವೆಂದರೆ ಮಧ್ಯಪ್ರದೇಶದ ಪತ್ರ 371 ದೇವಿಗೆ ಅಲೋಪತಿ ಚಿಕಿತ್ಸೆ ನಿಲ್ಲಿಸಿ ಹೋಮಿಯೋಪತಿ ಚಿಕಿತ್ಸೆ ಮಾಡಿಸಿ. ನೀವು ದೇವಿಯ ಪೂರ್ಣ ವಿವರ, ಖಾಯಿಲೆ ಅದರ ಸಂಪೂರ್ಣ ಲಕ್ಷಣಗಳನ್ನು ಕಳುಹಿಸಿದರೆ ಇಲ್ಲಿ ಪ್ರಸಿದ್ಧ ಹೋಮಿಯೋಪತಿ ಡಾಕ್ಟರ್ ಇದ್ದಾರೆ. ಅವರನ್ನು ಕೇಳಿ ಔಷಧ ಬರೆದು ಕಳುಹಿಸುತ್ತೇನೆ. ಹೋಮಿಯೋಪತಿ ಚಿಕಿತ್ಸೆಯ ಔಷಧಿ ಹೊಂದಿಕೊಂಡಿದ್ದೇ ಆದರೆ ಯಾವ ರೀತಿಯ ತೊಂದರೆಯೂ ಇಲ್ಲದೆ ಸರಿಹೋಗುವುದು. ಅಣ್ಣನವರಿಗೆ ಮತ್ತು ಅತ್ತಿಗೆಯವರಿಗೆ ನಮಸ್ಕಾರಗಳು. ದೇವಿ ಮತ್ತು ಮಹಾದೇವಿಗೆ ಸ್ನೇಹ. ಪ್ರಶ್ನೆಗೆ ಉತ್ತರಿಸಿ ಅಣ್ಣನವರು ಎಂದು ಪತ್ರ ಬರೆಯವುದೇ ಇಲ್ಲ. ನಿಮ್ಮ ಅಣ್ಣನ ಮಗ ದೀನಾ BLANK PAGE ರಾಷ್ಟ್ರ ಚಿಂತನ ಹಿಂದೀ ಮೂಲ ಪಂಡಿತ್ ದೀನ್‍ದಯಾಳ ಉಪಾಧ್ಯಾಯ ಅನುವಾದ ಘಟ್ಟನುರಾಜು ಅಶ್ವಥನಾರಾಯಣ ಡಿ.ಕೆ. ರಾಜಮ್ಮ BLANK PAGE ಪಂಡಿತ್ ದೀನ್ ದಯಾಳ್ ಉಪಾಧ್ಯಾಯ 1968 ಫೆಬ್ರವರಿ 11 ರಂದು ಭಾರತೀಯ ಜನಸಂಘದ ಅಧ್ಯಕ್ಷರಾದ ಪಂಡಿತ್ ದೀನ್ ದಯಾಳರ ಪಾರ್ಥೀವ ಶರೀರವನ್ನು ಮೊಗಲಸರಾಯ್ ಸ್ಟೇಷನ್‍ನ ಅಂಗಣದಲ್ಲಿ ಇರಿಸಲಾಗಿತ್ತು. ಈ ಷಡ್ಯಂತ್ರಕಾರಿ ಘಟನೆಯ ರಹಸ್ಯ ಇಂದಿಗೂ ಅಜ್ಞಾತವಾಗಿಯೇ ಉಳಿದಿದೆ. ಬಹುಶಃ ಮುಂದೆ ಎಂದಾದರೊಂದು ದಿನ ಇದರ ರಹಸ್ಯ ಬಯಲಾಗಬಹುದೆನೋ? ರಹಸ್ಯ ಏನೇ ಇರಲಿ. ಭಾರತೀಯ ಪ್ರಜಾತಂತ್ರದ ರಾಜಕಾಣರದಲ್ಲಿನ ವಿಚಾರ ಕಾರ್ಯ ಮತ್ತು ಪ್ರಗತಿಗಾಗಿ ಭಾರೀ ಆಶೋತ್ತರಗಳೊಂದಿಗೆ ಉತ್ಕೃಷ್ಟ ಜೀವನನ್ನು ಸಾಗಿಸುತ್ತಾ ಬಂದಿದ್ದರೋ ಮತ್ತು ಸನಾತನ ಭಾರತೀಯ ಜೀವನಾದರ್ಶನದ ಆಧಾರದ ಮೇಲೆ ಕಾಲಕ್ಕನುಗುಣವಾದ ನೂತನ ವ್ಯವಸ್ಥೆಯನ್ನು, ಮೌಲಿಕ ಚಿಂತನೆಯನ್ನು ಮತ್ತು ದಾರ್ಶನಿಕ ದೃಷ್ಟಿಕೋನದಿಂದ ಪರಿಪೂರ್ಣ ವ್ಯಾವಹಾರಿಕ ವ್ಯಾಖ್ಯಾನವನ್ನು ಪ್ರಸ್ತುತಪಡಿಸುತ್ತಿದ್ದರೋ ಅಂತಹ ದಿವ್ಯ ಚೇತನ ಇದ್ದಕ್ಕಿದ್ದಂತೆ ಅದೃಶ್ಯವಾಯಿತು. ಭವ್ಯ ಭವಿಷ್ಯವನ್ನು ಬೆಸೆಯುವಂತಹ ವರ್ತಮಾನ ಕಾಲದ ಮಹಾನ್ ಶಿಲ್ಪಿ ಚಿರನಿದ್ರಗೆ ಜಾರಿಹೋದರು. ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ, ಜನಸಾಮಾನ್ಯರ ಸುಖದುಃಖಗಳಲ್ಲಿ ಸಮಭಾಗಿಯಾಗುತ್ತಾ, ಸಾಮರಸ್ಯದೊಂದಿಗೆ ಅವರ ಮುಂದಾಳುವಾಗಿದ್ದ ಮಹಾನ್ ನೇತಾರ ಅಸ್ತಂಗತರಾದರು. ಅನೇಕ ಸಮಸ್ಯೆಗಳಿಂದ ಕೂಡಿದ್ದ ಈ ದೇಶದಲ್ಲಿ ಎಲ್ಲ ರೀತಿಯಿಂದಲೂ ತಾಳ್ಮೆಯಿಂದ ನಿವಾರಿಸುವ ವಿಶ್ವಾಸವನ್ನು ತುಂಬುತ್ತಿದ್ದ ಪ್ರಕಾಶಪುಂಜ ನಂದಿಹೋಯಿತು. ಸರಳ ಜೀವನ, ಸರಳ ವ್ಯವಹಾರ, ಉನ್ನತವಿಚಾರ, ಉಜ್ವಲ ಅಂತಃಕರಣ ಮತ್ತು ಕಾರ್ಯನಿಷ್ಠೆಯ ಮೂರ್ತಿ ಕಣ್ಮರೆಯಾಗಿ ಹೋಯಿತು. ಆದ್ದರಿಂದಲೇ ಈಗಿನ ಜನಸಂಘದ ಅಧ್ಯಕ್ಷರಾದ ಅಟಲ್‍ಬಿಹಾರಿ ವಾಜಪೇಯಿಯವರು ಹೇಳಿದ್ದು ``ಸೂರ್ಯ ಮರೆಯಾಗಿ ಹೋದ, ನಾವೀಗ ನಕ್ಷತ್ರಗಳ ಬೆಳಕಿನಲ್ಲಿ ದಾರಿಯನ್ನು ಕಂಡುಕೊಳ್ಳಬೇಕಾಗಿದೆ" ಎಂದು. ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಪಂಡಿತ್ ದೀನ್ ದಯಾಳರು ಅಷ್ಟೊಂದು ನಮ್ರರೂ, ಸರಳರೂ ಆಗಿದ್ದರು. ಅವರ ಹಿರಿಮೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಕಠಿಣವಾಗಿತ್ತು. ಅವರು ಎಂತಹ ಮಹನೀಯರೆಂದರೆ ತಮ್ಮ ಅಕ್ಕಪಕ್ಕದಲ್ಲಿನ ಯಾವುದೇ ವಸ್ತು ವಿಷಯವನ್ನು ಕಡೆಗಣಿಸದೆ ಅದೆಷ್ಟೇ ಚಿಕ್ಕದಿರಲಿ, ದೊಡ್ಡದಿರಲಿ 376 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಲ್ಲದರ ಏಳಿಗೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿರುತ್ತಿದ್ದರು. ಪಂಡಿತ್ ದೀನ್ ದಯಾಳ ಉಪಾಧ್ಯಾಯರು 1916ನೇ ಇಸವಿ ಸೆಪ್ಟೆಂಬರ್ 25 ರಂದು ಜನಿಸಿದರು. ಅವರ ಮಾತಾಮಹರು ಪಂಡಿತ್ ಚುನ್ನಿಲಾಲ್ ಶುಕ್ಲಾ ಜಯಪುರ ಅಜ್ಮೀರ ರೈಲ್ವೇ ಮಾರ್ಗದಲ್ಲಿನ ಹಳ್ಳಿಯಾದ ಧನಕಿಯಾದಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು. ಪಂಡಿತ್ ದೀನ್ ದಯಾಳರ ಜನನವಾಗಿದ್ದು ಇದೇ ಹಳ್ಳಿಯಲ್ಲಿನ ಅವರ ಅಜ್ಜನ ಮನೆಯಲ್ಲಿ. ಅವರ ತಂದೆಯ ಹೆಸರು ಶ್ರೀ ಭಗವತೀ ಪ್ರಸಾದ್ ಉಪಾಧ್ಯಾಯ. ಅವರು ಉತ್ತರಪ್ರದೇಶದ ಮಥುರ ಜಿಲ್ಲೆಯಲ್ಲಿನ ಫರ್ರಡ್ ಗ್ರಾಮದ ಸಮೀಪವಿದ್ದ ಜಲೇಸರ್ ಮಾರ್ಗದ ರೈಲ್ವೇಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು. ಅವರ ಪಿತಾಮಹರು ಪಂಡಿತ್ ಹರಿರಾಮಶಾಸ್ತ್ರಿಯವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಆ ಕಾಲದಲ್ಲಿನ ಅತ್ಯಂತ ಹೆಸರುವಾಸಿಯಾಗಿದ್ದ ವಿದ್ವಾಂಸರೆಂಬ ಮನ್ನಣೆಗೆ ಪಾತ್ರರಾಗಿದ್ದರು. ಅವರು ನಿಧನರಾದಾಗ ಮೃತರ ಸ್ಮರಣಾರ್ಥ ಆಗ್ರಾ ಮತ್ತು ಮಥುರಾದಲ್ಲಿ ಶೋಕಾಚರಣೆಯನ್ನು ಆಚರಿಸಲಾಯಿತೆಂದು ಹೇಳಲಾಗಿದೆ. ಸುಮಾರು ಏಳು ವರ್ಷದ ಬಾಲಕನಾಗಿದ್ದಾಗಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ದೀನ್‍ದಯಾಳರ ಪಾಲನೆ ಪೋಷಣೆಯನ್ನು ನೋಡಿಕೊಂಡವರು ಅವರ ಸೋದರ ಮಾವನವರಾದ ಶ್ರೀ ರಾಧಾರಮಣ ಶುಕ್ಲಾರವರು. ಹೀಗೆ ಕಷ್ಟಗಳೊಂದಿಗೆ, ಪ್ರತಿಕೂಲ ಪರಿಸ್ಥಿತಿಗಳೊಂದಿಗೆ ಹೋರಾಡುವಂತಹ ಅಭ್ಯಾಸ ಬಾಲ್ಯಾವಸ್ಥೆಯಿಂದಲೇ ಪ್ರಾರಂಭವಾಯಿತು. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾದ ದುಃಖ ಜೀವನಪರ್ಯಂತ ಜರ್ಜರಿತರನ್ನಾಗಿ ಮಾಡಿಬಿಡುತ್ತದೆ. ದೌರ್ಭಾಗ್ಯವೆಂಬ ಈ ಆಘಾತದಿಂದ ಅಪೂರ್ವವೆಂಬಂತೆ ಬಿಡುಗಡೆ ಹೊಂದಿ ಉದ್ಧಾರವಾಗಿಬಿಡುವದೂ ಉಂಟು. ಎಳೆಯ ವಯಸ್ಸಿನಲ್ಲಿಯೇ ಸ್ವಾವಲಂಬನೆ ಮತ್ತು ಎದುರಾಗುವ ಕಷ್ಟಗಳನ್ನು ಸಹಿಸಿಕೊಳ್ಳುವಂತಹ ಪರೀಕ್ಷೆ ನಿಜವಾಗಿಯೂ ಕಠೋರವಾಗಿದ್ದರೂ ಅವು ಶಾಶ್ವತವಾಗಿ ಉಳಿಯದೆ ಮರೆಯಾಗಿಬಿಡುವುದೂ ಉಂಟು. ಇತರ ಮಕ್ಕಳೆಲ್ಲ ತಮ್ಮ ತಂದೆ ತಾಯಿಗಳ ಮುದ್ದಾಟದಲ್ಲಿ ಬೆಳೆಯುತ್ತಿದ್ದರೆ ಈ ಒಂಟಿ ಬಾಲಕ ಕಲ್ಲು ಬಂಡೆಯಂತೆ ಕಷ್ಟಕಾರ್ಪಣ್ಯಗಳನ್ನೆಲ್ಲ ಸಹಿಸಿಕೊಂಡು, ಮಾಡುವ ಕಾರ್ಯದಲ್ಲಿ ಮಗ್ನತೆಯನ್ನು ರೂಢಿಸಿಕೊಳ್ಳುತ್ತಾ ವಿದ್ಯಾಭ್ಯಾಸದ ಒಂದೊಂದೇ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರುತ್ತಾ ಹೋದರು. ಅವರು ಪೀಕರದ ಕಲ್ಯಾಣ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಅಜ್ಮೀರ ಬೋರ್ಡ್‍ನ ಮೆಟ್ರಿಕ್ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗಿಂತಲೂ ಮೊದಲಿಗರಾಗಿ ಸ್ವರ್ಣಪದಕ ಗಳಿಸಿದರು. ಮಾಡುವ ಕೆಲಸದಲ್ಲಿ ಏಕಾಗ್ರತೆಯೊಂದಿಗೆ ಬುದ್ಧಿವಂತಿಕೆ ಹಾಗೂ ಮನಸಿಟ್ಟು ಮಾಡಿದಲ್ಲಿ ಆ ಕೆಲಸಕ್ಕೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ರಾಷ್ಟ್ರ ಚಿಂತನ 377 ಇವರೇ ಸಾಕ್ಷಿಯಾಗಿದ್ದರು. ರಾಜಸ್ತಾನದ ಪಿಲಾನಿಯ ಪದವಿ ಪೂರ್ವ ಕಾಲೇಜಿನ ಎರಡು ವರ್ಷಗಳ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರಲ್ಲದೆ, ಕಾನ್ಪುರದ ಸನಾತನ ಕಾಲೇಜಿನ ಬಿ.ಎ. ಪರೀಕ್ಷೆಯಲ್ಲಿಯೂ ಪ್ರಥಮ ಶ್ರೇಣಿಯಲ್ಲಿಯೇ ಉತ್ತೀರ್ಣರಾದರು. ಇಂತಹ ಸಮಯದಲ್ಲಿ ಅಂದರೆ 1937ನೇ ಇಸವಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಇವರ ಸಂಪರ್ಕ ಉಂಟಾಯಿತು. ಉತ್ತರ ಪ್ರದೇಶದಲ್ಲಿ ಸಂಘದ ಕಾರ್ಯಕ್ಕೆ ಅಡಿಪಾಯ ಹಾಕುತ್ತಿದ್ದ ಪೂಜ್ಯ ಶ್ರೀ ಭಾವೂರಾವ್‍ಜೀ ದೇವರಸರೊಂದಿಗೆ ಇವರ ಪರಿಚಯವಾಗಿ ಆ ಪರಿಚಯ ದೇಶಕ್ಕೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಡುವ ವ್ರತವನ್ನು ಸ್ವೀಕರಿಸುವ ಮಂಗಳಕರವಾದ ಕ್ಷಣವೂ ಆಯಿತು. ರಾಷ್ಟ್ರೀಯ ಸ್ವಯಂಸೇವಾ ಸಂಘದಲ್ಲಿ ತಮ್ಮ ಶಕ್ತಿಯನ್ನೆಲ್ಲಾ ಧಾರೆಯೆರೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಕಾನ್ಪುರದ ಸನಾತನ ಧರ್ಮ ಕಾಲೇಜಿನಿಂದ ಬಿ.ಎ. ಪದವಿಯನ್ನು ಉತ್ತೀರ್ಣರಾದ ನಂತರ ಆಗ್ರಾದಲ್ಲಿ ಆಂಗ್ಲಸಾಹಿತ್ಯದಲ್ಲಿ ಎಂ.ಎ. ಮಾಡಲು ಸೆಂಟ್ ಜಾನ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಪ್ರಥಮ ವರ್ಷದಲ್ಲಿ ಉತ್ತೀರ್ಣರಾದರು. ಆದರೆ ದ್ವಿತೀಯ ವರ್ಷದ ಎಂ.ಎ. ಪರೀಕೆಯನ್ನು ತೆಗೆದುಕೊಳ್ಳಲಾಗಲಿಲ್ಲ. ಏಕೆಂದರೆ ಅ ಸಮಯದಲ್ಲಿ ಅವರು ಆಗ್ರಾದಲ್ಲಿ ತಮ್ಮ ಅಜ್ಜಿ ಮತ್ತು ತಂಗಿಯೊಂದಿಗೆ ವಾಸವಾಗಿದ್ದರು. ಸಹೋದರಿಯ ಆರೋಗ್ಯ ಹದಗೆಟ್ಟಿದ್ದರಿಂದ ಅವರ ಶುಶ್ರೂಷೆಗಾಗಿ ಅವರನ್ನು ಪ್ರಕೃತಿ ಚಿಕಿತ್ಸೆಗಾಗಿ ಪರ್ವತಪ್ರಾಂತ್ಯಕ್ಕೆ ಕರೆದುಕೊಂಡು ಹೋಗಬೇಕಾಯಿತು. ಈ ಕಾರಣದಿಂದಾಗಿ ಎಂ.ಎ. ದ್ವಿತೀಯ ವರ್ಷದ ಅಧ್ಯಯನವನ್ನು ನಿಲ್ಲಿಸಿದರು. 1942ರಲ್ಲಿ ರಾಷ್ಟ್ರೀಯ ಸ್ವಯಂ ಸೇವಾಸಂಘದ ಪ್ರಚಾರಕರಾಗಿ ಲಖೀಂಪುರ ಜಿಲ್ಲೆಯಲ್ಲಿ ನಿಯೋಜಿಸಲ್ಪಟ್ಟರು. ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಅಲ್ಲಿಯೇ ಒಂದು ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅದ್ವಿತೀಯ ಪ್ರತಿಭೆ, ಉನ್ನತ ನಡೆವಳಿಕೆ ಮತ್ತು ಗೌರವ ವ್ಯವಹಾರಿಕ ಕುಶಲತೆಯಿಂದ ಪ್ರಭಾವಿತರಾದ ಶಾಲೆಯ ವ್ಯವಸ್ಥಾಪಕರು ಅವರಿಗೆ ಮುಖ್ಯೋಪಧ್ಯಾಯರ ಸ್ಥಾನವನ್ನು ನೀಡುವ ಇಚ್ಛೆಯನ್ನು ಪ್ರಕಟಿಸಿದರು. ಆದರೆ ಶ್ರೀ ದೀನ್ ದಯಾಳರು ಅದನ್ನು ನಿರಾಕರಿಸಿದರು. ಮೂರುವರ್ಷಗಳಲ್ಲಿ ಅವರು ಉತ್ತರಪ್ರದೇಶದ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಪ್ರಾಂತೀಯ ಪ್ರಚಾರಕರಾದರು. 1951 ರಲ್ಲಿ ಜನಸಂಘದ ನಿರ್ಮಾಣವಾಗುವವರೆಗೂ ಅವರು ಇದೇ ಕ್ಷೇತ್ರದಲ್ಲಿ ಇದೇ ಕಾರ್ಯವನ್ನು ನಿರ್ವಹಿಸಿದರು. ಇದರ ನಡುವೆ ಸಂಘದ ಶಾಖೆಯನ್ನು ವಿಸ್ತರಿಸುವ ಸಂಘಟನಾ ಕಾರ್ಯದ ಜೊತೆಗೆ ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ 378 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮುಂತಾದ ಸಾಹಿತ್ಯಿಕ ಕಾರ್ಯಚಟುವಟಿಕೆಗಳಲ್ಲೂ ಸಫಲರಾದರು. ಚಂದ್ರಗುಪ್ತ ಸಾಮ್ರಾಟ್, ಜಗದ್ಗುರು ಶಂಕರಾಚಾರ್ಯರ ಹೆಸರಿನಲ್ಲಿ ಎರಡು ಪುಸ್ತಕಗಳನ್ನು ತಾವೇ ರಚಿಸಿದರು. ಇದಲ್ಲದೆ ರಾಷ್ಟ್ರಧರ್ಮ (ಮಾಸಿಕ) ಮತ್ತು ಪಾಂಚಜನ್ಯ (ಸಾಪ್ತಾಹಿಕ) ಪತ್ರಿಕೆಗಳ ಸಂಪಾದಕರು ಆದರು. ಲಕ್ನೋದಲ್ಲಿ ರಾಷ್ಟ್ರಧರ್ಮ ಪ್ರಕಾಶನ ಲಿಮಿಟೆಡ್‍ನ ಸಂಸ್ಥಾಪಕರೂ ಆದರು. ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್‍ನ ರಾಷ್ಟ್ರ ವಿಘಾತಕ ಮತ್ತು ದೂರದರ್ಶಿತ್ವವಿಲ್ಲದ ನೀತಿಯ ಪರಿಣಾಮವಾಗಿ ಪಾಕಿಸ್ತಾನದ ನಿರ್ಮಾಣವಾದ ಮೇಲೆ ಕಾಂಗ್ರೆಸ್‍ನಲ್ಲಿ ರಾಜಕಾರಣ ಅಧಿಕಾರದಾಹ ವೇಗವಾಗಿ ಪ್ರಾರಂಭವಾಯಿತು. ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಕುಸಿತ ಕಂಡುಬರಲು ಪ್ರಾರಂಭವಾಯಿತು. ಅಂತಹ ಸಮಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹೊಸ ನೇತಾರನ ಅವಶ್ಯಕತೆ ಕಂಡು ಬಂದಿತು. ಇಂತಹ ಅವಶ್ಯಕತೆಯಿದ್ದ ಸಂದರ್ಭದಲ್ಲಿ 1951ರಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ಅಖಿಲಭಾರತೀಯ ಜನಸಂಘದ ನಿರ್ಮಾಣದ ವಿಚಾರವೂ ನಡೆಯುತ್ತಿತ್ತು. ಆಗ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು 1951ನೇ ಇಸವಿ ಸೆಪ್ಟೆಂಬರ್ 21 ರಂದು ಲಕ್ನೋದಲ್ಲಿ ಪ್ರಾದೇಶಿಕ ಸಮ್ಮೇಳನವನ್ನು ಏರ್ಪಡಿಸಿ ಪ್ರಾದೇಶಿಕ ಜನಸಂಘದ ಸ್ಥಾಪನೆ ಮಾಡಿದರು. ಅಲ್ಲಿಂದ ಸರಿಯಾಗಿ ಒಂದು ತಿಂಗಳ ನಂತರ ಅಂದರೆ 1951 ಅಕ್ಟೋಬರ್ 21 ರಂದು ದೆಹಲಿಯಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ಅಖಿಲ ಭಾರತೀಯ ಜನಸಂಘದ ಸ್ಥಾಪನೆಯಾಯಿತು. 1952ರಲ್ಲಿ ಪ್ರಥಮ ಅಖಿಲ ಭಾರತೀಯ ಜನಸಂಘದ ಅಧಿವೇಶನವನ್ನು ಕಾನ್ಪುರದಲ್ಲಿ ಆಯೋಜಿಸಲಾಯಿತು. ಪಂಡಿತ್ ದೀನ್ ದಯಾಳ್‍ರ ಸಂಘಟನಾ ಚಾತುರ್ಯದಿಂದಾಗಿ ಜನಸಂಘದ ಪ್ರಥಮ ಅಧಿವೇಶನ ಅತ್ಯಂತ ಯಶಸ್ವಿಯಾಯಿತು. ಇದೇ ಅಧಿವೇಶನದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರಿಗೆ ಅಖಿಲ ಭಾರತೀಯ ಮಹಾಮಂತ್ರಿಯ ಪದವಿಯನ್ನು ನೀಡಲಾಯಿತು. ಅಲ್ಲಿಂದ ಮೊದಲ್ಗೊಂಡು 1967ರಲ್ಲಿ ಕ್ಯಾಲಿಕಟ್‍ನಲ್ಲಿ ನಡೆದ ಅಧಿವೇಶನದವರೆಗೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದರು. ಕಾನ್ಪುರದಿಂದ ಕ್ಯಾಲಿಕಟ್‍ವರೆಗಿನ ಜನಸಂಘದ ಉನ್ನತ ಸ್ಥಾನದಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ, ಆಚಾರ್ಯ ರಘುವೀರ್ ಮುಂತಾದ ಅಖಿಲ ಭಾರತೀಯ ವಿದ್ವಾಂಸರು ವಿರಾಜಮಾನರಾಗಿದ್ದರು. ದೌರ್ಭಾಗ್ಯವೆಂದರೆ ಅನತಿ ಕಾಲದಲ್ಲಿ ಅವರು ತೀರಿಕೊಂಡರು. ಇಂತಹ ಕ್ಲಿಷ್ಟ ಸಮಯದಲ್ಲಿ ದೀನ್ ದಯಾಳರು ವಿಶ್ವಾಸ ಮತ್ತು ಆಶಾಭಾವನೆಯ ಜ್ಯೋತಿಸ್ತಂಭವಾಗಿ ಮಾರ್ಗದರ್ಶನದ ಮುಂದಾಳತ್ವವನ್ನು ನಿಭಾಯಿಸಿದರು. ಅದು ಕಾಶ್ಮೀರದ ಆಂದೋಳನವೇ ಆಗಿರಲಿ ಅಥವಾ ರೈತ ರಾಷ್ಟ್ರ ಚಿಂತನ 379 ಕಾರ್ಮಿಕರ ಚಳುವಳಿ ಆಗಿರಲಿ, ಪಂಚವಾರ್ಷಿಕ ಯೋಜನೆಯೇ ಆಗಿರಲಿ ಅಥವಾ ಸಾಮಾಜಿಕ ತೊಡಕೇ ಆಗಿರಲಿ ಎಲ್ಲಾ ಕಾರ್ಯಗಳಲ್ಲೂ ದೀನ್‍ದಯಾಳರ ಮಾರ್ಗದರ್ಶನ ದೇಶಕ್ಕೆ ಲಭಿಸತೊಡಗಿತು. ಪಂಡಿತ್ ದೀನ್ ದಯಾಳರು ದೇಶದ ಎಲ್ಲ ಮಹತ್ವಪೂರ್ಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗಂಭೀರವಾದ ಸಾರಯುಕ್ತವಾದ ವಿಚಾರಮಂಥನ ನಡೆಸುತ್ತಿದ್ದರು. ಇವೆಲ್ಲಕ್ಕಿಂತ ಮುಖ್ಯವಾದ ವಿಶೇಷತೆಯೇನೆಂದರೆ ಅವರು ಯಾವುದೇ ಚಿಕ್ಕ ವಿಷಯವಾದರೂ ಅದರ ಬಗ್ಗೆ ಸೈದ್ಧಾಂತಿಕ ದೃಷ್ಟಿಕೋನದಿಂದ ನೋಡಿ ಬರೆಯುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ಬ್ರಹ್ಮ ಅವರಿಗೆ ಹುಟ್ಟಿನಿಂದಲೇ ಕಷ್ಟಗಳ ಸರಮಾಲೆಯನ್ನೇ ಹೆಣೆದಿದ್ದರೂ ದೀನ್ ದಯಾಳರು ತಮ್ಮ ತೀಕ್ಷ್ಣಬುದ್ಧಿ ಮತ್ತು ಕಷ್ಟ ಸಹಿಷ್ಣುತೆಯ ಬಲದಿಂದ ಯಾವಾಗಲೂ ಉನ್ನತಿಯನ್ನೇ ಕಾಣುವ ಸಂಕಲ್ಪವನ್ನು ಹೊಂದಿ ಅವರು ತಮ್ಮ ದೈವೀಗುಣದ ಬಲದ ಮೇಲೆ ಸತತ ಪರಿಶ್ರಮ, ತ್ಯಾಗದಿಂದಾಗಿ ಹಿಂದಿರುಗಿ ನೋಡದೆ ಮೇಲೇರುತ್ತಾ ಸಾಗಿದರು. ಇದು ಬಾಲ್ಯದಿಂದಲೇ ಪ್ರಾರಂಭವಾಗಿ ಜೀವನದ ಕೊನೆಯವರೆಗೂ ಸಾಗಿತ್ತು. ಬ್ರಹ್ಮ ಅವರನ್ನು ಬಾಲ್ಯದಿಂದಲೇ ಅನಥಾರನ್ನಾಗಿ ಮಾಡಿದನು. ವಿದ್ಯಾರ್ಥಿ ಜೀವನದಲ್ಲಿ ಸ್ನೇಹದ ಏಕಮಾತ್ರ ಆಸರೆಯಾಗಿದ್ದ ತಂಗಿಯನ್ನು ಮೃತ್ಯು ಕರೆದೊಯ್ದನು. ಆ ಮೂಲಕ ಅವರ ಮನಃಶಾಂತಿಯನ್ನು ಕದಡಲು ಪ್ರಯತ್ನಿಸಿದನು. ಆದರೂ ದೀನ್‍ದಯಾಳರು ಸೋಲದೆ ಯಶಸ್ಸನ್ನು ಕಂಡರು. ಅದು ಅಧ್ಯಕ್ಷರ ರೂಪದಲ್ಲಿ ಮಾನನೀಯರಾಗುವುದರ ಮೂಲಕ, ಮೃತ್ಯು ಅವರನ್ನು ಚಿರನಿದ್ರಗೆ ನೂಕಿ ಅವರಿಗೆ ಯಾರು ವಾರಸುದಾರರಿಲ್ಲದಂತೆ ಮಾಡಿತು. ಸೃಷ್ಟಿಕರ್ತನ ಕ್ರೌರ್ಯವು ಅವರು ಅಜ್ಞಾತ ಶವವಾಗುವವರೆಗೆ ಸಾಗಿತ್ತು. ಇದರಿಂದಾಗಿ ಯಾರಿಗೂ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆದರೂ ಸಹ ಅವರು ಪ್ರತಿಸಲವೂ ತಮ್ಮ ಕೃತಕೃತ್ಯದ ಬಲದಿಂದ ಇನ್ನೂ ಹೆಚ್ಚಿನದನ್ನು ಸಾಧಿಸುತ್ತಿದ್ದರು. ಬಾಲ್ಯದಿಂದಲೇ ಅವರನ್ನು ಬ್ರಹ್ಮ ಅನಾಥನನ್ನಾಗಿ ಮಾಡಿದರೂ ಅವರು ತಮ್ಮನ್ನು ಕರ್ಮಯೋಗಿಯಾಗಿ ರೂಪಿಸಿಕೊಂಡರು. ಅವರನ್ನು ವಿಕ್ಷಿಪ್ತಗೊಳಿಸಿದರೂ ಅವರು ಕರ್ಮಯೋಗಿಯ ರೂಪದಲ್ಲಿ ಸರ್ವತ್ಯಾಗಿ ಸನ್ಯಾಸಿಯಾದರು. ಕೊನೆಯಲ್ಲಿ ಅವರ ಮೃತಶರೀರವನ್ನು ಮೂಟೆಯಲ್ಲಿ ಕಟ್ಟಿದ ಗಂಟಿನಂತೆ ಮಾಡಿ ಎಲ್ಲರೂ ಮರೆತು ಹೋಗುವಂತೆ ಮಾಡಬೇಕೆಂದಿದ್ದರೂ ಅವರ ಜೀವನ ಸಾಧನೆ ಅಲ್ಲಿಯೂ ಸಹ ಅವರನ್ನು ಯಶೋಕಾಯರನ್ನಾಗಿ ಮಾಡಿ ಮಿಂಚಿನಂತೆ ಕಾಣಿಸಿಕೊಂಡಿತು. ಬೆಳಿಗ್ಗೆ 9 ಗಂಟೆಯವರೆಗೂ ಅವರ ಮೃತಶರೀರ ಅನಾಥವಾಗಿಯೇ ಇತ್ತು. 10 ಗಂಟೆಗೆ ಈ ಘಟನೆಯ ವಿಷಯ ತಿಳಿದಾಗ ಇಡೀ ದೇಶವೇ ಕಣ್ಣೀರುಗರೆಯಿತು. ಪುಷ್ಪಾಂಜಲಿಯೊಂದಿಗೆ ಪೂಜೆ ಸಲ್ಲಿಸಲು ಪ್ರಾರಂಭವಾಯಿತು. ಬ್ರಹ್ಮ ಅವರನ್ನು 380 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಒಂದು ಕಬ್ಬಿಣದ ಬಂಡೆಯನ್ನಾಗಿ ಮಾಡಲು ಯೋಚಿಸಿದ್ದನೋ ಏನೋ ಆದರೆ ಅವರು ಚಿತಾಭಸ್ಮದಿಂದ ಎದ್ದು ಬಂದು ಜನಮನದಲ್ಲಿ ಯಾವಾಗಲೂ ಬೆರೆತು ಹೋದರು, ಅಮರತ್ವವನ್ನು ಪಡೆದರು. ನಿಜವಾಗಿಯೂ ಅವರು ನತದೃಷ್ಟರಾಗಿರಲಿಲ್ಲ, ಬದಲಿಗೆ ಮಹಾನುಭಾವರಾಗಿದ್ದರು. ತಮ್ಮ ಕಾಯಕದಿಂದ ಯಾರು ಬೇಕಾದರೂ ಮೇಲೇರಬಹುದೆಂದು ಸಂದೇಶವನ್ನು ಹುಟ್ಟಿದಂದಿನಿಂದ ಸಾಯುವವರೆಗಿನ ಘಟನೆಗಳ ಮೂಲಕ ಸಾರಿಹೋದರು. ತಮ್ಮ ಸಂಘರ್ಷಮಯ ಬದುಕಿನಲ್ಲಿ ಕರ್ಮದ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸಿದರು. ಕ್ಯಾಲಿಕಟ್ ಅಧಿವೇಶನದಲ್ಲಿ ಅವರು ಇಡೀ ದೇಶಕ್ಕೆ `ಸಾಗುತ್ತ ಇರಿ' ಎಂಬ ಯಾವ ಸಂದೇಶವನ್ನು ನೀಡಿದರೋ ಆ ಸಂದೇಶವನ್ನು ಅವರು ತಮ್ಮ ಜೀವನದಲ್ಲಿ ಸಾಕಾರಗೊಳಿಸಿದರು. ಭಾರತೀಯ ರಾಜನೀತಿಯ ಮೂಲಭೂತ ದೋಷ ಕಳೆದ ಅರ್ಧ ಶತಮಾನದ ರಾಜಕೀಯ ಸ್ಥಿತಿಗತಿಗಳ ಪರಿಣಾಮವೇ ಇಂದಿನ ಭಾರತೀಯ ಜೀವನ ಎಂದು ಹೇಳುವುದರಲ್ಲಿ ಯಾವುದೇ ರೀತಿಯ ಅತಿಶಯೋಕ್ತಿ ಇಲ್ಲ. ಮತ್ತು ಈಗಿನ ಜೀವನದಿಂದ ಬೇಸತ್ತುಹೋದ ವ್ಯಕ್ತಿಯ ಗಮನ ರಾಜಕೀಯ ಆಂದೋಲನದ ವಿಶ್ಲೇಷಣೆಯನ್ನು ಮಾಡುವುದರ ಕಡೆಗೆ ಸಹಜವಾಗಿ ಹೋಗುತ್ತದೆ. ಆ ಆಂದೋಲನದ ಸಫಲತೆ ಅಥವಾ ವಿಫಲತೆಯನ್ನು ಪರಿಗಣಿಸದೆ ಸ್ವಲ್ಪ ಗಂಭೀರತೆಯಿಂದ ವಿಚಾರ ಮಾಡಿದ ಮೇಲೆ ನಮ್ಮ ಸಂಪೂರ್ಣ ರಾಜನೀತಿ ಕೆಲವು ತತ್ವಗಳ ಮೇಲೆ ನಿಂತಿದೆ ಎನ್ನಿಸುತ್ತದೆ. ಅದರ ಸತ್ಯತೆಯ ವಿಚಾರದಲ್ಲಿ ಸಂಶಯವೂ ಉಂಟಾಗುತ್ತಿದೆ. ಈಚಿನವರೆಗೆ ಆ ತತ್ವಗಳನ್ನು ಸ್ವಯಂ ಸಿದ್ಧ ಸತ್ಯವೆಂದು ಗೌರವಿಸಿ ನಡೆಯುತ್ತಿದ್ದೆವು. ಆ ತತ್ವಗಳ ಆಧಾರದ ಮೇಲೆ ನಮ್ಮ ರಾಜನೀತಿಯ ಅತಿರಥ ಮಹಾರಥರು ತಮ್ಮ ಸಂಪೂರ್ಣ ಪ್ರತಿಭೆ ಮತ್ತು ಶಕ್ತಿಯನ್ನು ಆಂದೋಲನ ಮತ್ತು ರಾಷ್ಟ್ರ ಚೈತನ್ಯವನ್ನು ಹುಟ್ಟುಹಾಕಿ, ರಾಜನೈತಿಕ ಅಭಿಪ್ರಾಯವನ್ನು ಮೂಡಿಸಲು ತೊಡಗಿದ್ದರು. ಇಂದೂ ಸಹ ಭಾರತದ ನವನಿರ್ಮಾಣದ ಕನಸನ್ನು ಕಾಣುವ ಅನೇಕರು ಆ ತತ್ವನ್ನು ಶಿಲಾಶಾಸನವೆಂದು ಒಪ್ಪಿಕೊಂಡು ನಡೆಯುತ್ತಿದ್ದಾರೆ. ಆ ತತ್ವಗಳಿಂದ ಹೊರಬಿದ್ದ ಪರಿಣಾಮಗಳು ಮತ್ತು ಅವುಗಳಿಂದ ಉಂಟಾದ ಸಮಸ್ಯೆಗಳ ಪರಿಹಾರದ ಸಂಬಂಧದಲ್ಲಿ ಪಕ್ಷಗಳಲ್ಲಿ ಜಗಳಗಳುಂಟಾದರೂ ಆ ತತ್ವಗಳ ಸತ್ಯದ ಬಗ್ಗೆ ಎಲ್ಲರಿಗೂ ಒಮ್ಮತವಿದೆ. ಇದರಿಂದ ಅವರು ಆ ತತ್ವಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ ಅವು ಪ್ರಾಮಾಣಿಕವೆಂದು ತಿಳಿದಿದ್ದಾರೆ. ಆ ತತ್ವಗಳ ಬಗ್ಗೆ ಗಂಭೀರವಾಗಿ ಚಿಂತನೆ ಸಹ ಮಾಡಿದ್ದಾರೆ ಎಂದು ಭಾವಿಸಬಾರದು. ಭೂಮಿ ಅಚಲವಾಗಿ ನಿಂತಿದ್ದು, ಸೂರ್ಯನು ಅದರ ಸುತ್ತ ಸುತ್ತುತ್ತಾನೆ ಎಂಬ ಅಭಿಪ್ರಾಯವನ್ನು ಹೊಂದಿದ್ದ ಟಾಲೆಮಿ ಮುಂತಾದ ಶಾಸ್ತ್ರಜ್ಞರು ಅನೇಕ ಸಿದ್ಧಾಂತಗಳನ್ನು ರಚಿಸಿದ್ದರು. ರಾಷ್ಟ್ರ ಚಿಂತನ 381 ಆದರೆ ಕೊಪರ್‌ನಿಕಸ್‍ನ ಸಂಶೋಧನೆ ಹೊರಬರುವವರೆಗೂ ಟಾಲೆಮಿ ಮುಂತಾದವರ ಜ್ಯೋತಿಷ್ಯ ಸಂಪೂರ್ಣ ಸುಳ್ಳೆಂದು ಯಾರಿಗೂ ಗೊತ್ತಾಗಲಿಲ್ಲ. ಭಾರತೀಯ ರಾಜನೀತಿಜ್ಞರ ಬಹುದೊಡ್ಡ ದೋಷವೆಂದರೆ ಅವರು ಭಾರತದ ಬೇರೆ ಬೇರೆ ವರ್ಗಗಳ ಸ್ವತಂತ್ರ ಅಸ್ತಿತ್ವವನ್ನು ಒಪ್ಪಿಕೊಂಡಿರುವುದು. ಅವುಗಳ ಅಸ್ತಿತ್ವವನ್ನು ಒಪ್ಪಿದ ಮೇಲೂ ರಾಷ್ಟ್ರ ಹಿತದ ಕಾರ್ಯದಲ್ಲಿ ಈ ಅಸ್ತಿತ್ವ ಯಾವ ರೀತಿಯಲ್ಲಿ ಕೆಲಸಕ್ಕೆ ಬರುತ್ತದೆ ಎಂಬ ವಿಚಾರದ ಬಗ್ಗೆಯೂ ಪ್ರಯತ್ನಿಸುತ್ತಾರೆ. ಇದುವರೆಗೂ ಅವರು ಈ ರೀತಿ ಬೇರೆ ಬೇರೆ ಸ್ವತಂತ್ರ ಘಟಕಗಳ ಅಸ್ತಿತ್ವವನ್ನು ಒಪ್ಪಿ ಇವುಗಳ ನಡುವೆ ಏಕತೆ ಮತ್ತು ಸಾಮಂಜಸ್ಯವನ್ನು ಉಂಟುಮಾಡುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಅವುಗಳಲ್ಲಿ ಮಹತ್ತರವಾದ ಸಮಾನತೆಯನ್ನು ಹುಡುಕುವುದಕ್ಕೆ ಅವರು ಪ್ರಯಾಸ ಪಡುತ್ತಿದ್ದಾರೆ. ಆದರೆ ಸಂಸ್ಥೆಗಳು ಜಡವಾಗಿ ಸಮಾನತೆಯನ್ನು ಧಕ್ಕೆ ಉಂಟುಮಾಡದೆ ಯಾವುದೇ ವರ್ಗದ ಸುಳ್ಳು ಅಸ್ತಿತ್ವ ಕಾಣದಾಗದೆ, ಕುರುಡಾಗಿವೆ. ಅದರ ಸಂವರ್ಧನೆ ಮಾಡುತ್ತಲೇ ಇಲ್ಲಿಯವರೆಗಿನ ರಾಜನೈತಿಕ ಸಮಸ್ಯೆಗಳಿಗೆ ಸಮಾಧಾನ ಹುಡುಕಲು ಪ್ರಯತ್ನ ಮಾಡಲಾಗಿದೆ. ಅದರ ಪರಿಣಾಮ ಎಂದೆಂದಿಗೂ ಫಲಕಾರಿ ಆಗಿರಲಿಲ್ಲ. ಬ್ರಿಟಿಷರ ಆಡಳಿತದಲ್ಲಿ ದೇಶದಲ್ಲಿ ಮುಸಲ್ಮಾನರು, ಕ್ರೈಸ್ತರು ಮುಂತಾದ ಅನೇಕ ವರ್ಗಗಳಿವೆ ಎಂದು ಒಪ್ಪಿಕೊಂಡಿದ್ದೇವೆ. ಮತ್ತು ಅವರ ಸ್ವತಂತ್ರ ಅಸ್ತಿತ್ವದ ರಕ್ಷಣೆ ಮಾಡುತ್ತಲೇ ರಾಷ್ಟ್ರೀಯತೆಯ ನಿರ್ಮಾಣ ಸ್ವತಂತ್ರ ಅಸ್ತಿತ್ವವನ್ನು ಅಂಗೀಕರಿಸುವುದು ಬಹುದೊಡ್ಡ ತಪ್ಪು. ಏಕೆಂದರೆ ಮುಸಲ್ಮಾನರು, ಕ್ರೈಸ್ತರು, ಮುಂತಾದ ವರ್ಗೀಕರಣವನ್ನು ಮತಧರ್ಮದ ಆಧಾರದ ಮೇಲೆ ಮಾಡುವುದು ರಾಷ್ಟ್ರೀಯತೆಯಿಂದ ಭಿನ್ನವಾಗಿರುತ್ತದೆ. ಒಂದೇ ಧರ್ಮವನ್ನು ಮಾನ್ಯ ಮಾಡುವ ಅನೇಕ ರಾಷ್ಟ್ರಗಳ ಅಂಗವಾಗುತ್ತದೆ ಮತ್ತು ಒಂದೇ ರಾಷ್ಟ್ರದಲ್ಲಿ ಅನೇಕ ಮತಧರ್ಮಗಳನ್ನು ಮಾನ್ಯ ಮಾಡುವವರ ಸಮಾವೇಶವೂ ಆಗುತ್ತದೆ. ರಾಷ್ಟ್ರೀಯತೆಗೆ ಇಷ್ಟು ಪ್ರೇರಣಾಶಕ್ತಿಯಿದೆ ಎಂದಾದಲ್ಲಿ ಅದರ ಚೈತನ್ಯ ಕ್ಷೇತ್ರದಲ್ಲಿ ಧರ್ಮದ ಪ್ರವೇಶವಾಗಬಾರದು. ಆದರೆ ಇದುವರೆಗೆ ನಮ್ಮ ಪ್ರಯತ್ನ ಈ ವರ್ಗಗಳ ಸ್ವತಂತ್ರ ಅಸ್ತಿತ್ವವನ್ನು ಒಪ್ಪಿಕೊಂಡು ಅವುಗಳ ಏಕೀಕರಣವನ್ನು ಮಾಡುವುದಾಗಿತ್ತು. ಇಂತಹ ಏಕೀಕರಣದಿಂದ ಯಾರೂ ಏನನ್ನೂ ತ್ಯಜಿಸಬೇಕಾಗಿಲ್ಲ ಎಂಬುದಾಗಿತ್ತು. ಮೋಜಿನ ವಿಷಯವೇನೆಂದರೆ ಎಲ್ಲರನ್ನು ಸೇರಿಸಿ ಒಂದು ಮಾಡೋಣ ಎಂಬ ತತ್ವ ಇದೆ ಎಂಬುದರ ಬಗೆಗಿನ ಸ್ಪಷ್ಟ ಕಲ್ಪನೆ ಯಾರಿಗೂ ಇಲ್ಲದಿರುವುದು. ಪಂಡಿತ್ ಜವಾಹರಲಾಲ ನೆಹರು ಅವರು ಅನೇಕ ಸಲ ಹೇಳಿದ್ದು ಏನೆಂದರೆ ಸ್ವತಂತ್ರ ಭಾರತದ ರಾಜ್ಯ ಹಿಂದೂಗಳಿಗೇ ಅಲ್ಲ, ಮುಸಲ್ಮಾನರಿಗೆ ಅಲ್ಲ, ಕ್ರೈಸ್ತರಿಗೇ ಅಲ್ಲ ಎಂದು. ಮತ್ತೆ ಇದು ಯಾರಿಗೆ ಎಂಬ ಪ್ರಶ್ನೆಗೆ ಬಹಳಷ್ಟು ಮಂದಿ ಹಿಂದೂಸ್ತಾನಿಗಳಿಗೆ 382 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಂಬ ಉತ್ತರ ಕೊಡಲು ಪ್ರಯತ್ನಿಸಿದರು. ಆದರೆ ಈ ಹಿಂದೂಸ್ತಾನಿ ಯಾರೂ ಎಂಬುದುರ ಬಗ್ಗೆ ಜಗಳ ಉಂಟಾಗುತ್ತದೆ. ಇದರಲ್ಲಿ ಯಾರ ಪಾಲು ಎಷ್ಟು? ಇದನ್ನು ಯಾವ ಆಧಾರದ ಮೇಲೆ ನಿರ್ಣಯಿಸಬೇಕು? ಸಂಖ್ಯಾ ಬಲದ ಆಧಾರದ ಮೇಲೆಯೇ? ಅಥವಾ ಇನ್ನು ಯಾವುದರ ಆಧಾರದ ಮೇಲೆ ? ಇದುವರೆಗೆ ನಾವು ಸಂಖ್ಯಾಬಲದ ಆಧಾರದ ಮೇಲೆ ಮಾನ್ಯ ಮಾಡಿದ್ದೆವೋ ಮತ್ತು ಯಾವ ಯಾವ ವಿಷಯಗಳ ಮೇಲೆ ನಾವು ಈ ವರ್ಗದವರೆಂದು ನಿಂತಿದ್ದರೋ ಅವರನ್ನು ಸೇರಿಸುವ ಪ್ರಯತ್ನ ಮಾಡಿದೆವು. ಬ್ರಿಟಿಷರಿಂದ ಆಗುತ್ತಿದ್ದ ಎಲ್ಲ ಹೊಂದಾಣಿಕೆ ಮತ್ತು ಆ ಕಾಲದ ಎಲ್ಲಾ ಆಂದೋಲನಗಳಲ್ಲಿ ಅದೇ ಮುಖ್ಯ ಪ್ರಶ್ನೆಯಾಗಿತ್ತು. ಅದರ ಪರಿಣಾಮ ಪಾಕಿಸ್ತಾನವಾಯಿತು. ಇದನ್ನು ಒಪ್ಪಿಕೊಂಡಲ್ಲಿ ಯಾವುದೇ ಬುದ್ಧಿವಂತ ವ್ಯಕ್ತಿಗೆ ಹಾನಿಯುಂಟಾಗುವುದಿಲ್ಲ. ಈ ರೀತಿಯ ವರ್ಗೀಕರಣ ಕೇವಲ ಕೋಮುಗಳ ಆಧಾರದ ಮೇಲೆಯೇ ಅಲ್ಲ. ಭಾಷೆ ಮತ್ತು ಆರ್ಥಿಕ ಆಧಾರದ ಮೇಲೆಯೂ ಮಾಡಲಾಗುವುದು. ಈಗ ನಮ್ಮ ಎಲ್ಲ ವರ್ಗಗಳಿಗೆ ಒಂದು ಸ್ವತಂತ್ರ ಅಸ್ತಿತ್ವವಿದೆ ಮತ್ತು ಈ ರೀತಿಯ ಅನೇಕ ಸ್ವತಂತ್ರ ವರ್ಗಗಳನ್ನು ಸೇರಿಸಿ ಸಮಗ್ರ ಭಾರತದ ರಚನೆ ಮಾಡಬೇಕು. ಇದರ ಪರಿಣಾಮ ನಮ್ಮ ಇಂಡಿಯನ್ ಯೂನಿಯನ್ ಮತ್ತು ಅದರ ಪ್ರಸ್ತುತ ವಿಧಾನ, ಇದರ ಕಲ್ಪೆನಯು ಪ್ರಾಂತೀಯ ಸ್ವತಂತ್ರತೆಯ ಹೆಸರಿನ ಸಿದ್ಧಾಂತಕ್ಕೆ ಜನ್ಮನೀಡಿದೆ ಮತ್ತು ಪ್ರಾಂತ್ಯಗಳ ಒಂದು ಅಧಿಕಾರವನ್ನು ಕೇಂದ್ರ ತನ್ನ ಕೈಗೆ ತೆಗೆದುಕೊಂಡರೂ ಪ್ರಾಂತ್ಯ ಪ್ರತಿನಿಧಿ ಪ್ರಾಂತೀಯ ಸ್ವತಂತ್ರದ ನೆಪದಲ್ಲಿ ಪ್ರಾಂತ್ಯಗಳನ್ನು ಮುನಿಸಿಪಾಲಿಟಿಗೆ ಸಮನಾಗಿ ಮಾಡುವ ಪ್ರಯತ್ನವಾಗುತ್ತಿದೆ ಎಂಬ ಟೀಕೆ ಪ್ರಾರಂಭವಾಗಿತ್ತು. ಧಾರ್ಮಿಕ ಸ್ವಾತಂತ್ರ್ಯದ ಪರಿಣಾಮವಾಗಿ ಪಾಕಿಸ್ತಾನವಾಯಿತು ಎಂದ ಮೇಲೆ ಈ ಪ್ರಾಂತೀಯ ಸ್ವಾತಂತ್ರ್ಯತೆಯ ಪರಿಣಾಮವೇನಾಗಬಹುದು ಎಂಬುದನ್ನು ಭವಿಷ್ಯವೇ ಹೇಳಬೇಕಾಗುತ್ತದೆ. ಆರ್ಥಿಕ ಆಧಾರದ ಮೇಲೆ ಸ್ವತಂತ್ರ ವರ್ಗಗಳ ಪರಿಕಲ್ಪನೆ ಮಾಡಲಾಗಿದೆ. ಒಬ್ಬ ಜಮೀನ್ದಾರನಾದರೆ ಇನ್ನೊಬ್ಬ ರೈತ. ಒಬ್ಬ ಬಂಡವಾಳಶಾಹಿಯಾದರೆ ಇನ್ನೊಬ್ಬ ಕಾರ್ಮಿಕ, ಒಬ್ಬ ಶೋಷಕನಾದರೆ ಇನ್ನೊಬ್ಬ ಶೋಷಿತ. ಈ ರೀತಿಯ ವರ್ಗೀಕರಣವಾದರೆ ಒಬ್ಬರು ಮತ್ತೊಬ್ಬರ ಮೇಲೆ ದಬ್ಬಾಳಿಕೆ ನಡೆಸಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನ ನಡೆಯುತ್ತದೆ. ಅಥವಾ ಇಬ್ಬರ ಮಧ್ಯೆ ಸಾಮರಸ್ಯವನ್ನುಂಟು ಮಾಡುವ ಪ್ರಯತ್ನ ಮಾಡಲಾಗುತ್ತದೆ. ಹೀಗೆ ಅನೇಕ ವರ್ಗಗಳು ಯಾವುದನ್ನು ರಾಜನೀತಿಜ್ಞರು, ಕಠೋರಸತ್ಯ ಎಂಬುದನ್ನು ಒಪ್ಪಿಕೊಂಡು ನಡೆಯುತ್ತಿದ್ದಾರೋ ಅದು ವಾಸ್ತವದಲ್ಲಿ ಮಿಥ್ಯ. ಎಲ್ಲಿಯವರೆಗೆ ನಾವು ಅವುಗಳ ಅಸ್ತಿತ್ವವನ್ನು ಅಂಗೀಕರಿಸಿ ಅವುಗಳನ್ನು ಓಲೈಸುವ, ರಾಷ್ಟ್ರ ಚಿಂತನ 383 ನಮ್ಮ ನೀತಿಯಿಂದ ಅವುಗಳ ಅಹಂಕಾರ ಮತ್ತು ಸ್ವಾರ್ಥದ ವೃದ್ಧಿಯನ್ನು ಮಾಡುತ್ತಿರುತ್ತೇವೆಯೋ ಅಲ್ಲಿಯವರೆಗೆ ರಾಜನೀತಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುತ್ತದೆ. ಸತ್ಯವೇನೆಂದರೆ ಸಮಗ್ರ ಭಾರತ ಒಂದೇ ಮತ್ತು ಭಾರತದ ಸಂತತಿ ಒಂದೇ ಮತ್ತು ಎಲ್ಲರಲ್ಲಿಯೂ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿರಬೇಕು. ಅನೇಕ ಅಂಗಗಳನ್ನು ಒಟ್ಟು ಸೇರಿಸಿ ಶರೀರವನ್ನು ಸೃಷ್ಟಿ ಮಾಡಲಾಗುವುದಿಲ್ಲ. ಆದರೆ ಶರೀರಕ್ಕೆ ಅನೇಕ ಅಂಗಗಳಿರುತ್ತವೆ. ಆದ್ದರಿಂದ ಪ್ರತಿಯೊಂದು ಅವಯವವೂ ತನ್ನ ಸ್ವತಂತ್ರ ಅಸ್ತಿತ್ವಕ್ಕೆ ಬದಲಾಗಿ ಶರೀರದ ಸಮಗ್ರ ಅಸ್ತಿತ್ವ್ಕಕಾಗಿಯೇ ಪ್ರಯತ್ನ ಮಾಡುತ್ತಿರಬೇಕು. ಈ ರೀತಿ ರಾಷ್ಟ್ರದ ಎಲ್ಲಾ ಅಂಗಗಳೂ ತಮ್ಮ ರೂಪರೇಷೆ, ರಾಷ್ಟ್ರೀಯ ಸ್ವರೂಪ ಮತ್ತು ಹಿತಗಳಿಗಾಗಿ ದುಡಿಯಬೇಕೇ ಹೊರತು ರಾಷ್ಟ್ರದ ಹಿತದೃಷ್ಟಿಯಿಂದ ಈ ಅಂಗಗಳನ್ನು ಕತ್ತರಿಸುವುದಲ್ಲ. ಕೋಮುಗಳು, ಪ್ರಾಂತ್ಯಗಳು, ಭಾಷೆಗಳು ಮತ್ತು ವರ್ಗಗಳು ರಾಷ್ಟ್ರಹಿತಕ್ಕಾಗಿ ಅನುಕೂಲವಾಗಿರುವ ತನಕ ಅದಕ್ಕೆ ಬೆಲೆಯಿರುತ್ತದೆ. ಇಲ್ಲದಿದ್ದಲ್ಲಿ ದೇಶದ ಐಕ್ಯತೆಗಾಗಿ ಅವನ್ನು ಬಲಿ ನೀಡುವುದಕ್ಕೂ ನಾವು ಹಿಂದೆಗೆಯಬಾರದು. ವೈವಿಧ್ಯವನ್ನು ಸತ್ಯವೆಂದು ಒಪ್ಪಿಕೊಂಡು ಏಕತ್ವದ ಪರಿಕಲ್ಪನೆ ಮಾಡುವುದು ಒಂದು ದೃಷ್ಟಿಕೋನವಾದರೆ, ಏಕತ್ವವನ್ನು ಅಂಗೀಕರಿಸಿ, ಅದರಲ್ಲಿ ಭಿನ್ನತ್ವವನ್ನು ದರ್ಶಿಸುವುದು ಎರಡನೆಯ ದೃಷ್ಟಿಕೋನ. ನದಿಯ ನೀರಿನಲ್ಲಿ ಅಸಂಖ್ಯಾತ ಅಲೆಗಳಿದ್ದರೂ ನದಿಯ ನೀರು ಒಂದೇ, ಅಲೆಗಳಿಗೆ ಪ್ರತ್ಯೇಕವಾದ ಅಸ್ತಿತ್ವ ಇರುವುದಿಲ್ಲ. ಅಲೆಗಳ ಸಮೂಹವೇ ನದಿ ಎಂದು ಭಾವಿಸುವುದು ತಪ್ಪಾಗುತ್ತದೆ. ದೇಶದ ಪಾಲನೆಯ ಕಡಿವಾಣ ಕೈಯಲ್ಲಿ ಇಟ್ಟುಕೊಂಡಿರುವ ಭಾರತ ಭಾಗ್ಯವಿಧಾತರು ಮೊದಲನೆಯ ದೃಷ್ಟಿಕೋನದವರೆಂದು ಹೇಳುವುದಕ್ಕೆ ಚಿಂತಿಸಬೇಕಾಗುತ್ತದೆ. ನಮ್ಮ ದೇಶದ ರಾಜನೀತಿಯ ಮೂಲಭೂತವಾದ ಈ ತಪ್ಪನ್ನು ಸರಿಪಡಿಸಿದಿದ್ದರೆ ನಮ್ಮ ಭಾರತದ ತಳಹದಿ ಸುದೃಢವಾಗಿರುವುದು ಸಂದೇಹಾಸ್ಪದ. ನಮ್ಮ ಸಂವಿಧಾನವನ್ನು ಏನು ಮಾಡೊಣ? ಒಬ್ಬ ಕಾಬುಲೀವಾಲಾ ಸಾಬೂನು ಮಾರುವ ಅಂಗಡಿಯಿಂದ ಒಂದು ಸಾಬೂನಿನ ತುಂಡನ್ನು ಮಿಠಾಯಿ ಎಂಬ ಭ್ರಮೆಯಲ್ಲಿ ಖರೀದಿಸಿ ತಿನ್ನಲು ಪ್ರಾರಂಭಿಸಿದ. ಗಂಟಲಿನಲ್ಲಿ ಇಳಿಯುತ್ತಿದ್ದ ಸಾಬೂನಿನ ರುಚಿ ತಿಳಿದರೂ ಮತ್ತೆ ಮತ್ತೆ ಅದನ್ನು ತಿನ್ನುತ್ತಲೇ ಇದ್ದ. ಈ ಬಗ್ಗೆ ಯಾರೋ ಒಬ್ಬ ``ಖಾನ್ ಏನು ತಿನ್ನುತ್ತಿರುವೆ?" ಎಂದು ಕೇಳಿದಾಗ ಖಾನ ಕೂಡಲೇ ``ಖಾನ್ ಮತ್ತೇನು ತಿನ್ನುತ್ತಾನೆ ತನ್ನ ದುಡ್ಡನ್ನು ತಿನ್ನುತ್ತಿದ್ದಾನೆ" ಎಂದು ಉತ್ತರಿಸಿದ. ಈ ಮಾತು ಇಂದಿನ ನಮ್ಮ ಸಂವಿಧಾನಕ್ಕೆ ಅನ್ವಯಿಸಿದಂತೆ ಒಬ್ಬ ಸಾಮಾನ್ಯ ಭಾರತೀಯನ ಮನಸ್ಥಿತಿಯ ಬಗ್ಗೆ ಹೇಳಲಾಗುತ್ತದೆ. 384 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಾವು ಅನೇಕ ವರ್ಷಗಳಿಂದ ಒಂದು ಸಂವಿಧಾನ ಸಭೆಯ ಬೇಡಿಕೆಯನ್ನಿಟ್ಟಿದ್ದೆವು ಮತ್ತು ಬೇರೆ ಯಾವುದೇ ರೀತಿಯ ವಿಧಾನವನ್ನು ಹೊರಗಿನಿಂದ ತರುವುದು ನಮಗೆ ಬೇಡವಾಗಿತ್ತು. ಆದ್ದರಿಂದ ನಾವು ನಮ್ಮ ಸಂವಿಧಾನವನ್ನು ಸ್ವತಃ ನಾವೇ ರಚನೆ ಮಾಡಿಕೊಂಡೆವು. 1935ರ ಗೌರ್ನಮೆಂಟ್ ಆಫ್ ಇಂಡಿಯಾ ಆ್ಯಕ್ಟ್‍ನ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಈ ವಿಧಾನವನ್ನು ಸ್ವೀಕರಿಸದೇ ಹೋದಲ್ಲಿ ಎಂಬ ಸಂಶಯ ಕಾರ್ಮಿಕ ದಳದ ಮುಖಂಡರಲ್ಲಿ ಉಳಿದುಕೊಂಡಿತ್ತು. ಆದ್ದರಿಂದ ಶ್ರೀ ಹೋರ್‍ರವರು ಕಾಂಗ್ರೆಸ್ ತನ್ನ ಸಂವಿಧಾನದ ಸಭೆಯ ಮೂಲಕ ಅಂಗೀಕರಿಸಿದ ವಿಧಾನಕ್ಕೆ ಹೊರತಾಗಿ ಬೇರೆ ಯಾವ ವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಎಂಬುದನ್ನು ಅವರು ತಿಳಿದುಕೊಳ್ಳಬೇಕೆಂದು ಉತ್ತರಿಸಿದರು. ಕಾಂಗ್ರೆಸ್ ಘನತೆಯಿಂದ ಅಂಗೀಕರಿಸುತ್ತದೆ ಎಂದು ಹೇಳಲಾದ ಈ ಭವಿಷ್ಯವಾಣಿ ಸಂಪೂರ್ಣವಾಗಿ ನಿಜವಾಗದಿದ್ದರೂ ದೇಶಭಕ್ತಿಯ ಮೂಲಭೂತ ಸಿದ್ಧಾಂತದ ಪ್ರತಿಪಾದನೆ ಅವಶ್ಯಕವಾಗಿ ಆಯಿತು. ಸ್ವರಾಜ್ಯದ ಹಸಿವನ್ನು ಸ್ವರಾಜ್ಯದಿಂದ ಅಳಿಸಲಾಗುವುದಿಲ್ಲ ಎಂಬ ಸತ್ಯಾಂಶದ ಅನುಸಾರ ಬ್ರಿಟಿಷ್ ಪಾರ್ಲಿಮೆಂಟ್‍ನ ಮೂಲಕ ವಿಧಾನಗಳ ಬಹುದೊಡ್ಡ ದೋಷವೆಂದರೆ ಅದು ಪರಕೀಯ ಪ್ರಭುತ್ವದ ಮೂಲಕ ನಿರ್ಮಿತವಾದ ವಿಧಾನವಾಗಿತ್ತು ಮತ್ತು ಅದಕ್ಕೆ ವಿರುದ್ಧವಾದ ಇಂದಿನ ಭಾರತದ ಬಹುದೊಡ್ಡ ಗುಣವೆಂದರೆ ಅದರ ರಚನೆಯಲ್ಲಿ ಈ ದೇಶದವರೇ ಆದ ಕೆಲವು ಜನರು ಸೇರಿ ಮಾಡಿರುವುದು. ಆದ್ದರಿಂದ ಈ ಸಂವಿಧಾನವನ್ನು ಅಂಗೀಕರಿಸುವುದು ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯವಾಗುತ್ತದೆ. ಸುಮಾರು ಒಂದು ಕೋಟಿ ರೂಪಾಯಿಯನ್ನು ಖರ್ಚುಮಾಡಿ 3 ವರ್ಷಗಳ ಅವಧಿಯಲ್ಲಿ ಈ ಸಂವಿದಾನ ರಚನೆ ಸಾಧ್ಯವಾಯಿತು. ಆದುದರಿಂದ ಖಾನ್‍ನ ಪೈಸೆಯಂತೆ ರುಚಿ ಹೇಗಾದರೂ ಇರಲಿ ಗಂಟಲಿಂದ ಕೆಳಗಿಳಿಯಲೇಬೇಕು. ಆದ್ದರಿಂದ ಸಂವಿಧಾನದ ಮೊದಲ ಪ್ರತಿಕ್ರಿಯೆ ಎಂದರೆ ಅದನ್ನು ಗೌರವಿಸುವುದು. ಏಕೆಂದರೆ ಅದು ನಮ್ಮದೇ ಆಗಿದೆ ಮತ್ತು ದೇಶದ ಹೆಚ್ಚಿನ ಜನ ಈ ಭಾವನೆಯಿಂದಲೇ ನೋಡುತ್ತಾರೆ. ಏಕೆಂದರೆ ಶೇ 90 ರಷ್ಟು ಅವಿದ್ಯಾವಂತ ಜನರನ್ನು ಬಿಡಿ. ಉಳಿದ ಶೇ 10 ರಲ್ಲಿ 9 ರಷ್ಟು ಜನರಿಗೆ ವಿಧಾನ ಎಂದರೇನು ಮತ್ತು ಅದರಲ್ಲಿ ಏನೇನಿದೆ, ಸಂವಿಧಾನದ ವಿಭಿನ್ನ ವ್ಯವಸ್ಥೆಗಳು ಅವರ ಜೀವನದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಬಹುದು ಎಂಬ ಭವಿಷ್ಯದ ಗರ್ಭವನ್ನು ಒಳಹೊಕ್ಕು ಕಲ್ಪನೆ ಮಾಡಿಕೊಳ್ಳುವ ಶಕ್ತಿ ಅವರಲ್ಲಿದೆಯೇ? ಅವರು ಇದರ ಬಗ್ಗೆ ಉದಾಸೀನರಾಗಿದ್ದಾರೆ. ಅವರು ಮಾತ್ರವಲ್ಲ, ಬಡ ಭಾರತದ ಪರಿಶ್ರಮದ ಆದಾಯದ 45 ರೂಪಾಯಿಯನ್ನು ಪ್ರತಿನಿತ್ಯ ಇದಕ್ಕೆ ವೆಚ್ಚಮಾಡಲಾಯಿತು. ಈ ರೀತಿ ಪ್ರತಿದಿನದ 45 ರೂಪಾಯಿಗಳನ್ನು ಗಳಿಸುವ ಸಂವಿಧಾನ ಸಭೆಯ ಅನೇಕ ಸದಸ್ಯರು ಇದರ ಬಗ್ಗೆ ಇದುವರೆಗೂ ರಾಷ್ಟ್ರ ಚಿಂತನ 385 ಉದಾಸೀನರಾಗಿದ್ದರು. ಏಕೆಂದರೆ ಪ್ರತಿಸಲವೂ ಕೋರಂ ಕೊರತೆಯಿಂದಾಗಿ ಸಭೆಯ ಕಾರ್ಯಕಲಾಪಗಳು ಸ್ಥಗಿತಗೊಂಡವು. ಸರ್ವಶ್ರೀ ಕುಂಜ್ರೂ, ಕಾಮತ್, ಶಿಬ್ಬನ್‍ಲಾಲ್ ಸೆಕ್ಸೆನಾ ಮುಂತಾದ ಬೆರಳೆಣಿಕೆಯ ಸದಸ್ಯರನ್ನು ಬಿಟ್ಟರೆ ಉಳಿದ ಕೆಲವೇ ಸದಸ್ಯರು ತಮ್ಮ ಬುದ್ಧಿ ಮತ್ತು ಮಾತಿನ ಮೂಲಕ ಸಂವಿಧಾನಕ್ಕೆ ಸಂಬಂಧಿಸಿದಂತೆ ಏನಾದರೂ ತೊಂದರೆ ಕೊಡಬಹುದು. ಈ ಸಂವಿಧಾನ ಸಭೆಯು ಸಾಮಾನ್ಯ ಚುನಾವಣೆಯ ಆಧಾರದ ಮೇಲೆ ರಚನೆಯಾಗಿಲ್ಲ. ಸಾಮಾನ್ಯ ಜನತೆಯ ಪ್ರತಿನಿಧಿತ್ವವಿಲ್ಲದೆ ರಚನೆಯಾಗಿರುವುದರಿಂದ ಎಂದಾದರೂ ಕೆಲವು ಜನ ಆಪತ್ತನ್ನುಂಟುಮಾಡುತ್ತಾರೆ. ಸಾಮಾನ್ಯ ಚುನಾವಣೆಯಾದರೆ ಪರಿಣಾಮವು ಯಾವ ರೀತಿ ಭಿನ್ನವಾಗುತ್ತದೆ. ಎಂಬ ಪ್ರಶ್ನೆಯೂ ಏಳುತ್ತದೆ. ಕೇವಲ ಖಾನ್‍ನ ಹಣ ಹೆಚ್ಚು ಖರ್ಚಾಗುತ್ತದೆ ಅಷ್ಟೆ. ನಿಜವಾಗಿ ಹೇಳಬೇಕೆಂದರೆ ಪ್ರಾರೂಪ ಸಮಿತಿ ಮತ್ತು 2-4 ಸದಸ್ಯರ ಹೊರತಾಗಿ ಬೇರೆ ಯಾರಾದರೂ ಈ ಸಭೆಯ ಸದಸ್ಯರಾದರೂ ಈಗ ಮಾಡಿರುವಂತೆಯೇ ಮಾಡುತ್ತಾರೆ. ಸಾಮಾನ್ಯ ಚುನಾವಣೆಯಾಗಿ ಬಿಟ್ಟರೆ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ. ಏಕೆಂದರೆ ಅಶಿಕ್ಷಿತ ಜನರ ಅಭಿಪ್ರಾಯ ಭಿನ್ನ ರೀತಿಯಲ್ಲಿ ಪ್ರಕಟವಾಗುವುದಿಲ್ಲ. ಆದರೆ ಮೊದಲನೆಯ ಪ್ರತಿಕ್ರಿಯೆಯ ಆವೇಶ ಮುಗಿದುಹೋಗಿದ್ದರೂ ಸಂವಿಧಾನ ವಿಧಿಯ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಮತ್ತು ಮುಂದೊದಗುವ ಒಳಿತು ಕೆಡುಕುಗಳ ಪರಿಣಾಮದ ಕಲ್ಪನೆಯೂ ಉಂಟಾಗುತ್ತದೆ. ಪ್ರಜಾತಂತ್ರದ ಆದರ್ಶದ ಅನುಸಾರ ವಯಸ್ಕರ ಮತದಾನದ ಅಧಿಕಾರ ಮತ್ತು ಪೂರ್ಣವಾದ ಲೋಕತಂತ್ರೀಯ ಶಾಸನ ಪ್ರಣಾಲಿ ಅಭಿಮಾನದ ವಸ್ತು. ದೊಡ್ಡ ದೊಡ್ಡ ಸಭ್ಯ ದೇಶಗಳೂ ಕೂಡ ಅಲ್ಲಿಯತನಕ ತಲುಪಲರಾದಷ್ಟು ಅದು ಪ್ರಗತಿಯ ಬಿಂದು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಜನರಲ್ಲಿ ರಾಜನೈತಿಕ ಕ್ಷಮತೆಯ ಅಭಾವವಿದೆ. ಇದರ ಕುಸಿತದಿಂದಾದ ನೈತಿಕ ಸ್ಥರದಲ್ಲಿ ಅವರೇ ಏನು ಅವರ ಮುಖಂಡರು ಸಹಜ ಭ್ರಷ್ಟರಾಗಿದ್ದಾರೆ. ಆತ್ಮಾಭಿಮಾನದ ಕೊರತೆ, ಸಾವಿರ ವರ್ಷಗಳ ಗುಲಾಮತನ ಮತ್ತು ನಿರಂಕುಶ ಕಾನೂನಿನಲ್ಲಿ ಇದ್ದು ಇದ್ದು ನಮ್ಮದೇ ಆದ ಸ್ವಂತ ಕಾನೂನು ಮತ್ತು ಪ್ರಜಾತಂತ್ರಾತ್ಮಕ ಪರಂಪರೆಗಳಿಂದ ಶೂನ್ಯಸ್ಥಿತಿ, ಒಳಹೊರಗಿನ ಅಶಾಂತಿಯ ಅವಸ್ಥೆ ಮತ್ತು ಅಧಿಕಾರದ ಮೂಲಕ ಜನಾಭಿಪ್ರಾಯದ ಉಪೇಕ್ಷೆಯ ಪ್ರಚಲಿತ ಭಾವವನ್ನು ನೋಡಿ ಈ ಆದರ್ಶಗಳನ್ನು ನಾವು ನಮ್ಮ ವ್ಯವಹಾರದಲ್ಲಿ ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳಬಹುದು ಎಂಬ ಸಂಶಯ ಉಂಟಾಗುತ್ತದೆ. ಈಗ ಜನರಿಗೆ ಸಂಪೂರ್ಣ ಅಧಿಕಾರ ಸಿಕ್ಕಿದೆ ಮತ್ತು ಇದರ ರಕ್ಷಣೆಗಾಗಿ ಸಂವಿಧಾನ ಎಲ್ಲ ಪ್ರಕಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಇದು ನಿರ್ಮಾಣಗಳ ಕಾಲ. ಅಧಿಕಾರದ ಭಾವನೆಯಿಂದಲೇ ನಿರ್ಮಾಣವಾಗಲು ಸಾಧ್ಯವೇ? ``ಅಧಿಕಾರ ತನ್ನ 386 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಗ್ನರೂಪದಿಂದ ವಿರೋಧದ ಸಂಘಟನೆಯನ್ನು ಮಾಡುತ್ತದೆ, ಧ್ವಂಸ ಮಾಡುತ್ತದೆ. ಆದರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕರ್ತವ್ಯ ನಿರ್ಮಾಣ ಮಾಡುತ್ತದೆ ಮತ್ತು ಸಮಾಜದ ಸಾಮೂಹಿಕ ಶಕ್ತಿಯಿಂದ ಏಕತೆಯನ್ನು ಸ್ಥಾಪನೆ ಮಾಡುತ್ತದೆ'' ಎಂದು ಮೇಜಿ ಹೇಳಿದ್ದಾನೆ. ಆದ್ದರಿಂದ ಒಳ್ಳೆಯ ಸಿದ್ಧಾಂತವನ್ನು ಇಟ್ಟುಕೊಂಡ ಮೇಲೂ ಅರ್ಥವಾಗುವುದೇನೆಂದರೆ ಇದರ ಪುರಸ್ಕಾರವನ್ನು ಮಾಡಿದ ಮೇಲೆ ಯಾವುದೋ ಬೊಗಳೆ ಮಾತುಗಳಿಂದ ಜನರನ್ನು ಭ್ರಮೆಯಲ್ಲಿ ಮುಳುಗಿಸಿ ಧ್ವಂಸ ಮಾಡುವ ಶಕ್ತಿಗಳು ಮುಂದೆ ಬರದಿರಲು ಸಾಧ್ಯವೇ ಎಂಬುದು ಕಾಂಗ್ರೆಸ್‍ನ ಪಕ್ಷಪಾತ ಅಥವಾ ವಿಭಿನ್ನ ಭೇದಗಳ ಆಧಾರದ ಮೇಲೆ ಮಾಡಲಾದ ಅನೇಕ ರಾಜಕೀಯ ಪಕ್ಷಗಳು ಈ ಸಂಶಯಕ್ಕೆ ಮತ್ತಷ್ಟು ಬಲ ನೀಡುತ್ತಿರುವುದರಿಂದ ಅರಿವಾಗುತ್ತದೆ. ಭಾರತಕ್ಕೆ ಸಂಪೂರ್ಣ ಪ್ರಭುತ್ವ ಸಂಪನ್ನ ಎಂಬುದನ್ನು ಘೋಷಿಸಲಾಗಿದೆ. ಆದರೆ ಇದರ ವ್ಯವಸ್ಥೆಯನ್ನು ಒಳ್ಳೆಯ ಮಾದರಿಯಲ್ಲಿ ಮಾಡದಿದ್ದರೆ ಈ ಪ್ರಭುತ್ವ ಇರುತ್ತದೆಯೇ? ದೇಶದಲ್ಲಿ ಒಂದೇ ಪೌರತ್ವ ಹಾಗೂ ಕೇಂದ್ರಕ್ಕೆ ಪರ್ಯಾಯ ಶಕ್ತಿಯನ್ನು ಕೊಟ್ಟು ಭಾರತದ ಏಕತೆಯನ್ನು ಬಲಪಡಿಸುವ ಪ್ರಯತ್ನ ಮಾಡಲಾಯಿತು. ಆದರೆ ಇದಕ್ಕೆ ವಿಭಿನ್ನ ರಾಜ್ಯಗಳ ಕೂಟವನ್ನು ಒಪ್ಪಿಕೊಂಡಿದ್ದರಿಂದ ಅದರ ಏಕತೆಯ ಅಡಿಪಾಯದ ಮೇಲೆ ಕೊಡಲಿ ಪೆಟ್ಟು ಉಂಟಾಗಿದೆ. ಶರೀರವು ವಿಭಿನ್ನ ಅಂಗಗಳ ಸಮುಚ್ಛಯವಲ್ಲವಾದರೂ ಶರೀರದ ವಿಭಿನ್ನ ಅಂಗಗಳು ಕೂಟ ಕಲ್ಪನೆಯ ಪರಿಣಾಮವಾಗಿ ಭಾರತದ ಏಕತೆಗೆ ಖಂಡಿತವಾಗಿಯೂ ಪೆಟ್ಟು ಬೀಳುತ್ತದೆ. ಹಾಗೂ ದೇಶದಲ್ಲಿ ರಾಷ್ಟ್ರವಿರೋಧಿ ಭಾವನೆಗಳಿಗೆ ಪ್ರೇರಣೆ ಸಿಗುತ್ತದೆ. ರಾಜ್ಯ ಅಧಿಕಾರಕ್ಕಾಗಿ ನಡೆಯುವ ಕಾದಾಟ ರಾಷ್ಟ್ರೀಯತೆಯ ಅಭಾವದಲ್ಲಿ ಯಾವಾಗಲೂ ಭಯಾನಕ ಸ್ವರೂಪವನ್ನು ತಾಳುತ್ತದೆ. ಹಾಗೂ ಈಗ ಭಾಷಾವಾರು ಪ್ರಾಂತ್ಯ ರಚನೆಯಾಗಬೇಕೆಂಬ ಬೇಡಿಕೆಯ ಹಿಂದೆ ಈ ದುಷ್ಟ ಪ್ರವೃತ್ತಿಯ ಕಿಡಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಭಾರತದ ಕೂಟ ಕಲ್ಪನೆಯ ಒಂದು ದೊಡ್ಡ ದೋಷವೆಂದರೆ ಅವುಗಳ ಪುರಸ್ಕಾರವನ್ನು ಯಾವುದೇ ಮೌಲ್ಯದ ಮೇಲೆ ಮಾಡದಿರುವುದು. ಇದಕ್ಕೆ ಹೊರತಾಗಿ ಸಂವಿಧಾನದಲ್ಲಿ ಇದೇ ರೀತಿಯ ಇನ್ನೂ ಅನೇಕ ನ್ಯೂನತೆಗಳಿವೆ. ಅವುಗಳನ್ನು ಯಾರು ಬೇಕಾದರೂ ಮಾಡಬಹುದು. 1935ರ ಇಂಡಿಯಾ ಆ್ಯಕ್ಟ್‍ನ ಬಹುತೇಕ ಭಾಗ ಹೇಗಿದೆಯೋ ಹಾಗೆಯೇ ಸಂವಿಧಾನದಲ್ಲಿ ತೆಗೆದುಕೊಳ್ಳಲಾಗಿದೆ. ಅಲ್ಲದೆ ಉಳಿದ ಕೆಲವು ವಿಷಯಗಳಿಗೂ ಅದರ ಆಧಾರ ಪಶ್ಚಿಮದ ಜ್ಞಾನವೇ ಆಗಿದೆ. ಅಮೆರಿಕಾದ ಅಧ್ಯಕ್ಷ ಮತ್ತು ಬ್ರಿಟನ್ನಿನ ಸಂಸದೀಯ ಪ್ರಣಾಲಿಯ ವಿಚಿತ್ರ ಸಂಯೋಜನೆಯನ್ನು ಮಾಡುವ ಪ್ರಯತ್ನ ನಡೆದಿದೆ. ಸಂಸತ್ತು ಮತ್ತು ರಾಷ್ಟ್ರಪತಿ ಈ ವಿಭಿನ್ನ ದಳಗಳಾಗಿಬಿಟ್ಟರೆ ಇಬ್ಬರ ಜಗ್ಗಾಟ ತಮಾಷೆಯಾಗಿರುತ್ತದೆ ಮತ್ತು ದೇಶಕ್ಕೆ ಸಂಕಟದ ವಸ್ತುವಾಗಿ ಬಿಡುತ್ತದೆ. ರಾಷ್ಟ್ರ ಚಿಂತನ 387 ಭಾರತದ ಸಂವಿಧಾನದಲ್ಲಿ ಭಾರತೀಯತೆ ಅಭಾವ ಆಗಬಾರದು. ದೇಶದ ಹೆಸರು, ರಾಷ್ಟ್ರಭಾಷೆ ಮುಂತಾದ ಪ್ರಶ್ನೆಗಳ ಮೇಲೆ ಯಾವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೋ ಅದು ರಾಷ್ಟ್ರ ಜೀವನದ ಮೂಲಕಲ್ಪನೆ. ಭಾರತದ ಸಂವಿಧಾನದಲ್ಲಿ ಬಹಳಷ್ಟು ವಿಷಯಗಳನ್ನು ಸೇರಿಸಲಾಗಿದ್ದು ಅವುಗಳಲ್ಲಿ ಹೆಚ್ಚಿನಾಂಶ ಅನಗತ್ಯವಾಗಿವೆ. ಭಾವೀ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಷಯಗಳನ್ನು ಸೇರಿಸಲಾಗಿದೆ. ಇಂದಿನ ನಮ್ಮ ಕಲ್ಪನೆಗಳಿಂದ ಭಾವೀ ಜನಾಂಗವನ್ನು ಕಟ್ಟಿಹಾಕಿದರೆ ಅದು ಅವರ ಪ್ರಗತಿಗೆ ಅಡ್ಡಿಯಾಗುತ್ತದೆ. ಈ ರೀತಿಯ ಅಡಚಣೆಗಳು ನಮ್ಮ ಸಂವಿಧಾನದಲ್ಲಿ ಸಜ್ಜಾಗಿದ್ದು ಬೇರೆ ಇನ್ನಾವ ದೇಶದ ವಿಧಾನದಲ್ಲಿ ಹುಡುಕಿದರೂ ಸಿಗಲಾರದು. ಅಧ್ಯಕ್ಷರ ಚುನಾವಣೆಯಿಂದ ಮೊದಲ್ಗೊಂಡು ಸಾಧಾರಣ ಕಾರ್ಯಕರ್ತರವರೆಗಿನ ಸಂಬಂಧದಲ್ಲಿ ಕಾನೂನಿನ ವಿಧಿಗಳನ್ನು ಜೋಡಿಸಲಾಗಿದೆ. ಸಂವಿಧಾನದಲ್ಲಿ ಒಂದೆಡೆ ಅತ್ಯುಚ್ಛ ಆದರ್ಶಗಳ ಸಂಕಲ್ಪವಿದೆ. ಅದರಲ್ಲಿ ಇಂದಿನ ಸಮಾಜದ ಸ್ಥಿತಿಗತಿಗಳ ಕಡೆಗೆ ಯಾವುದೇ ಗಮನ ಹರಿಸಿಲ್ಲವಾದರೆ ಮತ್ತೊಂದೆಡೆ ಅನಿಹಿತ ಸ್ವಾರ್ಥಗಳ ಸಂರಕ್ಷಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. 'You do not enact a good law, but you grow it' ಎಂದು ಒಳ್ಳೆಯ ನಿಯಮಗಳ ಸಂಬಂಧದಲ್ಲಿ ಹೇಳಲಾಗಿದೆ. ಆದರೆ ಇಲ್ಲಿ ಸಂವಿಧಾನದ ವಿಕಾಸದ ಮಾರ್ಗವನ್ನೇ ಮುಚ್ಚಿಹಾಕಲಾಗಿದೆ. ಹಾಗಾದರೆ ಸಂವಿಧಾನವನ್ನು ಬಹಿಷ್ಕರಿಸುವುದೇ? ಎಂಬ ಪ್ರಶ್ನೆಯು ಸಹಜವಾಗಿ ಮೂಡುತ್ತದೆ. ಯಾವ ಸಂವಿಧಾನದ ಮೂಲಕ ದೇಶದ ಭವಿಷ್ಯದಲ್ಲಿ ಯಾವುದು ನಿಜವಾಗಿಯೂ ಹಾನಿಯುಂಟುಮಾಡುವುದೋ ಅಂತಹುದನ್ನು ಹೇಗೆ ಪುರಸ್ಕರಿಸುವುದು? ಆದರೆ ಈ ಕ್ಷಣದಲ್ಲಿ ಬರುವ ವಿಚಾರವೇನೆಂದರೆ ನಮ್ಮವರಿಂದಲೇ ನಿರ್ಮಾಣವಾದ ಸಂವಿಧಾನವನ್ನು ಬಹಿಷ್ಕರಿಸಿದರೆ ಅದರಿಂದ ಅನುಚಿತ ಪರಂಪರೆಯೊಂದು ನಿರ್ಮಾಣವಾದಂತಾಗಿ ಅದರಲ್ಲಿ ಭಾವನಾತ್ಮಕ ಸ್ಥಾನದಲ್ಲಿ ಅಭಾವನಾತ್ಮಕ ಮತ್ತು ಕ್ರಿಯಾತ್ಮಕ ಸ್ಥಾನದಲ್ಲಿ ಪ್ರತಿಕ್ರಿಯಾತ್ಮಕ ನಡೆವಳಿಕೆಯ ನಿರ್ಮಾಣವಾಗುತ್ತದೆ. ಗಾಂಧೀಜಿಯವರು 1935ರ ಶಾಸನದ ಸಂಬಂಧದಲ್ಲಿ ಮಾಡಿದ ಹಾಗೆ ನಾವೂ ಸಂವಿಧಾನದ ಪುರಸ್ಕಾರವನ್ನು ಮಾಡುತ್ತಲೇ ಅದನ್ನು ಸಮಾಪ್ತಿಗೊಳಿಸುವ ಪ್ರಯತ್ನ ಮಾಡಬಹುದು. ಆದರೆ ಬಹಿಷ್ಕಾರಕ್ಕಾಗಿ ಪುರಸ್ಕಾರ ಸರಿಯಲ್ಲ ಮತ್ತು ಮುಂಬರುವ ಸಂವಿಧಾನದ ಸಭೆ ಸರ್ವಾಂಗ ಪೂರ್ಣ ಸಂವಿಧಾನವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಯಾವ ಸಂವಿಧಾನವನ್ನು ಪೂರ್ಣವೆಂದು ಹೇಳಲು ಸಾಧ್ಯವಿಲ್ಲ. ಇಂಥ ಸ್ಥಿತಿಯಲ್ಲಿ ನಮಗಿರುವ ಒಂದೇ ಒಂದು ಮಾರ್ಗವೆಂದರೆ ಸಂವಿಧಾನದ ತಿದ್ದುಪಡಿಗೆ ತಕ್ಕ ಪುರಸ್ಕಾರ ಮಾತ್ರ. ಅರವತ್ತು ವರ್ಷಗಳಿಂದ 388 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಾ ಸರಿಯಾಗಲಿಲ್ಲ ಸಂವಿಧಾನವನ್ನು ಸಮಗ್ರವಾಗಿ ಬಹಿಷ್ಕಾರಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಸಾಧ್ಯ ನೀವೇ ಹೇಳಿ. ಇದಕ್ಕೆ ಭವಿಷ್ಯವೇ ಉತ್ತರ ನೀಡಬೇಕಾಗಿದೆ. ರಾಷ್ಟ್ರಭಾಷೆಯ ಸಮಸ್ಯೆ ರಾಷ್ಟ್ರಭಾಷೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರ ಆದೇಶವನ್ನು ಉಭಯ ಸದನಗಳ ಸಂಯುಕ್ತ ಅಧಿವೇಶನದಲ್ಲಿ ಇಡಲಾಯಿತು. ಬಜೆಟ್ ಮಂಡನೆಯ ಅಂತಿಮ ದಿನವಾಗಿದ್ದರಿಂದ ಸದಸ್ಯರಿಗೆ ಆ ವಿಷಯದ ಬಗ್ಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಅವಕಾಶ ಸಿಗಲಿಲ್ಲ. ಶಾಸನವು ಈ ವಿಷಯದಲ್ಲಿ ಪ್ರಾರಂಭದಿಂದಲೂ ಇದೇ ರೀತಿಯ ನೀತಿಯನ್ನು ತಳೆದಿದೆ. ಯಾವ ಕಾರಣಗಳಿಗಾಗಿ ಸದಸ್ಯರಿಗೆ ಈ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡುತ್ತಿಲ್ಲವೆಂಬುದು ಗೊತ್ತಿಲ್ಲ. ಯಾವಾಗ ಪ್ರಸ್ತಾವನೆಯನ್ನು ಇಟ್ಟರೂ ಅದನ್ನು ಅಧಿವೇಶನ ಅವಧಿಯ ಕೊನೆಯಲ್ಲೇ ಇಡಲಾಗುತ್ತಿದೆ. ಸಂವಿಧಾನದ ಪ್ರಕಾರ ಐದು ವರ್ಷಗಳ ನಂತರ ಶಾಸನವು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಏನು ಪ್ರಗತಿ ಸಾಧಿಸಿದೆ ಮತ್ತು ಮುಂದೆ ಅದು ಯಾವ ಹಾದಿಯಲ್ಲಿ ಸಾಗಬೇಕೆಂದಿದೆ ಎಂಬುದರ ಬಗ್ಗೆ ವಿಚಾರ ಮಾಡಿದ್ದರಿಂದ ಅನುಚ್ಛೇದ 344ರ ಅನ್ವಯ ರಾಜಭಾಷಾ ಆಯೋಗ, ಸಂಸದೀಯ ಸಮಿತಿ ಹಾಗೂ ರಾಷ್ಟ್ರಪತಿಯವರ ಆದೇಶದ ವ್ಯವಸ್ಥೆಯನ್ನು ಮಾಡಲಾಗಿದೆ. ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬಂದಿತು. ಜನವರಿ 26, 1955ರ ನಂತರ 344ನೇ ಅನುಚ್ಛೇದದ ಅನ್ವಯ ಕಾರ್ಯರೂಪಕ್ಕೆ ಬರಬೇಕಿತ್ತು. ಆದರೆ ಈ ಕಾರ್ಯ ಮಂದಗತಿಯಲ್ಲಿ ಸಾಗಿದ್ದರಿಂದ ಐದು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದುಹೋಯಿತು. ವಾಸ್ತವವಾಗಿ 26 ಜನವರಿ 1960ರ ನಂತರ ಎರಡನೇ ರಾಜಭಾಷಾ ಆಯೋಗ ಸ್ಥಾಪನೆಯಾಗಬೇಕಿತ್ತು. ರಾಷ್ಟ್ರಪತಿಗಳು ತಮ್ಮ ಆದೇಶದಲ್ಲಿ ಸಂವಿಧಾನದ 344ನೇ ಅನುಚ್ಛೇದದ ಮುಖಾಂತರ ಅವರ ಮೇಲೆ ವಹಿಸಿದ್ದ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ. ಬದಲಾಗಿ 343ನೇ ಅನುಚ್ಛೇದದಲ್ಲಿ ಹೇಳಲಾದ ಕ್ರಮವನ್ನು ಉಲ್ಲಂಘಿಸಿ, 1955ರ ನಂತರವೂ ಆಂಗ್ಲಭಾಷೆಯು ಒಂದು ಸಂಪರ್ಕ ಭಾಷೆಯ ರೂಪದಲ್ಲಿರುತ್ತದೆಂದು ಹೇಳಲಾಯಿತು. ಅನುಚ್ಛೇದ 343ರಲ್ಲಿ ಅಥವಾ ಭಾಗ 17ರಲ್ಲಿ ರಾಜಭಾಷೆಯ ವ್ಯವಸ್ಥೆ ಏನಿತ್ತೋ ಅಲ್ಲಿ ಸಹಯೋಗಿ ರಾಜಭಾಷೆಯ ರೂಪದಲ್ಲಿ ಆಂಗ್ಲ ಅಥವಾ ಇನ್ನಾವುದೇ ಭಾಷೆಯ ಕಲ್ಪನೆಯೂ ಇರಲಿಲ್ಲ. ಮತ್ತು ಸಂವಿಧಾನದ ಶಿಲ್ಪಿಗಳು ಇದರ ರಾಷ್ಟ್ರ ಚಿಂತನ 389 ಅಗತ್ಯತೆಯನ್ನು ಮನಗಂಡಿರಲಿಲ್ಲ. ಸಂಘದ ರಾಜಭಾಷೆಯಾಗಿ ಹಿಂದಿ ಮತ್ತು ಲಿಪಿ ದೇವನಾಗರಿ ಇರಲಿ, ಹದಿನೈದು ವರ್ಷಗಳ ಕಾಲಾವಧಿಯಲ್ಲಿ ಆಂಗ್ಲಭಾಷೆಯ ಉಪಯೋಗ ಕೇವಲ ರಾಜಕೀಯ ಪ್ರಯೋಜನಕ್ಕಾಗಿ ಮಾತ್ರವಿರಲಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. 15 ವರ್ಷಗಳ ನಂತರವೂ ಸಾಧಾರಣ ಆಂಗ್ಲಭಾಷೆಯು ರಾಜಕಾರ್ಯದಲ್ಲಿ ಯಾವುದೇ ರೀತಿಯಲ್ಲೂ ಸಹಾಯಕವಾಗುತ್ತಿಲ್ಲ. ಇದನ್ನು ಸಂಸತ್ತು ಮನಗಂಡಿದ್ದಲ್ಲಿ ಸಂವಿಧಾನದ ವಿಧಿಯ ಮುಖಾಂತರ ಅದರಲ್ಲಿ ಉಲ್ಲೇಖಿಸಲಾಗಿರುವಂತೆ ರಾಜಕೀಯ ಪ್ರಯೋಜನಕ್ಕಾಗಿಯೇ ಆಂಗ್ಲಭಾಷೆಯ ಉಪಯೋಗ ಎಂಬುದನ್ನು ತಡೆಯಬಹುದಿತ್ತು. ಸಂವಿಧಾನದ ವಿಧಿಯಲ್ಲಿ ಉಲ್ಲೇಖಿಸಿರುವಂತೆ 1965ರ ನಂತರ ಆಂಗ್ಲಭಾಷೆಯ ಸ್ಥಾನ ಏನು? ಎಷ್ಟು? ಮತ್ತು ಎಲ್ಲಿಯವರೆಗೆ ಇರುತ್ತದೆ ಎಂಬುದರ ನಿರ್ಣಯ ಸಂಸತ್ತಿನ ವಿಧಿಯ ಮುಖಾಂತರವೇ ಆಗಬೇಕಿತ್ತೇ ಹೊರತು ರಾಷ್ಟ್ರಪತಿಯವರ ಆದೇಶದ ಮುಖಾಂತರವಲ್ಲ. ಹೀಗಾಗಿದ್ದರೆ ರಾಷ್ಟ್ರಪತಿಯವರು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಸಂಸತ್ತಿನ ಇಂತಹ ನಿರ್ಣಯದಿಂದ ಒಂದೆರಡು ಪ್ರಯೋಜನಗಳಿಗಾಗುತ್ತಿತ್ತೇ ವಿನಃ ಸಂಪೂರ್ಣ ರಾಜಕಾರಣದ ಕ್ಷೇತ್ರಕ್ಕೆ ಅದರ ಹರವು ಸಾಧ್ಯವಾಗುತ್ತಿರಲಿಲ್ಲ. ಆದಾಗ್ಯೂ ಯಾವ ಕ್ಷೇತ್ರದಲ್ಲಿ ಆಂಗ್ಲಭಾಷೆಯ ಪ್ರಯೋಗ ಅದರ ವಿಧಾನದ ಅಂತರ್ಗತದ ರೂಪದಲ್ಲಿ ಆಯಿತೋ ಅಲ್ಲಿ ಅದು ಒಂದು ಸಹಯೋಗಿ ಭಾಷೆಯ ರೂಪದಲ್ಲಿ ಮಾತ್ರವಲ್ಲದೆ ಪ್ರಮುಖ ಭಾಷೆಯ ರೂಪದಲ್ಲಿ ವ್ಯವಹರಿಸಲು ಪ್ರಾರಂಭವಾಯಿತು. ಆ ಸಮಯದಲ್ಲಿ ಪ್ರಧಾನ ಮಂತ್ರಿಗಳು `ಸಹಯೋಗಿ ಭಾಷಾ' ಶಬ್ದದ ಪ್ರಯೋಗವನ್ನು ರಾಜಕೀಯ ದೃಷ್ಟಿಯಿಂದಲೇ ಮಾಡಬೇಕಾಯಿತು. ಆದರೆ ರಾಷ್ಟ್ರಪತಿಯವರ ಆದೇಶಗಳಲ್ಲಿ ಈ ಶಬ್ದದ ಪ್ರಯೋಗವಾಗುವುದು ಬೇಡವಾಗಿತ್ತು. ಅನುಚ್ಛೇಧ 344ರ ಅನ್ವಯ ಆಯೋಗ ಮತ್ತು ಸಂಸದೀಯ ಸಮಿತಿಯ ವರದಿಯನ್ನು ವಿಚಾರ ಮಾಡಿ ರಾಷ್ಟ್ರಪತಿಯವರಿಗೆ ಈ ಕೆಳಗಿನ ವಿಷಯಗಳ ಮೇಲೆ ತನ್ನ ಆದೇಶವನ್ನು ನೀಡಿತು. * ಸಂಘದ ರಾಜಕೀಯ ಪ್ರಯೋಜನಕ್ಕಾಗಿ ಹಿಂದೀ ಭಾಷೆಯ ಬಳಕೆಯನ್ನು ಇನ್ನು ಮುಂದೆ ಹೆಚ್ಚೆಚ್ಚು ಮಾಡುವುದು. * ಸಂಘದ ರಾಜಕೀಯ ಪ್ರಯೋಜನಗಳಲ್ಲಿ ಯಾವುದಕ್ಕೇ ಆಗಲಿ ಆಂಗ್ಲಭಾಷಾ ಬಳಕೆಯ ಮೇಲೆ ನಿರ್ಬಂಧ. * ಅನುಚ್ಛೇದ 348ರಲ್ಲಿ ವಿವರಿಸಲಾಗಿರುವ ಪ್ರಯೋಜನಗಳಲ್ಲಿ ಎಲ್ಲ ಅಥವಾ ಯಾವುದಕ್ಕೇ ಆಗಲಿ ಪ್ರಯೋಗ ಮಾಡಬಹುದಾದ ಭಾಷೆ ಒಂದೇ. 390 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 * ಸಂಘಕ್ಕೆ ಯಾವುದೇ ಒಂದು ಅಥವಾ ಹೆಚ್ಚು ಉಲ್ಲೇಖಿತ ಪ್ರಯೋಜನಗಳಿಗಾಗಿ ಪ್ರಯೋಗವಾಗುವ ಅಂಕಗಳ ರೂಪ. ಈ ಎಲ್ಲ ವಿಷಯಗಳ ಮೇಲೆ ರಾಷ್ಟ್ರಪತಿಯವರ ಆದೇಶವು ದೇಶವನ್ನು ಮುನ್ನಡೆಸುವ ಸ್ಥಾನದಲ್ಲಿ ಹಿಂದಕ್ಕೆಳೆಯುವಂತೆ ಮಾಡಿತು. ಶಾಸನ ಕ್ಷೇತ್ರದಲ್ಲಿ ಹಿಂದಿಯನ್ನು ಹೆಚ್ಚೆಚ್ಚು ಬಳಸುವ ಸಂಬಂಧದಲ್ಲಿ ಆದೇಶ ನಿಡುವುದು ಅವಶ್ಯಕವಾಗಿತ್ತು ಆದರೆ ಆ ಸ್ಥಾನದಲ್ಲಿ ಒಂದು ಹೇಳಿಕೆಯನ್ನು ನೀಡಲಾಯಿತು. ಅದೇನೆಂದರೆ ಹಿಂದಿಯನ್ನು ಹೆಚ್ಚೆಚ್ಚು ಪ್ರಯೋಗಿಸುವ ಅವಕಾಶವನ್ನು ಮಾಡಿಕೊಡುವ ಸಲುವಾಗಿ ಗೃಹ ಸಚಿವಾಲಯವು ಒಂದು ಯೋಜನೆಯ ನಿರ್ಮಾಣ ಮತ್ತು ಕ್ರಿಯಾನ್ವಯಕ್ಕಾಗಿ ಅವಶ್ಯಕವಾದ ಕಾರ್ಯಕ್ರಮವನ್ನು ಮಾಡುತ್ತದೆ. ಅಂದರೆ ಇದರರ್ಥ, ಕುಡಿಯಲು ನೀರು ಕೊಡುವ ಬದಲು ಬಾವಿ ತೋಡುವ ಯೋಜನೆಯನ್ನು ಮಾಡುವ ಆದೇಶ ನೀಡಲಾಯಿತು ಎಂಬಂತೆ. ಈಗ ಶಾಸನದ ಎಲ್ಲ ಕ್ಷೇತ್ರಗಳಲ್ಲೂ ಆಂಗ್ಲಭಾಷೆಯು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಅದರ ಪ್ರಯೋಗವನ್ನು ಪ್ರತಿಬಂಧಿಸುವ ಯಾವುದೇ ಆದೇಶ ಕೊಟ್ಟಿಲ್ಲ. ಎಲ್ಲಿ ಹೋಗುವುದು ? ಏಕೆಂದರೆ ಶಾಸನವೇ ತಯಾರಾಗದಿದ್ದ ಮೇಲೆ ಅದನ್ನು ತಡೆಯುವವರು ಯಾವುದೋ ಆದೇಶ ನೀಡಿ ಶಾಸನದ ಕಾರ್ಯಕ್ಕೆ ತೊಂದರೆ ನೀಡುವುದು ವ್ಯಾವಹಾರಿಕವಲ್ಲ. ಆದರೆ ಎಲ್ಲಿ ನಮ್ಮ ರಾಷ್ಟ್ರದ ಸ್ವತಂತ್ರ ಅಸ್ತಿತ್ವ ಹಾಗೂ ನಮ್ಮ ಗೌರವಕ್ಕೆ ಧಕ್ಕೆಯುಂಟಾಗುವುದೋ ಆಗ ನಾವು ಆಂಗ್ಲಭಾಷೆಯನ್ನು ತ್ಯಜಿಸಿ ನಮ್ಮ ರಾಷ್ಟ್ರಭಾಷೆಯ ಪ್ರಯೋಗ ಮಾಡೊಣ. ಅಂತಹ ಕೆಲವು ಕ್ಷೇತ್ರಗಳ ಅವಶ್ಯಕತೆಯಿದೆ. ವಿದೇಶದೊಂದಿಗೆ ನಮ್ಮ ಬಾಂಧವ್ಯದ ಪ್ರಶ್ನೆ ಬಂದಾಗ ಅವರ ಭಾಷೆಯನ್ನು ನಮ್ಮ ಹಾಗೆಯೇ ಮಾಡಿಕೊಳ್ಳಬೇಕು. ನಾವು ನಮ್ಮ ಸಹಜವಾದ ರಾಷ್ಟ್ರೀಯ ಸ್ವಾಭಿಮಾನದ ಕಾರಣ ಆಂಗ್ಲಭಾಷೆಯನ್ನು ಈ ಕ್ಷೇತ್ರದಿಂದ ಬೀಳ್ಕೊಡಬೇಕು. ನಾಗರಿ ಅಂಕೆಗಳಿಗೆ ಸಂಬಂಧಿಸಿದಂತೆ ಯಾವ ಆದೇಶ ಸಿಕ್ಕಿದೆಯೋ ಅದರ ಫಲಶ್ರುತಿಯಾಗಿ ಒಂದೇ ರೂಪದ ಹೆಸರಿನ ಮೇಲೆ ಎಲ್ಲಾ ಕಡೆಗಳಿಂದ ಬಹಿಷ್ಕಾರ ಉಂಟಾಗಬಹುದು. ಆದಾಗ್ಯೂ ರಾಷ್ಟ್ರಭಾಷೆಯ ಆಯೋಗವು ಹಿಂದಿಯ ಪ್ರಕಟಣೆಯಲ್ಲಿ ನಾಗರಿ ಅಂಕೆಗಳ ಪ್ರಯೋಗವೇ ಆಗಬೇಕೆಂದು ಸ್ಪಷ್ಟಪಡಿಸಿದ್ದರೂ ಕಾನೂನು ಹಿಂದಿಗೆ ಈ ಪ್ರಚಲಿತ ಅಂಕೆಗಳನ್ನು ಬಳಸಲು ಅನುಮತಿ ನೀಡಿಲ್ಲ. ಸಂವಿಧಾನದಲ್ಲಿ ಆಂಗ್ಲ ಅಂಕೆಗಳಿಗಾಗಿ ಆ ಸಮಯದಲ್ಲಿ ಉಂಟಾದ ಕಾದಾಟದಲ್ಲಿ ನಾವು ಸಿಕ್ಕಿ ಬಿದ್ದೆವು. ಆದರೆ ಅದರ ಅಧಾರದ ಮೇಲೆ ಅಲ್ಲಿ ನ್ಯಾಯವಾಗಿ ನಾಗರಿ ಅಂಕೆ ಪ್ರಸ್ತುತವಾಗಬೇಕಿತ್ತು. ಅಥವಾ ಆಗುತ್ತಲೇ ಇರುತ್ತದೆ. ಅಲ್ಲಿ ಕೂಡ ಅದಕ್ಕೆ ತೊಂದರೆಕೊಡುವುದು ಸರಿಯಲ್ಲ. ರಾಷ್ಟ್ರ ಚಿಂತನ 391 ಅನುಚ್ಛೇದ 348ರ ಅನ್ವಯ ಪ್ರಯೋಜನಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯವರ ಆದೇಶ ಕೇವಲ ಕಾನೂನು ಸಚಿವಾಲಯದಿಂದ ಕಾನೂನಿನ ಪುಸ್ತಕಗಳನ್ನು ಹಿಂದಿ ಅಥವಾ ಅನ್ಯಕ್ಷೇತ್ರಗಳ ಭಾಷೆಯಲ್ಲಿ ತರ್ಜುಮೆ ಮಾಡಲು ಶಿಫಾರಸ್ಸು ಮಾಡುತ್ತಿದೆ. ಇದೇ ಸಮಯದಲ್ಲಿ ನ್ಯಾಯಾಲಯದ ಮುಖಾಂತರ ಹಿಂದೀ ಅಥವಾ ಅನ್ಯರಾಜ್ಯಗಳ ರಾಜ್ಯ ಭಾಷೆಗಳಲ್ಲೂ ನ್ಯಾಯಾಲಯದ ನಿರ್ಣಯ, ಆದೇಶ, ಸಮನ್ಸ್ ಮುಂತಾದವುಗಳನ್ನು ಕೊಡುವ ವಿಷಯದಲ್ಲಿ ಉಪಯುಕ್ತವಾದ ವ್ಯವಸ್ಥೆಯನ್ನು ನಿರ್ಮಾಣ ಮಾಡಲಿ ಎಂಬ ಸಲಹೆಯನ್ನು ನೀಡಿದೆ. ಪಾರಿಭಾಷಿಕ ಶಬ್ದಗಳಿಗೆ ಸಂಬಂಧಿಸಿದಂತೆ ಒಂದು ನಿಖರವಾದ ಆದೇಶವನ್ನು ನೀಡಲಾಗಿದೆ. ಶಿಕ್ಷಣ ಸಚಿವಾಲಯದ ಅನ್ವಯ ಒಂದು ಸ್ಥಾಯೀ ಸಮಿತಿಯನ್ನು ನಿಯೋಜಿಸಲಾಗುತ್ತಿದೆ. ಇದು ಪಾರಿಭಾಷಿಕ ಶಬ್ದಗಳ ನಿರ್ಮಾಣವನ್ನು ಮಾಡುತ್ತದೆ. ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಶಿಕ್ಷಣ ಸಚಿವಾಲಯ ಹಾಗೂ ಇತರ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಯಾವ ಕಾರ್ಯ ಆಗಿದೆಯೋ ಅದರ ಮೇಲೆ ಪುನರ್ವಿಚಾರವನ್ನು ಮಾಡಲಾಗುತ್ತದೆ. ಪಾರಿಭಾಷಿಕ ಶಬ್ದಗಳ ಮೂಲವನ್ನು ಅಂತರಾಷ್ಟ್ರೀಯ ರೂಪದಲ್ಲೇ ಸ್ವೀಕರಿಸಬೇಕು. ಅವುಗಳ ವ್ಯುತ್ಪತ್ತಿ ಶಬ್ದಗಳನ್ನು ಮಾಡುವ ಸಮಯದಲ್ಲಿ ಭಾರತೀಯಕರಣವನ್ನು ಅವಶ್ಯಕವಾಗಿ ಮಾಡಬೇಕಾಗುತ್ತದೆ. ಎಂಬ ಸಿದ್ಧಾಂತವನ್ನು ಪಾರಿಭಾಷಿಕ ಶಬ್ದಗಳ ಸಂಬಂಧದಲ್ಲಿ ಪ್ರತಿಪಾದನೆ ಮಾಡುವುದರ ಮೂಲಕ ರಾಷ್ಟ್ರಪತಿಗಳು ತಮ್ಮ ಆದೇಶದಲ್ಲಿ ಭಾಷಾ ವಿಜ್ಞಾನದಲ್ಲಿ ಅಸಂಗತವಾದ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಈ ಮೂಲಶಬ್ದ ಗ್ರೀಕ್ ಅಥವಾ ಲ್ಯಾಟಿನ್‍ನಿಂದ ತೆಗೆದುಕೊಂಡಿದ್ದಲ್ಲಿ ವಿಜ್ಞಾನ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವುಗಳಿಗೆ ಹೊರತಾದ ಶಬ್ದಗಳನ್ನೇ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಅವುಗಳ ಜೊತೆ ಸಂಸ್ಕೃತಿ ಅಥವಾ ಹಿಂದಿಯ ಉಪಸರ್ಗ ಮತ್ತು ಪ್ರತ್ಯಯಗಳನ್ನು ಸೇರಿಸಿದರೆ ಮೊದಲನೆಯದಾಗಿ ಅವು ಸರಳ ಹಾಗೂ ಸಹಜವಾಗುವುದಿಲ್ಲ. ಎರಡನೆಯದಾಗಿ ಈ ರೀತಿಯಾಗಿ ಮಾಡಲ್ಪಟ್ಟ ಶಬ್ದ ಸಂಸ್ಕೃತ ಧಾತುವಿನಿಂದ ಮಾಡಲ್ಪಟ್ಟ ಶಬ್ದಕ್ಕಿಂತಲೂ ಕಠಿಣವಾಗುತ್ತದೆ. ರಾಷ್ಟ್ರಪತಿಗಳು ತಮ್ಮ ಆದೇಶವನ್ನು ಸಂಸದೀಯ ಸಮಿತಿಯ ಮೂಲಕ ವ್ಯಕ್ತವಾದ ಅಭಿಪ್ರಾಯದ ಮೇಲೆ ನೀಡಿದ್ದಾರೆ. ದುರ್ಭಾಗ್ಯದ ವಿಷಯವೇನೆಂದರೆ ಯಾವ ಪ್ರಶ್ನೆಯನ್ನು ಭಾಷಾ ಶಾಸ್ತ್ರಜ್ಞರಿಗೆ ಬಿಡಬೇಕಾಗಿತ್ತೋ ಅದರ ಮೇಲೆ ರಾಜಕಾರಣಿಗಳು ತಮ್ಮ ಅಭಿಪ್ರಾಯವನ್ನು ಕೊಡಲು ಪ್ರಾರಂಭಿಸಿದ್ದಾರೆ. ರಾಜಕಾರಣಿಗಳು ಭಾಷೆಯ ಹೆಸರಿನಲ್ಲಿ ಕಾಪಾಡಬಹುದು. ಆದರೆ ಭಾಷೆಯನ್ನು ಸೃಷ್ಟಿಸಲು ಅವರಿಗೆ ಸಾಧ್ಯವಿಲ್ಲ. 392 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರಾಷ್ಟ್ರಪತಿಗಳು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದಾಗ ಈ ವಿಷಯದಲ್ಲೂ ವಿಚಾರಮಾಡಿದ್ದರು. ಸಂವಿಧಾನದ ಹಿಂದಿ ಅಥವಾ ಇತರ ಭಾರತೀಯ ಭಾಷೆಗಳಲ್ಲಿ ಅನುವಾದ ಮಾಡುವ ಸಂದರ್ಭದಲ್ಲಿ ಈ ಪ್ರಶ್ನೆ ಉದ್ಭವಿಸಿತ್ತು. ಎಲ್ಲ ಭಾಷಾ ವಿದ್ವಾಂಸರ ಒಂದು ಸಮಿತಿ ಶ್ರೀ ಘನಶ್ಯಾಮಸಿಂಹಗುಪ್ತರ ಅಧ್ಯಕ್ಷತೆಯಲ್ಲಿ ಸೇರಿತ್ತು. ಅವರು ಆಂಗ್ಲಭಾಷೆಯ ಸ್ಥಾನದಲ್ಲಿ ಸಂಸ್ಕೃತ ಮತ್ತು ಭಾರತೀಯ ಭಾಷೆಗಳಲ್ಲಿ ಹೆಚ್ಚು ಪ್ರಚಲಿತವಿರುವ ಶಬ್ದಗಳನ್ನು ಪ್ರಯೋಗ ಮಾಡಬಹುದೆಂಬ ನಿರ್ಣಯ ತೆಗೆದುಕೊಂಡರು. `ಪಾರ್ಲಿಮೆಂಟ್' ಶಬ್ದದ ಪ್ರಯೋಗದಿಂದ ಮಾತ್ರ ಕಾರ್ಯಸಾಗುವುದಿಲ್ಲ. ಇದರ ಜೊತೆಗೆ ಇನ್ನಿತರ ವ್ಯುತ್ಪನ್ನ ಶಬ್ದಗಳನ್ನು ತರಬೇಕಾಗುತ್ತದೆ. ಅವುಗಳನ್ನು ಭಾರತೀಕರಣಗೊಳಿಸುವ ಪ್ರಯತ್ನ ಮಾಡಿದಲ್ಲಿ ಅದು ಶಿವಾಜಿಯ ಭಾರತವಾಗಿ ಬಿಡುತ್ತದೆಯೇ ಹೊರತು ಭಾಷೆಯಾಗಲಾರದು. ಸಂವಿಧಾನ ಸಭೆಯೂ ಹಿಂದಿಯ ಭಾವೀ ಸ್ವರೂಪ ವಿಚಾರವನ್ನು ಮಾಡುವ ಸಮಯದಲ್ಲಿ ಅನುಚ್ಛೇಧ 351ರಲ್ಲಿ ಇದನ್ನೇ ಹೇಳಿದೆ. ಏನೆಂದರೆ ಮುಖ್ಯವಾಗಿ ತನ್ನ ಶಬ್ದ ಭಂಡಾರಕ್ಕಾಗಿ ಬೇರೆ ಭಾಷೆಗಳಿಂದ ಶಬ್ದಗಳನ್ನು ಸ್ವೀಕರಿಸಬಹುದು. ಸಂಸ್ಕೃತ ಧಾತುವಿನಿಂದ ಮಾಡಲ್ಪಟ್ಟ ಶಬ್ದ ಈಗ ಸ್ವಲ್ಪ ಕಠಿಣವೆನಿಸಬಹುದು ಆದರೆ ಸ್ವಲ್ಪ ದಿನಗಳಲ್ಲಿ ಆ ಶಬ್ದ ನಮಗೆ ಹೆಚ್ಚು ಸುಲಭವೂ ಹಾಗೂ ಪ್ರಮಾಣಿತ ದೃಷ್ಟಿಯಿಂದ ಸೂಕ್ಷ್ಮ ಹಾಗೂ ಯಥಾರ್ಥ ಭಾವನೆಗಳನ್ನು ಅಭಿವ್ಯಕ್ತಪಡಿಸಬಹುದೆಂಬುದು ಸ್ಪಷ್ಟವಾಗುತ್ತದೆ. ಸಂಸ್ಕೃತನಿಷ್ಠ ಪಾರಿಭಾಷಿಕ ಶಬ್ದಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ದಕ್ಷಿಣ ಮತ್ತು ಪೂರ್ವ ಏಷ್ಯಾಗಳಿಗೂ ಬಳಕೆಗೆ ಬರುತ್ತವೆ. ಹಾಗೂ ಮುಂಬರುವ ಶಬ್ದಗಳಲ್ಲಿ ಅದೇ ಅಂತರಾಷ್ಟ್ರೀಯ ಶಬ್ದಗಳಾಗಿ ಬಿಡುತ್ತವೆ. ಸಂವಿಧಾನವು ರಾಷ್ಟ್ರಭಾಷೆಯ ವಿಷಯದಲ್ಲಿ ರಾಷ್ಟ್ರಪತಿಗಳ ಮೇಲೆ ಕೇಂದ್ರ ಶಾಸನದಿಂದ ಬೇರೆಯಾದ ಹೊಣೆಗಾರಿಕೆಯನ್ನು ಹೊರಿಸಿದೆ. ಅವರು ಅದರ ನಿರ್ವಹಣೆ ಮಾಡಬೇಕು. ಇದುವರೆಗೂ ರಾಷ್ಟ್ರಪತಿಗಳು ವ್ಯಕ್ತಿಗತ ರೂಪದಲ್ಲಿ ತಮ್ಮ ಅಧಿಕಾರದ ಪ್ರಯೋಗವನ್ನು ಮಾಡಲಿಲ್ಲ. ಹಾಗೂ 1965ರ ನಂತರವೂ ನಾವು ಒಂದು ಹೆಜ್ಜೆಯನ್ನೂ ಮುಂದಿಡಲಾಗಲಿಲ್ಲ. ವಾಸ್ತವವಾಗಿ ನಮ್ಮ ದೇಶದಲ್ಲಿ ಹಿಂದಿಗೆ ಯಾವ ವಿರೋಧವೂ ಇಲ್ಲ. ಈ ರೀತಿ ಕಾನೂನಿನ ನೀತಿಯ ಕಾರಣದಿಂದಾಗಿ ಹಿಂದಿ ಭಾಷಿಕರಲ್ಲದವರು ಹಿಂದಿ ಕಲಿಯುವ ಮತ್ತು ಅದರಲ್ಲಿ ಪ್ರಾವೀಣ್ಯತೆ ಪಡೆಯುವ ಅವಕಾಶ ಸಿಗದಿದ್ದಲ್ಲಿ ತಮ್ಮ ಭವಿಷ್ಯದ ದೃಷ್ಟಿಯಿಂದ ಆತಂಕಕ್ಕೊಳಗಾಗುವುದರಲ್ಲಿ ಸಂಶಯವಿಲ್ಲ. ಅವರ ಆತಂಕವನ್ನು ಹೋಗಲಾಡಿಸುವ ಪ್ರಯತ್ನ ನಡೆಯಬೇಕು. ಇದರಿಂದ ಹಿಂದಿ ಪ್ರಾಂತ್ಯಗಳಲ್ಲದ ಮಕ್ಕಳು ಸಹ ಹಿಂದಿ ಕಲಿಯಲು ಸಾಧ್ಯವಾಗುತ್ತದೆ. ರಾಷ್ಟ್ರ ಚಿಂತನ 393 ಈಗ ಡಾ. ರಾಮ ಮನೋಹರ್ ಲೋಹಿಯಾ ಮತ್ತು ಚಕ್ರವರ್ತಿ ರಾಜಗೋಪಾಲಚಾರಿಯವರು ಈ ವಿಷಯದಲ್ಲಿ ಅಜಗಜಾಂತರದಿಂದ ನೋಡುತ್ತಿದ್ದಾರೆ. ಇದಕ್ಕೆ ಶಾಸನದ ನಿಷ್ಕತೆಯಿಂದಾಗಿ ಹಿಂದಿಯ ಯೋಗ್ಯ ಪ್ರಹಾರ ಮತ್ತು ವಿಕಾಸದ ಅಭಾವ ಉಂಟಾಗಿರುವುದೂ ಕಾರಣವಾಗಿರಬಹುದು. 1965ರಲ್ಲಿ ಹಿಂದಿ ಜಾರಿಗೆ ಬಂದರೆ ಹಿಂದಿ ಜ್ಞಾನದ ಅಭಾವದಿಂದಾಗಿ ತಮಿಳರು ಉದ್ಯೋಗ ವಂಚಿತರಾಗಬಹುದು ಎಂದು ರಾಜಾಜಿಯವರಿಗೆ ಅನಿಸಿರಬಹುದು. ಹಿಂದಿಯ ಪ್ರಶ್ನೆ ಬಂದಾಗ ಬಹುಮಟ್ಟಿಗೆ ಒಮ್ಮತದ ಅಭಿಪ್ರಾಯವಿದ್ದಾಗ ಶಾಸನದ ನೀತಿಯ ನೆಪದಿಂದಾಗಿ ವಿವಾದವು ಅಲ್ಲಿಗೇ ನಿಂತುಬಿಡುತ್ತದೆ. ಇದುವರೆಗೆ ಕಾನೂನು ಪಾರಿಭಾಷಿಕ ಶಬ್ದಗಳನ್ನು ಏಕೆ ಮಾಡಲಿಲ್ಲ? ರಾಜಾಜಿಯವರೇನಾದರೂ ಅದನ್ನು ತಡೆದರೆ ಅವರು ಅದರಲ್ಲಿ ಯಾವ ಹಿಂದಿ ವಿರೋಧಿಯು ಅಡಚಣೆಯುಂಟುಮಾಡಿತು? ಅಡಚಣೆ ಹಿಂದಿಯ ವಿರೋಧಕ್ಕಾಗಿಯಲ್ಲ, ಶಾಸನದ ಉಪೇಕ್ಷತೆ, ಕುಂಟುನೆಪ ಹಾಗೂ ಉದಾಸೀನತೆಯ ನೀತಿಗಾಗಿ. ರಾಷ್ಟ್ರಪತಿಯವರ ಆದೇಶದ ಕೊನೆಯಲ್ಲೂ ಆ ನೀತಿಯಲ್ಲಿ ಪರಿವರ್ತನೆಯ ಯಾವ ಲಕ್ಷಣವೂ ಕಾಣಿಸಲಿಲ್ಲ. ಅದೇ ನೀತಿಯೇ ನಡೆಯುತ್ತಿದೆ. ಅದರ ಪರಿಚಯವೂ ಆ ಆದೇಶದಲ್ಲಿ ಸಿಕ್ಕಿದೆ. ಅಖಂಡ ಭಾರತ ಲಕ್ಷ್ಯ ಮತ್ತು ಸಾಧನ ಭಾರತೀಯ ಜನಸಂಘವು ತನ್ನ ಮುಂದೆ ಅಖಂಡ ಭಾರತದ ಧ್ಯೇಯವನ್ನು ಇಟ್ಟುಕೊಂಡಿದೆ. ಅಖಂಡ ಭಾರತ ದೇಶದ ಭೌಗೋಳಿಕ ಏಕತೆಯ ಸೂಚಕವಲ್ಲದೆ ವಿವಿಧತೆಯಲ್ಲಿ ಏಕತೆ ಭಾರತೀಯ ಜೀವನದ ದೃಷ್ಟಿಕೋನದ ದ್ಯೋತಕವೂ ಎಂಬುದನ್ನು ದರ್ಶನ ಮಾಡಿಸುತ್ತದೆ. ಅಖಂಡ ಭಾರತ ಯಾವುದೇ ರಾಜಕೀಯ ಪೋಷಣೆ ಅಲ್ಲ. ನಾವು ಇದನ್ನು ಯಾವುದೋ ಪರಿಸ್ಥಿತಿಯಲ್ಲಿ ಇದು ಜನಪ್ರಿಯವಾಯಿತೆಂದು ಸ್ವೀಕರಿಸಲಿಲ್ಲ. ಇದು ನಮ್ಮ ಸಂಪೂರ್ಣ ಜೀವನದ ವಿಧಾನದ ಮೂಲಾಧಾರವಾಗಿದೆ. 15 ಆಗಸ್ಟ್ 1947ರಂದು ಭಾರತದ ಏಕತೆಯ ವಿಭಜನೆಯಾಯಿತು ಮತ್ತು ಅಪಾರ ಧನಹಾನಿಯಾದ ಕಾರಣ ಜನರಿಗೆ ಅಖಂಡತೆಯ ಅಭಾವದ ಪ್ರತ್ಯಕ್ಷ ಪರಿಣಾಮವನ್ನು ಕಾಣಬೇಕಾಯಿತು. ಆದ್ದರಿಂದ ಭಾರತಕ್ಕೆ ಈಗ ಪುನಃ ಒಂದುಗೂಡಿಸುವ ಹಸಿವು ಪ್ರಬಲವಾಗಿದೆ. ಆದರೆ ನಾವು ಯುಗಯುಗಳಿಂದ ನಡೆದು ಬಂದಿರುವ ಜೀವನಾಧಾರದ ಅಂತಃ ಪ್ರವಾಹವನ್ನು ನೋಡುವ ಪ್ರಯತ್ನವನ್ನು ಮಾಡಿದರೆ ನಮ್ಮ ರಾಷ್ಟ್ರೀಯ ಚೇತನ ಯಾವಾಗಲೂ ಅಖಂಡತೆಗಾಗಿಯೇ ಪ್ರಯತ್ನಶೀಲವಾಗಿತ್ತು ಎಂಬುದು ತಿಳಿಯುತ್ತದೆ. ಈ ಪ್ರಯತ್ನದಲ್ಲಿ ನಾವು ಬಹಳಷ್ಟು ಮಟ್ಟಿಗೆ ಸಫಲರೂ ಆಗಿದ್ದೇವೆ. 394 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಉತ್ತರಂ ಯತ್ ಸಮುದ್ರಸೈ ಹಿಮದ್ರಾಚ್ಛೈವ ದಕ್ಷಿಣಂ| ವರ್ಷಂತದ್ ಭಾರತಂ ನಾಮ ಭಾರತೀ ಯಸ್ಯ ಸಂತತಿಃ || ಈ ರೀತಿಯಲ್ಲಿ ನಮ್ಮ ಪುರಾಣಕಾರರು ಭಾರತ ವರ್ಷದ ವ್ಯಾಖ್ಯಾನವನ್ನು ಕೇವಲ ಭೂಮಿಯ ಪರವಾಗಿಯೇ ಅಲ್ಲದೆ ಜನರು ತಮ್ಮ ಸಂಸ್ಕೃತಿಯ ಪರವಾಗಿಯೂ ಮಾಡಿದ್ದರು. ನಾವು ಭೂಮಿ, ಜನ ಮತ್ತು ಸಂಸ್ಕೃತಿಯ ನಡುವೆ ಯಾವ ವ್ಯತ್ಯಾಸವನ್ನು ಮಾಡಿಲ್ಲ. ಬದಲಾಗಿ ಅವುಗಳ ಏಕಾತ್ಮತೆಯ ಅನುಭವದ ಮೂಲಕ ರಾಷ್ಟ್ರದ ಸಾಕ್ಷಾತ್ಕಾರವನ್ನು ಮಾಡಿದ್ದೇವೆ. ರಾಷ್ಟ್ರೀಯ ಮತ್ತು ಏಕಾತ್ಮಕ ಸಂಸ್ಕೃತಿಗೆ ಯಾವ ಆಧಾರಭೂತ ಮಾನ್ಯತೆಗಳನ್ನು ಜನಸಂಘವು ಸ್ವೀಕಾರ ಮಾಡಿದೆಯೋ ಅವೆಲ್ಲವುಗಳ ಸಮಾವೇಶ ಅಖಂಡ ಭಾರತ ಶಬ್ದದಲ್ಲಿ ಅಡಗಿದೆ. ಅಟಕ್‍ನಿಂದ ಕಟಕ್, ಕಚ್‍ನಿಂದ ಕಾಮರೂಪ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಪೂರ್ಣ ಭೂಮಿಯ ಕಣಕಣವೂ ಪುಣ್ಯ ಮತ್ತು ಪವಿತ್ರ ಮಾತ್ರವಲ್ಲದೆ ಆತ್ಮೀಯ ಸ್ವೀಕಾರದ ಭಾವನೆ ಅಖಂಡ ಭಾರತದ ಒಳಗೆ ಸೇರಿಹೋಗಿದೆ. ಈ ಪುಣ್ಯಭೂಮಿಯಲ್ಲಿ ಅನಾದಿಕಾಲದಿಂದ ಯಾವ ಪ್ರಜೆಗಳಿದ್ದರೋ ಮತ್ತು ಈಗಲೂ ಇದ್ದಾರೋ ಅವರಲ್ಲಿ ಸ್ಥಾನ ಮತ್ತು ಕಾಲಕ್ರಮದಿಂದ ಬಹಿರಂಗವಾದ ಭಿನ್ನತೆ ಇದ್ದರೂ ಅವುಗಳಲ್ಲಿ ಸಂಪೂರ್ಣ ಜೀವನದಲ್ಲಿ ಮೂಲಭೂತವಾಗಿ ಏಕತೆಯ ದರ್ಶನವನ್ನು ಅಖಂಡ ಭಾರತದ ಪ್ರತಿಯೊಬ್ಬರೂ ಮಾಡುತ್ತಾರೆ. ಆದ್ದರಿಂದ ಎಲ್ಲಾ ರಾಷ್ಟ್ರವಾದಿಗಳ ಸಂಬಂಧದಲ್ಲಿ ಅವರ ಮನಸ್ಸಿನಲ್ಲಿ ಆತ್ಮೀಯತೆ ಮತ್ತು ಅದರಿಂದ ಉತ್ಪನ್ನವಾದ ಸೌಹಾರ್ದತೆ, ಶ್ರದ್ಧೆ ಮತ್ತು ವಿಶ್ವಾಸದ ಭಾವನೆ ಇರುತ್ತದೆ. ಅದು ಅವರ ಸುಖ-ದುಃಖಗಳ ಬಗ್ಗೆ ಸಹಾನುಭೂತಿಯನ್ನು ತೋರಿಸುತ್ತದೆ. ಈ ಅಖಂಡ ಭಾರತಮಾತೆಯ ಗರ್ಭದಲ್ಲಿ ಹುಟ್ಟಿದ ಸತ್ಪುತ್ರರು ತಮ್ಮ ಚಟುವಟಿಕೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಏನನ್ನು ನಿರ್ಮಾಣ ಮಾಡಿದ್ದಾರೋ ಅದರಲ್ಲಿ ಕೂಡ ಏಕತೆಯ ಸೂತ್ರವಿದೆ. ನಮ್ಮ ಧರ್ಮನೀತಿ, ಅರ್ಥನೀತಿ ಮತ್ತು ರಾಜನೀತಿ; ನಮ್ಮ ಸಾಹಿತ್ಯ, ಕಲೆ ಮತ್ತು ದರ್ಶನ; ನಮ್ಮ ಇತಿಹಾಸ, ಪುರಾಣ ಮತ್ತು ಉಪನಿಷತ್; ನಮ್ಮ ಸ್ಮೃತಿಗಳು ಮತ್ತು ವಿಧಿ ವಿಧಾನ ಎಲ್ಲವುಗಳಲ್ಲಿ ದೇವಪೂಜೆಯ ವಿವಿಧ ರೀತಿಯ ಕ್ರಮಗಳು ಹೊರನೋಟಕ್ಕೆ ಕಂಡುಬಂದರೂ ಆಂತರ್ಯದಲ್ಲಿ ಭಕ್ತಿಯ ಭಾವನೆ ಒಂದೇ ಆಗಿರುತ್ತದೆ. ನಮ್ಮ ಸಂಸ್ಕೃತಿಯ ಏಕತೆಯ ದರ್ಶನ ಅಖಂಡ ಭಾರತವನ್ನು ಗೌರವಿಸುವವರು ತಪ್ಪದೇ ಮಾಡಬೇಕು. ಸಂಪೂರ್ಣ ಜೀವನದ ಏಕತೆಯ ಅನುಭೂತಿ ಮತ್ತು ಆ ಅನುಭೂತಿಯ ಮಾರ್ಗದಲ್ಲಿ ಮುಂಬರುವ ಅಡಚಣೆಗಳನ್ನು ದೂರಮಾಡಲು ರಚನಾತ್ಮಕವಾದ ಪ್ರಯತ್ನದ ಹೆಸರೇ ಇತಿಹಾಸ. ಗುಲಾಮಗಿರಿ ನಮ್ಮ ಏಕತೆಯ ಅನುಭೂತಿಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿತ್ತು. ಪರಿಣಾಮವಾಗಿ ನಾವು ಅದರ ವಿರುದ್ಧ ರಾಷ್ಟ್ರ ಚಿಂತನ 395 ಹೋರಾಡಿದೆವು. ಸ್ವರಾಜ್ಯದ ಪ್ರಾಪ್ತಿಗೆ ಈ ಅನುಭೂತಿ ಸಹಕಾರಿಯಾಗಬೇಕಾಗಿತ್ತು. ಆದರೆ ಅದು ಹಾಗೆ ಆಗಲಿಲ್ಲ. ಆದ್ದರಿಂದ ನಾವು ಖಿನ್ನರಾದೆವು. ಈಗ ನಮ್ಮ ಜೀವನದಲ್ಲಿ ವಿರೋಧಿ ಪ್ರಭಾವಗಳ ಸಂಘರ್ಷವಾಗುತ್ತಿದೆ. ಅಖಂಡ ಭಾರತ ನಮ್ಮ ರಾಷ್ಟ್ರದ ಪ್ರಕೃತಿ; ನಮ್ಮ ರಾಷ್ಟ್ರದ ವಿಕೃತಿ. ಈಗ ನಾವು ವಿಕೃತಿಯಲ್ಲಿ ಆನಂದಾನುಭೂತಿಯನ್ನು ಅನುಭವಿಸುತ್ತಿದ್ದೇವೆ. ಖಂಡಿತ ಭಾರತಯೆನ್ನುವ ಭಾಷೆಗೆ ಒಳಗಾಗುತ್ತಿದ್ದೇವೆ, ಆದರೆ ಆನಂದ ಸಿಗುವುದಿಲ್ಲ. ಇದಕ್ಕೆ ಬದಲಾಗಿ ನಾವು ಸತ್ಯವನ್ನು ಸ್ವೀಕಾರ ಮಾಡಿದರೆ ನಮ್ಮ ಅಂತಃಸಂಘರ್ಷ ದೂರವಾಗಿ ನಮ್ಮ ಪ್ರಯತ್ನಗಳಿಗೆ ಏಕತೆ ಮತ್ತು ಶಕ್ತಿಬರುತ್ತದೆ. ಬಹುತೇಕ ಜನರ ಮನಸ್ಸಿನಲ್ಲೂ ಸಂಶಯ ಉಂಟಾಗಿದೆ. ಅಖಂಡ ಭಾರತ ಸಿದ್ಧಿಸುತ್ತದೋ ಅಥವಾ ಇಲ್ಲವೋ ಎಂಬ ಅವರ ಸಂಶಯ ಮೂಲತಃ ಮನೋವೃತ್ತಿಯ ಪರಿಣಾಮವಾಗಿದೆ. ಕಳೆದ ಅರ್ಧ ಶತಮಾನದ ಇತಿಹಾಸ ಮತ್ತು ನಮ್ಮ ಪ್ರಯತ್ನಗಳ ವೈಫಲ್ಯಗಳಿಂದ ಅವರು ಎಷ್ಟು ಮುಳುಗಿಹೋಗಿದ್ದಾರೆಂದರೆ ಅವುಗಳಿಂದ ಮೇಲೆದ್ದು ಬರುವ ಶಕ್ತಿ ಇಲ್ಲವೇ ಇಲ್ಲ. ಅವರು 1947ರಲ್ಲಿ ತಮ್ಮ ಏಕತೆಯ ಪ್ರಯತ್ನಗಳ ಪರಾಜಯ ಮತ್ತು ಪ್ರತ್ಯೇಕವಾದಿಯ ನೀತಿಯ ವಿಜಯವನ್ನು ನೋಡಿದರು. ಅವರ ಶಕ್ತಿ ಉಡುಗಿಹೋಯಿತು. ಮತ್ತು ಈಗ ಅವರು ಪರಾಜಯವನ್ನು ಸ್ಥಾಯೀಗೊಳಿಸಿದರು. ಆದರೆ ಇದು ಸಾಧ್ಯವಿಲ್ಲ. ಅವರು ರಾಷ್ಟ್ರದ ಪ್ರಕೃತಿಗೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ. ಹಿಂದಿನ ಕಷ್ಟ ಪರಂಪರೆಗೆ ಇದೇ ಕಾರಣ. 1947ರ ಪರಾಜಯ ಭಾರತದ ಏಕಾನುಭೂತಿಯ ಸೋಲಲ್ಲ. ಆದರೆ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ ಮಾಡಿದ ಪ್ರಯತ್ನಗಳ ಸೋಲು. ನಾವು ಏಕೆ ಸಫಲರಾಗಲಿಲ್ಲ ಎಂದರೆ ನಮ್ಮ ಉದ್ದೇಶ ತಪ್ಪಾಗಿತ್ತು. ಆದ್ದರಿಂದ ಮಾರ್ಗದ ಆಯ್ಕೆಯೂ ಕೂಡ ತಪ್ಪಾಗಿತ್ತು. ದೋಷದ ಸಾಧನದ ಕಾರಣದಿಂದಾಗಿ ಸಾಧ್ಯದ ಸಿದ್ಧಿಯೂ ಆಗಲಿಲ್ಲ. ಮತ್ತು ಅವ್ಯವಹಾರದಿಂದಲ್ಲ. ಇವತ್ತಿಗೂ ಕೂಡ ಅಖಂಡಭಾರತದ ವ್ಯಾವಹಾರಿಕತೆಯಲ್ಲಿ ಅವುಗಳ ಬಗ್ಗೆ ಅದೇ ಸಂಶಯ ಉಂಟಾಗುತ್ತದೆ. ಅವತ್ತು ದೋಷಯುಕ್ತ ಸಾಧನಗಳನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದರೋ ಅವು ಇವತ್ತಿಗೂ ಕೂಡ ಅವರನ್ನು ಬಿಡುತ್ತಿಲ್ಲ. ಅಖಂಡ ಭಾರತದ ಮಾರ್ಗದಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯೆಂದರೆ ಮುಸ್ಲಿಂ ಸಂಪ್ರದಾಯದ ಪ್ರತ್ಯೇಕವಾದಿ ಮತ್ತು ಅರಾಷ್ಟ್ರೀಯ ಮನಃಸ್ಥಿತಿಯಾಗಿದೆ. ಪಾಕಿಸ್ತಾನದ ಸೃಷ್ಟಿ ಆ ಮನೋವೃತ್ತಿಯ ವಿಜಯವಾಗಿದೆ. ಅಖಂಡ ಭಾರತದ ಸಂಬಂಧದಲ್ಲಿ ಒಂದು ಸಂಶಯ ಉಂಟಾಗುತ್ತಿದೆ. ಏಕೆಂದರೆ ಮುಸಲ್ಮಾನರು ತಮ್ಮ ನೀತಿಯಲ್ಲಿ ಪರಿವರ್ತನೆ ಮಾಡುವುದಿಲ್ಲ ಎಂಬ ಸಂಶಯ ಉಂಟಾಗುತ್ತಿದೆ. ಇದು ಅವರು ಒಪ್ಪಿಕೊಂಡಿರುವ ಸತ್ಯವೇ ಆದಲ್ಲಿ ಇದು ಭಾರತದ ಆರುಕೋಟಿ ಮುಸಲ್ಮಾನರನ್ನು ಇಟ್ಟುಕೊಳ್ಳುವುದು ರಾಷ್ಟ್ರಹಿತಕ್ಕೆ ದೊಡ್ಡ ಸಂಕಟವಾಗುತ್ತದೆ. ಯಾವುದೇ 396 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕಾಂಗ್ರೆಸ್ಸಿಗನಾಗಲಿ ಇದನ್ನು ಹೇಳುತ್ತಾನಾ? ಏನೆಂದರೆ ಮುಸಲ್ಮಾನರನ್ನು ಭಾರತದಿಂದ ಓಡಿಸಬೇಕೆ? ಇಲ್ಲವಾದಲ್ಲಿ ಅವರು ಭಾರತೀಯ ಜೀವನದ ಜೊತೆ ಸಾಮರಸ್ಯದಿಂದ ಇರಬೇಕಾಗುತ್ತದೆ. ಈ ಭೌಗೋಳಿಕ ದೃಷ್ಟಿಯಿಂದ ವಿಭಜನೆಯಾದ ಭಾರತದಲ್ಲಿ ಈ ಅನುಭೂತಿ ಸಾಧ್ಯವಾದರೆ ಉಳಿದ ಭೂಭಾಗಕ್ಕೂ ಇದು ಸಿಗುವುದು ದೂರವಿಲ್ಲ. ಏಕತೆಯ ಅನುಭೂಮಿಯ ಅಭಾವದಿಂದಾಗಿ ಈ ದೇಶ ವಿಭಜನೆಯಾಗಿದೆ. ಆದರೆ ಅವರ ಭಾವನೆಯಲ್ಲಿ ಅದು ಅಖಂಡವಾಗಿದೆ. ನಾವು ಅದಕ್ಕಾಗಿಯೇ ಪ್ರಯತ್ನ ಮಾಡೋಣ. ಮುಸಲ್ಮಾನರನ್ನು ಭಾರತೀಯರನ್ನಾಗಿ ಮಾಡುವುದಕ್ಕೆ ನಾವು ನಮ್ಮ ಕಳೆದ ಅರ್ಧ ಶತಮಾನಗಳ ಪುರಾತನ ನೀತಿಯನ್ನು ಬದಲಾಯಿಸಬೇಕಾಯಿತು. ಕಾಂಗ್ರೆಸ್ ಹಿಂದೂ ಮುಸಲ್ಮಾನ ಏಕತೆಯ ಪ್ರಯತ್ನವನ್ನು ತಪ್ಪು ಆಧಾರದ ಮೇಲೆ ಮಾಡಿತು. ಅದು ರಾಷ್ಟ್ರದ ಮತ್ತು ಸಂಸ್ಕೃತಿಯ ಜೊತೆ ಹಿಂದಿನಿಂದ ನಡೆದುಬಂದಂತಹ ಏಕತೆಯ ಸಾಕ್ಷಾತ್ಕಾರವನ್ನು ಮಾಡಲು ಮತ್ತು ಎಲ್ಲರಿಗೂ ಅದರ ಸಾಕ್ಷಾತ್ಕಾರ ಮಾಡುವ ಸ್ಥಾನದಲ್ಲಿ ಅನೇಕತೆಯ ಸಾಕ್ಷಾತ್ಕಾರವನ್ನು ಮಾಡಿತು ಮತ್ತು ಅನೇಕರಿಗೆ ಮೋಸ ಮತ್ತು ರಾಜಕೀಯ ಚೌಕಾಸಿಯ ಆಧಾರದ ಮೇಲೆ ಒಂದುಗೂಡಿಸುವ ಪ್ರಯತ್ನ ಮಾಡಿತು. ಭಾಷೆ, ಸಹಬಾಳ್ವೆ, ರೀತಿ ನೀತಿ ಎಲ್ಲದಕ್ಕೂ ಕೃತ್ರಿಮ ರೂಪದಿಂದ ರಚನೆ ಮಾಡಿತು. ಈ ಪ್ರಯತ್ನ ಯಾವಾಗಲೂ ಸಫಲವಾಗಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯತೆ ಮತ್ತು ಅರಾಷ್ಟ್ರೀಯತೆಯ ಸಮನ್ವಯ ಸಂಭವವಿಲ್ಲ. ನಮಗೆ ಏಕತೆ ಬೇಕಾದಲ್ಲಿ ಭಾರತೀಯ ರಾಷ್ಟ್ರೀಯತೆ ಯಾವುದಾಗಿದೆಯೋ ಅದು ಹಿಂದೂ ರಾಷ್ಟ್ರೀಯತೆ ಆಗಿದೆ ಮತ್ತು ಭಾರತೀಯ ಸಂಸ್ಕೃತಿ ಎಂದರೆ ಹಿಂದೂ ಸಂಸ್ಕೃತಿ. ಅವುಗಳನ್ನು ಮಾನದಂಡ ಮಾಡಿಕೊಂಡು ನಡೆಯೋಣ. ಭಾಗೀರಥಿಯ ಈ ಪುಣ್ಯ ಧಾರೆಯಲ್ಲಿ ಎಲ್ಲಾ ಧಾರೆಗಳು ಸಂಗಮವಾಗಲು ಬಿಟ್ಟರೆ ಯಮುನೆಯೂ ಸಿಗುತ್ತಾಳೆ ಮತ್ತು ತನ್ನ ಉಪನದಿಗಳನ್ನು ಸೇರಿಸಿಕೊಂಡು ತನ್ನ ಶ್ವೇತಧಾರೆಯಲ್ಲಿ ಹರಿಯುತ್ತಾಳೆ. ಆದ್ದರಿಂದ ಇದಕ್ಕಾಗಿ ಭಗೀರಥ ಪ್ರಯತ್ನದ ನಿಷ್ಠೆ ಮತ್ತು ``ಏಕಂ ಸದ್ ವಿಪ್ರೌ, ಬಹುಥಾ ವದಂತಿ'ಯ ಮಾನ್ಯತೆಯನ್ನು ತೆಗೆದುಕೊಂಡು ನಾವು ಸಂಸ್ಕೃತಿ ಮತ್ತು ರಾಷ್ಟ್ರದ ಏಕತೆಯ ಯಾವ ಅನುಭವವನ್ನು ಮಾಡಿದ್ದೆವೋ ಅದು ಸಹಸ್ರಾರು ವರ್ಷಗಳ ಅಸಫಲತೆಗಿಂತ ಅಧಿಕವಾಗಿತ್ತು. ಆದ್ದರಿಂದ ನಾವು ನಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ಒಬ್ಬ ಹಳೆಯ ಸಿಪಾಯಿ ದಣಿದರೆ ಮತ್ತೊಬ್ಬ ಹೊಸ ಸಿಪಾಯಿ ಬರುತ್ತಾರೆ. ಹಾಗೆಯೇ ಹಿಂದಿನ ಸೋಲನ್ನು ಎದೆಗುಂದದೆ ಧೈರ್ಯದಿಂದ ಸ್ವೀಕರಿಸಬೇಕು. ನಮ್ಮ ಅಸ್ತ್ರಗಳನ್ನು ಮಿತಗೊಳಿಸಿಕೊಂಡು ಸ್ವೀಕರಿಸಬೇಕು. ಯುದ್ಧದಲ್ಲಿ ಯಾವಾಗಲೂ ನಾವೇ ಗೆಲ್ಲುತ್ತೇವೆ ಎಂಬುದು ಸರಿಯಲ್ಲ. ಇದು ನಮ್ಮ ವಿಪರೀತವಾದ ಅಹಂಕಾರ ದರ್ಪವನ್ನು ತೋರಿಸುತ್ತದೆ. ಅಲ್ಲದೆ ರಾಷ್ಟ್ರದ ಪ್ರಕೃತಿ ಮತ್ತು ಪರಂಪರೆಯ ರಾಷ್ಟ್ರ ಚಿಂತನ 397 ಪ್ರತಿಕೂಲವೂ ಹೌದು. ರಾಷ್ಟ್ರೀಯತೆಯ ಪುಣ್ಯಪ್ರವಾಹ ನಮ್ಮ ರಾಷ್ಟ್ರೀಯ ಜೀವನದ ಗಂಗಾ ಪ್ರವಾಹವು ಆದಿ ಕಾಲದಿಂದಲೂ ನಡೆದುಬರುತ್ತಿದೆ. ಪುಣ್ಯನದಿ ಗಂಗೆಯ ಒಂದೊಂದು ಜಲಕಣವೂ ಪವಿತ್ರ ಮತ್ತು ಅದರ ಯಾವುದೇ ಜಾಗದ ಸ್ನಾನ ಮುಕ್ತಿಪ್ರದವಾದರೂ ಕೆಲವು ಸ್ಥಳಗಳಿಗೆ ವಿಶೇಷವಾದ ಮಹತ್ವವಿದೆ. ಹಿಮಾಲಯದ ಮಡಿಲನ್ನು ಬಿಟ್ಟು ಭಾರತ ಭೂಮಿಯ ಮೇಲೆ ನಿಧಾನವಾಗಿ ಹರಿಯುವ ಗಂಗೆ ಹರಿದ್ವಾರದಲ್ಲಿ ತನ್ನ ವಿಶೇಷವಾದ ಮಹತ್ವನ್ನು ಹೊಂದಿದ್ದಾಳೆ. ಯಮುನೆಯು ಕಪ್ಪು ಕಾಲಕೂಟವನ್ನು ತಂದು ಶಿವಸ್ವಾಮಿನಿಗೆ ಕೊಡುವಾಗ ಅದು ಶಿವನ ರೀತಿಯಲ್ಲೇ ಸಂತೋಷವಾಗಿಸುತ್ತದೆ. ಮತ್ತು ಅದರ ಪಾನವನ್ನು ಮಾಡುವ ಸ್ಥಳ ಪ್ರಯಾಗವೆಂದು ಹೆಸರು ಪಡೆದು ತೀರ್ಥಕ್ಷೇತ್ರವಾಗಿದೆ ಇದೇ ರೀತಿ ರಾಷ್ಟ್ರತ್ವದ ಕಣಕಣವೂ ಪವಿತ್ರವಾಗಿದೆ. ಯಾವುದೇ ಸ್ಥಳ ಅಥವಾ ಕಾಲದ ವಿಚಾರ ಮನಸ್ಸನ್ನು ನಿರ್ಮಲವಾಗಿಸಿ ರಾಷ್ಟ್ರಭಕ್ತಿಯನ್ನು ತುಂಬುತ್ತದೆ. ಆದರೆ ಪುಣ್ಯಸ್ವರೂಪರಾದ ಮಹಾಪುರುಷರ ಜನನದ ಕಾಲ ನಮ್ಮ ಜಾತೀಯ ಜೀವನದಲ್ಲಿ ಅಧಿಕ ಮಹತ್ವಹೊಂದಿದೆ. ಗಂಗಾನದಿಯ ತೀರದಲ್ಲಿರುವ ಕಾರಣದಿಂದಲೇ ಅಲ್ಲಿಯ ತೀರ್ಥಕ್ಷೇತ್ರಗಳು ಮಹತ್ವ ಪಡೆದುಕೊಂಡಿರುವುದರಿಂದ ಅಲ್ಲಿಗೆ ಯಾತ್ರೆ ಕೈಗೊಳ್ಳುವುದು ಪ್ರತಿಯೊಬ್ಬ ಭಕ್ತನ ಅಭಿಲಾಷೆಯಾಗಿದೆ. ಮಹಾಪುರುಷರ ಜೀವನ ಮತ್ತು ಯಶಸ್ಸಿನ ನೆನಪು ಜನಸಾಮಾನ್ಯರ ಮೇಲೆ ಅದರ ಪ್ರಭಾವ ಮತ್ತು ಜಾತೀಯ ಚರಿತ್ರೆಯ ಒಕ್ಕೂಟದಲ್ಲಿ ಅವರ ಮೂಲಕ ಬದಲಾದ ಆದರ್ಶ ರಾಷ್ಟ್ರಜೀವನಕ್ಕೆ ಒಂದು ಅಮೂಲ್ಯ ಸಂಪತ್ತು ಮತ್ತು ಶಕ್ತಿಯ ಪ್ರವಾಹವಾಗಿದೆ. ಅವರ ಚಿಂತನೆ, ವಿಚಾರ ಮತ್ತು ಆಲೋಚನೆಗಳು ಮಾನವರಿಗೆ ನಿತ್ಯನೂತನ ಸ್ಪೂರ್ತಿಯನ್ನು, ಉತ್ಸಾಹವನ್ನು, ಜೀವಂತಿಕೆಯನ್ನು ಉಂಟುಮಾಡುತ್ತದೆ. ಈ ಪುಣ್ಯಕ್ಷೇತ್ರಗಳಲ್ಲಿ ಹರಿಯುವ ಜೀವನದಿಯಾದ ಗಂಗೆಯಲ್ಲಿ ಮೀಯುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಇದರಲ್ಲಿ ಶ್ರೀಮದ್ ಶಂಕರಾಚಾರ್ಯರ ಸ್ಥಾನವಂತೂ ಪ್ರಯಾಗಕ್ಕೆ ಸಮಾನವಾಗಿರುವುದರಿಂದ ಅಲ್ಲಿ ಭಕ್ತರ ಗುಂಪು ನೆರೆದಿದ್ದರೆ ಅದರಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ. ನಮ್ಮ ರಾಷ್ಟ್ರ ನಿರ್ಮಾಣದಲ್ಲಿ ಶ್ರೀಮದ್ ಶಂಕರಾಚಾರ್ಯರ ಸ್ಥಾನ ಬಹಳ ಉನ್ನತವಾದುದು. ಅನೇಕ ವಿದ್ವಾಂಸರು ಅವರನ್ನು ಹಿಂದೂ ಧರ್ಮದ ಜನಕನೆಂದು ಕರೆದಿದ್ದಾರೆ. ಮಂದಿರಗಳಲ್ಲಿ ಮೂರ್ತಿಯನ್ನು ಸ್ಥಾಪನೆಮಾಡಿ ಪ್ರಾಣಪ್ರತಿಷ್ಠಾಪನೆ ಮಾಡಿದವರನ್ನು ಮಂದಿರದ ನಿರ್ಮಾಪಕರೆಂದು ಕರೆಯಲಾಗುತ್ತಿದೆಯಾದರೂ ತಮ್ಮ ಉಳಿ ಮತ್ತು ಸುತ್ತಿಗೆಯ ಏಟಿನಿಂದ ಮೂರ್ತಿಗೆ ರೂಪವನ್ನು ಕೊಟ್ಟ ಶಿಲ್ಪಿ 398 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮತ್ತು ಮಂದಿರ ನಿರ್ಮಾಣ ಮಾಡಿಸಿದ ಅನೇಕ ರಾಜರು ಮತ್ತು ಕೂಲಿಗಾರರನ್ನು ಮರೆಯಲಾಗುವುದಿಲ್ಲ. ಆ ಸಂಪೂರ್ಣ ಜನಸಮುದಾಯದ ಪರಿಶ್ರಮವನ್ನು ಮರೆತರೆ ಅದು ಕೃತಘ್ನತೆ ಮಾತ್ರವಲ್ಲದೆ ಸಾಮಾಜಿಕ ಜೀವನದ ರಚನಾತ್ಮಕ ನಿಯಮಗಳನ್ನು ಅವಮಾನಿಸಿದಂತಾಗುತ್ತದೆ. ರಾಷ್ಟ್ರಜೀವನದ ನಿರ್ಮಾಣವನ್ನು ಒಂದೆರಡು ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಮಾಡಲಾಗುವುದಿಲ್ಲ. ಯಾವುದೇ ಮಹಾಪುರುಷನು ರಾಷ್ಟ್ರಜೀವನದ ಸಂಸ್ಕಾರಗಳಿಂದ ಪೂರ್ಣನಿರ್ಲಿಪ್ತನಾಗಿ ತನ್ನ ಮಾನಸಿಕ, ಆಧ್ಯಾತ್ಮಿಕ ಅಥವಾ ಶಾರೀರಕ ಶಕ್ತಿಗಳ ಸಹಾಯದಿಂದ ರಾಷ್ಟ್ರಜೀವನದ ನಿರ್ಮಾಣ ಮಾಡಲಾಗುವುದಿಲ್ಲ. ಮಹಾಪುರುಷರು ಜಾತೀಯ ಸಾಧನೆಯ ಮೂರ್ತಿ ಸ್ವರೂಪರಾಗಿರುತ್ತಾರೆ. ಅವರು ಸಮಾಜದಲ್ಲಿ ವರ್ಷಗಳಿಂದ ಆಗುತ್ತಿರುವ ವಿಚಾರ ಕ್ರಾಂತಿಯ ಪ್ರತ್ಯಕ್ಷ ವೃಂದಗಳಾಗಿರುತ್ತಾರೆ. ಅವರ ಅಲೌಕಿಕ ಶಕ್ತಿ ಮತ್ತು ಸಂಪತ್ತು, ಸರ್ವತೋಮುಖ ಪ್ರತಿಭೆ, ಅಖಂಡವಾದ ಕರ್ಮಮಯ ಜೀವನ ಮತ್ತು ಎಲ್ಲೆಡೆಗೂ ಹರಡಿರುವ ಪ್ರಭಾವವನ್ನು ನೋಡಿ ನಮ್ಮ ಕಣ್ಣುಗಳು ಎಷ್ಟು ಹೊಳೆಯುತ್ತವೆಯೆಂದರೆ ನಾವು ಆ ಮಹಾಪುರುಷರಿಗೆ ಜನ್ಮಕೊಟ್ಟಿದ್ದ ಜೀವನಧಾರೆಯನ್ನೇ ಮರೆತುಬಿಟ್ಟಿದ್ದೇವೆ. ಯಾವ ಸಮಾಜದಲ್ಲಿ ಅವರ ಜನನವಾಗಿದೆಯೋ ಅದರ ವಿಚಾರವನ್ನು ಮಾಡುವುದಿಲ್ಲ. ಜ್ವಾಲಾಮುಖಿಯ ಸ್ಪೋಟವನ್ನು ನೋಡಿ ನಿಧಾನವಾಗಿ ಚಲಿಸುವ ನೀರಿನ ಮೇಲೆ ಗಮನ ಹೋಗುವುದಿಲ್ಲ. ಅರಳಿದ ಹೂವಿನ ಸುಗಂಧದ ಮುಂದೆ ವೃಕ್ಷ ಮರೆಯಲ್ಪಡುತ್ತದೆ. ಬಹುಶಃ ಈ ಸ್ವಭಾವದ ಮರೆಯಲ್ಲಿ ನಮ್ಮ ವ್ಯಕ್ತಿಗತ ಸ್ವಾರ್ಥವೂ ಇರಬಹುದು. ಏಕೆಂದರೆ ಯಾರೋ ಒಬ್ಬ ಮಹಾಪುರುಷನನ್ನು ಈ ಸಮಾಜವನ್ನು ಪೂರ್ತಿಯಾಗಿ ನಿರ್ಮಿಸುವ ಅಥವಾ ಹಾಳುಮಾಡುವ ಜವಾಬ್ದಾರನನ್ನಾಗಿ ಮಾಡಿ ನಾವು ಸಮಾಜದ ನಿರ್ಮಾಣ ಕಾರ್ಯದಿಂದ ಮುಕ್ತರಾಗುತ್ತೇವೆ. ವಾಸ್ತವದಲ್ಲಿ ಮಹಾಪುರುಷರು ಪ್ರತಿಯೊಬ್ಬ ಮನುಷ್ಯನ ಜೀವನವನ್ನು ಉತ್ತೇಜನಗೊಳಿಸುವ ಕಾರ್ಯದಲ್ಲಿ ಯಾವುದು ಶಕ್ತಿ ಮತ್ತು ಪ್ರೇರಣೆಯನ್ನು ನೀಡುತ್ತದೆಯೋ ಅದು ಸ್ವತಃ ಸಾಮೂಹಿಕ ಪ್ರಯತ್ನಗಳಿಗಿಂತ ಮುಂಚೆಯೇ ಗ್ರಹಿಸಲಾಗಿರುತ್ತದೆ. ಜಾತೀಯ ಪ್ರಾಣಗಳ ಈ ಆಭ್ರಂತರ ಜೀವಿತ ಸಾಧನೆಯ ಧಾರೆಯ ಸ್ವರೂಪ ವಿವಿಧ ಯುಗಗಳಲ್ಲಿ ವಿಶೇಷ ಮಹಾಪುರುಷರ ಸಾಧನೆ ಮತ್ತು ಸಿದ್ಧಿಯ ಮೂಲಕ ಯುಗೋಚಿತವಾದ ಆಕಾರ ಮತ್ತು ವೇಷಭೂಷಣಗಳಿಂದ ಸುಸಜ್ಜಿತವಾಗಿ ಪ್ರಕಟವಾಗುತ್ತದೆ. ಆದ್ದರಿಂದ ಯಾವುದೇ ಮಹಾಪುರುಷರ ಬಗ್ಗೆ ತಿಳಿಯುವ ಮುನ್ನ ಅಂದಿನ ಜಾತೀಯ ಜೀವನದ ಸಾಧನೆಯ ಸ್ವರೂಪವನ್ನು ತಿಳಿಯುವುದು ಅವಶ್ಯಕವಾಗಿರುತ್ತದೆ. ಯುಗ ಪುರುಷ ಶಂಕರಾಚಾರ್ಯರ ಮಹತ್ವವನ್ನು ಆ ಯುಗದ ಸ್ವಭಾವದ ಬಗ್ಗೆ ತಿಳಿದುಕೊಂಡೇ ಅರ್ಥಮಾಡಿಕೊಳ್ಳಲಾಗುತ್ತದೆ. ಜನಸಾಮಾನ್ಯರು ಸ್ವಾಮಿ ಶಂಕರಾಚಾರ್ಯರನ್ನು ರಾಷ್ಟ್ರ ಚಿಂತನ 399 ಬೌದ್ಧ ಮತದ ವಿಧ್ವಂಸಕರು ಹಾಗೂ ಹಿಂದೂ ಧರ್ಮದ ಸಂಸ್ಥಾಪಕರೆಂದು ಗುರುತಿಸಿರುತ್ತಾರೆ. ಆದರೆ ಬಹಳ ವಿದ್ವಾಂಸರಿಗೆ ಅವರಲ್ಲಿ ನಿಜವಾದ ಬುದ್ಧ ಗೋಚರಿಸುತ್ತಾನೆ. ಎರಡೂ ಚಿತ್ರಣಗಳ ಹಿಂದೆ ಸತ್ಯಾಂಶವು ಅಡಗಿದೆ. ಏಕೆಂದರೆ ಅವರ ಯುಗದಲ್ಲಿ ಸಂಪೂರ್ಣ ಸಹಸ್ರಾಬ್ಧಿಯ ಕೇಂದ್ರ ಗಾಮಿಯಾದ ಬೌದ್ಧಧರ್ಮ ಹಾಗೂ ಕೇಂದ್ರಾಭಿಮುಖವಾದ ಹಿಂದೂ ಧರ್ಮದ ನಡುವೆ ಪರಸ್ಪರ ಸಂಘರ್ಷ ಮತ್ತು ಸಮನ್ವಯ ಇತ್ತೆಂಬ ಇತಿಹಾಸವಿದೆ. ಆದ್ದರಿಂದ ನಾವು ಬೌದ್ಧಧರ್ಮದ ಉಗಮದಿಂದ ಹಿಡಿದು ಸ್ವಾಮಿ ಶಂಕರಾಚಾರ್ಯರ ಕಾಲದವರೆಗಿನ ಬೌದ್ಧಧರ್ಮದ ವಿಕಾಸ ಮತ್ತು ಗುಣಗಳ ಹಾಗೂ ಹಿಂದೂ ಧರ್ಮದ ವಿವಿಧ ಗುಣಗಳ ಸಿಂಹಾವಲೋಕನ ಮಾಡಬೇಕಾಗಿದೆ. ಮಹಾತ್ಮ ಬುದ್ಧನ ಜನ್ಮದ ಸಮಯದಲ್ಲಿ ವೈದಿಕ ಕರ್ಮಕಾಂಡಗಳ ವಿರುದ್ಧ ದಂಗೆಗಳು ಪ್ರಾರಂಭವಾಗಿತ್ತು. ಕರ್ಮಕಾಂಡವು ಎಷ್ಟು ಬೆಳೆದಿತ್ತೆಂದರೆ ಜನರು ತಮ್ಮ ಹೃದಯದಲ್ಲಿ ಸದ್ಗುಣಗಳ ವಿಕಾಸಕ್ಕೆ ಬದಲಾಗಿ ಕೇವಲ ಯಜ್ಞಯಾಗಾದಿಗಳಿಗೆ ಮಾತ್ರ ಮಹತ್ವವನ್ನು ಕೊಡುತ್ತಿದ್ದರು. ಆತ್ಮದ ಉನ್ನತ್ತಿಗೆ ಬದಲಾಗಿ ಬಾಹ್ಯೋಪಚಾರಗಳಿಗೆ ಹಾಗೂ ಕರ್ಮಕಾಂಡಗಳ ಕಡೆಗೇ ಹೆಚ್ಚು ಗಮನವಿತ್ತು. ಇದರ ಮೂಲಕವೇ ನಮಗೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂಬ ವಿಶ್ವಾಸವಿತ್ತು. ಇದರ ಪರಿಣಾಮವಾಗಿ ಸ್ವರ್ಣಪಾತ್ರೆಯಲ್ಲಿ ವಿಷ ತುಂಬತೊಡಗಿತು. ಬಾಹ್ಯದಲ್ಲಿ ಧಾರ್ಮಿಕ ಪಂಡಿತರ ಮನಸ್ಸಿನಲ್ಲೂ ಕೆಟ್ಟ ಗುಣಗಳ ಸಮಾವೇಶವಾಗುತ್ತಿತ್ತು. ದಯೆ, ಶಾಂತಿ, ಸಹನೆ ಮತ್ತು ಅಹಿಂಸೆಗಳ ಸ್ಥಾನದಲ್ಲಿ ಕ್ರೌರ್ಯ, ಕ್ರೋಧ ಮತ್ತು ಹಿಂಸೆ ತುಂಬಿಕೊಳ್ಳುತ್ತಿತ್ತು. ಕ್ಷಮೆ ಹೇಡಿಗಳ ಲಕ್ಷಣವೆಂದು ಪರಿಗಣಿಸಲಾಗುತ್ತಿತ್ತು. ಸಾಮಾಜಿಕ ವಿಭೇದಗಳು ಹೆಚ್ಚಲಾರಂಭಿಸಿದವು. ಒಂದು ವರ್ಣದವರು ಇನ್ನೊಂದು ವರ್ಣದವರನ್ನು ದ್ವೇಷಿಸಲಾರಂಭಿಸಿದರು. ತ್ಯಾಗಹೀನ, ಗುಣಹೀನ ಹಾಗೂ ಕೆಟ್ಟ ವಿಚಾರಗಳಿಂದ ತುಂಬಿದ ಬ್ರಾಹ್ಮಣರು ತಮ್ಮ ಶ್ರೇಷ್ಠತೆಯನ್ನು ಕೊಚ್ಚಿಕೊಳ್ಳುತ್ತಿದ್ದರು. ಸಮಾಜದ ನೇತೃತ್ವ ತಮ್ಮ ಹಕ್ಕೆಂದು ಭಾವಿಸುತ್ತಿದ್ದರು. ಕ್ಷತ್ರಿಯ ಕುಲದವರು ಇದನ್ನು ನೋಡಿ, ಅವರ ಉಚ್ಛಸ್ವರವನ್ನು ಕೇಳಿ ಅವರ ಅಧಿಕಾರವನ್ನು ಅಂಗೀಕರಿಸಲು ಸಿದ್ಧರಿರಲಿಲ್ಲ. ಇದರ ಫಲವಾಗಿ ಎಲ್ಲೆಡೆಗಳಲ್ಲಿಯೂ ತಿರಸ್ಕಾರ ಮತ್ತು ದ್ವೇಷದ ಸಾಮ್ರಾಜ್ಯವೇ ಕಾಣುತ್ತಿತ್ತು. ಎಲ್ಲಕ್ಕಿಂತ ಮುಖ್ಯ ಅಧಿಕಾರವೇ ಆಗಿತ್ತು. ಸಮಾಜದಲ್ಲಿ ಇಂತಹ ಸ್ಥಿತಿಯ ಕಾರಣದಿಂದಾಗಿ ಅದರ ಶಕ್ತಿಯೂ ಕ್ಷೀಣವಾಗುತ್ತಾ ಹೋಗುತ್ತಿತ್ತು. ಇಂತಹ ಸಮಯದಲ್ಲಿ ಶರೀರದ ಕೊಬ್ಬನ್ನು ಕರಗಿಸಿ ಜೀವನಶಕ್ತಿಯನ್ನು ಹೆಚ್ಚಿಸಬೇಕಾಗಿತ್ತು. ಮಹಾತ್ಮ ಬುದ್ಧನಿಗೆ ಮೊದಲೇ ಈ ವಿಚಾರಗಳಲ್ಲಿ ಕ್ಷೋಭೆ ಪ್ರಾರಂಭವಾಗಿ ಉಪನಿಷತ್ತುಗಳಲ್ಲಿ ವಿದ್ರೋಹದ ಕ್ಷೀಣ ಸ್ವರವು ಕೇಳಿಬರುತ್ತಿತ್ತು. ಆದರೆ ಭಾಗವತ ಧರ್ಮ ಮತ್ತು ಜೈನ ಧರ್ಮದ ರೂಪದಲ್ಲಿ ಈ ವಿದ್ರೋಹದ 400 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸ್ಪಷ್ಟ ಹಾಗೂ ನಿಖರ ಸ್ವರೂಪ ನಮಗೆ ಕಾಣಸಿಗುತ್ತದೆ. ಭಾಗವತ ಧರ್ಮದ ವಿದ್ರೋಹ ಕಡಿಮೆಯಾಗುತ್ತಿತ್ತು. ಅದು ವಿದ್ರೋಹದ ಅಲೆಗಳಲ್ಲಿ ಮತ್ತು ಭಾವನೆಯ ಆವೇಶದಲ್ಲಿ ತನ್ನ ಎದುರಿಗೆ ಬಂದಿದ್ದನ್ನು ನಾಶಗೊಳಿಸುವ ಪ್ರಯತ್ನಮಾಡಲಿಲ್ಲ. ರೋಗದ ಜೊತೆಯಲ್ಲಿ ರೋಗಿಯ ಪ್ರಾಣತೆಗೆದುಕೊಳ್ಳಲು ತುದಿಗಾಲಿನಲ್ಲಿ ನಿಲ್ಲಲಿಲ್ಲ. ಅದು ಕರ್ಮಕಾಂಡವನ್ನು ವಿರೋಧಿಸಿತು. ಸಮಾಜ ವ್ಯವಸ್ಥೆಯಲ್ಲಿನ ರೂಢಿವಾದವನ್ನು ವಿರೋಧಿಸಿತು. ಆದರೆ ನಮ್ಮ ಪೂರ್ವಪರಂಪರೆಯ ಧರ್ಮಗ್ರಂಥಗಳು ಹಾಗೂ ಸಮಾಜ ವ್ಯವಸ್ಥೆಯ ಆಧಾರಗಳಿಗೆ ಯಾವ ರೀತಿಯಲ್ಲೂ ತೊಂದರೆ ಕೊಡಲಿಲ್ಲ. ಭಾಗವತ ಧರ್ಮದ ಭಗವಂತನಾದ ಕೃಷ್ಣನು ವೈದಿಕ ಧರ್ಮದ ಇಂದ್ರಾದಿ ದೇವತೆಗಳ ಪೂಜೆ ಅರ್ಚನೆಗಳನ್ನು ವಿರೋಧಿಸಿ ಗೋವರ್ಧನ ಪೂಜೆಯನ್ನು ಮಾಡಿದರೂ ವೇದಗಳು ಮತ್ತು ವೈದಿಕ ವ್ಯವಸ್ಥೆಯ ಮೇಲೂ ಗೌರವ ಭಾವನೆಯನ್ನು ತೋರಿದನು. ಜೀವನದಲ್ಲಿ ಯಜ್ಞ ಯಾಗಾದಿಗಳನ್ನು ವಿರೋಧಿಸಿದರೂ ಯುಧಿಷ್ಠರನನ್ನು ರಾಜಸೂಯ ಯಾಗವನ್ನು ಮಾಡಲು ಪ್ರೇರೇಪಿಸಿದನು ಮತ್ತು ತಾನೇ ಅದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದನು. ಭಾಗವತ ಧರ್ಮ ಕೆಟ್ಟದ್ದನ್ನು ವಿರೋಧಿಸಿತೇ ಹೊರತು ಸಂಪೂರ್ಣ ವ್ಯವಸ್ಥೆಯನ್ನಲ್ಲ. ಆದರೆ ಬೌದ್ಧಧರ್ಮದ ವಿರೋಧ ಅಲ್ಲಿಗೆ ನಿಲ್ಲಲಿಲ್ಲ. ಗೋಧಿಯಲ್ಲಿರುವ ಕಲ್ಲನ್ನು ನೋಡಿ ಸಂಪೂರ್ಣ ಗೋಧಿಯನ್ನೇ ಎಸೆದರು. ಕರ್ಮಕಾಂಡದಲ್ಲಿನ ಹಿಂಸೆಯನ್ನು ನೋಡಿ ಅವರು ಕರ್ಮಕಾಂಡವನ್ನೂ ವಿರೋಧಿಸದೇ ವೇದ ಮತ್ತು ಬ್ರಾಹ್ಮಣರನ್ನೇ ಎಲ್ಲ ಪಾಪಗಳ ಮೂಲವೆಂದು ತಿಳಿದು ಅದರ ಪ್ರಭಾವವನ್ನೇ ನಿರ್ಮೂಲಗೊಳಿಸಿದರು. ಪ್ರಾಚೀನ ಕಾಲದಿಂದ ನಡೆದುಬಂದ ಪದ್ಧತಿಗಳನ್ನೆಲ್ಲ ಸಂಪೂರ್ಣವಾಗಿ ತ್ಯಜಿಸಿದರು. ಅವರು ತಮ್ಮ ಪ್ರಚಾರವನ್ನು ಸಂಸ್ಕೃತದ ಬದಲಾಗಿ ಪಾಲೀ ಭಾಷೆಯಲ್ಲಿ ಮಾಡಿದರು. ವರ್ಣವ್ಯವಸ್ಥೆಯನ್ನು ವಿರೋಧಿಸಿದರು. ವೈದಿಕ ಪರಂಪರೆ ಮತ್ತು ವ್ಯವಸ್ಥೆಯನ್ನು ಸಂಬಂಧವನ್ನು ಪೂರ್ಣವಾಗಿ ತೊರೆದರು. ವೈದಿಕ ಧರ್ಮದಲ್ಲಿ ಪರಿವರ್ತನೆ ನಿರಂತರವಾಗಿ ಆಗುತ್ತಲೇ ಬಂದಿದ್ದು ಈ ಧರ್ಮವು ಚಲನಶೀಲ, ಗಂಗೆಯ ಹಾಗೆ ಚೈತನ್ಯಯುಕ್ತವಾಗಿದೆ; ಜೀವಂತವಾಗಿದೆ. ನಿಂತ ನೀರಿನ ಹಾಗೆ ಸ್ಥಿರವಾದುದು, ಜಡವಾದುದು ಮತ್ತು ಮೃತವಾದುದಲ್ಲ. ಧರ್ಮದಲ್ಲಿ ನಿರಂತರವಾಗಿ ನವೀನ ವಿಚಾರಗಳ ಆಗಮನವಾಗುತ್ತಲೇ ಇರುತ್ತದೆ. ಹಳೆಯದರಲ್ಲಿ ಬದಲಾವಣೆ ಮತ್ತು ವಿಕಾಸವಾಗುತ್ತಲೇ ಇರುತ್ತದೆ. ಆದರೆ ಪ್ರತಿಯೊಂದು ಹೊಸ ಬದಲಾವಣೆ ಹಳೆಯದಕ್ಕೆ ಸಂಬಂಧ ಹೊಂದಿರುತ್ತದೆ. ಪ್ರತಿಯೊಬ್ಬ ನವೀನ ಆಂದೋಲನಕಾರಿಯೂ ತನ್ನ ಪೂರ್ವಜರ ಬಗ್ಗೆ ಶ್ರದ್ಧಾಭಾವನೆಯನ್ನು ಇಟ್ಟಿದ್ದನು. ಪ್ರತಿಯೊಬ್ಬ ನವೀನ ಸುಧಾರಕನು ತನ್ನ ಪ್ರಾಚೀನ ರಾಷ್ಟ್ರ ಚಿಂತನ 401 ಪರಂಪರೆಯನ್ನು ನಂಬುತ್ತಿದ್ದನು. ತಮ್ಮ ಪೂರ್ವಜರನ್ನು ಹಾಗೂ ಅವರ ಕೃತಿಗಳನ್ನು ಗೌರವಿಸುತ್ತಿದ್ದನು. ಇವುಗಳ ಜೊತೆಗೆ ಸಮಯಕ್ಕೆ ತಕ್ಕ ಹೊಸ ಬದಲಾವಣೆಗಳನ್ನು ತರುತ್ತಿದ್ದನು. ಮೂಲಕ್ಕೆ ಸಂಬಂಧ ಹೊಂದಿದ್ದ ಕಾರಣದಿಂದ ಅವರ ಹೊಸ ವಿಚಾರಗಳಿಂದ ರಾಷ್ಟ್ರ ಜೀವನಕ್ಕೆ ಯಾವ ರೀತಿಯಿಂದಲೂ ತೊಂದರೆ ಆಗಲಿಲ್ಲ. ಬದಲಾಗಿ ಅದರಲ್ಲಿ ವಿಕಾಸವಾಗುತ್ತಾ ಹೋಯಿತು. ಅನಾದಿಕಾಲದಿಂದಲೂ ನಡೆದು ಬರುತ್ತಿರುವ ರಾಷ್ಟ್ರೀಯ ಪರಂಪರೆಯನ್ನು ಮುರಿಯುವ ಪ್ರಯತ್ನವನ್ನು ಇಲ್ಲಿಯವರೆಗೂ ಯಾರೂ ಮಾಡಲಿಲ್ಲ. ಆದರೆ ಮಹಾತ್ಮ ಬುದ್ಧ ಮತ್ತು ಅವನ ಅನುಯಾಯಿಗಳು ಸಂಪೂರ್ಣವಾಗಿ ನಮ್ಮ ಪ್ರಾಚೀನ ಪರಂಪರೆಯನ್ನು ತ್ಯಜಿಸಿದರು. ಅನಂತ ಜ್ಞಾನದ ಅಗರವಾದ ವೇದಗಳಿಂದ ತಮ್ಮ ಮತಕ್ಕೆ ಪುಷ್ಟಿಕೊಡುವ ಬದಲಾಗಿ ವೇದಗಳಿಗೆ ಅವರ ಧಾರ್ಮಿಕ ವ್ಯವಸ್ಥೆಯಲ್ಲಿ ಯಾವ ಸ್ಥಾನವನ್ನು ಕೊಡಲಿಲ್ಲ. ಭಗವಂತ ಮತ್ತು ವೇದಗಳ ಬಗ್ಗೆ ಮಹಾತ್ಮ ಬುದ್ಧನ ಈ ಉದಾಸೀನತೆಯ ಭಾವ ಅವನ ಅನುಯಾಯಿಗಳಲ್ಲಿ ವಿರುದ್ಧವಾಗಿ ಬದಲಾವಣೆ ಹೊಂದಿತು. ಇದು ಬೌದ್ಧ ಧರ್ಮ ಮತ್ತು ಹಿಂದೂ ಧರ್ಮ ಒಂದಕ್ಕೊಂದು ವಿರೋಧಿಗಳಾಗಲು ಕಾರಣವಾಯಿತು. ಬುದ್ಧನ ಕಾಲಕ್ಕೆ ನಮ್ಮ ಧಾರ್ಮಿಕ ವಿಚಾರಗಳು ನಿಧಾನವಾಗಿ ಯಾವ ಬದಲಾವಣೆಯೂ ಇಲ್ಲದೆ ಹೇಗೆ ಬೆಳೆಯಿತೆಂದರೆ ಹೊಸ ವಿಚಾರಗಳ ನವೀನತೆಯ ಬಗ್ಗೆ ಯಾರ ಗಮನವೂ ಹೋಗಲಿಲ್ಲ. ನಮ್ಮ ಧಾರ್ಮಿಕ ಅಂಕುಶ ನಿಧಾನವಾಗಿ ಬೆಳೆದು ಆಕಾಶವನ್ನು ಮುಟ್ಟುವ ದೊಡ್ಡ ವೃಕ್ಷವಾಯಿತು. ಮಹಾತ್ಮ ಬುದ್ಧನು ಇದರಲ್ಲಿನ ಶಾಖೆಗಳನ್ನು (ಕೊಂಬೆ) ಎಲೆಗಳನ್ನು ಕತ್ತರಿಸಿ ಧಾರ್ಮಿಕ ವಿಚಾರಗಳಲ್ಲಿ ಬದಲಾವಣೆ ತಂದು ಮತ್ತೊಂದು ಮಹಾವೃಕ್ಷವನ್ನೇ ನಿಲ್ಲಿಸಿದನು. ಈ ಸ್ಥಿತಿಯಲ್ಲಿ ಅವನ ವ್ಯಕ್ತಿತ್ವದ ಪ್ರಭಾವ ಎಲ್ಲೆಡೆ ಬೀರುವುದು ಸಹಜ ಮತ್ತು ಹಾಗೆಯೇ ಆಯಿತು. ಆದ್ದರಿಂದ ಆ ಧರ್ಮವೂ ವ್ಯಕ್ತಿತ್ವ ಪ್ರಧಾನವಾಯಿತು. ಭೂಮಿಯ ಮೇಲೆ ಗಿಡವನ್ನು ನೆಟ್ಟರೆ ಅದು ಭೂಮಿಯ ಸಾರವನ್ನು ಹೀರಿಕೊಂಡು ಬೆಳೆಯುತ್ತದೆ. ಆದರೆ ಅವರು ತಮ್ಮ ವೃಕ್ಷಗಳನ್ನು ಕುಂಡಗಳಲ್ಲಿ ಬೆಳೆದರು. ಇದರಿಂದ ಅವರಿಗೆ ಅದನ್ನು ಹೋದ ಕಡೆಯಲ್ಲೆಲ್ಲಾ ತೆಗೆದುಕೊಂಡು ಹೋಗಲು ಅನುಕೂಲವಾದರೂ ಅದರ ವೃದ್ಧಿ ಕುಂಠಿತವಾಯಿತು. ಹುಲ್ಲಿನ ಹಾಗೆ ಎಲ್ಲೆಡೆಗಳಲ್ಲಿ ಹರಡಿದಾಗ್ಯೂ ಅದು ವೃಕ್ಷದ ರೀತಿ ವಿಶಾಲವಾಗಲು ಸಾಧ್ಯವಾಗಲಿಲ್ಲ. ಭಾರತದ ಸಂಪೂರ್ಣ ಪರಂಪರೆ ವೈದಿಕ ಧರ್ಮ ಮತ್ತು ಭಾಗವತ ಧರ್ಮದ ಸಂಬಂಧ ಭಾರತದ ಭೂಮಿ, ಪರ್ವತ, ನದಿ, ವನ ಮುಂತಾದವುಗಳಿಂದ ಸ್ಥಿರವಾಗಿ ಅಂಟಿಕೊಂಡಿದೆ. ಬೌದ್ಧಧರ್ಮವು ಎಲ್ಲಿ ಪ್ರಾಚೀನ ಪರಂಪರೆಯನ್ನು ವಿನಾಶಗೊಳಿಸಿತೋ ಅಲ್ಲಿ ಅದನ್ನು ನಂಬಿದ್ದ 402 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪೂರ್ವಜನರಿಂದಲೂ ಸಂಬಂಧವನ್ನು ಕಳೆದುಕೊಂಡಿತ್ತು. ಆದ್ದರಿಂದ ಪೂರ್ವಕಾಲದ ಮಹರ್ಷಿಗಳ ಜೀವನದಲ್ಲಿ ರಾಮ, ಕೃಷ್ಣರಿಗೆ ಯಾವುದೇ ಮಹತ್ವ ಇರಲಿಲ್ಲ. ಎಲ್ಲಿ ತಮ್ಮ ಪೂರ್ವಜರ ಸಂಬಂಧದಲ್ಲಿ ಅಶ್ರದ್ಧೆಯ ಭಾವನೆ ಇದೆಯೋ, ಎಲ್ಲಿ ತಮ್ಮ ಜನ್ಮಭೂಮಿಗೆ ವಿಶೇಷ ಮಹತ್ವ ಸಿಗುವುದಿಲ್ಲವೋ ಅಲ್ಲಿ ಅರಾಷ್ಟ್ರೀಯ ಭಾವನೆ ಹುಟ್ಟುವುದು. ತನ್ನತನದ ಈ ಭಾವನೆಯನ್ನು ತುಂಬಿಕೊಂಡು ಬೌದ್ಧಧರ್ಮ ದೇಶದೇಶಾಂತರಗಳಿಗೆ ಹೋಗಿ ಅಲ್ಲಿ ಜ್ಞಾನವನ್ನೇನೋ ಹಂಚಿತು. ಆದರೆ ಅಲ್ಲಿನ ಎಷ್ಟೊ ವಿಷಯಗಳನ್ನು ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೆ ಅದು ತನ್ನ ದೇಶವಾಸಿಗಳ ಬದಲಾಗಿ ಧರ್ಮ ಬಾಂಧವರನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡಿತು. ವಿದೇಶೀ ಆಕ್ರಮಣಕಾರರೂ ಈ ಅರಾಷ್ಟ್ರೀಯ ಭಾವನೆಯ ಲಾಭ ಪಡೆದರು. ಅವರಲ್ಲಿ ಅನೇಕರು ಬೌದ್ಧಧರ್ಮವನ್ನು ಹಾಗೂ ಬೌದ್ಧರೂ ಕೂಡ ದೇಶದ ಸ್ವಾತಂತ್ರ್ಯವನ್ನು ಅಪಹರಣ ಮಾಡಿದ ಈ ಧರ್ಮಬಾಂಧವರನ್ನು ತಮ್ಮಲ್ಲಿ ಸೇರಿಸಿಕೊಂಡರು. ಆ ದಿನಗಳಲ್ಲಿ ಬೌದ್ಧಧರ್ಮವು ಒಂದು ಅತ್ಯಾಚಾರಿವರ್ಗದ ಸಾಕುಮಗನಾಗಿತ್ತು. ಮತ್ತು ಆ ವರ್ಗದ ಅತ್ಯಾಚಾರಿಗಳ ನಿರ್ಮೂಲನವಾದಾಗ ಸಹಜವಾಗಿಯೇ ಅದರೊಂದಿಗೆ ಈ ಧರ್ಮದ ಪತನವೂ ಆಯಿತು. ಬೌದ್ಧ ಧರ್ಮ ಆ ದಿನಗಳಲ್ಲಿ ರಾಷ್ಟ್ರೀಯತೆಯ ಕೊರತೆಯಿಂದ ಪತಿತಿವಾಗಿತ್ತು ಮತ್ತು ಅಹಿಂದೂ ಸ್ವರೂಪವನ್ನು ಪಡೆದಿತ್ತು. ಈ ಸ್ಥಿತಿಯಲ್ಲಿ ಬೌದ್ಧಧರ್ಮದ ಉಚ್ಛಾಟನೆ ಒಂದು ರಾಷ್ಟ್ರೀಯ ಕರ್ತವ್ಯವಾಗಿತ್ತು. ಒಬ್ಬರ ನಂತರ ಒಬ್ಬರು ಮಹಾಪುರುಷರು ಜನಿಸಿದರು ಮತ್ತು ಈ ಅರಾಷ್ಟ್ರೀಯ ಪ್ರವೃತ್ತಿಯನ್ನು ನಾಶಗೊಳಿಸಲು ಪ್ರಯತ್ನಮಾಡಿದರು. ಅವರಲ್ಲಿ ಕುಮಾರಿಲ ಭಟ್ಟ ಮತ್ತು ಶಂಕರರ ಹೆಸರುಗಳು ಎಲ್ಲರಿಗೂ ತಿಳಿದಿದೆ. ಆದರೆ ಇವರಲ್ಲದೆ ಇನ್ನೂ ಅನೇಕ ಸಾಧು ಸಂತರು, ಋಷಿಮುನಿಗಳು ಇದ್ದು ಅವರು ಈ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇಂದು ನಾವು ಅವರ ಹೆಸರುಗಳನ್ನು ತಿಳಿಯದಿದ್ದರೂ, ಅವರ ಗುಣಗಾನವನ್ನು ಮಾಡದಿದ್ದರೂ ನಮ್ಮ ಹೃದಯದಲ್ಲಿನ ರಾಷ್ಟ್ರೀಯ ಭಕ್ತಿಯ ಭಾವನೆ ನಮಗರಿವಿಲ್ಲದಂತೆಯೆ ಅದರ ಬಗ್ಗೆ ಶ್ರದ್ಧಾಭಾವನೆಯನ್ನು ತೋರಿಸುತ್ತದೆ. ಕಿತ್ತೆಸೆಯುವ ಈ ಪ್ರಯತ್ನದಲ್ಲಿ ನಮ್ಮ ಭಾವನಾತ್ಮಕ ಕಲ್ಪನೆ ಮತ್ತು ರಚನಾತ್ಮಕ ಯೋಜನೆಯೂ ಒಂದು ವಿಶೇಷತೆಯಾಗಿದೆ. ನಮ್ಮ ಮಹಾಪುರುಷರು ಪ್ರತಿಕ್ರಿಯಾತ್ಮಕ ಅಥವಾ ವಿರೋಧಾತ್ಮಕ ಹಾಗೂ ವಿನಾಶಾತ್ಮಕ ದೃಷ್ಟಿಕೋನದಿಂದ ಬೌದ್ಧಧರ್ಮವನ್ನು ಕಿತ್ತೆಸೆಯಲಿಲ್ಲ. ಹಾಗೇನಾದರೂ ಮಾಡಿದ್ದಿದ್ದರೆ ಅವರಿಗೆ ಸಫಲತೆಯೂ ಸಿಗುತ್ತಿರಲಿಲ್ಲ ಮತ್ತು ಭಾರತದಲ್ಲಿ ಅವರು ಇಚ್ಛಿಸಿದ ಜೀವನ ರೀತಿಯು ಸೃಷ್ಟಿಯಾಗುತ್ತಿರಲಿಲ್ಲ ವಿನಾಶಾತ್ಮಕ ಭಾವನೆಯಿಂದ ಕೆಲಸಮಾಡಿದರೆ ರಾಷ್ಟ್ರದ ಗತಿಮಯ ಜೀವನದಲ್ಲಿ ಸ್ತಬ್ಧತೆ ಮತ್ತು ಅಭಾವದ ಸೃಷ್ಟಿಯಾಗುತ್ತದೆ. ರಾಷ್ಟ್ರ ಚಿಂತನ 403 ಜೀವನದಲ್ಲಿ ಮೃತ್ಯುವಿನ ಜನನಿಯಾದ ಶೂನ್ಯತೆಯು ಸೃಷ್ಟಿಯಾಗುತ್ತದೆ. ಅವರು ತಮ್ಮ ರಚನಾತ್ಮಕ ಕಾರ್ಯಕ್ರಮಗಳ ಕಾರಣದಿಂದಾಗಿ ಅರಾಷ್ಟ್ರೀಯ ಗುಣಗಳನ್ನು ವಿನಾಶಮಾಡದೆ ಅದರ ಸ್ಥಾನವನ್ನು ರಾಷ್ಟ್ರೀಯ ಪ್ರವೃತ್ತಿಗಳು ತೆಗೆದುಕೊಳ್ಳುವಂತೆ ಮಾಡಿದರು. ಆದ್ದರಿಂದ ಈ ಯುಗದಲ್ಲಿ ನಮಗೆ ಬೌದ್ಧಧರ್ಮವನ್ನು ನಾಶಗೊಳಿಸುವ ಪ್ರಯತ್ನಗಳು ಕಂಡುಬರದೆ ನಮ್ಮ ಪರಂಪರೆಯಿಂದ ಪ್ರಾಪ್ತವಾದ ರಾಷ್ಟ್ರೀಯ ವೈದಿಕ ಧರ್ಮವನ್ನು ಬಲಪಡಿಸಿ ವ್ಯಾಪಕಗೊಳಿಸುವ ಪ್ರಯತ್ನಗಳೇ ಕಾಣಸಿಗುತ್ತವೆ. ರಾಷ್ಟ್ರೀಯತೆಯ ಪ್ರಖರ ಪ್ರಕಾಶವನ್ನು ಎಲ್ಲೆಡೆಯಲ್ಲಿಯೂ ಹರಡುವ ಪ್ರಯತ್ನಗಳು ನಡೆದವು ಇದರಿಂದ ಅರಾಷ್ಟ್ರತೆಯ ಅಂಧಕಾರವು ತನ್ನಷ್ಟಕ್ಕೆ ತಾನೇ ದೂರವಾಯಿತು. ಈ ಜ್ವಾಲೆಯ ಪ್ರಕಾಶವನ್ನು ಮತ್ತಷ್ಟು ಪ್ರಖರಗೊಳಿಸಲು ಸಾಧು-ಸಂತರು, ಕವಿ- ಕಲಾಕಾರರು, ಪುರಾಣಕಾರರು, ಸೂತರು ಮತ್ತು ಸ್ಮೃತಿಕಾರರು, ಮುನಿ ಮತ್ತು ದರ್ಶನ ಶಾಸ್ತ್ರದ ಜನ್ಮದಾತರಾದ ಋಷಿ-ಮಹರ್ಷಿಗಳು ಭಕ್ತಧಾರಾಮೃತವನ್ನು ಹರಿಸಿದ ಸಂತರು-ಮಹಂತರು, ಮತ್ತೊಮ್ಮೆ ಅಶ್ವಮೇಧ ಯಜ್ಞವನ್ನು ಮಾಡಿ ಭಾರತದಲ್ಲಿ ಚತುರಂಗ ಸಾಮ್ರಾಜ್ಯದ ನಿರ್ಮಾಣವನ್ನು ಮಾಡಿದ ದಿಗ್ವಿಜಯಿಗಳಾದ ಸಾಮ್ರಾಟರು ಮತ್ತು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಏಕತೆಯನ್ನು ರಾಜನೀತಿ ಎಂಬ ಕಲರವದಿಂದ ಪುಷ್ಪಿಗೊಳಿಸಿದ ರಾಜನೀತಿಜ್ಞರು ನೀತಿಕಾರರು, ಶಿಲ್ಪಿಗಳು ಮತ್ತು ವ್ಯಾಪಾರಸ್ಥರು, ಕೃಷಿಕರು ಎಲ್ಲರೂ ಮುಂದೆ ಬಂದರು. ಅನೇಕರು ಅಹಂಕಾರದಿಂದ ದೂರಸರಿದರು. ರಾಷ್ಟ್ರದ ವೃದ್ಧಿಗತ ಶಕ್ತಿಗೆ ಜೀವನದ ಸರ್ವಸ್ವವನ್ನೂ ಅರ್ಪಿಸುವುದಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದರು, ಆದರೆ ರಾಷ್ಟ್ರೀಯ ಭಾವನೆ ಕೇವಲ ಕೆಲವು ತತ್ವಜ್ಞಾನಿಗಳು ಮತ್ತು ವಿಚಾರವಂತರಿಗೆ ಸೀಮಿತವಾಗಿರದೆ ಸಂಪೂರ್ಣ ಜನಸಾಮಾನ್ಯರೂ ಈ ಭಾವನೆಯನ್ನು ತುಂಬಿಕೊಂಡಿದ್ದರು. ಈ ವ್ಯಾಪಕ ಕಾರ್ಯಚೇತನವು ಮಹಾತ್ಮ ಬುದ್ಧನಿಂದ ಹಿಡಿದು ಸ್ವಾಮಿ ಶಂಕರಾಚಾರ್ಯರವರೆಗೂ ಕಾಣಸಿಗುತ್ತದೆ. ಒಂದು ಕಡೆ ಮಹಾತ್ಮಬುದ್ಧನು ನಿದ್ದೆ ಮಾಡಿದ್ದ ಜನತೆಯನ್ನು ಎಚ್ಚರಗೊಳಿಸಿ ಅಸಾಧಾರಣ ಕ್ರಾಂತಿಯನ್ನು ಹುಟ್ಟುಹಾಕಿದನು. ಅದರ ಪರಿಣಾಮವನ್ನು ಇನ್ನೊಂದು ಕಡೆ ವೈದಿಕ ಧರ್ಮದ ಸಂಘರ್ಷ ಮತ್ತು ಸಮನ್ವಯದ ಪರಿಣಾಮವಾಗಿ ಈ ಯುಗದಲ್ಲಿ ಜಾಗೃತವಾದ ಕರ್ಮಚೇತನ, ವ್ಯಾಪಕ ಪ್ರಭಾವವನ್ನುಂಟುಮಾಡಿದ ಕರ್ಮಚೇತನ ರಾಷ್ಟ್ರಜೀವನದಲ್ಲಿ ಹಾಗೆಯೇ ಕಾಣಸಿಗುತ್ತದೆ. ಈ ಯುಗದ ಜೀವನ ಸ್ಥಿರ ಮತ್ತು ಗತಿಹೀನವಾಗಿರಲಿಲ್ಲ; ಬದಲಾಗಿ ಸತತ ಗತಿಶೀಲವಾಗಿದ್ದು ಅದರಲ್ಲಿ ಜೀವನಕ್ಕೆ ಪ್ರೇರಕ ಶಕ್ತಿ ನೀಡುವ ಕೆಲಸವನ್ನು ಕಾಣುತ್ತೇವೆ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಬಾಗಿಲು ತೆರೆದಿತ್ತು. ವಿಶಾಲವಾದ ಕಾರ್ಯಕ್ಷೇತ್ರ ಎಲ್ಲರ ಮುಂದಿತ್ತು. ಅಣೆಕಟ್ಟು ಒಡೆದರೆ ನೀರು ಎಲ್ಲ ಕಡೆಯಲ್ಲಿಯೂ ಹರಡುವ ಹಾಗೆ ಭಾರತೀಯತೆ ಎಲ್ಲ ಕಡೆಯಲ್ಲಿಯೂ ಹರಡಿತು. ಪ್ರತಿಯೊಂದು 404 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕ್ಷೇತ್ರದಲ್ಲಿಯೂ ವಿಕಾಸದ ಚರಮಸೀಮೆಯನ್ನು ಮುಟ್ಟುವ ಮಹತ್ವಾಕಾಂಕ್ಷೆ ಹುಟ್ಟಿಕೊಂಡಿತು. ಬಾಯಾರಿದ ಭೂಮಿ ಮಳೆ ಬಂದ ಕೂಡಲೇ ಹೇಗೆ ಹಸಿರಿನಿಂದ ತುಂಬುತ್ತದೆಯೋ ಹಾಗೆಯೇ ಜನ ಸಮಾಜದಲ್ಲಿನ ಅತೃಪ್ತಿ ಆತ್ಮತೃಪ್ತಿಯಾಗಿ ಅನೇಕ ಭಾಗಗಳಲ್ಲಿ ಪ್ರಸರಿಸಿತು. ಧಾರ್ಮಿಕ, ರಾಜನೈತಿಕ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಮುಂದುವರೆದೆವು. ಸಾಹಿತ್ಯ ಮತ್ತು ಕಲೆಗಳಲ್ಲಿಯೂ ಈ ಧಾರೆ ಪ್ರವಹಿಸಿತು. ಸಂಪೂರ್ಣ ಭಾರತವನ್ನು ತುಂಬಿತು. ಇದೇ ಕಾಲದಲ್ಲಿ ಮನುಷ್ಯರನ್ನು ದುಃಖದಿಂದ ಮುಕ್ತಗೊಳಿಸಿ ಸತ್ಯಮಾರ್ಗವನ್ನು ತೋರಿಸುವ ಆಸೆಯಿಂದ ನಮ್ಮ ಧರ್ಮಪ್ರಚಾರಕರು ದೇಶವಿದೇಶಗಳಲ್ಲಿ ಹರಡಿದರು. ಜಗತ್ತಿನ ಮೂಲೆ ಮೂಲೆಗಳಲ್ಲಿ ಭಾರತದ ವಿಜಯಪತಾಕೆ ಹಾರಾಡಿತು. ಜಾವಾ, ಸುಮಾತ್ರಾ, ಬಾಲಿ, ಸ್ಯಾನು, ಇಂಡೊಚೈನ್, ಚೈನಾ, ಜಪಾನ್, ಬಲಖ, ಬುಖಾರ್, ಈಜಿಪ್ಟ್ ನಾನಿ ಮತ್ತು ರೋಮ್ ಹೀಗೆ ಎಲ್ಲ ಕಡೆಗಳಲ್ಲಿ ಜ್ಞಾನದೀವಿಗೆಯಿಂದ ಅಜ್ಞಾನದ ಅಂಧಕಾರವನ್ನು ನೀಗಿಸಿ ಮನುಷ್ಯನ ಮನಸ್ಸಿನಲ್ಲಿ ಆಶಾಜ್ಯೋತಿಯನ್ನು ಬೆಳಗಿಸಿತು. ಒಂದು ಕಡೆ ಸಾಂಸ್ಕೃತಿಕ ಸಾಮ್ರಾಜ್ಯದ ವಿಸ್ತೀರ್ಣವಾಗುತ್ತಿದ್ದರೆ ಮತ್ತೊಂದೆಡೆ ನಮ್ಮ ದಿಗ್ವಿಜಯಿ ರಾಜರು ದೊಡ್ಡ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಸಮುದ್ರವನ್ನು ದಾಟಿ ತಮ್ಮ ರಾಜ್ಯವನ್ನು ಸ್ಥಾಪಿಸಿದರು ಮತ್ತು ಬೃಹತ್ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಲ್ಪನೆಗೆ ಸ್ಥೂಲರೂಪ ಕೊಟ್ಟರು. ನಮ್ಮ ವ್ಯಾಪಾರಿಗಳು ದೂರ ದೇಶಗಳೊಂದಿಗೆ ವ್ಯಾಪಾರ ಮಾಡಿ ಭಾರತವನ್ನು ಸ್ವರ್ಣದಿಂದ ತುಂಬಿದರು. ಭಾರತದಲ್ಲಿ ಅದು ಸಿರಿ ಮತ್ತು ವೈಭವದ ಸುಖ ಮತ್ತು ಶಾಂತಿಯ ಯುಗವಾಗಿತ್ತು. ಇತಿಹಾಸಕಾರರು ಈ ಯುಗವನ್ನು ಭಾರತದ ಸ್ವರ್ಣಯುಗವೆಂದು ಕರೆದರು. ದೊಡ್ಡ ದೊಡ್ಡ ಸಾಮ್ರಾಜ್ಯ, ಅಪಾರ ಧನರಾಶಿ, ಅತುಲವೈಭವ, ಮನಸ್ಸನ್ನು ರಂಜಿಸುವ ಕಲೆ ಮತ್ತು ಸಾಹಿತ್ಯದ ಕಾರಣದಿಂದ ನಾವು ಆ ಯುಗವನ್ನು ಸ್ವರ್ಣಯುಗವೆಂದು ಕರೆಯಲಿಲ್ಲ. ಇಂದು ಅವು ಯಾವು ನಮ್ಮ ಹತ್ತಿರವಿಲ್ಲ. ದೊಡ್ಡ ದೊಡ್ಡ ಸಾಮ್ರಾಜ್ಯಗಳೂ ಉಳಿಯಲಿಲ್ಲ. ಅಪಾರ ಧನರಾಶಿ ಕಳೆದುಹೋಯಿತು. ವೈಭವವೆಲ್ಲ ನಾಶವಾಯಿತು. ಕಲೆ ಮತ್ತು ಸಾಹಿತ್ಯ, ವಿದ್ವಾಂಸರ ಹುಡುಕಾಟ ಕೇವಲ ಮನೋರಂಜನೆಯ ಸಾಮಾಗ್ರಿಯಾಗಿ ಉಳಿದುಕೊಂಡಿತು. ಆ ಯುಗದ ಅಕ್ಷಯವಾದ ಕೊಡುಗೆ ಎಂದರೆ ನಮ್ಮ ರಾಷ್ಟ್ರೀಯತೆಯ ಭಾವನೆ. ಭಾರತದ ಏಕತೆ ಮತ್ತು ಅಖಂಡತ್ವದ ಭಾವನೆ ಮತ್ತು ಆ ಭಾವನೆಗಳಿಗೆ ರೂಪಕೊಡಲು ಪ್ರಯತ್ನಿಸುವ ಸಂಸ್ಥೆಗಳ ಸ್ಥಾಪನೆ ಮತ್ತು ಅವುಗಳನ್ನು ಶಾಶ್ವತಗೊಳಿಸುವ ಸಂಸ್ಕಾರಗಳ ಯೋಜನೆ, ನಮ್ಮ ರಾಷ್ಟ್ರೀಯ ಕಲ್ಪನೆ ವೈದಿಕ ಕಾಲದಿಂದಲೂ ನಡೆದುಬಂದಿದೆ ಮತ್ತು ಆಂತರಿಕ ಪ್ರಕೃತಿ ಮತ್ತು ಬಾಹ್ಯ ಪ್ರಕೃತಿಯನ್ನು ಎಬ್ಬಿಸಿ ಹೃದಯದಲ್ಲಿರುವ ಅಂಧಃಶ್ರದ್ಧೆಯನ್ನು ವ್ಯಕ್ತಪಡಿಸಲು ನಮ್ಮ ಋಷಿಮುನಿಗಳು ಹೀಗೆ ಹಾಡುತ್ತಾರೆ. ರಾಷ್ಟ್ರ ಚಿಂತನ 405 ಇದರಲ್ಲಿ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ರೋಮಂ ಸಚತಾ ಪುರುಷಯಾ ಅಸಿವನ್ಯಾ, ಮರುಧೃದೇ ವಿತಸ್ತಯಾರ್ಜಿಕೀಯೇ ಶೃಣುಹ್ವಾ ಸುಖೋಮಯಾ ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಯಾವಾಗ ರಾಷ್ಟ್ರಭಕ್ತಿಯ ಕಲ್ಪನೆಗೆ ಒಂದು ಸ್ಥೂಲ ರೂಪ ಸಿಗುತ್ತದೋ ಆಗ ರಾಷ್ಟ್ರದ ಆತ್ಮಕ್ಕೆ ಆಧಾರ ಸ್ವರೂಪವಾದ ಮಾತೃಭೂಮಿಯ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೌದ್ಧ ಧರ್ಮದ ಪ್ರಸಾರದಿಂದಾಗಿ ಈ ರಾಷ್ಟ್ರತ್ವದ ಕಲ್ಪನೆಗೆ ಒಂದು ಏಟುಬಿತ್ತು. ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರ ನಾಶವಾಗುತ್ತದೆ. ಎಂಬುದು ಅರಿವಾಗತೊಡಗಿತು. ಆದರೆ ಪಾತಾಳದವರೆಗೂ ಹರಡಿರುವ ಆಲದ ಮರದ ಬೇರುಗಳನ್ನು ಎಷ್ಟು ಸಲ ಕಡಿದರೂ ಅದು ಮತ್ತೆ ಮತ್ತೆ ಚಿಗುರುವ ಹಾಗೆಯೇ ವೈದಿಕ ಧರ್ಮವೆಂಬ ವಟವೃಕ್ಷವನ್ನು ಎಷ್ಟು ಬಾರಿ ಕಡಿದರೂ ಅದು ಮತ್ತೆ ಮತ್ತೆ ಹಸುರಾಯಿತು. ಏಕೆಂದರೆ ಅದರ ಬೇರುಗಳು ಭಾರತ ಭೂಮಿಯಲ್ಲಿ ಬಹಳ ಆಳದಲ್ಲಿ ನಿಂತುಬಿಟ್ಟಿದೆ. ಎಷ್ಟು ಆಳವೆಂದು ಇದುವರೆಗೂ ಯಾರಿಂದಲೂ ತಿಳಿಯಲಾಗಲಿಲ್ಲ. ಮಧ್ಯದಲ್ಲಿ ಅಣೆಕಟ್ಟು ಕಟ್ಟಿದರೆ ಗಂಗಾ ಪ್ರವಾಹವು ನಿಲ್ಲುವುದಿಲ್ಲ. ಏಕೆಂದರೆ ಗಂಗೋತ್ರಿಯಿಂದ ಸತತವಾಗಿ ಧಾರೆ ಹರಿದು ಬರುತ್ತಿರುತ್ತದೆ. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ಗಂಗಾ ಪ್ರವಾಹವನ್ನು ನಿಲ್ಲಿಸಿದರೆ ಅದು ಸಾಗರದವರೆಗೆ ತಲುಪುವುದಿಲ್ಲ. ಎನಿಸಿದರೂ ಕೆಲವೇ ದಿನಗಳಲ್ಲಿ ನಮಗೆ ನಮ್ಮ ತಪ್ಪಿನ ಅರಿವಾಗುತ್ತದೆ. ಅನಂತವಾಗಿ ಹರಿದುಬರುವ ಜಾಹ್ನವಿ ಅಣೆಕಟ್ಟನ್ನು ಚೂರು ಚೂರು ಮಾಡಿ ಮುಂದೆ ಸಾಗುತ್ತದೆ ಮತ್ತು ತನ್ನ ದಾರಿಯನ್ನು ಹುಡುಕಿಕೊಂಡೇ ತೀರುತ್ತದೆ. ಗಂಗೆಯ ಉಗಮ ಸ್ಥಾನಗಳು ಎಲ್ಲಿ ಮತ್ತು ಎಷ್ಟಿವೆ ಎಂದು ಇಲ್ಲಿಯವರೆಗೆ ಯಾರಿಂದಲೂ ತಿಳಿಯಲಾಗಲಿಲ್ಲ. ಇದೇ ರೀತಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರತ್ವದ ಪ್ರಗತಿಯನ್ನು ಅನೇಕ ಬಾರಿ ತಡೆಯುವ ಪ್ರಯತ್ನಗಳು ನಡೆದವು. ಆದರೆ ಪ್ರತಿಸಲವೂ ಅದು ತನ್ನನ್ನು ತಡೆಯುವವರನ್ನು ತನ್ನ ಜೊತೆ ತೆಗೆದುಕೊಂಡು ಮುಂದೆ ಸಾಗಿತು. ಗಂಗೆಯು ಹೇಗೆ ತನ್ನನ್ನು ತಡೆದವರನ್ನು ತನ್ನ ಮಡಿಲಿನಲ್ಲಿ ಹಾಕಿಕೊಂಡು ಆಶ್ರಯವನ್ನು ಕೊಡುತ್ತದೆಯೋ, ಅದನ್ನು ತಡೆದ ಅನೇಕ ಕಲ್ಲುಗಳೂ ಕೆಲವೇ ದಿನಗಳಲ್ಲಿ ಪಾಪನಾಶಿನಿಯ ಜಲಕಣಗಳಿಂದ ಹೊಡೆದುಕೊಂಡು ತಮ್ಮ ಚೂಪಾದ ಮೊನೆಗಳನ್ನು ಕಳೆದುಕೊಂಡು ಶಾಲಿಗ್ರಾಮದ ರೂಪದಲ್ಲಿ ಪೂಜೆಗೆ ಅರ್ಹತೆಯನ್ನು ಪಡೆದುಕೊಳ್ಳುತ್ತವೆಯೋ ಅದೇ ರೀತಿ ಹಿಂದೂ ಧರ್ಮವೂ ತನ್ನನ್ನು ತಡೆದ ಅನೇಕ ಜನರನ್ನು ತನ್ನ ಮಡಿಲಿಗೆ ತೆಗೆದುಕೊಂಡು ಮುಂದೆ 406 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತಂದಿತು. ಏಕೆಂದರೆ ಅದರಲ್ಲಿ ಆ ಸಮಯದಲ್ಲಿ ಅಲ್ಲದೆ ಇತರರನ್ನು ಮುಂದೆ ತರುವ ಸಾಮರ್ಥ್ಯ ಅದಕ್ಕೆ ಇದ್ದ ಕಾರಣ ಇದು ಸಾಧ್ಯವಾಯಿತು. ಜೊತೆಯಲ್ಲಿ ಹೋಗುವವರೂ ಅದರಲ್ಲಿನ ಶಕ್ತಿ, ಉದಾರತೆ ಮತ್ತು ಸ್ನೇಹವನ್ನು ನೋಡಿ ತಮ್ಮ ಹಠವನ್ನು ಬಿಟ್ಟರು, ವೈರತ್ವವನ್ನು ಬಿಟ್ಟರು ಮತ್ತು ಇದರ ಸ್ನೇಹವನ್ನು ಪಡೆಯುವುದು ತಮ್ಮ ಭಾಗವೆಂದು ತಿಳಿದರು. ಇದೂ ಕೂಡ ಅವರನ್ನು ತನ್ನದೇ ಅಂಗವೆನ್ನುವಷ್ಟು ಹತ್ತಿರಕ್ಕೆ ಎಳೆದುಕೊಂಡಿತು ಹಾಗೂ ತನ್ನ ಹೃದಯಸಿಂಹಾಸನದಲ್ಲಿ ಅವರಿಗೆ ಸ್ಥಾನವನ್ನು ಕೊಟ್ಟಿತು. ಹಿಂದೂ ಧರ್ಮದ ಈ ಸಮನ್ವಯಾತ್ಮಕ ಗುಣಕ್ಕೆ ಶಂಕರಾಚಾರ್ಯರು ಒಂದು ಜ್ವಲಂತ ಉದಾಹರಣೆಯಾಗಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ಕಡಿಯಲ್ಪಟ್ಟ ಆ ಸಮಯದಿಂದಲೂ ನಿರಂತರವಾಗಿ ಬೆಳೆಯುತ್ತಿದ್ದ ವೈದಿಕಧರ್ಮ ರೂಪದ ವಟವೃಕ್ಷದ ಪುಣ್ಯಫಲ ಅವರು. ಬುದ್ಧ ಭಗವಾನನು ವೈದಿಕ ಧರ್ಮದಲ್ಲಿ ವಿರುದ್ಧ ವಿದ್ರೋಹವನ್ನು ಪ್ರಾರಂಭ ಮಾಡಿದಾಗ ವೈದಿಕ ಧರ್ಮವು ಶಾಂತ ಚಿತ್ತದಿಂದ ಕುಳಿತುಕೊಳ್ಳಲಿಲ್ಲ. ಅದು ಕಾಲಗತಿಯನ್ನು ಮತ್ತು ಆ ವಿದ್ರೋಹದಿಂದ ಆಗುತ್ತಿದ್ದ ಹಾನಿಯನ್ನು ತಿಳಿದುಕೊಂಡಿತು. ಆದ್ದರಿಂದ ವೈದಿಕ ಮಹಾಪುರುಷರ ಮುಂದೆ ವೈದಿಕ ಧರ್ಮವನ್ನು ಎಲ್ಲಾ ರೀತಿಯಿಂದಲೂ ಸದೃಢ ಮತ್ತು ಯುಗಾನುಕೂಲವಾಗಿ ಮಾಡುವುದು ಹೇಗೆ ಎಂಬ ಪ್ರಶ್ನೆ ಅವರ ಮುಂದಿತ್ತು. ಅವರು ವಿದ್ರೋಹದ ಕಾರಣಗಳನ್ನು ತಿಳಿದರು ಮತ್ತು ಅದನ್ನು ದೂರಮಾಡಿದರು. ಇಷ್ಟೇ ಅಲ್ಲದೆ ಬೌದ್ಧಧರ್ಮದ ಎಲ್ಲ ಒಳ್ಳೆಯ ಗುಣಗಳನ್ನು ತಮ್ಮದಾಗಿ ಮಾಡಿಕೊಂಡರು. ಸ್ವಾಮಿ ಶಂಕರಾಚಾರ್ಯರು ಬುದ್ಧ ಭಗವಾನರನ್ನು ವಿಷ್ಣುವಿನ ಅವತಾರವೆಂದೇ ಘೋಷಿಸಿದರು. ಹಿಂದೂ ಧರ್ಮವು ಕೆಲವು ಕರ್ಮಕಾಂಡಿ ವಿದ್ವಾಂಸರ ಸ್ವತ್ತಾಗಿರದೆ ಜನ ಸಾಮಾನ್ಯರ ಸ್ವತ್ತಾಯಿತು. ಈ ಎಲ್ಲ ಬದಲಾವಣೆಗಳಿಂದಾಗಿ ಬೌದ್ಧ ಧರ್ಮವು ಭಾರತದಲ್ಲಿ ಅನವಶ್ಯಕವಾಯಿತು. ಜನರಿಗೆ ಯಾವ ಭಕ್ತಿಭಾವ ಮತ್ತು ನೈತಿಕತೆ ಬೌದ್ಧಧರ್ಮದಲ್ಲಿ ಸಿಗುತ್ತಿತ್ತೋ ಅದು ಹಿಂದೂ ಧರ್ಮದಲ್ಲೂ ಇದ್ದು ಅದಕ್ಕಿಂತಲೂ ಹೆಚ್ಚು ಸಿಗುತ್ತಿತ್ತು. ಇದರಲ್ಲಿ ನಮ್ಮ ಪೂರ್ವಜರ ಬಗ್ಗೆ ಶ್ರದ್ಧೆ ನಮ್ಮ ಮಾತೃಭೂಮಿಯ ಬಗ್ಗೆ ಮಮತೆ, ಸ್ವಾಭಿಮಾನದ ಭಾವನೆ ಮತ್ತು ರಾಷ್ಟ್ರೀಯ ಜೀವನವನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆ ಇತ್ತು. ಸ್ವಾಮಿ ಶಂಕರಾಚಾರ್ಯರ ಕಾಲಕ್ಕೆ ಬೌದ್ಧಧರ್ಮ ಮತ್ತು ಹಿಂದೂಧರ್ಮ ಒಂದಕ್ಕೊಂದು ಎಷ್ಟು ಸನಿಹವಾಗಿತ್ತೆಂದರೆ ಬುದ್ಧ ಭಗವಾನರನ್ನು ಭಗವಂತನ ಅವತಾರ ಮತ್ತು ವೇದಾಂತದ ಸ್ಥಾಪನೆ ಮಾಡಿದಾಗ ಬೌದ್ಧರಿಗೆ ಶೂನ್ಯವಾದಕ್ಕೆ ಹತ್ತಿರ ಎಂದು ಅನಿಸುತ್ತಿತ್ತು. ಬೌದ್ಧಧರ್ಮದ ಸ್ವತಂತ್ರ ಅಸ್ತಿತ್ವ ಅನಾವಶ್ಯಕವೆನಿಸಿತೊಡಗಿ ಅದು ಹಿಂದೂ ಧರ್ಮದಲ್ಲಿ ಸೇರ್ಪಡೆಯಾಯಿತು. ಈ ಐಕ್ಯತೆ, ಇದರ ಕಾರಣ ಮತ್ತು ಇತಿಹಾಸದ ವಿವೇಚನೆ ಮತ್ತು ರಾಷ್ಟ್ರೀಯ ಜೀವನದ ರಾಷ್ಟ್ರ ಚಿಂತನ 407 ವಿಶೇಷತೆಗಳನ್ನು ಸ್ಪಷ್ಟವಾಗಿಸುತ್ತಿತ್ತು. ಜೀವನ ತತ್ವಗಳ ಸಂಬಂಧದಲ್ಲಿ ನಮಗೆ ಯಾವಾಗಲೂ ಶ್ರದ್ಧೆ ಇತ್ತು ಮತ್ತು ಆ ಜೀವನವನ್ನು ಪೂರ್ಣಗೊಳಿಸುವ ಸಾಧನೆಗಳನ್ನು ಈ ಯುಗದ ಮೇಲೂ ಹೊಂದಿಸಿ ನೋಡಲು ಯಾವ ಹಿಂಜರಿಕೆಯೂ ಇರಲಿಲ್ಲ. ತಮ್ಮ ಧರ್ಮವನ್ನು ತರ್ಕದ ಅಡಿಪಾಯದ ಮೇಲೆ ವ್ಯವಸ್ಥಿತವನ್ನಾಗಿ ಮಾಡಲು ಷಡ್ದರ್ಶನಗಳ ನಿರ್ಮಾಣವಾಯಿತು. ಪ್ರತಿಯೊಂದು ದರ್ಶನವೂ ತನ್ನ ತನ್ನ ಪದ್ಧತಿಯಲ್ಲಿ ವೈದಿಕ ಆದರ್ಶಗಳಲ್ಲಿ ಅತ್ಯಂತ ತರ್ಕಶುದ್ಧ ಪದ್ಧತಿ ಎಂದು ಪ್ರತಿಪಾದಿಸಿದರು. ನಂತರ ನಾವು ಈ ಆರು ದಶಕಗಳಲ್ಲಿ ಒಂದನ್ನು ಅದ್ಭುತ ಸಮನ್ವಯ ಮತ್ತು ಸಾಮಂಜಸ್ಯವೆಂದು ನೋಡುತ್ತೇವೆ. ಜನಸಾಮಾನ್ಯರನ್ನು ಆಕರ್ಷಿಸುವ ಸಲುವಾಗಿ ದೊಡ್ಡ ದೊಡ್ಡ ಮಂದಿರ ಮತ್ತು ಮಠಗಳ ಸ್ಥಾಪನೆಯಾಯಿತು. ಪುರಾಣ ಮತ್ತು ಆಗಮಗಳ ರಚನೆಯಾಯಿತು. ಕಥೆಗಳ ಮೂಲಕ ನಮ್ಮ ಧರ್ಮದ ಗೂಢ ಸಿದ್ಧಾಂತಗಳನ್ನು ಜನಸಾಮಾನ್ಯರ ಮುಂದೆ ಇಡಲಾಯಿತು ಮತ್ತು ಭಕ್ತಿಯ ಅಲೆ ಸಂಪೂರ್ಣ ಜನತೆಯನ್ನು ತೋಯಿಸಿತು. ವೇದಗಳ ಪ್ರಾಚೀನ ಆದರ್ಶಗಳು ಮತ್ತು ಉಪದೇಶಗಳನ್ನು ನವೀನ ಮತ್ತು ರೋಚಕವಾಗಿ ತಿಳಿಸಲು ಪುರಾಣಗಳ ಸೃಷ್ಟಿಯಾಯಿತು. ಈ ಪುರಾಣಗಳು ಪ್ರಾಚೀನತೆಯನ್ನು ರಕ್ಷಿಸಿ ನವೀನತೆಯನ್ನು ಗ್ರಹಿಸಿತು. ವಿದ್ರೋಹವನ್ನು ಅಡಗಿಸುವ ಜೊತೆಗೆ ರಾಷ್ಟ್ರದ ಆತ್ಮವನ್ನು ಜೀವಂತವಾಗಿರಿಸಿತು ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಪ್ರಾಚೀನ ಗಾರ್ಹಸ್ತ್ಯದ ಸೂತ್ರದ ಸ್ಥಾನವನ್ನು ಸ್ಮೃತಿಗಳು ತೆಗೆದುಕೊಂಡವು ಹಾಗೂ ಯಜ್ಞಯಾಗಾದಿಗಳ ಸ್ಥಾನವನ್ನು ಮಂದಿರಗಳು ಮತ್ತು ಪೂಜೆ ಅರ್ಚನೆಗಳು ತೆಗೆದುಕೊಂಡವು. ಹಿಂದೂ ಧರ್ಮದ ಸ್ವರೂಪ ಬದಲಾಯಿತು. ಆದರೆ ಇದರ ಆತ್ಮವು ಅದೇ ಇತ್ತು. ಏಕೆಂದರೆ ಇಂದಿಗೂ ಪ್ರಾಚೀನತೆಯ ಮೇಲೆ ಅದೇ ಶ್ರದ್ಧೆ ಮತ್ತು ಗೌರವ ಭಾವನೆ ಇತ್ತು. ಅದೇ ಪ್ರಾಚೀನ ಆದರ್ಶ ಮತ್ತು ಜೀವನದ ದೃಷ್ಟಿ ಸಮಾಜದ ಮುಂದೆ ಇತ್ತು, ಆದರೆ ಅದರ ಸಾಧನಗಳು ಬದಲಾದವು. ಆದ್ದರಿಂದ ಈ ಯುಗದಲ್ಲಿ ನಮ್ಮ ಮಾತೃ ಭೂಮಿಯ ದರ್ಶನ ಮಾಡಿಸುವ ಪ್ರಯತ್ನ ಮಾಡಲಾಯಿತು. ಯಾವುದೇ ಮತ ಅಥವಾ ಸಂಪ್ರದಾಯದವರಾಗಲಿ ಅವರ ಎದುರಿನಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಆಸೇತು ಸಿಂಧು ಭಾರತದ ಚಿತ್ರ ಕಾಣಿಸುತ್ತಿತ್ತು. ಪ್ರತಿಯೊಂದು ಸಂಪ್ರದಾಯದ ಆಚಾರ್ಯರು ನಮ್ಮ ಸಂಪ್ರದಾಯದ ಜನ ಸಂಪೂರ್ಣ ಭಾರತವನ್ನು ಪವಿತ್ರವೆಂದುಕೊಳ್ಳಬೇಕೆಂಬ ಪ್ರಯತ್ನವನ್ನು ಮಾಡಿದರು. ಇಷ್ಟೇ ಅಲ್ಲದೆ ಎಲ್ಲರಿಗೂ ಭಾರತದ ಏಕತೆಯ ಪ್ರತ್ಯಕ್ಷ ಜ್ಞಾನವನ್ನು ಮೂಡಿಸುವ ಸಲುವಾಗಿ ಪ್ರತಿಯೊಂದು ಸಂಪ್ರದಾಯದಲ್ಲೂ ತೀರ್ಥಯಾತ್ರೆಯ ಪ್ರಚಾರವಾಯಿತು. ಈ ತೀರ್ಥಕ್ಷೇತ್ರಗಳು ಸಂಪೂರ್ಣ ಭಾರತದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಹರಡಿತ್ತು. 408 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸೂರ್ಯನ ಹನ್ನೆರಡು ಮಂದಿರಗಳು, ಗಾಣಪತ್ಯಗಳ ದ್ವಾದಶ ವಿನಾಯಕ, ಶೈವರ ಹದಿನೆಂಟು ಜ್ಯೋತಿರ್ಲಿಂಗ ಶಾಕ್ತದ ಐವತ್ತೊಂದು ಶಕ್ತಿ ಕ್ಷೇತ್ರಗಳು, ವೈಷ್ಣವರ ಅಗಣಿತ ತೀರ್ಥಕ್ಷೇತ್ರಗಳು ಸಂಪೂರ್ಣ ಭಾರತದಲ್ಲಿ ಹರಡಿಕೊಂಡಿದ್ದವು. ಈ ವಿಶಾಲ ಪುಣ್ಯಕ್ಷೇತ್ರಗಳ ಕಾರಣ ಪ್ರಾಂತೀಯತೆಯ ಸಂಕುಚಿತ ಭಾವನೆಯ ಪ್ರವೇಶ ಅಸಂಭವವಾಗಿತ್ತು. ಮರ್ಯಾದ ಪುರೋಷತ್ತಮ ರಾಮನ ದಕ್ಷಿಣದ ಯಾತ್ರೆ ಉತ್ತರ ದಕ್ಷಿಣಗಳನ್ನು ಒಂದುಗೂಡಿಸಿತು. ಅದು ಜನಸಾಮಾನ್ಯರ ಆಚಾರ ವಿಚಾರಗಳು ಮತ್ತು ಭಾವನೆಗಳಲ್ಲಿ ಸ್ಥಿರವಾಗಿ ನಿಂತಿತು. ಮಹಾಭಾರತದ ರಚನಾಕಾರರು ಈ ಏಕತೆಯನ್ನು ತೋರಿಸುವ ಸಲುವಾಗಿ ಅನೇಕ ಸಲ ಭಾರದಿಂದ ಒಂದು ತುದಿಯಿಂದ ಇನ್ನೊಂದು ತುದಿಗೆ ಅತ್ಯಂತ ಭಾವುಕತೆಯ ವರ್ಣನೆಯನ್ನು ಮಾಡಿದರು. ಪುರಾಣಕಾರರು ಭಾರತ ಭೂಮಿಯ ಕಣ ಕಣದ ಪವಿತ್ರತೆಯ ಗುಣಗಾನ ಮಾಡಿದರು. ಪ್ರತಿಯೊಂದು ಮತ ಮತ್ತು ಸಂಪ್ರದಾಯದ ಮುಂದೆ ಸಂಪೂರ್ಣ ಭಾರತದ ಚಿತ್ರಣವಿತ್ತು ಮತ್ತು ಅದರಲ್ಲಿ ಪ್ರತಿಯೊಬ್ಬರೂ ವೈದಿಕ ಧರ್ಮದ ಪಾವಿತ್ರ್ಯತೆಯ ರಕ್ಷಣೆಯನ್ನು ಮಾಡುತ್ತಾ ಭಾರತ ಭೂಮಿಯ ಯಶೋವೃದ್ಧಿಗಾಗಿ ಪ್ರಯತ್ನ ಮಾಡಿದರು. ಆದರೆ ಈ ರೀತಿಯಲ್ಲಿ ಒಂದೇ ಧ್ಯೇಯವನ್ನು ಇಟ್ಟುಕೊಂಡು ಕೆಲಸ ಮಾಡುವವರಲ್ಲಿ ಸಹಕಾರ ಮತ್ತು ಏಕತೆಯ ಅವಶ್ಯಕತೆಯೂ ಇತ್ತು. ಆದ್ದರಿಂದ ರಾಷ್ಟ್ರೀಯ ಭಾವನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಿನ್ನ ಭಿನ್ನ ಮತದವರು ಮತ್ತು ಸಂಪ್ರದಾಯವರಲ್ಲಿ ಸಮನ್ವಯ ಸ್ವಭಾವದ ವಿಕಾಸವೂ ಈ ಯುಗದಲ್ಲಿ ನಡೆಯಿತು. ಈ ಸಮನ್ವಯದ ಬಹುತೇಕ ಯಶಸ್ಸು ಶ್ರೀ ಶಂಕರಾಚಾರ್ಯರಿಗೆ ಸಿಕ್ಕಿದೆ. ಈ ಸಮನ್ವಯದ ಕಾರ್ಯದಲ್ಲೂ ಭಾರತದ ಏಕತೆ ಮತ್ತು ಅಖಂಡತೆಯ ಬಗ್ಗೆ ಗಮನವಿಡಲಾಯಿತು. ಈ ರೀತಿಯಾಗಿ ಮೇಲೆ ಕೆಳಗೆ, ಎಡ-ಬಲಗಳಲ್ಲಿ ಎಲ್ಲಾ ಕಡೆಯಲ್ಲಿಯೂ ಏಕತೆಯ ಪ್ರಸಾರವಾಯಿತು. ದಾರದ ಎಳೆಗಳಂತೆ ಒಂದು ಭಾವನಾ ಸೂತ್ರವನ್ನು ಹರಡಿ ಒಂದು ವಸ್ತ್ರದ ನಿರ್ಮಾಣವಾಯಿತು. ಭಿನ್ನ ಭಿನ್ನ ಸಂಪ್ರದಾಯಗಳ ತೀರ್ಥಕ್ಷೇತ್ರಗಳು ಸಂಪೂರ್ಣ ಭಾರತದಲ್ಲಿ ಹರಡಿದ್ದವು. ಅವುಗಳಲ್ಲಿ ನಾಲ್ಕನ್ನು ಪ್ರಮುಖ ತೀರ್ಥಕ್ಷೇತ್ರಗಳನ್ನಾಗಿ ಆರಿಸಿ ಅವುಗಳನ್ನು ಎಲ್ಲ ಸಂಪ್ರದಾಯದವರೂ ಗೌರವ ಮತ್ತು ಶ್ರದ್ಧೆಯ ಸ್ಥಾನಗಳನ್ನಾಗಿ ಮಾಡಿಕೊಂಡರು. ಹಿಮಾಲಯದಲ್ಲಿ ಹಿಮದಿಂದ ಕೂಡಿದ ಶಿಖರದಲ್ಲಿರುವ ಬದರೀನಾಥನ ಯಾತ್ರೆ ಎಲ್ಲ ಸಂಪ್ರದಾಯಸ್ಥರ ಜೀವನದ ಬಯಕೆಯಾಯಿತು. ಎಲ್ಲಿ ಭಾರತ ಮಾತೆಯ ಚರಣಗಳನ್ನು ತೊಳೆಯುತ್ತವೆಯೋ ಆ ರಾಮೇಶ್ವರ ಯಾತ್ರೆಗೆ ಶೈವರು ಎಷ್ಟು ಶ್ರದ್ಧಾಭಕ್ತಿಗಳಿಂದ ಹೋಗುತ್ತಾರೋ ಅದಕ್ಕಿಂತ ಹೆಚ್ಚು ಶ್ರದ್ಧೆಯಿಂದ ವೈಷ್ಣವರು ಗಂಗೋತ್ರಿಯ ಜಲವನ್ನು ತಂದು ಶಿವಲಿಂಗದ ಮೇಲೆ ಅಭಿಷೇಕ ಮಾಡುವರು. ರಾಷ್ಟ್ರ ಚಿಂತನ 409 ಜಗನ್ನಾಥನ ಹೆಸರನ್ನು ಹೇಳು ಜಾತಿಯನ್ನು ಕೇಳಬೇಡ ಎಂದು ಎಷ್ಟು ಪ್ರೇಮದಿಂದ ಮತ್ತು ಶ್ರದ್ಧೆಯಿಂದ ಶ್ರೀ ಜಗನ್ನಾಥನ ಪ್ರಸಾದವನನ್ನು ಸ್ವೀಕರಿಸುತ್ತಾರೋ ಅದು ರಾಷ್ಟ್ರೀಯ ಸಂಘಟನೆಗೆ ಸಂಜೀವಿನಿಯಂತೆ ಕೆಲಸಮಾಡುತ್ತದೆ. ದೊಡ್ಡ ದೊಡ್ಡ ಶಾಕ್ತರೂ ಕೂಡ ಶ್ರೀ ದ್ವಾರಕಾಪುರಿಗೆ ಹೋಗಿ ತಮ್ಮ ಶ್ರದ್ಧೆಯ ರಕ್ತಕಣವನ್ನು ಭಗವಂತ ವಾಸುದೇವನ ಚರಣಗಳಿಗೆ ಅರ್ಪಿಸಿ ತಮ್ಮನ್ನು ಧನ್ಯರೆಂದು ಭಾವಿಸುತ್ತಾರೆ ಇದೇ ರೀತಿಯಾಗಿ ಪುರಾಣಕಾರರು ಅಯೋಧ್ಯಾ ಮಥುರಾ ಮಾಯಾಕಾಶೀ ಕಾಂಚೀ ಅವಂತಿಕಾ ಪುರೀ ದ್ವಾರಾವತೀ ಚೈವ ಸಪ್ತೈತಾಂ ಮೋಕ್ಷದಾಯಿಕಾ ಎಂದು ಹೇಳುತ್ತಾ ಸಾಂಪ್ರದಾಯಿಕ ಭಾವನೆಯಿಂದ ಮೇಲೆ ಬಂದು ರಾಷ್ಟ್ರೀಯ ಭೂಮಿಕೆಯಿಂದ ವಿಚಾರವನ್ನು ಮಾಡುತ್ತಿದ್ದರು. ಈ ಸಂತರು, ಭಕ್ತರು, ಭಾರತೀಯರು ರಾಷ್ಟ್ರದ ಪ್ರಮುಖ ಸ್ಥಾನದಲ್ಲಿದ್ದರು. ಭಾರತೀಯ ಸಭ್ಯತೆ ಮತ್ತು ಸಂಸ್ಕೃತಿಯ ಕೇಂದ್ರವಾಗಿದ್ದರು. ಒಬ್ಬೊಬ್ಬರ ಹಿಂದೆ ಗತಕಾಲದ ಎಷ್ಟು ಘಟನೆಗಳ ಸಂಬಂಧ ಇತ್ತೆಂದರೆ ಅದರ ನೆನಪಿನಿಂದಲೇ ನಮ್ಮ ಸಂಪೂರ್ಣ ಇತಿಹಾಸ ಚಲನಚಿತ್ರದ ರೀತಿಯಲ್ಲಿ ಕಣ್ಣ ಮುಂದೆ ಹಾದು ಹೋಗುತ್ತದೆ. ಇಷ್ಟೇ ಅಲ್ಲದೆ ಭಾರತ ಭೂಮಿಯಲ್ಲಿ ಯಾವುದೇ ಸ್ಥಳ ಸಿಕ್ಕಿದರೂ ಅದರ ಪ್ರಾಕೃತಿಕ ಸೌಂದರ್ಯ ನಮ್ಮ ಹೃದಯದ ವೀಣೆಯ ತಂತಿಗಳನ್ನು ಮೀಟಿ ನಮ್ಮ ಅಂತಃಕರಣದಲ್ಲಿ ಕೋಮಲ ಹಾಗೂ ಉಚ್ಛಭಾವನೆಗಳನ್ನು ಸೃಷ್ಟಿಮಾಡುತ್ತದೆ. ಯಾವ ಪ್ರದೇಶ ಯಾವುದೇ ಮಹಾಪುರುಷನಿಗೆ ಸಂಬಂಧಪಟ್ಟರೂ, ರಾಮ ಕೃಷ್ಣ ಅಥವಾ ಯಾವುದೇ ಮಹಾಪುರುಷನಿಗೆ ಸಂಬಂಧಪಟ್ಟರೂ ಅದರಿಂದ ನಮ್ಮ ರಾಷ್ಟ್ರದ ಇತಿಹಾಸದ ಘಟನಾಚಕ್ರ ನಮ್ಮ ಮನಸ್ಸಿನ ಕಣ್ಣುಗಳ ಮುಂದೆ ಬಂದು ನಿಲ್ಲುತ್ತದೆ. ಆ ಸ್ಥಳಕ್ಕೆ ತೀರ್ಥಕ್ಷೇತ್ರದ ಸ್ವರೂಪ ಸಿಗುತ್ತದೆ. ಅಲ್ಲಿಗೆ ಯಾತ್ರೆಗಳು ಪ್ರಾರಂಭವಾಗಿ ಬಿಡುತ್ತವೆ. ಸಂತೆಗಳು, ಪ್ರದರ್ಶನಗಳು, ಯಾತ್ರೆಗಳು ನಡೆಯಲು ಆರಂಭವಾಗಿ ಅವು ನಮ್ಮ ಜೀವನದ ಅಂಗವಾಗಿಬಿಡುತ್ತವೆ. ಹೃದಯದ ಶ್ರದ್ಧಾಭಾವ ಲಕ್ಷಗಟ್ಟಲೆ, ಕೋಟಿಗಟ್ಟಲೆ ಯಾತ್ರಿಕರನ್ನು ಎಲ್ಲ ರೀತಿಯ ಕಷ್ಟಗಳ ಮಧ್ಯೆಯೂ ಮಾಘಮಾಸದ ಕೊರೆಯುವ ಚಳಿಯಲ್ಲಿಯೂ ಕುಂಭಮೇಳದಲ್ಲಿ ಸ್ನಾನಮಾಡಲು ಪ್ರೇರೇಪಿಸುತ್ತದೆ. ಅದರ ಉಗಮ ಸ್ಥಾನ ಬಹಳ ಆಳವಾಗಿದೆ. ಶ್ರದ್ಧೆಯನ್ನು ನಿರ್ಮಾಣ ಮಾಡಿದ, ಸಂಸ್ಕಾರಗಳಿಗೆ ಬುನಾದಿ ಹಾಕಿದ ಆ ಮಹಾತ್ಮನಿಗೆ ನಾವು ಕೃತಜ್ಞರಾಗಿರಬೇಕು. ಈ ಕುಂಭಮೇಳಗಳು ಏನು? ಓಡಾಡುವ ವಿದ್ಯಾಲಯಗಳು ಅಂದುಕೊಳ್ಳಬಹುದು. ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್‍ನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಸಮ್ಮೇಳನಗಳೆಂದು ಹೇಳಬಹುದು. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು-ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ 410 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮತ್ತು ಕೋಟಿ ಸಂಖ್ಯೆಯಲ್ಲಿ ಜನ ಒಟ್ಟು ಸೇರಿ ಅವರ ದರ್ಶನ ಮತ್ತು ಉಪದೇಶಗಳಿಂದ ತಮ್ಮ ಹೃದಯದ ಕಲ್ಮಶವನ್ನು ತೊಳೆದುಕೊಂಡು ಪಾವಿತ್ರ್ಯದ ಅನುಭವವನ್ನು ಪಡೆಯುತ್ತಾರೆ. ಎಲ್ಲ ಸಂಪ್ರದಾಯಗಳ ಜನರು ಈ ರೀತಿಯಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಒಟ್ಟು ಸೇರಿದಾಗ ಭಾರತದ ಸಮನ್ವಯಾತ್ಮಕ ವಾತಾವರಣದಲ್ಲಿ ಏಕತೆಯ ನಿರ್ಮಾಣವಾಗದೇ ಇರಲು ಹೇಗೆ ತಾನೇ ಸಾಧ್ಯ. ನಮ್ಮ ದಿನಿತ್ಯದ ವ್ಯವಹಾರದಲ್ಲಿ ಈ ರಾಷ್ಟ್ರೀಯ ಭಾವನೆಯ ಪುಷ್ಟಿಯಾಗುತ್ತಿರುತ್ತದೆ. ಇದಕ್ಕಾಗಿ ದೈನಿಕ ಆಚರಣೆಗಳಲ್ಲೂ ರಾಷ್ಟ್ರೀಯ ಭಾವನೆಯನ್ನು ಪೋಷಿಸುವ ಸಂಸ್ಕಾರಗಳನ್ನು ಸೇರ್ಪಡೆ ಮಾಡಲಾಗಿದೆ. ಬೆಳಿಗ್ಗೆ ಏಳುತ್ತಲೇ ಭೂಮಿಯ ಮೇಲೆ ಕಾಲಿಡುತ್ತಲೇ ಅತ್ಯಂತ ವಿನೀತ ಭಾವದಿಂದ ಹಿಂದೂ ಮಾತೆಗೆ ನಮಸ್ಕರಿಸುತ್ತಾ ಹೀಗೆ ಹೇಳುತ್ತೇವೆ. ಸಮುದ್ರ ವಸನೇ ದೇವೀ ಪರ್ವತ ಸ್ತನಮಂಡಲೇ ವಿಷ್ಣುಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ಇದರಲ್ಲಿ ಅದೇ ಸಂಪೂರ್ಣ ಭಾರತದ ಚಿತ್ರಣ ಮತ್ತು ಅದರ ಮುಂದೆ ಹೃದಯದ ಸಂಪೂರ್ಣ ಶ್ರದ್ಧೆಯೇ ಉಕ್ಕಿ ಹರಿಯುತ್ತಿದೆಯೇನೊ ಎನಿಸುತ್ತದೆ. ಯಾರೂ ಪ್ರಾತಃಸ್ಮರಣೆ ಮಾಡುತ್ತಾರೋ ಅವರು ತಮ್ಮ ಮನಸ್ಸಿನಲ್ಲಿ ಒಬ್ಬರಾದ ನಂತರ ಒಬ್ಬರು ಪೂರ್ವಜರನ್ನು ಸ್ಮರಿಸುತ್ತಾ ತಾವೂ ಅವರ ಹಾಗೆ ಆಗಬೇಕೆಂಬ ಅಭಿಲಾಷೆಯನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳುತ್ತಾರೆ. ಪ್ರಾತಃಸ್ಮರಣೆಯಲ್ಲಿ ಪ್ರಾಂತ ಮತ್ತು ಸಂಪ್ರದಾಯದ ಸಂಕುಚಿತ ಭಾವನೆಗೆ ಸ್ಥಾನವಿಲ್ಲ. ಇಲ್ಲಿ ನೂರಕ್ಕೆ ನೂರರಷ್ಟು ರಾಷ್ಟ್ರೀಯತೆಯ ಭಾವನೆಯಿಂದ ಸ್ನಾನ ಮತ್ತು ಸಂಧ್ಯಾವಂದನೆಯಲ್ಲಿಯೂ ರಾಷ್ಟ್ರೀಯತೆಯ ಜನಕ ಸಂಸ್ಕಾರಗಳ ಸಮಾವೇಶವಾಗಿದೆ. ಸ್ನಾನದ ಸಮಯದಲ್ಲಿ ಅಥವಾ ಸಂಕಲ್ಪ ಮಾಡುವಾಗ ನಾವು ಈ ಕೆಳಗಿನ ಶ್ಲೋಕವನ್ನು ಹೇಳುತ್ತೇವೆ. ಗಂಗೆ ಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಈ ಶ್ಲೋಕವನ್ನು ಹೇಳಿದಾಗ ನಾವು ಭಾರತದ ಬಹುತೇಕ ಪವಿತ್ರ ನದಿಗಳನ್ನು ಆವಾಹನೆ ಮಾಡುತ್ತೇವೆ. ಈ ನದಿಗಳಿಗೆ ಸಮಾನವಾಗಿಯೇ ಸಪ್ತವನಗಳಿಗೆ, ಸಪ್ತ ಪರ್ವತಗಳಿಗೆ, ನಾಲ್ಕು ಸರೋವರಗಳಿಗೆ ನಮ್ಮ ಜೀವನದಲ್ಲಿ ಮಹತ್ವದ ಸ್ಥಾನ ಕೊಟ್ಟಿದ್ದೇವೆ. ಎಲ್ಲಾ ಸಂಪ್ರದಾಯಗಳ ಜನರಲ್ಲಿ ಏಕತೆಯನ್ನು ತರುವುದಕ್ಕಾಗಿಯೇ ನಮ್ಮಲ್ಲಿ ತ್ರಿಮೂರ್ತಿಗಳ ಕಲ್ಪನೆಯನ್ನು ಮಾಡಲಾಯಿತು. ಇದರ ಅನುಸಾರವಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಒಂದೇ ಪರಬ್ರಹ್ಮನ ವಿವಿಧ ಸ್ವರೂಪಗಳು, ಶೈವರು ಮತ್ತು ವೈಷ್ಣವರ ಮಧ್ಯೆ ಯಾವುದೇ ರೀತಿಯ ವಿರೋಧವಿರಬಾರದೆಂದು ಪುರಾಣಕಾರರು ರಾಷ್ಟ್ರ ಚಿಂತನ 411 ಒಬ್ಬರು ಇನ್ನೊಬ್ಬರಿಗೆ ಭಕ್ತರನ್ನಾಗಿ ಮಾಡಿದರು. ಶಿವನು ವಿಷ್ಣುವಿನ ಉಪಾಸನೆಯನ್ನು ಮಾಡುತ್ತಾನೆ ಮತ್ತು ವಿಷ್ಣುವಿನ ಚರಣ ಕಮಲಗಳಿಂದ ಹುಟ್ಟಿದ ಗಂಗೆಯನ್ನು ಧರಿಸುತ್ತಾನೆ. ಹೀಗಿರುವಾಗ ವಿಷ್ಣುವಿನ ಅವತಾರವಾದ ರಾಮನು ಶಿವನ ಆರಾಧನೆಯನ್ನು ಮಾಡಿ ಶ್ರೀ ರಾಮೇಶ್ವರ ಮಂದಿರವನ್ನು ಸ್ಥಾಪನೆ ಮಾಡಿಯೇ ತನ್ನ ವಿಜಯ ಯಾತ್ರೆಯಲ್ಲಿ ಮುಂದುವರಿಯುತ್ತಾನೆ. ತನ್ನದೇ ವರದಾನದ ಕಾರಣದಿಂದ ಶಿವನು ಭಸ್ಮಾಸುರ, ರಾವಣ ಮುಂತಾದ ರಾಕ್ಷಸರಿಂದ ತೊಂದರೆಗೆ ಒಳಗಾದಾಗ ವಿಷ್ಣು ಭಗವಾನನು ಅವನ ರಕ್ಷಣೆಗೆ ಓಡುತ್ತಾನೆ. ಗಣಪತಿ ಮತ್ತು ಶಕ್ತಿಯರ ಜೊತೆ ಭಗವಂತ ಶಿವನಿಗೆ ಕೌಟುಂಬಿಕ ಸಂಬಂಧವನ್ನು ಜೋಡಿಸಿದ್ದಾರೆ. ಈ ರೀತಿಯಲ್ಲಿ ನಮ್ಮ ಪುರಾಣಕಾರರು ಪಾರಸ್ಪರಿಕ ಪ್ರೇಮ ಮತ್ತು ಸೌಜನ್ಯದ ಬೀಜವನ್ನು ನೆಟ್ಟಿದ್ದಾರೆ. ಶ್ರೀ ಶಂಕರಾಚಾರ್ಯರು ಪಂಚಾಯತನ ಪದ್ಧತಿಯನ್ನು ನಡೆಸಿ ಈ ಸಂಬಂಧವನ್ನು ಮತ್ತಷ್ಟು ದೃಢಗೊಳಿಸಿದ್ದಾರೆ. ಇದರ ಪ್ರಕಾರವಾಗಿ ಪ್ರತಿಯೊಬ್ಬರು ವಿಷ್ಣು, ಶಿವ, ಶಕ್ತಿ, ಗಣಪತಿ ಮತ್ತು ಸೂರ್ಯ ಈ ಐದೂ ದೇವರುಗಳ ಪೂಜೆಯನ್ನು ಮಾಡುತ್ತಾರೆ. ಈ ಯುಗದ ಈ ಸಮನ್ವಯಾತ್ಮಕ ಗುಣ ಮತ್ತು ಸಹಿಷ್ಣುತೆಯ ಫಲವಾಗಿ ಭಾರತೀಯರು ಯಾವಾಗಲೂ ಪ್ರೇಮ ಮತ್ತು ಸೌಹಾರ್ದದಿಂದ ಇರುತ್ತಾ ಬಂದಿದ್ದಾರೆ. ಕರ್ಮ, ಭಕ್ತಿ ಮತ್ತು ಜ್ಞಾನ ಈ ಮೂರು ಭಾಗಗಳ ಸಮನ್ವಯವನ್ನು ನಾವು ಈ ಯುಗದಲ್ಲಿ ನೋಡಬಹುದು. ಕೃಷ್ಣ ಭಗವಾನನು ಸ್ವತಃ ಗೀತೆಯಲ್ಲಿ ಈ ಮೂರರ ಸಮನ್ವಯವನ್ನು ಮಾಡಿದನು. ಮತ್ತು ಗೀತೆಗೆ ಈ ಯುಗದಲ್ಲಿ ಅತ್ಯಂತ ಪ್ರಮುಖ ಸ್ಥಾನವಿದೆ. ಸ್ವತಃ ಶಂಕರಾಚಾರ್ಯರು ಜೀವನದಲ್ಲಿ ಜ್ಞಾನ, ಕರ್ಮ ಮತ್ತು ಭಕ್ತಿಗಳ ಸುಂದರ ಸಮನ್ವಯವನ್ನು ಮಾಡಿದ್ದಾರೆ. ಇವರುಗಳ ಪ್ರಯತ್ನದಿಂದಲೇ ಇವುಗಳಿಗೆ ಮಾನ್ಯತೆ ದೊರೆತಿದೆ. ಈ ಮೂರು ವಿಷಯಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟು ಒಂದು ಕಡೆ ಅವರು ಬೌದ್ಧರ ವೇದ ವಿರೋಧಿ ದುರಾಗ್ರಹದಿಂದ ಮುಕ್ತಿಪಡೆದರು ಮತ್ತು ವೇದಗಳ ಆತ್ಮವನ್ನು ಉಪನಿಷದ್ ಬ್ರಹ್ಮಸೂತ್ರ ಮತ್ತು ಗೀತೆಗಳ ಜ್ಞಾನದ ಮುಖೇನ ಜೀವಂತವಾಗಿ ಉಳಿಸಿದರು. ಭಾರತದ ಈ ಅಖಂಡತೆ ಮತ್ತು ಏಕತೆಗೆ ಸ್ಥೂಲ ರೂಪವನ್ನು ಕೊಡುವುದಕ್ಕಾಗಿಯೇ ಒಬ್ಬರ ನಂತರ ಒಬ್ಬರು ರಾಜರು ಬಂದರು. ಮತ್ತು ಏಕಚ್ಛತ್ರ ಸಾಮ್ರಾಜ್ಯದ ಸ್ಥಾಪನೆಯನ್ನು ಮಾಡಿದರು. ಸಾಮ್ರಾಟ್ ಚಂದ್ರಗುಪ್ತ ಮೌರ್ಯನಿಂದ ಹಿಡಿದು ಹರ್ಷ ಮತ್ತು ಪುಲಕೇಶಿ ಮುಂತಾದ ರಾಜರು ಭಾರತವನ್ನು ಏಕಸೂತ್ರದಲ್ಲಿ ಇಡುವ ಪ್ರಯತ್ನ ಮಾಡಿದರು. ಇಷ್ಟೇ ಅಲ್ಲದೆ ಭಾರತದ ಏಕತೆಯನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಉತ್ತರ ಭಾರತದ ಮೇಲೆ ವಿದೇಶಿಯರಿಂದ ತೊಂದರೆಯಾದಾಗ ದಕ್ಷಿಣ ಭಾರತದಲ್ಲಿಯೂ ತುಂಬಾ ನೊಂದುಕೊಂಡರು. ತಲೆಗೆ ಏಟು ಬಿದ್ದಾಗ ಇಡೀ ಶರೀರದ ಸಂಪೂರ್ಣ ಶಕ್ತಿಗಳು ಹೇಗೆ ತಿರುಗುತ್ತವೆಯೋ 412 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಹಾಗೆಯೇ ಉತ್ತರ ಭಾರತದಲ್ಲಿ ಶಕರು ಮತ್ತು ಹೂಣರು ಆಕ್ರಮಣ ಮಾಡಿದಾಗ ದಕ್ಷಿಣದಿಂದ ಬಂದ ಶಾಕಾರಿ ವಿಕ್ರಮಾದಿತ್ಯ ಮತ್ತು ಯಶೋವರ್ಧನರು ಅವರನ್ನು ಎದುರಿಸಿದರು. ಈ ರೀತಿಯಾಗಿ ಸುಖ-ದುಃಖಗಳಲ್ಲಿ, ಜಯ-ಪರಾಜಯಗಳಲ್ಲಿ, ವೈಭವ ಪರಾಭವಗಳಲ್ಲಿ ಏಕತೆ ಮತ್ತು ಆಭಿನ್ನತೆ ಪ್ರಕಟವಾಯಿತು. ಅದು ನಮ್ಮ ರಾಷ್ಟ್ರವನ್ನು ಒಂದು ಜೀವನದ ಸೂತ್ರದಲ್ಲಿ ಬಂಧಿಸಿತು. ನಮ್ಮ ಸಾಹಿತ್ಯಕಾರರೂ ಸಹ ರಾಷ್ಟ್ರದ ಈ ಏಕತೆಗೆ ಭಾಷೆಯ ವಸ್ತ್ರವನ್ನು ಹೊದಿಸಿ ಜನರ ಮುಂದೆ ಇಟ್ಟರು. ರಾಮಾಯಣ ಮತ್ತು ಮಹಾಭಾರತ ನಮ್ಮ ರಾಷ್ಟ್ರದ ಸಾಹಿತ್ಯದ ಅಮೂಲ್ಯ ಸಂಪತ್ತುಗಳು ಭಗವಂತ ರಾಮ ಮತ್ತು ಕೃಷ್ಣರ ಚರಿತ್ರೆ ಆದರ್ಶದ ರೂಪದಲ್ಲಿ ರಾಷ್ಟ್ರದ ಮುಂದೆ ಉಪಸ್ಥಿತವಾಗಿದೆ. ಇವರ ಜೀವನದಲ್ಲಿ ಹಿಂದೂ ಸಮಾಜವು ತನ್ನ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಿದೆ. ನಮ್ಮ ಸಾಹಿತ್ಯಕಾರರೂ ಸಹ ರಾಷ್ಟ್ರದ ಶ್ರದ್ಧೆಯ ಈ ಕೇಂದ್ರಗಳಿಗೆ ತಮ್ಮ ಶ್ರದ್ಧೆಯನ್ನು ತೋರಿಸಿ ಆತ್ಮಸುಖದ ಅನುಭವವನ್ನು ಪಡೆದಿದ್ದಾರೆ. ಮತ್ತು ಜನತೆಯ ಶ್ರದ್ಧೆಯನ್ನು ಅಮರವಾಗಿಸಿದ್ದಾರೆ. ಈ ಯುಗದಲ್ಲಿ ರಾಮಕೃಷ್ಣರ ಬಗೆಗೆ ಕಾವ್ಯ ಬರೆಯದವರು, ರಾಮಾಯಣ, ಮಹಾಭಾರತಾದಿಗಳಿಂದ ತಮ್ಮ ಕಾವ್ಯದ ವಿಷಯಗಳನ್ನಾಗಿ ಆರಿಸಿಕೊಳ್ಳದ ಯಾವ ಕವಿಯೂ ಇಲ್ಲ. ಇಷ್ಟೇ ಅಲ್ಲದಲೆ ಈ ಸಾಹಿತ್ಯಕಾರರೇ ಈ ಯುಗದ ಜೀವನ ಸಂಬಂಧವನ್ನು ಪುರಾತನ ಕಾಲಕ್ಕೆ ಜೋಡಿಸಿದರು. ಸಾಹಿತ್ಯವು ಆ ಕಾಲದ ಸಮಾಜದ ದರ್ಪಣವಾಗಿರುತ್ತದೆ. ಅದರಲ್ಲಿ ಸಮಾಜದ ಮನೋಭಾವನೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಲ್ಪಡುತ್ತದೆ. ಸಾಹಿತ್ಯಕಾರನು ತನ್ನ ಪಾತ್ರವನ್ನು ತನ್ನ ಯುಗದಿಂದಲೇ ಅಲ್ಲದೆ ಪ್ರಾಚೀನ ಕಾಲದಿಂದಲೂ ಆರಿಸಿಕೊಂಡರೆ ಪ್ರಾಚೀನ ಮತ್ತು ನವೀನಗಳ ಒಂದು ಅದ್ಭುತ ಮತ್ತು ಜೀವನದ ಸಮ್ಮಿಶ್ರಣವು ಅವನ ಸಾಹಿತ್ಯದಲ್ಲಿ ಕಾಣಸಿಗುತ್ತದೆ. ತಮ್ಮ ಭಾವನೆಗಳನ್ನು ಪ್ರಾಚೀನ ಮಹಾಪುರುಷರ ಭಾವನೆಗಳ ಜೊತೆಯಲ್ಲಿ ಸೇರಿಸಿ ಅನುಭವಿಸಿದಾಗ ಜನ ಸುಖ, ಸಮಾಧಾನ ಮತ್ತು ಶಕ್ತಿಯ ಅನುಭವ ಪಡೆಯುತ್ತಾರೆ. ಸಮುದ್ರಗುಪ್ತನ ದಿಗ್ವಿಜಯದ ವರ್ಣನೆಯನ್ನು ಕವಿ ರಘುಮಹಾರಾಜನ ದಿಗ್ವಿಜಯದ ರೂಪದಲ್ಲಿ ಮಾಡಿದರೆ ಭಾರತದ ಅಖಂಡತೆಯನ್ನು ಒಂದು ಸೂತ್ರದಲ್ಲಿ ಕೂಡಿಸುವ ಪರಂಪರೆಗೆ ಎಷ್ಟು ಶಕ್ತಿ ಬಂದಿರುತ್ತದೆ? ಈ ಸಾಹಿತ್ಯಕಾರರ ಪ್ರಯತ್ನಗಳ ಫಲವಾಗಿ ಇಡೀ ದೇಶದಲ್ಲಿ ದೇವವಾಣಿ ಸಂಸ್ಕೃತ ಮತ್ತು ದೇವಿ ಭಾರತಿಗೆ ಸಮಾನ ರೂಪದಲ್ಲಿ ಗೌರವ ಸಿಗಲಾರಂಭಿಸಿತು. ಭಾರತದ ಪ್ರಾಂತೀಯ ಪ್ರಾಕೃತಿಕ ಭಾಷೆಗಳಿದ್ದರೂ ಸಂಸ್ಕೃತ ನಮ್ಮ ರಾಷ್ಟ್ರಭಾಷೆಯಾಗಿ ವಿಚಾರ ವಿನಿಮಯ ಭಾವನೆಗಳ ಪ್ರದರ್ಶನ, ಪವಿತ್ರ ಸಂಸ್ಕಾರ ಮತ್ತು ಜ್ಞಾನ ವಿಜ್ಞಾನದ ಪ್ರಚಾರ ಸಾಧನವಾಗಿದೆ ಮತ್ತು ಎಲ್ಲರೂ ಇದರ ಕಳೇಬರಹವನ್ನು ಸಮಾನವಾಗಿ ಬಲಪಡಿಸಿದ್ದಾರೆ. ರಾಷ್ಟ್ರ ಚಿಂತನ 413 ನಮ್ಮ ನೀತಿಕಾರರು ಮತ್ತು ಸ್ಮೃತಿಕಾರರೂ ಸಹ ನಮ್ಮ ಈ ಏಕತೆಯ ಭಾವನೆಯನ್ನು ಹೆಚ್ಚಿಸಲು ಸಹಾಯ ಮಾಡಿದರು. ಮಹರ್ಷಿ ಚಾಣಕ್ಯನು ಒಂದು ಕಡೆ ಪೃಥಿಯೈ ಸಮುದ್ರ ಪರ್ಯಂತಾಯಃ ಏಕ ರಾಷ್ಟ್ರದ ಪ್ರಾಚೀನ ಆದರ್ಶವನ್ನು ಸತ್ಯಾಂಶಕ್ಕೆ ಬದಲಿಸಲು ಸಾಮ್ರಾಟ್ ಚಂದ್ರಗುಪ್ತನನ್ನು ಪ್ರೇರೇಪಿಸಿದನು. ಇನ್ನೊಂದು ಕಡೆ ರಾಜನೀತಿ ಮತ್ತು ಅರ್ಥಶಾಸ್ತ್ರದ ರಹಸ್ಯ ನಿಯಮಗಳನ್ನು ರಚಿಸಿ ರಾಷ್ಟ್ರದ ಏಕಸೂತ್ರವನ್ನು ಶಾಶ್ವತಗೊಳಿಸುವ ಏರ್ಪಾಡು ಮಾಡಿದನು. ಯಾರು ನಮ್ಮವರು ಮತ್ತು ಯಾರು ಪರರು ಎಂಬುದರ ಸರಿಯಾದ ಜ್ಞಾನ ರಾಷ್ಟ್ರೀಯ ಭಾವನೆಯ ಪೋಷಕವಾಗಿರುತ್ತದೆ. ಬೇರೆಯವರಿಗೆ ಅಡಿಯಾಗಿ ಬಾಳದೆ ನಮ್ಮ ಜೀವನವನ್ನು ಸ್ವತಃ ನಾವೇ ರೂಪಿಸಿಕೊಳ್ಳಲು ಈ ಭಾವನೆ ಮತ್ತಷ್ಟು ಬಲಪಡಿಸುತ್ತದೆ. ನಾವು ನಮ್ಮ ನೀತಿ ಸಾಹಿತ್ಯದಲ್ಲಿ ಈ ಭಾವನೆಯನ್ನು ಯಾವಾಗಲೂ ನೋಡುತ್ತೇವೆ. ಮಹರ್ಷಿ ಚಾಣಕ್ಯರ `ನತ್ವೇವಾರ್ಯಸ್ಯ ದಾಸ್ಯಭಾವಃ' ಎಂಬ ಘೋಷಣೆ ರಾಷ್ಟ್ರದ ಸ್ವಾಭಿಮಾನವನ್ನು ಬಡಿದೆಬ್ಬಿಸುವಂತಿದೆ. ಹಾಸ್ಯದ ಕಲ್ಪನೆಯ ಹಿಂದೆ ರಾಷ್ಟ್ರದ ಅಸ್ತಿತ್ವದ ಭಾವನೆ ಮತ್ತು ದಾಸ್ಯದ ದ್ವೇಷದಲ್ಲಿ ರಾಷ್ಟ್ರದ ಸ್ವಾಭಿಮಾನ ಅಂತರ್ನಿಹಿತವಾಗಿದೆ. ನಮ್ಮಲ್ಲಿ ಈ ಭಾವನೆ ಎಷ್ಟಿದೆಯೆಂದರೆ ನಾವು ಸ್ವಯಂ ನಮ್ಮ ನಾಯಕರಾಗಿದ್ದೇವೆ. ಭಗವಂತನ ಕೊಡುಗೆಯಾದ ಆರ್ಯಾವರ್ತದಲ್ಲಿ ಸ್ವತಂತ್ರವಾಗಿ ಬಾಳುತ್ತಿದ್ದೇವೆ. ಈ ಭಾವನೆಯು ರಾಜನೈತಿಕ ಮತ್ತು ಭೌಗೋಳಿಕ ಭಾವನೆಯಾಗಿದೆ. ಇದರ ಪ್ರಕಾರ ಆರ್ಯಾವರ್ತದಲ್ಲಿ ಪ್ರಾರಂಭದಿಂದಲೂ ಹಿಂದುಗಳದೇ ರಾಜ್ಯವಿರಬೇಕೆಂದು ಜನರು ಅರಿತುಕೊಂಡಿದ್ದರು. ಇದರ ಉಲ್ಲೇಖ ಮಾನವಧರ್ಮ ಶಾಸ್ತ್ರ (2,22,23) ದಲ್ಲೂ ಇದೆ ಮತ್ತು ಈ ಭಾವನೆ ಪತಂಜಲಿಯ ಕಾಲದಿಂದ ಹಿಡಿದು ಮೇಘತಿಥಿ ಮತ್ತು ಬೀಸಲದೇವನವರೆಗೂ ಜನರ ಮನಸ್ಸಿನಲ್ಲಿ ಜೀವಂತವಾಗಿತ್ತು. ಈ ಭಾವನೆಯನ್ನು ಈ ಯುಗದಲ್ಲಿ ತತ್ವಜ್ಞಾನಿಗಳು ಮತ್ತಷ್ಟು ಬಲಪಡಿಸಿದರು. ಮನುಸ್ಮೃತಿಯಲ್ಲಿ ಸಂಪೂರ್ಣ ಭಾರತವನ್ನು ಪುಣ್ಯಭೂಮಿಯೆಂದು ಪರಿಗಣಿಸಲಾಯಿತು. ಉಳಿದ ದೇಶಗಳನ್ನು ಮ್ಲೇಚ್ಛ ದೇಶಗಳೆಂದು ಹೇಳಲಾಯಿತು. ``ಭಾರತಂ ನಾಮ ತದ್ವರ್ಷ ಭಾರತೀ ಯತ್ರ ಸಂತತಿ" ಎನ್ನುವ ವಾಕ್ಯ ಭಾರತದೇಶ ಮತ್ತು ಅದರ ಜನಸಮೂಹದ ಆತ್ಮದ ದಿಗ್ದರ್ಶನವನ್ನು ಮೂಡಿಸುತ್ತದೆ. ಈ ಸಂತತಿಯ ವರ್ಣನೆ ಮಾಡುತ್ತಾ ಮನು ಹೀಗೆ ಹೇಳುತ್ತಾನೆ. ಏತದ್ದೇಶ ಪ್ರಸೂತಸ್ಯ ನಕಾಶಾದಗ್ರಜನ್ಮನಃ ಸ್ವಂ ಸ್ವಂ ಚರಿತ್ರ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ ಇವರು ಗುರುವಿನ ಸ್ಥಾನದಲ್ಲಿ ಕುಳಿತುಕೊಳ್ಳುವ ಗೌರವವನ್ನು ಪಡೆದ ಕಾರಣ ಇವರು ಬರೆದ ನಿಯಮಗಳನ್ನು ಇಡೀ ದೇಶ ತನ್ನ ಮನಸ್ಸಿನಲ್ಲಿ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಈ ನಿಯಮಗಳ ಪಾಲನೆಯನ್ನು ಮಾಡಿತು. 414 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಭಾರತದ ಸಂಪೂರ್ಣ ಜನರು ತಮ್ಮ ಆಚಾರ-ವಿಚಾರಗಳನ್ನು ಸ್ಮೃತಿಕಾರರು ಅಳತೆಗೋಲಿನಲ್ಲಿ ಅಳೆಯಿತು ಮತ್ತು ಏಕತೆಯ ಅಚ್ಚಿನಲ್ಲಿ ಹಾಕುವ ಸಂಸ್ಕಾರಗಳಿಗೆ ತಮ್ಮ ಜೀವನದಲ್ಲಿ ಜಾಗ ಕೊಟ್ಟರು. ಇದರ ಪರಿಣಾಮವಾಗಿ ಇಡೀ ಭಾರತದಲ್ಲಿ ಒಂದೇ ರೀತಿ-ನೀತಿ ನಿಯಮ-ಉಪನಿಯಮಗಳು ಮತ್ತು ವ್ಯವಹಾರದ ಸೃಷ್ಟಿಯಾಯಿತು. ಈ ನೀತಿಕಾರರೇ ನಮ್ಮ ಗ್ರಾಮ ಪಂಚಾಯಿತಿಗಳಿಗೆ ಜನ್ಮ ನೀಡಿದರು. ಅದರ ಸ್ವರೂಪ ಇಡೀ ಭಾರತದಲ್ಲಿ ಒಂದೇ ರೀತಿ ಇದೆ. ಮೇಲ್ನೋಟಕ್ಕೆ ಇದರಲ್ಲಿ ಕೆಲವು ಬದಲಾವಣೆಗಳು ಕಂಡುಬಂದರೂ ಇದರಲ್ಲಿ ಭಾರತದ ಆತ್ಮದ ಸ್ವತಂತ್ರತೆ ಮತ್ತು ಏಕತೆ ಹಾಗೆಯೇ ಉಳಿದುಕೊಂಡಿದೆ. ಈ ರೀತಿಯಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ರಾಷ್ಟ್ರದ ಆತ್ಮದ ಸರ್ವಾಂಗೀಣ ವಿಕಾಸವಾಯಿತು. ಹಾಗೂ ಅದು ಅತ್ಯಂತ ಸ್ಥಿರವಾಗಿ ನಿಂತಿತು. ಭಾರತದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಹರಡಿರುವದೆಂದು ಸಮಾಜ ಸಮಾನ ವಿಚಾರಧಾರೆ ಮತ್ತು ಸಮಾನ ಕರ್ತವ್ಯವದಿಂದ ಒಂದಾಗಿ ಜೀವನ ವಿಕಾಸದಿಂದ ತುಂಬಿ, ಒಂದೇ ಸಂಸ್ಕೃತಿಯ ಆಧಾರದ ಮೇಲೆ ಅಖಂಡ ರಾಷ್ಟ್ರೀಯತೆಯಲ್ಲಿ ಒಂದಾಗಿದೆ. ಈ ಯುಗದ ಪ್ರಯತ್ನಗಳ ಫಲವಾಗಿಯೇ ದೇಶಕ್ಕೆ ಪರಿಪಕ್ವವಾಗಿ ಸಿಕ್ಕಿದ ರಾಷ್ಟ್ರೀಯತೆ ಈ ಹಿಂದಿನ ರಾಜನೈತಿಕ ಪರಾಜಯದ ಕಾಲದಲ್ಲಿಯೂ ಸ್ಥಿರವಾಗಿಯೇ ಇತ್ತು. ಕ್ರಿಸ್ತಶಕ ಎಂಟನೆ ಶತಮಾನದ ಪ್ರಾರಂಭದಲ್ಲಿ ಅರಬ್‍ನಿಂದ ಬೀಸಿದ ಬಿರುಗಾಳಿ ಗ್ರೀಸ್, ಈಜಿಪ್ಟ್, ಸ್ಪೇಯಿನ್ ಮತ್ತು ಪರ್ಷಿಯ ಮುಂತಾದ ದೊಡ್ಡ ದೊಡ್ಡ ದೇಶಗಳನ್ನು ಸಂಪೂರ್ಣವಾಗಿ ನಾಶಗೊಳಿಸಿತು. ಆದರೆ ಭಾರತಕ್ಕೆ ಸಮುದ್ರ ತೀರದ ಒಂದು ಮೂಲೆಗೆ ಬಡಿದು ಹಾಗೆಯೇ ಹಿಂದಿರುಗಿತು. ಇದರ ನಂತರ ಬಂದ ಆಕ್ರಮಣಕಾರರನ್ನು ಇಡೀ ಸಮಾಜ ಒಂದೇ ಅಭಿಪ್ರಾಯದಿಂದ ಶತ್ರುಗಳೆಂದು ಪರಿಗಣಿಸಿ ಅವರಿಂದ ದೇಶವನ್ನು ಮುಕ್ತಿಗೊಳಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆದವು. ಇಷ್ಟೇ ಅಲ್ಲದೆ ಇಂದಿನ ಯುಗದಲ್ಲಿಯೂ ಅದೇ ಸಂಸ್ಕೃತಿ ನಮ್ಮ ಹೃದಯಗಳಲ್ಲಿ ಜಾಗೃತವಾಗಿದೆ. `ಹಿಂದು' ಎಂಬ ಶಬ್ದದ ಉಚ್ಛಾರಣೆ ಮಾತ್ರದಿಂದಲೇ ಒಬ್ಬ ಹಿಂದುವಿನ ರಕ್ತದ ಕಣ ಕಣವೂ ಇನ್ನೊಬ್ಬನ ಹಿಂದುವಿನ ರಕ್ತದ ಪ್ರತಿಯೊಂದು ಕಣದ ಜೊತೆ ತಲ್ಲೀನವಾಗುತ್ತದೆ. ಇದೇ ಅಖಂಡ ರಾಷ್ಟ್ರೀಯತೆಯನ್ನು ನಾವಿಂದು ಮತ್ತೆ ಮತ್ತೆ ಆಹ್ವಾನಿಸಬೇಕು ಮತ್ತು ಸಿಂಧುವಿನಿಂದ ಬ್ರಹ್ಮಪುತ್ರದವರೆಗೂ, ಸೇತುಬಂಧನದಿಂದ (ಕನ್ಯಾಕುಮಾರಿಯಿಂದ) ಹಿಮಾಚಲದವರೆಗೂ ಎಲ್ಲ ಉಪಾಂಗಗಳವರೆಗೂ ಹರಡಿರುವ ಮಾತೃಭೂಮಿಗೆ ನಮ್ಮ ಪೂರ್ವಜರ ತ್ಯಾಗ ಪೂರ್ಣವಾದ ಮತ್ತು ಕ್ಲಿಷ್ಟಕರವಾದ ಪ್ರಯತ್ನಗಳ ಪರಂಪರೆಯನ್ನು ಮತ್ತೆ ನಮ್ಮದಾಗಿಸಿಕೊಳ್ಳಬೇಕಾಗುತ್ತದೆ. ರಾಷ್ಟ್ರ ಚಿಂತನ 415 ಸ್ವಾತಂತ್ರ್ಯದ ಸಾಧನೆ ಮತ್ತು ಸಿದ್ಧಿ ಸ್ವರಾಜ್ಯವು ಜೀವಂತ ದೇಶದ ಒಂದು ಸಾಧಾರಣ ಲಕ್ಷಣ. ಸ್ವರಾಜ್ಯವಿಲ್ಲದ ದೇಶ ತನ್ನ ಹಿತವನ್ನು ಸಾಧಿಸುವುದಕ್ಕಾಗುವುದಿಲ್ಲ ಮತ್ತು ಅಭಿವ್ಯಕ್ತಿಯನ್ನು ತಿಳಿಸುವುದಕ್ಕೆ ಆಗುವುದಿಲ್ಲ. ಆದ್ದರಂದ ಪ್ರಾಣಿಗಳಲ್ಲಿ ಪ್ರಾಣವಿರುವುದು ಎಷ್ಟು ಸ್ವಾಭಾವಿಕವೋ ಹಾಗೆಯೇ ದೇಶದಲ್ಲಿ ಸ್ವಾತಂತ್ರ್ಯದ ಬಯಕೆ ಅದರ ಜೀವನದ ಅನಿವಾರ್ಯ ಅವಶ್ಯಕತೆ ಆಗಿದೆ. ಸ್ವಾತಂತ್ರ್ಯದ ಬಯಕೆ ಇರದ ಯಾವುದೇ ಜನ ಸಮೂಹ ದೇಶ ಎಂಬ ಹೆಸರನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ದೇಶದ ಇತಿಹಾಸದಲ್ಲಿ ಹೆಚ್ಚಿನ ಪಾಲು ಸ್ವರಾಜ್ಯದ ಪ್ರಾಪ್ತಿ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮಾಡುವ ಪ್ರಯತ್ನಗಳಿಗೆ ಸಿಕ್ಕಿದೆ ಎಂದರೆ ಆಶ್ಚರ್ಯವಿಲ್ಲ. ಕೇವಲ ಪ್ರಾಣವಿರುವ ಮಾತ್ರಕ್ಕೆ ಜೀವನ ಆಗುವುದಿಲ್ಲವೋ ಹಾಗೆಯೇ ಸ್ವರಾಜ್ಯವೇ ದೇಶದ ಪೂರ್ಣ ರೂಪವಾಗುವುದಿಲ್ಲ. ಒಂದು ಸಾಮಾನ್ಯ ಜೀವ ವಿಕಾಸದ ಮೆಟ್ಟಿಲು ಏರುತ್ತಿದ್ದಂತೆಯೇ ಅದರ ಜೀವನ ಕೇವಲ ಆಹಾರ, ನಿದ್ರೆ, ಭಯ, ಮೈಥುನ ಮುಂತಾದ ಪ್ರಕೃತಿ ಸಹಜವಾದ ಕ್ರಿಯೆಗಳೇ ಅಲ್ಲದೆ ಒಂದು ನಿಶ್ಚಿತ ಧ್ಯೇಯವನ್ನು ಕೇಂದ್ರವಾಗಿಟ್ಟುಕೊಂಡು ಅದಕ್ಕಾಗಿ ದುಡಿಯುವ ಸಾಧನವಾಗುತ್ತದೆ. `ಧ್ಯೇಯವೇ ಜೀವನ' ಎನ್ನುವ ಮಾತು ಚರಿತಾರ್ಥವಾಗಿದೆ. ದೇಶದ ಜೀವನದಲ್ಲೂ ಸ್ವರಾಜ್ಯವು ಒಂದು ಸಾಧನವಾಗಿದೆ. ಸಮಾಜವು ಯಾವುದೇ ತೊಂದರೆಗಳಿಲ್ಲದೆ ತನ್ನ ವಿವೇಕಕ್ಕೆ ಅನುಸಾರವಾಗಿ ನಿಶ್ಚಿತ ಧ್ಯೇಯದ ಕಡೆಗೆ ಮುಂದೆ ಹೋಗುವ ಸ್ಥಿತಿಗೆ ತಲುಪಬೇಕಾಗಿದೆ. 15 ಆಗಸ್ಟ್ 1948ರಲ್ಲಿ ಆಂಗ್ಲರು ಭಾರತವನ್ನು ಬಿಟ್ಟಾಗ ನಮಗೆ ರಾಜಕೀಯ ಸ್ವಾತಂತ್ರ್ಯವು ಸಿಕ್ಕಿತು. ರಾಷ್ಟ್ರಜೀವನದ ಅಭಿವ್ಯಕ್ತಿ ಮತ್ತು ಪುರುಷಾರ್ಥವನ್ನು ಹೇಳಿಕೊಳ್ಳುವ ಒಂದು ಅವಕಾಶ ಸಿಕ್ಕಿತು. ಆದರೆ ಈ ಅವಕಾಶವೂ ಪೂರ್ಣ ಮತ್ತು ಸ್ಪಷ್ಟವಾಗಿರಲಿಲ್ಲ. ನಮ್ಮ ರಾಜನೈತಿಕ ಅಧಿಕಾರ ಕೂಡ ಸಾಕಷ್ಟು ಅಂಶಗಳಲ್ಲಿ ಪರಿಮಿತವಾಗಿತ್ತು. ರಾಜ್ಯಗಳ ಒಟ್ಟುಗೂಡುವಿಕೆ, ಗೋವಾ, ಪಾಂಡಿಚೆರಿ ಮುಂತಾದವುಗಳ ಮುಕ್ತಿಯಿಂದ ನಾವು ಈ ಕೊರತೆಯನ್ನು ಕೆಲವು ಅಂಶಗಳ ಮಟ್ಟಿಗೆ ಕಡಿಮೆ ಮಾಡಿಕೊಂಡೆವು. ಆದರೆ ಪಾಕಿಸ್ತಾನದ ಅಸ್ತಿತ್ವ ಭಾರತದ ರಾಜನೈತಿಕ ಅಸ್ತಿತ್ವಕ್ಕೆ ಇಂದಿಗೂ ಕೂಡ ಕೊರತೆಯಾಗಿಯೇ ಉಳಿದಿದೆ. ಪಾಕಿಸ್ತಾನವನ್ನು ಒಂದು ಬೇರೆ ದೇಶವೆನ್ನುವುದು ತಪ್ಪಾಗುತ್ತದೆ. ಇದು ಭಾರತದ ರಾಷ್ಟ್ರೀಯ ಅಸ್ತಿತ್ವವನ್ನು ಇಲ್ಲಿ ಪರಕೀಯ ರಾಜ್ಯ ಮತ್ತು ನಿಷ್ಠೆಯನ್ನು ಪ್ರತಿಷ್ಠಾಪಿಸಲು ಬಯಸುವವರ ಮನೋವೃತ್ತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತದೆ. ಪಾಕಿಸ್ತಾನದಲ್ಲಿರುವವರು ಭಾರತ ದೇಶದ ಅಂಗವಾಗಿದ್ದರೂ ಅವರ ಗುರುತ್ವಾಕರ್ಷಣ ಶಕ್ತಿ ಭಾರತದ ಭೂಮಿ, ಜನ, ಇತಿಹಾಸ, ಸಂಸ್ಕೃತಿ ಮತ್ತು ಸಭ್ಯತೆಯಲ್ಲಿ ಇಲ್ಲ. 416 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಆದ್ದರಿಂದ ಪಾಕಿಸ್ತಾನ ಭಾರತದ ಗುಲಾಮತನದ ಅವಶೇಷವಾಗಿದೆ. ಅಲ್ಲಿನ ನಮ್ಮ ಬಂಧುಗಳನ್ನು ದಾಸತ್ವದಿಂದ ಮುಕ್ತಿಗೊಳಿಸದಿದ್ದರೆ ನಮ್ಮ ರಾಜನೈತಿಕ ಸ್ವಾತಂತ್ರ್ಯ ಅಪೂರ್ಣವಾಗಿಯೇ ಇರುತ್ತದೆ. ಶರೀರದಲ್ಲಿ ವ್ಯಾಪಿಸಿರುವ ವಿಷದ ಹಾಗೆ ಅದು ನಮ್ಮನ್ನು ಎಂದೆಂದಿಗೂ ಕಾಡುತ್ತಿರುತ್ತದೆ. ಸ್ವರಾಜ್ಯದ ನಂತರ ಸ್ವರಾಜ್ಯವು ಏಕೆ? ಈ ಪ್ರಶ್ನೆ ಸಹಜವಾಗಿಯೇ ಇದೆ. ಈ ಪ್ರಶ್ನೆಗೆ ಉತ್ತರ ಇಷ್ಟಬಂದ ಹಾಗೆ ಕೊಡುವ ಹಾಗಿಲ್ಲ. ಭಾರತವು ಇದುವರೆಗೂ ಈ ಪ್ರಶ್ನೆಗೆ ಉತ್ತರ ಕೊಡುವುದುರಲ್ಲಿ ಅಸಮರ್ಥವಾಗಿದೆ. ಆದ್ದರಿಂದ ಅದು ತನ್ನಲ್ಲಿ ಏನೋ ಕಳೆದುಕೊಂಡ ಅನುಭವವನ್ನು ಪಡೆಯುತ್ತಿದೆ. ಇದರಿಂದಲೇ ವಿದೇಶೀಯರ ಆಕ್ರಮಣ ಕಾಲದಲ್ಲಿ ಒಂದೇ ಬಾರಿಗೆ ನಮ್ಮ ಅಂತರ್ಶಕ್ತಿ ಎಚ್ಚೆತ್ತುಕೊಳ್ಳುತ್ತದೆ. ಆದರೆ ಉಳಿದ ಸಮಯದಲ್ಲಿ ನಾವು ರಚನಾತ್ಮಕ ರೀತಿಯಲ್ಲಿ ನಮ್ಮ ಶಕ್ತಿಯನ್ನು ಕೂಡಿಸಿಕೊಂಡು ಕ್ರಿಯಾಶೀಲರಾಗಲು ಸಾಧ್ಯವಾಗುತ್ತಿಲ್ಲ. ಯಾವುದೇ ದೇಶ ಕೇವಲ ಮನುಷ್ಯರ ಸಮುದಾಯ ಮಾತ್ರವಲ್ಲ. ಅದು ಒಂದು ಜೀವಂತ ಭಾಗವು ಎನ್ನುವ ವಿಷಯವನ್ನು ಇಲ್ಲಿ ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಈ ಭಾಗಕ್ಕೆ ತನ್ನದೇ ಆದ ವಿಶೇಷವಾದ ಮಹತ್ವವಿರುತ್ತದೆ ಅದು ಕೇವಲ ಐತಿಹಾಸಿಕ ಕ್ರಿಯೆಗಳು ಅಥವಾ ಸಾಮಾಜಿಕ ಸಂಸ್ಕಾರಗಳು ಮತ್ತು ವಾತಾವರಣಗಳ ಪರಿಣಾಮದಿಂದ ಬಂದದ್ದಲ್ಲ, ಸ್ವಾಭಾವಿಕವಾಗಿ ಬಂದದ್ದು ಎಂದು ನಾವು ತಿಳಿಯಬೇಕು. ಶಾಸ್ತ್ರಗಳು ಇದನ್ನು `ಚಿತಿ' ಎಂದು ಕರೆದಿವೆ. ಚಿತಿ ತನ್ನ ವಿಕಾಸದ ದಿಶೆಯನ್ನು ನಿರ್ಧರಿಸುತ್ತದೆ. ಇದೇ ಮಾರ್ಗದಲ್ಲಿ ಮುಂದೆ ನಡಿದು ದೇಶ ತನ್ನ ಜೀವನೊದ್ದೇಶವನ್ನು ಪಡೆಯುತ್ತ ಮಾನವನ ಏಕತೆಯ ಅನುಭೂತಿ ಮತ್ತು ಅದರ ಪ್ರಗತಿಯಲ್ಲಿ ತನ್ನ ಕೊಡುಗೆಯನ್ನು ಕೊಡಬಲ್ಲದು. ಯೋಗಿ ಅರವಿಂದರು ಈ ಸತ್ಯವನ್ನು ಹೀಗೆ ಹೇಳುತ್ತಾರೆ: (ಪ್ರತಿಯೊಂದು ದೇಶವು ವಿಕಾಸೋನ್ಮುಖವಾದ ಮಾನವನ ಆತ್ಮದ ಒಂದು ಶಕ್ತಿಯ ರೂಪದಲ್ಲಿ ವ್ಯಕ್ತವಾಗುತ್ತದೆ ಮತ್ತು ಅದು ಯಾವುದರ ರೂಪವೋ ಅದೇ ಸಿದ್ಧಾಂತಗಳ ಮೇಲೆ ಆಧಾರಪಟ್ಟು ಜೀವಿಸುತ್ತದೆ.) ಭಾರತಕ್ಕೂ ತನ್ನದೇ ಆದ ವಿಶೇಷ ಗುಣವಿದೆ. ಅದರದೇ ಆದ ಒಂದು ಆತ್ಮವಿದೆ. ಅದರ ಸಾಕ್ಷಾತ್ಕಾರದ ಪ್ರಯತ್ನವೇ ನಮ್ಮ ಸಾಧನೆಯ ಉದ್ದೇಶವಾಗಬೇಕು. ಇದರ ಮೂಲಕವೇ ನಾವು ನಮ್ಮ ಸಮಸ್ಯೆಗಳಿಗೆ ಸಮಾಧಾನ ಹುಡುಕಿಕೊಳ್ಳಬಲ್ಲೆವು. ನಮ್ಮ ದೇಶದ ಸಮೃದ್ಧಿ ಮತ್ತು ಜನತೆಯ ಸುಖ ಮತ್ತು ಹಿತಕ್ಕೆ ವ್ಯವಸ್ಥೆಯನ್ನು ಮಾಡಬಹುದು, ಮಾನವನ ಪ್ರಗತಿಯಲ್ಲಿ ನಮ್ಮ ಕೊಡುಗೆಯನ್ನು ನೀಡಬಹುದು. ಈ ಧ್ಯೇಯದ ಸಹಾಯದಿಂದ ರಾಷ್ಟ್ರದ ಜನರಲ್ಲಿ ಪ್ರಬಲ ಪುರುಷಾರ್ಥ, ತ್ಯಾಗ ರಾಷ್ಟ್ರ ಚಿಂತನ 417 ಮತ್ತು ತಪಸ್ಸಿನ ಭಾವನೆಯನ್ನು ಬೆಳೆಸಬಹುದು. ಈ ಸ್ಥಿತಿಯಲ್ಲಿಯೇ ಅವರಿಗೆ ಉದ್ಯೋಗದ ಪ್ರೇರಣೆ ಸಿಗುತ್ತದೆ ಮತ್ತು ಅದರ ಆರಾಧನೆಯಲ್ಲೇ ಅವರ ಜೀವನದ ವಿಕಾಸವಾಗುತ್ತದೆ. ಇದರಲ್ಲೇ ಅವರ ಆತ್ಮಕ್ಕೆ ಸುಖವು ಸಿಗುತ್ತದೆ. ಆಂಗ್ಲರು ಹೋದ ನಂತರ ಗಾಂಧೀಜಿಯವರು ಬಹಳ ದಿನಗಳು ಜೀವಂತವಾಗಿರಲಿಲ್ಲ. ರಾಜ್ಯದ ಆಡಳಿತ ವಹಿಸಿಕೊಂಡಿರುವರು ಭಾರತದ ಭಾಷೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಭಾರತಕ್ಕಾಗಿ ತಮ್ಮದೇ ಆದ ಕನಸುಗಳನ್ನು ಕಾಣಲೇ ಇಲ್ಲ. ಆಂಗ್ಲರ ಜೊತೆ ಸೆಣಸುವಾಗ ನಾವು ಎಷ್ಟೇ ಸ್ವದೇಶೀ ಘೋಷಣೆ ಕೂಗಿದರೂ ಅವರು ಹೋದ ನಂತರ ನಾವು ನಮ್ಮ ಸಂಪೂರ್ಣ ಜೀವನವನ್ನು ಮತ್ತು ನಮ್ಮ ಸಮಸ್ಯೆಗಳನ್ನು ಅವರ ಕನ್ನಡಕದಲ್ಲೇ ನೋಡಿದ್ದೇವೆ. ಆದ್ದರಿಂದಲೇ ನಮ್ಮ ರಾಜನೀತಿ, ಅರ್ಥನೀತಿ, ಸಾಮಾಜಿಕ ವ್ಯವಸ್ಥೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಆಂಗ್ಲರ ಆಳವಾದ ಪ್ರಭಾವವಿದೆ. ಭಾರತೀಯತೆ ಎಲ್ಲಾದರೂ ಇದ್ದರೆ ಅದು ಮೇಲ್ನೋಟಕ್ಕೆ ಮಾತ್ರ. ನಮ್ಮ ಮೌಲಿಕ ಉದ್ದೇಶಗಳು ವಿದೇಶೀಯರವು. ನಮ್ಮ ಸಂವಿಧಾನವು ಮುಖ್ಯವಾಗಿ 1965ರ ಇಂಡಿಯಾ ಆ್ಯಕ್ಟ್‍ನ ಸ್ವಲ್ಪ ಬದಲಾದ ರೂಪವಷ್ಟೇ. ಮೌಲಿಕ ಅಧಿಕಾರಗಳು ಮತ್ತು ಇದೇ ರೀತಿಯ ಎಷ್ಟೋ ವಿಷಯಗಳ ಸಂಬಂಧದಲ್ಲಿ ನಾವು ಏನನ್ನು ಸೇರಿಸಿದ್ದೇವೋ ಅದು ಹೊರಗಿನ ಸಂವಿಧಾನಗಳ ಆಧಾರದಿಂದ ತೆಗೆದುಕೊಂಡಿದ್ದು ಮತ್ತೆ ಅದರ ಮೇಲೆ ಯೂರೋಪ್ ಮತ್ತು ಇಂಗ್ಲೆಂಡ್‍ನ ರಾಜನೈತಿಕ ಪ್ರಭಾವವಿದೆ. ವಿಭಿನ್ನ ರಾಜಕೀಯ ದಳದವರು ಸಮಾಜವಾದಿಗಳಾಗಲೀ ಅಥವಾ ಸಮಾಜವಾದಿಗಳಾಗದಿರಲಿ ಯುರೋಪರ ರಾಜಕೀಯ ವಿಚಾರಗಳಿಂದ ಪ್ರಭಾವಿತರಾಗಿದ್ದಾರೆ. ಮತ್ತು ಭಾರತವನ್ನು ಯಾವುದೇ ದೇಶದ ಪ್ರತಿಬಿಂಬವನ್ನಾಗಿ ಮಾಡಬೇಕೆಂದಿದ್ದಾರೆ. ಪಂಡಿತ್ ಜವಹರ್ ಲಾಲ್ ನೆಹರೂರವರ `ಸಮಾಜವಾದ' ಬ್ರಿಟನ್‍ನ ಕಾರ್ಮಿಕ ಪಕ್ಷದ ಸಮಾಜವಾದಕ್ಕಿಂತ ಭಿನ್ನವಾಗಿಲ್ಲ. ಅವರು ಜನತಂತ್ರ ಮತ್ತು ಸಮಾಜವಾದ ಎರಡರ ಮಿಲನವನ್ನು ತರಲು ಬಯಸುತ್ತಿದ್ದರು. ಇದರಿಂದ ಜನತಂತ್ರದ ಸಮರ್ಥಕರ ಮನಸ್ಸಿನಲ್ಲಿ ಸಂಶಯಗಳು ಹುಟ್ಟಿಕೊಂಡವು. ಇನ್ನೊಂದು ಕಡೆ ಸಮಾಜವಾದದ ಸಮರ್ಥರಿಗೂ ಸಂತೋಷವಾಗಲಿಲ್ಲ. ಪ್ರಜಾತಂತ್ರ ಮತ್ತು ಸಮಾಜವಾದ ಯೂರೋಪರ ಎರಡು ಭಿನ್ನ ಭಿನ್ನ ಕ್ರಾಂತಿಗಳ ಕೊಡುಗೆಯಾಗಿದೆ. ಕಾಲಕ್ಕೆ ಅನುಗುಣವಾಗಿ ನೋಡಿದರೆ ಸಮಾಜವಾದ ಹೊಸದು. ಅದು ಪ್ರಜಾತಂತ್ರೀಯ ಯೂರೋಪಿನಲ್ಲಿ ಔದ್ಯೋಗಿಕರಣದಿಂದ ಹುಟ್ಟಿಕೊಂಡ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಮಾಡಿತು. ಆದರೆ ಈ ಪ್ರಯತ್ನದಲ್ಲಿ ಪ್ರಜಾತಂತ್ರೀಯ ಮೌಲ್ಯಗಳನ್ನು ಬಲಿ ಕೊಡಬೇಕಾಗಿ ಬಂದಿತು. ಪ್ರಜಾತಂತ್ರದ ಬಗ್ಗೆ ಯಾರಿಗೆ ವಿಶೇಷವಾದ 418 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅಭಿಮಾನವಿರಲ್ಲಿಲ್ಲವೋ ಅವರಿಗೆ ಇದರ ಬಗ್ಗೆ ಚಿಂತೆ ಇರಲಿಲ್ಲ. ಉಳಿದವರು ಸಮಾಜವಾದವನ್ನು ಅನುಮಾನದಿಂದ ನೋಡಿದರು. ಅವರಲ್ಲಿ ಕೆಲವರು ಸಮಾಜವಾದವನ್ನು ಬೇಡದ ವಸ್ತುವೆಂದು ತ್ಯಜಿಸಿದರು. ಕೆಲವರು ಸಮಾಜವಾದವನ್ನು ಮತ್ತು ಪ್ರಜಾತಂತ್ರವನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಮಾಡಿದರು. ಆದರೆ ಅದು ಇಂದಿಗೂ ಸಾಧ್ಯವಾಗಲಿಲ್ಲ. ಕೆಲವರು ಅದು ಎಂದಿಗೂ ಸಾಧ್ಯವಿಲ್ಲ ಎನ್ನುತ್ತಾರೆ. ಭಾರತವು ಕೂಡ ಪಂಡಿತ್ ಜವಹರ್ ಲಾಲ್ ನೆಹರೂ ಅವರ ಆಡಳಿತ ಕಾಲದಲ್ಲಿ ಪ್ರಾಂತ್ರೀಯ ಸಮಾಜವಾದದ ಘೋಷಣೆ ಕೂಗಿತ್ತು. ಆದರೆ ನಮಗೆ ಇದರಲ್ಲಿ ಸಫಲತೆ ಸಿಗಲಿಲ್ಲ. ಇದಕ್ಕೆ ಕಾರಣವೆಂದರೆ ನಾವು ಮೂಲತಃ ವಿದೇಶೀ ಮತ್ತು ಅಪೂರ್ಣವಾದ ಪ್ರಜಾತಂತ್ರ ಮತ್ತು ಸಮಾಜವಾದ ಎರಡರ ಸ್ವರೂಪ ಮತ್ತು ವಿವೇಚನೆಗಳ ಆಧಾರದ ಮೇಲೆ ಪ್ರಯತ್ನವನ್ನು ಮಾಡುತ್ತಿದ್ದೇವೆ. ಗಂಭೀರವಾಗಿ ವಿಚಾರ ಮಾಡಿದರೆ ಈ ಎರಡೂ ವಿಚಾರಧಾರೆಗಳು ಜೀವನದ ಒಂದೊಂದು ಭಾಗಗಳ ಮತ್ತು ಅವುಗಳಿಗೆ ಸಂಬಂಧಿಸಿದ ಸತ್ಯಗಳನ್ನು ವ್ಯಕ್ತಪಡಿಸುತ್ತವೆ. ಅವುಗಳ ಸಮನ್ವಯ ಆಗಬಹುದು. ನಮ್ಮ ವಿಚಾರಧಾರೆ ಮುಕ್ತವಾಗಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಪಶ್ಚಿಮ ದೇಶಗಳ ವಿಕಸಿತವಾದ ಪ್ರಜಾತಂತ್ರೀಯ ಸಂಸ್ಥೆಗಳು ಮತ್ತು ಪರಂಪರೆಗಳು ಅಥವಾ ಕಾರ್ಲ್ ಮಾಕ್ರ್ಸ್‍ರಿಂದ ಪ್ರಾರಂಭವಾದ ಮತ್ತು ಲೆನಿನ್, ಸ್ಟಾಲಿನ್‍ರಿಂದ ರಷ್ಯದಲ್ಲಿ ಸ್ಥಾಪಿತವಾದ ಸಮಾಜವಾದದ ರೂಪದ ಅಚ್ಚಿನಲ್ಲಿ ನಮ್ಮ ಸಂಪೂರ್ಣ ಜೀವನವನ್ನು ತರುವುದು ಸರಿಹೋಗುವುದಿಲ್ಲ. ಭಾರತದ ಜೀವನ ಇವೆರಡರ ಕಲ್ಪನೆಗಿಂತಲೂ ದೊಡ್ಡದು. ಆದ್ದರಿಂದ ಈ ಪ್ರಯತ್ನದಲ್ಲಿ ಎಳೆದಾಡಿದರೆ ನಮಗೇ ತೊಂದರೆ ಆಗುತ್ತದೆ. ಭಾರತದ ಮೇಲೆ ಪಶ್ಚಿಮ ದೇಶಗಳ ರಾಜನೀತಿಯ ಬದಲಾಗಿ ನಮ್ಮದೇ ಆದ ರಾಜನೀತಿಯನ್ನು ತರಲು ಪ್ರಯತ್ನ ಮಾಡಬೇಕು. ಇದರಿಂದ ನಾವು ಪಶ್ಚಿಮ ದೇಶದ ಜೀವನದ ಲಾಭ ಪಡೆಯುತ್ತೇವೆ. ಆದರೆ ನಾವು ಅದನ್ನೇ ಸತ್ಯವೆಂದು ಭಾವಿಸಿ ಅದರ ಅನುಭೂತಿಯನ್ನು ಪಡೆಯುವುದಲ್ಲ. ಹೀಗೆ ಮಾಡಿದರೆ ದೇಶ, ಕಾಲ ಎರಡರ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತೀಯ ರಾಜನೀತಿಯ ದರ್ಶನದ ಬಗ್ಗೆ ವಿಚಾರ ಮಾಡಲೇ ಇಲ್ಲ ಎಂದರೆ ತಪ್ಪಾಗುತ್ತದೆ. ಆದರೆ ಇಲ್ಲಿಯವರೆಗೂ ಗಟ್ಟಿ ಪ್ರಯತ್ನಗಳು ನಡೆಯಲಿಲ್ಲ. ಗಾಂಧೀಜೀ ಅವರ ಪರಂಪರೆಯನ್ನು ಮುಂದೆ ತರಬೇಕಾದಾಗ ಮತ್ತು ಭಾರತೀಯ ದೃಷ್ಟಿಕೋನದ ಬಗೆಗೆ ವಿಚಾರ ಮಾಡುವಾಗ ಅನೇಕ ನಾಯಕರು ಮಹತ್ತರವಾದ ಕಲ್ಪನೆಗಳನ್ನಿಟ್ಟುಕೊಂಡಿದ್ದರು. ಆದರೆ ಆಚಾರ್ಯ ವಿನೋಬಾಭಾವೆ ಅವರು ನಮ್ಮ ವೈಚಾರಿಕ ಕೊಡುಗೆಗಿಂತ ಹೆಚ್ಚಿನ ಮಹತ್ವವನ್ನು ಗ್ರಾಮದಾನದ ಯೋಜನೆಗೆ ಕೊಟ್ಟರು. ಜಯಪ್ರಕಾಶನಾರಾಯಣರವರು ಕೊಟ್ಟ ರಾಷ್ಟ್ರ ಚಿಂತನ 419 ಕೊಡುಗೆಯಲ್ಲೂ ಅವರ ಚಿಂತನೆಗೆ ಅವಕಾಶವಿರಲಿಲ್ಲ. ರಾಮರಾಜ್ಯ ಪರಿಷತ್‍ನ ಸಂಸ್ಥಾಪಕರಾದ ಸ್ವಾಮಿ ಕರಾಪತ್ರಿಯವರು ``ಕಮ್ಯುನಿಜಂ ಮತ್ತು ಸಾಮ್ಯವಾದ" ವನ್ನು ಬರೆದು ಪಾಶ್ಚಾತ್ಯ ರಾಜನೀತಿಯ ದರ್ಶನದ ಮೇಲೆ ತಮ್ಮ ಅಭಿಪ್ರಾಯವನ್ನು ಬರೆದರು. ಆದರೆ ಅವರ ದೃಷ್ಟಿಕೋನ ಮೂಲತಃ ಪುರಾತನ ಕಾಲದ್ದಾದ್ದರಿಂದ ಸುಧಾರವಾದಿಗಳ ಆಕಾಂಕ್ಷೆಗಳು ಮತ್ತು ಅವಶ್ಯಕತೆಗಳು ಪೂರ್ಣವಾಗಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಚಾಲಕರಾದ ಶ್ರೀ ಮಾ.ಸ. ಗೋವರರವರು ಕೂಡ ಆಗಾಗ ಭಾರತೀಯ ದೃಷ್ಟಿಕೋನದಿಂದ ವರ್ತಮಾನ ರಾಜನೈತಿಕ ಪ್ರಶ್ನೆಗಳ ವಿವೇಚನೆಯನ್ನು ಮಾಡಿದರು. ಭಾರತೀಯ ಜನಸಂಘದವರೂ ಕೂಡ ``ಏಕಾತ್ಮ ಮಾನವತಾವಾದ"ದ ಆಧಾರದ ಮೇಲೆ ಈ ದಿಶೆಯಲ್ಲಿ ಕೆಲವು ಪ್ರಯತ್ನಗಳು ಮಾಡಿದರು. ಹಿಂದೂಸಭೆ ``ಹಿಂದೂ ಸಮಾಜವಾದದ' ದ ಹೆಸರಿನಲ್ಲಿ ಸಮಾಜವಾದದ ಬೇರೆಯೇ ವ್ಯವಸ್ಥೆಯನ್ನು ಮಾಡುವ ಪ್ರಯತ್ನ ಮಾಡಿತು. ಆದರೆ ಅದು ವಿವರಣಾತ್ಮಕ ರೀತಿಯಲ್ಲಿ ನಮ್ಮ ಮುಂದೆ ಬರಲಿಲ್ಲ. ಡಾ. ಸಂಪೂರ್ಣಾನಂದರೂ ಕೂಡ ಸಮಾಜವಾದದ ಮೇಲೆ ವ್ಯಕ್ತಪಡಿಸಿದ ವಿಚಾರದಲ್ಲಿ ಭಾರತೀಯ ಜೀವನದ ವಿವೇಚನೆ ಇದೆ. ಚಿಂತನವನ್ನು ಈ ದಿಶೆಯಲ್ಲಿ ಮುಂದುವರಿಸುವ ಅವಶ್ಯಕತೆ ಇದೆ. ಭಾರತದ ಸಂಸ್ಕೃತಿ ಮತ್ತು ಜೀವನ ದರ್ಶನದಿಂದ ದೂರಸರಿದು ಭಾರತೀಯ ರಾಜನೀತಿಯ ವಿಚಾರ ಮಾಡಲು ಆಗುವುದಿಲ್ಲ. ಭಾರತೀಯ ಸಂಸ್ಕೃತಿ ಏಕಾತ್ಮತಾವಾದಿ. ಸೃಷ್ಟಿಯ ಶಕ್ತಿಗಳ ಮತ್ತು ಜೀವನದ ವಿಭಿನ್ನ ಅಂಗಗಳ ದೃಶ್ಯ ಭೇದವನ್ನು ಸ್ವೀಕಾರ ಮಾಡುತ್ತಲೇ ಅದು ಅವುಗಳಲ್ಲಿನ ಅಂತರದಲ್ಲಿ ಏಕತೆಯನ್ನು ಹುಡುಕುತ್ತಾ ಅವುಗಳಲ್ಲಿ ಸಮನ್ವಯವನ್ನು ಸ್ಥಾಪಿಸುತ್ತದೆ. ಸಮಾಜವಾದ ಮತ್ತು ಪ್ರಜಾತಂತ್ರ ಎರಡೂ ವರ್ಗಗಳೂ ಸಂಘರ್ಷಣೆಯಲ್ಲಿಯೇ ಹುಟ್ಟಿಕೊಂಡಿದೆ. ಎರಡರ ಉದ್ದೇಶ ಘರ್ಷಣೆಯನ್ನು ಅಂತ್ಯಗೊಳಿಸಿ ಏಕತೆಯನ್ನು ಸ್ಥಾಪಿಸುವುದು ಎಂದಾದರೂ ಈ ಉದ್ದೇಶ ಸಿದ್ಧಿಗಾಗಿ ಎರಡೂ ಆರಿಸಿಕೊಂಡ ದಾರಿಯಲ್ಲಿ ವರ್ಗಗಳ ಸಮಾಪ್ತಿಯಾಗದೇ ಕೇವಲ ರೂಪಾಂತರವಾಗಿದೆ ಮತ್ತು ಘರ್ಷಣೆ ಮತ್ತಷ್ಟು ತೀವ್ರಗೊಂಡಿದೆ. ಪ್ರಜಾತಂತ್ರವು ರಾಜ ಮತ್ತು ಪ್ರಜೆಗಳ ಘರ್ಷಣೆಯನ್ನು ಆಧಾರ ಮಾಡಿಕೊಂಡಿದೆ. ವರ್ಗಗಳು ಬದಲಾದರೂ ಘರ್ಷಣೆ ನಿಲ್ಲಲಿಲ್ಲ. ಇದಕ್ಕೆ ಕಾರಣ ಪಶ್ಚಿಮದ ವಿಚಾರಧಾರೆಗಳ ಮೂಲದಲ್ಲಿರುವ ಡಾರ್ವಿನ್‍ನ ಜೀವನ ಸಂಘರ್ಷಣೆಯ ಸಿದ್ಧಾಂತವಾಗಿದೆ. ಸೃಷ್ಟಿ ಸಂಘರ್ಷಣೆಯ ಮೇಲಲ್ಲದೆ ಸಮನ್ವಯ ಮತ್ತು ಸಹಯೋಗದ ಮೇಲೆ ನಿಂತಿದೆ. ಪುರುಷ ಮತ್ತು ಪ್ರಕೃತಿಯ ಸಂಘರ್ಷಣೆಯಿಂದಲ್ಲದೇ ಅವರ ಪರಸ್ಪರಾಧೀನತೆಯಿಂದ ಸೃಷ್ಟಿ ಆಗುತ್ತದೆ ಮತ್ತು ನಡೆಯುತ್ತದೆ. ಆದ್ದರಿಂದ ವರ್ಗ ವಿರೋಧ ಮತ್ತು ಸಂಘರ್ಷಣೆಯ ಸ್ಥಾನದಲ್ಲಿ ಪರಸ್ಪರಾವಲಂಬನೆ, ಪೂರಕತೆ, ಅನುಕೂಲತೆ ಮತ್ತು ಸಹಯೋಗದ ಆಧಾರದ ಮೇಲೆಯೇ ಸಂಪೂರ್ಣ 420 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕ್ರಿಯಾಕಲಾಪಗಳ ವಿವೇಚನೆ ಮತ್ತು ಅವುಗಳ ಭಾವಾತ್ಮಕ ದಿಶೆಯ ನಿರ್ಧಾರ ಮಾಡಬೇಕು. ವ್ಯಕ್ತಿ ಮತ್ತು ಸಮಾಜದ ಮಧ್ಯೆ ಯಾವುದೇ ಸಂಘರ್ಷವಿಲ್ಲ. ಒಂದು ವೇಳೆ ಇದ್ದರೆ ಅದು ವಿಕೃತಿಯ ಲಕ್ಷಣ. ಸೃಷ್ಟಿಯ ಹಿತಕ್ಕಾಗಿ ವ್ಯಕ್ತಿಯ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುವ ಅವಶ್ಯಕತೆ ಇಲ್ಲ. ವಾಸ್ತವದಲ್ಲಿ ಸ್ವೇಚ್ಛಾವಿಹಾರದಲ್ಲಿ ವ್ಯಕ್ತಿಯ ವಿಕಾಸವಿಲ್ಲ. ಬದಲಾಗಿ ವಿನಾಶವಿದೆ. ಸಮಷ್ಟಿಯ ಜೊತೆಗೆ ಏಕಾತ್ಮತೆಯೇ ವ್ಯಕ್ತಿಯ ಪೂರ್ಣ ವಿಕಸಿತ ಸ್ಥಿತಿಯಾಗಿದೆ. ವ್ಯಕ್ತಿಯೇ ಸಮಷ್ಟಿಯ ಪೂರ್ಣ ರೂಪ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜ ಹಿತ ಒಂದಕ್ಕೊಂದು ಅವಿರೋಧಿಗಳು. ಲೋಕತಂತ್ರ ಲೋಕಕರ್ತವ್ಯದ ನಿರ್ವಾಹದ ಸಾಧನ ಮಾತ್ರ ಆಗಿದೆ. ಸಾಧನೆಯ ಪ್ರಭಾವ ಕ್ಷಮತೆ, ಲೋಕ ಜೀವನದಲ್ಲಿ ದೇಶದ ಬಗ್ಗೆ ಏಕಾತ್ಮಕತೆ, ಭಾದ್ಯತೆಯ ಅನುಭವ ಮತ್ತು ಕ್ರಮಶಿರಣದ ಮೇಲೆ ಆಧಾರಪಟ್ಟಿದೆ. ಪೌರ ಈ ಸಂಸ್ಕಾರಗಳಿಲ್ಲದಿದ್ದರೆ ಜನತಂತ್ರವು ವ್ಯಕ್ತಿ, ವರ್ಗ ಮತ್ತು ಪಕ್ಷಗಳ ಸ್ವಾರ್ಥದ ಲಕ್ಷಣ ಮತ್ತು ಸಂವರ್ಧನದ ಸಾಧನವಾಗಿ ವಿಕೃತಗೊಳ್ಳುತ್ತದೆ. ಸಂಪತ್ತಿಗೆ ಸಂಬಂಧಿಸಿದ ಅಥವಾ ಯಾವುದೇ ಮೂಲಾಧಾರಗಳು ಶಾಶ್ವತವಾಗಿರುವುದಿಲ್ಲ. ಇವೆಲ್ಲವು ಸಮಾಜ ಹಿತಕ್ಕೆ ಬೇಕಾಗಿದೆ. ವಾಸ್ತವದಲ್ಲಿ ಈ ಅಧಿಕಾರಗಳು ವ್ಯಕ್ತಿಗೆ ತನ್ನ ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸಲು ಕೊಡಲ್ಪಡುತ್ತದೆ. ಅವನು ತನ್ನ ಕರ್ತವ್ಯ ಪಾಲನೆ ಮಾಡದಿದ್ದರೆ ಅವನಿಗೆ ಶಸ್ತ್ರ ಧರಿಸುವ ಅಧಿಕಾರವಿರುವುದಿಲ್ಲ. ಕಳ್ಳರು ಮತ್ತು ಡಕಾಯಿತರಿಗೆ ಶಸ್ತ್ರಧರಿಸುವ ಅಧಿಕಾರ ಕೊಡಲಾಗುವುದಿಲ್ಲ. ಇದೇ ರೀತಿಯಾಗಿ ವ್ಯಕ್ತಿಗೆ ತನ್ನ ಕರ್ತವ್ಯದ ಪಾಲನೆ ಮಾಡಲೂ ಸಂಪತ್ತಿಗೆ ಸಂಬಂಧಿಸಿದ ಅಧಿಕಾರವನ್ನು ಕೊಡಲಾಗುತ್ತದೆ. ಈ ಕಾರ್ಯಕ್ಕಾಗಿ ಸಮಯಕ್ಕೆ ಅನುಸಾರವಾಗಿ ಈ ಅಧಿಕಾರಗಳ ವ್ಯಾಖ್ಯೆ ಮತ್ತು ಮರ್ಯಾದೆಗಳಲ್ಲಿ ಬದಲಾವಣೆಗಳು ಅವಶ್ಯಕವಾಗುತ್ತದೆ. ಸಂಪತ್ತಿನ ಅಧಿಕಾರಕ್ಕೆ ಸಮಾಜದಲ್ಲಿ ಒಪ್ಪುಗೆ ಇದೆ. ಭಾರತೀಯ ಸಂಸ್ಕೃತಿಯ ಏಕಾತ್ಮವಾದ, ಸಮನ್ವಯ ಪ್ರಧಾನ ಮತ್ತು ಕರ್ತವ್ಯದ ಮೂಲಕ ದೃಷ್ಟಿಕೋನದಿಂದ ವಿಚಾರ ಮಾಡಿದರೆ, ಪ್ರಜಾತಂತ್ರ ಮತ್ತು ಸಮಾಜವಾದದ ಪರಸ್ಪರ ವಿರೋಧಿಗಳಾಗಿರದೆ ಪೂರಕವಾಗಿರುತ್ತದೆ. ಆದರೆ ಆ ಸಮಾಜವಾದ ರಾಜ್ಯಾಧಿಕಾರ ಅಥವಾ ಶಾಸನ ಕೇಂದ್ರಿತವಾಗಿರುವುದಿಲ್ಲ. ರಾಜ್ಯವನ್ನು ಸಮಾಪ್ತಿ ಮಾಡುವ ಪ್ರತಿಜ್ಞೆ ಮಾಡಿ ಕೂಡ ಕೋಮುವಾದ ರಾಜ್ಯವನ್ನು ಸರ್ವಗ್ರಾಹಿ ಮಾಡುತ್ತದೆ. ಸಮಾಜವು ತನ್ನ ಹಿತಕ್ಕಾಗಿ ಕುಟುಂಬದಿಂದ ರಾಜ್ಯವರೆಗೂ ಮತ್ತು ವಿವಾಹದಿಂದ ಸನ್ಯಾಸದವರೆಗೂ ಅನೇಕ ಸಂಸ್ಥೆಗಳ ನಿರ್ಮಾಣ ಮಾಡುತ್ತದೆ. ವ್ಯಕ್ತಿಯೂ ಸಮಾಜದ ಪ್ರತಿನಿಧಿಯೇ. ವ್ಯಕ್ತಿ ಸಮಾಜನಿಷ್ಠನಾಗದಿದ್ದರೆ ಕೇವಲ ಸಂಸ್ಥೆಗೆ ಸಂಬಂಧಿಸಿದ ರಾಷ್ಟ್ರ ಚಿಂತನ 421 ಬದಲಾವಣೆಗಳಿಂದ ಕೆಲಸವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಸಮಾಜವಾದದ ಉದ್ದೇಶದಿಂದ ರಾಜ್ಯವು ಅಧಿಕಾಧಿಕ ಜೀವನದ ಸ್ವಾಮಿ ಮತ್ತು ನಿಯಂತ ಆಗುತ್ತದೆ. ಆದರೆ ರಾಜ್ಯ ಕಾರ್ಮಿಕರ ಭ್ರಷ್ಟಾಚಾರದಿಂದ ಸಮಾಜದ ಹಿತಕ್ಕೆ ಹೆಚ್ಚು ಹೆಚ್ಚು ಲೋಪವಾಗುತ್ತಾ ಬರುತ್ತದೆ. ಬಂಡವಾಳಶಾಹಿಗಳ ವ್ಯವಸ್ಥೆಯ ಯಾವ ಕೆಟ್ಟ ಗುಣಗಳನ್ನು ದೂರಮಾಡಲು ಸಂಸ್ಥೆಗಳು ಪ್ರಯತ್ನಿಸುತ್ತವೋ ಅವು ಮತ್ತಷ್ಟು ಹೆಚ್ಚುತ್ತವೆ. ಆದ್ದರಿಂದ ಸಮಾಜವಾದ ಮತ್ತು ಪ್ರಜಾತಂತ್ರ ಎರಡರ ಸಾಫಲ್ಯ ಖಾಸಗಿ ಮತ್ತು ರಾಜನೈತಿಕ ನಿರಪೇಕ್ಷ ಆಂದೋಲನಗಳು ಮತ್ತು ಶಿಕ್ಷಣದ ಮೇಲೆ ಆಧಾರ ಪಟ್ಟಿದೆ. ಲೋಕ ಸಂಸ್ಕಾರಕ್ಕೆ ಸರ್ವಾಧಿಕ ಮಹತ್ವವಿದೆ. ದಯಾನಂದ, ಗಾಂಧೀ ಮತ್ತು ಹೆಗ್ಗಡೆವಾರರು ಹುಟ್ಟುಹಾಕಿದ ಪ್ರೇರಣೆಯ ಕಡೆ ದೇಶವು ಗಮನ ಹರಿಸಿದರೆ ಸಮಾಜದ ಶಕ್ತಿ ಮತ್ತಷ್ಟು ಪ್ರಬಲವಾಗುತ್ತದೆ. ಇದರಿಂದಲೇ ರಾಜ್ಯದ ಚಿತಿ ಜಾಗೃತವಾಗಿ ಅದರ ರೂಪ ಪ್ರಬಲವಾಗುತ್ತದೆ. ಚಿತಿ ಮತ್ತು ರೂಪದ ಸಂಬಂಧ ಆತ್ಮ ಮತ್ತು ಪ್ರಾಣದ ಸಂಬಂಧವಾಗುತ್ತದೆ. ವಿಭಿನ್ನ ಸಂಸ್ಥೆಗಳು ಶರೀರದ ಇಂದ್ರಿಯಗಳು. ಇಂದ್ರಿಯಗಳು ಪ್ರಾಣದಿಂದಲೇ ಜೀವಂತ ಮತ್ತು ಶಕ್ತಿಯುತವಾಗುತ್ತವೆ. ಪ್ರಾಣವಿಲ್ಲದೇ ಆತ್ಮದ ಸಂಚಾರವಾಗುವುದಿಲ್ಲ. ರಾಜನೈತಿಕ ಕ್ಷೇತ್ರದ ಸಂಬಂಧವಿರುವಾಗ ಆತುರ ಪಟ್ಟರೆ ಕೆಲಸವಾಗುವುದಿಲ್ಲ. ನಾವು ವರ್ತಮಾನ ಸಂವಿಧಾನ ಮತ್ತು ಅದರ ಮಾನ್ಯತೆಗಳಿಗೆ ಒಳಗಾಗಿಯೇ ಕೆಲಸ ಮಾಡಬೇಕಾಗುತ್ತದೆ. ಸಮಾಜದ ಹಿತಕ್ಕೆ ಅಡ್ಡಿಯಾಗುವ ಸಂದರ್ಭದಲ್ಲಿ ಅದರಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಹಿಂದಿನ ಹದಿನೈದು ವರ್ಷಗಳಲ್ಲಿ ಈ ರೀತಿ ಅನೇಕ ಬಾರಿ ಆಗಿದೆ. ಇದುವರೆಗೂ ನಮ್ಮ ಯಾವುದೇ ಸುಧಾರವಾದಿ ಅಥವಾ ಕ್ರಾಂತಿಕಾರಿ ಕಾರ್ಯಕ್ರಮ ಸಂವಿಧಾನದ ಅಡಚಣೆಯ ಕಾರಣದಿಂದ ನಿಲ್ಲಲಿಲ್ಲ. ಆದರೆ ಸಮಾಜದಲ್ಲಿ ಯೋಗ್ಯ ಶಿಕ್ಷಣ ಮತ್ತು ಶಾಸನದಲ್ಲಿ ಕರ್ತವ್ಯ ನಿಷ್ಠೆಯ ಅಭಾವದ ಕಾರಣದಿಂದ ನಮ್ಮ ಅಧಿಕಾಂಶ ಕಾರ್ಯಕ್ರಮಗಳಲ್ಲಿ ಬದಲಾವಣೆಗಳು ಕೇವಲ ಮೇಲ್ನೋಟಕ್ಕೆ ಮಾತ್ರ ಆಗಿವೆ. ಆದ್ದರಿಂದ ಸಂಸ್ಥೆಗೆ ಸಂಬಂಧಿಸಿದ ಪರಿವರ್ತನೆಯ ಜಾಗದಲ್ಲಿ ಮಾನಸಿಕ ಪರಿವರ್ತನೆ ಮಾಡಬೇಕಾಗಿದೆ. ಆರ್ಥಿಕ ವಿಕಾಸದಲ್ಲಿಯೂ ವರ್ತಮಾನ ಸಂವಿಧಾನ ಬಾಧಕವಾಗಿಲ್ಲ. ನಾವು ಸರಕಾರಿ ಮತ್ತು ಖಾಸಗಿ ಎರಡರಲ್ಲೂ ಎಲ್ಲಾ ಸಾಧನಗಳನ್ನು ಪೂರ್ತಿಯಾಗಿ ಉಪಯೋಗಿಸಿಕೊಂಡು ಕೆಲಸಮಾಡುತ್ತಿಲ್ಲ. ಇದೇ ಇದರಲ್ಲಿ ತೊಂದರೆಯಾಗಿದೆ. ಇಲ್ಲಿಯವರೆಗೂ ನಮ್ಮಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಶೀತಲ ಯುದ್ಧ ನಡೆದಿದೆ. ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಬಹುದಾಗಿದೆ. ಆದರೆ ಒಂದಕ್ಕೊಂದು ಪ್ರತಿಸ್ಪರ್ಧಿಗಳೇನೋ ಎನ್ನುವ ಹಾಗೆ ಕೆಲಸ ಮಾಡುತ್ತಿವೆ. ಸರಕಾರಿ 422 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕ್ಷೇತ್ರದ ಪರಿಸ್ಥಿತಿಯೂ ಅದೇ ಆಗಿದೆ. ಇದರ ಪರಿಣಾಮವಾಗಿ ಎಲ್ಲದರಲ್ಲೂ ಸಾಹಸ ಕಡಿಮೆಯಾಗುತ್ತಾ ಬಂದಿದೆ ಮತ್ತು ಎಲ್ಲವೂ ರಾಜ್ಯ ಮುಖಾಪೇಕ್ಷಿಗಳಾಗಿವೆ. ಸಂಪೂರ್ಣ ಭಾರತದ ಪುರುಷಾರ್ಥ ಮತ್ತು ಪರಾಕ್ರಮಗಳನ್ನು ಪ್ರಕಟಿಸುವ ಅವಕಾಶ ಬಂದರೆ ನಾವು ಪಶ್ಚಿಮದ ಬಂಡವಾಳಶಾಹಿ ಮತ್ತು ರಷ್ಯಾದ ಸಮಾಜವಾದಿ ಯುಗಕ್ಕಿಂತ ಕಡಿಮೆ ಸಮಯದಲ್ಲಿ ಪ್ರಗತಿಯನ್ನು ಪಡೆಯಬಹುದಾಗಿದೆ. ಬಂಡವಾಳಶಾಹಿ ದೇಶಗಳಲ್ಲಿ ಪ್ರಗತಿಯಲ್ಲಿ ಬಹಳ ಸಮಯವು ತೆಗೆದುಕೊಂಡಿದೆಯೆಂದರೆ ಅದರ ಕಾರಣ ಅವ್ಯವಸ್ಥೆಯಲ್ಲ. ವೈಜ್ಞಾನಿಕ ಆವಿಷ್ಕಾರಗಳು ಮತ್ತು ಔದ್ಯೋಗಿಕ ವಿಕಾಸದಲ್ಲಿ ತೆಗೆದುಕೊಂಡ ಸಮಯ ಕೂಡ ಆಕಾಲದ ಸಮಯದಲ್ಲಿ ಸೇರಿಕೊಳ್ಳುತ್ತದೆ. ರಷ್ಯಾದಲ್ಲಿ ಔದ್ಯೋಗಿಕ ವಿಕಾಸವಾಗಲು ಕಾರಣ ಅದಕ್ಕೆ ಅದರ ಜ್ಞಾನ ಸಹಜವಾಗಿ ಬಂದಿದೆ. ನಾವೂ ಕೂಡ ನಮ್ಮ ಹಿಂದಿನವರ ಜ್ಞಾನದ ಲಾಭ ಪಡೆದುಕೊಂಡು ಭವಿಷ್ಯದ ಬಗೆಗೆ ವಿಚಾರ ಮಾಡಬಹುದಾಗಿದೆ. ಆದ್ದರಿಂದ ಒಟ್ಟಾಗಿ ಕೆಲಸ ನಡೆದರೆ ನಾವು ಎಲ್ಲರ ತುಲನೆಯಲ್ಲಿ ಬಹಳ ಕಡಿಮೆ ಸಮಯದಲ್ಲಿ ನಮ್ಮ ಆರ್ಥಿಕನ ನೀತಿಯನ್ನು ಮತ್ತಷ್ಟು ಸಮೃದ್ಧಗೊಳಿಸಬಹುದಾಗಿದೆ. ಕೆಲವು ಕೆಲಸಗಳು ವ್ಯಕ್ತಿ ಅಥವಾ ವರ್ಗದ ಸ್ವಾರ್ಥವನ್ನು ಬಡಿದೆಬ್ಬಿಸಿ ಅಥವಾ ಜೀವನದ ಯಾವುದಾದರೂ ಹಸಿವನ್ನು ನೀಗಿಸಲು ಕೂಡಾ ಮಾಡಲ್ಪಡುತ್ತವೆ. ಪ್ರತಿಕ್ರಿಯೆಯಿಂದ ಕೂಡ ಪ್ರೇರಣೆ ಸಿಗುತ್ತದೆ. ಬಂಡವಾಳಶಾಹಿವಾದ ಮತ್ತು ಸಮಾಜವಾದ ಇದನ್ನೇ ಮಾಡುತ್ತದೆ. ಇದರಿಂದ ಸ್ವಾರ್ಥಸಿದ್ಧಿಯಾಗುತ್ತದೆ. ಆದರೆ ಶ್ರೇಯಸ್ಸು ಸಿಗುವುದಿಲ್ಲ. ಸ್ವಾರ್ಥ ಮತ್ತು ಶ್ರೇಯಸ್ಸು ಎರಡನ್ನೂ ಪಡೆಯಬೇಕಾದರೆ ದೇಶವನ್ನು ಆದರ್ಶವಾದಿಯನ್ನಾಗಿ ಮಾಡಬೇಕಾಗುತ್ತದೆ. ಚಿತಿ ಇಂದ ಈ ಆದರ್ಶ ನಿಶ್ಚಿತವಾಗುತ್ತದೆ. ಈ ಆಧಾರದಲ್ಲಿ ಆದರ್ಶ ಜಾಗೃತವಾದರೆ ರಾಜನೈತಿಕ ಸ್ವಾತಂತ್ರ ಮತ್ತು ಆರ್ಥಿಕ ಸಮೃದ್ಧಿಯ ಮಾರ್ಗ ಪ್ರಶಸ್ತವಾಗುತ್ತದೆ. ನಾವು ನಮ್ಮ ಹಳೆಯ ರೂಢಿಗಳನ್ನು ಬದಲಿಸಿ ವಿದೇಶೀಯರ ಪ್ರಭಾವದಿಂದ ಮುಕ್ತರಾಗಿ ಹೊಸ ಸ್ವಸ್ಥ ಮತ್ತು ಚೈತನ್ಯ ಸಂಸ್ಥೆಗಳನ್ನು ಹುಟ್ಟುಹಾಕುವ ವಿವೇಕ ಮತ್ತು ಸಾಮರ್ಥ್ಯ ನಮ್ಮಲ್ಲಿ ಇದರಿಂದ ಹುಟ್ಟುತ್ತದೆ. ಇದರಿಂದಲೇ ನಮ್ಮ ದೇಶ ವಿಶ್ವಕ್ಕೆ ಭಾರವಾಗಿರದೆ ಮತ್ತು ಪರಾವಲಂಬಿ ಪರಮುಖಾಪೇಕ್ಷಿಗಳಾಗಿರದೆ ಹೊಸ ಜಗತ್ತಿನ ರಚನೆಯಲ್ಲಿ ತನ್ನ ಕೊಡುಗೆಯನ್ನು ಕೊಡಬಹುದಾಗಿದೆ. ಇದೇ ನಮ್ಮ ಅದೃಷ್ಟವಾಗಿದೆ. ಈ ರೀತಿಯ ಸ್ವಾತಂತ್ರ್ಯದ ಸಾಧನೆ ಮತ್ತು ಸಿದ್ಧಿ ಆಗಬೇಕಾಗಿದೆ. ಲೋಕಮತದ ವ್ಯವಸ್ಥಾಪಕರು ಯಾರು? ರಾಜ್ಯಗಳ ಪುನಾರಚನೆಯ ಪ್ರಶ್ನೆಯಲ್ಲಿ ಯಾವಾಗ ದೇಶದಲ್ಲಿ ವಿಭಿನ್ನ ಬೇಡಿಕೆಗಳನ್ನು ಮುಂದಿಟ್ಟುಕೊಂಡ ಜನರ ಭಾವನೆಗಳು ಉಗ್ರಸ್ವರೂಪಕ್ಕೆ ರಾಷ್ಟ್ರ ಚಿಂತನ 423 ಹೋಗುತ್ತಿದ್ದಾಗ ಪ್ರಧಾನಮಂತ್ರಿ ಪಂಡಿತ ಜವಹರಲಾಲ್ ನೆಹರೂ ಅವರಿಂದ ಒಂದು ಉನ್ನತ ಸಮಿತಿ ದೊರೆಯಿತು. ಉನ್ನತ ಸಮಿತಿಯ ಒಬ್ಬ ಸದಸ್ಯನು ``ದೆಹಲಿಯಲ್ಲಿ ವಿಧಾನಸಭೆಯನ್ನು ಅಂತ್ಯಗೊಳಿಸಿದ ಅವರ ನಿರ್ಣಯದಿಂದ ಜನರು ಬಹಳ ಸಂತುಷ್ಟರಾಗಿದ್ದಾರೆ. ಆದ್ದರಿಂದ ಅದರಲ್ಲಿ ಯಾವುದೇ ರೀತಿಯ ಪರಿವರ್ತನೆಯನ್ನು ಮಾಡಬೇಡಿ" ಎಂದು ಅವರಲ್ಲಿ ಅರಿಕೆ ಮಾಡಿಕೊಂಡ. ಆಗ ನೆಹರೂರವರು ಮುಗುಳ್ನುಗುತ್ತಾ ಯಾವ ಜನ ವಿಧಾನಸಭೆಯನ್ನು ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಬಂದಿದ್ದರೋ ಅವರೂ ಸಹ ಜನರ ಪರಿವಾಗಿಯೇ ಮಾತನಾಡುತ್ತಾರೆ. ಜನರ ಇಚ್ಛೆಯನ್ನು ಹೇಗೆ ಅರ್ಥೈಸಿಕೊಳ್ಳುವುದು? ಪಂಡಿತ್‍ಜೀ ಅವರು ಯಾವ ಪ್ರಶ್ನೆಯನ್ನು ಮುಂದಿಟ್ಟರೋ ಅದು ಪ್ರಜಾರಾಜ್ಯಕ್ಕೆ ಅತ್ಯಂತ ಮಹತ್ವರ್ಪೂವಾಗಿದೆ. ಕಾರಣ ಪ್ರಜಾತಂತ್ರದಲ್ಲಿ ರಾಜ್ಯ ಜನತೆಯ ಇಚ್ಛೆಗಳ ಅನುಸಾರ ನಡೆಯಲ್ಪಡುತ್ತದೆ. ಆದರೆ ಇಬ್ಬರು ವ್ಯಕ್ತಿಗಳ ಇಚ್ಛೆ ಯಾವಾಗಲೂ ಒಂದೇ ಆಗಿರುವುದಿಲ್ಲ. ಅಂದಮೇಲೆ ಎಲ್ಲಿ ಕೋಟ್ಯಾಂತರ ಜನರ ಪ್ರಶ್ನೆ ಇರುತ್ತದೋ ಅಲ್ಲಿ ರಾಷ್ಟ್ರದ ಎಲ್ಲಾ ಜನರ ಇಚ್ಛೆಯೂ ಒಂದೇ ಆಗಿರುತ್ತದೆ. ಎಂಬುದು ಸಾಧ್ಯವಾಗದ ಮಾತು. ಹೌದು ಯುದ್ಧ ಸಂಭವಿಸಿದಾಗ ಎಲ್ಲರ ಇಚ್ಛೆಯೂ ಶತ್ರುಗಳನ್ನು ಸೋಲಿಸಿ ವಿಜಯವನ್ನು ಗಳಿಸಬೇಕೆಂಬುದೇ ಆಗಿರುತ್ತದೆ. ಆದರೆ ಅಲ್ಲಿಯೂ ನೀತಿಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅನೇಕ ಮತ ಭೇದಗಳು ಉಂಟಾಗುವುದೂ ಉಂಟು. ಲೋಕೇಚ್ಛೆ ಎಂಬುದು ವಾಸ್ತವದಲ್ಲಿ ಭಾವನಾತ್ಮಕ ಕಲ್ಪನೆಯಷ್ಟೆ. ಸತ್ಯವೇನೆಂದರೆ ಪ್ರಜಾತಂತ್ರದಲ್ಲಿ ಯಾರ ಇಚ್ಛೆಯೂ ನಡೆಯುವುದಿಲ್ಲ. ಪ್ರತಿಯೊಬ್ಬನೂ ಒಂದು ಸಾಮಾನ್ಯ ಇಚ್ಚಾನುಸಾರ ತನ್ನ ಇಚ್ಛೆಯನ್ನು ತ್ಯಜಿಸಬೇಕಾಗುತ್ತದೆ. ಹೀಗಲ್ಲದೆ ಪ್ರತಿಯೊಬ್ಬ ವ್ಯಕ್ತಿ ತನ್ನ ಇಚ್ಛೆಗಳನ್ನು ಮಾನ್ಯತೆಗಳನ್ನು ಮತ್ತು ವಿಶ್ವಾಸಗಳನ್ನು ಸರ್ವಸ್ವವೆಂದು ಅಂಗೀಕರಿಸಿ ಹಠ ಹಿಡಿದರೆ ಜನತಂತ್ರ ನಡೆಯಲು ಸಾಧ್ಯವಿಲ್ಲ. ಅರಾಜಕತೆ, ಅಡಚಣೆ ಮತ್ತು ಕೊನೆಯಲ್ಲಿ ಏಕತಂತ್ರೀಯ ನಿರಂಕುಶ ಸ್ಥಿತಿಯ ಪರಿಣಾಮ ಖಂಡಿತವಾಗಿಯೂ ಉಂಟಾಗುತ್ತದೆ. ನಮ್ಮ ಇಚ್ಛೆಗಳ ಮೇಲೆ ದಮನ ಎಂಬುದರ ಅರ್ಥ ಬೇರೆಯವರ ಮಾತುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದು ಪ್ರಜಾತಂತ್ರದ ಈ ವ್ಯಾಖ್ಯೆಯನ್ನು ಇಲ್ಲಿ ಏಕೆ ಕೊಡಲಾಗಿದೆ ಎಂದರೆ ಅದು ವಾದವಿವಾದಗಳ ಮೂಲಕ ನಡೆಯುವ ರಾಜ್ಯವಾಗಿತ್ತು. `ವಾದೇವಾದೇ ಜಾಯತೇ ತತ್ವಬೋಧಃ' ಇದು ನಮ್ಮ ಪುರಾತನ ಹೇಳಿಕೆಯಾಗಿದೆ. ಯಾವಾಗ ನಾವು ಈ ತತ್ವಬೋಧನೆಯನ್ನು ತೆಗೆದುಕೊಳ್ಳುತ್ತೇವೆಯೋ ಆಗ ನಾವು ಬೇರೆಯವರ ಮಾತುಗಳನ್ನು ಗಮನವಿಟ್ಟು ಕೇಳಬಹುದು ಮತ್ತು ಅದರಲ್ಲಿ ಯಾವ ಸತ್ಯಾಂಶವಿರುತ್ತದೆಯೋ ಅದನ್ನು ಗ್ರಹಿಸುವ ಇಚ್ಛೆಯನ್ನು 424 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಇಟ್ಟುಕೊಳ್ಳಬಹುದು. ಒಂದು ವೇಳೆ ಬೇರೆಯವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡದೆ ತಮ್ಮದೇ ದೃಷ್ಟಿಕೋನದ ಆಗ್ರಹವನ್ನು ಮಾಡುತ್ತಾ ಹೋದಲ್ಲಿ ``ವಾದೇವಾದೇ ಜಾಯತೇ ಕಂಠಶೋಷಃ" ಎಂಬ ಉಕ್ತಿಯು ಚರಿತ್ರಾರ್ಹವಾಗಬಹುದು. ವಾಲ್ಟೇರ್ ಏನು ಹೇಳಿದ್ದಾನೆಂದರೆ ನಾನು ನಿನ್ನ ಮಾತನ್ನು ಸತ್ಯವೆಂದು ಒಪ್ಪಿಕೊಳ್ಳುವುದಿಲ್ಲ. ಆದರೆ ಮಾತನಾಡುವ ನಿನ್ನ ಅಧಿಕಾರಕ್ಕಾಗಿ ನಾನು ಸಂಪೂರ್ಣ ಶಕ್ತಿಯಿಂದ ಹೋರಾಡುತ್ತೇನೆ. ಎಂದರೆ ಅವನು ಮನುಷ್ಯನ ಕೇವಲ ಕಂಠಶೋಷದ ಅಧಿಕಾರವನ್ನು ಅಂಗೀಕರಿಸಿದ. ಭಾರತೀಯ ಸಂಸ್ಕೃತಿ ಇದರಿಂದ ಮುಂದೆ ಹೋಗಿ ವಾದವಿವಾದಗಳನ್ನು ತತ್ವಬೋಧನೆಯ ಸಾಧನದ ರೂಪದಲ್ಲಿ ನೋಡುತ್ತೇವೆ. ದೃಷ್ಟಿಕೋನದಲ್ಲಿ ಈ ಪರಿವರ್ತನೆಗಾಗಿ ಜೀವನದಲ್ಲಿ ಯಾವಾಗಲೂ ಸಂಯಮದ ಅವಶ್ಯಕತೆ ಇದೆ. ಎಲ್ಲಿ ಸಂಯಮವಿರುವುದಿಲ್ಲವೋ ಅಲ್ಲಿ ತನ್ನ ಇಚ್ಛೆಗಳನ್ನು ಯಾವಾಗಲೂ ವಶಪಡಿಸಿಕೊಳ್ಳಲು ಆಗುವುದಿಲ್ಲ. ಆಗ ಅವುಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅವನು ಉಳಿದ ಜನರ ಬಗ್ಗೆ ಸ್ವಲ್ಪವೂ ಚಿಂತಿಸದೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ಇದು ಸಫಲವಾದಲ್ಲಿ ಅವನು ತನ್ನ ಕ್ಷೇತ್ರದಲ್ಲಿ ಏಕಾಧಿಪತ್ಯವನ್ನು ಪ್ರತಿಷ್ಠಾಪಿಸಿ ಲೋಕತಂತ್ರದ ಹತ್ಯೆ ಮಾಡುತ್ತಾನೆ. ಒಂದು ವೇಳೆ ಅಸಫಲವಾದರೆ ಅದರಿಂದಾಗಿ ಲೋಕತಂತ್ರ ರಸಹೀನ ಮತ್ತು ದುಃಖದಾಯಕವಾಗುತ್ತದೆ. ಒಂದು ವೇಳೆ ಬಹುಜನ ಸಮಾಜ ಲೋಕರಾಜ್ಯದಲ್ಲಿ ತನ್ನ ಸುಖದ ಅನುಭವವನ್ನು ಮಾಡದಿದ್ದರೆ ಲೋಕತಂತ್ರವನ್ನು ಆತ್ಮವಿಲ್ಲದ ಶರೀರ ಮಾತ್ರವೆಂದು ಹೇಳಬೇಕಾಗುತ್ತದೆ. ಇನ್ನೊಬ್ಬನ ಇಚ್ಛೆಯ ಮುಂದೆ ವಿನಮ್ರನಾಗುವ ಇನ್ನೊಬ್ಬರ ಇಚ್ಛೆಯ ತಯಾರಿಯಲ್ಲಿ ಒಂದು ಅಪಾಯವಿದ್ದೇ ಇರುತ್ತದೆ. ಸಜ್ಜನರು ಮತ್ತು ಧರ್ಮಪಾಲಕರು ಯಾವಾಗಲೂ ತಮ್ಮ ಮಾತಿನ ಆಗ್ರಹವನ್ನು ಬಿಟ್ಟು ಬೇರೆಯವರ ಮಾತನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಯಾರು ದುರ್ಜನರು ಮತ್ತು ದುರಾಗ್ರಹಿಗಳಾಗಿರುತ್ತಾರೋ ಅವರು ತಮ್ಮ ಹಟವನ್ನು ಬಿಡುವುದಿಲ್ಲ. ಪರಿಣಾಮವಾಗಿ ಅಂತಹ ಜನರಿಗೆ ಕೂಗಿ ಹೇಳಬೇಕಾಗುತ್ತದೆ. ಅವರು ತಮ್ಮ ಮಾತನ್ನು ಒಪ್ಪಿಕೊಂಡು ಸಮಾಜದ ಮುಂದಾಳಾಗುತ್ತಾರೆ ಮತ್ತು ನಿಧಾನವಾಗಿ ಲೋಕತಂತ್ರ ಒಂದು ವಿಕೃತ ರೂಪದಲ್ಲಿ ಅಸ್ತಿತ್ವ ಪಡೆದು ಸಮಾಜಕ್ಕೆ ಕಷ್ಟದಾಯಕವಾಗುತ್ತದೆ. ಸಂಭವಿಸಬಹುದಾದ ಈ ರೀತಿಯ ಸಂಕಟ ಸಮೀಪವಿರುವ ಕಾರಣದಿಂದ ನಮ್ಮ ಶಾಸ್ತ್ರಕಾರರು ಲೋಕಮತ ಪರಿಷ್ಕಾರದ ವ್ಯವಸ್ಥೆಯನ್ನು ಮಾಡಿದರು. ಯಾವ ಸಮಾಜದಲ್ಲಿ ಈ ಪರಿಷ್ಕಾರದ ಕೆಲಸ ನಡೆಯುತ್ತಿರುತ್ತದೆಯೋ ಅಲ್ಲಿ ಸಹಿಷ್ಣುತೆ ಮತ್ತು ಸಂಯಮಶೀಲ ವ್ಯಕ್ತಿಗಳ ನಿರಂತರವಾಗಿ ಸಮುದಾಯ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿಯವರೆಗಿನ ಇಂತಹ ಗುಣಗಳಿಂದ ವಂಚಿತನಾದ ವ್ಯಕ್ತಿ ಸ್ವಲ್ಪವಾದರೂ ಪ್ರಾಪ್ತಿಯನ್ನು ಹೊಂದುತ್ತಾನೆ. ರಾಷ್ಟ್ರ ಚಿಂತನ 425 ಅದೇ ಒಂದು ವೇಳೆ ಏನಾದರೂ ಅಪವಾದವಿದ್ದಲ್ಲಿ ಅವನು ತನ್ನ ಪ್ರಭುತ್ವವನ್ನು ಒಟ್ಟುಗೂಡಿಸಲು ಆಗುವುದಿಲ್ಲ. ಆದರೆ ಈ ಲೋಕಮತ ಪರಿಷ್ಕಾರದ ಕಾರ್ಯವನ್ನು ಯಾರು ಮಾಡುತ್ತಾರೆ. ರಷ್ಯ ಮತ್ತು ಇನ್ನಿತರ ಸಾಮ್ಯವಾದಿ ದೇಶಗಳಲ್ಲಿ ಈ ಕಾರ್ಯ ರಾಜ್ಯದ ಮೂಲಕ ನಡೆಯುತ್ತಿದೆ. ಮಾರ್ಕ್ಸ್‌ನ ಸಿದ್ಧಾಂತದ ಅನುಸಾರ ಕಾರ್ಮಿಕರ ಕ್ರಾಂತಿಯ ನಂತರ ಮತ್ತೆ ಕ್ರಾಂತಿಯ ಸಂಭವವಿದೆ. ಅದನ್ನು ತಡೆಯುವುದಕ್ಕೆ ಕಠೋರವಾದ ಉಪಾಯಗಳನ್ನು ಅವಲಂಬಿಸುವ ಅವಶ್ಯಕತೆ ಇದೆ. ಜೊತೆಗೆ ಇಲ್ಲಿಯವರೆಗೆ ಜೀವನದಲ್ಲಿ ಯಾವ ಮೌಲ್ಯ ಸ್ಥಾಪಿತವಾಗಿದೆಯೋ ಅದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಮೇಲೆ ಆಧಾರಿತವಾಗಿದೆ. ಅದನ್ನು ತೆಗೆದುಹಾಕಿ ಹೊಸ ಪ್ರಗತಿವಾದಿ ಮೌಲ್ಯಗಳನ್ನು ಪ್ರತಿಷ್ಠಾಪನೆ ಮಾಡಬೇಕಾಯಿತು. ಈ ಕಾರ್ಯವನ್ನು ಲೆನಿನ್ ರಾಜ್ಯದ ಪ್ರತಿನಿಧಿಗಳು ಮತ್ತು ಕ್ರಾಂತಿದರ್ಶಿ ಮಹಾನುಭಾವರ ಮೂಲಕ ಮಾಡುತ್ತಿದ್ದಾನೆ. ಆದರೆ ಅದರ ಪರಿಣಾಮವೇನಾಯಿತೆಂದರೆ ಅಲ್ಲಿ ಲೋಕಮತ ಪರಿಷ್ಕಾರದ ಹೆಸರಿನಲ್ಲಿ ವ್ಯಕ್ತಿಯ ಎಲ್ಲಾ ಸ್ವಾತಂತ್ರ್ಯಗಳು ಸಮಾಪ್ತಿಯಾಯಿತು ಮತ್ತು ಕೆಲವು ವ್ಯಕ್ತಿಗಳ ಸರ್ವಾಧಿಕಾರ ಸಂಪೂರ್ಣವಾಗಿ ಜನತೆಯ ಇಚ್ಛೆಯ ಹೆಸರಿನಲ್ಲಿ ನಡೆಯಲು ಪ್ರಾರಂಭವಾಯಿತು. ರೋಗಿಗೆ ಔಷಧಿಯನ್ನೇನೋ ಕೊಟ್ಟರು, ಅದರಿಂದ ಕಾಯಿಲೆ ವಾಸಿಯಾಗಲಿಲ್ಲ ರೋಗಿ ಸತ್ತು ಹೋದ. ಅಂದರೆ ಸಮಸ್ಯೆಗಳು ಎರಡೂ ಕಡೆಯೂ ಇವೆ. ಒಂದು ಕಡೆ ಅಪರಿಚಿತ ಲೋಕಮತದ ನಡೆಯಲ್ಲಿ ಆಲೋಚನಾ ವಿಚಾರಗಳು ಯಾವಾಗಲೂ ನಿಶ್ಚಿತ ರೂಪದಲ್ಲಿ ಇರುವುದಿಲ್ಲ. ಮತ್ತೊಂದೆಡೆ ವ್ಯಕ್ತಿಯ ಸ್ವಾತಂತ್ರ್ಯದ ಸಮಾಪ್ತಿ ಶೇಕ್ಸ್‌ಪಿಯರ್ ತನ್ನ ನಾಟಕ ಜೂಲಿಯಸ್ ಸೀಜರ್‌ನಲ್ಲಿ ಮೊದಲ ಅವಸ್ಥೆಯ ಒಳ್ಳೆಯ ಚಿತ್ರಣವನ್ನು ನೀಡಿದ್ದಾನೆ. ಯಾವ ಜನ ಬ್ರೂಟಸ್‍ನ ಜೊತೆ ಸೇರಿ ಜೂಲಿಯಸ್ ಸೀಜರ್‌ನ ವಧೆಮಾಡಿ ಖುಷಿ ಪಡುತ್ತಿದ್ದರೋ ಅವರು ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ನಡೆದ ಆ್ಯಂಟೋನಿಯ ಭಾಷಣದ ಕೊನೆಯಲ್ಲಿ ಬ್ರೂಟಸ್‍ನ ವಧೆ ಮಾಡಲು ಸನ್ನದ್ಧರಾದರು. ಮೋಬೋಕ್ರೆಸಿ ಮತ್ತು ಆಟೋಕ್ರೆಸಿ ಎರಡರ ಪಾಠಗಳ ನಡುವೆ ಡೆಮೊಕ್ರಸಿಯನ್ನು ಜೀವಂತವಾಗಿಡುವುದು ಒಂದು ಕಠಿಣ ಸಮಸ್ಯೆಯಾಗಿದೆ. ಭಾರತದಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ರಾಜ್ಯದ ಕೈಯಿಂದ ಲೋಕಮತ ನಿರ್ಮಾಣದ ಸಾಧನವನ್ನು ಕಸಿದುಕೊಂಡಿದೆ. ಲೋಕಮತದ ಪರಿಷ್ಕಾರದ ಕಾರ್ಯ ವೀತರಾದ ದ್ವಂದ್ವಾತೀತ ಸನ್ಯಾಸಿಗಳ ಕಾರ್ಯವಾಗಿದೆ. ಸನ್ಯಾಸಿಗಳು ಯಾವಾಗಲೂ ಧರ್ಮಗಳ ತತ್ವದ ಅನುಸಾರ ಜನರ ಐಹಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ಇಚ್ಛೆಯ ತಮ್ಮ ವಚನಗಳು ಮತ್ತು ಶಾಂತಿಪ್ರಿಯ ಆಚರಣೆಗಳಿಂದ ಜನಜೀವನದ ಮೇಲೆ ಸಂಸ್ಕಾರವನ್ನು ಸುರಿಯುತ್ತಿರುತ್ತಾರೆ. ಅವರು ಧರ್ಮದ ಮರ್ಯಾದೆಗಳ 426 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜ್ಞಾನವನ್ನು ಮಾಡುತ್ತಲೇ ಇರುತ್ತಾರೆ. ಅವರ ಎದುರಿಗೆ ಯಾವುದೇ ಮೋಹ ಮತ್ತು ಲೋಭಗಳು ಇಲ್ಲದಿರುವ ಕಾರಣ ಅವರು ಸತ್ಯದ ಆಚರಣೆಯನ್ನು ಸಹಜ ರೀತಿಯಲ್ಲಿ ಮಾಡಬಲ್ಲವರಾಗಿರುತ್ತಾರೆ. ಶಿಕ್ಷಣ ಮತ್ತು ಸಂಸ್ಕಾರದಿಂದ ಸಮಾಜದ ಜೀವನ ಮೌಲ್ಯಯುತವೂ, ಸದೃಢವೂ ಆಗುತ್ತವೆ. ಈ ಮೌಲ್ಯಗಳ ಕಟ್ಟೆ ಕಟ್ಟಿದ ಮೇಲೆ ಲೋಕೇಚ್ಛೆ ಎಂಬ ನದಿ ಯಾವಾಗಲೂ ತನ್ನ ದಡವನ್ನು ಅತಿಕ್ರಮಣ ಮಾಡಿ ಸಂಕಟವನ್ನುಂಟುಮಾಡುವುದಿಲ್ಲ. ಮರ್ಯಾದೆಗಳ ಅಂತರ್ಗತ ಕ್ರಿಯೆಯ ಹೆಸರೇ ಸಂಯಮ. ಹಸಿವಿನಿಂದ ಸಾಯುವುದು ಸಂಯಮವಲ್ಲ. ಆದ್ದರಿಂದ ಶರೀರದ ಅವಶ್ಯಕತೆಯ ಅನುಸಾರ ಒಳ್ಳೆಯ ಹಾಗೂ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸುವುದು ಸಂಯಮ. ಇದುವರೆಗೆ ಅತ್ಯಾಚಾರಿಯ ವಿರುದ್ಧವಾದ ಕೂಗು ಎದ್ದಿಲ್ಲವೆಂಬ ಅಥವಾ ಯಾರಿಗೂ ಸತ್‍ಪರಾಮರ್ಶೆಯನ್ನು ಕೊಡದಿರುವುದು ಸಂಯಮವಲ್ಲ ಎಂದು ಖಂಡಿತವಾಗಿಯೂ ಹೇಳಬಾರದು. ವಾಚಾಳಿ ಮತ್ತು ಮೂಕನ ನಡುವೆ ಸಂಯಮದ ವ್ಯಕ್ತಿ ಬರುತ್ತಾನೆ ಮತ್ತು ಅವಶ್ಯಕತೆಯಿದ್ದಲ್ಲಿ ಮಾತನಾಡುತ್ತಾನೆ. ತನ್ನ ವ್ಯವಹಾರದ ಈ ನಿಯಮ ಯಾವಾಗ ನೆರವೇರುತ್ತದೋ ಆಗ ವ್ಯಕ್ತಿಗೆ ತನ್ನ ಆದರ್ಶದ ಮೇಲೆ ಪ್ರೀತಿ ಹುಟ್ಟುತ್ತದೆ ಮತ್ತು ತನ್ನ ಜವಾಬ್ದಾರಿಯ ಅರಿವು ಆಗುತ್ತದೆ. ಅಸಂಯಮ ಮತ್ತು ಬೇಜವಾಬ್ದಾರಿ ಜೊತೆ ಜೊತೆಯಲ್ಲೇ ಸಾಗುತ್ತದೆ. ಒಬ್ಬ ನಾಗರಿಕ ತನ್ನ ಜವಾಬ್ದಾರಿಯನ್ನರಿತು ಅದರ ನಿರ್ವಹಣೆ ಮಾಡಲು ಯಾವಾಗ ಕ್ರಿಯಾಶೀಲನಾಗುತ್ತಾನೋ ಆಗಲೇ ಪ್ರಜಾರಾಜ್ಯವು ಸಫಲವಾಗುತ್ತದೆ. ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ನನ್ನದು ಎಂಬುದನ್ನು ಸಮಾಜವು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡು ನಡೆಯುವುದೋ ಅಷ್ಟರಮಟ್ಟಿಗೆ ಅವನು ಸಂಯಮಶೀಲನಾಗಿ ನಡೆಯುತ್ತಾನೆ. ಇಂದಿಲ್ಲದಿದ್ದರೂ ನಾಳೆಯಾದರೂ ತನ್ನ ಹೆಗಲಿನ ಮೇಲೆ ರಾಜ್ಯ ಸಂಚಲನೆಯ ಭಾರ ಬೀಳುತ್ತದೆಯೋ ಅಲ್ಲಿ ತನ್ನ ವಾಯಿದೆ ವ್ಯವಹಾರಗಳಲ್ಲಿ ಬೇಜವಾಬ್ದಾರಿ ಮತ್ತು ಅಸಂಯಮತೆ ಉಂಟಾಗುವುದಿಲ್ಲ ಎಂಬುದು ಯಾವ ದಳಕ್ಕೆ ತಿಳಿಯುತ್ತದೋ ಆಗ ಜನರ ಮೇಲಿನ ರಾಜ್ಯವನ್ನು ನಡೆಸುವ ಜವಾಬ್ದಾರಿ ಸದಾ ಇದ್ದೇ ಇರುತ್ತದೆ. ಕಾಲಕಾಲಕ್ಕೆ ಅವರು ತಮ್ಮ ಪ್ರತಿನಿಧಿಗಳ ರೂಪದಲ್ಲಿ ಬೇರೆ ಬೇರೆ ದಳಗಳನ್ನು ಚುನಾಯಿಸುತ್ತಾರೆ. ಅಲ್ಲಿ ಜವಾಬ್ದಾರಿ ಇದ್ದರೆ ದಳವೂ ಸಹ ಎಂದಿಗೂ ಸಂಯಮ ಶೂನ್ಯವಾಗುವುದಿಲ್ಲ. ಎಲ್ಲಕ್ಕಿಂತ ಬಹಳ ಮಹತ್ವದ್ದೆಂದರೆ ಜನರನ್ನು ಸುಸಂಸ್ಕೃತರನ್ನಾಗಿ ಮಾಡುವುದು. ಎಲ್ಲಿಯವರೆಗೆ ಈ ಕಾರ್ಯ ನಿರ್ವಹಿಸುವ ಸಂಘಟನೆ ಮತ್ತು ಮಹಾಪುರುಷರು ರಾಜ್ಯ ಮೋಹದಿಂದ ದೂರವಾಗಿ ಮತ್ತು ಭಯವಿಮುಕ್ತರಾಗಿರುತ್ತಾರೆಯೋ ಅಲ್ಲಿಯವರೆಗೆ ಅವರು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುತ್ತಾರೆ. ರಾಷ್ಟ್ರ ಚಿಂತನ 427 ಸಮಾಜವಾದ, ಲೋಕತಂತ್ರ ಮತ್ತು ಹಿಂದುತ್ವವಾದ ಭಾರತದಲ್ಲಿ ಸಮಾಜವಾದಿ ವಿಚಾರವು ಮತ್ತು ಸಮಾಜವಾದಿ ಪಕ್ಷ ಯೂರೋಪಿನ ವಿಚಾರಗಳು ಇಲ್ಲಿನ ವಿದ್ಯಾವಂತ ಜನರನ್ನು ಪ್ರಭಾವಿತರಾಗಿಸಲು ಪ್ರಾರಂಭಿಸುವುದಕ್ಕೆ ಮುಂಚಿನಿಂದಲೂ ಇದ್ದರೂ, ಸೈದ್ಧಾಂತಿಕ ರೂಪದಲ್ಲಿ ಸಮಾಜವಾದ ಇಲ್ಲಿನ ನಿವಾಸಿಗಳ ರಾಜಕೀಯ ಅಥವಾ ಸಾಮಾಜಿಕ ಜೀವನದಲ್ಲಿ ತನ್ನ ವಿಶೇಷವಾದ ಸ್ಥಾನವನ್ನು ಸ್ಥಾಪಿಸಲಾಗಲಿಲ್ಲ. ಆದರೆ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಸಮಾಜವಾದಿ ಸಮಾಜವನ್ನು ತನ್ನ ಅಂತಿಮ ಲಕ್ಷ್ಯವೆಂದು ಘೋಷಿಸಿದಾಗ ಪರಿಸ್ಥಿತಿ ಬದಲಾಯಿತು. ಸಾಧಾರಣ ಜನತೆಯ ಪ್ರಶ್ನೆ ಬಂದಾಗ ಅದು ಇಂದಿಗೂ ಅಷ್ಟೇ ದೂರವಿದೆ. ಕಾಂಗ್ರೆಸ್‍ನ ನಂತರವೂ ಅದು ಜನತೆಯ ಹೃದಯವನ್ನು ಮುಟ್ಟಲಾಗಲಿಲ್ಲ. ಜನತೆ ಅದರ ಬಗ್ಗೆ ಉತ್ಸಾಹಿತರಾಗಲಿಲ್ಲ. ಆದರೆ ಸಹಜವಾಗಿಯೇ ಚಿಂತೆಯಾಗುತ್ತದೆ ಇಂದು ಈ ವಿಚಾರಧಾರೆಯ ಅನುಯಾಯಿಗಳ ಸಂಖ್ಯೆಯ ಅನುಪಾತದಲ್ಲಿ ಅದಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗುತ್ತದೆ. ಇದರ ಜೊತೆಗೆ ಪ್ರಧಾನ ಮಂತ್ರಿಯ ಜನಪ್ರಿಯತೆ ಮತ್ತು ಗೌರವದ ಕಾರಣ ಕೆಲವು ದಿನಗಳ ಮಟ್ಟಿಗೆ ಸಮಾಜವಾದ ಇಲ್ಲಿನ ಜನತೆಗೆ ಅತ್ಯಂತ ಪ್ರಿಯವಾದ ವಿಷಯ ಎಂದು ಭಾಸವಾಗುತ್ತಿತ್ತು. ಇಂದು ತನ್ನನ್ನು ತಾನು ಸಮಾಜವಾದಿ ಎಂದು ಹೇಳಿಕೊಳ್ಳುವುದು ಒಂದು ಶೋಕಿಯಾಗಿದೆ. ಕಾಲ ಪ್ರವಾಹದಲ್ಲಿ ಕೊಚ್ಚಿಹೋದ ರಾಜಕೀಯ ಪಕ್ಷಗಳಲ್ಲಿ ಯಾರು ತಮ್ಮನ್ನು ಸಮಾಜವಾದದಲ್ಲಿ ಪ್ರಮುಖರು ಎಂದು ಸಿದ್ಧಗೊಳಿಸುತ್ತಾರೆ ಎಂದು ಪೈಪೋಟಿ ನಡೆದಿದೆ. ಹಿಂದೂ ಮಹಾಸಭೆ ಕೂಡ ಹಳೆಯ ಸಾಹಿತ್ಯವನ್ನು ಹೆಕ್ಕಿತೆಗೆದು ``ವೈದಿಕ ಸಮಾಜದ" ಹೊಸ ಅನ್ವೇಷಣೆ ಮಾಡಿತು. ಸಮಾಜವಾದದ ಭಿನ್ನರೂಪಗಳು:- ಕಾಂಗ್ರೆಸ್ ನಮ್ಮ ದೇಶದಲ್ಲಿ ಸಮಾಜವಾದದ ಘೋಷಣೆಯನ್ನು ಬಲಪಡಿಸಿದ ಮೊದಲನೆಯ ಪಕ್ಷ ಆಗಿರಲಿಲ್ಲ. ಕಾಂಗ್ರೆಸ್‍ನ ಮೂಲಕ ಸಮಾಜವಾದವನ್ನು ಸ್ವೀಕಾರಮಾಡುವ ಮೊದಲೇ ಇಲ್ಲಿ ಸಮಾಜವಾದ ಪಕ್ಷಗಳ ಅಸಂತುಷ್ಟ ಜನರೂ ಕೂಡ ತಮ್ಮನ್ನು ಸಮಾಜವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಅವರು ಯಾವ ಸಮಾಜವಾದವನ್ನು ಒಪ್ಪುತ್ತಾರೋ ಅದೇ ಅಧಿಕ ಶುದ್ಧ ಎನ್ನುತ್ತಾರೆ. ಈ ಸ್ಥಿತಿ ಸಮಾಜವಾದದ ವಿಷಯದಲ್ಲಿ ಮತ್ತಷ್ಟು ಭ್ರಮೆಗಳನ್ನು ಹೆಚ್ಚಿಸಿತು. ಯೂರೋಪಿನಲ್ಲಿ ಅನೇಕ ಪ್ರಕಾರದ ಸಮಾಜವಾದಗಳು ಇವೆ. ರೂಜ್‍ವೆಲ್ಟ್, ಹಿಟ್ಲರ್, ಮುಸೋಲೋನಿ ಮತ್ತು ಸ್ಟಾಲಿನ್ ಎಲ್ಲರೂ ತಮ್ಮನ್ನು ತಾವು ಸಮಾಜವಾದಿಗಳು ಎಂದು ಹೇಳಿಕೊಂಡಿದ್ದಾರೆ. ಸ್ವತಃ ಪ್ರತ್ಯಕ್ಷ ರಾಜನೀತಿಯಿಂದ ದೂರ ಇದ್ದರೂ ಕೂಡ ಅನೇಕ ಪ್ರಕಾರದ 428 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಮಾಜವಾದಿ ಸಿದ್ಧಾಂತಗಳನ್ನು ರಚಿಸುವ ಜನರಿಗೂ ಕೊರತೆ ಇರಲಿಲ್ಲ. ಭಾರತದಲ್ಲೂ ಈ ಎಲ್ಲಾ ಪ್ರಕಾರದ ಸಮಾಜವಾದವನ್ನು ಭಾರತೀಯ ಸಾಮಾಜಿಕ ಸಾಂಸ್ಕೃತಿಕ ರಚಿಸುವ ಜನರಿಗೂ ಕಡಿಮೆ ಇರಲಿಲ್ಲ. ಭಾರತದಲ್ಲೂ ಈ ಎಲ್ಲಾ ಪ್ರಕಾರದ ಸಮಾಜವಾದಿ ಗುಂಪುಗಳ ಅನುಯಾಯಿಗಳು ಇದ್ದಾರೆ. ಭಾರತದಲ್ಲಿ ಯೂರೋಪಿಯ ಸಮಾಜವಾದವನ್ನು ಭಾರತೀಯ ಸಾಮಾಜಿಕ ಸಾಂಸ್ಕೃತಿಕ ಜೀವನದ ಅನುರೂಪವಾಗಿ ಬದಲಿಸಿ ಸ್ವೀಕಾರ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಬಾಬು ಜಯಪ್ರಕಾಶ್ ನಾರಾಯಣ್‍ರವರು ಇಂದಿಗೂ ಸಮಾಜವಾದಿಗಳಾಗಿದ್ದಾರೆ. ಎಮ್.ಎನ್. ರಾಯ್‍ರು ತಮ್ಮ ಜೀವನದ ಅಂತಿಮ ಕಾಲದಲ್ಲಿ ಸಮಾಜವಾದವನ್ನು ಪೂರ್ಣತಃ ತ್ಯಜಿಸಿದ್ದರು. ಅವರೂ ಮೃತ್ಯುವಿನ ಸಮಯದಲ್ಲಿಯೂ ರಾಡಿಕಲ್ ಸೋಷಿಯಲಿಸ್ಟ್ ಅಂತಲೇ ಕರೆಯಲ್ಪಟ್ಟರು. ಸಿದ್ಧಾಂತ ವಾದಿಗಳು ಮತ್ತು ರಾಜಕಾರಣಿಗಳು ಈ ಸಮಾಜವಾದದ ಬಗೆಗೆ ವ್ಯಕ್ತಪಡಿಸುವ ಅಭಿಪ್ರಾಯಗಳ ಪರಿಣಾಮವಾಗಿ ಜನರಿಗೆ ತಾವು ಎಲ್ಲಿದ್ದೇವೆ ಎನ್ನುವುದೇ ಗೊತ್ತಾಗುತ್ತಿಲ್ಲ. ಪ್ರೇರಣೆಯ ಉಗಮ ಸ್ಥಾನ ಸಮಾಜವಾದ ಯಾವುದೇ ಜೀವನದರ್ಶನವಲ್ಲ. ಅದು ಒಂದು ವಿಚಿತ್ರ ಸ್ವಭಾವ ಮಾತ್ರ ಎನ್ನುವ ವ್ಯಂಗ್ಯವು ಕೇಳಿಬರುತ್ತದೆ. ನಾವು ಸಮಾಜವಾದಿಗಳ ಬಗ್ಗೆ ವಿಶ್ಲೇಷಣೆ ಮಾಡಿದರೆ ಬಹಳ ಮಟ್ಟಿಗೆ ಈ ಮೇಲಿನ ಮಾತು ಸರಿಯೆನಿಸುತ್ತದೆ. ಮನುಷ್ಯನ ಜೀವನದ ಮಟ್ಟ ಸುಧಾರಿಸಬೇಕು ಎಂಬುದು ಎಲ್ಲ ಸಮಾಜವಾದಿಗಳ ಅಭಿಲಾಷೆ. ಅವರು ಯಾರನ್ನೂ ಕೆಲಸಗಳ್ಳರು ಅಥವಾ ಕಾರ್ಮಿಕರಿಗೆ ಉಚಿತ ಲಾಭಾಂಶವನ್ನು ಕೊಡಿಸುವುದಕ್ಕೆ ಅಡ್ಡಿಮಾಡುವವರು ಎಂದುಕೊಳ್ಳುತ್ತಾರೋ ಅವರ ವಿರುದ್ಧ ನಿಂತು, ಕಾರ್ಮಿಕರ ಪಕ್ಷ ನಿಲ್ಲುತ್ತಾರೆ. ಸ್ವಾಮಿ ವಿವೇಕಾನಂದರೂ ಕೂಡಾ ತಮ್ಮನ್ನು ತಾವು ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದರು. ನಮ್ಮ ನಂಬಿಕೆಯ ಪುಷ್ಟಿಗಾಗಿ ಇದೇ ರೀತಿಯಾದ ತರ್ಕವನ್ನು ಕೊಡುತ್ತಿದ್ದರು. ಒಂದು ಬಾರಿ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. ``ನಾನು ಒಬ್ಬ ಸಮಾಜವಾದಿ. ನಾನು ಸಮಾಜವಾದಿ ಆಗಲು ಕಾರಣ ಸಮಾಜವಾದವು ಪೂರ್ಣ ದರ್ಶನವೆನ್ನುವುದು ಮಾತ್ರವಲ್ಲ, ಮನುಷ್ಯನು ಹಸಿವೆಯಿಂದ ಇರುವ ಬದಲು ಒಂದು ಪೈಸೆಯಾದರೂ ಸಂಪಾದನೆ ಮಾಡುವುದು ಒಳ್ಳೆಯದು ಎಂದು ನಂಬಿದ್ದೇನೆ. ಸುಖ ದುಃಖಗಳ ಅನುಭವ ಪಡೆದ ಮನುಷ್ಯನೇ ಅವುಗಳ ಪುನರ್ವಿಭಜನೆ ಮಾಡುವುದು ಶ್ರೇಯಸ್ಕರ. ಈ ಕಷ್ಟ ಪೂರ್ಣ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯ ದಿನಗಳನ್ನು ನೋಡುವ ಅವಕಾಶ ಬರಬೇಕು. ಹಸಿದುಕೊಂಡಿರುವವರ ಬಗ್ಗೆ ಆರ್ಥಿಕ ಸಹಾನುಭೂತಿ ರಾಷ್ಟ್ರ ಚಿಂತನ 429 ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಸ್ತರದಲ್ಲಿ ಗೌರವಪೂರ್ಣ ಸ್ಥಾನವನ್ನು ಕೊಡಿಸುವ ಇಚ್ಛೆ ಇಂದಿಗೂ ಪ್ರತಿಯೊಂದು ಸಮಾಜವಾದಿಗೂ ಪ್ರೇರಣೆಯನ್ನು ಕೊಡುತ್ತದೆ. ಮಾರ್ಕ್ಸ್‌ನ ದರ್ಶನ ಅಪೂರ್ಣ ಮಾಕ್ರ್ಸ್‍ರವರ ಸದಿಚ್ಛೆ ಹೊಗಳಿಕೆಗೆ ಪಾತ್ರವಾದದ್ದು. ದುಃಖ ಮತ್ತು ಕಷ್ಟಗಳಿಂದ ತುಂಬಿದ ಈ ವಿಶ್ವದಲ್ಲಿ ಅಸಮಾನತೆ, ಅನ್ಯಾಯ, ದುಃಖ ಕಷ್ಟ, ತೊಂದರೆ, ದಾಸತ್ವ, ಶೋಷಣೆ, ಹಸಿವು ಮತ್ತು ಅಭಾವವನ್ನು ನೋಡಿದರೆ ಯಾವುದೇ ಮಾನವೀಯ ಅಂತಃಕರಣವಿರುವ ವ್ಯಕ್ತಿ ಸಮಾಜವಾದವನ್ನು ಅನುಸರಿಸಿದೇ ಇರಲಾರನು. ಆದರೆ ಸಮಾಜವಾದವು ಇಲ್ಲಿಗೆ ಸೀಮಿತವಾಗಿರುವುದಿಲ್ಲ, ಅದು ಈ ದುಃಖಪೂರ್ಣ ಸ್ಥಿತಿಯ ಅಂತ್ಯವನ್ನು ಬಯಸುತ್ತದೆ. ಅದು ಸ್ಥಿತಿಯನ್ನು ವಿಶ್ಲೇಷಣೆ ಮಾಡಿ ರೋಗದ ನಿವಾರಣೆಗಾಗಿ ಔಷಧಿಯನ್ನು ಹೇಳಿದೆ. ಇಲ್ಲಿ ಅವರು ಮಾರ್ಕ್ಸ್‌ನ ಶಿಷ್ಯತ್ವ ಸ್ವೀಕಾರ ಮಾಡಬೇಕಾಗಿದೆ. ಅವನು ತನ್ನ ಸಮಕಾಲೀನ ವಿಚಾರಗಳನ್ನು ಒಟ್ಟುಗೂಡಿಸಿ ಮುಂದಿನ ಪೀಳಿಗೆಯನ್ನು ಆಕರ್ಷಿಸುವ ಕ್ಷಮತೆಯನ್ನು ಹೊಂದಿರುವ ವಿಚಾರ ಸರಣಿಯನ್ನು ವ್ಯಕ್ತಪಡಿಸುತ್ತಾನೆ. ಮಾರ್ಕ್ಸ್‌ನ ವಿಚಾರಗಳಿಗಿಂತ ಭಿನ್ನವಾಗಿ ಆಲೋಚಿಸುವ ಸಮಾಜವಾದಿಗಳು ಕೂಡ ಅವರ ಈ ತರ್ಕವನ್ನು ಖಂಡಿಸಲಾರರು. ಅವರು ಒಂದು ಸರಿಯಾದ ಯೋಜನೆಯನ್ನು ಮಾಡಿದರು. ಬೋಲ್ಶೇವಿಕರು ಆ ಸ್ವಪ್ನವನ್ನು ಸಾಕಾರಗೊಳಿಸಲು ರಷ್ಯಾದ ಮೇಲೆ ಅಧಿಕಾರವನ್ನು ಸ್ಥಾಪಿಸುವುದರಲ್ಲಿ ಯಶಸ್ವಿಯಾದರು. ಬೋಲ್ಶೇವಿಕ್‍ಗಳ ಕ್ರಾಂತಿಯಿಂದ ಇಲ್ಲಿಯವರೆಗೂ ರಷ್ಯಾದ ಇತಿಹಾಸವನ್ನು ನೋಡಿದರೆ ಅದು ವಿಭಿನ್ನ ಕ್ಷೇತ್ರಗಳಲ್ಲಿ ಸಫಲತೆಯನ್ನು ಗಳಿಸಿದ್ದರೂ ಈ ಪದ್ಧತಿಯು ಅಪೂರ್ಣತೆಯ ದ್ಯೋತಕವಾಗಿದೆ. ಲೋಕತಂತ್ರದ ಮೇಲೆ ಆಕ್ರಮಣ ಸಮಾಜವಾದದ ಮೊದಲ ಆಕ್ರಮಣ ಜನತಂತ್ರದ ಮೇಲೆ. ಕಬ್ಬಿಣದ ಆವರಣದ ಹಿಂದೆ ಇರುವವರನ್ನು ಬಿಟ್ಟು ಸಮಸ್ತ ವಿಶ್ವದ ಸಮಾಜವಾದಿ ವಿಚಾರಕರು ಆತಂಕಿತರಾಗಿದ್ದಾರೆ. ಅವರಿಗೆ ಗಣತಂತ್ರದ ಮೇಲೆ ನಂಬಿಕೆ ಇತ್ತು. ನಿಜ ಹೇಳಬೇಕೆಂದರೆ ಜನತಂತ್ರದವರಿಗೆ ಸಾಧಾರಣ ಜನರ ಬಗ್ಗೆ ಸಹಾನುಭೂತಿ ಇತ್ತು. ಅವರಿಗೆ ಸಮಾನತೆಯ ಸ್ಥಾನವನ್ನು ಕೊಡಿಸುವ ಮಾತನ್ನು ಆಡುತ್ತಿದ್ದರು. ಗಣತಂತ್ರವು ಅವರಿಗೆ ರಾಜಕೀಯ ಸಮಾನತೆಯನ್ನು ಕೊಟ್ಟಿತ್ತು. ಆದರೆ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಯಾಂತ್ರಿಕ ಉತ್ಪಾದನೆಯ ಪದ್ಧತಿಗಳು ಅವರನ್ನು ಆರ್ಥಿಕ ವಿಷಮತೆಗಳ ಹಳ್ಳಕ್ಕೆ ನೂಕಿದವು. ಇದರ ಪರಿಣಾಮವಾಗಿ ಈ ರೀತಿಯ ಪರಿಸ್ಥಿತಿಯಲ್ಲಿ 430 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರಾಜಕೀಯ ಸಮಾನತೆಗೆ ಯಾವುದೇ ಮಹತ್ವವಿರಲಿಲ್ಲ. ಮಾರ್ಕ್ಸ್‌ರವರು ವರ್ಗ ವಿಹೀನ ಸಮಾಜದ ಘೋಷಣೆಯನ್ನು ಮಾಡಿದರು. ಅಂತಿಮ ಅವಧಿಯವರೆಗೂ ಕಾರ್ಮಿಕರ ನಾಯಕತ್ವದ ಮಾತು ಆಡುತ್ತಿದ್ದರು. ಇದರಲ್ಲಿ ಸಂದೇಹಕ್ಕೆ ಅವಕಾಶಗಳಿದ್ದವು. ಜನರಿಗೆ ಒಂದು ಸಂದಿಗ್ಧ ವಸ್ತುವಿನ ಪ್ರಾಪ್ತಿಗಾಗಿ ಅವರಿಗೆ ಮೊದಲಿಂದಲೂ ಸಿಕ್ಕಿದ ರಾಜಕೀಯ ಸಮಾನತೆಯನ್ನು ತ್ಯಾಗ ಮಾಡಲು ಹೇಳಲಾಯಿತು. ಸಮಾಜವಾದ ಅವರಿಗೆ ಮೊದಲಿನಿಂದ ಸಿಕ್ಕಿದ ವಸ್ತುವನ್ನು ಕೂಡ ಕಿತ್ತುಕೊಳ್ಳುತ್ತದೆ ಎನ್ನುವ ಕಲ್ಪನೆಯೂ ಅವರಿಗೆ ಇರಲಿಲ್ಲ. ಅವರಂತೂ ಮೊದಲಿಂದಲೇ ಅಭಾವಗ್ರಸ್ತರಾಗಿದ್ದರು. ಸಮಾಜವಾದದಿಂದ ಅವರಿಗೆ ಏನಾದರೂ ಸಿಗಬೇಕಾಗಿತ್ತು, ಆದರೆ ಅವರಿಂದ ಕಿತ್ತುಕೊಳ್ಳಲಾಯಿತು. ಏನಾದರೂ ಕೊಡುವ ಮೊದಲೇ ಸಮಾಜವಾದ ಅವರಿಂದ ವ್ಯಕ್ತಿಗಳ ಸ್ವಾಧೀನತೆ ಮತ್ತು ರಾಜಕೀಯ ಸಮಾನತೆಯನ್ನು ಅಪಹರಿಸಿತು. 18 ಏಪ್ರಿಲ್ 1919ರಲ್ಲಿ ಪ್ರಿನ್ಸ್ ಕ್ರೊಪಾಟಕಿನ್ರವರು ಪಶ್ಚಿಮದ ಯೂರೋಪಿನ ಕಾರ್ಮಿಕರಿಗೆ ಒಂದು ಪತ್ರದಲ್ಲಿ ಹೀಗೆ ಬರೆದರು. ಒಂದು ಮಾತನ್ನು ಹೇಳುವುದು ನನ್ನ ಕರ್ತವ್ಯವೆಂದು ಅಂದುಕೊಳ್ಳುತ್ತೇನೆ. ನನ್ನ ಅನಿಸಿಕೆಯಲ್ಲಿ ಸದೃಢ ಕೇಂದ್ರಿತ ಶಾಸನ ವ್ಯವಸ್ಥೆಯ ಆಧಾರದ ಮೇಲೆ ದಳೀಯ ನಿರಂಕುಶ ಉಕ್ಕಿನ ಸರಪಳಿಯ ಕೆಳಗೆ ಸಾಮ್ಯವಾದಿ ಗಣತಂತ್ರದ ನಿರ್ಮಾಣ ಮಾಡುವ ಪ್ರಯತ್ನ ಅಸಫಲತೆಯನ್ನೇ ತರುತ್ತದೆ. ರಷ್ಯಾದಿಂದ ನಾನು ಒಂದು ಮಾತನ್ನು ಕಲಿತಿದ್ದೇನೆ. ಅದೇನೆಂದರೆ ಸಾಮ್ಯವಾದದ ಪ್ರವೇಶವನ್ನು ತಡೆಯಲಾಗುವುದಿಲ್ಲ. ಎಲ್ಲಿಯವರೆಗೆ ದಳೀಯ ನಿರಂಕುಶಗಳ ಶಾಸನವಿರುತ್ತದೆಯೋ ಅಲ್ಲಿಯವರೆಗೆ ರೈತರು ಮತ್ತು ಕಾರ್ಮಿಕ ಸಂಘಗಳು ತಮ್ಮ ಪ್ರಮುಖ ಸ್ಥಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರಷ್ಯಾದ ಗಣರಾಜ್ಯವು ಇಂದಿನವರೆಗೆ ಒಂದು ಅಭೇದ್ಯ ನೌಕರಶಾಹಿಗೆ ಜನ್ಮ ಕೊಟ್ಟಿದೆ. ಅದರ ಮುಂದೆ ಫ್ರಾನ್ಸ್‌ನ ನೌಕರಶಾಹಿ ಕೂಡ ಸೋಲುತ್ತದೆ. ಅದರ ಮುಂದೆ ಎಲ್ಲಿಯೋ ಬಿರುಗಾಳಿಗೆ ಸಿಕ್ಕಿ ಕೆಳಗೆ ಬಿದ್ದ ಮರವನ್ನು ಮಾರುವುದಕ್ಕೆ ನಲವತ್ತು ಸರಕಾರಿ ಅಧಿಕಾರಿಗಳ ಅವಶ್ಯಕತೆ ಇರುತ್ತದೆ. ಗುಂಡಿನ ಮೊದಲ ಬೇಟೆ ಜನತಂತ್ರವಾದಿ ಆಗುತ್ತಾನೆ ಯೂರೋಪಿನ ಸಮಾಜವಾದಿಗಳ ಹೊಸ ಪ್ರಯತ್ನಗಳು ಒಂದು ಹೊಸ ಸಿದ್ಧಾಂತಕ್ಕೆ ಜನ್ಮ ಕೊಟ್ಟಿವೆ. ಅದು ಇಂದು ಜನತಾಂತ್ರಿಕ ಸಮಾಜವಾದ ಎಂದು ಕರೆಯಲ್ಪಡುತ್ತದೆ. ಕೋಮುವಾದಿಗಳ ಜೊತೆ ಭಿನ್ನಾಭಿಪ್ರಾಯವಿದ್ದಾಗಲೂ ಅವರು. ಸಮಾಜವಾದದ ಜನ್ಮ ಜನತಾಂತ್ರಿಕ ವಿಧಾನದಿಂದ ಆಗಬೇಕು ಎಂದು ಹೇಳುತ್ತಿದ್ದರು. ಅವರು ಒಂದೇ ಬಾರಿಗೆ ಸಮಾಜವಾದ ಮತ್ತು ಜನತಂತ್ರದ ಆರಾಧನೆಯನ್ನು ಮಾಡಬೇಕೆಂದಿದ್ದರು. ಆದರೆ ಸಮಾಜವಾದ ಮತ್ತು ಜನತಂತ್ರ ಒಂದರ ಜೊತೆ ರಾಷ್ಟ್ರ ಚಿಂತನ 431 ಒಂದು ಇರಬಲ್ಲವೇ ಎನ್ನುವುದೇ ಮೂಲ ಪ್ರಶ್ನೆ. ಸಿದ್ಧಾಂತವಾದಿಗಳು ಈ ಪ್ರಶ್ನೆ ಉತ್ಪಾದನೆಯ ಎಲ್ಲಾ ಮೂಲಗಳು ರಾಜ್ಯದ ಅಧೀನವಿರಬೇಕು ಎಂದು ಸಮಾಜವಾದ ಹಾಕಿಕೊಡುತ್ತದೆ. ಆದ್ದರಿಂದ ಸಮಾಜದ ರಾಜನೈತಿಕ ಬೌದ್ಧಿಕ ಮತ್ತು ಸಾಮಾಜಿಕ ಜೀವನ ಅದರ ಉತ್ಪಾದನೆಯ ಮೂಲಗಳಿಂದಲೇ ಒಂದು ರೂಪಕ್ಕೆ ಬರುತ್ತವೆ ಎಂದು ಸಮಾಜವಾದಿಗಳು ನಂಬಿದ್ದಾರೆ. ಆದ್ದರಿಂದ ಸಮಾಜವಾದಿ ವ್ಯವಸ್ಥೆಯಲ್ಲಿ ರಾಜ್ಯದ ಆರ್ಥಿಕ ಕ್ಷೇತ್ರದ ಜೊತೆ ರಾಜನೈತಿಕ ಮತ್ತು ಅನ್ಯಕ್ಷೇತ್ರಗಳದೂ ಪೂರ್ಣ ಅಧಿಕಾರವಿರುವುದು ಅವಶ್ಯಕವಾಗಿದೆ. ಇದರಿಂದ ಆಡಳಿತದಲ್ಲಿರುವವರ ವಿರುದ್ಧ ಲೋಕತಾಂತ್ರಿಕ ಅಧಿಕಾರಗಳನ್ನು ಪ್ರಭಾವ ಪೂರ್ಣವಾಗಿ ಉಪಯೋಗಿಸುವುದು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಸಮಾಜವಾದಿಯ ಬಂದೂಕಿನ ಮೊದಲನೆಯ ಬೇಟೆ ಖಂಡಿತವಾಗಿ ಯಾರೋ ಒಬ್ಬ ಜನತಂತ್ರವಾದಿಯೇ ಆಗಿರುತ್ತಾನೆ. ಸಮಾಜವಾದ ಮತ್ತು ಲೋಕತಂತ್ರ ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಸಿಂಹ ಮತ್ತು ಮೇಕೆ ಒಟ್ಟಿಗೆ ಒಂದೇ ಕೆರೆಯ ದಡದಲ್ಲಿ ನೀರು ಕುಡಿಯುವುದು ಅಸಂಭವ. ಒಟ್ಟಿಗೆ ಇರುವುದು ಅಸಂಭವ ಇಂದು ಸಮಾಜವಾದಿ ಗುಂಪಿನಲ್ಲಿ ಹರಡಿರುವ ಭ್ರಮಾಪೂರ್ಣ ಸ್ಥಿತಿಗೆ ಆ ಸಿದ್ಧಾಂತವೇ ಬಹಳ ಅಂಶಗಳ ಮಟ್ಟಿಗೆ ಜವಾಬ್ದಾರಿಯಾಗಿದೆ. ಇವೆರೆಡು ತತ್ವಗಳು ಒಟ್ಟಿಗೆ ಇರುವುದು ಸಂಭವ ಎಂದು ಯಾರಿಂದಲೂ ಸಿದ್ಧಪಡಿಸಲು ಆಗಲಿಲ್ಲ. ಅದರಲ್ಲೂ ನಾವು ಲೋಕತಂತ್ರದ ವಿಭಿನ್ನ ಸ್ವರೂಪಗಳು ಮತ್ತು ಮರ್ಯಾದೆಗಳ ಜೊತೆಗೆ ಬೇರೆ ಬೇರೆ ದೇಶಗಳ ಸಾಮಾಜಿಕ, ಸಾಂಸ್ಕೃತಿಕ ರೂಪಗಳ ಮತ್ತು ಬೇರೆ-ಬೇರೆ ಪ್ರಕಾರಗಳ ಮತ್ತು ಭೌತಿಕ ಮತ್ತು ಆರ್ಥಿಕ ವಿಕಾಸಗಳನ್ನು ವಿಚಾರ ಮಾಡಿದಾಗ ಈ ಭ್ರಮೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಭ್ರಮೆಯ ಜಟಿಲತೆಯ ಕಾರಣ ಈ ಸಮಸ್ಯೆಗೆ ಸಮಾಧಾನ ಸಿಗುವುದು ಅಸಂಭವ ಎನಿಸುತ್ತದೆ. ಸಮಾಜವಾದಿಗಳಲ್ಲದ ದೇಶಗಳೂ ಕೂಡ ಸಮಾಜವಾದಿಗಳ ಈ ಭ್ರಮೆಯನ್ನು ಹೆಚ್ಚಿಸುವ ಕೆಲಸವನ್ನೇ ಮಾಡುವುದು. ಕಳೆದ ಕೆಲವು ವರ್ಷಗಳಲ್ಲಿ ಅವರು ತಮ್ಮ ಉದಾರ ನೀತಿಗಳು ಮತ್ತು ಆರ್ಥಿಕ ಚಿಂತನಗಳ ಕಾರಣ ಸಮಾಜವಾದಿಗಳನ್ನು ಅಚ್ಚರಿಗೊಳಿಸಿದರು. ಇಂದು ಅಮೇರಿಕ ಅಥವಾ ಇಂಗ್ಲೆಂಡ್‍ನ ಸರ್ವಸಾಧಾರಣ ವ್ಯಕ್ತಿ, ರೈತ ಅಥವಾ ಕಾರ್ಮಿಕ ನೂರು ವರ್ಷಗಳ ಹಿಂದಿನ ಹೀನ ಪರಿಸ್ಥಿತಿಯಲ್ಲಿಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಸ್ಥಾನದಲ್ಲಿ ಕಲ್ಯಾಣಕಾರಿ ರಾಜ್ಯದ ಆದರ್ಶಗಳು ಸ್ಥಾಪನೆ ಆಗುತ್ತವೆ. ಬಂಡವಾಳಶಾಹಿ ಮತ್ತು ಸಮಾಜವಾದಿ ಎರಡೂ ಪ್ರಕಾರದ ದೇಶಗಳ ಬಗ್ಗೆ ಮಾರ್ಕ್ಸ್‌ನ ಭವಿಷ್ಯವಾಣಿ ಅಸತ್ಯವಾಗಿದೆ. 432 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನಿನ್ನೆಯ ಬಂಡವಾಳಶಾಹಿ ದೇಶಗಳು ತಮ್ಮ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಂಡು ಭೌತಿಕ ವಿಕಾಸದಲ್ಲಿ ಸಮಾಜವಾದಿಗಳನ್ನು ಎದುರಿಸಲು ಸಿದ್ಧರಿದ್ದಾರೆ. ಆದರೆ ಸಮಾಜವಾದ ಇಂದಿಗೂ ಅದು ಎಲ್ಲಿಂದ ಯಾತ್ರೆ ಪ್ರಾರಂಭಮಾಡಿತೋ ಅಲ್ಲೇ ಇದೆ. ಆದರೆ ಬಂಡವಾಳಶಾಹಿ ದೇಶಗಳಲ್ಲಿ ಪ್ರಜಾತಂತ್ರವಿರುವ ಕಾರಣ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಹೊಸ ವಿಷಯಗಳನ್ನು ಸ್ವೀಕರಿಸಲು ಅವಕಾಶವಿರುತ್ತದೆ. ಆದರೆ ಸಮಾಜವಾದಿಗಳಿಗೆ ಸಮಸ್ಯೆಯ ಬಗ್ಗೆಯ ದೃಷ್ಟಿಕೋನದಲ್ಲಿ ಈ ರೀತಿಯ ಅವಕಾಶವಿಲ್ಲ. ಈ ರೀತಿಯ ವಿಚಾರಮಾಡುವವರು ಹೊಸ ವಿಚಾರಗಳಿಂದ ದೂರವಿರಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ಕೋಮುವಾದಿಗಳ ಶಬ್ದಕೋಶದಲ್ಲಿ ಈ ರೀತಿಯ ವಿಚಾರಕರಿಗೆ ಅನೇಕ ಪ್ರಕಾರಗಳಾದ ಬೈಗುಳಗಳೂ ಇವೆ. ಆದರೆ ವಿಚಾರಶೀಲ ಮನುಷ್ಯ ವಿಚಾರರಹಿತನಾಗಿರಲು ಸಾಧ್ಯವಿಲ್ಲ. ಅವರ ವಿಚಾರ ತರಂಗಗಳಿಗೆ ಯೋಗ್ಯ ದಿಶೆಯನ್ನು ಕೊಡುವ ಯೋಜನಾ ವ್ಯವಸ್ಥೆಯನ್ನು ಮಾಡದಿದ್ದರೆ ಅದರ ಪರಿಣಾಮವಾಗಿ ಭ್ರಮೆಯು ಮತ್ತಷ್ಟು ಹೆಚ್ಚುತ್ತದೆ. ಇದು ಎಂತಹ ವಿರೋಧ? ಇಂದು ಭಾರತದಲ್ಲಿ ಸಮಾಜವಾದದ ಬಗ್ಗೆ ಎದ್ದಿರುವ ವಾದ ವಿವಾದ ಪ್ರಮುಖವಾಗಿ ರಾಜಕೀಯ ಉದ್ಯೋಗಗಳ ವಿಸ್ತಾರದ ಅನಿವಾರ್ಯತೆ ಅಥವಾ ವ್ಯರ್ಥತೆಯ ಮೇಲೆ ಕೇಂದ್ರೀಕೃತವಾಗಿದೆ. ಸ್ವತಂತ್ರ ಉದ್ಯೋಗಗಳಿಂದ ಪುರಸ್ಕೃತರಾದವರು ಮತ್ತು ಸಮಾಜವಾದಿ ವಿಚಾರಕರು ಒಬ್ಬರ ವಿರುದ್ಧ ಒಬ್ಬರು ನಿಂತಿದ್ದರು. ಆದರೆ ಇನ್ನೊಂದು ಸತ್ಯವೆಂದರೆ ಒಬ್ಬರು ಇನ್ನೊಬ್ಬರಿಗೆ ನ್ಯಾಯಸಂಗತವಾದ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಿರುತ್ತಾರೆ. ಸಾಧಾರಣ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಒಪ್ಪಿಸಿಕೊಡುವ ಉದ್ಯೋಗಗಳನ್ನು ಕೂಡ ಈ ವಿಕಸಿತ ಆರ್ಥಿಕ ವ್ಯವಸ್ಥೆಯ ಕಾರಣದಿಂದಾಗಿ ಸರಕಾರದ ಆಡಳಿತಕ್ಕೆ ತೆಗೆದುಕೊಳ್ಳಬೇಕಾಗಿದೆ. ನಿಯೋಜಿತ ಅರ್ಥವ್ಯವಸ್ಥೆಯಲ್ಲಿ ಶತಮಾನಗಳಿಂದ ಪಶ್ಚಿಮ ದೇಶಗಳಲ್ಲಿ ಕೊಡುವ ರೀತಿಯಲ್ಲಿ ಕೆಲವು ವಿಶೇಷ ಸವಲತ್ತುಗಳನ್ನು ಕೊಡಲಾಗುತ್ತದೆ. ನಿಜ ಹೇಳಬೇಕೆಂದರೆ ಈ ಸ್ಪರ್ಧೆಯನ್ನು ಸರಿಯಾಗಿ ನಿಯಂತ್ರಿಸಿದರೆ ಎರಡರಲ್ಲೂ ಸರಿಯಾದ ಸಮತೋಲನವನ್ನು ಸ್ಥಾಪಿಸಲು ಸಹಾಯಕವಾಗುತ್ತದೆ. ಸಮಸ್ಯೆಗಳಿಗೆ ಸಮಾಧಾನ ಹುಡುಕುವಾಗ ಸಮಾಜವಾದಿ, ಸ್ವತಂತ್ರವಾದಿಗಳ ಗುಂಪಿನಲ್ಲಿ ಮತ್ತು ಸ್ವತಂತ್ರವಾದಿ ಸಮಾಜವಾದಿಗಳ ಗುಂಪಿನಲ್ಲಿ ಬಂದು ಕೂಡುತ್ತಾರೆ. ಸಾಧ್ಯಕ್ಕೆ ಅನುಗುಣವಾಗಿ ಸಾಧನವಿರಲಿ ನಾವು ಸಮಾಜವಾದವನ್ನು ಸ್ವೀಕಾರ ಮಾಡುತ್ತೇವೆಯೋ, ಇಲ್ಲವೇ ರಾಷ್ಟ್ರ ಚಿಂತನ 433 ಉದ್ಯೋಗಗಳ ಸ್ವತಂತ್ರತೆಯನ್ನೋ, ಅದು ಮುಖ್ಯವಾಗಿರುವುದಿಲ್ಲ. ಸಮಾಜವಾದ ಮತ್ತು ಜನತಂತ್ರ ಎರಡರ ತುಲನೆಯನ್ನು ಮಾಡಬೇಕಾಗಿಲ್ಲ. ನಮ್ಮ ಮುಂದೆ ಇದು ಮುಖ್ಯ ಪ್ರಶ್ನೆಯಲ್ಲ. ಇದು ಸಾಧನ ಮಾತ್ರ: ಸಾಧ್ಯವಲ್ಲ. ನಾವು ಮೊದಲು ಗಮ್ಯವನ್ನು ನಿರ್ಧಾರ ಮಾಡಿ ನಂತರ ಮಾರ್ಗವನ್ನು ನಿರ್ಧಾರ ಮಾಡಬೇಕು. ಎಲ್ಲ ವಿಚಾರಶೀಲ ಮನುಷ್ಯನು ಮಾನವ ಕಲ್ಯಾಣವನ್ನೇ ತಮ್ಮ ಗುರಿಯೆಂದು ಒಪ್ಪಿಕೊಂಡಿದ್ದಾನೆ. ದುರ್ಭಾಗ್ಯವೆಂದರೆ ಇಲ್ಲಿಯವರೆಗೂ ಮನುಷ್ಯ ಮನುಷ್ಯನನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅಸಮರ್ಥನಾಗಿದ್ದಾನೆ, ಮಾನವನನ್ನು ಸುಖಿ ಮತ್ತು ಸಂಪನ್ನ ಮಾಡುವ ಪ್ರಯತ್ನದಲ್ಲಿ ಸಮಾಜವಾದ ಮತ್ತು ಲೋಕತಂತ್ರ ಎರಡು ಕೂಡ ಅದಕ್ಕೆ ಭೀಭತ್ಸವಾದ ರೂಪವನ್ನು ನೀಡಿದ್ದಾರೆ. ಅವುಗಳು ಅದರ ಸಂಪೂರ್ಣ ವಿಶೇಷತೆಗಳನ್ನು ಕಿತ್ತುಕೊಂಡಿವೆ. ರೇನೆ ಹುಲಪ್‍ರವರು `ದಿ ಹ್ಯುಮನೈಜೇಷನ್ ಇನ್ ಮಾಡರ್ನ್ ಸೊಸೈಟಿ' ಎನ್ನುವ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾರೆ: ``ಜನತಂತ್ರವು ನಮಗೆ ಮತದಾನದ ಅಧಿಕಾರ, ನ್ಯಾಯ ಪಡೆಯುವ ಅಧಿಕಾರ, ವಿಚಾರ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸ್ವಯಂ ಆರೋಗ್ಯದ ಸ್ವಾತಂತ್ರ್ಯ ಮತ್ತು ಭಾಷಣ ಸ್ವಾತಂತ್ರ್ಯ ಕೊಟ್ಟಿದ್ದರೂ ಅದರ ಜೊತೆ ಆರ್ಥಿಕ ಮಾನವನ ಕಲ್ಪನೆಯನ್ನೂ ಕೊಟ್ಟಿದೆ." ಬಂಡವಾಳಶಾಹಿಗಳ ಕಲ್ಪನೆಯಲ್ಲಿ ಅತ್ಯಧಿಕ ಉತ್ಪಾದನೆಯ ಕ್ಷಮತೆಯನ್ನು ಹೆಚ್ಚಿಸುವ ಕಡೆ ಹೆಚ್ಚು ಗಮನಕೊಡಲಾಯಿತು. ಆದರೆ ಒಳ್ಳೆಯ ಜೀವನವನ್ನು ನಡೆಸುವ ಕ್ಷಮತೆಯನ್ನು ಹೆಚ್ಚಿಸುವ ಕಡೆ ಸಮಾಜವಾದ ಅಥವಾ ಸಾಮ್ಯವಾದ ಸಾಮೂಹಿಕ ಸುರಕ್ಷೆ ಮತ್ತು ಕಾರ್ಮಿಕ ವರ್ಗದ ಹಿತಗಳ ಸಂರಕ್ಷಣೆಯ ಘೋಷಣೆ ಕೂಗಲಾಗಿತ್ತು. ಆದರೆ ಅದರ ಜೊತೆ ಜೊತೆಗೆ ಅದು ಒಂದು ಯುದ್ಧ ಪಿಪಾಸುವಿಗೆ ಜನ್ಮಕೊಟ್ಟಿತು. ಈ ಯುದ್ಧಲೋಲುಪ ಮಾನವ ಸಮಾಜವಾದಿ ರಾಜ್ಯದ ಕೊಡುಗೆ ಬಗ್ಗೆ ಅವನಿಗೆ ಯೋಚನೆ ಮಾಡುವ ಸ್ವಾತಂತ್ರ್ಯವೂ ಇಲ್ಲ. ಸ್ವತಃ ನಿರ್ಣಯವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವು ಇಲ್ಲ. ಈ ವ್ಯವಸ್ಥೆಯಲ್ಲಿ ಮಾನವನ ಜೀವನ ಪಶುವಿನ ಜೀವನಕ್ಕಿಂತ ಹೆಚ್ಚಿನದಲ್ಲ. ಯಂತ್ರದ ಗುಲಾಮತನದ ಅಂತ್ಯದ ಅವಶ್ಯಕತೆ ಸಮಾಜವಾದ ಮತ್ತು ಲೋಕತಂತ್ರ ಎರಡೂ ಕೂಡ ಮಾನವನ ಭೌತಿಕ ಸ್ವರೂಪ ಮತ್ತು ಅವಶ್ಯಕತೆಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಿತು. ಮತ್ತು ಎರಡರಲ್ಲೂ ಆಧುನಿಕ ವಿಜ್ಞಾನ ಮತ್ತು ಯಾಂತ್ರಿಕ ಉನ್ನತಿಯ ಮೇಲೆ ಅತ್ಯಧಿಕ ಶ್ರದ್ಧೆ ಇತ್ತು. ಎರಡೂ ಕೂಡ ಈ ಆವಿಷ್ಕಾರಗಳಿಗೆ ಬಲಿಯಾದವು. ಇದರ ಪರಿಣಾಮವಾಗಿ ಉತ್ಪಾದನೆಯ ಸಾಧನಗಳ ನಿರ್ಧಾರ ಮಾನವನ ಕಲ್ಯಾಣ ಮತ್ತು ಆವಶ್ಯಕತೆಗಳಿಗೆ 434 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅನುಸಾರವಾಗಿ ಅಲ್ಲದೇ ಯಂತ್ರಗಳಿಗೆ ಅನುಸಾರವಾಗಿ ನಿರ್ಧಾರ ಮಾಡಬೇಕಾಗುತ್ತದೆ. ಈ ಉತ್ಪಾದನಾ ಕೇಂದ್ರಿತ ವ್ಯವಸ್ಥೆಯಲ್ಲಿ ನಿಯಂತ್ರಣ ವ್ಯಕ್ತಿಯಿಂದಾಗಲಿ ಅಥವಾ ರಾಜ್ಯದಿಂದಾಗಲಿ ಮಾನವನ ಸ್ವತಂತ್ರ ವ್ಯಕ್ತಿತ್ವದ ಲೋಪವಾಗುತ್ತದೆ. ನಿಯಂತ್ರಣಕ್ಕಿಂತ ಹೆಚ್ಚಿನ ಮಹತ್ವ ಅದಕ್ಕಿಲ್ಲ. ನಾವು ಮನುಷ್ಯನ ಮನುಷ್ಯತ್ವದ ರಕ್ಷಣೆ ಮಾಡಬೇಕೆಂದರೆ ನಾವು ಅವನನ್ನು ಯಂತ್ರದ ಗುಲಾಮತನದಿಂದ ಮುಕ್ತಗೊಳಿಸಬೇಕು. ಇಂದು ಮನುಷ್ಯ ಯಂತ್ರವನ್ನು ಆಳುತ್ತಿಲ್ಲ, ಬದಲಾಗಿ ಯಂತ್ರ ಮನುಷ್ಯನನ್ನು ಆಳುತ್ತಿದೆ. ಈ ಯಂತ್ರಪ್ರೇಮದ ಮೂಲದಲ್ಲಿ ಮನುಷ್ಯನ ಭೌತಿಕ ಅವಶ್ಯಕತೆಗಳನ್ನು ಹೆಚ್ಚು ಹೆಚ್ಚು ತೃಪ್ತಿಪಡಿಸುವ ಭಾವನೆ ಇದೆ. ಕೇವಲ ಭೌತಿಕ ಸಮೃದ್ಧಿಯಿಂದ ಮಾತ್ರ ಮನುಷ್ಯ ಸುಖವಾಗಿರಲಾರನೆಂದು ನಾವು ಮರೆಯಬಾರದು. ಭೌತಿಕ ಸಾಧನೆಗಳಿಂದ ಸಂಪನ್ನವಾಗಿರುವ ದೇಶದ ಸಮಸ್ಯೆಗಳು ನಮ್ಮ ಮುಂದಿದೆ. ನಾವು ಸಂಪೂರ್ಣ ಮಾನವ ಜೀವನದ ಬಗ್ಗೆ ವಿಚಾರ ಮಾಡಿ, ಉತ್ಪಾದನೆ, ವಿತರಣೆ ಮತ್ತು ಉಪಭೋಗಗಳನ್ನು ಒಂದು ಭಾಗವನ್ನಾಗಿ ಮಾಡಿ ನಡೆಯಬೇಕು. ಮನುಷ್ಯ ಉತ್ಪಾದನೆಯನ್ನು ನಿರ್ಧಾರ ಮಾಡಬೇಕು. ಮನುಷ್ಯನಿಗೆ ಕೇವಲ ಭೌತಿಕ ಅವಶ್ಯಕತೆಗಳು ಇವೆ. ಮಾನವ ಜೀವನದ ಆಧ್ಯಾತ್ಮಿಕ ಭಾಗವನ್ನೂ ಉಪೇಕ್ಷಿಸುವ ಜೀವನ ಪದ್ಧತಿ ಎಂದಿಗೂ ಪೂರ್ಣವಾಗುವುದಿಲ್ಲ. ಭೌತಿಕ ಉನ್ನತಿಯ ಜೊತೆ ಜೊತೆಗೆ ಆಧ್ಯಾತ್ಮಿಕ ಪ್ರಗತಿಯ ಕಲ್ಪನೆಯೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಮಾನವ ಜೀವನದ ಗೌರವವನ್ನು ಸುರಕ್ಷಿತವಾಗಿಟ್ಟುಕೊಳ್ಳುತ್ತಲೇ ಸಮಾಜದ ಆವಶ್ಯಕತೆಗಳನ್ನು ಪೂರ್ತಿಗೊಳಿಸುವ ಜವಾಬ್ದಾರಿಯನ್ನೂ ನಾವು ತೆಗೆದುಕೊಳ್ಳಬೇಕಾಗುತ್ತದೆ. ಸಮಾಜವಾದ ಮತ್ತು ಲೋಕತಂತ್ರ ಎರಡೂ ಕೂಡ ಏಕಾಂಗಿ ಮಾರ್ಗವನ್ನು ಸ್ವೀಕಾರ ಮಾಡಿದವು ಮತ್ತು ಮನುಷ್ಯನ ಎರಡು ವಿಭಿನ್ನ ಪ್ರವೃತ್ತಿಗಳನ್ನು ಒಟ್ಟುಗೊಳಿಸಿ ಅವನ ವಿಕಾಸವನ್ನು ಮಾಡುವ ಬದಲು ಒಂದು ಭಾವಪೂರ್ಣ ಸ್ಥಿತಿಯನ್ನು ಸೃಷ್ಟಿಸಿ ವಿಭಿನ್ನ ಶಕ್ತಿಗಳಿಗೆ ಒಂದು ಯುದ್ಧ ಸ್ಥಳವನ್ನು ಸಿದ್ಧಗೊಳಿಸಿದವು. ತರುಣೋಪಾಯ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥಗಳ ಆಧಾರಿತ ಹಿಂದೂ ಜೀವನಾದರ್ಶ ನಮ್ಮನ್ನು ಈ ಸಂಕಟದಿಂದ ಮುಕ್ತಗೊಳಿಸುತ್ತದೆ. ವಿಶ್ವದ ಸಮಸ್ಯೆಗಳ ಉತ್ತರ ಸಮಾಜದವಾದವಲ್ಲ, ಹಿಂದುತ್ವವಾದ. ಹಿಂದೂವಾದದಲ್ಲಿ ಜೀವನದ ವಿಚಾರ ಮಾಡುವಾಗ ಅದನ್ನು ಭಾಗಗಳನ್ನಾಗಿ ವಿಂಗಡಿಸದೆ ಸಂಪೂರ್ಣ ಜೀವನವನ್ನು ಒಂದು ಭಾಗವನ್ನಾಗಿ ಮಾಡಿ ವಿಚಾರಣೆ ಮಾಡುತ್ತದೆ. ಹಿಂದೂ ಜೀವನಾದರ್ಶಗಳ ಬಗ್ಗೆ ವಿಚಾರ ಮಾಡುವಾಗ ಕೆಲವು ನಿಷ್ಪ್ರಾಣ ಕರ್ಮಕಾಂಡಗಳ ರಾಷ್ಟ್ರ ಚಿಂತನ 435 ಬಗ್ಗೆ ಅಥವಾ ಹಿಂದೂ ಸಮಾಜವಾದದಲ್ಲಿರುವ ಅನೇಕ ಅಹಿಂದೂ ವ್ಯವಹಾರಗಳ ಬಗ್ಗೆ ಮಾತನಾಡಬಾರದು. ವಿಜ್ಞಾನ ಮತ್ತು ಯಂತ್ರಗಳು ಇವುಗಳ ಉಪಯೋಗ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಪದ್ಧತಿಗೆ ಅನುಗುಣವಾಗಿರಬೇಕು. ಮಹಾತ್ಮ ಗಾಂಧೀಯವರ ವಿಚಾರಗಳನ್ನು ಅನುಸರಿಸಿ ವಿನೋಬಾ, ಜಯಪ್ರಕಾಶ ನಾರಾಯಣ್ ಮತ್ತು ರಾಜಗೋಪಾಲಚಾರಿಯವರು ``ಟ್ರಸ್ಟಿಶಿಪ್" ವಿಚಾರವನ್ನು ಮಾಡಿದರು. ಇದು ಹಿಂದೂ ಜೀವನ ಪದ್ಧತಿಗೆ ಅನುಗುಣವಾಗಿತ್ತು. ಈ ವಿಚಾರ ಸಮಾಜವಾದಿ ಮತ್ತು ಸಮಾಜವಾದಿಯಲ್ಲದವರು ಇಬ್ಬರಿಗೂ ಸಮಾನ ಉಪಯೋಗಿಯಾಗಿದೆ. ನಾವು ಪಾಶ್ಚಾತ್ಯ ಯಂತ್ರ ಪ್ರಣಾಲಿಯ ಅಂಧಾನುಕರಣೆ ಮಾಡುತ್ತಲೇ ಇದ್ದರೆ ಸರ್ವೋದಯ ಅಥವಾ ಸಮಾಜವಾದ ನಮ್ಮ ಸಂಸ್ಕೃತಿಯನ್ನೂ ರಕ್ಷಿಸಲಾರವು ಮತ್ತು ನಮ್ಮ ಮುಂದೆ ಇರುವ ಸಮಸ್ಯೆಗಳಿಗೆ ಸಮಾಧಾನವನ್ನು ಕೊಡಲಾರವು. ನಾವು ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸೈದ್ಧಾಂತಿಕ ಎಲ್ಲ ಭಾಗಗಳಲ್ಲೂ ಯಂತ್ರವಾದವನ್ನು ಎದುರಿಸಬೇಕಾಗುತ್ತದೆ. ನಾವು ಧರ್ಮರಾಜ್ಯ, ಲೋಕತಂತ್ರ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ವಿಕೇಂದ್ರೀಕರಣವನ್ನು ನಮ್ಮ ಲಕ್ಷ್ಯವನ್ನಾಗಿ ಮಾಡಿಕೊಳ್ಳಬೇಕು. ಈ ಎಲ್ಲದರ ಸಮ್ಮಿಶ್ರಣವೇ ನಮ್ಮನ್ನು ಸಮಸ್ತ ತೊಂದರೆಗಳಿಂದ ಮುಕ್ತಿಗೊಳಿಸಿ ಸುರಕ್ಷತೆಯನ್ನು ಕೊಡುತ್ತದೆ. ಇದನ್ನು ನಾವು ಹಿಂದುತ್ವವಾದ ಮಾನವತವಾದ ಅಥವಾ ಅನ್ಯವಾದ ಯಾವ ಹೆಸರಿಂದ ಬೇಕಾದರೂ ಕರೆಯಬಹುದು. ಆದರೆ ಇದೊಂದು ಮಾರ್ಗ ಭಾರತದ ಆತ್ಮಕ್ಕೆ ಅನುಗುಣವಾಗಿ ಜನತೆಯಲ್ಲಿ ಉತ್ಸಾಹವನ್ನು ಸಂಚರಿಸುವಂತೆ ಮಾಡುತ್ತದೆ. ಅನ್ಯಮಾರ್ಗಗಳು ಮತ್ತು ವಿಚಾರಗಳು ಭಾರತದ ಪ್ರಕೃತಿಗೆ ಅನುಸಾರವಾಗಿ ಇರುವುದಿಲ್ಲ. ಅವು ಈ ದೇಶವನ್ನು ವಿಕಾಸದ ಸ್ಥಾನದ ಬದಲಾಗಿ ವಿಕೃತ ಮತ್ತು ವಿನಾಶದ ಕಡೆಗೆ ತೆಗೆದುಕೊಂಡು ಹೋಗುತ್ತವೆ. ಭ್ರಾಂತಿಯಲ್ಲಿರುವ ವಿಶ್ವಕ್ಕೆ ಇದು ಮಾರ್ಗದರ್ಶನದ ಕೆಲಸವನ್ನು ಮಾಡುತ್ತದೆ. ಪ್ರಜಾಪ್ರಭುತ್ವದ ಭಾರತೀಕರಣ ವರ್ತಮಾನ ಯುಗ ಜನತಂತ್ರದ ಯುಗ. ಪ್ರತಿಯೊಬ್ಬ ಶಾಸಕ, ಅವನು ಯಾವ ರೀತಿಯೇ ಅಧಿಕಾರಕ್ಕೆ ಬಂದಿರಲಿ ಜನತೆಯ ಹೆಸರಿನಲ್ಲಿಯೇ ತನ್ನ ಶಾಸನವನ್ನು ಮಾಡುತ್ತಾನೆ. ರಾಜತಂತ್ರವಿರುವ ದೇಶಗಳಲ್ಲಿಯೂ ರಾಜನನ್ನು ಭಗವಂತನ ಅವತಾರ ಎಂದು ಭಾವಿಸದೇ ಜನತೆಯ ಸಾಮೂಹಿಕ ಅಧಿಕಾರದ ಚಿನ್ಹೆ ಎಂದುಕೊಳ್ಳುತ್ತಾರೆ. ರಾಜನ ಅಧಿಕಾರ ಭಗವಂತನ ಕೊಡುಗೆಯಲ್ಲ, ಜನತೆಯಿಂದ ಬಂದದ್ದು ಮತ್ತು ಜನತೆಯ ಉಪಯೋಗ ಜನರಿಗಾಗಿಯೇ ಮಾಡಬೇಕು ಎಂದು ನಂಬಲಾಗುತ್ತದೆ. ರಷ್ಯಾ ಮುಂತಾದ ದೇಶಗಳ ನಾಯಕರೂ 436 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕೂಡ ತಮ್ಮನ್ನು ತಾವು ಜನತಂತ್ರದ ಪಾಲಕರೆಂದು ಘೋಷಿಸುತ್ತಾರೆ. ಮತ್ತು ತಮ್ಮ ಶಾಸನದಲ್ಲಿ ಯಾವುದಾದರೂ ಒಂದು ರೀತಿ ಜನತೆಯ ಅನುಕೂಲತೆಯನ್ನು ವ್ಯಕ್ತಪಡಿಸುತ್ತಾನೆ. ಜನತಂತ್ರವು ನಮಗೆ ಹೊಸದೇನಲ್ಲ ಭಾರತವು ತನಗಾಗಿ ಜನತಂತ್ರದ ಶಾಸನವನ್ನು ಆಯ್ಕೆಮಾಡಿಕೊಂಡಿದೆ. ನಾವು ಸಂವಿಧಾನದಲ್ಲಿ ಇದಕ್ಕೆ ಕೊಟ್ಟಿರುವ ವ್ಯಾಖ್ಯೆ ಹೊಸದಾಗಿದ್ದರೂ ಜನತಂತ್ರವು ನಮಗೆ ಹೊಸದೇನಲ್ಲ. ವೈದಿಕ ಕಾಲದ `ಸಭೆ' ಮತ್ತು `ಸಮಿತಿ'ಗಳ ರಚನೆ ಜನತಂತ್ರದ ಆಧಾರದ ಮೇಲೆಯೇ ಆಗುತ್ತಿತ್ತು ಮತ್ತು ಮಧ್ಯಕಾಲದ ಅನೇಕ ಗಣರಾಜ್ಯಗಳು ಪೂರ್ತಿಯಾಗಿ ಜನತಂತ್ರೀಯವಾಗಿತ್ತು. ರಾಜತಂತ್ರೀಯ ವ್ಯವಸ್ಥೆಯಲ್ಲೂ ನಾವು ರಾಜನಿಗೆ ಗೌರವವನ್ನು ಕೊಟ್ಟು ಪ್ರಜಾನುರಾಗಿ ಮಾತ್ರವಲ್ಲದೇ ಪ್ರಜಾನುಗಾಮಿಯಾಗಿಯೂ ನಂಬಿದ್ದೆವು. ಕೆಲವು ರಾಜರು ಇದನ್ನು ಅತಿಕ್ರಮಣ ಮಾಡಿದ ಉದಾಹರಣೆಗಳು ನಮಗೆ ಸಿಗುತ್ತವೆ. ಆದರೆ ಅವರ ವಿರುದ್ಧ ಜನರ ವಿದ್ರೋಹವಿತ್ತು. ಮತ್ತು ಅವನನ್ನು ಆದರ್ಶ ರಾಜನೆಂಬ ಪಟ್ಟಿಯಿಂದ ತೆಗೆದುಹಾಕಿ ಹೀನ ಗುಂಪಿನಲ್ಲಿ ಸೇರಿಸುವ ಪ್ರಯತ್ನದಲ್ಲಿ ನಮಗೆ ಜನತಂತ್ರೀಯ ಭಾವನೆ ಕಾಣಸಿಗುತ್ತದೆ. ಜನತೆಯಲ್ಲಿ ಶಕ್ತಿ ಮತ್ತು ಸಂಘಟನೆಯ ಅಭಾವದಿಂದಾಗಿ ಕೆಲವು ದಿನಗಳ ಮಟ್ಟಿಗೆ ಅವರು ನಿರಂಕುಶ ಪಾಲನೆಯನ್ನು ತಡೆದುಕೊಂಡಿದ್ದರೂ ಅವರು ಎಂದಿಗೂ ಅದನ್ನು ಹೊಗಳಲಿಲ್ಲ. ಇಂದು ನಾವು ಜನತಂತ್ರೀಯ ಶಾಸನವನ್ನು ಒಪ್ಪಿದಾಗ ಅದರಲ್ಲಿ ನಮಗೆ ನಮ್ಮ ಆತ್ಮದ ಪೂರ್ಣ ಅಭಿವ್ಯಕ್ತಿ ಆಗಬೇಕು. ಅದರಲ್ಲಿಯೇ ಜನ-ತೃಪ್ತಿ ಮತ್ತು ಜನ-ಕಲ್ಯಾಣವಾಗುತ್ತದೆ. ಆದರೆ ಈ ಅಭೀಷ್ಟದ ಸಿದ್ಧಿಗಾಗಿ ನಾವು ಬಹಳಷ್ಟು ಮಾಡಬೇಕಾಗಿದೆ. ಈಗಲೂ ನಾವು ನಮ್ಮ ಗುರಿಯಿಂದ ಬಹಳ ದೂರದಲ್ಲದ್ದೇವೆ. ಹಿಂದಿನ ಎರಡು ದಶಕಗಳಲ್ಲಿ ಜನತಂತ್ರಕ್ಕೆ ಸರಿಯಾದ ಪೋಷಣೆ ಸಿಗಲಿಲ್ಲ. ವಾಸ್ತವದಲ್ಲಿ ಜನತಂತ್ರವೆಂದರೇನು? ಜನತಂತ್ರವು ಯಾವುದೇ ಹೊರಗಿನ ರೂಪದಲ್ಲಿಲ್ಲ. ಎಲ್ಲರಿಗೂ ಮತಾಧಿಕಾರ ಮತ್ತು ಚುನಾವಣೆಯ ಅಧಿಕಾರ ಜನತಂತ್ರದ ಬಹು ದೊಡ್ಡ ಅಂಗವಾದರೂ ಕೇವಲ ಅದರಿಂದಲೇ ಜನತಂತ್ರೀಯದ ಸ್ಥಾಪನೆ ಆಗುವುದಿಲ್ಲ. ರಷ್ಯಾದಲ್ಲಿ ಈ ಎರಡೂ ಇದೆ. ಆದರೆ ರಾಜನೀತಿಜ್ಞರು ಅದನ್ನು ಜನತಂತ್ರವೆಂದು ಕರೆಯವುದಿಲ್ಲ. ಮತಾಧಿಕಾರ ಮತ್ತು ಚುನಾವಣೆಯ ಅಧಿಕಾರದ ಜೊತೆಗೆ ಮತ್ತೊಂದು ಭಾವನೆ ಜನತಂತ್ರಕ್ಕೆ ಅವಶ್ಯಕವಾಗಿದೆ. ಚುನಾವಣೆಯಿಂದ ಬಹುಮತ ಮತ್ತು ಅಲ್ಪಮತದ ರಾಷ್ಟ್ರ ಚಿಂತನ 437 ಬಗ್ಗೆ ತಿಳಿಯುತ್ತದೆ. ಬಹುಮತದ ಶಾಸನವೇ ಜನತಂತ್ರವಾಗುವುದಿಲ್ಲ. ಅದನ್ನು ನಾವು ಬಹುಮತವೆಂದು ಕರೆಯಬಹುದು. ಈ ರೀತಿಯ ಶಾಸನದಲ್ಲಿ ಒಂದು ವರ್ಗದ ಬಾಯಿ ಬಲವಂತದಿಂದ ಮುಚ್ಚಿಸಲಾಗುತ್ತದೆ. ಆ ಗುಂಪಿನ ಆತ್ಮ ಶಾಸನದ ವಿರುದ್ಧ ಯಾವಾಗಲೂ ವಿರೋಧ ವ್ಯಕ್ತಪಡಿಸುತ್ತದೆ. ಜನತಂತ್ರದ ಈ ಸ್ವರೂಪ `ಸರ್ವಜನಸುಖಾಯ' `ಸರ್ವಜನಹಿತಾಯ' ಆಗುವುದಿಲ್ಲ. `ಬಹುಜನ ಹಿತಾಯ' `ಬಹುಜನ ಸುಖಾಯ' ಆಗಬಹುದು. ಆದರೆ ಯಾವ ಶಾಸನದಲ್ಲಿ ಅಲ್ಪಮತವೆನ್ನಿಸಿಕೊಳ್ಳುವ ವರ್ಗ ಅಸಮಾಧಾನದಿಂದಿರುತ್ತದೆಯೋ ಆ ಅಲ್ಪಮತದ ವರ್ಗ 100ರಲ್ಲಿ 49 ಬೇಕಾದರೂ ಆಗಿರಬಹುದು. ಈ ರೀತಿಯ ಶಾಸನ ಎಂದಿಗೂ ಆದರ್ಶ ಶಾಸನವೆನ್ನಿಸಿಕೊಳ್ಳುವುದಿಲ್ಲ. ಆದ್ದರಿಂದ ಭಾರತೀಯ ಜನತಂತ್ರದ ಕಲ್ಪನೆಯಲ್ಲಿ ಚುನಾವಣೆ, ಬಹುಮತ, ಅಲ್ಪಮತ ಈ ರೀತಿಯಾದ ಹೊರಗಿನ ವ್ಯವಸ್ಥೆಗಳ ಜಾಗದಲ್ಲಿ ಎಲ್ಲರ ಅಭಿಪ್ರಾಯದ ಸಾಮಂಜಸ್ಯ ಮತ್ತು ಸಮನ್ವಯಕ್ಕೆ ಮಹತ್ವ ಕೊಡಲಾಗುತ್ತದೆ. ವಿರುದ್ಧ ಅಭಿಪ್ರಾಯವಿರುವ ವ್ಯಕ್ತಿ ಒಬ್ಬನೇ ಆಗಿದ್ದರೂ ಕೂಡಾ ಅವನ ಅಭಿಪ್ರಾಯವನ್ನು ಗೌರವಿಸುವ ಜೊತೆಗೆ ನಮ್ಮ ಕಾರ್ಯ ಪದ್ಧತಿಯಿಂದ ಅವನನ್ನು ತೃಪ್ತಿಪಡಿಸಬೇಕಾಗಿದೆ. ಇಂದಿನ ಜನತಂತ್ರದ ಪದ್ಧತಿ ಅತಿ ಹೆಚ್ಚಿನ ಸಫಲತೆಯನ್ನು ಪಡೆದ ಇಂಗ್ಲೆಂಡ್‍ನಲ್ಲಿ ವಿರೋಧ ಪಕ್ಷದ ನಾಯಕನಿಗೂ ಸರಕಾರಿ ಖಜಾನೆಯಿಂದ ವೇತನವನ್ನು ಕೊಡಲಾಗುತ್ತದೆ. ಆಟಕ್ಕೆ ಹೇಗೆ ಎರಡೂ ಗುಂಪುಗಳ ಆವಶ್ಯಕತೆ ಇದೆಯೋ ಹಾಗೆಯೇ ಸಂಸತ್ತಿನಲ್ಲಿಯೂ ಎರಡೂ ಪಕ್ಷಗಳು ಇರುವುದು ಅವಶ್ಯಕ ಎಂದು ಪರಿಗಣಿಸಲಾಗುತ್ತದೆ. ಶಾಸನದ ನೀತಿಗಳ ಮೇಲೆಯೂ ವಿರೋಧ ಪಕ್ಷಗಳ ಪ್ರಭಾವ ಇದ್ದೇ ಇರುತ್ತದೆ. ಸಹಿಷ್ಣುತೆಯ ಆಧಾರ ಸಾಮಂಜಸ್ಯ ಮತ್ತು ಸಮನ್ವಯದ ಈ ಭಾವನೆಗೆ ಸಹಿಷ್ಣುತೆಯ ಆವಶ್ಯಕತೆ ಬಹಳವಿದೆ. ಜನತಂತ್ರ ಎನ್ನುವ ಭಾಗೀರಥಿಯ ಉಗಮ ಸ್ಥಾನ ಸಹಿಷ್ಣುತೆ ಎಂದು ನಾವು ಹೇಳುತ್ತೇವೆ. ಇದರ ಅಭಾವದಲ್ಲಿ ಚುನಾವಣೆ ಮತ್ತು ಸಂಸತ್ತು ಇವುಗಳ ಜನತಂತ್ರೀಯ ವ್ಯವಸ್ಥೆಗಳು ಪ್ರಾಣವಿಲ್ಲದ ಶರೀರದಂತೆ. ಸಹಿಷ್ಣುತೆಯ ಅರ್ಥ ಅನ್ಯರ ಬಗ್ಗೆ ಗೌರವದ ಭಾವನೆ ಇರಿಸಿ ಅದನ್ನು ಅಂಗೀಕರಿಸುವ ದೊಡ್ಡತನ ಹೊಂದಿರಬೇಕು. ಭಾರತೀಯ ಸಂಸ್ಕೃತಿಯ ಆಧಾರವೇ ಸಹಿಷ್ಣುತೆ. ಇದರಿಂದಲೇ ಜನತೆಯ ಆತ್ಮದ ಸ್ವರವನ್ನು ತಿಳಿದುಕೊಳ್ಳುವ ಶಕ್ತಿ ಬರುತ್ತದೆ. ಯಾರು ಈ ಸ್ವರವನ್ನು ತಿಳಿದುಕೊಂಡು ಅದರಂತೆ ಕೆಲಸ ಮಾಡುತ್ತಾರೋ ಅವರು ನಿಜವಾದ 438 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜನತಂತ್ರದ ನಾಯಕರೆನ್ನಿಸಿಕೊಳ್ಳುತ್ತಾನೆ. ಭಾರತದ ವರ್ತಮಾನ ಜನತಂತ್ರ ಭಾರತದ ಜನತೆ ತಮ್ಮ ಪರಂಪರೆಗೆ ಅನುಗುಣವಾಗಿ ಜನತಂತ್ರವನ್ನು ಆಯ್ಕೆಮಾಡಿಕೊಂಡಿದೆ. ಇದಕ್ಕೆ ಪ್ರಮಾಣವೆಂದರೆ ಹಿಂದಿನ ಚುನಾವಣೆಗಳಲ್ಲಿ ವಿಶ್ವದ ಬಹುದೊಡ್ಡ ಚುನಾವಣೆ ಆಗಿದ್ದಾಗ್ಯೂ ಅನೇಕ ಶಂಕೆಗಳಿಗೆ ಆಸ್ಪದ ನೀಡದೇ ಅಶಾಂತಿಯ ಘಟನೆಗಳು ನಡೆದಿಲ್ಲದಿರುವುದು. ಚುನಾವಣೆಯ ಪ್ರಚಾರ ಎಷ್ಟೇ ಬಿರುಗಾಳಿ ಎಬ್ಬಿಸಿದರೂ ಚುನಾವಣೆಯ ಕಾರ್ಯ ಮಾತ್ರ ಶಾಂತಿಯಿಂದ ನಡೆಯಿತು. ಚುನಾವಣೆಯ ನಂತರ ಅಧಿಕಾರ ಪಕ್ಷದ ವಿರುದ್ಧ ಅನೇಕ ಆಪಾದನೆಗಳು ಬಂದರೂ ಚುನಾವಣೆಯ ಫಲಿತಾಂಶವನ್ನು ಎಲ್ಲಾ ಪಕ್ಷದವರೂ ಮುಕ್ತ ಮನಸ್ಸಿನಿಂದ ಅಂಗೀಕರಿಸಿದರು. ಇದರಿಂದಲೇ ನಾವು ಸಂತೋಷಪಡಲು ಸಾಧ್ಯವಿಲ್ಲ. ಏಕೆಂದರೆ ಚುನಾವಣೆಯ ನಂತರದ ವಾತಾವರಣ ಜನತಂತ್ರದ ವಿಕಾಸಕ್ಕೆ ಬಾಧಕವಾಗಿ ನಿಂತಿದೆ. ಚುನಾವಣೆಯ ನಂತರ ಕಾಂಗ್ರೆಸ್‍ನ ಆಚರಣೆ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಬಹುಮತದಿಂದ ಗೆದ್ದಿತು. ಪೆಪ್ಸೂವನ್ನು ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲೂ ಮತ್ತು ಕೇಂದ್ರದಲ್ಲೂ ಅದರ ಮಂತ್ರಿ ಮಂಡಲಗಳ ರಚನೆಯಾಯಿತು. ಈ ಗೆಲುವಿನಿಂದ ಕಾಂಗ್ರೆಸ್‍ನ ಜನ ತಮ್ಮ ಜವಾಬ್ದಾರಿಯನ್ನು ತಿಳಿದುಕೊಳ್ಳುವ ಬದಲಾಗಿ ಉದಾಸೀನರಾದರು. ಅಧಿಕಾರ ಪಕ್ಷದ ಜವಾಬ್ದಾರಿ ಎಂದರೆ ಅದು ವಿರೋಧ ಪಕ್ಷಗಳ ಅಭಿಪ್ರಾಯವನ್ನು ಗೌರವಿಸಿ ಸಮನ್ವಯ ಭಾವನೆಯಿಂದ ಆಡಳಿತವನ್ನು ನಡೆಸಬೇಕು. ಆದರೆ ಕಾಂಗ್ರೆಸ್‍ನಲ್ಲಿ ಈ ಭಾವನೆ ಕಾಣಲಿಲ್ಲ. ಆದ್ದರಿಂದ ಅದರ ಆಡಳಿತ ಕೇವಲ ಬಹುಮತದ ಆಳ್ವಿಕೆಯಾಗಿ ಮಾತ್ರ ಉಳಿಯಿತು. ಅದು ಜನತೆಯ ರಾಜ್ಯವಾಗಲಿಲ್ಲ. ವಿರೋಧಪಕ್ಷಗಳನ್ನು ದೇಶದ್ರೋಹಿಗಳು ಎಂದು ಕರೆದಾಗ ಅವರ ಅಸಹಿಷ್ಣುತೆಯ ಪರಿಚಯವಾಗುತ್ತದೆ ಮತ್ತು ವಿರೋಧ ಪಕ್ಷಗಳಿಗೆ ನೋವು ತರುತ್ತದೆ. ದೇಶದ್ರೋಹಿಗಳಿಗೆ ನೇಣುಹಗ್ಗವಲ್ಲದೇ ಬೇರೆ ಸ್ಥಾನವಿರುವುದಿಲ್ಲ. ಸಂಸತ್ತಿನ ಜವಾಬ್ದಾರಿಯುತ ಸದಸ್ಯರನ್ನು ಮತ್ತು ರಾಷ್ಟ್ರೀಯ ಸಂಸ್ಥೆಗಳನ್ನು ಈ ರೀತಿಯಾಗಿ ಸಂಬೋಧಿಸುವುದು ಜನತಂತ್ರೀಯ ಭಾವನೆಗೆ ಅನುಕೂಲವಾಗಿರುವುದಿಲ್ಲ. ಕಾಂಗ್ರೆಸ್‍ನ ಈ ಪ್ರವೃತ್ತಿಗೆ ಕಾರಣ ಅದಕ್ಕೆ ತನ್ನ ಭವಿಷ್ಯದ ಬಗ್ಗೆ ಚಿಂತೆಯ ಜೊತೆಗೆ ಸಂಸ್ಥಾಪಕರು ಮತ್ತು ಅದರ ಹೊರಗೆ ಸಿಕ್ಕಿದ ಸಮರ್ಥನೆಗೆ ಭಾರೀ ಅಂತರವಿದೆ. ಸಂಸತ್ತು ಮತ್ತು ವಿಭಿನ್ನ ವಿಧಾನಸಭೆಗಳಿಂದ ಅದಕ್ಕೆ ಒಟ್ಟು 72 ಪ್ರತಿಶತ ಸ್ಥಾನಗಳು ಸಿಕ್ಕವು. ಇದರಲ್ಲಿ ಒಟ್ಟು ಮತಗಳಲ್ಲಿ 23 ಪ್ರತಿಶತ ಮತ್ತು ರಾಷ್ಟ್ರ ಚಿಂತನ 439 ಅದಕ್ಕೆ ಸಿಕ್ಕ ಮತಗಳು 45 ಪ್ರತಿಶತ ಮಾತ್ರ ಇದ್ದವು. ಇದರ ಫಲವಾಗಿ ಸಂಸತ್ತಿನ ಧ್ವನಿ ಮತ್ತು ದೇಶದ ಧ್ವನಿಯಲ್ಲಿ ಬಹಳ ಅಂತರವಿತ್ತು. ಪೂರ್ತಿ ದೇಶದಲ್ಲಿ ಯಾವ ಧ್ವನಿ ಪ್ರತಿಧ್ವನಿಸುತ್ತದೆಯೋ ಸಂಸತ್ತಿನಲ್ಲಿ ಅದರ ಸ್ವರ ಕ್ಷೀಣವಾಗುತ್ತದೆ. ಇದರ ವಿರುದ್ಧ ಸಂಸತ್ತಿನ ಸ್ವರ ಹೊರಗಿನ ಪ್ರಪಂಚಕ್ಕೆ ಕೇಳಿಸುವುದಿಲ್ಲ. ಇದು ಕೂಡ ಜನತಂತ್ರಕ್ಕೆ ಬಹಳ ದೊಡ್ಡ ಆಘಾತವಾಗಿದೆ. ಶಾಸಕರು ಜನತೆಯ ಧ್ವನಿಯನ್ನು ಕೇಳುವಾಗ, ಶಬ್ದನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡಾಗ ಅಥವಾ ಅದರ ಧ್ವನಿಯನ್ನು ಅಡಗಿಸಲು ಕಾನೂನಿನ ಸಹಾಯವನ್ನು ತೆಗೆದುಕೊಂಡಾಗ ಈ ತೊಂದರೆ ಮತ್ತಷ್ಟು ಎದ್ದು ಕಾಣಿಸುತ್ತದೆ. ಒಳಗಿನ ಮತ್ತು ಹೊರಗಿನ ಈ ಅಂತರವನ್ನು ದೂರಮಾಡಲು ಫ್ರಾನ್ಸ್ ಮುಂತಾದ ದೇಶಗಳು ಸಮಾನ ಅನುಪಾತವನ್ನು ಪ್ರತಿನಿಧಿಸುವ ಚುನಾವಣೆ ಪದ್ಧತಿಯನ್ನು ಸ್ವೀಕರಿಸಲಾಯಿತು. ಇದರ ಅನುಸಾರವಾಗಿ ಸಿಕ್ಕ ಮತಗಳ ಅನುಪಾತದಿಂದಲೇ ಪ್ರತಿಯೊಂದು ಪಕ್ಷಕ್ಕೂ ಸ್ಥಾನ ಸಿಗುತ್ತದೆ. ಈ ಪದ್ಧತಿಯಿಂದ ಪ್ರತಿಯೊಂದು ಪಕ್ಷಕ್ಕೂ ಸ್ಥಾನವೇನೋ ಸಿಗುತ್ತದೆ ಆದರೆ ಯಾವುದೇ ಸದೃಢ ಸರಕಾರ ತರಲು ಬಹಳ ಕಠಿಣವಾಗುತ್ತದೆ. ದೇಗಾಲ್‍ಗೆ ಮುಂದೆ ಫ್ರಾನ್ಸ್‍ನಲ್ಲಿ ಪ್ರತಿದಿನ ಬದಲಾಗುತ್ತಿದ್ದ ಸರಕಾರಗಳ ದುರ್ದಶೆಯನ್ನು ನೋಡಿದಾಗ ನಮಗೆ ಇದರ ಅಂದಾಜು ಸಿಗುತ್ತದೆ. ಆದ್ದರಿಂದ ಇದರ ವ್ಯಾವಹಾರಿಕ ಮಾರ್ಗ ಶಾಸಕನ ಮನೋವೃತ್ತಿಯ ಪರಿವರ್ತನೆಯೇ ಆಗಿದೆ. ಪಕ್ಷಗಳ ಅನುಶಾಸನಕ್ಕೆ ಚೌಕಟ್ಟುಗಳು ಅಧಿಕಾರ ಪಕ್ಷದ ಸದಸ್ಯರು ತನ್ನ ಅಭಿಪ್ರಾಯವನ್ನು ಪ್ರಾಮಾಣಿಕತೆ ಮತ್ತು ನಿರ್ಭಯತೆಯಿಂದ ವ್ಯಕ್ತಪಡಿಸದಿದ್ದಾಗ ಜನಗಳ ವಾಸ್ತವಿಕ ಅಭಿಪ್ರಾಯ ಮತ್ತು ಸರಕಾರದ ನೀತಿಯಲ್ಲಿ ಅಂತರ ಮತ್ತಷ್ಟು ಹೆಚ್ಚುತ್ತಿದೆ. ಪಕ್ಷಗಳಲ್ಲಿನ ಅನುಶಾಸನ ಪಕ್ಷಗಳ ಸುಸ್ಥಿತಿಗೆ ಮಾತ್ರವಲ್ಲದೇ ಪಕ್ಷಗಳ ಮೇಲೆ ಆಧಾರಪಟ್ಟ ಶಾಸನ ವ್ಯವಸ್ಥೆಗೂ ಕೂಡ ಆವಶ್ಯಕವಾಗಿದೆ. ಆದರೆ ಅನುಶಾಸನ ಚೈನಾ ಹೆಂಗಸರ ಚಪ್ಪಲಿಗಳಂತೆ ಗಟ್ಟಿಯಾಗಿ ಬಿಗಿದುಕೊಂಡರೆ ವ್ಯಕ್ತಿ, ಪಕ್ಷ ಮತ್ತು ದೇಶ ಎಲ್ಲರ ವಿಕಾಸ ನಿಂತು ಹೋಗುತ್ತದೆ. ಜನತಂತ್ರವು ಅಲ್ಲಿ ಬೆಳೆಯುವುದೇ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಜನತೆಗೆ ಅತ್ಯಂತ ಅವಶ್ಯಕವಾಗಿದೆ. ಈ ಸ್ವಾತಂತ್ರ್ಯ ಆಡಳಿತ ಪಕ್ಷದ ಸದಸ್ಯರಿಗೂ ಬೇಕಾಗಿದೆ. ಇಂದು ಈ ಸ್ಥಿತಿ ಇಲ್ಲ. ಅನ್ಯ ಪ್ರಜಾತಂತ್ರಿಯ ದೇಶಗಳ ಪರಂಪರೆಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಸದಸ್ಯರೂ ತಮ್ಮ ಅಧಿಕಾರದ ಪ್ರಯೋಗ ಮಾಡಿದರು. ಇದರ ಫಲಿತವಾಗಿ ಈ ಸಮಿತಿಗಳಲ್ಲಿ ವಿರೋಧ ಪಕ್ಷಗಳ ಇರುವಿಕೆ ಶಿಷ್ಟಾಚಾರ ಮಾತ್ರವಾಗಿದೆ. 440 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ವೃತ್ತಪತ್ರಿಕೆಗಳು ಮತ್ತು ವೇದಿಕೆಗಳ ವಿಕಾಸ ಜನತಂತ್ರಕ್ಕೆ ವೃತ್ತ ಪತ್ರಿಕೆಗಳು ಮತ್ತು ವೇದಿಕೆಗಳ ಸುವ್ಯವಸ್ಥಿತ ವಿಕಾಸ ಕೂಡ ಆವಶ್ಯಕವಾಗಿದೆ. ಇಂದು ದೇಶದ ಬಹುತೇಕ ಪತ್ರಿಕೆಗಳು ಜನತೆಯ ಅಥವಾ ತಮ್ಮ ನಿಜವಾದ ಅಭಿಪ್ರಾಯವನ್ನು ಹೇಳುತ್ತವೆಯೋ ಇಲ್ಲವೋ ಎಂದು ಹೇಳುವುದು ಕಷ್ಟ. ಪಕ್ಷಗಳ ಜವಾಬ್ದಾರಿ ಕಾಂಗ್ರೆಸ್ ಮತ್ತು ಅನ್ಯ ಪಕ್ಷಗಳ ಸ್ಥಿತಿ ಕೂಡ ಇಂದು ಜನತಂತ್ರದ ವಿಕಾಸಕ್ಕೆ ಉಪಯುಕ್ತವಾಗಿಲ್ಲ. ಇಂದು ಯಾವುದೇ ಪಕ್ಷ ಜನತೆಯ ಹತ್ತಿರಕ್ಕೆ ತಲುಪಲಿಲ್ಲ. ಎಲ್ಲಾ ಕಡೆಗೂ ರಚನಾತ್ಮಕ ಕಾರ್ಯಗಳಿಗೆ ಅಭಾವವಿದೆ. ಇದರ ಫಲವಾಗಿ ಆಂದೋಲನಗಳು, ಪ್ರಚಾರ ಮತ್ತು ಪ್ರಶ್ನೆಗಳ ಸುರಿಮಳೆಗಳಿಂದಲೇ ರಾಜಕೀಯ ಪಕ್ಷಗಳು ಜೀವಂತವಾಗಿರುವುದು ಮತ್ತು ಬೆಳೆಯುವುದು. ಬಲವಾದ ಬುನಾದಿಯ ಆಭಾವದಿಂದಾಗಿ ಪ್ರತಿಯೊಂದು ಪ್ರಶ್ನೆಯನ್ನು ಮುಂದಿಡುವಾಗಲೂ ಪಕ್ಷದ ಮಾನ ಮತ್ತು ಪ್ರತಿಷ್ಠೆ ಮುಂದೆ ಬಂದು ನಿಲ್ಲುತ್ತದೆ. ಕಾಂಗ್ರೆಸ್‍ನ ಶಾಸಕರಿಗೆ ವಿರೋಧೀ ಪಕ್ಷಗಳ ಮತ್ತು ಆಂದೋಲನಕಾರರ ಮಾತುಗಳು ಒಪ್ಪಿಗೆ ಇದ್ದಾಗಲೂ ಅವರು ಅದನ್ನು ಕಾರ್ಯಾನ್ವಿತಗೊಳಿಸಲು ಹಿಂದೇಟು ಹಾಕಲು ಕಾರಣ ಅವರ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಮತ್ತು ವಿರೋಧಿಗಳ ಬೆಲೆ ಹೆಚ್ಚುತ್ತದೆ ಎಂದು. ರಚನಾತ್ಮಕ ಕಾರ್ಯಗಳಿಗೆ ಸದೃಢ ಆಧಾರವಿದ್ದಾಗ ಯಾವುದೇ ಪ್ರಕಾರದ ಸುಳ್ಳು ಪ್ರತಿಷ್ಠೆಗೆ ಅವಕಾಶ ಕೊಡಬಾರದು. ಇಂದು ಜನತೆ ಜನತಂತ್ರವನ್ನು ಸ್ವೀಕರಿಸಲು ಸಿದ್ಧರಿದ್ದರೂ ರಾಜಕೀಯ ಪಕ್ಷಗಳು ತಮ್ಮನ್ನು ತಾವು ಸಮರ್ಥವೆಂದು ಸಿದ್ಧಪಡಿಸಿಕೊಳ್ಳುವುದರಲ್ಲಿ ಅಸಮರ್ಥವಾಗಿವೆ. ದೇಶದ ಎಲ್ಲಾ ಪಕ್ಷಗಳೂ ಜನತಂತ್ರದ ವಿಕಾಸಕ್ಕಾಗಿ ಪ್ರಯತ್ನ ಮಾಡಬೇಕಾದ ಆವಶ್ಯಕತೆ ಬಹಳಷ್ಟು ಇದೆ. ಅಧಿಕಾರ ಪಕ್ಷದ ಜವಾಬ್ದಾರಿ ಬಹಳ ಹೆಚ್ಚಾಗಿರುತ್ತದೆ. ಅರ್ಥನೀತಿಯ ಭಾರತೀಯಕರಣ ವರ್ತಮಾನ ಯುಗದಲ್ಲಿ ಆರ್ಥಿಕ ಸಮಸ್ಯೆ ವಿಷಮವಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ನಿವಾರಿಸಲು ವಿವಿಧ ಪ್ರಕಾರದಲ್ಲಿ ಪಾಶ್ಚಾತ್ಯ ವಿದ್ವಾಂಸರು ಪ್ರಯತ್ನಿಸಿದ್ದಾರೆ. ಆದರೆ ಇವರೆಲ್ಲರ ದೃಷ್ಟಿಕೋನವು ಒಂದೇ ರೀತಿಯದಾಗಿದೆ. ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟಿದ್ದರ ಕಾರಣ ಅಮೇರಿಕಾ ಮುಂತಾದ ದೇಶಗಳಲ್ಲಿ ಬಂಡವಾಳಶಾಹಿ ಪದ್ಧತಿಯು ಪ್ರಚಾರವಾಯಿತು. ಯಂತ್ರಗಳ ಹೊಸ ಆವಿಷ್ಕಾರವು ರಾಷ್ಟ್ರ ಚಿಂತನ 441 ಈ ಹೆಚ್ಚಿನ ಉತ್ಪಾದನೆಗೆ ಕಾರಣವಾಯಿತು. ಈ ಯಂತ್ರಗಳ ಒಡೆಯ ಉತ್ಪಾದನೆಯ ಒಡೆಯನೂ ಆದನು. ಲಾಭದಲ್ಲಿ ಯಾವಾಗ ಶ್ರಮಿಕರಿಗೆ ಭಾಗ ಸಿಗಲಿಲ್ಲವೋ ಆಗ ಅವರಲ್ಲಿ ಪ್ರತಿಕ್ರಿಯೆಗಳು ಹುಟ್ಟಿಕೊಂಡವು. ಮತ್ತು ಅವರು ಒಂದು ಹೊಸ ಯೋಜನೆ ಸಮಾಜವಾದ ಅಥವಾ ಸಾಮ್ಯವಾದದ ವಿಕಾಸವನ್ನು ಮಾಡಿದರು. ಅದರಲ್ಲಿ ಪುನಃ ವಿತರಣೆಯ ಮೇಲೂ ಹೆಚ್ಚು ಒತ್ತು ನೀಡಲಾಯಿತು. ಅದಕ್ಕಾಗಿ ರಾಜ್ಯದ ಮೂಲಕ ವ್ಯಕ್ತಿಯ ಆದರೆ ಉಪಭೋಗದ ಕಡೆಯ ಪಾಶ್ಚಿಮಾತ್ಯ ವಿದ್ವಾಂಸರ ಗಮನ ಹೋಗಲಿಲ್ಲ. ಆದಾಗ್ಯೂ ಉತ್ಪಾದನೆ ಮತ್ತು ವಿತರಣೆ ಈ ಎರಡರ ಗುರಿಯೂ ಉಪಭೋಗವೇ ಪಶ್ಚಿಮವು ಹೆಚ್ಚೆಚ್ಚು ಉಪಭೋಗಕ್ಕೆ ತನ್ನ ಪುರಾತನ ಸಿದ್ಧಾಂತಗಳನ್ನು ಚಾಲನೆಗೊಳಿಸಿತು ಮತ್ತು ಅದರಲ್ಲಿ ಸಂಶೋಧನೆಯ ಅಗತ್ಯವಿಲ್ಲವೆಂದು ತಿಳಿಯಿತು. ವಾಸ್ತವವೇನೆಂದರೆ ಹೆಚ್ಚೆಚ್ಚು ಉಪಭೋಗದ ಸಿದ್ಧಾಂತವೇ ಮನುಷ್ಯನ ದುಃಖಕ್ಕೆ ಕಾರಣವೆಂಬುದು ಉಪಭೋಗದ ಲಾಲಸೆಯನ್ನು ಪೂರೈಸುತ್ತಾ ಹೋದಂತೆ ಅದು ಹೆಚ್ಚುತ್ತಲೇ ಹೋಗುತ್ತದೆ. ವರ್ಗ ಸಂಘರ್ಷ ಯಾವುದರ ಮೇಲೆ ಸಾಮ್ಯವಾದ ನಿಂತಿದೆಯೋ ಈ ರೀತಿಯ ಉಪಭೋಗದ ಕಾರಣದಿಂದ ಉತ್ಪನ್ನವಾಗುತ್ತಿದೆ. ಭಾರತೀಯ ಮತವಾದ ಯಾವಾಗ ವರ್ಗ ಸಂಘರ್ಷದ ಖಂಡನೆಯನ್ನು ಮಾಡುತ್ತದೆಯೋ ಆಗ ಅದರ ತಾತ್ಪರ್ಯ ಅದು ಉಪಭೋಗಕ್ಕೆ ನಿಯಂತ್ರಣವನ್ನು ಹಾಕಿದೆ ಮತ್ತು ಹೆಚ್ಚೆಚ್ಚು ಉಪಭೋಗಕ್ಕೆ ಬದಲಾಗಿ ಕಡಿಮೆ ಉಪಭೋಗದ ಆದರ್ಶವನ್ನಿಟ್ಟುಕೊಂಡಿದೆ ಎಂಬುದಾಗುತ್ತದೆ. ಮನುಷ್ಯನ ಸಹಜ ಭಾವನೆಗಳ ಸಂಸ್ಕಾರವನ್ನು ಮಾಡುತ್ತಾ ಅವುಗಳಲ್ಲಿ ಹೆಚ್ಚೆಚ್ಚು ಉತ್ಪಾದನೆ, ಸಮಾನ ವಿತರಣೆ, ಹಿತಮಿತ ಉಪಭೋಗದ ಪ್ರವೃತ್ತಿಯನ್ನು ಉಂಟುಮಾಡುವುದು ಆರ್ಥಿಕ ಕ್ಷೇತ್ರದಲ್ಲಿ ಸಂಸ್ಕೃತಿಯ ಕಾರ್ಯವಾಗಿದೆ. ಇದರಲ್ಲಿ ಮೂರರ ಸಮತೋಲನವು ಇದೆ. ಆರ್ಥಿಕ ಲೋಕತಂತ್ರ ಭಾರತೀಯ ಚೈತನ್ಯ ಪ್ರಕೃತಿಯಲ್ಲಿ ಪ್ರಜಾತಂತ್ರವಿದೆ ಮತ್ತು ಇಂದಿನ ಯುಗವು ಪ್ರಜಾತಂತ್ರದ ಕಡೆಗೆ ಮುನ್ನಡೆಯುತ್ತಿದೆ. ರಾಜಕೀಯ ಕ್ಷೇತ್ರದ್ಲಲಿ ಈ ಪ್ರಜಾತಂತ್ರದ ಅಭಿಪ್ರಾಯ ಬಹಳ ಸ್ಪಷ್ಟವಾಗಿ ಕಂಡುಬರುತ್ತಿದೆ. ಮತ್ತು ಈಗ ಆರ್ಥಿಕ ಕ್ಷೇತ್ರದಲ್ಲಿಯೂ ಇದೇ ಪ್ರಜಾತಂತ್ರದ ಉದಯವಾಗುತ್ತಿದೆ. ರಾಜನೀತಿಯ ಶಕ್ತಿಯನ್ನು ಪ್ರಜೆಗಳಲ್ಲಿ ವಿಕೇಂದ್ರಿಕರಣಗೊಳಿಸಿ ಯಾವ ಪ್ರಕಾರದಲ್ಲಿ ಶಾಸನದ ಸಾಂಸ್ಥಿಕ ನಿರ್ಮಾಣವನ್ನು ಮಾಡಲಾಗಿದೆಯೋ ಅದೇ ಪ್ರಕಾರ ಆರ್ಥಿಕ ಶಕ್ತಿಯನ್ನು ಪ್ರಜೆಗಳಲ್ಲಿ ವಿಕೇಂದ್ರೀಕರಿಸಿ ಅರ್ಥವ್ಯವಸ್ಥೆಯ ನಿರ್ಮಾಣ ಮತ್ತು ಸಂಚಾಲನೆಯಾಗಬೇಕು. ರಾಜನೀತಿಯ ಪ್ರಜಾತಂತ್ರದಲ್ಲಿ ವ್ಯಕ್ತಿಗೆ ತನ್ನ ರಚನಾತ್ಮಕ ಶಕ್ತಿಯನ್ನು ವ್ಯಕ್ತಪಡಿಸುವ ಪೂರ್ಣ 442 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅವಕಾಶ ಸಿಗುತ್ತದೆ. ಇದೇ ರೀತಿಯಲ್ಲಿ ಆರ್ಥಿಕ ಪ್ರಜಾತಂತ್ರದಲ್ಲಿಯೂ ವ್ಯಕ್ತಿಯ ರಚನಾತ್ಮಕ ಶಕ್ತಿಯನ್ನು ಕಸಿದುಕೊಳ್ಳಬಾರದು, ಬದಲಾಗಿ ಅವನಿಗೆ ವ್ಯಕ್ತಪಡಿಸುವ ಪೂರ್ಣ ಅವಕಾಶ ಪ್ರತಿಯೊಂದು ಅವಸ್ಥೆಯಲ್ಲೂ ಸಿಗಬೇಕು. ಈ ರೀತಿಯ ಅರ್ಥವ್ಯವಸ್ಥೆ ಯಾವುದೇ ರೀತಿಯಲ್ಲೂ ಸ್ವೀಕಾರವಲ್ಲ. ಇದರಲ್ಲಿ ವ್ಯಕ್ತಿಗೆ ತನ್ನ ಹಿತಗಳಲ್ಲಿ ಅದು ದಮನ ಮಾಡುತ್ತದೆ. ಏಕೆಂದರೆ ಅನಂತರ ಇದರ ದಮನದ ಪರಿಣಾಮ ಪ್ರಕಟವಾಗುತ್ತದೆ ಮತ್ತು ಕೊನೆಯಲ್ಲಿ ರಾಜನೀತಿ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೂ ಇದರ ದುಷ್ಟಭಾವ ಉಂಟಾಗುತ್ತದೆ. ಇದು ನಿಸರ್ಗದ ನಿಯಮ ಮತ್ತು ಆರಂಭದಿಂದಲೂ ಇದರ ಬಗ್ಗೆ ಗಮನವಿಟ್ಟು ನಡೆಯುವುದು ಬುದ್ಧಿವಂತಿಕೆ ಎನ್ನಬಹುದು. ರಾಜನೀತಿಯಲ್ಲಿ ವ್ಯಕ್ತಿಯ ರಚನಾತ್ಮಕ ಶಕ್ತಿಯನ್ನು ಯಾವ ರೀತಿ ಸರ್ವಾಧಿಕಾರ ನಷ್ಟಪಡಿಸುತ್ತದೆಯೋ ಅದೇ ರೀತಿ ಅರ್ಥನೀತಿಯಲ್ಲಿ ವ್ಯಕ್ತಿಯ ರಚನಾತ್ಮಕ ಶಕ್ತಿಗೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಔದ್ಯೋಗೀಕರಣ ನಷ್ಟಪಡಿಸುತ್ತದೆ. ಈ ರೀತಿಯ ಉದ್ಯೋಗಗಳಲ್ಲಿ ವ್ಯಕ್ತಿ ಸ್ವತಃ ಯಂತ್ರದ ಒಂದು ಭಾಗವಾಗಿರುತ್ತಾನೆ. ಆದ್ದರಿಂದ ಸರ್ವಾಧಿಕಾರದ ರೀತಿಯಲ್ಲೇ ಇಂತಹ ಔದ್ಯೋಗಿಕರಣವು ಬಿಟ್ಟುಬಿಡಲು ಯೋಗ್ಯವಾದುದು. ಆರ್ಥಿಕ ಕ್ಷೇತ್ರದಲ್ಲಿ ವ್ಯಕ್ತಿಯ ರಚನಾಶಕ್ತಿ ಯಾವಾಗ ಪ್ರಕಟವಾಗುತ್ತದೋ ಆಗ ವಿಕೇಂದ್ರೀಕರಣದ ಆಧಾರದ ಮೇಲೆ ಉದ್ಯೋಗಗಳ ವ್ಯವಸ್ಥೆಯಾಗಲೀ ವಿಕೇಂದ್ರಿಕರಣದಿಂದ ಯಂತ್ರಗಳ ಪರಿತ್ಯಾಗ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಆದ್ದರಿಂದ ಯಂತ್ರಗಳ ಅವಶ್ಯಕತೆಯನ್ನು ಕಡಿಮೆ ಮಾಡಬೇಕಾಗುತ್ತದೆ. ದೊಡ್ಡ ಯಂತ್ರಗಳ ಪರಿತ್ಯಾಗ ಈ ಅವಸ್ಥೆಯಲ್ಲಿ ಅವಶ್ಯವಾಗಿರುತ್ತದೆ. ಕೆಲವು ಕೆಲಸಗಳನ್ನು ದೊಡ್ಡ ಯಂತ್ರಗಳಿಂದಲೇ ಮಾಡಬೇಕಾದಾಗ ಅವುಗಳ ಮೇಲೆ ವ್ಯಕ್ತಿನಿಷ್ಠ ಪ್ರಭುತ್ವದ ಬದಲು ರಾಜಕೀಯ ಪ್ರಭುತ್ವವಾಗಬೇಕು. ಇಂತಹ ಉದ್ಯೋಗ ಸುರಕ್ಷಾ ಉದ್ಯೋಗಗಳಲ್ಲಿ ಬರುತ್ತದೆ. ವಿಕೇಂದ್ರೀಕರಣದಿಂದ ಏನಾದರೂ ಸಮಸ್ಯೆಗಳುಂಟಾದಲ್ಲಿ ಅದಕ್ಕೆ ಕಾರಣ ಅತಿಕೇಂದ್ರೀಕರಣ. ಬಂಡವಾಳಶಾಹಿ ಅತಿಕೇಂದ್ರೀಕರಣದ ಕಾರಣದಿಂದಲೇ ಉಂಟಾಗಿದೆ. ಯಾವಾಗ ಜನರಿಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಅವಕಾಶ ಸಿಗದಿದ್ದ ಮೇಲೆ ಬಂಡವಾಳವನ್ನು ಕ್ರೋಢಿಕರಿಸುವುದಾದರೂ ಹೇಗೆ? ಹಳ್ಳಿಗಳಿಗೆ ಹೆಚ್ಚೆಚ್ಚು ಸ್ವಾವಲಂಬನೆ ಸಿಕ್ಕಲ್ಲಿ ವ್ಯಕ್ತಿಗೆ ಪ್ರೋತ್ಸಾಹವು ಸಿಗುವ ಕಾರಣ ವಸ್ತುವಿನ ಗುಣ ಮತ್ತು ಉತ್ಪಾದನೆ ಎರಡೂ ಹೆಚ್ಚುತ್ತದೆ. ಹಿಂದಿನ ಕಾಲದಲ್ಲಿ ಗುಡಿ ಕೈಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತಿದ್ದರು. ಅಂತಹ ಗುಣಮಟ್ಟದ ಉತ್ಪಾದನೆಯನ್ನು ಇಂದಿನ ಯಂತ್ರಗಳು ತಯಾರಿಸುತ್ತಿಲ್ಲ. ಗುಡಿಕೈಗಾರಿಕೆಗಳಲ್ಲಿ ಕರಕುಶಲತೆ ಮತ್ತು ಶಿಲ್ಪಕಲೆಗೆ ಸಿಗುವಷ್ಟು ದೊಡ್ಡ ಕ್ಷೇತ್ರ ರಾಷ್ಟ್ರ ಚಿಂತನ 443 ಯಾಂತ್ರಿಕ ಉದ್ಯೋಗದಲ್ಲಿ ಖಂಡಿತಾ ಸಿಗುವುದಿಲ್ಲ. ಯಾವ ರೀತಿ ರಾಜನೀತಿಯ ಲೋಕತಂತ್ರದಲ್ಲಿ ಗ್ರಾಮಪಂಚಾಯಿತಿ ಮುಂತಾದವುಗಳಿಂದ ಲೋಕತಂತ್ರ ಏಕಾಂಗಿಯಾಗಿ ಮೇಲೆ ಬಂದು ಏಳಿಗೆಯ ಕಡೆಗೆ ಸಾಗುತ್ತಿರುವ ಹಾಗೆ ಆರ್ಥಿಕ ಕ್ಷೇತ್ರದಲ್ಲಿ ಗ್ರಾಮ ಮತ್ತು ಗೃಹ ಕೈಗಾರಿಕೆಗಳು ವಿಕೇಂದ್ರೀಕರಣದ ಅನುಸಾರ ಕೈಗೊಳ್ಳಲಾಗಿರುವ ಕೃಷಿ ಉತ್ಪಾದನಾ ಕೇಂದ್ರಗಳಿಂದ ಮೇಲೆ ಬಂದು ಲೋಕತಂತ್ರ ಏಳಿಗೆಯ ಕಡೆಗೆ ಸಾಗಬೇಕು. ಸಾಮ್ಯವಾದ ಕೇಂದ್ರೀಕೃತ ಅರ್ಥನೀತಿಯ ಒಂದು ಭಾಗವೇ ಆಗಿದೆ. ಆದ್ದರಿಂದ ಅದರ ಬೇರುಗಳು ಆಕಾಶದಲ್ಲಿ ಹಾರಾಡುತ್ತಿದ್ದರೆ ಅರ್ಥವ್ಯವಸ್ಥೆಯ ಬೇರುಗಳು ಭೂಮಿಯ ಆಳದಲ್ಲಿ ಸೇರಿಹೋಗಿವೆ. ಅರ್ಥಸೂತ್ರ :- ಭಾರತೀಯ ಸಂಸ್ಕೃತಿಯಲ್ಲಿ ಕರ್ಮ ಅಥವಾ ಶ್ರಮಕ್ಕೆ ಸರ್ವೋಚ್ಛ ಸ್ಥಾನ ನೀಡಲಾಗಿದೆ. ವೇದಗಳಿಂದ ಮೊದಲ್ಗೊಂಡು ಉಪನಿಷತ್ತುಗಳು ಹಾಗೂ ಭಗವದ್ಗೀತೆಯಲ್ಲೂ ಇದಕ್ಕೆ ಸರ್ವಶ್ರೇಷ್ಠವಾದ ಮಹತ್ವ ಸಿಕ್ಕಿದೆ. ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದ್ದರಿಂದ ಶ್ರಮದ ಅನಾದಾರದ ಬಗ್ಗೆ ಯಾವ ಪ್ರಶ್ನೆಗಳೂ ಉದ್ಭವಿಸುವುದಿಲ್ಲ. ಇದರ ಜೊತೆಯಲ್ಲಿ ಪ್ರತಿಯೊಬ್ಬನಿಗೂ ಕೆಲಸ ಮಾಡುವ ಅವಕಾಶವನ್ನು ಕೊಡುವುದು ಶಾಸನದ ಕರ್ತವ್ಯವೂ ಆಗಿದೆ. ಪ್ರತಿಯೊಬ್ಬನೂ ಕೆಲಸದ ಸಿದ್ಧಾಂತವನ್ನು ಸ್ವೀಕರಿಸಿದ್ದೇ ಆದಲ್ಲಿ ಸಮವಿತರಣದ ದಿಕ್ಕು ಖಾತ್ರಿಯಾಗುತ್ತದೆ. ಮತ್ತು ನಾವು ವಿಕೇಂದ್ರೀಕರಣದ ಕಡೆಗೆ ಮುಂದುವರಿಯುಬಹುದು. ಔದ್ಯೋಗೀಕರಣದ ಉದ್ದೇಶವನ್ನು ಒಪ್ಪಿಕೊಂಡು ನಡೆಯುವುದು ತಪ್ಪು. ಏಕೆಂದರೆ ಈ ಉದ್ದೇಶ ಸ್ಪಷ್ಟವಾಗಿಲ್ಲ. ಈ ಸಿದ್ಧಾಂತಕ್ಕೆ ಗಣಿತದ ಸೂತ್ರದಲ್ಲಿ ಈ ರೀತಿ ಇಡಬಹುದು. ಜxಕxಯ=ಇ. (ಇಲ್ಲಿ `ಇ' ಸಮಾಜದ ಪ್ರಭಾವಿ ಇಚ್ಛೆಯ ದ್ಯೋತಕ. ಇದರಲ್ಲಿ ಪೂರ್ತಿಶಕ್ತಿಯಿದೆ. `ಜ' ಸಮಾಜದಲ್ಲಿ ಕೆಲಸ ಮಾಡುವ ಯೋಗ್ಯ ವ್ಯಕ್ತಿಗಳ ಸಂಖ್ಯೆಯ ದ್ಯೋತಕ. `ಕ' ಕೆಲಸ ಮಾಡುವ ಅವಶ್ಯಕತೆ ಮತ್ತು ವ್ಯವಸ್ಥೆಯ ದ್ಯೋತಕ. `ಯ' ಯಂತ್ರದ ದ್ಯೋತಕ. ಈ ಸೂತ್ರದ ಅನುಸಾರ ನಮಗೆ ಬೇಕಾಗಿರುವುದೇನೆಂದರೆ `ಜ' ಖಚಿತವಾಗಿದ್ದರೆ (ಯಾವುದು ಪ್ರತಿಯೊಬ್ಬರಿಗೂ ಕೆಲಸದ ಸಿದ್ಧಾಂತದ ಅನುಸಾರ ಅವಶ್ಯಕವಾಗಿದೆಯೋ) ಅನುಪಾತದಲ್ಲಿ `ಕ' ಮತ್ತು `ಯ'ಗೆ ಬದಲಾವಣೆ ಮಾಡಬೇಕಾಗುತ್ತದೆ. ಯಾವ್ಯಾವ ರೀತಿಯಲ್ಲಿ ನಮ್ಮ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೋ ಆಗ ನಾವು ಈ ರೀತಿಯ ಸೂತ್ರದ ಉಪಯೋಗವನ್ನು ಮಾಡಬೇಕಾಗುತ್ತದೆ. ಇದರ ಸಹಾಯದಿಂದ ನಾವು ಅಧಿಕ ಉತ್ಪಾದನೆಯನ್ನು ಮಾಡಬಹುದು. ಈಗ ಯಾವ ಶಾಸನದ ನೀತಿ ಇದೆಯೋ ಅದರಲ್ಲಿ `ಯ' ಎಲ್ಲವನ್ನೂ ನಿಯಂತ್ರಿಸುತ್ತದೆ. ವಾಸ್ತವದಲ್ಲಿ `ಇ' ವೃದ್ಧಿಯಿಂದ ನಮ್ಮ ಸಮಸ್ಯೆ ಪರಿಹಾರವಾಗಿದೆ. ಆದರೆ 444 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 `ಇ' ಸಹಜವಾಗಿ ವೃದ್ಧಿಯಾಗಲು ಸಾಧ್ಯವಿಲ್ಲ. ಏಕೆಂದರೆ ಇದು ನಮ್ಮ ಖರೀದಿಸುವ ಶಕ್ತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಶಾಸನದಲ್ಲಿ ದೇಶದ ಖರೀದಿಸುವ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಬೇಕು. ಖರೀದಿಸುವ ಶಕ್ತಿ ಮೂಲತಃ ಅಧಿಕ ಉತ್ಪಾದನೆಯನ್ನು ಮಾಡುವುದರ ಮೇಲೆ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಅದಕ್ಕಾಗಿ ಹಣದ ಹೆಚ್ಚೆಚ್ಚು ಸಮವಿತರಣೆಯ ಅವಶ್ಯಕತೆಯೂ ಇರುತ್ತದೆ. `ಇ' ಹೆಚ್ಚು ಬೇಡಿಕೆ ಇರುವ ದೇಶಗಳಲ್ಲಿ ಮತ್ತು ದೇಶದ ಹೊರಗಡೆಯೂ ಆಗುತ್ತದೆ. ಒಂದು ವೇಳೆ ನಮ್ಮ ವಸ್ತುಗಳು ಹೊರಗಡೆ ಹೋದಾಗ `ಇ' ಹೆಚ್ಚಾಗುತ್ತದೆ. ಹೊರಗಡೆಯಿಂದ ವಸ್ತುಗಳು ನಮ್ಮ ದೇಶಕ್ಕೆ ಬಂದಾಗ `ಇ' ಕಡಿಮೆಯಾಗುತ್ತದೆ. ಏಕೆಂದರೆ ನಮ್ಮ ಖರೀದಿಸುವ ಶಕ್ತಿಯು ಹೆಚ್ಚು ಭಾಗ ಅವುಗಳನ್ನು ಖರೀದಿಸುವುದರಲ್ಲಿಯೇ ಖರ್ಚಾಗಿ ಹೋಗುತ್ತದೆ. ಈಗ ಭಾರತದಲ್ಲಿ ಇದೇ ಆಗುತ್ತಿದೆ. ಸ್ವದೇಶೀ ಪ್ರೇಮದ ಮೂಲಕ `ಇ'ಯನ್ನು ವೃದ್ಧಿಸಬಹುದು. ಏಕೆಂದರೆ `ಯ' ಮತ್ತು `ಕ'ದಲ್ಲಿ ಒಂದೇ ಸಲ ಪರಿವರ್ತನೆಯಾಗುವ ಸಂಭವವಿರುವುದಿಲ್ಲ. ಆದ್ದರಿಂದ `ಜ' ಕಡಿಮೆಯಾಗುತ್ತಾ ಹೋಗುತ್ತಿದೆ. ಆರ್ಥಿಕ ಕ್ಷೇತ್ರದ ಮೂರು ವಸ್ತುಗಳೆಂದರೆ ಮನುಷ್ಯ, ಶ್ರಮ ಮತ್ತು ಯಂತ್ರ. ಈ ಮೂರರ ಸಮನ್ವಯವೇ ಅರ್ಥವ್ಯವಸ್ಥೆಯ ಉದ್ದೇಶ. ಯಾವ ಅರ್ಥವ್ಯವಸ್ಥೆಯಲ್ಲಿ ಈ ಸಮನ್ವಯವಿಲ್ಲವೋ ಅದರಲ್ಲಿ ಸಮನ್ವಯವಿಲ್ಲದ ಪರಿಣಾಮ ಸ್ವರೂಪವಾಗಿ ವಿಷಮತೆಗಳುಂಟಾಗುತ್ತವೆ. ಯಾವ ಅರ್ಥನೀತಿ ಈ ಪರಿಣಾಮಗಳಿಂದ ತನ್ನ ದರ್ಶನದ ಸೂತ್ರವನ್ನು ಸಾಗಿಸುತ್ತಿದೆಯೋ ಅದು ತಾತ್ಕಾಲಿಕ ರೂಪದಲ್ಲಿ ಈ ಪರಿಣಾಮಗಳನ್ನು ದೂರ ಮಾಡಿದರೂ ಅದು ವ್ಯವಸ್ಥೆಯ ಮೂಲಶೋಧನೆಯನ್ನು ಮಾಡಲಾಗುವುದಿಲ್ಲ. ಮೂಲಶೋಧನೆಯ ಕಾರಣಗಳಿಂದಲೇ ಸಾಗಿ ಮುಂದೆ ಬರಬೇಕು ಮತ್ತು ಈ ಪರಿಣಾಮಗಳನ್ನು ಕಡಿಮೆ ಮಾಡುವ ಉಪಾಯಗಳನ್ನು ಕಂಡುಕೊಳ್ಳಬೇಕು. ವಿಕೇಂದ್ರೀಯ ಅರ್ಥವ್ಯವಸ್ಥೆ. ಭಾರತೀಯ ಜನಸಂಘದ ಮುಂದೆ ಒಂದು ಸ್ಪಷ್ಟ ಆರ್ಥಿಕ ಕ್ರಮವಿದೆ. ಆದರೆ ಅದರ ಸ್ಥಾನ ನಮ್ಮ ಸಂಪೂರ್ಣ ಕಾರ್ಯಕ್ರಮದಲ್ಲಿ ಎಷ್ಟಿದೆಯೋ ಅಷ್ಟೂ ಭಾರತೀಯ ಸಂಸ್ಕೃತಿಯಲ್ಲಿ ಹಣಕ್ಕೂ ಇದೆ. ಪಾಶ್ಚಾತ್ಯ ಸಂಸ್ಕೃತಿ ಭೌತಿಕವಾದಿಯಾದ ಕಾರಣ ಅರ್ಥಪ್ರಧಾನವಾಗಿದೆ. ನಾವು ಭೌತಿಕವಾದ ಮತ್ತು ಆಧ್ಯಾತ್ಮಿಕವಾದ ಎರಡನ್ನು ಸಮನ್ವಯಗೊಳಿಸಿ ಸಾಗಬೇಕೆನ್ನುತ್ತೇವೆ. ಆದ್ದರಿಂದ ಅರ್ಥಶಾಸ್ತ್ರಗಳು ಮತ್ತು ದಳಗಳು ಅರ್ಥದ ಮುಂದೆ ಜೀವನದ ಪ್ರತಿಯೊಂದು ಮೌಲ್ಯವನ್ನು ಉಪೇಕ್ಷಿಸಿ ರಾಷ್ಟ್ರ ಚಿಂತನ 445 ನಡೆಯಬೇಕೆನ್ನುವ ವಿಷಯದಲ್ಲಿ ಯಾವಾಗಲೂ ನಾವು ಹಿಂದಿರುತ್ತೇವೆಂಬುದು ಜನಸಂಘದ ನಿರ್ಧಾರವಾಗಿದೆ. ಜನಸಂಘ ಹೃದಯ, ಮಸ್ತಿಷ್ಕ ಮತ್ತು ಶರೀರ ಮೂರನ್ನು ಮೇಳೈಸಿ ವಿಚಾರ ಮಾಡುತ್ತಿದೆ. ಈ ಕಾರಣದಿಂದ ಕೆಲವರು ಜನಸಂಘದ ಮೇಲೆ ಈ ಆರೋಪವನ್ನು ಮಾಡುತ್ತಿದ್ದಾರೆ. ಏನೆಂದರೆ ಜನಸಂಘ ಆಧ್ಯಾತ್ಮಿಕತೆಯನ್ನು ಉಪೇಕ್ಷೆ ಮಾಡುತ್ತಿದೆ. ಅರವಿಂದ ಮಹರ್ಷಿ ಮುಂತಾದ ಆಧ್ಯಾತ್ಮಿಕ ಮಹಾಪುರುಷರ ಮಾತು ಕಿವಿಗೆ ಬೀಳುತ್ತಿಲ್ಲ ಎಂದು ನಾವು ಈ ಎರಡೂ ರೀತಿಯ ಆರೋಪಗಳನ್ನು ಸ್ವಾಗತಿಸುತ್ತೇವೆ ಮತ್ತು ಇಷ್ಟನ್ನು ಹೇಳಲಿಚ್ಛಿಸುತ್ತೇವೆ. ಏನೆಂದರೆ ಯಾವ ಅರ್ಥ ಸಮಾಜದ ಸ್ಥಿರತೆಗೆ ಅವಶ್ಯಕವಾಗಿದೆಯೋ ಅದರಿಂದಲೇ ವ್ಯಕ್ತಿ ತನ್ನ ಪಾಲನೆ ಪೋಷಣೆ ಮಾಡಿ, ಇತರ ಶ್ರೇಷ್ಠ ಮೌಲ್ಯಗಳನ್ನು ಗಳಿಸುವುದಕ್ಕೆ ಪ್ರಯಾಸ ಪಡುತ್ತಾನೋ ಅದಕ್ಕೂ ಕೂಡ ನಾವು ನಮ್ಮ ಕಾರ್ಯಕ್ರಮದಲ್ಲಿ ಸ್ಥಾನ ಕೊಟ್ಟಿದ್ದೇವೆ. ಇದು ಸಂಘರ್ಷವಲ್ಲ :- ಇಂದು ವಿಶ್ವದಲ್ಲಿ ಎರಡು ಬಣಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದೆಡೆ ಅಮೆರಿಕಾದ ನೇತೃತ್ವದಲ್ಲಿ ಬಂಡವಾಳಶಾಹಿ ದೇಶವಿದ್ದರೆ ಮತ್ತೊಂದೆಡೆ ರಷ್ಯಾದ ನೇತೃತ್ವದಲ್ಲಿ ಸಮಾಜವಾದಿ ಅಥವಾ ಸಾಮ್ಯವಾದಿ ಬಣವಿದೆ. ನಮ್ಮ ವಿದೇಶಿ ನೀತಿ ತಟಸ್ಥವಾಗಿದೆಯಾದರೂ ವೈಚಾರಿಕ ದೃಷ್ಟಿಯಿಂದ ನಾವು ಅವುಗಳಲ್ಲಿ ಒಂದು ಬಣ ಅಂದರೆ ಸಮಾಜವಾದಿ ಬಣದಲ್ಲಿ ಸೇರಿಕೊಳ್ಳುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ವಿದೇಶಿ ನೀತಿಯಂತೆಯೇ ನಾವು ವೈಚಾರಿಕ ಕ್ಷೇತ್ರದಲ್ಲೂ ತಟಸ್ಥವಾಗಿರಬೇಕೆಂಬುದನ್ನು ಜನಸಂಘ ಅಪೇಕ್ಷಿಸುತ್ತದೆ. ಯಾರು ಪಾಶ್ಚಾತ್ಯ ವಿಚಾರ ಧಾರೆಗಳಲ್ಲಿ ಪರವಾಗಿದ್ದಾರೆಯೋ ಮತ್ತು ಆ ವಿಚಾರಧಾರೆಗಳಲ್ಲಿ ಸೇರಿರುವ ಶಬ್ದಾವಳಿಗಳ ಆಧಾರದ ಮೇಲೆ ಪ್ರಪಂಚದ ಪ್ರತಿಯೊಂದು ವಸ್ತುಗಳನ್ನು ಅರ್ಥಮಾಡಿಕೊಳ್ಳುತ್ತಾರೋ ಅವರಿಗೆ ಹೇಳುವುದೇನೆಂದರೆ ಭಾರತದಲ್ಲಿಯೂ ಬಂಡವಾಳಶಾಹಿ ಮತ್ತು ಸಮಾಜವಾದದ ಸಂಘರ್ಷ ನಡೆಯುತ್ತಿದೆ. ವಾಸ್ತವದಲ್ಲಿ ಇದು ವಿಶ್ವದ ವೈಚಾರಿಕ ಸಂಘರ್ಷದ ಪ್ರತಿಬಿಂಬ ಮಾತ್ರವಾಗಿದೆ. ಅದರ ಅಸ್ತಿತ್ವ ಇಲ್ಲಿ ಇಲ್ಲವೇ ಇಲ್ಲ. ನಾವು ಹೇಳಬೇಕೆನ್ನುವುದೇನೆಂದರೆ ನಮ್ಮ ವೈಯಕ್ತಿಕ ಕ್ಷೇತ್ರ ಮತ್ತು ಸಾರ್ವಜನಿಕ ಕ್ಷೇತ್ರದ ಸಂಘರ್ಷದ ಚರ್ಚೆಯನ್ನು ಎತ್ತಿಕೊಳ್ಳುವುದು ನಿರರ್ಥಕ ಮತ್ತು ನಿರಾಧಾರ. ನಾವು ಇದರಿಂದ ಹೊರಬಂದು ಸಮಸ್ಯೆಗಳ ಕಡೆಗೆ ನೋಡಬೇಕು. ವ್ಯವಸ್ಥೆಗಿಂತ ಮೊದಲೇ ಮನುಷ್ಯ :- ಒಂದು ವೇಳೆ ನಾವು ಸೂಕ್ಷ್ಮ ವಿಶ್ಲೇಷಣೆಯನ್ನು ಮಾಡಿದ್ದೇ ಆದಲ್ಲಿ ಎರಡರ ದೋಷದ ಮೂಲ ಕಾರಣವು ಒಂದೇ ಎಂಬುದಾಗಿ ಕಂಡುಬರುತ್ತದೆ. ಅದರ ಮೂಲ ಬೇರೆ ಬೇರೆ ಇಲ್ಲ. ಆದ್ದರಿಂದ ನಮ್ಮ ಈ ಶೋಧನೆಯ ದೋಷ ಎಲ್ಲಿದೆ? ದೋಷದ ವಾಸ್ತವಿಕ ಕಾರಣ ವ್ಯವಸ್ಥೆಯಲ್ಲಿ ಮನುಷ್ಯ. ಮನುಷ್ಯನೇ ಮೊದಲು ಬರುತ್ತಾನೆ. ಕೆಟ್ಟ ಮನುಷ್ಯ ಒಳ್ಳೆಯ ವ್ಯವಸ್ಥೆಯಲ್ಲಿ ಪ್ರವೇಶಿಸಿ ಕೆಡುಕನ್ನೇ ಉಂಟುಮಾಡುತ್ತಾನೆ. ಸಮಾಜದ 446 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಪ್ರತಿಯೊಂದು ಪರಂಪರೆ ಮತ್ತು ವ್ಯವಸ್ಥೆ ಒಟ್ಟಿನಲ್ಲಿ ಒಬ್ಬರು ಒಳ್ಳೆಯ ವ್ಯಕ್ತಿಯ ಮೂಲಕ ಪ್ರಾರಂಭವಾಗಿದೆ. ಆದರೆ ಅದೇ ಒಳ್ಳೆಯ ಪರಂಪರೆಯ ಮೇಲೆ ಯಾವಾಗ ಕೆಟ್ಟವ್ಯಕ್ತಿ ಬಂದು ಕುಳಿತುಕೊಳ್ಳುತ್ತಾನೋ ಅಲ್ಲಿ ಕೆಟ್ಟದ್ದೂ ಬಂದುಬಿಡುತ್ತದೆ. ರಾಜ್ಯ ಸಂಸ್ಥಾನವನ್ನೇ ತೆಗೆದುಕೊಳ್ಳಿ ರಾಮಚಂದ್ರನೇನು ರಾಜನಾಗಿರಲಿಲ್ಲವೇ? ಅಲ್ಲಿ ಅವನು ಉನ್ನತ ಜೀವನದಿಂದ ರಾಜ್ಯ ಸಂಸ್ಥೆಯ ಗೌರವವನ್ನು ಹೆಚ್ಚಿಸಿದ. ಅಲ್ಲಿ ಅನೇಕರು ದುಷ್ಟತನದಿಂದ ಅವನಿಗೆ ಎಷ್ಟು ಅಪವಿತ್ರ ಮಾಡಿದರೆಂದರೆ ಪ್ರತಿಸಲವೂ ರಾಜ್ಯ, ಸಮಾಜದ ಹೆಸರನ್ನು ತೆಗೆದುಕೊಂಡಿದ್ದರಿಂದ ತಿರಸ್ಕಾರ ಉಂಟಾಗಿತ್ತು. ಈ ದೃಷ್ಟಿಯಿಂದ ವೈಯಕ್ತಿಕ ಮತ್ತು ಸಾರ್ವಜನಿಕ ಕ್ಷೇತ್ರದ ಸಂಘರ್ಷದ ಕಡೆಗೆ ನೋಡೋಣ. ಇದಕ್ಕೆ ಯಾವ ಗ್ಯಾರಂಟಿ ಇದೆ? ಏಕೆಂದರೆ ಒಂದು ವೇಳೆ ಯಾವುದೇ ವ್ಯಕ್ತಿ ತನ್ನ ವೈಯಕ್ತಿಕ ಜೀವನದಲ್ಲಿ ಸ್ವತಂತ್ರನಾಗಿದ್ದು ಕೆಟ್ಟದ್ದನ್ನು ಮಾಡಿದರೆ ಅದರ ಸ್ಥಾನದಲ್ಲಿ ರಾಜ್ಯದ ವ್ಯಕ್ತಿ ಕುಳಿತುಕೊಂಡಾಗ ಕೆಟ್ಟದ್ದಾಗುವುದಿಲ್ಲವೇ? ಆದ್ದರಿಂದ ನಮ್ಮ ಗಮನವೇನಿದ್ದರೂ ವ್ಯಕ್ತಿಯ ಕರ್ತವ್ಯ ಭಾವನೆಯನ್ನು ಜಾಗೃತಗೊಳಿಸುವುದರ ಮೇಲೆ ಕೇಂದ್ರೀಕೃತವಾಗಬೇಕಿತ್ತು. ಆರ್ಥಿಕ ಮನುಷ್ಯನ ಭ್ರಾಮಕ ಕಲ್ಪನೆ :- ಆದರೆ ಏನಾಯಿತು? ವ್ಯಕ್ತಿಯ ಕಡೆಗೆ ದುರ್ಲಕ್ಷ್ಯ ಮತ್ತು ಬಾಹ್ಯ ವ್ಯವಸ್ಥೆಯ ಮೇಲೆ ಅಧಿಕಾರ ಕೊಟ್ಟಿದೆ. ನಿರ್ಜೀವ ವ್ಯವಸ್ಥೆಯ ಮುಂದೆ ಚೈತನ್ಯ ಮನುಷ್ಯ ನಗಣ್ಯನಾಗಿದ್ದಾನೆ. ವ್ಯಕ್ತಿಯ ಒಳಗಿನ ವಿದ್ಯಮಾನಗಳಾದ ಸದ್ಗುಣಗಳನ್ನು ವಿಕಾಸಗೊಳಿಸುವ ಸ್ಥಾನದಲ್ಲಿ ಅವುಗಳನ್ನು ನಾಶಮಾಡುವ ಉಪಾಯಗಳನ್ನು ಅವಲಂಭಿಸಲಾಗಿದೆ. ರಾಷ್ಟ್ರನಿರ್ಮಾಣದ ಯೋಜನೆಗಳನ್ನು ಮಾಡುವವರು ಈ ಸತ್ಯವನ್ನು ಯಾವಾಗಲೂ ಮರೆತುಬಿಡುವ ಪ್ರಯಾಸ ಮಾಡಿದ ಮೇಲೆ ಮನುಷ್ಯ ಮಾನವನಿಂದ ದೇವತೆಯಾಗುತ್ತಾನೆ. ಅವರು ಮಾನವನ ಹಿರಿಮೆಯ ಸ್ವರೂಪವನ್ನು ಮುಂದಿಟ್ಟುಕೊಂಡಿರುತ್ತಾರೆ. ಯಾರು ಬಂಡವಾಳಶಾಹಿ ಆಧಾರದ ಮೇಲೆ ಈ ರೀತಿಯ ಮನುಷ್ಯನ ಕಲ್ಪನೆಯನ್ನು ಮಾಡುತ್ತಿದ್ದಾರೋ ಅವರು ವಿಶುದ್ಧ ಆರ್ಥಿಕ ಮನುಷ್ಯರು. ಇದೊಂದು ಕೇವಲ ಕಲ್ಪನೆ. ಈ ರೀತಿಯ ವ್ಯಕ್ತಿ ಇದುವರೆಗೆ ಹುಟ್ಟಿಲ್ಲ: ಮುಂದೆ ಹುಟ್ಟುವೂದು ಇಲ್ಲ. ಈ ರೀತಿ ಯಾವಾಗಲೂ ಆಗಲು ಸಾಧ್ಯವಿಲ್ಲವಾದ್ದರಿಂದ ಮನುಷ್ಯನ ಅದು ಬಂಡವಾಳಶಾಹಿಯಾಗಲಿ ಅಥವಾ ಕಾರ್ಮಿಕರೇ ಆಗಿರಲಿ ಪ್ರತಿಯೊಂದು ಕಾರ್ಯ ಆರ್ಥಿಕ ದೃಷ್ಟಿಯಿಂದ ಆಗುತ್ತಿರಲಿ ಅದರ ಕಾರ್ಯದ ಪ್ರೇರಕ ಹಣವಾಗಿರಲು ಸಾಧ್ಯವಿಲ್ಲ. ಅರ್ಥಶಾಸ್ತ್ರದ ನಿಯಮಗಳ ಒರೆಗಲ್ಲಿನ ಮೇಲೆ ಈ ಮಾನವೀಯ ವ್ಯವಹಾರಗಳನ್ನು ಒರೆಗೆ ಹಚ್ಚಿದ್ದರೆ ನಮಗೆ ಯಾವಾಗಲೂ ಆರ್ಥಿಕ ಮನುಷ್ಯನ ದರ್ಶನ ಸಿಗುವುದಿಲ್ಲ. ಅಲ್ಲದೆ ಅದರಿಂದ ಯಾವುದೇ ವಿಶಾಲ ಸಂಪೂರ್ಣ ಮಾನವನ ಅಸ್ತಿತ್ವವನ್ನು ನೋಡಲು ಸಾಧ್ಯವಿಲ್ಲ. ರಾಷ್ಟ್ರ ಚಿಂತನ 447 ಬಂಡವಾಳಶಾಹಿಯ ಆಧಾರ ಈ ಆರ್ಥಿಕ ಮನುಷ್ಯನನ್ನು ಸ್ವೀಕರಿಸಿದರೆ, ಅದರ ಪ್ರತಿಕ್ರಿಯೆಯ ಸ್ವರೂಪ ಸಮಾಜವಾದವು ಸಾಮೂಹಿಕ ಮನುಷ್ಯನ ಕಲ್ಪನೆ ಮಾಡುತ್ತದೆ. ಒಂದು ರೀತಿಯ ಮನುಷ್ಯನನ್ನು ನಾವು ಒಪ್ಪಿಕೊಂಡಿದ್ದೇವೆ. ಅವನ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವುದರ ಕಡೆಗೆ ಗಮನವನ್ನು ಇಟ್ಟದ್ದೇವೆ. ಅವನ ಜೀವನದ ಇತರ ಅವಶ್ಯಕತೆಗಳನ್ನು ಪೂರ್ಣವಾಗಿ ಉಪೇಕ್ಷಿಸಿದ್ದೇವೆ. ಎರಡೂ ವ್ಯವಸ್ಥೆಗಳಲ್ಲೂ ಮನುಷ್ಯತ್ವದ ವಿಚಾರವಿಲ್ಲ. ಮನುಷ್ಯ ಒಂದು ಭಾಗವಾಗಿಹೋಗಿದ್ದಾನೆ :- ಮನುಷ್ಯತನವನ್ನು ವ್ಯಾಖ್ಯಾನಿಸುವುದು ಕಷ್ಟಕರವಾದ ಕೆಲಸ. ಅನೇಕ ವಿಷಯಗಳಲ್ಲಿ ಒಂದೇ ಆಗಿದ್ದರೂ ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ವಿಶಿಷ್ಟತೆ ಇರುತ್ತದೆ. ಅವುಗಳ ವೈವಿಧ್ಯತೆಗಳ ವಿಚಾರಗಳ ಅವಶ್ಯಕವಿದೆ. ಭಾರತೀಯ ಸಂಸ್ಕೃತಿಯಲ್ಲಿ ಒಂದು ವಿಚಾರ ಮಾಡಲಾಗಿದೆ. ಏನೆಂದರೆ ಮನುಷ್ಯ ವೈವಿಧ್ಯತೆಗಳನ್ನು ಸ್ವಾಭಾವಿಕವಾಗಿ ವಿಕಾಸ ಮಾಡಿದ್ದರೂ ಆಂತರಿಕ ಏಕಾತ್ಮತೆಯ ಅನುಭವ ಮಾಡುತ್ತಾ ಸಾಗುತ್ತಾನೆ. ವ್ಯಕ್ತಿಯ ಸ್ವಾತಂತ್ರ್ಯ ಎಲ್ಲಕ್ಕಿಂತ ಸರ್ವಪ್ರಥಮವಾದುದು. ಯಾವಾಗ ಟಾಟಾಬಿರ್ಲಾ ವ್ಯಕ್ತಿ ಸ್ವಾತಂತ್ರ್ಯ ಅಥವಾ ಮುಕ್ತ ಪ್ರೇರಣೆಯ ಮಾತನಾಡುತ್ತಿದ್ದಾರೆಂದರೆ ಅದರ ಅಭಿಪ್ರಾಯ ಅವರು ತಮ್ಮ ಸ್ವಾತಂತ್ರ್ಯದ ಬಗ್ಗೆಯೇ ಮಾತನಾಡುತ್ತಾರೆಯೇ ಹೊರತು ಅವರ ಕಾರ್ಖಾನೆಯಲ್ಲಿ ಗುಲಾಮರಾಗಿರುವ ಲಕ್ಷಾಂತರ, ಕೋಟ್ಯಾಂತರ ಕಾರ್ಮಿಕರ ಸ್ವಾತಂತ್ರ್ಯದ ಬಗ್ಗೆ ಅಲ್ಲ. ನಾವಾದರೋ ಲಕ್ಷಾಂತರ ಕೋಟ್ಯಾಂತರ ಮಾನವರ ಸ್ವಾತಂತ್ರ್ಯದ ಬಗ್ಗೆ ವಿಚಾರ ಮಾಡಬೇಕಾಗಿದೆ. ರಾಜಕೀಯ ಶಕ್ತಿಯ ಅಥವಾ ಆರ್ಥಿಕ ಶಕ್ತಿಯ ಕೇಂದ್ರೀಕರಣದಿಂದ ವ್ಯಕ್ತಿ ಸ್ವಾತಂತ್ರ್ಯ ಮುಗಿಯುತ್ತದೆ. ಬಂಡವಾಳಶಾಹಿ ಮತ್ತು ಸಮಾಜವಾದ ಎರಡೂ ಕೇಂದ್ರೀಕರಣವನ್ನು ಸಮರ್ಥಿಸುತ್ತವೆ. ಬಂಡವಾಳಶಾಹಿಯಲ್ಲಿ ಮೆಲ್ಲ ಮೆಲ್ಲಗೆ ಮುಕ್ತ ಪೈಪೋಟಿ ಸಮಾಪ್ತಿಯಾಗಿ ಆರ್ಥಿಕ ಶಕ್ತಿಯ ಮೇಲೆ ವ್ಯಕ್ತಿಗಳ ಏಕಸ್ವಾಮ್ಯ ಸ್ಥಾಪಿತವಾಗುತ್ತಿದೆ. ಅಮೆರಿಕಾ ಮುಂತಾದ ದೇಶಗಳಲ್ಲಿ ದೊಡ್ಡ ದೊಡ್ಡ ಔದ್ಯೋಗಿಕ ಸಾಮ್ರಾಜ್ಯ ಸ್ಥಾಪಿತವಾಗಿದ್ದು ಅವುಗಳ ಸ್ಥಿತಿ ಏನಾಗಿದೆ? ಇಂದು ಅಮೆರಿಕಾದಲ್ಲಿ ಮಾಡಿರುವಷ್ಟು (Anti trust laws) ಇನ್ನೆಲ್ಲಿಯೂ ಮಾಡಿಲ್ಲ. ಅಲ್ಲಿ ವ್ಯವಹಾರವು ವ್ಯಕ್ತಿಯೊಂದಿಗೆ ನಡೆಯದೆ ಕಡತಗಳೊಂದಿಗೆ ನಡೆಯುತ್ತಿದೆ. ಆರ್ಥಿಕ ಶಕ್ತಿಯನ್ನು ರಾಜ್ಯದ ಕೈಗೆ ಒಪ್ಪಿಸುವ ಸಮಾಜವಾದದಲ್ಲಿಯೂ ಹೀಗೇ ಆಗುತ್ತದೆ. ಮನುಷ್ಯನ ಸ್ಥಾನವನ್ನು ಕಡತಗಳು ತೆಗೆದುಕೊಳ್ಳುತ್ತವೆ. ಮಾನವತೆ ಸಮಾಪ್ತಿಯಾಗುತ್ತಾ ಹೋಗುತ್ತದೆ. ಎರಡೂ ವ್ಯವಸ್ಥೆಗಳಲ್ಲಿ ಮನುಷ್ಯನ ವಿಚಾರ ಪರಿಮಾಣಾತ್ಮಕ ಆಧಾರದ ಮೇಲೆ ಆಗುತ್ತಿದೆಯೇ ಹೊರತು ಗುಣಾತ್ಮಕದ ಆಧಾರದ ಮೇಲಲ್ಲ; ಮಾನವವಾದ ಬೇಕಾಗಿದೆ. 448 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಲ್ಲಿಯವರೆಗೆ ಒಬ್ಬೊಬ್ಬ ವ್ಯಕ್ತಿಯ ವೈಶಿಷ್ಟ್ಯತೆ ವೈವಿಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ವಿಕಾಸದ ಚಿಂತನೆಯನ್ನು ಮಾಡುವುದಿಲ್ಲವೋ ಅಲ್ಲಿಯವರೆಗೆ ಮಾನವರಿಗೆ ಒಳ್ಳೆಯ ಸೇವೆ ಸಿಗುವುದಿಲ್ಲ. ಸಮಾಜವಾದ ಮತ್ತು ಬಂಡವಾಳಶಾಹಿ ಮನುಷ್ಯನನ್ನು ವ್ಯವಸ್ಥೆಯ ನಿರ್ಜೀವ ಯಂತ್ರದ ಒಂದು ಭಾಗವನ್ನಾಗಿ ಮಾತ್ರ ಮಾಡಿತು. ಒಂದು ಸ್ವತಂತ್ರ ಅಸ್ತಿತ್ವವನ್ನು ಸಮಾಪ್ತಿಗೊಳಿಸಿ ಅದು ವಿಶಾಲವಾದ ಕಾರ್ಖಾನೆಯ ಕೆಲಸಗಾರನನ್ನಾಗಿ ಮಾಡಿತು. ಬಟ್ಟೆ ವ್ಯಾಪಾರಿಗಳ ಅಂಗಡಿಗಳ ಸ್ಥಾನದಲ್ಲಿ ಒಂದು ವಿಭಾಗೀಯ ಸ್ಟೋರ್ಸ್ ಮಾಡಿದರು. ದರ್ಜಿಯ ಸ್ಥಾನದಲ್ಲಿ ಸಿದ್ಧಪಡಿಸಿದ ಉಡುಪು ತಂದಿರಿಸಿದರು. ಎಂಟುಗಂಟೆ ಯಂತ್ರದ ಹಾಗೆ ಕೆಲಸಮಾಡಲಿ ಮತ್ತು ಹದಿನಾರು ಗಂಟೆ ತಿನ್ನಲಿ ಎನ್ನುವುದಕ್ಕೆ ಮನುಷ್ಯನೇನು ಜಂತುವೇ. ಕೆಲಸ ಮತ್ತು ಜೀವನದ ನಡುವೆ ಒಂದು ಗೋಡೆ ನಿಂತಿದೆ. ಪಶ್ಚಿಮದ ಯಾವುದೇ ದೇಶಗಳಲ್ಲಿ ಎಲ್ಲಿ ಹೋದರೂ ಐದು ದಿನ ಕೆಲಸ ಮತ್ತು ಎರಡು ದಿನ ರಜೆ ಇದೆ. ಆ ಎರಡು ದಿನಗಳಲ್ಲಿ ಕೆಲಸದ ಮಾತೇ ಇಲ್ಲದೆ ಕೇವಲ ಮನರಂಜನೆ, ತಿನ್ನುವುದು, ಕುಡಿಯುವುದು ಮತ್ತು ಮಜಾ ಮಾಡುವುದು. ಅಂದರೆ ಅವರು ಐದು ದಿನ ಕೆಲಸ ಮಾಡುತ್ತಾರೆ. ಎರಡು ದಿನ ಜೀವಂತವಾಗಿರುತ್ತಾರೆ. ಆದ್ದರಿಂದ ಮನುಷ್ಯ ಮನುಷ್ಯನ ಸಂಪಾದನೆಯ ಸಾಧನಗಳು ಈ ರೀತಿ ನಿರ್ಮಾಣವಾಗಬೇಕು. ಏಕೆಂದರೆ ಕಾರ್ಯ ಮತ್ತು ವಾಸ್ತವಿಕ ಜೀವನದ ನಡುವೆ ಯಾವುದೇ ಕಂದಕವಿರಬಾರದು. ರಕ್ತ ಮಾಂಸಗಳಿಂದ ತುಂಬಿರುವ ಮನುಷ್ಯನಿಗೆ ಹೃದಯ, ಮೆದುಳು ಮತ್ತು ಶರೀರ ಈ ಮೂರಕ್ಕೂ ಹಸಿವಿದೆ ಎಂಬುದರ ವಿಚಾರವನ್ನು ಮಾಡಬೇಕು. ಅನ್ಯ ಕೆಲಸಗಳಿಗೆ ಎಂಟು ಗಂಟೆಗಳು ಅಮಾನವೀಯ ಪ್ರಭಾವವನ್ನುಂಟು ಮಾಡುತ್ತವೆ. ಅದನ್ನು ಸಮಾಪ್ತಿಗೊಳಿಸಿದರೂ ಉಳಿದ ತೊಂಭತ್ತನಾಲ್ಕು ಗಂಟೆಗಳು ವ್ಯರ್ಥವಾಗುತ್ತವೆ. ಅವುಗಳು ಮುಗಿದು ಹೋದರೂ ಅಲ್ಲಿ ಪುನಃ ಎಂಟು ಗಂಟೆಗಳ ಚಕ್ರದಲ್ಲಿ ಸಿಕ್ಕಿ ಬೀಳುತ್ತಾನೆ. ವಿಜ್ಞಾನ ಮತ್ತು ಮಾನವತೆ: ಆದ್ದರಿಂದ ನಾವು ಬಂಡವಾಳ ಶಾಹಿ ಮತ್ತು ಸಮಾಜವಾದದ ಸುಳಿಯಿಂದ ಮುಕ್ತರಾಗಿ ಮಾನವವಾದದ ವಿಚಾರ ಮಾಡೋಣ. ಮಾನವ ಜೀವನದ ಸಮಸ್ತ ಮಗ್ಗಲುಗಳ ವಿಚಾರ ಮಾಡಿ ಆರ್ಥಿಕ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ ಮತ್ತು ಉಪಭೋಗದ ಸಾಧನ ಮತ್ತು ವ್ಯವಸ್ಥೆಯನ್ನು ಮಾಡೋಣ. ಅದಕ್ಕಾಗಿ ವಿಜ್ಞಾನದ ಉಪಭೋಗವನ್ನು ಮಾಡೋಣ. ನಾವು ವಿಜ್ಞಾನದ ಪುರಾತನ ಪ್ರಯೋಗಗಳನ್ನು ಹೇಗಿತ್ತೋ ಹಾಗೆ ನಮ್ಮದಾಗಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇಂದು ನಾವು ಪಾಶ್ಚಿಮಾತ್ಯ ತಂತ್ರಜ್ಞಾನವನ್ನು ಕಣ್ಣುಮುಚ್ಚಿ ನಕಲು ಮಾಡುತ್ತಿದ್ದೇವೆ. ಇದನ್ನು ನಿಲ್ಲಿಸಬೇಕು ರಾಷ್ಟ್ರ ಚಿಂತನ 449 ಮತ್ತು ತಂತ್ರಜ್ಞಾನದ ಉಪಯೋಗವನ್ನು ಮಾನವನ ವಿಕಾಸಕ್ಕಾಗಿಯೇ ಮಾಡಬೇಕು. ವಿಕೇಂದ್ರಿತ ಅರ್ಥವ್ಯವಸ್ಥೆ: ಇದಕ್ಕಾಗಿ ವಿಕೇಂದ್ರಿತ ಅರ್ಥ ವ್ಯವಸ್ಥೆಯ ಆವಶ್ಯಕತೆಯಿದೆ. ಸ್ವಂತ ಉದ್ಯೋಗ ಕ್ಷೇತ್ರವನ್ನು ಸನ್ನದ್ಧಗೊಳಿಸಬೇಕು. ಈ ಕ್ಷೇತ್ರ ಎಷ್ಟು ದೊಡ್ಡದಾಗುತ್ತದೆಯೋ ಅದೇ ರೀತಿ ಮನುಷ್ಯನೂ ಮುಂದೆ ಬರುತ್ತಾನೆ. ಮನುಷ್ಯನ ವಿಕಾಸವಾಗುತ್ತದೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಬಗ್ಗೆ ವಿಚಾರ ಮಾಡುತ್ತಾನೆ. ಪ್ರತಿಯೊಬ್ಬ ಮನುಷ್ಯನ ಆವಶ್ಯಕತೆಗಳು ಮತ್ತು ವಿಶೇಷತೆಗಳ ವಿಚಾರಮಾಡಿ ಕೆಲಸ ಕೊಟ್ಟಲ್ಲಿ ಆ ಗುಣಗಳ ವಿಕಾಸವಾಗಬಹುದು. ಈ ರೀತಿಯ ವಿಕೇಂದ್ರಿಯ ಅರ್ಥವ್ಯವಸ್ಥೆ ವಿಶ್ವಕ್ಕೆ ಭಾರತದ ಕೊಡುಗೆಯಾಗಬಹುದು. ನಾವು ನೂತನ ದೃಷ್ಟಿಯಿಂದ ಆರ್ಥಿಕ ನಿರ್ಮಾಣ ಕಾರ್ಯವನ್ನು ಪ್ರಾರಂಭ ಮಾಡುತ್ತಿದ್ದೇವೆ. ಆದ್ದರಿಂದ ನಾವು ಈ ವಿಕೇಂದ್ರಿತ ಅರ್ಥವ್ಯವಸ್ಥೆಯನ್ನು ಭದ್ರವಾಗಿ ನೆಲೆಯೂರಿಸಲು ಅನುಕೂಲವಾಗುತ್ತದೆ. ಒಂದು ಸಲ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಮತ್ತೆ ಅವುಗಳನ್ನು ಮುಚ್ಚಿ ಹಾಕುವ ಯೋಚನೆ ಮಾಡಿದರೆ ಅನೇಕ ಕೆಲಸ ಕಾರ್ಯಗಳು ಕಠಿಣವಾಗಿಬಿಡುತ್ತವೆ. ಅದಕ್ಕಾಗಿ ಹರಸಾಹಸನವನ್ನೇ ಮಾಡಬೇಕಾಗುತ್ತದೆ. ಭಾರೀ ಅಸ್ತವ್ಯಸ್ತತೆಗಾಗಿ ಸಿದ್ಧರಾಗಬೇಕಾಗುತ್ತದೆ. ಆದ್ದರಿಂದ ರಾಷ್ಟ್ರ ನಿರ್ಮಾಣದ ಈ ಪ್ರಾರಂಭಿಕ ದಿಸೆಯಿಂದಲೇ ಅಭಿವೃದ್ಧಿಯನ್ನು ಹೆಚ್ಚಿಸುವುದರ ಕಡೆಗೆ ವಿಚಾರ ಮಾಡೋಣ. ಇದೇ ವಿಷಯವನ್ನು ಕೃಷಿ ಕ್ಷೇತ್ರಕ್ಕೆ ಅನ್ವಯಿಸಿ ನೋಡಿದಾಗ ಸಹಕಾರೀ ಕೃಷಿಯ ಅಂತಿಮ ಚಿತ್ರವಾಗುತ್ತದೆ. ಗ್ರಾಮವ್ಯವಸ್ಥೆಯಲ್ಲಿ ರೈತರ ಸ್ವತಂತ್ರ ಅಸ್ತಿತ್ವ ಕೊನೆಯಾಗುತ್ತದೆ. ಈಗ ನಾನು ಉತ್ಪಾದನೆಯ ಪ್ರಶ್ನೆಯನ್ನು ಎತ್ತುವುದಿಲ್ಲ. ಅದು ಎರಡನೆಯ ಸ್ಥಾನದಲ್ಲಿದೆ. ಮೊದಲನೆಯದಾಗಿ ಹೇಳುವುದೇನೆಂದರೆ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಕಾರಣ ಸುಖದ ಸ್ಥಾನದಲ್ಲಿ ದುಃಖ ಬಂದೇ ಬರುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಸ್ವಾತಂತ್ರ್ಯತೆ ಕೊನೆಯಾದರೆ ರಾಜನೀತಿಯ ಕ್ಷೇತ್ರದಲ್ಲೂ ಕೊನೆಯಾಗುತ್ತದೆ. ಸಮಾಜವಾದ ಮತ್ತು ಪ್ರಜಾತಂತ್ರ ಜೊತೆ ಜೊತೆಯಾಗಿ ನಡೆಯಲು ಸಾಧ್ಯವಿಲ್ಲ. ನಿಜವಾದ ಪ್ರಜಾತಂತ್ರದ ಆಧಾರ ಆರ್ಥಿಕ ವಿಕೇಂದ್ರೀಕರಣವೇ ಆಗಿರುತ್ತದೆ. ಆದ್ದರಿಂದ ಸೈದ್ಧಾಂತಿಕವಾಗಿ ನಾವು ಸಣ್ಣ ಸಣ್ಣ ಉದ್ಯೋಗಗಳನ್ನೇ ನಮ್ಮದಾಗಿಸಿಕೊಳ್ಳಬೇಕಾಗುತ್ತದೆ. ನಿರುದ್ಯೋಗಿಗಳ ಪ್ರಶ್ನೆ : ಈಗ ವ್ಯಾವಹಾರಿಕ ದೃಷ್ಟಿಯಿಂದ ನೋಡೋಣ. ನಮ್ಮ ಯೋಜನೆಗಳು 450 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಶ್ರಮ ಪ್ರಧಾನವಾಗಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಸಿಗಬೇಕಾಗಿದೆ. ಇಂದಿನ ಯೋಜನೆಗಳ ಒಂದು ದೊಡ್ಡ ದೋಷವೆಂದರೆ ಅವುಗಳಲ್ಲಿ ದೇಶದ ಸ್ಥಿತಿ ಮತ್ತು ಆವಶ್ಯಕತೆಗಳ ವಿಚಾರವನ್ನೇ ಮಾಡದಿರುವುದು. ಪಶ್ಚಿಮವು ನಮಗೆ ದೊಡ್ಡ ದೊಡ್ಡ ಯಂತ್ರಗಳನ್ನು ಕೊಡುತ್ತಿದೆ. ನಾವು ತೆಗೆದುಕೊಳ್ಳುತ್ತಾ ಇದ್ದೇವೆ. ಈ ರೀತಿಯ ಅರ್ಥವ್ಯವಸ್ಥೆಯಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ನಿರುದ್ಯೋಗ ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ಹೋದರೆ ದೇಶದ ಪ್ರಗತಿಯ ಆಧಾರವೇನು? ನಿರುದ್ಯೋಗ ಒಂದೇ ಸಲಕ್ಕೆ ದೂರವಾಗುವುದಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಯೋಜನೆಗಳನ್ನು ಮಾಡುವುದಕ್ಕೆ ಮೊದಲೇ ನಾವು ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಎನ್ನುವ ಸಿದ್ಧಾಂತಕ್ಕೆ ಮಾನ್ಯತೆ ಕೊಡಬೇಕಾಗುತ್ತದೆ. ಇದನ್ನು ಒಪ್ಪಿಕೊಂಡು ನಡೆದರೆ ಯೋಜನೆಗಳ ದಿಕ್ಕು ಸ್ವರೂಪ ಬದಲಾದರೂ ನಿರುದ್ಯೋಗ ಸಮಸ್ಯೆ ಕ್ರಮೇಣ ದೂರವಾಗುತ್ತದೆ. ರಾಷ್ಟ್ರೀಯ ಆದಾಯ : ಈಗಿನ ರಾಷ್ಟ್ರೀಯ ಆದಾಯದ ವಿಚಾರ ಸರಾಸರಿ ಸಿದ್ಧಾಂತದ ಆಧಾರದ ಮೇಲೆ ಮಾಡಲಾಗುತ್ತದೆ. ಆದರೆ ಇದು ಬಹಳ ದೊಡ್ಡ ಭ್ರಮೆಯಾಗಿದೆ. ರಾಷ್ಟ್ರೀಯ ಆದಾಯ ಹೆಚ್ಚಳವಾದ ನಂತರವೂ ದೇಶದ ಬಡತನ ಹೆಚ್ಚುತ್ತಲೇ ಇದೆ. ಇದು ಏಕೆ? ರಾಷ್ಟ್ರೀಯ ಆದಾಯದ ಹೆಚ್ಚಳ ಎಂಬುದರ ಅರ್ಥ ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಹೆಚ್ಚಳ. ಪ್ರತಿಯೊಬ್ಬನಿಗೂ ಕೆಲಸ ಕೊಟ್ಟರೆ ಬಡತನ ಕಡಿಮೆಯಾಗುತ್ತದೆ. ಪ್ರತಿಯೊಬ್ಬನ ಆದಾಯದಲ್ಲೂ ಹೆಚ್ಚಳವುಂಟಾಗುತ್ತದೆ. ಇದರಿಂದ ಉತ್ಪಾದನೆಯಲ್ಲಿ ಹೆಚ್ಚಳವುಂಟಾಗುತ್ತದೆ. ಕಡಿಮೆ ಜನರನ್ನು ಬಳಸಿಕೊಂಡು ದೊಡ್ಡ ಯಂತ್ರಗಳ ಮೂಲಕ ಉತ್ಪಾದನೆ ಮಾಡಬಹುದು ಎಂಬುದು ನಿಜವಾದರೂ ಅದು ನಮ್ಮ ದೇಶಕ್ಕೆ ಉಪಯೋಗವಾಗುವುದಿಲ್ಲ. ``ನನಗೆ ಅಧಿಕ ಉತ್ಪಾದನೆ ಬೇಕು. ಆದರೆ ಅಧಿಕ ಜನಸಮೂಹದ ಮೂಲಕ ಉತ್ಪಾದನೆ ಬೇಕು' ಎಂದು ಗಾಂಧೀಜಿಯವರು ಹೇಳುತ್ತಿದ್ದರು. ಉತ್ಪಾದನೆಯ ಸರಿಯಾದ ಲಕ್ಷಣ/ರೀತಿ: ಈಗ ದೊಡ್ಡ ಯಂತ್ರಗಳ ಆಧಾರದ ಮೇಲೆ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಅದರಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ, ವಿದೇಶೀ ಸಾಲವೂ ಹೆಚ್ಚುತ್ತಾ ಹೋಗುತ್ತಿದೆ. ಈಗ ನಮ್ಮ ರಾಷ್ಟ್ರದ ಒಟ್ಟು ಆದಾಯದ ಶೇಕಡಾ 55 ಕ್ಕಿಂತಲೂ ಹೆಚ್ಚು ಸಾಲ ನಮ್ಮ ಮೇಲಿದೆ. ಹೆಚ್ಚುತ್ತಿರುವ ವಿದೇಶೀ ಸಾಲದಿಂದಾಗಿ ಹಣದ ವಿನಿಮಯ ಸಮಸ್ಯೆಯೂ ಎದುರಾಗಿದೆ. ಈ ಕಾರಣದಿಂದಾಗಿ ರಾಷ್ಟ್ರ ಚಿಂತನ 451 ನಮ್ಮ ಘೋಷಣೆ `ಉತ್ಪಾದಿಸು ಇಲ್ಲವೇ ಮಡಿ' ಎಂಬ ಸ್ಥಾನದಲ್ಲಿ `ರಫ್ತುಮಾಡು ಇಲ್ಲವೇ ಮಡಿ' ಎಂಬಂತಾಗಿದೆ. ನಮ್ಮ ಮುಂದಿನ ಯೋಜನೆಗಳು ರಫ್ತಿನ ಮೇಲೆ ಅವಲಂಬಿತವಾದ ಕಾರಣದಿಂದ ಯಾವ ವಸ್ತುಗಳನ್ನು ನಾವೇ ಉತ್ಪಾದಿಸುತ್ತಿರುವೆವೋ ಅವುಗಳನ್ನು ಸಹ ಉಪಯೋಗಿಸದಂತಾಗಿದೆ. ಉದಾಹರಣೆ ಸಕ್ಕರೆಯನ್ನೇ ತೆಗೆದುಕೊಳ್ಳೋಣ. ಸಕ್ಕರೆಯಲ್ಲಿ ನಾವು ಸಂಪೂರ್ಣ ಮಾರುಕಟ್ಟೆಯನ್ನು ಹೊಂದಿದ್ದರೂ ವಿದೇಶೀ ವಿನಿಮಯದ ಗಳಿಕೆಗಾಗಿ ವಿದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಬೇಕಾಗಿದೆ. ಆದ್ದರಿಂದ ದೇಶದಲ್ಲಿ ಅದು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ನಮ್ಮ ಹಸು ಎಮ್ಮೆಗಳಿಗೆ ಹಿಂಡಿ ಬೂಸಾ ತಿನ್ನಿಸದೆ ಅವುಗಳನ್ನು ವಿದೇಶಗಳಿಗೆ ಸಾಗಿಸುತ್ತಿದ್ದೇವೆ. ಮತ್ತು ಹಾಲಿನ ಡಬ್ಬಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವನಸ್ಪತಿ ತುಪ್ಪವನ್ನು ತಯಾರಿಸುವ ಯಂತ್ರಗಳನ್ನು ಬೇಡುತ್ತಿದ್ದೇವೆ. ಇಂದು ನಮ್ಮ ದೇಶದ ಪ್ರಗತಿಯ ಲೆಕ್ಕಾಚಾರ ಯಂತ್ರಗಳ ಮೇಲೆ ನಿಂತಿದೆ. ಒಬ್ಬ ಸತ್ಪುರುಷನು ಅಮೆರಿಕಾಕ್ಕೆ ಹೋಲಿಸುತ್ತಾ ಭಾರತದ ಹಿಂದುಳಿದಿರುವಿಕೆಯ ಕಾರಣವನ್ನು ಉಕ್ಕಿನ ಬಳಕೆಯ ಮಾನದಂಡ ರೂಪದಲ್ಲಿ ಪ್ರಸ್ತುತಪಡಿಸಿದ್ದಾನೆ. ಆದ್ದರಿಂದ ನಾವೂ ಕೂಡ ಹೆಚ್ಚೆಚ್ಚು ಉಕ್ಕಿನ ಬಳಕೆಯ ಮೂಲಕ ಅಮೆರಿಕಾಕ್ಕೆ ಸರಿ ಸಮಾನವಾಗಿ ತಲುಪಬೇಕು ಎಂಬುದು ಅವನ ಹೇಳಿಕೆ. ಆದರೆ ಈಗ ಪ್ಲಾಸ್ಟಿಕ್ ಯುಗ ಪ್ರಾರಂಭವಾಗಿದೆ ಎಂಬುದನ್ನು ಅವನು ಮರೆತಿದ್ದಾನೆ. ಅಲ್ಲದೇ ಮುಂದಿನ 5-10 ವರ್ಷಗಳಲ್ಲಿ ಉಕ್ಕಿನ ಉತ್ಪಾದನೆಯಲ್ಲಿ ಅಮೆರಿಕಾಕ್ಕೆ ಸರಿಸಮಾನವಾಗಿ ತಲುಪಿದರೂ ಆರ್ಥಿಕ ಪ್ರಗತಿಯ ಮಾನದಂಡ ಪ್ಲಾಸ್ಟಿಕ್ ಉಪಯೋಗವೇ ಆಗಿರುತ್ತದೆ. ಮತ್ತು ನಾವು ಪುನಃ ಹಿಂದಿಂದೆಯೇ ಉಳಿದು ಬಿಡುತ್ತೇವೆ. ಆದ್ದರಿಂದ ನಾವು ಜೀವನ ಸ್ತರದ ಸರಿಯಾದ ನಿರ್ಧಾರವನ್ನು ಮಾಡೋಣ. ಈ ಬಗ್ಗೆ ವಿಚಾರ ಮಾಡಿಯೂ ನಾವು ಉತ್ಪಾದನೆಯ ಸಾಧನಗಳ ನಿರ್ಧಾರ ಮಾಡೋಣ. ಹೆಚ್ಚೆಚ್ಚು ಜನರನ್ನು ತೊಡಗಿಸಿಕೊಳ್ಳುವುದರ ಮೂಲಕ ಸಣ್ಣ ಸಣ್ಣ ಗುಡಿಕೈಗಾರಿಕೆಗಳನ್ನು ನಮ್ಮದಾಗಿ ಮಾಡಿಕೊಂಡರೆ ಬಂಡವಾಳ ಹಾಗೂ ಯಂತ್ರಗಳ ಅವಶ್ಯಕತೆ ಕಡಿಮೆಯಾಗುತ್ತದೆ. ಇದರಿಂದ ಅಧಿಕಾರಿಗಳು ನಡೆಸುವ ಪ್ರಭುತ್ವವು ಕಡಿಮೆಯಾಗುತ್ತದೆ. ವಿದೇಶದಿಂದ ಸಾಲ ತೆಗೆದುಕೊಳ್ಳುವುದೂ ತಪ್ಪುತ್ತದೆ. ದೇಶದ ನಿಜವಾದ ಪ್ರಗತಿಯುಂಟಾಗುತ್ತದೆ. ಮತ್ತು ಪ್ರಜಾತಂತ್ರದ ಅಡಿಪಾಯ ಉತ್ತಮವಾಗಿರುತ್ತದೆ. ಶಿಕ್ಷಣ ವ್ಯಕ್ತಿ ಜತೆಗೆ ಇರುವ ಸಂಬಂಧಕ್ಕಿಂತ ಶಿಕ್ಷಣವೂ ಸಮಾಜದ ಜತೆಗೆ ಅಧಿಕವಾಗಿದೆ. ಶಿಕ್ಷಣದ ಪರಿವೇ ಇಲ್ಲದ ಮಾನವನನ್ನು ನಾವು ಊಹಿಸಬಹುದು. 452 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅವನು ತನ್ನ ಸಹಜ ಸ್ವಭಾವದಿಂದಲೇ ತನ್ನ ಜೀವನಯಾತ್ರೆಯನ್ನು ಸಾಗಿಸಬಹುದು. ಆದರೆ ಶಿಕ್ಷಣವಿಲ್ಲದ ಸಮಾಜದ ಕಲ್ಪನೆ ಕಷ್ಟ. ಕೇವಲ ಮಾನವ ಸಮುದಾಯಕ್ಕೆ ``ಸಮಾಜದ"ದ ಹೆಸರು ಸಿದ್ಧಿಸಿದ್ದು ಯಾವ ಕಾಲದಲ್ಲಿಯೂ ಕಾಣಲಿಲ್ಲ. ಆ ಸಮುದಾಯದಲ್ಲಿ ಪ್ರತಿಕ್ಷಣವೂ ಕೆಲವರು ಮನುಷ್ಯರು ಕಡಿಮೆಯಾಗುತ್ತಾ, ಕೆಲವರ ಸಂಖ್ಯೆ ಜಾಸ್ತಿಯಾಗುತ್ತಾ ಇರುತ್ತದೆ. ಮಾನವನ ಆಯು ಪ್ರಮಾಣಕ್ಕೆ ಅನುಗುಣವಾಗಿ ಒಂದು ಕಾಲಾವಧಿಯಲ್ಲಿ ಯಾವುದೇ ಮಾನವ ಸಮುದಾಯದ ಎಲ್ಲ ಘಟಕಗಳು ಭೌತಿಕ ದೃಷ್ಟಿಯಿಂದ ಬದಲಾಗುತ್ತಾ ಇರುತ್ತವೆ. ಆದರೆ ಇದರ ನಂತರ ಕೂಡ ಆ ಮಾನವ ಸಮುದಾಯದ ವ್ಯಕ್ತಿತ್ವ ಮತ್ತು ಚೇತನ ಉಳಿದರೆ, ಹೊಸ ಘಟಕಗಳ ಮತ್ತು ಹಳೆಯ ಘಟಕಗಳ ಮಧ್ಯೆ ಸಂಬಂಧದ ಪ್ರಜ್ಞೆ ಹಾಗೆ ಇದ್ದರೆ, ಹೊಸ ಘಟಕಗಳು ಹಳೆಯ ಘಟಕಗಳ ಜೀವನ ಪ್ರೀತಿಯನ್ನು ತಮ್ಮದಾಗಿಸಿಕೊಂಡು ಹಾಗೆ ಮುನ್ನಡೆದರೆ, ಆ ಸಮುದಾಯಕ್ಕೆ `ಸಮಾಜ' ಎಂಬ ಹೆಸರು ಸಿಗುತ್ತದೆ. ಅಂದರೆ ಇಂದಿನ ಮಾನವ ಮುಂಬರುವ ಪೀಳಿಗೆಗಳಿಗೆ ತಾನು ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಂಪಾದಿಸಿದ ಸಮಸ್ತ ಅನುಭವನ್ನಾಗಲಿ ಅಥವಾ ಆ ಅನುಭವಸಾರನ್ನಾಗಲಿ ನೀಡಿದರೆ ಅಥವಾ ಒಪ್ಪಿಸಿದರೆ, ಆಗ ನಿರಂತರ ಗತಿಶೀಲವಾದ ಒಂದು ಮಾನವ ಸಮೂಹದ ಸೃಷ್ಟಿಯಾಗುತ್ತದೆ. ಇಂಥಹ ಮಾನವ ಸಮುದಾಯಕ್ಕೆ `ಸಮಾಜ' ಎಂಬ ಹೆಸರು ಅನ್ವರ್ಥವಾಗುತ್ತದೆ. ಅನುಭವ ಪ್ರಸಾರದ ಇಂಥ ಕ್ರಿಯೆಯನ್ನು ವಾಸ್ತವದಲ್ಲಿ `ಶಿಕ್ಷಣ' ಎಂದು ಕರೆಯುತ್ತಾರೆ. ಶಿಕ್ಷಣವಿಲ್ಲದಿದ್ದರೆ ಸಮಾಜ ರೂಪಗೊಳ್ಳುವುದಿಲ್ಲ. ಆದ್ದರಿಂದ `ಶಿಕ್ಷಣ'ದ ಬಗ್ಗೆ ಚಿಂತನೆಯನ್ನು ಸಾಮಾಜಿಕ ದೃಷ್ಟಿಕೋನದಿಂದಲೇ ನೋಡುವುದು ಸೂಕ್ತ. ನಮ್ಮ ಶಾಸ್ತ್ರಗಳ ಪ್ರಕಾರ ಇದನ್ನು `ಋಷಿ ಋಣ' ಎನ್ನುತ್ತಾರೆ. ಇದನ್ನು ತೀರಿಸುವುದು ಪ್ರತಿಯೊಬ್ಬನ ಕರ್ತವ್ಯ. ನಾವು ಮುಂಬರುವ ಪೀಳಿಗೆಗಳಿಗೆ ಶಿಕ್ಷಣದ ವ್ಯವಸ್ಥೆಯನ್ನು ರೂಪಿಸುವಾಗ ನಾವು ಆ ಪೀಳಿಗೆಯವರಿಗೆ ಉಪಕಾರವನ್ನು ಮಾಡುತ್ತಾ ಇದ್ದೇವೆ ಎನ್ನುವ ಭಾವನೆ ನನ್ನ ಮನಸ್ಸಿನಲ್ಲಿ ಇರುವುದಿಲ್ಲ. ಆದರೆ ನಮಗೆ ತಲತಲಾಂತರಗಳಿಂದ ಬಳುವಳಿಯಾಗಿ ಬಂದಿರುವ ಈ ಸಂಪತ್ತನ್ನು ಮುಂಬರುವ ಜನಾಂಗಕ್ಕೆ ನೀಡಿ ಪೂರ್ವಿಕರ ಋಣವನ್ನು ತೀರಿಸಿಕೊಳ್ಳುವ ಇಚ್ಛೆ ಇರುತ್ತದೆ, ಪ್ರಜ್ಞೆ ಇರುತ್ತದೆ. ಜಾನ್ ಬುಕನ್ ಎಂಬ ಮಹಾನುಭಾವ ಆ ವಿಷಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ- ``ನಾವು ಭವಿಷ್ಯತ್ತಿನ ಸಂತತಿಯನ್ನು ಋಣಗ್ರಸ್ತರನ್ನಾಗಿ ಮಾಡಬೇಕಾದರೆ ನಮ್ಮ ಪೂರ್ವಿಕರಿಂದ ಋಣಮುಕ್ತರಾಗಬೇಕು''. ಶಿಕ್ಷಣ ಸಂಸ್ಥೆಗಳು ಶಿಕ್ಷಣದ ವ್ಯಾಪ್ತಿ ಮತ್ತು ಗಂಭೀರವಾದ ವ್ಯವಸ್ಥೆ ಎಷ್ಟರಮಟ್ಟಿಗೆ ಇರುತ್ತದೋ ಆಗ ಸಮಾಜವೂ ಅಷ್ಟೇ ಸದೃಢವೂ ಮತ್ತು ಗಂಭೀರವೂ ಆಗುವುದು. ಹೊಸ ರಾಷ್ಟ್ರ ಚಿಂತನ 453 ಪೀಳಿಗೆಯ ಎಷ್ಟೋ ಜನ ಹಿಂದಿನ ಜ್ಞಾನವೆಂಬ ನಿಧಿಯನ್ನು ಬಳಸಿಕೊಂಡರೂ ತಮ್ಮ ಜೀವನ ಕಾರ್ಯಕ್ಷೇತ್ರದಲ್ಲಿ ಹಿಂದುಳಿಯುತ್ತಾರೆ. ಕಾರಣ ತಾವು ಗಳಿಸಿದ ಜ್ಞಾನ ನಿಧಿಗೆ ತಮ್ಮ ಪ್ರಯತ್ನ ಮತ್ತು ಅನುಭವದ ಆಧಾರದ ಮೇಲೆ ಅದನ್ನು ವೃದ್ಧಿಸಲು ಪ್ರಯತ್ನಿಸದಿರುವುದು. ಬದಲಾಗಿ ಅವರು ತಮ್ಮ ಪ್ರಯತ್ನ ಮತ್ತು ಅನುಭವದ ಆಧಾರದ ಮೇಲೆ ಆ ಜ್ಞಾನನಿಧಿಯನ್ನು ವೃದ್ಧಿಸಿದರೆ ಅದು ವೃದ್ಧಿಯಾಗುತ್ತಾ ಹೋಗುವುದು. ಇದಕ್ಕೆ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆಯ ಅವಶ್ಯಕತೆಯಿದೆ. ಈ ಪ್ರಕ್ರಿಯೆಯಲ್ಲಿ ಅಲ್ಪಸ್ವಲ್ಪ ನಷ್ಟವುಂಟಾದರೂ ಚಿಂತೆಯಿಲ್ಲ, ಇದಕ್ಕಾಗಿಯೇ ಎಲ್ಲಿ ಶಿಕ್ಷಣವನ್ನು ವ್ಯಾಪಕ ಮತ್ತು ವೈವಿಧ್ಯಪೂರ್ಣ ಯೋಜನೆಯನ್ನಾಗಿ ಮಾಡಲಾಗುತ್ತದೆಯೋ ಅಲ್ಲಿ ಪ್ರದೇಯದ ಅಸಾರಭೂತ ಅಂಗಗಳ ಪರಿತ್ಯಾಗ ಮತ್ತು ತತ್ವದ ಸಂರಕ್ಷಣೆಯ ದೊಡ್ಡ ಮನೋಲೋಗದಿಂದ ಮಾಡಬೇಕಾಗುತ್ತದೆ. ಇಂತಹ ಜನರ ಅವಶ್ಯಕತೆಯಿದೆ. ಯಾವ ಪೀಳಿಗೆಯ ಸಂಚಿತ ಜ್ಞಾನವನ್ನು ಆತ್ಮ ಮಾಡಿ ಸುಲಭವಾಗಿ ತಿಳಿಯುವಂತೆ ಮಾಡಬಹುದು. ಶಿಕ್ಷಣದ ವ್ಯಾಪಕ ಅರ್ಥದಲ್ಲಿ ಸಮಾಜದ ಪ್ರತಿಯೊಂದು ಘಟಕವೂ ಶಿಕ್ಷಕನ ರೂಪದಲ್ಲಿ ವ್ಯಕ್ತವಾದರೂ ಉಪಯುಕ್ತವಾದ ಕಾರಣಗಳಿಂದಾಗಿಯೂ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ರಾಷ್ಟ್ರ ಜೀವನದ `ಮನಸ್ಸಿನ ಜ್ಞಾನ' ಪ್ರತಿಯೊಂದು ಪೀಳಿಯೊಂದಿಗೆ ಸಮಾಜದ ಪ್ರಾಚೀನ ನಿಧಿಯ ಸಂರಕ್ಷಣೆ, ಸಂವರ್ಧನೆ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಿಕೆ ನಡೆಯುತ್ತಲೇ ಇರುತ್ತದೆ. ಆದರೆ ಹೊಸ ಅನುಭವಗಳನ್ನು ಹಳೆಯ ಅನುಭವಗಳೊಂದಿಗೆ ಒಂದುಗೂಡಿಸುವುದಿಲ್ಲವೋ ಅಲ್ಲಿಯವರೆಗೆ ಆ ಸಮಾಜದ ಮನಸ್ಸಿನಲ್ಲಿ ಸ್ಥಾನ ಪಡೆಯಲಾಗುವುದಿಲ್ಲ. ಪ್ರಸ್ತುತವರೆಗಿನ ಸಮಾಜದ ಸಂಪೂರ್ಣ ಅನುಭವಗಳು, ಜೀವನ ವ್ಯವಹಾರಗಳು -ಸಮನ್ವಿತ, ಏಕೀಕೃತ, ಸುಸಂಬದ್ಧ ಹಾಗೂ ಎಲ್ಲ ರೀತಿಯಿಂದಲೂ ವ್ಯಾಪಕವಾದ ಜ್ಞಾನ ಪ್ರಾಪ್ತಿಯಾಗುವ ಸಾಧ್ಯತೆಯು ಯಾವಾಗಲೂ ಇರುತ್ತದೆ. ಈ ಜ್ಞಾನದ ಮುದ್ರೆ ಎಷ್ಟು ಆಳವಾಗಿರುತ್ತದೋ, ಸ್ಪಷ್ಟ ಮತ್ತು ಸುವ್ಯವಸ್ಥಿತವಾಗಿರುತ್ತದೋ ಅಷ್ಟೂ ಮಾನವ ತನ್ನ ಜೀವನ ಕ್ಷೇತ್ರದಲ್ಲಿ ಸರಳತೆ ಮತ್ತು ಶಾಂತಿಯಿಂದ ಹೆಜ್ಜೆಯಿಡಲು ಸಾಧ್ಯವಾಗುತ್ತದೆ. ಒಂದು ವೇಳೆ ಅವನಿಗೆ ತನ್ನ ರಾಷ್ಟ್ರ ಮನಸ್ಸಿನ ಸರಿಯಾದ ಜ್ಞಾನವಿಲ್ಲದಿದ್ದರೆ ಆಗ ಅವನು ತನ್ನ ಜೀವನದಲ್ಲಿ ಯಾವಾಗಲೂ ಕಳಚಿ ಹೋದಂತಹ ಅನುಭವ ಪಡೆಯುತ್ತಾನೆ. ಶಿಕ್ಷಣದ ಮಾಧ್ಯಮ : ರಾಷ್ಟ್ರ ಮಾನಸದ ಜ್ಞಾನ ಅಥವಾ ಶಿಕ್ಷಣದ ಪ್ರಮುಖ ಮಾಧ್ಯಮಗಳೆಂದರೆ (1) ಸಂಸ್ಕಾರ (2) ಅಧ್ಯಾಪನ ಮತ್ತು (3) ಸ್ವಯಂ ಅಧ್ಯಯನ. ಮನುಷ್ಯ ತನಗರಿವಿಲ್ಲದಂತೆಯೇ ಸಮಾಜದಿಂದ ಸಂಸ್ಕಾರಗಳನ್ನು ಗ್ರಹಿಸುತ್ತಲೇ ಇರುತ್ತಾನೆ. 454 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅವುಗಳಲ್ಲಿ ಸಮಾಜದ ಪ್ರತಿಯೊಂದು ಘಟಕವೂ ಶಿಕ್ಷಕನ ಕೆಲಸವನ್ನು ಮಾಡುತ್ತದೆ. ಸಂಸ್ಕಾರವೆಂಬುದು ಎರಡೂ ಕಡೆಗಳಿಂದಲೂ ಸಾಗಬೇಕಾದ ಪ್ರಕ್ರಿಯೆಯಾಗಿರುತ್ತದೆ. ಮನಸ್ಸಿನ ಅನುಕರಣ, ಸಂವೇದನೆ ಹಾಗೂ ಸೂಚನಾತ್ಮಕ ಪ್ರವೃತ್ತಿಗಳ ನಿಯಮಾನುಸಾರ ಸಾಮರ್ಥ್ಯದಿಂದ ಮಾಡುವ ಕಾರ್ಯಗಳು ಪ್ರಭಾವಕಾರಿಯಾಗಿರುತ್ತದೆ. ಸಹಜವಾಗಿ ಹಿಂದಿನ ಪೀಳಿಗೆಯ ಆಚಾರ-ವಿಚಾರಗಳ ಸಂಸ್ಕಾರಗಳು ಹೊಸ ಪೀಳಿಗೆಯ ಮೇಲೆ ಪ್ರಭಾವಬೀರುತ್ತವೆ. ತಂದೆ-ತಾಯಿ, ಪರಿವಾರ, ಪುರಜನ, ಗುರುಜನ, ಅಗ್ರಪಾಠಿ, ಸಹಪಾಠಿ, ಸಮಾಜದ ಮುಖಂಡ ಮತ್ತು ನಾಯಕ ಮುಂತಾದವರೆಲ್ಲ ವಿವಿಧ ರೀತಿಯಲ್ಲಿ ಸಂಸ್ಕಾರಗಳನ್ನು ಹಾಕುತ್ತಲೇ ಇರುತ್ತಾರೆ. ತಮ್ಮ ಕ್ರಿಯೆಗಳ ಪರಿಣಾಮ ಕೇವಲ ತಮ್ಮ ಮೇಲಲ್ಲದೆ ಬೇರೆಯವರ ಮೇಲೂ ಬೀಳುತ್ತದೆ. ಎಂಬುದನ್ನು ಅವರು ಯೋಚಿಸುವುದಿಲ್ಲ. ಅವರು ತಮ್ಮನ್ನಷ್ಟೇ ಅಲ್ಲದೆ ಇತರರನ್ನೂ ಕೂಡ ತಮ್ಮ ಕರ್ಮ ಬಂಧನದಲ್ಲಿ ಕಟ್ಟಿಹಾಕುತ್ತಾರೆ. ಅಧ್ಯಾಪನ ಹಾಗೂ ಲೋಕಶಿಕ್ಷಣ: ಶಿಕ್ಷಣದ ಸರ್ವಸಾಮಾನ್ಯ ಸಾಧನವೆಂದರೆ ಅಧ್ಯಾಪನ, ಸಾಮಾನ್ಯ ಅಕ್ಷರಜ್ಞಾನ ಹಾಗೂ ಪುಸ್ತಕಗಳನ್ನು ಓದುವುದು ಅಥವಾ ತತ್ಸಂಬಂಧಿ ಪಠ್ಯಕ್ರಮದ ಅಧ್ಯಾಪನವೂ ಈ ಕ್ಷೇತ್ರಕ್ಕೆ ಸೇರಿವೆಯೆಂದು ತಿಳಿಯಲಾಗುತ್ತದೆ. ಆದರೆ ವಾಸ್ತವದಲ್ಲಿ ಈ ಕ್ಷೇತ್ರವೂ ಬಹಳ ವಿಶಾಲವಾಗಿದೆ. ಮಾನವನ ಹೆಚ್ಚಿನ ಜ್ಞಾನದ ಕೆಲವು ಅಂಶ ಭಾಷೆಯ ಮೂಲಕ ವ್ಯಕ್ತವಾಗುತ್ತದೆ ಮತ್ತು ಅದರಲ್ಲಿ ಒಂದಂಶ ಮಾತ್ರ ಲಿಪಿಬದ್ಧವಾಗಿರುತ್ತದೆ. ಆದ್ದರಿಂದ ಲಿಪಿ ಜ್ಞಾನ ಅಥವಾ ಭಾಷಾ ಜ್ಞಾನದಿಂದ ಶಿಕ್ಷಣದ ಪೂರ್ಣ ಉದ್ದೇಶ ಸಿದ್ಧಿಯಾಗುವುದಿಲ್ಲ. ಅಧ್ಯಾಪನದಲ್ಲಿ ಎಲ್ಲ ರೀತಿಯ ಕ್ರಿಯೆಗಳು ಬರುತ್ತವೆ. ಅವುಗಳ ಮೂಲಕ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿ ಸಮೂಹ ತಮ್ಮ ಹತ್ತಿರವಿರುವ ಜ್ಞಾನವನ್ನು ಮತ್ತೊಬ್ಬರಿಗೆ ಕೊಡುವ ಪ್ರಯತ್ನವನ್ನು ಮಾಡುತ್ತಾನೆ. ಈ ರೀತಿಯ ಪ್ರಯತ್ನಗಳು ಪಾಠಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾತ್ರವಲ್ಲದೆ ಮನೆ ಮನೆಗಳಲ್ಲಿ, ಹೊಲಗದ್ದೆಗಳಲ್ಲಿ, ಕಾರ್ಖಾನೆಗಳಲ್ಲಿ, ಅಂಗಡಿಗಳಲ್ಲಿ, ಪಾಠಶಾಲೆಗಳಲ್ಲಿ, ಕಲಾಭವನಗಳಲ್ಲಿ, ಆಟದ ಮೈದಾನಗಳಲ್ಲಿ ಮತ್ತು ಗರಡಿ ಮನೆಗಳಲ್ಲಿ ಕೂಡ ಮನುಷ್ಯನ ವಿವಿಧ ರೀತಿಯ ಅಧ್ಯಾಪನಗಳು (ಅಧ್ಯಯನಗಳು) ನಡೆಯುತ್ತಲೇ ಇರುತ್ತವೆ. ಹಿಂದಿನ ಕಾಲದ ಕಥೆ ಮತ್ತು ಕೀರ್ತನೆ ಮತ್ತು ಇಂದಿನ ರೇಡಿಯೋ, ಚಲನಚಿತ್ರ, ಸಮಾಚಾರಪತ್ರ ಇತ್ಯಾದಿಗಳೆಲ್ಲವೂ ಈ ವ್ಯಾಪ್ತಿಯಲ್ಲಿ ಬರುತ್ತವೆ. ಸ್ವಯಂ ಅಧ್ಯಯನ : ಸ್ವಾಧ್ಯಾಯ ಮನುಷ್ಯನ ಸ್ವಯಂ ಅಧ್ಯಾಪನವಾಗಿದೆ. ಸ್ವಯಂ ಅಧ್ಯಯನಕ್ಕೆ ರಾಷ್ಟ್ರ ಚಿಂತನ 455 ಲಿಪಿಯ ಜ್ಞಾನ ಬಹಳ ಆವಶ್ಯಕವಾಗಿದೆ. ಓದುವುದು, ಅರ್ಥಮಾಡಿಕೊಳ್ಳುವುದು ಮತ್ತು ಯೋಚಿಸುವುದರ ಮೂಲಕ ಮನುಷ್ಯ ಕರಗತ ಮಾಡುತ್ತಾನೆ. ಅಧ್ಯಯನವಿಲ್ಲದೆ ಗಳಿಸಿದ ಜ್ಞಾನ ನೆಲೆಯೂರುವುದಿಲ್ಲ ಮತ್ತು ವೃದ್ಧಿಸುವುದೂ ಇಲ್ಲ. ಸ್ವಯಂ ಅಧ್ಯಯನವಿಲ್ಲದೆ ಜ್ಞಾನವನ್ನು ಜೀವನದ ಅಂಗವನ್ನಾಗಿ ಮಾಡಿಕೊಂಡು ಉದ್ದೀಪನಗೊಳಿಸುವ ಪ್ರಶ್ನೆಯೇ ಬರುವುದಿಲ್ಲ. ಆದ್ದರಿಂದ ``ಸ್ವಾಧ್ಯಾಯನ್‍ಮಾ ಪ್ರಮದ" ಇದು ಕುಲಪತಿಯು ಸ್ನಾತಕನಿಗೆ ದೀಕ್ಷಾಂತ ಸಮಾರಂಭದಲ್ಲಿ ನೀಡುವ ಆದೇಶ. ಪುಸ್ತಕಾಲಯ ಮುಂತಾದ ವ್ಯವಸ್ಥೆಗಳು ಸ್ವಾಧ್ಯಾಯನಕ್ಕಾಗಿ ಅವಶ್ಯಕವಾಗಿರುತ್ತದೆ. ಶಿಕ್ಷಣದ ಸರ್ವಾಂಗ ಪೂರ್ಣ ವಿಚಾರಮಾಡಿದರೆ ಶಾಲಾ ಶಿಕ್ಷಣ ಕ್ರಮ ಹಾಗೂ ಅದರ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ವ್ಯಕ್ತಿ ಹಿಂದಿನ ಜ್ಞಾನ ನಿಧಿಯನ್ನು ಭವಿಷ್ಯಕ್ಕೂ ತಲುಪಿಸುವ ಒಬ್ಬ ಆಭಿಕರ್ತ ಮಾತ್ರವೆಂದಾದಲ್ಲಿ ಅವನ ಶಿಕ್ಷಣದಲ್ಲಿ ಇದರ ಸಮಾವೇಶವಾಗಬೇಕು. ಇದಾಗದಿದ್ದಲ್ಲಿ ಆ ಸಮಾಜ ಚೈತನ್ಯಶೀಲ ಹಾಗೂ ಪ್ರಭಾವೀ ಘಟಕವಾಗುವ ಸ್ಥಾನದಲ್ಲಿ ಸಮಾಜದಿಂದ ಅಸಂಬದ್ಧ ಹಾಗೂ ಮೃತಪ್ರಾಯದಂತಾಗಿ ಸಮಾಜಕ್ಕೆ ಅಹಿತಕರವಾಗುವುದು. ಶಾಲಾ ಶಿಕ್ಷಣ ಮಾತ್ರವೇ ಮನುಷ್ಯನನ್ನು ರೂಪಿಸಲು ಸಾಧ್ಯವಿಲ್ಲ. ಶಾಲಾ ಶಿಕ್ಷಣದಿಂದ ಹೊರತಾದ ಸಂಸ್ಕಾರ, ಅಧ್ಯಾಪನದಂತಹ ಬಹಳಷ್ಟು ಕ್ಷೇತ್ರಗಳು ಇವೆ. ಈ ಎರಡೂ ಕ್ಷೇತ್ರಗಳಲ್ಲಿ ವಿರೋಧವಿದ್ದರೆ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ರೀತಿಯ ಅಂತರದ್ವಂದ್ವ ಉಂಟಾಗುತ್ತದೆ. ಒಂದು ಸಮಾನ್ವಿತ ಏಕೀಕೃತ, ಸರ್ವಾಂಗಪೂರ್ಣ, ಅಖಂಡ ವ್ಯಕ್ತಿತ್ವದ ವಿಕಾಸವಾಗುವ ಬದಲು ಅದರ ಪ್ರವೃತ್ತಿಯಲ್ಲಿ ಬೇರೆಮಾಡಲ್ಪಟ್ಟ ನಿಷ್ಠೆಗಳುಂಟಾಗಿ ಸಮಾಜ ಮತ್ತು ಅದರ ನಡುವೆ ಒಂದು ಕಂದಕವುಂಟಾಗುತ್ತದೆ. ಆ ದೃಷ್ಟಿಯಿಂದ ಶಿಕ್ಷಣದ ಮಾಧ್ಯಮವು (ಸ್ವಂತ) ಮಾತೃಭಾಷೆಯಲ್ಲಿಯೇ ಆಗಬೇಕೆಂಬುದು ಸಹಜವಾದುದು. ಭಾಷೆ ಕೇವಲ ಅಭಿವ್ಯಕ್ತಿಯ ಮಾಧ್ಯಮವಷ್ಟೇ ಅಲ್ಲ, ಅದು ಸ್ವತಃ ಅಭಿವ್ಯಕ್ತಿಯೂ ಆಗಿದೆ. ಭಾಷೆಯ ಒಂದೊಂದು ಶಬ್ದ, ವಾಕ್ಯರಚನೆ, ನುಡಿಗಟ್ಟುಗಳು ಮುಂತಾದವುಗಳ ಹಿಂದೆ ಸಮಾಜ ಜೀವನದ ಅನುಭವಗಳು, ರಾಷ್ಟ್ರದ ಘಟನಾವಳಿಗಳ ಇತಿಹಾಸವೂ ಅಡಗಿದೆ. ಅಲ್ಲದೆ ತಮ್ಮದೇ ಆದ ಭಾಷೆ ವ್ಯಕ್ತಿಯನ್ನು ಬೇರೆ ಬೇರೆ ಕೋಣೆಗಳಲ್ಲಿ ಹಂಚುವುದಿಲ್ಲ. ಶಿಕ್ಷಣದ ಈ ಸಾಮಾಜಿಕ ಉದ್ದೇಶವನ್ನು ನೆರವೇರಿಸಲು ಪ್ರಯತ್ನ ಪಟ್ಟಾಗ ವ್ಯಕ್ತಿಯು ಸಹಜವಾಗಿಯೇ ಚತುರ್ವಿಧ ಪುರುಷಾರ್ಥಗಳಿಗಾಗಿ ಪ್ರಯತ್ನಿಸಲು ಯೋಗ್ಯನೂ, ಸಮರ್ಥನೂ ಆಗುತ್ತಾನೆ. 456 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 14. ಸರಿಯಾದ ಶಬ್ದ ಸರಿಯಾದ ಅರ್ಥ. ಸಮಾಜ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರ ಈ ನಾಲ್ಕರಲ್ಲೂ ಈ ಶಬ್ದವಿದೆ. ಅದರೊಂದಿಗೆ ಜೀವನದ ಗಾಢ ಸಂಬಂಧವಿದ್ದರೂ ಅದರ ವಿಚಾರದಲ್ಲಿ ದೇಶದಲ್ಲಿ ಬಹಳ ದೊಡ್ಡ ಭ್ರಾಂತಿ ವ್ಯಾಪಿಸಿದೆ. ಇದಕ್ಕೆ ಮೂಲ ಕಾರಣವೆಂದರೆ ನಾವು ವಿದೇಶೀ ಭಾಷೆಯಲ್ಲಿ ಬೇರೆ ಪರ್ಯಾಯ ಹುಡುಕಲು ಪ್ರಯತ್ನಿಸುತ್ತಿದ್ದರೂ ಅಲ್ಲಿ ಕೂಡ ಅದೇ ರೀತಿಯ ಪರ್ಯಾಯ ಶಬ್ದಗಳ ಹಿಂದೆ ಯಾವ ಭಾವನೆ ಅವರ ಭಾಷೆಯಲ್ಲಿ ಇದೆಯೋ ಅದನ್ನು ತಮ್ಮ ದೇಶದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿಯಾಗಿ ಈ ಶಬ್ದ ನಮಗೆ ಕಷ್ಟದಾಯಕವೂ ಮತ್ತು ಮತಿಭ್ರಮಣೆಯನ್ನು ಉಂಟುಮಾಡುವಂತದ್ದಾಗಿದೆ. ರಾಷ್ಟ್ರ:- ಮೊತ್ತಮೊದಲನೆಯದಾಗಿ ರಾಷ್ಟ್ರಶಬ್ದವನ್ನೇ ತೆಗೆದುಕೊಳ್ಳೋಣ. ಇಂದು ನಮ್ಮಲ್ಲಿ ಪ್ರಾದೇಶಿಕ, ರಾಷ್ಟ್ರವಾದದ ಕಲ್ಪನೆ ಪ್ರಚಲಿತವಾಗಿದೆ. ಈಗಾಗಲೇ ಯಾವುದು ಆಗಿದೆಯೋ ಮತ್ತೆ ಅದರ ವಿಚಾರ ಹೇಗೆ ಏನೇ ಇರಲಿ ಅದನ್ನು ಈ ರಾಷ್ಟ್ರದ ಅಂಗವನ್ನಾಗಿ ಒಪ್ಪಿಕೊಂಡು ನಡೆಯಬೇಕು ಎಂದು ಜನರು ಹೇಳುತ್ತಾರೆ. ಉದಾಹರಣೆ: ಒಬ್ಬ ಸತ್ಪುರುಷ ಸಂಸತ್ತಿನ ಆಂಗ್ಲೋ ಇಂಡಿಯನ್ ಸದಸ್ಯ ಶ್ರೀ ಫ್ರಾಂಕ್ ಆ್ಯಂಟೋನಿಯ ಮೂಲಕ ಪ್ರಸ್ತುತ ಆಂಗ್ಲ ವಿಷಯದ ಪ್ರಸ್ತಾಪದ ವಕಾಲತ್ತನ್ನು ಮಾಡುತ್ತಾ ಅರ್ಥೈಸುತ್ತಿದ್ದುದು ಏನೆಂದರೆ: ಆಂಗ್ಲೋ-ಇಂಡಿಯನ್ ಕೂಡ ಭಾರತದ ರಾಷ್ಟ್ರವಾಸಿ. ಆದ್ದರಿಂದ ಯಾವ ಭಾಷೆಗೆ ಅವರು ಮಾತೃಭಾಷೆಯೆಂದು ಹೇಳುತ್ತಾರೋ ಅದಕ್ಕೆ ನಾವು ಸಂವಿಧಾನದಲ್ಲಿ ಏಕೆ ಸ್ಥಾನ ಕೊಡಬಾರದು? ನಾನು ಇದಕ್ಕೆ ಉತ್ತರವಾಗಿ ಇಷ್ಟು ಹೇಳಲು ಬಯಸುತ್ತೇನೆ. ರಾಷ್ಟ್ರವಾಸಿಯಾಗಿದ್ದಾನೋ? ರಾಷ್ಟ್ರವಾಸಿಯಾಗಬೇಕಾಗಿದೆಯೋ? ಈ ಎರಡು ಮಾತುಗಳಲ್ಲೂ ಬಹಳ ಅಂತರವಿದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏನೆಂದರೆ ಯಾರು ಈ ಭೂಮಿಯಲ್ಲಿ ಜನ್ಮತಾಳಿದ್ದರೋ ಅವರು ರಾಷ್ಟ್ರವಾಸಿಯಾಗಲು ಶ್ರಮಪಡಬೇಕು. ಆದರೆ ಈ ವಿಚಾರದಲ್ಲಿ ಮತಭೇದ ಉಂಟಾಗಬಹುದು. ಅವರು ಇವತ್ತು ಏನಾಗಿದ್ದಾರೆಯೋ ಅದೇ ರೂಪದಲ್ಲಿ ಪೂರ್ಣ ರಾಷ್ಟ್ರೀಯತೆ ಇದೆಯೋ ಇಲ್ಲವೋ. ನಾನು ಅವನಿಗೆ ಹೇಳಿದೆ ಇಂದು ಅವರು ಆಂಗ್ಲಭಾಷೆಯನ್ನು ತಮ್ಮ ಮಾತೃ ಭಾಷೆ ಎಂದು ಅಂಗೀಕರಿಸುತ್ತಾರೆ ಮತ್ತು ನೀವು ಹೇಳುತ್ತೀರಿ ಅವರು ರಾಷ್ಟ್ರವಾದಿ ಎಂದು. ನೀವು ಅವರ ಬೇಡಿಕೆಯನ್ನು ಒಪ್ಪಿಕೊಂಡಿದ್ದೇ ಆದರೆ ನಮ್ಮ ದೇಶದಲ್ಲಿ ವಾಸಿಸುವ ಕೆಲವು ರೋಮನ್ ಕ್ಯಾಥೋಲಿಕ್ ಜನರು ರೋಮ್‍ನ ಪೋಪ್‍ನನ್ನು ಕೇವಲ ತಮ್ಮ ಧರ್ಮಗುರು ಮಾತ್ರವೇ ಅಲ್ಲ ಎಲ್ಲಾ ರೀತಿಯಿಂದಲೂ ಜೀವನದ ಕೇಂದ್ರ ಎಂಬುದಾಗಿ ಒಪ್ಪಿಕೊಂಡು ನಡೆಯುತ್ತಿದ್ದಾರೆ. ಭಾರತದ ರಾಷ್ಟ್ರಪುರುಷರ ಶ್ರೇಣಿಯಲ್ಲಿ ಅವರನ್ನು ಇಡಲಿ ಎಂಬ ಬೇಡಿಕೆಯನ್ನು ಇಟ್ಟರೆ? ಮತ್ತು ಈ ಸಿದ್ಧಾಂತದ ರಾಷ್ಟ್ರ ಚಿಂತನ 457 ಆಧಾರದ ಮೇಲೆ ಕೆಲವು ಜನರು ತಮ್ಮ ಅತಿಯಾದ ಪ್ರಾಂತೀಯತೆ ನಿಷ್ಠೆಯ ಕಾರಣದಿಂದಾಗಿ ವಿದೇಶೀ ರಾಜ್ಯದ ಪರವಾನಗಿ ಪಡೆದುಕೊಂಡು ನಮ್ಮ ದೇಶದಲ್ಲಿ ನೆಲೆಯೂರಿದರೆ ಅವರಿಗೆ ನೀವು ಏನನ್ನುತ್ತೀರಾ ? ಈ ರೀತಿ ರಾಷ್ಟ್ರೀಯತೆಯ ಮೂಲ ತತ್ವಗಳ ವಿಚಾರದಲ್ಲಿ ಇಂದು ನಮ್ಮಲ್ಲಿ ಬಹಳ ಭ್ರಮೆಯಿದೆ. ಅದರ ಸೃಷ್ಟಿ ವ್ಯಾಖ್ಯಾನ ಮಾಡುವುದು ರಾಷ್ಟ್ರಹಿತದ ದೃಷ್ಟಿಯಿಂದ ಬಹಳ ಅವಶ್ಯಕವಾಗಿದೆ. ಧರ್ಮ :- ಎರಡನೆಯ ಶಬ್ದ ಧರ್ಮವು ಈ ರೀತಿಯ ಭ್ರಮೆಯಲ್ಲಿ ಸಿಕ್ಕಿಬಿದ್ದಿದೆ. ಧರ್ಮಕ್ಕೆ ಉಪಾಸನಾ ಪದ್ಧತಿಯ ಜೊತೆಯಲ್ಲಿ ಜನರು ಮುಸಲ್ಮಾನ ಧರ್ಮದ ಸಮಾನಕ್ಕೆ ಹಿಂದೂ ಧರ್ಮದ ಶಬ್ದವನ್ನು ಪ್ರಯೋಗಿಸುತ್ತಿದ್ದಾರೆ. ಈ ಶಬ್ದ ಪ್ರಯೋಗ ಸರಿಯಲ್ಲ. ಏಕೆಂದರೆ ಹಿಂದೂ ಧರ್ಮದ ಅಂತರಾಳದಲ್ಲಿ ಅನೇಕ ಭಾವನೆಗಳು ಇವೆ. ಅವು ಕೇವಲ ಪೂಜಾಪದ್ಧತಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ವೇಳೆ ಧರ್ಮ ಶಬ್ದ ಆಂಗ್ಲಭಾಷೆಯ `ರಿಲಿಜನ್' ಪರ್ಯಾಯ ಶಬ್ದವನ್ನಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ. ಆದರೆ ಈ ಒಂದು ಚಿಕ್ಕ ತಪ್ಪಿನಿಂದಾಗಿ ಧರ್ಮ ಶಬ್ದದ ಮೂಲ ಅಭಿಪ್ರಾಯ ಲೋಪವಾಗುತ್ತಿದೆ ಮತ್ತು ಅದರ ಮೇಲೆ ರಿಲಿಜನ್ ಶಬ್ದದ ಭಾವವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಕಾರಣದಿಂದಾಗಿ ಇಂದು ನಮ್ಮ ರಾಷ್ಟ್ರ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಹುಟ್ಟಿಕೊಂಡಿವೆ. ಸಮಾಜ :- ಇದೇ ರೀತಿ ಈ ಸಮಾಜ ಏನು? ಸಮಾಜ ಶಬ್ದದಿಂದ ಯಾವ ಅಭಿಪ್ರಾಯ ಹೊರಬರುತ್ತಿದೆ? ಯಾವುದಕ್ಕೆ ನಾವು ಹಿಂದೂ ಸಮಾಜ ಎನ್ನುತ್ತೇವೆ? ಅದು ಎಲ್ಲಿಂದ ಬಂತು? ಹೇಗೆ ಆಯಿತು? ಅದರ ವಿಕಾಸ ಹೇಗೆ? ಯಾವಾಗ ಪ್ರಾರಂಭವಾಯಿತು? ಈ ಎಲ್ಲಾ ವಿಚಾರಗಳ ಬಗ್ಗೆ ಯಾವುದೇ ವಿಚಾರವನ್ನು ಮಾಡದೆ ನಾವು `ಸಮಾಜ' ಶಬ್ದವನ್ನು ಆಂಗ್ಲದಲ್ಲಿ (ಸೊಸೈಟಿ) ಶಬ್ದದಿಂದ ಅನುವಾದ ಮಾಡಿದ್ದೇವೆ. ಈ ಕ್ಷಣದಲ್ಲಿಯೂ ಕೂಡ ಈ ಬಗ್ಗೆ ವಿಚಾರ ಮಾಡುವುದಿಲ್ಲ. ಏಕೆಂದರೆ ಈ ಎರಡು ಶಬ್ದಗಳ ಉತ್ಪತ್ತಿ, ವಿಕಾಸ ಮತ್ತು ಮೂಲ ಭಾವನೆಗಳಲ್ಲಿ ಎಷ್ಟೋ ಮೂಲಭೂತವಾದ ಅಂತರವಿದೆ. ಸಂಸ್ಕೃತಿ:- ಕೊನೆಯ ಶಬ್ದ ಸಂಸ್ಕೃತಿ. ಇದರ ಸಂಬಂಧದಲ್ಲಿ ಎಲ್ಲಕ್ಕಿಂತ ಹೆಚ್ಚು ಭ್ರಮೆ ವ್ಯಾಪಿಸಿದೆ. ಆ ಭ್ರಮೆ ಎಲ್ಲಿಯವರೆಗೆ ವ್ಯಾಪಿಸಿದೆ ಎಂದರೆ ಇಂದು ಸಂಸ್ಕೃತಿ ಎಂದರೆ ಹಾಡು, ಕುಣಿತ, ಸಿನಿಮಾ ಥಿಯೇಟರ್ ಅಥವಾ ಈ ರೀತಿಯ ಮನೋರಂಜನೆಯ ಕಾರ್ಯಕ್ರಮ. ಇಂದಿನ ಸಾಂಸ್ಕೃತಿಕ ತಂಡಗಳ ಹೆಸರಿನಲ್ಲಿ ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಲು ಕಳಿಸುತ್ತೇವೆಯೋ ಅವುಗಳಲ್ಲಿ ಕೇವಲ ಕುಣಿಯುವ ಹಾಡುವ ಕಲಾವಿದರು ಮಾತ್ರ ಇರುತ್ತಾರೆ. ಪ್ರತಿಸಲ ಇದೂ ಕೂಡ ನಮಗೆ ಗೊತ್ತಾಗುವುದಿಲ್ಲ. ಏನೆಂದರೆ ಭಾರತೀಯ 458 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಗೀತ ಮತ್ತು ನೃತ್ಯ ಗೊತ್ತಿದೆಯೋ ಇಲ್ಲವೋ ಅನ್ನಿಸುತ್ತದೆ. ಇದು ಭಾರತೀಯ ಸಂಸ್ಕೃತಿಯೇ. ಈ ಸಂಸ್ಕೃತಿಯನ್ನು ಪ್ರಚಾರ ಮಾಡಲು ಒಂದು ಸಮಯದಲ್ಲಿ ಭಾರತೀಯ ಸಂತರು, ಮಹರ್ಷಿಗಳು ದುರ್ಗಮ ಹಿಮಾಲಯವನ್ನು ದಾಟಿ ಏಷ್ಯಾದ ದೂರ ದೇಶಗಳಿಗೆ ಹೋಗಲಿಲ್ಲವೇ? ಸಂಸ್ಕೃತಿಯ ಪ್ರಚಾರ ಮಾಡಲು ಸ್ವಾಮಿ ವಿವೇಕಾನಂದರು ಒಬ್ಬಂಟಿಯಾಗಿ ಅಮೆರಿಕಾಕ್ಕೆ ಹೋಗಲಿಲ್ಲವೇ? ಇಂದು ಪ್ರತಿಯೊಬ್ಬ ಸಿನಿಮಾ ತಾರೆಯರು ವಿದೇಶದಲ್ಲಿ ಹೋಗಿ ಸ್ವಾಮಿ ವಿವೇಕಾನಂದರ ಮಹಾನ್ ಮಿಷನ್‍ನ ಅಧಿಕಾರಿಣಿಯಾಗಿ ಕುಳಿತುಕೊಳ್ಳುತ್ತಾರೆ ಎಂದು ಇಂದು ಅನ್ನಿಸುತ್ತದೆ. ಕೇವಲ ಇದಕ್ಕಾಗಿ ಸಂಸ್ಕೃತಿಯ ವಿಚಾರದಲ್ಲಿ ನಮ್ಮ ಕಲ್ಪನೆಗಳು ಸ್ಪಷ್ಟವಾಗಿ ಇಲ್ಲದಿರುವುದರಿಂದ ಇದೆಲ್ಲಾ ಆಗುತ್ತಿದೆ. ಸಂಸ್ಕೃತಿ ಮತ್ತು ರಾಷ್ಟ್ರ:- ಆದ್ದರಿಂದ ಸಂಸ್ಕೃತಿ ಎಂದರೇನು ಎಂಬುದನ್ನು ವಿಚಾರ ಮಾಡೋಣ. ಈ ವಿಚಾರವನ್ನು ಮಾಡುವುದರ ಆವಶ್ಯಕತೆ ಇದೆ. ಏಕೆಂದರೆ ಸಂಸ್ಕೃತಿ ಸಾಮಾನ್ಯವಾಗಿ ಯಾವುದೇ ದೇಶದ ಆತ್ಮವಾಗಿರುತ್ತದೆ ಮತ್ತು ಯಾವುದೇ ರಾಷ್ಟ್ರ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಅದರ ಆತ್ಮ ಅದರೊಳಗೆ ವಿರಾಜಮಾನವಾಗಿರುತ್ತದೆ. ಕೇವಲ ಹೊರಗಿನ ಉಪಕರಣಗಳಿಂದ ರಾಷ್ಟ್ರ ಜೀವಂತವಾಗಿರುವುದಿಲ್ಲ. ರಾಷ್ಟ್ರದಲ್ಲಿ ವಾಸಿಸುವ ಮನುಷ್ಯ ಹೋಗುತ್ತಾ ಬರುತ್ತಾ ಇರುತ್ತಾನೆ. ಅವರ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತಾ ಇರುತ್ತದೆ. ರಾಷ್ಟ್ರದ ಭೂಮಿ ಕೂಡ ಆ ಮನುಷ್ಯ ಸಾಮರ್ಥ್ಯದ ಅನುಸಾರ ಅವರ ಹತ್ತಿರವೇ ಇರುತ್ತದೆ. ಆಗಾಗ ಬೇರೆಯವರ ಅಧಿಕಾರದಲ್ಲಿ ನಡೆಯುತ್ತಿರುತ್ತದೆ. ಈ ಎರಡೂ ರೀತಿಯ ನ್ಯೂನ್ಯಾಧಿತ್ಯದಿಂದ ರಾಷ್ಟ್ರದ ಅಸ್ತಿತ್ವದ ಮೇಲೆ ಪ್ರಭಾವ ಉಂಟಾಗುವುದಿಲ್ಲ. ಆದರೆ ಒಂದು ಸಲ ಈ ಎರಡನ್ನೂ ನಾವು ಒಂದುಗೂಡಿಸಿದಾಗ ಸಂಸ್ಕೃತಿಯೆಂಬುದು ಅಲ್ಲಿಗೆ ಕೊನೆಯಾಗುತ್ತದೆ. ಆಗ ರಾಷ್ಟ್ರಜೀವನದ ಅಂತ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾವ ರೀತಿ ಆತ್ಮ ಹೋದ ಮೇಲೆ ಶರೀರಕ್ಕೆ ಅರ್ಥವಿರುವುದಿಲ್ಲವೋ ಅದೇ ರೀತಿ ಅಂತ್ಯವಾದ ಮೇಲೆ ಉಳಿದ ತತ್ವಗಳು ಇದ್ದರೂ ಕೂಡ ರಾಷ್ಟ್ರಕ್ಕೆ ಹಾನಿಯಾಗುತ್ತಾ ಹೋಗುತ್ತದೆ. ರಾಷ್ಟ್ರ ಯಾವಾಗ ಸಾಯುತ್ತದೆ :- ಇವತ್ತು ನಾವು ಹೇಳುತ್ತೇವೆ. ಪುರಾಣ ರಾಷ್ಟ್ರವಾದ ಗ್ರೀಸ್ ಅಂತ್ಯವಾಗಿದೆ ಎಂದು. ಏನು ಅಂತ್ಯವಾಗಿದೆ? ಗ್ರೀಸ್ ಭೂಮಿಯ ಮೇಲೆ ಎಲ್ಲಿತ್ತೋ ಅಲ್ಲಿಯೇ ಇದೆ. ಈಗಲೂ ಭೂಪಟದಲ್ಲಿ ಅದನ್ನು ನೋಡಬಹುದು. ಅಲ್ಲಿ ಕೂಡ ಜನರಿದ್ದಾರೆ. ಯಾವುದೇ ಭೂಕಂಪವಾದಾಗ ಅಲ್ಲಿಯ ಜನರೆಲ್ಲಾ ಒಂದೇ ಸಲ ಸಮಾಪ್ತಿಯಾದ ಮೇಲೆ ಬೇರೊಂದು ಜಾಗದಿಂದ ತೆಗೆದುಕೊಂಡು ಬಂದು ಇಟ್ಟಿಲ್ಲ. ವಾಸ್ತವಿಕತೆ ಏನೆಂದರೆ ಪುರಾತನ ಜನರ ಸಂತತಿ ಅಲ್ಲಿ ಈಗಲೂ ಇದೆ. ಆದರೆ ಪುರಾತನ ಸಂಸ್ಕೃತಿ ಎಂಬುದು ಅಲ್ಲಿ ಸಮಾಪ್ತಿಯಾಗಿದೆ. ರಾಷ್ಟ್ರ ಚಿಂತನ 459 ಪುರಾತನ ಜನರ ಜೀವನ ಪದ್ಧತಿ ನಷ್ಟವಾಗಿದೆ. ಆದ್ದರಿಂದ ನಾವು ಗ್ರೀಸ್‍ನ ಹಳೆಯ ರಾಷ್ಟ್ರ ಸತ್ತುಹೋಗಿದೆ ಎಂದು ಹೇಳುತ್ತೇವೆ. ಇದೇ ರೀತಿಯಾಗಿ ಈಜಿಪ್ಟ್ ಕೂಡ ನಾಶವಾಯಿತು. ರೋಮ್‍ನ ಅಸ್ತಿತ್ವ ಕೂಡ ಉಳಿಯಲಿಲ್ಲ. ಅಂದರೆ ಸಂಸ್ಕೃತಿ ಎಷ್ಟೊಂದು ಮಹತ್ವಪೂರ್ಣ ತತ್ವವಾಗಿದೆಯೆಂದರೆ ಅದು ನಷ್ಟವಾದಾಗ ಸಂಪೂರ್ಣ ರಾಷ್ಟ್ರಜೀವನದ ಪ್ರವಾಹವೇ ಭಗ್ನವಾಗುತ್ತದೆ. ಆದ್ದರಿಂದ ಅದರ ಮೂಲ ರೂಪದ ವಿಚಾರ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಸಂಸ್ಕೃತಿ ಶಬ್ದದ ಉತ್ಪತ್ತಿ :- ಸಂಸ್ಕೃತಿ ಶಬ್ದ ಸ್ವಲ್ಪ ಹೊಸದಾದರೂ ಕೂಡ ಪುರಾತನ ಸಂಸ್ಕೃತಿಯ ವಾಙ್ಮಯದಲ್ಲಿ ಈ ಶಬ್ದ ಸಿಗುವುದಿಲ್ಲ. ಆದರೆ ಹೊಸದಾದರೂ ಕೂಡ ಇದು ಬಹಳ ಪ್ರಚಲಿತದಲ್ಲಿದೆ. ಮತ್ತು ಹಿಂದೂಸ್ಥಾನದ ಸರಿಸುಮಾರು ಎಲ್ಲ ಭಾಷೆಗಳಲ್ಲಿ ಏಕಾಗಕೋ ಬಿಟ್ಟರೂ ಕೂಡ ಸಂಸ್ಕೃತಿ ಶಬ್ದಕ್ಕಿರುವ ಸಂಬಂಧ ಬಹಳ ಪುರಾತನವಾಗಿದೆ. ಆ ಶಬ್ದವೇ ಸಂಸ್ಕಾರ. ಎಲ್ಲರಿಗೂ ಇದರ ಪರಿಚಯವಿದೆ. ಮತ್ತು ವ್ಯಾಕರಣದ ದೃಷ್ಟಿಯಿಂದ ಸ್ವಲ್ಪ ವಿಚಾರ ಮಾಡಿದರೆ ಸಂಸ್ಕಾರ ಎಂಬುದು ಸಂಸ್ಕೃತಿಗಿಂತ ಭಿನ್ನವಾಗಿಲ್ಲ ಎಂಬುದು ಗೊತ್ತಾಗುತ್ತದೆ. ಮಲಯಾಳ ಭಾಷೆಯಲ್ಲಿ ಸಂಸ್ಕೃತಿ ಶಬ್ದ ಇಲ್ಲ. ಅದರ ಸ್ಥಾನದಲ್ಲಿ `ಸಂಸ್ಕಾರ' ಶಬ್ದದ ಪ್ರಯೋಗವಾಗುತ್ತದೆ. ಸಂಸ್ಕಾರಗಳು ಜೀವನದ ಮೇಲೆ ಯಾವ ಪ್ರಭಾವವನ್ನು ಉಂಟುಮಾಡುತ್ತವೋ ಹಾಗೆ ಅವರ ಮನಸ್ಸಿನ ಮೇಲೆ ಶಾಶ್ವತವಾದ ಮುದ್ರೆಯನ್ನು ಉಂಟುಮಾಡುತ್ತವೆ. ಅವುಗಳ ಸಮಾವೇಶ ಸಂಸ್ಕೃತಿ ಶಬ್ದದಲ್ಲಿ ಆಗುತ್ತದೆ. ಸಂಸ್ಕಾರ:- ಸಂಸ್ಕಾರ ಎನ್ನುವುದು ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಯಾವ ಒಂದು ಕರ್ಮವನ್ನು ನಾವು ಮಾಡುತ್ತೇವೆಯೋ ಮತ್ತು ಅದರಿಂದ ಯಾವ ಪರಿಣಾಮ ಉಂಟಾಗುತ್ತದೆ. ಅದನ್ನೇ ನಾವು ನಮ್ಮ ಸಂಸ್ಕಾರ ಎಂದು ಹೇಳುತ್ತೇವೆ. ಬೇರೆಯವರ ಕರ್ಮ ನಮ್ಮ ಮೇಲೆ ಯಾವ ಪರಿಣಾಮ ಉಂಟು ಮಾಡುತ್ತದೆಯೋ ಅದನ್ನು ನಾವು ಸಂಸ್ಕಾರ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಸಂಸ್ಕಾರ ಶಬ್ದದಲ್ಲಿ ನಾವು ಕೆಟ್ಟ ಸಂಸ್ಕಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವುಗಳನ್ನು ಬೇರೆಯಾಗಿ ಕುಸಂಸ್ಕಾರ ಎಂದು ಹೇಳಿ ದೂಷಿಸುತ್ತೇವೆ. ಯಾರನ್ನು ಗುಣವಂತ ಮತ್ತು ರೂಪವಂತ ಎಂದು ಕರೆಯುತ್ತೇವೆಯೋ, ಸಂಸ್ಕಾರಿ ಎಂದು ಕರೆಯುತ್ತೇವೆಯೋ ಅವನು ಒಳ್ಳೆಯ ಸಂಸ್ಕಾರವಂತ ವ್ಯಕ್ತಿ ಎಂದು ಅದರ ಅರ್ಥ. ಒಳ್ಳೆಯ ಸಂಸ್ಕಾರಗಳ ಪರಿಣಾಮ ಮತ್ತು ಭಾವನೆಗಳನ್ನೂ ನಾವು ಸಂಸ್ಕೃತಿ ಎನ್ನುತ್ತೇವೆ. ಅದೇ ರೀತಿ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡೂ ಸಂಸ್ಕಾರ ಕೂಡ ಒಬ್ಬ ವ್ಯಕ್ತಿಯ ಒಂದು ಗುಣವಾಗಿದೆ. ಅವನು ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಕರ್ಮಗಳನ್ನು ಮಾಡುತ್ತಾನೆ. ಅಂದರೆ ಈ ಕಾರಣದಿಂದಾಗಿ ಅವನ ಚಾರಿತ್ರ್ಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಮುಖಗಳೂ ಇರುತ್ತವೆ. ಈ 460 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಪೂರ್ಣ ನಡವಳಿಕೆ ಕರ್ಮ ಮತ್ತು ಸಂಸ್ಕಾರಗಳ ಸಮುಚ್ಚಯ ವಾಚರವೆಂದರೆ ಅವನ ವ್ಯಕ್ತಿತ್ವವಾಗುತ್ತದೆ. ವ್ಯಕ್ತಿತ್ವದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಈ ಪೂರ್ಣ ವ್ಯಕ್ತಿತ್ವದಲ್ಲಿ ಕೆಟ್ಟದ್ದನ್ನು ಬೇರೆ ಮಾಡಿದರೆ ಉಳಿದದ್ದು ಒಳ್ಳೆಯದಾಗಿರುತ್ತದೆ. ಅದನ್ನು ಶೀಲ ಎಂಬ ಹೆಸರಿನಿಂದ ಕರೆಯುತ್ತೇವೆ. ಈ ಶೀಲಯುಕ್ತ ಸಂಸ್ಕಾರದ ಪರಿಣಾಮವೇ ಸಂಸ್ಕೃತಿ ಎಂದು ಕರೆಯಲ್ಪಡುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದರ ಒರೆಹಚ್ಚುವಿಕೆ :- ಆದರೆ ಈಗೊಂದು ಪ್ರಶ್ನೆ ಏಳುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದು ಯಾವುದು ಎಂದು ನೋಡಿದಾಗ ಅನ್ನಿಸುತ್ತದೆ. ಏನೆಂದರೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಬೇರೆ ಬೇರೆ ಮಾನದಂಡಗಳಿವೆ. ಇದರ ಭಿನ್ನತೆಯ ಕಾರಣದಿಂದಾಗಿ ಒಂದು ದೇಶ ಮತ್ತೊಂದು ದೇಶದ ಸಂಸ್ಕೃತಿಯಲ್ಲಿ ಅಂತರ ಉಂಟಾಗುತ್ತದೆ. ಈ ಭಿನ್ನತೆಯ ಪರಿಣಾಮ ಸ್ವರೂಪವಾಗಿ ಈ ರಾಷ್ಟ್ರಗಳ ಚಿಕ್ಕದ್ದರಿಂದ ಹಿಡಿದು ದೊಡ್ಡ ವ್ಯವಹಾರಗಳಲ್ಲಿ ಕೂಡ ಭೇದಗಳು ನಮಗೆ ತಿಳಿಯುತ್ತಾ ಹೋಗುತ್ತವೆ. ಉದಾಹರಣೆಗಾಗಿ ನಾವು ಇಲ್ಲಿ ನಮಸ್ಕಾರ ಮಾಡುತ್ತೇವೆ. ಆದರೆ ಯಾರೋ ಒಬ್ಬ ಆಂಗ್ಲವ್ಯಕ್ತಿ ಭಾರತೀಯ ಮಹಿಳೆಗೆ ನಮಸ್ಕಾರ ಮಾಡುವುದ್ಕಕೆ ಕೈ ಮುಂದೆ ಚಾಚಿದರೆ ಹೇಗನ್ನಿಸುತ್ತದೆ? ಇಂತಹ ಚಿಕ್ಕ ಚಿಕ್ಕ ವಿಷಯಗಳನ್ನು ತೆಗೆದುಕೊಂಡಾಗ ಅಲ್ಲಿಯ ರಾಷ್ಟ್ರ ಜೀವನದ ಒಳ್ಳೆಯ ಮತ್ತು ಕೆಟ್ಟದ್ದರ ಪರಿಚಯವಾಗುತ್ತದೆ. ನಮ್ಮ ಪ್ರಥಮ ಪ್ರಧಾನಮಂತ್ರಿಗೆ ಹಿಂದೂ ಸಂಸ್ಕೃತಿಯ ಮೇಲೆ ಸ್ವಲ್ಪವೂ ವಿಶ್ವಾಸವಿಲ್ಲದಿದ್ದರೂ ಈ ದೇಶದ ಮಣ್ಣಿನ ಮೇಲೆ ಜನ್ಮತಾಳಿದ ಕಾರಣ ಅವರ ಮನಸ್ಸಿನಲ್ಲೂ ಸ್ವಲ್ಪ ಸಂಸ್ಕಾರವಿದ್ದೀತು. ಅವರ ಅಮೆರಿಕಾ ಯಾತ್ರೆಯ ಸಂದರ್ಭದಲ್ಲಿ ಅವರಿಗೆ ಅಮೆರಿಕಾದಲ್ಲಿ ಒಂದು ಔತಣಕೂಟವನ್ನು ಏರ್ಪಡಿಸಿದ್ದರು. ಅದರಲ್ಲಿ ಅಮೆರಿಕಾದ ಗಣ್ಯಾತಿಗಣ್ಯ ವ್ಯಕ್ತಿಗಳು ಸೇರಿದ್ದರು. ಒಬ್ಬ ಪತ್ರಕರ್ತನೂ ಅಲ್ಲಿದ್ದ. ಅವನು ಪತ್ರಕಾರರ ಪದ್ಧತಿಗೆ ಅನುಸಾರವಾಗಿ ಅಲ್ಲಿ ನೆರೆದಿದ್ದ ಎಲ್ಲ ಗಣ್ಯರ ಆರ್ಥಿಕ ಸಾಮರ್ಥ್ಯ/ ಸಂಪತ್ತಿಗೆ ಸಂಬಂಧಿಸಿದಂತೆ ಲೆಕ್ಕಚಾರ ಮಾಡಲು ಪ್ರಾರಂಭಿಸಿ ನೆಹರೂ ಅವರಿಗೆ ಹೇಳಿದ. ಈಗ ನೀವು ಇಷ್ಟು ಕೋಟಿ ಡಾಲರ್‍ಗಳ ಮಧ್ಯೆ ಕುಳಿತಿದ್ದೀರಾ ಎಂದು ಕೇಳಿದ. ನೆಹರೂ ಅವರಿಗೆ ಒಮ್ಮೆಗೆ ಇದರ ಅರ್ಥ ಗೊತ್ತಾಗಲಿಲ್ಲ. ಇಷ್ಟು ಕೋಟಿ ಡಾಲರ್‍ಗಳ ನಡುವೆ ಕುಳುತುಕೊಳ್ಳುವುದು ಎಂದರೆ ಏನು ಅರ್ಥ? ಪತ್ರಕರ್ತನು ಯಾವಾಗ ಸ್ಪಷ್ಟೀಕರಣ ಕೊಟ್ಟನೋ ಆಗ ಆ ಮಾತು ಅವರಿಗೆ ಒಮ್ಮೆಗೆ ಬಹಳ ವಿಚಿತ್ರವೆನ್ನಿಸಿತು. ಇದರಲ್ಲಿ ಏನೋ ಗೂಢಾರ್ಥವಿದೆಯೆನ್ನಿಸಿತು. ಈ ವ್ಯಕ್ತಿ ಇಡೀ ಭೋಜನ ಕೂಟವನ್ನು ಕೇವಲ ಡಾಲರ್‍ನಿಂದ ಅಳತೆಮಾಡಿದ್ದಾನೆಂದು ಅವರಿಗೆ ಅನ್ನಿಸಿತು. ಆಗ ನೆಹರೂ ನಗುತ್ತಾ ಹೇಳಿದರು. ನಮ್ಮ ದೇಶದಲ್ಲಿ ಅಳತೆಯ ಮಾನದಂಡ ಇದಲ್ಲ. ನಾವು ನೋಡುವ ದೃಷ್ಟಿಯೇ ಬೇರೆಯಾಗಿದೆ. ನಮ್ಮ ಜೀವನದ ಆದರ್ಶವೇ ಬೇರೆಯಾಗಿದೆ. ರಾಷ್ಟ್ರ ಚಿಂತನ 461 ಈ ದೃಷ್ಟಿಭೇದದ ಕಡೆಗೆ ಸೂಚನೆ ಕೊಡುತ್ತಾ ವಿವೇಕಾನಂದರು ಹೇಳಿದ್ದೇನೆಂದರೆ ಇಂಗ್ಲೆಂಡ್ ಪ್ರತಿಯೊಂದು ವಸ್ತುವಿಗೆ ಪೌಂಡ್, ಶಿಲಿಂಗ್, ಪೆನ್ಸ್‌ನಲ್ಲಿ ಹೇಳಿದರೆ ಭಾರತವು ಪ್ರತಿಯೊಂದನ್ನು ಧರ್ಮದ ಭಾಷೆಯಲ್ಲಿ ಹೇಳಲಾಗುತ್ತದೆ. ಒಂದು ದೇಶದಲ್ಲಿ ಕಾಲಕ್ಕೆ ಅನುಗುಣವಾಗಿ ಒಳ್ಳೆಯದು ಕೆಟ್ಟದ್ದರ ವಿಷಯದಲ್ಲಿ ವ್ಯತ್ಯಾಸವಾಗುತ್ತಾ ಇರುತ್ತದೆ. ಆದರೆ ಯಾವುದೇ ಕಾಲ ವಿಶೇಷದಲ್ಲಿ ಒಳ್ಳೆಯ ಕೆಟ್ಟದ್ದರ ಒರೆಹಚ್ಚುವಿಕೆ ಸಾಧ್ಯವಾಗುತ್ತದೆ. ಅಂದ ಮೇಲೆ ನಮ್ಮ ಜೀವನದ ಧ್ಯೇಯಗಳ ಕಡೆಗೆ ಅಭಿವೃದ್ಧಿಯಲ್ಲಿ ಸಾಗುವ ಸಾಧನ ಒಳ್ಳೆಯದಾಗಿರಬೇಕು. ಯಾವುದು ಅಭಿವೃದ್ಧಿಯಲ್ಲಿ ಅನುಕೂಲವಾಗಿರುವುದಿಲ್ಲವೋ ಅದು ಕೆಟ್ಟದ್ದಾಗಿರುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ನಿರ್ಣಯವನ್ನು ತೆಗೆದುಕೊಳ್ಳುವ ಸಮಯದಲ್ಲಿ ಮನುಷ್ಯನಿಗೆ ತನ್ನ ಗುರಿಯ ಕಡೆಗೆ ಹೆಚ್ಚು ಗಮನವಿರಬೇಕು. ಜೀವನದ ಧ್ಯೇಯವೇನು ? ಈಗ ನಮ್ಮ ಗುರಿ ಏನು ಎಂಬುದನ್ನು ವಿಚಾರಮಾಡಿ ಅದರ ಪ್ರಕಾರ ನಾವು ಒಳಿತುಕೆಡುಕುಗಳ ನಿರ್ಣಯ ಮಾಡೋಣ. ಬೇರೆ ಬೇರೆ ದೇಶಗಳ ಜೀವನ ಪದ್ಧತಿಯಲ್ಲಿ ಯಾವ ಭಿನ್ನತೆಗಳು ಕಂಡುಬರುತ್ತಿವೆಯೋ ಅದು ಏನು ? ಇವು ಪರಿಸ್ಥಿತಿಗೆ ಸಿಲುಕಿ ಅಕಸ್ಮಾತ್ ಉಂಟಾದವೋ ಅಥವಾ ಅದರ ಹಿಂದೆ ಜೀವನದ ಯಾವುದಾದರೂ ಧ್ಯೇಯಮುಖ ಪ್ರಕ್ರಿಯೆ ಇದೆಯೋ? ಈಶ್ವರನ ಸೃಷ್ಟಿ ಅವನ ಯೋಜನಾಬದ್ಧ ಪರಿಶ್ರಮವೆಂದೂ ಅವನು ಏನನ್ನು ಮಾಡಿದ್ದಾನೋ ಅದನ್ನು ಒಂದು ಮತ್ತೊಂದಕ್ಕೆ ಪೂರಕವಾಗಿರುವಂತೆ ಮಾಡಿದ್ದಾನೆ ಎಂದು ಶಿವನನ್ನು ನಂಬಿರುವವರು ಒಪ್ಪಿಕೊಳ್ಳುತ್ತಾರೆ. ಶಿವನನ್ನು ನಂಬಿದವರು ಪ್ರಕೃತಿಯಲ್ಲಿಯೇ ಇದು ಕಂಡುಬರುತ್ತದೆ, ಇದೊಂದು ಚಕ್ರದಂತೆ, ಎಲ್ಲವೂ ಒಂದು ಮತ್ತೊಂದಕ್ಕೆ ಪೂರಕವಾಗಿದೆ ಎನ್ನುತ್ತಾರೆ. ಈ ರೀತಿಯಾಗಿ ಎಲ್ಲರ ಕಾರ್ಯವು ಒಬ್ಬರಿಂದೊಬ್ಬರಿಗೆ ಪೂರಕವಾಗಿದೆ. ಈ ರೀತಿ ಪ್ರತಿಯೊಂದು ರಾಷ್ಟ್ರ ಪ್ರಕೃತಿ, ವೈಶಿಷ್ಟ್ಯತೆ ಮತ್ತು ಜೀವನದೃಷ್ಟಿ ಹಾಗೂ ಉದ್ದೇಶ ಭಗವಂತನ ಯೋಜನಾನುಸಾರವೇ ನಿರ್ಧಾರವಾಗುವುದು. ನಮ್ಮ ಸಮಾಜಶಾಸ್ತ್ರದಲ್ಲಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ರಾಷ್ಟ್ರ, ಪ್ರತಿಯೊಂದು ಜಾತಿ ಸಮೂಹ ತಮ್ಮ ಜೀವನದಲ್ಲಿ ಕೆಲವು ವಿಶೇಷತೆಗಳನ್ನು ಪಡೆದು ಹುಟ್ಟಿರುತ್ತವೆ. ಮಂಗನಿಂದ ಮಾನವನಾದ ಎಂಬುದನ್ನು ನಾವು ಒಪ್ಪುವುದಿಲ್ಲ. ಹಾಗೆಯೇ ಸ್ವರ್ಗದಿಂದ ಆ್ಯಡಮ್ ಈವ್ ಹೆಸರಿನ ಸ್ತ್ರೀ- ಪುರುಷರ ಜೋಡಿಯಿಂದ ಮಾನವ ಜಾತಿ ಹುಟ್ಟಿಕೊಂಡಿತು ಎಂಬುವುದನ್ನು ನಂಬುವುದಿಲ್ಲ. ಸೃಷ್ಟಿಯ ಆದಿ ಮತ್ತು ನಂತರದಲ್ಲೂ ಜಾತಿಗಳು ಹುಟ್ಟಿಕೊಂಡವು ಎಂಬುದನ್ನು ಒಪ್ಪಿಕೊಂಡು ನಡೆಯುತ್ತೇವೆಯಾದರೂ ಅದು ಲಕ್ಷಾಂತರ 462 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಕೋಟ್ಯಾಂತರ ಸಂಖ್ಯೆಯಲ್ಲಿ ಹುಟ್ಟಿಕೊಂಡವು ಎಂಬರ್ಥದಲ್ಲಿ ಅಲ್ಲ. ಒಂದಿಬ್ಬರು ವ್ಯಕ್ತಿಗಳು ಹುಟ್ಟಿದಾಗ ಅಲ್ಲಿ ಒಂದು ಜಾತಿಯ ಪ್ರತಿನಿಧಿತ್ವ ಮತ್ತು ವಿಕಾಸವುಂಟಾಗುತ್ತದೆ. ಈ ಜಾತಿಗಳು ಭಗವಂತನೆಡೆಯಿಂದ ಒಂದು ನಿಶ್ಚಿತ ಧ್ಯೇಯವನ್ನು ಪಡೆದು ಬಂದಿರುತ್ತವೆ. ಅದರೊಂದಿಗೆ ಭಗವಂತನು ಉಳಿದ ಸೃಷ್ಟಿಗಳನ್ನು ಒಂದಕ್ಕೊಂದು ಪೂರಕವಾಗಿ ಸೃಷ್ಟಿಸಿದ್ದಾನೆ. ಹುಲ್ಲು ಕೊಟ್ಟರೆ ಅನ್ನವು ಬೆಳೆಯುತ್ತದೆ. ಹುಲ್ಲಿಲ್ಲವೆಂದರೆ ಹಾಲಿನ ಸೃಷ್ಟಿ. ಬುರಲಿ ಹಕ್ಕಿ ಹುಟ್ಟಿದರೆ ಅದಕ್ಕೆ ತಿನ್ನಲು ಕ್ರಿಮಿಕೀಟ, ಹಾವು ಹುಟ್ಟಿದರೆ ಅದರ ಹಸಿವನ್ನು ನೀಗಿಸಲು ಕಪ್ಪೆ ಹೀಗೆ ಇವೆಲ್ಲ ಒಂದಕ್ಕೊಂದು ಪೂರಕವಾಗಿದೆ. ಭಗವಂತನು ಚಲಿಸುತ್ತಿರುವ ಈ ಚಕ್ರದೊಂದಿಗೆ ಇರುವ ಯೋಜನೆ ಏನೆಂಬುದು ಗೊತ್ತಿಲ್ಲ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಈ ಯೋಜನೆಯ ಬೆಳವಣಿಗೆ ಇದೆ. ಇವೆಲ್ಲವೂ ಕವಿಯ ಪ್ರಕೃತಿಯಾದರೆ ಪ್ರಪಂಚದ ಗತಿ ಏನು? ಇವೆಲ್ಲವೂ ನರ್ತಿಸುವಂತಹುಗಳೆಂದಾದಲ್ಲಿ ಆ ದೃಶ್ಯ ಹೇಗಿರಬಹುದು? ಅವನು ಗುಣಗಳು ಮತ್ತು ಪ್ರತಿಭೆಗಳನ್ನು ವಿಂಗಡಣೆ ಮಾಡಿದ್ದಾನೆ ಮತ್ತು ಅವುಗಳನ್ನು ಒಂದಕ್ಕೊಂದು ಪೂರಕವಾಗಿ ಮಾಡಿದ್ದಾನೆ ಎಂಬುದೆ ಈ ಮಾತಿನ ಅರ್ಥ. ಈ ರೀತಿ ಜಾತಿಗಳ ಬಗ್ಗೆಯೂ ಇದೆ. ಜಾತಿ ಎಂಬುದಕ್ಕೆ ಸರಿಯಾದ ಪರ್ಯಾಯ ಪದವಿಲ್ಲ. ಪ್ರತಿಯೊಂದು ಜಾತಿಯೂ ಭಗವಂಗತನಿಂದ ಕೆಲವು ವಿಶೇಷತೆಗಳನ್ನು ಪಡೆದು ಬಂದಿರುತ್ತವೆ. ಆ ವಿಶಿಷ್ಟ ಭಾವನೆಗಳೂ ಆ ಜಾತಿಯ ಪ್ರತಿಯೊಬ್ಬ ಮನುಷ್ಯನಲ್ಲಿ ಹೆಚ್ಚು ಕಡಿಮೆ ಪ್ರಮಾಣದಲ್ಲಿರುತ್ತವೆ. ಯಾವಾಗ ಹೊಸ ಮನುಷ್ಯ ಅದರಲ್ಲಿ ಪ್ರವೇಶಿಸುತ್ತಾನೋ ಅವನಿಗೂ ದಾನ ಧರ್ಮಕ್ಕನುಗುಣವಾಗಿ ಅದು ಸಿಗುತ್ತದೆ ಮತ್ತು ಆ ಜಾತಿಗನುಗುಣವಾದ ವೈಶಿಷ್ಟ್ಯತೆ ಅಥವಾ ಭಾವನೆಗಳಿಗೆ ನಾವು ಇಲ್ಲಿಯವರೆಗೆ `ಚಿತಿ' ಎಂಬ ಒಂದು ಪಾರಿಭಾಷಿಕ ಶಬ್ದವನ್ನು ಕೊಟ್ಟಿದ್ದೆವು. ರಾಷ್ಟ್ರದ ಪ್ರತಿಯೊಂದು ಘಟಕದಲ್ಲೂ ಸಾಮಾನ್ಯ ತತ್ವದ ರೂಪದಲ್ಲಿರುವ ರಾಷ್ಟ್ರದ ಮೂಲಭಾವನೆಯೇ ಇದು. ಈ ತತ್ವದ ಆಧಾರದ ಮೇಲೆಯೇ ಜೀವನದ ಸುಖದ ಕಲ್ಪನೆಯನ್ನು ಮಾಡಲಾಗಿದೆ. ಈ ದೃಷ್ಟಿಯ ಅನುಸಾರ ಸುಖ ಸಿಕ್ಕಿದ್ದೇ ಆದರೆ ಜೀವನ ಸಫಲವಲ್ಲದೆ ಮತ್ತೇನೂ ಇಲ್ಲ. ಜೀವನ ದೃಷ್ಟಿಯ ವಿಭಿನ್ನತೆಯ ಕಾರಣದಿಂದಾಗಿ ಪ್ರತಿಯೊಂದು ರಾಷ್ಟ್ರದ ಸುಖದ ಕಲ್ಪನೆಯೂ ಭಿನ್ನವಾಗಿದೆ. ಮೂಲತಃ ಯಾವ ಒಂದು ಪ್ರಕೃತಿಯನ್ನು ಈ ಭಗವಂತ ಇಲ್ಲಿಗೆ ತಂದು ಸೃಷ್ಟಿಸಿದ್ದಾನೋ ಅದರ ಮೆಲೆ ಈ ಸುಖದ ಮಹಲು ನಿಂತಿರುತ್ತದೆ. ಈ ಮೂಲ ಪ್ರಕೃತಿಗೆ ನಾವು ಚಿತಿ ಎನ್ನುತ್ತೇನೆ. ಇದೇ ರಾಷ್ಟ್ರದ ಕೇಂದ್ರ ಬಿಂದು. ಉಳಿದೆಲ್ಲಾ ತತ್ವಗಳು ಇದಕ್ಕೆ ಪೂರಕವಾಗಿರುತ್ತವೆ. ಈ ಆಧಾರದ ಮೇಲೆ ಯಾವ ಯಾವ ಸಂಸ್ಕಾರಗಳು ಸೃಷ್ಟಿಯಾಗುತ್ತವೋ ಅವುಗಳನ್ನು ಮತ್ತು ಆ ಸಂಸ್ಕಾರಗಳಿಂದುಂಟಾಗುವ ಭಾವನೆಗಳನ್ನು ಸೇರಿಸಿ ನಾವು ಸಂಸ್ಕೃತಿ ಎನ್ನುತ್ತೇವೆ. ರಾಷ್ಟ್ರ ಚಿಂತನ 463 ಅಂದರೆ ಈ ಚಿತಿ ಎನ್ನುವುದೂ ಪರಮ ಸುಖದ ಕಲ್ಪನೆಯ ಆಧಾರವೇ ಆಗಿದೆ. ಈ ಚಿತಿಯ ಅನುಭವಕ್ಕಾಗಿ ಮನುಷ್ಯ ಎಲ್ಲ ಕಾರ್ಯವನ್ನೂ ಮಾಡುತ್ತಾನೆ. ಸಂಸ್ಕೃತಿ ಎಂಬುದು ಒಂದು ವಿಶಿಷ್ಟವಾದ ಕಲ್ಪನೆಯಾಗಿದೆ. ಅದು ಬೆಳವಣಿಗೆಯಾಗುವಂತಹುದು. ವ್ಯಾಪಕವಾಗುವಂತಹುದು. ಆದರೆ ಚಿತಿ ಸ್ಥಾಯಿಯಾಗಿರುತ್ತದೆ. ಅದು ಭಗವಂತನಿಂದ ಬಿಂದುವಿನ ರೂಪದಲ್ಲಿ ನಮಗೆ ದಾನ ಧರ್ಮದ ಅನುಸಾರ ಎಷ್ಟು ಪ್ರಾಪ್ತಿಯಾಗುತ್ತದೋ ಅಷ್ಟೇ ಇರುತ್ತದೆ. ಚಿತಿಯ ಮೂಲೋದ್ದೇಶದ ಪ್ರಾಪ್ತಿಗಾಗಿ ನಾವು ಯಾವ ಸಂಸ್ಕಾರವನ್ನು ಹುಟ್ಟುಹಾಕುತ್ತೇವೆಯೋ ಆ ಸಂಸ್ಕಾರಗಳ ಭಾವಾತ್ಮಕ ರೂಪವೇ ಸಂಸ್ಕೃತಿ ಎಂದು ಕರೆಯಲ್ಪಡುತ್ತದೆ. ಇದು ವೃದ್ಧಿಯಾಗುತ್ತದೆ, ಚಲನಶೀಲವಾಗಿರುತ್ತದೆ. ಪ್ರಕೃತಿ, ಧರ್ಮ ಮತ್ತು ಸಂಸ್ಕೃತಿ: ಸಂಸ್ಕೃತಿ ಮತ್ತು ಸಮಷ್ಟಿ ಎರಡರಲ್ಲೂ ಸಂಬಂಧವನ್ನಿಟ್ಟುಕೊಂಡಿದೆ. ಆದಾಗ್ಯೂ ಸಂಸ್ಕೃತಿಯ ಭಾವನೆ ಮೂಲತಃ ಸಮಷ್ಟಿಗತವಾಗಿರುತ್ತದೆ. ಸಂಸ್ಕೃತಿಯ ಮೂಲಕ ಜೀವನದ ವೈಶಿಷ್ಟ್ಯತೆ ಅಂದರೆ ಸಮಾಜದ ಆತ್ಮದ ಅಭಿವ್ಯಕ್ತಿಯಾಗಿರುತ್ತದೆ. ಯಾವ ರೀತ ಬ್ರಹ್ಮ ಸಂಪೂರ್ಣ ಸೃಷ್ಟಿಯ ನಂತರವೂ ಹತ್ತು ಅಂಗುಲ ಉಳಿಸಿಕೊಂಡ ಎಂಬುದು ಸತ್ಯವೋ ಅದೇ ರೀತಿ ಅನೇಕ ವ್ಯಕ್ತಿಗಳಿಂದ ಒಟ್ಟು ಸೇರಿ ಆಗಿರುವ ಈ ಸಮಾಜಕ್ಕೂ ತನ್ನದೇ ಆದ ಒಂದು ಪ್ರತ್ಯೇಕ ಅಸ್ತಿತ್ವ ಮತ್ತು ವೈಶಿಷ್ಟ್ಯತೆ ಇರುತ್ತದೆ. ಇದರೊಂದಿಗೆ ಯಾವಾಗ ಸಮಾಜ ಕ್ರಿಯಾಶೀಲವಾಗಬಯಸುತ್ತದೋ ಆಗ ಅದು ತನ್ನ ಭಾವನೆಗಳ ಅಭಿವ್ಯಕ್ತಿಗಾಗಿ ವ್ಯಕ್ತಿಗಳ ಪುರುಷಾರ್ಥದ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದೂ ಸತ್ಯವೇ. ಆತ್ಮ ಶಾಶ್ವತ ಮತ್ತು ಶರೀರ ನಶ್ವರ. ಆದರೆ ಆತ್ಮ, ಶರೀರದ ಮೂಲಕವೇ ಯಾವುದೇ ಕೆಲಸವನ್ನು ಮಾಡಬೇಕಾಗುತ್ತದೆ; ಅದಿಲ್ಲದೆ ಸಾಧ್ಯವೇ ಇಲ್ಲ. ಅದೇ ರೀತಿ ಸಮಾಜದಲ್ಲಿ ವ್ಯಕ್ತಿಗಳಿಲ್ಲದೆ ಯಾವುದೇ ಕೆಲಸ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಂಸ್ಕೃತಿ ಮೂಲತಃ ಸಮಷ್ಟಿಗತವಾದರೂ ವ್ಯಕ್ತಿಯೊಂದಿಗೆ ಅದರ ಸಂಬಂಧವಿರಲೇಬೇಕು. ವ್ಯಕ್ತಿ ಮತ್ತು ಸಮಾಜ : ವ್ಯಕ್ತಿ ಮತ್ತು ಸಮಾಜಕ್ಕಿರುವ ಪರಸ್ಪರ ಸಂಬಂಧವೇನು ? ಎಂಬ ಪ್ರಶ್ನೆಯೊಂದು ಈಗ ಎದುರಾಗಿದೆ. ವ್ಯಕ್ತಿ ಒಂದೇ ಸಮಯದಲ್ಲಿ ಎರಡು ರೀತಿಯ ಅಸ್ತಿತ್ವವನ್ನು ಪಡೆದು ನಡೆಯುತ್ತಿದ್ದಾನೆ ಎಂಬುದು ನಮಗೆ ಕಂಡುಬರುತ್ತದೆ. ಒಂದೆಡೆ ಅವನ ಪೂರ್ಣವಾದ ಅಸ್ತಿತ್ವವಿದ್ದರೆ ಮತ್ತೊಂದೆಡೆ ಅವನು ಸಮಾಜದಿಂದ ಆಭಿನ್ನವಾದ ರೂಪದಲ್ಲಿ ಕೂಡ ಹೋಗಬೇಕಾಗಿದೆ. ಮತ್ತು ಒಂದೇ ಸಮಯದಲ್ಲಿ ಈ ಎರಡೂ 464 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಬಂಧಗಳಿಂದ ಕೆಲಸ ಮಾಡುತ್ತಾನೆ. ಅವನು ವೃತ್ತಿಯ ಸಂಬಂಧದಿಂದಲೂ, ಸಮಾಜದ ಸಂಬಂಧದಿಂದಲೂ ಜೀವನವನ್ನು ಪ್ರಕಟಪಡಿಸುತ್ತಾನೆ. ಆದ್ದರಿಂದ ಎರಡರ ನಡುವೆ ಯೋಗ್ಯ ಸಂಬಂಧ ಸ್ಥಾಪಿಸುವುದು ಅತ್ಯಂತ ಅವಶ್ಯಕವಾಗಿದೆ. ಪ್ರಪಂಚದ ಸಮಸ್ತ ಸಮಾಜಶಾಸ್ತ್ರಜ್ಞರು, ರಾಜನೀತಿಜ್ಞರು ಮತ್ತು ದಾರ್ಶನಿಕರಲ್ಲಿ ಈ ಪ್ರಶ್ನೆ ಮೂಡಿದ್ದು ಈ ವಿಚಾರದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತಿವಾಗಿವೆ. ಕೆಲವರು ವ್ಯಕ್ತಿಯನ್ನು ಸರ್ವಶ್ರೇಷ್ಠನೆಂದು ಒಪ್ಪಿಕೊಂಡರೆ ಮತ್ತೆ ಕೆಲವರು ಅವನನ್ನು ಸಮಾಜದ ಇಚ್ಛೆಗಳನ್ನು ಪೂರೈಸುವ ಸಾಧನ ಮಾತ್ರವೆಂದು ಪರಿಗಣಿಸಿದ್ದಾರೆ. ಆದ್ದರಿಂದ ವ್ಯಕ್ತಿ ಸ್ವಾತಂತ್ರ್ಯವನ್ನು ಸಮಸ್ತ ಸಾಮಾಜಿಕ ಘಟನೆಯ ಕೇಂದ್ರಬಿಂದುವಾಗಿ ಒಪ್ಪಿಕೊಂಡಿದ್ದಾರೆ. ಇದು ಪಾಶ್ಚಿಮಾತ್ಯದ ವಿಚಾರಧಾರೆ. ಮತ್ತೊಂದೆಡೆ ಸಮಾಜದಿಂದ ಭಿನ್ನವಾದ ವ್ಯಕ್ತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಸಮಾಜ ಸರಿಯಾಗಿದ್ದರೆ ವ್ಯಕ್ತಿ ತಾನೂ ಸಹ ಸರಿಯಾಗಿರುತ್ತಾನೆ ಎಂಬುದು ಅವರ ಅಭಿಪ್ರಾಯ. ವ್ಯಕ್ತಿ ತನ್ನ ಬಗ್ಗೆ ಸ್ವಲ್ಪವೂ ಯೋಚಿಸಿದೆ ಕೇವಲ ಸಮಾಜದ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿಯೇ ಜಗಳ ಮಾಡುತ್ತಿರಬೇಕಾಗುತ್ತದೆ. ವ್ಯಕ್ತಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಂದರ್ಭದಲ್ಲಿ ಯಂತ್ರದ ಒಂದು ಭಾಗದ ಬಗ್ಗೆ ವಿಚಾರಮಾಡುವಂತೆ ವಿಚಾರ ಮಾಡುತ್ತಾನೆ. ಯಾವ ರೀತಿ ಬಟ್ಟೆಯ ಥಾನಿನ ಒಂದು ಮಾದರಿಯನ್ನು ನೋಡಿ ಅದೇ ಪ್ರಕಾರ ನೂರಾರು ಥಾನನ್ನು ಮಾಡಲು ಸಾಧ್ಯವಾಗುವುದೋ ಅದೇ ರೀತಿ ಒಬ್ಬ ವ್ಯಕ್ತಿಯ ಮಾದರಿಯನ್ನು ಅಂಗೀಕರಿಸಿ ಅದೇ ಮಾದರಿಯ ಆಧಾರದ ಮೇಲೆ ಎಲ್ಲ ವ್ಯಕ್ತಿಗಳ ಸಾಮೂಹಿಕ ವಿಚಾರವನ್ನು ಮಾಡಲಾಗುತ್ತದೆ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಯಾವುದೇ ಅಸ್ತಿತ್ವವಿಲ್ಲದಿರುವುದರಿಂದ ಅವನ ದೃಷ್ಟಿಯಲ್ಲಿ ಸಮೂಹವೂ ಪ್ರಮುಖ ವಸ್ತುವೇ ಆಗಿರುತ್ತದೆ. ಈ ಎರಡೂ ವಿಚಾರ ಧಾರೆಗಳು ಇಂದು ಪಶ್ಚಿಮದಲ್ಲಿ ನಡೆಯುತ್ತಿವೆ. ಒಂದರ ಪ್ರಕಾರ ವ್ಯಕ್ತಿ ಗಣ್ಯ ಮತ್ತು ಸಮಾಜವೇ ಎಲ್ಲವೂ ಆಗಿದೆ. ಮತ್ತೊಂದರ ಪ್ರಕಾರ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವೇ ಸರ್ವಶ್ರೇಷ್ಠವಾದುದು. ಈಗ ಇದೇ ಇಬ್ಬರು ವ್ಯಕ್ತಿಗಳ ಸ್ವಾತಂತ್ರ್ಯದಲ್ಲಿ ಸಂಘರ್ಷವುಂಟಾದರೆ ಏನಾಗಬಹುದು. ಇದಕ್ಕೆ ಉತ್ತರವಾಗಿ ``ಇದು ಜೀವನದ ಸ್ಥಾಯೀ ಸಂಘರ್ಷ ಇದಕ್ಕೆ ಯಾವುದೇ ಉಪಾಯವಿಲ್ಲ. ಈ ಸಂಘರ್ಷದಲ್ಲಿ ಯಾವುದು ಕದಲದೇ ನಿಲ್ಲುತ್ತದೋ ಅದರ ಹತ್ತಿರ ಅಧಿಕ ಶಕ್ತಿಯಿರುತ್ತದೆ. ಪ್ರಕೃತಿಯ ನಿಯಮವೇನೆಂದರೆ ಯಾರು ಯೋಗ್ಯವಂತರಾಗಿರುತ್ತಾರೋ ಅವರು ಜೀವಿಸುತ್ತಾರೆ. ಉಳಿದವರು ನಾಶವಾಗಿ ಹೋಗುತ್ತಾರೆ" ಎಂದು ಹೇಳಲಾಗುತ್ತದೆ. ಭಾರತೀಯ ಕಲ್ಪನೆ : ಆದರೆ ನಮ್ಮ ಸಂಸ್ಕೃತಿಯ ಪ್ರಕಾರ ವ್ಯಕ್ತಿ ಮತ್ತು ಸಮಾಜದ ಸಂಬಂಧ ಭಿನ್ನವಾಗಿದ್ದರೂ ಎರಡರ ಅಸ್ತಿತ್ವ ಬೇರೆ ಬೇರೆಯಾಗಿದೆ. ಆದ್ದರಿಂದ ನಾವು ಈ ರಾಷ್ಟ್ರ ಚಿಂತನ 465 ಎರಡರ ವಿಚಾರವನ್ನೂ ಮಾಡಿದೆವು. ವ್ಯಕ್ತಿ ತನ್ನ ವ್ಯಕ್ತಿತ್ವದ ರಕ್ಷಣೆಯ ಜೊತೆ ಜೊತೆಗೆ ಸಮಾಜದ ಅಸ್ತಿತ್ವದ ಗಮನ ನೀಡುವಂತೆ ವ್ಯಕ್ತಿ ತನ್ನ ಸ್ವಾತಂತ್ರ್ಯದ ಉಪಭೋಗ ಮಾಡುವಾಗ ಮತ್ತು ಸಮಾಜದ ಉಪಕರಣದ ಮೂಲಕ ಕೆಲಸ ಮಾಡುವಾಗ ಈ ಎರಡೂ ಸ್ಥಿತಿಗಳಲ್ಲಿ ಸಂಬಂಧ ಸ್ಥಾಪಿಸುವ ಅವಶ್ಯಕತೆಯಿದೆ. ಆದ್ದರಿಂದ ಉಪನಿಷತ್ತಿನಲ್ಲಿ ಯಾರು ಈ ಬಗ್ಗೆ ಒಂದೇ ರೀತಿಯ ವಿಚಾರ ಮಾಡುತ್ತಾರೋ ಅವರು ತಪ್ಪು ಹಾದಿಯಲ್ಲಿ ನಡೆಯುತ್ತಾರೆ. ಯಾರು ಕೇವಲ ವ್ಯಕ್ತಿಯ ವಿಚಾರ ಮಾಡುತ್ತಾರೆ ಅವರು ಅಂಧಕಾರವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಆದ್ದರಿಂದ ನಾವು ಈ ಎರಡು ಬಗ್ಗೆಯೂ ವಿಚಾರಗಳನ್ನು ಮಾಡಬೇಕು. ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಮಾಡುತ್ತಾ, ಅವನ ವ್ಯಕ್ತಿತ್ವದ ಸಂರಕ್ಷಣೆ ಮಾಡುತ್ತ ಅವನ ವಿಕಾಸಕ್ಕೂ ಸಂಪೂರ್ಣ ಅವಕಾಶ ಕೊಡಿ. ನಾವು ವ್ಯಕ್ತಿಯನ್ನು ಮೃತ್ಯುವಿನಿಂದ ಕಾಪಾಡೋಣ, ಮೃತ್ಯುವನ್ನು ಜಯಿಸೋಣ. ಇನ್ನೊಂದೆಡೆ ಸಮಾಜದ ವಿಚಾರವನ್ನು ಮಾಡಿ ಸಮಷ್ಟಿಯ ಆಧಾರದ ಮೇಲೆ ಅಮರತ್ವವನ್ನು ಪಡೆಯೋಣ ಎಂಬುದು ಅವರ ಹೇಳಿಕೆ. ಒಂದು ಕಡೆಯಿಂದ ಮೃತ್ಯುವನ್ನು ಜಯಿಸುವುದು ಮತ್ತೊಂದು ಕಡೆಯಿಂದ ಅಮರತ್ವವನ್ನು ಪಡೆಯುವುದು. ಅಂದರೆ ಈ ಎರಡನ್ನೂ ಒಂದು ಗೂಡಿಸುವ ದೃಷ್ಟಿಯಿಂದ ನಾವು ವಿಚಾರ ಮಾಡೋಣ. ಉದಾಹರಣೆಗೆ ರೋಟಿಯನ್ನು ತೆಗೆದುಕೊಳ್ಳೋಣ. ರೋಟಿ ಬದುಕಲಿಕ್ಕೆ ಬಹಳ ಅವಶ್ಯಕ ಅಂದ ಮಾತ್ರಕ್ಕೆ ರೋಟಿ ತಿನ್ನುವವರು ಸಾಯುವುದೇ ಇಲ್ಲ ಎಂದರ್ಥವಲ್ಲ. ಹಾಗೆಯೇ ರೋಟಿ ತಿನ್ನುವವರೆಲ್ಲ ಒಂದಲ್ಲ ಒಂದು ದಿನ ಸತ್ತೇ ಹೋಗುತ್ತಾರೆ. ಆದ್ದರಿಂದ ನಾನು ರೋಟಿ ತಿನ್ನುವುದಿಲ್ಲ ಉಪವಾಸವಿರಲು ಪ್ರಾರಂಭಿಸುತ್ತೇನೆ ಎಂದು ಎಲ್ಲರೂ ಉಪವಾಸ ಮಾಡಲು ಪ್ರಾರಂಭಿಸಿದರೆ ಅವರ ಗತಿ ಏನಾಗುವುದು? ರೋಟಿ ತಿನ್ನದಿದ್ದರೆ ಮೃತ್ಯುವಿನಿಂದ ಪಾರಾಗಬಹುದು. ರೋಟಿ ತಿನ್ನದಿದ್ದರೆ ಅಮರತ್ವವನ್ನು ಪಡೆಯಬಹುದು ಎಂಬುದು ಸರಿಯಾದ ನಿರ್ಣಯವಲ್ಲ. ಜೀವಂತವಾಗಿರಲು ರೋಟಿಯ ಅವಶ್ಯಕತೆಯಿದೆ. ಮುಕ್ತಿ ಪಡೆಯಲು ಶರೀರದ ಮೂಲಕ ಸತ್ಕರ್ಮಗಳನ್ನು ಮಾಡುವ ಅವಶ್ಯಕತೆಯೂ ಇದೆ. ಆಹಾರ ವ್ಯಕ್ತಿಯನ್ನು ಜೀವಂತವಾಗಿಡಲು ಅವಶ್ಯಕವಾದರೂ ವ್ಯಕ್ತಿಯು ಅಮರತ್ವವನ್ನು ಪಡೆಯಲು ಸಮಷ್ಟಿಯ ಸಹಕಾರವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಪ್ರಕೃತಿ ಮತ್ತು ವಿಕೃತಿ ಈ ಎರಡನ್ನೂ ಸಂಯೋಜಿಸುವುದು ಆವಶ್ಯಕ. ಇವೆರಡನ್ನು ಒಂದುಗೂಡಿಸುವುದು ಸಂಸ್ಕೃತಿಯ ಮುಖ್ಯ ಕಾರ್ಯವಾಗಿದೆ. ವ್ಯಕ್ತಿಗೆ ಯಾವುದು ಪ್ರಾಪ್ತಿಯಾಗುವುದೋ ಅದನ್ನು ನಾವು ಪ್ರಕೃತಿ ಎನ್ನುತ್ತೇವೆ. ಪ್ರಕೃತಿಯಲ್ಲಿ ಭಿನ್ನತೆ 466 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಇದೆ ಮತ್ತು ಪ್ರಕೃತಿಯ ಮೂಲಕ ಈ ಭಿನ್ನತೆ ವ್ಯಕ್ತಿ ವ್ಯಕ್ತಿಗಳಲ್ಲಿ ಪ್ರವೇಶಿಸುತ್ತದೆ. ಪ್ರಕೃತಿಯಿಂದ ಪಡೆಯಲಾದ ಎಲ್ಲವೂ ನಮ್ಮ ಮನಸ್ಸು, ಶರೀರ, ಇಂದ್ರಿಯ ಮುಂತಾದವು ಪ್ರಕೃತಿಯ ಅನುಸಾರವೇ ನಡೆಯುತ್ತದೆ. ಪ್ರಕೃತಿಗೆ ತನ್ನ ಧರ್ಮವಿದೆ. ಮನುಷ್ಯ ತನ್ನ ಹೆಚ್ಚಿನ ಕೆಲಸಕಾರ್ಯಗಳನ್ನು ಪ್ರಕೃತಿಯ ಧರ್ಮಕ್ಕೆ ಒಳಪಟ್ಟೇ ಮಾಡುತ್ತಾನೆ. ಇಡೀ ಜಗತ್ತಿಲ್ಲೆಲ್ಲಾ ಸಂಪೂರ್ಣವಾಗಿ ವ್ಯಾಪಿಸಿಕೊಂಡಿರುವ ಪ್ರಕೃತಿ ತಾನೂ ಸಹ ತನ್ನ ಕೆಲಸವನ್ನು ನಿಯಮದಿಂದಲೇ ಮಾಡುತ್ತಿದೆ. ಅದು ಸ್ವಪ್ರೇರಣೆಯಿಂದಿರಬಹುದು ಅಥವಾ ಈಶ್ವರನ ಯೋಜನೆಯಿಂದಿರಬಹುದು. ಆದರೆ ಅದರ ಪ್ರತಿಯೊಂದು ಕಾರ್ಯವೂ ನಿಯಮಾನುಸಾರವಾಗಿಯೇ ನಡೆಯುತ್ತದೆ. ಅದೇ ರೀತಿ ಮನುಷ್ಯ ಮತ್ತು ಉಳಿದ ಜೀವ-ಜಂತುಗಳೂ ಪ್ರಕೃತಿಯ ಕೆಲಸಗಳನ್ನು ಸ್ವಾಭಾವಿಕ ರೂಪದಿಂದ ನಿಯಮಪೂರ್ವಕವಾಗಿ ಮಾಡುತ್ತಿರುತ್ತವೆ. ಉದಾಹರಣೆಗೆ ಉಸಿರಾಟ ಸ್ವಾಭಾವಿಕವಾದ ಕ್ರಿಯೆ ಅದರ ಬಗ್ಗೆ ನಾವು ಯಾವುದೇ ವಿಚಾರ ಮಾಡುವ ಅವಶ್ಯಕತೆಯಿಲ್ಲ. ಉಸಿರಾಟ ತನ್ನಷ್ಟಕ್ಕೆ ತಾನೇ ನಡೆಯುತ್ತದೆ. ಸಾಮಾನ್ಯವಾಗಿ ಮನುಷ್ಯ ಪ್ರಕೃತಿಯ ನಿಯಮಾನುಸಾರವೇ ಕೆಲಸ ಮಾಡುತ್ತಾನೆ. ಆದರೆ ಎಂದಾದರೂ ಅವನು ಅಹಂಕಾರದಿಂದ ಪ್ರಕೃತಿಯ ಸಂರಕ್ಷಣೆಯಲ್ಲಿ ಕೆಟ್ಟವಿಚಾರ, ಅತಿರೇಕ ಅಥವಾ ಉಪೇಕ್ಷೆ ಮಾಡಿದರೆ ಅದು ಅಸ್ತವ್ಯಸ್ತವಾಗಿಬಿಡುತ್ತದೆ. ಉದಾಹರಣೆಗೆ ಒಳ್ಳೆಯ ಪದಾರ್ಥಗಳೆಂದು ಅತಿಯಾಗಿ ತಿಂದರೆ ಜೀರ್ಣಶಕ್ತಿ ಹಾಳಾಗಿಬಿಡುತ್ತದೆ. ಆದ್ದರಿಂದ ಈ ಅತಿರೇಕದಿಂದ ಪಾರಾಗಬೇಕು. ಇದಕ್ಕೆ ಜನರು `ವಿಕೃತಿ' ಎನ್ನುತ್ತಾರೆ. ಪ್ರಕೃತಿಯಲ್ಲಿ ಯಾವುದೇ ರೀತಿಯ ಅತಿರೇಕ ಉಂಟಾದಲ್ಲಿ ವಿಕೃತಿಯೂ ಉಂಟಾಗುತ್ತದೆ. ಈ ವಿಕೃತಿಯನ್ನು ಪಡೆಯುವುದು ಮತ್ತು ಪ್ರಕೃತಿ ಸರಿಯಾಗಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುವಂತೆ ಮಾಡುವ ಕೆಲಸವನ್ನು `ಧರ್ಮ' ಮಾಡುತ್ತದೆ. ಧರ್ಮ : ಧರ್ಮ ವಿಕೃತಿಯನ್ನು ತಡೆಯುತ್ತದೆ. ಆದ್ದರಿಂದ ಸಂಸ್ಕೃತಿ ಏರುವ ಮೊದಲ ಮೆಟ್ಟಿಲೇ ಧರ್ಮವಾಗಿರುತ್ತದೆ. ``ಧರ್ಮದಿಂದಲೇ ಪ್ರಾರಂಭ ಮತ್ತು ಧರ್ಮದಿಂದಲೇ ದೃಢತೆ." ಯಾವುದೇ ಸಮಾಜದ ಕಾರ್ಯೋದ್ದೇಶ ಅದರ ಅಸ್ತಿತ್ವ ಧರ್ಮದ ಕಾರಣದಿಂದಲೇ ಆಗುತ್ತಿರುತ್ತದೆ. ವಿಕೃತಿಯ ಕಾರಣದಿಂದಾಗಿ ಎಲ್ಲ ಕೆಡುಕುಗಳು ಮತ್ತು ರೋಗ ಬರುತ್ತವೆ. ಯಾವ ಮನುಷ್ಯ ಮಿಥ್ಯಾಹಾರ, ವಿಹಾರಗಳನ್ನು ಮಾಡುತ್ತಾನೋ ಅವನಿಗೆ ರೋಗ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಅದೇ ನಮ್ಮ ಆಹಾರ ವಿಹಾರಗಳು ಸರಿಯಾಗಿದ್ದರೆ ಪ್ರಕೃತಿಯ ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ಯಾವುದೇ ರಾಷ್ಟ್ರ ಚಿಂತನ 467 ರೋಗಗಳುಂಟಾಗಲು ಅವಕಾಶವೇ ಇರುವುದಿಲ್ಲ ಮತ್ತು ಮನುಷ್ಯ ತನ್ನ ಸಂಪೂರ್ಣ ಆಯಸ್ಸನ್ನು ಹೊಂದುತ್ತಾನೆ. ಆದ್ದರಿಂದ ಮನುಷ್ಯ ತನ್ನ ಪ್ರಕೃತಿಯ ಎಲ್ಲ ನಿಯಮಗಳ ಪಾಲನೆಯನ್ನು ಮಾಡುತ್ತಲೇ ಒಬ್ಬರು ಮತ್ತೊಬ್ಬರ ಜೊತೆ ಸರಿಯಾದ ವ್ಯವಸ್ಥೆಯನ್ನು ಇಟ್ಟುಕೊಂಡರೆ ಇಲ್ಲಿ ಸಹಜವಾಗಿ ಧರ್ಮ ಬಂದೇ ಬರುತ್ತದೆ. ಎಂಬುದನ್ನು ನಾವಿಲ್ಲಿ ಧರ್ಮದ ರೂಪದಿಂದಲೇ ಅರ್ಥೈಸಿ ಹೇಳಿದ್ದೇವೆ. ಸಮಷ್ಟಿಗತ ಧರ್ಮ ಈ ಧರ್ಮದ ಎರಡನೆಯ ಮಗ್ಗುಲು ಪ್ರಕೃತಿಯನ್ನೊಳಗೊಂಡೇ ಬರುತ್ತದೆ. ಪ್ರಕೃತಿಯ ಅನುಸಾರ ಜೀವನದ ಉದ್ದೇಶಕ್ಕಾಗಿ ಕಾರ್ಯವನ್ನು ಕೈಗೊಳ್ಳುವ ಸಮಯದಲ್ಲಿ ಮನುಷ್ಯನೊಬ್ಬನಿಂದಲೇ ಮಾಡಲು ಸಾಧ್ಯವಾಗದ ಅನೇಕ ಕಾರ್ಯಗಳಿವೆ. ಹಲವರ ಜೊತೆ ಸೇರಿ ಮಾಡಿದಾಗ ಮಾತ್ರ ಆ ಕಾರ್ಯ ಸಾಧ್ಯವಾಗುತ್ತದೆ ಎಂಬ ಅನುಭವವುಂಟಾಗುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಏನನ್ನಾದರೂ ಉತ್ಪಾದನೆ ಮಾಡುವಾಗ ಅದರಲ್ಲಿ ತನ್ನೆಲ್ಲಾ ಸಮಯವನ್ನು ವಿನಿಯೋಗಿಸುತ್ತಾನೆ. ತನಗೊಬ್ಬನಿಗಾಗಿ ಉತ್ಪಾದನೆ ಮಾಡಿದರೂ ಅದು ಅವನ ಜೀವನದ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದು. ಒಬ್ಬ ಭತ್ತ ಬೆಳೆದರೆ ಮತ್ತೊಬ್ಬ ಬಟ್ಟೆ ತಯಾರಿಸುತ್ತಾನೆ. ಇಬ್ಬರೂ ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಮೂಲಕವೇ ತಮ್ಮತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಸಮಾಜದಲ್ಲಿ ಪರಸ್ಪರ ಸಹಕಾರದ ದಾನ-ಪ್ರತಿದಾನದ, ಕೊಡು-ಕೊಳ್ಳುವಿಕೆಯ ಅವಶ್ಯಕತೆಗಳು ಪ್ರತಿ ಹೆಜ್ಜೆಯಲ್ಲೂ ಉಂಟಾಗುತ್ತವೆ. ಈ ಕೊಡುವ ತೆಗೆದುಕೊಳ್ಳುವ ಮತ್ತು ಪರಸ್ಪರ ಸಹಕಾರದ ವ್ಯವಸ್ಥೆಯನ್ನು ಸಾಮಾಜಿಕ ವ್ಯವಸ್ಥೆಯೆಂದು ಕರೆಯುತ್ತಾರೆ. ಈ ರೀತಿ 10 ಜನ ತಮ್ಮ ತಮ್ಮ ವ್ಯಕ್ತಿತ್ವವನ್ನು ರಕ್ಷಣೆ ಮಾಡಿಕೊಳ್ಳುತ್ತಲೇ ಜೊತೆಗೂಡಿ ನಡೆಯಬಹುದು. ಸರಿಯಾದ ರೀತಿಯಲ್ಲಿ ಕೆಲಸ ಮಾಡಬಹುದು. ಅವರಲ್ಲಿ ಯಾವುದೇ ರೀತಿಯ ದೋಷಗಳು ಅಥವಾ ಘರ್ಷಣೆಗಳು ಉಂಟಾಗದಂತೆ ಮಾಡಲು ಕೆಲವು ನಿಯಮಗಳನ್ನು ಮಾಡಲೇಬೇಕಾಗುತ್ತದೆ. ರಸ್ತೆಯಲ್ಲಿ ವಾಹನಗಳ ಅಪಘಾತಗಳಿಂದ ರಕ್ಷಿಸಲು ರಸ್ತೆಯ ನಿಯಮಗಳನ್ನು ಮಾಡಲಾಗಿದೆ. ಈ ಎಲ್ಲ ನಿಯಮ ಮತ್ತು ವ್ಯವಸ್ಥೆಗಳು ವ್ಯಕ್ತಿಯ ಮತ್ತು ನಮ್ಮ ಪ್ರಕೃತಿಯ ರಕ್ಷಣೆಯ ದೃಷ್ಟಿಯಿಂದಲೂ ಅವಶ್ಯಕವಾಗಿವೆ. ವ್ಯಕ್ತಿಗೆ ತನ್ನ ಹಿತದ ಸಂಪಾದನೆಗಾಗಿ ವ್ಯಕ್ತಿಗತ ಮತ್ತು ಸಾಮೂಹಿಕ ಎರಡೂ ರೀತಿಯ ಪ್ರಯತ್ನಗಳ ಅವಶ್ಯಕತೆಯಿರುತ್ತವೆ. ಸಾಮಾಜಿಕ ಜೀವನದಲ್ಲಿ ಕೆಲವು ವ್ಯವಸ್ಥೆಗಳನ್ನು ನಿರ್ಧರಿಸಲೇಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಗಳು ಧರ್ಮದೊಳಗೇ ಬರುತ್ತವೆ. ಎಲ್ಲಿಯವರೆಗೆ ಎಲ್ಲ ಕಾರ್ಯಗಳು ಧರ್ಮದ ಆಧಾರದ ಮೇಲೆ ನಡೆಯುತ್ತಿರುತ್ತವೋ ಅಲ್ಲಿ ಎಲ್ಲಿಯೂ ಸಂಸ್ಕೃತಿ ಬರುವುದಿಲ್ಲ. 468 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಂಸ್ಕೃತಿ ಮತ್ತು ಧರ್ಮ : ಯಾವಾಗ ನಾವು ನಮ್ಮ ವ್ಯಕ್ತಿಗತ ವಿಶೇಷ ಗುಣಗಳ ಬಗ್ಗೆ ವಿಚಾರ ಮಾಡದೆ ಸಮಷ್ಟಿಯ ವಿಚಾರವನ್ನು ಮಾಡಿ ವ್ಯಕ್ತಿಯ ಪ್ರಕೃತಿಗಳಿಗೆ ಸಮಷ್ಟಿ ಪ್ರಕೃತಿ ಅಂದರೆ ಸಮಾಜದ ವಿರೋಧಿಯನ್ನಾಗಿ ಮಾಡದೆ ಮುಂದೆ ಸಾಗಬೇಕೆನ್ನುತ್ತೇವೋ ಆಗ ವಾಸ್ತವದಲ್ಲಿ ಸಂಸ್ಕೃತಿ ಬರುತ್ತದೆ. ಇದು ಎರಡನೆಯ ಮೆಟ್ಟಿಲು. ಇದರ ಒಂದೇ ಒಂದು ಚಿಂತೆ ಎಂದರೆ ವ್ಯಕ್ತಿಯ ಪ್ರಕೃತಿಯನ್ನು ಸಮಾಜಕ್ಕೆ ವಿರುದ್ಧವಾಗಿ ಮಾಡದೆ ಅದನ್ನು ಸಾಮೂಹಿಕ ಕರ್ತವ್ಯದ ಮೂಲಕ ಆರೋಗ್ಯಕರವಾಗಿಡುವುದು ಹೇಗೆ? ಎಂಬುದು. ಆದ್ದರಿಂದ ಎಲ್ಲಿ ವ್ಯಕ್ತಿ ತನ್ನ ಪ್ರಕೃತಿಯ ಬಗ್ಗೆ ಯಾವುದೇ ಚಿಂತೆ ಮಾಡದೆ ಕೇವಲ ಸಮಷ್ಟಿಗತ ಮತ್ತು ಪರಾರ್ಥ ಭಾವದಿಂದ ಕಾರ್ಯಮಾಡುವುದಕ್ಕೆ ಪ್ರವೃತ್ತನಾಗುತ್ತಾನೋ ಅಲ್ಲಿ ಸಂಸ್ಕೃತಿ ಪ್ರಾರಂಭವಾಗುವುದು. ಸಂಸ್ಕೃತಿಯ ಸ್ಥೂಲ ಲಕ್ಷಣವನ್ನು ನೋಡಿ ಯಾವುದೇ ಕೆಲಸವನ್ನು ಮಾಡುವ ಸಮಯದಲ್ಲಿ ಈ ಕಾರ್ಯ ಸ್ವಂತ ಸ್ವಾರ್ಥದಿಂದ ಪ್ರೇರಿತವಾಗಿಲ್ಲ ತಾನೇ ಎಂಬುದನ್ನು ವಿಚಾರ ಮಾಡೋಣ. ಒಂದು ವೇಳೆ ಅದರ ಮೂಲದಲ್ಲಿ ಸ್ವಾರ್ಥವಿಲ್ಲವೆಂದಾದಲ್ಲಿ ಆ ಸಂಸ್ಕೃತಿಯ ಅನುಸಾರವೇ ಕಾರ್ಯವಾಯಿತು ಎಂದಾಗ ನಾವು ಸ್ವಾರ್ಥವನ್ನು ಸಂಪೂರ್ಣವಾಗಿ ಕೆಟ್ಟದ್ದು ಎಂಬರ್ಥದಲ್ಲಿ ತೆಗೆದುಕೊಳ್ಳಬೇಕು ಎಂದು ಅರ್ಥವಲ್ಲ. ಪ್ರಕೃತಿಯ ರಕ್ಷಣೆಗಾಗಿ ಕೆಲವು ಅಂಶಗಳವರೆಗೆ ಸ್ವಾರ್ಥದ ಅವಶ್ಯಕತೆ ಬಹಳವಾಗಿರುತ್ತವೆ. ವಾಸ್ತವದಲ್ಲಿ `ಸ್ವಾರ್ಥಿ' ಶಬ್ದವನ್ನು ಎಲ್ಲಿ ಕೆಟ್ಟದ್ದು ಎಂಬರ್ಥದಲ್ಲಿ ಬಳಸುತ್ತೇವೋ ಅಲ್ಲಿ ನಮ್ಮ ಸ್ವಾರ್ಥವನ್ನು ಪೂರ್ತಿಗೊಳಿಸುವುದಕ್ಕಾಗಿ ಬೇರೆಯವರ ಸ್ವಾರ್ಥಕ್ಕೆ ಹಾನಿಯುಂಟುಮಾಡಲು ತೊಡಗುತ್ತೇವೆ. ಅದೇ ಯಾರ ಸ್ವಾರ್ಥಕ್ಕೂ ಹಾನಿ ಮಾಡದೆ ನಮ್ಮ ಸ್ವಾರ್ಥವನ್ನು ಪೂರೈಸಿಕೊಂಡರೆ ಅದು ಕೆಟ್ಟದ್ದಲ್ಲ. ಏಕೆಂದರೆ ಇದು ಸಾಮಾನ್ಯ ಪ್ರವೃತ್ತಿಯಾಗಿದೆ. ಆದರೆ ನಾವು ಸಂಸ್ಕೃತಿಯ ವಿಚಾರವನ್ನು ಮಾಡುವಾಗ ನಮ್ಮ ಕಾರ್ಯ ಶುದ್ಧ ಪರಾರ್ಥ ಭಾವದಿಂದಲೇ ಆಗುತ್ತಿದೆಯೇ ಎಂಬುದನ್ನು ನೋಡಬೇಕಾಗುತ್ತದೆ. ಹಾಗಾದಾಗ ನಾವು ನಮ್ಮ ಕಾರ್ಯ ಸಂಸ್ಕೃತಿಯ ಪ್ರೇರಣೆಯಿಂದಲೇ ಆಯಿತು ಎಂದು ಹೇಳಬಹುದು. 15. ಚಿತಿ (1) ಯಾವುದೇ ರಾಷ್ಟ್ರ ಪರಕೀಯರ ಪ್ರಭುತ್ವಕ್ಕೆ ಅಧೀನವಾಗಿರುತ್ತದೆಯೋ ಆ ರಾಷ್ಟ್ರದ ರಾಷ್ಟ್ರೀಯತೆ ಮತ್ತು ಆ ದೇಶದ ನಿವಾಸಿಗಳ ದೇಶಭಕ್ತಿಯ ಏಕಮೇವ ಉದ್ದೇಶ ಆ ಪ್ರಭುತ್ವವನ್ನು ದೂರಮಾಡುವುದು. ಯಾರು ಪರಕೀಯ ಪ್ರಭುತ್ವವನ್ನು ವಿರೋಧಿಸುತ್ತಾರೋ ಆ ದೇಶಭಕ್ತ ಯಾವ ಸಾಧನದಿಂದ ಆ ಪ್ರಭುತ್ವ ನಷ್ಟವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡುತ್ತಾನೆ. ಅದನ್ನೇ ದೇಶಭಕ್ತಿ ಎಂದು ರಾಷ್ಟ್ರ ಚಿಂತನ 469 ಅರ್ಥಮಾಡಿಕೊಳ್ಳಲಾಗುತ್ತದೆ. ಇಂತಹ ಸಮಯದಲ್ಲಿ ಸಾಮಾನ್ಯ ಜನರ ಸಮ್ಮುಖದಲ್ಲಿ ರಾಷ್ಟ್ರಭಕ್ತಿಯ ಇಂತಹ ವಿರೋಧಾತ್ಮಕ ಸ್ವರೂಪ ಇರುತ್ತದೆ. ಈ ರೀತಿ ಅಭಾವಾತ್ಮಕ ಕಲ್ಪನೆಯ ಆಧಾರದ ಮೇಲೆ ಕೆಲಸ ಮಾಡುವವರು ತಮ್ಮ ಪಕ್ಷವನ್ನು ಸದೃಢಗೊಳಿಸುವ ಇಚ್ಛೆಯಿಂದ ಆ ಪ್ರತಿಯೊಂದು ಸಮೂಹವನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಇಚ್ಛಿಸುತ್ತಾರೆ. ಯಾವ ಶಾಸನ ಪ್ರಭುತ್ವದಿಂದ ಪರಕೀಯರ ಸಂಬಂಧವಿರುತ್ತದೆಯೋ ಅದನ್ನು ಹೋಗಲಾಡಿಸಲು, ನಾಶಗೊಳಿಸಲು ಒಂದು ಒಗ್ಗಟ್ಟಿನ ಸೂತ್ರವಿರುತ್ತದೆ. ಈ ಆಧಾರದ ಮೇಲೆ ಪ್ರತಿಸಲವೂ ರಾಷ್ಟ್ರೀಯ ಆಂದೋಲನಗಳು ನಡೆಯುತ್ತಿರುತ್ತವೆ. ಪರಕೀಯರ ಆಳ್ವಿಕೆಯಿಂದ ಜನತೆಯ ಮನಸ್ಸಿನಲ್ಲಿ ಹೆಚ್ಚೆಚ್ಚು ದ್ವೇಷ ಉತ್ಪನ್ನ ಮಾಡುವುದು ಅವಶ್ಯಕವೆಂದು ತಿಳಿದು ಜನತೆಯ ಸಂಪೂರ್ಣ ದುಃಖಗಳ ದೋಷವನ್ನು ಆ ಪ್ರಭುತ್ವದ ತಲೆಯ ಮೇಲೆ ಹಾಕುತ್ತಾರೆ. ದೈಹಿಕ, ದೈವಿಕ ಮತ್ತು ಭೌತಿಕ ಕಾರಣಗಳಿಂದ ಭೂಕಂಪ, ಅನಾವೃಷ್ಟಿ ಮತ್ತು ಅತಿವೃಷ್ಟಿಯೇ ಆಗಿರಲಿ, ತಮ್ಮ ಅಸ್ವಚ್ಛತೆಯ ಪರಿಣಾಮ ಸ್ವರೂಪವಾಗಿ ಕಾಯಿಲೆ ಕಸಾಲೆಗಳು ಉಂಟಾಗಿರಲಿ, ಶಾಸನ ಯಂತ್ರಗಳ ಕೆಡುಕಿನ ಕಾರಣದಿಂದ ಜನರು ಬಸವಳಿದಿರಲಿ, ಧಾರ್ಮಿಕತೆಯ ಅಜ್ಞಾನದಿಂದ ಸುಳ್ಳು ಮೂಢನಂಬಿಕೆಗಳ ಮೂಲಕ ಜನರನ್ನು ಲೂಟಿ ಮಾಡುತ್ತಿರಲಿ ಈ ಎಲ್ಲಾ ಕಾರಣಗಳ ದೋಷವನ್ನು ಶಾಸನವನ್ನು ಮಾಡುವಂತಹ ಪರಕೀಯರ ಪ್ರಭುತ್ವದ ಮೇಲೆ ಹೊರಿಸುತ್ತಾರೆ. ಪಾರತಂತ್ರ್ಯವನ್ನು ಹೋಗಲಾಡಿಸಲು ಆಳುವ ವರ್ಗಗಳ ಬಗ್ಗೆ ವಿರೋಧವಾಗಿ ಪ್ರಚಾರ ಮಾಡುತ್ತಾ ಜನಮತವನ್ನು ಅದರ ಬಗ್ಗೆ ದ್ವೇಷವುಂಟಾಗುವಂತೆ ಸಿದ್ಧಗೊಳಿಸಲು ಅಲ್ಲಿ ದೋಷಾರೋಪಣದ ಅವಶ್ಯಕತೆ ಇರುತ್ತದೆ. ಅಲ್ಲಿ ಈ ಸತ್ಯವು ಅದರ ಹಿಂದೆ ಅಡಗಿರುತ್ತದೆ. ಏನೆಂದರೆ ದುಃಖಗಳನ್ನು ದೂರ ಮಾಡುವುದರಲ್ಲಿ ತಮ್ಮ ಪುರುಷಾರ್ಥ ಪ್ರಕಟಪಡಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಅಸಹಾಯಕ ಪರಿಸ್ಥಿತಿಯಲ್ಲಿ ದುಃಖ ಉರಿಯುತ್ತಿದ್ದರೂ ಸಹ ಪರಕೀಯ ಪ್ರಭುತ್ವಕ್ಕೆ ದೋಷವನ್ನು ತಡೆಯುವುದು ಸ್ವಾಭಾವಿಕವಾಗಿರುತ್ತದೆ. ರಾಷ್ಟ್ರಜೀವನದ ಪ್ರತಿಯೊಂದು ಕ್ಷೇತ್ರವು ಪರಕೀಯರಿಂದ ವ್ಯಾಪಿಸಿರುವ ಕಾರಣ ಆ ಪ್ರಭುತ್ವದ ಬಗೆಗಿನ ವಿರೋಧ ಹೆಚ್ಚು ಕಡಿಮೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊರಬರುತ್ತದೆ. ಯಾವುದೇ ಸ್ವಾರ್ಥದಿಂದ ಆಘಾತ ಉಂಟಾದರೆ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ. ಯಾವುದೇ ಯೋಜನೆಗಳು ಅಸಫಲಗೊಂಡರೆ ವ್ಯಕ್ತಿಗೂ ತಮ್ಮ ಶಕ್ತಿಯ ವಿಕಾಸಕ್ಕೆ ಅವಕಾಶ ಸಿಗುವುದಿಲ್ಲ. ಈ ರೀತಿಯಾಗಿ ತಮ್ಮ ತಮ್ಮ ಹಿತಗಳಲ್ಲಿ ಆಘಾತ ಉಂಟಾಗುವ ಕಾರಣ ವಿರೋಧಿ ದಳವು ಅಲ್ಲಿಯೇ ನಿಂತುಬಿಡುತ್ತದೆ. ತಮ್ಮ ತಮ್ಮ ಇಚ್ಛೆಯನ್ನು ಪೂರ್ತಿಗೊಳಿಸುವ ಆಸೆಯಿಂದ ತಮ್ಮನ್ನು ಕೇಂದ್ರವಾಗಿಸಿಕೊಂಡು ಸುಂದರ ಭವ್ಯವಾದ ಭವಿಷ್ಯದ ಸ್ವಪ್ನವನ್ನು ಕಾಣುತ್ತಾ ಎಲ್ಲಾ ಅನ್ಯರಾಜ್ಯಗಳನ್ನು ಹಾನಿಗೊಳಿಸುವ ಪ್ರಯತ್ನವನ್ನು ಮಾಡುತ್ತಾರೆ, 470 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಅದಕ್ಕಾಗಿ ತ್ಯಾಗ ಮಾಡುತ್ತಾರೆ, ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ, ಯಾತನೆಗಳನ್ನು ನುಂಗಿಕೊಳ್ಳುತ್ತಾರೆ. ಈ ಒಂದು ಓಟದಲ್ಲಿ ಎಲ್ಲರಿಗಿಂತ ಯಾರು ಮುಂದೆ ಬರುತ್ತಾ ದಾರಿ ತೋರಿಸುತ್ತಾರೋ ಅವನು ದೇಶಭಕ್ತನಾಗುತ್ತಾನೆ. ಅವನ ದರ್ಶನಕ್ಕೆ ಜನರು ಮುಗಿಬೀಳುತ್ತಾರೆ. ಅವರ ಹೆಸರಿನಲ್ಲಿ ಜಯಜಯಕಾರ ಮಾಡುತ್ತಾರೆ. ಅವರ ಮಾತುಗಳಿಂದ ಎಲ್ಲರನ್ನೂ ಜಾದೂಗೊಳಿಸುತ್ತಾರೆ. ಅವರು ರಾಷ್ಟ್ರದ ಮಹಾಪುರುಷರಾಗುತ್ತಾರೆ. ರಾಷ್ಟ್ರವು ಮುಂದುವರೆಯುವುದು ಗೊತ್ತಾಗುತ್ತದೆ. ರಾಷ್ಟ್ರೀಯ ಭಾವನೆಯು ಪ್ರಬಲವಾಗುತ್ತಾ ಹೋಗುತ್ತದೆ. ರಾಷ್ಟ್ರೀಯ ಭಾವನೆಯ ಈ ರೀತಿಯ ಪ್ರಬಲ ಪ್ರವಾಹ ಅಥವಾ ಬೇರೆ ಇನ್ಯಾವುದೇ ಕಾರಣದಿಂದ ಈ ಪರಕೀಯ ಪ್ರಭುತ್ವ ನಷ್ಟವಾದರೆ ಅಥವಾ ಅಪ್ರತ್ಯಕ್ಷವಾಗಿ ಮಾಯವಾದರೂ ಕೂಡ ಈ ವಿರೋಧಾತ್ಮಕ ರಾಷ್ಟ್ರೀಯತೆಯ ಬಗ್ಗೆ ನಮ್ಮ ಕಣ್ಣಮುಂದೆ ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಬಂದು ನಿಲ್ಲುತ್ತದೆ. ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಆಶ್ರಯ ಸ್ಥಾನ ಪರಕೀಯ ಪ್ರಭುತ್ವವು ಲುಪ್ತವಾದರೂ ಪರತಂತ್ರ ದೇಶದಲ್ಲಿ ಕೂಡ ದೇಶಭಕ್ತಿ ಉಂಟಾಗುತ್ತದೆಯೆ? ರಾಷ್ಟ್ರೀಯತೆಗಾಗಿ ಪರಾಧೀನತೆಯ ಅವಶ್ಯಕತೆ ಇದೆಯೇ? ಇಲ್ಲ. ನಾವು ದೇಶಭಕ್ತಿ ಎಂದರೆ ಏನು ಎಂದು ವಿಚಾರ ಮಾಡಿದಾಗ ಅದರ ಬಗ್ಗೆ ಯಾವುದಾದರೂ ಒಂದು ರಚನಾತ್ಮಕ ಆಧಾರ ಅದಕ್ಕೆ ಇರಬೇಕು. ಇಂತಹ ರಚನಾತ್ಮಕವಾದ ಆಧಾರ ಇಲ್ಲದೆ ಹೋದಾಗ ದೊಡ್ಡ ದೊಡ್ಡ ದೇಶಭಕ್ತರು ದೇಶಭಕ್ತಿಯ ಹೆಸರಿನಲ್ಲಿ ಸ್ವಾರ್ಥದ ಸೌಧವನ್ನು ಕಟ್ಟಲು ಪ್ರಾರಂಭ ಮಾಡುತ್ತಾರೆ. ತಮ್ಮ ಹೆಸರು ಮತ್ತು ಪದವಿಗಾಗಿ ದೇಶವನ್ನು ಕೂಡ ಬಲಿಕೊಡಲು ಸಿದ್ಧರಾಗುತ್ತಾರೆ. ಆದ್ದರಿಂದ ದೇಶಭಕ್ತಿಗೆ ಒಂದು ಭಾವನಾತ್ಮಕ ಕಲ್ಪನೆ ಬೇಕು, ರಚನಾತ್ಮಕ ಆಧಾರಬೇಕು ಮತ್ತು ಅಲ್ಲಿ ಶಾಶ್ವತವಾದಂತಹ ನಿಯಮಗಳ ಅನುಸಾರವಾಗಿರಬೇಕು. ಹಾಗಿರದಿದ್ದರೆ ಮರಳಿನ ಮೇಲೆ ಕಟ್ಟಿದ ಮಹಲು ತೀವ್ರವಾದ ಗಾಳಿಬೀಸಿದಾಗ ಬಿದ್ದುಹೋಗುತ್ತದೋ ಹಾಗೆ ದೇಶಭಕ್ತಿಯೆಂಬ ಮಹಲು ನೆಲಸಮವಾಗುತ್ತದೆ. ಈ ರಚನಾತ್ಮಕ ಆಧಾರವನ್ನು ಅಂತರ್ಮುಖಿ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು. ಪರಕೀಯ ಪ್ರಭುತ್ವದ ಸ್ಥಾನದಲ್ಲಿ ನಮ್ಮ ದೇಶ ಮತ್ತು ರಾಷ್ಟ್ರದ ವಿಚಾರ ಮಾಡಬೇಕು. ಇದರ ಬಗ್ಗೆ ಏನೆಂದರೆ ಪರಕೀಯರ ಪ್ರಭುತ್ವವನ್ನು ನಾವೇಕೆ ವಿರೋಧಿಸುತ್ತೇವೆ ಎಂಬುದರ ಬಗ್ಗೆ ಆಳವಾದ ವಿಚಾರ ಮಾಡೋಣ. ಪರಕೀಯ ಪ್ರಭುತ್ವದ ಕಾರಣದಿಂದಾಗಿ ನಮ್ಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆಯೇ? ಬಡತನ ಮತ್ತು ನಿರುದ್ಯೋಗದ ರಾಜ್ಯವಾಗಿದೆ. ನಮಗೆ ದೊಡ್ಡ ದೊಡ್ಡ ನೌಕರಿಗಳು ಸಿಗುತ್ತಿಲ್ಲ. ರಾಜ್ಯದ ಕಾರ್ಯಭಾರದಲ್ಲಿ ನಮಗೆ ಯಾವುದೇ ಸ್ಥಾನವಿಲ್ಲ. ನಮ್ಮ ವ್ಯಕ್ತಿಗತ ಸ್ವಾಭಿಮಾನಕ್ಕೆ ಯಾವುದಾದರೂ ಒಂದು ಧಕ್ಕೆಯಾಗುತ್ತದೆ. ಮುಂತಾದ ಎಲ್ಲಾ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ವಿಷಯಗಳ ಬಗ್ಗೆ ವಿಚಾರ ರಾಷ್ಟ್ರ ಚಿಂತನ 471 ಮಾಡಿದರೆ ತಿಳಿದುಬರುವುದೇನೆಂದರೆ ಮೇಲಿನ ಕಾರಣಗಳಿದ್ದರೂ ಕೂಡ ಇದರ ಹಿಂದೆ ಯಾವುದೇ ಸತ್ಯವಿಲ್ಲ. ಯಾರು ಇಂದು ಪರಕೀಯ ಪ್ರಭುತ್ವವನ್ನು ವಿರೋಧಿಸುತ್ತಿದ್ದಾರೋ ನಾಳೆ ಅವರಿಗೆ ಕೆಲಸ ಸಿಕ್ಕಿದರೆ ಮತ್ತು ವಿರೋಧಿಸುವುದನ್ನು ಬಿಟ್ಟು ಬಿಟ್ಟರೆ ಅವರನ್ನು ದೇಶಭಕ್ತ ಎಂದು ಕರೆಯಲು ಸಾಧ್ಯವೇ ? ಹಣ ಇಲ್ಲದಿದ್ದರೂ ವಿರೋಧಿಸುವ ದೇಶಭಕ್ತನನ್ನು ಶಾಸಕ ವರ್ಗವು ಖರೀದಿ ಮಾಡಿಕೊಂಡ ಮೇಲೆ ಅವನು ನಮ್ಮ ಶ್ರದ್ಧೆಯ ಕೇಂದ್ರಬಿಂದುವಾಗುತ್ತಾನೆಯೇ? ರಾಜ್ಯದಲ್ಲಿ ಯಾರಿಗೆ ಯಾವುದೇ ಪದವಿ ಇಲ್ಲದೆ ಇರುವನು, ನಾಳೆ ಅದು ಸಿಕ್ಕಿದಾಗ ಅವನನ್ನು ಶಾಸಕ ವರ್ಗ ಸೇರಿಸಿಕೊಳ್ಳುತ್ತದೆಯೇ? ಅವನ ಮಾತಿನಲ್ಲಿ ಅದೇ ಜಾದೂ ಇರುತ್ತದೆಯೇ? ನಿಜವಾದ ದೇಶಭಕ್ತ ಎಂದರೆ ಹಣ ವೈಭವ ಮತ್ತು ಪದವಿಯನ್ನು ತಿರಸ್ಕರಿಸಿ ಅದಕ್ಕೆ ಬದಲಾಗಿ ನಿರ್ಧನತ, ಅಭಾವ ಮತ್ತು ಸೇವೆಯನ್ನು ವ್ರತವನ್ನಾಗಿ ಸ್ವೀಕಾರ ಮಾಡುತ್ತಾನೆ. ಮತ್ತು ಇವುಗಳಲ್ಲಿ ಅವರ ಶ್ರೇಷ್ಠತೆ ಇರುತ್ತದೆ. ಹೇಳಲಾಗುವುದೇನೆಂದರೆ ಪರಕೀಯ ಪ್ರಭತ್ವದ ವಿರುದ್ಧವಾದ ದೇಶಭಕ್ತಿಯಲ್ಲಿ ನಿರ್ಧನತ, ನಿರುದ್ಯೋಗ, ಪದವಿ ಇಲ್ಲದೆ ಇಡೀ ರಾಷ್ಟ್ರದ ಬಡತನ ಮತ್ತು ನಿರುದ್ಯೋಗದ ಪ್ರಶ್ನೆ ಇದೆ. ಇಡೀ ರಾಷ್ಟ್ರದ ಈ ಪ್ರಶ್ನೆಯನ್ನು ದೂರಮಾಡಬೇಕು. ರಾಷ್ಟ್ರ ಕಲ್ಪನೆಯಲ್ಲೂ ದೇಶಭಕ್ತಿಯ ರಹಸ್ಯ ಹುದುಗಿರುತ್ತದೆ. ನಾವು ನಮ್ಮ ಸ್ಥಾನದಲ್ಲಿದ್ದುಕೊಂಡು ಇಡೀ ರಾಷ್ಟ್ರದ ಚಿಂತನೆಯನ್ನು ಏಕೆ ಮಾಡುತ್ತೇವೆ. ಇದಕ್ಕಾಗಿ ಈ ಪ್ರಶ್ನೆಯನ್ನು ಒಮ್ಮೆಲೆ ದೂರೀಕರಿಸುವುದಕ್ಕೆ ಎಲ್ಲಾ ಜನರು ಸೇರಿದಾಗ ಸುಲಭವಾಗಿ ಹೋಗಲಾಡಿಬಹುದು. ರಾಷ್ಟ್ರದ ವೈಭವದ ಚಿಂತನೆಯಲ್ಲಿ ನಮ್ಮ ವೈಭವವೂ ಕೂಡ ಇದೆ. ಈ ರೀತಿಯ ಸ್ವಾರ್ಥದ ಭಾವನೆಯಲ್ಲಿ ನಮ್ಮ ರಾಷ್ಟ್ರೀಯತೆ ಕಳ್ಳರು ಮತ್ತು ಡಕಾಯಿತರ ಜೋಡಿಯಂತಾಗುತ್ತದೆ. ಕಳ್ಳರು ಮತ್ತು ಡಕಾಯಿತರು ಒಬ್ಬರಿಗೊಬ್ಬರು ಸೇರಿ ಕೆಲಸ ಮಾಡುತ್ತಾರೆ. ಒಬ್ಬರಿಗೊಬ್ಬರು ರಕ್ಷಣೆ ಮಾಡುತ್ತಾರೆ. ತಮ್ಮ ನಾಯಕರ ಆಜ್ಞೆಯನ್ನು ಪಾಲನೆ ಮಾಡುತ್ತಾರೆ. ಮತ್ತು ತಮ್ಮ ಸ್ವಾರ್ಥವನ್ನು ತಮ್ಮ ಗುಂಪಿನ ಸ್ವಾರ್ಥಕ್ಕೋಸ್ಕರ ತ್ಯಾಗ ಮಾಡುತ್ತಾರೆ. ಮೇಲ್ನೋಟಕ್ಕೆ ಇವೆಲ್ಲಾ ಒಳ್ಳೆಯ ಮಾತಿನಂತೆ ಕಂಡರೂ ಕೂಡ ಇವರ ಸಂಬಂಧ ಅದು ಶಾಶ್ವತವಲ್ಲ ಮತ್ತು ಮಾನವನ ಕಲ್ಯಾಣಕ್ಕಾಗಿಯೂ ಅಲ್ಲ. ತಾವು ಲೂಟಿ ಮಾಡಿದಂತಹ ವಸ್ತುಗಳನ್ನು ಹಂಚಿಕೊಳ್ಳುವಾಗ ಅವರವರಲ್ಲೇ ಜಗಳವುಂಟಾಗಿ ಬಿರುಕು ಕಾಣಿಸಿಕೊಳ್ಳುತ್ತದೆ, ಬೇರೆಯಾಗುತ್ತಾರೆ. ಇದಿಲ್ಲವಾದರೆ ಅವರು ಜೊತೆಸೇರಿ ಬೇರೆಯವರನ್ನು ಲೂಟಿ ಮಾಡುತ್ತಾರೆ. ಈ ಎರಡೂ ಸ್ಥಿತಿಗಳು ಹಾನಿಕಾರಕವೇ ಆಗಿರುತ್ತದೆ. ರಾಷ್ಟ್ರೀಯತೆ ಕೂಡ ಇದೇ ರೀತಿ ಆರ್ಥಿಕ ಕಾರಣಗಳ ಪ್ರೇರಣೆಯ ಫಲವಾಗಿರುತ್ತದೆ ಎಂದರೆ ವ್ಯಕ್ತಿಗತ ಮತ್ತು ವರ್ಗ ಸ್ವಾರ್ಥದ ಕಾರಣದಿಂದಾಗಿ ಪರಸ್ಪರ ಜಳಗವಾಗುತ್ತದೆ. ಅಥವಾ ಪಶ್ಚಿಮದ ಕೆಲವು ರಾಷ್ಟ್ರಗಳಂತೆ 472 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಮಾನವತ್ವವನ್ನು ಎತ್ತಿಹಿಡಿದು ತಮ್ಮ ರಾಷ್ಟ್ರೀಯ ಸ್ವಾರ್ಥಕ್ಕಾಗಿ ಬೇರೆ ರಾಷ್ಟ್ರಗಳನ್ನು ಗುಲಾಮರನ್ನಾಗಿ ಮಾಡಿಕೊಂಡು ನಿರಂತರವಾಗಿ ವಿಶ್ವಯುದ್ಧದ ಮಟ್ಟಿಗೆ ಇಡೀ ಜಗತ್ತನ್ನು ವಿಪತ್ತಿನಲ್ಲಿ ಸಿಕ್ಕಿಸುತ್ತವೆ. ರಾಷ್ಟ್ರದ ಬಗ್ಗೆ ಭಕ್ತಿ ಮತ್ತು ತಮ್ಮ ರಾಷ್ಟ್ರದ ಜನಸಮುದಾಯದ ಬಗ್ಗೆ ಸಹಾನುಭೂತಿವುಂಟಾಗುವುದಕ್ಕೆ ಮೂಲಕಾರಣ ಈ ಸ್ವಾರ್ಥಗಳ ಏಕತೆಯು ಅಲ್ಲ, ಶತ್ರುತ್ವವೂ ಅಲ್ಲ, ಮಿತ್ರತ್ವವೂ ಅಲ್ಲ. ನಮ್ಮ ರಾಷ್ಟ್ರದ ಸಂಪೂರ್ಣ ಜನತೆಯ ಬಗ್ಗೆ ನಮಗಿರುವ ಮಮಕಾರದಿಂದಲೇ ನಮ್ಮ ದೇಶಭಕ್ತಿ ವ್ಯಕ್ತವಾಗುತ್ತದೆ ಇದು ಏಕಾತ್ಮಕತ್ವದ ಪರಿಣಾಮವೇ ಎಂದರೆ ತಪ್ಪಾಗಲಾರದು. ವ್ಯಕ್ತಿಗೆ ಆತ್ಮವಿರುವಂತೆ ರಾಷ್ಟ್ರಕ್ಕೂ ಒಂದು ಆತ್ಮ ಇರುತ್ತದೆ. ಇದರ ಪರಿಣಾಮವಾಗಿ ರಾಷ್ಟ್ರದಲ್ಲಿ ಏಕಾತ್ಮಕತೆ ಪುಟಿದೇಳುತ್ತದೆ. ರಾಷ್ಟ್ರದ ಈ ಆತ್ಮಕ್ಕೆ ನಮ್ಮ ಶಾಸ್ತ್ರಕಾರರು `ಚಿತಿ' ಎಂದು ಕರೆಯುತ್ತಾರೆ. ಬೇರೆ ಬೇರೆ ರಾಷ್ಟ್ರಕ್ಕೂ ಕೂಡ ಬೇರೆ ಬೇರೆ ರೀತಿಯ ಚಿತಿ ಇರುತ್ತದೆ. ಈ ಭಿನ್ನತೆಯ ಕಾರಣದಿಂದಾಗಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಆಳ್ವಿಕೆಯಲ್ಲಿ ಇದ್ದರೆ ತಮ್ಮನ್ನು ಪರತಂತ್ರ ಎಂದುಕೊಳ್ಳುತ್ತಾರೆ. ಮನುಷ್ಯ ಮನುಷ್ಯನಿಗಾಗಿ ಇರುವಂತಹ ರಾಜ್ಯ ಯಾವಾಗಲೂ ಇರುತ್ತದೆ. ಸ್ವತಂತ್ರ ರಾಜ್ಯದಲ್ಲಿಯೂ ಸರ್ಕಾರ ಇರುತ್ತದೆ. ಅಲ್ಲಿಯೂ ಆಡಳಿತ ಸಂಬಂಧವಾದ ನಿಯಮಗಳೂ ಇರುತ್ತವೆ. ಮತ್ತು ಬಂಧನವೂ ಇರುತ್ತದೆ. ರಾಷ್ಟ್ರದ ಆಪತ್ತಿನ ಸಂದರ್ಭದಲ್ಲಿಯೂ ಇರುತ್ತದೆ. ಆದರೆ ಅಂತಹ ಸ್ಥಿತಿಯನ್ನು ಯಾವ ದೇಶಭಕ್ತನೂ ಕೂಡ ದುಃಖ ಎಂದು ತಿಳಿದುಕೊಳ್ಳುವುದಿಲ್ಲ. ಅಂತಹ ಒಂದು ಸಂಕಟದ ಸಂದರ್ಭದಲ್ಲಿಯೂ ಕೂಡ ಅವನು ಸಂತೋಷದಿಂದಲೇ ಇರುತ್ತಾನೆ. ಹಣ ಇಲ್ಲದೆ ಇದ್ದರೂ ಕೂಡ ಸುಖದಿಂದಲೇ ಕಳೆಯುತ್ತಾರೆ. ಚಿತಿಯೇ ಜನ ಸಮೂಹದ ದೇಶ ವಿದೇಶಗಳ ಜನರಲ್ಲಿ ಮನೆಮಾಡಿಕೊಂಡಿರುವ ಕಾರಣ ಅವರ ಸಂಸ್ಕೃತಿಯು ಸಾಹಿತ್ಯ ಧರ್ಮದಲ್ಲಿ ವ್ಯಕ್ತವಾಗುತ್ತದೆ. `ಚಿತಿ'ಎನ್ನುವುದು ಒಂದೇ ರೀತಿಯ ಪರಂಪರೆ, ಇತಿಹಾಸ ಮತ್ತು ಸಭ್ಯತೆಯನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಯಾವುದೇ ರಾಷ್ಟ್ರದ ಒಗ್ಗಟ್ಟಿನ ಮೂಲಕಾರಣ ಸಂಸ್ಕೃತಿ, ಸಭ್ಯತೆ, ಧರ್ಮ, ಭಾಷೆ ಮುಂತಾದವುಗಳ ಏಕತೆಯಲ್ಲ, ಮೂಲ ಕಾರಣ ಚಿತಿ ವ್ಯಕ್ತವಾಗುವ ಪರಿಣಾಮದಿಂದ. ಮೇಲ್ನೋಟಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಕೂಡ ಬೇರೆ ಬೇರೆ ಚಿತಿಯ ಈ ಜನರಲ್ಲಿ ಭಾಷೆ, ಧರ್ಮ, ಸಭ್ಯತೆ ಮುಂತಾದವುಗಳ ಏಕತೆಯ ನಿರ್ಮಾಣ ಮಾಡಿದರೂ ರಾಷ್ಟ್ರೀಯ ಏಕತೆ ಆಗುವುದಿಲ್ಲ. ಕೇವಲ ಅಂಗಗಳ ಜೋಡಣೆಯಿಂದ ಮಾತ್ರ ಜೀವನ ನಡೆಯುವುದರ ಆತ್ಮದ ಸ್ಥಿತಿಯು ಜೀವನ ಮತ್ತು ಚೈತನ್ಯದ ಭೂಮಿಕೆಯಾಗುತ್ತದೆ. ವ್ಯಕ್ತಿಯ ಆತ್ಮದ ರಾಷ್ಟ್ರ ಚಿಂತನ 473 ಏಕತೆಯು ಅದರ ವ್ಯಕ್ತಿತ್ವದ ವಿಶಿಷ್ಟತೆ ಮತ್ತು ಅದರ ಚರಿತ್ರೆಯ ಏಕತೆಯಲ್ಲೂ ವ್ಯಕ್ತವಾಗುತ್ತದೆ. ಪ್ರತಿಯೊಂದು ಅಂಗವೂ ಶರೀರಕ್ಕೋಸ್ಕರ ಕೆಲಸ ಮಾಡಬೇಕಾಗುತ್ತದೆ. ಸಂಪೂರ್ಣ ಶರೀರದ ಜೊತೆ ಜೊತೆಯಲ್ಲಿ ಪ್ರತಿಯೊಂದು ಅಂಗವೂ ಪಾಲನೆ ಪುಷ್ಟಿ ಮಾಡಬೇಕಾಗುತ್ತದೆ ಈ ಸಮಷ್ಟಿ ಜೀವನದ ಭಾವವು ಆತ್ಮದ ಇರುವಿಕೆಯೇ ಕಾರಣವಾಗಿದೆ. ಇದರ ಹಿಂದೆ ಯಾವುದೇ ಸ್ವಾರ್ಥ ಭಾವನೆಯೂ ಇಲ್ಲ. ಸಂಪೂರ್ಣ ರಾಷ್ಟ್ರದ ಏಕತೆ ಅದರ ಸಮಷ್ಟಿ ಜೀವನ ರಾಷ್ಟ್ರದ ಆತ್ಮವಾದ ಚಿತಿಯ ಪರಿಣಾಮವೇ ಆಗಿರುತ್ತದೆ. ಚಿತಿಯ ಪ್ರಕಾಶದಿಂದಲೇ ರಾಷ್ಟ್ರದ ಅಭ್ಯುದಯವಾಗುತ್ತದೆ ಮತ್ತು ಚಿತಿಯ ವಿನಾಶದಿಂದ ರಾಷ್ಟ್ರದ ಅಧಃಪತನವೂ ಆಗುತ್ತದೆ. ಪರತಂತ್ರ ಅವಸ್ಥೆಯಿಂದ ಚಿತಿ ಆಕ್ರಮಿಸಲ್ಪಡುತ್ತದೆ. ಜನ ಸಮಾಜದಲ್ಲಿ ಅದರ ಪ್ರಕಾಶ ಅತ್ಯಂತ ಕ್ಷೀಣವಾಗುತ್ತದೆ. ಕೇವಲ ಕೆಲವು ಶುದ್ಧ ಮತ್ತು ಸಾತ್ವಿಕ ಪ್ರವೃತ್ತಿಯ ಜನರಲ್ಲಿ ಮಾತ್ರ ಅದರ ಆವಿರ್ಭಾವವಿರುತ್ತದೆ. `ಚಿತಿ'ಯ ಈ ಪ್ರಕಾಶವನ್ನು ಉಜ್ವಲಗೊಳಿಸುವ ಕಾರ್ಯ ದೇಶಭಕ್ತನ ಪ್ರಮುಖ ಕಾರ್ಯವಾಗುತ್ತದೆ. ಇದರ ಪರಿಣಾಮ ಸ್ವರೂಪವಾಗಿ ದೇಶದ ಬಂಧನ ಕಳಚಿಹೋಗುತ್ತದೆ. ಮತ್ತು ತದನಂತರವೂ ಇದರ ಪ್ರಕಾಶ ಹೆಚ್ಚೆಚ್ಚಾಗುತ್ತಾ ರಾಷ್ಟ್ರ ಜೀವನವನ್ನು ಪೋಷಿಸುತ್ತದೆ. ಅದನ್ನು ಚಿರಂತನವಾಗಿಸುತ್ತಾ ಮಾನವ ಕಲ್ಯಾಣದ ಕಡೆಗೆ ಕೊಂಡೊಯ್ಯುತ್ತದೆ. ಇದೇ ಆತ್ಮ ಸಾಕ್ಷಾತ್ಕಾರ ರಾಷ್ಟ್ರ ಜೀವನದ ಮುಖ್ಯ ಗುರಿಯಾಗುತ್ತದೆ. ರಾಷ್ಟ್ರವನ್ನು ಈ ಆತ್ಮಸಾಕ್ಷಾತ್ಕಾರದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವವನೂ ದೇಶಭಕ್ತನಾಗುತ್ತಾನೆಯೇ ಹೊರತು ಕೇವಲ ವಿದೇಶಗಳನ್ನು ವಿರೋಧಿಸುವವನಲ್ಲ. ರಾಷ್ಟ್ರದ ಆತ್ಮವಾದ ಈ ಸಾಕ್ಷಾತ್ಕಾರ ಇಲ್ಲದಿದ್ದಲ್ಲಿ ಆತ್ಮವು ಅದೇ ರೀತಿ ಆಕ್ರಮಿಸಲ್ಪಡುತ್ತದೆ ಮತ್ತು ಮುಳುಗಿಹೋಗುತ್ತದೆ ಅಥವಾ ತನ್ನ ಚಿತಿಯ ಮೇಲೆ ಅನ್ಯ ರಾಷ್ಟ್ರದ ಚಿತಿಯ ಪ್ರಭಾವವುಂಟಾದಾಗ ಜಾತೀಯ ಜೀವನದ ಉತ್ಕರ್ಷದ ಸ್ಥಾನದಲ್ಲಿ ಅಪಕರ್ಮವೂ ಉಂಟಾಗಿಬಿಡುತ್ತದೆ. ಈ ರೀತಿ ಚಿತಿಗಳ ಸಂಘರ್ಷದಲ್ಲಿ ದೇಶೀಯ ಚಿತಿ ಬಲಯುತವಾಗದಿದ್ದರೆ ಕೊನೆಯಲ್ಲಿ ರಾಷ್ಟ್ರ ಜೀವನ ನಷ್ಟವಾಗಿಬಿಡುತ್ತದೆ ಮತ್ತು ಅದರ ಸ್ಥಾನವನ್ನು ಬೇರೊಂದು ರಾಷ್ಟ್ರ ಪಡೆದುಕೊಳ್ಳುತ್ತದೆ. ಈಗ ಭಾರತದ ಮುಂದಿರುವ ಪ್ರಶ್ನೆ ಏನೆಂದರೆ, ಇದುವರೆಗೆ ನಮ್ಮ ರಾಷ್ಟ್ರ ಎಂದು ಹೇಳಿಕೊಂಡು ಆಂದೋಲನ ನಡೆಸುತ್ತಿದ್ದವರ ಆಂದೋಲನದ ಸ್ವರೂಪ ಕೇವಲ ಆಂಗ್ಲ ವಿರೋಧಿಯಾದ ಸ್ವರೂಪವಾಗಿತ್ತು. ಎಲ್ಲ ರೀತಿಯ ಕಾರಣಗಳನ್ನು ಒಟ್ಟು ಸೇರಿಸಿ ಒಂದು ಸಂಯುಕ್ತ ಮೋರ್ಚಾವನ್ನು ನಿಲ್ಲಿಸುವ ಪ್ರಯತ್ನ ಮಾಡಲಾಯಿತು. ಅದರಲ್ಲಿ ಭಾರತದ ಹೆಚ್ಚೆಚ್ಚು ಜನಸಮೂಹವನ್ನು ಒಂದುಗೂಡಿಸಿ ಅವರಲ್ಲಿ ರಾಷ್ಟ್ರಿಯ ಸಮಾನತೆಯ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಯಿತು. 474 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 `ಚಿತಿ'ಯ ಆಧಾರವಿಲ್ಲದ ಕಾರಣ ಈ ರಾಷ್ಟ್ರೀಯತೆಯ ರಚನಾತ್ಮಕ ಸ್ವರೂಪ ಒಡೆದುಹೋಗಲಾರದು. ಬ್ರಹ್ಮಾಂಡದಿಂದ ಆತ್ಮದ ಸೃಷ್ಟಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇಂದು ನಮ್ಮ ವಿರೋಧದ ಆಶ್ರಯ ತಾಣ ಕಣ್ಣಿಗೆ ಕಾಣದಂತಾಗಿದೆ. ಇಂತಹ ಸಮಯದಲ್ಲಿ ನಮಗೆ ರಚನಾತ್ಮಕ ದೇಶಭಕ್ತಿಯ ಕಡೆಗೆ ವಿಶೇಷ ಗಮನಹರಿಸುವ ಅವಶ್ಯಕತೆಯಿದೆ. ನಾವು ನಮ್ಮ ಜಾತೀಯ ಜೀವನದ ಚಿತಿಯನ್ನು ಗುರುತಿಸಿ ಅದಕ್ಕೆ ಪ್ರಾಕೃತಿಕ ಸಂಸ್ಕಾರದ ಮೂಲಕ ಹೊದಿಸುವ ಪ್ರಯತ್ನ ಮಾಡುವುದರಲ್ಲಿಯೇ ನಮ್ಮ ರಾಷ್ಟ್ರದ ಚಿರ ಕಲ್ಯಾಣವಿದೆ. ಅದರ ಮೂಲಕ ನಾವು ಮಾನವತೆಯ ಸೇವೆ ಮಾಡುವುದರಲ್ಲಿ ಸಮರ್ಥರಾಗುತ್ತೇವೆ ಮತ್ತು ನಮ್ಮ ಚಿರಾಕಾಂಕ್ಷೆಯ ಧ್ಯೇಯವೂ ಆಗ ಸಫಲವಾಗುತ್ತದೆ. ``ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯಃ ಸರ್ವೇ ಭದ್ರಾಣಿ ಪಶ್ಚಂತು ಮಾ ಕಶ್ಚಿದ್ ದುಃಖಭಾಗಭವೇತ್." 16. ಚಿತಿ (2) ಯಾವುದೇ ರಾಷ್ಟ್ರದ ಅಸ್ತಿತ್ವಕ್ಕೆ ಕಾರಣ ಅದರ ಚಿತಿಯೇ ಆಗಿರುತ್ತದೆ. ಚಿತಿಯ ಉಗಮದಿಂದ ರಾಷ್ಟ್ರದ ಉಗಮವಾಗುತ್ತದೆ. ಭಾರತದ ಉನ್ನತಿ ಮತ್ತು ಅವನತಿಯ ವಾಸ್ತವಿಕ ಕಾರಣವೂ ನಮ್ಮ ಚಿತಿಯ ಪ್ರಕಾಶ ಅಥವಾ ಅದರ ಅಭಾವವೇ ಆಗಿದೆ. ಇಂದು ಭಾರತ ಉನ್ನತಿಯ ಆಕಾಂಕ್ಷೆಯನ್ನಿಟ್ಟುಕೊಂಡಿದೆ. ವಿಶ್ವದಲ್ಲಿ ಬಲಿಷ್ಠ ಮತ್ತು ವೈಭವಶಾಲಿ ರಾಷ್ಟ್ರಗಳ ಜೊತೆಯಲ್ಲಿ ನಿಲ್ಲಬೇಕೆಂಬುದು ಭಾರತದ ಅಪೇಕ್ಷೆಯಾಗಿದೆ. ಎಲ್ಲ ಕಡೆಯೂ ಜನರು ಈ ಧ್ಯೇಯವನ್ನು ಉಚ್ಛರಿಸುತ್ತಿದ್ದಾರೆ ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿತಿಯ ಬಗ್ಗೆ ತಿಳಿದುಕೊಳ್ಳುವುದು ನಮಗೆ ಅವಶ್ಯಕವಾಗಿದೆ. ಚಿತಿಯ ಜ್ಞಾನವಿಲ್ಲದಿದ್ದರೆ, ಮೊದಲನೆಯದಾಗಿ ನಮ್ಮ ಪ್ರಯತ್ನಗಳಲ್ಲಿ ಪ್ರೇರಕಶಕ್ತಿಯ ಅಭಾವದಿಂದಾಗಿ ಅದು ಫಲಕಾರಿಯಾಗುವುದಿಲ್ಲ. ಎರಡನೆಯದಾಗಿ ಮನಸ್ಸಿನಲ್ಲಿ ಭಾರತದ ಕಲ್ಯಾಣದ ಇಚ್ಛೆಯನ್ನು ಇಟ್ಟುಕೊಂಡು ಅದಕ್ಕಾಗಿ ಸ್ವಲ್ಪ ಪರಿಶ್ರಮಪಟ್ಟರೂ ಭಾರತವನ್ನು ಭವ್ಯವನ್ನಾಗಿಸುವ ಸ್ಥಾನದಲ್ಲಿ ಅದಕ್ಕೆ ಹಾನಿಯನ್ನುಂಟುಮಾಡುತ್ತೇವೆ. ಸ್ವಪ್ರಕೃತಿಯ ಪ್ರತಿಕೂಲ ಕಾರಣದ ಪರಿಣಾಮವಾಗಿ ಜೀವನದಲ್ಲಿ ಯಾವ ಪರಿವರ್ತನೆಯನ್ನು ಕಾಣುತ್ತಿದ್ದೇವೋ ಅಲ್ಲಿ ವಿಕಾಸಕ್ಕೆ ಬದಲು ವಿನಾಶದ ದ್ಯೋತಕವನ್ನೇ ಕಾಣುತ್ತಿದ್ದೇವೇ ಮತ್ತು ಈ ರೀತಿ `ವಿನಾಯಕಂ ಪ್ರಕುರ್ವಾಣೋ ರಚಯಾಮಾಸ್ ವಾನರಮ್' ಎಂಬ ಮಾತು ಚರಿತ್ರಾರ್ಹವಾಗಿದೆ. ನಮ್ಮ ರಾಷ್ಟ್ರ ಜೀವನದ ಚಿತಿ ಏನು? ನಮ್ಮ ಆತ್ಮದ ಸ್ವರೂಪವೇನು? ಈ ರಾಷ್ಟ್ರ ಚಿಂತನ 475 ಸ್ವರೂಪದ ವ್ಯಾಖ್ಯಾನ ಮಾಡುವುದು ಕಠಿಣವೇ, ಅದಕ್ಕಾದರೋ ಸಾಕ್ಷಾತ್ಕಾರದ ಸಂಭವವಿದೆ. ಆದರೆ ರಾಷ್ಟ್ರತ್ವದ ಪೂರ್ಣ ಸಾಕ್ಷಾತ್ಕಾರವನ್ನು ಮಾಡಿಕೊಂಡ ಮಹಾಪುರುಷರ ಜೀವನದಲ್ಲಿ `ಚಿತಿ'ಯ ಪ್ರಕಾಶ ಉಜ್ವಲವಾಗಿರುತ್ತದೆ. ಅವರ ಜೀವನದ ಕಡೆಗೆ ದೃಷ್ಟಿ ಹಾಯಿಸುವುದರಿಂದ ಅವರ ಜೀವನದ ಕ್ರಿಯೆಗಳು ಮತ್ತು ಘಟನೆಗಳನ್ನು ವಿಶ್ಲೇಷಣೆ ಮಾಡುವುದರಿಂದ ನಾವು ನಮ್ಮ ಚಿತಿಯ ಸ್ವರೂಪಕ್ಕೆ ಆ ಕಾಂತಿಯನ್ನು ಸ್ವಲ್ಪ ಮಟ್ಟಿಗೆ ಪಡೆದುಕೊಳ್ಳಬಹುದು ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಸಾಗಿ ಬಂದಿರುವ ರಾಷ್ಟ್ರ ಪುರುಷರ ಪರಂಪರೆಯ ಹಿಂದೆ ಅಡಗಿರುವ ಸೂತ್ರವನ್ನು ನಾವು ಕಂಡುಕೊಂಡಿದ್ದೇ ಆದಲ್ಲಿ ಸಂಭವನೀಯ ಚಿತಿಯ ವ್ಯಕ್ತಿ ಪರಿಣಾಮದ ಮೀಮಾಂಸೆಯಿಂದ ಅದರ ಅವ್ಯಕ್ತ ಕಾರಣದ ಅನುಭವವೂ ನಮಗೆ ಉಂಟಾಗುತ್ತದೆ. ಯಾವ ಮಹಾನ್ ವಿಭೂತಿ ಪುರುಷರ ನಾಮಸ್ಮರಣೆಯಿಂದಲೇ ನಾವು ನಮ್ಮ ಜೀವನದಲ್ಲಿ ದುರ್ಬಲತೆಯ ಕ್ಷಣಗಳಲ್ಲಿ ಶಕ್ತಿಯ ಅನುಭವವನ್ನು ಮಾಡುತ್ತೇವೆಯೋ, ಹೇಡಿತನದ ಕಾರ್ಯಕ್ಕೆ ಬದಲಾಗಿ ಶೌರ್ಯದ ವ್ರತವನ್ನು ಪಡೆಯುತ್ತೇವೆಯೋ, ಅವರ ಜೀವನದ ಯಾವ ಮಾತುಗಳು ನಮ್ಮಲ್ಲಿ ಇಷ್ಟೊಂದು ಸಾಮರ್ಥ್ಯವನ್ನು ತುಂಬುತ್ತವೆಯೋ ಅಂತಹವರಿಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗುತ್ತೇವೆ. ನಮ್ಮ ಶಿರವು ಶ್ರದ್ಧೆಯಿಂದ ಅವರ ಮುಂದೆ ಬಾಗುವುದಲ್ಲದೆ ಮತ್ತೇನು? ಅದರ ಗುರಿ ಯಾವುದೇ ಅಗಿರಲಿ ಅದರ ಕಡೆಗೇ ನಮ್ಮ ರಾಷ್ಟ್ರ ಜೀವನ ಸುತ್ತುತ್ತಲೇ ಬಂದಿದೆ. ನಮ್ಮ ರಾಷ್ಟ್ರದ ಯಾವ ತತ್ವಗಳನ್ನು ಉಳಿಸಿಕೊಳ್ಳಲು ನಾವು ದೊಡ್ಡ ದೊಡ್ಡ ಯುದ್ಧಗಳನ್ನು ಮಾಡಿದೆವೋ? ಯಾವುದಕ್ಕಾಗಿ ಲಕ್ಷಾಂತರ ಜನರ ಬಲಿದಾನವಾಯಿತೋ? ಉತ್ತರ ಭಾರತದ ಭೂಮಿಗಾಗಿ, ಆದರೆ ಇದರ ಅರ್ಥ ಭಾರತವೇನು ಜಡಭೂಮಿಯಾಗಿತ್ತೇ? ನಾವೇನು ಹಿಮಾಲಯದ ಪರ್ವತಗಳನ್ನು ಮತ್ತು ಗಂಗಾಜಲವನ್ನು ರಕ್ಷಣೆ ಮಾಡಿದೆವೆ? ನಮ್ಮ ಅವತಾರಗಳು ಯಾವ ಕಾರಣದಿಂದ ಜನ್ಮತಾಳಿವೆ? ಅವುಗಳಿಗೆ ನಾವು ಭಗವಂತನ ಅವತಾರವೆಂದು ಏಕೆ ಕರೆಯುತ್ತೇವೆ. ಮೇಲೆ ಹೇಳಿದಂತೆ ಅನೇಕ ರೀತಿಯ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆಲ್ಲ ನಾವು ಉತ್ತರ ಕೊಟ್ಟಿಲ್ಲ. ನಮಗೆ ನಮ್ಮ ಚಿತಿಯ ಪತ್ತೆಯಾಗುತ್ತದೆ. ನಮ್ಮ ಶಾಸ್ತ್ರಕಾರರು ಇದನ್ನು ಧರ್ಮವೆಂಬ ಹೆಸರಿನಿಂದ ಕರೆಯುತ್ತಾರೆ. ಈಗ ಧರ್ಮ ಎಂಬ ಶಬ್ದಕ್ಕೆ ಭ್ರಮಪೂರ್ಣ ಅರ್ಥ ಪ್ರಚಲಿತವಾಗಿದೆ. ಆಂಗ್ಲರ ರಿಲೀಜಿಯನ್ ಎಂಬುದನ್ನು ಪರ್ಯಾಯವಾಚಿಯಾಗಿ ಸ್ವೀಕರಿಸಿ ಮತ್ತು ರಿಲೀಜಿಯಸ್ ಮತ್ತು `ದೀನ್' ಎಂಬ ಹೆಸರಿನಲ್ಲಿ ಯುರೋಪ್ ಹಾಗೂ ಇನ್ನಿತರ ದೇಶಗಳಲ್ಲಿ ಯಾವ್ಯಾವ ಅಮಾನುಷ ಅತ್ಯಾಚಾರಗಳುಂಟಾಗಿವೆಯೋ ಅವುಗಳ ಸಂಬಂಧ ಇದರೊಂದಿಗೆ ಬೆರೆತುಹೋಗಿ 476 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಜನ ಧರ್ಮ ಶಬ್ದದಿಂದ ರೋಸಿಹೋಗಿದ್ದಾರೆ. ಅವರು ಧರ್ಮಕ್ಕೆ ಹಾನಿಯುಂಟುಮಾಡಿದ ಮೇಲೆ ತುಲನೆ ಮಾಡಿರಬೇಕು ಅಥವಾ ಯಾರು ಮೃದು ಧೋರಣೆ ಹೊಂದಿರುವ ಗುಂಪಿನವರು ಧರ್ಮವನ್ನು ಕೇವಲ ವ್ಯಕ್ತಿಗತ ಜೀವನದವರೆಗೆ ಸೀಮಿತವಾಗಿರಬೇಕೆನ್ನುತ್ತಾರೆ. ರಾಷ್ಟ್ರ ಮತ್ತು ಸಮಾಜದ ಧರ್ಮದಿಂದ ಅವರು ಯಾವುದೇ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲಿಯವರೆಗೆ ಧರ್ಮಕ್ಕೆ ರಿಲೀಜಿಯನ್ ಎಂಬ ತಾತ್ಪರ್ಯವನ್ನು ಕೊಡುತ್ತಾರೋ ಅಲ್ಲಿಯವರೆಗೆ ಅವರು ತಾವೇ ಸರಿ ಎನ್ನುತ್ತಾರೆ. ಆದರೆ ಧರ್ಮದ ಅರ್ಥ ವ್ಯಾಪಕವಾಗಿದೆ ಮತ್ತು ಈ ವ್ಯಾಪಕವಾದ ಅರ್ಥ ಹಿಂದೆ ಯಾವ ಭಾವವಿದೆಯೋ ಅದೇ ಭಾವ ಭಾರತದ ಕೋಟಿ ಕೋಟಿ ಜನರಲ್ಲಿ ಧರ್ಮ ಶಬ್ದವನ್ನು ಕೇಳಿ ಉತ್ಪತ್ತಿಯಾಗುತ್ತದೆ. ನಾವು ರಾಮ ಮತ್ತು ಕೃಷ್ಣರನ್ನು ನಮ್ಮ ಧರ್ಮದ ಮಹಾಪುರುಷರೆಂದು ಹೇಳುತ್ತೇವೆ. ಅವರೇನು ಯಾವುದೇ ವ್ಯಕ್ತಿಯ ಸಂಪತ್ತೇ? ಯಾವ ರಾಷ್ಟ್ರಭಕ್ತ ತಾನೇ ಅವರ ನೆನಪನ್ನು ಭಾರತದಿಂದ ಅಳಿಸಬೇಕೆನ್ನುತ್ತಾನೆ? ರಾಮಾಯಣ ಮತ್ತು ಮಹಾಭಾರತ ನಮ್ಮ ಧಾರ್ಮಿಕ ಗ್ರಂಥಗಳು. ಅವುಗಳನ್ನು ನಾವು ಓದಬಾರದೆಂದೇನಾದರೂ ಇದೆಯೇ? ಅವುಗಳಲ್ಲಿ ಇಂದಿನ ರಾಷ್ಟ್ರ ಜೀವನಕ್ಕೆ ಪ್ರೇರಣೆ ನೀಡುವ ಯಾವ ಅಂಶಗಳೂ ಇಲ್ಲವೇ? ನಮ್ಮ ಧರ್ಮ ನಮಗೆ ಗಂಗೆಯನ್ನು ಪವಿತ್ರವೆಂದು ಭಾವಿಸಬೇಕೆಂಬುದನ್ನು ಕಲಿಸಿಕೊಡುತ್ತದೆ. ನಮ್ಮ ಧರ್ಮ ನಾಲ್ಕು ಕಡೆಗಳಲ್ಲೂ ಯಾತ್ರೆಗಳನ್ನು ಕೈಗೊಳ್ಳುವುದರ ಮೂಲಕ ಭರತ ಭೂಮಿಯನ್ನು ಪರ್ಯಟನೆ ಮಾಡಲು ಹೇಳುತ್ತದೆ. ಇದು ರಾಷ್ಟ್ರಭಕ್ತಿಯ ಉಜ್ವಲವಾದ ಭಾವನೆಯಲ್ಲವೇ ? ನಮ್ಮ ಧರ್ಮವು ನಮ್ಮ ರಾಷ್ಟ್ರದ ಆತ್ಮವಾಗಿದೆ. ಧರ್ಮವಿಲ್ಲದ ರಾಷ್ಟ್ರಜೀವನಕ್ಕೆ ಯಾವುದೇ ಅರ್ಥವಿರುವುದಿಲ್ಲ. ಭಾರತವು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಭೂಖಂಡದಿಂದ ನಿರ್ಮಿತವಾಗಿದೆ. ಹೊರತು ಮೂವತ್ತು ಕೋಟಿ ಮಾನವ ಸಮೂಹದಿಂದಲ್ಲ. ಮೂವತ್ತು ಕೋಟಿ ಜನರನ್ನು ಒಬ್ಬರಿಂದೊಬ್ಬರನ್ನು ಬೆಸೆಯುವಂತಹ, ಮೂವತ್ತು ಕೋಟಿ ಜನರನ್ನು ಈ ಭೂಮಿಯೊಂದಿಗೆ ಬೆಸೆಯುವಂತಹ ಒಂದು ಸೂತ್ರ ನಮಗೆ ಬೇಕಾಗಿದೆ. ಆ ಸೂತ್ರ ನಮ್ಮ ಧರ್ಮವೇ ಆಗಿರುತ್ತದೆ. ಧರ್ಮವಿಲ್ಲದಿದ್ದರೆ ಭಾರತೀಯ ಜೀವನ ಚೈತನ್ಯ ಉಡುಗಿಹೋಗುತ್ತದೆ. ಅದರ ಪ್ರೇರಕ ಶಕ್ತಿಯೂ ಹೊರಟು ಹೋಗುತ್ತದೆ. ನಮ್ಮ ಧಾರ್ಮಿಕ ವೈಶಿಷ್ಟ್ಯ ಕಾರಣದಿಂದಾಗಿಯೇ ಪ್ರಪಂಚದ ಬೇರೆ ಬೇರೆ ಜನಸಮೂಹಗಳಲ್ಲಿ ನಾವೂ ರಾಷ್ಟ್ರದ ಸಲುವಾಗಿ ನಿಲ್ಲಬಲ್ಲವರಾಗುತ್ತೇವೆ. ಧರ್ಮದ ಮಾನದಂಡದಿಂದಲೇ ಎಲ್ಲವನ್ನು ಅಳೆಯಲಾಗುತ್ತದೆ. ಧರ್ಮದ ಒರೆಗಲ್ಲಿನ ಮೇಲೆ ಒರೆಹಚ್ಚಿ ಒಳ್ಳೆಯದು ಕೆಟ್ಟದ್ದು ಎಂಬುದನ್ನು ಪರೀಕ್ಷಿಸಲಾಗುತ್ತದೆ. ನಾವು ಯಾರನ್ನು ಮಹಾಪುರುಷರೆಂದು ಪೂಜಿಸುತ್ತೇವೇಯೋ ಅವರ ಜೀವನದ ರಾಷ್ಟ್ರ ಚಿಂತನ 477 ಪ್ರತಿಯೊಂದು ಹೆಜ್ಜೆಯಲ್ಲಿಯೂ ನಮಗೆ ಧಾರ್ಮಿಕತೆಯ ದೃಷ್ಟಿಗೋಚರವಾಗುತ್ತದೆ. ರಾಮ ನಮ್ಮ ಆರಾಧ್ಯ ದೈವವಾದರೆ ರಾವಣ ಯಾವಾಗಲೂ ತಿರಸ್ಕೃತನಾಗಿರುತ್ತಾನೆ, ಏಕೆ? ರಾಮ ಧರ್ಮದ ಶಿಕ್ಷಕನಾಗಿದ್ದ ಮತ್ತು ರಾವಣ ಧರ್ಮದ ವಿನಾಶವನ್ನು ಮಾಡುವಂತಹವನಾಗಿದ್ದ. ಯುಧಿಷ್ಠಿರ ಮತ್ತು ದುರ್ಯೋಧನ ಇಬ್ಬರೂ ಅಣ್ಣ ತಮ್ಮಂದಿರಾಗಿದ್ದರು, ಇಬ್ಬರಿಗೂ ರಾಜ್ಯ ಬೇಕಾಗಿತ್ತು. ಒಬ್ಬನ ಬಗ್ಗೆ ನಮ್ಮ ಮನಸ್ಸಿನಲ್ಲಿ ಪೂಜ್ಯಭಾವನೆ ಇದ್ದರೆ, ಮತ್ತೊಬ್ಬನ ಬಗ್ಗೆ ತಿರಸ್ಕಾರ. ಕೇವಲ ಧರ್ಮದ ಭಾವ ಅಥವಾ ಅಭಾವದ ಕಾರಣದಿಂದಾಗಿ ಒಂದು ಸ್ಥಾನದಲ್ಲಿ ಒಂದನ್ನು ಕೆಟ್ಟದ್ದೆಂದು ಭಾವಿಸಿದರೆ ಮತ್ತೊಂದು ಸ್ಥಾನದಲ್ಲಿ ಅದನ್ನು ಒಳ್ಳೆಯದು ಎನ್ನುತ್ತೇವೆ. ಇದ್ಕಕಾಗಿಯೇ ದೇಶದ್ರೋಹಿ ವಿಭೀಷಣ. ಪರಮ ವೈಷ್ಣವನಾದ ಮತ್ತು ಸೂಜಿಮೊನೆಯಷ್ಟೂ ನೆಲವನ್ನು ಕೊಡಲು ಸಿದ್ಧನಿರದಿದ್ದ ದುರ್ಯೋಧನ ವಿಷ್ಣುದ್ರೋಹಿಯೆಂದು ಪರಿಗಣಿಸಲ್ಪಟ್ಟ. ಒಂದು ಕಡೆ ನಾವು ರಾಜಭಕ್ತಿಗೆ ಮಾನ್ಯತೆ ನೀಡಿದರೆ ಧರ್ಮಕ್ಕಾಗಿ ಋಷಿಗಳು ಏನನ್ನು ರಾಜ್ಯಭ್ರಷ್ಟವನ್ನಾಗಿ ಮಾಡಿದರು. ಧರ್ಮಕ್ಕಾಗಿಯೇ ಶ್ರವಣಕುಮಾರ ತನ್ನ ತಂದೆ ತಾಯಿಯನ್ನು ಹೆಗಲಮೇಲೆ ಕೂರಿಸಿಕೊಂಡು ತಿರುಗಾಡಿದ. ಧರ್ಮಕ್ಕಾಗಿಯೇ ಪ್ರಹ್ಲಾದನು ಹಿರಣ್ಯಕಶಿಪುವನ್ನು ವಿರೋಧಿಸಿದ. ರಾಮನು ಏಕಪತ್ನೀವ್ರತವನ್ನು ಪಾಲಿಸಿ ಧರ್ಮದ ರಕ್ಷಣೆ ಮಾಡಿದರೆ ಕೃಷ್ಣನು ಅನೇಕರನ್ನು ವಿವಾಹ ಮಾಡಿಕೊಂಡು ಅದೇ ಧರ್ಮವನ್ನು ನಿಭಾಯಿಸಿದ. ನಮ್ಮ ಇತಿಹಾಸದಲ್ಲಿ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ವಿರೋಧಾಭಾವನೆಗಳಿದ್ದರೂ ಅವುಗಳ ನಿರಾಕರಣೆ ಕೇವಲ ಧರ್ಮದ ಭಾವನೆಯಿಂದಲೇ ಉಂಟಾಗಿರುವುದು. ನಾವು ನಮ್ಮ ಜೀವನದಲ್ಲಿ ಧರ್ಮಕ್ಕೆ ಮಹತ್ವವನ್ನು ನೀಡಿಯೇ ಪ್ರತಿಯೊಂದು ಕಾರ್ಯವನ್ನು ಮಾಡುತ್ತೇವೆ. ನಮ್ಮ ಊಟ, ನಿದ್ರೆ, ಕುಡಿಯುವುದು, ಏಳುವುದು ಕುಳಿತುಕೊಳ್ಳುವುದು ಮುಂತಾದ ಎಲ್ಲವುಗಳ ಹಿಂದೆ ಧರ್ಮದ ಭಾವವಿರುತ್ತದೆ. ಆದ್ದರಿಂದಲೇ ಸ್ಮೃತಿ ಗ್ರಂಥಗಳಲ್ಲಿ ಅವುಗಳ ಸಂಬಂಧದಲ್ಲಿ ನಿಯಮಗಳನ್ನು ಕೊಡಲಾಗಿದೆ. ಸ್ಮೃತಿ ಗ್ರಂಥಗಳನ್ನು ಧರ್ಮಗ್ರಂಥಗಳೆಂದೇ ಒಪ್ಪಿಕೊಂಡಿದ್ದೇವೆ. ನಮ್ಮ ಸಾಹಿತ್ಯವೂ ಲೋಕಕಲ್ಯಾಣಕ್ಕಾಗಿ ಧಾರ್ಮಿಕ ಭಾವನೆಯಿಂದಲೇ ಪ್ರೇರಣೆಯನ್ನು ಪಡೆದುಕೊಂಡಿದೆ. ಕವಿ ತನ್ನ ರಚನೆಯಲ್ಲಿ ಸ್ವಾಂತಃ ಸುಖಾಯ ಮಾಡಿದರೂ ಅಂತಃಕರಣದಲ್ಲಿ ಆತ್ಮದ ಸಾಕ್ಷಾತ್ಕಾರದ ಅನುಭವದಲ್ಲಿ ಸುಖವನ್ನು ಪಡೆಯುತ್ತಾ ಧಾರ್ಮಿಕ ಪ್ರವೃತ್ತಿಯ ಉಚ್ಛತೆಯ ಅವಸ್ಥೆಯನ್ನು ಗಳಿಸುತ್ತಾನೆ. ಭಾರತದಲ್ಲಿನ ಯಾವುದೇ ಕವಿಯ ಕಾವ್ಯದಲ್ಲಿನ ಒಂದೊಂದು ಪದದಲ್ಲೂ ರಾಷ್ಟ್ರತ್ವದ ಕೂಗು ಕೇಳುವುದಿಲ್ಲವೇ ಮತ್ತು ಅವು ಧಾರ್ಮಿಕ ಭಾವನೆಯಿಂದ ಪರಿಪೂರ್ಣವಾಗಿಲ್ಲವೇ? ನಮ್ಮ ವಾಲ್ಮೀಕಿ, ವ್ಯಾಸ, ಕಾಳಿದಾಸ, ತುಲಸೀ, ಸೂರ್, ಜ್ಞಾನದೇವ, ಸಮರ್ಥ, 478 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಚೈತನ್ಯ ಮತ್ತು ನಾನಕ್ ಕವಿಗಳಾಗಿದ್ದರು, ಜೊತೆಗೆ ಋಷಿ ಮತ್ತು ಸಂತರೂ ಆಗಿದ್ದರು. ನಮ್ಮ ಧರ್ಮವನ್ನು ತಮ್ಮ ಆಚರಣೆಯಲ್ಲಿ ಪಾಲಿಸಿಕೊಂಡು ಬಂದ ಆದರ್ಶ ಮಹಾಪುರುಷರಾಗಿದ್ದರು. ಆದ್ದರಿಂದ ಅವರ ಶಬ್ದ ರಾಷ್ಟ್ರದ ಶಬ್ದವಾಯಿತು. ಅವರ ಮಾತು ಯುಗಯುಗಳಲ್ಲಿ ರಾಷ್ಟ್ರ ಜೀವನದ ಸಂಚಾರವನ್ನು ಮಾಡುತ್ತಲೇ ಬಂದಿದೆ. ನಮ್ಮ ರಾಜನೀತಿಜ್ಞರು, ಆಚಾರ್ಯರೂ ಸಹ ರಾಜನೀತಿಯ ಮೇಲೆ ಧರ್ಮದ ಮೆರುಗನ್ನು ನೀಡಿದ್ದಾರೆ. ಶುಕ್ರಾಚಾರ್ಯ ಮತ್ತು ಚಾಣಕ್ಯ ಧರ್ಮವಿಲ್ಲದ ರಾಜನೀತಿಯ ಪೋಷಕರಾಗಿರಲಿಲ್ಲ. ಧರ್ಮವಿಲ್ಲದ ರಾಜನೀತಿಗೆ ಯಾವ ಅರ್ಥವೂ ಇಲ್ಲ. ನಮ್ಮ ಸಾಮ್ರಾಟರು ಅಶ್ವಮೇಧ ಯಜ್ಞವನ್ನು ಧರ್ಮವೆಂದು ತಿಳಿದು ನೋಡಿದರೆ? ಅಥವಾ ರಾಜನೀತಿಯೆಂದು ತಿಳಿದು ಮಾಡಿದರೆ ? ರಾಣಾಪ್ರತಾಪ ಮತ್ತು ಅಕ್ಬರನ ನಡುವೆ ಉಂಟಾದ ಯುದ್ಧ ರಾಜನೀತಿ ಕ್ಷೇತ್ರದಲ್ಲಿ ಬರುತ್ತದೋ? ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಬರುತ್ತದೋ? ಶಿವಾಜಿ ಮತ್ತು ಗುರುಗೋವಿಂದ ಸಿಂಗರು ರಾಜನೀತಿಯ ಮುಖಂಡರೆ? ಅಥವಾ ಧಾರ್ಮಿಕ ಮುಖಂಡರೆ ? ದಯಾನಂದ ಮತ್ತು ವಿವೇಕಾನಂದರ ಕಾರ್ಯ ಭಾರತದ ರಾಜನೀತಿ ಮತ್ತು ರಾಷ್ಟ್ರದ ಮೇಲೆ ಯಾವ ಪ್ರಭಾವವನ್ನೂ ಬೀರಿಲ್ಲವೇ, ಗಾಂಧೀಜಿಯವರ ದೇಶವ್ಯಾಪಿ ಪ್ರಭಾವದ ಹಿಂದೆ ಇದ್ದುದು ಅವರ ಹಿರಿತನವೇ, ಧಾರ್ಮಿಕತನವೇ ಅಥವಾ ರಾಜನೀತಿಯೇ? ಸ್ವದೇಶೀ ಆಂದೋಲನದಲ್ಲಿ ನೇಣುಗಂಬಕ್ಕೆ ಏರುವಾಗ ಗೀತೆಯ ಪ್ರತಿಯನ್ನು ತೆಗೆದುಕೊಂಡು ಏರುತ್ತಿದ್ದ ಕ್ರಾಂತಿಕಾರಿ ವೀರರಲ್ಲಿ ಇದ್ದುದು ಧಾರ್ಮಿಕ ಪ್ರೇರಣೆಯೇ ಅಥವಾ ರಾಜನೀತಿಯ ಪ್ರೇರಣೆಯ? ಎರಡನ್ನೂ ಬೇರೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ. ನಮ್ಮ ರಾಜನೀತಿ ನಮ್ಮ ಧಾರ್ಮಿಕ ವೃತ್ತಿಯ ಪರಿಣಾಮವೇ ಆಗಿದೆ. ನಮ್ಮ ಧಾರ್ಮಿಕತೆಯನ್ನು ರಕ್ಷಣೆ ಮಾಡುವ ಒಂದು ಸಾಧನವಾಗಿದೆ. ಈ ಧಾರ್ಮಿಕ ಪ್ರವೃತ್ತಿ ನಮ್ಮ ರಾಷ್ಟ್ರದಲ್ಲಿ ಎಷ್ಟು ವ್ಯಾಪಕವಾಗಿದೆಯೆಂದರೆ ಅದರಿಂದ ಹೊರತಾಗಿ ಯಾವುದೇ ಕ್ಷೇತ್ರವಿರಲು ಸಾಧ್ಯವಿಲ್ಲ ಎನ್ನವಷ್ಟು ವ್ಯಾಪಕವಾಗಿದೆ. ವರ್ಣಾಶ್ರಮ ಧರ್ಮ ಸಮಾಜದ ಒಂದು ಪದ್ಧತಿಯಾಗಿದೆ. ಆದರೆ ನಾವು ಅದಕ್ಕೆ ಧರ್ಮದ ವೇಷಭೂಷಣಗಳಿಂದ ಚೆನ್ನಾಗಿ ಅಲಂಕರಿಸಿದ್ದೇವೆ. ವೈವಾಹಿಕ ಜೀವನ ಸಮಾಜದ ಅವಶ್ಯಕತೆಗಳಲ್ಲಿ ಒಂದಾಗಿದೆ. ನಾವು ಇದನ್ನು ಧಾರ್ಮಿಕ ಕರ್ತವ್ಯವೆಂದು ಮಾನ್ಯ ಮಾಡಿದ್ದೇವೆ. ಸಂತಾನೋತ್ಪತ್ತಿಯನ್ನು (ವಂಶಾಭಿವೃದ್ಧಿ) ನಾವು ಧರ್ಮವೆಂದು ತಿಳಿಸಿರುತ್ತೇವೆ. ಮಕ್ಕಳು ತಂದೆ-ತಾಯಿಯ ಸೇವೆ ಮಾಡುವುದು ತಮ್ಮ ಧರ್ಮವೆಂದು ತಿಳಿದು ಅದನ್ನು ಪಾಲಿಸುತ್ತಾರೆ. ಮರಣದ ನಂತರ ನಡೆಯುವ ಅಪರ ಕ್ರಿಯೆಗಳನ್ನೂ ಧರ್ಮವೆಂದೇ ಭಾವಿಸಿದ್ದೇವೆ. ಈ ಎಲ್ಲ ಕಾರ್ಯಗಳ ಸ್ತರದಲ್ಲಿ ಸಮಾಜ ರಚನೆಯಾದಾಗ್ಯೂ ಜನಾಂಗದ ಸನಾತನ ಪರಂಪರೆ ಹಾಗೂ ರಾಷ್ಟ್ರತ್ವವಿದೆ. ನಾವು ಪ್ರತಿದಿನ ದೊಡ್ಡವರಿಗೆ ವೃದ್ಧರಿಗೆ ರಾಷ್ಟ್ರ ಚಿಂತನ 479 ನಮಸ್ಕರಿಸುತ್ತೇವೆ. ಇದು ನಮ್ಮ ಧರ್ಮ. ನಾವು ಪ್ರತಿನಿತ್ಯ ಸ್ನಾನ ಮಾಡುತ್ತೇವೆ. ಈ ಹಳ್ಳಿಯ ವ್ಯಕ್ತಿಯೂ ಇದನ್ನು ತನ್ನ ಧರ್ಮವೆಂದು ಹೇಳುತ್ತಾನೆ. ಆದ್ದರಿಂದಲೇ ಕರ್ಮಕಾಂಡೀ ಜನ ಕಾಯಿಲೆಯಿದ್ದಾಗಲೂ ಸ್ನಾನ ಮಾಡುತ್ತಾರೆ. ಸ್ನಾನವಿಲ್ಲದೆ ಇರಲು ಸಾಧ್ಯವಿಲ್ಲ. ಸ್ನಾನ ಮಾಡದ ಹೊರತು ಭೋಜನ ಮಾಡಬಾರದೆನ್ನುವುದೂ ಧರ್ಮವೇ ಆಗಿದೆ. ಪಾದರಕ್ಷೆಗಳನ್ನು ಹಾಕಿಕೊಂಡು ಹೋಗುವುದು ಅಧರ್ಮ. ಶುಚಿಯಾಗಿ ಭೋಜನ ತಯಾರಿಸುವುದು ಧರ್ಮ. ನಮ್ಮನಮ್ಮ ಮನೆಗಳಲ್ಲಿ ತುಳಸಿಯ ಗಿಡವನ್ನು ನೆಡುವುದು ಧರ್ಮವೆಂದೇ ತಿಳಿದಿದ್ದೇವೆ. ಅದು ಮಲೇರಿಯಾವನ್ನು ನಾಶಮಾಡುತ್ತದೆ ಎಂಬರ್ಥದಲ್ಲಿ ಅಲ್ಲ. ಸ್ವಚ್ಛತೆ ಮತ್ತು ಆರೋಗ್ಯದ ಪ್ರತಿಯೊಂದು ನಿಯಮವೂ ಧರ್ಮವೇ ಆಗಿದೆ. ನಮ್ಮ ರೈತರು ಬೀಜವನ್ನು ಬಿತ್ತುತ್ತಾರೆ. ಅದರ ಹಿಂದೆಯೂ ಧರ್ಮದ ಭಾವನೆಯೇ ಆಡಗಿದೆ. ಧರ್ಮದ ಭಾವನೆಯ ಕಾರಣದಿಂದಲೇ ಅದು ಇಂದಿಗೂ ಸಹ ವಿಕೃತವಾಗಿಲ್ಲ. ಬ್ರಾಹ್ಮಣರು ನೇಗಿಲಿಗೆ ಕೈ ಹಾಕಿಲ್ಲ. ವಿದ್ಯಾರ್ಥಿಗಳು ಗುರುಗಳ ಸೇವೆ ಮಾಡುತ್ತಾರೆ. ಗುರುಗಳು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದೇ ಭಾವಿಸುತ್ತಾರೆ. ಇಲ್ಲಿರುವ ಭಾವನೆಯೂ ಧರ್ಮವೇ ಆಗಿದೆಯೇ ಹೊರತು ಸ್ಕೂಲ್ ಮ್ಯಾನೇಜ್‍ಮೆಂಟ್ ಮತ್ತು ಡಿಸಿಪ್ಲಿನ್‍ನ ಭಾವನೆಯಲ್ಲ. ಹೀಗೆ ನಾವು ಎಷ್ಟೆಷ್ಟೋ ಉದಾಹರಣೆಗಳನ್ನು ತೆಗೆದುಕೊಂಡು ನೋಡಿದರೂ ಪ್ರತಿಯೊಂದರಲ್ಲೂ ಧಾರ್ಮಿಕತೆಯ ಕಳೆಯಿದೆ ಮತ್ತು ಧರ್ಮದ ಪ್ರೇರಣೆಯಿಂದಲೇ ನಾವು ನಮ್ಮ ಜೀವನವನ್ನು ರೂಪಿಸಿಕೊಂಡಿದ್ದೇವೆ ಎಂಬುದು ತಿಳಿದುಬರುತ್ತದೆ. ಆದ್ದರಿಂದಲೇ ಅನೇಕ ವಿದ್ವಾಂಸರು ಭಾರತವನ್ನು ಧರ್ಮಪ್ರಾಣ ದೇಶವೆಂದೂ ಕರೆದಿದ್ದಾರೆ. ಈ ಆತ್ಮದ ಪ್ರೇರಣೆಯನ್ನು ಅಚೇತನದಿಂದ ಚೇತನ ಕ್ಷೇತ್ರದಲ್ಲಿ ತರುವುದರ ಮೂಲಕ ನಾವಿಂದು ರಾಷ್ಟ್ರ ಜೀವನದಲ್ಲಿ ಕಾಣುತ್ತಿರುವ ವಿಶುದ್ಧ, ಸಂಘರ್ಷಮಯ, ಅನಿಶ್ಚಿತತೆಯ ಅವಸ್ಥೆಗಳನ್ನು ದೂರ ಮಾಡಬಹುದು. 17. ರಾಷ್ಟ್ರಾತ್ಮ ಮತ್ತು ವಿಶ್ವಾತ್ಮ ರಾಷ್ಟ್ರೀಯತೆ ಮೂಲತಃ ಭಾವಾತ್ಮಕವೇ ಆಗಿದ್ದರೂ ಅದರ ವಿರೋಧವಾದ ಅಭಿವ್ಯಕ್ತಿ ಅಲ್ಲಲ್ಲಿ ಆಗುತ್ತಿದ್ದರೂ ಅದು ಎಷ್ಟು ಪ್ರಬಲವಾಗಿದೆ ಎಂದರೆ ಸಾಧಾರಣ ಜನತೆಯೇ ಅಲ್ಲದೇ ದೊಡ್ಡ-ದೊಡ್ಡ ವಿಚಾರಕರೂ ಕೂಡಾ ಅದರ ವಾಸ್ತವಿಕತೆಯನ್ನು ಮರೆತು ಹೋಗುತ್ತಾರೆ. ಒಂದು ದೇಶ ಮತ್ತು ಇನ್ನೊಂದು ದೇಶದ ಮಧ್ಯೆ ಸಂಘರ್ಷದಿಂದ ಉಂಟಾದ ಯುದ್ಧ ಮತ್ತು ಅದರಿಂದುಂಟಾದ ಭೀಕರ ಪರಿಣಾಮದಿಂದ ಜನರು ಎಷ್ಟು ನೊಂದಿದ್ದಾರೆಂದರೆ ಇದರಿಂದ ರಕ್ಷಿಸಿಕೊಳ್ಳಲು ದೇಶ ಮತ್ತು ದೇಶಭಕ್ತಿಯ ಭಾವನೆಯನ್ನೇ ಆವಾಂಛನೀಯ ಮತ್ತು ಅಶುದ್ಧ ಎಂದು ಹೇಳಿ ಅದರಿಂದ ದೂರವಿದ್ದಾರೆ. ಆದರೆ ಇದು ತಲೆ ನೋವಿಗೆ ಹೆದರಿ 480 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ತಲೆಯನ್ನೇ ಒಡೆದು ಹಾಕಿದಂತಾಗುತ್ತದೆ. ಕಣ್ಣುಗಳನ್ನು ಆಸೆಯ ಮೂಲ ಎಂದು ಭಾವಿಸಿ ಸೂರದಾಸರು ಕಣ್ಣುಗಳನ್ನೇ ಕಿತ್ತುಹಾಕಿಕೊಂಡರು. ಇಂದು ವಿಶ್ವದ ಅನೇಕ ವಿಚಾರಕರು ಸೂರದಾಸರಾಗಲು ಬಯಸುತ್ತಿದ್ದಾರೆ. ಜೀವನ ಮತ್ತು ಕಣ್ಣುಗಳ ಭಾವನಾತ್ಮಕ ಸಂಬಂಧ ಅವರಿಗೆ ತಿಳಿದಿಲ್ಲ. ಪರಸ್ಪರ ಸಂಘರ್ಷಣೆಯ ಭೂತ :- ಜೀವನ ಸಂಘರ್ಷಣೆಯಿಂದಲೇ ಸೃಷ್ಟಿಯ ವಿಕಾಸವಾಗಿದೆ ಎನ್ನುವ ಕಲ್ಪನೆಯಿಂದ ಪಶ್ಚಿಮ ದೇಶಗಳ ವಿದ್ವಾಂಸರಿಗೆ ಜಗತ್ತಿನ ಪ್ರತಿಯೊಂದು ಭಾಗ ಸಂಘರ್ಷಮಯವಾಗಿ ಕಾಣುತ್ತದೆ. ಅವರ ಪ್ರಕಾರ ಎರಡು ಅಥವಾ ಹೆಚ್ಚು ಭಾಗಗಳ ಮಿಲನ ಮತ್ತು ಅದರಿಂದ ಜನಿಸಿದ ಹೊಸ ಭಾಗಗಳ ಅಸ್ತಿತ್ವ ಕೂಡಾ ಇತರ ಬಲವಾದ ಶಕ್ತಿಗಳ ಜೊತೆ ಸಂಘರ್ಷಣಕ್ಕಾಗಿಯೇ ಆಗುತ್ತವೆ. ಡಾರ್ವಿನ್ ಪ್ರಾಣಿಶಾಸ್ತ್ರದ, ಹೆಗೆಲ್ ದರ್ಶನ ಶಾಸ್ತ್ರದ ಮತ್ತು ಮಾರ್ಕ್ಸ್‌ ಇತಿಹಾಸದ ವಿವೇಚನೆಯನ್ನು ಇದರ ಆಧಾರದ ಮೇಲೆಯೇ ಮಾಡಿದರು. ಹಿಟ್ಲರ್‍ನ ನಾಜೀವಾದಕ್ಕೆ ಮೂಲವಾದ ನೀತ್ಸೆಯ ಕಲ್ಪನೆಯ ಪರಿಣತೆಯ ಮೂಲ ಕೂಡ ಈ ಸಿದ್ಧಾಂತದಲ್ಲಿಯೇ ಇದೆ. ಬಂಡವಾಳಶಾಹಿ ಅರ್ಥಶಾಸ್ತ್ರ ಈ ಸಂಘರ್ಷಣೆ ಮತ್ತು ಪ್ರತಿಸ್ಪರ್ಧೆಯ ಸಿದ್ಧಾಂತವನ್ನು ಧೃವ ಸತ್ಯ ಮತ್ತು ವೈಜ್ಞಾನಿಕ ತಥ್ಯ ಎಂದು ನಂಬುತ್ತದೆ. ಇದೆ ಸಂಘರ್ಷಣೆಗೆ ಸಾಮುದಾಯಿಕ ಮತ್ತು ಸಂಘಟಿತ ರೂಪವನ್ನು ಕೊಟ್ಟು ಒಂದು ವರ್ಗವನ್ನು ಸಮಾಪ್ತಿಗೊಳಿಸಿ ವರ್ಗವಿಹೀನ ಸಮಾಜದ ಕಲ್ಪನೆಯ ಮೇಲೆ ಸಾಮ್ಯವಾದವು ನಡೆಯುತ್ತದೆ. ಇವೆಲ್ಲವೂ ದೇಶವನ್ನು ಸಂಘರ್ಷಣೆಯ ಸಾಧಕ ಮತ್ತು ಬಾಧಕ ರೂಪದಲ್ಲಿ ನೋಡುತ್ತವೆ. ಯಾರು ರಾಷ್ಟ್ರೀಯತೆಯ ಪಕ್ಷದಲ್ಲಿದ್ದಾರೋ ಅವರು ಹಾಗೆ ಮಾಡಲು ಕಾರಣ ಅವರು ಮಾಡುವ ಸಂಘರ್ಷಣೆಗೆ ಅವರಲ್ಲಿರುವ ರಾಷ್ಟ್ರೀಯ ಭಾವನೆ ಅವರಿಗೆ ಸಹಾಯಕವಾಗಿರುತ್ತದೆ. ಯಾರು ರಾಷ್ಟ್ರೀಯತೆಯನ್ನು ಅಳಿಸಲು ಬಯಸುತ್ತಾರೋ ಅವರ ಅಭಿಪ್ರಾಯದಲ್ಲಿ ವಿಶ್ವ ಸಂಘರ್ಷಣೆಯ ಕಲ್ಪನೆಯಲ್ಲಿ ರಾಷ್ಟ್ರೀಯತೆಯೇ ಮೂಲ ಕಾರಣವಾಗಿರುತ್ತದೆ. ಸಂಘರ್ಷಣಾತ್ಮಕ ವಿವೇಚನೆಯ ಆಧಾರದ ಮೇಲೆ ಸಂಘರ್ಷಣೆಯ ವಿಹೀನತೆ ಹೇಗೆ ಪಶ್ಚಿಮ ದೇಶಗಳ ಈ ವೇದಾಂತದ ಉತ್ಪತ್ತಿಯ ಆಧಾರ ಭಗವಂತ ಮತ್ತು ಸೈತಾನನ ಮಧ್ಯೆ ನಡೆಯುವ ಕ್ರೈಸ್ತರ ಕಲ್ಪನೆ ಆಗಿರಬಹುದು. ಸೈತಾನನ ಮುಷ್ಟಿಯಿಂದ ತಪ್ಪಿಸಿಕೊಂಡು ಭಗವಂತನ ಶರಣು ಹೋಗಲು ಹೇಗೆ ಕ್ರೈಸ್ತ ಸಂಪ್ರದಾಯದ ನಿರ್ಮಾಣವಾಗಿದೆಯೋ ಹಾಗೆಯೇ ರಕ್ಷಣಾತ್ಮಕ ಹಾಗೂ ವಿಭೇದಾತ್ಮಕ ಆಧಾರದ ರಾಷ್ಟ್ರ ಚಿಂತನ 481 ಮೇಲೆ ರಾಷ್ಟ್ರವೂ ಸೇರಿದಂತೆ ಮಾನವನ ಅನ್ಯ ಸಂಸ್ಥೆಗಳ ಸೃಷ್ಟಿ ಆಗಿದೆ. ಜೀವನದ ಈ ವೇದಾಂತ ಯಾವ ಸಹಯೋಗ, ಪ್ರೇಮ ಮತ್ತು ಏಕಾತ್ಮಕತೆಯ ಆಕಾಂಕ್ಷೆಗಾಗಿ ಈ ವಿಚಾರಕರು ಪ್ರಯತ್ನಶೀಲರಾಗಿದ್ದಾರೋ ಅದರ ಜೊತೆ ಈ ಸಿದ್ಧಾಂತ ಮೇಳವಿಸುವುದಿಲ್ಲ. ಸಂಘರ್ಷಣಾತ್ಮಕ ವಿವೇಚನೆಯ ಆಧಾರದ ಮೇಲೆ ಸಂಘರ್ಷಣ ರಹಿತ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಮನುಷ್ಯನ ಅಥವಾ ಪ್ರಾಣಿಗಳ ಮೂಲ ಸ್ವಭಾವವೇ ಸಂಘರ್ಷಣಮಯವಾಗಿದ್ದರೆ, ಅವರ ಪ್ರತಿಯೊಂದು ಕ್ರಿಯೆಯ ಪ್ರೇರಣೆ ಇನ್ನೊಬ್ಬರನ್ನು ನುಂಗಿ ತಾನು ಬದುಕುವುದಾಗಿದ್ದರೆ, ಅವರಿಗೆ ಬೇರೆಯವರಿಗಾಗಿ ಬದುಕುವುದು ಮತ್ತು ಇನ್ನೊಬ್ಬರನ್ನು ಪ್ರೀತಿಸುವುದನ್ನು ಕಲಿಸಲು ಸಾಧ್ಯವಿಲ್ಲ. ಪ್ರೇಮ ಮತ್ತು ಸಹಯೋಗದ ಆಧಾರವಿದ್ದರೂ ಕೂಡಾ ಅದು ಬಲವಾದ ಶತ್ರುವಿನ ಮುಂದೆ ತನ್ನ ದುರ್ಬಲತೆ ಮತ್ತು ಪರಾಜಯದ ಭಾವನೆಯಿಂದ ಹುಟ್ಟಿರುವುದಾಗಿರುತ್ತದೆ. ಇದರಿಂದ ಮಾನವನಲ್ಲಿ ಹುಟ್ಟುವ ಸದ್ಭಾವ, ತ್ಯಾಗ, ಸೇವಾ ಮನೋಭಾವ, ಸಹಿಷ್ಣುತೆ ಕ್ರಮಶಿರಣೆ ಮುಂತಾದ ಗುಣಗಳು ಒಂದೇ ಮುಖದ್ದಾಗಿರುತ್ತವೆ. ಅವರು ಮನುಷ್ಯ ಅಥವಾ ಸಮಾಜದ ಅಂಗವಾಗಿರಲು ಸಾಧ್ಯವಿಲ್ಲ. ಬೇರೆಯವರನ್ನು ಮೋಸಗೊಳಿಸಲು ನಾಲ್ಕು ಜನ ಮೋಸಗಾರರ ಮಧ್ಯೆ ಇರುವ ಪ್ರಾಮಾಣಿಕೆಯಂತೆ ಈ ಗುಣಗಳು ಇರುತ್ತವೆ. ಪರಸ್ಪರ ನಂಬಿಕೆಯನ್ನು ಉಳಿಸಿಕೊಳ್ಳಲು ಈ ಮೋಸಗಾರರ ಜೊತೆ ಯಾರೋ ಒಬ್ಬರು ಅಮಾಯಕರು ಸದಾ ಇರಬೇಕಾಗುತ್ತದೆ. ಇವರಿಗೆ ಮೋಸಮಾಡಲು ಯಾರೂ ಉಳಿಯದಿದ್ದರೆ ಅವರು ಪರಸ್ಪರ ಒಬ್ಬರನ್ನೊಬ್ಬರು ಮೋಸ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಇಂದು ಪಶ್ಚಿಮ ದೇಶಗಳ ಮುಂದೆ ಇದೇ ಸಂಕಟವು ತಲೆ ಎತ್ತಿ ನಿಂತಿದೆ. ಅವರು ತಮ್ಮ ವಿರೋಧಿಗಳನ್ನು ಮತ್ತು ಶತೃಗಳನ್ನು ತಮ್ಮ ತಲೆಯಿಂದ ತೆಗೆದುಹಾಕಿದರೆ ಅವರೇ ಸಮಾಪ್ತವಾಗುತ್ತಾರೆ. ಅವರ ಏಕತೆಯ ಆಧಾರ ಒಡೆದುಹೋಗುತ್ತದೆ. ಅವರು ಇದೇ ವಿರೋಧಾತ್ಮಕ ಆಧಾರದ ಮೇಲೆ ನಡೆದುಕೊಂಡರೆ ಮಾನವನ ಏಕತೆ ಮತ್ತು ಶಾಂತಿ ಎನ್ನುವ ಅವರ ಘೋಷಣೆಗಳು ಎಂದಿಗೂ ಸಾಕಾರವಾಗುವುದಿಲ್ಲ. ರಾಷ್ಟ್ರೀಯತೆ ಅವರಿಗೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿರುವ ಮೂಳೆಯ ರೀತಿ ಆಗುತ್ತದೆ. ಅವರಿಂದ ಅದನ್ನು ಬಿಡಲೂ ಸಾಧ್ಯವಿಲ್ಲ ಮತ್ತೆ ಅದನ್ನು ಹಾಗೇ ಇಟ್ಟುಕೊಂಡರೆ ಅವರೇ ಬಲೆಯಲ್ಲಿ ಬೀಳುತ್ತಾರೆ. ಸ್ವಾರ್ಥಿಗಳ ಅರಮನೆ ಜಗತ್ತಿನ ದೇಶಗಳ ರಾಜನೀತಿಜ್ಞರು ರಾಷ್ಟ್ರೀಯತೆಯನ್ನು ಮುಗಿಸುವ ಆತ್ಮಹತ್ಯಾ ಪ್ರಯತ್ನವನ್ನು ಮಾಡುವುದಿಲ್ಲ. ಆದ್ದರಿಂದ ಇಂದು ಅವರು ಜಗತ್ತಿನ ಏಕತೆಯ ಆಕಾಂಕ್ಷೆಯನ್ನು ಕೇವಲ ತಮ್ಮ-ತಮ್ಮ ದೇಶಗಳ ಸ್ವಾರ್ಥದ ಪೂರ್ತಿಗಾಗಿ ಅಥವಾ 482 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಬೇರೆಯವರ ಸ್ವಾರ್ಥದ ವಿನಾಶಕ್ಕಾಗಿ ಹೇಗೆ ಉಪಯೋಗಿಸಬಹುದು ಎಂದು ಯೋಚಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಂಯುಕ್ತ ರಾಷ್ಟ್ರಸಂಘದಂತಹ ಸಂಸ್ಥೆ ಕೂಡ ಎರಡು ಭಾಗಗಳಲ್ಲಿ ಹಂಚಿಹೋಯಿತು. ಪರಸ್ಪರ ಸಂಘರ್ಷಣೆಯ ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಜಾತಂತ್ರ ಮತ್ತು ಸಾಮ್ಯವಾದದ ಪ್ರತಿಪಾದನೆ ಮಾಡಲಾಗುತ್ತಿದೆ. ನವೀನ ವೇದಾಂತದ ಅವಶ್ಯಕತೆ ಇದೆ ನಾವು ವಿಶ್ವ ಸಂಹಾರ ಮತ್ತು ವಿನಾಶದಿಂದ ಉಳಿಯಬೇಕಾದರೆ ಈ ಸ್ಥಿತಿಯನ್ನು ಬದಲಿಸಬೇಕಾಗುತ್ತದೆ. ದೇಶವನ್ನು ಬದಲಿಸಬೇಕಾಗಿಲ್ಲ, ಅದನ್ನು ಬದಲಿಸಲಾಗುವುದಿಲ್ಲ. ನಾವು ಜೀವನದ ವೇದಾಂತವನ್ನು ಬದಲಿಸಬೇಕಾಗುತ್ತದೆ. ಸೃಷ್ಟಿಯ ವಿಕಾಸದ ಹೊಸ ವಿವೇಚನೆಯನ್ನು ಮಾಡಬೇಕಾಗಿದೆ. ಪಶ್ಚಿಮದ ಖಗೋಳಜ್ಞ ಕೋಪರ್ನಿಕಸ್‍ಗೆ ಮುಂಚೆ ಟಾಲೆಮಿಯ ಸಿದ್ಧಾಂತವನ್ನೇ ಅಚಲ ಸತ್ಯವೆಂದು ನಂಬಿ ನಡೆಯುತ್ತಿದ್ದರು. ಅಲ್ಲಿಯವರೆಗೆ ಭೂಮಿಯ ಸುತ್ತಲೂ ಸೂರ್ಯ ತಿರುಗುತ್ತಾನೆಂದು ನಂಬುತ್ತಿದ್ದರು. ನಂತರ ಸೂರ್ಯನ ಸುತ್ತಲೂ ಭೂಮಿ ಸುತ್ತುತ್ತಿದೆ ಎಂದು ನಂಬಿದ್ದಾರೆ. ಇಂದು ಪಶ್ಚಿಮದವರಿಗೆ ಈ ರೀತಿಯಾದ ಕ್ರಾಂತಿಕಾರಿ ವೇದಾಂತದ ಅವಶ್ಯಕತೆ ಇದೆ. ಗಾಡ್ ಮತ್ತು ಸೈತಾನನ ದ್ವೈತದ ಸ್ಥಾನದಲ್ಲಿ ಅದ್ವೈತದ ಜ್ಞಾನ ಮೂಡಿಸಬೇಕಾಗಿದೆ. ಈ ಜಗತ್ತು ಸಂಘರ್ಷಣಾತ್ಮಕವಲ್ಲ, ಸೃಜನಾತ್ಮಕವಾಗಿದೆ. ಬೀಜವು ವೃಕ್ಷದ ರೂಪದಲ್ಲಿ ಸಂಘರ್ಷಣೆಗಾಗಿ ಅಲ್ಲ, ತನ್ನ ಸಾಕ್ಷಾತ್ಕಾರಕ್ಕಾಗಿ ಪ್ರಕಟವಾಗುತ್ತದೆ. ಅದರ ಜೀವನದ ಉದ್ದೇಶ ಯಾರದೇ ವಿನಾಶವಲ್ಲ, ಯಾರಿಗಾದರೂ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದಾಗಿರುತ್ತದೆ. ಸಂಪೂರ್ಣ ಸೃಷ್ಟಿ ಒಂದಕ್ಕೊಂದು ಸಹಕಾರ ಮಾಡುತ್ತಾ ನಡೆಯುತ್ತಿದೆ. ಇದರ ಆಧಾರ ಸಂಘರ್ಷಣವಲ್ಲ, ಸಹಯೋಗವಾಗಿದೆ. ಪಂಚಭೂತಗಳು ಒಂದಾಗಲು ಕಾರಣ ಯಾರ ಜೊತೆಯಲ್ಲೂ ಸಂಘರ್ಷಣೆ ಮಾಡುವುದಲ್ಲ. ಬದಲಾಗಿ ಅದು ಅವುಗಳ ವಿಕಾಸವಾದಿಗಳಾಗಿದ್ದರೆ ಸೃಷ್ಟಿಯ ಸೃಜನದ ನಿಯಮವನ್ನು ಸ್ವೀಕರಿಸಬೇಕು, ಬದಲಾಗಿ ವಿಸರ್ಜನದ ಅಥವಾ ಸಂಹಾರದ ನಿಯಮವನ್ನಲ್ಲ. ಸಂಪೂರ್ಣ ಸೃಷ್ಟಿಯಲ್ಲಿ ಎಲ್ಲಾ ಪ್ರಾಣಿಗಳ ಚೈತನ್ಯದಲ್ಲಿ ಯಾವುದೋ ಒಂದು ಶಕ್ತಿಯ ಪ್ರೇರಣೆ ಮತ್ತು ಇಚ್ಛೆ ಕೆಲಸ ಮಾಡುತ್ತಿದೆ ಎಂದರೆ ಅದು ನಿಶ್ಚಿತ ವಿಧಾಯಕವಾಗಿದೆ, ನಿರ್ಮಾಣಾತ್ಮಕವಾಗಿದೆ, ಏಕಾತ್ಮಕವಾಗಿದೆ ಮತ್ತು ಭಾವಾತ್ಮಕವಾಗಿದೆ; ವಿನಾಶಕ ಮತ್ತು ವಿಭೇದಕವಲ್ಲ. ಈಗಲೇ ಪ್ರಳಯಕಾಲ ಬಂದಿಲ್ಲ. ಸೃಜನದ ಬಳ್ಳಿಯಲ್ಲಿ ಪ್ರಳಯದ ನಿಯಮ ಹೇಗೆ ಫಲಿಸುತ್ತದೆ. ರಾಷ್ಟ್ರ ಚಿಂತನ 483 ಸಂಘರ್ಷಣ ಗುಣದಿಂದ ಮುಕ್ತ ಭಾರತೀಯ ಕಲ್ಪನೆ ಭಾರತವು ರಾಷ್ಟ್ರೀಯತೆಯನ್ನೂ ಕೂಡಾ ಜಗತ್ತು ಮತ್ತು ಜೀವನದ ವಿವೇಚನೆಯ ಆಧಾರದ ಮೇಲೆ ಇದೇ ಭಾವಾತ್ಮಕ ರೂಪದಲ್ಲಿ ನೋಡುತ್ತದೆ. ನಮ್ಮ ರಾಷ್ಟ್ರೀಯತೆ ಇನ್ನೊಬ್ಬರ ಜೊತೆ ಸಂಘರ್ಷಣೆ ಮತ್ತು ಅವರ ಜೊತೆ ಪ್ರತಿಸ್ಪರ್ಧೆಯ ಮೇಲೆ ಆಧಾರಪಟ್ಟಿಲ್ಲ. ಆಗಾಗ ಕೆಲವು ಸಂಘರ್ಷಣೆಗಳು ಬಂದಿದ್ದರೂ ಅವು ರಾಷ್ಟ್ರ-ಮಾನಸದಲ್ಲಿ ಪ್ರಭಾವ ಬೀರಲಿಲ್ಲ. ರಾಷ್ಟ್ರ ಜೀವನದ ವಿಕೃತಿಯನ್ನು ಸಮಾಪ್ತಗೊಳಿಸಲು ಮನೆಯಲ್ಲೇ ಕೆಲವು ಸಂಘರ್ಷಣೆಗಳು ಆಯಿತು. ಅವುಗಳ ಪ್ರಭಾವ ಮಾತ್ರ ಬಹಳ ಆಳವಾಗಿದೆ. ರಾಮ-ರಾವಣ ಮತ್ತು ಮಹಾಭಾರತ ಯುದ್ಧಗಳು ಪರರ ಜೊತೆಯಲ್ಲ. ನಮ್ಮ ನಮ್ಮಲ್ಲೇ ಆಯಿತು. ಅವುಗಳನ್ನು ನಾವು ಮರೆಯಬೇಕೆಂದರೂ ಮರೆಯಲಾರೆವು. ರಾಷ್ಟ್ರ : ದೈವೀ ಪ್ರಕೃತಿಯ ಯೋಜನೆ ನಮ್ಮ ದೃಷ್ಟಿಯಲ್ಲಿ ದೇಶಗಳ ಅವಿರ್ಭಾವ ಯಾವುದೇ ಐತಿಹಾಸಿಕ ಕಾರಣದಿಂದಲ್ಲ, ಬದಲಾಗಿ ದೈವೀ ಪ್ರಕೃತಿಯ ಮೂಲ ಯೋಜನೆಯ ಕಾರಣದಿಂದ ಆಗಿದೆ. ಕೋಟಿ ಸಂಖ್ಯೆಯಲ್ಲಿ ಮಾನವರು ರಾಷ್ಟ್ರದ ರೂಪದಲ್ಲಿ ಯಾವುದೇ ಕೃತ್ರಿಮ ಉಪಾಯದಿಂದ ಒಂದಾಗಿರುವುದಿಲ್ಲ. ಅವರ ಜೀವನದ ಏಕಸೂತ್ರತೆ, ಮಾತೃಭೂಮಿಯ ಬಗ್ಗೆ ಸಮಾನ ಪ್ರೇಮ, ಸಮಾನ ಶತೃ-ಮಿತ್ರ ಭಾವ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಇತಿಕರ್ತವ್ಯತೆ ಇವುಗಳ ಸಂಬಂಧದಲ್ಲಿ ಸಮಾನ ಭಾವ ಯಾವುದೇ ಹೊರಗಿನ ಪ್ರಜಾತಂತ್ರದಿಂದ ಉತ್ಪನ್ನವಾಗುವುದಿಲ್ಲ. ರಾಷ್ಟ್ರ ಜೀವನದಲ್ಲಿ ಕಾಣಲಾಗುವ ಸಮಾನತೆಗಳು ಯಾವುದೋ ಅಂತರ್ನಿಹಿತ ಚೇತನ ತತ್ವದ ಅಭಿವ್ಯಕ್ತಿ ಮಾತ್ರ ಆಗಿವೆ. ಇವು ರಾಷ್ಟ್ರದ ಲಕ್ಷಣಗಳು, ಕಾರಣಗಳಲ್ಲ. ಪಶ್ಚಿಮದ ವಿದ್ವಾಂಸರು ಲಕ್ಷಣಗಳನ್ನು ಕಾರಣಗಳೆಂದು ತಿಳಿದು ಕೃತ್ರಿಮ ರೂಪದಲ್ಲಿ ರಾಷ್ಟ್ರಜೀವನದ ಕಲ್ಪನೆಯನ್ನು ಮಾಡುತ್ತಾರೆ. ಪ್ರಥಮ ವಿಶ್ವಯುದ್ಧದ ನಂತರ ಬಾರ್ಸಾಈಯ ಸಂಧಿ ಯೂರೋಪಿನಲ್ಲಿ ಈ ರೀತಿಯಾಗಿ ಅನೇಕ ದೇಶಗಳನ್ನು ಉತ್ಪನ್ನ ಮಾಡುವ ಪ್ರಯತ್ನ ಮಾಡಿತು. ಆದರೆ ಎರಡನೆಯ ವಿಶ್ವಯುದ್ಧವು ಅವರ ಪ್ರಯತ್ನ ವಿಫಲವಾಯಿತು ಎಂದು ನಿರೂಪಿಸಿತು. ಹರಿದ್ವಾರದ ಕುಂಭಮೇಳದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ನೋಡಿ ಇದರ ಪ್ರಚಾರಕ್ಕೆ ಎಷ್ಟು ಖರ್ಚಾಯಿತು ಮತ್ತು ಏನೇನು ಉಪಾಯ ಮಾಡಿದಿರಿ ಎಂದು ಒಬ್ಬ ಅಮೆರಿಕದ ಯಾತ್ರಿ ಮದನಮೋಹನ್ ಮಾಲವೀಯ ಅವರನ್ನು ಕೇಳಿದರಂತೆ. ಅದಕ್ಕೆ ಉತ್ತರವಾಗಿ ಮಾಲವೀಯ ಅವರು ಪಂಚಾಂಗವನ್ನು ತೆಗೆದು `ಕುಂಭ ಪರ್ವ' ಎಂದು ಬರೆದಿರುವ ಸಾಲುಗಳನ್ನು ತೋರಿಸಿ ``ಇದೇ ನಮ್ಮ ಪ್ರಚಾರ. ಈ ಒಂದು ಸಾಲು ಮುದ್ರಿಸುವುದಕ್ಕೆ 484 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಷ್ಟು ಖರ್ಚಾಗಬಹುದು ಎಂದು ನೀವೇ ಊಹಿಸಿ" ಎಂದು ಹೇಳಿದರಂತೆ. ಇದರ ಅರ್ಥ ಕುಂಭ ಪರ್ವ ಮುಂತಾದ ಹಬ್ಬಗಳು ದೇಶದ ಅಸ್ತಿತ್ವಕ್ಕೆ ಪರಿಣಾಮಗಳೇ ವಿನಾ ಕಾರಣಗಳಲ್ಲ. ವಿಶ್ವಾತ್ಮ ಮತ್ತು ರಾಷ್ಟಾ್ರತ್ಮ ಜೀವಾತ್ಮದ ರೀತಿಯಲ್ಲೇ ರಾಷ್ಟಾ್ರತ್ಮಕ್ಕೂ ಒಂದು ಸ್ಥಾಯಿತ್ವ ಮತ್ತು ವಿಶ್ವಾತ್ಮದ ಜೊತೆ ಅದರ ಸಂಬಂಧಗಳ ಆಧಾರದ ಮೇಲೆಯೇ ನಾವು ಅದರ ವಿಕಾಸದ ಧಾರೆಯನ್ನು ನಿರ್ಣಯಿಸುತ್ತೇವೆ. ಅದು ವಿರೋಧಾತ್ಮಕವಲ್ಲದೇ ಸೃಜನಾತ್ಮಕವಾಗಿರುತ್ತದೆ. ಸೇನೆಯ ಒಂದು ತುಕಡಿಯ ಉನ್ನತಿ ಮತ್ತು ಅದರ ಕರ್ತವ್ಯಗಳ ಪೂರ್ತಿ ಸಂಪೂರ್ಣ ಸೇನೆಯ ನಿರ್ಧಾರಿತ ಯೋಜನೆಯಲ್ಲಿ ತಮಗಾಗಿ ನಿಶ್ಚಯವಾಗಿರುವ ಕೆಲಸವನ್ನು ಯೋಗ್ಯವಾದ ರೀತಿಯಲ್ಲಿ ಮಾಡಿ ಮುಗಿಸುವುದಾಗಿದೆ. ಆರ್ಥಿಕ ದೃಷ್ಟಿಯಿಂದ ವಿಭಾಗೀಯ ಮತ್ತು ತಮ್ಮ ತಮ್ಮ ಕ್ಷೇತ್ರಗಳ ತಜ್ಞತೆಯ ಸಿದ್ಧಾಂತದ ಬಗೆಗೆ ಪ್ರತಿಪಾದಿಸುವ ಪಶ್ಚಿಮದ ದಾರ್ಶನಿಕರು ಒಂದು ವಿಷಯವನ್ನು ಮರೆತು ಹೋಗುತ್ತಾರೆ. ಅದೇನೆಂದರೆ ಪ್ರತಿಯೊಂದು ರಾಷ್ಟ್ರ ಪರಮಾತ್ಮನಿಂದ ಒಂದು ವಿಶೇಷವಾದ ಶಕ್ತಿಯಿಂದ ಹುಟ್ಟಿದೆಯೆಂದು. ಅವುಗಳ ಆ ಶಕ್ತಿ ಇತರರಿಗೆ ವಿನಾಶದಾಯಕವಲ್ಲ, ಸೃಷ್ಟಿಯ ಪಾಲನೆಯಲ್ಲಿ ಸಹಾಯಕವೂ ಆಗಬಲ್ಲುದು. ಈ ಕಾರ್ಯದ ಪೂರ್ತಿಗಾಗಿ ತಮ್ಮ ಸಂಪೂರ್ಣ ಶಕ್ತಿಗಳನ್ನು ಉಪಯೋಗಿಸುವುದು ರಾಷ್ಟ್ರದ ವಿಕಾಸದ ಸರ್ವೋತ್ತಮ ಸಾಧನವಾಗಿದೆ. ಈ ವಿಶೇಷತೆಯನ್ನು ಪರಿಗಣಿಸದೆ ಎಲ್ಲರನ್ನೂ ಒಂದು ಮಾನವತೆಯ ಹೆಸರಿನ ಅಚ್ಚಿನಲ್ಲಿ ಹಾಕಿ ತೆಗೆಯುವುದು ಜೀವನದ ನಿಯಮಗಳ ಅಜ್ಞಾನಕ್ಕೆ ಸಾಕ್ಷಿಯಾಗಿವೆ. ಸಂಘರ್ಷಣೆ, ವಿಕೃತಿಯ ಪರಿಣಾಮ ತಮ್ಮ-ತಮ್ಮ ನಿಶ್ಚಿತ ಕಾರ್ಯಗಳಿಗೆ ಉತ್ಪನ್ನವಾಗಿರುವ ದೇಶಗಳು ಒಂದರ ಜೊತೆ ಒಂದು ಘರ್ಷಣೆಗೊಂಡರೆ ಅದು ಅವುಗಳ ಅವಿಚಾರದ ಸೂಚನೆಯಾಗಿರುತ್ತದೆ. ಅದು ಅವುಗಳ ಜೀನನೋದ್ದೇಶದ ವಿಸ್ಮೃತಿಯ ಪರಿಣಾಮವಾಗಿದೆ. ಮಾನವನ ದೀರ್ಘವಾದ ವಿವಿಧ ಇತಿಹಾಸದಲ್ಲಿ ಅಪವಾದ ಸ್ವರೂಪವಾಗಿದೆ. ಪ್ರತಿದಿನ ಸಾವಿರಾರು ಮೈಲಿಗಳು ಚಲಿಸುವ ರೈಲುಗಳು ಒಂದಕ್ಕೊಂದು ಢಿಕ್ಕಿ ಹೊಡೆದರೆ ಅದು ಚಿಂತೆಯ ವಿಷಯವಾಗಿದೆ. ಆದರೆ ಪ್ರತಿದಿನ ಮಾಡುವ ಕೃತ್ಯಗಳನ್ನು ಮರೆಯುವಂತಿಲ್ಲ. ಓಡುವ ರೈಲುಗಾಡಿಗಳು ಒಂದಕ್ಕೊಂದು ಢಿಕ್ಕಿ ಹೊಡೆಯುವುದೇ ಅವುಗಳ ಉದ್ದೇಶವೆಂದು ನಾವು ಅಂದುಕೊಳ್ಳುವ ಹಾಗಿಲ್ಲ. ಢಿಕ್ಕಿ ಹೊಡೆದುಕೊಳ್ಳದಿರುವಂತೆ ನೋಡಿಕೊಳ್ಳುವುದು ರಾಷ್ಟ್ರ ಚಿಂತನ 485 ಪ್ರತಿಯೊಬ್ಬ ಸಂಚಾಲಕನ ಉದ್ದೇಶ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದು ಸುರಕ್ಷೆಯನ್ನು ಕಾಪಾಡುವುದು ಚಾಲಕನ ಕರ್ತವ್ಯವಾಗಿರುತ್ತದೆ. ಎಲ್ಲ ರಾಷ್ಟ್ರಗಳ ಸಹಅಸ್ತಿತ್ವ ಸಂಭವವೇ ಅಲ್ಲದೇ ಅನಿವಾರ್ಯವಾಗಿದೆ. ಈ ಅಸ್ತಿತ್ವ ಇಬ್ಬರು ಜಟ್ಟಿಗಳ ಮಧ್ಯೆ ಇರುವ ಸಹಅಸ್ತಿತ್ವ ಅಥವಾ ಸೀ-ಸೋ ಮೇಲೆ ಕುಳಿತುಕೊಂಡಿರುವ ಮಕ್ಕಳ ಸಹಅಸ್ತಿತ್ವದ ಜೊತೆ ಹೋಲಿಸುವ ಹಾಗಿಲ್ಲ. ಇದು ತಮ್ಮ ಅಸ್ತಿತ್ವವನ್ನು ಹಾಗೆ ಉಳಿಸಿಕೊಂಡು ಸಂಪೂರ್ಣ ಸೌಂದರ್ಯದಲ್ಲಿ ತಮ್ಮ ಕೊಡುಗೆ ಕೊಡುವಂಥ ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳ ಸಹ ಅಸ್ತಿತ್ವದಂತೆ, ಚಿತ್ರದಲ್ಲಿನ ಪ್ರತಿಯೊಂದು ರೇಖೆಗೂ ತನ್ನದೇ ಆದ ಮಹತ್ವವಿದೆ. ಅದರ ಕಾರಣ ಚಿತ್ರವಾಗಿದೆ. ಚಿತ್ರದ ಕಾರಣ ಪ್ರತಿಯೊಂದು ರೇಖೆಗೂ ಸಾರ್ಥಕತೆ ಬಂದಿದೆ. ಒಂದು ವಕ್ರ ರೇಖೆ ಮನುಷ್ಯನ ಚಿತ್ರದಲ್ಲಿ ಕಿವಿಯಂತೆ ಕಾಣಿಸಿದರೆ ಮತ್ತೊಂದು ಕಡೆ ಬೇರೆ ಯಾವುದಾದರೂ ರೂಪ ಪಡೆಯುತ್ತದೆ ಅಥವಾ ಅರ್ಥಹೀನವೂ ಆಗಿರಬಹುದು. ನಮ್ಮಿಂದ ಅದರ ವಕ್ರತೆಯನ್ನು ಅಳಿಸಲಾಗುವುದಿಲ್ಲ ಅಥವಾ ಸಂಪೂರ್ಣ ಚಿತ್ರದಿಂದ ಅದನ್ನು ಬೇರ್ಪಡಿಸಲಾಗುವುದಿಲ್ಲ. ಎರಡೂ ಪರಿಸ್ಥಿತಿಗಳಲ್ಲೂ ಅದರ ವಿನಾಶವಿದೆ. ರಾಷ್ಟ್ರಗಳೂ ಕೂಡಾ ತಮ್ಮ ವಿಶೇಷತೆ ಮತ್ತು ಪೂರಕತೆಯನ್ನು ತಿಳಿದು ಸಹ ಅಸ್ತಿತ್ವದ ಬಗ್ಗೆ ವಿಚಾರ ಮಾಡಿದರೆ ಸುಂದರ ಜಗತ್ತನ್ನು ಸೃಷ್ಟಿಸಬಹುದಾಗಿದೆ. ನಾವು ಇಂದು ಸಂಘರ್ಷಣೆಯ ಜಾಗದಲ್ಲಿ ಸಹಯೋಗವನ್ನು ಸತ್ಯ ದರ್ಶನವೆಂದು ನಂಬಿ ನಡೆದರೆ ಮಾತ್ರ ಇದು ಸಾಧ್ಯವಾಗುತ್ತದೆ. ಭಾರತವು ತನ್ನ ರಾಷ್ಟ್ರ ಜೀವನವನ್ನು ಇದೇ ಆಧಾರದ ಮೇಲೆ ನಡೆಸುತ್ತಾ ಬಂದಿದೆ. ಪಶ್ಚಿಮದ ಸಂಪರ್ಕಕ್ಕೆ ಬಂದ ಮೇಲೆ ಬ್ರಿಟಿಷರನ್ನು ವಿರೋಧಿಸಲು ಇಲ್ಲಿಯೂ ಪಶ್ಚಿಮೀ ರಾಷ್ಟ್ರೀಯತೆಯ ಆಧಾರದ ಮೇಲೆ ವಿರೋಧಾತ್ಮಕ ರಾಷ್ಟ್ರ ನಿರ್ಮಾಣದ ಪ್ರಯತ್ನ ಪ್ರಾರಂಭವಾಯಿತು. ಆದರೆ ಅದಕ್ಕೆ ಸಫಲತೆ ಸಿಗಲಿಲ್ಲ. ಈ ರೀತಿಯಾದ ರಾಷ್ಟ್ರ ಜಾಗರಣ ನೀರಿನ ಗುಳ್ಳೆಯಂತೆಯೇ ಆಯಿತು. ಹ್ಹಾಂ! ಅದರಿಂದ ರಾಷ್ಟ್ರ ಮಾನಸದಲ್ಲಿ ಕೆಲವು ವಿಕೃತಿಗಳು ಉಂಟಾಯಿತು, ಅದನ್ನು ನಾವು ಶೋಧಿಸಬೇಕಾಗಿದೆ. ಇಂದು ಕಾಣುತ್ತಿರುವ ಪ್ರಾಂತೀಯತೆ, ಜಾತಿವಾದ, ಗುಂಪುಕಟ್ಟುವಿಕೆ ಮುಂತಾದ ಭಾವನೆಗಳು ಆ ಜೀವನ ದರ್ಶನದ ಪರಿಣಾಮವಾಗಿದೆ. ಅವುಗಳನ್ನು ಅಳಿಸುವುದಕ್ಕಾಗಿ ಕೆಲವೊಮ್ಮೆ ಪ್ರಕೃತಿ ವಿರುದ್ಧವಾದ ಏಕರೂಪತೆಯ ಒತ್ತಡವನ್ನು ಹೇರುವ ಪ್ರಯತ್ನಗಳು ನಡೆದಿವೆ. ಜೀವನದ ದಿಶೆಯ ಜ್ಞಾನ ಪಡೆದನಂತರ ಪ್ರಾಣಶಕ್ತಿಯ ಸಂಚಾರವಾಗುತ್ತಲೇ ಈ ವಿಘಟನಾತ್ಮಕ ಪ್ರವೃತ್ತಿಗಳು ತನ್ನಷ್ಟಕ್ಕೆ ತಾನೇ ಅಂತ್ಯಗೊಳ್ಳುತ್ತವೆ. ಬನ್ನಿ ನಾವು ನಮ್ಮ ಏಕಾತ್ಮಕ ಮತ್ತು ವಿಧಾಯಕ ರಾಷ್ಟ್ರ ನಿರ್ಮಾಣದ ಈ ಪ್ರಯತ್ನದಲ್ಲಿ ಒಂದಾಗೋಣ; ಧಾರಣಾತ್ಮಕವಾಗಿರುವ ಕಾರಣ ಇದೇ ನಮ್ಮ ಮತ್ತು ವಿಶ್ವದ ಧರ್ಮವಾಗಿದೆ. ಇದರಿಂದಲೇ ನಾವು ವಿಶ್ವ ಕಲ್ಯಾಣದ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲೋಣ. 486 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 18. ಧರ್ಮ ರಾಜ್ಯವೆಂದರೆ ಏನು? ಮತ್ತು ಏಕೆ ? ಭೂಮಿ, ಜನ ಮತ್ತು ಸಂಸ್ಕೃತಿಗಳ ಒಕ್ಕೂಟದಿಂದ ದೇಶದ ನಿರ್ಮಾಣವಾಗುತ್ತದೆ. ಜನ ಮತ್ತು ಸಂಸ್ಕೃತಿಯ ಕಾರಣದಿಂದಲೇ ಜಡಭೂಮಿ ಚೈತನ್ಯಮಯಿಯಾಗುತ್ತದೆ. ಭೂಮಿ ಮತ್ತು ಸಂಸ್ಕೃತಿಯ ಕಾರಣದಿಂದಲೇ ಮರಣಶೀಲ ಜನತೆಗೆ ಅಮರತ್ವವು ಪ್ರಾಪ್ತವಾಗುತ್ತದೆ. ದಿನವೂ ಬದಲಾಗುತ್ತಿದ್ದರೂ ಸ್ಥಿರವಾಗುತ್ತದೆ. ಅವರ ಜೀವನದ ದಿಶೆ ಮತ್ತು ಪರಿಭಾಷೆ, ವ್ಯವಹಾರದ ಮರ್ಯಾದೆಗಳು ಮತ್ತು ನಿಯಮಗಳು ಈ ಎರಡರ ಅಧೀನದ ಮೇಲೆ ಆಗುತ್ತದೆ. ಸಂಸ್ಕೃತಿಯಂತೂ ಜನ ಮತ್ತು ಭೂಮಿಯ ಪಾರಸ್ಪರಿಕ ಸಂಬಂಧಗಳು ಕ್ರಿಯೆ ಪ್ರತಿಕ್ರಿಯೆಗಳ ಪರಿಣಾಮದಿಂದಾಗಿ ಕೆಲವು ವಿಜ್ಞಾನಿಗಳ ಅನುಸಾರವಾಗಿ ಜನ ಒಂದು ಅಮೈಥುನಿಕ ಸೃಷ್ಟಿಯ ರೂಪದಲ್ಲಿ ಭಗವಂತನ ಕಡೆಯಿಂದ ಕೆಲವು ವಿಶೇಷತೆಗಳನ್ನು ಪಡೆದುಕೊಂಡು ಹುಟ್ಟುತ್ತಾರೆ ಮತ್ತು ಅದರ ಮೂಲ ತತ್ವದ ವಿಕಸಿತ ಸ್ವರೂಪವೇ ಸಂಸ್ಕೃತಿ. ಇತರರ ಅನುಸಾರವಾಗಿ ಮನುಷ್ಯ-ಮನುಷ್ಯನ ಮಧ್ಯೆ ಇರುವ ವ್ಯವಹಾರಕ್ಕೆ ಒಂದು ನಿಶ್ಚಿತ ಆದರ್ಶೋನ್ಮುಖ ದಿಶೆ ಪ್ರಾಪ್ತವಾದಾಗ ಸಂಸ್ಕೃತಿ ಎನ್ನಿಸಿಕೊಳ್ಳುತ್ತದೆ. ಸಂಸ್ಕೃತಿ ಜನರ ಕರ್ತವ್ಯಗಳು ಮತ್ತು ಪರಿಣಾಮ ಇವೆರೆಡರ ಮಿಲನವಾಗಿದೆ. ಭೂಮಿಯ ಜೊತೆಗೆ ಜನಗಳ ಪ್ರೀತಿ ಮತ್ತು ಸಾಧಕ ಸಾಧ್ಯ, ಪೋಷಕ-ಪೋಷ್ಯ, ರಕ್ಷಕ-ರಕ್ಷಿತ, ದೌಹಕ- ದುಧ್ಯಗಳ ಸಂಬಂಧದಿಂದ ಸಂಸ್ಕೃತಿ ಅಲಂಕೃತವಾಗುತ್ತದೆ. ವೇದಾಂತಿಗಳು ಯಾವುದೇ ಒಂದರ ಅಥವಾ ಒಂದಕ್ಕಿಂತ ಹೆಚ್ಚಿನದಕ್ಕೆ ವಿಶೇಷ ಮಹತ್ವವನ್ನು ಕೊಟ್ಟರೂ ಜೀವ, ಆತ್ಮ ಮತ್ತು ದೇಹ ಮೂರೂ ಸತ್ಯವೆ. ಇದೇ ರೀತಿಯಾಗಿ ಭೂಮಿ, ಜನ ಮತ್ತು ಸಂಸ್ಕೃತಿ ಮೂರರಲ್ಲಿ ಯಾವುದನ್ನೂ ಕಡಿಮೆ ಮಾಡುವಂತಿಲ್ಲ. ದೇಶದ ಅಸ್ತಿತ್ವ ಇವುಗಳನ್ನು ಬಿಟ್ಟು ಇರುವುದಿಲ್ಲ. ಈ ಮೂರು ತತ್ವಗಳ ಒಕ್ಕೂಟದಿಂದ ಉತ್ಪನ್ನವಾದ ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ಸಮೃದ್ಧಿ ಯಾವ ವ್ಯವಹಾರಗಳಿಂದ ಆಗುತ್ತದೆಯೋ ಅದರ ಮೂಲ ಧರ್ಮವಾಗಿದೆ. ಧರ್ಮದಿಂದಲೇ ಧಾರಣೆ ಆಗುತ್ತದೆ, ಅದರಿಂದಲೇ ಅಭ್ಯುದಯ ಮತ್ತು ಅಶ್ರೇಯಸ್ಸು ಆಗುತ್ತದೆ. ವ್ಯಷ್ಟಿ ಮತ್ತು ಸಮಷ್ಟಿಯ ಹಿತಗಳ ಸಾಮಂಜಸ್ಯ ಧರ್ಮದಿಂದಲೇ ಆಗುತ್ತದೆ. ಧರ್ಮದ ಪಾಲನೆ ಮಾಡುವ ವ್ಯಕ್ತಿ ಹೇಗೆ ದೇಹವನ್ನು ಸ್ವಸ್ಥವಾಗಿಟ್ಟುಕೊಂಡು ಆತ್ಮದ ಸಾಕ್ಷಾತ್ಕಾರ ಪಡೆದು ಜೀವನಕ್ಕೆ ಭೌತಿಕ ಮತ್ತು ಆಧ್ಯಾತ್ಮಿಕ ಎರಡೂ ಪ್ರಕಾರವಾದ ಆನಂದವನ್ನು ಪಡೆಯುತ್ತಾನೋ ಹಾಗೆಯೇ ಧರ್ಮಾನುಯಾಯಿ ದೇಶ ಭೂಮಿ, ಜನ ಮತ್ತು ಸಂಸ್ಕೃತಿ ಮೂರಕ್ಕೂ ಕಲ್ಯಾಣಕಾರಿಯಾಗುತ್ತದೆ. ಧರ್ಮದ ಈ ಕಲ್ಪನೆಯ ಕಾರಣದಿಂದಲೇ ಭೂಮಿ- ಪೂಜನ, ತೀರ್ಥಯಾತ್ರೆ, ಮಾತೃವಂದನೆ, ಸಮಾಜ ವ್ಯವಸ್ಥೆ, ಯಜ್ಞ-ಯಾಗಾದಿಗಳು ರಾಷ್ಟ್ರ ಚಿಂತನ 487 ನಮ್ಮ ಧರ್ಮದ ಒಳಗಿವೆ. ಈ ಧರ್ಮ ವ್ಯಕ್ತಿ ವ್ಯಕ್ತಿಯ, ವ್ಯಕ್ತಿ ಮತ್ತು ಸಮಾಜದ, ಒಂದು ಸಮಾಜ ಮತ್ತು ಇನ್ನೊಂದು ಸಮಾಜದ, ಜಡ ಮತ್ತು ಚೇತನದ ಎಲ್ಲ ವ್ಯವಹಾರಗಳನ್ನು ನಿಯಂತ್ರಿಸಿ ಅವುಗಳ ಸಂಬಂಧವನ್ನು ಪರಸ್ಪರಾನುಕೂಲ ಮಾಡುತ್ತದೆ. ಧರ್ಮವೇ ನಮ್ಮ ಸಂಪೂರ್ಣ ಜೀವನದಲ್ಲಿ ವ್ಯಾಪಿಸಿರುತ್ತದೆ. ಧರ್ಮಕ್ಕೆ ಈ ಸ್ಥಾನವಿರುವ ಕಾರಣದಿಂದಲೇ ನಮ್ಮ ಎಲ್ಲ ಸಂಸ್ಥೆಗಳು ಧರ್ಮ ಪ್ರಾಮುಖ್ಯತೆಯನ್ನು ಹೊಂದಿವೆ. ರಾಜ್ಯವು ಮುಖ್ಯವಾಗಿ ರಾಷ್ಟ್ರ ರಕ್ಷಣೆಗಾಗಿ ಆಗಿರುವ ಕಾರಣ ಧರ್ಮವನ್ನು ನಿರ್ಲಕ್ಷಿಸುವಂತಿಲ್ಲ. ಅಡಿಗೆಗೆ ಬಳಸುವ ಇಂಧನ ತನ್ನ ಬಿಸಿಯಿಂದ ದೂರವಾಗಿ ತನ್ನ ಕರ್ತವ್ಯವನ್ನು ಮಾಡಲಾರದು. ನಮ್ಮನ್ನು ನಡೆಸುವ ಧರ್ಮವನ್ನು ಉದಾಸೀನ ಮಾಡಿ ನಡೆದರೆ ರಾಜ್ಯವು ಎಂದಿಗೂ ರಾಷ್ಟ್ರದ ರಕ್ಷಣೆ ಮಾಡಲಾಗುವುದಿಲ್ಲ. ಆದ್ದರಿಂದ ನಮ್ಮಲ್ಲಿ ರಾಜ್ಯವೆಂದರೆ ಧರ್ಮರಾಜ್ಯವೆಂದು ಕರೆಯಲಾಗುತ್ತದೆ. ಅದರ ಅನ್ಯ ಭೇದಗಳು ಗೌಣವಾಗಿವೆ. ರಾಜ್ಯವು ಧರ್ಮದ ಅನುಷ್ಠಾನದಲ್ಲಿದ್ದರೆ ಅದು ಲೋಕತಂತ್ರೀಯದ್ದಾಗಿರಲಿ ಅಥವಾ ಏಕತಂತ್ರೀಯವಾಗಿರಲಿ ಎರಡೂ ಪರಿಸ್ಥಿತಿಗಳಲ್ಲಿ ಕಲ್ಯಾಣಕಾರಿಯಾಗಿರುತ್ತದೆ. ಇದರ ವಿರುದ್ಧವಾಗಿದ್ದರೆ ಜನತಂತ್ರ ಮತ್ತು ಏಕತಂತ್ರ ಎರಡರಲ್ಲೂ ಪ್ರಜೆಗಳನ್ನು ಹಿಂಸಿಸುವ ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ. ಧರ್ಮರಾಜ್ಯದಲ್ಲಿ ಭೂಮಿಯ ಏಕತೆ, ಅಖಂಡತೆ ಮತ್ತು ಅದರ ಬಗ್ಗೆ ಶ್ರದ್ಧೆ ಪ್ರಮುಖವಾಗಿ ಇರುತ್ತದೆ. ಧರ್ಮರಾಜ್ಯವು ಎಂದಿಗೂ ಸಂಕುಚಿತವಾಗಿರುವುದಿಲ್ಲ. ಅತಿ ತುಚ್ಛ ವಸ್ತುಗಳಿಗೂ ಪೂಜೆಯ ಯೋಗ್ಯತೆಯನ್ನು ಕೊಡಿಸುವುದು ಧರ್ಮದ ಲಕ್ಷಣ. ಇದೇ ಕಾರಣದಿಂದಲೇ ಭೂಮಿಯನ್ನು ಅತ್ಯಂತ ಶ್ರದ್ಧೆ ಮತ್ತು ಆದರದಿಂದ ನೋಡಲಾಗುತ್ತದೆ. ನಿಃಸ್ವಾರ್ಥ ದೇಶಭಕ್ತಿ ಧರ್ಮಾತೀತವಾಗಿರುವುದಿಲ್ಲ. ಲೋಕಾರಾಧನೆ ಧರ್ಮರಾಜ್ಯದ ಏಕೈಕ ಉದ್ದೇಶವಾಗಿರುತ್ತದೆ. ಒಬ್ಬನೇ ಒಬ್ಬನು ಹಸಿವೆಯಿಂದ ಇದ್ದರೂ ಧರ್ಮಾನುಯಾಯಿ ರಾಜನಿಗೆ ಊಟಮಾಡಲು ಅಧಿಕಾರವಿಲ್ಲ. ವಿಶ್ವಕಲ್ಯಾಣಕ್ಕಾಗಿಯೇ ಪಾಲಕನಿಗೆ `ರಾಜ' ಎನ್ನುವ ಹೆಸರು ಕೊಡಲಾಗಿದೆ. ಧರ್ಮನೀತಿ ಮೂಲತಃ ಲೋಕನೀತಿಯಾಗಿರುತ್ತದೆ. ಧರ್ಮಭಾವ ಜನರನ್ನು ಬೇರೆ ಬೇರೆಯಾಗಲ್ಲದೇ ಅವರನ್ನು ಸಂಪೂರ್ಣವಾಗಿ ನೋಡುತ್ತದೆ. ದೇಹ ಮತ್ತು ಅವಯವಗಳ ಸಂಬಂಧವಿರುವಂತೆಯೇ ಪ್ರಜೆ ಮತ್ತು ಪ್ರಜಾ ಸಂಸ್ಥೆಗಳು ಮತ್ತು ವಿವಿಧ ಆಧಾರಗಳ ಮೇಲೆ ನಿರ್ಮಾಣವಾಗಿರುವ ವಿವಿಧ ವರ್ಗಗಳ ಸಂಬಂಧವಿರುತ್ತದೆ. ಯಾವ ಅಂಗವನ್ನೂ ನಿರ್ಲಕ್ಷಿಸಲಾಗುವುದಿಲ್ಲ ಮತ್ತು ದೇಹವನ್ನು ನಿರ್ಲಕ್ಷಿಸಲಾಗುವುದಿಲ್ಲ. ಪುಷ್ಪದ ಅಸ್ತಿತ್ವ ದಳಗಳಿಂದ ಇರುತ್ತದೆ. ದಳಗಳ ಸೌಂದರ್ಯ ಮತ್ತು ಜೀವನದ ಸಾರ್ಥಕತೆ ಹೂವಿನ ಜೊತೆ ಇದ್ದು ಅದರ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಇರುತ್ತದೆ. ಬೇರೆ ಬೇರೆಯಾಗಿರುವುದಕ್ಕೆ 488 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಇಲ್ಲಿ ಅವಕಾಶವಿಲ್ಲ. ಸಾಂಸ್ಕೃತಿಕ ದೃಷ್ಟಿಯಿಂದಲೂ ಧರ್ಮವೂ ಏಕಾತ್ಮತಾವಾದಿ. ಜೀವನದ ಏಕಾತ್ಮಕತೆಯ ಅನುಭೂತಿಯೇ ಭಾರತೀಯ ಸಂಸ್ಕೃತಿಯ ವಿಶೇಷತೆಯಾಗಿದೆ ಮತ್ತು ಈ ಭಾವದಿಂದ ಹುಟ್ಟಿದ ಆಚಾರ ಸಂಹಿತೆಯೇ ಧರ್ಮವಾಗಿದೆ. ನಿಶ್ಚಯವಾಗಿಯೂ ಈ ಆಚಾರ ಸಂಹಿತೆಯ ಲಕ್ಷ್ಯ ಸಮಷ್ಟಿಯ ಸಂರಕ್ಷಣೆ ಮತ್ತು ವ್ಯಕ್ತಿಯ ವಿಕಾಸವಾಗಿರುತ್ತದೆ. ವ್ಯಕ್ತಿ ಮತ್ತು ಸಮಾಜದಲ್ಲಿ ಯಾವುದಾದರೂ ಒಂದನ್ನು ಲಕ್ಷ್ಯಮಾಡಿಕೊಂಡರೆ ಅದು ಏಕಾಂಗಿಯಾಗಿರುತ್ತದೆ. ಭಾರತೀಯ ಸಂಸ್ಕೃತಿ ಎರಡರ ಹಿತವನ್ನು ಸಮಾನವಾಗಿ ದೃಷ್ಟಿಯಲ್ಲಿಡುತ್ತದೆ. ಪ್ರಜಾವಾದ ಮತ್ತು ಸಮಾಜವಾದಗಳಲ್ಲಿ ಈ ರೀತಿ ಸಾಧ್ಯವಾಗಲಿಲ್ಲ. ಧರ್ಮದಲ್ಲಿ ಇದು ಸಹಜವಾಗಿ ಪ್ರಾಪ್ತವಾಗುತ್ತದೆ. ಧರ್ಮರಾಜ್ಯದ ಸ್ವರೂಪ ``ಮತರಾಜ್ಯ"ವಲ್ಲ. ಧರ್ಮ ಮತ್ತು ಮತ ಒಂದೇ ಅಲ್ಲ. ಆಂಗ್ಲಭಾಷೆಯ ``ರಿಲಿಜಿಯನ್" ಅನ್ನುವ ಪದದಿಂದ ಅನುವಾದ ಮಾಡಿದ ಕಾರಣ ನಮಗೆ ಈ ಭ್ರಮೆ ಉಂಟಾಗುತ್ತದೆ. ``ಧರ್ಮ" ವ್ಯಾಪಕವಾಗಿರುತ್ತದೆ. ಉಪಾಸನೆ, ಸಂಪ್ರದಾಯ ಜೀವನದ ಒಂದು ಭಾಗದ ಬಗ್ಗೆ ವಿಚಾರ ಮಾಡುತ್ತದೆ. ನಾಲ್ಕು ಪುರುಷಾರ್ಥಗಳಲ್ಲಿ ಒಂದರ ವ್ಯಕ್ತಿಗತ ವಿಚಾರ ಮಾಡುವುದು ಮತದಲ್ಲಾಗುತ್ತದೆ. ಧರ್ಮ ನಾಲ್ಕು ಪುರುಷಾರ್ಥಗಳಲ್ಲಿ ಒಂದಾಗಿದ್ದರೂ ನಾಲ್ಕನ್ನೂ ಅಧೀನದಲ್ಲಿಟ್ಟುಕೊಂಡಿರುತ್ತದೆ. ಆದ್ದರಿಂದ ಧರ್ಮ ``ಥಿಯೋಕ್ರಿಟಿಕ್ ಸ್ಟೇಟ್" ಆಗಿರುವುದಿಲ್ಲ. ರಾಜನೇ ಧರ್ಮಗುರುವಾದಾಗ ಥಿಯೋಕ್ರಿಸಿಯ ಜನ್ಮವಾಗುತ್ತದೆ. ಭಾರತದಲ್ಲಿ ರಾಜನಿಗೆ ಈ ಸ್ಥಾನ ಎಂದಿಗೂ ಕೊಟ್ಟಿರಲಿಲ್ಲ. ರಾಜ್ಯದಲ್ಲಿ ಸಂಪೂರ್ಣ ಶಕ್ತಿ ಕೇಂದ್ರಿತವಾದರೆ ಥಿಯೋಕ್ರೆಸಿ ಉತ್ಪನ್ನವಾಗುತ್ತದೆ. ರಾಜನ ಮತ ಈಶ್ವರವಾದಿ ಅಥವಾ ಯಾವುದಾದರೂ ಮತ ವಿಶೇಷದಿಂದ ಸಂಬಂಧಪಟ್ಟಿದ್ದರೆ ಅದರ ಆಧಾರದ ಮೇಲೆ ಸಂಪೂರ್ಣ ಸಮಾಜದ ನಿಯಂತ್ರಣವಾಗುತ್ತದೆ. ಯೂರೋಪಿನಲ್ಲಿ ಕ್ರೈಸ್ತರಲ್ಲದವರು ಮತ್ತು ಕ್ರೈಸ್ತರು ಮಧ್ಯದಲ್ಲಿ ಬೈಬಲ್‍ನಲ್ಲಿನ ಸಿದ್ಧಾಂತಗಳ ವಿರುದ್ಧ ಮಾತನಾಡಿರುವವರ ವಿರುದ್ಧವಾಗಿ ರಾಜ್ಯದ ಶಕ್ತಿ ಇತ್ತು. ಗೆಲಿಲಿಯೋನನ್ನು ಇದೇ ಕಾರಣಕ್ಕಾಗಿ ಜೈಲಿಗೆ ಕಳಿಸಲಾಯಿತು. ಖಿಲಾಫತ್ ಮತ್ತು ಪೋಪ್‍ಡಮ್ ಇವುಗಳಿಂದಲೇ ಉತ್ಪನ್ನವಾದವು. ಇಂದಿಗೂ ಚೀನಾ ಮತ್ತು ರಷ್ಯಾಗಳಲ್ಲಿ ಥಿಯೋಕ್ರೆಸಿಯೇ ನಡೆಯುತ್ತಿದೆ. ಸಾಮ್ಯವಾದಿಗಳ ಧರ್ಮ ಈಶ್ವರವಾದಿ ಅಲ್ಲದಿದ್ದರೂ ಮತವಾದದ ಎಲ್ಲಾ ಲಕ್ಷಣಗಳೂ ಅದರಲ್ಲಿ ಇದೆ. ಸಮಾಜವಾದದ ಉದ್ದೇಶವನ್ನು ಮುಂದಿಟ್ಟುಕೊಂಡು ನಡೆಯುವವರು ಸಫಲರಾದರೆ ಇದೇ ವಿಧವಾದ ಮತ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ಸಮಾಜವಾದವೇ ಅವರ ಮತವಾಗಿದೆ. ರಾಜನೈತಿಕ, ಆರ್ಥಿಕ, ಸಾಮಾಜಿಕ ಮತ್ತು ಬೌದ್ಧಿಕ (ಆರ್ಥಿಕಕ್ಕೆ ಇಲ್ಲಿ ಸ್ಥಾನವಿಲ್ಲ) ಎಲ್ಲಾ ಶಕ್ತಿಗಳು ರಾಜ್ಯದ ಅಧೀನದಲ್ಲಿ ಇರುತ್ತವೆ. ರಾಷ್ಟ್ರ ಚಿಂತನ 489 ಧರ್ಮರಾಜ್ಯ ಶಕ್ತಿಗಳ ವಿಕೇಂದ್ರೀಕರಣ ಅಥವಾ ಸರಿಯಾದ ರೀತಿಯ ನಿಯೋಜನೆಯ ಮೇಲೆ ವಿಶ್ವಾಸವಿಟ್ಟಿರುತ್ತದೆ. ``ರಾಜ ಮಾಡಿದ್ದೆಲ್ಲ ನ್ಯಾಯ" ಎನ್ನುವ ಸಿದ್ಧಾಂತಕ್ಕೆ ಇಲ್ಲಿ ಮಾನ್ಯತೆ ಇಲ್ಲ. ಬದಲಾಗಿ ರಾಜನು ನ್ಯಾಯದ ದಾರಿಯಲ್ಲಿ ನಡೆಯಬೇಕಾಗಿದೆ. ``ನ್ಯಾಯ" ಎಂದರೇನು ಎನ್ನುವುದನ್ನು ರಾಜ್ಯವಲ್ಲ ಧರ್ಮವು ನಿರ್ಣಯಿಸುತ್ತದೆ. ಇಂದಿನ ಪರಿಭಾಷೆಯಲ್ಲಿ ಇದನ್ನು ಸಂವಿಧಾನದ ಸರಕಾರ (Constitutional Government) ಎಂದು ಕರೆಯಲಾಗುತ್ತದೆ. ಆದರೆ ಅಂತರವೆಂದರೆ ಇಂದಿನ ಸಂವಿಧಾನ ಸಾಧಾರಣ ಮನುಷ್ಯನಿಂದ ಮಾಡಲಾಗಿದೆ ಮತ್ತು ಅವರ ಕೈಗೊಂಬೆಯಾಗಿದೆ. ಆದ್ದರಿಂದ ಅವರು ಇದನ್ನು ಇಷ್ಟ ಬಂದಾಗ ಬದಲಿಸಬಹುದಾಗಿದೆ. ಆದ್ದರಿಂದ ಇಂದು ಸಂವಿಧಾನಕ್ಕೆ ಅನುಗುಣವಾದ ಶಾಸನವಾಗಿಲ್ಲದೆ ಶಾಸನಕ್ಕೆ ಅನುಗುಣವಾದ ಸಂವಿಧಾನವಾಗಿದೆ. ಧರ್ಮದ ಸಿದ್ಧಾಂತ ದ್ವಂದಾತೀತ ಮಹಾಪುರುಷರಿಂದ ಸೃಷ್ಟಿಯ ನಿಗೂಢ ರಹಸ್ಯಗಳನ್ನು ತಮ್ಮ ಅಂತರ್ದೃಷ್ಟಿಯಿಂದ ಸಾಕ್ಷಾತ್ಕಾರಗೊಳಿಸಿದ ನಂತರ ನಿಶ್ಚಿತವಾಗಿದೆ. ಇಲ್ಲಿ ಲಿಖಿತ ನಿಯಮಗಳಿಗಿಂತ ಹೆಚ್ಚಾಗಿ ಅಲಿಖಿತ ನಿಯಮಗಳು ಹೆಚ್ಚಿನ ಪ್ರಾಧಾನ್ಯತೆ ಪಡೆದಿವೆ. ಸಮಾಜವು ತನ್ನ ವ್ಯವಹಾರದಿಂದ ತನ್ನ ಆತ್ಮವನ್ನು ಅಭಿವ್ಯಕ್ತಪಡಿಸುತ್ತದೆ. ನಿಯಮಗಳು ಮತ್ತು ಸ್ಮೃತಿಗಳು ಸಮಾಜದ ಅಂತರಾಳದ ಪ್ರಕ್ಷೇಪಣೆ ಮಾತ್ರ ಆಗಿರುತ್ತದೆ. ಸಮಾಜ ಸ್ವತಃ ಧರ್ಮಸಮ್ಮತ ಶಿಷ್ಟಾನುಮೋದಿತ ಆಚಾರದ ಅನುಸರಣೆ ಮಾಡುತ್ತಿರುವ ಕಾರಣ ವ್ಯವಹಾರದಲ್ಲಿ ಎಲ್ಲೂ ಸೈರಭಾವ ಅಥವಾ ಸ್ವಚ್ಛಂದತೆ ಕಾಣುವುದಿಲ್ಲ. ಈ ಪ್ರಕಾರದ ಧರ್ಮರಾಜ್ಯ ಮೋಬೋಕ್ರಸಿ ಮತ್ತು ಆಟೋಕ್ರೆಸಿಯ ಕೆಟ್ಟಗುಣಗಳಿಂದ ದೂರ ಉಳಿಯುತ್ತದೆ. ಧರ್ಮಶಾಸ್ತ್ರವು ಯಾವುದೇ ಪುಸ್ತಕವನ್ನು ಆಧರಿಸಿಲ್ಲ; ಅದು ಸ್ಥಿರವಾಗಿರುವುದಿಲ್ಲ. ಆದರೆ ಅದರ ಚಲನೆ, ಅಸ್ಥಿರತೆ ಅಥವಾ ಪರಾಗತಿಗೆ ಯಾವುದೇ ಹೆಸರಿಲ್ಲ. ದೇಶ ಮತ್ತು ಕಾಲಕ್ಕೆ ಅನುಗುಣವಾಗಿ ಅದು ಬದಲಾಗುತ್ತದೆ. ಆದರೂ ಜೀವನದ ನಿಶ್ಚಿತ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಅದರಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಇಲ್ಲಿ ಸಮಾಜವನ್ನು ಮುನ್ನಡೆಸುವ ಶಕ್ತಿ ರಾಜನ ಹತ್ತಿರವಿರುವುದಿಲ್ಲ. ಬದಲಾಗಿ ಧರ್ಮದ ಹತ್ತಿರ ಇರುತ್ತದೆ. ವ್ಯವಹಾರದಲ್ಲಿ ಮುನ್ನಡೆಸುವ ಶಾಸಕ ವರ್ಗದಿಂದ ಭಿನ್ನವಾಗಿರಬೇಕು. ಧರ್ಮಶಾಸ್ತ್ರವನ್ನು ಸಾಧಾರಣವಾಗಿ ``ರೂಲ್ ಆಫ್ ಲಾ" ಎಂದು ಕರೆಯಲಾಗುತ್ತದೆ. ನಿಧಿ ನಿರ್ಮಾಣ ಅಧಿಕಾರ ಶಾಸಕನ ಕೈಯಲ್ಲಿ ಇದ್ದಾಗ ಅದರ ವ್ಯವಹಾರಿಕ ಅರ್ಥ ``Rule of law to be framed by the ruler" ಆಗಿರುತ್ತದೆ. ಧರ್ಮರಾಜ್ಯದಲ್ಲಿ ಶಾಸಕನಿಗೆ ಈ ಅಧಿಕಾರವಿರುವುದಿಲ್ಲ. ಧರ್ಮರಾಜ್ಯವು ಇಂದಿನ ಪ್ರಜಾತಂತ್ರಕ್ಕಿಂತ ಭಿನ್ನವಾಗಿದೆ. ಪ್ರಜಾರಂಜನೆ 490 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ರಾಜನ ಕರ್ತವ್ಯವಾಗಿದ್ದರೂ ಅದು ಮೂಲತಃ ಧರ್ಮದಿಂದ ನಿಯಂತ್ರಿಸಲಾಗುತ್ತದೆ. ಪ್ರಜೆಗಳ ನಿಯಂತ್ರಣವೂ ಧರ್ಮದಿಂದ ಆಗುತ್ತದೆ. ಧರ್ಮಾನುಯಾಯಿ ಪ್ರಜೆಗಳನ್ನು ದಂಡಿಸುವ ಅಥವ ಹೊರಹಾಕುವ ಅಧಿಕಾರ ಹೇಗೆ ರಾಜನಿಗೆ ಇರುವುದಿಲ್ಲವೋ ಹಾಗೆಯೇ ಧರ್ಮಪಾಲಕ ರಾಜನನ್ನು ತೊಲಗಿಸುವ ಅಧಿಕಾರ ಪ್ರಜೆಗಳಿಗೂ ಇರುವುದಿಲ್ಲ. ಪ್ರಜಾತಂತ್ರದಲ್ಲಿ ರಾಜ ಮತ್ತು ಪ್ರಜೆಗಳ ಹಿತವನ್ನು ಒಂದಕ್ಕೊಂದು ವಿರೋಧ ಎಂದು ಪರಿಗಣಿಸಿ ರಾಜನನ್ನು ಪ್ರಜೆಗಳ ಹಿಡಿತದಲ್ಲಿಟ್ಟುಕೊಳ್ಳಲು ವಿರೋಧ ಪಕ್ಷದ ರೂಪದಲ್ಲಿ ನಿರಂತರ ನಡೆಯುತ್ತಿರುವ ವಿದ್ರೋಹ ರೂಪದ ಕತ್ತಿ ರಾಜನ ತಲೆಯ ಮೇಲೆ ತೂಗಾಡುತ್ತಿರುತ್ತದೆ. ಪ್ರಜಾತಂತ್ರದ ಈ ರೂಪ ಮಾನವನ ವಿಕಾಸಕ್ಕೆ ಉಪಯುಕ್ತವಾಗಿರುವುದಿಲ್ಲ. ಬಹುಶಃ ಭಗವಂತ ಮತ್ತು ಸೈತಾನರ ದ್ವೈತವಾದ ಕ್ರೈಸ್ತರ ವಿಚಾರಧಾರೆಯಿಂದ ಉತ್ಪನ್ನವಾಗಿರಬಹುದು. ರಾಜನು ಧರ್ಮದ ವಿರುದ್ಧ ಕೆಲಸ ಮಾಡಿದರೆ ಪ್ರಜೆಗಳು ರಾಜನನ್ನು ಪದವಿಯಿಂದ ಕೆಳಗಿಳಿಸಬಹುದು. ರಾಜನನ್ನು ಅಧಿಕಾರದಿಂದ ಕೆಳಗಿಳಿಸುವುದು ಪ್ರಜೆಗಳ ಧರ್ಮವಲ್ಲ, ಬದಲಾಗಿ ಧರ್ಮದ ಪಾಲನೆ ಮಾಡುವುದು ಪ್ರಜೆಗಳ ಧರ್ಮವಾಗಿದೆ. ರಾಜನು ಧರ್ಮ ಪಾಲನೆಯ ಮಾರ್ಗದಲ್ಲಿ ಅಡಚಣೆ ಉಂಟುಮಾಡಿದರೆ ಪ್ರಜೆಗಳಿಗೆ ತೊಂದರೆಯನ್ನುಂಟು ಮಾಡಿದರೆ ಅವನನ್ನು ಪದಚ್ಯುತಿಗೊಳಿಸುವುದು ಪ್ರಜೆಗಳ ಧರ್ಮವಾಗಿರುತ್ತದೆ. ಧರ್ಮದ ಮಹತ್ವವನ್ನು ಅನೇಕರು ಸ್ವೀಕರಿಸುತ್ತಾರೆ. ಆದರೆ ಅವರು ಧರ್ಮರಾಜ್ಯದ ಘೋಷಣೆಯ ಅವಶ್ಯಕತೆಯನ್ನು ತಿಳಿಯುವುದಿಲ್ಲ. ಅವರು ಅಂತರ್ಮುಖರಾಗಿ ಯೋಚಿಸಿದರೆ ಅವರ ನಿರ್ಣಯದ ಹಿಂದೆ ಧರ್ಮದ ಸಂಬಂಧವಾಗಿ ಭ್ರಮೆಯಿಂದ ಕೂಡಿದ ಕಲ್ಪನೆಗಳು ಮತ್ತು ಹಿಂದಿನ ಅರ್ಧಶತಕದ ರಾಜನೀತಿ ಇವೆ ಎಂದು ತಿಳಿಯುತ್ತದೆ. ನಾವು ಈ ದಿಶೆಯನ್ನು ಬದಲಿಸಬೇಕೆಂದಿದ್ದರೆ ನಮ್ಮ ರಾಜ್ಯದ ಸ್ವರೂಪದ ಬಗ್ಗೆ ಸ್ಪಷ್ಟ ಶಬ್ದಗಳಲ್ಲಿ ಹೇಳಬೇಕಾಗಿದೆ. ಸೆಕ್ಯುಲರ್ ಸ್ಟೇಟ್, ವೆಲ್‍ಫೇಯರ್ ಸ್ಟೇಟ್, ಸೋಷಲಿಸ್ಟ್ ಸ್ಟೇಟ್ ಮುಂತಾದ ಘೋಷಣೆಗಳನ್ನು ಕೂಗಲಾಯಿತು. ಆದರೆ ಅವು ಮೂಲತಃ ಭಾರತೀಯ ಪರಂಪರೆ ಮತ್ತು ಪ್ರಕೃತಿಗೆ ಪ್ರತಿಕೂಲವಾಗಿದ್ದುವು. ಆದ ಕಾರಣ ಜನತೆಯಲ್ಲಿ ಏನನ್ನಾದರೂ ನಿರ್ಮಾಣ ಮಾಡಲು ಅಥವಾ ಸಮಾಜದ ವ್ಯವಸ್ಥೆಯನ್ನು ಸರಿಮಾಡಲು ಅವುಗಳಿಂದ ಸಾಧ್ಯವಾಗಲಿಲ್ಲ. ಧರ್ಮರಾಜ್ಯ ನಿಶ್ಚಿತವಾಗಿಯೂ ಈ ಇಂದ್ರಜಾಲವನ್ನು ಮಾಡಬಲ್ಲದು. ನಮ್ಮ ಸುಪ್ತ ಆಕಾಂಕ್ಷೆಗಳನ್ನು ಎಬ್ಬಿಸುವ ಸಾಮರ್ಥ್ಯ ಅದರಲ್ಲಿದೆ ``ಧರ್ಮರಾಜ್ಯ" ಸಂಬಂಧದಲ್ಲಿ ಇಂದು ಏಕಾಭಿಪ್ರಾಯವಿಲ್ಲದಿರಬಹುದು. `ಧರ್ಮ' ಒಂದು ಸತ್ಯವಾಗಿದ್ದರೂ ಅದರ ಸ್ವರೂಪವನ್ನು ನೋಡುವುದರಲ್ಲಿ ಎಂದೆಂದಿಗೂ ಭಿನ್ನಭಿಪ್ರಾಯವಿದೆ. ಇದೇ ರೀತಿಯಾಗಿ ``ಧರ್ಮರಾಜ್ಯ"ದ ಸಂಬಂಧದಲ್ಲೂ ಆಗಿರಬಹುದು. ಆದರೆ ಈ ದಿಶೆಯಲ್ಲಿ ಸಮಾಜವಾದ ಮುಂತಾದವುಗಳ ಪ್ರಗತಿ ರಾಷ್ಟ್ರ ಚಿಂತನ 491 ಕೂಡ ಸರಿಯಾಗಿಲ್ಲ. ಅವುಗಳ ಸಂಬಂಧದಲ್ಲೂ ಹೀಗೆ ಹೇಳಲಾಗುತ್ತದೆ. ಎಷ್ಟು ಜನ ಸಮಾಜವಾದಿಗಳಿದ್ದರೋ ಅಷ್ಟು ಸಮಾಜವಾದದ ಪ್ರಕಾರಗಳಿವೆ. ಆದರೆ ಈ ಎಲ್ಲ ಕಲ್ಪನೆಗಳೂ ಮೂಲತಃ ವಿದೇಶೀಯರದು. ಆದ್ದರಿಂದ ಅವುಗಳನ್ನು ಸ್ವೀಕರಿಸಬೇಕಾದಾಗ ನಮ್ಮ ದೃಷ್ಟಿ ಹೊರಗಿನ ದಿಕ್ಕಿನಲ್ಲಿರುತ್ತದೆ. ``ಧರ್ಮರಾಜ್ಯ" ಮುಖ್ಯವಾಗಿ ಭಾರತೀಯ ಕಲ್ಪನೆಯಾದ ಕಾರಣ ಭಿನ್ನಾಭಿಪ್ರಾಯಗಳಿದ್ದರೂ, ನಾವು ಅಂತರ್ಮುಖಿಗಳಾಗಿ ಯೋಚಿಸುತ್ತೇವೆ. ದೇಶಪ್ರೇಮಿಯಾಗಿ ಯೋಚಿಸುವ ಮತ್ತು ವ್ಯವಹರಿಸುವ ವ್ಯಕ್ತಿಗಳಿಂದ ದೇಶಕ್ಕೆ ಯಾವುದೇ ಹಾನಿಯಾಗುವುದಿಲ್ಲ. ``ವಾದೇ-ವಾದೇ ಜಾಯತೇ ತತ್ವಬೋಧಃ" ಇದಕ್ಕೆ ಅನುಸಾರವಾಗಿ ನಮಗೂ ಸಹ ಧರ್ಮಬೋಧೆ ಆಗಬಹುದು. ಧರ್ಮ ಧಾರಣೆಯಿಂದ ಆಗುತ್ತದೆ. ವಾಸ್ತವದಲ್ಲಿ ಸಮಾಜ ಧರ್ಮದ ಆಧಾರದ ಮೇಲೆ ನಡೆಯುತ್ತದೆ. ಈ ರೀತಿಯಾಗಿ ಕೆಲಸ ಮಾಡಿದಾಗ ಸ್ವಾಭಾವಿಕವಾಗಿ ಉನ್ನತಿ ಸಿಗುತ್ತದೆ. ಅದು ಪರಮ ವೈಭವವಾಗಿರುತ್ತದೆ. ಈ ಎರಡರ ಸಮ್ಮಿಲನ ಅವಶ್ಯಕವಾಗಿದೆ. ಶರೀರ ಮತ್ತು ಆತ್ಮದ ಮಿಲನವಾದಾಗ ಶರೀರವು ಆತ್ಮಕ್ಕೆ ಅನುಸಾರವಾಗಿ ಆತ್ಮದ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸಮಾಡುತ್ತದೆ. ಈ ಕೆಲಸವೇ ಅದರ ಉನ್ನತಿ ಆಗುತ್ತದೆ. ಯಾವುದೇ ಅಡೆತಡೆಗಳು ಇರುವುದಿಲ್ಲ. ಆತ್ಮ ಮತ್ತು ಶರೀರಗಳ ಮಧ್ಯೆ ಅಂತರ ಉಂಟಾದಾಗ ಅಡಚಣೆ ಆಗುತ್ತದೆ. ಆತ್ಮ ಮತ್ತು ಶರೀರಗಳ ಮಿಲನವಾದಾಗ ನಡೆಯುವ ಕೆಲಸದಿಂದ ಉನ್ನತಿಯಾಗುತ್ತದೆ. ಎಲ್ಲಿಯೂ ಏನೂ ಅಡಚಣೆಯುಂಟಾಗುವುದಿಲ್ಲ. ಸ್ವಾಭಾವಿಕ ಉನ್ನತಿ ಎಂದರೇನು ಎಂದು ಇದನ್ನು ನೋಡಿದರೆ ತಿಳಿಯುತ್ತದೆ. ಇವೆರಡರ ಮಿಲನವಾಗದಿದ್ದರೆ, ಅಂದರೆ ಆತ್ಮಕ್ಕೆ ವಿರುದ್ಧವಾಗಿ ಶರೀರವು ಕೆಲಸ ಮಾಡಿದರೆ ಆತ್ಮವನ್ನು ಅವಮಾನಿಸಿ ಶರೀರವು ಕೆಲಸ ಮಾಡಿದರೆ ಆ ಕೆಲಸಗಳು ಉನ್ನತಿಯ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ. ಅವು ಅವನತಿಯ ಕಡೆಗೆ ತೆಗೆದುಕೊಂಡು ಹೋಗುತ್ತದೆ. ಇವುಗಳ ಮಿಲನದಿಂದ ಮಾಡುವ ಕೆಲಸ ಸರಿಯಾಗಿರುತ್ತದೆ. ಇದೇ ರೀತಿಯಾಗಿ ಸಮಾಜವು ಮತ್ತು ಧರ್ಮದ ಸಂಬಂಧ. ಸಮಾಜದ ಆಧಾರ ಧರ್ಮವು. ಇಲ್ಲಿ ನಾನು ಧರ್ಮದ ಪ್ರಯೋಗವನ್ನು ಮತ್ತೆ-ಮತ್ತೆ ಮಾಡುತ್ತಿದ್ದೇನೆ. ಇದರಿಂದ ಧರ್ಮವೆಂದರೇನು ಎನ್ನುವ ಕಲ್ಪನೆ ನಿಮಗೆ ಆಗಿರಬಹುದು ಎಂದು ನಾನು ಭಾವಿಸುತ್ತೇನೆ. ಈ ಶಬ್ದವೇ ಹಾಗೆ, ಇದರ ಪ್ರಯೋಗವು ಬಹಳ ಮಟ್ಟಿಗೆ ಆಗುತ್ತಿರುತ್ತದೆ. ಇದರ ಪ್ರಯೋಗ ಎಷ್ಟಾಗುತ್ತದೆ ಎಂದರೆ ಅನೇಕ ಕಡೆಗಳಲ್ಲಿ ಇದರ ಅರ್ಥವು ಅನರ್ಥವಾಗಿದೆ. ಅನೇಕ ಸಲ ಧರ್ಮಕ್ಕೆ ಸಂಬಂಧವಿರದ 492 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಎಷ್ಟೋ ವಿಷಯಗಳು ಧರ್ಮದ ಹೆಸರಿನಲ್ಲಿ ಆಚರಣೆಯಲ್ಲಿ ತರಲಾಗುತ್ತದೆ. ಧರ್ಮವು ಒಂದು ವ್ಯಾಪಕ ಶಬ್ದವಾಗಿದ್ದರೂ ಅದರಲ್ಲಿರುವ ಚಿಕ್ಕ-ಚಿಕ್ಕ ವಿಷಯಗಳಿಗೆ ಸಂಬಂಧಿಸಿದ ಚಿಕ್ಕ-ಚಿಕ್ಕ ಅಂಗಗಳನ್ನೂ ಜನರು ಧರ್ಮ ಎಂದು ತಿಳಿಯಲಾರಂಭಿಸಿದ್ದಾರೆ. ನಾವು ಹೀಗೆ ತಿಳಿಯಬಾರದು. ಏಕೆಂದರೆ ಎಷ್ಟೋ ಬಾರಿ ಮಂದಿರ, ಮಸೀದಿ ಮತ್ತು ಚರ್ಚ್‍ಗಳನ್ನೇ ಜನರು ಧರ್ಮವೆಂದು ತಿಳಿದಿದ್ದಾರೆ. ಈ ರೀತಿಯಾಗಿ ಅವರ ಧರ್ಮವಾಗಿದೆ. ಯಾರು ಮಂದಿರಕ್ಕೆ ಹೋಗುತ್ತಾರೋ ಅವರು ಧರ್ಮಾತ್ಮರು ಅನ್ನಿಸಿಕೊಳ್ಳುತ್ತಾರೆ. ಮಂದಿರಕ್ಕೆ ಹೋಗುವುದು ಒಳ್ಳೆಯದೇ, ಅದು ಧರ್ಮದಲ್ಲಿ ಒಂದು ಭಾಗ. ಆದರೆ ಮಂದಿರಕ್ಕೆ ಹೋಗುವುದೇ ಧರ್ಮವಲ್ಲ. ವಾಸ್ತವದಲ್ಲಿ ಧರ್ಮವೆದಂರೇನು? ಅದನ್ನು ಕೂಡ ನಾವು ಸ್ವಲ್ಪ ಮಟ್ಟಿಗೆ ತಿಳಿಯಬೇಕಾಗಿದೆ. ಏಕೆಂದರೆ ಈಗ ಧರ್ಮವಲ್ಲದ ಎಷ್ಟೋ ವಿಷಯಗಳು ಧರ್ಮದ ಹೆಸರಿನಲ್ಲಿ ಚಲಾವಣೆಯಲ್ಲಿವೆ. ಆಗಾಗ ಕೆಲವು ಜನ ಬಂದು ನಮ್ಮ ಎದುರಿಗೆ ನಿಂತು ಇದೇ ಧರ್ಮವೆಂದು ಹೇಳುತ್ತಾರೆ. ಹೊರಗಿನ ಜನ ಬಂದರು. ಆಂಗ್ಲಭಾಷೆಯ `ರಿಲಿಜಿಯನ್' ಎಂಬ ಶಬ್ದ ಬಂದು ಬಹಳ ದೊಡ್ಡ ತಪ್ಪು ಮಾಡಿತು. ಏಕೆಂದರೆ ಬ್ರಿಟಿಷರು ಇಲ್ಲಿಗೆ ಬಂದು ಧರ್ಮ ಎಂಬ ಶಬ್ದವನ್ನು ಕೇಳಿದಾಗ ಅದರ ಅನುವಾದವನ್ನು ಮಾಡತೊಡಗಿದರು. ಧರ್ಮ ಶಬ್ದದ ಅನುವಾದ ಮಾಡುವುದು ಅವರಿಗೆ ಕಷ್ಟ ಎನಿಸಿತು. ಧರ್ಮವೆನ್ನುವುದು ಬಹಳ ವ್ಯಾಪಕವಾದ ಶಬ್ದ, ಧರ್ಮದ ಯಾವುದೇ ಕಲ್ಪನೆ ಅವರಿಗಿರಲಿಲ್ಲ. ಕೊನೆಗೆ ಅವರು `ರಿಲಿಜಿಯನ್' ಅನ್ನುವ ಶಬ್ದದಿಂದ ಅದರ ಅನುವಾದ ಮಾಡಿದರು. ಇದು ಅನುವಾದದಿಂದಾದ ತಪ್ಪು. ಅನುವಾದದಿಂದ ಈ ರೀತಿಯ ತಪ್ಪುಗಳಾಗುತ್ತಿರುತ್ತವೆ. ತಂದೆಯ ತಾಯಿಯನ್ನಾಗಲೀ ತಾಯಿಯ ತಾಯಿಯನ್ನಾಗಲೀ ``ಗ್ರಾಂಡ್ ಮದರ್" ಅನ್ನುತ್ತಾರೆ. ನಮ್ಮಲ್ಲಿ ಇವೆರಡರಕ್ಕೂ ಆಕಾಶ ಭೂಮಿಗಳ ಮಧ್ಯೆ ಇರುವಷ್ಟು ಅಂತರವಿದೆ. ಆದರೆ ಅಲ್ಲಿ ಎರಡಕ್ಕೂ ಒಂದೇ ಪದವಿದೆ. ಅತ್ತಿಗೆಯಾಗಲೀ ನಾದಿನಿಯಾಗಲೀ ಇಬ್ಬರನ್ನೂ ``ಸಿಸ್ಟರ್-ಇನ್-ಲಾ' ಎಂದು ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಈ ರೀತಿಯಾದ ಅನೇಕ ಶಬ್ದಗಳಿವೆ. ಅವುಗಳಿಂದ ಅನುಮಾನಗಳುಂಟಾಗುತ್ತವೆ. ಆದ್ದರಿಂದ ಬ್ರಿಟಿಷರು ಇಲ್ಲಿಗೆ ಬಂದಾಗ ಧರ್ಮ ಶಬ್ದದ ಅನುವಾದವನ್ನು `ರಿಲಿಜಿಯನ್' ಎಂದು ಮಾಡಿದರು. `ರಿಲಿಜಿಯನ್' ಎಂದರೆ `ಮತ' ಅಥವಾ `ಸಂಪ್ರದಾಯ'ವಾಗಿದೆ. ಪೂಜೆ ಮಾಡುವ ಪದ್ಧತಿಯನ್ನು ಸಂಪ್ರದಾಯ ಎನ್ನುತ್ತಾರೆ. ಅವರು ಅನುವಾದ ಮಾಡಿದ ನಂತರ ನಾವೂ ಅದನ್ನೇ ಬಳಸಲು ಪ್ರಾರಂಭಿಸಿದೆವು. ಮತ್ತು ಅದನ್ನು ಧರ್ಮವೆಂದು ಹೇಳತೊಡಗಿದವು. ಆದರೆ ಧರ್ಮ ಶಬ್ದದ ಯಾಥಾರ್ಥ ರೂಪವನ್ನು ನಾವು ತಿಳಿಯಬೇಕಾಗಿದೆ. ನಾವು ಹಿಂದೂ ಧರ್ಮದ ರಕ್ಷಣೆ ಮಾಡುವ ಮಾತು ಆಡುತ್ತಿದ್ದರೆ ಅದು `ರಿಲಿಜಿಯನ್' ಅಲ್ಲ. ಆದರೆ ಅನೇಕ ಬಾರಿ ಹಿಂದೂ ಧರ್ಮದ ರಾಷ್ಟ್ರ ಚಿಂತನ 493 ಅನುವಾದ ಮಾಡುವಾಗ ಜನರು `ಹಿಂದು ರಿಲಿಜಿಯನ್' ಎನ್ನುತ್ತಾರೆ. ಆದರೆ `ರಿಲಿಜಿಯನ್' ಅನ್ನುವ ಶಬ್ದ ನಮ್ಮಲ್ಲಿಲ್ಲ. ಇಲ್ಲಿ ವೈಷ್ಣವ `ರಿಲಿಜಿಯನ್' ಇದೆ. ಸಿಖ್ `ರಿಲಿಜಿಯನ್' ಇದೆ. ವಾಸ್ತವದಲ್ಲಿ ಹಿಂದೂ ಧರ್ಮದಲ್ಲಿ ಅನೇಕ `ರಿಲಿಜಿಯನ್' ಗಳಿವೆ, ಅನೇಕ ಮತಗಳಿವೆ, ಅನೇಕ ಸಂಪ್ರದಾಯಗಳಿವೆ. ಪ್ರಾರ್ಥನೆಯ ಅನೇಕ ಪದ್ಧತಿಗಳಿವೆ. ಇವೆಲ್ಲರ ಮಿಶ್ರಣವೇ ಹಿಂದೂ ಧರ್ಮ. ಈ ರೀತಿಯಾಗಿ ಇವೆಲ್ಲವನ್ನು ಸೇರಿಸಿದ ಮೇಲೆ ಯಾವುದನ್ನು ಧರ್ಮವೆನ್ನುತ್ತೇವೆಯೋ ಅದು ಒಂದೇ ಅಂದರೆ ಶೈವ, ವೈಷ್ಣವ, ಸಿಖ್, ಲಿಂಗಾಯತ ಮತ್ತು ಜೈನ್ ಇವೆಲ್ಲವೂ ವಾಸ್ತವದಲ್ಲಿ ಬೇರೆ ಬೇರೆ ಅಲ್ಲ. ಮತಗಳು ಬೇರೆ, ಸಂಪ್ರದಾಯ ಬೇರೆ, ಯಾವುದು ಎಲ್ಲರಿಗೂ ಲಾಭಕರವಾಗಿರುತ್ತದೆಯೋ ಯಾವುದು ಮೋಕ್ಷದ ಮಾರ್ಗಕ್ಕೆ ಪ್ರಶಸ್ತವಾಗಿದೆಯೋ ಅದೇ ವಾಸ್ತವದಲ್ಲಿ ಧರ್ಮ ಎನ್ನಿಸಿಕೊಳ್ಳುತ್ತದೆ. ಧರ್ಮದ ಬಗ್ಗೆ ಹೀಗೆ ವ್ಯಾಖ್ಯಾನಿಸುತ್ತಾರೆ: ``ಧಾರಣಾತ್ ಧರ್ಮಮಾಹುಃ" ಎಂದು. ಧಾರಣೆಗೆ ಅನುಗುಣವಾಗಿ ಧರ್ಮವಿರುತ್ತದೆ. ಅಂದರೆ ಯಾವ ವಸ್ತುವಿನ ಕಾರಣ, ಯಾವ ಶಕ್ತಿಯ ಕಾರಣ, ಯಾವ ಭಾವದ ಕಾರಣ, ಯಾವ ವ್ಯವಸ್ಥೆಯ ಕಾರಣ, ಯಾವ ನಿಯಮಗಳ ಕಾರಣ ಯಾವುದಾದರೂ ವಸ್ತು ನಿಂತರೆ ಅದು ಧರ್ಮ, ಆದ್ದರಿಂದ ಸಂಪೂರ್ಣ ಪ್ರಜೆ ಜನಸಮಾಜ, ಅದರಿಂದಲೂ ಮುಂದೆ ಹೋದರೆ ಸೃಷ್ಟಿ ಇವುಗಳ ಧಾರಣೆ ಧರ್ಮದಿಂದಲೇ ಆಗುತ್ತದೆ. ಯಾವುದರಿಂದ ಇವೆಲ್ಲವೂ ನಿಲ್ಲುತ್ತವೆಯೋ ಅದೇ ಧರ್ಮ. ಧರ್ಮ ಇಲ್ಲವಾದರೆ ಯಾವುದೂ ನಿಲ್ಲುವುದಿಲ್ಲ, ನಾಶವಾಗುತ್ತದೆ. ಆದ್ದರಿಂದಲೇ ನಮ್ಮಲ್ಲಿ ಧರ್ಮಕ್ಕೆ ಪ್ರತೀಕವಾಗಿ ಎತ್ತನ್ನು ಹೇಳುತ್ತಾರೆ. ಮತ್ತೆ ಧರ್ಮಕ್ಕೆ ನಾಲ್ಕು ಚರಣಗಳು ಎಂದು ಹೇಳುತ್ತಾರೆ. ಎತ್ತು ತನ್ನ ನಾಲ್ಕು ಕಾಲುಗಳ ಮೇಲೆ ನಿಲ್ಲುತ್ತದೆ. ಅದರ ಸ್ಥಿರತೆ ಅದರ ನಾಲ್ಕು ಕಾಲುಗಳ ಮೇಲೆ ಇರುತ್ತದೆ. ಯಾವುದಾದರೂ ಎತ್ತಿಗೆ ಒಂದು ಕಾಲು ಮುರಿದು ಹೋದರೆ ಹೇಗೆ ನಡೆಯುತ್ತದೆ ಎಂದು ನಾವು ಕಲ್ಪನೆ ಮಾಡಿಕೊಳ್ಳಬಹುದು. ಅದಕ್ಕೆ ನಿಂತುಕೊಳ್ಳುವುದು, ನಡೆಯುವುದು ಕಷ್ಟವಾಗುತ್ತದೆ. ಎರಡು ಕಾಲುಗಳು ಮುರಿದು ಹೋದರೆ ಮತ್ತಷ್ಟು ಕಷ್ಟವಾಗುತ್ತದೆ. ಮೂರು ಕಾಲುಗಳು ಮುರಿದು ಹೋದರೆ ಬಿದ್ದೇ ಹೋಗುತ್ತದೆ. ಎತ್ತಿಗೆ ಸರಿಯಾಗಿ ನಿಂತುಕೊಳ್ಳಲು, ನಡೆಯಲು ನಾಲ್ಕು ಕಾಲುಗಳ ಅವಶ್ಯಕತೆ ಹೇಗಿದೆಯೋ ಹಾಗೆಯೇ ಧರ್ಮಕ್ಕೂ ನಾಲ್ಕು ಕಾಲುಗಳು ಅವಶ್ಯಕತೆ ಇದೆ. ಅಂದರೆ ಇದರ ಹಿಂದಿರುವ ಮೂಲ ಧಾರಣೆ (ಉದ್ದೇಶ) ಅದು ಸರಿಯಾಗಿ ನಿಲ್ಲುವುದು. ಧರ್ಮದ ಆರ್ಥಧಾರಣೆ, ಶರೀರದ ಧಾರಣೆಗಾಗಿ ಕೂಡ ಬೇರೆ-ಬೇರೆ ವಯಸ್ಸಿನಲ್ಲಿ ಬೇರೆ-ಬೇರೆ ಧರ್ಮಗಳಿರುತ್ತವೆ. ಎಲ್ಲವೂ ಒಂದೇ ಕಾಲಕ್ಕೆ ಹೊಂದುವುದಿಲ್ಲ. ನನ್ನ ಒಬ್ಬ ಮಿತ್ರ ಒಂದು ಬಾರಿ ಬೇಸಿಗೆಯಲ್ಲಿ ಲಖನೋಗೆ ಹೋಗಿದ್ದರು. ಅಲ್ಲಿ ಲಖನೋನಿನ ಹಳೇ ಕಾಲದ 494 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ನವಾಬರು ಇರುತ್ತಾರೆ. ಅವರು ತಮ್ಮ ಮಖಮಲ್‍ನ ಕುರ್ತಾ ಹಾಕಿಕೊಂಡು, ಟೋಪಿ ಧರಿಸಿಕೊಂಡು ಸಂಜೆಯ ಸಮಯದಲ್ಲಿ ಸೆಂಟು ಹಾಕಿಕೊಂಡು ಓಡಾಡುತ್ತಾರೆ. ಅವರು ನನ್ನ ಮಿತ್ರನನ್ನು `ನೀವು ಪೂರ್ತಿಯಾಗಿ ಹಳ್ಳಿಯವರ ತರಹ ಕಾಣುತ್ತೀರಲ್ಲ' ಎಂದರಂತೆ. ಇದನ್ನು ಕೇಳಿ ಇದನ್ನು ಕೇಳಿ ಇವರೂ ಕೂಡಾ ಕುರ್ತಾ ಹೋಲಿಸಿಕೊಂಡು ಅದೇ ರೀತಿ ಓಡಾಡತೊಡಗಿದರು. ಎರಡು ಮೂರು ತಿಂಗಳುಗಳಾದ ಮೇಲೆ ಚಳಿಗಾಲ ಬಂದಿತು. ಹಳ್ಳಿಗೆ ಹಿಂದಿರುಗಿದರು. ಅವರು ಹಳ್ಳಿ ಜನರಿಗೆ ಏನೂ ಗೊತ್ತಾಗುವುದಿಲ್ಲವೆಂದು ತಿಳಿದು ಸಂಜೆ 5 ಗಂಟೆಗೆ ಕುರ್ತಾವನ್ನು ಹಾಕಿಕೊಂಡು ಸೆಂಟು ಹಾಕಿಕೊಂಡು ಓಡಾಡತೊಡಗಿದರು. ಹಳ್ಳಿಯ ಒಬ್ಬರು ಮುದುಕರು ಶಾಲನ್ನು ಹೊದ್ದುಕೊಂಡು ಮಲಗಿದ್ದರು. ಅವನನ್ನು ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳಿದರು. ಓಡಾಡಲು ಹೋಗುತ್ತಿದ್ದೇನೆ ಎಂದು ಹೇಳಿದರು. ಹೀಗೆ ಓಡಾಡಿದರೆ ಆರೋಗ್ಯವು ಕೆಡುತ್ತದೆ ಎಂದು ಮುದುಕರು ಹೇಳಿದರು. ಅವರು ಆರೋಗ್ಯವು ಹೇಗೆ ಕೆಡುತ್ತದೆ ಎಂದು ನಿರ್ಲಕ್ಷ್ಯದಿಂದ ಕೇಳಿದರು. ಆದರೆ ಅವರಿಗೆ ನಿಮೋನಿಯಾ ಆಯಿತು. ಶಾಲನ್ನು ಹೊದ್ದಿಸಿ ಮಲಗಿಸಲಾಯಿತು. ಹಳ್ಳಿಯವರು ಕಷ್ಟ ಅನುಭವಿಸಬೇಕಾಗಿ ಬಂದಿತು. ಕಾಲವನ್ನು ನಿರ್ಲಕ್ಷಿಸಿದ್ದರಿಂದ ನಮ್ಮ ಮಿತ್ರರಿಗೆ ಹೀಗಾಯಿತು. ಸಮಯಕ್ಕೆ ಸರಿಯಾಗಿ ಕೆಲಸ ಮಾಡಬೇಕು ಎಂದು ನಾವು ತಿಳಿಯಬೇಕು. ಧರ್ಮ ಎಂದರೆ ಶರೀರದ ಧಾರಣೆ, ಶರೀರದ ಧಾರಣೆಯ ನಿಯಮಗಳು ಬದಲಾಗುತ್ತಿರುತ್ತವೆ. ಸಮಯಕ್ಕೆ ಅನುಸಾರವಾಗಿ ಬದಲಾಗುತ್ತವೆ. ಸ್ಥಿತಿಗೆ ಅನುಸಾರವಾಗಿ ಬದಲಾಗುತ್ತದೆ. ಮನಸ್ಸಿನಲ್ಲಿ ಅನೇಕ ವಿಚಾರಗಳಿವೆ. ಅವುಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಇವು ಋತುಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಇವುಗಳಲ್ಲಿ ಸ್ಥಿರತೆ ಇರುವುದಿಲ್ಲ. ಆದರೆ ಶರೀರದ ಜೊತೆಗೆ ಬುದ್ಧಿ ಇದೆ. ಮನಸ್ಸಿದೆ. ಇವುಗಳ ಧಾರಣೆ ಆಗಬೇಕಾಗಿದೆ. ಇವುಗಳ ಮಿಲನವಾಗಬೇಕಾಗಿದೆ. ವಾಸ್ತವದಲ್ಲಿ ಧರ್ಮವೆಂದರೇನು? ಧಾರಣೆ ಮಾಡುವುದು. ಧಾರಣೆ ಮಾಡಿ ಶರೀರ, ಮನಸ್ಸು, ಬುದ್ಧಿ ಇವೆಲ್ಲವುಗಳ ಮಧ್ಯೆ ಸಂಬಂಧ ಬೆಳೆಸುವುದು ಮತ್ತು ಒಟ್ಟುಗೂಡಿಸುವುದು, ಎರಡು ರೀತಿಯಾಗಿ ಸಾಮಂಜಸ್ಯ ಮಾಡಲಾಗುತ್ತದೆ. ಕೆಲವು ಸಾಮಂಜಸ್ಯಗಳ ಕೂಡಿಸಲು ನಿಯಮಗಳನ್ನು ಮಾಡಲಾಗುತ್ತದೆ. ಕೆಲವು ಸಾಮಂಜಸ್ಯಗಳು ಎಷ್ಟು ನಿಯಮಗಳನ್ನು ಮಾಡಿದರೂ ಪರಿಣಾಮವಾಗುವುದಿಲ್ಲ. ಎಷ್ಟು ನಿಯಮಗಳನ್ನು ಮಾಡಿದರೂ ಜೀವನದಲ್ಲಿ ನಿಯಮಗಳನ್ನು ಪಾಲಿಸಲಾಗುವುದಿಲ್ಲ. ಜೀವನದಲ್ಲಿ ನಿಯಮಗಳಿಗೆ ಸಿಗದ ಎಷ್ಟೋ ಪರಿಸ್ಥಿತಿಗಳು ಉಂಟಾಗುತ್ತವೆ. ಆದ್ದರಿಂದಲೇ ನಮ್ಮಲ್ಲಿ ಸ್ಮೃತಿ, ಶಾಸ್ತ್ರಗಳು, ಕೃತಿಗಳು ಇವೆಲ್ಲವೂ ಇವೆ. ಈ ರೀತಿಯ ಪರಿಸ್ಥಿತಿ ಬಂದರೆ ಏನು ಮಾಡಬೇಕು ಎಂಬ ರಾಷ್ಟ್ರ ಚಿಂತನ 495 ಸಂಶಯ ಬಂದರೆ ನಮ್ಮ ಮನಸ್ಸನ್ನು ಕೇಳಿಕೊಳ್ಳಬೇಕು. ಮನಸ್ಸು ನಮಗೆ ಸಾಕ್ಷಿ ಹೇಳುತ್ತದೆ. ಮನಸ್ಸು ನಮಗೆ ಹೇಳುತ್ತದೆ: `ಮನಃ ಪೂತಮ್ ಸಮಾಚರೇತ್' ನೀವು ಅದರ ಅನುಗುಣವಾಗಿ ಕೆಲಸ ಮಾಡಬೇಕು. ಆದರೆ ಈ ಕೆಲಸ ಎಲ್ಲರ ಮನಸ್ಸು ಮಾಡುವುದಿಲ್ಲ. ಯಾರ ಮನಸ್ಸು ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲದೋ ಅವರು ಈ ರೀತಿಯಾಗಿ ಮಾಡಬಹುದಾಗಿದೆ. ಶರೀರದ ಒಳಗೆ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳನ್ನು ಮಾಡಲಾಗಿದೆ. ಪ್ರಕೃತಿಯ ಜೊತೆಗೆ ಇವುಗಳ ಸಾಮಂಜಸ್ಯ ಆಗದಿದ್ದರೆ ತೊಂದರೆ ಆಗುತ್ತದೆ. ಪ್ರಕೃತಿಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ. ದೇಶ ಕಾಲಗಳ ಬಗ್ಗೆ ವಿಚಾರ ಮಾಡಿದ ಹಾಗೆ ಪ್ರಕೃತಿಯ ಜೊತೆಗೂ ಸಾಮಂಜಸ್ಯ ಮಾಡಬೇಕಾಗಿದೆ. ಪ್ರಕೃತಿಯ ವ್ಯವಸ್ಥೆಗೆ ಅನುಗುಣವಾಗಿ ಮನಸ್ಸಿನ, ಬುದ್ಧಿಯ, ಶರೀರದ ಎಲ್ಲವುಗಳ ಸಾಮಂಜಸ್ಯ ಮಾಡಬೇಕಾಗಿದೆ. ಇವುಗಳ ಬಗೆಗೆ ಯೋಚಿಸಬೇಕಾಗಿದೆ. ವ್ಯಕ್ತಿ ಒಬ್ಬಂಟಿಯೂ ಆಗುತ್ತಾನೆ. ಗುಂಪೂ ಆಗುತ್ತಾನೆ. ಇನ್ನೊಬ್ಬರ ಜೊತೆ ಅವನ ಸಂಬಂಧಗಳು ಬರುತ್ತವೆ. ಸಹೋದರರ ಮಧ್ಯೆ ಸಾಮಂಜಸ್ಯವನ್ನು ಕೂಡಿಸುವವರೂ ಬೇಕಾಗುತ್ತಾರೆ. ಮನಸ್ಸಿಗೆ ಇಷ್ಟೇ ಇರಬೇಕು. ಮನಸ್ಸಿನ ಸ್ವಭಾವವೂ ಆಗಿರಬೇಕು. ವಾಸ್ತವದಲ್ಲಿ ಈ ಸಾಮಂಜಸ್ಯವನ್ನು ಕೂಡಿಸುವ ಕೆಲಸವನ್ನೂ ಧರ್ಮವೇ ಮಾಡುತ್ತದೆ. ಧರ್ಮದ ಕಾರಣವೇ ಸಹೋದರರು ಒಬ್ಬರ ಜೊತೆ ಒಬ್ಬರು ಜಗಳವಾಡದೇ ಸಾಮಂಜಸ್ಯದಿಂದ ಇರುತ್ತಾರೆ. ಪ್ರೀತಿಸಲು ಕಲಿಯುತ್ತಾರೆ. ಪತಿ-ಪತ್ನಿ ನಡುವೆ ಸಾಮಂಜಸ್ಯವು ಕೂಡುತ್ತದೆ. ತಂದೆ ಮಕ್ಕಳ ನಡುವೆ ಇರುವ ಸಾಮಂಜಸ್ಯ, ಯಾವುದರ ಸಹಾಯದಿಂದ ಅವರುಗಳ ಮಧ್ಯೆ ಹೊಂದಾಣಿಕೆಯಾಗುತ್ತದೆ. ಒಟ್ಟಾಗಿ ಕೆಲಸ ಮಾಡುತ್ತಾರೆ. ಅವರುಗಳ ಮಧ್ಯೆ ಸಂಘರ್ಷವು ಕಡಿಮೆಯಾಗುತ್ತದೆ. ಅವರುಗಳ ಮಧ್ಯೆ ವಿರೋಧವು ಕಡಿಮೆಯಾಗಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಕೆಲಸಮಾಡುತ್ತಾರೆ. ಎಂದರೆ ಇದಕ್ಕೆ ಕಾರಣ ವಾಸ್ತವದಲ್ಲಿ ಧರ್ಮವೇ ಆಗಿದೆ. ಆದ್ದರಿಂದ ತಂದೆಯ ಧರ್ಮವು ಪುತ್ರನ ಪಾಲನೆ-ಪೋಷಣೆ ಮಾಡುವುದು ಪುತ್ರನ ಧರ್ಮ ತಂದೆಯ ಸೇವೆ ಮಾಡುವುದು ಮತ್ತೆ ತಂದೆಯ ಆಜ್ಞೆಯನ್ನು ಪಾಲಿಸುವುದು. ಇಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಪಾಲಿಸಿದರೆ ಅವರುಗಳ ಮಧ್ಯೆ ಇರುವ ಸಂಘರ್ಷಣೆ ಮಾಯವಾಗುತ್ತದೆ. ಅಂದರೆ ವಿರೋಧವು ನಾಶವಾಗಿ ಇಬ್ಬರೂ ಒಬ್ಬರ ಜೊತೆ ಒಬ್ಬರು ಹೊಂದಿಕೊಂಡು ಒಬ್ಬರನ್ನು ಇನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಗಂಡ-ಹೆಂಡತಿಯರ ಮಧ್ಯೆ ಇರುವ ಸಾಮಂಜಸ್ಯವೂ ವಾಸ್ತವದಲ್ಲಿ ಧರ್ಮವೇ ಆಗಿದೆ. ಇಂದು ರಾಷ್ಟ್ರ ಮತ್ತು ವ್ಯಕ್ತಿಯ ಮಧ್ಯೆ ಇರುವ ಸಂಬಂಧವೇ ರಾಷ್ಟ್ರ ಮತ್ತು ವ್ಯಕ್ತಿಯ ಮಧ್ಯೆ ಇರುವ ಧರ್ಮವಾಗಿದೆ. ತನ್ನ ದೇಶದ ಜೊತೆಗೆ ಸಂಪೂರ್ಣ ಮಾನವ ಸಮಾಜವಿದೆ. ಈ ಮಾನವ 496 ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 6 ಸಮಾಜದ ಜೊತೆಗೆ ಸಾಮಂಜಸ್ಯವು ಆಗಬೇಕಾಗಿದೆ. ಆದರೆ ಪೂರ್ತಿ ಸಮಾಜಕ್ಕೆ ನಷ್ಟವಾದರೂ, ಪೂರ್ತಿ ಮಾನವ ಸಮಾಜಕ್ಕೆ ತೊಂದರೆಯಾದರೂ ನಮ್ಮ ದೇಶವು ಬಹಳ ಎತ್ತರದಲ್ಲಿರಬೇಕೆಂಬ ಭಾವನೆಯನ್ನು ನಾವು ಅಲ್ಲಗೆಳೆಯುವಂತಿಲ್ಲ. ಎಲ್ಲಿ ಕೇವಲ ತಮ್ಮ ತಮ್ಮ ಬಗ್ಗೆ ವಿಚಾರ ಮಾಡಲಾಗುತ್ತದೆಯೋ, ತಮ್ಮ ದೇಶದ ಸಂಬಂಧವಾಗಿ ಸ್ವಾರ್ಥದಿಂದ ವಿಚಾರ ಮಾಡಲಾಗುತ್ತದೆಯೋ, ಮಾನವ ಸಮಾಜದ ಬಗ್ಗೆ ವಿಚಾರ ಮಾಡುವುದಿಲ್ಲವೋ (ಇಂದು ಪಶ್ಚಿಮ ದೇಶಗಳಲ್ಲಿ ಆಗುತ್ತಿರುವಂತೆ) ಅಲ್ಲಿ ರಾಷ್ಟ್ರ ಮತ್ತು ಮಾನವ ಸಮಾಜದ ಮಧ್ಯೆ ದೊಡ್ಡ ಕಂದಕ ಉಂಟಾಗುತ್ತದೆ. ನಾವಂತೂ ಈ ಜಗತ್ತಿನ ಪ್ರತಿಯೊಂದು ಪ್ರಾಣಿಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಮೂಕ ಪ್ರಾಣಿಗಳ ಬಗ್ಗೆಯೂ ನಾವು ಗಮನ ಹರಿಸಬೇಕಾಗುತ್ತದೆ. ಅವುಗಳ ಮತ್ತು ನಮ್ಮ ಮಧ್ಯೆ ಸಾಮಂಜಸ್ಯವು ಸಾಧ್ಯವೇ? ಎರಡರ ಮಧ್ಯೆ ಸಂಘರ್ಷಣೆಯು ಅಳಿಸಲಾಗುತ್ತದೆಯೇ ಇದರ ಬಗ್ಗೆ ಕೂಡ ಯೋಚಿಸಬೇಕಾಗಿದೆ. ಹಸು ಇದೆ, ಎತ್ತು ಇದೆ, ಪಶು-ಪಕ್ಷಿಗಳಿವೆ. ಎಷ್ಟೋ ಕೀಟಾಣುಗಳು ಒಂದರ ಜೊತೆ ಒಂದು ಹೊಂದಿಕೊಂಡಿದೆ. ಇವುಗಳ ಮಧ್ಯೆ ಇರುವ ಸಂಘರ್ಷಣೆಯ ಭೂಮಿಕೆಯನ್ನು ಅಳಿಸಿ ಸಾಮಂಜಸ್ಯವನ್ನು ಸ್ಥಾಪಿಸಿದರೆ ಸೃಷ್ಟಿ ಮುಂದೆ ಸಾಗುತ್ತದೆ. ಅದರ ಜೊತೆಗೆ ಪಶು-ಪಕ್ಷಿಗಳು ಮತ್ತೆ ನಮ್ಮ ಚಲಿಸುವ ಜಗತ್ತು, ಇಷ್ಟೇ ಅಲ್ಲದೇ, ಇಲ್ಲಿ ಪ್ರಕೃತಿ ಇದೆ, ಗಿಡಮರಗಳಿವೆ. ಇವುಗಳ ಮಧ್ಯೆ ಕೂಡ ಸಾಮಂಜಸ್ಯವು ಮೂಡಬೇಕಾಗಿದೆ. ಇವುಗಳಿಂದಲೇ ನಮಗೆ ಊಟ ಸಿಗುತ್ತದೆ. ನಮಗೆ ಮಾವಿನ ಹಣ್ಣು ಬೇಕಾಗಿದ್ದರೆ ಮಾವು, ಮಾವಿನ ಮರ, ಮತ್ತು ಮಾವಿನ ಮರದ ಒಡೆಯ ಇವುಗಳ ಮಧ್ಯೆ ಸಾಮಂಜಸ್ಯವನ್ನು ತರಬೇಕಾಗಿದೆ. ಪ್ರಕೃತಿಯ ಜೊತೆಗೂ ಯಾವುದೋ ಒಂದು ರೀತಿಯ ಸಾಮಂಜಸ್ಯವು ಸ್ಥಾಪಿಸಬೇಕಾಗಿದೆ. ಅದರಲ್ಲಿರುವ ಉಲ್ಲಾಸವನ್ನು ನಮ್ಮ ಜೀವನದಲ್ಲೂ ತರಬೇಕಾಗಿದೆ. ಈ ರೀತಿಯಾದ ಸಂಬಂಧವನ್ನು ಸ್ಥಾಪಿಸಬೇಕಾಗಿದೆ. ವಾಸ್ತವದಲ್ಲಿ ವ್ಯಕ್ತಿಯ ಒಳಗೆ ಅವನ ಶರೀರ ಧಾರಣದಿಂದ ಹಿಡಿದು ಸಂಪೂರ್ಣ ಸೃಷ್ಟಿಯವರೆಗೂ ಎಷ್ಟು ಬೇರೆ-ಬೇರೆ ಸಂಬಂಧಗಳು ಬಂದರೂ ಅವುಗಳ ಮಧ್ಯೆ ಸಾಮಂಜಸ್ಯವನ್ನು ಕೂಡಿಸುವುದು ಧರ್ಮದ ಕೆಲಸವಾಗಿದೆ. ನಮ್ಮಲ್ಲಿರುವ ಧರ್ಮದ ವ್ಯಾಖ್ಯೆಯಲ್ಲಿ ಹತ್ತು ಲಕ್ಷಣಗಳಲ್ಲಿ ಹೇಳಲಾಗಿವೆ. ಅವು ಕ್ಷಮೆ, ಅಸ್ಯೆಯ (ಕಳ್ಳತನ ಮಾಡದಿರುವುದು) ಶೌಚ, ಇಂದ್ರಿಯ ನಿಗ್ರಹ, ಸತ್ಯ, ಬುದ್ಧಿ, ವಿದ್ಯೆ ಮುಂತಾದವು ಧರ್ಮದ ಲಕ್ಷಣಗಳಾಗಿವೆ. ಇವುಗಳಿಂದ ನಮ್ಮ ಧರ್ಮವು ನಡೆಯುತ್ತದೆ. ಈಗ ಇವುಗಳ ಆಧಾರದ ಮೇಲೆ ಸಮಯಾನುಸಾರವಾಗಿ ನಿಯಮಗಳು ಮತ್ತು ವ್ಯವಸ್ಥೆಗಳು ಬದಲಾಗುತ್ತಿರುತ್ತವೆ. ಅವುಗಳು ಸಮಯ ಮತ್ತು ಸ್ಥಾನಕ್ಕೆ ಅನುಸಾರವಾಗಿ ಬದಲಾಗುತ್ತವೆ. * * * *